ಭಾನುವಾರ, ಡಿಸೆಂಬರ್ 29, 2019

ತೊಳೆದ ಮುತ್ತು-ಕೆರೂರು ವಾಸುದೆವಾಸಚಹಾರ್ಯ






ಪ್ರಥಮ ದರ್ಶನದ ಪ್ರೇಮ


ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮಪುರವೆಂಬ ಹೆಸರು. ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಥಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು ಗ್ರಾಮ ಪುರೋಹಿತರು ಹೇಳುವದುಂಟು. ಆ ಕುಸುಮಪುರದ ಪೂರ್ವದಿಕ್ಕಿಗೆ ಗೋಪುರಾಕಾರದ ದಿನ್ನೆಯು ವಿವಿಧವಾದ ವೃಕ್ಷಲತೆಗಳಿಂದ ಆಚ್ಛಾದಿತವಾಗಿ ಅದೊಂದು ಪಚ್ಚಮಣಿಗಳ ಅಗಾಧವಾದ ರಾಶಿಯೇ ಆಗಿ ತೋರುತ್ತಿತ್ತು. ಆ ಮರಕತಗಿರಿಯ ತುದಿಯ ಮೇಲಿನ ವಿಸ್ತಾರವಾದ ತಪ್ಪಲಿನ ಮೇಲೆ ಶಾರದಾಪ್ರಸಾದ ಕಾಲೇಜದ ಶೋಭಾಮಯವಾದ ಮುಂದಿರಗಳು ತಳಿರು ತೋರಣ ಬಾಳೆಗಂಬಗಳಿಂದ ಅಲಂಕೃತವಾದ ಹೆದ್ದೇರಿನ ತುದಿಗಿರುವ ಪ್ರೇಕ್ಷಣೀಯವಾದ ಕಳಸಗಳಂತೆ ಮೆರೆಯುತ್ತಿದ್ದವು. ಕಾಲೇಜದ ಮಂದಿರಗಳಿಂದ ದಿನ್ನೆಯನ್ನಿಳಿದು ಕೆಳಗೆ ಬರಬೇಕಾಗಿ ಮಲಸೂತ್ರದಾಕಾರವುಳ್ಳ ವಿಸ್ತಾರವಾದ ಬೀದಿಯಿದ್ದು, ಆ ಬೀದಿಗೆ ಕೆಂಪುಗರಸಿನ ನೆಲಗಟ್ಟು ಮಾಡಿರುವದರಿಂದ ಆ ಪ್ರದೇಶಕ್ಕೆ ಅದೊಂದು ವಿಲಕ್ಷಣವಾದ ಅಲಂಕಾರವೇ ಆಗಿ ತೋರುತ್ತಿತ್ತು. ಕಾಲೇಜದ ಉನ್ನತವಾದ ಮಂದಿರಗಳಲ್ಲಿ ನಿಂತು ನೋಡಿದರೆ ಅನೇಕ ಯೋಜನೆಗಳ ವರೆಗೆ ಹಬ್ಬಿಕೊಂಡಿರುವ ಭೂಶೋಭೆಯು ಜಗ್ಗನೆ ಹೊಳೆದು ತೋರಿ ಪ್ರೇಕ್ಷಕರ ಚಿತ್ತಗಳನ್ನು ಬಲವತ್ತರವಾಗಿ ಆಕರ್ಷಿಸಿ ಕೊಳ್ಳುತ್ತಿತ್ತು. ಎತ್ತ ನೋಡಿದತ್ತ ನೆಲ್ಲು ಹುಲ್ಲುಗಳ ಗದ್ದೆಗಳೂ ಹೂದೋಟಗಳೂ ಹಣ್ಣು ಗಿಡಗಳ ತೋಪುಗಳೂ ಅವಿಚ್ಛಿನ್ನವಾಗಿ ಕಂಗೊಳಿಸುವವು. ಭೂವನಿತೆಯು ಉಟ್ಟಿರುವ ಮರಕತಮಯವಾದ ಮಹಾವಸ್ತ್ರದ ಮೇಲೆ ಚಿತ್ರ ವಿಚಿತ್ರವಾಗಿ ತೆಗೆದಿರುವ ಕಶೀದೆಗಳಂತೆ ಅಲ್ಲಲ್ಲಿ ಮೆರೆಯುವ ಹಳ್ಳಿಪಳ್ಳಿಗಳೂ ಪುರಪತ್ತನಗಳೂ ಬಹು ಚಮತ್ಕಾರವಾಗಿ ತೋರುತ್ತಿದ್ದವು. ಧರ್ಮದ ಮಾರ್ಗವು ಪ್ರಶಸ್ತವಾಗಿಯೂ ನಿಷಂಟಕವಾಗಿಯೂ ಸಮವಾಗಿಯೂ ಇರುವದಾಗಿ ಭಕ್ತಜನರಿಗೆ ತೋರಿಸಬೇಕೆಂದು ಗಂಗಾದೇವಿಯು ತಾನು ಪೂರ್ವಗಾಮಿಯಾಗಿ ನಡೆದಿರುವ ಶೋಭೆಯಾದರೂ ಬಹು ಪ್ರೇಕ್ಷಣೀಯವಾಗಿತ್ತು. ಕಾಲೇಜದ ಉನ್ನತವಾದ ಪ್ರದೇಶದಲ್ಲಿರುವ ಹವೆಯು ನಿರ್ಮಲವಾಗಿಯೂ ಆರೋಗ್ಯಕರವಾಗಿಯೂ ಮಕರಂದಮಯವಾಗಿಯೂ ಇರುವದರಿಂದ ಅಲ್ಲಿಯ ವಿದ್ಯಾರ್ಥಿಗಳಿಗೆ ವಿದ್ಯಾಲಾಭದಿಂದ ಮನಸ್ತುಷ್ಟಿಯಾಗುವಂತೆಯೇ ದೇಹಪುಷ್ಟಿಯು ಕೂಡಾ ಆಗುತ್ತಿತ್ತು.

ಬ್ರಿಟಿಶ್ ಸಾಮ್ರಾಜ್ಯವು ನಮ್ಮಲ್ಲಿ ನೆಲೆಗೊಂಡಾಗಿನಿಂದ ಪಾಶ್ಚಾತ್ಯ ಪದ್ಧತಿಯ ವಿದ್ಯಾಭಿರುಚಿಯು ನಮ್ಮಲ್ಲಿ ಹಬ್ಬಿ ಅಲ್ಲಲ್ಲಿ ಹಾಯಸ್ಕೂಲುಗಳೂ ಕಾಲೇಜಗಳೂ ಸ್ಥಾಪಿತವಾದವು. ಸಹಸ್ರಾವಧಿ ಜನ ತರುಣರು ವಿಶ್ವವಿದ್ಯಾಲಯದ ಪದವೀಧರರಾದರು. ಯುರೋಪಿಯನ್ ಗುರುಗಳಿಗೆ ಬುದ್ಧಿಗಲಿಸುವಂಥ ಪಂಡಿತರೂ, ಮೆಕಾಲೇನಂಥ ದುರಭಿಮಾನ ದೃಪ್ತನ ಹೊಟ್ಟೆಯಲ್ಲಿ ಬೆಂಕಿಬೀಳುವಂತೆ ವಾಗ್ಚಾತುರ್ಯದಿಂದಲೂ ಪ್ರಮಾಣಶಾಸ್ತ್ರಕ್ಕನುಸರಿಸಿಯು ಪ್ರೌಢರಾದ ಬ್ಯಾರಿಷ್ಟರರು ನ್ಯಾಯಸಭೆಗಳಲ್ಲಿ ವಾದವಿವಾದಗಳನ್ನು ನಡಿಸಿದರು. ನ್ಯಾಯಾಧೀಶ, ಕೌನ್ಸಿಲರ, ಕಮಿಶನರ, ಕಲೆಕ್ಟರ ಮುಂತಾದ ಅಧಿಕಾರಗಳನ್ನು ನಮ್ಮವರು ಒಳ್ಳೆ ಚಾತುರ್ಯದಿಂದ ನಡಿಸಿದರು. ಕೌನ್ಸಿಲಿನಲ್ಲಿ ಹೊಕ್ಕರೆ ನಾವೇ ಪ್ರಬಲರು. ಯುನಿವರ್ಸಿಟಿಗಳಲ್ಲಿ ಹೊಕ್ಕರೆ ನಾವೇ ಸೀನಿಯರ್ ರ್‍ಯಾಂಗ್ಲರರು. ಹೀಗೆ ವಿದ್ಯಾಪ್ರಸಾರಣವು ಪುರುಷರಲ್ಲಿ ಹಬ್ಬುತ್ತಲಿರಲು ನಮ್ಮ ಅರ್ಧಾಂಗಿಯರೂ ಅಕ್ಕ ತಂಗೆಂದಿರೂ ವಿದ್ಯೆಯಲ್ಲಿ ಹಿಂದುಳಿಯಲಾಗದೆಂದು ನೆನಿಸಿ ನಾವು ಶಿಕ್ಷಣವನ್ನು ಕೂಡ ಕೈಕೊಂಡೆವು. ಹೆಣ್ಣು ಮಕ್ಕಳಿಗಾಗಿ ತಕ್ಕ ಮಟ್ಟಿಗೆ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳಾದವು. ಆದರೆ ಉಚ್ಚ ಪ್ರತಿಯ ಶಿಕ್ಷಣದ ಸ್ವತಂತ್ರವಾದ ಶಾಲೆಗಳ ಸಂಖ್ಯೆಯು ಕಡಿಮೆ; ಕಾಲೇಜಗಳಂತೂ ಇಲ್ಲವೇ ಇಲ್ಲ. ಅಲ್ಪ ವಯಸ್ಸಿನಲ್ಲಿ ಹೆಣ್ಣು ಗಂಡುಮಕ್ಕಳು ಒಟ್ಟಿಗೆ ಕಲೆತು ಶಿಕ್ಷಣವನ್ನು ಹೊಂದಬಹುದು; ಆದರೆ ತರುಣ ತರುಣಿಯರು ಒಂದೇ ಸಂಸ್ಥೆಯಲ್ಲಿರುವದು ವಿಹಿತವೋ ಅಲ್ಲವೋ ಎಂಬ ಮಾತಿನ ಬಗ್ಗೆ ಮತ ಭೇದವು. ಆದರೆ ಸ್ತ್ರೀ ಪುರುಷರ ಮಿಶ್ರ ಶಾಲೆಗಳು ಪ್ರಶಸ್ತವಾದದ್ದವೆಂಬ ಅಭಿಪ್ರಾಯವನ್ನು ತಳೆದ ಸುಧಾರಕರು ತೀರ ಕಡಿಮೆ. ಸ್ತ್ರೀಯರಿಗೆ ಸ್ವತಂತ್ರವಾದ ಕಾಲೇಜಗಳಿರಬೇಕೆಂಬ ಜನರೇ ಬಹಳ. ಹೀಗಿರಲು ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳನ್ನು ಸ್ಥಾಪಿಸುವ ಸುಬುದ್ಧಿಯು ಇನ್ನೂ ನಮ್ಮ ಪುರಸ್ಕರ್ತರಲ್ಲಿ ಉಂಟಾಗಿಲ್ಲ. ಶಿಕ್ಷಣಾಭಿರುಚಿಯುಳ್ಳ ನವಯೌವನೆಯರು ಅನಿರ್ವಾಹಕ್ಕಾಗಿ ಗಂಡು ಮಕ್ಕಳ ಕಾಲೇಜಗಳಿಗೆ ಹೋಗುತ್ತಿರುವರು.

ಗಂಡುಮಕ್ಕಳ ಕಾಲೇಜಗಳಲ್ಲಿ ಅನೇಕವಾದ ವಿದ್ಯಾ ಕಲೆಗಳ ಶಿಕ್ಷಣವು ಯಥೇಷ್ಟವಾಗಿ ದೊರಕುತ್ತಿದ್ದರೂ ಅಲ್ಲಿ ಧಾರ್ಮಿಕ ಹಾಗೂ ನೈತಿಕ ಶಿಕ್ಷಣಗಳ ಅಭಾವವೇ ಆಗಿರುವದರಿಂದ ಅನೇಕ ಜನ ತರುಣರು ಅಮಾರ್‍ಗಿಗಳಾಗುತ್ತಿರುವದನ್ನು ಕಂಡು, ಅತ್ಯಂತವಾಗಿ ಉದರರಾಗಿರುವ ರಾಜಾ ದೀನ ದಯಾಲರೆಂಬ ಘನವಂತರಾದ ಶ್ರೀಮಂತರು ಪರ್ವತಪ್ರಾಯವಾದ ಹಣ ವೆಚ್ಚ ಮಾಡಿ ಶಾರದಾಪ್ರಸಾದವೆಂಬ ಕಾಲೇಜವನ್ನು ಕುಸುಮಪುರದ ಸಮೀಪದಲ್ಲಿ ಸ್ಥಾಪಿಸಿದರು. ರಾಮಕಿಶೋರ ಆಚಾರ್ಯ ಚೌದ್ಧರಿ ಎಮ್. ಏ. ಎಲ್‍ಎಲ್. ಡೀ. ಎಂಬ ಅನೇಕ ಶಾಸ್ತ್ರ ಪಾರಂಗತರಾದ ಮಹಾಪಂಡಿತರ ಸೌಜನ್ಯ ಸದಾಚರಣಗಳನ್ನೂ ಅವರಲ್ಲಿರುವ ವಿದ್ಯಾಪ್ರದಾನ ಮಾಡುವ ಉತ್ಕಟವಾದ ಅಭಿಲಾಷೆಯನ್ನೂ ಕಂಡು ರಾಜಾ ದೀನದಯಾಲ ರವರು ಅವರನ್ನು ಬಹು ಸನ್ಮಾನದೊಂದಿಗೆ ಕರೆತಂದು ನಮ್ಮ ಕಾಲೇಜ್ ದ ಮುಖ್ಯ ನಿಯಾಮಕರನ್ನಾಗಿ ಮಾಡಿದರು. ಉಳಿದ ಶಿಕ್ಷಕವರ್‍ಗವಾದರೂ ಸಾಮಾನ್ಯ ವಾದದ್ದಲ್ಲ. ಈ ಅಲಭ್ಯ ಲಾಭಕ್ಕಾಗಿ ಶಾರದಾಪ್ರಸಾದ ಕಾಲೇಜದಲ್ಲಿ ಕಲಿಯುವದಕ್ಕಾಗಿ ಅನೇಕ ಪ್ರಾಂತಗಳಿಂದ ಬುದ್ದಿವಂತರಾದ ವಿದ್ಯಾರ್‍ಥಿಗಳು ಬರುತ್ತಲಿದ್ದರು.

ಡಾಕ್ಟರ ಚೌಧರಿಯವರ ಧರ್ಮಪತ್ನಿಯರಾದ ಜಾನಕೀದೇವಿಯರಾದರೂ ಕಲಕತ್ತಾ ವಿಶ್ವವಿದ್ಯಾಲಯದ ಪದವಿಡರೆಯರಾದ ವಿದುಷಿಯರು. ಪ್ರಚಲಿತವಾದ ಸ್ತ್ರೀ ಶಿಕ್ಷಣದ ಪದ್ಧತಿಯಲ್ಲಿರುವ ದೋಷಗಳನ್ನು ತೆಗೆದುಹಾಕಿ ಭರತಭೂಮಿಗೆ ಭೂಷಣರಾಗತಕ್ಕೆ ಮಹಿಳೆಯರಿಗೆ ಉಚ್ಚಪ್ರತಿಯ ಶಿಕ್ಷಣವು ದೊರಕುವದಲ್ಲದೆ ಸ್ತ್ರೀ ಧರ್ಮ ನೀತಿಗಳು ಕೂಡಾ ಅವರಿಗೆ ಸಂಪೂರ್ಣವಾಗಿ ಪ್ರಾಪ್ತವಾಗಬೇಕೆಂಬ ಪ್ರಯತ್ನದಲ್ಲಿ ಜಾನಕೀದೇವಿಯರಿದ್ದರು. ಶಾರದಾಪ್ರಸಾದ ಕಾಲೇಜದಲ್ಲಿ ಕಲಿಯಲಿಕ್ಕೆ ಬಂದ ಹೆಣ್ಣು ಮಕ್ಕಳ ಶಿಕ್ಷಣಕ್ರಮದ ಮೇಲ್ವಿಚಾರಣೆಯನ್ನು ಆ ಸಾಧ್ವಿಯರು ಮನಃಪೂರ್ವಕವಾಗಿ ಅಂಗೀಕರಿಸಿದ್ದಲ್ಲದೆ, ಆ ವಿದ್ಯಾರ್ಥಿನಿಯರ ವ್ಯಾಯಾಮ ಮನೋರಂಜನ ಸ್ನಾನ ಭೋಜನಾದಿಗಳಲ್ಲಿಯಾದರೂ ಅವರು ದಕ್ಷತೆಯಿಂದ ಲಕ್ಷವನ್ನಿಟ್ಟಿದ್ದರು. ಗೃಹಿಣೀ ಜನೋಚಿತವಾದ ಕರ್‍ತವ್ಯ ಜಾಗ್ರತಿಯು ಅಲ್ಲಿಯ ವಿದ್ಯಾರ್ಥಿನಿಯರಲ್ಲಿ ಅಂಗ ಭೂತವಾಗಿರಬೇಕೆಂದು ನೆನಿಸಿ ಪ್ರತಿ ರವಿವಾರ ಇಬ್ಬರು ವಿದ್ಯಾರ್ಥಿನಿಯರನ್ನು ಜಾನಕೀದೇವಿಯರು ತಮ್ಮ ಮನೆಗೆ ಕರಿಸಿಕೊಂಡು ತಾವು ಮಾಡುತ್ತಿರುವ ಮನೆಕೆಲಸಗಳ ವ್ಯವಸ್ಥೆಯನ್ನೂ ಅತಿಥಿಗಳ ಆದರಾತಿಥ್ಯವನ್ನೂ, ಪತಿ ಶುಶ್ರೂಷೆಯ ಕ್ರಮವನ್ನೂ ನಿತ್ಯ ನಿಯಮ ದೇವತಾರಾಧನಗಳನ್ನೂ ಅವರಿಗೆ ತೋರಿಸಿಕೊಡುತ್ತಿದ್ದರು.

ಶಾರದಾ ಕಾಲೇಜದಲ್ಲಿ ಇಪ್ಪತ್ತು ಇಪ್ಪತ್ತೈದು ಜನ ಹೆಣ್ಣು ಮಕ್ಕಳಿದ್ದರು, ಅವರಲ್ಲಿ ರಮಾಸುಂದರಿಯೂ ಓರ್ವಳಾಗಿದ್ದಳು. ರಮಾಸುಂದರಿಯು ದಕ್ಷಿಣ ದೇಶದಲ್ಲಿರುವ ಕನಕಗಿರಿಯೆಂಬ ಊರಿನ ಜಾಗೀರದಾರ ಮಗಳು. ಅವಳ ತಂದೆಯು ಸುಸಂಸ್ಕೃತವಾದ ಆಚಾರ ವಿಚಾರಗಳುಳ್ಳವನೂ ವಿದ್ಯಾಪಕ್ಷಪಾತಿಯೂ ದೇಶ ಸಂಚಾರ ಮಾಡಿದವನೂ ಆಗಿರುವದರಿಂದ ಅವನು ರಮಾಸುಂದರಿಗೆ ಉಚ್ಚ ಪ್ರತಿಯ ಶಿಕ್ಷಣವನ್ನು ಕೊಡಿಸುತ್ತಿರುವದು ಆಶ್ಚರ್ಯವಲ್ಲ. ಉತ್ತರ ದೇಶದಲ್ಲಿ ಸಂಚಾರ ಮಾಡುತ್ತಿರುವಾಗ ಅವನು ಶಾರದಾ ಕಾಲೇಜದ ಖ್ಯಾತಿಯನ್ನು ಕೇಳಿ ಅದನ್ನು ನೋಡಹೋಗಿ, ಅಲ್ಲಿ ರಾಮಕಿಶೋರ ಜಾನಕೀದೇವಿಯರ ಪರಿಚಯವನ್ನು ಮಾಡಿಕೊಂಡು, ತನ್ನ ಪ್ರೀತಿಯ ಮಗಳಾದ ರಮಾಸುಂದರಿಯನ್ನು ಜಾನಕೀದೇವಿಯರ ಉಡಿಯಲ್ಲಿ ಹಾಕಿದಂತೆ ಮಾಡಿ ಅವಳನ್ನು ಶಾರದಾ ಕಾಲೇಜದಲ್ಲಿ ಕಲಿಯಲಿಕ್ಕೆ ಇಟ್ಟಿದ್ದನು.

ರಮಾಸುಂದರಿಯು ನಿರುಪಮವಾದ ರೂಪವತಿಯೂ, ವಿನಯ ಶೀಲೆಯ, ಪಾಪಭೀರುವೂ, ಬುದ್ಧಿ ಮತಿಯೂ ಆಗಿರುವದರಿಂದ ಅವಳು ಜಾನಕೀದೇವಿಯರ ಪ್ರೀತಿ ಪಾತ್ರಳಾಗಿದ್ದಳು, ಇಂದುಮತಿ ಭಾನರ್ಜಿ, ಚಂದ್ರಾವಲೀ ತ್ರಿವೇದಿ ಹಾಗೂ ರಮಾಸುಂದರಿಯರು ಎಫ್. ಏ. ತರಗತಿಯಲ್ಲಿ ಕಲಿಯುತ್ತಿರುವದರಿಂದ ಅವರೆಲ್ಲರೂ ಒಟ್ಟಿಗೆ ಒಂದೇ ಕೋಣೆಯಲ್ಲಿ ಇದ್ದು ಕೊಂಡು ಅಭ್ಯಾಸ ಮಾಡುತ್ತಿದ್ದರು. ಮೂವರೂ ತೀಕ್ಷ್ಣವಾದ ಬುದ್ದಿ ಯುಳ್ಳವರೂ ನಿರ್ಮಲಾಂತಃಕರಣದವರೂ ವಿಶುದ್ಧವಾದ ಆಚರಣವುಳ್ಳವರೂ ಆಗಿದ್ದರು. ಇಂದುಮತಿಯ ವಿನೋದದ ನುಡಿಗಳೂ, ಚಂದ್ರಾವಲಿಯ ತಿದ್ದಿ ತೀಡಿದ ಉಡಿಗೆ ತೊಡಿಗೆಗಳೂ, ರಮಾ ಸುಂದರಿಯ ಸ್ವಚ್ಛತೆ ಸುವ್ಯವಸ್ಥೆಗಳೂ ಆ ಮೂವರಲ್ಲಿ ಸರಿಯಾಗಿ ಕಲೆತು ಹೋಗಿ ಅವರು ನಾರೀ ಕುಲಕ್ಕೆ ಅಲಂಕಾರವಾಗಿ ಮೆರೆಯುತ್ತಿದ್ದರು.

ಪಾಠಶಾಲೆಯಲ್ಲಿ ನಡೆದ ವಿಷಯದ ಊಹಾಪೋಹವನ್ನು ಗಂಡು ಮಕ್ಕಳು ಮಾಡುತ್ತಿರುವವನ್ನೂ, ಅವರು ತೆಗೆದ ಕುಶಲವಾದ ಶಂಕೆಗಳಿಗೆ ಗುರುಗಳು ಹೇಳುತ್ತಿರುವ ಸಮರ್ಪಕವಾದ ಸಮಾಧಾನಗಳನ್ನೂ ಆ ಚತುರೆಯರು ಮನಸ್ಸು ಕೊಟ್ಟು ಕೇಳುತ್ತಿದ್ದರು. ಆ ಮೂವರಿಗೂ ಭಾಷಾವಿಷಯಗಳಲ್ಲಿ ವಿಶೇಷವಾದ ಅಭಿರುಚಿಯಾಗಿರುವದರಿಂದ ಬಿ. ಏ., ಎಂ. ಏ. ವರ್ಗ ಗಳಲ್ಲಿ ಇಂಗ್ಲಿಶ್ ಸಂಸ್ಕೃತ ವಿಷಯಗಳು ನಡೆದಿರುವಾಗ ಒಮ್ಮೊಮ್ಮೆ ಹೋಗಿ ಅವರು ಕೇಳುತ್ತೆ ಕೂಡುವರು. ಪುರುಷ ವಿದ್ಯಾರ್ಥಿಗಳ ಪರಿಚಯವನ್ನು ಅವರು ಮಾಡಿಕೊಳ್ಳುತ್ತಿದ್ದಿಲ್ಲವಾದರೂ ಆ ಕಾಲೇಜದಲ್ಲಿ ಒಳ್ಳೆ ಬುದ್ದಿಶಾಲಿಗಳಾದ ವಿದ್ಯಾರ್ಥಿಗಳಾರೆಂಬದು ಅವರಿಗೆ ಗೊತ್ತಾಗಿತ್ತು.

ವಿಜಯಪುರದ ಧುವರಾಯನೆಂಬ ಅದ್ವಿತೀಯನಾದ ಬುದ್ಧಿಶಾಲಿಯು ಬಿ. ಏ. ತರಗತಿಯಲ್ಲಿ ಉತ್ತಮ ಪರೀಕ್ಷೆಯನ್ನು ಕೊಟ್ಟಿದ್ದನಾದ್ದರಿಂದ ಆ ತರುಣನನ್ನು ಡಾಕ್ಟರ ಚೌಧರಿಯವರು ತಮ್ಮ ಕಾಲೇಜದ ಫೆಲೋ – (ವಿದ್ಯಾರ್ಥಿಯಾಗಿದ್ದರೂ ಶಿಕ್ಷಕರ ಕೆಲಸವನ್ನು ಮಾಡುವವ) ನನ್ನಾಗಿ ಮಾಡಿ ಎಂ. ಎ. ತರಗತಿಯಲ್ಲಿ ಅಭ್ಯಾಸ ಮಾಡಲು ಆಸ್ಥೆಯಿಂದ ಇಟ್ಟು ಕೊಂಡರು. ಧ್ರುವರಾಯನು ಸಂಸ್ಕೃತದಲ್ಲಿ ಅಸದೃಶನೂ ಇಂಗ್ಲಿಶದಲ್ಲಿಯೂ ಅತಿ ಪ್ರವೀಣನೂ ಆಗಿರುವದರಿಂದ ಎಫ್. ಏ. ತರಗತಿಯವರಿಗೆ ಆ ಎರಡು ವಿಷಯಗಳನ್ನು ಕಲಿಸಲು ಅವನನ್ನು ಆಯಾ ವಿಷಯಗಳ ಪಂಡಿತರ ಸಹಾಯಕಾರಿಯಾಗಿ ನಿಯಮಿಸಿದ್ದರು.

ಒಂದು ದಿನ ಡಾಕ್ಟರ ರಾಮಕಿಶೋರ ಆಚಾರ್ಯರವರು ಮೇಜಿನ ಮೇಲಿರುವ ಲೇಖಗಳಲ್ಲಿ ಒಂದನ್ನೆತ್ತಿಕೊಂಡು ನೆರೆದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕುರಿತು “ಇದು ನಮ್ಮ ಧುವರಾಯನು ಬರೆದಿರುವ ‘ಶೇಕ್ಸ್‍ಪೀಯರ್ ಕಾಲಿದಾಸರ ಕವಿತಾ ಚಾತುರ್ಯದ ತುಲನೆ’ ಎಂಬ ಸರಸವಾದ ಲೇಖವು. ಇದರಲ್ಲಿಯ ಭಾಷಾ ಸರಣಿಯೂ, ವಿಷಯನಿರೂಪಣಶಕ್ತಿಯೂ, ಮಾರ್ಮಿಕವಾದ ಪರೀಕ್ಷಣವೂ ಪಂಡಿತರಿಂದ ಕೂಡ ಅನುಕರಣೀಯವಾಗಿವೆ. ನೀವೆಲ್ಲರೂ ಈ ಲೇಖವನ್ನು ಮತ್ಸರವಿಲ್ಲದೆ ಓದಿಕೊಳ್ಳಬೇಕೆಂದು ನಾವು ಸೂಚಿಸುತ್ತೇವೆ. ಧುವರಾಯ, ನಿನ್ನನ್ನು ನಾವು ಮನಃಪೂರ್ವಕವಾಗಿ ಅಭಿನಂದಿಸುತ್ತೇವೆ. ಈ ಸುವರ್ಣ ಪದಕವನ್ನು ರಾಜಾ ದೀನದಯಾಲ ರವರು ಪರಮ ಸಂತುಷ್ಟರಾಗಿ ನಿನಗೆ ಕಾಣಿಯಾಗಿ ಕೊಟ್ಟಿರುವರು.” ಎಂದು ಹೇಳಿ ಪದಕವನ್ನು ಧ್ರುವರಾಯನ ಅಂಗಿಗೆ ಕಟ್ಟಿದರು.

ಧ್ರುವರಾಯನು ಬರೆದ ಸ್ತುತ್ಯವಾದ ಲೇಖನನ್ನೋದಬೇಕೆಂಬ ಕುತೂಹಲವುಳ್ಳವಳಾಗಿ ರಮಾಸುಂದರಿಯು ಲಗುಬಗೆಯಿಂದ ಒಂದು ಪತ್ರವನ್ನು ಬರೆದು ಕಾಲೇಜದ ಜವಾನನ ಕೈಯಲ್ಲಿ ಕೊಟ್ಟು, ದ್ರುವರಾಯರು ತಮ್ಮ ಲೇಖನವನ್ನು ಕೊಟ್ಟರೆ ತಂದುಕೊಡೆಂದು ಹೇಳಿದಳು. ದ್ರುವರಾಯನು ಸಾಯಂಕಾಲದಲ್ಲಿ ತಿರುಗಾಡಿ ವಸತಿಗೃಹಕ್ಕೆ ಬರುವಷ್ಟರಲ್ಲಿ ಜವಾನನು ರಮಾಸುಂದರಿಯ ಪತ್ರವನ್ನು ತಂದುಕೊಟ್ಟನು. ಮುಕ್ತವಲಿಗಳಂತೆ ಮನೋಹರವಾಗಿರುವ ಹಸ್ತಾಕ್ಷರದಿಂದ ಬರೆದ ಮೇಲ್ವಿಳಾಸವನ್ನು ನೋಡಿ ಚಕಿತನಾಗಿ ಅವನು ಔತ್ಸುಕ್ಯದಿಂದ ಪತ್ರವನ್ನೊಡೆದು ಓದಿದನು. ಓದೋದುವಾಗ ಅವನ ಹೃದಯದಲ್ಲಿ ಅಭಿಮಾನ ಧನ್ಯತೆ ಸಂತೋಷ ಮುಂತಾದ ಮನೋವಿಕಾರಗಳು ಉಕ್ಕೇರಿಬಂದವು. ರಮಾಸುಂದರಿಯು ತನ್ನ ಲೇಖದ ಸ್ತುತಿಮಾಡಿರುವದು ಅವನಿಗೆ ರಾಜಾ ದೀನದಯಾಲರ ಸುವರ್ಣ ಪದಕಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳದ್ದಾಗಿ ತೋರಿತು. “ರಮಾಸುಂದರಿಯಂತೆ ಆಸ್ಥೆಯಿಂದ ವಿದ್ಯಾ ಸಂಪಾದನೆ ಮಾಡಿಕೊಳ್ಳಲಿಚ್ಛಿಸುವಂಥ ಸ್ತ್ರೀಯರು ನಮ್ಮ ಸಮಾಜದಲ್ಲಿ ಹತ್ತೇ ಜನರು ಹುಟ್ಟಿದ ನಮ್ಮ ಸಮಾಜವು ಉಚಿತವಾಯಿತೆಂದು ನಮ್ಮ ಜಾನಕಿದೇವಿಯವರು ಕೃತಾರ್ಥರಾದರೆಂದೂ ನಾನು ನಂಬುತ್ತೇನೆ. ನನ್ನ ಲೇಖವನ್ನು ಅನೇಕ ಜನರು ಬೇಡಿದ್ದಾರೆ. ಆದರೆ ನಾನದನ್ನು ಈ ಜಿಜ್ಞಾಸುವಾದ ವಧುವಿಗೆ ಮೊದಲು ಕೊಡುವೆನು” ಎಂದು ತನ್ನೊಳಗೆಯೇ ಚಿಂತಿಸಿ ಧ್ರುವರಾಯನು ಆ ಲೇಖವನ್ನು ತೆಗೆದು ಜವಾನನ ಕೈಯಲ್ಲಿ ಕೊಟ್ಟು ರಮಾ ಸುಂದರಿಗೆ ಕೊಡಹೇಳಿದನು.

ಮಧ್ಯರಾತ್ರಿಯಾಗುತ್ತ ಬಂದಿದ್ದರೂ ಕಾಲೇಜದ ಸ್ತ್ರೀಶಾಖೆಯ ವಸತಿ ಗೃಹಗಳಲ್ಲಿಯ ಒಂದು ಕೋಣೆಯಲ್ಲಿ ಇನ್ನೂ ದೀಪವು ಜಗಜಗನೆ ಪ್ರಕಾಶಿಸುತ್ತಿತ್ತು. ರಮಾಸುಂದರಿಯು ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ಬೆನ್ನು ಹಿಂದೆಯೇ ಮೇಜಿನ ಮೇಲಿಟ್ಟಿರುವ ಬೆಳ್ಳಿ ದೀಪವೃಕ್ಷದಲ್ಲಿ ಉರಿಯುತ್ತಿರುವ ಮೇಣ ಬತ್ತಿಯ ಬೆಳಕಿನಲ್ಲಿ ದ್ರುವರಯನ ಲೇಖವನ್ನು ಓದುತ್ತಿದ್ದಳು. “ಏನು ಮಾರ್ಮಿಕತೆಯಿದು! ಈ ತಾರ್ಕಿಕ ಭಾಷಾ ಸರಣಿಯು ಪ್ರತ್ಯಕ್ಷ ಮೆಕಾಲೇನದೇ. ಸ್ಟೀಲನ ತದ್ರೂಪವಾದ ವಿನೋದಲಹರಿಯಿದು. ಇದು ಹೆನ್ರಿ ಮೋರ್ಲೆನ ಅರ್ಥಪ್ರಕಾಶವು. ಇವುಗಳು ಬೇಕನ್ನನ ವಿಚಾರ ತರಂಗಗಳು. ಸಾಧು ! ಸಾಧು ! ಈ ಹೊಸ ಪಂಡಿತರು ಬರೆದಿರುವ ಬೇರೆ ಲೇಖವನ್ನು ಓದಲನುಕೂಲವಾದರೆ ಎಷ್ಟು ಉಪಯೋಗವಾಗಬಹುದು!” ಎಂದು ಅವಳು ಆಗಾಗ್ಗೆ ಉದ್ಗಾರ ತೆಗೆಯುತ್ತಿದ್ದಳು. ವಾಚನದಲ್ಲಿ ನಿಮಗ್ನಳಾದ ಆ ತರುಣಿಯು ಹೊದ್ದುಕೊಂಡಿರುವ ಶಾಲು ಅಸ್ತವ್ಯಸ್ತವಾಗಿ ಜರಿದು ಬಿದ್ದಿತ್ತು. ಬಾಯಿಯಲ್ಲಿ ಹಿಡಿದಿರುವ ಪೆನ್ಸೀಲು ಅಲ್ಲಿಯೇ ಉಳಿದಿತ್ತು. ‘ನನ್ನನ್ನು ಬಳಿಯಲ್ಲಿ ಇರಿಸಿಕೊಂಡಿದ್ದೇಕೆ? ಒಮ್ಮೆಯಾದರೂ ನನ್ನ ಮುಖವನ್ನು ನೋಡಬಾರದೆ?’ ಎಂದು ಗಡಿಯಾರವು ಸತತವಾಗಿ ಕಿಟಿಕಿಟ ಹಚ್ಚಿದ್ದರೂ ರಮಾಸುಂದರಿಯು ಅದನ್ನು ಕಣ್ಣೆತ್ತಿ ನೋಡಿದ್ದಿಲ್ಲ.

ಅಷ್ಟರಲ್ಲಿ ಬಾಗಿಲವನ್ನು ನೂಕಿ ಒಳಗೆ ಯಾರೋ ಬಂದರು. ಆದರದೂ ಅವಳಿಗೆ ಲಕ್ಷ್ಯವಿಲ್ಲ. “ರವಾಸುಂದರಿ!” ಎಂದು ಬಂದವರು ಎಚ್ಚರಗೊಳಿಸಿದರು.

ರಮಾಸುಂದರಿಯು ಆ ಧ್ವನಿಯಾದ ಕಡೆಗೆ ಮುಖ ತಿರಿವಿ ನೋಡಿದವಳೇ ಆಶ್ಚರ್ಯಚಕಿತಳಾಗಿ ಎದ್ದು ನಿಂತು “ಅವ್ವಯ್ಯಾ! ಅಮ್ಮನವರೇಕೆ ಬಂದರು!” ಎಂದು ಉದ್ಗಾರ ತೆಗೆದಳು.

“ರಮಾಸುಂದರಿ, ಏನು ಮಾಡುತ್ತಲಿದ್ದಿ ನೀನು?” ಎಂದು ಜಾನಕೀ ದೇವಿಯರು ತುಸು ಕ್ರುದ್ಧರಾಗಿ ಕೇಳಿದರು.

“ಏನೂ ಇಲ್ಲ. ತಮ್ಮದೇಕೆ ಬರೋಣ?”

“ಇದಕ್ಕೂ ಹೆಚ್ಚಿನ ಕಾರಣವಿನ್ನಂತಿರಬೇಕು? ಸರಿರಾತ್ರಿಯಾಗಿ ಹೋದರೂ ಮಲಗಿಕೊಳ್ಳುವ ವಿಚಾರವಿಲ್ಲವೆ? ಏನು ಓದುತ್ತಲಿದ್ದಿ ರಮಾ? ಕಾದಂಬರಿಯೇ?”

“ಇಲ್ಲಾ. ತಮ್ಮ ಅನುಜ್ಞೆಯಿಲ್ಲದೆ ಕಾದಂಬರಿಯನ್ನು ಹೇಗೆ ಓದಲಿ? ಧ್ರುವರಾಯರು ಬರೆದಿರುವ ಲೇಖವನ್ನು ಪಂಡಿತವರ್ಯರು (ಡಾಕ್ಟರ ಚೌಧರಿ) ಬಹುಪರಿಯಾಗಿ ಕೊಂಡಾಡಿದ್ದರಿಂದ ಅದನ್ನು ತರಿಸಿಕೊಂಡು ನಾನು ಓದುತ್ತಲಿದ್ದೆನು.”

“ಇದಕ್ಕೆ ನಮ್ಮ ಅಪ್ಪಣೆ ಬೇಡವೇನು?” ಎಂದು ಜಾನಕೀದೇವಿಯರು ಮಂದಸ್ಮಿತೆಯರಾಗಿ ಕೇಳಿದರು.

“ನಿಯಾಮಕರೇ ಈ ಲೇಖದ ಪ್ರಶಂಸೆಯನ್ನು ಮಾಡಿರುವದರಿಂದ ಇದನ್ನು ಓದಲು ಪ್ರತ್ಯವಾಯ ತೋರಲಿಲ್ಲಾದ್ದರಿಂದ ಅಪ್ಪಣೆ ಕೇಳುವದನ್ನು ಬಿಟ್ಟೆನು.”

“ಆ ಲೇಖವನ್ನು ಓದಿದ್ದರಲ್ಲಿ ದೋಷವಿಲ್ಲ ರಮಾ. ಆದರೆ ಅದನ್ನು ನೀನು ಸಂಪಾದಿಸಿದ್ದು ಹೇಗೆ?”

“ಯಾಕೆ? ಧ್ರುವರಾಯರಿಗೆ ಪತ್ರ ಬರೆದು ಈ ಲೇಖವನ್ನು ತರಿಸಿ ಕೊಂಡೆನು.”

“ಆಯಿತು, ಪುರುಷರೊಡನೆ ಪತ್ರವ್ಯವಹಾರ ಮಾಡಬೇಕಾದರೆ ನಮ್ಮ ಅಪ್ಪಣೆ ಆವಶ್ಯವಾಗಿ ಬೇಕಾಗಿತ್ತಷ್ಟೆ?”

ಈ ಮಾತು ಕೇಳಿ ರಮಾಸುಂದರಿಯು ಕಚ್ಚನೆ ನಾಲಿಗೆಯನ್ನು ಕಚ್ಚಿ “ತಪ್ಪಾಯಿತು ಸರಿ! ಆದರೆ ಅಮ್ಮನವರೆ, ನಾನು ಪತ್ರ ಬರೆದದ್ದು ಅನುಚಿತವಾಯಿತೇನು?” ಎಂದು ಅಂಜಂಜುತ್ತ ಕೇಳಿದಳು.

ಈ ಮಾತಿನ ಚರ್ಚೆಯನ್ನು ವಿಶೇಷವಾಗಿ ಮಾಡಿದರೆ ಪುರುಷರ ವಿಷಯವಾಗಿ ನಾರಿಯರಲ್ಲಿ ಹೆಚ್ಚಾದ ಕುತೂಹಲವನ್ನು ಬೆಳಿಸಿದಂತಾಗುವದೆಂದು ತಿಳಿದು ನೋಡಿ ಜಾನಕೀದೇವಿಯರು ಆ ವಿಷಯವನ್ನು ಅಲ್ಲಿಯೇ ಮುರಿಯಬೇಕಾಗಿ-

“ಹೋಗಲಿ ಬಿಡು, ಅನುಚಿತವೇನೂ ಆಗಿಲ್ಲ. ಸಂಸ್ಥೆಯ ನಿಯಮದ ನೆನಪು ಕೊಟ್ಟೆನು ಹೊರತಾಗಿ ಇದರಲ್ಲಿ ಮತ್ತೆನಿಲ್ಲ.”

ಇನ್ನೊಮ್ಮೆ ಇಂಥ ಆವಿಚಾರದ ಕೆಲಸವನ್ನು ಮಾಡುವದಿಲ್ಲೆಂದು ರಮಾಸುಂದರಿಯು ತನ್ನ ಧರ್ಮ ಮಾತೆಗೆ ಅಭಿವಚನವನ್ನಿತ್ತಳು.

“ಆಗಲಿ, ಓದು ಬರಹಕ್ಕಾದರೂ ಸಮಯಾಸಮಯದ ವಿಚಾರವಿರಬೇಕು. ಮಗುವೆ, ಗಡಿಯಾರವನ್ನು ನೋಡಬಾರದೆ? ಸರಿರಾತ್ರಿ ಮೀರಿ ಹೋಗಿದೆ. ನೋಡು, ಹಾಸಿಗೆಯನ್ನು ಕೂಡ ಬಿಚ್ಚಿಲ್ಲ” ಎಂದು ಜಾನಕೀದೇವಿಯರು ರಮಾಸುಂದರಿಯ ಮಂಚದ ಮೇಲಿದ್ದ ಹಾಸಿಗೆಯನ್ನು ಉರುಳಿಸಿದರು.

“ಅಯ್ಯೋ ಪಾಪವೆ! ನನ್ನ ಕೈಗಳೇನು ಮುರಿದಿವೆಯೇನು? ತಾವೇಕೆ ಹಾಸಿಗೆಯನ್ನು ಉರುಳಿಸಿದಿರಿ?” ಎಂದು ರಮಾಸುಂದರಿಯು ಖಿನ್ನಳಾಗಿ ನುಡಿದಳು.

“ಮತ್ತೊಂದು ಮಾತಾಡದೆ ಮಲಗಿಬಿಡು ಇನ್ನು ಇಂದಿನಿಂದ ರಾತ್ರಿಯ ಹತ್ತು ಗಂಟೆಯ ತರುವಾಯದಲ್ಲಿ ನಿನ್ನ ಕೋಣೆಯಲ್ಲಿ ದೀಪವು ಉರಿದದ್ದಾದರೆ ನಾನು ನಿನ್ನನ್ನು ಕ್ಷಮಿಸಿದವಳಲ್ಲ!” ಎಂದು ಹೇಳಿ ಜಾನಕೀದೇವಿಯರು ಹೊರಟು ಹೋದರು. ರಮಾಸುಂದರಿಯಾದರೂ ದೀಪಕ್ಕೆ ಅಪ್ಪಣೆಕೊಟ್ಟು ಮಲಗಿಕೊಂಡಳು.

ಮರುದಿವಸ ರಮಾಸುಂದರಿಯು ನಿನ್ನೆ ರಾತ್ರಿ ನಡೆದ ಸಂಗತಿಯನ್ನೆಲ್ಲ ಇಂದುಮತಿ ಚಂದ್ರಾವಲಿಯರಿಗೆ ತಿಳಿಸಿ ಜಾನಕೀದೇವಿಯರ ಶಿಷ್ಯ ವಾತ್ಸಲ್ಯವನ್ನು ಕೊಂಡಾಡಿದಳು.

“ಸರಿ ಸರಿ, ರಮಾಸುಂದರೀ, ನೀನು ಧ್ರುವರಾಯನಿಗೆ ಬರೆದ ಪತ್ರದಲ್ಲಿ ಲೇಖವನ್ನು ಕಳಿಸಿಕೊಡೆಂದು ಇಷ್ಟೆಯೇ ಬರೆದಿದ್ದೆಯೋ ಮತ್ತೇನಾದರೂ ಬರೆದಿದ್ದೆಯೋ?”

“ತಲೆ ನಿನ್ನದು! ಮತ್ತೇನು ಬರೆಯುತ್ತಾರೆ?” ಎಂದು ರಮಾಸುಂದರಿಯು ಕ್ರುದ್ಧಳಾಗಿ ಕೇಳಿದಳು.

“ಇಲ್ಲವಾದರೆ ಇಲ್ಲವೆನ್ನು, ಕೋಪವೇಕೆ?” ಎಂದು ಚಂದ್ರಾವಲಿಯು ನಕ್ಕು ನುಡಿದಳು.

“ಸುಸ್ವಭಾವದವರಾದ ಸ್ತ್ರೀ ಪುರುಷರೀರ್ವರನ್ನು ಒತ್ತಟ್ಟಿಗೆ ಇಡಬಹುದಂತೆ, ಆದರೆ ಸಮಾನವಯಸ್ಕರಾದ ಮಿಂಡೆಯರೀರ್ವರನ್ನು ಒತ್ತಟ್ಟಿಗೆ ಇಡಕೂಡದೆಂದು ಹಿರಿಯರಾಡುವದು ಅನುಭವಸಿದ್ಧವಾದ ಮಾತು” ಎಂದು ರಮಾಸುಂದರಿಯು ಜಿಗುಪ್ಸೆಯಿಂದ ತನ್ನ ಸಖಿಯರನ್ನು ನೋಡುತ್ತೆ ನುಡಿದಳು.

“ಅನುಭವಸಿದ್ದವಾದ ಮಾತುಗಳನ್ನೇ ಹಿರಿಯರು ಹೇಳುತ್ತಿರುವದುಂಟು. ಇಬ್ಬರು ಮಿಂಡೆಯರು ನಿರಂತರವಾಗಿ ಒತ್ತಟ್ಟಿಗೆ ಇರಬಹುದಾದರೆ ಗಂಡಂದಿರಿಗೆ ನಮೋ ನಮೋ ಎಂದು ನಡಕೊಳ್ಳುವ ಹಣೇಬರಹವು ಹೆಣ್ಣು ಮಕ್ಕಳ ಪಾಲಿಗೆಲ್ಲಿ ಬರುತ್ತಿತ್ತು?” ಎಂದು ಇಂದುಮತಿಯು ವಿನೋದ ಗೈಯುತ್ತೆ ನುಡಿದಳು.

ಈ ಮಾತಿಗೆ ಚಂದ್ರಾವಲಿಯು ತಾನು ಒಳಿತಾಗಿ ನಕ್ಕರೂ “ಇಂದುಮತೀ, ಅತಿಕ್ರಮಣವಾಯಿತು, ಈ ವಿಷಯವು ಸಾಕಿನ್ನು,” ಎಂದು ನಿಷೇಧಿಸಿ ರಮಾಸುಂದರಿಯನ್ನು ಕುರಿತು, “ರಮಾಸುಂದರಿ, ಧ್ರುವರಾಯರ ಲೇಖವನ್ನು ಮರಳಿ ಅವರಿಗೆ ಕಳಿಸಿದಿಯೋ?” ಎಂದು ಕೇಳಿದಳು.

ರಮಾಸುಂದರಿಗಾದರೂ ಇಂದುಮತಿಯ ಚೇಷ್ಟೆಯ ಹರಟೆಯನ್ನು ನಿಲ್ಲಿಸಬೇಕಾದ್ದರಿಂದ ಅಂದದ್ದು : “ಇನ್ನೂ ಕಳಿಸಿಲ್ಲ ಚಂದ್ರಕ್ಕಾ ಅದನ್ನು ನಮ್ಮ ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಇಟ್ಟು ಕೊಂಡಿದ್ದೇನೆ.”

ಕೆಲವು ದಿವಸಗಳಾದ ಮೇಲೆ ಒಂದು ದಿನ ಸಂಸ್ಕೃತಾಧ್ಯಾಪಕರು ಎಫ. ಏ. ತರಗತಿಯ ವಿದ್ಯಾರ್ಥಿಗಳ ವರ್ಗಕ್ಕೆ ಕಲಿಸಲು ಬರಲಿಲ್ಲ. ನಿಯಾಮಕರಾದ ಡಾಕ್ಟರ ಚೌಧರಿಯವರು ಧ್ರುವರಾಯನಿಗೆ ಅಂದು ಆ ಕೆಲಸ ಮಾಡೆಂದು ಆಜ್ಞಾಪಿಸಿದರು. ಧ್ರುವರಾಯನು ಬಂದಿರುವದನ್ನು ಕಂಡು ವಿದ್ಯಾರ್ಥಿಗಳು ಹೆದರಿಕೆಯಿಲ್ಲದೆ ತಲೆಗೊಂದೊಂದು ಪ್ರಶ್ನವನ್ನು ಮಾಡಿ ಆವನನ್ನು ಪೀಡಿಸಹೋದರು. ಆದರೆ ಆ ಚಿಕ್ಕ ಪಂಡಿತನು ನಿರಾಯಾಸವಾಗಿ ಆವರೆಲ್ಲರಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟು ಮತ್ತೇನಾದರೂ ಪ್ರಶ್ನೆಗಳಿದ್ದರೆ ಕೇಳಿಕೊಳ್ಳಿರೆಂದು ಮುಂಡಿಗೆಯೊಗೆದನು, ಬಳಿಕ ಕ್ಷುದ್ರವಾದ ಪ್ರಶ್ನೆಗಳೆಲ್ಲ ನಿಂತುಹೋದವು. ಒಂದೆರಡು ವ್ಯಾಕರಣ ಆಲಂಕಾರಗಳ ಮೇಲಿನ ಪ್ರಶ್ನೆಗಳ ಸಮಾಧಾನವಾದ ಮೇಲೆ ಆ ದಿವಸದ ವಿಷಯವು ನಡೆಯಿತು. ಔತ್ಸುಕ್ಯಮಾತ್ರಮವಸಾದಯತಿ ಪ್ರತಿಷ್ಟಃ ಎಂಬ ಶಾಕುಂತಲದಲ್ಲಿಯ ಶ್ಲೋಕದ ಅರ್ಥವು ನಡೆಯಿತು. ಅನೇಕವಾದ ಪಾಠಾಂತರಗಳ ವಿಚಾರವಾಯಿತು. ಸ್ವಹಸ್ತಕೃತವಾದ ದಂಡವುಳ್ಳ ಆತಪತ್ರಕ್ಕೂ ರಾಜ್ಯಕ್ಕೂ ಇರುವ ಸಾಮ್ಯವನ್ನು ಕುರಿತು ವಿಶದವಾದ ಊಹಾಪೋಹವಾಯಿತು. ನಮ್ಮ ವಿದ್ಯಾರ್ಥಿನಿತ್ರಯರಿಗೆ ಸಂಶಯ ನಿವಾರಣವೇ ಬೇಕಾಗಿತ್ತು ಹೊರತಾಗಿ ಸ್ವಪಾಂಡಿತ್ಯದ ಪ್ರದರ್ಶನವು ಅವರಿಗೆ ಬೇಕಾಗಿದ್ದಿಲ್ಲ. ಶ್ಲೋಕಾರ್ಥವು ಮುಗಿದ ಬಳಿಕ ಮತ್ತೆ ಪ್ರಶ್ನೆಗಳ ಸುಗ್ಗಿಯೆದ್ದಿತು. ಆಗ ಚಂದ್ರಾವಲಿಯು ತನ್ನ ಸ್ತ್ರೀ ಸ್ವಭಾವಕ್ಕನುಸರಿಸಿ ಮೆಲ್ಲನೆ ಇಂದುಮತಿಯನ್ನು ಕುರಿತು “ಧ್ರುವರಾಯನ್ನು ವಿವಾಹಿತನೋ ಅವಿವಾಹಿತನೋ?” ಎಂದು ಕೇಳಿದಳು.

“ಇದಕ್ಕಿಷ್ಟೊಂದು ವಿಚಾರವೇಕೆ? ಕಾಲೇಜದ ವಿದ್ಯಾರ್ಥಿಗಳಲ್ಲಿ ವಿವಾಹಿತರಾದವರ ನಾಮಾವಲಿಯ ಪುಸ್ತಕವು ಒಂದು ಬೇರೆಯಾಗಿಯೂ, ಅವಿವಾಹಿತರ ನಾಮಾನವಲಿಯ ಪುಸ್ತಕವು ಬೇರೆಯಾಗಿಯೂ ಸಿದ್ದವಾಗಿಯೇ ಇವೆ. ಅವುಗಳನ್ನು ಬೇಕಾದವರು ಬೇಕಾದಾಗ ನೋಡಿಕೊಳ್ಳಬಹುದಷ್ಟೆ? ಧುವರಾಯನ ಹೆಸರು ಅವಿವಾಹಿತರ ಪುಸ್ತಕದಲ್ಲಿ ಕಂಡುಬರುತ್ತದೆ” ಎಂದು ಇಂದುಮತಿ ಹೇಳಿದಳು.

“ಅಭ್ಯಾಸ ನಡೆದಿರುವ ಸಮಯದಲ್ಲಿ ಈ ಕುಚೋದ್ಯವೇಕೆ ಗೆಳತಿಯರೆ? ಅಧ್ಯಪಕರು ಹೇಳುವದನ್ನು ಕೇಳಿಕೊಂಡರೆ ಹಿತವಾದೀತು.” ಎಂದು ರಮಾಸುಂದರಿಯು ಬಾದ್ಧಿವಾದ ಮಾಡಿದಳು.

ಹೀಗೆ ಆ ಕಲಭಾಷಿಣಿಯು ನಡಿಸಿರುವ ಕಲಕಲಾಟವನ್ನು ಕೇಳಿ ಧ್ರುವರಾಯನು ಅವರ ಕಡೆಗೆ ನೋಡಿ “ನಿಮ್ಮೊಳಗೆಯೇ ಗುಜುಗುಜು ನಡೆಸಿರುವದೇಕೆ? ನಿಮಗೇನಾದರೂ ಕೇಳುವದಿದ್ದರೆ ಸಂಕೋಚವಿಲ್ಲದೆ ನನ್ನನ್ನೇ ಕೇಳಿದರಾಯಿತು” ಎಂದು ಸುಮುಖವನ್ನು ತಾಳಿ ನುಡಿದರೂ ಕಲಕಲಾಟವನ್ನು ಮಾಡಬೇಡಿರೆಂದು ಅವನು ಪರ್ಯಾಯದಿಂದ ಸೂಚಿಸಿದನು. ಆದರೆ ಆ ಲಲನೆಯರು ಧ್ರುವರಾಯನ ವಿವಾಹ ಆವಿವಾಹವನ್ನು ಕುರಿತು ನಡಿಸಿದ ಹರಟೆಗೆ, ಅವನಾಡಿದ ಮಾತು ಕಾಕತಾಳೀಯವಾಗಿ ಸಮರ್ಪಕವಾದದ್ದು ಕಂಡು ಆ ಮಾನಿನಿಯರೆಲ್ಲರಿಗೆ ನಗೆ ಬಂದಿತು. ಅತಿ ಮರ್ಯಾದ ಶೀಲೆಯಾದ ರಮಾಸುಂದರಿಯು ಕೂಡ ನಕ್ಕದ್ದನ್ನು ಕಂಡು ಧ್ರುವರಾಯನು ತಾನು ಅಪಹಾಸಕ್ಕೆ ಪಾತ್ರನಾಗಿರುವೆನೇನೆಂದು ಶಂಕಿಸಿ “ಏನು ಸಮಾಚಾರವದು ರಮಸುಂದರೀಬಾಯೀ?” ಎಂದು ಮಂದಸ್ಮಿತನಾಗಿ ಕೇಳಿದನು. ಅವನ ಮಂದಹಾಸವು ಆ ಸುಂದರಿಯರ ವಿನೋದವನ್ನು ಕೊಂದಿತು. ಧ್ರುವರಾಯನ ಪ್ರಶ್ನೆಗೆ ಏನು ಉತ್ತರವೆಂದು ಇಂದುಮತಿ ಚಂದ್ರಾವಣಿಯರು ಬೆದರಿ ನಿರುತ್ತರರಾಗಿ ಕುಳಿತರು. ರಮಾಸುಂದರಿಯೇ ಆನಿರ್ವಾಹಕ್ಕಾಗಿ ಲಜ್ಜೆಯಿಂದ ಆರಕ್ತವಾಗಿರುವ ತನ್ನ ಮುಖವನ್ನು ಬಾಗಿಸಿ “ಏನೂ ಇಲ್ಲ. ನಮಗೆಯೇ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯದ ಮೇಲೆ ವ್ಯರ್ಥವಾಗಿ ಪ್ರಶ್ನೆ ಕೇಳುವದೇಕೆಂದು ನಾವು ಮಾತಾಡುತ್ತಿದ್ದೆವು. ಗಲಾಟವಾದದ್ದಕ್ಕೆ ಕ್ಷಮೆ ಇರಬೇಕು” ಎಂದು ಬಿನ್ನಯಿಸಿದಳು.

ರವಾಸುಂದರಿಯ ಧುವರಾಯನೂ ಶಾರದಾ ಪ್ರಸಾದ ಕಾಲೇಜ ದಲ್ಲಿರಹತ್ತಿ ಏಳೆಂಟು ತಿಂಗಳು ಆಗಿ ಹೋಗಿದ್ದರೂ ಅವರವರಲ್ಲಿ ಪರಿಚಯ ವುಂಟಾಗಿದ್ದಿಲ್ಲ. ಮೊನ್ನೆಯೇ ಅವಳು ಅವನಿಗೆ ಪತ್ರ ಬರೆದ ಲೇಖವನ್ನು ತರಿಸಿಕೊಂಡಿದ್ದಳು. ಇಂದು ಅವರವರ ನಡುವೆ ಮೇಲೆ ವಿವರಿಸಿದ ಒಂದೇ ಒಂದಾದ ಪ್ರಶ್ನೊತ್ತರವು ನಡೆಯಿತು. ಚಕಮಕ ಕಲ್ಲಿನ ಒಂದೇ ಹೊಡೆತದಿಂದ ಒಮ್ಮೊಮ್ಮೆ ಬೆಂಕಿಯ ಕಿಡಿಯು ಹೊರಡುವುದುಂಟು. ಒಂದೇ ಬೆಂಕಿಯ ಕಿಡಿಯಿಂದ ಏನೇನು ಚಮತ್ಕಾರಗಳುಂಟಾಗಬಲ್ಲವೆಂಬುದನ್ನು ಯಾರು ಹೇಳ ಬಲ್ಲರು? ಕುಚೋದ್ಯ ಮಾಡಿದವರಾದ ಇಂದುಮತಿ ಚಂದ್ರಾವಲಿಯರೊತ್ತಟ್ಟಿಗೆ ಉಳಿದರು. ಧ್ರುವರಾಯನ ಪ್ರಶ್ನವು ರಮಾಸುಂದರಿಯ ಮೇಲೆ ಬಿದ್ದಿತು. ಆ ಚಮತ್ಕಾರವಾದ ಪ್ರಶ್ನಕ್ಕೆ ನಿರ್ವಾಹವಿಲ್ಲದೆ ಉತ್ತರವನ್ನು ಕೊಡುವಾಗ ರಮಾಸುಂದರಿಯು ಒಳಿತಾಗಿ ನಾಚಿಕೊಂಡಳು, ಆ ನಾಚಿಕೆಯ ಹಿಡಿತಕ್ಕಾಗಿ ಸಖಿಯರ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ. ಇತ್ತ ನೋಟಕ್ಕೆ ಹಾದಿ ಕಟ್ಟಾಗಿರಲು ಆ ನೋಟವು ಫಕ್ಕನೆ ಧುವರಾಯನ ಸುಂದರವಾದ ಮುಖದ ಕಡೆಗೆ ಧಾವಿಸಿತು. ಹಗಲು ಪಂಜಿನ ಚಮತ್ಕಾರವಾದ ಪ್ರಕಾಶದಲ್ಲಿ ವಸ್ತುಗಳ ಸೌಂದರ್ಯವು ಎದ್ದು ಕಾಣುವಂತೆ ರಮಾಸುಂದರಿಯ ಹೃದಯದಲ್ಲಿ ಉದ್ಭವಿಸಿದ ಕೆಲವೊಂದು ವಿನೂತನವಾದ ಜ್ಯೋತಿಯ ಮೂಲಕ ಧುವರಾಯನ ಮುಖದ ಸೌಂದರ್ಯ ಆ ಕ್ಷಣದಲ್ಲಿ ಮನ್ಮಥನ ಸೌಂದರ್ಯವನ್ನು ಲಜ್ಜಿಸುವಂತೆ ಕಂಡಿತು. ಒಂದು ಪಳದ ಎಷ್ಟನೆಯ ಅಂಶವೋ, ಅಷ್ಟು ಅಲ್ಪ ಕಾಲ ಮಾತ್ರ ರಮಾಸುಂದರಿಯ ದೃಷ್ಟಿಯು ಸಾಭಿಲಾಷವಾಗಿ ಧ್ರುವರಾಯನ ಮುಖಚಂದ್ರಮದಲ್ಲಿ ನೆಲ್ಲಿಸಿದ್ದರೂ ಅಲ್ಪಾವಧಿಯಲ್ಲಿ ಅನುರಾಗಯುಕ್ತವಾದವುಗಳಾದ ಪರಸ್ಪರರ ಮೂರ್ತಿಗಳು ಪರಸ್ಪರರ ಹೃದಯಪಟಗಳ ಮೇಲೆ ಬಿಂಬಿತವಾದವು (ಫೋಟೋ ಹೊರಟವು). ತತ್‌ಕ್ಷಣವೇ ರಮಾಸುಂದರಿಯು ಪ್ರಜ್ಞೆಯನ್ನು ತಾಳಿ ತನ್ನ ದೃಷ್ಟಿಯನ್ನು ಮರಳಿ ಎಳಕೊಂಡು ಇನ್ನು ಮೇಲೆ ಇಂಥ ಪ್ರಮಾದವಾಗಕೂಡದೆಂದು ನಿಶ್ಚಯಿಸಿಕೊಂಡಳು. ಪಾಪ, ಬಿಂಬನಿರ್ದೇಶದ ವಾರ್ತೆಯೇ ಆ ಸಮಯದಲ್ಲಿ ಅವಳಿಗಿರಲಿಲ್ಲ. ತಲೆನೋವಿನ ನೆವಮಾಡಿ ಕೊಂಡು ರಮಾಸುಂದರಿಯು ಅಲ್ಲಿಂದೆದ್ದವಳೇ ಮನೆಗೆ ಬಂದುಬಿಟ್ಟಳು.

ಈ ಸಂಗತಿಗಳೆಲ್ಲ ಮರೆಮಾತಿಗೆ ಬಿದ್ದು ಹೋದವು. ಮತ್ತೆ ಆ ಸತಿಯರೆಲ್ಲರೂ ಯಾವ ಪ್ರಕಾರದ ವ್ಯವಧಾನವಿಲ್ಲದೆ ತಮ್ಮ ಅಭ್ಯಾಸಕ್ರಮವನ್ನು ನಡೆಸಿದರು. ಗಾನವಾದನ ಕಲೆಗಳ ಅಭಿವೃದ್ಧಿಯಾಯಿತು. ಸೂಪಶಾಸ್ತ್ರ ಪ್ರಾವೀಣ್ಯದ ಪ್ರಯೋಗಗಳಾದವು. ರಂಗವಲ್ಲಿ ಚಿತ್ರ ಕಲೆಗಳ ಪ್ರದರ್ಶನಗಳಾದವು. ಹೀಗೆ ವಿಲಾಸದಿಂದಲೂ ಉಲ್ಲಾಸದಿಂದಲೂ ಆಸ್ಥೆಯಿಂದಲೂ ಸ್ತ್ರೀ ಶಿಕ್ಷಣದ ಮಹತ್ಕಾರ್ಯವು ಯಶಸ್ಕರವಾಗಿ ನಡೆಯಿತು. ಹೀಗೆ ಕೆಲವು ದಿವಸಗಳು ಕಳೆದ ಬಳಿಕ ಒಂದು ರವಿವಾರ ದಿನ ರಮಾಸುಂದರಿಯು ಸಹಾಧ್ಯಾಯಿನಿಯರಾದ ಇಂದುಮತಿ ಚಂದ್ರಾವಲಿಯರು ಗೃಹವ್ಯವಸ್ಥೆಯ ಶಿಕ್ಷಣಕ್ಕಾಗಿ ಜಾನಕೀದೇವಿಯರ ಮನೆಯಲ್ಲಿ ಇರಹೋದರು. ರಮಾಸುಂದರಿಯು ಓರ್ವಳೇ ಬೇಸತ್ತು ಪೀಯಾನೋಪೇಟಿಯನ್ನು ತೆಗೆದು, ನಲದಮಯಂತೀನಾಟಕ ದೊಳಗಿನ “ಬಾಳಿದಿಯಾ ಮದನಾ, ನಮಗಾಗಿ” ಎಂಬ ಪದವನ್ನು ಬಾರಿಸುತ್ತಿದ್ದಳು. ಕರುಣಾರಸವ್ಯಂಜಕವಾದ ಸ್ವರಗಳು ಪಿಯಾನೋದಲ್ಲಿ ಬಹು ಮನೋವೇಧಕವಾಗಿ ಪರಿವರ್ತಿಸುತ್ತಿರಲು ಆ ನವ ಸುಂದರಿಯು ತಲ್ಲೀನಳಾಗಿ ಹೊರಗಿನ ಜಗತ್ತನ್ನು ಮರೆತು ಕುಳಿತಿದ್ದಳು. “ಬಾಳಿದಿಯಾ ಮದನಾ” ಎಂದು ಪುನರಾವರ್ತನವನ್ನು ಅವಳು ಮಾಡುವಷ್ಟರಲ್ಲಿ ಯಾವನೋ ಆವಳೆದುರಿನಲ್ಲಿ ಬಂದು ನಿಂತನು. ಮದನನೇ ಏನು? ಅಲ್ಲ, ಅವಳು ಅವನ ಪರಿಚಯದವನಾದ ಧ್ರುವರಾಯನೇ. ನೋಡನೋಡುವಷ್ಟರಲ್ಲಿ ಕಾಚ ಪಾತ್ರೆಯು ಒಡೆದು ಪುಡಿಪುಡಿಯಾಗುವಂತೆ ಧ್ರುವರಾಯನ ಪಾದಾಘಾತದಿಂದ ರಮಾಸುಂದರಿಯ ಉತ್ಸಾಹಭಂಗವಾದಂತಾಗಿ ಅವಳು ತಟಸ್ಥಳಾಗಿ ನಿಂತುಕೊಂಡಳು. “ಯಾಕೆ ಬಂದಿರುವನಾದೀತು” ಎಂದು ಅವಳು ಮನಸ್ಸಿನಲ್ಲಿಯೇ ಚಿಂತಿಸಿದರೂ ಹಾಗೆ ಕೇಳಲು ಅವಳಿಗೆ ಬಾಯಿ ಬರಲೊಲ್ಲದು. ಎದೆ ಡವಡವನೆ ಹಾರುತ್ತಿತ್ತು.

ಧ್ರುವರಾಯನ ಮನಸ್ಸಿನ ಸ್ಥಿತಿಯಾದರೂ ಹಾಗೆಯೇ ಆಗಿತ್ತು. ಆ ಸಮಯದಲ್ಲಿ ರಮಾಸುಂದರಿಯು ತನ್ನ ಮಂದಿರದಲ್ಲಿ ಓರ್ವಳೇ ಆಗಿರಬಹುದೆಂದು ನೆನಿಸಿ ಅವನು ಸಮಯವನ್ನು ಸಾಧಿಸಿ ಅಲ್ಲಿಗೆ ಬಂದಿದ್ದನಾದರೂ ಅಲ್ಲಿ ಅವಳನ್ನೇಕಾಕಿನಿಯನ್ನು ಕಂಡಾಕ್ಷಣವೇ ಅವನೆದೆಯಲ್ಲಿ ವಿದ್ಯುದಾಘಾತವಾದಂತಾಯಿತು. ಉದ್ವೇಗದಿಂದ ಒಮ್ಮೆಲೆ ಎದೆಯುಬ್ಬಿ ಅವನ ಅಂಗಾಂಗಗಳಲ್ಲೆಲ್ಲ ಒಳಗಿಂದೊಳಗೆ ರಕ್ತವು ಚಿಮ್ಮಾಡಿ ಹರಿದಾಡಲಾರಂಭಿಸಿದ್ದರಿಂದ ಪಂಚೇಂದ್ರಿಯ ವ್ಯಾಪಾರಗಳೆಲ್ಲ ಕಟ್ಟಾಗಿ ನಿಂತವು. ಕೆಲವೊಂದು ಮನೋಗತವನ್ನು ಅವನು ರಮಾಸುಂದರಿಗೆ ಅರುಹಬೇಕೆಂದು ಬಂದದ್ದು ನಿಜ; ಆದರೆ ಒಡೆದು ಹೋದ ಅವನ ಹೃದಯದೊಳಗಿನ ವಿಚಾರಗಳೆಲ್ಲ ಸೇರಿ ಹೋಗಿದ್ದವು. ಮೂಢನಂತೆ ನಿಂತುಕೊಂಡನು. ಮರ್ಯಾದಿಶೀಲೆಯಾದ ಆ ತರುಣಿಯೇ ಸಮಯವನ್ನರಿತು “ಬನ್ನಿರಿ, ಏನು ಸಮಾಚಾರ?” ಎಂದು ಹಾಗೂ ಹೀಗೂ ಮಾಡಿ ಶಿಷ್ಟಾಚಾರದ ಋಣದಿಂದ ಮುಕ್ತಳಾದಳು.

“ವಿಶೇಷವೇನೂ ಇಲ್ಲ. ಆ ನನ್ನ ಲೇಖವನ್ನು ಓದಿದ್ದಾಯಿತೇನು?” ಎಂದು ಧ್ರುವರಾಯನು ಆಸ್ವಾಧೀನಚಿತ್ತನಂತೆ ವಿಚಾರ ವಾಕ್ಯ ರಚನೆಗಳನ್ನು ಏಕೀಕರಿಸಲು ಪ್ರಯತ್ನ ಮಾಡುತ್ತೆ ಕೇಳಿದನು.

“ತಂದ ದಿವಸವೇ ಓದಿದೆನು. ಈಗಲೇ ಬೇಕಾಗಿರುವದೇನು? ಈ ಸುಲಲಿತವಾದ ಲೇಖವನ್ನು ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಮಾಡಿದ್ದೇನೆ” ಎಂದು ಆ ಚಾರುಹಾಸೆಯು ಬಹು ವಿನಯದಿಂದ ನುಡಿದಳು.

“ಅವಶ್ಯ ಅವಶ್ಯ. ಬೇಕಾದಷ್ಟು ದಿವಸ ಇಟ್ಟು ಕೊಳ್ಳಿರಿ. ಲೇಖವು ನಿಮ್ಮ ಮನಸ್ಸಿಗೆ ಬಂದಿರುವದೇನು?”

ರಮಾಸುಂದರಿಯು ಈಗ ಪ್ರಶಸ್ತವಾಗಿ ನಕ್ಕಳು. “ಧ್ರುವರಾವ್, ಪ್ರತ್ಯಕ್ಷ ಪಂಡಿತಜೀಯವರು (ಡಾಕ್ಟರ ಚೌಧರಿ) ತಲೆದೂಗಿದ ಲೇಖದ ವಿಷಯವಾಗಿ ನಾನು ಅಭಿಪ್ರಾಯವನ್ನು ಕೆಡಿಸಲು ಯೋಗ್ಯಳೆ ? ಇದಕ್ಕೂ ದೊಡ್ಡ ದೊಡ್ಡವಾದ ಲೇಖಗಳನ್ನು ನೀವು ಬರೆದದ್ದು ನೋಡುವ ಭಾಗ್ಯವು ನನ್ನದಿರಲಿ!”

“ರಮಾಸುಂದರೀಬಾಯಿ, ನಿಮ್ಮ ಅಭಿಪ್ರಾಯವನ್ನು ಕೇಳಿ ನಾನು ಕೃತಾರ್ಥನಾದೆನು. ನೀವು ಹೇಳಿದಂತೆ ಅನೇಕ ಲೇಖಗಳನ್ನು ಬರೆಯಬಹುದಾದರೂ ಮನಸ್ಸಿಗೇಕೋ ಉತ್ಸಾಹವಿಲ್ಲದಂತಾಗಿದೆ.” ಎಂದು ಧ್ರುವರಾಯನು ದೀನಮುಖನಾಗಿ ನುಡಿದನು.

“ಹಾಗೆ ಕಾಣುತ್ತದೆ. ನಿಮ್ಮ ಮುಖದ ತೇಜಸ್ಸು ಕಡಿಮೆಯಾಗಿದೆ. ಸೊರಗಿಯೂ ಇರುವಿರಿ, ಏನು ಚಿಂತೆಯಾಗಿದೆ? ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರಷ್ಟೆ?”

ಧ್ರುವರಾಯನು ವಿಷಾದದಿಂದ ನಕ್ಕು “ದೇವರ ಕೃಪೆಯಿಂದ ಮನೆಯಲ್ಲಿ ಎಲ್ಲರೂ ಕೇಮದಿಂದಿರುವರು” ಎಂದು ಹೇಳಿದನು.

“ಹಾಗಾದರೆ ಚಿಂತೆಗೆ ಮತ್ತಿನ್ನೇನು ಕಾರಣ?”

“ಚಿಂತೆಗೆ ಸಾವಿರ ಕಾರಣಗಳು, ಸೌಖ್ಯದ ಕಲ್ಪನೆಯನ್ನು ಏರಿಸಿ ಕಟ್ಟುತ್ತೆ ನಡೆದರೆ ಅಲ್ಲಿಯೇ ಚಿಂತೆಯು. ಮರದ ತುದಿಯಲ್ಲಿರುವ ಹಣ್ಣನು ಬಯಸಿದರೆ ಅದು ಹೇಗೆ ತಾನೆ ಸುಲಭವಾಗಿ ಸಾಧ್ಯವಾದೀತು?” ಎಂದು ಆ ತರುಣನು ರಮಾಸುಂದರಿಯ ಮುಖಾರವಿಂದವನ್ನು ಔತ್ಸುಕ್ಯದಿಂದ ನೋಡುತ್ತೆ ನುಡಿದನು.

ಚಿಂತೆಯ ಕಾರಣದ ಭಾಸವು ರಮಾಸುಂದರಿಯ ಮನಸ್ಸಿಗೆ ಆಕಸ್ಮಾತ್ತಾಗಿ ಜಗ್ಗನೆ ಹೊಳೆದಂತಾಯಿತು. ಧುವರಾಯನಿನ್ನು ಏನು ಹೇಳುವನೋ ಏನು ಬಿಡುವನೋ ಹೇಗೆ ಮಾಡಲೆಂದು ಅವಳು ಕಾತರಳಾದಳು.

“ರಮಾಸುಂದರಿ, ಕಾತರಳಾಗದೇಡ, ಅವಿಚಾರದ ಮಾತುಗಳನ್ನೇ ನಾನು ಆಡತಕ್ಕವನಲ್ಲ. ನನ್ನ ಚಿಂತೆಯ ಕಾರಣವನ್ನು ನಿನ್ನ ಮುಂದೆ ಹೇಳಿದರೆ ಪ್ರಯೋಜನವಾಗುವದೋ ಇಲ್ಲವೋ ಎಂಬ ಮಾತಿನ ಪೂರ್ವಾಪರವನ್ನು ಚನ್ನಾಗಿ ತೂಗಿ ನೋಡಿದ ಬಳಿಕ ನಿನಗೆ ತಿಳಿಸಬಹುದಾದರೆ, ತಿಳಿಸುವೆನು.” ಎಂದು ಮುಗಿಸಿದವನೇ ಆ ಪಂಡಿತನು ಮೂಢನಂತೆ ಓಡಿ ಹೋದನು.

ದೇವರು ಹೇಳುವ ಪೂಜಾರಿಯ ಸಂದಿಗ್ಧವಾದ ನುಡಿಗಳಂತೆ ಧ್ರುವರಾಯನೇನೋ ಮಾತನಾಡಿ ಹೋದಬಳಿಕ ರಮಾಸುಂದರಿಗೆ ಒಳ್ಳೆ ವಿಚಾರ ಉಂಟಾಯಿತು. ಅವನ ಮನಸ್ಸಿನೊಳಗಿನ ಭಾವವೇನಿರುವದೋ ಇರಲಿ. ಅವನ ಚಿಂತೆಯ ಚಿಂತೆ ನನಗೇಕೆ? ಮನೋಜ್ಞನಾದ ತರುಣನ ನಡೆ ನುಡಿಗಳನ್ನು ನಿರೀಕ್ಷಿಸುವದೂ, ಅವನ ಹಿತಾಹಿತಗಳ ವಿಷಯವಾಗಿ ವಿಚಾರ ಮಾಡುವದೂ ಸ್ತ್ರೀಯರಲ್ಲಿ ಪ್ರೇಮದ ಪ್ರಥಮ ಲಕ್ಷಣವೆಂದು ಅನುಭವಿಕರ ಅಭಿಪ್ರಾಯವು. ಇದೊಂದೇಕೆ, ಮೊನ್ನೆದಿನ ಆ ಹೋಯ್ನಾಲೆಯಾದ ಇಂದುಮತಿ ಪ್ರೇಮದ ಮೀಮಾಂಸೆಯನ್ನು ಕುರಿತು ಹರಟೆ ಕೊಚ್ಚುತ್ತಿರುವಾಗ ಅಂದದ್ದು: “ರಮಾಸುಂದರಿ, ಪ್ರಿಯನಲ್ಲಿ ನಿನ್ನ ಪ್ರೇಮವಿನ್ನೂ ನೆಲೆಸಿಲ್ಲವೆಂದು ತಿಳಿ; ಆದರೆ ನಿನ್ನ ತಂದೆಯವರು ನಿನ್ನನ್ನು ವಿಜಯಪುರದ ಧ್ರುವರಾಯನಿಗೆ ಕೊಡುವೆವೆಂದು ಸಂಕಲ್ಪ ಮಾಡಿದರೆ ಒಲ್ಲೆನೆನ್ನಲು ನೀನು ಸಿದ್ಧಳಾಗಿರುವೆಯೇನು? ಒಲ್ಲೆನೆಂದು ಸಹಸಾ ಹೇಳುವದಾಗದಿದ್ದರೆ ಅಲ್ಲಿಯೇ ಪ್ರೇಮದ ಉತ್ಪತ್ತಿಯು.” ಆ ಗೈಯಾಳಿಯ ವಾದವು ಇನ್ನೂ ನನ್ನ ಎದೆಯಲ್ಲಿ ಕಟೆಯುತ್ತಲಿದೆ. ವಿಚಾರ ಮಾಡಿಮಾಡಿದ ಹಾಗೆ ಪ್ರೇಮದ ಬೇರು ಹೆಚ್ಚು ಹೆಚ್ಚಾಗಿ ತಳವೂರಿಕೊಂಡಂತೆ ಕಾಣುತ್ತದೆ.”

“ಸಾಕು ಸಾಕು! ಈ ವಿಚಾರವೇ ಬೇಡ” ಹೀಗೆ ಪ್ರತಿಜ್ಞೆ ಮಾಡಿಕೊಂಡು ರಮಾಸುಂದರಿಯು ಒಳ್ಳೇ ಆಢ್ಯತೆಯಿಂದ ತಲೆ ಎತ್ತಿ ಎಡೆಯಾಡಲಾರಂಭಿಸಿದಳು. ಒಳ್ಳೇ ವೇಗದಿಂದ ಭ್ರಮಿಸುತ್ತಿರುವ ವಿಚಾರಚಕ್ರವನ್ನು ತಟ್ಟನೆ ತಡೆದು ನಿಲ್ಲಿಸುವನೆಂದರೆ ಯೋಗಿಯಾದವನಿಗೂ ಅಸಾಧ್ಯವು. ರಮಾಸುಂದರಿಯ ಮನಸ್ಸು ಮತ್ತೆ ಆ ವಿಚಾರಚಕ್ರದ ಗಿರಕಿಗೆ ಸಿಕ್ಕಿ ಸುತ್ತಿಕೊಂಡು ನಡೆಯಿತು.

“ಇಲ್ಲಿಗೆ ಧ್ರುವರಾಯನು ಬಂದ ಉದ್ದೇಶವೇನು? ಲೇಖವನ್ನು ಮರಳಿ ತೆಗೆದುಕೊಳ್ಳಲಿಕ್ಕೆಯ? ಹಾಗೆ ತೋರುವದಿಲ್ಲ. ಕಾಲೇಜದಲ್ಲಿ ನನಗೆ ಸಮಕ್ಷಮವಾಗಿ ಹಾಗೆ ಹೇಳಿದ್ದರೆ ನಾನು ಅದನ್ನು ಕಳಿಸಿಕೊಡುತ್ತಿದ್ದೆನು; ಇಲ್ಲವೆ, ಜವಾನನೊಡನೆ ಹೇಳಿ ಕಳಿಸಿದ್ದರೂ ಆಗುವಂತಿತ್ತು. ಈ ಸಂಸ್ಥೆಯ ಕಾರ್ಯಕ್ರಮವನ್ನು ಓದಿದವರಿಗೆ ಇಂದು ಈ ಕೋಣೆಯಲ್ಲಿ ನಾನೋರ್ವಳೇ ಇರುವೆನೆಂಬ ಮಾತು ತಿಳಿಯದೆ ಇರದು. ಈ ಸಂಗತಿಯನ್ನರಿತು ಧ್ರುವರಾಯನು ಹೊತ್ತು ಸಾಧಿಸಿಕೊಂಡು ಬಂದಿದ್ದನೇನು? ಇರಬಹುದು, ಆದರೆ ಆ ಸುಶೀಲನು ದುರ್ವಿಚಾರಪ್ರೇರಿತನಾಗಿ ಬರಲಿಲ್ಲ. ಅವನ ಆಚರಣವೇ ತಾನಾಗಿ ಹೇಳುತ್ತದಲ್ಲ! ಹಾಗಾದರೆ ಆ ಅವಿವಾಹಿತನಾದ ತರುಣನು ಪ್ರೇಮಪರವಶನಾಗಿ ತನ್ನ ಮನೋಗತವನ್ನು ನನಗೆ ತಿಳಿಸಲು ಬಂದಿದ್ದನೇನು? ಆಗಿದ್ದಿತು. ನಾನೋರ್ವಳೇ ಸರ್ವಗುಣ ಸಂಪನ್ನೆ ಯಾದ ಚದುರೆಯೇನು?” ಈ ಪ್ರಶ್ನಕ್ಕೆ ಅವಳ ಆತ್ಮವಿಶ್ವಾಸದ ನಗೆಯೇ ಸಮರ್ಪಕವಾದ ಉತ್ತರವಾಗಿತ್ತು.

ಪ್ರಾತಃಸ್ನಾನ, ಅಭ್ಯಾಸ, ಭೋಜನ, ಕಾಲೇಜದಲ್ಲಿಯ ಶಿಕ್ಷಣ, ಸಖೀ ಜನರ ಸಹವಾಸಗಳು ಚಕ್ರನೇಮಿಕ್ರಮದಿಂದ ನಡೆಯುತ್ತಿದ್ದರೂ ಧ್ರುವನ ನಿಶ್ಚಲವಾದ ಮೂರ್ತಿಯು ರಮಾಸುಂದರಿಯ ಕಣ್ಣು ಮುಂದೆ ಕಟ್ಟಿಯೇ ಇರುತ್ತಿತ್ತು. ಏಕಾಂತವಾಸದಲ್ಲಿದ್ದರಂತೂ ಆ ವಿಚಾರದಲ್ಲಿ ಅವಳು ಸಮಗ್ರವಾಗಿ ಮುಳುಗಿಹೋಗುತ್ತಿದ್ದಳು. ಅದಕ್ಕಾಗಿ ಅವಳು ಸಹಸಾ ಏಕಾಕಿನಿ ಯಾಗಿರುತ್ತಲೇ ಇದ್ದಿಲ್ಲ. ಒಂದು ದಿನ ಅವಳ ಈ ಸ್ಥಿತಿಯಲ್ಲಿ ಅಂಚೆಯವನು ಅವಳ ಕೈಯಲ್ಲಿ ಒಂದು ಪತ್ರವನ್ನು ತಂದುಕೊಟ್ಟನು, ಮೇಲ್ವಿಳಾಸವು ಧ್ರುವರಾಯನ ಹಸ್ತಾಕ್ಷರದ್ದು. ಪತ್ರದ ಅಭಿಪ್ರಾಯವು ಆಗಲೆ ಅವಳಿಗೆ ವಿದಿತವಾಯಿತು. ಹುಟ್ಟಿನಲ್ಲಿ ಜೇನಿರುವದೆಂಬದನ್ನು ಹಿಂಡಿ ತೋರಿಸಿ ಬೇಕೆ? ರಮಾಸುಂದರಿಯು ಆ ಪತ್ರವನ್ನು ಮೇಜಿನ ಮೇಲಿಟ್ಟು ಓದುವಷ್ಟು ಮನಃಸ್ವಾಸ್ಥವಾಗಲೆಂದು ಎರಡೂ ಕೈಗಳಿಂದ ಕಣ್ಣು ಮುಚ್ಚಿಕೊಂಡು ಒಳಿತಾಗಿ ಉಸುರಾಡಿಸುತ್ತೆ ಕುಳಿತುಕೊಂಡಳು.

ಅಂಥ ಪತ್ರವನ್ನು ಹಾಗೆ ಇಟ್ಟು ಕೊಂಡರೆ ಅದು ಸುಮ್ಮನೆ ಕುಳ್ಳಿರಗೊಡಿಸುವದೆ? ಎರಡು ಮೂರು ನಿಮಿಷಗಳಲ್ಲಿಯೇ ಅವಳು ಅದನ್ನು ಒಡೆದು ಓದಿದಳು. ಓದುವಾಗಲೆ ಅವಳ ಸರ್ವಾಂಗವೆಲ್ಲ ಬೆವತಿತು. ಅವಳ ಮುಖದಲ್ಲಿ ಒಮ್ಮೆ ದರ್ಪವೂ ಒಮ್ಮೆ ಮಂದಹಾಸವೂ ಒಮ್ಮೆ ಲಜ್ಜೆಯ ರಕ್ತತೆಯೂ ಒಮ್ಮೆ ವಿಚಾರದ ಗಾಂಭೀರ್ಯವೂ ಕ್ರಮಕ್ರಮವಾಗಿಯೂ ಸಂಕುಲಿತವಾಗಿಯೂ ತೋರಿದವು. ಓದುವದಾದ ಕೂಡಲೆ ಅವಳು ಆ ಪತ್ರವನ್ನು ತನ್ನ ಉಡಿಯಲ್ಲಿಟ್ಟು ಕೊಂಡು, ಉಪವನದಲ್ಲಿ ಅಡ್ಡಾಡ ಹೋದಳು. ಆಕೆ, ಅವಸರದಲ್ಲಿ ಆ ಪತ್ರವು ಇಲ್ಲಿ ಜಾರಿ ಬಿದ್ದಿದೆ. ಇದೇ ಸಮಯ ಓದಿ ಕೊಳ್ಳಿರಿ.

ಪ್ರಿಯ ರಮಾಸುಂದರಿ,

ನನ್ನಲ್ಲಿ ಜನಿಸಿದ ಕೆಲವೊಂದು ಅಭಿಪ್ರಾಯವನ್ನು ನಿನಗೆ ನಿವೇದಿಸಲೆಂದು ಮೊನ್ನೆದಿನ ಬಂದಿದ್ದೆನು. ಆದರೆ ಆಗ ನನ್ನ ಮನಸ್ಸು ಯಾಕೋ ಸಂಕೋಚಗೊಂಡಿದ್ದರಿಂದ ಹಾಗೆಯೇ ಹೊರಟುಹೋದೆನು. ನನ್ನ ಅಭಿಪ್ರಾಯವು ಚತುರೆಯಾದ ನಿನಗೆ ಅವಶ್ಯವಾಗಿ ವಿದಿತವಾಗಿರಲಿಕ್ಕೆ ಬೇಕು. ಸಂದೇಹಚ್ಛೇದವಾಗದಿದ್ದಲ್ಲಿ ಈ ಪತ್ರದ ಮೊದಲನೆಯ ವಳಿಯಲ್ಲಿಯ ಸಂಬೋಧನವು ಸೂಚಕವಾಗಿರುವದು. ನಾಳಿಗೆ ನಾನು ಮತ್ತೆ ನಿನ್ನ ಸನ್ನಿಧಾನಕ್ಕೆ ಬಂದು ನನ್ನ ಮನಸ್ಸನ್ನು ನಿನ್ನ ಮುಂದೆ ತೋಡಿಕೊಳ್ಳುವೆನು. ಇದು ನಾಳಿನ ಸಂದರ್ಶನದ ಪೂರ್ವ ಪೀಠಿಕೆಯು.

ನಿನ್ನ….. (ಯಾರೆಂದು ಹೇಳಲಿ?)
ಧ್ರುವರಾಯ

ಭ್ರಮಿಷ್ಟಳಂತೆ ರಮಾಸುಂದರಿಯು ಉಪವನದಲ್ಲಿ ಆತ್ತಿತ್ತ ಅಡ್ಡಾಡಿದಳು. ಸ್ನಿಗ್ಧವಾದ ತರಚ್ಛಾಯೆಯಲ್ಲಿರುವ ಶಿಲಾತಲದಲ್ಲಿ ವಿಶ್ರಮಿಸಿ ಕೊಳ್ಳಬೇಕೆಂದು ಹೊರಟವಳು ಅದನ್ನು ಮರೆತು ಕಾರಂಜಿಯು ಪುಟಿಯುತ್ತಿರುವ ಸ್ಥಳಕ್ಕೆ ಬಂದಳು, “ಈ ಸ್ಥಳಕ್ಕಾದರೂ ಏನಾಗಿದೆ?” ಎಂದು ಸಮಾಧಾನ ಹೊಂದಿ ಆ ಸುಂದರಿಯು ಅಲ್ಲಿರುವ ಅಂದವಾದ ಚಿಕ್ಕ ಹೊಂಡದಲ್ಲಿ ಕೈಕಾಲು ಮೋರೆಗಳನ್ನು ತೊಳೆದು ಬಳೆಯಲ್ಲಿಯೇ ಇರುವ ಕಟ್ಟಿಯ ಮೇಲೆ ಕುಳಿತು ವಿಚಾರ ನಡಿಸಿದಳು.

“ಇದಕ್ಕೂ ವ್ಯಕ್ತವಾಗಿ ಅವರು ಇನೆಂತು ಬರೆಯಬೇಕು? ನಾಳಿಗೆ ಬಂದು ಎರಡರಲ್ಲಿ ಒಂದು ಹೇಳೆಂದರೆ ಏನು ಹೇಳಲಿ? ಅನುಮತಿಸಲೆ? ಅನುಮತಿಸಲು ನಾನು ಸ್ವತಂತ್ರಳಲ್ಲ; ತಂದೆ ತಾಯಿಗಳು ಕೊಟ್ಟ ಮನೆಗೆ ಹೋಗತಕ್ಕವಳು, ಒಲ್ಲೆನೆಂದು ಹೇಳಲಿಕ್ಕಾದರೂ ನಾನೆಲ್ಲಿ ಸ್ವತಂತ್ರಳು? ಮನಸ್ಸು ಮೊದಲೇ ಅವರ ಸ್ವಾಧೀನವಾಗಿ ಹೋಗಿದೆ,” ಎಂದು ವಿಚಾರಿಸುತ್ತೆ ರಮಾಸುಂದರಿಯು ಫಕ್ಕನೆ ಎದ್ದು ಪ್ರಫುಲ್ಲಿತವಾದ ದವನದ ದಳವನ್ನು ಚಿವುಟಿ ಮೂಸಿನೋಡಿ “ದವನದ ಸುಗಂಧವೇ ಇದು, ನನಗೆ ಮತಿಭ್ರಮವಿನ್ನೂ ಆಗಿಲ್ಲ” ಎಂದು ಒಳಿತಾಗಿ ನಕ್ಕು, ಮತ್ತೇನೋ ವಿಚಾರಸುತ್ತೆ ಅಡ್ಡಾಡಿ ಮತ್ತೆ ಮೊದಲಿನ ಸ್ಥಳದಲ್ಲಿ ಬಂದು ಕುಳಿತಳು. “ಬ್ರಹ್ಮಾನುಕೂಲವಿದ್ದಂತೆ ಆದೀತು. ಆದರೆ ಇಂದಿಗೆ ನನ್ನ ವಿದ್ಯಾಭ್ಯಾಸಕ್ಕೆ ಕೃಷ್ಣಾರ್ಪಣ ವೆಂದಂತಾಯಿತು. ಗಡಿಯಾರದ ಅಂದೋಲನದಂತೆ ವಿಚಾರಗಳು ಸಂತತವಾಗಿ ನನ್ನ ತಲೆಯಲ್ಲಿ ಹೊಯ್ದಾಡುತ್ತಿರುವಾಗ ನಾನು ಓದುವದೇನು ಬರೆಯುವದೇನು?

ನನ್ನದೇನಾದರೂ ಆಗಲಿ, ಈ ಕಥಾನಾಯಕನ ಅವಸ್ಥೆಯೇನು? ದೃಢಾಂಗರೂ ತೇಜಸ್ಸುಳ್ಳ ರಕ್ತದವರೂ ಆದವರ ವಿಕಾರವಶತೆಯು ಅಧಿಕವಾಗಿರಲೇ ಬೇಕು. ಅವರು ಅಂಥ ವಿಕಾರವಶತೆಯನ್ನು ವಿವೇಕದಿಂದ ದಬ್ಬಿಡಬಹುದು. ಆದರೆ ಆ ವಿವೇಕದ ಸಾಮರ್ಥ್ಯವೆಷ್ಟಿರಬೇಕು ಬಲ್ಲಿರಾ? “ಧ್ರುವರಾಯನ ಬಲವು ಕುಂದಿಹೋಗಿದೆ. ಅವರ ಮುಖವು ಕಳೆಗುಂದಿ ಹೋಗಿದೆ. ಅವರ ಅಭ್ಯಾಸಕ್ರಮವು ನಿಂತು ಹೋಗಿದೆ” ಎಂದು ಪ್ರಕ್ಷ್ಯಕ್ಷ ಪಂಡಿತಜಿಯವರು ಚಿಂತಾಕುಲರಾಗಿದ್ದಾರೆ. ಪಂಡಿತಜಿಯವರ ತರುವಾಯ ಈ ಕಾಲೇಜದ ಚಾಲಕರು ಧ್ರುವರಾಯರೇ ಎಂದು ರಾಜಾ ದೀನದಯಾಲರೇ ಮುಂತಾದ ಮಹಾತ್ಮರು ಆಶೆಯನ್ನು ತಳೆದಿರಲು ನನಗೋಸ್ಕರವಾಗಿ ಅಂಥ ಮಹತ್ಕಾರ್ಯದ ಹಾನಿಯಾಗುವ ಹೊತ್ತು ಬಂದೊದಗಿದಂತಾಗಿದೆ, ಏನು ಮಾಡಲಿ? ಬಹಳೊತ್ತು ಅವಳು ಆಲೋಚಿಸಿದಳು, ಬಹಳೊತ್ತು ಅಡ್ಡಾಡಿದಳು, ಬಗೆ ಹರಿಯಲಿಲ್ಲ. “ಆಗಲಿ, ನಾಳಿನತನಕ ಅವಕಾಶವಿರುವದಲ್ಲ; ಅಷ್ಟರಲ್ಲಿ ದೇವರು ಬುದ್ಧಿ ಕೊಟ್ಟಂತೆ ಮಾಡಬಹುದು.”

ಬೆಳಗಾಗುವದರೊಳಗಾಗಿ ಧ್ರುವರಾಯನ ಕೈಯಲ್ಲಿ ರಮಾ ಸುಂದರಿಯು ಬರೆದ ಕಾರ್ಡು:

ಶಾರದಾಪ್ರಸಾದ ಕಾಲೇಜದ “ಫೆಲೋ” ಇವರಿಗೆ ರಮಾಸುಂದರಿಯ ವಿನಂತಿ :

ಏನು ನಿಮಿತ್ತವೊ ತಲೆನೋವು ಹೆಚ್ಚಾಗಿದೆ. ಅದಕ್ಕಗಿ ಇಂದು ವಿದ್ಯಾ ಮಂದಿರಕ್ಕೆ ಬರುವದಾಗುವದಿಲ್ಲ. ಶ್ರುತವಿರಬೇಕು.

ತಮ್ಮ ವಿಧೇಯಳಾದ,
ರಮಾಸುಂದರಿ.

ಧ್ರುವರಾಯನು ಆ ಕಾರ್ಡನ್ನು ಮೇಜಿನಮೇಲಿಟ್ಟು ಅದರ ಮೇಲೆ ತನ್ನ ಹಸ್ತವನ್ನು ಒಳಿತಾಗಿ ಅಪ್ಪಳಿಸಿದನು. ಆ ರಭಸದ ಹೊಡೆತಕ್ಕೆ ಮೇಜು ಒಳಿತಾಗಿ ಆದರಿತು, ಆಫೀಸದ ಕೋಣೆಯಲ್ಲೆಲ್ಲ “ಧಮ್ಮೆಂದು” ದರವು ಹಿಡಿಯಿತು. “ಏನು ಮಾಡಿದಳೀಕೆ! ಇಂದು ನಾನು ಅವಳ ಸನ್ನಿಧಾನಕ್ಕೆ ಬರುವೆನೆಂದು ಬೇಡಿಕೊಂಡಿದ್ದೆನು. ನಾನು ಬರಬಾರದೆಂಬವೇ ಈ ಕಾರ್‍ಡಿನ ಅರ್ಥವಿರಬಹುದೇನು?” ಮತ್ತೆ ಅಡ್ದಾಡಿ ವಿಚಾರಿಸಿ “ಹೀಗೂ ಇರಬಹುದು: ಪ್ರಾತಃ ಕಾಲದಲ್ಲಿ ಹೋದರೆ ಆ ಚತುರೆಯ ಸಖಿಯರಾದ ಇಂದುಮತಿ ಮುಂತಾದವರು ಬಳಿಯಲ್ಲಿಯೇ ಇರುವರು, ಮಧ್ಯಾಹ್ನದಲ್ಲಿಯಂತೂ ಕಾಲೇಜಕ್ಕೆ ಬರತಕ್ಕದ್ದು. ‘ಮಧ್ಯಾಹ್ನದಲ್ಲಿ ಮನೆಯಲ್ಲಿ ನಾನೋರ್ವಳೇ ಇರುತ್ತೇನೆ. ಆಗ ನೀವು ಬನ್ನಿರಿ’ ಎಂಬದೇ ಈ ಕಾರ್ಡಿನ ನಿಜವಾದ ಅಭಿಪ್ರಾಯವು.” ಎಂದವನೇ ಸ್ತ್ರೀಣಾಮಶಿಕ್ಷಿತಪಟ್ಟುತ್ವ ಕಾಮ್ಮನುಪೋಷು ಸಂಘಶ್ಯತೇ ಕಿಮುತಃ ಯಾ ಪ್ರತಿಬೋಧವತ್ಯಃ ಎಂದು ಕೂಗಿ ಹಾಡಿದನು.

ಆಮೇಲೆ ಅವನು ಆ ಕಾರ್ಡನ್ನು ಜೋಡಿಸಿ ಕಾಲೇಜದ ವೈದ್ಯರಾದ ಕವಿರಾಜ ನರೇಂದ್ರನಾಥ ಚತರ್ಜಿಯವರಿಗೆ ಒಂದು ಪತ್ರ ಬರೆದು “ಈ ವಿದ್ಯಾರ್ಥಿನಿಗೆ ಬೇಗನೆ ಆರೋಗ್ಯವಾಗುವಂತೆ ಮಾಡ ಬೇಕು.” ಎಂದು ವಿಶೇಷ ಸೂಚನೆಯನ್ನು ಕೂಡಾ ಬರೆದನು. ಮಧ್ಯಾಹ್ನ ಮೀರುವದರೊಳಗಾಗಿ ಕವಿರಾಜರ ಉತ್ತರ ಬಂದಿತು. “ರಮಾಸುಂದರೀ ದೇವಿಯ ತಲೆನೋವಿಗೆ ಮನಸ್ತಾಪವೇ ಕಾರಣವು. ಮೇಲುಪಚಾರದಿಂದ ವಿಶೇಷವಾದ ಪ್ರಯೋಜನವಾಗದು. ಆದರೂ ನೋವು ಕಡಿಮೆಯಾಗುವಂತೆ ವ್ಯವಸ್ಥೆ ಮಾಡಿದೆ.”

ಆಯತ್ತವಾಗಿ ನೆಟ್ಟಗಾಯಿತು. ರಮಾಸುಂದರಿಯ ಮನೆಗೇಕೆ ಹೋಗಿದ್ದೆಯೆಂದು ಯಾರಾದರೂ ಕೇಳಿದರೆ ರೋಗಿಯಾದ ವಿದ್ಯಾರ್ಥಿನಿಯ ಸಮಾಚಾರಕ್ಕೆ ವ್ಯವಸ್ಥಾಪಕನಾದ ನಾನು ಹೋಗಬೇಡವೆ? ಲಗಬಗೆಯಿಂದ ಪೋಷಾಕು ಮಾಡಿಕೊಂಡು ಅವನು ರಮಾಸುಂದರಿಯು ಇರುವ ಸ್ಥಳದ ಕಡೆಗೆ ಎಡವುತೆ ಮುಗುತ್ತೆ ಓಡಿದನು. ಇವನು ಬರುವನೆಂದು ನಿಶ್ಚಯವಾಗಿ ತಿಳುಕೊಂಡು ಆ ರಮಣಿಯು ತನ್ನ ವ್ಯವಸ್ಥೆಯಲ್ಲಿಯೇ ಇದ್ದಳು. “ಕಲೋನ ವಾಟರ”ದಲ್ಲಿ ( ಒಂದು ಪ್ರಕಾರದ ಓಷಧಿಯ ನೀರು ) ತೋಯಿಸಿದ ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಅವಳು ಹಾಸಿಗೆಯಲ್ಲಿ ಮಲಗಿದ್ದಳು. ಸಮೀಪದಲ್ಲಿಯೇ ಧ್ರುವರಾಯನಿಗಾಗಿ ಒಂದು ಕುರ್ಚಿಯನ್ನೂ ಮೇಜಿನ ಮೇಲೆ ಚಿನೀ ಚಂಬುವಿನಲ್ಲಿ ತುಂಬಿಟ್ಟ ಹಾಲನ್ನೂ ಇರಿಸಿದ್ದಳು. ಬಾಗಿಲನು ತೆರೆದೇ ಇಟ್ಟಿತ್ತು.

ಧುವರಾಯನು ಬಂದವನೇ ಸಂತೋಷವ್ಯಂಜಕವಾಗಿ ಮಂದಹಾಸವನ್ನು ತಳೆದು “ಪ್ರಕೃತಿ ಹೇಗಿದೆ?” ಎಂದು ಕೇಳಿದನು.

“ಹೇಗೇನು? ನೆಗಡಿ ಕೆಮ್ಮುಗಳು ಬೇನೆಯಲ್ಲ, ನತ್ತು ಬುಗುಡಿ ಆಭರಣಗಳಲ್ಲವೆಂಬ ನಾಣ್ನುಡಿ ಇರುವದಿಲ್ಲವೆ?” ಎಂದು ರಮಾಸುಂದರಿಯಾದರೂ ಅಹುದೋ ಅಲ್ಲವೋ ಎಂಬಷ್ಟು ನಗೆ ತಳೆದು ನುಡಿದಳು.

ಧ್ರುವರಾಯನು ನಾಲ್ಕಾರು ನಿಮಿಷದವರೆಗೆ ಕೆಳಗೆ ಮೋರೆಯನ್ನು ಮಾಡಿಕೊಂಡು ತನ್ನ ಕೈಯಲ್ಲಿರುವ “ಮಲಕ್ಕಾ” ಬೆತ್ತದಿಂದ ನೆಲವನ್ನು ಗೀಚುತ್ತೆ ವಿಚಾರಗೈದು ಮನಸ್ಸಿನ ನಿಶ್ಚಯವಾದ ಬಳಿಕ ರಂಆಸುಂದರಿಯ ಮುಖವನ್ನು ದಿಟ್ಟಿಸಿ ನೋಡಿ “ನಿನ್ನೆ ನಾನು ಬರೆದ ಪತ್ರವು ನಿಮಗೆ ತಿರಬಹುದು?” ಎಂದು ಕೇಳಿದನು.

“ಆಹುದು ಧೃವರಾವ್, ನಿಮ್ಮಂಥ ಸದಸದ್ವಿವೇಕವುಳ್ಳ ಪಂಡಿತರು ಅಂಥ ಅಪ್ರಯೋಜಕವಾದ ಪತ್ರವನ್ನು ಹೇಗೆ ಬರೆದಿರೋ ಏನೋ!” ಎಂದು ಆ ಧೀರೆಯು ಗಂಭೀರವಾದ ಮುಖಮುದ್ರೆಯನ್ನು ತಳೆದು ಕೇಳಿದಳು.

ಆ ಮಾತು ಕೇಳಿ ದ್ರುವರಾಯನು ಸಿಡಿಲುಬಡಿದವನಂತೆ ಬೆರಗಾಗಿ ಬಾಯ್ದೆರೆದು ಕಲ್ಲುಮೂರ್ತಿಯಂತೆ ಕುಳಿತನು.

“ಏನೆಂದಿ ರಂಆಸುಂದರಿ?” ಎಂದಿಷ್ಟು ಕೇಳಬೇಕಾದರೆ ಆರ್ಧಾಂಗ ವಾಯುಗ್ರಸ್ತನಿಗಾಗುವಷ್ಟು ಶ್ರಮವು ಆ ಮದುನಪೀಡಿತನಿಗಾಯಿತು.

“ನೀವು ನನ್ನನ್ನು ಏಕವಚನದಿಂದ ಸಂಭೋದಿಸಿದರೂ ನನಗೆ ಕೋಪವಿಲ್ಲ. ಆದರೆ ನೀವು ಆ ಪತ್ರವನ್ನು ಬರೆಯಲೇಬಾರದಾಗಿತ್ತು.”

“ಕ್ಷಮಿಸಿರಿ! ಪ್ರೇಮಪರವಶನಾದ ನನಗೆ ಜೀವಿತಾಧಾರದ ಬೇರೆ ಉಪಾಯವು ತೋಚಲಿಲ್ಲಾದ್ದರಿಂದ ಹಾಗೆ ಬರೆದೆನು.” ಎಂದು ಅವನು ಬಹು ದೀನನಾಗಿ ನುಡಿದನು.

“ಧ್ರುವರಾವ್, ನಾನು ಕಾಲೇಜವನ್ನು ಬಿಟ್ಟು ಹೋದ ಬಳಿಕ ನೀವು ಇಂಥ ವಿಚಾರಗಳನ್ನು ಪ್ರಕಟಗೊಳಿಸಿದ್ದರೆ ವಿಶೇಷವಾದ ಬಾಧಕವಿದ್ದಿಲ್ಲ. ನೀವಿಲ್ಲಿ ನಮ್ಮ ಅಭ್ಯಾಸದ ನಿಯಾಮಾಕರು. ನೀವೇ ಕರ್ತವ್ಯಪರಾಙ್ಮುಖರಾಗಿ ನಿಮ್ಮ ಅಭ್ಯಾಸಕ್ಕೆ ವ್ಯತ್ಯಯವನ್ನು ತಂದುಕೊಳ್ಳುವದಲ್ಲದೆ ನಮ್ಮಂಥ ಅಬಲೆಯರ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡಬಂದಿರುವಿರಿ. ವಿಹಿತವೇ ಇದು?”

“ಪ್ರಿಯೆ, ಇಂದು ಬೇಡ, ಇನ್ನು ಹತ್ತು ವರ್ಷಕ್ಕಾದರೂ ನನ್ನ ಪ್ರಣಯವನ್ನು ನೀನು ಸ್ವೀಕರಿಸುವಿಯಾ?” ಎಂದು ಭಕ್ತನು ಗುಡಿ ಯಲ್ಲಿಯ ಮೂರ್ತಿಯ ಮುಂದೆ ಕೈಜೋಡಿಸಿಕೊಂಡು ನಿಂತಂತೆ ನಿಂತು ಧ್ರುವರಾಯನು ಬೆಸಗೊಂಡನು.

ರಮಾಸುಂದರಿಗೆ ನಗೆ ತುಂಬಿ ಬಂದಿತು. ಅವಳು ತನ್ನ ಎರಡೂ ಕೈ ಗಳಿಂದ ಮೊರೆಯನ್ನು ಮುಚ್ಚಿಕೊಂಡು ನಗೆಯನ್ನು ಅಡಗಿಸಿಕೊಂಡಳು. ಧ್ರುವರಾಯನ ಪ್ರಾರ್ಥನೆಗೆ ಉತ್ತರವನ್ನು ಕೊಡುವ ಗೋಜಿಗೆ ಅವಳು ಹೋಗಲಿಲ್ಲ. ಮತ್ತೆ ಅವಳು ಗಾಂಭೀರ್ಯವನ್ನು ತಳೆದು, “ಶಿಕ್ಷಕರೆ, ನೀವು ಸಂಬೋಧನಗಳನ್ನು ಉಪಯೋಗಿಸುವಾಗ ವಿಚಾರ ತಿಳಿದು ಉಪಯೋಗಿಸಿರಿ. ನಿಮ್ಮಂಥವರಿಗೆ ಅಬಲೆಯಾದ ನಾನು ಬುದ್ಧಿಯ ಮಾತು ಹೇಳಲು ವಿಷಾದಪಡುತ್ತೇನೆ.”

ಧ್ರುವರಾಯನು ಚಟ್ಟನೆ ತನ್ನ ಆಸನವನ್ನು ಬಿಟ್ಟೆದ್ದು “ರಮಾಸುಂದರೀಬಾಯಿ, ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿರಿ. ಆದರೂ ಪ್ರೇಮನಿರ್ಜಿತನಾದ ನಾನು ಮರ್ಯಾದೆಯನ್ನು ಉಲ್ಲಂಘಿಸಲಿಲ್ಲವೆಂದು ನಂಬುತ್ತೇನೆ. ಇರಲಿ. ನಾಳಿನಿಂದ ನಾನು ಕಾಲೇಜ ದಲ್ಲಿರುವದರಿಂದ ನಿಮಗೆ ಸಂಕೋಚವಾಗುತ್ತಿದ್ದರೆ ಹಾಗೆ ಕೇಳಿರಿ; ನಾನು ಹೊರಟು ಹೋಗುತ್ತೇನೆ” ಎಂದು ಸಂಕ್ಷುಬ್ಧನಾಗಿ ಕೇಳಿದನು.

“ಹಾಗೆ ಮಾತ್ರ ಮಾಡಬೇಡಿರಿ. ಹೀನಸತ್ವರ ವಿಚಾರವಿದು. ನೀವು ಇಲ್ಲಿ ಇರುವದರಿಂದ ನನ್ನ ಸಮಭಾವವು ಕೆಡಲಾರದು, ಆಷ್ಟು ಮಾನಸಿಕ ಧೈರ್ಯವು ನನ್ನಲ್ಲಿದೆ” ಎಂದು ಆ ಪ್ರೌಢೆಯು ತಾಳ್ಮೆಯಿಂದ ನಗುತ್ತೆ ನುಡಿದಳು.

ಮತ್ತೊಂದು ಮಾತಾಡದೆ ಧ್ರುವರಾಯನು ಆ ಸ್ಥಳವನ್ನು ಬಿಟ್ಟು ರಭಸದಿಂದ ಹೊರಗೆ ನಡೆದನು, ಆ ಸುಂದರಾಂಗನ ಮೂರ್ತಿಯು ಕಣ್ಮರೆಯಾದ ಕೂಡಲೆ ರಮಾಸುಂದರಿಯ ಕಣ್ಣುಗಳೊಳಗಿಂದ ಅಶ್ರುಧಾರೆಗಳ ಜೀಕಳಿಗಳು ಪುಟಿದವು. ಚಟ್ಟನೆ ಮಂಚದಿಂದಿಳಿದು ಅವಳು ಕಿಟಕಿಯಲ್ಲಿ ಬಂದು ನಿಂತು ತನ್ನ ಮನೋರಮಣನ ವ್ಯಾಪಾರಗಳನ್ನು ನೋಡುವ ಕುತೂಹಲವುಳ್ಳವಳಾಗಿ ನಿಂತುಕೊಂಡಳು. ಅಶ್ವಥಾಮನ ಸೆಟೆಯಿಂದ ಎದೆಯುಬಿಸಿಕೊಂಡು ಅಡ್ಡಾಡುವ ಆ ತರುಣನು, ಈ ಸಮಯದಲ್ಲಿ ಮುಪ್ಪಿನಿಂದ ಮುಟ್ಟಿಗೆಯಾದವನಂತೆ ಅಧೋಮುಖನಾಗಿ ಹೆಜ್ಜೆಗಳನ್ನೆಣಿಸುತ್ತೆ ನಡೆದಿದ್ದನು. ಅವನನ್ನು ಕಂಡು ರಮಾಸುಂದರಿಯು ಒಳಿತಾಗಿ ಬಿಸಿಸುಯ್ದು “ಅವರ ಹಿತಕ್ಕಾಗಿ ನನ್ನ ಕಾಲ ಮೇಲೆ ನಾನು ಕಲ್ಲು ಹಾಕಿಕೊಂಡೆನು. ಆಗಲಿ, ಅವರದಾದರೂ ಕಲ್ಯಾಣವಾಗಲಿ, ನನ್ನ ಕಡೆಯಂತೂ ಮುಗಿಯಿತು. ಮುಂದೆ ಈ ಕಾಲೇಜದಲ್ಲಿ ಜಾನಕೀದೇವಿಯರ ಸ್ಥಾನಾಪನ್ನಳಾಗಕ್ಕವಳು ನಾನೇ ಎಂದು ತಿಳುಕೊಂಡಿದ್ದೆನು.” ಎಂದು ನುಡಿದು ಅವಳು ಮತ್ತೆ ಕಣ್ಣಿಗೆ ನೀರು ತಂದಳು.

“ನಡೆ ಧ್ರುವರಾವ್, ನಿನಗಿನ್ನು ಸನ್ಯಾಸವು ಬಂದಡರಿತು. ಕರ್ಮ ಯೋಗಿಯಂತೆ ನೀನಿನ್ನು ನಿಷ್ಕಾಮವಾದ ಕರ್ಮವನ್ನು ಮಾಡು, ಅನೇಕ ಜನ ಮಹಾತ್ಮರು ಕೂಡಿ ಈ ಕಾಲೇಜ ಸಂಸ್ಥೆಯ ಭಾರವನ್ನು ನಿನ್ನ ತಲೆಯ ಮೇಲೆ ಹೊರಿಸಬೇಕೆಂದು ಮಾಡಿದ್ದಾರೆ, ಹೊರ ನಡೆ, ಆಯತ್ತವಾಗಿ ಸಂಸಾರದ ಭಾರವು ನಿನ್ನ ತಲೆಯ ಮೇಲಿಂದ ಇಳಿದಿದೆ” ಎಂದು ಉದ್ಗಾರ ತೆಗೆದು ಧ್ರುವರಾಯನು ಮನೆಗೆ ಬಂದವನೇ ಮನೋನಿಗ್ರಹದಿಂದ ಸಕಲ ವ್ಯಾಮೋಹಗಳನ್ನು ಮೆಟ್ಟಿ ಎಮ್. ಎ. ಪರೀಕ್ಷೆಯ ಸಿದ್ಧತೆ ಮಾಡಲುದ್ಯುಕ್ತನಾದನು.

ಧೂವರಾಯನು ಹೋದನೋ ಇಲ್ಲವೋ ಅಷ್ಟರಲ್ಲಿ ಇಂದುಮತಿಯು ರಮಾಸುಂದರಿಯ ಎದುರಿನಲ್ಲಿ ಬಂದು ನಿಂತಳು.

“ಇಂದುಮತಿ, ಅಡ್ನಾಡಿ ಹೊತ್ತಿನಲ್ಲಿ ನೀನು ಕಾಲೇಜವನ್ನು ಬಿಟ್ಟು, ಹೇಗೆ ಬಂದಿ?”

“ಇದೊಂದು ವಿನೋದಾಸ್ಪದವಾದ “ಟ್ರ್ಯಾಜೆಡಿ” (ದುಃಖಪರ್‍ಯ ವಸಾಯಿ ನಾಟಕ) ಪ್ರಯೋಗವು, ಅದರಲ್ಲಿ ನನಗೂ ಒಂದು ಚಿಕ್ಕದಾದ ಭೂಮಿಕೆಯನ್ನು ಕೊಟ್ಟಿದ್ದಾರೆ. ಪಾಠ ಮಾಡುವದಕ್ಕಾಗಿ ಬಂದೆನು.”

“ಏನೇನು?” ಎಂದು ರಮಾಸುಂದರಿಯು ಚಕಿತಳಾಗಿ ಕೇಳಿದಳು.

“ಏನೇನೆಂದರೆ, ಧುವರಾಯರು ನಿನ್ನಲ್ಲಿಗೆ ಬಂದಿದ್ದರಲ್ಲ, ಅವರಿಗೆ ನೀನು ನಿಷ್ಟುರವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತವೆ.” ಎಂದು ಇಂದುಮತಿಯು ನಟಿಯಂತೆ ಹಾವಭಾವ ಮಾಡುತ್ತೆ ಕೇಳಿದಳು.

“ಅಂದರೆ ! ಧ್ರುವರಾಯರು ಇಲ್ಲಿಗೆ ಬಂದಿದ್ದರೆಂದು ಯಾರು ಹೇಳಿದರು? ನಾನು ನಿಷ್ಟುರವಾದ ಉತ್ತರವನ್ನಾದರೂ ಕೊಟ್ಟಿದ್ದು ಯಾರು ಹೇಳಿದರು?” ಎಂದು ರಮಾಸುಂದರಿಯು ಕ್ರುದ್ಧಳಾಗಿ ಪ್ರಶ್ನೆ ಮಾಡಿದಳು.

“ಧುವರಾಯರಿಗೆ ನೀನು ಅನುಕೂಲವಾದ ಉತ್ತರವನ್ನು ಕೊಟ್ಟಿದ್ದರೆ ಅವರು ಉತ್ಸಾಹದಿಂದ ಹುಲಿಯಂತೆ ಹಾರುತ್ತೆ ಹೋಗುತ್ತಿದ್ದರು. ಈಗ ಹೋದಂತೆ ಅಳುಮೋರೆ ಮಾಡಿಕೊಂಡು ಹೆಜ್ಜೆಗಳನ್ನೆಣಿಸುತ್ತೆ ಉಶ್ ಉಶ್ ಎಂದು ಯಾಕೆ ಹೋಗುತ್ತಿದ್ದರು?”

“ನಾನೇಕೆ ನಿಷ್ಠುರವಾಡಲಿ ಅವರಿಗೆ? ಯಾವ ಸಂದರ್ಭದಿಂದ ನೀನು ಕೇಳುವಿ ಪ್ರಿಯ ಸಖಿ?”

“ಸಂದಿರ್ಭವು ಈ ಪತ್ರದಲ್ಲಿ ಇದೆ ನೋಡಿದಿಯಾ?” ಎಂದು ಇಂದುಮತಿಯು ಧ್ರುವರಾಯನು ರಮಾಸುಂದರಿಗೆ ಬರೆದಿರುವ ಪತ್ರವನ್ನು ಅವಳ ಮುಖಕ್ಕೆ ಹಿಡಿದು ನುಡಿದಳು.

“ರಮಾಸುಂದರಿಯು ಕಳ್ಳೆಯಂತಾಗಿ “ಸಖಿ, ಇಂಥ ಪತ್ರಕ್ಕೆ ನಿಷ್ಟುರವಾದ ಉತ್ತರವೇ ತಕ್ಕದ್ದಲ್ಲವೆ?” ಎಂದು ನಾಚಿ ಸತ್ತವಳಾಗಿ ನುಡಿದಳು.

“ವಾಸ್ತವ, ವಾಸ್ತವ! ಆದರೆ ನನ್ನ ಜೀವದ ಗೆಳತಿಯೋ, ಈ ಪತ್ರದ ಬೆನ್ನು ಮೇಲೆ ನೀನು ನಿನ್ನ ಸ್ವಹಸ್ತಾಕ್ಷರದಿಂದ ಏನು ಬರೆದಿರುವೆ?” ಎಂದು ಇಂದುಮತಿಯು ಆ ಪತ್ರವನ್ನು ರಮಾಸುಂದರಿಯ ಮುಂದೆ ತಿರಿವಿ ಹಿಡಿದು ಗೊಳ್ಳನೆ ನಕ್ಕಳು.

“ಏನು ಬರೆದಿದ್ದೇನೆ?” ಎಂದು ರಮಾಸುಂದರಿಯು ಆ ಪತ್ರವನ್ನು ಸೆಳಕೊಳ್ಳಹೋದಳು. ಇಂದುಮತಿಯು ಅದನ್ನು ಗಟ್ಟಿಯಾಗಿ ಹಿಡಿದು ಕೊಂಡು “ನೀನು ಬರೆದದ್ದು ಓದಿ ಹೇಳಲಿಯಾ?”

ವಿನತಿಯನಾಲಿಸೊ ಮನಮೋಹನಾ ||ಪಲ್ಲಾ||
ನಲಿನೀಯ ಸೀಳುತೆ ಬಸವ ಸಾರಸನು |
ಸೆಳೆವ ತೆರದಲೆನ್ನ ಮನವ ಸೆಳೆದಿ ರಾಜೇಂದ್ರ || ೧ ||

ಎಂಬ ಪದವನ್ನು ಒಳ್ಳೆ ಸುಸ್ವರವಾಗಿ ಹಾಡಿ ತೋರಿಸಿದಳು.

“ಇಂದುಮತೀ, ನೀನು ಹೀಗೆ ಅನ್ಯರ ಪತ್ರಗಳನ್ನು ಕದ್ದು ಓದಬಹುದೆ? ನಿನಗೆ ಕನ್ನಡವನ್ನು ಕಲಿಸಿದಾಕೆ ನಾನೇ ಮೂರ್ಖಳು.”

“ಮೂರ್ಖಳೋ ಆವಳೋ ನನಗೆ ಗೊತ್ತಿಲ್ಲ. ನೀನು ನನಗೆ ಕನ್ನಡವನ್ನು ಕಲಿಸದಿದ್ದರೆ ನಾನು ಈ ಸಚಿತ್ರ ಭಾರತದ ಸಂಚಿಕೆಯನ್ನಾಗಲಿ, ಅದರಲ್ಲಿ ನೀನಿಟ್ಟಿರುವ ಈ ಪತ್ರವನ್ನಾಗಲಿ ಎತ್ತಿ ಕೊಂಡು ಹೋಗುತ್ತಿದ್ದಿಲ್ಲ ಸರಿ.”

ಮುಂದೆ ಯಥಾಕಾಲವಾಗಿ ಯುನಿವರ್ಸಿಟಿಯ (ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳಾದವು. ಒಟ್ಟಿನಲ್ಲಿ ಶಾರದಾ ಪ್ರಸಾದ ಕಾಲೇಜದ ಬೆಳಕು ಬಹಳಾಯಿತು. ಎಮ್. ಏ. ಪರೀಕ್ಷೆ ಪಾಸಾದವರಲ್ಲಿ ಧ್ರುವರಾಯನಿಗೆ ಪ್ರಥಮ ಸ್ಥಾನವು. ಸ್ತ್ರೀ ವಿದ್ಯಾರ್ಥಿಗಳಲ್ಲಿ ನಾಲ್ವರು ಜೀ. ಪಿ. ಪಾಸಾಗಿದ್ದರು, ಇಂದುಮತಿ, ಚಂದ್ರಾವಲಿ, ರಮಾಸುಂದರಿಯರು ಎಫ್. ಎ. ದಲ್ಲಿ ಪಾಸಾದವರು. ಅಂದು ಡಾಕ್ಟರ ಚೌಧರಿಯವರಿಗೆ ಪರಮಾನಂದವು. ಜಾನಕಿದೇವಿಯರಾದರೂ ಪಾಸಾಗಿರುವ ತಮ್ಮ ಶಿಷ್ಯರನ್ನು ಕೂಡಿಸಿಕೊಂಡು ಸಂತೋಷ ಪ್ರದರ್ಶನವನ್ನು ಮಾಡಿದರು. ಧ್ರುವರಾಯನು ಸೊರಗಿದಂತೆ ತೋರಿದರೂ ಒಣಗಿದ ದ್ರಾಕ್ಷದಂತಿರುವ ಅವನ ಮುಖವು ಸ್ವಾದಿಷ್ಟವಾಗಿ ತೋರಿತು, ರಮಾಸುಂದರಿಯು ಮಾತ್ರ ಬಾಡಿದ ಕಲಿಕೆಯಂತೆ ವಿಷಾದಾಸ್ಪದಳಾಗಿ ಕಂಡಳು.

“ಹೀಗೇನು? ಈ ಮಾತು ನನಗೆ ನೀನು ಮೊದಲೆ ಯಾಕೆ ತಿಳಿಸಲಿಲ್ಲ?” ಎಂದು ಜಾನಕೀದೇವಿಯರು ಇಂದುಮತಿಯನ್ನು ಕುರಿತು ಮಾತಾಡಿದರು.

“ಆ ಮಾತಿಗೆ ನೀವು ಒಪ್ಪುವಿರೋ ಕೋಪಿಸಿಕೊಳ್ಳುವಿರೋ ನನಗೆಂತು ತಿಳಿಯಬೇಕು? ಕೋಪಿಸಿಕೊಂಡರೆ ಅನರ್ಥವಾಗುವದೆಂದು ತಿಳಿದು ನಾನು ಹಲ್ಲಲ್ಲಿ ನಾಲಿಗೆಯನ್ನಿಟ್ಟು ಕೊಂಡು ಸುಮ್ಮನಿದ್ದೆನು.”

“ಹಾಃ! ಹಾಃ! ಹಾಃ! ರಮಾಸುಂದರಿಯು ಧ್ರುವರಾಯನ ಪ್ರಾಯಶ್ಚಿತ್ತವನ್ನು ಚನ್ನಾಗಿ ಮಾಡಿದಳು.” ಎಂದು ದೇವಿಯವರು ನಕ್ಕು ನುಡಿದರು.

“ಅಮ್ಮನವರೆ, ವಿನೋದವು ಹಾಗಿರಲಿ, ಇನ್ನು ಮೇಲೆ ಮಾಡುವ ಬಗೆಯೇನು? ರಮಾಸುಂದರಿಯು ಎರಡು ಬಗೆಯ ಚಿಂತೆಯಿಂದ ಸೊರಗುತ್ತಿರುವಳು ಕಾಣಿರಾ?”

“ಓಹೋ, ವೆಂಕಟೇಶ್ವರನಿಗೆ ಕಲ್ಲಿಲೊಗೆದ ಪದ್ಮಾವತಿಯು ಈಗ ಆತನ ಪಾದಗಳನ್ನು ನಂಬಲು ಒಪ್ಪಿರುವಳೆ?”

“ಒಪ್ಪದೆ ಪದ ಹಾಡುವಳು.”

ಜಾನಕೀದೇವಿಯರು ಗಂಟೆಯನ್ನು ಬಾರಿಸಿ ಜವಾನನನ್ನು ಕರೆದು “ಅಖಾಯ್, ಪ್ರೊಫೆಸರ್ ಧ್ರುವರಾಯರನ್ನು ನಾನೀಗಲೆ ಕರೆದಿರುವೆನೆಂದು ಹೇಳಿ ಬೇಗನೆ ಕರಕೊಂಡು ಬಾ” ಎಂದು ಆಜ್ಞಾಪಿಸಿದರು.

ಧ್ರುವರಾಯನು ಬಂದು ಆ ಮಾತೆಯ ಬಳಿಯಲ್ಲಿ ವಿನಯದಿಂದ ನಿಂತ ಬಳಿಕ,

“ಪಂಡಿತ ಮಹಾಶಯ, ನಿನ್ನ ಹಿತಕ್ಕಾಗಿ ನಿಮ್ಮ ಪತ್ನಿಯು ನಿನಗೊಂದು ಬಿರಿನುಡಿಯಾಡಿದರೆ ನೀನು ಅವಳನ್ನು ಕ್ಷಮಿಸುವಿಯಲ್ಲವೆ?” ಎಂದು ಜಾನಕೀದೇವಿಯರು ಕೇಳಿದರು.

“ಸಹಜವಾದ ಮಾತಿದು. ಆದರೆ ನನಗೆಲ್ಲಿಯ ಪತ್ನಿಯು?”
“ರಮಾಸುಂದರಿ, ಕೇಳಿದಿಯಾ ಈ ಪ್ರೊಫೆಸರರು ನಿನ್ನ ಅನುನಯವನ್ನು ಮನ್ನಿಸುವುದಿಲ್ಲ. ನಿನಗಾದರೂ ಏನು ಅಡಗಾಣಿಸಿದೆ, ಅಷ್ಟೇಕೆ ಆತುರಳಾಗಿರುವಿ?” ಎಂದು ಜಾನಕೀದೇವಿಯರು ವಿನೋದ ಮಾಡಿ ನುಡಿದರು. ಧ್ರುವರಾಯನ ಮುಖವು ಸಂತೋಷದಿಂದ ಹಿಗ್ಗಿ ಇಮ್ಮಡಿಯಾಯಿತು. ಇಂದ್ರಜಾಲದ ಮಂತ್ರದಿಂದಲೋ ಎಂಬಂತೆ ರಮಾಸುಂದರಿಯ ಬಾಡಿದ ಮುಖವು ಪ್ರಫುಲ್ಲಿತವಾದ ಕಮಲದಂತೆ ಕಂಗೊಳಿಸಿತು.

“ಮಾತಾಜೀ, ರಮಾಸುಂದರೀಬಾಯಿಯವರು ಪದವೀಧರೆಯರಾಗಿ ಈ ಕಾಲೇಜವನ್ನು ಬಿಟ್ಟ ಬಳಿಕ ನನ್ನ ಪ್ರಾರ್ಥನೆಯ ವಿಚಾರ ಮಾಡುವರಂತೆ!” ಎಂದು ನುಡಿದು ಧುವರಾಯನು ಲಜ್ಜಾವನತಮುಖಿಯಾಗಿ ನಿಂತಿರುವ ತನ್ನ ರನುಣಿಯ ಮುಖವನ್ನು ನೋಡಿ ನಕ್ಕನು.

“ಅಹುದೇನು ರಮಾಸುಂದರೀ? ವಿವಾಹಿತರಾಗಿ ಕಾಲೇಜಗಳಲ್ಲಿ ಕಲಿಯುತ್ತಿರುವ ಪುರುಷರೆಷ್ಟಿರುವರು ನಿನಗೆ ಗೊತ್ತುಂಟೇನು? ಹೆಂಗಸರೇಕೆ ವಿವಾಹಿತರಾಗಿ ಕಾಲೇಜದಲ್ಲಿರಕೂಡದು?” ಎಂದು ಜಾನಕಿ ದೇವಿಯರು ಕೇಳಿದರು.

ಧ್ರುವ ರಮಾಸುಂದರಿಯರ ವಿವಾಹವು ಸಾರ್ವಜನಿಕ ಮಹೋತ್ಸವ ದಂತೆ ನ ಭೂತೋ ನ ಭವಿಷ್ಯತಿಯಾಗಿ ವಿಜೃಂಭಣಗೊಂಡಿತು. ಆ ಕಾಲೇಜದ ವ್ಹಾಯಿಸ್ ಪ್ರಿನ್ಸಿಪಲ್ಲರಾದ ಧ್ರುವರಾಯರ ಹೆಂಡತಿಯ ವಿದ್ಯಾಭ್ಯಾಸಕ್ಕೆ ಆತಂಕವೆ?ಜೋಯಿಸನ ಮಗನ ಮದುವೆಗೆ ಮುಹೂರ್ತ ತೆಗೆದು ಕೊಡುವವರನ್ನು ಹುಡುಕಿದ್ದುಂಟೆ?

ಶಾರದಾಪ್ರಸಾದ ಕಾಲೇಜದ ಭಾವೀ ನಿಯಾಮಕರಾದ ಪ್ರೊಫೆಸರ್ ಧ್ರುವರಾವ್ ಹಾಗೂ ರಮಾಸುಂದರೀದೇವಿಯರು ಡಾಕ್ಟರ್ ಚೌಧರಿ ಹಾಗೂ ಜಾನಕೀದೇವಿಯರಿಗೆ ಸಮಾನಾಧಿಕಾರಿಗಳಾಗಿದ್ದುಕೊಂಡು ಆ ವೃದ್ಧ ದಂಪತಿಗಳ ಮೇಲಿನ ಭಾರವನ್ನು ಸಾವಕಾಶವಾಗಿ ಇಳಿಸುತ್ತಲೂ ಉಚ್ಚ ಪ್ರತಿಯ ಶಿಕ್ಷಣದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚ್ಚ ಪ್ರತಿಯ ಧಾರ್ಮಿಕ ಹಾಗೂ ನೈತಿಕ ಬೋಧಾಮೃತವನ್ನು ನೀಡುತ್ತಲೂ ದೇಶದ ರಾಜಕೀಯ ಸಾಮಾಜಿಕ ಉನ್ನತಿಗಾಗಿ ಶ್ರಮಪಡುತ್ತಲೂ ಶಾರದಾ ಪ್ರಸಾದ ಕಾಲೇಜದ ಹೆಸರನ್ನು ಅಜರಾಮರವಾಗಿ ಮಾಡಿದರು.
*****

=======================================================

ಅಲಿಪ್ರವಾದ ಪ್ರೇಮಸಂಯೋಗ  


ಮಹಾಮಹೋಪಾಧ್ಯಾಯರಾದ ವಿದ್ಯಾಧೀಶ ಪಂಡಿತರು ಸ್ನಾನ 

ತೀರಿಸಿಕೊಂಡು ಇನ್ನು ದೇವತಾರ್ಚನಕ್ಕೆ ಕೂಡತಕ್ಕವರು. ದೇವತಾಯ 

ತನವನ್ನು ಪ್ರವೇಶ ಮಾಡುತ್ತೆ ಮಾಡುತ್ತೆ ಅವರು “ಪ್ರದ್ಯುಮ್ನನೆಲ್ಲಿ 

"ಕಾಣುವದಿಲ್ಲ? " ಎಂದು ತಮ್ಮ ಪತ್ನಿಯಾದ ನರಸಮ್ಮನನ್ನು ಕೇಳಿದರು. 


" ನಾನೇನು ಬಲ್ಲೆ? ಎಲ್ಲಿಗಾದರೂ ಮೆರೆಯಲಿಕ್ಕೆ ಹೋಗಿರುವನಾ 

ದೀತು,” ಎಂದು ನರಸಮ್ಮನು ತಿರಸ್ಕಾರದಿಂದ ನುಡಿದಳು. 


ಮಹಾಮಹೋಪಾಧ್ಯಾಯರ ಪೂಜೆಯು ಎರಡು ಗಳಿಗೆಯ ವರೆಗೆ 

ಒಳ್ಳೇ ವಿಧಾನಪೂರ್ವಕವಾಗಿ ನಡಿಯಿತು. ಒಬ್ಬ ಶಿಷ್ಯನು ಗಂಧಃ ತೇಯು 

ತ್ತಿದ್ದನು, ಮತ್ತೊಬ್ಬನು ಸಾಲುದೀಪಗಳನ್ನು ಹಚ್ಚಿಡುತ್ತಿದ್ದನು. ಪಂಡಿತರು 

ದೇವರಿಗೆ ತುಲಸಿಯನ್ನು ಏರಿಸುವಾಗ ಮೂರನೆಯವನು ನಾಮಾವಲಿಯನ್ನು 

ಹೇಳುತ್ತಿದ್ದನು. ಜಾಂಗಟಿ. ಗಂಟೆ ತಾಲಗಳ ಘನವಾದ ಸಪ್ಪಳದೊಂದಿಗೆ 

ದೇವರಿಗೆ ಮಂಗಲಾರತಿಯಾದ ಬಳಿಕ ವಿದ್ಯಾಧೀಶರು ಮತ್ತೆ " ಪ್ರದ್ಯುಮ್ನ 

'ನೆಲ್ಲಿ?" ಎಂದು ಅಡಿಗೆಯವನನ್ನು ಕೇಳಿದರು, 


" ಎಲ್ಲಿಗೆ ಹೋಗಿರುವರೋ ಕಾಣೆನು ಸ್ವಾಮೀ. ಪ್ರಹರ ಹೊತ್ತೀರಿ 

ದಾಗಿನಿಂದ ಪ್ರದ್ಯುಮ್ನ ಪಂಡಿತರು ಮನೆಯಲ್ಲಿಯೆ ಇಲ್ಲ” ಎಂದು ಅಡಿಗೆ 

'ಯವನು ಬಹು ವಿನೀತನಾಗಿ ಹೇಳಿದನು. 


«ಏನೇ? ?' ಎಂದು ಹೆಂಡತಿಯನ್ನು ಕುರಿತು "ಏನೇ, ಪ್ರದ್ಯುಮ್ನನ 

ಸ್ನಾನವಾದರೂ ಆಗಿರುವದೇನು? ' 


" ಏನಾಗಿದೆಯೋ, ಏನು ಬಿಟ್ಟದಿಯೋ. ಇಪ್ಪತ್ತು ವರ್ಷದ ಟೊಣಪ 

ನಾದ ನಿಮ್ಮ ಮಗನನ್ನು ಯಾರೂ ಓಡಿಸಿಕೊಂಡು ಹೋಗುವದಿಲ್ಲ ಕಂಡಿರಾ! 

ಯಾಕೆ ಹಾಗೆ ಸೊಲ್ಲಿಗೊಮ್ಮೆ ಪ್ರ್ರದ್ಯುಮ್ನ ಪ್ರದ್ಯುಮ್ನನೆಂದು ಕೂಗುವದು?"

ಎಂದು ಪ್ರದ್ಯುಮ್ಮನ ಮಲತಾಯಿಯಾದ. ನರಸಮ್ಮನು ಕ್ರುದ್ಧಳಾಗಿ 

ನುಡಿದಳು. 



ಪಂಡಿತರು ಸುಮ್ಮನಾದರು. ನೈವೇದ್ಯ ವೈಶ್ವದೇವಗಳಾದ ಬಳಿಕ 



ಅಲಿಪ್ತ ವಾದ ಪ್ರೇಮುಸಂಯೋಗ ೨೯ 



ಶಿಷ್ಯರು ಪುಸ್ತಕಗಳನ್ನು ತೆಗೆದುಕೊಂಡು ಪಾಠ ಹೇಳಿಸಿಕೊಳ್ಳಲಿಕ್ಕೆ ಸಿದ್ದ 

ರಾಗಿ ಕುಳಿತರು. ಆದರೂ ಪ್ರದ್ಯುಮ್ನನು ಬರಲಿಲ್ಲ. ಪಂಡಿತರು ಚಿಂತಾ 

ಕುಲರಾಗಿ "ಮಹಿದಾಸ, ಪ್ರದ್ಯುಮ್ನನು ತನ್ನ ಸ್ನೇಹಿತನಾದ ವಿಜಯೀಂದ್ರನ 

ಮನೆಗೆ ಹೋಗಿರಬಹುದು; ನೋಡಿಕೊಂಡು ಭಾ" ಎಂದು ಓರ್ವ ಶಿಷ್ಯನಿಗೆ 

ಆಜ್ಞಾಪಿಸಿದರು. ಪ್ರದ್ಯುಮ್ನನು ವಿಜಯಯೀಂದ್ರನ ಮನೆಯಲ್ಲಿ ಭೋಜನ 

ತೀರಿಸಿಕೊಂಡು ಅನನೊಡನೆ ಎಲ್ಲಿಯೋ ಹೊರಗೆ ಹೋದನೆಂಬ ವರ್ತಮಾನ 

ವನ್ನು ಮಹಿದಾಸನು ತಂದನು. ಏನೋ ವ್ಯತ್ಯಾಸವಿರಬಹುದೆಂದು ನೆನಿಸಿ 

ಪಂಡಿತರು ವಿಷಣ್ಣರಾಗಿ ಹಾಗೂ ಹೀಗೂ ಪಾಠಪ್ರವಚನ ಭೋಜನಾದಿ 

ಗಳನು  ತೀರಿಸಿಕೊಂಡವರೇ ವಿಜಯೀದ್ರನ ಮನೆಗೆ ಹೋದರು. ಅತಿ 

ತೇಜಸ್ಟಿಗಳಾದ ಆ ಮಹಾಮಹೊಪಾಧ್ಯಾಯರು ಹೀಗೆ ತನ್ನ ಮನೆಗೆ 

ನಡೆದು ಬಂದಿರುವದನ್ನು ಕಂಡು ವಿಜಯೀಂದ್ರನು ಚಕಿತನಾಗಿ " ಮಹಾ 

ಸ್ವಾಮಿಯವರು ಹೀಗೆ ನನ್ನಂಥ ಅಲ್ಪನ ಮನೆಗೆ ದಯಮಾಡಿದ ಕಾರಣ 

ವೇನು ?” ಎಂದು ವಿಜಯೀಂದ್ರನು ವಿನಯದಿಂದ ನಮಸ್ಕರಿಸಿ ಬೆಸ 

ಗೊಂಡನು. 


" ವಿಜಯೀಂದ್ರ, ನಮ್ಮ ಪ್ರದ್ಯುಮ್ನನ ಸಮಾಚಾರವೇನು ಇಂದು 

ನಿಮ್ಮಲ್ಲಿ ಯಾಕೆ ಭೋಜನ ಮಾಡಿದನು? ಈಗೆಲ್ಲಿರುವನು? " ಮುಂತಾದ 

ಅನೇಕ ಪ್ರಶ್ನಗಳನ್ನು ಪಂಡಿತರು ಕೇಳಿದರು, 


" ಮಹಾತ್ಮರ ಮುಂದೆ ಸುಳ್ಳಾಡುವದು ಸರಿಯಲ್ಲ. ನರಸಮ್ಮನ 

ವರು ಪ್ರದ್ಯುಮ್ನನಿಗೆ ನಿತ್ಯದಲ್ಲಿಯೂ ಕಿಟಿಕಿಟಿ ಮಾಡುತ್ತಿರುವರು, ಪ್ರದ್ಯುಮ್ನ 

ನೆಂದೇ ಅದನ್ನೆಲ್ಲ. ಸಹಿಸುತ್ತ ಬಂದನು. ಈವತ್ತಿನ ದಿವಸವಂತೂ ಅವರು 

ಪ್ರದ್ಯುಮ್ನನಿಗೆ ಮಾಡಿದ ಅವಮರ್ಯಾದೆಯನ್ನು ನೋಡಿ ನನಗೆ ಕೂಡ ಅತಿ 

ಶಯವಾದ ಖೇದವಾಯಿತು. '' 


" ಏನಾಯಿತು ವಿಜಯೀಂದ್ರ? " ಎಂದು ವಿದ್ಯಾಧೀಶರು ವ್ಯಾಕುಲ 

ರಾಗಿ ಕೇಳಿದರು. 


" ಉತ್ತಮ ತರಗತಿಯಲ್ಲಿ ಬೀ. ಏ. ಪರೀಕ್ಷೆ ಕೊಟ್ಟವನೂ, ಶ್ರೀಮಂ 

ತರೂ, ಪ್ರತಿಷ್ಠಿತರೂ ಆದವರ ಮಗನೂ ಆದ  ಪ್ರದ್ಯುಮ್ನನಿಗೆ ನಿ‍ಷ್ಕಾರಣ 

ವಾಗಿ ಮಾಡಿದ ಅಸಮಾನದ ಸಹನವಾದೀತೇ?"



೩೦  ಸಂಪೂರ್ಣ-ಕಥೆಗಳು 



" ಆದದ್ದಾದರೂ ಏನು ಹೇಳಬಾರದೆ ?" 


" ಪ್ರಾತಃಕಾಲದಲ್ಲಿ ನಾನೂ ಪ್ರದ್ಯುಮ್ಮನೂ ತನ್ಮು ಮನೆಯಲ್ಲಿ 

ಕಾಫಿ ಮಾಡಿದೆವು. ಪ್ರದ್ಯುಮ್ನ ನು ಒಳಗಿನಿಂದ ಹಾಲು ತರುತ್ತಿರುವಾಗ 

'ಯಾರನ್ನು ಕೇಳಿ ಹಾಲು ತೆಗೆದುಕೊಂಡೆ? ' ಎಂದು ನರಸಮ್ಮನನರು ಗದ್ದ 

ರಿಸಿ ನುಡಿದವರೇ ಪ್ರದ್ಯುಮ್ನನ ಕೈಯಲ್ಲಿಯ ಹಾಲಿನ ಪಾತ್ರೆಯನ್ನು ಕಾಲಿ 

ಲೊದ್ದು ಕೆಡವಿದರು. ಪಾಪ, ಪ್ರದ್ಯುಮ್ನನು ಹಾಗೆಯೇ ಎದ್ದವನೇ ನನ್ನ 

ಮನೆಗೆ ಬಂದು ಭೋಜನ ತೀರಿಸಿಕೊಂಡ ಬಳಿಕ, ಅವನು ಕಲಕತ್ತೆಗೆ 

ಹೋಗುವ ಸಿದ್ದತೆ ಮಾಡಿಕೊಳ್ಳುವ ಹವಣಿಕೆಯಲ್ಲಿರುವನು.” 


ಈ ಸಮಾಚಾರವನ್ನು ಕೇಳಿ ಸರಮ ಸಾತ್ಟಿಕರೂ ಪುತ್ರತ್ಸಲರೂ 

ಆದ ಆ ಮಹಾಮಹೋಪಾಧ್ಯಾಯರ ಕಣ್ಣುಗಳಲ್ಲಿ ದುಃಖಾಶ್ರುಗಳೊತ್ತಿ 

ಬಂದವು. 


" ವಿಜಯೀಂದ್ರ, ಹೇಗಾದರೂ ಮಾಡಿ ಪ್ರದ್ಯುಮ್ನನನ್ನು ನಮ್ಮ 

ಮನೆಗೆ ಕರೆದುಕೊಂಡು ಬಾ. ನಾನು ನಾಲ್ಕು ಸಮಾಧಾನದ ಮಾತು ಹೇಳಿ 

ಆ ಮಗುವನ್ನು ಓಡಂಬಡಿಸುವೆವು.?' 


" ತಮ್ಮ ಆಜ್ಞೆಯನ್ನು ಅವನಿಗೆ ತಿಳಿಸುವೆನು. ನನ್ನ ಮಾತಿಗೆ ಅವನು 

ತನ್ಮು ಮನೆತನಕ ಬರುವನೋ ಇಲ್ಲವೊ ಹೇಳಲಾಗದು. ಪ್ರದ್ಯುಮ್ನನು ಅತಿ 

ಶಯವಾಗಿ ಸಂತಪ್ತನಾಗಿರುವನು.” 


"ಏನೇ ಆಗಲಿ, ನಮ್ಮನ್ನು ಕಾಣದೆ ಕಲಕತ್ತೆಗೆ ಹೋಗಬೇಡವೆಂದು 

ಅವನಿಗೆ ನೀನು ಹೇಳುವಿಯಷ್ಟೆ?" ಎಂದು ಮಗನ ಮೇಲಿನ ವ್ಯಾಮೋಹ 

ಕ್ಕಾಗಿ ವಿದ್ಯಾಧೀಶರು ದೀನರಂತೆ ಕೇಳಿದರು, 


ಮೂರನೆಯ ಪ್ರಹರವು ಮಾರಿ ಹೋಗಿದ್ದರೂ ಬೇಸಿಗೆಯ ಬಿಸಿಲಿನ 

ಪ್ರಖರತೆಯು ಎಳ್ಳಷ್ಟಾದರೂ ಕಡಿಮೆಯಾಗಿದ್ದಿಲ್ಲ ... ಪುರ ಪಟ್ಟಣದ 

ರೈಲ್ವೆ ಸ್ಟೇಶನದ ಅಂಗಣದಲ್ಲಿ ಅಧಿಕಾರಿಗಳು ಒಳ್ಳೇ ಜೋಕೆಯಾಗಿ ಬೆಳಿ 

ಸಿದ ವೃಕ್ಷಗಳ ಛಾಯೆಯಲ್ಲಿದ್ದೆ ಬೆಂಚಿನ ಮೇಲೆ ಉದ್ದಿಗ್ನನಾದ ತರುಣ 

ನೋರ್ವನು ಹಣೆಗೆ ಕೈಯಿಟ್ಟುಕೊಂಡು ಕುಳಿತಿದ್ದನು, ಅವನು ಪ್ರದ್ಯುಮ್ನನೇ. 

ರಫಸಂಪನ್ನನೂ ದೃಢಾಂಗನೂ ತರುಣನೂ ಆಗಿರುವ ಪ್ರದ್ಯುಮ್ನನು 

ಮನಸ್ಸಿನ ಉದ್ವೇಕ್ಕಾಗಿಯೂ ಬಿಸಿಲಿನ ತಾಸಕ್ಕಾಗಿಯೂ ತ್ರಸ್ತನಾಗಿ ತಲೆ  



ಅಲಿಪ್ತ ವಾದ ಪ್ರೇಮಸಂಯೋಗ ೩೧ 



ಹಿಡುಕೊಂಡು ಕುಳಿತಿದ್ದನು. ಪ್ರದ್ಯುಮ್ನನು ಎಂಟು ವರುಷದನನಿರುವಾಗಲೇ 

ಅವನ ತಾಯಿಯು ತೀರಿಕೊಂಡಿದ್ದಳು. ಅಪ್ರಬುದ್ಧನಾದ ಆ ಪೋರನಿಗೆ 

ಮಾತೃನಿಯೋಗದ ದುಃಖವೆಲ್ಲಿ? ಯಾರು ಏನು ಆಡಿದರೂ ಅದರ ವ್ಯತ್ಯಾ  

ಸವು ಅವನಿಗಿಲ್ಲ. ಒಳ್ಳೇ ಕೂಳು ನೀಡಿದರೂ ಅದು ಅವನಿಗೆ ಸ್ವಾದಿಷ್ಟವೇ, 

ಕೆಟ್ಟ ಕೂಳು ನೀಡಿದರೂ ಸ್ವಾದಿಷ್ಟವೇ. ಮಲತಾಯಿಯು ಕೃದ್ದಳಾಗಿ 

ನಾಲು ಪೆಟ್ಟು ಹೊಡೆದರೂ ಅದರ ಲಕ್ಷ್ಯ ಅವನಿಗಿಲ್ಲ. ತಂದೆಯವರು 

ಪ್ರೇಮದಿಂದ ಅವನನ್ನು ಮುದ್ದಿಸಿದ್ದರ ಸ್ಪಾರಸ್ಯವೂ ಅವನಿಗೆ ತಿಳಿಯುತ್ತಿ 

ದ್ದಿಲ್ಲ. ಈ ದಿವಸ ಮಾತ್ರ ವಿಶ್ವವಿದ್ಯಾಲಯದ ಪದವೀಧಧರನಾದ ಪ್ರದ್ಯುಮ್ನ 

ನಿಗೆ ಹಡೆದ ತಾಯಿಯ ನೆನಪಾಗಿ ಅವನನು ಕಣ್ಣು ತುಂಬಾ ನೀರು ತಂದನು. 

ಅನೇಕರಿಗೆ ಆಶ್ರಯವನ್ನು ಕೊಡಲು ಸಮರ್ಥನಾಗಿದ್ದ ಆ ತರುಣನು ತಾಯಿ  

ಇಲ್ಲದಕ್ಕಾಗಿ ತಾನು 'ನಿರಶ್ರಿ ತನಾಜಿನೆಂದು ವ್ಯ ಸನಪಟ್ಟ ನು. ತಂದೆಯ 

ವರು ನಿದ್ಯಾದಾತೃ ಗಳು, ಮನುತಾಸುಗಳು, ತನ್ನಭೀಸ್ಟೆ ಯನ್ನು ಯಥೇಷ್ಟ 

ವಾಗಿ ಪೂರೈಸುವರು ಸಜ ಆದರೆ ತಾಯಿಲ್ಲದವನಿಗೆ ಗೃ ಸುಖವಿಲ್ಲ. ಪದ್ದು 

ಮ್ಹನು ಹೀಗೆ ವಿಚಾರದಲ್ಲಿ ಥಿಮಗ್ನನಾಗಿರುವಾಗ ವಿದಾ ಧೀಶ ಪಂಡಿತರು 

ಟಿ ತರಾಶುರಿಯಿಂದೆ ನುಗನನ್ನು ಹುಡುಕುತ್ತ ಹುಡುಕುತ್ತ ಅವನೆದುರಿನಲ್ಲಿ 

ಬಂದು ನಿಂತರು. ಪಿಶಾಪುತ್ರರದ್ದ ಸು ಯೊಂದಾದ ಕೊಡಲೆ ಈರ್ನರ ಕಣ್ಣು 

ಗಳಲ್ಲಿಯೂ ಅಶ್ರುಗಳು ಸೂಟು ತ್ರ ಸ್ರದ್ಧುಮ್ನನು ಚಟ್ಟೆ ನೆ ತನ್ನ 

ಸ್ಕಾ ನವನ್ನು ಬಟ್ಟ ದ್ದು ತಂಜಿಯವರ ಕಾಶ್ಗೆ ರಗಿ ಸತ್‌ ಬು 

ಕರು. ವದ್ಯಾಥೀಕರ ಮಗನಿಗೆ ಮಸಿಗೆ ಬಾರೆಂದು ಎಷ್ಟು ಪರಿಯಾಗಿ 

ಹೇಳಿದರೂ ಪ್ರದ್ಯು ಮ್ನನು ಮಾಶಾಡದೆ ಸುಮ್ಮನ ಸಾಗರ! 

«ಆಗಲಿ ದ ನೆನನಿಂದ ನೀನು ದೇಶಸಂಚಾರ ಮಾಡಿದೆ 

ಯಾದರೆ ನಿನಗೆ ಜಗತ್ತಿನ ಅನುಭವವು ಹೆಚ್ಚುಗಿ ಬರುವದು. ಆದಷು 

ಬೇಗನೆ ಮರಳಿ ಊರಿಗೆ ಬಾ. ನಿನ್ನ ಲಗ್ನಮಾಡಿ ನಿನ್ನನ್ನು ಸ್ರಶ್ತೇಕ 

ವಾಗಿ ಇಡುತ್ತೇವೆ. ನೀನು ಸಂಸಾರಸುಖದಲ್ಲಿದ್ದದ್ದು ಕಂಡರೆ ಸಾಕು. ಈ 

ಸಹಸ್ರ ರೂಪಾಯಿಗಳ ನೋಟು ತೆಗೆದುಕೋ, ಮತ್ತೆ ಬೇಣದಕೆ ಪತ್ರ 

ಬರಿ, ಕಳಿಸಿಕೊಡುತ್ತೇನೆ. ನೀನು ಸರಮ ಸದ್ದುಣಿಯೂ, ನಿರ್ವ್ಯಸನಿಯೂ 

ವಿನೀತನೂ, ಸ್ವಕುಲಾಚಾರಗಳ ಅಭಿಮಾನಿಯೂ ಆಗಿರುವದರಿಂದ ನೀನಿಲ್ಲಿಗೆ 



೩೨ ಸಂಪೂರ್ಣ-ಕಥೆಗಳು 



ಹೋದರೂ ಮಾನ್ಯನೇ ಆಗುವಿ. ನಿನ್ನ ವಿಷಯವಾಗಿ ನಮಗೆ ಆಲೋಚನವಿಲ್ಲ. 

ವೃದ್ಧಾಪ್ಯದಲ್ಲಿ ನೀನಿಲ್ಲದೆ ನಮ್ಮ ಗತಿಯೇನಾಗುವದೋ ಕಾಣೆವು. ತಿಳಿದ 

ವನೇ ಇರುವಿ. ಹೆಚ್ಚಿಗೇನು ಹೇಳೋಣ? ” ಎಂದು ನುಡಿದು ವರ್ಚಸ್ವಿಗಳಾದ 

ಆ ಪಂಡಿತರು ಮತ್ತೆ ಕಣ್ಣಿಗೆ ನೀರು ತಂದರು. 


ತೀರ್ಥರೂಪರ ನಿಃಸೀಮವಾದ ವಾತ್ಸಲ್ಯವನ್ನು ಕಂಡು ಪ್ರದ್ಯುಮ್ನನ 

ಅಂತಃಕರಣವಾದರೂ ಉಕ್ಕೇರಿ ಬಂದಿತು. ಕಂಠವು ಬಿಗಿದದ್ದರಿಂದ ಅವನ 

ಬಾಯಿಯಿಂದ ಮಾತುಗಳೇ ಹೊರಡಲೊಲ್ಲವು. ಪಳಪಳನೆ ಉದುರುತ್ತಿರುವ 

ಕಣ್ಣೀರಿನ ದೊಡ್ಡದೊಡ್ಡ ಹನಿಗಳೇ ಅವನ ಉತ್ತರಗಳಾದವು. 


ಪ್ರದ್ಯುಮ್ನ, ಯೋಚಿಸಬೇಡ, ನಾವು ಸಂತೋಷದಿಂದ ನಿನಗೆ 

ಸಂಚಾರಕ್ಕೆ ಹೋಗಲು ಅಪ್ಪಣೆ ಕೊಡುತ್ತೇವೆ. ಸದ್ಯಕ್ಕೆ ವರ್ಷಾರು ತಿಂಗಳ 

ನೀನು ಯಥಾಸುಖವಾಗಿ ತಿರುಗಾಡಿ ಬರುವದೇ ವಿಹಿತವು. ಹೋಗಿ ಬಾ” 

ಎಂದು ಹೇಳಿ ತಂದೆಯವರು ಮಗನನ್ನು ಹರಿಸಿದರು. 

* * *


"ಪ್ರದ್ಯುಮ್ನ ಪಂಡಿತ ಮುಂಬಯಿ ಪ್ರೊಫೆಸರ್ ಎನ್‌ ಲಾಯಿಟನ್ 

ಮೆಂಟ ಸಾಹೇಬರು ನಿಮ್ಮ ವಿಷಯವಾಗಿ ಒಳ್ಳೆ ಗೌರವದ ಅಭಿಪ್ರಾಯ 

ವನ್ನು ತಳೆದದ್ದು ಆಶ್ಚರ್ಯವಲ್ಲ, ನೀವು ನನ್ನ ಬಳಿಯಲ್ಲಿ ಅರ್ಥಶಾಸ್ತ್ರವನ್ನು 

ಕಲಿಯಲಾರಂಭಿಸಿ ನಾಲ್ಕೇ ತಿಂಗಳುಗಳಾಗಿದ್ದರೂ ಒಮ್ಮೊಮ್ಮೆ ನೀವು 

ಮಾಡುತ್ತಿರುವ ನೈಪುಣ್ಯದ ಪೂರ್ವಪಕ್ಷಗಳಿಗೆ ಸಮರ್ಪಕವಾದ ಉತ್ತರ 

ಗಳನ್ನು ಕೊಡಬೇಕಾದರೆ ನನಗೆ ಪರಿಶ್ರಮ ಮಾಡಬೇಕಾಗುತ್ತದೆ. ಈಗ 

ನೀವು ಗಳಿಸಿಕೊಂಡಷ್ಟು ಜ್ಞಾನದಿಂದ ಅರ್ಥಶಾಸ್ತ್ರ ಪ್ರವೀಣರೆಂದು ನಿಮ್ಮನ್ನು 

ಕರೆಯಲು ಅಭ್ಯಂತರವಿಲ್ಲ. ಇನ್ನು ಮುಂದೆ ನಾನು ನಿಮಗೆ ಅರ್ಥಶಾಸ್ತ್ರದ 

ಗುರುವೂ ನೀವು ನನಗೆ ಸಂಸ್ಕೃತಾಧ್ಯಾಪಕರೂ ಆಗಿರತಕ್ಕದ್ದು. ನಿಮ್ಮ 

ತಂದೆಯವರು ಆದ್ವಿತೀಯರಾದ ಪಂಡಿತರೆಂದು ತರ್ಕವಾಗೀಶರು ಹೇಳುತ್ತಿ 

ರುವರು. ಅವರಲ್ಲಿ ಕಲಿತವರಾದ ನೀವು ಕೂಡ ಸಂಸ್ಕೃತದಲ್ಲಿ ಒಳ್ಳೆ 

ಗಟ್ಟಿಗರೆಂದು ನಮ್ಮ ಕಾಲೇಜದ ಶಾಸ್ತ್ರಿಗಳು ಒಪ್ಪಿಕೊಂಡಿದ್ದಾರೆ” ಎಂದು 

ಕಲಕತ್ತಾ ಕಾಲೇಜದ ಪ್ರಿನ್ಸಿಪಾಲರೆಂದರು. 


ಹೀಗೆ ಗುರುಶಿಷ್ಯ ರೀರ್ವರೂ ಪರಸ್ಪರರನ್ನು ಆದರಿಸುತ್ತೆ ತಮ್ಮ ತಮ್ಮ 


ಆಲಿಪ್ತವಾದ ಪ್ರೇಮಸಂಯೋಗ ೩೩


ವ್ಯಾಸಂಗಗಳನ್ನು ನಡಿಸುತ್ತೆ ಆನಂದದಲ್ಲಿದ್ದರು. ಆದರೆ ಇನ್ನು ಮುಂದೆ 

ಪ್ರದ್ಯುಮ್ನ ನ ಆಯುಷ್ಯ ಕ್ರಮದಲ್ಲಿ ವಿಲಕ್ಷಣವಾದ ಕ್ರಾಂತಿಯಾಗತಕ್ಕದ್ದಿತ್ತು. 


ತ್ರಿಗರ್ತ ಸಂಸ್ಥಾನಾಧಿಪತಿಗಳಾದ ಮಹಾರಾಜಾ ನಕುಷಸಿಂಹ ಬಹಾ 

ದ್ದರವರು ಕಲಕತ್ತೆಗೆ ಬಂದಿದ್ದು ಹಿಂದುಸ್ಥಾನದಲ್ಲಿಯ ಇತಿಹಾಸ ಪ್ರಸಿದ್ಧ 

ವಾದ ಸ್ಥಳಗಳನ್ನೂ, ಪರಮ ರಮಣೀಯವಾಗಿರುವ ಬೇರೆ ಅನೇಕ ಸ್ಥಾನ 

ಗಳನ್ನೂ ನೋಡುವದಕ್ಕಾಗಿ ಅವರು ಸಕುಟುಂಬವಾಗಿ ಹೊರಡಬೇಕಾದ್ದರಿಂದ 

ಒಬ್ಬ ಚತುರನೂ, ವಿನೀತನೂ, ಕಾರ್ಯದಕ್ಷ, ಒಳ್ಳೆ ವಿಶ್ವಾಸದವನೂ 

ಆಗಿರುವ ವ್ಯವಸ್ಥಾಪಕನ ಅವಶ್ಯಕತೆ ಅವರಿಗಿತ್ತು. ಕಲಕತ್ತಾ ಕಾಲೇಜದ 

ಪ್ರಿನ್ಸಿಪಾಲರ ಬಳಿಗೆ ಹೋಗಿ ಮಹಾರಾಜರು ತಮಗೊಬ್ಬ ವ್ಯವಸ್ಥಾಪಕ 

ನನ್ನು ಗೊತ್ತು ಮಾಡಿಕೊಡಿರೆಂದು ಕೇಳಲಾಗಿ, ಅವರು ಪ್ರದ್ಯುಮ್ನನ 

ಗುಣಾನುವಾದವನ್ನು ಬಹುಪರಿಯಾಗಿ ಮಾಡಿ ಅವನನ್ನು ಹೊರತುಪಡಿಸಿ 

ಇನ್ನೊಬ್ಬ ಯೋಗ್ಯನಾದ ವ್ಯವಸ್ಥಾಪಕನು ತಮಗೆ ಸಿಕ್ಕನೆಂದು ಪ್ರಿನ್ಸಿಪಾಲರು 

ಮಹಾರಾಜರಿಗೆ ಹೇಳಿದರು. 


ಅನಾಯಾಸವಾಗಿ ದೇಶಸಂಚಾರ ಮಾಡುವ ಸುಖತರವಾದ ಸಾಧನವು 

ತನಗೆ ಪ್ರಾಪ್ತವಾಗಿರಲು ಪ್ರದ್ಯುಮ್ನನು ಸಂಡಲೆ ಒಪ್ಪಿಕೊಂಡು, ತ್ರಿಗರ್ತದ 

ಮುಖ್ಯ ಪಟ್ಟಣವಾದ ಶೃಂಗಾರಪುರಿಗೆ ಅವನು ಮಹಾರಾಜರೊಡನೆ 

ನಡೆದನು. 


ಮಹಾರಾಜ ನಹುಷಸಿಂಹರ ಕುಟುಂಬದಲ್ಲಿ ಅವರ ರಾಣಿಯವರಾದ 

ಪ್ರಮಾದ ಹೃದಯಾದೇವಿಯರ, ನವತರುಣಳಾದ ರಾಜಕುಮಾರಿ ಪ್ರೇಮ 

ಸುಂದರಿಯೂ, ಹನ್ನೆರಡು ವರುಷದ ಚಿಕ್ಕ ಯುವರಾಜನಾದ ರಘುವೀರ 

ಸಿಂಹನ ಹೀಗೆ ನಾಲ್ಕೇ ಜನರಿದ್ದರು. 


ಮಹಾರಾಜರಿಗೆ ಮಾತುಕಥೆಯಾಡುವಷ್ಟು ಮಾತ್ರಕ್ಕೆ ಇಂಗ್ಲಿಷ್ ಬರು 

ತ್ತಿದ್ದರೂ ಅವರು ಬಹುಶ್ರುತರೂ, ಒಳ್ಳೇ ವ್ಯವಹಾರಜ್ಞಾನಿಗಳೂ, ಉದಾರ 

ವಾದ ಮನಸ್ಸಿನವರೂ, ವಿದ್ಯಾಭಿಮಾನಿಗಳೂ ಆಗಿದ್ದರು. ರಾಣಿಯವರಾ 

ದರೂ ಸುಸಂಸ್ಕೃತವಾದ ವಿಚಾರಗಳುಳ್ಳವರೂ, ಆದರಶೀಲರೂ ಹಿಂದೀ 

ಭಾಷೆಯಲ್ಲಿ ಓದು ಬರೆಯಲು ಬಲ್ಲವರೂ ಆಗಿದ್ದರು. 


ಕುಮಾರಿ ಪ್ರೇಮಸುಂದರಿಗೆ ಅವಳ ತೀಕ್ಷ್ಮವಾದ ಬುದ್ಧಿಗೆ ಉಚಿತ 


೩೪ ಸಂಪೂರ್ಣ-ಕಥೆಗಳು 


ವಾದ ಶಿಕ್ಷಣವು ದೊರೆತಿತ್ತು. ಅಮೃತರಂಜನರಾಯನೆಂಬ ಪಂಡಿತನ ಮಗ 

ಳಾದ ಶಾರದಾರಂಜನೀ ಎಂಬ ವಿದುಷಿಯು ಪ್ರೇಮಸುಂದರಿಗೆ ಶಿಕ್ಷಕ 

ಳಾಗಿದ್ದು ಅವಳ ಕೈಯಲ್ಲಿ ಆ ರಾಜಕುಮಾರಿಯು ಇಂಗ್ಲಿಷ್, ಸಂಸ್ಕೃತ 

ಭಾಷೆಗಳ ಜ್ಞಾನವನ್ನು ಚೆನ್ನಾಗಿ ಮಾಡಿಕೊಂಡಿರುವದಲ್ಲದೆ ಗಾಯನ, ಚಿತ್ರ 

ಕಲೆಗಳನ್ನೂ ಇತಿಹಾಸ ನೀತಿಗಳನ್ನಾದರೂ ಚೆನ್ನಾಗಿ ಹೇಳಿಸಿಕೊಂಡಿದ್ದಳು. 

ಪ್ರೇಮಸುಂದರಿಯು ನಿಪುಣೆಯೂ ವಿನೋದಿನಿಯೂ ಮಾತಾಪಿತೃಗಳಲ್ಲಿ 

ಭಕ್ತಿಯುಳ್ಳವಳೂ ಆಗಿದ್ದಳು. 


ಹೀಗೆ ಐಶ್ವರ್ಯಮಂಡಿತರ ವಿದ್ಯಾವಿಭೂಷಿತರೂ ಆಗಿರುವ ಆ 

ರಾಜ ಕುಟುಂಬವರೊಡನೆ ದೇಶ ಸಂಚಾರವನ್ನು ಮಾಡುವಂಥ ಅಲಭ್ಯ 

ಲಾಭವು ಪ್ರದ್ಯುಮ್ನನಿಗೆ ದೊರಕಿತು. ಪ್ರದ್ಯುಮ್ನನಂಥ ಘನವಿದ್ವಾಂಸ 

ನಾದ ವ್ಯವಸ್ಥಾಪಕನ ಸಮಾಗಮದಿಂದ ರಾಜರ ಸಂಚಾರವು ಸೌಕರ್ಯ 

ವುಳ್ಳದ್ದೂ ಜ್ಞಾನಾನಂದಗಳನ್ನೀಯುವದಾಗಿಯೂ ಆಯಿತೆಂಬಗರಲ್ಲಿ 

ಸಂದೇಹವಿಲ್ಲ. 


ಇವರು ಅಯೋಧ್ಯಾ, ಪಾಟಲೀಪುತ್ರ, ಕೌಶಾಂಬಿ, ಹಸ್ತಿನಾಪುರ, 

ಪ್ರತಿಷ್ಠಾನ ಮುಂತಾದ ನಾಮಶೇಷಗಳಾದ ಪ್ರಾಚೀನ ರಾಜಧಾನಿಗಳಲ್ಲಿದ್ದ 

ಸ್ಥಳಗಳನ್ನೂ, ದಿಲ್ಲಿ, ಆಗ್ರಾ ಮುಂತಾದ ಗತವೈಭವಗಳಾದ ರಾಜಧಾನಿಗಳ 

ಅವಶೇಷವಾದ ಸೌಂದರ್ಯಗಳನ್ನೂ, ಗಯಾ, ಕಾಶೀ, ಮಥುರಾ ಮುಂತಾದ 

ಪವಿತ್ರವಾದ ಕ್ಷೇತ್ರಗಳನ್ನೂ, ಬಂಗಾಲ, ಕಾಶ್ಮೀರ ಮುಂತಾದ ಸೃಷ್ಟಿ 

ಸೌಂದರ್ಯಪೂರಿತವಾದ ದೇಶಗಳನ್ನೂ ನೋಡುತ್ತೆ ಸಾವಕಾಶವಾಗಿ ನಡೆದಿ 

ದ್ದರು. ಹೋದ ಹೋದ ಸ್ಥಳದ ಇತಿಹಾಸವನ್ನೂ, ಅಲ್ಲಿಯ ಮಳೆಬೆಳೆಗಳ 

ಸಂಗತಿಗಳನ್ನೂ, ಜನರ ನಡೆನುಡಿಗಳ ಪ್ರಗತಿಗಳನ್ನೂ ಪ್ರದ್ಯುಮ್ನನು 

ಮೊದಲೇ ಸಂಕಲಿಸಿ ಇಟ್ಟು ನಾಳಿನ ಊರಿನ ಸಾಮಾನ್ಯವಾದ ವರ್ಣನೆ 

ಯನ್ನು ಇಂದೆಯೇ ತನ್ನ ಯಜಮಾನರ ಕುಟುಂಬದವರಿಗೆ ಹೇಳಿ 

ಇಡುತ್ತಿದ್ದನು.  


ತಾಜಮಹಾಲಿನಂಥ ಅತಿ ರಮಣೀಯವಾದ ಮಹಾಮಂದಿರದ ಶೋಭೆ 

ಯನ್ನು ಅವಲೋಕಿಸುವಾಗ ಆಗಲಿ, ಪ್ರಯಾಗದಂಥ ಮಹಾನದಿಗಳ ಸಂಗ 

ಮದ ಅಲೌಕಿಕವಾದ ನೋಟವನ್ನು ನೋಡುವಾಗಲಾಗಲಿ, ಅಶೋಕ ಚಕ್ರ 


ಅಲಿಪ್ತವಾದ ಪ್ರೇಮಸಂಯೋಗ ೩೮


ವರ್ತಿಯ ಶಿಲಾಶಾಸನಗಳನ್ನು ಒಡೆದು ಓದುವಾಗಲಾಗಲಿ ಪ್ರೇಮಸುಂದ 

ರಿಯು ಪ್ರದ್ಯುಮ್ಮನ ಸಮೀಪದಲ್ಲಿ ನಿಂತು ಅನೇಕ ಪ್ರಶ್ನೆ ಗಳನ್ನು ಮಾಡಿ 

ತನ್ನ ಜಿಜ್ಞಾಸೆಯನ್ನು ತೃಪ್ತಿ ಪಡಿಸಿಕೊಳ್ಳುತ್ತಿದ್ದಳು. ಆಯಾ ಸ್ಥಳಗಳ ವರ್ಣನೆ 

ಯನ್ನು ಪೂರ್ವಕವಿಗಳಾದ ಕಾಲಿದಾಸ ಪ್ರಕೃತಿಗಳು ಮಾಡಿದ್ದಾಗಿದ್ದರೆ 

ಪ್ರದ್ಯುಮ್ನನು ಸಮಯೋಚಿತವಾಗಿ ಆ ಸಾವ್ಯಗಳಲ್ಲಿಯ ಶ್ಲೋಕಗಳನ್ನು 

ಉದಹರಿಸಿ ಬಹು ರಮ್ಯವಾಗಿ ವರ್ಣಿಸುತ್ತಿದ್ದನು. ಇತಿಹಾಸಕಾರರ ಗ್ರಂಥ 

ಗಳಲ್ಲಿಯ ಅವತರಣಿಕೆಗಳನ್ನು ಪ್ರಸಂಗಾನುಸಾರವಾಗಿ ಅವನು ಓದಿಹೇಳು 

ತ್ತಿದ್ದನು. ಅಲ್ಲಲ್ಲಿ ಮೊದಲು ಆಳಿರಾದ ರಾಜರ ಚಿತ್ರಗಳುಳ್ಳ, ಪುಸ್ತಕ 

ಗಳನ್ನು ತೆರೆದು ಅಕಬರ, ಜಹಾಂಗೀರಿ, ನೂರಜಹನ, ಶಿವಾಜಿ, ತೋಡರ 

ಮಲ್ಲ, ಜಯಸಿಂಹ ಮುಂತಾದ ಮಹಾತ್ಮರ ಚಿತ್ರಗಳನ್ನು ತೋರಿಸಿ ಅವರವರ 

ಜೀವನ ಚರಿತ್ರಗಳನ್ನು ಸಂಕ್ಷಿಪ್ತವಾಗಿ ಹೇಳುವನು. 


ಪ್ರದ್ಯುಮ್ನನ ಜ್ಞಾನಭಾಂಡಾರನನ್ನೂ, ಅವನ ವಾಕ್ಚಾತುರ್ಯವನ್ನೂ, 

ಅವನ ವಿನಯವನ್ನೂ, ತಾರುಣ್ಯದ ಪ್ರಭೆಯಿಂದ ಕೂಡಿದ ಜನ ಸುಂದರ 

ವಾದ ಮುಖದ ವರ್ಚಸ್ವವನ್ನೂ ಕಂಡು ಅಬಲೆಯಾದ ಪ್ರೇಮಸುಂದರಿಯು 

ಆಗಾಗ್ಗೆ ಕೌತುಕಪಡುವಳು. ಈ ಅವಲೋಕನಾರ್ಥಿಗಳ ಮೇಳೆಯು ಆಗ್ರಾ 

ಪಟ್ಟಣದಲ್ಲಿರುವ ಅಕಬರನ ದಿವಾನ್ ಈ ಆಮ್ಮ್ ಎಂಬ ಮಂದಿರದಲ್ಲಿ ನಿಂತು 

ನೋಡುತ್ತಲೂ ಮಾತಾಡುತ್ತಲೂ ಇರುವಾಗ ಪ್ರೇಮಸುಂದರಿಯ ಪ್ರದ್ಯು 

ಮ್ನನನ್ನು ಕುರಿತು, 'ಪಂಡಿಜೀ, ಈ ಮಂದಿರದಲ್ಲಿ ನಿನ್ನನ್ನು ಅಕಬರ 

ಬಾದಶಹರು ಕಂಡದ್ದಾಗಿದ್ದರೆ ಅವರು ನಿಶ್ಚಯವಾಗಿ ನಿಮ್ಮನ್ನ ತಮ್ಮ 

ವಜೀರನನ್ನಾಗಿ ಮಾಡಿಕೊಳ್ಳುತ್ತಿದ್ದರು, ” ಎಂದು ನುಡಿದು ವಿನೋದ 

ಮಾಡಿದಳು.ಈ ಚಮತ್ಕಾರವಾದ ಕಲ್ಪನೆಗೆ ಎಲ್ಲರೂ ನಕ್ಕರು. ಹೀಗೆ 

ಪ್ರದ್ಯುಮ್ನನು ಆ ರಾಜಮನೆತನದವರಿಗೆಲ್ಲರಿಗೂ ಬೇಕಾದವನೂ, ಅವರ 

ಆದರಕ್ಕೆ ಪಾತ್ರನೂ, ಅವರ ವಿಶ್ವಾಸನಿಧಾನನೂ ಆಗಿದ್ದರಿಂದ ಅವನು 

ಕಣ್ಣು ಮರೆಯಾದರೆ ಅವರ ಮನಸ್ಸಿಗೆ ಸಮಾಧಾನವಿರುತ್ತಿದ್ದಿಲ್ಲ. 


ಪ್ರವಾಸವು ತೀರಿದ ಬಳಿಕ ರಾಜಾ ನಯಷಸಿಂಹರು ಪ್ರದ್ಯುಮ್ನನನ್ನು 

ಅತ್ಯಾಗ್ರಹದಿಂದ ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿ ಇಟ್ಟು ಕೊಂಡರು. 

ತಿಂಗಳಾ ಐನೂರು ರೂಪಾಯಿಯ ಸಂಬಳವುಳ್ಳ ಉದ್ಯೋಗವನ್ನು ಬಿಟ್ಟು 


೩೬ ಸಂಪೂರ್ಣ-ಕಥೆಗಳು 


ಕೊಡುವದ, ರಾಜಕುಟುಂಬದವರೆಲ್ಲರೂ ತನ್ನ ಮೇಲೆ ಮಾಡುತ್ತಿರುವ 

ಮಮತೆಯನ್ನು ನೆನೆದು, ಅವರ ಮಾತು ಮುರಿಯುವದೂ ಪ್ರದ್ಯುಮ್ನನಿಂದ 

ಆಗಲಿಲ್ಲ. ಇತ್ತ ತಂದೆಯವರಾದ ವಿದ್ಯಾಧೀಶರು ಆಗ್ರಹದೊಂದಿಗೆ ಮಗನಿಗೆ 

ಊರಿಗೆ ಬಾರೆಂದು ಬರೆಯುತ್ತಿದ್ದರು. ಪ್ರದ್ಯುಮ್ನನ ವಿವಾಹವನ್ನು ಮಾಡುವ 

ಕರ್ತವ್ಯದ ಭಾರವು ಅವರ ಮೇಲೆ ದುಃಸಹವಾಗಿ ಕುಳಿತದ್ದರಿಂದ ಅವರು 

ಅನೇಕ ಜನ ವಧುಗಳ ಭಾವಚಿತ್ರಗಳನ್ನು ತೆಗಿಸಿ ಪ್ರದ್ಯುಮ್ನನ ಒಪ್ಪಿಗೆಗಾಗಿ 

ಕಳಿಸುತ್ತಿದ್ದರು. ಆದರೆ ಪ್ರಗತಿಯ ಮಾರ್ಗಾನುಗಾಮಿಯಾದ ಪ್ರದ್ಯುಮ್ನನು 

ತನ್ನ ವಿವಾಹದ ಭಾರವು ಕೇವಲ ತನ್ನ ತಂದೆಯವರ ಮೇಲೆ ಎಳ್ಳಷ್ಟಾದರೂ 

ಇರದೆ ಆ ಕಾರ್ಯವು ಕೇವಲ ತನ್ನದೇ ಎಂದೂ, ಅದನ್ನು ತನ್ನ ಇಷ್ಟವಿದ್ದಾಗ 

ತಾನು ನೆರವೇರಿಸತಕ್ಕವನೆಂದೂ ಅಭಿಪ್ರಾಯವನ್ನು ತಿಳಿಸಿದ್ದನು. ಅದಕ್ಕಾಗಿ 

ತಂದೆಮಕ್ಕಳ ನಡುವೆ ಅಂಚೆತಂತಿಗಳ ದ್ವಾರವಾಗಿ ವಾಗ್ಯುದ್ಧವು ನಡೆದು 

ಕಡೆಗೆ ವಿದ್ಯಾಧೀಶರೇ ಸೋತವರಾಗಿ ಮಗನೊಡನೆ ಒಪ್ಪಂದ ಮಾಡಿ 

ಕೊಂಡರು. 


ಶೃಂಗಾರಪುರದ ಅರಮನೆಯ ಉಪ್ಪರಿಗೆಯ ಒಂದು ಭಾಗದಲ್ಲಿ ಕಾರ್ಯ 

ದರ್ಶಿಯಾದ ಪ್ರದ್ಯುಮ್ನನ ಕಚೇರಿಯಾಗತಕ್ಕದ್ದಾಯಿತು. ಅನಲಸನೂ, 

ದಕ್ಷನ, ಚತುರನು ಆದ ಆ ನವತರುಣನಿಗೆ ಕಾರ್ಯಭಾರದ ಬೇಸರ 

ವೆಷ್ಟು ಮಾತ್ರವೂ ಆಗಿರಲಿಲ್ಲ. ಬರೆಬರೆಯುವಾಗ ಅವನು ಉತ್ಸಾಹದಿಂದ 

ಒಮ್ಮೊಮ್ಮೆ ಮಧುರವಾದ ರಾಗ ಮಾಡುವನು. ಒಂದು ಪ್ರಕರಣವನ್ನು 

ಬರೆದು ಮುಗಿಸಿದ ಕೂಡಲೆ "ನಿಮಗಪ್ಪಣೆ !” ಎಂದು ಆ ಪ್ರಕರಣವನ್ನು 

ಒತ್ತಟ್ಟಿಗಿರಿಸಿಬಿಡುತ್ತಿದ್ದನು. ದಿನಾಲು ಒಂದು ಪ್ರಹರ ಮಾತ್ರ ದುಡಿದರಾ 

ಯಿತು, ಪ್ರದ್ಯುಮ್ನನ ಕೆಲಸವು ಮುಗಿದುಹೋಗುತ್ತಿತ್ತು. ಉಳಿದ ವೇಳೆಯಲ್ಲಿ 

ಅವನು ಕಾವ್ಯ, ನಾಟಕಗಳನ್ನು ಓದುವದರಲ್ಲಿಯೂ, ವರ್ತಮಾನ ಪತ್ರಗಳನ್ನು 

ನಿರೀಕ್ಷಿಸುವದರಲ್ಲಿಯೂ, ಹಾಡಿ ಬಾರಿಸುವದರಲ್ಲಿಯ ನಿರತನಾಗಿರುತ್ತಿ 

ದ್ದನು. ಆದರೂ ರಾಣಿಯವರು ಒಂದು ಕೆಲಸವನ್ನು ಹೇಳಿದರೆ ಸಿದ್ಧನೇ; 

ಮಹಾರಾಜರೊಡನೆ ಆಲೋಚನೆಗೈಯುವದರಲ್ಲಿ ಅವನು ತತ್ಪರನೇ. 


ಪ್ರೇಮಸುಂದರಿಯೂ ಅವಳ ಅಧ್ಯಾಸಕಳಾದ ಶಾರದಾರಂಜನಿಯ 

ತಮ್ಮ ತಮ್ಮ ವ್ಯಾಸಂಗಗಳಲ್ಲಿ ಆಗಾಗ್ಗೆ ಪ್ರದ್ಯುಮ್ನನ ಅಭಿಪ್ರಾಯವನ್ನು 


ಅಲಿಪ್ತವಾದ ಪ್ರೇಮಸಂಯೋಗ 


ಕೇಳಿಕೊಳ್ಳುತ್ತಿದ್ದರು. ಗಾನಗಳ ಸ್ವರಸಂಯೋಗದಲ್ಲಿ ಆ ಗುರುಶಿಷ್ಯೆಯರಲ್ಲಿ 

ಮತಭೇದ ಬಂದಾಗ ಪ್ರದ್ಯುಮ್ನನೇ ನಿರ್ಣಯವನ್ನು ಕೊಡುವನು. ಹೀಗಾಗಿ 

ಯಾವ ಮಾತಿನಲ್ಲಿಯಾಗಲಿ, ಯಾವ ವಿಷಯದಲ್ಲಿಯಾಗಲಿ ಆ ಅರಮನೆ 

ಯಲ್ಲಿ ಪ್ರದ್ಯುಮ್ನನ ಅಭಿಪ್ರಾಯವೇ ಪ್ರಮಾಣವಾಗಿತ್ತು. 


ಪ್ರದ್ಯುಮ್ನನ ವಿದ್ಯಾಚಾತುರ್ಯಗಳನ್ನು ಕಂಡು, ಪ್ರೇಮಸುಂದರಿಗೆ 

ಕೌತುಕವಾಗಿತ್ತು. ಅವನ ವಿನಯಶಾಲೀನತೆ ಸೌಜನ್ಯಗಳನ್ನು ಕಂಡು 

ಆದರವೂ ಅವನ ಚತುರೋಕ್ತಿಗಳನ್ನು ಕೇಳಿ ವಿನೋದವೂ, ಅವನ ಅಪ್ರತಿಮ 

ವಾದ ಸೌಂದರ್ಯವನ್ನು ಕಂಡು ಹರ್ಷವೂ ಆ ನವತರುಣಿಗೆ ಆಗುತ್ತಿರು 

ವದು ಸಹಜವೇ, ಆದರೆ ಬರಬರುತ್ತೆ ಪ್ರದ್ಯುಮ್ನನನ್ನು ತಾನು ಬಹಳೊ 

ತ್ತಿನ ವರೆಗೆ ಕಾಣದಿದ್ದರೆ ಅವಳ ಜೀವಕ್ಕೆ ಸಮಾಧಾನವಾಗದಂತಾಯಿತು. 

ಕೊಳ್ಳತಕ್ಕ ದುಕೂಲಗಳ ಜರತಾರಿಯನ್ನು ಪರೀಕ್ಷಿಸುವದಕ್ಕಾಗಲಿ, ತಾನು 

ತೆಗೆದಿದ್ದ ಚಿತ್ರಪಟದಲ್ಲಿಯ ದೋಷಗಳನ್ನು ತೋರಿಸಿಕೊಡುವದಕ್ಕಾಗಲಿ, 

ಇನ್ನೊಂದು ನೆವಕ್ಕಾಗಲಿ, ಪ್ರೇಮಸುಂದರಿಯು ಪ್ರದ್ಯುಮ್ನನನ್ನು ತನ್ನ

 ಬಳಿಗೆ ಕರಿಸಿಕೊಂಡು ಅವನೊಡನೆ ನಾಲ್ಕು ಮಾತಾಡಿ ಕಳಿಸಿಕೊಡುತ್ತಿದ್ದಳು. 

ಇವೆಲ್ಲ ಪ್ರೇಮಸಮುದ್ಭೂತಿಯ ಚಿನ್ನಗಳೇನು ? ಇನ್ನು ಹೇಳಲಾಗದು, 

ಕಾಲ್ಪನಿಕವಾದ ಸಮಾಜಸ್ಥಿತಿಯ ಆತಿ ಶ್ರೇಷ್ಠವಾದ ಇರುವಿಕೆಯಲ್ಲಿ ವಿಹಾರ 

ಮಾಡುತ್ತಿರುವವನಾದ ಪ್ರದ್ಯುಮ್ನನ ಮನಸ್ಸಿನಲ್ಲಿ ಅನಂಗನ ಸಂಚಾರವು 

ಸಹಸಾ ಆಗುವಂತಿಲ್ಲವೆಂದಿಷ್ಟು ಮಾತ್ರ ಹೇಳಲು ನಾವು ಸಮರ್ಥರಿರುತ್ತೇವೆ. 


ಈ ಪ್ರಕಾರವಾಗಿ ಕೆಲವು ದಿವಸಗಳು ಕಳೆದವು. ಬರಬರುತ್ತೆ 

ಪ್ರದ್ಯುಮ್ನನನ್ನು ಕಂಡರೆ ಪ್ರೇಮ ಸುಂದರಿಯ ಮನಸ್ಸಿನಲ್ಲಿ ಲಜ್ಜೆಯೂ, 

ಮುಖದಲ್ಲಿ ಈಷತ್ ಮಂದಹಾಸವೂ, ಅವನನ್ನು ಮಾತಾಡಿಸಲು ಹೃದಯ 

ದಲ್ಲಿ ಅಧೈರ್ಯವೂ ತೋರಲಾರಂಭಿಸಿದವು. ಆದರೆ ಈ ಹೆಚ್ಚು ಕಡಿಮೆಗ 

ಳಾಗಿರುವದನ್ನಾಗಲಿ, ಅವೇಕೆ ಉಂಟಾದವೆಂಬದರ ಕಾರಣಗಳ ವಿಚಾರವಾ 

ಗಲಿ ಕಲ್ಪನಾಸೃಷ್ಟಿಯಲ್ಲಿ ನಡೆದಾಡುವ ಪ್ರದ್ಯುಮ್ನ ನ ಅವಲೋಕನದಲ್ಲಿ 

ಬರಲಿಲ್ಲ. 


ಪ್ರದ್ಯುಮ್ನನ ಗೌರವರ್ಣದ ಕಾಂತಿಯ, ಸೌಷ್ಟವವುಳ್ಳ ಅವನ 

ದೇಹದ ದಾರ್ಡ್ಯವೂ, ನಯನ ಮನೋಹರವಾಗಿರುವ ಅವನ ಸುಂದರವಾದ 


೩೮ ಸಂಪೂರ್ಣ-ಕಥೆಗಳು


ಮುಖವೂ, ಆ  ಮುಖಕ್ಕೆ ಒಪ್ಪಿಗೆಯನ್ನೀಯುವ ಹೊಸಮೀಸೆಗಳು 

ಶೋಭೆಯೂ ಯಾವಾಗಲೂ ಪ್ರೇಮಸುಂದರಿಯ ಕಣ್ಣಿನಲ್ಲಿ ಕಟ್ಟಿ  

ದಂತಾಗಿದ್ದವು. 


"ಇದೇನು ಮನಸ್ಸಿನ ಜಂಜಡವು ! ಪ್ರದ್ಯುಮ್ನ ನೊಡನೆ ನಾಲ್ಕು 

ವಿನೋದದ ಮಾತುಗಳನ್ನಾಡುವೆನೆಂದರೆ ಮನಸ್ಸಿನ ಧೈರ್ಯ ಸಾಲದು ! 

ಆನಂದದಾಯಕವಾದ ಅವನ ಮುಖವನ್ನು ನೋಡುವೆನೆಂದರೆ ಕಣ್ಣುಗಳಿಗೆ 

ನಾಚಿಕೆ, ಮನೆಯವರೆಲ್ಲರು ಬಳಿಯಲ್ಲಿದ್ದರೂ ಪ್ರದ್ಯುಮ್ನನ ಸಮೀಪದಲ್ಲಿ 

ಕುಳಿತರೆ ಮೈಯೆಲ್ಲ ರೋಮಾಂಚಗಳು, ಏನು ಕಾರಣ... ಹೀಗಾಗಿರ 

ಬಹುದು ? ” ಎಂದು ಆ ಮುಗ್ಧೆಯು ಎಷ್ಟು ವಿಚಾರಗೈದರೂ ನಿಜವಾದ 

ಕಾರಣವು ಸ್ಪಷ್ಟವಾಗಿ ತೋರಲೊಲ್ಲದು. 


ಮಹಾರಾಜರೊಡನೆ ಪ್ರದ್ಯುಮ್ನನು ಕಲಕತ್ತೆಗೆ ಹೋದವನು ಒಂದು 

ತಿಂಗಳವರೆಗೆ ಶೃಂಗಾರಪುರಕ್ಕೆ ಬರಲಿಲ್ಲ. ಒಂದೆರಡು ದಿವಸ ಮಾತ್ರ 

ಪ್ರೇಮಸುಂದರಿಯ ಮನಸ್ಸಿಗೆ ತುಸು ಸಮಾಧಾನವಾದಂತಾಯಿತು. ಆದರೆ 

ಮೂರನೆಯ ದಿವಸ ಪ್ರದ್ಯುಮ್ನನನ್ನು ಕಾಣದೆ ಅವಳ ಮನಸ್ಸು ಕಳವಳ 

ಗೊಂಡಿತು. ಅವನ ಗಂಭೀರವಾದ ಧ್ವನಿಯಿಲ್ಲದೆ ರಾಜಮಂದಿರವೆಲ್ಲ ಪ್ರೇಮ 

ಸುಂದರಿಗೆ ನಿಃಶಬ್ದವಾಗಿ ತೋರಿತು. ಅವನ ಸುಂದರವಾದ ಮೂರ್ತಿಯಿಲ್ಲದೆ 

ಮನೆಯು ಅಲಂಕಾರರಹಿತವಾಯಿತು. ಅವನ ನಯನಮನೋಪರವಾಗಿ 

ರುವ ಮುಖವನ್ನು ಕಾಣದಿರುವ ಅವಳ ಕಣ್ಣುಗಳು ನಿಷ್ಪಲವಾಗಿ ತೋರಿ 

ದವು. ಮೆಲ್ಲನೆ ಅವಳು ಪ್ರದ್ಯುಮ್ನನ ಚಿತ್ರಪಟವಿದ್ದಲ್ಲಿಗೆ ಬಂದು ಅದನ್ನು 

ಚನ್ನಾಗಿ ದಿಟ್ಟಿಸಿ ನೋಡಿದಳು. ಚಿತ್ರಪಟದ ದೃಷ್ಟಿಯೂ ತನ್ನ ದೃಷ್ಟಿಯೂ 

ಏಕವಾದಂತೆ ಭಾಸವಾಗಲು ಆ ಮುಗ್ಧಯ ಮನಸ್ಸಿನಲ್ಲಿ ಪ್ರೇಮಾ೦ಕುರವು 

ಉದ್ಭವಿಸಿದಂತಾಗಿ ಅವಳ ಮುಖದಲ್ಲಿ ಮಂದಹಾಸವು ತೋರಿತು. 

ಚಿತ್ರಕಾರನು ಪ್ರದ್ಯುಮ್ನನನ್ನು ಹಾಸ್ಯಮುಖನನ್ನಾಗಿ ರೇಖಿಸಿದ್ದನು. ಆ 

ಸುಂದರನೇ ತನ್ನನ್ನು ಕಂಡು ಮೃದುಹಾಸಗೈದನೆಂದು ನಂಬಿ ಆ ರಮಣಿಯು 

ಲಜ್ಜೆಯಿಂದ ತಲೆಬಾಗಿ ನಿಂತು ಓರೆಗಣ್ಣಿನಿಂದ ಮೆಲ್ಲನೆ ಆ ಚಿತ್ರಪಟವನ್ನು 

ನೋಡಿದಳು. ಈ ಸಾರೆ ಮಾತ್ರ ಅದು ಚಿತ್ರವಲ್ಲದೆ ಆ ಹಾಸ್ಯ ಮುಖನು 

ನಿಜವಾದ ಪ್ರದ್ಯುಮ್ನನಲ್ಲವೆಂದರಿತು ತನ್ನ ಕಣ್ಣ ಮೋಸಕ್ಕೆ ತಾನೇ ಬೆರಗಾಗಿ 



ಅಲಿಪ್ತ ವಾದ ಪ್ರೇಮಸಂಯೋಗ 


ಯಥೇಷ್ಟವಾಗಿ ನಕ್ಕಳು. 


“ ನಾನು ಯಾರು ? ಈ ಪ್ರದ್ಯುಮ್ನನಾರು ? ಕ್ಷತ್ರಿಯವಂಶದವರಾದ 

ಮಹಾರಾಜಾ ನಷಸಿಂಹರ ಮಗಳು ನಾನು. ಪ್ರದ್ಯುಮ್ನನು ಕರ್ಮನಿಷ್ಠ 

ರಾದ ಬ್ರಾಹ್ಮಣೋತ್ತಮನ ಮಗನು. ಇವನಲ್ಲಿ ಪ್ರೇಮವನ್ನಿಡುವದು 

ವಿಹಿತವೆ ಈ ವಿಚಾರ ? ಆಗದೆ ಮಾತು. ನಾನಿನ್ನು ಪ್ರದ್ಯುಮ್ನನನ್ನಾಗಲಿ, ಅವನ ಚಿತ್ರ 

ವನ್ನಾಗಲಿ ಕಣ್ಣೆತ್ತಿ ನೋಡಲಿಕ್ಕಿಲ್ಲ, ಇದೇ ನಿಶ್ಚಯ !” ಎಂದು ಪ್ರೇಮ 

ಸುಂದರಿಯು ಚಟ್ಟನೆ ಎದ್ದು ತನ್ನ ಮಂದಿರಕ್ಕೆ ಹೋದಳು, ಈ ವಿಚಾರ 

ಗಳನ್ನು ಹೋಗಲಾಡಿಸಲು ಅವಳು ಅನೇಕವಾದ ಉದ್ಯೋಗಗಳನ್ನು ಮಾಡಿ 

ನೋಡಿದಳು. ಸೂಕ್ಷ್ಮವಾದ ಕಸೀದೆಯ ಕೆಲಸವನ್ನು ಕೈಕೊಂಡು ಕಣ್ಣಲ್ಲಿ 

ಕಣ್ಣಿಟ್ಟು ಸೂಜಿಯನ್ನು ಎಳೆದಾಡಿದಳು. ಅದು ಬೇಸರಬರಲು ಭೂಮಿತಿಯ 

ಪ್ರಮೇಯಗಳನ್ನು ಬಿಡಿಸಲಾರಂಭಿಸಿದಳು. ಆದರೂ ಮನಸ್ಸು ಮನೋ 

ರಮಣನ ಸ್ವಾಧೀನದಲ್ಲಿಯೇ. 


" ಬ್ರಾಹ್ಮಣನಾದರೆ ಕ್ಷತ್ರಿಯರ ಕನೈಯನ್ನು ಮದುವೆಯಾಗಕೂಡ 

ದೇನು ? ಪೂರ್ವಕಾಲದಲ್ಲಿ ಅನೇಕ ಜನ ರಾಜರು ತಮ್ಮ ಕನ್ಯೆಯರನ್ನು 

ವಿಪ್ರೋತ್ತಮರಿಗೆ ಕೊಟ್ಟು ಮದುವೆಮಾಡಿಕೊಟ್ಟ ಉದಾಹರಣಗಳಿಗೇನು 

ಕಡಿವೆಯೇ? ದಶರಥನು ತನ್ನ ಮಗಳಾದ ಶಾಂತಾದೇವಿಯನ್ನು ಋಷ್ಯಶೃಂಗ 

ಮುನಿಗೆ ಕೊಟ್ಟನು.” ಈ ವಿಚಾರಸರಣಿಯನ್ನು ತಡೆದವಳೇ ಪ್ರೇಮಸುಂದ 

ರಿಯು ತನ್ನ ಹುಚ್ಚತನಕ್ಕೆ ತಾನೇ ನಕ್ಕು “ ಪ್ರದ್ಯುಮ್ನನು ನನ್ನನ್ನು ಪ್ರೀತಿ 

ಸುವನೋ ಇಲ್ಲವೋ ಎಂಬದರಿಯದೆ ಅವನ ಪಾಣಿಗ್ರಹಣದ ವಿಚಾರವನ್ನು 

ನಾನು ನಡಿಸಬಹುದೆ?” ಎಂದು ಆಲೋಚಿಸಿ ಆ ಮುಗ್ಧೆಯು ಉಸುರ್ಗರೆದಳು. 


ಒಂದೆರಡು ದಿವಸಗಳಲ್ಲಿಯೇ ಪ್ರೇಮಸುಂದರಿಯು ಮತ್ತೆ ತನ್ನ 

ಹೃದಯಚೋರನ ಪ್ರತಿಕೃತಿಯ ಮುಂದೆ ಬಂದು ನಿಂತಳು. ಬಹಳೊತ್ತು 

ತದೇಕಧ್ಯಾನಳಾಗಿ ಆ ಸುಂದರವಾದ ಮುಖವನ್ನು ನೋಡಿಕೊಂಡಳು. ಬಳಿಕ 

ಚಟ್ಟನೆ ಮುಖತಿರುವಿ ನಿಂತು “ ನೋಡು, ಪ್ರೇಮಸುಂದರಿ, ಇನ್ನಾದರೂ 

ವಿಚಾರಿಸಿನೋಡು. ಈ ಮೋಹನಾಂಗನು ಬ್ರಾಹ್ಮಣನು; ನೀನು ಕ್ಷತ್ರಿಯ 

ವಂಶಸಂಭವಳು, ಅವಿಚಾರದ ರೂಢಿಯೇ ಆಗಲಿ, ಅದು ನಿಮ್ಮೀರ್ವರ ಸಂಯೋ 

ಗಕ್ಕೆ ವಿಘಾತಕವಾಗಿದ್ದರೆ ಈ ಹಂಬಲವೇಕೆ ? ಪ್ರದ್ಯುಮ್ನನಲ್ಲಿ ಸಿಲ್ಕಿರುವ

------------------------------

-----------------------------------


೪೦-೪೧ ಪುಟಗಳು ಈಗ ದೊರಕಿರುವ ಮೂಲದಲ್ಲಿ ಲಭ್ಯವಿಲ್ಲ

ಹುಡುಕುವ ಕಾರ್ಯ ನಡೆದಿದೆ.



-----------------------------------------

೪೨ ಸಂಪೂರ್ಣ-ಕಥೆಗಳು 



ಪ್ರದ್ಯುಮ್ನ ನ ಬಳಿಗೆ ಬಂದು * ಪಂಡಿಶಜೀ, ವ್ಯಾಖ್ಯಾ ನದ ಕಾಲದಲ್ಲಿ ನೀವು 

ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನೆಲ್ಲ ನಾನು ಕೇಳಿದೆನು. ಆದರೆ ನಿಮ್ಮ 

ಅಭಿಪ್ರಾಯಗಳು ತೋರಿಕೆಯವೋ ನಿಜವಾದವುಗಳೋ ಹೇಳಿರಿ. '' ಎಂದು 

ಒಳ್ಳೇ ದರ್ಪಯುಕ್ತವಾದ ಮುದ್ರೆಯನ್ನು ತಳೆದು ಕೇಳಿದಳು, 


" ಈ ಪ್ರಶ್ನವನ್ನು ಮಾಡಬೇಕಾದರೆ, ನೀವೇಕೆ ಹೀಗೆ ಅತ್ತೆಯು 

ಸೊಸೆಯನ್ನು ಕೇಳಿದಂತೆ ಕೇಳುತ್ತಿರುವಿರಿ 


" ಯಾಕಂದರೆ, ನಿಮ್ಮಂಥವರು ಹೊಟ್ಟೆಯಲ್ಲೊಂದು ಬಾಯಿಯ 

ಲ್ಲೊಂದು ಮಾಡಿದರೆ ಸಮಾಜವು ಪ್ರಗತಿಯನ್ನು ಹೊಂದುವದು ಹೇಗೆ?” 

ಎಂದು ಫ್ರೇಮಸುಂದರಿಯು ಮಂದಹಾಸದಿಂದ ಕೇಳಿದಳು.


"ನನ್ನ ಅಜಿಪ್ರಾಯನ್ರ ಹೊಟ್ಟೆಯೊಳಗಿಂದೇ ಹೊರತಾಗಿ ಅದರಲ್ಲಿ 

ದಂಭವೇನೂ ಇಲ್ಲ.” 


" ಹಾಗಾದರೆ ಚಿಂತೆಯಿಲ್ಲ " ಎಂದು ಹೇಳಿದವಳೇ ಹೊರಟು 

ಹೋಗಲು ಸಿದ್ಧಳಾದಳು. 


"ತುಸು ತಡೆಯಿರಿ. ಮೊನ್ನೆ ಒಂದು ಪ್ರಶ್ನೆ ಕೇಳಿದಿರಿ, ಏಕೆಂದು 

ಕೇಳಿದರೆ, ಕಾರಣನನ್ನು ಇನ್ನೊಂದಾವರ್ತಿ ಹೇಳುವೆನೆಂದು ಹೇಳಿ ಹೋದಿರಿ, 

ಈಗ ಹೇಳಬಹುದೇನು ?" 


"ಇಲ್ಲ. ಇನ್ನೂ ನನ್ನ ಮನಸು ಸಂಕೋಚಗೊಳ್ಳುತ್ತಲಿದೆ. ಆದರೂ 

ಇದೇ ಸಮಯದಲ್ಲಿ ಇನ್ನೊಂದು ಪ್ರಶ್ನೆ ಕೇಳಲೆ ?” 


" ಬೇಕಾದ ಪ್ರಶ್ನೆ ಕೇಳಿರಿ, ಬೇಸರಿಲ್ಲದೆ ಹೇಳುವೆನು. ?' ಎಂದು 

ನಗುತ್ತೆ ಪ್ರದ್ಯುಮ್ನನು ಹೇಳಿದನು, 


" ನಿಮ್ಮ "ವಿವಾಹವಾಗಿಲ್ಲವಾಗಿ ತೋರುತ್ತದೆ.” ಎಂದು ಪ್ರೇಮ 

ಸುಂದರಿಯು ಆಂಜುತ್ತ ಕೇಳಿದಳು. 


" ಇಲ್ಲ!"| 


" ಯಾಕೆ? ಎಂದು ಆ ಕುತೂಹಲಿನಿಯು ಬಹು ಮೆಲ್ಲಗೆ 

ಕೇಳಿದಳು.


" ನನಗೆ ಅನುರೂಪಳಾದ ವಧುವು ಸಿಕ್ಕಿದ ಹೊರತು ನಾನು ಮದುವೆ 

ಯಾಗುವದಿಲ್ಲ, "



ಅಲಿಪ್ತವಾದ ಪ್ರೇಮಸಂಯೋಗ 



ಪ್ರೇಮ: ಸಂದರಿಯು ಹೊರಟುಹೋದಳು, ಪ್ರದ್ಯುಮ್ನನಿಗೆ ಈ 

ಪ್ರಶ್ನವನ್ನು ಕೇಳಿದ್ದೇ ತನ್ನಿಂದ ತಪ್ಪಾಯಿತೆಂದು ಅವಳು ತನ್ನ ಮಂದಿರದಲ್ಲಿ 

ಕುಳಿತು ಆಲೋಟಿಸಿದಳು. ನಾನು ನನ್ನ ಪ್ರಿಯತಮನಿಗೆ ಅನುರೂಪಳಾಗಿಲ್ಲ 

ವೇನು? ಹೀಗೆ ನುಡಿಗವಳೇ ಆ ಮುಗ್ಧೆಯು ಎದ್ದು ನಿಲವುಗನ್ನಡಿಯ 

ಮುಂದೆ ನಿಂತು "ಅನೇಕ ಜನ ಸುಂದರಿಯರ ಚಿತ್ರವನ್ನು ನಾನು 

ನೋಡಿದ್ದೇನೆ, ಅದಕೆ ಈ ಕನ್ನಡಿಯಲ್ಲಿರುವ ನನ್ನ್ನ ಬಿಂಬವು ಆ ಚಿತ್ರಗಳಿಗಿಂತ: 

ಕಡಿಮೆಯಾದದ್ದಲ್ಲ. ನಾನು ಸರ್ವಥಾ ಅಶಕ್ತಳಲ್ಲ, ನನಗಿಂತ ಹೆಚ್ಚಿಗೆ ಕಲಿತವ 

ಳಾದ ತರುಣಿಯು ಈ ಬ್ರಾಹ್ಮಣನಿಗೆಲ್ಲಿಂದ ದೊರಕುವಳು? ಅಂತರ್ಗತವಾದ 

ಪ್ರೇಮಕ್ಕೂ ಬಹಿರಂಗವಾಗಿರುವ ರೂಪಕ್ಕೂ ಸಂಬಂಧವಿರುವದಿಲ್ಲವೇನು 7 

ಏನು? ನಾನು ಅಪ್ರಾಪ್ತಳೆಂದು ತಿಳಿದು ನನ್ನ ಮನೋರಮಣನು ನನ್ನ 

ಹೃದ್ಗತವನ್ನು ಚನ್ನಾಗಿ ಪರೀಕ್ಷಿಸಲೊಲ್ಲನೋ? ಎಷ್ಟೆಂದು ವಿಚಾರ 

ಮಾಡಲಿ? '' ಎಂದು ಚಿಂತಾಕುಲಳಾಗಿ ಹೊರಟುಹೋದಳು. 


ಯುವರಾಜ ರಘುವೀರಸಿಂಹನ ಹುಟ್ಟಿದ ದಿವಸವು. ಅರಮನೆಯ 

ಲ್ಲಿಯೂ ರಾಜಧಾನಿಯಲ್ಲೆಲ್ಲ ಕಡೆಗೂ ಉತ್ಸವವು. ಪ್ರದ್ಯುಮ್ನನಿಗೆ ಆ ದಿವಸ 

ಕೆಲಸವಿಲ್ಲ. ಅವನು ಉಪಹಾರ ತೀರಿಸಿಕೊಂಡು ಬಹು ರಮ್ಯವಾಗಿ 

ಹಾಡುತ್ತ ಕುಳಿತಿದ್ದನು. ಜರದ ಧೋತರನನ್ನುಟ್ಟು ಮೈಮೇಲೆ ಜರದ 

ಶಲ್ಲೆಯನ್ನು ಹಾಕಿಕೊಡು ಕುಳಿತ ಪ್ರದ್ಯುಮ್ನನ ಸುಂದರವಾದ 

ಮೂರ್ತಿಯು ಬಹು ರುಚಿಕರವಾಗಿ ಕಾಣುತ್ತಿತ್ತು.. ಪ್ರೇಮವಶಳಾದ ಪ್ರೇಮ 

ಸುಂದರಿಗೆ ಅದೆಷ್ಟೆಂದು ಮೋಹಕವಾಗಿ ಕಂಡಿತೆಂಬದನ್ನು ಅವಳೇ ಹೇಳ 

ಬೇಕಲ್ಲವೆ? ಅವಳು ಮೆಲ್ಲನೆ ಕಿಟಿಕಿಯ ಬಳಿಯಲ್ಲಿ ಬಂದು ನಿಂತು ಅವನ 

ರೂಪವನ್ನು ಅರೆದು ಕುಡಿಯುವಳೋ ಎಂಬಂತೆ ಬಲು ಅಬಿಲಾಷೆಯಿಂದ 

ನೋಡುತ್ತಿದ್ದಳು, ಮೇಲೆ ಮನಸ್ಸಿಗೆ ಹುಚ್ಚು ಹಿಡಿಸುವಂಥ ಶ್ರುತಿಮನೋ 

ಹರನಾದ ಗಾನವು. ಮದನಸಂತಾಪದಿಂದ ನಿವ್ಹಲಳಾದಳು, 


ಪ್ರೇಮಸುಂರರಿ, ಈ ಮದನಸುಂದರನಲ್ಲಿ ನಿನ್ನ ಪ್ರೇಮವು 

ಸಂಪೂರ್ಣವಾಗಿ ಆಸಕ್ತವಾಯಿತು. ಇವನು ನಿನ್ನ ಪ್ರಣಯವನ್ನು ಅಂಗೀ 

ಕರಿಸದಿದ್ದರೆ ನಿನ್ನವಸ್ಥೆಯೇನು? ಅನ್ಯರ ಸ್ತ್ರೀಯಾಗಬಲ್ಲಿಯಾ ಛೇಃ 

ಎಂದೂ ಇಲ್ಲ. ಸನ್ಯಾಸಿನಿಯಾಗುವಿಯಾ? ಮತ್ತಿನ್ನೇನು ಮಾಡುವದು? 



೪೪ ಸಂಪೂರ್ಣ-ಕಥೆಗಳು 



ಇನ್ನೊಬ್ಬರ ಸತಿಯಾಗುವೆನೆ? ಅವನಿಗೆಲ್ಲಿಂದ ಪ್ರೇಮವನ್ನು ತರಲಿ? 

ಫ್ರೇಮಾಸ್ಪದನೊಬ್ಬನಾಗಿರಲು ಇನ್ನೊಬ್ಬನು ಪತಿಯಾಗಬಲ್ಲನೆ? ಇಂಥ 

ವಿಚಾರವೇ ಪಾಪಕರವಾದದ್ದು. ಕಡೆಯ ಉಪಾಯನನ್ನು ಮಾಡಿ 

ನೋಡಿಯೇ ಬಿಡಬೇಕು. ನಿರಾಶೆಯೇ ನನ್ನ ಪಾಲಿಗಿದ್ದರೆ ನಾಳಿನಿಂದಲೇ 

ಪ್ರಶಾಂತವಾದ ಮನಸಿನವಳಾಗುವೆನು. ತಡವೇಕೆ? " ಎಂದವಳೇ ಅವಳು 

ಪ್ರದ್ಯುಮ್ಯನ ಮಂದಿರದಲ್ಲಿ ಬಂದು ನಿಂತಳು, 


" ಪ್ರದ್ಯುಮ್ನರೆ; ಕ್ಷತ್ರಿಯ ಕನ್ನೆಯರು ಪುರಾಣ ಕಾಲದಲ್ಲಿ ಬ್ರಾಹ್ಮಣ 

ರನ್ನು ಮದುವೆಯಾಗುತ್ತಿದ್ದರೆಂದು ನೀವು ಕೇಳಿದಿರಿ, ಇದು ಪ್ರಗತಿಯ  

ಮಾರ್ಗಗಾಮಿಗಳಾದ ಈಗಿನ ಪಂಡಿತರ ಅಭಿಪ್ರಾಯಕ್ಕೆ ವಿರುದ್ಧವಾಗಿಲ್ಲ 

ವಷ್ಟೆ?"


ಎಷ್ಟು ಮಾತ್ರವೂ ಇಲ್ಲ. ಯಾಕೆ?'' 


" ಓರ್ವ . ಕ್ಷತ್ರಿಯ ಕನ್ಯೆಯು ನಿಮ್ಮನ್ನು ವರಿಸಲು ಸಿದ್ದಳಾಗಿದ್ದರೆ 

ಅವಳ ಪಾಣಿಗ್ರಹಣವನ್ನು ಮಾಡಲು ನೀವು ಸಿದ್ಧರಷ್ಟೆ?” 


" ಅವಳು ಅನುರೂಪಳೆಂದರೆ ನಾನೆ ಸಿದ್ಧನೆ " 


« ಅನುರೂಪಳೆಂದರೆ ನನ್ನಷ್ಟು ಸುಂದರಿಯಿದ್ದರೆ ಆಯಿತೆ?” 


"ನಿಮ್ಮ ಸೌಂದರ್ಯದ ಅರ್ಧವಿದ್ದರೂ ಸಾಕು.. ಆದರೆ ಇವೆಲ್ಲ 

ಪ್ರಶ್ನಗಳೇಕೆ ?" ಪ್ರದ್ಯುಮ್ಮನು ಚಕಿತನಾಗಿ ಕೇಳಿದೆನು. 


" ಪ್ರಗತಿಯಗೋಸ್ಕರವಾಗಿ ನಿಮ್ಮ ನಿಷ್ಠೆ ಎಷ್ಟಿರುವದೋ ಪರೀಕ್ಷಿಸಿ 

ದೆನು; ಮತ್ತೇನಿಲ್ಲ...” 



" ನಿಮಗೆ ಅನುರೂಪಳಾದನಳು ಬ್ರಾಹ್ಮಣಿಯೇ ಇರಲಿ ಕ್ಷತ್ರಿಯಳೇ 

ಇರಲಿ, ಅವಳ ವಿದ್ಯಾಕಲಾಕೌಶಲ್ಯಗಳೆಷ್ಟಿರಬೇಕು ? ನನಗೆ ಬರುವಷ್ಟು 

ಬಂದರಾಯಿತೆ? "


" ಯಾಕೆ ಕೇಳುವಿರೋ ಏನೋ ! ? ಎಂದು ಪ್ರದ್ಧುಮ್ನನು ಪ್ರೇಮ: 

ಸುಂದರಿಯ ಸುಂದರವಾದ ಮುಖವನ್ನು ನಿರೀಕ್ಷಿಸುತ್ತ ಉದ್ಗಾರ ತೆಗೆದು 

" ಸಾಕು ಸಾಕ್ಕು ಅಷ್ಟು ವಿದ್ಯೆ ಸಾಕು. ನನಗೊಂದು ಕನ್ಯೆಯನ್ನ ತಂದಿರು 

'ವಿರೇನು? " ಎಂದು ಮಂದಹಾಸಗೈದು ಕೇಳಿದನು. 


" ಇದಕ್ಕೂ ಹೆಚ್ಚಿನ ಗುಣಗಳೇನಾದರೂ ಇರಬೇಕೇನು ??' ಎಂದು 



ಅಲಿಪ್ತವಾದ ಪ್ರೇಮಸಂಯೋಗ ೪೫ 



ಅವನತಮುಖಿಯಾಗಿ ಪ್ರೇಮಸುಂದರಿಯು ಕೇಳಿದಳು 


" ಹೆಚ್ಚಿಗಿದ್ದರೆ ಬೇಡವೇಕೆ ? ನೀವು ಹೇಳಿದಷ್ಟು ಗುಣಗಳಿದ್ದರೆ 

ಸಾಕು?' ಎಂದು ಆ ಭೂಮದನನು ಪ್ರೇಮಸುಂದರಿಯ ಮುಖವನ್ನು ಒಳಿ 

ತಾಗಿ ಪರೀಕ್ಷಿಸುತ್ತೆ ಹೇಳಿದನು 


" ಇನ್ನೊಂದು ಪ್ರಶ್ನವನ್ನು ಕೇಳಿದರೆ ನೀವು ಕೋಪಿಸಿಕೊಳ್ಳಲಿಕ್ಕಿಲ್ಲ 

ವಷ್ಟೆ ?" ಎಂದು ಆ ನವತರುಣಿಯು ಬಹು ಮೋಹಬರುವಂತೆ ಮಂದ 

ಹಾಸವನ್ನು ಬೀರಿ ಕೇಳಿದಳು, 


ಈ ಮೃದುಹಾಸದ ತೀಕ್ಷ್ಣತೆಯನ್ನು ಆ ಯೌವನೋದ್ರಿಕ್ತನಾದ 

ಪ್ರದ್ಯುಮ್ನನು ಹೇಗೆ ತಡಕೊಂಡನೋ ಹೇಳಲಾಗದು. ಸ್ವಸ್ಟ ಚಿತ್ತದವ 

ನಂತೆ ಅನನು ಅಂದದ್ದು: " ಕೇಳಿರಿ ಅವಶ್ಯ ಕೇಳಿರಿ, ಕೋಪವೇತರದು?” 


" ಕೇಳಲಿಯಾ ? " ಎಂದು ಲಜ್ಜಾಗ್ರಸ್ತಳಾಗಿ ಪ್ರೇಮಸುಂದರಿಯು 

ಕೆಳಗೆ ಮೋರೆ ಮಾಡಿಕೊಂಡು ನಿಂತಳು. 


" ಇಂದು ನಿಮ್ಮ ಚಿತ್ತ ವೃತ್ತಿಯು ಚಮತ್ಕಾರವಾಗಿರುವಂತೆ ಕಾಣು 

ತ್ತದೆ, ಪ್ರಶ್ನೆ ಕೇಳುವದಿದ್ದರೆ ಹಾಗೆ ತಡೆಯುವದೇಕೆ ?"


" ಹಾಗಾದರೆ ನನ್ನ ಪಾಣಿಗ್ರಹಣವನ್ನು ಮಾಡಲಿಕ್ಕೆ ನೀವು ಸಿದ್ಧರಾ 

ಗುವಿರೇನು??' ಎಂದು ಕೇಳಿದವಳೇ ಪ್ರೇಮಸುಂದರಿಯು ತನ್ನ ಎರಡೂ 

ಕೈಗಳಿಂದ ಮುಖವನ್ನು ಗಟ್ಟಿಯಾಗಿ ಮುಚ್ಚಿಕೊಂಡಳು. | 


" ಪ್ರೇಮಸುಂದರೀ ದೇವಿ! ನಿನ್ನ ಚಿತ್ಕಕ್ಕೆ ಭ್ರಮವಾಗಿಲ್ಲವಷ್ಟೆ ? '' 

ಎಂದು ಪ್ರದ್ಯುಮಸನನು ಜರಿದು ನುಡಿದನು. 


ಪ್ರೇಮಸುಂದರಿಯ ಕಣ್ಣುಗಳಲ್ಲಿ ಅಶ್ರುಗಳು ಧಾರೆಯಿಟ್ಟು ಹರಿದವು. 

ಅವಳ ಕೋಮಲವಾದ ದೇಹವು ಕಂಪಿಸಿತು. ಅವಳು ಉತ್ತರನನ್ನೇನು 

ಕೊಡುವಳು? 


" ಪ್ರೇಮಸುಂದರಿ, ನಮ್ಮ ನಿಮ್ಮ ಸ್ಥಿತಿಗಳಲ್ಲಿರುವ ಮಹದಂತರದ 

ವಿಚಾರ ಮಾಡಿದಿಯೇನು?"


"ಸ್ಥಿತ್ಯಂತರದ ವಿಚಾರವನ್ನು ಆಗಲೇ ಮಾಡಿರುವೆನು. ಅದನ್ನು 

ಕಟ್ಟಿಕೊಂಡಿನ್ನೇನು ಮಾಡುವದು ? ನಾಳಿನಿಂದ ನಾನು ಸನ್ಯಾಸಿನಿಯಾಗು 

ವದನ್ನು ಈಗಲೇ ನಿಶ್ಚಯಿಸಿಕೊಂಡಿರುವೆನು. '' 



೪೬ ಸಂಪೂರ್ಣ-ಕಥೆಗಳು 



"ಹಾಗಂದರೇನು ಪ್ರೇಮಸುಂದರಿ?” ಎಂದು ಪ್ರದ್ಯುಮ್ನನು ವಿಚಾರ 

`ಮೂಢನಾಗಿ ಕೇಳಿದನು. 


ಪ್ರೇಮಸುಂದರಿಯು ಮಾತಾಡಲಿಲ್ಲ. 


" ಪ್ರೇಮಸುಂದರಿ, ನಿನ್ನ ಅನುನಯನನ್ನು ನಾನು ಆನಾದರಿಸಿದೆ  

ನೆಂದು ತಿಳಿಯಬೇಡ, ನಿನ್ನಂಥ ವಿದುಷಿಯೂ, ನಿನ್ನಂಥ ಚತುರೆಯೂ  

ನಿನ್ನಂಥ ಸುಶೀಲೆಯೂೂ, ನಿನ್ನಂಥ ಅಪ್ರತಿಮ ಸುಂದರಿಯೂ ಅದ ನವತರು 

ಣಿಯ ಪ್ರೇಮಪಾತ್ರನು ನಾನಾದದ್ದು ಕಂಡು ಸರ್ವಥಾ ಧನ್ಯನಾಗಿರುವೆನು. 

ಅದರೆ ಮಹಾರಾಜರು ನಮ್ಮ ವಿವಾಹಕ್ಕೆ ಒಪ್ಪಿಗೆಯನ್ನು. ಕೊಡುವದು 

ಅಸಂಭವವಾದ ಮಾತು. ಮೇಲಾಗಿ ಈ ವರ್ತಮಾನವು ಅವನಿಗೆ ತಿಳಿದರೆ 

ನಿನ್ನನ್ನು ನಾನೇ ಮೋಹಗೊಳಿಸಿದೆನೆಂದು ತಿಳಿದು ನನ್ನನ್ನು ಅಯೋಗ್ಯ 

ನೆಂದೂ ವಿಶ್ಚಾಸಘಾತಕಿಯೆಂದೂ ದೂಷಿಸಿದಿರರೆ ? ಲಭ್ಯಾಂವಿಲ್ಲದೆ ದೋಷಿ 

ಯೆಂಬ ಕಲಂಕವು ನನಗೆ ತಗಲುವದು. ನಿನಗೆ ಮನಸಿಗೆ ತಾಪನಾಗುವದು. 

ಆದಕ್ಕಾಗಿ ಸುಂದರಿ, ಈ ವಿಚಾರವನ್ನು ಬಿಟ್ಟುಕೊಡೆಂದು ನಾನು ಪ್ರಾರ್ಥಿ 

ಸುತ್ತೇನೆ. ?' 


" ಪ್ರಿಯರೆ, ಮಹಾರಾಜರೊಪ್ಪಿದರೂ ನನ್ನ ಪ್ರೇಮವು ನಿಮ್ಮಲ್ಲಿ 

'ದೃಢವಾಗಿ ಉಳಿಯುವದು; ಒಪ್ಪದಿದ್ದರೂ ಆ ಪ್ರೇಮವನ್ನ ನಿಮ್ಮಿಂದ ತೆಗೆ 

ಯುವದು ಬ್ರಹ್ಮದೇವರಿಂದಾಗದು. ಆದರೂ ಮಹಾರಾಜರೊಪ್ಟಿದ ಪಕ್ಷದಲ್ಲಿ 

ನೀವು ನನ್ನ ಪಾಣಿಗ್ರಹಣವನ್ನು ಮಾಡುವಿರಷ್ಟೆ ?” 


" ಹಾಗಾದ ಪಕ್ಷದಲ್ಲಿ ಪ್ರೇಮಸುಂದರಿಯ ಫಾಣಿಗ್ರಹಣನನ್ನು ಮಾಡ 

ದಿದ್ದರೆ ಇನ್ನಾರ ಪಾಣಿಗ್ರಹಣವನ್ನು ಮಾಡಲಿ? ಆದರೆ ಮಹಾರಾಜರ 

ಸಮ್ಮತಿಯು ಶಶವಿಷಾಣದಂತೆ ಅಸಂಭವನೇ. i 


" ಅಸಂಭವವೆಂದು ಕಲ್ಪಿಸಿ ನೀವು ನನ್ನ ಪಾಣಿಗ್ರಹಣ ಮಾಡುವ 

ವಚನವನ್ನು ಈಗಲೇ ಕೊಡಬೇಕು, ಇಲ್ಲದಿದ್ದರೆ ಈ ಪ್ರೇಮಸುಂದರಿಯು 

ನಾಳಿಗೆ ಬದುಕಿದ್ದಾದರೆ ಸನ್ಯಾಸಿನಿಯೇ ಆಗುವಳು, " 


"ಫ್ರಿಯಳೆ, ಈ ಶಸ್ತ್ರವನ್ನು ತೆಗೆದುಕೊಂಡು ಮೊದಲು ನನ್ನ ಎದೆಯಲ್ಲಿ 

ಹೊಡೆ; ಮುಂದೆ ಬೇಕಾದದ್ದು ಮಾಡುವಿಯಂತೆ !" ಎಂದು ಪ್ರದ್ಯುಮ್ನನು 

“ಅಶ್ರುಗಳನ್ನು ತಳೆದು ಪ್ರೇಮಸುಂದರಿಯ ಮುಖವನ್ನು ನೋಡಿ ನುಡಿದನು. 



ಅಲಿಪ್ತ ವಾದ ಪ್ರೇಮಸಂಯೋಗ ೪೭ 



ಇದಕ್ಕಾದರೂ ಸಿದ್ದರಿರುನಿರಾ? ನೋಡಿರಿ!” ಎಂದು ಪ್ರೇಮ 

ಸುಂದರಿಯು ವಿಲಾಸದಿಂದ ನುಡಿದು ನಕ್ಕಳು. 


"ಸಿದ್ಧನೆಂಬುದಕ್ಕೆ ಸಂದೇಹವೇನು ? ಇದ್ದು ಮಹಾರಾಜರಿಗೂ ರಾಣಿ 

ಯವರಿಗೂ ನನ್ನ ಪಂಚಪ್ರಾಣಗಳಾದ ನಿನಗೂ ವ್ತಸನವನ್ನೀಯುವದಕ್ಕಿಂತ 

ನಿನ್ನ ಪ್ರೇಮಲವಾದ ಕರಗಳಿಂದ ಅಸುವನ್ನು ನೀಗುವದು ಸುಖವಲ್ಲವೆ ? 

ಪ್ರಿಯೆ, ನಾನು ನಿನ್ನ ಮೇಲೆ ಪ್ರೇಮವನ್ನಿಟ್ಟದ್ದು ಇಂದಲ್ಲ ನಿನ್ನೆಯಲ್ಲ. ನಿನ್ನ 

ಮನೋಹರವಾದ ರೂಪವು ಪ್ರಥಮ ದರ್ಶನದಲ್ಲಿ ನನ್ನನ್ನು ಜಯಿಸಿತು, 

ನಿನ್ನ ಹೃದ್ಯವಾದ ಗುಣಗಳೆಲ್ಲವೂ ನನ್ನನ್ನು ಸಂಪೂರ್ಣವಾಗಿ ಪರಾಧೀನ 

ನನ್ನಾಗಿ ಮಾಡಿಬಿಟ್ಟಿರುತ್ತವೆ. ನಾನು ಪ್ರೇಮವನ್ನು ಎಷ್ಟು ಬಿಗಿದು ಕಟ್ಟಿದ್ದೆ  

ನೆಂಬದನ್ನು ದೇವರೇ ಬಲ್ಲ. ಬದುಕಿದ್ದರೂ ನಾನು ವಿವಾಹಿತನಾಗಿ ಸಂಸಾರ 

ಸುಖವನ್ನು ಕಾಣುವಂರತಿಲ್ಲ. ಅಂದಮೇಲೆ ಮರಣನ ಭಯವೇಕೆ? ತೆಗೆದು 

ಕೊಳ್ಳು ಆ ಶಸ್ತ್ರವನ್ನು. 


ಪ್ರೇಮಸುಂದರಿಯು ಒಯ್ಯಾರದಿಂದ ಆ ಶಸ್ತ್ರ ವನ್ನು ತೆಗೆದುಕೊಂಡು 

ಮೇಲಕ್ಕಿತ್ತಿ ಕಸುವಿನಿಂದ ಹೊಡೆದಳು. ಹೊಡೆದಳೆ! ಇಲ್ಲ. ಅನಳು ಶಸ್ತ್ರ 

ವನ್ನು ಬದಿಗೆ ಮಾಡಿ ಪ್ರದ್ಯುಮ್ನನ ಸುಂದರವಾದ ಮುಖವನ್ನು ಪ್ರೇಮ 

ನಿರ್ಭರದಿಂದ ಚುಂಬಿಸಿದಳು. 


ಪ್ರದ್ಯುಮ್ನನು ಸಂಕ್ಷುಬ್ಧನಾಗಿ " ಇದೇನನರ್ಥ ಮಾಡಿದಿ, ಪ್ರೇಮ 

ಸುಂದರಿ?” ಎಂದು ಕೇಳಿ ಹಿಂದಕ್ಕೆ ಸಿಡಿದು ನಿಂತನು, . 


" ಫ್ರಾಣಕಾಂತರೆ, ಇದು ಅನರ್ಥನಲ್ಲ ಸರ್ವಾರ್ಥವು. ಈ ಚುಂಬ 

ನವೇ ನಮ್ಮ ವಿವಾಹದ ಪವಿತ್ರವಾದ ಸಂಸ್ಕಾರವು.. ಈ ಚುಂಬನವೇ ನಮ್ಮ 

ಸಂಸಾರ ಸುಖದ ಇತಿಶ್ರೀಯು. ಪ್ರಿಯರೆ, ನನಗಿನ್ನು ಐಹಿಕ ಸುಖದ ಇಚ್ಛೆ  

ಯಿಲ್ಲ, ಒಂದೇ ನಿಮಿಷವಾದರೂ ಈ ಪಾದಗಳ ದಾಸಿಯಾಸಿಕೆಂಬ ಬಿರುದು 

ನನಗೆ ಸಾಕು. ನೀನಿನ್ನು ದ್ವಿತೀಯ ವಿವಾಹವನ್ನು ಮಾಡಿಕೊಂಡು ಸಂಸಾ 

ರದ ಪರಮಾವಧಿಯ ಸುಖವನ್ನು ಅನುಭವಿಸುತ್ತಿರುವ ವಾರ್ತೆಯನ್ನು ಕೇಳಿ 

ನಾನು ಪರಮ ಸಂತುಷ್ಟಳಾಗಿರುವೆನು." 


ಪ್ರದ್ಯುಮ್ನನು ಪ್ರೇಮಸುಂದರಿಯನ್ನು ಭರದಿಂದ ಅಪ್ಪಿಕೊಂಡು 

ಕಮಲದಂತಿರುವ ಅವಳ. ಸುಂದರವಾದ ಮುಖವನ್ನು ಯಥೇಷ್ಟನಾಗಿ 



೪೮ ಸಂಪೂರ್ಣ-ಕಥೆಗಳು 



ಚುಂಬಿಸಿ "ಪಾಣೇಶ್ವರಿ, ನನ್ನ ಪ್ರೇಮದ ಬೆಲೆಯು ನಿನಗೆ ಚನ್ನಾಗಿ ತಿಳಿ 

ದಿಲ್ಲವಾಗಿ ತೋರುತ್ತದೆ. ನಿನ್ನ ಬಿಟ್ಟು ನಾನು ಅನ್ಯಳೊಡನೆ ಸಂಸಾರ  

ಮಾಡಬಲ್ಲೆನೇ? ಮಹಾರಾಜರೂ ರಾಣಿಯವರೂ ಅಪ್ಪಣೆ ಕೊಟ್ಟರೆ  

ನಾವು ಸಂಸಾರಿಗಳಾಗತಕ್ಕವರು. ಇಲ್ಲದಿದ್ದರೆ ಬ್ರಾಹಣನಾದ. ನಾನು ಇನ್ನು 

ಮೇಲೆ | ಸನ್ಯಾಸಿಯೇ ಆಗಿರುವೆನು."


ತತ್ ಕ್ಷಣವೇ ಆ ಪ್ರಣಯಿಗಳು ಅಗಲಿದರು. ವಧೂವರಗಳ ತಂದೆ 

ತಾಯಿಗಳ ಅಪ್ಪಣೆಯು ಕೊಡದಲೆ ಹಾಗೆಯೇ ಉಳಿಯಿತು; ಈ ಪ್ರಣಯಿಗಳ 

ಸಂಸಾರ ಸುಖವು ಅನುಭವಿಸದಲೆಯೇ ಉಳಿದುಹೋಯಿತು.


ಪ್ರದ್ಯುಮ್ನನು ಆರ್ಯಧರ್ಮ ಪ್ರಸಾರಣದ ಬೋಧಕನಾಗಿ ಅಮೇ 

ರಿಕಾ, ಜಪಾನ ಮುಂತಾದ ದ್ವೀಪಗಳಲ್ಲಿ ಸಂಚರಿಸುತ್ತಿರುವನು. ಪಾಪ  

ಕೋಮಲೆಯಾದ ಫ್ರೀಮಸುಂದರಿಯು ವ್ರತಸ್ಥಳಾಗಿ ಬಾಡಿದ ಮಾಲತೀ 

ಫುಷ್ಪದಂತೆ ಅರಮನೆಯಲ್ಲಿಯೇ ಉಳಿದಳು 

=======================================

ಪ್ರಕೃತಿಬಲ


ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು ನೋಡತಕ್ಕದ್ದು, ನಿಮ್ಮೋನ್ನತಾಂಗಿಯಾದ ಆ ನಗರಲಕ್ಷ್ಮಿಯು ಪುಷ್ಪಹಾಸೆಯಾದ ವನದೇವತೆಯಿಂದ ಸಮೇತಳಾಗಿ ಅನೇಕ ಪ್ರಕಾರದ ಅಲಂಕಾರಗಳನ್ನು ಧರಿಸಿ ದಕ್ಷಿಣದ ರಾಣಿ ತಾನೆಂಬ ಬಿಂಕದಿಂದ ಮೆರೆಯುತ್ತಿದ್ದಳು. ಸಂಪಿಗೆ, ಬಕುಲ, ಪಾರಿಜಾತಾದಿ ಮಕರಂದಮಯವಾದ ವೃಕ್ಷಗಳಿಂದ ಮರ್ಯಾದಿತವಾದ ಸುಮನೋಹರವಾದ ಬೀದಿಗಳ ಎರಡೂ ಮಗ್ಗಲಿಗೂ, ಸೌಂದರ್ಯದಲ್ಲಿ ಪರಸ್ಪರರನ್ನು ಸ್ಪರ್ಧಿಸುತ್ತಿರುವ ಸುಶೋಭಿತವಾದ ಪ್ರಾಸಾದ ಹರ್ಮ್ಯ ಮಂದಿರಗಳು ಅವಲೋಕನಾರ್ಥಿಗಳ ವಿಡಂಬನೆಯನ್ನು ಮಾಡುವಂತೆ ಅವರ ದೃಷ್ಟಿಗಳನ್ನು ಸುತ್ತಿ ಮುತ್ತಿ ಹಿಡಿದೆಳೆಯುತ್ತಿದ್ದವು. ಮಹಾರಾಜರ ಪ್ರೇಮ ಕಟಾಕ್ಷದಿಂದ ಸಂವರ್ಧಿತಳಾದ ವನಶ್ರೀಯ ವಿಲಾಸವತಿಯರಾದ ತನುಜೆಯರು ಲಾಲಬಾಗ, ಕಬನಪಾರ್ಕ ಮುಂತಾದ ಉಪವನಗಳ ಮರ್ಯಾದೆಯಲ್ಲಿ ನಿಂತುಕೊಂಡು ಸ್ವೇಚ್ಛೆಯಿಂದ ಲೀಲಾವಿಲಾಸಗಳನ್ನು ವ್ಯಕ್ತಪಡಿಸಿ ನರ್ತಿಸುತ್ತಿದ್ದರು. ಚಮತ್ಕಾರವಾಗಿ ತೋರುವ ಈ ನಗರ ಶೋಭೆಯನ್ನು ಕಂಡು ತಡಾಗ ಸರಸಿಯರು ಬೆರಗಾಗಿ ಅಲ್ಲಲ್ಲಿ ತಟಸ್ಥರಾಗಿ ನಿಂತುಕೊಂಡಿದ್ದರು. ಸ್ವಾತಂತ್ರಾಧಿಕ್ಯದ ಜಂಬದಿಂದ ಮೆರೆಯುತ್ತಿರುವ ಶುಕ ಪಿಕ ಮಯೂರಾದಿ ವಿಹಂಗಮಗಳು ಬೆಂಗಳೂರಿನ ಸಿರಿದೇವಿಯ ವೈಭವವನ್ನು ಕಂಡು ಮನಸೋತು ಆ ನಗರಿಯ ಸ್ತುತಿಪಾಠವನ್ನು ಮಾಡುತ್ತೆ ಮತ್ತೆಲ್ಲಿಗೂ ಹೋಗಲರಿಯದೆ ಅಲ್ಲಿಯೇ ಉಳಿದವು.

ಅಭ್ಯಂಗಯುತವಾದ ತಿಲಸ್ನಾನವನ್ನು ಮಾಡಿ ಉತ್ತಮೋತ್ತಮವಾದ ವಸ್ತ್ರಾಲಂಕಾರಗಳನ್ನು ಧರಿಸಿ ದೇವತಾಗುರುವಂದನೆಗಳನ್ನು ಮಾಡಿಕೊಂಡು ಮುದಾನ್ನಿತರಾಗಿ ಆಪ್ತರಿಷ್ಟರನ್ನು ಕಾಣಿಸಿಕೊಳ್ಳಲು ಬೀದಿ ಬೀದಿಗಳಗುಂಟ ನಡೆದಿರುವ ನರನಾರಿಯರ ಮೇಳಗಳು ಬಹು ಶುಭಮಯವಾಗಿ ಕಂಡವು. ಸುಂದರಾಂಗಿಯರಾದ ಯುವತಿಯರು ಬಹು ಪರಿಷ್ಕಾರವಾದ ಉಡಿಗೆ ತೊಡಿಗೆಗಳನ್ನು ಮಾಡಿಕೊಂಡು, ಪರಿಮಳಯುತವಾದ ತಾಂಬೂಲ ರಾಗದಿಂದ ತಮ್ಮ ಬಿಂಬಾಧರಗಳನ್ನು ರಂಜಿಸಿ, ಎಳೆನಗೆಯಿಂದ ಕೂಡಿದ ಮಧುರಾಲಾಪಗಳನ್ನು ಮಾಡುತ್ತೆ, ಕೈಯಲ್ಲಿ ಎಳ್ಳು ಸಕ್ಕರೆ ಕಬ್ಬು ಹಣ್ಣು ಹಂಪಲಗಳಿಂದ ತುಂಬಿದ ತಟ್ಟೆಗಳನ್ನು ತೆಗೆದುಕೊಂಡು, ಮೆಲ್ಲಡಿಗಳನ್ನಿಕ್ಕುತ್ತೆ ವಿಸ್ತಾರವಾದ ರಾಜಮಾರ್ಗದಲ್ಲಿ ಬರುತ್ತಿರುವದನ್ನು ಕಂಡು, ಗಗನ ಮಾರ್ಗದಲ್ಲಿ ಮೆರೆಯುತ್ತಿರುವ ತಾರಾಸುಂದರಿಯರೇ ಇವರೆಂಬ ಭ್ರಮವಾಗುವಂತಿತ್ತು. ಈ ದಿವಸ ಎಲ್ಲರ ಮನೆಗಳಲ್ಲಿಯೂ ಸುಶೋಭೆ, ಎಲ್ಲರ ಮನಸ್ಸಿನಲ್ಲಿಯೂ ಆನಂದ, ಎಲ್ಲಿ ಹೋದಲ್ಲಿ ಉತ್ಸವ.

ತನ್ನ ತಂದೆಯ ಸ್ನೇಹಿತರೂ ದೂರಿನ ಆಪ್ತರೂ ಆದ ಮಾಧವರಾಯರ ಮನೆಗೆ ತರುಣನಾದ ಆನಂದರಾಯನು ಎಳ್ಳು ಸಕ್ಕರೆಗಳನ್ನು ಕೊಡುವ ನಿಮಿತ್ತವಾಗಿ ಸಂಕ್ರಾಂತಿಯ ದಿನ ಸಾಯಂಕಾಲಕ್ಕೆ ಹೋದನು. ಮನೆಯವರೆಲ್ಲರೂ ಆನಂದರಾಯನನ್ನು ಆದರದಿಂದ ಕರೆದೊಯ್ದು ಕುಶಲ ಪ್ರಶ್ನೆಗಳನ್ನು ಮಾಡಿ ಸತ್ಕರಿಸಿದರು. ಆನಂದರಾಯನು ಅತ್ತಿತ್ತ ನೋಡಿ “ವತ್ಸಲೆಯೆಲ್ಲಿ?” ಎಂದು ಅವಳ ಸೋದರತ್ತೆಯಾದ ತಾರಮ್ಮನನ್ನು ಕೇಳಿದನು. ಸಮೀಪದಲ್ಲಿ ಇರುವದೊಂದು ಕೋಣೆಯ ಕಡೆಗೆ ತಾರಮ್ಮನು ಕೈಮಾಡಿ ತೋರಿಸಿದಳು. ಪಿಯಾನೊ ಪೇಟಿಯ ಸ್ವರದೊಂದಿಗೆ ವತ್ಸಲೆಯು ಬಹು ಮಂಜುಲವಾಗಿ ಹಂಸಧ್ವನಿರಾಗದಲ್ಲಿ

ಮನಸು ಕರಗದೇಮಿ ಶ್ರೀ
ಮಾನಿನೀ ಮನೋಹರನೆ ||

ಎಂಬ ಪದವನ್ನು ಹಾಡುತ್ತಿದ್ದಳು. ಆನಂದರಾಯನು ಒಳಕ್ಕೆ ಪ್ರವೇಶ ಮಾಡಿದವನೇ ತಾಲ ಹಿಡಿದು “ಮನಸು ಕರಗದೇಮಿ ಶ್ರೀ” ಎಂದು ಹಾಡಿದನು. “ಆನಂದ! ಬಂದೆಯಾ? ಒಳ್ಳೇ ಸಮಯಕ್ಕೆ ಬಂದಿ. ಈ ಪದವನ್ನು ನೀನು ಸಂಪೂರ್ಣವಾಗಿ ಹಾಡಿತೋರಿಸಬಾರದೆ? ನನಗೆ ಮರೆತಂತಾಗಿದೆ.” ಎಂದು ವತ್ಸಲೆಯು ತನ್ನ ಕಮನೀಯವಾದ ಕರಾಂಗುಲಿಗಳನ್ನು ಪೇಟಿಯಿಂದ ತೆಗೆದು ಕೊಂಚ ಮಂದಹಾಸಗೈದು ಕೇಳಿದಳು.

“ಇಂದು ನನ್ನ ಕಂಠವು ಚನ್ನಾಗಿಲ್ಲ. ವತ್ಸಲಾ, ನೀನೇ ಹಾಡು ತಪ್ಪಿದಲ್ಲಿ ಹೇಳಿಕೊಡುವೆನಂತೆ.”

ವತ್ಸಲೆಯು ಹಾಡಲು ನಾಚಿಕೊಂಡವಳಾಗಿ ವಿಷಯಾಂತರವನ್ನು ಮಾಡಬೇಕೆಂದೆಣಿಸಿ, ಒಯ್ಯಾರದಿಂದೆದ್ದು ಮಾಡದೊಳಗಿನ ಬೆಳ್ಳಿಯ ಕರಡಿಗೆಯನ್ನು ತೆಗೆದು ಅದರೊಳಗಿಂದೆ ಸೆರೆ ಕುಸುರೆಳ್ಳು ತೆಗೆದುಕೊಂಡು ಬೆಳ್ಳಿಯ ಬಟ್ಟಲಿನಲ್ಲಿ ಹಾಕಿ ಅದನ್ನು ಆನಂದರಾಯನ ಮುಂದಿರಿಸಿ “ಆನಂದ, ಇಂದು ಸಂಕ್ರಮಣ. ಮೇಲೆ ಮಾಧುರ್ಯವುಳ್ಳದ್ದಾಗಿಯೂ ಒಳಗೆ ಸ್ನೇಹಯುತವಾಗಿಯೂ ಇರುವ ಈ ಎಳ್ಳು ಸಕ್ಕರೆಯನ್ನು ತಿಂದು ಒಳ್ಳೇ ಮಧುರವಾದ ಮಾತಾಡುವವನಾಗು” ಎಂದು ಹೇಳಿದಳು.

ಆ ಚಾರ್ವಂಗಿಯು ಆದರದಿಂದ ಕೊಟ್ಟ ಎಳ್ಳು ಸಕ್ಕರೆಯನ್ನು ಸಂತೋಷದಿಂದ ಸ್ವೀಕರಿಸಿ “ವತ್ಸಲೆ, ಇದನ್ನು ತಿನ್ನುವದರಿಂದ ಮಧುರವಾಗಿ ಮಾತಾಡಲು ಬರುತ್ತಿದ್ದರೆ, ಮಧುರಾಲಾಪೆಯಾದ ನೀನು ನಿತ್ಯದಲ್ಲಿಯೂ ಇದನ್ನೇ ಸೇವಿಸುತ್ತಿರುವೆಯಾಗಿ ತೋರುತ್ತದೆ.” ಎಂದು ಆನಂದ ರಾಯನು ನಗುನಗುತ್ತೆ ನುಡಿದು ಆ ಎಳ್ಳು ಸಕ್ಕರೆಯನ್ನು ಬಾಯಲ್ಲಿ ಹಾಕಿ ಕೊಂಡನು.

“ಅರ್ಥಕ್ಕೆ ಅನರ್ಥವೆ? ಆನಂದರಾವ, ನಾನೆಂದು ಮಧುರಭಾಷಿಣಿ ಯಾಗಿದ್ದೆನು? ನಾಳೆ ನಿನ್ನ ಅರ್ಧಾಂಗಿಯಾಗಿ ಬರುವಾಕೆ ಮಧುರವಾದ ನುಡಿಗಳನ್ನಾಡಿ ನಿನ್ನ ಮನವನ್ನು ರಂಜಿಸುವಳು” ಎಂದು ನುಡಿದು ವತ್ಸಲೆಯು ನಕ್ಕಳು.

“ಎಂಥವಳು ಬಂದರೂ ಈ ಜಾಣ್ಮೆಯನ್ನು ನಿನ್ನ ಬಳಿಯಲ್ಲಿಯೇ ಕಲಿತುಕೊಂಡು ಹೋಗಬೇಕಲ್ಲದೆ ಮತ್ತೊಂದು ಮಾರ್ಗವಿಲ್ಲ.”

ಈ ಸಂವಾದವನ್ನು ಬಾಗಿಲಲ್ಲಿ ನಿಂತು ಕೇಳುತ್ತಲಿದ್ದ ತಾರಮ್ಮನು ಒಳಕ್ಕೆ ಬಂದು ಆನಂದರಾಯನ ಭುಜದ ಮೇಲೆ ಕೈಯಿಟ್ಟು ವಿನೋದದಿಂದ “ಆನಂದ, ನಿನ್ನ ತಂದೆಯವರ ಪ್ರಮಾದಕ್ಕಾಗಿ ಈ ಮಧುರಭಾಷಿಣಿಯನ್ನು ನಿನ್ನ ಅರ್ಧಾಂಗಿಯನ್ನಾಗಿ ಮಾಡಿಕೊಳ್ಳುವ ಸಮಯವನ್ನು ಕಳಕೊಂಡು ಬಿಟ್ಟೆ. ಈ ರತಿದೇವಿಗೆ (ವತ್ಸಲೆಯ ಗದ್ದವನ್ನು ಹಿಡಿದು) ಏನಾಗಿತ್ತೆಂದು ನಿಮ್ಮ ತಂದೆಯವರು ನಿರಾಕರಿಸಿದರೋ ಕಾಣೆನು.” ಎಂದು ನುಡಿದಳು.

ತಾರಮ್ಮನ ಮಾತು ಕೇಳಿ ಆನಂದರಾಯನ ಎದೆಯಲ್ಲಿ ಒಮ್ಮೆಲೆ ಆಲ ಗಿಕ್ಕಿ ಹೊಡೆದಂತಾಯಿತು. ಚಮತ್ಕಾರವಾದ ಮನೋವಿಕಾರಕ್ಕಾಗಿ ಅವನು ಭ್ರಮಿಷ್ಟನಂತೆ ದೇಹವ್ಯಾಪಾರಗಳನ್ನು ಮರೆತು ಶೂನ್ಯದೃಷ್ಟಿಯಾಗಿ ಕುಳಿತು ಕೊಂಡನು. ತನ್ನ ಸೋದರತ್ತೆಯ ವಿಪರೀತವಾದ ವಿನೋದವನ್ನು ಕೇಳಿ ವತ್ಸಲೆಯು ಈಷನ್ಮಂದಸ್ಮಿತೆಯಾದರೂ ಕೂಡಲೆ ಬಲವತ್ತರವಾದ ಲಜ್ಜೆಯು ಅವಳ ನಗೆಯನ್ನೂ ಮುದವನ್ನೂ ಕೂಡಿಯೇ ತಗ್ಗಿಸಿಬಿಟ್ಟಿತು. ತಾರಮ್ಮನ ಮುಖವನ್ನಾಗಲಿ ಆನಂದರಾಯನ ಮುಖವನ್ನಾಗಲಿ ಕಣ್ಣೆತ್ತಿ ನೋಡಲು ಅವಳು ಅಸಮರ್ಥಳಾದಳು, ಆ ಸ್ಥಳದಲ್ಲಿ ಕುಳ್ಳಿರಲು ಕೂಡ ಧೈರ್ಯ ಸಾಲದೆ ವತ್ಸಲೆಯು ಮೆಲ್ಲನೆ ಹೊರಗೆ ನಡೆದಳು.
* * * *

ಆನಂದರಾಯನ ತಂದೆಯವರಾದ ರಘುನಾಥರಾಯರೂ ವತ್ಸಲೆಯ ತಂದೆಯವರಾದ ಮಾಧವರಾಯರೂ ಬಾಲ್ಯದ ಸ್ನೇಹಿತರು, ಇಬ್ಬರೂ ಒಂದೇ ಕಾಲೇಜದಲ್ಲಿ ವಿದ್ಯಾರ್ಜನವನ್ನು ಮಾಡಿ ಇಬ್ಬರೂ ಮೈಸೂರ ಸಂಸ್ಥಾನದಲ್ಲಿ ದೊಡ್ಡ ಅಧಿಕಾರಿಗಳಾದರು. ಪೂರ್ವ ಕಾಲದ ಕೆಲವೊಂದು ಶರೀರಸಂಬಂಧಕ್ಕಾಗಿಯ ಕಾಲೇಜದ ಸ್ನೇಹಕ್ಕಾಗಿಯೂ ರಘುನಾಥರಾಯರೂ ಮಾಧವ ರಾಯರೂ ಒಂದೇ ಮನೆಯವರಂತೆ ನಡಕೊಳ್ಳುತ್ತಿದ್ದರು. ಮಾಧವರಾಯರೂ ಅವರ ಮನೆಯವರೂ ವತ್ಸಲೆಯನ್ನು ಚಪಲನೂ ಸುಂದರನೂ ಆಗಿರುವ ಆನಂದರಾಯನಿಗೆ ಕೊಡುವ ವಿಚಾರವನ್ನು ಮಾಡಿದ್ದರು. ಆ ವಿಚಾರವು ರಘುನಾಥರಾಯರಿಗೂ ಸಮ್ಮತವಾಗಿತ್ತು. ಎಲ್ಲರೂ ವತ್ಸಲೆಗೆ ಆನಂದನ ಹೆಂಡತಿಯೆಂದು ಕರೆಯಲಾರಂಭಿಸಿದರು. ಅತೀವ ಸುಂದರಿಯಾಗಿದ್ದ ಆ ಮುದ್ದು ಮಗುವು ಈ ಮಾತು ಕೇಳಿ ನಕ್ಕು ಗಂಡನೆಂದರೆ ಯಾವ ಸಂಬಂಧಿಕನೆಂಬದನ್ನರಿಯದಿದ್ದರೂ ಆನಂದನನ್ನು ಕಂಡು ನಾಚಿ ಓಡಿ ಹೋಗಲಾರಂಭಿಸಿದಳು. ಆನಂದನಾದರೂ ವತ್ಸಲೆಯನ್ನು ಕಂಡು ಮಾತಾಡಿಸಲರಿಯದೆ ಅವಳಿಂದ ದೂರದಲ್ಲಿಯೇ ಇರುವನು. ಇದಕ್ಕೇನು ಕಾರಣ ? ಪ್ರೇಮವೆ ? ಛೇ! ಎಳೆಮಕ್ಕಳವರು. ಜನರು ತಮಗೆ ಗಂಡಹೆಂಡರೆಂದು ಕರೆಯುತ್ತಾರೆಂಬ ಸಂಗತಿಯೇ ಅವರ ಈ ಆಚರಣಕ್ಕೆ ಕಾರಣವಾಗಿತ್ತು.

ಬರಬರುತ್ತೆ ಸುಧಾರಕ ಸಮಾಜ, ಪ್ರಾರ್ಥನಾ ಸಮಾಜ, ಬ್ರಹ್ಮ ಸಮಾಜ ಮುಂತಾದ ಪಂಥಗಳು ದೇಶದಲ್ಲಿ ಮೆಲ್ಲಮೆಲ್ಲನೆ ಕಾಲಿಡಲಾರಂಭಿಸಿದವು. ಈ ಪಂಥದವರಿಗೂ ಕರ್ಮನಿಷ್ಠರಿಗೂ ಅಖಂಡವಾದ ವಾಗ್ವಾದ ನಡೆದು ಅಲ್ಲಲ್ಲಿ ಪಕ್ಷಪರ ಪಕ್ಷಗಳುಂಟಾಗಿ ಆಪ್ತರಿಷ್ಟರೂ ಬಂಧುಬಾಂಧವರೂ ಬೇರೆ ಬೇರೆ ಪಕ್ಷಗಳಿಗೆ ಸೇರಿ ಪರಸ್ಪರರೊಡನೆ ಹಗೆಗಳಂತೆ ನಡಕೊಂಡರು. ಮಾಧವರಾಯರು ಸುಧಾರಣಾ ಪಂಥಕ್ಕೆ ಸೇರಿದ್ದರಿಂದ ಅವರಿಗೂ ರಘು ನಾಥರಾಯರಿಗೂ ವೈಮನಸ್ಸು ಉಂಟಾದ್ದರಿಂದ ವತ್ಸಲಾ ಆನಂದರ ವಿವಾಹದ ವಿಚಾರವು ಮುರಿದುಹೋಯಿತು. ಆದರೆ ಅನಂದ ವತ್ಸಲೆಯರಿಗೆ ಅದರ ಚಿಂತೆಯೇನು ? ನಿಷ್ಕಾರಣವಾಗಿರುವ ನಿರ್ಬಂಧವು ಕಡಿದಂತಾಗಿ ಅವರು ಮತ್ತೆ ಸಂತೋಷದಿಂದ ಕೂಡಿ ಆಡಲಾರಂಭಿಸಿದರು.

ಆಗಿನ ಕಾಲದ ಸುಧಾರಣೆಯೆಂದರೆ ಬ್ರಾಹ್ಮಣರಲ್ಲಿರುವ ಮಡಿ ಮೈಲಿಗೆ, ಸ್ನಾನ ಸಂಧ್ಯೆ, ಭಸ್ಮ ಮುದ್ರಾಕ್ಷತೆಗಳನ್ನು ನಿಂದಿಸಿ ಸ್ವಚ್ಛೆಯಿಂದ ನಡೆಯುವದೂ ಪರಕೀಯರ ವೇಷಾಚರಣಗಳನ್ನು ಅನುಕರಿಸುವದೂ, ಬೇಕು ಬೇಕಾದವರಲ್ಲಿ ಉಂಡು ತಿಂದು ಬರುವದೂ ಇಷ್ಟೇ ಆಗಿತ್ತು. ಹೊರತಾಗಿ ಅನ್ವರ್ಥಕವಾದ ಸುಧಾರಣೆಯ ವಿಚಾರಗಳು ಆ ಜನರ ಮನಸ್ಸಿನಲ್ಲಿ ಸೇರಿರಲಿಲ್ಲ. ಇಲ್ಲವೆಂದರೆ ಬ್ರಾಹ್ಮಣಿಯರಾದ ವಿಧವೆಯರ ಪುನರ್ವಿವಾಹವೊಂದು ಅವರಿಗೆ ಅಗತ್ಯವಾದ ವಿಷಯವಾಗಿತ್ತು.

ಇಂಥ ಪರಿಸ್ಥಿತಿಯಲ್ಲಿ ಮಾಧವರಾಯನ ಮಗಳಿಗೆ ತಕ್ಕವನಾದ ವರನು ಸಿಕ್ಕದಾದನು. ಸುಧಾರಣಾ ಪಂಥದವರಲ್ಲಿ ಯೋಗ್ಯರಾದ ವರಗಳೇ ಇರಲಿಲ್ಲ. ಪ್ರಾಚೀನ ಸಾಂಪ್ರದಾಯದವರಂತೂ ಮಾಧವರಾಯನನ್ನು ತಮ್ಮ ನೆಳಲಿಗೆ ನಿಲ್ಲಗೊಡುತ್ತಿದ್ದಿಲ್ಲ. ವತ್ಸಲೆಯು ಲಾವಣ್ಯವತಿಯಾದ ತರುಣಿಯಾಗುತ್ತೆ ಬಂದಳು. ಅವಳಿಗೆ ತಕ್ಕಮಟ್ಟಿಗೆ ಶಿಕ್ಷಣವೂ ದೊರೆತಿತ್ತು. ಮದುವೆಯನ್ನು ಬಿಡುವದೆಂತು? ಮಾಡಬೇಕಾದರೆ ವರನೆಲ್ಲಿ? ಅನಿರ್ವಾಹಕ್ಕಾಗಿ ಸುಬ್ಬರಾಯನೆಂಬ ಸುರಾಭಕ್ತನಾದ ಸುಧಾರಕನ ಮಗನಾದ ಗೋವಿಂದನೆಂಬವನಿಗೆ ವತ್ಸಲೆಯನ್ನು ಕೊಡುವದು ಗೊತ್ತಾಯಿತು. ತಂದೆಯ ಗುಣಗಳೇ ಗೋವಿಂದನಲ್ಲಿ. ತನ್ನ ಹೆಂಡತಿಯಾದ ವತ್ಸಲೆಯು ಯುರೋಪಿಯನ್ನರ ಬೂಟು ಝಗೆಗಳನ್ನು ಹಾಕುವದಕ್ಕೂ ಕುಂಕುಮ ಬಳೆಗಳನ್ನು ತೆಗೆದೊಗೆಯಲಿಕ್ಕೂ ಒಪ್ಪಲಿಲ್ಲಾದ್ದರಿಂದ ಗಂಡ ಹೆಂಡಿರ ಸಮಾಗಮವಾಗುವದಕ್ಕೆ ಮುಂಚಿತವಾಗಿಯೇ ಗೋವಿಂದನು ಸಿಟ್ಟಾಗಿ ಎದ್ದು ಹೋಗಿ ಎಲ್ಲಿಯೋ ಒಂದು ಇಂಗ್ಲಿಶ್ ಹಾಟೆಲ್ಲಿನಲ್ಲಿ ಕಾರಕೂನನಾಗಿ ಇದ್ದು ಕೊಂಡನು.

ಈ ಸಂಗತಿಯಿಂದ ಮಾಧವರಾಯರ ಮನೆಗೆ ಒಂದು ವಿಪತ್ತೇ ಬಂದಂತಾಗಿತ್ತು, ಆದರೆ ಮಾಡುವದೇನು ? ವತ್ಸಲೆಯು ಇನ್ನೂ ಅಪ್ರಬುದ್ದೆಯಾದ ತರುಣಿಯು, ಮಾಧವರಾಯರು ಅವಳನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿದ್ದರಿಂದ ಆ ಬಾಲೆಯು ತನಗುಂಟಾದ ಆಪತ್ತಿಗೆ ಈಡಾಗದೆ ಕಾವ್ಯ ನಾಟಕಗಳನ್ನು ಓದುವದರಲ್ಲಿಯೂ ಗಾನ-ವಾದನಗಳಲ್ಲಿ ಮನಸ್ಸು ಹಾಕುತ್ತಲೂ ದಕ್ಷತೆಯಿಂದ ಮನೆಕೆಲಸಗಳನ್ನು ಮಾಡುತ್ತಲೂ ಇದ್ದಳು.

ಆನಂದರಾಯನು ಕಾಲೇಜಿನಲ್ಲಿ ಆಸ್ಥೆಯಿಂದ ವಿದ್ಯಾರ್ಜನವನ್ನು ಮಾಡಿ ಬಿ. ಏ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನು. ಮುಂದಿನ ವ್ಯಾಸಂಗಕ್ಕಾಗಿ ಮತ್ತೆ ಅವನು ಕಾಲೇಜಿಗೆ ಹೋಗತಕ್ಕವನು. ಬುದ್ಧಿವಂತನಾಗಿರುವ ತನ್ನ ಏಕಾಕಿಯಾಗಿರುವ ಮಗನ ಮದುವೆಯನ್ನು ಅವನ ಇಚ್ಛಾನುಸಾರವಾಗಿ ಮಾಡಬೇಕೆಂದು ರಘುನಾಥರಾಯರು ಆನಂದನ ಮದುವೆಯ ವಿಚಾರವನ್ನು ಸದ್ಯಕ್ಕೆ ಮಾಡದೆ ಇದ್ದರು.
ಇಂಥ ಸಮಯದಲ್ಲಿ ಒದಗಿದ ಸಂಕ್ರಾಂತಿಯ ದಿವಸದಲ್ಲಿ ಆನಂದ ರಾಯನು ವತ್ಸಲೆಯ ಮನೆಗೆ ಬಂದಿದ್ದನು.

ವತ್ಸಲೆಯ ಲಗ್ನವು ಗೋವಿಂದನೊಡನೆ ಆಗುವವರೆಗೆ, ಅವಳು ತನ್ನ ಹೆಂಡತಿಯಾದರೆ ಒಳಿತಾಗುವದೆಂದು ಆನಂದನ ಅಭಿಪ್ರಾಯವಾಗಿತ್ತು. ಪ್ರೌಢರಾದವರ ದುರ್ಧರವಾದ ಪ್ರೇಮನಿರ್ಭರವು ಅವನ ಮನಸ್ಸಿನಲ್ಲಿ ಹುಟ್ಟಿರದಿದ್ದರೂ ವತ್ಸಲೆಯ ಕಾಂತಿಮಯವಾದ ರೂಪವೂ ಅವಳ ಅಂಗಸೌಷ್ಟವವೂ ಅವಳ ಲಲಿತವಾದ ಮುಖಮುದ್ರೆಯೂ ಆನಂದರಾಯನ ಮನಸ್ಸಿನಲ್ಲಿ ಒಳಿತಾಗಿ ನೆಟ್ಟಿದ್ದವು. ಆದರೇನು ? ತನ್ನ ತಂದೆಗೂ ಮಾಧವರಾಯರಿಗೂ ಉಂಟಾದ ವಿರೋಧಕ್ಕಾಗಿ ತನ್ನ ಮನದೆಣಿಕೆಯು ಬಯಲಾಗುವದೆಂದು ನೆನಿಸಿ ಅವನು ವಿಷಾದವನ್ನು ತಳೆದಿದ್ದನು. ಕಡೆಗೆ ವತ್ಸಲೆಯು ಅನ್ಯರ ವಸ್ತುವೇ ಆಗಿಹೋದಳು. ಆನಂದರಾಯನು ದೈವಲೀಲೆಯ ವೈಚಿತ್ರವನ್ನು ವೇದಾಂತಿಯಂತೆ ವಿಮರ್ಶಿಸಿ ಕೈಮೀರಿ ಹೋದ ಮಾತಿಗೆ ದುಃಖಿಸದೆ ಸಮಾಧಾನವನ್ನು ತಳೆದುಕೊಂಡಿದ್ದನು. ಭದ್ರವಾಗಿ ಕಟ್ಟಿದ ಕೆರೆಯು ಅದೃಷ್ಟ ಪೂರ್ವವಾದ ಕಾರಣಕ್ಕಾಗಿಯೇ ಒಡೆಯಬೇಕಲ್ಲದೆ ಸಹಸಾ ಅದಕ್ಕೆ ಅಪಾಯವಿಲ್ಲವಷ್ಟೆಯೇ. ಅದರಂತೆಯೇ ಸುವಿಚಾರಗಳಿಂದ ಧೃತವಾದ ಆನಂದರಾಯನ ಮನೋವಿಕಾರವು ನಿರ್ಬಂಧದಲ್ಲಿಯೇ ಉಳಿದಿತ್ತು. ವತ್ಸಲೆಯ ಮನೆಗೆ ಅವನು ಆಗಾಗ್ಗೆ ಹೋಗುತ್ತಿದ್ದರೂ ನಿಶ್ಚಯಿಯಾದ ಆ ತರುಣನು ಸಮಾಹಿತ ಚಿತ್ತವುಳ್ಳವನಾಗಿ ಅವಳೊಡನೆ ನಿಷ್ಕಲಂಕವಾದ ಭಾವದಿಂದ ಮಾತುಕಥೆಗಳನ್ನಾಡುತ್ತಿದ್ದನು. ಆದರೆ ದಿನೇ ದಿನೇ ಅಧಿವೃದ್ಧಿಯನ್ನು ಹೊಂದುತ್ತಿರುವ ವತ್ಸಲೆಯ ಸೌಂದರ್ಯವು ಅವನ ದೃಷ್ಟಿಗೆ ಹೊಳೆಯದಿರುವದು ಹೇಗೆ ? ಇರಲಿ, ಆ ದಿವಸ ತಾರಮ್ಮನು ಆಡಿದ ಅವಿವೇಕವಾದ ವಿನೋದದ ನುಡಿಗಳನ್ನು ಕೇಳಿ ಆನಂದರಾಯನ ಮನಸ್ಸಿಗೆ ದುರ್ಧರವಾದ ಪೆಟ್ಟು ತಗಲಿತು. ತಾನು ವತ್ಸಲೆಯ ಪತಿಯಾಗಲಿಲ್ಲವೆಂಬ ವ್ಯಸನವು ಅವನ ಹೃದಯವನ್ನು ವ್ಯಾಪಿಸಿ ಸುಡಲಾರಂಭಿಸಿತು. ಆದರೆ ವಿದ್ವಾಂಸನೂ ಸುಶೀಲನೂ ಆದ ಆ ತರುಣನು ಮತಿ ಭ್ರಮವನ್ನು ಗೆದ್ದು ಬೇಗನೆ ಎಚ್ಚತ್ತವನಾಗಿ ಮಾಧವರಾಯನ ಮನೆಯಲ್ಲಿನ್ನು ಕಾಲಿಡ ಕೂಡದೆಂದು ನಿಶ್ಚಯಿಸಿ ಕೊಂಡು ಚಟ್ಟನೆ ಎದ್ದು ತನ್ನ ಮನೆಗೆ ಹೊರಟು ಹೋದನು.

ಪಾಪ! ಅಬಲೆಯೂ ದುರ್ಬಲವಾದ ಧೈರ್ಯವುಳ್ಳವಳೂ ಚಿಕ್ಕವಳೂ ಆದ ವತ್ಸಲೆಯ ಮನಸ್ಸಿನ ಸ್ಥಿತಿಯು ಏನಾಗಿರಬಹುದು ? ಬಾಲ್ಯದಲ್ಲಿ ವಿನೋದಕ್ಕಾಗಿ ಅವಳ ತಾಯಿತಂದೆಗಳೇ ಅವಳಿಗೆ ಆನಂದನ ಹೆಂಡತಿಯೆಂದು ಕರೆಯುತ್ತಿದ್ದರು. ತನ್ನ ತಂದೆಗೂ ರಘುನಾಥರಾಯರಿಗೂ ಉಂಟಾದ ವಿರೋಧದ ತರುವಾಯವಾದರೂ ವತ್ಸಲೆಯ ತಾಯಿಯು ಹೇಗಾದರೂ ಮಾಡಿ ತನ್ನ ಮಗಳನ್ನು ಆನಂದನಿಗೇ ಕೊಡುವೆನೆಂಬ ಮಾತುಗಳನ್ನು ಕೇಳಿ ಆ ಬಾಲಿಕೆಯ ಮನಸ್ಸಿನಲ್ಲಿ ಒಂದು ಪ್ರಕಾರದ ಕುತೂಹಲವು ಉಂಟಾಗಿತ್ತು. ವತ್ಸಲೆಯ ಖೇದಜನಕವಾದ ವಿವಾಹಾನಂತರವಾದರೂ ಮನೆಯವರೆಲ್ಲರೂ ಅವಳನ್ನು ಆನಂದರಾಯನಿಗೆ ಕೊಟ್ಟಿದ್ದರೆ ಒಳಿತಾಗುತ್ತಿತ್ತೆಂದು ನೆನಿಸಿ ಹಳ ಹಳಿಸುವದನ್ನು ಕಂಡು ಅವಳ ಮನೋವೃತ್ತಿಯಾದರೂ ಅವರಂತೆಯೇ ಆಗಿತೆಂದು ಹೇಳಿದರೆ ಶಿಷ್ಟರೆಂಬವರು ಈ ಲೇಖಕನನ್ನು ನಿಂದಿಸುವರೆಂದು ನಾವು ನಂಬುವದಿಲ್ಲ. ಮನುಷ್ಯ ಸ್ವಭಾವವಿದು. ಶಿಷ್ಟರು ಬೇಕಾದರೆ ತಮ್ಮ ಮನಸ್ಸುಗಳನ್ನೇ ಸಂಶೋಧಿಸಿ ನೋಡಿಕೊಳ್ಳಲಿ. ಕಮನೀಯವಾದ ವಸ್ತು ಗಳನ್ನು ಕಂಡರೆ ಮನಸ್ಸಿನಲ್ಲಿ ಆಕಾಂಕ್ಷೆಯುಂಟಾಗುವದು ಸಹಜವೇ. ಕೆಲವೊಂದು ಪರಿಸ್ಥಿತಿಯಲ್ಲಿ ಆಕಾಂಕ್ಷೆಯು ಪ್ರಶಂಸನೀಯವಾದದ್ದಾಗಿಯೂ ಬೇರೊಂದು ಪರಿಸ್ಥಿತಿಯಲ್ಲಿ ಅದು ಅಪ್ರಶಸ್ತವಾಗಿಯೂ ಇರುವದು. ಹೀಗೆ ಅವಶ್ಯವಾಗಿ ಉಂಟಾಗುವ ಪ್ರಶಸ್ತವಾದ ಆಕಾಂಕ್ಷೆಯನ್ನು ವಿವೇಕದಿಂದ ನಿಗ್ರಹಿಸುವದೇ ಮಹಾತ್ಮರ ಲಕ್ಷಣವು.

ತನ್ನ ಸೋದರತ್ತೆಯಾಡಿದ ಮಾತು ಕೇಳಿ ವತ್ಸಲೆಯು ಬಲವತ್ತರವಾಗಿ ಲಜ್ಜಿತಳಾದಳೆಂದು ನಾವು ಮೇಲೆ ಹೇಳಿದೆವಷ್ಟೆ? ಆ ನುಡಿ ಕೇಳಿ ಆನಂದರಾಯನ ಮನಸ್ಸಿನಲ್ಲುಂಟಾದ ಭಾವನೆಯಾದರೂ ಅವಳಿಗೆ ವಿದಿತವಾಗದೆ ಇರಲಿಲ್ಲ. ಲಜ್ಜೆ ಯಿಲ್ಲದೆ ಇನ್ನೂ ಅನೇಕವಾದ ವಿಕಾರಗಳು ಅವಳ ಮನಸ್ಸಿನಲ್ಲಿ ಉದ್ಭವಿಸಿದ್ದವು. ತಾನು ಕುಳಿತಿದ್ದ ಕೋಣೆಯಿಂದೆದ್ದು ಹೊರ ಬಿದ್ದು ಬಂದರೂ ಅವಳ ಚಿತ್ತಕ್ಕೆ ಸ್ವಾಸ್ಥ್ಯವಿರಲಿಲ್ಲ. ಅವಳು ಮನೆಯಲ್ಲಿ ಅತ್ತಿತ್ತ ಅಡ್ಡಾಡಿ ನೋಡಿದಳು. ಎಲ್ಲಿಯೂ ಶಾಂತಿ ದೊರಕಲಿಲ್ಲ. ಉದ್ವೇಗದಿಂದ ಅವಳ ಎದೆಯು ಉಬ್ಬಿಕೊಂಡಿತು. ಮೈಯೆಲ್ಲ ಕಾದುಹೋಗಿತ್ತು. ಕಣ್ಣುಗಳಲ್ಲಿ ವೈಚಿತ್ರವು ಕಂಡಿತು. ಅವಳ ಹೃದಯದಲ್ಲಿ ನೆಟ್ಟಿರುವ ಆವದೋ ಒಂದು ಪ್ರಕಾರದ ಶಲ್ಯವು ಆಗಾಗ್ಗೆ ಅಸಹ್ಯವಾದ ವೇದನೆಯನ್ನು ಉಂಟುಮಾಡುತ್ತಿತ್ತು. ತನಗುಂಟಾದ ಅವಸ್ತೆಯ ಕಾರಣವನ್ನು ವತ್ಸಲೆಯು ಅರಿತವಳಾಗಿದ್ದಳು. ಆದರೆ ಅಂಥ ವಿಕಾರಕ್ಕೆ ಆಸ್ಪದವನ್ನು ಕೊಡುವದು ಕೇವಲವಾದ ಪಾಪವೇ ಅಲ್ಲವೆ? ಆದರೆ ಅದನ್ನು ಮಟ್ಟ ಹಾಕುವದಕ್ಕೆ ಯೋಗಿಯಾದವನ ಬಲವು ಬೇಕಲ್ಲ! “ಆದಿ-ಶಕ್ತಿಯಾದ ಜಗದಂಬೆಯೇ ಇಂಥ ಬಲವನ್ನು ನನಗೆ ಕರುಣಿಸು ಕಂಡಿಯಾ!” ಎಂದು ವತ್ಸಲೆಯು ಕಣ್ಣೀರು ಸುರಿಸುತ್ತೆ ಬೇಡಿಕೊಂಡಳು.

“ಆನಂದ” ಎಂದು ರಘುನಾಥರಾಯರು ತಮ್ಮ ಮಗನನ್ನು ಕೂಗಿ ಕರೆದರು. ಆನಂದರಾಯನು ವಿನಯದಿಂದ ತಂದೆಯ ಸನ್ನಿಧಾನದಲ್ಲಿ ಬಂದು ನಿಂತುಕೊಂಡ ಮೇಲೆ ರಾಯರು ಮಗನನ್ನು ಕಂಡು ಸಂತೋಷದಿಂದ ನಕ್ಕು ಕೆಲವು ಪತ್ರಗಳನ್ನೂ ಕನ್ನೆಯರ ಫೋಟೋಗ್ರಾಫುಗಳನ್ನೂ ಅವನ ಸ್ವಾಧೀನ ಮಾಡಿ “ಇದು ನೋಡು, ಇಂತಿಷ್ಟು ಜನ ಮಹನೀಯರಾದ ನನ್ನ ಸ್ನೇಹಿತರು ನಮ್ಮೊಡನೆ ಶರೀರಸಂಬಂಧವನ್ನು ಬೆಳಿಸಲಿಚ್ಚಿಸುವರು, ಈ ಫೋಟೋಗ್ರಾಫಗಳನ್ನು ನೋಡಿಕೊಂಡು ನನಗೆ ತಿಳಿಸು” ಎಂದು ಹೇಳಿದರು. ಆನಂದರಾಯನು ಕಿಂಚಿತ್ ಲಜ್ಜಿತನಾಗಿ ನಿಂತು ಕೊಂಡನು.

“ಈ ಮಾತಿನಲ್ಲಿ ನಾಚುವದೇಕೆ ಆನಂದ? ಅವುಗಳನ್ನು ತೆಗೆದು ಕೊಂಡು ಚನ್ನಾಗಿ ಪರೀಕ್ಷಿಸು. ನಿನ್ನ ಮನಸ್ಸಿಗೆ ಬಂದ ಕನ್ನೆಯನ್ನು ಪ್ರತ್ಯಕ್ಷವಾಗಿ ನೋಡುವ ಅಪೇಕ್ಷೆಯುಂಟಾದಲ್ಲಿ ನೋಡಿಯೂ ಬರಬಹುದು, ಹೋಗು” ಎಂದು ರಘುನಾಥರಾಯರು ಮಗನಿಗೆ ಅಪ್ಪಣೆ ಕೊಟ್ಟು ಕಳಿಸಿದರು.

ಆನಂದರಾಯನು ತನ್ನ ಕೋಣೆಗೆ ಹೋಗಿ ಅನಾಸ್ಥೆಯಿಂದ ಆ ಚಿತ್ರಗಳನ್ನೆಲ್ಲ ನೋಡಿ ಇಟ್ಟು ಬಿಟ್ಟು ಸುಮ್ಮನೆ ಮುಗ್ಧನಂತೆ ಕುಳಿತುಕೊಂಡನು. ತನಗಿಷ್ಟಳಾದ ಹೆಂಡತಿಯು ಈ ಚಿತ್ರಗಳಲ್ಲಿ ರೇಖಿಸಿದ ಕನ್ನೆಯರಲ್ಲಿ ಯಾವಳೆಂದು ಅವನು ಮತ್ತೆ ಅವುಗಳನ್ನು ನಿರೀಕ್ಷಿಸಿ ನೋಡಲಾರಂಭಿಸಿದನು. ಆದರೇನು? ಚಿತ್ರವು ಕೈಯಲ್ಲಿ, ಕಣ್ಣು ಮುಂದೆ ವತ್ಸಲೆಯ ಲಜ್ಜಾಗ್ರಸ್ತವಾದ ಸುಂದರ ಮೂರುತಿಯು. ಯಾವ ಚಿತ್ರವನ್ನು ನೋಡಿದರೂ ವತ್ಸಲೆ ಆಡ್ಡಾಗಿ ಬಂದು ನಿಂತಳೇ. ಆನಂದನು ಆ ಚಿತ್ರಗಳನ್ನೆಲ್ಲ ಭರ್ರನೆ ಬೀಸಾಡಿ ತನ್ನ ಮಂಚದ ಮೇಲೆ ಬಿದ್ದು ಕೊಂಡನು.

ಕೆಲಹೊತ್ತಿನ ಮೇಲೆ ಆನಂದರಾಯನು ನಿಟ್ಟು ಸುರಿಟ್ಟು “ವತ್ಸಲೆ, ನೀನು ನನ್ನ ಪಾಲಿಗೆ ಸತ್ತಂತಾಗಿರುವಿ, ನಾನೇನು ಮಾಡಲಿ?” ಎಂದು ವ್ಯಸನದಿಂದ ಕೂಗಿಕೊಂಡನು.

ಎರಡು ಮೂರು ದಿವಸಗಳಾದರೂ ಆನಂದನು ತನ್ನ ಅಭಿಪ್ರಾಯವನ್ನು ತಿಳಿಸಲಿಲ್ಲೆಂದು ಕಂಡು ರಘುನಾಥರಾಯರು ಅವನನ್ನು ಕುರಿತು “ಯಾಕೆ ಆನಂದ, ಚಿತ್ರಗಳಲ್ಲೊಂದಾದರೂ ಮನಸ್ಸಿಗೆ ಬರಲಿಲ್ಲವೊ? ಕವಿನಿರ್ಮಿತಳಾದ ಸುಂದರಿಯು ಈ ಜಗತ್ತಿನಲ್ಲಿ ಸಿಕ್ಕುವದು ಕಷ್ಟವೆಂಬದನ್ನು ನೀನು ಮರೆಯಲಾಗದು. ಆದರೂ ಆ ಚಿತ್ರಗಳಲ್ಲಿ ಒಂದನ್ನು ನೀನು ಆರಿಸಿಕೊಳ್ಳಲೇ ಬೇಕೆಂದು ನಾನು ಆಗ್ರಹಪಡುವದಿಲ್ಲ. ಮತ್ತೆ ನೋಡೋಣಂತೆ” ಎಂದು ನಗೆಮುಖವನ್ನು ತಳೆದೇ ನುಡಿದರು.

ಆನಂದರಾಯನಿಗೆ ಬಿಟ್ಟರೆ ಸಾಕಾಗಿತ್ತು. ಅವನು ಪೋಷಾಕುಮಾಡಿಕೊಂಡು ತಿರುಗಾಡಲಿಕ್ಕೆ ಹೋದನು.

“ಎಲ್ಲಿಯ ಮದುವೆ, ಏನು ಕಥೆ! ವಿವಾಹಿತನಾಗಿ ಸಂಸಾರ ಸುಖವನ್ನು ಅನುಭವಿಸುವದನ್ನು ಬ್ರಹ್ಮದೇವರು ನನ್ನ ಹಣೆಯಲ್ಲಿಯೇ ಬರೆಯಲಿಲ್ಲ!” ಎಂದು ಉದ್ಗಾರವನ್ನು ತೆಗೆದು ರಾಜಮಾರ್ಗವನ್ನು ಹಿಡಿದು ನಡೆದಿರುವ ಆನಂದರಾಯನಿಗೆ ಜನಸಮ್ಮರ್ದಿತವಾದ ಆ ಮಾರ್ಗವು ನಿರ್ಜನವಾಗಿ ತೋರಿತು. ಪ್ರಬಲವಾದ ವಿಚಾರದಲ್ಲಿ ನಿಮಗ್ನನಾಗಿ ನಡೆದಿರುವ ಆ ವಿಮನಸ್ಕನಿಗೆ ಮಾರ್ಗದಲ್ಲಿ ಹೋಗಿ ಬರುವವರ ಅರಿಕೆಯೇ ಇರಲಿಲ್ಲ. ತಿರುಗಾಡುತ್ತೆ ತಿರುಗಾಡುತ್ತೆ ಅವನು ಅನೇಕವಾದ ಆಲೋಚನೆಗಳನ್ನು ಮಾಡಿಕೊಂಡು ಮನೆಗೆ ಬಂದನು.
* * * *

“ಅವಶ್ಯ ಹೋಗು, ಯಾರು ಬೇಡೆನ್ನುತ್ತಾರೆ? ನಿನ್ನಂಥ ಸುಶಿಕ್ಷಿತನಾದ ತರುಣನಿಗೆ ಪ್ರವಾಸದ ಅನುಭವವು ದೊರಕಿದರೆ ಬಂಗಾರವೇ ಆಗುವದು.” ಎಂದು ರಘುನಾಥರಾಯರು ಆನಂದರಾಯನ ವಿಜ್ಞಾಪನೆಯನ್ನು ಮನ್ನಿಸಿ ಹೇಳಿದರು.

“ಸಾವಕಾಶವಾಗಿ ಪ್ರಸಿದ್ಧವಾದ ಸ್ಥಳಗಳನ್ನು ನೋಡಿಕೊಳ್ಳುತ್ತ ಹೋದರೆ ನನಗೆ ನಾಲ್ಕಾರು ತಿಂಗಳು ಬೇಕು.”

“ಬೇಕೇ ಬೇಕು. ಹಾಗಿಲ್ಲದಿದ್ದರೆ ಪ್ರವಾಸದಿಂದಾಗುವ ಪ್ರಯೋಜನವೇನು? ನಿನಗೆ ಸಾಕಷ್ಟು ಹಣವನ್ನು ಕೊಡುತ್ತೇನೆ. ಯಥಾವಕಾಶವಾಗಿ ಪ್ರವಾಸ ಮಾಡಿ ನಿನ್ನ ಪ್ರವಾಸದ ಸಮಾಚಾರವನ್ನೆಲ್ಲ ಒಂದು ಪುಸ್ತಕ ರೂಪವಾಗಿ ಬರೆದಿಡುವ ಯತ್ನ ಮಾಡು” ಎಂದು ಪುತ್ರವತ್ಸಲರಾದ ರಾಯರು ಸಂತೋಷದಿಂದ ಹೇಳಿದರು.
* * * *

ತನ್ನ ಮನಸಿನಲ್ಲಿ ಉದ್ಭವಿಸಿದ ಮನೋವಿಕಾರಗಳನ್ನು ಎಲ್ಲ ಪ್ರಕಾರದಿಂದಲೂ ನಿಗ್ರಹಿಸಬೇಕೆಂದು ವತ್ಸಲೆಯು ನಿಶ್ಚಯಿಸಿಕೊಂಡಳು. ಗಾನ ವಾದನ ಚಿತ್ರಕಲೆ ಕಶೀದೆ ಮುಂತಾದ ಲಲಿತ ಕಲೆಗಳ ಹವ್ಯಾಸವನ್ನು ಅವಳು ನಿರಾಕರಿಸಿದಳು. ಏಕಾಂತದಲ್ಲಿ ಕುಳಿತು ವಿಚಾರಗಳಿಗೆ ಈಡಾಗದಂತೆ ಅಹರ್ನಿಶವಾಗಿ ಅವಳು ಮನೆಯ ಕೆಲಸಗಳನ್ನು ಮಾಡಲಾರಂಭಿಸಿದಳು. ದೇವರಿಗೆ ಹತ್ತಿ ಬತ್ತಿಗಳನ್ನೂ ಹೂ ತುಲಸಿಗಳ ಮಾಲೆಗಳನ್ನೂ ತಪ್ಪದೆ ಮಾಡುವಳು. ಆದರೆ ಇದನ್ನೆಲ್ಲ ತಾನೇಕೆ ಮಾಡುತ್ತಿರುವೆನೆಂಬ ವಿಚಾರವು ಅವಳಲ್ಲಿ ಉದ್ಭವಿಸಿದಾಕ್ಷಣವೇ ಅವಳ ಎದೆಯಲ್ಲಿ ಉಲಕುತ್ತಿರುವ ಶಲ್ಯವು ಬಹು ತೀಕ್ಷ್ಣವಾದ ವೇದನೆಯನ್ನು ಕೊಡುತ್ತಿತ್ತು. ಯಾವದಾದರೊಂದು ಸಂಗತಿಯನ್ನು ನಾವು ಪ್ರಯತ್ನ ಪೂರ್ವಕವಾಗಿ ಮರೆತುಬಿಡಬೇಕೆಂದರೆ ಆ ಸಂಗತಿಯು ನಮ್ಮ ಸ್ಮರಣದಲ್ಲಿ ವಜ್ರಲೇಪವಾಗಿಯೇ ಉಳಿಯುವದೇ ಹೊರತಾಗಿ ಅದು ನಮ್ಮಿಂದ ಸರ್ವಥಾ ಮರೆಯಾಗಲರಿಯದೆಂಬದು ಅನುಭವಸಿದ್ಧವಾದ ಮಾತು. ಇದಕ್ಕಾಗಿ ವತ್ಸಲೆಯು ತನ್ನ ಪತಿಯ ಬಳಿಗೆ ಹೋಗಿರಬೇಕೆಂದು ಚಿಂತಿಸಿ, ತನ್ನ ಅಪರಾಧಗಳನ್ನೆಲ್ಲ ಕ್ಷಮಿಸಿ ತನ್ನನ್ನು ಕರೆದುಕೊಂಡು ಹೋಗಬೇಕೆಂದು ಬಹು ಅನುನಯಯುತವಾದ ಪತ್ರವನ್ನು ಬರೆದು ಕೊಂಡಳು.

ಸಚ್ಛೀಲೆಯಾದ ತರುಣಿಯವಳು. ಪ್ರಬುದ್ಧೆಯಾದ ಬಳಿಕ ದಾಂಪತ್ಯ ಧರ್ಮವನ್ನರಿತವಳಾಗಿ ವತ್ಸಲೆಯು ಅಗ್ನಿ ಸಾಕ್ಷಿಯಾಗಿ ತನ್ನ ಕೈಯನ್ನು ಗೋವಿಂದನಿಗೆ ಕೊಟ್ಟಿದ್ದಳಲ್ಲೆ? ತನ್ನ ಆಪ್ತವರ್ಗದವರು ಗೋವಿಂದನನ್ನು ಅವನ ಗುಣಗೇಡಿತನಕ್ಕಾಗಿ ಹಳಿಯುತ್ತಿದ್ದರೂ ಪತಿಯ ಸಮೀಪದಲ್ಲಿರುವುದು ತನಗೆ ಸರ್ವಥಾ ಭೂಷಣವೂ ಇಷ್ಟವೂ ಆಗಿ ಅವಳಿಗೆ ತೋರಿತು. ಗೋವಿಂದನು ದುರ್ಮಾರ್ಗಿಯಾಗಿದ್ದರೆ ಅವನನ್ನು ತಾನೆಂತಾದರೂ ಮಾಡಿ ಸನ್ಮಾರ್ಗಕ್ಕೆ ತರುವೆನೆಂದೂ ಏಕಾಕಿ ಕಷ್ಟ ಪಡುತ್ತಿರುವ ತನ್ನ ಪತಿಗೆ ತಾನು ಅನುಕೂಲೆಯಾಗಿ ವರ್ತಿಸಿದರೆ ಅವನ ಪ್ರೇಮವು ತನ್ನ ಮೇಲೆ ಉಂಟಾಗದಿರದೆಂದೂ ಚಿಂತಿಸಿ ಅವಳು ತನ್ನ ಗಂಡನಿಗೆ ಪತ್ರವನ್ನು ಬರೆದಿದ್ದಳು. ಇಂದು ನಾಳೆ ತನ್ನ ಪತಿಯು ಉತ್ತರವನ್ನು ಬರೆಯುವನೆಂದು ಆ ದೀನೆಯಾದ ಸತಿಯು ಆಸ್ಥೆಯಿಂದ ಮಾರ್ಗಪ್ರತೀಕ್ಷೆ ಮಾಡಿದಳು. ಉತ್ತರವೇ ಇಲ್ಲ. ಮತ್ತೊಂದು ಬರೆದಳು, ಮತ್ತೂ ಉತ್ತರವಿಲ್ಲ. ತಂದೆಯ ಕಡೆಯಿಂದ ಬರೆಸಿ ನೋಡಿದಳು. ಅದರ ಗತಿಯಾದರೂ ಹಾಗೆಯೇ ಆಯಿತು ಕಡೆಗೆ ನೀವು ನನ್ನನ್ನು ಕರೆಯಿಸದಿದ್ದರೆ ನಾನೇ ತಮ್ಮ ಪಾದಸೇವೆಗಾಗಿ ಹೊರಟೆದ್ದು ಬರುವೆನು ” ಎಂದು ಆ ಸಾದ್ವಿಯು ಬರೆದುಕೊಂಡಳು. ಈ ಪತ್ರಕ್ಕೆ ಮಾತ್ರ ಉತ್ತರ ಬಂದಿತು. ವಿಳಾಸದಲ್ಲಿ ಗೋವಿಂದನ ಹಸ್ತಾಕ್ಷರದ ಗುರುತು ಹಿಡಿದು ವತ್ಸಲೆಯು ಆಸೆಯಿಂದ ಒಂದು ಆಣೆ ಅಂಚೇವೆಚ್ಚವನ್ನು ಕೊಟ್ಟು ಪತ್ರವನ್ನು ಬಿಚ್ಚಿ ಓದಲಾರಂಭಿಸಿದಳು. ಪತ್ರವನ್ನೊದುತ್ತಿರುವಾಗ ಆ ಕೋಮಲಾಂಗಿಯ ಸುವದನವು ವಿಷಾದ, ದುಃಖ, ಚಿಂತೆಗಳಿಂದ ಗ್ರಸ್ತವಾದಂತೆ ಕಂಡಿತು. ಕಡೆಗೆ ಸಂತಾಪದಿಂದವಳು ತನ್ನ ಕೆಂದುಟಿಯನ್ನು ಕಟ್ಟನೆ ಕಡಿದುಕೊಂಡು ಕಣ್ಣೀರು ಸುರಿದು ತನ್ನ ಮಂಚದ ಮೇಲೆ ಮಗ್ಗಲಾಗಿ ಬಿದ್ದು ಕೊಂಡಳು. ಆ ಪತ್ರವು ತನ್ನಿಂದ ತಾನೇ ಅಲ್ಲಿಯೇ ಕೆಳಗೆ ಬಿದ್ದಿತು. ವಾಚಕರಿಗಾಗಿ ನಾವು ಅದರ ಅವತರಣಿಕೆಯನ್ನು ಇಲ್ಲಿ ಕೊಡುತೇವೆ.

ಮುಂಬಯಿ, ಎಲ್‍ಫಿನ್‍ಸ್ಟನ್ ಹಾಟೆಲ್,
ತಾ. ೨೧-೧೨-೧೮

ಹೆಂಡತಿ,
ನೀನೂ ನಿನ್ನ ಮತಿಹೀನನಾದ ತಂದೆಯೂ ಬರೆದ ಪತ್ರಗಳು ಮುಟ್ಟಿದವು. ಗರ್ವಿಷ್ಠರಾದ ನಿಮ್ಮ ಮನೆಯವರು ನನ್ನ ಇಚ್ಛೆಗಳನ್ನು ತುಚ್ಛಿಸಿಯೂ ನನ್ನ ಮಾನಹಾನಿಯನ್ನ ಮಾಡಿಯೂ ಇರುವ ಸಂಗತಿಗಳನ್ನು ನಾನು ಮರೆಯುವುದೂ ಇಲ್ಲ. ಅದಕ್ಕಾಗಿ ನಾನು ನಿನ್ನನ್ನು ಕ್ಷಮಿಸುವದೂ ಇಲ್ಲ. ನನ್ನ ಆರೈಕೆಗಾಗಿ ನೀನು ಬರುವಿಯಾ? ಆರೈಕೆಗೆ ನನಗೇನು ಕಡಿಮೆ? ನೀನಿಲ್ಲದಿದ್ದರೂ ನಾನು ಸುಖವಾಗಿ ಹೋಟಲಿನಲ್ಲಿ ಉಣ್ಣುತ್ತೇನೆ. ನನ್ನ ಸೇವೆ ಮಾಡಲಿಕ್ಕೆ ಚತುರೆಯರಾದ ವಾರಾಂಗನೆಯರು ನಿತ್ಯದಲ್ಲಿಯೂ ಮೇಲಾಡುತ್ತಿರುವರು. ಮಾರಿಯಾದ ನಿನ್ನನ್ನು ಕಟ್ಟಿಕೊಂಡು ನಾನೇನು ಮಾಡಲಿ? ನೀನು ವಿಧವೆಯಾಗಿ ಅಮಂಗಲವಾದ ರೂಪವನ್ನು ಹೊಂದಿದ್ದು ನಾನು ಪ್ರತ್ಯಕ್ಷವಾಗಿ ನೋಡುವದು ಸಾಧ್ಯವಾದ ಸಂಗತಿಯಾಗಿರುವದಿಲ್ಲವೆಂದು ನೆನಿಸಿ ನನಗೆ ವಿಷಾದವಾಗುತ್ತದೆ. ಆದರೂ ಈ ಪ್ರಾಯಶ್ಚಿತ್ತವು ಬೇಗನೆ ನಿನ್ನ ಪಾಲಿಗೆ ಬರುವದು. ನನಗೀಗ ಉದರರೋಗದ ಭಾವನೆಯಾಗಿದೆ. ನನ್ನ ಮರಣದಿಂದ ನಿನ್ನ ತಂದೆಗೆ ದುಃಖವೊದಗಿದರೆ ನನಗೆ ಮರಣವೇ ಬರಲಿ!

ನಿನ್ನ ಕುಂಕುಮ ಮಂಗಲಸೂತ್ರಾಪಕರ್ಷಕನಾದ,
ಗೋವಿಂದ.

ಎಂಥ ಅಭದ್ರವಾದ ಪತ್ರವಿದು! ಅಶಿಕ್ಷಿತನೂ ತಿಳಿಗೇಡಿಯ ಮೇಲೆ ದುರ್ಮಾರ್ಗಿಯೂ ಆದ ಮೂರ್ಖನ ವಿಚಾರಗಳನ್ನು ಕಂಡಿರಾ? ಈ ಮೂಢನು ಬೇಡಿ ಬೇಡಿದಾಗ್ಗೆ ಮಾಧವರಾಯರು, ಮಗಳ ಮುಖವನ್ನು ನೋಡಿ ನೂರು ಇನ್ನೂರು ರೂಪಾಯಿಗಳನ್ನು ಕಳಿಸಿ ಕೊಟ್ಟೆಕೊಡುತ್ತಿದ್ದರು. ದರ್ಶನವನ್ನು ಕೊಟ್ಟು ಹೋಗಬೇಕೆಂದು ಕಾಲಕಾಲಕ್ಕೆ ಆದರ ದಿಂದ ಹೇಳಿಕೊಳ್ಳುತ್ತಿದ್ದರು. “ಅಳಿಯದೇವರು ತಮ್ಮ ಕೃತಜ್ಞತೆಯನ್ನು ಮೇಲ್ಕಂಡ ರೀತಿಯಾಗಿ ವ್ಯಕ್ತ ಪಡಿಸಿದರೆ?” ಎಂದು ಉದ್ಗಾರ ತೆಗೆದು ವತ್ಸಲೆಯು ನಿಟ್ಟುಸುರು ಬಿಟ್ಟು ತನ್ನ ದೈವವನ್ನು ನಿಂದಿಸಿಕೊಂಡು ಅತ್ತಳು. ಸಾಧ್ವಿಯವಳು! ಪತಿಯು ಉದರ ರೋಗದಿಂದ ಪೀಡಿತನಾಗಿರುವ ಸಂಗತಿಯನ್ನರಿತು ಅವಳ ಹೊಟ್ಟೆಯಲ್ಲಿ ಉರಿಬಿದ್ದಿತು. ಮರುದಿವಸವೇ ಅವಳು ತಂದೆಯನ್ನು ಕರಕೊಂಡು ಪತಿದರ್ಶನಾರ್ಥವಾಗಿ ಮುಂಬಯಿಗೆ ಹೊರಟು ಹೋದಳು.

ಆನಂದರಾಯನು ದೇಶಸಂಚಾರವನ್ನು ಮಾಡಿಕೊಂಡು ಊರಿಗೆ ಬರುವದರೊಳಗಾಗಿಯೇ ವತ್ಸಲೆಯು ವಿಧವೆಯಾಗಿ ಎರಡು ತಿಂಗಳಾಗಿದ್ದವು. ಈ ಸಂಗತಿಯನ್ನರಿತು ದಯಾದ್ರ ಭಾವದವನಾದ ಆನಂದರಾಯನ ಎದೆಯೊಡೆದು ನೀರಾಯಿತು, ವತ್ಸಲೆಯು ತನಗಲ್ಲದವಳಾಗಿ ತನ್ನ ಕಣ್ಮರೆಯಲ್ಲಿ ಸುಖದಿಂದಿದ್ದರೆ ತನ್ನ ಮನಸ್ತಾಪಕ್ಕೆ ಎಷ್ಟೋ ಸಮಾಧಾನವಾಗುವದೆಂದು ಅವನು ಆಶಿಸಿದ್ದನು. “ಸುಲಕ್ಷಣವಾದ ರೂಪದಿಂದ ಮಂಡಿತರಾದವರು ವಿಶೇಷವಾಗಿ ದುಃಖಭಾಗಿಗಳಾಗುವದಿಲ್ಲವೆಂದು ಕವಿಗಳೂ ಸಾಮುದ್ರಿಕ ಲಕ್ಷಣಗಳನ್ನರಿತವರೂ ಹೇಳುತ್ತಿರುವದು ಸುಳ್ಳಾಯಿತೆ? ಬ್ರಹ್ಮದೇವನೆ, ನೀನು ವತ್ಸಲೆಯಂಥ ಲಲಿತಾಂಗಿಯನ್ನು ಶ್ರಮಪಟ್ಟು ನಿರ್ಮಿಸಿದೇಕೆ? ಅವಿಚಾರದಿಂದ ಆ ಕುಸುಮಕೋಮಲೆಯನ್ನು ದುಃಖಾಗ್ನಿಯಲ್ಲಿ ಬಿಸುಟಿದೇಕೆ? ವತ್ಸಲೆ, ಆಲ್ಹಾದಜನಕವಾದ ನಿನ್ನ ಚಾರುಹಾಸವು ಅಡಗಿಹೋಯಿತೆ? ಪ್ರಫುಲ್ಲಿತವಾದ ನಿನ್ನ ಮುಖ ಕಮಲವು ಬೆಂದು ಬಾಡಿ ಹೋಯಿತೆ? ನಿನ್ನ ತಾರುಣ್ಯವು ವ್ಯರ್ಥವಾಯಿತೆ? ನಿನ್ನ ಜನ್ಮವು ಯಾತಕ್ಕೂ ಬೇಡಾಯಿತೆ? ನಿನಗೆಷ್ಟು ದುಃಖ, ನಿನ್ನನ್ನು ಹಡೆದವರಿಗೆಷ್ಟು ದುಃಖ!” ಎಂದು ಆನಂದ ರಾಯನು ವ್ಯಸನಾಕುಲನಾಗಿ ಮರುಗಿದನು.

ಮಾಧವರಾಯರು ದುಃಖದಲ್ಲಿರುವಾಗ ಅವರನ್ನು ಮಾತಾಡಿಸಿ ಬರುವದು ಶಿಷ್ಟಾಚಾರವೂ ಸ್ನೇಹಾನುಬಂಧಿಗಳ ಧರ್ಮವೂ ಆಗಿರುವದರಿಂದ ಆನಂದನಿಗೆ ಅವರನ್ನು ಕಂಡು ಬರುವದು ಅವಶ್ಯವಾಗಿತ್ತು. ಜಗತ್ತಿನ ಆನುಭವವುಳ್ಳವರೂ ವಿಚಾರಶೀಲರೂ ಆಗಿದ್ದ ಮಾಧವರಾಯರೊಡನೆ ನಾಲ್ಕು ವೇದಾಂತದ ಮಾತುಗಳನ್ನಾಡಿ ಬರುವದು ಆನಂದರಾಯನಿಗೆ ದುಃಷ್ಕರವಾಗಿದಿಲ್ಲ. ಆದರೆ-

“ವತ್ಸಲೆಯ ಮೊರೆಯನ್ನು ನಾನೆಂತು ನೋಡಲಿ? ಅವಳು ಭೋರಿಟ್ಟು ಅತ್ತರೆ ನಾನೇನು ಸಮಾಧಾನವನ್ನು ಹೇಳಲಿ?” ಎಂದು ಚಿಂತಿಸುತ್ತೆ ಅವನು ಹೇಗೋ ಆ ಹೃದಯವಿದಾರಕವಾದ ಶಿಷ್ಟಾಚಾರವನ್ನು ತೀರಿಸಿಕೊಂಡು ಮನೆಗೆ ಬಂದನು.

ವತ್ಸಲೆಯ ವಿಷಯವಾಗಿ ಅನೇಕ ಪ್ರಕಾರದ ವಿಚಾರಗಳು ಆನಂದನ ಮನಸ್ಸಿನಲ್ಲಿ ಹೊಯ್ದಾಡಿ ಅವನನ್ನು ಹಗಲಿರಳು ಬಹುಪರಿಯಾಗಿ ಪೀಡಿಸಿದವು. ಪರಸ್ಪರ ವಿರುದ್ಧವಾದ ಮನೋವಿಕಾರಗಳು ಒಂದಕ್ಕೊಂದು ಅಖಂಡವಾಗಿ ಹೋರಾಡಿ ಒಂದರ ಬಲೆವನ್ನೊಂದು ಕುಂದಿಸಿದವು. ಆದರೂ ಶೃಂಖಲಾಬದ್ದವಾಗಿದ್ದ ಪ್ರೇಮಭಾವವೇ ಪ್ರಸ್ತುತವಾದ ಯುದ್ದದಲ್ಲಿ ತುಸು ಹಿಂಜರಿಯಿತು. ಯುದ್ಧ ಮಾಡುವವರು ತಾವು ದಣುಕೊಳುವದೊತ್ತಟ್ಟಿಗಿರಲಿ, ಅವರು ರಣಭೂಮಿಯನ್ನು ಉದ್ದಾಮತನದಿಂದ ಉಧ್ವಸ್ತವಾಗಿ ಮಾಡಿ ಬಿಡುವಂತೆ, ಮೇಲ್ಕಂಡ ಮನೋವಿಕಾರಗಳ ಯುದ್ಧದಲ್ಲಿ ರಣಭೂಮಿಯಾಗಿದ್ದ ಆನಂದರಾಯನ ಹೃದಯವು ಹಣ್ಣು ಹಣ್ಣಾಗಿ ಹೋಯಿತು.

ಚಿಂತಾನಿಮಗ್ನನಾದ ಆನಂದರಾಯನ ಮುಖದ ವರ್ಚಸ್ವವು ದಿನೇ ದಿನೇ ಕುಂದಿತು. ರಘುನಾಥರಾಯರು ಅವನ ಲಗ್ನದ ಮಾತು ತೆಗೆದರೆ ಅವನಿಗೆ ತಲೆಬೇಸರಿಕೆ. ಈ ಮಾತಿನ ವಿಷಯವಾಗಿ ಆನಂದರಾಯನು ತಂದೆಯವರೊಡನೆ ಮನಬಿಚ್ಚಿ ಮಾತಾಡುವದಿಲ್ಲೆಂದು ಅರಿತು ಅವನ ಮಾತೆಯವರು ಅವನನ್ನು ಕುರಿತು,

“ಆನಂದ, ನೀನು ದೊಡ್ಡವನಾದಿ; ಇನ್ನೆಷ್ಟು ದಿವಸ ನೀನು ಮದುವೆಯಿಲ್ಲದೆ ಇರಬೇಕು? ಪ್ರಬುದ್ಧನಾದ ಮಗನಿಗೆ ನಾವು ಒಡೆದು ಹೇಳುವ ಮಾತು ಯಾವದೂ ಇಲ್ಲ. ನಾವಿನ್ನು ನಿನ್ನ ಮದುವೆಯನ್ನು ಸರ್ವಥಾ ಮುಂದಕ್ಕೆ ಹಾಕುವದಿಲ್ಲ. ಈ ವಿಷಯದಲ್ಲಿ ನೀನು ಉದಾಸೀನನಾಗಿರುವದು ಏಕೆ? ನಿನ್ನ ಮನಸ್ಸಿನಲ್ಲಿ ಏನಿದೆ ಸ್ಪಷ್ಟವಾಗಿ ಹೇಳಿಬಿಡು” ಎಂದು ಕೇಳಿದರು.

ಆನಂದನು ಮಾತೆಯ ಮಮತಾ ಪೂರ್ಣವಾದ ಮುಖವನ್ನು ನೋಡಿ ಸಂತೋಷದಿಂದ ಮುಗುಳುನಗೆದೋರಿ “ಆಮ್ಮಾ ನಾನು ನಿಮ್ಮ ಆಜ್ಞೆಯನ್ನು ಮೀರಿದವನಲ್ಲ. ನನ್ನ ಹಿತಕ್ಕಾಗಿಯೇ ನೀವಿಷ್ಟು ಚಿಂತಿಸುತ್ತಿರುವದನ್ನು ನಾನು ಅರಿಯೆನೆ? ಈಗೀಗಲೇಕೋ ಮನಸ್ಸು ಕೊಂಚ ಉದ್ವಿಗ್ನವಾಗಿರುವದು. ಸದ್ಯಕ್ಕೆ ಐದಾರು ತಿಂಗಳು ಹೋಗಲಿ, ಆ ಮೇಲೆ ನಾನು ನಿಮ್ಮ ಇಚ್ಛೆಗೆ ಪ್ರತಿಕೂಲನಾಗಿ ನಡಕೊಳ್ಳುವದಿಲ್ಲ. ನನ್ನ ಮನೋಗತವನ್ನು ನೀವು ತಂದೆಯವರಿಗೆ ತಿಳಿಸಿರಿ.” ಎಂದು ಹೇಳಿಕೊಂಡನು.

“ತಿಳಿದವನಿಗೆ ನಾವು ಹೆಚ್ಚಾಗಿ ಎಷ್ಟು ಹೇಳೋಣ? ಆದರೂ ಸಣ್ಣ ಮಾತಿಗಾಗಿ ನಾವು ನಿನ್ನ ಮನಸ್ಸು ಮುರಿಯುವದಿಲ್ಲ. ಆರೇ ತಿಂಗಳ ಮಾತು ಅಹುದಲ್ಲೊ? ಆಗಲಿ.”
* * * *

ದುಃಖಭರಾರ್ತೆಯಾದ ವತ್ಸಲೆಯು ದಿನಕ್ಕೊಂದು ರೀತಿಯಾಗಿ ನವೆಯಲಾರಂಭಿಸಿದಳು. ಅವಳು ತನ್ನ ಕೋಣೆಯನ್ನು ಬಿಟ್ಟು ಹೊರಗೆ ಬೀಳುತ್ತಲೇ ಇದ್ದಿಲ್ಲ. ಜಾಣೆಯೂ ರೂಪವತಿಯೂ ಆಗಿರುವ ತನ್ನ ಮಗಳಿಗೆ ಸಮಾಧಾನವೆಂತಾದೀತೆಂದು ಅವಳ ತಂದೆಯು ಹಗಲಿರಳು ಯೋಚನೆ ಗೈಯುತ್ತಲೇ ಇದ್ದನು. ಮಾಧವರಾಯರು ಸುಧಾರಕ ಪಂಥದವರು. ವಿದ್ಯಾವತಿಯಾದ ತಮ್ಮ ಮಗಳನ್ನು ಎಲ್ಲಿಯಾದರೂ ಒಂದು ಸ್ತ್ರೀ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕಳನ್ನಾಗಿ ಮಾಡಿದರೆ ಅವಳು ತನ್ನ ದುಃಖವನ್ನು ಮರೆದಿರುವಳೆಂದು ಯೋಚಿಸಿದರು. ಅದಕ್ಕೆ ಅವಳು ಒಪ್ಪಲಿಲ್ಲ.

ಒಂದು ದಿನ ಆನಂದರಾಯನು ಮಾಧವರಾಯರ ಮನೆಗೆ ಸಮಾಚಾರಕ್ಕಾಗಿ ಬಂದಿದ್ದನು. ಆಗ ಮಾತಿಗೆ ಮಾತು ಬಂದಾಗ ಮಾಧವರಾಯರು ಅಂದದ್ದು:

“ಆನಂದರಾವ, ಏನು ಮಾಡುವದು? ಉಪಾಯವಿಲ್ಲದ ಮಾತಾಗಿದೆ. ವತ್ಸಲೆಗೆ ನಾವೆಷ್ಟು ಸಮಾಧಾನದ ಮಾತು ಹೇಳಿ ನೋಡಿದರೂ ಅವಳ ಚಿತ್ತಕ್ಕೆ ಶಾಂತಿಯಿಲ್ಲ. ಮದುವೆಯಾದರೂ ಪತಿಯ ಮೋರೆಯನ್ನು ಕೂಡ ಅವಳು ಕಾಣಲಿಲ್ಲ; ಸಂಸಾರದ ಸುಖವು ಒತ್ತಟ್ಟಿಗಿರಲಿ.”

“ರಾಯರೆ, ಮನುಷ್ಯನ ಯತ್ನವಿಲ್ಲದ ಮಾತಿಗೆ ದುಃಖಿಸಿ ಫಲವೇನು?” ಎಂದು ಆನಂದರಾಯನು ಉತ್ತರವನ್ನಿತ್ತನು.

“ಮನುಷ್ಯನಿಗೆ ಮೀರಿದ್ದು ಯಾವದು? ವತ್ಸಲೆಯ ಪುನರ್ವಿವಾಹವನ್ನು ಮಾಡಿದರೆ ಒಳಿತಾಗುವದೆಂದು ನಾನು ನೆನಿಸುತ್ತೇನೆ. ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಹೊಂದಿ ಸುಸಂಸ್ಕೃತರಾದವರು ನೀವು. ನಿಮ್ಮಂಥವರು ದೀನೆಯರಾದ ಆಬಲಾಜನರ ಉದ್ಧಾರಣಾರ್ಥವಾಗಿ ಯತ್ನ ಮಾಡದಿದ್ದರೆ ಮುಂದೆ ನಮ್ಮ ಸಮಾಜವು ಕೆಟ್ಟು ಹೋಗುವದಲ್ಲವೆ?”

“ರಾಯರೆ, ನಾನೆಷ್ಟರವನು! ಇಂಥ ಮಹತ್ಕಾರ್ಯದಲ್ಲಿ ನನ್ನಿಂದ ಆಗುವ ಸಹಾಯವಾದರೂ ಎಂಥದು?” ಎಂದು ಆನಂದನು ಹೇಳಿದನು.

“ಕೆಲಸ ಮಾಡಲಿಚ್ಚಿಸುವವನಿಗೆ ಮಾರ್ಗವು ತನ್ನಿಂದ ತಾನೇ ತೋರುವದು.”

ಮಾಧವರಾಯರ ಅಭಿಪ್ರಾಯವನ್ನು ಕೇಳಿ ಆನಂದರಾಯನ ಎದೆಯ ಮೇಲೆ ಗದಾಪ್ರಹಾರವಾದಂತೆ ಭಾಸವಾಯಿತು. “ಈ ರಾಯರು ನನಗೆ ವತ್ಸಲೆಯನ್ನು ಮದುವೆಮಾಡಿಕೊಳ್ಳೆಂದು ಸೂಚಿಸಿದರೇನು?” ಎಂದವನು ಚಿಂತಿಸಿದನು. ಹಿಂದಕ್ಕೆ ತಾರಮ್ಮನಾಡಿದ ನುಡಿಯನ್ನು ಕೇಳಿ ಹುಟ್ಟಿದ ಮನೋವಿಕಾರಗಳಂಥವೇ ಈ ಸಮಯದಲ್ಲಿ ಆನಂದನ ಹೃದಯದಲ್ಲಿ ಉದ್ಭವಿಸಿದವು. ಮತ್ತವನು ತಲ್ಲಣಗೊಂಡು ದಿಂಗುಬಡಿದವನಂತೆ ಮಾತಾಡಲರಿಯದೆ ಸುಮ್ಮನೆ ಕುಳಿತುಕೊಂಡನು.

“ಯಾಕೆ ಆನಂದರಾವ, ಮಾತಾಡಲೊಲ್ಲಿರಿ?” ಎಂದು ಮಾಧವ ರಾಯರು ಕೇಳಿದರು.

“ರಾಯರೆ, ಮಹತ್ವವಾದ ವಿಷಯವಿದು, ಪೂರ್ವ ಪಕ್ಷ ಪರ ಪಕ್ಷವಾಗಿ ಇದನ್ನು ನಾನು ವಿಮರ್ಶಿಸಿಲ್ಲ. ನಾನೇನು ಹೇಳಲಿ?” ಎಂದು ಆನಂದನು ತೊಂದರೆಗೊಂಡು ಅನಿರ್ವಾಹಕ್ಕಾಗಿ ಉತ್ತರ ಕೊಟ್ಟನು.

“ಆಗಲಿ! ಈ ವಿಷಯವಾಗಿ ಸಾಧಕಬಾಧಕವಾದ ಅನೇಕ ಗ್ರಂಥಾಧಾರಗಳೂ ಲೇಖಗಳೂ ನಿಬಂಧಗಳೂ ನನ್ನಲ್ಲಿ ಇವೆ. ಅವುಗಳನ್ನು ತೆಗೆದು ಕೊಂಡು ಹೋಗಿ, ನಾಲ್ಕು ದಿವಸಗಳಲ್ಲಿ ನೀವು ಪಟ್ಟಿರುವ ಅಭಿಪ್ರಾಯವನ್ನು ನನಗೆ ತಿಳಿಸಿದರೆ ನಾನು ತುಂಬಾ ಉಪಕೃತನಾಗುವೆನು.” ಎಂದು ಹೇಳಿ ಮಾಧವರಾಯರು ಆನಂದರಾಯನನ್ನು ತಮ್ಮ ವಾಚನದ ಕೋಣೆಗೆ ಕರಕೊಂಡು ಹೋದರು.

ಅಲ್ಲಿ ವತ್ಸಲೆಯು ಏನೋ ಓದುತ್ತ ಕುಳಿತಿದ್ದಳು. ಆನಂದರಾಯನನ್ನು ಕಾಣುತ್ತಲೆ ವತ್ಸಲೆಯು ಆಶ್ಚರ್ಯಚಕಿತಳಾಗಿ ಎದ್ದು ನಿಂತಳು. ಲಜ್ಜಾವನತ ಮುಖಿಯಾದ ಆ ಅಬಲೆಯು ಮೆಲ್ಲನೆ ಉಸುರ್ಗರೆದಳು.

“ವತ್ಸಲಾ, ನಿನ್ನ ಕುರ್ಚಿಯ ಮೇಲೆ ಕುಳಿತುಕೊಳ್ಳು, ಆನಂದರಾಯನೇನು ನಮಗೆ ಪರಕೀಯನೆ?” ಎಂದು ಮಗಳಿಗೆ ಹೇಳಿ ಮಾಧವರಾಯರು ತಾವೊಂದು ಕುರ್ಚಿಯ ಮೇಲೆ ಕುಳಿತುಕೊಂಡು ಆನಂದರಾಯನಿಗೂ ಕುಳ್ಳಿರ ಹೇಳಿದರು.

ಬಳಿಕ ರಾಯರು ತಮ್ಮ ಪುಸ್ತಕದ ಕಪಾಟು ತೆರೆದು, ಆನಂದರಾವ, ಇದು ನೋಡಿರಿ, ದಿವಾನ್ ಬಹಾದ್ದೂರ ರಘುನಾಥರಾಯರು ಪುನರಿವಾಹದ ಸಮರ್ಥನಕ್ಕಾಗಿ ಬರೆದ ಲೇಖವು. ಇದು ರಾಜಾರಾಮ ಶಾಸ್ತ್ರಿಗಳ ನಿಬಂಧವು. ಇದು ಪುನರ್ವಿವಾಹದ ಖಂಡನಾರ್ಥವಾಗಿ ಬಾಗಲಕೋಟೆಯ ಆಚಾರ್ಯರು ಮಾಡಿದ ಉಪನ್ಯಾಸವು. ಇದು ಶ್ರೀ ಸತ್ಯ ವೀರಸ್ವಾಮಿಗಳವರು ಬರೆಸಿದ ಗ್ರಂಥವು. ಇವುಗಳನ್ನೆಲ್ಲಾ ಚನ್ನಾಗಿ ಪರಾಮರ್ಶಿಸಿ ನೀವು ನಿಮ್ಮ ನಿಜವಾದ ಅಭಿಪ್ರಾಯವನ್ನು ಕೊಡುವಿರೆಂದು ನಾನು ಆಶಿಸುತ್ತೇನೆ” ಎಂದು ಕೇಳಿಕೊಂಡರು.

“ಯಾತಕ್ಕಿಷ್ಟು ಪ್ರಯತ್ನ?” ಎಂದು ವತ್ಸಲೆಯು ಚಕಿತಳಾಗಿ ತನ್ನ ಮನದಲ್ಲಿಯೇ ಚಿಂಚಿಸಿ ಕುತೂಹಲದಿಂದ ಆನಂದನ ಮುಖವನ್ನು ನೋಡಿದಳು. ವತ್ಸಲೆಯು ವ್ಯಸನದಿಂದ ಕೃಶಳಾಗಿದ್ದರೂ ಅವಳ ಮನೋಹರವಾಗಿದ್ದ ನೇತ್ರಗಳಲ್ಲಿಯ ಪ್ರಭೆಯು ರವಷ್ಟಾದರೂ ಕಡಿಮೆಯಾಗಿದ್ದಿಲ್ಲ. ಅವಳು ಅವಿವಾಹಿತಳಾದ ತರುಣಿಯಾಗಿದ್ದರೆ ಅವಳ ದೃಷ್ಟಿಪಾತದಿಂದ ಆನಂದರಾಯನ ಎದೆಯು ಪಂಚಶರನ ಬಾಣದಿಂದ ಸೀಳಿ ಹೋಗಬಹುದಾಗಿತ್ತು. ಆದರೂ ಆ ದೃಷ್ಟಿಯ ಪರಿಣಾಮವು ಆನಂದನನ್ನು ಬಾಧಿಸದಿರಲಿಲ್ಲ.

“ನಾನೆಷ್ಟು ಪರಿಯಾಗಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಈ ಪ್ರಸಂಗವು ತಾನಾಗಿ ಬಂದೊದಗಿತೆ?” ಎಂದು ಆನಂದನು ತನ್ನೊಳಗೆ ತಾನು ಚಿಂತಿಸಿ, ದೂಡಿದರೂ ಮತ್ತೆ ಮತ್ತೆ ತನ್ನ ಹೃದಯದಲ್ಲಿ ಸೇರಿಕೊಳ್ಳುತ್ತಿರುವ ಮನೋವಿಕಾರವನ್ನು ಕಂಡು ತನ್ನ ಹೃದಯದೌರ್ಬಲ್ಯವನ್ನು ನಿಂದಿಸಿದನು. ಲೇಖಗಳೆಲ್ಲ ತನ್ನ ಸ್ವಾಧೀನವಾದ ಕೂಡಲೆ ಅವನು ಚಟ್ಟನೆ ಸ್ಥಾನವನ್ನು ಬಿಟ್ಟು ಹೊರಟು ತನ್ನ ಮನೆಯ ಮಾರ್ಗವನ್ನು ಹಿಡಿದನು. ಹೋಗುವಾಗ ವತ್ಸಲೆಯ ಮುಖವನ್ನು ಅವನು ಕಣ್ಣೆತ್ತಿ ನೋಡಲಿಲ್ಲ. ಅವಳು ಅವನ ಮುಖವನ್ನು ನೋಡುತ್ತಲಿದ್ದಳೋ ಇಲ್ಲವೋ ಅವನಿಗೆ ತಿಳಿಯ ಬರಲಿಲ್ಲ.

ಆನಂದರಾಯನು ಆ ಕಾಗದಗಳನ್ನೆಲ್ಲ ತನ್ನ ಮನೆಗೆ ತಂದು ಮೇಜಿನ ಮೇಲೆ ಚೆಲ್ಲಿಕೊಟ್ಟು ಆರಾಮ ಕುರ್ಚಿಯಲ್ಲಿ ಬಿದ್ದು ಕೊಂಡು ವಿಚಾರದಲ್ಲಿ ಮುಳುಗಿದನು.

“ಮಾಧವರಾಯರು ಈ ಕೆಲಸವನ್ನು ನನಗೇಕೆ ಹೇಳಿದರು? ವತ್ಸಲೆಯ ಪುನರ್ವಿವಾಹವನ್ನು ಮಾಡಬೇಕೆನ್ನುವರೋ? ಮಾಡಿದರೆ ಮಾಡಲಿ, ಅದಕ್ಕೆ ನನ್ನ ಅಭಿಪ್ರಾಯವೇಕೆ? ಸುಧಾರಕರ ಸಮಾಜದಲ್ಲಿ ವಿಧವೆಯರ ಪುನರ್ವಿವಾಹವನ್ನು ಮಾಡುವದು ಗೊತ್ತಾಗಿ ಹಳೆಮಾತಾಗಿದೆ. ನನ್ನ ಮೇಲೆ ಬಲೆಯನ್ನು ಒಗೆಯುವರೇನು? ಪುನರ್ವಿವಾಹದ ಪದ್ಧತಿಯು ಅಸಮಂಜಸವಾಗಿರುವದೆಂದು ನಾನು ಅನೇಕವರ್ತಿ ಸಭೆಗಳಲ್ಲಿ ಆಡಿ ತೋರಿಸಿದ್ದೇನೆ. ಇನ್ನು ನಾನು ಮತಾಂತರವನ್ನು ತಳೆಯುವದು ಹೇಗೆ?” ಎಂದವನು ಆಲೋಚಿಸಿ ಮಾಧವರಾಯರು ಕೊಟ್ಟ ಲೇಖಗಳನ್ನು ತೆಗೆದುಕೊಂಡು ಓದದೆ ಅವುಗಳನ್ನು ಸುಮ್ಮನೆ ತಿರುತಿರುವಿ ನೋಡಿದನು.

“ಇವುಗಳನ್ನು ನಾನು ಓದಿಯೇ ಇದ್ದೇನೆ. ಶಾಸ್ತ್ರಾರ್‍ಥಗಳನ್ನು ಜಗ್ಗಾಡಿ ಅರ್ಥಗಳನ್ನು ಮಾಡಿಕೊಳ್ಳದೆ ಇದ್ದರೆ ಉಭಯ ಪಕ್ಷದವರಿಗೂ ಅನುಕೂಲವಿಲ್ಲ. ಮಾಧವರಾಯರಿಗೆ ಉತ್ತರವನ್ನು ಹೇಗೆ ಹೇಳಬೇಕು? ನಾನು ಪ್ರತಿ ಕೂಲವಾದ ಅಭಿಪ್ರಾಯವನ್ನು ಹೇಳಿದರೆ ಅವರು ಒಪ್ಪಿಕೊಳ್ಳುವರೆ? ಅನುಕೂಲವಾದದನ್ನೇ ಹೇಳಿದರೆ ನನ್ನ ಗಂಟು ಹೋಗುವದಾದರೂ ಏನು?” ಎಂದು ಯೋಚಿಸಿ ಅವನು ತನ್ನ ಅಭಿಪ್ರಾಯವನ್ನು ಸಂಕ್ಷೇಪವಾಗಿ ಬರೆದು ಮಾಧವರಾಯರ ಮನೆಗೆ ಕಳಿಸಿದನು.

ಇಷ್ಟಾದಬಳಿಕ ಕೆಲವು ದಿವಸಗಳಮೇಲೆ ಮಾಧವರಾಯರು ವತ್ಸಲೆಯ ಕೂಡ ಪುನರ್ವಿವಾಹದ ಬಗ್ಗೆ ವಾಗ್ವಾದ ನಡೆಸಿದರು. ತಂದೆಯವರ ಆಗ್ರಹವು ಹೆಚ್ಚಾಗಿ ತೋರಿದ್ದರಿಂದ ಅವಳು ಮಾತು ಬೆಳಿಸಲೂ ಇಲ್ಲ, ತನ್ನ ಮನೋಗತವನ್ನೂ ತಿಳಿಸಲಿಲ್ಲ.

“ಏನು ಬಂತಿದು! ಆನಂದರಾಯನು ಪುನರ್ವಿವಾಹಕ್ಕೆ ಒಪ್ಪಿದನೆ? ಕರ್ಮನಿಷ್ಟರಾದ ರುಘುನಾಥರಾಯರ ಮಗನು ಮತಾಂತರವನ್ನು ಹೊಂದಿದ್ದು ಹೇಗೆ? ನನ್ನ ವಿಷಯವಾಗಿ ಅವನು ತಳೆದಿರುವ ಪ್ರೇಮವು ಈಗ ವೃದ್ಧಿಂಗತವಾಗಿ ಅವನು ತನ್ನ ಕುಲಶೀಲಗಳನ್ನು ಮರೆತನೆ? ಪ್ರೇಮವೆ, ನೀನೊಮ್ಮೆ ಉದ್ಭವಿಸಿದೆಂದರೆ ಎಷ್ಟು ಕಡಿಕಡಿದು ಹಾಕಿದರೂ ನಿನ್ನ ಬೇರುಗಳು ಇಲ್ಲದಂತಾಗುವದಿಲ್ಲವಲ್ಲ! ಆನಂದನು ತಾನಾಗಿ ನನ್ನ ಬಳಿಗೆ ಬಂದು ಪುನರ್ವಿವಾಹಕ್ಕೆ ನನ್ನ ಸಮ್ಮತಿಯನ್ನು ಕೇಳಿದರೆ ಏನೆಂದು ಹೇಳಲಿ? ಅವನು ಬಹು ಸರಿಯಾಗಿ ಕೇಳಿಕೊಂಡರೆ ಒಲ್ಲೆನೆಂದು ಹೇಳಲಿಕ್ಕೆ ನನ್ನ ಹೀನಸತ್ಯವಾದ ಹೃದಯವು ಸಮರ್ಥವಾಗುವದೆ? ಪುನರ್ವಿವಾಹವು ಪವಿತ್ರವಾದದ್ದೆಂದು, ನನ್ನ ಅಂತರಾತ್ಮವು ಒಪ್ಪುವದಿಲ್ಲ.”

ಇಂಥ ಪ್ರಕಾರದ ವಿಚಾರಗಳಿಗೆ ಈಡಾಗಿ ವತ್ಸಲೆಯು ಎರಡು ಮೂರು ದಿವಸ ಚಿಂತಾವಿಷಾದ ಆಶೆ- ನಿರಾಶೆಗಳೆಂಬ ವೇಗವುಳ್ಳ ಅಭ್ರಪಟಲಗಳ ಪುನರಾವರ್ತನದಿಂದ ಸಂಪೀಡಿತಳಾದಳು. ಮೂಡಭಾವ, ಸುಧಾರಣೆ, “ಯದ್ಯಪಿ ಶುದ್ಧಂ ಲೋಕವಿರುದ್ಧಂ,” ಧರ್ಮಶಾಸ್ತ್ರಗಳ ಯಥಾರ್ಥಭಾವ, ಭಿಕ್ಷುಗಳ ಆಗ್ರಹದ ಮತ ಮುಂತಾದ ದ್ವಂದ್ವಗಳನ್ನು ಸಮತೋಲವಾಗಿ ಹಿಡಿಯಲು ಅವಳು ಯತ್ನಿಸಿದಳು. ಆನಂದನಲ್ಲಿ ಅವಳ ಪ್ರೇಮವೂ, ಗೋವಿಂದನಲ್ಲಿ ಅವಳ ಹಸ್ತವೂ ಸಿಕ್ಕು ಹೋಗಿದ್ದವು. ಗೋವಿಂದನು ಮೃತನಾಗಿದ್ದರೂ ಪಾಣಿಗ್ರಹಣದ ದೃಢವಾದ ಹಿಡಿತವು ಬಿಟ್ಟಿರುವದೋ ಇಲ್ಲವೋ ಎಂಬ ಶಂಕೆ, ಆನಂದನಲ್ಲಿ ಸಿಕ್ಕಿದ ಪ್ರೇಮವು ಏನು ಕೊಟ್ಟರೂ ಸುರಳಿ ಬರಲೊಲ್ಲದು.

“ಇಂದು ಆನಂದನು ನನ್ನ ಬಳಿಗೆ ಅಭಿಪ್ರಯಕ್ಕಾಗಿ ಬರುವನಂತೆ. ಈಗಿನಿಂದಲೇ ನನ್ನ ನಿಶ್ಚಯವು ಶಿಥಿಲವಾಗುತ್ತಿರುವಂತೆ ಭಾಸವಾಗುತ್ತದೆ. ಆದರೂ ಈ ಸಮಯದಲ್ಲಿ ಆದಷ್ಟು ಧೈರ್ಯವನ್ನು ತಾಳಿ ಮನೋವಿಕಾರಗಳಿಗೆ ಈಡಾಗದೆ ಆನಂದನೊಡನೆ ಮಾತಾಡುವೆನು” ಎಂದು ಯೋಚಿಸಿ ವತ್ಸಲೆಯು ತನ್ನ ಕೋಣೆಯಲ್ಲಿ ಎಡೆಯಾಡುತ್ತೆ ಕೆಲಹೊತ್ತು ಕಳೆದಳು. ಆನಂದನು ಬರುವ ಸಮಯವಾಯಿತು. ಅವಳು ಕಾತರಳಾದಳು. ಎದೆಯು ಧಕ್ಕಧಕ್ಕೆಂದು ಹಾರಲಾರಂಭಿಸಿತು. ಅವಳು ಉಸಿರಾಡಿಸುವದು ಕೋಣೆಯ ಹೊರಗೆ ನಿಂತವರಿಗೆ ಕೂಡ ಕೇಳಬರುವಂತಿತ್ತು. ನೀರಡಿಸಿ ನೀರು ಕುಡಿಯುವನೆಂದು ಅವಳು ಚಂಬುವನ್ನು ತೆಗೆದುಕೊಳ್ಳಹೋದರೆ ಕೈಯು ಥರ ಥರನೆ ನಡುಗಿತು, “ಯಾರು ಬಂದರು?” ಆನಂದನಲ್ಲ, ತಾರಮ್ಮನು. “ಆತ್ಯಾ, ಏನು ಸಮಾಚಾರ?” ಎಂದು ವತ್ಸಲೆಯು ಕೇಳಿದಳು, “ಯಾತರ ಸಮಾಚಾರ?” ಎಂದು ಏನೂ ಅರಿಯದ ತಾರಮ್ಮನು ಕೇಳಿದಳು. ತಾರಮ್ಮನು ತನ್ನ ಕೆಲಸಕ್ಕೆ ಹೋದಳು. ಅವಳು ಹೋದ ಬಳಿಕ ಅಲ್ಪ ಕಾಲ ದಲ್ಲಿಯೇ ಆನಂದನು ಧಗ್ಗನೆ ವತ್ಸಲೆಯ ಕೋಣೆಯಲ್ಲಿ ಬಂದು ನಿಂತನು. ಆ ತರುಣಿಯ ಮುಖದಲ್ಲಿ ಮೃದುಹಾಸವು ತೋರಿತೆನ್ನುವಷ್ಟರಲ್ಲಿಯೇ ಬಿಗಿಯಾದ ಗಂಭೀರತೆಯು ಅವಳ ಸುಂದರವಾದ ಮುಖವನ್ನು ಸಮಗ್ರವಾಗಿ ವ್ಯಾಪಿಸಿಕೊಂಡಿತು. ಆದರೆ ಆನಂದನನ್ನು ಮಾತಾಡಿಸಲು ವತ್ಸಲೆಯ ಅಂತರಂಗದಲ್ಲಿ ಧೈರ್ಯವಿರಲಿಲ್ಲ. ಕಟೆದ ಬೊಂಬೆಯ ಹಾಗೆ ಅವಳು ಸ್ತಬ್ಬಳಾಗಿ ನಿಂತುಬಿಟ್ಟಳು.

ಆನಂದರಾಯನು ಬಂದವನೇ ನೆಟ್ಟನೊಂದು ಕುರ್ಚಿಯ ಮೇಲೆ ಕುಳಿತುಕೊಂಡು, ವತ್ಸಲೆಯ ವಿಲಕ್ಷಣವಾದ ಮುಖಮುದ್ರೆಯನ್ನು ಆಗಾಗ್ಗೆ ಕಣ್ಣೆತ್ತಿ ನೋಡತೊಡಗಿದನು. ಅವನಾದರೂ ಅವಳೊಡನೆ ಮಾತಾಡುವೆನೆಂದರೆ ಸಹಸಾ ಹೇಗೆ ಉಪಕ್ರಮಿಸಬೇಕೆಂಬುದನ್ನರಿಯದೆ ಮೇಜಿನ ಮೇಲಿದ್ದ “ಸ್ತ್ರೀಶಿಕ್ಷಣದ ಮಹತ್ವವು” ಎಂಬ ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡು, ಪುಟಗಳನ್ನು ಹಿಂದೆ ಮುಂದೆ ಮಾಡುತ್ತೆ ‘ವತ್ಸಲಾ’ ಎಂದು ಮೆಲ್ಲನೆ ಸಂಬೋಧಿಸಿದನು.

ವತ್ಸಲೆಯು ದೀರ್ಘಶ್ವಾಸವನ್ನು ಬಿಟ್ಟು ತನ್ನ ಹೃತ್‍ಕ್ಷೋಭವನ್ನು ತುಸು ಸಡಲಿಸಿ “ಏನು?” ಎಂದಿಷ್ಟು ಕೇಳಿದಳು.

ಮುಂದೇನು? ಹತ್ತು ನಿಮಿಷಗಳಾದರೂ ಆನಂದನ ಮುಖದಿಂದ ಒಂದು ಮಾತು ಹೊರಡಲೊಲ್ಲದು. ವತ್ಸಲೆಯು ಕೆಳಗೆ ಚೆಲ್ಲಿದ ತನ್ನ ದೃಷ್ಟಿಯನ್ನು ಕುತೂಹಲದಿಂದ ಮೇಲಕ್ಕೆತ್ತಿ ಆನಂದನ ಮುಖವನ್ನು ನೋಡಿದಳು. ಅಷ್ಟೇ ಧೈರ್ಯದಿಂದ ಅವನು “ವತ್ಸಲೆ, ನಾನೇಕೆ ಬಂದಿರುವೆನೆಂಬದು ನಿನಗೆ ಗೊತ್ತಾಗಿರುವದೇನು?” ಎಂದು ಪ್ರಶ್ನೆ ಮಾಡಿದನು.

“ನಾನೇನು ಬಲ್ಲೆ?”
“ಮಾಧವರಾಯರು ನಿನ್ನ ಮುಂದೆ ಏನೂ ಹೇಳಲಿಲ್ಲವೆ?”
“ಅವರೇನೇನೋ ಹೇಳಿದರು. ಆಗ ನನ್ನ ಮನಸ್ಸು ಸ್ಥಿರವಾಗಿರಲಿಲ್ಲವಾದ್ದರಿಂದ ನನಗೇನೂ ತಿಳಿಯಲಿಲ್ಲ.” ಎಂದು ವತ್ಸಲೆಯು ಕಂಪಿತವಾದ ಧ್ವನಿಯಿಂದ ಉತ್ತರ ಕೊಟ್ಟಳು.

“ಆಂದರೆ? ಅವರು ಹೇಳಿದ್ದು ನಿನಗೆ ಸರಿಯಾಗಿ ತೋರಲಿಲ್ಲವೇನು?” ಎಂದು ಆನಂದನು ಶಂಕಿತನಾಗಿ ಕೇಳಿದನು.

ಬಹಳೊತ್ತು ಧ್ಯಾನಿಸಿ ವತ್ಸಲೆಯಂದದ್ದು : “ನಿಮಗೆ ಸರಿಯಾಗಿ ತೋರಿತೇನು?”

“ವತ್ಸಲೆ, ನನಗೆಂತೇ ತೋರಲಿ, ಕೇವಲ ನಿನ್ನ ಹಿತಕ್ಕಾಗಿ ನಾನು… ಮಾಧವರಾಯರ ಅಭಿಪ್ರಾಯಕ್ಕೆ ಒಳಪಟ್ಟೆನು.”

ಆನಂದರಾಯನು ಆಡಿದ್ದರ ಸತ್ಯತೆಯ ಬಗ್ಗೆ ಶಂಕೆ ತೆಗೆದುಕೊಳ್ಳಲು ಆಸ್ಪದವೇ ಇಲ್ಲೆಂಬದನ್ನು ವತ್ಸಲೆಯು ಸಂಪೂರ್ಣವಾಗಿ ಅರಿತವಳು. ವಿದ್ಯುತ್ ಪ್ರವಾಹದ ಸೆಳಕಿನಿಂದಲೋ ಎಂಬಂತೆ ವತ್ಸಲೆಯು ಆನಂದನ ನುಡಿ ಕೇಳಿ ತಟ್ಟನೆ ವಿಭ್ರಮಗೊಂಡಳು. ತೀವ್ರವಾದ ಶುಧಿರಾಭಿಸರಣದಿಂದ ಅವಳ ಮುಖವು ವಿಲಕ್ಷಣವಾದ ರಕ್ತಿಮೆಯನ್ನು ಹೊಂದಿತು. ಕುತ್ತಿಗೆ ಯುಬ್ಬಿ ಕಣ್ಣುಗಳೊಳಗಿಂದ ಅಶ್ರು ಬಿಂದುಗಳು ತಟತಟನೆ ನೆಲಕ್ಕುದುರಿದವು. “ಆನಂದರಾವ್……… ” ಎಂದಿಷ್ಟು ನುಡಿಯಬೇಕಾದರೆ ಅವಳಿಗೆ ಶ್ರಮವಾಯಿತು.

“ಹೇಳು ವತ್ಸಲಾ, ನಿಃಶಂಕವಾಗಿ ಮಾತಾಡು. ನಾನಿನ್ನೂ ಮುಂಚಿನ ಆನಂದನೇ ಎಂದು ತಿಳಿದು ಸಂಕೋಚಗೊಳ್ಳದೆ ಮಾತಾಡು. ”

“ಓರ್ವ ಹತಭಾಗ್ಯಳ ವಿಷಯವಾಗಿ ಕನಿಕರಪಡುವದು ತತ್ಕಾಲ ಮಾತ್ರವಾದದ್ದು. ನಾನು ದೀನಾವಸ್ಥೆ ಹೊಂದಿದೆನೆಂದು ಕಂಡು ನೀವು ಕನಿಕರ ಪಡುವದು ವಿಹಿತವೇ. ಆದರೆ ಆ ಕನಿಕರಕ್ಕಾಗಿ ನೀವು ನಿಮ್ಮ
ಸುಖಕ್ಕೆ ತಿಲಾಂಜಲಿಯನ್ನು ಕೊಟ್ಟು, ಬಳಿಕ ಆಮರಣ ಪಶ್ಚಾತ್ತಾಪಕ್ಕೆ ಈಡಾಗುವಿರೆಂಬದನ್ನು ನೀವು ವಿಚಾರಿಸಿರುವಿರೋ? ಯಃಕಶ್ಚಿತವಾದ ನನ್ನ ಹಾಳು ಜೀವಿತವೆತ್ತಣದು! ಅದಕ್ಕಾಗಿ ಈ ದೇಶಕ್ಕೆ ಅಲಂಕಾರರಾಗತಕ್ಕನರಾದ ನೀವು ನಿಮ್ಮ ಸುಕೀರ್ತಿಗೆ ಹಾನಿ ತರುವಂಥ ಉದ್ಯೋಗವನ್ನು ಮಾಡುವದೇನು!” ಎಂದು ವತ್ಸಲೆಯು ಆನಂದನ ಮುಖವನ್ನು ನೋಡುತ್ತೆ ನುಡಿದಳು.

“ವಿವೇಕಜ್ಞಳಾದ ನನ್ನ ವತ್ಸಲೆ, ಈ ವಿಷಯದಲ್ಲಿ ನಾನು ಪಶ್ಚಾತಾಪ ಹೊಂದುವ ಕಾರಣವೇ ಇಲ್ಲ. ನಿನ್ನಲ್ಲಿ ನನ್ನ ಪ್ರೇಮವು ಆಸಕ್ತವಾಗಿ ಬಹುಕಾಲವಾಗಿಹೋಯಿತು, ಇದುವರೆಗೂ ಅದು ನಿಶ್ಚಲವಾಗಿ ಉಳಿದಿರುವದು, ನಿರ್ಭರವಾದ ಪ್ರೇಮದಿಂದ ನಾನು ನಿನ್ನ ಪಾಣಿಗ್ರಹಣವನ್ನು ಮಾಡಿದರೆ ಪಶ್ಚಾತ್ತಾಪವೆಲ್ಲಿಂದ ಬರುವದು?” ಎಂದು ಆನಂದರಾಯನು ಗದ್ಗದ ಕಂಠವಾಗಿ ನುಡಿದು, ವತ್ಸಲೆಯ ಮನೋಹರವಾದ ಮುಖವನ್ನು ಏಕಾಗ್ರ ದೃಷ್ಟಿಯಿಂದ ನೋಡುತ್ತ ಕುಳಿತನು.

ಈ ಮಾತು ಕೇಳುತ್ತಲೆ, ವತ್ಸಲೆಯ ಹೃದಯವು ಕಂಪಿಸಿತು. ಚಿತ್ತಕ್ಕೆ ಭ್ರಮಬಂದಂತಾಗಿ ಆ ಮಂದಿರಕ್ಕೆ ಮಂದಿರವೇ ಆಂದೋಲನವನ್ನು ಹೊಂದುತ್ತಿರುವಂತೆ ಅವಳಿಗೆ ಭಾಸವಾಯಿತು. ಇಂಥ ಸ್ಥಿತಿಯಲ್ಲಿ ಅವಳೆಂತು ಮಾತಾಡಬಲ್ಲಳು? ಹತ್ತೆಂಟು ನಿಮಿಷಗಳಾದರೂ ವತ್ಸಲೆಯ ಮುಖದಿಂದ ಒಂದು ಅಕ್ಷರವಾದರೂ ಹೊರಡಲಿಲ್ಲ.

ಆನಂದನು “ವತ್ಸಲಾ!” ಎಂದು ಮೆಲ್ಲನೆ ಉಸುರಿದನು.

ವತ್ಸಲೆಯು ಸ್ವಪ್ನದಿಂದೆಚ್ಚಂತಾಗಿ “ಏನು?” ಎಂದು ಮೂಢೆಯಂತೆ ಕೇಳಿದಳು.

“ವತ್ಸಲೆ, ನಿನ್ನನ್ನು ನಾನು ವಂಚಿಸಬಂದಿಲ್ಲ. ನೀನು ನನ್ನನ್ನು ಪ್ರೀತಿಸುತ್ತಿದ್ದರೆ ಇದೆಲ್ಲ ಮಾತು. ಇಲ್ಲವಾದರೆ ಈ ಸಂವಾದವು ಇಲ್ಲಿಗೆ ಸಾಕು?”

“ನಿಷ್ಫಲವಾದ ಪ್ರೀತಿಯನ್ನು ವ್ಯಕ್ತಪಡಿಸಿ ಪ್ರಯೋಜನವೇನು?” ಎಂದು ನುಡಿದು ವತ್ಸಲೆಯು ಲಜ್ಜಿತಳಾಗಿ ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡಳು.

ಆನಂದನ ಪರವಶನಾಗಿ ಎದ್ದು ವತ್ಸಲೆಯ ಕೈಹಿಡಿದು, “ಪ್ರಿಯೆ, ನೀನು ನನ್ನನ್ನು ಪ್ರೀತಿಸುತ್ತಿದ್ದರೆ ನಾವು ಮತ್ತೊಂದು ವಿಚಾರವನ್ನು ಮಾಡದೆ ಪುನರ್ವಿವಾಹದ ರೀತಿಯಿಂದ ದಂಪತಿಗಳಾಗಿ ಸುಖದಿಂದಿರಬಲ್ಲೆವಷ್ಟೆ?” ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಮಂದಸ್ಮಿತನಾಗಿ ಕೇಳಿದನು.

ಆನಂದನು ತನ್ನ ಕೈ ಹಿಡಿದಿರಲು ಅಂಥ ಅನನುಭೂತವಾದ ಸುಖ ಸ್ಪರ್ಶದಿಂದ ಮೋಹಿತಳಾಗಿ ಕೈ ಬಿಡಿಸಿಕೊಳ್ಳುವದನ್ನು ಮರೆತು, ವತ್ಸಲೆಯು ಸುಮ್ಮನೆ ಕುಳಿತುಕೊಂಡಳು. ಅವಳು ಒತ್ತಾಯದಿಂದ ಸಂಗ್ರಹಿಸಿಕೊಂಡಿರುವ ನಿಶ್ಚಯವೆಲ್ಲ ಯಾವಾಗಲೋ ಜಾರಿಹೋಗಿತ್ತು. ಮಾತಾಡುವಷ್ಟು ಚಿತ್ತಸ್ವಾಸ್ಥವಾದ ಬಳಿಕ ಅವಳು “ಆನಂದರಾವ ಕೈ ಬಿಡಿರಿ! ನನ್ನನ್ನು ಮೋಹಕ್ಕೆ ಈಡುಮಾಡಬೇಡಿರಿ. ಪುನರ್ವಿವಾಹದ ವಿಚಾರವು ನನಗೆ ಚೆನ್ನಾಗಿ ತೋರಲೊಲ್ಲದು.” ಎಂದು ನುಡಿದಳು.

“ಯಾಕೆ?” ಎಂದು ಆನಂದನು ಚಕಿತನಾಗಿ ಕೇಳಿದನು.

“ಯಾಕೆಂದರೆ, ಪುನರ್ವಿವಾಹಿತರಾದ ನಮ್ಮನ್ನು ಸಮಾಜವು ಅಂಗೀಕರಿಸದು.”

“ಪ್ರಿಯೆ, ಸಮಾಜದ ಗೊಡವೆ ನಮಗೇಕೆ? ಸುಧಾರಣೆಯ ಪಂಥದವರು ನಮ್ಮನ್ನು ಆದರದಿಂದ ಸನ್ಮಾನಿಸುವರಲ್ಲೆ?”

“ಸುಧಾರಣೆಯ ಪಂಥವು ನಮ್ಮ ಸಮಾಜದ ತಿರಸ್ಕೃತವಾದ ಚಿಕದೊಂದು ಮೇಳೆಯು. ಪ್ರಾಚೀನ ಸಾಂಪ್ರದಾಯಾನುವರ್ತಿಗಳಲ್ಲಿ ಅನೇಕರು ನಮ್ಮ ಆಪ್ತರೂ ಸ್ನೇಹಿತರೂ ಇರುವರು. ಅವರಿಗೆಲ್ಲ ನಾವು ಬೇಡಾಗಿರುವದು ಬಾಳುವೆಯೆ?” ಎಂದು ವತ್ಸಲೆಯು ಚಿಂತಾಕುಲೆಯಾಗಿ ನುಡಿದಳು.

“ಕೊಂಚ ವಿಚಾರ ಮಾಡಿ ನೋಡಿದರೆ, ನಿನ್ನ ಸಂಶಯದ ಪರಿಹಾರವಾಗುವದು. ನಮ್ಮ ಸಮಾಜದವರು ಗುಣಗ್ರಾಹಿಗಳಲ್ಲ. ನಿಜವಾದ ಧರ್ಮಶಾಸ್ತ್ರವು ಹೇಳುತ್ತಿರುವದೇನು, ನಾವು ಆಚರಿಸುತ್ತಿರುವದೇನು ಎಂಬದರ ವಿವೇಕವು ಅವರಿಗಿಲ್ಲ. ರೂಢವಾದ ಮೂಢ ವಿಚಾರಗಳೇ ಶಿಷ್ಟಾಚಾರವಾಗಿವೆ. ಹೊಸ ಶೋಧ-ಸುಧಾರಣೆಗಳೆಲ್ಲ ಅವರ ಮತದಿಂದ ಅಧರ್ಮವಾಗಿವೆ. ಹೊಗೆಬಂಡಿಯಲ್ಲಿ ಪ್ರವಾಸ ಮಾಡುವದು ಮೊದಲು
ಮೊದಲು ಧರ್ಮಬಾಹ್ಯವಾಗಿತ್ತು. ನಿಲುವಂಗಿಯನ್ನು ಬಿಟ್ಟು ಯುರೋಪಿಯನ್ನರ ಮಾದರಿಯ ಕೋಟುಗಳನ್ನು ತೊಟ್ಟು ಕೊಂಡವನು ಹತ್ತು ಹದಿನೈದು ವರ್ಷಗಳಾಚೆಗೆ ಧರ್ಮಹೀನರಲ್ಲಿ ಗಣನೆಯನ್ನು ಹೊಂದುತ್ತಿದ್ದನು. ಯುರೋಪಿಯನ್ನರನ್ನು ಮುಟ್ಟಿ ಬಂದವನಿಗೆ ಹೊಲೆಮೈಲಿಗೆ, ಈಗ ಅದೇ ಸಮಾಜದವರು ಆಂಗ್ಲರನ್ನು ಮುಟ್ಟಿ ನಿಃಶಂಕವಾಗಿ ಮನೆಗೆ ಬರುತ್ತಾರೆ. ಕೋಟುಗಳೇ ಪ್ರಬಲವಾಗಿ ಮುಂಚಿನ ನಿಲುವಂಗಿಗಳು ಎಲ್ಲಿಯೋ ಅಡಗಿದವು. ಹೊಗೆಬಂಡಿಗಳಲ್ಲಿ ಪ್ರಯಾಣ ಮಾಡದೆ ಇದ್ದ ಆಚಾರ್ಯ ಪುರಾಣಿಕರಿಲ್ಲವೇ ಇಲ್ಲ. ಹೊಸ ಸಾಂಪ್ರದಾಯವನ್ನು ಜಾಣನೂ ಧೈರ್ಯಶಾಲಿಯೂ ಆದವನೊಬ್ಬನು ಸಮಾಜದಲ್ಲಿ ನೂಕಿದನೆಂದರೆ, ಆ ಸಾಂಪ್ರದಾಯವು ಪ್ರಾರಂಭದಲ್ಲಿ ಕೊಂಚ ಅನಾದರವನ್ನು ಹೊಂದಿದರೂ ಕಡೆಗೆ ಅದೇ ಸಾಂಪ್ರದಾಯವೇ ಪ್ರಶಸ್ತವಾಗಿ ಮೆರೆಯುವದು.

ಇದೇ ಮೇರಿಗೆ ಜನರು ಸಮಾಜದ ಭೀತಿಯಿಂದ ಪುನರ್ವಿವಾಹದ ಪದ್ಧತಿಯನ್ನು ಬಿಟ್ಟರೆ ಬಿಟ್ಟೇ ಹೋಗುತ್ತದೆ. ಪುರಸ್ಕರ್ತರು ಧೈರ್ಯದಿಂದ ಆ ಮಾರ್ಗವನ್ನು ಅವಲಂಬಿಸಿದರೆ ಮುಂದೆ ಅದೇ ಮೆಲ್ಲಮೆಲ್ಲನೆ ಪ್ರಚಾರದಲ್ಲಿ ಬಂದು ಜನರ ಆದರಕ್ಕೆ ಪಾತ್ರವಾಗುವದು.

ಈ ವತ್ಸಲೆಯು ಔತ್ಸುಕ್ಯದಿಂದ ಆನಂದರಾಯನ ಸುಂದರವಾದ ಮುಖವನ್ನು ನೋಡುತ್ತಲೇ ಇದ್ದಳು. ಅವನ ವಾದವು ಮುಗಿದ ಬಳಿಕ ಆ ಚತುರೆಯು ತಳೆದ ನಗೆಯಲ್ಲಿ ಸಂಶಯ ನಿವಾರಣದ ಪ್ರಸನ್ನತೆಯು ಕಂಡುಬರಲಿಲ್ಲ.

“ಸುಂದರಿ, ನಿನ್ನ ಶಂಕೆಯು ಇನ್ನೂ ದೂರಾಗಿಲ್ಲವೆಂದು ತೋರುತ್ತದೆ ಶಾಸ್ವಾರ್ಥವನ್ನು ಕುರಿತು ನಿನಗೆ ವಾದ ಮಾಡುವದಿದೆ ಏನು?”

“ಶಾಸ್ತ್ರಾರ್ಥವು ದೊಡ್ಡ ವಿಷಯವಲ್ಲ. ಉಭಯ ಪಕ್ಷದವರೂ ಆರೆವಾಸಿಯಾಗಿ ಸೋತಿದ್ದರೂ ದುರಾಗ್ರಹದಿಂದ ವಾದಿಸುತ್ತಿರುವರು. ಆದರೆ….” ಎಂದು ವತ್ಸಲೆಯು ಲೀಲೆಯಿಂದ ನುಡಿದು ನಕ್ಕು ಮುಂದೆ ಮಾತಾಡಲರಿಯದೆ ತಡೆದಳು.

“ತಡೆಯುವದೇಕೆ ಪ್ರಿಯೆ, ಸಾಗಲಿ.”

“ಇಂಥ (ಪ್ರಿಯಳೆಂಬ) ಸಂಬೋಧನವೇಕೆ?” ಎಂದು ವತ್ಸಲೆಯು ಕೊಂಚ ಕೋಪವನ್ನು ತಳೆದಂತೆ ನಟಿಸಿ ಕೇಳಿದಳು.

“ಈ ರೀತಿಯಾಗಿ ಇದೇ ಪ್ರಸಂಗದಲ್ಲಿ ನಾನು ಸಂಬೋಧಿಸಿ ಹತ್ತು ನಿಮಿಷಗಳಾಗಿಲ್ಲ. ಆಗೇಕೆ ಈ ಆಕ್ಷೇಪಣೆ ಬರಲಿಲ್ಲ?” ಎಂದು ಆನಂದನು ಮಂದಹಾಸದಿಂದ ನುಡಿದನು.

ವತ್ಸಲೆಯು ನಿರುತ್ತರಳಾದಳು. ಆಮೇಲೆ ಆನಂದನು “ಆದರೆ…. ಎಂದು ತಡೆದಿಯೇಕೆ? ನಿನ್ನ ಆಕ್ಷೇಪಣೆಯೇನು?”

“ನೀವು ಹೇಳಿದ್ದರಲ್ಲಿ ನಿಮಗೆಯೇ ನಂಬಿಗೆ ಇರುವದೇನು? ಪುನರ್ವಿವಾಹವು ಪವಿತ್ರವಾದದ್ದೆಂದು ನಿನ್ನ ನಿಜವಾದ ಮತವೊ?”

“ಹೇಗೆ ಹೇಳಲಿ ಮನೋರಮೆ? ಶಪಥಮಾಡಿ ಹೇಳಲಿಯಾ?”

“ಹೇಗೆ ಹೇಳಿದರೂ ನಂಬುವೆನು. ನಿಮ್ಮಲ್ಲಿ ನನಗೆ ಸಂಪೂರ್ಣವಾದ ನಂಬಿಗೆ” ಎಂದು ನುಡಿದು ವತ್ಸಲೆಯು ಪ್ರೇಮಪೂರಿತವಾದ ಸುಹಾಸವನ್ನು ತಳೆದಳು.

ಆಗ ಆನಂದರಾಯನು ವತ್ಸಲೆಯನ್ನು ತನ್ನ ಬಾಹುಪಾಶದಲ್ಲಿ ಪಿಡಿದು, ಅವಳ ಕೆಂದುಟಿಯನ್ನು ಚುಂಬಿಸಿ, “ಇದು ನನ್ನ ನಂಬಿಗೆ ನಿಶ್ಚಯಗಳ ಕುರುಹು” ಎಂದು ಸಂಭ್ರಮದಿಂದ ನುಡಿದನು.

ಮುಂದೆ ಎಂಟಾನೆಂಟು ದಿವಸ ಬೆಂಗಳೂರಲ್ಲೆಲ್ಲ ಪುನರ್ವಿವಾಹವನ್ನು ಕುರಿತು ಚರ್ಚೆ, ಶಾಸ್ತ್ರರ್ಥ, ವಾಗ್ವಾದ, ಕಲಹ, ಬೊಬ್ಬಾಟಗಳ ದೊಡ್ಡದೊಂದು ಸ್ತೋಮವೇ ಎದ್ದಿತು. ಶಾಸ್ತ್ರಾರ್ಥದ ನಿರ್ಣಯವಾದ ಮೇರೆಗೆ ನಡಕೊಳ್ಳೋಣ ಎಂದು ಹೇಳಿ ಸಮವೃತ್ತಿಗಳಾದ ಮಹಾತ್ಮರ ಸಂಖ್ಯೆಯು ತೀರ ಕಡಿಮೆ. “ಕಲಿಕಾಲ! ಸುಧಾರಕ ಮುಂಡೆ ಮಕ್ಕಳು ಧರ್ಮವನ್ನು ಕೆಡಿಸಿಬಿಡುತ್ತಾರೆ,” ಎಂದು ಹಸಿಬಿಸಿ ಪಂಡಿತನಾದ ಮಠಾಧಿಪತಿಯೋರ್ವನು ಅಧಿಕಾರದ ಉನ್ಮಾದದಿಂದ ಗೊಗ್ಗರ ಧ್ವನಿ ತೆಗೆದು ಕೂಗಿಕೊಳ್ಳುತ್ತಿದ್ದನು.

“ಬ್ರಾಹ್ಮಣರೇ ಸ್ವಕಪೋಲಕಲ್ಪಿತವಾದ ಕ್ಷೇಪಕ ಶ್ಲೋಕಗಳನ್ನು ಧರ್ಮಶಾಸ್ತ್ರ ಪುರಾಣಗಳಲ್ಲಿ ಸೇರಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವದಕ್ಕಾಗಿ, ಸಮಾಜಕ್ಕೆ ದುಃಸ್ಥಿತಿಯನ್ನು ಉಂಟುಮಾಡಿದರು. ನಾವು ಶಾಸ್ತ್ರಗಳನ್ನು ಲೆಕ್ಕಿಸದೆ ನಮಗೆ ಉಚಿತವಾಗಿ ತೋರಿದ್ದನ್ನೇ ಮಾಡುವೆವು.” ಎಂದು ವರ್ಣಸಂಕರ ಪ್ರಿಯರಾದ ಕೆಲಜನ ಉನ್ಮತ್ತರು ಬೊಬ್ಬಿರಿದರು. ಶಾಸ್ತ್ರ ವಿಚಾರಗಳ ಗಂಧರಹಿತರಾದ ಮೂಢರು, ಕೇವಲ ಬಾಯಿಪ್ರಸಾದಗಳನ್ನೇ ಮಾಡುತ್ತೆ ವೃಥಾ ವ್ಯಾಜ್ಯವನ್ನು ಮಾಡಿದರು.

ಪುನರ್ವಿವಾಹವನ್ನು ನಿಷೇಧಿಸಬೇಕೆಂದು ರಘುನಾಥರಾಯರು ಮಿತಿ ಮೀರಿ ಸಾಹಸಮಾಡಿದರು. ಆದರೆ ‘ಹಗ್ಗ ಹರಿಯಲಿಲ್ಲ, ಕೋಲು ಮುರಿಯಲಿಲ್ಲ’ವೆಂಬ ನಾಣ್ನುಡಿಯಂತೆ, ವಾದದಲ್ಲಿ ಏನೂ ನಿಷ್ಪನ್ನವಾಗಲಿಲ್ಲ. ಮಗನಾದ ಆನಂದನು ತನ್ನ ಆಗ್ರಹವನ್ನು ಬಿಡಲಿಲ್ಲ. ಕಡೆಗೆ ರಘುನಾಥರಾಯರು ಐಹಿಕ ವಿಚಾರಗಳನ್ನೆಲ್ಲ ಬಿಟ್ಟು ಕೊಟ್ಟು ಕಾಶೀವಾಸಕ್ಕಾಗಿ ಹೋಗುವವರಾಗಿದ್ದಾರೆ. ಅವರು ಕಾಶಿಗೆ ಹೋದ ಬಳಿಕ ಆನಂದ ವತ್ಸಲೆಯರ ಪುನರ್ವಿವಾಹದ ಸಮಾರಂಭವಾಗತಕ್ಕದ್ದೆಂದು ಗೊತ್ತಾಗಿದೆ.
*****

================================================

ಮಲ್ಲೇಶಿಯ ನಲ್ಲೆಯರು


ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ ಅಲ್ಲಿಯ ಕಾವಲುಗಾರನಾದ ಮಲ್ಲೇಶಿಯು ತನ್ನ ಯಜಮಾನರನ್ನು ತೋಟದಲ್ಲೆಲ್ಲ ಅಡ್ಡಾಡಿಸಿಕೊಂಡು ಬಂದನು. ಮಲ್ಲೇಶಿಯ ದಕ್ಷತೆಗಾಗಿ ಆ ತೋಟದಲ್ಲಿ ಕಾಗೆ ಗುಬ್ಬಿಗಳು ಕೂಡ ಅಡ್ಡ ಹಾಯುತ್ತಿರಲಿಲ್ಲ. ತೋಟದ ಬೇಲಿಗಳು ಅಚ್ಚಳಿಯದೆ ಕೋಟೆಯ ಗೋಡೆಗಳಂತೆ ಭದ್ರವಾಗಿ ಕಂಗೊಳಿಸುತ್ತಿದ್ದವು. ಮಾಡಿಟ್ಟ ಹಾದಿಗಳಲ್ಲದೆ ತೋಟದಲ್ಲಿ ಅತ್ತಿತ್ತ ದನಕರುಗಳ ಅಥವಾ ಮನುಷ್ಯನ ತುಳುಕಲಿನ ಸಂಪರ್ಕವೇ ಇದ್ದಿಲ್ಲ. ಕಾಯಿಪಲ್ಲೆಗಳ ಮಡಿಗಳಾಗಲಿ, ಹಣ್ಣು ಹಂಪಲಿನ ಗಿಡಗಳಾಗಲಿ ಕಬ್ಬು ಬಾಳೆಗಳ ಫಡಗಳಾಗಲಿ ಅಬಾಧಿತವಾಗಿದ್ದು ಸಸಿಬಳ್ಳಿಗಿಡಗಳೆಲ್ಲ ಪ್ರಫುಲ್ಲಿತವಾಗಿ ತೋರಿ ದೇಸಾಯರ ಮನಸ್ಸಿಗೆ ಆನಂದವನ್ನಿತ್ತವು. ಮಲ್ಲೇಶಿಯ ಕಣ್ಣು ತಪ್ಪಿಸಿ ಒಂದು ಕಾಯಿ, ಒಂದು ಹೂವನ್ನು ಕೂಡ ತೆಗೆದುಕೊಂಡು ಮನೆಗೆ ಹೋಗುವೆನೆಂದರೆ ಪ್ರತ್ಯಕ್ಷ ತೋಟಿಗನಿಗೆ ಕೂಡ ಅಸಾಧ್ಯವಾಗಿತ್ತು.

ಯಜಮಾನರು ಅತ್ತಿತ್ತ ತಿರುಗಾಡಿ ನೋಡಿ ಬಂದು, ದಟ್ಟಾಗಿ ಬೆಳೆದಿರುವ ಮಾವಿನ ಮರದ ಅಡಿಯಲ್ಲಿರುವ ಕಟ್ಟೆಯ ಮೇಲೆ ಕುಳಿತು “ಅಹುದು, ಮಗನೆ ಮಲ್ಲೇಶಿ, ತೋಟವನ್ನು ಬಲು ಚನ್ನಾಗಿ ಕಾದಿರುವಿ. ಈ ವರ್ಷದ ಆಕಾರವು ಹೋದ ವರ್ಷದ ಆಕಾರಕ್ಕೆ ಇಮ್ಮಡಿಯಾಗಿ ಕಾಣುತ್ತದೆ.” ಎಂದು ಕಾವಲುಗಾರನನ್ನು ಕೊಂಡಾಡಿದರು.

ಮಲ್ಲೇಶಿಯು ಸಂತೋಷದಿಂದ ಉಬ್ಬಿ ತನ್ನ ಕೈಯಲ್ಲಿರುವ ತುಬಾಕಿಯನ್ನು ಎಡಗೈಯಲ್ಲಿ ಹಿಡಿದು ಯಜಮಾನರಿಗೆ ಪ್ರಣಾಮ ಮಾಡಿ ಅಭಿಮಾನ ವ್ಯಂಜಕವಾದ ನಗೆ ನಕ್ಕನು. ದೇಸಾಯರು ತಮ್ಮ ಶಿರೋಭೂಷಣವನ್ನು ತೆಗೆದು ಕೆಳಗಿರಿಸಿ ಬೆವರೊರೆಸಿಕೊಂಡು, “ಮಲ್ಲೇಶಿ, ಭರಮನು ತೀರಿ ಕೊಂಡಾಗಿನಿಂದ ನಮ್ಮ ಟಾಂಗೆಯನ್ನು ಹೊಡೆಯುವವರಿಲ್ಲದಂತಾಗಿದೆ, ಹುಡುಗಾ,” ಎಂದು ನುಡಿದರು.

“ಅಹುದು ದೇವರೂ, ಭರಮಪ್ಪನಂಥ ಜಾಣನಾದ ಟಾಂಗೆಯವನು ಸಿಕ್ಕುವದು ಎಂಥ ಮಾತೊ ಕಾಣೆನು.” ಎಂದು ಮಲ್ಲೇಶಿಯು ನಿರ್ವ್ಯಾಜವಾದ ತನ್ನ ಅಭಿಪ್ರಾಯವನ್ನು ಹೇಳಿದನು.

“ನೀನು ನಮ್ಮ ಟಾಂಗೆಯನ್ನು ಹೊಡೆಯಬಲ್ಲಿಯಾ ಮಲ್ಲೇಶಿ?”

“ಹೊಡಿ ಅಂದರೆ ಹೊಡೆಯುವೆನು ದೇವರೂ. ಕನಕನೂರಿನ ದೊರೆಗಳ ಮನೆಯಲ್ಲಿದ್ದಾಗ ನಾನು ಟಾಂಗೆಯನ್ನೇ ಹೊಡೆಯುತ್ತಿದ್ದೆನು.”

“ಅಹುದೋ! ಅವರ ಕುದುರೆಗಳು ತಟ್ಟುಗಳಾಗಿದ್ದವು. ನಮ್ಮ ಕುದುರೆಗಳು ಮದ್ದಾನೆಯಂಥವು. ಭರಮನಿಗೆ ಕೂಡ ಚನ್ನಾಗಿ ವಣಿಯುದಿಲ್ಲ.

“ಹಣಿಯದೇನು ದೇವರೂ? ಅದರಮ್ಮ ಹಣಿದಾಳು! ಹತ್ತಿ ನಾಲ್ಕು ತಿರವು ತಿರುವಿದರೆ ಕುದುರೆಯ ನೆಲೆ ನಮಗೂ ನಮ್ಮ ನೆಲೆ ಕುದುರೆಗೂ ಗೊತ್ತಾಗಿಹೋಗುವದು, ಹೆಂಗಸೊಂದೆಯೇ ಅಡಮುಟ್ಟ ಮಿಕ ನೋಡಿರಿ! ಅದರ ನೆಲೆ ಮಾತ್ರ ಯಾರಿಗೂ ಹತಿಲ್ಲ.”

“ಹೆಂಗಸರ ನೆನಪು ಒಳಿತಾಗಿ ತೆಗೆದಿ ಮಲ್ಲೇಶೀ. ನಮ್ಮ ಮನೆಯವರ (ದೊರೆಸಾನಿಯವರ) ಕೈ ಕೆಳಗೆ ಒಬ್ಬ ಇಚ್ಚಕಳಾದ ಹೆಣ್ಣು ಮಗಳು ಬೇಕಾಗಿದ್ದಾಳೆ. ನೀನು ಒಳ್ಳೆಯದೊಂದು ಹೆಣ್ಣು ನೋಡಿಕೊಂಡು ಬರಬಾರದೆ ? ನಿನ್ನ ಮದುವೆಯನ್ನು ಮಾಡಿ ಗಂಡ ಹೆಂಡರನ್ನು ಕೂಡೆಯೇ ಅರಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ನೀನು ಟಾಂಗೆಯನ್ನು ಹೊಡೆದರೆ ನಿನಗೆ ತಿಂಗಳಾ ನಾಲ್ಕು ವರಾಹ ಸಂಬಳ ದೊರಕುವದು.”

“ಮದುವೆಯ ಗೋಳಿಗೆ ನನ್ನನ್ನು ಹಾಕಬೇಡಿರಿ ದೇವರೂ; ಕೈ ಜೋಡಿಸುತ್ತೇನೆ. ಮನುಷ್ಯನಿಗೆ ಈಗಿದ್ದ ಸ್ವಾತಂತ್ರ್ಯವು ಮದುವೆಯಾದ ಮೇಲೆ ಹೇಗೆ ಬಂದೀತು? ಸೀರೆ ತಾ; ಕುಪ್ಪಸ ತಾ; ತೋಳಬಂದೀ
ತಾ; ಟಿಕ್ಕೆ ತಾ; “ತಾ” ಎಂಬ ಸೊಲ್ಲು ತಪ್ಪುವದೇ ಇಲ್ಲ! ಹೆಂಡತಿಯು ಜಾತ್ರೆಗೆ ಹೊರಟರೆ ನಾವು ಹಿಂಬಾಲಿಸಿ ನಡೆಯಲೇಬೇಕು. ಅವಳು ಊರಲ್ಲಿ ಜಗಳವನ್ನು ಕೊಂಡುತಂದರೆ ನಾವು ಅವಳನ್ನು ಮೇಲು ಕಟ್ಟಿ ವ್ಯಾಜ್ಯಕ್ಕೆ ಸಿದ್ದರಾಗಬೇಕು. “ಮದುವೆಯನ್ನು ಬಿಟ್ಟು ಕೊಟ್ಟು ಶಿವಶಿವ ಎಂದಿದ್ದು ಕೊಂಡಿರುವದು ಒಳಿತಲ್ಲವೆ?” ಎಂದು ಮಲ್ಲೇಶಿಯು ಉಪನ್ಯಾಸ ಮಾಡಿದನು.

“ಹುಚ್ಚ ನನ್ನ ಮಗನೆ, ಮನುಷ್ಯನು ಮದುವೆಯನ್ನೊಲ್ಲೆನೆಂದರೆ ಲೋಕವೆಂತು ಸಾಗುವದು? ನಿಮ್ಮಪ್ಪನು ಮದುವೆಯಾಗಿದ್ದನು; ನಿಮ್ಮ ಮುತ್ತಾತನು ಮದುವೆಯಾಗಿದ್ದನು; ಅವರ ಅಪ್ಪನಾದರೂ ಮದುವೆಯಾಗಿದ್ದನು.” ಎಂದು ದೇಸಾಯರು ಯುಕ್ತಿವಾದ ಮಾಡಿ ಬೋಧಿಸಿದರು.

“ಮದುವೆಯನ್ನು ಮಾಡಿಕೊಳ್ಳುವದು ಸುಲಭವಾಗಿರಬಹುದು; ಆದರೆ ಪರಿಣಾಮವು ಹೇಗಾಗುವದೋ ಯಾರು ಬಲ್ಲರು? ನನ್ನ ತಾಯಿತಂದೆಗಳೀರ್ವರೂ ದಿನ ಬೆಳಗಾದರೊಮ್ಮೆ ಜಗಳ ಮಾಡದೆ ಇರಲಿಲ್ಲ.”

“ಮಲ್ಲೇಶಿ, ಸುಮ್ಮನೆ ನನ್ನ ಮಾತು ಕೇಳಿ ನೀನು ಮದುವೆಯಾಗು. ಹಾಗೆ ವಾದಿಸಬೇಡ.”

“ತಂದೆಯವರು ಕುಳಿತು ಮದುವೆಯಾಗೆಂದು ಹಟ ತೊಟ್ಟರೆ ಯತ್ನವಿಲ್ಲ, ಮದುವೆಯಾಗಲೇಬೇಕು. ಆದರೆ ಹೆಣ್ಣು ನೋಡಿಕೊಂಡು ಬರುವ ಕೆಲಸವಾದರೂ ನನ್ನದೇ ಎಂದು ಹೇಳುತ್ತಿರಲ್ಲ! ಎಂದು ಮಲ್ಲೇಶಿಯು ಅಧೈರ್ಯದಿಂದ ನುಡಿದನು.

“ಹಣ ವೆಚ್ಚ ಮಾಡಿ ಮದುವೆ ಮಾಡುವ ಕೆಲಸವು ನನ್ನದು; ತಿರುಗಾಡಿ ಒಂದು ಹೆಣ್ಣು ನೋಡಿಕೊಂಡು ಬರಲಾರೆಯಾ ? ನಿನ್ನಂಥ ಹುಡುಗನಿದ್ದರೆ, ಹೆಣಿಗೇನು ಕಡಿಮೆ?”

“ಕಡಿಮೆಯಿಲ್ಲ ನನ್ನೊಡೆಯರೆ, ಅರ್ಧದೇಶವೇ ಹೆಣ್ಣಾಗಿರುವದು. ಎಲ್ಲಿ ನೋಡಿದಲ್ಲಿಯೂ ಹೆಂಗಸರಾಗಿದ್ದರೂ ಹಿಡಿಯಲಿಕ್ಕೆ ಹೋದರೆ ಒಬ್ಬಳೂ ಕೈಗೆ ಹತ್ತುವದಿಲ್ಲ. ಆದರೂ ಎರಡು ದಿವಸ ನನ್ನನ್ನು ಬಿಡಿರಿ. ಹೇಗಾದರೂ ಮಾಡಿ ಒಂದು ಹೆಣ್ಣನ್ನು ಗೊತ್ತು ಮಾಡಿಕೊಂಡು ಬರುವೆನು.”

“ಹೋಗು; ಎರಡು ದಿವಸ ನಿನಗೆ ಅಪ್ಪಣೆಯಿದೆ, ಉತ್ತಮಳಾದ ಕನ್ನೆಯನ್ನು ಆರಿಸಿಕೊಂಡು ಬಾ.”

ಮರುದಿವಸ ಮಲ್ಲೇಶಿಯು ಪ್ರಾತಃಕಾಲದಲ್ಲೆದ್ದು ಕ್ಷೌರ ಮಾಡಿಸಿಕೊಂಡು ಎರಕೊಂಡನು. ಕೇವೆಯ ಬಣ್ಣದ ಹೊಸ ಚಲ್ಲಣವನ್ನು ತೊಟ್ಟು ಮೈಗೆ ತಿಟಿತಿಟಿಯಾಗಿರುವ ಗಂಜಿಯ ಅಂಗಿಯನ್ನು ತೊಟ್ಟು ಕೊಂಡನು. ಯಜಮಾನರ ಶೇಷವಸ್ತ್ರವಾಗಿದ್ದ ಕಂಪು ಜರದ ಪೇಟೆಯನ್ನು ಓರೆಕಿಟ್ಟಾಗಿ ತಲೆಗೆ ಸುತ್ತಿಕೊಂಡು ಬಲಗಿವಿಯ ಸಂದಿನಲ್ಲಿ ಮಲ್ಲಿಗೆಯ ಹೂಗೊಂಚಲವನ್ನು ಸಿಕ್ಕಿಸಿಕೊಂಡನು. ಹೆಜ್ಜೆಗೊಮ್ಮೆ ರವರವಿಸುವ ಕಾಲಮರೆಗಳನ್ನು ಮೆಟ್ಟಿಕೊಂಡು ಆ ಕನ್ಯಾರ್ಥಿಯಾದ ನವತರುಣನು ನೆಲ ಅದರುವಂತೆ ಹೆಜ್ಜೆಗಳನ್ನು ತುಳಿಯುತ್ತೆ ಪೇಟೆಯ ಹಾದಿಯನ್ನು ಹಿಡಿದು ನಡೆದನು. ಮಾರ್‍ಗದಲ್ಲಿ ಚರಂತಯ್ಯನ ಮಠವನ್ನು ಕಂಡು ಮಲ್ಲೇಶಿಯು ಒಳ್ಳೇ ಬಿಂಕದಿಂದ ಒಳಗೆ ಹೊಕ್ಕು “ಇರಸಂಗಯ್ಯನವರೂ ಸ್ವಾಮೀ!” ಎಂದು ಕೂಗಿದನು. ಅಯ್ಯನವರು ಮಠದಲ್ಲಿ ಇದ್ದಿಲ್ಲ. ಯಾವಳೋ ತರುಣಿಯೋರ್ವಳು ಬಾಗಿಲದ ಫಡಕಿನ ಮರೆಗೆ ನಿಂತು ಅರ್ಧ ಮೊರೆಯನ್ನು ಮೆಲ್ಲನೆ ಹೊರಗೆ ಚಾಚಿ “ಅಯ್ಯನವರು ಹೊರಗೆ ಹೋಗಿದ್ದಾರೆ” ಎಂದು ಮಂಜುಲವಾದ ಧ್ವನಿಯಿಂದ ಹೇಳಿದಳು.

ಮಲ್ಲೇಶಿಯು ಆ ಚೆಲುವೆಯಾದ ತರುಣಿಯನ್ನು ನೋಡಿ ತನ್ನ ಮನಸ್ಸಿನಲ್ಲಿಯೇ “ಹುಡಿಗಿ ಮಾತ್ರ ಬಲು ಗಾಂವು!” ಎಂದು ಉದ್ಗಾರ ತೆಗೆದು, ಇನ್ನವಳನ್ನು ಮಾತಾಡಿಸಬಹುದೋ ಬೇಡವೋ ಎಂಬ ಯೋಚನೆಯಲ್ಲಿ ಕ್ಷಣಹೊತ್ತು ಸುಮ್ಮನೆ ನಿಂತುಕೊಂಡನು.

“ಯಾಕೆ ಬಂದಿರುವಿರಿ? ನೀರು-ನಿಡಿ ಏನಾದರೂ ಬೇಕೇನು? ಎಂದು ಕೇಳಿ ಆ ಸುಂದರಿಯಾದ ಯುವತಿಯು ಮಲ್ಲೇಶಿಯ ವೇಷವನ್ನು ಚನ್ನಾಗಿ ನಿರೀಕ್ಷಿಸಿ ನೋಡಿ ವಿನೋದದಿಂದ ಮಂದಹಾಸಗೈದಳು.

ಮಲ್ಲೇಶಿಯು ಹೊಸ ಹರೆಯದ ಹುಡುಗನಾಗಿದ್ದರೂ ನಾರಿಯರ ಹೃದ್ಗತವನ್ನು ಕಂಡುಹಿಡಿಯುವಷ್ಟು ಚಾತುರ್ಯವು ಅವನಲ್ಲಿದ್ದಿಲ್ಲ. ಸಂಭಾಷಣಾನುಕೂಲವಾದ ಪ್ರಸಕ್ತಿಯನ್ನು ಜಾಣೆಯಾದ ಆ ಯುವತಿಯು ತೆಗೆದಿದ್ದರೂ ಸಮಯಗ್ರಹಣಶಕ್ತಿಯಿಲ್ಲದವನಾದ ಆ ಹೆಡ್ಡನು ತನಗೆ ನೀರು ಬೇಡವೆಂದು ಅಸಭ್ಯವಾದ ರೀತಿಯಿಂದ ಹೇಳಿದನು. ತರುಣನಾದ ಪುರುಷನಲ್ಲಿ ಮೂಢತನದ ವಿಶೇಷಾಂಶವು ಕಂಡುಬಂದಲ್ಲಿ ಕಾಮಿನಿಯರ ವಿನೋದಕ್ಕೆ ಪ್ರಶಸ್ತವಾದ ಆಸ್ಪದವುಂಟಾಗುವದು ಸಹಜವು. ಆಮೇರೆಗೆ ಆ ಯುವತಿಯು ಮನಸ್ಸಿನ ಸಂಕೋಚವನ್ನು ದೂಡಿ ಬಾಗಿಲದ ಮರೆಯಿಂದ ಹೊರಗೆ ಬಂದು-

“ಹಾಗಾದರೆ ಇಲ್ಲಿ ನಿಮ್ಮದೇನು ಕೆಲಸ? ಮದುವೆಯ ಕಾರ್ಯವೇನಾದರೂ ಇರುವದೋ? ಸೊಬಗಿನ ಉಡಿಗೆತೊಡಿಗೆಗಳನ್ನು ಮಾಡಿಕೊಂಡು ಬಂದವರಾದ ನೀವು ಮದಿಮಕ್ಕಳಂತೆ ಕಾಣುವಿರಿ!” ಎಂದು ವಿನೋದಗೈದು ಪ್ರಶ್ನೆ ಮಾಡಿದಳು.

ಆ ಯುವತಿಯ ಪ್ರಶ್ನಕ್ಕೆ ಮಲ್ಲೇಶಿಯು ಬೆರಗಾಗಿ ನಿಂತು “ನನ್ನ ಮನಸಿನಲ್ಲಿಯ ಮಾತು ನಿನಗೆ ತಿಳಿದದ್ದು ಹೇಗೆ? ಮದುವೆಯಾಗುವದು ನನ್ನ ಮನಸಿನಲ್ಲಿದೆ ಸರಿ. ಅದಕ್ಕಾಗಿ, ಇರಸಂಗಯ್ಯನವರ ಗೊತ್ತಿನಲ್ಲಿ ಎಲ್ಲಿಯಾದರೂ ಒಂದು ಹೆಣ್ಣು ಇದೆಯೇ ಎಂದು ಕೇಳಲು ನಾನು ಬಂದಿದ್ದೇನೆ. ನೀನು ಯಾರು, ಹೊಸಬಳಾಗಿ ತೋರುವಿ?” ಎಂದು ಕೇಳಿದನು.

“ಇಲ್ಲಿಯೇ ನೆರೆಹಳ್ಳಿಯಾದ ಮಂಗನೂರಿನವರು ನಾವು. ನನಗೊಂದು ಚಿಂತಾಕವು ಬೇಕಾಗಿರುವದರಿಂದ ನಮ್ಮ ತಂದೆಯು ಇರಸಂಗಯ್ಯನವರನ್ನು ಕರಕೊಂಡು ಪೇಟೆಗೆ ಹೋಗಿದ್ದಾನೆ. ನಿಮಗೆ ಹೆಣ್ಣು ಎಂಥದಿರಬೇಕು? ಕಪ್ಪು ಬಣ್ಣದವಳೂ ಒಂಟಿಗಣಿನವಳೂ ಇದ್ದರೆ ಸಾಗುವದೇನು?”

“ದೊರೆಗಳ ಮನೆಯಲ್ಲಿರುವವನು ನಾನು. ಧನಿಯರು ಅಪರೂಪವಾದ ಹೆಣ್ಣು ನೋಡಿಕೊಂಡು ಬಾರೆಂದು ಹೇಳಿದ್ದಾರೆ. ನಿನ್ನಂಥ ಹುಡುಗೆಯಿದ್ದರೆ ಬಲು ಸೊಗಸಾದೀತು! ನಿನ್ನ ಮದುವೆಯಾಗಿರುವದೇನು? ಯಾವ ಬಗೆ ನಿಮ್ಮದು?”

“ನಾವು ನರವಲ ರಡ್ಡಿಗಳು. ನಮ್ಮಪ್ಪನು ಇನ್ನೂ ನನ್ನ ಮದುವೆಯನ್ನು ಮಾಡಿಲ್ಲ.”

“ಹಾಗಾದರೆ ಕೂಡಿತಲ್ಲ! ನಾನೂ ನರವಲ ರಡ್ಡಿಯು, ನಾನೇ ನಿನಗೊಂದು ಒಳ್ಳೆ ಚಿಂತಾಕನ್ನು ಕೊಡಿಸುವೆನು. ಎರಡು ತೋಳಬಂದಿಗಳನ್ನು ಕೊಡಿಸುವೆನು. ನನ್ನನ್ನು ಮದುವೆಯಾಗುವಿಯೇನು, ಹೇಳಿಬಿಡು” ಎಂದು ಮಲ್ಲೇಶಿಯು ಆಸ್ಥೆಯಿಂದ ಕೇಳಿದನು.

“ಮದುವೆಯಾದ ಬಳಿಕ ನಾನು ಏಳೆಂದು ಹೇಳಿದಾಗ ನೀವು ಏಳ ಬೇಕು, ಕೂಡೆಂದಾಗ ಕೂಡಬೇಕು. ಈ ಮಾತಿಗೆ ನೀವು ಒಪ್ಪುವಿರೊ?” ಎಂದು ಆ ತರುಣಿಯು ವಿನೋದಗೈದು ಕೇಳಿದಳು.

“ಹೆಂಡತಿ ಬೇಕಾದ ಬಳಿಕ ಅವಳು ಹೇಳಿದಂತೆ ನಡಕೊಳ್ಳಲೇ ಬೇಕು.”

“ಹಾಗಾದರೆ ನಾಳೆ ಬೆಳಗಿನಲ್ಲಿ ನೀವು ಇಲ್ಲಿಗೆ ಬಂದು ನಮ್ಮ ತಂದೆ ಯವರನ್ನು ಕೇಳಿರಿ. ನನ್ನ ಕೈಯಲ್ಲಿ ಏನಿದೆ?” ಎಂದು ಆ ವಿನೋದಗಾರತಿಯು ಮಂದಸ್ಮಿತೆಯಾಗಿ ನುಡಿದಳು.

“ಮಾತು ತಿರುಗಿ ಬಿದ್ದಿತಲ್ಲ! ನಿಮ್ಮ ತಂದೆಯು ಒಪ್ಪದಿದ್ದರೆ ಮುಂದೆ ಗತಿಯೇನು?” ಎಂದು ಮಲ್ಲೇಶಿಯು ಅಧೀರನಾಗಿ ನುಡಿದನು.

“ಅದಕ್ಕೆ ನಾನೇನು ಮಾಡಲಿ?”

“ಆಗಲಿ, ನಾನು ಬೆಳಗಿನಲ್ಲಿ ಇಲ್ಲಿಗೆ ಬರುವೆನು” ಎಂದು ಹೇಳಿ ಮಲ್ಲೇಶಿಯು ಹೊರಟೆದ್ದು ನಡೆದನು.

ಅಲ್ಲಿಂದಲವನು ಮತ್ತೊಂದು ಓಣಿಯನ್ನು ಹಿಡಿದು “ಬಾಳುಗೋಪಾಳ ಕವಿತೀ, ನಾಡೊಳಗಾಗೆ ಪ್ರಖ್ಯಾತೀ! ಬಡಿತೊ ನನಗ ಭ್ರಾಂತೀ, ಮನದೊಳಗಿಲ್ಲ ಅಗದಿ ಶಾಂತೀ!” ಎಂದು ಲಾವಣೀಪದವನ್ನು ಹಾಡುತ್ತೆ ನಡೆದಿದ್ದನು. ಅಷ್ಟರಲ್ಲಿ ಸೊಕ್ಕಿನದೊಂದು ದೊಡ್ಡ ಹೋರಿಯು ಒಳ್ಳೆ ಭರದಿಂದ ಲೋಡುತ್ತ ಮಲ್ಲೇಶಿಯೆದುರಿನಲ್ಲಿ ಬರುತ್ತಿತ್ತು. ಅಷ್ಟರಲ್ಲಿ ಮಲ್ಲಪ್ಪ ಮಲ್ಲಪ್ಪ, ಆ ಹೋರಿಯನ್ನು ತಿರುವು ನನ್ನ ಮಗನೆ” ಎಂದು ಒಬ್ಬ ಮುದುಕಿಯು ಅಂಗಲಾಚಿ ಹೇಳಿಕೊಂಡಳು. ಸಮರ್ಥನಾದ ಮಲ್ಲೇಶಿಯು ಆ ಹೋರಿಯನ್ನು ತಡೆದು ನಿಲ್ಲಿಸಿ ಅದರ ಕೊರಳಲ್ಲಿಯ ದೃಷ್ಟಿಕಣ್ಣಿಯನ್ನು ಹಿಡುಕೊಂಡು ನಿಂತನು.

“ಒಳಿತು ಮಾಡಿದಿ ಮಗನೆ, ಹೋರಿಯನ್ನು ಹಿಡಿದು ತಂದು ಗೋದಲೆಯಲ್ಲಿ ಬಿಗಿ.” ಎಂದು ಆ ಮುದಕಿಯು ಹೇಳಿದ ಮೇರೆಗೆ ಮಲ್ಲೇಶಿಯು ಅದನ್ನು ಅವಳ ಮನೆಗೆ ತೆಗೆದುಕೊಂಡು ಹೋಗಿ ಕಟ್ಟಿ ಪಡಸಾಲೆಯ
ಪಾವಟಿಗೆಯ ಮೇಲೆ ಕುಳಿತು ಎಲೆ ಅಡಿಕೆ ತಂಬಾಕಗಳನ್ನು ಹಾಕಿಕೊಳ್ಳಲಾರಂಭಿಸಿದನು.

“ಮಲ್ಲೇಶಿ, ನೀನೀಗ ದೊರೆಗಳ ಮನೆಯಲ್ಲಿ ಟಾಂಗೇ ಹೊಡೆಯಲಿಕ್ಕೆ ನಿಂತಿರುವಿಯಂತೆ, ಅಹುದೇನು?” ಎಂದು ಆ ಮುದುಕೆಯು ಕೇಳಿದಳು.

“ಆಹುದು ಸಂಗವ್ವತ್ತೀ. ಆದರೆ ಆ ಕೆಲಸವನ್ನು ಹಿಡಿಯಬೇಕಾದರೆ ಮೊದಲು ನಾನು ಮದುವೆಯಾಗಲೇಬೇಕೆಂದು ದೊರೆಗಳು ಹೇಳಿದ್ದಾರೆ.”

“ಹಾಗೇಕಂತೆ?” ಎಂದು ಸಂಗವ್ವನು ಕೇಳಿದಳು.

“ದೊರೆಸಾನಿಯವರ ಕೈಕೆಳಗೆ ಒಳ್ಳೆಯದೊಂದು ಹೆಣ್ಣಾಳು ಬೇಕಾಗಿದೆಯಂತೆ. ನನಗೆ ತಿಂಗಳಾ ನಾಲ್ಕು ವರಾಹ ಸಂಬಳ, ಗಂಡಹೆಂಡರು ಕೂಡಿಯೇ ಅರಮನೆಯಲ್ಲಿ ಊಟ ಮಾಡಿ ಅಲ್ಲಿಯೇ ಇರಬೇಕು. ಅತ್ತೀ, ನಿನ್ನ ಗೊತ್ತಿನಲ್ಲಿ ಒಳ್ಳೇ ಹೆಣ್ಣು ಇರುವದೇನು?”

“ಹೆಣ್ಣಿಗೇನು ತುಟ್ಟಿ, ಮಲ್ಲಣಾ? ನನ್ನ ಮನೆಯಲ್ಲಿ ಒಂದು ಹೆಣ್ಣು ಬೆಳೆದು ಕೂತಿದೆ. ನಮ್ಮ ತಂಗಿಯ ಮಗಳು ನೀಲಗಂಗೆಗೆ ಈಗ ಹದಿನೆಂಟು ವರ್ಷ” ಎಂದು ಸಂಗವ್ವನು ಅನುಸಂಧಾನಪೂರ್ವಕವಾಗಿ ನುಡಿದಳು.

“ಹದಿನೆಂಟು ವರ್ಷಗಳಾದರೆ ಏನಾಯಿತು? ಕಂಡಕಂಡವರನ್ನು, ಮದುವೆಯಾಗೆನ್ನುವಿಯೇನು ದೊಡ್ಡಮ್ಮಾ?” ಎಂದು ಉದ್ದಾಮಳಾದ ನೀಲಗಂಗೆಯು ನಡುಮನೆಯಿಂದ ಹೊರಗೆ ಬಂದು ಕೇಳಿದಳು.

“ಸುಮ್ಮನಿರು ನೀಲಿ, ಇಂಥ ಮಾತು ಮಾತಾಡಿಯೇ ನೀನು ಮನೆ-ಮೂಳಳಾಗಿ ಕೂತಿರುವಿ. ನಮ್ಮ ಮಲ್ಲೇಶಿಯಂಥ ಗಂಡನು ಸಿಕ್ಕಬೇಕಾದರೆ ದೇವರಲ್ಲಿ ಪಡೆದು ಬರಬೇಕು!” ಎಂದು ನೀಲಗಂಗೆಯ ದೊಡ್ಡಮ್ಮನು ಸಿಟ್ಟು ಮಾಡಿ ನುಡಿದಳು.

“ಔ, ಗಂಡನೇ! ಹೀಗೆ ತಂಬಾಕ ತಿಂದು ಪಿಚಿಪಿಚಿಯಾಗಿ ಉಗುಳುವ ಗಂಡನನ್ನು ಯಾರು ಮಾಡಿಕೊಂಡಾರು?”

“ತಂಬಾಕು ತಿಂದರೆ ದಿನಾಲು ಮೂರು ಸಾರೆ ಹಲ್ಲು ತಿಕ್ಕಿಕೊಳ್ಳುತ್ತೇನೆ” ಎಂದು ಮಲ್ಲೇಶಿಯು ತಂಬಾಕವನ್ನು ಗುಳಿ ಕಿರಿಮೀಸೆಯನ್ನು ಒರಿಸಿ ಕೊಂಡು ನೀಲಗಂಗೆಯ ಮುಖವನ್ನು ಸ್ಪರ್ಧೆಯಿಂದ ನೋಡುತ್ತ ನುಡಿದನು.

“ನೀಲಾ, ಇವನು ತಂಬಾಕವನ್ನು ಬಿಟ್ಟ ಮೇಲಾದರೂ ಇವನನ್ನು ಮದುವೆಯಾಗುವೆಯಾ?” ಎಂದು ಸಂಗವ್ವನು ಮಧ್ಯಸ್ಥಳಾಗಿ ಕೇಳಿದಳು.

“ಬಿಟ್ಟು ತೋರಿಸಲಿ, ಆ ಮೇಲೆ ಮುಂದಿನ ಮಾತು.” ಎಂದು ನಗದವಳಾದ ನೀಲೆಯು ಮೆಲ್ಲನೆ ನಕ್ಕು ನುಡಿದಳು.

“ಬಿಟ್ಟಾನು; ಯಾವ ದೊಡ್ಡ ಮಾತು?” ಎಂಬ ಆಶ್ವಾಸನವನ್ನು ನೀಲಗಂಗೆಗಿತ್ತು ಸಂಗವ್ವನು ಮಲ್ಲೇಶಿಯನ್ನು ಕುರಿತು “ಮಲ್ಲೇಶಾ, ನಿನ್ನ ಕೆಲಸವಾಯಿತು ಹೋಗು, ಹುಡಿಗಿಯು ನಗುತ್ತಾಳೆ ಕಾಣದೆ? ಈಗ ನಮ್ಮ ಲೆಂಕಪ್ಪನು ಹೊಲಕ್ಕೆ ಹೋಗಿದ್ದಾನೆ. ನಾಳೆ ಮಾತುಕತೆಯಾಡೋಣಂತೆ”, ಎಂದು ಹೇಳಿದಳು.

ಮಲ್ಲೇಶಿಯು ಅಲ್ಲಿಂದೆದ್ದು ಹೊರಗೆ ಬಂದು “ಹುಡಿಗಿಯು ಬಲು ಬಾಯಿಬಡಿಕೆಯಾಗಿ ತೋರುತ್ತಾಳೆ. ಈಕೆಯ ದೆಸೆಯಿಂದ ನಾವು ತಂಬಾಕ ತಿನ್ನುವದನ್ನು ಬಿಡಬೇಕೆ? ಆದರೂ ಇವಳು ಬಲು ಚೆಲುವೆ. ಆಳು ದುಂಡಗಾಗಿದ್ದು ಮೈ ಬಣ್ಣ ಕೆಂಪಾಗಿದೆ. ಅರಮನೆಯಲ್ಲಿ ಇರಲು ಒಪ್ಪುತ್ತಾಳೆ. ಎಲ್ಲಿಗೆ ಬರುತ್ತದೋ ನೋಡೋಣ,” ಎಂದು ತನ್ನೊಳಗೆ ತಾನೇ ಮಾತಾಡುತ್ತ ನಡೆದನು. ಸಂಗವ್ವನ ಮನೆಯಲ್ಲಿರುವಾಗಲೇ ಮಲ್ಲೇಶಿಗೆ ನೀರಡಿಕೆ ಯಾದಂತಾಗಿತ್ತು. ಆದರೆ ಆ ಪ್ರಸಂಗದಲ್ಲಿ ನೀರು ಬೇಡುವ ಅವಕಾಶವೇ ಅವನಿಗಿದಿಲ್ಲ. ಮುಂದೆ ಹನುಮಂತದೇವರ ಗುಡಿಯ ಓಣಿಯಲ್ಲಿರುವ ಹೊಕ್ಕು ತುಂಬುವ ಬಾವಿಯನ್ನು ಕಂಡು ನೀರಡಿಕೆಯನ್ನಾರಿಸಿಕೊಳ್ಳುವದಕ್ಕಾಗಿ ಆ ಬಾವಿಯಲ್ಲಿಳಿದು ನೀರು ಕುಡಿದನು. ನೀರು ಕುಡಿದು ಮೇಲಕ್ಕೆ ಬರುವಷ್ಟರಲ್ಲಿ ಒಬ್ಬ ತರುಣಿಯು “ಮಲ್ಲೇಶಿ, ಈ ಕೊಡವನ್ನು ಹೊರಿಸಿ ಹೋಗಬಾರದೆ?” ಎಂದು ಕೇಳಿಕೊಂಡಳು. ಆ ತರುಣಿಯ ಮಾತನ್ನು ಕೇಳಿ ಮಧ್ಯಮವಯಸ್ಕಳಾಗಿದ್ದ ಚಾರುವಾಕೆಯಾದ ವಿಧವೆಯು ನಕ್ಕು:

“ಯಾಕೆ ಅಂಬೂ, ನಾವಿಷ್ಟು ಜನ ಹೆಣ್ಣುಮಕ್ಕಳಿರಲಿಕ್ಕೆಯೂ ಮಲ್ಲೇಶಿಯ ಕೈಯಿಂದಲೇ ಕೊಡ ಹೊರಿಸಿಕೊಳ್ಳುವ ಉಬ್ಬೇಕೆ? ಕಬ್ಬಿನಂಥ ಹುಡುಗನನ್ನು ಕಂಡು ಅವನ ಮೇಲೆ ನಿನ್ನ ಕಣ್ಣು ಹೋಯಿತಲ್ಲೇ? ಮದುವೆ ಯಾಗುವೆನೆಂದು ಹೇಳಿದರೆ ಮಾತ್ರ ಮಲ್ಲೇಶಿಯು ಕೊಡ ಹೊರಿಸುವನು. ಸುಮ್ಮಸುಮ್ಮನೆ ಕೊಡ ಹೊರಿಸೆಂದರೆ ಯಾರಿಗೆ ಯಾರು ಹೊರಿಸುತ್ತಾರೆ?” ಎಂದು ನುಡಿದಳು.

ಮಲ್ಲೇಶಿಗೆ ಆ ವಿಧವೆಯಾಡಿದ ಮಾತಿನ ಭಾವವು ತಿಳಿಯಲಿಲ್ಲ. ಅಂಬೆಯು ಅವಿವಾಹಿತೆಯಾದ ಕನ್ನೆಯೆಂಬದನ್ನು ಮಾತ್ರ ಅವನು ಊಹಿಸಿ ಕೊಂಡನು. ಆದರೆ ಮೇಲ್ಕಂಡ ಮಾತಿನ ಬಾಣವು ಅಂಬೆಯ ಎದೆಯಲ್ಲಿ ಒಳಿತಾಗಿ ನಟ್ಟಿತು. ನಾಚಿಕೆಗಾಗಿ ಅವಳ ಮುಖವು ಬಹು ಚಮತ್ಕಾರವಾಗಿ ಕಂಡಿತು. ಮಲ್ಲೇಶಿಯು ಕೊಡ ಹೊರಿಸಿದ್ದೂ ಅವಳಿಗೆ ತಿಳಿಯಲಿಲ್ಲ. ತಾನು ಹೊತ್ತು ಕೊಂಡದ್ದೂ ತಿಳಿಯಲಿಲ್ಲ. ಸುಮ್ಮನೆ ಕೊಡವನ್ನು ಹೊತ್ತು ಕೊಂಡು ನಿಂತುಬಿಟ್ಟಳು.

“ಆದದ್ದಾಯಿತು ಮಲ್ಲೇಶಿ, ನನ್ನ ಕೊಡವನ್ನಷ್ಟು ಹೊರಿಸಿಬಿಡು” ಎಂದು ಆ ವಿಧವೆಯು ಕೇಳಿಕೊಂಡಳು. ಅವಳ ಮಾತನ್ನು ಕೇಳಿದಾಕ್ಷಣವೇ ಅಂಬೆಗೆ ಪ್ರಜ್ಞೆ ಬಂದಿತು. ಅವಳ ವಿನೋದವೃತ್ತಿಯಾದರೂ ಜಾಗ್ರತಿಯನ್ನು ಹೊಂದಿತು.

“ಛಾಯವ್ವಕ್ಕಾ, ಸುಮ್ಮಸುಮ್ಮನೆ ಯಾರಿಗೆ ಯಾರು ಕೊಡವನ್ನು ಹೊರಿಸುತ್ತಾರೆ?” ಎಂದು ಆ ಚತುರೆಯಾದ ಕನ್ಯೆಯು ಆ ವಿಧವೆಯ ಮೇಲೆ ವಾಗ್ಬಾಣವನ್ನು ಬಿಟ್ಟು, ವಿಜಯಶಾಲಿನಿಯ ದಂಭದಿಂದ ನಕ್ಕಳು.

“ಗೈಯಾಳೀ! ಹಳೆ ಗೈಯಾಳಿ! ಇಂಥ ಮಾತು ಆಡುವಿಯಾ? ಆರಮುದುಕೆಯೂ ವಿಧವೆಯೂ ಆದ ನಾನು ನಿನಗಾಗಿ ಇನ್ನು ಮೇಲೆ ಮೊದಲಗಿತ್ತಿಯಾಗಬೇಡವೆ? ನಿನ್ನನ್ನು ಮಾತ್ರ ಇದೇ ಮಲ್ಲೇಶಿಯ ಕೊರಳಿಗೆ ಕಟ್ಟದಿದ್ದರೆ ನನ್ನ ಹೆಸರು ಛಾಯವ್ವನಲ್ಲ!”

ಈ ವಿನೋದಮಯವಾದ ವ್ಯಾಜ್ಯದ ಅರ್ಥವು ಮಲ್ಲೇಶಿಗೆ ಚನ್ನಾಗಿ ತಿಳಿಯದಿದ್ದರೂ ಛಾಯವ್ವನು ಅಂಬೆಯನ್ನು ತನಗೆ ನಿಶ್ಚಯವಾಗಿ ಕೂಡಿಸುವಳೆಂದು ಆ ಮೂಢನು ದೃಢವಾಗಿ ನಂಬಿ ಬಹುಪರಿಯಾಗಿ ಉಬ್ಬಿದನು. ಆ ಹೆಂಗಸರಿಬ್ಬರೂ ಕೊಡಗಳನ್ನು ಹೊತ್ತು ಕೊಂಡು ತಮ್ಮ ತಮ್ಮ ಮನೆಗೆ ನಡೆದ ಬಳಿಕ ಮಲ್ಲೇಶಿಯು ನೆಟ್ಟಗೆ ಛಾಯವ್ವನ ಮನೆಗೆ ಬಂದು ಬಿಟ್ಟನು.

“ಯಾಕೆ ಬಂದಿ ಮಲ್ಲೇಶಿ? ಮದುವೆಯ ಅವಸರವು ಬಹಳಾಗಿದೆ ಏನು?” ಎಂದು ವಿನೋದಿನಿಯಾದ ಆ ವಿಧವೆಯು ನಗೆಯಾಡಿ ಕೇಳಿದಳು.

“ಅಹುದು ಛಾಯಾವ್ವಾ. ಬೇಗನೆ ಮದುವೆಯಾಗೆಂದು ದೊರೆಗಳು ಅಪ್ಪಣೆ ಮಾಡಿದ್ದಾರೆ. ದೊರೆಸಾನಿಯವರ ಕೈ ಕೆಳಗೆ ಒಂದು ಹೆಣಾಳು ಬೇಕಾಗಿದೆಯಂತೆ. ಇಲ್ಲವಾದರೆ ನನಗೆಲ್ಲಿ ಮದುವೆಯ ಅವಸರ?”

“ಹೊಲವಿಲ್ಲ, ಮನೆಯಿಲ್ಲ, ನಿನ್ನ ಮದುವೆ ಹೇಗಾಗಬೇಕು ಮಲ್ಲೇಸಿ?”

“ಹೀಗೇನು! ಆ ಹುಡುಗಿಯನ್ನು ನನಗೆ ಗಂಟುಹಾಕುವೆನೆಂದು, ನೀನು ಬಾವಿಯಲ್ಲಿದ್ದಾಗ ಭಾಷೆಯನ್ನು ಕೊಡಲಿಲ್ಲವೆ? ಈಗೇಕೆ ಹೀಗೆ: ಮಾತಾಡುವಿ ಚಿಗವ್ವಾ?” ಎಂದು ಮಲ್ಲೇಶಿಯು ಸಾಶಂಕನಾಗಿ ಕೇಳಿದನು.

“ಆಹುದಲ್ಲೆ? ನಾನು ಮರತೇ ಬಿಟ್ಟೆನು!” ಎಂದು ಛಾಯವ್ವನು ಗಹಗಹಿಸಿ ನಕ್ಕಳು.

“ಇನ್ನು, ಮನೆಯೆಂದರೆ ನಾವು ಗಂಡಹೆಂಡರು ಅರಮನೆಯಲ್ಲಿಯೇ ಇರತಕ್ಕವರು. ಇನ್ನೊಂದು ನಾಲ್ಕು ವರ್ಷಕ್ಕೆ ನಮ್ಮ ಧನಿಯರು ನನಗೊಂದು ಹೊಲವನಾದರೂ ಕೊಡುವೆನೆಂದು ಹೇಳಿದ್ದಾರೆ. ಸದ್ಯಕ್ಕೆ ನನಗೆ ತಿಂಗಳಾ ನಾಲ್ಕು ವರಾಹ ಸಂಬಳ, ಆಮೇಲೆ ಮದುವೆಯ ವೆಚ್ಚವು ನಮ್ಮ ಯಜಮಾನರದು.”

ಅಷ್ಟರಲ್ಲಿ ಅಂಬೆಯು ಬರಿದಾದ ಕೊಡವನ್ನು ಬಗಲಲ್ಲಿಟ್ಟು ಕೊಂಡು ಬಂದು ಇನ್ನೊಂದು ಕೊಡಕ್ಕೆ ಬಾವಿಗೆ ಬರುವಿಯೇನೆಂದು ಛಾಯವನನ್ನು ಕೇಳಿದಳು. ಅಂಬೆಯನ್ನು ಕಂಡು ಛಾಯವನು ಕಣ್ಣು ಚಿವುಟಿ “ಬಾರಲೆ, ಮದಿಮಗಳೆ! ಇಲ್ಲಿ ನೋಡು, ನಿನ್ನ ಗಂಡನು ಮದುವೆಗೆ ಆತುರನಾಗಿ ಬಂದು ಕುಳಿತಿದ್ದಾನೆ. ಸಂಜೆಯೊಳಗಾಗಿ ‘ಸಾಮಧ್ಯಮ’ವಾಗಿಹೋಗಲಿ!”

“ಸುಮ್ಮನೆ ಬರಬಾರದೆ ಛಾಯವ್ವಾ. ಮುದಿಹುಚ್ಚು ತಲಿಗೇರಿತೆಂದು ಹೀಗೆ ಮಾತಾಡುವಿಯೇನು?” ಎಂದು ಅಂಬೆಯು ಅಸಹನೆಯಾಗಿ ನುಡಿದು ತಲೆಬಾಗಿಲದ ಹೊರಗೆ ಬಂದು ನಿಂತಳು. ಛಾಯವ್ವನಾದರೂ ತನ್ನ ಕೊಡವನ್ನು ತೆಗೆದುಕೊಂಡು ಬಾವಿಗೆ ಹೋಗಲು ಸಿದ್ಧಳಾದಳು. ಮಲ್ಲೇಶಿಯು ಅರಮನೆಯ ಹಾದಿಯನ್ನು ಹಿಡಿದನು.

“ಹುಡಿಗಿಯು ಮನಸ್ಸಿನಲ್ಲಿ ಯಾಕೋ ಸಂಕೋಚಗೊಂಡಿದ್ದಾಳೆ; ಆದರೇನಾಯಿತು? ಒಲ್ಲೆನೆಂಬುವ ಮಾತು ಅವಳ ಬಾಯಿಯಿಂದ ಬರಲಿಲ್ಲ. ಸಾಕಾಗದೇನು? ಆಕೆ ಒಲ್ಲೆನೆನ್ನಲಿ, ಬಿಡಲಿ, ಛಾಯವ್ವನಂತೂ ಅವಳನ್ನು ನನಗೆ ಕೊಡಿಸುವದು ಗಟ್ಟಿ ಮಾತು, ಹುಡಿಗಿ ಮಾತ್ರ ಅಪರೂಪದ ಹುಡಿಗಿ!” ಎಂದು ವಿಚಾರಗೈಯುತ್ತ ಮಲ್ಲೇಶಿಯು ಅರಮನೆಗೆ ಬಂದನು.

ಶರಣೆಂದು ಪ್ರಣಾಮಮಾಡಿ ನಿಂತ ಮಲ್ಲೇಶಿಯ ವೇಷವನ್ನು ಕಂಡು ಹೇಮರಡ್ಡಿ ಪ್ರಭುಗಳು ಮುಗುಳುನಗೆ ನಕ್ಕು “ಉಡಿಗೆ ತೊಡಿಗೆಗಳ ಸೊಬಗು ಬಹಳವಾಗಿದೆಯೋ ಮಲ್ಲೇಶಿ!” ಎಂದು ಕೇಳಿದರು.

“ಹೆಣ್ಣು ನೋಡಲಿಕ್ಕೆ ಹೋಗಿದ್ದೆನಲ್ಲವೆ ಧನಿಯರೆ?” ಎಂದು ಮಲ್ಲೇಶಿಯು ಬೆಸಗೊಂಡನು.

“ಎಲ್ಲಿಯಾದರೂ ಗೊತ್ತು ಮಾಡಿಕೊಂಡು ಬಂದಿಯಾ?”

“ಮೂರು ತಾವಿನಲ್ಲಿ ಮೂರು ಹೆಣ್ಣು ನೋಡಿಕೊಂಡು ಬಂದಿದ್ದೇನೆ ದೇವರೂ, ಹೆಣ್ಣಿನ ತಾಯಿತಂದೆಗಳನ್ನಷ್ಟೇ ಕೇಳಿದರೆ ಹೆಣ್ಣಿನ ಸರ ಪೋಣಿಸಬಹುದು. ಆದರೆ ಆ ಹೆಣ್ಣುಗಳನ್ನು ತಡೆಯುವದೂ ಚಿಣಗೀ ಹಾವುಗಳನ್ನು ತಡೆಯುವದೂ ಒಂದೇ, ಕೈಗೆ ಸಿಕ್ಕದೆ ಟಣಟಣನೆ ಜಿಗಿದಾಡುತ್ತವೆ.”

“ಜಿಗಿದಾಡಲಿ, ಎಲ್ಲಿಯವರೆಗೆ ಜಿಗಿದಾಡ ಬಲ್ಲರವರು? ಬಲ್ಲಿದನಾದ ಗಂಡನಿದ್ದರೆ ಹೆಂಡತಿಯು ಮೆತ್ತಗೆ ಹಣ್ಣಾಗಿರುವಳು.”

“ಹೇಳಬೇಡಿರಿ ಧನಿಯರೆ, ತಂದೆಗಳಾದ ತಾವು ಊರಿಗೆ ಊರನ್ನೇ ಆಳುವಿರಿ; ಆದರೆ ಅರಮನೆಯಲ್ಲಿ ನೀವೇ ಹೇಗೆ ಹುದುಗಿಕೊಂಡಿರುವಿರಿ ನೋಡಿರಿ.”

ಹೇಮರಡ್ಡಿ ಪ್ರಭುಗಳಿಗೆ ಮಲ್ಲೇಶಿಯ ಮಾತು ಕೇಳಿ ನಗೆ ಬಂದಿತು. ಆದರೂ ಅವರು ಕೋಪದ ಆವಿರ್ಭಾವವನ್ನು ಮಾಡಿ “ಹುಚ್ಚು ಸೂಳೆಯ ಮಗನೆ!” ಎಂದು ಉದ್ಗಾರ ತೆಗೆದರು.

“ನಾನೇನು ಸುಳ್ಳು ಹೇಳಿರುವೆನೆ? ನನ್ನ ಮೇಲೇಕೆ ಕೋಪ ದೇವರೂ?” ಎಂದು ಮಲ್ಲೇಶಿಯು ಬೊಗಸೆಯೊಡ್ಡಿ ಕೊಂಡು ನಿಂತು ಕೇಳಿದನು.

ದೊರೆಗಳು ನಕ್ಕು “ನಿನ್ನಂತೆಯೇ ಆಗಲಿ, ಮಲ್ಲೇಶೀ. ನಿನಗೆ ಹೆಂಡತಿಯಿಂದ ಪೀಡೆಯಾಗುವದೆಂದು ಕಂಡರೆ ನೀನು ಮದುವೆಯ ಗೋಜಿಗೆ ಹೋಗಲೇಬೇಡ.” ಎಂದು ಹೇಳಿದರು.

“ಬೇಡವೆಂದರೆ ಅರಮನೆಯಲ್ಲಿ ಅವ್ವನವರ ಕೈಕೆಳಗೊಂದು ಹೆಣ್ಣಾಳು ಬೇಕಾಗಿಲ್ಲವೆ?” ಎಂದು ಮಲ್ಲೇಶಿಯು ಚಕಿತನಾಗಿ ಕೇಳಿದನು.

ನಮ್ಮಲ್ಲಿ ಅಡಿಗೆ ಮಾಡುವ ಭೀಮವ್ವನ ಮಗಳು ಇಂದೆಯೇ ಬಂದಿರುವಳು. ಅವಳನ್ನೇ ಅರಮನೆಯಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.”

“ಹಾಗಾದರೆ ನಮ್ಮ ಯತ್ನವೆಲ್ಲ ಹೊಳೆಯಲ್ಲಿ ಹುಳಿ ತೊಳೆದಂತಾಯಿತಲ್ಲ.” ಎಂದು ಮಲ್ಲೇಶಿಯು ಭಗ್ನೋತ್ಸಾಹನಾಗಿ ನುಡಿದನು.

“ಹಾಗೆ ಆಸೆಗುಂದಬೇಡ ಮಲ್ಲೇಶೀ, ನಿನ್ನ ಮನಸ್ಸಿನಲ್ಲಿ ಲಗ್ನವಾಗುವದಿದ್ದರೆ ಆಗು, ಲಗ್ನದ ವೆಚ್ಚವೆಲ್ಲ ನಮ್ಮ ಮೈಮೇಲೆ ” ಎಂದು ದೇಸಾಯರು ಕೃಪಾವಂತರಾಗಿ ಹೇಳಿದರು.

“ಲಗ್ನವು ನನಗೆಲ್ಲಿ ಅಡಗಾಣಿಸಿದೆ ದೇವರೂ? ನನ್ನ ಲಗ್ನದಿಂದ ದೊರೆಸಾನಿಯವರಿಗೆ ಹಿತವಾಗುವಂತಿದ್ದರೆ ನಾನು ಮಾಡಿಕೊಳ್ಳ ತಕ್ಕವನು.”

“ಸದ್ಯಕ್ಕೆ ನಿನ್ನ ಹೆಂಡತಿಯ ಕೆಲಸವು ಅರಮನೆಯಲ್ಲಿಲ್ಲ. ನಿನಗೆ ಇಷ್ಟವಿದ್ದಾಗ ನೀನು ಲಗ್ನವಾಗು.”

“ಅದೆಲ್ಲ ಆದೀತು ನನ್ನ ತಂದೆಯವರೆ. ಆದರೆ ಈಗ ನನಗೊಂದು ಮಾತಿನ ಬಗ್ಗೆ ಬಿರಿಬಂದಂತಾಗಿದೆ.”

“ಅದೇನು ಮಲ್ಲೇಶಿ”

“ಲಗ್ನ ಮಾಡಿಕೊಳ್ಳುವೆನೆಂದು ನಾನು ಮೂರುಮಂದಿ ಹುಡಿಗೆಯರಿಗೆ ವಚನಕೊಟ್ಟು ಬಂದಿದ್ದೇನೆ. ಅವರೆಲ್ಲರಿಗೆ ಇನ್ನೇನು ಹೇಳಲಿ?” ಎಂದು ಮಲ್ಲೇಶಿಯು ಚಿಂತಾಕುಲನಾಗಿ ಕೇಳಿದನು.

“ಆ ಮೂವರು ಹೆಣ್ಣು ಮಕ್ಕಳಲ್ಲಿ ನೀನೆಷ್ಟು ಜನರನ್ನು ಮದುವೆಯಾಗ ತಕ್ಕವನು? ಒಬ್ಬಳನ್ನೊ ಇಬ್ಬರನ್ನೊ?”.

“ಒಬ್ಬಳನ್ನೇ” ಮಲ್ಲೇಶಿಯು ಏನೂ ಸಂಶಯವಿಲ್ಲದೆ ಉತ್ತರವನ್ನಿತ್ತನು.

“ಒಬ್ಬಳನ್ನೇ ಮದುವೆಯಾಗುವಿ. ಒಬ್ಬಳನ್ನೇ ಮದುವೆಯಾಗುವ ಪಕ್ಷದಲ್ಲಿ ಉಳಿದ ಸೌಭಾಗ್ಯಕಾಂಕ್ಷಿಣಿಯರಾದ ಇಬ್ಬರಿಗೆ ಏನು ಹೇಳುವಿ?”

ಈ ಪ್ರಶ್ನವನ್ನು ಕೇಳುತ್ತಲೆ ಮಲ್ಲೇಶಿಗೆ ದಿಗಿಲು ಬಡಿದಂತಾಯಿತು. ಮೂಢನಾದ ಈ ತರುಣನು ಯಜಮಾನರ ಮುಖವನ್ನು ಹುಳುಹುಳನೆ ನೋಡುತ್ತ ನಿಂತನು. ಹೇಮರಡ್ಡಿ ಪ್ರಭುಗಳು ತಮ್ಮ ಹಸ್ತದಿಂದ ಪ್ರಶ್ನೆ ಸೂಚಕವಾದ ಹಾವಭಾವವನ್ನು ಮಾಡಿ “ಯಾಕೆ ಮಲ್ಲೇಶಿ, ನಾನು ಕೇಳಿದ ಪ್ರಶ್ನೆಕ್ಕೆ ಏನೆನ್ನುವಿ?” ಎಂದು ಕೇಳಿದರು.

“ಏನೆಂದು ಹೇಳಲಿ ಪ್ರಭುಗಳೆ? ಹುಚ್ಚು ಹಿಡಿಯುವ ಮಾತಿದು. ಆದರೂ ಒಬ್ಬಳನ್ನು ಲಗ್ನವಾಗಿದ್ದೇನೆ, ಉಪಾಯವಿಲ್ಲೆಂದು ಉಳಿದ ಇಬ್ಬರಿಗೆ ಹೇಳಬಹುದಷ್ಟೆ?”

“ಅಷ್ಟರಿಂದಲೇ ಅವರಿಗೆ ಸಮಾಧಾನವಾಗಬಹುದೇನು ಮಲ್ಲೇಶಿ?”

ಮಲ್ಲೇಶಿಯು ತುಸು ಆಲೋಚಿಸಿ ಇಲ್ಲವೆಂದು ಹೇಳಿದನು.

“ಹಾಗಾದರೆ ಇಬ್ಬರಿಗೆ ಅಸಮಾಧಾನವಾಗುವಲ್ಲಿ ಮೂವರಿಗೂ ಅಸಮಾಧಾನವಾದರೆ ವಿಶೇಷವೇನೂ ಹೆಚ್ಚು ಕಡಿಮೆಯಾಗಲಿಕ್ಕಿಲ್ಲ. ಅದಿರಲಿ. ಆ ಮೂವರು ಕನ್ಯೆಯರಲ್ಲಿ ಯಾರಾರು ತಮ್ಮ ತಮ್ಮ ಒಪ್ಪಿಗೆಯನ್ನು ಹೇಗೆ ಹೇಗೆ ಕೊಟ್ಟಿರುವರು ಹೇಳು ನೋಡೋಣ.”

ಮಲ್ಲೇಶಿಯ ತನ್ನ ಕನ್ಯಾನ್ವೇಷಣದ ವೃತ್ತಾಂತವನ್ನು ಯಥಾ ಪ್ರಕಾರವಾಗಿ ಹೇಳಿದನು. ಆ ಸಂಗತಿಯನ್ನು ಕೇಳ ಕೇಳುವಷ್ಟರಲ್ಲಿ ಹೇಮರಡಿ ಪ್ರಭುಗಳು ವಿಪರೀತವಾಗಿ ನಕ್ಕು ನಕ್ಕು ತನ್ನ ಪಕ್ಕಡಿಗಳನ್ನು ನೋಯಿಸಿ ಕೊಂಡರು. ನಗೆ ನಿಂತು ಮಾತಾಡುವಷ್ಟು ಅವಸಾನವು ದೊರಕಿದ ಬಳಿಕ ದೊರೆಗಳಂದದ್ದು:

“ಹುಡುಗನೆ, ನಿನಗೆ ಹೆಂಗಸರ ಸ್ವಭಾವಗುಣಗಳು ಎಷ್ಟು ಮಾತ್ರವೂ ತಿಳಿದಿಲ್ಲ. ಆ ಮೂವರು ಸ್ತ್ರೀಯರಲ್ಲಿ ಒಬ್ಬಳಾದರೂ ನಿನ್ನನ್ನು ಮದುವೆ ಯಾಗಲಪೇಕ್ಷಿಸಲಿಲ್ಲ. ಆ ಗಾಡಿಕಾರತಿಯರ ವಿನೋದದ ಮಾತಿಗೆ ನೀನು ಮೋಸಹೋಗಿರುವಿ, ಬೇಕಾದರೆ ನಾಳೆ ನೀನು ಆ ಕನ್ಯೆಯರನ್ನು ಕಂಡು ‘ನಾನು ನಿಮ್ಮನ್ನು ಮದುವೆಯಾಗುವ ದಿಲ್ಲ’ ವೆಂದು ಹೇಳಿದರೆ ಅವರಿಗೆ ಹೆಚ್ಚಾದ ವಿನೋದವೇ ಆಗುವದಲ್ಲದೆ ತಿಲಮಾತ್ರವಾದರೂ ವಿಷಾದವೆನಿಸದು. ಬೇಕಾದರೆ ಪರೀಕ್ಷಿಸಿ ನೋಡು.”

ತಲೆಯ ಮೇಲಿನ ದೊಡ್ಡದೊಂದು ಭಾರವೇ ಇಳಿದಂತಾಗಿ ಮಲ್ಲೇಶಿಯು ಸಮಾಧಾನದ ಉಸುರ್ಗರೆದು-

“ಪೀಡೆ ಕಡಿಯಿತು ದೇವರೂ, ಇಂದಿನ ರಾತ್ರಿ ಕಣ್ಣು ತುಂಬಾ ನಿದ್ದೆ ಮಾಡುವೆನು” ಎಂದು ಹೇಳಿದನು.
* * *

ತನಗೂ ಕನ್ನೆಯರಿಗೂ ಗೋತ್ರ ಕೂಡುವದೇ ಇಲ್ಲವೆಂದು ಮಲ್ಲೇಶಿಯು ನಿಶ್ಚಿತವಾಗಿ ತಿಳಿದು, ಲಗ್ನದ ಹಂಬಲವನ್ನು ಸರ್ವಥಾ ಬಿಟ್ಟು ನಿಶ್ಚಿಂತನಾಗಿದ್ದನು. ಶ್ರೀಮಂತರೂ ಕೃಪಾಳುಗಳೂ ಆಗಿದ್ದ ಯಜಮಾನರ ಮನೆಯಲ್ಲಿ ಮೂರು ಹೊತ್ತು ಸಮೀಚೀನವಾದ ಊಟವಾಗುತ್ತಿತ್ತು. ಮೇಲೆ ದುಡಿಕೆಯಾದರೂ ಅಷ್ಟಕ್ಕಷ್ಟೆಯೇ. ಆದ್ದರಿಂದ ದಾಂಪತ್ಯ ಸ್ಥಿತಿಗಿಂತಲೂ ಇದೇ ಒಳಿತೆಂದು ಅವನು ನಂಬಿದ್ದನು. ದಿನಾ ಧನಿಯರು ಸಾಯಂಕಾಲದಲ್ಲಿ ತಿರುಗಾಡಲಿಕ್ಕೆ ಹೊರಟರೆ ಎರಡು ಮೂರು ಗಳಿಗೆ ಟಾಂಗೆಯನ್ನು ಹೊಡಕೊಂಡು ಬಂದನೆಂದರೆ ಮಲ್ಲೇಶಿಯ ಕೆಲಸ ಮುಗಿಯಿತು. ವಾರಕ್ಕೊಂದೆರಡಾವರ್ತಿ ಹೇಮರಡ್ಡಿ ಪ್ರಭುಗಳು ಸಮೀಪದಲ್ಲಿಯೇ ಇರುವ ಜಿಲ್ಲೆಯ ಸ್ಥಾನವಾದ ಪಟ್ಟಣಕ್ಕೆ ಹೋಗಿ ಬಂದರೆ ಹೆಚ್ಚಿನ ಕೆಲಸವಾಯಿತು. ದೇಸಾಯರ ಊರಿನಲ್ಲಿರುವ ಹೊಲೆಯರು ಸರತಿಯ ಮೇಲೆ ಟಾಂಗೇದ ಕುದುರೆಗಳ ಮೈತಿಕ್ಕಿ ಹೋಗುವರು. ಮನೆಯ ಆಳುಮಗಳು ಕುದುರೆಗಳಿಗೆ ಬೇಕಾದಷ್ಟು ಕಡಲೆಗಳನ್ನು ಒನೆದುಕೊಟ್ಟು ಹೋಗುವಳು. ಕುದುರೆಗಳಿಗೆ ಆ ಧಾನ್ಯವನ್ನು ತಿನ್ನಿಸುವದು, ಹುಲ್ಲು ಹಾಕುವದು, ನೀರು ಕುಡಿಸುವದು ಮುಂತಾದ ಕೆಲಸಗಳನ್ನು ಮಾತ್ರ ಮಲ್ಲೇಶಿಯು ತಾನೇ ಮಾಡುತ್ತಿದ್ದನು.

ವಂಚನಾರಹಿತನೂ, ಸಮರ್ಥನೂ, ತರುಣನೂ ಆದ ಮಲ್ಲೇಶಿಗೆ ತನಗಿದ್ದಷ್ಟೆಯೇ ಅಲ್ಪ ಕೆಲಸದಿಂದ ಸಮಾಧಾನವಿದ್ದಿಲ್ಲ. ಅನಲಸನಾದ ಆ ಬಂಟನಿಗೆ ಕೆಲಸವಿಲ್ಲದೆ ಸುಮ್ಮನೆ ಬಿಟ್ಟು ಕೊಂಡಿರುವದು ಸೇರುತ್ತಿದ್ದಿಲ್ಲ. ಗ್ರಾಮದ ಸಮಾಚಾರಗಳನ್ನರಿತುಕೊಳ್ಳುವದಕ್ಕಾಗಿ ದೇಸಾಯರು ಹೊರ ಹೊರಟಾಗ ಅವರ ಮುಂದೆ ಮುಂದೆ ಹೋಗತಕ್ಕವರಾವ ಓಲೆಕಾರರಿದ್ದಾಗ್ಗೆಯೂ ಮಲ್ಲೆಶಿಯು ತಾನೊಬ್ಬ ಅನುಚರನಾಗಿ ಅವರೊಡನೆ ನಡೆದನೇ, ದೊರೆಸಾನಿಯವರು ಮಲ್ಲೇಶಿಯನ್ನು ಕರೆದು ಒಂದು ಕೆಲಸವನ್ನು ಹೇಳಿದರೆ ಅದು ಅವನಿಗೊಂದು ಪ್ರಸಾದವೇ. ಅಡಿಗೆಯ ಭೀಮನೊಂದು ಕೆಲಸವನ್ನು ಹೇಳಿದರೂ ಅವನಿಗೆ ಎಗ್ಗು ಇದ್ದಿಲ್ಲ. ದೊರೆಸಾನಿಯವರ ಅನುಚರಳಾಗಿ ಬಂದಿದ್ದ ಗಿರಿಬಾಯಿಯು, ಭೀಮವ್ವನ ಮಗಳು, ತನ್ನ ದೊಂದು ಕೆಲಸವನ್ನು ಹೇಳಿದರೂ ಅದನ್ನು ಮಲ್ಲೇಶಿಯು ಸಂತೋಷದಿಂದಲೇ ಮಾಡುವನು. ಚಿಕ್ಕ ಬಾಲಕರಿಗೆ ಕ್ರಮಕ್ರಮವಾಗಿ ಜಗತ್ತಿನ ಪರಿಚಯವಾಗುವಂತೆ ಮಲ್ಲೇಶಿಗೆ ಲೋಕವ್ಯವಹಾರದ ರೀತಿಗಳು ಮೆಲ್ಲ ಮೆಲ್ಲನೆ ತಿಳಿಯಲಾರಂಭಿಸಿದ್ದರೂ ತಾನು ಉತ್ಕ್ರಾಂತಿಯ ಮಾರ್ಗದಲ್ಲಿರುವೆನೆಂಬದು ಅವನಿಗೆ ಚನ್ನಾಗಿ ತಿಳಿದಿದ್ದಿಲ್ಲ. ಒಂದು ದುಡ್ಡಿಗೆ ಮೂರು ಪೂರ್ಣಾಂಕ ಮೂರು ನಾಲ್ಕನೆಯಂಶ ಬಾಳೇ ಹಣ್ಣಾದರೆ ಏಳು ಪೂರ್ಣಾಂಕ ಐದು ದಶಮಾಂಶ ದುಡ್ಡಿಗೆಷ್ಟು ಹಣ್ಣುಗಳೆಂದು ಶಾಲೆಯ ಮಾಸ್ತರರು ಕೇಳಿದರೆ ಮಲ್ಲೇಶಿಯಿಂದ ಹೇಳಲಿಕ್ಕಾಗದಿದ್ದರೂ, ದುಡ್ಡಿಗೆ ಹತ್ತು ಬಿಳಿಯೆಲೆ, ನೂರು ಬಿಳಿಯಲೆಗಳನ್ನು ತಾರೆಂದು ದೊರೆಸಾನಿಯವರು ಹೇಳಿದಾಗ ಅವನು ಆ ವ್ಯಾಪಾರ ವನ್ನು ಸಮಾಧಾನಕರವಾಗಿ ಮಾಡಿಕೊಂಡು ಬರುವನು. ರೂಪಾಯದಲ್ಲಿ ಏಳಾಣೆ ಹೋದರೆ ಉಳೆಯಿತೆಷ್ಟೆಂಬುದನ್ನು ಅವನು ಕೆಲವೊಂದು ಟೂಕಿಯಿಂದ ತಪ್ಪದೆ ಹೇಳುವನು. ಹೇಳುವದೇನೆಂದರೆ, ದಿನದಿನಕ್ಕೆ ಮಲೇಶಿಯ ದಡ್ಡತನವು ಕಡಿಮೆಯಾಗಿ ಅವನು ಇಚ್ಛಕನಾಗಿ ನಡಕೊಳ್ಳುವದರಿಂದ ಅವನ ಮೇಲೆ ಎಲ್ಲರ ಪ್ರೇಮವೂ ನೆಲಿಸಿತು.

ದೊರೆಸಾನಿಯವರು ಹೇಳಿದ ಪೇಟೆಯ ವ್ಯಾಪಾರಗಳ ಲೆಕ್ಕವನ್ನು ಒಪ್ಪಿಸಿಕೊಳ್ಳುವವಳು ಗಿರಿಬಾಯಿಯು. ಅದಕ್ಕಾಗಿ ತೊಂದರೆಯಾಗಬಾರದೆಂದು ಗಿರಿಬಾಯಿಯು ಮಲ್ಲೇಶಿಯನ್ನು ಕುಳ್ಳಿರಿಸಿಕೊಂಡು ಪೇಟೆಯಿಂದ ತರತಕ್ಕ ಪದಾರ್ಥಗಳೆಷ್ಟು, ಅವುಗಳ ಬೆಲೆಯೇನು ಮುಂತಾದ ಸಂಗತಿಗಳನ್ನು ಅವನಿಗೆ ಚನ್ನಾಗಿ ತಿಳಿಸಿ ಹೇಳಿ, ಕೊಟ್ಟ ರೂಪಾಯದಲ್ಲಿ ಮರಳಿ ಬರತಕ್ಕ ರೊಕ್ಕವೆಷ್ಟೆಂಬದನ್ನಾದರೂ ಹೇಳಿಕೊಡುತ್ತಿದ್ದಳು. ಮಲ್ಲೇಶಿಯ ವಿನಯ, ಶಿಕ್ಷಣ ಕೊಳಗಾಗುವ ಆವನ ಮನೋವೃತ್ತಿ, ಅವನ ದಕ್ಷತೆ, ಅವನ ಶಾಂತ ವೃತ್ತಿಗಳನ್ನು ಕಂಡು ಗಿರಿಬಾಯಿಯು ಅವನ ಹೆಡ್ಡತನದ ದೋಷವನ್ನು ಎಣಿಸದಾದಳು. ಹೀಗೆ ಮೂರುನಾಲ್ಕು ತಿಂಗಳುಗಳು ಸಂದು ಹೋದ ಹಾಗೆ ಮಲ್ಲೇಶಿಯ ವ್ಯವಹಾರ ಚಾತುರ್ಯವು ವೃದ್ಧಿಯನ್ನು ಹೊಂದುತ್ತೆ ನಡೆಯಿತು.

ಒಂದು ದಿನ ದೊರೆಸಾನಿಯವರು ಮಲ್ಲೇಶಿಗೆ ಅಡಿಕೆ-ಎಲೆ, ಉತ್ತತ್ತಿ ತೆಂಗಿನಕಾಯಿ, ಬಾಳೆಹಣ್ಣು, ಜೇನುತುಪ್ಪ, ಕಪ್ಪುರಗಳನ್ನು ತಾರೆಂದು ಆಜ್ಞಾ ಪಿಸಿದರು. ಆಗ ಗಿರಿಬಾಯಿಯು ಮಲ್ಲೇಶಿಯನ್ನು ಕಂಡು ತುಸು ನಕ್ಕು “ಮಲ್ಲೇಶಿ, ಪದಾರ್ಥಗಳು ಬಹಳಾದವು. ನಿನಗೆ ನೆನಪು ಉಳಿಯುವದು ಎಂಥ ಮಾತೋ. ನೀನು ಓದು ಕಲಿತಿದ್ದರೆ ಹೇಗೆ ಒಳಿತಾಗುತ್ತಿತ್ತು ನೋಡು.” ಎಂದು ಮಾತಾಡಿದಳು.

“ಇದಕ್ಕೇಕಿಷ್ಟು ಚಿಂತೆ ಗಿರಿಬಾಯಿ? ನನಗೆ ಓದು ಬರದಿದ್ದರೂ ನಿಮ್ಮ ಪದಾರ್ಥಗಳ ಹೆಸರುಗಳನ್ನೆಲ್ಲ ಕಾಗದದ ಮೇಲೆ ಬರೆದುಕೊಡುವೆನು, ಪರೀಕ್ಷೆ ಮಾಡಿ ನೋಡು” ಎಂದು ಮಲ್ಲೇಶಿಯು ವಿನೋದದಿಂದ ನುಡಿದನು.

ಮಲ್ಲೇಶಿಯ ದಂಭವನ್ನು ಮುರಿಯಬೇಕೆಂದು ಗಿರಿಬಾಯಿಯ ಸಂಗ ಡಲೆ ಮಸಿ ಲೆಕ್ಕಣಿಕೆಗಳನ್ನು ತಂದು ಮುಂದಿರಿಸಿದಳು. ಮಲ್ಲೇಶಿಯು ನುರಿತವನಾದ ಲೇಖಕನ ಜಂಬದಿಂದ ಕುಳಿತು ಆ ಕಾಗದದ ಮೇಲೆ ಒಂದು ಅಡಿಕೆಯ ಆಕಾರದ ಗುಂಡನ್ನೂ, ಎಲೆಯ ಮಾಟದ ಚಿತ್ರವನ್ನೂ, ಉತ್ತತಿಯ ಆಕಾರವನ್ನೂ, ತೆಂಗಿನ ಆಕಾರದ ಮತ್ತೊಂದು ದೊಡ್ಡ ಗುಂಡನ್ನೂ, ಕಪ್ಪುರದ ಒಡೆಯಂಥ ಚೌಕೋನವನ್ನೂ ಬರೆದನು. ಅವನ ಲೇಖನ ಕೌಲ್ಯವನ್ನು ಕಂಡು ದೊರೆಸಾನಿಯವರು ಪರಿಹಾಸಮಾಡಿ ಬಿದ್ದು ಬಿದ್ದು ನಕ್ಕರು. ಗಿರಿಬಾಯಿಯಾದರೂ ಕೊಂಚ ನಕ್ಕು ಆದರೂ, ಅವ್ವನವರೆ, ಈ ಚಮತ್ಕಾರವಾದ ಪಟ್ಟಿಯನ್ನು ಮಲ್ಲೇಶಿಯು ಪೇಟೆಗೆ ತೆಗೆದು ಕೊಂಡು ಹೋದನೆಂದರೆ ಅವನು ಒಂದು ಪದಾರ್ಥವನ್ನಾದರೂ ಮರೆತು ಬರಲಿಕ್ಕಿಲ್ಲ. ಅಕ್ಷರ ಲೇಖನದ ಕೆಲಸವೇ ಈತನ ಈ ಚಮತ್ಕಾರವಾದ ಲೇಖನದಿಂದ ಆದಂತಾಗಲಿಲ್ಲವೆ? ಮಲ್ಲೇಶಿಯು ಬರಬರುತ್ತೆ ಚತುರನಾಗುತ್ತೆ ನಡೆದಿದ್ದಾನೆ” ಎಂದು ಹೇಳಿ ಮಲ್ಲೇಶಿಯನ್ನು ಕುರಿತು, “ಮಲ್ಲೇಶೀ, ನಿನ್ನ ಪಟ್ಟಿಯಲ್ಲಿ ಜೇನುತುಪ್ಪವನ್ನು ಬರೆಯಲಿಲ್ಲವಲ್ಲ?” ಎಂದು ಕೇಳಿದಳು.

“ಜೇನುತುಪ್ಪಕ್ಕೆ ಈ ಬೆಳ್ಳಿಯ ಬಟ್ಟಲವೇ ಸಾಕ್ಷಿ. ಅದನ್ನು ಬರೆಯಲೇಬೇಕೆ?” ಎಂದು ಆಢ್ಯತೆಯಿಂದ ಮಲ್ಲೇಶಿಯು ಕೇಳಿದನು.

ಈ ಉತ್ತರದಿಂದ ಗಿರಿಬಾಯಿಗೆ ಸಂತೋಷವಾಯಿತು. ಮಲ್ಲೇಶಿಯ ಚಲುವಾದ ಮುಖಕ್ಕೆ ಕಲಂಕದಂತಿರುವ ಅವನ ಮಢತನದ ಲಕ್ಷಣವು ಈಗಲೇ ತೊಳೆದುಹೋಯಿತೋ ಎಂಬಂತೆ ಆ ಯುವತಿಯ ಕಣ್ಣಿಗೆ ಅವನ ಮುಖವು ಚಂದ್ರಮನ ಶುದ್ಧ ಮಂಡಲದಂತೆ ನಿರ್ಮಲವಾಗಿ ಕಂಡಿತು. ಅಂದಿನಿಂದ ಅವಳು ಜನರ ಕಣ್ಣು ತಪ್ಪಿಸಿ ಮಲ್ಲೇಶಿಗೆ ಅಕ್ಷರಗಳ ಪರಿಚಯವನ್ನು ಮಾಡಿಕೊಡಲಾರಂಭಿಸಿದಳು. ಮಲ್ಲೇಶಿಯು ಏಕಪಾಠಿಯಾಗಿರದಿದ್ದರೂ ವಿಶೇಷ ಪ್ರಯಾಸವಿಲ್ಲದೆ ತಿಂಗಳೆರಡು ತಿಂಗಳುಗಳಲ್ಲಿ ಸುಲಭವಾದ ಶಬ್ದಗಳನ್ನು ಬರೆಯಬಲ್ಲಷ್ಟು ಅಕ್ಷರಸ್ಥನಾದನು. ಗಿರಿಬಾಯಿಯು ತನ್ನ ಚಿಕ್ಕಮ್ಮನ ಮನೆಯಲ್ಲಿರುವಾಗ ಶಾಲೆಗೆ ಹೋಗಿ ಐದು ಇಯತ್ತೆಗಳವರೆಗೆ ಅಭ್ಯಾಸ ಮಾಡಿದ್ದಳು. ಮುಂದೆ ಅವಳು ಅದೇ ಶಾಲೆಯಲ್ಲಿ ಮೂರು ವರ್ಷ ಕಸೀದೆ ಕಲಿಸುವ ಶಿಕ್ಷಕಳಾಗಿದ್ದು ಕೊಂಡಿದ್ದಳು. ಆದರೆ ಗಿರಿಬಾಯಿಯಲ್ಲಿ ವಿಶೇಷವಾದ ಅಭಿಮಾನವುಳ್ಳವಳಾದ ಶಾಲೆಯ ಮುಖ್ಯ ಶಿಕ್ಷಕರು ಮತ್ತೊಂದೂರಿಗೆ ಹೋದ ಬಳಿಕ ಅವಳು ತನ್ನ ತಾಯಿಯ ಬಳಿಗೆ ಬಂದು ದೊರೆಸಾನಿಯವರ ಅನುಚರಳಾಗಿ ಇದ್ದು ಕೊಂಡಿದ್ದಳು. ಅವಳ ವಿದ್ಯೆಯು ಅಲ್ಪವೇ ಆಗಿದ್ದರೂ ಅವಳಿಂದ ಮಲ್ಲೇಶಿಯು ಕಲಿತದ್ದು ಬಹಳಾಯಿತು. ತಕ್ಕಮಟ್ಟಿಗೆ ರೂಪವತಿಯಾಗಿದ್ದ ಆ ತರುಣಿಯು ಮನಬಿಚ್ಚಿ ಅವನೊಡನೆ ಮಾತುಕಥೆ ಯಾಡುತ್ತಿರುವದರಿಂದ ಹೆಂಗಸರೆಂದರೆ ವಿಜಾತೀಯವಾದ ಪ್ರಾಣಿಗಳೆಂಬ ಅವನ ಕಲ್ಪನೆಯು ದೂರಾಯಿತು. ಮಮತೆಯ ಮಾತುಗಳೇ ಮೊದಲು ಮೃದುವಾದವುಗಳು. ಮೃದುಭಾಷಿಣಿಯರ ಮಂಜುಲವಾದ ವಾಣಿಯಿಂದ ಹೊರಟಂಥ ಅಂಥ ಮಾತುಗಳು ಕೇಳುವವರ ಕಿವಿಗೆ ಆಹ್ಲಾದವನ್ನೀಯಬೇಡವೇ? ತಕ್ಕಮಟ್ಟಿಗೆಯೇ ಆಗಲಿ, ಅವನಿಗೆ ಅವಳು ವ್ಯವಹಾರ ಚಾತುರ್‍ಯವನ್ನು ಕಲಿಸಿದಳು; ಸುಸಂಸ್ಕೃತವಾದ ನಾಲ್ಕು ಶಬ್ದಗಳನ್ನುಚರಿಸುವಷ್ಟು ಅಕ್ಷರಜ್ಞಾನವನ್ನು ಮಾಡಿಕೊಟ್ಟಳು. ಅವನವಳಿಗೆ ಕೃತಜ್ಞನಾಗಿ ನಡ ಕೊಂಡನು; ಅವಳಲ್ಲಿ ಆದರವುಳ್ಳವನಾಗಿದ್ದನು. ಅವಳ ನಡತೆ ನಡಾವಳಿ ಸವಿನುಡಿಗಳಿಗೆ ಮನಸೋತವನಾಗಿದ್ದನು. ಮಲ್ಲೇಶಿಯಾದರೂ ಸಭ್ಯನು, ಪ್ರಾಮಾಣಿಕನು, ಸ್ವಭಾವತಃ ಕುಚೇಷ್ಟಾ ರಹಿತನು. ಇಂಥವನು ಬರ ಬರುತ್ತ ಸೌಜನ್ಯಯುತನಾಗಿ ನಡೆಯಲಾರಂಭಿಸಿರಲು ಗಿರಿಬಾಯಿಯಾದರೂ ಅವನಲ್ಲಿ ಪಕ್ಷಪಾತವುಳ್ಳವಳಾದದ್ದು ಆಶ್ಚರ್ಯವಲ್ಲ.

ಒಂದು ದಿನ ದೊರೆಸಾನಿಯವರು ನೋಡಿಕೊಳ್ಳುವ ದೊಡ್ಡ ಕನ್ನಡಿಯು ಗಿರಿಬಾಯಿಯ ಕೈತಪ್ಪಿ ಬಿದ್ದು ಪಳ್ಳನೆ ಒಡೆದು ಎರಡು ಹೋಳಾಯಿತು. ಗಿರಿಬಾಯಿಯ ಮೈಮೇಲೆ ದೊಡ್ಡದೊಂದು ಸಂಕಟವೇ ಬಂದಂತಾಗಿ ಅವಳು ಮಲ್ಲೇಶಿಯನ್ನು ಏಕಾಂತದಲ್ಲಿ ಕರೆದು ಆ ಒಡೆದ ಕನ್ನಡಿ ಯನ್ನು ತೋರಿಸಿ ಇನ್ನೇನು ಗತಿ ಮಾಡಲೆಂದು ಕಣ್ಣೀರು ತಂದಳು. ಮಲ್ಲೇಶಿಯು ತುಸು ಧ್ಯಾನಿಸಿ “ಚಿಂತೆ ಮಾಡಬೇಡ ಗಿರಿಬಾಯಿ, ಈ ಕನ್ನಡಿಯನ್ನು ದೊರೆಗಳು ಕೊಂಡು ತರುವಾಗ ಆ ಅಂಗಡಿಯಲ್ಲಿ ಇಂಥದೇ ಇನ್ನೊಂದು ಕನ್ನಡಿ ಇರುವದನ್ನು ನಾನು ನೋಡಿದ್ದೇನೆ. ಈ ಒಡಕ ಕನ್ನಡಿಯನ್ನು ಎಲ್ಲಿಯಾದರೂ ಚಲ್ಲಿ ಕೊಟ್ಟು ನಾನು ಆ ಹೊಸ ಕನ್ನಡಿಯನ್ನು ತಂದುಕೊಡುತ್ತೇನೆ.” ಎಂದು ಒಳ್ಳೆ ಮಮತೆಯಿಂದ ಆ ತರುಣಿಗೆ ಆಶ್ವಾಸನವನ್ನಿತ್ತನು.

ತಡವಿಲ್ಲದೆ ಮಲೇಶಿಯು ತನ್ನ ಸಂದುಕದೊಳಗಿಂದ ನಾಲ್ಕು ರೂಪಾಯಿಗಳನ್ನು ತೆಗೆದುಕೊಂಡು ಸಮೀಪದಲ್ಲಿಯೇ ಇರುವ ಪೇಟೆಯ ಊರಿಗೆ ಹೋಗಿ ಕನ್ನಡಿಯನ್ನು ಕೊಂಡುಕೊಂಡು, ಒಂದೇ ತಾಸಿನಲ್ಲಿ ಮರಳಿ ಬಂದು ಅದನ್ನು ಗಿರಿಬಾಯಿಯ ಸ್ವಾಧೀನ ಮಾಡಿದನು. ಅವಳು ಸಂತುಷ್ಟಳಾಗಿ ಮಲ್ಲೇಶಿಯ ಉಪಕಾರವನ್ನು ಕೊಂಡಾಡಿದಳು. ಅವಳ ಶುಚಿಸ್ಮಿತವಾದ ಮುಖವನ್ನು ಕಂಡು ಅವನ ಮನಸ್ಸಿನಲ್ಲಿ ಒಂದು ಪ್ರಕಾರದ ತೃಪಿಯುಂಟಾದಂತಾಗಿ ತಾನಿಂದು ಧನ್ಯನೇ ಆದೆನೆಂದು ಅವನು ಭವಿಸಿಕೊಂಡನು. ಆ ನೆವದಿಂದ ಮಲ್ಲೇಶಿ ಗಿರಿಬಾಯಿಯವರ ನಡುವೆ ದೃಢವಾದ ಸ್ನೇಹವು ನೆಲೆ ಗೊಂಡಿತು. ಗಿರಿಬಾಯಿಗೆ ತಾನೊಂದು ಉಪಕಾರ ಮಾಡದಿದ್ದ ದಿವಸವು ಮಲ್ಲೇಶಿಗೆ ದುರ್ದಿನವು. ಮಲ್ಲೇಶಿಯನ್ನು ಸಂತೋಷಗೊಳಿಸದಿದ್ದ ದಿವಸವು ವ್ಯರ್ಥವಾಗಿ ಹೋಯಿತೆಂದು ಆ ಬಾಲೆಯು ವ್ಯಸನಪಡುವಳು. ತರುಣ ತರುಣಿಯರ ನಡುವಿನ ಸ್ನೇಹವು ಪ್ರೇಮದಲ್ಲಿ ಪರಿಣಮಿಸಿತೆಂದು ಹೇಳುವ ಕಥೆಗಾರನ ಫಲಿತಾರ್ಥವೂ “ಮಳೆ ಬಂದಲ್ಲಿ ಕೆಸರಾದೀತೈ!” ಎಂದು ಹೇಳುವ ಬುಡುಬುಡಿಗನ ಭವಿಷ್ಯಜ್ಞಾನವೂ ಒಂದೇ ಸರಿ.

ಒಂದು ದಿನ ಮಲ್ಲೇಶಿಯು ತಲೆನೋವಿಗಾಗಿ ಹಾಸಿಗೆ ಹಿಡಿದು ಮಲಗಿ ಕೊಂಡನು. ಹೇಮರಡ್ಡಿ ಪ್ರಭುಗಳೂ ದೊರೆಸಾನಿಯವರೂ ಮಲ್ಲೇಶಿಗೆ ತಲೆನೋವಾದದ್ದು ಕೇಳಿ ವ್ಯಥಿತರಾಗಿ, ಏನೂ ಕೆಲಸ ಮಾಡದೆ ವಿಶ್ರಾಂತಿಯನ್ನು ತೆಗೆದು ಕೊಳ್ಳೆಂದು ಅವನಿಗೆ ಹೇಳಿದಳು. ಮಧ್ಯಾಹ್ನದ ಮೇಲೆ ಗಿರಿಬಾಯಿಯು ದಾಲಚಿನ್ನಿಯ ಎಣ್ಣೆಯನ್ನು ತೆಗೆದುಕೊಂಡು ಮಲ್ಲೇಶಿಯ ಬಳಿಗೆ ಹೋಗಿ ಅವನ ಹಣೆಯ ಮೇಲೆ ತನ್ನ ಹಸ್ತವನ್ನಿಟ್ಟು “ಮಲ್ಲೇಶಿ, ತಲೆಬೇನೆ ಹೇಗಿದೆ?” ಎಂದು ಬಲು ಮಮತೆಯಿಂದ ಕೇಳಿದಳು, ಆ ನವಯುವತಿಯ ಕೋಮಲವಾದ ಹಸ್ತ ಸ್ಪರ್ಶವನ್ನನುಭವಿಸಿದ ಕೂಡಲೆ ಮಲ್ಲೇಶಿಯ ಮೈಯಲ್ಲಿ ಭರನೆ ವಿದ್ಯುತ್ ಪ್ರವಾಹವು ಸಂಚರಿಸಿದಂತಾಗಿ ಅವನು ಚಟ್ಟನೆ ಎದ್ದು ಕುಳಿತು ಗಿರಿಬಾಯಿಯ ಹಸ್ತವನ್ನು ತನ್ನ ಕೈಯಲ್ಲಿ ಗಟ್ಟಿಯಾಗಿ ಹಿಡಿದು “ಓ! ಅಮೃತಹಸ್ತವೆ! ಓ, ಸಿರಿಗಂಧದ ಪೂಸೆ!” ಎಂದು ಉದ್ಗಾರ ತೆಗೆದು, “ಗಿರಿಬಾಯಿ, ಚಮತ್ಕಾರ ನೋಡಿದಿಯಾ? ನಿನ್ನಿ ಕೋಮಲವಾದ ಹಸ್ತ ಸ್ಪರ್ಶದಿಂದ ನನ್ನ ತಲೆನೋವೆಲ್ಲ ಭರನೆ ಇಳಿದು ಹೋಯಿತು. ಆದರೆ ನನ್ನೆದೆ ಮಾತ್ರ ಯಾಕೋ ಡಬ ಡಬ ಹಾರಲಾರಂಭಿಸಿದೆ. ಇಲ್ಲಿಷ್ಟು ಕೈಯಾಡಿ ಸಬಾರದೆ?” ಎಂದು ನುಡಿದವನೇ ಅವಳ ಪದ್ಮಕೋಮಲವಾದ ಹಸ್ತವನ್ನು ತನ್ನ ಎದೆಗೆ ತಗಲಿಸಿ ಆ ಹಸ್ತವನ್ನು ಅವಳು ಸೆಳಕೊಳ್ಳದಂತೆ ಅವನ್ನು ಗಟ್ಟಿಯಾಗಿ ತನ್ನ ಎರಡೂ ಕೈಗಳಿಂದ ಹಿಡುಕೊಂಡು “ಓ ಹೂವಿನ ಹಸ್ತವೆ ! ಓ ಸಿರಿಗಂಧದ ಪೂಸೆ!” ಎಂದು ಮತ್ತೆ ಕೂಗಿದನು.

ಹೀಗೆ ಗಟ್ಟಿಗಟ್ಟಿಯಾಗಿ ಉಚ್ಚರಿಸಿದ ಅವನ ಉದ್ಗಾರಗಳನ್ನು ಹೊರಗಿದ್ದವರಾರಾದರೂ ಕೇಳಿದರೆ ಪರಿಣಾಮವೇನೆಂಬ ಭೀತಿಯಿಂದ ಗಿರಿ ಬಾಯಿಯು ತಾನೇನು ಮಾಡುವೆನೆಂಬದನ್ನು ಅರಿಯದೆ ತನ್ನ ದೊಂದು ಕೈಯನ್ನು ಮಲ್ಲೇಶಿಯ ಹೆಗಲಮೇಲೆ ಹಾಕಿ, ಮತ್ತೊಂದು ಕೈಯಿಂದ ಅವನ ಬಾಯನ್ನು ಗಟ್ಟಿಯಾಗಿ ಮುಚ್ಚಿ “ಮಲ್ಲೇಶಿ, ನೀನು ಹಾಗೆ ಕೂಗಿದರೆ ಜನರು ವಿಪರೀತವಾದ ಕಲ್ಪನೆಯನ್ನು ಮಾಡಬಹುದಲ್ಲವೆ?” ಎಂದು ಕೇಳಿದಳು.

“ಗಿರಿಬಾಯಿ, ಬೇನೆಯಿಂದ ಪೀಡಿತನಾದ ನಾನು ನಿನ್ನ ಹಸ್ತದಿಂದ ಉಂಟಾದ ಸಹಾನುಭೂತಿಯ ಮೂಲಕ ಹಾಗೆ ಚಕಿತನಾಗಿ ಕೂಗಿದೆನು, ನೀನು ತಳೆದಿರುವ ಶಂಕೆಯಾದರೂ ಸರಿಯಾದದ್ದು. ಸದ್ಯಕ್ಕೆ ನನ್ನ ಕೊರಳಿನಲ್ಲಿರುವ ನಿನ್ನೀ ಸುಖಮಯವಾದ ಬಾಹುಪಾಶವನ್ನು ಇನ್ನೊಂದು ಕ್ಷಣ ಹೊತ್ತಾದರೂ ನೀನು ಹೀಗೆಯೇ ಇರಗೊಟ್ಟರೆ ನಾನು ಕೃತಾರ್ಥನಾಗುವೆನು” ಎಂದು ಹೇಳಿಕೊಂಡು ಮಲ್ಲೇಶಿಯು ತನ್ನ ಹೆಗಲ ಮೇಲಿರುವ ಗಿರಿಬಾಯಿಯ ನಳಿತೋಳನ್ನು ಅಲ್ಲಿಯೇ ಗಟ್ಟಿಯಾಗಿ ಹಿಡಿದುಕೊಂಡು ಕುಳಿತನು.

ಪ್ರೇಮದ ಉತ್ಪತ್ತಿಯ ಮೇಘದ ಉತ್ಪತ್ತಿಯೂ ಹೇಗಾಗುವದೋ ಯಾರು ಬಲ್ಲರು? ಈ ಗಳಿಗೆಯಲ್ಲಿ ಬರಿದಾಗಿ ತೋರುವ ಮುಗಿಲಿನಲ್ಲಿ ಇನ್ನೊಂದು ಕ್ಷಣಕ್ಕೆ ಅಗಾಧವಾದ ಮೇಘಸಮುದಾಯವು ಹುಟ್ಟಿ, ಮಿಂಚು, ಕೋಲುಮಿಂಚು, ತಂಗಾಳಿಗಳ ವಿಲಕ್ಷಣವಾದ ಆಟವು ತೋರುವದುಂಟು. ಹಾಗೆಯೇ ಪ್ರೇಮೋದ್ಗಮಕ್ಕಾದರೂ ಹೇಳಿಕೊಳ್ಳುವಂಥ ನನ ಬೇಕಾಗುತ್ತದೆಂತಲ್ಲ. ಅಪ್ರತ್ಯಕ್ಷವಾದ ಕಾರಣಗಳು ಅನೇಕವಾಗಿರಬಹುದು. ಪದಾರ್ಥ ವಿಜ್ಞಾನಶಾಸ್ತ್ರೀಯು ವಿದ್ಯುತ್ತಿನ ಉತ್ಪತ್ತಿಯ ಅನೇಕವಾದ ಕಾರಣಗಳನ್ನು ಕಂಡುಹಿಡಿದಿರಬಹುದು. ಆದರೆ ಅಕಸ್ಮಾತ್ತಾಗಿ ಜಗ್ಗನೆ ಮಿನುಗಿದ ಕೋಲು ಮಿಂಚಿನ ಚಮತ್ಕಾರವನ್ನು ಕಂಡು ಆ ಶಾಸ್ತ್ರಿಯು ಫಕ್ಕನೆ ಚಕಿತನಾಗಿ ಮೂರ್ಛಿತನು ಕೂಡ ಆಗಬಹುದು. ಗಿರಿಬಾಯಿಯ ಅಂಗಗಳಲ್ಲಿ ಪ್ರೇಮದ ಸಂಚಾರವಂತಾಯಿತೋ ಹೇಳಲಾಗದು. ಅವಳ ಮುಖದಲ್ಲಿ ವಿಲಕ್ಷಣವಾದ ತೇಜಸ್ಸು ತೋರಿತು. ಮೈಯಲ್ಲೆಲ್ಲ ರೋಮಾಂಚಗಳೆದ್ದವು. ಚಿತ್ತವು ಚಮತ್ಕಾರವಾದದ್ದಾಯಿತು. ಲೀಲೆಯಿಂದವಳು ಮಲ್ಲೇಶಿಯ ಗದ್ದವನ್ನು ಹಿಡಿದು “ಹುಚ್ಚ ಹುಡುಗನಿರುವಿ ನೀನು!” ಎಂದು ನುಡಿದು ಮಂದಹಾಸ ಗೈದಳು.

ತತ್‌ಕ್ಷಣವೇ ಮಲ್ಲೇಶಿಯು ಚತುರನಾದ ಕಾಮಿಯಂತೆ ಆ ನವತರುಣಿಯ ಅಧರವನ್ನು ಚುಂಬಿಸಿ ಹುಚ್ಚೆದ್ದು ಕುಣಿದನು. ಕತ್ತಲೆಯಲ್ಲಿ ಎಂಥದಾದರೂ ಒಂದು ಪ್ರಕಾಶದ ಅಪೇಕ್ಷೆಯಾಗುವದುಂಟು. ಆದರೆ ಅತಿ ದೀಪ್ತಿಮಯವಾದ ವಿದ್ಯುಲ್ಲತೆಯ ತೇಜಸ್ಸು ಕಣ್ಣಿಗೆ ಸರ್ವಥಾ ಸಹನವಾಗದಿರುವಂತೆ ಪ್ರೇಮಸಮ್ಮೂಢನಾದ ಮಲ್ಲೇಶಿಯ ಚಿತ್ರಕ್ಕೆ ಆಕಸ್ಮಾತ್ತಾಗಿ ತೋರಿದ ಗಿರಿಬಾಯಿಯ ಮೃದುಹಾಸವು ವಿಭ್ರಮವನ್ನುಂಟು ಮಾಡಿತು.

ಈ ಸಂಗತಿಯಾದ ಬಳಿಕ ಗಿರಿಬಾಯಿ ಮಲ್ಲೇಶಿಗಳು ಚಮತ್ಕಾರವಾದ ಚಿತ್ತ ವೃತ್ತಿಯುಳ್ಳವರಾದರು. ಅವರ ಸಲಿಗೆಯ ಮಾತುಗಳು ನಿಂತುಹೋಗಿ ನೇತ್ರ ವ್ಯಾಪಾರಗಳಿಂದಲೇ ಅವರ ಸಂವಾದಗಳು ನಡೆದವು. ಹೆಸರುಗೊಂಡು ಅವರು ಒಬ್ಬರೊಬ್ಬರನ್ನು ಕರೆಯದಾದರು. ಮಲ್ಲೇಶಿಯನ್ನು ಓರೆ ಕಣಿನಿಂದ ನೋಡುತ್ತ ಬರುವ ಗಿರಿಬಾಯಿಯನ್ನು ನೋಡಿ ದೊರೆಸಾನಿಯವರು ನಕ್ಕರು. ಜಾಣರು ಮತ್ತಿನ್ನೆಷ್ಟು ಪರೀಕ್ಷೆ ಮಾಡಿ ನೋಡುವರು? ಎಲ್ಲರಿಗೂ ಬೇಕಾದ ಮಾತದು. ಅಂದಮೇಲೆ ಗಿರಿಜಾ ಮಲ್ಲೇಶ್ವರರ ಕಲ್ಯಾಣೋತ್ಸವವು ಬೇಗನೆ ಆಗಿಹೋಯಿತು.

ಮಲ್ಲೇಶ್ವರನು ಅಕ್ಷರಸ್ಥನೂ ವಿನಯಶೀಲನೂ ಅಭಿಜಾತನೂ ಆದ ನಾಗರಿಕನಾದದ್ದು ಕಂಡು ದೊರೆಗಳು ಅವನನ್ನು ಅರಮನೆಯ ಕೋಶಾಧ್ಯಕ್ಷನನ್ನಾಗಿ ಮಾಡಿದರು. ಗಿರಿಬಾಯಿಯಂತೂ ದೊರೆಸಾನಿಯವರ ವಿಶ್ವಾಸದ ಪರಿಚಾರಿಕೆಯು. “ಊರನ್ನಾಳುವ ದೊರೆಗಳೇ ಮನೆಯಲ್ಲಿ ಬಾಗಿಬಾಗಿ ನಡಕೊಳ್ಳುವದನ್ನು ಕಂಡು, ನಮ್ಮಂಥವರ ಹೆಂಡರು ನಮ್ಮ ತಲೆಮೇಲೇರಿ ಕುಳ್ಳಿರುವದೇನು ಆಶ್ಚರ್ಯ ತಾಯಿಯವರೇ?” ಎಂದು ಮಲ್ಲೇಶಿಯು ಆಗಾಗ್ಗೆ ದೊರೆಸಾನಿಯವರ ಮುಂದೆ ದೂರಿಕೊಂಡರೂ ವೈವಾಹಿಕ ಸ್ಥಿತಿಯು ಸುಖಕರವಾದದ್ದೆಂಬದು ಅವನ ನಿಜವಾದ ಅಭಿಪ್ರಾಯವು.
*****


=======================================

ಗುಲ್ಬಾಯಿ


ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ ಔಷಧಾಲಯದ ಬಳಿಯಲ್ಲಿಯೇ ಇರುವದೊಂದು ಮನೆ ಹಿಡಿಯುವದು ನಮಗೆ ಅವಶ್ಯವಾಗಿತ್ತು. ಅಂಥ ಪ್ರಶಸ್ತವಾದ ಮನೆ ದೊರಕಿಲ್ಲದು. ಪ್ರಶಸ್ತವಾದದೊಂದು ಬಂಗಲೆ ಮಾತ್ರ ನಮಗೆ ಅನುಕೂಲವಾಗಿತ್ತು. ಆದರೆ ಅದರ ಯಜಮಾನನು ಅದನ್ನು ಬಾಡಿಗೆಗಾಗಿ ಯಾರಿಗೂ ಕೊಡುವದಿಲ್ಲೆಂದು ಅಲ್ಲಿಯ ಜನರು ಹೇಳಿದರು. ಯಜಮಾನರಾರೆಂದು ವಿಚಾರಮಾಡಲಾಗಿ ಕೊಲ್ಲಾಪುರದಲ್ಲಿ ರುವ ನಾನಾಸಾಹೇಬ ದೇಶಪಾಂಡೆ ಎಂಬ ವಕೀಲರ ಬಂಗಲೆ ಅದೆಂದು ತಿಳಿಯಬಂದಿತು. ನಾನಾಸಾಹೇಬರೂ ನಾನೂ ಕೂಡಿಯೇ ಮುಂಚೆ ಪುಣೆಯ ಫರ್ಗ್ಯುಸನ್ ಕಾಲೇಜದಲ್ಲಿ ಕಲಿಯುತ್ತಿದ್ದೆವು. ಅರ್ಥಾತ್ ಆ ಬಂಗಲೆಯು ನಮಗೆ ಸಿಕ್ಕೇಸಿಕ್ಕುವದೆಂದು ಹೇಳಿ ನಾವೆಲ್ಲರೂ ನಾನಾಸಾಹೇಬ ರನ್ನು ಕೇಳುವದಕ್ಕಾಗಿ ಮಿರ್ಜಿಯಿಂದ ಕೊಲ್ಲಾಪುರಕ್ಕೆ ಹೊರಟೆವು.

ಸಾಯಂಕಾಲದ ಐದು ಗಂಟೆಯ ಗಾಡಿಗೆ ಸೆಕಂಡ ಕ್ಲಾಸದ ಡಬ್ಬೆಗಳಿಲ್ಲ. ಇದ್ದ ಡಬ್ಬಿಗಳಲ್ಲಿ ಅಂದು ಅತಿಶಯವಾದ ದಟ್ಟಣೆಯು, ಗಿಬ್ರಾ ಯಲ್‌ನೆಂಬ ಟಿಕೆಟ ಕಲೆಕ್ಟರನಿಗೆ ಬಹುಪರಿಯಾಗಿ ಹೇಳಿಕೊಂಡು ನಾವು ಮೂವರು ಒಂದು ಕಂಪಾರ್ಟಮೆಂಟದಲ್ಲಿ ಆರಾಮವಾಗಿ ಕುಳಿತುಕೊಂಡೆವು. ಗಾಡಿ ಹೊರಡುವದರೊಳಗಾಗಿ ಮತ್ತೆ ಮಂದಿ ಬಂದು ತುಂಬುವದೋ ಎಂಬ ಭೀತಿಯು ನಮಗೆ ಇದ್ದೇ ಇತ್ತು. ಅನೇಕ ಜನರು ಬಂದು ನಮ್ಮ ಬಾಗಿಲವನ್ನು ತಟ್ಟಿಯೇ ತಟ್ಟಿದರು. ಆ ಜನರ ವೇಷ-ಸ್ಥಿತಿಗಳನ್ನು ಕಂಡು ಇದು ರಿರುರ್ವ ಕಂಪಾರ್ಟ” ಎಂದೂ, ಇಲ್ಲಿಯವರು ಕೆಲವರು ಏನೋ ನಿಮಿತ್ತ ವಾಗಿ ಹೊರಗೆ ಹೋಗಿರುವರು” ಎಂದೂ, ಯಾಕೆ ತೊಂದರೆ ಮಾಡಿ ಕೊಳ್ಳುತ್ತೀರಿ? ಮುಂದೆ ಎಥೇಷ್ಟ ಡಬ್ಬಿಗಳು ತೆರವೇ ಇವೆ” ಎಂದೂ ಹೇಳಿ ಅವರನ್ನು ದೂಡಿಹಾಕಿದೆವು. ಇಂಥ ಸುಸಮಯದಲ್ಲಿ ಗಾಡಿಯು ನಡೆಯಲಾ ರಂಭಿಸಿದರೆ ಬಂಗಾರದಂತಾಗುವದೆಂದು ನಾವು ಉದ್ಗಾರ ತೆಗೆಯುವಷ್ಟರಲ್ಲಿಯೇ ಸುಧಾರಿಸಿದ ವಿದುಷಿಯ ವೇಷವನ್ನು ಧರಿಸಿದವಳಾದ ತರುಣಿ ಯೋರ್ವಳು ಮತ್ತೊಬ್ಬ ಸ್ತ್ರೀಯನ್ನೂ ಮಧ್ಯಮವಯಸ್ಕನಾದ ಗೃಹಸ್ಥ ನೊಬ್ಬನನ್ನೂ ಕೂಡಿಕೊಂಡು ನೆಟ್ಟನೆ ನಾವಿದ್ದಲ್ಲಿಗೆ ಬಂದು ನಿಂತಳು.

“ಸ್ಥಳವೇ ಇಲ್ಲ, ಮಾಡುವದಿನ್ನೇನು? ಈ ಸಭ್ಯಗೃಹಸ್ಥರಿಗೆ ನಮಗೋಸ್ಕರವಾಗಿ ಕೊಂಚ ತೊಂದರೆಯಾದರೂ ಇವರು ನಮ್ಮನ್ನು ಕ್ಷಮಿಸುವರು” ಎಂದ ಆ ಯುವತಿ ಯು ಮಂದಸ್ಮಿತವಾಗಿ ನುಡಿದಳು.

ನಿಷೇಧಿಸಲಂತೂ ನಾವು ಸರ್ವಥಾ ಅಸಮರ್ಥರಾಗಿಹೋದೆವು. ನಮ್ಮ ಶ್ಯಾಮರಾಯರು ಆ ನವತರುಣಿಯನ್ನು ಕುರಿತು: “Most welcome! ( ಅವಶ್ಯವಾಗಿ ಬನ್ನಿರಿ, ಸ್ಥಳವು ನಿಮ್ಮದೇ ಇದೆ)” ಎಂದು ಹೇಳಿದವರೇ ತಾವಾಗಿ ಎದ್ದು ಆ ಲಲನಾ ಜನರಿಗೆ ಒಳಗೆ ಬರಲನುವಾಗುವಂತೆ ಕಂಪಾರ್ಟಮೆಂಟದ ಬಾಗಿಲನ್ನು ತೆರೆದಿಟ್ಟರು. ಆ ತರುಣಿಯು ಸಾವಕಾಶವಾಗಿ ಒಳಗೆ ಬಂದು ಕಿಟಕೆಯನ್ನು ಹಿಡುಕೊಂಡು ಆಧ್ಯತೆಯಿಂದ ಕುಳಿತುಕೊಂಡು “ರಾವಸಾಹೇಬ, ನೀವು ಮೂವರೂ ಒಂದು ಬೆಂಚದ ಮೇಲೆ ದಯಮಾಡಿ ಕುಳಿತರೆ ಈಚೆಯ ಬೆಂಚು ಸ್ವತಂತ್ರವಾಗಿ ನಮ್ಮ ಜನರಿಗಾಗುತ್ತದೆ” ಎಂದು ಕೇಳಿಕೊಂಡಳೋ ಆಜ್ಞೆ ಮಾಡಿದಳೋ ನಮಗೆ ಚನ್ನಾಗಿ ತಿಳಿಯದಿದ್ದರೂ ನಾವು ಒಂದು ಸಮಗ್ರವಾದ ಬೆಂಚವನ್ನು ಅವರಿಗೆ ಬಿಟ್ಟು ಬಿಟ್ಟದ್ದು ಸರಿ. ಆ ಮೂವರು ಯಥಾಸ್ಥಿತವಾಗಿ ಕುಳಿತ ಬಳಿಕ.

“ನಮ್ಮ ಗುಲ್ ಬಾಯಿ ಇದ್ದರೆ ಸ್ಥಳಕ್ಕೇನು ಕಡಿಮೆ ? ಇಂದು ಎತ್ತ ನೋಡಿದತ್ತ ದಟ್ಟಣೆ ಬಹಳ” ಎಂದು ಗುಲ್ ಬಾಯಿಯ ಸಂಗಡ ಬಂದ ಸ್ತ್ರೀಯು ತನ್ನ ಮಗುವನ್ನು ಚುಂಬಿಸುತ್ತೆ ಸಂತೋಷದಿಂದ ನುಡಿದಳು.

“ಮಾಣಿಕಬಾಯಿ, ಯಾರಾದರೇನು? ಒಳ್ಳೆ ಮಾತಾಡಿದರೆ ಒಳ್ಳೆ ಕೆಲಸಗಳಾಗುತ್ತವೆ. ಆಹುದಲ್ಲರೀ ಅಣ್ಣಾಸಾಹೇಬ” ಎಂದು ಗುಲ್ ಬಾಯಿಯು ಮೇಲ್ಕಂಡ ಬಿರುದನ್ನು ನನಗೆ ಕೊಟ್ಟು ಕೇಳಿದಳು.

“ನಿಮ್ಮಂಥ ಒಳ್ಳೇ ಜನರು ಬಂದರೆ ಯಾರು ಬೇಡೆನ್ನುತ್ತಾರೆ? ಗ್ರಾಮ್ಯರಾದ ಜನರು ಬಂದು ಸೇರಿದರೆ ಮಾತ್ರ ಬಹು ವ್ಯತ್ಯಾಸವಾಗುತ್ತದೆ. ನೀವು ಬಂದದ್ದೂ ವಿಹಿತವೇ ಆಯಿತು” ಎಂದು ನಾನು ಸಮ್ಮತಿಸಿ ನುಡಿದೆನು.

ಮುಂದೆ ಒಂದೇ ನಿಮಿಷದಲ್ಲಿ ಗಾಡಿಯು ತನ್ನ ಸ್ಥಾನವನ್ನು ಬಿಟ್ಟು ಒಳ್ಳೆ ವೇಗದಿಂದ ಧಾವಿಸಲಾರಂಭಿಸಿತು. ಮಾರ್ಗದ ಬದಿಗಿದ್ದ ಗಿಡಗಳು ಗಾಡಿಗೆ ಇದಿರಾಗಿ ಓಡುತ್ತಿರುವದನ್ನು ಮಾಣಿಕಬಾಯಿಯ ಚಿಕ್ಕಮಗಳಾದ ರತನಬಾಯಿಯು ನೋಡಿ ತಾನೂ ಹೊರಗಿನ ಚಮತ್ಕಾರವನ್ನು ನೋಡುವೆನೆಂದು ಕುಣಿಕುಣಿದಾಡಿ ಕೂಗಿದಳು. ಈಚೆಯ ಕಿಟಕೆಗೆ ಕುಳಿತಿದ್ದ ಗುಲ್ ಬಾಯಿಯು ಅವಳನ್ನು ಕರಕೊಳ್ಳಲೊಲ್ಲಳು. ಮತ್ತೊಂದು ಕಿಟಕಿಗೆ ಹೊಂದಿ ಕೊಂಡು ಕುಳಿತ ಗೃಹಸ್ಥನು ಮಕ್ಕಳನ್ನೆತ್ತಿಕೊಳ್ಳುವದು ತನ್ನ ಕರ್ತವ್ಯವಲ್ಲೆಂದು ತಿಳಿದಿದ್ದನೋ ಏನೋ, ಆ ಮಗುವನ್ನು ಅವನು ಕಣ್ಣೆತ್ತಿ ನೋಡಲೊಲ್ಲನು. ಆರ್ತೆಯಾದ ಅವಳ ಮಾತೆಯು ಅಭಿಪ್ರಾಯ ವ್ಯಂಜಕವಾದ ದೃಷ್ಟಿಯಿಂದ ನನ್ನನ್ನು ನೋಡಿದಳು. ಸದ್ಗುಣಿಯಾದ ಸ್ತ್ರೀಯ ಕಳೆಯುಳ್ಳವಳಾದ ಮಾಣಿಕಬಾಯಿಯ ಆ ಅವ್ಯಕ್ತವಾದ ಪ್ರಾರ್ಥನೆಯನ್ನು ಮನ್ನಿಸಿ ನಾನು ರತನಬಾಯಿಯನ್ನು ಎತ್ತಿಕೊಂಡು ಜೋಕೆಯಿಂದ ಆ ಮಗುವಿಗೆ ಹೊರಗಿನ ನೋಟವನ್ನು ತೋರಿಸಲಾರಂಭಿಸಿದೆನು. ಈ ಅಲ್ಪ ಉಪಕಾರವು ಆ ತಾಯಿಗೆ ಬಹಳಾಯಿತು. ಕೃತಜ್ಞತೆಯಿಂದ ಅವಳು ನನ್ನನ್ನು ನೋಡಿ, “ಆಣ್ಣಾ, ನೀವು ಮಕ್ಕಳಂದಿಗರಾಗಿ ತೋರುವಿರಿ” ಎಂದು ನುಡಿದು ಮುಖದಲ್ಲಿ ಶುಚಿಸ್ಮಿತವನ್ನು ತಳೆದಳು.

“ಬಂಗಾರದರಗಿಳಿಯಂಥ ಮಗುವನ್ನು ಯಾರಾದರೂ ಪ್ರೇಮದಿಂದ ಎತ್ತಿಕೊಳ್ಳುವರು. ಅದಕ್ಕಿಷ್ಟೇಕೆ ಕೃತಜ್ಞತೆ?” ಎಂದು ಗುಲ್‍ಬಾಯಿಯು ನಮ್ಮಿರ್ವರನ್ನು ನೋಡಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದಳು.

“ಹಾಗಾದರೆ ನೀವೇಕೆ ಆ ಕೂಸನ್ನು ಎತ್ತಿಕೊಳ್ಳಲಿಲ್ಲ ಗುಲ್‍ಬಾಯಿ?” ಎಂದು ನಾನು ಮಾತಿಗೆ ಮಾತಾಡಿದೆನು. ಬಲು ಮಾತಿನವಳಾದ ಆ ತರುಣಿ ಯೊಡನೆ ಮಾತಾಡಲು ನನಗೆ ಸಂಕೋಚವೆನಿಸಲಿಲ್ಲ.

ಅದಕ್ಕೆ ಗುಲ್ ಬಾಯಿಯು ನಕ್ಕು : “ರತನಬಾಯಿಯನ್ನು ನಾನೆತ್ತಿ ಕೊಳ್ಳುವದನ್ನು ನೀವೇನು ಹೇಳುವಿರಿ? ಅವಳು ನಮ್ಮ ಮನೆಯವಳೇ, ಆದರೆ ನಾನುಟ್ಟು ಕೊಂಡಿರುವ ಈ ಸೂಕ್ಷ್ಮವಾದ ಜರದ ಪತ್ತಲವು ಮಾಸುವದೆಂದು ತಿಳಿದು ನಾನಾಕೆಯನ್ನು ಎತ್ತಿಕೊಳ್ಳಲಿಲ್ಲ” ಎಂದು ನುಡಿದು ತನ್ನ ಮಹಾ ವಸ್ತ್ರವನ್ನು ತೀಡಿ ಸಮಮಾಡಿಕೊಂಡಳು.

“ಗುಲ್ಬಾಯಿ, ನಿಮಗಿಷ್ಟು ಉಡಿಗೆ ತೊಡಿಗೆಗಳ ಚಿಂತೆಯಾಗಿದ್ದರೆ ನೀವು ಮತ್ತೊಂದು ಸಮಯದಲ್ಲಿ ಸೆಕಂಡಕ್ಲಾಸ ಡಬ್ಬೆಯುಳ್ಳ ಗಾಡಿಗೆ ಬರಬೇಕಾಗಿತ್ತು!” ಎಂದು ನಮ್ಮ ಮಾಧವರಾಯರು ಸೂಚಿಸಿದರು.

“ನಾನೆಂದೂ ಮೂರನೆಯ ವರ್ಗದ ಡಬ್ಬಿಯಲ್ಲಿ ಕುಳಿತು ಪ್ರವಾಸ ಮಾಡಿದವಳಲ್ಲ. ಇಂದು ರಾತ್ರಿ ಒಂಬತ್ತು ಗಂಟೆಗೆ ಕೊಲ್ಲಾಪುರದಲ್ಲಿ ನಾಟಕವಿರುವದರಿಂದ ಅನಿರ್ವಾಹಕ್ಕಾಗಿ ಈ ಗಾಡಿಯಲ್ಲಿ ಪ್ರವಾಸಮಾಡ ಬೇಕಾಯಿತು. ಯುರೋಪಿಯನ್ ಥರ್ಡ ಕ್ಲಾಸದಲ್ಲಿಯಾದರೂ ನನಗೆ ಪ್ರವೇಶವಿಲ್ಲ.

“ನೀವು ಯುರೋಪಿಯನ್ನರ ಝಗ ಟೊಪ್ಪಿಗೆಗಳನ್ನು ಮಾಡಿಸಿರುವಿರಿ; ಹಾಕಿಕೊಂಡು ಬಂದಿದ್ದರೆ ಈ ಸಮಯದಲ್ಲಿ ಉಪಯೋಗವಾಗುತ್ತಿತ್ತು?” ಎಂದು ಮಾಣಿಕಬಾಯಿಯು ಚೇಷ್ಟೆ ಮಾಡಿ ನುಡಿದು ನಕ್ಕಳು.

“ಝಗ ಟೊಪ್ಪಿಗೆಗಳನ್ನು ಹೇಗಾದರೂ ಸಂಪಾದಿಸಬಹುದು. ಆದರೆ ಯುರೋಪಿಯನ್ನರ ಬಿಳಿದಾದ ಮೈ ಬಣ್ಣ ಎಲ್ಲಿಂದ ತರಲಿ ಮಾಣಿಕಬಾಯಿ>”

ಇದೇ ಸಮಯವೆಂದು ನೆನೆದು ನಾನು : “ಯಾಕೆ ಗುಲ್ಬಾಯಿ, ನೀವು ಗೌರವರ್ಣದವರೇ ಆಗಿರುವಿರಿ. ನಿಮ್ಮ ಸುಂದರವಾದ ಮುಖಕ್ಕೆ ಕೊಂಚ ‘ಚರಿಬ್ಲಾಸಮ್’ ಬಣ್ಣವನ್ನು ತಗಲಿಸಿದರೆ ನೀವು ಯುರೋಪಿಯನ್ನರಲ್ಲವೆಂದು ಸಹಸಾ ಯಾರೂ ಹೇಳರು” ಎಂದು ವಿನೋದಗೈದು ನುಡಿದೆನು.

ನನ್ನ ಮಾತಿನಿಂದ ಗುಲ್‍ಬಾಯಿಯ ಮನಸ್ಸಿಗೆ ಕೋಪ ವಿಷಾದಗಳೇನೂ ತಟ್ಟಿದಂತೆ ತೋರಲಿಲ್ಲ. ಅವಳು ಕಿಂಚಿತ್ ಮಂದಸ್ಮಿತೆಯಾಗಿ “ಅಣ್ಣಾಸಾಹೇಬ, ಬಣ್ಣವನ್ನು ಹಚ್ಚಿಕೊಳ್ಳಲು ನನಗೆ ನಾಚಿಕೆ ಬರುತ್ತದೆ” ಎಂದು ನುಡಿದಳು. ಆದರೂ ಆ ತರುಣಿಯ ಕಪೋಲಗಳಲ್ಲಿ ಎಷ್ಟು ಮಟ್ಟಿಗೆಯ ಲಜ್ಜೆಯ ಛಟೆಯು ವ್ಯಕ್ತವಾಗಿ ಕಾಣಲಿಲ್ಲ.

“ನಾಚಿಕೆ ಬಂದರಂತೂ ನಿಮ್ಮ ಚಲುವಾದ ಮುಖವು ಹೆಚ್ಚಾಗಿ ಗೌರವರ್ಣವನ್ನು ತಳೆಯುವದು, ಲಜ್ಜೆ ಬಾರದಿದ್ದರಂತೂ ನೀವು ನಿಃಸಂಶಯವಾಗಿ ಯುರೋಪಿಯನ್ನರೇ. ಸಣ್ಣ ಪುಟ್ಟ ಮಾತುಗಳಿಗಾಗಿ ಯುರೋಪಿಯನ್ನ ಸ್ತ್ರೀಯರು ತಮ್ಮ ಮುಖಕ್ಕೆ ಲಜ್ಜೆಯ ಲಾಂಛನವು ತಗಲದಂತೆ ಎಚ್ಚರವುಳ್ಳವರಾಗಿರುವರು” ಎಂದು ನಾನು ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆನು.

ನನ್ನ ಮಾತು ಕೇಳಿ ನಮ್ಮ ಶ್ಯಾಮರಾಯರು ಒಳಿತಾಗಿ ನಕ್ಕರು. ಅದನ್ನು ಕಂಡು ಮಾತ್ರ ಗುಲ್‍ಬಾಯಿಯು ಲಜ್ಜಾವತನಮುಖಿಯಾದಳು. ಅವಳ ತಗ್ಗಿದ ಮೊಗದಲ್ಲಿ ಕೊಂಚ ಮುಗುಳನಗೆಯ ಜುಳುಕಾದರೂ ತೋರಿದಂತಾಯಿತು.

“ಗುಲ್ ಬಾಯಿ, ಇದೆಲ್ಲ ಹಾಗಿರಲಿ, ಇಂದು ನಾಟಕದವರು ಯಾವ ಪ್ರಯೋಗವನ್ನು ಮಾಡತಕ್ಕವರು?” ಎಂದು ಮಾಧವರಾಯರು ವಿಷಯಾಂತರವನ್ನು ಮಾಡಲಿಚ್ಚಿಸಿ ಕೇಳಿದರು.

“ಇಂದು ಮಹಾರಾಷ್ಟ್ರ ಅಭಿನವ ನಾಟಕ ಮಂಡಳಿಯವರ ‘ವಿನೋದ’ ನಾಟಕದ ಪ್ರಯೋಗವಿರುವದು, ನಿಮಗೆ ಗೊತ್ತೇ ಇಲ್ಲವೇನು? ಊರತುಂಬ ಹಸ್ತಪತ್ರಿಕೆಗಳನ್ನು ಹಂಚಿದರಲ್ಲ.

“ವಿನೋದ!” ಎಂದು ಉದ್ಗಾರ ತೆಗೆದು ಮಾಧವರಾಯರಂದದ್ದು : “ಗುಲ್ಬಾಯಿ, ವಿನೋದ ನಾಟಕದಲ್ಲಿ ಕಥಾಭಾಗವಿಲ್ಲ; ನೀತಿಯ ಮಾತುಗಳಿಲ್ಲ; ಕಲಿತುಕೊಳ್ಳತಕ್ಕ ಸಂಗತಿಗಳಿಲ್ಲ. ಕೈಗೆ ಸಿಕ್ಕಿದ ಚೂರುಗಳನ್ನು ಹಾಕಿ ಹೊಲಿದ ಕಂತೆಯೇ ಆದು.”

ಗುಲ್‍ಬಾಯಿಗೆ ಈ ಮಾತು ರುಚಿಸಲಿಲ್ಲ. ಅವಳು ಉದ್ರೇಕದಿಂದ ಮುಖವನ್ನೆತ್ತಿ “ಕಥಾಭಾಗ ತತ್ವನಿರೂಪಣಗಳೇ ನಿಮಗೆ ಬೇಕಾಗಿರುವಲ್ಲಿ ನೀವು ಬಿಟ್ಟು ಬಿಡದೆಲೆ ಪುರಾಣಗಳನ್ನು ಕೇಳಿರಿ! ನಾಟಕದ ಮುಖ್ಯ ಉದ್ದೇಶವು ಮನೋರಂಜವೇ ಹೊರತಾಗಿ ಮತ್ತೊಂದಿಲ್ಲ. ಅದು ಹಾಗಿರಲಿ, ನಿಮಗೆ ಮಾನ್ಯವಾಗಿರುವ ಸೌಭದ್ರ ನಾಟಕದಲ್ಲಿ ಅಂಗಭೂತನಾಗಿರುವ ನೀತಿ ತತ್ವಗಳಾವವು? ಯಾಕೆ, ತೊಂದರೆಯಲ್ಲಿ ಬಿದ್ದಿರುವಿರೇನು?” ಎಂದು ನುಡಿದಳು.

ಮಾಧವರಾಯರು ಮುಗುಳುನಗೆ ನಕ್ಕು “ಗುಲ್ ಬಾಯಿ, ನಾಟಕದಲ್ಲಿ ಕೇವಲವಾದ ಮನೋರಂಜನವನ್ನೇ ಹುಡುಕುವವರಾದ ನಿಮಗೆ ಬೇರೆ ಸಂಗತಿಗಳ ಅರಿಕೆಯಾಗುವದೆಂತು? ನೀವಿನ್ನೂ ಚಿಕ್ಕವರು. ಈ ವಿಷಯವು ಸದ್ಯಕ್ಕೆ ಹಾಗಿರಲಿ.” ಎಂದು ನುಡಿದು ಗುಲ್ಬಾಯಿಯ ಉತ್ಸಾಹವನ್ನೆಲ್ಲ ಕೆಡಿಸಿಬಿಟ್ಟರು.

ಮಾಣಿಕಬಾಯಿಯು ಮಧ್ಯದಲ್ಲಿಯೇ ಬಾಯಿಹಾಕಿ ಹೇಳಿದ್ದು : “ವಿನೋದ ನಾಟಕದ ಮೇಲೆ ಗುಲ್‍ಬಾಯಿಯ ಮನಸ್ಸು ಇಷ್ಟೇಕೆಂಬದನ್ನು ಹೇಳುತ್ತೇನೆ ಕೇಳಿರಿ. ನಾಟಕದಲ್ಲಿ ಪಿಯಾನೋ ಬಾರಿಸುವವನು ಬಲು ಇಂಪಾಗಿ ಬಾರಿಸುವನಂತೆ; ನಾಯಕ ನಾಯಿಕೆಯರು ಬಲು ‘ಮಧುರವಾಗಿಯೂ ಶಾಸ್ತ್ರೋಕ್ತವಾಗಿಯೂ ಹಾಡುವರಂತೆ, ಗಾನಪ್ರಿಯರಾದ ನಮ್ಮೀ ಬಾಯಿಯವರು ನಾಟಕವೆಂದರೆ ಮೂಗು ಕೊಯ್ಯಿಸಿಕೊಳ್ಳುತ್ತಾರೆ.”

“ಹೆಚ್ಚಿನಾಕೆ ನೀನು ಮಾಣಿಕಬಾಯಿ” ಎಂದು ಗುಲ್‍ಬಾಯಿಯು ಮಾಣಿಕಳನ್ನು ನಿಷೇಧಿಸಿ ನನ್ನನ್ನು ಕುರಿತು ಅಂದದ್ದು “ಅಣ್ಣಾಸಾಹೇಬ,

ರಮ್ಯಾಣಿ ವಿಶ್ಯ ಮತುರಶ್ರ್ ನಿಶಮ್ಯಶದ್ವಾನು|
ಪರ್ಯತ್ಸಕಿಬವತಿ ಯಃ ಸುಖಿತೋ ಪಿಜಂತುಃ||

ಎಂಬ ಉಕ್ತಿಯು ಸಂಪೂರ್‍ಣವಾದ ವ್ಯಾಪ್ತಿಯುಳ್ಳದ್ದಾಗಿದೆಯಷ್ಟೆ? ನಮ್ಮ ಮಾಣಿಕಬಾಯಿಯು ರಾಗಜ್ಞಾನದಲ್ಲಿ ಶುಂಠಳಾಗಿದ್ದರೂ ಇವಳು ಗಾನ ವಾದನಗಳನ್ನು ಕೇಳಿದಾಗಲೆಲ್ಲ “ಆಹಹಾ, ಏನು ಚಂದ ಬಾರಿಸುತ್ತಾನೆ!” “ಔ ನೋಡೆ! ಕೋಗಿಲ ಬೇರೆಯಲ್ಲ ಈಕೆ ಬೇರೆಯಲ್ಲ” ಎಂದು ಹಾವ ಭಾವಗಳನ್ನು ಮಾಡಿ ಉದ್ಗಾರ ತೆಗೆಯುತ್ತಾಳೆ. ಮತ್ತೆ ಹೇಳುತ್ತಾಳೆ, ನಾನೇ ಮೂಗು ಕೊಯಿಸಿಕೊಳ್ಳುವೆನೆಂದು!”

ಗುಲ್‍ಬಾಯಿಯು ಸಮಯೋಚಿತವಾಗಿ ಶಾಕುಂತಲದಲ್ಲಿಯ ಶ್ಲೋಕಾರ್ಧವನ್ನು ಉದಾಹರಿಸಿದ್ದು ಕೇಳಿ ಅವಳು ಚನ್ನಾಗಿ ಕಲಿತವಳಾಗಿರಬಹುದೆಂದು ನಾವು ತರ್ಕಿಸಿ ಅವಳ ಸ್ತುತಿ ಮಾಡಿದೆವು.

“ಯಾತರದರಿ! ನನ್ನ ಅಧ್ಯಯನವೆಷ್ಟರದು, ನಾನೆಷ್ಟರವಳು? ಹಾಗೂ ಹೀಗೂ ಮಾಡಿ ಮ್ಯಾಟ್ರಿಕ್ಯೂಲೇಶನ್ನ ಪರೀಕ್ಷೆಯೊಂದನ್ನು ದಾಟಿದ್ದೇನೆ. ಇಲ್ಲಿ ಕುಳಿತವರೇ ನನ್ನ ಗುರುಗಳು ಕಾಲೇಜದ ಅಭ್ಯಾಸವನ್ನು ಕೈಕೊಳ್ಳಬೇಕೆಂದರೆ, ಹೆಣ್ಣು ಮಕ್ಕಳಿಗಾಗಿ ಸ್ವತಂತ್ರವಾದ ಕಾಲೇಜವಿಲ್ಲ. ಗಂಡುಮಕ್ಕಳ ಕಾಲೇಜಕ್ಕೆ ಹೋದರೆ ‘ಇವಳು ಹದಿನೆಂಟು ವರ್ಷದ ದೊಡ್ಡ ಹೆಂಗಸಾಗಿದ್ದರೂ ಇವಳಿಗಿನ್ನೂ ಮದುವೆ ಇಲ್ಲವೆ’ಂದು ಕುಚೇಷ್ಟೆ ಮಾಡುತ್ತಾರೆ.”

“ಇನ್ನೂ ನಿಮ್ಮ ಮದುವೆಯಾಗಿಲ್ಲವೆ? ಏಕೆ? ಕೇಳಿದ್ದಕ್ಕೆ ಕ್ಷಮೆ ಇರಲಿ?” ಎಂದು ನಾನು ಕೇಳಿಕೊಂಡೆನು.

ಗುಲ್ಬಾಯಿಯು ಮಂದಸ್ಮಿತೆಯಾಗಿ ಇಷ್ಟಕ್ಕೇಕೆ ಕ್ಷಮೆ ಅಣ್ಣಾ ಸಾಹೇಬ? ಮದುವೆಯಾದ ಕೂಡಲೆ ಪತಿರಾಯರ ಮನೆಯ ವಾರಂಟು ಬಂದಿತೇ! ಬಳಿಕ ವಿದ್ಯಾರ್ಜನವೆಲ್ಲಿ, ಆನಂದ ವಿನೋದಗಳೆಲ್ಲಿ?” ಎಂದು ನುಡಿದಳು.

“ಬಹು ಸೂಕ್ಷ್ಮವಾದ ವಿಚಾರವಿದು ಗುಲ್‍ಬಾಯಿ. ಹೆಚ್ಚಾಗಿ ಮಾತಾಡಲು ನಮಗೆ ಬಾಯಿ ಬಾರದು. ಆದರೂ ಪತಿಯ ಮನೆಗೆ ಹೋದ ಮೇಲೆ ನಿಮ್ಮ ಆಕ್ಷೇಪಗಳೆಲ್ಲ ನಿರಾಧಾರವಾದವುಗಳಾಗಿ ನಿಮಗೆಯೇ ಕಾಣುವವು” ಎಂದು ನಾನು ತೂಕದ ಮೇಲೆ ಮಾತಾಡಿದೆನು.

ನನ್ನ ಮಾತು ಕೇಳಿ ಆ ಸುದತಿಯು ಸುಮ್ಮನೆ ಮುಗುಳುನಗೆ ನಕ್ಕು ಕಿಟಕಿಯಲ್ಲಿ ಮೊರೆಯನ್ನು ಹಾಕಿ ಹೊರಗಿನ ಶೋಭೆಯನ್ನು ನೋಡುವದರಲ್ಲಿ ಮಗ್ನಳಾಗಿರುವಂತೆ ನಟಿಸಿದ್ದು ನೋಡಿ, ಹೊಸ ಪರಿಚಯದವರೂ ಪರ ಪುರುಷರೂ ಆದವರೊಡನೆ ಇಂಥ ಮಾತುಗಳನ್ನು ಅವಳು ಬೆಳಿಸಲಿಚ್ಚಿಸಲಿಲ್ಲವೆಂದು ಗ್ರಹಿಸಿ ನಾವೂ ಕೂಡ ಆ ಮಾತನ್ನು ಅಲ್ಲಿಯೇ ನಿಲ್ಲಿಸಿದೆವು. ಮುಂದೆ ಮೂರು ನಾಲ್ಕು ನಿಮಿಷಗಳ ವರೆಗೆ ಸಂಪೂರ್ಣವಾದ ಸ್ತಬ್ಧತೆಯು ವ್ಯಾಪಿಸಿ ಕೊಂಡಿತು. ಮಾಧವರಾಯರಿಗೆ ಈ ಪರಿಸ್ಥಿತಿಯು ಸೇರಲಿಲ್ಲಾದ ಕಾರಣ ಅವರು ಮೆಲ್ಲನೆ ಗುಲ್ಬಾಯಿಯ ಮಾಸ್ತರರನ್ನು ಕುರಿತು, “ಯಾಕೆ ಮಾಸ್ತರರೆ, ನಿಮ್ಮ ಸೊಲ್ಲೇ ಇಲ್ಲ. ತನ್ನ ಪರಿಚಯವಾದರೂ ನಮಗಿರಬೇಕೆಂದು ನಾವು ಬಯಸುತ್ತೇವೆ. ತಮ್ಮ ಅಭಿಧಾನವೇನು?” ಎಂದು ಕೇಳಿದರು.

“ನನ್ನ ಹೆಸರು ಕೇಳಿದಿರಾ? ನನ್ನನ್ನು ಧೋಂಡೋ ಮೈರಾಳ ಢಮ್ ಢೇರೆ ಎಂದು ಕರೆಯುವರು.”

ಧೋಂಡೋಪಂತ ಢಮ್ ಡೇರೆಯವರು ತಮ್ಮ ಹೆಸರಿಗನುರೂಪವಾಗಿ ಕಲ್ಲಿನಲ್ಲಿ ಒಡಮೂಡಿದ ಮೂರ್ತಿಯೇ ಆಗಿ ಕಾಣಿಸುತ್ತಿದ್ದರು. ಮುಳ್ಳಾಡಿಸಿದ ಆಸೆಯ ಕಲ್ಲಿನಂತೆ ಅವರ ಮೋರೆಯ ತುಂಬೆಲ್ಲ ಹುಳುಕು ಮೆತ್ತಿತ್ತು. ಮೆಂತೆಯನ್ನಾದರೂ ಅವರು ಅಗ್ಗ ಮಾಡಿದ್ದರು. ಮೀಸೆಯೊಡೆದ ಹೆಂಗಸಿಗಿಂತ ಕೊಂಚ ಹೆಚ್ಚಾದ ಕೂದಲುಗಳು ಅವರ ಮೇಲ್ದುಟಿಯ ಮೇಲೆ ವಿರಳವಾಗಿ ಕಾಣುತ್ತಿದ್ದವು. ಅವರ ಕಿರಿಗಣ್ಣುಗಳ ದೃಷ್ಟಿಯು ಯಾವಾಗಲೂ ನೆಲವನ್ನೇ ನೋಡುತ್ತಿರುವದಾಗಿ ತೋರಿತು. ದಪ್ಪವಾಗಿರುವ ಕೆಳ ದುಟಿಯ ಮೂಲಕವಾಗಿಯೂ ಕಸಿ ಬಿದ್ದ ಕುತ್ತಿಗೆಯ ಮೂಲಕವಾಗಿಯ ಧೋಂಡೋಪಂತರು ಗೊಗ್ಗರ ಧ್ವನಿಯಿಂದ ತಮ್ಮ ಹೆಸರನ್ನು ಹೇಳಬೇಕಾದರೆ ತುಸು ಪ್ರಯಾಸವನ್ನು ಹೊಂದಿದರು. ರಾ. ಥಂಡೇರೆಯವರು ಘೋರ ಸ್ವರದಲ್ಲಿ ತಮ್ಮ ಹೆಸರು ಹೇಳಿದ್ದು ಕೇಳಿ ಕುಚೇಷ್ಟೆಗಾಗಿಯೋ ಏನೋ ಹುಡುಗಾಟಗೆಯ ಹೊಸಪ್ರಾಯದವರಾದ ನಮ್ಮ ಶ್ಯಾಮರಾಯರು ಅವರನ್ನು ಕುರಿತು, “ಧೋಂಡೋಪಂತ, ನಿಮ್ಮ ಶಿಷ್ಯರಾದ ಈ ಗುಲ್‍ಬಾಯಿಯವರಿಗೆ ಗಾನವನ್ನಾದರೂ ನೀವೆ ಕಲಿಸುವಿರೇನು?” ಎಂದು ಕೇಳಿದರು. ವಿಪರೀತವಾಗಿರುವ ಈ ಪ್ರಶ್ನವನ್ನು ಕೇಳಿದಾಕ್ಷಣವೇ ಗುಲ್ ಬಾಯಿಗೆ ಹುಚ್ಚು ನಗೆ ತುಂಬಿತು. ಯಥೇಷ್ಟವಾಗಿ ನಗುವಳೇ, ಅದು ಆಪ್ರಶಸ್ತವಾದ ಮಾತಾಗಿತ್ತು. ಆ ನಗೆಯನ್ನು ಬಿಗಿದುಹಿಡಿಯುವಳೇ ಅದು ಅಸಾಧ್ಯವಾಗಿತ್ತು. ಅವಳು ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿ ಕುಳಿತಳು. ಗುಲ್ಬಾಯಿಯ ಆಚರಣವನ್ನು ಕಂಡು ಶ್ಯಾಮರಾಯರ ಪ್ರಶ್ನವು ಕುಚೇಷ್ಟಾಯುತವಾಗಿರುವದೆಂದು ಶಂಕಿಸಿ, ಕುಚೇಷ್ಟೆ ಮಾಡುವಿರೇನೆಂದು ಧೋಂಡೋಪಂತರು ಕ್ರುದ್ಧರಾಗಿ ಕೇಳಿದರು.

“ಕ್ಷಮಿಸಿರಿ ಮಾಸ್ತರರೆ, ತಮ್ಮೊಡನೆ ಕುಚೇಷ್ಟೆಯೇ? ತಮ್ಮ ವೇಷವನ್ನು ನೋಡಲಾಗಿ ತಾವು ಗಾನಶಾಸ್ತ್ರಿಗಳ ಮನೆತನದಲ್ಲಿ ಹುಟ್ಟಿದವರಾಗಿ ತೋರಿದ್ದರಿಂದ ಹಾಗೆ ಪ್ರಶ್ನೆ ಮಾಡಿದೆನು.” ಎಂದು ಶ್ಯಾಮರಾಯರು ವಿನೀತರಂತೆ ನುಡಿದರು.

ಢಂಢೇರೆಯವರ ತಲೆಯ ಮೇಲೆ ಪೇಶ್ವಾಯಿ ಕಾಲದ ಕಂಪು ಮುಂಡಾಸವಿತ್ತು. ಜಗನ್ನಾಥೀ ಅರಿವೆಯ ಅವರ ಉದ್ದಂಗಿಯು ಮೊಳಕಾಲ ಕೆಳಗೆ ಒಂದು ಗೇಣು ಇಳಿ ಬಿದ್ದಿತ್ತು. ಉಟ್ಟಿರುವ ಸೊಲ್ಲಾಪುರದ ಗಿರಣಿಯ ದೋತರವು ಕಲ್ಲು ನೀರುಗಳ ಹೊಡೆತವನ್ನು ಎರಡು ವರ್ಷಗಳವರೆಗೆ ಸಹಿಸಿದ್ದರೂ ಹಣಿದಿದ್ದಿಲ್ಲ. ಗಾದಿಯ ಮೇಲೆ ಹಾಸುವ ಮಗ್ಗಲಾಸಿಗೆಯಂಥ ಉರುಟಾದ ಚಾದರವನ್ನು ಅವರು ಮೈ ಮೇಲೆ ಹೊತ್ತು ಕೊಂಡಿದ್ದರು. ಧೋಂಡೋಪಂತರು ತಮ್ಮ ವೇಷವನ್ನು ನೋಡಿಕೊಂಡರು, ಕರ್ಮ-ಧರ್ಮ ಸಂಯೋಗದಿಂದ ಅವರ ತಂದೆಯಾದ ಮೈರಾಳ ಶಾಸ್ತ್ರಿಯು ಹೆಸರಾದ ಗಾಯಕನಾಗಿದ್ದನು. ಶ್ಯಾಮರಾಯರ ತರ್ಕವು ಯಥಾರ್ಥವಾಗಿರುವದು ಕಂಡು ಮಾಸ್ತರರ ಕೋಪವೆಲ್ಲ ಇಳಿದುಹೋಯಿತು. ಆದರೂ ಅವರ ಮುಖದಲ್ಲಿ ನಗೆಯ ಚಿಹ್ನವಾಗಲಿ ಮಾತಾಡುವ ಯತ್ನವಾಗಲಿ ಕಂಡು ಬರಲಿಲ್ಲ.

“ಗುಲ್ಬಾಯಿ, ನಿಮಗೆ ಗಾಯನ ವಾದನಗಳಲ್ಲಿ ಪರಿಶ್ರಮ ಉಂಟೇನು ಎಂದು ನಾನು ಕೇಳಿದೆನು.

“ಅವರ ಬೆರಳಲ್ಲಿರುವ ತಂತಿಯ ಉಗುರುಂಗುರವೇ ಸಾಕ್ಷಿಯು, ಸತಾರವನ್ನು ಬಾರಿಸುವದರಲ್ಲಿ ಅವರಿಗೆ ಪರಿಶ್ರಮವಿರುವದರಿಂದಲೇ ಅವರು ಯಾವಾಗಲು ಅದನ್ನು ತಮ್ಮ ಬೆರಳಿನಲ್ಲಿಟ್ಟು ಕೊಂಡಿರುವರು” ಎಂದು ಶ್ಯಾಮರಾಯರು ತರ್ಕಿಸಿ ಹೇಳಿದರು.

“ಇಷ್ಟು ಸೂಕ್ಷ್ಮವಾಗಿ ಅನ್ಯರ ಅಂಗಾಂಗಗಳನ್ನು ನಿರೀಕ್ಷಿಸುವವರು ಇಲ್ಲಿ ಇರುವರೆಂದು ತಿಳಿದಿದ್ದರೆ ನಾನು ನೆನಪಿನಿಂದ ಈ ಉಂಗುರವನ್ನು ಮನೆಯಲ್ಲಿ ಬಿಟ್ಟು ಬರುತ್ತಿದ್ದೆನು..” ಎಂದು ಗುಲ್‍ಬಾಯಿಯು ನುಡಿದು ಲೀಲೆಯಿಂದ ಆ ಉಂಗುರವನ್ನು ತೆಗೆದು ತನ್ನ ರೌಗೆಯ ಜೇಬಿನಲ್ಲಿಟ್ಟು ಕೊಂಡಳು.

ಗುಲ್‍ಬಾಯಿಯು ಉಡಿಗೆ ತೊಡಿಗೆಗಳ ಸೊಬಗಿನವಳೂ ಅಲಂಕಾರ ಪ್ರಿಯಳೂ ಎಂಬದು ಅವಳು ಧರಿಸಿದ ಮೇಲ್ತರದ ವಸ್ತ್ರಲಂಕಾರಗಳಿಂದ ಕಂಡು ಬಂದಿತು. ಅವಳ ಎಗ್ಗಳವಾದ ಮಾತಿನಿಂದ ಅವಳು ದಿಟ್ಟೆಯಾದ ಹುಡಿಗೆಯೆಂದಾದರೂ ನಮ್ಮ ನಂಬಿಗೆಯಾಯಿತು. ಆದರೂ ಅವಳಲ್ಲಿ ಕಾಮಿನಿಯರ ವಿಲಾಸ-ಚೇಷ್ಟೆಗಳೆಷ್ಟು ಮಾತ್ರವೂ ಇರಲಿಲ್ಲ. ನೋಡಿದರೆ, ಅವಳು ಸರ್ವಾಂಗ ಸುಂದರಿಯೂ ತುಂಬಿದ ಅವಯವಗಳುಳ್ಳವಳಾದ ತರುಣಿಯೂ ಆಗಿದ್ದಳು. ಅವಳ ಮಾತುಗಳು ಬಾಣ ಹೊಡೆದಂತೆ ಸರಳವಾಗಿದ್ದವಲ್ಲದೆ ಅವುಗಳಲ್ಲಿ ಕೊಂಕು, ಕೌಟಿಲ್ಯಗಳಿರಲಿಲ್ಲ. ಸುಶಿಕ್ಷಿತಳಾದ ಸ್ತ್ರೀಯು ಹೇಗೆ ನಡಕೊಳ್ಳುತ್ತಿರಬೇಕೆಂಬ ಮಾತಿನ ತಪ್ಪು ತಿಳುವಳಿಕೆಯಿಂದಾಗಲಿ, ಶ್ರೀಮಂತನೂ ಅಪತ್ಯವತ್ಸಲನೂ ಆಗಿರುವ ತಂದೆಯ ಆಜ್ಞೆಯಲ್ಲಿ ವಿಶೇಷವಾಗಿ ಬೆಳೆದವಳಾಗಿದ್ದ ಗುಲ್‌ಬಾಯಿಯು ಸ್ತ್ರೀಸ್ವಾತಂತ್ರ್ಯದ ಆಡಂಬರವನ್ನು ಅಧಿಕವಾಗಿ ಬೆಳೆಸಿಕೊಂಡಿರಬಹುದೆಂದು ನಾವು ತರ್ಕಿಸಿದೆವು.

ಪರರ ಅಂಗಾಂಗಗಳನ್ನು ನಿರೀಕ್ಷಿಸುವವರೆಂಬ ಆರೋಪವು ತಮ್ಮ ಮೇಲೆ ಹೊತ್ತಿತೆಂಬದನ್ನು ಅರಿತು ಶ್ಯಾಮರಾಯರು ಒಳಿತಾಗಿ ನಾಚಿಕೊಂಡು ಅಬಲೆಯರಂತೆ ಅಧೋ ಮುಖರಾಗಿ ಕುಳಿತರು. ಮಾಧವರಾಯರು ಅವರ ಪಕ್ಷವನ್ನು ವಹಿಸಿ “ಗುಲ್‍ಬಾಯಿ, ಶ್ಯಾಮರಾಯರ ಮೇಲೆ ನೀವು ಅನ್ಯಾಯವಾಗಿ ಆರೋಪವನ್ನು ತೋರಿಸಿದಿರಿ. ಇವರೊಳ್ಳೆ ಗಾನಕಲಾಪಟುಗಳೂ ಸತಾರ-ರುದ್ರವೀಣಾದಿಗಳನ್ನು ಬಾರಿಸುವದರಲ್ಲಿ ಒಳ್ಳೆ ನಿಪುಣರೂ ಆಗಿರುವರು. ಅವರವರಿಗೆ ಪ್ರಿಯವಾದ ವಸ್ತುಗಳೇ ಬೇಗನೆ ಕಾಣುವವೆಂಬಂತೆ ನಿನ್ನು ಉಗುರುಂಗುರವು ಶ್ಯಾಮರಾಯರ ಕಣ್ಣಿಗೆ ಕಂಡಿತೇ ಹೊರತಾಗಿ, ನೀವು ಧರಿಸಿರುವ ಹಾರ-ಕಂಕಣಾದಿಗಳ ಮೇಲೆ ಅವರ ಲಕ್ಷ್ಯವಿಲ್ಲವೆಂದು ನಾನು ಹೇಳುತ್ತೇನೆ.”

ಗುಲ್‍ಬಾಯಿಯ ತೊಂದರೆಯಲ್ಲಿ ಬಿದ್ದಳು. ಕೊಂಚ ವಿಚಾರ ಮಾಡಿ “ಮಾಧವರರೆ, ಕ್ಷಮಿಸಿರಿ. ಶ್ಯಾಮರಾವ್‌ಜೀಯವರಿಗೆ ಗಾನ ಕಲೆಯಲ್ಲಿ ಅಭಿರುಚಿಯಿರುವದೆಂದು ನಾನು ತಿಳಿದಿದ್ದಿಲ್ಲ.” ಎಂದು ನುಡಿದು ಮುಗ್ಧೆಯಂತೆ ನಕ್ಕಳು.

“ಬಾಯಿ, ನಿಮಗೆ ಪಾಶ್ಚಾತ್ಯ ಜನರ ಆಚಾರ ವಿಚಾರಗಳ ಸೇರಿಕೆಯಾಗಿರುವಂತೆ ಕಾಣುತ್ತದೆ. ನೀವೂ ಗಾನಕಲಾಭಿಜ್ಞರು; ನಮ್ಮ ಶ್ಯಾಮರಾಯರೂ ಆ ಕಲೆಯಲ್ಲಿ ನಿಷ್ಣಾತರು. ನಿಮ್ಮಿಬ್ಬರಲ್ಲಿ ವಿಶೇಷವಾದ ಪರಿಚಯ ವಿರಬೇಕೆಂದು ನಾನು ಬಯಸಿದರೆ ಅದು ನಿಮಗೆ ಪ್ರಿಯವಾಗಿ ತೋರಲಿಕ್ಕಿಲ್ಲವೆಂದು ನಂಬುತ್ತೇನೆ. ನಮ್ಮ ಶ್ಯಾಮರಾಯರಂಥ ಪಿಯಾನೋ ವಾದನ ನಿಪುಣರು ಮಹಾರಾಷ್ಟ್ರ-ಕರ್ನಾಟಕ ದೇಶಗಳೆರಡರಲ್ಲಿಯೂ ಇಲ್ಲ ವೆಂದರೆ ಅತಿಶಯೋಕ್ತಿಯಾಗದು” ಎಂದು ನಾನು ಹೇಳಿದೆನು.

“ಅವಶ್ಯ ಆವಶ್ಯ! ನನಗೂ ಪಿಯಾನೋ ವಾದನವನ್ನು ಕೇಳುವ ಅಭಿಲಾಷೆ ಬಹಳ”

ಆಷ್ಟರಲ್ಲಿ ಗಾಡಿಯು ಗಕ್ಕನೆ ನಿಂತಿತು. ಪೋರ್ಟರನು “ಕೊಲ್ಲಾಪೂರ ಕೊಲ್ಲಾಪೂರ” ಎಂದು ಕೂಗಿದನು.

“ಇಷ್ಟರಲ್ಲಿ ಕೊಲ್ಲಾಪುರ ಬಂತೆ?” ಎಂದು ಗುಲ್‍ಬಾಯಿಯು ಚಕಿತಳಾಗಿ ಕೇಳಿದಳು.

“ನಿಮ್ಮಾ ಹರಟೆಗೆ ಮುಂಬಯಿ ಪಟ್ಟಣವು ಕೂಡ ಹೇಳದೆ ಕೇಳದೆ ಬರಬಹುದು” ಎಂದು ಮಾಣಿಕಬಾಯಿಯು ನಗುತ್ತ ನುಡಿದು ತನ್ನ ಮಗುವನ್ನು ಎತ್ತಿ ಕೊಂಡು ಎದ್ದು ನಿಂತಳು.

ನಾವೆಲ್ಲರೂ ಕೆಳಗಿಳಿದು ಪ್ಲಾಟಫಾರ್ಮದ ಮೇಲೆ ಬಂದೆವು. ನಾಟಕಕ್ಕೆ ಬರುವಿರೇನೆಂದು ಗುಲ್ಬಾಯಿಯು ನಮ್ಮನ್ನು ಕೇಳಿದಳು. ಕೆಲಸದ ಮೂಲಕ ನಮಗೆ ನಾಟಕಕ್ಕೆ ಹೋಗುವಂತಿದ್ದಿಲ್ಲ.

“ಉಪಾಯವಿಲ್ಲ. ಅಣ್ಣಾಸಾಹೇಬ ಮಾಧವರಾವ ಶ್ಯಾಮರಾವಜೀ, ನೀವು ನಾಳೆಗೆ ನಮ್ಮ ಮನೆಗೆ ದಯಮಾಡಿ ಬಂದರೆ ಒಳ್ಳೇದಾಗುವದು. ನಿಮ್ಮಂಥ ಸಜ್ಜನರ ಪರಿಚಯವೇ ದುರ್ಲಭ. ಯಾವ ಸಮಯವು ನಿಮಗೆ ಅನುಕೂಲವಾಗುವದೆಂದು ಹೇಳಿದರೆ ಆ ಸಮಯಕ್ಕೆ ನಾನು ತಮ್ಮ ಸ್ವಾಗತದ ಸಿದ್ಧತೆ ಮಾಡಿಕೊಂಡಿರುವೆನು” ಎಂದು ಮುಂದಾಗತಕ್ಕವಳದ ಆ ಸ್ತ್ರೀ ಕುಲಾವತಂಸೆಯು ಒಳ್ಳೇ ಆದರದೊಂದಿಗೆ ಬೆಸಗೊಂಡಳು.

“ಅವಶ್ಯ ಅವಶ್ಯ” ಎಂದು ಶ್ಯಾಮರಾಯರು ಒಳ್ಳೇ ಉತ್ಸಾಹದಿಂದ ಒಪ್ಪಿ ಕೊಂಡರು.

ಗುಲ್ಬಾಯಿ ಮುಂತಾದವರು ನೆಟ್ಟಗೆ ನಾಟಕ ಗೃಹದ ಮಾರ್ಗವಾಗಿ ನಡೆದರು. ನಾವು ನಾರಾಯಣರಾಯರ ಮನೆಗೆ ಬಂದೆವು. ನನ್ನನ್ನು ಕಂಡ ಕೂಡಲೆ ನಾರಾಯಣರಾಯರು ಸ್ನೇಹಾತಿರೇಕದಿಂದ “ಅಲಭ್ಯಲಾಭ, ಅಲಭ್ಯಲಾಭ! ಏನಿದು ರಾಯರೆ, ನಮ್ಮ ನಿಮ್ಮ ದರ್ಶನಗಳಾಗದೆ ಅನೇಕ ಶತಮಾನಗಳು ಕಳೆದುಹೋದಂತೆ ಭಾಸವಾಗುತ್ತದೆ.” ಎಂದು ಉದ್ಗಾರ ತೆಗೆದರು.

“ನಾರಾಯಣರಾವ, ತಾರುಣ್ಯವೆಲ್ಲ ಅಳಿದುಹೋದ ಬಳಿಕ ಏಕತ್ರರಾದ ವಿರಹಿಗಳ ನಿರರ್ಥಕವಾದ ಸಂದರ್ಶನದಂತೆ ಸ್ನೇಹಿತರ ಸಂದರ್ಶನವಲ್ಲ. ಆದು ಯಾವಾಗಲೂ ಇಷ್ಟವೆ.”

“ಕಾಲೇಜದೊಳಗಿರುವಾಗಿನ ಕುಚೇಷ್ಟಿತಗಳೆಲ್ಲ ಅಖಂಡವಾಗಿ ಉಳಿದಿವೆ.” ಎಂದು ಹೇಳಿ ನಾರಾಯಣರಾಯರು ನಕ್ಕರು.

“ಇನ್ನೊಂದು ಹತ್ತು ನಿಮಿಷಗಳು ಹೋಗಲಿ, ನಿಮ್ಮ ಗುಣಗಳಾದರೂ ಹೊರಬೀಳದೆ ಇರವು.”

“ಹಾ… ಹಾ… ಹಾ” ಎಂದು ನಕ್ಕು “ಇಂದು ದಯ ಮಾಡಿದ ಕಾರಣವೇನು?” ಎಂದು ಮನೆಯ ಯಜಮಾನರು ಕೇಳಿದರು.

ಮಿರ್ಜಿಯಲ್ಲಿಯ ಬಂಗಲೆಯು ಬೇಕಾಗಿವೆಂಬದನ್ನು ಕೇಳಿದ ಕೂಡಲೆ ನಾರಾಯಣರಾಯರು ಸಂತೋಷದಿಂದ ಯಾಕಾಗಲೊಲ್ಲವೆಂದು ಒಪ್ಪಿಕೊಂಡು ಬಂಗಲೆಯ ಬೀಗದಕೈಯ್ಯನ್ನು ಆಗಿಂದಾಗಲೇ ತರಿಸಿ ನನ್ನ ಸ್ವಾಧೀನ ಮಾಡಿದರು. ಸಮೀಚೀನವಾದ ಭೋಜನವೂ ಆವರೋಪಚಾರಗಳ ಹರಟೆಯೂ ಪರಸ್ಪರರ ಗೃಹಕೃತ್ಯಗಳ ಪರಾಮರ್ಶಗಳೂ ಆಗುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆಯಾಯಿತು. ಸುಖನಿದ್ರೆಗೈದು ನಾವು ಬೆಳಗು ಮುಂಜಾವಿನ ಗಾಡಿಗೆ ಮಿರ್ಜಿಗೆ ಹೊರಟೆವು. ನಾಳಿನ ಆದಿತ್ಯವರ ನಮ್ಮ ಅನುಕೂಲತೆಯನ್ನು ಅವಲೋಕಿಸುವದಕ್ಕಾಗಿ ತಾವೂ ಮಿರ್ಜಿಗೆ ಬರುವೆವೆಂದು ನಾರಾಯಣರಾಯರು ಅಭಿವಚನವನ್ನಿತ್ತರು.

ಸ್ಟೇಶನದಲ್ಲಿ ಸೆಕಂಡ ಕ್ಲಾಸದ ಡಬ್ಬಿಯೊಂದು ತೆರವೇ ಇತ್ತು. ಅದನ್ನು ನಾವು ಆಕ್ರಮಿಸಿಕೊಂಡು ಕುಳಿತು ಯಥೇಷ್ಟವಾಗಿ ಸಿಗರೆಟ್ಟು ಸೇದುತ್ತೆ ಕುಳಿತೆವು. ಅಷ್ಟರಲ್ಲಿ ಯುರೋಪಿಯನ್ನ ನಾದ ಸ್ಟೇಶನ ಮಾಸ್ಟರನು ನಾವಿದ್ದಲ್ಲಿಗೆ ಬಂದು “I am sorry gentlemen, you will have to get down. This is reserved for ladies. (ಉಪಾಯವಿಲ್ಲ ರಾಯರೆ, ತಮಗೆ ಇಳಿಯಬೇಕಾಗಿರುವದು. ಇದು ಮಹಿಲಾ ಜನರಿಗಾಗಿ ಬೇರಿರಿಸಲ್ಪಟ್ಟ ಡಬ್ಬೆಯು)” ಎಂದು ಹೇಳಿದನು.

“ಮಹಿಲಾ ಜನರೆಲ್ಲಿ? ಸುಮ್ಮನೆ ನನಗೇಕೆ ತೊಂದರೆ ಕೊಡುವಿರಿ?” ಎಂದು ಶ್ಯಾಮರಾಯರು ಆಕ್ಷೇಪ ತೆಗೆದುಕೊಂಡರು.

“ಇಕೋ, ಇಲ್ಲಿಯೇ ಇಬ್ಬರಿದ್ದಾರೆ ಕಾಣಿರೋ? ಸುಮ್ಮಸುಮ್ಮನೆ ನಾನೇಕೆ ನಿಮಗೆ ತೊಂದರೆ ಕೊಡಲಿ?” ಎಂದು ಸ್ಟೇಶನ್ ಮಾಸ್ತರನು ನುಡಿಯುವಷ್ಟರಲ್ಲಿ ಗುಲ್‍ಬಾಯಿಯು ಬಂದು ನಮ್ಮನ್ನು ನೋಡಿ, ಸ್ಟೇಶನ್ ಮಾಸ್ತರನನ್ನು ಕುರಿತು “O! Never mind master, these gentlemen are our friends. Do’nt disturb them please. (ಏನು ಚಿಂತೆಯಿಲ್ಲ ಮಾಸ್ತರರೆ, ಈ ಮಹನೀಯರು ನಮ್ಮ ಸ್ನೇಹಿತರೇ ಆಗಿರುವರು, ಕುಳ್ಳಿರಲೊಲ್ಲರೇಕೆ) ಎಂದು ವಿಧಿಸಿದಳು. ಶಂಭು ಸ್ವಯಂಭು ಹರರೇ ಉರುಳಾಡುವಾಗ, ಪಾಪ ಬಡ ಸ್ಟೇಶನ್ ಮಾಸ್ತರನ ಪಾಡೇನು? ಅವನು ಸುಮ್ಮನೆ ಹೊರಟು ಹೋದನು. ಗುಲ್‍ಬಾಯಿ, ಮಾಣಿಕಬಾಯಿಯರು ಒಳಗೆ ಬಂದು ಒಂದು ಮಗ್ಗಲಿಗೆ ಕುಳಿತರು. ನಾವು ಮೂವರು ಮತ್ತೊಂದು ಮಗ್ಗಲಿಗೆ ಕುಳಿತೆವು.

“ಹೇಗೆ ರಾಯರೆ? ನಾನಿಲ್ಲದಿದ್ದರೆ ಸ್ಟೇಶನ್ ಮಾಸ್ತರನು ನಿನ್ನನ್ನು ಇಳಿಸಿಬಿಡುತ್ತಿದ್ದನು. ನಿನ್ನಿನ ಉಪಕಾರವು ಮುಟ್ಟಿತು.” ಎಂದು ಗುಲ್‍ಬಾಯಿಯು ವಿನೋದಗೈದು ನುಡಿದಳು.

“ಮುಟ್ಟಿತು, ಮುಟ್ಟಿತು. ನಾಟಕವು ಹೇಗಾಯಿತು?” ಎಂದು ಮಾಧವರಾಯರು ಕೇಳಿದರು.

“ಅಪ್ರತಿಮವಾಯಿತು! ನಾಟಕವೆಂದರೆ ವಿನೋದ ನಾಟಕವೇ ನಾಟಕವು.”

“ಮೊದಲೇ ನೀವು ಅದನ್ನು ಕೊಂಡಾಡುತ್ತಿದ್ದಿರಿ; ಪ್ರತ್ಯಕ್ಷವಾಗಿ ನೋಡಿದ ಬಳಿಕೇನು ಕೇಳುವದು? ರಂಗಭೂಮಿಯ ದೀಪ್ತಿಯೇ ಬೇರೆ.” ಎಂದು ನಾನು ಆಡಿದೆನು.

“ಅಣ್ಣಾಸಾಹೇಬ, ಪಾತ್ರಗಳ ವೇಷ-ವೈಚಿತ್ರ್ಯವೇನು, ಭಾಷಾ ಸರಣಿಯೇನು, ಮಾತುಮಾತಿಗೆ ಹೊಸ ಮಾದರಿಯ ಉಪಮೆಗಳೇನು, ಎಲ್ಲವೂ ಒಳ್ಳೇ ಮನೋ ವೇಧಕವಾಗಿತ್ತು.”

“ಪಿಸ್ಸಾ! ಅನುರಕ್ತಳಾದ ಸ್ತ್ರೀಗೆ ಟಾರ್‍ಪೆಡೋದ ಉಪಮೆ, ಮತ್ತೇ ತಕ್ಕೆಯೋ ತೋಫಿನ ಗುಂಡುಗಳ ಉಪಮೆ, ಗುಲ್ ಬಾಯಿ, ಅದೆಲ್ಲ ನಿಮಗೆ ಚಂದ ಕಾಣಿಸಿದ್ದೀತು ನೋಡಿರಿ!” ಎಂದು ಮಾಣಿಕಬಾಯಿಯು ಹಳಿದು ನುಡಿದಳು.

ಮಿರ್ಜಿಯ ಸ್ಟೇಶನಕ್ಕೆ ಬರುವವರೆಗೆ ನಾಟಕದ ಮಾತೇ ಮಾತುಗಳು. ಗಾಡಿಯಿಂದಿಳಿದು ನಾವು ಸ್ಟೇಶನದ ಹೊರಗೆ ಬಂದ ಕೂಡಲೆ ಗುಲ್‍ಬಾಯಿಯು ನಮ್ಮನ್ನು ಕರೆದು “ಅಣ್ಣಾ ಸಾಹೇಬ, ನೋಡಿರಿ, ಇದೇ ನಮ್ಮ ಬಂಗಲೆಯು,” ಎಂದು ಸ್ಟೇಶನಕ್ಕೆ ಸಮೀಪವಾಗಿರುವದೊಂದು ರಮ್ಯವಾದ ಮಂದಿರವನ್ನು ತೋರಿಸಿ “ಇಂದು ಮೂರು ಘಂಟೆಗೆ ಅವಶ್ಯವಾಗಿ ದಯಮಾಡಬೇಕು ಕಂಡಿರೋ” ಎಂದು ಪ್ರಾರ್ಥಿಸಿ ಹೊರಟು ಹೋದಳು.

ನಾವು ನೆಟ್ಟಗೆ ನಮಗೆ ದೊರಕಿದ ಹೊಸ ಬಂಗಲೆಗೆ ಬಂದು ಅಲ್ಲಿ ಉಡುಗುವದು, ಹಾಸುವದು ಮುಂತಾದ ವ್ಯವಸ್ಥೆಗಳನ್ನು ಮಾಡಿಸಿದೆವು. ಬಂಗಲೆಯು ನಿಜವಾಗಿ ನಮ್ಮ ಸಾಧೀನಕ್ಕೆ ಬಂದಿರುವದೆಂಬ ನೆಚ್ಚಿಗೆಗಾಗಿ ಅಲ್ಲಿಯೇ ನಾವು ಕ್ಷಣ ಹೊತ್ತು ಸ್ಟೇಚ್ಛೆಯಿಂದ ಕೈ ಕಾಲು ಚಾಚಿಕೊಂಡು ಮಲಗಿ ಸುತ್ತಲೂ ಔತ್ಸುಕ್ಯದಿಂದ ನೋಡಿದೆವು. ಕಟ್ಟಡವು ಭದ್ರವಾಗಿಯೂ ರಮಣೀಯವಾಗಿಯೂ ಕಟ್ಟಿದ್ದಾಗಿತ್ತು, ಅಲ್ಲಲ್ಲಿ ಬೆಲೆಯುಳ್ಳ ಕುರ್ಚಿ, ಮೇಜುಗಳೂ ಪಲಂಗು-
ಕೋಚಗಳೂ ಚಿತ್ರ ಪಟ- ಕನ್ನಡಿಗಳೂ ಒಳ್ಳೇ ವ್ಯವಸ್ಥೆಯಿಂದ ಇರಿಸಲ್ಪಟ್ಟಿದ್ದವು. ಸುತ್ತಲಿನ ಗಿಡಗಳೊಳಗಿಂದ ಹಾಯ್ದು ಬಂದಿರುವ ತಂಗಾಳಿಯು ಒಳ್ಳೇ ಸುಖಪ್ರದವಾಗಿತ್ತು. ಅದನ್ನೆಲ್ಲ ನೋಡಿ ದೊಡ್ಡ ದೊಂದು ಸಂಪತ್ತೆ ಪ್ರಾಪ್ತವಾದಷ್ಟು ಸಂತೋಷವು ನಮಗಾಯಿತು. ಇಳಿಯಲಿಕ್ಕೆ ಮುರುಕ ಧರ್ಮಸಾಲೆ ಕೂಡ ಸಿಕ್ಕದಿರುವಾಗ ಅಂಥ ಸುರಮ್ಯವಾದ ಮಂದಿರವನ್ನು ಕಂಡು ಸಂತೋಷವಾಗದಿರುವದೆ? ನಮ್ಮ ಜನರೆಲ್ಲರೂ ಬಂದು ಕೆಳಗಿನ ಮನೆಯಲ್ಲಿ ಅಡಿಗೆಯನ್ನು ಹೂಡಿದರು. ಇನ್ನೇನ ಚಿಂತೆಯಿಲ್ಲವೆಂದು ನೆನೆದು ಗುಂಡೇರಾಯರ ಸಮಾಚಾರಕ್ಕಾಗಿ ನಾವು ಔಷಧಾಲಯಕ್ಕೆ ನಡೆದೆವು.

ಏನಿದ್ದ ಸಮಾಚಾರವನ್ನು ನಾವು ಡಾಕ್ಟರ ಸಾಹೇಬರ ಮುಖಾಂತರವಾಗಿಯೇ ಅರಿತುಕೊಳ್ಳಬೇಕಾಗಿತ್ತು. ರೋಗಿಯಿದ್ದಲ್ಲಿಗೆ ಹೋಗಿ ಅವರನ್ನು ಮಾತಾಡಿಸಲು ನಮಗೆ ಅಪ್ಪಣೆಯಿದ್ದಿಲ್ಲ. ಗುಂಡೇರಾಯರ ಕಣ್ಣಿಗೆ ಡಾಕ್ಟರರು ಶಸ್ತ್ರ ಪ್ರಯೋಗವನ್ನು ಮಾಡಿ, ಗೋಡೆಗಳನ್ನೆಲ್ಲ ಹಸರು ಬಣ್ಣ ದಿಂದ ಸಾರಿಸಿದ ಕೋಣೆಯಲ್ಲಿ ಅವರನ್ನು ಮಲಗಿಸಿದ್ದರು. ಅವರ ಆರೈಕೆಗಾಗಿ ತಜ್ಞಳಾದ ಯುರೋಪಿಯನ್ ಸ್ತ್ರೀಯೊಬ್ಬಳೇ ಅವರ ಬಳಿಯಲ್ಲಿ ಇರತಕ್ಕವಳು. ಅವಳಾಗಲಿ, ಡಾಕ್ಟರ ವಾಲ್ನೇಸ್ ಸಾಹೇಬರಾಗಲಿ ಇಬ್ಬರೇ ರೋಗಿಯ ಸಮೀಪಕ್ಕೆ ಹೋಗತಕ್ಕವರು, ನಾವು ನೆಟ್ಟಗೆ ಡಾಕ್ಟರರ ಬಳಿಗೆ ಹೋಗಿ ಸಮಾಚಾರವನ್ನು ಕೇಳಲಾಗಿ, ಅವರು “O! He is progressing well! Good morning (ಅವರಿಗೋ, ವಾಸಿಯಾಗುತ್ತಲೇ ನಡೆದಿದೆ. ನೀವಿನ್ನು ಹೋಗಬಹುದು)” ಎಂದವರೇ ಮತ್ತೆಲ್ಲಿಗೋ ಹೊರಟುಹೋದರು.

ಮನೆಗೆ ಬಂದು ಭೋಜನವನ್ನು ತೀರಿಸಿಕೊಂಡು ತಾಂಬೂಲಾದಿಗಳನ್ನು ಸೇವಿಸಿ, ವಾಮಕುಕ್ಷಿಗಾಗಿ ಅಟ್ಟದ ಮೇಲೆ ಬಂದು ಅಡ್ಡಾದೆವು. ಶ್ಯಾಮರಾಯರು ಮಲಗಿದಲ್ಲಿಯೇ “ಜಗತ್ತಿನ ಇಂಗಿತ (Riddle of the Universe)” ಎಂಬ ಪುಸ್ತಕವನ್ನೋದುವದರಲ್ಲಿ ತೊಡಗಿದಂತೆ ಕಂಡರು. ನರ್ನ ಮಾಧವರಾಯರಿಗೂ ಬೇಗನೆ ಜಂಪು ಹತ್ತಿತು. ಕೆಲಹೊತ್ತಿನ ಮೇಲೆ ಶ್ಯಾಮರಾಯರ ಬೂಟುಗಾಲಿನ ಚರ್ರಚರ್ರೆಂಬ ಸಪ್ಪಳಕ್ಕೆ ನಾನು ಎಚ್ಚತ್ತೆನು. ರಾಯರು ಅಂಗಾಲಿನಿಂದ ಕುತ್ತಿಗೆಯ ವರೆಗೆ, ಪ್ರತಿಷ್ಠಿತನಾದ ಯುರೋಪಿಯನ್ನನಂತೆ, ಬೂಟು ಪ್ಯಾಂಟ್ ಕೋಟ ಜಾಕೆಟ್ ನೆಕ್‍ಟಾಯ ಕಾಲರ ಮುಂತಾದವುಗಳನ್ನು ಧರಿಸಿಕೊಂಡು ನಿಲುವುಗನ್ನಡಿಯ ಮುಂದೆ ನಿಂತಿದ್ದರು. ಅವರನ್ನು ಕಂಡು ನಾನು “ಏನು ರಾಯರೆ, ನಿಮ್ಮ ಕಣ್ಣಿಗೆ ಕಣ್ಣು ಹತ್ತಿದಂತೆ ಕಣುವದಿಲ್ಲ. ಈಗಾಗಲೇ ಈ ವೇಷವೇಕೆ?” ಎಂದು ಕೇಳಿದೆನು.

“ಗುಲ್‍ಬಾಯಿಯ ಮನೆಗೆ ಹೋಗುವ ಸಿದ್ಧತೆ ಕಾಣುತ್ತದೆ” ಎಂದು ಮಲಗಿದವರಾದ ಮಾಧವರಾಯರು ಮುಸುಗು ತೆಗೆಯದೆ ಸೂಚಿಸಿದರು.

“ಮಾಧವರಾವಜೀ, ಏಳಿರಿನ್ನು, ಚೇಷ್ಟೆ ಮಾಡಿದಂತಲ್ಲ. ಇಲ್ಲಿ ನೋಡಿರಿ, ಎರಡೂಕಾಲು ಘಂಟೆಯಾಗಿದೆ” ಎಂದು ಹೇಳಿ ಶ್ಯಾಮರಾಯರು ಜೇಬಿನೊಳಗಿಂದ ತಮ್ಮ ಚಿನ್ನದ ಗಡಿಯಾರವನ್ನು ತೆಗೆದು ತೋರಿಸಿದರು.

“ಅಯ್ಯೋ! ಗುಲ್‌ಬಾಯಿಯ ಮನೆಗೆ ಹೋಗಬೇಕಾದರೆ ಇನ್ನೂ ನಾಲ್ಕತ್ತೈದು ನಿಮಿಷಗಳಿವೆ. ಇಷ್ಟೇಕೆ ಅವಸರ?” ಎಂದು ಮಾಧವರಾಯರು ಎದ್ದು ಕೂಡಲು ಪ್ರಯತ್ನ ಮಾಡದೆ ಮಾತಾಡಿದರು.

“ನೀವು ಎದ್ದು ಮುಖ ತೊಳೆದುಕೊಂಡು ಪೋಷಾಕು ಮಾಡಿಕೊಳ್ಳುವಷ್ಟರಲ್ಲಿ ನಾಲ್ಕತ್ತೈದು ಮಿನಿಟುಗಳಾಗಲಿ ಇಪ್ಪತ್ತೇಳುನೂರು ಸೆಕಂಡಗಳಾಗಲಿ, ಹೊರಟುಹೋಗುವವು.”

ಮಾಧವರಾಯರು ಎದ್ದು ಕುಳಿತು “ನನ್ನ ಪೋಷಾಕಿಗೆ ಸಮಯವೇ ಬೇಡ. ಆ ಕೋಟು ತೊಟ್ಟು ಕೊಂಡು ರುಮಾಲು ಸುತ್ತಿಕೊಳ್ಳಲಿಕ್ಕೆ ಎರಡೇ ನಿಮಿಷಗಳು ಸಾಕು. ರಥವನ್ನು ತರಿಸಲಿಕ್ಕೆ ಆಳಿಗೆ ಹೇಳಿರುವಿರೇನು?” ಎಂದು ಕೇಳಿದರು.

“ಹೊರಗೆ ಫೈಟನ್ (ಒಂದು ಪ್ರಕಾರದ ರಥ) ಬಂದು ನಿಂತೇ ಇದೆ, ಏಳಿರಿ.”

ಮೂರು ಗಂಟೆಗೆ ಸರಿಯಾಗಿ ನಾವು ಗುಲ್‍ಬಾಯಿದು ಮಂದಿರಕ್ಕೆ ಹೋದೆವು. ರಮಣೀಯವಾಗಿರುವ ಪುಷ್ಪೋದ್ಯಾನದ ಮಧ್ಯದಲ್ಲಿ ಮೆರೆಯುತ್ತಿರುವ ಆ ಮಂದಿರವು ಅತಿ ರಮಣೀಯವಾಗಿ ತೋರಿತು. ರಥದಿಂದಿಳಿದ ಕೂಡಲೆ ಮನೆಯ ಗುಮಾಸ್ತನು ನಮ್ಮನ್ನು ಆದರದಿಂದ ಉಪ್ಪರಿಗೆಯ ಮೇಲೆ ಕರೆದೊಯ್ದನು. ಶ್ರೀಮಂತರ ಮನೆಯೇ ಅದು. ಅಲ್ಲಿ ಶೋಭೆಯನ್ನು ವರ್ಣಿಸುವದೇತಕ್ಕೆ? ಗುಲ್‍ಬಾಯಿಯ ತಂದೆಯವರಾದ ಲಲ್ಲೂ ಭಾಯಿಯವರು ಗುಜರಾಥೀ ಸಭ್ಯಗೃಹಸ್ಥರಿಗುಚಿತವಾದ ಪೋಷಾಕು ಮಾಡಿಕೊಂಡು ತೂಲಿಕಾಮಯವಾದ ಆರಾಮಕುರ್ಚಿಯಲ್ಲಿ ಕುಳಿತಿದ್ದರು. ಅವರ ಬಳಿಯಲ್ಲಿ ಅವರ ಮುಖ್ಯ ಮನೀಮನಾದ ಶ್ಯಾಮಲದಾಸನೂ ಅವನ ಹೆಂಡತಿಯಾದ ಮಾಣಿಕಬಾಯಿಯೂ ಕುಳಿತಿದ್ದರು. ಲಲ್ಲೂಭಾಯಿಯವರ ಬಲಕ್ಕೆ ವಸ್ತ್ರಾಲಂಕಾರ ವಿಭೂಷಿತೆಯಾಗಿ ಕುಳಿತ ಗುಲ್‍ಬಾಯಿಯ ಮೂರ್ತಿಮತಿಯಾದ ಈಪ್ಸಿತಾರ್ಥ -ದೇವತೆಯಂತೆ ನಯನಾಭಿರಾಮೆಯಾಗಿ ಕಂಗೊಳಿಸಿದಳು. ಆ ಸುಂದರಿಯ ದಿವ್ಯವಾದ ರೂಪಕ್ಕೆ ಕೆಟ್ಟ ಜನರ ದೃಷ್ಟಿ ತಗಲಬಾರದೆಂದು ಅಲ್ಲೊಂದು ದೃಷ್ಟಿಯ ಗೊಂಬೆಯನ್ನು ಕುಳ್ಳಿರಿಸಿರುವರೋ ಎಂಬಂತೆ ನಮ್ಮ ಧೋಂಡೋಪಂತ ಢಂಢರೆಯವರ ಮಹಾಗ್ರಸ್ಥವು ಗುಲ್ ಬಾಯಿಯ ಬಳಿಯಲ್ಲಿ ಕುಳಿತಿತ್ತು. ಗಾಯಕನೋರ್ವನು ತಂಬೂರಿಯ ಸ್ವರವನ್ನು ಸರಿಯಾಗಿ ಮಾಡುವದರಲ್ಲಿ ನಿಮಗ್ನನಾಗಿ ಕುಳಿತು, ಮದ್ದಲೆಯವನಿಗೆ ಆಗಾಗ್ಗೆ ಪೆಟ್ಟು ಹಾಕಿ ತೋರಿಸೆಂದು ಸೂಚಿಸುತ್ತಿದ್ದನು.

ನಾವು ಒಳಕ್ಕೆ ಬಂದದ್ದನ್ನು ಕಂಡು ಗುಲ್‍ಬಾಯಿಯು ನಗೆಮೊಗವನ್ನು ತಾಳಿ ನಮಗೆ ಇದಿರಾಗಿ ಬಂದು ನಮ್ಮನ್ನು ತನ್ನ ತಂದೆಯ ಬಳಿಗೆ ಕರೆ ದೊಯ್ದು “ಇವರೇ ಆ ಸದ್‍ಗೃಹಸ್ಥರು,” ಎಂದು ಹೇಳಿದಳು. ಲಲ್ಲೂ ಭಾಯಿಯವರು ಆದರದಿಂದೆದ್ದು ನಿಂತು ನಮ್ಮ ಕರಸ್ಪರ್ಶಮಾಡಿ “ಹೀಗೆ ವಿಶ್ರಮಿಸಿಕೊಳ್ಳಬೇಕು” ಎಂದು ಹೇಳಿ ನಮಗೆ ಕುಳ್ಳಿರಲು ಕುರ್ಚಿಗಳನ್ನು ತೋರಿಸಿದರು. ನಾವು ಆಸನಸ್ಥರಾದ ಬಳಿಕ ಎಲ್ಲರೊಡನೆ ಆವರೋಪಚಾರಗಳ ಮಾತುಗಳು ನಡೆದವು.

ಗಾಯಕನು ತಂಬೂರಿಯನ್ನು ಸರಿಮಾಡುವಷ್ಟರಲ್ಲಿಯೇ ಅದರದೊಂದು ತಂತಿಯು ತಟ್ಟನೆ ಹರಿದುಹೋಯಿತು. ಹೊಸ ತಂತಿಯನ್ನು ತರಿಸಬೇಕೆಂದು ಬುವಾನವರು (ಗಾಯಕನು) ಹೇಳಿದನು.

“ಬುವಾ, ಪಿಯಾನೋದ ಸ್ವರದೊಡನೆ ಹಾಡಿರಿ. ಇನ್ನು ತಂತಿಯನ್ನು ತರಿಸಲು ಅವಕಾಶವಿಲ್ಲ. ಇಲ್ಲಿ ಬಂದಿರುವ ಮಹನೀಯರಾದ ಶ್ಯಾಮ ರಾಯರು ಪಿಯಾನೋ ಬಾರಿಸುವದರಲ್ಲಿ ಹೆಸರಾದವರಂತೆ!?” ಎಂದು ಹೇಳಿ ನಮ್ಮ ಶ್ಯಾಮರಾಯರನ್ನು ಕುರಿತು : “ರಾಯರೆ, ನನ್ನದಿಷ್ಟು ವಿಜ್ಞಾಪನೆಯನ್ನು ಮನ್ನಿಸುವಿರೆಂದು ಕೋರುತ್ತೇನೆ” ಎಂದು ಮೃದುಹಾಸವನ್ನು ತಳೆದು ಮನವೊಲಿಸುವಂತೆ ಬೇಡಿಕೊಂಡಳು.

ಒಲ್ಲೆನೆನ್ನಲು ಶ್ಯಾಮರಾಯರಿಗೆ ಎದೆ ಸಾಲದು. ಅವರು ಮತ್ತೊಂದು ಮಾತಾಡದೆ ಪೇಟಿಯ ಮೇಲೆ ಕುಳಿತು, ಸಾ,ರಿ,ಗ,ಮ,ಪ,ಧ,ನಿ,ಸ ಎಂದು ಸ್ವರಸ್ಥಾನಗಳ ಮೇಲೆ ಕೈಯಾಡಿಸಿ ಸ್ವರಗಳು ಸರಿಯಾಗಿವೆಯಿಲ್ಲವೋ ನೋಡಿದರು. ಅಷ್ಟರಿಂದಲೇ ಅವರು ಆ ಕಲೆಯಲ್ಲಿ ಒಳ್ಳೇ ನಿಷ್ಟತರೆಂಬದು ಎಲ್ಲರಿಗೆ ತಿಳಿದುಹೋಯಿತು. ಗುಲ್‍ಬಾಯಿಯ ಮುಖದಲ್ಲಿ ಸಮಾಧಾನದ ಚಿಹ್ನವು ವ್ಯಕ್ತವಾಗಿ ತೋರಿತು. ಗಾಯಕನು “ಢೋಲನ ಮೇರೆ ಘರ ಆವೆ” ಎಂದು ಗಾನಕ್ಕೆ ಪ್ರಾರಂಭ ಮಾಡಿದನು. ಇದು ಪರೀಕ್ಷೆಯ ಸಮಯವೆಂದರಿತು ಶಾಮರಾಯರು ಒಳ್ಳೆ ಮನಸ್ಸು ಕೊಟ್ಟು ತಮ್ಮ ಕೌಶಲ್ಯವನ್ನೆಲ್ಲ ವೆಚ್ಚ ಮಾಡಿ ಬಾರಿಸಿದರು. ಗಾಯಕನಾದರೂ ಕಡಿಮೆಯವನಲ್ಲ. ಗಾಯನವು ಭರಕ್ಕೆ ಬಂದಹಾಗೆ ಹಾಡುವವನಿಗಿಂತಲೂ ಬಾರಿಸುವವನ ಜಾಣ್ಮೆಯು ಅಧಿಕವಾದದ್ದೆಂಬ ಮಾತು ಎಲ್ಲರ ಮನಸ್ಸಿಗೂ ತಟ್ಟಿತು. ಒಂದು ಸಂಧಿಯಲ್ಲಿ ಶ್ಯಾಮಲದಾಸನು ಆನಂದೋದ್ರೇಕದಿಂದ “ವಾಃವಾ, ವಾಃವಾ! ರಾವಸಾಹೇಬ, ಕ್ಯಾಬಾತ್ ಹಾಯ್!” ಎಂದು ಶ್ಯಾಮರಾಯರ ಕಡೆಗೆ ತನ್ನ ಎರಡೂ ಕೈಗಳನ್ನು ಚಾಚಿ ಸಂಭಾವಿಸಿದನು. ಶ್ಯಾಮಲದಾಸನು ಗಾಯನಕಲಾಭಿಜ್ಞನು. ಅವನ ಉದ್ಗಾರವನ್ನು ಕೇಳಿ ಗಾಯಕನ ಹೊಟ್ಟೆಯಲ್ಲಿ ಮತ್ಸರವು ಹೊಕ್ಕಿತು. ಅವನು ಅಡ್ಡತಿಡ್ಡವಾಗಿ ಹಾಡಿ ಶ್ಯಾಮರಾಯರ ಕೈ ನಿಂದಿರಸಬೇಕೆಂದು ಜಿಗಿದಾಡಿ ಪ್ರಯತ್ನ ಮಾಡಿದರೂ ಅದೆಲ್ಲ ವ್ಯರ್ಥವಾಯಿತು. ಗಾಯಕನ ಇಂಗಿತವನ್ನರಿತು “ಬುವಾ, ಶ್ಯಾಮರಾಯರನ್ನು ತಪ್ಪಿಸಹೋಗಿ ನೀವೇ ಅಡ್ಡ ಹಾದಿಗೆ ಬಿದ್ದು ನಗೆಗೇಡಾಗುವಿರಿ. ಕೆಲಸವು ಸರಳವಾಗಿ ನಡೆಯಲಿ. ರಾಯರು ಹೊಟ್ಟೆ ತುಂಬಿಸಿಕೊಳ್ಳಲೆಂದು ಬಾರಿಸಬಂದಿಲ್ಲ. ಅವರು B, A, LL B, ಇದ್ದಾರೆ. ನಾಳೆ ಈ ಸಂಸ್ಥಾನದ ನ್ಯಾಯಾಧೀಶರಾವರೂ ಆಗುವರು.” ಎಂದು ಸೂಚಿಸಲಾಗಿ ಬುವಾನವರು ಹಾದಿಗೆ ಬಂದರು. ಕೆಲಸವು ಯಥಾ ಪ್ರಕಾರವಾಗಿ ಸಾಗಿತು. ಗಾಯಕನು ಹಾಡುವದನ್ನು ಮುಗಿಸಿದಕೂಡಲೆ ಶ್ಯಾಮರಾಯರು ಅದೇ ಪದವನ್ನು ಪಿಯಾನೋದಲ್ಲಿ ಬಹು ಸುಶ್ರಾವ್ಯವಾಗಿ ಬಾರಿಸಿ, ಬೆರಗಾಗಿ ಕುಳಿತಿರುವ ಗುಲ್‍ಬಾಯಿಯನ್ನು ಕುರಿತು “How is that unpire ಹೇಗಾಯಿತು ನಿರ್ಣಾಯಕರೆ?)” ಎಂದು ಆಢ್ಯತೆಯಿಂದ ಕೇಳಿದರು.

ತಾನಾದರೂ ಉತ್ತಮಳಾದ ಬಾರಿಸುವಾಕೆಯೆಂಬ ಜಂಬವು ಗುಲ್‍ಬಾಯಿಗೆ ಇತ್ತು. ಆದರೆ ಈಗ ಶ್ಯಾಮರಾಯರು ತೋರಿಸಿದ ನಿಃಸೀಮವಾದ ಪ್ರಾವೀಣ್ಯವನ್ನು ಕಂಡು ಅವಳ ಹೃದಯದೊಳಗಿನ ಅಭಿಮಾನವೆಲ್ಲ ಕರಗಿ ನೀರಾಗಿ ಹರಿದು ಹೋಯಿತು. ತನಗೂ ಅವರಿಗೂ ಅಜಗಜ ನ್ಯಾಯವೆಂದು ತನ್ನೊಳಗೆ ತಾನೇ ಒಪ್ಪಿಕೊಂಡಳು. ಅವಳು ಅನಿರ್ವಾಹಕ್ಕಾಗಿ ಶ್ಯಾಮರಾಯರ ಪ್ರಶ್ನಕ್ಕೆ ಉತ್ತರ ಕೊಡಲೆಂದು ತನ್ನ ಮುಖವನ್ನು ಮೆಲ್ಲನೆ ಮೇಲಕ್ಕೆತ್ತಿ “O! Most exquisite (ಉತ್ತಮೋತ್ತಮ)” ಎಂದು ಹೇಳಿದರೂ ನೆಟ್ಟನೆ ಶ್ಯಾಮರಾಯರ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ.

ಆಗ ಲಲ್ಲೂಭಾಯಿಯವರು ಎದ್ದು ಶ್ಯಾಮರಾಯರ ಬಳಿಗೆ ಬಂದು ಅವರ ಹಸ್ತ ಸ್ಪರ್ಶವನ್ನು ಮಾಡಿ “ರಾವಸಾಹೇಬ, ನಮ್ಮ ಗುಲ್‍ಬಾಯಿಯು ಅನ್ಯರ ಸ್ತುತಿಮಾಡಿದ್ದನ್ನು ನಾನು ಇದೇ ಮೊದಲು ಕೇಳಿದೆನು. ಅರ್ಥಾತ್ ನಿಮ್ಮಂಥ ವಾದನ ಕಲಾಪ್ರವೀಣರು ದುರ್ಲಭರೆಂಬದರಲ್ಲಿ ಸಂದೇಹವಿಲ್ಲ.” ಎಂದು ಮನಃಪೂರ್ವಕವಾಗಿ ನಮ್ಮ ಮಿತ್ರನನ್ನು ಸಂಭಾವಿಸಿದರು.

ಗಾಯನವಾದ ಬಳಿಕ ಉಪಹಾರಕ್ಕೆ ಪ್ರಾರಂಭವಾಯಿತು. ಅಂಜೂರಿ, ದ್ರಾಕ್ಷ, ಮಾವು, ನಾರಿಂಗ ಮುಂತಾದ ಫಲಗಳೂ ಒಡೆ, ಚಕ್ಕಲಿ, ಗುಳ್ಳೋರಿಗೆ ಮುಂತಾದ ಪದಾರ್ಥಗಳೂ ಬೆಳ್ಳಿಯ ತಟ್ಟೆ ಪಟ್ಟೆಗಳಲ್ಲಿ ತುಂಬಿಬಂದವು. ಗುಲ್‍ಬಾಯಿ ಮಾಣಿಕಬಾಯಿಯರದ್ದು ಆ ಪದಾರ್ಥಗಳನ್ನೆಲ್ಲ ನಮ್ಮ ಹರಿವಾಣಗಳಲ್ಲಿ ಒಳ್ಳೇ ಉಬ್ಬಿನಿಂದ ಬಡಿಸಿದರು. ಉಪಹಾರವು ಯಥೇಚ್ಛವಾಗಿ ಸಾಗಿತು, ವಾಚಕರೇ, ನಗಬೇಡಿರಿ. ಲಲ್ಲೂ ಭಾಯಿಯವರೆಂದರೆ ಗುರ್ಜರಾಷ್ಟ್ರದೇಶದ ವಣಿಜರೆಂದು ನೀವು ತಿಳಿದಿರುವಿರಾದೀತು ಹಾಗಲ್ಲ. ಅವರು ಆ ದೇಶದಲ್ಲಿ ಶ್ರೇಷ್ಠರೆಂದೆನಿಸಿಕೊಂಡ ನಾಗರ ಬ್ರಾಹ್ಮಣರ ವರ್ಗಕ್ಕೆ ಸೇರಿದವರು. ಇಷ್ಟು ಮಾತ್ರ ಸರಿ, ಅವರಾದರೂ ನನ್ನಂತೆಯೂ ನನ್ನ ಸ್ನೇಹಿತರಂತೆಯೂ ಸುಧಾರಣಾಪ್ರಿಯರು. ಇಲ್ಲವಾದರೆ ನಾಗರ ಬ್ರಾಹ್ಮಣರು ನಮ್ಮ ಬ್ರಾಹ್ಮಣರೊಡನೆ ಉಣ್ಣುವದಿಲ್ಲ; ನಾವು ಅವರೊಡನೆ ಉಣ್ಣುವದಿಲ್ಲ.

ಫಲಾಹಾರ ತಾಂಬೂಲ ಗಂಧಪುಷ್ಪಗಳ ಸಮರ್ಪಣಗಳಾದ ಬಳಿಕ ನಾವು ನಮ್ಮ ಮನೆಗೆ ಹೋಗಲು ಯಜಮಾನರ ಅಪ್ಪಣೆ ಕೇಳಿದೆವು. ಲಲ್ಲೂ ಭಾಯಿಯವರೆದ್ದು ನಿಂತು ಕೈಜೋಡಿಸಿ “ತಮ್ಮ ಪರಿಚಯದಿಂದ ನಾನು ಕೃತಾರ್ಥನಾಗಿರುವೆನು, ಹೇಗೋ ತಾವಿನ್ನು ನಮ್ಮ ಸ್ನೇಹಿತರಾಗಿರುವಿರಿ. ಕೂಡಿದಾಗ ಈ ಮನೆಗೆ ಬಂದು ಹೋಗುತ್ತಲಿರಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ಬಹು ಸೌಜನ್ಯಯುತರಾಗಿ ಹೇಳಿಕೊಂಡರು. “ನಾಳಿಗೆ ನಮ್ಮ ಮನೆಯಲ್ಲಿ ತಾವೆಲ್ಲರೂ ತಮ್ಮ ಪಾದಧೂಳಿಯನ್ನು ಕೆಡಹುವಿರೆಂದು ಬೇಡಿ ಕೊಳ್ಳುತ್ತೇವೆ” ಎಂದು ನಾನು ಕೇಳಿಕೊಂಡೆನು. ಅದಕ್ಕೆ ಅವರಾದರೂ ಒಪ್ಪಿಕೊಂಡರು. ನಾವು ನಮ್ಮ ಮನೆಗೆ ಬಂದೆವು.

ಲಲ್ಲೂ ಭಾಯಿಯವರೂ ಅವರ ಮನೆಯವರಾದ ಗುಲ್‍ಬಾಯಿ ಮುಂತಾದವರೂ ಇಂದು ನಮ್ಮ ಮನೆಗೆ ಬರುವರೆಂದು ಅವರ ಸ್ವಾಗತಕ್ಕಾಗಿ ನಾವು ಬಹುಪರಿಯಾಗಿ ವ್ಯವಸ್ಥೆಗಳನ್ನು ಮಾಡಿದ್ದೆವು. ಮುಖ್ಯವಾಗಿ ನಾವಿರುವ ಬಂಗಲೆಯು ಪ್ರಶಸ್ತವಾಗಿಯೂ ಹಾಸಿಗೆ ದಿಂಬ ಕುರ್ಚಿ ಮೇಜು ಕೋಚಗಳಿಂದ ಪರಿಷ್ಕೃತವಾಗಿಯೂ ಇತ್ತು. ಉಪಹಾರದ ವ್ಯವಸ್ಥೆಯನ್ನಾದರೂ ನಮ್ಮ ಅಡಿಗೆಯವನು ಬಲು ಚನ್ನಾಗಿ ಮಾಡಿದ್ದನು. ತಾಂಬೂಲ ಹಾರತುರಾಯಿಗಳಿಗೆ ಮಿರ್ಜಿಯ ಗ್ರಾಮವು ಆಗರವೇ ಆಗಿತ್ತು. ನಮ್ಮ ಸತ್ಕಾರಕ್ಕೆ ಮೆಚ್ಚಿದವರಾಗಿ ಲಲ್ಲೂ ಭಾಯಿಯವರು ನಮ್ಮೊಡನೆ ಯಥೇಚ್ಛವಾಗಿ ಹರಟೆಯನ್ನು ಬಿಚ್ಚಿದರು. ಅತ್ತಿತ್ತ ಸುತ್ತಾಡಿ ಹರಟೆಯು ಅಶ್ವಮೇಧದ ಕುದುರೆಯಂತೆ ಸ್ಟೇಚ್ಛೆಯಿಂದ ಸ್ತ್ರೀಸ್ವಾತಂತ್ರದ ವಿಷಯವನ್ನು ಪ್ರವೇಶಿಸಿತು. ಆ ವಿಷಯದ ಸ್ವಾಮಿನಿಯಾದ ಗುಲ್‍ಬಾಯಿ ಪ್ರಮಿಲೆಯು ತನ್ನ ಬತ್ತಳಿಕೆಯೊಳಗಿನ ಪ್ರಮಾಣಾಸ್ತ್ರಗಳನ್ನು ತೆಗೆತೆಗೆದು ಎಸೆಯಲಾರಂಭಿಸಿದಳು. ಆಗ ನಮ್ಮ ಶ್ಯಾಮರಾಯರು ಮುಂದರಿದು ಬಂದು “ಗುಲ್‍ಬಾಯಿ ಸ್ತ್ರೀಸ್ವಾತಂತ್ರ್ಯವೆಂದರೇನು? ಪುರುಷರೆಲ್ಲರನ್ನು ನರ್ಮದೆಯ ಆಚೆಗೆ ಅಟ್ಟಿ, ಈಚೆಗೆ ನೀವೆಲ್ಲರೂ ನಿಂತುಕೊಂಡು ಪರಸ್ಪರರೊಡನೆ ಪರಸ್ಪರರ ಸಂಬಂಧವಿಲ್ಲದಂತೆ ಇರತಕ್ಕದ್ದೆಂಬದು ನಿಮ್ಮ ಅಭಿಪ್ರಾಯವೊ?” ಎಂದು ಕೇಳಿದರು.

ಪರಿ ಚಮತ್ಕಾರವಾದ ಪ್ರಶ್ನೆಕ್ಕೆ ಉತ್ತರವನ್ನೀಯಲು ಗುಲ್‍ಬಾಯಿಗೆ ಸಹಸಾ ಬುದ್ಧಿ ಸಾಲದೆ ಅವಳು ಮೂಢೆಯಂತೆ ಶ್ಯಾಮರಾಯರ ಮುಖವನ್ನು ನೋಡಿ “ಹಾಗಲ್ಲ….” ಎಂದು ಉಪಕ್ರಮಿಸಿದರೂ ಮುಂದೆ ಮಾತೇ ಬರಲೊಲ್ಲವು.

“ತಿಳಿಯಿತು. ಹಾಗೆ ನಮ್ಮನ್ನು ನಿಷ್ಟುರತೆಯಿಂದ ಅಟ್ಟಿ ಕೊಡಲು ನಿಮಗೆ ಧೈರ್ಯವಿಲ್ಲ. ಆದರೂ ಸ್ತ್ರೀ ಪುರುಷರು ಒಂದೇ ಊರಿನಲ್ಲಾಗಲಿ, ಮನೆಯಲ್ಲಾಗಲಿ ಇದ್ದು ಕೊಂಡರೂ ಅವರು ಅನ್ನೋನ್ಯರ ಅರಿಕೆಯಿಲ್ಲದಂತೆ ಸ್ವತಂತ್ರರಾಗಿರಬೇಕೆಂಬದು ನಿಮ್ಮ ಅಭಿಪ್ರಾಯವು.”

“ಹೀಗೆ ತೋರುತ್ತದೆ” ಎಂದು ಆಯತ್ತವಾಗಿ ಉದ್ಭವಿಸಿದ ಆಧಾರದ ಮೇಲೆ ಕಾಲೂರಿ ನಿಂತುಕೊಂಡಂತೆ ನಟಿಸಿ ಗುಲ್ಬಾಯಿಯು ನುಡಿದಳು.

“ಗುಲ್‍ಬಾಯಿ, ಹೀಗೆ ಮಾತಾಡಿದರೆ ನಿಮಗೆ ಅರ್ಥಶಾಸ್ತ್ರದ ನಿಯಮಗಳಾಗಲಿ ಇತಿಹಾಸದ ತತ್ವಗಳಾಗಲಿ ವ್ಯವಹಾರದ ಜ್ಞಾನವಾಗಲಿ ಚನ್ನಾಗಿ ವಿದಿತವಾಗಿಲ್ಲವೆನ್ನ ಬೇಕಾಗುವದು.”

“ಅದೇಕೆ?” ಎಂದು ಆ ಬಾಲೆಯು ಕಿಂಚಿತ್ ಕ್ರುದ್ಧಳಾಗಿ ಕೇಳಿದಳು.

ಶ್ಯಾಮರಾಯರು ನಕ್ಕು “ಬಾಯಿಯವರೇ, ನೇಕಾರನಾಗು ಜವಳಿಯವನಾಗಲಿ ಇಲ್ಲದಿದ್ದರೆ ನಿಮಗೆ ಆ ಅಂದವಾದ ಸೀರೆ ಕುಪ್ಪಸಗಳು ಸಿಕ್ಕುತಿದ್ದಿಲ್ಲ, ಅಕ್ಕಸಾಲಿಗನಿಲ್ಲದಿದ್ದರೆ ನೀವು ಆಧ್ಯತೆಯಿಂದಿಟ್ಟುಕೊಂಡಿರುವ ಆ ವಜ್ರ ಕಂಕಣಗಳೇ ಹುಟ್ಟುತ್ತಿದ್ದಿಲ್ಲ. ಇದು ಹಾಗಿರಲಿ, ಇಂಗ್ಲಂಡ, ಫ್ರಾನ್ಸಗಳಂಥ ಸ್ವತಂತ್ರವಾದ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಬೇಕಾದ ಸೌಕರ್ಯಗಳನ್ನು ಗಳಿಸಿಕೊಳ್ಳುತ್ತಿದ್ದರೂ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರಕ್ಕೆ ಅನುಕೂಲವಾಗದಿದ್ದರೆ ಈ ಎರಡೂ ರಾಷ್ಟ್ರಗಳಿಗೂ ಅನೇಕವಾದ ತೊಂದರೆಗಳುಂಟಾಗುವವು”

ಆಗ ಲಲ್ಲಭಾಯಿಯವರು ತಮ್ಮ ಮಗಳನ್ನು ಕುರಿತು “ಗುಲ್, ಈ ಮಾತುಗಳನ್ನು ನೀನು ಪುಸ್ತಕಗಳಲ್ಲಿ ಓದಿಕೊಳ್ಳಲಿಲ್ಲವೇನು?” ಎಂದು ಕೇಳಿದರು.

“ಓದಿಕೊಂಡಿದ್ದೇನೆ. ಅದಕ್ಕಾಗಿಯೇ ಈ ರಾಯರ ವಾದಕ್ಕೆ ನಾನು ನಿರುತ್ತರಳಾಗಿರುವೆನು.”

“ಹಾಗಾದರೆ ಇನ್ನು ಸ್ತ್ರೀ ಸ್ವಾತಂತ್ರ್ಯವೆಂದರೆ ಹೇಗಿರಬೇಕು ಹೇಳಿರಿ. ಮದುವೆಯಾದ ಪತಿಯ ಮನೆಯಲ್ಲಿ ನೀವು ಸೇರಿಕೊಂಡು ಅವನನ್ನೇ ಹೊರಗೆ ಹಾಕಬೇಕೆನ್ನುವಿರಾ?” ಎಂದು ಶ್ಯಾಮರಾಯರು ಕುಚೇಷ್ಟೆಗಾಗಿ ಕೇಳಿದರು.

ಗುಲ್ ಬಾಯಿಯು ಒಳಿತಾಗಿ ನಾಚಿಕೊಂಡು ದೃಷ್ಟಿಯನ್ನು ಕೆಳಗಿರಿಸಿ “ಹಾಗಲ್ಲ, ಈ ಲೋಕದಲ್ಲಿ ಸ್ತ್ರೀಪುರುಷರು ಒಬ್ಬರೊಬ್ಬರಿಗೆ ಸಮಾನರಾದವರಲ್ಲೆ?” ಎಂದು ಮಂದಸ್ಮಿತೆಯಾಗಿ ಕೇಳಿದಳು.

“ಈ ಮಾತಿಗೆ ನನ್ನ ಒಪ್ಪಿಗೆಯಿಲ್ಲ. ಪುರುಷನು ಹೆಂಗಸಿಗೆ ಸಮಾನನೆಂದು ಹೇಳಿದರೆ ಅದು ಅವನ ನಿಂದೆಯು.”

ಶ್ಯಾಮರಾಯರು ಆಡಿದ ಈ ಮಾತಿಗೆ ಗುಲ್‍ಬಾಯಿಯು ಬಹು ವಿನೋದಪಟ್ಟು ನಕ್ಕು “ಸ್ತ್ರೀಯು ಪುರುಷನಿಗೆ ಸಮಾನಳೆಂದು ಹೇಳಿದರಾದರೂ ಒಪ್ಪುವಿರೋ ಇಲ್ಲವೊ?” ಎಂದು ಕೇಳಿದಳು.

“ಸ್ತ್ರೀಯು ಪುರುಷನಿಗೆ ಸಮಾನಳೇ ಆಗಿದ್ದ ಪಕ್ಷದಲ್ಲಿ ಹಾಗೆ ಒಪ್ಪಬಹುದು. ಪುರುಷರೊಡನೆ ಸಮಾನತೆಯನ್ನು ಪಡೆದರೆ ನೀವು ಧನ್ಯರಾಗುವಿರಷ್ಟೆ? ನಿಮ್ಮ ಸುಂದರವಾದ ಮುಖವು ಚಂದ್ರನಿಗೆ ಸಮಾನವಾಗಿರುವದೆಂದು ಹೇಳಿದರೂ ನೀವು ಧನ್ಯರಾಗುವಿರಿ. ಆದರೆ ಏನು ಮಾಡಿದರೂ ನಿಮ್ಮ ಮುಖವು ಚಂದ್ರಮಂಡಲವಾಗದೆಂಬದನ್ನು ಮಾತ್ರ ನೀವು ಒಪ್ಪಿ ಕೊಳ್ಳಲೇಬೇಕು.”

“ಅಂದರೆ ಸ್ತ್ರೀಯರೆಲ್ಲರೂ ನಿಮ್ಮ ಚರಣದಾಸಿಯರೆಂದು ನೀವು ತಿಳುಕೊಂಡಿರುವಿರಾಗಿ ತೋರುತ್ತದೆ!” ಎಂದು ಗುಲ್‍ಬಾಯಿಯು ಕೋಪವನ್ನು ತಾಳಿ ಕೇಳಿದರೂ ಅಪಜಯದಿಂದ ಅವಳ ಮುಖವು ಸೋತು ಬಾಡಿ ಹೋಗಿತ್ತು.

“ಹಾಃ ಹಾಃ! ನಮ್ಮ ಉಪಕಾರಕ್ಕಾಗಿ ನೀವು ಹೀಗೆ ಹೇಳಬೇಕಾಗಿಲ್ಲ. ನಿಮ್ಮ ಮಾತೆಯವರನ್ನು ಮೊದಲುಮಾಡಿಕೊಂಡು ಜಗನ್ಮಾತೆಯರಾದ ಪಾರ್ವತೀ ಲಕ್ಷ್ಮೀದೇವಿಯರು ಕೂಡ ತಾವು ತಮ್ಮ ಪತಿರಾಯರ ಚರಣದಾಸಿಯರೆಂದು ಒಪ್ಪಿಕೊಂಡಿರುವರು. ಇನ್ನು ನೀವು ಒಬ್ಬ ಗುಣ ಹೀನೆಯನ್ನಾಗಲಿ ಚಂಡಿಯನ್ನಾಗಲಿ ನಿಮ್ಮ ಗುರುವನ್ನಾಗಿ ಮಾಡಿಕೊಂಡರೆ ನನ್ನ ಯತ್ನವಿಲ್ಲ.”

ಲಲ್ಲೂ ಭಾಯಿಯವರು ಈ ಮಾತು ಕೇಳಿ ಉದ್ರೇಕದಿಂದ ಚಪ್ಪಳೆ ಹೊಡೆದು ಅಂದದ್ದು: “ವಾಃ ವಾಃ! ಈ ವಾದದ ನಿರ್ಣಯವಾದಂತಾಯಿತು. ಇತಿಶ್ರೀ ಗುಲ್‍ಬಾಯಿ ಶಾಮರಾವ ಸಂವಾದೇ ಶ್ಯಾಮರಾವ ವಿಜಯೋ ನಾಮ ಪ್ರಥಮೋಧ್ಯಾಯಃ! ಇಂಥದೇ ಬೇರೊಂದು ವಾದವನ್ನು ಮತ್ತೊಂದು ಪ್ರಸಂಗದಲ್ಲಿ ತೆಗೆಯೋಣ.”

ತನ್ನ ತಂದೆಯು ಕೂಡ ಪರ ಪಕ್ಷಕ್ಕೆ ಸೇರಿದ್ದು ಕಂಡು ಗುಲ್ಬಾ ಯಿಯು ನಿರ್ವಿಣ್ಣಳಾದಳು. ಅವಳ ಮುಖದಲ್ಲಿಯ ಅಢ್ಯತೆಯೆಲ್ಲ ಅಳಿದು ಹೋಗಿ ಅಲ್ಲಿ ಲಜ್ಜೆಯ ಆಧಿಷ್ಠಾನವು ನಿರಂತರವಾಗಿ ಸ್ಥಾಪಿತವಾಯಿತು. ವಿಷಾದದ ಭರಕ್ಕಾಗಿ ಅವಳು ಅವನತಮುಖಿಯಾಗಿ ಸುಮ್ಮನೆ ಕುಳಿತು ಕೊಂಡಳು. ಶ್ಯಾಮರಾಯರು ಅವಳ ಸ್ಥಿತಿಯನ್ನು ಕಂಡು ಕನಿಕರವುಳ್ಳವರಾಗಿ ಅವಳ ಮನಸ್ಸಿಗೆ ಉತ್ಸಾಹ ಬರಲೆಂದು ಚಿಂತಿಸಿ, ಅಂದದ್ದು :

“ಗುಲ್ ಬಾಯಿ, ಪತಿಯಲ್ಲಿ ಪತ್ನಿಯ ದಾಸೀಭಾವವು ಸ್ಥಾಪಿತವಾಯಿತೆಂದು ನೀವು ವಿಷಾಪಡಬೇಡಿರಿ, ಪ್ರೇಮದ ಪರವಶತೆಗಾಗಿ ಉತ್ತಮೆಯರಾದ ಸತಿಯರು ತಾವು ತಮ್ಮ ಪತಿಯ ದಾಸಿಯರೆಂದು ಹೇಳುವದು ಆದರಮೂಲವಾದ ಮಾತು. ಪ್ರೀತಿಯುತನಾದ ಪತಿಯು ಕೂಡ ತಾನು ತನ್ನ ಅರ್ಧಾಂಗಿಯ ದಾಸನೆಂದು ಹೇಳಿಕೊಂಡಿರುವದನ್ನು ನೀವು ಪುರಾಣೇತಿಹಾಸಗಳಲ್ಲಿಯೂ, ಕಾವ್ಯನಾಟಕಗಳಲ್ಲಿಯೂ ಓದಿರಬಹುದು. ಅದು ಹಾಗಿರಲಿ, ಸ್ತ್ರೀಯರು ಪುತ್ರವತಿಯರಾದರೆಂದರೆ ಅವರ ಯೋಗ್ಯತೆ ಮಿತಿ ಮೀರಿ ಬೆಳೆಯುವದು, ಸಮರವಿಜಯಿಯಾದ ವೀರನಾಗಲಿ, ಭೂಮಂಡಲವನ್ನಾಳುವ ಸಾರ್ವಭೌಮನಾಗಲಿ, ಅವನು ತನ್ನ ಮಾತೆಯನ್ನು ಪರದೈವತವೆಂದರಿತು ನಿತ್ಯದಲ್ಲಿಯೂ ಪೂಜಿಸುತ್ತಾನೆ. ಮೊದಲು ತಾಯಿಯನ್ನು ಪೂಜಿಸೆಂದೂ ಅನಂತರದಲ್ಲಿ ತಂದೆಯನ್ನು ಪೂಜಿಸೆಂದು ಗುರುಮಂತ್ರವು (ಶಿಕ್ಷಾ) ನಮಗೆ ಆಜ್ಞಾಪಿಸುತ್ತಿರುವದರಿಂದ ತಂದೆಗಿಂತಲೂ ತಾಯಿಯ ಯೋಗ್ಯತೆಯು ಹೆಚ್ಚಾಗಿರುವದು ಶಾಸ್ತ್ರ ಸಮ್ಮತವಾದ ಮಾತು, ತಂದೆಗೆ ವಿರೋಧಿಯಾಗಿದ್ದ ಅಲೆಕ್‍ಝಾಂಡರ ಬಾದಶಹನು ತನ್ನ ತಾಯಿಯ ದಾಸಾನುದಾಸನು. ಆ ಬಾದಶಹನು ದಿಗ್ವಿಜಯಕ್ಕಾಗಿ ಹೊರಗೆ ಹೊರಟಾಗ ತನ್ನ ರಾಜ್ಯದ ವ್ಯವಸ್ಥೆಯನ್ನು ತನ್ನ ಮುಖ್ಯ ಪ್ರಧಾನನಾದ ಫಾರ್ಮೆನಿ ಯೋನ ಕೈಯಲ್ಲಿ ಕೊಟ್ಟು ಹೋಗಿದ್ದನು. ಆದರೆ ಬಾದಶಹನ ತಾಯಿಯು ರಾಜ್ಯ ಕಾರಭಾರದಲ್ಲಿ ಆಗಾಗ್ಗೆ ಕೈ ಹಾಕುತ್ತಿದ್ದಳಾದ ಕಾರಣ ಅವಳ ವಿರುದ್ದವಾಗಿ ಫಾರ್ಮನಿಯೋನು ಅನೇಕವಾದ ಪತ್ರಗಳನ್ನು ಬಾದಶಹನಿಗೆ ಬರೆದನು. ಆಗ ಅಲೆಕ್‍ಝಾಂಡರನು ಫಾರ್ಮೆನಿಯೋನಿಗೆ ಒಂದೇ ಉತ್ತರವನ್ನು ಕೊಟ್ಟಿದ್ದೇನೆಂದರೆ ‘ಪಾರ್ಮೆನಿಯೋ, ನನ್ನ ತಾಯಿಯ ಕಣ್ಣೀರಿನ ಒಂದೇ ಹನಿಯು ನೀನು ಬರೆದ ಸಾವಿರ ಪತ್ರಗಳನ್ನೆಲ್ಲ ಒಮ್ಮೆಲೆ ಅಳಿಸಿಬಿಡುವದು, ಗೊತ್ತಿರಲಿ.’ ಇದು ಮಾತೆಯ ಆಧಿಕಾರವು; ಇದು ಮಾತೆಯ ಯೋಗ್ಯತೆಯು; ಇದೇ ಮಾತೆಯ ಧನ್ಯತೆಯು!

ಈ ಮಾತು ಕೇಳಿ ಗುಲ್ ಬಾಯಿಯು ಒಂದು ಬಗೆಯ ನಗೆ ತೋರಿದಳಲ್ಲದೆ ಅವಳು ಮತ್ತೊಂದು ಮಾತಾಡಲಿಲ್ಲ. ಆಗ ಮಾಧವರಾಯರು ಮುಂದಾಗಿ ಬಂದು “ಗುಲ್‍ಬಾಯಿ, ಇಷ್ಟೆಯೇ ಅಲ್ಲ. ಪತ್ನಿಯು ತಾನು ಪತಿಯ ದಾಸಿಯೆಂದು ಹೇಳುಹೇಳುತ್ತಿರುವಾಗಲೇ ಅವನನ್ನು ತನ್ನ ದಾಸನಾಗಿಯೇ ಮಾಡಿಕೊಂಡಿರುವ ಮಾತು ಎಲ್ಲ ಪತ್ನಿಯರ ಹೃದ್ಗತವು. ಬೇಕಾದರೆ ಈ ನಿಮ್ಮ ಮಾಣಿಕಬಾಯಿಯ ಮುಖದಿಂದಲೇ ಕೇಳಿಕೊಳ್ಳಿರಿ” ಎಂದು ನುಡಿದು ಕುಳಿತವರೆಲ್ಲರ ಮುಖವನ್ನು ನೋಡಿದರು.

ಲಲ್ಲೂಭಾಯಿಯವರು ಗಹಗಹಿಸಿ ನಕ್ಕು ಈ ಮಾತಿಗೆ ತಾವು ಸಾಕ್ಷಿಗಳೆಂದು ಹೇಳಿದರು. ಮಾಣಿಕಬಾಯಿಯು ಮುಗುಳುನಗೆಯ ಮಿಷದಿಂದ ನಿಜ ಸ್ಥಿತಿಯು ಹೀಗೆಯೇ ಎಂದು ಸೂಚಿಸಿದಳು. ಶ್ಯಾಮಲದಾಸನು ತನ್ನ ಹೆಂಡತಿಯಾದ ಮಾಣಿಕಬಾಯಿಯ ಮುಖವ ನೋಡಿ ಸಂತೋಷದಿಂದ ನಕ್ಕು ತಾನು ಸ್ವಸಂತೋಷದಿಂದಲೇ ತನ್ನ ಪ್ರಿಯಭಾರ್ಯೆಯ ದಾಸನಾಗಿರುವೆನೆಂದು ಪ್ರತ್ಯಕ್ಷವಾದ ಸಾಕ್ಷಿಯನ್ನು ಹೇಳಿದನು. ಬಳಿಕ ಲಲ್ಲೂಭಾಯಿಯವರು ನಮ್ಮೆಲ್ಲರ ಅಪ್ಪಣೆ ತೆಗೆದುಕೊಂಡು ಸಹಪರಿವಾರವಾಗಿ ತಮ್ಮ ಮನೆಗೆ ದಯಮಾಡುವವರಾದರು.

ಬಸಂತರಾಜನ ಆಡಳಿತದ ಕಾಲವದು. ಗಿಡಬಳ್ಳಿಗಳೆಲ್ಲ ಹೊಸ ತಳಿರು ಹೂಮೊಗ್ಗೆಗಳನ್ನಾಂತು ಸೊಬಗಿನಿಂದ ಜಗಜಗನೆ ಹೊಳೆಯುತ್ತಿದ್ದವು. ಗಿಳಿ ಕೋಗಿಲೆ ಮುಂತಾದ ಚಲುವಕ್ಕಿಗಳು ಇನಿದಾದ ಸರಗೈದು ಉಬ್ಬಿನಿಂದ ಹಾಡುತ್ತಿದ್ದವು. ಮುಂಜಾವಿನ ಎಳೆಬಿಸಿಲಿನ ಹೊಂಬಣ್ಣದಿಂದೊಪ್ಪುವ ಹಸಿರು ಬಣ್ಣದ ಹೊಸ ಸೀರೆಯನ್ನುಟ್ಟು, ಒಯ್ಯಾರದಿಂದ ಮೆಲ್ಲಡಿಗಳನ್ನಿಕ್ಕುತೆ ಅತ್ತಿತ್ತ ಸುಳಿದಾಡಿ ತನ್ನ ಐಸಿರಿಯನ್ನು ಕಂಡು ಹಿಗ್ಗಿ ಮುಗುಳು ನಗೆ ದೋರುತ್ತಿರುವ ಬನಸಿರಿಯ ಚಲುವಿಕೆಯನ್ನು ಕಂಡು ಮನಸೋತವನಾಗಿ ಮಾರುತನು ಮೆಲ್ಲನೆ ಬಂದು ಆ ಗಾಡಿಕಾರತಿಯನ್ನು ಬಿಗಿದಪ್ಪಿ ಅವಳ ಪೂ ಗಂಪಿನ ಮೊಗಕ್ಕೆ ಮುದ್ದಿಟ್ಟನು. ಎರಳೆನೋಟದ ಆ ಹರದೆಯು ಬೆದರಿ ನಿಂತು ತನ್ನ ಮೈ ಮುಟ್ಟ ಬಂದ ಅರಿವುಗೇಡಿ ಯಾರೆಂದು ಮುನಿಸಿನಿಂದ ಹೊರಳಿ ನೋಡಿದಳು. ಇದಿನ್ನು ಸರಿಯಲ್ಲವೆಂದು ತಂಬೆಲರನು ಆ ತಾಣವನ್ನು ಬಿಟ್ಟೋಡಿ ಗಿಡಬಳ್ಳಿಗಳನ್ನೆಡವುತ್ತೆ ನುಗ್ಗುತ್ತೆ ಹೇಗೋ ನಮ್ಮ ಗುಲ್‍ಬಾಯಿಯು ಕುಳಿತಿರುವ ಮನೆಯಲ್ಲಿ ಹೊಕ್ಕು ಅಡಗಿಕೊಂಡನು.

ಗುಲ್ಬಾಯಿಯು ತನ್ನ ವಿಚಾರಗಳಲ್ಲಿಯೇ ನಿಮಗ್ನಳಾಗಿ ಹೋಗಿರುವದರಿಂದ ಅವಳಿಗೆ ಆ ಮಾರುತನ ಔದ್ಧತ್ಯವು ಕಾಣಲಿಲ್ಲ; ತನಗುಂಟಾದ ಮಾನಭಂಗವನ್ನು ಸಹಿಸದೆ ಕೋಪಯುಕಳಾಗಿ ನಿಂತಿರುವ ಆ ಬನಸಿರಿಯ ಆರಕ್ತವಾದ ಮುಖದ ಶೋಭೆಯು ಕಾಣಲಿಲ್ಲ. ಗುಲ್ ಬಾಯಿಯು ಒಂದು ಮಾಸಿಕ ಪುಸ್ತಕವನ್ನು ತೆರೆದು ಓದುತ್ತಿರುವಂತೆ ಕಂಡರೂ ಶೂನ್ಯನಾದ ಅವಳ ದೃಷ್ಟಿಗೆ ಒಂದು ಅಕ್ಷರವಾದರೂ ತೋರಲಿಲ್ಲ. ಓದುವ ಹವ್ಯಾಸವನ್ನು ಬಿಟ್ಟು ಅವಳು ತನ್ನ ಕೆನ್ನೆಯ ಮೇಲೆ ಕೈಯಿಟ್ಟು ಕೊಂಡು ಮಂದ ದೃಷ್ಟಿಯಿಂದ ಅತ್ತಿತ್ತ ನೋಡಿದಳು. ಬಳಿಯಲ್ಲಿಯೇ ಕುಳಿತಿರುವ ಮಾಣಿಕ ಬಾಯಿಯನ್ನು ನೋಡಿ “ಮಾಣಿಕ, ಏನು ಮಾಡುತ್ತಿರುವಿ?” ಎಂದು ಕೇಳಿದಳು.

“ಕುಪ್ಪಸವನ್ನು ಹೊಲಿಯುತ್ತೇನೆ ಕಾಣದೆ? ಗುಲ್‍ಬಾಯಿ, ಇಂದು ನಿನ್ನ ಚಿತ್ತವೃತ್ತಿಯು ಚಮತ್ಕಾರವಾಗಿ ತೋರುತ್ತದೆ.”

“ಮಾಣಿಕ, ನಾನೊಂದು ಪ್ರಶ್ನವನ್ನು ಕೇಳುತ್ತೇನೆ. ನಿರ್ವಂಚನದಿಂದ ಉತ್ತರವನ್ನು ಕೊಡುವಿಯಾ?”

“ನಮ್ಮ ನಿಮ್ಮ ನಡುವೆ ವಂಚನೆಯೇ? ಸತ್ಯವಾಗಿ ನನಗೆ ತಿಳಿದದ್ದನ್ನೇ ಹೇಳುವೆನು.”

“ಆರ್ಯಕನ್ನಿಕೆಯರು ಅವಿವಾಹಿತರಾಗಿ ಉಳಿಯಕೂಡದೆಂಬ ಶಾಸ್ತ್ರ ನಿರ್ಬಂಧನಕ್ಕಾಗಿ ನಮ್ಮ ವಿವಾಹವೊ? ಅಥವಾ ನಾವು ಅಬಲೆಯರಾಗಿರುವದರಿಂದ ನಮ್ಮ ಯೋಗಕ್ಷೇಮವನ್ನು ಸ್ವತಂತ್ರವಾಗಿ ಗಳಿಸಿಕೊಳ್ಳಲು ಆಸಮರ್ಥರಾಗಿರುವ ನೆವಕ್ಕಾಗಿ ಪುರುಷರ ದಾಸ್ಯವನ್ನು ಸ್ವೀಕರಿಸಿ ಅವರ ಹೆಂಡರಾಗಿರಬೇಕೆ? ಏನು ಸಮಾಚಾರವಿದು?” ಎಂದು ಗುಲ್‍ಬಾಯಿಯು ಚಿಂತಾಕ್ರಾಂತವಾದ ಮುಖವುಳ್ಳವಳಾಗಿ ಕೇಳಿದಳು.

“ವಿವಾಹದ ಉದ್ದೇಶಗಳಿವೆರಡೇ ಎಂದು ನೀವು ತಿಳಿದಿರುವಿಯೇನು?” ಎಂದು ಮಾಣಿಕಬಾಯಿಯು ಮೃದುಸ್ಮಿತೆಯಾಗಿ ಗುಲ್ ಬಾಯಿಯ ಮುಖವನ್ನು ಬಿಟ್ಟು ಬಿಡದಲೆ ನೋಡುತ್ತ ಕೇಳಿದಳು. ಗುಲ್‍ಬಾಯಿ ಯಾದರೂ ತನ್ನ ಮುಖದಲ್ಲಿ ಮಂದಹಾಸವನ್ನು ತಳೆದು ಮಾತಾಡದೆ ಸುಮ್ಮನಿದ್ದಳು.

“ಪ್ರಿಯಸಖಿ, ವಿವಾಹದ ರಹಸ್ಯವೇ ಬೇರೆ. ನವತರುಣಿಯಾದ ನಿನಗೆ ಆ ರಹಸ್ಯದ ಆಕಲನವೆಷ್ಟು ಮಾತ್ರವೂ ಇಲ್ಲವೆಂದು ನಾನು ಹೇಳಲಾರೆನು. ಆದರೂ ನನಗೆ ತಿಳಿದದ್ದನ್ನು ಹೇಳುತ್ತೇನೆ ಕೇಳು, ಭರದಿಂದ ಬೆಳೆದ ಬಳ್ಳಿಯು ಪ್ರಫುಲ್ಲಿತವಾಗಿ ಪುಷ್ಪಗಳ ಮಕರಂದವನ್ನು ಬೀರುತ್ತಿರುವಂತೆ ನವ ತರುಣಿಯರು ಅಂಗಸೌಷ್ಟವವನ್ನು ಹೊಂದಿ ನಿಸರ್ಗಜನ್ಯವಾದ ಪ್ರೇಮವೆಂಬ, ಹೃದ್ಯವಾದ ಭಾವವನ್ನಾಂತು ನವಾವತಾರನೂ ಸುಂದರನೂ ಗುಣಮಣಿಯೂ ಆದ ಪುರುಷನಲ್ಲಿ ಅನುರಾಗವನ್ನು ತಳೆದು ಅವನ ಪಾಣಿಗ್ರಹಣವನ್ನು ಮಾಡುವದು ಭಗವದಾಜ್ಞೆಯ ಮಾತು.”

“ಮಾಣಿಕಬಾಯಿ, ಇದನ್ನೆಲ್ಲ ನಾನು ಸೇಕ್ಸಪೀಯರನ ನಾಟಕಗಳಲ್ಲಿಯೂ ಕಾಲಿದಾಸನ ಕಾವ್ಯಗಳಲ್ಲಿಯೂ ಓದಿ ಅರಿತುಕೊಂಡಿದ್ದೇನೆ. ಆದರೆ ಸ್ಟೇಚ್ಛೆಯಿಂದ ವಿಹರಿಸುವ ಚಕ್ರವಾಕಿಯು ಪ್ರೇಮದಿಂದ ತನ್ನ ಪ್ರಿಯತಮ
ನನ್ನೊಡಗೂಡುವಂತೆ ಮನುಷ್ಯರಲ್ಲಿ ನಿಜವಾದ ಅನುರಾಗವುಳ್ಳ ಸತಿ ಪತಿಯರ ಸಮಾಗಮದ ವಾರ್ತೆಯೇ ಅಪರೂಪ. ಸುಧಾರಣೆಯ ಅತ್ಯುಚ್ಛವಾದ ಶಿಖರದ ಮೇಲಿರುವ ಇಂಗ್ಲಂಡದಲ್ಲಿ ಪ್ರೀತಿವಿವಾಹಗಳಿಗೆ ಮುಕ್ತದ್ವಾರವಿರುವದೆಂದು ಹೇಳುತ್ತಾರೆ ಮಾತ್ರ! ಆದರೆ ಅಲ್ಲಿ ಕೂಡ ಸ್ವಾರ್ಥವಲವಾದ ವಿವಾಹಗಳೇ ಬಹಳ, ಸುಶಿಕ್ಷಿತಳೂ ರೂಪವತಿಯ ಆದ ನವತರುಣಿ ಯೋರ್ವಳು ಎಂಬತ್ತು ವರ್ಷದ ಮುದಿಹದ್ದಾಗಿರುವ ಅರ್ಗಾಯಿಲದ ಡ್ಯೂಕನ ಕೊರಳಿಗೆ ಮಾಲೆ ಹಾಕಿದ್ದು ಸ್ವರ್ಗೀಯ ಪ್ರೇಮದ ಸಮಾಚಾರವೆ? ಆಶ್ರಮವಾಸಿನಿಯಾಗಿದ್ದು ಕೊಂಡು ನಗರವಾಸಿಗಳ ಕೌಟಿಲ್ಯವನ್ನರಿಯದ ಶಕುಂತಲೆಯೆಂಬ ಮುಗ್ಧ ವಧುವನ್ನು ಹಿಂಡು ಹೆಂಡರ ಗಂಡನಾದ (ಪರಿಗ್ರಹ ಬಹುತ್ವೇಪಿ) ದುಷ್ಯಂತನು ವಂಚಿಸಲಿಲ್ಲೆ?”

“ಗುಲ್‍ಬಾಯಿ, ಇಷ್ಟು ದಿನ ನೀನು ಮದುವೆಯನ್ನೇ ಒಲ್ಲೆನೆಂದು ಹೇಳುತ್ತಿದ್ದಿ, ಈಗ ಮಾತ್ರ ನಿನಗೆ ಅನುರೂಪನಾದ ಪತಿಯು ದೊರಕಿದರೆ ನೀನು ವಿವಾಹಕ್ಕೆ ಸಿದ್ಧಳಾಗಿರುವ ಸುವಾರ್ತೆಯನ್ನು ಕೇಳಿ ನನಗೆ ತುಂಬಾ ಸಂತೋಷವಾಗಿದೆ.”

“ನಾನು ಅನುರೂಪನಾದ ಪ್ರಿಯನಿಗೆ ಕೈ ಕೊಡುವೆನೋ ಆರ್ಗಾಯಿಲದ ಡ್ಯೂಕನಂಥ ಮೃತಗಜದಾನವನ್ನು ಸ್ವೀಕರಿಸುವೆನೋ ಅದರ ಗೊಡವೆ ನಿನಗೇಕೆ? ಯುಕ್ಲಿಡನ ಪ್ರಮೇಯಗಳನ್ನು ಕುರಿತು ವಿಚಾರ ಮಾಡುವಂತೆಯೇ ಈ ಪ್ರಶ್ನದ ವಿಚಾರವನ್ನಾದರೂ ನಾನು ನಿರಭಿಲಷವಾಗಿ ಮಾಡುವೆನೆಂದು ತಿಳಿ”.

“ಯುಕ್ಲಿಡವು ನನಗೆ ತಿಳಿಯುವದಿಲ್ಲ. ಆದರೆ ಪ್ರೇಮದ ಪ್ರಮೇಯಗಳನ್ನು ಕುರಿತು ಆಸ್ಥೆಯಿಂದ ವಿಚಾರ ಮಾಡುವ ಪ್ರಮದೆಯು ಪ್ರಿಯಾಭಿಲಾಷಿಯಾಗಿಯೇ ಇರುವಳೆಂಬದು ರೂಡಿಯಲ್ಲಿ ಅನುಭವಜನ್ಯವಾದ ಸಂಗತಿಯು.” ಎಂದು ಮಾಣಿಕಬಾಯಿಯು ಪರಿಹಾಸ ಮಾಡಿ ನಕ್ಕಳು.

“ಮೋರೆ ಮೋರೆ ಬಡಿಸಿಕೊಳ್ಳುವಿ, ಎಚ್ಚರಿಕೆ!” ಎಂದು ನುಡಿದು ಗುಲ್ ಬಾಯಿಯು ತಾನು ಸಿಟ್ಟಾಗಿರುವೆನೆಂದು ತೋರಿಸಲು ಯತ್ನ ಮಾಡಿದರೂ ಅದು ಸಾಧಿಸಲಿಲ್ಲ. ಅವಳು ಸುಮ್ಮನೆ ನಕ್ಕು ಬಿಟ್ಟಳು.

“ನೋಡಿದಿಯಾ ಗುಲ್, ನೀರಲ್ಲಿ ಹಾಕಿದ ಸಕ್ಕರೆಯಂತೆ ನಿನ್ನ ಹುಡುಗಾಟಿಗೆಯೆಲ್ಲ ಕರಗಿ ನೀರಾಗಿ ಹೋಗಿದೆ. ಪ್ರೇಮದ ಮಹಿಮೆಯೇ ಬೇರೆ”

“ಸಾಕು ಮಾಡು ಮಾಣಿಕ್, ನನೊಂದು ಪ್ರಶ್ನವನ್ನು ಕೇಳಿದ್ದಕ್ಕೆ ನೀನು ನನ್ನನ್ನು ಕ್ಷಮಿಸು, ನಿನ್ನ ಪತಿಯಲ್ಲಿ ನಿನ್ನ ಪ್ರೇಮವು ನಿಜವಾಗಿ ನೆಲಸಿರುವದೇನು? ಸತ್ಯವಾಗಿ ಹೇಳು.”

“ದೇವರನ್ನು ಸ್ಮರಿಸಿ ಕೇಳುತ್ತೇನೆ ಗುಲ್! ನಾನು ನನ್ನ ಪತಿರಾಯರನ್ನು ಅನನ್ಯಭಾವದಿಂದ ಪ್ರೀತಿಸುತ್ತೇನೆ. ಅವರ ಪ್ರೇಮವಾದರೂ ನನ್ನಲ್ಲಿ ದೃಢವಾಗಿ ನೆಲೆಸಿರುವದು.” ಎಂದು ಮಾಣಿಕಬಾಯಿಯು ಒಳ್ಳೇ ಗಾಂಭೀರ್‍ಯದಿಂದ ಹೇಳಿದಳು.

“ಪುಣ್ಯವಂತಿಯು ನೀನು! ನಿನ್ನಂತೆಯೇ ಸುಖಿಗಳಾಗಿರುವವರು ನಮ್ಮ ದೇಶದಲ್ಲಿ ಮತ್ತಿನ್ನಾರಾದರೂ ಇರುವರೇನು?”

“ರವಷ್ಟು ಹೆಚ್ಚುಕಡಿಮೆಯ ಪ್ರಮಾಣದಿಂದ ಅನೇಕ ಜನ ಗೃಹಿಣಿಯರು ಸುಖಿಗಳಾಗಿರುವರು. ಅಸುಖಿಗಳೇ ಕಡಿಮೆಯೆಂದು ನಾನು ನಂಬುತ್ತೇನೆ.”

ಅಷ್ಟರಲ್ಲಿ ಸೇವಕಳೋರ್ವಳು ಬಂದು, ಆ ಗೆಳತಿಯರೀರ್ವರನ್ನು ಉಪಹಾರಕ್ಕೆ ಕರೆದೊಯ್ದಳು. ಅದೇ ದಿವಸವೇ ಸಾಯಂಕಾಲದಲ್ಲಿ ಮಾಣಿಕ ಬಾಯಿಯು ಪಾರ್ಕಿನಲ್ಲಿ (ಉಪವನದಲ್ಲಿ) ನನಗೆ ಭೆಟ್ಟಿಯಾದಾಗ ಮೇಲ್ಕಂಡ ಸಂವಾದದ ಸಮಾಚಾರವನ್ನೆಲ್ಲ ನನಗೆ ಹೇಳಿದ ಮೇರೆಗೆ ನಾನದನ್ನು ಇಲ್ಲಿ ನಿರೂಪಿಸಿದ್ದೇನೆ.
* * *

ಮೇಲಿನ ಸಂವಾದವಾದ ಬಳಿಕ ಒಂದೆರಡು ದಿವಸಗಳಲ್ಲಿ ನಾವು ಸರತಿಯ ಮೇರಿಗೆ ಲಲ್ಲೂಭಾಯಿಯವರ ಮನೆಗೆ ಹೋದೆವು. ಭಾಯಿಯವರು ಸಾಮಾಜಿಕ ಸುಧಾರಣೇಚ್ಛುಗಳಾಗಿದ್ದು ಆ ವಿಷಯವನ್ನು ಕುರಿತು ಸಂವಾದ ಮಾಡಲು ಅವರಿಗೆ ಅಪೇಕ್ಷೆ ಬಹಳ. ಆದರೆ ಪಚಾರದ ಮಾತುಗಳ ಪ್ರಸ್ತಾವನೆಯಾದ ಬಳಿಕ ಸ್ತ್ರೀಶಿಕ್ಷಣದ ವಿಷಯವನ್ನು ಅವರು ತೆಗೆದರು. ನಮ್ಮ ಪಕ್ಷದಲ್ಲಿ ವಾದ ನಡಿಸುವವರು ಶಾಮರಾಯರೇ ಆಗಿದ್ದರು. ವಾದವೆಂದರೆ ಸ್ತ್ರೀ ಶಿಕ್ಷಣವು ಬೇಕೋ ಬೇಡವೋ ಎಂಬದಲ್ಲ. ಸ್ತ್ರೀ ಶಿಕ್ಷಣದ ಇತಿಕರ್ತವ್ಯತೆ ಯಾವದೆಂಬದೇ ನಮ್ಮ ವಾದದ ವಿಷಯವು. ಸರಕಾರದ ಸೇವೆಯಲ್ಲಿಯ ಅಧಿಕಾರಸ್ಥರ ಸ್ಥಾನಗಳನ್ನು ಪಡಕೊಳ್ಳಬೇಕಾಗಿ ಸ್ತ್ರೀಯರು ಶಿಕ್ಷಣವನ್ನು ಬಯಸುವರೇನೆಂಬ ಪ್ರಶ್ನಕ್ಕೆ ಗುಲ್ಬಾ‍ಯಿಯು ಇಲ್ಲವೆಂದು ಹೇಳಿದಳು. ಮುನಿಸಿಪಾಲಿಟಿ ಲೋಕಲ್‍ಬೋರ್ಡ ಕಾಯಿಡೇ ಕೌನ್ಸಿಲ್‌ಗಳಲ್ಲಿ ಸೇರಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವದಾದರೂ ಸ್ತ್ರೀಯರ ಮನೀಷೆಯಲ್ಲವೆಂದು ಆ ಮಹಿಲೆಯು ಒಪ್ಪಿಕೊಂಡಳು. ಶ್ಯಾಮರಾಯರ ಚಮತ್ಕಾರವಾದ ಕೂಟಪ್ರಶ್ನೆಗಳಿಗೆ ವಿಭ್ರಮಗೊಂಡವಳಾಗಿಯೋ, ಇಲ್ಲವೆ ಅವಳ ಅಭಿಪ್ರಾಯದಲ್ಲಿಯೇ ಅಕಸ್ಮಾತಾಗಿ ವಿಲಕ್ಷಣವಾದ ಹೆಚ್ಚು ಕಡಿಮೆಯಾಗಿ ಶ್ಯಾಮರಾಯರಿಗೆ ಬೇಕಾದ ಉತ್ತರಗಳನ್ನೆ ಗುಲ್‍ಬಾಯಿಯು ಕೊಡಲಾರಂಭಿಸಿದಳು. ಗ್ರಹಮೇಧಿಗಳ ಕರ್ತವ್ಯವನ್ನು ಸತಿಯರು ಚತುರತೆಯಿಂದ ನೆರವೇರಿಸಲು ಸಮರ್ಥರಾಗಬೇಕೆಂತಲೂ ಗೃಹಕರ್ಮಗಳನ್ನು ಮಾಡಿ, ಉಳಿದ ಕಾಲದಲ್ಲಿ ಗೃಹಿಣಿಯರು ಅಬಲಾ ಜನರ ಉನ್ನತಿಗೆ ಸಹಾಯಕರ್ತ್ರಿಗಳಾಗಬೇಕಂತಲೂ, ಕೋಮಲಾಂತಃಕರಣೆಯರಾದ ನಾರಿಯರು ರೋಗಿಗಳ ಆರೈಕೆ, ಬಡಜನರ ಪರಾಮರಿಕೆ ಮುಂತಾದ ಸಾತ್ವಿಕವಾದ ಜನಸೇವೆಯನ್ನು ಮಾಡಲು ಆಸ್ಥೆ ಯುಳ್ಳವರಾಗಬೇಕೆಂತಲೂ, ತಮ್ಮ ಚಿಕ್ಕ ಮಕ್ಕಳು ದೊಡ್ಡವರಾದ ಬಳಿಕ ಲೋಕೋಪಕಾರಕವಾದ ಮಹತ್ಕಾರ್ಯಗಳನ್ನು ನೆರವೇರಿಸಲು ಕಾರ್‍ಯಕ್ಷಮರಾಗುವಂತೆ ಅವರಿಗೆ ಚಿಕ್ಕಂದಿನಲ್ಲಿಯೇ ಬೌದ್ಧಿಕ ಹಾಗೂ ನೈತಿಕ ಶಿಕ್ಷಣವನ್ನು ಕೊಡಲು ಮಾತೆಯರು ಸಮರ್ಥರಾಗಿರಬೇಕೆಂತಲೂ ಸ್ತ್ರೀಯರಿಗೆ ಶಿಕ್ಷಣವನ್ನು ಕೊಡತಕ್ಕದ್ದೆಂದು ಅವಳು ನಿವೇದಿಸಿದಳು.

“ಏನಿದು ಗಲ್, ಹೀಗೆಂತು ವಿಪರೀತವಾದ ಮಾತುಗಳನ್ನಾಡುವಿ? ‘ಮರ್ಚಂಟ್ ಆಫ್ ವೇಸಿಸ್’ ( ಒಂದು ನಾಟಕ ) ದಲ್ಲಿಯ ಪೋರ್ಸಿಯಾ ಎಂಬ ನಾಯಿಕೆಯಂತೆ ನೀನು ಬ್ಯಾರಿಸ್ಟರಳಾಗಬೇಕೆನ್ನುತಿದ್ದಿ, ಹಿಂದೂ ಗೃಹಿಣಿಯರ ಶೋಚನೀಯವಾದ ಸ್ಥಿತಿಯನ್ನು ಬಯಲಿಗಿರಿಸಿ ಹಿಂದುಸ್ಥಾನದಲ್ಲೆಲ್ಲ ಪ್ರೀತಿವಿವಾಹದ ಪ್ರಚಾರವನ್ನು ಮಾಡತಕ್ಕದ್ದೆಂದು ಹವಣಿಸುತ್ತಿದ್ದಿ. ನ್ಯಾಯಾಧೀಶ, ವಕೀಲ, ಮುಲಕೀ ಅಮಲದಾರರೆಲ್ಲ ಸ್ತ್ರೀಯರೇ ಆದರೆ ಸ್ತ್ರೀ ಸಾತಂತ್ರ್ಯದ ಧ್ವಜವು ಹಿಂದುಸ್ಥಾನದಲ್ಲೆಲ್ಲ ಅವ್ಯಾಹತವಾಗಿ ಮೆರೆಯುವದೆಂದು ನೀನು ಪ್ರತಿಪಾದಿಸುತ್ತಿ. ಅದೆಲ್ಲ ಈಗ ಎಲ್ಲಿ ಹೋಯಿತು?” ಎಂದು ಲಲ್ಲೂಭಾಯಿಯವರು ಮಗಳಲ್ಲಿ, ಉಂಟಾಗಿರುವ ವಿಚಾರಕ್ರಾಂತಿಯನ್ನು ಕಂಡು ಸಮಾಧಾನಗೊಂಡವರಾಗಿ ಕೇಳಿದರು. ಲಲ್ಲೂಭಾಯಿ ಯವರಿಗೆ ಸಾಮಾಜಿಕ ಸುಧಾರಣೆಗಳಲ್ಲಿ ಕೆಲವು ಸುಧಾರಣೆಗಳು ಇಷ್ಟವಾಗಿದ್ದರೂ ಸ್ತ್ರೀಸ್ವಾತಂತ್ರ್ಯದ ಅತಿರೇಕವು ಅವರಿಗೆ ಸೇರುತ್ತಿರಲಿಲ್ಲ.

ಗುಲ್‍ಬಾಯಿಯು ತನ್ನ ತಂದೆಯಾಡಿದ ಪರಿಹಾಸೋಕ್ತಿಯನ್ನು ಕೇಳಿ ಮೆಲ್ಲಗೆ ನಕ್ಕು ನಮ್ಮ ಮೂವರ ಕಡೆಗೆ ಕೈಮಾಡಿ ತೋರಿಸಿ “ಅಪ್ಪಾ, ಈ ಜನರು ಪಾದ್ರಿಗಳಂತೆ ಸಂವಾದಗೈಯುತ್ತಲೂ ಬೋಧಿಸುತ್ತಲೂ ಉಪನ್ಯಾಸಗಳನ್ನು ಮಾಡುತ್ತಲೂ ಬೆಂಬಲವಿಲ್ಲದವಳಾದ ನನ್ನನ್ನು ಸೋಲಿಸಿ ನನ್ನ ವಿಚಾರ ಸರಣಿಯಲ್ಲಿ ಹೆಚ್ಚು ಕಡಿಮೆ ಮಾಡಿ ಬಿಟ್ಟಿದ್ದಾರೆ.” ಎಂದು ಕೊಂಚ ನಾಚಿಕೊಂಡವಳಾಗಿ ಹೇಳಿದಳು.

“ಮಗಳೇ, ಸ್ತ್ರೀಯರು ಪುರುಷರಿಗೆ ಸಮಾನರೆಂದು ಈ ನನ್ನ ಸ್ನೇಹಿತರು ಒಪ್ಪುತ್ತಾರಾಗಿ ತೋರುತ್ತದೆ; ಆಮೇಲಾದರೂ ನಿನಗೆ ಸಮಾಧಾನವಷ್ಟೆ? ಆ ದಿವಸ ಶ್ಯಾಮರಾಯರು ವಾದದ ಮಿಷಕ್ಕಾಗಿ ಪ್ರತಿಕೂಲವಾದ ಅಭಿಪ್ರಾಯವನ್ನು ಕೊಟ್ಟಿರಬಹುದು; ಅಹುದಲ್ಲವೆ ಶ್ಯಾಮರಾವಜಿ?” ಎಂದು ಲಲ್ಲೂಭಾಯಿಯವರು ನುಡಿದರು.

“ಭಾಯಿಜೀ, ಸ್ತ್ರೀಯರು ವಿನೀತೆಯರಾಗಿ ನಡೆದುಕೊಂಡರೆ ಜಗತ್ತೇ ಅವರದಾಗಿದೆ. ವಿಲಾಯತಿಯಲ್ಲಿ ಸ್ತ್ರೀಯರ ಆಧಿಕಾರವೆಷ್ಟೇ ಇರಲಿ, ಶ್ರುತಿ-ಸ್ಮೃತಿ-ಪುರಾಣಾದಿಗಳನ್ನು ನೋಡಲಾಗಿ ಆರ್ಯಸ್ತ್ರೀಯರ ಅಧಿಕಾರವು ಅತಿ ಸ್ಪೃಹಣೀಯವಾಗಿರುವದೆಂಬುದರಲ್ಲಿ ಸಂದೇಹವಿಲ್ಲ.” ಎಂದು ಶ್ಯಾಮರಾಯರು ಗುಲ್‍ಬಾಯಿಯ ಮುಖದಲ್ಲಿ ದೃಷ್ಟಿಯುಳ್ಳವರಾಗಿ ಹೇಳಿದರು.

“ಅಹಾಹಾ ನಿಮ್ಮ ಸ್ಮೃತಿಗಳೇ! ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂಬದು ಪರಮ ಉದಾರವಾದ ವಚನವಲ್ಲೆ?” ಎಂದು ಗುಲ್ಬಾಯಿಯು ವಿನೋದದಿಂದ ನಕ್ಕು ಶ್ಯಾಮರಾಯರನ್ನು ಓರೆಗಣ್ಣಿನಿಂದ ನೋಡುತ್ತೆ ಕೇಳಿದಳು.

“‘ನ ಸ್ತ್ರಿ ಸ್ವಾತಂತ್ರ್ಯಮರ್ಹತಿ’ ಎಂದು ಪ್ರಥಮತಃ ನಾರದರ ತಲೆಯೊಳಗಿಂದ ಹೊರಟಿರಬಹುದಾಗಿ ತೋರುತ್ತದೆ. ಕಲಹಪ್ರಿಯರೇ ಅವರು. ಅವರ ಮಾತುಗಳನ್ನು ಕಟ್ಟಿ ಕೊಂಡೇನು ಮಾಡುವಿರಿ?” ಎಂದು ಮಾಧವ ರಾಯರು ನಗುತ್ತೆ ನುಡಿದರು.

“ಗುಲ್ಬಾಯಿ, ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ | ಮುಂತಾದ ಆಧಾರಗಳ ಮೇಲಿಂದ ಆರ್ಯರು ತಮ್ಮ ನಾರಿಯರನ್ನು ಎಷ್ಟು ಸರಿಯಾಗಿ ಸಂಭಾವಿಸುತ್ತಿದ್ದರೆಂಬದನ್ನು ಊಹಿಸಬಹುದು. ಇಂದಿಗಾದರೂ ನಾವು ನಮ್ಮ ಹೆಂಡರನ್ನು ಗೃಹಲಕ್ಷ್ಮಿಯೆಂದು ಅಕ್ಕರದಿಂದ ಕರೆಯುತ್ತೇವೆ. ‘ನ ಗೃಹಂ ಗೃಹಮಿತ್ಯಾಹುಃ ಗೃಹಿಣಿ ಗೃಹಮುಚ್ಯತೆ’ ಎಂದು ಮನ್ವಾದಿಗಳು ಗೃಹಿಣಿಯನ್ನು ಬಣ್ಣಿಸಿದ್ದಾರೆ.” ಎಂದು ಶ್ಯಾಮರಾಯರು ನಿಷ್ಪಕ್ಷಪಾತವಾಗಿರುವ ತಮ್ಮ ಅಭಿಪ್ರಾಯವನ್ನು ಹೇಳಿದರು.

ಅಂದಿನ ವಿಷಯವನ್ನು ಅಲ್ಲಿಗೆಯೇ ನಿಲ್ಲಿಸಿ ನಾವು ನಮ್ಮ ಮನೆಗೆ ಬಂದೆವು. ಆ ತರುವಾಯದಲ್ಲಿ ಗುಲ್‍ಬಾಯಿಗೂ ನಮಗೂ ಆದ ಸಂವಾದಗಳಲ್ಲಿ ಈರ್ಷೆಯ ಲೇಶವಿರಲಿಲ್ಲ. ಒಂದೇ ಪಕ್ಷದವರು ತಮ್ಮ ತಮ್ಮೊಳಗೆ ಆಪ್ತಾಲೋಚನವನ್ನು ಮಾಡುತ್ತಿರುವಂತೆ ನಮ್ಮ ವಿಚಾರಗಳು ನಡೆದವು. ಇಷ್ಟು ಮಾತ್ರ ಸರಿ, ಗುಲ್ ಬಾಯಿಯು ಅಂದಿನಿಂದ ನಮ್ಮೊಡನೆ ಹೆಚ್ಚಾಗಿ ಮಾತಾಡಲು ನಾಚಿಕೊಳ್ಳಲಾರಂಭಿಸಿದಳು. ಗಟ್ಟಿ ಗಟ್ಟಿಸಿ ಮಾತಾಡುವದನ್ನು ಬಿಟ್ಟು ಅವಳು ವಿನೀತೆಯಾಗಿ ಬಲು ಮೆಲ್ಲಗೆ ಮಾತಾಡಲಾರಂಭಿಸಿದಳು. ವಿಲಾಯತಿಯ ಸ್ತ್ರೀಯರ ದರ್ಪದ ಆವಿರ್ಭಾವಗಳೆಲ್ಲ ಅವಳಲ್ಲಿ ಇಲ್ಲದಾಗಿ ಹೋದವು.

ಗುಂಡೇರಾಯರ ನೇತ್ರವಿಕಾರವೆಲ್ಲ ಹೊರಟುಹೋಯಿತು. ಅವರ ದೃಷ್ಟಿಯು ಸ್ವಚ್ಛವಾಯಿತು. ಇನ್ನೊಂದು ಹದಿನೈದು ದಿವಸ ಮಿರ್ಜಿಯಲ್ಲಿ ಇದ್ದರೆ ಒಳ್ಳೇದಾಗುವದೆಂದು ಡಾಕ್ಟರ ವಾಲ್ನೇಸ್ ಸಾಹೇಬರು ಸೂಚಿಸಿದ್ದ ಮೇರೆಗೆ ನಮ್ಮ ಮಿರ್ಜಿಯ ನಿವಾಸವು ಬೆಳೆಯಿತು. ಗುಂಡೇರಾಯರಿಗೆ ಗಂಜೀಪ ಆಡುವ ನಾದವಿರುವದರಿಂದ ನಾನೂ ಅವರೂ ಮಾಧವರಾಯರೂ ದಿನಾಲು ಭೋಜನೋತ್ತರ ಅಖಂಡವಾಗಿ ಮರು ನಾಲ್ಕು ಗಂಟೆಯವರೆಗೆ ಅದೇ ಆಟವನ್ನು ನಡಿಸುತ್ತಿದ್ದೆವು. ಗುಂಡೇರಾಯರು ಬಹಳ ಹೊತ್ತು ಪುಸ್ತಕದಲ್ಲಿ ಕಣ್ಣಿಟ್ಟು ಓದಲಾಗದೆಂದು ಡಾಕ್ಟರರು ವಿಧಿಸಿದ್ದರಾದ ಕಾರಣ ನಾನೂ ಮಾಧವರಾಯರೂ ಬೇಸರವನ್ನು ಲೆಕ್ಕಿಸದೆ ಗಂಜಿಪದ ಆಟವನ್ನಾಡ ಬೇಕಾಗಿತ್ತು. ಶ್ಯಾಮರಾಯರಿಗೆ ನಮ್ಮ ವ್ಯವಸಾಯವು ಸೇರಲಿಲ್ಲ. ಅವರು ತಮ್ಮ ವಾಚನದಲ್ಲಿಯೂ, ಮಿರ್ಜಿಯಲ್ಲಿ ನಮಗೆ ಹೊಸ ಪರಿಚಯದವರಾದ ಬೇರೆ ಸ್ನೇಹಿತರೊಡನೆ ಮಾತುಕಥೆಯಾಡುವದರಲ್ಲಿಯೂ, ವನೋಪವನ ನದೀ ತೀರದಲ್ಲಿ ವಿಹರಿಸುವದರಲ್ಲಿಯೂ ಕಾಲ ಕಳೆಯುತ್ತಿದ್ದರು.

ಗಂಜೀಪದ ಆಟಕ್ಕೆ ಬೇಸತ್ತು ಸಾಯಂಕಾಲದ ನಾಲ್ಕು ಗಂಟೆಗೆ ನಾನೂ ಮಾಧವರಾಯರೂ ಗುಂಡೇರಾಯರೂ ಕೂಡಿ ಸದಾಶಿವೋದ್ಯಾನದ ಕಡೆಗೆ ತಿರುಗಾಡಲಿಕ್ಕೆ ಹೋದೆವು. ಇಳಿಬಿಸಿಲಾಗಿ ಹೋಗಿದ್ದರೂ ಶಕೆ ಕುಚ್ಚುತ್ತಲೇ ಇತ್ತು. ತೋಟದಲ್ಲಿ ಅತ್ತಿತ್ತ ಸುಳಿದಾಡಿ ಬಿಡಿ ಹೂಗಳನ್ನೂ ಹೂಗೊಂಚಲಗಳನ್ನೂ ದವನ ಪಾಚ ಮುಂತಾದ ಸುಗಂಧಮಯವಾದ ಹಳಗಳನ್ನೂ ಕೊಟ್ಟು ಕೊಂಡು ಕೊಡೆಯಂತೆ ಗುಂಡಗೆ ಬೆಳೆದಿರುವ ಮಾಮರದ ದಟ್ಟಾದ ನೆಳಲಿಗೆ ಬಂದೆವು. ತೋಟಿಗನು ಆ ಗಿಡದಡಿಯಲ್ಲಿರುವ ಕಸಕಡ್ಡಿಗಳನ್ನೆಲ್ಲ ತೆಗೆದು ನೆಲವನ್ನು ಚೆನ್ನಾಗಿ ಉಡುಗಿ ಇಟ್ಟಿದ್ದನಾದ್ದರಿಂದ ನಾವು ನಮ್ಮ ರುಮಾಲುಗಳನ್ನು ತಲೆದಿಂಬಿಗಿಟ್ಟು ಕೊಂಡು ಅಡ್ಡಾಗಿ ತಂಪಾಗಿ ಸೂಸುತ್ತಿರುವ ಸುಳಿಗಾಳಿಯನ್ನು ಯಥೇಚ್ಛವಾಗಿ ಸೇವಿಸಲಾರಂಭಿಸಿದೆವು.

ತುಸು ಹೊತ್ತಿನಲ್ಲಿಯೇ ನಾವೊಂದು ಚಮತ್ಕಾರವನ್ನು ಕಂಡೆವು. ರಂಗಭೂಮಿಯನ್ನು ಪ್ರವೇಶಿಸುವ ನಾಯಿಕೆಯಂತೆ ವಸ್ತ್ರಾಲಂಕಾರಗಳಿಂದ ವಿಭೂಷಿತೆಯಾದ ಲಲನೆಯೋರ್ವಳು ಆ ತೋಟದ ಮಧ್ಯ ಬೀದಿಯನ್ನು ಹಿಡಿದು ಮೆಲ್ಲಡಿಗಳನ್ನು ಚೆಲ್ಲುತ್ತೆ ನಡೆತಂದಳು. ಅವಳ ವನಪು ಒಯ್ಯಾರಗಳನ್ನೂ ಉಡಿಗೆ ತೊಡಿಗೆಗಳ ಸೊಬಗನ್ನೂ ಗೌರವರ್ಣದಿಂದ ತೊಳಗುವ ಅವಳ ದುಂಡು ಮೊಗವನ್ನೂ ಕಂಡು ಕುತೂಹಲಯುತರಾಗಿ ನಾವು ಮಲಗಿದಲ್ಲಿಯೇ ತಲೆಯೆತ್ತಿ ಆ ಸುಂದರಿಯು ಯಾರಿರಬಹುದೆಂದು ನಿರೀಕ್ಷಿಸಲಾರಂಭಿಸಿದೆವು. ಆ ಲೋಲೆಯು ತುಸು ಸಮೀಪಕ್ಕೆ ಬಂದ ಬಳಿಕ ಅವಳು ಗುಲ್‍ಬಾಯಿಯೇ ಎಂದು ಮಾಧವರಾಯರು ಗುರುತು ಹಿಡಿದು ಹೇಳಿದರು. ಇಂಥ ಸಮಯದಲ್ಲಿ ಅವಳನ್ನು ಮಾತಾಡಿಸುವದು ವಿಹಿತವಲ್ಲವೆಂದು ತಿಳಿದು ನಾವು ದಬ್ಬಿಕೊಂಡು ಮಲಗಿದೆವು. ಗುಲ್‍ಬಾಯಿಯು ಸಮೀಪದಲ್ಲಿರುವದೊಂದು ಮಲ್ಲಿಗೆಯ ಮಂಟಪದ ಬಳಿಗೆ ಬಂದು ಮೆಲ್ಲನೆ ಹಣೆಯಿಕ್ಕಿ ನೋಡಿ ಒಳಕ್ಕೆ ಪ್ರವೇಶಮಾಡಲು ಬಾಧಕವಿಲ್ಲೆಂದು ತಿಳಿದ ಬಳಿಕ ಒಳ ಹೊಕ್ಕಳು.

ಗುಲ್‍ಬಾಯಿಯ ತಂದೆಯು ಬೇಗನೆ ಅಲ್ಲಿಗೆ ಬರುವವನಿರಬಹುದೆಂದೂ ಅವನು ಬಂದ ಬಳಿಕ ನಾವೂ ಲತಾ ಮಂಟಪಕ್ಕೆ ಬಂದು ಎಲ್ಲರೂ ಮಿಲಿತರಾಗಿ ಯಥೇಚ್ಛವಾಗಿ ಹರಟೆಯನ್ನು ನಡಿಸಬಹುದೆಂದೂ ತಿಳಿದು ನಾವು ಕುಳಿತಲ್ಲಿಯೇ ಕುಳಿತು ಲಲ್ಲೂಭಾಯಿಯ ಮಾರ್ಗ ಪ್ರತಿಕ್ಷೆ ಮಾಡಿದೆವು. ಅರ್ಧ ಗಂಟೆಯವರೆಗೆ ಹಾದಿಯನ್ನು ನೋಡಿ ಬೇಸತ್ತು ನಾವಿನ್ನು ಮನೆಗೆ ತೆರಳುವವರು, ಅಷ್ಟರಲ್ಲಿ ಅಕೋ! ಜಾದುಗಾರನ ಮಾಟದ ಮನೆಯೊಳಗಿಂದಲೋ ಎಂಬಂತೆ ಆ ಮಂಟಪದೊಳಗಿಂದ ಒಬ್ಬ ಗುಲ್ ಬಾಯಿಯ ಸ್ಥಳದಲ್ಲಿ ಇಬ್ಬರು ಹೊರಬಿದ್ದರು. ಗುಲ್ಬಾಯಿಯ ಜೊತೆಗಾರನೆಂದರೆ ಮತ್ತೊಬ್ಬನಲ್ಲ ಮಗುದೊಬ್ಬನಲ್ಲ. ನಮ್ಮ ಮಿತ್ರನಾದ ಶ್ಯಾಮರಾಯನೇ! ಆ ಬೂಟು ಆ ಪಾಟಲೋನು ಆ ವೆರಿನಿಶಿಯನ್ ಕೋಟುಗಳನ್ನು ಧರಿಸಿದವನು ಶ್ಯಾಮ ರಾಯನಲ್ಲದೆ ಮತ್ತೊಬ್ಬನಲ್ಲವೆಂದು ಮುಖ ನೋಡದೆ ಹೇಳಬಹುದಾಗಿತ್ತು. ನಾವಂತು ಅವನ ಪರಿಚಿತವಾದ ಮುಖವನ್ನು ನೋಡಿ ಮನಗಂಡೆವು. ನಾವಿನ್ನು ಆ ಪ್ರಣಯಿಗಳ ಕಣ್ಣಿಗೆ ಬೀಳುವದು ಸರ್ವಥಾ ಸರಿಯಲ್ಲವೆಂದು ಗುಲ್‍ಬಾಯಿ ಶ್ಯಾಮರಾಯರ ಕಡೆಗೆ ಬೆನ್ನು ಮಾಡಿ ಮಲಗಿದೆವು. ಅವರು ಒಬ್ಬೊಬ್ಬರೊತ್ತಟ್ಟಿಗಾಗಿ ಲಗಬಗೆಯಿಂದ ಆ ತೋಟವನ್ನು ಬಿಟ್ಟು ಹೊರ ಬಿದ್ದು ನಡೆದರು.

ನಮಗೆ ಹುಚ್ಚುನಗೆ ತುಂಬಿತು. ಅವರು ಕಣ್ಮರೆಯಾದ ಕೂಡಲೆ ನಾವು ಬಿದ್ದು ಬಿದ್ದು ನಕ್ಕೆವು. “ಇದು ಕೋರ್ಟಶಿಪ್ ಕಂಡಿರೋ?” ಎಂದು ಗುಂಡೇರಾಯರು ಉಪಕ್ರಮಿಸಿ ಇಂಗ್ಲಿಶ್ ಫ್ರೆಂಚ್ ಮುಂತಾದ ಕಾದಂಬರಿಗಳನ್ನೋದಿ ಪಾಶ್ಚಾತ್ಯರ ಪ್ರಿಯಾರಾಧನದ ಪದ್ಧತಿಯು ಬಹು ಸ್ವಾರಸ್ಯಮಯವಾಗಿರುವದೆಂಬ ಗ್ರಹವು ನಮ್ಮ ತರುಣರಲ್ಲಿ; ಆ ಸ್ವಾರಸ್ಯವನ್ನು ಕಂಡುಕೊಳ್ಳುವ ಲವಲವಿಕೆಯು ಗುಲ್‍ಬಾಯಿಯಲ್ಲಾದರೂ ಹುಟ್ಟಿರ ಬಹುದು.” ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು.

“ಕಥೆ ಕಾದಂಬರಿಗಳು ಸಾಲದೆ ‘ಕೋರ್ಟಶಿಪ್’ (ಪ್ರಿಯಾರಾಧನ) ಎಂಬುದೊಂದೇ ವಿಷಯದ ಮೇಲೆ ತಜ್ಞರಾದ ಆಂಗ್ಲ ಸ್ತ್ರೀ ಪುರುಷರು ಶಾಸ್ತ್ರಗಳನ್ನೇ ಬರೆದಿರುತ್ತಾರೆ. ನನ್ನ ಪ್ರೇಮವು ಹೀಗಿದೆ, ನನ್ನ ಪ್ರೇಮವು ಇಂತಿಷ್ಟಾಗಿದೆ, ಇಂಥದೊಂದು ಪ್ರಸಂಗದಾರಭ್ಯ ನಾನು ನಿನಗೆ ಮೋಹಿತನಾದೆನು, ಎಂಬಂಥ ಮಾತುಗಳನ್ನು ಹೇಳುವದಾದರೆ ವಾಕ್ಯ ರಚನೆ ಹೇಗಿರಬೇಕು, ಅಲಂಕಾರಗಳೆಂಥವಿರಬೇಕು, ಇಂಥ ಮಾತುಗಳನ್ನು ಹೇಳುವಾಗ ಧ್ವನಿ ಹೇಗೆ ಹೊರಡಬೇಕು, ಎಂಬ ಮಾತುಗಳ ನಿರ್ಣಯವು ಆ ಶಾಸ್ತ್ರ ಗ್ರಂಥಗಳಲ್ಲಿ ಹೇಳಿದೆ. ಇದಲ್ಲದೆ ಮೊದಲು ಚುಂಬನವನ್ನಿಕ್ಕುವ ಅಧಿಕಾರವಾರದು, ಇಕ್ಕುವದಾದರೆ ಅದು ಕೆನ್ನೆಯಮೇಲೋ ಕೆಂದುಟಿಯ ಮೇಲೋ, ಒಬ್ಬರೊಬ್ಬರ ಮೇಲೆ ಭುಜಗಳನ್ನು ಚಲ್ಲುವ ಬಗೆ ಹೇಗೆ ಎಂಬದನ್ನು ಆ ಗ್ರಂಥಗಳು ನಿರೂಪಿಸುವದಲ್ಲದೆ ಆ ಪ್ರಣಯಿಗಳು ಅಗಲುವಾಗ ಪ್ರಿಯನು ಪ್ರಿಯಳ ಕೊಡೆಯನ್ನು ಮರೆತು ಎತ್ತಿಕೊಂಡು ಹೋಗಬೇಕೆಂತಲೂ, ಅವಳು ಅವನ ಕೈಯಲ್ಲಿಯ ಬೆತ್ತವನ್ನು ಮರೆತು ತೆಗೆದುಕೊಂಡು ಹೋಗಬೇಕೆಂತಲೂ ಅವುಗಳ ನಿರ್ಬಂಧನವಿರುತ್ತದೆ. ಅಂಥ ಗ್ರಂಥಗಳನ್ನು ಓದಿ ಪ್ರವೀಣರಾದವರೇ ಪ್ರಿಯಾರಾಧನ ಸುಖವನ್ನು ಸೇವಿಸಬಲ್ಲರು. ನಮ್ಮ ನಿಮ್ಮಂಥವರಿಗೆ ಅದು ಸರ್ವಥಾ ಸಾಧ್ಯವಲ್ಲ.” ಎಂದು ಮಾಧವರಾಯರು ಹೇಳಿದರು.

ಸಾಯಂಕಾಲದ ಭೋಜನವು ತೀರುವವರೆಗೆ ನಾವು ಶ್ಯಾಮರಾಯರ ಹೆಸರು ತೆಗೆಯಲಿಲ್ಲ. ಉಂಡು ಕವಳವನ್ನು ಹಾಕಿಕೊಂಡು ನಾನೂ ಮಾಧವ ರಾಯರೂ ಗುಂಡೇರಾಯರು ಕೋಚಗಳ ಮೇಲೆ ಕುಳಿತುಕೊಂಡು ಸಾವಕಾಶವಾಗಿ ಧೂಮಪಾನವನ್ನು ನಡೆಸಿದೆವು. ಶ್ಯಾಮರಾಯರು ಆ ಗೋಡೆಯಿಂದ ಈ ಗೋಡೆಗೆ ಅಡ್ಡಾಡುತ್ತೆ ನೂರಡಿ ಮಾಡುತ್ತಿದ್ದರು. ಅವರ ಬೆನ್ನು ನನ್ನ ಕಡೆಗಾಗುತ್ತಲೆ ಗುಂಡೇರಾಯರು ಮಾಧವರಾಯರ ಭುಜವನ್ನು ಮೆಲ್ಲನೆ ಚಿವುಟ ಹೇಗೆ ತದೇಕಧ್ಯಾನರಾಗಿ ಅಡ್ಡಾಡುತ್ತಿರುವರು ನೋಡಿರಿ,” ಎಂದು ನುಡಿದರು. ಹೊಸದೇನು ಹೇಳಿದಿರಿ? ಪ್ರಿಯಾ ಸಮೇತರಾಗಿ ತಾವು ಉಪವನದಲ್ಲಿ ವಿಹರಿಸುತ್ತಿರುವೆವೆಂದು ಅವರು ತಿಳು ಕೊಂಡಿದ್ದಾರೆ!” ಎಂದು ಮಾಧವರಾಯರು ವಿನೋದಗೈದರು. ಶ್ಯಾಮ ರಾಯರು ನನ್ನ ಕಡೆಗೆ ಮುಖ ಮಾಡಿ ಈಚೆಗೆ ಬರುವಾಗ ನಾವು ಗಾಂಭೀರದ ಮೌನವನ್ನು ತಳೆಯುತ್ತಿದ್ದೆನು. ಅವರ ಬೆನ್ನು ನಮ್ಮ ಕಡೆಗಾದ ಕೂಡಲೆ ನಾವು ಮತ್ತೆ ಗುಜುಗುಜು ನಡಿಸುತ್ತಿದ್ದೆವು. ಶ್ಯಾಮರಾಯರಿಗೆ ಸಂಶಯ ಬಂದು ತಲೆಯ ಮೇಲೂ ಬೆನ್ನು ಮೇಲೂ ಕೈಯಾಡಿಸಿ ತನ್ನ ಹಿಂಭಾಗಕ್ಕೆ ಏನಾದರೂ ಅಂಟಿಕೊಂಡಿರುವದೋ ಎಂದು ನೋಡಿಕೊಂಡರು. ನಾವು ಮೂವರು ಖೊಳ್ಳನೆ ನಕ್ಕೆವು.

“ಏನಾದರೂ ವಿಪರೀತವಾಗಿದೆಯೇನು? ಏತಕ್ಕಿಷ್ಟು ನಗೆ ರಾಯರೆ?” ಎಂದು ಶ್ಯಾಮರಾಯರು ಹುಚ್ಚರಾಗಿ ಕೇಳಿದರು.

“ಏನೂ ಇಲ್ಲ! ‘ಗುಲ್ನೇ ಸುನೋವರ್ಸೆ ಕ್ಯಾ ಕಿಯಾ?’ ಎಂಬ ಗುಲ್ ಸುನೋವರದಲ್ಲಿಯ ಪ್ರಶ್ನಕ್ಕೆ ನಿಮ್ಮಲ್ಲಿ ಉತ್ತರವುಂಟೊ?” ಎಂದು ಗುಂಡೇರಾಯರು ನಗುತ್ತೆ ಕೇಳಿದರು.

ಶ್ಯಾಮರಾಯರ ಎದೆಗೆ ಬಾಣ ಬಡಿದಂತಾಯಿತು. ಅವರು ಚಕಿತರಾಗಿ “ರಾಯರೆ, ನೀವು ಏನನ್ನುವಿರೋ ನನಗೆ ತಿಳಿಯಲೊಲ್ಲದು!” ಎಂದು ನುಡಿದರು.

“ಲೇಡಿ ಒಲಿವಿಯಾ ಕೋ ಕೆಟ್ ಎಂಬ ಚತುರೆಯು ಬರೆದಿರುವ ‘ಪ್ರಿಯಾರಾಧನವೂ ಅದರ ಸ್ವಾರಸ್ಯವೂ’ ಎಂಬ ಶೃಂಗಾರರಸ ಪ್ರಚುರವಾದ ಗ್ರಂಥವನ್ನು ನೀವು ಮೊನ್ನೆ ಮೊನ್ನೆ ಓದುತ್ತಿದ್ದೀರಿ. ಆದೀ ಎಲ್ಲಿಯೂ ಕಾಣುವದಿಲ್ಲ. ಗುಲ್‍ಬಾಯಿಗೆ ಕೊಟ್ಟಿರುವಿರೇನು?” ಎಂದು ಮಾಧವ ರಾಯರು ಕೇಳಿದರು.

ಶ್ಯಾಮರಾಯರ ಮುಖಕ್ಕೆ ಲಜ್ಜಾದೇವಿಯು ಒಂದು ಪ್ರಕಾರದ ಆವರಣವನ್ನಿಕ್ಕಿದಳು. ತಮ್ಮ ಹುಟ್ಟಿದ ವಿಕಾರವನ್ನು ಅಡಗಿಸಿಕೊಳ್ಳಲು ಅವರು ಹಃ ! ಹಾಃ ! ಹಾಃ ! ಎಂದು ಒಳಿತಾಗಿ ನಕ್ಕು “ನಮ್ಮ ರಹಸ್ಯವು ನಿಮಗೆ ತಿಳಿದದ್ದು ಹೇಗೆ?” ಎಂದು ಕೇಳಿದರು.

“ಹೇಗಾದರೂ ತಿಳಿಯಿತು! ನೀವು ನಿಮ್ಮ ವಾಕ್ಚಾತುರ್ಯದ ಬಲದಿಂದ ವಿದುಷಿಯಾದ ಸೌಂದರ್ಯಲಕ್ಷ್ಮಿಯನ್ನು ಗೆದ್ದು ಕೊಂಡಿರಿ, ಒಳ್ಳೇ ಸಂತೋಷದ ಮಾತು.” ಎಂದು ನಾನು ನನ್ನ ಮಿತ್ರನನ್ನು ಸಂಭಾವಿಸಿದೆನು.

ಬಳಿಕ ಪಂಚಗೌಡರೂ ಪಂಚದ್ರಾವಿಡರೂ ಆಗಿರುವ ದಶವಿಧ ಬ್ರಾಹ್ಮಣರಲ್ಲಿ ಅನ್ಯೋನ್ಯ ವಿವಾಹಗಳು ಸಂಕೋಚವಿಲ್ಲದೆ ನಡೆಯಬೇಕೋ ಬಾರದೋ ಎಂಬ ವಿಷಯದ ಶಾಸ್ತ್ರರ್‍ಥವು ನಡೆಯಿತು. ಧರ್ಮಶಾಸ್ತ್ರಗಳ ಇಂಗಿತವನ್ನು ನೋಡಲಾಗಿ ಇಂಥ ವಿವಾಹಳಿಗೆ ಪ್ರತಿ ಬಂಧವಿಲ್ಲವೆಂಬ ನಿಷ್ಕರ್ಷೆಯಾಯಿತು. ಇನ್ನು ಆಂಗ್ಲ ವಿವಾಹ ಪದ್ದತಿಯ ಪೂರ್ವ ಪೀಠಿಕೆಗೆ ಅನುಸರಿಸಿ ವರನೇ ವಧುವಿನ ತಂದೆಯ ಬಳಿಗೆ ಹೋಗಿ ಕನ್ಯಾದಾನವನ್ನು ಬೇಡಿಕೊಳ್ಳಬೇಕಾಗಿರುವ ಮೇರೆಗೆ ಶ್ಯಾಮರಾಯರೇ ಲಲ್ಲೂಭಾಯಿಯ ಬಳಿಗೆ ಕನ್ಯಾರ್ಥಿಗಳಾಗಿ ಹೋಗತಕ್ಕದ್ದೆಂದು ಮಾಧವರಾಯರು ವಿನೋದಗೈದರು.

“ಆಂಗ್ಲ ಪದ್ದತಿಯೇಕೆ? ಆರ್ಯರ ಪದ್ಧತಿಯೇ ಇದು ವಾಚ ಚತ್ತ ಮ್ಯ್ ಕನ್ಯಾ ಪುತ್ರಾತಿ ಯಾಚಿತ ತ್ವಯ (ಅಂದರೆ ಸಂತತಿಗಾಗಿ ನೀನು ನನ್ನ ಕನ್ಯೆಯನ್ನು ಬೇಡಿಕೊಂಡ ಮೇರೆಗೆ ಅವಳನ್ನು ನಾನು ನಿನಗೆ ವಚನ ಪೂರ್ವಕವಾಗಿ ಕೊಟ್ಟಿದ್ದೇನೆ) ಎಂಬುದು ನಮ್ಮಲ್ಲಿಯ ವಾಗ್ದಾನದ ವಿಧಿಯಾಗಿರುವದಷ್ಟೇ? ಆಧುನಿಕರೇ ಕನ್ನೆಯರ ಯೋಗ್ಯತೆಯನ್ನು ಕಡಿಮೆ ಮಾಡಿದ್ದರಿಂದ ನನ್ನ ಮಗಳನ್ನು ‘ನೀವು ಸ್ವೀಕರಿಸುವಿರಾ?’ ಎಂದು ಕಂಡಕಂಡವರನ್ನು ಕೇಳಿಕೊಳ್ಳುತ್ತೆ ಕನ್ನೆಯ ಪಿತನು ಊರೂರು ತಿರುಗಬೇಕಾಗಿದೆ.” ಎಂದು ಶ್ಯಾಮರಾಯರು ವಿಷಾದದಿಂದ ನುಡಿದರು.

“ವಾಃ ವಾಃ ! ಈ ಮೇರೆಗೆ ಇಂದು ನೀವು ಲಲ್ಲೂ ಭಾಯಿಯವರ ಕಡೆಗೆ ಹೋಗಿ ಅವರ ಸಮ್ಮತಿಯನ್ನು ಪಡೆದು ಬನ್ನಿರಿ, ಅವರಾದರೂ ಸುಧಾರಣೆಚ್ಚುಗಳೇ ಆಗಿರುವರು. ರೂಢಿಯಲ್ಲಿ ಹಿತಾವಹವಾದ ಹೆಚ್ಚು ಕಡಿಮೆ ಮಾಡಲು ಅವರು ಸಿದ್ದರೇ ಇರುವರು. ನಿಮ್ಮಂಥ ಸಂಪನ್ನರಾದ ಅಳಿಯಂದಿರನ್ನು ಕಂಡಾಕ್ಷಣವೇ ಅವರು ತಮ್ಮ ಮಗಳನ್ನು ನಿಮಗೆ ಪ್ರೇಮ ಪೂರ್ವಕವಾಗಿ ಸಮರ್ಪಿಸುವರು.” ಎಂದು ನಾನು ಅಭಿಪ್ರಾಯಪಟ್ಟೆನು.

“ಓ! ಗುಲ್, ನಾನು ನಿನ್ನನ್ನು ಕರಿಸಿದನೋ ಇಲ್ಲವೋ ಅಷ್ಟರಲ್ಲಿಯೇ ಬಂದುಬಿಟ್ಟೆಯಲ್ಲ!” ಎಂದು ಲಲ್ಲೂ ಭಾಯಿಯವರು ತಮ್ಮ ಮಗಳ ಮುಖವನ್ನು ನೋಡಿ ಸಂತೋಷದಿಂದ ನುಡಿದರು.

“ಆಜ್ಞೆಯಾದ ಮೇಲೆ ಬರಬೇಡವೆ?” ಎಂದು ಗುಲ್‍ಬಾಯಿಯು ವಿನೀತೆಯಾಗಿ ನಿಂತುಕೊಂಡು ನುಡಿದಳು.

“ಪಿತ್ರಾಜ್ಞೆಯನ್ನು ನೀನು ಮೀರಿದವಳಲ್ಲ; ಆದರೂ ಇಷ್ಟು ಸೌಜನ್ಯ, ಇಷ್ಟು ವಿನಯ, ಇಷ್ಟು ನಮ್ರತೆಗಳನ್ನು ನೀನೆಲ್ಲಿ ಕಲಿತುಕೊಂಡಿ? ಹಾಗೆ ಕೋಚದ ಮೇಲೆ ಕೂಡು.”

ಗುಲ್ಬಾಯಿಯು ಕೋಚದ ಮೇಲೆ ಕುಳಿತುಕೊಂಡು “ನನ್ನನ್ನು ಕರಿಸಿದ್ದೇಕೆ?” ಎಂದು ಕೇಳಿದಳು.

“ಗುಲ್, ನಿನ್ನ ಪೂರ್ವದ ವಿಚಾರಗಳೆಲ್ಲ ತೊಳೆದು ಹೋಗಿ ನೀನು ಪುರಾತನ ಪದ್ದತಿಯ ನಾರಿಯಂತೆ ಆಚರಿಸಲಾರಂಭಿಸಿರುವಿ. ಅಣ್ಣಾ ಸಾಹೇಬ, ಮಾಧವರಾವ, ಶ್ಯಾಮರಾವ ಮುಂತಾದ ನಮ್ಮ ಹೊಸ ಸ್ನೇಹಿತರೊಡನೆ ವಾದ ವಿವಾದಗಳನ್ನು ಮಾಡುತ್ತೆ ತಿಂಗಳು ಹದಿನೈದು ದಿವಸಗಳಲ್ಲಿಯೇ ಇಷ್ಟು ವಿಚಾರಕ್ರಾಂತಿಯಾಯಿತೆ?”

“ಅಪ್ಪಾ, ನಮ್ಮ ಹೊಸ ಸೈತರು ಒಳ್ಳೇ ಚತುರರಾದ ವಿವಾದ ಪಟುಗಳು. ಅವರ ವಿಶುದ್ಧವಾದ ಆಚರಣಗಳನ್ನೂ ಅವರಲ್ಲಿರುವ ಆರ್ಯ ಧರ್ಮದ ಅಭಿಮಾನವನ್ನೂ ಸಾರಾಸಾರ ವಿಚಾರಗಳನ್ನು ತೂಗಿ ಸುಧಾರಣೆಯ ಪಥದಲ್ಲಿ ಅವರಿಡುತ್ತಿರುವ ಹೆಜ್ಜೆಗಳನ್ನೂ ಚನ್ನಾಗಿ ನಿರೀಕ್ಷಿಸಲಾಗಿ ಅವರು ಬೋಧಿಸಿದ ಎಲ್ಲ ಮಾತುಗಳು ನನಗೆ ಸಮ್ಮತವೇ ಆದವು.”

“ಸ್ತ್ರೀಸ್ವಾತಂತ್ರ್ಯದ ವಾದವೆಂಬ ಪ್ರಬಲವಾದ ಅಸ್ತ್ರವನ್ನಾದರೂ ನೀನು ಹಾಗೆ ಕೆಳಗಿಡಬಾರದಾಗಿತ್ತು” ಎಂದು ಲಲ್ಲೂಭಾಯಿಯವರು ಮುಗುಳುನಗೆ ನಗುತ್ತೆ ನುಡಿದರು.

“ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಸ್ತ್ರವು! ಪುರಷರಾದರೂ ಸ್ತ್ರೀಯರನ್ನು ಬಿಟ್ಟು ಸ್ವತಂತ್ರರಾಗಿ ಇರಲಾರರಷ್ಟೆ?” ಎಂದು ಗುಲ್‍ಬಾಯಿಯು ತಂದೆಯ ಮುಖವನ್ನು ನೋಡುತೆ ಮಂದಸ್ಮಿತೆಯಾಗಿ ಕೇಳಿದಳು.

“ಓ ಹೋ! ಲಗ್ನ ಮಾಡಿಕೊಳ್ಳುವದಿಲ್ಲೆಂದು ನೀನು ಸಾಧಿಸಿ ಹೇಳುತ್ತಿದ್ದಿ. ಆ ವಿಚಾರವನ್ನಾದರೂ ನೀನು ಕಳೆದುಕೊಂಡಿಲ್ಲವಷ್ಟೆ?”

ಕೆಂಪು ಹಗಲು ಪಂಜಿನ ಬೆಳಕಿನಲ್ಲಿ ಎಲ್ಲ ವಸ್ತುಗಳು ಕೆಂಪಾಗಿ ಕಾಣುವಂತೆ ಲಲ್ಲೂಭಾಯಿಯವರ ಮಾತು ಕೇಳುತ್ತಲೆ ಗುಲ್‍ಬಾಯಿಯ ಸುಂದರವಾದ ಮುಖವು ವಿಲಕ್ಷಣವಾದ ರಕ್ತಿಮೆಯನ್ನು ತಳೆದಿತು. ಸಲಜ್ಜಸ್ಮಿತಳಾಗಿ ಅವಳು ಮುಖವನ್ನು ತಗ್ಗಿಸಿಕೊಂಡು ಕುಳಿತಳೇ ಹೊರತಾಗಿ ತಂದೆಯ ಪ್ರಶ್ನಕ್ಕೆ ಮತ್ತೊಂದು ಉತ್ತರವನ್ನು ಹೇಳಬಲ್ಲಳೆ?

“ಉತ್ತರವಿಲ್ಲವೆ? ಹಾಗಾದರೆ ವಿವಾಹದ ವಿಷಯದಲ್ಲಾದರೂ ನೀನು ಶ್ಯಾಮರಾಯರ ಮತಕ್ಕೆ ಒಳಗಾಗಿರುವಿಯೆಂದು ನಾನು ಗ್ರಹಿಸುತ್ತೇನೆ.” ಎಂದು ತಂದೆಯು ಒಳಿತಾಗಿ ನಕ್ಕು ಕೇಳಿದನು.

ಗುಲ್‍ಬಾಯಿಯು ಭ್ರಾಂತಳಂತೆ ದಿಂಗು ಬಡಿದು ಕುಳಿತಳು. ತಲೆಯೆತ್ತಿ ತಂದೆಯ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ. “ನೀವು ಏನೆನ್ನುವಿರೋ ನನಗೆ ತಿಳಿಯಲೊಲ್ಲದು” ಎಂದಿಷ್ಟು ನುಡಿಯ ಬೇಕಾದರೆ ಅವಳಿಗೆ ಸಾಕುಬೇಕಾಗಿಹೋಯಿತು.

“ನನಗಾದರೂ ಎಲ್ಲಿ ತಿಳಿಯುತ್ತಿತ್ತು? ಇಂದು ಪ್ರಾತಃಕಾಲದಲ್ಲಿ ಶ್ಯಾಮರಾಯರೇ ನನ್ನ ಬಳಿಗೆ ಬಂದು ನಿನ್ನನ್ನು ತಮಗೆ ಕೊಡಬೇಕೆಂದು ಕೇಳಿಕೊಂಡರು. ನೀನು ಅಕ್ಕರತೆಯಿಂದ ಅವರ ಪಾಣಿಗ್ರಹಣಕ್ಕೆ ಒಪ್ಪಿರುವಿಯಂತೆ!”

“ಇದರಲ್ಲಿ ನನ್ನದೇನಿದೆ? ನೀವು ಕೊಡುವವರು ಅವರು ಸ್ವೀಕರಿಸತಕ್ಕವರು.”

“ಗುಲ್, ಈ ಸಂವಾದವು ಇಷ್ಟಕ್ಕೆಯೇ ಸಾಕು. ಹೆಚ್ಚಾಗಿ ವಿನೋದಗೈದು ನಿನ್ನ ಮುಖದ ಆರಕ್ತತೆಯನ್ನು ಹೆಚ್ಚಿಸುವದು ವಿಹಿತವಲ್ಲ. ಕೆಳಗೆ ಹೋಗಿ ನನಗಾಗಿ ಚಹಾ ತೆಗೆದುಕೊಂಡು ಬಾ” ಎಂದು ಲಲ್ಲೂಭಾಯಿಯವರು ಕೃತಕೃತ್ಯರಾಗಿ ನುಡಿದರು.

ಗುಲ್‍ಬಾಯಿಯು ಚಹ ತೆಗೆದುಕೊಂಡು ಮರಳಿ ಬರುವಷ್ಟರಲ್ಲಿ ಅವಳ ಚಿತ್ತವು ಕಿಂಚಿತ್ ಶಾಂತವಾಗಿತ್ತು. ಲಜ್ಜೆಯ ರಕ್ತಿಮೆಯು ಕಡಿಮೆಯಾಗಿತ್ತು.

“ಗುಲ್, ಲಗ್ನ ಮಾಡಿಕೊಳ್ಳದೆ ಹಾಗೆಯೆ ಇರತಕ್ಕದ್ದೆಂದು ನಿನಗೆ ಯಾರು ಬೋಧಿಸಿದ್ದರು?”

“ಯಾರೂ ಇಲ್ಲ. ನನ್ನ ಶಿಕ್ಷಕರಾದ ಧೋಂಡೋಪಂತ ಧಂಢೇರೆಯವರ ಪರಿಚಯವಾದಂದಿನಿಂದ ಅವರಂತೆಯೇ ಎಲ್ಲ ಪುರುಷರ ಮನೋವೃತ್ತಿಗಳಿರುವವೆಂಬ ದುರ್ಗ್ರಹವಾದ ಅಭಿಪ್ರಾಯವು ನನ್ನಲ್ಲಿ ಸೇರಿತು. ಅದರಂತೆ ಎಲ್ಲ ಪುರುಷರು ಸೆಟಮ್ಮನೆ ಸೆಟ ಕೊಂಡಿರುವರೆಂದೂ ಅವರಂತೆಯೇ ಎಲ್ಲರೂ ಸ್ತ್ರೀಯರ ವಿಷಯವಾಗಿ ಅನಾದರವುಳ್ಳವರೆಂದೂ ಅವರಂತೆಯೇ ಎಲ್ಲ ಪುರುಷರು ಅರಸಿಕರೆಂದೂ ನಾನು ತಿಳಿದಿದ್ದೆನು. ನಿಮ್ಮ ಸ್ನೇಹಿತರು ಬಂದು ನನ್ನಲ್ಲಿ ವಿಚಾರ ಕ್ರಾಂತಿಯನ್ನುಂಟು ಮಾಡಿದ್ದು ಸುಯೋಗವೇ ಎಂದು ತಿಳಿದು ಅವರಿಂದ ನಾನು ಉಪಕೃತಳಾಗಿದ್ದೇನೆ.”

ವಾಚಕರೆ, ಇದೇ ತಿಂಗಳಲ್ಲಿ ಗುಲ್‍ಬಾಯಿ ಶ್ಯಾಮರಾಯರ ವಿವಾಹವಾಗತಕ್ಕದ್ದು. ನೀವು ಬಂದು ವಧೂವರರ ಮೇಲೆ ಅಕ್ಷತೆಗಳನ್ನು ಹಾಕಿದರೆ ವಿಹಿತವೇ. ಬರಲಿಕ್ಕೆ ಅನುಕೂಲವಿಲ್ಲದಲ್ಲಿ ನೀವಿದ್ದ ಸ್ಥಳಗಳಿಂದಲೇ ಆಶೀರ್ವಚನಯುಕ್ತವಾದ ಪತ್ರಗಳನ್ನು ಹಾಕಿರಿ. ನಿಮ್ಮೆಲ್ಲರಿಗೂ ಲೇಖನದ್ವಾರಾ ರಸಪೂರ್ಣವಾದ ಪಕ್ವಾನ್ನಗಳನ್ನು ಕಳಿಸಲು ಲಲ್ಲೂಭಾಯಿಯವರು ನಮಗೆ ‘ಮಕ್ತೆ’ ಕೊಟ್ಟ ಮೇರೆಗೆ ಅಂಥ ಪಕ್ವಾನ್ನಗಳನ್ನು ‘ಸಚಿತ್ರ ಭಾರತದಲ್ಲಿ’ ತುಂಬಿ ಕಳಿಸುವೆವು, ಸ್ವೀಕರಿಸಬೇಕು.
*****

======================================================

ಕರಿಗಾಲಿನ ಗಿರಿರಾಯರು


ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ ಜನ ಕಾರ್‍ಯಧುರಂಧರರು ಇಂಗ್ಲಿಶ್ ಸರಕಾರಕ್ಕೆ ಕಾಯಾ ವಾಚಾ ಮನಸಾ ಸಾಹಾಯ ಮಾಡಿದ್ದರು. ಅವರಲ್ಲಿ ದಿವಾನ್ ಬಹಾದ್ದೂರ ವೀರನಾರಾಯಣರಾಯರು ಒಬ್ಬರಾಗಿದ್ದರು. ದಿವಾನರವರು ಮಾಡಿದ ಸಾಹಸದ ಸಹಾಯಕ್ಕೆ ಮೆಚ್ಚಿ ವಿಜಯಿಗಳಾದ ಆರ್ಥರ ವೆಲ್ಲಸ್ಲೆ ಪ್ರಭುಗಳು ಅವರನ್ನು ಬಹುಪರಿಯಾಗಿ ಸಂಭಾವಿಸಿ, ಅವರಿಗೆ ಚಿನ್ನೂರು ಎಂಬ ಗ್ರಾಮವನ್ನು ಉಂಬಳಿಯಾಗಿ ಹಾಕಿ ಕೊಟ್ಟಿದ್ದಲ್ಲದೆ ವೀರನಾರಾಯಣ ರಾಯರ ಮಗ ಮೊಮ್ಮಕ್ಕಳಿಗೆ ತಿಂಗಳಾ ಇನ್ನೂರು ರೂಪಾಯದ ಮಾಸಾಶನವು ಕೂಡ ಸಿಕ್ಕತಕ್ಕದ್ದೆಂದು ವ್ಯವಸ್ಥೆ ಮಾಡಿ ಕೊಟ್ಟಿದ್ದರು.

ವೀರನಾರಾಯಣರಾಯರು ಚಿಕ್ಕಂದಿನಿಂದಲೇ ದೊಡ್ಡ ಉದ್ಯೋಗಸ್ಥರಾಗಿದ್ದು ಮುಂದವರು ಅಭಿವೃದ್ಧಿಯನ್ನು ಹೊಂದುತ್ತೆ ತಿಂಗಳಾ ಒಂದು ಸಾವಿರ ರೂಪಾಯಿಯ ಸಂಬಳವುಳ್ಳ ದಿವಾನರಾದರು. ರಾಯರ ತಂದೆಯವರು ಗಳಿಸಿಟ್ಟ ಹೇರಳವಾದ ಹಣಕ್ಕೆ ವರ್ಷಾ ಐದಾರು ಸಾವಿರ ರೂಪಾಯಿ ಬಡ್ಡಿ ಬರುತ್ತಿತ್ತು. ಊರ ಉತ್ಪನ್ನವು ವರ್ಷ ಹತ್ತು ಸಾವಿರಕ್ಕೆ ಹೆಚ್ಚಾಗಿತ್ತು. ಮದರಾಸು ಬಳ್ಳಾರಿ ಪಟ್ಟಣಗಳಲ್ಲಿ ದಿವಾನರವರು ಕಟ್ಟಿಸಿದ ದಿವ್ಯವಾಗಿರುವ ಬಂಗಲೆಗಳಿಗೆ ವರ್ಷಾ ಐದು ಸಾವಿರ ರೂಪಾಯಿ ಬಾಡಿಗೆ ನಿರ್‍ವಿವಾದವಾಗಿ ಬರುತ್ತಿತ್ತು. ದಿವಾನರು ಸಂಬಳದಿಂದುಳಿಸಿದ ಹಣವಾದರೂ ವಿಪುಲವಾಗಿತ್ತು. ಹೆಣ್ಣು ಮಕ್ಕಳ ಮೈ ಮೇಲಿನ ಮುತ್ತು ರತ್ನಗಳ ಅಲಂಕಾರಗಳಿಗೆ ಬೆಲೆಯಿಲ್ಲ. ಮನೆಯಲ್ಲಿ ಕೊಡ, ಗಂಗಾಳ, ಪರಾತಗಳು ಕೂಡ ಬೆಳ್ಳಿಯವು. ಹೀಗೆ ಸಮೃದ್ಧಿಯಾಗಿರುವ ಸಂಪತ್ತಿನಿಂದ ಸಂತುಷ್ಟರಾದ ದಿವಾನ್ ಬಹಾದ್ದೂರರವರು ತಮ್ಮ ಸರಕಾರಿ ಉದ್ಯೋಗವನ್ನು ಬಿಟ್ಟು ಬೇಗನೆ ಪೆನ್ಶನ್ ತೆಗೆದುಕೊಂಡು ತಮ್ಮ ಉಂಬಳಿಯ ಗ್ರಾಮದಲ್ಲಿ ಸುಖದಿಂದ ಇರುವವರಾದರು.

ವೀರನಾರಾಯಣರಾಯರು ಸದಾಚರಣ ಸಂಪನ್ನರೂ, ಧರ್ಮಪರಾಯಣರೂ ದಾನಶೂರರೂ ಆಗಿರುವದರಿಂದ ಅವರು ಸರಕಾರದ ದಿವಾನಗಿರಿಯನ್ನು ಬಿಟ್ಟಿದ್ದರೂ ಅವರಿಗೆ ತುಂಗಭದ್ರೆಯ ಪ್ರಾಂತದಲ್ಲಿ ವಿಶೇಷವಾದ ಮರ್ಯಾದೆಯಿತ್ತು. ರಾಯರ ಪತ್ನಿಯವರಾದ ಕೋಪ್ರಮ್ಮನವರು ತಮಗಿಷ್ಟು ಸಂಪತ್ತು ಇದ್ದರೂ ಮಕ್ಕಳಾಗಿರಲಿಲ್ಲವೆಂದು ಚಿಂತಾಕುಲರಾಗಿ ಅನೇಕ ದೇವರಿಗೆ ಹರಕೆ ಹೊತ್ತರು. ಅಶ್ವತ್ಥನಿಗೆ ಪ್ರದಕ್ಷಿಣೆ ಹಾಕಿ ಹಾಕಿ ಬೇಸತ್ತರು, ಕಡೆಗೆ ಅಶ್ವತ್ಥನ ಪ್ರಸಾದದಿಂದಲೋ ಮತ್ತಾವ ಗ್ರಾಮ ದೇವತೆಯ ಅನುಗ್ರಹದಿಂದಲೋ ಕೊಪ್ರಮ್ಮನವರು ಗರ್ಭವನ್ನು ತಳೆದು ಸೂರ್ಯಗ್ರಹಣದ ಸಮುಹೂರ್ತದಲ್ಲಿ ಮಗನನ್ನು ಪಡೆದರು.

ಮಗನು ಹುಟ್ಟಿದ ದಿವಸವೇ ರಾಯರಿಗೆ ಅರ್ಧಾಂಗವಾಯುವಿನ ವಿಕಾರವಾದರೂ ಅವರು ಪುತ್ರೋತ್ಸವದ ಸಮಾರಂಭವನ್ನು ಒಳ್ಳೆ ಸಂತೋಷದಿಂದ ನೆರವೇರಿಸಿದರು. ಚಿರಂಜೀವರಿಗೆ ಗಿರಿರಾಯನೆಂಬ ನಾಮಕರಣವನ್ನು ಮಾಡಿಸಿದರು. ವ್ರುದ್ಧಾಪ್ಯದಲ್ಲಿ ಮಗನು ಹುಟ್ಟಿದ್ದರಿಂದ ತಂದೆ ತಾಯಿಗಳು ಅವನನ್ನು ಒಳ್ಳೆ ಪ್ರೀತಿಯಿಂದ ಬೆಳೆಸಿದರು. ಮಗುವು ದೊಡ್ಡದಾದ ಬಳಿಕ ಅದು ಕುಚೇಷ್ಟೆಗಳನ್ನು ಮಾಡಿದರೂ ಹಡೆದವರು ಹಿಗ್ಗುವರು; ಸೌಮ್ಯನಾಗಿದ್ದರೂ ಕಂಡು ಸಂತೋಷಬಡುವರು.

ಗಿರಿರಾಯನು ಮನೆಯಲ್ಲಿ ಎಂಥ ಕೆಟ್ಟ ಕೆಲಸ ಮಾಡಿದರೂ ಅವನನ್ನು ಯಾರೂ ತಡೆಯಕೂಡದೆಂದು ಕಟ್ಟಳೆಯಿತ್ತು. ರೊಕ್ಕ ರೂಪಾಯಿಗಳನ್ನು ಅವನು ಕೇಳಿ ತಕ್ಕೊಂಡರೂ ಚಿಂತೆಯಿಲ್ಲ; ಕದ್ದು ಕೊಂಡರೂ ಹೀಗೇಕೆಂದು ಯಾರೂ ಕೇಳುತ್ತಿದ್ದಿಲ್ಲ. ಚಿಕ್ಕರಾಯರು ಕದ್ದು ತಂದಿರುವ ಹಣವನ್ನು ಸೆಳೆದುಕೊಳ್ಳುವ ಸೇವಕರು ಅವನು ಬಡಿದರೂ ಬಡಿಸಿಕೊಳ್ಳುತ್ತಿದ್ದರು ; ಬೇಕಾದ ಹಾಗೆ ಬೈದರೂ ಬೈಸಿಕೊಳ್ಳುತ್ತಿದ್ದರು. ಓಣಿಯಲ್ಲಿ ಹೊರೆ ಹೊತ್ತು ಕೊಂಡು ಹೋಗುವವರನ್ನು ಅವನು ಧಕ್ಕನೆ ಹಾಯ್ದು ಕೆಡವುವನು, ಕಲ್ಲೊಗೆದು ಗೌಳಿಗಿತ್ತಿಯ ಮೊಸರುಗಡಿಗೆಯನ್ನೊಡೆದರೆ ಅದು ಕೃಷ್ಣ ಲೀಲೆಯೆಂದು ಹೇಳಿ ಗಿರಿರಾಯನ ತಾಯಿಯು ಯಥೇಷ್ಟವಾಗಿ ನಕ್ಕು, ಗೌಳಿಗಿತ್ತಿಗೆ ಮೊಸರುಗಡಿಗೆಗಳ ಹಾನಿಗಾಗಿ ಸಾಕಷ್ಟು ಹಣವನ್ನು ಕೋಡುವಳು. ವೀರನಾರಾಯಣರಾಯರಿಗೆ ಮಗನು ಮಾಡಿದ ಕುಚೇಷ್ಟೆಗಳು ಸರಿಬರುತ್ತಿಲ್ಲವಾದರೂ ಗಿರಿಯು ದೊಡ್ಡವನಾದ ಬಳಿಕಾದರೂ ಬುದ್ಧಿಗಲಿಯುವನೆಂದು ಸಮಾಧಾನವನ್ನು ಹಚ್ಚಿಕೊಳ್ಳುತ್ತಿದ್ದರು.

ರಾಜಕಾರಣಗಳಲ್ಲಿ ಕೂಡ ಒಳ್ಳೇ ದೂರದರ್ಶಿಗಳೆಂದು ಖ್ಯಾತಿಯನ್ನು ಹೊಂದಿದ ವೀರನಾರಾಯಣರ ದೃಷ್ಟಿಯು ಪುತ್ರ ವಾತ್ಸಲ್ಯವೆಂಬ ಆವರಣದಿಂದ ಅಂಧವಾಗಿ ಹೋಗಿತ್ತಾದ್ದರಿಂದ ವ್ರಾತ್ಯನಾದ ಗಿರಿರಾಯನ ಅವಸ್ಥೆ ಮುಂದೇನಾಗುವದೆಂಬ ಆಲೋಚನವು ಅವರಿಗೆ ತೋರಲಿಲ್ಲ. ಅಶಿಕ್ಷಿತನಾದ ಶಿಕ್ಷಕನೋರ್ವನು ನಿತ್ಯದಲ್ಲಿಯೂ ಮನೆಗೆ ಬರುತ್ತಿದ್ದರೂ ಗಿರಿರಾಯನ ಕಲಿಯುವ ಅಪೇಕ್ಷೆಯು ಒಮ್ಮೆಯಾದರೂ ತೋರಿಬರಲಿಲ್ಲಾದ್ದರಿಂದ ಅವನು ಸೇವಕರೊಡನೆಯೂ ಗಿರಿರಾಯನೊಡನೆಯೂ ಒಣಹರಟೆ ಕೊಚ್ಚಿ ಹೋಗುತ್ತಿದ್ದನು. ಈ ಮಾತು ರಾಯರ ಲಕ್ಷ್ಯಕ್ಕೆ ಬಂದಿದ್ದರೂ ಗರ್ಭಶ್ರೀಮಂತನಾದ ತನ್ನ ಮಗನಿಗೆ ವಿದ್ಯೆ ಬರದಿದ್ದರೆ ಬಿಡಲೊಲ್ಲದೇಕೆಂದು ಹೇಳುತ್ತಿದ್ದರು. ಮಂಗ, ಹೋತು, ನವಿಲು, ಪಾರಿವಾಳಗಳನ್ನು ಸಾಕುವ ಪ್ರೀತಿಯು ಗಿರಿ ರಾಯನಿಗೆ ಬಹಳಾಗಿತ್ತು. ಒಂದು ಮುಸುವನನ್ನು ಕೊಂಡು ಅದಕ್ಕೆ ಗೋವೆಯ ಕಿರಿಸ್ತಾನರಂಥ ಅಂಗಿ ಟೊಪ್ಪಿಗೆಗಳನ್ನು ಹಾಕಿ ಅವನು ಅದಕ್ಕೆ ಗೊನ್ಸಾಲ್ವಿಸನೆಂಬ ಹೆಸರನ್ನಿಟ್ಟನು; ಗಡ್ಡದ ಬಿಳಿ ಹೋತಿಗೆ ಅವನು ಕಾಜೀ ಮಸ್ತಾನಸಾಹೇಬರೆಂದು ಕರೆದನು. ಇದಕ್ಕೆಲ್ಲ ಚಾತುರ್ಯವೆಂದು ಹೇಳಿ ದಿವಾನರವರು ಮಗನನ್ನು ಕೊಂಡಾಡುತ್ತಿದ್ದರು.

ವೀರನಾರಾಯಣರಾಯರ ಪ್ರಕೃತಿಯು ದಿನವೊಂದಕ್ಕೆ ಕ್ಷೀಣವಾಗುತ್ತ ನಡೆದದ್ದರಿಂದ ತಾವು ಬದುಕಿರುವಾಗಲೇ ಮಗನ ವಿವಾಹ ಸಮಾರಂಭವನ್ನು ಮುಗಿಸಿಬಿಡಬೇಕೆಂದೆಣಿಸಿ ಅವರು ತಮ್ಮ ಹೆಂಡತಿಯ ತಮ್ಮನಾದ ಕೃಷ್ಣ ಮೂರ್ತಿರಾಯರ ಅತಿ ಚಲುವೆಯಾದ ಮಗಳನ್ನು ತೆಗೆದುಕೊಂಡು ಹದಿನೈದು ವರುಷದ ಅಲ್ಪ ವಯಸ್ಕನಾದ ಗಿರಿರಾಯನ ಮದುವೆಯನ್ನು ಮಾಡಿ ಬಿಟ್ಟರು. ಇನ್ನೇನು ಚಿಂತೆಯಿಲ್ಲ; ಮನೆಯಲ್ಲಿ ಅಖಂಡವಾದ ಸಂಪತ್ತು; ಸೊಸೆ ರೂಪವತಿಯು; ಶ್ಲಾಘ್ಯರಾದವರೊಡನೆ ಶರೀರಸಂಬಂಧವಾಗಿರುವದು; ತಮ್ಮ ಮಗನು ತಮ್ಮ ಪಾಶ್ಚಾತ್ ಸುಖಿಯಾಗಿರುವನೆಂಬ ಸಂತೋಷದಿಂದ ರಾಯರು ಪರಲೋಕಕ್ಕೆ ತೆರಳುವವರಾದರು. ಮುಂದೆ ಒಂದೆರಡು ವರುಷಗಳಲ್ಲಿ ಗಿರಿರಾಯರ ಹೆಂಡತಿಯಾದ ವಿಶಾಲಾಕ್ಷಿಯು ಮೈನೆರೆದು ಮನೆಗೆ ಬಂದಳು. ಸಕಲ ಸಂಪತ್ತುಗಳು ಗಿರಿರಾಯರ ಸ್ವಾಧೀನವಾದವು.

ಗಿರಿರಾಯರ ಪ್ರೀತಿ ಪಾತ್ರನಾದ ಕಾಜೀ ಮಸ್ತಾನಸಾಹೇಬನು (ಹೋತಿನ ಹೆಸರು) ಮನಬಲ್ಲಂತೆ ಮೇದು ಮದವೇರಿ ಊರಲ್ಲಿಯ ಅಜಯೋಷಿತೆಯರ ಮರ್ಯಾದೆಯನ್ನು ಅಸಹ್ಯವಾಗಿ ಭಂಗಿಸಲಾರಂಭಿಸಿದನು. ಅದನ್ನು ಕಂಡು ಗಿರಿರಾಯರು ತಮ್ಮ ಸ್ನೇಹಿತರಾದ ಪತ್ತಾರ ಮಾನಪ್ಪ, ಸುಂಕದ ವೆಂಕಣ್ಣ, ಶಾನುಭೋಗರ ಬಾಳಪ್ಪ ಮುಂತಾದವ ರೊಡನೆ ವಿಚಾರಗೈದು ಕಾಳೀ ಸಾಹೇಬರನ್ನು ಅಷ್ಟಪಾದರನ್ನಾಗಿ ಮಾಡಬೇಕೆಂದು ನಿಶ್ಚಯಿಸಿದರು. (ದ್ವಿಭುಜರಾದ ದಂಪತಿಗಳಿಗೆ ಚತುರ್ಭುಜರೆಂದು ಹೇಳುವ ರೂಢಿಯಂಟಷ್ಟೆ?) ಸಂಗಡಲೇ ಗಲಸತ್ನಿಯಾದ ಅಜಾಸುಂದರಿಯನ್ನು ವಧುವಾಗಿ ಗೊತ್ತು ಪಡಿಸಿ ಗಿರಿರಾಯರು ಕಾಜಿ ಮಸ್ತಾನ ಸಾಹೇಬರ ವಿವಾಹವಮಹೋತ್ಸವವನ್ನು ಒಳ್ಳೆ ವಿಜೃಂಭಣೆಯಿಂದ ಬೆಳೆಸಿದರು. ವರನ ಕೊಂಬುಗಳಿಗೆ ಬಂಗಾರದ ಅಣಸುಗಳನ್ನು ಹಾಕಿ ಅದರ ಮೈಗೆ ಬೆಲೆಯುಳ್ಳ ಕಲಾಬತ್ತಿನ ಜೂಲ ಹಾಕಿದರು. ವಧುವಿನ ಕೊರಳಲ್ಲಿ ಟಿಕ್ಕೆ ಸರಗಳನ್ನು ತೊಡಕಿಸಿ ಮೈ ಮೇಲೆ ಜರದ ಪೀತಾಂಬರವನ್ನು ಹೊದಿಸಿದರು, ಬೇಂಡಬಾಜಾ ಬಾಜಂತ್ರಿಗಳೊಂದಿಗೆ ವಧೂವರರ ಘನವಾದ ಮೆರವಣಿಗೆ ಹೊರಟಿತು. ತಾರಾಜೀ, ಪ್ಯಾರಾಜೀ, ಗುಲಾಬಜೀ ಮುಂತಾದ ವಾರಾಂಗನೆಯರ ಸೊಬಗಿನ ನೃತ್ಯಗಾಯನಗಳಾದವು. ಎಂಟಾನೆಂಟು ದಿವಸ ಬಂದು ಹೋದವರಿಗೆ ಪಕ್ವಾನ್ನದ ಭೋಜನಗಳು. ಈ ಗಲಸ್ತನೀ ಮಸ್ತಾನಸಾಹೇಬರ ಅಸದೃಶವಾದ ವಿವಾಹಮಹೋತ್ಸವಕ್ಕೆ ಐದಾರು ಸಾವಿರ ರೂಪಾಯಿಗಳ ವೆಚ್ಚವಾಯಿತು.

ಗಿರಿರಾಯರು ಒಳ್ಳೇ ರೂಪವಂತರೂ, ಹದಿನೆಂಟು ಹತ್ತೊಂಬತ್ತು ವರುಷದ ಪ್ರಾಯದವರೂ, ಮಿತಿಮೀರಿದ ಶ್ರೀಮಂತರೂ ಆಗಿರುವದರಿಂದ ಇಂಥ ವಸ್ತುವು ನ್ಯಾಯವಾಗಿ ತಮ್ಮದೇ ಎಂದು ಆ ಪ್ರಾಂತದ ವಾರಾಂಗನೆಯರ ಅಭಿಪ್ರಾಯವಾಯಿತು. ಅವರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ಗಿರಿರಾಯರ ಸ್ನೇಹಿತರಾದ ಸುಂಕದ ವೆಂಕಣ್ಣ, ಶಾನುಭೋಗ ಮುಂತಾದವರ ಸಹಾನುಭೂತಿಯನ್ನು ಕೋರಿಕೊಳ್ಳಲಾರಂಭಿಸಿದರು. ಪ್ರಸಿದ್ಧರಾದ ವಾರಾಂಗನೆಯರು ತಮ್ಮ ಸಹಾಯವನ್ನು ಬಯಸುತ್ತಿರುವದನ್ನು ಕಂಡು ವೆಂಕಣ್ಣನವರಿಗೂ ಶಾನುಭೋಗರಿಗೂ ಒಳ್ಳೆ ಗೌರವ ಬಂದಂತಾಗಿ ಆ ಸ್ತ್ರೀ ಪಕ್ಷ ಪಾತಿಗಳು ವಾರಾಂಗನೆಯರಿಗೆ ಗಿರಿರಾಯರನ್ನು ಗೆದ್ದು ಕೊಡುವ ಹವಣಿಕೆಗೆ ಬಿದ್ದರು.

ಕಡೆಗೆ ವೆಂಕಣ್ಣನ ಪಾಲಿಗೆ ಕೀರ್ತಿ ಬಂದಿತು. ತಾರಾಜಿಯ ದೈವವು ಕೆರೆಯಿತು. ಗಿರಿರಾಯನು ಸೊಬಗಿನ ಉಡುಗೆತೊಡಿಗೆ ಮಾಡಿ ಕೊಂಡು ತನ್ನ ಮನೆಗೆ ಬಂದದ್ದು ಕಂಡು ತಾರಾಜಿಯು ಪರಮ ಸಂತುಷ್ಟಳಾಗಿ ವಿಲಾಸದಿಂದೆ ಮಂದಹಾಸಗೈದು ರಾಯರನ್ನು ಪ್ರೇಮದಿಂದ ಕೈ ಹಿಡಿದು ಮಂಚದ ಮೇಲೆ ಕುಳ್ಳಿರಿಸಿದಳು. ತಾರುಣ್ಯದ ಭರದಲ್ಲಿದ್ದ ಆ ವಾರಾಂಗನೆಯು ವೈಯ್ಯಾರದಿಂದ ಕೈ ಹಿಡಿದಾಕ್ಷಣವೇ ಗಿರಿರಾಯನ ಮೈಯೆಲ್ಲ ಚೋಂಪಿಸಿತು. ಅವನ ಚಿತ್ತವು ಬಹು ಪರಿಯಾಗಿ ಚಂಚಲವಾಯಿತು. ಭ್ರಮಿಷ್ಟನಂತೆ ಅವನ ಆ ವಿಶ್ವ ಯೋಷಿತೆಯ ಸುಂದರವಾದ ಮುಖವನ್ನು ನೋಡುತ್ತ ಕುಳಿತನು.

ತಾರಾಜಿಯು ಕುಲುಕುಲು ನಗುತ್ತೆ ಸುಗಂಧಮಯವಾದ ಅತ್ತರವನ್ನು ತನ್ನ ಅಂಗೈಯಲ್ಲಿ ಹಾಕಿಕೊಂಡು ಅದನ್ನು ಗಿರಿರಾಯನ ವಿಶಾಲವಾದ ಎದೆಗೂ ಪುಷ್ಟವಾಗಿರುವ ಆವನ ಮುಂಗೈಗೂ ಕಾಮಪರವಶಳಾಗಿ ತಿಕ್ಕಿದಳು. ಬಳಿಕ ಶಾನುಭೋಗರ ಬಾಳಪ್ಪನು “ತಾರಾಜೀ, ರಾಯರಂಥ ದೊಡವರು ನಿನ್ನ ಮನೆಗೆ ಬಂದಿದ್ದಾರೆ, ಸರಸವಾಗಿ ಗಾನ ಮಾಡ ಬೇಕಲ್ಲವೆ?” ಎಂದು ಕೇಳಿದನು. ವೀಣಾಮೃದಂಗಗಳ ಸಂಯೋಗವು ಸಿದ್ದವಾಗಿಯೇ ಇತ್ತು. ತಾರಾಜಿಯು “ಏನೀದಚ್ಚರಿ ಪ್ರಿಯ, ಏಣಾಂಕನದನಿಯ ನೀನಗಲಿರುವದು ಉಚಿತವೇನೋ” ಎಂಬ ಪದವನ್ನು ಅಭಿನಯದೊಂದಿಗೆ ಒಳ್ಳೆ ಮಂಜುಲವಾಗಿ ಹಾಡಿದಳು.

ಆಯಿತು, ತಾರಾಜಿಯ ಉದಯವಾಯಿತು. ಬಿದಿಗೆಯ ಚಂದ್ರ ರೇಖೆಯಂತಿರುವ ಮನೋಹರಳಾದ ವಿಶಾಲಾಕ್ಷಿಗೆ ಬೇಗನೆ ಅಸ್ತ ಸಮಯವೂ ಪ್ರಾಪ್ತವಾಯಿತು. ಕುಲಾಂಗನೆಯೂ, ವಿನಯವತಿಯೂ, ಮರ್ಯಾದೆ ಶೀಲಳೂ ಆಗಿರುವ ವಿಶಾಲಾಕ್ಷಿಯು ಕೇವಲ ಅರಸಿಕೆಯೆಂದೂ, ನಿಜವಾದ ಸ್ತ್ರೀಸುಖವು ಪ್ರಾಪ್ತವಾಗಬೇಕಾದರೆ ವಾರಾಂಗನೆಯರಿಂದಲೇ ಎಂದೂ ಗಿರಿರಾಯನ ದೃಢವಾದ ಅಭಿಪ್ರಾಯವಾಯಿತು. ತಾರಾಜಿಯು ಕೊಟ್ಟ ‘ಕಸ್ತೂರಿಕಾ ಕೇಶರ ಹೇಮಮಿಶ್ರ’ವಾದ ತಾಂಬೂಲವನ್ನು ಸ್ವೀಕರಿಸಿ ಉಳಿದವರೆಲ್ಲರೂ ಹೊರಟುಹೋದರು. ಗಿರಿರಾಯನೊಬ್ಬನೇ ತಾರಾಜಿಯ ಮೋಹಜಾಲದಲ್ಲಿ ಸಿಕ್ಕಿಕೊಂಡನು.

ಎಷ್ಟು ಸುವರ್ಣಲಾತಿಯನ್ನು ಸುರಿವಿದರೂ ವಾರಾಶಿಯ ಒಡಲೂ ವಾರಾಂಗನೆಯ ಒಡಲೂ ತುಂಬುವದುಂಟೇ? ದಿನವೊಂದಕ್ಕೊಂದರಂತೆ ಗಿರಿರಾಯನ ಮನೆಯ ಅನರ್ಘವಾದ ಅಲಂಕಾರಗಳು ತಾರಾಜಿಯ ಪಾಲಾಗುತ್ತ ನಡೆದವು. ಹಿಡಿ ಹೊನ್ನು ಅವಳ ನಿತ್ಯದ ವೆಚ್ಚಕ್ಕೆ ಸಾಲದಾಗಿತ್ತು. ರಾಯರು ಸ್ವತಃ ಮಾಡುವ ವ್ಯಯಕ್ಕಾದರೂ ಮಿತಿಯಿಲ್ಲ. ಇಂದು ಎರಡು ಸಾವಿರ ರೂಪಾಯಿಯ ಬೆಲೆಯುಳ್ಳ ಕುದುರೆಯ ಜೋಡು ತಂದಿದ್ದರೆ ಮುಂದಿನ ತಿಂಗಳಿಗೆ ಮತ್ತೊಂದು ಜೋಡು, ಇಂದಿನ ಬೆಲೆಯುಳ್ಳ ಪೋಷಾಕು ನಾಳೆ ಮುಜುರೆ ಮಾಡಿದವನ ಪಾಲು, ನೃತ್ಯಗಾಯನಗಳ ವೆಚ್ಚ; ಫಲಾಹಾರಗಳ ವೆಚ್ಚ; ಸುಗಂಧ ದ್ರವ್ಯಗಳ ವೆಚ್ಚ, ನೀರು ತೊಡಿಹಾಕಿದಂತೆ ರಾಯರ ಮನೆಯ ಧನಕನಕಾದಿಗಳೆ ಎರಡು ಮೂರು ವರ್ಷಗಳಲ್ಲಿ ಸವೆದುಹೋದವು.

ವಿಶಾಲಾಕ್ಷಿಯ ಕೊರಳಲ್ಲಿಯ ಚಂದ್ರಹಾರವು ತಾರಾಜಿಗೆ ಬೇಕಾಯಿತು. ಅದನ್ನು ತಂದುಕೊಡಲಿಕ್ಕೆ ಗಿರಿರಾಯನು ಒಪ್ಪಲಿಲ್ಲ. ಆ ಕ್ಷಣದಲ್ಲಿಯೇ ಗಿರಿರಾಯನು ಸಿಟ್ಟು ಬೆಂಕಿಯಾಗಿ ಆ ರಂಡೆಯ ಮನೆಯಿಂದ ಹೊರಬಿದ್ದದನ್ನು ಜನರು ಕಂಡರು. ಮರುದಿವಸ ಅವನು ಅವಳ ಮನೆಗೆ ಹೋಗಲಿಲ್ಲ. “ಏನು ಚಮತ್ಕಾರವಿದು?” ಎಂದು ವೆಂಕಣ್ಣನು ಬಾಳಪ್ಪನನ್ನು ಕೇಳಿದನು. “ಏನೋ ವಿಪರೀತವಾಗಿರಬಹುದು, ತಾರಾಜಿಯು ತನ್ನ ಮೆತ್ತಗಿನ ಪಾದರಕ್ಷದಿಂದ ಮೆಲ್ಲನೆ ಒಂದೇಟು ಹೊಡೆದರೂ ಹೊಡೆದಿರಬಹುದು! ಹಾ… ಹಾ… ಹಾ… !” ಎಂದು ಬಾಳಪ್ಪನು ನಕ್ಕನು.

ಪತಿಯು ನಾಲ್ಕು ದಿವಸ ಮನೆಯಲ್ಲಿಯೇ ಇರುವದನ್ನು ಕಂಡು ತಪಸ್ವಿನಿಯಾದ ವಿಶಾಲಾಕ್ಷಿಗೆ ಸಮಾಧಾನವಾಯಿತು. ಪತಿಯನ್ನು ಕಂಡು ಅಲಂಕಾರಗಳನ್ನು ಕಳಕೊಂಡ ವ್ಯಸನದ ವರಿಮಾರ್ಜನವಾದಂತಾಗಿ ಅವಳು ಒಳ್ಳೇ ಪ್ರೇಮದಿಂದ ಆತನ ಸೇವೆಯನ್ನು ಮಾಡತೊಡಗಿದಳು. ಪಾಪ, ಅವಳು ಉಬ್ಬಿನಿಂದ ಸತ್ಯನಾರಾಯಣನ ವ್ರತವನ್ನು ಮಾಡಿದಳು. ಆದರೆ ಸತ್ಯನಾರಾಯಣನಾದರೂ ಏನು? ನಾಳೆ ವಿಶಾಲಾಕ್ಷಿಯ ವೈರಿಯಾದ ಅನ್ಯಳೊರ್ವಳು ಅದೇ ವ್ರತವನ್ನು ಮಾಡಿದರೆ, ಆ ದೇವನು ಗಿರಿರಾಯನನ್ನೊಯ್ದು ಅನ್ಯಳ ಸ್ವಾಧೀನ ಮಾಡಿದನೇ! ‘ನಾ ಮಾಡಿದ ಕರ್ಮ ಬಲವಂತನಾದರೆ, ನೀ ಮಾಡುವದೇನೋ ಪರಿಯೇ’ ಎಂದು ಹರಿದಾಸರು ಹೇಳಿದ್ದು ಸಟೆಯೇ?

ಕರ್ಮಧರ್ಮ ಸಂಯೋಗದಿಂದೆ ಗಿರಿರಾಯನಿದ್ದ ಊರಿಗೆ ಡೊಂಬರಾಟ ಬಂದಿತು. ಅವರಲ್ಲಿದ ಓರ್ವ ಮೋಹನಾಂಗಿಯಾದ ಯುವತಿಯು ಬಹು ಚಮತ್ಕಾರವಾದ ಆಟಗಳನ್ನು ತೋರಿಸುತ್ತಿದ್ದಳಾದ್ದರಿಂದ ಆ ಡೊಂಬರಾಡಂಬರಕ್ಕೆ ಬಹುಜನರು ಮೋಹಿತರಾಗಿದ್ದರು. ಮಾನಪ್ಪನು ಗಿರಿರಾಯರ ಮನೆಗೆ ಬಂದು ರಾಯರೇ, ಆ ಡೊಂಬತಿಯ ಆಟವನ್ನು ತಾವು ನೋಡದಿದ್ದರೆ ಹುಟ್ಟಿದ್ದು ಅಸಾರ್ಥಕವಾದಂತಾಗುವದೆಂದು ಹೇಳಿದನು. ಕೇಳುವದೇನು? ಆಟಕ್ಕೆ ಪ್ರಾರಂಭವಾಯಿತು. ಹದಿನಾರು ವರುಷದ ಪ್ರಾಯದವಳಾದ ಆ ಡೊಂಬ ಸುಂದರಿಯು ಪಟ್ಟಿ, ಪೀತಾಂಬರವನ್ನುಟ್ಟು ತಲೆಗೆ ಚಿತ್ರಮಯವಾದ ಜರದ ಟೊಪ್ಪಿಗೆಯನ್ನಿಟ್ಟು, ಅಂತರದಲ್ಲಿ ಹಿಡಿದಿರುವ ಹಗ್ಗದ ಮೇಲೆ ಇಟ್ಟಿರುವ ಹರಿವಾಣದಲ್ಲಿ ತನ್ನ ಕಾಲುಗಳನ್ನಿಟ್ಟು, ಹರಿವಾಣವನ್ನು ಸರಿಸುತ್ತೆ ಹಗ್ಗದ ಈಚೆಯ ತುದಿಯಿಂದ ಆಚೆಯ ತುದಿಗೆ ಹೋಗುತ್ತಿರುವಾಗ ನಭಶ್ಚಾರಿಣಿಯಾದ ಊರ್ವಶಿಯಂತೆ ಕಂಡಳು. ಹಾಗೆ ನಡೆದಿರುವ ಆ ಒಯ್ಯಾರೆಯು ತನ್ನ ತೂಕವನ್ನು ಹಿಡಿದಿರುವದರಲ್ಲಿ ತದೇಕಧ್ಯಾನಳಾಗಿದ್ದರೂ ಆಗಾಗ ತನ್ನ ತೀವ್ರವಾದ ಕಟಾಕ್ಷದಿಂದ ಗಿರಿ ರಾಯನನ್ನು ನೋಡುತ್ತಿರಲು ಆ ಹುಚ್ಚನು ಅವಳ ಮೋಹಪಾಶದಲ್ಲಿ ಸಂಪೂರ್ಣವಾಗಿ ಸಿಕ್ಕನು.

ತಾರೆಯ ಪ್ರಾಯಶ್ಚಿತ್ತಕ್ಕಾಗಿಯೇ ತಾನು ಆ ಡೊಂಬರ ಮೋಹಕವಾದ ಬೊಂಬೆಯನ್ನು ವಶಮಾಡಿಕೊಳ್ಳವನೆಂದು ಹೇಳಿ ಗಿರಿರಾಯನು ಬಳ್ಳಾರಿಯಲ್ಲಿಯ ಬಂಗಲೆಗಳನ್ನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ತಂದು ಅವಳೊಡನೆ ದುರ್‍‍ವ್ಯಾಪಾರವನ್ನು ಮಾಡಲಾರಂಭಿಸಿದನು.

ಹರಕೆ ಹೊತ್ತು ಹಡೆದ ಮಗನು ಈ ರೀತಿ ದುರ್ಮಾರ್ಗಿಯಾಗಿ ಹಿರಿಯರ ಹೆಸರಿಗೆ ಕೇರಿನಂಥ ಕಲಂಕವನ್ನು ತಂದದ್ದಲ್ಲದೆ, ಮನೆಯ ಸಂಪತ್ತು ಈಡಾಡಿ ಸುಕುಮಾರಿಯಾದ ತನ್ನ ಸೊಸೆಯ ಸೌಖ್ಯಲತೆಗೆ ಬೆಂಕಿ ಹಾಕಿದನಲ್ಲಾ ಎಂಬ ವ್ಯಸನದಿಂದ ಗಿರಿರಾಯನ ತಾಯಿಯು ಹೃದ್ರೋಗವನ್ನು ತಗಲಿಸಿಕೊಂಡು ಸತ್ತು ಹೋದಳು. ಗಿರಿರಾಯನಿಗೆ ಇದೊಂದು ಹಿತವೇ ಆಯಿತು. ಆದರೆ ಪಾಪ, ವಿಶಾಲಾಕ್ಷಿಗೆ ಕಟ್ಟಡವಿಯಲ್ಲಿ ಕಣ್ಣು ಕಟ್ಟಿ ಬಿಟ್ಟಂತಾಯಿತು. ಡೊಂಬತಿಯು ಮನೆಯಲ್ಲಿಯೇ ಬಂದು ಕುಳಿತಳು. ಎಲ್ಲ ಕಾರಭಾರವೂ ಅವಳ ಕೈ ಸೇರಿಹೋಯಿತು.

ವಿಶಾಲಾಕ್ಷಿಗೆ ತೀವ್ರವಾದ ಮಾನಹಾನಿಯ ವೇದನೆಯಾಯಿತು. ತನ್ನ ದೇವತೆಯಾದ ಪತಿಯು ಕುಮಾರ್ಗಿಯಾಗಿ ಕೆಟ್ಟು ಹೋಗುತ್ತಿರುವದನ್ನು ಅವಳು ಕಣ್ಣಲಿ ನೋಡಲಾರಳು. ಸಂಸಾರದ ಸುಖವಂತೂ ಅವಳಿಗೆ ಚಿಕ್ಕಂದಿನಲ್ಲಿಯೇ ಇಲ್ಲದಂತಾಯಿತು. ಅಪ್ಸರೆಯರಿಗಿಂತಲೂ ಮಿಗಿಲಾಗಿರುವ ಆ ನವತರುಣಿಯು ವ್ಯಸನಾತಿರೇಕದಿಂದ ಸೊರಗಿ ಕಡ್ಡಿಯಾದಳು. ಶಶಿಬಿಂಬದಂತೆ ಮನೋಹರವಾಗಿರುವ ಅವಳ ಮುಖವು ಹುಚ್ಚಿಟ್ಟು ಸುರಿಯಿತು. ಪತಿವ್ರತೆಯೂ ಧರ್ಮಶೀಲಳೂ ಆಗಿರುವ ಆ ಸತಿಯು ನಿತ್ಯದಲ್ಲಿಯೂ ಬೊಗಸೆ ಬೊಗಸೆ ಕಣ್ಣೀರು ಸುರಿಸಿ ದೇವರಿಗೆ ಎಷ್ಟು ಸರಿಯಾಗಿ ಪ್ರಾರ್ಥಿಸಿದರೂ ಆ ನಿರ್ಗುಣನಾದ ಪರಮಾತ್ಮನಿಗೆ ಕರುಣೆ ಬರಲಿಲ್ಲ. ಆದರೂ ಆ ಕುಲಾಂಗನೆಯು ಪತಿಯ ಆಜ್ಞೆಯನ್ನು ಬೊಗಸೆಯೊಡ್ಡಿ ಅಂಗೀಕರಿಸಿ ಸಮಾಧಾನದಿಂದಲೂ, ವಿನಯದಿಂದಲೂ ಹೇಳಿದಷ್ಟು ಕೆಲಸ ಮಾಡಿಕೊಂಡು ಇದ್ದಳು. ಅಮ್ಮಾ, ವಿಶಾಲಾಕ್ಷಿ, ನಿನ್ನ ವಾರ್ತೆಯನ್ನು ಕೇಳಿಯೇ ದುಃಖದಿಂದ ನನ್ನ ಗಂಟಲು ಬಿಗಿದುಬರುತ್ತಿರಲು, ನೀನು ನಿನ್ನ ಪುಣ್ಯದ ಬಲದಿಂದಲೇ ಅದನ್ನೆಲ್ಲ ಸಹಿಸುತ್ತಿರುವಿಯಲ್ಲವೆ?

ಇರಲಿ, ಗಿರಿರಾಯನು ಕಡೆಗೆ ತನ್ನ ಉಂಬಳಿಯ ಚಿನ್ನೂರು ಗ್ರಾಮವನ್ನು ಮದರಾಸಿನಲ್ಲಿಯ ಓರ್ವ ವರ್ತಕನಿಗೆ ಮಾರಿಕೊಂಡು ಊರು ಬಿಟ್ಟು ಹೊರಟೆದ್ದು ನಡೆದನು. ಇಂದು ನಾಳೆ ಊರಿಗೆ ಮರಳಿ ಬರುವೆನೆಂದು ವಿಶಾಲಾಕ್ಷಿಗೆ ಸುಳ್ಳು ಹೇಳಿ ಹೋದ ಗಿರಿರಾಯನು ಮರಳಿ ಬರಲೇ ಇಲ್ಲ.

ವರುಷಾರು ತಿಂಗಳುಗಳಲ್ಲಿಯೇ ಮನೆ ಮಾರಿದ ಹಣವೆಲ್ಲ ಹಾರಿ ಹೋಯಿತು. ಸರಕಾರದಿಂದ ತಿಂಗಳಾ ಇನ್ನೂರು ರೂಪಾಯಿ ಬರುವದನ್ನು ಅವನು ಆ ಡೊಂಬತಿಯ ಸ್ವಾಧೀನ ಮಾಡುವನು. ಅವಳು ಅದರಲ್ಲಿ ಹತ್ತು ರೂಪಾಯಿಗಳನ್ನು ಓರ್ವ ಅಡುಗಲಜ್ಜಿಗೆ ಕೊಟ್ಟು ಗಿರಿರಾಯನಿಗೆ ಕೂಳು ಹಾಕಲು ಹೇಳಿ ಉಳಿದ ಹಣವನ್ನು ತನ್ನ ಸ್ಟೇಚ್ಛೆಯಿಂದ ವೆಚ್ಚ ಮಾಡುವಳು. ಧನಹೀನನೂ ಅರ್ಥಾತ್ ತೇಜೋಹೀನನೂ ಆಗಿರುವ ಗಿರಿರಾಯನನ್ನು ಆ ಜಾತಿಗಾರತಿಯು ಪ್ರೀತಿಸದಾದಳು. ಆದರೂ ಆ ಮೂಢನು ಆ ಪಾಪ ಕರ್ಮಿಣಿಯ ಬಾಗಿಲಲ್ಲಿ ನಾಯಿ ಬಿದ್ದಂತೆ ಕಾದುಕೊಂಡು ಬಿದ್ದಿರುವನು.

ಇಲ್ಲಿ ನೋಡ ಬನ್ನಿರಿ: ಗಿರಿರಾಯನು ಒಂದು ಧರ್ಮಶಾಲೆಯಲ್ಲಿ ಹರಕು ಚಾಪಿಯ ಮೇಲೆ ಮೇಹರೋಗದ ವೇದನೆಯಿಂದ ವ್ಯಥಿತನಾಗಿ ಹೊರಳಾಡುತ್ತಿರುವನು. ಅವನಿಗೆ ನೀರಡಿಕೆಯಾಗಿದೆ, ಬಾಯಿಯಲ್ಲಿ ನಾಲ್ಕು ಕಾಳು ನೀರು ಹಾಕುವವರಿಲ್ಲ. ತನ್ನ ಹೆಂಡತಿಯ ಸದ್ಗುಣಗಳನ್ನೂ ಅವಳ ಪತಿಸೇವಾ ತತ್ಪರತೆಯನ್ನೂ ನೆನೆದು “ವಿಶಾಲಾಕ್ಷಿ! ವಿಶಾಲಾಕ್ಷೀ!” ಎಂದು ಕೂಗಿ ಅತ್ತನು.

ಆ ಸಮಯದಲ್ಲಿ ವಿಶಾಲಾಕ್ಷಿ ತನ್ನ ಪತಿಗೆ ಹಿತವಾಗಲೆಂದು ನೆನಿಸಿ ತಿರುಪತಿಯ ವೆಂಕಟೇಶ್ವರನ ಮುಂದೆ ಇಳಿಯೊದಿಯನ್ನುಟ್ಟು ಕೊಂಡು ಪ್ರಾಣಾಚಾರಿಯಾಗಿ ಬಿದ್ದಿದ್ದಳು. ಮದರಾಸಿನಲ್ಲಿ ಕೂಗುತ್ತಿರುವ ಗಂಡನ ಸೊಲ್ಲು ಗಿರಿಯಲ್ಲಿ ಮಲಗಿದ ವಿಶಾಲಾಕ್ಷಿಯ ಕಿವಿದೆರೆಗೆ ಬಿದ್ದಿತು. ಭಯಗ್ರಸ್ತಳಾಗಿ ಆ ಮಹಾ ಸತಿಯು ಕಪ್ಪರಿಸಿಕೊಂಡೆದ್ದು ನೋಡುತ್ತಾಳೆ, ಜಗನ್ಮಾತೆಯಾದ ಲಕ್ಷ್ಮೀದೇವಿಯು ಧಾವಿಸಿ ಬಂದು ಅವಳನ್ನು ಗಟ್ಟಿಯಾಗಿ ಅಪ್ಪಿ ಕೊಂಡಳು. “ಮಗುವೆ, ಈ ಜನ್ಮದ ಸುಖವನ್ನು ನೀನು ಪರಮಾತ್ಮನಲ್ಲಿ ಬೇಡಿಕೊಂಡು ಬರಲಿಲ್ಲ, ಯತ್ನವೇನಿದೆ? ಮುಂದಿನ ಜನ್ಮದಲ್ಲಿ ನಿನಗೆ ಅಖಂಡವಾದ ಸೌಭಾಗ್ಯವನ್ನೂ ಸಂಪತ್ತನ್ನೂ ಕೊಟ್ಟ ಬಳಿಕ ನಿನಗೆ ಮೋಕ್ಷವನ್ನು ಕೊಡುವೆನು.” ಎಂದು ಹೇಳಿ ಲಕ್ಷ್ಮೀದೇವಿಯು ವಿಶಾಲಾಕ್ಷಿಯ ಪರಮ ಪವಿತ್ರವಾದ ಆತ್ಮವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಳು.

ಇತ್ತ ಗಿರಿರಾಯನು ನೀರು ನೀರೆಂದು ದೇಶಿಗನಂತೆ ಪ್ರಾಣಬಿಟ್ಟನು.
*****


===============================================

ದುರಾಶಾ ದುರ್ವಿಪಾಕ 


" ಒಳ್ಳೇದು, ಅವನನ್ನು ಒಳಗೆ ಬರಹೇಳು” ಎಂದು ಪ್ರೇಮಚಂದನು-  

ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದ 

ವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. 


ಬಾಗಿಲಲ್ಲಿ ನಿಂತಿದ್ದ ವೃದ್ಧ ಗುಮಾಸ್ತನು, ನಿಂತಲ್ಲಿಯೇ ಅನುಮಾನಿಸಿ 

ದಂತೆ ಮಾಡಿ, ಹಿಂದು ಮುಂದೆ ನೋಡಹತ್ತಿದನು. 


"ನಿಜವಾಗಿ ಕೇಳಿದರೆ, ನೀವು ಈಗ ಅವನ ಬೆಟ್ಟಯನ್ನೇ ತಕ್ಕೋಳ್ಳ 

ಬಾರದು ಎಂದು ತೋರುತ್ತದೆ ?” ಎಂದು ಆ ಗುಮಾಸ್ತನು ಅಂದನು. 


"ಭೆಟ್ಟಿ ಆಗಬಾರದೆ ? ಅದೇಕೆ ? ” ಎಂದು ಪ್ರೇಮಚ೦ದನು 

ಯಾವದೋ ಹುಂಡಿಯನ್ನು ಬರೆದು ಸಹಿ ಮಾಡ ಮಾಡುತ್ತ ಹೇಳಿದನು: 

" ನನಗಂತು ಅವನನ್ನು ಕಾಣದಿರುವದಕ್ಕೆ ಕಾರಣವೆಷ್ಟೋ ತೋರುವದಿಲ್ಲ.” 

" ಇರಲಿ, ಆದರೂ.... ಅವನು ತುಸುಮಟ್ಟಿಗೆ ರೇಗಿಗಿದ್ದಂತೆ ತೋರು 

ತ್ತದೆ. ಯಾವಾಗಲಾದರೂ ಒಂದಿಲ್ಲೊಂದು ತಕರಾರಿನ ಸುದ್ದಿಯನ್ನಂತೂ 

ಅವನು ಆಡಲಿಲ್ಲವೆಂದು ನಾವೆಂದು ಕಂಡಿದ್ದೇವೆ ? ಅವನ ದುಃಖಗಳೆಲ್ಲವೂ 

ಕೇವಲ ಕಲ್ಪನಾಜನ್ಯವೆಂಬುವದಂತೂ ನಿಮಗೆ ಗೊತ್ತೇ ಇದೆ.” 


ಪ್ರೇಮಚಂದನು ಮುಂಬಯಿಯಲ್ಲಿಯದೊಂದು ಪ್ರಖ್ಯಾತವಾದ 

ಗಿರಣಿಯಲ್ಲಿ ಪಾಲುಗಾರನು, ಈ ಸಂಘವು : ಪ್ರೇಮಚ೦ದ ರಾಯ 

ಚಂದ ಮತ್ತು ಸನ್‌ಸ್‌ ' ಎಂಬ ಹೆಸರಿನಿಂದ ಪ್ರಸಿದ್ಧವಿತ್ತು. ಈ ಕಂಪನಿ 

ಯವರ ವಶದಲ್ಲಿ ನಾಲ್ಕೆಂಟು ಗಿರಣಿಗಳು ಇದ್ದವು. ತನ್ನ ಗುಮಾಸ್ತನ ಮಾತು 

ಕೇಳಿ ಪ್ರೇಮಚಂದನು ಮುಗುಳುನಗೆ ನಕ್ಕನು. ಈ ನಗೆಯು ಅವನ 

ಆಯುಷ್ಯದೊಳಗಿನ ಐವತ್ತು ವರ್ಷಗಳ ಕಳೆಯನ್ನು ಹಿಮ್ಮೆಟ್ಟಿಸಿತು. ಜನ್ಮ 

ವೆಲ್ಲವೂ ವ್ಯಾಪಾರದ ವಿಶೇಷವಾದ ಚಾತುರ್ಯದಲ್ಲಿ ಕಳೆದವನ ನಗೆಯೇ 

ಅದು, ಅದರಲ್ಲಿ ಮನೋಭಾವವು ಮೇಲು ಮೇಲೆಯೇ ಕಾಣುತ್ತಿತ್ತೆಂದರೆ 

ಚಾತುರ್ಯದ ಲವಲೇಶವಾದರೂ ಅಲ್ಲಿ ಹೇಗೆ ಕಂಡುಕೊಳ್ಳಬೇಕು ? 


ಮತ್ತೂ ನಾವು ಎಂದಿನಿಂದ ನಮ್ಮಲ್ಲಿಯ ನೌಕರರ ತಕರಾರು 

ಗಳನ್ನು ಕೇಳಿಲ್ಲ?” ಎಂದು ಪ್ರೇಮಚಂದನು ಸಾವಕಾಶವಾಗಿ ನುಡಿದನು, 


"ಆಗಾಗ ಹೇಳುವವರ ಮಾತುಗಳನ್ನೆಲ್ಲ ಧನಿಯರು ಕೇಳೇ ಕೇಳುತ್ತಿ 

ರುವದುಂಟು” ಎಂದು ಆ ಮುದುಕನು ಅಂದನು. " ಆದರೆ ಯಶೋಧರನ 

ಆ ಗಂಟುಮೋರೆಯನ್ನೇ ನಾನು ನೋಡಲಾರೆ. ಈಗ ಒಳಗೆ ಬಂದು 

ಮನಸ್ಸಿಗೆ ಬಂದಂತೆ ಅವನು ಮಾತನಾಡಲಿಕ್ಕಿಲ್ಲೆಂದು ನಾನೇನು ಹೇಳ 

ಲಾರೆ ” 


ಪ್ರೇಮಚಂದನು ನಕ್ಕನು. " ಇರಲಿ, ಅವನನ್ನು ಒಳಗಂತು ಬರ 

ಗೊಡು, ಹೂಂ, ಏನೂ ಅಡ್ಡಿ ಇಲ್ಲ, ಅವನು ಒಳಗೆ ಬರಲಿ ” ಎಂದು 

ಗುಮಾಸ್ತನಿಗೆ ಹೊರಗೆ ಹೋಗಲಪ್ಪಣೆ ಮಾಡಿದಂತೆ ಪ್ರೇಮಚ೦ದನು ಕೈ 

ಸನ್ನೆ ಮಾಡಿದನು. 


"ಯಾಕಾಗವಲ್ಲದು” ಎಂದು ಅಂದತೆ ತಲೆ ಅಲ್ಲಾಡಿಸಿ ಗುಮಾಸ್ತನು, 

ಸರಾಫನು ಕೂಡುವ ಸ್ಥಳದ ಮಗ್ಗಲಿಗಿದ್ದ ಬಾಗಿಲದಿಂದ ಹೊರಬಿದ್ದನು. 


ಇನ್ನೊಂದು ಕ್ಷಣದಲ್ಲಿ ಯಶೋಧರನು ಪ್ರೇಮಚಂದನ ಕೋಣೆಯ 

ಬಾಗಿಲು ತೆರೆದು ಒಳಗೆ ಬಂದನು. ಯಶೋಧನು ಸಾಧಾರಣ ಎತ್ತರವಾದ 

ಆಳು; ಎದೆಕಟ್ಟು ಎಷ್ಟು ಆಗಲಾದದ್ದಲ್ಲದಿದ್ದರೂ ಮೈ- ಕೈಗಳು ಹುರಿಕಟ್ಟಾಗಿ 

ದ್ದವು. ಮುವತ್ತು ಮೂವತ್ತೆರಡು ವರ್ಷದ ವಯಸ್ಸು, ಮುಖಚರ್ಯದ 

ಮೇಲಿಂದಲೂ, ಔದಾಸೀನ್ಯಪೂರ್ಣವಾದ ಅವನ ಒಳನಟ್ಟ ಕಣ್ಣುಗಳ 

ಮೇಲಿಂದಲೂ, ತಲೆ ತು೦ಬ ಇದ್ದ ಆ ಅರ್ಧಮರ್ಧ ಜಡೆಗಟ್ಟಿದ ಕೂದಲು 

ಗಳಿಂದಲೂ, ಮಲಿನವಾದ ಹಲ್ಲುಗಳು, ಆ ತೆರಿದ ಬಾಯಿಯೂ, ಇರಬೇಕಾ 

ದ್ದಕಿಂತಲೂ ಸ್ವಲ್ಪ ಕೆಳಗೆ ಹಾಯ್ದ ಗದ್ದವೂ ಇವೆಲ್ಲವುಗಳನ್ನು ನೋಡು 

ವವರಿಗೆ ಅವನೇನೋ 'ಬುದ್ದಿವಂತ 'ನಿರಬೇಕೆಂದು ತರ್ಕವಾಗುವಂತಿತ್ತು. 

ಆ ಬಾಗಿಲವನ್ನ ಮುಚ್ಚಿದವನೇ ಯಶೋಧರನು ಅದಕ್ಕೆ ಬೆನ್ನು ಕೊಟ್ಟು 

ನಿಂತುಕೊಂಡನು. ಎಂದೂ ಓಡಲಾರದವನು ಹೊಗೆಬಂಡಿಯು ತನ್ನನ್ನು 

ಬಿಟ್ಟು ಮುಂದಕ್ಕೆ ಸಾಗೀತೆಂದು ಒಳ್ಳೆ ಅವಸರದಿಂದ ಕೈಕಾಲು ಸಡಿಲು 

ಬಿಟ್ಟು ಓಡೋಡಿ ಹ್ಯಾಗೋ ಆ ಬಂಡಿಯನ್ನು ಮುಟ್ಟಿದವನಂತೆ ಇವನು 

ದೀರ್ಘ ಶ್ವಾಸ ಬಿಡುತ್ತಿದ್ದನು. ಹೊರಗೆ ಬಿಟ್ಟ ಉಸಿರು ಒಳಜಗ್ಗುವಾಗ 

ಅವನ ಕೈ ಬೆರಳುಗಳು ನಡುಗಿ ಒಳಸೇದಿಕೊಳ್ಳುತ್ತಿದ್ದವು. 


" ಜಯಗೋಪಾಳ, ಯಶೋಧರಾ, ಕೂತುಕೋ ” ಎಂದು ಪ್ರೇಮ 

ಚಂದನು ಯಶೋಧರನನ್ನು ನೋಡಿ, ಒಂದೆರಡು ನೋಟಗಳಲ್ಲಿಯೇ ಅವನ 

ಮನದಿಂಗಿತವನ್ನು ತಿಳಿದು ಕೊಂಡವನಂತೆ, ತನ್ನ ಆಸನದಲ್ಲಿ ಒಳ್ಳೇ ಸುಖ 

ಪೂರ್ಣನಾಗಿ ಕುಳಿತುಕೊಂಡನು. 


"ಏನೂ ಅಲ್ಲ, ಶೇಟಜೀ, ಆದರೆ ನಾನು ನಿಂತುಕೊಂಡೇ 

ಮಾತಾಡಬೇಕೆನ್ನುತ್ತೇನೆ. ” 


" ನಿನ್ನ ಮನಸಿದ್ದ೦ತೆ ಮಾಡು....... ಒಳ್ಳೇದು, ನನ್ನ ಬೆಟ್ಟಿಯು 

ನಿನಗೇಕೆ ಬೇಕಾಯಿತೀಗ ? ಅಂಥ ಕೆಲಸವಾದರೂ ಯಾವದು? ಉಳಿದ 

ಜನರಂತೂ ನಿನ್ನ ಗೋಜಿಗೆ ಹೋದ೦ತಿತ್ತೆಂದು ತೋರುತ್ತದೆ. ” 


" ಅದೇನೂ ಇಲ್ಲ. ” 


ಪ್ರೇಮಚಂದನು ತಿರುಗಿ ಮಾತಾಡುವದಕ್ಕೆ ತುಸು ತಡವಾಯಿತು. 


" ಆಗಲಿ, ಹೊರಬೀಳಲಿ; ನೀನು ಎಷ್ಟೂ, ಅಂಜಬೇಡ, ನೀನು 

ಏನು ಹೇಳಬೇಕೆಂದೆನ್ನುತ್ತೀ , ಅಹುದೋ ಅಲ್ಲವೋ ? ” 


ಯಶೋಧನ ಮೈ ಕೈಗಳನ್ನು ನಿದ್ದೆ ಯೊಳಗಿಂದ ಎದ್ದವನಂತೆ 

ನಿಂತಲ್ಲಿಯೇ ಚಾ ಚಿ ಸಾವರಿಸಿಕೊಂಡನು. 


" ಅಹುದು, ನನ್ನದೊಂದು ಮಾತು ತಮಗೆ ತಿಳಿಸತಕ್ಕದಿತ್ತು. 

ಆಯಿತು- ನೀವು ತಾವಾಗಲೂ ಅನ್ನುವಂತೆ ಅದನ್ನು ' ತಕರಾರು '  

ಎಂದೇ ಕರೆಯಿರಿ. ಬಹಳೇನು ? ನನ್ನನ್ನು ನೀವು ನೆಟ್ಟಗೆ ಇಟ್ಟು ಕೊಳ್ಳುವ 

ದಿಲ್ಲ ಸರಿ ” ಎಂದು ಯಶೋಧರನು ಜಡವಾದ ಸ್ವರದಿಂದ ನುಡಿದನು. 


"ನಿಜವಾಗಿಯೇ ? ಯಾವ ಬಗೆಯಿಂದ ? " 

 

" ನಾನು ಶೋಧಿಸಿದ ಆ ಹೊಸ ಯಂತ್ರದ ಸಂಬಂಧದಿಂದ. ” 


" ಸಾಗಲಿ, ಯಶೋಧರಾ, ನಿನ್ನ ಮಾತು ಮುಗಿಸು, ಅನ್ನುವದನ್ನೆಲ್ಲ 

ಒಮ್ಮೆ ಹೇಳಿಯೇಬಿಡು, "


" ನೀವು ನನ್ನ - ಶೋಧದಿಂದ ' ಇಪ್ಪತ್ತು ಸಾವಿರ ರೂಪಾಯಿಗಳನ್ನು 

ಗಳಿಸಿಕೊಂಡದ್ದು ಈ ಮೊದಲೇ-" 

 

ಪ್ರೇಮಚಂದನ ಮೊರೆಯು ಒಮ್ಮೆಲೆ ಕೆಂಪಾಯಿತು, " ಅದಕ್ಕೆಲ್ಲ 

ನಾನೇ ಒಡೆಯನಲ್ಲವೆ ? ಅದೆಲ್ಲವೂ ನನ್ನ ಕೆಲಸ.” 


"ಆದರೆ ಆ ಯಂತ್ರವನ್ನು ಶೋಧಿಸಿದವನು ನಾನು, ಪ್ರೇಮಚ೦ದರೆ.” 


" ನನಗೆ ಬಂದ ಲಾಭದ ಲೆಕ್ಕವು ನಿನಗೆಲ್ಲಿಂದ ಸಿಕ್ಕಿತು ? ಈ ಪ್ರಶ್ನೆ 

ವನ್ನು ನಾನು ಕೇಳಬಹುದಲ್ಲವೆ ? " 


" ಆ ಲೆಕ್ಕವನ್ನು ನಾನು ನನ್ನಷ್ಟಕ್ಕೆ ಮಾಡಿಕೊಂಡೆನು. ಅದಕ್ಕೆ 

ಹತ್ತುವ ಸಾಹಿತ್ಯ ಸಂಗ್ರಹದ ಬೆಲೆ, ಅದನ್ನು ಮಾಡುವದಕ್ಕೆ ಬೇಕಾಗುವ 

ಶ್ರಮದ ಬೆಲೆ, ಈಗ ಅದನ್ನು ಮಾರುವ ಕ್ರಯ ಇವೆಲ್ಲವುಗಳನ್ನು ಆರಿತವ 

ನಾದ್ದರಿಂದ, ನಿಮ್ಮ ಲಾಭದ ಲೆಕ್ಷವು ತಿಳಿಯದೆ ? ಇದೆಲ್ಲದರ ಮೇಲಿಂದ 

ನೀವು ನನ್ನನ್ನು ಒಳಿಪಾಗಿ ಇಟ್ಟು ಕೊಂಡಿಲ್ಲೆ೧ಬದ ಮೇಲೆಯೇ ತೋರುತ್ತಿದೆ. 

ನನಗೆ 'ನ್ಯಾಯದಾನ ' ಮಾಡುವಿರೆಂಬದೇ ನನ್ನ ಬಯಕ. ನಾನು 

ನ್ಯಾಯವನ್ನಸೇಕ್ಷಿಸುವೆನು, ಪ್ರೇಮಚಂದ.” 


" ನ್ಯಾಯವೆ? ತರದು ? ಹಣವೇ ಬೇಕೆನ್ಯ ಬಾಗದೆ ?” ಎಂದು ವಯಾ 

ತೀತನಾದ ಪ್ರೇಮಚಂದನು ಉತ್ತೇಜಿತನಾದ ಸ್ವರದಿಂದ ಸ್ವಲ್ಪು ಸಿಟ್ಟು 

ತಾಳಿದವನಂತೆ ಕೇಳಿದನು, “ಇರಲಿ, ಯಶೋಧರಾ, ನೀನು ನನ್ನನ್ನು ಈ 

ಮೂರು ವರುಷಗಳಿಂದ ಮಾತ್ರ ಬಲ್ಲಿಯಷ್ಟೆ ? ಆದರೆ ಕಳೆದ ಹದಿನೈದು 

ವರುಷಗಳಿಂದಲೂ ನಾನು ನನ್ನ ಕಾರಖಾನೆಗಳಲ್ಲಿದ್ದ ನೌಕರರನ್ನು ನ್ಯಾಯ 

ದಿಂದಲೇ ನಡೆಯಿಸಿಕೊಳ್ಳುತ್ತೇನೆ. ಅವರು ತಮ್ಮ ತಕರಾರುಗಳನ್ನು ಬೇಕಾ 

ದಾಗ ನನ್ನ ಮುಂದೆ ಹೇಳಬೇಕೆಂದು ನಾನು ಅವರೆಲ್ಲರಿಗೂ ಆಗಾಗ ತಿಳಿಸು 

ತ್ತೇನೆ, ಸಕಾರಣವಾದಂಥವುಗಳನ್ನೆಲ್ಲ ನ್ಯಾಯದೃಷ್ಟಿಯಿಂದಲೇ ನೋಡುತ್ತಿರು 

ವೆನೆಂಬದು ಎಲ್ಲರಿಗೂ ಗೊತ್ತಿದ್ದ ಮಾತು, ಇನ್ನು ಈ 'ನ್ಯಾಯದಾನ'ದ 

ಕಾರ್ಯವು ನನ್ನಿಂದ ಹೇಗೆ ಪಾರುಗಂಡಿರುವದೆಂಬದನ್ನು ನಾನೇನು ಹೇಳಲಿ?  

ಆದರೂ ಯಜಮಾನ-ಸೇವಕರಲ್ಲಿಯ ಸಂಬಂಧಗಳು ಈ ಹದಿನೈದು ವರುಷ 

ಗಳಲ್ಲಿ ಕ್ಷೇಮದಿಂದಿರುತ್ತವೆ. ನಮ್ಮ ಸಂಘದ ಮುಖ್ಯ ಪಾಲುಗಾರನೆಂದು 

ಕಾರ್ಯವಾಹಕತನವು ನನ್ನ ಮೇಲೆಯೇ ಇರುವದು. ಎಲ್ಲಕ್ಕೂ ನಾನೇ 

ಬಾಧ್ಯಸ್ಥನಂತಿದ್ದುದರಿಂದ ಸರಿತೋರಿದಾಗ, ಸೇವಕರು ಬೇಡುವ ಅನುಕೂಲ 

ಗಳನ್ನು ನಾನು ಆಗಾಗ ಮಾಡಿ ಕೊಡುತ್ತಲೇ ಬಂದಿರುವೆನು. ಯಾವದೊಂದು 

' ಲಿಮಿಟೆಡ್ ' ಕಂಪನಿಯ ಪಾಲುಗಾರನಾಗಿದ್ದೆನಾದರೆ ಆ ಮಾತು ಬೇರೆ 

ಯಾಗುತ್ತಿತ್ತು. ನನ್ನ ಜನರು ಅವರಲ್ಲಿ ಎಷ್ಟೋ ಜನರಾದರೂ ಈ 

ಸಂಗತಿಯನ್ನು ನಿನಗೆ ಅ೦ಜಿಕಿಲ್ಲದೆ ಹೇಳಿಯಾರು,” ಪ್ರೇಮಚಂದನು ಸ್ವಲ್ಪು 

ತಡೆದು ಯಶೋಧರನನ್ನು ದಿಟ್ಟಿಸಿ ನೋಡಿದನು, 


"ಯಶೋಧರನು ಹೇಕರಿಸಿ ಗಂಟಲು ಸಡಿಲು ಮಾಡಿಕೊಂಡನು. 

" ಇದೆಲ್ಲವೂ ನಿಜವಿರುವದು ಶೇಟಜೀ, ” ಎಂದು ಉದಾಸೀನತೆಯಿಂದ 

ಅಂದನು. ಆದರೆ, ನನ್ನ ಸುಧಾರಿಸಿದ ಯಂತ್ರವು ....” 


" ಬಹಳ ಛಲೋದು! ಈ ಕ್ಷಣಕ್ಕೆ ನಿನ್ನ ಯಂತ್ರವನ್ನು ಚಿಕಿತ್ಸಿಸುವ....  

ಆದರೂ ಅದು ನನ್ನ ಯಂತ್ರವೆಂದೇ ಕ್ಷಣಹೊತ್ತು ತಿಳಿದುಕೊಳ್ಳತಕ್ಕದ್ದೆಂಬ 

ದನ್ನು ಮಾತ್ರ ಮರೆಯಬೇಡ, ” 


ಶೋಧಕನು ಇದನ್ನು ಕೇಳಿ ಬಾಯಿತೆರೆದನು; ಆದರೆ ಏನೂ ಮಾತಾಡ 

ಲಾರದೆ, ತಡೆದುಕೊಂಡು ಸುಮ್ಮನೇ ನಿಂತದ್ದನ್ನು ಕಂಡು ಯಜಮಾನನು 

ಮು೦ದೆ ಸಾಗಿದನು. 


"ಆ ಯಂತ್ರದ ಚಿಕ್ಕ ಇತಿಹಾಸವೇ ಇಲ್ಲಿ ಇರುವದು, ನೋಡು ” 

ಎಂದ ಅ೦ದವನೇ ಎದುರಿನಲ್ಲಿದ್ದ ಕಪಾಟಿನೊಳಗಿಂದ ಒಂದು ಸಣ್ಣ ನೋಟ 

ಬುಕ್ಕನ್ನು ತೆಗೆದನು, “ಒಳ್ಳೇದು, ಕೇಳ ಬೇಕೆಂದು ಕೇಳುತ್ತೇನೆ. ತಾವು 

ಮೂರು ವರುಷದ ಕೆಳಗೆ ಇಲ್ಲಿಗೆ ಬಂದಾಗ ತಮಗೆ ಸಂಬಳವೆಷ್ಟು 

ಸಿಗುತ್ತಿತ್ತು? ವರಕ್ಕೆ ಹದಿನೈದು ರೂಪಾಯಿಗಳೇ ಅಲ್ಲವೆ?” ಯಶೋಧರನು 

ಗೊಣುಹಾಕಿದನು. " ಸರಿಯಾಗಿರುವದಷ್ಟೆ. ನಮ್ಮಲ್ಲಿ ಒಂದು ವರುಷ 

ಮಟ್ಟಿಗಿದ್ದ ನಂತರ, ನೀನು ಒಂದು ದಿನ ನನ್ನ ಹತ್ತರ....” ಪ್ರೇಮಚಂದನು 

ಮೊದಲನೆಯ ಪುಟವನ್ನು ನೋಡಿ, “ ಹದಿನಾರನೆಯ ಫೆಬ್ರುವರಿಯ 

ದಿವಸ... ಆಹುದು...  ಸುಧಾವಿಸಿದ ಯಂತ್ರ 'ದ ಕಲ್ಪನೆಯನ್ನು ಹೇಳ 

ಬೇಕೆ೦ದು ಬ೦ದಿಯಷ್ಟೆ. ಅದಕ್ಕೆ ಒಪ್ಪಿಕೊಂಡು, ನಿನ್ನನ್ನು ದಿನದ ಕೆಲಸದಿಂದ 

ಬಿಡಿಸಿ, ನಿನ್ನ ಶೋಧಕ್ಕೆ ಮೂರ್ತಸ್ವರೂಪವನ್ನು ಕೊಡಲಪ್ಪಣೆ ಕೊಟ್ಟಿದ್ದಾ 

ಯಿತು. ಹತ್ತನೆಯ ಮೇದ ದಿನ ನೀನೊಂದು ಮಾದರಿಯನ್ನು ಮಾಡಿ 

ಕೊಟ್ಟಿ. ಮುಂದೆ ಒಂದು ತಿಂಗಳಾದ ಮೇಲೆ, ನಿನ್ನ ' ಶೋಧ'ವನ್ನು 

ಮಾರತಕೊಂಡು ಅದಕ್ಕೆ ಪ್ರತಿಫಲವಾಗಿ ' ಸ್ವಾಮಿತ್ವ'ದ ಹಣವನ್ನು 

ಕೊಡಲು ನಾನು ಒಪ್ಪಿಕೊಂಡೆನು. ಅದಕ್ಕೆ ನೀನು ಸ್ವಾಮಿತ್ವವನ್ನು ಒಲ್ಲೆ 

ನೆಂದು ಹೇಳಿ, ಒಮ್ಮೆಯೇ ಎಷ್ಟಾದರೊಂದು ' ರಕಮು ? ಕೊಡಿರೆಂದು 

ಕೇಳಿದಿ, ಅದನ್ನು ನಾನು ಮುಂದೆ ಮಾಡಲಿಲ್ಲ. ನೀನು ವಿಚಾರಮಾಡುತ್ತೇ 

ನೆಂದು ಹೇಳಿ, ಎರಡು ತಿಂಗಳುಗಳಲ್ಲಿ, ಸುತ್ತುಮುತ್ತಲಿನ, ಎಲ್ಲವ್ಯಾಪಾರಸ್ತ 

ರಿಗೂ ಕೇಳಿ ನೋಡಿದಿ.... " 


ಇದಕ್ಕೆ ಯಶೋಧರನು ಉತ್ತರವಾಗಿ ಕಟುಸ್ವರದಿಂದ ಉದ್ಗಾರ 

ತೆಗೆದನು; ಇವನೇಕೋ ಗಾಬರಿಗೊಂಡನು. 


ಪ್ರೇಮಚಂದನು ಸಮಾಧಾನದೊಂದಿಗೆ ಮತ್ತೆ ಮಾತಾಡತೊಡ 

ಗಿದನು. ' ಮತ್ತೊಮ್ಮೆ ನೀನು ನನ್ನಲ್ಲಿ ಬಂದು  " ನನ್ನ ಶೋಧಕ್ಕೆ 

ಏನೆಂದಿ'ರೆಂದು ಕೇಳಿದಿ. ನಾನು ಮತ್ತೆ ಸ್ವಾಮಿತ್ವವನ್ನು ತೆಗೆದು ಕೋ, 

ಎಂದು ಹೇಳಿದೆ ಅದನ್ನು ನೀನು ಮತ್ತೆ ಒಲ್ಲೆನೆಂದಿ. ಇದೆಲ್ಲ ಒಂಬತ್ತನೆಯ 

ಅಗಷ್ಟದ ದಿವಸ ವಾಯಿತು. " 


" ಇಷ್ಟು ಸಾಕಾಯಿತು.... ಪ್ರೇಮಚಂದಜೀ. ಇದೆಲ್ಲವನ್ನೂ ಈಗ 

ನೆನಿಸಿ ಮಾಡುವದೆಂಥದು ? ಮುಖ್ಯ ಮಾತೇನೆಂದರೆ ನಿಮಗೆ ಮಾತ್ರ 

ಅದರಿಂದ ಇಪ್ಪತ್ತು ಸಾವಿರ ಹಣ ಬಂದದ್ದಾಯಿತು. ಆದರೆ ನಾನು... ” 


ಯಜಮಾನನು ಆ ' ನೋಟಬುಕ್ಕು ಮತ್ತೆ ತಿರಿವಿಹಾಕಹತ್ತಿದನು. 

"ಇಷ್ಟಾದನಂತರ ನೀನು ಒಂದು ಮಾತಿನಿಂದ ಹಾದಿಗೆ ಬಂದಿ. ನಿನ್ನ ಶೋಧದ 

ಸ್ವಾಮಿತ್ವವು ನಮ್ಮದಾಗಿ, ನಿನಗೆ ಮುಂದೆ ಐದು ವರುಷಗಳ ತನಕ ನಾವು 

ವಾರಕ್ಕೆ ೫೦ ರೂಪಾಯಿ ಕೊಡಬೇಕೆಂದು ಗೊತ್ತಾಯಿತು ...ಐದು ವರ್ಷದ 

ಒಪ್ಪಿಗೆ. "

 

ಐದು ವರ್ಷದ ಒಪ್ಪಿಗೆಯ ಸಂಪೂರ್ಣ ಲಾಭವು ನಿಮ್ಮ ಕೈ ಸೇರಿತು. 

ಲಾಭವೆಲ್ಲವೂ ನಿಮ್ಮದಾದ ಮೇಲೆ....” 


"ತುಸು ತಡೆ, ಲಾಭದಗೂಡ ಲುಕ್ಸಾನಕ್ಕಾದರೂ ನಾನೇ ಹೊಣೆ 

ಯಾದೆನಲ್ಲವೆ ? ನಿನ್ನನ್ನು ಮೊದಲು ಯಾವ ಕೆಲಸದ ಮೇಲಿಟ್ಟು 

ಕೊಂಡೆವೋ, ಆ ಕೆಲಸದಿಂದ ನಿನಗೆ ವಾರಕ್ಕೆ ಎರಡು ರೂಪಾಯಿ 

ಯಾದರೂ ಸಿಗುವಂತಿತ್ತೋ ಇಲ್ಲವೋ ಎಂಬದನು ನಿನ್ನ ಮನಸ್ಸೇ ನಿನಗೆ. 

ಹೇಳಬೇಕು. ನಿಲ್ಲು, ನಾನು ಅನ್ನತಕ್ಕದ್ದನ್ನೆಲ್ಲ ಒಮ್ಮೆ ಅಂದುಕೊಳ್ಳುವೆನು. 

ನಡುನಡುವೆ ನಿನ್ನ ಕೆಲಸದಲ್ಲಿ, ನೀನು ಮಾಡಿದ ತಪ್ಪು ತಡೆಗಳಿಂದ ನನಗೆಷ್ಟು 

ಲುಕ್ಸಾನು ಆಯಿತೆಂಬದನ್ನು ನೀನು ಅರಿತಿಲ್ಲವೆಂಬಂತೆಯೂ ಇಲ್ಲ. ಆದರೆ 

ನಾನು ನಿನ್ನನ್ನು ಇದಕ್ಕಾಗಿ ದೂಷಿಸುವದಿಲ್ಲ. ನಿನ್ನ ತಲೆಯಲ್ಲಿ ಈಗ ಸದ್ಯಕ್ಕೆ 

ಇನ್ನೂ ಕೆಲವು ಶೋಧಗಳು ಇದ್ದಿರುವದರಲ್ಲಿಯ ಸಂಶಯವಿಲ್ಲ. ಅದಿರಲಿ, 

ನಾವೆಲ್ಲರೂ ಸ್ವಪ್ನ ಸೃಷ್ಟಿಯಲ್ಲಿ ಈಸಾಡುತ್ತಿರುವದೇನೋ ನಿಜ. ನನಗೂ 

ಎಷ್ಟೋ ಬಗೆಯ ಸ್ವಪ್ನ ಸಾಮ್ರಾಜ್ಯದಲ್ಲಿ ಆಧಿಪತ್ಯವು ಸಿಕ್ಕಿದೆ; ನಾನೂ 

ಎಷ್ಟೋ ಸ್ವಪ್ನ ಗಳ ಒಡೆಯನಾಗಿದ್ದೇನೆ.” ವಿಚಾರ ಮಾಡಮಾಡುತ್ತಲೇ 

ಪ್ರೇಮಚಂದ್ರನು ನಕ್ಕನು, ಅದರಲ್ಲಿ ಉದಾಸೀನತೆಯು ಇದ್ದಿತೆ ? 


ಯಶೋಧರನು ನಿಂತಲ್ಲಿಯೇ ಕಾಲು ಎತ್ತಿಡಹತ್ತಿದನು. "ನನ್ನ 

ಕೆಲಸದಲ್ಲಿ ನಾನು ನೈಪುಣ್ಯವನ್ನು ತೋರಿಸಲಿಲ್ಲೆಂಬ ಆರೋಪಕ್ಕೆ ಮಾತ್ರ 

ನನ್ನ ಸಮ್ಮತಿಯಿಲ್ಲವೆಂದು ನಾನು ಹೇಳಬೇಕೆನ್ನುತ್ತೇನೆ ''೦ದು ಉರಿಮೋರೆ 

ಯಿಂದ ಯಶೋಧರನು ನುಡಿದನು. "ಏನೇ ಇರಲಿ, ನನ್ನ ಯಂತ್ರದಿಂದ 

ನೀನು ಇಪ್ಪತ್ತು ಸಾವಿರವನ್ನ೦ತೂ ಬಕ್ಕಣದಲ್ಲಿ ಹಾಕಕಕೊಂಡಿಯಷ್ಟೆ? ನನಗೆ 

ಆದರ ಇಪ್ಪತ್ತನೆಯ ಪಾಲು ಕೂಡ ಸಿಗಬಾರದೆಂದರೆ ? ” 


ಪ್ರೇಮಚಂದನು ತನ್ನ ಎದುರಿನಲ್ಲಿದ್ದ ನೋಟಬುಕ್ಕು ನೋಡಿ ನಿಟ್ಟು 

ಸಿರಿಟ್ಟನು, “ ನಾನು ನಿನ್ನ ಕೂಡ ಮಾಡಿದ ವ್ಯವಹಾರದಲ್ಲಿಯ ನನ್ನ 

ಗುಣಾವಗುಣಗಳನ್ನು ಈಗ ತೋಡಿಕೊಳ್ಳುತ್ತ ಕೂಡುವದಿಲ್ಲ ಕಂಡಿಯಾ, 

ಆದರೆ, ನನ್ನ ವ್ಯವಹಾರವನ್ನೆಲ್ಲ ಇದಕ್ಕೂ ವಿಸ್ತಾರವಾಗಿ ಹೇಳಬೇನ್ನುತ್ತೇನೆ. 

ಇಲ್ಲಿ ಹೇಳು : ನಿನ್ನ ಯಂತ್ರದ ಮೇಲೆ ನನಗೆ ದೊರೆತ ಲಾಭಕ್ಕೂ ನೀನು 

ಕಟ್ಟದ ಅನುಮಾನಕ್ಕೂ ಮಹದ೦ತರವಿಲ್ಲ. ನಿಜವಾಗಿ ಹೇಳಬೇಕಾದರೆ, 

ನಿನ್ನ ಎಣಿಕೆಯಕಿಂತಲೂ, ಒಂದೆರಡು ಸಾವಿರ ರೂಪಾಯಿಗಳಿಂದ ಹೆಚ್ಚು 

ಆಗಿರುವದು. ಈ ಯಂತ್ರವನ್ನು ಮಾರ್ಕೆಟಿನಲ್ಲಿ ಮಾರಲಿಕ್ಕಿಸುವದಕ್ಕೂ 

ಮುಂಚಿತವಾಗಿ ಅದಕ್ಕೆ ತಗಲಿದ ವೆಚ್ಚದ ಲೆಕ್ಕವನ್ನು ನೀನು ಮಾಡಿದಂತೆ. 

ಕಾಣುವದಿಲ್ಲ. ಇಕೋ, ಇವೇ ಆ ಲೆಕ್ಕದ ಅ೦ಕೆಗಳು, ಅದರ ಪೇಟೆಂಟು 

ತೆಗೆದುಕೊಳ್ಳಲಿಕ್ಕೆ-ಅ೦ದರೆ ರೆಜಿಸ್ಟ್ರೇಶನಕ್ಕೆ ೧೭೦೦ ರೂಪಾಯಿಗಳು-- 

ಆಣೆ ಪೈಗಳನ್ನು ನಾನು ಹೇಳುವದಿಲ್ಲ. ಹೊಸ ಯಂತ್ರಸಾಮಗ್ರಿಯು. 

೬೦೦೦; ಉಳಿದ ವೆಚ್ಚ ೩೯೦೦, ಒಟ್ಟಿಗೆ ೧೨೬೦೦. ಇಷ್ಟೆಲ್ಲವೂ ಒಂದು 

ಯಂತ್ರವು ಮಾರುವದಕ್ಕಿಂತಲೂ ಮೊದಲು ವೆಚ್ಚ ಮಾಡಬೇಕಾಯಿತು, 

ಇದರ ಮೇಲೆ ಲಾಭ-ಲುಕ್ಷಾನಿನ ಮಾತು ನನ್ನ ಮೇಲೆಯೇ ಉಳಿಯಿತಲ್ಲವೆ?” 


ಯಶೋಧರನು ಹೌಹಾರಿದನು. “ ಒಳ್ಳೆದು, ಅದೆಲ್ಲವೂ ಈಗ ತೀರಿ 

ಹೋಗಿ, ಈಗ ನೀನು ಏನು ಮಾಡಬೇಕಾಗಿದೆ ? ಲಾಭವನ್ನೆಣಿಸುತ್ತ 

ಕೂಡುವದೊಂದೇ ಕೆಲಸವಲ್ಲವೆ ? ಹಾಗೂ ವರುಷೊಂದಕ್ಕೆ ನಿನ್ನ ಲಾಭವು 

ಇಪ್ಪತ್ತು ಸಾವಿರವನ್ನು ಮಾರಬಾರದೆಂದು ಎಲ್ಲಿ ಹೇಳಿಯದೆ ? ” ಎ೦ದು 

ಅವನು ಒಳ್ಳೇ ಸೊಕ್ಕಿನಿಂದ ಗದರಿಸಿ ನುಡಿದನು. 


" ಲಾಭವು ಇನ್ನೂ ಹೆಚ್ಚಾಗಲಿ, ಆದಿರಲಿ, ಅದೆಲ್ಲವೂ ಯಶೋ 

ಧರಾ, ನನ್ನನ್ನೇ ಕೂಡಿದೆ. ಇದರಲ್ಲಿ ನಿನ್ನೆ ಸಂಬಂಧವೇನು? ಅದರೆ ನನ್ನ 

ಲುಕ್ಸಾನಿನ ಕಾಲವು ಮುಗಿದು ಹೋಗಿದೆಯೆಂದು ಮಾತ್ರ ನೀನು ಊಹಿಸ 

ಬೇಡ. ಜಗತ್ತಿನಲ್ಲಿ ನಿನಗಿಂತಲೂ ಮೇಲಾದ ಶೋಧಕ ವೀರರು ಇದ್ದಿರ 

ಬಹುದು. ನೀನೊಬ್ಬನೇ ಒಬ್ಬನಲ್ಲ. ನಿನ್ನ ಯಂತ್ರವನ್ನು ಉಪಯುಕ್ತತೆ 

ಯಲ್ಲಿಯೂ, ಮತ್ತುಳಿದ ಅಂತರ್ಬಾಹ್ಯಾಂಗಗಳಲ್ಲಿಯ, ಮೆಟ್ಟಿ ಮೀಾರು 

ವಂಥ ಹೊಸ ಯಂತ್ರವನ: ಇನ್ನು ಮುಂದೆ ಯಾವನ್ನೊಬ್ಬನು ಶೋಧಿಸಿ 

ತೆಗೆಯಬಾರದೆಂಬದಂತೂ ನಿಜವಲ್ಲ. ಹೇಗೇ ಇರಲಿ, ಇನ್ನು ನಾಲ್ಕು ವರುಷ 

ಗಳ ತನಕ ನಿನಗಂತೂ ವಾರಕ್ಕೆ ಗೊತ್ತು ಮಾಡಿದ ಹಣವು ಮುಟ್ಟೇ ಮುಟ್ಟು 

ವದು. " ಪ್ರೇಮಚಂದನು ತನ್ನ ತಿಜೋರಿಯನ್ನು ಲಕ್ಷ್ಯಗೊಟ್ಟು ನೋಡಿ 

" ಯಶೋಧರಾ, ನಾನು ಹೇಳತಕ್ಕದ್ದೆಲ್ಲ ಮುಗಿದಾಯಿತು, ನಿನ್ನ ಮನಸು 

ಕೀಳುತನಕ್ಕಿಳಿದಿರುವದನ್ನು ಕಂಡು ಮಾತ್ರ ಬಹಳ ವಿಷಾದವಾಗುತ್ತದೆ. 

ನಾವು ಈ ವ್ಯವಹಾರವನ್ನು ಮಾಡಿದಾಗ ನೀನು ಒಳ್ಳೆ ಸಂತೋಷದಲ್ಲಿದ್ದಂತೆ 

ಕಾಣುತ್ತಿದ್ದಿಯಲ್ಲ....” 


“ ಛೇ, ಛೇ, ಅದೇ ಮೂರ್ಖತನಕ್ಕಾಗಿಯೇ, ಈಗ ನಾನು ಕಷ್ಟ 

ಬಡುತ್ತಿರುವೆನಲ್ಲ ! ಆದರೆ ಧನವಂತರು ಹುಟ್ಟು ಬಡವರಾದ ಗುಣವಂತರ 

ಲಾಭವನ್ನು ಹೀಗೆಯೇ ಅನ್ಯಾಯದಿಂದ ಎಷ್ಟು ದಿನ ತೆಗೆದುಕೊಳ್ಳ....” 


" ಇನ್ನು ಸಾಕಾಯಿತು. ನೀನು ಮೂರ್ಖನಿದ್ದದ್ದೇ ಸತ್ಯ"ವೆಂದು 

ಮೆಲ್ಲನೆ ಆಂದವನೇ ಪ್ರೇಮಚಂದನು ಎದ್ದು ನಿಂತನು. “ನಿನ್ನ ದುಃಖಕ್ಕೆಲ್ಲ 

ನೀನೇ ಕಾರಣನೆಂಬದನ್ನು ಇನ್ನಾದರೂ ತಿಳಿದುಕೊ, ಇನ್ನು ಮೇಲೆ, ಆ 

ದುಃಖವನ್ನು ಪೋಷಿಸಬೇಡ. ನಿನ್ನ ಜೀವಿತವೆಲ್ಲ ವಿಷಮಯವಾಗುವದರೊಳ 

ಗಾಗಿಯೇ ಎಚ್ಚರಾಗು, ನೀನಿನ್ನು ಬೇಕಾದರೆ ನಿನ್ನ ಕೆಲಸಕ್ಕೆ ಹೋಗು.... 

`ಇಲ್ಲದಿದ್ದರೆ ನಿನ್ನ ಶೋಧಕ ಬುದ್ದಿಯನ್ನೇ ಹಿಂಬಾಲಿಸು, ನಿನ್ನ ಶೋಧಗಳಿಂದ 

ನೀನು ಧನವಂತನಾದರೆ ನನಗೆ ವಿಷಾದವಿಲ್ಲ. ಆದರೆ ಎರಡನೆ 

ಯವರಲ್ಲಿ ಯತ್ಕಿಂಚಿತ್ತಾದರೂ ವಿಶ್ವಾಸವನ್ನಿಡಲಿಕ್ಕೆ ಪ್ರಯತ್ನಿಸು. ಕ್ಷಣ 

ಹೊತ್ತು ನಿನ್ನ ಯಂತ್ರಶೋಧಕ್ಕೆ ಅರವಾಳು ಹತ್ತಿತ್ತೆಂದು ತಿಳಿ....” 


" ನಿನ್ನಷ್ಟು ಆದಾಯವಿದ್ದವನಿಗೆ ಈ ನಷ್ಟದಿಂದೇನಾದೀತು ? ಆದರೆ 

ದೇವರಾಣೆ ! ಇನ್ನು ಮುಂದೆ ನನ್ನ ಶೋಧಗಳ ಲಾಭವು ನಿನಗೆಂದಿಗೂ ದೊರೆ 

ಯಲಾರದು ” ಎಂದು ಅಂದವನೇ ದುಶೋಧನು ಹಿಂದಿರುಗಿ ಮನೆಯ 

ಹಾದೀ ಹಿಡಿದನು. 


ಪ್ರೇಮಚಂದನು !! ನೋಟಬುಕ್ಕನ್ನು ವ್ಯವಸ್ಥೆಯಿಂದ ಇಟ್ಟು ಮುಖ್ಯ 

ಗುಮಾಸ್ತನಾದ ಗುಲಾಬಚಂದನನ್ನು ಕರೆಯುವದಕ್ಕಾಗಿ ಗಂಟೆಯನ್ನು 

ಬಾರಿಸಿದನು. ಗುಲಾಬಚಂದನು ಒಳಗೆ ಬರಬರುತ್ತಲೇ “ನಾನು ಹೇಳಿ 

ದಂತೆಯೇ ಅವನು ಮಾತಾಡಿದ್ದಾನಾದೀತು. ಅವನ ತಲೆಯೇ ಹಾಳಾ 

ಗಿದೆ. ಆದರೂ ನಿಮ್ಮ ತಾಳ್ಮೆಯು ಮಿಗಿಲಾದದ್ದು. ಕಾರಖಾನೆಯಲ್ಲಿಯ 

ಉಳಿದ ಜನರ ಮಾತು ಬೇರೆ. ವ್ಯಾಪಾರದ ಮೂಲತತ್ವಗಳನ್ನು ಲವ 

ಮಾತ್ರವೂ ಅರಿಯದ ಈ ಆರೆ ಹುಚ್ಚನ ಮಾತು ಬೇರೆ. ಇನ್ನು ಇವನಲ್ಲಿ 

ಕನಿಕರ ಬಡುವದಾದರೂ ಎಲ್ಲಿಯ ವರೆಗೆ ? ಒಂದು ಕೊಟ್ಟರೆ, ಮತ್ತೊಂದೂ 

ದೊರೆಯಬೇಕೆಂದು ಅವನು ನಾಳೆಯೇ ಕೇಳದಿರುವನೆ ? ಹತ್ತು ರೂಪಾಯಿ 

ಗಳ ಸಂಬಳವು ಸಿಕ್ಕ ಕೂಡಲೆ ಅದಕ್ಕೆ ಇಪ್ಪತ್ತಾಗತಕ್ಕದ್ದೆಂದು ಅವನು ಮರು 

ಗದೇ ಎಂದಿಗೂ ಇರನು, ಈ ಬಿಸಿಲ್ಗುದುರೆಯ ಬೆನ್ನು ಬಿದ್ದವನನ್ನು ನಾವೆ 

ಷ್ವಂತ ಬೆನ್ನಟ್ಟುವದು ? ” ಎಂದಂದನು. 


"ನೀನನ್ನು ವದೆಲ್ಲವೂ ನಿಜವು, ಯಶೋಧರನು ಮೊದಲು ಅತ್ಯಾಶೆ 

ಯುಳ್ಳವನಂತೆ ಕಾಣಿಸಿದನೇ ? " 

 

" ಇದಕ್ಕೆ ಆಶೆಬುರುಕತನವೆನ್ನುವದಕ್ಕಿಂತಲೂ, ಒಣಹೆಮ್ಮೆಯೆಂದೇ 

ಅನ್ನಬೇಕು. ತಲೆಗೂಳತನ-ಯಾಕೆ, ಇದೇ ಮೂರು ವರುಷಗಳಾಚೆಗೆ 

ಇವನೇ ಅಲ್ಲವೆ, ಏನಾದರೂ ಕೆಲಸ ಕೊಡಿರೆಂದು ಅಂಗಲಾಚಿ ಹೇಳಿಕೊಳ್ಳುತ್ತ 

ನಮ್ಮ ಬಾಕಿಲಲ್ಲಿ ಬಿದ್ದವನು-? ಆದರೆ ಈಗ ಇವನೇ ಇಡೀ ಪೃಥ್ವಿಗೆ ಪ್ರಸಿದ್ದ 

ನಾದ ಪ್ರಥಮ ಪರಿಶೋಧಕನಂತೆ ! ಹಣೇಬರಹ ! ” 


" ಅ೦ದರೇನು, ಅವನಲ್ಲಿ ತಥ್ಯವೇನೂ ಇಲ್ಲೆನ್ನು ವಿಯಾ ? ಗುಣವಂತ. 

ನಿದ್ದದ್ದು ನಿಜವು, ಆದರೆ ....? 


" ಅವನಳ್ಳಿಯ ಗುಣಗಳಿಗೇನೂ ಕೊರತೆಯಿಲ್ಲ, ಶೇಟಜೀ, ಆದರೆ 

ಮನುಷ್ಯನು ಈ ಸರಿಯಾಗಿ ನಿಚ್ಚಣಿಕೆ ಇರುನ್ನೇ ಹತ್ತಿದರೆ, ಅವನು ತನ್ನ 

ಜೀವಕೂ ಮುಳುವು, ಎರಡನೇಯವರಿಗ೦ತಾ ಶುದ್ಧ ಕಾಲರೂಪಿ. ನೀವು 

ಬೇಕಾದ್ದು ಹೇಳಿರಿ. ಇನ್ನೊಂದು , ಕೆಲ ದಿನಗಳಲ್ಲಿಯೇ ಅತವ ಬಾತಿಗೆ 

ಬಾರದಾಗುವನು, ಈ ಗೇ ಅವನ ಸೊಕ್ಯಾಳಿತನವು ಸಾಕುಬೇಕಾಗಿದೆ, "  

ಗುಲಾಬಚಂದನು ತುಸು ವಿಚಾರ ಮಾಡಿ ಅಂದದ್ದು : " ಅದಿರಲಿ, ನೀನಿನ್ನೂ 

ಅವನಿಗೆ ಅವನ ಸ್ವಾಮಿತ್ವದ ಹಣವನ್ನು ಸಲ್ಲಿಸಬೇಕೆಂತಲೇ ಮಾಡಿರುವಿ 

ರಲ್ಲ ! ಅವನ ಹೆಸರಿಗೆ ನಾಲ್ಕು ಸಾವಿರ ರೂಪಾಯಿಗಳು ಬರೆದಿಟ್ಟಿರುವವು. 

ಇದೆಲ್ಲವೂ ಅಂತರಂಗದ ಲೆಕ್ಕವಾದ ನಾಯಿತು ? ಅವನಿಗೆ ಸಲ್ಲತಕ್ಕದ್ದ೦ತೂ. 

ಸರಿ, ” 


"ಸಲ್ಲತಕ್ಕದ್ದಿರೆ ಸಲ್ಲಿಸು, ಬೇಡವೇಕೆ ? '' ಎಂದು ಪ್ರೇಮಚಂದ. 

ನಂದನು. " ಆಹಹ! ಈ ಸುದ್ದಿ ತಗಲಿದ ಕೂಡಲೆ ಅವನು ಹೆರೆಯುಚ್ಚಿದ 

ಹಾವಿನಂತಾಗುವದೇ ನಿಜ, ಇದು ಎಂಟುಸಾವಿರಮಟ್ಟಿಗೇಕಿಲ್ಲಂಬುದಾಗಿ 

ಅವನು ಬಳಲುವದೇನ ಬಿಡನು. " 


"ಹೇಗೇ ಆಗಲಿ, ಅವನನ್ನಿಂದೊದು ಸಾರೆ ತಡೆಯೋಣ, ಈ ಗಾಳಿಯು 

ಬೀಸಿ ತೀರಿದ ನಂತರವಾದರೆ, ಅವನು ಎಚ್ಚರಗೊಡಾನು, ಏನೇ ಇರಲಿ, 

ಈಗ ಐದು ನಿಮಿಷಗಳಾಚೆ ಅವನ ಉದ್ದಟತನವನ್ನು ಕಂಡು, ಆವನ ಪರಲು 

ಕಡಿದುಕೊಳ್ಳಬೇಕೆಂದೆನಿಸಿತ್ತು. ಇವನ ಅರ್ಧ ಪಾಂಡಿತ್ಯದ ಅಹ೦ಕಾಗದ 

ಬಿರಿನುಡಿಗಳಿಗಿಂತಲೂ ಅಜ್ಞಾನಾಂಧಕಾರದಲ್ಲಿದ್ದ ನಮ್ಮ ಕೂಲಿಗಾರರು ಕುರಿ 

ಗಳಂತಾಚರಿಸುವದೇ ಒಳಿತೆನಿಸಿತು. ಕೈಲಾದಷ್ಟು ಕೈ ಕೆಳಗಿನವರ ಕಲ್ಯಾಣ 

ಚಿಂತನೆಯೇ ನನ್ನ ಜೀವನ ಸರ್ವಸ್ವವೆಂದು ನಾನು ತಿಳಿಯುತ್ತೇನೆ.” ಎಂದು 

ಕರ್ತವ್ಯಪರಾಯಣನಾದ ಪ್ರೇಮಚಂದನಂದನು. 


" ಆಗಲಿ, ಧನಿಯರ ಇಚ್ಛೆ ! ಉಳಿದ ಕೆಲಸವನ್ನು ನೋಡಿಕೊಳ್ಳ 

ಬೇಕು ” ಎಂದು ಇನ್ನೂ ಎಷ್ಟೋ ಕಾಗದಗಳನ್ನು ಗುಲಾಬಚಂದನು ಅವನ 

ಮುಂದಿಟ್ಟು, ಬಾಗಿಲತನಕ ಹೋಗಿ, ಇನ್ನೊಂದು ಮಾತು ಕೇಳತಕ್ಕದ್ದಿದೆ. 

ಯಶೋಘವನಿಗೆ ಸಲ್ಲ ಸ್ವಾಮಿತ್ವದ ಹಣವನ್ನೆಲ್ಲ ಅವನ ಹೆಂಡತಿಯಾದ 

ಶಾಂತಾದೇವಿಗೆ ಕೊಟ್ಟರೆ ಒಳಿತಾಗಲಿಕ್ಕಿವೆ ? ಪಾಪ, ಚಿಕ್ಕವಳಾದ ಸುಕು 

ಮಾರಿಯು ಕೂತುನೀರೆಂದು ಬಳಲುತ್ತಾಳೆಂದು ಮೊನ್ನೆಯೇ ನಮ್ಮಕ್ಕನು 

ಹೇಳುತ್ತಿದ್ದಳು. ನನಲ್ಲಿ ಕಣ್ಣಿಗೆ ಹಚ್ಚೇನೆಂದರೆ ಕಾಳು ಧಾನ್ಯವಿಲ್ಲವಂತೆ. 

ಉಡಿಜಿಪಿಗೆಗಳಂ ", ಅದನ್ನೇ ಒಗೆದು ಉಡಬೇಕ೦ತೆ ! ” ಎಂದು ಒಳ್ಳೆ 

ಆಲ್ಪರೆದು ಗುಲಾಬಚಂದನು ಹೇಳಿದನು. 


" ಇಂಥ ಸ್ಥಿತಿಯಾಗಲಿಕ್ಕೇನು ಕಾರಣ ? ” 


" ಎಂಥದಾ ದರೆ೦ದು ಅನಿಷ್ಟವಾದ ಸಂಗತಿಯೇ ಇದಕ್ಕೆಲ್ಲ ಕಾರಣ 

ವಾಗಿರ ಬೇಕಲ್ಲದೆ, ಮತ್ತಿನ್ನೇನು ? ” 


ಪ್ರೇಮಚಂದನು ಆ ಅಂದಾಜು ಪತ್ರಿಕೆಯನ್ನು ಕೈಯ್ಯಲ್ಲಿ ಹಿಡಿದು 

ಅ೦ದದ್ದು : "ಗುಲಾಬಜೀ, ನೀವು ಮಾತ್ರ ಯಶೋಧರನ ಬೆನ್ನು ಕೈ 

ತೊಳೆದುಕೊಂಡು ಹತ್ತಿದಿರಿ; ಇದರಲ್ಲಿ ತಿಲಮಾತ್ರ ಸಂದೇಹವಿಲ್ಲ. ಆದರೆ 

ಅವನ ಗೃಹಕೃತ್ಯಗಳಲ್ಲಿ ಕೈ ಹಾಕುವದು ನಮ್ಮದಲ್ಲ. ನಮ್ಮಲ್ಲಿ ಬಂದಾಗ 

ಅವನು ತೀರ ಬಡಸ್ಥಿತಿಯಲ್ಲಿದ್ದರೂ ನಿಮಗೆ ಗೊತ್ತಿದೆ. ಹಿಂದೆ ಮಾಡಿದ 

ಸಾಲಸುದ್ದಿಗಳನ್ನು ತೀರಿಸುವದರಲ್ಲಿ ಅವನಿಗೆ ಹಣದ ಕೊರತೆಯಾಗುತ್ತಿ 

ದ್ದೀತು. ಯಶೋಧರನ ಹೆಂಡತಿಯಇ ಇದ್ದದ್ದರಲ್ಲಿಯೇ ಸುಖ ಹಚ್ಚಿಕೊಂಡು 

ಇದ್ದಿರುವಳಾದೀತು. ತನ್ನ ಗಂಡನ ಸಲುವಾಗಿ ಅವಳಿಗೆ ಒಳ್ಳೆ ಅಭಿಮಾನ 

ವಿದ್ದಂತೆ ಕಾಣುತ್ತದೆ. ಗುಣಗಳನ್ನೇ ಪೂಜೆ ಮಾಡುತ್ತಿರುವವಳಾದೀತು. 

ಗುಣಕ್ಕೆ ಬೆಲೆಯದೆಯಲ್ಲವೆ ? '' ಇಷ್ಟೊಂದು ಪ್ರೇಮಚಂದನು ಗಹಗಹಿಸಿ 

ನಕ್ಕನು. 


" ನಿನ್ನ ಸಮಾಧಾನಕ್ಕೆ ಬೆಲೆಯಿಲ್ಲ" ವೆಂದು ಗುಲಾಬಚಂದನು 

ಮೆಲ್ಲನೇ ನುಡಿದು ಹೊರಬಿದ್ದನು. 


ಪ್ರೇಮಚಂದನು ಘನವಾದ ವ್ಯಾಪಾರಸ್ತನೆಂಬದನ್ನು ಈ ಮೊದಲೇ 

ಹೇಳಿದ್ದೇವೆ. ಈ ಘನವಾದ ವ್ಯಾಪಾರವೈಭವಕ್ಕೆ ಒಪ್ಪುವಂಥ ಗೃಹಸೌಖ್ಯವು 

ಅವನಿಗಿದ್ದಿಲ್ಲವೆಂಬದನ್ನು ಹೇಳಲಾರೆವು. ಮದುವೆಯಾದ ಒಂದೆರಡು ವರುಷ 

ಗಳಲ್ಲಯೇ, ಅವನ ಅಧಾ೯೦ಗಿಯಾದ ಲಲಿತಾದೇವಿಯು ಪರಲೋಕವನ್ನು 

ಪಡೆದಳು. ಮುಂದೆ ಒಂದು ವರುಷ ಹೋಗಲಿ; ಇಷ್ಟು ಧನವನ್ನು ಸಂಪಾ 

ದಿಸಿ ಮಗನ ಸೌಭಾಗ್ಯವನ್ನು ನಿರೀಕ್ಷಿಸಿ ಆನಂದಗೊಳ್ಳುತ್ತಲಿದ್ದ ತಂದೆಯು 

ತೀರಿಕೊಂಡನು. ಇವೆರಡೇ ಅನಾಹುತಳಿ೦ದ ಪ್ರೇಮಚಂದನಿಗೆ ಜಗತ್ತಿ 

ನಲ್ಲಿಯ ಬಾಳ್ವೆಯೇ ಇಲ್ಲದಾಗಿತ್ತು. ಆದರೂ ದಿನಗಳೆದಂತೆ ದುಃಖವನ್ನು 

ನುಂಗಿ ಮರೆಮಾಡುತ್ತ ಬಂದಿದ್ದನು. 


ನಂತರ ಕೆಲವು ದಿನಗಳಲ್ಲಿಯೇ ಇವರ ವಶಕ್ಕಿದ್ದ ಕಾರಖಾನೆಗಳಲ್ಲಿ 

ಒ೦ದರೊಳಗೆ, ಒಂದು ದಿನ ಒಂದು ಅಪಘಾತವಾದದ್ದೇ ಪ್ರೇಮಚಂದನ 

ಸ್ಥಿತಿಯು ಹೆಚ್ಚೆಚ್ಚು ಸುಧಾರಿಸಿ, ಅವನಲ್ಲಿ ಪ್ರಸ್ತುತಕ್ಕಿದ್ದ ಭೂತದಯೆ, 

ಕಾರುಣ್ಯ, ಕೈಕೆಳಗಿನವರ ಮೇಲೆ ಮಮತೆ, ವ್ಯಾಪಾರ ವ್ಯವಹಾರಗಳಲ್ಲಿ 

ಅಳುಕದಂಥ ಧೈರ್ಯ ಮುಂತಾದ ಗುಣಗಳ ವಿಕಾಸವಾಗಲಿಕ್ಕೆ ಕಾರಣ 

ವಾಯಿತೆಂದು ಅನ್ನಲಿಕ್ಕೆ ಅಡ್ಡಿಯಿಲ್ಲ. ಗಿರಣಿಗೆ ಆದಿಶಕ್ತಿಯಾದಂಥ 

ಪ್ರಧಾನ-ಗತಿ- ಚಕ್ರವೇ ಒಂದು ದಿವಸ ಒಡೆದು ಚಿಪ್ಪಾಡಿಯಾಗಿ, ಇವನ 

ಕಣ್ಣೆದುರಿನಲ್ಲಿ ಇಬ್ಬರು ನಿಂತಲ್ಲಿಯೇ ನುಚ್ಚು ನೂರಾದರು. ಎಷ್ಟೋ ಜನರಿಗೆ 

ಗಾಯತಗಲಿ ಮಿತಿಮೀರಿದ ನಷ್ಟವಾಯಿತು. ದುಃಖದ ಪೆಟ್ಟು ತಿಂದವನಾದ 

ಪ್ರೇಮಚಂದನಿಗೆ ಇಷ್ಟೇ ಹಣದ ನಷ್ಟವು ಇದಕ್ಕೂ ಒಂದು ವರುಷ ಮಟ್ಟಿಗೆ 

ಮೊದಲು ತಗಲಿದ್ದಾದರೆ, ಅವನು ನೆಲಹಿಡಿದು ಮಲಗಿಕೊಳ್ಳುತ್ತಿದ್ದನು. 

ಆದರೆ ಈಗ ಈ ಅಪಘಾತದಲ್ಲಿ ನುಡಿದು ಗಾಯಗೊಂದಿ, ಅನೇಕ ಅನರ್ಥ 

ಗಳಿಗೊಳಗಾದ ತನ್ನ ಸೇವಕ ಜನರ ಗೋಳಾಟವು, ಇವನನ್ನು ಪೂರ್ಣ 

ವಾಗಿ ಎಚ್ಚರಗೊಳಿಸಿ ಜಗತ್ತಿನಲ್ಲಿಯ ಬಾಳುವೆ ಎಂದರೇನೆಂಬುದರ ಪಾಠ 

ವನ್ನು ಕಲಿಸಿತು. ಇದುವರೆಗೆ, ಏನೋ ಒಂದು ದೊಡ್ಡ ಚಕ್ರದ ಸಣ್ಣ ಸಣ್ಣ 

ಭಾಗಗಳೆಂದು ತನ್ನ ಜನರನ್ನು ಸ್ವಲ್ಪ ಅಲಕ್ಷದಿಂದ ನಡೆಯಿಸುತ್ತಿದ್ದವನು, 

ತನ್ನ ಜೀವನದಷ್ಟೇ ಮಹತ್ವವು ಕಡಿಮೆ ಬೆಲೆಬಾಳುವ ಪ್ರಾಣಿಗಳಿಗೂ 

ಇರುವದೆಂದು ಇವನಿಗೆ ತತ್‌ಕ್ಷಣಕ್ಕೆ ತಿಳಿಯಬ೦ದಿತು. ತನ್ನ ನೌಕರರ 

ಜೀವನವೇ ತನ್ನ ಮುಖ್ಯಾಧಾರವೆಂಬದು ಅವನ ಮನವರಿಕೆಯಾಯಿತು. 

ವ್ಯಾಪಾರ ವ್ಯವಹಾರಗಳಲ್ಲಿ ಕೇವಲ ದ್ರವ್ಯ ಸಂಪಾದನೆಯ ಭರದಲ್ಲಿ, ಆ - 

ದ್ರವ್ಯಾರ್ಜನೆಯ ಸಾಧನಗಳಾದ ತನ್ನ ಆಳುಗಳನ್ನು ಒಂದೇ ದಿನ ರಕ್ತ 

ಹಿಂಡುವಂತೆ ದುಡಿಸಿಕೊಂಡು ಜೀರ್ಣ ಮಾಡಬಾರದೆಂಬದು ಅವನಿಗೆ 

ಕಂಡಿತು. ಅಂದಿನಿಂದ ಅವನು ಯಥಾಯೋಗ್ಯನಾದ ಯಜಮಾನನ ಗುಣ 

ಗಳನ್ನು ಹೊಂದಿದನು. ದಡ್ಡತನವೆಂದರೆ ಸಂಭಾಏತರ ಲಕ್ಷಣವೆಂದು ತಿಳಿದು 

ಕೊಳ್ಳದೆ, ಜಾಣರಲ್ಲಿ ತಪ್ಪುಗಾರರನ್ನು ತಡವಿಲ್ಲದೆ ಕ್ಷಮಿಸಹತ್ತಿದನು 

ಮನಮುಟ್ಟಿ ಕೆಲಸ ಮಾಡುವವನು ಕೆಲಸದಲ್ಲಿ ತಡ ಮಾಡಿದರೂ, ತಿವ್ರವೇ 

ಏಕಾಗಲಿಲ್ಲವೆಂದು ತಲ್ಲಣಿಸುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ತನ್ನ ಜಾಣತನ 

ವನ್ನು ತೋರಿಸಿಕೊಳ್ಳುವ ಸಮಯಗಳನ್ನು ಆಗಾಗ ತಂದುಕೊಡುತ್ತಿದ್ದನು. 

ಒಮ್ಮೆಯಲ್ಲದೆ ನೂರಾರು ಸಾರೆ, ಅವರ ಪ್ರಯತ್ನಗಳ ಪ್ರಯೋಜನವು ಎಲ್ಲರ 

ನಿದರ್ಶನಕ್ಕೆ ಬರುವಂತೆ, ವೇಳೆಯನ್ನರಿತು ಇಂಥವರ ಬೆನ್ನು ಚಪ್ಪರಿಸುವನು. 

ಇದರಿಂದ ಒಳ್ಳೆಯವನೆಂದು ಹಗಲೆಲ್ಲ ತಪ್ಪುಮಾಡುತ್ತ, ಕೆಲಸಕ್ಕೆ ತಪ್ಪಿಸುವ 

ಮೈಗಳ್ಳರನ್ನು ಮೇಯಿಸಿ ಪುಷ್ಟ ಮಾಡುತ್ತಿದ್ದನೆಂಬದನ್ನು ಮಾತ್ರ ತಿಳಿಯ 

ಕೂಡದು. 


ಒಂದು ರೀತಿಯಿಂದ ಪ್ರೇಮಚಂದನು ನಿರಂಕುಶ ಪ್ರಭುವು, ಎಲ್ಲ 

ಮಾತುಗಳು ತನ್ನ ಕಿವಿಮುಟ್ಟದೆ ತನ್ನ ನಿರ್ಣಯಕ್ಕೊಳಪಡದೆ, ತನ್ನ ಕೈಲೇಖ 

ವಿಲ್ಲದೆ ಹೊರಬೀಳಬಾರದೆಂದು ಅವನು ಆಗ್ರಹ ತೊಡುತ್ತಿದ್ದನು. ತಾನು 

ಒಳ್ಳೆ ನ್ಯಾಯವಂತನೆಂಬ ಬಗ್ಗೆ ಅವನಿಗೆ ಒಳ್ಳೆ ಅಭಿಮಾನವಿತ್ತು. ವಾರದಲ್ಲಿ 

ಕೆಲವೊಂದು ವೇಳೆಯನ್ನು ಗೊತ್ತುಪಡಿಸಿ, ಆಗ ತಮಗೇನೆಂದು ತಿಳಿಸುವ 

ದಿದ್ದರೆ ತಿಳಿಸತಕ್ಕದ್ದೆಂದು ಸಣ್ಣ ದೊಡ್ಡ ಕೆಲಸಗಾರರಿಗೆ ಹೇಳಿಟ್ಟಿದ್ದನು. ಈ 

ಕಾಲಕ್ಕೆ ಪ್ರೇಮಚಂದನಿಗೆ ತಮಗೆ ಬೇಕಾದ ಬೇಡಿಕೆಗಳನ್ನಾಗಲಿ, ಹೇಳಿಕೆ 

ಕೇಳಿಕೆಗಳನ್ನಾಗಲಿ ಹೇಳಿಕೊಳ್ಳುವ ಸ್ವಾತಂತ್ರವು ಎಲ್ಲರಿಗೂ ಇತ್ತು. 

ಅ೦ದರೆ ಈಗ ಎಲ್ಲರೂ ತಮ್ಮ 'ತಕರಾರು'ಗಳನ್ನು ಹೇಳಿಕೊಳ್ಳಬಹುದು. 

ಹೀಗಾದುದರಿಂದ ಸುಮ್ಮನೇ ತಮಗೆ ನ್ಯಾಯವಾಗಿದೆಯೆಂಬ ಕಲ್ಪನೆಗೆ 

ಬಲಿಬಿದ್ದು ದುಮುದುಮು ಉರಿಯುತ್ತಿದ್ದು ಈ ತಕರಾರುಗಳ ಜ್ವಾಲೆಯು 

ದಿನವೊಂದಕ್ಕೆ ದಬ್ಬಿ ಕೊಂಡಿದ್ದರಿಂದ ಹೆಚ್ಚೆಚ್ಚು ಪ್ರಖರವಾಗುತ್ತ ಸಾಗಿ, 

ಒಮ್ಮೆಲೆ ವಡವಾಗಿ ಯಂತೆ ಪ್ರಜ್ವಲಿಸಿ, ಸುತ್ತು ಮುತ್ತು ಲಿನ ಪ್ರದೇಶವನ್ನೆಲ್ಲ 

ಸುಟ್ಟು ಬೂದಿಮಾಡಲವಕಾಶವು ಈ ಪ್ರೇಮಚಂದನ ಕಾರಖಾನೆಗಳಲ್ಲಿ 

ಇದ್ದಿಲ್ಲ. ಮೂರು ನಾಲ್ಕು ಸಾವಿರ ನೌಕರರಲ್ಲಿ ಅನ್ಯಾಯದ ಭ್ರಾಂತಿಗೆ ಬಿದ್ದ 

ವರು ತೀರ ತುಸು ಜನರು. ಈ ಬಗೆಯ ಜನರೆಂದರೆ ಪ್ರೇಮಚಂದನನ್ನು 

ಸುಳ್ಳು ಸೋಗಿನಿಂದ ಠಕ್ಕಿಸಲಿಕ್ಕೆ ಹೋಗಿ, ತಮ್ಮ ತಗಲು ಬೈಲಿಗೆ ಬಿದ್ದದ್ದ 

ರಿಂದ ಮಾನಹಾನಿಯಾದಂತಾಗಿ ಮನಸ್ಸು ನೋಯಿಸಿಕೊ೦ಡ೦ಥವರು ಕೆಲ 

ಜನರಿದ್ದರು. ಇನ್ನೂ ಕೆಲವರೆಂದರೆ ಅವನನ್ನು ಠಕ್ಕಿಸಿ ಜಯಹೊಂದಿದ್ದರು. 

ತಮಗೆ ಜಯ: ಸಿಕ್ಕಿದ್ದರೂ ಆವರ ಠಕ್ಕತನವು ಅವರ ಮನಸ್ಸನ್ನು ಸಣ್ಣಾಗಿ 

ತಿನ್ನುತ್ತಿತ್ತೆಂಬದರಲ್ಲಿ ಸಂದೇಹವಿಲ್ಲ. ಆದರೆ ಬೆದರಿಕೆ ಹಾಕಿ, ಕೆಲಸ ನಿಲ್ಲಿಸುತ್ತೇ 

ವೆಂದು ಹೇಳಿ, ಜುಲುಮೆಮಾಡಿ ಒತ್ತಾಯದಿಂದ ಜಿಗಿದು ಹಾರಾಡಿನರಿಗೆ 

ಪ್ರೇಮಚಂದನಿಂದ ಒಂದು ಕಾಸು ಕಪರ್ದಿಯಷ್ಟು ಲಾಭವಾಗುತ್ತಿದಿಲ್ಲ. 

ಒಣ ಬೆದರಿಕೆಗೆ ಬೆದರಿ ಬೇಲಿ ಸೇರುವ ಬಂಟನಿವನಲ್ಲ. 


ಇರಲಿ; ಇದೆಲ್ಲದರಿಂದ ಇವನಿಗೆ ಲಾಭವಾಗುತ್ತಿತೋ ? ನಿಜವಾಗಿ 

ಆಗತಕ್ಕಷ್ಟು ಆಗುತ್ತಿದ್ದಿಲ್ಲ. ಗುಮಾಸ್ತನಾದ ವೃದ್ದ ಗುಲಾಬಚಂದನನ್ನು 

ಕೇಳಿದರೆ, ಅವನಾದರೂ ಇದನ್ನೇ ಹೇಳುವನು. ಈ ಸಂಘವು ಸಾವಕಾಶ 

ವಾಗಿ, ಎಚ್ಚರದಿಂದ ನಾಲ್ಕೂ ಕಡೆಗೂ ಕಣ್ಣಿಟ್ಟು ಕೆಲಸ ಮಾಡುತ್ತಿದ್ದ ಕಾರಣ 

ಗಪಗಪನೆ ಕೈಗೆ ಬಂದಷ್ಟು ಬಳಿದುಕೊಳ್ಳುವಂಥ ಕಂಪನಿಗಳು ಲಾಭಹೊಂದು 

ವಷ್ಟು ಇವರಿಗೆ ಆಗುತ್ತಿದ್ದಿಲ್ಲ. ಕಳೆದ ಹತ್ತು ವರುಷಗಳಿಂದಲಂತೂ ಈ ಕಂಪ 

ನಿಯ ಲಾಭದ ಪ್ರಮಾಣವು ನೂರಕ್ಕೆ ಐವತ್ತರಿಂದ ಕಡಿಮೆಯಾಗಿತ್ತು. 

ಕೂಲಿಯ ದರವನ್ನು ಕೇಳಿದ್ದರೆ ಇವನ ತಂದೆಯಾದ ರಾಯಚಂದನು 

ಕೈಲಾಸದಲ್ಲಿಯೇ ಎದೆ ಎದೆ ಬಡಿದುಕೊಳ್ಳುವಂತಿತ್ತು. ಆಳುಗಳಲ್ಲಿ ಬೇನೆ 

ಬೇಸರಿಕೆಯಾದರೆ, ಕಂಪನಿಯ ವೆಚ್ಚ: ಮುಪ್ಪಿನಿಂದ ಕೆಲಸ ಬಿಟ್ಟವರಿಗೆ, 

ಕಂಪನಿಯ ಪೆನಶನ ರೂಪದ ಉಂಬಳೆಯು; ಇಂಥವೇ ಇನ್ನೂ ಕೆಲವು 

ವೆಚ್ಚದ ಬಾಬುಗಳಂತೂ ಹೆಚ್ಚಾಗಿದ್ದವು. ಪ್ರೇಮಚಂದನಿಗೆ ಲಾಭವಾಗುತ್ತ 

ದೆಂದೆಯೇ ಇವೆಲ್ಲ ಔದಾರ್ಯದ ಸೋಗುಗಳು; ಇಲ್ಲದಿದ್ದರೆ ಬೇಗೆಂದು 

ಕೀಳು ಸುನಸಿನ ಕೆತ್ತಿಗರಲ್ಲಿಯ ಭಾಷಣವು. ವರುಷದ ಕೊನೆಯಲ್ಲಿ ಶಿಲುಕಿನ 

ಪತ್ರಿಕೆಯನ್ನು ಓದಲಿಕ್ಕೆ ಪ್ರೇಮಚಂದನಂಥ ಧೈರ್ಯಸ್ತನೇ ಬೇಕೆಂಬದನ್ನು 

ನಾವು ಹೇಳುತ್ತೇವೆ. ವರುಷದ ಕೊನೆಯಲ್ಲಿಯ ಲಾಭದ ಆದಾರವನ್ನು 

ನಾವೆಷ್ಟು ಔದಾರ್ಯದಿಂದ ವೆಚ್ಚ ಮಾಡಿಕೊಂಡರೂ, ಇದಕ್ಕೂ ಹೆಚ್ಚಿನ 

ಲಾಭವನ್ನು ನಾಳಿನ ವುಷ ದೊರಕಿಸಲಿಕ್ಕೇ ಬೇಕೆಂದು ನಮ್ಮಲ್ಲಿ ಎಷ್ಟು 

ಜನರು ಪಂಥತೊಡುವದಿಲ್ಲ ? ಇಡೀ ಜಗತ್ತನ್ನೇ ಸಲುಹಿ, ಬೆಟ್ಟಿಯಾದವರ 

ನ್ನೆಲ್ಲ ಸ೦ತೋಷಪಡಿಸಬೇಕೆಂಬ ಲವಲವಿಕೆಯಿ೦ದ ಹೊರಟ ಯಾತ್ರಸ್ಥರಲ್ಲಿ 

ಇದುವರೆಗೆ ಎಷ್ಟು ಜನರು ಜಯಶಾ:ಗಳಾದರು ? ಪ್ರೇಮಚಂದನಂತೆ 

ಪರಜಯಪಟ್ಟವರೇ ಬಹು ಜನರೆಂದು. ಧಾರಾಳವಾಗಿ ಹೇಳಬಹುದು. ಇಡೀ 

ಜಗತ್ತಿನ ಪ್ರೀತಿ ಮತ್ತು ಸುಪಾ ವಿಸಿ.೧೦ಡ ನನೊಬ್ಬನು ಸರ್ವೆಶ್ವರನಾದರೂ 

ಅಹುದೆ ? 

ನಿತ್ಯಶಃ 'ನ್ಯಾಯ, ನ್ಯಾಯ 'ವೆಂದು ಕನಕರಿಸುತ್ತಿರುವ ಜನರೆಲ್ಲರೂ 

ಮನಸಿನಲ್ಲಿ 'ಸೇಡು' ತೀರಿಸಿಕೊಳ್ಳಬೇಕೆಂಬ ಭಯಂಕರವಾದ ವಿಚಾರವನ್ನೆ 

ಮಾಡುತ್ತಿರುವರೆಂಬುದು ಹೆಜ್ಜೆಹೆಜ್ಞೆಗೆ ಕಂಡು ಬರುವದು, ನ್ಯಾಯವೆಂದರೆಯೇ 

ಸೇಡು, ಫಿರ್ಯಾದು ಮಾಡಿ ನ್ಯಾಯ ಬೇಡುವೆನೆಂದವನು, ಪ್ರತಿಪಕ್ಷಿಯ 

ಮೇಲೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿರುವನೆಂದೇ ತಿಳಿಯತಕ್ಕದ್ದು. 

ಯಶೋಧರನು ಇದೇ ' ನ್ಯಾಯ ' ಶಬ್ದವನ್ನೇ ಉಚ್ಚರಿಸುತ್ತ ಮನೆಯ 

ಹಾದೀ ಹಿಡಿದನು. ಊಟಕ್ಕೆ ತಾಗ ' ನ್ಯಾಯ ' ದ ಧ್ಯಾನವೇ, ಅದೇ 

ಜಪವೇ. ಪ್ರಾಣಿಯು ಪಾತ್ರೆಯಲ್ಲಿ ಏನು ಇರುವದೆಂಬದನ್ನು ಕೂಡಾ 

ಕಣ್ಣಾರೆ ಕಂಡನೋ ಇಲ್ಲವೋ ? ಊಟದ ರುಚಿ ಯಾರಿಗೆ ? ಹೆಂಡತಿಯನ್ನು 

ಕರೆಯುವದಾದರೂ 'ನ್ಯಾಯ 'ವೆಂದೇ, ಶಾಂತಾದೇವಿಯೂ ಈ ಶಬ್ದವನ್ನು 

ಈಗ ಮರು ನಾಲ್ಕು ತಿಂಗಳುಗಳಿಂದ ಕೇಳುತ್ತ ಬಂದವಳಾದ್ದರಿಂದ ಪ್ರತ್ಯು 

ತ್ತರ ಕೊಡದೆ ಮೂಕಭಾವವನ್ನು ತಾಳಿದಳು. 


" ಅಯ್ಯೋ ದೈವವೆ ! ” ಕಡೆಗೆ ಬೇಸತ್ತು ಅವಳಂದದ್ದು "ಹೀಗೆಯೇ 

ಮಾಡುತ್ತ ಹೋದಲ್ಲಿ ಯಾವ ಪ್ರಯೋಜನ? ನೀವೂ ಹುಚ್ಚರಾಗಿ ನನ್ನನ್ನೂ 

ಹಾಳುಮಾಡುವಿರಿ, ಒಮ್ಮೆ ಮುಗಿದ ವ್ಯವಹಾರ....” 


" ಆದರೆ ಆ ವ್ಯವಹಾರವು ಅನ್ಯಾಯದ್ದು ಕೇಳಿದಿಯಾ ? ಅವನು 

ನನ್ನ ಉಪಯೋಗವನ್ನು ....” 


" ಇರಲಿರಲಿ. ಈಗ ಅದಕ್ಕೆ ಯಾವ ಉಪಾಯವಿದೆ ? ಆದದ್ದು 

ಆಯಿತು. ಆದನ್ನೆಲ್ಲ ಮರೆತುಬಿಡಿರಿ. ನಿಮಗೆ ಅದರಿಂದ ನಷ್ಟವಂತೂ ಆಗಿಲ್ಲ 

ವಲ್ಲ. ಸ್ವಲ್ಪಿಲ್ಲ ಸ್ವಲ್ಪು ಹಣ ಬಂದೀತೊ ಇಲ್ಲವೋ ? ಇನ್ನು ಮುಂದೆ 

ನೀವೇನೂ ಮಾಡಬೇಡಿರಿ.” 

 

"ಅದನ್ನು ಪ್ರೇಮಚಂದನ ಎದೆಯೊಳಗಿನ ರಕ್ತಹೀರಿ ತೆಗೆದುಕೊಳ್ಳುವೆ 

ನಂತೆ, ಅನ್ಯಾಯದಿಂದ ಧನವಂತನಾಗುವನೇ ಅವನು ?" ಎಂದು ಯಶೋ 

ಧರನು ಹಲ್ಲು ತುಟಿ ಕಚ್ಚುತ್ತ ನುಡಿದನು. 


“ಛೇ! ಆ ಮಾತು ಹಾಳಾಗಲಿ ! ಇನ್ನೂ ನಾಲ್ಕು ವರುಷಗಳ ವರೆಗಂತೂ 

ಗೊತ್ತು ಮಾಡಿದ೦ತೆ ಹಣವು ಬರುತ್ತದಲ್ಲ. ?” ಎಂದು ಅವಳು ಬಿರಿನಗಿ 

ನಕ್ಕಳು. "ಆದರೆ, ರಾಯರೆ, ಅದರೊಳಗಿನದೊಂದು ಭಾಗವಾದರೂ ಮನೆಯ 

ಕಡೆಗೆ ಬರಲಿನ್ನು.” 


" ಏನೆನ್ನು ವಿಯೇ ? ಇನ್ನೊಮ್ಮೆ ಅನ್ನು ನೋಡೋ-" 

 

"ಏನಂದರೆ?” ಶಾಂತೆಯು ತುಸು ಧೈರ್ಯತಾಳಿ ಅಂದದ್ದು: “ಮನೆಯಲ್ಲಿ 

ಈಗ ಒಂದು ಹಿಡಿಯಷ್ಟು ಕಾಳಿಲ್ಲ. ಉದ್ದೇನಂದರೆ ಬಟ್ಟೆಯ ಬರವು, ನಿಮ್ಮ 

ಗಳಿಕೆ ನೋಡಿದರೆ, ನಾಲ್ಕು ಜನರಲ್ಲಿ ಒಳ್ಳೇ ಮೇಲಾಗಿ ಇರುವಂಥ ಭಾಗ್ಯ. 

ಒಬ್ಬಿಬ್ಬ ಕೂಲಿಯವರನ್ನಿಟ್ಟು ಕೊಂಡಿರುವನ್ನು ದೊರಕಣೆ....” 


" ಇಲ್ಲಿ ಕೇಳಿಲ್ಲೆ" ಯಶೋಧರನು ತನ್ನ ನ್ನು ಬಿಗಿಹಿಡಿದುಕೊಳ್ಳುತ್ತ 

ಅಂದದ್ದು: “ಇದಿಷ್ಟೇ ಯಾಕೆ, ಮೇಲುಪ್ಪರಿಗೆಯ ಮನೆಯಲ್ಲಿ ಕೂಡ್ರುವಿ 

ಯಂತೆ ! ಸ್ವಲ್ಪ ತಾಳು. ಈಗ ಸಿಕ್ಕುತ್ತಿದ್ದದ್ದರಲ್ಲಿಯದೊಂದೊಂದು 

'ಕಾಸೆ' ೦ದರೆ ನನಗೀಗ ದೊಡ್ಡ ಖಜೀನೆ ಇದ್ದಂತೆ.” 


" ನಿಮ್ಮ ಖಜಾನೆಯಲ್ಲಿ ಬ್ಯಾಂಕಿನಲ್ಲಿ, ಅಹುದಲ್ಲೋ ? " 


“ಅಲ್ಲ ಬಿಡು ! ಒಂದಕ್ಕೆ ನೂರು-ಒಂದಕ್ಕೆ ಸಾವಿರ ಬರುವಂಥದೊಂದು 

ಹೊಸ ಯುಕ್ತಿಯಲ್ಲಿ ಹಾಕಿದ ದುಡ್ಡು ಹಾಳಾಗಿ ಹೋಗುವದೆ ? ಬಹಾದ್ದೂ 

ರನ (ಎದೆಗೆ ಕೈಹಚ್ಚಿಕೊಂಡು) ಶೋಧಕ್ಕೆ-ಜಾಣತನಕ್ಕೆ ಏನಾದರೂ ಬೆಲೆ 

ಇರುವದೋ ಇಲ್ಲವೋ ? ನೀನೆ ಹೇಳು. ” 


" ಈಗ ಮಾಡಿದಷ್ಟು ಶೋಧದಿಂದಲೇ ಮಣೆಯ ಮೇಲೆ ಕೂತು 

ಉಣ್ಣುವಷ್ಟು ದೇವರು ಕೊಟ್ಟಿದ್ದಾನೆ. ಹೆಚ್ಚಿನ ಹಣದ ಸುದ್ದಿ ನಮಗೆ 

ಬೇಡವೇ ಬೇಡ, ಹಿಂದೆ ಮಾಡಿದಷ್ಟೇ ಮುಂದೆ ಮಾಡುವದು, ನಿಮ್ಮ ಮೊದ 

ಲನೇ ಶೋಧವೇನು ಕಡಿಮೆ ಮಾಡಿತೆ ? ಅದರಿಂದಲೇ ಮನೆಮಾರು 

ಹಾಳಾಗಿ ಕೂಳು ಕೂಳೆಂದು ತಿರುಗಿ, ನಾಲ್ಕು ಜನರಿಗೆ ಹಾಕುವಂಥ 

ಕೈಯಿಂದಲೇ ಎರಡನೆಯವರಿಗೆ ಬೇಡಬೇಕಾದದ್ದು, ಹೂವು ಮಾರಿದ 

ಊರಲ್ಲಿ ಹುಲ್ಲು ಮಾರಬಾರದೆಂಬವರಿಂದಲೇ ಈ ಮುಂಬಯಿ ಸೇdಲಿಲ್ಲವೇ ? 

ಪ್ರೇಮಚಂದ ಶೇಟಜಿಯವರಲ್ಲಿ ಮೊದಲು ಹೋದಾಗ ನಿಮ್ಮ ಮೈಮೇಲೆ 

ಬಟ್ಟೆಗಳಾದರೂ ಗಟ್ಟಿಯಾದಂಥವಿದ್ದವೆ? ಪ್ರೇಮಚ೦ದರು “ನಿನ್ನನ್ನು ಕೆಲ 

ಸಕ್ಕೆ ಬಾ ಎಂದು ಹೇಳಿದ ದಿವಸ ನೀವೇ ಅಲ್ಲವೆ, ಅವರನ್ನು ದೇವರ 

ಸಮಾನರೆಂದು ಕರೆದು ಹಾರೈಸಿದವರು ? " 


"ನಿನ್ನ ಹಳೇ ರಗಳೆ ಸಾಕು ತೆಗಿ ! ಒಮ್ಮೆ ಯಾದರೂ ಉತ್ತೇಜನದ 

ಮಾತು ! ಈ ಹೆಂಗಸರನ್ನು ಯಾವ ದೇವರು ಹುಟ್ಟಿಸಿದ್ದಾನು ? ಸಹಾನು 

ಭೂತಿ ಯ ಸುದ್ದಿಯೇ ಇಲ್ಲ. ಇದಿಕೋ, ಈ ಸಾರೆ ಮಾತ್ರ ನನ್ನ ಕೆಲಸ 

ನನಗೆ ಚ-ನ್ನಾ- ಗಿ ಗೊತ್ತಿದೆ. ಈ ಹೊಸ ಶೋಧದಿಂದ ಹಣ ಬಂದ ಕೂಡಲೆ 

ಮೊದಲು ಕಟ್ಟಿಸುವದು ಮೂರುಪ್ಪರಿಗೆಯ ಮಹಾಲು ! ” ಶಾಂತಾದೇವಿಯು 

ತಲೆದೂಗಿದಳು, 


"ಈ ಕೋ, ಈ ಸಂಗತಿಯು ನಮ್ಮಿಬ್ಬರಿಗೇ ಗೊತ್ತಿರಲಿ. ಇಲ್ಲದಿದ್ದರೆ 

ನೆರೆಯವರನ್ನು ಮುಂದೆ ಕೂಡಿಸಿಕೊಂಡು ಚಂದಾಗಿ ಮಾತಾಡಿ ಬಿಟ್ಟೀ ! ಈ 

ಹಣ ಬಂದ ದಿನವೇ, ಒಂದು ' ಎಂಜನೀಯರಿಂಗ'ದ ಭವ್ಯವಾದ 'ಶಾಪ್' 

ತೆಗೆದುಬಿಟ್ಟೆನೆಂದೇ ತಿಳಿ, ಅಲ್ಲಿಂದ ದಿನಕ್ಕೊಂದರಂತೆ ಶೋಧವನ್ನು 

ತೆಗೆದುಕೊ, ರೊಕ್ಕದ ಸುರಿಮಳೆ!... ಯಾಕೆ ಮಾತಾಡಲೊಲ್ಲಿ ? ” 


" ಆದಷ್ಟು ಉಲ್ಲಾ ಸವೃತ್ತಿಯನ್ನು ತಾಳಿ ನಗೆಮೋರೆಯನ್ನು ಮಾಡಿ 

ಕೊಂಡು ಶಾಂತೆಯು ಅ೦ದದ್ದು: “ ಆಮೇಲೆ ಬಂದ ಲಾಭವೆಲ್ಲವೂ 

ನಿಮ್ಮದೇ ಅಲ್ಲವೆ ? " 


" ಅರ್ಥಾತ್ !'' ತುಸು ಕಾಲೂರಿ ನಿಂತ ಕೂಡಲೆ, “ಈ ಪ್ರೇಮಚಂದನ 

ಸಮಾಚಾರವನ್ನು ತೆಗೆದುಕೊಳ್ಳೋಣಂತೆ, ಇವನು ಅರಿವೆ ಕಚ್ಚಿಕೊಂಡು 

ಬಿಕ್ಕೆ ಬೇಡದಿದ್ದರೆ ನನ್ನ ಹೆಸರೇ ಅಲ್ಲ ! ” 


" ಛೇ, ಆ ಮಾತೇ ಸಾಕು ! ಮಾತಾಡಿದಂತೆ ನೀವು ಎಂದಿಗೂ 

ಮಾಡಲಿಕ್ಕಿಲ್ಲ ಇಷ್ಟು ಸೇಡು ತೀರಿಸಿಕೊಳ್ಳುವ ಬುದ್ದಿಯು ನಿಮ್ಮಲ್ಲಿ ಹುಟ್ಟು 

ವಂತೆ ಅವನೇನು ಮಾಡಿಯೂ ಇಲ್ಲ.... ” 


" ನೀನೂ ಅವನ ಕೈವಾಳ ತೆಗೆದುಕೋ ಬೇಕಾದರೆ ! " 


"ನಿಜವೆಂದಾರು ಯಾರದರೂ ! ಅವನ ಉಚ್ಛ್ರೇಯವೇ. ನಿಮ್ಮ 

ಮನಸ್ತಾಪಕ್ಕೆ ಕಾರಣವಾದ್ದರಿಂದ ನನ್ನ ನಷ್ಟವನ್ನು ಕಂಡು ಮಾತ್ರ ನಾನು 

ಅವನನ್ನು ಹಳಿಯುವೆನಲ್ಲದೆ, ನಿಮ್ಮ ಕೂಡ ಅವನು ಅನ್ನುವಷ್ಟು, ಅನ್ಯಥಾ 

ಚರಣೆ ಯ ಬಳಿಸಿಲ್ಲವೆಂಬುದನ್ನು ನಾವು ಬೇಕಾದಲ್ಲಿ ಹೇಳೇನು. ಇಡೀ ನಷ್ಟದ 

ಭಾರವನ್ನೇ ಅವನು ಹೊತ್ತು ಕೊಂಡನಲ್ಲ...?' ಅವಳು ನಡುವೇ ಸ್ವರ ತಗ್ಗಿಸಿ 

ದಳು. "ಹೀಗ್ಯಾಕೆ ನೋಡುವದದು ? ನೋಡಿದರೆ ಅಂಜಿಕೆಯೇ ಬರುತ್ತ 

ದಲ್ಲ ! ” ಎಂದು ಶಾಂತೆಯು ಚಟ್ಟ ಚೀರಿದಳು. 


ಯಶೋಧರನು ಅಡಬಡಿಸಿಕೊಂಡೆದ್ದು ಕಾಲು ಅಪ್ಪಳಿಸುತ್ತ ಬಾಗಿ 

ಲದ ಕಡೆಗೆ ಹೋದನು. ಇವನ ಈ ಗದ್ದರಿಕೆಯನ್ನು ಕಂಡು ಶಾಂತೆಯು 

ತನ್ನ ಎರಡೂ ಕೈಗಳಿಂದ ಕಣ್ಣೇ ಮುಚ್ಚಿಕೊಂಡಳು. ಬಾಗಿಲ ಚಿಲಕವನ್ನು 

ಅವನು ಹೇಗೋ ತೆಗೆದನು, ಬಾಗಿಲಿಂದ ಹಿಂದಿರುಗಿ ಅವನಂದದ್ದು 

" ಇನ್ನೊಮ್ಮೆ ಹೀಗೆ ಮಾತಾಡು ಅಂದರೆ ಹೇರುತ್ತೇನೆ ! ತಿಳಿಯಿತೆ , ಪೂರಾ 

ಬುದ್ದಿಗಲಿಸಿಬಿಟ್ಟಿತು. ಪ್ರೇಮ ಚಂದನಿಂದ ನನಗೆ 'ನ್ಯಾಯ' ದೊರೆಯ 

ಲಿಕ್ಕೇ ಬೇಕು, ನಿನ್ನ ಮನಸಿಗೆ ಬರಲಿ, ಬರದಿರಲಿ ನಲಿಗೆಗೆ ಕೀಲಿ ಮಾತ್ರ 

ಕೊಡುತ್ತಿರಬೇಡ ! ” ಎಂದವನೇ ಆ ತಾಮಸಿಯು ಉರಿಗಣ್ಣಿನಿಂದ ಬೆಂಕಿ 

ಯನ್ನೆ ಬೀರುತ್ಯ ಬೀದಿಬಿದ್ದು ವಡೆದನು. 


ಅವನು ಹೋದ ಎಷ್ಟೋ ಹೊತ್ತಿನವರೆಗೂ ಶಾಂತೆಯ ನಿಶ್ಚೇಷ್ಟ 

ಳಂತೆ ಕೂತಲ್ಲಿಯೇ ಕೂತಿದ್ದಳು. ಅವಳು ಕಣ್ಣೀರು ಸುರಿಸಲಿಲ್ಲ; ಅಳುತ್ತ 

ಕೂಡುವ ಹಾದಿ ಹಿ೦ದಾಗಿತ್ತು. ಅವಳ ಪ್ರಾಯ ಸೌಂದರ್ಯಗಳು ಕಂದಿ 

ಹೋಗಿದ್ದವು. ಶರೀರವು ಉಪವಾಸ ವನವಾಸಗಳಿಂದ ಸೊರಗಿ ಬೆಂಡಾ 

ಗಿತ್ತು. ಮನಸ್ತಾಪಕ್ಕಂತೂ ಮೇರೆಗೆ: ಇಲ್ಲದಾಗಿತ್ತು. ಪ್ರೀತಿತರುವಿನಲ್ಲಿದ್ದ 

ಆಶಾತಂತುವು ಈಗೋ ಇನ೦ದು ಗಳಿಗೆಗೊ, ಎಂಬಂತೆ ಕಾಣಿಸಹತ್ತಿತು. 

ಈ ಸ್ಥಿತಿಯಲ್ಲಿ ಎಲ್ಲ ಸಂಕಟಗಳಿಗೂ ಆದ್ಯ ಮಂತ್ರಿ ಕನಾದ ಪರಮೇಶನನ್ನೇ 

ಎಲ್ಲರೂ ಮೊರೆ ಹೋಗುವಂತೆ ಇವಳೂ ಅವನನ್ನೇ 2 'ರಕ್ಷ ರಕ್ಷ ' ಎಂದು 

ಧಾವಿಸಿ ಶರಣುಹೋದಲ್ಲಿ ಆಶ್ಚರ್ಯವೇನು ? ತನ್ನ ಪ್ರೀತಿಯ ಪತಿಯನ್ನು 

ಈ ಸಂಕಟಪರಂಪರೆಯಲ್ಲಿ ಕಾಯು ತನ್ನನ್ನು ಸಲುಹಿಕೊಳ್ಳಬೇಕೆಂದು 

ಅವಳು ಪ್ರಾರ್ಥಿಸಿದಳು. ಕೈ ಮೀರಿದ ಕಾಲಕ್ಕೆ ಇ೦ಥ ಪ್ರಾರ್ಥನೆಗಳ ಫಲವು 

ಎಷ್ಟು ಜನರಿಗೆ ದೊರತಿರುವದು ? ತಮ್ಮ ಪತಿಗಳ ಆಯುಷ್ಯವನ್ನು , ಅ೦ತ್ಯ 

ಕಾಲದಲ್ಲಿ ಅನ್ಯೋನ್ಯಭಾವದಿಂದ ಬೇಡಿಕೊಂಡವರೆಷ್ಟು ಯುವತಿಯರು 

ಸುವಾಸಿನಿಯರಾಗಿ ಉಳಿದರು ? ಈ ಪ್ರಾರ್ಥನೆಯಲ್ಲಿಯೇ ದೋಷವೋ ? 

ಇಲ್ಲವೆ ಆ ಕೊಡಗೈ ದೊರೆಯೇ ಅಸಮರ್ಥನೋ ? 

* * *

ಆ ದಿವಸ ಮಧ್ಯಾನ್ಹದ ನಂತರ ಯಶೋಧರನು ಕಾರಖಾನೆಗೆ ಹೋಗ 

ಲಿಲ್ಲ. ಪಟ್ಟಣದಲ್ಲಿ ಭ್ರಮಿಷ್ಟನಂತೆ ಒಂದೆರಡು ಮೈಲುಗಳ ವರೆಗೆ ತಿರುಗಾಡಿ 

ಸಮುದ್ರ ದಂಡೆಯ ಮೇಲೆ ಕುಳಿತು ಸದ್ಯಕ್ಕೆ ತಾನು ಕೂಳುಗೇಡಿಯಾದದ್ದು .

ಕೇವಲ ಪ್ರೇಮಚಂದನ ಕಪಟಾಚರಣೆಗಳಿಂದಲೇ ಅಲ್ಲದೆ, ಹೀಗಾಗುವದಕ್ಕೆ 

ತಾನು ಯಂಚಿತ್ತಾದರೂ ತಪ್ಪುಗಾರನಲ್ಲವೆಂದು ನಿಶ್ಚಯಿಸಿಕೊಂಡನು. ಈ 

ನಿಶ್ಚಯವಾದನಂತರ ಭವಿಷ್ಯತ್ಕಾಲದ ಭವಿಷ್ಯದ ಭವಣಿಯನ್ನು ಏನು ಹೇಳ 

ಬೇಕು? 'ನ್ಯಾಯ ನ್ಯಾಯ' ವೆಂಬ ಕನವರಿಕೆಯನ್ನು ಬಿಟ್ಟು ಇನ್ನೊಂದನ್ನು 

ಇವನು ಹಿಂಬಾಲಿಸುವ ಜಂಬರಕ್ಕೆ ಬಿದ್ದಾನೆಂಬ ಆಶೆಯೇ ಉಳಿಯಲಿಲ್ಲ. 

ಸಂಧ್ಯಾಕಾಲವಾಗುತ್ತಲೇ ಆರನಿದ್ದೆಯೊಳಗಿದ್ದವನಂತೆ ಕುಳಿತಿದ್ದ ಯಶೋ 

ಧರನು ತಟ್ಟನೇ ಎದ್ದು ಮತ್ತೆ ಹಾದೀ ಹಿಡಿದನು, ಅತ್ತಿತ್ತ ತಿರುಗಾಡುವಷ್ಟ 

ರಲ್ಲಿ ಫಕ್ಕನೆ ನೆನಪಾಗಿ-ತಾನು ದಿನಾಲು 'ಆಡ್‌ವ್ಹೊಕೇಟ' ವನ್ನು ಸಂಜೆಗೆ 

ತಪ್ಪದೆ ತೆಗೆದುಕೊಳ್ಳುವ ಪ್ರಘಾತವು ಇಂದೇಕೆ ಮುರಿದೆನೆಂಬದಾಗಿಯೋ 

ಏನೋ,- ಆ ವೃತ್ತ ಪತ್ರದ ಆಫೀಸಿನ ಕಡೆಗೆ ನಡೆದನು, ಹೋದವನೇ 

ಒಂದಾಣೆ ಕೊಟ್ಟು, ಆಡ್‌ವ್ಹೋಕೇಟನ್ನು ತೆಗೆದುಕೊಂಡು, ಆತ ಎಲ್ಲಿಯೂ 

ಹೋಗದೆ 'ಬ್ಯಾಂಕುಗಳ' ಸುದ್ದಿಯನ್ನು ಓದಹತ್ತಿದನು. ಒಂದೆರಡು ನಿಮಿಷ 

ಗಳಲ್ಲಿ ............ ಬ್ಯಾಂಕಿನ ನಷ್ಟಚರ್ಯವು ............ ಕೋಟಿ ರೂಪಾಯಿ 

ಗಳಷ್ಟು ! ಬ್ಯಾಂಕಿನಲ್ಲಿ ಹಣವಿಟ್ಟವರಿಗೆ ರೂಪಾಯಿಯಲ್ಲಿ ನಾಲ್ಕಾಣೆಯಂತೆ 

ಸಿಗುವದು ! ಇದೆಲ್ಲವನ್ನೂ ಒಂದೇ ಒಂದು ನಿಮಿಷದಲ್ಲಿ ಓದಿಕೊಂಡವನೇ 

ಗಕ್ಕನೆ ನೆಲಕ್ಕೆ ಕೂತನು, ಇನ್ನೆಲ್ಲಿಯ ಶೋಧ ? ಇನ್ನೆಲ್ಲಿಯ ಲಾಭದಾಸೆ ? 

ಎಂದು ನುಡಿಯಲ್ಲಿಯೇ ನುಡಿದದ್ದಷ್ಟೇ ಮಾತ್ರ. ಹಾಗೆಯೇ ತೊಡಕಾಲು 

ಹಾಕುತ್ತ ಹತ್ತರದಲ್ಲಿಯೇ ಇದ್ದ 'ಶಕ್ತಿ- ಶಾಂತಿಗೃಹ' ವನ್ನು ಹೊಕ್ಕನು. ಹಗ 

ಲೆಲ್ಲ ಶ್ರಮಪಟ್ಟು ಸಾಯಂಕಾಲಕ್ಕೆ ಶ್ರಮನಿವಾರಣಾರ್ಥವಾಗಿ ಮಾದಕ 

ಪದಾರ್ಥಗಳನ್ನು ಸೇವಿಸುವದು ಕಾರಖಾನೆಗಳಲ್ಲಿಯ ಸಾಧಾರಣ ತರಗತಿಯ 

ಜನರ ಪರಿಪಾಠವು, ಅದರ ದುಷ್ಪರಿಣಾಮದಲ್ಲಿ ಲಕ್ಷ್ಯವಿಟ್ಟು ಅದರಿಂದ 

ದೂರಿರುವ ಜನರು ತೀರ ಕಡಿಮೆಯೆಂದರೂ ಸಲ್ಲುವದು, ಇರಲಿ, ಯಶೋ 

ಧರನು ಈ ಜನರ ಕೂಡಾಗಲೀ, ತಾನೊಬ್ಬನೆಯಾಗಲೀ ಇದುವರೆಗೆ ಈ 

'ಗೃಹ'ಗಳನ್ನಾಶ್ರಯಿಸಿದವನಲ್ಲ. ಆದರೆ ವಿಪರೀತ ಕಾಲಕ್ಕೆ ವಿನಾಶಬುದ್ದಿಯೇ 

ಮೇಲು, ಅಲ್ಲಿ ಒಂದೆರಡು ಪಾತ್ರೆ ತುಂಬ ಹಾಕಿಕೊಂಡವನೇ ಮೂರು ತಾಸು 

ರಾತ್ರೆ ಯ ಸುಮಾರಕ್ಕೆ ಮನೆಗೆ ಬಂದನು. ಬಂದಕೂಡಲೆ ದೊಡ್ಡ ಧ್ವನಿ 

ತೆಗೆದು ಅಳಹತ್ತಿ ' ನಾವು ಪುಟ್ಟಪೂರಾ ಮುಳುಗಿದೆ' ವೆಂದು ಹೆಂಡತಿಗೆ ಹೇಳಿ 

ದನು. ಮತ್ತೆ ಅಳುವದು; ಮತ್ತೆ ಅದೇ ಸುದ್ದಿ. ಯಾಕೆಂದರೆ ಉತ್ತರವಿಲ್ಲ. 

ಹಿಂದೆ ಆದದ್ದನ್ನೆಲ್ಲ ಮರೆತು, ಇಲ್ಲವೆ ಅದನ್ನು ಪ್ರಸ್ತುತಕ್ಕೆ ಮುಚ್ಚಿಕೊಂಡು, 

ಶಾಂತೆಯು ಮಮತೆಯಿಂದ, ಏನೂ ಚಿಂತೆಯಿಲ್ಲೆ೦ದು ಹೇಳಿ ಅವನನ್ನು 

ಸಮಾಧಾನಗೊಳಿಸಬೇಕೆಂದು ಪರಿಪರಿಯಿಂದ ಯತ್ನಿಸಿದಳು. ಮೊದಲಿನಂತೆ 

ಮಾಡದೆ ಇನ್ನು ಮುಂದೆ ಜಾಗ್ರತೆಯಿಂದ ಕೆಲಸ ಮಾಡಿದರೆ ತಮಗೇನೂ 

ಕೊರತೆಯಿಲ್ಲೆ೦ದೂ ಮತ್ತಿನ್ನೂ ಎಷ್ಟೋ ಬಗೆಯಿಂದ ಅವನಿಗೆ ಉತ್ತೇಜನ 

ಬರಲೆಂದು ಸಾಯಾಸಪಟ್ಟಳು. ಬರಬರುತ್ತ ಯಶೋಧರನು, ಪ್ರೇಮಚಂದ 

ನನ್ನು ಶಾಪಿಸುವದಕ್ಕೂ, ಅವನನ್ನು ನುಚ್ಚುನೂರಾಗಿ ಕಡಿದುಹಾಕುವ 

ನೆಂದೂ, ತನ್ನ ನಾಶಕ್ಕೆ ಅವನೇ ಕಾರಣನೆಂದೂ ನಾನಾಪರಿಯಿಂದ ಬೈದಾಡಿ 

ತಾಳಬಿಟ್ಟನು. ಈ ಆಕ್ರೋಶವನ್ನು ಕಂಡು, ಮನೆಯಲ್ಲಿ ಒಬ್ಬಳೇ ಒಬ್ಬ 

ಳಾದ ಶಾಂತೆಯ ಗತಿ ಏನಾಗಿದ್ದೀತೆಂಬದು ಇಂಥ ಪ್ರಸಂಗಗಳನ್ನು 

ಕಂಡು, ಕೇಳಿ, ಅನುಭವಿಸಿದವರಿಗೇ ಗೊತ್ತು. 


ಕೊನೆಯಲ್ಲಿ ಶಾಂತೆಯು ಸಾಮೋಪಚಾರಗಳಿಂದ ತನ್ನ ಗಂಡನು 

ಹಾದಿಗೆ ಬರುವದಿಲ್ಲೆಂದು ಪತಿವ್ರತೆಯರ ಪರಮ ಸಾಧನವಾದ ಮೌನವ್ರತ 

ವನ್ನವಲಂಬಿಸಿ ಒಟ್ಟಿಗೆ ಸ್ವಸ್ಥ ಕುಳಿತುಬಿಟ್ಟಳು. ಸುಮ್ಮನೇ ಕೂತದ್ದು 

ಸಹನವಾಗದೆ ಯಶೋಧರನು "ನಾನು ಸತ್ತ ಮೇಲೆ ಹೀಗೆ ಕೂಡ್ರುವದು 

ನಿನ್ನ ಪಾಲಿಗೆ ಇಟ್ಟಿದ್ದೇ, ಜೀವದಿಂದಿರುವಾಗಲೇ ಹೀಗೆ ಅಪಶಕುನಗಳನ್ನು 

tಬಗೆಯುವಿಯಾ?” ಎಂದವನೇ ಕೈಲೊಂದು ಕಾಲಿಲೆರಡು ಕೊಟ್ಟು, “ಪ್ರೇಮ 

ಚಂದ, ಇದೆಲ್ಲ ನಿನ್ನ ಸಲುವಾಗಿ! ನಾನು ಮನೆಮುದುಕೊಂಡದ್ದು ನಿನ್ನ 

ದೆಸೆಯಿಂದ | ನೀವು ಧನವಂತರೆಲ್ಲರೂ ಗಂಟಿಚೋರರ ಕಿಂತಲೂ ರಕ್ಷ ರು ! 

ನಾನು ದುಡಿಯಬೇಕ೦ತೆ, ನನ್ನ ಶ್ರಮದ ಫಲವು ಕೇವಲ ಹಣವಂತನೆಂದೇ 

ಇವನ ಮನೆ ಸೇರಬೇಕ೦ತೆ ! ತಲೆಯಲ್ಲಿ ನೋಡಿದರೆ ಮರು ಬೊಗಸೆ 

ಮಣ್ಣು ! ಯಶೋಧರಾ, ನೀನಂತೂ ಎಲ್ಲ ನಾಚಿಕೆಯನ್ನೂ ಬಿಟ್ಟಿ” ಎಂದು 

ಅ೦ದುಕೊ೦ಡ ವನೇ ಮತ್ತೆ ಮನೆಯ ಹೊರಗೆ ಬಿದ್ದನು, 


೪ 

ಮರುದಿನ, ಮಾರನೆಯ ದಿನ, ಕಾರಖಾನೆಗಳಲ್ಲಿ ನೌಕರರು ಒಮ್ಮೆಲೆ 

ಕೆಲಸ ಬಿಟ್ಟು ಕೊಡುತ್ತಾರೆಂಬ ಸುದ್ದಿಯೇ ಘನ ಸುದ್ದಿ, ಯಶೋಧರನ 

ಪಂಗಡಕ್ಕೆ ಈ ಕಾಲದಲ್ಲಿ ಕೆಲವರು ಸೇರಿಕೊಳ್ಳುವದೇನೂ ದೊಡ್ಡ ಮಾತಲ್ಲ. 

ಕೆಲವರು, ಇದೇನೋ ಮೋಜಿನ ಸುಗ್ಗಿಯೆಂದು, ಕೆಲವರು ಆತ್ಮಪ್ರೌಢಿಗಾಗಿ, 

ಇನ್ನುಳಿದವರು ಹಲವೊಂದು ಕಾರಣದಿಂದ ಮನಸಿಲ್ಲದಿದ್ದರೂ ಬೆಂಕಿಬಿದ್ದ 

ಲ್ಲಿಗೆ ಜನವು ಓಡಿ ನೆರೆಯುವಂತೆ ಯಶೋಧರನ ಬೆನ್ನು ಹತ್ತಿರುವರೆಂಬ 

ವಾರ್ತೆಯು ಪ್ರೇಮಚಂದನ ಕಿವಿಮುಟ್ಟಿತು. ತಕ್ಕಡಿಯ ಹೊಯಿಲು ತಿಳಿದು 

ಕೆಲಸ ಸಾಧಿಸುವದಂತೂ ಮಾನವರ ಸ್ವಭಾವವು. ಕಡೆತನಕ ಯಶೋಧರನ 

ಬೆನ್ನು ಕಟ್ಟಿ ಬಾಳುವವರು ತೀರ ಕಡಿಮೆ ಜನ, 'ಈ ವಾರ್ತೆಯನ್ನು ಕೇಳಿ, 

ಪ್ರೇಮಚಂದನು ಯಶೋಧರನನ್ನು ಹೇಗಿದ್ದಂತೆ ತನ್ನಲ್ಲಿಗೆ ತರಹೇಳಿ ಕೆಲವು 

ಆಳುಗಳನ್ನೂ ವೃದ್ದ ಗುಲಾಬಚಂದನನ್ನೂ ಕಳುಹಿಸಿದನು. ಗುಲಾಬ 

ಚಂದನು - "ಧನಿಯರೇ, ಅವನಿಂದೇನೂ ಆಗುವಂತಿಲ್ಲ, ಸುಮ್ಮನೆ ಯಾಕೆ 

ಅವನ ಪ್ರಸ್ಥ ಬೆಳಿಸುವಿರಿ ? ” ಎಂದು ಗುಣಗುಡುತ್ತಲೇ ಒಳ್ಳೇದೆಂದು ಆವ 

ನನ್ನು ಹಿಡಿದು ತಂದನು. 

* * * *

ಯಶೋಧರನು ಪರಮೋದಾರನಾದ ಪ್ರೇಮಚಂದನೆದುರಿಗೆ ಬಂದು 

ನಿಂತಾಗ ಆ ಉಚ್ಛವ ಮೂರ್ತಿಯ ಸ್ವರೂಪವನ್ನು ಬಣ್ಣಿಸಲು ಬಾಣಕವಿ 

ಯಷ್ಟು ಚಾತುರ್ಯವೂ ಶಬ್ದ ಸಂಗ್ರಹವೂ ಬೇಕು, ಯಶೋಧರನನ್ನು ಕಂಡ 

ಕೂಡಲೆ, ಪ್ರೇಮಚಂದನು, ಹೊಟ್ಟೆಯ ಮಕ್ಕಳು ಅಡ್ಡದಾರಿ ಹಿಡಿದರೆ 

ತಂದೆಯು–ತಾಯಿಯು-- ವಾತ್ಸಲ್ಯದಿಂದ ಪುನಶ್ಚ ಅವರನ್ನು ತೀಡಿತಿದ್ದಿ 

ಹಾದಿಗೆ ತರುವದಕ್ಕಾಗಿ ಶ್ರಮಪಡುವಂತೆ ಉತ್ಸುಕತೆಯಿಂದ ಯಶೋಧರ 

ನನ್ನು ಪ್ರೇಮದಿಂದ ಹತ್ತರ ಕುಳ್ಳಿರಿಸಿಕೊಂಡು ಅ೦ದದ್ದು: “ಯಶೋಧರಾ, 

ನೀನು ನಿಜವಾಗಿಯೇ ಯಶಸ್ಸನ್ನು ಹೊಂದತಕ್ಕವನು. ನೀನು ಸಾಮಾನ್ಯ 

ನಲ್ಲ. ನಿನ್ನ ತಲೆಯಲ್ಲಿ ಈ ದುರಾಶೆ ಯಾಕೆ ಸೇರಿತು ? ಇವರಿಂದ ಯಾರೂ 

ಮುಂದಾಗಿಲ್ಲ. ಬುದ್ದಿವಂತರಿಗೆ ಈ ಪರಿಯ ಶಾಪವೋ ಹೇಗೆ ? ಈಗ ಈ 

ನಾಲ್ಕು ಸಾವಿರದ ಹುಂಡಿಯು ನಿನ್ನದು, ನಿನ್ನ ಶೋಧದ ಸ್ವಾಮಿತ್ವವು 

ಎಂದೋ ನಿನ್ನ ಲೆಕ್ಕಕ್ಕೆ ಬರೆಯಿಸಿದ್ದೇನೆ. ಇದನ್ನು ತಕ್ಕೊಂಡು, ನೀನು 

ನನ್ನಲ್ಲಿ ಬಂದಾಗ ಯಾವ ಬಗೆಯಿಂದ ಕೆಲಸ ಮಾಡುತ್ತಿದ್ದಿಯೋ ಹಾಗೆಯೇ 

ಸಾಗಿಸು, ನಿನ್ನಿಂದ ನನಗೆ ನಿಜವಾಗಿಯೇ ಲಾಭವಿದೆ. ಆದರೂ ಲಾಭಕ್ಕೆ 

ಪಾಲುಗಾರರು ಬಹುಜನರು, ನೀವೆಲ್ಲರೂ ನನ್ನ ಪಾಲುಗಾರರಲ್ಲವೆ ?" 

ಎಂದು ಯಶೋಧರನ ಗದ್ದ ಮುದ್ದಾಡಿ ಹೇಳಿದರೂ ಮದ್ದುತಿಂದ ಜನಕ್ಕೆ 

ಮೂರು ಬುದ್ದಿಯೆಂಬದು ಸುಳ್ಳಾದೀತೆ ? : ಈ ನಾಲ್ಕು ಸಾವಿರವನ್ನು 

ನಿಮಿಷದಲ್ಲಿ ಗಳಿಸುವ ಸಾಮರ್ಥ್ಯವು ನನ್ನಲ್ಲಿ ಇಲ್ಲವೆಂದು ತಿಳಿದು ಬಿಕ್ಕೆ 

ಬೇಡುವವನಿಗೆ ಬೊಗಸೆ ಕಾಳು ನೀಡುವಂತೆ ಮಾಡುವಿಯಲ್ಲ ! ” ಎಂದು 

ಯಶೋಧರನು ಆ ಹುಂಡಿಯನ್ನು ಚರಚರನೆ ಹರಿದು ಕಾಲಿಲೊದು ಈಡಾಡಿ 

ಬಿಟ್ಟ ನು, ಪ್ರೇಮಚಂದನು ಮತ್ತೆ ಸಮಾಧಾನದಿಂದ "ನಾನು ಈಗಿಂದೀಗ 

ಡಾಕ್ಟರನನ್ನು ಕರೆಯಿಸುವೆನು; ನಿನಗೇನೋ ಆಗಿದೆ '' ಎ೦ದು ಅನ್ನುವಷ್ಟರ 

ಲ್ಲಿಯೇ, ಯಶೋಧರನು ಕಿಸೆಯೊಳಗಿನ ರಿವಾಲ್ವರನ್ನು ಹಾರಿಸಿದನು. ತಿಳಿ 

ಗೇಡಿಯು ಎಲ್ಲಿ ಹಾರಿಸಿದನೋ, ಅದರಿಂದ ಅಪಾಯವೇನೂ ಆಗಲಿಲ್ಲ. 

ಆದರೆ ಆ ಸಪ್ಪಳವನ್ನು ಕೇಳಿ ಕಾರಖಾನೆಯೊಳಗಿನ ಜನರು ಒಟ್ಟಾಗಿ ಅವನ 

ನ್ನೇನು ಮಾಡಿದರೋ, ಇಲ್ಲವೆ ಅವನೇ ಸುಕುಮಾರಿಯಾದ ಶಾಂತೆಯ ಚಿಂತೆ 

ಯಿಲ್ಲದೆ ವಿಧಿವಶನಾದನೋ ನಾವೇಶತಕ್ಕೆ ಹೇಳುವ ? 

==========================================

ಗೃಹವ್ಯವಸ್ಥೆ 


ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶ 

ನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದ 

ರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ 

ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯ ಅವಳ ಮಗಳಾದ ಲಲಿತಾ 

ಗೌರಿಯ ಹಿಂದಿನ ಸ್ಟೇಶನದಾರಭ್ಯ ಇಳಿಯುವದಕ್ಕಾಗಿ ವ್ಯವಸ್ಥೆ ಮಾಡಿಟ್ಟು 

ಕೊಂಡವರು ಬ೦ಡಿಯು ನಿಂತಕೂಡಲೆ ಲಗುಬಗೆಯಿಂದ ಕೆಳಗಿಳಿದರು. 

ತಮ್ಮನ್ನು ಊರಲ್ಲಿ ಕರಕೊಂಡು ಹೋಗಲಿಕ್ಕೆ ಯಾರಾದರೂ ಬಂದಿರು 

ವರೋ ಎಂದು ಅವರು ತುಸು ಹೊತ್ತು ಅತ್ತಿತ್ತ ನೋಡಿದರು. ಯಾರೂ 

ಬಂದಿದ್ದಿಲ್ಲ. 


"ಕೇಶವಭಟ್ಟರೆ, ( ಗತವಯಸ್ಕನಾದ ಬ್ರಾಹ್ಮಣನು ನಿರ್ಮಲಾ 

ಬಾಯಿಯವರ ಮನೆಯ ಆಶ್ರಿತನು ) ಪದ್ಮನಾಭನಾಗಲಿ, ಅವನ ಮನೆಯ 

ಸೇವಕನೊಬ್ಬನಾಗಲಿ, ಯಾರೂ ಬಂದಂತೆ ಕಾಣಿಸುವದಿಲ್ಲ. ಒಂದು 

ಬಾಡಿಗೆಯ ಗಾಡಿಯನ್ನು ಮಾಡಿಕೊಂಡು ಹೋಗೋಣ; ಇನ್ನೆಷ್ಟು ಹಾದೀ 

ನೋಡೋಣ ? " 

 

(ಪದ್ಮನಾಭರಾಯರಿಗೆ ಇನ್ನೂ ಸೂರ್ಯೋದಯವಾಗಿರಲಿಕ್ಕಿಲ್ಲ ! 

ಮೇಲೆ ಇಂಥ ಮಳೆ ! ಅವರು ನಮಗಾಗಿ ವ್ಯವಸ್ಥೆಯನ್ನಿಡುವರೆಂದು ತಿಳು 

ಕೊಳ್ಳುವದೇ ದಡ್ಡತನ ” ಎಂದು ಕೇಶವಭಟ್ಟರು ತಮ್ಮ ಅಭಿಪ್ರಾಯವನ್ನು 

ಹೇಳಿದರು.  


"ಅಂದರೇನು ಭಟ್ಟರೆ ? ಹುಡುಗನ ಮೈ ಯಲ್ಲಿ ಹೇಗಿದೆಯೋ 

ಏನೋ ಎಂದು ಬಾಯಿಯಲ್ಲಿ ಅಕ್ಕಿ ಕಾಳು ಹಾಕಿಕೊಂಡು ನಾವು ಧಾವಿಸಿ 

ಬಂದಿರಲು, ನಮ್ಮ ಜೀವಕ್ಕೆ ಸಮಾಧಾನವಾಗುವಂಥ ವರ್ತಮಾನವನ್ನು 

ಹೇಳಿ, ನಮ್ಮನ್ನು ಕರಕೊಂಡು ಹೋಗಲಿಕ್ಕೆ ಬಾರದಿರಲು ಪದ್ಮನಾಭನು 

ಕಿವಿಯಲ್ಲಿ ತುತ್ತು ಹಾಕಿಕೊಳ್ಳುತ್ತಾನೆನ್ನ ಬೇಕೆ ? ಇರಲಿ. ಬೇಗನೆ 

ಗಾಡೀ ಮಾಡಿಕೊಂಡು ಬನ್ನಿರಿ” ಎಂದು ನಿರ್ಮಲಾಬಾಯಿಯು ಚಿಂತಾ 

ಕುಲಳಾಗಿ ಹೇಳಿದಳು, 


ಪದ್ಮನಾಭರಾಯನು ಕಿಂಚಿತ್‌ ಸೋಮಾರಿಯಾಗಿದ್ದರೂ ಒಳ್ಳೆ 

ಬುದ್ದಿವಂತನಾದ ವಕೀಲನು. ತಿಂಗಳಾ ಇನ್ನೂರು ಇನ್ನೂರೈವತ್ತು 

ರೂಪಾಯಿಗಳು ಅವನಿಗೆ ಅವಿಚ್ಛಿನ್ನವಾಗಿ ಸಿಕ್ಕುತ್ತಿದ್ದವು. ಅವನಿಗಿಂತ 

ಕಡಿಮೆ ಬುದ್ದಿವಂತರಾದವರು ಪದ್ಮನಾಭನಿಗಿಮ್ಮಡಿಯಾದ ಪ್ರಾಪ್ತಿವಂತ 

ರಾಗಿದ್ದರೂ ಅವನಿಗೆ ಸಲ್ಲುತ್ತಿರುವ ಮರ್ಯಾದೆಯು ಸ್ಪೃಹಣೀಯವಾಗಿತ್ತು. 

ಪದ್ಮನಾಭರಾಯನು ಸ್ವಭಾವತಃ ಉದಾರನೂ, ಆಪ್ತರಿಷ್ಟಗೆ ಪ್ರಿಯನೂ, 

ಬಡವರಿಗೆ ದಯಾಲುವೂ ಆಗಿರುವದರಿಂದ ಅವನ ಮನೆಯ ವೆಚ್ಚಕ್ಕಿಂತಲೂ 

ಪ್ರಾಪ್ತಿ ಯು ಅಧಿಕವಾಗಿದ್ದಿಲ್ಲ, ಊರಲ್ಲಿ ಪ್ರಮಿತರಾದ ಜನರಿರತಕ್ಕ ಭಾಗ 

ದಲ್ಲಿ ನೋಡಲು ಪ್ರಶಸ್ತವಾದ ಮನೆಯನ್ನು ಅವನು ಕಟ್ಟಿಕೊಂಡಿದ್ದನು. 


ನಿರ್ಮಲಾಬಾಯಿಯ ಗಾಡಿಯು ಪದ್ಮನಾಭರಾಯರ ಮನೆಯ 

ಮುಂದೆ ಬಂದು ನಿಂತಿತು. ಮಗುವಿನ ಪ್ರಕೃತಿಯು ಇದ್ದಕ್ಕಿದ್ದಂತೆಯೇ 

ಇರುವದೆಂದು ಕೇಳಿ ಅವಳು ಬದುಕೆಲೆ ಜೀವವೇ ಎಂದು ಸಮಾಧಾನದ 

ಉಸುರ್ಗರೆದು ಗಾಡಿಯಿಂದಿಳಿದು ಒಳಗೆ ಬಂದಳು. ಅತ್ತಿಗೆಯವರು 

ಬಂದದ್ದು ಕಂಡು ಪದ್ಮನಾಭರಾಯರ ಪತ್ನಿಯಾದ ಯಮುನಾಬಾಯಿಯು 

ಸಂತೋಷವನ್ನು ತಾಳಿ 'ಬನ್ನಿರಿ' ಎಂದು ಸ್ವಾಗತವನ್ನಿಕ್ಕಿದಳು. 


ಮತ್ತೊಂದು ಮಾತಾಡದೆ " ರಂಗನ ಪ್ರಕೃತಿ ಹೇಗಿದೆ ? ” ಎಂದು 

ನಿರ್ಮಲಾಬಾಯಿಯು ಆತುರಳಾಗಿ ಕೇಳಿದಳು. 


ಹಾಂsssಗೆ ಮಲಗಿ ಕೊಂಡಿದ್ದಾನೆ ! ತಿಂಗಳ ದಿವಸ ಹಾಸಿದ 

ಹಾಸಿಗೆ ತೆಗೆದೇ ಇಲ್ಲ ! ” ಎಂದು ಯಮುನಾಬಾಯಿಯು ಹೇಳಿದ್ದು 

ಆಕ್ಷರಶಃ ನಿಜವಾಗಿತ್ತು. ಕತ್ತಲೆಮಯವಾದ ಕೋಣೆಯಲ್ಲಿ ರಂಗನು ನೆರ 

ಳುತ್ತೆ ಮಲಗಿದ್ದನು. ಮಗುವಿನ ಸ್ಥಿತಿಯನ್ನು ಚನ್ನಾಗಿ ನೋಡಬೇಕೆಂದು 

ಕಿಟಿಕೆಗಳನ್ನು ತೆಗೆಸಿದರು. ಗಜ್ಜರೆಯ ತುಂಬಿನಂತೆ ಪುಷ್ಟಾಂಗನಾಗಿರುವ 

ರಂಗಣ್ಣನು ಅಸ್ಥಿ ಪಂಜರನಾಗಿದ್ದನು. ತೇಜಸ್ಸಿನಿಂದ ಉಕ್ಕುತ್ತಿರುವ ಅವನ 

ಮುಖವು ಗಂಜಿಯನ್ನು ಹಸಿದಂತೆ ಬೆಳ್ಳಗಾಗಿ ಹೋಗಿತ್ತು. 


" ಅತ್ಯಾ ಬಂದಿರುವಳಲ್ಲ ! ” ಎಂದು ರಂಗನು ಒಣಗಿ ಸಂಡಿಗೆಯಾ 

ಗಿದ್ದ ತನ್ನ ಮುಖದಲ್ಲಿ ಕಿಂಚಿತ್ ನಗೆ ತಾಳಿ ಕೇಳಿಸಿತೋ ಇಲ್ಲವೋ ಎಂಬಷ್ಟು 

ಸಣ್ಣ ಧ್ವನಿಯಿಂದ ನುಡಿದನು. 


" ಹೇಗಿದೆ ಅಪ್ಪು ರಂಗಣ್ಣಾ? ” ಎಂದು ರಂಗನ ಸೋದರತ್ತೆಯಾದ 

ನಿರ್ಮಲಾಬಾಯಿಯವರು ಆ ಬಾಲಕನ ಮೈ ಮೇಲೆ ಕೈ ಆಡಿಸಿ ಪ್ರೇಮದಿಂದ 

ಕೇಳಿದಳು. 


" ಚಳಿಜ್ವರ ಬರುತ್ತವೆ. ತಿಂಗಳಾಯಿತು ನಿಂತಿಲ್ಲ. ಡಾಕ್ಟರನ 

ಔಷಧ ಕುಡಿದು ಕುಡಿದು ವಾಕರಿಕೆ ಬಂದು ಹೋಗಿದೆ ! ” ಎಂದು 

ರಂಗನಂದನು. 


ನಡುಮನೆಯಲ್ಲಿರುವ ಬೇರೊಂದು ಪ್ರಶಸ್ತವಾದ ಕೋಣೆಯನ್ನು 

ತೆರವು ಮಾಡಿ ನಿಮ್ಮಲಾಬಾಯಿಯು ಚನ್ನಾಗಿ ಉಡುಗಿ ಲೋಬಾನ ಗುಗ್ಗುಳ 

ಗಳ ರೂಪವನ್ನು ಹಾಕಿ, ಅಲ್ಲಿ ಸ್ವಚ್ಛವಾದ ಹಾಸಿಗೆ ಹಾಸಿ ರಂಗನ ಕೈ 

ಹಿಡಿದು ಕರೆತಂದು ಅಲ್ಲಿ ಮಲಗಿಸಿದಳು. ಅವನ ಮೈಮೇಲಿದ್ದ ಹೊಲಸಾದ 

ಬಟ್ಟೆಗಳನ್ನು ತೆಗೆದು ಒಗೆದ ಬಟ್ಟೆಗಳನ್ನು ತೊಡಿಸಿದಳು, " ಅತ್ಯಾ, ಇಲ್ಲಿ 

ಬಹಳ ಚನ್ನಾಗಿದೆ ನೋಡು ! ” ಎಂದು ರಂಗನು ತನ್ನ ಹೊಸ ಸ್ಥಳವನ್ನು 

ಕಂಡು ಸಂತುಷ್ಟನಾಗಿ ನುಡಿದನು. 


ಪದ್ಮನಾಭರಾಯನು ಹತ್ತು ಗಂಟೆಯ ಸಮಯಕ್ಕೆ ಹೊರಗಿಂದ 

ಬಂದನು. ನೋಡುತ್ತಾನೆ, ಮನೆಯಲ್ಲಿ ವಿಪರೀತವಾಗಿ ಸ್ವಚ್ಛವಾಗಿತ್ತು. 

ಡಾಕ್ಟರನ ಕಡೆಯಿಂದ ಅವನು ಮಗನಿಗಾಗಿ ಔಷಧ ಬಾಟಲಿ ( ಕುಪ್ಪೆ) 

ಯನ್ನು ತಂದಿದ್ದು ಅದನ್ನು ತೆಗೆದುಕೊಂಡು ರಂಗನ ಕೋಣೆಗೆ ಹೋದನು. 

ಅವನು ಅಲ್ಲಿದ್ದಿಲ್ಲ. ಬೇರೊಂದು ಕೋಣೆಯಲ್ಲಿ ಅವನು ವ್ಯವಸ್ಥಿತನಾಗಿ 

ಮಲಗಿದ್ದು ಕಂಡು ಬಹು ಸಂತುಷ್ಟನಾಗಿ "ಇದನ್ನೆಲ್ಲ ಯಾರು ಮಾಡಿದರು 

ರಂಗಾ ? ” ಎಂದು ಅವನು ಕೇಳಿದನು, 


" ನಿರಮಕ್ಕೆ ಅತ್ಯಾ ಬಂದಿರುವಳಲ್ಲ! ಅವಳೇ ಮಾಡಿದಳು. ” 


"ಎಲ್ಲಿ ಇದ್ದಾಳೆ ? ” ಎಂದವನೇ ಪದ್ಮನಾಭನು ಅಕ್ಕನನ್ನು ಕಾಣು 

ವದಕ್ಕಾಗಿ ಒಳಗೆ ಹೋದನು, ನಿರಮಕ್ಕನು ಅಡ ಕಲ ಕೋಣೆಯಲ್ಲಿ 

ಬಗೆಬಗೆಯ ಧಾನ್ಯಗಳು ಒಂದಕ್ಕೊಂದು ಕೂಡಿ ನೆಲದಮೇಲೆಲ್ಲ ಬಿದ್ದು 

ಕೆಟ್ಟು ಹೋಗುತ್ತಿದ್ದವನ್ನು ಬಳಿಬಳಿದು ಬುಟ್ಟಿಗಳಲ್ಲಿ ತುಂಬಿಡುತ್ತಿದ್ದಳು. 


"ನಿರಮಕ್ಕಾ, ಯಾವಾಗ ಬಂದೆ ? ಬರುವದಾದರೆ ಪತ್ರವನ್ನಾದರೂ 

ಹಾಕಿ ಬರಬೇಕಾಗಿತ್ತು, "  


" ಈಗ ಬಂದಿರುವೆನಲ್ಲ ! ” ಎಂದು ನಿರಮಹ್ಯನ ತಮ್ಮನ ಮುಖ 

ವನ್ನು ನೋಡಿ ಸಂತೋಷದಿಂದ ನಕ್ಕಳು 


"ಇದೇನು ಕಿತ್ತಿ ಕಿಕ್ಕಿ ಹಾಕುತ್ತಿರುವಿ ? ಪ್ರವಾಸದಿಂದ ದಣಿದು 

ಬಂದಾಕೆ ಸುಮ್ಮನೆ ಕೂತುಕೊಳ್ಳಬಾರದೆ ? ” 


" ಪದ್ಮನಾಭ, ಮನೆಯನ್ನುವದು ನೋಡುವ ಹಾಗಿತ್ತೆ ? ತಿಪ್ಪೆ ! 

ಇಂಥ ತಿಪ್ಪೆಯಂಥ ಸ್ಥಳದಲ್ಲಿ ನನ್ನಿಂದ ಸರ್ವಥಾ ಕೂಡುವದಾಗದು " 

 

" ಅಹುದು ನೋಡು ನಿರಮಕ್ಕಾ, ಹೊರಗಿಂದ ಬಂದಕೂಡಲೆ 

ನಡುಮನೆ ಪಡಸಾಲೆಗಳ ಸ್ವಚ್ಛತೆಯನ್ನೂ ಅಲ್ಲಿ ವ್ಯವಸ್ಥೆಯಿಂದ ಇರಿಸಿದ 

ವಸ್ತುಗಳನ್ನೂ ನೋಡಿದ ಕೂಡಲೆ ಮತ್ತೊಬ್ಬರಾರದೆ ಮನೆಗೆ ಬಂದಂತೆ 

ನನಗೆ ಭಾಸವಾಯಿತು. ಮಲ್ಲ.....ಮಗನಿಗೇನು ಬೇನೆ? ನೀನು ಇಂದು ಉಡುಗಿ 

ಸ್ವಚ್ಚ ಮಾಡಿದಂತೆ ಮಾಡಬಾರದೇಕೆ ? ನಾಳಿಗೆ ಅವನ ಟೊಂಕವನ್ನೇ 

ಮುರಿಯುತ್ತೇನೆ” ಎಂದು ಪದ್ಮನಾಭನಂದನು. 


"ಆಳುಮಗನ ಕಡೆಗೇನು ಇದೆ ? ನಿಂತು ಕೆಲಸ ಮಾಡಿಸಿಕೊಳ್ಳ 

ಬೇಕು, ಬಂಡಿಯನ್ನು ಹೊಡೆಯುವವನು ತೂಕಡಿಸಿದರೆ ಎತ್ತುಗಳು 

ಅಲ್ಲಿಯೇ ನಿಲ್ಲುವವು. 


ಸ್ನಾನವಾದ ಬಳಿಕ ಪದ್ಮನಾಭರಾಯನು ಊಟಕ್ಕೆ ಕುಳಿತನು, ಬೇಳೆ 

ಚನ್ನಾಗಿ ಬೇಯದೆ ಇದ್ದುದರಿಂದ ಸಾರು ತವ್ವಿಗಳು ಕೂಡಿಯೇ ಕೆಟ್ಟು 

ಹೋಗಿದ್ದವು. ಹಿಟ್ಟು ಸಾಣಿಸಿದ್ದಿಲ್ಲವಾದ್ದರಿಂದ ರೊಟ್ಟಿಯಾದರೂ 

ಚನ್ನಾಗಿ ಆಗಿದ್ದಿಲ್ಲ. 


"ಬಾಳವ್ಯಾ, ಏನು ಅಡಿಗೆ ಮಾಡಿರುವೆ ! ಒಂದಾದರೂ ಪದಾ 

ರ್ಥವು ಬಾಯಿಯಲ್ಲಿ ಹಾಕಿಕೊಳ್ಳುವಂತೆ ಇದೆಯೇ ? ?” ಎಂದು ವಕೀಲರು 

ಕೇಳಿದರು. 

 

"ಬಂದಹಾಗೆ ಮಾಡುತ್ತೇನೆ, ಮಂದೀಮನೆಯಲ್ಲಿ ಯಾರೇನು 

ಬೊಟ್ಟು ಮುರಿದುಹಾಕಿ ರುಚಿಕರವಾದ ಅಡಿಗೆ ಮಾಡುತ್ತಾರೆಯೇ ? ದಿನಾಲು 

ಹೀಗೆ ಅನ್ನಿಸಿಕೊಂಡು ನಾನು ನಿಮ್ಮ ಮನೆಯಲ್ಲಿ ಹೇಗೆ ಇರಬೇಕು 

ಹೇಳಿರಿ." 


ಪದ್ಮನಾಭರಾಯನಿಗೆ ಅಡಿಗೆಯವಳ ಮಾತು ಕೇಳಿ ಒಳಿತಾಗಿ ಕೋಪ 

ಬಂದಿತು. ಆದರೆ ನಿರ್ಮಲಾಬಾಯಿಯು ಅಹುದು ಬಾಳವ್ಯಾ, ನಿನ್ನ 

ಕಡೆಗೆ ಏನಿದೆ ? ಬಂದಹಾಗೆಯೇ ಅಡಿಗೆ ಮಾಡುವದು ಸರಿ, ಇಲ್ಲದ 

ಜಾಣತನವನ್ನು ಎಲ್ಲಿಂದ ತರಬೇಕು ? ಪದ್ಮನಾಭ, ನಾಳಿನಿಂದ ನಾನೂ 

ಅಡಿಗೆಗೆ ನೆರವಾಗುವೆನು ” ಎಂದು ಮಾತಾಡಿ ಆಗಿನ ಪ್ರಸಂಗವನ್ನು ನೀಗಿಸಿ 

ಕೊಂಡುಹೋದಳು. 

 

ಯಮುನಾಬಾಯಿಯು ಒಂದು ತಾಟು ತಂದು ರಂಗನ ಪಥ್ಯಕ್ಕಾಗಿ 

ಬಾಳವ್ವಗೆ ಬಡಿಸಹೇಳಿದಳು, ನಿರ್ಮಲಾ ಜಾಯಿಯು ಅವರ ಉದ್ಯೋಗ 

ವನ್ನು ತಡೆದು, " ಯಮುನಾಬಾಯಿ, ರ೦ಗನಿಗೆ ಈಗಲೇ ಪಥ್ಯ ಬೇಡ. 

ಹುಡುಗನ ಹೊಟ್ಟೆ ತುಸು ಹಸಿಯಲಿ, ಹಿಂದಿನಿಂದ ನಾನೇ ಅವನಿಗೆ ಬೇರೆ 

ಪಥ್ಯವನ್ನು ಮಾಡಿ ಹಾಕುವೆನು ” ಎಂದು ಹೇಳಿದಳು. 


" ಸಣ್ಣಕ್ಕಿಯನ್ನು ಗಿಳಿಲಿನಲ್ಲಿ ಹಣ್ಣಾಗಿ ಬೇಯಿಸಿ ರುಚಿಕರವಾದ 

ಮೆಣಸಿನ ಸಾರು ಮಾಡಿ, ನಿರ್ಮಲಾಬಾಯಿಯು ರಂಗನನ್ನು ಎಬ್ಬಿಸಿ ಅವನ 

ಬಾಯಿಯನ್ನು ಸ್ವಚ್ಛವಾಗಿ ತೊಳೆದು ಪಥ್ಯಕ್ಕೆ ಕೂಡಿಸಿದಳು, ಆ ಸಾರು 

ಅನ್ನವನ್ನು ಅಲ್ಲದ ಚಟ್ಟಣಿ ಇದನ್ನು ಬಾಡಿಸಿಕೊಳ್ಳುತ್ತೆ ರಂಗನು ಸಂತೋಷ 

ದಿಂದ ಕುಳಿತು ಹೋದಷ್ಟು ತಿಂದನು. " ಆತ್ಯಾ, ಜ್ವರ ಹೇಗೇ ಇರಲಿ, 

ಇಂದಿನ ದಿವಸ ನನ್ನ ಜೀವಕ್ಕೆ ಎಷ್ಟೋ ಸೊಗಸಾಗಿದೆ. ಆ ಕತ್ತಲೆಯ 

ಕೋಣೆ, ಅಲ್ಲಿಯ ಕಸ, ಬಾಳವ್ವನ ಅನ್ನ ಮುಂತಾದವುಗಳಿಗಾಗಿ ಮನಸ್ಸಿಗೆ 

ಹೇಸಿಕೆ ಬರುತ್ತಿತ್ತು. ಇನ್ನು ದಿನಾ ನೀನೇ ಪಥ್ಯ ಮಾಡಿ ಹಾಕಬಾರದೆ ? ” 

ಎಂದು ರಂಗನು ಕೇಳಿದನು. 

 

"ಯಾರು ಬೇಡೆನ್ನು ವರು ? ನಾನು ಬಂದದ್ದೇ ನಿನ್ನ ಸಲುವಾಗಿ, ” 

ಎಂದು ನಿರ್ಮಲಾ ಬಾಯಿಯು ಪ್ರೇಮದಿಂದ ನುಡಿದು ಲಲಿತಾ, ಆ ಪಂಚೆ 

ಯನ್ನು ತಂದುಕೊಡು, ರಂಗಣ್ಣ ನು ಕೈ ಒರಿಸಿಕೊಳ್ಳಲಿ” ಎಂದು ಆಜ್ಞಾ 

ಪಿಸಿದಳು, ಲಲಿತಾಗೌರಿಯ ಉಣ್ಣೆಯ ಎಳೆಯಿಂದ ಕಾಲುಚೀಲವನ್ನು ಹೆಣೆ 

ಯುತ್ತೆ ಕುಳಿತವಳು ಚಟ್ಟನೆ ಎದ್ದು ರಂಗನಿಗೆ ಪಂಚೆಯನ್ನು ತಂದು 

ಕೊಟ್ಟಳು. 


" ಎಷ್ಟೆತ್ತರವಾಗಿದ್ದಾಳೆ ಲಲಿತಾ ! ” ಎಂದು ರಂಗನು ಕೈ ಒರಸಿ ಕೊಂಡು 

ದಿಂಬಕ್ಕೆ ಆತುಕೊಂಡು ಕುಳಿತು ಉದ್ಗಾರ ತೆಗೆದನು, 


" ಅವಳಿಗೆ ವರ್ಷಗಳೇನು ಕಡಿಮೆಯಾಗಿವೆಯೇ ? ಹನ್ನೆರಡು ವರ್ಷ 

ಮೊನ್ನಿನ ವೈಶಾಖಕ್ಕೆ ತುಂಬಿದವು, ಎತ್ತರವಾಗದೇನು ಮಾಡುವಳು ? " 

ಎಂದು ನಿರ್ಮಲಾಬಾಯಿಯು ಮಗಳ ಸುಂದರವಾದ ಮುಖವನ್ನು ನೋಡಿ 

ಸಂತೋಷದಿಂದ ನಕ್ಕು ನುಡಿದಳು. 


ಲಲಿತೆಯು ಈ ಮಾತು ಕೇಳಿ ತುಸು ಮಂದಹಾಸಗೈದರೂ ಲಜ್ಜೆ 

ಯಿಂದ ಅವಳ ಗೌರವರ್ಣದ ಮುಖವು ಕೆಂಪಗಾಯಿತು. ಅ೦ಥ ಚಿಕ್ಕ 

ಬಾಲಿಕೆಗೆ ನಾಚಿಕೆಯೇತರದು ? ಸ್ತ್ರೀಜಾತಿ ! ಮತ್ತಿನ್ನೇನು ? 


"ಸಾಲೆಗೆ ಹೋಗುತ್ತಾಳೆನು ಈಕೆ, ಅತ್ಯಾ ? ” ಎಂದು ರಂಗನು 

ಮಾತಾಡಲು ತ್ರಾಣಬ೦ದವನಾಗಿ ಕೇಳಿದನು, 


" ಹೋಗುತ್ತಾಳೆ. ಮೊನ್ನೆ ನಾಲ್ಕನೆಯ ಇಯತ್ತೆ ಯಲ್ಲಿ ಪಾಸಾಗಿ 

ರುವಳು, " 


" ಲಲಿತಾ, ನಿಮ್ಮ ಸಾಲೆಯಲ್ಲಿ ಹಾಡು ಕಲಿಸುತ್ತಾರೇನು ? ” ಎಂದು 

ರಂಗನು ನಗಲಿಕ್ಕೆ ಬಂದಷ್ಟು ನಕ್ಕು ಕೇಳಿದನು. 


" ಸಾಲೆಯಲ್ಲಿ ಕಲಿಸುವದು ಕವಿತೆಯೇ, ಮನೆಯಲ್ಲಿ ನಮ್ಮ ಅತ್ತಿಗೆ -

ರಮಾಭಾಯಿಯು ಕೈಯಿಂದ ಕೆಲವು ಹಾಡು ಹೇಳಿಸಿಕೊಂಡಿದ್ದೇನೆ.” 


" ರಂಗಾ, ಇವಳು ಸ್ಥಾಲೀಪಾಕದ ಜಾಡು ಚನ್ನಾಗಿ ಹಾಡುತ್ತಾಳೆ, 

ಅನ್ನು ಲಲಿತಕ್ಕಾ. ' ಎ೦ದು ಲಲಿತೆಯ ತಾಯಿಯು ಹೇಳಿದಳು. 


" ಲಲಿತಾಗೌರಿಯು ಅತ್ತ್ರಿತ್ತ ತುಸು ನಾಚಿದ ಹಾಗೆ ಮಾಡಿ, ಕಡೆಗೆ 

ತಾಯಿಯ ಆಗ್ರಹಕ್ಕಾಗಿ ಹಾಡಿದಳು, ಹೆಣ್ಣು ಮಕ್ಕಳ ಸ್ವರವೇ ಸ್ವಭಾವತಃ 

ಮಧುರವಾದದ್ದು, ಅದರಲ್ಲಿ ಲಲಿತೆಯು ಕೊಂಚ ಪರಿಶ್ರಮಮಾಡಿ ಕಲಿತಿ 

ದ್ದಳಾದ್ದರಿಂದ ಅವಳು ಹಾಡಿದಳೆನ್ನುವದಕ್ಕಿಂತ ಗಾನ ಮಾಡಿದಳೇ ಎಂದು 

ಹೇಳಬಹುದಾಗಿತ್ತು. ರಂಗನು ತನ್ನ ಬೇನೆಯನ್ನು ಮರೆತು ಉತ್ಸುಕನಾಗಿ 

ಕೇಳುತ್ತಿದ್ದನು. ಅವನು ಮಧ್ಯದಲ್ಲಿಯೇ ಲಲಿತೆಯನ್ನು ತಡೆದು "ಕೇಳವ್ವಾ 

ಅತ್ಯಾ ! ದ್ರೋಪತಿಯು ಅಂತೆ ! ” ಎಂದು ನುಡಿದು ನಕ್ಕನು. 


" ಮತ್ತಿನ್ನು ಹೇಗೆ ಅನ್ನ ಬೇಕು ? ” ಎಂದು ಲಲಿತೆಯು ತನ್ನ ಸುಲ 

ಲಿತವಾದ ಮುಖದಲ್ಲಿ ಎಳೆನಗೆಯನ್ನು ತಳೆದು ಕೇಳಿದಳು. 


" ದೌಪದಿಯು ಎಂದು ಹಾಡಿದಂತೆ ಮಾಡಿ ರಂಗನು ಹೇಳಿದನು. 


ಮರುದಿವಸ ಮುಂಜಾನೆ ಆರು ಗಂಟೆಯ ಸಮಯಕ್ಕೆ ನಿರ್ಮಲಾ 

ಬಾಯಿಯ ಪದ್ಮನಾಭರಾಯನನ್ನು ಮಲಗಿದವನನ್ನು ಎಬ್ಬಿಸಿದಳು. “ಅಕ್ಕಾ, 

ಸಕ್ಕರೆಯ ನಿದ್ದೆಯ ಹೊತ್ತಿನಲ್ಲಿ ನಿನ್ನ ದೇನು ಕಾಟ ಮತ್ತೆ ! ” ಎಂದು 

ತಮ್ಮನು, ಮುಸುಕಿನಲ್ಲಿ ಕೂಗಿ ನುಡಿದನು. * ಏಳಬಾರದೆ ! ರಾತ್ರಿಯಲ್ಲಿ 

ನೀನು ಜಾಗರಣೆಯನ್ನು ಬೇರೆ ಮಾಡಿಲ್ಲವಷ್ಟೆ ? ” ಎಂದು ಅಲ್ಲಿನ ಸಿಟ್ಟು 

ಮಾಡಿದ್ದಕ್ಕೆ ವಕೀಲರು ಅನಿರ್ವಾಹಕ್ಕಾಗಿ ಎದ್ದು ಹೊರಗೆ ಬಂದರು. 


ಪದ್ಮನಾಭರಾಯನು ಎದ್ದು ನೋಡುತ್ತಾನೆ, ಮನೆ ಉದುಗಿ ಕನ್ನಡಿ 

ಯಾಗಿದೆ. ರಂದೆಯು ಎಲ್ಲೆಲ್ಲಿಯೂ ಇಲ್ಲ, ಅದನ್ನು ನೋಡಿ ರಾಯರ 

ಮನಸ್ಸಿಗೆ ಉತ್ಸಾಹ ಬಂದಂತಾಗಿ ನಿದ್ದೆಯ ಜಾಡ್ಯವೆಲ್ಲ ಹೊರಟುಹೋಯಿತು. 

ಬಹಿರ್ದಿಶಕ್ಕೆ ಹೋಗಿಬರುವಾಗ ನೋಡುತ್ತಾರೆ, ಮನೆಯ ಸುತ್ತಲಿರುವ ಹೂ 

ದೋಟದ ಭಾಗವೆಲ್ಲ ಸ್ವಚ್ಛವಾಗಿ ಹೋಗಿತ್ತು. ಪದ್ಮನಾಭರಾಯನು ಮುಖ 

ತೊಳೆದುಕೊಳ್ಳಲಿಕ್ಕೆ ಬಚ್ಚಲಕ್ಕೆ ಬರಲು ಅಲ್ಲಿ ಸ್ನಾನದ ಸಿದ್ದತೆಯೇ ಆಗಿತ್ತು. 

ಬಚ್ಚಲಮನೆಯು ಕೂಡ ಲಕಲಕನೆ ಹೊಳೆಯುತ್ತಿತ್ತು, ನಿತ್ಯದಂತೆ ಅಲ್ಲಿ 

ಮುಸುರೆಯ ಪಾತ್ರೆಗಳನ್ನು ತೊಳೆಯಲು ಇಟ್ಟಿದ್ದಿಲ್ಲ. ರಾತ್ರಿಯಲ್ಲಿ ಉಂಡು 

ಕೈದೊಳೆದ ಅಗಳುಗಳಿದ್ದಿಲ್ಲ. ನೀರು ತೋಡಿದ ಗಂಗಾಳವು ಬಂಗಾರದಂತೆ 

ಹೊಳೆಯುತ್ತಿತ್ತು. ಎಣ್ಣೆಯ ಬಟ್ಟಲು ಸಾಬೂನುಗಳು ಅಲ್ಲಿಯೇ ಸಿದ್ದ. 

ಸ್ನಾನ ಮಾಡುತ್ತೆ ಪದ್ಮನಾಭನು (C 29 : ನಮ್ಮ ಬಚ್ಚಲಮನವ: ಹೊರ 

ಗಿರುವ ಕುಣಿಯಲ್ಲಿ ಶಾವಿಪಲ್ಲಿ ಇತ್ತು, ಅದನ್ಕಾರು ಕಿತ್ತುಹಾಕಿದರು ? " 

ಎಂದು ಕೇಳಿದನು. 


" ಬುದ್ದಿವಂತನಿರುವಿ, ಮನೆಯ ಸಮೀಪದಲ್ಲಿಯೇ ಕೊಳಚೆ ನೀರಿನ

ಕುಂಡವಿರಬೇಕೆ ? ಮೂರು ಕಾಸಿನ ಪಲ್ಲೆ ಯಾಗಲಿಕ್ಕಿಲ್ಲ, ಅದಕ್ಕಾಗಿ 

ಮನೆ ತುಂಬ ಕುದುರೇಮೋತಿಯ ಹುಳಗಳ ಉಪದ್ರವವೆಷ್ಟು ? ನಿನ್ನೆ ಮಧ್ಯಾಹ್ನ 

ದಿಂದ ಎರಡು ಆಳು ಹಚ್ಚಿ ನೀರಿನ ಕುಣಿಗಳನ್ನೂ, ಕಸದ ರಾಶಿಗಳನ್ನೂ 

ಹಾರಾಡುತ್ತಿರುವ ಎಂಜಲೆಲೆಗಳನ್ನೂ ತೆಗೆಸಿ ಹಾಕಿ ಉಡುಗಿಸಿಬಿಟ್ಟಿರುವೆನು” 

ಎಂದು ನಿರ್ಮಲಾಬಾಯಿಯು ನುಡಿದಳು. 


" ನಮ್ಮ ಯಜಮಾನರ ( ಹೆಂಡತಿಯ) ಕೆಲಸವಿದು ! ಹೇಳಿ ಹೇಳಿ ಬೇಸತ್ತು ಹೋದೆನು ! !! 


"ಅಶಕ್ತಳವಳು, ಏನು ಮಾಡಬಲ್ಲಳು? ನಿನಗೇಕೆ ತಿಳಿಯಬಾರದು? 

ಎಂದು ಆಕ್ಕನು ಯಮುನಾಬಾಯಿಯ ಪಕ್ಷ ಪಾಶವನ್ನು ಕಟ್ಟಿ ಮಾತಾ 

ಡಿದಳು. 


" ಕೇಳಿರಿ, ಅತ್ತಿಗೆಯವರೆ, ಹೊಲೆಯರಂತೆ ನಾನಿನ್ನು ತಿಪ್ಪೇ ಉಡುಗು 

ವದೊಂದು ಮಾತ್ರ ಉಳಿದಿದೆ ! ” ಎಂದು ಯಮುನಾಬಾಯಿಯು ಎರಡು 

ದಿನ ಹಣಿಗೆ ಮುಟ್ಟದಿರುವ ತನ್ನ ತಲೆಯನ್ನು ಉಗುರಿಸಿಕೊಳ್ಳುತ್ತೆ ಗಂಡನ 

ಮೇಲೆ ಸಿಟ್ಟಾಗಿ ನುಡಿದಳು. 

 

ಪದ್ಮನಾಭದಾಯನು ಸ್ಥಾ ನ ತೀರಿಸಿಕೊಂಡು ನಾಮ ಮುದ್ರೆಗಳನ್ನು 

ಧರಿಸಿ ಅರ್ಭ್ಯ ಪ್ರದಾನವನ್ನು ಮಾಡಿ ನಡುಮನೆಗೆ ಬಂದನು. ಅಲ್ಲಿ ಲಲಿ 

ತೆಯು ತನ್ನ ಸೋದರಮಾವನಿಗಾಗಿ ಒಂದು ಮಣೆ ಹಾಕಿಟ್ಟು ಎಲೆಯಲ್ಲಿ 

ಬಿಸಿಬಿಸಿಯಾದ ಸಜ್ಜಿಗೆಯನ್ನು ಬಡಿಸಿದಳು. ವರ್ತುಲಾಕಾರವಾಗಿದ್ದ ಚಿತ್ರ, 

ಮಯವಾದ ರಂಗವಲ್ಲಿಯ ಮಧ್ಯದಲ್ಲಿ ಚಹ ತುಂಬಿದ ಚೀನೀ ಪಾತ್ರೆಯ ಮೆರೆ 

ಯುತ್ತಿತ್ತು. ಎಲ್ಲಿಯೋ ಮೂಲೆಗೆ ಬಿದ್ದು ಹೋಗಿರುವ ಎರಡು ಚೀನೀ ಹೂಜಿ 

ಗಳನ್ನು ಬೆಳಗಿ ಅವುಗಳಲ್ಲಿ ಹೂವಿನ ಟೊಂಗೆಗಳನ್ನೂ ಪಲ್ಲವಗಳನ್ನೂ 

ಇರಿಸಿ ಆ ಹೂಜಿಗಳೆರಡನ್ನೂ ರಂಗವಲ್ಲಿಯ ವರ್ತುಲದ ಎರಡು ಪಾರ್ಶ್ವಗಳಲ್ಲಿ 

ಒಳ್ಳೆ ಚಿತ್ತವೇಧಕವಾಗಿ ಕಾಣುವಂತೆ ಲಲಿತೆಯು ಇರಿಸಿದ್ದಳು. 


" ಅಬ್ಬಬಬ ! ಇದೇನಾ ಸಾಹೇಬರ ಮನೆಯಾಯಿತು ಬಿಡು 

ಲಲಿತಾ!” ಎಂದು ಪದ್ಮನಾಭರಾಯನು ಸಂತೋಷಭರಿತನಾಗಿ ಉಪಹಾರಕ್ಕೆ 

ಕುಳಿತನು. ಇದೆಲ್ಲ ಸಮಾರಂಭವನ್ನು ರಂಗನು ತನ್ನ ಕೋಣೆಯಲ್ಲಿ ಹಾಸಿ 

ಗೆಯ ಮೇಲೆ ಕುಳಿತು ನೋಡುತ್ತಿದ್ದನು. ಅವನಿಗೂ ಉತ್ಸಾಹ ಬಂದಂತಾಗಿ 

" ಅಪ್ಪಾ, ನಾನೂ ಹೊರಗೆ ಬಂದು ಚಹ ತಕೊಳ್ಳಲೇನು ? ?' ಎಂದು 

ತಂದೆಯನ್ನು ಕೇಳಿದನು. 


ಅವಶ್ಯ ಬಾ, ಅಕ್ಕಾ, ನೀನೂ ಲಲಿತೆಯ ಕೂಡಿ ಅವನನ್ನು 

ಕೈ ಹಿಡಿದು ಕರಕೊಂಡು ಬನ್ನಿರಿ, ” ಎಂದು ಪದ್ಮನಾಭರಾಯನು 

ಹೇಳಿದನು. 

 

ಏಳು ಬಡಿಯುವದರೊಳಗಾಗಿಯೇ ಪದ್ಮನಾಭರಾಯನು ತನ್ನ ಕಚೇ 

ರಿಯ ಕೋಣೆಗೆ ಬಂದನು. (ನಿತ್ಯದಲ್ಲಿ ಅವನು ಆ ಕೋಣೆಗೆ ಒಂಬತ್ತು 

ಗಂಟೆಗೆ ಬರುತ್ತಿದ್ದನು.) ಕಾಳಪ್ಪ ಕಾರಕೂನನು ಆ ದಿವಸ ನಡೆಯುವ 

ಮುಕದ್ದಮೆಯ [ಪ್ರಕರಣಗಳ] ಕಾಗದಗಳನ್ನು ಒಂದು ಪುಷ್ಟಿ ಪತ್ರದಲ್ಲಿ 

ನಿನ್ನೆ ಯೇ ಹಾಕಿಟ್ಟು ಹೋಗಿದ್ದನು. ರಾಯರು ಆ ಪ್ರಕರಣಗಳನ್ನೋದಿ 

ಮನನ ಮಾಡಿಕೊಂಡು ಸಮಾಧಾನವಾದ ಮನಸ್ಸುಳ್ಳವರಾದರು. ಪಕ್ಷ 

ಕಾರರು ತಮ್ಮ ಬರುವ ಸಮಯಕ್ಕೆ ಬಂದು ವಕೀಲರು ಎದ್ದಿರುವದನ್ನು 

ಕಂಡು " ಇಂದೇನು ನಮ್ಮ ಅದೃಷ್ಟವು ಚನ್ನಾಗಿಯೇ ಇರುವದೆನ್ನಬೇಕು. 

ವಕೀಲರು ಎದ್ದು ಸಿದ್ದರಾಗಿ ಕುಳಿತಿದ್ದಾರೆ " ಎಂದು ಸಂತೋಷದಿಂದ ಅವ 

ರಿಗೆ ಪ್ರಣಾಮಮಾಡಿ ಕುಳಿತುಕೊಂಡರು, ಅಂದರೆ ! ಇನಾಮು ಪತ್ರ 

ಬರಿಸಿಕೊಂಡ ಬಳಿಕ ಮಲಗಿಕೊಂಡರೆ ಹೇಗಾದೀತು? ಇನ್ನೂರು ರುಪಾಯಿ 

ಸಿದ್ಧ ಮಾಡಿರುವಿರಾ ? ಇಂದು ತೀರ್ಪು ನಿಮ್ಮಂತೆಯೇ ಆಗುವದು ” ಎಂದು

ವಕೀಲರು ಪ್ರಸನ್ನ ಮನಸ್ಸಿನವರಾಗಿ ಹೇಳಿದರು. 


ಅಂದು ಮಧ್ಯಾಹ್ನದ ಭೋಜನವು ಸರಿಯಾಗಿ ಹತ್ತು ಘಂಟೆಗೆ ಸಿದ್ದ 

ವಾಗಿತ್ತು, ವ್ಯವಸ್ಥೆಯಲ್ಲಿ ಎಲ್ಲೆಲ್ಲಿಯೂ ಬಿಟ್ಟಿ ಬೇಸರಿಕೆ ಕಾಣಲಿಲ್ಲ. ನಿರ್ಮಲ 

ವಾಗಿ ಉಡುಗಿದ ಭೋಜನ ಶಾಲೆ, ಕನ್ನಡಿಯಂತೆ ಹೊಳೆಯುತ್ತಿರುವ ಹರಿ 

ವಾಣ ಬಟ್ಟಲುಗಳು; ಓರಣವಾಗಿ ಬಡಿಸಿದ ಪಲ್ಲೆ ಚಟ್ಟಣಿ ಉಪ್ಪಿನಕಾಯಿ 

ಗಳು; ಘಮಘಮಿಸುವ ಶುಭ್ರವಾದ ಅನ್ನದ ಮೇಲೆ ಸುವರ್ಣ ರಸದಂತೆ 

ಆಲ್ಹಾದಕರವಾದ ತವ್ವಿಯು ! ಈ ಪರಿಷ್ಕಾರವನ್ನೆಲ್ಲ ಕಂಡು ಪದ್ಮನಾಭ

ರಾಯನ ಮನಸ್ಸಿಗೆ ಒಂದು ಪ್ರಕಾರದ ಉತ್ಸಾಹ ಬಂದಂತಾಗಿ ಅವನೊಳ್ಳೇ 

ಹುರುಪಿನಿಂದ ಭೋಜನಕ್ಕೆ ಪ್ರಾರಂಭಮಾಡಿದನು. ಅಡಿಗೆಯವಳು ಮಾಡ 

ತಕ್ಕ ಕೆಲಸದ ಅರ್ಧವನ್ನು ನಿರ್ಮಲಾಬಾಯಿಯೇ ಮಾಡಿದ್ದರಿಂದ ಸಿಡಿ ಪಿಡಿ 

ಮಾಡಲಿಕ್ಕೆ ಅವಳಿಗೆ ಆ ಸ್ಪದವಿಲ್ಲದಕಾಗಿ ಅವಳು ವಿನೀತಳಾಗಿ ಮನಮುಟ್ಟಿ 

ಕೆಲಸ ಮಾಡುತ್ತಿದ್ದಳು. 


ಎಲ್ಲಿಯ ನೀರಿದು ಅಕ್ಕಾ ? ?” ಎಂದು ಪದ್ಮನಾಭರಾಯನು ಸ್ವಚ್ಛ 

ವಾಗಿರುವ ಬೆಳ್ಳಿಯ ಪಂಚಪಾತ್ರದಲ್ಲಿಯ ನಿರ್ಮಲವಾಗಿರುವ ನೀರು 

ಕುಡಿದು ಕೇಳಿದನು. 


" ಅಪ್ಪಾ ಸಾಹೇಬರ ತೋಟದ ಬಾವಿಯ ನೀರು ಬಹು ಪಾಚಕವಾಗಿ 

ರುವನೆಂದು ಎಲ್ಲರೂ ಹೊಗಳುತ್ತಿರುವದರಿಂದ ನಾನೇ ಒಂದು ಕೊಡ ತುಂಬಿ 

ಕೊಂಡು ಬಂದೆನು ” ಎಂದು ನಿರ್ಮಲಾಬಾಯಿಯು ಹೇಳಿದಳು.  


"ಯಾಕೆ ಆಶಾ, ನಿನಗೆ ದುಡಿಯುವ ಉಬ್ಬು ಹೆಚ್ಚಾಗಿರುವದೇನು ? 

ನಮ್ಮ ಬಾವಿಯ ನೀರಿಗಾದರೂ ಏನಾಗಿದೆ ? " 


"ನಿನ್ನ ಪುಷ್ಪ ಕರಂಡಕ ಜೀರ್ಣೋದ್ಯಾನದಲ್ಲಿ ಕೂಪದಲ್ಲಿ ತೊಪ್ಪಲ 

ಗಳ ಗೇಣುದಪ್ಪ ತೆಪ್ಪವು ತೇಲಾಡುತ್ತದೆ. ಸುತ್ತಲಿನ ಗೋಡೆಯಲ್ಲಿ ಬಿದ್ದು 

ಹೋಗಿದ್ದರಿಂದ ಹೊರಗಿನ ನೀರೆಲ್ಲ ಬಳಿದು ಬಾವಿಗೇ ಬರುತ್ತದೆ. ಸಮೀಪ 

ದಲ್ಲಿಯೇ ಇದ್ದ ತೆಗ್ಗಿನಲ್ಲಿ ನಿಂತ ಮಲೆತ ನೀರು ಇಂಗಿ ಬಾವಿಯಲ್ಲಿ ಸೇರಿ 

ಕೊಳ್ಳುತ್ತದೆ. ಅಂಥ ಕೆಟ್ಟ ನೀರು ಕುಡಿದೇ ನಮ್ಮ ರಂಗನು ಬೇನೆಯನ್ನು 

ಕರಕೊಂಡನು." 


" ವೈದ್ಯಕ ಪಾಠಶಾಲೆಯಲ್ಲಿ ನೀವು ವ್ಯಾಸಂಗ ಮಾಡಿರುವಿರೇನು 

ಡಾಕ್ಟರ ಅಕ್ಕಾಸಾಹೇಬ ? ?” ಎಂದು ತಮ್ಮನು ನಗೆಯಾಡುತ್ತೆ ಕೇಳಿದನು. 

 

" ಮೂಢರಿಗೆ ಕೂಡ ತಿಳಿಯುವಂಥ ಸರ್ವಸಾಧಾರಣವಾದ ಮಾತಿಗೆ 

ಡಾಕ್ಟರನೇಕೆ ಬೇಕು ಪದ್ಮನಾಭ ? ಮೈಯಲ್ಲಿ ಆಲಸ್ಯವು ಛೇದಿಸಿತೆಂದರೆ 

ಮನುಷ್ಯನು ಮುಗ್ಗಲಗೇಡಿಯಾಗಿ ಅವನಿಗೆ ಸ್ವಚ್ಛತೆಯು ತಿಳಿಯದಂತಾ 

ಗುತ್ತದೆ. ” 


ಪದ್ಮನಾಭನು ಸಾರು ಸುರಿದು " ಕ್ಯಾಬತ್‌ ಹೈ ! ಬಾಳವ್ವಾ ಸಾರು 

ಚನಾಗಿ ಮಾಡಿರುವಿ '' ಎ೦ದು ಅಡಿಗೆಯವಳ ಸ್ತುತಿಮಾಡಿದನು. 

 

" ನಾನೇನು ಮಾಡಿದ್ದೇನೆ ? ಚಂದಕ್ಕೆ ಒಲೆಯ ಮುಂದೆ ಕುಳಿತದ್ದು 

ಮಾತ್ರ ಸರಿ, ಮಾಡಿದವರು ನಿರ್ಮಲಾ ಬಾಯಿಯವರು” ಎಂದು ಬಾಳವ್ವನು. 

ಹೇಳಿದಳು. 


"ಅಕ್ಕಾ, ಎಲ್ಲ ಕೆಲಸಗಳಲ್ಲಿ ನಿನ್ನದೇ ಕೈಯಾಗಿದ್ದರೆ ನಿನಗೆ ಕೈಗಳಾ 

ದರೂ ಎಷ್ಟಿರುವವು ? ನೀನು ಸಹಸ್ರಭುಜಾದೇವಿಯೆಂದು ತಿಳಿದರೂ 

ಇಷ್ಟೆಲ್ಲ ಮಾಡಲಿಕ್ಕೆ ಸಮಯವಾದರೂ ದೊರೆತದ್ದು ಹೇಗೆ ? ” ಎಂದು 

ಅಕ್ಕನ ಕಾರ್ಯದಕ್ಷತೆ ಎದ್ದು ಕಂಡು ಬೆರಗಾಗಿ ಪದ್ಮನಾಭರಾಯನು ಕೇಳಿದನು. 


" ಹಾಗೆಯೇ ನೋಡುತ್ತ ಕುಳಿತರೆ ಕೆಲಸವು ಎದೆಯಮೇಲಿರಿಸಿದ 

ಗುಡ್ಡದಂತೆ ಕಾಣುವದು ಸರಿ, ಆದರೆ ಜಾಣ್ಮೆಯಿಂದ ಮಾಡುವವರಿಗೆ ಅದರ

ಭಾರವೆಷ್ಟು ಮಾತ್ರವೂ ತೋರದು, ನೀನೇ ಹೇಳು : ಇಪ್ಪತ್ತು ಮೂವತ್ತು 

ಹಾಳಿ ಕಾಗದ ತುಂಬ ವಿಶ್ರಾಂತಿಯಿಲ್ಲದೆ ಹೇಗೆ ಬರೆಯುವಿ ? ಅಕ್ಷರಗಳ 

ನ್ನೆಣಿಸುತ್ತೆ ಬರೆದರೆ ಕೆಲಸವಾಗುವದೇ ? " 

 

ಈ ಮಾತುಗಳನ್ನು ಯಮುನಾಬಾಯಿ, ಲಲಿತಾಗೌರಿ,. 

ಅಡಿಗೆಯವಳೂ ಏಕಚಿತ್ತರಾಗಿ ಬೆರಗಾಗಿ ಕೇಳಿ ನಿರ್ಮಲಾಬಾಯಿಯನ್ನು 

ಮನಸ್ಸಿನಲ್ಲಿಯೇ ಕೊಂಡಾಡಿದರು. ಆಲಸ್ಯತನವನ್ನೂ ಮೈಗಳ್ಳತನವನ್ನೂ 

ತುಳಿದುಹಾಕಬೇಜೆಂದು ಅವರು ತಮ್ಮ ತಮ್ಮೊಳಗೆ ನಿಶ್ಚಯಿಸಿಕೊಂಡರು.  


ಕಡೆಯ ಅನ್ನವು ಬಡಿಸಿತು, ಯಮುನಾಬಾಯಿಯ ಬೆಳಗಿದ ಪಾತ್ರೆ 

ಯಲ್ಲಿರುವ ಕೆನೆಮೊಸರನ್ನು ಲಕಲಕನೆ ಹೊಳೆಯುವ ಸೌಟಿನಲ್ಲಿ ತೆಗೆದು 

ಕೊಂಡು ಗಂಡನಿಗೆ ಬಡಿಸಿದಳು, ಕೆಲಸ ಕಡಿಮೆಯಾಗಿದ್ದರಿಂದ ಅವಳ 

ಅಶಕ್ತ ವಾದ ಪ್ರಕೃತಿಯು ಎರಡೇ ದಿವಸಗಳಲ್ಲಿ ಗುಣವನ್ನು ಹೊಂದುತ್ತೆ 

ಬಂದಿತ್ತು. ಮನೆಯಲ್ಲಿ ಎತ್ತ ನೋಡಿದತ್ತ ಓರಣ, ಎತ್ತ ನೋಡಿದತ್ತ 

ಸುವ್ಯವಸ್ಥೆಗಳು ಮೆರೆಯುತ್ತಿರುವದನ್ನು ಕಂಡು ಅವಳ ಮನಸ್ಸಿಗೂ 

ಉಲ್ಲಾಸವಾಗಿತ್ತು. ಅವಳು ತೀಡಿ ಉಟ್ಟ ರುವ ಒಗೆದ ಸೀರೆಯು ರುಗ 

ಝಗಿಸುತ್ತಿತ್ತು. ಚೌರಿ ರಾಗಟಿ ಹೂತುಲಸಿಗಳಿಂದ ಅಲಂಕೃತವಾದ ಅವಳ 

ಕೇಶಕಲಾಪವು ನುಣುಪಾಗಿ ಹೊಳೆಯುತ್ತಿತ್ತು, ಹರಡಿ ಕಂಕಣಯುಕ್ತ 

ವಾದ ಕೈಗಳಿ೦ದ ಮೊಸರು ಬಡಿಸಲು ಬಂದಿರುವ ಹೆಂಡತಿಯ ಸೊಬಗನ್ನು 

ಕಂಡು ಪದ್ಮನಾಭರಾಯನು ವಿನೋದದಿಂದ " ಓಹೋ ! ರಾಣಿ ಸರಕಾರ,. 

ಇಂದು ನೀವು ಸ್ವರ್ಗಲೋಕದಿಂದ ಇಳಿದುಬಂದಂತೆ ಕಾಣುತ್ತಿರಲ್ಲ ! ” 

ಎಂದು ನುಡಿದು ನಕ್ಕನು. ಈ ಗೌರವದ ಸತ್ಕಾರವು ಯಮುನಾಬಾಯಿಗೂ 

ರುಚಿಸಿ ಮಂದಹಾಸವನ್ನು ತಳೆದು ಅಂದದ್ದು :  


'' ಮುದುಕರಾದ ಹಾಗೆ ಹುಚ್ಚು ಹೆಚ್ಚಾಯಿತು ! " 


" ಮನಕ್ಕೆ ಉತ್ಸಾಹವಿಲ್ಲದವರು ಬೇಕಾದರೆ ಮುದುಕರಾಗಲಿ ! 

ನಾನೇಕೆ ಮುದುಕನು ? ಒಯ್ಯಾರದಿಂದ ನಿಂತವಳಾದ ನೀನಾದರೂ 

ಮುದುಕೆಯಲ್ಲಿ ಕಂಡಿಯಾ !?” ಎಂದು ಪದ್ಮನಾಭರಾಯನು ಉಲ್ಲಾಸ, 

ದಿಂದ ನಕ್ಕನು. 


" ಪದ್ಮನಾಭ, ನೀನೂ ಮುದುಕನಲ್ಲ ಈಕೆಯ ಮುದುಕೆಯಲ್ಲ. 

ಯಾವ ದೊಡ್ಡ ದಿವಸಗಳಾಗಿವೆಯೆಂದು ನೀವು ಮುದುಕರಾದಿರಿ ? ” ಎಂದು. 

ನಿರ್ಮ೮ ಬಾಯಿಯು ಸಂತೋಷದಿಂದ ನುಡಿದಳು. 


ಪದ್ಮನಾಭರಾಯನು ಆ ದಿವಸ ವೇಳೆಗೆ ಸರಿಯಾಗಿ ಕಚೇರಿಗೆ 

ಹೋದನು. ಅವನ ಪಕ್ಕಕಾರನ ಮುಕದ್ದಮೆಯ ಕೆಲಸವು ಒಳ್ಳೇ ವ್ಯವಸ್ಥಿತ 

ವಾಗಿ ನಡೆಯಿತು, ವಕೀಲರ ಚಿತ್ತ ವೃತ್ತಿಯು ಆನಂದವುಳ್ಳದ್ದಾಗಿಯೂ 

ಉತ್ಸಾಹಪೂರಿತವಾಗಿಯೂ ಇದ್ದದರಿಂದ ಅವರು ವಿರುದ್ದ ಪಕ್ಷದ ಸಾಕ್ಷಿ 

ಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿದರು. ತಮ್ಮ ವಾದದ ನಿರೂಪಣವನ್ನು 

ಅಸ್ಖಲಿತವಾದ ವಾಣಿಯಿಂದ ಸಪ್ರಮಾಣವಾಗಿಯಣ ಹೃದಯಂಗಮ 

ವಾಗಿಯೂ ಮಾಡುತ್ತಿರುವದನ್ನು ನ್ಯಾಯಾಧೀಶರೂ ವಕೀಲ ವರ್ಗದವರೂ 

ತಲ್ಲೀನರಾಗಿ ಕುಳಿತು ಕೇಳಿ " ಸಾಧು ಸಾಧು ! ” ಎಂದು ಉದಾರ 

ತೆಗೆದರು. ತೀರ್ಪು ಪದ್ಮನಾಭರಾಯನಂತೆ ಆದ್ದರಿಂದ ಆ ದಿವಸ ರಲ್ಲೆಲ್ಲ 

ಅವರ ಖ್ಯಾತಿಯಾಯಿತು. 


ತನ್ನ ಸೋದರತ್ತೆಯ ಅಂತಃ ಕರಣದ ಆರೈ# ಉಪಚಾರಗಳಿಂದಲೂ, 

ಲಲಿತಾಗೌರಿಯು ಸುಲಲಿತವಾದ ಪದಪದ್ಯ ಹಾಸ್ಯ ವಿನೋದಗಳಿಂದಲೂ 

ರಂಗನ ಪ್ರಕೃತಿಯು ದಿನಕ್ಕೊಂದು ಚಂದವಾಗಿ ಸ್ವಸವಾಗುತ್ತೆ ಬಂದಿತು. 

ಎಂಟು ದಿವಸಗಳಲ್ಲಿ ಅವನು ತನ್ನ ಹಾಸಿಗೆಯನ್ನು ಬಿಟ್ಟಿದ್ದು ಬೇಕಾದಹಾಗೆ 

ತಿರುಗಾಡಲಾರಂಭಿಸಿದನು. ಒಂದು ದಿವಸ ಅವನು ಮನೆಯ ಸುತ್ತಲಿರುವ 

ತೋಟದಲ್ಲಿ ಹೋಗಿ ಅನೇಕ ಪ್ರಕಾರದ ಹೂಗಳನ್ನು ತೆಗೆದುಕೊಂಡು ಬಂದು 

 ಅತ್ತೆಯ ಮುಂದೆ ಸುರಿದು " ಅತ್ಯಾ, ಇಕೋ, ಎಷ್ಟು ಹೂಗಳನ್ನು ತಂದಿರು 

 ವೆನು ನೋಡು ! ಲಲಿತಾಗೌರಿಗೆ ಇಂದು ಹೂವಿನ ಬೆರಳು ಹಾಕಬಾರದೆ ? ” 

ಎಂದು ಹೇಳಿದನು. 

 

ಆ ಹೂಗಳ ಶೋಭೆಯನ್ನು ನೋಡಿ ಲಲಿತಾಗೌರಿಗೆ ಹೆರಳುಹಾಕಿ 

ಕೊಳ್ಳುವ ಅಪೇಕ್ಷೆಯಾದರೂ ನಾಚಿಕೆಯಿಂದ ಅವಳು ತಲೆಬಾಗಿಸಿ ಮೆಲ್ಲನೆ 

ನಕ್ಕಳು. ಹೆಣ್ಣು ಮಕ್ಕಳು ಉತ್ಸವಪ್ರಿಯರೆಂಬಂತೆ ರಂಗನ ತಾಯಿಯೂ  

ಅತ್ತೆಯೂ ಕೂಡಿ ಉಬ್ಬಿ ನಿಂದೆ ಲಲಿತಾಗೌರಿಗೆ ಹೂವಿನ ಹೆರಳು ಹಾಕ 

ತೊಡಗಿದರು. 


ಅವರ ಬಳಿಯಲ್ಲಿಯೇ ಕುಳಿತು ಲಲಿತೆಯ ವೇಣೀಗ್ರಥನ ಸಮಾರಂಭ 

ವನ್ನು ಕೌತುಕದಿಂದ ನೋಡುತ್ತ ಕುಳಿತವನಾದ ರಂಗನು ನಿರ್ಮಲಾಬಾಯಿ 

ಯನ್ನು ಕುರಿತು ಅತ್ಯಾ, ನಿನ್ನಲ್ಲಿ ಮಂತ್ರಗಿ೦ತ್ರವೇನಾದರೂ ಇರುವ 

ದೇನು ? ?” ಎಂದು ಕೇಳಿದನು. 


ಅಯ್ಯೆ ! ಅದೇಕೊ ನನ್ನ ಅಪ್ಪಯ್ಯಾ ? ” ಎಂದು ಅತ್ತೆಯು 

ಅಕ್ಕರತೆಯಿಂದ ಕೇಳಿದಳು. 


" ನೋಡಿದಿಯಾ : ನಾನು ಬೇನೆಯಿಂದ ಏಳುವದರೊಳಗಾಗಿಯೇ, 

ಸುರಸ ಕಥೆಗಳಲ್ಲಿಯ ಚಮತ್ಕಾರವಾದ ಸಂಗತಿಗಳಂತೆ, ಅಡವಿಯಾಗಿರುವ 

ನಮ್ಮ ನೋಟವು ಪ್ರಫುಲ್ಲಿತವಾದ ಉಪವನವಾಗಿದೆ. ಜೋಮಜೋಮ 

ಸುರಿಯುತ್ತಿರುವ ನಮ್ಮೀ ಮನೆಯು ಕನ್ನಡಿಯ ಪೆಟ್ಟಿಗೆಯಂತೆ ಮನೋಹರ 

ವಾಗಿ ಕಾಣುತ್ತದೆ. ನಮ್ಮೀ ಅವ್ವನನ್ನೇ ನೋಡು, ಬೇನೆಹತ್ತಿ ಎಲ್ಲಿ 

ಸಾಯುತ್ತಾಳೋ ಎಂದು ಮಾಡಿದ್ದೆನು; ಈಗ ನೋಡು ಹೇಗಾಗಿದ್ದಾಳೆ ? 

ಅತ್ಯಾ, ನೀನು ಹೋದಿಯಂದರೆ ಮಾತ್ರ ಮುಂಚಿನ ಅವ್ಯವಸ್ಥೆಯು ಮತ್ತೆಲ್ಲಿ 

ಮರುಕಳಿಸಿ ಬರುವದೋ ಏನೋ. " 

 

" ರಂಗಯ್ಯಾ, ಚಿಂತೆಮಾಡಬೇಡ. ನನ್ನ ಮಂತ್ರ ತಂತ್ರಗಳನ್ನೆಲ್ಲ 

ನಿನ್ನ ಅವ್ವ ಆಪ್ಪಂದಿರಿಗೂ, ಆಳುಹೋಳುಗಳಿಗೂ, ಕೂಡಿಯೇ ಕಲಿಸಿದ್ದೇನೆ ” 

ಎಂದು ನಿರ್ಮಲಾಬಾಯಿಯು, ಹೊಸ ರಕ್ತದಿಂದ ಕಂಗೊಳಿಸುತ್ತಿರುವ 

ರಂಗನ ಸುಂದರವಾದ ಮುಖವನ್ನು ನೋಡಿ ನುಡಿದಳು. 

 

ನಿರ್ಮಲಾಬಾಯಿಯು ಆಯಾಸ ಬೇಸರಿಕೆಗಳನ್ನು ಲೆಕ್ಕಿಸದೆ ಎಡೆ 

ಬಿಡದೆ ಕೆಲಸಗಳಲ್ಲಿ ತೊಡಗಿರುವದನ್ನು ಕಂಡು ಅಡಿಗೆಯವಳೂ ಒಕ್ಕಲ 

ಗತ್ತಿಯೂ ಮಲ್ಲನ ತೋಟಿಗನೂ ನಾಚಿಕೊಂಡು ತಮತಮಗೆ ಹೊಂದಿದ 

ಕೆಲಸಗಳನ್ನೂ ಹೊಂದದೆ ಇದ್ದ ಕೆಲಸಗಳನ್ನೂ ಕೂಡಿಯೇ ಮೇಲುಮೇಲಾಡಿ 

ಮಾಡಲಾರಂಭಿಸಿದರು. ಕೆಲಸಗಳಲ್ಲಿ ಮೈನುರಿತದ್ದರಿಂದ ಅವರೆಲ್ಲರಿಗೂ 

ತಮಗೆ ಸಾಕಾಗುವಷ್ಟು ಕೆಲಸವೇ ಇಲ್ಲವೆಂದು ಹೇಳುತ್ತಿದ್ದರು. 

 

ಪದ್ಮನಾಭರಾಯನಲ್ಲಿ ಚಟುವಟಿಕೆ ಹೆಚ್ಚಾಯಿತು. ವಿಲಕ್ಷಣ ಬುದ್ದಿ 

ಶಾಲಿಯಾದ ಆ ವಕೀಲನು ಅನಲಸನಾದದ್ದರಿಂದ ಅವನ ಪ್ರಾಪ್ತಿಯು 

ಹೆಚ್ಚಾಯಿತು. ಪ್ರಾಪ್ತಿಯು ಹೆಚ್ಚಾದಹಾಗೆ ಅವನ ಉತ್ಸಾಹವೂ ಹೆಚ್ಚಾದ್ದ 

ರಿಂದ ಕೆಲಸಕ್ಕೆ ಬೇಸರವಿಲ್ಲದಂತಾಯಿತು. ಮನೆಯಲ್ಲಿಯು ಸುವ್ಯವಸ್ಥೆ 

ಗಾಗಿಯೂ ಅಭಿವೃದ್ಧಿಯನ್ನು ಹೊಂದುತ್ತಿರುವ ಪ್ರಾಪ್ತಿಗಾಗಿ ಅವನ 

ಸಾಂಸತ್ತಿಕಸ್ಥಿತಿಯು ಕಲ್ಪನಾತೀತವಾಗಿ ಬೆಳೆಯಿತು. ಸಂತತಿ ಸಂಪತ್ತು 

ಆರೋಗ್ಯ ಸೌಕರ್ಯಗಳ ಹೆಚ್ಚಳಗಳ ಮೂಲಕ ಪದ್ಮನಾಭರಾಯನು 

ಇಹಲೋಕದಲ್ಲಿ ತಾನೋರ್ವನೇ ಸುಖಿಯೆಂದು ತಿಳಿದು ಆನಂದಿತನಾದನು. 


ಎರಡೇ ತಿಂಗಳಗಳಾಚೆಗೆ ಪದ್ಮನಾಭನ ಸಂಸಾರವೆಂದರೆ ಹರಿದದ್ದೇ 

ಹಳ್ಳಿ ನಿಂತಿದ್ದೇ ತೀರ್ಥವೆಂಬವಾಗಿತ್ತು. ಅವನ ಜೀವಕ್ಕೆ ಸೌಖ್ಯವಿದ್ದಿಲ್ಲ. 

ಹೆಂಡತಿಯ ಜೀವಕ್ಕೂ ಸೌಖ್ಯ ವಿದ್ದಿಲ್ಲ. ಸಂಸಾರವೆಂಬದು ತಲೆಯ ಮೇಲೆ 

ಹೊತ್ತಿರುವ ಭಾರವಾದ ಬಂಡೆಯೆಂದು ತಿಳಿದು ಇವನು ಉದಾಸೀನ 

ನಾಗಿದ್ದನು. ಅದೆಲ್ಲ ಹೋಗಿ ಈಗ ಆನಂದಮಯವಾದ ಪರಿಸ್ಥಿತಿಯುಂಟಾಗ 

ಲಿಕ್ಕೆ ಕಾರಣವೇನು ? ಭಗವತ್‌ಕೃಪೆ ಇದ್ದರೂ ಇರಬಹುದು, ಆದರೆ 

ದೃಶ್ಯವಾದ ಕಾರಣವು ಸುಕರವಾಗಿಯೂ ಸುಸಾಧ್ಯವಾಗಿಯೂ ಇರುವ 

ದೆಂಬದನ್ನು ನಿರ್ಮಲಾ ಬಾಯಿಯ ಉದಾಹರಣದಿಂದ ಕಲಿತುಕೊಳ್ಳಬಹು 

ದಲ್ಲವೆ ? 


- ತಾನು ಬಂದ ಉದ್ದೇಶವು ಸಫಲವಾಯಿತೆಂದು ಕಂಡು ನಿರ್ಮಲಾ 

ಬಾಯಿಂದ ಕೃತರ್ಥಳಾಗಿ ತನ್ನ ಊರಿಗೆ ಹೊರಟಳು. ಪದ್ಮನಾಭ 

ರಾಯನು ಅಕ್ಕನ ಈ ಚಕಾರಗಳನ್ನು ನೆನೆನೆನೆದು ಕೊಂಡಾಡಿ ಅವಳ 

ಕಾಲ್ಗೆರಗಿ 'ಅಕ್ಕಾ, ಹೋಗಿ ಬಾ, ನಾನೇನು ಕೊಟ್ಟರೂ ನಿನ್ನ ಉಪಕಾರ 

ತೀರದು ” ಎಂದು ಕಣ್ಣಿಗೆ ನೀರು ತಂದು ಹೇಳಿದನು. 


"ಪದ್ಮನಾಭ, ಇದರಲ್ಲೇತರ ಉಪಕಾರ ? ನನ್ನ ಕರಳಿಗಾಗಿ ನಾನು 

ಮಾಡಿದೆನು, ಉಪಕಾರ ತೀರಿಸುವದೇ ನಿನ್ನ ಮನಸ್ಸಿನಲ್ಲಿದ್ದರೆ ಲಲಿತಾಗೌರಿ 

ಯನ್ನು ರಂಗನಿಗೆ ತೆಗೆದುಕೊಂಡರೆ ನನ್ನ ಮೇಲೆಯೇ ನೀನು ಉಪಕಾರವನ್ನು 

ಹೊರಿಸಿದಂತಾಗುವದು ” ಎಂದು ನಿರ್ಮಲಾಬಾಯಿಯು ಸ್ಮಿತವದನೆಯಾಗಿ 

ಮಾತಾಡಿದಳು. 


ಅಕ್ಕನ ಮನೋಗತವು ಪದ್ಮನಾಭನಿಗಾದರೂ ರುಚಿಸಿತು. ಲಲಿತಾಗೌರಿ 

ಯಂಥ ಚಲುವೆಯೂ ಜಾಣೆಯ ಕೆಲಸಕ್ಕೆ ಬೇಸರಿಯದವಳೂ ಆದ 

ಸೊಸೆಯು ಯಾರಿಗೆ ಬೇಡ ?. 


" ಅಕ್ಕಾ, ನಿನ್ನ ಮಾತಿಗೆ ನನ್ನ ಒಪ್ಪಿಗೆಯೇ ಇರುವದು, ಆದರೆ ಲಗ್ನ 

ಮಾಡಿಕೊಳ್ಳುವವನ ಮನಸ್ಸು ! ” ಎಂದು ಪದ್ಮನಾಭರಾಯನು ಮಗನ 

ಮುಖವನ್ನು ನೋಡಿ ವಿನೋದದಿಂದ ನುಡಿದನು. 


" ಇದರಲ್ಲಿ ಯಾರನ್ನು ಕೇಳುವದೇನು ಉಳಿದಿದೆ ? ಲಲಿತೆಯೂ 

ರಂಗನೂ ಈಗಾಗಲೇ ಮನಸಾ ಮನಸಾ ಗಂಡಹೆಂಡರೇ ಆಗಿರುವರು. ಅವನು 

ಇವಳಿಗೆ ಹೂವಿನ ಹೆರಳು ಹಾಕಿಸುತ್ತಾನೆ, ಇವಳು ಅವನಿಗೆ ಹೂಮಾಲೆ 

ಯನ್ನು ಕಟ್ಟಿ ಅರ್ಪಿಸುತ್ತಾಳೆ. ಇಬ್ಬರೂ ಕೂಡಿ ಹಾಡುತ್ತಾರೆ; ಇಬ್ಬರೂ 

ಕೂಡಿ ಹಾರುಮನಿ (ಹಾರ್ಮೋನಿಯಮ್) ಬಾರಿಸುತ್ತಾರೆ. ಈಗಿನ ಹುಡು 

ಗರ ನಡತೆಯೇ ಚಮತ್ಕಾರವಾದದ್ದು ! ?” ಎಂದು ಯಮುನಾಬಾಯಿ 

ಯಾದರೂ ಪರ್ಯಾಮದಿಂದ ತನ್ನ ಒಪ್ಪಿಗೆಯನ್ನಾದರೂ ಸೂಚಿಸಿದಳು. 


ಲಲಿತೆಯು ಬಲವತ್ತರವಾದ ನಾಚಿಕೆಯಿಂದ ತಾಯಿಯ ಬೆನ್ನು ಮರೆ 

ಯಾಗಿ ನಿಂತುಕೊಂಡು ಮೆಲ್ಲನೆ ರಂಗನ ಮುಖವನ್ನು ನೋಡುತ್ತಿದ್ದಳು.  

ಯಾಕೆ ನೋಡಿದಳೆಂಬದು ಅವಳಿಗೂ ಚೆನ್ನಾಗಿ ತಿಳಿದಿದ್ದಿಲ್ಲ. 


"ಯಮುನಾಬಾಯಿ, ಎಳೆಮಕ್ಕಳಿವರು, ಇವರಿಗೇನು ತಿಳಿಯುತ್ತದೆ? 

ಸಲಿಗೆಯಿಂದ ಕೂಡಿ ಮಾತಾಡಿದರೆ ನೀನು ಇವರ ಮೇಲೆ ಹಾಡುಕಟ್ಟಿ ಹಾಡ 

ಬರಬೇಡ ! "


" ಏನಾಯಿತೀಗ ? ಅವರು ತಿಳುವಳಿಕೆಯಿಂದಲೇ ಪರಸ್ಪರರೊಡನೆ 

ಪ್ರೇಮದಿಂದ ನಡಕೊಂಡಿದ್ದರೂ ನಮಗೆ ಸಂತೋಷವೇ ! ” ಎಂದು ಪದ್ಮ 

ನಾಭರಾಯನು ನುಡಿದು ಅಕ್ಕನನ್ನೂ ಲಲಿತೆಯುವ ರಥದಲ್ಲಿ ಕುಳ್ಳಿರಿಸಿ 

ಸ್ಟೇಶನಕ್ಕೆ ಕರಕೊಂಡು ಹೋದನು. 

=========================================== 

 

ದೇವರೇ ಪಾರುಮಾಡಿದಿ ಕಂಡಿಯಾ . 


“Life is as tedious as a twice-told tale” 


ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ 

ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು ತುಸು 

ಹೊರಬೀಸಾಗಿದ್ದು ಅದನ್ನು ವಾಯು ಸಂಚಾರಕ್ಕೆ ಅನುಕೂಲವಾಗಿರುವಂತೆ 

ಕಟ್ಟಿದ್ದರು. ಮನೆಯ ಸುತ್ತಲು ಚಿಕ್ಕದಾಗಿರುವದೊಂದು ಹೂದೋಟವೂ 

ಇತ್ತು, 


ಆ ದಿವಸ ಮನೆಯಲ್ಲಿ ವಿಲಕ್ಷಣವಾದ ಸ್ವಚ್ಛತೆಯು ಕಂಡು ಬರುತ್ತಿತ್ತು, 

ಮನೆಯವರೆಲ್ಲರೂ ತಮ್ಮ ತಮ್ಮ ಕೆಲಸವನ್ನು ಮು೦ದಿಟ್ಟು ಕೊಂಡಿದ್ದರೂ 

ಅದನ್ನು ಮಾಡಲರಿಯದೆ ಚಿಂತಾಕ್ರಾಂತರಾಗಿ ಅಲ್ಲಲ್ಲಿ ಕುಳಿತಿದ್ದರು. ತಂದು 

ಬಂದು ಹಾಕುವವನಾದ ಮನೆಯ ಯಜಮಾನನೇ ವ್ಯಾಧಿಗ್ರನಾಗಿ 

ಬಿದ್ದಲ್ಲಿಯೇ ಬಿದ್ದು ಕೊಂಡಿದ್ದನು. ಎಂಟು ದಿವಸದಿಂದ ಅವನಿಗೆ ಈ 

ಕಡೆಯ ಪ್ರಜ್ಞೆಯೇ ಇದ್ದಿಲ್ಲ. 


ಚಿಂತೋಪಸಂತನ ಸೋದರತ್ತೆಯ ಮಗಳಾದ ಅನ್ನಪೂರ್ಣೆಯು 

ವ್ಯಾಧಿತನಿಗೆ ಶುಕ್ರೂಷೆಮಾಡುವದಕ್ಕಾಗಿ ಬಳಿಯಲ್ಲಿ ಕುಳಿತುಕೊಂಡಿದ್ದಳು, 

ಅನಾಥ ಬಾಲಿಕಾಶ್ರಮದಲ್ಲಿದ್ದುಕೊಂಡು ಅನ್ನಪೂರ್ಣೆಯ ವ್ಯಾಧಿತರಿಗೆ 

ಆರೈಕೆ ಮಾಡುವ ವಿದ್ಯೆಯನ್ನು ಕಲಿತಿದ್ದಳು, ಏಕಾಕಿನಿಯಾಗಿ ಬಹಳೊತ್ತು 

ಕಾದು ಕುಳಿತ ಶ್ರಮಕ್ಕಾಗಿಯೂ, ವ್ಯಾಧಿತನ ದುರವಸ್ಥೆಯನ್ನು ಕಂಡು 

ಕೊಂಡದ್ದಕ್ಕಾಗಿಯೂ ಅನ್ನ ಪೂರ್ಣೆಯು ಉದ್ವಿಗ್ನಳಾಗಿದ್ದಳು. 


ಆಕಸ್ಮಾತ್ತಾಗಿ ಚಿ೦ತೋಪಂತನು ತನ್ನ ವಿಶಾಲವಾದ ಕಣ್ದೆಗೆದು 

ನೋಡಿದನು, ಕೋಣೆಯಲ್ಲಿ ಮೃದುಲಾಂಗಿಯಾದ ಅನ್ನಪೂರ್ಣೆಯ ತಕ್ಕ 

ಮಟ್ಟಿಗೆ ಸುಂದರವಾಗಿರುವ ತನ್ನ ಮೊಗದಲ್ಲಿ ಚಿಂತೆಯನ್ನಾಂತು ಗೆಲ್ಲದ 

ಮೇಲೆ ಕೈಯಿಟ್ಟು ಕೊಂಡು ಕುಳಿತಿದ್ದಳು 


" ಹೊತ್ತಾದಂತೆ ಕಾಣುತ್ತದೆ ! ಹತ್ತರ ಗಾಡಿಗೆ ನಾನು ಹುಬ್ಬಳ್ಳಿಗೆ 

ಹೋಗಲೇಬೇಕು ” ಎಂದು ಬಡಬಡಿಸಿ ಚಿಂತೋಪಂತನು ಎದ್ದು ಕೂಡಲಿಕ್ಕೆ 

ಹೋದನು, ಚಾಚಿದ ಕೈ ಎಳಕೊಳ್ಳಲಿಕ್ಕೆ ಅಸಮರ್ಥನಾಗಿರುವನಾದ ಆ 

ಬೇನೆಯವನು ಏಳಲರಿಯದೆ ನೆರಳುತ್ತೆ ಅಂದದ್ದು :"ಯಾರಲ್ಲಿ ? ನನ್ನನ್ನು 

ಎಬ್ಬಿಸಬಾರದೆ ? ಹರ ಗಾಡಿ ತಪ್ಪಿದರೆ ಕಚೇರಿಯ ಕೆಲಸವೆಲ್ಲ ಕೆಟ್ಟು 

ಹೋಗುವದು. ಕಲ್ಲನಗೌಡರು ರಜೆಯ ಮೇಲೆ ಹೋಗಿದ್ದಾರೆ. ಉಳಿದವರು 

ಸಂಬಳ ತೆಗೆದು ಕೊಳ್ಳಲಿಕ್ಕೆ ಮಾತ್ರ ಇದ್ದಾರೆ. ನಾನು ಹೋಗಲೇಬೇಕು.” 


ಅನ್ನ ಪೂರ್ಣೆಯು ಮೆಲ್ಲನೆದ್ದು ( ಬೇನೆ ಬಂದಾಗ ಕಚೇರಿಯ 

ಮಾತೇಕೆ ? ನೆಟ್ಟಗಾಗಲಿ; ಕಚೇರಿಗೆ ಹೋಗುವಿರಂತೆ, ಬಹಳ ಮಾತಾಡಿ 

ಆಯಾಸ ಮಾಡಿಕೊಳ್ಳಬೇಡಿರಿ " ಎಂದು ಸದಯಾಂತಃಕರಣದಿಂದ 

ನುಡಿದಳು. 


" ಬೇನೆ! ಯಾತರ ಬೇನೆ ? ಯಾವಾಗಿನಿಂದ ಬೇನೆಬಿದ್ದಿರುವೆನು ?" 

 

" ಎ೦ಟಾನೆಂಟು ದಿವಸ ಮೈ ಮೇಲೆ ಎಚ್ಚರಿಕೆಯಿಲ್ಲದೆ ಮಲಗಿ 

ಕೊಂಡಿರುವಿರಿ ! ಮಾತಾಡಬೇಡಿರೆಂದು ನಾನು ಹೇಳಲಿಲ್ಲವೆ ? ಆಯಾಸ 

ಮಾಡಿಕೊಳ್ಳುತ್ತೀರಿ ?' ಎಂದು ಚಿಂತೋಪಂತನ ಮುಖವನ್ನು ನೋಡುತ್ತೆ 

ಅನ್ನಪೂರ್ಣೆಯು ನುಡಿದಳು. 

 

" ಯಾರು ! ನೀನು ಅನ್ನಪೂರ್ಣೆಯೇನು ? " 


"ಬಹಳ ಮಾತಾಡಬಾರದೆಂದು ಡಾಕ್ಟರರು ಶಾಸನಮಾಡಿರುವರು. 

ಕಣ್ಣು ಮುಚ್ಚಿಕೊಂಡು ಮಲಗಿರಿ” ಎಂದು ಹೇಳಿ ಅನ್ನ ಪೂರ್ಣೆಯು ಚಿಂತೋ 

ಪಂತನಿಗೆ ಔಷಧವನ್ನು ಕುಡಿಸಿ ಅವನ ತಲೆದಿಂಬು ಸರಿಮಾಡಿಟ್ಟು 

ಮೈ ತುಂಬ ಚೆನ್ನಾಗಿ ಹೊದಿಸಿದಳು. 


ಕಣ್ಣು ಮುಚ್ಚಿಕೊಂಡು ಮಲಗಿದರೂ ಚಿಂತೋಪಂತನು "ಎಂಟಾ 

ನೆಂಟು ದಿವಸ ಎಚ್ಚರವಿಲ್ಲದೆ ಇದ್ದೆನೇ? ನನಗೆ ತಿಳಿಯದೆ ನಾನೆಂತು ಆಸ್ವಸ್ಥ 

ನಾದೆನೋ ಏನೋ ! ಚಮತ್ತಾವೇ !! ” ಎಂದು ಅವನು ಆಲೋಚಿಸಲಾಗಿ 

ಅವನ ನಿದ್ದೆಯು ಹಿಂದಾಯಿತು. ಅವನ ಮಿದುಳು ವಿಚಾರಗ್ರಹಣಕ್ಕೆ 

ಅಕ್ಷಮವಾಗಿದ್ದರೂ ಸಂಸಾರಶಾಪದ ವಿವಿಧವಾದ ದುಃಸಂಗತಿಗಳು ಅವನ 

ಹೃದಯದಲ್ಲಿ ಸುತ್ತಾಡಿದ್ದರಿಂದ ದುಃಖಸಂತಪ್ತನಾಗಿ ಕಣ್ಣಿಗೆ ನೀರುತಂದನು. 

ಸಂಸಾರದಲ್ಲಿ ಅವನಿಗೆ ತಿಲಮಾತ್ರವೂ ಸುಖವಿರಲಿಲ್ಲ. ಅದರ ಭಾರವನ್ನು 

ಮಾತ್ರ ಅವನಿಗೆ ಅವ್ಯಾಹತವಾಗಿ ಹೊರಬೇಕಾಗಿತ್ತು. 


ಚಿ೦ತೋಪಂತನು ಹದಿನೆಂಟು ವರುಷದವನಿದ್ದಾಗ ಅವನ ತಂದೆಯು 

ಒಂದು ಹೆಣ್ಣು ತೆಗೆದು ಮದುವೆ ಮಾಡಿದ್ದನು. ಅವನ ಮನಸ್ಸಿನಲ್ಲಿ 

ಬೇರೊಬ್ಬ ಅಭಿನವಸುಂದರಿಯನ್ನು ಮದುವೆ ಮಾಡಿಕೊಳ್ಳಬೇಕೆಂ ದಿತ್ಕು, 

ಆದರೆ ಲಜ್ಜೆಗೂ ಜನರೂಢಿಗೂ ದುರಾಗ್ರಹಿಯಾದ ತ೦ದೆಯ ಅಂಜಿಕೆಗೂ 

ಅವನು ಈಡಾಗಿ ತನ್ನ ಮನೋಗತವನ್ನು ವ್ಯಕ್ತಪಡಿಸದಲೆ ಕಲ್ಲುಕಟ್ಟಿ 

ಕೊಂಡು ಭವಾರ್ಣವದಲ್ಲಿ ಈಸುಬಿದ್ದು ಬಿಟ್ಟನು. 


ತಂದೆ ತೀರಿಕೊಂಡ ಬಳಿಕ ಚಿಂತೋ ಸಂತನ ಸದರ್ನ ಮರಾಠಾ , ರೇಲ್ವೆಯ 

ಮಾರ್ಗವನ್ನು ಮಾಡತಕ್ಕವನಾದ ಸರ್ ಟೀ, ಟಾಮ್ ಸನ್ ನೆಂಬ 

ಕಂತ್ರಾಟಗಾರನ ಕೈ ಕೆಳಗೆ ಒಂದು ಚಾಕರಿಯನ್ನು ಸಂಪಾದಿಸಿಕೊಂಡು 

ಅಂದಿನಿಂದ ಸಪ್ತಾಪುರದಲ್ಲಿ ಮನೆಮಾಡಿ ಕೊಂಡಿದ್ದನು, ಚಿಂತೋಪಂತನ 

ಹೆಂಡತಿಯ ಹೆಸರು ಸುಶೀಲೆಯು, ಹೆಸರು ದಂಡ! ಅವಳು ಜಾತ್ಯಾ ದುಃಶೀಲೆ 

ಯಾಗಿದ್ದು ಮೇಲೆ ತಾಯಿಯ ಕಲಿಕೆ, ಕೇಳುವದೇನು ? ಸೊಸೆಮುದ್ದು 

ಮನೆಯಲ್ಲಿ ಕಾಲಿಟ್ಟ ಕ್ಷಣದಿಂದ ಅತ್ತೆಯೊಡನೆ ಹುರ್ರೆಂದು ಜಗಳಕ್ಕೆ 

ಪ್ರಾರಂಭ ಮಾಡಿದಳು, ಚಿಂತೋಪಂತನು ಸೌಮ್ಯ ಸ್ವಭಾವದವನೂ ಸುಶೀ 

ಲನೂ ಆಗಿದ್ದನು. ಸಂಸಾರ ಸುಖದ ಹೊಸ ಭರತಿಯಲ್ಲಿ ಮನೆಯ ಕಲಾಪ 

ವನ್ನು ಅವನು ಮೈಗೆ ಹಚ್ಚಿಕೊಳ್ಳಲಿಲ್ಲ.

 

ಸುಶೀಲೆಯು ಬೇಗ ಬೇಗನೆ ಇಬ್ಬರು ಗಂಡುಮಕ್ಕಳನ್ನು ಹಡೆದಳು. 

ತಾಯಿ ಮುದುಕೆ, ಹೆಂಡತಿಯು ಕೂಸಿನ ತಾಯಿ ! ಹೀಗಾಗಿ ಸಮಯಕ್ಕೆ 

ಊಟವಿಲ್ಲ; ದುಡಿದು ದಣಿದು ಮನೆಗೆ ಬರುವದರೊಳಗಿಯೇ ಅತ್ತೆ- 

ಸೊಸೆಯರು ಭೋರೆಂದು ಕಾದುತ್ತಿರುವರು. ಹೆಂಡವಾಡುವ ನಾಲ್ಕು 

ಸವಿ ಮಾತುಗಳು ಕೂಡ, ಪಾಪ, ಚಿ೦ತೋಪಂತನ ಕಿವಿಗೆ ಬೀಳುತ್ತಿದ್ದಿಲ್ಲ. 


"ಪುಣ್ಯವಂತಿಯರು ಮುನಸೀಫ ಮಾಮಲೇದಾಭದ ಹೆಂಡಿರಾಗಿ ಐಶ್ವರ್ಯ 

ದಲ್ಲಿ ಲೋಲಾಡುತ್ತಿರುವರು; ನನ್ನ ದೈವಕ್ಕೆ ಈ ಹತ್ತು ಗಂಟೆಯ ಅಡಿಗೆ 

ಮಾಡಿ ನೀರು ಹೊತ್ತು ಹೊತ್ತು ಸಾಯುವದು ಪ್ರಾಪ್ತವಾಯಿತು ! ಮೇಲೆ 

ಇ೦ಥ ಅತ್ತೆಯ ಕಿಟಿಕಿಟಿ !?” ಎಂದು ಕಂಡದ್ದನ್ನೆಲ್ಲ ಎಡವುತ್ತೆ ಪಾತ್ರೆಗಳನ್ನು 

ಇಕ್ಕರಿಸುತ್ತಿರುವ ಹೆಂಡತಿಯನ್ನು ನೋಡಿ ಚಿ೦ತೋಪಂತನಿಗೆ ಎಷ್ಟಾದರೂ 

ವ್ಯಸನವಾಗುತ್ತಿರಬಹುದು! ತನ್ನ ಮನಸ್ಸಿಗೆ ಬಂದಿದ್ದ ಗುಣಸಂಪನ್ನೆ ಯಾದ 

ಸುಂದರಿಯು ತನ್ನ ಹೆಂಡತಿಯಾಗಲಿಲ್ಲೆಂಬ ಚಿಂತೆಯು ಅವನ ಮನಸ್ಸಿನಲ್ಲಿ 

ಹೆಚ್ಚಾಗಿ ಕಟೆಯದಿರುವದೆ ? ಮೇಲಾಗಿ ಆ ಸುಚರಿತೆಯು ವಿಧವೆಯಾಗಿ 

ಜಗತ್ತಿನಲ್ಲಿ ಕಣ್ಣು ಕಟ್ಟಿ ಬಿಟ್ಟವರಂತೆ ಆಧಾರಹೀನಳಾದ ಸಂಗತಿಯಾದರೂ 

ಅವನ ವ್ಯಸನಕ್ಕೆ ಕಾರಣವಾಗಿತ್ತು, 


ಚಿಂಚೋಪಂತನು ಸುಶೀಲನೂ ಸಮಾಧಾನವುಳ್ಳ ವೃತ್ತಿಯವನೂ 

ಆಗಿದ್ದರಿಂದ ಬಂದದ್ದನ್ನೆಲ್ಲ ನುಂಗಿಕೊಂಡಿದ್ದನು. ಆದರೂ ಅವನ ಮುಂದೆ 

ಬಡಿಸಿಟ್ಟ ದುಃಖದ ಎಡೆಯು ಸವೆಯಲೊಲ್ಲದು. 


ಲೋಹಮಾರ್ಗದ ರಚನೆಯು ಮುಗಿದು ಹೊಗೆಬಂಡಿಗಳು ಓಡಾಡ 

ಹತ್ತಿದ ಬಳಿಕ ಚಿ೦ತೋಪಂತನು ಹುಬ್ಬಳ್ಳಿಯಲ್ಲಿಯ ಒಂದು ರೇಲ್ವೆ ಆಫೀಸದ 

ಹೆಡ್‌ಕ್ಲಾರ್ಕನಾದನು. ದಿನಾಲು ಧಾರವಾಡದಿಂದ ಹುಬ್ಬಳ್ಳಿಗೆ ಹತ್ತು 

ಗಂಟೆಗೆ ಹೋಗಿ ಸಂಜೆಯ ಐದಕ್ಕೆ ಮನೆಗೆ ಬರುವನು, ಆಂತಃಕರಣದ 

ತಾಯಿಯು ತೀರಿಕೊಂಡದ್ದರಿಂದ ಹೆಂಡತಿಯ ತಾಪವು ಅವನಿಗೆ ಅಧಿಕವಾಗಿ 

ತೋರಿತು. ಸಿದ್ದೂ, ಗಣಾ ಎಂಬ ಅವರಿಬ್ಬರು ಮಕ್ಕಳು ಸಾಲೆ ಬಿಟ್ಟು ಮನೆ 

ಮೂಳರಾಗಿ ಕುಳಿತರು. 


ತಂದೆಯು ನೂರು ರೂಪಾಯಿ ಸಂಬಳವುಳ್ಳ ಅಧಿಕಾರಿಯಿರುವನೆಂಬ 

ಹೆಮ್ಮೆಯಿಂದಲೂ, ತಾಯಿಯ ಮೈ ಮೇಲಿರುವ ಮೂರು ನಾಲ್ಕು ಸೇರು 

ಬಂಗಾರದ ದೀಪ್ತಿಯಿಂದಲೂ ಸಿದ್ದೇಶ್ವರನ ತಲೆ ತಿರುಗಿ ಹೋಗಿದ್ದರಿಂದ 

ಅವನು ಉದ್ದಾಮನಾಗಿ ವರ್ತಿಸುತ್ತಿದ್ದನು. ಚಿಕ್ಕವನು ವೇಶ್ಯಾಗೃಹಸಂಚಾರಿ 

ಗಳಾದ ರಾವಸಾಹೇಬರ ಅನುಯಾಯಿಯಾಗಿ ತಂಬಾಕಚರ್ವಣ ಧೂಮ್ರ 

ಪಾನಗಳ ವ್ಯಸನವನ್ನು ತಗಲಿಸಿಕೊಂಡು ಸುಲಿದ ಬಡಿಗೆಯಂತೆ ಕ್ಷೀಣನಾಗಿ 

ದ್ದನು. ಅಹೋರಾತ್ರಿ ನಾಟಕದ ಪದಗಳನ್ನು ಕೇಳಿದವರ ಕಿವಿ ಕೀಸರಾಗು 

ವಂತೆ ಅಪದ್ಧ ವಾಗಿ ಹಾಡುವನು, ವೇಶ್ಯಾ ಜನರ ಸೇವೆಯಲ್ಲಿ ನಿರತನಾಗಿದ್ದ 

ಗಣಪತಿಗೆ ಮನೆಯ ಅರಿವೇ ಇದ್ದಿಲ್ಲ. 


ಸಿದ್ದೇಶ್ವರನು ಆಕ್ಷರಸ್ಥನಾಗಿದ್ದುದರಿಂದ ಅವನ ತಂದೆಯು ಹುಬ್ಬ 

ಳ್ಳಿಯ ಗಿರಣಿಯಲ್ಲಿ ಒಂದು ಚಾಕರಿ ಕೊಡಿಸಿದ್ದನು. ಆದರೆ ಉನ್ಮತ್ತನಾದ 

ಆ ಪೋರನಿಗೂ ಗಿರಣಿಯ ವ್ಯವಸ್ಥಾಪಕನಿಗೂ ಕೂಡಿ ಬರಲಿಲ್ಲಾದ್ದರಿಂದ 

ಅವನು ವರ್ತಮಾನಪತ್ರಗಳ ಲೇಖಕನಾಗುವ ಯತ್ನದಲ್ಲಿರುವೆನೆಂದು ತಂದೆ 

ತಾಯಿಗಳಿಗೆ ಹೇಳಿ ಕಾಗದ ಮಸಿಗಳಿಗೆ ಕಾಳರೂಪಿಯಾದನು. ಕಡೆಗೆ ಅವಿ 

ಚಾರಿಗಳಾದ ಮಕ್ಕಳನ್ನು ಕಂಡರೆ ತಂದೆಗೆ ಆಗುತ್ತಿದ್ದಿಲ್ಲ. ತಂದೆಯ ಸಮ 

ಕ್ಷದಲ್ಲಿ ಕುಳಿತು ಉಣ್ಣಲಿಕ್ಕೆ ಮಕ್ಕಳಿಗೆ ಮನಸ್ಸಾಗುತ್ತಿದ್ದಿಲ್ಲ. 


ಚಿ೦ತೋಪಂತನಿಗೆ ನಿತ್ಯದಲ್ಲಿಯೂ ಒಂದೇ ಪ್ರಕಾರದ ತಾಪಗಳು, 

ಅದೇ ಊಟದ ಅನಾನುಕೂಲತೆ, ಅದೇ ಗಾಡಿಯ ಅವಸರ; ನಿರಂತರವಾದ 

ಕಚೇರಿಯ ಕೆಲಸದ ತಾಪ, ಮಕ್ಕಳ ಅವಿಚ್ಛಿನ್ನವಾದ ದುವ್ಯಾಪಾರ, 

ಚಿ೦ತೋಪಂತನೆಂದೇ ಅವುಗಳನ್ನು ಅನುಭವಿಸುತ್ತಿದ್ದನೆ ಹೊರತಾಗಿ ಮತ್ತೊ 

ಬ್ಬನಾಗಿದ್ದರೆ ಉರುಲು ಹಾಕಿಕೊಳ್ಳುವ ಮಾತು. 


ಮುನಸಿಪಲ್ ಇಲೆಕ್ಶನ್ನದ ಗಡಿಬಿಡಿಯ ಮೂಲಕ ಒಂದು ದಿವಸ 

ಚಿಂತೊಪಂತನಿಗೆ ಸ್ಟೇಶನಕ್ಕೆ ಹೋಗಲಿಕ್ಕೆ 'ಟಾಂಗೆ' ಸಿಗಲಿಲ್ಲ. ಹೊಟ್ಟೆಯಲ್ಲಿ 

ಕೂಳು ತುಂಬಿಕೊಂಡು ಅವನು ನಡೆಯುತ್ತ ಸ್ಟೇಶನಕ್ಕೆ ಹೊರಟನು. 

ಕರ್ಮಧರ್ಮ ಸಂಯೋಗದಿಂದ ಮಾರ್ಗದಲ್ಲಿ ಒಳಿತಾಗಿ ಮಳೆ ಹೊಡೆಯಿತು. 

ತೋಯಿಸಿಕೊಂಡು ಚಿ೦ತೋಪಂತನು ಕಚೇರಿಗೆ ಹೋದವನು ಸಂಜೆಗೆ ಜ್ವರ 

ತಕ್ಕೊಂಡೇ ಮನೆಗೆ ಬಂದನು. 


ಮೇಲೆ ವಿವರಿಸಿದಂಥ ಅಸಹ್ಯವಾದ ಸಂಸಾರ ತಾಪಗಳನ್ನು ನೆನೆದು 

ಚಿ೦ತೋಪಂತನು ವ್ಯಾಕುಲನಾಗಿ ಆಗಾಗ್ಗೆ ಬಾಯಲ್ಲಿ ಏನೋ ಒಟಗುಡು 

ತ್ತಿದ್ದನು, ಅನ್ನಪೂರ್ಣೆಯು ಅವನ ಬಾಯಿ ಸಪ್ಪಳವನ್ನು ಬಹಳ ಹೊತ್ತು 

ಕೇಳಿ ಮೆಲ್ಲನೆ ಮುಸುಕು ತೆಗೆದು ನೋಡಿದಳು, ಹೃದಯದಲ್ಲಿ ಕಲ್ಲೋಲ 

ವನ್ನು ೦ಟುಮಾಡುವ ವಿಚಾರಗಳ ನಿರ್ಭರಕ್ಕಾಗಿ ಪಾಪ, ಆ ರೋಗಿಯು 

ಆಯಾಸ ಹೊಂದಿದ್ದನು. ಮೈಯೆಲ್ಲ ಜೋರೆಂದು ಬೆವತಿತ್ತು. ಹಿತೈಷಿಣಿ 

ಯಾದ ಅನ್ನಪೂರ್ಣೆಯು ಚಿ೦ತೋಪಂತನ ದುಃಸ್ಥಿತಿಯನ್ನು ಕಂಡು ಒಳಿ 

ತಾಗಿ ಉಸುರ್ಗರೆದು ಜೋಕೆ ಯಿಂದ ಅವನ ಬೆವರೊರಿಸಿ ತನ್ನ ಸೆರಗಿನಿಂದ 

ಮೆಲ್ಲನೆ ಗಾಳಿ ಹಾಕಿದಳು, ತುಸು ಹೊತ್ತಿನಲ್ಲಿ ಅವನಿಗೆ ನಿದ್ದೆ ಹತ್ತಿತು. 


ವಿಕಾರವಶತೆಯಿಂದುಂಟಾದ ಆಯಾಸಕ್ಕಾಗಿ ರೋಗಿಯು ಹೆಚ್ಚಿಗೆ 

ಕ್ಷೀಣನಾದನು, ನಿನ್ನಿಗಿಂತಲೂ ಈ ದಿವಸದ ಸ್ಥಿತಿಯು ಕೆಟ್ಟದ್ದು. ಡಾಕ್ಟರ 

ಮಂಗೇಶರಾಯರು ರೋಗಿಯ ನಾಡೀ ಪರೀಕ್ಷೆ ಮಾಡಿ ಅನ್ನಪೂರ್ಣೆಯನ್ನು 

ಕುರಿತು 14 ಕಠಿಣವಿದೆ ” ಎಂದು ಹೇಳಿದರು. 


" ಏನಾಯಿತು ? ” ಎಂದು ಅನ್ನ ಪೂರ್ಣೆಯು ದ್ರವಹಾರಿ ಕೇಳಿದಳು. 


" ತೀರ ನಿಕ್ಕಳಿಕೆಗೆ ಬಿದ್ದಿದ್ದಾರೆ. ಏನಾಗುತ್ತದೆಯೋ ಹೇಳಲಾಗದು.” 


" ಈ ಸಮಾಚಾರವನ್ನು ಸುಶೀಲಾಬಾಯಿಯವರಿಗೆ ತಿಳಿಸಲೆ ? " 

ಎಂದು ಅನ್ನಪೂರ್ಣೆಯು ಕಣ್ಣು ತುಂಬಾ ನೀರು ತಂದು ಕೇಳಿದಳು. 


" ಉಪಾಯವೇ ಇಲ್ಲ, ತಿಳಿಸಬಹುದು ?” ಎಂದು ಹೇಳಿ ಡಾಕ್ಯ 

ರರು ಅನಿರ್ವಾಹಕ್ಕಾಗಿ ಕೆಲವು ಔಷಧಗಳನ್ನು ಕೊಟ್ಟು ಹೊರಟುಹೋದರು.  


" ನಿಕ್ಕಳಿಕೆ " "ಸುಶೀಲಾಬಾಯಿಗೆ ತಿಳಿಸಲೆ ? " " ಉಪಾಯವಿಲ್ಲ” 

ಮುಂತಾದ ಮೇಲಿನ ಸಂವಾದದಲ್ಲಿಯ ಶಬ್ದಗಳು ಚಿಂತೋಪಂತನ ಕಿವಿಗೆ 

ಬಿದ್ದು ಅವನಿಗೊಂದು ಪ್ರಕಾರದ ಚೇತನವು ಬಂದಂತಾಯಿತು. 

 

" ' ಸುಶೀಲಾಬಾಯಿಗೆ ತಿಳಿಸಲೆ ' ಯಾಕೆ ? ನಾನು ಔಷಧ ತೆಗೆದು 

ಕೊಳ್ಳುವದಿಲ್ಲವೆಂದು ತಿಳಿದು ಆ ಚಂಡಿಯನ್ನು ನನ್ನ ಮುಂದೆ ತಂದು ನಿಲ್ಲಿಸು 

ವಿರೇನು ಮತ್ತೆ ? ?” ಎಂದು ವಿಚಾರಿಸಿ ಅವನು ತುಸು ಹೆದರಿದನು, 


" ಉಪಾಯವಿಲ್ಲವೇಕೆ೦ದರು? ನಾನು ಸಾಯುವೆನೇನು ? ' ಮರಣಂ 

ಪ್ರಕೃತಿಃ ಶರೀರಿಣಾಂ' ಎಂಬ ಮಾತು ಸತ್ಯವಿರಲಿ ಇರದಿರಲಿ, ' ವಿಕೃತಿರ್ಜೀ 

ವಿತಮುಚ್ಯತೇ ಬುಧೈಃ' ಎಂಬದು ಮಾತ್ರ ಸರ್ವಾ೦ಶಗಳಲ್ಲಿ ಸತ್ಯವು, ಆಃಹಾ, 

ಈ ಸಮಯದಲ್ಲಿ ಮರಣ ಬಂದರೆ ನಾನು ಗೆದ್ದೆ ನಲ್ಲನೆ ? ?” ಎಂದು ಅವನು 

ಮೆಲ್ಲನೆ ಉದ್ಘಾರ ತೆಗೆದು ಮತ್ತೆ ಕಣ್ಣು ಮುಚ್ಚಿದನು. 

 

ತುಸು ಹೊತ್ತಿನ ಮೇಲೆ ಅನ್ನ ಪೂರ್ಣೆಯು ಅವನ ಕೈಹಿಡಿದು ನೋಡಿ 

ದಳು. ತುದಿ ಬೆರಳುಗಳು ತಣ್ಣಗಾಗಿದ್ದವು. ಅವಳ ಕೋಮಲವಾದ ಹಸ್ತ ಸ್ಪರ್ಶ 

ದಿಂದ ಚಿ೦ತೋಪಂತನಿಗೆ ತುಸು ಎಚ್ಚರ ಬಂದಂತಾಗಿ ನಾನು ಸಾಯುವೆ 

ನೇನು ? ” ಎಂದು ಅನ್ನಪೂರ್ಣೆಯ ಮುಖವನ್ನು ನೋಡಿ ಕೇಳಿದನು. 

 

" ಭರವಸವಿಲ್ಲವೆಂದು ಡಾಕ್ಟರರು ಹೇಳಿದ್ದಾರೆ" ಎಂದು ಅವಳು 

ಗದ್ದ ದಿತಕಂಠೆಯಾಗಿ ಮೆಲ್ಲನೆ ಉಸುರಿದಳು. 

 

"ದೀನದಯಾಳಾ, ಪಾರುಮಾಡಿದಿ ಕಂಡಿಯಾ ! " - 


ಬದುಕುವ ಆಶೆಯಿಲ್ಲೆ೦ದು ಡಾಕ್ಟರರು ಹೇಳಿದ ಸಂಗತಿಯನ್ನು ಕೇಳಿ 

ಸುಶೀಲೆಯು ತನ್ನ ಮುತ್ತೈದೆತನವನ್ನು ನೆನೆದು ದುಃಖಿತಳಾದಳು. ಗಣ 

ಪತಿಯು ರಂಗಾಸಾನಿಗಾಗಿ ಕೊಯ್ದಿರುವ ಹೂವಿನ ಬುಟ್ಟಿಯನ್ನು ತೋಟ 

ದಲ್ಲಿಯೇ ಬಿಟ್ಟು ತಂದೆಯ ಬಳಿಗೆ ಬಂದನು, ಸಿದ್ದೇಶ್ವರನು ತಾನು ಬರೆದಿಟ್ಟ 

ಕಾಗದಗಳನ್ನು ಅವಸರದಿಂದ ಪಾಙ್ಕ್ತವಾಗಿ ಕೂಡಿಸತೊಡಗಿದನು. 

 

ಹೆಂಡತಿಯ ಮಕ್ಕಳೂ ತನ್ನ ಬದಿಗೆ ಬಂದು ನಿಂತದ್ದು ಕಂಡು 

ಚಿ೦ತೋಪಂತ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಕಾರಗಳು ಉದ್ಭವಿಸಿ 

ದವು. ಹೆಂಡತಿಯು ಮೇಲೆ ಅವನ ಪ್ರೇಮವು ವಿಶೇಷವಾಗಿ ಇಲ್ಲದಿದ್ದರೂ 

" ಧರ್ಮೇ ಚ ಅರ್ಥೇ ಚ ಕಮೇ ಚ ನಾತಿಚರಾಮಿ ” ಎಂದು ತಾನು ಅವ 

ಳೊಡನೆ ಪ್ರತಿಜ್ಞೆ ಮಾಡಿದ್ದ ನ್ನು ಸರ್ವಥಾ ಅವನು ಉಲ್ಲಂಘಿಸಿದ್ದಿಲ್ಲ. ಆದರೂ 

ಸಂಸಾರದಲ್ಲಿ ತನಗೆ ಸುಖವಾಗಲಿಲ್ಲವೆಂದು ನೆನಿಸಿ ಅವನು ದುಃಖಿತನಾದನು. 

ಸಿದ್ದೇಶ್ವರನೂ ಗಣೇಶ ನಾ ಚಿಕ್ಕ ಮಕ್ಕಳಿದ್ದಾಗ ಅವರು ತನ್ನ ಅರಗಿಳಿಗಳೇ 

ಎಂದು ಅವನು ಅಕ್ಕರತೆಯನ್ನು ಹೊಂದಿದ್ದನು. ಅದೇ ಮಕ್ಕಳು ಈಗ 

ವ್ರಾತ್ಯಾರಾಗಿ ತಾವೂ ಸುಖಿಗಳಾಗಲಿಲ್ಲ, ತಂದೆಯಾದ ತನಗೂ ಸುಖ ಕೊಡ 

ಲಿಲ್ಲವೆಂದು ಕಂತು ಸರ್ವಸಂಗ ಪರಿತ್ಯಾಗ ಮಾಡಿದ ಭಾವಾ ಬೈರಾಗಿಗಳ 

ಜೀವಿತವೇ ವಿಹಿತವಾದದ್ದೆಂದು ಅವರು ತಿಳಿದನು, ಹೆಂಡತಿಯು ದುಃಖ 

ದಿ೦ದ ಅಳುವುವದು ಕಂಡು ಅವನಂದದ್ದು : 

" ಯಾಕೆ ಅಳುತ್ತೀ ? ಸಾವು ಬಿಡಿಸುವವರಾರು ? ನನ್ನ ಅವಸ್ಥೆ 

ಏನೆಂದು ಶೋಕಿಸಬೇಡ, ನನಗೆ, ಯಾವ ವ್ಯಥೆಯೂ ಇಲ್ಲ ! ಸಮಾಧಾನ 

ವನ್ನು ತಾಳಬೇಕು, ಬೇಟೆ ಮಾರ್ಗವೇ ಇಲ್ಲ. ” 


ಉಪಚಾರಕ್ಕಾಗಿ : ನಿಮ್ಮನ್ನು ಬಿಟ್ಟು ಹೇಗೆ ಸಾಯಲಿ ! * ಎಂದೆನ್ನ 

ಬೇಕೆಂದು ಅವನು ಯೋಚಿಸಿದನು. ಆದರೆ ಸಾಯುವ ಸಮಯದಲ್ಲಿ ಸುಳ್ಳಾಡ 

ಲರಿಯದೆ ವನು ಹಲ್ಲಲ್ಲಿ ನಾಲಿಗೆ ಇಟ್ಟುಕೊಂಡು ಕುಳಿತನು. 

 

" ಮುಂದೆ ನನ್ನ ಗತಿಯೇನು ? ಸಿದ್ದೇಶ್ವರ ಗಣಪತಿಗಳಿಗೆ ಏನು 

ಹೇಳುತ್ತೀರಿ ? ” ಎಂದು ನಿಜವಾದ ದುಃಖದಿಂದ ಸುಶೀಲೆಯು ಕೇಳಿದಳು. 


" ಗತಿಯೇನು! ಲಯಿಫ ಆಶ್ಚುರನ್ಸದ ೪೦೦೦ ರೂಪಾಯಿಗಳು 

ಬರುವವು. ನಿಮ್ಮ ಮೇಲೆ ಬಂಗಾರವಿದೆ; ನಾವಿದ್ದ ಮನೆಯನ್ನು ಕೊಂಡು 

ಬಿಟ್ಟಿದ್ದೇನೆ, ಕೆಲಗೇರಿಯ ಗದ್ದೆಯಿಂದ ಹೊಟ್ಟೆಗೆ ಸಾಕಷ್ಟು ನೆಲ್ಲು ಬರು 

ತ್ತದೆ, ಹೇಗಾದರೂ ಇರಿರಿ, ಹುಡುಗರು ಒಳ್ಳೆ ರೀತಿಯಿಂದ ನಡಕೊಂಡರೆ 

ಹೊಟ್ಟೆ ಬಟ್ಟೆಗೆ ಏನು ಕಡಿಮೆ ? ” ಎಂದು ನುಡಿದವನೇ ಮತ್ತೆ ಭ್ರಮ 

ಬಂದಂತಾಗಿ ಮಲಗಿದನು. ಇಷ್ಟಕ್ಕೆಯೇ ನಾಲಿಗೆ ಕುಂಠಿತವಾದದ್ದು ಕಂಡು 

ಇನ್ನೇನು ಮರಣವೇ ಬಂದಿತೆಂದು ನೆನೆದು ಅವನು ಒಳ್ಳೆ ಸಂತುಷ್ಟನಾಗಿ 

ಮಲಗಿದನು. 


ಈಗ ಪ್ರಾಣವು ಹೋಗುತ್ತದೋ. ಇನ್ನೊಂದು ಕ್ಷಣಕ್ಕೆ ಹೋಗು 

ತ್ತದೋ ಎಂದು ಎಲ್ಲರತಾ ಹೌಹಾರಿ ಕುಳಿತಳು. ತೀರ್ಥ ಗಂಗಾಜಲಗಳ 

ಹನಿಗಳು ಕಷ್ಟದೊಂದಿಗೆ ಗಂಟಲಿನಲ್ಲಿ ಇಳಿದವು. ಹಾಗೂ ಹೀಗೂ ರಾತ್ರಿ 

ಪಾರಾ:ತು, ಚಿಂತೋಪಂತನಿಗೆ ಮನೋಹರವಾದ ಕನಸು ಬಿದ್ದಂತಾಗಿ 

ಅವನು ಸುಖನಿದ್ರೆಗೈದಿದನೆಂದು ಹೇಳಬಹುದು. 


ಮರುದಿವಸ ಶ್ವಾಸೋಚ್ಛ್ವಾಸವು ಸಮಾಧಾನಕರವಾಗಿ ನಡೆಯಿತು. 

ನಾಡಿಗಳು ಮೆಲ್ಲನೆ ಆಡಲಾರಂಭಿಸಿದವು. ಡಾಕ್ಟರರು ಚಿಂತೋಪಂತನ 

ಸರ್ವಾಂಗವನ್ನೆಲ್ಲ ಚೆನ್ನಾಗಿ ಪರೀಕ್ಷಿಸಿ "ಇನ್ನೇ್ನು ಚಿಂತೆಯಿಲ್ಲ ! ” ಎ೦ದು 

ನಗೆಮೊಗವನ್ನು ತಾಳಿ ಹೇಳಿದಳು. 


ಸುಶೀಲೆಯು ಸಮಾಧಾನದ ಉಸುರ್ಗರೆದು "ನೋಡಿರಪ್ಪಾ ನೀವೇ 

ಹೊಟ್ಟೆಯಲ್ಲಿ ಹಾಕಿಕೊಳ್ಳಿರಿ ! ” ಎ೦ದು ಡಾಕ್ಟರರಿಗೆ ಹೇಳಿಕೊಂಡಳು. 

 

" ಚಿ೦ತೇ ಬಿಡಿರಿ ! ಮಾತ್ರ ನೀವು ಇಲ್ಲಿ ನಿಷ್ಕಾರಣವಾಗಿ ಗೊಂದಲ 

ಮಾಡಿ ಇವರ ನಿದ್ದೆ ಕೆಡಿಸಬೇಡಿರಿ. ಆದಷ್ಟು ನಿದ್ದೆ ಒಳ್ಳೇದು. ಶಿಶ್ರೂಷೆಗೆ 

ಅನ್ನ ಪೂರ್ಣಾಬಾಯಿಯವರು ಒಬ್ಬರು ಮಾತ್ರ ಇರಲಿ, ನೀವೆಲ್ಲರೂ ನಿಮ್ಮ 

ಉದ್ಯೋಗಕ್ಕೆ ಹೆಣರಟುಹೋಗಿರಿ” ಎಂದು ಹೇಳಿ ಎಲ್ಲರನ್ನು ಕರಕೊಂಡು 

ಡಾಕ್ಟರರು ಹೊರಬಿದ್ದು ಹೋದರು .

 

"ಬಹಳೊತ್ತಿನ ಮೇಲೆ ನಿದ್ರೆ ತಿಳಿದಂತಾಗಿ "ನಾನು ಸತ್ತೆನೇನು?"

ಎಂದು ಚಿಂತೋಪಂತನು ಅರೆನಿದ್ದೆಯಲ್ಲಿಕೇಳಿದನು. 


ಯಮಪಾಶವು ಸಡಿಲಾಗಿ ಕಳಚಿಬಿದ್ದುದರಿಂದಲೇ ಅವನ ಬಾಯಿ 

ಯಿಂದ ಶಬ್ದಗಳು ಹೊರಟವಷ್ಟೆ ? ಚಿಂತೋಪಂತನ ವಿಲಕ್ಷಣವಾದ 

ಪ್ರಶ್ನವನ್ನು ಕೇಳಿ ಅನ್ನಪೂರ್ಣೆ, ವಿನೋದವಾಗಿ ಅವಳು ತುಸು ಕೇಳಬರು 

ವಂತೆ ನಕ್ಕಳು. ತನ್ನ ಕನಸಿಗೂ ಆ ನಗೆಗೂ ಸಂಬಂಧವಿದ್ದಂತಾಗಿ ಚಿಂತೋ 

ಪಂತನು ಮೆಲ್ಲನೆ ಕಣ್ಣೆರೆದು ನೋಡಿದನು. 


" ಅನ್ನಪೂರ್ಣಾ ನೀನೆಂದು ಬದಿ ? ನಿನ್ನೆ ಮೊನ್ನೆ ನಿನ್ನನ್ನು 

ಎಲ್ಲಿಯೊ ನೋಡಿದಂತಾಯಿತು. ” 


" ಮಾತಾಡಗೊಡಬಾರದೆಂದು ಡಾಕ್ಟರರು ಹೇಳಿದ್ದಾರೆ. ” ಎಂದು 

ಅನ್ನಪೂರ್ಣೆಯು ಮಂದಸ್ಮಿತೆಯಾಗಿ ಹೇಳಿದಳು. 


“ ನಾನಿನ್ನು ಸಾಯಲಿಕ್ಕಿಲ್ಲೇನು?” ಎಂದು ಅವನು ಮತ್ತೆ ಕೇಳಿದನು, 


" ಸಾವಿನ ಮಾತೇ ತೆಗೆಯಬೇಡಿರಿ. ಇಂದಿಗೆಂಟನೆಯ ದಿವಸ ನೀವೇ 

ಸಂಬಳ ತೆಗೆದುಕೊಳ್ಳಲಿಕ್ಕೆ ಹುಬ್ಬಳ್ಳಿಗೆ ಹೋಗುವಿರಿ. ಸದ್ಯಕ್ಕೆ ದಯಮಾಡಿ 

ಮಾತಾಡಬೇಡಿರಿ, ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಲಿಕ್ಕೆ ಯತ್ನಮಾಡಿರಿ." 

 

"ಆಜ್ಞೆಯ ಮೇರೆಗೆ ಚಿ೦ತೋಪಂತನು.ಕಣ್ಣು ಮುಚ್ಚಿದಂತೆ ಮಾಡಿ 

ದನು, ಆದರೆ ಅವು ಮುಚ್ಚಲೊಲ್ಲವು. ನಿಚ್ಚಳವಾಗಿ ಕಣ್ಣೆರೆದು ಕೆಲಹೊತ್ತಿನ 

ವರೆಗೆ ಅವನು ಅಸಂಬದ್ಧವಾಗಿ ಬಡಬಡಿಸಿದಂತೆ ಮಾಡಿದನು. ಅನ್ನ 

ಪೂರ್ಣೆಯು ಅವನ ಮಾತುಗಳನ್ನು ತಡೆಯಲಿಲ್ಲ, ಅವನಿಗೆ ಉತ್ತರವನ್ನೂ 

ಕೊಡಲಿಲ್ಲ. ಅವನೇ ಮಾತಾಡಿ ದಣಿದು ಮತ್ತೆ ತುಸು ನಿದ್ದೆ ಮಾಡಿದನು. 

ಅರ್ಧಗಳಿಗೆಯಲ್ಲಿಯೇ ಮತ್ತವನು ಎಚ್ಚತ್ತು ಜೀವಕಳೆಯಿಂದ ಯುಕ್ತವಾದ 

ತನ್ನ ಕಣ್ಣು ತೆರೆದು ನೋಡಿದನು, ಅನ್ನಪೂರ್ಣೆಯು ಕೆಳಗೆ ಮೋರೆ ಮಾಡಿ 

ಕೊಂಡು ಕಾಲುಚೀಲವನ್ನು ಹೆಣೆಯುತ್ತೆ " ಹರಿ ಕೊಟ್ಟದ್ದು೦ಡು ಇಟ್ಟ೦ತಿ 

ರೊದಲ್ಲದೆ | ಪರತೊಂದು ಬಯಸುವರೇ ” ಎಂದು ಬಹು ಮೆಲ್ಲಗೆ ಮಂಜುಲ 

ವಾಗಿ ಹಾಡುತ್ತಿದ್ದಳು. ಆ ಸ್ವರದ ಸೋ೦ಪಿಗೆ ಚಿ೦ತೋಪಂತನ ಜೀವಕ್ಕೆ 

ಉತ್ಸಾಹ ಬಂದಂತಾಗಿ "ಪೂರ್ಣಾ, ನಾನಾಗಲೇ ಏನೇನೋ ಹುಚ್ಚನಂತೆ  

ಮಾತಾಡುತ್ತಿದ್ದೆನಲ್ಲವೆ ? ” ಎಂದು ಕೇಳಿದನು.  


"ಆಹುದು ! ಏನೇನೋ ಬಡ ಬಡಿಸುತ್ತಿದ್ದಿರಿ. * ಎಂದು ಅವಳು 

ಸುಳ್ಳಾಡಿದಳು. ನಿಜವಾಗಿ ಹೇಳಬೇಕಾದರೆ ಚಿ೦ತೋಪಂತನು ಬಡಬಡಿಸಲಿಲ್ಲ. 

ಎಚ್ಚರುಳ್ಳವನಾಗಿಯೇ ಮಾತಾಡಿದ್ದನು. 


ಆಡಬಾರದ್ದನ್ನು ಆಡಿದೆನೇನು ? ” ಎಂದು ಅವನು ಕಿಂಚಿತ್ 

ಪಶ್ಚಾತ್ತಾಪದಿಂದ ಕೇಳಿದನು. 


" ಆಡಿದರೂ ಆಡಿರಬಹುದು ! ಬೇನೆಯರಿವರೇನಾಡಿದರೂ ಅದನ್ನು 

ಲಕ್ಷಕ್ಕೆ ತರಕೂಡದೆಂಬದು ನಾವು ಕಲಿತ ಶುಶೂಷಾಶಾಸ್ತ್ರದ ನಿಯಮವು." 

ಆದರೆ ಅನ್ನಪೂರ್ಣೆಯು ಅನಭಿಜ್ಜಳೇ ? 

===================================

ಗ್ರಹಕಥಾ


[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು 

ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ 

ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ 

ಪ್ರೇರಿತರಾಗಿ, ಪರರ ಮನೋವೃತ್ತಿಗಳನ್ನು ಲಕ್ಷಿಸದೆ ಸ್ವಸುಖಾಭಿಲಾಷಿಯಾದರೆ, 

ಸಂಸಾರವು ಹೇಗೆ ಕಷ್ಟಮಯವಾಗುತ್ತದೆಂಬವು ಈ ಚಿಕ್ಕ ಕಥೆಯಲ್ಲಿ ತೋರಿಸಿದೆ. 

ಆದರೆ, ನಮ್ಮ ಕಥಾನಾಯಿಕೆಯಾದ ಪ್ರೇಮವಲ್ಲರಿಯು ಶಿಕ್ಷಣದ ಸಂಸ್ಕಾರವನ್ನು 

ಹೊಂದಿದವಳಾದ್ದರಿಂದ ವ್ಯವಹಾರ ಚತುರೆಯಾದ ಅನ್ನಪೂರ್ಣಾಬಾಯಿಯ ಸದುಪ 

ದೇಶವನ್ನು ಗ್ರಹಿಸಿ ತನ್ನ ಆಗ್ರಹವನ್ನು ಬಿಟ್ಟುಕೊಟ್ಟು ಮತ್ತೆ ಹೇಗೆ ಸುಖಭಾಗಿನಿ 

ಯಾದಳೆಂಬದಾದರೂ ಇದರಲ್ಲಿ ತೋರಿಸಿದೆ. ] 


ದಿವಾಕರ ದೇವರಾವ ದೇಶಪಾಂಡೆ ಎಂಬ ಹೆಸರಿನ ಅಲ್ಪ ವಯಸ್ಕನಾದ 

ಬಾಲಕನ ತಂದೆತಾಯಿಗಳೀರ್ವರೂ ಏಕಕಾಲಕ್ಕೆ ವಿಲಕ್ಷಣವಾದ ಜ್ವರದ 

ಪೀಡೆಯಿಂದ ತೀರಿಕೊಂಡದ್ದರಿಂದ ಸಕಲ ಸಂಪತ್ತುಗಳಿಂದ ತುಂಬಿ ತುಳಕು 

ತ್ತಿರುವ ಅವನ ಮನೆಗೆ ನಿಯಾಮಕವಿಲ್ಲದಂತಾಯಿತು. ಅವನ ಸಂರಕ್ಷಣದ 

ಭಾರವೂ ಅವನ ಜಾಗಿರಿಯ ವ್ಯವಸ್ಥೆಯ ಭಾರವೂ ಕೋರ್ಟ ಆಫ 

ವಾರ್ಡ್ನ ಎಂಬ ನ್ಯಾಯಾಸ್ಥಾನದ ಕಡೆಗೆ ಬಂದಿತು. ದಿವಾಕರನು ಸುಂದ 

ರನೂ ಚಪಲನೂ ಬುದ್ದಿವಂತನೂ ಆದ ಬಾಲಕನಾಗಿರುವದರಿಂದ ಜಜ್ಜ 

ಸಾಹೇಬರ ಪ್ರೇಮವು ಅವನ ಮೇಲೆ ಅಧಿಕವಾಗಿತ್ತು. ಅವನ ಊಟ ಉಡಿಗೆ 

ಆರೈಕೆ ಆರೋಗ್ಯ ರಕ್ಷಣಗಳ ಕೆಲಸವನ್ನು ಸಾಹೇಬರು ದಿವಾಕರನ ಪ್ರೀತಿಯ 

ಸೋದರಮಾವನ ಕಡೆಗೆ ಒಪ್ಪಿಸಿದ್ದರು. ದಿವಾಕರನು ಸರಕಾರದ ಹಾಯ 

ಸ್ಕೂಲಿನಲ್ಲಿ ಅಭ್ಯಾಸಮಾಡುತ್ತಿದ್ದರೂ ಮನೆಯಲ್ಲಿ ಅವನ ಮಾನಸಿಕ ಹಾಗೂ 

ನೈತಿಕ ಶಿಕ್ಷಣಗಳ ಮೇಲ್ವಿಚಾರಣದ ಕೆಲಸವು ಒಬ್ಬ ಚತುರನಾದ ಪದವೀ 

ಧರನ ಕಡೆಗೆ ಕೊಡಲ್ಪಟ್ಟಿತ್ತು. ಹೀಗೆ ವ್ಯವಸ್ಥಿತವಾದ ಶಿಕ್ಷಣ ಪೋಷಣಗಳು 

ದೊರೆಯುತ್ತಿರಲು ಕೇಳುವದೇನು ? ದಿವಾಕರನು ಬುದ್ದಿಶಾಲಿಯಾದ 

ವಿದ್ಯಾರ್ಥಿಯ ರೂಪವಂತನ ಬಲವಂತನೂ ಆದ ತರುಣನೂ ಆಗುತ್ತೆ 

ನಡೆದನು. ಶಾಠ್ಯ ದಂಭ ಆಹಂಕಾರಗಳ ಸಂಪರ್ಕವಿಲ್ಲದೆಯ ದುರಾಚರ 

ಣದ ಹಾದಿಗೆ ಹೋಗದೆಯ ದಿವಾಕರನು ತನ್ನ ವಿದ್ಯಾ ವ್ಯಾಸಂಗವನ್ನು 

ಚನ್ನಾಗಿ ಮಾಡುತ್ತೆ ಸಾಹೇಬರಿಗೂ, ಮಾವನಿಗೂ ಶಿಕ್ಷಕರಿಗೂ ಕೂಡಿಯೇ 

ಕೀರ್ತಿಯನ್ನು ಕೊಡುವವನಾದನು. ಯಥಾಕ್ರಮವಾಗಿ ಇಯತ್ತೆ ಇಬರುತ್ತೆ 

ಗಳನ್ನು ದಾಟಿ ಅವನು ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾಗಿಬಿಟ್ಟನು. 

 

ಆ ಕಾಲಕ್ಕೆ ವರಗಳ ವ್ಯಾಪಾರವೇ ತೇಜಿಯಲ್ಲಿತ್ತು. ಹುಟ್ಟಿದ ಹುಳಕ್ಕೆ 

ಕೂಡ ಯೋಗ್ಯತೆ ಮೀರಿ ವರದಕ್ಷಿಣೆ! ಫಾಯನಲ್ಲ ಪರೀಕ್ಷೆಯಾಗಿ ಅಸಿಸ್ಟೆಂಟ 

ಕಲೆಕ್ಟರರ ಕಚೇರಿಯಲ್ಲಿ ಉಮೇದವಾರನಾಗಿದ್ದರಾಯಿತು, ಅವನು ದೊಡ್ಡ 

ವರನು. ವರದಕ್ಷಿಣೆ ಎಷ್ಟೆಂದು ಕೇಳಿದ್ದೊಂದೇ ತಡ, ' ಸಾವಿರ ರೂಪಾಯಿ , 

ಮೇಲೆ ವರೋಪಚಾರ ! ಎಂಬ ಮಾತು ಬಂದಿತೇ, ವತನವೃತ್ತಿ ಮನೆ 

ಮಾರುಗಳೇನಾದರೂ ಇವೆಯೋ ಎಂದು ಕನ್ನೆಯ ಮೇಲೆ ಸಾವಿರ 

ರೂಪಾಯಿಗಳನ್ನೂ ಕೊಡತಕ್ಕವನು ಕೇಳಿದರೆ ತಪ್ಪಾಯಿತೆ ? : ಯಾಕೆ 

ಬಹಳ ಕೀಳುತ್ತೀರಿ ? ನಮ್ಮ ವತನ ವೃತ್ತಿಗಳನ್ನು ನೀವು ಕೊಂಡುಕೊಳ್ಳ 

ತಕ್ಕವರೋ ? ಇನ್ನೊಮ್ಮೆ ಕೇಳಿದರೆ ವರದಕ್ಷಿಣೆ ಹದಿನೈದು ನೂರು !  ' 

ಎಂಬ :ಉದ್ದವಾದ ಉತ್ತರವನ್ನು ಆ ನೀರಿನವನ ಮಗನು ಕೊಡುವನು. 

ವರಗಳ ವ್ಯಾಪಾರವು ಹೀಗೆ ಘನಚಕ್ರ ವಾಗಿ ನಡೆದಿರುವ ದಿವಾಕರನಂಥ 

ಶ್ರೀಮಂತನೂ ಕುಲೀನನೂ ಉಚ್ಚಪ್ರತಿಯು ಶಿಕ್ಷಣದಮಾರ್ಗದಲ್ಲಿರುವವರೂ 

ಆದ ತರುಣನ ಮೇಲೆ ಚವರ ಹಾರದಿದ್ದೀತೆ ? ದೊಡ್ಡ ದೊಡ್ಡ ದೇಸಾಯಿ 

ದೇಶಪಾಂಡೆ ಮುಂತಾದ ಜಮೀದಾಶರಣ ಜಜ್ಜ ಕಲೆಕ್ಟರ ಮುಂತಾದ ಆಧಿ 

ಕಾರಿಗಳೂ ಸುಂದರಿಯರಾದ ತಮ್ಮ ಕನ್ನೆಯರನ್ನು ಕೊಡಹೋದಲ್ಲಿ, ಕೊರ್ಟ 

ಆಫ ವಾರ್ಡ್ಸದವರು ಸದ್ಯಕ್ಕೆ ದಿವಾಕರನ ಮದುವೆ ಮಾಡುವದು ತಮಗೆ 

ಇಷ್ಟವಿಲ್ಲೆಂದು ಹೇಳಿದರು. 


ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಿವಾಕರನು ಮುಂದೆ ಮುಂಬಯಿ 

ಯಲ್ಲಿಯ ದೊಡ್ಡದೊಂದು ಕಾಲೇಜಕ್ಕೆ ಹೋದನು. ಅಲ್ಲಿಯಾದರೂ ಅವನು 

ಬುದ್ದಿವಂತರಾದ ವಿದ್ಯಾರ್ಥಿಗಳಲ್ಲಿ ಅಗ್ರಗಣ್ಯನೆನಿಸಿಕೊಂಡು ಬೀ. ಏ. 

ಪರೀಕ್ಷೆಯಲ್ಲಿ ಬಹುಮಾನದ ಪದವಿಯನ್ನು ಹೊಂದಿದನು, ಬುದ್ದಿವಂತನೂ 

ಸುಸ್ವಭಾವದವನೂ ಸಂಪತ್ತಿನ ಸೌಕರ್ಯದಲ್ಲಿರುವವನೂ ಆದ ಆ ತರು 

ಣನು ಪ್ರತಿಷ್ಠಿತರ ಸಮಾಜ ದಲ್ಲಿ ಮರೆಯಲಾರಂಭಿಸಿದನು. ಮುಂಬಯಿ 

ಯಂಥ ಸುಧಾರಣೋತ್ತೇಜಕವಾದ ಕ್ಷೇತ್ರದಲ್ಲಿ ಅವನ ನಿವಾಸವು, ಅವನ 

ಸಹಾಧ್ಯಾಯಿಗಳೂ ಸ್ನೇಹಿತರೂ ಕಾಲೇಜದ ಫೆಲೋ ಪ್ರೊಫೆಸರರೂ ಎಲ್ಲರೂ 

ಸುಧಾರಣಾವಾದಿಗಳು, ಸುಧಾರಿಸಿದ ಆಚಾರ ವಿಚಾರಗಳುಳ್ಳ ಸಮಾಜದಲ್ಲಿ 

ಓಡಾಡುವವನಾದ ದಿವಾಕರನು . ನಖಶಿಖಾಂತವಾಗಿ ಸುಧಾರಕನಾಗಿ 

ಹೋದನು. ಆ ಪರಿಸ್ಥಿತಿಯಲ್ಲಿದ್ದರೆ ಪೆದ್ದನಂಥ ಗ್ರಾಮ್ಯನೋರ್ವನು ಕೂಡ 

ವರ್ಷಾರು ತಿಂಗಳದಲ್ಲಿ ಸುಧಾರಣೆಯ ಪ್ರವಾಹಕ್ಕೆ ಬಿದ್ದು ಅರಿಯದೆ ತಾನೆಷ್ಟು 

ದೂರ ಹೋಗಿರುವೆನೆಂಬದನ್ನು ಕಂಡು, ಅವನಿಗೆಯೇ ಆಶ್ಚರ್ಯವಾಗ 

ಬಹುದು, ದಿವಾಕರನಂತೂ ಸುಧಾರಣೆಗೆ ಅನುಕೂಲನು. ಈ ಸು ಕಲಿಯ 

ಬೇಕೆಂದು, ಬೇಕಾಗಿ ಇವನು ಆ ಮಹಾಪ್ರವಾಹದಲ್ಲಿ ಹಾಕಿಕೊಂಡು 

ವಿನೋದದಿಂದ ತೇಲತೇಲುತ್ತೆ ಹೋಗಿ, ಸುಧಾರಣಾ ಮಹಾರ್ಣವದ ತರಂಗ 

ತತಿಗಳ ಹೊಡೆತವನ್ನು ಲಕ್ಷಿಸದೆ ಅವನು ಅಲ್ಲಿ ಆನಂದದಿಂದ ಹೊಯ್ಯಾಡ 

ಲಾರಂಭಿಸಿದನು, ಉಣಿಸುತಿನಿಸಿನ ಚಮತ್ಕಾರ ವೇಷವೈಚಿತ್ರ, ನಡೆನುಡಿ 

ಗಳ ಒಯ್ಯಾರ ಮುಂತಾದ ಮಾತುಗಳಲ್ಲಿ ದಿವಾಕರನು ಅಚ್ಚ ಸುಧಾರಕರ 

ತಲೆ ಮೇಲೆ ಕೈ ಇಟ್ಟನು. 


ಬಿ. ಏ. ಪರೀಕ್ಷೆಯಾಯಿತು; ಸುಧಾರಣೆಯ ಯಥೇಷ್ಟವಾದ ಪರಿಚಯ 

ವಾಯಿತು; ಇಂದು ನಾಳೆ ಕೋರ್ಟಿನವರು ಸಂಪತ್ತನ್ನೆಲ್ಲ ತನ್ನ ಸ್ವಾಧೀನಕ್ಕೆ 

ಕೊಡತಕ್ಕವರು; ಇಂಥ ಸೌಕರ್ಯದ ಸ್ಥಿತಿಯಲ್ಲಿ ತಾನಿನ್ನು ಸಸ್ತ್ರೀಕವಾಗಿ 

ಸಂಸಾರದ ಸುಖವನ್ನು ಯಥೇಷ್ಟವಾಗಿ ಭುಂಜಿಸಬೇಕೆಂಬ ವಿಚಾರವು ದಿನಾ 

ಕರನಲ್ಲಿ ಹುಟ್ಟಿದ್ದು ಸಹಜವೇ ಸರಿ, ಆದರೆ ತನಗಿನ್ನು ಯೋಗ್ಯಳಾದ ಪತ್ನಿ 

ಯೆಂದರೆ ಎಂಥವಳು ? ಅಪರಿಚಿತಳೂ ಅಸಂಸ್ಕೃತಳ ಆಗಿರುವ ಓರ್ವ 

ಹಳ್ಳಿಗಾಡ ಕನೈಯನ್ನು ದಲಾಲರ ಮುಖಾಂತರವಾಗಿ ಹುಡುಕಿ ಮದುವೆ 

ಮಾಡಿಕೊಂಡು ಸಂಸಾರ ಸುಖವನ್ನು ಹೊಂದುವೆನೆಂಬುವದೂ ಕಬ್ಬಿಣದ 

ಅಲಂಕಾರಗಳನ್ನು ಮಾಡಿ ಇಟ್ಟುಕೊಂಡು ಮೆರೆಯುವೆನೆಂಬುವದೂ ಒಂದೇ 

ಎಂದು ಶಂಕಿಸಿ, ಅವನು ಸುಧಾರಣಾಶಾಣೋಲ್ಲೀಢಿತಳಾದ ಓರ್ವ ವಿದುಷೀ 

ಮಣಿಯ ಪ್ರೇಮ ಸಂಪಾದನವನ್ನು ಮಾಡಿಕೊಳ್ಳುವ ಉದ್ಯೋಗದಲ್ಲಿ ತೊಡ 

ಗಿದನು. ಕರ್ಮಧರ್ಮ ಸಂಯೋಗದಿಂದ ಒಂದು ನಾಕ್ಯಮಣಿಯ ಪರಿ 

ಚಯವೂ ಅವನಿಗೆ ಅಕಸ್ಮಾತ್ತಾಗಿ ಆಯಿತು. ಮುಂಬಯಿಯ ಬಳಿಯಲ್ಲಿ, 

ರುವ ಮಾತಂಗ ದ್ವೀಪದಲ್ಲಿಯ ಗುಹೆಗಳನ್ನು ದಿವಾಕರನು ನೋಡ ಹೋದ 

ಕಾಲಕ್ಕೆಯೇ " ಫೀಮೇಲ ಯುನಿವರ್ಸಿಟಿ ಕಾಲೇಜ ” ಎಂಬ ವಿದ್ಯಾ ಸಂಸ್ಥೆ 

ಯಲ್ಲಿ ಕಲಿಯುತ್ತಿರುವ ತರುಣಿಯರ ವೃಂದವಾದರೂ ಅಲ್ಲಿಗೆ ಬಂದಿತ್ತು. 

ಆ ವೃಂದದಲ್ಲಿದ್ದ ಮಿಸ್ ಪ್ರೇಮವಲ್ಲರೀ ಎಂಬ ಸುಂದರಿಯಾದ ಒಯ್ಯಾರೆ 

ಯೊಬ್ಬಳು ಸಶಾಸ್ತ್ರವಾದ ಶೃಂಗಾರ ಚೇಷ್ಟಿತಗಳನ್ನು ನಟಿಸಿ ದಿವಾಕರನ 

ಚಿತ್ತವೃತ್ತಿಯನ್ನು ಅಪಹರಿಸಿಕೊಂಡಳು. 


ಪ್ರೇಮವಲ್ಲರಿಯು ಹದಿನೆಂಟು ವರ್ಷದ ನವತರುಣಿಯು, ಗೌರ 

ವರ್ಣದ ಆ ಸುಂದರಿಯ ಉಡಿಗೆ ತೊಡಿಗೆಗಳು ಬಹು ಸೊಬಗಿನವು. ಕೈಯ ಲ

್ಲಿಯ ಅ೦ದವಾದ ಪುಸ್ತಕವನ್ನು ತಾಳದೊಂದಿಗೆ ನನ್ನ ತೊಡೆಗೆ ಬಡಿಯುತ್ತೆ 

ಸೇಕ್ಸಪಿಯರನದೊ೦ದು " ಸಾನೆಟ್ ” ಪದವನ್ನು ಮೆಲ್ಲನೆ ಬಹು ಇಂಪಾಗಿ 

ಹಾಡುತ್ತಿರುವ ಮಿಸ್ ಪ್ರೇಮವಲ್ಲರಿಯನ್ನು ಕಂಡು ದಿವಾಕರನು ಮೋಹಿತ 

ನಾದದ್ದು ಆಶ್ಚರ್ಯವಲ್ಲ. ಮುಂಬಯಿಗೆ ಬಂದ ಬಳಿಕ ಟಾಮವೇದಲ್ಲಾ 

ಗಲಿ, ನಾಟಕಗೃಹದಲ್ಲಾಗಲಿ ದಿವಾಕರ ಪ್ರೇಮವಲ್ಲರಿಯರ ಸಂದರ್ಶ

ನ ವಾದಾಗ ಅವರವರ ನಡುವೆ ಮೃದುಸ್ಮಿತದ ಪ್ರಣಾಮಗಳು ನಡೆದವು. ಬರ 

ಬರುತ್ತೆ ಸಂಕೋಚವು ಸಡಿಲಾಗಿ ಅವರೀರ್ವರ ನಡುವೆ ಕುಶಲಪ್ರಶ್ನೆಗಳ 

ವ್ಯವಹಾರವು ನಡೆಯಿತು. ಮುಂದೆ ಇಬ್ಬರೂ ಕೂಡಿ ಸೇಕ್ಸಪಿಯರನ 

" ರೋಮಿಯೋ ಆ್ಯಂಡ ಜೂಲಿಯಟ್ ' ಎಂಬ ಸುರಸವಾದ ನಾಟಕ 

ನನ್ನೊದಿದರು. ಒಬ್ಬರ ಮಾರ್ಮಿಕತೆಯನ್ನು ಒಬ್ಬರು ಕೊಂಡಾಡಿದರು. 

ಒಂದು ದಿನ ಪ್ರೇಮವಲ್ಲರಿಯು ದಿವಾಕರನಿಗೊಂದು ಚಿತ್ರ ಮಯವಾದ 

ಕೊರಳ ಪಟ್ಟಿಯನ್ನು ಕಾಣಿಕೆಯಾಗಿ ಕಳಿಸಿದಳು ; ಆದಕ್ಕೆ ಪ್ರತಿಯಾಗಿ ದಿವಾಕರ 

ನೊಂದು ಬೆಲೆಯುಳ್ಳ ರೇಶಿಮೆಯ ದುಕೂಲವನ್ನು + In tokers of love 

(ಪ್ರೇಮದ ಕುರುಹು)' ಎಂಬ ವಿಳಾಸ ಸಹಿತವಾಗಿ ಕಳಿಸಿದನು. ಮುಂದೆ 

ನಡೆದ ಚಮತ್ಕಾರಗಳನ್ನು ರಸಿಕರಾದ ವಾಚಕರು ಊಹಿಸಬಹುದಾದ್ದರಿಂದ 

ಅದನ್ನು ನಾವು ಇಲ್ಲಿ ಬೆಳಿಸಿ ಹೇಳಲಿಚ್ಛಿಸುವದಿಲ್ಲ. ಪ್ರಥಮ ಪರಿಚಯವಾದ 

ಒಂದೆರಡು ತಿಂಗಳಗಳಲ್ಲಿಯೇ ದಿವಾಕರ ಪ್ರೇಮವಲ್ಲರಿಯರು ದಂಪತಿ `

ಗಳಾದರು. 


"ನಿಮ್ಮ ಆಸ್ತಿಯನ್ನು ನೀವು ನಿಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳತಕ್ಕ 

ದ್ದೆ '೦ದು ಕೊರ್ಟ- ಆಫ ವಾರ್ಡ್ಗದ ಅಧಿಕಾರಿಗಳು ದಿವಾಕರನಿಗೆ ತಿಳಿಸಿದ

ಮೇರೆಗೆ ಅವನು ಸಸ್ತ್ರೀಕನಾಗಿ ಊರಿಗೆ ಬಂದು ದೊಡ್ಡ ಶ್ರೀಮಂತನಾಗಿ 

ಇರತೊಡಗಿದನು. ಊರಲ್ಲಿಯ ಮನೆಯು ಮನಸ್ಸಿಗೆ ಬರಲಿಲ್ಲವಾದ್ದರಿಂದ

ನವದಂಪತಿಗಳು ಊರ ಹೊರಗಿರುವ ತಮ್ಮ ಬಂಗಲೆಯಲ್ಲಿ ಇರಹೋದರು. 

ಅಲ್ಲಿ ಅವರು ಸೋಜಿಗದ ಸಂಸಾರವನ್ನು ಹೂಡಿದರು. ಎಲ್ಲಿ ನೋಡಿದಲ್ಲಿ 

ಮೇಜು, ಕುರ್ಚಿ, ಕಪಾಟುಗಳೂ ಚಿತ್ರಪಟ ಕನ್ನಡಿಗಳೂ ಕರ್ಟನ್ ಕನಾತು 

ಗಳೂ ಮಂಚತಿವಾಸಿಗೆಗಳೂ ಪಿಯಾನೋ ಹಾರ್ಮೋನಿಯಮ್‌ಗಳೂ ಬಹು 

ಪರಿಷ್ಕಾರದೊಂದಿಗೆ ಮಂಡಿಸಲ್ಪಟ್ಟಿದ್ದವು. ಮನೆಯ ಸುತ್ತಲಿನ ರಮ್ಯ 

ವಾದ ಉದ್ಯಾನದ ಆರೈಕೆಗಾಗಿ ನಾಲ್ಕು ಜನ ತೋಟಿಗರು, ಮನೆಯಲ್ಲಿ ಕೈಗೊಬ್ಬ 

ಕಾಲಿಗೊಬ್ಬ ಸೇವಕನು. ಹೆಂಡತಿಗೊಂದು ಗಂಡನಿಗೊಂದು ಹೀಗೆ ಎರಡು 

ಕುದುರೆಯ ರಥಗಳು. ಹತ್ತುವ ಕುದುರೆಗಳಾದರೂ ಬೇರೆ ಬೇರೆ. ವರ್ಷಾ 

ಎಂಟೊಂಬತ್ತು ಸಾವಿರ ರೂಪಾಯಿಗಳನ್ನು ಗಂಡಹೆಂಡರಿಬ್ಬರೇ ಬೇಕಾದ 

ಹಾಗೆ ತೂರಾಡಬಹುದಾದ ಸಮಯದಲ್ಲಿ ಸಂಸಾರಸಾಗರದ ದುಃಖಮಯ 

ವಾದ ತರಂಗಗಳು ಇವರಿಗೆ ತೊಂದರೆಯನ್ನು ಕೊಡಲು ಸತ್ವಹೀನವಾಗಿ 

ದ್ದವು. ಚಹಾ, ಕಾಫಿ, ಊಟ-ಉಡಿಗೆ, ಗಾನ- ವಾದನ, ವಾಚನ- ಚಿತ್ರ 

ಲೇಖನ, ಅಶ್ವದಮನ, ವನೋಪವನಗಳಲ್ಲಿ ವಿಹರಣ ಮುಂತಾದ ವ್ಯವಸಾಯ 

ಗಳಲ್ಲಿ ಅವರು ವರ್ಷರುತಿಂಗಳುಗಳನ್ನು ಆಡಾಡುತ್ತೆ ಕಳೆದರು. 


" ಸ್ವರ್ಗೀಯ ” " ಸ್ವರ್ಗೀಯ ”ವೆಂದು ಹೇಳಲ್ಪಡುವ ಹುಚ್ಚು 

ಪ್ರೇಮದ ನಿರ್ಭರವೆಲ್ಲ ಇಳಿದುಹೋದ ಬಳಿಕ ನಾನು ನಾನೆಂಬ ಐಹಿಕವಾದ 

ವಿಚಾರವು ಮನುಷ್ಯನ ಹೃದಯವನ್ನು ಆಕ್ರಮಿಸುವದುಂಟು. ದೇಶಸ್ಥನಾದ 

ಈ ದಿವಾಕರನಿಗೆ ನನ್ನಂಥ ಸುಂದರಿಯ ಸುಸಂಸ್ಕೃತೆಯ ಆದ ಸ್ತ್ರೀ 

ರತ್ನದ ಪ್ರಾಪ್ತಿಯಿಂದಲೇ ಸುಖವಲ್ಲದೆ ಅವನ ಐಶ್ವರ್ಯದಿ೦ದೇನು ಎಂಬ 

ವಿಚಾರವು ಮೆಲ್ಲನೆ ಪ್ರೇಮವಲ್ಲರಿಯ ಮನಸ್ಸಿನಲ್ಲಿ ಹೊಕ್ಕಿಕೊಂಡಿತು. ಸುಧಾ 

ರಿಸಿದ ಸ್ತ್ರೀಗೆ ಉಚಿತವಾದ ಸ್ವಾತಂತ್ರ್ಯವು ಈ ಮನೆಯಲ್ಲಿ ತನಗೆ ಸಂ ಪೂರ್ಣ 

ವಾಗಿ ಇರುವದೋ ಇಲ್ಲವೋ ಎಂಬದನ್ನು ಅವಳು ಅನೇಕ ಪರಿಯಾಗಿ ಪರೀ 

ಕ್ಷಿಸಿ ನೋಡಿದಳು. ಅದು ಇದ್ದಿತ್ತು. ಉದಾರನಾದ ಪತಿಯ ಪರಮಾನು 

ಗ್ರಹವೆಂದು ಭಾವಿಸದೆ ತಾನನುಭವಿಸುತ್ತಿರುವ ಸ್ವಾತಂತ್ರ ಸುಖವು ತನ್ನಲ್ಲಿ 

ಸ್ವಾಯತ್ತವಾಗಿರುವ ಗುಣಗಳ ಪರಾಕ್ರಮದಿಂದಲೇ ತನಗೆ ಪ್ರಾಪ್ತವಾಗಿ 

ರುವರೆಂಬ ಭಾವನೆಯು ಅವಳಿಗಾಯಿತು, ತನಗಾಗಿ ತನ್ನ ಮನೆಗೆ ಬಂದಿ 

ರುವ ತನ್ನ ಪ್ರಿಯ ಪತ್ನಿಗೆ ಯಾರಿಂದಲೂ ಕೊರತೆಯಾಗಬಾರದೆಂದು ದಿವಾ 

ಕರನು ಹೆಂಡತಿಯ ಇಚ್ಛಾನುವರ್ತಿಯಾಗಿ ನಡೆದರೆ ಅವನು ಹೀನಸತ್ವನೆಂದು 

ಅವಳು ತಿಳುಕೊಂಡಳು, ಹೆಂಡತಿಯ ಅಧಿಕಾರ ಮರ್ಯಾದೆಯನ್ನು ಅವಳೂ 

ಮೆಲ್ಲಮೆಲ್ಲನೆ ಉಲ್ಲಂಘಿಸಿದಳು. ಪ್ರೀತಿಯುತನಾದ ಪತಿಗೆ ಅದೆಲ್ಲ ಮೊದಲು 

ಮೊದಲು ವಿನೋದವೇ ಆಗಿ ತೋರಿತು. ಸತಿ-ಮು ಬೇಡವೆಂದರೂ ನೂರು 

ರೂಪಾಯಿಗಳನ್ನು ಕೊಟ್ಟು ಪ್ರೇಮವಲ್ಲರಿಯು ಒಂದು ಮಂಗನನ್ನು 

ಕೊಂಡಳು, ' ಮಂಗ ಮಂಗಗಳಿಗೆ ಗಂಟು ' ಎಂದು ನಕ್ಕು ಪತಿಯು 

ಸುಮ್ಮನಿದ್ದನು. ಗಂಡನಿಗಿಂತ ತನಗೆ ಮೊದಲು ಊಟಕ್ಕೆ ಬಡಿಸಲಿಲ್ಲೆಂದು 

ಸಿಟ್ಟಾಗಿ ಅವಳು ಅಡಿಗೆಯವನನ್ನು ಹೊರಗೆ ಹಾಕಿದಳು, ಹೆಗಲೆಂದನ 

ವನು ದಿವಾಕರನೆಂದರೆ ತನಗೆ ಅ೦ಕಿಣವಾಗಿ ರುವದೊಂದು ಪ್ರಾಣಿಯೆಂದು 

ನಿಶ್ಚಿತವಾದ ಕಲ್ಪನೆಯಾದ ಬಳಿಕ ಪ್ರೇಮವಲ್ಲರಿಯು ನಿಮ್ಮ ಸ್ವಾತಂತ್ರ್ಯ 

ವನ್ನೂ ಪತಿಯ ಸ್ವಾತಂತ್ರ್ಯವನ್ನೂ ತನ್ನ ವಶದಲ್ಲಿಯೇ ಇಟ್ಟುಕೊಂಡು ಮನೆ 

ಯನ್ನು ಆಳಲಾರಂಭಿಸಿದಳು. 


ಬರಬರುತ್ತೆ ತನ್ನ ಸುಖದಲ್ಲಿ ಕೊರತೆಯಾಗಲಾರಂಭಿಸಿತೆಂದು 

ದಿವಾಕರನಿಗೆ ಕಂಡುಬಂದಿತು, ತನ್ನೆಡೆಗೆ ಸುಖವು ಬಾರದಿದ್ದರೆ ತಾನೇ 

ಸುಖವಿದ್ದಲ್ಲಿಗೆ ಹೋದರಾಯಿತೆಂದು ಹೇಳಿ ಅವನು ಸಮಾಧಾನ ಹಚ್ಚಿ 

ಕೊಳ್ಳುವನು. ಆದರೇನು? ಹೆಂಡತಿಯೊಡನೆ ಕುಳಿತು ನಾಲ್ಕು ವಿನೋದದ 

ಮಾತುಗಳನ್ನಾಡುವೆನೆಂದರೆ ಅವಳು ಅವನಿಗೆ ವಿಶೇಷವಾದ ಆದರವನ್ನು 

ತೋರಿಸದಾದಳು, " ಪ್ರೇಮವಲ್ಲರಿ, ಪಿಯಾನೋ ಪೇಟಿಯನ್ನು ತೆಗೆದು 

ತುಸು ಹಾಡಬಾರದೇ ! ” ಎಂದು ಕೇಳಿದರೆ " ನಾನೊಲ್ಲೆ ! काव्यशास्त्र 

विनोदेन कालो गच्छति धीमसां ಎಂದು ಜಂಬ ಹೇಳುತ್ತಿರುವಿರಿ. ಸುಮ್ಮನೆ 

ಪುಸ್ತಕವನ್ನೋದಿರಿ?” ಎಂದು ಅವಳು ಹೇಳುವಳು  "ವಲ್ಲರಿ ನೀನೇ 

ಚಹ ಮಾಡಬಾರದೆ ? ಅಡಿಗೆಯವಳು ನಿಸ್ಸಾರವಾದ ಚಹ ಮಾಡಿರುವಳು "

ಎಂದು ಅವನು ಕೇಳಿಕೊಂಡರೆ ನಾನೇನು ದಾಸಿಯಲ್ಲ ” ಎಂಬ ಅಭದ್ರ 

ವಾದ ಉತ್ತರವು. ಒಂದು ದಿನವಂತೂ ಪ್ರೆಮವಲ್ಲರಿಯು ಗಂಡನನ್ನು  

ಕೇಳದ ತಾನೋರ್ವಳೇ ನಾಟಕವನ್ನು ನೋಡಲಿಕ್ಕೆ ಹೊರಟು ಹೋದಳು. 


ಮರುದಿವಸ ಮಧ್ಯಾಹ್ನದ ಭೋಜನವಾದ ಬಳಿಕ ಪ್ರೇಮವಲ್ಲರೀ 

ಬಾಯಿ ಸಾಹೇಬರವರು ಒಯ್ಯಾರದ ಪೋಷಾಕು ಮಾಡಿಕೊಂಡು ಇನ್ನು 

ಯುರೋಪಿಯನ್ ಮಡಮ್ಮನಂತೆ ಪೇಟೆಗೆ ಜೀನಸುಗಳನ್ನು ತರಲಿಕ್ಕೆ. 

ಹೊರಡತಕ್ಕವರು, ಅವರು ತಮ್ಮ ಸ್ವಂತ ರಥದ ಸಾರಥಿಯನ್ನು ಕೂಗಿ ರಥ 

ಸಿದ್ದ ಮಾಡೆಂದು ಆಜ್ಞಾಪಿಸಿದರು. ಆದರೆ ಸಾರಥಿಯ ಉಲುವೇ ಇಲ್ಲ. 

ಸಿಟ್ಟಾಗಿ ರಥವಿರುವ ಸ್ಥಳಕ್ಕೆ ಹೋಗಿ ನೋಡಿದರು. ಅಲ್ಲಿ ರಥವೂ ಇಲ್ಲ ; 

ಕುದುರೆಗಳೂ ಇಲ್ಲ. ಕಡು ಕೋಪದಿಂದ ಬೂಟುಗಾಲಪ್ಪಳಿಸುತ್ತೆ ಅಮ್ಮ 

ನವರ ಮೆರವಣಿಗೆಯು ರಾಯರಿದ್ದಲ್ಲಿಗೆ ಬಂದಿತು. 


" ಪತಿರಾಜ ! ನನ್ನ ರಥ - ಕುದುರೆಗಳೆಲ್ಲಿ ? ಪ್ರಾತಃಕಾಲದಲ್ಲಿಯೇ 

ನೀವು ಅವುಗಳನ್ನು ಎಲ್ಲಿಗೋ ಕಳಿಸಿದಿರಂತೆ ! ನನ್ನ ತಥದ ಗೊಡವೆಗೆ 

ಹೋಗುವ ಪ್ರಯೋಜನವು ನಿಮಗೇನಿತ್ತು?” ಎಂದು ಕ್ರುದ್ಧಳಾದಂತೆ 

ನಟಿಸಿ ಪ್ರೇಮವಲ್ಲರಿಯು ಗಂಡನನ್ನು ಕುರಿತು ಪ್ರಶ್ನೆ ಮಾಡಿದಳು. 


" ನಿಮ್ಮ ರಥವೇ ? ಅದನ್ನು ನಾನು ಮಾರಿಬಿಟ್ಟೆನು ! ?” ಎಂದು 

ತನ್ನ ಮುಖದಲ್ಲಿ ಯಾವ ಪ್ರಕಾರದ ವಿಕಾರವನ್ನಾದರೂ ವ್ಯಕ್ತಪಡಿಸದೆ 

ದಿವಾಕರನು ಬಹು ಶಾಂತನಾಗಿ ಹೇಳಿದನು. 


" ಏನು? ನನ್ನ ರಥವನ್ನು ನೀವು ಮಾರಿದಿರಾ?” ಎಂದು ಆ ಹೆಂಡತಿಯು 

ಸಂತಾಪಾತಿಶಯದಿಂದ ಗಂಡನನ್ನು ಬಡಿಯಹೋದವಳಂತೆ ಉದ್ಧಾರ 

ತೆಗೆದಳು. 

 

"ಮಾರಿದೆನು; ಅದರಲ್ಲೇನಾಯಿತು ? ಕೆಲಸಬಿದ್ದಾಗ ನೀವು ನನ್ನ 

ರಥದಲ್ಲಿ ಕುಳಿತುಕೊಂಡು ಹೋಗಬಹುದು. ” 


'ನನ್ನ ಕೆಲಸದ ಪಂಚಾಯತಿ ಮಾಡಬೇಡಿರಿ. ನನ್ನ ರಥವನ್ನು 

ಮಾರಲಿಕ್ಕೆ ನಿಮಗೆ, ಅಧಿಕಾರವೇನು ? ” 


ವಿಚಾರವಂತನಾದ ದಿವಾಕರರಾಯನು ಹೆಂಡತಿಯ ಮೂರ್ಖತನ 

ವನ್ನು ಕಂಡು ನಕ್ಕು "ಪ್ರಿಯೆ, ನನಗೆ ಅಧಿಕಾರವಿತ್ತೆಂದೇ ನಾನು ಆ 

ರಥವನ್ನು ಮಾರಿದೆನು. ಬೇಕಾದರೆ ನೀನು ವಕೀಲರನ್ನು ಕೇಳಿಕೊಂಡು. 

ಬಾ ! ” ಎಂದು ಕಿಂಚಿತ್ತಾದರೂ ವ್ಯಗ್ರನಾಗದೆ ನುಡಿದನು. 


" ಕೇಳುವ ಪ್ರಸಂಗ ಬಂದಾಗ ಕೇಳುವನಂತೆ ! ಆದರೆ ಈಗ ರಥ 

ವನ್ನು ಮಾರುವಂಥಾದ್ದೇನಾಗಿತ್ತು ? ” 


* ಮಾರುವಂಥದೇನೂ ಆಗಿಲ್ಲ. ದೇವರ ಕೃಪೆಯಿಂದ ಇನ್ನೂ ಹತ್ತು 

ರಥಗಳನ್ನು ಕೊಳ್ಳಬಹುದು. ಸದ್ಯಕ್ಕೆ ಈ ರಥವನ್ನು ನಾನು ನಿನ್ನ ಹಿತಕ್ಕಾಗಿ 

ಮಾರಿದೆನು. ಸಮಯಪಸಮಯಗಳ ವಿಚಾರವನ್ನು ಮಾಡದೆ, ಹೆಂಡತಿ 

ಯಾದ ನೀನು ನನ್ನ ಆಜ್ಞೆಯನ್ನು ಕೇಳದೆ ರಥದಲ್ಲಿ ಕುಳಿತು ನಿನ್ನೆ ನಾಟಕಕ್ಕೆ 

ಹೋದದ್ದು ನನಗೆ ರುಚಿಸಲಿಲ್ಲ. ವಲ್ಲರೀ, ಸುಶಿಕ್ಷಿತ ಆದ ನಿನಗೆ ನಾನು 

ಕೊಟ್ಟ ಸ್ವಾತಂತ್ರ್ಯದ ಉಪಭೋಗವನ್ನು ಮಾಡಲು ಬರಲಿಲ್ಲ. ಕೆಲವು 

ಮಾತಿನ ಅನುಭವವು ನಿನಗೆ ಚನ್ನಾಗಿ ಬರುವವರೆಗೆ ನಿನ್ನ ಸ್ವಾತಂತ್ರ್ಯ 

ದಲ್ಲಿಯ ಅನೇಕಾಂಶಗಳನ್ನು ಸೆಳಕೊಳ್ಳುವ ವಿಚಾರದಲ್ಲಿ ನಾನಿದ್ದೇನೆ. " 

 

ಪ್ರೇಮವಲ್ಲರಿಯು ಹೆಮ್ಮೆಯಿಂದ ಸೆಟೆದು ನಿಂತು " ಓಹೋ! ಬಾಳ 

ಗಂಗಾಧರ ಟಿಳಕರೇ ನೀವು ! ನನ್ನನ್ನು ಪ್ರೀತಿಸುತ್ತೇವೆಂದು ಬಾಯಿಯಿಂದ 

ಒಣ ಮಾತುಗಳನ್ನಾಡುವಿರಿ. ನಿಮ್ಮ ಕೃತಿಗಳನ್ನು ನೋಡಲಾಗಿ ಅವು 

ನಿಃಸಂದೇಹವಾಗಿ ವಿಪರೀತವಾಗಿವೆ. ನಿಮ್ಮಂಥ ಹುಳುಕುಬುದ್ದಿಯವರ 

ವಿಚಾರಗಳಿಂದ ಹಾನಿಯೇ ಹೊರತಾಗಿ ಸುಪರಿಣಾಮವಾಗಲಾರದು. ನೀವು -

ನನ್ನಿಂದ ಬೇರೆ ಇರಬೇಕಾಗುವದು ! ” ಎಂದು ನುಡಿದು ಅವಳು ತನ್ನ - 

ವಕ್ತೃತ್ವವನ್ನು ಪ್ರಕಟಗೊಳಿಸಿದಳು. 


" ಸುಮ್ಮನಿರು ವಲ್ಲರಿ! ಇ೦ಥ ಆ ಪ್ರಶಸ್ತವಾದ ಅಲಂಕಾರಿಕ ಭಾಷೆಯು 

ನನಗೆ ಸೇರುವದಿಲ್ಲ. ನಾನು ಈ ಮನೆಯ ಸ್ವಾಮಿಯು. ಇಲ್ಲಿಯ ಸಕಲ 

ವಸ್ತುಗಳ ವಿನಿಯೋಗವನ್ನು ನಾನು ನನ್ನ ಇಚ್ಛೆಗೆ ಬಂದಂತೆ ಮಾಡಬಲ್ಲೆನು.

ಹಿಂದೂ ಧರ್ಮಶಾಸ್ತ್ರದ ಮೇರೆಗೆ ಹೆಂಡತಿಯಾದ ನಿನಗೆ ಇಲ್ಲಿ ಯಾವ 

ಪ್ರಕಾರದ ಸ್ವಾತಂತ್ರವೂ ಇಲ್ಲ. ?” ಎಂದು ದಿವಾಕರನು ಗದರಿಸಿ 

ನುಡಿದನು. 


ಕ್ರೋಧಾತಿಶಯದಿಂದ ಪ್ರೇಮವಲ್ಲರಿಯದ ಮುಖವು ಕೆಂಪಗೆ ಕೆಂಜಗ ..

ವಾಯಿತು. ಶಿರ ಬಿಗಿದು ಒತ್ತಾಯದ ಕಂಬನಿಗಳು ಉದುರಿದವು. 

ಮತ್ತೊಂದು ಮಾತಾಡದೆ ಅವಳು ರಭಸದಿಂದ ಹೊರಬಿದ್ದು ಬಂದು ತನ್ನ -

ಕೋಣೆಗೆ ಹೋದಳು, ಕುರ್ಚಿಯ ಮೇಲೆ ಕುಳಿತು ಸಮಾಧಾನವಾಗಲಿಲ್ಲ. 

ಎದ್ದು ಮಂಚದ ಮೇಲಿನ ಹಾಸಿಗೆಯನ್ನು ರುಳಿಸಿ ಅವಳು ಬಿದ್ದು ಕೊಂಡಳು. 

ಆದರೂ ಸಮಾಧಾನವಿಲ್ಲ. ಪತಿಯು ಹೀಗೇಕೆ ತನ್ನ ವಿಷಯವಾಗಿ ದ್ರೋಹ 

ಮಾಡಿದನೆಂಬದು ಆವಳಿಗೆ ಚನ್ನಾಗಿ ತಿಳಿಯಲಿಲ್ಲ. ಬಿಕ್ಕಿ ಬಿಕ್ಕಿಸಿ ಅತ್ತಳು. 

ಆದರಿಂದ ಜೀವಕ್ಕೆ ತುಸು ಸಮಾಧಾನವೆನಿಸಿದರೂ ತನ್ನ ಸ್ವಾತಂತ್ರ್ಯಕ್ಕೆ 

ಹೀನತೆ ಬಂದಿತಲ್ಲಾ ಎಂಬ ವ್ಯಸನವು ಅವಳನ್ನು ಅಧಿಕವಾಗಿ ಬಾಧಿಸಿತು. 

" ನಾನು ಹೆಂಗಸಾಗಿದ್ದೆಯೇ ತಪ್ಪೋ, ಅವನು ಪುರುಷನಾಗಿರುವನೆಂಬ 

ಗರ್ವವು ಹೆಚ್ಚಾಯಿತೋ?” ಎಂದು ನುಡಿದು ಪ್ರೇಮವಲ್ಲರಿಯು ತನ್ನ 

ದೈವ ವನ್ನು ನಿಂದಿಸಿದಳು. ಮತ್ತೂ ಅವಳ ಕಣ್ಣಿಗೆ ನೀರು ಬಂದಿತು ; ಮತ್ತಿಷ್ಟು 

ಸಮಾಧಾನವಾಯಿತು. " ಎಂದಿಲ್ಲದೆ ಅವರು ಹೀಗೇಕೆ ಇಂದು ಮಾಡಿ 

ದ್ವಾರು ? ನನ್ನಲ್ಲಿಂತಾದರೂ ದೋಷ ವೇನು ? ಮಿಸ್ ಸೋರಾಬಜೀ, 

ಮಿಸೆಸ್ ಫರ್ನಾಂಡೀಜ ಮುಂತಾದ ಸಖಿಯರು ನಾಟಕಕ್ಕೆ ಹೋಗೋ 

ಣೆಂದು ಕ್ಲಪ್ತಿಯನ್ನು ತೆಗೆದದ್ದರಿಂದ ಹೋದೆನು. ಹೋದರೇನಾಯಿತು ?  

ಅವರ ಕಣ್ಣುಗಳನ್ನು ಬೇರೆ ನಾನು ತೆಗೆದು ಕೊಂಡು ಹೋಗಿ ಅವುಗಳಲ್ಲಿ 

ಜಾಗರಣದ ಪೀಡೆಯನ್ನು ಹಾಕಲಿಲ್ಲವಷ್ಟೇ ?” ಎಂದು ತನ್ನೊಳಗೆ ತಾನೇ 

ಪ್ರಶ್ನೆ ಮಾಡಿದಳು. ಮತ್ತೇನೋ ಒಂದು ವಿಚಾರವು ಹುಟ್ಟಿ ಅವಳು 

ಲಜ್ಞಾಕ್ರಾಂತಳಾಗಿ ನಕ್ಕಳು. " ಅಂದರೇನಾಯಿತು ? ಒಂದು ದಿವಸ 

ನಾಟಕಕ್ಕೆ ಹೋಗದಷ್ಟು ಪರಾಧೀನತೆಯೇನು ? ?” ಎಂದು ವಾದಿಸಿದಳು, 

ಹೊರಗೆ ಬಂದು ನಡುಮನೆಯಲ್ಲಿ ವಿಮನಸ್ಕಳಾಗಿ ಅಡ್ಡಾಡಿದಳು. ಅಲ್ಲಿಯೂ 

ಸೊಗಸಾಗಲಿಲ್ಲ. ಮತ್ತೆ ಬಂದು ಹಾಸಿಗೆಯ ಮೇಲೆ ಶಾಲು ಮುಸುಗಿಟ್ಟು 

ಕೊಂಡು ಮಲಗಿದಳು. ಸಮಾಧಾನವೆಲ್ಲಿ ! ವಿಷದ ಗಾಳಿ ಬೀಸುತ್ತಿರುವ 

ದೇನು ಈ ದಿವಸ ? ಎಂದು ಅವಳು ಮುಸುಗು ತೆರೆದು ಗಾಳೀ ಹಾಕಿ 

ಕೊಂಡಳು. " ಅವರು ನನ್ನನ್ನು ಸಮಾಧಾನಗೊಳಿಸಲು ಇಲ್ಲಿ ಬಂದಾ 

ದರೂ ಬರಲಿ ! ಹೇಗೆ ಮಾಡುವೆನೋ ತಿಳಿದೀತು ! ?” ಎಂದು ಚಿಂತಿಸಿ 

ಪತಿಯು ಬಂದದ್ದೇ ಆದರೆ ಕೋಪನಿರಾಕರಣದ ಕಟುವಚನಗಳ ಸಮ್ಮೇಲನ 

ವನ್ನು ಹೇಗೆ ಸಾಧಿಸತಕ್ಕದ್ದೆಂಬ ವಿಚಾರದಲ್ಲಿ ತೊಡಗಿದಳು. ಆದರೇನು ? 

ಅವಳು ಯೋಚಿಸಿದಂತೆ ಪತಿಯು ಬಂದು ತಾನೊಡ್ಡಿದ ಬಲೆಯಲ್ಲಿ ಬಿದ್ದರೆ 

ಅದೆಲ್ಲ ಸರಿಯಷ್ಟೆ ? ಅವನು ಬರಲೇ ಇಲ್ಲ. ಅರ್ಧ ತಾಸು, ತಾಸು, 

ಎರಡು ತಾಸು ಹಾದೀ ನೋಡಿದರೂ ಆ ಧೂರ್ತನು ೩೨ ಹಣೆಯಿಕ್ಕಿ  

ನೋಡಲಿಲ್ಲ. ಆ ಕೋಪನೆಗೆ ಇಮ್ಮಡಿಯಾದ ಸಂತಾಪವಾಯಿತು. 

ಸ್ತ್ರೀಯರ ಬ್ರಹ್ಮಾಸ್ತ್ರವೇ ಪ್ರಯೋಜನವಿಲ್ಲದೆ ಹಗೆಯೇ ಉಳಿಯಿತು, 

ಕಡೆಗೆ ನಿರಾಶೆಯಿಂದ ಅವಳು ಚನ್ನಾಗಿ ಮುಸುಗಿಟ್ಟುಕೊಂಡು ಮಲಗಿ 

ಬಿಟ್ಟಳು. ಕೆಲಹೊತ್ತಿನ ಮೇಲೆ ಅನ್ನ ಪೂರ್ಣಾಬಾಯಿಯು (ಅಡಿಗೆಯುವಳು) 

ಪ್ರೇಮವಲ್ಲರಿಯು ಮಲಗಿದ್ದ ಸ್ಥಳಕ್ಕೆ ಬಂದು " ಬಾಯಿಸಾಹೇಬರೆ, 

ಭೋಜನಕ್ಕೆ ದಯ ಮಾಡುವದಿಲ್ಲವೆ ? ” ಎಂದು ಕೇಳಿದಳು. 


" ಅವರ ಭೋಜನವಾಯಿತೇನು ? ” ಎಂದು ಪ್ರೇಮವಲ್ಲರಿಯು ಬಹು 

ದೀನಸ್ವರದಲ್ಲಿ ಕೇಳಿದಳು. 


" ರಾಯರ ಗೊಡವೆ ನಿಮಗೇಕೆ ? ನೀವು ನಿಮ್ಮ ಭೋಜನವನ್ನು 

ತೀರಿಸಿಕೊಂಡರಲ್ಲವೆ ? ಎರಡು ತಾಸು ರಾತ್ರಿ ಯಾಗಿ ಹೋಯಿತು ! ” 


" ಪತಿಗಳಾದವರ ಅಧಿಕಾರವು ಅವರಿಗೆ ಸಲ್ಲಲಿ ! ಅವರ ಊಟ 

ತೀರಿಹೋದಮೇಲೆ ನಾನು ಉಣ್ಣುವೆವಂತೆ ! ” ಎಂದು ಆಜ್ಞಾಧಾರಕಳಾದ 

ಆ ಪತ್ನಿ ಯು ಅಕ್ಕಸದಿಂದ ನುಡಿದಳು.  


" ರಾಯರ ಹಾದಿಯನ್ನು ನೀವು ನೋಡಬೇಕಾಗಿಲ್ಲ. ನಿಮ್ಮ ಅಡಿಗೆ 

ಬೇರೆಯಾಗಿದೆ, ರಾಯರ ಅಡಿಗೆ ಬೇರೆಯಾಗಿದೆ. ರಾಯರು ಮೂರು 

ತಾಸು ರಾತ್ರಿಯ ಮೇಲೆ ಮನೆಗೆ ಬರುವರಂತೆ, ಇಂದೇಕೊ ಕಾರ್ಯ 

ಗಳು ವಿಪರೀತವಾಗಿ ನಡೆದಿರುತ್ತವೆ ! ” ಎಂದು ಅನ್ನಪೂರ್ಣೆಯು ನುಡಿದಳು, 


" ಅನ್ನ ಪೂಣ೯ ಬಾಯಿ, ನನ್ನ ಅಡಿಗೆಯೇ ಬೇರೆಯಾಗಿದ್ದ ಪಕ್ಷದಲ್ಲಿ 

ಅದನ್ನು ನಾನು ಬೇಕಾದಾಗ ಉಣ್ಣುವೆನಂತೆ ! ಮನೆಯ ಯಜಮಾನರ 

ಊಟವಾದ ಬಳಿಕ ನಿಮ್ಮ ಫಲಾಹಾರದೊಂದಿಗೆ ನಾನು ,ಊಟಕ್ಕೆ ಬರು 

ವೆನು, ಈಗ ನನಗೆ ತಲೆ ಸೂಲೆ ಬಹಳಾಗಿದೆ; ಸ್ವಲ್ಪ ಚಹ ಮಾಡಿ ತನ್ನಿರಿ, " 

 

ರಾತ್ರಿಯ ಹತ್ತು ಗಂಟೆಗೆ ಮತ್ತೆ ಅನ್ನ ಪೂರ್ಣಾಬಾಯಿಯು ತನ್ನ ಯಜ 

ಮಾನತಿಯನ್ನು ಊಟಕ್ಕೆ ಎಬ್ಬಿಸಿದಳು. ಪ್ರೇಮವಲ್ಲರಿಯು ಅನಿರ್ವಾಹಕ್ಕಾಗಿ -

ಎದ್ದು ಭೋಜನಶಾಲೆಗೆ ಬಂದಳು. ಹಾಗೂ ಹೀಗೂ ಕೈಯಂಜಲ ಬಾಯಂ 

ಜಲ ಮಾಡಿ ಅವಳು ಕೈದೊಳೆದು ಮಂಚಕ್ಕೆ ಬಂದಳು. ಎಷ್ಟಾದರೂ ನವ 

ತರುಣಿಯ ಅವಳು ! ತಾಂಬೂಲ ಸಮಾರಂಭಕ್ಕೆ ಪತಿಯು ಬಳಿಯಲ್ಲಿಲ್ಲ 

ವಾದ್ದರಿಂದ ಅದು ಅವಳಿಗೆ ಸೊಗಸಾಗಲಿಲ್ಲ. ಉದ್ದಡ್ಡಗಲವಾಗಿರುವ ಆ 

ಪಟ್ಟಮಂಚದ ಮೇಲೆ ತಾನೋರ್ವಳೇ ಮಲಗಿದ ಆ ತರುಣಿಗೆ ಭಣಭಣವಾ 

ಯಿತು. ಪತಿಗೆ ಶರಣು ಹೋಗಿ ಇಂದು ತನ್ನ ಮೇಲೆ ಇಷ್ಟೇಕೆ ಅವಕೃಪೆ 

ಯೆಂದು ಕೇಳಬೇಕೆಂದು ಅವಳೊಮ್ಮೆ ಆಲೋಚಿಸಿದಳು. ಆದರೆ ಹಾಗೆ 

ಮಾಡುವದು ಸ್ವಾಭಿಮಾನಕ್ಕೆ ಹಾನಿಯೆಂದು ಆಹಂಕಾರವು ಉದ್ರೇಕದಿಂದ 

ಬೋಧಿಸಿತು. ಆ ಮಗ್ಗಲೊಮ್ಮೆ ಈ ಮಗ್ಗಲೊಮ್ಮೆ ಹಾಸಿಗೆಯ ಮೇಲೆ 

ಹೊರಳಾಡಿ ಆ ಚಂಚಲೆಯು ಬೇಸತ್ತು ಹೋದಳು. ಏನು ಮಾಡಿದರೂ 

ಕಣ್ಣಿಗೆ ಕಣ್ಣು ಹೆತ್ತಲೆಲ್ಲಿದು, ಮೆಲ್ಲನೆ ಎದ್ದು ಅವಳು ಅನ್ನಪೂರ್ಣೆಯಿದ್ದ 

ನಡುಮನೆಗೆ ಬಂದಳು. 


ಅಷ್ಟು ರಾತ್ರಿಯಾಗಿದ್ದರೂ ಅನ್ನ ಪೂರ್ಣಾ ಬಾಯಿಯು ದೀಪದ ಬೆಳಕಿಗೆ 

ಕುಳಿತು ವಾಣೀವಿಲಾಸ ಮಹಾಭಾರತದ ಆದಿಪರ್ವದಲ್ಲಿ ಕೆಲವೊಂದು 

ಪ್ರಕರಣವನ್ನು ಓದುತ್ತ ಕುಳಿತಿದ್ದಳು, ಅಡಿಗೆಯವಳೆಂದರೆ ಅನ್ನಪೂರ್ಣೆಯ 

ಕುಲಹೀನೆಯಲ್ಲ. ಸಂಭಾವಿತನಾದ ಸದ್ಗೃಹಸ್ಥನ ಹೆಂಡತಿಯಾಗಿದ್ದಳವಳು. 

ಅವಳ ಪತಿಗೆ ತಿಂಗಳಾ ನೂರು ರೂಪಾಯಿಗಳ ಸಂಬಳವಿದ್ದರೂ ಆತ್ತ ವ್ಯಯ 

ನಾದ ( ಕನ್ನಡ ಐದನೆಯ ಪುಸ್ತಕ ನೋಡಿರಿ.) ಆ ತರುಣ ಗೃಹಸ್ಥನ 

ಬಳಿಯಲ್ಲಿ ಸಂಚಿತಾರ್ಥವೇನೂ ಇಲ್ಲ. ಏರತಕ್ಕವನಾದ ಆ ಮನುಷ್ಯನು 

ಮುಂದೇನು ಸಂಚಯಮಾಡುತ್ತಿದ್ದನೋ ಬಿಡುತ್ತಿದ್ದನೋ, ಆಕಸ್ಮಾತಾಗಿ 

ವಿಷಮ ಜ್ವರದಿಂದ ತೀರಿಕೊಂಡು ಹೆಂಡತಿಯನ್ನು ಗತಿಗೇಡಿಯನ್ನಾಗಿ ಮಾಡಿ 

ಕೂಡಿಸಿದ್ದನು, ಅನ್ನಪೂರ್ಣೆಯು ಶಾಂತ ಸ್ವಭಾವದವಳೂ ಸುಶಿಕ್ಷಿತಳೂ 

ಅಲ್ಪ ಸಂತೋಷದವಳೂ ಆಗಿದ್ದರಿಂದ ಆ ಸುಶೀಲೆಯು ದಿವಾಕರರಾಯ 

ನಂಥವನಲ್ಲಿ ಆಶ್ರಯವನ್ನು ಹೊಂದಿ ದೇವರು ಇಟ್ಟಂತೆ ಇದ್ದು ಸಮಾಧಾನ 

ದಿಂದಿದ್ದಳು. ಪ್ರೇಮವಲ್ಲರಿಯು ಹಾಗೆ ಆಕಸ್ಮಾತ್ತಾಗಿ ತನ್ನೆಡೆಗೆ ಬರುವ 

ದನ್ನು ಕಂಡು ಅನ್ನಪೂರ್ಣೆಯು ಚಟ್ಟನೆ ಎದ್ದು ನಿಂತಳು. 


" ಹಾಗೆ ಎದ್ದಿರೇಕೆ ? ಕುಳಿತುಕೊಳ್ಳಿರಿ” ಎಂದು ಪ್ರೇಮವಲ್ಲರಿಯು 

ಚಾಪೆಯ ಮೇಲೆ ಕುಳಿತುಕೊಂಡು ಅನ್ನಪೂರ್ಣೆಯನ್ನಾದರೂ ಕುಳ್ಳಿರಿಸಿ 

ಕೊಂಡು 14 ಅನ್ನ ಪೂರ್ಣಾಬಾಯಿ, ಇಂದೇಕೋ ನನ್ನ ಜೀವಕ್ಕೆ ಸಮಾಧಾನ 

ವಿಲ್ಲದ್ದರಿಂದ ನಿಮ್ಮೊಡನೆ ನಾಲ್ಕು ಮಾಾಡಿ ಹೋಗಬೇಕೆಂದು ಬಂದಿದ್ದೇನೆ” 

ಎಂದು ವಿನಯದಿಂದ ನುಡಿದಳು. 

 

"ಆಹುದು ! ಇಂದೇಕೆ ನಿಮ್ಮಿಬ್ಬರ ನಡುವೆ ಇಂಥ ಚಮತ್ಕಾರವಾದ 

ರಸಕಸಿಯು ? ಮಧ್ಯಾಹ್ನದಲ್ಲಿಯೇ ಕೇಳಬೇಕೆಂಬ ಮನಸ್ಸಾಗಿತ್ತು. ಆದರೆ 

' ಗಂಡ ಹೆಂಡರ ನಡುವಿನ ಜಗಳ ಜಗಳವಲ್ಲ, ಪೆಂಡೆ ಮುತ್ತಿನ ಹಾರ ಪಾಶವಲ್ಲ' 

ವೆಂದು ತಿಳಿದು ಸುಮ್ಮನಿದ್ದೆನು.'' ಎಂದು ಅನ್ನಪೂರ್ಣೆಯು ಕೆನ್ನೆಯಲ್ಲಿಯೇ 

ನಕ್ಕು ನುಡಿದಳು, 


"ಏನು ಮಣ್ಣೋ ! ಅವರಿಂದಲೇ ಕಾಲು ಕೆದರಿ ಜಗಳ ತೆಗಿಯೋಣಾ 

ಯಿತು. ಆದಿರಲಿ ಅನ್ನ ಪೂರ್ಣಾಬಾಯಿ, ಪತಿಯನ್ನು ಯಾವಾಗಲೂ 

ಸಂಪೂರ್ಣವಾದ ಸಂತೋಷದಲ್ಲಿಡುವದು ಹೆಂಡತಿಯ ಕೈಯಲ್ಲಿಯ ಮಾತಾ 

ಗಿರುವದೇನು ? " 

 

ಈ ಮಾತು ಕೇಳಿ ಅನ್ನ ಪೂರ್ಣೆಯ ಕಣ್ಣುಗಳಲ್ಲಿ ಅಶ್ರುಬಿಂದುಗಳೊತ್ತಿ 

ಬಂದವು. ಪತಿಯನ್ನು ಬೇಕಾದ ಹಾಗೆ ಸಂತೋಷಗೊಳಿಸಬಲ್ಲ ಜಾಣೆಯಾದ 

ಆ ಸುಶೀಲೆಯ ಗಂಡನು ಸದಾ ಸಂತುಷ್ಟನಾಗಿದ್ದ ಮಾತು ನೆನಪಾಗಿ ಅವ 

ಳಿಗೆ ವ್ಯಸನವಾಯಿತು. ಆದರೂ ಅವಳು ಬೇಗನೆ ಸಮಾಧಾನವನ್ನು ತಳೆದು 

ಕಣ್ಣೀರೊರಿಸಿಕೊಂಡು " ಇರಬಹುದು; ನಾನೇನು ಬಲ್ಲೆ? ಆದರೂ ಹೆಂಡತಿ 

ಯನ್ನು ಸದಾ ಸಂತೋಷದಲ್ಲಿಡುವೆನೆಂಬ ಪತಿಯ ಪ್ರಯತ್ನಗಳಾದರೂ 

ಸರ್ವಥಾ ಸಫಲವಾಗಿರುವವೇನು ? ” ಎಂದು ಆ ಚತುರೆಯಾದ ವಿಧವೆಯು. 

ನಿಪುಣವಾದ ಪ್ರಶ್ನೆ ಮಾಡಿದಳು. 


ಈ ಮಾತು ಪ್ರೇಮವಲ್ಲರಿಯ ಮನಸ್ಸಿಗೆ ಬಾಣ ಬಡಿದಂತೆ ನಟ್ಟಿತು 

ಅವಳು ಇಲ್ಲದ ನಗೆ ತಾಳಿ " ನೀವು ಅವರ ಪಕ್ಷವನ್ನು ಹಿಡಿದು ಹೀಗೆ. 

ಮಾತಾಡುವಿರಿ, ಅವರು ನನ್ನ ನ್ನು ಸಂತೋಷಗೊಳಿಸಲು ಪ್ರಯತ್ನ ಮಾಡು 

ತ್ತಿರುವದು ಸರಿ, ಆದರೆ ಅವರ ಪ್ರಯತ್ನಗಳು ಸಫಲವಾಗಿಲ್ಲವೆಂದು ಹೇಗೆ 

ಹೇಳುವಿರಿ ? ” ಎಂದು ಆಢ್ಯತೆಯಿಂದ ಕೇಳಿದಳು. 


"ಹೇಳಿದರೆ ಸಣ್ಣ ಬಾಯಲ್ಲಿ ದೊಡ್ಡ ತುತ್ತು ತೆಗೆದುಕೊಂಡಂತಾ 

ದೀತು ! ಆದರೂ ಹೇಳುತ್ತೇನೆ. ರಾಯರು ತಮ್ಮ ಸಂಪತ್ತನ್ನೆಲ್ಲ ನಿಮ 

ಗೊಸ್ಕರವಾಗಿ ಕಾದಿಟ್ಟಿರುವರೋ ಎಂಬಂತೆ - ದುಡ್ಡಿನ ಮೊರೆಯನ್ನು 

ಯಂಚಿತ್ತಾದರೂ ನೋಡದೆ ನೀವು ಬೇಡಿ ಬೇಡಿದ್ದನ್ನೆಲ್ಲ ಹಿಡುಕೊಂಡು 

ನಿಂತಿರುವರು. ಪರದಾರ ಸೋದರರಾದ ಅವರಿಗೆ ಯಾರೂ ಹೆಸರಿಡುವಂತಿಲ್ಲ.. 

ಇವೆರಡೂ ಮಾತುಗಳಲ್ಲಿ ನೀವು ವಾದಿಸಬಂದಲ್ಲಿ ನಾನು ಕೇಳಿದವಳಲ್ಲ.. 

ಹೀಗಿದ್ದು ನಿಮ್ಮ ಸಂತೋಷಕ್ಕೇನು ಕಡಿಮೆಯಾಯಿತೆಂದು ನೀವು ಪತಿಯ 

ಆಜ್ಞೆಯನ್ನು ಅಪ್ಪಿ ತಪ್ಪಿ ಯಾದರೂ ಉಲ್ಲಂಘಿಸುವಿರಿ ? ' 


"  ನಿನ್ನೆ ನಾನು ನಾಟಕಕ್ಕೆ ಹೋಗಿ೦ದೆಯೇ ಸರಿ. ಸಖೀಜನರೆ. 

ಮನಸ್ಸು ಮುರಿಯಲರಿಯದೆ ಹೋದೆನು. ಏನಾಯಿತದರಲ್ಲಿ ? ” 


“ ನಾಟಕದ ಛಂದಕ್ಕಾಗಿ ಹೊದಿರಿ. ಹೆಚ್ಚು ಮಾತಾಡಿದ್ದಕ್ಕೆ ಕ್ಷಮಿ, 

ಸಿರಿ. ಪತಿಯಾಜ್ಞೆಯನ್ನು ಮುರಿದು ಹೋದಿರಿ. ಇದರಲ್ಲಿ ಪತಿಯ 

ಸಂತೋಷಕ್ಕಿಂತಲಣ ನಿಮ್ಮ ಸಂತೋಷವು ಹೆಚ್ಚಾಗಿ ತೋರಿತೋ ಇಲ್ಲವೊ ? 

ವಸ್ತುತಃ, ಶಾಸ್ತ್ರತಃ, ನಿಮ್ಮ ಒಡೆಯರೂ ಈ ಮನೆಯ ಸಂಪತ್ತಿನ ಒಡೆ 

ಯರೂ ಆದ ನಮ್ಮ ರಾಯರು, ನಿಮ್ಮ ಸಂತೋಷಕ್ಕೆ ವಿರುದ್ದವಾಗಿದ್ದಂಥ 

ದೊಂದು ಕೆಲಸ ಮಾಡಿ ತಾವು ಸಂತೋಷಪಟ್ಟಿರುವದನ್ನು ನೀವು ಎಂದಾ 

ದರೂ ಕಂಡಿರುವಿರೋ ? " 

 

ಅನ್ನಪೂರ್ಣೆಯು ಆಡಿದ ಮಾತುಗಳಲ್ಲಿ ಯಾವದನ್ನಾದರೂ ತೆಗೆದು 

ಹಾಕುವಂತೆ ಇದ್ದಿಲ್ಲ. ಪ್ರೇಮವಲ್ಲರಿಯು ನಿರುತ್ತರಳಾಗಿ ಹುಚ್ಚು ಹಿಡಿದವ 

ರಂತೆ ಕುಳಿತಳು. ಅವರು ನನ್ನಲ್ಲಿ ಹೆಚ್ಚಾದ ಪ್ರೇಮವನ್ನು ತಳೆದಿರುವ 

ರೆಂಬ ಮಾತಿನಲ್ಲಿ ತಿಲಮಾತ್ರವಾದರೂ ವ್ಯತ್ಯಾಸದ ದೋಷವು ನನಗೆ ತೋರ 

ಲೊಲ್ಲದು. ನನ್ನ ಅಭಿಲಾಷೆಗಳ ಪೂರ್ತಿಗಾಗಿ ಅವರು ತಮ್ಮ ದುಡ್ಡು ಸೂರೆ 

ಮಾಡುತ್ತಿರುವದಾದರೂ ನಿಜವೇ. ಇನ್ನು ನಾನಾದರೂ ಮಾಡಿದ ತಪ್ಪೇನು?” 

ಎಂದು ತನ್ನೊಳಗೆ ಚಿಂತಿಸುತ್ತಿರುವಾಗ ಅವಳ ವಿಚಾರಸರಣಿಯು ಅಲ್ಲಿಯೇ 

ನಿಂತಿತು. ನಾನಾದರೂ ಮಾಡಿದ ತಪ್ಪೇನು ? ' ಎಂಬ ಪ್ರಶ್ನವನ್ನು 

ಅವಳು ತನ್ನ ಮನಸ್ಸಿಗೆ ಕೇಳಿದಾಗ ' ನಿರ್ದೋಷಿ ' ಎಂಬ ಉತ್ತರ ಬರ 

ಲೊಲ್ಲದು. 


" ಅನ್ನಪೂರ್ಣಾಬಾಯಿ, ಅವರಿಗೊಂದು ಮಾತಿನಿಂದ ಸಂತೋಷ 

ವಿಲ್ಲವೆಂದು ತಿಳಿಯಿರಿ, ಅದೇ ಮಾತಿನಿಂದ ನನಗೆ ಸಂತೋಷವಿದ್ದರೆ ಅದನ್ನು 

ನಾನೇಕೆ ಮಾಡಬಾರದು ? ಮಾಡಿದರೆ ತಪ್ಪೇನು ? ” ಎಂದು ಪ್ರೇಮವಲ್ಲ. 

ರಿಯ. ವಿಚಾರ ಸಮ್ಮೂಢೆಯಾಗಿ ಕೇಳಿದಳು, 


ನೀವು ನಾಟಕಕ್ಕೆ ಹೋದ ಪ್ರಶ್ನವನ್ನೇ ತೆಗೆದುಕೊಳ್ಳೋಣ, ನೀವು 

ಹೋಗುವದರಿ೦ದ ರಾಯರಿಗೆ ಸಂತೋಷವೋ ಅಸಂತೋಷವೋ ನಮಗೆ ತಿಳಿ 

ದಿಲ್ಲವೆಂದು ಕಲ್ಪಿಸಿರಿ. ಅಂಥ ಸಮಯದಲ್ಲಿ ನಾಟಕಕ್ಕೆ ಹೋಗುವದು ಉಚಿ 

ತವೊ ಅನುಚಿತವೋ ಎಂಬುದನ್ನು ನಾವು ನೋಡಿಕೊಳ್ಳಬೇಕಲ್ಲವೆ ? ಸದ 

 ಸದ್ಧಿವೇಕದಿಂದ ನೋಡಲಾಗಿ ಅದು ಅನುಚಿತವೆಂದು ಕಂಡಲ್ಲಿ ನಾಟಕಕ್ಕೆ 

 ಹೋಗುವ ವಿಚಾರವನ್ನು ಬಿಟ್ಟೇಬಿಡಬೇಕಲ್ಲವೆ ? ಏನು, ಇದಕ್ಕೂ ನಿಮ್ಮಲ್ಲಿ 

ವಾದವಿರುವದೊ ? " 


" ಇದಕ್ಕೇತರ ವಾದ ಅನ್ನ ಪೂರ್ಣಾಬಾಯಿ ? ” 


" ಒಳಿತಾಗಿ ಮಾತಾಡಿದಿರಿ ! ಇನ್ನು ನಾಟಕಕ್ಕೆ ಹೋದರೆ ಚಿಂತೆ 

ಯಿಲ್ಲವೆಂದು ವಿವೇಕವು ಹೇಳಿದ್ದಾದಲ್ಲಿ ಹೋಗಬಹುದು, ಅಡ್ಡಿ ಇಲ್ಲ. 

" ನಾಟಕಕ್ಕೆ ಹೋಗಬಹುದು, ಅಥವಾ ಜೋಗುವದು ಅವಶ್ಯವಾಗಿರುವದು " 

ಎಂದು ತೋರಿದ ಪ್ರಸಂಗದಲ್ಲಿ ಕೂಡ ನಿಮ್ಮ ಪತಿರಾಯರು ನಿಷ್ಕಾರಣವಾಗಿ 

ಆಗ್ರಹತೊಟ್ಟು ನಿಮಗೆ ಹೊಗಬೇಡವೆಂದು ಆಜ್ಞಾಪಿಸಿದರೆಂದು ಕಲ್ಪಿ 

ಸೋಣ. ಆಗ ನೀವು ಹೋಗುವವರೋ ಹೋಗದಿರುವವರೋ ? ” ಎಂಬ 

ದೊಂದು ದೊಡ್ಡ ಮುಂಡಿಗೆಯನ್ನು ಅನ್ನ ಪೂರ್ಣೆಯು ಪ್ರೇಮವಲ್ಲರಿಯು 

ಮುಂದೆ ಚಲ್ಲಿದಳು, 


" ನಾನೇನು ಹೇಳಲಿ ? ಹೋದರೆ ಏನಾಗುವದು ? '' ಎಂದು ಪ್ರೇಮ 

ವಲ್ಲರಿಯ ಮೂಢೆಯ೦ತೆ ಕೇಳಿದಳು. 


"ನಿಮ್ಮ ಸಂತೋಷಕ್ಕಾಗಿ ನೀವು ಅನ್ಯರಿಗೆ ಅಸಂತೋಷವನ್ನು 

ಉಂಟುಮಾಡಿದರೂ ಚಿಂತೆಯಿಲ್ಲವೆನ್ನುವಿರಾ ? ಆ ಅನ್ಯರೆಂದರೆ ಪ್ರತ್ಯಕ್ಷ 

ನಿಮ್ಮ ಪ್ರಾಣೇಶ್ವರರು. ನಿಮ್ಮ ಹಿತಕ್ಕಾಗಿಯೇ ತಾವು ಹುಟ್ಟಿರುವವರಂತೆ 

ವರ್ತಿಸಿ ನಿಮ್ಮ ಹಿತವಾದದ್ದು ಕಂಡು ತಾವು ಸಂತೋಷ ಪಡುತ್ತಿರುವ 

ಪ್ರಾಣೇಶ್ವರರು ಮತ್ತೆ ! " 

 

" ಅನ್ನ ಪೂರ್ಣಾಬಾಯಿ, ನಿಮ್ಮಲ್ಲಿ ಮೆಸ್ಮೆರಿಝಮ್‌ ಇಲ್ಲವೆ ಹಿಪ್ನಾಟಿ 

ಝುಮ್ ಎಂಬ ವಿದ್ಯೆ ಬೇರೆ ಇಲ್ಲವಷ್ಟೆ ? ಏಕೋ ಈ ಸಮಯದಲ್ಲಿ ನೀವು 

ಅಂದದ್ದಕ್ಕೆ “ಹೂಂ" ಎನ್ನುವ ಬುದ್ದಿ ನನಗಾಗಿದೆ” ಎಂದು ಪ್ರೇಮವಲ್ಲ 

ರಿಯು ಬಹು ನಮ್ರಳಾಗಿ ನುಡಿದಳು 


ಅನ್ನಪೂರ್ಣೆಯು ನಕ್ಕು ಎಲ್ಲಿಯ ಮೆಸ್ಮೆರಿಝಮ್, ಏನು ಕಥೆ ! 

ನಿನ್ನಲ್ಲಿ ತಿಳುವಳಿಕೆ ಇದೆ ಎಂಬುದು ಸಿದ್ದಾ೦ತವಾಯಿತು ಸರಿ, ಅದಿರಲಿ, 

ಅನ್ಯರಿಗೆ, ಅನ್ಯರಿಗೇಕೆ, ಪತಿರಾಯರಿಗೆ ಅಸಂತೋಷವನ್ನುಂಟು ಮಾಡಿ ನೀವು 

ನಿಮ್ಮ ಸಂತೋಷವನ್ನು ಸಾಧಿಸಿಕೊಳ್ಳುವದು ಆಯೋಗ್ಯವೆಂಬ ಮಾತಿಗೆ 

ನೀವು ಒಪ್ಪಿದಂತಾಯಿತಷ್ಟೆ ? ” ಎಂದು ಕೇಳಿದಳು, 


"ನಮ್ಮ ಸಂತೋಷವಾಗುವ ಕೆಲಸದಲ್ಲಿ ಪತಿರಾಯರು ತಾನೇಕೆ 

ಅಸಂತೋಷನನ್ನು ಹುಟ್ಟಿಸಿಕೊಳ್ಳಬೇಕು ? ” 


" ಅದು ಅವರ ವಿಚಾರವು. ನಿಮ್ಮ ಸಂತೋಷಕ್ಕಾಗಿ ಪತಿಗೆ 

ಆಸಂತೋಷವನ್ನುಂಟು ಮಾಡುವದು ನಿಮ್ಮ ಧರ್ಮವಲ್ಲವಷ್ಟೆ ? ” 


"  ಅಲ್ಲ'' ಎಂದು ಪ್ರೇಮವಲ್ಲರಿಯು ಪ್ರಾಂಜಲಳಾಗಿ ಉತ್ತರವಿತ್ತಳು. 


“ ತೀರಿ ಹೋಯಿತು ! ಜಗಳವಿನ್ನಲ್ಲಿ ಉಳಿಯಿತು ? ” 


" ಅನ್ನಪೂರ್ಣಾ ಬಾಯಿ, ಈ ಜಗತ್ತಿನಲ್ಲಿ ಗಂಡ ಹೆಂಡರಿರ್ವರೂ 

ಸಮಾನಾಧಿಕಾರಿಗಳಲ್ಲವೆ ? ನಾವೇ ಸೋತು ಪತಿಯ ಸಂತೋಷದ ಕೆಲಸ 

ಗಳನ್ನಷ್ಟು ಮಾಡುತ್ತಿರಬೇಕೆ ? " 


“ನಿಮ್ಮ ವಾದದಲ್ಲಿ ದೋಷವಿಲ್ಲ. ಆದರೆ ನಮ್ಮ ರಾಯರು ನಿಷ್ಕಾರಣ 

ವಾಗಿ ನಿಮ್ಮ ಸಂತೋಷದಲ್ಲಿ ಮಣ್ಣುಗಲಿಸಲು ಯತ್ನಿಸುವರೆಂದು ನೀವು ತಿಳಿ 

ದಿದ್ದರೆ ಅದು ತಪ್ಪು. ಯಾಕೆಂದರೆ ನಿಮಗೆ ಸಂತೋಷವಾಗಲೆಂದು ಹಗ 

ಲಿರಳು ಅವರು ಶ್ರಮಪಡುತ್ತಿರುವದನ್ನು ನೀವು ಅರಿತವರಾಗಿರುವಿರಿ, ವಿಚಾರ 

ತಿಳಿಯದೆ ನೀವೊಂದು ಮಾತು ಮಾತಾಡುತ್ತಿದ್ದರೆ ಬೇಡೆಂದು ಹೇಳಲು 

ಅವರಿಗೆ ಅಧಿಕಾರವಿರುವದೊ ಇಲ್ಲವೋ ? ” 


“ ನಾನು ಮಾಡಿದ್ದೊಂದು ಕೆಲಸವು ಆವಿಚಾರದ್ದೇ ಎಂದು ಹೇಗೆ 

ಹೇಳುವಿರಿ ? ” 


" ಅದು ಬುದ್ದಿವಂತರ ಕೆಲಸವು, ನಿಮಗಿಂತಲೂ ರಾಯರು ಬುದ್ದಿ 

ವಂತರೆಂಬದಕ್ಕೆ ನಿಮಗೆ ಮಾನ್ಯವಾಗಿರುವ ಯುನಿವ್ಹರ್ಸಿಟಿಯೇ ಪ್ರಮಾಣವು 

ನಿಮ್ಮ ಮನಸ್ಸೇ ಸಾಕ್ಷಿಯು, ತಮ್ಮ ಮನೆಯಲ್ಲಿ ನಡೆದಿರುವ ಕಾರ್ಯ್ರಮಗಳ 

ವಿಹಿತಾ ವಿಹಿತಗಳ ನಿರ್ಣಯವನ್ನು ರಾಲತರೇ ಮಾಡತಕ್ಕವರಲ್ಲವೆ ? 


" ಅಂದರೆ ನಾನೆಂದರೆ ಈ ಮನೆಯಲ್ಲಿ ಯಾತಕ್ಕೂ ಬಾರದವಳೆಂದು 

ನಿಮ್ಮ ಭಿಪ್ರಾಯವೆ? ?” ಎಂದು ಸಾಶಂಕಳಾಗಿ ಪ್ರೇಮವಲ್ಲರಿಯು ಕೇಳಿದಳು. 


" ಯಾರು ಹಾಗೆ ಹೇಳುವರು ಬಾಯೀಸಾಹೇಬ ! ನೀವಾದರೂ ಈ 

ಮನೆಯಲ್ಲಿ ರಾಯರಿಗೆ ಸಮಾನರಾದ ಅಧಿಕಾರಿಗಳು, ನೀವು ರಾಯರಿಗೆ 

ಸಮಾನರಾದ ಅಧಿಕಾರಿಗಳೆಂದರೆ ರಾಯರ ಅಧಿಕಾರವನ್ನು ನೀವು ಕಸು 

ಕೊಳ್ಳಲಾರಿರಿ ಎಂಬದನ್ನು ನೀವು ಮರೆಯಲಾರಿರಿ. ಈ ಮನೆಯಲ್ಲಿ ನಿಮಗೆ 

ಅಧಿಕಾರವು ಪ್ರಾಪ್ತವಾಗಿದ್ದರೆ ಅದರೊಡನೆ ಕೆಲವು ಕರ್ತವ್ಯಗಳಾದರೂ 

ನಿಮಗೆ ಬಿಡದವಾಗಿವೆ, ನಿರಂತರವಾಗಿ ಪತಿಗೆ ಸಂತೋಷವಾಗುವಂಥ ಕಲಸ 

ವನ್ನೆ ಮಾಡುತ್ತಿರುವದು ನಿಮ್ಮ ಕರ್ತವ್ಯವು, ಈ ಕರ್ತವ್ಯವೊಂದನ್ನು 

ಮಾಡಿದ ಮಾತ್ರದಿಂದಲೇ ಈ ಮನೆಯ ಸ್ವಾಮಿನಿಯೆಂಬ ಬಹುಮಾನದ 

ಪದವಿಯು ನಿಮಗೆ ಪ್ರಾಪ್ತವಾಗುವದು. " 

 

" ಸರಿ ! ಆದರೆ ನಾವು ಯಾವಾಗಲೂ ಪತಿಯು ಛಂದಾನುವರ್ತಿ 

ಗಳೇ ಆಗಿದ್ದು ಕೊಂಡರೆ ನಮ್ಮ ಸುಖದ ಬಗ್ಗೆ ವಿಚಾರ ಮಾಡಲು ನಮಗೆ 

ಅವಕಾಶವೇ ಉಳಿಯಲಿಕ್ಕಿಲ್ಲ. ” 


" ರಹಸ್ಯವೇನಿರುವದು ಈ ಮಾತಿನಲ್ಲಿಯೇ ! ಸಮಾನಾಧಿಕಾರಿಗಳೀ  

ರ್ವರಿದ್ದಲ್ಲಿ ಅವರವರು ತಮ್ಮ ತಮ್ಮ ಅಧಿಕಾರದ ಮರ್ಯಾದೆಯನ್ನು ಕಾದು 

ಕೊಂಡಿರಬೇಕಾದರೆ ಒಬ್ಬರೊಬ್ಬರು ಒಬ್ಬರೊಬ್ಬರ ಮನೋವೃತ್ತಿಯಂತೆ 

ನಡೆಯಬೇಕು, ಇಲ್ಲಿಯೇ ನೋಡಿ ! ನಮ್ಮ ರಾಯರು ಯಾವಾಗಲೂ 

ನಿಮ್ಮ ಹಿತವನ್ನೇ ಮಾಡುತ್ತಿದ್ದು ನಿಮಗಾದ ಸುಖವನ್ನು ಕಂಡು ತಾವು 

ಸುಖಿಸುತ್ತಿರುವರು, ನೀವಾದರೂ ಅದರಂತೆ ವರ್ತಿಸಿ ಅವರಿಗಾದ ಸುಖ 

ವನ್ನು ಕಂಡು ಸುಖಿಸುವೆನೆಂಬ ವಿಚಾರವನ್ನು ನೀವು ಮಾಡಿದರೆ ಹೇಗೆ 

ಬಂಗಾರದಂತಾಗುವದು ನೋಡಿರಿ ! ನಿಮ್ಮ ಹಿತವನ್ನು ರಾಯರು ಪ್ರಯತ್ನ 

ಪೂರ್ವಕವಾಗಿ ಮಾಡುತ್ತಿರುವರು. ಇದರಿಂದ ನಿಮ್ಮ ಹಿತವು ಸಾಧಿಸಿತಷ್ಟೆ ? 

ಅವರ ಹಿತವಾಗುವಂತೆ ನೀವು ಮಾಡಿದರೆ ಅನಾಯಾಸವಾಗಿ ಅವರ ಸುಖವು 

ಸಾಧಿಸುವದು, ಸ್ವಸುಖವನ್ನು ತಾವೇ ಸಾಧಿಸಿಕೊಳ್ಳುವದೂ ಕತ್ತಲೆಯಲ್ಲಿ 

ಕುಳಿತು ಮುಟುಮುಟನೆ ಉಂಡೆ ಅನ್ನ ರಸಗಳನ್ನು ತಿನ್ನುವದೂ ಒಂದೇ ಸರಿ. 

ಪದಾರ್ಥವು ಸವಿಯಾಗಿರಬಹುದು, ಆದರೆ ಅದರಲ್ಲಿ ಸ್ವಾರಸ್ಯವಿಲ್ಲ. ಈರ್ವರು. 

ಚತುರೆಯರು ಅನ್ನೋನ್ಯರನ್ನು ಬೆರಗು ಮಾಡಬೇಕೆಂದು ಒಂದೊಂದು ಚಮ. 

ತ್ಕಾರವಾದ ಪಕ್ವಾನ್ನದ ತಾಟುಗಳನ್ನು ಸಿದ್ಧಗೊಳಿಸಿ, ಈರ್ವರೂ ಇದಿರುಬದಿ 

ರಾಗಿ ಕುಳಿತು, ಇವಳು ತನ್ನ ತಾಟಿನಲ್ಲಿಯ ಪದಾರ್ಥಗಳನ್ನು ಅವಳ ತಾಟಿ 

ನಲ್ಲಿಯೂ ಅವಳು ತನ್ನ ಪದಾರ್ಥಗಳನ್ನು ಇವಳ ತಾಟಿನಲ್ಲಿಯೂ ಹಾಕಿ, 

ಒಬ್ಬರೊಬ್ಬರ ಕೌಶಲ್ಯವನ್ನೂ ಆದರವನ್ನೂ ಬಣ್ಣಿಸುತ್ತ ಹಾಸ್ಯ ವಿನೋದ 

ಯುತವಾದ ಮಾತುಗಳನ್ನಾಡುತ್ತ ಉಂಡರೆ ಅವರಿಬ್ಬರಿಗೂ ಎಷ್ಟು, 

ಸಂತೋಷ ? ಭೋಜನಕ್ಕಾದರೂ ಎಷ್ಟಾದರೂ ಸ್ವಾರಸ್ಯ ? ಹಾಗೆಯೇ 

ಪತಿಯು ಸತಿಯ ಸುಖವನ್ನೂ ಸತಿಯು ಪತಿಯ ಸುಖವನ್ನೂ ಮಾಡಲೆಣಿ 

ಸಿದರೆ ಇಬ್ಬರ ಸುಖಗಳೂ ಸಾಧಿಸುವವಲ್ಲದೆ ಅವರವರ ಸುಖಕ್ಕೆ ಬಗೆಬಗೆಯ 

ಸ್ವಾರಸ್ಯವಾದರೂ ಬರುವದು, ರಾಯರಿಗೆ ನೀವು ಮಾಡಿಕೊಟ್ಟ ತಾಂಬೂಲ 

ವನ್ನು ಸೇವಿಸಲು ಬಲು ಅಕ್ಕರತೆ ! ಅವರು ಪ್ರೇಮದಿಂದ ನಿಮ್ಮ ತುರಬಿಗೆ 

ಒಂದು ಹಾರವನ್ನು ತೊಡಕಿಸಿದರೆಂದು ತಿಳಿಯಿರಿ. ಆ ಸೊಬಗು ಸ್ವರ್ಗದ 

ಪುಷ್ಪವೃಷ್ಟಿಯಿಂದಾದರೂ ಬರಬಲ್ಲದೆ ? ” 


ಪ್ರೇಮವಲ್ಲರಿಯು ವಿನೋದವನ್ನು ತಾಳಿ ಯಥೇಚ್ಛವಾಗಿ ನಕ್ಕಳು. 

ಇಂದು ತನ್ನ ಜೀವಕ್ಕೆ ವ್ಯಸನವಾಗಿತ್ತೆಂಬ ಅರಿವನ್ನೇ ಅವಳು ಸಂಪೂರ್ಣ 

ವಾಗಿ ಮರೆತುಬಿಟ್ಟಳು. " ಅನ್ನ ಪೂರ್ಣಾಬಾಯಿ, ನೀವು ಒಳ್ಳೇ ರಸಿಕರು " 

ಎಂದು ವಲ್ಲರಿಯು ನುಡಿಯುವಷ್ಟರಲ್ಲಿಯೇ ಅನ್ನಪೂರ್ಣೆಯ ವೈಧವ್ಯದ ನೆನ 

ಪಾಗಿ ಅವಳ ಕಣ್ಣುಗಳಲ್ಲಿ ಮಃಖಾಶ್ರುಗಳೊತ್ತಿ ಬಂದವು. "ಅಕ್ಕಾ-ಇಂದಿ 

ನಿಂದ ನಾನು ನಿಮ್ಮನ್ನು ಆಕ್ಕನೆಂದೇ ಕರೆಯುವೆನು. - ಆಕ್ಕಾ, ನಿಮ್ಮಂಥ 

ಉತ್ತಮಳಾದ ಸ್ತ್ರೀಗೆ ಇಂಥ ದುರವಸ್ಥೆಯು ಪ್ರಾಪ್ತವಾಗಿರುವದನ್ನು ಕಂಡು 

ನನಗೆ ನಿಜವಾಗಿ ವ್ಯಥೆ ಯಾಗಿದೆ, ಏನು ಮಾಡಲಿ ! ” 


ಧೀರೆಯಾದ ಅನ್ನಪೂರ್ಣೆಯು ದುಃಖದ ವಿಚಾರಗಳಿಗೆ ಈಡಾಗದೆ 

"ಬಾಯಿಯವರೆ, ಈ ಮಾತಿನಲ್ಲಿ ಯಾರು ಏನು ಮಾಡಬೇಕಾಗಿದೆ? ದೇವರು 

ಕರುಣಾಪೂರ್ಣವಾಗಿ ನನ್ನ ಉಡಿಯಲ್ಲಿ ಸುಖದ ಫಲವನ್ನೇ ನೀಡಿದ್ದನು. 

ಹತ್ತು ವರ್ಷದ ಮೇಲೆ ಅದೇ ಫಲವನ್ನು ಅವನೇಕೋ ಎತ್ತಿಕೊಂಡು 

ಹೋದನು. ನನ್ನ ಹಣೇ ಬರಹವು ಹಾಗಿರಲಿ, ದೇವರು ನಿಮ್ಮ ಉಡಿಯಲ್ಲಿ 

ಯಾದರೂ ಸರಮಪ್ಪ ಹಣೀಯವಾದ ಫಲವನ್ನು ನೀಡಿದ್ದಾನೆ. ಆದನು 

ಅನಾದರಿಸದೆ ಜೋಕೆಯಿಂದ ಅದರ ಸ್ವಾರಸ್ಯ ವನ್ನು ಸೇವಿಸುತ್ತ ನಡೆದರೆ 

ನಿಮಗೂ ನಿಮ್ಮ ಪತಿರಾಯರಿಗೂ ಕೂಡಿಯೇ ಮಿತಿ ಮೀರಿದ ಸುಖ; ಗಂಟು, 

ಹಾಕಿ ನಿಮ್ಮಿಬ್ಬರನ್ನು ಒತ್ತಟ್ಟಿಗಿರಿಸಿದ ಪರಮಾತ್ಮನಿಗಾದರೂ ಸಂತೋಷ.” 


ಪ್ರೇಮವಲ್ಲರಿಯು ಅನ್ನಪೂರ್ಣೆಯ ಕಾಲೆರಗಿ "ಅಕ್ಕಾ, ಇಂದಿನಿಂದ 

ನಾನು ನಿಮ್ಮ ಉಪದೇಶದಂತೆ ನಡೆಯುವೆನು. ನಾನು ನನ್ನ ಪತಿರಾಯರ 

ಇಚ್ಛೆಯನ್ನು ಮುರಿದವಳೇ ಹೆಡ್ಡಳು, ” ಎಂದು ನುಡಿದು ಆ ಸಾಧಿಯ 

ಮುಖವನ್ನು ನೋಡುತ್ತ ಕುಳಿತಳು. 


“ ನನ್ನದೇನು ಉಪದೇಶ ! ಗುರುಹಿರಿಯರು ಕಲಿಸಿದ ಉಪದೇಶ 

ವಿದು. ದಾಂಪತ್ಯ ಧರ್ಮ, ಅದರ ಯೋಗ್ಯತೆ, ಅದರ ಸ್ವಾರಸ್ಯಗಳು ನಮ್ಮ 

ಜನಾಂಗದವರಿಗೆ ತಿಳಿದಷ್ಟು ಬೇರೆ ಜನಾಂಗದವರಿಗೆ ತಿಳಿದಿಲ್ಲ. ಈ ಧರ್ಮ 

ದಿಂದ ನಡೆದರೆ ಇಹದಲ್ಲಿ ಸಂಪೂರ್ಣವಾದ ಸುಖದ ಪ್ರಾಪ್ತಿಯು, ಪರಮಾರ್ಥ 

ಬೋಧವಾದರೂ ಅದರಲ್ಲಿಯೇ ತುಂಬಿ ತುಳುಕುತ್ತಲಿದೆ.” 


"  ಅಕ್ಕಾ, ಅಲ್ಲಿ ಕೇಳಿದಿರಾ ? ಗಡಿಯಾರದಲ್ಲಿ ತಣ್ಣನೆ ಒಂದು ಹೊಡೆ 

ಯಿತು, ಮಲಗಿಕೊಳ್ಳಿರಿನ್ನು. ನಾನು ಹೋಗುತ್ತೇನೆ. ” ಎಂದು ಪ್ರೇಮ 

ವಲ್ಲರಿಯು ಎದ್ದು ನಿಂತು ಮೂಢೆಯಂತೆ ಅವನತಮುಖಿಯಾಗಿ ನಕ್ಕು, 

“ಎಲ್ಲಿಗೆ ಹೋಗಲಿ ನಾನಿನ್ನು ? ಅವರ ಬಳಿಗೆ ಹೋಗಿ ಕ್ಷಮೆ ಬೇಡಿಕೊಳ್ಳಿ 

ಲಿಯಾ ? ಕ್ಷಮೆಯಾದರೂ ಸಿಕ್ಕಬಹುದೇನು ? ” ಎಂದು ಕೇಳಿದಳು, 


" ಕ್ಷಮಿಸಲಿಕ್ಕೆ ರಾಯರು ನಿಮ್ಮ ಮೇಲೆ ಕೋಪಿಸಿಕೊಂಡಿದ್ದರೆ ಸರಿ 

ಯಷ್ಟೆ ? ನಿಮ್ಮಲ್ಲಿಯ ಅಪಕ್ವವಾದ ವಿಚಾರಗಳನ್ನು ತೆಗೆದು ಹಾಕಲು ಆವರು 

ಮಾಡಿದ ಪ್ರಯತ್ನವಿದು, " 


" ಹಾಗಾದರೆ ಈಗಲೇ ನಡೆದೆನು. ಆದರೆ ಅಕ್ಕಾ, ಅವರು ನಿದ್ರಾವಶ 

ರಾಗಿ ಮಲಗಿದರೆ ಹೇಗೆ ಮಾಡಲಿ ?” 


ಅನ್ನಪೂರ್ಣೆಯು ನಸುನಕ್ಕು " ಹುಚ್ಚು ಹಾಳಾಗಲಿ ! ಅವರಿಗೆ 

ನಿದ್ರೆಯೋ ನಿಮಗೋಸ್ಕರವಾಗಿ ಆತುರತೆಯಿಂದ ಮಾರ್ಗಪ್ರತೀಕ್ಷೆ 

ಮಾಡು ಇರುವರೋ ಎಂಬದು ನಿಮಗೆ ತಿಳಿಯಬೇಕು. ಹೋಗಿರಿ. ಅವರಿಗೆ 

ನಿದ್ರೆ ಬಂದದ್ದಾಗಿರಲಿ, ಇಲ್ಲವೆ ನಿಮ್ಮ ಮೇಲೆ ಅವರು ಕೋಪ ಮಾಡಿದ್ದೇ 

ಆಗಲಿ, ಆಗಿದ್ದರೆ ನಾಳೆ ಬೆಳಿಗ್ಗೆ ಬಂದು ನನ್ನ ಮುಂದೆ ಹೇಳಿರಿ. "

=======================================

ಮನೆಮನೆಯ ಸಮಾಚಾರ # # # # 


ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮ 

ವಿರುವದು. . ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥ 

ನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ 

ಇದ್ದರು, ರಾಯರ ಹಿರಿಯ ಮಗನಾದ ರಾಮಚಂದ್ರರಾಯನು ತಕ್ಕಮಟ್ಟಿಗೆ 

ವಿದ್ಯಾರ್ಜನವನ್ನು ಮಾಡಿ ತಂದೆಯವರ ತಲೆಯ ಮೇಲಿದ್ದ ಸಂಸಾರದ 

ಭಾರವನ್ನು ತಾನು ಹೊತ್ತು ಕೊಂಡು ಆ ಪ್ರಾಂತದಲ್ಲಿ ಒಳ್ಳೇ ಪ್ರತಿಷ್ಟಿತನೆಂದು 

ಹೆಸರಾದನು. ಚಿಕ್ಕವನಾದ ವಿಜಯರಾಯನು ಕಾಲೇಜದಲ್ಲಿ ಅಭ್ಯಾಸ. 

ಮಾಡುತ್ತಿದ್ದು ಒಳ್ಳೆ ಬುದ್ದಿವಂತನಾದ ವಿದ್ಯಾರ್ಥಿಯಾಗಿದ್ದನು, ಮಗಳಾದ 

ವತ್ಸಲೆಯನ್ನು ನೆರೆಹಳ್ಳಿಯ ದೇಸಾಯರ ಮಗನಾದ ತಿರುಮಲರಾಯನಿಗೆ 

ಕೊಟ್ಟಿತ್ತು. ತಿರುಮಲರಾಯನಾದರೂ ವಿಜಯರಾಯನೊಂದಿಗೆ ಕಾಲೇಜ 

ದಲ್ಲಿ ಅಭ್ಯಾಸ ಮಾಡುತ್ತಿದ್ದನು. 

 

ಹೀಗೆ ಮನೆಯೆಲ್ಲ ಸಂತತಿ ಸಂಪತ್ತು ಗಳಿಂದ ತುಂಬಿ ತುಳುಕುತ್ತಿರುವ  

ದನ್ನು ನೋಡಿ ಪ್ರೌಢರಾಯರಿಗೂ ಅವರ ಧರ್ಮಪತ್ನಿಯವರಾದ ಯಮುನಾ 

ಬಾಯಿಯವರಿಗೂ ಸಂಸಾರಸುಖದ ಪರಮಾವಧಿಯ ತೃಪ್ತಿಯಾಗಿ ಜಗತ್ತಿ 

ನಲ್ಲಿ ತಾವೇ ಧನ್ಯರೆಂದು ಅವರು ತಿಳುಕೊಂಡಿದ್ದರು. 


ಆದರೆ ಈ ಮೃತ್ಯುಲೋಕದಲ್ಲಿ ಸತ್ಯವಾದ ಸುಖವೆಲ್ಲಿ ?  ನುಣ್ಣಗೆ 

ಕಾಣುವ ದುಃಖದ ಬೀಜಗಳನ್ನು ಸುಖದ ಸಾರವೆಂದು ತಿಳಿದು ನಾವು. 

ಯಥೇಷ್ಟವಾಗಿ ಗುಳುಗುಳನೆ ನುಂಗಿದರೆ ಮುಂದೆ ಕಷ್ಟವೇ ಸಂಭವಿಸುವ 

ದೆಂದು ಅನಾದಿಕಾಲದಿಂದ ಅನುಭವಿಕರಾದ ಜ್ಞಾನಿಗಳು ಸಾರಿ ಹೇಳುತ್ತೆ 

ಬಂದಿದ್ದರೂ, ನಿವಾರಿಸಲ್ಪಟ್ಟಾಗ್ಯೂ ಬಿಟ್ಟು ಬಿಡದಿ ದೀವಿಗೆಗೆ ಅಡರು 

ರುವ ಶಲಭಗಳಂತೆ, ನಾವು ಸುಳ್ಳು ಸುಖದ ಹಂಬಲವನ್ನು ಸರ್ವಥಾ ಬಿಡು 

ವದಿಲ್ಲ. ಈ ಮಾತಿನಿಂದ ಲೋಕದ ಜನರು ಸಂಸಾರ ಮಾಡುವದನ್ನು 

ಬಿಡತಕ್ಕದ್ದೆಂದು ನಾವು ಹೇಳುವದಿಲ್ಲ. ಸಂಸಾರವನ್ನು ಕರ್ತವ್ಯವೆಂದು  

ತಿಳಿದೇ ಮಾಡತಕ್ಕದ್ದಲ್ಲದೆ ಅದರಲ್ಲಿ ಅಧಿಕವಾದ ಆಸಕ್ತಿಯನ್ನು ತಳೆಯುವ 

ದಲ್ಲ. ಸುಖಾಭಿಲಾಷೆಯನ್ನು ಹೊಂದುವದು ಮನುಷ್ಯನ ಸ್ವಭಾವಸಿದ್ದ 

ವಾದ ಗುಣವಾದ್ದರಿಂನ ಅದು ದೋಷವಲ್ಲ. ಜ್ಞಾನಿಗಳು ನಿತ್ಯವಾದ ಸುಖ 

ವನ್ನು ಬಯಸಿದರೆ ಇತರರು ತಮ್ಮ ಕುದ್ರವಾದ ದೃಷ್ಟಿಗೆ ಕಂಡ ಸುಖಾಪೇಕ್ಷೆ 

ಯನ್ನು ಮಾಡುವದುಂಟು. 


ಸಾಮಾನ್ಯರಾದ ಮನುಷ್ಯರ ಸುಖಕ್ಕೆ ಅನೇಕವಾದ ಕಂಟಕಗಳಿರು 

ವವು. ಅವುಗಳಲ್ಲಿ ಮೃತ್ಯುವೆಂಬದು ಬಹು ಘೋರವಾದದ್ದು. ಪ್ಲೇಗದ 

ರೂಪವನ್ನು ತಾಳಿ ಮೃತ್ಯುವು ಹದ್ದಿನಂತೆ ಎರಗಿ ಪ್ರೌಢರಾಯನ ಮುಂಗೈ 

ಮೇಲಿರುವ ಆರಗಿಳಿಯಾದ ರಾಮಚಂದ್ರರಾಯನನ್ನು ಭರ್ರನೆ ಎತ್ತಿಕೊಂಡೊ 

ಯ್ದಿತು, ಅದೇ ಬೇನೆಯಿಂದ ರಾಮಚಂದ್ರನ ಹೆಂಡತಿಯಾದರೂ ತೀರಿ 

ಕೊಂಡು ಪರದೇಶಿಯಾದ ತನ್ನ ಚಿಕ್ಕ ಬಾಲಕನ ಸಂರಕ್ಷಣದ ಭಾರವನ್ನು 

ಮುದುಕೆಯಾದ ತನ್ನ ಅತ್ತೆಯ ಮೇಲೆ ಹೊರಿಸಿ ಹೋದಳು. ಪುತ್ರಶೋಕದ 

ಉಗ್ರವಾದ ಸಂತಾಪದಿಂದ ಪ್ರೌಢರಾಯರು ಕೂಡ ಬೇಗನೆ ಪರಲೋಕ 

ವಾಸಿಗಳಾದರು. 


ಪಾಪ ! ಯಮುನಾಬಾಯಿಯವರು ಸಂಸಾರಸುಖದ ಸ್ವಾದವನ್ನೆ 

ಸೇವಿಸಿದವರು ಹೊರತಾಗಿ ಅವರಿಗೆ ದುಃಖದ ಗಾಳಿ ಕೂಡ ಇದುವರೆಗೆ ತಗಲಿ 

ದ್ದಿಲ್ಲ. ಮುಪ್ಪಿನ ಕಾಲದಲ್ಲಿ ಪ್ರಾಪ್ತವಾದ ಸತಿಪುತ್ರರ ವಿಯೋಗದ ದುಃಖ 

ದಿಂದ ಅವರು ಮುರಿದು ಮುಟ್ಟಿಗೆಯಾದರು. ಮೇಲೆ ೬-೭ ವರ್ಷದ 

ಅರ್ಭಕನಾದ ಮೊಮ್ಮಗನನ್ನು ಸಂರಕ್ಷಿಸುವ ಭಾರವೊಂದು ಅವರ ಮೈಮೇಲೆ 

ಬಿದ್ದಿತ್ತು. ಆದರೂ ತಿಳುವಳಿಕೆಯುಳ್ಳವರಾದ ಯಮುನಾಬಾಯಿಯವರು 

ಪುರಾಣ ಪುಣ್ಯ ಕಥೆಗಳನ್ನು ಕೇಳುವದರಲ್ಲಿ ಯೂ, ವ್ರತನಿಯಮಗಳನ್ನು ಆಚ 

ರಿಸುವದರಲ್ಲಿಯ, ದಾನಧರ್ಮಗಳನ್ನು ಮಾಡುವದರಲ್ಲಿಯ ಕಾಲಕ್ಷೇಪ 

ಮಾಡುತ್ತೆ ತಮ್ಮ ದುಃಖಗಳನ್ನು ಮೆಲ್ಲಮೆಲ್ಲನೆ ಮರೆಯುತ್ತೆ ಬಂದು ಇದ್ದವ 

ರನ್ನು ನೋಡಿಕೊಂಡು ಇದ್ದರು.  


" ಉತ್ಸವಪ್ರಿಯಾ: ಖಲು ನಾರ್ಯಃ” ಎಂಬಂತೆ ಮನೆಯಲ್ಲಿ ಲಗ್ನ 

ಮುಹೂರ್ತಗಳಾದರೆ ಹೆಣ್ಣು ಮಕ್ಕಳು ತಮಗುಂಟಾದ ಕಡುತರವಾದ ದುಃಖ - 

ಗಳನ್ನು ಮರೆತು ಉಬ್ಬಿನಿಂದ ಮಂಗಲೋತ್ಸವಗಳನ್ನು ನೆರೆವೇರಿಸುವದುಂಟು. 

ಪ್ರೌಢರಾಯರು ತೀರಿಕೊಂಡು ವರ್ಷವಾದ ಕೂಡಲೆ ಯಮುನಾಬಾಯಿಯ 

ವರು ತಮ್ಮ ಚಿಕ್ಕ ಮಗನಾದ ವಿಜಯರಾಯನ ವಿವಾಹಮಹೋತ್ಸವವನ್ನು 

`ಬೆಳಿಸುವವರಾದರು. ಕನ್ನೆಯ ತಂದೆಯ ದೊಡ್ಡದೊಂದು ತಾಲೂಕಿನ 

ತಹಶೀಲದಾರನಾಗಿದ್ದನು. ಅವನ ಹೆಂಡತಿಯಾದ ರಖಮಾಬಾಯಿಯು 

ತಹಶೀಲದಾರನಿಗೆ ಇಮ್ಮಡಿಯಾದ ಅಧಿಕಾರವನ್ನು ಆ ತಾಲೂಕಿನಲ್ಲಿ ಮೆರಿ 

ಸುತ್ತಿದ್ದಳು. ಇಂಥವರು ಅಭಿಮಾನಕ್ಕೊಳಗಾಗಿ ಒಬ್ಬಳೇ ಒಬ್ಬಳಾಗಿರುವ 

ತಮ್ಮ ಪ್ರೀತಿಯ ಮಗಳ ಕಲ್ಯಾಣೋತ್ಸವಕ್ಕಾಗಿ ಹೇರಳವಾಗಿ ಹಣ ವೆಚ್ಚ 

ಮಾಡಿದರು. ಸೊಸೆಯು ರೂಪವತಿಯಾಗಿರುವದರಿಂದಲೂ ವಿವಾಹಮಹೋ 

ತ್ಸವವು ತಿಂಗಳಾನು ತಿಂಗಳು ನಡೆದಿದ್ದರಿಂದಲೂ ಯಮುನಾಬಾಯಿಯವರ 

ಮನಸ್ಸಿಗೆ ವಿಶೇಷವಾದ ಆನಂದವಾದ್ದರಿಂದ ಅವರು ಹಿಂದಿನ ದುಃಖಗಳ 

ನ್ನೆಲ್ಲ ಸಂಪೂರ್ಣವಾಗಿ ಮರೆತು ಮಗನಾದ ವಿಜಯರಾಯನ ಸಂಸಾರಸುಖ 

ವೆಂಬ ನಾವೆಯಲ್ಲಿ ಕುಳಿತು ಮತ್ತೆ ಭವಸಾಗರದ ಶಾಂತವಾದ ನೀರಿನಲ್ಲಿ 

ಸಂಚಾರ ಮಾಡಲಾರಂಭಿಸಿದರು. 

 

ವಿಜಯರಾಯನು ವಿಶ್ವವಿದ್ಯಾಲಯದ ಪದವೀಧರನಾಗಿ ಬಂದ ಬಳಿಕ 

ಅವನು ಪ್ರಮೋದ ನಗರದಲ್ಲಿ ಘನವಾದ ವ್ಯಾಪಾರವನ್ನು ನಡಿಸುತ್ತೆ ಅಲ್ಲಿ 

ಮನೆಮಾಡಿಕೊಂಡು ಇದ್ದನು. ಅವನು ಮನೆಯಿಂದ ಧನವಂತನು; ಸ್ವತಃ 

ವಿದ್ಯಾವಂತನು, ಸುಶೀಲನು, ತರುಣನು ಆಗಿದ್ದರಿಂದ ಅವನ ಸಂಸಾರ 

ಸುಖಕ್ಕೆ ಕೊರತೆಯಿಲ್ಲ. 


ವಿಜಯರಾಯನ ಹೆಂಡತಿಯೂದ ಸುಭದ್ರೆಯು ರೂಪವತಿಯೂ, ಚತು 

ರೆಯೂ ಆಗಿದ್ದ ರೂ ಗರ್ವಿಷ್ಟರಾದ ತಂದೆತಾಯಿಗಳ ಅಟ್ಟೆಯಲ್ಲಿ ಬೆಳೆದವಳಾ 

ದ್ದರಿಂದ ಅವಳಲ್ಲಿ ನಮ್ರತೆಯು ತುಸು ಕಡಿಮೆಯಾಗಿತ್ತು. ಬಹಿರಂಗವಾಗಿ 

ಅವಳು ವಿನೀತೆಯಂತೆ ನಡಕೊಳ್ಳುತ್ತಿದ್ದರೂ ಚರ್ಯೆ ನೋಡಲಾಗಿ ಇವಳು 

ಗೃಹಕಲಹವನ್ನುಂಟು ಮಾಡುವಳೆಂದು ಚಾಣಾಕ್ಷರಾದ ಯಮುನಾಬಾಯಿ 

ಯವರು ತಿಳುಕೊಂಡುಬಿಟ್ಟಿದ್ದರು. ಆದರೂ ಇವನೊಬ್ಬ ಮಗನ ಸುಖ 

ದಲ್ಲಿ ವಿಷಾದವು ತಿಲಮಾತ್ರವಾದರೂ ಬೆರೆಯಲಾಗದೆಂದು ಯೋಚಿಸಿ ಆ 

ಮಾತೆಯು ಸೊಸೆಯ ಛಂದಾನುವರ್ತಿಯಾಗಿಯೇ ಇದ್ದಳು. ಸುಭದ್ರೆಯ 

ತಂದೆಯು ತೀರಿಕೊಂಡದ್ದರಿಂದ ಅವನು ಗಳಿಸಿಟ್ಟ ಧನವೆಲ್ಲ ಅವಳದೇ ಆಗಿ 

ದ್ದರಿ೦ದ, ವಿಜಯರಾಯನು ತನ್ನ ಪ್ರಿಯತಮೆಯಾದ ಹೆಂಡತಿಯು ಹಾಕಿದ 

ಉಗುಳನ್ನು ಸಹಸಾ ದಾಟದಂತಾದನು. 


ಸುಭದ್ರೆಯು ಗರ್ವಿಷ್ಟಳಂತೆ ನಡಕೊಂಡರೂ ಮನೆಯಲ್ಲಿ ಯಮುನಾ 

ಬಾಯಿಯವರ ಅಧಿಕಾರವು ಅಬಾಧಿತವಾಗಿ ಉಳಿದದ್ದರಿಂದ ಆಪ್ತರಿವರಿಗೂ 

ಅನುಯಾಯಿ ವರ್ಗಕ್ಕೂ ಅವಳಿಂದ ವಿಶೇಷವಾದ ಪೀಡೆಯಾಗಲಿಲ್ಲ. ವಿನಯ 

ನಮ್ರತೆಗಳೂ ಸೌಜನ್ಯ ಮಧುರಾಲಾಪಗಳ ದರಿದ್ರರಲ್ಲಿರತಕ್ಕ ಗುಣಗಳೆಂದು 

ಸುಭದ್ರೆಯ ತಿಳುವಳಿಕೆಯಾಗಿತ್ತು. ತಾನು ದೊಡ ವರ ಮಗಳೆಂದು ತಿಳಿದು, 

ಪತಿಯ ಅತ್ತೆಯವರೂ ತನ್ನನ್ನು ಆದರಿಸುವರೆಂದು ಆ ಹೊಸಮೊದಲು 

ಗಿತ್ತಿಯ ನಂಬಿಕೆಯಾಗಿತ್ತು. ಮಗ-ಸೊಸೆಯರು ಸುಖದಿಂದಿರಲೆಂದೆಣಿಸಿ 

ಯಮುನಾಬಾಯಿಯವರು ತಮ್ಮ ಉತ್ತಮೋತ್ತಮವಾದ ಅಲಂಕಾರಗಳನ್ನು 

ಸೊಸೆಯ ಮೈಮೇಲಿಡಿಸಿ ಅಕ್ಕರೆಯನ್ನು ಪಡುತ್ತಿರುವದರ ಬೆಲೆಯು ಸುಭ 

ದ್ರೆಗೆ ತಿಳಿಯಲಿಲ್ಲ. ಪರಸತಿಯರನ್ನು ಕಣ್ಣೆತ್ತಿ ನೋಡದ ವಿಜಯರಾಯನು 

ಹೆಂಡತಿಯ ಇಚ್ಛಾನುವರ್ತಿಯಾಗಿರಲಿಕ್ಕೆ ತನ್ನ ರೂಪ-ಯೌವನಗಳೇ 

ಕಾರಣಗಳೆಂದು ಅವಳು ತಿಳುಕೊಂಡಿದ್ದಳು, 


ಯೌವನ, ಧನ, (ಅ೦ಶತಃ) ಪ್ರಭುತ್ವಗಳು ಸುಭದ್ರೆಯಲ್ಲಿ ಸೇರಿರಲು 

ಸಂಪೂರ್ಣವಾದ ಅನರ್ಥಕ್ಕೆ ದುರ್ಬೋಧನವೊಂದೇ ಕಡಿಮೆಯಾಗಿತ್ತು. 

ಕಾಲಕ್ಕೆ ಸರಿಯಾಗಿ ಆದರದೂ ಪೂರ್ತಿಯಾಯಿತು, ಸುಭದ್ರೆಯ ತಾಯಿಯು 

ಮಗಳ ಸಂಸಾರವನ್ನು ನೋಡುವದಕ್ಕಾಗಿ ಅಳಿಯನ ಮನೆಗೆ ನಡೆತಂದಳು. 

ರಖಮಾಬಾಯಿಯು ಗರ್ವಿಷ್ಠಳೂ, ನಿಷ್ಟುರಳೂ, ಕಲಹಪ್ರಿಯಳೂ ಆಗಿ 

ದ್ದಳು, ಬಂದು ಒಂದೆರಡು ದಿನಗಳಲ್ಲಿಯೇ ರಖಮಾಬಾಯಿಗೆ ಯಮುನಾ 

ಬಾಯಿಯವರ ಅಧಿಕಾರವು ಕಣ್ಣು ಕಿಸರಾಗಿ ಕಂಡಿತು, ಸುಭದ್ರೆಯ ಲಗ್ನದ 

ಕಾಲದಲ್ಲಿ ನಡೆದ ವಾಗ್ವಾದಗಳ ನೆನಪು ಬುಧ್ಯಾ ಕೆದರಿ ತೆಗೆದು ರಖಮಾ 

ಬಾಯಿಯು ಆಗಾಗ್ಗೆ ತನ್ನ ಬೀಗಿತಿಗೆ ಮರ್ವಭೇದಕವಾದ ಮಾತುಗಳ 

ನ್ನಾಡುವಳು, ಸುಳ್ಳು ಸುಳ್ಳೆಯೇ ತನಗೆ ಅನಾದರವಾಯಿತೆಂದು ಹೇಳಿ 

ಅವಳು ಸೆಡವು ಮಾಡಿಕೊಂಡು ಕೂಡುವಳು, ಸುಭದ್ರೆಯಾದ " ತನ್ನ 

ತಾಯಿಯನ್ನು ಮೇಲುಕಟ್ಟಿ ಮೆಲ್ಲನೆ ಅತ್ತೆ ಯೊಡನೆ ವ್ಯಾಜ್ಯಮಾಡಲು 

ಉಪಕ್ರಮಿಸಿದಳು. 


ಅಪರೂಪದ ಹಾಗೆ ಮನೆಗೆ ಬಂದಿರುವ ಬೀಗಿತ್ತಿಯೊಡನೆ ನಿಷ್ಕಾರಣ 

ವಾಗಿ ವ್ಯಾಜ್ಯವಾಡಕೂಡದೆಂದು ನೆನೆಸಿ, ಯಮುನಾಬಾಯಿಯವರು 

ರಖಮಾಬಾಯಿಯ ದುರುಕ್ಕಿಗಳನ್ನು ಕೇಳಿಯೂ ಕೇಳದಂತೆ ಮಾಡಿ ಅವ 

ಳಿಗೆ ತಕ್ಕದಾದ ಉಪಚಾರಗಳನ್ನೇ ಮಾಡುತ್ತಿದ್ದರು. ಸೊಸೆಯ ಔದ್ದತ್ಯಕ್ಕೆ 

ವಿನೋದವೆಂದು ತಿಳಿದು ಅವರು ನಗುವರು. ಬಹಿಃಪ್ರಾಣನಾಗಿದ್ದ ತಮ್ಮ 

ಮೊಮ್ಮಗನಾದ ರಂಗಣ ನಿಗೆ ರಖುಮಾಬಾಯಿಯಾಗಲಿ ಸುಭದ್ರೆಯಾಗಲಿ 

ಏನಾದರೂ ಆಡಿದ್ದರೆ, " ಆದರೇನಾಯಿತು, ಹಿರಿಯರಾಡಿದ್ದಕ್ಕೆ ಸುಮ್ಮನಿರ 

ಬೇಕು ! ” ಎಂದು ಬುದ್ದಿ ಹೇಳಿ ಆ ಸಾದ್ವಿಯು ಆ ಮಗುವನ್ನೆತ್ತಿ ಮುದ್ದಾಡಿ 

ಸಂತೈ ಸುವಳು. 


ತನ್ನ ಹೆಂಡತಿಯು ತುಸು ಉದ್ದ ತಳಾಗಿ ವರ್ತಿಸುವಳೆಂದು ವಿಜಯ 

ರಾಯನಿಗೆ ಕಂಡುಬಂದಿತ್ತು. ಆದರೂ ಹೆಂಡತಿಯನ್ನು ಅವಳ ತಾಯಿಯ 

ಸಮಕ್ಷದಲ್ಲಿ ದಂಡಿ ಸುವದು ಸರಿಯಲ್ಲವೆಂದು ತಿಳಿದು ಅವನು ಸುಮ್ಮನಿರುತ್ತಿ 

ದ್ದನು, ಹೆಂಡತಿಯೊಡನೆ ಏಕಾಂತದಲ್ಲಿರುವಾಗ ಅವನಿಗೆ ಈ ಮಾತಿನ 

ಸ್ಮರಣವೇ ಆಗುತ್ತಿದ್ದಿಲ್ಲ. ಮೆಲ್ಲಮೆಲ್ಲನೆ ಸುಭದ್ರೆಯ ಔದ್ಧತ್ಯವು ದಿನ 

ಕ್ಕೊಂದು ಚಂದವಾಗಿ ಬೆಳೆಯಿತು. 


" ಅಳಿಯನ ಮನೆಯಲ್ಲಿದ್ದು ಕೆಲಕಾಲವಾದ ಬಳಿಕ ಮೈ ಯುಂಡಂತಾಗಿ 

ರಖಾಬಾಯಿಯು ಮೈಚಳಿ ಬಿಟ್ಟು ಮನಸ್ಸಿಗೆ ಬಂದದ್ದು ಮಾಡಲೂ 

ಮನಸ್ಸಿಗೆ ಬಂದಂತೆ ಮಾತಾಡಲೂ ಆರಂಭಿಸಿದಳು. ಮನೆಗೆ ಮುಖ್ಯಳಾದ 

ಯಮುನಾಬಾಯಿಯ ಕಡೆಯಿಂದ ತನಗೆ ಅಪಮಾನವಾಯಿತೆಂದು ನಿಷ್ಕಾ 

ರಣವಾಗಿ ಹೇಳಿ ಉಪವಾಸ ಬೀಳುವ ಅಂಜಿಕೆಯನ್ನು ಒಮ್ಮೆ ತೋರಿಸು 

ವಳು. ಕೆಲಸವನ್ನು ಬಿಡಿಸಿ ಮಗಳನ್ನು ಮುಂದೆ ಕೂಡಿಸಿಕೊಂಡು ನಿಂದೆಯ 

ಹರಟೆಯನ್ನು ಕೊಚ್ಚುವಳು, ಸೌಜನ್ಯಯುತರಾದ ಯಮುನಾಬಾಯಿ 

ಯವರು ಒಂದು ಮಾತಾಡದೆ ಬೀಗಿತ್ತಿಯ ಮನಸ್ಸು ಹಿಡಿಯುವದರಲ್ಲಿಯೇ 

ನಿರತರಾಗಿದ್ದರು. 


ಒ೦ದೇ ಕೈಯಿಂದ ಚಪ್ಪಾಳೆಯಾಗಲಿಲ್ಲವೆಂದು ತಿಳಿದು ನಿರಾಶಳಾಗಿ 

ರಖಮಾಬಾಯಿಯು ಬೇಸತ್ತು ತನ್ನ ಊರಿಗೆ ಹೋಗುವ ವಿಚಾರ ಮಾಡಿ 

ದಳು. ಆದರೂ ಅವಳು ಸುಮ್ಮನೇಕೆ ಹೊದಾಳು ? ಅಳಿಯನ ಕಿವಿಗೆ 

ಮುಟ್ಟುವಂತೆ ಯಮುನಾಬಾಯಿಯವರ ಮೇಲೆ ಇಲ್ಲದ್ದೊಂದು ಮಾತು 

ಹೊರಿಸಿ ಅವಳು ಊರಿಗೆ ಹೋಗುವೆನೆಂದು ಗಂಟುಕಟ್ಟಿಕೊಂಡು ಕುಳಿತಳು. 

ಯಮುನಾಬಾಯಿಯವರು ಎಷ್ಟು ಸರಿಯಾಗಿ ಹೇಳಿಕೊಂಡರೂ ಇನ್ನೊಂದು 

ದಿವಸವಾದರೂ ನಿಲ್ಲಲು ಅವಳು ಒಪ್ಪಿಕೊಳ್ಳಲಿಲ್ಲ; ಹೋಗುವದೇ ನಿಶ್ಚಯ 

ವಾಯಿತು. ಹೋಗುವಾಗ ಮಗಳನ್ನು ಏಕಾಂತದಲ್ಲಿ ಕರ ಕೊಂಡು ರಖಮಾ 

ಬಾಯಿಯು ಅನೇಕವಾದ ಕಿವಿಮಾತುಗಳನ್ನು ಹೇಳಿರಬಹುದು. सुश्रूषस्व 

गुरून् (ಸುಶ್ರೂಷಸ್ವ ಗುರೂನ್) ಎಂದು ಹೇಳಿದಳೆ ? ಎಲ್ಲಿಯ ಮಾತೆ ! 

ಅವಳು ಹೇಳಿದ ಕಿವಿತುಂತ್ರವು ಬೇರೆಯಾಗಿತ್ತು, 


ಕುಶಾಗ್ರ ಬುದ್ದಿಯವಳಾದ ಸುಭದ್ರೆಯ ಮನಸ್ಸಿನಲ್ಲಿ ತಾಯಿಯ ಉಪ 

ದೇಶವು ಚನ್ನಾಗಿ ಭೇದಿಸಿತು. ಅವಳು ತನ್ನ ಜಾಣತನದ ಪ್ರಯೋಗವನ್ನು 

ಯಥಾವಕಾಶವಾಗಿ ಮಾಡಲಾರಂಭಿಸಿದಳು, ಒಂದು ದಿವಸ ರಂಗನು ಸಾಲೆ 

ಯಿಂದ ಬಂದವನೆ ತನಗೆ ಹಸಿವೆಯಾಗಿದೆಯೆಂದು ಮುತ್ತಮ್ಮನ ಮುಂದೆ 

ಕುಣಿದಾಡಿದನು. ಯಮುನಾಬಾಯಿಯವರು ಆಗ ಮಡಿಯಲ್ಲಿ ಇದ್ದದರಿಂದ 

ಹುಡುಗನಿಗೆ ಏನಾದರೂ ತಿನ್ನಲಿಕ್ಕೆ ಕೊಡೆಂದು ಸೊಸೆಗೆ ಕೇಳಿದರು, ಅವಳು 

ಆ ಮಾತು ಕಿವಿಮೇಲೆ ಹಾಕಿಕೊಳ್ಳದೆ ಹಾಗೆಯೇ ತಿರುಗಾಡಿದಳು. ರಂಗನು ಆ 

ತನ್ನ ಕಕ್ಕಿಯ ಬೆನ್ನು ಹತ್ತಿ ಏನಾದರೂ ಕೊಡೆಂದು ಕಾಡಿದನು. ಆಗಲಾ 

ನಿಷ್ಕರುಣೆಯು ಆ ಮಗುವಿನ ಕೆನ್ನೆ ಬಾಯುವಂತೆ ಒಳಿತಾಗಿ ಒಂದು ಏಟು 

ಕೊಟ್ಟಳು. 


ಎಂಥ ಆಪರಾಧಗಳನ್ನು ತಡಕೊಂಡರೆ, ತಮ್ಮ ಪ್ರಾಣ ಪುತ್ಥಳಿಯಾದ 

ಮೊಮ್ಮಗನಿಗೆ ಪೀಡೆ ಮಾಡಿದವರನ್ನು ಯಮುನಾಬಾಯಿಯವರು ಸರ್ವಥಾ 

ಕ್ಷಮಿಸುತ್ತಿದ್ದಿಲ್ಲ. ಎಳೆ ಮಗುವಾದ ರಂಗನ ಕೆನ್ನೆಯ ಮೇಲೆ ಕೆಂಪಗೆ 

ಮೂಡಿದ ಬಾಸಣಿಕೆಯನ್ನೂ, ಅವನ ಕಣ್ಣುಗಳಲ್ಲಿ ಸುರಿಯುತ್ತಿರುವ ಆಶ್ರು 

ಧಾರೆಗಳನ್ನೂ ಕಂಡು ಅವರ ಹೊಟ್ಟೆಯಲ್ಲಿ ಸಾಸಿವೆಯನ್ನು ಅರೆದು 

ಹೊಯ್ದಂತಾಯಿತು. ತಕ್ಷಣವೇ ಅವರು ಮೈಲಿಗೆಯಾಗಿ ಅಳುತ್ತಿರುವ  

ರಂಗನನ್ನು ಎತ್ತಿಕೊಂಡು ತಾವೂ ಕಣ್ಣೀರು ಸುರಿಸುತ್ತೆ ಅವನನ್ನು ಬಹು 

ಪರಿಯಾಗಿ ಸಮಾಧಾನಗೊಳಿಸಿ ಸುಭದ್ರೆಗೆ ಒಳಿತಾಗಿ ಸಿಟ್ಟು ಮಾಡಿದರು. 

ಅತ್ತೆಯವರ ಕೋಪದ ಮಟ್ಟು, ಎಷ್ಟಿರುವದೆಂಬದು ಅದು ಮೊದಲು ಸುಭ 

ದ್ರೆಗೆ ತಿಳಿದಿದ್ದಿಲ್ಲ. ಅವಳು ಆ ದಿವಸ ಸಂಜೆಯವರೆಗೆ ದುಮುದುಮು 

ಉರಿಯುತ್ತಲೇ ಇದ್ದಳು. 


ಸಾಯಂಕಾಲವಾಗುತ್ತಲೆ ಸುಭದ್ರೆಯ ಬಣ್ಣ ತಿರುಗಿತು; ಭೋಜನ 

ವಾದ ಬಳಿಕ ಅವಳು ಸಿಂಗರದ ಉಡುಗೆತೊಡಿಗೆಗಳನ್ನು ಮಾಡಿಕೊಂಡು 

ಒಪ್ಪಿನಿಂದ ಅಲಂಕಾರಗಳನ್ನು ಧರಿಸಿ, ನೂಪುರಗಳ ಮಂಜುಲ ಸ್ವರವಾಗು 

ವಂತೆ ಒನಪಿನಿಂದ ಮೆಲ್ಲಡಿಗಳನ್ನಿಕ್ಕುತ್ತೆ ಪತಿಯ ಶಯ್ಯಾಗೃಹಕ್ಕೆ ಬರುವವ 

ಳಾದಳು, ರೂಪವತಿಯಾದ ಆ ನವತರುಣಿಯು ಅಂಗಜನ ಜಯಸಿರಿಯಂತೆ 

ತನ್ನನ್ನು ಮೋಹಪಾಶದಲ್ಲಿ ಹಿಡಿಯಲು ಸಾಗಿ ಬರುತ್ತಿರುವದನ್ನು ಕಂಡು 

ವಿಜಯರಾಯನು ಪ್ರೇಮಪರವಶನಾಗಿ ಸೇಜದಿಂದ ಟಣ್ಣನೆ ಹಾರಿಬಂದು 

ಆ ತನ್ನ ಅರ್ಧಾಂಗಿಯನ್ನು ಭರದಿಂದ, ಅವಳನ್ನು ಲೀಲೆಯಿಂದ ಎತ್ತಿ 

ತಂದು ಮಂಚದ ಮೇಲೆ ಇರಿಸಿಕೊಂಡನು, 


ಹೀಗೆ ಆಯತ್ತವಾಗಿ ತನ್ನ ಕಾರ್ಯವು ಅರ್ಧಕರೆ ಸಾಧಿಸಿತೆಂದು 

ಕಂಡುಕೊಂಡ ಕೂಡಲೆ ಆ ಮೋಸಗಾರತಿಯು ತುಸು ಕೋಪಾವೇಶವನ್ನು 

ತಾಳಿ, ಸತಿಯ ಬಾಹುಪಾಶಗಳನ್ನು ಒತ್ತಾಯದಿಂದ ಬಿಡಿಸಿಕೊಂಡು ಸಿಡಿದು 

ಹೋಗಿ ದೂರದಲ್ಲಿ ಕುಳಿತಳು. ಆತುರನಾದ ಆ ಪತಿಯು ಆ ಕೈಕಯಾ 

ದೇವಿಯನ್ನು ಮತ್ತೆ ಬಲಾತ್ಕಾರದಿಂದ ತನ್ನ ಬಾಹುಪಾಶಗಳಲ್ಲಿ ಬಿಗಿದಪ್ಪಿ 

ಅವಳ ನುಣುಪಾದ ಗದ್ದ ವನ್ನು ಆದರದಿಂದ ಹಿಡಿದು, ಮುನಿಸುಗೊಟ್ಟ 

ಕಾರಣವನ್ನು ಬಹು ವಿನಯದಿಂದ ಕೇಳಿದನು. ಆಗಲಾ ಕೋಪನೆಯು 

ಅಬ್ಬರದಿಂದ ಆಕ್ರೋಶಿಸಿ ಕಂಬನಿಗಳನ್ನು ಮಿಡಿದು ಆರ್ತಯಂತೆ ಗದ್ದದ 

ಕಂಠಯಾಗಿ : " ಮುನಿಸುಗೊಡಲಿಕ್ಕೇನಾಗಿದೆ ! ಉರುಲು ಹಾಕಿಕೊಳ್ಳು 

ವಂಥ ಕಷ್ಟವು ನನಗೊದಗಿರಲು ಅದು ನಿಮಗೆ ಮುನಿಸಿನಂತೆಯೂ ಪ್ರಣಯ 

ಕಲಹದಂತೆಯೂ ಭಾಸವಾಗುವದಲ್ಲವೆ ?” ಎಂದು ನುಡಿದಳು. 


ವಿಜಯರಾಯನು ತನ್ನ ಸೆಲ್ಲೆ ಯಿಂದ ಪ್ರಿಯತಮೆಯ ಅಶ್ರುಪೂರ್ಣ 

ವಾದ ಕೆಂಗಣ್ಣುಗಳನ್ನೊರಿಸಿ ವಿಷಾದದಿಂದೆ " ಕಷ್ಟವೇತರದು ಪ್ರಿಯೆ ? ಈ 

ಮನೆಗೆ ನೀನು ಸಾರ್ವಭೌಮಿನಿಯಾಗಿರಲು ನಿನ್ನ ಮನಸ್ಸನ್ನು ನೋಯಿಸಿ 

ದವರಾರು ? ” ಎಂದು ಅವಳ ಮುಖವನ್ನು ನೋಡುತ್ತ ಕೇಳಿದನು. 

" ಬಿಚ್ಚಿ ಹೋಳಾಗಿರುವ ನನ್ನ ಎದೆಯು ಇಂಥ ಬುಬ್ಬುಣಕಚಾರದ ಮಾತು 

ಗಳಿಂದ ವಾಸಿಯಾಗಬಲ್ಲದೆ ?” ಎಂದು ಸುಭದ್ರೆಯು ಪತಿಯ ಎದೆ ಹಿಡಿದು 

ಮೆಲ್ಲನೆ ನೂಕಿದಳು. 


ಪ್ರೇಮವಲ್ಲರಿಯ ಅಮೋ ದಮಯವಾದ ಆ ನವಮಂಜರಿಯ ಪೀಡೆ 

ಗೊಳಗಾಗಿರುವದನ್ನು ಕಂಡು ವಿಜಯರಾಯನ ಎದೆಗೆ ಚುರ್ರನೆ ಬರೆ 

ಕೊಟ್ಟಂತಾಯಿತು. ಅವನ ಪ್ರಿಯತಮೆಯ ಅಧರವನ್ನು ಭರದಿಂದ ಚುಂಬಿಸಿ 

" ಕಾರಣವು ತಿಳಿಯದಿದ್ದಲ್ಲಿ ದುಃಖ ನಿವಾರಣ ಮಾಡುವ ಬಗೆ ಏನು ? 

ಸುಭದ್ರೆ, 'ಆದದ್ದಾದರೂ ಏನು ಹೇಳು ! ” ಎಂದು ಕೇಳಿದನು. 


" ಹೇಳಿದರೆ ನಂಬಿಕೆಯಾಗದು ! ಆದರೂ ದುಃಖಪರಿಮಾರ್ಜನದ 

ಕೆಲಸವು ನಿಮ್ಮಿಂದಾಗದು ! ಹೇಳಿ ಫಲವೇನು ? ” ಎಂದು ನುಡಿದ ಸುಭ 

ದ್ರೆಯ ಕಣ್ಣುಗಳಿಂದ ಜಲಪ್ರವಾಹಗಳು ಸುರಿದವು. 


" ವಿಜಯರಾಯನು ವರಿಮತೆಯಿಂದ ಹೆಂಡತಿಯ ಬೆನ್ನು ಮೇಲೆ ಕೈಯಾ 

ಡಿಸಿ ಪ್ರೇಯಸಿ, ಈ ಮನೆಗೆ ನಾನು ಸಂಪೂರ್ಣನಾದ ಸ್ವಾವಿಯು! ನಿನ್ನ 

ದುಃಖವನ್ನು ಹೋಗಲಾಡಿಸಲು ನಾನು ಅಸಮರ್ಥನೆ ? - ಇಂಥ ಮಾತು 

ಹೀಗೆಯೇ ಆಗತಕ್ಕದ್ದು ” ಎಂದು ನೀನು ಆಚ್ಚು ಸಿಸಿದ ಕ್ಷಣದಲ್ಲಿಯೇ 

ನಾನು ಹಾಗೆ ಮಾಡಿಯೇ ತೀರುವೆನು. ನೋಡಿಯಾದರೂ ನೋಡು ! ” 

ಎಂದು ಪತಿಯು ಬೇಡಿಕೊಂಡನು. 


' ಹೇಳಲಿಯಯಾ ? ಇಂದು ರಂಗನು ಏನೇನೋ ಬೇಡಿ ನನ್ನ ಮೈ ಮ್ಮೆ 

ಅಡರುತ್ತ ಬಂದು ಪೀಡಿಸಿದಾಗ ನಾನು ಕೆಲಸದಲ್ಲಿರುವದರಿಂದ ತಿಳಿಯದೆ 

ಅವನ ಗಲ್ಲಕ್ಕೆ ಮೆಲ್ಲನೆ ಕೈ ತಾಗಿಸಿ ಬಡಿದಂತೆ ಮಾಡಿದೆನು. ಅಷ್ಟಕ್ಕೆ ಅತ್ತೆಯ 

ವರು ಮುತ್ತೈದೆಯಾದ ನನಗೆ ವಿಧಿನಿಷೇಧಗಳನ್ನು ಲೆಕ್ಕಿಸದೆ ಬಾಯಿಗೆ 

ಬಂದಂತೆ ಬೈದರು, ನನ್ನಿಂದ ತಪ್ಪಾಗಿದ್ದರೆ ಒಂದು ಮಾತು ! " 


ವಿಜಯರಾಯನು ಗಹಗಹಿಸಿ ನಕ್ಕು : “ ಇಷ್ಟೆಯೋ ! ಉರುಲು 

ಹಾಕಿಕೊಳ್ಳುವಂಥ ಪ್ರಸಂಗವೇನೋ ಎಂದು ಮಾಡಿದ್ದೆನು, ಇದಕ್ಕೆ ಶಾವಿ 

ಗೆಯ ಪಾಯಸದಿಂದ ಉರಲು ಹಾಕಿಕೊಳ್ಳು, ಬೇಡೆನ್ನುವವರಾರು ? ” 

ಎಂದು ನುಡಿದನು. 


" ಹೀಗಾಗುವದೆಂದು ನನಗೆ ಈ ಮೊದಲು ತಿಳಿದೇ ಇತ್ತು ! ” ಎಂದು 

ನುಡಿದವಳೇ ಸುಭದ್ರೆಯು ಅಕ್ಕಸದಿಂದ ಮಂಚವನ್ನು ಬಿಟ್ಟಳಿದಳು. 


ವಿಜಯರಾಯನು ಮತ್ತೆ ಅವಳನ್ನು ಮಂಚಕ್ಕೆ ಕರೆದೊಯ್ದು "ಸುಭದ್ರೆ, 

ಹಿರಿಯರೊಂದು ಮಾತಾಡಿದರೆ ತಡಕೊಳ್ಳಬಾರದೇನು ? ” ಎಂದು ಕೇಳಿದನು. 


" ಬೈಸಿಕೊಳ್ಳುವದು ಇದೇ ಮೊದಲಾಗಿದ್ದರೆ ತಡಕೊಳ್ಳುತ್ತಲೇ 

ಇದ್ದೆನು, ದಿನಬೆಳಗಾದರೆ ಕಿಟಕಿಟಿಯು ಆರಂಭಿಸಿತೇ, ಹೇಳಬಾರದು 

ಹೇಳಬಾರದು ಎಂದರೆ ಎಲ್ಲಿಯ ವರೆಗೆ ? ನನ್ನಿಂದ ತಪ್ಪಾಗಿದ್ದರೆ ಸಿಟ್ಟು 

ಮಾಡಲಿಕ್ಕೆ ನಾನು ಬೇಡೆನ್ನುವೆನೆ ? ನನಗಂತೂ ಜೀವ ಬೇಡಾಗಿ ಹೋಗಿದೆ. 

ಒಮ್ಮೆಲೆ ಕೆರೆಬಾವಿ ಹಾರಿಕೊಳ್ಳುವದು ಲೇಸು. ” 


"ಆಗಲಿ ! ನಾಳೆ ಅವನಿಗೆ ಹೇಳಿ ನಿನ್ನ ಹೆಸರು ತೆಗೆಯದಂತೆ 

ಮಾಡಿದರೆ ಆಯಿತೋ ಇಲ್ಲವೊ ? ” 


ಸುಭದ್ರೆಯ ಮುಖದಲ್ಲಿ ಮಂದಹಾಸವು ತೋರಿತು. ಸತಿಯ ಭುಜದ 

ಮೇಲೆ ಒಯ್ಯಾರದಿಂದ ತನ್ನ ಮುಖವನ್ನಿಟ್ಟು, ಕಥೆಗಾರನಿಗೆ ತನ್ನ ವಿಲಾಸ 

ಮಂದಿರವನ್ನು ಬಿಟ್ಟು ಹೊರಗೆ ಹೋಗಲು ಸೂಚಿಸಿದಳು. 


ಮುಂದೆ ತಿಂಗಳೆರಡು ತಿಂಗಳಲ್ಲಿ ಒಂದೊಂದರಂತೆ ಇಂಥವೇ ಹತ್ತೆಂಟು 

ದೂರುಗಳು ವಿಜಯರಾಯನ ಕಿವಿಗೆ ಬಿದ್ದ ವು. ಅತ್ತೆ-ಸೊಸೆಂದಿರ ನಡುವೆ 

ದಿನಾಲು ದುಸುಮುಸು ನಡೆದೇ ಇತ್ತು. ಸುಭದ್ರೆಗೆ ಬುದ್ದಿ ಹೇಳೆಂದು 

ಯಮುನಾಬಾಯಿಯವರು ಮಗನಿಗೆ ಸೂಚಿಸಿದ್ದು ನಿರರ್ಥಕವಾಯಿತು. 

ವಿಜಯರಾಯನ ತಂಗಿಯಾದ ವತ್ಸಲೆಯು ತವರುಮನೆ ಮಾಡಲಪೇಕ್ಷಿಸಿ 

ಬಂದಾಗಿನಿಂದಂತೂ ಗೃಹಕಲಹದ ಬೇಗೆಯು ಹೆಚ್ಚಾಯಿತು, ವತ್ಸಲೆಯು 

ದೊಡ್ಡ ದೇಸಾಯರ ಹೆಂಡತಿಯು: ಮೇಲಾಗಿ ತಾಯಿಯಿದ್ದ ತವರುಮನೆಗೆ 

ಬಂದವಳು. ಅವಳು ಸುಭದ್ರೆಯ ಜ೦ಬಕ್ಕೆ ಉಪ್ಪು ಹಾಕುವಳೆ ? ಸುಭ 

ದೈಯು ಒಳಗಿಂದೊಳಗೆಯೇ ಕುದಿಯಲಾರಂಭಿಸಿದಳು, ಹೀಗೆ ಹದಿನೈದು 

ಇಪ್ಪತ್ತು ದಿವಸಗಳು ಕಳೆದ ಬಳಿಕ ಕಲಹಕ್ಕೆ ಒಂದು ನೆವ ಹುಟ್ಟಿತು. 


ಒಂದು ದಿವಸ ವತ್ಸಲೆಯು ಮೈ ತೊಳೆದುಕೊಂಡು ತಾಯಿಯ 

ಹೇಳಿಕೆಯ ಮೇರೆಗೆ ಸುಭದ್ರೆಯ ಜರತಾರಿಯ ಸೀರೆಯನ್ನು ಉಟ್ಟು 

ಕೊಂಡಳು. ಸುಭದ್ರೆಯು ಅದನ್ನು ಕಂಡು "ಹಾ! ಹಾ! ನನ್ನ ಸೀರೆ 

ಯನ್ನು ಏಕೆ ಉಟ್ಟುಕೊಂಡಿರಿ? ಸದ್ಯಕ್ಕೆ ಅದನ್ನು ಕಳೆಯಿರಿ'' ಎಂದು ಬೊಗಳಿ 

ನಿಂತರಿಕೆಯಲ್ಲಿ ಅದನ್ನು ಕಳಿಸಿಕೊಂಡಳು. ಶ್ರೀಮಂತರ ಸೊಸೆಯಾದ 

ವತ್ಸಲೆಯು ಇಂಥ ಅಪಮಾನವನ್ನು ಸಹಿಸುವಳೆ ? ಅರಕ್ಷಣವಾದರೂ ಈ 

ಮನೆಯಲ್ಲಿ ನಾನು ನಿಲ್ಲುವದಿಲ್ಲವೆಂದು ಹಟತೊಟ್ಟು, ವತ್ಸಲೆಯು ಊಟ 

ಉಡಿಗೆಗಳ ವಿಚಾರವನ್ನು ಬಿಟ್ಟು ತನ್ನ ಊರಿಗೆ ಹೋಗಲು ರಥವನ್ನು 

ತರಿಸಿಕೊಂಡು ಸಿದ್ಧಳಾದಳು ಯಮುನಾಬಾಯಿಯವರಿಗೆ ಮಗಳಿಗಾದ 

ಅಪಮಾನವನ್ನು ಕಂಡು ಅತಿಶಯವಾದ ಸಂತಾಪವಾಯಿತು. ಅವರು 

ಸೊಸೆಯ ಸಮಾಚಾರವನ್ನು ಚನ್ನಾಗಿ ತೆಗೆದುಕೊಂಡದ್ದಲ್ಲದೆ, ಮಗನನ್ನು 

ಏಕಾಂತದಲ್ಲಿ ಕರೆದು ಅವನ ಕಿವಿಯನ್ನಾದರೂ ಚನ್ನಾಗಿ ಹಿಂಡಿದರು, ಆದರೆ 

ವಿಜಯರಾಯನು ಈಗೀಗಲಾಗಿ ಚನ್ನಾಗಿ ಹೆಂಡತಿಯ ಪಕ್ಷವನ್ನು ಹಿಡಿದವ 

ನಾಗಿದ್ದರಿಂದ, ಬಿರಿನುಡಿಗಳಿಂದ ತಾಯಿಗೆ ಎದಿರುತ್ತರವನ್ನು ಕೊಟ್ಟನೇ 

ಹೊರತಾಗಿ ತನಗೆ ದೇವತೆಯಾದ ಆ ತಾಯಿಯ ಅಭಿಮಾನವನ್ನು ಹಿಡಿಯ 

ಲಿಲ್ಲ. " ಅವ್ಯಾ, ಇನ್ನು ಮೇಲೆ ಈ ಮನೆಯಲ್ಲಿ ನೀನಾಗಲಿ ಆವಳಾಗಲಿ 

(ಹೆಂಡತಿ) ಇಬ್ಬರಲ್ಲಿ ಒಬ್ಬರು ಮಾತ್ರ ಇರಬೇಕು. ನಿತ್ಯದಲ್ಲಿಯೂ ನಡೆ 

ದಿರುವ ಈ ಆನರ್ಥಗಳನ್ನು ನಾನು ನೋಡಲಾರೆನು. ಅವಳನ್ನೆ ಆಟ್ಟ ಬಿಡ 

ಬೇಕೆಂದು ನಿನ್ನ ಮನಸ್ಸಿನಲ್ಲಿ ಇದ್ದರೆ ಇಂದೆಯೇ ಅವಳನ್ನು ತವರು ಮನೆಗೆ 

ಕಳಿಸಿಬರುತ್ತೇನೆ. ” 


" ಏನಂದಿ ವಿಜಯಾ ! ” ಎಂದು ಅತ್ಯಂತವಾಗಿ ಕ್ರುದ್ಧರಾಗಿದ್ದ 

ಯಮುನಾಬಾಯಿಯವರು ಉದ್ಘಾರ ತೆಗೆದರು. 


" ಕೇಳಿಸಲಿಲ್ಲವೇನು ? ” 


"ಸಾಕು! ಇನ್ನೊಂದು ಮಾತಾಡಬೇಡ. ?” ಎಂದು ಆಜ್ಞಾಪಿಸಿದ 

ಯಮುನಾಬಾಯಿಯವರು ತಾವು ಕೂಡ ಮತ್ತೊಂದು ಮಾತಾಡದೆ ಮಗ 

ಳಾದ ವತ್ಸಲೆಯನ್ನೂ ಮೊಮ್ಮಗನಾದ ರಂಗನನ್ನೂ ರಥದಲ್ಲಿ ಕುಳ್ಳಿರಿಸಿ. 

ಸ್ಟೇಶನದ ಹಾದೀ ಹಿಡಿದರು. 


ರಥವು ಕಣ್ಮರೆಯಾದ ಕೂಡಲೆ ವಿಜಯರಾಯನ ಮೈಯೊಳಗಿನ ಮದ 

ಜ್ವರವು ಝರ್ರನೆ ಇಳಿದು ಅವನಿಗೆ ಸ್ಮೃತಿ ಬಂದಿತು. ಅವನು ಒಳಗೆ 

ಹೋಗಿ ನೋಡುತ್ತಾನೆ, ಮಾಡಿದ ಅಡಿಗೆಯು ಹಾಗೆಯೇ ಮೆರೆಯುತ್ತಿತ್ತು. 

"ಈ ಅವರು ಉಣ್ಣದೆ ಹೋದರಲ್ಲೆ ! ?' ಎಂದು ಉದ್ಗಾರ ತೆಗೆದ ವಿಜಯ 

ರಾಯನ ಕಣ್ಣುಗಳಲ್ಲಿ ದುಃಖಾಶ್ರುಗಳೂ ಬಂದವು. ತನ್ನ ಪ್ರೀತಿಯ 

ತಂಗಿಯು ಅಪರೂಪವಾಗಿ ಮನೆಗೆ ಬಂದಿರಲು ಅವಳನ್ನು ನಾನು ಸಂತೋಷ 

ಗೊಳಿಸಲಿಲ್ಲ. ಅವಳಿಗಾಗಿ ಉಡುಗರೆ ಉತ್ಸವಗಳನ್ನು ಮಾಡಿಸಲಿಲ್ಲ; ಇಷ್ಟೇ 

ಅಲ್ಲ, ಹೋಗುವಾಗ ಆ ಸೀಮಂತಿನಿಯ ಹಣೆಗೆ ಬೊಟ್ಟು ಕುಂಕುಮವನ್ನು 

ಕೂಡ ಯಾರೂ ಹಚ್ಚಲಿಲ್ಲ ಎಂದು ಚಿಂತಿಸಿ ಬಹು ವ್ಯಸನಾಕುಲನಾಗಿ 

ಅವನು ತನ್ನ " ಬಾಸಿಕಲ್ ''ವನ್ನು ಹತ್ತಿಕೊಂಡು ವಾಯುವೇಗದಿಂದ. 

ಸ್ಟೇಶನಕ್ಕೆ ಬಂದನು. 


ಸ್ಟೇಶನದ ಸಮಯಪ್ರತೀಕ್ಷಾಗೃಹದಲ್ಲಿ (waiting room) ಯಮುನಾ 

ಬಾಯಿಯವರೂ ವತ್ಸಲೆಯ ಕುಳಿತಿದ್ದರು. ವಿಜಯರಾಯನು ಬಂದವನೇ 

ಗಟ್ಟಿಯಾಗಿ ತಾಯಿಯ ಕಾಲುಹಿಡಿದು ಮನೆಗೆ ಬಾರೆಂದು ಹೇಳಿಕೊಂಡನು. 

ಆ ಮಾತೆಯ ಕಣ್ಣುಗಳಲ್ಲಿಯೂ, ವಿಜಯರಾಯ ವತ್ಸಲೆಯರ ಕಣ್ಣುಗಳ 

ಲ್ಲಿಯ ನೀರು ಸುರಿಯುತ್ತಿತ್ತು. ಯಮುನಾಬಾಯಿಯವರು ಸದ್ಗದಿತಕಂಠ `

ರಾಗಿ ಅಂದದ್ದು : " ವಿಜಯರಾಯ, ನಾನು ನಿನ್ನ ಮೇಲೆ ಕೋಪಿಸಿಕೊಳ್ಳ 

ಲಿಲ್ಲ; ನಿನ್ನ ಮನೆಗೆ ಬರಬಾರದೆಂದೂ ಅನ್ನು ವದಿಲ್ಲ. ಮಗನನ್ನು ಅಗಲಿ 

ಯಾವ ಮಾತೆಯ ಇರಲಾರಳು. ನೀನು ನನ್ನ ದ್ರೋಹವನ್ನು ಮಾಡಲೆಸ 

ಗಿದರೂ ನಾನು ಸರ್ವಥಾ ಮಾಡೆನು. ಸಮುದ್ರದ ಚಂಚಲವಾದ ತೆರೆಗಳು 

ಸಂಕ್ಷುಬ್ಧ ವಾಗಿ ದಂಡೆಯ ಮೇಲಿದ್ದ ಗುಡ್ಡಕ್ಕೆ ಒಳಿತಾಗಿ ಅಪ್ಪಳಿಸುತ್ತಿದ್ದರೂ 

ಪರ್ವತವು ತರೆಗಳನ್ನು ಬಡಿಯಲಿಕ್ಕೆ ಹೋಗುವದಿಲ್ಲವಷ್ಟೆ? ಹಾಗೆಯೇ 

ಪರ್ವತದಂತೆ ನಿಶ್ಚಲವಾಗಿರುವ ನನ್ನ ಮನಸ್ಸು ನಿನ್ನ ಕೂಡ ವಿರೋಧವನ್ನು 

ಬೆಳಿಸದು.” 


" ಆದಿರಲಿ ಅವ್ಯಾ, ಸದ್ಯಕ್ಕೆ ಮನೆಗೆ ನಡಿ; ಇನ್ನು ಮೇಲೆ ನಾನು 

ಕೇವಲವಾಗಿ ನಿನ್ನ ಆಜ್ಞೆಯಲ್ಲಿಯೇ ಇರುವನು ” ಎಂದು ವಿಜಯರಾಯನು 

ಹೇಳಿಕೊಂಡನು. 


" ವಿಜಯಣ್ಣಾ, ನಮ್ಮಿಂದೇನು ಪ್ರಯೋಜನ ನಿನಗೆ ? ನೀನೂ, ನಿನ್ನ 

ರಮಣೀ ಯಥೇಷ್ಟವಾಗಿ ಇರಿ, ನೀನು ಆರಸು, ಆಕ ಆರಸಿ, ನೀನು ನಿನ್ನ 

ಹಣೆಯಲ್ಲಿ ಮಣೆಮಾಡಿದರೂ ನಾವು ಬರುವವರಲ್ಲ.” ಎಂದು ವತ್ಸಲೆಯು. 

ಅಕ್ಕಸದಿಂದ ನುಡಿದಳು. 


" ವತ್ಸಲೆ, ಕ್ಷಮಿಸು, ನನ್ನಿಂದ ತಪ್ಪೇ ಆಗಿರುವದು. ಸುಮ್ಮನ ಮನೆಗೆ 

ನಡೆಯಿರಿ, ಮನುಷ್ಯನು ಒಮ್ಮೆ ತಗ್ಗಿನಲ್ಲಿ ಬಿದ್ದರೆ ಮತ್ತೊಂದಾವರ್ತಿ 

ಬೀಳುವನೇನು ?"

 

" ಅವ್ವನೇನೋ, ನೀನೇನೋ ! ನಾನಂತೂ ನಮ್ಮ ಊರಿಗೆ 

ಹೋಗಲೇಬೇಕು " 

 

- " ಯಾಕೆ ಅವ್ವಾ ? ” ಎಂದು ವಿಜಯನು ಮತ್ತೆ ತಾಯಿಯನ್ನು 

ಬೆಸಗೊಂಡನು. 


"ವಿಜಯರಾಯ, ಈ ಸಮಯದಲ್ಲಿ ನಾವು ಊರಿಗೆ ಹೋಗುವವರೇ!

ಮನುಷ್ಯನಾದವನು ಈ ಸಂಸಾರದಲ್ಲಿ ಅನೇಕವಾದ ಮಾತುಗಳ ಅನುಭವ 

ವನ್ನು ತೆಗೆದುಕೊಳ್ಳಲೇಬೇಕು. ನೀನೂ ನಿನ್ನ ಹೆಂಡತಿಯ ಕೆಲವು ದಿವಸ 

ಇಬ್ಬರೇ ಇದ್ದು ಸಂಸಾರ ಮಾಡಿ ನೋಡಿರಿ. ಬಳಿಕ ನಮ್ಮಂಥವರ ಅವಶ್ಯ 

ಕತೆ ಎಷ್ಟರಮಟ್ಟಿಗೆ ಇರುವದೆಂಬದ ಜ್ಞಾನವು ನಿನಗಾಗುವದು. ನಿನ್ನನ್ನು 

ಬಿಟ್ಟಿರಬೇಕಾದರೆ ನನಗೆ ಒಂದೊಂದು ಕ್ಷಣವು ಒಂದೊಂದು ವರುಷದಂತೆ 

ತೋರಿದರೂ ಕೆಲದಿವಸ ನಾನು ಹಾಗೆ ಮಾಡಲೇಬೇಕು. ಹೋಗು, 

ಹೆಚ್ಚಾಗಿ ಆಗ್ರಹ ಮಾಡಬೇಡ. " 


ವಿಜಯರಾಯನೂ ತಾಯಿಯನ್ನು ಕಳಿಸಲಿಕ್ಕೆ ಊರಿಗೆ ಹೋಗಿ 

ಮರಳಿ ಬಂದನು, ಪತಿಯು ತನ್ನ ತಾಯಿಯ ಅನುನಯವನ್ನು ಮಾಡಿದ್ದು 

ಕೇಳಿಯ ಅವನು ಅವಳನ್ನು ಕಳಿಸಲಿಕ್ಕೆ ಹೋದದ್ದನ್ನು ಕಂಡೂ ಸುಭದ್ರೆಗೆ 

ಅತಿಶಯವಾದ ಸಂತಾಪವಾಗಿತ್ತು. ಗಂಡನು ಮನೆಗೆ ಬಂದಕೂಡಲೆ 

" ಬಂದಿರಾ ? ಅಲ್ಲಿಯೇ ಇರಬೇಕಾಗಿತ್ತು ? ಮಾತೃದೇವತೆಯನ್ನು 

ಬಿಟ್ಟು ಬರಬೇಕಾದರೆ ಮನಸ್ಸಿಗೆ ಬಹಳ ವ್ಯಸನವಾಗಿದ್ದಿತು ! " 


“ ಮಾತೃದೇವತೆಯನ್ನು ಅಗಲಿ ಬರಬೇಕಾದರೆ ಮನಸ್ಸಿಗೆ ಅಸಮಾ 

ಧಾನವಾಯಿತು ಸರಿ ; ಆದರೆ ಮನೆಯ ಲಕ್ಷ್ಮಿಯನ್ನು ಬಿಟ್ಟಿರುವದು ಅಸಾ 

ಧ್ಯವಲ್ಲೆ ? ” ಎಂದು ನುಡಿದು ವಿಜಯರಾಯನು ಹೆಂಡತಿಯ ಮುಖವನ್ನು 

ನೋಡಿ ವಿನೋದದಿಂದ ನಕ್ಕನು. 


" ಹೆಂಡತಿಯೇನು ? ಅದೊಂದು ದುಡಿಯಲಿಕ್ಕೆ ತಂದ ತೊತ್ತು  ! 

ಅದರಲ್ಲಿ ಪ್ರೇಮವೇ, ಮಮತೆ, ಏನಿರುವದು ? " 


“ ನನ್ನ ಪ್ರಾಣಕಾಂತೆಯ ಹೊಟ್ಟೆಯಲ್ಲಿ ಪ್ರೇಮ ಮಮತೆಗಳ 

ಉರ್ಮುಳಿಯೇ ಇರುವದರಿಂದ ನಾನು ಅವಳ ಆಧೀನನಾಗಿರುವನಷ್ಟೆ !'' 


" ಬಾಯಿತುಂಬ ಒಣ ಮಾತುಗಳನ್ನಾಡಲಿಕ್ಕೆ ಯಾರಿಗೂ ವೆಚ್ಚ 

ತಗಲುವದಿಲ್ಲ. ” 

ಸ್ವತಂತ್ರವಾದ ಸಂಸಾರದ ಆರಂಭವು ಹೀಗಾಯಿತು. ಪತಿಯು ತನ್ನ 

ಆಧೀನದಲ್ಲಿ ಎಷ್ಟರಮಟ್ಟಿಗೆ ಇರುವನೆಂಬದನ್ನು ಅರಿತುಕೊಳ್ಳುವದಕ್ಕಾಗಿ 

ಸುಭದ್ರೆಯು ಅನೇಕವಾದ ಹಂಚಿಕೆಗಳನ್ನು ಮಾಡಿ ನೋಡಿದಳು. ಇಂಥ 

ದೊಂದು ಕೆಲಸ ಮಾಡೆಂದು ವಿಜಯರಾಯನು ಹೇಳಿದರೆ ಮಂದವಾಡಿ 

ಹೆಂಡತಿಯು "ಈಗ ನನಗೆ ಬೇಸರ ” ಎಂದು ಹೇಳುವಳು. ಪತಿಯು 

ಬೇಡವೆಂದು ಹೇಳಿದ್ದನ್ನು ಸುಭದ್ರೆಯು ಹಟಕ್ಕಾಗಿ ಮಾಡಿ ತೀರುವಳು. 

ವಿಜಯರಾಯನು ಇದೆಲ್ಲ ವಿನೋದವೆಂದು ತಿಳಿದು ನಕ್ಕು ಸುಮ್ಮನಿರುವನು. 


ಸಲಿಗೆಯು ತಲೆಗೇರಿದ್ದರಿಂದ ಪತಿಯ ಆಜ್ಞೆಯನ್ನು ಮೀರುವದೇ 

ಸುಭದ್ರೆಯ ಅಭೀಷ್ಟೆಯಾಯಿತು. ಅವನಿಗೇನು ಬೇಕು ಬೇಡೆಂಬದರ ಆರಿ 

ಕೆಯು ಅವಳಿಗಿರಲಿಲ್ಲ. ಮಾತು ಕೇಳುವ ಗಂಡನಿದ್ದರೆ ಹೆಂಡತಿಯು ಅವ 

ನನ್ನು ಜೀತದ ಆಳಿಗಿಂತ ಕಡೆಯಾಗಿ ಮಾಡುವದುಂಟು. ಬರಬರುತ್ತೆ 

ವಿಜಯ ರಾಯನು ಕೇವಲ ಪರತಂತ್ರನಾಗಿ ಹೋದನು, ಆಪ್ತರಿಷ್ಟರನ್ನಾಗಲಿ, 

ಸ್ನೇಹಿತರನ್ನಾಗಲಿ ಮನೆಗೆ ಕರೆತಂದು ಅವರಿಗೆ ಆದರ ಉಪಚಾರಗಳನ್ನು 

ಮಾಡುವೆನೆಂದರೆ ಅದು ಅವನ ಸ್ವಾಧೀನದಲ್ಲಿ ಇರಲಿಲ್ಲ. 


ವಿಜಯರಾಯನ ಭಾವಮೈದುನನೂ, ಸ್ನೇಹಿತನೂ ಆದ ತಿರುಮಲ 

ರಾಯ ದೇಸಾಯಿಯು ವಿಜಯರಾಯನ ಸಮಾಚಾರಕ್ಕಾಗಿ ಒಂದು ದಿನ 

ಅವನ ಮನೆಗೆ ಬಂದನು. ಪ್ರತ್ಯಕ್ಷ ತನ್ನ ತಂಗಿಯಾದ ವತ್ಸಲೆಯ ಗಂಡನು 

ಬಂದಿರುವನೆಂದು ಕಂಡು ವಿಜಯರಾಯನು ಸಂತುಷ್ಟನಾಗಿ ಅವನಿಗಾಗಿ 

ಚಹಾ ಉಪಹಾರಗಳನ್ನು ಮಾಡೆಂದು ತನ್ನ ಪ್ರೀತಿಯ ಅರ್ಧಾಂಗಿಗೆ 

ಆಜ್ಞೆಗೈದನು. 


ಮೊದಲಿಗೇ ವತ್ಸಲೆಗೂ ಸುಭದ್ರೆಗೂ ವೈಮನಸ್ಸು. ವತ್ಸಲೆಯ 

ಗಂಡನಿಗೆ ಅವಳು ಆದರಾತಿಥ್ಯವನ್ನು ತೋರಿಸುವಳೆ ?  “ಮುಂಜಾವಿನಿಂದ 

ಸಂಜೆವರೆಗೆ ಇದೇ ಉಸಾಬರಿಯನ್ನೆ ಮಾಡುತ್ತ ಕುಳಿತರೆ ಉಳಿದ ಕೆಲಸಗ 

ಳನ್ನಾರು ಮಾಡುವರು ? ಬೀಗನಲ್ಲಿ ನಿಮಗೆ ಪ್ರೇಮವು ಹೆಚ್ಚಾಗಿದ್ದರೆ 

ಒಲೆಯ ಮುಂದೆ ಕುಳಿತು ಬೇಕಾದ್ದು ಮಾಡಿ ಹಾಕಿರಿ ?” ಎಂದು ತಿರುಮಲ. 

ರಾಯನಿಗೆ ಕೇಳಿಸುವ ಹಾಗೆ ಆ ಉದ್ದತೆಯು ನುಡಿದಳು 


ವಿಜಯ ರಾಯನಿಗೆ ತುಸು ಕೋಪ ಬ೦ದಿತು, ರುದ್ರಾವತಾರವನ್ನು 

ತಾಳುವ ಸಮಯವಿದಲ್ಲೆಂದು ನೆನಿಸಿ ಅವನು ಸುಮ್ಮನಿದ್ದನು. ಭಗಿನೀ 

ಪತಿಯೂ, ಶ್ರೀಮಂತನೂ, ತನ್ನ ಸ್ನೇಹಿತನು, ಸಹಾಧ್ಯಾಯಿಯ 

ಆಗಿದ್ದ ತಿರುಮಲರಾಯನಿಗಾಗಿ ಉತ್ಸವದ ಭೋಜನ ಸಮಾರಂಭವನ್ನು 

ಮೂಡಿಸಬೇಕೆಂದು ಅವನು ಯೋಚಿಸುತ್ತಿರುವಾಗ ಆ ಚಂಡಿಯಾಗಿದ್ದ ಅವನ 

ಹೆಂಡತಿಯು ತಲೆ ಕಟ್ಟಿಕೊಂಡು ಮಲಗಿದ್ದಳು ವಿಚಿತ್ರವನ್ನೆಲ್ಲ ಕಂಡು 

ತಿರುಮಲರಾಯನಿಗೆ ನಗೆ ಬಂದಿತು, ವಿಜಯರಾಯನು ತನಗೆ ಆದರವನ್ನು 

ತೋರಿಸುತ್ತಿದ್ದರೂ ಮನೆಯಲ್ಲಿ ಅವನ ಆಟವು ಸಗದಿರುವದನ್ನು ಕಂಡು 

ಅವನಿಗೆ ವಿಷಾದವಾಯಿತು, ತನ್ನ ಹೆಂಡತಿಯಾದ ವತ್ಸಲೆಯ ಮುಖದಿಂದ 

ಅವನು ಸುಭದ್ರೆಯ ಗುಣಾನುವಾದವನ್ನು ಕೇಳಿಯೇ ಇದ್ದನು. ಹಾಗೂ 

ಹೀಗೂ ಭೋಜನದ ಶಿಷ್ಟಾಚಾರವು ಮುಗಿಯಿತು. 


ಭೋಜನೋತ್ತರ ಮಾತಿಗೆ ಮಾತು ಬಂದಾಗ 'ತಿರುಮಲರಾಯನು 

ವಿಜಯರಾಯನ ಸಂಸಾರಸುಖದ ಸಮಾಚಾರವನ್ನು ಕೇಳಿದನು. ಅನಿ 

ರ್ವಾಹಕ್ಕಾಗಿ ವಿಜಯರಾಯನಿಗೆ ತನ್ನ ನಿಜವಾದ ಸ್ಥಿತಿಯನ್ನು ಒಪ್ಪಿಕೊಳ್ಳ 

ಬೇಕಾಯಿತು. ಹೆಂಡತಿಗೆ ಅನರ್ಥಕರ ವಾದ ಸಲಿಗೆಯನ್ನು ಕೊಟ್ಟು ಪರಾ 

ಧೀನನಾದ ವಿಜಯರಾಯನನ್ನು ತಿರುಮಲರಾಯನು ಬಹುಪರಿಯಾಗಿ 

ಜರಿದು ಅಂದದ್ದು : " ವಿಜಯ: ರಾಯ, ನೀನು ಕಾಲೇಜದಲ್ಲಿ ತತ್ವಜ್ಞಾನದ 

ಪುಸ್ತಕಗಳನ್ನು ಓದಿದವನು, ಸಂಸಾರದ ಅನೇಕವಾದ ಚಿತ್ರಗಳನ್ನು ಪ್ರತ್ಯಕ್ಷ 

ನೋಡಿದವನು, ಇತಿಹಾಸ ಪುರಾಣ ನಾಟಕ ಕಾದಂಬರಿಗಳಲ್ಲಿ ಬರೆದ ಆ 

ಚಿತ್ರಗಳ ವರ್ಣನೆಯನ್ನು ಓದಿದವನು; ಇಂಥವನು ಹೀಗೆ ಕೇವಲನಾದ 

ಸ್ತ್ರೈಣನಾಗಿರುವದನ್ನು ಕಂಡು ನನಗೆ ಬಹಳೇ ವ್ಯ:ನನವಾಯಿತು. ಸ್ತ್ರೀವಶ 

ನಾದವನಲ್ಲಿ ಭಕ್ತಿ, ವಾತ್ಸಲ್ಯ, ಕರ್ತವ್ಯದಕ್ಷತೆ, ಔದಾರ್ಯಾದಿ ಗುಣಗಳ 

ಲೋಪವೇ ಆಗುವದು, ಕುಲದೀಪಕನೂ, ಕೀರ್ತಿವಂತನೂ, ಸುಖಿಯ 

ಆಗಬೇಕೆಂದು ನೀನು ಸಂಸಾರವನ್ನು ಹೂಡಿದಿಯಲ್ಲ, ಸ್ತ್ರೀವಶನಾದ ನಿನಗೆ 

ಈ ಮೂರು ಉದ್ದೇಶಗಳಲ್ಲಿ ಯಾವದು ಸಾಧಿಸಿತು ? ಅವಿಚರಿಯೇ, 

ನನ್ನಂಥ ಸ್ನೇಹಿತನಿಗೆ ತಾಯಿ ನೀರು ಕೂಡ ಕೊಡಲು ಅಸಮರ್ಥನಾದ ನಿನ್ನ 

ಜನವು ಸುಟ್ಟಿತು, ಯಮುನಾಬಾಯಿಯವರಂಥ ಮಹಾಸಾಧಿಯಾದ 

ತಾಯಿಯ ಪಾದಸೇವೆಯನ್ನು ಕಳ ಕೊಂಡಿರುವವನಾದ ನೀನು ಪಾಪಿಯಲ್ಲದೆ 

ಮತ್ತಾರು ? ವಿಜಯರಾಯ, ನಿಷ್ಟುರವಾಡಿದ್ದಕ್ಕೆ ಕ್ಷಮಿಸು, ಸ್ನೇಹಿತನ 

ಅಧಿಕಾರದಿಂದ ನಿನ್ನ ಉಚ್ಛಯವನ್ನು ಬಯಸಿ ಹೀಗೆ ಆಡಿದೆನು.” 


" ತಿಮ್ಮಾ, ನೀನಾಡಿದ್ದೆಲ್ಲ ಸತ್ಯವೆ, ನಾನು ನಿಂದ್ಯನಾದ 'ಸ್ತ್ರೈಣ 

ನಾಗಿರುವನು. ಸುಧಾರಣಾವಾದಿಗಳ ಮಾತು ಕೇಳಿ ಹೆಂಡತಿಯು ನನ್ನ 

ಸಮಾನಸ್ಕಂಧಳೆಂದು ತಿಳಿದು ನಾನವಳನ್ನು ಆತ್ಯಾದರದಿಂದ ನಡೆಸಿ 

ಕೊಂಡೆನು. ಪಾಶ್ಚಿಮಾತ್ಯ ಸ್ತ್ರೀಯರಲ್ಲಿ ಏನು ಗುಣವಿರುವದೊ, ಅವರನ್ನು 

ಅವರ ಗಂಡಂದಿರು ತಮ್ಮ ಸಮಾನರೆಂದು ತಿಳಿದರೂ ಅವರು ಪತಿಗಳ ತಲೆಯ 

ಮೇಲೆ ಏರಿ ಕೂಡುತ್ತಿರಲಿಕ್ಕಿಲ್ಲ. ಮೂಢನಾದ ನಾನು ಹೆಂಡತಿಗೆ ಸಲಿಗೆ 

ಯನ್ನು ಕೊಟ್ಟು ಅಸುಖಿಯಾಗಿರುವೆನು. ಹೆಂಡತಿಗೆ ನಾನೆಷ್ಟು ಪರಿಯಾಗಿ 

ಬೋಧಿಸಿದರೂ ಅವಳಿಗೆ ತಿಳುವಳಿಕೆ ಬಾರದು, ಏನು ಮಾಡಲಿ ? ಯತ್ನ 

ಮೀರಿದ ಮಾತಾಗಿದೆ. ” ಎಂದು ವಿಜಯರಾಯನು ಬಹು ವಿಷಾದದಿಂದ 

ಮಾತಾಡಿದನು. 


“ಹುಚ್ಚನ ಹಾಗೆ ಮಾತಾಡಬೇಡ, ಪ್ರತಾಪರಾಯನು ತ್ರಾಟಿಕೆಯನ್ನು 

ಮಣಿಸಿದ ಮಂತ್ರವನ್ನು ಕೈಕೊಂಡು ನೋಡು, ಮೀರದ ಪಕ್ಷದಲ್ಲಿ 

" ಮರ್ದನಂ ಗುಣವರ್ಧನಂ ” ಎಂಬ ಅಂತಿಮವಾದ ಉಪಾಯವಿದ್ದೆ 

ಇರುವದು. ತುಸು ಗಂಡಸಿನಂತೆ ವರ್ತಿಸಿ ನೋಡು. " 


ತಿರುಮಲರಾಯನು ಊರಿಗೆ ಹೋದ ಮರುದಿವಸವೇ ವಿಜಯ 

ರಾಯನು ನಿಶ್ಚಯದಿಂದಲೂ ಜಾಣ್ಮೆಯಿಂದಲೂ ಪ್ರತಾಪರಾಯನ ಉಪಾಯ 

ಗಳನ್ನು ಯೋಚಿಸಲಾರಂಭಿಸಿದನು. ರಾಮಸಿಂಗನು ಕುದುರೆಯ ಮೈ 

ತಿಕ್ಕಿಲ್ಲವೆಂದು ಹೇಳಿ ವಿಜಯರಾಯನು ಅವನನ್ನು ಬಾರಕೋಲಿನಿಂದ ಹೆಣ 

ಬೀಳ ಹೊಡೆದನು. ಸುಭದ್ರೆಯು ಕನಿಕರಪಟ್ಟು ಅವನನ್ನು ಹೊಡೆಯಬಾರ 

ದೆಂದು ಗಂಡನಿಗೆ ಹೇಳಹೋದಳು. " ಸುಮ್ಮನಿರು ! ನಿನ್ನದಲ್ಲದ ಮಾತಿ 

ನಲ್ಲಿ ಬಾಯಿ ಹಾಕಿದರೆ ಒಳಿತಾಗಲಿಕ್ಕಿಲ್ಲ ! ” ಎಂದು ಅವನು ಒಳ್ಳೆ 

ಕೋಪಾಮೋಪದಿಂದ ಆಜ್ಞಾಪಿಸಿದನು. ರಾಮಸಿಂಗನಿಗೆ ಬಿದ್ದ ಹೊಡತ 

ಗಳನ್ನು ನೋಡಿಯೇ ಸುಭದ್ರೆಯು ತುಸು ಅ೦ಜಿದ್ದಳು ಎಂದು ಇಲ್ಲದೆ 

ಇಂದು ತನ್ನ ಮೇಲೆ ಗಂಡನು ಸಿಟ್ಟಾಗಿದ್ದು ಕಂಡು ಅವಳು ಮತ್ತಿಷ್ಟು ಅಂಜಿ 

ದಳು. ಇದಾಗಿ ಕೆಲವು ಹೊತ್ತಿನ ಮೇಲೆ ಸುಭದ್ರೆಯು ಗಂಡನನ್ನು ಭೋಜ 

ನಕ್ಕೆ ಎಬ್ಬಿಸಿದಳು; ಅವನು ಏಳಲಿಲ್ಲ. ತುಸು ಹೊತ್ತಿನ ಮೇಲೆ ಮತ್ತೊಮ್ಮೆ 

ಎಬ್ಬಿಸ ಬ೦ದಳು, ಆದರೂ ಅವನು ಏಳಲಿಲ್ಲ. ಮೂರನೆಯ ಸಾರೆ ಅವಳು 

ಗಂಡನ ಬಳಿಗೆ ಬಂದು " ಏಳುವದಿಲ್ಲವೆ ? ನನಗೆ ಹಸಿವೆ ಬಹಳಾಗಿದೆ; 

ಬಿಟ್ಟು ಊಟಕ್ಕೆ ಕೂಡುವೆನು ನೋಡಿರಿ ” ಎಂದು ಅವಳು ತನ್ನ ಪೂರ್ವ 

ಸ್ವರೂಪವನ್ನು ತಾಳಿ ಕೇಳಿದಳು. 


" ತಿನ್ನು ಹೋಗು !'' ಎಂದು ವಿಜಯರಾಯನು ಗದರಿಸಿ ನುಡಿದನು. 


ಇಂದಿನ ಮುಹೂರ್ತವು ಚನ್ನಾಗಿ ಇಲ್ಲವೆಂದು ತಿಳಿದು ಸುಭದ್ರೆಯು 

ಹುದುಗಿಕೊಂಡು ಸುಮ್ಮನೆ ಒಳಮನೆಗೆ ಹೋದಳು. ಇಳಿಹೊತ್ತಾದರೂ 

ವಿಜಯರಾಯನು ಊಟಕ್ಕೆ ಏಳದಿದ್ದದ್ದು ಕಂಡು ಸುಭದ್ರೆಯು ಹಿಟ್ಟು ಆವ 

ಲಕ್ಕಿಗಳನ್ನು ತಿಂದು ಕುಳಿತಳು. ಮತ್ತೊಮ್ಮೆ ಗ೦ಡನನ್ನು ಊಟಕ್ಕೆ ಕರೆ 

ಯಲು ಅವಳಿಗೆ ಧೈರ್ಯ ಸಾಲಲಿಲ್ಲ. ವಿಜಯರಾಯನಾದರೂ ಪೇಟೆಯಿಂದ 

ಹಣ್ಣು ಹಂಪಲಗಳನ್ನು ತರಿಸಿಕೊಂಡು ತಿಂದನು. ಮಾಡಿದ ಆಡಿಗೆಯು 

ಹಾಗೆಯೇ ಉಳಿಯಿತು. " ಸಂಜೆಯ ಆಡಿಗೆಯನ್ನಾದರೂ ಮಾಡತಕ್ಕದ್ದೂ 

ಇಲ್ಲವೊ ? ” ಎಂದು ಸುಭದ್ರೆಯು ತುಸು ವಿನೀತೆಯಂತೆ ಕೇಳಿದಳು. 


" ನನಗೆ ಗೊತ್ತಿಲ್ಲ! " 


 ಆ ದಿವಸ ಗಂಡಹೆಂಡರ ನಡುವೆ ಇದಕ್ಕೂ ಹೆಚ್ಚಿಗೆ ಮಾತುಗಳಾಗ 

 ಲಿಲ್ಲ. ವಿಜಯರಾಯನು ಆ ರಾತ್ರಿ ತನ್ನ ಶಾಲು ಹೊದ್ದು ಕೊಂಡು ಪಡ 

 ಶಾಲೆಯಲ್ಲಿಯೇ ಮಲಗಿಕೊಂಡನು, ಮರುದಿವಸ ಬೆಳಗಿನಲ್ಲಿ ಎದ್ದು ಅವನು. 

 ಅಡಿಗೆಯವಳಿಗೂ, ಒಕ್ಕಲಗಿತ್ತಿಗೂ, ಕೈಯಾಳಿಗೂ ಅವರವರಿಗೆ ಸಲ್ಲತಕ್ಕ 

 ಸಂಬಳಗಳನ್ನು ಕೊಟ್ಟು ಮನೆಬಿಟ್ಟು ಹೊರಗೆ ಹಾಕಿದನು. ರಾಮಸಿಂಗ 

 ನಂತೂ ಬಡಿಸಿಕೊಂಡವನು ಮನೆಗೆ ಬರಲೇ ಇಲ್ಲ. 

 

ಈ ಅನಾಹತದ ಅರ್ಥವೇನೆಂಬದು ಸುಭದ್ರೆಗೆ ತಿಳಿಯದಾಯಿತು. 

ಗಂಡನ ಮೋರೆ ನೋಡಲು ಆದು ಉಗ್ರವಾಗಿ ಕಾಣುತ್ತಿತ್ತು, ಅವನನ್ನು 

ಮಾತಾಡಿಸಲು ಅವಳಿಗೆ ಧೈರ್ಯ ಸಾಲಲಿಲ್ಲ. ಕೈಯಲ್ಲಿ ಜೀವ ಹಿಡುಕೊಂಡು 

ಅವಳು ಮೆಲ್ಲನೆ " ಅಡಿಗೆಯವಳನ್ನು ಹೊರಗೆ ಹಾಕಿದ್ದೇಕೆ ? ಮನೆಯಲ್ಲಿ 

ಕೆಲಸ ಹೇಗೆ ಸಾಗಬೇಕು ? ” ಎಂದು ಕೇಳಿದಳು. ಉತ್ತರವೇ ಇಲ್ಲ. 

ನಾಲ್ಕೂ ಮನೆಯ ಕಸ ತೆಗಿಯಬೇಕಾದರೆ ಅವಳಿಗೆ ದಮ್ಮಯ್ಯ ದಪ್ಪಯ್ಯ 

ಆಗಿ ಹೋಯಿತು. ನೀರು ಹೊತ್ತು ಅಡಿಗೆ ಮಾಡಬೇಕಾದರೆ ಸುಭದ್ರೆಯ 

ಕಣ್ಣೀರು ಕೆನ್ನೆಗೆ ಬಂದಿತ್ತು. ವಿಜಯರಾಯನು ಬೇಕುಬೇಡನ್ನದೆ ಎನೌನ 

ದಿಂದ ಉಣ್ಣುತ್ತಿರುವದನ್ನು ಕಂಡು " ಮಾತಾಡುವದಿಲ್ಲವೇಕೆ ? ನನ್ನಿಂದೇ 

ನಾದರೂ ತಪ್ಪಾಗಿರುವದೇನು ? ” ಎಂದು ಹೆಂಡತಿಯು ಕೇಳಿದಳು. ಮತ್ತಾ 

ದರೂ ಉತ್ತರವಿಲ್ಲ. ಪ್ರೌಢಯಾದ ಆ ತರುಣಿಗೆ ದುಃಖವಾಗಿ ತಟತಟನೆ 

ಕಣ್ಣೀರು ನೆಲಕ್ಕೆ ಉದುರಿದವು. 


ಆ ರಾತ್ರಿ ಯಾದರೂ ಬೇರೆ ಹಾಸಿಗೆ ಮಾಡಿಕೊಂಡು ಮಲಗಿದ ತನ್ನ 

ಪತಿಯ ಸಮೀಪಕ್ಕೆ ಹೋಗಿ ತನ್ನ ಮೇಲೆ ಇಷ್ಟು ಕೋಪವೇಕೆ೦ದು ಕೇಳ 

ಹೋದಳು. ತನ್ನನ್ನು ಮುಟ್ಟಕೂಡದೆಂದು ವಿಜಯರಾಯನು ನಿಷ್ಟುರನಾಗಿ 

ಹೇಳಿ ಮುಸುಕಿಟ್ಟುಕೊಂಡು ಮಲಗಿದನು. ಸುಭದ್ರೆಯು ಅವನ ಕಾಲುದೆಸೆ 

ಯಲ್ಲಿ ಕುಳಿತು ಮುಳುಮುಳು ಅತ್ತಳು. ಅಪರಾಧವಿಲ್ಲದೆ ತನ್ನ ಮೇಲೆ 

ಪತಿಯು ಇಷ್ಟೇಕೆ ಮುನಿದನೆಂಬ ಚಿಂತೆಗಾಗಿ ಅವಳ ಕಣ್ಣಿಗೆ ಕಣ್ಣು ಹತ್ತ 

ಲೊಲ್ಲದು. ಸರಿರಾತ್ರಿಯಾದರೂ ಅವಳು ತನ್ನ ಸ್ಥಳವನ್ನು ಬಿಟ್ಟೇಳಲಿಲ್ಲ. 

ಪೃಥಕ್ ಶಯ್ಕೆಯು ನಾರಿಯರಿಗೆ ಮರಣ ಸಮಾನವಾದ ವ್ಯಸನವೆಂಬದು 

ಸುಳ್ಳಲ್ಲ. 


ಹೆಂಡತಿಯು ಹೀಗೆ ಹಣಾಗಿರುವದನ್ನು ಕಂಡು ತನ್ನ ಕಾರ್ಯವು 

ಸಾಧಿಸಿತೆಂದು ನಂಬಿ ವಿಜಯರಾಯನಿಗೆ ಸಂತೋಷವೂ, ಅವಳ ದುರ್ದೆಶೆ 

ಯನ್ನು ಕಂಡು ಕನಿಕರವೂ ಉಂಟಾಗಿ ಅವನಿಗೆ ನಿದ್ರೆ ಬರಲೇ ಇಲ್ಲ. 

ಅವನು ಸುಭದ್ರೆಯ ಚಲನವಲನಗಳನ್ನು ಮುಸುಗಿನೊಳಗಿಂದಲೇ ನಿರೀಕ್ಷಿಸು 

ತ್ತಿದ್ದನು. 

 

" ನಾನು ನನ್ನ ಪಾತಿವ್ರತ್ಯದ ಸನ್ಮಾರ್ಗದಿಂದ ಒಂದು ಹೆಜ್ಜೆಯನ್ನಾ 

ದರೂ ಅಡ್ಡತಿಡ್ಡಾಗಿ ಇಟ್ಟಿಲ್ಲ. ಹಾಗಿರಲು ಪತಿಯ ಮನಸ್ಸು ಕ್ಷುಬ್ದವಾಗಿ 

ರುವ ಕಾರಣವೇನು ? ನಾನು ಅವಿನೀತೆಯಾಗಿ ವರ್ತಿಸಿದೆನೇನು ? ಸತ್ಯ ! 

ಅತ್ತೆಯವರ ಕೂಡ ಚನ್ನಾಗಿ ನಡಕೊಳ್ಳಲಿಲ್ಲ. ನಾದಿನಿಯಾದ ವಸ್ಸಲಾ 

ಬಾಯಿಯವರೊಡನೆ ನಿಷ್ಕಾರಣವಾಗಿ ವ್ಯಾಜ್ಯ ಮಾಡಿದನು. ಅವರಿಗೆ ಉಡು' 

ಗರೆಯಾಗಿ ಹತ್ತೆಂಟು ಜವಳಿಗಳನ್ನಾದರೂ ಕೊಡಬಹುದಾಗಿದ್ದರೂ ಒಪ್ಪತ್ತು 

ಅವರು ನನ್ನ ಸೀರೆಯನ್ನು ಟ್ಟುಕೊಂಡಿರಲು ಉನ್ಮತ್ತಳಾದ ನಾನು ಅದನ್ನು 

ಕಳೆಸಿಕೊಂಡೆನು. ಸತಿಯ ಪ್ರೀತಿಯ ತಂಗಿಗೆ ನಾನು ಅನಾದರವನ್ನು ತೋರಿ 

ಸಿದರೆ ಅವರು ಕ್ಷಮಿಸುವರೆ ? ಪತಿಯ ಬಾಯಿಯಿಂದ ಮಾತುಗಳು ಹೊರ 

ಡುವದಕ್ಕೆ ಮುಂಚಿತವಾಗಿ ಆ ಆಜ್ಞೆಯನ್ನು ಶಿರಸಾವಹಿಸಲಿಕ್ಕೆ ನಾನು ಸಿದ್ದ 

ಳಾಗಿರತಕ್ಕವಳು, ಬೇಕಾಗಿ ನಾನು ನನ್ನ ಪತಿದೇವರ ಆಜ್ಞೆಗಳನ್ನು ಉಲ್ಲಂಘಿ 

ಸಿದೆನು. ಇಂಥ ಆಕ್ಷಮ್ಯವಾದ ಅನೇಕ ಅಪರಾಧಗಳನ್ನು ನಾನು ಮಾಡಿದೆ 

ನಲ್ಲೆ ? ಬೇಡಿ ಬೇಡಿದ ಹಾಗೆ ನಿನ್ನ ಅಭೀಷ್ಟೆಗಳನ್ನು ಪೂರೈಸುವ ಪ್ರಾಣ 

ಕಾಂತರ ಮನಸ್ಸು ಖಿನ್ನ ವಾಗುವಂಥ ಕೃತಿಗಳನ್ನು ಮಾಡಿ, ಸುಭದ್ರೆ, ಅಪ 

ರಾಧವೇನೆಂದು ನೀನು ಅದೇ ಪತಿರಾಯರನ್ನು ಕೇಳಿದಿಯಾ ? ” ಎಂದು 

ಯೋಚಿಸುತ್ತೆ ಪಶ್ಚಾತ್ತಾಪದ ಭರದಿಂದ ನನ್ನಳಾಗಿ ಕೆಲಹೊತ್ತು ಕುಳಿತ 

ಬಳಿಕ ಸುಭದ್ರೆಯು ತನ್ನ ಪ್ರಾಣಕಾಂತನ ಪಾದಗಳನ್ನು ಗಟ್ಟಿಯಾಗಿ ಹಿಡಿದು 

"ಈ ತೊತ್ತಿನ ಅಪರಾಧಗಳನ್ನು ಕ್ಷಮಿಸುವಿರೇನು? '' ಎಂದು ಬಹು ಆರ್ತ 

ಳಾಗಿ ಕೇಳಿದಳು. 


ವಿಜಯರಾಯನು ಮುಸುಗ ತೆಗೆದು "ಈಗ ನೀನು ಮಲಗಲಿಕ್ಕೆ 

ಹೋಗು, ಇನ್ನು ಹದಿನೈದು ದಿವಸಗಳ ವರೆಗೆ ನೀನು ವಿನೀತೆಯಾಗಿ ವರ್ತಿ 

ಸಿದ್ದು ನಾನು ಮನಮುಟ್ಟಿ ಕಂಡೆನೆಂದರೆ ಕ್ಷಮೆಯ ವಿಚಾರವನ್ನು ಮಾಡು 

ವೆನು ” ಎಂದು ಅವನು ಉದಾಸೀನನಂತೆ ನುಡಿದರೂ ಅವನ ಮನಸ್ಸು 

ಕರಗಿ ನೀರಾಗಿತ್ತು. 


" ನನ್ನ ದೇವರೆ, ಹದಿನೈದು ದಿವಸಗಳವರೆಗೇಕೆ, ಯಾವಜೀವ 

ನಾನು ಕೇವಲ ವಿನೀತೆಯಾಗಿ ವರ್ತಿಸುವೆನು. ಈ ಪಾದಗಳಿಗಿಂತಲೂ ಪವಿತ್ರ 

ವಾದ ವಸ್ತುವು ಈ ಜಗತ್ತಿನಲ್ಲಿ ನನಗೆ ಮತ್ತೊಂದಿಲ್ಲ. ಈ ಪಾದಗಳ ಸಾಕ್ಷಿ 

ಯಾಗಿ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಯಾವಾಗಲೂ 

ಪ್ರಾಣಕಾಂತರಿಗೆ ಪ್ರಿಯವಾದದ್ದನ್ನೇ ಮಾಡುತ್ತಲಿರುವೆನು, ಆಯಿತೆ ! ಈಗ 

ಲಾದರೂ ನನ್ನನ್ನು ಕ್ಷಮಿಸಬೇಕು ” ಎಂದು ನುಡಿದ ಆ ತಪಸ್ವಿನಿಯು 

ಪತಿಯ ಪಾದದ ಮೇಲೆ ಹಣೆ ಇಟ್ಟಳು. 


ವಿಜಯರಾಯನು ಭರದಿಂದೆದ್ದು ತನ್ನ ಪ್ರಾಣಕಾಂತೆಯನ್ನು ಎತ್ತಿ 

ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಪ್ರೇಮದಿಂದ ಅವಳ ಗದ್ದವನ್ನು ಹಿಡಿದು 

" ಪ್ರಿಯೆ ಕ್ಷಮಿಸಿರುವೆನು ಕಂಡಿಯಾ ! ನೀನಿನ್ನು ಗುರುಹಿರಿಯರನ್ನು 

ಪೂಜಿಸುವವಳೂ ಅತಿಥಿ ಅಭ್ಯಾಗತರನ್ನು ಆದರಿಸುವವಳೂ ಆಗಿ ನಿನ್ನ 

ಪತಿಯಾದ ನನ್ನ ಕೀರ್ತಿಯು ಹೆಚ್ಚಾಗುವಂತೆಯೂ ವರ್ತಿಸಿದರೆ ಗೃಹಮೇಧಿ 

ಗಳಾದ ನಾವು ಐಹಿಕ ಸುಖದ ಸ್ವಾರಸ್ಯವನ್ನು ಸೇವಿಸಿ ಪಠಲೋಕವನ್ನು 

ಅಗ್ಗದಲ್ಲಿ ಕಂಡುಕೊಳ್ಳವ ” ಎಂದು ಹೇಳಿದನು. 


ಆ ಕಾಲದಲ್ಲಿ ಸುಭದ್ರೆಯು ಅನುಭವಿಸಿದ ಸುಖಕ್ಕೆ ಪರಿಮಿತಿ ಇರಲಿಲ್ಲ. 

ಸುಭದ್ರೆಯು ನಿದ್ದೆ ಗೈದು ಕೃತಾರ್ಥಳಾಗಿಯೇ ಎದ್ದಳು, ಸೂರ್ಯೋದಯ 

ದೊಂದಿಗೆ ಸುಭದ್ರೆಯ ಉದಯಕಾಲವಾದರೂ ಪ್ರಾಪ್ತವಾಯಿತು. ನಿರು 

ಪಮಳಾದ ಸತಿಯೆಂದರೆ ಸುಭದ್ರೆಯೇ, ಅತ್ತೆಯ ಆಜ್ಞಾನುವರ್ತಿನಿಯೆಂದರೆ 

ಅವಳೇ, ಆಪ್ತರಿಷ್ಟರ ಸುಖಸಮಾಚಾರಗಳನ್ನು ನೋಡುವವಳೆಂದರೆ ಅವಳೇ, 

ಎಂದು ಲೋಕವೆಲ್ಲ ಹೊಗಳಲಾರಂಭಿಸಿತು. 

==========================================

ತೊಳೆದ ಮುತ್ತು 


ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ 

ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ 

ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು 

ಡೆಪುಟ ಕಲೆಕ್ಟರರಾಗಿ ಪೆನ್ಶನ್ನ ತೆಗೆದುಕೊಂಡಿದ್ದರಿಂದ ನಮ್ಮಲ್ಲಿ ಐವತ್ತು-  

ಅರವತ್ತು ಸಾವಿರ ರೂಪಾಯದ ಗಂಟಿರಬಹುದೆಂದು ಜನರ ತರ್ಕ, ಜನರ 

ತರ್ಕವಾದರೂ ತಪ್ಪಾದದ್ದಲ್ಲ. 


ನಮ್ಮ ತಂದೆತಾಯಿಗಳಿಗೆ ನಾವು ಮೂರು ಮಂದಿ ಮಕ್ಕಳು, ಹಿರಿಯ 

ಳಾದ ಸತ್ಯಭಾಮೆಯನ್ನು (ನಾವು ಭಾಮಕ್ಕನೆನ್ನುತ್ತೇವೆ) ಶಹಾಪುರದಲ್ಲಿ 

ಲಕ್ಷಾಧೀಶರಾದ ತಮ್ಮಣ್ಣನಾಯಕರ ಮಕ್ಕಳಾದ ಶೇಷಗಿರಿನಾಯಕರಿಗೆ 

ಕೊಟ್ಟಿದೆ. ನಡುವಿನವನು ನಾನು. ದೊಡ್ಡವರ ಮಗನಾದ ನನ್ನ ಮದು 

ವೆಯು ಬೇಗನೆ ಆಯಿತು, " ವೆಂಕಟರಾಯರ ಬುದ್ದಿ ಬಹಳ ಚುರುಕು; 

ಈ ಸಾರೆ ಅವರು ಮ್ಯಾಟ್ರಿಕ್ಯೂಲೇಶನ್ನದಲ್ಲಿ ಹೇಗೆ ' ನಾಪಾಸ' ಆದರೋ 

ತಿಳಿಯಲಿಲ್ಲ. ” ಎಂದು ನನ್ನ ತಂದೆಯವರ ಸ್ತುತಿಪಾಠಕರು ಹಳಹಳಿಸಿದರು. 

ಈ ಮೊದಲೆಯೇ ನಾನು ಎರಡು ಸಾರೆ ' ನಾಪಾಸ' ಆಗಿದ್ದನು. “ ಏನು 

ದೊಡ್ಡ ಮಾತು ? ಪಾಸಾಗದಿದ್ದರೆ ಇಲ್ಲ. ಪರೀಕ್ಷೆ ಪಾಸಾದರೆಯೇ ವೆಂಕ 

ಟೇಶನ ಹೊಟ್ಟೆ ತುಂಬುತ್ತದೆ ಅಂತಲ್ಲ ! ” ಎಂದು ಪುತ್ರ ವತ್ಸಲರಾದ ನನ್ನ 

ತಂದೆಯವರು ಹೇಳಿದರು, ತಂದೆ ತಾಯಿಗಳು ನನ್ನ ಮೇಲೆ ಹೆಚ್ಚಾದ

ಮಮತೆ ಮಾಡುತ್ತಿರುವದರಿಂದಲೂ ನಾನು ಗೃಹಸ್ಥಾಶ್ರಮಿಯಾಗಿ ೩-೪ 

ವರ್ಷಗಳಾಗಿರುವದರಿಂದಲೂ ನಾನು ಮೂರು ಸಾರೆ ಮಾಟ್ರಕುಲೇಶನ್ 

ದಲ್ಲಿ ನಾಪಾಸ ಆದೆನು. ಮುಂದಿನ ವರ್ಷ ನಾನೂ ನನಗಿಂತ ನಾಲ್ಕು ವರ್ಷ 

ಚಿಕ್ಕವನಾದ ನನ್ನ ತಮ್ಮ ಮಾಧವನೂ ಕೂಡಿಯೇ ಆ ಪರೀಕ್ಷೆಯಲ್ಲಿ 

ತೇರ್ಗಡೆ ಹೊಂದಿದವು. ಮಾಧವನು ತೇರ್ಗಡೆ ಹೊಂದಿದವರಲ್ಲಿ ಮೊದಲನೆ 

ಯವನು; ಶಂಕರಸೇಟ್ ಸ್ಕಾಲರನೂ ಆದ್ದರಿಂದ ಅವನ ಪ್ರಶಂಸೆಗೆ ಅಳತೆ 

ಯಿರಲಿಲ್ಲ. ಆಗಲಿ! ನಿಂದಕರನ್ನು ನೋಡಿರಿ. ಅವರು ಮಾಧವನ ಸ್ತುತಿ 

ಮಾಡಬೇಕಾದರೆ ನನ್ನನ್ನು ಹಳಿಯಬೇಕೆ ? ನಾನಾದರೂ ' ಪಾಸ್ ' ಆದವ 

ರಲ್ಲಿ ಒಂಬತ್ತನೆಯವನು. 


ಕಾಂತಾಸಹವಾಸದ ವ್ಯಾಮೋಹಕ್ಕಾಗಿಯ ಸ್ನೇಹಿತರೊಡನೆ ವಿನೋ 

ದದ ಹರಟೆ ಕೊಟ್ಟಿದ್ದಕ್ಕಾಗಿ ನನ್ನ ಅವಸ್ಥೆ ಹೀಗಾಯಿತೆಂಬ ವ್ಯಸನ 

ದಿಂದ ನಾನಾದರೂ ಮುಂಬಯಿಯಲ್ಲಿ ನಿಂತು ಒಳ್ಳೆ ಮನಸ್ಸು ಕೊಟ್ಟು  

ವಕೀಲೀ ಪರೀಕ್ಷೆಯ ಅಭ್ಯಾಸ ಮಾಡಿದ್ದರಿಂದ ವರುಷ ತಿರುಗುವದರೊಳಗಾ 

ಗಿಯೇ ನಾನು ವಕೀಲನಾದೆನು. ಕೇಳುವದೇನು ! ಮಾಧವನು ಪೀ. ಈ, 

ಪರೀಕ್ಷೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿದರೂ ಅವನು ವಿದ್ಯಾರ್ಥಿಯೇ ! 

ನಾನು ತಿಂಗಳೊಂದಕ್ಕೆ ನೂರು ನೂರೈವತ್ತು ರೂಪಾಯಿ ಗಳಿಸುವ ವಕೀ 

ಲನು.  ಹೀಗೆ ನಮ್ಮ ಮನೆಯಲ್ಲಿ ಸುಖವೂ ಆನಂದವೂ ನೆಲೆಗೊಂಡವು. 


ನಾವು ಕರ್ನಾಟಕದ ದೇಶಸ್ಥರು; ಮನೆಯಿಂದ ನೆಟ್ಟಗಿದ್ದವರು; ಇಂಥ 

ವರ ಮನೆಯಲ್ಲಿದ್ದ ನಮ್ಮ ಮಾಧವನು ಅವಿವಾಹಿತನಾಗಿ ಉಳಿಯುವದು 

ಹೇಗೆ ? ಇಷ್ಟು ದಿವಸ ಮಾಧವನ ಮದುವೆಯಾಗದೆ ಉಳಿದದ್ದೇ ಹೆಚ್ಚಿನ 

ಮಾತು. ಹೈದರಾಬಾದದಲ್ಲಿ ಕರೋಡಗಿರಿಯ ಮೋಹತಮೀಮರಾದ ಸುಬ್ಬ 

ರಾಯರು ನಮ್ಮ ತಂದೆಯವರ ಬಾಲ್ಯದ ಸ್ನೇಹಿತರು, ತಮ್ಮ ಮಗಳನ್ನು 

ಮಾಧವನಿಗಾಗಿ ಸ್ವೀಕರಿಸಬೇಕೆಂದು ಸುಬ್ಬರಾಯರು ನಾವಿದ್ದಲ್ಲಿಗೆ ಬಂದು 

ಬಹುರಿಪರಿಯಾಗಿ ಹೇಳಿಕೊಂಡು ಐದು ಸಾವಿರ ರೂಪಾಯಿ ವರದಕ್ಷಿಣೆಯಾಗಿ 

ಕೊಡಲೊಪ್ಪಿದ್ದರಿಂದ ನಮ್ಮ ತಂದೆಯವರು ಒಪ್ಪಿಕೊಂಡರು. ನಮ್ಮ 

ತಾಯಿಯವರು ಇನ್ನೂ ಕೆಲವು ' ಬಾಬು 'ಗಳನ್ನು ಹೆಚ್ಚಾಗಿ ಬೇಡಿದರೂ 

ಅವುಗಳನ್ನು ಸುಬ್ಬರಾಯರು ಕೊಡಲೊಪ್ಪಿದ್ದರಿಂದ ಮಾಧವನ ಮದುವೆಯ 

ನಿಶ್ಚಯವೇ ಆಗಿಹೋಯಿತು, 


ಕಥೆ-ಕಾದಂಬರಿ, ನಾಟಕಾದಿಗಳನ್ನು ಓದಿದವನಾದ ಮಾಧವನು 

"ಇಂಗ್ಲಂಡದಲ್ಲಿ ತರುಣರು ಇಪ್ಪತ್ತೆಂಟು ಮೂವತ್ತು ವರ್ಷದ ಪ್ರಾಯದವ 

ರಾಗುವ ವರೆಗೆ ಲಗ್ನ ಮಾಡಿಕೊಳ್ಳುವದಿಲ್ಲ. ಅವರು ತಮ್ಮ ಇಚ್ಛೆಗೆ ಬಂದ 

ವಧುವನ್ನೇ ಮದುವೆ ಮಾಡಿಕೊಳ್ಳುತ್ತಾರೆ. ಹೀಗೆ ಬಂಧಿಸಿ ನನ್ನ ಮದುವೆ 

ಮಾಡುವದು ಸರ್ವಥಾ ಅನ್ಯಾಯವಾದದ್ದು" ಎಂದು ನನಗೂ ತಂದೆಯವರಿಗೂ 

ಕೂಡಿಯೇ ಬರಕೊಂಡನು. ನಮ್ಮ ತಂದೆಯವರು ತಾವು ಮಾಡಿದ ನಿಶ್ಚಯ. 

ವನ್ನು ಮುರಿಯುವರೆ? ಕನ್ನೆ ಯು ಶ್ರೇಷ್ಟಳಾಗಿರುವಳೆಂದೂ ಸುಬ್ಬರಾಯರಂಥ 

ಮನೆತನಸ್ಥರೊಡನೆ ಸಂಬಂಧ ಮಾಡುವದು ಶ್ಲಾಘ್ಯವಾದದ್ದೆಂದೂ ಬರೆದ 

ದ್ದಲ್ಲದೆ ತಮ್ಮ ಆಜ್ಞೆಯನ್ನು ಉಲ್ಲಂಘಿಸಿದ್ದಾದರೆ ಕಾಲೇಜ ಬಿಟ್ಟು ಮನೆಗೆ 

ಬರಬೇಕಾದೀತೆಂದು ತಂದೆಯವರು ಮಾಧವನಿಗೆ ನಿಷ್ಟುರವಾಗಿ ಬರೆದದ್ದೆ 

ರಿಂದ ಅವನು ಅನಿರ್ವಾಹಕ್ಕಾಗಿ ಸುಮ್ಮನಾದನು. 


ಮನೆಯಲ್ಲಿ ಮಾಧವನ ಮದುವೆಯ ಸಮಾರಂಭವು ಅಟ್ಟಹಾಸದಿಂದ 

ನಡೆದಿತ್ತು. ಬುದ್ದಿಶಾಲಿಯ, ದೃಢಾಂಗನೂ, ಸುಂದರನೂ ಆದ ವರನನ್ನು 

ಕಂಡು, ವಧಪಕ್ಷದವರಿಗೆ ಅತಿಶಯವಾದ ಸಂತೋಷವಾಗಿತ್ತು. ನಮ್ಮ 

ತಾಯಿಗೂ ಭಾಮಕ್ಕನಿಗೂ ದಾಸಾನುದಾಸರಾಗಿ ನಡಕೊಳ್ಳುತ್ತಿದ್ದರು. 

ಕಳಸಗಿತ್ತಿಯಾದ ಭಾಮಕ್ಕನ ಜಂಬವನ್ನು ಹಿಡಿಯಬೇಕಾದರೆ, ಸುಬ್ಬ 

ರಾಯರಿಗೂ ಅವರ ಪತ್ನಿಗೂ ಸಾಕುಬೇಕಾಗಿ ಹೋಯಿತು, ಈ ಲಗ್ನ 

ಸಮಾರಂಭದಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಉಲ್ಲಾಸ, ಎಲ್ಲರಿಗೂ ಆನಂದ 

ವಾಗಿರುವಾಗ ಮಾಧವನೊಬ್ಬನೇ ಚಿಂತಾಕ್ರಾಂತನಾಗಿ ಕಂಡನು. 


ಕನ್ನೆಯ ರೂಪವು ಹೇಗಿರುವರೋ ಎಂದು ನೋಡುವನೆಂದರೆ ಆ 

ಹುಡುಗಿಯು ಕೆಳಗೆ ಮೋರೆ ಹಾಕಿದವಳು ಅದನ್ನು ಮೇಲಕ್ಕೆ ಎತ್ತಿದ್ದಿಲ್ಲ. 

ಮೊದಲನೆಯ ದಿವಸ ವಧುವು ಮಾಧವನ ಮುಖವನ್ನು ನಿರೀಕ್ಷಿಸಿ ನೋಡು 

ತ್ತಿದ್ದಳಂತೆ ! ಆಗ ಊಟಕ್ಕೆ ಬಂದ ಪುರೋಹಿತಗಿತ್ತಿಯಾದ ಭಾಗಮ್ಮನು 

ಅದನ್ನು ಕಂಡು, "ಆಯ್ಕೆ! ಏನು ಹುಡುಗೆ ಇದು ? ಈಗಲೆ ಗಂಡನ 

ಮೊರೆಯನ್ನು ಹುಳುಹುಳು ನೋಡುತ್ತಾಳೆ ” ಎಂದು ಆ೦ದಳಂತೆ. ಆ 

ಮಾತು ಕೇಳಿದಾಗಿನಿಂದ ಮದುಮಗಳು ತಿರುಗಿ ಮೇಲಕ್ಕೆ ಮೋರೆಯನ್ನೆತ್ತಿ 

ದಿಲ್ಲ. ಸಿಕ್ಕಸಿಕ್ಕವರು ಎರೆದದ್ದರಿಂದ ಮದುವುಗಳ ತಲೆಯಲ್ಲಿ ತಪತಪ ಎಣ್ಣೆ 

ಬಸಿಯುತ್ತಿತ್ತು. ಮೈಯೆಲ್ಲ ಎಣ್ಣೆ ಆರಿಸಿನಗಳ ಜಿಗಿಯು, ಅಷ್ಟಪತ್ರಿಯು 

ಪುರೋಹಿತನಿಗೆ ಹೋಗಬೇಕಾದ್ದರಿಂದ ಒಂದೂ ಮುಕ್ಕಾಲು ರೂಪಾಯಿಯ 

ಬೆಲೆಯುಳ್ಳ ಅರಿಸಿನ ಬಣ್ಣದ್ದೊಂದು ವಸ್ತ್ರವನ್ನು ಆ ಕನ್ನೆಗೆ ಉಡಿಸಿದ್ದರು 

ಇಷ್ಟು ಸೌಭಾಗ್ಯದ ಮೇಲೆ ವಧುವಿನ ಹೆಸರು ಗುಂಡನು. 


ಸಾರಾಂಶ, ಹೆಂಡತಿಯು ಮಾಧವನ ಮನಸ್ಸಿಗೆ ಎಳ್ಳಷ್ಟಾದರೂ ಬರ 

ಲಿಲ್ಲ, ಭಾಮಕ್ಕನು ಆಗ್ರಹದಿಂದ ಜಗ್ಗಿಕೊಂಡು ಹೋದರೆ ಮಾತ್ರ ಊಟ 

ಣಿಗೆ ಹೋಗುವನು. ಗುಂಡಕನು ತಪ್ಪು ತಡೆಯಾದ ಮರಾಠಿ ಒಗಟು 

ಗಳನ್ನು ಹಾಕಿ ಗಂಧ ಹಚ್ಚಲಿಕ್ಕೆ ಬಂದರೆ ಅವನು ಕೈ ಕೊಡಲಿಲ್ಲ. 

" ಮಾಧವಾ, ನಿನ್ನ, ಮಾವನು ಕೊಟ್ಟ ಪೀತಾಂಬರವು ಚನ್ನಾಗಿದೆ ಅಲ್ಲವೆ ? 

ನೋಡು ಬಾ ! ” ಎಂದು ನಮ್ಮ ತಾಯಿಯು ಕರೆದರೆ "ರಮಾಕಕ್ಕಿ, 

( ನಮ್ಮ ತಾಯಿಗೆ ನಾವು ರಮಾಕಕ್ಕಿ ಎಂದೆನ್ನುತ್ತೇವೆ) ರಮಾಕಕ್ಕಿ, ಈ 

ಸುದ್ದಿಯನ್ನು ನನ್ನ ಮುಂದೆ ತೆಗಿಯಬೇಡ, ಪೀತಾಂಬರವನ್ನು ಮದುವೆ 

ಮಾಡಿಕೊಳ್ಳುವದದೇನು ? ” ಅಂದನು. 


- ಹೀಗೆ ಮಾಧವನು ಮದುವೆ ಮುಗಿಯುವ ವರೆಗೆ ದುಮುದುಮು 

ಉರಿಯುತ್ತಿದ್ದನು. ಆಲ್ಪರೆದು ಹೇಳಿಕೊಂಡರೂ ತಂದೆಯವರು ತನ್ನ 

ವಿನಂತಿಯನ್ನು ಲಕ್ಷಿಸದೆ ತನಗೆ ಇಂಥದ್ದೊಂದು "ಕರಡೆ ”ಯನ್ನು ಗಂಟು 

ಹಾಕಿದರೆ ? ಒಳ್ಳೇದು, ಇದರ ಪ್ರಾಯಶ್ಚಿತ್ತವನ್ನು ಅವರಿಗೆ ಉಣ್ಣಿಸದಿದ್ದರೆ 

ನನ್ನ ಹೆಸರೇ ಮಾಧವನಲ್ಲ; ಆಗ್ರಹಿಯಾದ ತಂದೆಯ ಮಗನು ಆಗ್ರಹಿ 

ಯಾಗದಿದ್ದರೆ ಒಪ್ಪುವದುಂಟೆ ? ಎಂದು ನೆನಿಸಿ ಅವನು ಕಾಲೇಜು. 

ಹೊರಟುಹೋದನು. 


ಮುಂದಿನ ' ಮೇ ' ತಿಂಗಳಲ್ಲಿ ಮಾಧವನು ಊರಿಗೆ ಬರಲಿಲ್ಲ. ತಂದೆ 

ಯವರು ಆಗ್ರಹದಿಂದ ಬಾರೆಂದು ಬರೆದರೆ 'ಅವನು ಊರಿಗೆ ಬಂದ ಮರು 

ದಿವಸವೇ ಮರಳಿ ಕಾಲೇಜಕ್ಕೆ ಹೋದನು. ಮಾಧವನು ಅಳಿಯತನಕ್ಕೆ 

ಅತ್ತೆ ಮನೆಗೆ ಹೋಗಲಿಲ್ಲ. ಹೆಂಡತಿ ಮೈನೆರೆದರೆ ಫಲಶೋಭನಕ್ಕೆ ಊರಿಗೆ 

ಬರಲಿಲ್ಲ. ತಂದೆಯವರು ಬೇರೊಂದು ಮುಹೂರ್ತ ತೆಗೆದು ಮಾಧವನಿಗೆ 

ಸಿಟ್ಟು ಮಾಡಿ ಬರಹೇಳಿ ಕಳಿಸಿದರೆ, “ ನನಗೆ ಇನ್ನೊಂದು ಮದುವೆ ಮಾಡಿದರೆ 

ಮಾಡಿರಿ; ಇಲ್ಲದಿದ್ದರೆ ನೀವು ಮಾಡುವ ಮಂಗಲಕಾರ್ಯಗಳು ನನಗೆ 

ಬೇಕಾಗಿಲ್ಲ ” ಎಂದು ಪ್ರತ್ಯುತ್ತರ ಕೊಟ್ಟನು.  


ತಂದೆಯವರಿಗೆ ಕೋಪ ಬಂದಿತು; ಆದರೆ ಮಗನನ್ನು ಒಗೆಯುವರು 

ಹೇಗೆ ? ಇತ್ತ ಸುಬ್ಬರಾಯರ ಪತ್ರಗಳು ಮೇಲಿಂದ ಮೇಲೆ ಬರುತ್ತಿದ್ದವು; 

ಇತ್ತ ಮಗನು ಮಾತು ಕೇಳಲೊಲ್ಲನು, . ಎಮ್, ಏ, ಆಗಿ ಪ್ರಬುದ್ಧನಾಗಿ 

ರುವ ಮಗನನ್ನು ಹೆಚ್ಚಿಗೆ ಕೆಣಕಿ ನೋಡಿ ಫಲವೇನು ? ಸುಖಿಯಾಗಿದ್ದ 

ನಮ್ಮ ರಾಯರಿಗೆ ವೃದ್ಧಾಪ್ಯದಲ್ಲಿ ಇದೊಂದು ದೊಡ್ಡ ಚಿಂತೆಯಾಯಿತು... 

ಇದ್ದ ಸೊಸೆಯು ರೂಪವತಿಯೂ ಗುಣವತಿಯೂ ಆಗಿದ್ದಳು. ಇನ್ನೊಂದು 

ಮದುವೆ ಮಾಡುವದೆಂತು ? ಒಬ್ಬರ ಮಗಳ ಗೋಳು ಕಟ್ಟಿಕೊಳ್ಳುವದ 

ಕ್ಕಿಂತಲೂ ಮಗನು ಹೆಂಡತಿಯಿಲ್ಲದೆ ಕುಳಿತರೂ ಚಿಂತೆಯಿಲ್ಲವೆಂದು ತಿಳಿದು 

ಅವರು ಮಾಧವನ ದ್ವಿತೀಯ ವಿವಾಹದ ಗೊಡವೆಗೆ ಹೋಗಲಿಲ್ಲ. 


ತಂದೆಯವರ ಪ್ರಕೃತಿಯು ದಿನೇದಿನೇ ಅಸ್ವಸ್ಥನಾಗುತ್ತೆ ನಡೆದದ್ದ 

ರಿಂದ ನಾವು ಗ್ರಾಮಾಂತರಕ್ಕೆ ಹೋಗಿ ಇರಬೇಕೆಂದು ವೈದ್ಯರು ಹೇಳಿದರು. 

ಆಮೇರೆಗೆ ನಾವೆಲ್ಲರೂ ಬೆಂಗಳೂರಿಗೆ ಹೋದೆವು. 'ಬಸವನಗುಡಿ ' ಎಂಬ 

ಹೊಸಪೇಟೆಯಲ್ಲಿ ನಮ್ಮ ಪ್ರಾಂತದ ಜನರ ವಸತಿ ಬಹಳವಾಗಿರುವದರಿಂದ 

ನಾವು ಅಲ್ಲಿಯೇ ಒಂದು ರಮ್ಯವಾದ ಮನೆ ಹಿಡುಕೊಂಡು ಇದ್ದೆವು. ಬೆಂಗ 

ಳೂರಿನ ನೀರು ಗಾಳಿಗಳು ಒಳ್ಳೆ ಹಿತಕರವಾಗಿರುವುದರಿಂದಲೂ, ಅಲ್ಲಿಯ 

ಶೋಭೆಯು ಒಳ್ಳೇ ರಮಣೀಯವಾಗಿರುವದರಿಂದಲೂ, ಅಲ್ಲಿರುವ ಬೇರೆ 

ಸುಖಸಾಧನಗಳು ಸಾಮೀಚೀನವಾಗಿರುವುದರಿಂದಲೂ ತಿಂಗಳು ಹದಿನೈದು 

ದಿವಸಗಳಲ್ಲಿಯೇ ತಂದೆಯವರ ಪ್ರಕೃತಿಯು ವಾಸಿಯಾಗುತ್ತೆ ಬಂದಿತು. 


'ನಾವು ಬೆಂಗಳೂರಿಗೆ ಬಂದ ವರ್ತಮಾನವನ್ನು ಕೇಳಿ ನಮ್ಮ ಭಗಿನೀ 

ಪತಿಗಳಾದ ಶೇಷಗಿರಿನಾಯಕರಿಗೂ ಅಲ್ಲಿಗೆ ಬರುವ ಇಚ್ಛೆಯಾಯಿತು. ಶೇಷಗಿರಿ 

ನಾಯಕರು ಮೂವತ್ತೈದು ವರುಷದ ಪ್ರಾಯದವರಾದ ತರುಣರು. ಅವರು 

ದೃಢಾಂಗರಾಗಿದ್ದು ಮೈ ಬಣ್ಣ ಸಾದಗಪ್ಪಿನದಾಗಿತ್ತು, ನಾಯಕರ ಮುಖದ 

ಮೇಲೆ ಲಕ್ಷ್ಮಿಯ ಕಳೆಯು ಉಕ್ಕುತ್ತಿತ್ತು. ಹಿರಿಯರು ವರುಷಾ ನಿರಾತಂಕ 

ಏಳೆಂಟು ಸಾವಿರ ರೂಪಾಯಿ ಗಳಿಸುವರು. ಹೊಟ್ಟೆಗಿಲ್ಲದವರು ವಿದ್ಯಾವ್ಯಾಸಂಗ 

ವನ್ನು ಮಾಡತಕ್ಕದ್ದೆಂದು ತಮ್ಮಣ್ಣನಾಯಕರ ಅಭಿಪ್ರಾಯವಾದದ್ದರಿಂದ 

ಶೇಷಗಿರಿ ನಾಯಕರನ್ನು ದೊಡೂರ ಶಾಲೆಗೆ ಕಳಿಸಲಿಲ್ಲ. ಅಂಕಿ ಮೊಗ್ಗೆ 

ಅಕ್ಷರ ಬರಹಗಳ ಪೂರ್ತೆ ಶೇಷಗಿರಿ ನಾಯಕರ ವಿದ್ಯಾಭ್ಯಾಸವಾಗಿತ್ತು. 

ಕನ್ನಡ ಮರಾಠಿ ಅಕ್ಷರಗಳನ್ನು ಅವರು ಮುಕ್ತಾಫಲದಂತೆ ಬರೆಯುತ್ತಿದ್ದರು. 

ವ್ಯಾಪಾರದ ಲೆಕ್ಕಗಳನ್ನು ಅವರು ತಪ್ಪಿಲ್ಲದೆ ಬಹು ಜಾಗ್ರತೆಯಾಗಿ ಮಾಡು 

ತ್ತಿದ್ದ ರು. ಶೇಷಗಿರಿನಾಯಕರು ಒಳ್ಳೆ ತೀಕ್ಷ್ಮವಾದ ಬುದ್ಧಿಯುಳ್ಳವರಾಗಿದ್ದ 

ರಿಂದ ತಮಗೆ ಉಚ್ಚ ವಾದ ಶಿಕ್ಷಣವು ದೊರಕಲಿಲ್ಲವೆಂದು ಅವರು ಆಗಾಗ್ಗೆ 

ವಿಷಾದಪಡುತ್ತಿದ್ದರು. ಪದವೀಧರರಂತೆ ಪೋಷಾಕು ಮಾಡಿಕೊಳ್ಳುವದೂ 

ಆ ಜನರಂತೆ ವರ್ತಿಸುವದೂ ಅವರಿಗೆ ಸೇರುತ್ತಿತ್ತು. ಉತ್ತಮೋತ್ತಮವಾದ 

ಜರದ ರುಮಾಲಗಳನ್ನು ಅವರು ಸುತ್ತಿಕೊಳ್ಳುತ್ತಿದ್ದರು. ಬೆಲೆಯುಳ್ಳ ಕೋಟು 

ಪಾಟಲೂನುಗಳ ಜೊತೆಗಳು ಅವರಲ್ಲಿ, ಹತ್ತೆಂಟು ಇದ್ದವು. ಕಣ್ಣುಗಳು 

ಚನ್ನಾಗಿ ಕಾಣುತ್ತಿದ್ದರೂ ಆಲಂಕಾರಕ್ಕಾಗಿ ' ಲಾರೆನ್ನ ಎಂಡ ಮೇಯೊ ' 

ಕಂಪನಿಯಿಂದ ಐವತ್ತು ರೂಪಾಯದ ಉಪನೇತ್ರಗಳನ್ನು ತರಿಸಿದ್ದರು. 

ಅವರಿಗೆ ಗಡಿಯಾರದ ಅವಶ್ಯಕತೆ ಇಲ್ಲದಿದ್ದರೂ ಸುಶಿಕ್ಷಿತರು ಗಡಿಯಾರವಿಲ್ಲದೆ 

ಇರಕೂಡದಾದ್ದರಿಂದ ಅವರ ಕಿಶೆಯಲ್ಲಿ ಚಿನ್ನದ ಗಡಿಯಾರವೂ ಅದಕ್ಕೆ 

ರತ್ನಖಚಿತವಾದ ಬಂಗಾರದ ಅಂದವಾದ ಸರಪಣಿಯೂ ಇತ್ತು. ವಾಚ್- 

ಚೇನ ಮೀಟಂಗ-ಲೆಕ್‌ಚರ, ಲೇಡಿಜ-ಜೆಂಟ್ಲಮೆನ್, ಗುಡ್ ಮಾರ್ನಿ೦ಗ 

ಮುಂತಾದ ಅವಶ್ಯವಾದ ಅನೇಕ ಇಂಗ್ಲಿಷ ಶಬ್ದಗಳು ಅವರಿಗೆ ಬರುತ್ತಿದ್ದು 

ಅವುಗಳನ್ನು ಅವರು ಪ್ರಸಂಗಬಂದಾಗ ಉಪಯೋಗಿಸದಲೆ ಬಿಡುತ್ತಿದ್ದಿಲ್ಲ, 


ಇರಲಿ, ಶೇಷಗಿರಿನಾಯಕರು ಜಾತ್ಯಾ ಚತುರರೂ, ವೆಚ್ಚ ಮಾಡುವದ 

ರಲ್ಲಿ ಸಡಿಲು ಕೈಯುಳ್ಳವರೂ ಆಪ್ತರಿಷ್ಟರೊಡನೆ ಪ್ರೇಮದಿಂದ ನಡಕೊಳ್ಳು 

ವವರೂ ಆಗಿದ್ದರು, ಗಂಡ ಹೆಂಡರು ಪ್ರೇಮದಿಂದಿದ್ದು ಆದರದೊಂದಿಗೆ 

ವರ್ತಿಸುತ್ತಿದ್ದರು, ಅವರಿಗೆ ರಂಗಣ್ಣ ನೆಂಬ ನಾಲೈದು ವರ್ಷದ ಬಾಲಕ 

ನಿದ್ದನು. ಹೀಗೆ ಸುಖಿಯಾಗಿದ್ದ ಶೇಷಗಿರಿನಾಯಕರು `ಸಪತ್ನೀಕರಾಗಿ 

ಬೆಂಗಳೂರಿನಲ್ಲಿ ಕೆಲವು ದಿವಸ ಆನಂದದಲ್ಲಿ ಕಳೆಯಬೇಕೆಂದು ಬಂದಿದ್ದರು. 

ಅವರಾದರೂ ನಮ್ಮ ಮನೆಯ ಸಮಾಸದಲ್ಲಿರುವದೊಂದು ಚಿಕ್ಕ ಬಂಗಲೆ 

ತೆಗೆದುಕೊಂಡು ಇರಲಾರಂಭಿಸಿದರು. 


ಒಂದು ದಿವಸ ಪ್ರಾತಃಕಾಲದಲ್ಲಿ ನಾನೂ ನನ್ನ ತಮ್ಮನಾದ ಮಾಧವ 

ರಾಯನೂ ( ಮಾಧವನು ಎಂ. ಎ. ಆದಬಳಿಕ ನಾವೆಲ್ಲರೂ ಅವನಿಗೆ 

ಮಾಧವರಾಯನೆನ್ನುತ್ತೇವೆ. ) ಕೂಡಿ ಭಾವಕ್ಕನ ಮನೆಗೆ ಉಪಹಾರಕ್ಕೆ 

ಹೋದೆವು. ಅಲ್ಲಿಯ ವ್ಯವಸ್ಥೆ ನೋಡಿರಿ : ಬಂಗಲೆಯ ಪ್ರಶಸ್ತವಾದ ಒಂದು 

ಭಾಗದಲ್ಲಿ ಒಂದು ವರ್ತುಲಾಕಾರದ ಮೇಜು ಇಟ್ಟಿದ್ದು ಅದರ ಸುತ್ತಲೂ 

ನಾಲ್ಕಾರು ಅಂದವಾದ ಕುರ್ಚಿಗಳನ್ನಿಟ್ಟಿದ್ದರು. ಚಿತ್ರಮಯವಾದ ಬನಾತ 

ವನ್ನು ಮೇಜಿನ ಮೇಲೆ ಹಾಸಿದ್ದು ಮಧ್ಯದಲ್ಲಿ ಪುನಗು ಕಸೂರಿಯ ಊದಿನ 

ಕಡ್ಡಿಗಳುಳ್ಳ ಬೆಳ್ಳಿಯ ಗಿಡವು ಸುಗಂಧಮಯವಾದ ಹೊಗೆಯನ್ನು ತೂರು 

ತ್ತಿತ್ತು. ಬೆಳ್ಳಿಯ ಹೂಜಿಗಳಲ್ಲಿ ವಿವಿಧವರ್ಣದ ಪುಷ್ಪ ಗಳನ್ನಿರಿಸಿ ಅವುಗಳನ್ನು 

ಊದಿನ ಕಡ್ಡಿಯ ಗಿಡದ ಸುತ್ತಲೂ ಪರಿಷ್ಕಾರವಾಗಿ ಇಟ್ಟಿದ್ದರು. ನಾಲ್ಕು 

ಬೆಳ್ಳಿಯ ಹರಿವಾಣಗಳಲ್ಲಿ, ಕಂಡರೆ ಬಾಯಿಗೆ ನೀರು ಬರುವಂಥ ಉಪಹಾರದ 

ಪಕ್ವಾನ್ನಗಳು ಒಳಿತಾಗಿ ಶೋಭಿಸುತ್ತಿದ್ದವು. ಹೆಚ್ಚಿದ ಸೇಬುಗಳ ತುಂಡು 

ಗಳೂ, ಸುಲಿದ ಕಿತ್ತಳೆಗಳ ಪಳುಕುಗಳೂ, ದ್ರಾಕ್ಷದ ಗೊಂಚಲುಗಳೂ, 

ಮಾಣಿಕದ ಪ್ರಭೆಯನ್ನು ಹೀಯಾಳಿಸುವಂಥ ದಾಳಿಂಬದ ಬೀಜಗಳ 

ಗೋಪುರಗಳೂ ಅನೇಕ ಪ್ರಕಾರದ ಪಾತ್ರೆಗಳಲ್ಲಿ ತುಂಬಿಕೊಂಡಿದ್ದವು. 


ನಾನೂ, ಮಾಧವನೂ, ನಾಯಕರೂ, ಭಾಮಕ್ಕನೂ ಹೀಗೆ ನಾಲ್ಕೂ 

ಜನರು ಉಪಹಾರಕ್ಕೆ ಕುಳಿತೆವು. 


“ ನಾಯಕರ, ನಿಮ್ಮಲ್ಲಿಯ ವ್ಯವಸ್ಥೆ ಚನ್ನಾಗಿದೆ. ಆದರೂ ನಿಮ 

ಗಿನ್ನೂ ಯುರೋಪಿಯನ್ ವ್ಯವಸ್ಥೆಯು ಚನ್ನಾಗಿ ಸಾಧಿಸಿಲ್ಲ. ಪದಾರ್ಥಗಳ 

ನೆಲ್ಲ ಹೀಗೆ ಒಮ್ಮೆಲೇ ತಂದು ಒಟ್ಟತಕ್ಕದ್ದಲ್ಲ. ಬೆಳ್ಳಿ ಬಂಗಾರದ ಪಾತ್ರೆಗಳಿ 

ಗಿಂತ ಚೀನಾ ಭಾಂಡಗಳು ಪ್ರಶಸ್ತವಾದವುಗಳು, ಹೀಗೆ ಇನ್ನೂ ಅನೇಕ 

ಸೂಚನೆಗಳನ್ನು ಮಾಡಬಹುದು ” ಎಂದು ಮಾಧವರಾಯನು ಹೇಳಿದನು. 


" ಸೂಚನೆ ಮಾಡಲಿಕ್ಕೆ ಅಡ್ಡಿ ಇಲ್ಲ ಆದರೂ ಭಾಟವಡೇಕರ, 

ಕರಂದೀಕರ, ಆರೇಕರ, ಗೋಖಲೆ, ಜೋಗಳೇಕರ ಮುಂತಾದ ಪಾಶ್ಚಾತ್ಯ 

ಸುಧಾರಣಾಗ್ರಾಹಿಗಳ ಮನೆಯಲ್ಲಿ ಇಂಥದೇ ವ್ಯವಸ್ಥೆ ಇರುವದು ?” ಎಂದು 

ನಾಯಕರು ಹೇಳಿದರು. 


" ಯಾವದೇ ಮಾತಿನಲ್ಲಿಯಾಗಲಿ, ಪ್ರಗತಿಗೆ ಪ್ರತಿಕೂಲವಾದ ಮಾತು 

ಗಳನ್ನು ತೆಗೆದುಹಾಕುವದೂ ಅದಕ್ಕೆ ಅನುಕೂಲವಾದವುಗಳನ್ನು ಸಂಗ್ರಹಿಸು 

ವದೂ ಸುಧಾರಣೆಯೆಂದೆನಿಸುವದಷ್ಟೇ ? ಈ ನಮ್ಮ ಉಪಹಾರದ ಉಪ 

ಕರಣಗಳಲ್ಲಿ ಸೌಕರ್ಯಕ್ಕೆ ಪ್ರತಿಕೂಲವಾದವುಗಳಾವವು ಹೇಳಬಾರದೆ, ಪಂಡಿ 

ತಜೀ?'' ಎಂದು ನಾನು ಮಾಧವರಾಯನನ್ನು ಕುರಿತು ಪ್ರಶ್ನೆ ಮಾಡಿದನು. 


ಮಾಧವನು ತುಸು ಚಕಿತನಾಗಿ " ಅಣ್ಣಾ, ಸುಧಾರಣೆಯ ಮಾತು 

ಗಳು ಬೇರೆ, ಶಿಷ್ಟಾಚಾರದ ಮಾತುಗಳು ಬೇರೆ. ಬೈಕಫಸ್ಟ (ಉಪಹಾರ), 

ಟೀ (ಚಹ) ಮುಂತಾದ ಮಾತುಗಳಲ್ಲಿ ನಾವು ಯುರೋಪಿಯನ್ ಪದ್ದತಿ 

ಯನ್ನೇ ಅನುಕರಿಸಬೇಕು. ಅವರಲ್ಲಿಯ ಕೆಲವು ಆಚಾರಗಳು ಅಪದ್ಧ ವಾಗಿ 

ಕಂಡರೂ ಶಿಷ್ಟಾಚಾರವೆಂದು ನಾವಾದರೂ ಅವರಂತೆಯೇ ಮಾಡತಕ್ಕದ್ದು ” 

ಎಂದು ಹೇಳಿದನು. 


"ಏನು ? ಯುರೋಪಿಯನ್ನರೇ ಶಿಷ್ಯರು, ಅವರು ಮಾಡುವದೇ 

ಶಿಷ್ಟಾಚಾರವೆ ? ನಾವೇಕೆ ಶಿಷ್ಟರಲ್ಲ ? ನಮ್ಮ ಆಚಾರಗಳೇ ಶಿಷ್ಟಾಚಾರ 

ಎಂದು ಅವರು ಅನುಕರಿಸಲಿ ! ಮಾಧವರಾಯ, ನೀನು ಯುರೋಪಿಯನ್ನರ 

ಪಂಗ್ತಿಗೆ ಹೋದಾಗ ಅವರ ಆಚಾರಗಳಂತೆ ನಡಕೊಳ್ಳು ಬೇಕಾದರೆ " 

ಎಂದು ಭಾಮಕ್ಕನು ನಗುತ್ತ ನುಡಿದಳು. 


"ಯುರೋಪಿಯನ್ನರು ನಮ್ಮ ಮಾಧವರಾಯರನ್ನು ಪಂಗ್ತಿಗೆ ಕರ 

ಕೊಂಡಾಗ ಈ ಮಾತು, ” ಎಂದು ನಾನು ಅಂದೆನು. 


" ಅದಿರಲಿ, ನಾವು ನಮ್ಮ ಚಹಾ 'ಪಾರ್ಟಿ'ಯಲ್ಲಿ ಸುಧಾರಣೆ ಮಾಡು 

ವದು ಅವಶ್ಯವಿರುವದೇನು ಎಂಬುದನ್ನು ವಿಚಾರಿಸುವಾ, ಉತ್ತಮವಾದ 

ಪದಾರ್ಥಗಳನ್ನು ವ್ಯವಸ್ಥಿತವಾಗಿ ಮಂಡಿಸಿ ವಿನೋದದ ಮಾತುಗಳನ್ನಾಡುತ್ತೆ 

ತಿಂದರಾಯಿತು, ಹಣ್ಣು ತಿನ್ನುವವನು ಪೂರ್ವಾಭಿಮುಖನಾಗಿ ತಿನ್ನ 

ಬೇಕೆಂದು ಯುರೋಪಿಯನ್ನು ಹೇಳಿದನೆಂದು ತಿಳಿಯಿರಿ, ಕೇಳುವವ 

ರಾರು ? ” ಎಂದು ಶೇಷಗಿರಿನಾಯಕರು ನುಡಿದರು. ಅಷ್ಟರಲ್ಲಿ ಅಪೂರ್ವ 

ಳಾದ ಸುಂದರಿಯೋರ್ವಳು ಮೆಲ್ಲನೆ ಬಾಗಿಲ ತೆರೆದು " ಅಕ್ಕಾ, ಈ ರಂಗಣ್ಣ 

ನನ್ನು ತುಸು ಕರಕೊಳ್ಳಿರಿ, ತ್ರಾಸ ಕೊಡುತ್ತಾನೆ, ಚಹ ಸೋಸಗೊಡ 

ಲೊಲ್ಲನು” ಎಂದು ರಂಗಣ್ಣನನ್ನು ಕೈಯಲ್ಲಿ ಹಿಡುಕೊಂಡು ಬಂದು ಮರಾಠಿ 

ಭಾಷೆಯಲ್ಲಿ ಬಲು ಮೆಲ್ಲಗೆ ಹೇಳಿದಳು. 


ರಂಗನು ಸ್ಫೂರ್ತಿಯಿಂದ " ಬೇಂಡ್ ಬಾಜೆ ”ಯನ್ನೂದುತ್ತೆ ತನ್ನ 

ತಾಯಿಯ ಬಳಿಯಲ್ಲಿ ಬಂದು ನಿಂತನು. ಆ ಸುಂದರಿಯು ಮತ್ತೆ ಒಳಗೆ 

ಹೋದಳು. 


ಏನು ಸೌಂದರ್ಯವದು ! ಇಂಥ ರೂಪವತಿಯನ್ನು ನಾನು ನೋಡಲೇ 

ಇಲ್ಲ. ಅವಳ ಗೌರವರ್ಣವೂ, ಪ್ರೌಢಿಮೆಯಿಂದ ಮೆರೆಯುವ ಅವಳ ಸುಂದರ 

ವಾದ ಮುಖವೂ, ಮಂಜುಲವಾದ ವಾಣಿಯ ಮನೋವೇಧಕವಾಗಿದ್ದವು. 

ಭೂಯಿಯ " ಪರಭೂ'' ಸುಂದರಿಯರಂತೆ ಅವಳು ತನ್ನ ನೀಲಾಲಕ 

ವನ್ನು ಚನ್ನಾಗಿ ಬಾಚಿ ಚಮತ್ಕಾರವಾಗಿ ಕಾಣುವಂಥ 'ಚುಚಡೆ'ಯನ್ನು 

..ಳು, ಬದನೀ ಬಣ್ಣದ ರೇಸಿಮೆಯು ಜರತಾರಿ ಸೀರೆಯಲು ಅವಳ 

ಪರಮವಾದ ಮೈ ಕಟ್ಟಿಗೆ ಒಳಿತಾಗಿ ಒಪ್ಪುತ್ತಿತ್ತು. ಅವಳ ಮುಂಗೈ 

ಲಿದ್ದ ಅನರ್ಘವಾದ ಹರಡ- ಕಂಕಣ ಗೋಟು ತೋಡೆಗಳಿಗೆ ಅವಳ 

ಪಾದ ಹಸ್ತಗಳೇ ಅಲಂಕಾರವಾಗಿದ್ದವೋ ಆ ಹಸ್ತಗಳಿಗೆ ಆ ಜಡ 

ಗಗಳೇ ಅಲಂಕಾರವೂ ಹೇಳಲಾಗದು. ನಮ್ಮ ನಿರೀಕ್ಷಣಕ್ಕೆ ಈಡಾ 

ದ ಸುಂದರಿಯು ನಿಲ್ಲದೆ ಹೊರಟು ಹೋದದ್ದರಿಂದ ನಾನಾದರೂ 

ವರ್ಣನೆಯನ್ನು ಹೆಚ್ಚಿಗೆ ಮಾಡಲಾರೆನು. 


ಭಾವಕ್ಕಾ ಈ ಪ್ರಾಣಿ ಯಾರು ? ?” ಎಂದು ಮಾಧವರಾಯನು 


ಇವಳೆ ? ” ಎಂದು ಉದ್ಗಾರ ತೆಗೆದು ಭಾವಕ್ಕನು ತನ್ನ ಗಂಡನ 

ಕೈ ಮಾಡಿ "ಇವರ ಸೋದರ ಸೊಸೆಯ?” ಎಂದು ನುಡಿದು ನಕ್ಕಳು. 

..ನಗಲಿಕ್ಕೇನಾಯಿತು ? ” ಎಂದು ನಾಯಕರು ಹೆಂಡತಿಯ ಮೇಲೆ 

ತುಷ್ಟರಾಗಿ ಕೇಳಿದರು. 


ಭಾಮಕ್ಕನು ಗಂಡನ ಕೋಪವನ್ನು ಲೆಕ್ಕಿಸದೆ "ಊರೆಲ್ಲ ನಕ್ಕರೂ 

ನಗಕೂಡದು !” ಎಂದು ನುಡಿದು ಮತ್ತೆ ನಕ್ಕಳು. 


ಚಮತ್ಕಾರವನ್ನು ಅರಿತುಕೊಳ್ಳುವ ಕುತೂಹಲದಿಂದ ನಾನು  

: “ ಭಾಮಾ, ಇವಳು ನಿನ್ನ ಸೊಸೆಯಾದರೆ ನಮ್ಮೊಡನೆ ಚಹ 

ಕೊಳ್ಳಲಿಕ್ಕೆ ಬರಲಿಲ್ಲವೇಕೆ ?" 


ಹೇಗೆ ಬಂದಾಳು ವೆಂಕಣ್ಣಾ ! ದೊಡ್ಡ ಹೆಂಗಸಾಗಿದ್ದಾಳೆ, ಇನ್ನೂ 

ಲಗ್ನಇಲ್ಲ. ಪಾಪ, ನಾಚಿಕೊಂಡು ಒಳಗೇ ಇರುತ್ತಾಳೆ. ಹಡೆದ ತಂದೆ 

ತಾಯಿಗೆ ಊಟ ಹೇಗೆ ಸವಿಯಾಗುವದೊ ಕಾಣೆ | ” ಎಂದು ಭಾಮ 

ಆತನನ್ನು ಓರೆಗಣ್ಣಿನಿಂದ ನೋಡಿ ನಕ್ಕಳು. 


ಅವರ ತಂದೆತಾಯಿಗಳ ಪಾಪ ಪುಣ್ಯ ಅವರ ಸುತ್ತ. ಇಲ್ಲಿಯೇ 

ಸುಮ್ಮನಿದ್ದಾನೆ; ಹೆಂಡತಿಯನ್ನು ಬಿಟ್ಟು ಬಿಟ್ಟಿದ್ದಾನೆ. ನಿನಗೆ ಊಟ 

ಹತ್ತುತ್ತದೇನು ? ” ಎಂದು ನಾಯಕರು ಗಂಭೀರವಾದ ಮುದ್ರೆ 

ಯನ್ನು ತಳೆದು ಕೇಳಿದರು. 

" ಬೇವಿನಕಾಯಿ ತಿಂದರೆ ಕಹಿ ಹತ್ತುತ್ತದೆ. ಸವಿಯೂಟ ಉಂಡು 

ಅನ್ನ ಲಿಯಾ ? ” ಎಂದು ನಾಯಕಠ ಪ್ರೇಯಸಿಯು ನುಡಿದು ಮತ್ತೆ 

ನಕ್ಕಳು.


" ನಾಯಕರ ಗಂಭೀರವಾದ ಮುಖಮುದ್ರೆಯು ಆಡಗಿ ಅಲ್ಲಿ ಮಂದ 

ಹಾಸವು ತೋರಿತು. ಅವರು ತಮ್ಮ ಚಿನ್ನದ ಗಡಿಯಾರವನ್ನು ತೆಗೆದು 

ಓಹೋ, ಏಳುವರೆಯಾಯಿತು” ಎಂದು ಯಂತ್ರದ ಗಂಟೆ ಬಡಿದು ಮೇಲೆ 

ನಾರ್ಣಮ್ಮಾ, ಚಹ ಸಿದ್ದವಾಗಿದೆಯೋ ಇಲ್ಲವೊ ??” ಎಂದು ಅಡಿಗೆಯವ 

ನ್ನು ಕೂಗಿ ಕೇಳಿದರು. 


ಆಗಲಿನ' ವಾಗ್ದಾಣ ಬಡೆದು ತುಸು ಚಿಂತಾಕ್ರಾಂತನಾಗಿದ್ದ ಮಾಧವ 

ರಾಯನು ನಾಯಕರ ಕಡೆಗೆ ಮೋರೆ ತಿರುವಿ ನಾಯಕರೆ, ಯುರೋಪಿ 

ಯನ್ ಪದ್ಧತಿಯಂತೆ ನೀವು ಗಂಟೆ ಬಡಿದಿರಿ, ಸರಿಯಾಯಿತು; ಮೇಲೆ 

ನಾರ್ಣಮ್ಮನನ್ನು ಕೂಗಿದಿರೇಕೆ ? ” ಎಂದು ನುಡಿದು ಖೆಳ್ಳನೆ ನಕ್ಕನು. 


ಶೇಷಗಿರಿನಾಯಕರ ಮುಖದಲ್ಲಿ ಹುಚ್ಚು ಕಳೆ ಇಡುಗಿತು, ಅವರಿಂದ 

ಚಾತುರ್ಯವೇ ಆಗಿತ್ತು. ಅವರಂದದ್ದು : " ಗಂಟೆ ಬಾರಿಸಿದ ಕೂಡಲೆ 

ಬರಬೇಕೆಂದು ನಾವು ನಾರ್ಣಮ್ಮನಿಗೆ ಕಲಿಸದಿದ್ದರೆ ಬಾರಿಸಿದ ಕೂಡಲೆ 

ಅವಳು ಬರುವದು ಹೇಗೆ ? ನಾನು ನಿನ್ನೆ ಯೇ ಈ ಗಂಟೆಯನ್ನು ಈ ಊರಲ್ಲಿ 

ಕೊಂಡೆನು."  ಇದು ಹೊಸ ವಸ್ತು ವಾದ್ದರಿಂದ `ಹೇಗೆ ನುಡಿಯುತ್ತದೆಯೋ 

ನೋಡಿದೆನು, ” 


ಅಷ್ಟರಲ್ಲಿ ಚಹ ಬಂದಿತು. ಎಲ್ಲರು 'ಸಾಸಠ'ಗಳಲ್ಲಿ ಚಹ ಹಾಕಿ ಆರಿಸಿ 

" ಕುಡಿಯಲಾರಂಭಿಸಿದರು. ಮಾಧವರಾಯನು ಚಹವನ್ನಾ 

ದಿಸಿ  " ಚಹ ಮಾತ್ರ ಸರ್ವೋತ್ಕೃಷ್ಟವಾಗಿದೆ” ಎಂದು ಗಟ್ಟಿಯಾಗಿ 

ಹೇಳಿದನು, ಭಾವಕ್ಕನು ಅವನನ್ನು ದಿಟ್ಟಿಸಿ ನೋಡಿದಳು. 

೩- 

ಮರುದಿವಸ ಶೇಷಗಿರಿನಾಯಕರು ನಮ್ಮ ಮನೆಗೆ ಬಂದಾಗ ನಾನು 

ಸೋದರಸೊಸೆಯಂದರೆ ಯಾರ ಮಗಳು ? ಇಷ್ಟು ದಿವಸ ಅವಳು 

ಅವಿವಾಹಿತಳಾಗಿ ಉಳಿದದ್ದು ಹೇಗೆ ? ಅವಳ ವಿದ್ಯಾವ್ಯಾಸಂಗಗಳೇನು ? 

ಮುಂತಾದ ಪ್ರಶ್ನೆಗಳನ್ನು ಮಾಡಿದೆನು. ನಾಯಕರು ಇದ್ದ ಸಂಗತಿಯನ್ನೆಲ್ಲ 

ಸ್ವಲ್ಪದರಲ್ಲಿ ಹೇಳಿದರು. ಮಾಧವರಾಯನು ನನ್ನೆಲ್ಲ ಲಕ್ಷ ಕೊಟ್ಟು ಕೇಳು 

ತ್ತಿದ್ದನು. 


" ಶೇಷಗಿರಿನಾಯಕರ ತಾಯಿಯು ಜೋಗಂಬೆಯ ಜಗೋಪಂತ ಗೆ ಕಾಥ 

ವಟೆಯವರ ಮಗಳು. ದೇಶಸ್ಥರಲ್ಲಿ ಇರುವ ರೂಗನ.ಸರಿಸಿ ತಮ್ಮಣ್ಣ 

ನಾಯಕರು ತಮ್ಮ ಮಗಳನ್ನು ಮತ್ತೆ ಜಗೋಪಂತರ ಮಗನಾದ ಮನೋ 

ಹರಸಂತನಿಗೆ ಕೊಟ್ಟಿದ್ದರು. ಆ ಮನೋಹರಪಂತರ ಮಗಳೇ ನಾವು ಮೇಲೆ 

ವಿವರಿಸಿದ ಅವಿವಾಹಿತಳಾದ ಸುಂದರಿಯು, ಇವಳ ಹೆಸರು ಚಂದ್ರಭಾಗಾ. 

ಜಗೋಪಂತರು ತೀರಿಕೊಂಡ ಬಳಿಕ ಮನೋಹರಪಂತನು ಪುಣೆಯಲ್ಲಿ ಮನೆ 

ಮಾಡಿಕೊಂಡಿದ್ದನು. ಅಲ್ಲಿ ಅವನು ಮಾಧವರಾವ ರಾನಡೆ, ವಿಷ್ಣು ಮೋರೆ 

ಶ್ವರ, ಅಗಸ್ತೀ ಮುಂತಾದ ಸುಧಾರಕಾಗ್ರಣಿಗಳ ಪಟ್ಟದ ಶಿಷ್ಯನಾಗಿದ್ದು , ಆ 

ಮಹಾತ್ಮರ ಪಶ್ಚಾತ್ ಮನೋಹರ ಪಂತನೇ ಪುಣೆಯಲ್ಲಿಯ ಸುಧಾರಕರ 

ಅಗ್ರಗಣಿಯೆಂದು ಎಲ್ಲರೂ ಮಾತಾಡುತ್ತಿದ್ದರು, ಮನೋಹರ ಪಂತನು ತನ್ನ 

ಮಗಳನ್ನು ಪುಣೆಯಲ್ಲಿ ಫೀಮೇಲ ಹುಸ್ಕೂಲಿನಲ್ಲಿ ಅಭ್ಯಾಸಕ್ಕೆ ಇಟ್ಟ 

ದ್ದನು. ಅಲ್ಲಿ ಚಂದ್ರಭಾಗೆಯು ಇ೦ಗ್ಲೀಷ ಕಲಿತದ್ದಲ್ಲದೆ ಗಾನ, ಚಿತ್ರಕಲೆ, 

ಕಸೀದೆ ತೆಗೆಯುವುದು ಮುಂತಾದ ಅಭಿನವ ಕಲೆಗಳಲ್ಲಿಯಾದರೂ ನಿಷ್ಣಾತ 

ಳಾಗಿದ್ದಳು, ತನ್ನ ಮಗಳು ಹದಿನೆಂಟು ವರ್ಷದ ಪ್ರಾಯದವಳಾಗುವವರೆಗೆ 

ಅವಳ ವಿವಾಹವನ್ನು ಮಾಡುವದಿಲ್ಲೆಂದೂ ಅವಳ ಇಚ್ಛೆಗೆ ಬಂದ ವರನಿಗೆ 

ಮಾತ್ರ ಅವಳನ್ನು ಕೊಡುವೆನೆಂದೂ ಮನೋಹರ ಪಂತನು ನಿಶ್ಚಯಿಸಿದ್ದನು. 

ಅವನ ನಿಶ ಯವೇ ಕೊನೆಗಾಣುವ ಹೊತ್ತು ಬಂದಿತು, ಯಾಕಂದರೆ ರಜ 

ಸ್ವಲೆಯಾದ ಚಂದ್ರಭಾಗೆಯನ್ನು ಹಳೆ ಸಾಂಪ್ರದಾಯದವರಂತೂ ಮಾಡಿ 

ಕೊಳ್ಳುವ ಮಾತೇ ದೂರಾಗಿ ಹೋಗಿತ್ತು. ಇನ್ನು ಸುಧಾರಕರ ಚಿಕ್ಕ ಮೇಳೆ 

ಯಲ್ಲಿ ಚಂದ್ರಭಾಗೆಗೆ ಅನುರೂಪನಾದ ಪತಿಯು ದೊರಕುವನೋ ಇಲ್ಲವೋ 

ಎಂಬ ಶಂಕೆಯಿತ್ತು. 


ಅಕ್ಕನ ಮೇಲೆ ಭಕ್ತಿ ಹೆಚ್ಚಾಗಿ ಮಾಧವನು ದಿನಾಲು ಶೇಷಗಿರಿನಾಯ 

ಕರ ಮನೆಗೆ ಎಡತಾಕಲಾರಂಭಿಸಿದನು. “ಹಸಿವೆಯಾಗಿದೆ, ಅಕ್ಕಾ ಏನಾದರೂ 

ತಿನ್ನಲಿಕ್ಕೆ” ಕೊಡು ಎಂದು ನೆವಮಾಡಿಕೊಂಡು ಒಮ್ಮೆ ಹೋಗುವನು. 

ಮರೆತು ಬಂದ ಬಡಿಗೆಯನ್ನು ತರಲಿಕ್ಕೆ ಮತ್ತೊಮ್ಮೆ ಹೋಗುವನು. ಲಾಲ 

ಬಾಗಕ್ಕೆ ಬರುವಿರೇನೆಂದು ಶೇಷಗಿರಿನಾಯಕರನ್ನು ಕರೆಯಲಿಕ್ಕೆ ಒಂದಾವರ್ತಿ 

ಹೋಗುವನು. ಹೀಗೆ ಸಕಾರಣ ನಿಷ್ಕಾರಣವಾಗಿ ಮಾಧವನು ನಾಯಕರ 

ಮನೆಗೆ ನಿತ್ಯದಲ್ಲಿಯೂ ಹೋಗಿ ಬರುತ್ತಿದ್ದನು. 


ಭಾವಕ್ಕನ ಮನೆಯಲ್ಲಿಯ ರುಚಿಕರವಾದ ಮಾವಿನಹಣ್ಣಿನ ಒಡೆ 

ಗಳನ್ನು ಯಾರು ಮಾಡಿದರೆಂದು ಮಾಧವನು ಕೇಳಿದರೆ ಅವುಗಳನ್ನು 

ಚಂದ್ರಭಾಗೆಯೇ ಮಾಡಿದಳೆಂಬ ಉತ್ತರ ಬಂದಿತು, ರಂಗಣ್ಣ ನ ತಲೆಯ 

ಮೇಲಿನ ಅಂದವಾದ ಟೊಪ್ಪಿಗೆಯನ್ನು ಹೆಣೆದವಳು ಚಂದಭಾಗೆಯೇ. ಆ 

ಹುಡುಗನಿಗೆ ಮನೆಯಲ್ಲಿ ಕಲಿಸುವವಳು ಅವಳೇ. ಒಳಗಿನ ಮನೆಯಲ್ಲಿ ಕುಳಿತು 

ಮೆಲ್ಲಗೆ ಬಹು ಮಂಜುಲನಾಗಿ ಚಂದ್ರಭಾಗೆಯು ಹಾಡುತ್ತಿದ್ದರೆ ಅವಳು 

ತಾಲಮಟ್ಟುಗಳನ್ನು ಬಿಟ್ಟಿರಲಿಲ್ಲ. ಪುಣೆಯಲ್ಲಿ ಇಂಗ್ಲಿಷ್ ಕಲಿತವಳಾಗಿದ್ದರೂ 

ಅವಳು ಅವಿನೀತೆಯಾಗಿ ಇದ್ದಿಲ್ಲ. ಒಂದು ದಿನ ಸತ್ಯಭಾಮೆಯು ಮೈ 

ತೊಳೆದುಕೊಳ್ಳಲಿಕ್ಕೆ ಬಚ್ಚಲಕ್ಕೆ ಹೋದದ್ದು ಮಾಧವನಿಗೆ ಗೊತ್ತಿದ್ದರೂ 

ಅವನು ಮೆಲ್ಲನೆ ಚಂದ್ರಭಾಗೆಯ ಸವಿಾಪಕ್ಕೆ ಬಂದು “ ಭಾಮಕ್ಕನೆಲ್ಲಿ ? " 

ಎಂದು ಕೇಳಿದಾಗ ಆ ಲಲನೆಯು ಪರಿವೃತ್ತಾರ್ದಮುಖಿಯಾಗಿ ಎಳೆನಗೆ 

ತೋರುತ್ತ “ ಮೈ ತೊಳೆಯುತ್ತಿರುವರು ” ಎಂದು ಬಹು ಮಂಜುಲವಾಗಿ 

ಹೇಳಿದಳು. “ ನಾನು ವರನು ನೀನು ಕನ್ನೆ ಏನು ಅನಹಿತಾ? ?” ಎಂದು 

ಮನಸ್ಸಿನಲ್ಲಿಯೇ ಯೋಚಿಸುತ್ತ ಅವನು ಹೊರಟುಹೋದನು. 


ಮಾಧವನಿಗೆ ಚಂದ್ರಭಾಗೆಯ ಹುಚ್ಚೇ ಹಿಡಿಯಿತು. ಕನಸುಮನಸಿ 

ನಲ್ಲಿ ಕೂಡಿಯೇ ಚಂದ್ರಭಾಗೆಯ ಹೊರತಾಗಿ ಇನ್ನೊಂದು ವಿಷಯವೇ ಇಲ್ಲ. 

ಕಡೆಗವನು ಒಂದು ದಿನ ಗಟ್ಟಿ ಧೈರ್ಯಮಾಡಿ ಅಕ್ಕನ ಬಳಿಗೆ ಬಂದು 

"ಅಕ್ಕಾ, ನಿನೊ ಡನೆ ಒಂದು ಆಲೋಚನೆ ಮಾಡಬೇಕಾಗಿದೆ" ಎಂದಂದನು. 


“ಏನದು?” ಎಂದು ಸತ್ಯಭಾಮೆಯು ಮುಗುಳುನಗೆ ನಗುತ್ತ ಕೇಳಿದಳು. 

ಅವಳಿಗೆ ಮಾಧವನ ಮನಸ್ಸಿನೊಳಗಿನ ಮಾತು ತಿಳಿದೇ ಹೋಗಿತ್ತು. 


" ಹೇಳೆಂದರೆ ಹೇಳುತ್ತೇನೆ” ಎಂದು ಮಾಧವನು ಲಜ್ಞಾಗ್ರಸ್ತನಾಗಿ 

ನುಡಿದನು. 


( ಹೇಳು, ನನ್ನ ಮುಂದೆ ಯಾತರ ಸಂಕೋಚ ?" 

 

“ ನಾನು ಎರಡನೆಯ ಲಗ್ನ ಮಾಡಿಕೊಳ್ಳುವದಂತೂ ನಿಶ್ಚಯವೇ 

ಈ ಚಂದ್ರಭಾಗೆಯನ್ನು ನನಗೇಕೆ ಕೊಡಿಸಬಾರದು ?" 


ಈ ಮಾತು ಕೇಳಿ ಸತ್ಯಭಾಮೆಯು ಚಕಿತಳಾಗಿ 'ಹುಚ್ಚನೇನು ನೀನು 

ಮಾಧವರಾಯಾ ? ಆ ಹುಡುಗೆ ಮೈನೆರೆದು ಮೂರು ವರ್ಷಗಳಾಗಿವೆ 

oತೆ, ಹಿರಿಯರು ಕೇಳಿದರೆ ನನ್ನ ನಿನ್ನ ಕೂಡಿಯೇ ಬಡಿದಾರು | ” 

ಎಂದು ಅಧಿಕ್ಷೇಪಿಸಿ ನುಡಿದಳು, - 


" ಹೀಗೆಯೇ ನಾನು ಸನ್ಯಾಸಿಯಂತೆ ಇರಬೇಕ೦ಬದು ನಿನ್ನ 

ಮನಸ್ಸೆ ? ” 

 

“ ಯಾಕೆ ? ನಿನ್ನ ಹೆಂಡತಿಯನ್ನು ಕರಸಿಕೊ; ಸುಖದಿಂದ ಇರು. 

ಅವಳೇನು ಕುರುಡೆಯೇ ? ಕುಂಟಿಯೇ ? ಏನಾಗಿದೆ ? ಕಲಿತು ಪಂಡಿತ 

ನಾಗಿರುವೆನೆಂದು ಹೇಳುತ್ತೀ. " 

 

"ಭಾಮಕ್ಕಾ, ನಿನಗಿಂತ ನನಗೆ ಚೆನ್ನಾಗಿ ತಿಳಿಯುತ್ತದೆ. ನಾನು ನಿನ್ನ 

ಉಪದೇಶ ಕೇಳಲಿಲ್ಲ. ಚಂದ್ರೆಯನ್ನು ಕೊಡಿಸುವಿಯೋ ಇಲ್ಲವೋ ನನಗೆ 

ಹೇಳಿಬಿಡು." 


" ಕೊಡಿಸುವದು ದೊಡ್ಡ ಮಾತಲ್ಲ ಮಾಧವಾ, ನಿನ್ನ೦ಥವನಿಗೆ ಮಾಲೆ 

ಹಾಕದೆ ಅವಳು ಮುತ್ತಿನಾರಿಗೆ ಹಾಕುವಳು? ಆದರೆ ಮೈನೆರೆದ ಹುಡುಯನ್ನು 

ನೀನು ಮದುವೆಯಾದರೆ ಜನರು ನಮ್ಮನ್ನು ಎತ್ತಿ ಇಟ್ಟಾ ರು; ಕಾಣದೆ ?” 


( ಏನು ಹೇಳುತ್ತಿ ಬಿಡು, ದುಷ್ಯಂತ, ನಳರಾಜ, ಪರಾಶರ, ಅರ್ಜುನ 

ಮುಂತಾದ ಮಹಾತ್ಮರು ಮೈನೆರೆದವರನ್ನೇ ಮದುವೆಯಾಗಲಿಲ್ಲೆ ?” 


" ವ್ಯಾಖ್ಯಾನ ಕಡುವಿರೇನು ಎಮ್, ಎ, ಪಂಡಿತರೆ ? ಕೊಡುವ 

ದಾದರೆ ಚನ್ನಾಗಿ ಎದ್ದು ನಿಂತು ' ಮಹಿಳೆಯರೆ, ಸಭ್ಯಗೃಹಸ್ಥರೆ, ' ಎಂದು 

ಉಪಕ್ರಮಿಸಿ ಗಳಿಗೆ ಎರಡುಗಳಿಗೆ ವ್ಯಾಖ್ಯಾನ ಕೊಡು, ನಿನ್ನ ಪರೀಕ್ಷೆಯಾಗಿ, 

ಹೋಗಲಿ, ” 


ಅಂತಃಕರಣದ ಅಕ್ಕನೆಂದು ನಿನ್ನ ಮುಂದೆ ಹೊಟ್ಟೆ ತೋಡಿಕೊಂಡರೆ 

ಭಾಮಕ್ಕಾ, ನೀನು ನಗೆಯಾಡುವಿಯಾ ?” ಎಂದು ಮಾಧವನು ಹೀನಸತ್ಯ .

ನಾಗಿ ನುಡಿದನು. 


" ಅಪ್ಪಾ, ಈ ಮಾತಿನಲ್ಲಿ ನನಗೇನೂ ತಿಳಿಯದು, ಅವರಿ 

(ಅವರೆಂದರೆ ಗಂಡ), ಬೇಕಾದಂಥ ಕರ್ತಾಪುರುಷನಾದ ನಿಮ್ಮಣ್ಣನಿದ್ದಾನೆ. 

ನೀನಾದರೂ ದೊಡ್ಡ ಪರೀಕ್ಷೆ ಕೊಟ್ಟವನು. ಮೂರೂಮ೦ದಿ ಕಲೆತು ಬೇಕ... 

ಮಾಡಿರಿ. ಕೊಡಿಸೆಂದರೆ ಕನ್ಯಾ ಕೊಡಿಸಲಿಕ್ಕೆ ನಾನು ಸಿದ್ದಳು. ” 


ಸಾಯಂಕಾಲಕ್ಕೆ ನಾನೂ ಮಾಧವರಾಯನೂ ಶೇಷಗಿರಿನಾಯಕರು  

ಕಲೆತು ಬಹಳೊತ್ತು ವಿಚಾರಮಾಡಿದೆವು. ಮಾಧವರಾಯನೆಷ್ಟು ಮಾಡಿದರೂ 

ತನ್ನ ಹಟ ಬಿಡಲಿಲ್ಲ. ಆಗ ನಾಯಕರು ಅಂದದ್ದು : ( ನೋಡಿರಿ ಮಾಧವ 

ರಾಯರೆ, ನಿಮ್ಮ ಹಿರಿಯರನ್ನು ಹೇಗಾದರೂ ಮಾಡಿ ಒಡಂಬಡಿಸುವ.  

ಆದರೆ ಚಂದ್ರಭಾಗೆಯನ್ನು ನೀವು ಚನ್ನಾಗಿ ಇಟ್ಟು ಕೊಂಡು ಸಂಸಾರ 

ಮಾಡುವದು ನಿಶ್ಚಯವೇ? ಏನು ಮೂರನೆಯದೊಂದು ಹೆಣ್ಣು ಗಂಟುಹಾಕಿ  

ರೆಂದು ಹೇಳುವಿರೋ ?” 


"ನಾನು ಕೇವಲ ಮರ್ಖನೆಂದು ನೀವು ತಿಳಿದು ಹೀಗೆ ಮಾತಾಡುವಿ 

ರೇನು ನಾಯಕರೇ ? "


" ಕನ್ಯಾ ಮನಸ್ಸಿಗೆ ಬಂದಿರುವದೇನು ? ” 


(( ಚಂದ್ರಭಾಗೆಯಂಥ ಸುಂದರಿಯು ಮನಸ್ಸಿಗೆ ಬಂದಳೇನೆಂದು " ಕೇಳ 

ಬೇಕ ? ಅವಳಲ್ಲಿ ತೆಗೆಯುವಂಥದೇನೂ ಇಲ್ಲ, ತೊಳೆದ ಮುತ್ತು! ” ಎಂದು 

ಮಾಧವನು ಮೋರೆ ಹಿಗ್ಗಿಸಿ ಹೇಳಿದನು. 


"ಇದಕ್ಕೂ ಇನ್ನೇನು ಹೇಳಬೇಕು ನಾಯಕರೆ ? 'ನಿಮಗೆ ಸಮಾ 

ಧಾನವಾಯಿತಷ್ಟೆ ? ” ಎಂದು ನಾನು ಕೇಳಿದೆನು. 


" ವೆಂಕಟರಾಯರೆ, ನೀವು ಕನ್ನೆ ಯನ್ನು ಚನ್ನಾಗಿ ನೋಡಿರುವಿ 

ರಷ್ಟೆ ? ” ಎಂದು ನಾಯಕರು ನನ್ನನ್ನು ಕೇಳಿದರು. - 


" ನೋಡಿದಂತಾಗಿದೆ. ಮುಖ್ಯ ಮಾಧವನ ಮನಸ್ಸಿಗೆ ಬಂದಮೇಲೆ 

ಆಗಿ ಹೋಯಿತು. ಆದರೂ ಕರಿಸಿರಿ, ಇನ್ನೂ ಮೈ ನೋಡೋಣ.” 


"ಯಾರು !  ಗುಂಡಕನನ್ನು ಹೀಗೆ ಕರೆದುಕೊಂಡು ಬರಬಾರದೆ ! 

ಎಂದು ನಾಯಕರು ತಮ್ಮ ಹೆಂಡತಿಗೆ ಹೇಳಿದರು. 


ಗುಂಡಕ್ಕನೆಂಬ ಹೆಸರು ಕೇಳಿದಾಕ್ಷಣವೇ ನಾನು ಚಕಿತನಾದೆನು. 

ಮಾಧವನ ಮೋತಿಯಂತೂ ಹುಚ್ಚಿಟ್ಟಿತು. (( ಗುಂಡಕ್ಕನಾರು ??” ಎಂದು  

ನಾನು ಕೇಳಿದೆನು. 


"ಮತ್ತಾವ ಗುಂಡಕ್ಕ? ನಿಮ್ಮ ಅನುಜರ ಪ್ರೀತಿಯ ಹೆಂಡತಿಯ - 

ಅವಳು, ಈಗ ವಿನೋದಕ್ಕಾಗಿ ಚಂದ್ರಭಾಗಾ ಎಂಬ ಹೆಸರಿಟ್ಟುಕೊಂಡಿ 

ದ್ದಾಳೆ,” ಎಂದು ನಾಯಕರು ಗಹಗಹಿಸಿ ನಗುತ್ತ ನುಡಿದರು. 


ಭಾವಕ್ಕನು ಗುಂಡಕ್ಕನನ್ನು ( ನಮ್ಮ ಮನೆಯ ಹೆಸರು ಲಲಿತಾ ) 

ಕರಕೊಂಡು ಬಂದು ನಮ್ಮೆಲ್ಲರಿಗೂ ನಮಸ್ಕಾರ ಮಾಡ ಹೇಳಿದಳು. 


ಆ ದಿವಸ ನಮಗೆಲ್ಲರಿಗೂ ಮಿತಿಮೀರಿದ ಆನಂದವಾಯಿತು. ಹಿರಿಯರ 

ಎದೆಯ ಮೇಲಿದ್ದ ದೊಡ್ಡ ಕಲ್ಲು ಇಳಿದಂತಾಗಿ ಅವರು ಸವ: ಧಾನದ ಉಸು 

ರ್ಗರೆದರು, ಬೆಂಗಳೂರಲ್ಲಿಯೇ ಫಲಶೋಭನದ ಪ್ರಸ್ಯ ವಗತಕ್ಕದ್ದು, 

ಸುಬ್ಬರಾಯರಿಗೆ ತಾರು ಕಳಿಸಿದ್ದೇವೆ. ಮುಹೂರ್ತವು ಅನಾಯಸವಾಗಿ 

ನಾಳಿನ ಇ೦ಗ್ರಜೀ -' ನ್ಯೂ ಇಯರ್ಸ ಡೇ ' ದ ದಿವಸ ಹೊಇರಟದೆ. 

ಸಂಪಾದಕರೆ, ಈ ಮಹೋತ್ಸವದ ದಿವಸವೇ ನೀವಾದರೂ ನಿಮ್ಮ ಡಿಸೆಂಬ 

ರದ ಸಂಚಿಕೆಯನ್ನು ಹೊರಡಿಸಿದರೆ ಬಹಳ ಒಳ್ಳೇದಾಗುವದು. 

========================================

ಬೆಳ್ಳಿ ಚಿಕ್ಕೆ 

( ಪತ್ತೇದಾರಿ ಕಥೆಗಳು ) 

೧ ಅಪರಾಧಿಗಳ ಶೋಧಕನು 

ಮರಣೋನ್ಮುಖನಾದದ್ದು 

೨ ವಿಸ್ಮಯ ಜನಕವಾದ 

ಹಿಂಸೆಯ ಕ್ರಮವು 

೩ ಬೆಳ್ಳಿ ಚಿಕ್ಕೆ 

============================================ 

ಅಪರಾದಿಗಳ ಸಂಶೋಧಕನು  

ಮರಣೋನ್ಮುಖನಾದದ್ದು 


ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ 

ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ 

ಸ್ವಾಮಿನಿಯಾದ ಲೀಲಾಚಾಯಿಯು ದೂರಿಕೊಳ್ಳುತ್ತಿದ್ದಳು. ಕಟ್ಟಿ ಮೋರೆ 

ಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿ 

ಲ್ಲದೆ ನನ್ನ ಮನೆಗೆ ಬರುತ್ತಿರುವದು ಎಂದು ತಪ್ಪುವದು ದೇವರೆ ? ” ಎಂದು 

ಅವಳು ಉದ್ದಾರ ತೆಗೆಯುವಳು. ಸರಲಾಕ್ಷನಾದರೇನು, ಹೊತ್ತಿಲ್ಲದ ಹೊತ್ತಿ 

ನಲ್ಲಿ ಕಂಡಕಂಡದ್ದು ಬೇಡುವನು. ಮನಸ್ಸಿಗೆ ತಿಳಿದದ್ದು ಮಾಡುವನು. 

ಸರಿರಾತ್ರಿಯಲ್ಲಿ ಅವನಿಗೆ ರಾಗಗಳೇಳುತ್ತಿದ್ದವು. ಊಟದ ಹೊತ್ತಿನಲ್ಲಿ 

ಗುರುಗುರು ನಿದ್ದೆ , ಅಡಿಗೆಯ ಮನೆಯಲ್ಲಿ ನಿಂತು ಅವನು ತುಬಾಕಿಯನ್ನು 

ಹಾರಿಸಿ ಗುರಿಹೊಡೆಯುವ ಸಾಧಕವನ್ನು ಮಾಡುವನು. ಒಮ್ಮೊಮ್ಮೆ ಮನ 

ತುಂಬ ಇಡುಗುವಂಥ ದುರ್ಗ೦ಧಮಯವಾದ ರಸಾಯನ ಕ್ರಿಯೆಗಳನ್ನು 

ನಡಿಸುವನು, ಮನೆಬಿಟ್ಟು ಬೇರೊಂದು ಮನೆ ನೋಡಿಕೊಳ್ಳೆಂದು ಹೇಳು 

ವಳೇ ? ಸರಲಾಕ್ಷ ನಂಥ ಕೊಡಗಯ್ಯನನ್ನು ಕಾಣುವದು ದುರ್ಲಭ. 

ವರ್ಷದ ಡೆಕ್ಕವನ್ನು ತಿಂಗಳೊಂದಕ್ಕೆ ಕೊಡುವನು. ರಾಯರೆ, ನಿಮ್ಮ 

ಗಡಿಯಾರ ಚನ್ನಾಗಿದೆ ಎಂದು ಅವಳು ಹೇಳುವಷ್ಟರಲ್ಲಿಯೇ ಅವನು ಅವಳಿಗೆ 

ಆ ಗಡಿಯಾರದ ದಾನ ಮಾಡಿದನೇ ! 


ಸರಲಾಕ್ಷನ ಔದಾರ್ಯಕ್ಕೆ ಮೆಚ್ಚಿಯೂ ಅವನ ಮಿತಭಾಷಣಕ್ಕೆ 

ಹೆದರಿಯ ಆ ವಸತಿಗೃಹದ ಸ್ವಾಮಿನಿಯು ಅವನ ಹೆಸರೇ ತೆಗೆಯುತ್ತಿ 

ದ್ದಿಲ್ಲ. ಅವನು ಏನನ್ನಾದರೂ ಕೆಡಿಸಿದರೂ ಚಂತೆಯಿಲ್ಲ, ಚಲ್ಲಿ ಉಕ್ಕಿ 

ದರೂ ಚಿಂತೆಯಿಲ್ಲ, ಅವಳು ಬಾಯಿಬಿಚ್ಚಿ ಮಾತಾಡುತ್ತಿದ್ದಿಲ್ಲ. ಆದರೂ 

ಅವಳಿಗೆ ಅವನಲ್ಲಿ ಭಕ್ತಿ ಮಮತೆಗಳು ಹೆಚ್ಚು, ಮಿತಭಾಷಿಯಾಗಿದ್ದರೂ 

ಅವನು ಮೃದುಭಾಷಿಯಂ, ಉಪ್ಪು ಸಪ್ಪಗೆಂದು ಅವನು ಅಡಿಗೆಗೆ ಒಮ್ಮೆ 

ಯಾದರೂ ಹೆಸರಿಟ್ಟವನಲ್ಲ. ಅಂಥವನಿಂದ ತನಗೆ ತೊಂದರೆಯಾಯಿತಂದ 

ಹೇಳಲು ಲೀಲಾಬಾಯಿಗೆ ಧೈರ್ಯವಾದರೂ ಬರುವದು ಹೇಗೆ ? 


ಒಂದು ದಿವಸ ಅವಳು ನನ್ನ ಮನೆಗೆ ಬಂದು ಅಂದದ್ದು : " .. 

ವಾತಾತ್ಮಜರೆ, ಎಂಥ ಗಿರಾಕಿಯನ್ನು ತಂದು ಹಾಕಿದಿರಿ ನನ್ನ ಮನೆಗೆ 

ಸರಲಾಕ್ಷನೊಡನೆ ನಿತ್ಯ ತಲೆಯೊಡಕೊಂಡು ಗೋಳಾಡಿಹೊದೆನು, ” 


("ಏನಾಯಿತಮ್ಮ ಪೀಡೆ ನಿನಗೆ ? ” 


"ನನಗೆ ಏನೂ ಆಗಿಲ್ಲ. - ಅವನಂಥ ದಾನಶೂರನು ಎಷ್ಟು ... 

ಮಾಡಿದರೂ ಸಹಿಸಬಹುದು. ಆದರೆ ಈಗ ಮೂರು ದಿವಸ ಅವನು ಹಾಸಿಗೆ 

ಹಿಡಿದು ಮಲಗಿಕೊಂಡವನು ತುತ್ತು ಕೂಳು ತಿಂದಿಲ್ಲ. ಬಾಯಿಯಲ್ಲಿ ನಿರೂ 

ಹಾಕಿಲ್ಲ. ಈ ದಿನ ಮುಂಜಾವಿನಿಂದಂತೂ ಅವನ ಲಕ್ಷಣವೇ ಚನ್ನಾಗಿ 

ತೋರುವದಿಲ್ಲ. ಈಗ ಸಾಯುವನೋ, ಈ ಗಳಿಗೆಗೆ ಸಾಯುವನೋ ಹೇಳ 

ಲಾಗದು. ಮಾತಿಗೊಮ್ಮೆ ತೇಕುತ್ತಾನೆ. ಮೋರೆ ಎಣ್ಣೆ ಸ್ಥೆ ಬಸಿಯುತ್ತಾ 

ಬರಿಗಣ್ಣಿನಿಂದ ನೋಡಿದನೆಂದರೆ ಅಂಜಿಕ ಸಾವು ಬರುತ್ತದೆ.” 


ct ಲೀಲಾಬಾಯಿ, ನೀವಾದರೂ ವೈದ್ಯರನ್ನು ಕರಿಸಿ ತೋರಿಸಬಾರ 

ದಿತ್ತೆ ? ” ಎಂದು ವ್ಯಧಿತನಾಗಿ ನಾನು ಅಂಗಿ ರುಮಾಲುಗಳನ್ನು ಲಗುಬಗೆ 

ಯಿಂದ ಹಾಕಿಕೊಳ್ಳುತ್ತೆ ಕೇಳಿದೆನು. 


" ಹಟಮಾರಿಯವನು, ವೈದ್ಯರನ್ನು ಕರೆಯುವೆನೆಂದರೆ ಅವನು .. 

ಚ್ಛಿನ್ನ ಬೇಡವೆಂದು ಹೇಳುವನು. ಅವನ ಮಾತು ಮಾರಿ ವೈದ್ಯರನ್ನು ಕರೆ 

ಯಲು ನನಗೆ ಧೈರ್ಯವಾಗಿದ್ದಿಲ್ಲ. ಇಂದಿನ ಅವ್ಯವಸ್ಥೆಯನ್ನು ನೋಡಿ  

ನಾನು ವೈದ್ಯನನ್ನು ಕರೆದೇ ಬಿಡುವೆನು; ನಿನ್ನ ಮಾತು ಕೇಳುವದಿಲ್ಲವೆಂದು 

ನಿಷ್ಟುರವಾಗಿ ನಾನು ಅವನಿಗೆ ಹೇಳಿದಾಗ ಅವನು ನಿಮ್ಮನ್ನು ವಾತಾತ್ಮಜ 

ರನ್ನು ಕರೆಯೆಂದು ಹೇಳಿದನು ?” ಎಂದು ಲೀಲಾಬಾಯಿಯು ಚಿಂತಾಕುಂತ 

ಳಾಗಿ ಹೇಳಿದಳು. 


" ಏನು ಬೇನೆ ? ನಿಮಗೆ ತಿಳಿದಿರುವದೋ ? " 


"ಏನು ಮಣ್ಣೋ! ಅಪರಾಧಿಯೋರ್ವನ ಶೋಧಕ್ಕಾಗಿ ಬಳೆಗಾರ 

ಪೇಟೆಯಲ್ಲಿರುವ ಕೆಟ್ಟದೊಂದು ಓಣಿಯಲ್ಲಿ ಅಡ್ಡಾಡಿ ಬಂದ ನೆವಕ್ಕಾಗಿ ಅವನಿ 

ಗಿಂಥ ಕೆಟ್ಟ ಬೇನೆಯು ಅಡರಿತೆಂದು ನಾನು ನಂಬುತ್ತೇನೆ. ಬುಧವಾರ 

ಮಲಗಿದ್ದಾನೆ. ಬುಧವಾರ, ಗುರುವಾರ, ಶುಕ್ರವಾರ ಇಂದಿಗೆ ಮೂರು ದಿವಸ 

ಗಳಾದವು, ಅನ್ನೋದಕದ ಸ್ಪರ್ಶವಿಲ್ಲ. "


" ಮುಂದೆ ಗತಿಯೇನಾ ? " 


ದೇವರೇ ಗತಿ! ಇಂದಿನ ದಿನವನ್ನು ಅನನು ಕಳೆಯುವನೋ 

ಇಲ್ಲವೋ ಅನ್ನುವಂತಾಗಿದೆ. ವೈದ್ಯರೇ ಇದ್ದೀರಲ್ಲ. ನೋಡಬನ್ನಿರಿ , ” 


ಲಗುಬಗೆಯಿಂದ ನಾನು ಲೀಲಾಬಾಯಿಯ ಮನೆಗೆ ಹೋದನು ಸರ 

ಲಾಕ್ಷನು ಮಲಗಿರುವ ಕೋಣೆಯನ್ನು ಅವಳು ತೆಗೆದ ಕೂಡಲೆ. ಅವನ 

ಶೋಚನೀಯವಾದ ಸ್ಥಿತಿಯನ್ನು ಕಂಡು ನಾನು ಅತಿಶಯವಾಗಿ ವ್ಯಥಿತ 

ನಾದೆನು, ಅವನ ಮೊರೆಯು ಒಣಗಿ ಸಂಡಿಗೆಯಾಗಿತ್ತು. ಕಣ್ಣು ಒಳ 

ನಟ್ಟು ಹೋಗಿದ್ದವು. ತುಟಿಗೆಲ್ಲ ಮುಸರಿ ಬಡಿದಂತಾಗಿತ್ತು. ಧ್ವನಿಯು 

ಬೇನೆಯ ಬೆಕ್ಕಿಗಿಂತಲೂ ಕ್ಷೀಣವಾಗಿತ್ತು. ಅಂಗಾತವಾಗಿ ಮಲಗಿದವನು 

ಅಹುದೋ ಅಲ್ಲವೋ ಎಂಬಷ್ಟು ಮೋರೆ ತಿರಿವಿ ಸರಲಾಕ್ಷವು ನನ್ನನ್ನು ಬಿರಿ 

ಗಣ್ಣಿನಿಂದ ನೋಡಿದನು. 


"ಸರಲಾಕ್ಷರಾಯರೆ, ಏನು ನಿಮ್ಮವಸ್ತೆ ? '' ಎಂದು ನಾನು ದುಃಖಿತ 

ನಾಗಿ ಕೇಳಿದನು. 


"ವಾತಾತ್ಮಜ ವೈದ್ಯರೇನು ? ದರ್ಶನವು ಅಪರೂಪವಾಯಿತು ! " 

ಎಂದು ಅವನು ತಳಮನೆಯಲ್ಲಿ ಬಿದ್ದ ವನ ಧ್ವನಿಯಿಂದ ಬಹು ಪ್ರಯಾಸ 

ದೊಂದಿಗೆ ನುಡಿದನು. 


" ಏನಾಗಿದೆ ನಿಮಗೆ ?” ಎಂದು ಕೇಳ ಕೇಳು. ನಾನು ಸರಲಾಕ್ಷನ 

ಮೈ ಹಿಡಿದು ನೋಡಬೇಕೆಂದು ಅವನ ಹಾಸಿಗೆಯ ಬಳಿಗೆ ನಡೆದೆನು. 

 

"ಹಾಂ! ತಡೆಯಿರಿ ವೈದ್ಯರೆ, ಒಂದು ಹೆಜ್ಜೆ ಯನ್ನು ನೀವು ಮುಂದಕ್ಕೆ 

ಇಟ್ಟರೆ ಸರಿ ಬೀಳಲಿಕ್ಕಿಲ್ಲ ! ” ಎಂದು ಅವನು ಬೇನೆಯ ಬೆಕ್ಕಿನಂತೆ ಚೀರಿ 

ಒಸಕ್ಕನೆ ಹರುಕೊಳ್ಳಲಿಕ್ಕೆ ಬಂದಂತೆ ಮಾಡಿ ನುಡಿದನು. " 


" ಹೀಗೇಕೆ, ಹೀಗೇಕೆ ರಾಯರೆ ? ನನ್ನ ಗುರುಶವಾದರೂ ಹತ್ತಿತೋ 

ಇಲ್ಲವೊ ? ” ಎಂದು ನಾನು ಚಕಿತನಾಗಿ ಕೇಳಿದೆನು. 


" ಏಕೆ ! ನನ್ನ ಇಚ್ಛೆ; ಜೋಕೆ !” 


" ಹಾಗಂದರೇನು ? ನಿಮ್ಮ ಪ್ರಕೃತಿಯನ್ನು ನೋಡಬೇಡವೆ ? " 


" ವಾತಾತ್ಮಜ, ನನ್ನ ಮಾತು ಕೇಳಿ ನೀವು ಹಾಗೆ ದೂರ ನಿಂತು 

ಕೊಂಡರೆ ನನ್ನ ಮೇಲೆ ನೀವು ದೊಡ್ಡ ಕೃಪೆ ಮಾಡಿದರೆಂದು ತಿಳಿಯುವೆನು.” 


“ ನಾಡಿಯನ್ನಾ ದರೂ ಹಿಡಿದು ನೋಡೋಣ. " 

 

" ಸುಮ್ಮನೆ ಇರಿರಿ ವೈದ್ಯರೆ, ಸಾಯಬೇಕೆನ್ನು ನಿರೇನು ? " ಎಂದು 

ಸರಲಾಕ್ಷನು ನೆರಳುತ್ತಲೂ ಉಸುರು ಬಡುಕೊಳ್ಳುತ್ತಲೂ ಬಲು ಕಷ್ಟದಿಂದ 

ನುಡಿದನು. 


" ಯಾಕೆ? ನನಗೇನಾಗಬೇಕಾಗಿದೆ?” ಎಂದು ನಾನು ಕೇಳಿದೆನು. 


“ವಾತಾತ್ಮಜ, ನನಗೆ 'ಕೂಲಿಯ ರೋಗ' ಎ೦ಬ ಪ್ರಾಣಘಾತಕವಾದ 

ಜ್ವರ ಬಂದಿದೆ. ಬಲು ಕೆಟ್ಟ ಬೇನೆ ! ನನ್ನ ಮೈ ಮುಟ್ಟಿದ ಕೂಡಲೆ ಈ 

ಜ್ವರವು ನಿಮಗೆ ಅಂಟಿಕೊಳ್ಳದೆ ಬಿಡದು. ಜ್ವರ ಬಂದ ಮೇಲೆ ಮನುಷ್ಯನ 

ಮೂರು ದಿವಸ ಕೂಡ ಬದುಕಲಾರನು. " 


" ಸರಲಾಕ್ಷರಾಯರೆ, ಇಂಥ ಮಾತುಗಳನ್ನು ನೀವು ನನಗೆ ಕಲಿಸ 

ಬರುವಿರೇನು ? ನಾನೂ ವೈದ್ಯನಿದ್ದೇನೆ. " 


" ನನ್ನೊಡನೆ ಮಾತಾಡ ಬೇಕಾಗಿದ್ದರೆ ನೀವು ಹಾಗೆ ದೂರ ನಿಂತೆಯೇ 

ಮಾತಾಡಿರಿ, ಒಲ್ಲದಿದ್ದರೆ ನಿಮ್ಮ ಮನೆಯ ಹಾದಿಯನ್ನು ಹಿಡಿಯಿರಿ, ” 

ಎಂದು ಸರಲಾಕ್ಷನು ಕೈ ಕಾಲುಗಳನ್ನು ಚೆಲ್ಲುತ್ತಲೂ ತಲೆಯನ್ನು ಗಾದಿಗೆ 

ಹೊಸೆಯುತ್ತಲೂ ಶ್ರಮದಿಂದ ನುಡಿದನು. . 


" ರಾಯರೆ, ನಾನು ವೈದ್ಯನು, ನೀನು ರೋಗಿಗಳು, ರೋಗಿಯು. 

ವೈದ್ಯನ ಮಾತನ್ನು ರಾಜಾಜ್ಞೆಯಂತೆ ಮನ್ನಿಸತಕ್ಕದ್ದು.” 


ಸರಲಾಕ್ಷನು ನನ್ನನ್ನು ಕೆಟ್ಟಗಣ್ಣಿಲೆ ನೋಡಿ ತಿರಸ್ಕಾರದಿಂದ  

" ಘನವೈದ್ಯರು ನೀವು ! ನಿಮ್ಮ ಅಜ್ಞೆಯನ್ನು ಮನ್ನಿಸದವರಾರು ? ವಾತಾ 

ತ್ಮಜ ಕುಂಟಗಾಲ ವೈದ್ಯರೆ, ಶುಂಠಿ- ಬೆಲ್ಲವೇ ನಿಮ್ಮ ಔಷಧ, ಯಾವ ದೊಡ್ಡ 

ಹೆಸರಾದ ವೈದ್ಯರು ನೀವು? ” ಎಂದು ಅವನು ಸನ್ನಿ ಪಾಠದ ಆವೇಶದಿಂದ 

ನುಡಿದನು. 


" ಎಂಥ ಸೌಜನ್ಯ ರಹಿತವಾದ ಮಾತುಗಳನ್ನಾಡಿದಿರಿ ! ಸ್ನೇಹಕ್ಕಾಗಿ 

ನಾನು ಕರಳು ಹರಕೊಳ್ಳುತ್ತಿರುವಾಗ ನೀವು ಕಟುವಚನಗಳನ್ನಾಡಬರು 

ವಿರಿ. ಆದರೂ ನೀವು ಸಂತಾಪ-ಸನ್ನಿ ಪಾತಗಳಿಗೀಡಾಗಿ ಹೀಗೆ ಮಾತಾಡುವಿ 

ರೆಂದು ಮನಗಂಡು ನಾನು ಸುಮ್ಮನಿದ್ದೇನೆ. ನನ್ನ ಜಾಣತನವು ಹಾಗಿರಲಿ, 

ಸರ ದೇಶಮುಖ, ಡಾಕ್ಟರ ರಾವ, ಡಾಕ್ಟರ ನಾಡಗೀರ ಈ ಮೂವರಲ್ಲಿ 

ಯಾರನ್ನು ಕರಿಸಲಿ ? ನಾಡಗೀರ ಯಶವಂತರಾಯರನ್ನು ಕರಿಸಲೆ? ಇಂಥ 

ಭಯಂಕರವಾದ ಅಂಟುಬೇನೆಗಳ ಉಗಮಗಳನ್ನು ಅವರು ಬಹು ಚನ್ನಾಗಿ 

ಅಭ್ಯಸಿದ್ದಾರೆ. ” ಸರಲಾಕ್ಷನು ಮಾತನಾಡದೆ ಸುಮ್ಮನೆ ನನ್ನನ್ನು ಪಿಳಿಪಿಳಿ ನೋಡುತ್ತೆ 

...ರೆದನು. 


"ಒಡನುಡಿಯಿರಿ., ಯಾರನ್ನು ಕರಿಸಲಿ ಹೇಳಬಾರದೆ ? ಏನು 

...ಎಂತು ಮಾಡಲಿ ಎನ್ನು ವದರೊಳಗಾಗಿ ಪ್ರಾಣವನ್ನು ಬಿಟ್ಟು 

... ನೀವು ಹೇಳದಿದ್ದರೆ ನಾನೇ ನನ್ನ ಮನಸ್ಸಿಗೆ ಬಂದವರನ್ನು ಕರೆ 

ಸುವೆನು” ಎಂದು ನಾನು ಹೇಳಿದೆನು, 


" ಯಾರನ್ನು ಕರೆಯಬೇಕೆಂಬ ಜ್ಞಾನವು ನಿಮಗಿಲ್ಲ. 

ಸುಮ್ಮನೆ ಒಟಗುಡುವಿರಿ? ನನ್ನ ಜ್ವರದ ಮೂಲವನ್ನು ಈ ಊರಲ್ಲಿ ಯಾರು 

ಬಲ್ಲರು ? " 

 

" ಸರಿ, ನೀವು ನಿಮ್ಮ ಪ್ರಕೃತಿಯನ್ನು ತೋರಿಸುವದೇ ಇಲ್ಲ. ಮೂಲ 

ಹಿಡಿಯುವದು ಹೇಗೆ ? ” 


"ಸುಜ್ಞರಂತೆ ಮಾತಾಡಿದಿರಿ. ಒಳ್ಳೇದು ನಿಮ್ಮ ಬಳಿಯಲ್ಲಿ ಬೆಳ್ಳಿಯ 

ನಾಣ್ಯಗಳಿರುವವೋ ?” ಎಂದವನು ನೆರಳುತ್ತೆ ಕೂಗಿ ಕೇಳಿದನು. ... 


"ಇವೆ. ಎಷ್ಟು ಬೇಕು ? ” ಎಂದು ನಾನು ಕೇಳಿದೆನು. 


"ಅರ್ಧ ರೂಪಾಯಿಗಳಷ್ಟು ಇವೆ. ನಾಲ್ಕಾಣೆಯ ನಾಣ್ಯಗಳೆಷ್ಟು ? ” 


"ನಾನು ನನ್ನ ಚೀಲವನ್ನು ತೆಗೆದು ತೋರಿಸಿದೆನು, ಅದರಲ್ಲಿ ಇಪ್ಪತ್ತು 

ರೂಪಾಯಿಗಳಿದ್ದವು. ಮೂವತ್ತೈದು ನಾಲ್ಕಾಣೆಯ ನಾಣ್ಯಗಳಿದ್ದವು. 


"ವಾತಾತ್ಮಜ,'' ಎಂದವನು ಮಗ್ಗಲಾಗಿ ನನ್ನನ್ನು ದಿಟ್ಟಿಸಿ 

" ವಾತಾತ್ಮಜ, ಇಷ್ಟೇಯೋ ? ನಿಮ್ಮಂಥ ಸಂಪನ್ನರಲ್ಲಿ 

ಇದು ಬಗೆಯ ನೂರು ನೂರು ನಾಣ್ಯಗಳಿರಬೇಕು. ಆಗಲಿ, 

ರೂಪಾಯಿಗಳನ್ನೆಲ್ಲ ಈಚೆಯ ಜೇಬಿನಲ್ಲಿ ಹಾಕಿರಿ; ಉಳಿದವುಗಳನ್ನು 

ಆ ಜೇಬಿನಲ್ಲಿರಿಸಿರಿ. ಅಂದರೆ ಸಮತೋಲವಾಗಿ ನೀವು ಸಹಜವೇ 

ಹೌಹಾರುವಿರಿ ! " 


ಉರಿಯು ಹೆಚ್ಚಾಗಿ ಸರಲಾಕ್ಷನು ಬಡಬಡಿಸಲಾರಂಭಿಸಿದನೆಂದು 

ನಾನು ಕಂಡು " ಸಠಲಾಕ್ಷ, ಜ್ವರದ ತೀವ್ರತೆ ಹೆಚ್ಚಾಗುತ್ತಲಿದೆ, ನಾನೀ 

ಗಲೆ ವೈದ್ಯನನ್ನು ಕರತರಲು ಹೋಗುತ್ತೇನೆ” ಎಂದು ನುಡಿದು ನಾನು ನನ್ನ - 

ರುಮಾಲವನ್ನು ಸುತ್ತಿಕೊಳ್ಳಲಾರಂಭಿಸಿದೆನು. 


ಅಷ್ಟರಲ್ಲಿ ಅಕೋ ಸರಲಾಕ್ಷನು ತನ್ನ ಹಾಸಿಗೆಯನ್ನು ಬಿಟ್ಟು ಟಣ್ಣನೆ 

ಹಾರಿ ಕೋಣೆಯ ಒಳಚಿಲಕವನ್ನಿಕ್ಕಿ ಬೀಗವನ್ನು ಪಡೆದು ಕೈಯನ್ನು ತನ್ನ 

ಜೇಬಿನಲ್ಲಿಟ್ಟು ಕೊಂಡವನೇ ತತ್ತರಿಸುತ್ತಲೂ ಉಸರು ಬಡಕೊಳ್ಳುತ್ತಲೂ 

ನೆರಳುತ್ತಲೂ ತನ್ನ ಹಾಸಿಗೆಗೆ ಬಂದು ಬಿದ್ದು ಕೊಂಡನು. 


" ಇದೇನು ಸರಲಾಕ್ಷ, ನಾನು ನಿಮ್ಮ ಮೈ ಹಿಡಿದು ಜ್ವರವನ್ನಾದರೂ 

ನೋಡುವೆನು” ಎಂದು ನಾನು ಅವನ ಸಮೀಪಕ್ಕೆ ಹೋಗುವಷ್ಟರಲ್ಲಿ ಅವನು 

ಸಾಯುವವನ ಹಾಗೆ ಕೂಗಿಕೊಂಡು : ನನ್ನ ಮೈ ಮುಟ್ಟಬಂದರೆ ಇಲ್ಲಿಯೇ 

ಕುತ್ತಿಗೆಯನ್ನು ಹಿಚಕಿಕೊಳುವೆನು !?” ಎಂದು ನುಡಿದು ಲಟಪಟನೆ 

ಕಾಲು ಜಾಡಿಸಲಾರಂಭಿಸಿದನು. 


" ಹಾಗಾದರೆ ಬಾಗಿಲಕ್ಕೆ ಬೀಗವನ್ನೇಕೆ ಹಾಕಿದಿರಿ ? " 


"ಇನ್ನೆರಡು ತಾಸಿನ ಮೇಲೆ ಯಾವ ವೈದ್ಯನನ್ನು ಕರಿಸಬೇಕೆಂಬ 

ದನ್ನು ಹೇಳುವೆನು. ಅಲ್ಲಿಯ ವರೆಗೆ ನೀವು ಮೇಜಿನ ಮೇಲಿದ್ದ ಪುಸ್ತಕ 

ವರ್ತಮಾನಪತ್ರಗಳನ್ನೊದುತ್ತ ಕಾಲಕಳೆಯಿರಿ, ” ಎಂದು ಹೇಳಿ ಸರಲಾ 

ಕ್ಷನು ಮುಸುಗಿಟ್ಟುಕೊಂಡು ಮಲಗಿದನು. 


ನಾನು ವಿಚಾರಗ್ರಸ್ತನಾಗಿಯ ಚಿಂತಾಕುಲನಾಗಿಯ ಕೋಣೆಯಲ್ಲಿ 

ಎಡೆಯಾಡುತ್ತಿದ್ದೆನು. ಆಗ ಮಾಡದಲ್ಲಿ ಒಂದು ಹಂತದ ಕರಡಿಗೆಯನ್ನು 

ಕಂಡು ಅದನ್ನು ಮೆಲ್ಲನೆ ಕೈಯಲ್ಲಿ ತೆಗೆದುಕೊಂಡೆನು. 


ಸರ್ಪದಂತೆ ತೀಕ್ಷವಾದ ಶ್ರವಣೇಂದ್ರಿಯವುಳ್ಳವನಾದ ಹುಲಿ 

ದೊಸೆಯ ಭರದಿಂದ ತನ್ನ ಮುಸುಗನ್ನು ಹಿರಿದೊಗೆದು "ವಾತಾತ್ಮಜ, 

ಆ ಕರಡಿಗೆಯನ್ನು ಸುಮ್ಮನೆ ಇದ್ದಲ್ಲಿರಿಸಿರಿ, ಮಂದಿಯ ಒಡವೆಗಳಿಗೆ ಕೈಯಿ 

ಕ್ಕುವದು ದುರ್ನಡತೆಯು, ಇರಿಸಿ ಎರಡನೆಯ ಕೆಲಸ ಮಾಡಿರಿ. ಏನು 

ಹೇಳುತ್ತೇನೆ ! ” ಎಂದು ಸರಲಾಕ್ಷನು ಉಚ್ಚ ಉಚ್ಚ ತರವಾದ ಧ್ವನಿಗಳನ್ನು 

ತಗದು ಅಧಿಕ್ಷೇಪಿಸಿ ನುಡಿದನು. 


ನನಗೆ ಅಪ್ರತಿಷ್ಠೆಯಾದಂತಾಗಿ ನಾನು ಒಳಿತಾಗಿ ನೊಂದುಕೊಂಡೆನು, 

ಮಾಡಲಿನ್ನೇನು ? ಕರಡಿಗೆಯನ್ನು ಮೆಲ್ಲನೆ ಇದ್ದಲ್ಲಿ ಇರಿಸಿ ತಲೆ ಚಿಟ್ಟುರಿಸಿ 

ಕೊಂಡು ಕೆಳಕ್ಕೆ ನೋಡುತ್ತೆ ಕುಳಿತನು. 


ಎರಡು ತಾಸಿನ ಅವಧಿ ಮುಗಿದಿತು, ಸರಕನು ಗಡಿಯಾರವನ್ನು 

ನೋಡಿ ವೈದ್ಯರೆ, ಏಳಿರಿನ್ನು, ನೋಡಿದಿರಾ, ಆಯಾಸದಿಂದಲೂ, ಮನ 

ಸ್ತಾಪದಿಂದಲೂ ಜ್ವರದ ಭರಕ್ಕಾಗಿ ನನ್ನ ಹೊಟ್ಟೆ ಯಲ್ಲಿ ಬೆಂಕಿ ಬಿದ್ದಂ 

ತಾಗಿದೆ, ಬೇಗನೆ ಕಾಮಾಠಿಪುರಕ್ಕೆ ಜೋಗಿ ಅಲ್ಲಿ ಪರೋಡೆಯವರ ಬ೦ಗ 

ಲೆಯ ಎದುರಿಗೆ ಇರುವ ಮನೆಯಲ್ಲಿ ಕಲ್ಯಾಣಸುಂದರ ಮುದಲಿಯರ್ 

ಎಂಬ ಗೃಹಸ್ಥನಿದ್ದಾನೆ. ಅವನಿಗೆ ಈ ರೋಗದ ನಿದಾನ ಚಿಕಿತ್ಸೆಗಳ ಜ್ಞಾನ 

ಚನ್ನಾಗಿದೆ, ತಡಮಾಡಬೇಡಿರಿ. ಹೊತ್ತುಗಳೆಯುವಂತಿಲ್ಲ '' ಎಂದು 

ಹೇಳಬೇಕಾದರೆ ಕ್ಷೀಣನಾದ ಸರಲಾಕ್ಷನಿಗೆ ಸಾಕುಬೇಕಾಗಿ ಹೋಯಿತು. 


"ಎಲ್ಲವೂ ವಿಪರೀತವೇ. ಎಲ್ಲಿಯ ಕಲ್ಯಾಣಸುಂದರನವನು ? ಹೆಸ 

ರನ್ನು ಕೂಡಾ ನಾನು ಕೇಳಿಲ್ಲ. ವೈದ್ಯಕವಿದ್ಯೆಯಲ್ಲಿ ಅವನು ಪದವೀಧರನಾಗಿ 

ತೋರುವದಿಲ್ಲ. ಅಂಥವನ ಕಡೆಯಿಂದ ನೀವು ಔಷಧ ತೆಗೆದುಕೊಳ್ಳುವ 

ವರೆ ? ಚನ್ನಾಗಿದೆ. " 


" ಚೀನ, ಜಪಾನ, ಸುಮಾತ್ರಾ, ಕೊರಿಯಾ ಮುಂತಾದ ದೇಶಗ 

ಳಲ್ಲಿ ಉದ್ಭವಿಸುವ ಚಮ - ಚಮತ್ಕಾರವಾದ ಜ್ವರಗಳ ನಿದಾನವನ್ನು ನಮ್ಮ 

ವೈದ್ಯ ಶಾಸ್ತ್ರಿಗಳು ಅರಿತವರಲ್ಲ. ಆಯಾ ದೇಶಗಳಲ್ಲಿ ಸಂಚರಿಸಿ ಆಸ್ಥೆಯಿಂದ 

ಆಯಾ ರೋಗಗಳ ಮೂಲವನ್ನು ಕಂಡುಹಿಡಿದ ಜಾಣನೇ ನನ್ನ ಜ್ವರದ ಪರಿ 

ಹಾರ ಮಾಡಬಲ್ಲನು. ಕಲ್ಯಾಣಸುಂದರನು ಲಾರ್ಡ ಕಾವರ್ಡ ದೊರೆಗಳ 

ಸೈನ್ಯದ ಪಡೆಯೊಂದಿಗೆ ಚೀನ ಕೋರಿಯಾ ಸುಮಾತ್ರಾ ಮುಂತಾದ ದೇಶ 

ಗಳಲ್ಲಿ ಸಂಚಾರ ಮಾಡಿ ಅಲ್ಲಲ್ಲಿ ಅಂಟುಬೇನೆಗಳ ಕ್ರಿಮಿಗಳನ್ನು ಹಿಡಿದು 

ನಿರೀಕ್ಷಿಸಿ ಅವುಗಳಲ್ಲಿರುವ ವಿಷವನ್ನೂ ಆ ವಿಷಕ್ಕೆ ಪ್ರತೀಕಾರವನ್ನೂ ಪರಿ 

ಶ್ರಮ ಮಾಡಿ ಕಂಡುಕೊಂಡಿದ್ದಾನೆ. ಹೋಗು, ಕಲ್ಯಾಣ ಸುಂದರನಿಗೆ ನನ 

ಗಾದ ಅವಸ್ಥೆಯನ್ನು ಸವಿಸ್ತರವಾಗಿ ನಿವೇದಿಸಿ ತಕ್ಕದಾದ ಔಷಧವನ್ನು ತರ 

ಹೇಳು. ” 

 

" ಆಗಲಿ, ಈಗಲೆ ಅವನನ್ನು ಕರತರುವನು. ಇಲ್ಲಿಂದಲೇ ಒಂದು 

ಮೋಟರಗಾಡಿಯನ್ನು ತೆಗೆದುಕೊಂಡು ಹೋಗಿ ಅವನನ್ನು ಅದರಲ್ಲಿಯೇ 

ಕುಳ್ಳಿರಿಸಿಕೊಂಡು ಬರುವೆನು. ” 

 

" ಅಷ್ಟು ಮಾತ್ರ ಮಾಡಬೇಡ. ನೀನು ಕಲ್ಯಾಣನ ಬಳಿಗೆ ಹೋಗಿ, 

ನಾನು ಅತ್ಯವಸ್ಥನಾಗಿರುವೆನೆಂದು ಹೇಳಿ ಅವನನ್ನು ಇತ್ತ ಕಳಿಸಿಕೊಡು. 

ಅವನೂ ನಾನೂ ಕೂಡಿ ಮಾತಾಡುವಾಗ ಹೊರಗಿನವರಿದ್ದರೆ ಅವನಿಗೆ ಸಹಿ 

ಸದು, ಕಲ್ಯಾಣ ಸುಂದರನಿಗೆ ಸುದ್ದಿಯನ್ನು ಹೇಳಿದವನೇ ನೀನು ನಿನ್ನ 

ಮೋಟರದಲ್ಲಿ ಕುಳಿತು ಬಾ, ಅವನು ತನ್ನ ರಥದಲ್ಲಿ ಕುಳಿತು ಯಥಾವಕಾಶ 

ವಾಗಿ ಬರುವನು ” ಎಂದು ಸರಕ್ತಾಕ್ಷನು ಹೇಳಿದನು. 


" ಆಗಲಿ, ನೀವು ಹೇಳಿದಂತೆಯೇ ಮಾಡುವೆನು ” ಎಂದು ಹೇಳಿ 

ನಾನು ಹೊರಡಲು ಸಿದ್ದನಾದೆನು.. 


" ವಾತಾತ್ಮಜರೆ, ವೈದ್ಯರೆ, ನನಗಾದ ಅವಸ್ಥೆಯನ್ನು ಅವನಿಗೆ 

ಚನ್ನಾಗಿ ವಿವರಿಸಿ ಹೇಳಿರಿ, ನಾನು ಬಹುಪರಿಯಾಗಿ ಹೇಳಿಕೊಂಡಿರುವೆ 

ನೆಂದೂ ಅವನು ಬರದಿದ್ದರೆ ಇ೦ದೆಯೇ ನಾನು ನಿಶ್ಚಯವಾಗಿ ಸತ್ತು 

ಹೋಗುವೆನೆಂದೂ ಹೇಳಿ ಅವನ ಹೊಟ್ಟೆಯಲ್ಲಿ ಅಂತಃಕರಣ ಬರುವಂತೆ 

ಮಾಡಿರಿ ಕಂಡಿರೋ ? ” 


"  ಚಿಂತೇಬಿಡಿರಿ. ಹೇಗಾದರೂ ಮಾಡಿ ಅವನ ಕೈ ಕಾಲು ಹಿಡಿದು 

ಕೊಂಡು ಹೇಳಿಕೊಳ್ಳುವೆನು ನಿಮ್ಮ ಜೀವ ಉಳಿದರೆ ಸಾಕು, ” ಎಂದು. 

ಹೇಳಿ ನಾನು ಹೊರಟೆನು, 


" ತಡೆಯಿರಿ, ವೈದ್ಯರೆ, ಆ ಗ್ಯಾಸ್ ಲ್ಯಾಂಪಕ್ಕೆ ದೀಪವನ್ನು ಅಂಟಿ 

ಸಿರಿ, ಕಣ್ಣು ಕುಕ್ಕುವಷ್ಟು ಬೆಳಕು ಮಾಡಬೇಡಿರಿ, ಆರೆವಾಸಿಯಾಗಿರಲಿ ?” 

ಎಂದು ಸರಲಾಕ್ಷನು ಹೇಳಿಕೊಂಡ ಮೇರೆಗೆ ನಾನು ದೀಪವನ್ನು ಅಂಟಿಸಿ 

ಹೊರಟುಹೋದೆನು. 

 

ಕಲ್ಯಾಣಸುಂದರನ ಮನೆಯು ದೊಡ್ಡದಾಗಿಯ ಅಂದವಾಗಿಯೂ 

ಇದ್ದಿತು. ನಾನು ಅವನ ಮನೆಯ ಬಾಗಿಲಕ್ಕೆ ಹೋದ ಕೂಡಲೆ ಅಲ್ಲಿಯ 

ಜವಾನನು ನನಗೆ ಕೈ ಮುಗಿದು " ಬುದ್ಧೀ, ಯಾರು ದಯಮಾಡಿರುವ 

ರೆಂದು ಯಜಮಾನರಿಗೆ ತಿಳಿಸಲಿ ? ” ಎಂದು ಕೇಳಿದನು. ನಾನು ನನ್ನ 

ಹೆಸರು ಉದ್ಯೋಗಗಳನ್ನು ಅವನಿಗೆ ತಿಳಿಸಿದೆನು, ಜವಾನನು ಒಳಗೆ 

ಹೋದಕೂಡಲೆ ಕಲ್ಯಾಣಸುಂದರನು ಅವನನ್ನು ಕುರಿತು "ಯಾಕೆ ಕಂಡ 

ಕಂಡವರನ್ನು ಹೀಗೆ ಮನೆಗೆ ಬರಗೊಡುತ್ತೀರೋ, ಅವನನ್ನು ಆವಾರದ 

ಅಲ್ಲಿಯೇ ಬಿಡಬಾರದಾಗಿತ್ತು” ಎಂದು ನುಡಿದನು. 


" ದೇವರೂ, ಯಾರೋ ಜ್ವರಪೀಡಿತರಾಗಿರುವರಂತೆ. ಜೀವಕ್ಕೆಯೇ 

ಗಂಡಾಂತರವಿರುವ ಮೂಲಕ ಆತುರರಾಗಿ ತಮ್ಮ ಕಡೆಗೆ ಬಂದಿದ್ದಾರೆ. 

ಅವರಿಗೆ ನಾಲ್ಕು ಸಮಾಧಾನದ ಮಾತು ಹೇಳುವದೇ ವಿಹಿತವಾಗಿ ತೋರು 

ತ್ತದೆ. ” ಎಂದು ಸೇವಕನಂದನು. 


" ನಡೆ, ದಿನಾಲು ಸಾವಿರಾರು ಜನರು ಸಾಯುತ್ತಾರೆ. ಅವ 

ರೆಲ್ಲರ ಮನೆಗೆ ಹೋಗಬೇಕಾದರೆ ನಮ್ಮದೇ ಇತಿಶ್ರೀಯಾದೀತು. ಅವ 

ರೆಲ್ಲರ ಮನೆಯಲ್ಲಿಲ್ಲವೆಂದು ಹೇಳು.” 


ಈ ಸಮಾಚಾರವನ್ನೆಲ್ಲ ನಾನು ಹೊರಗಿನಿಂದಲೇ ಕೇಳಿ ಇನ್ನು 

ಉಪೇಕ್ಷೆ ಮಾಡುವದು ಸರಿಯಲ್ಲವೆಂದು ನೆನೆದು ನಾನು ನೆಟ್ಟನೆ 

ಮನೆಯ 'ಯಜಮಾನನಿದ್ದ ಕೋಣೆಗೆ ಹೋದೆನು. 

 

ಕಲ್ಯಾಣಸುದರ ಮುದಲಿಯಾರನು ಸುಮಾರು ಐವತ್ತೈದು ವರ್ಷದ 

ಪ್ರಾಯದವನಾದ ಮನುಷ್ಯನು, ಅವನ ಮೋರೆಯ ಮೇಲಿನ ಬಿಳಿ ಮೀಸೆ 

ಗಳು ಸಾಲಿಗ್ರಾಮದಂತೆ ಕಪ್ಪಾಗಿರುವ ಅವನ ಮೈ ಬಣ್ಣಕ್ಕಾಗಿ ಎದ್ದು ಕಾಣಿ 

ಸುತ್ತಿದ್ದವು. ತಲೆಯ ಕೂದಲು ಉಚ್ಚಿ ಹೋಗಿದ್ದರಿಂದ ಅವನ ನೆತ್ತಿಯ 

ಮಿರಿಮಿರಿಯಾಗಿ ಮಿಂಚುತ್ತಿತ್ತು. ಅವನ ದೊಣ್ಣೆ ಮೂಗು ಗುಳ್ಳೆಗಣ್ಣು 

ಗಳನ್ನು ನೋಡಿದರೆ ಅಂಜಿಕೆ ಬರುವಂತೆ ಇತ್ತು. ಚಂಗಾಳಿಯು ಪಂಜೆಯ 

ನ್ನುಟ್ಟು ಇಸ್ತ್ರಿಯ ಶರ್ಟನ್ನು ಹಾಕಿಕೊಂಡು ಅವನೊಂದು ಆರಾಮ ಕುರ್ಚಿ 

ಯಲ್ಲಿ ಸೆಟೆಯಿಂದ ಕುಳಿತುಕೊಂಡಿದ್ದನು. ನನ್ನನ್ನು ಕಾಣುತ್ತಲೆ ಅವನು 

ಕ್ರುದ್ಮನಾದಂತೆ ನಟಿಸಿ, ಯಾರು ನೀವು, ಹೀಗೇಕೆ ಹೇಳದೆ ಕೇಳದೆ 

ಬಂದಿರಿ ? ಏನು ಕೆಲಸ ನಿಮ್ಮದು, ಹೊರಗೆ ನಡಿಯಿರಿ!” ಎಂದು ಹೆಬ್ಬಟ್ಟಿ 

ನಗಲವಾದಂಥ ಬಂಗಾರದ ಪಾಟಲಿಯುಳ್ಳ ತನ್ನ ಕೃಷ್ಣ ವರ್ಣದ ಹಸ್ತವನ್ನು 

ಚಾಚಿ ನನಗೆ ಹೊರಗೆ ಹೋಗಲು ಆಜ್ಞಾಪಿಸಿದನು. 


"ಮುದಲಿಯಾರರೆ, ಪ್ರಖ್ಯಾತನಾದ ಗೃಹಸ್ಥನೋರ್ವನು ಗಂಡಾಂತರ 

ದಲ್ಲಿದ್ದಾನೆ. ಅವನ ಪ್ರಾಣವನ್ನು ಉಳಿಸುವುದು ನಿಮ್ಮ ಕೈಯಲ್ಲಿ ಇದೆ 

ಎಂದು ನಂಬಿ ನಾನು ಬಂದೆನು, ಒಣ ಉಪಚಾರದ ಮಾತುಗಳಲ್ಲಿ ಸಮಯ 

ವನ್ನು ಕಳೆಯಲು ಅವಕಾಶವಿಲ್ಲಾದ್ದರಿಂದ ನಾನು ಆತುರನಾಗಿ ತಮ್ಮ ಬಳಿಗೆ 

ಬಂದಿರುವೆನು. ದಯಮಾಡಿ ನನ್ನ ಪ್ರಾರ್ಥನೆಯನ್ನು ಮನ್ನಿಸಬೇಕು. ” 


" ಯಾರು ಗಂಡಾಂತರದಲ್ಲಿ ಇರುವರು ? ” ಎಂದು ಮುದಲಿ 

ಯಾರನು ಆಢ್ಯತೆಯಿಂದ ಕೇಳಿದನು. 


" ಹುಲಿಮೀಸೆ ಸರಲಾಕ್ಷರಾಯರು ” ಎಂದು ನಾನು ನಿವೇದಿಸಿದನು. 


" ಸರಲಾಕ್ಷ ಹುಲಿಮೀಸೆ ! ” ಎಂದು ಕಲ್ಯಾಣಸುಂದರನು ಚಕಿತ 

ನಾಗಿ ಉದ್ಗಾರ ತೆಗೆದನು. 


" ಆಹುದು, ಅವರೇ ಸುಮಾತ್ರಾದಲ್ಲಿಯ 'ಕೂಲೀ ' ಜ್ವರದಿಂದ 

ಪೀಡಿತರಾಗಿರುವರು, ಬದುಕುವರೋ ಇಲ್ಲವೋ ಎಂಬ ಶಂಕೆಯುಂಟಾಗಿದೆ. 

ತಾವು ದಯಮಾಡಿ ಈಗಲೆ ಬಂದರೆ ಒಳಿತಾಗುವದು. "  

 

" ಇಂಥ ಅತ್ಯವಸ್ಥೆಯೇ ? ಪಾಪ ! ಸರಲಾಕ್ಷರಾಯರು ಅಪರಾಧಿ ಗಳ 

ತುಬ್ಬು ಹಚ್ಚುವದರಲ್ಲಿ ಒಳ್ಳೆ ನಿಪುಣರೂ ವಕ್ಷ ರೂ ಆಗಿರುವರು, ನಾನಾ 

ದರೂ ಬೇನೆಗಳ ಮೂಲವನ್ನು ಶೋಧಿಸಿ ತೆಗೆಯುವದರಲ್ಲಿ ಅರ್ಧ ಆಯುಷ್ಯ 

ವನ್ನೇ ಕಳೆದಿರುವೆನು. ಸರಲಾಕ್ಷರ ಪ್ರತ್ಯಕ್ಷವಾದ ಪರಿಚಯವು ನನಗಿಲ್ಲ 

ದಿದ್ದರೂ ಕೆಲಕೆಲವು ಪ್ರಕರಣಗಳ ಸಂಬಂಧವಾಗಿ ನಾನೂ ಅವರೂ ಅನೇಕಾ 

ವರ್ತಿ ಕೂಡಿದ್ದೆವು. ತಾವು ವೈದ್ಯ ವಾತಾತ್ಮಜರೆಂದು ನಮ್ಮ ಮನುಷ್ಯನು 

ಹೇಳಿದನು. ಕುಳಿತುಕೊಳ್ಳಿರಿ." 


" ಬೇಗನೆ ಏಳಿರಿ ” ಎಂದು ಹೇಳಿ ನಾನು ಕುರ್ಚಿಯ ಮೇಲೆ ಕುಳಿತನು. 


ಕಲ್ಯಾಣ ಸುಂದರನು ಒಂದು ಕಪಾಟವನ್ನು ತೆರೆದು ಅದರಲ್ಲಿರುವ 

ಅನೇಕವಾದ ಕುಪ್ಪೆಗಳಲ್ಲಿ ಯದೊಂದು ಕುಪ್ಪೆಯನ್ನು ತೆಗೆದು, " ಇದು 

ನೋಡಿರಿ, 1 ಕೂಲೀ ಜ್ವರದ ಕ್ರಿಮಿಗಳ ಸಂಚಯವನ್ನು ಮಾಡಿಟ್ಟಿದ್ದೇನೆ. 

ಈ ಹುಳದ ರಸಿಕೆ ತಗಲಿದರೆ ಸಾಕು ತತ್‌ಕ್ಷಣವೇ ಜ್ವರ ಬರುವದು. 

ಹೀಗೆಯೇ ಬೇರೆ ಬೇರೆಯಾದ ಕುಪ್ಪೆಗಳಲ್ಲಿ ಬೇರೆ ಬೇರೆ ಜಾತಿಯ ವಿಷ ಕ್ರಿಮಿ 

ಗಳನ್ನು ಹಿಡಿದಿಟ್ಟಿದ್ದೇನೆ. ಇದು ನೋಡಿರಿ........” 


" ಇರಬಹುದು, ಅವುಗಳನ್ನೆಲ್ಲ ನೋಡುತ್ತ ಹೊತ್ತು ಗಳೆಯುವಂತಿಲ್ಲ, 

ಅಲ್ಲಿ ಸರಲಾಕ್ಷನ ಅವಸ್ಥೆ ಏನಾಗಿರುವ ಕಾಣೆನು, ” ಎಂದು ನಾನು 

ಆತುರನಾಗಿ ನುಡಿದೆನು, 


" ಇಷ್ಟು ಅತ್ಯವಸ್ಥೆಯೇ ? ಸರ೮: ಕನಿಗೆ ಈ ಘಾತಕವಾದ ಬೇನೆ 

ಬಂದು ಎಷ್ಟು ದಿವಸಗಳಾದವಂತೆ ? " 


" ಮೂರು ದಿವಸಗಳಾದವೆಂದು ಅವರೇ ಹೇಳಿದರು. ” 


" ಭ್ರಮ ಸನ್ನಿ ಪಾತಾದಿಗಳೇನಾದರೂ ಆಗಿರುವವೇನು? " 

 

"ಕಂಡಕಂಡಂತೆ ಚೀರುತ್ತಾರೆ. ಅರಿವೇ ಹರಿಯುತ್ತಾರೆ. ಇದಕ್ಕೂ 

ಹೆಚ್ಚಿನ ಸನ್ನಿ ಪಾಶದ ಲಕ್ಷಣವೇನಿರಬೇಕು ? ” 


ಪಾಪ ! ಸರಕಾಕ್ಷನಂಥ ಅಪರೂಪವಾದ ಜೀವನಕ್ಕೆ ಎಂಥ 

ಭಯಂಕರವಾದ ಗಂಡಾಂತರವು ಒ೦ದೊದಗಿರುವದು. ಆರಿಸಿ ಒಲ್ಲೇ ಜೀವನ 

ಕೈಯೇ ಇಂಥ ಬೇನೆ, " ಎಂದು ಖಿನ್ನನಾಗಿ ನುಡಿದನು. 


" ಏಳಿರಿ, ಆ೦ಗಿ ರುಮಾಲುಗಳನ್ನು ಹಾಕಿಕೊಳ್ಳಿರಿ. 1” ಎಂದು 

ಕುರ್ಚಿಯಿಂದ ಎದ್ದು ನಿಂತನು. 


" ಏಳಿರಿ, ನನ್ನ ಮೋಟಾರವು ಸಿದ್ದವೇ ಇದೆ. ” 


" ತಾವು ಸರ ಲಾಕ್ಷರ ಮನೆ ನೋಡಿರುವಿರಂತ. ದಯಮಾಡಬೇಕು. 

ನಾನು ಅವರ ಅಣ್ಣಂದಿರಾದ ಅರವಿಂದಾಕ್ಷರನ್ನು ಕರತರುವೆನು, ಮೃತ್ಯು 

ಪತ್ರವನ್ನು ಮಾಡಿಸಬೇಕಾಗಿದೆ. ” ಎಂದು ನಾನು ನಿವೇದಿಸಿದೆನು. 


"  ಆಗಲಿ, ನೀವು ಹೋಗಿರಿ. ನಾನು ಇನ್ನೊಂದು ಹದಿನೈದು 

ನಿಮಿಷಗಳಲ್ಲಿ ಸರಲಾಕ್ಷರ ಮನೆಯಲ್ಲಿಯೇ ಇರುವೆನು, ” ಎಂದು ನುಡಿದು 

ಕಲ್ಯಾಣಸುಂದರನು ತನ್ನ ರುಮಾಲವನ್ನು ಅಡ್ಡತಿಡ್ಡಾಗಿ ಸುತ್ತಿಕೊಳ್ಳಲು 

ಆರಂಭಿಸಿದನು. 


ನಾನು ಲಗುಬಗೆಯಿಂದ ನನ್ನ ಮೊಟಕದಲ್ಲಿ ಕುಳಿತು ಸರಕ್ತಾಕ್ಷನ. 

ಮನೆಗೆ ಬಂದೆನು. 


"  ಏನು ಮಾಡಿದಿರಿ ವಾತಾತ್ಮಜರೇ ? ” ಎಂದು ಅವನು ಬಲು ಹಗು 

ರಾದ ಧ್ವನಿಯಿಂದ ದೀನನಾಗಿ ಕೇಳಿದನು. 


( ಓಹೋ, ಹೋಗಿದ್ದೆನು. ಕಲ್ಯಾಣಸುಂದರನಿಗೆ ನಿಮ್ಮ ದೀನವಾದ 

ಅವಸ್ಥೆಯನ್ನು ತಿಳಿಸಿದನು. ಅವನಿಗೆ ಕನಿಕರ ಬಂದು “ ಈಗಲೆ ಬರುವೆ” 

ನೆಂದು ಹೇಳಿದ್ದಾನೆ. ಇನ್ನೊಂದು ಹದಿನೈದು ನಿಮಿಷಗಳಲ್ಲಿ ಬರುವನು.” 


"  ಸತ್ಯವೇ ? ಪುಣ್ಯ ಕಟ್ಟಿ ಕೊಂಡಿರಿ ಕಂಡಿರಾ. ಆದರೆ ಆ ಮುದಲಿ 

 ಯಾರನು ನನ್ನೊಡನೆ ಮಾತಾಡುತ್ತಿರುವಾಗ ನೀವು ಇಲ್ಲಿ ಇರಲಾಗದು.” 

 

" ಆದೊಂದು ಮಾತು ಬಿಟ್ಟು ಬಿಡಿರಿ. ಇಂಥ ಗಂಡಾಂತರದ ಸಮಯ  

ದಲ್ಲಿ ನಾನು ನಿಮ್ಮನ್ನು ಅಗಲಿ ಇರಲಾರೆನು. ಕುವೈದ್ಯನಾದ ಕಲ್ಯಾಣ 

ಸುಂದರನಿಂದ ನಿಮ್ಮ ರೋಗದ ಚಿಕಿತ್ಸೆಯಾಗದಿದ್ದರೆ ಅವನನ್ನು ಹೊರಗೆ ಹಾಕಿ 

ನಾನೇ ಉಪಚಾರ ಮಾಡ ಬೇಕಲ್ಲವೆ ? ” ಎಂದು ನಾನು, ಚೋಳ 

ರಾಜನು ತಲೆಯೊಡಕೊಂಡ ಶ್ರೀನಿವಾಸನ ಮುಂದೆ ನಿಂತು ಪ್ರಾರ್ಥಿಸಿದನು. 


" ನಿನ್ನ ಆಗ್ರಹವಿದ್ದರೆ ನನ್ನಿ ಬೆನ್ನಿನ ಹಿಂದೆ ಇರುವ ಹಾಸಿಗೆಯ 

ಸುರುಳೆಯಲ್ಲಿ ಸುತ್ತಿಕೊಂಡು ಕುಳ್ಳಿರು, ತ್ವರೆಮಾಡು, ಮುದಲಿಯು 

ಬಂದ ನಂದು ಕಾಣುತ್ತದೆ; ಪಾವಟಿಗೆಯ ಮೇಲೆ ಕಾಲಸಪ್ಪಳವಾಗುತ್ತದೆ. ” 


ನಾನು ಅಡಗಿಕೊಂಡು ಒಂದೆರಡು ನಿಮಿಷಗಳಾಗಿದ್ದಿಲ್ಲ, ಆಗಲೆ 

ಕಲ್ಯಾಣಸುಂದರನು ಒಳಗೆ ಬಂದನು. 


" ಯಾರೂ ಇಲ್ಲವೇ ? ” ಎಂದು ಅವನು ಚಕಿತನಾಗಿ ಉದ್ಧಾರ 

ತೆಗೆದು " ಸರಲಾಕ್ಷರಾವ! ಸರಾಕ್ಷರಾವ! ” ಎಂದು ಮೆಲ್ಲನೆ ಕೂಗಿದನು. 


ಉತ್ತರ ಬರಲಿಲ್ಲ. ಕಲ್ಯಾಣ ಸುಂದರನು ಸರಕ್ತಾಕ್ಷನ ಭುಜವನ್ನು 

ಹಿಡಿದು ಅಲ್ಲಾಡಿಸಿ ಎಚ್ಚರಿಸಿದನು... 


" ಯಾರಲ್ಲಿ ? ನನ್ನ ಪ್ರಾಣ ಹೋಗಿದೆಯೋ ಇನ್ನೂ ಇದೆಯೋ ? 

ಪರೀಕ್ಷಿಸಿ ಹೇಳಿರಿ. ” ಎಂದು ಸರಲಾಕ್ಷನು ನುಡಿದನು, ನಾನು ಅವನ 

ಚಮತ್ಕಾರವಾದ ನುಡಿ ಕೇಳಿ ಬೆರಗಾದೆನು. 


" ಸರಲಾಕ್ಷ, ಹೀಗೆ ನನ್ನ ಮೊರೆಯನ್ನು ನೋಡಿರಿ, ಕಲ್ಯಾಣ 

ಸುಂದರನ ಗುರುತು ಹತ್ತಿತೆ ?” ಎಂದು ಮುದಲಿಯಾರನು ಕೇಳಿದನು. 


" ದಂಡಂ ! ಅಯ್ಯಾ, ಹಾಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಿರಿ. 

ನನ್ನ ಪ್ರಾರ್ಥನೆಯನ್ನು ಮನ್ನಿಸಿ ತಾವು ಬಂದದ್ದು ಭಗವತ್ ಕೃಪಾ ಪ್ರಸಾ 

ದವೇ." 


" ನಿಮ್ಮ ಪ್ರಕೃತಿ ಹೇಗಿದೆ ? ” 


" ನನ್ನ ಕಥೆ ಮುಗಿದಂತಾಯಿತು ಮುದಲಿಯಾರರೆ. ನಾಮಾಂಕಿತ 

ರಾದ ವೈದ್ಯರು ಕೈ ಬಿಟ್ಟು ಬಿಟ್ಟರು. ನಿಮ್ಮ ಪುಣ್ಯದಿಂದಲೇ ನಾನು ಬದುಕಿ 

ಉಳಿಯತಕ್ಕವನು ಏನು ಉಪಾಯ ಮಾಡುವಿರೋ ನೋಡಿರಿ. " ಎಂದು 

ನುಡಿದ ಸರ ಲಾಕ್ಷನ ದೀನವಾಣಿಯನ್ನು ಕೇಳಿ ನನಗೆ ವ್ಯಸನವಾಯಿತು. 


" ವೈದ್ಯರು ನಿಮ್ಮ ಬೇನೆಗೆ ಏನು ಹೆಸರಿಟ್ಟರು ? ” 


" ನಿಶ್ಚಿತಾತ್ಮಕವಾದ ನಿದಾನವಾಗಿಲ್ಲ. ನನ್ನ ಜ್ವರವು ಸುಮಾತ್ರಾದ 

' ಕೂಲೀ ' ಜ್ವರವಾಗಿರಬಹುದೆಂದು ಡಾಕ್ಷರ ನಾಡಗೀರರ ಅಭಿಪ್ರಾಯವು. 

ನಿಮ್ಮ ವಿಜಯರಂಗನಾದರೂ ಇಂಥ ಜ್ವರದಿಂದಲೇ ತೀರಿಕೊಂಡನೆಂದು 

ನೀವೇ ಹೇಳಿರುವಿರಿ, ನನ್ನ ಜ್ವರದ ಲಕ್ಷಣಗಳಾದರೂ ಅಂಥವೇ ಆಗಿವೆ. " 


" ಅಸಾಧ್ಯವಾದ ಬೇನೆ ! ನೋಡಿರಿ, ನಮ್ಮ ಹುಡುಗನು ನನ್ನ ಕಣ್ಣಾರೆ 

ಸತ್ತು ಹೋಗಲಿಲ್ಲವೆ?'' ಎಂದು ಮುದಲಿಯು ಗದ ದಿತ ಕ೦ಠನಾಗಿ 

ನುಡಿದನು. 


" ವಿಜಯರಂಗನ ದೈವವು ವಿಜಯರಂಗನ ಸುತ್ತೆ. ಆದರೆ ನಿಮ್ಮ 

ಉಪಾಯಗಳಿಂದ ನನಗೇಕೆ ವಾಸಿಯಾಗಬಾರದು ? ದಯಮಾಡಿ ನೀವು 

ಮನಸ್ಸಿನ ಮೇಲೆ ತೆಗೆದುಕೊಂಡು ನನಗೆ ಪ್ರಾಣದಾನ ಕೊಟ್ಟರೆ ನಿಮ್ಮ 

ಉಪಕಾರವನ್ನು ಎಳೇಳು ಜನ್ಮಗಳಲ್ಲಿ ಮರೆಯಲಿಕ್ಕಿಲ್ಲ.” 


"ಈ ರೋಗವು ನನಗೆ ಅಸಾಧ್ಯವಾಗಿ ತೋರುತ್ತದೆ'' ಎಂದು 

ಮುದಲಿಯಾರನಂದನು. 


" ಹಾಗೆನ್ನ ಬೇಡಿರಿ, ಕೃಪೆಮಾಡಿರಿ. ನಾನು ಹಿಂದಕ್ಕೆ ನಿಮಗೆ 

ವಿರೋಧಿಯಾಗಿ ನಡೆದೆನೆಂದು ಸಿಟ್ಟು ಹಿಡಿಯಬೇಡಿರಿ. ಇನ್ನು ಮೇಲೆ ನಾವೂ 

ನೀವೂ ಸಖ್ಯದಿಂದಲೇ ಇರತಕ್ಕದ್ದೆಂದು ನಾನು ಬಯಸುತ್ತೇನೆ. ಅಯ್ಯಯ್ಯೋ! 

ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಕಾಲು ಭಾರವಾಗಿದೆ; ಎಳಕೊಳ್ಳ 

ಲಿಕ್ಕೆ ಬರಲೊಲ್ಲದು ಸಾಯುತ್ತೇನೆ. ಕಲ್ಯಾಣಸುಂದರರೆ, ಹೊಟ್ಟೆಯಲ್ಲಿ 

ಹಾಕಿಕೊಳ್ಳಿರಿ ! ” ಎಂದು ಸರಕಾಕ್ಷನು ಚೀರಿದನು. 


" ಇದೇ ಸರಲಾಕ್ಷ, ಮರಣದ ಚಿಹ್ನಗಳು ತೋರಲಾರಂಭಿ 

ಸಿದವು. ನೀನು ಇನ್ನೊ೦ದು ತಾಸೆರಡು ತಾಸಿನ ಜೊತೆಗಾರನು. ದುರಾತ್ಮಾ, 

ನೀನು ನನ್ನ ಕೊರಳಿಗೆ ಉರಲು ತರಬೇಕೆಂದು ಮಾಡಿದ್ದಿರಲ್ಲವೆ ? ಆದರೆ 

ಫಲಭೋಗವನ್ನು ಈಗ ನೀನು ಉಣ್ಣು ! ” 


"ಹಾಗೆ ನಿರ್ದಯರಾಗಬೇಡಿರಿ, ನನ್ನನ್ನು ಉಳಿಸಿಕೊಳ್ಳಿರಿ. ” 


" ನಿನ್ನನ್ನು ಉಳಿಸಿಕೊಳ್ಳುವದು ಇನ್ನು ಧನ್ವಂತರಿಗೂ ಅಸಾಧ್ಯವು  

ದುಷ್ಟನೆ, ನಿನಗೆ ವಿಜಯರಂಗನ ಮರಣದ ಶೋಧ ಬೇಕಾಗಿತ್ತಲ್ಲವೆ ? ನಾನೇ 

ಅವನನ್ನು ಕೊಂದೆನು. ನೀನೇನು ಮಾಡುವಿ ಇನ್ನು ? ” 


" ನಿಮ್ಮ ಹುಡುಗನನ್ನು ನೀವೇ ಕೊಂದಿರೆಂಬುವದು ಅಸಾಧ್ಯವು 

'ಕೂಲಿ' ಜ್ವರವನ್ನು ಮನುಷ್ಯನ ಹೊಟ್ಟೆಯಲ್ಲಿ ನೀವು ಹೇಗೆ ಹಾಕಬಲ್ಲಿರಿ ?” 


" ಸರಲಾಕ್ಷ, ನೀನು ಜಾಣನೆಂದು ನಾನು ತಿಳಿದಿದ್ದೆನು. ಇಕೋ,. 

ಈ ಮಾಡದಲ್ಲಿಯ ಜಂತದ ಕರಡಿಗೆಯನ್ನು ನೋಡು, ಇದರಲ್ಲಿ ಒಂದು 

ಸೂಕ್ಷ್ಮವಾದ ತಂತಿಯ ಸುರುಳೆಯಿದೆ. ಆದರೆ ಕೊನೆಗೆ ಆ ಜ್ವರದ ಕೀಟಕದ 

ರಸವನ್ನು ತಗಲಿಸಿದ್ದೆನು, ಇದೇ ಕರಡಿಗೆಯನ್ನು ಅಂಚೆಯವನು ಬುಧವಾರ 

ದಿವಸ ಪ್ರಾತಃಕಾಲಕ್ಕೆ ತಂದು ಕೊಟ್ಟ ನಷ್ಟ ? ಅದನ್ನು ನಾನೇ ನಿನಗೆ ಕಳಿ 

ಸಿದ್ದೆನು. " 

 

" ಆಹುದೇನು ? ಆ ಕರಡಿಗೆಯನು ನಾನು ಕೈಯಲ್ಲಿ ತೆಗೆದುಕೊಂಡ 

ಕೂಡಲೆ ಒಳಗಿನ ತಂತಿಯು ನನ್ನ ಕೈಗೆ ನಟ್ಟಿತು ” ಎಂದು ಸರಲಾಕ್ಷನು. 

ನುಡಿದನು. 


" ಅದೇ ತುತಿಯ ತುದಿಗೆ ವಿಷವಿತ್ತು. ಆ ವಿಷವು ನಿನ್ನ ಕೈಯಲ್ಲಿ 

ಸೇರಿದಾಗಿನಿಂದ ನಿನಗೆ ಜ್ವರ ಬಂದಿತಲ್ಲವೆ ? ಈ ರೀತಿಯಾಗಿಯೇ ನಾನು 

ನನ್ನ ಅಣ್ಣನ ಮಗನಾದ ವಿಜಯರಂಗನನ್ನು ಕೊಂದೆನು. ನನ್ನ ವೈರಿಯಾದ 

ನಿನ್ನನ್ನು ಈಗ ಯಮಸದನಕ್ಕೆ ಆಟ್ಟುವೆನು. ವಿಜಯರಂಗನನ್ನು ಕೊಂದವನ 

ಶೋಧವು ನಿನಗೆ ಬೇಕಾಗಿತ್ತಲ್ಲವೆ ? ಈಗ ಶೋಧವಾಯಿತಲ್ಲ ! ಹೊಡೆ 

ಪಾಂಚಜನ್ಯವನ್ನು ! " 


" ಅಯ್ಯೋ ! ನಾನಿನ್ನೇನು ಮಾಡಲಿ ? ಹೊಟ್ಟೆಯೊಳಗೆ ಸಂಕಟವು 

ಹೆಚ್ಚಾಯಿತು! ಕಲ್ಯಾಣ ಸುಂದರಂ, ವಿಜಯ ರಂಗನನ್ನು ನೀವು ಕೊ೦ದಿರಲಿ 

ಕೊಲ್ಲದಿರಲಿ, ಆ ಬಗ್ಗೆ ನಾನಿನ್ನು ಯತ್ತಿಂಚಿತ್ತಾದರೂ ಮನಸ್ಸು ಹಾಕುವದಿಲ್ಲ. 

ನನ್ನನ್ನು ಉಳಿಸಿಕೊಳ್ಳಿರಿ. ಆಹಾ !ಆಹಾ!' ಎಂದು ಕೆಮ್ಮಿ "ಗಂಟಲು 

ಒಣಗುತ್ತದೆ, ತುಸು ನೀರು ಕೊಡಿರಿ, ” 


" ತೆಗೆದುಕೊಳ್ಳು, ನೀರು ಕುಡಿದು ಸಾಯಿ. ಇನ್ನು ನೀನು ಎರಡು 

ಗಳಿಗೆಯಲ್ಲಿ ಪ್ರೇತನಾಗುವಿ. " 


ಸರಲಾಕ್ಷನು ನೀರು ಕುಡಿದು ಉಗುಳಿ "ನೀರು ಗಂಟಲಿನಲ್ಲಿ ಇಳಿ 

ಯಲೊಲ್ಲದು. ಕಣ್ಣು ಕತ್ತಲೆಗುಡಿಸುತ್ತವೆ. ಕಲ್ಯಾಣಸುಂದರಂ, ದೀಪವನ್ನು 

ನಿಚ್ಚಳವಾಗಿ ಮಾಡಿರಿ, ” 


" ಆಗಲಿ, ಈ ಪ್ರಕಾಶವು ಕೂಡ ನಿನ್ನ ಕಣ್ಣಿಗೆ ಬೆಳಕು ಕೊಡಲಾ 

ರದು ” ಎಂದು ಹೇಳಿ ಮುದಲಿಯಾರನು ಗ್ಯಾಸದ ದೀಪವು ಚನ್ನಾಗಿ ಉರಿ 

ಯುವಂತೆ ಎತ್ತಿದನು. 


ಪ್ರಕಾಶವು ಸಂಪೂರ್ಣವಾಗಿ ಬಿದ್ದ ಕೂಡಲೆ ಸರಲಾಕ್ಷನು ಟಣ್ಣನೆ 

ಎದ್ದು ಕುಳಿತು "ಶಾಬಾಸ್ ಮುದಲಿಯಾರನೆ, ಚನ್ನಾಗಿ ಮಾಡಿದಿ. 

ಇನ್ನು ನಾಲ್ಕಾರು ಸಿಗರೆಟ್ಟುಗಳನ್ನು ಕೊಡು, ಒಳ್ಳೇ ಹುರುಪಿನಿಂದ ಸೇದು 

ವೆನು. ” ಎಂದು ರೋಗರಹಿತನ ದನಿ ತೆಗೆದು ಗಂಟೆ ಹೊಡೆದಂತೆ ನುಡಿದನು. 

 

"ಸರಲಕ್ಷ, ಹೀಗೇಕೆ ಮಾಡುವಿ? ಎದ್ದು ಕೂತಬೇಡ, ನಿನ್ನ 

ಜೀವಕ್ಕೆ ಈಗಲೇ ಆಪಾಯವಾದೀತು” ಎಂದು ಮುದಲಿಯು ತನ್ನ ಕುರ್ಚಿ 

ಯಿಂದೆದ್ದು ಸರಲಾಕ್ಷನ ಹಾಸಿಗೆಯ ಸಮೀಪಕ್ಕೆ ಬಂದನು. 


“ ದೂರದಲ್ಲಿರು ನೀಚನೆ, ನನ್ನ ಮೈ ಮೇಲೆ ಬಂದರೆ ನಿನ್ನನ್ನು ಕಾಲಿ 

ಲೊದ್ದು ಕೆಡಹುವೆನು, ವೈದ್ಯ ವಾತಾತ್ಮಜರೆ, ಅಡಗಿಕೊಂಡ ಮೆಟ್ಟು ಬಿಟ್ಟು 

ಹೊರಗೆ ಬನ್ನಿರಿ ” ಎಂದು ಹುಲಿಮೀಸೆಯು ಹುರುಪಿನಿಂದ ನುಡಿದನು. 


ನಾನು ಹೊರಬಿದ್ದು ಬಂದೆನು. ಅಷ್ಟರಲ್ಲಿ ಬಾಗಿಲವನ್ನು ತೆರೆದು 

ಗೋವಿಂದರಾವ ಪೋಲೀಸ್ ಇನ್ಸ್ಪೆಕ್ಟರರೂ ಬಂದರು. ಮುದಲಿಯು 

ಓಡಿ ಹೊಗಬೇಕೆಂದು ಪ್ರಯತ್ನ ಮಾಡುವಷ್ಟರಲ್ಲಿಯೇ ಪೋಲಿಸರು ಅವ 

ನನ್ನು ಹಿಡಿದು ಚತುರ್ಭುಜನನ್ನಾಗಿ ಮಾಡಿದರು. 


ಕಲ್ಯಾಣಸುಂದರನು ಮನೆ ಆದ ರುವಂತೆ ಗದ್ದರಿಸುತ್ತೆ "ಯಾರು 

ನೀವು ? ನನಗೆ ಬೇಡಿಯನ್ನು ಹಾಕಲಿಕ್ಕೆ ನಿಮಗೇನು ಅಧಿಕಾರ ? ನನ್ನ 

ಅಪರಾಧವೇನು ? ” ಎಂದು ಕೇಳಿದನು.


ಸರಲಾಕ್ಷನು ಹಾಸಿಗೆಯಿಂದೆದ್ದು ನಿಂತು, " ಕಲ್ಯಾಣಸುಂದರಂ,ಿ 

ನಿನ್ನ ಅಪರಾಧವೇನೆಂದು ಕೇಳುವಿಯಾ? ಇನ್‌ಸ್ಪೆಕ್ಟರ ಸಾಹೇಬರಿಗೆ ಈಗಲೇ 

ಹೇಳುವೆನು” ಎಂದು ನುಡಿದು ಇನ್ಸ್ಪೆಕ್ಟರರನ್ನು ಕುರಿತು, 

" ಗೋವಿಂದರಾವಜಿ, ಈ ನರಾಧಮನ ಅಣ್ಣನಾದ ಸೋಮಸುಂದ 

ರನು ವ್ಯಾಪಾರದಲ್ಲಿ ಘನತೆಯನ್ನು ಹೊಂದಿ ಮೂರುನಾಲ್ಕು ಲಕ್ಷ ರೂಪಾಯಿ 

ಗಳನ್ನು ಸಂಪಾದಿಸಿ ಸತ್ತು ಹೋದನು. ಅವನು ಸತ್ತ ಬಳಿಕ ಅವನ ಮಗ 

ನಾದ ವಿಜಯರಂಗನು ಈ ಪಾಪಿಯ ಆಶ್ರಯಕ್ಕೆ ಬಂದನು. ಈ ಕೊಲೆ 

ಗಡ ಕನು ಹೇಗಾದರೂ ಮಾಡಿ ಆ ಮಗುವನ್ನು ಕೊಂದು ಸೋಮಸುಂದರನ 

ಹಣವನ್ನೆಲ್ಲ ಅಪಹರಿಸಬೇಕೆಂಬ ದುರ್ಬುದ್ಧಿಯಿಂದ 'ಕೂಲೀ' ಜ್ವರದ 

ಕ್ರಿಮಿಗಳನ್ನು ತರಿಸಿ ಅವುಗಳ ರಸಿಕೆಯನ್ನು ವಿಜಯರಂಗನ ಮೈಗೆ ತಗಲಿಸಿ 

ದನು. ಪಾಪ, ಆ ಕೂಸು ಭಯಂಕರವಾದ ಆ ಜ್ವರದ ಬಾಧೆಗೆ ಈಡಾಗಿ 

ಮೂರೇ ದಿವಸಗಳಲ್ಲಿ ಮಡಿದುಹೋಯಿತು. ಕಲ್ಯಾಣ ಸುಂದರನು ತನ್ನ ಪಾಪ 

ಕೃತ್ಯವನ್ನು ಈಗಲೇ ನನ್ನ ಮುಂದೆ ಒಪ್ಪಿಕೊಂಡಿದ್ದನ್ನು ಈ ವಾತಾತ್ಮಜ 

ವೈದ್ಯರು ಕೇಳಿದ್ದಾರೆ. ಇದೇ ವಿಷದ ಕರಡಿಗೆಯು ” ಎಂದು ಆ ಜಂತದ 

ಕರಡಿಗೆಯನ್ನು ಪೊಲೀಸರ ಸ್ವಾಧೀನ ಮಾಡಿದನು. ಪೋಲೀಸರು ಆರೋಪಿ ಯನ್ನು 

ಜಗ್ಗಿಕೊಂಡು ನಡೆದರು. 


ಇನ್ ಸ್ಪೆಕ್ಟರ ಗೋವಿಂದರಾಯರೂ ನಾನ ಕುಳಿತುಕೊಂಡು ಇದೇನು 

ಚಮತ್ಕಾರವೆಂದು ಸರಲಾಕ್ಷನನ್ನು ಕೇಳಿದೆವು. 


"ಇದೊಂದು ಶೋಧಕನ ಜಾಣ್ಮಯ ಚಮತ್ಕಾರವು'' ಎಂದು ನುಡಿದು 

ಸರಲಾಕ್ಷನು ನಕ್ಕನು. 


" ನಿಮ್ಮ ಬೇನೆ ಸುಳ್ಳು! ?” ಎಂದು ನಾನು ಚಕಿತನಾಗಿ ಕೇಳಿದೆನು. 

 

" ಎಲ್ಲಿಯ ಬೇನೆ ಏನು ಕಥೆ, ಬೇನೆಯ ಸೋಗು ಹಾಕಿಕೊಂಡಿ 

ದ್ದೆನು. ಮೂರು ದಿವಸ ಮಾತ್ರ ವಿಷ್ಣು ಪಂಚಕವನ್ನು ಮಾಡಿ ಮೈಯಲ್ಲಿ 

ನಿತ್ರಾಣವನ್ನು ತಂದುಕೊಂಡು ಮೋರೆಗೆ ವ್ಯಾಸಿಲಿನ್ ಎಣ್ಣೆಯನ್ನು ಸವರಿ 

ತುಟಿಗೆ ಮೇಣವನ್ನು ಹಚ್ಚಿಕೊಂಡು ಸಜ್ಜನಾಗಿ ಕೂತಿದ್ದೆನು, ಕಲ್ಯಾಣನಿಗೆ 

ಸಂಶಯ ಬರಲೇ ಇಲ್ಲ, ಹೇಗೆ ಬರುವದು ? ” ಎಂದು ಸರಲಾಕ್ಷನು 

ಹೇಳಿದನು. 


ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಗೆ ಈ ವರ್ತಮಾನವು 

ತಿಳಿದ ಕೂಡಲೆ ಆನಂದದಿಂದ ಕುಣಿದಾಡಿದಳು, " ರಾಯರೆ, ನೀವು ಇಷ್ಟು 

ಕೃತ್ರಿಮರಾಗಿರುವಿರಾ ? ” ಎಂದು ಬಾಯ ಮೇಲೆ ಕೈ ಇಟ್ಟುಕೊಂಡಳು. 


" ಹೋಗಮ್ಮಾ, ಹಸಿವೆಯಾಗಿದೆ, ವಿಲಕ್ಷಣವಾದ ಹಸಿವೆಯಾಗಿದೆ. 

ಸಮೀಚೀನವಾದ ಉಪಹಾರವನ್ನು ನೀನೀಗಲೆ ತರದಿದ್ದರೆ ನಿನ್ನನ್ನೇ ಮುರಿದು 

ತಿನ್ನು ವೆನು” ಎಂದು ಸರಲಾಕ್ಷನು ನಗುತ್ತೆ ನುಡಿದನು. 

 

ಲೀಲಾಬಾಯಿಯು ಮರು ಬೆಳ್ಳಿಯ ತಾಟುಗಳಲ್ಲಿ ಘಮಘಮಿಸುವ 

ಪಕ್ಷಾನ್ನಗಳನ್ನೂ ಹಾಲು ಕಾಫಿಗಳನ್ನೂ ಅವರೆಲ್ಲರ ಮುಂದಿರಿಸಿ ತಿನ್ನಿತಿನ್ನಿ 

ರೆಂದು ಆಗ್ರಹ ಮಾಡುತ್ತಲೂ ಸಂತೋಷದಿಂದ ನಗುತ್ತಲೂ ಅಲ್ಲಿಯೇ ನಿಂತಿದ್ದಳು. 

=============================================

ವಿಸ್ಮಯಜನಕವಾದ ಹಿಂಸೆಯ ಕ್ರಮವು 


ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು 

'ಹಾವಾನಾ ಸಿಗರ' (ತಂಬಾಕದ ಸುರುಳಿ) ಸೇದುತ್ತೆ ತನ್ನ ಆರಾಮ ಕುರ್ಚಿ 

ಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. 

ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ 

ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳಿಗೆ ಹೋರಾಡುತ್ತಿರುವದನ್ನು ಮೇಲ್ 

ದೃಷ್ಟಿಯಿಂದ ನೋಡುತ್ತ ಕುಳಿತಿದ್ದನು. ಆಗ “ Your presence makes , 

my heart rejoice and sing ( ನಿನ್ನ ಮುಖವ ಕಂಡು ಹರುಷಮಾಗಿ 

ಗಾನೋನ್ಮುಖಳಾಗಿರುವೆನು )” ಎಂದು ಇಂಗ್ಲಿಶದಲ್ಲಿ ಯಾರೋ ಬಹು 

ಮ೦ಜುಲವಾಗಿ ಹಾಡಿದರು. ಡಿಗ್ಬಿಯು ಚಕಿತನಾಗಿ ಎದ್ದು ಕುಳಿತು 

ಗಾಯಕಿಯನ್ನು ಕಂಡು " ಡಿಯಾನಾ ! ” ಎಂದು ಉದ್ಗಾರ ತೆಗೆದನು. 

 

"ವಾಲೆಂಟಾಯಿನ್, ಇಂದು ಮುಂಜಾವಿನಲ್ಲಿ ನನ್ನ ಮನೆಗೆ ಚಹ 

ಉಪಹಾರಕ್ಕೆ ಬರುವಿಯೆಂದು ನಂಬಿ ನಿನ್ನ ಮಾರ್ಗಪ್ರತೀಕ್ಷೆಯನ್ನು ಮಾಡಿ 

ಮಾಡಿ ಬೇಸತ್ತು ಹೋದೆನು. ಎಲ್ಲಿ ಹೋಗಿದ್ದಿ ನೀನು? ” ಎಂದು ಡಿಯಾನಾ 

ಸುಂದರಿಯು ತನ್ನ ಸುಲಲಿತವಾದ ಹಸ್ತವನ್ನು ಆ ತರುಣನ ಭುಜದ ಮೇಲೆ 

ಒಯ್ಯಾರದಿಂದಿಟ್ಟು ಮಂದಸ್ಮಿತೆಯಾಗಿ ಕೇಳಿದಳು. 


ಡಿಗ್ಬಿಯು ತನ್ನ ಸುಖಾಸನದಿಂದೆದ್ದು ಡಿಯಾನೆಯ ಕೈ ಹಿಡಿದು ಅವ 

ಳನ್ನು ಹಂಸತೂಲಿಕೆಯು ಮಂಚದ ಮೇಲೆ ಕುಳ್ಳಿರಿಸಿ « ಡಿಯಾನಾ, ಇಂದು 

ನನ್ನಿಂದ ಅನುಚಿತವಾಯಿತು; ಕ್ಷಮಿಸು. ನಾನು ಬೇಗನೆ ಇಂಗ್ಲಂಡಕ್ಕೆ 

ತೆರಳುವವನಾಗಿರುವದರಿಂದ ಅನೇಕವಾದ ವ್ಯವಸ್ಥೆಗಳನ್ನು ಮಾಡಿಟ್ಟು ಕೊಳ್ಳು 

ವದರಲ್ಲಿ ತೊಡಗಿದ್ದೆನು” ಎಂದು ನುಡಿದು ಆ ಸುಂದರಿಯ ಹಸ್ತವನ್ನು 

ಗಟ್ಟಿಯಾಗಿ ಹಿಡಿದು ಕ್ಷಮೆ ಬೇಡಿದನು. 


ಡಿಯಾನೆಯು ಆ ಸುಸಂಧಿಯನ್ನು ಸಾಧಿಸಿಕೊಂಡು ವ್ಹಾಲೆಂಟಾಯಿನ 

ನನ್ನು ಭರದಿಂದ ಜಗ್ಗಿ ತನ್ನ ಪಾರ್ಶ್ವದಲ್ಲಿ ಕುಳ್ಳಿರಿಸಿಕೊಂಡು " ಪುರುಷ 

ರಲ್ಲಿನ್ನು ವಿಶ್ವಾಸವನ್ನೇ ಇಡಬಾರದಾಯಿತು ! ” ಎಂದು ಅಧಿಕ್ಷೇಪಿಸುವ 

ನುಡಿಯಾಡಿದರೂ ಅವಳು ಆ ತರುಣನನ್ನು ಪ್ರೇಮದಿಂದ ಬಿಗಿದಪ್ಪುವಳೋ 

ಎಂಬಂತೆ ಅವನ ಹೆಗಲ ಮೇಲೆ ಕೈ ಹಾಕಿ ಮುದ್ದು ಬರುವಂತೆ ಮುಗುಳು 

ನಗೆ ನಕ್ಕಳು. 


ಡಿಯಾನೆಯು ಬಲು ಚಲುವೆಯಾದ ಹೆಂಗಸು ಅವಳ ಅಂಗ  ಕಾಂತಿಯು 

ತೇಜಸ್ಸುಳ್ಳದ್ದಾಗಿತ್ತು. ಸಶಕ್ತಳಾದ ಪ್ರೌಢೆಯು ಮೂವತ್ತು 

ಮೂವತ್ತೆರಡು ವರ್ಷದ ಪ್ರಾಯದವಳಾfದ ರೂ ಅರಿಯದವರಿಗೆ ಅವಳು 

ಇಪ್ಪತ್ತು ವರ್ಷದ ನವತರುಣಿಯಂತೆ ಕಾಣುತ್ತಿದ್ದಳು. ಅವಳ ಉಡಿಗೆ 

ತೊಡಿಗೆಗಳು ಬೆಲೆಯುಳ್ಳವುಗಳೂ ಅಂದವಾಗಿ ಕಾಣುವಂತೆ ಮಾಡಿದ್ದವೂ 

ಆಗಿದ್ದವು. ಚಕಚಕನೆ ಹೊಳೆಯುವ ರತ್ನ ಖಚಿತವಾದ ದ್ರಾಕ್ಷಬಳ್ಳಿಯು 

ಅವಳ ನೀಲಾಳಕಗಳನ್ನು ಬಂಧಿಸಿತ್ತು. ವಜದ ಪದಕದಿಂದ ಥಳಥಳಿಸುವ 

ಮುಕ್ತಾಹಾರವು ಅವಳ ದಿವ್ಯವಾದ ಕ೦ಠದಿಂದ ಇಳಿಬಿದ್ದು, ಅರ್ಧ ವ್ಯಕ್ತವಾಗಿ 

ರುವ ಪೀನೋನ್ನತವಾದ ವಕ್ಷೋಜಗಳನ್ನು ಅಲಂಕರಿಸಿತ್ತು. ಕೆಂಡದಂತೆ 

ಪ್ರಕಾಶಿಸುತ್ತಿರುವ ಮಾಣಿಕದ ಉಂಗುರವು ಆ ಸುಂದರಿಯ ಸುಲಿಶವಾದ 

ಹಸ್ತಕ್ಕೆ ವಿಲಕ್ಷಣವಾದ ಶೋಭೆಯನ್ನು ಕೊಟ್ಟಿತ್ತು. ಆ ಮೀನಾಕ್ಷಿಯ 

ಕಟಾಕ್ಷಕ್ಷೇಪವು ಕಠೋರಹೃದಯರಾದ ಪುರುಷರ ಎದೆಗಳನ್ನು ಕ್ಷಣಮಾತ್ರ 

ದಲ್ಲಿ ಸೀಳಿಬಿಡುವಂತೆ ಕಂಡಿತು, ಪರಿಪಕ್ವವಾದ ಬಿಂಬದಂತೆ ಕೆ೦ಪಾಗಿ 

ತೋರುವ ಅವಳ ಅಧರದಲ್ಲಿ ಅಮೃತವೇ ಇರುವದೆಂದು ನಂಬಿ ಅಪ್ರೌಢ್ಢರಾದ 

ತರುಣರು ಬಟ್ಟು ಬಿಡದಲೆ ಅವಳ ಮುಖವನ್ನೇ ನೋಡುತ್ತ ನಿಲ್ಲಬಹುದು 

ಕೋಕಿಲಸ್ವರವನ್ನು ಹೀಯಾಳಿಸುವ ಅವಳ ಮಂಗಳ ವಾ ಧ್ವನಿಯನ್ನೂ 

ಅವಳ ವಿನೋದಯುತವಾದ ಸವಿನುಡಿಗಳನ್ನೂ ಕೇಳಿ ಮುಗ್ಧರು ಕೂಡ 

ಸ್ಫೂರ್ತಿಯನ್ನು ಹೊಂದಿ ಆಗ್ಗಳವಾದ ನುಡಿಗಳಿಂದ ಅವಳ ಸ್ತುತಿ ಮಾಡು 

ವರು. ಅಂಥ ವಿಲಾಸಿನಿಯಾದ ಸುಂದರಿಯು ಮುಗುಳುನಗೆಯನ್ನು ತಾಳಿ 

ಮೋಹ ಬರುವಂತೆ ಪ್ರಶ್ನೆ ಮಾಡಿದಾಗ ವ್ಹಾಲೆಂಟಾಯಿನನು ನಿರ್ಜಿತನಾಗಿ 

" ನಾನು ಮಾಡಿದ ತಪ್ಪೇನು? ” ಎಂದು ನುಡಿದು ಅವಳ ಪಾರ್ಶ್ವವನಾ 

ಶ್ರಯಿಸಿಕೊಂಡು ಕುಳಿತನು. 


" ಏನೆಂದರೇನು ಹೇಳಲಿ ? ಕಠೋರ ಹೃದಯನಾದ ತರುಣನೆ, 

"ಕಾಮಿನಿಯರ ಹೃದಯವನ್ನು ಅಪಹರಿಸಿಕೊಂಡು ಹಾಗೆ ಮಹಾಸಾಗರದ 

ಆಚೆಯ ದಂಡೆಗೆ ಹೋಗಿ ಕುಳ್ಳಿರುವ ವಿಚಾರ ಮಾಡಿದರೆ ನನ್ನ ಗತಿ 

ಯೇನು ? ” 


ವ್ಹಾಲೆಂಟಾಯಿನನು ಆ ಸುಂದರಿಯ ಕಂದುಟಿಯನ್ನು ರಭಸದಿಂದ 

ಚುಂಬಿಸಿ ನಕ್ಕು ' ಡಿಯಾನಾ, ನಾನಿನ್ನೂ ಬಡವನು, ನಿನ್ನ೦ಥ ವಿಲಾ 

ಸಿನಿಯ ಪತಿಯಾಗಿ ನಿನ್ನ ಸಕಲಾಭೀಷ್ಟಗಳನ್ನು ಒದಗಿಸಿಕೊಡಬೇಕಾದರೆ 

ನನ್ನಲ್ಲಿ ಕುಬೇರನ ಸಂಪತ್ತು ಬೇಕು, ಮತ್ತು ಮಾಣಿಕ ವಜ್ರ ವೈಡೂರ್ಯ 

ಗಳಿಂದ ನಿನ್ನ ಪ್ರತ್ಯಂಗವನ್ನು ಅಲಂಕರಿಸದಿದ್ದರೆ ನಾನು ಸ್ತ್ರೀಸೌಂದರ್ಯದ 

ದ್ರೋಹಿಯಾಗುವೆನು, '' ಎಂದು ಮೆಲ್ಲನೆ ನುಡಿದನು. 


" ಪ್ರಿಯನೆ, ನಮ್ಮ ಸಮಾಜದ ನಿಯಮಗಳನ್ನು ನೋಡಲಾಗಿ 

ಸ್ತ್ರೀಯು ತನ್ನ ಮನೋಗತವನ್ನು ಸ್ಪಷ್ಟೋಕ್ತಿಗಳಿಂದ ವ್ಯಕ್ತಪಡಿಸುವದು 

ಅಪರಾಧವಾಗಿದ್ದರೂ ನೀನು ನನ್ನನ್ನು ಬಿಟ್ಟು ಸಹಸ್ರಯೋಜನದಾಚೆಗೆ 

ಹೋಗುವ ನಿಶ್ಚಯವನ್ನು ಮಾಡಿದರೆ ನನ್ನ ಮನಸ್ಸು ನಿಲ್ಲುವದೆಂತು ? ” 

ಎಂದು ನುಡಿದು ಡಿಯಾನೆಯ ನೀರಿನಿಂದ ತುಂಬಿದ ತನ್ನ ಕಣ್ಣುಗಳನ್ನು 

ಕರವಸ್ತ್ರದಿಂದ ಒರಿಸಿಕೊಂಡಳು. 


ವ್ಹಾಲೆಂಟಾಯಿನನು ಪರವಶನಾಗಿ ಹೋದನು. ತಾನು ಹಿಂದೆ, 

ಮಾಡಿದ ಅನೇಕವಾದ ನಿಶ್ಚಯಗಳನ್ನೆಲ್ಲ ಮರೆತುಬಿಟ್ಟು ಅವನು ಡಿಯಾನೆ. 

ಯನ್ನು ಭರದಿಂದ ಅಪ್ಪಿಕೊಂಡು ಅವಳ ಅಧರಾಮೃತದ ಸಂಚಯವನ್ನೆಲ್ಲ 

ಬರಿದಾಗಿ ಮಾಡಿದನು. 


" ಡಿಯಾನಾ, ನಿನ್ನ ಸೌಂದಕ್ಕೆ ನಾನು ಸರ್ವಥಾ  ಮೋಹಿತನಾಗಿ 

ರುವೆನು, ಆದರೆ ನಾನಿನ್ನೂ ಬಡವನೇ ಅಲ್ಲವೆ? ದೇವರು ನನ್ನ ಸಾಹಸಕ್ಕೆ 

ಅನುಕೂಲನಾದರೆ ನಾಲ್ಕಾರು ತಿಂಗಳಗಳಲ್ಲಿಯೇ ನಾನು ಶ್ರೀಮಂತರಲ್ಲಿ 

ಶ್ರೀಮಂತನಾಗತಕ್ಕವನು. ಅಲ್ಲಿಯ ವರೆಗೆ ತಡೆ, ಹೀಗೆ ಆತುರಳಾಗಬೇಡ” 

ಎಂದು ವಂಚನಾರಹಿತವಾದ ನುಡಿಗಳಿಂದ ಅವನು ಆ ರಮಣಿಗೆ ಆಶ್ವಾಸನ 

ನನ್ನಿತ್ತನು,  


“ ವ್ಹಾಾಲೆಂಟಾಯಿನ್; ನನ್ನ ಪೂರ್ವದ ಪತಿಯಾದ ಎಡ್ವರ್ಡ ಕ್ಯಾಂಬೆ 

ಲ್ಲನು ಲಗ್ನವಾದ ಎರಡೇ ತಿಂಗಳಲ್ಲಿ ಸಮುದ್ರದ ಪಾಲಾಗಿ ಸತ್ತು ಹೋಗಿ 

ನನ್ನನ್ನು ವೈಧವ್ಯದ ದುಃಖದಲ್ಲಿ ಮುಳುಗಿಸಿ ಹೋದನು. ಆತನಿಂದ ನನಗೆ 

ಪ್ರಾಪ್ತ ವಾದ ಧನವಾದರೂ ವಿಪುಲವಾಗಿದೆ. ನಿನ್ನ ಧನವಿರದಿದ್ದರೇನಾಯಿತು? 

ನಾವು ದಂಪತಿಗಳಾಗಿ ಸುಖಿಗಳಾಗಿರಬಲ್ಲೆ ವಷ್ಟೆ ? ಅದಿರಲಿ, ಆ ನಿನ್ನ 

ಸಾಹಸವಂಥದು ? " 


" ಇದೇ ಬ್ರೆಝಿಲ್ ದೇಶದಲ್ಲಿಯ ಕೆಲವೊಂದು ಅರಣ್ಯದಲ್ಲಿ ಎಷ್ಟು 

ಅಗಿದರೂ ಸವೆಯದಂಥ ಬಂಗಾರದ ಖನಿಗಳಿವೆ. ನಾನು ಆ ಪ್ರದೇಶದ 

ನಕಾಶವನ್ನು ಮಾಡಿಟ್ಟು ಕೊಂಡಿದ್ದೇನೆ. ” 


" ಆಹುದೇನು ? ” ಎಂದು ಡಿಯಾನೆಯು ಆಶ್ಚರ್ಯಯತಳಾಗಿ 

ಉದ್ದಾರ ತೆಗೆದು "ವ್ಹಾಲೆಂಟಾಯಿನ್, ಈ ಸುದ್ದಿಯನ್ನು ನನಗೆ ಹೇಳಿಯೇ 

ಇಲ್ಲ. ಇಂಥ ವಿಚಾರದಲ್ಲಿ ನೀನಿರುವಿಯೆಂದು ನಾನು ತರ್ಕಿಸಿಯೇ ಇದ್ದೆನು, 

ಆ ನಕಾಶವೆಲ್ಲಿ ? ” ಎಂದು ಕೇಳಿದಳು. 


" ಅದನ್ನೀಗಲೇ ತೋರಿಸುವಂತೆ ಇಲ್ಲ. ಯಾರಿಗಾದರೂ ಇಂಥ 

ದೊಂದು ಸ್ಥಳದಲ್ಲಿ ಬಂಗಾರವಿದೆಯೆಂದು ತಿಳಿದರೆ, ಶೋಧ ಮಾಡಿದವನಾದ 

ನಾನು ಕಡೆಗುಳಿದು ವಂಚಕರೇ ಆ ಸಂಪತ್ತಿನ ಅಪಹಾರ ಮಾಡುವರು.” 


" ಹೀಗೇನು ? ನೀನು ಈಗ ಇಂಗ್ಲಂಡಕ್ಕೆ ಹೊರಟಿರುವದೇಕೆ ? 

ಎಂದು ಡಿಯಾನೆಯು ವಿಲಾಸದಿಂದ ವ್ಹಾಲೆಂಟಾಯಿನನ ಭುಜಕ್ಕೆ ತನ್ನ 

ಮುಖವನ್ನಾನಿಸಿಕೊಂಡು ಕುಳಿತು ಕೇಳಿದಳು. 


" ಬಂಗಾರದ ಖನಿಗಳಲ್ಲಿ ಕೆಲಸ ಮಾಡಬೇಕಾದರೆ ಯಂತ್ರಸಾಹಿತ್ಯ 

ರಸಾಯನಶಾಲೆ ಕೂಲಿಕುಂಬಳಿಗಳ ವ್ಯವಸ್ಥೆ ಮುಂತಾದವುಗಳಿಗಾಗಿ ಹೇರಳ 

ವಾದ ಹಣ ಬೇಕು, ಲಂಡನದ ಫೋರ್ಬ್ಸ ಬ್ಯಾಂಕಿನಲ್ಲಿ ಮಿತಿಮೀರಿದ ಧನ 

ರಾಶಿ ಒಟ್ಟಿದೆ. ಆ ಬ್ಯಾಂಕಿನವರಿಗೆ ನನ್ನ ವಿಚಾರವನ್ನು ತಿಳಿಸಿ ಅವರಿಂದ 

ಧನಸಹಾಯವನ್ನು ಪಡೆದೆನೆಂದರೆ, ನಾನು ಹೇಳಿದ ಅರಣ್ಯದಲ್ಲಿ ಉದ್ಯಮ 

ಶಾಲೆಗಳಿಂದಲೂ ಕೂಲಿಕಾರ ವ್ಯಾಪಾರಸ್ಥರ ಮನೆಗಳಿಂದಲೂ ತುಂಬಿದ 

ದೊಡ್ಡದೊಂದು ನಗರವೇ ಆಗುವದು, ಬಳಿಕ ನಾನೇ ಅಲ್ಲಿಯ ರಾಜನು. 

ಧನವಂತರ ಅರಸನಾದ ವ್ಹಾಲೆಂಟಾಯಿನ್ ಡಿಗ್ಬಿಯ ಪ್ರಿಯಪತ್ನಿಯಾದ 

ನೀನು ಉಡುಗಣದ ಮಧ್ಯದಲ್ಲಿ ತೆರೆಯುವ ಚಂದ್ರಮಂಡಲದಂತೆ 

ವಿರಾಜಿಸುವಿ." 


"ಕೃತಾರ್ಥಳಾದೆನು ಪ್ರಿಯ ವ್ಹಾಲೆಂಟಾಯಿನ್ | ಈ ವಚನವನ್ನು 

ದೇವರಾಣೆ ಯಾಗಿ ಕಾಪಾಡುತ್ತಲಿರು. ನೀನು ಇಂಗ್ಲಂಡಕ್ಕೆ ಹೋಗುವದೇ 

ಆದರೆ ಒಬ್ಬನೇ ಹೋಗಬೇಡ, ಸಂಗಡ ಪರಲೋಕವಾಸಿಯಾದ ನನ್ನ 

ಗಂಡನ ಆಪ್ತನಾದ ಜಾರ್ಜ ಕ್ಯಾಂಬೆಲ್ಲವನ್ನು ಕಳಿಸುವೆನು. ಅವನು ರಸಾ 

ಯನ ಶಾಸ್ತ್ರ ನಿಪುಣನು, ಲಂಡನದಲ್ಲಿ ಒಂದು ರಸಾಯನ ಶಾಲೆಯನ್ನು 

ಹಾಕಿಕೊಂಡಿರುವನಂತೆ. ಹೋಗಲಿ, ನನಗೂ ಅವನ ಕಿಟಕಿಟ ತಪ್ಪಿದ೦ತಾ 

ಗುವದು, ಮಾರ್ಗದಲ್ಲಿ ನಿನಗೂ ಜೋಡಾಗುವನು.” 


ಮುಂದೆ ಕೆಲಹೊತ್ತು ಆ ಮಾತು ಈ ಮಾತುಗಳಾದ ಬಳಿಕ ಡಿಯಾ 

ನೆಯು ಡಿಗ್ಬಿಯ ಅಪ್ಪಣೆ ಯನ್ನು ತೆಗೆದುಕೊಂಡು ತನ್ನ ಮನೆಗೆ ಹೊರಟು 

ಹೋದಳು. 


ವ್ಹಾಲೆಂಟಾಯಿನ್ ಡಿಗ್ಬಿಯು ಲಂಡನಕ್ಕೆ ಬಂದು ಫೋರ್ಬ್ಸ ಬ್ಯಾಂಕಿನ 

ಮುಖ್ಯ ವ್ಯವಸ್ಥಾಪಕನಾದ ಸರ ಆರಥರ ರಸೆತಲ್ಲನ ಮುಂದೆ ತನ್ನ ವಿಚಾರ 

ಗಳನ್ನೆಲ್ಲ ಪ್ರಕಟಗೊಳಿಸಿ ತಾನು ತಂದಿದ್ದ ಖನಿಗಳ ನಕಾಶೆ ಯನ್ನೂ ಬಂಗಾರ 

ದಿಂದ ಕೂಡಿದ ಅದುರಿನ ಮಣ್ಣನ್ನೂ ತೋರಿಸಿದನು. ಲಂಡನದ ವಿಖ್ಯಾತ 

ರಾದ ಭಗರ್ಭಶಾಸ್ತ್ರಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ರಸೆಲ್ಲನು 

ಡಿಗ್ಬಿಯ ವಿಚಾರಗಳಿಗೆ ಒಪ್ಪಿಕೊಂಡು ಧನಸಹಾಯವನ್ನು ಮಾಡಲು 

ಸಿದ್ದನಾದನು. ಡಿಗ್ಬಿಯು ಚತುರನೂ ವಿನಯಶೀಲನೂ ಉದ್ಯಮದಕ್ಷನೂ 

ಆದ ತರುಣನಾಗಿದ್ದರಿಂದ ಸರಿ ಆರಥರ ರಸೆಲ್ಲನ ಪ್ರೇಮವು ಅವನ ಮೇಲೆ 

ಅಧಿಕವಾಯಿತು. ಹೊಸ ಕಂಪನಿಯ ರಚನೆಯಾಗಲಿಕ್ಕೂ, ಹೊಸ 

ಯಂತ್ರಗಳ ನಿರ್ಮಾಣವನ್ನು ಮಾಡಲಿಕ್ಕೂ ಕೆಲವು ಅವಧಿಯು ಬೇಕಾಗಿರು 

ವದರಿಂದ ಡಿಗ್ಬಿಯು ತಿಂಗಳೆರಡು ತಿಂಗಳ ವರೆಗೆ ಲಂಡನದಲ್ಲಿಯೇ ಇರುವವ 

ನಾದನು. ಲಾಭಕರವಾದ ಕಂಪನಿಯು ಉತ್ಪಾದಕನೇ ಅವನಾಗಿರುವದರಿಂದ 

ಲಂಡನದಲ್ಲಿ ಅವನ ಹೆಸರಾಯಿತು. ಶ್ರೀಮಂತರೂ, ಉದ್ಯಮಸಾಹಸಿಗಳೂ, 

ಮದುವೆಗಾದ ಹೆಣ್ಣು ಮಕ್ಕಳುಳ್ಳ ತಾಯಂದಿರೂ ಡಿಗ್ಬಿಯ ಮನೆಗೆ 

ಎಡತಾಕಲಾರಂಭಿಸಿದರು. ಸ್ನೇಹಿತರಾದರೂ ಅವನಿಗೆ ಅನೇಕರಾಗಿದ್ದರು. 


ಒಂದು ದಿನ ಡಿಗ್ಬಿಯು ತಿರುಗಾಡಲಿಕ್ಕೆ ಹೋಗಿ ಮನೆಗೆ ಬಂದ ಕೂಡಲೆ 

ಅಂಚೆಯವನು ಕೆಲವು ಪತ್ರಗಳನ್ನು ತಂದು ಅವನ ಕೈಯಲ್ಲಿ ಕೊಟ್ಟನು. 

ಉಳಿದ ಪತ್ರಗಳನ್ನೆಲ್ಲ ಓದಿ ಓದಿ ಚಲ್ಲಿ ಅವನು ಒಂದು ಪತ್ರವನ್ನು ಮಾತ್ರ 

ಬಲು ಮನಸ್ಸುಗೊಟ್ಟು ಓದುತ್ತ ತಲೆ ಕೆಳಗೆ ಮಾಡಿಕೊಂಡು ಚಿ೦ತಾಗ್ರಸ್ತ 

ನಾಗಿ ಕುಳಿತನು. ಆಗ ಸರ್ ಆರಥರ ರಸೆಲ್ಲನು ಅವನ ಸ್ಥಿತಿಯನ್ನು ಕಂಡು 

" ಯಾಕೆ ಡಿಗ್ಬಿ, ಆ ಪತ್ರದಲ್ಲಿಯ ಸಮಾಚಾರವು ನಿನ್ನನ್ನು ಚಿಂತೆಗೀಡಾಗಿ 

ಮಾಡಿದಂತೆ ತೋರುತ್ತದೆ ? ” ಎಂದು ಕೇಳಿದನು. ಡಿಗ್ರಿಯು ವಿಷಾದದಿಂದ 

ನಕ್ಕು ರಸೆಲ್ಲನಿಗೆ ಏನೂ ಉತ್ತರವನ್ನು ಕೊಡದೆ ತನ್ನ ಕೈಯಲ್ಲಿರುವ ಪತ್ರ 

ವನ್ನು ಅವನ ಸ್ವಾಧೀನ ಮಾಡಿದನು. 


ಲಂಡನ್ 

ವ್ಹಾ. ಡಿಗ್ಬಿ ಸಾಹೇಬರಿಗೆ, 

ಡಿಯಾನಾ ಕ್ಯಾಂಬೆಲ್ಲ ಇವಳು ತಮ್ಮ ಪರಿಚಯದವಳಾಗಿರುವದು 

ಬ್ರಾಝಿಲದಲ್ಲಿ ಸರ್ವಶ್ರುತವಾದ ಮಾತು. ಪರಿಚಯವು ಹಾಗಿರಲಿ, ತಮ್ಮ 

ಪ್ರೇಮವನ್ನು ಸೆಳಕೊಂಡು ಅವಳು ತಮ್ಮೊಡನೆ ಪುನರ್ವಿವಾಹ ಮಾಡಿಕೊಳ್ಳ 

ಲಿಕ್ಕೆ ಒಪ್ಪಿಕೊಂಡಿರುವಳೆಂದು ಸುದ್ದಿಯಿದೆ. ಡಿಯಾನೆಯು ನಿಜವಾಗಿ 

ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತಿದ್ದರೆ ಈ ಪತ್ರವನ್ನು ಬರೆಯುವ ಕಾರ 

ಣವೇ ಇದ್ದಿಲ್ಲ. ಹೆಂಡತಿಗಿಂತ ಗಂಡನೇ ಹಿರಿಯನಿರಬೇಕೆಂಬ ನಿಯಮ 

ವೆಲ್ಲಿ ? ಡಿಯಾನೆಯು ನಿಮಗಿಂತ ನಾಲೈದು ವರುಷ ಹಿರಿಯಳಾಗಿದ್ದರೂ 

ಜಗತ್ತಿನ ಅನುಭವವುಳ್ಳ ಹೆಂಡತಿಯ ಸಹವಾಸದಲ್ಲಿ ನೀವು ಸುಖಿಗಳಾಗಿರ 

ಬಹುದಾಗಿತ್ತು, ಆದರೆ ಡಿಯಾನೆಯು ನಿಮ್ಮನ್ನು ಮದುವೆಯಾಲಿಚ್ಚಿಸು 

ವದೇ ಇಲ್ಲ. ಜಾರ್ಜ ಕ್ಯಾಂಬೆಲ್ಲನಲ್ಲಿ ಅವಳ ಸರ್ವಸ್ವವಾದ ಪ್ರೇಮವು ನೆಲಿ 

ಸಿರುವದು, ಡಿಯಾನೆಯ ಪತಿಯಾದ ಎಡ್ವರ್ಡ ಕ್ಯಾಂಬೆನು ಅಕಸ್ಮಾತ್ತಾಗಿ 

ಮರಣ ಹೊಂದಿದನು, ಡಿಯಾನೆಯೇ ಅವನಿಗೆ ವಿಷ ಕೊಟ್ಟಳೆಂದು ಜನರ 

ಗ್ರಹಿಕೆಯಾಗಿದೆ. ಜಾರ್ಜ ಕ್ಯಾಂಬೆಲ್ಲನೇ ವಿಷವನ್ನು ಸಿದ್ದಮಾಡಿ ಡಿಯಾನೆಯ 

ಕೈಯಲ್ಲಿ ಕೊಟ್ಟಿದ್ದನಂತೆ, ಏನೇ ಇರಲಿ; ನೀವು ಆ ಚಂಚಲೆಯ ಮೋಸ 

ಕ್ಕೀಡಾಗದಂತೆ ಜಾಗರೂಕರಾಗಿರುವದು ವಿಹಿತವೆಂದು ನಾನು ನಂಬುತ್ತೇನೆ. 

ನಿಮ್ಮಲ್ಲಿ ಬಂಗಾರದ ಖನಿಗಳ ನಕಾಶವಿರುವದೇನು ? ಆ ಖನಿಗಳಿಗಾಗಿ 

ನೀವು ಪ್ರಾಣವನ್ನು ಕೊಡುವ ಸಮಯಯವು ಬಂದೊದಗಿದೆ, ಏನಾದರೊಂದು 

ಉಪಾಯದಿಂದ ನಿಮ್ಮಲ್ಲಿರುವ ನಕಾಶವನ್ನು ಹೊತ್ತು ಹಾಕುವೆನೆಂದು ಪ್ರತಿಜ್ಞೆ 

ಮಾಡಿ ಡಿಯಾನೆಯು ಅಮೇರಿಕೆಯಿಂದ ಇಲ್ಲಿಗೆ ಬಂದು ಮೂರು ದಿವಸಗಳಾ 

ದವು. ನೀವು ನಿಮ್ಮ ಎಚ್ಚರಿಕೆಯಲ್ಲಿರಿರಿ. ವಂಚನೆಗೆ ಈಡಾಗಿ ಕೇಡು ತಂದು 

ಕೊಳ್ಳುವಿರಿ. ಎಚ್ಚರಿಕೆ. ನಾನಾದರೂ ಮೊನ್ನೆಯೇ ಅಮೇರಿಕೆಯಿಂದ 

ಬಂದವಳು.  

-ಎ, ಬಿ, ಸಿ. 


ಸರ್ ಆರಥರನು ಪತ್ರವನ್ನೋದಿ ನಕ್ಕು "ಡಿಯಾನೆಯ ಪ್ರೇಮಪಾಶ 

ದಲ್ಲಿ ನೀವು ಸಿಕ್ಕಿರುವಿರೇನು? ಈ ಪತ್ರದಲ್ಲಿ ಬರೆದಂತೆ ಅವಳ ಕೃತಿಗಳು 

ಸಂಶಯಾಸ್ಪದವಾಗಿವೆ ಏನು ? ” ಎಂದು ಕೇಳಿದನು. 


" ಅಸಂಭವವಾದ ಮಾತು, ಡಿಯಾನಾ ಕ್ಯಾಂಬೆಲ್ಲಳು ಸುಸ್ವಭಾವ 

ದವಳಾದ ಸುಂದರಿಯು, ಮತ್ಸರಗ್ರಸ್ತಳಾದ ನಾರಿಯೋ, ನೀಚನಾದ 

ಪುರುಷನೋ ಈ ಪತ್ರವನ್ನು ಬರೆದಿರುವಂತೆ ತೋರುತ್ತದೆ ” ಎಂದು 

ಡಿಗ್ಬಿಯು ನಿಶ್ಚಿಂತನಂತೆ ನುಡಿದರ ಅವನ ಮನಸ್ಸಿನಲ್ಲಿಯ ಭೀತಿಯು 

ಬಿಟ್ಟಿದ್ದಿಲ್ಲ. 


" ಈ ಪತ್ರವನ್ನು ನಾನು ಆಪರಾಧಿಗಳ ಶೋಧಕರಾದ ಅಧಿಕಾರಿಗಳ 

ಕಡೆಗೆ ಕೊಟ್ಟು, ಅಭಿಪ್ರಾಯವನ್ನು ತೆಗೆದುಕೊಳ್ಳಬಹುದಷ್ಟೆ ? ” ಎಂದು 

ಸರ್ ಅರಥರನು ಕೇಳಿದನು. 

 

" ಅವಶ್ಯವಿಲ್ಲ. ತನ್ನ ಆಸ್ತಿಯನ್ನೆಲ್ಲ ನನಗೆ ಕೊಟ್ಟು ನನ್ನನ್ನು 

ಮದುವೆ ಮಾಡಿಕೊಳ್ಳಲಿಚ್ಚಿಸುವ ಆ ಸುಚರಿತೆಯ ವಿಷಯವಾಗಿ ಸಂಶಯ 

ವನ್ನು ತೆಗೆದುಕೊಳ್ಳುವದೆಂದರೆ ಪಾಪವೇ ಸರಿ. " 


ಆ ಆಲೋಚನವು ಅಲ್ಲಿಯೇ ಉಳಿಯಿತು. ಡಿಯಾನಾ ಸುಂದರಿಯು 

ತಾನು ಬಂದಿರುವ ವರ್ತಮಾನವನ್ನು ತನ್ನ ಪ್ರಿಯನಾದ ವ್ಹಾಲೆಂಟಾಯಿನ್ 

ಡಿಗ್ಬಿಗೆ ತಿಳಿಸಿ ಇಂಥ ಓಣಿಯಲ್ಲಿರುವ ಇಂಥ ಮನೆಗೆ ಬಂದು ತನಗೆ ದರ್ಶನ 

ಕೊಡಬೇಕೆಂದು ತಿಳಿಸಿದ್ದರ ಮೇರೆಗೆ ಅವನು ಅವಳಿದ್ದಲ್ಲಿಗೆ ಧಾವಿಸಿ ನಡೆ 

ದನು. ಅವರ ಸಮಾಗಮವೆಂದರೆ ಹರ್ಷಾತಿರೇಕದ ಪ್ರದರ್ಶವೇ ಆಗಿತ್ತು. 

ಡಿಯಾನೆಯು ವ್ಹಾಲೆಂಟಾಯಿನನ ಮೈಗಡರಿ ಆನಂದಾಶ್ರುಗಳನ್ನು ಸುರಿಸಿ 

ದಳು; ಅವನಾದರೂ ಅವಳನ್ನು ಅಪ್ಪಿ ಚುಂಬಿಸಿ ಸಂತೋಷಗೊಳಿಸಿದನು. 


"ಡಿಯಾನಾ, ಯಾವ ನೀಚರು ಈ ಪತ್ರವನ್ನು ಬರೆದಿರಬಹುದೆಂಬ 

ದನ್ನು ನೀನು ಊಹಿಸಬಲ್ಲಿಯಾ ? ?” ಎಂದು ನುಡಿದು ಡಿಗ್ಬಿಯು ಎ ಬಿ ಸಿ. 

ಎಂಬ ಸಂಯುಳ್ಳ ಮೇಲ್ಕಂಡ ಪತ್ರವನ್ನು ಅವಳಿಗೆ ತೋರಿಸಿದನು. 


ಡಿಯಾನೆಯು ಆ ಪತ್ರವನ್ನು ಒಮ್ಮೆ, ಎರಡಾವರ್ತಿ, ಮೂರಾವರ್ತಿ 

ತಿರಿತಿರಿವಿ ಓದಿ ಹುಬ್ಬು ಗಂಟಿಕ್ಕಿ ವಿಚಾರಗೈದು ಕಡೆಗೆ ಮೃದುಹಾಸವನ್ನು 

ತಳೆದು ಡಿಗ್ಬಿಯ ಮುಖವನ್ನು ನೋಡಿ, “ ವ್ಹಾಲೆಂಟಾಯಿನ, ನಾನೊಂದು 

ಅಪರಾಧವನ್ನು ಮಾಡಿದ್ದಾದರೆ ನೀನು ಕ್ಷಮಿಸುವಿಯಷ್ಟೆ ? ” ಎದು 

ಕೇಳಿದಳು. 


"ಪ್ರೇಮದರಸಿಯ, ನೀನೇನು ಅಪರಾಧವನ್ನು ಮಾಡಿದ್ದರೂ ನಾನು 

ವಿಚಾರಗೈಯದೆ ಕ್ಷಮಿಸಿದ್ದೇನೆ. ” ಎಂದು ಡಿಗ್ಬಿಯು ಡಿಯಾನೆಯ ಹೆಗಲ 

ಮೇಲೆ ಕೈ ಹಾಕಿ ಅವಳ ಗದ್ದವನ್ನು ಬಹು ಪ್ರೇಮದಿಂದ ಹಿಡಿದು ಕುಲು 

ಕುಲನೆ ನಗುತ್ತೆ ಆಶ್ವಾಸನನನ್ನಿತ್ತನು. 


"ಪ್ರಿಯನೆ, ನಿನ್ನ ಮನಸ್ಸು ನೋಡಬೇಕೆಂದು ನಾನೇ ಓರ್ವ 

ದಾಸಿಯು ಕೈಯಿಂದ ಈ ಪತ್ರವನ್ನು ಬರೆಯಿಸಿದೆನು. ಇನ್ನು ಕ್ಷಮಿಸಲಿಕ್ಕೆ 

ಅಡ್ಡಿಯಿಲ್ಲವಷ್ಟೇ ? ” ಎಂದು ಆ ಸಮಯಚತುರೆಯಾದ ವಿಲಾಸಿನಿಯು 

ನುಡಿದು ಡಿಗ್ಬಿಯ ಪ್ರತ್ಯುತ್ತರವನ್ನು ಕೇಳಲುತ್ಸುಕಳಾಗಿ ಅವನ ಮುಖ 

ವನ್ನು ದಿಟ್ಟಿಸಿ ನೋಡಲಾರಂಭಿಸಿದಳು. 


ಆಲಿಂಗನ ಚುಂಬನಗಳೇ ಅವನ ಪ್ರತ್ಯುತ್ತರಗಳು : ಪ್ರಿಯೆ, ಅನ್ಯರ 

ಎದೆಯನ್ನೋಡಿಸುವಂಥ ರೀತಿಯಿಂದ ನೀನು ನನ್ನ ಮನಸ್ಸು ನೋಡ 

ಬಂದೆಯಾ ? ಆದರೂ ನಾನು ನಿನ್ನನ್ನು ಕ್ಷಮಿಸಿದ್ದೇನೆ ” ಎಂದು ನುಡಿದ 

ಅವನ ಆಭಿವಚನವು ಪುನರುಕ್ತಿಯೇ ಆಗಿತ್ತು. 


ಜಾರ್ಜ ಕ್ಯಾಂಬೆಲ್ಲನು ಹಿಡಿದಿರುವ ವಿಸ್ತಾರವಾದ ಮನೆಯಲ್ಲಿ ಡಿಯಾ 

ನೆಯು ಬಂದು ಉಳುಕೊಂಡಿದ್ದಳು. ಕ್ಯಾಂಬೆಲ್ಲನ ರಸಾಯನ ವ್ಯಾಪಾರ 

ಗಳು ಒಳ್ಳೆ ವಿಜೃಂಭಣೆಯಿಂದ ನಡೆದಿದ್ದವು. ಒತ್ತಟ್ಟಿಗೆ ಸಲ್ಪ್ಯೂರಿಕ್ 

ಆಸಿಡಿನ ಭರಣೆಗಳು, ಮತ್ತೊಟ್ಟಿಗೆ ನಾಯಟ್ರಿಕ್ ಆಸಿಡ್, ಒಂದೆಡೆಯಲ್ಲಿ 

ಫ್ರೂಟ ಸಾಲ್ಟಿನರಾಶಿ, ಮತ್ತೊಂದೆಡೆಯಲ್ಲಿ ಸಾನಾಟೋಜನ್ನದ ನಿರ್ಮಾಣ, 

ಕಾಡ್ ಲಿವ್ಹರದ ರಂಜಣಿಗೆಗಳು ಒ೦ದು ಪಡಸಾಲೆಯಲ್ಲಿ ಹೀಗೆ ಎಲ್ಲಿ 

ನೋಡಿದಲ್ಲಿ ಅನೇಕ ಪ್ರಕಾರದ ವಸ್ತುಗಳ ಸಂಗ್ರಹವು ತುಂಬಿಕೊಂಡಿತ್ತು. 

ಡಿಗ್ಬಿಯು ಜಾರ್ಜ ಕ್ಯಾಂಬೆಲ್ಲನ ಸಾಹಸಕ್ಕೆ ಮೆಚ್ಚಿ ಅವನ ಉದ್ಯಮಶೀಲತೆ 

ಯನ್ನು ಕೊಂಡಾಡಿದನು. 


" ಇಷ್ಟಕ್ಕೆ ತೀರಲಿಲ್ಲ. ಹವೆಯನ್ನು ಹಿಡಿದು ಭಟ್ಟಿಗೆ ಹಾಕಿ ಅದನ್ನು 

ನೀರಿನಂತೆ ಮಾಡಿ ಆ ರಸವನ್ನು ದೊಡ್ಡ ದೊಡ್ಡ ಭಾಂಡಗಳಲ್ಲಿ ತುಂಬಿಟ್ಟಿದ್ದೇನೆ. 

ಈ ವ್ಯಾಪಾರವು ಕೆಳಗೆ ನೆಲಮನೆಯಲ್ಲಿ ನಡೆದಿರುಗ್ಧದೆ, ಅಲ್ಲಿಯೇ ವಿದ್ಯುತ್ 

ಶಕ್ತಿಯಿಂದ ಚಮ:ಚಮತ್ಕಾರವಾದ ರಸಾಯನಪನ್ಯಗಳ ನಿರ್ಮಾಣವನ್ನು 

ಮಾಡುವ ಕೆಲಸ ನಡೆದಿರುತ್ತದೆ. ” ಎಂದು ಕ್ಯಾಂಬೆಲ್ಲನು ಅಭಿಮಾನದಿಂದ 

ನುಡಿದನು. 


" ಸಂತೋಷ ! ಡಿಯಾನಾ, ನೀನು ನನಗೆ ಚಹ ಕೊಡುವಾಕೆ ಯಾ 

ಗಿದ್ದಿಯಲ್ಲವೆ ? ನಡೆ ” ಎಂದು ಡಿಗ್ಬಿಯು ಕೇಳಿದನು. 


" ಚಹ ಸಿದ್ದವೇ ಆಗಿದೆ. ಅಮಲಿಯಾ ಬಾಯಿಯು ಚಹ ಸೋಸಿಟ್ಟು 

ಯಾವಾಗಿನಿಂದ ನಿನ್ನ ಮಾರ್ಗಪ್ರತೀಕ್ಷೆಮಾಡುತ್ತ ಕುಳಿತಿರುವಳು. ” 


" ಅಮೆಲಿಯಾ ಸುಂದರಿಯ ಬಂದಿರುವಳೇನು ? ನಡೆ, ನಾನವಳ 

ದರ್ಶನೋತ್ಸುಕನಾಗಿರುವೆನು. ” 


' ಅಹಹಾ, ಇಷ್ಟೇಕೆ ಆತುರತೆ ? ತಾಯಿಮಕ್ಕಳನ್ನು ಕೂಡಿಯೇ 

ನೀನು ಮದುವೆಯಾಗಬೇಕಾಗಿಲ್ಲವಷ್ಟೆ ? ” ಎಂದು ಡಿಯಾನೆಯ ಪರಿಹಾಸ 

ಗೈದು ನುಡಿದಳು. 

 

" ಏನು ಮಾತಾಡುವಿ, ಡಿಯಾನಾ ? ” 


" ಅಮೆಲಿಯೆಯ ಪ್ರೇಮವನ್ನು ಅಪಹರಿಸಬೇಕೆಂದು ನೀನೊಂದು 

ಕಾಲ ಹವಣಿಸುತ್ತಿರುವದನ್ನು ನಾನರಿಯೆನೆ ? ” ಎಂದು ಡಿಯಾನೆಯು  

ಚಮತ್ಕಾರವಾದ ನಗೆ ನಗುತ್ತೆ ನುಡಿದಳು. 


"ಆದರೇನಾಯಿತು ? ಆಮೆಲಿಯೆಯ ಪ್ರಾಪ್ತಿಗಾಗಿ ನಿಮ್ಮ ಮನೆಗೆ 

ನಾನು ಬರುತ್ತಿದ್ದೇನೆಂದು ನಿನ್ನ ಪ್ರೇಮದ ವ್ಯಾಪ್ತಿಯು ನನಗಾಯಿತಷ್ಟೆ ?  

ಬಂಗಾರವನ್ನು ಹುಡುಕಲಿಕ್ಕೆ ಹೋದ ಖನಿಯಲ್ಲಿ ರತ್ನವು ಪ್ರಾಪ್ತವಾದಂತಾ 

ಯಿತು, ಹಾಸಿಯೇನು ? ” ಎಂದು ಡಿಗ್ಬಿಯು ಡಿಯಾನೆಯನ್ನು ಬಗಲಲ್ಲಿ 

ಬಿಗಿಯಾಗಿ ಹಿಡಿದು ನುಡಿದನು. 


ಅಮೆಲಿಯೆಯು ತನ್ನ ಮಲತಾಯಿಗೂ ಡಿ ಗ ಚಹ ಉಪಹಾರ 

ಗಳನ್ನು ನೀಡಿ ಅವರೀರ್ವರ ಸವಿಗಾರಿಕೆಯನ್ನು ಕಂಡು ದುಃಖಿತಳಾಗಿ ನಿಂತು. 

ಕೊಂಡಿದ್ದಳು. ಡಿಯಾನೆಯು ಆ ಸರಿಯಾಗಿ ನಿಂತ ತನ್ನ ಮಲಮಗಳನ್ನು ನೋಡಿ 

ಹಲ್ಲು ಕರೆಯುತ್ತಿದ್ದರೂ ವ್ಹಾಲೆಂಟಾಯಿನನು ಆ ನವತರುಣಿಯನ್ನು  

ಪ್ರೇಮದಿಂದ ಮಾತಾಡಿಸಿ ತಾಯಿ ಮಕ್ಕಳೀರ್ವರ ಅಪ್ಪಣೆಯನ್ನು ಪಡಕೊಂಡು 

ತನ್ನ ನಿವಾಸಕ್ಕೆ ಹೊರಟು ಹೋದನು. 

* * * *

ಡಿಗ್ಬಿಗೆ ಇಂದಿನ ದಿವಸ ಮಿತಿ ಮೀರಿದ ಹರುಷವು. ಅರೆಕ್ಷಣವಾದರೂ 

ಕುಳ್ಳಿರುವೆನೆಂದರೆ ಅವನಿಗೆ ಅವಕಾಶವಿಲ್ಲ. ಸಿಂಪಿಗನು ಹೊಸ ಕೋಟು 

ಪ್ಯಾಂಟುಗಳನ್ನು ತಂದು ಅವನಿಗೆ ತೊಡಿಸಿ ನೋಡುತ್ತಿದ್ದನು. ಸೌದಾಗಾರನು 

ಪ್ರಕಾಶವನ್ನುಗಹ್ಗುವ ಹರಳುಂಗುರಗಳನ್ನು ತಂದು ತೋರಿಸುತ್ತಿದ್ದನು. ಹೀಗೆ 

ಅನೇಕರಾದ ವರ್ತಕರು ಅನೇಕವಾದ ವಸ್ತುಗಳನ್ನು ತಂದು ತಂದು ಕೊಡೆಲಾ 

ರಂಭಿಸಿದ್ದರು. ಇಂದು ಅವನು ಯಾರೊಡನೆಯ ಉಲ್ಲಾಸದಿಂದ 

ನಡಕೊಳ್ಳುತ್ತಿದ್ದನು. ಇಂದು ಯಾರು ಏನು ಹೇಳಿದ್ದಕ್ಕೂ ಅವನು ಒಪ್ಪಿ 

ಕೊಳ್ಳುತ್ತಿದ್ದನು. 


"ವಾಲೆಂಟಾಯಿನ್ ಡಿಗ್ಬಿ, ಇಂದೇಕೆ ನೀನಿಷ್ಟು ಉಲ್ಲಾಸದಲ್ಲಿರುವಿ?” 

ಎಂದು ಸರ ಆರಥರ ರಸೆಲ್ಲನು ನಗೆಮುಖವನ್ನು ತಾಳಿ ಕೇಳಿದನು. 


" ಸೌಭಾಗ್ಯವೇ ನನ್ನ ವಶವರ್ತಿಯಾಗಿ ನಡಕೊಳ್ಳಲಾರಂಭಿಸಿರುವ 

ದಲ್ಲವೆ? ಸರ ಅರಥರ, ನೀವೇ ನನ್ನ ಸೌಭಾಗ್ಯಕ್ಕೆ ಮುಖ್ಯ ಕಾರಣರಾಗಿರಲು 

ನನ್ನ ಮನೋಲ್ಲಾಸದ ಮೂಲವನ್ನು ನಿಮಗೆ ತಿಳಿಸದಿರುವೆನೆ ? ” 


" ಯಾವಾಗ ಹೇಳುವಿ ? ಇದಕ್ಕೆ ಇಷ್ಟೇಕೆ ಪೂರ್ವಪೀಠಿಕೆಯನ್ನು 

ಬೆಳಿಸುವಿ ? ” 

 

" ಇಂದು ಜಾರ್ಜ- ಕ್ಯಾಂಬೆಲ್ಲನ ಪತ್ರ ಬಂದಿದೆ. ಇಂದೆಯೇ ನಮ್ಮ 

ಮದುವೆಯ ಬಗ್ಗೆ ಮಾತುಕಥೆಗಳನ್ನಾಡತಕ್ಕದೆಂದು ನನ್ನ ಪ್ರಿಯತಮೆಯಾದ 

ಡಿಯಾನೆಯು ಇಚ್ಚಿಸುವಳಂತೆ. ಅದಕ್ಕಾಗಿ ನಾನು ಆತುರನಾಗಿದ್ದೇನೆ. " 


"ಸಂತೋಷ ! ದೇವರು ನಿಮ್ಮ ಅಭೀಷ್ಟಗಳನ್ನೆಲ್ಲ ಕೈಗೂಡಿಸಿ 

ಕೊಡಲಿ ” ಎಂದು ನುಡಿದು ಸರ ಆರ್ಥರನು ಡಿಗ್ಬಿಯ ಹಸ್ತವನ್ನು 

ಗಟ್ಟಿಯಾಗಿ ಹಿಡಿದು ಅಲ್ಲಾಡಿಸಿದನು. 

 

ಮಧ್ಯಾಹ್ನದ ಊಟವಾಯಿತು, ಡಿಗ್ಬಿಯು ವರ್ತಮಾನಪತ್ರಗಳ 

ನ್ನೋದುತ್ತೆ ಕುಳಿತಿರುವಾಗ ಸೇವಕನೊಬ್ಬನು ಒಂದು ಪತ್ರವನ್ನು ತಂದು 

ಕೊಟ್ಟನು. 

ಚಾರಿಂಗಕ್ರಾಸ್ 

ಪ್ರಿಯ ಡಿಗ್ಬಿ, ನಂಬರ ೧೫೭, 

ಅನಿರ್ವಾಹಕ್ಕಾಗಿ ಈ ಪತ್ರವನ್ನು ಬರೆದಿರುವೆನು. ನಾನು ಬರೆ 

ದದ್ದು ನಿಮಗೆ ವಿಪರೀತವಾಗಿ ತೋರುವದು. ಆದರೂ ನೀವು ವಿಚಾರವಂತ 

ರಾಗಿ ನಡಕೊಳ್ಳುವಿರೆಂದು ಆಶಿಸುತ್ತೇನೆ. ಇಂದು ಸಾಯಂಕಾಲಕ್ಕೆ ಈ 

ಮನೆಗೆ ಬರಲು ನಿಮಗೆ ಆಮಂತ್ರಣವಿರುವದಷ್ಟೇ ? ನೀವು ಬರಬೇಡಿರಿ.  

ಬಂದರೆ ನೀವು ಗಂಡಾಂತರದಲ್ಲಿ ಬೀಳುವದು ನಿಶ್ಚಯ, ಜಾರ್ಜ ಕ್ಯಾಂಬೆ 

ಲ್ಲನ್ನೂ ನನ್ನ ಮಲತಾಯಿಯಾದ ಡಿಯಾನಾ ಕ್ಯಾಂಬೆಲ್ಲಳೂ ಕೂಡಿ ಸಂಚು 

ಮಾಡಿ ನಿಮ್ಮ ಪ್ರಾಣವನ್ನೂ ನಿಮ್ಮ ಬಳಿಯಲ್ಲಿರುವ ನಕಾಶವನ್ನೂ 

ಕೂಡಿಯೇ ಅಪಹರಿಸಬೇಕೆನ್ನುವರು. ನಿಮ್ಮಲ್ಲಿ ನಾನು ಒಂದಾವರ್ತಿ 

ಪಕ್ಷಪಾತವುಳ್ಳವಳಾಗಿದ್ದೇನೆಂದು ಒಪ್ಪಿಕೊಳ್ಳಲು ನಾನು ನಾಚಿಕೊಳ್ಳುತ್ತೇನೆ. 

ಮೀರಿಬಂದ ಪ್ರಸಂಗದಲ್ಲಿ ಹಾಗೆ ಮಾಡಬೇಕಾಗಿದೆ. ಆ ಪಕ್ಷಪಾತವನ್ನು 

ಲಕ್ಷಿಸಿ ನಾನೇ ಪತ್ರವನ್ನು ಬರೆದಿದ್ದೇನೆ. ಇಂದಿನ ರಾತ್ರಿ ನೀವು ನಿಮ್ಮ 

ಪ್ರಾಣವನ್ನು ಕಳಕೊಳ್ಳುವದೇ ನಿಶ್ಚಯ. ಅದಕ್ಕಾಗಿ ನಾನು ನಿಮಗೆ 

ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ಇಂದಿನ ಆಮಂತ್ರಣವನ್ನು ನಿರಾಕರಿಸಿ 

ನೀವು ಇಲ್ಲಿಗೆ ಬರುವ ವಿಚಾರವನ್ನು ಬಿಟ್ಟು ಬಿಡಿರಿ. ಮೋಹಕ್ಕೊಳಗಾಗ 

ಬೇಡಿರಿ.” 

ತಮ್ಮ ವಿಧೇಯಳಾದ 

ಅಮೆಲಿಯಾ ಕ್ಯಾಂಬೆಲ್ಲ. 

ಡಿಗ್ಬಿಯು ಪತ್ರವನೋದಿ ದಂಗುಬಡಿದವನಾಗಿ ಕುಳಿತುಕೊಂಡನು 

ಇದುವರೆಗೆ ಅವನ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಸುಲಲಿತವಾದ ವಿಚಾರ 

ಗಳೆಲ್ಲ ಮಂಜಿನಲ್ಲಿ ಮುಸುಗಿದಂತಾಗಿ ಅಡಗಲಾರಂಭಿಸಿದವು. 


" ಈ ಪತ್ರವನ್ನು ಕೂಡ ಡಿಯಾನೆಯೇ ಬರೆದಿರಲಿಕ್ಕಿಲ್ಲವಷ್ಟೆ ? 

ಬರೆದಿದ್ದರೆ ಇಂಥ ಶುಭದಿವಸದಲ್ಲೇಕೆ ಬರೆದಳು ? ಅಮೆಲಿಯೆಯೇ ಬರೆ 

ದಿರಬಹುದು. ಇರಬಹುದೇಕೆ, ಅವಳೇ ಬರೆದಿರುವಳೆಂಬದು ಸಹಿಯು 

ಮೇಲಿಂದ ಸ್ಪಷ್ಟವಾಗಿ ಕಾಣುವದಿಲ್ಲವೆ ? ಆದರೂ ಡಿಯಾನೆಯು ಇಷ್ಟು 

ಘಾತಳಿರುವಳೆದು ನಾನೆಂದಿಗೂ ನಂಬಲಾರೆನು,” ಎಂದು ವಿಚಾರಿಸುತ್ತೆ 

ಅವನು ಚಿಂತೆಗೀಡಾಗಿ ಮಲಗಿಕೊಂಡನು. 


ಮೂರು ಸಂಜೆಯ ಹೊತ್ತು, ನೊಗವನ್ನು ಚ್ಚಿ ಬಿಟ್ಟ ದನಗಳಂತೆ, 

ಉದ್ಯೋಗಸ್ತರು, ಗುಮಾಸ್ತರು, ಅಧಿಕಾರಿಗಳು, ಸೇವಕರು ಮುಂತಾದವರು 

ಇಂದಿನ ದಿವಸವನ್ನ೦ತೂ ಗೆದ್ದೆವೆ ? " ಎಂಬ ಸಂತೋಷ ಬಂದ ತಮ್ಮ 

ತಮ್ಮ ಮನೆಗಳಿಗೆ ಬಂದು ಉಪಹಾರಗಳನ್ನು ಸೇವಿಸಿ ಮೇಲಾದ ಬಟ್ಟೆಗ 

ಳನ್ನು ಧರಿಸಿ ತಂಗಾಳಿಯನ್ನು ಸೇವಿಸಲು ಒಯ್ಯಾರದಿಂದ ನಡೆದಿರುವರು. 

ಸರ ಆರಥರ ರಸೆಲ್ಲನು ಸಪತ್ನೀಕನಾಗಿ ದಿವ್ಯವಾದ ರಥದಲ್ಲಿ ಕುಳಿತುಕೊಂಡು 

ವಿಹಾರಕ್ಕಾಗಿ ಹೊರಟು ಹೋಗಿದ್ದನು. ಹೊರಗೆಲ್ಲ ಲೀಲಾವಿಲಾಸ ಆನಂದ 

ಒನಪು ಒಯ್ಯಾರಗಳು ನಡೆದಿರಲು ಡಿಗ್ಬಿಯೊಬ್ಬನೇ ಚಿಂತಾಕುಲನಾಗಿ 

ಮಂಚದ ಮೇಲೆ ಬಿದ್ದು ಕೊಂಡಿದ್ದನು. ಅಷ್ಟರಲ್ಲಿ ಜಗಜಗಿಸುವ ಪೋಷಾಕ 

ವನ್ನೂ ತಳತಳಿಸುವ ಮುತ್ತು ರತ್ನ ಗಳ ಆಭರಣಗಳನ್ನೂ ನೋಡುವವರ 

ಮನಸ್ಸಿನ ವಿಷಾದವನ್ನು ದೂಡಿ ಹಾಕುವ೦ಥ ಮಂದಹಾಸವನ್ನೂ 

ತಳೆದವಳಾದ ಡಿಯಾನಾ ಸುಂದರಿಯು ಮ೦ಜುಲವಾದ ಧ್ವನಿಯಿಂದ 

ವ್ಹಾಲೆಂಟಾಯಿನನನ್ನು ಕೂಗುತ್ತ ಅವನ ಮಂಚದ ಸಮೀಪಕ್ಕೆ ಬಂದಳು. 

ಅಲ್ಲಿ ಅವನು ಚಿಂತಾಗ್ರಸ್ತನಾಗಿ ಉರುಳಾಡುತ್ತಿರುವದನ್ನು ಕಂಡು ಆ 

ಮಾನಿನಿಯು ಚಕಿತಳಾಗಿ" ವ್ಹಾಲೆಂಟಾಯಿನ್ ! ಪ್ರಿಯ ವ್ಹಾಲೆಂಟಾ 

ಯಿನ್ !! ಏನು ಸಮಾಚಾರವಿದು ?” ಎಂದು ಕೇಳಿದಳು. 


ಹುಲಿಯ ಕೈಗೆ ಸಿಕ್ಕವನು ಶಸ್ತ್ರಪಾಣಿಯಾದ ತಾರಕನನ್ನು ಕಂಡಾ 

ಕ್ಷಣವೇ " ಬದುಕಲೆ ಜೀವವೆ " ಎಂದು ಧೈರ್ಯವನ್ನು ತಳೆವಂತೆ, 

ಡಿಯಾನೆಯನ್ನು ಕಂಡಾಕ್ಷಣಕ್ಕೆ ಡಿಗ್ಬಿಯ ಚಿಂತೆಯು ಅರ್ಧ ಹಿಮ್ಮೆಟ್ಟಿದಂ 

ತಾಗಿ, ಆವನು ತತ್‌ಕ್ಷಣವೇ ಎದ್ದು ಕುಳಿತು " ಬಾ, ಡಿಯಾನಾ, 

ನೀನೊಳ್ಳೇ ಸಮಯಕ್ಕೆ ಬಂದಿ” ಎಂದು ಮಂಚದಲ್ಲಿ ತುಸು ಸರಿದು ಅವಳಿಗೆ 

ಸ್ಥಳ ಮಾಡಿದನು.. 


ವಿಮನಸ್ಕನಾದ ಬಾಲಕನನ್ನು ಮನೆಯ ಹಿರಿಯಳು ಕಕ್ಕುಲತೆಯಿಂದ 

ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು ಅವನ ಮುಂದಲೆಯ ಮೇಲೆ ಕೈಯಾಡಿಸಿ 

ಸಮಾಧಾನಗೊಳಿಸುತ್ತಿರುವಂತೆ ಏನೆಯು ಡಿಗ್ಬಿಯ ಹೆಗಲಮೇಲೆ ಕೈ 

ಹಾಕಿ, ಮತ್ತೊಂದು ಕೈಯನ್ನು ಅವನ ಎದೆಯ ಮೇಲೆ ಪ್ರೇಮದಿಂದ 

ಆಡಿಸುತ್ತೆ "ಏನು ಸಮಾಚಾರವಿದು ನನ್ನ ಮನದಾಣ್ಮನೆ ? ನೀನೊಳ್ಳೆ 

ಉಬ್ಬಿನಲ್ಲಿರುವಿಯೆಂದು ನಾನು ನೆನೆದು ನಿನ್ನೊಡನೆ ಯಥೇಷ್ಟವಾಗಿ ನಕ್ಕು 

ಕೆಲೆದು ಹೋಗಬೇಕೆಂದು ಬಂದಿದ್ದೆನು. ಏನಾಗಿದೆ ನಿನಗೆ ? ನನ್ನ 

ಪಾಣಿಗ್ರಹಣವನ್ನು ಮಾಡಲು ನಿನ್ನ ಮನಸ್ಸು ಒಲ್ಲದೇನು ? ” ಎಂದು 

ಕೇಳಿದಳು. 


" ಪ್ರಿಯೆ, ನಿನ್ನನ್ನು ಒಲ್ಲದವನಾದ ನಾನು ನನ್ನ ಪ್ರಾಣವನ್ನು ಕೂಡ 

ಒಲ್ಲೆನೆಂದು ಹೇಳಬೇಕಾದೀತು. ಇಂಥ ಭಯಂಕರವಾದ ಶಂಕೆಯನ್ನು 

ನೀನು ಏನು ನಿಮಿತ್ತವಾಗಿ ತಳೆದಿ ?” ಎಂದು ವ್ಹಾಲೆಂಟಾಯಿನನು ಡಿಯಾ 

ನೆಯ ಕೊಂಕುಗುರುಳನ್ನು ತನ್ನ ಬಟ್ಟಗೆ ಸುತ್ತುತ್ತೆ ಪ್ರಶ್ನೆ ಮಾಡಿದನು. 


"ತೆಗೆ, ನೀನು ಸುಳ್ಳಾಡುವಿ! ” ಎಂದು ಡಿಯಾನೆಯು ಕ್ರುದ್ಧಳಾದಂತೆ 

ನಟಿಸಿ ಹಿಂದಕ್ಕೆ ಸರಿದು ಕುಳಿತಳು. 


ನಿರ್ಜಿತನಾದ ವ್ಹಾಲೆಂಟಾಯಿನನು ಆ ಒಯ್ಯಾರೆಯನ್ನು ತನ್ನ ಬಾಹು 

ಪಾಶದಲ್ಲಿ ಹಿಡಿದು ಅನೇಕವಾದ ಆಣೆ ಪ್ರಮಾಣಗಳನ್ನು ಮಾಡಿ ಆ ವರನು 

ವಧುವಿಗೆ ವಿವಾಹದ ವಾಗ್ದಾನ ಮಾಡಿದನು. ಡಿಯಾನೆಯು ಸಂಗಡಲೇ 

ಎದ್ದು ಕಪಾಟಿನೊಳಗಿಂದ ಪರಿಮಳವನ್ನು ಸೂಸುವ ಮದರಾಸವದ ಕುಪ್ಪೆ 

ಯನ್ನು ತೆಗೆದು ಒಯ್ಯಾರದಿಂದ ತುಂಬಿ ಆಗ್ರಹದೊಂದಿಗೆ ವ್ಹಾಲೆಂಟಾಲಿನ 

ನಿಗೆ ಕುಡಿಸಿದಳು. ಒಂದು ಗ್ಲಾಸಕ್ಕೆ ಎರಡು ಕುಡಿದು ಉದ್ರಿಕ್ತನಾದ 

ಅವನನ್ನು ಡಿಯಾನೆಯು ರಥದಲ್ಲಿ ಕುಳ್ಳಿರಿಸಿಕೊಂಡು ಹಾಯಿಡಪಾರ್ಕ 

ವೆಂಬ ಭೂನಂದನದ ಕಡೆಗೆ ವಿಹಾರಾರ್ಥವಾಗಿ ನಡೆದಳು. ಅಲ್ಲಿ ವಿಹರಿಸುವಾಗ 

ಡಿಯಾನೆಯು ಡಿಗ್ಬಿಯ ಮನಸ್ಸಿನಲ್ಲಿಯ ಅನೇಕವಾದ ಶಂಕೆಗಳ ನಿವಾರಣ 

ವನ್ನು ಸಯುಕ್ತಿಕವಾಗಿ ಮಾಡಿದಳು. 


ಮನೆಗೆ ಬಂದ ಕೂಡಲೆ ಡಿಗ್ಬಿಯ ಒಳ್ಳೇ ಸೊಬಗಿನ ಪೋಷಾಕು 

ಮಾಡಿಕೊಂಡು ಬಂಗಾರದ ಹಿಡಿಕೆಯ ಮಲಬಾರ ಬೆತ್ತವನ್ನು ಹಿಡುಕೊಂಡು 

ಡಿಯಾನೆಯ ಮನೆಗೆ ಹೋಗಲು ಸಿದ್ಧನಾದನು. ಸರ ಆರಥರ ರಸೆಲ್ಲನು 

ಅವನನ್ನು ತಡೆದು "ಓ ಸಾಹೇಬ, ಭೋಜನದ ಸಮಯದಲ್ಲಿ ನೀವೆಲ್ಲಿಗೆ 

ನಡೆದಿರಿ ? ಈ ಹೊಸ ಉಲ್ಲಾಸವು ನಿಮಗೆಲ್ಲಂದ ಪ್ರಾಪ್ತವಾಯಿತು ? 

ಮಧ್ಯಾಹ್ನ ದಲ್ಲಿ ನೋಡಿದರೆ ನೀವು ಚಿಂತೆಯಿಂದ ಹಿಂಡಿ ಹಿಪ್ಪೆಯಾಗಿ ತೋರು 

ತ್ತಿದ್ದಿರಿ, ಏನಾಗಿತ್ತು ಆಗ ನಿಮಗೆ ? ” ಎಂದು ಕೇಳಿದನು. 


ಈ ಮಾತಿನ ಬಗ್ಗೆ ವಿಶೇಷವಾದ ಚರ್ಚೆ ಮಾಡಲಿಕ್ಕೆ ನನಗೆ ಅವಸರ 

ವಿಲ್ಲ. ಆದರೂ ನನಗೆ ಚಿಂತೆಯನ್ನು ಹುಟ್ಟಿಸಿದ ಪತ್ರವನ್ನು ನಿಮಗೆ ತೋರಿ 

ಸುತ್ತೇನೆ ನೋಡಿರಿ ಡಿಯಾನೆಯು ಇದರಲ್ಲಿ ಬರೆದ ಮಾತಿನ ನಿರಾಕರಣ 

ವನ್ನು ಸಮಾಧಾನಕರವಾಗಿ ಮಾಡಿರುವಳು ” ಎಂದು ಹೇಳಿ ಪತ್ರವನ್ನು 

ಜೇಬಿನೊಳಗಿಂದ ತೆಗೆದು ರಸೆಲ್ಲನಿಗೆ ತೋರಿಸಿದನು. 


ಸರ ಆರಥರ ರಸೆಲ್ಲನು ಆ ಪತ್ರವನ್ನೋದಿ ಡಿ ಕೈ ಹಿಡಿದು ಬಳಿ 

ಯಲ್ಲಿ ಕುಳ್ಳಿರಿಸಿಕೊಂಡು " ವ್ಹಾಲೆಂಟಾಯಿನ್, ಈ ಪತ್ರದಲ್ಲಿ ಸೂಚಿಸಿದಂತೆ 

ನೀನು ಇಂದಿನ ರಾತ್ರಿ ಅಲ್ಲಿಗೆ ಹೋಗುವದನ್ನು ಬಿಟ್ಟರೆ ಕೆಡುವದೇನು ? 

ಡಿಯಾನೆಯ೦ತೂ ನಿನ್ನಲ್ಲಿ ಅತಿಶಯವಾದ ಆಸಕ್ತಿಯನ್ನು ತಳೆದವಳೆಂದು 

ಹೇಳುವಿ, ಇ೦ದಿಗಾಗುವ ಕೆಲಸವು ನಾಳಿಗಾದೀತು ?” ಎಂದು ಸೂಚಿಸಿದನು. 


“ ಸರ ಆರಥರರೆ, ನೀವಾದರೂ ಒಂದಾವರ್ತಿ ವಧುವಿನ ಪ್ರೇಮದಲ್ಲಿ 

ಸಿಲುಕಿದವರು, ಡಿಯಾನೆಯ ಆಶಾಭಂಗವನ್ನು ನಾನು ಹೇಗೆ ಮಾಡಲಿ ? 

ಮೇಲಾಗಿ ಅವಳ ಪ್ರೇಮವು ಆಕ್ಷೇಪಾರ್ಹವಾದದ್ದೆಂದು ನಂಬುವದೇ ಪಾಪ 

ವೆಂದು ನನಗೆ ತೋರುತ್ತದೆ. ಇದೊಂದು ಮಾತಿನಲ್ಲಿ ನಾನು ನಿಮ್ಮ ಆಜ್ಞೆ 

ಯನ್ನು ಮೀರಿದ್ದಕ್ಕೆ ಕ್ಷಮಿಸಿರಿ. " 


" ನಿನ್ನಿಚ್ಛೆಯಂತಾಗಲಿ. ಆದರೂ ಅಲ್ಲಿ ಮಾದಕ ಪದಾರ್ಥಗಳನ್ನು 

ನೀನು ಸೇವಿಸುವದನ್ನು ಬಿಟ್ಟು ಬಿಡು, ಕೆಲಸ ತೀರಿದ ಕೂಡಲೆ ನಿರರ್ಥಕ 

ವಾಗಿ ಅಲ್ಲಿ ಹೊತ್ತು ಗಳೆಯದೆ ಮರಳಿ ಬಾ ” ಎಂದು ರಸೆಲ್ಲಸಾಹೇಬರು 

ಸ್ನೇಹಪರವಶರಾಗಿ ಉಪದೇಶ ಮಾಡಿದರು. 


ಹಾಗೆಯೇ ಆಗಲೆಂದು ಡಿಯು ಹೊರಟು ಹೋದನು. ಇತ್ತ ಸರ 

ಆರಥರನು ಟೆಲಿಫೋನಿನಿಂದ ಕುಕರ್ಮಶೋಧಕನಾದ ಶರ್ಲಕ ಹೋಲ್ಮ್ಸ 

ನನ್ನು ಕರಿಸಿ ನಡೆದ ವರ್ತಮಾನವನ್ನೆಲ್ಲ ಅವನಿಗೆ ತಿಳಿಸಿ, ಡಿಗ್ಬಿಯು ತನಗೆ 

ತೋರಿಸಿರುವ ಎರಡೂ ಪತ್ರಗಳನ್ನು ಶರ್ಲಾಕನ ಸ್ವಾಧೀನ ಮಾಡಿದನು. 

ಹೋಲ್ಮನು ಕ್ಷಣಹೊತ್ತು ವಿಚಾರಗೈದು ನನ್ನಿಂದಾದಷ್ಟು ಸಾಹಸವನ್ನು 

ಮಾಡಿ ಡಿಗ್ಬಿಯ ಜೀವಕ್ಕೆ ಅಪಾಯವಾಗದಂತೆ ವ್ಯವಸ್ಥೆ ಮಾಡುವೆನೆಂದು 

ಹೇಳಿ ಲಗಬಗೆಯಿಂದ ಹೊರಟು ಹೋದನು. 


ರಾತ್ರಿಯ ಹತ್ತು ಗಂಟೆಗೆ ಚಾರಿಂಗ ಕ್ರಾಸಿನಲ್ಲಿ ೧೫೭ನೆಯ ನಂಬರಿನ 

ಮನೆಯ ಆವಾರಿನ ಸುತ್ತಲೂ ಪೊಲೀಸರ ಮುತ್ತಿಗೆ ಬಿದ್ದಿತು. ಬೆಕ್ಕಿನ 

ಪಿಳ್ಳೆಯನ್ನು ಅವರು ಒಳಗೆ ಹೋಗಗೊಡಲೂ ಇಲ್ಲ, ಹೊರಗೆ ಬರಲೂ ಕೊಡ 

ಲಿಲ್ಲ. ರಾತ್ರಿಯ ಹನ್ನೆರಡರೊಳಗಾಗಿ ಡಿಗ್ಬಿಯು ಆ ಮನೆಯನ್ನು ಬಿಟ್ಟು 

ಬಂದೇ ಬರುವನೆಂದು ಖಂಡಿತವಾಗಿ ಹೇಳಿದ್ದನು. ಹನ್ನೆರಡು ಬಡಿದು 

ಹೋದವು. ಡಿಗ್ಬಿಯು ಹೊರಗೆ ಬರಲಿಲ್ಲ.   


ಘಾತವಾಯಿತೆಂದವನೇ ಶರ್ಲಾಕನು ನೆಟ್ಟಗೆ ಆ ಮನೆಯ ತಲೆ `

ಬಾಗಿಲಕ್ಕೆ ಬಂದು ಬಾಗಿಲವನ್ನು ಒದೆಯಲಾರಂಭಿಸಿದನು.  


"ಯಾರವರು, ಇಷ್ಟು ರಾತ್ರಿಯಲ್ಲಿ ಉದ್ದಾ ಮತನದಿಂದ ನಿದ್ರಾಭಂಗ 

ವನ್ನು ಮಾಡುತ್ತಿರುವವರು ? ” ಎಂದು ಕ್ರುದ್ಧಳಾಗಿ ಕೇಳುತ್ತಿದ್ದರೂ ಆ 

ಕೇಳುವಾಕೆಯ ಧ್ವನಿಯು ಕೋಕಿಲದ ವಾಣಿಯಂತೆ ಮಂಜುಲವಾಗಿ 

ಕೇಳಿಸಿತು. 


ಇಲ್ಲಿ ವ್ಹಾಲೆಂಟಾಯಿನ್ ಡಿಗ್ಬಿ ಎಂಬ ಗೃಹಸ್ಥರು ಬಂದಿರುವರಷ್ಟೆ ?” 

ಎಂದು ಶಾರ್ಲಾಕನು ಕೇಳಿದನು. 


" ವಾಲೆಂಟಾಲಿನ್ ಡಿಗ್ಬಿ ! ಎಲ್ಲಿಯವರವರು ? ಇಲ್ಲಿಗೇಕೆ ಬರುವ 

ರವರು ? ಡಿಗ್ಬಿ ಎಂಬವರ ಪರಿಚಯವೇ ನಮಗಿಲ್ಲ ” ಎಂದು ಆ ಸ್ತ್ರೀಯ 

ಒಳಗಿನಿಂದಲೇ ನುಡಿದಳು. 

 

" ಅದೇಕೆ ? ಡಿಗ್ಬಿಯು ಇಲ್ಲಿ ಬಂದದ್ದನ್ನು ನಾನು ಪ್ರತ್ಯಕ್ಷವಾಗಿ 

ಕಂಡಿದ್ದೇನೆ. ನನ್ನ ಹೆಸರು ಶರ್ಲಾಕ್ ಹೋಲ್ಮ್ಸನು, ” 


" ಶರ್ಲಾಕ್ ಹೋಲ್ಮ್ಸ ! ” ಎಂದು ಉದ್ಗಾರ ತೆಗೆದವಳೇ ಡಿಯಾ 

ನೆಯು ಬಾಗಿಲವನ್ನು ತೆರೆದು “ಏನು ನಿಮಿತ್ತ ಬಂದಿರುವಿರಿ ? ಒಳಗೆ ದಯ 

ಮಾಡಬೇಕು ” ಎಂದು ವಿನಯದಿಂದ ನುಡಿದಳು. 


ಶರ್ಲಾಕನು ಒಳಗೆ ಹೋಗಿ ಅಲ್ಲಿರುವದೊಂದು ಕುರ್ಚಿಯ ಮೇಲೆ 

ಕುಳಿತು " ಡಿಯಾನಾಬಾಯಿ, ಡಿಗ್ಬಿಯು ಇಲ್ಲಿ ಬರಲಿಲ್ಲವೆ ? ಅವನು ಇದೇ 

ಮನೆಯೊಳಗೆ ಬಂದಂತಾಯಿತು ” ಎಂದು ನುಡಿದನು. 


" ಬರಲಿಲ್ಲ ಬಿಡಿರಿ. ಬೇಕಾದರೆ ನೀವು ನೋಡಿ ಕೊಳ್ಳಬಹುದು. 

ಮನೆ ತುಂಬ ಅಡ್ಡಾಡಿ ನೋಡಿರಿ. ನೀವೇಕೆ ಅವನ ವಿಷಯವಾಗಿ ವಿಚಾರ 

ಗೈಯುವಿರಿ ? ಅವನೇನಾದರೂ ಅಪರಾಧವನ್ನು ಮಾಡಿರುವನೋ ? " 

ಎಂದು ಕೇಳಿದಳು. 


ಶರ್ಲಾಕನು ಡಿಯಾನೆಯ ಧೂರ್ತತನಕ್ಕೆ ಬೆರಗಾಗಿ ನಕ್ಕು “ ಆವನ 

ಅಪರಾಧಗಳೇನೂ ಇಲ್ಲ. ಆದರೂ ಅವನಿಲ್ಲಿಗೆ ಬಂದನೆಂಬದನ್ನು ಅನೇಕ 

ಜನರು ಕಂಡಿರುವದಾಗಿ ಹೇಳುತ್ತಾರಾದ್ದರಿಂದ ನಾನು ಈ ಮನೆಯಲ್ಲೆಲ್ಲ

 ಶೋಧ ಮಾಡುವೆನು. ನೀವು ಪ್ರತಿಬಂಧ ಮಾಡಲಿಕ್ಕಿಲ್ಲ ಎಂದು ಆಶಿಸು 

 ತ್ತೇನೆ ” ಎಂದು ಸೂಚಿಸಿದನು. 

 

" ಅವಶ್ಯ, ಅವಶ್ಯ! ತಾಸೆರಡು ತಾಸು ನಿದ್ದೆಗೇಡಾಗುವೆನಲ್ಲದೆ 

ಮತ್ತೇನಿದೆ ? ” 

 

ಸಂಗಡಲೆ ನಾಲ್ಕಾರು ಪೋಲೀಸ ಜನ ಶರ್ಲಾಕನೂ ಡಾಕ್ಟರ 

ವ್ಯಾಟ್ ಸನ್ನನೂ ಮನೆಯಲ್ಲಿ ಹೊಕ್ಕು ಎಲ್ಲ ಕಡೆಯಲ್ಲಿಯೂ ಡಿಗ್ಬಿಯ ಶೋಧ 

ಮಾಡಿದರು, ಕೋಠಿ, ಅಡಿಗೆಮನೆ, ಬಚ್ಚಲ, ಹಿತ್ತಲಮನೆಗಳಲ್ಲಿ ಅಡ್ಡಾಡಿ 

ನೋಡಿದರು. ಪೆಟ್ಟಿಗೆ ಕಪಾಟಗಳನ್ನು ತೆರೆದಿಟ್ಟರು. ಹಾಸಿಗೆಯ ಸುರುಳಿ 

ಗಳನ್ನು ಉರುಳಿಸಿದರು. ಎಲ್ಲಿಯ ಡಿಗ್ಬಿಯ ತುಬ್ಬು ಇಲ್ಲ. ನೆಲದಲ್ಲಿ 

ಪೊಳ್ಳಿರುವದೋ ಎಂದು ಶಂಕಿಸಿ ಅಲ್ಲಲ್ಲಿ ಕುಣಿದಾಡಿ ನೋಡಿದರು. ಬೇಸತ್ತು 

ಅವರು ನೆಲಮನೆಗೆ ಬಂದರು. ಅಲ್ಲಿಯಾದರೂ ಏನಿದೆ ? ಶರ್ಲಾಕನು 

ಬೆರಗಾಗಿ ನಿಂತನು. ದೊಡ್ಡ ದೊಂದು ಹಾವಾನಾ ಸಿಗರು ತೆಗೆದು ಅವನು 

ಅದನ್ನು ಹೊತ್ತಿಸಿ ಸೇದುತ್ತೆ ಮೂಢನಂತೆ ನೋಡುತ್ತ ನಿಂತನು. ಎಲ್ಲರ 

ಯತ್ನಗಳೆಲ್ಲ ನಿಂತವು. ಶರ್ಲಾಕನು ಹತ್ತೆಂಟು ಜುರಿಕೆ ಬಕ್ತಿಯನ್ನು ಅವ 

ಸರವಸರದಿಂದ ಸೇದಿ ಸಾವಕಾಶವಾಗಿ ಹೆಜ್ಜೆಗಳನ್ನಿಕ್ಕುತ್ತೆ ಅಲ್ಲಿಟ್ಟಿರುವ 

ದೊಂದು ದೊಡ್ಡದಾದ ಹಿತ್ತಾಳೆಯ ಕಲಬತ್ತಿನ ಬಳಿಗೆ ಬಂದು ಅದರಲ್ಲಿ 

ಕೈ ಹಾಕಿ ನೋಡಲಾಗಿ ಪೈ ತೂಕದಷ್ಟು ಹಿಟ್ಟಿನಂಥ ಪದಾರ್ಥವು ಇದ್ದಿತು. 

ಒಂದು ಚಮಟಗೆಯನ್ನು ತೆಗೆದುಕೊಂಡು ಅವನ ಮಣಸಿನೋಡಿದನು. 

ಮತ್ತೊಮ್ಮೆ ಮೂಸಿನೋಡಿ ಅದನ್ನು ಅವನು ಡಾಕ್ಟರ ವ್ಯಾಟ್ ಸನ್ನನಿಗೆ 

ತೋರಿಸಿದನು. " ಪ್ರಾಣಿಜ ಪದಾರ್ಥದಂತೆ ಕಾಣಿಸುತ್ತದೆ " ಎಂದು 

ವ್ಯಾಟ್ಸನ್ನನು ಅಭಿಪ್ರಾಯಪಟ್ಟ ಕೂಡಲೆ ತರ್ಲಾಕನಿಗೆ ಹುಚ್ಚು ನಗೆ 

ತುಂಬಿತು. ಏನು ಮಾಡಿದರೂ ಅವನ ನಗೆ ನಿಂದಿದಲೊಲ್ಲದು. " ಹೀಗೇಕೆ 

ಮಾಡುವಿರಿ ಹೋಲ್ಮ್ಸ ? ” ಎಂದು ಡಾಕ್ಟರನು ಕೇಳಿದರೂ ಅವನ ನಗೆ 

ನಿಂದಿರಲಿಲ್ಲ. ಈ ಮನುಷ್ಯನಿಗೆ ಚುಚ್ಚು ಹಿಡಿಸುವ ಪುಡಿಯು ಇದು ಬೇರೆ 

ಅಲ್ಲವಷ್ಟೆ ?” ಎಂದು ನುಡಿದು ವ್ಯಾಟ್ಸನ್ನನು ಅದನ್ನು ತಾನು ಮತ್ತೆ 

ಮೂಸಿನೋಡಿದನು, ಆಗ ಶರ್ಲಾಕನು " ಡಾಕ್ಟರ, ಇದು ಮನುಷ್ಯನಿಗೆ 

ಹುಚ್ಚು ಹಿಡಿಸುವ ಪುಡಿಯಲ್ಲ. ಇದು ಯಾತರ ಪುಡಿ ಎಂಬದು ತಿಳಿದರೆ 

ನಿಮಗಾದರೂ ಹುಚ್ಚು ಹಿಡಿಯಬಹುದು,'' ಎಂದು ಹೇಳಿದನು. 


ಬಳಿಕ ಹರ್ಲಾಕನು ಮತ್ತೊಂದು ಸಿಗರವನ್ನು ಹೊತ್ತಿಸಿ ಒಂದು 

ಕುರ್ಚಿಯನ್ನು ತೆಗೆದುಕೊಂಡು ಆರಾಮವಾಗಿ ಕುಳಿತುಕೊಂಡು ಹೇಳಲಾ 

ರ೦ಭಿಸಿದ್ದೇನೆಂದರೆ : 


". ಡಾಕ್ಟರ, ಇಲ್ಲಿ ನೋಡಿರಿ, ನೀರಾಗಿ ಮಾಡಿದ ಹವೆಯ ರಸದಿಂದ 

ತುಂಬಿದ ಬುದ್ದಲಿಕೆಯಲ್ಲಿದೆ. ಇದರಲ್ಲಿ ಮೊಲ ಮುಂತಾದ ಪ್ರಾಣಿಗಳನ್ನು 

ಕೊಂದು ಚಲ್ಲಿ ಕೊಟ್ಟರೆ ಅವುಗಳ ಶರೀರಗಳು ರಾಳ ಕಲ್ಲು ಸಕ್ಕರೆ ಮುಂತಾದ 

ಪದಾರ್ಥಗಳಂತೆ ಹೊಡೆದರೆ ಪಳ ಪಳ ಪುಡಿಯಾಗುತ್ತವೆಂಬದನ್ನು ನೀವು 

ಬಲ್ಲಿರಷ್ಟೆ ? ಹಾಗೆಯೇ ಈ ರಸದಲ್ಲಿ ಮನುಷ್ಯನ ದೇಹವನ್ನು ಚೆಲ್ಲಿ ಕೊಟ್ಟರೆ 

ಅದಾದರೂ ಕುಟ್ಟಿದ ಕೂಡಲೆ ಪುಡಿಪುಡಿಯಾಗಬಹುದಲ್ಲವೆ? ” 


ಈ ಮಾತು ಕೇಳಿದ ಕೂಡಲೆ ವ್ಯಾಟಸನ್ನ ನು ಹುಯ್ಕೆಂದು ಹುಚ್ಚ 

ನಂತೆ ಕುಣಿದನು. ( ತಿಳಿಯಿತು ಶರ್ಲಾಕ್, ಈ ಕಲಬತ್ತಿನಲ್ಲಿಯ 

ಪುಡಿಯು ಮನುಷ್ಯನ ದೇಹವನ್ನು ಕಟ್ಟಿ ಮಾಡಿದ ಪುಡಿಯ ಅವಶೇಷವೇ, 

ಸಂದೇಹವಿಲ್ಲ. ವ್ಹಾಲೆಂಟಾಯಿನ ಡಿಬ್ಗಿ ಯನ್ನು ಕೊಂದು ಅವನ ದೇಹ 

ವನ್ನು ಹೀಗೆ ಕುಟ್ಟಿ ಪುಡಿಪುಡಿಯಾಗಿ ಮಾಡಿರುವರಾದೀತೇನು ? ” 


" ಸಂದೇಹವೇಕೆ ? ಆದರೆ ಇಲ್ಲಿಯ ಜನರು ಡಿಗ್ಬಿಯನ್ನು ಕೊಂದು 

ಅವನ ದೇಹವನ್ನು ಕುಟ್ಟಿ ಹೀಗೆ ಪುಡಿ ಮಾಡಿರುವರೆಂದು ಸಿದ್ಧಮಾಡಿ 

ಕೊಡಲು ನಮ್ಮಲ್ಲಿ ಸಾಕಷ್ಟು ಪ್ರಮಾಣಗಳಿಲ್ಲ. ಈ ಗಾಳಿಯ ರಸದ ಬುದ್ದಲಿ 

ಕೆಯಲ್ಲಿ ಡಿಗ್ಬಿಯನ್ನು ಕೊಂದು ಹಾಕಿ ಆ ಹೆಣವನ್ನು ಡೋಣಿಯಂತಿರುವ 

ಕಲಬತ್ತಿನಲ್ಲಿ ಹಾಕಿ ಕುಟ್ಟಿ ಪುಡಿ ಮಾಡಿ ಅಕೋ ಅಲ್ಲಿ ಬಿದ್ದಿರುವ ತೊಗಲ 

ಕೊಳಿವೆಯಲ್ಲಿ ಹಾಕಿ ಯಂತ್ರ ಸಹಾಯದಿಂದ ಆ ಪುಡಿಯನ್ನೆಲ್ಲ ಗಾಳಿಗೆ 

ತೂರಿಬಿಟ್ಟಿರುವರು. ಇನ್ನು ನಾವು ಈ ಶೋಧದ ಕೆಲಸವನ್ನು ಹೆಚ್ಚಾಗಿ 

ಈ ಮನೆಯಲ್ಲಿ ನಡಿಸಿದರೆ ಮರವು ನಮ್ಮ ಮೈ ಮೇಲೆಯೇ ಕಡುಕೊಂಡು 

ಬೀಳುವದು. ಡಿಯಾನೆಯು ಕಣ್ಣಿಗೆ ಚಲುವೆಯಾಗಿ ಕಂಡಷ್ಟೆಯೇ ಅವಳು 

ದುಷ್ಟೆಯ ನಿರ್ದಯವೂ ಆಗಿರುವಳು, ವ್ಹಾಲೆಂಟಾಯಿನ ಡಿಗ್ಬಿಯು 

ಅವಳ ಮೋಸಕ್ಕೊಳಗಾಗಿ ವ್ಯರ್ಥವಾಗಿ ಸತ್ತು ಹೋದನು. ನನ್ನಂಥವ 

ನನ್ನು ಕೂಡ ಸೋಲಿಸುವ ಹೆಂಗಸು ಹುಟ್ಟಿದಳು ! 

=======================================

ಬೆಳ್ಳಿ-ಚಿಕ್ಕೆ ##### 


ಸರಲಾಕ್ಷ ಹುಲಿಮೀಸೆ ಎಂಬವನು ಅತಿ ಧೂರ್ತನಾದ ಕಳ್ಳರ 

ಮಿಂಡನು. ಆವನ ದಕ್ಷತೆಯಿಂದಲೂ ಚಾತುರ್ಯದಿಂದಲೂಾ ಶೋಧಕ 

ಶಕ್ತಿಯಿಂದಲೂ ರಾಮರಾಜನ ರಾಜ್ಯದಲ್ಲಿ ನಡೆದುಹೋದ ಅನೇಕವಾದ 

ಕೊಲೆ ಸುಲಿಗೆ ಮೋಸ ಅಪಹಾರಾದಿ ದುಷ್ಕೃತ್ಯಗಳ ತುಬ್ಬು ತತ್ಕಾಲವೇ 

ಹತ್ತುತ್ತಿರುವದರಿಂದ ಆ ರಾಜ್ಯದಲ್ಲಿ ಪಾಪಾತ್ಮರಿಗೆ ಕಾಲೂರಿ ನಿಲ್ಲಲು ಸ್ಥಳ 

ವಿಲ್ಲದಂತಾಗಿತ್ತು. ಇಂಥ ಸ್ಥಳದಲ್ಲಿ ಇಂಥ ದಿವಸ ಇಂಥದೊಂದು ಅಪಕೃತ್ಯ 

ವಾಯಿತೆಂಬ ವಾರ್ತೆಯು ಹುಲಿಮೀಸೆಯ ಕಿವಿಗೆ ಬಿದ್ದ ರಾಯಿತು. ಅದನ್ನು 

ಮಾಡಿದವರಾರು, ಅವರಾಕೃತ್ಯವನ್ನು ಯಾವ ಚಮತ್ಕಾರವಾದ ರೀತಿಯಿಂದ 

ಮಾಡಿದರೆಂಬ ಮಾತಿನ ಎಳೆಯನ್ನು ಅವನು ಸಂಗಡಲೇ ಹಿಡಿದುಕೊಂಡನೇ. 

ರಾಜಧಾನಿಯಲ್ಲಿ ಕಳ್ಳರಾರು ಸುಳ್ಳರಾರು ಮೋಸಗಾರರಾರಂಬದರ ಎಣಿಕೆ 

ಯನ್ನು ನಿರಲಸನಾದ ಆ ಕಾರ್ಯದಕ್ಷನು ಕಟ್ಟಿಕೊಂಡು ಇರುವನು. 

ಆದರೂ ನಗರರಕ್ಷಕರ ದಕ್ಷತೆಯು ಅಧಿಕಾಧಿಕವಾದಂತೆಯೇ ಕಳ್ಳರಾದರೂ 

ಹೆಚ್ಚಾದ ಜಾಣೆಯಿಂದ ತಮ್ಮ ಕುಕರ್ಮಗಳನ್ನು ನಿರ್ವಿಘ್ನವಾಗಿ ಸಾಧಿಸಿ 

ಕೊಳ್ಳುವದು ಸಹಜವಾದ ಮಾತೇ. ಕುಕರ್ಮಗಳ ಶೋಧವನ್ನು ಶಾಸ್ತಾನು 

ರೋಧವಾಗಿ ನಡಿಸಿದ ಪ್ರಮಾಣದಿಂದಲೇ ಕಳ್ಳರಾದರೂ ರಸಾಯನಶಾಸ್ತ್ರ, 

ವೈದ್ಯಶಾಸ್ತ್ರ, ಪದಾರ್ಥವಿಜ್ಞಾನಶಾಸ್ತ್ರಗಳ ಸಹಾಯದಿಂದ ತಮ್ಮ, ಚೌರ್ಯ 

ಕರ್ಮಗಳನ್ನು ಲೋಕವು ಬೆರಗಾಗುವಂತೆ ಮಾಡಿ ತೋರಿಸುವರು. ಹುಲಿ 

ಗಳು ಹೆಚ್ಚಾಗಿರುವ ನಾಡುಗಳಲ್ಲಿಯೇ ಆ ಶ್ವಾಪದಗಳಿಗೆ ಬಾಯ್ತಡೆಯನ್ನು 

ಮಾಡಬಲ್ಲವರಾದ ನಿಪುಣರು ಹುಟ್ಟುವಂತೆ ರಾಮರಾಜನ ರಾಜ್ಯದಲ್ಲಿ ಕಳ್ಳ 

ರಿಗೆ ಮಿಂಡನಾದ ಹುಲಿಮೀಸೆಯು ಹುಟ್ಟಿ ಆ ಅಪರಾಧಿಗಳ ಕುಕರ್ಮಗಳ 

ನ್ನೆಲ್ಲ ಬಯಲಿಗೆ ತಂದು ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡಿದರು. 


ಹುಲಿಮೀಸೆಯು ಅಗಾಧವಾದ ಬುದ್ದಿಯುಳ್ಳವನು. ಗಣಿತ ರಸಾಯನ 

ಶಾಸ್ತ್ರಗಳಲ್ಲಿ ಅವನಿಗೆ ಮಿತಿಮೀರಿದ ಮೆಚ್ಚಿಗೆ, ತರ್ಕದಲ್ಲಿಯಾದರೂ ಅವ. 

ನೊಳ್ಳೆ ಗಟ್ಟಿಗನು, ಜನರ ಗುಣಾವಗುಣಗಳನ್ನು ಬಹು ಸೂಕ್ಷ್ಮವಾಗಿ, 

ನಿರೀಕ್ಷಿಸುವದು ಅವನ ಹುಟ್ಟು ಗುಣವೇ ಆಗಿತ್ತು. ತಳುವಾದ ಮೈಕಟ್ಟಿನವ 

ನಾಗಿದ್ದರೂ ಅವನು ಸಮರ್ಥನು. ಸರ್ಪದಂತೆ ತೀಕ್ಷ್ಣವಾದ ಕಣ್ಣುಗಳು 

ಳ್ಳವನಾದ ಅವನು ಹೋಗಹೋಗುವಾಗಲೇ ಅಲ್ಲಲ್ಲಿಯ ಚರಾಚರಗಳ 

ಸ್ವರೂಪವನ್ನು ಕಂಡುಕೊಳ್ಳುವನು ಅಂಥ ಚಮತ್ಕಾರವಾದ  ಉತ್ತಮ

ಚಿತ್ತವೃತಿಯು ವಿಲಕ್ಷಣವಾದದಾಗಿತ್ತೆಂದು ಆಶ್ಚರ್ಯದಮಾತು. ಆಟ 

ನೋಟ ವಿನೋದ ಮುಂತಾದವುಗಳು ಅವನಿಗೆ ಸೇರುತ್ತಿದ್ದರೂ ಅವುಗಳಲ್ಲಿ 

ಅವನು ಹೊತ್ತು ಗಳೆದವನಲ್ಲ. ಜನರೊಡನೆ ವಿಶೇಷವಾಗಿ ಕೂಡಿ ಆಡಿದನವಲ್ಲ. 

ಅವನು ದೃಢಾಂಗನಾಗಿದ್ದರೂ ವ್ಯಾಯಾಮಗಳಲ್ಲಿ ಅವನಿಗೆ ಸೇರಿಕೆ ಕಡಿಮೆ. 

ಯಾವದೊಂದು ದೊಡ್ಡ ವಿಚಾರದಲ್ಲಿ ಅವನು ಮುಳುಗಿದ್ದನೆಂದರೆ ಎಡ ಬಲ 

ದಲ್ಲಿ ನಡೆದಿದ್ದ ಸಂಗತಿಗಳ ಅರಿವೇ ಅವನಿಗಿರುತ್ತಿದ್ದಿಲ್ಲ. ಇ೦ಥ ಸ್ಥಿತಿಯಲ್ಲಿರು 

ವಾಗ ಹುಲಿಮೀಸೆಯು ಹೊಗೆಸೊಪ್ಪನ್ನೊಂದನ್ನು ಮಾತ್ರ ಬಲು ಹುರುಪಿ 

ನಿಂದ ಸೇದುವನು, ಮನೆಗೆಲ್ಲಿಯೋ ಬೆಂಕಿಹತ್ತಿರುವದೆಂಬಂತೆ ಅವನಿರುವ 

ಕೋಣೆಯಲ್ಲಿ ದುಂದಾಕಾಗವಾಗಿ ಗೋಗೆ ಇಡುಗಿತ್ತೆಂದರೆ ಹುಲಿಮೀಸೆಯು 

ತರ್ಕಗಳು ಅವ್ಯಾಹತವಾಗಿ ನಡೆದಿರುವವೆಂಬ ಸೂಚನೆ, 


ನಾನು ( ವೈದ್ಯ ವಾತಾತ್ಮಜ ಪಂಡಿತ ) ಸರಲಾಕ್ಷರಾಯನ ಪರಮ 

ಶಿಷ್ಯನು, ನನ್ನ ಸ್ವಂತ ಉದ್ಯೋಗದಿಂದ ಯೋಗಕ್ಷೇಮವು ಅವಿಚ್ಛಿನ್ನವಾಗಿ 

ಸಾಗುತ್ತಿದ್ದರೂ ಸರಲಾಕ್ಷನು ಕುಕರ್ಮಗಳ ತುಬ್ಬನ್ನು ಹೇಗೆ ಚಮತ್ಕಾರ 

ವಾಗಿ ಹಚ್ಚುತ್ತಿರುವನಂಬದರ ಅನುಭವವನ್ನು ಕಂಡುಕೊಳ್ಳುವ ಲವಲವಿಕೆ 

ನನಗೆ ಹೆಚ್ಚಾಗಿರುವದರಿಂದ ನಾನು ಅವನ ಅನುಯಾಯಿಯಾಗಿ ಇದ್ದು 

ಕೊಂಡಿದ್ದನು. ಒ೦ದು ದಿನ ನಾನು ಹುಲಿಪಿತಾಸೆ ಸರಕಾಕ್ಷನ ಮನೆಗೆ 

ಹೋದಾಗ ಅವನ ಕೋಣೆಯಲ್ಲಿ ದಟ್ಟಾದ ಹೊಗೆ ಇಡುಗಿತ್ತು. ಅವನಾ 

ವದೋ ಗಹನವಾದ ವಿಚಾರದಲ್ಲಿ ನಿಮಗ್ನನಾಗಿರುವನೆಂಬದು ನಿರ್ವಿವಾದವು. 

ಒಳಗೆ ಹೋಗಿ ನೋಡಲಾಗಿ ಆ ಮೂರ್ತಿಯು ಸಮಾಧಿಸ್ಥವಾಗಿ ಕುಳಿತಿತ್ತು. 

ನಾನು ಕ್ಯಾಕರಿಸಿದೆನು, ಹುಂಕರಿಸಿದೆ. ಸರಲಾಕ್ಷನು ನನ್ನನ್ನು ಕಣ್ಣೆತ್ತಿ 

ಕೂಡಾ ನೋಡಲಿಲ್ಲ. ಇತ್ತ ಕಡೆಯ ಪ್ರಜ್ಞೆಯೆ ಆವನಿಗಿಲ್ಲ. ನೋಡುವನೆಲ್ಲಿಂದ? 

ನಾನೊಂದು ದಿಂಬಕ್ಕೆ ಆತುಕೊಂಡು ಅರ್ಧಗಳಿಗೆ ಸುಮ್ಮನೆ ಕುಳಿತನು. 

ಹುಲಿವಾಸಪ್ಪನವರ ಸಮಾಧಿಯು ಬಿಗಿಯು ತುಸು ಸಡಿಲಾದಂತೆ ಕಂಡಿತು. 


"ಯಾಕೆ ರಾಯರೆ, ಗಹನವಾದ ವಿಚಾರವು ನಡೆದಂತೆ ಕಾಣುತ್ತದೆ?” 

ಎಂದು ನಾನು ಗಟ್ಟಿಸಿ ಕೇಳಿದೆನು. 

 

" ಓ ವೈದ್ಯರಾಜ, ಯಾವಾಗ ಆಗಮನ ? ” ಎಂದು ಅವನು ತಟ್ಟನೆ 

ಎಚ್ಚಶವನಾಗಿ ನನ್ನನ್ನು ಕೇಳಿದನು. 


" ಬಂದು ಆರ್ಧಗಳಿಗೆಯಾಯಿತು, ಸುಭೇದಾರ ರಾಸಬಿಹಾರಿಯವರ 

ಕುದುರೆಯ ಪ್ರಕರಣವನ್ನು ಕುರಿತು ಆಲೋಚಿಸುತ್ತಿದ್ದಿರೇನು ? ” 


" ವಾಃ ! ವಾತಾತ್ಮಜ ಪಂಡಿತ, ದಿನೇ ದಿನೇ ನಿಮ್ಮ ಬುದ್ಧಿಯು 

ಒಳ್ಳೆ ಚುರುಕಾಗುತ್ತೆ ಬಂದಿತು. ನಾನು ರಾಸಬಿಹಾರಿಯ ಕುದುರೆಯ 

ಪ್ರಕರಣವನ್ನು ಕುರಿತೇ ಆಲೋಚಿಸುತ್ತಿದ್ದೆನು, ಒಳಿತಾಗಿ ಸಿಕ್ಕಿರಿ ನೀವು. 

ನಾನೀಗಲೆ ವಾತಾಪಿಪುರಕ್ಕೆ ಹೊರಡತಕ್ಕವನು. ನೀವು ನನ್ನೊಡನೆ ಬರುವಿ 

ರಷ್ಟೆ ?” 


" ಗುರುಗಳೆಲ್ಲಿಯೋ ಅಲ್ಲಿ ಶಿಷ್ಯನು, ನಡೆಯಿರಿ. ” ಎಂದು ನಾನು 

ನಗುತ್ತೆ ಒಪ್ಪಿಕೊಂಡೆನು. 


“ ನಾನು ಧನ್ಯನಾದೆನು, ಈ ಪ್ರಸಂಗದಲ್ಲಿ ವೈದ್ಯರ ಅಭಿಪ್ರಾಯವೂ 

ಅವಶ್ಯವಾಗಿರುವಂತೆ ತೋರುತ್ತದೆ. ” ಎಂದು ನುಡಿದು ಸರಲಾಕೃರಾಯನು 

ತನ್ನ ಗಡಿಯಾರವನ್ನು ತೆಗೆದು ನೋಡಿ, “ ಓಹೋ, ಇಲ್ಲಿ ನೋಡಿರಿ 

ಹತ್ತೂವರೆಯಾಗಿದೆ. ಹನ್ನೊಂದಕ್ಕೆ ಸರಿಯಾಗಿ ಹೊಗೆಬಂಡಿಯು ವಾತಾಪೀ 

ಪುರಕ್ಕೆ ಹೊರಡುವದು. ನೀವಿನ್ನು ಮನೆಗೆ ಹೋಗುವ ವಿಚಾರ ಮಾಡದೆ 

ಹೀಗಿಂದ ಹೀಗೆಯೇ ಸ್ಟೇಶನಕ್ಕೆ ಬರಬೇಕು, ಹೊನ್ನಪ್ಪನು ನಮ್ಮೀರ್ವರಿ 

ಗಾಗಿ ಹಾಸಿಗೆ ಬಟ್ಟೆಗಳನ್ನು ಕಟ್ಟಿಕೊಂಡೇ ಕುಳಿತಿರಬಹುದು. ” 


" ಆಗಲಿ !” ಎಂದು ನಾನು ಒಪ್ಪಿಕೊಂಡೆನು. " 


" ವಾತಾತ್ಮಜ, ಅಲ್ಲಿ ದುರ್ಬೀನು ಇವೆ; ತೆಗೆದುಕೊಳ್ಳಿರಿ. ವಾತಾಪೀ 

ಪುರದ ಬಳಿಯಲ್ಲಿರುವ ಪರ್ವತಾವಳಿಯನ್ನೂ ಇನ್ನುಳಿದ ಸೃಷ್ಟಿ ಸೌಂದರ್ಯ 

ವನ್ನೂ ಚನ್ನಾಗಿ ನಿರೀಕ್ಷಿಸಬೇಕಾದರೆ ದುರ್ಬೀನು ಅವಶ್ಯವಾಗಿ ಬೇಕು, ಆ 

ನಿಮ್ಮ ಚೀಲದಲ್ಲಿ ಹಿಂಗಾಷ್ಟಕವಿರುವದಷ್ಟೆ ?” ಎಂದು ಹುಲಿಮೀಸೆಯು 

ಮುಗುಳುನಗೆ ನಕ್ಕು ಕೇಳಿದನು. 


" ಅದೇಕೆ ?" 


" ರಾಸಬಿಹಾರಿಯಂಥ ಅತ್ತಕಡಿಯ ಬ್ರಾಹ್ಮಣರು ಪಕ್ವಾನ್ನದ ಅಡಿ 

ಗೆಯ ಹೊರತಾಗಿ ಮತ್ತೊಂದು ಅಡಿಗೆಯನ್ನೇ ಅರಿಯಿಸಿರು, ಪಕ್ವಾನ್ನ ಭೋಜನ 

ವಿದ್ದಾಗ ನೀವು ಹೊಟ್ಟೆಯ ಅಳತೆಯನ್ನು ಮರೆತೇ ಬಿಡುವಿರಿ. ” ಎಂದು 

ಹುಲಿ ಮೀಸೆಯು ಗಹಗಹಿಸಿ ನಗುತ್ತೆ ನುಡಿದನು. 

 

ಸಮಯವು ಒತ್ತಿ ಬಂದಿದ್ದರಿಂದ ನಾವು ರಥದಲ್ಲಿ ಕುಳಿತು ಸ್ನೇಳನಕ್ಕೆ 

ಹೋದೆವು. ಹೊಗೆಬಂಡಿಯು ಸಿದ್ಧವಾಗಿಯೇ ನಿಂತಿತ್ತು. ವಿಲಂಬವಾಡದೆ 

ನಾವು ಮೊದಲನೆಯ ತರಗತಿಯ ಬಂಡಿಯಲ್ಲಿ ಯಥಾ ಸುಖವಾಗಿ ಕುಳಿತು 

ಕೊಂಡು ಗಡಿಯಾರವನ್ನು ತೆಗೆದು ನೋಡುವಷ್ಟರಲ್ಲಿ ಬಂಡಿಯು ಸಾಗಿಯೇ 

ಬಿಟ್ಟಿತು. ನಾವೀ ರ್ವರೂ ನನ್ನ ತಲೆಯ ಮೇಲಿನ ರುಮಾಲುಗಳನ್ನು ತೆಗೆ 

ದಿಟ್ಟು, ಧೂಮ್ರಪಾನದ ಉದ್ಯೋಗವನ್ನು ನಡೆಸಿದೆವ, ಹೊಗೆಬಂಡಿ 

ಯಾದರೂ ಒಳ್ಳೆ ರಭಸದಿಂದ ಸಾಗಲಾರಂಭಿಸಿತ್ತು, ಹುಲಿಮೀಸೆಯು ತನ್ನ 

ಕೈಯಲ್ಲಿ ಗಡಿಯಾರವನ್ನು ತೆಗೆದು ಹಿಡಿದು ವಾಃ ! ಬಂಡಿಯನ್ನು ಒಳ್ಳೆ 

ವೇಗದಿಂದ ಹೊಡೆಯುತ್ತಿರುವನು. ಗಂಟೆಯೊಂದಕ್ಕೆ ನಾಲ್ಕತ್ತು ಮೈಲಿನ 

ವೇಗವಾಗಿದೆ. ” ಎಂದು ಅವನು ಕಿಟಕಿಯ ಹೊರಗೆ ಮೋರೆ ಹಾಕಿ ನೋಡಿ 

ನುಡಿದನು. 


" ಮೈಲುಗಲ್ಲುಗಳು ನನಗೆ ಕಾಣಿಸುವದಿಲ್ಲ. ಹೇಗೆ ಹೇಳಲಿ ?" 

ಎಂದು ನಾನು ಉತ್ತರವನ್ನಿತ್ತನು. 


ನಾನಾದರೂ ಎಲ್ಲಿ ನೋಡಿದ್ದೇನೆ" ? ಈ ಭಾಗದಲ್ಲಿ ಮೈಲೊಂದಕ್ಕೆ 

ಇಪ್ಪತ್ತು ತಂತಿಯ ಕಂಬಗಳನ್ನು ನಿಲ್ಲಿಸಿರುವರಷ್ಟೆ? ” 


" ಇಂಥ ಸಂಗತಿಗಳೆಲ್ಲ ನಿಮ್ಮ ಧ್ಯಾನದಲ್ಲಿ ನಿಂತಿರುವದು ಹೆಚ್ಚಿನ 

ಮಾತು, ” 


" ಈ ಮಾತು ಹಾಗಿರಲಿ, ಆ ಬೆಳ್ಳಿಯ ಚಿಕ್ಕೆಯೆಂಬ ಕುದುರೆಯ 

ಪ್ರಕರಣದಲ್ಲಿ ಆ ಆಶ್ವ ಶಿಕ್ಷಕನಾದ ಠಾಕೂರಸಿಂಗನ ಕೊಲೆಯ ಸಂಗತಿಯ .

ಆ ಅಪೂರ್ವವಾದ ಕುದುರೆಯು ಒಮ್ಮಿಂದೊಮ್ಮೆ ಕಾಣದಂತಾಗಿರುವ ಸೋಜಿ 

ಗದ ಸಂಗತಿಯೂ ವಿಚಾರಾರ್ಹವಾಗಿವೆ. ” ಎಂದು ಸರಲಾಕ್ಷನು ನುಡಿದನು.  


" ಆ ವೃತ್ತಾಂತವನ್ನೆಲ್ಲ ನಾನು ' ವೃತ್ತ ವಿಪರ್ಯಾಸ ' : ಸುದ್ದೀ 

ಸೂರಕ್ಕ' ಎಂಬ ವರ್ತಮಾನಪತ್ರಗಳಲ್ಲಿ ಓದಿರುವೆನು. ಆದರೆ ಇನ್ನೂ 

ಕೆಲವು ಪ್ರತ್ಯಕ್ಷ ಪ್ರಮಾಣಗಳು ಸಿಕ್ಕಿದ ಹೊರತು ನಿಶ್ಚಿತವಾದ ಅಭಿಪ್ರಾಯ 

ವನ್ನು ಹೇಳಲಾಗದು. 


" ವೈದ್ಯರೆ, ಸದ್ಯಕ್ಕೆ ಉಪಲಬ್ದ ವಾದ ಪ್ರಮಾಣಗಳು ಸಾಕಾಗುವಷ್ಟು 

ಇವೆಯೆಂದು ನಾನು ಭಾವಿಸುತ್ತೇನೆ. ಅವುಗಳನ್ನು ವಿಂಗಡಿಸಿ ಸುವ್ಯವಸ್ಥಿತ. 

ವಾಗಿ ರಚಿಸಿ ನೋಡಿದರೆ ನಿಜವಾಗಿ ಸಂಭವಿಸಿದ ಸಂಗತಿಗಳಾವವು ? ಅವು 

ಗಳಿಂದ ನಾವು ಊಹಿಸತಕ್ಕದ್ದೇನೆಂಬದು ಸಹಜವಾಗಿ ತಿಳಿಯುವಂತಿದೆ.” 


"ಈಗಾಗಲೆ ಠಾಕುರಸಿಂಗನ ಮರಣದ ಕಾರ್ಯಕಾರಣ ಸಂಬಂಧದ 

ಹೊಂದಿಕೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುವಿರೇನು ? ” 

ಎಂದು ನಾನು ಕುತೂಹಲವುಳ್ಳವನಾಗಿ ಕೇಳಿದೆನು. 


" ಇನ್ನೂ ನಿಶ್ಚಿತವಾಗಿ ಹೇಳಲಾರೆನು. ಕೆಲವು ಸಂಗತಿಗಳು ಸಂದಿಗ್ಧ 

ವಾಗಿವೆನಾವು ದೇವೀಗುಡ್ಡವೆಂಬ ಆ ಗ್ರಾಮಕ್ಕೆ ಹೋಗಿ ಚನ್ನಾಗಿ ಸ್ಥಳ 

ನಿರೀಕ್ಷಣವನ್ನು ಮಾಡಿಯೂ ಕೆಲವು ಸಂಗತಿಗಳನ್ನು ಪ್ರತ್ಯಕ್ಷವಾಗಿ ರಾಸ 

ಬಿಹಾರಿಯ ಮುಖದಿಂದ ಕೇಳಿಯ ನಿಶ್ಚಯಾತ್ಮಕವಾದ ಅಭಿಪ್ರಾಯವನ್ನು 

ಹೇಳಬಹುದು. ಒಂದು ತರ್ಕವಂತೂ ನಿಷ್ಪಲವಾದಂತಾಗಿದೆ, ” 


" ಯಾವದದು ? ” ಎಂದು ನಾನು ಚಕಿತನಾಗಿ ಕೇಳಿದೆನು, ಹುಲಿ 

ಮೀಸೆಯ ತರ್ಕವು ನಿಷ್ಪಲವಾಯಿತೆಂದರೆ ನೀಲಿ ಕೆಟ್ಟ ಸುದ್ದಿಯೇ. 


" ಮೊನ್ನೆ ಮಂಗಳವಾರ ದಿವಸವೇ ಸುಭೇದಾರ ರಾಸಬಿಹಾರಿಯೂ 

ಕೊತವಾಲ ಕೃಷ್ಟ ಭುಜಂಗನೂ ಕೂಡಿ ನೀವು ನಿಲ್ಲದೆ ಬರಬೇಕೆಂದು ನನಗೆ 

ತಂತಿಯಿಂದ ತಿಳಿಸಿದ್ದರು. ” 


" ಮೊನ್ನೆ ತಂತಿ ಬಂದಿತ್ತೆ? ಇಂದು ಗುರುವಾರ ; ನೀವು ಹೋಗದೆ 

ಎರಡು ದಿವಸ ಹಾಗೆಯೇ ಹೇಗೆ ಕುಳಿತಿರಿ ? " 


"ಕಣ್ಣ ಗೊಂಬೆಯಂತೆ ಎಲ್ಲರ ಕಣ್ಣಲ್ಲಿ ಕಟ್ಟಿರುವ ಬೆಳ್ಳೀಚಿಕ್ಕೆಯಂಥ 

ಅಶ್ವರತ್ನ ವನ್ನು ಒಂದೊಪ್ಪತ್ತು ಕೂಡ ಯಾರಾದರೂ ಬಚ್ಚಿಟ್ಟು ಕೊಂಡಿರು 

ವದು ಅಸಂಭವವಾದ ಮಾತು. ಅದಕ್ಕಾಗಿ ಇಂದಿಲ್ಲ ನಾಳಿಗಾದರೂ ಆ 

ಕುದುರೆಯ ವರ್ತಮಾನವು ಬಯಲಿಗೆ ಬರದೆ ಇರದೆಂದು ನಾನು ತರ್ಕಿಸಿ 

ಎರಡು ದಿನ ಸುಮ್ಮನೆ ಕುಳಿತು ಬಿಟ್ಟೆನು, ಇದೊಂದು ತಪ್ಪೇ ಆಯಿತು. " 

 

" ಕುದುರೆಯ ಸಮಾಚಾರವು ತಿಳಿಯದಿರುವದರಿಂದ ನಿಮ್ಮ ವಿಚಾರ 

ಸರಣಿಯಲ್ಲಿ ಹೆಚ್ಚು ಕಡಿಮೆಯಾಗಿರುವದೇನು?” ಎಂದು ನಾನು ಕೇಳಿದೆನು. 


" ಅದರ ವಿಚಾರವನ್ನು ಮುಂದೆ ಮಾಡೋಣ, ಸದ್ಯಕ್ಕೆ ನೀವೊಂದು 

ಮಹತ್ವದ ಸಂಗತಿಯನ್ನು ಚನ್ನಾಗಿ ಧ್ಯಾನದಲ್ಲಿಟ್ಟು ಕೊಳ್ಳಬೇಕು, ಅದೇ 

ನೆಂದರೆ, ಪ್ರತಿವರ್ಷ ವಾತಾಸೀಪುರದ ಬಯಲಿನಲ್ಲಿ ನಡೆಯುತ್ತಿರುವ ಕುದು 

ರೆಯ ಶರ್ಯತ್ತುಗಳು (ಜೂಜುಗಳು) ಬಹು ಪ್ರೇಕ್ಷಣೀಯವಾಗಿರುತ್ತವೆ. 

ಚಪಲಗತಿಯುಳ್ಳವೆಂದು ಹೆಸರಾದ ಕುದುರೆಗಳು ಆ ಶರ್ಯತ್ರಿಗೆ ಬರದೆ ಉಳಿ 

ಯುವದಿಲ್ಲ. ಗೆದ್ದ ಕುದುರೆಯ ಯಜಮಾನನು ಹತ್ತು ಹನ್ನೆರಡು ಸಾವಿರ 

ರೂಪಾಯಿಗಳನ್ನು ಉಡಿಯಲ್ಲಿ ಕಟ್ಟಿಕೊಳ್ಳುವನು. ಇದಲ್ಲದೆ ಹೀಗೆ ಜಿದ್ದಿ 

ನಿಂದ ಓಡುತ್ತಿರುವ ಕುದುರೆಗಳಲ್ಲಿ ಯಾವದು ಗೆದಿಯುವದು ಯಾವದು 

ಬಿಡುವದೆಂಬ ಮಾತಿನ ಬಗ್ಗೆ ಅನೇಕ ಜನ ದುರ್ನೀತರು ಅವಾ೦ತರವಾದ 

ಜಿದ್ದುಗಳನ್ನು ಕಟ್ಟುವದುಂಟು. ” 


" ಹೇಗೆ ? ಹೇಗೆ ? ” ಎಂದು ನಾನು ಪ್ರಶ್ನೆ ಮಾಡಿದೆನು. 


"ಕೇಳಿರಿ. ಬೆಳ್ಳೀಚಿಕ್ಕೆಯೆಂಬ ಕುದುರೆಯು ಮುಂದೆ ಬರುವದೋ 

" ಗಾಳಿಯ ಮಿಂಡ 'ನೆಂಬ ಬೇರೊಂದು ಕುದುರೆಯ ಮುಂದೆ ಬರುವದೋ 

ಎಂಬದೊಂದು ಪ್ರಶ್ನವು. ' ಗಾಳಿಯ ಮಿಂಡನು ಮುಂದೆ ಬರುವನು ; 

ನೂರು ನೂರು ರೂಪಾಯಿ ಜಿದ್ದು ' ಎಂದು ಕೆಲವರು ಪ್ರತಿಪಾದಿಸು 

ವರು. ' ಅದೇಕೆ, ಬೆಳ್ಳೀಚಿಕ್ಕೆಯೇ ಮುಂದೆ ಬರುವದು; ಇನ್ನೂರು ಇನ್ನೂರು 

ರೂಪಾಯಿ ಜಿದ್ದು ; ' ಎಂದು ಬೇರೆ ಕೆಲವರು ಪ್ರತಿಪಾದಿಸುವರು. ಹೀಗೆ 

ಅವಾಂತರವಾಗಿ ಜೂಜು ಕಟ್ಟು ವವರ ಹೆಸರುಗಳನ್ನೂ ಅವರು ಕಟ್ಟಿದ 

ಜೂಜಿನ ಹಣದ ಪರಿಮಿತಿಯನ್ನೂ ತಮ್ಮ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳು 

ವವರಾದ ಪಂಚರೂ ಅಲ್ಲಿ ಸಿದ್ದರಾಗಿಯೇ ಇರುತ್ತಾರೆ, ಗೆದ್ದವರು ತಮಗೆ 

ಸಿಕ್ಕ ಹಣದಲ್ಲಿ ನೂರಕ್ಕೆ ಐದೋ ಹತ್ತೋ ಹೀಗೆ, ಕೆಲವು ಭಾಗವನ್ನು 

ಪಂಚರ ಮಾನಪಾನವೆಂದು ಕೊಡುವ ಪರಿಪಾಠವೂ ಉಂಟು. ಹೀಗಾಗಿ 

ಬೆಳ್ಳಿಯ ಚಿಕ್ಕೆಯು ಹಿಂದಾಗಬೇಕೆಂದು ಬಯಸುವವರೂ ಅನೇಕ ಜನ. 

ಗಾಳಿಯ ಮಿಂಡನು ಹಿಂದಾಗಬೇಕೆಂದು ದೇವರಿಗೆ ಬೇಡಿಕೊಳ್ಳುವವರೂ 

ಅನೇಕ ಜನ. ” 


" ನಿರುದ್ಯೋಗಿಗಳಿಗೆ ಇದೊಂದು ಉದ್ಯೋಗವೇ ಆಯಿತೆಂದೆನ 

ಬೇಕು. ” ಎಂದು ನಾನು ಅಭಿಪ್ರಾಯಪಟ್ಟು ನಕ್ಕೆನು. 


" ಸರಿ ಸರಿ. ಇಂಥ ಸಂದಿನಲ್ಲಿ ಸುತ್ತಿನಂತಿರುವ ಆ ಬೆಳ್ಳೀ 

ಚಿಕ್ಕೆಯು ಅಕಸ್ಮಾತ್ತಾಗಿ ಕಳ್ಳರ ಪಾಲಾಗಿ ಹೋದ ವರ್ತಮಾನವನ್ನು ಕೇಳಿ 

ಅನೇಕ ಜನರ ಚಿತ್ತಗಳು ಸಂಕ್ಷುಬ್ಧ ವಾಗಿಹೋಗಿವೆ. ನಾಮಾಂಕಿತವಾದ 

ಕುದುರೆಯು; ಆದರ ಯಜಮಾನನು ಬಹುಜನಕ್ಕೆ ಬೇಕಾದವನಾದ 

ಶ್ರೀಮಂತನು. ಶರ್ಯತ್ತುಗಳನ್ನು ನೋಡುವ ಕುತೂಹಲವುಳ್ಳ ಜನರ 

ಎಣಿಕೆಯಿಲ್ಲ. ಆದ್ದರಿಂದ ಬೆಳ್ಳೀಚಿಕ್ಕೆಯು ಇಲ್ಲದಾದ ಸಂಗತಿಯನ್ನು ಕುರಿತು 

ಅನೇಕರು ಅನೇಕವಾದ ತರ್ಕಗಳನ್ನು ಕಟ್ಟುವರು. ದ್ವೇಷಗಳನ್ನು ಸಾಧಿಸಿ 

ಕೊಳ್ಳುವವರು ಇದೇ ಸಮಯವೆಂದರಿತು ಕೆಲಜನರು ತಮಗೆ ಬೇಡಾದ 

ಜನರ ಮೇಲೆ ಇಲ್ಲದ ಆರೋಪಗಳನ್ನು ಹೊರಿಸಲು ಹಿಂದೆಮುಂದೆ ನೋಡಿಲ್ಲ.  

ವರ್ತಮಾನಪತ್ರಕಾರರಾದರೂ ತಮ್ಮ ಪತ್ರಗಳಲ್ಲಿ ಹೊಸ ಸುದ್ದಿಯನ್ನು 

ಕೊಟ್ಟು ಖ್ಯಾತಿಯನ್ನು ಕಟ್ಟಿಕೊಳ್ಳುವ ಅಭಿಲಾಷೆಗಾಗಿ ಅಡಗುಲಜ್ಜಿಯ 

ಮನೆಯಲ್ಲಿ ಹುಟ್ಟಿದ ಸುದ್ದಿಗಳನ್ನೆತ್ತಿಕೊಂಡು ಅವುಗಳಿಗೆ ಉಪ್ಪು ಕಾರ ತಗಲಿಸಿ 

ಸತ್ಯದ ವಿಪರ್ಯಾಸವನ್ನು ಮಾಡಿ ಬಿಡುವರು. ತಿಳಿಗೇಡಿಯಾದ ಸ್ನೇಹಿತ 

ನೊಬ್ಬನು ' ಸಾಧು ಎಡಿಟರರೆ, ನಿಮ್ಮ ಲೇಖವು ಅಪ್ರತಿಮವಾಗಿದೆ' ಎಂದು 

ಎಡಿಟರನಿಗೆ ಪತ್ರವನ್ನು ಬರೆದಿದ್ದರೆ ಆ ಎಡಿಟರನು ಆ ಪತ್ರವನ್ನು ಕಂಡ 

ಕಂಡವರಿಗೆ ಅಕ್ಕರತೆಯಿಂದ ತೋರಿಸಿ ಜನರಿಂದ ಧನ್ಯವಾದವನ್ನು ಪಡೆಯು 

ವನು. ಅದಕ್ಕಾಗಿ ' ವೃತ್ತ ವಿಪರ್ಯಾಸ' - ಸುದ್ದಿಯ ಸೂರಕ್ಕ' ಮುಂತಾದ 

ವರ್ತಮಾನ ಪತ್ರಗಳಲ್ಲಿಯ ಲೇಖಗಳಿಗೆ ಮಹತ್ವವನ್ನು ಕೊಡಲಾಗದು " 

ಎಂದು ಹೇಳಿ ಹುಲಿಮೀಸೆಯು ಹೊಗೆಸೊಪ್ಪಿನ ಬತ್ತಿಗಳನ್ನು ತೆಗೆದು 

ತಾನೊಂದು ಸೇದಿ ನನಗೊಂದು ಕೊಟ್ಟನು. 


ಧೂಮಪಾನವು ಯಥೇಚ್ಛವಾಗಿ ಸಾಗಿದ ಬಳಿಕ ''ನಿಮಗೆ ತಿಳಿದಿರುವ 

ಸಮಾಚಾರವು ಎಂತಿರುವದು ? ” ಎಂದು ನಾನು ನನ್ನ ಮಿತ್ರನನ್ನು 

ಕೇಳಿದನು. 

 

"  ಕೇಳಿರಿ : ಸೋಮವಾರ ದಿನ ಸಾಯಂಕಾಲದಲ್ಲಿ ಠಾಕೂರಸಿಂಗನು 

ಆ ಕುದುರೆಯನ್ನು ಹೊರಗೆ ತೆಗೆದು ಅಡ್ಡಾಡಿಸಿ ಕೊಂಡು ಬಂದನು. ಬಳಿಕ 

ಆದರ ಮೈತಿಕ್ಕುವದೂ ಅದಕ್ಕೆ ದಾಣೆ ಮೇವುಗಳನ್ನಿಡುವದೂ ಆಯಿತು. 

ಪ್ರಹರ ರಾತ್ರಿಯಾದ ಬಳಿಕ ಠಾಕೂರಸಿಂಗನು ಕಾವಲುಗಾರರೆಲ್ಲಿ ಇಬ್ಬರನ್ನು 

ತನ್ನ ಮನೆಗೆ ಊಟಕ್ಕೆ ಕರಕೊಂಡು ನಡೆದನು. ಕುದುರೆಯ ಲಾಯದ 

ಮನೆಯಿಂದ ಠಾಕೂರಸಿಂಗನ ಮನೆಯು ಒಂದು ಕೂಗಳತೆಯ ಮೇಲಿತ್ತು. 

ಇವರು ಹೋದ ಬಳಿಕ ಲಾಯದ ಮನೆಯಲ್ಲಿ ಉಳಿದವನಾದ ಗಂಗಾದೀನ 

ನೆಂಬ ಮೂರನೆಯ ಕಾವಲುಗಾರನು ಮನೆಯ ಬಾಗಿಲವನ್ನು ಭದ್ರವಾಗಿ 

ಇಕ್ಕಿ ಬೀಗವನ್ನು ಜಡೆದನು. ಬೆಳ್ಳಿ ಚಿಕ್ಕೆಯು ಇಲ್ಲಿಯ ವರೆಗೆ ತನ್ನ 

ಗೋದಲೆಯಲ್ಲಿ ಸುರಕ್ಷಿತವಾಗಿಯೇ ಇತ್ತು. ಠಾಕೂರಸಿಂಗನ ಭೋಜನ 

ವಾದ ಬಳಿಕ ಗಂಗಾದೀನನ ತಂಗಿಯಾದ ಮಥುರಾ ಎಂಬ ಹದಿನಾರು 

ಹದಿನೇಳು ವರ್ಷದ ಹುಡಿಗೆಯು ಕೈಯಲ್ಲಿ ಕಂದೀಲು ಹಿಡಿದುಕೊಂಡು ತನ್ನ 

ಅಣ್ಣನಿಗಾಗಿ ಬುತ್ತಿಯನ್ನು ತೆಗೆದುಕೊಂಡು ನಡೆದಿದ್ದಳು. ಮಥುರೆಯು 

ಲಾಯದ ಸಮಾಪಕ್ಕೆ ಬರುವಷ್ಟರಲ್ಲಿ ಯಾವನೋ ಒಬ್ಬ ಮನುಷ್ಯನು 

' ಹುಡುಗಿ ತುಸು ನಿಲ್ಲ' ಎಂದು ಕೂಗಿ ಅವಳನ್ನು ನಿಲ್ಲಿಸಿದನು. ಅವನು 

ಮುಸಲ್ಮಾನನು. ಅವನ ತುಮಾನ್ ( ಚಲ್ಲಣ ) ಆವನ ಶೇರವಾನ್ 

(ಉದ್ದ೦ಗಿ) ಅವನ ಮಂದೀಲ (ಮುಂಡಾಸ) ಮುಂತಾವುಗಳನ್ನು ನೋಡ 

ಲಾಗಿ ಅವನು ಒಳ್ಳೆ ಮನೆತನಸ್ಥನಾಗಿ ತೋರಿದನು. ಅವನ ವಯಸ್ಸು 

ಸುಮಾರು ಮೂವತ್ತು ಆದೀತು. 

 

ತಂಗೀ, ಈ ಹಾದಿಯು ಎಲ್ಲಿಗೆ ಹೋಗುತ್ತದೆಂಬುದನ್ನು ನೀನು 

ಹೇಳಬಲ್ಲಿಯಾ ? ನಾನೊಂದು ಕಡೆಗೆ ಹೊರಟವನು ಹಾದಿಯನ್ನು ಕಳ 

ಕೊಂಡು ಹುಚ್ಚನ ಹಾಗೆ ತಿರುಗಾಡುತ್ತಿರುವನು' ಎಂದು ಆ ಮುಸಲ್ಮಾನನು 

ಕೇಳಿದನು. 

ಇದು ಸುಭೇದಾರ ರಾಸಬಿಹಾರಿಯವರ ಕುದುರೆಯ ಲಾಯಕ್ಕೆ 

ಹೋಗುವ ಹಾದಿಯು.' 


ದೈವವೇ ಕೂಡಿಸಿಕೊಟ್ಟಂತಾಯಿತಲ್ಲ; ನನಗೆ ಅಲ್ಲಿಯೂ ಒಂದು 

ಕೆಲಸವುಂಟು, ಆ ಲಾಯವನ್ನು ಕಾಯುವದಕ್ಕೆ ಅಲ್ಲಿ ಬೆಳತನಕ ಒಬ್ಬ 

ಹುಡುಗನು ಮಲಗಿರುವನಂತೆ, ನೀನು ಅವನಿಗಾಗಿ ಬುತ್ತಿಯನ್ನು ತೆಗೆದು 

ಕೊಂಡು ನಡೆದಿರುವಿಯೇನು ? ' 


' ಅಹುದು; ಅವನು ನನ್ನ ಅಣ್ಣನಾದ ಗಂಗಾದೀನನು, ಅವನಿಗಾಗಿ 

ನಾನು ಈ ಬುತ್ತಿಯನ್ನು ಒಯ್ಯುತ್ತಿರುವೆನು.” 


'ಹಾಗಾದರೆ ನೀನೊಂದು ಕೆಲಸ ಮಾಡುವಿಯಾ ? ಈ ಕಾಗದವನ್ನು 

ನೀನು ನಿಮ್ಮ ಅಣ್ಣನಿಗೆ ಮುಟ್ಟಿಸಿದರೆ ನಾಳೆ ಮುಂಜಾನೆ ನಾನು ನಿನಗೊಂದು 

ರೇಸಿಮೆಯ ಅಂಚಿನ ಹೂವಿನ ಸೀರೆಯನ್ನು ಕಾಣಿಕೆಯಾಗಿ ಕೊಡುವೆನು. 

ಬೇಕಾದರೆ ಹತ್ತು ರೂಪಾಯಿಗಳನ್ನು ಈಗಲೇ ತೆಗೆದುಕೊ, ;' ಎಂದು 

ಆ ಮುಸಲ್ಮಾನ ಗೃಹಸ್ಥನು ನುಡಿದು ತನ್ನ ಜೇಬಿನೊಳಗಿಂದ ಕಾಗದದ 

ಚೀಟಿಯನ್ನು ತೆಗೆಯಲಾರಂಭಿಸಿದನು, ಆ ಕಾಗದದ ಬಿಳಿ ಚುಂಗನ್ನು 

ತಾನು ಪ್ರತ್ಯಕ್ಷವಾಗಿ ನೋಡಿದೆನೆಂದು ಮಥುರೆಯು ಪ್ರಮಾಣ ಮಾಡಿ ಹೇಳಿ 

ರುತ್ತಾಳೆ. 


ಆತನ ನಡೆನುಡಿಗಳನ್ನು ನೋಡಿ ಮಥುರೆಯು ಬೆದರಿ ಲಾಯದ ಕಡೆಗೆ 

ಓಡುತ್ತೆ ಹೋಗಿ ಆವಾರದ ಗೋಡೆಯ ಹೊರಗೆ ನಿಂತು ಕಿಟಕಿಯಲ್ಲಿಂದ 

ಬುತ್ತಿಯ ಗಂಟನ್ನು ಒಳಗೆ ಚಾಚಿದಳು. ಕಿಟಕಿಯಲ್ಲಿಯೇ ನಿಂತು ಬುತ್ತಿ ಬರುವ 

ಹಾದಿಯನ್ನು ನೋಡುತ್ತಿರುವವನಾದ ಗಂಗಾ ದೀನನು ಆ ಗಂಟನ್ನು ಸಂಗ 

ಡಲೇ ಒಳಕ್ಕೆ ಎಳಕೊಂಡನು, ಮಥುರೆಯು ಮುಸಲ್ಮಾನನ ಸುದ್ದಿಯನ್ನು 

ಹೇಳಲುಪಕ್ರಮಿಸುವಷ್ಟರಲ್ಲಿಯೇ ಅವನಾದರೂ ಅಲ್ಲಿಗೆ ಬಂದುಬಿಟ್ಟನು. 


'ಸಲಾಮ್ ಗಂಗಾದೀನ, ನಿನ್ನೊಡನೆ ಕೆಲವು ಮಾತನಾಡಬೇಕೆಂದು 

ನಾನು ಬಂದಿದ್ದೇನೆ' ಎಂದು ಮುಸಲ್ಮಾನನು ಕೇಳಿದನು. 


' ನನ್ನೊ ಡನೆ ಯಾತರ ಮಾತು ಸಾಹೇಬರೆ ? ' ಎಂದು ಗಂಗಾ 

ದೀನನು ತಿರಸ್ಕಾರದಿಂದ ಕೇಳಿದನು. 


"  ನಿನಗೆ ಹಿತವಾದ ಮಾತು. ಕೈಯಲ್ಲಿ ಹಾಕಿಕೊಳ್ಳಲು ಬೆಳ್ಳಿಯ 

ಕಡೆ ಸರಪಣಿಗಳು ಸಿಕ್ಕರೆ ಹಿತದ ಮಾತಾಗಲಿಕ್ಕಿಲ್ಲವೆ ? ನಿಮ್ಮಲ್ಲಿ 'ಬೆಳ್ಳಿಯ 

ಚಿಕ್ಕೆ'ಯೆಂದೂ 'ಕಡಿದ ಬಂಟ 'ನೆಂದೂ ಎರಡು ಕುದುರೆಗಳಿವೆಯಷ್ಟೆ ? 

ಬೆಳ್ಳಿಯ ಚಿಕ್ಕೆಯ ತಡಿಯನ್ನು ಕಡಿದ ಬಂಟನಿಗೂ ಕಡಿದ ಬಂಟನ ತಡಿ 

ಯನ್ನು ಬೆಳ್ಳಿಯ ಚಿಕ್ಕೆಗೂ ಹಾಕಿದರೆ ಒಂದು ಕೂಗಳತೆ ಓಡುವಷ್ಟರಲ್ಲಿ 

ಬೆಳ್ಳಿಯ ಚಿಕ್ಕೆಯು ಹಿಂದಾಗುವದೆಂದು ಹೇಳುತ್ತಾರೆ. ಅಹುದೇನು ? ' 


' ಈ ಉಸಾಬರಿ ನಿಮಗೇಕ ಬೇಕು, ಸುಮ್ಮನೆ ಹಾದಿ ಹಿಡಿಯಿರಿ. ' 

ಎಂದು ಗಂಗಾದೀನನು ಸಿಟ್ಟು ಮಾಡಿದನು, 


" ಹಾಗಲ್ಲ, ಈ ರಹಸ್ಯವನ್ನರಿತವರು ಬೆಳ್ಳಿಯ ಚಿಕ್ರೆಯು ಹಿಂದುಳಿ 

ಯುವದೆಂದು ಜಿದ್ದು ಕಟ್ಟಿರುವರಂತೆ, ಈ ರಹಸ್ಯವು ನಿಜವಾದದ್ದೋ ? ' 

 

- ಓ! ತಾವು ಜೂಜುಗಾರರ ಒಳಸಂಚಿನವರೋ ? ದಯಮಾಡಿರಿ, 

ಸಲಾವರ್, ನೀವೀಗಲೆ ಇಲ್ಲಿಂದ ಕಾಲು ತೆಗೆಯದಿದ್ದರೆ ನಾಯಿಯನ್ನು 

ಭೂ ಬಿಡುವೆನು, ಹೊಟ್ಟೆ ತರಿಸಿಕೊಂಡು ಸರಿ, ಎದ್ದೇಳಿರಿ ' ಎಂದು 

ನುಡಿದವನೇ ಗಂಗಾದೀನನು ಲಾಯದ ಬಾಗಿಲವನ್ನು ಕಡಕ್ಕನೇ ತೆರೆದು 

ನಾಯಿಯನ್ನು ಭೂ ಬಿಟ್ಟನು. ಅಷ್ಟರಲ್ಲಿ ಆ ಮುಸಲ್ಮಾನನು ಜಾರಿಕೊಂಡು 

ಪಾರಾಗಿದ್ದನು. ಗಂಗಾದೀನನು ಅವನನ್ನು ಅಕ್ಕಿ ಹುಡುಕಿದನು. '


ಸರಲಾಕ್ಷನು ಇಷ್ಟು ಸಂಗತಿಯನ್ನು ಹೇಳಿದ ಕೂಡಲೆ ನಾನು 

( ಪಂಡಿತ ವಾತಾತ್ಮಜ) ಅವನನ್ನು ತಡೆದು " ನಿಲ್ಲಿರಿ, ನಾನೊಂದು ಮಾತು 

ಕೇಳುತ್ತೇನೆ : ಗಂಗಾದೀನನು ಆ ಮುಸಲ್ಮಾನನನ್ನು ಹುಡುಕುತ್ತಿರುವಾಗ 

ಲಾಯದ ಬಾಗಿಲವನ್ನು ತೆರೆದಿಟ್ಟು ಬಿಟ್ಟಿದ್ದನೋ; ಜೋಕೆಯಿಂದ ಮುಚ್ಚಿ 

ಕೊಂಡಿದ್ದನೋ ? ” 


" ಓ ! ಸಾಧು ಪಂಡಿತರೆ, ಒಳ್ಳೇ ಚಾಣಾಕ್ಷರತೆ ಪ್ರಶ್ನೆ ಮಾಡಿ 

ದಿರಿ, ನಿನ್ನೆಯೇ ಈ ವಿಚಾರವು ನನಗೆ ತಟ್ಟಿದ್ದರಿಂದ ನಾನು ತಂತಿಯ 

ಮುಖಾಂತರವಾಗಿ ಈ ಪ್ರಶ್ನದ ಉತ್ತರವನ್ನು ತರಿಸಿಕೊಂಡಿದ್ದೇನೆ. ಗಂಗಾ 

ದೀನನು ಬಾಗಿಲವನ್ನು ಮುಚ್ಚಿ ಹೊರಕೀಲಿಯನ್ನು ಹಾಕಿಯೇ ಆ ಮಾಸ 

ಲ್ಮಾನನ ಶೋಧಕ್ಕಾಗಿ ಅಡ್ಡಾಡಿದನಂತೆ, ಕಿಟಿಕೆಯಲ್ಲಂತೂ ಮನುಷ್ಯನು 

ಹಿಡಿಸುವ ಹಾಗಿಲ್ಲ. ” 


" ಸಾಗಲಿ ಹಾಗಾದರೆ ನಿಮ್ಮ ಸಮಾಚಾರ, ” ಎಂದು ಹೇಳಿ ನಾನು 

ಮತ್ತೊಂದು ಬತ್ತಿಯನ್ನು ಹೊತ್ತಿಸಿದೆನು. - 


" ಉಳಿದ ಕಾವಲುಗಾರರು ಉಂಡು ಬರುವ ಹಾದಿಯನ್ನು ನೋಡಿ 

ಗಂಗಾದೀನನು ಅವರೊಡನೆ ನಡೆದ ವರ್ತಮಾನವನ್ನೆಲ್ಲ ಠಾಕೂರಸಿಂಗನಿಗೆ 

ಹೇಳಿ ಕಳಿಸಿದನು. ಆ ವರ್ತಮಾನವನ್ನು ಕೇಳಿ ಠಾಕೂರಸಿಂಗನಿಗೆ ಪರ 

ಮಾವಧಿಯ ಸಂತಾಪವಾಯಿತು. ಮನೆಯಲ್ಲಿಯೇ ಕುಳಿತು ಅವನು 

ಬಂದ ಹಾಗೆ ಒದರಾಡಿದನು. ಠಾಕೂರಸಿಂಗನ ವಿಲಾಸಿನಿಯಾದ ಭಾರ್ಯೆಯು 

ಮೋಹಕವಾದ ವಿಲಾಸಚೇಷ್ಟಿ ತಗಳಿಂದಲೂ ಸಮಾಧಾನದ ಸವಿನುಡಿ. 

ಗಳಿಂದಲೂ ಗಂಡನ ಮನಸ್ಸನ್ನು ವಿನೋದಕ್ಕೆಳಿಸಬೇಕೆಂದು ಬಹುಪರಿಯಾಗಿ 

ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಕುವರಬಾಯಿಯು ಗಂಡನ 

ಗೊಡವೆಯನ್ನು ಬಿಟ್ಟು ಪಿಯಾನೋದ ಪೇಟಿಯನ್ನು ತೆಗೆದು ಮೆಲ್ಲನೆ ಹಾಡ 

ಲಾರಂಭಿಸಿದಳು. ಇತ್ತ ಠಾಕೂರಸಿಂಗನು ವೀರಗಚ್ಚೆಯ ದೋತರವನ್ನುಟ್ಟು  

ಬೇಟೆಗಾರನ ಪೋಷಾಕು ಮಾಡಿಕೊಂಡು ಮೇಲೆ ದೊಡ್ಡದೊಂದು 'ಜುಬ್ಬಾ' 

(ದೊಡ್ಡ ಡಗಲೆ)ಯನ್ನು ಮೈ ತುಂಬ ಹೊತ್ತು ಕೊಂಡು ರಾತ್ರಿಯ ಮೂರ 

ನೆಯ ಯಾವುವು ಆರ್ಧಕಳೆದ ಮೇಲೆ ಮನೆಬಿಟ್ಟು ಹೊರಬಿದ್ದು ಹೋದ 

ದ್ದನ್ನು ಕುವರಬಾಯಿಯು ತಾನು ಪ್ರತ್ಯಕ್ಷವಾಗಿ ಕಂಡಿರುವದಾಗಿ ಹೇಳು 

ತ್ತಾಳೆ. ಆಗ ಹೋದ ಠಾಕೂರಸಿಂಗನು ಮರಳಿ ಮನೆಗೆ ಬರಲೇ ಇಲ್ಲ. 

ಬೆಳಗಾದರೂ ಗಂಡನು ಬರಲಿಲ್ಲವೆಂಬದನ್ನು ಕಂಡು ಕುವರಬಾಯಿಯ 

ಚಿಂತಾಕ್ರಾಂತಳಾಗಿ ಮಥುರೆಯನ್ನು ಸಂಗಡ ಕರಕೊಂಡು ಲಗಬಗೆಯಿಂದ 

ಕುದುರೆಯ ಲಾಯಕ್ಕೆ ಬಂದಳು. ಲಾಯದ ಬಾಗಿಲು ಹಾರದೆಗೆದಿತ್ತು, ಒಳ 

ಮಗ್ಗಲು ಪಡಸಾಲೆಯಲ್ಲಿ ಗಂಗಾದೀನನು ಮದ್ದು ತಿಂದವನ ಹಾಗೆ ಪ್ರಜ್ಞೆ 

ಯಿಲ್ಲದೆ ಆಸ್ತವ್ಯಸ್ತನಾಗಿ ಬಿದ್ದು ಕೊಂಡಿದ್ದನು. ಕಟ್ಟಿದ ಸ್ಥಳದಲ್ಲಿ ಬೆಳ್ಳಿ 

ಚಿಕ್ಕೆಯ ಇದ್ದಿಲ್ಲ. ಆಶ್ವ ರಕ್ಷಕನಾದ ಠಾಕೂರಸಿಂಗನ ವಾರ್ತೆಯ ಇಲ್ಲ. 

ಎಚ್ಚರದಿಂದ ಕಾಯುವ ಸರತಿಯಿಲ್ಲದವರಾದ ಬೇರಿಬ್ಬರು ಆಳುಗಳು ಕಡ 

ಲೆಯ ಗಳಗಿಗಳ ಸಂದಿಯಲ್ಲಿ ಸ್ವಸ್ಥವಾಗಿ ಮಲಗಿಕೊಂಡು ನಿದ್ದೆ ಮಾಡುತ್ತಿ 

ದ್ದರು. ಅವರನ್ನು ಎಚ್ಚರಿಸಿ ಕೇಳಲಾಗಿ ಅವರು ತಮಗೆ ಏನೂ ಗೊತ್ತಿಲ್ಲ 

ವೆಂದು ಹೇಳಿದರು. ಘನನಿದ್ದೆಯವರವರು ! ಗಂಗಾದೀನನನ್ನು ಬಡಿದೆಬ್ಬಿಸಿ 

ನೋಡಿದರು, ಸುತ್ತಿ ಸುತ್ತಿಕೊಂಡು ಬೀಳುತ್ತಿದ್ದನೇ ಹೊರತಾಗಿ ಜನರು 

ತನ್ನನ್ನು ಮಾತಾಡಿಸುತ್ತಿರುವರೆಂಬ ಪ್ರಜ್ಞೆಯೇ ಅವನಿಗಿಲ್ಲ. ಅವನ ಹಾದಿ 

ಯನ್ನು ಬಿಟ್ಟು ಉಳಿದವರೆಲ್ಲರೂ ಆ ಆಶ್ವಪಾಲಕನ ಶೋಧಕ್ಕಾಗಿ ಕಂಡಕಂಡ 

ಕಡೆಗೆ ಓಡಲಾರಂಭಿಸಿದರು. 


" ಲಾಯದಿಂದ ಸುಮಾರು ಎರಡು ಕೈ ಗಲ್ಲು ಅಳತೆಯ ಮೇಲೆ 

ಒಂದು ಆಳವಾದ ಕೆನ್ನಾ ರವಿತ್ತು. (ದೊಡ್ಡದೊಂದು ತಗ್ಗು ) ಆ ಕೊನ್ನಾ 

ರದ ದಡದ ಮೇಲಿರುವದೊಂದು ಹುಲಗಲದ ಗಿಡಕ್ಕೆ ಯಾರದೋ ಒಂದು 

ಡಗಲೆಯು ಜೋತಾಡುತ್ತಿರುವದನ್ನು ಒಬ್ಬನು ಕಂಡನು, ಅದು ಠಾಕೂರ 

ಸಿಂಗನ ಡಗಲೆಯೇ ಎಂದು ಗೊತ್ತು ಹಿಡಿದು ಆ ಮನುಷ್ಯನು ಅಲ್ಲಿ ನಿಂತು 

ಸುತ್ತಲೂ ನಿರೀಕ್ಷಿಸಿ ನೋಡಲಾಗಿ ಯಾರದೊ ಒಂದು ಹೆಣವು ಕಂಡಿತು. 

ಪಾಪ, ಅದು ಠಾಕೂರಸಿಂಗನದೇ, ಬಲವಾದ ಟೊಣಪೆಯಂಥ ಹೊಡೆತ 

ದಿಂದ ಠಾಕೂರನ ತಲೆಯು ಒಡೆದು ಚಿಪ್ಪಾಡೆಯಾಗಿತ್ತು. ಚೂಂಯ 

ಹೊಡೆತದಿಂದ ಅವನ ತೊಡೆಗಾದರೂ ಒಂದು ಗಾಯವಾಗಿತ್ತು. ಠಾಕೂರ 

ಸಿಂಗನಾದರೂ ತನ್ನನ್ನು ಕೊಲ್ಲಬಂದವನನ್ನು ತನ್ನ ಕೈಯಲ್ಲಿರುವ ಚಿಕ್ಕ 

ಶಸ್ತ್ರದಿಂದ ಇರಿದಿದ್ದನಾಗಿ ತೋರಿತು. ಯಾಕೆಂದರೆ ಅವನ ಕೈಯಲ್ಲಿ 

ಚಾಕುವಿನಂಥದೊಂದು ತೀಕ್ಷ್ಮವಾದ ಶಸ್ತ್ರವಿದ್ದು ಅದರ ತುದಿಗೆ ರಕ್ತವು 

ಮೆತ್ತಿಕೊಂಡು ಕರಣೆಗಟ್ಟಿತ್ತು. ಠಾಕೂರನು ತನ್ನ ಎಡಗೈಯಲ್ಲಿ ರೇಸಿಮೆಯ 

ಗದ್ದೆಮಡಿಯ ಹೆಗಲವಸ್ತ್ರವನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದನು. ಆ ವಸ್ತ್ರ 

ವನ್ನು ಕಂಡಾಕ್ಷಣವೇ ಮಥುರೆಯು ಚಕಿತಳಾಗಿ ಅಯ್ಯೋ ಈ ವಸ್ತ್ರ 

ವನ್ನು ನಾನು ನಿನ್ನೆ ರಾತ್ರಿ ಆ ಮುಸಲ್ಮಾನನ ಹೆಗಲ ಮೇಲೆ ಕಂಡಿದ್ದೇನು ' 

ಎಂದು ಹೇಳಿದ್ದಲ್ಲದೆ 'ಅವನೇ ಈ ಘೋರವಾದ ಕೃತ್ಯವನ್ನು ಮಾಡಿರ 

ಬಹುದು. ಯಾಕೆಂದರೆ ಅವನ ಕೈಯಲ್ಲಿ ಒನಕೆಯಂಥ ಭಾರವಾದ 

ದೊಣ್ಣೆಯೂ ಇತ್ತು' ಎಂದು ಪ್ರಮಾಣ ಮಾಡಿ ಹೇಳಿದಳು. 


ಈ ವಸ್ತ್ರವೇ ಆ ಮುಸಲ್ಮಾನನ ಹೆಗಲಮೇಲಿತ್ತೆಂದು ಗಂಗಾದೀನ 

ನಾದರೂ ನಿಶ್ಚಿತವಾಗಿ ಹೇಳಿದನು. ಅವನೇ ತನ್ನ ಬುತ್ತಿಯಲ್ಲಿ ಮದ್ದು 

ಕಲಿಸಿರಬಹುದೆಂದು ಕೂಡಾ ಗಂಗಾದೀನನ ನಂಬಿಗೆಯು. 

 

' ಠಾಕೂರಸಿಂಗನ ಕೊಲೆಯಾದ ಸಮಯದಲ್ಲಿ ಕುದುರೆಯು ಅವನ 

ಬಳಿಯಲ್ಲಿಯೇ ನಿಂತಿತ್ತೆಂದು ಅಲ್ಲಿ ಮೂಡಿರುವ ಹೆಜ್ಜೆಗಳಿಂದ ನಿರ್ವಿವಾದ 

ವಾಗಿ ಊಹಿಸಬಹುದು. ಅರ್ಥಾತ್ ಆ ಕುದುರೆಯನ್ನು ಅಪಹರಿಸಿದವನ 

ಬೆನ್ನಟ್ಟಿ ಹೋಗಿ ಠಾಕೂರಸಿಂಗನು ಪ್ರಾಣವನ್ನು ಕಳಕೊಂಡನೆಂದು ಕೊತ 

ವಾಲ ಕೃಷ್ಣ ಭುಜಂಗನ ತರ್ಕವಾಗಿದೆ. ಅವರು ಆ ಸಂದೇಹದ ಮೇಲಿಂದಲೇ 

ಪಪ್ಪಳಿ ವದವನಾದ ಮಹಮ್ಮದ ಇಬ್ರಾಹಿಮನೆಂಬ ಲಬೈರವನನ್ನು 

ಹಿಡಿದು ಕೂಡಿಸಿದ್ದಾರೆ. ಇಷ್ಟು ಸಂಗತಿಗಳೆಲ್ಲ ಸಾಕ್ಷಿಗಳಿಂದ ಸಿದ್ಧವಾಗಿವೆ."  

" ತನ್ನ ಮೇಲಿನ ಆರೋಪವನ್ನು ನಿವಾರಿಸಿಕೊಳ್ಳಲು ಮಹಮ್ಮದ 

ಇಬ್ರಾಹಿಮನು ಏನಾದರೂ ಸಯುಕ್ತಿಕವಾದ ಸಮಾಧಾನಗಳನ್ನು ಹೇಳುವ 

ನೇನು ? ' ಎಂದು ನಾನು ಕೇಳಿದೆನು. 


" ಮಹಮ್ಮದ ಇಬ್ರಾಹಿಮನು ಮನೆತನಸ್ಥನೂ ಸುಶಿಕ್ಷಿತನೂ ಆದ 

ಗೃಹಸ್ಸನು, ಇವನು ಕುದುರೆಗಳ ಶರ್ಯತ್ತಿನಲ್ಲಿ ದುಡ್ಡೆಲ್ಲ ಹಾಳುಮಾಡಿ 

ಕೊಂಡು ಈಗೀಗ ಶರ್ಯತ್ತಿನ ಅವಾಂತರ ಜೂಜುಗಾರರ ಪಂಚನಾಗಿ 

ವ್ಯವಹರಿಸಿ ಅವನು ಹಾಗೂ ಹೀಗೂ ಹೊಟ್ಟೆ ತುಂಬಿಕೊಳ್ಳುತ್ತಾನೆ. ಬೆಳ್ಳೀಯ 

ಚಿಕ್ಕೆಯು ಸೋಲುವದೆಂದು ಪ್ರತಿಪಾದಿಸುವ ಜೂಜುಗಾರರು ಒಟ್ಟಿನಲ್ಲಿ 

ಐವತ್ತು ಸಾವಿರ ರೂಪಾಯಿಗಳ ಜೂಜುಕಟ್ಟಿರುವದಾಗಿ ಮಹಮ್ಮದ ಇಬ್ರಾ 

ಹೀಮನ ಪುಸ್ತಕದ ಮೇಲಿಂದ ಕಂಡುಬರುತ್ತದೆ. 


"ಕೊತವಾಲರ ವಶವಾದ ಬಳಿಕ ಮಹಮ್ಮದ ಇಬ್ರಾಹಿಮನು 

ತಾನು ಮಥುರೆಯನ್ನು ದಾರಿಯಲ್ಲಿ ಕಂಡದ್ದನ್ನೂ ಗಂಗಾದೀನನೊಡನೆ 

ಮಾತಾಡ ಹೋಗಿದ್ದ ನ್ಯೂ ಒಪ್ಪಿಕೊಂಡಿದ್ದಲ್ಲದೆ ಠಾಕೂರನ ಹೆಣದ ಕೈಯ 

ಲ್ಲಿದ್ದ ವಸ್ತ್ರವು ತನ್ನದೇ ಆಗಿದ್ದು ಅದು ತನ್ನ ಹೆಗಲಮೇಲಿಂದ ಜಾರಿಬಿದ್ದು  

ಹೋದದ್ದು ಠಾಕೂರನ ಕೈಗೆ ಹೇಗೆ ಸಿಕ್ಕಿತೋ ಹೇಳಲಾರೆನೆಂದು ಅವನು 

ಸೂಚಿಸಿರುವನು, 


" ಠಾಕೂರನ ಕೈಯಲ್ಲಿಯ ಶಸ್ತ್ರಕ್ಕೆ ರಕ್ತವು ಅಂಟಿಕೊಂಡಿದೆ. ಅದರ 

ಮೇಲಿಂದ ಆತತಾಯಿಯಾದ ಮಹಮ್ಮದ ಇಬ್ರಾಹೀಮನನ್ನು ಆ ಶಸ್ತ್ರ 

ದಿಂದ ಇರಿದಿರಬಹುದೆಂಬ ತರ್ಕವಾಗಿದೆ ; ಆದರೆ ಗಾಯವು ಮಹಮ್ಮದ 

ಇಬ್ರಾಹೀಮನ ಮೈ ಮೇಲೆ ಇದ್ದಂತೆ ತೋರುವದಿಲ್ಲ ಅರ್ಥಾತ್ ಆ 

ಮುಸಲ್ಮಾನನ ಮೇಲೆ ಆರೋಪವು ಸ್ಥಾಪಿತವಾಗಲರಿಯದಷ್ಟೆ ? ” ಎಂದು 

ನಾನು ಕೇಳಿದೆನು. 


" ಸಯುಕ್ತಿಕವಾದ ಪ್ರಶ್ನೆ ಮಾಡಿದಿರಿ ವಾತಾತ್ಮಜ. ಆದರೆ ಠಾಕೂ 

ರನು ತನ್ನ ಕೈ ಚೂರಿಯಿಂದ ಪ್ರತಿಪಕ್ಷಿಯನ್ನು ಇರಿದನೇ ಎಂದು ಗ್ರಹಿಸಲು 

ಯಾರು ಹೇಳಿರುವರು ? " 

 

"ಹಾ ಜ್ಞಾಪಕವಾಯಿತು...ಠಾಕೂರನ ತೊಡೆಗೂ ಒಂದು ಗಾಯ 

ವಾಗಿದೆ. ಗುದ್ದಾಟದ ಭರದಲ್ಲಿ ಠಾಕೂರನ ಕೈ ಶಸ್ತ್ರವೇ ಅವನ ತೊಡೆಗೆ 

ತಗಲಿ ಗಾಯವಾದರೂ ಆಗಿರಬಹುದು. ಹೀಗೆ ತರ್ಕಮಾಡಿದರೆ ಮಹ 

ಮೃದ ಇಬ್ರಾಹಿಮನು ತನ್ನ ಮೇಲಿನ ಆರೋಪದ ನಿವಾರಣಾರ್ಥವಾಗಿ 

ಮಾಡತಕ್ಕ ವಾದದಲ್ಲಿ ಒಂದು ಮಹತ್ವದ ವಾದವು ನಿರರ್ಥಕವಾಯಿತು ” 

ಎಂದು ನಾನು ಅಭಿಪ್ರಾಯಪಟ್ಟೆನು. 


" ಹೇಗೆ ತರ್ಕ ಮಾಡಿದರೂ ಅದಕ್ಕೆ ಸಾಧಕಬಾಧಕಗಳು ಉಂಟೇ 

ಉಂಟು, ತಾಕೂರನ ತೊಡೆಗಾದ ಗಾಯವು ಅವನ ಕೈಯಲ್ಲಿರುವ ಶಸ್ತ್ರ 

ದಿಂದಲೇ ಆಗಿರಬಹುದೆಂಬ ಮಾತಿನ ವಿಚಾರವನ್ನು ಶವವನ್ನು ಪರೀಕ್ಷಿಸಿದ 

ಡಾಕ್ಟರನಾಗಲಿ ಕೊತವಾಲರTಲಿ ಮಾಡಿರುವದಾಗಿ ತೋರುವದಿಲ್ಲ. ಇನ್ನು 

ಅಲ್ಲಿಗೆ ಹೋಗಿ ನಾವು ಹೆಚ್ಚಾಗಿ ಶೋಧಮಾಡಿ ನೋಡಲಾಗಿ ಏನೆಂಬುವದು 

ತಾನೇ ತೋರುವದು.” 


ಪ್ರಹರ ಹೊತ್ತಿರುವದರೊಳಗೆ ನಾವು ವಾತಾಪಿಪುರದ ಸ್ಟೇಶನಕ್ಕೆ 

ಬಂದೆವು. ಅಲ್ಲಿ ನಮ್ಮ ಸ್ವಾಗತಕ್ಕಾಗಿ ಇಬ್ಬರು ಗೃಹಸ್ಥರು ಬಂದಿದ್ದರು. 

ಒಬ್ಬನು ಆಜಾನುಬಾಹುವಾದ ಆಳು, ಆವನ ಕಲ್ಲಿಯ ವಿರಾಸೆಗಳೆಂದರೆ 

ಎರಡು ಗಂಗಾವನಗಳೇ ಆಗಿದ್ದವು. ಸಶಕ್ತನೂ ತೇಜಸ್ವಿಯ ದರ್ಪ 

ಶಾಲಿಯೂ ಆಗಿದ್ದ ಆ ಭವ್ಯ ಪುರುಷನ ಮುಖಮುದ್ರೆಯು ಕಿಂಚಿತ್‌ ಉಗ್ರ 

ವಾಗಿ ಕಾಣುತ್ತಿತ್ತು. ಇನ್ನೊಬ್ಬನಾದರೂ ದೃಢಾಂಗನೂ ಎತ್ತರವಾದ 

ಆಕಾರವುಳ್ಳವನೂ ಆಗಿದ್ದರೂ ಮೊದಲಿನವನ ಮುಂದೆ ಅವನು ಕುರಿಮರಿ 

ಯಂತೆ ಕಂಡನು, ಮೊದಲಿನವನೇ ಸುಭೇದಾರ ರಾಸಬಿಹಾರಿಯು, 

ಮತ್ತೊಬ್ಬನು ಕೊತವಾಲ ಕೃಷ್ಣ ಭುಜಂಗನು. 

 

( ರಾಮ ರಾಮ, ಸರಳಾಕ್ಷ ರಾಯರೆ, ತಮ್ಮ ದರ್ಶನದಿಂದ ನಾನು 

ಕೃತಾರ್ಥನಾದೆನು. ಇಕೋ ಈ ನನ್ನ ಜೊತೆಗಾರರೇ ಕೃಷ್ಣಭುಜಂಗ 

ಕೊತವಾಲರು, ಇವರೊಳ್ಳೇ ಸಾಹಸದಿಂದ ನಮ್ಮ ಕುದುರೆಯ ಪ್ರಕರ 

ಣದ ಶೋಧವನ್ನು ನಡಿಸಿದ್ದಾರೆ. ನೀವೂ ದಯಮಾಡಿ ಬಂದಿದ್ದೀರಿ. 

ಹೇಗಾದರೂ ಮಾಡಿ ನಮ್ಮ ಠಾಕ್ರರಸಿಂಗನನ್ನು ಕೊಂದವನ ಪರಿಪತ್ಯ 

ವಾಗುವಂತೆಯೂ ಬಂಗಾರದಂತಿರುವ ನನ್ನ ಕುದುರೆಯ ಶೋಧವಾಗುವಂ 

ತೆಯೂ ಮಾಡಿರಿ ” ಎಂದು ಸುಭೇದಾನು ಹೇಳಿದನು. 


ಹುಲಿಮೀಸೆಯು ಕೃಷ್ಣ ಭುಜಂಗನಿಗೆ ಪ್ರಣಾಮವಾಡಿ " ಹೊಸ 

ಶೋಧಗಳೇನಾದರೂ ಆಗಿವೆಯೋ ? ?” ಎಂದು ಕೇಳಿದನು. 


" ಹೇಳಿಕೊಳ್ಳುವಂಥ ಹೊಸ ಸಂಗತಿಗಳೇನೂ ಹೊರಬಿದ್ದಿಲ್ಲ 

ಮೊದಲು ಊರಿಗಂತೂ ಹೋಗೋಣ, ಕಣ್ಣು ಬೆಳಕಿರುವಾಗಲೇ ಈ 

ಪ್ರಾಂತದಲ್ಲಿಯ ಕೆಲವು ರಮಣೀಯವಾದ ಪ್ರದೇಶಗಳನ್ನು ಹೋಗಹೊಗು. 

ವಾಗ ನೋಡಿಕೊಳ್ಳುವಿರಂತೆ ” ಎಂದು ಕೃಷ್ಣ ಭುಜಂಗನು ಸೂಚಿಸಿದನು. 


ಮೇಲ್ಕಟ್ಟು ಇಲ್ಲದ 'ದಮನೀ ' ಗಾಡಿಯಲ್ಲಿ ನಾವು ನಾಲ್ವರೂ 

ಕುಳಿತು ನಡೆದೆವು, ಅಲ್ಲಿಯ ವಿಸ್ತಾರವಾದ ಬೀದಿಯ ಎರಡೂ ಬದಿಗೂ 

ಬೇವು ಹೆಬ್ಬೇವು ಆಲ ನೇರಿಲ ಮಾಮರ ಮುಂತಾದ ದೊಡ್ಡ ದೊಡ್ಡ ಮರ 

ಗಳ ಸಾಲುಗಳ ಅಡವಾಗಿ ಬೆಳೆದು ಬೀದಿಯ ಮೇಲೆ ದಟ್ಟಾದ ನೆಳಲನ್ನು 

ಕೆಡಹಿದ್ದವು , ಆ ಬೀದಿಯ ಎಡಮಗ್ಗಲಿಗೆ ಗಗನಚುಂಬಿತವಾದ ಕೋಟೆಯ 

ಗೋಡೆಯಂತೆ ಪರ್ವತಾವಳಿಯು ಅವಿಚ್ಛಿನ್ನವಾಗಿ ಕಾಣುತ್ತಿತ್ತು. ಬಲ 

ಗಡೆಗೆ ಸಮತಲವಾದ ಕೆಂಪು ಭೂಮಿಯ ಮಾವು ತೆಂಗು ಈಚಲ ಮುಂತಾದ 

ಗಿಡಗಳಿಂದ ಬಹು ರಮಣೀಯವಾಗಿ ತೋರುತ್ತಿತ್ತು. ಆಗ ವಸಂತಮಾಸ 

ವಿರುವದರಿಂದ ಸಂದಟಿವಾದ ಮಂಜರಿಗಳಿಂದ ಮಾಮರಗಳ ಎಲೆಗಳೆಲ್ಲ 

ಮುಚ್ಚಿ ಹೋಗಿದ್ದವು. ಹಸರುಮುರಿಯುವ ಬೇವಿನ ಕೊಂಬೆಗಳಲ್ಲಿ 

ಸೂಕ್ಷ್ಮವಾಗಿಯೂ ಶುಭ್ರವಾಗಿಯೂ ತೋರುವ ಹೂಗೊಂಚಲುಗಳು ಬಹು 

ಪ್ರೇಕ್ಷಣೀಯವಾಗಿದ್ದವು. ಬಲಕ್ಕೆ ಆಮ್ರವೃಕ್ಷಗಳಲ್ಲಿ ಕುಳಿತು ಕೂಜಿತ 

ವನ್ನು ಮಾಡುವ ಕೋಗಿಲೆಗಳ ಪಂಚಮರಾಗವೂ ಎಡಕ್ಕೆ ಪರ್ವತಾಗ್ರಗಳಲ್ಲಿ 

ನಿಂತು ನರ್ತಿಸುತ್ತಿರುವ ಮಯೂರಗಳ ಕೇಕೆಯ ಬಹು ಚಿತ್ತರಂಜಕ 

ವಾಗಿದ್ದವು. 


" ಕಣ್ಣು ಕಿವಿಗಳೆರಡಕ್ಕೂ ಸಮನಾಗಿ ತೃಪ್ತಿಯುಂಟಾಗಿದೆ ” ಎಂದು 

ನಾನು ಉದ್ದಾರ ತೆಗೆದೆನು. 

 

"ಮೂಗಿಗಾದರೂ ಅನಾದರವೆಲ್ಲಿ ? ಕವಿಗಳು ಆಮ್ಮ ಬಕುಲ 

ಚಂಪಕ ಮಾಲತಿಗಳ ಸುಗಂಧದ ವರ್ಣನೆಯನ್ನು ಮಾಡಲಿ, ಈ ಬೇವಿನ 

ಹೂಗಳ ಸುವಾಸವು ನಿಶ್ಚಯವಾಗಿ ಆಹ್ಲಾದಕರವಾಗಿದೆ. ಕಾಲಿದಾಸನಿದ್ದ 

ಪ್ರಾಂತದಲ್ಲಿ ಈ ಗಿಡಗಳು ಬೆಳೆಯಲಿಲ್ಲವಾಗಿ ತೋರುತ್ತದೆ. ಇದ್ದರೆ ಋತು 

ಸಂಹಾರದ ತುಂಬ ಈ ನಿಂಬಮಂಜರಿಗಳ ಸುಗಂಧವೇ ಇಡುಗುತ್ತಿತ್ತು.” 

ಎಂದು ಸರಲಾಕ್ಷ ರಾಯನು ಬಣ್ಣಿಸಿ ನುಡಿದನು. 


ಹೀಗೆ ಉತ್ಸುಕತೆಯಿಂದ ವನಶೋಭೆಯನ್ನು ನಿರೀಕ್ಷಿಸುತ್ತಲೂ ಅಲ್ಲಲ್ಲಿ 

ಎರಳೆ ಹ ಿ ನರಿ ಮು೦ಗಿಲಿಗಳ ಓಡಾಟಗಳನ್ನು ನೋಡುತ್ಕಲೂ ಎರಡು 

ಗಳಿಗೆ ನಾವು ಪ್ರವಾಸದಲ್ಲಿ ಕಳೆದೆವು. ಅಷ್ಟರಲ್ಲಿ ಹಾದಿಯು ದಕ್ಷಿಣದಿಂದ 

ಪೂರ್ವಕ್ಕೆ ಒಡೆಯಿತು. ಆಕೊ ಅಂಬಾರಿಗಳನ್ನು ಹೊತ್ತು ಕೊಂಡಿರುವ 

ಎರಡು ಮದ್ದಾನೆಗಳು ಎದಿರುಬದಿರಾಗಿ ನಿಂತು ಕದಲುದಕವಾಗಿವೆಯೋ 

ಎಂಬಂತೆ ಇಕ್ಕಟ್ಟಾಗಿ ನಿಂತಿರುವ ಎರಡು ಪರ್ವತಗಳ ಮೇಲೆ ಕಟ್ಟಿರುವ 

ಎರಡು ಕೋಟೆಗಳು ಶೋಭಿಸಿ ತೋರಿದವು. ಆ ಎರಡು ಪರ್ವತಗಳ 

ಮಧ್ಯದಲ್ಲಿರುವ ಪ್ರದೇಶದಲ್ಲಿ ವಾತಾಪಿಪುರವನ್ನು ಕಟ್ಟಿದ್ದಾರೆ. ಪುರಾಣ 

ಪ್ರಸಿದ್ದ ವೂ ಇತಿಹಾಸಪ್ರಸಿದ್ಧವೂ ಆಗಿರುವ ಸ್ಥಾನವದು. ಪುರಾಣದಲ್ಲಿಯ 

ವಾತಾಪೀ ಎಂಬ ರಾಕ್ಷಸನು ತನ್ನ ನಿವಾಸವನ್ನು ಈ ಸ್ಥಾನದಲ್ಲಿ ಮಾಡಿ 

ಕೊ೦ಡಿದ ನೆಂದು ಇದಕ್ಕೆ ವಾತಾಪಿಪುರವೆಂಬ ಹೆಸರು. ಇಲ್ಲಿಯೇ 

ಜಗದ್ವಿಖ್ಯಾತನಾದ ಪುಲಿಕೇಶಿ ಸಾರ್ವಭೌಮನು ತನ್ನ ರಾಜಧಾನಿಯನ್ನು 

ಮಾಡಿ ಕೊಂಡಿದ್ದನು. 


- ಸುಭೇದಾರ ರಾಸಬಿಹಾರಿಯ ಮನೆಯು ವಾತಾಪಿಪುರದಲ್ಲಿದಿಲ್ಲ. 

ಪರ್ವತವನ್ನು  ಎಡಕ್ಕೆ ಸುತ್ತಿ ಕೆಲವು ಹಾದಿಯನ್ನು ನಡೆದ ಮೇಲೆ ನಾವು 

ನದೀ ತೀರದಲ್ಲಿರುವ ದೇವಿಯಗುಡ್ಡವೆಂಬ ಗ್ರಾಮಕ್ಕೆ ಬಂದೆವು. ಗ್ರಾಮದ 

ಸವಿಾಪದಲ್ಲಿರುವ ಉನ್ನತವಾದ ಕಲ್ಲುಬಂಡೆಗಳ ಮೇಲಿಂದ ಆ ನದಿಯ 

ಪ್ರವಾಹವು ತಡಸಲವಾಗಿ ಧಭಧಭಿಸಿ ಬೀಳುತ್ತಿತ್ತು. ಆ ಪಡಸಲಿನ 

ಎದುರಿಗೆಯೇ ರಮ್ಯವಾಗಿ ರಚಿಸಿರುವ ಉದ್ಯಾನದ ಮಧ್ಯದಲ್ಲಿ ಸುಭೇದಾರನ 

ರಮ್ಯವಾದ ಮಂದಿರವಿತ್ತು. ಉದ್ಯಾನದ ಶೋಭೆಯನ್ನು ನೋಡಲಾಗಿ 

ಸುಭೇದಾರನು ರಸಿಕನಾಗಿರಬಹುದೆಂದು ಕಂಡಿತು. ಮನೆಯಲ್ಲಿಯ 

ಸುವ್ಯವಸ್ಥೆಯನ್ನು ಕಂಡು ರಾಸಬಿಹಾರಿ ಭಾರ್ಯೆಯು ಚಾಣಳಾದ 

ಗೃಹಿಣಿಯಾಗಿರಬೇಕೆಂದು ಹುಲಿಮೀಸೆಯು ತರ್ಕಿಸಿದನು. 


ಉಪಹಾರವಾದ ಬಳಿಕ ಮತ್ತೆ ಪ್ರಕರಣದ ವಿಷಯವಾಗಿ ಮಾತುಗಳು 

ನಡೆದವು. 

 

" ಸುಭೇದಾರ, ಠಾಕೂರಸಿಂಗನು ನಿಮ್ಮಲ್ಲಿ ಏಳೆಂಟುವರ್ಷ ಇದ್ದನೆಂದು 

ಕೇಳಿದ್ದೇನೆ. ಅವನು ನಂಬಿಗೆಯವನಾದ ಸೇವಕನಾಗಿದ್ದನೋ ? ” ಎಂದು 

ಹುಲಿಮೀಸೆ ಸರಲಾಕ್ಷನು ಕೇಳಿದನು. . 


"ಒಳ್ಳೇ ಮನುಷ್ಯ ಕಂಡಿನಾ ! ” ಎಂದು ರಾಸಬಿಹಾರಿಯ 

ವ್ಯಸನಾರ್ತನಾಗಿ ಉದ್ಗಾರ ತೆಗೆದನು. 


" ಕೃಷ್ಟ ಭುಜಂಗರೆ, ಠಾಕೂರಸಿಂಗನ ಹೆಣದ ಮೇಲಿರುವ ವಸ್ತ್ರಗಳ 

ಟಿಪ್ಪಣೆ ನಿಮ್ಮಲ್ಲಿ ಇರುವದೋ ? ” ಎಂದು ಸರಲಾಕ್ಷನು ಕೇಳಿದನು. 


"  ಟಪ್ಪಣಿಯೊಂದೇ ಏಕೆ ? ಆ ವಸ್ತುಗಳನ್ನೆಲ್ಲ ಚನ್ನಾಗಿ ಕಾದಿಟ್ಟ 

ದ್ದೇನೆ. ಅವುಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಇಲ್ಲಿಯೇ ಹೊರಗಿನ ಕೋಣೆ 

ಯಲ್ಲಿಟ್ಟಿದ್ದೇನೆ. ಬೇಕಾದರೆ ತೋರಿಸುತ್ತೇನೆ ಬನ್ನಿರಿ.” 


ನಾವೆಲ್ಲರೂ ಆ ಕೋಣೆಗೆ ಹೋದೆವು. ಕೃಷ್ಣ ಭುಜಂಗನು ಆ ಪೆಟ್ಟಿಗೆ 

ಯೊಳಗಿನ ಜೀನಸುಗಳನ್ನೆಲ್ಲ ಒಂದು ಚಾಪೆಯ ಮೇಲೆ ಸುರಿದು ಟಿಪ್ಪಣಿ 

ಯನ್ನು ಓದಲಾರಂಭಿಸಿದನು : 


" ಮೇಣದ ಕಡ್ಡಿಗಳುಳ್ಳ ದೀಪದ ಪೆಟ್ಟಿಗೆಯೊಂದು ; ಮೇಣಬತ್ತಿಯ 

ಚೂರು ಒಂದು, ಎರಡು ಅಂಗುಲ ಉದ್ದ ; ಹೊಗೆಸೊಪ್ಪು ಸೇದುವ ಬೆಳ್ಳಿಯ 

ಚಿಲಿಮೆಯೊಂದು ; ಹೊಗೆಸೊಪ್ಪು ಹಾಕುವ ಸುರಿಕೆಯ ಚೀಲ, ಎರಡು 

ತೋಲೆ ಹೊಗೆಸೊಪ್ಪು ಸಹಿತ; ಬೆಳ್ಳಿಯ ಗಡಿಯಾರ, ಅದಕ್ಕೆ ಚಿನ್ನದ ಸರ 

ಪಣಿ, ತೂಕ ಒಂದು ತೊಲೆ ; ಇಪ್ಪತ್ತು ರೂಪಾಯಿಯ ನೋಟು ಒಂದು ; 

ಸೀಸಕಡ್ಡಿ ಒಂದು, ಮೂರು ಅಂಗುಲ ಉದ್ದವಾದದ್ದು ; ಜಂತದ ಹಿಡಿಕೆಯ 

ಚಾಕುವಿನಂಥ ಶಸ್ತ್ರ ಒಂದು, ಮಡಿಚಲಿಕ್ಕೆ ಬರುವದಿಲ್ಲ, ರಾಜರ್ಸ ಎಂಬ 

ಶಸ್ತ್ರಕಾರನ ಹೆಸರುಳ್ಳದ್ದು. ಐದು ಕಾಗದಗಳು. " 

 

ಹೊಸ ಮಾದರಿಯ ಚಾಕುವಿದು. ಇದೇ ಠಾಕೂರಸಿಂಗನ ಹೆಣದ 

ಕೈಯಲ್ಲಿ ಇತ್ತಷ್ಟೆ ? ಇದರಿಂದ ವೈದ್ಯರು ಸೂಕ್ಷ್ಮವಾದ ಶಸ್ತ್ರಕ್ರಿಯೆಯನ್ನು 

ಮಾಡಬಹುದಲ್ಲವೆ ಪಂಡಿತ ವಾತಾತ್ಮಜ? '' ಎಂದು ಸಶಲಾಕ್ಷನು ಆ ಚಾಕು 

ವನ್ನು ಎತ್ತಿ ತೋರಿಸಿ ನನ್ನನ್ನು ಕೇಳಿದನು.  


" ಆಹುದು. ನೇತ್ರರೋಗದಲ್ಲಿ ಉಪಯೋಗಿಸುವ ಶಸ್ತ್ರವಿದು ” ಎಂದು 

ನಾನು ಹೇಳಿದೆನು, ಸೂಕ್ಷ್ಮವಾದ ಶಸ್ತ್ರಕ್ರಿಯೆಯನ್ನು ಮಾಡಲಿಕ್ಕೆ 

ಮಾಡಿದ ಸೂಕ್ಷ್ಮ ತರವಾದ ಶಸ್ತ್ರವಿದು, ಕಳ್ಳರನ್ನು ಬೆನ್ನಟ್ಟಿ ಹೋದವ 

ನಾದ ಠಾಕೂರಸಿಂಗನು ಇ೦ಥ ಶಸ್ತ್ರವನ್ನೇಕೆ ತೆಗೆದುಕೊಂಡು ಹೋದನೋ 

ಕಾಣೆನು. ಇದನ್ನು ಮಡಿಚಲಿಕ್ಕಾಗದು ಇಂಥದನ್ನು, ಜೇಬಿನಲ್ಲಿಟ್ಟುಕೊಂಡು 

ಹೋಗುವವನಿಗೇ ಅಪಾಯವು 1” ಎಂದು ಹುಲಿ ಮೀಸೆಯು ಅಭಿಪ್ರಾ ಯು 

ಪಟ್ಟನು. 


" ಅಲಗು ಫಕ್ಕನೆ ನಟ್ಟೀತೆಂದು ಇದರ ತುದಿಗೆ ಒಂದು ತೊಗಲಿನ 

ಟೊಪ್ಪಿಗೆಯನ್ನು ಮಾಡಿರುತ್ತಾರೆ. ಆ ಚಿಕ್ಕ ಟಿ.೩ಗೆಯು ಗುದ್ದಾಟದ 

ಸ್ಥಳದಲ್ಲಿ ಬಿದ್ದಿತ್ತು. ಇಕೋ ನೋಡಿರಿ ” ಎಂದು ಕೃಷ್ಣಭ: ಚಂಗನು 

ನುಡಿದು ಟೊಪ್ಪಿಗೆಯನ್ನು ತೋರಿಸಿದನು. 


ಆ ಮಾತು ಕೇಳಿ ಹುಲಿಮೀಸೆ ಋು ಮೇಲ್ದೃಷ್ಟಿಯನ್ನಿಟ್ಟು ಧ್ಯಾನಿ 

ಸುತ್ತೆ ಕುಳಿತನು. 


" ಈ ಶಸ್ತ್ರವು ಠಾಕೂರಸಿಂಗನ ಮೇಜಿನ ಮೇಲೆ ನಾಲ್ಕಾರು ದಿವಸ 

ಗಳಿಂದ ಬಿದ್ದಿತೆಂದು ಅವನ ಹೆಂಡತಿಯಾದ ಕುವರಭಾಯೆಯು ಹೇಳು 

ತ್ತಾಳೆ, ಆ ದಿವಸ ಠಾಕೂರಸಿoಗನು ಅಂಥ ಅವಸರದ ಸಮಯದಲ್ಲಿ ಆ 

ಚಾಕುವು ಸಂಗಡ ಇದ್ದರೂ ಇರಲೆಂದು ಒಯ್ದಿರಬಹುದು ” ಎ೦ದು ಕೃಷ್ಣ 

ಭುಜಗನು ಸೂಚಿಸಿದನು. 


" ನಿಮ್ಮ ಮಾತು ಸೋಪ ಪತ್ರಿಕವಾಗಿ ತೋರುತ್ತದೆ; ಇನ್ನು ಈ 

ಕಾಗದಗಳನ್ನು ತೆಗೆಯಿರಿ ನೋಡೋಣ. ” 


ಕೃಷ್ಟ ಭುಜಂಗನು ಆ ಕಾಗದಗಳನ್ನು ಒಂದೊಂದಾಗಿ ತೆಗೆದು ಸರಲಾ 

ಕ್ಷನ ಕೈಗೆ ಕೊಟ್ಟನು. 


ಸರಲಾಕ್ಷನು ಅವುಗಳನ್ನು ನೋಡುತ್ತೆ ಅಂದದ್ದು : "ಇವು 

ಮೂರು ಹುಲ್ಲುಗಡಲೆಗಳ ಲೆಕ್ಕದ ಚೀಟಿಗಳು. ಇದು ಕುವರ ಬಾಯಿಗೆ 

ಪಿಯಾನೋ ಬಾರಿಸಲಿಕ್ಕೆ ಕಲಿಸಿದವನಾದ ಚಂದೂ ಅಡ್ಡ ಗಮ್ಮಣ್ಣನವರ 

ಎಂಬವನು ಬರೆದ ಕ್ಷೇಮಸಮಾಚಾರದ ಪತ್ರವು. ಇದೇನು ? ಮಗನೀ 

ರಾಮ ಚಂದೂಭಾಯಿ ಎಂಬ ಜವಳಿ ವ್ಯಾಪಾರಸ್ಥನ ಲೆಕ್ಕದ ಪಟ್ಟಿಯು. 

ಕುವರಬಾಯಿಗಾಗಿ ಗಿಳಿ ಬಣ್ಣದ ಜರದ ಪತ್ತಲ ಒಂದು, ಬೆಲೆ ಎಪ್ಪತ್ತೈದು 

ರೂಪಾಯಿ, ಹಸ್ತೆ ಬಾಳೂ ಸಂಗಮ. ಇಷ್ಟು ಬೆಲೆ ಯ ಸೀರೆ ! 

ಹೋಗಲಿ, ಅವರವರ ಗೃಹಕೃತ್ಯದ ಕೆಲಸವಿದು. ಈ ಕಾಗದಗಳಲ್ಲಿ 

ವಿಶೇಷವೇನೂ ಇಲ್ಲವೆಂತಾಯಿತು ” ಎಂದು ಹೇಳಿ ಸರಲಾಕ್ಷನು ಕೋಣೆ 

ಯಿಂದೆದ್ದು ಹೊರಗೆ ನಡೆದನು. ನಾವೆಲ್ಲರೂ ಅವನನ್ನು ಹಿಂಬಾಲಿಸಿನಡೆದೆವು. 


ಅಷ್ಟರಲ್ಲಿ ರೂಪವತಿಯ ವಿಲಾಸಪ್ರಿಯಳೂ ಆದ ತರುಣಿಯೋರ್ವಳು 

ಚಿಂತಾಕ್ರಾಂತವಾದ ಮುಖವುಳ್ಳವಳಾಗಿ ನಾವಿದ್ದಲ್ಲಿಗೆ ಬಂದು " ಏನು 

ಕೊತವಾಲರೆ, ಏನಾದರೂ ಶೋಧವಾಯಿತೆ ?' ಪರದೇಶಿಯಾದ ನಾನು 

ಇನ್ನೆಷ್ಟು ದಿವಸ ಇಲ್ಲಿರಲಿ ಹೇಳಿರಿ ” ಎಂದು ಚಿಂತೆಯಲ್ಲಿಯೇ ಕಿಂಚಿತ್ 

ಮಂದಹಾಸಕ್ಕೆ ಅವಕಾಶವನ್ನು ಕೊಟ್ಟು ಕೇಳಿದಳು.  


" ಆದೀತು, ಬೇಗನೆ ಶೋಧವಾದೀತು, ಕುವರಿಬಾಯಿ, ನಾಳೆ 

ನಿಮಗೆ ಅಪ್ಪಣೆಯಾಗುವದು ” ಎಂದು ಕೃಷ್ಣ ಭುಜಂಗನು ಹೇಳಿ ಬಳಿಕ 

ಸರಲಾಕ್ಷನನ್ನು ಕುರಿತು ' ರಾಯರೆ, ಇವರೇ ಠಾಕೂರಸಿಂಗನ ದುರ್ದೈವಿಗ 

ಳಾದ ಪತ್ನಿಯವರು ?” ಎಂದು ಹೇಳಿಕೊಟ್ಟನು. 


ಸರಲಾಕ್ಷನು ಕುವರಬಾಯಿಯ ಮುಖವನ್ನು ದಿಟ್ಟಿಸಿ ನೋಡಿ " ಓ, 

ಕುವರಬಾಯಿ, ನೀವು ಆಚೇ ವರ್ಷ ಶ್ರಾವಣಮಾಸದಲ್ಲಿ ಲೀಲಾಧರ 

ಖುಶಾಲಚಂದರೊಡನೆ ಬೆಳಗಾವಿಯಲ್ಲಿ ಪ್ರಮೀಳಾ ಸ್ವಯಂವರ ನಾಟಕ 

ವನ್ನು ನೋಡಬಂದಿದ್ದಿಲ್ಲವೆ ? ಆಗ ನೀವು ಗಿಳಿಬಣ್ಣದ ಜರದ ಪುಲವ 

ನ್ನುಟ್ಟು ಕೊಂಡಿದ್ದಿರಿ,'' ಎಂದು ಕೇಳಿದನು. 


" ಯಾರನ್ನು ನೋಡಿದಿರಿ ನೀವು ? ನಾನು ಪ್ರಮಾಲಾ ಸ್ವಯಂವರ 

ವೆಂಬ ನಾಟಕವನ್ನೇ ನೋಡಿಲ್ಲ. ಗಿಳಿಬಣ್ಣದ ಸೀತೆಯನ್ನು ನಾನು ಮೊನ್ನೆ 

ಕೊಂಡಿದ್ದೇನೆ' ಎಂದು ಕುವರಬಾಯಿಯ ಕಿಂಚಿತ್ ಕ್ರುದ್ಧಳಾಗಿ ನುಡಿದಳು. 


"ಗಿಳಿ ಬಣ್ಣದ ಸೀರೆಯನ್ನು ನೀವು ಮೊನ್ನೆ ಕೊಂಡಿರೆಂಬದು ಮಗನೀ 

ರಾಮನ ಲೆಕ್ಕವೇ ಹೇಳುತ್ತದೆ. ಅಂಥದೇ ಮತ್ತೊಂದು ಸೀರೆಯನ್ನು 

ಆಚೆಯ ವರ್ಷ ಕೊಳ್ಳಲಿಕ್ಕೆ ನಿಮಗೆ ಬೇಡೆಂಬುವವರಾಗಿದ್ದರು ? ಹೋಗಲಿ, 

ನೀವು ಪ್ರಮೀಲಾನಾಟಕಕ್ಕೆ ಹೋಗಲೇ ಇಲ್ಲವೆಂದು ಹೇಳಿದ ಬಳಿಕ ವಾದವೇ 

ಇಲ್ಲ. ಒಬ್ಬರಂತೆ ಒಬ್ಬರಿರುವದನ್ನು ಒಮ್ಮೊಮ್ಮೆ ಕಾಣಬಹುದು. ಕ್ಷಮಿಸಿರಿ, 

ನಾನು ತಪ್ಪಿದೆನು.” 


" ತಪ್ಪೋತರದು ರಾಯರೆ ? ಬ್ರಾಹ್ಮಣರಾದವರಿಗೂ ಒಮ್ಮೊಮ್ಮೆ 

ಹುಲಿ ಮೀಸೆ ಎಂಬ ಹೆಸರು ' ಎಂದು ಕುವರಬಾಯಿಯು ಹೊಟ್ಟೆಯೊಳಗಿನ 

ಸಿಟ್ಟಿನಿಂದ ನುಡಿದಳು. 


ಹುಲಿಮೀಸೆಯು ಅವಳ ಮಾತಿಗೆ ನಕ್ಕು "ಕುವರಬಾಯಿ, ನೀವು 

ವಿನೋದವತಿಯರು. ಹುಲಿ ಮೀಸೆಯೆಂಬದು ನನ್ನ ಹೆಸರಲ್ಲ. ನನ್ನ 

ಮುತ್ತಾತರಿಗೆ ಆ ಹೆಸರನ್ನು ಇಟ್ಟಿದ್ದರು. ಆ ಹೆಸರಿನ ಚಮತ್ಕಾರಕ್ಕಾಗಿ 

ಜನರು ನಮ್ಮ ಮನೆಯವರನ್ನೆಲ್ಲ ಅದೇ ಹೆಸರಿನಿಂದ ಕರೆಯಲಾಂಭಿಸಿದ್ದ 

ರಿಂದ ಹಲಿಮೀಸೆಯೆಂಬದು ನಮ್ಮ ಅಡ್ಡ ಹೆಸರೇ ಆಗಿಹೋಗಿದೆ ” ಎಂದು 

ಹೇಳಿದನು, 


"ಬ್ರಾಹ್ಮಣರಲ್ಲಿ ಹುಲಿಮೀಸೆಯೆಂಬ ಹೆಸರು ಎಲ್ಲಿಯೂ ನಾನು 

ಕೇಳಿಲ್ಲ. ಅಂಥ ಹೆಸರನ್ನು ನಿಮ್ಮ ಮುತ್ತಾತರಿಗೆ ಹೇಗಿಟ್ಟರು ? ” ಎಂದು 

ರಾಸಬಿಹಾರಿಯು ಜಡೆಯಂತಿರುವ ತನ್ನ ಗಲ್ಲೇ ಮೂಸೆಯ ಮೇಲೆ ಕೈಯಾಡಿ 

ಸುತ್ತೆ ಕೇಳಿದನು. 


" ಇಂಥ ಸಮಯದಲ್ಲಿ ಆ ಕಥಾಂತರವನ್ನೇ ಹೇಳಲಿಯಾ ? ಆಗಲಿ, 

ಕೇಳಿರಿ : ವೇಣೀಸಂಹಾರ ನಾಟಕವನ್ನು ಬರೆದ ಭಟ್ಟ ನಾರಾಯಣನ ವಂಶ 

ದವರು ನಾವು. ಆ ಕವಿಗೆ ಮೃಗರಾಜಲಕ್ಷ್ಮ ಎಂಬ ಬಿರುದು, ಮೃಗರಾಜ 

ಲಕ್ಷ್ಗಮ್ಷವೆಂದರೆ ಸಿಂಹದ ಜಡೆ. ಇನ್ನು ಕನ್ನಡ ಪಂಡಿತರು ಒಮ್ಮೊಮ್ಮೆ 

ಸಿಂಹಕ್ಕೆ ಹುಲಿಯೆಂದು ಕರೆಯುವದುಂಟು. ಸಿಂಹಕೇಶಿಯಾದ ಚಾಲುಕ್ತ 

ಸಾರ್ವಭೌಮನಿಗೆ ಪುಲಿಕೇಶಿ ಎಂದು ಅವರು ಕರೆದರು, ಹಾಗೆಯೇ ನಮ್ಮ 

ಮುತ್ತಾ ತನ ಹೆಸರು ಪುಲಿಕೇಶಿ, ಹುಲಿಕೇಶಿ ಶಬ್ದ ವು ಹೋಗಿ ಹುಲಿಮೀಸೆ 

ಯಾಯಿತು. ” ಎಂದು ಸರಲಾಕ್ಷನು ತನ್ನ ಹೆಸರಿನ ಉತ್ಪತ್ತಿಯನ್ನು ವಿವ 

ರಿಸಿ ಹೇಳಿದನು. 


ಮರುದಿವಸ ಬೆಳಿಗ್ಗೆ ನಾವು ತಾಕೂರನ ಕೊಲೆಯಾದ ಸ್ಥಳವನ್ನು 

ನೋಡಲಿಕ್ಕೆ ಹೊರಟೆವು. ಮಾರ್ಗದಲ್ಲಿ ಸುಭೇದಾರರ ಮಾವಿನ ತೋಟದ 

ಬಳಿಯಲ್ಲಿದ್ದ ಕುದುರೆಯ ಲಾಯದ ಮನೆಯನ್ನು ನೋಡಿದೆವು, ಆ ಅಶ್ವ 

ಶಾಲೆಯ ಹೊರಗೋಡೆಗಳನ್ನು ನೋಡಲಾಗಿ ಅದೊಂದು ಚಿಕ್ಕದಾದ 

ಕೋಟೆಯೇ ಎಂಬಂತೆ ಕಂಡಿತು, ಒಳಗಿನ ಎರಡು ಕೊಟ್ಟಿಗೆಗಳಲ್ಲಿ ಐದೈದು 

ಕುದುರೆಗಳನ್ನು ದೂರದೂರಾಗಿ ಕಟ್ಟಿದ್ದರು, ಕಸದ ಕಡ್ಡಿ ಯಾಗಲಿ, ಲದ್ದಿಯ 

ಚೂರಾಗಲಿ ಅಲ್ಲಿ ಇದ್ದಿಲ್ಲ, ಎತ್ತ ನೋಡಿದ ಸ್ವಚ್ಛತೆಯೇ ಸ್ವಚ್ಛತೆಯು, 

ಕೊಟ್ಟಿಗೆಯಲ್ಲಿ ವಿಪುಲವಾಗಿ ಗಾಳಿಯಾಡುತ್ತಿತ್ತು. ಬೆಳಕಿಗೂ ಕೊರತೆ 

ಯಿಲ್ಲ. ಒಂದೊಂದು ಕುದುರೆಗೆ ಎಷ್ಟು ಹುಲ್ಲು ತೂಗಿ ಹಾಕಿತು, ತಿನ್ನದೆ. 

ಉಳಿಯಿತೆಷ್ಟು ಮುಂತಾದ ಸಂಗತಿಗಳ ಲೆಕ್ಕವನ್ನು ಆಯಾ ಕುದುರೆಯ ಬಳಿ 

ಯಲ್ಲಿಟ್ಟ ಹಲಿಗೆಯ ಮೇಲೆ ಕಾಲಕಾಲಕ್ಕೆ ಆಳುಗಳು ಬರೆದಿಟ್ಟಿದ್ದರು. ಬೆಳ್ಳೀ 

ಚಿಕ್ಕೆಯನ್ನು ಕಟ್ಟಿರುವ ಸ್ಥಳವು ಪ್ರಥಕ್ಕಾಗಿಯೂ ಅಲ್ಲಿಯ ವ್ಯವಸ್ಥೆಯೂ 

ವಿಶೇಷವಾಗಿಯೂ ಇರುವಂತೆ ಕಂಡಿತು. ಬೆಳತನಕ ಎಚ್ಚರಿಕೆಯಿಂದ 

ಕಾದುಕೊಂಡು ಕುಳ್ಳಿರುವ ಆಳಿನ ಸಮೀಪದಲ್ಲಿಯೇ ಎರಡು ಭೀಕರವಾದ  

ಸೊನಗಗಳನ್ನು ಕಟ್ಟಿದ್ದರು. ಅಲ್ಲಿಯ ವ್ಯವಸ್ಥೆಯನ್ನೆಲ್ಲ ಸೂಕ್ಷ್ಮವಾಗಿ 

ನಿರೀಕ್ಷಿಸಿ ಹುಲಿಮೀಸೆಯು ಮುಗುಳುನಗೆ ನಕ್ಕು ಕೊಲೆಯ ಸ್ಥಳಕ್ಕೆ ನಮ್ಮನ್ನು 

ಕರಕೊಂಡು ನಡೆದನು. 


ಆಳವಾದ ಹಾಳು ಕೆರೆಯಂತೆ ಕಾಣುವದೊಂದು ವಿಸ್ತಾರವಾದ ತಗ್ಗಿಗೆ 

ನಾವು ಬಂದೆವು. ಅದೇನು ? ಆ ಗಿಡಕ್ಕೆ ಜೋತಾಡುವ ಅಂಗಿ 

ಯಾರದು ? ಅದು ಠಾಕೂರಸಿಂಗನದೇ ಎಂದು ಸುಭೇದಾರನು ಹೇಳಿದನು. 


" ಕೊಲೆಯಾದ ರಾತ್ರಿ ಬಿರುಗಾಳಿ ಬಿಟ್ಟಿತ್ತೆ ?” ಎಂದು ಹುಲಿ 

ಮೀಸೆಯು ಕೇಳಲಾಗಿ ಗಾಳಿಯೇ ಇಲ್ಲವೆಂದು ಉತ್ತರ ಬಂದಿತು. 


" ಹಾಗಾದರೆ ಈ ಅಂಗಿಯನ್ನು ಠಾಕೂರನು ತಾನಾಗಿ ಆ ಕೊಂಬೆಗೆ 

ತೆಗೆದಿಟ್ಟನೆನ್ನಬೇಕು. ” ಎಂದು ಚಾಣಾಕ್ಷನಾದ ಸರಲಾಕ್ಷನು ಅಭಿಪ್ರಾಯ 

ಪಟ್ಟನು. 


" ಇಕೋ ನೋಡಿರಿ : ಇಲ್ಲಿಯೇ ಹೆಣವು ಅಂಗಾತು ಬಿದ್ದಿತ್ತು, 

ಇವು ಕುದುರೆಯ ಹೆಜ್ಜೆಗಳು, ಬೆಳ್ಳೀಚಿಕ್ಕೆಯ ಕಾಲಿನ ನಾಲಿಗೂ ಇಲ್ಲಿ 

ಮೂಡಿದ ನಾಲಿಗೂ ಎಷ್ಟು ಮಾತ್ರವೂ ಹೆಚ್ಚು ಕಡಿಮೆಯಿಲ್ಲ. ಹದಿನೈದು 

ದಿವಸಗಳಾಚೆಗೆ ಆದ ಮಳೆಯಿಂದ ಇಲ್ಲಿ ಕೊಂಚ ಕೆಸರಾಗಿದ್ದರಿಂದ ಹೆಜ್ಜೆ 

ಗಳು ಚನ್ನಾಗಿ ಮೂಡಿರುವವು. ಮನುಷ್ಯರ ಹೆಜ್ಜೆಗಳೂ ಇವೆ. ಠಾಕೂರ 

ಸಿಂಗನು ಮೆಟ್ಟಿ ಕೊಂಡ ಜೋಡು ತಂದಿದ್ದೇನೆ ನೋಡಿರಿ. ಇದು ಮಹ 

ಮ್ಮದ ಇಬ್ರಾಹೀಮನ ಜೋಡು, ಬೆಳ್ಳೀಚಿಕ್ಕೆಗೆ ಹೊಸ ನಾಲು ಕಟ್ಟಿಸಿ 

ದಾಗ ತೆಗೆದಿಟ್ಟ ಹಳೆ ನಾಲು ಇದು." ಎಂದು ಕೃಷ್ಣ ಭುಜಂಗನು ತಾನು 

ತಂದಿರುವ ವಸ್ತುಗಳನ್ನು ಹುಲಿಮೀಸೆಗೆ ತೋರಿಸಿದನು. 


" ಸಾಧು ಕೃಷ್ಟ ಭುಜಂಗ! ಕೆಲಸ ಮಾಡಬೇಕು ನೀವೇ ” ಎಂದು 

ನುಡಿದು ಸರಲಾಕ್ಷನು ಬೊಗ್ಗಿ ಬೊಗ್ಗಿ ಆ ಸ್ಥಳದಲ್ಲಿಯ ಹೆಜ್ಜೆ ಮುಂತಾದವು 

ಗಳನ್ನು ಒಳ್ಳೇ ಸೂಕ್ಷ್ಮವಾದ ರೀತಿಯಿಂದ ಪರೀಕ್ಷಿಸಿ ನೋಡಿದನು. 

ಬಳಿಕ ಅವನು ಶುದಿ ಬೆರಳುಗಳಿ೦ದ ತುಸು ನೆಲ ಕೆದರಿನೋಡಿ ಓಹೋ, ಇದು 

ಮೇಣ ಬತ್ತಿಯ ರಸವಲ್ಲವೆ ? ನೋಡಿಠಿ ಕೃಷ್ಣ ಭಜಂಗ ” ಎಂದು ನುಡಿದು 

ಅನನು ತಾನು ಕೆದರಿಕೊಂಡ ಪದಾರ್ಥವನ್ನು ಕೊತವಾಲನಿಗೆ ತೋರಿಸಿದನು. 


- tC ಅಹುದು ಇದು ಮೇಣಬತ್ತಿ ಯ ರಸವೇ, ಈ ರಸವು ಇಲ್ಲಿರಬಹು 

ದೆಂದು ತರ್ಕಿಸಿ ಹಾಗೆ ನೀವು ಕೆದರಿ ನೋಡಿದಿರೇನು ? ನನಗಿದು ಆ ದಿವಸ 

ಕಾಣಿಸಲೇ ಇಲ್ಲ. " ಎಂದು ಕೃಷ್ಣ ಭುಜಂಗನು ಚಕಿತನಾಗಿ ನುಡಿದನು. 


" ಇಕೋ, ಇದು ನೋಡಿರಿ, ಕೆರೆದ ದೀಸದ ಕಡ್ಡಿಯ ಚೂರು. 

ಮೃತನ ಜೇಬಿನಲ್ಲಿಯ ಪೆಟ್ಟಿಗೆಯೊಳಗಿನ ಕಡ್ಡಯೂ ಈ ಕಡ್ಡಿಯ ಒಂದೇ 

ಆಗಿ ತೋರುತ್ತದೆ. ” 


"  ನಿಶ್ಚಯ, ಎರಡೂ ಕಡ್ಡಿಗಳು ಒಂದೆಯೇ ?' ಎಂದು ಕೂತ -

ವಾಲನು ಉದ್ದಾರ ತೆಗೆದನು. 


"ಒಳ್ಳೇದು, ಇಲ್ಲಿಯ ಕೆಲಸವಾಯಿತು. ನಾನೂ ನಮ್ಮ ವಾತಾತ್ಮಜ 

ಪಂಡಿತರೂ ಕೂಡಿ ಹೀಗೆ ಆಡ್ಡಾಡಿ ಇನ್ನಿಟ್ಟು ಇಲ್ಲಿಯ ವನಶೋಭೆಯನ್ನು 

ನೋಡಿಕೊಂಡು ಬರುತ್ತೇವೆ. ಕೃಷ್ಣಭುಜಂಗ, ನೀವು ಸುಭೇದಾರರನ್ನು ಕರ 

ಕೊಂಡು ಮನೆಗೆ ನಡೆಯಿರಿ, ಊಟದ ಸಮಯಕ್ಕೆ ನಾವು ಬಂದೇಬರು 

ತ್ತೇವೆ, 'ಗಾಳಿಯ ಮಿಂಡ' ನೆಂಬ ಕುದುರೆಯ ಯಜಮಾನನಾದ ಜಾಫರ 

ಸೇಟನ ಲಾಯದ ಮನೆ ಎತ್ತ ಕಡೆಗಿರುವದು ? ” ಎಂದು ಹುಲಿಮೀಸೆಯು 

ಕೇಳಿದನು. ಅವರು ತೋರಿಸಿದರು. 


" ಸರಲಾಕ್ಷರಾವ್, ನೀವು ತಿರುಗಾಡಿಕೊಂಡು ಬನ್ನಿರಿ, ನಾವು 

ಕುವರ ಬಾಯಿಯ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮಾರ್ಗಪ್ರತೀಕ್ಷೆ 

ಮಾಡುವೆವು. ಆಮೇಲೆ ಎಲ್ಲರೂ ರಥದಲ್ಲಿ ಕುಳಿತುಕೊಂಡು ಮನೆಗೆ 

ಹೋಗುವ ” ಎಂದು ಹೇಳಿ ರಾಸಬಿಹಾರಿಯು ಕೃಷ್ಟ ಭುಜಂಗನನ್ನು ಕರ 

ಕೊಂಡು ನಡೆದನು. ನಾವು ನಮ್ಮ ಹಾದೀ ಹಿಡಿದು ನಡೆದೆವು. 


" ಪಂಡಿತರೆ, ಈ ಪ್ರಕರಣದಲ್ಲಿ ಎರಡು ಮಾತಿನ ವಿಚಾರಗಳಿವೆ. 

ಠಾಕೂರಸಿಂಗನನ್ನು ಕೊಂದವರಾರೆಂಬದು ಒಂದು; ಬೆಳ್ಳೀಚಿಕ್ಕೆ ಎಲ್ಲಿರುವ 

ದೆಂಬದು ಮತ್ತೊಂದು, ಆ ಅಶ್ವ ಶಿಕ್ಷಕನ ಮರಣದ ಕಾರಣದ ಶೋಧದ 

ಮಾತು ತುಸು ಬಿಕ್ಕಟ್ಟಾದದ್ದು ; ಕುದುರೆಯ ಮಾತು ಹಾಗಲ್ಲ. ಕುದುರೆಯನ್ನು 

ಯಾರೂ ಕೊಂದಿಲ್ಲವೆಂಬದು ಸಿದ್ಧಾಂತವು. ಅದು ಬದುಕಿದ್ದರೆ ಎಲ್ಲಿರಬೇಕು?” 

ಎಂದು ಹುಲಿಮೀಸೆಯು ಉಪಕ್ರಮಿಸಿದನು. 


" ಚಿಗರಿಕಾರರು ಒಯ್ದಿ ರಲಿ, ಇಲ್ಲವೇ ಮಹಮ್ಮದ ಇಬ್ರಾಹಿಮನೇ 

ಒಯ್ದಿರಲಿ ಒಯ್ದಿರಬೇಕೆಂದು ಕೃಷ್ಣ ಭುಜಂಗನು ತರ್ಕಿಸುತ್ತಾನೆ. " 


" ಎರಡೂ ಸುಳ್ಳು, ಚಿಗರಿಕಾರರು ಒಯಿಲ್ಲ. ಕುದುರೆಯನ್ನು 

ಕೋದು ಅವರೇನು ತಿನ್ನಬೇಕಾಗಿಲ್ಲ. ಮಾರಿಕೊಳ್ಳುವರೇ, ಬೆಳ್ಳೀಚಿಕ್ಕೆಯೇನು 

ಮುಚ್ಚುವ ಬದುಕೆ ? ಇನ್ನು ಮಹಮ್ಮದ ಇಬ್ರಾಹಿಮನು ಒಯ್ದರೆ 

ಯಾತಕ್ಕೆ ಒಯ್ಯಬೇಕು ? ಕಳವೇ ಅವನ ಉದ್ದೇಶವಾಗಿದ್ದರೆ ಮನೆಗಳಿಗೆ 

ಕನ್ನವನ್ನಿಕ್ಕಿ ಧನಕನಕಗಳನ್ನು ಕದಿಯುವ ಸುಲಭವಾದ ಸಾಧನವನ್ನು ಬಿಟ್ಟು 

ಇಂಥ ಗೋಜಿಗೆ ಅವನೇಕೆ ಹೋದಾನು ? ” 


( ಬೆಳ್ಳೀಚಿಕ್ಕೆಯು ನಾಳಿನ ಶರ್ಯತ್ತಿನಲ್ಲಿ ಬರಬಾರದೆಂಬ ಉದ್ದೇ 

ಶವು ಅವನಡಿದ್ದರೆ ಅವನು ಅದನ್ನು ಬಚ್ಚಿಡಬಾರದೇಕೆ ?” ಎಂದು ನಾನು 

ಕೇಳಿದೆನು. 


"ಒಳ್ಳೇ ಪ್ರಶ್ನೆ. ಆದರೆ ಬೆಳ್ಳೀಚಿಕ್ಕೆಯ ಕಾಲನ್ನೇ ಮುರಿದುಬಿಟ್ಟಿದ್ದರೆ 

ಮಹಮ್ಮದ ಇಬ್ರಾಹೀಮನ ಕಾರ್ಯವು ಸುಲಭವಾಗಿ ಸಾಧಿಸುತ್ತಿತ್ತಷ್ಟೆ ? 

ಕುದುರೆಯನ್ನು ಕಟ್ಟಿ ಅದಕ್ಕೆ ಕೂಳು ನೀಡಿ, ಕಡೆಗೆ ಕಳವಿನ ಶೋಧವಾದರೆ 

ಅವನು ಶಿಕ್ಷೆಗೆ ಪಾತ್ರನಾಗುವನಲ್ಲೆ ? ಇದು ಮಹಮ್ಮದ ಇಬ್ರಾಹಿಮನ 

ಕೆಲಸವೇ ಅಲ್ಲ. ” 


" ಹಾಗಾದರೆ ಕುದುರೆಯು ಎಲ್ಲಿಗೆ ಹೋಗಬೇಕು ? ” ಎಂದು ನಾನು 

ಒಳ್ಳೆ ಆಡ್ಯತೆಯಿಂದ ಕೇಳಿದೆನು. 


"ಕಟ್ಟಿದ ಕುದುರೆಯನ್ನು ಬಿಟ್ಟ ಕೂಡಲೆ ತನ್ನ ಸ್ವಜಾತೀಯವಾದ 

ಪ್ರಾಣಿಗಳ ಹಿಂಡಿನಲ್ಲಿ ಸೇರಿಕೊಳ್ಳುವದು ಅದರ ಹುಟ್ಟುಗುಣವು. ಇನ್ನು ಈ 

ಪ್ರಾಂತದಲ್ಲಿ ಕುದುರೆಗಳ ಹಿಂಡುಗಳೆಂದರೆ ಎರಡೇ ಇರುವವು. ರಾಸಬಿಹಾ 

ರಿಯ ಲಾಯದ ಹಿಂಡು ಒಂದು, ಜಾಫರಸೇಟನ ಲಾಯದ ಹಿಂಡು 

ಮತ್ತೊಂದು, ಬೆಳ್ಳೀ ಚಿಕ್ಕೆಯು ರಾಸಬಿಹಾರಿಯ ಲಾಯಕ್ಕೆ ಬಂದಿಲ್ಲ 

ವಾದ ಮೇಲೆ ಅದು ಜಾಫರಸೇಟನ ಲಾಯಕ್ಕೆ ಹೋಗಿರಲಿಕ್ಕೇಬೇಕು.” 


" ಹಾಗಾದರೆ ಅದು ಅತ್ತ ಹೋಗಿದೆಯೋ ಹೇಗೆ ನೋಡೋಣ ನಡೆ 

ಯಿರಿ. ಹೆಜ್ಜೆಗಳ ಗುರುತು ಸಿಕ್ಕರೂ ಸಿಕ್ಕ ಬಹುದು ” ಎಂದು ನಾನು ಸೂಚಿ 

ಸಿದೆನು 


" ನಡೆಯಿರಿ, ಇದು ಬಿರುಸುಭೂವಿ ಯು; ಈ ದಿನ್ನೆ ಯನ್ನಿಳಿಯುವ 

ವರೆಗೂ ಹೆಜ್ಜೆಗಳ ಗುರುತು ಸಿಕ್ಕಲಾರದು, ಜಾಫರಸೇಟನ ಲಾಯ ಇಲ್ಲಿಂದ 

ನೆಟ್ಟಗೆ ಪೂರ್ವಕ್ಕೆ ಇದೆಯಂತೆ. ನಾವು ಪೂರ್ವಾಭಿಮುಖರಾಗಿಯೇ ದಿನ್ನೆಯ 

ಇಳುಕಲಿನ ವರೆಗೆ ಹೋಗೋಣ, ಅಲ್ಲಿ ಭೂಮಿಯ ಮೆತ್ತಗಾಗಿರಲಿ, ಇಲ್ಲವೆ 

ಮಳೆನೀರಿನ ಹಸಿ ಇರಲಿ ಇದ್ದರೆ ಹೆಜ್ಜೆಗಳನ್ನು ನಾವು ಕಾಣಬಹುದು. 

ಕುದುರೆಯಂತೂ ಹೀಗೆಯೇ ಹೋಗಿರಲಿಕ್ಕೆ ಸಾಕು. ” 


ದಿನ್ನೆ ಯ ಇಳುಕಲಿಗೆ ನಾವು ಬಂದು ನೋಡಲಾಗಿ ಆಲ್ಲಿ ಕುಂಟೆಯಂಥ 

ತಗ್ಗೇ ಇದ್ದು ಅದರಲ್ಲಿಯ ನೆಲವಾದರೂ ಹಸಿಯಾಗಿಯೇ ಇತ್ತು. ಆ 

ಕುಂಟೆಯ ಒಂದು ದಡವನ್ನು ಹಿಡಿದು ಕುಲಿಮೀಸೆಯು ನಡೆದನು. 

ನಾನೊಂದು ದಡವನ್ನು ಹಿಡಿದು ಹೆಜ್ಜೆಗಳ ಶೋಧಕ್ಕಾಗಿ ನೆಲವನ್ನು ನೋಡು 

ತ್ತಲೇ ನಡೆದೆನು, ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿಯೇ ಶುಭಚಿಹ್ನವೇನೋ 

ನನಗೆ ಕಂಡಂತಾಯಿತು, ಹೋಗಿ ನೋಡಲಾಗಿ ಕುದುರೆಯ ಹೆಜ್ಜೆಗಳೇ. 

ಕುದುರೆಯಾದರೂ ಜಾಫರಸೇಟನ ಲಾಯದ ಕಡೆಗೆ ಹೋಗಿದ್ದಾಗಿ 

ಕಂಡಿತು, ಹರ್ಷಿತನಾಗಿ ನಾನು ಹುಲಿಮೀಸೆಯನ್ನು ಕೂಗಿ ಚಪ್ಪಳೆ ಹೊಡೆ 

ದೆನು, ಚಿಗರೆ ಹಾರಿದಂತೆ ಹಾರುತ್ತೆ ಸರಲಾಕ್ಷನು ನಾನಿದ್ದಲ್ಲಿಗೆ ಬಂದನು. 

ಹೆಜ್ಜೆಗಳನ್ನು ನೋಡಿದವನೇ ಅವನು ತನ್ನ ಜೇಬಿನಲ್ಲಿಯ ನಾಲು ತೆಗೆದು 

ಹೆಜ್ಜೆಯಲ್ಲಿ ಮೂಡಿದ ನಾಲಿಗೆ ಇಟ್ಟು ನೋಡಿದನು. ಕೂದಲೆಳೆಯಷ್ಟು 

ಬಿಡದೆ ಹೊಂದಿಕೆಯಾಯಿತು. 


" ವಾಃ ವಾಃ! ಪಂಡಿತರೆ, ಈ ಪ್ರಕರಣದಲ್ಲಿ ದೈವವು ನಿಮಗೆ ಅನು 

ಕೂಲವಾಯಿತು, ಆಗಲಿ, ಪ್ರತಿಯೊಂದು ಪ್ರಕರಣದಲ್ಲಿಯ ಪ್ರತಿಯೊಂದು 

ಮಾತಿನ ಶೋಧವು ನನ್ನಿ೦ದಲೇ ಆಗಬೇಕೆಂದು ಬರಕೊಟ್ಟಿದೆಯೇನು ? 

ಬೆಳ್ಳೀಚಿಕ್ಕೆಯು ಜಾಫರಸೇಟನ ಲಾಯದ ಮಾರ್ಗವಾಗಿ ಹೋಗಿದೆಯೆಂಬದ 

ರಲ್ಲಿ ಸಂದೇಹವಿಲ್ಲ. ” ಎಂದು ಸರಲಾಕ್ಷನು ವಿನೋದಗೈಯುತ್ತ ನುಡಿದನು. 


 " ಮತ್ತೆ ಈ ಏರಿಕೆಯಲ್ಲಿ ಕುದುರೆಯ ಖುರಪುಟಗಳ ಚಿಹ್ನೆಗಳು 

 ಮೂಡಿದ್ದು ಕಾಣುವದಿಲ್ಲ.” ಎಂದು ನಾನು ನೆಲವನ್ನು ನಿರೀಕ್ಷಿಸುತ್ತ 

ನುಡಿದೆನು. 


" ಈ ದಿನ್ನೆಯ ಇಳಿಕೆಯಲ್ಲಿ ನಾವು ಮತ್ತೆ ಆ ಚಿಕ್ಕ ಗಳನ್ನು ಕಾಣ 

ಬಹುದು. ನೆಟ್ಟಗೆ ನಾವು ಪೂರ್ವದಿಕೆಯನ್ನು ನೋಡಿಕೊಂಡು ನಡೆದರಾ 

ಯಿತು. " ಎಂದು ಸರಲಾಕ್ಷನು ನುಡಿದನು. 


ನಾವು ದಿನ್ನೆ ಯನ್ನಿಳಿದು ಅದರಡಿಯಲ್ಲಿದ್ದ ತೇವು ಭೂಮಿಗೆ ಬಂದೆವು. 


" ನೋಡಿರಿ ರಾಯರೆ, ಇಲ್ಲಿ ಕುದುರೆಯ ಹೆಜ್ಜೆಗಳಿವೆ ” ಎಂದು ಹೇಳಿ 

ನಾನು ಆ ಹೆಜ್ಜೆಗಳನ್ನು ಹುಲಿಮೀಸೆಗೆ ತೋರಿಸಿದೆನು. ಅವುಗಳನ್ನವನು 

ಕಣ್ಣಿಟ್ಟು ನೋಡಿ, 


" ಮತ್ತೊಂದು ಚಮತ್ಕಾರವೇ ! ಇಲ್ಲಿ ಕುದುರೆಗಳ ಹೆಜ್ಜೆಗಳೊಡ 

ನೆಯೇ ಮನುಷ್ಯನ ಹೆಜ್ಜೆಗಳಾದರೂ ಕಾಣುತ್ತವೆ. ಹಿಂದಿನ ಸ್ಥಳದಲ್ಲಿ ನಾವು 

ಈ ಮನುಷ್ಯನ ಹೆಜ್ಜೆಗಳನ್ನು ಕಾಣಲಿಲ್ಲ. ಅವನೆಲ್ಲಿಂದ ಬಂದನು ? ” 

ಎಂದು ಆಲೋಚಿಸುತ್ತ ಅವನು ಆ ಪ್ರದೇಶದಲ್ಲೆಲ್ಲ ಆಡ್ತಾಡಿ ನೋಡಿದನು. 

 

" ವಾತಾತ್ಮಜ, ಹೀಗೆ ಬನ್ನಿರಿ, ಕುದುರೆಯು ಮೊದಲು ತಾನೊಂದೆ 

ಯಾಗಿ ಜಾಫರನ ಲಾಯದ ಕಡೆಗೆ ಹೋಗಿದೆ. ಇಕೋ, ಇಲ್ಲಿ ಆ ಕುದು 

ರೆಯು ಹೊಡಮರಳಿ ಬಂದ ಹೆಜ್ಜೆಗಳಾದರೂ ಇವೆ, ಆಮೇಲೆ ಮನುಷ್ಯ 

ನೊಬ್ಬನ ಹೆಜ್ಜೆಗಳು ಜಾಫರನ ಲಾಯದಿಂದ ಬಂದಂತೆ ಮಡಿವೆ. ಹಿಂದಿ 

ನಿಂದ ಕುದುರೆಯೂ ಆ ಮನುಷ್ಯನೂ ಕೂಡಿಯೇ ಆ ಲಾಯದ ಕಡೆಗೆ 

ಹೋದ ಹೆಜ್ಜೆಗಳಿವು. ” 


" ಇದೆಲ್ಲದರ ಅರ್ಥವೇನು ? ” ಎಂದು ನಾನು ವಿಚಾರ ಮೂಢನಾಗಿ 

ಕೇಳಿದೆನು. 


" ಅರ್ಥವೇನೆಂದರೆ, ಮೊದಲು ಕುದುರೆಯು ಜಾಫರನ ಲಾಯಕ್ಕೆ 

ಹೋಯಿತು. ಅಲ್ಲಿಯ ಕಾವಲುಗಾರನು ಆಗಂತುಕವಾದ ಆಶ್ವವನ್ನು ಹಿಂತಿ 

ರುವಿ ಹೊಡೆದಟ್ಟಿದನು, ಬಳಿಕ ಮತ್ತೊಬ್ಬ ಉಪದ್ವ್ಯಾಪಿಯಾದ ಪುರುಷ 

ನಿಗೆ ಅಲ್ಲಿ ಬಂದಿರುವ ಕುದುರೆಯು ಬೆಳ್ಳೀಚಿಕ್ಕೆಯೇ ಎಂದು ತಿಳಿದ ಕೂಡಲೆ  

ಅವನು ಅದನ್ನು ಮತ್ತೆ ಹಿಡುಕೊಂಡು ಹೋಗಿದ್ದಾನೆ. ಕುದುರೆಯು ಜಾಫರ 

ಸೇಟನ ಛಾಯದಲ್ಲಿಯಾಗಲಿ, ಅಲ್ಲಿಯೇ ಸಮೀಪದಲ್ಲಿ ಮತ್ತೆಲ್ಲಿಯಾಗಲಿ 

ಸುರಕ್ಷಿತವಾಗಿದೆ. ನಡೆಯಿರಿ, ಬೇಗ ಬೇಗ ಹೆಜ್ಜೆಗಳನ್ನಿಕ್ಕಿರಿ” ಎಂದು ಹೇಳಿ 

ಸರಲಾಕ್ಷನು ಪೈಗುವಿನ ವೇಗದಿಂದ ನಡೆಯಲಾರಂಭಿಸಿದನು. 


ಜಾಫರನ ಲಾಯಕ್ಕೆ ಬಂದೆವು, ಆಳು ಒಬ್ಬನು ಕೊಡ ತೆಗೆದುಕೊಂಡು 

ನೀರಿಗೆ ನಡೆದಿದ್ದನು. ನಮ್ಮನ್ನು ಕಾಣುತ್ತಲೆ ಅವನು ಸಟೆಯಿಂದ ನಿಂತು 

ಕೊಂಡು "ಯಾರು ನೀವು ? ಯಜಮಾನರಿಗಿಂತ ಯಜಮಾನರಾಗಿ ನಿಮ್ಮಿ 

ಚ್ಛೆಯಿಂದಲೇ ಒಳಗೆ ನಡೆದಿರುವಿರಿ ? " ಎಂದು ಗ್ರಾಮ್ಯನಿಗುಚಿತವಾದ 

ಔದ್ಧತ್ಯದಿಂದ ಕೇಳಿದನು. ಆ ಮನುಷ್ಯನ ಬಾಯಿ ಕೇಳುತ್ತಲೆ ಜಾಫರನ 

ಅಶ್ವ ಶಿಕ್ಷಕನಂತೆ ಕಾಣುವ ಮನುಷ್ಯನೋರ್ವನು ಕೈಯಲ್ಲಿ ಚಬಕವನ್ನು 

ತೆಗೆದುಕೊಂಡು ಬಂದು . "ಯಾರವರು ಕೆಂಜೆಡೆಯಪ್ಪಾ ? ' ಎಂದು ಒಳ್ಳೆ 

ಕೋಪವಶನಾಗಿ,ಕೇಳಿದನು. 


" ಯಾರೋ ನೀವೇ ನೋಡಿರಿ, ಗುಲಾಮಹುಸೇನಸಾಬರೆ, ಇಲ್ಲಿಯೇ 

ನಿಂತಿದ್ದಾರೆ. ” ಎಂದು ಕೆಂಜೆಡೆಯು ಹೇಳಿದನು. 


" ಯಾರು ನೀವು ? ನಿಮಗೆಷ್ಟು ಪರಿಯಾಗಿ ಹೇಳಿದರೂ ನೀವು 

ಕೇಳುವದಿಲ್ಲ. ಒಬ್ಬರ ಲಾಯದಲ್ಲಿ ಒಬ್ಬರು ಬಂದು ಕಿಡಿಗೇಡಿತನವನ್ನು 

ಮಾಡುವಿರಲ್ಲವೆ ? ತಡೆಯಿರಿ, ನಾಯಿಗಳನ್ನು 'ಛೂ ' ಬಿಟ್ಟು ನಿಮ್ಮ 

ಕಾಲಿನ ಮೀನಗಂಡಗಳನ್ನು ಹರಿಸಿದಾಗ ಮಾತ್ರ ನಿಮ್ಮ ಕಣ್ಣುಗಳು ತೆರೆಯು 

ವವು. ” ಎಂದು ನುಡಿದು ಗುಲಾಮ ಹುಸೇನನು ನಾಯಿಗಳ ಸರಪಣಿಗಳನ್ನು 

ಬಿಚ್ಚಿಹೋದನು. 


 " ಗುಲಾಮಹುಸೇನ್, ಉತ್ತಮವಾದ ಆ ನಾಯಿಗಳನ್ನು ನಮ್ಮ 

ಮೈಮೇಲೆ ಬಿಡಹೋಗಿ ವ್ಯರ್ಥವಾಗಿ ಅವುಗಳನ್ನು ಕೊಲ್ಲಿಸಬೇಡ, ಇಕೋ 

ನೋಡು, ನನ್ನ ಕೈಯ್ಯಲ್ಲಿ ಪಿಸ್ತೂಲು ಇದೆ ! ” ಎಂದು ಹುಲಿಮೀಸೆಯು 

ಬಹು ಶಾಂತವೃತ್ತಿಯವನಾಗಿಗುಲಾಮಹುಸೇನಿಗೆ ಬುದ್ದಿಯನ್ನು ಹೇಳಿದನು. 


"ಕೊಲ್ಲು ನೋಡುತ್ತೇನೆ, ” ಎಂದು ಗುಲಾಮಹುಸೇನಿಯು ಎದೆ 

ಯುಬ್ಬಿಸಿಕೊಂಡು ಹಿಂತಿರುಗಿ ಹುಲಿಮೀಸೆಯನ್ನು ನೋಡುತ್ತ ಶಾಠ್ತದಿಂದ 

ಕೇಳಿದನು. 


" ಹಾಗಲ್ಲ ಸಾಬರೆ, ನಾವು ರಾಜಧಾನಿಯ ನಿವಾಸಿಗಳು. ಇಲ್ಲಿಯ 

ಉಸಾಬರಿಯನ್ನು ಮಾಡಿ ನಮಗೇನು ಕಟ್ಟಿಕೊಳ್ಳಬೇಕಾಗಿದೆ ? ” ಎಂದು. 

ಸವಿಮಾತಾಡುತ್ತೆ ಸರಲಾಕ್ಷನು ಹುಸೇನಿಯ ರಟ್ಟೆಯಲ್ಲಿ ಕೈ ಹಾಕಿ ಅವನ 

ಕಿವಿಯಲ್ಲಿ ಏನೋ ಹೇಳಿದನು. 


" ಏನು ? ಏನೆಂದಿರಿ ? " 


" ಸುಮ್ಮನಿರು, ಮೂರನೆಯವನ ಕಿವಿಮುಟ್ಟುವಂತೆ ನೀನು ಮಾತಾಡಿ 

ದರೆ ಕೊಳದಲ್ಲಿ ನಿನ್ನ ಕೈ ಸಿಕ್ಕುವದು, ಹೀಗೆ ಏಕಾಂತಕ್ಕೆ ಬಾ ” ಎಂದು 

ಹುಲಿಮೀಸೆಯು ಅವನನ್ನು ಒತ್ತಟ್ಟಿಗೆ ಕರಕೊಂಡು ಹೋಗಿ ಅವನೊಡನೆ 

ಆರ್ಧಗಳಿಗೆ ವರೆಗೆ ಏನೇನೋ ಮಾತಾಡಿದನು, ಗುಲಾಮನು ಜೊಮ್ಮನೆ 

ಜೋತುಕೊಂಡು ಕೇಳುತ್ತಿದ್ದನು. 


ಮಾತು ಮುಗಿದ ಬಳಿಕ ಹುಲಿಮೀಸೆಯು ನನ್ನನ್ನು ಕುರಿತು “ವೈದ್ಯರೆ, 

ನಡೆಯಿರಿನ್ನು ನಮ್ಮ ಕೆಲಸವಾಯಿತು, ” ಎಂದು ಸಂತೋಷದಿಂದ ನುಡಿದು 

ನನ್ನನ್ನು ಕರಕೊಂಡು ನಡೆದನು, ಹೋಗುವಾಗ ಅವನು ಗುಲಾಮಹುಸೇನಿ 

ಯನ್ನು ಚದರಿಸಿ “ನೋಡು, ನಾನು ಹೇಳಿದಂತೆ ಮಾಡಲು ತಪ್ಪಿದಿಯಾದರೆ 

ನಿನ್ನ ಚರ್ಮವನ್ನೇ ಸುಲಿಸುವನು” ಎಂದು ಶಾಸನಗೈದನು. 


" ಪಂಡಿತ, ನಾವಿನ್ನು ಕುವರವಾಯಿತು ಮನೆಗೆ ಹೋಗಬೇಕಲ್ಲವೆ ? 

ಅವಳು ಎಂಥ ಸ್ವಭಾವದವಳಾದ ತರುಣಿಯೆಂಬದು ನಿಮಗೆ ಆರಿಕೆ 

ಯಾಗಿದೆಯೋ ? ” 


" ನನಗೆ ತಿಳಿದಿಲ್ಲ. .ಕುವರಬಾಯಿಯು ಠಾಕೂರಸಿಂಗನ ಹೆಂಡತಿ. 

ಯೆಂಬದಿಷ್ಟೇ ಸರಿ. " 


"ಇರಬಹುದು. ಆದರೆ ಅವಳು ವೇಷ ಒಯ್ಯಾರಗಳಿಂದ ನಟಿಸುತ್ತಿ 

ರುವ ದುಂದುಗಾರತಿಯೆಂಬದನ್ನಾದರೂ ನೀವು ಊಹಿಸಬಹುದಲ್ಲವೆ ? ” 


" ಹಾಗೆ ತೋರುತ್ತದೆ” ಎಂದು ನಾನು ಒಪ್ಪಿಕೊಂಡೆನು.. 


" ಇಂಥ ಹೆಂಡತಿಯ ಅನುರೋಧದಿಂದ ನಡೆಯುವ ಪತಿಯ ಉತ್ಪನ್ನ 

ಕ್ಕಿಂತಲೂ ವೆಚ್ಚವು ಅಧಿಕವಾಗಿಯೇ ಇದ್ದಿರಬೇಕು. ಗಂಡ ಸತ್ತವಳಾದ 

ಕುವರಬಾಯಿಯ ಆಚರಣವನ್ನು ನೋಡಿ ನೀವು ಹೀಗೆ ಊಹಿಸುವಿರಾದರೆ, 

ಠಾಕೂರಸಿಂಗನು ಜೀವಂತನಿರುವಾಗ ನೀವು ಅವಳ ನಡಾವಳಿಯನ್ನು ಕಂಡಿ 

ದ್ದರೆ ನಿಮ್ಮ ಅಭಿಪ್ರಾಯವು ಏನಾಗುತ್ತಿತ್ತೋ ನೋಡಿಕೊಳ್ಳಿರಿ. ಸದ್ಯಕ್ಕೆ 

ಈ ಮಾತು ಸಾಕು. ಇದರ ಸಂದರ್ಭವನ್ನು ನಾನು ನಿನಗೆ ಒಂದೆರಡು 

ದಿವಸಗಳಲ್ಲಿಯ ಹೇಳುವೆನು." 


ಹೀಗೆ ಮಾತಾಡುತ್ತೆ ನಾವು ಕುವರಬಾಯಿಯ ಮನೆಗೆ ಬಂದೆವು. ಅಲ್ಲಿ 

ರಾಸಬಿಹಾರಿಯ ಕೃಷ್ಣಭುಜಂಗನೂ ನಮ್ಮ ಮಾರ್ಗಪ್ರತೀಕ್ಷೆ ಮಾಡುತ್ತಲೇ 

ಕುಳಿತಿದ್ದರು, 


" ಓ! ಸರಲಾಕ್ಷರಾಯರೆ, ಬನ್ನಿರಿ, ಎಲ್ಲೆಲ್ಲಿ ತಿರುಗಾಡಿ ಬಂದಿರಿ? 

ಈ ಪ್ರಕರಣದ ಸಂಬಂಧವಾಗಿ ಮತ್ತೇನಾದರೂ ಸಂಗತಿಗಳನ್ನು ಕಂಡು 

ಕೊಂಡಿರೋ ? ” ಎಂದು ಕೃಷ್ಣ ಭುಜಂಗನು ಕೇಳಿದನು. 


" ಹೇಳಿಕೊಳ್ಳುವಂಥ ಸಂಗತಿಗಳೇನು ಕ೦ಡುಬರಲಿಲ್ಲ ?” ಎಂದು 

ಹುಲಿಮೀಸೆಯು ಮುಗುಳುನಗೆ ನಕ್ಕು ಹೇಳಿದನು. 


" ಉಪಾಯವಿಲ್ಲ ಹುಲಿವಿಾಸೆಯವರೆ. ನಾಳಿನ ಶರ್ಯತ್ತಿನಲ್ಲಿ ನಮ್ಮ 

ಬೆಳ್ಳೀ ಚಿಕ್ಕೆಯ ಚಮತ್ಕಾರವಾದ ಚಾಪಲ್ಯವನ್ನು ಕಂಡು ಕೌತುಕಬಡುವದ 

ಕ್ಕಾಗಿ ಅನೇಕ ಸ್ಥಳಗಳಿಂದ ಅಸಂಖ್ಯಾತರಾದ ಜನರು ಬರತಕ್ಕವರು. ಆ 

ನನ್ನ ಅಶ್ವರತ್ನವು ಸಮಯಕ್ಕೆ ಸಿಕ್ಕದಿರುವದರಿಂದ ಅಷ್ಟೆಲ್ಲ ಜನರು ನಿರಾಶೆ 

ಯನ್ನು ಹೊಂದಬೇಕಾಗುವದು. ಆದ ಕಾರಣ ಬೆಳ್ಳೀ ಚಿಕ್ಕೆಯು ಶರ್ಯ 

ತ್ತಿತಿಗೆ ಬರುವದಿಲ್ಲವೆಂದು ನಾನು ಇಂದೆಯೇ ಪ್ರಕಟಿಸಿಬಿಡುವೆನು'' ಎಂದು 

ಸುಭೇದಾರನು ಉತ್ತಾಹರಹಿತನಾಗಿ ನುಡಿದನು. 

 

" ಹಾಗೆ ಮಾತ್ರ ಮಾಡಬೇಡಿರಿ, ಬೆಳ್ಳೀ ಚಿಕ್ಕೆಯು ಶರ್ಯತ್ತಿನ 

ದಿನ ಒಳ್ಳೇ ಸ್ಫೂರ್ತಿಯಿಂದ ಓಡಿ ವಿಜಯಿಯಾಗುವದೆಂದು ನಾನು ಎದೆತಟ್ಟಿ್ಟ 

ಹೇಳುವೆನು ” ಎಂದು ಹುಲಿಮೀಸೆಯು ಹಾಗೆ ನಟಿಸಿ ಹೇಳಿದನು. 


" ನನ್ನ ಕುದುರೆಯು ಮತ್ತೆ ಹುಟ್ಟಿ ಬರಬೇಕಾಗಿಲ್ಲವಲ್ಲ! ಏನು ಹೇಳು 

ವಿರಿ ರಾಯರೆ ?” 


( ಸತ್ತದ್ದೇ ನಿಜವಾದರೆ ಬೆಳ್ಳೀ ಚಿಕ್ಕೆಯು ಹುಟ್ಟಯಾದರೂ ಬರು 

ವದು. ಬದುಕಿದ್ದರಂತೂ ಬಂದೇ ಬರುವದು, ಹೇಗೆ ಬಂದರೇನು ನಿಮ್ಮ 

ಕುದುರೆಯೇ ನಾಳಿನ ಶರತ್ತನ್ನು ಗೆದ್ದರಾಯಿತು.” 


" ಅಂದರೆ ? ” 


"ಅ೦ದರಿಲ್ಲ, ಬಿಟ್ಟಿಲ್ಲ. ನಾನು ಹೇಳುವದು ನಿಜವು. ಹೇಗೆಂಬದನ್ನು 

ಮಾತ್ರ ಕೇಳಬೇಡಿರಿ,'' 


ಕುವರಬಾಯಿಯು ಚಹ ಉಪಹಾಶಗಳನ್ನು ತರಿಸಿ ನಮ್ಮೆಲ್ಲರಿಗೆ ತೆಗೆದು 

ಕೊಳ್ಳ ಹೇಳಿದಳು, ಆದಾದ ಬಳಿಕ ನಾವೆಲ್ಲರೂ ರಥದಲ್ಲಿ ಕುಳಿತು ಸುಭೇ 

ರರ ಮನೆಗೆ ಬಂದೆವು. ಬಂದ ಕೂಡಲೆ ಹುಲಿಮೀಸೆಯು ಗಂಟು ಕಟ್ಟಿಸಿ 

ಕೊಂಡು ರಾಜಧಾನಿಗೆ ಹೊರಡಲು ಸಿದ್ಧನಾಗಿ ನಿಂತುಕೊಂಡನು, ಭೋಜನ 

ತೀರಿಸಿಕೊಂಡು ಹೋಗಿರೆಂದು ಸುಭೇದಾರನು ಹೇಳಿಕೊಂಡರೂ ಕೇಳಲಿಲ್ಲ. 

ರೈಲಿನ ಸಮಯವೇ ಆಗಿತ್ತಾದ್ದರಿಂದ ಭೋಜನಕ್ಕೆ ಅವಕಾಶವಿರಲಿಲ್ಲ. 


" ಬರುತ್ತೇನೆ ಸುಭೇದಾರ. ನಾಳಿನ ಶರ್ಯತ್ತಿನ ದಿವಸ ನಾನಿಲ್ಲಿಗೆ 

ನಿಶ್ಚಯವಾಗಿ ಬರುವೆನು, ಬೆಳ್ಳೀ ಚಿಕ್ಕೆಯ ಹೆಸರು ಬಹಳ ಹೇಳುತ್ತಾರೆ. 

ಆದರ ಓಡಾಟವನ್ನು ನೋಡುವ ಕುತೂಹಲವು ನನಗಾಗಿದೆ ” ಎಂದು ಹೇಳಿ 

ದವನೇ ಹುಲಿಮೀಸೆಯು ರಥದಲ್ಲಿ ಕುಳಿತನು. ಬಸವನ ಹಿಂದೆ ಬಾಲ 

ಎಂಬಂತೆ ನಾನೂ ಅವನೊಡನೆ ನಡೆದೆನು. 

* * *

ವಾತಾಸೀಪುರದ ಗುಡ್ಡದ ಓರೆಯಲ್ಲಿರುವ ಬಯಲಿನಲ್ಲಿ ಗಾಲಿಯ 

ಅಂಚಿನಂತೆ ವರ್ತುಲಾಕಾರವಾಗಿ ಒಂದು ಬೀದಿಯನ್ನು ಮಾಡಿದ್ದರು. ಆ 

ಬೀದಿಯ ಸುತ್ತಲೂ ಕಣಗಟ್ಟಿ ಜನಜಾತ್ರೆ ನೆರೆದಿತ್ತು. ಬೀದಿಯ ಒಳ 

ಮಗ್ಗಲಿಗಿರುವ ಮಂಡಲಾಕಾರವುಳ್ಳ ಪ್ರದೇಶದ ಮಧ್ಯಭಾಗದಲ್ಲಿ ನಾಲ್ಕಾರು 

ಭವ್ಯವಾದ ತಂಬುಗಳನ್ನು ಹೊಡೆದಿದ್ದರು. ಗರ್ಭ ಶ್ರೀಮಂತರಾದ ನರನಾರಿ 

ಯರು ಮನದುಬಿನಿಂದ ತಂಬುಗಳ ಸುತ್ತಲೂ ಎಡೆಯಾಡುತ್ತಿದ್ದರು. 

ಬೀದಿಯ ಒಂದು ಮಗ್ಗಲಿಗೆ ಜನಸಂದಟ್ಟಣಿಯಿದ್ದರೆ ಈಚೆಯ ಮಗ್ಗಲು 

ಕಟ್ಟಿರುವ ಮಂಚಿಕೆಗಳ ಮೇಲೆ ಧನ ಸಂಪನ್ನರಾದ ಜನರು ಕುಳಿತುಕೊಂಡು 

ಇನ್ನು ಮೇಲೆ ನಡೆಯತಕ್ಕ ಶರ್ಯತ್ತುಗಳನ್ನು ನೋಡತಕ್ಕವರು, ನೆಲದ 

ಮೇಲೆ ನಿಲ್ಲಲೊಲ್ಲದೆ ಸ್ಫೂರ್ತಿಯಿಂದ ಅಂತರಗಾಲಿಟ್ಟು ಕುಣಿಯುವ ಕುದುರೆ 

ಗಳನ್ನೇರಿಕೊಂಡು ರಾವುತರು ಶರ್ಯತ್ತಿನ ಸಮಯನಿರೀಕ್ಷಣವನ್ನು ಬಹು ಕಷ್ಟ 

ದೊಂದಿಗೆ ಮಾಡುತ್ತಿದ್ದರು. ( ಅದೋ ನೋಡಿರಿ 'ಗಾಳಿಯ ಮಿಂಡ, ' 

'ಆದು ಕಡಿದ ಬಂಟ ”, ' ಎಂಥ ಉತ್ತಮವಾದ ತೇಜಿಯಿದು ? ', 'ಬೆಳ್ಳೀ 

ಚಿಕ್ಕೆ ಎಲ್ಲಿಯೂ ಕಾಣುವದಿಲ್ಲ' ” ಹೀಗೆ ನೆರೆದವರಲ್ಲಿ ಅನೇಕರು ಅನೇಕವಾದ 

ಉದ್ಗಾರಗಳನ್ನು ತೆಗೆದರು. ಢಣ್ ! ಢಣ್ ! ಥಟ್' ! ಢಣ್ ! ” ಎಂದು 

ಝಾಗಟಿಯು ನಾಲ್ಕು ಬಾರಿಸಿತು, ಸಂಗಚಲೆ ಕುದುರೆಗಳೆಲ್ಲ ಬೀದಿಗೆ ಬಂದು 

ಸಾಲು ಹಿಡಿದು ಓಡಲುದ್ಯುಕ್ತವಾಗಿ ನಿಂತುಕೊಂಡವು. ವಾತಾಪಿಪುರದ 

ದೇಸಾಯರ ದಳವಾಯಿಯ ಫೋಂ ಫೋ೦ ಫೋಂ ಎಂದು ಕಹಳೆಯನ್ನೂ 

ದಿದ ಕೂಡಲೆ ಕುದುರೆಗೆ ಬೆಲ್ಲ ಆರ್ಭಟೆಯಿಂದ ಹೇಂಕರಿಸಿ ಧಿಂ ಬಿಟ್ಟು ಓಡಿದವು. 

" ಗಾಳಿಯ ಮಿಂಡನೇ ಅದು, ಆದ ಎಲ್ಲಕ್ಕೂ ಮುಂದೆ ಬರುವದು ” ಎಂದು. 

ಕೆಲವರು ಉದ್ಘಾರ ತೆಗೆದರು. "ಅಕೋ ನೊಡಿರಿ, 'ವೀರಕೇಸರಿ'ಯು 

ಎಲ್ಲ ಕುದುರೆಗಳನ್ನು ಹಿಂದೆ ಹಾಕಿ ಸುಂಟರಗಾಳಿಯ ವೇಗದಿಂದ ನಡೆದಿರು 

ವದು" ಎಂದು ಅನೆಕರು ಒಂದೇ ದನಿಗೊಟ್ಟು ಕೂಗಿದರು. "ಕಡಿದ 

ಬಂಟನ ಬಂಟನ ಕಡಿತವೇ ಯಾರಿಗೂ ತಿಳಿದಿಲ್ಲ. ಈಗ ನೋಡಿರಿ ಅದೇ ಹೇಗೆ 

ಚಮತ್ಕಾರವಾಗಿ ಎಲ್ಲ ಕುದುರೆಗಳನ್ನು ಹಿಂದೆ ಹಾಕುವದು" ಎಂದು 

ಅನೇಕರು ತಮಗೆ ಪರಿಚಿತವಾದ ಕುದುರೆಯ ಗುಣವನ್ನು ಕಂಡವರಾಗಿ 

ತರ್ಕಿಸಿದರು. 


* ಅಬ್ಬಬ್ಬೆ! ಆ ಕರಿಗುದರಿಯನ್ನು ನೋಡಿರಿ, ಅದೇನು ಕುದುರೆಯೋ 

ವೇತಾಳವೋ ಕಾಣೆವು. ತಾಯಿಗಂಡನದು ಮೊದಲು ಮೊದಲು ಹಿಂದುಕ್ಕುಳಿ 

ದಂತೆ ಮಾಡಿ ಈಗ ಹೇಗೆ ಮಿಲಚಿನ ಚಪಲತೆಯಿಂದ ಓಡಿತು. ಅಷ್ಟು ಜನರ 

ಮಾತೆಲ್ಲ ಸುಳ್ಳು; ಈ ಕರಿಗುದಧಿಯೇ ವಿಜಯಿಯಾಗುವದು; ಸಂದೇಹವಿಲ್ಲ* 

ಎಂದು ನೆರೆದ ಪರಸಿ ಪರಸಿಯ ಉದ್ದಾಗ ತೆಗೆಯಿತು. 


ಸಂಗಡಲೆ ಅನೇಕರು ತಮ್ಮ ಕಣ್ಣಿಗೆ ದೃಷ್ಟಿ ಯಂತ್ರಗಳನ್ನಿಕ್ಕಿಕೊಂಡು 

ನೋಡಿದರು. ಅನೇಕರು ಹುಬ್ಬುಗೈಯಿಕ್ಕಿ ನೋಡಿದರು. ಚಪಲರಾದ 

ಹುಡುಗರು ಮರಗಳನ್ನೆ ರಿಕೊಂಡು ನೋಡಲಾರಂಭಿಸಿದರು. ಅವರು ನೋಡ . 

ನೋಡುವಷ್ಟರಲ್ಲಿಯೇ ಆ ಕೃಷ್ಣ ವರ್ಣದ ತುರಂಗನವು ಎಲ್ಲ ಕುದುರೆಗಳನ್ನು 

ಹತ್ತಿಪ್ಪತ್ತು ಮಾರು ಹಿಂದೆಗೆದು ಫಾಜೆಯ ಕಟ್ಟೆಗೆ ಬಂದು ನಿಂತಿತು. 

ಪ್ರಮುಖರೆಲ್ಲರೂ ಜಯಘೋಷವನ್ನು ಮಾಡಿ ಕುದುರೆಯಿಲ್ಲಿಗೆ ಬಂದು 

ಒಳ್ಳೇ ಅಕ್ಕರತೆಯಿಂದ ಅದರ ಕೆಡಕು ಚಪ್ಪರಿಸಿದರು. 


" ಓ ! ಹುಲಿಮಿರಾಸೆಯವರೆ, ಯಾವಾಗ ಬಂದಿರಿ ? ಎಲ್ಲಿದೆ ನನ್ನ 

ಬೆಳ್ಳೀ ಚಿಕ್ಕೆ? ಅದೇ ಇಂದಿನ ದಿವಸ ವಿಜಯಿಯಾಗುವದೆಂದು ಎದೆಗೆ ಕಣಕ

ವನ್ನು ಹಚ್ಚಿ ಕೊಂಡು ಹೇಳಿದ್ದಿರಿ ! ” ಎಂದು ರಾಸಬಿಹಾರಿಯು ಸರಲಾಕ್ಷನ 

ಉಪಮರ್ದನವನ್ನು ಮಾಡಿ ನುಡಿದನು. 


ಸರಳಾಕ್ಷನು ಒಳಿತಾಗಿ ನಕ್ಕು : ಸುಬೇದಾರರೆ, ನಿಮ್ಮ ಕುದುರೆಯ 

ಗುರುತು ನಿಮಗಿಲ್ಲದಾಯಿತೆ ? ಈ ಬಂಟನಾರು ? ” ಎಂದು ಆ ಕರಿಗುದುರಿ 

ಯನ್ನು ತೋರಿಸಿ ಕೇಳಿದನು. 

 

"ಇದು ನನ್ನ ಕುದುರೆಯೆ ? ಇದು ಬೆಳ್ಳೀಚಿಕ್ಕೆಯೆ? ಇದರ ಹಣೆಯ

 ಮೇಲೆ ಒಂದಾದರೂ ಬಿಳಿಕೂದಲಿಲ್ಲ. ನನ್ನ ಕುದುರೆಯ ಹಣೆಯ ಮೇಲೆ 

 ಚಂದ್ರಮನಷ್ಟು ಢಾಳವಾದ ಹಣೆಚಿಕ್ಕೆಯಿದೆ ! ” ಎಂದು ಸುಭೇದಾರನು 

 ಶಂಕಾಯುತನಾಗಿ ನುಡಿದನು. 

 

" ಹೀಗೆ ಆ ಕುದುರೆಯನ್ನು ತೆಗೆದುಕೊಂಡು ಒಟ್ಟಿಗೆ ಬನ್ನಿರಿ” 

ಎಂದು ಹೇಳಿ ಹುಲಿಮೀಸೆಯಃ ಸುಭೇದಾರನನ್ನೂ ಕುದುರೆಯನ್ನೂ ಕಟ್ಟಿ 

ಕೊಂಡು ತಂಬುವಿಗೆ ಬಂದನು. ಅಲ್ಲಿ ಆ ಮಹಾಶೋಧಕನು ಟರ್ಪೆಂಟ 

ಎಣ್ಣೆ ಯಿಂದ ಕುದುರೆಯ ಹಣೆ ತೊಳಿಸಲಾಗಿ ನಿಜವಾಗಿಯೇ ಚಂದ್ರಮನಂತೆ 

ಢಾಳವಾದ ಹಣೆಚಿಕ್ಕೆಯು ಸುವ್ಯಕ್ತವಾಗಿ ತೋರಿತು. ಸುಭೇದಾರನು 

ಸಂತೋಷದ ಭರದಲ್ಲಿ ಕುದುರೆಯ ಕೊರಳಿಗೆ ಬಿದ್ದು ಅದನ್ನು 

ಅಪ್ಪಿಕೊಂಡನು. 


“ ಸರಲಾಕ್ಷರಾವ್, ಇಂದು ನನಗೆ ಸಿಕ್ಕ ತಕ್ಕ ಬಹುಮಾನದ ಹಣವೆಲ್ಲ 

ನಿಮ್ಮದೆ. ಹಾಗೆ ನಗಬೇಡಿರಿ, ನಾನು ಸುಳ್ಳಾಡಿದವನಲ್ಲ. ಇಕೋ ಈ 

ಪಂಡಿತ ವಾತಾತ್ಮಜರೇ ನನ್ನ ವಚನಕ್ಕೆ ಸಾಕ್ಷಿಗಳಾಗಿದ್ದಾರೆ. '' 


" ಆಗಲಿ, ನಿಮ್ಮ ಮನಸ್ಸಿಗೆ ತಿಳಿದಂತೆ ಮಾಡಿರಿ. ಇಷ್ಟೇ ಹಣ 

ಬೇಕೆಂದು ನಾನು ಆಗ್ರಹ ತೊಡುವದಿಲ್ಲ. ” ಎಂದು ಹುಲಿಮೂಾಸೆಯು 

ಹೇಳಿದನು. 


" ಚತುರರಾದ ನನ್ನ ಮಹಾರಾಯರೆ, ನಿಮ್ಮ ಕೃಪೆಯಿಂದ ನನ್ನ 

ಅಶ್ವರತ್ನವನ್ನು ನಾನು ಮತ್ತೆ ಕಂಡೆನು. ಆದರೆ ನಮ್ಮ ಠಾಕೂರಸಿಂಗನ 

ಕೊಲೆ ಮಾಡಿದವನ ಶೋಧವು ಮಾತ್ರ ಇನ್ನೂ ಆಗಲಿಲ್ಲವಾಗಿ ತೋರುತ್ತದೆ” 

ಎಂದು ಸುಭೇದಾರನು ಕೇಳಿದನು.  


" ಶೋಧವಾಗಿದೆ, ಆದರೆ ಆ ಶೋಧದಿಂದ ನಿಮಗೆ ಸಾಕಷ್ಟು 

ಸಮಾಧಾನವಾಗಲಿಕ್ಕಿಲ್ಲ. ?” 


" ಆಗಲಿ ಆಗದಿರಲಿ, ಠಾಕೂರಸಿಂಗನನ್ನು ಕೊಂದವನಾರು, ಹೇಳಿ 

ಬಿಡಿರಿ. " 


" ಕೊಂದವನು ನನ್ನ ಬಳಿಯಲ್ಲಿಯೇ ನಿಂತಿರುವನು '' ಎಂದು 

ಹುಲಿಮಾಸೆಯು ಸುಭೇದಾರನ ಮುಖವನ್ನು ನೋಡಿ ನುಡಿದನು. 


"ಏನೆಂದಿರಿ ? ಇದ್ದ ಮೂರು ಮಂದಿಯಲ್ಲಿ ಕದ್ದವರಾರ೦ತೆ ! ನೀವು 

ನಗೆಯಾಡುವದಿಲ್ಲವಷ್ಟೆ?”ಎಂದು ಸುಭೇದಾರನು ಕಿಂಚಿತ್‌ ಕ್ರದ್ಧನಾಗಿಯೂ 

ಕಿಂಚಿತ್ ಕುತೂಹಲವುಳ್ಳವನಾಗಿಯ ಕೇಳಿದನು. 


" ನಾನು ನಗೆಯಾಡುವದಿಲ್ಲ. ಠಾಕೂರಸಿಂಗನನ್ನು ಕೊಂದವನು 

ನನ್ನಿಂದ ಒಂದು ಮೊಳದ ಆ೦ತರದಲ್ಲಿಯೇ ನಿಂತಿರುವನು. ” 


" ಹುಲಿಮೀಸೆ, ನೀವು ನನ್ನನ್ನು ಉದ್ದೇಶಿಸಿ ಹೀಗೆ ಮಾತಾಡಿದ್ದಾದರೆ 

ನಿಮ್ಮ ನಾಲಿಗೆ ಜೋಕೆ, ಕಂಡಿರಾ !'' 


ಹುಲಿಮೀಸೆಯು ಸುಭೇದಾರನಿಗೆ ಪ್ರಣಾಮಮಾಡಿ ನಗುತ್ತೆ “ಕ್ಷಮಿಸಿರಿ 

ಸುಭೇದಾರರೆ, ನಾನು ನಿಮ್ಮನ್ನು ದ್ವೇಶಿಸಿ ಹಾಗೆ ಮಾತಾಡಲಿಲ್ಲ. ಠಾಕೂರ 

ಸಿಂಗನ ಕೊಲೆಮಾಡಿದವನು ಈ ನಮ್ಮ ಬೆಳ್ಳಿಚಿಕ್ಕಪ್ಪನು ” ಎಂದು ಬೆಳ್ಳೀ 

ಚಿಕ್ಕೆಯ ಜುಟ್ಟವನ್ನು ಆದರದಿಂದ ತೀಡುತ್ತೆ ನುಡಿದನು. 


" ಹೇಗೆ ? ಹೇಗೆ ? ಹೇಳಿರಿ. " 


ಮೊದಲು ಮನೆಗೆ ಹೋಗೋಣ, ಅಲ್ಲಿ ವಿಶ್ರಬ್ಧವಾಗಿ ಕುಳಿತು 

ಕೊಂಡು ಎಲ್ಲ ಸಮಾಚಾರವನ್ನೂ ಹೇಳುವೆನು. ಕೊತವಾಲ ಕೃಷ್ಟ ಭುಜಂಗ 

ರನ್ನೂ ಹೀಗೆ ಕರೆಯಿರಿ ” ಎಂದು ಹುಲಿವಿಯು ಹೇಳಿದನು. 

 

ನಾವೆಲ್ಲರೂ ರಥದಲ್ಲಿ ಕುಳಿತುಕೊಂಡು ಸುಭೇದಾರರ ಮನೆಗೆ ಹೋದೆವು. 

ಚಹಾಪಾನವಾದ ನಂತರ ಹುಲಿಮೀಸೆಯು ತಾನು ಮಾಡಿದ ಶೋಧದ 

ಸಮಾಚಾರವನ್ನು ಹೇಳಲಾರಂಭಿಸಿದನು. 


“ಸುಭೇದಾರ, ನಿಮ್ಮ ಠಾಕೂರಸಿಂಗನು ಅಸಂಭಾವಿತನಾದ ಮನುಷ್ಯ

 ನಾಗಿದ್ದನು. ಹೆಂಡತಿಯ ದಂಭಾಚಾರಕ್ಕಾಗಿ ಅವನು ಸಾಲಗೊಯ್ಕನಾದನು. 

 ಅವನಿಗಿರುವ ಸಂಬಳ ಐವತ್ತು. ತಿಂಗಳಾ ಅವನ ವೆಚ್ಚವು ನೂರು 

 ನೂರಿಪ್ಪತ್ತಾಗಿರಬಹುದು. ತನಗಾದ ಸಾಲ ತೀರಿಸುವುದಕ್ಕಾಗಿ ಆ ನೀಚನು 

ಅನ್ನ ದಾತರಾದ ನಿಮ್ಮ ಮೇಲೆ ದ್ರೋಹ ಮಾಡಹೋಗಿ ಜೀವಕ್ಕೆ ಎರವಾದನು.”


"ಹೇಗೆ ದ್ರೋಹವನ್ನು ಮಾಡಲೆಸಗಿದನು?" ಎಂದು ಕೃಷ್ಣ 

ಭುಜಂಗನು ಚಕಿತನಾಗಿ ಕೇಳಿದನು.


* ( ಬೆಳ್ಳಿಚಿಕ್ಕೆಯು ಶರ್ಯತ್ತಿನಲ್ಲಿ ಮುಂದೆ ಬರಬಾರದೆಂದು ಜಾಫರ - 

ಸೇಟನೇ ಮೊದಲಾದ ಅನೇಕ ಜನರು ಇಚ್ಚಿಸುವದು ವಿಹಿತವೇ. ಅದಕ್ಕಾಗಿ 

ಏನಾದರೂ ಮಾಡಿ ಆ ಕುದುರೆಯನ್ನು ಕುಂಟುಗೆಡವಿದರೆ ಶಾಕೂರಸಿಂಗನಿಗೆ 

ಸಾವಿರಾರು ರೂಪಾಯಿ ಕೊಡುವೆವೆಂದು ಜಾಫರನೇ ಮೊದಲಾದ ಜನರು 

ಸೂಚಿಸಿದ ಮೇರೆಗೆ ಠಾಕೂರನು ಆ ದುಷ್ಕೃತ್ಯವನ್ನು ಮಾಡಲಿಕ್ಕೆ 

ಸಿದ್ದನಾದನು. 


" ಸರರಾತ್ರಿಯ ಮೇಲೆ ಅವನು ಲಾಯಕ್ಕೆ ಬಂದು ತನ್ನ ಬಳಿಯಲ್ಲಿರುವ 

ದೊಂದು ಬೀಗದ ಕೈಯಿಂದ ಬಾಗಿಲನ್ನು ತೆರೆದನು, ಒಳಗಿನ ನಾಯಿಗಳು 

ಪರಿಚಯದವನಾದ ಆ ಶಿಕ್ಷಕನನ್ನು ಕಂಡು ಬೊಗಳಲಿಲ್ಲ. ಠಾಕೂರಸಿಂಗನೇ 

ಗಂಗಾದೀನನ ಭೋಜನದಲ್ಲಿ ಅಫೀಮು ಕಲಿಸಿ ಮೊದಲೇ ಕಳಿಸಿದ್ದನಾದ್ದ 

ರಿಂದ ಅದನ್ನು ತಿಂದು ಗಂಗಾದೀನನು ಎಚ್ಚರದಪ್ಪಿ ಮಲಗಿಕೊಂಡು 

ಬಿಟ್ಟಿದ್ದನು. .


" ಠಾಕೂರನು ಕುದುರೆಯನ್ನು ಆ ತಗ್ಗಿಗೆ ಒಯ್ದು ತನ್ನ ಉದ್ದಂಗಿ 

ಯನ್ನು ಗಿಡಕ್ಕೆ ತೂಗಹಾಕಿ ಕಡ್ಡಿಯನ್ನು ಕೊರೆದು ಮೇಣ ಬತ್ತಿಗೆ ದೀಪ 

ವನ್ನು ಅಂಟಿಸಿದನು. ಸುಟ್ಟ ಕಡ್ಡಿಯ ಚೂರನ್ನೂ ಮೇಣಬತ್ತಿಯ ರಸವನ್ನೂ 

ನೀವೆಲ್ಲರೂ ಆ ಸ್ಥಳದಲ್ಲಿ ಕಂಡಿರುವಿರಷ್ಟೆ ?


" ಬಳಿಕ ಆ ನೀಚನು ಚಾಕುವಿನಂಥ ತೀಕ್ಷವಾದ ಶಸ್ತ್ರದಿಂದ 

ಬೆಳ್ಳಿಚಿಕ್ಕೆಯ ಒಳದೆಡೆಯೊಳಗಿವೆ ನರಕ್ಕೆ ನೋವು ಮಾಡಹೋದನು. 

ಕುದುರೆಯ ಬೆದರಿ ಹಾರಾಡಿತು, ಠಾಕೂರನು ತಾನು ತೆಗೆದುಕೊಂಡು 

ಬಂದ ಗದ್ದೇಮಡಿಯ ವಸ್ತ್ರದಿಂದ ಕುದುರೆಯ ಹಿಂಗಾಲಿಗೆ ದಳಿಕಟ್ಟ ಹೊಗೆ 

ಲಾಗಿ ಬೆಳ್ಳಿ ಚಿಕ್ಕೆ ಮತ್ತಷ್ಟು ಬೆದರಿ ಸರಿದು ನಿಂತು ಒಳಿತಾಗಿ ಒದೆಯಿತು. 

ನಾಲುಳ್ಳ ಹಿಂಗಾಲಿನ ಖುರದ ಭರದ ಸೆಟ್ಟಿನಿಂದ ಠಾಕೂರಸಿಂಗನ ಹಣೆ 

ಹೊಡೆದು ಚಿಪ್ಪಾಡೆಯಾಗಿ ಅವನಲ್ಲಿಯೇ ಗತಪ್ರಾಣನಾಗಿ ಬಿದ್ದು ಬಿಟ್ಟನು.”


" ಮಹಮ್ಮದ ಇಬ್ರಾಹಿಮನ ಗದ್ದೆವಡಿಯ ವಸ್ತ್ರವು ಠಾಕೂರನಿಗೆ 

ಹೇಗೆ ಸಿಕ್ಕಿತು ? ” ಎಂದು ಕೃಷ್ಣ ಭುಜಂಗನು ಕೇಳಿದನು.

 

- " ಅದನ್ನು ತಾನು ಮಾರ್ಗದಲ್ಲಿ ಕಳಕೊಂಡೆನೆಂದು ಮಹಮ್ಮದನು 

ಹೇಳಲಿಲ್ಲವೆ ? ಅಕಸ್ಮಾತ್ತಾಗಿ ಸಿಕ್ಕ ವಸ್ತ್ರವು ತನ್ನ ಉಪಯೋಗಕ್ಕೆ ಬರುವ 

ದೆಂದು ತಿಳಿದು ಠಾಕೂರನು ಅದನ್ನು ಎತ್ತಿ ಕೊಂಡನು, ” 


" ಹಾಗಾದರೆ ಮಹಮದ ಇಬ್ರಾಹಿಮನು ನಿರ್ದೋಷಿಯು ? ” ಎಂದು 

ಕೃಷ್ಟ ಭುಜಂಗನು ಕೇಳಿದನು. 


"  ಸಂದೇಹವೇಕೆ ? ನೀವು ಆ ನಿರಪರಾಧಿಯನ್ನು ನಾಳೆಯೇ ಬಿಟ್ಟು 

ಬಿಡಿರಿ" 

==============================================


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ