ಶನಿವಾರ, ಅಕ್ಟೋಬರ್ 24, 2020

ಸುಮತಿ ಮದನಕುಮಾರರ ಚರಿತ್ರೆ-ಎಂ.ಎಸ್‌.ಪುಟ್ಟಣ್ಣ

https://archive.org/details/dli.osmania.3162

=================================


-----------------------------------------

ಸುಮತಿ ಮದನಕುಮಾರರ ಚರಿತೆ


ಈ ಲೇಖಕರ ಕೃತಿಗಳು:

೧. ಮಾಡಿದ್ದುಣ್ಣೋ ಮಹಾರಾಯ

೨. ನೀತಿಚಿಂತಾಮಣಿ (ಮೂರು ಭಾಗಗಳು)

೩. ಕುಣಿಗಲ್‌ ರಾಮಾಶಾಸ್ತ್ರಿಗಳ ಚರಿತ್ರೆ

೪, ಮುಸುಗ ತೆಗೆಯೇ ಮಾಯಾಂಗನೆ 

=========================================================

ಎಂ. ಎಸ್‌. ಪುಟ್ಟಣ್ಣ


ಸುಮತಿ ಮದನಕುಮಾರರ

ಚರಿತ್ರೆ

‘ SANDFORD AND MERTON’ ಎಂಬ ಕೃತಿಯ


ಮಾದರಿಯಲ್ಲಿ ಬರೆದದ್ದು

ಪ್ರಕಾಶಕರು


ಕಾವ್ಯಾಲಯ

ಮೈಸೂರು

ಮೊದಲನೆಯ ಮುದ್ರಣ ; ೧೯೧೩

ನಾಲ್ಕನೆಯ ಮುದ್ರಣ

ಕಾನ್ಶಾಲಯದಿಂದ ಮೊದಲನೆಯ ಮುದಣ ;: ೧೯೪೯

ಎಲಾ ಹಕ್ಕುಗಳನೂ, ಕಾದಿರಿಸಿದೆ


ಪ್ರಕಾಶಕರು ;

ಕೂಡಲಿ ಚಿದಂಬರಂ, ಕಾವ್ಯಾಲಯ, ಮೈಸೂರು,

ಮುದ್ರಣಕಾರರು ;

ಜಿ, ಎಚ್‌, ರಾಮರಾವ್  ಬಿJಜಿ.ಎಸ್‌ಸಿ,

ಮೈಸೂರು ಪ್ರಿಂಟಂಗ್‌ ಮತ್ತು ಸಬ್ಲಿಸಿಂಗ್‌ ಹೌಸ್‌ ಮೈಸೂರು

PREFACE

THREE stories of great educational importance are well

known to the literary world, One of them is ‘‘Hithopadesa”’

‘by Vishnusarma. The second is ‘‘Adventures of Telemachus’’

by the French writer Fenelon. The third is ‘‘ The History

of Sandford and Merton” by Thomas Day. It is not neces-

sary to discuss the respective merits of the three great works.

Certain facts and tradition supported by the internal evi-

‘dence in the works themselves, go to show that the first two

works were intended for ‘the training of princes. These

works coupled with the personal influence of these writers

themselves, probably fulfilled the object for which they

were intended, But ‘ Hithopadesa’ or its expanded form

called ‘ Panchatantra’ is all fable, where dumb animals are

invested with the power of speech. ‘ Adventures of Tele-

machus’ which is classed by some writers of the eighteenth

century among epic poems, has the drawback of the inter-

vention of supernatural agency, ‘‘ Why do not birds and

jackals speak now ?”’ ‘‘ Why do not Gods come to the earth

now ?’’ are questions guilelessly and spontaneously asked by

the little ones and are quite within the experience of men

familiarly conversant with young minds during their plastic

period. The third work viz., Day’s ‘ History of Sandford

and Merton’ was written in the eighteenth century. It is:

free from the above drawbacks. It narrates in an impressive

manner only what transpires in our every day life and imper-

ceptibly educates young minds to higher ideals.

It is this last work that I took for my model in writing


the present treatise. Though the entire story is essentially

il

Hindu and Karnatic in its nature, I adapted some of them

‘to my requirements. The book is intended for the benefit

of all boys and girls. As the ‘History of Sandford and

Merton’ which is my ideal, deserves to be .in the hands of

all teachers and pupils, all parents and children, it is my

prayer that this book, written after the model of that immo-

rtal work, may not be thrown away without a calm perusal

by all those intercsted in the cause of education. It is.

written in the simplest colloquial style so that it may be

within the comprehension of all readers.

BANGALORE, \

January 13, 1913.             M.S. P.

This Edition has been revised and brought out to meet

a heavy demand up-to-date.

Bangalore,

June, 19, 1922               M.S.P

-------------------------------------------

ಕೃತಜ್ಞ ತೆ

ಶ್ರೀಮಾನ್‌ ಡಿ.ವಿ. ಗುಂಡಪ್ಪನವರ ನೆರವಿನಿಂದ ಶ್ರೀಮಾನ್‌ ಎಂ. ಪಿ,

ಸೋಮಶೇಖರರಾವ್ ಮತ್ತು ಸಹೋದರರ ಅನುಮತಿ ಪಡೆದು ಈ ಕೃತಿಯನ್ನು

ಪ್ರಕಟಸಲಾಗಿದೆ, ಶ್ರೀಮಾನ್‌ ಡಿ ಎಲ್‌, ನರಸಿಂಹಾಚಾರ್ಯರು ಇದರ ಮುದ್ರಣ

ದಲ್ಲಿ ಹಲವು ಉಪಯುಕ್ತ ಸಲಹೆಗಳನ್ನು ಕೊಟ್ಟು ಉಪಕಾರ ಮಾಡಿದ್ದಾರೆ, ಇವ

ರೆಲ್ಲರಿಗೂ ನನ್ನ ವಂದನೆಗಳು, ಈ ಪುಸ್ತಕವನ್ನು ವಿಶೇಷ ಶ್ರಮವಹಿಸಿ ಶೀಘ್ರ

ವಾಗಿಯೂ ಅಂದವಾಗಿಯೂ ಮುದ್ರಿಸಿಕೊಟ್ಟ ಮೈಸೂರು ಪ್ರಿಂಟಿಂಗ್‌ ಮತ್ತು

ಪಬ್ಲಿಷಿಂಗ್‌ ಹೌಸಿನ ಮಾಲೀಕರಾದ ಶ್ರೀಮಾನ್‌ ಜಿ. ಎಚ್‌, ರಾಮರಾಯರ

ಸಹಕಾರವನ್ನು ನೆನೆಯೆದಿರಲಾರೆ,

ಕೂಡಲಿ ಚಿದಂಬರಂ. 

-----------------------------------------

ಪೀಠಿಕೆ


ಸಣ್ಣ ಹುಡುಗರಿಗೆ ಕ್ರಮವಾಗಿ ವಿದ್ಯಾಭ್ಯಾಸ ಮಾಡಿಸುವುದು

ಬಹು ಶ್ರಮ, ಇದರ ಕಷ್ಟವು ಈ ವಿಷಯದಲ್ಲಿ ಪರಿಶ್ರಮಪಟ್ಟಿರತಕ್ಕ

ವಿದ್ವಾಂಸರಿಗೆ ಗೊತ್ತಾಗಿದೆ. " ಒಂದು ಮಠಾ ಇಟ್ಟು ಕೊಂಡು ಹುಡುಗ

ರಿಗೆ ಓದಿಸುವುದಕ್ಕೂ ಇವನಿಗೆ ಯೋಗ್ಯತೆ ಇಲ್ಲ; ಯಾವ ಕೆಲಸಕ್ಕೆ

ತಾನೇ ಈ ಮನುಷ್ಯ ಬಂದಾನು? ' ಎಂಬದಾಗಿ ಜನರು ಆಡಿಕೊಳ್ಳು

ವರು. ಹುಡುಗರಿಗೆ ಓದಿಸುವುದು ಕೇವಲ ನಿಕೃಷ್ಟವಾದ ವೃತ್ತಿ

ಎಂತಲ್ಕೂ ಇನ್ನು ಅದಕ್ಕಿಂತಲೂ ಹೀನವಾದ ವೃತ್ತಿ ಯಾವುದೂ ಇಲ್ಲ

ವೆಂತಲೂ ಈ ವೃತ್ತಿಯಿಂದ ಜೀವರ ಮಾಡತಕ್ಕವನು ಕೇವಲ ಅಧಮ

ನೆಂತಲೂ, ಅರಿಯದ ಅಲ್ಪರು ಹೇಳಿಕೊಳ್ಳುವರು. ಆದರೆ ಉಪಾಧ್ಯಾ

ಯರ ವಿಷಯವನ್ನು ಏನು ವರ್ಣಿಸಲಿ? ಕೈಯಲ್ಲಿ ಒಂದು ಬೆತ್ತವನ್ನು

ಹಿಡಿದು ಹತ್ತುಜನ ಹುಡುಗರನ್ನು ಕೂರಿಸಿಕೊಂಡು ಯಾವ ವಿಧಿ

ಯನ್ನೂ ಅನುಸರಿಸದೆ ಮನಸ್ಸಿಗೆ ಬಂದುದನ್ನು ಹೇಳುತಾ ಸಿಕ್ಕಿದ ಹುಡು

ಗರನ್ನು ಬೆತ್ತದಿಂದ ಸೆಳೆಯುತಾ ಇದ್ದರೆ, ವಿದ್ಯಾಭ್ಯಾಸ ಮಾಡಿಸಿದಂತಾ

ಗುವುದೆಂದು ತಿಳಿದಿರತಕ್ಕವರು ಅನೇಕರುಂಟು. ಇದೂ ಸಹಿತ ಅರಿ

ಯದ ಅಲ್ಪರ ಕೆಲಸವೇ ಸರಿ. ಬಾಲಕರ ಬುದ್ಧಿ ಯಾವ ಸ್ಥಿತಿಯಲ್ಲಿ

ದೆಯೋ ಅದನ್ನು ಮೊದಲು ತಿಳಿದುಕೊಂಡು, ತನ್ನ ಬುದ್ಧಿಯನ್ನು

ಬಾಲಕರ ಬುದ್ಧಿಯ ಸ್ಥಿತಿಗೆ ಇಳಿಸಿಕೊಂಡ್ಕು ಹೇಳಿಕೊಟ್ಟದ್ದನ್ನು

ಬಾಲಕರು ತಿಳಿದುಕೊಳ್ಳುವುದಕ್ಕೆ ಪ್ರತಿಬಂಧಕಗಳೇನಿವೆ ಎಂಬುದನ್ನು

ಪರೀಕ್ಷಿಸಿ, ಅಂಥಾ ಪ್ರತಿಬಂಧಕಗಳನ್ನು ನಿವಾರಣಮಾಡಿ, ತನ್ನ

ಮನಸ್ಸಿನಲ್ಲಿರುವುದನ್ನು ಬಾಲಕನು ತಿಳಿದುಕೊಳ್ಳು ವುದಕ್ಕೆ ಬೆಳಕನ್ನು

ತೋರಿಸುವ ಪುಣ್ಯಾತ್ಮರು ಈ ಲೋಕದಲ್ಲಿ ಬಹಳ ಕಡಮೆ. ಬಾಲ್ಯ 

ದಲ್ಲಿ ಆದ ಶಿಕ್ಷಾಕ್ರಮದ ರೀತಿಯು ಒಳ್ಳೇದಾಗಲಿ ಕೆಟ್ಟದಾಗಲಿ ಅದು

iv------------------------------------------


ಹುಡುಗರ ಮನಸ್ಸಿಗೆ ಅಂಟದರೆ ಬಾಲಕರ ಜನ್ಮನಿರುವವರೆಗೂ, ಅದೇ:

ಕ್ರಮವನ್ನೇ ಬುದ್ಧಿ ಅನುಸರಿಸುವುದು.


ವಿದ್ಯಾಭ್ಯಾಸ ಮಾಡುವ ರೀತಿಯನ್ನು ವಿಧಿವಾಕ್ಯಾಗಿ ಹೇಳದೆ,

ಒಳ್ಳೇಮಾರ್ಗವನ್ನು ಹುಡುಗರು ಗ್ರಹಿಸುವಹಾಗೆ ಕಥಾರೂಪವಾಗಿ

ದೊಡ್ಡ ವಿಷಯಗಳನ್ನು ತಿಳಿಸುವುದಕ್ಕೆ ನಮ್ಮ 'ಹಿತೋಷದೇಶ' ಅಥವಾ

' ಪಂಚತಂತ್ರ' ವನ್ನು ಬಿಟ್ಟರೆ ಬೇರೇ ಯಾವ ಗ್ರಂಥವೂ ನಮ್ಮಲ್ಲಿಲ್ಲ.

ಆದರೆ ' ಪಂಚತಂತ್ರ'ದಲ್ಲಿ ಮಾತನಾಡಲು ಶಕ್ತಿ ಇಲ್ಲದ ಜಂತುಗಳು

ಮಾತನಾಡುವಹಾಗೆ ತೋರಿಸಿರುವ ಕಾರಣ, ಲೋಕದಲ್ಲಿಲ್ಲದ ಸುಳ್ಳನ್ನು

ಹೇಳುವುದರ ಮೂಲಕ ನಿಶ್ಚಯವನ್ನು ಬೋಧಿಸಿದಂತಾಗುವುದು.

ಇದು ಆಧುನಿಕರ ಮತವಲ್ಲ. ಈ ದೋಷವಿಲ್ಲದೆ ಇಂಗ್ಲೀಷಿನಲ್ಲಿ ಉದ್ದಾ

ಮವಾಗಿ ರಚಿಸಲ್ಪಟ್ಟಿರುವ ಒಂದು ಗ್ರಂಥವನ್ನು ಮಾದರಿಯಾಗಿ ಇಟ್ಟು

ಕೊಂಡು ಈ ಪುಸ್ತಕವನ್ನು ನಾನು ಬರೆದೆನು. ಈ ಪುಸ್ತಕವನ್ನು

ಹೆಂಣು ಗಂಡು ಆದಿಯಾಗಿ ಆಬಾಲವೃದ್ಧರೂ ಅವರ ಜನ್ಮದಲ್ಲಿ ಒಂದು

ಸಾರಿಯಾದರೂ ಓದಿರಬೇಕೆಂದು ನಾನು ಹೇಳುತೇನೆ. ಹೀಗೆ ಹೇಳುವ

ನನ್ನ ಮಾತು ಆತ್ಮಸ್ತುತಿ ಎಂದು ಭಾವಿಸುವವರು ತಮ್ಮ ಅಭಿಪ್ರಾಯ

ವನ್ನು ಒಳಹೊಕ್ಕು ಸ್ವಲ್ಪ ದೀರ್ಘವಾಗಿ ಯೋಚಿಸಿದರೆ, ನಾನು

ಮಾದರಿಯಾಗಿ ಇಟ್ಟುಕೊಂಡ ಗ್ರಂಥವನ್ನು ಬರೆದ ಪುಣ್ಯಾತ್ಮನ

ಸ್ತೋತ್ರವೇ ಸರಿ ಎಂದು ತೋರದೇ ಇರಲಾರದು,

ಬೆಂಗಳೂರು ಎಂ. ಎಸ್‌, ಪುಟ್ಟಣ್ಣ

ವಾಚಕರ ಪ್ರಯೋಜನಾರ್ಥವಾಗಿ ಮೂರನೇಸಾರಿ ಛಾಪಿಸಿದೆ.


ಬೆಂಗಳೂರು                 |

ದುಂದುಭಿ ಸಂ! ಜ್ಯೇಷ್ಠ  ಬ ||     ಎಂ. ಎಸ್‌, ಪುಟ್ಟಣ್ಣ 

೧೦ ಸೋಮವಾರ          | 

=============================================

ಸುಮತಿ ಮದನ ಕುಮಾರರ ಚರಿತ್ರೆ

....

೧ನೆ ಅಧ್ಯಾಯ

ಪೀಠಿಕೆ


ಶಾಲಿವಾಹನ ಶಕ ೧೪೩೦-೪೦ ರಲ್ಲಿ ಕರ್ಣಾಟಕ ರಾಜ್ಯದ ಮಲೆ

ನಾಡುಸೀಮೆಯಲ್ಲಿ ಒಬ್ಬಾನೊಬ್ಬ ಚಿಕ್ಕ ಪಾಳಯಗಾರನಿದ್ದನು. ಆತನ

ಹೆಸರು ಅನಂಗರಾಜ. ಆ ಕಾಲದಲ್ಲಿ ಹತ್ತು ಇಪ್ಪತ್ತು ಹಳ್ಳಿಗಳನ್ನು

ಕಟ್ಟಿಕೊಂಡು ಆ ಚಿಕ್ಕ ರಾಜ್ಯದಲ್ಲಿ ಆಳುತ್ತಿದ್ದ ಪಾಳಯಗಾರರನ್ನು

ಅಲ್ಲಿನ ಸಾಧಾರಣ ಬಡಜನರೆಲ್ಲರೂ ದೊರೆಗಳು ದೊರೆಗಳು ಎಂದು

ಕರೆಯುವ ಪದ್ಧತಿ ಇತ್ತು. ಅಲ್ಲಿನ ಬಡ ಆರಂಬಗಾರರು ಬೆಳೆದ ಕಾಳು

ಕಡ್ಡಿಯೆಲ್ಲಾ ಈ ದೊರೆಗಳ ಉಗ್ರಾಣಕ್ಕೆ ಬಂದುಬೀಳುತಿತ್ತು. ಅವರು

ಸಂಪಾದಿಸಿದ ಪುಟ್ಟ ಗಂಟೆಲ್ಲಾ ದೊರೆಯ ಬೊಕ್ಕಸದಲ್ಲಿ ಗಂಟಾಗು

ತಿತ್ತು. ಹೆಣ್ಣು ಗಂಡು ಆದಿಯಾಗಿ ಇವರ ಅರಮನೆಯ ಬಿಟ್ಟೀ

ಬೇಗಾರಿ ಚಾಕರಿಯನ್ನು ಮಾಡಿ ವಾಡಿ ಮುಪ್ಪಾಗುತಾ ಇದ್ದರು.

ದೊರೆಯ ಆಜ್ಞೆಯನ್ನು ಮೀರಿದವರಿಗೆ ಚಿತ್ರಾಜ್ಞೆಯಾಗುತಿತ್ತು.

ಮುಟ್ಟಬೇಡವೆಂದ ವಸ್ತುವನ್ನು ಮುಟ್ಟಿದವರಿಗೆ ಕೈ ಕತ್ತರಿಸುವುದು

ದೊರೆಯನ್ನು ಕತ್ತೆತ್ತಿ ನೋಡಿದವರಿಗೆ ಕಣ್ಣ ಕೀಳಿಸುವುದು, ದೊರೆಯ

ಉದ್ಯಾನವನದ ಹೂವನ್ನು ಕಿತ್ತು ಮೂಸಿನೋಡಿದವರಿಗೆ ಮೂಗ

ಕುಯಿಸುವುದು, ದೊರೆಯನ್ನು ದೂಷಿಸಿ ಮಾತನಾಡಿದವರಿಗೆ ನಾಲಗೆ

ಯನ್ನು ಸೀಳಿಸುವುದು, ದೊರೆಯ ತೋಟದ ಹಣ್ಣನ್ನು ತಿಂದವರಿಗೆ

ಹಲ್ಲ ಮುರಿಸುವುದು ಇವೇ ಮೊದಲಾದ ದಂಡನೆಗಳು ನಿತ್ಯವೂ ಗೊತ್ತಿಲ್ಲ

ದಷ್ಟು ನಡೆಯುತಿದ್ದವು. ಆದರೆ ಯಾವ ಶಿಕ್ಷೆಯನ್ನು ವಿಧಿಸಬೇಕಾದರೂ,

ದೊರೆಯ ವಿಷಯದಲ್ಲಿ ನಿಜವಾದ ಅಥವಾ ಸುಳ್ಳಾದ ಯಾವುದಾದರೂ

ಒಂದು ಅಪರಾಧವನ್ನು ನಡಸಿದವನಿಗೇ ಹೊರತು, ಉಳಿದ ಯಾವ 

------------------------------------------------------------

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಕೆಟ್ಟ ಕೆಲಸವನ್ನು ಯಾರು ಮಾಡಿದರೂ ಏನೂ ಆಗುತಿರಲಿಲ್ಲ. ರಾಜಾ

ಜ್ಞೆಗೆ ಎಲ್ಲರೂ ಗಡಗಡನೆ ನಡುಗುತಾ ಯಾವಕಾಲಕ್ಕೆ ಏನೋ ಎಂದು

ಹಸಾದಕ್ಕೆ ಹಮ್ಮೈಸಿಕೊಂಡಿದ್ದರು. ಹೀಗೆ ಇದ್ದಾಗ್ಯೂ ದೊರೇಮನೆ

ಯಲ್ಲಿ ಚಾಕರಿ ಮಾಡುತಿದ್ದವರಿಗೆಲ್ಲಾ ಅರಮನೆಯಲ್ಲಿಯೇ ಮೃಷ್ಟಾನ್ನ

ಭೋಜನವಾಗುತಿತ್ತು. ಈ ಬಡಜನರಿಗೂ ಇವರ ಕುಟುಂಬದವರಿಗೂ

ತಲೆಗೆ ಒಂದು ಬಟ್ಟೇಮೇರೆಗೆ ನವರಾತ್ರೆಗೂ ಯುಗಾದಿಗೂ ಇನಾಮು

ದೊರೆಯುತಿತ್ತು. ಇಷ್ಟೇ ಅಲ್ಲ; ಅರಮನೇ ಚಾಕರರಲ್ಲದವರು ಅನೇ

ಕರು ಸರ್ಕಾರದ ಬಟಾಯಿ ಭೂಮಿಗಳನ್ನು ವ್ಯವಸಾಯಮಾಡುತಾ,

ಇರ್ವಾರ ಬಂದ ದವಸದಲ್ಲಿ ರಾಜಪಾಲನ್ನು ಕೊಟ್ಟು ಕುಳಪಾಲನ್ನು

ತಾವು ತೆಗೆದುಕೊಂಡು ಸುಖವಾಗಿ ಜೀವಿಸಿಕೊಳ್ಳುತಿದ್ದರು. ಅರಮನೆ

ಯಲ್ಲಿ ಯಾರಾದರೂ ಮಕ್ಕಳು ಹುಟ್ಟಿದರೆ, ಮದುವೆಯಾದರೆ, ಕುಳಕ್ಕೆ

ಮೂರು ಹಣವನ್ನು ತೆರಬೇಕಾಗಿತ್ತು. ಹೀಗಿದ್ದಾಗ್ಯೂ, ರಾಜಿಕವಾದ

ದಂಡಿನ ಹಾವಳಿಯೂ, ದೈನಿಕವಾದ ಕ್ಷಾಮವೂ, ಕೆಟ್ಟ ರೋಗಗಳೂ

ಬಂದಾಗಮಾತ್ರ ಅರಸು ತನ್ನ ಪ್ರಜೆಗಳನ್ನು ತನ್ನ ಮಕ್ಕಳ ಕಂಡಹಾಗೆ

ಪೋಷಿಸುತಿದ್ದನು. 


ಹೀಗಿರುತಿರಲಾಗಿ ಈ ಅನಂಗರಾಜನೆಂಬ ಪಾಳಯಗಾರನಿಗೆ

ಒಬ್ಬನೇ ಒಬ್ಬ ಮಗ ಇದ್ದನು. ಈ ಮಗನ ಮೇಲೆ ತಂದೆಗೆ ಅಧಿಕ

ವಾಗಿ ಪ್ರೀತಿ ಇತ್ತು : ಮಗನಿಗೆ ಚೆನ್ನಾಗಿ ವಿದ್ಯವನ್ನು ಕಲಿಸಬೇಕೆಂಬ

ಕುತೂಹಲವು ಆ ಪ್ರೀತಿಗಿಂತಲೂ ಹೆಚ್ಚಾಗಿ ಇತ್ತು. ಇದಕ್ಕಾಗಿ ತನ್ನ

ನೆರೇಪಾಳಯಪಟ್ಟಿನ ದೊರೆಯಾಗಿ ತನಗೆ ಸ್ನೇಹಿತನಾಗಿರುವ ಕುಮಾರ

ನಾಯಕನ ರಾಜಧಾನಿಯಾದ ಬಿದರೆ ಎಂಬ ಪಟ್ಟಣದಲ್ಲಿ ತಾನು

ಹೋಗಿ ಕೆಲವು ವರುಷಗಳು ವಾಸವಾಗಿದ್ದು, ಅಲ್ಲಿನ ಮಹಾ ವಿದ್ವಾಂಸ

ರಲ್ಲಿಯೂ ಕ್ರಮವರಿತು ನಡಸುತಿರುವ ಪಾಠಶಾಲೆಗಳಲ್ಲಿಯೂ, ತನ್ನ

ಪುತ್ರನಿಗೆ ವಿದ್ಯಾವ್ಯಾಸಂಗವನ್ನ್ನು ಮಾಡಿಸಬೇಕೆಂದು ಅನಂಗರಾಯನು

ನಿಶ್ಚೈಸಿದನು. ಅದೇ ಪ್ರಕಾರ ಈ ದೊರೆಯು ತನ್ನ ಪಟ್ಟಣವಾದ

ಬನವಾಸಿಯನ್ನು ಬಿಟ್ಟು ಬಿದರೆಗೆ ಮಗನನ್ನು ಕರೆತಂದು ತನ್ನ

ಯೋಗ್ಯತೆಗೆ ತಕ್ಕಂಥಾ ಒಂದು ಮನೆಯನ್ನು ಮಾಡಿ ಹುಡುಗನನ್ನು 

---------------------------------------------

೧] ಸುಮತಿ ಮದನ ಕುಮಾರರ ಚರಿತ್ರೆ 3


ಅಲ್ಲೇ ಇಟ್ಟು ಅವನ ಉಪಚಾರಕ್ಕೆ ಬೇಕಾದಷ್ಟು ಜನ ಚಾರರನ್ನು

ನೇಮಿಸಿ ಹೊರಟುಹೋದನು. ಈ ರಾಜಕುಮಾರನ ತಾಯಿಯು

ಮಗುವಿನ ಸಮಾಪದಲ್ಲಿಯೇ ಇರುತಿದ್ದಳು. ತಂದೆಯೂ ಆಗಾಗ್ಯೆ

ಬಂದು ನೋಡಿಕೊಂಡು ಹೋಗುತಿದ್ದನು.


ಮದನಕುಮಾರನು ಬನವಾಸಿಯನ್ನು ಬಿಟ್ಟು ಬಿದರೆಗೆ ಬರು

ವಾಗ್ಗೆ ಅವನಿಗೆ ೬ ವರುಷ. ಈ ಬಾಲಕನು ಸ್ವಭಾವವಾಗಿ ಒಳ್ಳೇ

ಮಾರ್ಗವನ್ನು ಅನುಸರಿಸತಕ್ಕವನಾಗಿದ್ದನು. ಆದರೆ ಅವನ ಅದೃಷ್ಟಕ್ಕೆ,

ಮೊದಲಿನಿಂದಲೂ ಅತಿಯಾಗಿ ಮುದ್ದು ಮಾಡಿ ಮಾಡಿ ಹುಡುಗನ

ಅಭ್ಯಾಸವನ್ನು ಕೆಡಿಸಿದ್ದರು. ಬನವಾಸಿಯಲ್ಲಿ ಈತ ಇದ್ದಾಗ್ಗೆ ಅನೇಕ

ಆಳುಗಳು ಇವನ ಅಂಗರಕ್ಷಕರಾಗಿ ಕೈಕಟ್ಟಿಕೊಂಡು ಇರುತಿದ್ದರು.

ಈ ಆಳುಗಳಲ್ಲಾ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕಾಗಿತ್ತೇ

ಹೊರತು, ಏನೇ ಆಗಲಿ ಯಾರೂ ಈ ಹುಡುಗನಿಗೆ ಎದುರುಮಾತನಾಡ

ಕೂಡದಾಗಿತ್ತು, ಇವನು ಓಡಿಯಾಡುವಾಗಕೂಡ ಇವನ ಸಂಗಡ

ಯಾವಾಗಲೂ ಇಬ್ಬರು ಓಲೆಕಾರರು ಸೊಂಟಕಟ್ಟ ಕೊಂಡು ಓಡಿ

ಯಾಡುತಲೇ ಇದ್ದರು, ಅವರಲ್ಲಿ ಒಬ್ಬನು ಬಿಸಿಲಿಗೆ ಮರೆಯಾಗಿ ರಾಜ

ಪುತ್ರನಿಗೆ ದೊಡ್ಡ ಛತ್ರಿಯನ್ನು ಬಿಚ್ಚಿ ಹಿಡಿದುಕೊಂಡಿರುತಲೇ ಇದ್ದನು;

ಹುಡುಗನು ಓಡಿಯಾಡಿ ಆಯಾಸಪಟ್ಟಾಗ ಅವನನ್ನು ಕಂಕುಳಿಗೆ

ಎತ್ತಿಕೊಳ್ಳುವುದಕ್ಕೆ ಮತ್ತೊಬ್ಬ ಆಳು ಸಿದ್ಧನಾಗಿದ್ದನು; ಈ ಅರಸು

ಮಗನಿಗೆ ರತ್ನಖಚಿತವಾದ ನಿಲುದೊಡಿಗೆಯನ್ನು ಇಟ್ಟು ದಿವ್ಯವಾದ

ಕಿಂಕಾಬಿನ ಉಡುಪನ್ನು ಹಾಕುತಿದ್ದರು. ಈತನಿಗೆ ಸುನೇರೀ ಕೆಲಸ

ಮಾಡಿದ ಒಂದು ಪಲ್ಲಕ್ಕಿ ಇತ್ತು. ಬೇಕಾದ ಶೃಂಗಾರವನ್ನು ಮಾಡಿ

ಕೊಂಡು ಈ ಪಲ್ಲಕ್ಕಿಯಲ್ಲಿ ಕೂತು, ಸುಂದರನಾದ ಈ ಹುಡುಗನು ತನ್ನ

ಸಂಗಡ ಆಡುವ ಓರಗೇ ಹುಡುಗರ ಮನೆಗೆ ಹೋಗುತಿದ್ದನು.

ತಾಯಿಗೆ ಇವನಲ್ಲಿ ವಿಪರೀತವಾಗಿ ಪ್ರೀತಿಯಿತ್ತು, ಯಾವ ಪದಾರ್ಥ

ಬೇಕೆಂದು ಮಗ ಅತ್ತಾಗ್ಲೂ ಕೂಡಲೆ ಅವನಿಗೆ ಅದನ್ನು ತರಿಸಿಕೊಡು

ತಿದ್ದಳು, “ ಅಮ್ಮೈಯ, ನಾನು ಓದಿದರೆ ನನಗೆ ತಲೆನೋವು ಬರುತ್ತೆ"

ಎಂದು ಆ ಪುತ್ರರತ್ನವು ಆಗಾಗ್ಗೆ ಹೇಳುತಿದ್ದಕಾರಣ, ತಾಯಿಯಾದ 

--------------------------------------------------

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ


ಮೀನಾಂಬಕಿದೇವಿಯು ಓದುವುದಕ್ಕೆ ಮಗುವನ್ನು ಅರೆಗಳಿಗೆಯೂ

ಬಿಡುತಿರಲಿಲ್ಲ.


ಇದರ ಫಲವೇನಾಯಿತು ಎಂದರೆ: ಮದನಕುಮಾರೆನಿಗೆ  ಕೇಳಿ 

ದ್ದನ್ನೆಲ್ಲಾ ಕೊಟ್ಟಾಗ್ಯೂ, ಅವನಿಗೆ ಸಿಡುಕೂ ಅಸಮಾಧಾನವೂ ತಪ್ಪ 

ಲಿಲ್ಲ. ಈ ಹುಡುಗನು ಒಂದಾನೊಂದು ವೇಳೆ ತನಗೆ ಮನಸ್ಸು ಬಂದ

ಷ್ಟು ಮಿಠಾಯಿಯನ್ನು ಅಸಹ್ಯ ಹಿಡಿಯುವ ತನಕ ತಿಂದುಬಿಡುತಿದ್ದ.

ಇದರಿಂದ ಮೈಗೆ ಉಂಟಾಗುತಿದ್ದ ಅಲಸಿಕೆಯನ್ನು ಹೋಗಲಾಡಿಸಲು.

ಭೇದೀ ಔಷಧವನ್ನು ಕೊಟ್ಟರೆ ಕಞ್, ತಾನು ಒಲ್ಲೆ ನೆಂದು

ಒರಟುತನಮಾಡುತಿದ್ದ. ಮತ್ತೊಂದುವೇಳೆ ಇಲ್ಲದ್ದನ್ನೆಲ್ಲಾ ಕೊಡು 

ಎಂದು ರಚ್ಚೆ ಹಿಡಿಯುತಿದ್ದ; ಇವನ ಮಾತಿಗೆ ಎದುರುಮಾತು ಆಡಿ

ದ್ಹನ್ನು ಕಂಡ ಅಭ್ಯಾಸವೇ ಇವನಿಗೆ ಇರಲಿಲ್ಲವಾದಕಾರಣ, ಹಾಗೆ

ಹೋರಿಯಾಡತಕ್ಕ ಕಾಲಗಳಲ್ಲಿ ಈ ಒರಟ ಹುಡುಗನನ್ನು ಸಮಾ

ಧಾನ ಮಾಡುವುದು ಬಹು ಕಷ್ಟವಾಗಿತ್ತು. ಮನೆಗೆ ಹೊರಗಿನವರು

ಯಾರಾದರೂ ಊಟಕ್ಕೆ ಬಂದಾಗ, ಮನೆಯಲ್ಲಿ ಮಾಡಿದ್ದನ್ನೆಲ್ಲಾ

ಮೊದಲೇ ತನಗೆ ಹಾಕಿ ಉಣ್ಣಿಸಬೇಕು; ಇಲ್ಲದಿದ್ದರೆ ವಿಪರೀತವಾಗಿ

ಗದ್ದಲಮಾಡಿ ಎಲ್ಲರನ್ನೂ ತೊಂದರೆ ಮಾಡುತಿದ್ದನು. ದೊರೆಯು

ಬಂದ ಅತಿಥಿಗಳ ಸಂಗಡ ಊಟಕ್ಕೆ ಕೂತಾಗ ರಾಜಪುತ್ರನು ಅವರ

ಎಡೆಯನ್ನೆಲ್ಲಾ ಎಳೆದು ಬಡಿಸಿದ್ದ ಪದಾರ್ಥವನ್ನು ಮನೆಯಲ್ಲೆಲ್ಲಾ

ಚೆಲ್ಲಾಡಿ, ಬಟ್ಟಿ ಲುಗಳನ್ನು ಉರುಟಿ ಎಲೆಯನ್ನು ಹರಿಯುತಿದ್ದನು.

ಇಂಥಾ ಚೇಷ್ಟೆಗಳಿಂದ ಇತರರಿಗೆ ಬೇಜಾರು ಆಗುತಿತ್ತು. ಮತ್ತು

ಇಲ್ಲದ ಚೇಷ್ಟೆ ಮಾಡುತಿರುವುದು, ಭಾರವಾಸಿಯಾದ ಸಾಮಾನುಗಳನ್ನು

ತನ್ನ ತಲೆಮೇಲೆ ಕೆಡವಿಕೊಳ್ಳುವವುದು ಇಂಥಾ ಚೇಷ್ಟೆಗಳೆಲ್ಲಾ ಇವ 

ನಿಗೆ ಸಾಧಾರಣವಾಗಿದ್ದವು.. ಒಂದಾನೊಂದು ಸಮಯದಲ್ಲಿ ಮರಳಿ

ಗೆಜ್ಜೆಗುದಿ ಹಾಯುತಿದ್ದ ಒಂದು ದೊಡ್ಡೆ ಹಂಡೇನೀರನ್ನು ತನ್ನ ಮೇಲೆ

ಉರುಳಿಸಿಕೊಂಡು ಸತ್ತು ಹೋಗುತ್ತಿದದನು. ಇದಲ್ಲದೆ ಅತಿ ಲಾಲನೆ

ಯಿಂದ ಸಾಕಿದ್ದರಾದಕಾರಣ, ಆಗಾಗ್ಗೆ ಇವನಿಗೆ ಏನಾದರೂ ಒಂದು

ಜಾಡ್ಯ ಬರುತಲೇ ಇತ್ತು, ಸ್ವಲ್ಪ ಗಾಳಿ ಬೀಸಿದರೆ ಆಗಲೇ ನೆಗಡಿ 

------------------------------------------------

1] ಸುಮತಿ ಮದನ ಕುಮಾರರ ಚರಿತ್ರೆ ೫ 


ಯಾಗುತಿತ್ತು, ಸ್ವಲ್ಪ ಬಿಸಿಲಿಗೆ ಹೋದರೆ ಆಗಲೇ ಜ್ವರ ಬರುತಿತ್ತು;

ಹೀಗೆ ತೀರ್ಥ ತೆಗೆದುಕೊಂಡರೆ ಸೀತ, ಮಂಗಳಾರ್ತಿ ತೆಗೆದುಕೊಂಡರೆ

ಉಷ್ಣ ಎನ್ನುವ ಮಟ್ಟಿಗೆ ಈ ಹುಡುಗನ ದೇಹಪ್ರಕೃತಿಯು ನಾಜೂ

ಕಾಗಿತ್ತು. ಹೊರಗೆ ಓಡಾಡಿ ಇತರ ಮಕ್ಕಳಹಾಗೆ ಕುಣಿದಾಡಿಕೊಂಡು

ಇರುವುದಕ್ಕೆ ಬದಲಾಗಿ, “ ಒಂದು ಕಡೆ ಸುಮ್ಮನೆ ಮಕ್ಕಳು ಕೂತಿರ

ಬೇಕು ; ಇಲ್ಲದಿದ್ದರೆ ಬಟ್ಟೆಯೆಲ್ಲಾ ಮಾಸಿಹೋಗುವುದು ” ಎಂದು

ಹೇಳಿಕೊಡುತಿದ್ದರು, “ ಮಕ್ಕಳು ಹೊರಕ್ಕೆ ಹೋಗಬಾರದು, ಮರೆ

ಯಲ್ಲಿಯೇ ಇರಬೇಕು : ಇಲ್ಲದಿದ್ದರೆ ಮುಖವೆಲ್ಲಾ ಕಪ್ಪಾಗುವುದು” ಎಂದು 

ಹೇಳಿಕೊಡುತಿದ್ದರು. ಈ ಸುಕುಮಾರನು ಬಿದರೆಗೆ ಸೇರು

ವಾಗ್ಯೆ ಈ ವಿಧವಾದ ವಿದ್ಯಾಭ್ಯಾಸದ ಫಲದಿಂದ ಓದುವುದಕ್ಕೂ ಬರೆಯು

ವುದಕ್ಕೂ ಬಾರದೆ, ತನ್ನ ಅವಯವಗಳನ್ನು ಈ ಕಡೆ ಆ ಕಡೆ ಸರಾಗ

ವಾಗಿ ಅಲುಗಿಸಲಾರದೆ, ಸ್ವಲ್ಪ ಆಯಾಸವನ್ನೂ ಸಹಿಸಲಾರದೆ, ಹೀಗೆ

ಕೈಲಾಗದ ಮುಕ್ಕನಾಗಿದ್ದನು. ಇವನ ಅಹಂಕಾರಕ್ಕೂ ಕೋಪಕ್ಕೂ

ದುಡುಕಿಗೂ ಒರಟುತನಕ್ಕೂ ಮಿತಿಯೇ ಇರಲಿಲ್ಲ.


ಬಿದರೆಯಲ್ಲಿ ಮದನಕುಮಾರನ ಉಪ್ಪರಿಗೇ ಮನೆಯ ಸಮೀಪ 

ದಲ್ಲಿ, ಸೂರ್ಯಭಟ್ಟನೆಂಬ ಒಬ್ಬ ಬ್ರಾಹ್ಮಣನಿದ್ದನು. ಈತನಿಗೆ ಸುಮತಿ

ಯೆಂಬ ಒಬ್ಬನೇ ಒಬ್ಬ ಮಗನಿದ್ದನು. ವ್ಯವಸಾಯದಿಂದ ಜೀವಿಸು

ತಿದ್ದ ಈ ಬ್ರಾಹ್ಮಣನ ಮಗನು ಹೊಲಗಳಲ್ಲಿಯೂ ತೋಟಗಳಲ್ಲಿಯೂ

ಓಡಿಯಾಡುತ್ತಿದ್ದನು. ಈ ಸುಮತಿಯು ಹೊಲ ಉಳುತಿರುವಾಗ ಆಳು

ಗಳ ಸಂಗಡಲೇ ಹೋಗುವುದೂ, ಬರುವುದೂ, ಕುರಿಯನ್ನೂ ದನವನ್ನೂ

ಹೊಲಕ್ಕೆ ಹೊಡೆದುಕೊಂಡು ಹೋಗುವುದೂ, ಹೀಗೆ ಮಾಡುತ್ತಿದ್ದದೂ

ಅಲ್ಲದೆ ಚಟುವಟಕೆಯುಳ್ಳವನಾಗಿಯೂ ಬಲಶಾಲಿಯಾಗಿಯೂ

ಗಟ್ಟಿ ರಾಸಾಗಿಯೂ, ತೇಜಸ್ವಿಯಾಗಿಯೂ ಇದ್ದನು. ಇವನು. ಮದನ

ಕುಮಾರನಷ್ಟು ಕೆಂಪಾಗಿಯೂ ಇರಲಿಲ್ಲ; ಅವನ ಹಾಗೆ ಅತಿ

ನಾಜೂಕಾದ ಅಂಗಗಳುಳ್ಳವನಾಗಿಯೂ ಇರಲಿಲ್ಲ. ಆದರೆ ಪ್ರಾಮಾಣಿ

ಕತೆಯೂ ನಿಷ್ಕಪಟ್ಯವೂ ಅವನ ಮುಖದಲ್ಲಿ ಚೆನ್ನಾಗಿ ತೋರುತಿ

ದ್ದವು. ಇದರಿಂದ ಅವನನನ್ನು ನೋಡಿದವರೆಲ್ಲರೂ ಅವನ ಮೇಲೆ 

--------------------------------------------

6 ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಏನೋ ಒಂದು ಅಭಿಮಾನವನ್ನು ಇಟ್ಟು ಕೊಂಡಿದ್ದರು. ಇವನಿಗೆ

ಯಾವಾಗಲೂ ಕೋಪ ಬರುತಿರಲಿಲ್ಲ. ಇವನು ಇತರರಿಗೆ ಉಪಕಾರ

ಮಾಡುವುದರಲ್ಲಿ ಅತ್ಯಂತವಾಗಿ ಸಂತೋಷ-ಪಡುತ್ತಿದ್ದನು. ಮಗು

ವಾದ ಈ ಸುಮತಿಯು ಊಟ ಮಾಡುತ್ತಿರುವಾಗ ಯಾರಾದರೂ

ಗೋಪಾಳದವರು “ ಕವಳ” ಎಂದು ಕೂಗಿದಕ್ಕೆ ತನ್ನ ಎಲೆಯಲ್ಲಿ

ಬಡಿಸಿದ್ದ ಆಹಾರದಲ್ಲಿ ಅರ್ಧವನ್ನು ಅವರಿಗೆ ಹಾಕಿಬಿಡುತ್ತಿದ್ದನು.

ಒಂದೊಂದುಸಾರಿ ಬಡಿಸಿದ್ದನ್ನೆಲ್ಲಾ ಅವರಿಗೆ ಹಾಕಿಬಿಡುತ್ತಿದ್ದನು.

ನೊಣಗಳನ್ನಾಗಲಿ, ಇರುವೆಗಳನ್ನಾಗಲಿ, ಇತರ ಹುಳುಗಳನ್ನಾಗಲಿ

ಚಿಕ್ಕ ಹುಡುಗರು ಹಿಡಿದು ಹಿಂಸಿಸಿ ಕೊಲ್ಲುತ್ತಿದ್ದಹಾಗೆ ಇವನು ಹಿಂಸಿಸಿ

ಕೊಲ್ಲುತ್ತಿರಲಿಲ್ಲ. ಆ ಬಡ ಜಂತುಗಳಿಗೂ ನಮ್ಮ ಹಾಗೆಯೇ

ಯಾತನೆಯಾಗುವುದು, ಆದರೆ ಹೇಳಿಕೊಳ್ಳುವುದಕ್ಕೆ ಬಾಯಿ ಮಾತ್ರ,

ಇಲ್ಲವೆಂದು ಸುಮತಿಯು ಚೆನ್ನಾಗಿ ತಿಳಿದುಕೊಂಡಿದ್ದನು. ಯಾವಾ

ಗಲೋ ಒಂದುಸಾರಿ ಮಾತ್ರ ಇವನು ಒಂದು ಮಿಡತೆಯನ್ನು ಹಿಡಿದು

ಅದರ ಕಾಲಿಗೆ ಸಣ್ಣ ದಾರವನ್ನು ಕಟ್ಟಿ ಗಿರ್ರೆಂದು ತಿರುಗಿಸುತ್ತಿದ್ದನು.

ಆದರೆ ಇದು ತಿಳಿವಳಿಕೆ ಸಾಲದ ದೋಷವೇ ಹೊರತು ಮತ್ತೇನೂ

ಅಲ್ಲ. ಕೂಡಲೇ ಇವನ ತಂದೆಯು ಬಂದು, “ ಅಪ್ಪಾ, ಆ ಪ್ರಾಣಿ

ಯನ್ನು ಯಾಕೆ ಹಿಂಸಿಸುತ್ತೀಯೆ? ಚೂರಿ ತೆಗೆದುಕೊಂಡು ನಾವು ಕೈ 

ಕುಯಿದುಕೊಂಡಾಗ ನಮಗೆ ಎಂಥಾ ಯಾತನೆಯಾಗುವುದೋ ಅದಕ್ಕೆ

ಈಗ ಅಂಥಾ ಯಾತನೆಯಾಗುತಿದೆ" ಎಂದು ಹೇಳಲು ಸುಮತಿಯು

ತಂದೆಯ ಮುಖವನ್ನು ನೋಡಿ ಕಣ್ಣಿನಲ್ಲಿ ನೀರನ್ನು ತಂದುಕೊಂಡು

ದಾರವನ್ನು ಬಿಚ್ಚಿ, ಆ ಮಿಡತೆಯನ್ನು ಮನೆಗೆ ತೆಗೆದುಕೊಂಡುಹೋಗಿ

ಅದಕ್ಕೆ ಹಸುರು ಸೊಪ್ಪುಗಳನ್ನು ಕುಯಿದು ತಂದು ಹಾಕಿ ಹದಿನೈದು

ದಿವಸ ಅದನ್ನು ತನ್ನಲ್ಲಿ ಇಟ್ಟುಕೊಂಡು ಉಪಚಾರ ಮಾಡಿದನು.

ಅದು ಸ್ವತಂತ್ರವಾಗಿ ಹಾರಾಡಬಹುದೆಂದು ತಿಳಿದು ಹೊರಕ್ಕೆ ಬಿಟ್ಟು

ಬಿಟ್ಟನು. ಆಗಿನಿಂದಲೂ ಸುಮತಿಯು ಹೊರಕ್ಕೆ ಹೊರಟರೆ ಪ್ರಾಣಿ

ಮಾತ್ರಕ್ಕೆ ಎಲ್ಲಿಯಾದರೂ ನೋಯಿಸಿಯೇನಲ್ಲಾ ಎಂದು ಅತಿ ಜಾಗರೂ

ಕತೆಯಿಂದ ಕಾಲನ್ನು ಇಡುತಾ ಹಕ್ಕಿಗಳಿಗೆ ಕಾಳನ್ನು ಹಾಕುತ್ತಾ 

-----------------------------------------

೧] ಸುಮತಿ ಮದನ ಕುಮಾರರ ಚರಿತ್ರೆ ೭ 


ದಾರಿತಪ್ಪಿ ಹೋಗುತಿದ್ದ ಹುಳುಗಳನ್ನು ಯಾರೂ ತುಳಿಯದ ಸ್ಥಳಕ್ಕೆ

ತೆಗೆದುಕೊಂಡು ಹೋಗಿ ಮೆಲ್ಲಗೆ ಬಿಡುತಾ ಇದ್ದನು. ಹಸುವನ್ನು

ಕಂಡಾಗ ಅದರ ಮೈಯನ್ನು ತಡವರಿಸುತಿದ್ದನು. ಕಂಡ ಕಡೆಯಲ್ಲಿ

ಗರಿಕೇಹುಲ್ಲನ್ನು ಕಿತ್ತು ಕರುಗಳ ಬಾಯಿಗೆ ಕೊಡುತ್ತಿದ್ದನು. ಯಾವ

ಹಸುರು ಸಿಕ್ಕಿದರೂ ಕಿತ್ತು ಮೇಕೆಗಳ ಮುಂದೆ ಹಾಕುತ್ತಿದ್ದನು. ಆದ್ದ

ರಿಂದ ಎಳೆಗರುಗಳು ಇವ ಎಲ್ಲಿ ಹೋದರೂ ಹಿಂದೆಯೇ ಹೋಗುತಿ

ದ್ದವು. ಎಂಥಾ ಅಸಹ್ಯವಾದ ಜಂತುವಾದರೂ ಅದನ್ನು ಬಾಧಿಸದೆ 

ನೋಡಿಕೊಳ್ಳುತ್ತಿದ್ದನು. ಜಾಡ, ಕಪ್ಪೆ, ಕಟ್ಟಿರುವೆ, ಕೆಂಜಗ ಮೊದ

ಲಾದವುಗಳಿಗೆ ಕೂಡ ಇವನ ದಯಾರಸದ ಫಲ ಇಲ್ಲದೇ ಇರಲಿಲ್ಲ.

" ನಾವು ಹೇಗೆ ಬಾಧೆ ಇಲ್ಲದೆ ಜೀವಿಸಿಕೊಂಡಿರಬೇಕೆಂದು ಇಷ್ಟ ಪಡು

ವೆವೊ ಹಾಗೆಯೇ ಎಲ್ಲಾ ಜಂತುಗಳೂ ಇಷ್ಟಪಡುವುವು . ಅವುಗಳನ್ನು

ಕಂಡರೆ ನಮಗೆ ಆಗದೇ ಹೋದ ಮಾತ್ರಕ್ಕೆ ಆ ಬಡ ಪ್ರಾಣಿಗಳನ್ನು

ಕೊಲ್ಲುವುದು ಯಾವ ನ್ಯಾಯ?” ಎಂದು ಆಗಾಗ್ಗೆ ಹೇಳುತಿದ್ದನು.

ಇಂಥಾ ಅಭಿಪ್ರಾಯವನ್ನು ಇಟ್ಟು ಕೊಂಡಿದ್ದನಾದ್ದರಿಂದ ಈ

ಸುಮತಿಯು ಎಲ್ಲರಿಗೂ ಬೇಕಾದವನಾಗಿದ್ದನು. ಮುಖ್ಯವಾಗಿ ಆ

ಪಟ್ಟಣದ ವೈದಿಕರೆಲ್ಲಾ ಇವನ ಮೇಲೆ ವಿಶೇಷವಾಗಿ ಅಭಿಮಾನ

ವನ್ನು ಇಟ್ಟುಕೊಂಡಿದ್ದರು. ನೋಡುವುದಕ್ಕೆ ಪಟುವಾಗಿ ಒಳ್ಳೇ

ಸ್ವಭಾವವುಳ್ಳವನಾಗಿದ್ದ ಈ ಹುಡುಗರಿಗೆ ಸ್ಥಳದ ಜೋಯಿಸನಾದ

ರಾಮಜೋಯಿಸನು ಶ್ಲೋಕಗಳನ್ನು ಹೇಳಿಕೊಡುವುದು, ಬರೆಯುವು

ದಕ್ಕೆ ಹೇಳಿಕೊಡುವುದು, ಹೀಗೆಲ್ಲಾ ಮಾಡುತ್ತಿದ್ದನು. ಇಂಥಾ

ಹುಡುಗನ ಮೇಲೆ ರಾಮಜೋಯಿಸನಿಗೆ ಅಭಿಮಾನವಿದ್ದದೇನೋ

ಆಶ್ಚರ್ಯವಲ್ಲ. ಹೇಳಿಕೊಟ್ಟದ್ದನ್ನೆಲ್ಲಾ ಜಾಗ್ರತೆಯಾಗಿ ಕಲಿತುಕೊಳ್ಳು

ತ್ತಿದ್ದನಲ್ಲದೆ, ಈ ಬಾಲಕನು ಪ್ರಾಮಾಣಿಕನಾಗಿ, ಯಾವಾಗಲೂ ಉಪ

ಕಾರಿಯಾಗಿಯೇ ಇರುತ್ತಿದ್ದನು. ಏನಾದರೂ ಕೆಲಸವನ್ನು ಅವನಿಗೆ

ಹೇಳಿದರೆ. ಸ್ವಲ್ಪವೂ ಅಸಮಾಧಾನಪಡದೆ, ಸ್ವಲ್ಪವೂ ಗೊಣಗದೆ

ಮಾಡುತ್ತಿದ್ದನು. ಇದೂ ಅಲ್ಲದೆ ಸುಮತಿಯು ಹೇಳಿದ ಮಾತನ್ನೆಲ್ಲಾ 

ನಾವು ನಂಬಬಹುದಾಗಿತ್ತು. ಒಂದಾನೊಂದು ಸಂದರ್ಭದಲ್ಲಿ ಸುಳ್ಳು 

-------------------------------------------

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಹೇಳಿದರೆ ತನಗೆ ಒಂದು ಹಣ್ಣು ದೊರೆಯುವುದು, ದಿಟ ಹೇಳಿದರೆ

ಬೆತ್ತದಿಂದ ಏಟು ಬೀಳುವುದು ಎಂದು ಅವಧಿಗೆ ಖಂಡಿತವಾಗಿ ತಿಳಿದಿ

ದ್ದಾಗ್ಯೂ ದಿಟವನ್ನೇ ಹೇಳಿ ಸಾಧಿಸುತ್ತಿದ್ದನೇ ಹೊರತು, ಸ್ವಲ್ಪವೂ

ಅನುಮಾನಪಡುತ್ತಿರಲಿಲ್ಲ. ಮಕ್ಕಳು ಮೂರು ಹೊತ್ತೂ ಏನನ್ನಾ 

ದರೂ ತಿನ್ನುತ್ತಲೇ ಇರುವವಷ್ಟೆ, ಇವ ಹಾಗಲ್ಲ. ಒಂದು ಚೂರು

ದೋಸೆಯನ್ನು ಕೊಟ್ಟಿರೆ ಅವರಿಗೆ ಅಷ್ಟೆ ಸಾಕು; ಇನ್ನು ಯಾವ ತಿಂಡಿ

ಎಷ್ಟು ಹಾಕಿದರೆ ಅಷ್ಟೇ ಸಾಕು, ಹೀಗಿತ್ತು.


ಮದನಕುಮಾರನಿಗೂ ಸುಮತಿಗೂ ಪರಿಚಯವಾಯಿತು. ಅದು

ಹೇಗೆಂದರೆ, ಒಂದಾನೊಂದು ದಿನ ವಸಂತ ಋತುವಿನಲ್ಲಿ ಬೆಳಗಿನ

ಹೊತ್ತು ಮದನಕುಮಾರನೂ ಅವನ ದಾದಿಯೂ ಪಟ್ಟಣದ ಹೊರಗಿ

ರುವ ಒಂದಾನೊಂದು ಹೂವಿನ ತೋಟದಲ್ಲಿ ನಡೆದುಕೊಂಡು ಹೋಗುತಾ

ಇರುವಾಗ ಅರಸು ಮಗನು ಅಲ್ಲಿ ಕಂಡಕಂಡ ಹೂವನ್ನೆಲ್ಲಾ ಕುಯಿ

ದುಕೊಳ್ಳುತ್ತಾ ಚಿಟ್ಟೆಗಳೂ ಪುಟ್ಟ ಪುಟ್ಟ ಹಕ್ಕಿಗಳೂ ಹಾರಾಡುತಿ

ರಲು, ಅವುಗಳನ್ನು ಹರಿಸಿಯಾಡುತಾ, ಅಲ್ಲಲ್ಲಿಯೇ ಬಳಸಿ

ಬಳಸಿ ಬರುತಾ, ಹೀಗೆ ಓಡಾಡುತ್ತಿರುವಾಗ್ಗೆ, ಕೆಸರಾಗಿದ್ದ ಹುಲ್ಲ

ಹಸಳೆಯಲ್ಲಿ ಒಂದು ನೀರಹಾವು ಸರಕ್ಕನೆ ಮೇಲಕ್ಕೆ ಎದ್ದು

ಸುಕುಮಾರನ ಕಾಲಿಗೆ ಸುತ್ತಿಕೊಂಡಿತು. ಆ ಮಗುವಿಗೂ ಅವನ

ಸಂಗಡ ಇದ್ದ ದಾದಿಗೂ ಉಂಟಾದ ಭಯವನ್ನು ಕೇಳಬೇಕೆ?

“ಅಯ್ಯೋ ಇನ್ನೇನು ಗತಿ” ಎಂದು ಕೂಗಿಕೊಳ್ಳುತಾ ದಾದಿಯು ಓಡಿ

ಹೋದಳು. ರಾಜಕುಮಾರನು ಮಹಾ ಭಯದಿಂದ ಗಡಗಡನೆ ನಡು

ಗುತ್ತಾ, ಹೆಜ್ಜೆಯನ್ನು ಎತ್ತಿ ಮೇಲಕ್ಕೆ ಇಡಲಾರದೆ ನಿಂತಕಡೆಯಲ್ಲಿಯೇ

ನಿಂತುಕೊಂಡು ಅರಚಿಕೊಳ್ಳು ತಿದ್ದನು. ಸಮೀಪವಾದ ಕಾಲುದಾರಿ

ಯಲ್ಲಿ ಹೋಗುತಿದ್ದ ಸುಮತಿಯು ಇದನ್ನು ಕಂಡು ಓಡಿಬರುತ್ತಾ

" ಅದೇನು ಅದೇನು?” ಎಂದು ಕೂಗಿ ಕೇಳಿದನು. ನೋಡಿದವರಿಗೆ

ಮರುಕ ಹುಟ್ಟುವಂತೆ ಬಿಕ್ಕಳಿಸಿಕೊಂಡು ಅಳುತ್ತಿದ್ದ ಆ ಮದನಕುಮಾ

ರನ ಬಾಯಲ್ಲಿ ಮಾತೇ ಹೊರಡದೆ, ಅವನು ಕಾಲನ್ನು ಕೊಡವುತಾ

ಹಿಂದ ಹಿಂದಕ್ಕೆ ಹೋಗುತಾ ತನ್ನ ಕಾಲನ್ನು ಕೈಯಿಂದ ತೋರಿಸಿದನು.

--------------------------------------------

2] ಸುಮತಿ ಮದನ ಕುಮಾರರ ಚರಿತ್ರೆ ೯ 


ಇದನ್ನು ಕಂಡು ಸುಮತಿಯು ಆ ಹುಡುಗನಿಗೆ ಸಂಭವಿಸಿದ್ದ ಅಪಾಯ

ವನ್ನು ತಿಳಿದುಕೊಂಡನು. ತಾನೂ ಚಿಕ್ಕ ಹುಡುಗನಾದಾಗ್ಯೂ ಸುಮ

ತಿಯು ಧೈರೃಶಾಲಿಯಾದ್ದರಿಂದ ಹೆದರಬೇಡವೆಂದು ಅವನಿಗೆ ಹೇಳಿ

ಕೂಡಲೇ ಬಂದು ಯುಕ್ತಿಯಿಂದಲೂ ಮನೋನಿಶ್ಚಯದಿಂದಲೂ ಆ

ಹಾವನ್ನು ಕತ್ತಿನ ಹತ್ತಿರ ಹಿಡಿದುಕೊಂಡು ಬಲವಾಗಿ ಈಚೆಗೆ ಎಳೆದು,

ಅದನ್ನು ಗರ್ರನೆ ತಿರುಗಿಸಿ ದೂರವಾಗಿ ಎಸೆದನು.

   ...

೨ ನೆ ಅಧ್ಯಾಯ


ಇದು ಹೀಗಿರಲಾಗಿ, ಅತ್ತ ಮದನ ಕುಮಾರನ ತಾಯಿಯೂ

ಅವಳ ಮನೆಯವರೆಲ್ಲರೂ ಸೇರಿ, ದಾದಿಯ ಕೂಗಿನಿಂದ ಗಾಬರಿಪಟ್ಟು

ತಮ್ಮ ಮುದ್ದಿನ ಕಂದ ಇದ್ದ ಸ್ಥಳಕ್ಕೆ ಓಡಿಬಂದರು. ಆಗ ಮದನ

ಕುಮಾರನು ಚೇತರಿಸಿಕೊಳ್ಳುತಾ ತನಗೆ ಉಪಕಾರವನ್ನು ಮಾಡಿದ

ಹುಡುಗನನ್ನು ಹತ್ತಿರ ಕೂರಿಸಿಕೊಂಡು ಕೂತಿದ್ದನು. ಅವನ

ತಾಯಿಯು ಓಡಿಬಂದು ತನ್ನ ಕಂದನನ್ನು ಎತ್ತಿಕೊಂಡು ಸಾವಿರಸಾರಿ

ಮುದ್ದಾಡಿ, ತರುವಾಯ, ಏನಾದರೂ ಗಾಯವಾಯಿತೆ? ಎಂದು ಕೇಳಿ

ದಳು. ಆ ಹುಡುಗನು-ಅಮ್ಮ, ಇಲ್ಲ, ಗಾಯವಾಗಲಿಲ್ಲ. ಅಷ್ಟರಲ್ಲಿಯೇ

ಆ ಸಣ್ಣ ಹುಡುಗ ಬಂದು ಆ ಹಾಳಹಾವನ್ನು ಎಳೆದುಹಾಕಿ ಬಿಟ್ಟ

ಇಲ್ಲದಿದ್ದರೆ ಅದು ನನ್ನನ್ನು ಕಚ್ಚುತಿತ್ತು, ಎಂದನು. ಇಂಥಾ ಉಪ

ಕಾರವನ್ನು ಮಾಡಿದವನು ನೀನು ಯಾರಪ್ಪಾ? ಎಂದು ಆಕೆ ಕೇಳಿ

ದಳು. ನಾನು ಸುಮತಿ ಎಂದು ಅವನು ಹೇಳಿದನು. ಕೂಡಲೇ ಆಕೆ.

ಮಗು, ನೀನು ಬಹು ಧೈರ್ಯಶಾಲಿ, ಬಾ ನಮ್ಮ ಮನೆಗೆ ನಿನಗೆ ತಿನ್ನು

ವುದಕ್ಕೆ ಕೊಡುತ್ತೇನೆ, ಎಂದಳು.


" ಈ ಮಾತಿನಿಂದಲೇ ತಾವು ನನಗೆ ತಿಂಡೀಕೊಟ್ಟ ಹಾಗಾಯಿತು;

ಇಲ್ಲ, ನಾನು ಬರುವುದಿಲ್ಲ. ನಮ್ಮ ತಂದೆಗಳು ಕೂಗುತಾರೆ."


“ ನಿಮ್ಮ ತಂದೆ ಯಾರಯ್ಯ, ಮಗುವೆ?” 

------------------------------------------

೧೦ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


“ ಇಗೊ ಈ ಅಗ್ರಹಾರದಲ್ಲಿರುವ ಸೂರ್ಯಭಟ್ಟರು, ತಾಯಿ ”


“ ಅಪ್ಪ, ಇನ್ನುಮೇಲೆ ನೀನೂ ನನ್ನ ಮಗುವಿನಹಾಗೇ; ನನ್ನ

ಮಗುವಿನ ಹಾಗೇ ನಮ್ಮಲ್ಲಿ ಇರುತೀಯಾ,ಏನಪ್ಪಾ?”


" ತಾಯಿ, ತಮ್ಮ ದಯಬಂದರೆ ಹಾಗೇ ಆಗಬಹುದು; ಆದರೆ:

ನಮ್ಮ ತಂದೆ ನಮ್ಮ ತಾಯಿ ಸಹ ಹಾಗೆ ಇರುವುದಾದರೆ, ಆಗಬಹುದು."


ಅರಸಿಯು ಆ ಕ್ಷಣದಲ್ಲಿಯೇ ಆ ಬ್ರಾಹ್ಮಣನ ಮನೆಗೆ ಒಬ್ಬ

ಆಳನ್ನು ಓಡಿಸಿ, ಸುಮತಿಯ ಕೈಹಿಡಿದು ತನ್ನ ಅರಮನೆಯೊಳಕ್ಕೆ

ಕರೆದುಕೊಂಡು ಹೋದಳು, ಅಲ್ಲಿ ಅನಂಗರಾಜನನ್ನು ಕಂಡು ತನ್ನ 

ಪುಟ್ಟುಸಾಮಿಗೆ ಬಂದಿದ್ದ ವಿಪತ್ತನ್ನೂ ಸುಮತಿಯ ಧೈರ್ಯವನ್ನೂ ಸವಿ

ಸ್ತಾರವಾಗಿ ಹೇಳಿದಳು.


ತಂದೆಗೂ ಬಹು. ಸಂತೋಷವಾಯಿತು. ಅರಸುಮಗಳನಿಗೆ

ಬಂದಿದ್ದ ಗಂಡ ತಪ್ಪಿತಲ್ಲಾ ಎಂದು ಮನೆಯವರೆಲ್ಲಾ ಸಂತೋಷದಿಂದ

ಬಹು ಸಡಗರಪಡುತಿದ್ದರು. ಮಗುವಿನ ಪೀಡಾಪರಿಹಾರಾರ್ಥವಾಗಿ

ಮೃತ್ಯುಂಜಯ ಜಪವೂ ಹವನವೂ ತಕ್ಕ ದಾನಧರ್ಮಗಳೂ ಬ್ರಾಹ್ಮಣ

ಸಂತರ್ಪಣೆಯೂ ನಡೆದವು. ಆ ಕಾಲದಲ್ಲಿ ಮಗುವಿಗೆ ಅಲಂಕಾರ

ಮಾಡಿ ಬೇಕಾದ ಒಡವೆಯನ್ನು ಇಟ್ಟು ದಿವ್ಯವಾದ ವಸ್ತ್ರವನ್ನು

ಹೊದಿಸಿ ಶೃಂಗರಿಸಿದರು. ಸುಮತಿಯನ್ನೂ ಉಪಚರಿಸಿ, ನೋಡು

ವುದಕ್ಕೆ ಮನೋಹರವಾದ ಪದಾರ್ಥಗಳನ್ನೆಲ್ಲಾ ಅವನ ಮುಂದೆ 

ತಂದಿಟ್ಟರು. ಸುನೇರಿ ಕೆಲಸದ ಚೌಕಟ್ಟ ಹಾಕಿರುವ ನಿಲುಗನ್ನಡಿ

ಗಳೂ, ಚಿತ್ರವಿಚಿತ್ರವಾದ ತಸ್‌ಬೀರುಗಳೂ, ನಾಜೂಕಾದ ಕಂದೀಲು

ಗಳೂ ಗಾಜಿನ ಸಾಮಾನುಗಳೂ, ರತ್ನಗಳನ್ನು ಕೆತ್ತಿದ ಚಿನ್ನ

ಬೆಳ್ಳೀ ಪಾತ್ರೆಗಳೂ, ತಟ್ಟೆಗಳೂ ಇವೇ ಮುಂತಾಗಿ ನೋಡುವುದಕ್ಕೆ

ಆಹ್ಲಾದಕರವಾದ ಪದಾರ್ಥಗಳೆಲ್ಲಾ ಈ ಬಡ ಬ್ರಾಹ್ಮಣರ ಗಂಡಿನ

ಮುಂದೆ ಸಾಲುಸಾಲಾಗಿ ಓರಣಗೊಂಡವು. ಆ ದಿನ ರಾಣಿಯು ತನ್ನ

ಸಮಾಪದಲ್ಲಿಯೇ ತನ್ನ ಮುದ್ದಿನ ಕಂದನನ್ನು ಊಟಕ್ಕೆ ಕೂರಿಸಿ

ಕೊಂಡು ಮನೆಯಲ್ಲಿ ಮಾಡಿದ್ದ ರುಚಿಕರವಾದ ಅನೇಕ ಪದಾರ್ಥ

ಗಳನ್ನು ಚಿನ್ನದ ತಟ್ಟಿ ಬಟ್ಟಲುಗಳಲ್ಲಿಟ್ಟು ಬೇಕಾದಹಾಗೆ ತಾನೇ ತೆಗೆದು 

----------------------------------------------

೨] ಸುಮತಿ ಮದನ ಕುಮಾರರ ಚರಿತ್ರೆ ೧೧ 


ಕಂದನಿಗೆ ಊಟಮಾಡಿಸುತ್ತಾ, ಅತ್ಯಂತ ವಾತ್ಸಲ್ಯದಿಂದ ಮುದ್ದಾಡುತಾ

ಅದು ಆಡುವ ತೊದಲು ಮಾತುಗಳನ್ನು ಅದರ ಸಂಗಡ ತಾನೂ ಅನು

ಸರಿಸಿ ಆಡುತ, ಎಷ್ಟೆಷ್ಟೋ ಬಗೆಯಲ್ಲಿ ಲಾಲನೆ ಮಾಡಿದ್ದಲ್ಲದೆ, ಸುಮ

ತಿಯನ್ನೂ ತನ್ನ ಹತ್ತಿರದಲ್ಲೇ ಎಡೆ ಮಾಡಿ ಕೂರಿಸಿಕೊಂಡು ಬೇಕಾದ

ಹಣ್ಣು ಹಂಪಲನ್ನೂ ಹಾಲುಖೋವೆ ಮೊದಲಾದ್ದನ್ನೂ ವಿಚಿತ್ರವಾದ

ಮಿಠಾಯಿಗಳನ್ನೂ ಅವನಿಗೆ ಕೊಡುತ ಬಂದಳು. ಆದರೆ ಅಲ್ಲಿದ್ದ

ಪದಾರ್ಥಗಳೆಲ್ಲಾ ಸುಮತಿಗೆ ಸಾಧಾರಣವಾಗಿಯೇ ಕಾಣಿಸಿದವು.

ಯಾತರಿಂದಲೂ ಸಂತೋಷ ಹುಟ್ಟಲಿಲ್ಲ. ಅರಸಿತ್ತಿಗೆ ಇದರಿಂದ ಅಸ

ಮಾಧಾನವಾಯಿತು. ಆ ಅಸಮಾಧಾನವನ್ನು ಮರೆಮಾಚುವುದಕ್ಕೆ 

ಆಗಲಿಲ್ಲ. ತಾನು ಎಷ್ಟು ಒಡವೆಗಳನ್ನು ಹೇರಿಕೊಂಡರೆ ಎಂಥಾ ಸೀರೆ 

ಯನ್ನುಟ್ಟು ಇನ್ನೆಂಥಾ ಕುಪ್ಪುಸವನ್ನು, ತೊಟ್ಟುಕೊಂಡರೆ ತನಗೆ ಹೇಗೆ

ತೃಪ್ತಿಯೋ ಹಾಗೆಯೇ ಎಲ್ಲರಿಗೂ ಆಗುವುದೆಂದು ಆ ಪ್ರಾಣಿಯು ತಿಳಿ

ದುಕೊಂಡಿದ್ದಳು. ತನ್ನ ಮಗನು ತೀನೆ ಹಾಕಿಕೊಂಡು ತಿನ್ನುತಿದ್ದ

ಬೆಳ್ಳೀ ಬಟ್ಟಲನ್ನು ಸುಮತಿಯು ದೃಷ್ಟಿಸಿ ನೋಡಲು, ಅರಸಿತ್ತಿಯು

ಕಂಡು “ ಬಟ್ಟಲು ಎಷ್ಟು ಚೆನ್ನಾಗಿದೆ, ನೋಡು, ಇದು ನಿನಗೆ ಬೇಕೆ 

ತೀನಿ ಹಾಕಿಕೊಂಡು ತಿನ್ನುವುದಕ್ಕೆ? ? ಎನ್ನುತ್ತಾ, “ ಇದು ನಮ್ಮ

ಪುಟ್ಟುಸಾಮೀ ಬಟ್ಟಲು, ನಿನಗೆ ಬೇಕಾದರೆ ಕೊಡುತಾನೆ” ಎಂದು

ಹೇಳಿದಳು. ಆಗ ಮದನಕುಮಾರನು ಈ ಮಾತನ್ನು ಕೇಳಿ, --

"ಅಮ್ಮ, ಹಾಗೇ ಆಗಲಿ; ಈ ಬಟ್ಟಲನ್ನು ನಾನು ಆ ಹುಡುಗನಿಗೆ

ಕೊಡುತೇನೆ. ನನಗೆ ಇದಕ್ಕಿಂತಲೂ ಚೆನ್ನಾಗಿರತಕ್ಕ ಚಿನ್ನದ ಬಟ್ಟ 

ಲಿದೆ; ಇದಲ್ಲದೆ ಇನ್ನೂ ಎರಡು ದೊಡ್ಡ ಬೆಳ್ಳೀ ಬಟ್ಟಲುಗಳಿವೆ;

ಹವುದೋ ಅಲ್ಲವೊ ಅಮ್ಮ? ' ಎಂದನು. ಕೂಡಲೆ ಸುಮತಿಯು--

ಬಹಳವಾಗಿ ಸಂತೋಷವಾಯಿತೈ; ನಿನ್ನ ಬಟ್ಟಲು ನಿನ್ನಲ್ಲಿಯೇ  ಇರಲಿ ; 

ನಾನು ನಿನ್ನಿಂದ ಅದನ್ನು ಕಿತ್ತುಕೊಳ್ಳ ಲಾರೆ; ನಮ್ಮ ಮನೆಯಲ್ಲಿ ಇದೆಲ್ಲ

ಕ್ಕಿಂತಲೂ ಉತ್ತಮವಾದ ಬಟ್ಟಲಿದೆ ಎಂದನು.


ಆಗ ಅರಸಿಯು--ಏನು, ನಿಮ್ಮ ತಂದೆ ಬೆಳ್ಳೀ ಬಟ್ಟಿಲಲ್ಲಿ ಪದಾ.

ರ್ಥವನ್ನು ಇಟ್ಟುಕೊಳ್ಳುತಾನೆಯೋ? 

---------------------------------------------

೧೨ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ


“ ತಾಯಿ, ಇದಕ್ಕೆ ನೀವೇನು ಹೆಸರಿಟ್ಟಿದೀರೋ ನಾನು ಕಾಣೆ;

ಆದರೆ ನಮ್ಮ ಮನೆಯಲ್ಲಿ ನಾವು ಹುಡುಗರು ತಿಂಡಿ ಹಾಕಿಕೊಂಡು ತಿನ್ನ 

ತಕ್ಕದ್ದು ಬಳಪದ್ದು; ಹುಡುಗರು ಹಲಗೇಮೇಲೆ ಬರೆಯುತಾರಲ್ಲಾ,

ಅಂಥಾದ್ದರಲ್ಲಿ ಮಾಡಿದ್ದು,?


ಹೀಗೆಂದು ಹೇಳಿದ ಸುಮತಿಯ ಮಾತನ್ನು ಕೇಳಿ, ರಾಜ

ಪತ್ನಿಯು “ ಪಾಪ! ಮಗು ಏನೂ ಅರಿತದ್ದಲ್ಲ. ಅದು ಸರಿಯಪ್ಪ,

ಇವೆಲ್ಲಕ್ಕಿಂತಲೂ ನಿಮ್ಮ ಮನೆಯಲ್ಲಿರುವ ಬಟ್ಟಲು ಹೇಗೆ ಉತ್ತಮ

ವಾದ್ದು?"


ಸುಮತಿ--ತಾಯಿ, ಹೇಗೆಂದರೆ, ಅದರಲ್ಲಿ ಯಾವ ತಿಂಡೀ

ಸಾಮಾನನ್ನು ಎಷ್ಟು ಹೊತ್ತು ಹಾಕಿಕೊಂಡು ತಿಂದರೂ, ನಮಗೆ ಅಸ

ಹ್ಯವಾಗಿ ವಾಂತಿ ಬರುವ ಹಾಗೆ ಆಗುವುದಿಲ್ಲ.


ಅರಸಿ--ಅಸಹ್ಯವಾಗುವುದು, ವಾಂತಿಯಾಗುವುದು ಎಂದರೇ

ನಪ್ಪ, ಹಸುಳೆ? ಹಾಗೆಂದರೇನು?


ಸುಮತಿ--ನೋಡಿ ತಾಯಿ, ಅಕೋ ಆ ಆಳು ಒಂದು ಬಟ್ಟ

ಲನ್ನು ಕೈ ಮರೆತು ಅಲ್ಲಿ ಬಿಟ್ಟು ಹೋದ್ದಕ್ಕೆ ತಮಗೆ ಎಷ್ಟೋ ಸಂಕಟ

ಉಂಟಾಯಿತು. ಯೋಚನೆಯಿಂದ ಜ್ಞಾನತಸ್ಪಿ ಎಲ್ಲಿ ಬಿದ್ದು ಬಿಡು

ತೀರೋ ಎಂದು ನನಗೆ ಭಯವಾಯಿತು. ನಮ್ಮ ಮನೆಯಲ್ಲಿರುವ

ಬಟ್ಟಲು ಎಲ್ಲಿದ್ದರೂ ಏನೂ ತೊಂದರೆ ಇಲ್ಲ. ಬೇಕಾದ ಕಡೆ ಬಿಸಾಟ

ರುತ್ತೇನೆ. ಕೇಳುವರೇ ಇಲ್ಲ. ಒಬ್ಬರೂ ಲಕ್ಷ್ಯವೇ ಮಾಡುವುದಿಲ್ಲ.


ಅರಸಿ- ಈ ಗಂಡಿನ ಮಾತಿಗೆ ಏನ ಹೇಳಬೇಕೋ ನಿಜವಾಗಿ

ನನಗೆ ತೋರುವುದಿಲ್ಲ; ಏನೇನೋ ಆಡುತ್ತೆ.


ಹೀಗೆ ಇರುವಲ್ಲಿ ಕೆಲವರು ಊಟಮಾಡುತಾ, ಕೆಲವರು ಫಲಾ

ಹಾರ ಮಾಡುತಾ ಕೂತಿರಲು, ಆಗತಾನೆ ಒಬ್ಬ ಪರಿಚಾರಕನು

ಊಟದ ತಟ್ಟೆ ಬಟ್ಟಲುಗಳನ್ನು ಎತ್ತಿಕೊಂಡು ಅತ್ತಿತ್ತ ಇರಿಸುವಾಗ್ಗೆ ,

ಒಂದು ಬಟ್ಟಲು ಕೆಳಕ್ಕೆ ಬಿತ್ತು. ಅದನ್ನು ನೋಡಿ ಅರಸಿಯು ಬಹು

ಕೋಪಗೊಂಡು ಪರಿಚಾರಕನನ್ನು ಗದರಿಸಿದಳು, ಇದನ್ನು ಕಂಡೇ

ಸುಮತಿಯು ಬಟ್ಟಲ ನೆವದಲ್ಲಿ ಮಾಕರಿಸಿ ಮಾತನಾಡಿದ್ದು.

----------------------------------------------

೨] ಸುಮತಿ ಮದನ ಕುಮಾರರ ಚರಿತ್ರೆ ೧೩



ಊಟ ತಿಂಡಿ ಮುಂತಾದ್ದೆಲ್ಲಾ ಆದಕೂಡಲೆ, ಇತರ ಜಾತಿಯ 

ವರ ಮನೆಯಲ್ಲಿ ನೀರ ಕುಡಿಯದ ಬ್ರಾಹ್ಮಣರ ಹುಡುಗನಾದ ಸುಮ

ತಿಗೆ ಕಾಸಿದ ಹಾಲನ್ನು ತರಿಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಅದನ್ನು

ಅರಸಿಯು ಕುಡಿಯಪ್ಪಾ ಎಂದು ಸುಮತಿಯ ಕೈಗೆ ಕೊಡಹೋದಳು.


ಸುಮತಿ-- ತಾಯಿ ನಾನು ಒಲ್ಲೆ; ನನಗೆ ಬಾಯಾರುವುದಿಲ್ಲ.


ಅರಸಿ--ಮಗು, ಅಚ್ಚ ಹಸುವಿನ ಹಾಲು, ನೀರು ಬೆರದಿಲ್ಲ;

ಕೊಡೆಯಾಲದ ಕಲ್ಲುಸಕ್ಕರೆಯನ್ನು ಹುಡಿಮಾಡಿ ಹಾಕಿಸಿದೆ; ಯಾಲ

ಕ್ಕಿಯೂ ಕೇಸರಿಯೂ ಬಿದ್ದಿದೆ, ಬಹು ರುಚಿಯಾಗಿರುವುದು, ಕುಡಿ- 

ಎಂದಳು.


ಸುಮತಿ--ಆಗಬಹುದು ತಾಯಿ, ಆದರೆ ನಮ್ಮ ಜೋಯಿಸರು,

ಹಸಿವು ಆದಾಗ ಅನ್ನಾ ತಿನ್ನಬೇಕು, ಬಾಯಾರಿದಾಗ ನೀರ ಕುಡಿಯ

ಬೇಕು ಎಂದು ಹೇಳಿಕೊಟ್ಟಿದಾರೆ. ಇದಲ್ಲದೆ ನಮಗೆ ಸುಲಭವಾಗಿ

ಸಿಕ್ಕುವುದನ್ನೇ ತಿನ್ನಬೇಕು ಕುಡಿಯಬೇಕು, ಎಂದೂ ಹೇಳಿದಾರೆ.

ಹಾಗಲ್ಲದಿದ್ದರೆ, ಅಂಥಾ ಒಳ್ಳೇ ಪದಾರ್ಥ ನಮಗೆ ಸಿಕ್ಕದೇ ಹೋದಾಗ

ನಮ್ಮ ಮನಸ್ಸಿಗೆ ಏನೋ ಕಿರಿಕಿರಿಯಾಗಿ ಪೇಚಾಡಬೇಕಾಗುವುದಂತೆ.

ಹಿಂದಕ್ಕೆ ಖುಷಿಗಳೆಲ್ಲಾ ಮಾಡುತಿದ್ದದೂ ಹೀಗೇಯೇ; ಅವರೆಲ್ಲಾ

ಬಹು ಸತ್ಯವಂತರು, ಒಳ್ಳೆಯವರು.


ಈ ಮಾತಿಗೆ ಅರಸು ನಕ್ಕು--ಏನೆಲಾ ಹುಡುಗ, ಋಷಿಗಳು

ಯಾರು, ನೀನು ಬಲ್ಲೆಯೋ? ಎಂದನು.


“ ಬುದ್ಧಿ,ಬಲ್ಲೆ.”


“ ಅವರು ಯಾರು? ?


« ಸ್ವಾಮಿ, ಅರಿಕೆಮಾಡುತೇನೆ.  ಒಂದಾನೊಂದು ಕಾಲದಲ್ಲಿ

ಜನರೆಲ್ಲಾ ಬಹಳ ಕೆಟ್ಟವರಾಗಿದ್ದರು ; ಮನಸ್ಸಿಗೆ ಬಂದ ಕೆಲಸವ

ನ್ನೆಲ್ಲಾ ಮಾಡುತಿದ್ದರು. ದೊಡ್ಡವರು ಅಹಂಕಾರಪಡುತಿದ್ದರು;

ತಿನ್ನುವುದು, ಮಲಗುವುದು, ಆನಂದವಾಗಿರುವುದು, ಇಷ್ಟು ಹೊರತು

ಇನ್ನು ಯಾವ ಕೆಲಸಕ್ಕೂ ಹೋಗುತ್ತಿರಲಿಲ್ಲ. ಬಡವರನ್ನು ಕಂಡರೆ

ಲಕ್ಷ್ಯವೇ ಇಲ್ಲ. ಹಸಿದು ಸಾಯುತಿರುವ ಗೋಪಾಳದವರಿಗೆ ಅವರ 

-----------------------------------------

'೧೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ


ಕ್ಷುತ್ತು ಪರಿಹಾರವಾಗಲೆಂದು ಒಂದು ತುತ್ತು ಅನ್ನವನ್ನೂ ಕೊಡುತ್ತಿರ 

ಲಿಲ್ಲ. ಬಡವರಾದರೊ ಯಾವ ಕೆಲಸವೂ ಮಾಡದೆ ಕೂತಕಡೆ ಬಿಟ್ಟು

ಏಳದೆ ಎರಡು ಮಂಡೀ ಸಂದಿಯಲ್ಲಿ ತಲೆಯನ್ನು ಸಿಕ್ಕಿಸಿಕೊಂಡು, ಮುಖ

ಅಡಿಯಾಗಿ ತೂಕಡಿಸುತಿದ್ದರು, ಕೆಲಸ ಮಾಡುವುದಕ್ಕಿಂತಲೂ ಯಾವ

ಕೆಲಸವೂ ಇಲ್ಲದೆ ಸುಮ್ಮನೇ ಜಡರಾಗಿರುವುದೇ ಮೇಲೆಂದು ಎಣಿಸಿ

ಕೊಂಡಿದ್ದರು. ಸಣ್ಣ ಹುಡುಗರು ತಂದೆತಾಯಿಗಳ ಮಾತನ್ನು

ಕೇಳುತ್ತಿರಲಿಲ್ಲ. ತಂದೆತಾಯಿಗಳು ಮಕ್ಕಳಿಗೆ ಒಳ್ಳೇ ಬುದ್ಧಿಯನ್ನು

ಕಲಿಸುತಿರಲಿಲ್ಲ. ಹೀಗೆ ಲೋಕವೆಲ್ಲಾ ಬಹುವಾಗಿ ಕೆಟ್ಟು ಹೋಗಿತ್ತು.

ಅನೇಕರು ರಾಕ್ಷಸ ಕೃತ್ಯವನ್ನು ಮಾಡುತಾ ಮಹಾಪಾತಕಗಳನ್ನು

ಮಾಡುವುದರಲ್ಲಿ ನಾನು ತಾನೆಂದು ಮೇಲಾಡುತಿದ್ದರು. ಸಜ್ಜನರು

ಬಾಳುವುದಕ್ಕೆ ಮಾರ್ಗವೇ ಇರಲಿಲ್ಲ. ಆಗ ಪ್ರಪಂಚವನ್ನು

ಉದ್ಧಾರ ಮಾಡುವುದಕ್ಕಾಗಿ ದೇವರು ಈ ಭೂಲೋಕದಲ್ಲಿ ಅವತಾರ

ಮಾಡಿ ಧರ್ಮಸಂಸ್ಥಾ ಸನೆಯನ್ನು ಮಾಡಿದನು. ಹೀಗೆ ಅನೇಕಸಾರಿ

ನಡೆದಿದೆ. ಹೀಗೆ ದೇವರು ಸ್ಥಾ ಪನೆಮಾಡಿದ ಧರ್ಮವನ್ನು ಕಾಪಾ

ಡುತ ಜನರಿಗೆಲ್ಲಾ ಅದನ್ನು ಬೋಧಿಸುತಾ ತಪಸ್ಸು ಮಾಡಿಕೊಂಡಿದ್ದ

ವರೇ ಋಷಿಗಳು. ಇಂಥಾ ಉತ್ತಮವಾದ ಪದಾರ್ಥವನ್ನೇ ತಾವು

ತಿನ್ನಬೇಕು, ಅಂಥಾ ಒಳ್ಳೇ ಬಟ್ಟೆಯನ್ನೇ ಹೊದೆಯಬೇಕು, ಎಂದು

ಅವರಿಗೆ ಆಶೆ ಇರಲಿಲ್ಲ. ಒಣಕಲ ಎಲೆಯಾದರೂ ಸರಿಯೆ, ಕೊನೆಗೆ

ಗಾಳಿಯಾದರೂ ಸರಿಯೆ, ಆಹಾರಮಾಡಿ ಹೊಟ್ಟೆ ತುಂಬಿಕೊಳ್ಳುತಿ

ದ್ದರು. ಕೃಷ್ಣಾಜಿನ, ವ್ಯಾಘ್ರಾಜಿನ, ನಾರುಬಟ್ಟೆ ಗಳು ಇವುಗಳನ್ನು

ಉಟ್ಟು ಹೊದ್ದು ಕಾಲವನ್ನು ಕಳೆಯುತಿದ್ದರು. ಅವರಿಗೆ ಹಣ

ಕಾಸನ್ನು ಕೊಟ್ಟರೆ ದೀನರಾದವರಿಗೆ ಕೊಡಿರೆಂದು ಹೇಳಿ ಧಿಃಕರಿಸಿ

ಹೊರಟು ಹೋಗುತಿದ್ದರು. ಈ ರೀತಿಯಲ್ಲಿ ಅವರು ಲೋಕಕ್ಕೆ

ಎಷ್ಟೋ ಉಪಕಾರವನ್ನು ಮಾಡಿದರು. ಆದ್ದರಿಂದ ನಮಗೆ ದೇವರು

ಏನು ಕೊಟ್ಟಿದಾನೋ ಅದರಲ್ಲಿ ನಾವು ತೃಪ್ತರಾಗಬೇಕು. ಮೃಗಪಕ್ಷಿ  

ಗಳು ತಮಗೆ ಸಿಕ್ಕುವ ಹುಲ್ಲನ್ನೂ ಕಾಳನ್ನೂ ತಿಂದು, ನೀರು ಹೊರತು

ಇನ್ನೇನನ್ನೂ ಕುಡಿಯದೆ ಇರುವದಿಲ್ಲವೆ? ಆದರೂ ಅವುಗಳಿಗೆ ಶಕ್ತಿ

ಏನಾದರೂ ಕಡಿಮೆಯಾಗಿದೆಯೆ?" 

----------------------------------------------

೨] ಸುಮತಿ ಮದನ ಕುಮಾರರ ಚರಿತ್ರೆ ೧೫


ಆಗ ಅನಂಗರಾಜನು-ಈ ಹುಡುಗನ ಪ್ರಜ್ಞೆ ಅತ್ಯದ್ಭುತವಾದ್ವು;

ಇವನು ಮಹಾಪಂಡಿತನಾಗಿ ತೋರುತಾನೆ. ಇವನನ್ನು ಇಷ್ಟರ

ಮಟ್ಟಿಗೆ ತಯಾರು ಮಾಡಿಟ್ಟ ರಾಮಜೋಯಿಸರು ಸಾಕ್ಷಾತ್‌ ವೇದ

ಮೂರ್ತಿಯೇ ಸರಿ; ಅವರು ನಮ್ಮ ಪುಟ್ಟಸಾಮಿಯನ್ನೂ ಹೀಗೇ

ನೋಡಿಕೊಂಡು ವಿದ್ಯಾಬುದ್ಧಿಯನ್ನು ಕಲಿಸಿದರೆ ಅವರಿಗೆ ನಾನು

ಎಷ್ಟೋ ಕೃತಜ್ಞನಾಗಿದ್ದೇನು. ನಮ್ಮ ಮಗುವೇನು ಸಾಧಾರಣನಲ್ಲ

ತುಂಬಾ ಪ್ರಬಲಕ್ಕೆ ಬರತಕ್ಕವನು, ಅಕ್ಷರಾಭ್ಯಾಸ ಮಾಡುವುದಕ್ಕೆ

ಸಕಾಲವಾಗಿದೆ--ಎಂದುಕೊಂಡು, ತನ್ನ ಮಗ ಮದನಕುಮಾರನನ್ನು

ಕುರಿತು--ಅಯ್ಯ ಮದನು, ನೀನೂ ಶಾಸ್ರಜ್ಞನಾಗಬೇಕೋ?

ಎಂದನು. 


ಅಪ್ಪಾಜಿ -ಶಾಸ್ತ್ರಜ್ಞ ಎಂದರೇನೋ ನಾನರಿಯೆ,. ಆದರೆ ನಾನು

ದೊರೆಯಾಗಿರಬೇಕು ; ಯಾಕೆಂದರೆ ದೊರೆಯು ಇತರರಿಗಿಂತಲೂ

ನೋಡುವುದಕ್ಕೆ ಸೊಗಸಾಗಿಯೂ ಐಶ್ವರ್ಯವಂತನಾಗಿಯೂ ಇರು

ತಾನೆ; ಇದಲ್ಲದೆ ಅವನಿಗೆ ಕೆಲಸವೇನೂ ಇರುವುದಿಲ್ಲ; ಮತ್ತೆ ಎಲ್ಲರೂ

ಅವನನ್ನು ಕಂಡರೆ ಕೈಕಟ್ಟಿಕೊಂಡು ಅತಿ ನಿನಯದಿಂದಲೂ ಮರ್ಯಾದೆ 

ಯಿಂದಲೂ ನಿಂತುಕೊಳ್ಳುವರು, ಎಲ್ಲರೂ ಅವನಿಗೆ ಭಯಪಡುವರು.


ಈ ಮಾತನ್ನು ಕೇಳಿದ ಕೂಡಲೆ ಅರಸಿಯು ಮೇಲಕ್ಕೆ ಎದ್ದು

ಸಂತೋಷದಿಂದೊಡಗೂಡಿ,- -ಮಗು, ಒಳ್ಳೇ ಮಾತನಾಡಿದೆ, ಇಂಥಾ

ಯೋಗ್ಯತೆ ನಿನ್ನಲ್ಲಿರುವುದರಿಂದ ನೀನು ರಾಜಪದವಿಗೆ ತಕ್ಕವನೇ ಸರಿ

ಇಂಥಾ ಮುದ್ದುಗಾರ ಮಾತನಾಡಿದ್ದಕ್ಕೋಸ್ಕರ, ಈ ಹಣ್ಣನ್ನು ಹಿಡಿ, ಈ

ಉಂಗುರವನ್ನು ಇಟ್ಟುಕೊ, ಎಂದು ಮಗನನ್ನು ಎತ್ತಿಕೊಂಡು ಮುದ್ದಾ

ಡುತ್ತಾ ಸುಮತಿಯನ್ನು ನೋಡಿ--ಏನೈ, ಮಗು, ನೀನು ದೊರೆಯಾಗ

ಬೇಕೆಂದು ನಿನ್ನ ಮನಸ್ಸಿನಲ್ಲಿದೆಯೋ ಇಲ್ಲವೊ?


ಸುಮತಿ--ತಾಯಿ ಹಾಗೆಂದರೇನೋ ನಾನರಿಯೆ, ನನಗೆ ಈಗ

ವಯಸ್ಸು ಬಂದು ನಾನು ದೊಡ್ಡವನಾದರೆ ಸಾಕು; ಯಾವುದಾದರೂ

ಒಂದು ಉದ್ಯೋಗವನ್ನು ಕಲಿತುಕೊಂಡು ಜೀವನಮಾಡಿಕೊಳ್ಳುತೇನೆ.

ನನಗೋಸ್ಕರ ಯಾವ ಆಳೂ ಬೇಡ, ಯಾರೂ ಸೊಂಟಾ ಸುತ್ತಿಕೊಂಡು

ಇರಬೇಕಾದ್ದೂ ಇಲ್ಲ.

-----------------------------------------------

೧೬ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ.


ಈ ಮಾತು ತಿವಿಗೆ ಬೀಳಲು, ದೊರೇ ಹೆಂಡತಿಯು ಗಂಡನನ್ನು

ಕುರಿತು ಸುಮತಿಯನ್ನು ಅತಿ ನಿಕೃಷ್ಟವಾಗಿ ನೋಡುತ್ತಾ-- ದೊಡ್ಡ

ವರ ಮಕ್ಕಳಿಗೂ ಬಡವರ ಮಕ್ಕಳಿಗೂ ಎಷ್ಟು ತಾರತಮ್ಯವಿದೆ?

ಎಂದಳು.


ಅನಂಗ-- ಈ ಮಾತಿನಮಟ್ಟಿಗೆ ನಮ್ಮ ಮಗು ಶಾನೆ ಬುದ್ಧಿಶಾಲಿ

ಎಂದು ನಾನು ಹೇಳಲಾರೆ. (ಸುಮತಿಯನ್ನು ಕುರಿತು) ನಿನಗೆ

ಐಶ್ವರ್ಯ ಬರಬೇಕೆಂದು ಇಷ್ಟವಿಲ್ಲವೆ, ಮಗು?


ಸುಮತಿ--ಇಲ್ಲ, ಸ್ವಾಮಿ.


ಅರಸಿ-- ಚೆನ್ನಾಗಿದೆ! ಪುಣ್ಯವಿದ್ದರೆ ಇಷ್ಟವಿರುತ್ತೆ. ನಿನಗೆ 

ಐಶ್ವರ್ಯ ಬೇಡವೆ?


ಸುಮತಿ- ಬೇಡ. ಯಾಕೆ ಎಂದರೆ, ತಾಯಿ, ನಾನು ಒಬ್ಬನೇ

ಒಬ್ಬ ಐಶ್ವರ್ಯವಂತನನ್ನು ನೋಡಿದೇನೆ, ಆತನೇ ಆಚೇಬೀದಿಯಲ್ಲಿ

ರುವ ದೊಡ್ಡಮನೇ ಯಜಮಾನರು; ಅವರ ಹೆಸರು ಪ್ರಧಾನಿ

ಮಂಜೈಯ ಹೆಗ್ಗಡೆ. ಇವರು ಬೆಳೆದು ನಿಂತಿರುವ ಹೊಲದ ಮಧ್ಯೆ

ಕುದುರೆಯನ್ನು ಓಡಿಸಿಕೊಂಡು ಹೋಗುವುದು. ಬಡರೈತರ ಬೇಲಿಗಳ

ನ್ನೆಲ್ಲಾ ಕಡಿಯುವುದು, ಒಕ್ಕಲಮಕ್ಕಳ ಕೋಳಿಗಳನ್ನು ಕೊಲ್ಲುವುದು,

ಕುರಿಯನ್ನು ಹೊತ್ತುಕೊಂಡು ಹೋಗುವುದು, ಅವರ ದನಕರುಗಳನ್ನು

ತನ್ನ ಮನೆಗೆ ತೆಗೆದುಕೊಂಡು ಹೋಗಿ ಕಟ್ಟಿಕೊಳ್ಳುವುದು, ಅವರ ನಾಯಿ

ಗಳನ್ನು ಕೊಲ್ಲಿಸುವುದು, ಅವರ ಎತ್ತು ಕುದುರೆಗಳ ಕಾಲು ಮುರಿಯು

ವುದು, ಅವರ ಭೂಮಿಯಲ್ಲಿ ಬೆಳೆದು ಒಕ್ಕಣೆಯಾಗಿರುವ ದವಸವನ್ನು

ತಾನು ಹಾರುಹುಯಿಸಿಕೊಂಡು ಹೋಗುವುದು ಸಿಕ್ಕಿದವರನ್ನೆಲ್ಲಾ

ಬೈಯುವುದು, ತಲೇ ಎತ್ತಿ ತಿರುಗಿದವರನ್ನು ಹಿಡಿಸಿ ಹೊಡಿಸುವುದು,

ಎದುರಿಸಿದವರನ್ನು ಕೊಲ್ಲಿಸುವುದು; ಹೀಗೆಲ್ಲಾ ಮಾಡುತಾನೆ. ಇದ

ಕ್ಕೆಲ್ಲಾ ಅವನ ಐಶ್ವರ್ಯಮದವೇ ಕಾರಣವೆಂದು ಹೇಳುತಾರೆ. ಯಾರಿಗೂ

ಇವನನ್ನು ಕಂಡರೆ ಆಗದು; ಆದರೆ ಈ ಮಾತನ್ನು ಅವನ ಎದುರಿಗೆ

ಆಡಲು ಯಾರಿಗೂ ಧೈರ್ಯವಿಲ್ಲ. ನನಗೆ ಏನು ಕೊಟ್ಟರೂ ಹೀಗೆ

ಜನರ ದ್ವೇಷವನ್ನು ಕಟ್ಟಿಕೊಳ್ಳಲಾರೆ. ಅವರ ಸ್ಥಿತಿ ನನಗೆ ಬೇಡ. 

-----------------------------------------------

೨] ಸುಮತಿ ಮದನಕುಮಾರರ ಚರಿತ್ರೆ ೧೭


ಅರಸಿ.- ತೊಟ್ಟು ಕೊಳ್ಳು ವುದಕ್ಕೆ  ಕಿನ್‌ಕಾಪಿನ ಅಂಗಿ, ತಿರುಗಾಡು

ವುದಕ್ಕೆ ಗಾಡಿ, ಯಾವ ಕೆಲಸಕ್ಕೂ ಕಾದು ಬಿದ್ದಿರುವುದಕ್ಕೆ ಓಲೆಕಾರರು,

ಇದೆಲ್ಲಾ ನಿನಗೆ ಬೇಡವೆ?


ಸುಮತಿ--ಆ ಪಕ್ಷಕ್ಕೆ ಅಮ್ಮಯ್ಯಾ, ಯಾವ ಅಂಗಿಯಾದರೇನು?

ಮೈಗೆ ಬೆಚ್ಚಗಿದ್ದರೆ ಸರಿ, ವಾಹನಗಳಿಂದೇನು? ಅದೇನೂ ಇಲ್ಲದೇ

ಇದ್ದರೆ ಮನಸ್ಸು ಬಂದಕಡೆ ನಾನು ತಿರುಗಾಡಬಹುದು. ಆಳುಗಳು

ನೂರುಜನ ತಾನೇ ಇದ್ದರು; ಫಲವೇನು? ಅವರಿಗೆ ಕೆಲಸವೇನಿದೆ?


ಮೀನಾಂಬಕಿಯು ಸುಮತಿಯನ್ನು ಅತಿ ಕೀಳಾಗಿ ತಿಳಿದು,

ಅವನ ಸಂಗಡ ಇನ್ನು ಯಾವ ಮಾತನ್ನೂ ಆಡದೆ, ಆ ಗಂಡನ್ನು

ಬೆರಗಾಗಿ ನೋಡುತಿದ್ದಳು.


ಸಾಯಂಕಾಲದ ಸಮಯಕ್ಕೆ ಸುಮತಿಯು ತಮ್ಮ ಮನೆಗೆ

ಹೋದನು. ಅಲ್ಲಿ ಅವರ ತಂದೆಯಾದ ಸೂರ್ಯಭಟ್ಟನು ಮಗನನ್ನು

ಕುರಿತು ಅನಂಗರಾಜರ ಅರಮನೆಗೆ ಹೋಗಿದ್ದೆಯಲ್ಲಾ, ಏನೇನು

ನೋಡಿದೆ? ಯಾವ ಯಾವುದು ಚೆನ್ನಾಗಿತ್ತು. ಎಂದು ಕೇಳಿದನು.


ಆಗ ಸುಮತಿಯು-- ಹವುದು, ಹೋಗಿದ್ದೆ ; ಅವರೆಲ್ಲಾ ನನ್ನನ್ನು

ಬಹುವಾಗಿ ಲಾಲಿಸಿದರು. ನನಗೇನೊ ಅವನು ಉಪಕಾರವನ್ನೇ

ಮಾಡಿದಹಾಗಾಯಿತು. ಆದರೆ ನಾನು ಅಲ್ಲಿಗೆ ಹೋಗದೆ ಮನೆಯ

ಲ್ಲಿಯೇ ಇದ್ದರಾಗಿತ್ತು ಎನ್ನಿಸಿಹೋಯಿತು. ನಿಧಾನವಾಗಿ ಸ್ವಲ್ಪ

ತಿಂಡಿ ತಿನ್ನಬೇಕು ಎಂದರೆ ಮಾರ್ಗವಿಲ್ಲ; ನನ್ನ ಮನಸ್ಸಿಗೆ ಬಹು

ಅಸಮಾಧಾನವಾಯಿತು. ಒಬ್ಬ ಬರುವುದು, ಹಣ್ಣಿನ ಮೇಲಿನ ಸಿಪ್ಪೆ

ವರೆಯುವುದು ; ಇನ್ನೊಬ್ಬ ಬರುವುದು, ಅದನ್ನು ಕುಯ್ಯುವುದು ;

ಇನ್ನೊಬ್ಬ ಬರುವುದು, ಅದರ ಪಚ್ಚಡಿಯನ್ನು ನನ್ನ ಬಾಯಿಗೆ ತಿನಿಸು

ವುದು; ಇನ್ನೊಬ್ಬ ಬರುವುದು, ನಾನು ಉಗುಳುವುದಕ್ಕೆ ಮುಂಚೆಯೇ

ನನ್ನ  ಬಾಯಿನಿಂದ ಸಿಪ್ಪೆಯನ್ನು ಕಿತ್ತುಕೊಂಡು ಹೋಗುವುದು ;

ಇನ್ನೊಬ್ಬ ಹಾಲನ್ನು ತಂದಿರಿಸುವುದು ; ಮತ್ತೊಬ್ಬ ಹಾಲನ್ನು ಆರಿಸು

ವುದು; ಮತ್ತೊಬ್ಬ ಅದನ್ನು ಬಟ್ಟಲಿಗೆ ಹನಿಸುವುದು, ಮತ್ತೊಬ್ಬ ಆ

ಬಟ್ಟಲನ್ನು ನನಗೆ ತಂದು ನೀಡುವುದು ; ಮತ್ತೊಬ್ಬ ನನ್ನ 

-----------------------------------------

೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಕೈಯಿಂದ ಅದನ್ನು ಇಸುಕೊಳ್ಳುವುದಕ್ಕೆ ಸಿದ್ಧವಾಗಿ ಕಾದಿರು

ವುದು; ಮಗದೊಬ್ಬ ನನ್ನ ಕೈಗೆ ನೀರಹಾಕಲು ಬೆಳ್ಳಿ ಚಂಬಿನಲ್ಲಿ ಬಿಸಿ

ನೀರನ್ನು ಹಿಡಿದುಕೊಂಡು ಕಾದಿರುವುದು; ಮಗದೊಬ್ಬ ನಾನು ಕೈ 

ತೊಳೆದುಕೊಳ್ಳುವುದಕ್ಕೆ ತಟ್ಟೆಯನ್ನು ಸಿದ್ಧವಾಗಿ ಹಿಡಿದುಕೊಂಡಿರು

ವುದು; ಮಗದೊಬ್ಬ ನನ್ನ ಕೈ ಒರಸುವುದಕ್ಕೆ ಚೌಕವನ್ನು ಹಿಡಿದು

ಕೊಂಡು ನಿಂತಿರುವುದು: ಹೀಗೆಲ್ಲಾ ಮಾಡುತಿದ್ದರು. ನನಗೇನೋ

ಕಂಣು ಕೈಕಾಲುಗಳೇನೂ ಇಲ್ಲದೇ ಇರುವಹಾಗೂ ಇವರೆಲ್ಲಾ ನನಗೆ

ಸಹಾಯ ಮಾಡುವಹಾಗೂ. ಇದಲ್ಲದೆ ಒಬ್ಬ ಈ ಕಡೇ ಬರುವನಲ್ಲ,

ಒಬ್ಬ ಆಕಡೇ ಹೋಗುವನಲ್ಲ, ಇನ್ನೊಬ್ಬ ಓಡಿಹೋಗುವನಲ್ಲ ಹೀಗೆ

ಹಾರಾಡುತಿದ್ದ ಈ ಓಲೆಕಾರರ ಸಂಭ್ರಮ ಸಾಕೋಸಾಕು. ಈ ಗದ್ದಲ

ಎಂದಿಗಾದರೂ ಮುಗಿಯುವುದೇ ಇಲ್ಲವೊ ಏನೋ ಎಂದು ನನಗೆ

ತೋರಿಹೋಯಿತು. ಅವರು ಕೊಟ್ಟ ತಿಂಡಿಯನ್ನೇನೋ ತಿಂದೆ;

ತಿಂದಕೂಡಲೆ ಅತ್ತಿತ್ತ ಅಡ್ಡಾಡದಹಾಗೆ ಒಂದು ಜಾವದ ಹೊತ್ತು

ಸುಮ್ಮನೇ ಮಾತನಾಡಿಸುತಾ ಕೂರಿಸಿಕೊಂಡರು. ಅರಸಿತ್ತಿಯು ನನ್ನ

ಸಂಗಡ ಮಾತನಾಡುವುದಕ್ಕೆ ಮೊದಲು ಮಾಡಿದಳು; ಆಕೇ ಮಾತು

ರಾಮಜೋಯಿಸರ ಮಾತಿನ ಹಾಗಿರಲಿಲ್ಲ; ಪ್ರಧಾನಿಗಳ ಮನೆಯ

ವರನ್ನು ಕಂಡಹಾಗೆ ಎಲ್ಲರೂ ನನ್ನನ್ನು ಬೈಯುವುದಕ್ಕೆ, ಒಳ್ಳೇ ಬಟ್ಟೆ

ಯನ್ನು ಹಾಕಿಕೊಳ್ಳುತ್ತೀಯ? ನೀನು ದೊರೆಯಾಗಬೇಕೆ? ನಿನಗೆ

ಐಶ್ವರ್ಯ ಬರಬೇಕೆ? ಎಂದು ಏನೇನೋ ಕೇಳುತ ಬಂದಳು, ಎಂದು

ತಂದೆಯ ಸಂಗಡ ಹೇಳಿದನು.


ಅತ್ತ ಅರಮನೆಯಲ್ಲಿ ಈ ಮಧ್ಯೆ ನಡೆಯುತಿದ್ದ ಮಾತೆಲ್ಲಾ

ಸುಮತಿಯ ಗುಣಕಥನವೇ ಆಗಿತ್ತು. ಮೀನಾಂಬಕೀದೇವಿಯು ಆ

ಹುಡುಗ ಧೈರ್ಯಶಾಲಿಯೆಂದೂ ನಿಷ್ಕಪಟ ಎಂದೂ ಒಪ್ಪಿಕೊಂಡಳು;

ಅವನ ಒಳ್ಳೇ ಸ್ವಭಾವವನ್ನೂ ಧಾರಾಳವಾದ ಬುದ್ಧಿಯನ್ನೂ ಕಂಡು

ಬೆರಗಾದಳು. ಆದರೆ ಅವನ ಮಾತಿನಲ್ಲಿ ಸ್ಪಲ್ಪ ಒರಟುತನವಿದೆ

ಎಂತಲೂ, ನಯವಿಲ್ಲವೆಂತಲೂ, ಇಂಥಾ ವಿನಯವೂ ವಾಗ್ಭೂಷಣವೂ

ಅಟ್ಟಹಾಸದಿಂದ ಬಾಳುವ ಐಶ್ವರ್ಯವಂತರ ಮಕ್ಕಳಿಗೆ ಹೊರತು ಬಡ 

----------------------------------------------

2] ಸುಮತಿ ಮದನಕುಮಾರೆರ ಚರಿತ್ರೆ ೧೯ 


ವರ ಮಕ್ಕಳಿಗೆ ಬರುವುದಿಲ್ಲವೆಂತಲೂ ಪಟ್ಟುಹಿಡಿದು ಮಾತನಾಡಿದಳು.


ಅದಕ್ಕೆ ಅನಂಗರಾಜನು ಒಪ್ಪದೆ -ಎಂಥಾ ಪದವಿಯಲ್ಲಿರತಕ್ಕವ

ರಿಗೇ ಆಗಲಿ, ಸುಮತಿಯಹಾಗೆ ಒಳ್ಳೇ ಸ್ವಭಾವವೂ ಬುದ್ಧಿ ಕೌಶಲ್ಯವೂ

ಇರತಕ್ಕ ಮಕ್ಕಳನ್ನು ಪಡೆಯುವುದು. ಪೂರ್ವಜನ್ಮದ ಪುಣ್ಯವೇ 

ಹೊರತು ಮತ್ತೆ ಬೇರೇ ಇಲ್ಲ. ಈ ಮೇಲುಮೇಲಿನ ವಾಗ್ವಿನಯವನ್ನೂ

ಮರ್ಯಾದೆಯುಕ್ತವಾದ ಮೇಲ್ಮಾತನ್ನೂ ಬೇಗ ಕಲಿಯಬಹುದು ;

ಇಂಥಾ ತಳಕುಪಳಕುಗಳು ತಮ್ಮಲ್ಲಿರುವ ಉತ್ತಮೋತ್ತಮವಾದ

ಗುಣನೆಂದೂ, ಅದೇ ದೊಡ್ಡ ಗುಣನೆಂದೂ ದೊಡ್ಡವರು ಕೊಚ್ಚಿಕೊಳ್ಳ

ಬಹುದು. ಇಂಥಾ ನಡತೆ ಬಹು ಸುಲಭವಾಗಿ ಬರುವುದು ; ಮತ್ತು

ನಾವು ನಮ್ಮ ಮೈಮೇಲಿನಿಂದ ತೆಗೆದುಹಾಕಿದ ಜೀರ್ಣವಸ್ತ್ರಗಳು

ಹೇಗೆ ನಮ್ಮ ಕಂಚುಕಿಗಳ ಮೈಮೇಲಕ್ಕೂ ದಾದಿಯರ ಮೈಮೇಲಕ್ಕೂ

ಸುಲಭವಾಗಿ ಏರುವವೋ, ಹಾಗೆಯೇ ಈ ಅಲ್ಪಗುಣಗಳೂ ನಮ್ಮಿಂದ

ಅವರಿಗೆ ಹತ್ತುವವು. ಆದರೆ ಈ  ಭೃತ್ಯರು ಕೊಳಕುಬಟ್ಟೆಯನ್ನು ಹಾಕಿ

ಕೊಂಡು ತಿವಿದು ಗಟ್ಟಿಸಿದ ಹಾಗೆ ಆರೋಗ್ಯವಾಗಿರುವುದೇ ಅವರಿಗೂ

ಅವರ ಸ್ವಾಮಿಗೂ ಇರುವ ಭೇದ. ಮತ್ತೆ ಯಾವ ಭೇದವೂ ಇಲ್ಲ. ಎಷ್ಟೇ

ಮರ್ಯಾದಸ್ಥಿತಿ ಇರಲಿ, ಇನ್ನು ಎಂಥಾ ಉನ್ನತವಾದ ಗುಣವಿರಲಿ 

ಇದೆಲ್ಲಕ್ಕೂ ಮನಸ್ಸೇ ಮುಖ್ಯವಾದ ಸ್ಥಾನ. ಗಂಭೀರವಾದ ಅಭಿಮತ,

ಉತ್ತಮವಾದ ಧೈರ್ಯ, ಅಶೇಷರಲ್ಲಿಯೂ ಏಕರೀತಿಯಾಗಿರುವ ನಿಜ

ವಾದ ದಯಾರಸ, ಈ ಗುಣಗಳು ನಿಜವಾದ ದೊಡ್ಡತನಕ್ಕೆ ಅಂಗಗಳು.

ಈ ಗುಣಗಳು ಲೋಪವಾದರೆ ಅವುಗಳಿಗೆ ಬದಲಾಗಿ ಬೇರೇ ಕೃತಕವಾದ

ಧ್ವನಿಯಲ್ಲಿ ಮಾತಾಡುವುದು, ಮುಖದಲ್ಲಿಯೂ ಕೈಯಲ್ಲಿಯೂ ವಿಶೇಷ

ವಾದ ಅಭಿನಯವನ್ನು ತೋರಿಸುವುದು ಮನಸ್ಸು ಬಂದಂತೆ ಡಂಭವಾದ

ಉಡುಪನ್ನು ಹಾಕಿಕೊಳ್ಳುವುದು, ಇಂಥಾ ಹೊರಗಿನ ನಡತೆಗಳು ಇರ

ಬಲ್ಲವೆಂದು ತಿಳಿಯುವರು ಮಂದಮತಿಗಳಾಗಿರಬೇಕು. ಇಂಥಾ ಚರ್ಯ

ಗಳಿಗೂ ನಿಜವಾದ ದೊಡ್ಡತನಕ್ಕೂ ಬಹುದೂರ. ಅಷ್ಟೇ ಅಲ್ಲದೆ ಇಂಥಾ

ಹೊರಗಿನ ಶೃಂಗಾರಗಳು ಕೆಲಸಿಗರಲ್ಲಿಯೂ, ಚಿಪ್ಪಿಗರಲ್ಲಿಯೂ, ಆಟ

ಗಾರರಲ್ಲಿಯೂ, ನಟುವರಲ್ಲಿಯೂ, ಸೂಳೆಯರಲ್ಲಿಯೂ, ಮತ್ತೂ ಇತರ 

------------------------------------------

20 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಅನೇಕವಿಧವಾದ ವಂಚಕರಲ್ಲಿಯೂ ನೆಲೆಗೊಂಡಿವೆ; ಮನಸ್ಸಾಕ್ಷಿಯಾ 

ಗಿಯೂ ನನಗೆ ತೋರುವುದೇನೆಂದರೆ : ಈ ಬ್ರಾಹ್ಮಣರ ಹುಡುಗನಲ್ಲಿ

ನಿಜವಾದ ಗಾಂಭೀರ್ಯಕ್ಕೂ ಸದ್ಗುಣಕ್ಕೂ ತಕ್ಕ ಬೀಜವಿದೆ. ನಮ್ಮ

ಮಗುವಿನಲ್ಲಿ ಅವನ ಪದವಿಗೆ ಸಾಧಾರಣವಾಗಿರಬೇಕಾದ ಗುಣ

ಗಳೇನೋ ಇರಲೇಬೇಕು; ಗುಣದಲ್ಲಿ ಸುಮತಿಗಿಂತಲೂ ನಮ್ಮ ಹುಡು

ಗನು ಯಾವ ಭಾಗದಲ್ಲಿಯೂ ಕಡಮೆಯಲ್ಲವೆನ್ನಿಸಿಕೊಳ್ಳಲಿ, ಎನ್ನುವುದೇ

ನನ್ನ ಕೋರಿಕೆ. ಈ ವಿಷಯವಾಗಿ ನನ್ನಲ್ಲಿ ಅತಿಯಾದ ಕುತೂಹಲ.

ವೇನಾದರೂ ತೋರಿಬಂದರೆ  ಅದು ನಮ್ಮ ಮದನನ ಅಭಿವೃದ್ಧಿಯಲ್ಲಿ

ನನಗಿರುವ ಆಸಕ್ತಿಯಿಂದ ಹುಟ್ಟಿದ್ದೇ ಹೊರತು ಮತ್ತೇನೂ ಅಲ್ಲ.

ನಮ್ಮಿಬ್ಬರಿಗೂ ಅವನಲ್ಲಿರುವ ಅತಿಪ್ರೀತಿಯಿಂದ ಇದುವರೆಗೆ ಅತಿಯಾಗಿ

ಮುದ್ದು ಮಾಡಿಬಿಟ್ಟೆವು. ಅವನಿಗೆ ಸ್ವಲ್ಪ ಯಾತನೆಯೂ ಸ್ವಲ್ಪ ಅಸಮಾ

ಧಾನವೂ ಆಗಕೂಡದೆಂಬ ನಮ್ಮ ಅಭಿಲಾಷೆಯಿಂದ ಅವನ ಸ್ವಭಾ

ವವು ಅತಿ ನಾಜೂಕಾಯಿತು. ಸಿಡುಕಲು ವಿಪರೀತವಾಯಿತು. ಅವನ

ಮರ್ಜಿಯನ್ನು ಅನುಸರಿಸಿ ನಡೆಯಬೇಕೆಂಬ ನಮ್ಮ ಆಶೆಯಿಂದ,

ಅವನು ಮನಸ್ಸು ಬಂದ ಹಾಗೆ ಆಡುವ ಐಲಾಟಗಳಿಗೆ ನಾವು ಸಹಕಾರಿ

ಗಳಾಗಬೇಕಾಗಿ ಬಂತು. ಅವನಿಗೆ ಯಾವನಿಂದ ಯಾವ ವಿಧವಾದ

ತೊಡಕೂ ನಿರ್ಬಂಧವೂ ಇರಕೂಡದೆಂದು ನಾವು ಮಾಡುವ ವಿಶೇಷ

ಪ್ರಯತ್ನವೇ ಅವನಿಗೆ ಒಂದಕ್ಷರವೂ ಬಾರದೆ ಓರಗೇ ಹುಡುಗರಿ

ಗಿಂತಲೂ ಎಷ್ಟೋ ಕೀಳಾಗಿರುವುದಕ್ಕೆ ಕಾರಣವಾಯಿತು. ಇದೆಲ್ಲ

ವನ್ನೂ ಬಾಯಲ್ಲಿ ಆಡದೆ ನನಗೆ ಮಗುವಿನಲ್ಲಿರುವ ಪ್ರೇಮದಿಂದಲೂ,

ಅವನ ಕ್ಷೇಮಕ್ಕೆ ಏನಾದರೂ ನಾನು ಮಾಡಿದರೆ ನೀನು ಅಳುತಾ

ಕೂತುಕೊಳ್ಳುತೀಯಲ್ಲಾ ಎಂಬ ಯೋಚನೆಯಿಂದಲೂ ನನಗಿದ್ದ

ಅಸಮಾಧಾನವನ್ನು ಮುಚ್ಚಿಕೊಂಡಿದ್ದೆ. ಆದರೆ ಅವನ ಪುರೋವೃದ್ಧಿಯ

ಯೋಚನೇಮೇಲೆ ಯಾವ ಅಭಿಮಾನವೂ ಹಾಯಲಾರದೇ ಹೋಯಿತು.

ಇದರಿಂದ ನಾನು ಒಂದು ಖಂಡಿತವಾದ ಸಂಕಲ್ಪವನ್ನು ಮಾಡಬೇಕಾಗಿ

ಬಂತು. ಇದಕ್ಕೆ ನೀನು ಅಸಮಾಧಾನಪಟ್ಟುಕೊಳ್ಳಕೂಡದು. ಆ

ಸಂಕಲ್ಪವೇನೆಂದರೆ ಈ ಊರಲ್ಲಿರುವ ರಾಮಜೋಯಿಸರು ತಮ್ಮ 

--------------------------------------------

a] ಸುಮತಿ ಮದನಕುಮಾರರ ಚರಿತ್ರೆ ೨೧ 


ಅಧೀನಕ್ಕೆ ನಮ್ಮ ಮಗುವನ್ನು ತೆಗೆದುಕೊಳ್ಳುವುದಾದರೆ, ಅವರ ಸಮೀ 

ಪಕ್ಕೆ ಇವನನ್ನು ಕಳುಹಿಸಬೇಕೆಂಬುದು. ಸುಮತಿಯೂ ನಮ್ಮ

ಮದನನೂ ವಾರಿಗೇಹುಡುಗರು, ಇಬ್ಬರ ಎತ್ತರವೂ ಒಂದೇ, ಇಬ್ಬರ

ವಯಸ್ಸೂ ಒಂದೇ. ಅಕಸ್ಮಾತ್ತಾಗಿ ಉಂಟಾದ ಸುಮತಿಯ ಪರಿಚಯ

ದಿಂದ ನಮ್ಮ ಮಗುವಿಗೆ ಕ್ಷೇಮವಾದರೆ ಸಾಕು. ಆದಕಾರಣ ಸುಮ

ತಿಯ ತಿಂಡಿ ತೀರ್ಥ ಮೊದಲಾಗಿ ಅವನಿಗೋಸ್ಕರ ತಗಲುವ ವೆಚ್ಚ

ವನ್ನೆಲ್ಲಾ ನಾನು ನೋಡಿಕೊಳ್ಳುತೇನೆ. ನಮ್ಮ ಮಗುವಿನ ಸಂಗಡಲೇ

ಸುಮತಿಯು ಯಾವಾಗಲೂ ಸಹಪಾಠಿಯಾಗಿರುವಂತೆ ಮಾಡಿಸ

ಬೇಕೆಂದು ಸೂರ್ಯಭಟ್ಟರಿಗೆ ನಾನು. ಹೇಳಬೇಕೆಂಬದಾಗಿದೇನೆ:

ಹೀಗೆಂದು ಅರಸನು ತನ್ನ ಅಭಿಪ್ರಾಯವನ್ನು ವಿಶದವಾಗಿ ಹೆಂಡತಿಯ

ಸಂಗಡ ಹೇಳಿದನು.

  ... 

3ನೆ ಅಧ್ಯಾಯ 

ಈ ರೀತಿಯಲ್ಲಿ ದೊರೆಯು ತನ್ನ ಮನಸ್ಸಿನಲ್ಲಿ ಮಾಡಿಕೊಂಡಿದ್ದ

ಖಂಡಿತವಾದ ಸಂಕಲ್ಪನನ್ನು ಕೇಳಿದ ಕೂಡಲೆ, ಅರಸಿಯು ಗಂಡನ

ಮನೋಗತವೆಲ್ಲಾ ಬಹಳ ಯುಕ್ತವಾದುದೆಂತಲೂ ಹಾಗೆ ನಡೆಸುವುದು

ಅಗತ್ಯವೆಂತಲೂ ತಿಳಿದುಕೊಂಡು ಆತನ ಮಾತಿಗೆ ಪ್ರತಿಯಾಗಿ

ಹೇಳದೆ ಸುಮ್ಮನಿದ್ದಳು. ಆದರೆ ಮಗನನ್ನು ಬಿಟ್ಟು ಕಳುಹಿಸುವುದಕ್ಕೆ

ಮನಸ್ಸಿಲ್ಲದೇ ಕೊನೆಗೆ ಕಳುಹಿಸಿಕೊಟ್ಟಳು. ಕೂಡಲೆ ಒಂದಾನೊಂದು

ಸೋಮವಾರ ಶಿವಪೂಜೇಕಾಲಕ್ಕೆಸರಿಯಾಗಿ ಅನಂಗರಾಜರ ಅರಮನೆಗೆ

ದಯಮಾಡಿಸಬೇಕೆಂದು ಅಪ್ಪಣೆಯಾಗಿರುವುದಾಗಿ ಊಳಿಗದವರು

ಹೋಗಿ ವೇದಮೂರ್ತಿ ರಾಮಜೋಯಿಸರನ್ನು ಕರೆದರು... ಅದೇ

ಪ್ರಕಾರ ರಾಮಜೋಯಿಸನು ಅರಮನೆಗೆ ಬಂದು ಯೋಗ್ಯತಾನುಸಾರ 

-----------------------------------------------

೨೨ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ


ವಾದ ಮರ್ಯಾದೆಯನ್ನು ಹೊಂದಿ ಸಭೆಯಲ್ಲಿ ಕೂತುಕೊಂಡನು. ಅರ

ಸನು ಅದನ್ನು ಕಂಡು ಆತನನ್ನು ತನ್ನ ಸಮೀಪಕ್ಕೆ ಕರೆದು ಕುಳ್ಳಿರಿಸಿ.

ಕೊಂಡು ಆಮಾತು ಈಮಾತು ಆಡುತ್ತಾ, ತನ್ನ ಮಗನ ನಿದ್ಯಾಭ್ಯಾಸ

ವಿಷಯವನ್ನು ಮೆಲ್ಲಗೆ ತೆಗೆದನು; ಮತ್ತು ತನ್ನ ಯೋಗ್ಯತೆ ಮೀರಿ 

ಮರ್ಯಾದೆಯನ್ನು ಮಾಡುವುದೂ ಅಲ್ಲದೆ, ತನ್ನ ಮಗ ಅಕ್ಷರಸ್ಥನಾಗಿ

ಅಭಿವೃದ್ಧಿಯಾಗುವುದೇ ತನ್ನ ಮುಖ್ಯೋದ್ದೇಶವಾದ ಕಾರಣ, ಪ್ರತ್ಯುಪ

ಕಾರಕ್ಕೆ ಮೀರಿದಂಥಾ ಉಪಕೃತಿಯನ್ನು ತಾನು ಜೋಯಿಸನಿಂದ

ಹೊಂದಿದವನೆಂದು ಭಾವಿಸುತೇನೆಂಬದಾಗಿ ಆತನ ಸಂಗಡ ಹೇಳಿದನು.


ಈ ಮಾತನ್ನು ಕೇಳಿ ಜೋಯಿಸನು ನಿಧಾನವಾಗಿ ಸ್ವಲ್ಪಹೊತ್ತು

ಪರ್ಯಾಲೋಚನೆ ಮಾಡಿ, ತರುವಾಯ ದೊರೆಯನ್ನು ಕುರಿತು, -ಸ್ವಾಮಿ, 

ಒಂದು ಸಂಗತಿಯನ್ನು ಅರಿಕೆ ಮಾಡಬೇಕಾಗಿದೆ, ಕ್ಷಮಿಸಬೇಕು;

ಕೆಲವು ತಿಂಗಳ ಮಟ್ಟಿಗೆ ತಮ್ಮ ಮಗನನ್ನು ನನ್ನ ವಶಕ್ಕೆ ತೆಗೆದು

ಕೊಂಡು ಆತರ ಅಭಿವೃದ್ಧಿ ಗೊಸ್ಕರ ನನ್ನ ಕೈಲಾದ ಸಾಹಸವನ್ನೆಲ್ಲಾ

ಮಾಡುವುದಕ್ಕೆ ಸಿದ್ಧನಾಗಿದೇನೆ. ಆದರೆ ಒಂದು ಮಾತನ್ನು ನಾವು

ನಡಸಿಕೊಡದಿದ್ದರೆ ತೀರುವುದಿಲ್ಲ, ಆತನಿಗೆ ನಾನು ಒಬ್ಬ ಸ್ನೇಹಿತನಾಗಿ

ಇರುವನಂತೆಯೇ ತೋರ್ಪಡಿಸಿಕೊಂಡು ತಮ್ಮ ಕಾರ್ಯವನ್ನು ನೆರವೇರಿಸ

ಬೇಕು. ಇಷ್ಟರಮಟ್ಟಿಗೆ ಮಾಡಲು ನನಗೆ ಅಭಯವಾಗಿ, ನನ್ನ ನಡೆ

ನುಡಿಗಳು ತಮಗೆ ಸಮ್ಮತವಾದರೆ, ಎಷ್ಟು ದಿವಸ ಬೇಕಾದರೂ ಆತ

ನನ್ನು ಬಳಿಯಲ್ಲಿ ಇಟ್ಟುಕೊಂಡಿರುತೇನೆ. -ಈ ಮಧ್ಯೆ ಅತಿ ಪ್ರೀತಿ

ಯಿಂದಲೂ ಮುದ್ದಿನಿಂದಲೂ ಹುಡುಗನ ಗುಣವು ಸ್ವಲ್ಪ ಹದಗೆಟ್ಟಿದೆ

ಎಂದು ನನಗೆ ಭಯವುಂಟಾಗಿದೆ. ಅದು ವ್ಯತ್ಯಾಸವಾಗಬೇಕು. ಆದ್ದ

ರಿಂದ ನಾನು ಉಪಾಧ್ಯಾಯನೆಂದು ತೋರ್ಪಡಿಸಿಕೊಳ್ಳು ವುದಕ್ಕಿಂತಲೂ

ತಮಗೂ ತಮ್ಮ ಮನೆಯವರೆಲ್ಲರಿಗೂ ಮಿತ್ರನಂತೆ ಸದ್ಯಕ್ಕೆ ತೋರ್ಪಡಿಸಿ

ಕೊಂಡಲ್ಲಿ, ನನ್ನ ಕಾರ್ಯಕ್ಕೆ ಅಗತ್ಯವಾಗಿ ಬೇಕಾದ ಹತೋಟಿಯು

ನನಗೆ ಕೊಂಚ ಹೆಚ್ಚಾಗಿಯೇ ಇದ್ದೀತೆಂದು ತೋರುತಿದೆ; ಇದರ

ಮೇಲೆ ಸರ್ವಜ್ಞ ಚಿತ್ತ, ಹೀಗೆಂದು ಹೇಳಿದನು.


ಉಪಾಧ್ಯಾಯರಿಗೆ ಸಲ್ಲತಕ್ಕ ಮರ್ಯಾದೆಯಿಂದಲೇ ಆ ವಿದ್ವಾಂಸ 

----------------------------------------------

3] ಸುಮತಿ ಮದನಕುಮಾರರ ಚರಿತ್ರೆ 23 


ನನ್ನು ಕಾಣಬೇಕೆಂಬ ಅರಸನ ಉದಾರವಾದ ಮನಸ್ಸಿಗೆ ಜೋಯಿ

ಸನು ಹೇಳಿದ ಮಾತು ಎಷ್ಟೇ ಅಸಮಾಧಾನಕರವಾಗಿದ್ದಾಗ್ಗೂ, 

ದೊರೆಯು ಅದಕ್ಕೆ ಒಪ್ಪದೇಹೋದರೆ ತೀರದಾಗಿತ್ತು. ಅದೇ ಪ್ರಕಾರ

ಆವೂರಿಗೆ ಕೊಂಬಿನ ಕೂಗಿನ ದೂರದಲ್ಲಿದ್ದ ಅಗ್ರಹಾರದಲ್ಲಿ ರಾಮಜೋ

ಯಿಸನು ವಾಸಮಾಡುತಿರುವ ಮರೆಗೆ ಆ ಮಾರನೇದಿನಸ ಮದನ

ಕುಮಾರನನ್ನು ಕಳುಹಿಸಿದರು. 


ರಾಜಕುಮಾರನು ತನ್ನ ಮನೆಗೆ ಬಂದು ಸೇರಿದ ಮಾರನೇದಿನಸ

ಬೆಳಗ್ಗೆ ಅಷ್ಟು ಹೊತ್ತಿಗೇ ರಾಮಜೋಯಿಸನು ತನ್ನ ಆನ್ಹಿಕಗಳನ್ನು

ತೀರಿಸಿಕೊಂಡು ಧನುರ್ಮಾಸದ ಹಾಗೆ ಹೊತ್ತಿಗೆ ಮುಂಚೆಯೇ ಊಟ 

ವನ್ನು ಮಾಡಿಕೊಂಡು, ಸುಮತಿಮದನಕುಮಾರ ಈ ಉಭಯ

ರೊಡನೆ ಕೂಡಿ ಸಮಾಪದಲ್ಲಿದ್ದ ತನ್ನ ತೋಟಕ್ಕೆ ಹೋದನು, ಅಲ್ಲಿ

ಜೋಯಿಸನು ಸುಮತಿಯ ಕೈಗೆ ಒಂದು ಕಳೆಕೊಕ್ಕೆಯನ್ನು ಕೊಟ್ಟು

ತಾನು ಒಂದು ಗುದ್ದಲಿಯನ್ನು ತೆಗೆದುಕೊಂಡನು : ತರುವಾಯ ಬಹು

ಶ್ರದ್ಧೆಯಿಂದ ಅವರಿಬ್ಬರೂ ಅಗೆಯುವದಕ್ಕೆ ಮೊದಲು ಮಾಡಿದರು.


ಹಾಗೆ ಅಗೆಯುತಾ ಜೋಯಿಸನು ಆ ಹುಡುಗರನ್ನು ನೋಡಿ...

ಹಣ್ಣುತಿನ್ನ ಬೇಕೆಂದು ಆಶೆಯಿರತಕ್ಕವರು ,ಆ ಹಣ್ಣು ಬೆಳೆಯುವುದಕ್ಕೆ

ತಕ್ಕ ಕೆಲಸವನ್ನು ಮಾಡಬೇಕು; ಆದ್ದರಿಂದ ನಾನೂ ನಮ್ಮ ಸುಮ

ತಿಯೂ ನಮ್ಮ ದಿನಗಟ್ಟಲೇ ಕೆಲಸಕ್ಕೆ ಮೊದಲು ಮಾಡುತೇವೆ: ಇಗೋ

ಇದೇ ನನ್ನ ಪಾತ್ರೆ, ಅದು ಸುಮತೀದು,  ನಾವು  ನಿತ್ಯವೂ ಕೆಲಸ

ಮಾಡುತೇವೆ. ಯಾರು ಹೆಚ್ಚಾಗಿ ಬೆಳೆಯುತಾರೆಯೋ ಅವರಿಗೆ ಹೆಚ್ಚು

ತಿಂಡಿ ಸಿಕ್ಕುವುದು. ಅಯ್ಯಾ ಮದನು, ನೀನೂ ನಮ್ಮ ಜೊತೆಗೆ ಬರುವು

ದಾದರೆ ನಿನಗೂ ಒಂದು ತುಂಡನ್ನು ಗುರುತುಮಾಡಿಕೊಡುತೇನೆ ;

ಅದು ನಿನ್ನದೇ ಆಗಿರುತ್ತೆ; ಅದರಲ್ಲಿ ಆದ ಹಣ್ಣೆಲ್ಲಾ ನಿನ್ನದೇ. 


ಮದನಕುಮಾರ- ಒಂದು ಕಾಲಕ್ಕೂ ಇಲ್ಲ, ನಾನು ರಾಜ

ಕುಮಾರ; ಕೆಲಸಕ್ಕೆ ಬಾರದ ಕೂಲಿಯವರಹಾಗೆ ನಾನು ಇಂಥಾ

ಚಾಕರಿಗೆಲ್ಲಾ ಹೋಗಲಾರೆ, ನನಗೆ ಇಷ್ಟವಿಲ್ಲ. 


ಜೋಯಿಸ--ಹಾಗಾದಕ್ಕೆ ಸ್ವಾಮಿ ಮಹಾರಾಜಶ್ರೀ ರಾಜ 

---------------------------------------------

೨೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಕುಮಾರರೆ  ತಮ್ಮ ಚಿತ್ತ ಬಂದಂತೆ ಮಾಡಿ; ನಾನೂ ಸುಮತಿಯೂ

ಕೆಲಸ ಮಾಡುತೇವೆ, ನಮ್ಮ ದರ್ಜೆಗೆ ಏನೂ ಕಮ್ಮಿಯಿಲ್ಲ. ನಮ್ಮ

ಕೆಲಸದಲ್ಲಿ ನಾವು ಇರುತೇವೆ.


ಹೀಗೆ ಇವರಿಬ್ಬರೂ ಎರಡು ಗಂಟಿಹೊತ್ತು ಕೆಲಸಮಾಡುತಿದ್ದರು.

ಆಗ ರಾಮಜೋಯಿಸನು--ಇನ್ನು ಸಾಕು, ಈಗ್ಗೆ ಕೆಲಸವನ್ನು ನಿಲ್ಲಿ

ಸೋಣ, ಎಂದು ಗುದ್ದಲಿಯನ್ನು ಬಿಟ್ಟು ಸುಮತಿಯ ಕೈಯನ್ನು

ಹಿಡಿದುಕೊಂಡು, ಆ ತೋಟದಲ್ಲಿ ಒಂದು ಕೊನೆಯಲ್ಲಿದ್ದ ಗುಡಿಲಿಗೆ

ಹೋದನು. ಅಲ್ಲಿ ಅವರಿಬ್ಬರೂ ಕೂತುಕೊಂಡರು. ಅಲ್ಲಿ ಒಂದು ಬಿದಿರ

ತಟ್ಟೆಯಲ್ಲಿ ಇರಿಸಿದ್ದ ಒಳ್ಳೇಕಳಿತ ಬಾಳೇಹಣ್ಣುಗಳನ್ನೂ ಮಾವಿನ

ಹಣ್ಣುಗಳನ್ನೂ ಅವರಿಬ್ಬರೂ ಹಂಚಿಕೊಂಡರು.


ಇವರಿಬ್ಬರೂ ಕೆಲಸವನ್ನು ನಿಲ್ಲಿಸಿ ಗುಡಿಲಿನ ಸಮೀಪಕ್ಕೆ  ಬರು

ವಾಗ ಇವರ ಹಿಂದೆಯೇ ಬಂದು ಸಮೀಪದಲ್ಲಿ ನಿಂತಿದ್ದ ಮದನಕುಮಾ

ರನು ತನಗೂ ತಿನ್ನುವುದಕ್ಕೆ ಹಣ್ಣನ್ನು ಕೊಟ್ಟಾರೆಂದು ಕಾದುಕೊಂಡಿ

ದ್ದನು.ಆದರೆ  ಅವರಿಬ್ಬರೂ ಇವನ ಕಡೆಯೇ ತಿರುಗಿನೋಡದೆ, ಇವ

ನನ್ನು ಲಕ್ಷ್ಯಮಾಡದೆ, ತಾವು ತಿನ್ನುವುದಕ್ಕೆ ಮೊದಲು ಮಾಡಿದರು.

ಮದನಕುಮಾರನಿಗೆ ಇದನ್ನು ಕಂಡು ಸಹಿಸದೇ ಹೋಯಿತು. ಗುಳ

ಗುಳನೆ ಕಣ್ಣಿನಲ್ಲಿ ನೀರ ಸುರಿಸುತಾ ಗೊಳ್ಳೆಂದು ಗಟ್ಟ ಯಾಗಿ ಅಳುವು

ದಕ್ಕೆ ಮೊದಲು ಮಾಡಿದನು.


ಜೋಯಿಸನು ಅವನನ್ನು ನೋಡಿ ಲೇಶವೂ ಗಾಬರಿಪಡದೆ--

ಯಾಕೆ ಏನಾಯಿತು? ಎಂದು ಕೇಳಿದನು. ಮದನಕುಮಾರನು ಅತಿ

ಕೋಪದಿಂದ. ಜೋಯಿಸನ ಮುಖವನ್ನು ದುರುಗುಟ್ಟಿಕೊಂಡು

ನೋಡುತಾ ಅವನ ಮಾತಿಗೆ ಉತ್ತರವನ್ನೇ ಹೇಳದೆ ಸುಮ್ಮನೇ ನಿಂತಿ

ದ್ದವನು. ಅದನ್ನು ಕಂಡು ಆ ಪಂಡಿತನು--ಓ! ಹಾಗೆಯೇ ಸ್ವಾಮಿ?

ತಾವು ಮಾತನಾಡದಿದ್ದರೆ ಸುಮ್ಮನೇ ಇರಬಹುದು. ಮಾತನಾಡಲೇ

ಬೇಕೆಂಬ ನಿರ್ಬಂಧವೇನೂ ಇಲ್ಲಿಲ್ಲ, ಎಂದು ಹೇಳಿದನು.


ಮದನನಿಗೆ ಇನ್ನೂ ಅಸಮಾಧಾನ ಹೆಚ್ಚಾಯಿತು. ತನ್ನ ಕೋಪ

ವನ್ನು ಮರೆಮಾಚಿಕೊಳ್ಳುವುದಕ್ಕೆ ಸಾಮರ್ಥ್ಯವಿಲ್ಲದಕಾರಣ, ಗುಡಿ 

------------------------------------------

4] ಸುಮತಿ ಮದನಕುಮಾರರ ಚರಿತ್ರೆ ೨೫


ಲನ್ನು ಬಿಟ್ಟು ಆಚೆಗೆ ಓಡಿಹೋಗಿ, ಬಿಕ್ಕಳಿಸಿ ಬಿಕ್ಕಳಿಸಿ ಅಳುತಾ

ಅಲ್ಲಲ್ಲೇ ಸ್ವಲ್ಪ ಸ್ಪಲ್ಪ ನಿಂತು ಹಿಂತಿರುಗಿ ಹಿಂತಿರುಗಿ ಇವರನ್ನು

ನೋಡುತಾ ಆ ತೋಟದಲ್ಲೆಲ್ಲಾ ಓಡಾಡಿದನು. ತನಗೆ ದುಃಖ ಉಂಟಾ

ಗಲಿ ಸಂತೋಷಉಂಟಾಗಲಿ, ಯಾರೂ ತನ್ನನ್ನು ಲಕ್ಷ್ಯಮಾಡುವುದಿಲ್ಲ

ವಲ್ಲಾ ಅಂಥಾಸ್ಥಳಕ್ಕೆ ಬಂದೆನಲ್ಲಾ ಎಂದು ಅವನಿಗೆ ಏಕರೀತಿಯಲ್ಲಿ

ಅಸಮಾಧಾನವೂ ಆಶ್ಚರ್ಯವೂ ಉಂಟಾದವು. ಹಣ್ಣನ್ನೆಲ್ಲಾ ಜೋಯಿ

ಸನೂ ಸುಮತಿಯೂ ತಿಂದು ಮುಗಿಸಿದರು.


ಸುಮತಿಯು--ಜೋಯಿಸರೆ, ನಾವು ತೋಟದಲ್ಲಿ ಕೆಲಸ ಮಾಡಿ

ಯಾದ ಮೇಲೆ, 'ನೀನು ಒಂದು ಕಥೆಯನ್ನು ಓದು ಕೇಳುತೇನೆ'

ಎಂದು ಹೇಳಿದ್ದಿರಿ. ತಮಗೆ ಸಮಾಧಾನವಾಗಿದ್ದರೆ, ಇರುವೆ ನೊಣ

ಗಳ ಕಥೆಯನ್ನು ಓದುತೇನೆ, ಕೇಳಬೇಕು.


ಜೋಯಿಸ--ಅಗತ್ಯವಾಗಿ ಆಗಲಿ. ನಿಧಾನವಾಗಿ ಸ್ಪಷ್ಟವಾಗಿ

ಓದಬೇಕು, ಮಧ್ಯೆ ಮಧ್ಯೆ ಸಂದೇಹಪಡಬಾರದು. ಶಬ್ದಗಳನ್ನು

ತಪ್ಪಾಗಿ ಉಚ್ಚರಿಸಬಾರದು, ನೀನು ಓದಿದ್ದು ನಿನಗೆ ಅರ್ಥವಾಯಿತೆಂದು

ತೋರ್ಪಡಿಸಿಕೊಳ್ಳುವಹಾಗೆ ಓದಬೇಕು. ಇದೆಲ್ಲಾ ನಿನಗೆ ಜ್ಞಾಪಕ

ವಿದ್ದೇ ಇದೆ.


ತರುವಾಯ ಸುಮತಿಯು ಪುಸ್ತಕವನ್ನು ತೆಗೆದುಕೊಂಡು ಓದಲಾ

ರಂಭಿಸಿದನು.


ನೊಣಗಳು ಮತ್ತು ಇರುವೆಗಳು


ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ಗೌಡನ ತೋಟದ

`ಒಂದು ಮೂಲೆಯಲ್ಲಿ ಒಂದು ದೊಡ್ಡ ಇರುವೇಗೂಡು ಇತ್ತು. ಅಲ್ಲಿದ್ದ

ಇರುವೆಗಳು ಬೇಸಗೆಯಲ್ಲಿ ದಿನವೆಲ್ಲಾ ಹೊರಕ್ಕೆ ಬಂದು ಕಾಳುಗಳನ್ನು

ಕಚ್ಚಿಕೊಂಡು ಗೂಡಿನ ಒಳಕ್ಕೆ ಹೋಗುತಲೇ ಇರುತಿದ್ದವು. ಆ ಇರುವೇ

ಗೂಡಿನ ಹತ್ತಿರ ಕೆಲವು ಹೂವಿನ ಗಿಡಗಳಿದ್ದವು. ಆ ಗಿಡಗಳ ಮೇಲಿದ್ದ

ಹೂವಿಗೆ ಅನೇಕ ನೊಣಗಳು ಬಂದು ಎರಗುವುದು, ಅಲ್ಲಿಂದ ಹಾರು

ವುದು, ಝೇಂಕರಿಸುವುದು, ಒಂದು ಪುಷ್ಪದಿಂದ ಇನ್ನೊಂದು ಪುಷ್ಪಕ್ಕೆ 

--------------------------------------

೨೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ನೆಗೆಯುವುದು, ಹೀಗೆಲ್ಲಾ ಆಡುತಿದ್ದವು. ಆ ತೋಟದವನ ಮಗನಾದ

ಒಬ್ಬ ಸಣ್ಣ ಹುಡುಗನು ಇರುವೆ ನೊಣಗಳು ಮಾಡುತಿರುವ ಕೆಲಸ

ವನ್ನು ಆಗಾಗ್ಗೆ ನೋಡುತಲೇ ಇದ್ದನು. ಈ ಹುಡುಗನು ಚಿಕ್ಕವನಾಗಿ

ಏನೂ ಅರಿಯದವನಾಗಿದ್ದ ಕಾರಣ ಒಂದುದಿನ ತನ್ನಷ್ಟಕ್ಕೆ ತಾನೇ.

ಇರುವೆಯ ಹಾಗೆ ಏನೇನೂ ಅರಿಯದ ಪ್ರಾಣಿಗಳು ಇನ್ನು ಉಂಟೆ?

ನೊಣಗಳ ಹಾಗೆ ಹಾರಾಡುತ ಸಂತೋಷವಾಗಿರದೆ ಹಗಲೆಲ್ಲಾ ಗೇದು

ಕೆಲಸ ಮಾಡುತಲೇ ಇರುತಿವೆ. ಈ ನೊಣಗಳು ಸರಿ, ಲೋಕದಲ್ಲಿ

ಇಂಥಾ ಸದಾ ಸಂತೋಷಿಯಾದ್ದು ಇನ್ನು ಯಾವುದೂ ಇಲ್ಲ, ಎಂದು

ಕೊಂಡನು. ಈ ಹುಡುಗನು ಹೀಗೆ ಎಂದುಕೊಂಡು ಸ್ವಲ್ಪ ದಿವಸದ

ಮೇಲೆ ಮಳೆಗಾಲಬಂತು, ಸೂರ್ಯ ರಶ್ಮಿಯೇ ಕಾಣಿಸುವುದು ಕಷ್ಟ

ವಾಗಿತ್ತು. ಮೂರು ಹೊತ್ತೂ ಜೊರ್ರೆಂದು ಮಳೆ ಹುಯ್ಯುತ್ತಲೇ ಇತ್ತು.

ಮೇಲೆ ಕಂಡ ಸಣ್ಣ ಹುಡುಗನು ಆ ಮಳೆಯಲ್ಲಿಯೇ ಒಂದು ದಿನ

ತೋಟಕ್ಕೆ ಹೋಗಿ ನೋಡುವಾಗ್ಗೆ, ಅಲ್ಲಿ ಒಂದು ಇರುವೆಯೂ ಇರ

ಲಿಲ್ಲ. ಅಲ್ಲಿದ್ದ ನೊಣಗಳು ಮಾತ್ರ ಚದರಿಹೋಗಿ ಕೆಲವು ಅಲ್ಲಲ್ಲಿ

ಹಾರಾಡುತಿದ್ದವು; ಮತ್ತೆ ಕೆಲವು ಸತ್ತು ಬಿದ್ದಿದ್ದವು. ಅವನು ಒಳ್ಳೇ

ಗುಣಾಢ್ಯನಾದ ಹುಡುಗನಾಗಿದ್ದರಿಂದ ಆ ಸಣ್ಣ ಜೀವರಾಶಿಗಳನ್ನು

ನೋಡಿ ಮರುಕದಿಂದ, ತನ್ನ ತಂದೆಯನ್ನು ಕುರಿತು--ಅಪ್ಪ, ಇಲ್ಲಿದ್ದ

ಇರುವೆಗಳಿಗೆ ಏನು ಬಂತು? ಅವು ಏನಾದವು? ಎಂದು ಕೇಳಿದನು.


ತಂದೆ--ಮಗು, ನೊಣಗಳೆಲ್ಲಾ ಸತ್ತುಹೋದವು; ಯಾಕೆ ಎಂದು

ಕೇಳಿದರೆ ಈ ಜಂತುಗಳಿಗೆ ಚಚ್ಚರ ಕಡಮೆ; ಶ್ರಮಪಟ್ಟು ತಿಂಡಿಯನ್ನು

ಸೇರಿಸಿ ತುಂಬಿಕೊಳ್ಳಲಿಲ್ಲ; ಕೆಲಸಮಾಡುವುದಕ್ಕೆ ಅತಿಯಾಗಿ ಪಾಲು

ಮಾರಿಕೆಪಡುತಿದ್ದವು; ಅದರಿಂದ ನೊಣಗಳಿಗೆ ಇಂಥಾ ದುರ್ಗತಿ ಬಂತು,

ಇರುವೆಗಳಾದರೋ ಬೇಸಗೆಯಲ್ಲಿ ಶ್ರಮ ಬಿದ್ದು ಕೆಲಸಮಾಡಿ ಚಳಿ

ಗಾಲಕ್ಕೆ ಅನುಕೂಲಿಸುವ ಹಾಗೆ ತಿಂಡಿಯನ್ನು ತುಂಬಿಕೊಂಡವು.

ಅದರಿಂದ ಅವುಗಳೆಲ್ಲಾ ಕ್ಷೇಮವಾಗಿವೆ. ಬಿಸಿಲುಕಾಲ ಬಂದರೆ ಮತ್ತೆ

ಅವುಗಳೆಲ್ಲಾ ಬರುವವು, ಹೀಗೆಂದು ಹೇಳಿದನು.


ಈ ರೀತಿಯಲ್ಲಿ ಸುಮತಿಯು ಓದಿದ ಕಥೆಯನ್ನು ಕೇಳಿ ರಾಮ.

-------------------------------------

೩]         ಸುಮತಿ ಮದನಕುಮಾರರ ಚರಿತ್ರೆ         ೨೭.


ಜೋಯಿಸನು-ಸಾಕೈಯ್ಯ, ಸುಮತಿ ಬಾ, ನಾವು ಹಾಗೆಯೇ ಹೊರಕ್ಕೆ,

ಹೋಗಿ ಸುತ್ತಾಡಿಕೊಂಡು ಬರೋಣ, ಎಂದು ಆ ಹುಡುಗನನ್ನು

ಜೊತೆಯಲ್ಲಿ ಕರೆದುಕೊಂಡು ಹೊಲಗಳಲ್ಲಿ ಸುತ್ತಿಯಾಡುತಾ ಇದ್ದನು;

ತಮ್ಮ ದಾರಿಯಲ್ಲಿ ಕಣ್ಣಿಗೆಬಿದ್ದ ಬಗೆಬಗೇ ಗಿಡಮೂಲಿಕೆಗಳನ್ನು

ಜೋಯಿಸನು ಸುಮತಿಗೆ ತೋರಿಸುತಾ ಅವುಗಳ ಹೆಸರುಗಳನ್ನೂ

ಗುಣಗಳನ್ನೂ ಅವನಿಗೆ ಹೇಳಿಕೊಡುತಾ ಹೋದನು. ಹಾಗೆಯೇ

ಹೋಗುತಾ ದಾರಿಯಲ್ಲಿ ಒಂದು ಬೇಲಿಯ ಹತ್ತಿರ ಬೆಳೆದಿದ್ದ ಒಂದು

ಸಣ್ಣ ಗಿಡವನ್ನು ಸುಮತಿಯು ಕಿತ್ತು ತಂದು-ಜೋಯಿಸರೆ, ಈ ಗಿಡ

ಸಣ್ಣಗಿದೆ, ಮೂಸಿನೋಡಿದರೆ ಸುವಾಸನೆಯಾಗಿದೆ, ಇದನ್ನು ಬಾಯಿಗೆ

ಹಾಕಿಕೊಂಡು ತಿನ್ನ ಬಹುದೇ? ಎಂದು ಕೇಳಿದನು. ಅದಕ್ಕೆ ಉಪಾ

ಧ್ಯಾಯನು-ಮಗು, ನಿನ್ನ ಪುಣ್ಯ ಚೆನ್ನಾಗಿತ್ತು; ನೀನು ಬಾಯಿಗೆ

ಹಾಕಿಕೊಳ್ಳುವುದಕ್ಕೆ ಮುಂಚೆ ನನ್ನನ್ನು ಕೇಳಿದ್ದು ಒಳ್ಳೇದಾಯಿತು.

ಹಾಗಿಲ್ಲದೆ ನೀನು ಬಾಯಿಗೆ ಹಾಕಿಕೊಂಡಿದ್ದರೆ ವಿಶೇಷವಾಗಿ ಹೊಟ್ಟಿ

ತೊಳಸಿ ನಿನಗೆ ವಮನವಾಗುತಿತ್ತು, ತಲೆ ಸುತ್ತುತಿತ್ತು. ಇದು ಕಾಡ

ಸಬಸಿಗೆಗಿಡ, ಅತ್ಯಂತ ಪಿತ್ತಕಾರಿ; ಕಳ್ಳೀಗಿಡದ ಬುಡದಲ್ಲಿ ಹುಟ್ಟಿದ್ದ

ಕಾರಣ ಅದರ ವಿಷವೂ ಈ ಸೊಪ್ಪಿಗೆ ವ್ಯಾಪನೆಯಾಗಿರುವುದು, ಎಂದು

ಹೇಳಿದನು. ಅದಕ್ಕೆ ಸುಮತಿಯು-- ಪಂತರೆ, ಪದಾರ್ಥದ ಗುಣ

ಇಂಥಾದ್ದೆಂದು ತಿಳಿಯದೆ ನಾನು ಯಾವುದನ್ನೂ ತಿನ್ನುವುದಿಲ್ಲ;

ನನಗೆ ಆ ಅಭ್ಯಾಸವೇ ಇಲ್ಲ. ತಾವು ದಯಮಾಡಿ ನನಗೆ ಹೇಳಿ

ಕೊಟ್ಟರೆ ಹಸುರುಗಳ ಹೆಸರನ್ನೂ ಗುಣವನ್ನೂ ಚೆನ್ನಾಗಿ ಜಾಗ್ರತೆ

ಯಿಂದ ತಿಳಿದುಕೊಳ್ಳುತೇನೆ, ಎಂದು ವಿನಯವಾಗಿ ಹೇಳಿದನು. 


ತರುವಾಯ ಅವರಿಬ್ಬರೂ ಮನೇಕಡೆಗೆ ತಿರುಗಿದರು. ದಾರಿಯಲ್ಲಿ

ಸುಮತಿಯು ಬರುತಾ ಇರುವಾಗ ನೆಲದಮೇಲೆ ಒಂದು ದೊಡ್ಡ ಹದ್ದು

ಕೂತಿತ್ತು. ಅದು ತನ್ನ ಕಾಲಿನಲ್ಲಿ ಏನನ್ನೋ ಮೆಟ್ಟಿ ಕೊಂಡಿತ್ತು.

ಆ ಬೀಳನ್ನು ಹದ್ದು ತನ್ನ ಕೊಕ್ಕಿನಿಂದ ಕುಕ್ಕುವ  ಸಮಯವಾಗಿತ್ತು.

ಇದನ್ನು ಕಂಡು ಸುಮತಿಯು ಅಬ್ಬರಿಸುತಾ ಆಕಡೆ ಓಡಿಹೋದನು.

ಆ ಹದ್ದು ತನ್ನ ಕಾಲಿನಲ್ಲಿ ಮೆಟ್ಟಿ ಕೊಂಡಿದ್ದದನ್ನು ಅಲ್ಲಿಯೇ ಬಿಟ್ಟು 

-----------------------------------------

೨೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಹಾರಿ ಹೋಯಿತು. ಅದು ಕೆಳಗೆ ಬಿಟ್ಟು ಹೋದ್ದು ಒಂದು ಗಿಣೀ

ಮರಿಯಾಗಿತ್ತು. ಅದಕ್ಕೆ ಗಾಯವೇನೋ ಆಗಿತ್ತು, ಪ್ರಾಣಹೋಗಿರ

ಲಿಲ್ಲ. ಆಗ ಸುಮತಿಯು-.-ಜೋಯಿಸರೆ, ಆ ಕೆಟ್ಟಹದ್ದು ಈ ಪುಟ್ಟ

ಗಿಣಿಗೆ ಅರ್ಥ ಜೀವಮಾಡಿತು. ಅದರ ಮೈಯಿಂದ ರಕ್ತ ಸುರಿಯುತಿದೆ;

ರೆಕ್ಕೆ ನೇತಾಡುತಿದೆ. ಅದನ್ನು ನನ್ನ ಎದೆಗೆ ಅವಿಚಿಕೊಳ್ಳುತೇನೆ, 

ಬೆಚ್ಚಗಾಗಿ ಚೇತರಿಸಿಕೊಳ್ಳಲಿ. ಮನೆಗೆ ತೆಗೆದುಕೊಂಡು ಹೋಗೋಣ,

ಅದಕ್ಕೆ ತ್ರಾಣ ಬರುವತನಕ ನನ್ನ ಎಡೇ ಅನ್ನದಲ್ಲಿ ಅದಕ್ಕೂ ಸ್ವಲ್ಪ

ಹಾಕುತೇನೆ, ಎಂದನು.


ಅವರು ಮನೆಗೆ ಬಂದಕೂಡಲೆ ಸುಮತಿಯು ಮೊದಲು ಆ ಗಿಣೀ

ಮರಿಯನ್ನು ಜೋಪಾನಮಾಡಿ, ಒಂದು ಕುಕ್ಕೆಯಲ್ಲಿ ಮೆತ್ತಗಿರುವ

ಹಾಗೆ ಹುಲ್ಲನ್ನು ಹಾಕಿ ಒಂದು ಕರಟದಲ್ಲಿ ಸ್ವಲ್ಪ ಅನ್ನವನ್ನೂ

ಇನ್ನೊಂದು ಕರಟದಲ್ಲಿ ನೀರನ್ನೂ ಇರಿಸಿ, ಆದರ ಮೇಲೆ ತೆಳ್ಳಗಿರುವ

ಬಟ್ಟೆಯನ್ನು ಮುಚ್ಚಿದನು. ತರುವಾಯ ರಾಮಜೋಯಿಸನೂ

ಸುಮತಿಯೂ ಊಟಕ್ಕೆ ಹೊರಟು ಹೋದರು.


ಇತ್ತ ಮದನ ಕುಮಾರನಿಗೆ ಅವನ ಕೋರಿಕೆಯಂತೆ ನಡೆಯದೇ

ಹೋದ್ದರಿಂದ ಬಹುವಾಗಿ ಅಸಮಾಧಾನವಾಯಿತು; ಹಗಲೆಲ್ಲಾ ಅಲ್ಲಿ

ಇಲ್ಲಿ ಸುತ್ತಾಡುತಾ ಇದ್ದನು. ಕಡೆಗೆ ಜೋಯಿಸರ ಹಿಂದೆಯೇ ಮನೆಗೆ

ಬಂದನು. ಬಹಳ ಹಸಿವಾಗಿತ್ತು, ಎಲ್ಲರ ಸಂಗಡ ತಾನೂ ಊಟಕ್ಕೆ

ಸಿದ್ಧಮಾಡಿಕೊಂಡನು. ರಾಮಜೋಯಿಸನು ಇದನ್ನು ಕಂಡು--ರಾಜ

ಕುಮಾರಕೆ, ತಾವು ಊಟಕ್ಕೆ ಸಿದ್ಧವಾಗಕೂಡದು, ತಮಗೆ ಇಲ್ಲಿ ಎಡೆ

ಮಾಡಿ ಬಡಿಸುವವರು ಯಾರೂ ಇಲ್ಲ, ಮೈಬಗ್ಗಿ ಕೆಲಸಮಾಡುವುದಕ್ಕೆ

ತಾವು ರಾಜಕುಮಾರರು, ತಮ್ಮ ಪದವಿ ಅತಿ ದೊಡ್ಡದು. ನಮ

ಗೇನೋ ಹಾಗಲ್ಲ. ನಾವು ರಟ್ಟೆ ಮುರಿಯ ಗೆಯ್ಯತಕ್ಕವರು. ಆದರೆ

ಕೆಲಸಕ್ಕೆ ಪಾಲುಮಾರತಕ್ಕವರಿಗೋಸ್ಕರ ಗೆಯ್ಯಲು ನಮಗೆ ಇಷ್ಟವಿಲ್ಲ,

ಎಂದು ಹೇಳಿದನು.


ಈ ಮಾತನ್ನು ಕೇಳಿ ಮದನನು ಒಂದು ಮೂಲೇ ಹತ್ತಿರಕ್ಕೆ

ಹೋಗಿ ಎರಡು ಕೈಗಳಲ್ಲಿಯೂ ತನ್ನ ಮುಖವನ್ನು ಮುಚ್ಚಿಕೊಂಡು 

------------------------------------------

3] ಸುಮತಿ ಮದನಕುಮಾರರ ಚರಿತ್ರೆ 29 


ಗೊಳೋ ಎಂದು ಅತ್ತನು. ಈ ಅಳುವು ತನ್ನನ್ನು ಇಲ್ಲಿ ಒಬ್ಬರೂ

ಲಕ್ಷ್ಯಮಾಡುವುದಿಲ್ಲವಲ್ಲಾ ಎಂಬ ವ್ಯಸನದಿಂದಲೇ ಹೊರತು, ಕೋಪ

ದಿಂದ ಹುಟ್ಟಿದ್ದಲ್ಲ.


ತನ್ನ ಸ್ನೇಹಿತನಾದ ಆ ಚಿಕ್ಕ ಹುಡುಗ ಅಷ್ಟೊಂದು ಅಳುತಿರುವು

ದನ್ನು ಕಂಡು ಸುಮತಿಯ ಮನಸ್ಸು ತಡೆಯಲಾರದೆ ಹೋಯಿತು;

ಅವನಿಗೂ ದುಃಖಬರುವ ಹಾಗಾಯಿತು. ಕಣ್ಣಿ ನಲ್ಲಿ ಸ್ವಲ್ಪ ನೀರನ್ನು

ತಂದುಕೊಂಡು, ಕತ್ತೆತ್ತಿ ಜೋಯಿಸರ ಮುಖವನ್ನು ನೋಡುತಾ-.-

ನನ್ನ ಎಡೆಗೆ ಇಕ್ಕಿದ ಅನ್ನವನ್ನು ನಾನು ಬೇಕಾದ ಹಾಗೆ ವಿನಯೋಗಿಸ

ಬಹುದೆ? ಅಪ್ಪಣೆಯಾಗಬೇಕು ಎಂದನು. ಅದಕ್ಕೆ ಜೋಯಿಸನು--

ಮಗು, ನೀನು ಬೇಕಾದಹಾಗೆ ವಿನಿಯೋಗಿಸಿಕೊಳ್ಳ ಬಹುದಪ್ಪ ಎಂದನು.

ಹಾಗಾದರೆ ಎಂದು ಸುಮತಿಯು ಮೇಲಕ್ಕೆ ಎದ್ದು- ಬಡಿಸಿರುವ ನನ್ನ

ಎಲೆಯನ್ನು ತಂದು ಮದನನಿಗೆ ಇರಿಸುತೇನೆ; ಪಾಪ, ಬೆಳಗ್ಗೆ ಹೊತ್ತಿಗೆ

ಮುಂಚೆ ನಮ್ಮ ಸಂಗಡ ಎರಡು ತುತ್ತು ಅನ್ನ ಬಾಯಿಗೆ ಹಾಕಿಕೊಂಡು.

ಜಾಗ್ರತೆಯಾಗಿ ಎದ್ದ; ಆಗಿನಿಂದ ಇದುವರೆಗೆ ಅವ ಏನನ್ನೂ ತಿನ್ನಲಿಲ್ಲ.

ಅವನಿಗೆ ಇಷ್ಟು ಹೊತ್ತು ಹಸಿದುಕೊಂಡು ಇದ್ದ ಅಭ್ಯಾಸವಿಲ್ಲ. ನನ

ಗಿಂತಲೂ ಅವನಿಗೆ ಕ್ಷುತ್ತುಹೆಚ್ಚಾಗಿರಬೇಕು ಎಂದನು ; ಕೂಡಲೆ ಬಡಿ

ಸಿದ್ದ ತನ್ನ ಎಡೆಯನ್ನು ಮದನ ಕೂತಿದ್ದ ಮೂಲೆಗೆ ತೆಗೆದುಕೊಂಡು

ಹೋಗಿ ಅವನ ಮುಂದೆ ಇರಿಸಿದನು. ಕೂಡಲೆ ಮದನನು ಆ ಎಲೆ

ಯಲ್ಲಿಕ್ಕಿದ್ದ ಅನ್ನವನ್ನು ಕತ್ತೆತ್ತಿ ಅತ್ತಿತ್ತ ನೋಡದೆ ಸುಮ್ಮನೆ ಉಂಡನು.

ಅದನ್ನು ನೋಡಿ ಜೋಯಿಸನು-ಹೀಗೋ! ಸರಿ, ತಿಳಿಯಿತು. ದೊರೆ

ಮಕ್ಕಳು ತಮಗೂ ಪ್ರಯೋಜನವಿಲ್ಲದೇಲೂ ಇತರರಿಗೂ ಪ್ರಯೋಜನ

ವಿಲ್ಲದೇಲೂ ಇರುವಂಥಾ ಪದವಿಯುಳ್ಳವರು. ಮೇಲೂ, ಇತರರು

ಕಷ್ಟ ಪಟ್ಟು ಸಂಪಾದಿಸಿದ ಅನ್ನವನ್ನು ತಿನ್ನುವ ಪದವಿಯೇ ಇವರ

ದೊಡ್ಡ ಪದವಿ ಎಂದನು.


ಮಾರನೇದಿನ ರಾಮಜೋಯಿಸನೂ ಸುಮತಿಯೂ ಎಂದಿನಂತೆ

ಸ್ನಾನಾದಿಗಳನ್ನು ತೀರಿಸಿಕೊಂಡು ತೋಟದಲ್ಲಿ ಕೆಲಸ ಮಾಡುವುದಕ್ಕೆ.

ಹೋದರು. ಅವರು ಕೆಲಸಕ್ಕೆ ಇನ್ನೇನು ಮೊದಲು ಮಾಡಿದರು. 

----------------------------------------------

30 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಮಾಡಲಿಲ್ಲ ಎನ್ನುವಷ್ಟರಲ್ಲಿಯೇ ಮದನ ಕುಮಾರನು ಇವರ ಸಮೀ 

ಪಕ್ಕೆ ಓಡಿಬಂದು --- ಜೋಯಿಸರೆ, ನನಗೂ ಒಂದು ಕಳೆಕೊಕ್ಕೆ ಬೇಕು, 

ಎಂದು ತಾನಾಗಿಯೇ ಕೇಳಿದನು. ಜೋಯಿಸನು ಅದನ್ನು ತೆಗೆದು

ಕೊಟ್ಟನು. ಮದನನು ಕಳೆಕೊಕ್ಕೆಯನ್ನು ತೆಗೆದುಕೊಂಡು ಅವರ

ಹಾಗೆಯೇ ಅಗೆಯಲಾರಂಭಿಸಿದನು ; ಎಂದಿಗೂ ಅಗೆದು ಅಭ್ಯಾಸವೇ

ಇಲ್ಲದಕಾರಣ, ಆಯುಧವನ್ನು ತಗಲಿಸಿಕೊಂಡು ಕೈಕಾಲುಗಳನ್ನು

ಗಾಯಮಾಡಿಕೊಂಡನು. ಇದನ್ನು ಕಂಡು ಜೋಯಿಸನು ತನ್ನ ಗುದ್ದ

ಲಿಯನ್ನು ಬಿಟ್ಟು ಮದನನ ಸಮೀಪಕ್ಕೆ ಹೋಗಿ ಕಳೆಕೊಕ್ಕೆಯನ್ನು

ಹಿಡಿಯುವುದು ಹೀಗೆ, ಅಗೆಯುವುದು ಹೀಗೆ, ಎಂದು ಆ ಹುಡುಗನಿಗೆ

ತೋರಿಸಿಕೊಟ್ಟನು. ಮದನನು ಸ್ವಲ್ಪ ಹೊತ್ತಿನಲ್ಲಿ ಅಗೆಯುವುದಕ್ಕೆ

ಚೆನ್ನಾಗಿ ಕಲಿತುಕೊಂಡು ಬಹು ಸಂತೋಷವಾಗಿ ಕೆಲಸಮಾಡಿದನು.

ಕೆಲಸ ಮುಗಿದಮೇಲೆ ಆ ಮೂರು ಜನರೂ ಗುಡಿಲಿಗೆ ಹೋದರು.

ಕುಯಿದುತಂದು ಅಲ್ಲಿರಿಸಿದ್ದ ಹಂಣುಗಳನ್ನು ಈಚೆಗೆ ತೆಗೆದು ಜೋಯಿ

ಸಕು ಕೊಳ್ಳೆ೦ದು ಮದನನಿಗೂ ಕೊಡುವುದಕ್ಕೆ ಹೋಗಲು, ಅರಸು

ಮಗನಿಗೆ ಅತ್ಯಂತ ಆನಂದವಾಯಿತು; ಅವುಗಳನ್ನು ತಿಂದನು. ಕೆಲಸ

ಮಾಡಿ ಶ್ರಮಪಟ್ಟಿದ್ದಕಾರಣ ಇವನಿಗೆ ಹಸಿವು ಬಹುವಾಗಿತ್ತು. ಅದ

ರಿಂದ ಆ ಹಂಣುಗಳು ಬಹುರುಚಿಯಾಗಿ ತೋರಿದವು.


ಅವರು ಮೂರುಜನರೂ ಫಲಾಹಾರವನ್ನು ಮಾಡಿದತರುವಾಯ, 

ರಾಮಜೋಯಿಸನು ಗೂಡಿನಲ್ಲಿದ್ದ ದಫ್ತರವನ್ನು ತೆಗೆದುಕೊಂಡು,

ಅದರಲ್ಲಿದ್ದ ಒಂದು ವಹಿಯನ್ನು ತೆಗೆದು-- ಅಯ್ಯಾ  ಮದನಕುಮಾರ,   

ಇದರಲ್ಲಿರುವ ಒಂದು ಕಥೆಯನ್ನು ಓದೀಯಾ? ಎಂದು ಕೇಳಿದನು,

ದೊರೆಮಗನು ತಲೆಯನ್ನು ಕೆಳಕ್ಕೆ ಬಗ್ಗಿಸಿ, ತನಗೆ ಓದು ಬರಹ ಬಾರ

ದೆಂದು ನಾಚಿಕೆಯೊಡನೆ ಹೇಳಿದನು. ಅದಕ್ಕೆ ಜೋಯಿಸನು-ಅಯ್ಯೋ!

ಈ ಮಾತ ಕೇಳಿ ನನಗೆ ಬಹು ಸಂಕಟವಾಗುತಿದೆ ಓದುಬರಹವನ್ನು

ಕಲಿತುದರಿಂದ ಉಂಟಾಗುವ ಸಂತೋಷ ನಿನಗೆ ಇಲ್ಲವಾಯಿತು.

ಒಳ್ಳೇದಾಯಿತು. ಸುಮತಿ ಓದುತಾನೆ, ನೀನು ಕೇಳು ಎಂದನು. ಅದೇ

ಪ್ರಕಾರ ಸುಮತಿಯು ಆ ವಹಿಯನ್ನು ತೆಗೆದುಕೊಂಡು ಕಥೆಯನ್ನು

ಓದಿದ್ದು ಹೇಗೆಂದರೆ : 

--------------------------------------------------

೩]     ಸುಮತಿ ಮದನಕುಮಾರರ ಚರಿತ್ರೆ 31


ಅರಸು, ಮೇದರವನು


ಮಧುಪುರಿ ಎಂಬ ಪಟ್ಟಣದಲ್ಲಿ ಮಧುವರ್ಮನೆಂಬ ಒಬ್ಬ ದೊರೆ

ಮಗನಿದ್ದನು. ಇವನಿಗೆ ಆ ಊರ ದೊರೆಮಗಳನ್ನು ಕೊಟ್ಟು ಮದುವೆ

ಯಾಗಿತ್ತು. ಇವನು ನಿತ್ಯವೂ ಕುದುರೇ ಸವಾರಿ ಮಾಡುವುದು, ತಿಂಡಿ

ತಿನ್ನುವುದು, ನಿದ್ರೆ ಮಾಡುವುದು, ಯಾವಾಗಲೂ ಆನಂದಪಡುವ

ಕೆಲಸದಲ್ಲಿ ಕಾಲವನ್ನು ಕಳೆಯುವುದು ಹೀಗೆ ಮಾಡುತಿದ್ದನು. ಇವನ

ಸಮೀಪದಲ್ಲಿ ಅನೇಕಜನ ಓಲೆಕಾರರು ಸೊಂಟ ಸುತ್ತಿಕೊಂಡು ಕಾದಿರು

ತಿದ್ದರು. ಈ ಆಳುಗಳು ದೊರೆಮಗಳನಿಗೆ ವಿಶೇಷವಾದ ಮರ್ಯಾದೆಯನ್ನು

ತೋರಿಸುತಾ ಉಪಚಾರವನ್ನು ಮಾಡುತಾ ಇದ್ದರು; ಅವನು ಯಾವ

ಮಾತನ್ನು ಹೇಳಿದರೂ ಕೂಡಲೇ ಅದನ್ನು ಜರುಗಿಸುತಿದ್ದರು. ಇದು

ಒಳ್ಳೇದು, ಇದು ಕೆಟ್ಟದು, ಎಂದು ಅವ ಅರಿಯಲೇ ಅರಿಯ. ಅದನ್ನು

ಯಾರಿಂದಲೂ ಕೇಳಿದ್ದೂ ಇಲ್ಲ. ಇವನು ಅತಿ ಅಹಂಕಾರಿಯಾಗಿ

ತನ್ನ ಬುದ್ಧಿಗೆ ತೋರಿದಹಾಗೆಲ್ಲಾ ಐಲಾಟವನ್ನು ಆಡುತ್ತಾ, ಲೋಕ

ಕ್ಕೆಲ್ಲಾ ತಾನೇ ಅಧಿಪತಿ ಎಂತಲೂ ಬಡವರೆಲ್ಲಾ ಹುಟ್ಟಿರುವುದು ತನ್ನ

ಸೇವೆಗೆಂತಲೂ, ಊಹಿಸಿಕೊಂಡಿದ್ದನು.


ಹೀಗಿರುವಲ್ಲಿ ಈ ದೊರೆಮಗನ ಅರಮನೆಗೆ ಸಮಾಪವಾಗಿ ಒಬ್ಬ

ಮೇದರವನು ಸಾಧಾರಣವಾದ ಒಂದು ಗುಡಿಸಲನ್ನು ಕಟ್ಟಿಕೊಂಡು

ವಾಸವಾಗಿರುತಿದ್ದನು. ಈ ಮೇದರವನು ಬಡವನಾದರೂ ಪ್ರಾಮಾ

ಣಿಕನಾಗಿ, ಒಬ್ಬರ ತಂಟಿಗೂ ಹೋಗದೆ, ತನ್ನ ಪಾಡಿಗೆ ತಾನು ಬಿದಿರ

ಕುಕ್ಕೆ, ಚಾಪೆ, ಮರ ಮೊದಲಾದ್ದನ್ನೂ, ಈಚಲು ಕುಕ್ಕೆಗಳನ್ನೂ,

ಹೆಣೆದು ಮಾರಿಕೊಂಡು ಜೀವನ ಮಾಡುತಿದ್ದನು. ಇವನು ಬೆಳಗಿ

ನಿಂದ ಸಾಯಂಕಾಲ ಕಣ್ಣಿಗೆ ನಿದ್ರೆ ಬರುವ ತನಕ ಕುಕ್ಕೇ ಹೆಣೆದು

ಕೆಲಸ ಮಾಡಿದರೂ ಇವನಿಗೂ ಇವನ ಹೆಂಡತಿ ಮಕ್ಕಳಿಗೂ ಹೊಟ್ಟೆ

ತುಂಬಾ ಅನ್ನ ಸಿಕ್ಕುತಿರಲಿಲ್ಲ; ಬೆರೆಕೆ ಸೊಪ್ಪಿನ ಉದಕ, ರಾಗೀಹಿಟ್ಟು

ಇಷ್ಟು ಹೊರತು ಮತ್ತೆಯಾವ ಭಕ್ಷ್ಯಭೋಜ್ಯಗಳನ್ನೂ ಕಂಡವನಲ್ಲ;

ಇವನು ಕುಕ್ಕೇ ಹೆಣೆಯುವುದಕ್ಕಾಗಿ ಹಾಕಿದ್ದ ಸೀಬು ಇವನಿಗೆ ಹಾಸುಗೆ

ಯಾಗಿತ್ತು. ಇಂಥಾ ಬಡತನವನ್ನು ಅನುಭವಿಸುತಿದ್ದಾಗ್ಯೂ, ದೇವರು 

------------------------------------------

32 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ.


ಕೊಟ್ಟಿದ್ದರಲ್ಲಿ ಸಂತುಷ್ಟನಾಗಿ ಸಂತೋಷವಾಗಿಯೇ ಕಾಲವನ್ನು ಕಳೆ

ಯುತಿದ್ದನು. ಹಗಲೆಲ್ಲಾ ಕೆಲಸಾ ಮಾಡಿ ಮಾಡಿ ದಣಿಯುತಿದ್ದ

ಕಾರಣ, ಹೊಟ್ಟೆಯಲ್ಲಿ ಚುರಗುಟ್ಟಿ ಹಸಿವಾಗಿ ಎಂಥಾ ಒಣಕಲ ಹಿಟ್ಟಾ 

ದರೂ ರುಚಿಯಲ್ಲಿ ಇವನ ಭಾಗಕ್ಕೆ ಮೃಷ್ಟಾನ್ನವಾಗಿರುತಿತ್ತು. ನೆಲದ

ಮೇಲೆ ಮಲಗಿಕೊಂಡರೂ ಮೈಮರೆತು ನಿದ್ರೆ ಬರುತಿತ್ತು. ಇದೂ 

ಅಲ್ಲದೆ ಆ ಮೇದರವನು ಬಹು ಒಳ್ಳೆಯವನಾಗಿಯೂ ಪ್ರಾಮಾಣಿಕ

ನಾಗಿಯೂ ಇದ್ದನು. ಅವನು ವ್ಯಾಪಾರದಲ್ಲಿ ಬಹು ನಿರ್ಣಯವಾಗಿ, 

ಯಾವಾಗಲೂ ನಿಜವನ್ನೇ ಹೇಳುತಾ ಇದ್ದನು. ಈ ಕಾರಣದಿಂದ

ನೆರೆಹೊರೆಯವಕೆಲ್ಲರೂ ಇವ ಸತ್ಯನಂತನೆಂದು ಮರ್ಯಾದೆಯಿಂದ ಕಾಣು.

ತಿದ್ದರು; ಅವರ ಜಾತಿ ಪಂಚಾಯಿತಿಯಲ್ಲಿ ಯಾವುದಕ್ಕೂ ಇವನನ್ನು

ಕರೆಯುತಿದ್ದರು.


ಹೀಗಿರುವಲ್ಲಿ ಮೇಲೆ ಕಂಡ ದೊರೆಯ ಅಳಿಯನಾದ ಅರಸು.

ಮಗನು ಎಂಥಾ ಮೃದುವಾದ ಮೆತ್ತೆಯ ಮೇಲೆ ಮಲಗಿಕೊಂಡಾಗ್ಯೂ

ಮತ್ತೆ ಯಾವ ಉಪಚಾರಗಳನ್ನು ಮಾಡಿಕೊಂಡಾಗ್ಯೂ ನಿದ್ರೆ ಬರುತಿರ.

ಲಿಲ್ಲ. ಇವನು ಹಗಲೆಲ್ಲಾ ಜೂಗರಿಸುತಾ ಯಾವ ಕೆಲಸವನ್ನೂ

ಮಾಡದೆ ಜಡನಾಗಿ ಕೂತಿರುತಿದ್ದ ಕಾರಣ ಹೀಗಾಗುತಿತ್ತು. ಆವೂರ.

ದೊರೆಗೆ ಆತ ಅಳಿಯ; ಖಾಸ ಪಂಙ್ತಿಯಲ್ಲಿ ಈತನಿಗೆ ಚೊಕ್ಕ ಭೋಜನ.

ವಾಗಿ ಇವನು ಹಾಲುತುಪ್ಪದಲ್ಲಿ ಕೈ ತೊಳೆಯುತಿದ್ದನು ; ಬೇಕಾದ.

ಭಕ್ಷ್ಯಭೋಜ್ಯಗಳು ಅರಮನೆಯಿಂದ ಬೆಂಡಿನ ಕುಕ್ಕೆಗಳಲ್ಲಿಯೂ ದೊಡ್ಡ

ಪರಾತಗಳಲ್ಲಿಯೂ ಅಡಕಿ ಅಳಿಯಂದಿರ ಮನೆಗೆ ಬರುತಾಇತ್ತು. ಇದಕ್ಕೆ

ಕೊನೆಮಿತಿಯೇ ಇಲ್ಲ. ಏನಾದರೆ ಏನು? ಎಂಥಾ ತಿಂಡಿ ಎಷ್ಟು ತಾನೇ

ಇತ್ತು, ಪ್ರಯೋಜನವೇನು? ಇವನಿಗೆ ಏನು ತಿಂದರೂ ರುಚಿಯೇ

ತೋರುತಿರಲಿಲ್ಲ.. ಯಾವುದೂ ಬೇಕಾಗಿರಲಿಲ್ಲ. ತನಗೆ ಚೆನ್ನಾಗಿ.

ಹೊಟ್ಟೆಯಲ್ಲಿ ಹಸಿವು ಹುಟ್ಟಿ ಆಹಾರದ ಮೇಲೆ ಅಪೇಕ್ಷೆಯಾಗದೇಲೇ

ಮೇಲೆ ಮೇಲೆ ಬಂದ ತಿಂಡಿಯನ್ನು ಮೇಲೆ ಮೇಲೆಯೇ ಬಾಯಿಗೆ

ಗಿಡಿದುಕೊಳ್ಳುತಿದ್ದ ಕಾರಣ, ಇವನಿಗೆ ಯಾತರಲ್ಲಿಯೂ ರುಚಿ ತೋರ

ಲಿಲ್ಲ. ದೊರೇ ಅಳಿಯನಾದ್ದರಿಂದ ವಿಶೇಷ ಬಿಗುಮಾನವಾಗಿ ಕೂತ 

--------------------------------------

3 ] ಸುಮತಿ ಮದೆನಕುಮಾರರೆ ಚರಿಕ್ರೆ 33 


ಕಡೆಯಲ್ಲಿಯೇ ವಿಸರ್ಜನೆಗಳನ್ನು ಮಾಡಿಕೊಳ್ಳುತಾ, ಹೊರೆಗಿನ ಗಾಳಿ

ಸೋಕಿದರೆ ತನ್ನ ಮುಖ ಎಲ್ಲಿ ಕಂದುವುದೋ ತನ್ನನ್ನು ಶೃಂಗಾರ ಪುರು

ಷನಲ್ಲವೆಂದು ಎಲ್ಲಿ ಯಾರು ಹೇಳಿಯಾರೋ ಎಂದು ಅವನು ಈಚೆಗೆ

ತಲೆಯನ್ನೇ ಹಾಕುತಿರಲಿಲ್ಲ. ಇವನ ಜಡತ್ವದಿಂದಲೂ ತಿಂಡಿಪೋತತನ

ದಿಂದಲೂ, ಇವನಿಗೆ ಯಾವಾಗಲೂ ಏನಾದರೂ ಜಾಡ್ಯವಿರುತಲೇ ಇತ್ತು.

ಇವನಿಂದ ಯಾರಿಗೂ ಯಾವ ಉಪಕಾರವೂ ಇಲ್ಲದೇ ಇದ್ದಕಾರಣ

ಇವನಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಇವನ ಮನೇ ಚಾಕರರು

ಸಹಿತವಾಗಿ ಇವನ ಹಿಂದೆ ವಿಶೇಷವಾಗಿ ದೂಷಿಸುತಿದ್ದರು. ಇವನು

ನೆರೆಹೊರೆಯವರಿಗೆ ಏನಾದರೂ ತೊಂದರೆಯನ್ನು ಕೊಡುತಲೇ ಇದ್ದ

ಕಾರಣ, ಅವರು ಇವನ ಮೇಲೆ ದ್ವೇಷ ಮಾಡುತಿದ್ದರು, ಇವನು

ಯಾವಾಗಲೂ ಸಿಡುಕಿನಿಂದ ಮುಖವನ್ನು ಗಂಟು ಹಾಕಿಕೊಂಡು,

ದುಮದುಮಗುಟ್ಟುತ ಇದ್ದನು; ಮೇಲೂ, ನಗುನಗುತಾ ಸಂತೋಷ

ವಾಗಿದ್ದವರನ್ನು ಕಂಡರೆ ಇವನು ಕಿಡಿಕಿಡಿಯಾಗುತಿದ್ದನು. ಇವನು

ಅಪೂರ್ವವಾಗಿ ಹೊರಕ್ಕೆ ಹೊರಟಾಗ ಇದ್ದಬದ್ದ ಒಡವೆಗಳನ್ನೆ,ಲ್ಲಾ

ಹೆಂಗಸರಹಾಗೆ ಹೇರಿಕೊಂಡು ನಿರಾಜೀ ಬಟ್ಟಿಗಳನ್ನು ಹಾಕಿಕೊಂಡು

ಹುಬ್ಬ ತಿದ್ದಿಸಿಕೊಳ್ಳುವುದೋ, ಕುಡಿಮಾಸೆಯನ್ನು ನೆಟ್ಟಗೆ ತಿರುಗಿಸಿ

ನಿಲ್ಲಿಸಿಕೊಳ್ಳುವುದೋ, ಕನ್ನಡಿಯನ್ನು ನೋಡುತಾ ಮುಖವನ್ನು ಒರಸಿ

ಒರಸಿ ಚುಕ್ಕೀ ಬಟ್ಟನ್ನು ಇಟ್ಟು ಕೊಳ್ಳುವುದೋ, ಎಲೆ ಅಡಕೆಯನ್ನು

ಅಗಿಯುತಾ ತನ್ನನ್ನು ಇತರರು ನೋಡುತಾರೋ ಇಲ್ಲವೋ ಎಂದು

ತನ್ನ ದೊಡ್ಡದೊಡ್ಡ ಕಣ್ಣುಗಳನ್ನು ಅತ್ತಿತ್ತ ಗರಗರನೆ ತಿರುಗಿಸಿ ನೋಡು

ವುದೋ, ವಿಶೇಷವಾಗಿ ಬೆಳೆದಿರುವ ಹೊಟ್ಟೆಯನ್ನು ಜಗ್ಗುಹಾಕುತಾ

ಕಾಲಮೇಲೆ ಕಾಲ ಹಾಕಿಕೊಂಡು ನಡೆಯುವುದೋ, ಹೀಗೆಲ್ಲಾ ವಯ್ಯಾ

ರದಿಂದ ಬಂದು ಮೇನಾದಲ್ಲಿ ಕೂತು ಹೊರಕ್ಕೆ ಹೊರಡುತಿದ್ದನು.

ಇವನ ಮೇನವನ್ನು ಬೋಯಿಗಳು, ಹೊತ್ತುಕೊಂಡು  "ಹ್ಞೆ " ” ಹ್ಞು" 

ಎಂದು ತಾವು ವಾಡಿಕೆಯಾಗಿ ಹೇಳುವ ಬೆಸ್ತರ ಸುರ್ಮಾಪದವನ್ನು

ಹೇಳಿಕೊಂಡು, ಮೇಲೆ ಹೇಳಿದ ಮೇದರವನ ಮನೇ ಮುಂದುಗಡೆ

ಹೋಗುತಿದ್ದರು. ಈ ಮೇದರವನು ಎಂದಿನಂತೆ ಸಂತೋಷವಾಗಿ

-----------------------------------------------

34 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಬೇಕಾದ ಹಾಡನ್ನು ರಾಗವಾಗಿ ಹೇಳುತಾ ತನ್ನ ಹೆಣಿಗೇ ಕೆಲಸವನ್ನು

ತಾನು ಮಾಡಿಕೊಳ್ಳುತಾ ಲಕ್ಷ್ಯವಿಲ್ಲದೆ ಕೂತಿರುತಿದ್ದನು. ಇವನನ್ನು

ಕಂಡಾಗೆಲ್ಲಾ ದೊರೇ ಅಳಿಯನಿಗೆ ಕೋಪ ಬರುತಿತ್ತು. ಈ ಅರಸು--

ಇದೇನು ಆಶ್ಚರ್ಯ, ಈ ಕೆಲಸಕ್ಕೆ ಬಾರದ ಕೀಳು ಜಾತಿಯವನು, ಹಗ

ಲೆಲ್ಲಾ ದುಡಿದು ಹಾಗದ ಕಾಸನ್ನು ಸಂಪಾದಿಸಲಾರದ ಮೇದರವನು, 

ಈ ಕಳ್ಳಗೊರಮು ಒಣಕಲ ಹಿಟ್ಟ ಕಡಿದುಕೊಂಡು ತಿಪ್ಪೇಮೇಲೆ ಬಿದ್ದಿರ

ತಕ್ಕ ಈ ಅಪ್ರಯೋಜಕ್ಕ ಯಾವಾಗಲೂ ಸೌಖ್ಯವಾಗಿ ಸಂತೋಷಚಿತ್ತ

ನಾಗಿರುವುದಕ್ಕೆ ಕಾರಣವೇನು? ನಾನು ದೊರೇ ಅಳಿಯ, ಬೇಕಾದ

ಐಶ್ವರ್ಯವಿದೆ, ಇಂಥಾ ಅಣುಗಳು ಎಷ್ಟು ಕೋಟಿ ಆದರೆ ತಾನೆ ನನಗೆ

ಸಮಾನವಾದಾವು? ಆದರೂ ನನ್ನಂಥಾವನಿಗೆ ಏನೋ ಮನೋವ್ಯಥೆ

ತಗಲಿಕೊಂಡು, ಯಾವಾಗಲೂ ಏನಾದರೂ ಒಂದು ಬಗೇ ಜಾಡ್ಯದಲ್ಲಿ

ನರಳುತ್ತಾ, ತಟಕ್ಕನೆ ಕಣ್ಣು ಮುಚ್ಚಿ ಒಂದು ದಿನವಾದರೂ ನಿದ್ರೆ

ಮಾಡದೆ ನಾನು ಪೇಚಾಡುವುದಕ್ಕೆ ಕಾರಣವೇನು?--ಹೀಗೆ ತನ್ನ

ಮನಸ್ಸಿನಲ್ಲಿ ಎಂದುಕೊಳ್ಳುತಿದ್ದನು. ಮೇದರವನನ್ನು ಕಂಡಾಗೆಲ್ಲಾ

ಇಂಥಾ ಯೋಚನೆ ತೋರಿ ಅರಸನಿಗೆ ಆ ಬಡವನ ಮೇಲೆ ವಿಶೇಷವಾಗಿ

ದ್ವೇಷ ಹುಟ್ಟಿತು. ತನಗೆ ಬಂದ ಕೋಪತಾಪಗಳು, ಕ್ರಮವಾಗಿಯೇ

ಇರಲಿ ಅಕ್ರಮವಾಗಿಯೇ ಇರಲಿ, ಆ ತಾರತಮ್ಯವನ್ನೇ ಇವ ಅರಿತವ

ನಲ್ಲ; ಅಂಥಾ ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡ ಅಭ್ಯಾಸವೇ

ಇವನಿಗಿಲ್ಲ. ಹೀಗಿರಲು, ಗುಬ್ಬೀಮೇಲೆ ಬ್ರಹ್ಮಾಸ್ತ್ರವನ್ನು ಹಾಕಿದರೆಂಬ

ಗಾದೆಗೆ ಸರಿಯಾಗಿ, ಆ ಬಡವರಿಗೆ ತಕ್ಕ ಶಿಕ್ಷೆಯನ್ನು ಮಾಡಬೇಕೆಂದು

ಅರಸುಮಗನು ನಿಶ್ಚಯಿಸಿಕೊಂಡನು. ಮೇದರವನು ಯಾವಾಗಲೂ

ಸಂತೋಷಿಯಾಗಿದ್ದುದೇ ಅವನ ಅಪರಾಧ.


ಹೀಗಿರುವಲ್ಲಿ ಇಂಥಾ ದುರಭಿಪ್ರಾಯದಿಂದ ಒಂದು ದಿನ ಅರಸು

ತನ್ನ ಆಳುಗಳನ್ನು ಕರೆದು,  ಆ ಮೇದರವನು ಅವನ ಗುಡಿಸಿಲಿನ

ಹತ್ತಿರ ಕಟ್ಟಿ ಹಾಕಿಕೊಂಡಿದ್ದ ಸೀಬಿನ ಪಿಂಡಿಗೆಲ್ಲಾ ಬೆಂಕೀ ಹತ್ತಿಸು

ವಂತೆ ಹೇಳಿದನು. ಸಮಿಪದಲ್ಲಿದ್ದ ಒಂದು ಕಟ್ಟೆಯಲ್ಲಿ ಬೆಳೆದಿದ

ನೊದೇ ಹುಲ್ಲನ್ನು ಕಿತ್ತು ಈ ಮೇದರವನು ಮಂದಲಿಗೆ ಮುಂತಾದ್ದನ್ನು 

-----------------------------------------------

3] ಸುಮತಿ ಮದನಕುಮಾರರ ಚರಿತ್ರೆ 35 


ಮಾಡಿ ಮಾಡಿ ಮಾರುತಿದ್ದನು; ಸ್ವಲ್ಪ ಒಣಗಿನಿಂತಿದ್ದ ಆ ನೊದೇ

ಹುಲ್ಲಿಗೂ ಬೆಂಕಿ ಹಾಕುವಂತೆ ಅರಸಿನವರ ಅಪ್ಪಣೆಯಾಯಿತು. ಯಜ

ಮಾನನ ಅಪ್ಪಣೆಯನ್ನು ಮೀರಲಾರದೆ ಆಳುಗಳು ಬೆಂಕಿಯನ್ನು

ಹತ್ತಿಸಿದರು. ಮೇದರವನ ಸೀಬಿನ ಪಿಂಡಿಗಳೂ, ಕೆಲವು ಕುಕ್ಕೆಗಳೂ,

ಈಚಲ ಕುಕ್ಕೆಗಳೂ, ಅದರ ಕಡ್ಡಿಗಳೂ, ಸಮೀಪದಲ್ಲಿದ್ದ ನೊದೇ

ಹುಲ್ಲಿನ ಅಡುವೂ, ಇನ್ನೂ ಇತರ ತಯಾರಾದ ಸಾಮಾನುಗಳೂ

ಸುಟ್ಟು ಬೂದಿಯಾದ್ದಲ್ಲದೆ ಮೇದರವನ ಹುಲ್ಲುಮನೆಗೂ ಯಜ್ಞೇಶ್ವರ

ಚೆನ್ನಾಗಿ ಪ್ರವೇಶಮಾಡಿದನು. ಆಗ ಮೇದರವನ ಬಟ್ಟೆ ಬರೆ ಎಲ್ಲಾ

ಸುಟ್ಟುಹೋಯಿತು. ಅವನ ಹೆಂಡತಿಯ ಮೈ ಅರ್ಥ ಬೆಂದುಹೋಯಿತು;

ಎಳೇ ಮಗುವಿನ ಜೋಳನೇ ಬಟ್ಟೆಗೂ ಬೆಂಕಿ ಹತ್ತಿ ಮಗುವಿನ ದೇಹ

ವೆಲ್ಲಾ ಬೆಂದುಹೋಯಿತು; ಅದರ ಪ್ರಾಣ ಉಳಿದದ್ದು ಮನುಷ್ಯ

ಪ್ರಯತ್ನದಿಂದ ಅಲ್ಲ ಎನ್ನುವ ಮಟ್ಟಿಗೆ ಅಪಾಯವುಂಟಾಯಿತು.


ಆ ಬಡವನಿಗೆ ಆಧಾರವಾಗಿದ್ದ ಬಿದಿರಕಡ್ಡಿ, ಈಚಲಕಡ್ಡಿ, ಹುಲ್ಲು

ಕಡ್ಡಿ ಇವೆಲ್ಲಾ ಉರಿದು ಬೂದಿಯಾದ್ದಕ್ಕೆ ಅವ ಪಟ್ಟ ಸಂಕಟವನ್ನು

ಹೇಳಬೇಕೆ! ಅವನು ಐಶ್ವರ್ಯವಂತನ ಕಣ್ಣಿಗೆ ಬಿದ್ದುದೇ ಅವರ

ತಪ್ಪಾಯಿತು. ಅದಕ್ಕಾಗಿ ಅವನಿಗೆ ತಕ್ಕ ಶಿಕ್ಷೆಯೂ ಆಯಿತು.

ಐಶ್ವರ್ಯದ ಅಹಂಕಾರದ ಮುಂದೆ ಬಡತನದ ದೈನ್ಯ ಎಷ್ಟು ತಾನೇ

ಸಾಗೀತು? ಆದರೂ ಒಂದು ಕೈ ನೋಡೋಣವೆಂದು, ಮೇದರವನು ಆ

ವೂರ ಮಂತ್ರಿಯ ಬಳಿಗೆ ಹೋಗಿ ಕಣ್ಣಿನಲ್ಲಿ ನೀರನ್ನು ಸುರಿಸುತ್ತಾ,

ತನಗೆ ದೊರೇ ಅಳಿಯನ ದೆಸೆಯಿಂದ ಸಂಭವಿಸಿದ ವಿಪತ್ತನ್ನು ಅರಿಕೆ

ಮಾಡಿದನು. ಕೂಡಲೆ ಒಳ್ಳೆಯವನಾಗಿಯೂ ನ್ಯಾಯ ಪರನಾಗಿಯೂ

ಇದ್ದ ಆ ಮಂತ್ರಿಯು ದೊರೆಯ ಅಳಿಯನೆಂದೂ ಮಹದೈಶ್ವರ್ಯ

ವಂತನೆಂದೂ ದಾಕ್ಷಿಣ್ಯವನ್ನು ನೋಡದೆ, ಅವನನ್ನು ಚಾವಡಿಗೆ ಹಿಡ 

ತರಿಸಿದನು. ಆ ಹಿಂಸಕನಾದ ಅರಸು ತಾನು ಮಾಡಿದ ಅಪರಾಧವನ್ನು

ಒಪ್ಪಿಕೊಂಡನು. ಆಗ ನ್ಯಾಯಾಧಿಪತಿಯು ಮೇದರವನನ್ನು ನೋಡಿ,

--ಅಯ್ಯಾ, ಈ ಅರಸು ತನ್ನನ್ನು ಬಿಟ್ಟರೆ ಇನ್ನು ಸರಿಯೇ ಇಲ್ಲವೆಂದು

ಅಹಂಕಾರದಲ್ಲಿ ಉಬ್ಬಿಹೋಗಿದಾನೆ. ಆದ್ದರಿಂದ ಬಡವರನ್ನು ಕಂಡರೆ 

--------------------------------------------------

36 ಮದನಕುಮಾರರ ಚರಿತ್ರೆ [ಅಧ್ಯಾಯ 


ಲಕ್ಷ್ಯವಿಲ್ಲದೆ ಇಂಥಾ ಪಾತಕವನ್ನು ಮಾಡಿದಾನೆ. ಇವನು ಶುದ್ಧವಾಗಿ.

ಅಪ್ರಯೋಜಕನೆಂತಲೂ ನೀಚನೆಂತಲೂ ಅವನಿಗೆ ತೋರಿಸಿಕೊಡ.

ಬೇಕು, ಅವನು ತನ್ನ ನಿಜವಾದ ಯೋಗ್ಯತೆಯನ್ನು ತಾನಾಗಿಯೇ

ತಿಳಿದುಕೊಳ್ಳುವುದಕ್ಕೆ ನಾನು ಒಂದು ಯೋಚನೆ ಮಾಡಿದೇನೆ. ಆ

ಯೋಚನೆ ಸಾಗುವುದಕ್ಕೆ ನೀನು ಸಹಕಾರಿಯಾಗಿ ನಾನು ಹೋಗು

ಎಂದಕಡೆಗೆ ನೀನು ಹೋಗಬೇಕು,  ಹೀಗೆಂದು ಹೇಳಿದನು.


ಆದಕ್ಕೆ ಮೇದರವನು... ಸ್ವಾಮಿ, ನನಗೆ ಇದ್ದ ಐಶ್ವರ್ಯ ಅಷ್ಟ

ರಲ್ಲಿಯೇ ಇತ್ತು. ಇದ್ದ ಅಲ್ಪಸ್ವಲ್ಪವೂ ಈ ನೀಚನ ಚೇಷ್ಟೆಯಿಂದ

ಹಾಳಾಗಿ ಹೋಯಿತು. ನಾನು ಪೂರ್ತಿಯಾಗಿ ಮುಳುಗಿಹೋದೆ,

ಇನ್ನೊಂದು ಗಳಿಗೆಗೆ ಹಸಿವಾದರೆ ಒಂದು ಮುದ್ದೆ ಹಿಟ್ಟಿಗೆ ಸಹಿತವಾಗಿ

ನನಗೆ ಗತಿಯಿಲ್ಲ. ಈ ಮನುಷ್ಯ ಮಾಡಿದ ಅಪಕಾರಕ್ಕೆ ತಕ್ಕದ್ದನ್ನು

ಮಾಡುವುದು ನನಗೇನೋ ಇಷ್ಟವಿಲ್ಲ. ಆದರೆ ನ್ಯಾಯವೂ ದಯಾ

ರಸವೂ ಇಂಥಾದ್ದೆಂದು ತೋರಿಸಿಕೊಟ್ಟು ಇನ್ನು ಮುಂದಕ್ಕೆ ಬಡವ.

ರನ್ನು ವೇಧಿಸದ ಹಾಗೆ ಇವನಿಗೆ ಬುದ್ಧೀ ಕಲಿಸಬೇಕೆಂದು ನನಗೆ ಇಷ್ಟ

ವುಂಟು, ಎಂಬದಾಗಿ ನುಡಿದನು.


ಕೂಡಲೆ--ಒಂದು ಹಡಗಿನಮೇಲೆ ಇವರಿಬ್ಬರನ್ನೂ ಕೂರಿಸಿ.

ಸಮುದ್ರದಮೇಲೆ ಕರೆದುಕೊಂಡುಹೋಗಬೇಕು; ಅಲ್ಲಿ ಒಂದು ಎಡ.

ತಿಟ್ಟನ್ನು ಹುಡುಕಬೇಕು ; ಅಲ್ಲಿನ ಜನರು ನಾಗರಿಕವನ್ನು ಅರಿಯದೆ

ಒರಟರಾಗಿ, ಐಶ್ವರ್ಯ ಎನ್ನುವುದನ್ನು ಕಿವಿಯಲ್ಲಿಯೂ ಕೇಳದೆ ಜೀವಿ

ಸುವಂಥವರಾಗಿರಬೇಕು; ಆ ಎಡತಿಟ್ಟು ಈ ಸ್ವಭಾವದ್ದಾಗಿರಬೇಕು;

ದೂರವಾಗಿರತಕ್ಕ ಅಂಥಾ ಒಂದು ಟಾಪಿನ ಮೇಲೆ ಈ ಮೇದರವನನ್ನೂ

ಅರಸನನ್ನೂ ಬಿಟ್ಟು ಬಿಡಬೇಕು, ಎಂದು ಅಧಿಕಾರಿಯು ಅಪ್ಪಣೆ ಮಾಡಿ

ದನು. ಅಧಿಕಾರಿಯ ಅಪ್ಪಣೇ ಪ್ರಕಾರ ನಾವಿಕರು ಅವರಿಬ್ಬರನ್ನೂ

ಕರೆದುಕೊಂಡು ಹೋಗಿ ಒಂದಾನೊಂದು ದ್ವೀಪದಲ್ಲಿ ಬಿಟ್ಟು ಹೊರಟು.

ಹೋದರು.


ಈ ಮಧ್ಯೆ ತನ್ನ ಕೈಕೆಳಗೆ ಸಂಬಳಕ್ಕಿರುವ ಅಧಿಕಾರಿಯು ತನ್ನ

ಅಳಿಯನನ್ನೇ ದಂಡಿಸಿದನಲ್ಲಾ ಎಂಬ ದ್ವೇಷದಿಂದ, ಆ ಮಧುಪುರಿಯ 

----------------------------------------------

3] ಸುಮತಿ ಮದನಕುಮಾರರ ಚರಿತ್ರೆ 37 


ದೊರೆಯು ಸರ್ವಾಧಿಕಾರಿಯನ್ನು ಕೆಲಸದಿಂದ ತೆಗೆದು ತನ್ನ ಅಳಿಯ

ನನ್ನು ಹಿಂದಕ್ಕೆ ಕರೆಯಿಸಲು ಯತ್ನಿಸಿದನು. ಈ ದೊರೇ ಅಳಿ

ಯನ ತುಂಟತನವನ್ನೂ ದೊರೆಯ ಅವಿವೇಕವನ್ನೂ ಕೇಳಿ, ಪರ

ರಾಜರು--ಯಾರೋ ಕುಮಂತ್ರಿ ಸೇರಿಕೊಂಡಿದಾನೆ; ಇಂಥಾ ವಿಪ 

ರೀತಕಾರ್ಯಗಳು ನಡೆಯುತಿವೆ; ಈ ರೀತಿಯಲ್ಲಿ ಮಂತ್ರಿಯು

ಕೆಟ್ಟ ಹಾದಿಗೆ ಎಳೆಯುವುದ್ಕೂ ದೊರೆಯು ನ್ಯಾಯವನ್ನು ಬಿಟ್ಟು ಬಡ

ಬಗ್ಗರ ಯೋಗಕ್ಷೇಮವನ್ನು ನೋಡದೇ ಸ್ವಜನಪಕ್ಷಪಾತಿಯಾಗು

ವುದೂ ಇಂಥಾ ನಡತೆಗಳೆಲ್ಲಾ ರಾಜ್ಯ ಕೆಡುವುದಕ್ಕೆ ಕಾರಣ; ನಮಗೆ

ಆ ರಾಜ್ಯವನ್ನು ಗೆಲ್ಲುವುದಕ್ಕೆ ಇದೇ ಸಮಯ ಎಂದು ಯೋಚಿಸಿ

ಕೊಂಡು, ದಂಡೆತ್ತಿ ಬಂದು ಮಧುಪುರಿಗೆ ಮುತ್ತಿಗೇ ಹಾಕಿದರು.

ದೊರೆಯು ಇದೆಲ್ಲಾ ತನ್ನ ಅವಿವೇಕದ ಫಲವೆಂದು ತಿಳಿದು ಕೆಲಸ

ದಿಂದ ತೆಗೆದಿದ್ದ ಅಧಿಕಾರಿಯನ್ನು ಕರೆಯಿಸಿ ಅವನಿಗೆ ಬಹುಮಾನ

ಮಾಡಿ,  - ತಾವು ನ್ಯಾಯ ಪಕ್ಷಪಾತಿಗಳು; ತಮ್ಮಂಥಾ ಸತ್ಯವಂತರು

ನನ್ನ ರಾಜ್ಯದಲ್ಲಿ ಇರುವವರೆಗೂ ನನಗೆ ಯಾವ ಕೇಡೂ ಸಂಭವಿಸ

ಲಿಲ್ಲ; ಈಗ ನನಗೆ ಬಂದಿರುವ ವಿಪತ್ತನ್ನು ಪರಿಹರಿಸಬೇಕು, ನನ್ನಿಂದ

ತಪ್ಪಾಯಿತು, ಕ್ಷಮಿಸಬೇಕು, ಎಂದು ಅತಿದೈನ್ಯದಿಂದ ಹೇಳಿಕೊಂಡನು.

ಅಧಿಕಾರಿಯು ಕನಿಕರದಿಂದ ಶತ್ರುಗಳನ್ನು ಜಯಿಸುವ ಉಪಾಯ

ಮಾಡಿ, ಅವರನ್ನು ಆಚೆಗೆ ಅಟ್ಟಿ ಎಂದಿನಂತೆ ಅರಸು ರಾಜ್ಯಭಾರ

ವನ್ನು ಮಾಡುವಂತೆ ಅತನಿಗೆ ತಕ್ಕ ವಿವೇಕ ಹೇಳಿ, ಮಂತ್ರಿತ್ವವನ್ನು

ವಹಿಸಿದನು. ದೊರೆಯು ಸ್ವಲ್ಪ ದಿವಸಗಳು ಕಳೆದ ಮೇಲೆ ತನ್ನ ಮಂತ್ರಿ

ಯನ್ನು ಕುರಿತು,  ತನ್ನ ಮಗಳು ಬಹಳವಾಗಿ ಅಳುತಾಳೆ; ಅಳಿಯ

ನನ್ನು ಏನಾದರೂ ಮಾಡಿ ಹಿಂದಕ್ಕೆ ಕರೆಸಬೇಕೆಂದು ಹೇಳಿದನು.

ಅದಕ್ಕೆ ಅಧಿಕಾರಿಯು-- ಆತನನ್ನು ದ್ವೀಪಾಂತರಕ್ಕೆ ಸಾಗಿಸಿದ್ದು ಅವ

ನಿಗೆ ವಿವೇಕಬರಲಿ, ತನ್ನ ಐಶ್ಚರ್ಯಮದದಿಂದ ಬಡವರನ್ನು ಹಿಂಸಿ

ಸದೆ ಇರಲಿ ಎಂದೇ ಹೊರತು ಅವನಿಗೆ ಕೇಡು ಸಂಭವಿಸಲೆಂದು ಅಲ್ಲ;

ಆತನನ್ನು ಹಿಂದಕ್ಕೆ ಕರೆಯಿಸುವ ಸಮಯ ಕೂಡಲೆ ಬರುವುದು ಸ್ವಲ್ಪ

ತಡೆಯಬೇಕು ; ತಾವು ಈ ಪ್ರಸ್ತಾಪವನ್ನು ಮಾಡದಿದ್ದಾಗ್ಯೂ ನಾನೇ 

-----------------------------------------------

38 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಆತನನ್ನು ಕರೆಯಿಸುತಿದ್ದೆ ಎಂದು ಹೇಳಿದನು.


ಅತ್ತ ದ್ವೀಪಾಂತರಕ್ಕೆ ಗಡೀಪಾರಾಗಿ ಕಳುಹಿಸಲ್ಪಟ್ಟಿದ್ದ ಮಧು

ವರ್ಮನು ತನಗೆ ಬಂದ ಕಷ್ಟಕ್ಕೆ ಗೋಳಾಡುತಾ ಇದ್ದನು. ಇವನಿಗೆ

ಯಾರ ಸಹಾಯವೂ ಇಲ್ಲ; ಇತ್ತಬಾ ಎನ್ನುವರಿಲ್ಲ, ಇವನ ಇರವನ್ನು

ಕೇಳುವರಿಲ್ಲ. ಆ ದ್ವೀಪದ ಜನರು ಬಹು ಒರಟರು, ಅವರ ಭಾಷೆ

ಇವನಿಗೆ ತಿಳಿಯದು. ಇಂಥಾ ಜನರ ಕೈಗೆ ಇವ ಸಿಕ್ಕಿದ. ಹಲವು

ಬಗೆಯಲ್ಲಿಯೂ ಕಷ್ಟ ಬಂತು. ಇದೆಲ್ಲವನ್ನೂ ಕಂಡು ಪೇಚಾಡುತಾ:

ದುಃಖಪಡುತ್ಕಾ ಕೈ ಕೈ ಮುರಿದುಕೊಳ್ಳುತಾ, ಕೆಟ್ಟಮುಖವನ್ನು

ಹಾಕಿಕೊಂಡು ಅಳುತಾ ಮಧುವರ್ಮ ಕುಕ್ಕರಿಸಿದ್ದನು. ಇವನ ಸಂಗಡ

ಆ ದ್ವೀಪಕ್ಕೆ ಹೋಗಿ ಇಳಿದ ಮೇದರವನಿಗೆ ಇದು ಯಾವುದೂ ಕಷ್ಟ

ವಾಗಿ ತೋರಲಿಲ್ಲ. ಬಾಲ್ಯದಿಂದಲೂ ಕಷ್ಟಪಟ್ಟು ಇವನಿಗೆ ಅಭ್ಯಾಸ

ವಿತ್ತು. ಆ ದ್ವೀಪದ ಒರಟು ಜನರನ್ನು ಈ ಮೇದರವನು ಕಂಡು, 

ತಾನು ಅವನಿಗೆ ಶತ್ರುವಾಗಿ ಬಂದಿಲ್ಲ, ಅವರು ಹೇಳಿದ ಕೆಲಸವನ್ನು

ಮಾಡಿಕೊಂಡು ಇರುತೇನೆ,  ತನಗೆ ಹೊಟ್ಟೆಗೆ ಹಾಕಿದರೆ ಸಾಕು, ಎಂದು

ಕೈಸನ್ನೆ ಯಿಂದ ತಿಳಿಸಿದನು. ಅವರು ಇವರಿಬ್ಬರನ್ನೂ ನೋಡಿ, ಭಯ

ಪಡತಕ್ಕ ಅಗತ್ಯವಿಲ್ಲ, ತಾವು ಅವರಿಬ್ಬರಿಗೂ ಏನೂ ಕೇಡ ಮಾಡುವು

ದಿಲ್ಲ; ಆದರೆ ತಮ್ಮ ಜೊತೆಯಲ್ಲಿ ಅವರು ಮೀನ ಹಿಡಿಯಬೇಕು,

ಮರದ ತುಂಡುಗಳನ್ನು ಹೊರಬೇಕು ಎಂದು ಕೈಸನ್ನೆಯಿಂದ ತಿಳಿಸಿ

ದರು.


ತರುವಾಯ ಆ ಕಾಡುಜನರು ಹೇಳಿದ ಚಾಕರಿಗೆ ಇವರಿಬ್ಬರೂ

ಒಪ್ಪಿಕೊಂಡರು. ಆಮೇಲೆ ಅವರ ಸಂಗಡಲೇ ಕಾಡಿಗೆ ಹೋದರು.

ಅಲ್ಲಿ ಮರದ ತುಂಡುಗಳು ರಾಸಿರಾಸಿಯಾಗಿ ಬಿದ್ದಿದ್ದವು. ಆ ಕಾಡು

ಜನರು ಆ ಮರದ ತುಂಡುಗಳನ್ನು ಮನೆಗೆ ಹೊತ್ತುಕೊಂಡು ಹೋಗ

ಬೇಕೆಂದು ಇಬ್ಬರಿಗೂ ಹೇಳಿದರು. ಅದೇ ಪ್ರಕಾರ ಅವರಿಬ್ಬರೂ ಕೆಲ

ಸಕ್ಕೆ ಅನುವಾದರು. ಬಡವನಾದ ಮೇದರವನು ಬಲಶಾಲಿಯಾಗಿ ಶ್ರಮ

ಪಡುವ ರೂಢಿವುಳ್ಳ ವನಾದಕಾರಣ, ತನಗೆ ಹಂಚಿಹಾಕಿದ್ದ ತನ್ನ

ಪಾಲಿನ ತುಂಡುಗಳನ್ನು ಜಾಗ್ರತೆಯಾಗಿ ಸಾಗಿಸಿದನು. ಕೈ ಕಾಲು 

---------------------------------------------

3] ಸುಮತಿ ಮದನಕುಮಾರರ ಚರಿತ್ರೆ 39 


ಕದಿರುಕಡ್ಡಿ ಯಾಗಿ ಹೊಟ್ಟಿ ಪಿಟ್ಟೇಕಾಯಿಯಾಗಿ ಬೊಜ್ಜು ಬೆಳಸಿ

ಕೊಂಡಿದ್ದ ದೊರೇ ಅಳಿಯಂದಿರಾದ ಶ್ರೀಮಂತರಿಗೆ ಯಾವ ಕೆಲಸ

ವನ್ನೂ ಮಾಡಿದ ಅಭ್ಯಾಸವೇ ಇಲ್ಲದ ಕಾರಣ, ಇವರ ಹಸಿಗೆಗೆ ಬಂದ

ತುಂಡುಗಳಲ್ಲಿ ನಾಲ್ಕರಲ್ಲಿ ಒಂದು ಭಾಗವೂ ಸಾಗಲಿಲ್ಲ. ಇದೆಲ್ಲವನ್ನೂ

ನೋಡುತಿದ್ದ ಕಾಡುಜನರು ತಮ್ಮ ಕೆಲಸಕ್ಕೆ ಮೇದರವನು ಉಪಯೋ

ಗಿಸುತಾನೆಂದು ಮೆಚ್ಚಿ, ಒಳ್ಳೇದಾಗಿರುವ ಒಂದು ಮೀನನ್ನೂ ತಮ್ಮ

ಕಾಡಿನಲ್ಲಿ ಸಿಕ್ಕುವ ಒಳ್ಳೇ ಗಡ್ಡೆ ಗೆಣಸುಗಳನ್ನೂ ತಂದು ಅವನಿಗೆ

ಕೊಟ್ಟರು, ಮಧುವರ್ಮನಿಗೆ ಕೆಲಸಮಾಡಲು ಸಾಮರ್ಥ್ಯವಿಲ್ಲವೆಂತ

ತಿಳಿದುಕೊಂಡು ಅವನಿಗೂ ಕ್ಷುತ್ತು ಪರಿಹಾರವಾಗಲು ಏನೋ ಸ್ವಲ್ಪ

ತಿಂಡಿಯನ್ನು ಕೊಟ್ಟರು. ಆ ದಿನವೆಲ್ಲಾ ಅನ್ನವಿಲ್ಲದೆ ವಿಶೇಷವಾಗಿ

ಕೆಲಸಮಾಡಿ ಆಯಾಸಪಟ್ಟಿದ್ದಕಾರಣ ಮಧುವರ್ಮನಿಗೆ ಹೆಚ್ಚಾಗಿ

ಹಸಿವಾಗಿತ್ತು; ಆ ಜನರು ಕೊಟ್ಟ ತಿಂಡಿಯನ್ನು ತಿಂದನು. ಆ

ತಿಂಡಿಯು ತನ್ನ ಮಾವನ ಖಾಸಾಪಙ್ತಿಯಲ್ಲಿ ಇವ ತಿನ್ನುತಿದ್ದ

ಮೃಷ್ಟಾನ್ನಕ್ಕಿಂತಲೂ ರುಚಿಯಾಗಿ ತೋರಿತು.


ಹೀಗೆಯೇ ಕೆಲವು ತಿಂಗಳು ಕಳೆದವು. ತರುವಾಯ ಮಧುಪುರಿಯ

ಮಂತ್ರಿಯಾಗಿ ಇವರಿಬ್ಬರಿಗೂ ಶಿಕ್ಷೆಯನ್ನು ವಿಧಿಸಿದ್ದ ಅಧಿಕಾರಿಯು

ಅವರನ್ನು ಹಿಂದಕ್ಕೆ ಕರೆತರುವಂತೆ ಅಪ್ಪಣೆ ಮಾಡಿದನು. ನಾವಿಕರು

ಹೋಗಿ ಅವರನ್ನು ಕರೆತಂದು ಮಂತ್ರಿಯ ಮುಂದೆ ನಿಲ್ಲಿಸಿದರು. ಆತನು

ಅಲ್ಲಿ ನಡೆದ ಸಮಾಚಾರವನ್ನೆಲ್ಲಾ ಕೇಳಿ ದೊರೇ ಅಳಿಯನನ್ನು ಕೋಪ

ದಿಂದ ನೋಡಿ--ಈಗ ನಿನಗೆ ಬುದ್ಧಿ ಬಂತೆ? ನಿನ್ನ ಯೋಗ್ಯತೆ ನಿನಗೆ

ಗೊತ್ತಾಯಿತೆ? ನಿನ್ನಿಂದ ಹಿಂಸೆಯನ್ನು ಹೊಂದಿದ ಆ ಬಡಮೇದರವನಿ

ಗಿಂತಲೂ ನಿನ್ನ ಯೋಗ್ಯತೆ ಎಷ್ಟು ಕಡಮೆಯಾಗಿದೆ, ತಿಳಿದುಕೊಂಡೆಯ?

ಅನನಿಗೆ ನೀನು ಹಿಂದೆ ಮಾಡಿದ ಅಪರಾಧಕ್ಕೆ ತಕ್ಕ ಪರಿಹಾರವನ್ನು

ನಿನ್ನಿಂದ ಅವನಿಗೆ ಕೊಡಿಸಬೇಕಾಗಿದೆ. ನೀನು ಅವನ ವಿಷಯದಲ್ಲಿ

ಬೇಕೆಂದು ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಮಾಡಿದರೆ, ನಿನ್ನ

ಆಸ್ತಿಯನ್ನೆ,ಲ್ಲಾ ಅವನಿಗೆ ಕೊಡಿಸಿ ಅವನಿಗೆ ನೀನು ಮಾಡಿದ ಹಾಗೆ

ನಿನಗೂ ಜೀವನೋಪಾಯಕ್ಕೆ ಮಾರ್ಗವಿಲ್ಲದಂತೆ ಮಾಡುವುದೇ ಧರ್ಮ.

------------------------------------------

40 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಆದರೆ ಇನ್ನು ಮೇಲಾದರೂ ಜನರ ಯೋಗ್ಯತೆಯನ್ನು ಅರಿತು ಸ್ವಪ್ರ

ತಿಷ್ಠೆಯನ್ನು ಬಿಟ್ಟು ಎಲ್ಲರಲ್ಲಿಯೂ ದಯಾರಸಉಳ್ಳವನಾಗಿ, ನಿನ್ನ

ಆಸ್ತಿಯ ನಾಲ್ಕರಲ್ಲಿ ಒಂದು ಭಾಗವನ್ನು ಅವನಿಗೆ ನೀನು ಕೊಡ

ತಕ್ಕದ್ದು. ಹೀಗೆಂದು ಅಧಿಕಾರಿಯು ಅಪ್ಪಣೆ ಮಾಡಿದನು,


ಇದೆಲ್ಲವನ್ನೂ ಕೇಳಿ ಆ ಮೇದರವನು--ಸ್ಟಾಮಿ ತಾವು ಮಾಡ

ಬೇಕೆಂದಿರುವ ಉಪಕಾರಕ್ಕೆ ನಾನು ಕೃತಜ್ಞನಾಗಿದೇನೆ. ನಾನು ಬಡ

ತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದೆ; ಕೆಲಸಮಾಡಿ ನನಗೆ

ಅಭ್ಯಾಸವಾಗಿದೆ. ಐಶ್ವರ್ಯವಂತನಾಗಬೇಕೆಂಬ ಇಚ್ಛೆ ನನಗೆ ಇಲ್ಲ.

ಅಥವಾ ಐಶ್ವರ್ಯ ಬಂದರೂ ಅದನ್ನು ಉಪಯೋಗಿಸುವ ಮಾರ್ಗ ನನಗೆ

ತಿಳಿಯದು. ನನಗೆ ಬೇಕಾದ್ದೆಲ್ಲಾ ಏನೆಂದರೆ, ನಾನು ಮೊದಲು

ಯಾವ ಸ್ಥಿತಿಯಲ್ಲಿದ್ದೆನೋ ಅದೇ ಸ್ಥಿತಿಯಲ್ಲಿ ಈ ಹಣಗಾರನು ನನ್ನನ್ನು

ಇಡಬೇಕು; ಈತನಿಗೆ ಹೆಚ್ಚಾಗಿ ದಯಾರಸವಿರಬೇಕು; ಇಷ್ಟೇ ಹೊರತು

ಮತ್ತೇನೂ ಇಲ್ಲ ಎಂದು ಅರಿಕೆ ಮಾಡಿದನು.


ಈ ಮೇದರವನ ಧಾರಾಳವಾನ ಮನಸ್ಸನ್ನು ನೋಡಿ ಮಧು

ವರ್ಮನಿಗೆ ಅತ್ಯಾಶ್ಚರ್ಯವುಂಟಾಯಿತು. ಅರಸುಮಗನು ತನಗೆ ಬಂದ

ಕಷ್ಟದಿಂದ ವಿವೇಕವನ್ನು ಕಲಿತುಕೊಂಡು, ತನ್ನ ಜೀವಮಾನಾವಧಿ ಆ

ಮೇದರವನನ್ನು ತನ್ನ ಪರಮಾಪ್ತನಂತೆ ಭಾವಿಸಿ, ತನ್ನ ಐಶ್ವರ್ಯ

ವನ್ನೆಲ್ಲಾ ಬಡಬಗ್ಗರ ಕಷ್ಟವನ್ನು ನಿವಾರಣ ಮಾಡುವುದಕ್ಕೆ ಉಪ

ಯೋಗಿಸಿದನು.

   ... 

೪ನೆ ಅಧ್ಯಾಯ


ಮೇಲೆ ಹೇಳಿದ ರೀತಿಯಲ್ಲಿ ಸುಮತಿಯು ಕಥೆಯನ್ನು ಓದಿ

ಮುಗಿಸಿದನು. ಅದನ್ನು ಮದನಕುಮಾರ ಕೇಳಿ ಬಹಳ ಸಂತೋಷ

ಪಟ್ಟು ನಾನು ಆ ಮೇದರವನಾಗಿದ್ದರೆ ದುಷ್ಟನಾದ ಆ ದೊರೇ ಅಳಿಯ 

------------------------------------------------

ಸುಮತಿ ಮದನಕುಮಾರರ ಚರಿತ್ರೆ ೪೧ 


ನಿಂದ ಅವನ ಐಶ್ವರ್ಯವನ್ನೆಲ್ಲಾ ಕಿತ್ತುಕೊಂಡು ಇರಿಸಿಕೊಳ್ಳುತಿದ್ದೆ

ಎಂದನು.


ಕೂಡಲೆ ಸುಮತಿಯು--ಆ ದೊರೇ ಅಳಿಯನ ಹಾಗೆ ಅಹಂಕಾರಿ

ಯಾಗಿಯೂ ದುಷ್ಟ ನಾಗಿಯೂ ಜಡನಾಗಿಯೂ ನಾನು ಎಲ್ಲಿಯಾದರೂ

ಅದೇನಲ್ಲಾ ಎಂಬ ಭಯದಿಂದ ಅವನ ಆಸ್ತಿ ನನಗೆ ಬೇಡವೆನ್ನುತಿದ್ದೆ,

ಎಂದನು.


ಅಲ್ಲಿಂದ ಮುಂದಕ್ಕೆ ರಾಮಜೋಯಿಸನೂ ಈ ಇಬ್ಬರು ಹುಡು

ಗರೂ ಸಹಾ ಬೆಳಗಿನ ಹೊತ್ತು ತೋಟದಲ್ಲಿ ಕೆಲಸ ಮಾಡುತಲೇ

ಇದ್ದರು. ಅವರಿಗೆ ಆಯಾಸವಾದಾಗ ಗುಡಿಲಿಗೆ ಹೋಗಿ ವಿಶ್ರಮಿಸಿ

ಕೊಳ್ಳುವುದು ಅಲ್ಲಿ ಸುಮತಿಯು ಯಾವುದಾದರೂ ಒಂದು ಇಂಪಾದ

ಕಥೆಯನ್ನು ನಿತ್ಯವೂ ಓದುವುದು ಮದನಕುಮಾರನು ಅದನ್ನು ಕಿವಿ

ಗೊಟ್ಟು ಕೇಳಿ ಆನಂದಪಡುವುದು, ಹೀಗೆಯೇ ನಡೆಯುತಿತ್ತು. ಒಂದಾ

ನೊಂದು ಕಾಲದಲ್ಲಿ ಸುಮತಿಯು ತಮ್ಮ ಅಕ್ಕನ ಮದುವೆಗೋಸ್ಟರ ೧೫

ದಿವಸಗಳ ಮಟ್ಟಿಗೆ ಗುರುವಿನ ಮನೆಯನ್ನು ಬಿಟ್ಟು ತಮ್ಮ ತಂದೇ

ಮನೆಗೆ ಹೊರಟುಹೋಗಲಾಗಿ, ರಾಮಜೋಯಿಸ ಮದನಕುಮಾರ

ಇವರಿಬ್ಬರೇ ನಿಂತರು.


ಸುಮತಿ ಹೊರಟುಹೋದ ಮಾರನೇ ದಿನಸ ಇವರಿಬ್ಬರೂ ತೋಟ

ದಲ್ಲಿ ಸೆಲಸಮಾಡಿ ಎಂದಿನಂತೆ ಗುಡಿಲಿಗೆ ಬಂದರು. ಆಗ ಮದನನು

ಯಥಾಪ್ರಕಾರವಾಗಿ ಓದತಕ್ಕ ಕಥೆಯನ್ನು ರಾಮಜೋಯಿಸನು ಓದು

ವನೆಂದು ತಿಳಿದುಕೊಂಡಿದ್ದನು. ಆದರೆ ಜೋಯಿಸನು ಹಾಗೆ ಓದದೆ

ಬೇರೇ ಕೆಲಸವಾಗಿದ್ದು. ಮಾರನೇ ದಿನವೂ ಮೂರನೇ ದಿನವೂ

ಹೀಗೆಯೇ ೧೫ ದಿವಸಗಳವರೆಗೂ ಓದುಗಾರಿಕೆ ಏನೇನೂ ಆಗಲಿಲ್ಲ.

'ಇದನ್ನು ಕಂಡು ಮದನನಿಗೆ ಬಹಳ ಅಸಮಾಧಾನವಾಯಿತು. ಇವನು

ತನ್ನ ಮನಸ್ಸಿನಲ್ಲಿ-- ಏನೋ ನಿತ್ಯವೂ ಹೀಗಾಗುತಿದೆ. ಕಥೆಯನ್ನು

ಕೇಳಬೇಕೆಂಬ ಆಶೆ ನನಗೆ ಉಂಟು. ಆದರೆ ಓದುವವರು ಯಾರೂ

ಇಲ್ಲ. ಸುಮತಿಯಹಾಗೆ ಓದುವುದಕ್ಕೆ ನಾನೇ ಯಾಕೆ ಕಲಿತುಕೊಳ್ಳ

`ಬಾರದು? ನನಗೆ ಅಕ್ಷರ ಬಂದರೆ ನೀವು ಓದಿ ತಾವು ಓದಿ, 

---------------------------------

೪೨ ಸುಮತಿ ಮದನಕುಮಾರೆರ ಚರಿತ್ರೆ [ಅಧ್ಯಾಯ


ಎಂದು ನಾನು ಇತರರನ್ನು ಬೇಡಿಕೊಳ್ಳ ಬೇಕಾದ್ಟೇ ಇಲ್ಲ. ನನ್ನ 

ಮಟ್ಟಿಗೆ ನಾನೇ ಓದಿಕೊಂಡು ಸಂತೋಷಪಡ ಬಹುದು. ಸುಮತಿ

ಏನೋ ಬಹು ಬುದ್ಧಿಶಾಲಿಯೇ ಸರಿ; ಆದರೆ ಅವರಿಗೆ ಓದುವುದಕ್ಕೆ

ಯಾರೂ ಹೇಳಿಕೊಡದೆಯೇ ಅವನು ಕಲಿತುಕೊಂಡಿರಲಾರ, ಅವನಿಗೆ

ಹೇಳಿಕೊಟ್ಟ ಹಾಗೆ ನನಗೂ ಹೇಳಿಕೊಟ್ಟರೆ, ಅವನಹಾಗೆಯೇ ನಾನೂ

ಓದಿಯೇನು. ಆಗಲಿ ನೋಡೋಣ. ಈಸಾರಿ ಅವನು ಇಲ್ಲಿಗೆ ಬರಲಿ,

ಈ ವಿಷಯದಲ್ಲಿ ಅವನನ್ನು ಕೇಳಿಯೇ ಸಿದ್ಧ ಎಂದನು.


ಸುಮತಿಯು ೧೫ ದಿವಸಗಳು ಕಳೆದ ಮಾರನೇ ದಿವಸವೇ ಹಿಂತಿ

ರುಗಿ ಬಂದನು, ಇವನ ಆಗಮನವನ್ನೇ ನಿರೀಕ್ಷಿಸಿಕೊಂಡಿದ್ದ ಮದನ

ಕುಮಾರನು,- ಸುಮತಿ, ನೀನು ಓದಲಿಕ್ಕೆ ಹೇಗೆ ಕಲಿತುಕೊಂಡೆ?


ಸುಮತಿ-- ರಾಮಜೋಯಿಸರು ಮೊದಲು ನನಗೆ ಅಕ್ಷರಗಳ

ನ್ನೆಲ್ಲಾ ಹೇಳಿಕೊಟ್ಟರು, ತರುವಾಯ ಅಕ್ಷರಗಳನ್ನು ಸೇರಿಸುವುದಕ್ಕೂ,

ಆಮೇಲೆ ಹೆಸರಕ್ಷರವನ್ನು ಬರೆಯುವುದಕ್ಕೂ ಕಲಿಸಿಕೊಟ್ಟರು ;

ಹಾಗೆಯೇ ನಾನು ಓದುವುದಕ್ಕೆ ಕಲಿತುಕೊಂಡೆ.


ಮದನ--ನನಗೂ ಅಕ್ಷರಗಳನ್ನು ಹೇಳಿಕೊಡುತೀಯ?


ಸುಮತಿ-- ಅಗತ್ಯವಾಗಿ ಆಗಲಿ.


ಹೀಗೆ ಈ ಹುಡುಗರಿಬ್ಬರೂ ಮಾತನಾಡಿಕೊಂಡರು. ಆಗ ಸುಮ

ತಿಯು ಅವನಿಗೆ ಅಕ್ಷರವನ್ನು ಹೇಳಿಕೊಟ್ಟನು. ಮದನ ೫ನೆ ವರ್ಷ

ದಲ್ಲಿ ಕ್ರಮವಾಗಿ ಅಕ್ಷರಾಭ್ಯಾಸವಾಗಿದ್ದಾಗ್ಗೂ ಇವನು ಒಂದು ದಿವಸ

ವಾದರೂ ಕೂತು ಒಂದು ಅಕ್ಷರವನ್ನೂ ಕಲಿತವನಲ್ಲ. ಆದರೆ ಈಗ

ಅಕ್ಷರದ ಮೇಲೆ ಮಮತೆಹುಟ್ಟದ ಕಾರಣ ಮದನನು ವರ್ಣಮಾಲೆ

ಯನ್ನೆಲ್ಲಾ  ೩ ದಿವಸದಲ್ಲಿ ಕಲಿತುಕೊಂಡನು. ಅಕ್ಷರವೆಲ್ಲಾ ಹೀಗೆ

ಜಾಗ್ರತೆಯಾಗಿ ಬರಲು,  ಅರಸುಮಗನಿಗೆ ಅತ್ಯಂತ ಸಂತೋಷವಾಯಿತು.

ಈ ಸಂತೋಷವನ್ನು ರಾಮಜೋಯಿಸನಸಿಗೆ ಆತುರದಿಂದ ಓಡಿಹೋಗಿ

ಹೇಳಬೇಕೆಂದು ಮದುನಸಿಗೆ ಮನಸ್ಸು ಹುಟ್ಟಿತು. ಆದರೆ ಉಂಡೆ

ಯಾದ ಒಂದು ಕಥೆಯನ್ನು ಆತನ ಮುಂದೆ ಓದಿ ಆತನಿಗೆ ಇನ್ನೂ

ಆಶ್ಚರ್ಯ ಹೆಚ್ಚಾಗುವಂತೆ ಮಾಡಬೇಕೆಂದು ಆಗ್ಗೆ ಸುಮ್ಮನಾದನು.

--------------------------------------

೪] ಸುಮತಿ ಮದನಕುಮಾರರ ಚರಿತ್ರೆ 43 


ಆದಕಾರಣ ಮದನನು ವಿಶೇಷಾಸಕ್ತಿಯಿಂದ ಓದುವುದಕ್ಕೆ ತೊಡಗಿ

ದನು. ತನ್ನ ಜೊತೆಗಾರನಿಗೆ ಓದು ಹೇಳಿಕೊಡುವ ವಿಷಯದಲ್ಲಿ ಸುಮ

ತಿಯು ಸ್ವಲ್ಪವೂ ಪಾಲಮಾರಲಿಲ್ಲ. ಇದಕ್ಕೆ ಅನುಗುಣವಾಗಿ ಇವನಲ್ಲಿ

ಬೋಧನಾಶಕ್ತಿಯೂ ಚೆನ್ನಾಗಿತ್ತು. ಎರಡು ತಿಂಗಳೊಳಗಾಗಿ ಸುಮ

ತಿಯ ಶಿಕ್ಷೆಯಲ್ಲಿ ಮದನನು ಕೈಗೆ ಕೊಟ್ಟ ಕಾಗದವನ್ನು ಚೆನ್ನಾಗಿ

ಓದುವ ಮಟ್ಟಿಗೆ ಕಲಿತುಕೊಂಡು, ತನ್ನ ಪಾಂಡಿತ್ಯವನ್ನು ರಾಮ

ಜೋಯಿಸನ ಮುಂದೆ ತೋರಿಸಿಕೊಳ್ಳ ಬೇಕೆಂದು ನಿಷ್ಟರ್ಷೆ ಮಾಡಿ

ಕೊಂಡನು. ಅದೇ ಪ್ರಕಾರ ನಡಸಲು ಒಂದು ಸಮಯ ದೊರೆಯಿತು.

ಒಂದು ದಿನ ಅವರು ಮೂರು ಜನರೂ ಗುಡಿಲಿನಲ್ಲಿ ಸೇರಿರುವಾಗ್ಗೆ 

ಕಥೆ ಓದುವುದಕ್ಕೋಸ್ಫರ ರಾಮಜೋಯಿಸನು ಸುಮತಿಯ ಕೈಗೆ ವಹಿ

ಯನ್ನು ತೆಗೆದುಕೊಟ್ಟನು ಆಗ ಮದನನು ಎದ್ದುನಿಂತು. -ಜೋಯಿ

ಸರೆ ತಮ್ಮ ಅಪ್ಪಣೆಯಾದರೆ ಆ ಕಥೆಯನ್ನು ನಾನು ಓದುತ್ತೇನೆ ಎಂದನು.

ಆದಕ್ಕೆ ಜೋಯಿಸನು--ಆಹಾ! ಆಗತ್ಯವಾಗಿ ಆಗಲಿ, ಎಂದು ಹೇಳಿ

ಯೇನು; ಆದರೆ ನನಗೆ ಗೊತ್ತಾಗಿದೆ, ನೀನು ಓದುಗೀದುವುದು ಸಟೆ;

ಬೇಕಾದರೆ ಕೈಲಿರುವ ಪುಸ್ತಕವನ್ನು ಬಿಸಾಟು ಓಡಿಹೋಗುತೀಯೆ

ಎಂದನು. ಆ ಮಾತಿಗೆ ರಾಜಪುತ್ರನು ನಸುನಕ್ಕು, ಅದನ್ನು ತಾನು

ಓದುತ್ತೇನೆಂಬ ನಂಬಿಕೆಯಿಂದ ಪುಸ್ತಕವನ್ನು ಕೈಗೆ ತೆಗೆದುಕೊಂಡು

ಓದಿದ್ದು ಹೇಗೆಂದರೆ-- 


ಎರಡು ನಾಯಿಗಳ ಕಥೆ


ಒಂದಾನೊಂದು ಊರಿನಲ್ಲಿ ತೋಳ ಹುಲಿ ಮೊದಲಾದ ಕಾಡು

ಮೃಗಗಳ ಉಪದ್ರವು ಬಹಳವಾಗಿತ್ತು. ಆ ಊರಿನಲ್ಲಿರುವ ಒಬ್ಬ ಬಡ

ಒಕ್ಳಲಿಗನು ಎತ್ತರವಾಗಿಯೂ ಥೈರ್ಯವಾಗಿಯೂ ಇರುವ ಎರಡು

ನಾಯಿಮರಿಗಳನ್ನು ತಂದು ಸಾಕಿದನು. ಅವುಗಳಲ್ಲಿ ಒಂದಕ್ಕೆ ಸಂಪಗೆ

ಎಂತಲೂ ಮತ್ತೊಂದಕ್ಕೆ ಮಲ್ಲಿಗೆ ಎಂತಲೂ ಹೆಸರಿಟ್ಟಿದ್ದನು. ಈ

ನಾಯಿಗಳು ನೋಡುವುದಕ್ಕೆ ಸುಂದರವಾಗಿ ಸಮಯದಲ್ಲಿ ಕೆಲಸಕ್ಕೆ

ಬರತಕ್ಕವುಗಳಾಗಿದ್ದ ಕಾರಣ, ಆ ಒಕ್ಳಲಿಗನು ಅವುಗಳಲ್ಲಿ ಒಂದನ್ನು 

-------------------------------------

೪೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ತಾನು ಉಳುಮೆ ಮಾಡತಕ್ಕ ಭೂಮಿಯ ಒಡೆಯನಾದ ಗೌಡನಿಗೆ

ಒಪ್ಪಿಸಿದನು; ಮತ್ತೊಂದನ್ನು ತನ್ನ ಕುರೀಮಂದೆ ಕಾಯುವುದಕ್ಕಾಗಿ

ಇರಿಸಿಕೊಂಡನು,


ಅದು ಮೊದಲುಗೊಂಡು ಈ ಎರಡು ಮರಿಗಳ ರೀತಿಯೂ

ವಿಶೇಷವಾಗಿ ಬದಲಾಯಿಸಿತು. ಒಡೆಯನಿಗೆ ಕೊಟ್ಟ ಸಂಪಗೆ ಎಂಬ

ನಾಯಿಯು ಗೌಡನ ಮನೆಗೆ ಹೋಗಿ ಅಲ್ಲಿನ ಅಡಿಗೆಯವರ ಸಂಗಡಲೂ

ಆಳುಗಳ ಸಂಗಡಲೂ ವಿಶೇಷವಾಗಿ ಸಲಿಗೆಯಾಗಿ, ಅವರೊಡನೆ ಆಟ

ವಾಡುತ ಅನೇಕ ಚೇಷ್ಟೆಯನ್ನು ಕಲಿತುಕೊಂಡಿತು. ಇದು ಮಾಡುವ

ಚೇಷ್ಟೆಗಳನ್ನು ನೋಡಿ ಅಲ್ಲಿನ ಆಳುಗಳು ಸಂತೋಷಪಟ್ಟು,

ಅದಕ್ಕೆ ಬೇಕಾದಷ್ಟು ಹಿಟ್ಟನ್ನೂ ಮಾಂಸವನ್ನೂ ಆಗಾಗ್ಗೆ  ಹಾಕಿ,

ಅದನ್ನು ಎಲ್ಲರೂ ಆದರದಿಂದ ಸಾಕುತಿದ್ದರು, ಹೀಗೆ ತಿಂದು ತಿಂದು

ಸಂಪಗೆಯು ದಪ್ಪವಾಗಿ ಬೆಳೆದು ದುಂಡುದುಂಡಾಗಿ ನೋಡುವುದಕ್ಕೆ

ಬಹು ಚೆನ್ನಾಗಿತ್ತು. ಆದರೆ ಮೈ ಹೊತ್ತುಕೊಂಡು ನಡೆಯಲಾರದೆ

ಇರುತಿತ್ತು ; ಇದರಲ್ಲಿ ಹೇಡಿತನ ಬಹು ಹೆಚ್ಚಾಗಿತ್ತು ; ಒಂದು ಸಣ್ಣ

ನಾಯಿಯನ್ನು ಕಂಡರೂ ಹೆದರಿಕೊಂಡು ಓಡಿಹೋಗುತಿತ್ತು; ಹೆಚ್ಚಾಗಿ

ತಿಂಡಿ ತಿಂದು ಅಭ್ಯಾಸವಿದ್ದ ಕಾರಣ ತಿಂಡೀ ಪದಾರ್ಥ ಯಾವುದು

ಎಲ್ಲಿ ಬಿದ್ದಿದ್ದಾಗ್ಯೂ ಕದ್ದು ತಿನ್ನುತಿತ್ತು. ಆದಾಗ್ಯೂ ಪಾದಚಾರಿಗಳಾಗಿ

ಹೋಗುತಿದ್ದ ಯಾರನ್ನು ಕಂಡರೂ ಬಾಲವನ್ನು ಅಲ್ಲಾ ಡಿಸುತಾ ಅವರೆ

ಹಿಂದೆಯೇ ಹೋಗುತಿತ್ತು. ಅವರ ಮೈಮೇಲಕ್ಕೆ ಸಂತೋಷದಿಂದ

ಅಡರುವುದು, ಎರಡು ಕಾಲಿನಲ್ಲಿ ನಿಂತುಕೊಳ್ಳುವುದು, ಯಾರಾದರೂ

ಕಡ್ಡಿಯನ್ನಾಗಲಿ, ಬಟ್ಟೆಯನ್ನಾಗಲಿ, ಲಾಂದ್ರವನ್ನಾಗಲಿ, ಬಾಯಿಗೆ

ಕೊಟ್ಟರೆ ಅದನ್ನು ಕಚ್ಚಿಕೊಂಡು ಹಿಂದೆಯೇ ಹೋಗಿ ಅವರಿಗೆ ಕೊಡು

ವುದು, ಹೀಗೆಲ್ಲಾ ಮಾಡುತಿದ್ದ ಕಾರಣ; ಆ ಸುತ್ತುಮುತ್ತಿನ ಜನರೆಲ್ಲರ

ಪ್ರೇಮಕ್ಕೆ ಇದು ಪಾತ್ರವಾಗಿತ್ತು.


ಒಕ್ಕಲಿಗನ ಮನೆಯಲ್ಲಿದ್ದ ಮಲ್ಲಿಗೆಯಾದರೋ, ಅವನ ಗುಡಿಲಿನ

ಬಾಗಿಲ ಜಗಲಿಯ ಮೇಲೆಯೇ ಬಿದ್ದಿರುತಿತ್ತು. ಇದರ ಮೈ ಸ್ವಲ್ಪ

ಒಣಗಿಕೊಂಡೇ ಇತ್ತು. ಸಂಪಗೆ ಮಾಡುತಿದ್ದ ಚೇಷ್ಟೆ ಯಾವುದೂ 

------------------------------------------

೪] ಸುಮಠಿ ಮದನಕುಮಾರರ ಚರಿತ್ರೆ 45 


ಇದರಲ್ಲಿ ಇರಲಿಲ್ಲ, ಇದರ ಒಡೆಯನಾದ ಒಕ್ಕಲಿಗನು ಬಡವನಾದ್ದರಿಂದ

ಅದರ ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ತಿಂಡಿಯನ್ನು ಮಾತ್ರ ಹಾಕು 

ತಿದ್ದನು. ಹೆಚ್ಚಾಗಿ ಹಾಕುತಿರಲಿಲ್ಲ. ಮಲ್ಲಿಗೆಯು ಅದನ್ನು ತಿಂದು

ಜೀರ್ಣಿಸಿಕೊಳ್ಳುತಿತ್ತು. ಹೆಚ್ಚು ತಿಂಡಿಯನ್ನು ತಿಂದ ಅಭ್ಯಾಸವೇ

ಅದಕ್ಕಿರಲಿಲ್ಲ. ತನ್ನ ಜೊತೇ ನಾಯಿಯಹಾಗೆ ಮನೆಯಲ್ಲಿಯೇ ಓಡಿ

ಯಾಡಿಕೊಂಡು ಮಡಕೇಹುಲಿಯಾಗಿರದೆ ಯಾವಾಗಲೂ ಒಕ್ಕಲಿಗನ.

ಸಂಗಡ ಹೊಲದಲ್ಲಿಯೇ ಓಡಿಯಾಡಿಕೊಂಡಿರುತಾ, ಹೊಟ್ಟೆಗೆ ಸಾಲದೆ

ಶ್ರಮಪಡುತಾ, ಅಲ್ಲಿಬಿದ್ದು ಇಲ್ಲಿಬಿದ್ದು ಗಟ್ಟಿರಾಸಾಗಿ, ಬಹಳ ಚಟು

ವಟಕೆಯುಳ್ಳದ್ದಾಗಿತ್ತು. ಒಕ್ಳಲಿಗನ ಕುರೀಮಂದೆಯನ್ನು ಕಾಡಿನಲ್ಲಿ 

ಕಾದುಕೊಂಡಿರುವಾಗ್ಗೆ ತೋಳಗಳ ಸಂಗಡ ಜಗಳಕ್ಕೆ ಹೋಗಿ ಇದಕ್ಕೆ

ಅಲ್ಲಲ್ಲಿ ಗಾಯವೂ ಆಗಿತ್ತು. ಹೀಗೆ ಆಗಾಗ್ಗೆ ಕಾದಿಕಾದಿ ಅಭ್ಯಾಸ

ವಾಗಿದ್ದ ಕಾರಣ, ಮಲ್ಲಿಗೆಗೆ ಧೈರ್ಯ ಹೆಚ್ಚಿ ಇದು ಯಾತಕ್ಕೂ ಹೆದರದೇ

ಇರುತಿತ್ತು. ಇದು ಮಂದೆ ಕಾಯುವುದಕ್ಕೆ ಮೊದಲುಮಾಡಿದ ಕಾಲ

ದಿಂದ ಒಂದು ಕುರಿಯೂ ಹೋಗದೆ ಎಲ್ಲವೂ ಒಕ್ಳಲಿಗನ ಮನೆಗೆ 

ಕ್ಷೇಮವಾಗಿ ಸಾಯಂಕಾಲಕ್ಕೆ ಬಂದು ಸೇರುತಿದ್ದವು. ಯಾವ ತಿಂಡಿ

ಎಲ್ಲಿ ಬಿದ್ದಿದ್ದಾಗ್ಯೂ ಅದನ್ನು ಮುಟ್ಟು ತಿರಲಿಲ್ಲ. ಒಕ್ಕಲಿಗನಿಗೆ ಮನೆ.

ಯಿಂದ ಅವನ ಹೆಂಡತಿ ಹಿಟ್ಟನ್ನು ತಂದು ಹೊಲದ ಭಾವೀತಡಿಯಲ್ಲಿ.

ಇರಿಸಿ ಆಚೆ ಈಚೆ ಹೋದಕ್ಕೆ ಆ ಹಿಟ್ಟನ್ನು ಕಾಗೆ ಮೊದಲಾಗಿ ಯಾವು.

ದೂ ಮುಟ್ಟಿದಹಾಗೆ ಮಲ್ಲಿಗೆಯು ದೂರಾ ಕೂತು ನೋಡಿಕೊಳ್ಳುತಿತ್ತೇ

ಹೊರತು ಅದನ್ನು ಮುಟ್ಟುತಿರಲಿಲ್ಲ. ತನ್ನ ಒಡೆಯ ಬಂದಮೇಲೆ.

ಅವನು ಆಹಾರವನ್ನು ತಿಂದು ಉಳಿದುದನ್ನು ಇದಕ್ಕೆ ಹಾಕಿದರೆ.

ಅದನ್ನು ತಿಂದು ತೃಪ್ತಿಯಾಗುತಿತ್ತು. ಯಾವಾಗಲೂ ಹೊರಗೆ ಇದ್ದು

ಗಾಳಿ ಮಳೆಗಳಿಂದ ಬಡಿಸಿಕೊಂಡ ಅಭ್ಯಾಸವಾಗಿದ್ದಕಾರಣ, ಯಾವ.

ಬಿರುಗಾಳಿಗೂ ಹೆದರದೆ ಕುರಿಯನ್ನು ಕಾಯುತಿತ್ತು. ಎಷ್ಟೇ ಚಳಿ

ಯಾಗಿರಲಿ, ನೀರು ಎಷ್ಟೇ ಆಳವಾಗಿರಲಿ ಯಜಮಾನನ ಸನ್ನೆ ನೋಡಿ.

ಕೊಂಡು ನೀರಿನೊಳಕ್ಕೆ ಹೋಗಿ ಬೀಳುತಿತ್ತು.


ಒಂದಾನೊಂದುದಿನ ಈ ಒಳ್ಳಲಿಗನ ಒಡೆಯನಾದ ಗೌಡನು 

----------------------------------------

೪೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ತನ್ನ ಭೂಮಿಯನ್ನು ನೋಡಿಕೊಂಡು ಬರಬೇಕೆಂದು ಹೊರಟು ಸಂಪಗೆ

ಯನ್ನು ತನ್ನ ಜೊತೆಯಲ್ಲಿಯೇ ಕರೆತಂದನು. ಹೊಸಜನರು ಯಾರಾ

ದರೂ ಬಂದರೆ ನಾಯಿಗಳು ಎದ್ದು ಅವರ ಸುತ್ತಮುತ್ತಲೂ ಸುತ್ತಿ

ಯಾಡುವುದು, ಅವರನ್ನು ಮೂಸಿನೋಡುವುದು ಹೀಗೆಲ್ಲಾ ಮಾಡು

ವುದು ಉಂಟಷ್ಟೆ. ಅದೇ ಪ್ರಕಾರ ಗೌಡ ಅಲ್ಲಿಗೆ ಬಂದು ತಲಪಿದ

ಕೂಡಲೆ ಮಲ್ಲಿಗೆಯು ಇವನನ್ನು ಮೂಸಿನೋಡಿ ಅಲ್ಲಲ್ಲಿ ಸುಳಿದಾಡಿತು.

ಆಗ ಗೌಡನು ಒರಟಾಗಿ ಪರಪರಕಲಾಗಿ ಕಾಣಿಸಿಕೊಳ್ಳುತಿದ್ದ ಈ

ಮಲ್ಲಿಗೆಯನ್ನು ನೋಡಿ ಅಸಹ್ಯಪಡುತ್ತಾ, ಇದನ್ನು ಅಲಕ್ಷ್ಯವಾಗಿ

ಕಂಡನು. ಸಂಪಗೆಯಲ್ಲಿದ್ದ ಚಾಕಚಕ್ಯಗಳು ಇದರಲ್ಲಿ ಕಾಣಬರಲಿಲ್ಲ.

ಇದು ಒಂದು ಕೆಲಸಕ್ಕೂ ಬಾರದ ಎಂಜಲಹಾಳೇ ನಾಯಿ ಎಂದು ಗೌಡ

ತಿಳಿದುಕೊಂಡಿದ್ದರು. ಈ ಸಮಯದಲ್ಲಿ ಈ ದುರಭಿಪ್ರಾಯವನ್ನು

ಹೋಗಲಾಡಿಸತಕ್ಕಂಥಾ ಒಂದು ಸಂಗತಿ ಜರುಗಿತು.


ಗೌಡನು ಅಲ್ಲಿಗೆ ಬಂದು ಎರಡು ಮೂರು ದಿವಸವಾದಮೇಲೆ

ತನ್ನ, ಭೂಮಿಗಳನ್ನೆಲ್ಲಾ ಅಲ್ಲಲ್ಲಿ ನೋಡಿಕೊಳ್ಳುತಾ ಸ್ವಲ್ಪ ಒತ್ತಾದ

ಕಾಡಿನಲ್ಲಿ ಹೋಗುತಿದ್ದನು. ಈ ನಾಯಿಗಳೆರಡೂ ಅವನ ಹಿಂದೆ

ಹೋಗುತಿದ್ದವು. ಸಮೀಪವಾದ ಒಂದು ಹೊದರಿನಲ್ಲಿ ಒಂದಾನೊಂದು

ಸಿವಂಗಿಯು ಹೊಟ್ಟೆಗೆ ಕಾಣದೆ, ಏನಾದರೂ ಸಿಕ್ಕೀತೆ, ಬಾಯಿಗೆ

ಹಾಕಿಕೊಂಡೇನೆ, ಎಂದು ಕಾದುಕೊಂಡು ಕೂತಿತ್ತು. ಅದು ಮನುಷ್ಯ

ಬರುವ ಸದ್ದನ್ನು ಕೇಳಿ ಹೊದರಿನಿಂದ ಈಚೆಗೆ ಹೊರಟು ಹಾರಿಹಾರಿ

ಬರುತಾ ನೆಗೆದು ಈ ಗೌಡನ ಮೇಲೆ ಬೀಳುವುದಕ್ಕೆ ಬಂತು. ಇವನಿಗೆ

ಕಕಮಕ ಹಿಡಿಯಿತು. ಏನೂ ತೋರಲಿಲ್ಲ. ಈ ಗಾಬರಿಗೆ ಅನು

ಸಾರವಾಗಿ, ಜೊತೆಯಲ್ಲಿ ಬರುತ್ತಿದ ಮೆಚ್ಚಿನ ಸಂಪಗೆಯು ಒಡೆಯ

ನಿಗೆ ಸಮಯದಲ್ಲಿ ಸಹಾಯಮಾಡದೆ ಬಾಲವನ್ನು ಎರಡು ಕಾಲು

ಸಂದಿಗೆ ಸೇರಿಸಿಕೊಂಡು ಭಯದಿಂದ ಅರಚಿಕೊಳ್ಳುತಾ ಅವನ ಹಿಂದೆ

ಓಡಿಹೋಯಿತು, ಗೌಡನ ಆಶೆ ನಿರಾಶೆಯಾಗುತ ಬಂತು. ಇವನ

ಹಿಂದೆಯೇ ಸದ್ದುಮಾಡದೆ ಇವನ ಕಣ್ಣಿಗೆ ಕಾಣಿಸಿಕೊಳ್ಳದೆ ದೂರ

ದಲ್ಲಿ ಮೆಬ್ಲಗೆ ಬರುತಿದ್ದ ಮಲ್ಲಿಗೆಯು ಕ್ಷಣಮಾತ್ರದಲ್ಲಿ ಅಂಬು 

-----------------------------------------

೪] ಸುಮತಿ ಮದನಕುಮಾರರ ಚರಿತ್ರೆ ೪೭


ಎಸೆದಹಾಗೆ ಓಡಿಬಂದು ಬಹುದೈರ್ಯದಿಂದಲೂ ಚಮತ್ಕಾರದಿಂ

ದಲೂ ಸಿವಂಗಿಯಮೇಲೆ ಹಾರಿ ಬಿತ್ತು. ಇದು ಬಿದ್ದಪೆಟ್ಟಗೇ ಸಿವಂ

ಗಿಯು ತತ್ತರಿಸಿಹೋಗಿ ಕೆಳಕ್ಕೆ ಬಿತ್ತು; ತರುವಾಯ ಚೇತರಿಸಿ

ಕೊಂಡು ಕೂಡಲೆ ಎದ್ದು ತನ್ನ ಪಂಜದಿಂದ ಅತಿ ಬಿರುಸಾಗಿ ನಾಯಿಯ

ಮುಖದಮೇಲೆ ಒಂದು ಏಟಹಾಕಿತು. ಮಲ್ಲಿಗೆಯು ಅದನ್ನು ತಪ್ಪಿಸಿ

ಕೊಂಡು ತನ್ನ ಹಲ್ಲುಗಳಿಂದ ಸಿವಂಗಿಯ ಕತ್ತನ್ನು ಕಡಿಯಿತು. ಹೀಗೆ

ಇವೆರಡಕ್ಕೂ ಘೋರವಾದ ಜಗಳ ಹತ್ತಿತು. ಬಹಳ ಹೊತ್ತು ಕಾದಿ-ಕಾದಿ

ಎರಡೂ ತಟ್ಟಾಗಿ ಹೋದವು. ಎರಡರ ಮೈಯೂ ರಕ್ತಮಯವಾಯಿತ್ತ್ಮು

ಮಲ್ಲಿಗೆಯು ಸಿವಂಗಿಯ ಆಯಸ್ಥಳವನ್ನು ಹಡಿದು ಕಚ್ಚಲು,

ಸಿವಂಗಿಯು ಬಿದ್ದು ಪ್ರಾಣವನ್ನು ಬಿಟ್ಟಿತು. ದೂರದಲ್ಲಿ ನಿಂತು ಈ

ಘೋರವಾದ ಕದನವನ್ನು ನೋಡುತಿದ್ದ ಗೌಡನ ಸಮೀಪಕ್ಕೆ ಮಲ್ಲಿ

ಗೆಯು ಓಡಿಬಂತು. ಅದಕ್ಕೂ ಪೂರಾ ಏಟು ಬಿದ್ದಿತ್ತು. ಗೌಡನು

ಆ ದಿನ ಪ್ರಾಣ ಉಳಿದುದಕ್ಕೆ ಸಂತೋಷಸಡುತಾ ಮಲ್ಲಿಗೆಯ ಮೈ 

ರಕ್ತವನ್ನು ಒರಸಿ ಅದನ್ನು ಆದರಿಸಿದನು. ಇದರಿಂದ-ಯಾರೂ ಮೇಲೆ

ಮೇಲೆ ನೋಡಿ ಮೋಸ ಹೋಗಕೂಡದು; ಹೊರಗಡೆ ಎಷ್ಟು ಪರಕ

ಲಾಗಿದ್ದರೂ ಒಳಗೆ ಉತ್ತಮವಾದ ಯೋಗ್ಯತೆ ಇರಬಹುದು; ಪ್ರಾಸಾದ

ವಾಸಿಗಳಲ್ಲಿ ಶುದ್ಧಶೂನ್ಯವಾಗಿರುವ ಸದ್ಗುಣಗಳು ಗುಡಿಸಿಲಿನ ಬಡವರಲ್ಲಿ

ಕಂಡು ಬರಬಹುದು ಎಂದು ಆ ಗೌಡನು ಅನುಭವದಿಂದ ತಿಳಿದು

ಕೊಂಡನು.


ಈ ರೀತಿಯಲ್ಲಿ ಓದಿ ನಿಲ್ಲಿಸಲು, ರಾಮಜೋಯಿಸನು--ಬಹು

ಚೆನ್ನಾಗಿದೆ; ಸಂತೋಷವಾಯಿತು. ಹುಡುಗರು ಶ್ರಮ ಪಟ್ಟರೆ ದೊಡ್ಡ

ವರು ಮಾಡತಕ್ಕಕೆಲಸಗಳನ್ನು ಅವರಿಗೆ ಸಮಸಮವಾಗಿ ಮಾಡಿಯಾರು.

ಇದು ಹಾಗಿರಲಿ ಮದನ ಈಗ ನೀನು ಓದುತಿದ್ದ ಕಥೆ ಹೇಗಿದೆ?

ನೋಡುವುದಕ್ಕೆ ಸುಂದರವಾಗಿ ಒಲಪುಮಾಡುತಿದ್ದು ತನ್ನೊಡೆಯನನ್ನು

ಸಿವಂಗಿ ತಿಂದುಕೊಳ್ಳಲೆಂದು ಬಿಟ್ಟು ಬಿಟ್ಟು ಓಡಿಹೋದ ಸಂಪಗೆ

ಯಂಥಾ ನಾಯಿ ನಿನಗೆ ಬೇಕೆ? ಇಲ್ಲ, ಯಾರೂ ಲಕ್ಷ್ಯಮಾಡದಿ

ತೆಳ್ಳಗೆ ಸರಕಲಾಗಿದ್ದು ಯಜಮಾನನಿಗೋಸ್ಕರ ತನ್ನ ಪ್ರಾಣವನ್ನು ಒಪ್ಪಿ   

------------------------------------------

48 ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ


ಸಲು ಹೋದ ಮಲ್ಲಿಗೆಯಂಥಾ ನಾಯಿ ನಿನಗೆ ಬೇಕೆ? ಎಂದು.

ಜೋಯಿಸ ಕೇಳಿದನು. ಆಗ ಮದನನು ಉಪಾಧ್ಯಾಯನನ್ನು ಕುರಿತು.

--ನನಗೆ ಮಲ್ಲಿಗೆಯಂಥಾ ನಾಯಿಯೇನೋ ಬೇಕು. ಆದರೆ ಅದಕ್ಕೆ

ಮೈ ತೊಳೆದು ಒಳ್ಳೇ ಆಹಾರವನ್ನು ಕೊಟ್ಟು ಅದನ್ನು ಸುಖವಾಗಿ.

ಇಟ್ಟುಕೊಂಡಿರುತಿದ್ದೆನೇ ಹೊರತು, ಹೀಗೆ ಅದನ್ನು ಕಂಡರೆ ಲಕ್ಷ್ಯವಿಲ್ಲದೆ

ಬಿಟ್ಟು ಬಿಡುತಿರಲಿಲ್ಲ ಎಂದನು. ಕೂಡಲೆ ಜೋಯಿಸನು--ನೀನು.

ಹಾಗೆ ಮಾಡಿದ್ದಕ್ಕೆ ಮಲ್ಲಿಗೆಯೂ ಸಂಪಗೆಯಂತೆಯೇ ದಪ್ಪವಾಗಿ ಇದ್ದ

ಕಡೆಯಲ್ಲಿಯೇ ಇರುತ್ತಾ ಹೇಡಿಯಾಗುತಿತ್ತು. ಆದರೆ ಈ ಕಥೆ ಇನ್ನೂ

ಮುಂದಕ್ಕೆ ಇದೆಯಷ್ಟೇ ; ಅದನ್ನು ಕೊನೆಗಾಣಿಸು, ಮುಂದಕ್ಕೆ ಏನಾಗು.

ವ್ರುದೋ ನೋಡೋಣ, ಎಂದನು, ಆಗ ಮದನಕುಮಾರನು ಕಥೆಯನ್ನು

ಮುಂದಕ್ಕೆ ಸಾಗಿಸಿದನು--


ಮಲ್ಲಿಗೆಯ ಗುಣಾತಿಶಯಗಳನ್ನು ಕಂಡು ಗೌಡನಿಗೆ ಬಹು.

ಸಂತೋಷವಾಯಿತು; ಆದಕಾರಣ ತನ್ನ ಸಮೀಪದಲ್ಲಿಯೇ ಅದನ್ನು

ಇರಿಸಿಕೊಳ್ಳ ಬೇಕೆಂಬ ತಾತ್ಪರ್ಯದಿಂದ, ತನಗೆ ಮಲ್ಲಿಗೆಯನ್ನು ಇನಾ 

ಮಾಗಿ ಕೊಡೆಂದು ಒಕ್ಕಲಿಗನನ್ನು ಕೇಳಿಕೊಂಡನು. ಒಕ್ಳಲುಮಗ

ನಿಗೆ ಗೌಡನ ಅಪೇಕ್ಷೆಯಂತೆ ಮಲ್ಲಿಗೆಯನ್ನು ಅವಕ ಸಂಗಡ ಕಳುಹಿಸಿ

ಕೊಡುವುದು ಇಷ್ಟವಿಲ್ಲದ್ದಿದ್ದಾಗ್ಯೂ, ಯಜಮಾನನ ಮಾತನ್ನು ಮೀರು

ವುದಕ್ಕಾಗಲಿಲ್ಲ. ಗೌಡನು ಹೇಡಿಯಾದ ಸಂಪಗೆಯ ಮೇಲೆ ಅತ್ಯಾ

ಗ್ರಹಗೊಂಡು, ಅದನ್ನು ಬೈದು ಕಾಡಿನಲ್ಲಿಯೇ ಬಿದ್ದಿರಲಿ, ಅದಕ್ಕೆ

ಆಹಾರವನ್ನು ಹಾಕಬೇಡವೆಂದು ಹೇಳಿ , ಮಲ್ಲಿಗೆಯನ್ನು ಕರೆದು.

ಕೊಂಡು ಊರಿಗೆ ಹೊರಟು ಹೋದನು.


ಗೌಡ ಹೊರಟುಹೋದ ತರುವಾಯ, ಒಕ್ಕಲಿಗನು ಸಂಪಗೆಗೆ

ಹಿಟ್ಟನ್ನು ಹಾಕದೆ, ಈ ಕೆಟ್ಟ ನಾಯಿ ಸತ್ತು ಹೋಗಲೆಂದು ಸುಮ್ಮ

ನಿದ್ದನು. ಆದರೆ ಅದರೆ ಆಕಾರವೂ, ರೂಪೂ, ಒಕ್ಳಲಿಗನನ್ನು ಕಂಡಾಗ

ಲೆಲ್ಲಾ ಬಾಲವನ್ನು ಅಲ್ಲಾಡಿಸಿಕೊಂಡು ಅವನ ಕಾಲನ್ನು ನೆಕ್ಕುವುದಕ್ಕೆ 

ಬರುವ ವಿನ್ಯಾಸವೂ ಇವನ ಮನಸ್ಸನ್ನು ಕರಗಿಸಿತು. ಮತ್ತು ಇದನ್ನು

ಕಂಡವರೆಲ್ಲಾ ಅದರ ಮೇಲಿನ ಪ್ರೀತಿಯಿಂದ ಅದಕ್ಕೆ ಆಹಾರವನ್ನು 

----------------------------------------

೪] ಸುಮತಿ ಮದನಕುಮಾರರ ಚರಿತ್ರೆ ೪೯ 


ಹಾಕೆಂದು ಆ ರೈತನಿಗೆ ಹೇಳಿದರು. ಆಗ ಒಕ್ಕಲಿಗನು ಬೇರೇ ಗುಣ

ಉಂಟಾಗಲಾರದೆ. ನೋಡಬೇಕೆಂದು ನಿಶ್ಚಯಿಸಿಕೊಂಡು, ಮಲ್ಲಿಗೆಗೆ

ಹಾಕುತ್ತಿದ್ದ ಹಾಗೆಯೇ ಸ್ವಲ್ಪ ಹಿಟ್ಟುಸೊಪ್ಪನ್ನು ಹಾಕಿ ಸಾಕುತಿದ್ದನು.

ಮೊದಲಿಗೆ ಈಗ ಆಹಾರ ಕಡಮೆಯಾಯಿತು; ಮೈ ಸಣ್ಣ ಗಾಯಿತು ;

ಲವಲವಿಕೆ ಹೆಚ್ಚಾಯಿತು. ಒಂದು ದಿನಸ ಸಂಪಗೆಯು ಮಳೆಯಲ್ಲಿ

ನೆನೆದು ಮನೆಗೆ ಓಡಿಬಂದು ಬೆಂಕಿ ಉರಿಯುತಿದ್ದ ಒಲೇ ಹತ್ತಿರಕ್ಕೆ

ಹೋಯಿತು. ಹೀಗೆ ಮಳೆಯಲ್ಲಿ ನೆನದಾಗಲೆಲ್ಲಾ ಬೆಂಕೀ ಕಾಸಿ

ಕೊಳ್ಳುವುದಕ್ಕೆ ಒಲೆಯ ಹತ್ತಿರಕ್ಕೆ ಹೋಗುವ ಅಭ್ಯಾಸ ಇದಕ್ಕಿತ್ತು.

ಆದಕಾರಣ ಹಿಟ್ಟನ್ನು ಮಾಡುತಾ ಕೂತಿದ್ದ ಒಕ್ಕಲಿಗನ ಹೆಂಡತಿಯ

ಹತ್ತಿರ ಹೋಗಿ ಮೈಯನ್ನೂ ತಲೆಯನ್ನೂ ಝಾಡಿಸುತಾ ಒಲೆಯ

ಮುಂದೆ ಮಲಗಿಕೊಂಡಿತು. ಆ ಹೆಂಗಸು ಅದನ್ನು ಆಚೆಗೆ ಅಟ್ಟಿ 

ಬಿಟ್ಟಳು. ಚಳಿಯಲ್ಲಿ ಶುನಕವು ಆಚೆಗೆ ಹೊರಟುಹೋಗಬೇಕಾಗಿ ಬಂತು.

ನಿತ್ಯವೂ ಹೀಗೆಯೇ ಮಳೆಯಲ್ಲಿಯೂ ಗಾಳಿಯಲ್ಲಿಯೂ ನಡುಗಿ ನಡುಗಿ

ಗಟ್ಟಿ ಯಾಯಿತು. ಎಷ್ಟು ಚಳಿಯಾದರೂ ತಡೆದುಕೊಳ್ಳುವ ಅಭ್ಯಾಸ

ಹುಟ್ಟಿತು.


ಪೂರ್ವಕ್ಕಿಂತಲೂ ಈಚೆಗೆ ಇದರ ಅಭ್ಯಾಸಗಳೆಲ್ಲಾ ಬದಲಾಯಿಸಿ

ದವು. ಆದರೂ ಈ ಸಂಪಗೆಗೆ ಕಾಡುಮೃಗಗಳ ವಿಷಯದಲ್ಲಿ ಏನೋ

ಭಯವಿತ್ತು. ಒಂದು ದಿವಸ ಕಾಡಿನಲ್ಲಿ ಈ ನಾಯಿ ಒಂದೇ ಹೋಗು

ತಿರಲು, ಒಂದು ತೋಳ ಇದನ್ನು ದೂರದಿಂದ ಕಂಡು,  ಓಡಿ ಬಂದು

ಸಂಪಗೆಯಮೇಲೆ ಬಿದ್ದು ಅದರ ಕತ್ತನ್ನು ಹಿಡಿದುಕೊಂಡಿತು. ನಾಯಿ

ತಪ್ಪಿಸಿಕೊಂಡು ಹೊರಡಬೇಕೆಂದು ಪ್ರಯತ್ನ ಮಾಡಿದರೂ ತೋಳ

ಬಿಡಲಿಲ್ಲ. ಯಾರಾದರೇನು? ಸಮಯ ಬಂದಾಗ ಹೇಡಿಗಳೂ ಕೂಡ

ಶೂರರಾಗುತ್ತಾರೆ. ಅತ್ತಿತ್ತ ಅಡ್ಡಾಡುವುದಕ್ಕೆ ಆಸ್ಪದವಿಲ್ಲದೆ ಸಂಪಗೆಯು

ಗರ್ರನೆ ತಿರುಗಿ ಉಪಾಯವಾಗಿ ತನ್ನ ಶತ್ರುವಿನ ಕತ್ತನ್ನು ಬಲವಾಗಿ

ಹಿಡಿದು ಕಚ್ಚಿತು. ತೋಳವು ಒಂದು ಗಳಿಗೆಯಲ್ಲಿ ಸತ್ತು ಒರಗಿತು.

ನಾಯಿಯನ್ನು ಒಕ್ಳಲಿಗನು ಹುಡುಕುತಾ ಬಂದು ಅದನ್ನು ಕಂಡು

ಸಂತೋಷದಿಂದ ಅದರ ಮೈ ತಡವರಿಸಿ, ಅದಕ್ಕೆ ಸಂತೋಷವಾಗುವಂತೆ

-------------------------------------------

೫೦ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ 


ಮಾತನಾಡಿದನು. ಇಷ್ಟರ ಮಟ್ಟಗೆ ಅದನ್ನು ಒಕ್ಕಲಿಗನು ಯಾವಾ

ಗಲೂ ಮುದ್ದಿಸಿರಲಿಲ್ಲ. ತನ್ನ ಯಜಮಾನನಿಗೆ ಸಂತೋಷ ಉಂಟಾ

ದ್ದನ್ನು ಕಂಡು ನಾಯಿಗೆ ಬಹು ಪ್ರೋತ್ಸಾಹವಾಯಿತು. ಇದಕ್ಕೆ  ಪೂರ್ವ 

ದಲ್ಲಿ ಎಷ್ಟು ಅಧೈರ್ಯವಿತ್ತೋ ಈಚೆಗೆ ಅಷ್ಟು ಧೈರ್ಯ ಹೆಚ್ಚಿತು. ಆ

ಸುತ್ತಲೂ ಸಂಪಗೆಯ ಹೆಸರು ಎತ್ತಿದರೆ ಕ್ಷುದ್ರ ಮೃಗಗಳಿಗೆಲ್ಲಾ ಗಡ

ಗಡನೆ ನಡುಗುವ ಮಟ್ಟಗೆ ಆಯಿತು.


ಅತ್ತ ಮಲ್ಲಿಗೆಯು ಗೌಡನ ಊರಿಗೆ ಹೋಗಿ, ಯಾವಬೇಟೆಯೂ

ಇಲ್ಲದೆ ಗೌಡನ ಮನೆಯಲ್ಲಿ ತಿನ್ನುವುದು ಅವನ ಜಗಲೀ ಮೇಲೆ ಮಲ

ಗಿರುವುದು, ಇಷ್ಟು ಕೆಲಸದಲ್ಲಿ ಕಾಲವನ್ನು ಕಳೆಯುತಿತ್ತು. ಯಜ

ಮಾನನಿಗೆ ಪೂರ್ವದಲ್ಲಿ ಇದು ಮಾಡಿದ ಉಪಕಾರಸ್ಮರಣೆಯಿಂದ ಎಲ್ಲರೂ

ಇದನ್ನು ಆದರಿಸಿ ಹೆಚ್ಚಾಗಿ ಉಪಚಾರವನ್ನು ಮಾಡುತಿದ್ದರು. ಸಾಧನೆ

ಇಲ್ಲದಿದ್ದರೆ ಎಂಥಾ ಸುಗುಣವಾದರೂ ಮಸಣಿಸಿ ಹೋಗುವುದು. ಸಂಪ

ಗೆಗೆ ಪೂರ್ವದ ಧೈರ್ಯವೂ ಶಕ್ತಿಯೂ ಕಡಮೆಯಾಯಿತು,  ಪಾಲುಮಾರಿಕೆ

ಗುಣ ಹೊಸದಾಗಿ ಬಂತು.


ಒಂದಾನೊಂದು ದಿವಸ ಗೌಡನು ಪುನಃ ತನ್ನ ಭೂಮಿಯನ್ನು

ನೋಡಿಕೊಂಡು ಹೋಗಬೇಕೆಂದು ಹಳ್ಳಿಗೆ ಹೋದನು. ಮಲ್ಲಿಗೆಯು

ತನ್ನ ರಕ್ಷಣೆಗಾಗಿ ಇರಲೆಂದು ಅದನ್ನು ಕರೆದುಕೊಂಡು ಬಂದನು. ಆ

ಗ್ರಾಮದ ಸಮೀಪದಲ್ಲಿ ಹೊಸದಾಗಿ ಒಂದು ಕಿರುಬ ಬಂದು ಸೇರಿ

ಕೊಂಡು ದನಕರುಗಳಿಗೂ ಕುರಿಗಳಿಗೂ ಬಹುಬಾಧೆಯನ್ನು ಮಾಡು

ತಿತ್ತು. ಇದನ್ನು ಕೇಳಿ ಗೌಡನು ಸಂಪಗೆಯನ್ನು ಕರೆದುಕೊಂಡು

ಹೋಗಿ ಆ ಕಿರುಬವನ್ನು ಬೇಟೆಯಾಡಲು ಬಿಟ್ಟನು. ಕಿರುಬ ಕೊನೆಗೆ

ಸಿಕ್ಕಿತು. ಅದು ಆರ್ಭಟ ಮಾಡಿದ್ದನ್ನು ಕೇಳಿ ಮಲ್ಲಿಗೆ ಹೆದರಿಕೊಂಡು

ಗೌಡನ ಹಿಂದುಗಡೆಗೆ ಓಡಿಹೋಯಿತು. ಗ್ರಾಮಸ್ಥರ ಸಂಗಡ ಬಂದಿದ್ದ

ಸಂಪಗೆಯು ಕೂಡಲೇ ಹಾರಿ ಹೊದರಿಗೆ ಹೊಕ್ಕು ಆ ಕಿರುಬವನ್ನು

ಹಿಡಿದು ಕೊಂದುಹಾಕಿತು. ಗೌಡನಿಗೆ ಸಂಪಗೆಯ ಗುರುತೇ ಸಿಕ್ಕಲಿಲ್ಲ

ಇದು ಯಾವುದು ಎಂದು ಅವನು ಕೇಳಲು ಒಕ್ಕಲಿಗನು ಸಂಪಗೆಯೆಂದು

ಹೇಳಿದನು ಅದನ್ನು ಕೇಳಿದ ಕೂಡಲೆ ಗೌಡನಿಗೆ ಆಶ್ಚರ್ಯವುಂಟಾಗಿ, 

------------------------------------------

೫] ಸುಮತಿ ಮದನಕುಮಾರೆರ ಚರಿತ್ರೆ 52 


ಮುಸಂಡಿಯಾಗಿ ಇದ್ದಕಡೆಯಲ್ಲಿಯೇ ಇರತಕ್ಕವನಿಗೆ ಇದ್ದ ಥೈರ್ಯವೂ

ಹೋಗುವುದು; ಗುಣವಿದ್ದರೇನು? ಅದಕ್ಕೆ ತಕ್ಕ ಸಾಧನೆ ಇರಬೇಕು,

ಎಂದು ನುಡಿದನು. 

  ... 

  

೫ನೆ ಅಧ್ಯಾಯ

ಮೇಲೆ ಕಂಡ ರೀತಿಯಲ್ಲಿ ಕಥೆ ಮುಗಿಯಿತು. ಆಗ ರಾಮ

ಜೋಯಿಸನು ಹೇಳಿದ್ದೇನೆಂದರೆ -ಮದನ ಕುಮಾರನು ಓದುವ

ಮಟ್ಟಿಗೆ ಪಾಂಡಿತ್ಯವನ್ನು ಸಂಪಾದಿಸಿದ್ದನ್ನು ನೋಡಿ ನಾನು ಸಂತೋಷ

ಪಟ್ಟೆ. ಈಗ ಓದುವ ವಿಷಯದಲ್ಲಿ ಅವನಿಗೆ ಸಹಾಯಬೇಡ. ಎಲ್ಲಿ

ಯಾದರೂ ಸರಿಯೆ ಕೂತುಕೊಂಡು ಗ್ರಂಥವನ್ನು ಓದಿ ಸಂತೋಷಪಡ

ಬಲ್ಲ. ನಮ್ಮ ಭಾಷೆಯಲ್ಲಿರತಕ್ಕ ಸಮಸ್ತ ಗ್ರಂಥಗಳೂ ಇಲ್ಲಿಂದ 

ಮುಂದಕ್ಕೆ ಅವನಿಗೆ ಸ್ಟಾಧೀನವಾಗುವುವು. ಈ ದಿನ ನಾವು ಓದಿಸಿ

ದಂಥಾ ಚಿಕ್ಕ ಕಥೆಗಳಾದರೂ ಸರಿಯೆ, ಮಹಾತ್ಮರ ಚರಿತ್ರೆಯಾದರೂ

ಸರಿಯೆ, ದೇಶಾಂತರಗಳಲ್ಲಿ ಸಿಕ್ಕುವ ಪಶು ಪಕ್ಷಿ ಮೃಗಾದಿಗಳ ಸ್ವಭಾವ

ವನ್ನು ಕುರಿತು ಬರೆದಿರುವ ಲೇಖನಗಳಾದರೂ ಸರಿಯೆ ಯಾವುದಾ

ದರೂ ಇತಃ ಪರ ಆತ ಓದಬಹುದು. ಮುಖ್ಯವಾಗಿ ಇನ್ನು ಮುಂದಕ್ಕೆ

ಅವನ ಕೈಲಾಗದೇ ಇರತಕ್ಕದ್ದು ಇಂಥಾದ್ದು ಎಂದು ಹೇಳುವುದಕ್ಕೆ

ಯಾವುದೂ ತೋರಲಿಲ್ಲ. ಈತನು ಮುಂದಕ್ಕೆ ತಾನೂ ದೊಡ್ಡ ಪಂಡಿತ

ನಾಗಿ ಇತರರಿಗೂ ಪಾಂಡಿತ್ಯವನ್ನು ಉಂಟುಮಾಡಲು ಶಕ್ತಿಯುಳ್ಳವ

ನಾಗಬಹುದೆಂದು ನನಗೆ ಕೋರಿಕೆ ಇದೆ, ಎಂದನು. 


ಹೀಗೆ ಜೋಯಿಸನು ಸ್ತೋತ್ರ ಮಾಡಿದ್ದನ್ನು ಕೇಳಿ ಮದನ

ಕುಮಾರನು ಉಬ್ಬಿ ಹೋಗಿ ನುಡಿದದ್ದೇನೆಂದರೆ,--ನಾನು ಪಾಂಡಿತ್ಯ

ದಲ್ಲಿ ಯಾರಿಗೂ ಕಡಮೆಯಲ್ಲ ವೆನ್ನಿಸಿಕೊಳ್ಳ ಬೇಕೆಂದು ಖಂಡಿತಮಾಡಿ 

----------------------------------------------

೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಕೊಂಡಿದೇನೆ. ನಾನು ಈಗ ಹುಡುಗನಾಗಿದ್ದಾಗ್ಗೂ ದೊಡ್ಡವರಿಗಿಂತಲೂ

ಎಷ್ಟೋ ಬುದ್ಧಿವಂತ. ನಮ್ಮ ಅರಮನೆಯಲ್ಲಿ ನೂರಾರು ಜನ ಆಳು

ಗಳಿದ್ದಾರೆ, ಒಬ್ಬನಿಗಾದರೂ ನನ್ನ ಮಟ್ಟಿಗೆ ಓದುವುದಕ್ಕೆ ಬಾರದು

ಎಂದು ಅಹಂಕಾರಪಟ್ಟನು. ಈ ಮಾತನ್ನು ಜೋಯಿಸ ಕೇಳಿ ಆ ನಿಮ್ಮ

ಆಳುಗಳಿಗೆ ಮಠವನ್ನಿಟ್ಟು ಓದಿಸಿದವರು ಯಾರು ಹೇಳು, ಎಂದನು.

ಯಾರೂ ಇಲ್ಲ ಎಂದು ಮದನನು ಉತ್ತರ ಕೊಟ್ಟನು. ಕೂಡಲೆ ಉಪಾ

ಧ್ಯಾಯನು ಆ ಬಾಲಕನನ್ನು ದುರಗುಟ್ಟಿಕೊಂಡು ನೋಡುತಾ--ಆದ

ಕಾರಣ ಅವರು ದಡ್ಡರಾಗಿದ್ದರೆ ಏನು ಆಶ್ಚರ್ಯ? ನಿನಗೆ ಏನನ್ನೂ

ಹೇಳಿಕೊಡದಿದ್ದರೆ ಬಹುಶಃ ನಿನಗೂ ಏನೂ ಬರುತಿರಲಿಲ್ಲ. ಈಗ

ತಾನೆ ನಿನಗೆ ಏನು ಬರುತ್ತೆ? ಏನೇನೂ ಬಾರದು ಎಂದು ಹೇಳಿ

ಮೂದಲಿಸಿದನು.


ಈ ರೀತಿಯಲ್ಲಿ ರಾಮಜೋಯಿಸನು ಮದನಕುಮಾರನ ವಿದ್ಯಾ

ಭ್ಯಾಸವನ್ನು ಮೊದಲು ಮಾಡಿದನು. ಮದನನಾದರೊ ಸಹಜವಾಗಿ

ಒಳ್ಳೇ ಸ್ವಭಾವ ಉಳ್ಳವನು. ಆದರೆ ಈ ಬಾಲಕನಿಗೆ ದುಸ್ವಭಾವಗಳನ್ನು

ಕಲಿಸಿದ್ದರು. ಇದರಿಂದ ಅವನ ಸುಗುಣಗಳು ಈಚೆಗೆ ಒಂದೂ ಪ್ರಕಾ

ಶಿಸದ ಹಾಗೆ ಅಡ್ಡಿ ಯಾಗಿತ್ತು. ಈ ಹುಡುಗನಿಗೆ ಯಾವಾಗಲೂ ಸ್ವಲ್ಪ

ಮಾತಿಗೆಲ್ಲಾ ಅತಿಯಾಗಿ ಕೋಪಬರುತಿತ್ತು; ತನ್ನಂತೆ ಡಂಭವಾಗಿ

ಬಟ್ಟೆಯನ್ನು ಹಾಕಿಕೊಳ್ಳದೆ ಮಾಸಲ ಬಟ್ಟೆಯನ್ನು ಹಾಕಿಕೊಂಡಿದ್ದವ

ರೆಲ್ಲಾ ತನ್ನ ಚಾಕರರೆಂದು ತಿಳಿದುಕೊಂಡಿದ್ದನು.


ಆಗ ಒಂದಾನೊಂದು ಸಂಗತಿ ನಡೆಯಿತು. ಮದನನು ಒಂದು

ದಿನ ಚೆಂಡನ್ನೂ ದಾಂಡನ್ನೂ ತೆಗೆದುಕೊಂಡು ಆಡುತಾ ಇರಲು, 

ಆ ಚೆಂಡು ಬೇಲಿಯಮೇಲೆ ಹಾರಿ ಒಂದು ತೋಟದೊಳಕ್ಕೆ ಬಿತ್ತು.

ಮದನನು ಆ ತೋಟದಲ್ಲಿ ಒಂದು ಹರಕು ಬಟ್ಟೆಯನ್ನು ಸೊಂಟಕ್ಕೆ

ಸುತ್ತಿಕೊಂಡು ಗಿಡಗಳಿಗೆ ನೀರು ಹಾಕುತಿದ್ದ ಒಬ್ಬ ಒಕ್ಕಲಿಗರ ಹುಡುಗ

ನನ್ನು ನೋಡಿ,


ಮದನ--ಎಲಾ ಆ ಚಂಡನ್ನು ತೆಗೆದುಕೊಂಡು ಬಾರೆಲಾ.


ಆ ಚಿಕ್ಕ ಹುಡುಗನು ಇವ ಹೇಳಿದ ಮಾತನ್ನು ಕಿವಿಯಮೇಲೆ 

-----------------------------------------------

ಸುಮತಿ ಮದನಕುಮಾರೆರೆ ಚರಿತ್ರೆ 53 


ಹಾಕಿಕೊಳ್ಳದೆ ತನ್ನ ಕೆಲಸವನ್ನು ತಾನು ನೋಡುತಿದ್ದನು. ಅರಸು

ಮಗನಿಗೆ ಆಗ್ರಹಬಂತು.


ಮದನ--ಏನೋ, ನಾನು ಹೇಳಿದ್ದು ನಿನ್ನ ಕಿವಿಗೆ ಬೀಳಲಿಲ್ಲ

ವೇನೆಲಾ?


ಹುಡುಗ--ನಾನೇನೂ ಕಿವಡನಲ್ಲ, ನೀನು ಹೇಳಿದ್ದು ಕೇಳಿತು.


ಮದನ--ಹಾಗಾದರೆ ಚಂಡನ್ನು ಎತ್ತಿಕೊಂಡುಬಾ. `


ಹುಡುಗ-- ನಾನು ಅದನ್ನು ತರಬೇಕೆಂದು ನನಗೆ ಅಗತ್ಯವಿಲ್ಲ.


ಮದನ-- ನಿನಗೆ ಅಗತ್ಯ ಉಂಟಾಗುವ ಹಾಗೆ ಮಾಡಲೋ?

ಎರಡು ಬಿಸಿಬಿಸಿಯಾಗಿ ಬೇಕೊ?


ಹುಡುಗ--ನೀನು ಬಡಪಾಯಿ, ನಿನ್ನ ಕೈಲೇನಾದೀತೆಲೆ ?—

ಹೀಗೆಂದು ತಿರಸ್ಕರಿಸಿ ಅವ ಆಡಿದ ಮಾತನ್ನು ಕೇಳಿ ರಾಜಪುತ್ರನಿಗೆ

ರೇಗಿಹೋಯಿತು; ಕೂಡಲೆ ಆ ಬಡ ಹುಡುಗನನ್ನು ಹಿಡಿದು ಹೊಡೆಯ

ಬೇಕೆಂದು ಮದನ ಬೇಲಿಯನ್ನು ಹಾದು ಹೋಗಲು, ಕಾಲು ಜಾರಿ

ಬಿದ್ದನು, ಒಂದೆರಡು ಮುಳ್ಳು ಮೈಗೆ ಬಲಿದುಕೊಂಡಿತು; ತೊಟ್ಟಿದ್ದ

ಮಖಮಲ್ಲಿನ ಅಂಗಿ ಹರಿದು ಹೋಯಿತು ; ಮೈಯೆಲ್ಲಾ ಮಣ್ಣಾಯಿತು.

ಮಂಡಿ ತರೆದು ಹೋಯಿತು. ಅಲ್ಲಿದ್ದ ಒಂದು ಹೆಗ್ಗಣದ ಡೊಗರಿಗೆ

ಕಾಲು ದೊಸಕೊಂಡು ಹೋದ್ದರಿಂದ, ಮೇಲಕ್ಕೆ ಏಳಲಾರದೆ ಹೋದನು.

ಇವನ ಸ್ಥಿತಿಯನ್ನು ನೋಡಿ ಆ ಬಡ ಹುಡುಗನು ಪರಿತಾಪದಿಂದ

ಮದನನನ್ನು ಮೇಲಕ್ಕೆ ಎತ್ತಿ ನಿಲಿಸಿ,  ಚುಚ್ಚಿ ಕೊಂಡಿದ್ದ ಮುಳ್ಳನ್ನು

ಕಿತ್ತು ಮಣ್ಣನ್ನು ಕೊಡವಿದನು. ಮದನನಿಗೆ ಬಹು ನಾಚಿಕೆಯಾಯಿತು;

ಒಂದು ಮಾತನ್ನೂ ಅಡದೆ ಮನೆಗೆ ಓಡಿಹೋದನು. ರಾಮಜೋಯಿ

ಸನು ಇವನ ರೀತಿಯನ್ನು ಕಂಡು ರಾಜಪುತ್ರನಿಗೆ ಏನೋ ದೊಡ್ಡ

ಪೆಟ್ಟಾಯಿತೆಂದು ತಿಳಿದು, ಹತ್ತಿರಕ್ಕೆ ಬಂದು ನೋಡಿ, ನಡೆದ ಸಂಗತಿ

ಯನ್ನೆಲ್ಲಾ ಕೇಳಿ ನಗುತಾ,  ಬಡ ಹುಡುಗರನ್ನು ಹಾಗೆ ಹೊಡೆಯುವು

ದಕ್ಕೆ ಇನ್ನು ಮೇಲೆ ಹೋಗಬೇಡವೆಂದು ಮದನನಿಗೆ ಬುದ್ಧಿ ಹೇಳಿದನು.


ಮಾರನೇ ದಿನ ರಾಮಜೋಯಿಸ, ಸುಮತಿ, ಮದನಕುಮಾರ 

ಈ ಮೂರು ಮಂದಿಯೂ,  ಎಂದಿನಂತೆ ತೋಟದ ಗುಡಿಸಿಲಿನಲ್ಲಿ ಸೇರಿ 

------------------------------------------------

೫೪ ಸುಮತಿ ಮದನಕುಮಾರೆರೆ ಚರಿತ್ರೆ [ಅಧ್ಯಾಯ 


ದರು. ಉಪಾಧ್ಯಾಯನು ಒಂದು ಕಥೆಯನ್ನು ಓದು ಎಂದು ಸುಮತಿಗೆ

ಹೇಳಲು, ಅವನು ಓದಿದ್ದು ಹೇಗೆಂದರೆ :--

ಕಯ, ಸಿಂಹ


ಅಸುರಪುರವನೆಂಬ ಒಂದು ಗ್ರಾಮದಲ್ಲಿ ಸಕ್ರೂರನೆಂಬ ಒಬ್ಬ ಹಣ

ವಂತನಿದ್ದನು. ಇವನಿಗೆ ವಿಶೇಷವಾಗಿ ಭೂಸ್ಥಿತಿ ಇತ್ತು. ಈ ಭೂಮಿ

ಗಳನ್ನು ವ್ಯವಸಾಯ ಮಾಡುವುದಕ್ಕಾಗಿ ತನ್ನ ಕೈಕೆಳಗೆ ಅನೇಕ

ಜೀತಗಾರರನ್ನು ಇಟ್ಟುಕೊಂಡಿದ್ದನು. ಈ ಜೀತಗಾರರಿಗೆ ಒಡೆಯನು

ಇಲ್ಲದ ಹಿಂಸೆಯನ್ನೆಲ್ಲಾ ಕೊಟ್ಟು ಅವರನ್ನು ಗೋಳು ಹುಯಿದು

ಕೊಳ್ಳುತಿದ್ದನು. ಅವರಲ್ಲಿ ಕಯನೆಂಬ ಒಬ್ಬ ಜೀತಗಾರನು ಯಜ

ಮಾನನ ಹಿಂಸೆಯನ್ನು ತಡೆಯಲಾರದೆ ತನ್ನ ಮನಸ್ಸಿನಲ್ಲಿ--


ಇನ್ನು ಈ ಬಾಧೆಯನ್ನು ಸಹಿಸಲಾರೆ. ಕೊನೆಗೆ ಬಂತು. ಇಂಥಾ

ಕಷ್ಟದಲ್ಲಿ ಬಾಳು ಬಾಳುವುದಕ್ಕಿಂತಲೂ ಸಾಯುವುದು ಲೇಸು. ಇಂಥಾ

ಒಡೆಯನ ಸೇವೆಯನ್ನು ಬಿಟ್ಟು ಎಲ್ಲಿಯಾದರೂ ಓಡಿಹೋಗಬೇಕು ;

ಮತ್ತೆ ಇವನ ಕೈಗೆ ಏನಾದರೂ ನಾನು ಸಿಕ್ಕಿದರೆ ನನ್ನನ್ನು ಜೀವಸಹಿತ

ಬಿಡುವುದಿಲ್ಲ. ತಲೆತಪ್ಪಿಸಿಕೊಂಡು ಎಲ್ಲಿಗಾದರೂ ಓಡಿಹೋದರೆ ಕಾಡಿಗೆ

ಹೋಗಬೇಕು; ಅಲ್ಲಿಯೂ ಕೂಡ ಕಾಡು ಮೃಗಗಳ ಕಾಟ, ಆದರೆ

ಮನುಷ್ಯರ ಹಿಂಸೆಗಿಂತಲೂ ಕಾಡುಮೃಗಗಳ ಬಾಧೆ ಉತ್ತಮ. ಹಿಂಸೆ

ಕೊಡುವ ಇಂಥಾ ಜೀತಕ್ಕಿಂತಲೂ ಮೃಗಗಳ ಬಾಯಿಗಾದರೂ ಹೋಗಿ

ಬಿದ್ದೇನು, ಎಂದುಕೊಂಡನು.


ಹೀಗೆ ನಿಶ್ಚಯಮಾಡಿಕೊಂಡು, ಒಂದು ದಿವಸ ಸಮಯವನ್ನು

ನೋಡಿ ಒಡೆಯನ ಮನೆಯನ್ನು ಬಿಟ್ಟು ಕಾಡಿಗೆ ಓಡಿಹೋದನು.

ಅಲ್ಲಿ ಒಂದು ವಿಧವಾದ ಕಷ್ಟಹೋಗಿ ಮತ್ತೊಂದು ವಿಧವಾದ ಕಷ್ಟ

ಬಂತು. ಬೇಲಿಗಳಲ್ಲಿಯೂ, ಮುಳ್ಳು ಪೊದೆಗಳಲ್ಲಿಯೂ ನುಸಿದು

ಮೈಯೆಲ್ಲಾ ತರೆದು ಹೋಗಿ ಬಹಳ ರಕ್ತ ಸುರಿಯುತಿತ್ತು. ಹೊತ್ತು

ಹೊತ್ತಿಗೆ ಹಸಿವು ಹೆಚ್ಚಿತು. ಕಾಡಿನಲ್ಲಿ ಯಾವ ಆಹಾರವೂ ಸಿಕ್ಕಲಿಲ್ಲ.

ಆಯಾಸ ಬಲವಾಯಿತು. ಕೊನೆಗೆ ಕಯನು ಸಾಯಬೇಕೆಂದು ಮನಸ್ಸಿ  

-------------------------------------------------

೫] ಸುಮತಿ ಮದನಕುಮಾರರ ಚರಿತ್ರೆ ೫೫ 


ನಲ್ಲಿ ದೃಢಮಾಡಿಕೊಂಡು ಸಮೀಪದಲ್ಲಿ ಅಕಸ್ಮಾತ್ತಾಗಿ ಸಿಕ್ಕಿದ ಒಂದು

ಗುಹೆಯೊಳಕ್ಕೆ ಹೋದನು--


ಈ ರೀತಿಯಲ್ಲಿ ಕಥೆಯನ್ನು ಓದಿ ನಿಲ್ಲಿಸಲು, ಅದರಲ್ಲಿ ಹೇಳಿರುವ

ವ್ಯಸನಕರವಾದ ಸಂಗತಿಗೆ ಸುಮತಿಯ ಮನಸ್ಸು ಕರಗಿ--ಅಯ್ಯೋ

ಪ್ರಾಣಿ, ಅಂಥವ ನನಗೆ ಸಿಕ್ಕಿದರೆ, ನನ್ನ ಎಡೇ ಅನ್ನವನ್ನು ಅವನಿಗೆ

ಇಕ್ಕಿ ನನ್ನ ಪಂಚೆಯನ್ನು ಅವನಿಗೆ ಕೊಡುತಿದ್ದೆ. ಜೋಯಿಸರೆ,

ಆ ಸಕ್ರೂರನೆಂಬ ಒಡೆಯನು ಯಾಕೆ ಅಷ್ಟು ಕಾಠಿಣ್ಯವನ್ನು ತೋರಿಸ

ಬೇಕು? ಆ ಜೀತಗಾರನು ಅಷ್ಟು ಕಷ್ಟವನ್ನಾದರೂ  ಪಟ್ಟುಕೊಂಡು

ಯಾಕೆ ಜೀತವನ್ನು ಮಾಡಬೇಕು? ಇದಕ್ಕೆ ಕಾರಣ ಅಪ್ಪಣೆಯಾಗಲಿ

ಎಂದು ಕೇಳಿದನು.


ಮದನಕುಮಾರನು--- ಸುಮತಿ, ಲೋಕದಲ್ಲಿ ಕೆಲವರು ಐಶ್ವರ್ಯ 

ವಂತರಾಗಿ ಹುಟ್ಟುತ್ತಾರೆ. ಅವರು ಇತರರಿಗೆ ಆಜ್ಞೆಮಾಡಲೇಬೇಕು.

ಕೆಲವರು ಚಾಕರರಾಗಿ ಹುಟ್ಟುತಾರೆ. ಅವರು ಹೇಳಿದ ಹಾಗೆ ಕೇಳಿ

ಕೊಂಡು ಚಾಕರಿ ಮಾಡುತಾ ಬಿದ್ದಿರಲೇಬೇಕು. ನಮ್ಮ ಅರಮನೆ

ಯಲ್ಲಿ ಅನೇಕ ಚಾಕರರಿದಾರೆ, ಅವರೆಲ್ಲಾ ನಮ್ಮ ಗುಲಾಮರಾಗಿರು

ವುದಕ್ಕೆ ಹುಟ್ಟಿದವರೆಂದು ನಮ್ಮ ಅಮ್ಮಯ್ಯ ಹೇಳಿದರು. ನಾನು

ಅವರನ್ನು ಹೊಡೆಯುತೇನೆ ; ಒದೆಯುತೇನೆ; ಕೋಪಬಂದಾಗ ಕೈಗೆ

ಸಿಕ್ಕಿದ್ದನ್ನು ತೆಗೆದುಕೊಂಡು ಅವರ ಮುಖದ ಮೇಲೆ ಎಸೆಯುತ್ತೇನೆ.

ಆದರೂ ಅವರು ಎದುರುಮಾತನಾಡುವುದು ಎಂದರೇನು? ಹೇಳಿದೆ

ಹಾಗೆ ಕೇಳಿಕೊಂಡು ಸತ್ತನಾಯಿಯ ಹಾಗೆ ಸುಮ್ಮನೇ ಬಿದ್ದಿರಬೇಕಾ

ದದ್ದೇ ಅವರ ಹಣೇಬರಹ.


ಜೋಯಿಸ--ಅಯ್ಯಾ ಮಗು, ಅವರು ಚಾಕರರು ಯಾಕೆ

ಆದರು? ಹೇಳು.


ಮದನ--ಯಾಕೆಂದರೆ ನಮ್ಮ ಅಪ್ಪಾಜಿ ಅವರಿಗೆ ತಿಂಗಳ

ಸಂಬಳಗಳನ್ನು ಕೊಡುತಾರೆ, ಇಲ್ಲ ಪಡಿ ಕೊಡುತಾರೆ.


ಜೋಯಿಸ-- ಹಾಗಾದಕೆ ಸಂಬಳವನ್ನು ತೆಗೆದುಕೊಳ್ಳ ತಕ್ಕವರೆ

ಲ್ಲರೂ ಚಾಕರರಷ್ಟೆ?

--------------------------------------------

೫೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಮದನ--ಹವುದು.


ಜೋಯಿಸ-- ಹಾಗಾದರೆ ಸಂಬಳವನ್ನು ಕೊಡತಕ್ಕವರು ಚಾಕ

ರರನ್ನು ಹೊಡೆಯಬಹುದು ಒದೆಯಬಹುದು ತಮ್ಮ ಮನಸ್ಸು ಬಂದ

ಹಾಗೆ ಮಾಡಬಹುದಷ್ಟೆ ?


ಮದನ--ಬೇಕಾದ್ದನ್ನು ಮಾಡಬಹುದು.


ಜೋಯಿಸ. -ಸೂರ್ಯಭಟ್ಟರ ಮನೆಯಲ್ಲಿ ನೀನು ಚಾಕರಿಗೆ

ಇದ್ದರೆ, ಅವರು ನಿನ್ನನ್ನು ಬೇಕಾದಹಾಗೆ ಹಿಂಸಿಸಬಹುದಷ್ಟೆ?


ಮದನ--ಅವರು ನನ್ನನ್ನು ಚಾಕರಿಗೆ ಇರಿಸಿಕೊಳ್ಳುವುದಕ್ಕೆ

ಕಾರಣವಿಲ್ಲ; ಅಥವಾ ಇರಿಸಿಕೊಂಡಾಗ್ಯೂ ಹಿಂಸೆ ಮಾಡುವುದಕ್ಕೆ

ಕಾರಣವಿಲ್ಲ.


ಜೋಯಿಸ-- ಹಾಗಾದರೆ ಸಂಬಳಕ್ಕೆ ಆಳುಗಳನ್ನು ಇರಿಸಿಕೊಂಡ

ಮಾತ್ರಕ್ಕೇ ಅವರನ್ನು ಹಿಂಸಿಸಲು ಕಾರಣವಿಲ್ಲವಷ್ಟೆ ? ಆ ಪಕ್ಷಕ್ಕೆ

ನಿಮ್ಮ ತಂದೆ ಆ ಜೀತಗಾರನನ್ನು ಚಾಕರಿಗೆ ಇರಿಸಿಕೊಳ್ಳಲು ಕಾರಣ

ವೇನು?


ಮದನ--ಅವರೆಲ್ಲಾ ಬಡವರು, ಅವರಿಗೆ ಏನೂ ಗತಿ ಇಲ್ಲ.

ನಾವು ದೊರೆಗಳು, ಐಶ್ವರ್ಯವಂತರು.


ಜೋಯಿಸ-- ಐಶ್ವರ್ಯವಂತರು ಎಂದರೇನು?


ಮದನ--ಹಾಗೆಂದರೆ, ನಮ್ಮ ಅಪ್ಪಾಜಿಯ ಹತ್ತರ ಗಾಡಿಯಿದೆ,

ಕುದುರೆ ಇದೆ,  ಬೇಕಾದಷ್ಟು ಹಣ, ಒಡವೆ, ಇದೆಲ್ಲಾ ಇದೆ; ಒಳ್ಳೇ

ಅರಮನೆ ಇದೆ ,


ಜೋಯಿಸ---ಇದೆಲ್ಲವನ್ನೂ ಯಾರಾದರೂ ಕಿತ್ತುಕೊಂಡು

ಹೋಗಿ, ನೀನೂ ಬಡವನಾದರೆ, ಆಗ ನಿನ್ನನ್ನು ಯಾರಾದರೂ ಚಾಕ

ರಿಗೆ ಇರಿಸಿಕೊಂಡು, ನಿನ್ನನ್ನು ಬೈದು, ಹೊಡೆದು ಬೇಕಾದ ಹಿಂಸೆ

ಯನ್ನೆಲ್ಲಾ ಮಾಡಬಹುದಷ್ಟೆ?


ಮದನ--ಇತರರು ನನ್ನನ್ನು ಹಿಂಸೆಮಾಡಕೂಡದು; ಅದು

ಸರಿಯಲ್ಲ.

-----------------------------------------------

೫] ಸುಮತಿ ಮದನಕುಮಾರರ ಚರಿತ್ರೆ ೫೭


ಜೋಯಿಸ-- ಹಾಗಾದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು

ಹಿಂಸೆಮಾಡಕೂಡದೊ?


ಮದನ-- ಕೂಡದು.


ಜೋಯಿಸ--ಆ ಪಕ್ಷಕ್ಕೆ, ಒಬ್ಬ ಮನುಷ್ಯನು ಮತ್ತೊಬ್ಬನನ್ನು

ಚಾಕರಿಗೆ ಇರಿಸಿಕೊಳ್ಳಕೂಡದು ; ಹಾಗೆ ಇರಿಸಿಕೊಂಡರೆ ಅವರಿಗೆ

ಹಿಂಸೆಮಾಡಿದಹಾಗಾಯಿತು; ಆದ್ದರಿಂದ ಇನ್ನುಮೇಲೆ ಚಾಕರರನ್ನು

ಇರಿಸಿಕೊಳ್ಳಲೇ ಕೂಡದಾಯಿತು.


ಮದನ --ಇಲ್ಲ ಜೋಯಿಸರೆ, ಹಾಗೆ ಹೇಳಕೂಡದು; ಇನ್ನು

ಮೇಲೆ ಚಾಕರರಿಗೆ ನಾನು ಹಿಂಸೆ ಮಾಡುವುದಿಲ್ಲ: ಅವರನ್ನು ಬೈದು

ಹೊಡೆಯುವುದಿಲ್ಲ.


ಜೋಯಿಸ-- ಹಾಗಾದರೆ ನೀನು ಒಳ್ಳೇ ಹುಡುಗನಾದೆ. ಮುಂದೆ

ಕಥೆ ಏನಾಯಿತು  ಕೇಳೋಣ..---


ಆ ಅದೃಷ್ಟಹೀನನಾದ ಕಯನು ಸಂಕಟಪಡುತ್ತಾ ಗುಹೆಯಲ್ಲಿ

ಸ್ವಲ್ಪ ಹೊತ್ತು ಮಲಗಿದ್ದ, ಅಷ್ಟರಲ್ಲಿಯೇ ಭಯಂಕರವಾದ ಒಂದು

ಶಬ್ದಕೇಳಿತು. ಆಗ ಕಯನು ಬೆಚ್ಚಿ ಬಿದ್ದು ಗಾಬರಿಯಿಂದ ಎದ್ದು

ಯಾವುದೋ ಕಾಡುಮೃಗದ ಆರ್ಭಟವಿರಬಹುದೆಂದು ನಡುಗುತ್ತಾ

ಅಲ್ಲಿಂದ ಆಚೆಗೆ ಓಡಿ ಹೋಗಬೇಕೆಂದು ಯೋಚಿಸಿ ಗುಹೆಯ ಬಾಗಿ

ಲಿಗೆ ಹೋಗುವಷ್ಟರಲ್ಲಿಯೇ: ಒಂದು ದೊಡ್ಡ ಸಿಂಹವು ಗುಡುಗುಡಾ

ಯಿಸಿಕೊಂಡು ಬಂದು ಇವನನ್ನು ಆಚೆಗೆ ಬಿಡದೇ ಹೋಯಿತು. ಜೀತ

ಗಾರನು ತನ್ನ ಹಣೇಬರಹ ಅಲ್ಲಿಗೆ ತೀರಿತೆಂದು ತಿಳಿದುಕೊಂಡು

ಹಿಂದ ಹಿಂದಕ್ಕೆ ಹೋದನು. ಸಿಂಹವು ಸ್ಪಲ್ಪವೂ ಆಗ್ರಹವಿಲ್ಲದೆ ಮೆಲ್ಲ

ಮೆಲ್ಲಗೆ ಅವನ ಸಮೀಪಕ್ಕೆ ಬರುತಿತ್ತು. ಕಯನ ಮನಸ್ಸು ಸ್ಪಭಾವವಾಗಿ

ಸ್ವಲ್ಪ ಗಟ್ಟಿ ಮನಸ್ಸು; ಇದರಮೇಲೆ ಧೈರ್ಯವನ್ನು ತಂದುಕೊಂಡನು.

ಸಿಂಹವು ಅವನ ಹತ್ತಿರಕ್ಕೆ ಮೆಲ್ಲಗೆ ಕುಂಟುತಾ ಬರುತಿತ್ತು. ಅದರ

ಒಂದು ಕಾಲು ಬಹಳವಾಗಿ ಬಾತುಕೊಂಡಿತ್ತು. ಈ ಮೃಗರಾಜನ

ಒಳ್ಳೇತನವನ್ನು ಕಂಡು ಕಯನಿಗೆ ಇನ್ನೂ ಧೈರ್ಯ ಹೆಚ್ಚಿತು. ಆಗ

ಅದು ಹತ್ತಿರ ಬಂದು ನಿಂತು ಕುಂಟುಗಾಲನ್ನು ಮೇಲಕ್ಕೆ ಎತ್ತಿ ಯಾತ 

----------------------------------------

೫೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. 


ನೆಗೆ ಒದರುವುದನ್ನು ಕಂಡು, ಕಯನು ಆ ಕಾಲನ್ನು ತಾನು ಹಿಡಿದು

ಮೇಲಕ್ಕೆ ಎತ್ತಿ ನೋಡಲಾಗಿ, ಅಂಗಾಲಿಗೆ ಬಹು ಗಾತ್ರವಾದ ಕಾರೇ

ಮುಳ್ಳು ನಾಟಕೊಂಡಿತ್ತು. ಇದರಿಂದ ಆ ಯಾತನೆ ಉಂಟಾಗಿರ.

ಬಹುದೆಂದು ತಿಳಿದು ಅಂಗಾಲನ್ನು ಹಿಡಿದು ಎರಡು ಕೈಯಿಂದಲೂ

ಗಟ್ಟಿಯಾಗಿ ಅದುಮಿದನು; ಆಕ್ಷಣವೇ ಮುಳ್ಳು ಚಿತಕ್ಕನೆ ಈಚೆಗೆ

ಹೊರಟತು. ಅದನ್ನು ಕೈಯಿಂದ ಕಿತ್ತು ಹಾಕಲು ಸಂಗಡಲೇ

ಕೀವೆಲ್ಲಾ ಈಚೆಗೆ ಬಂತು. ಇದರಿಂದ ಯಾತನೆ ಕೊಂಚ ಕಡಮೆಯಾ.:

ಯಿತು. ಆಗ ಸಿಂಹವು ಅವನ ತಲೇ ಮೇಲೆ ತನ್ನ ಬಾಲವನ್ನು ಆಡಿ

ಸುತಾ, ಅವನ ಕತ್ತಿನಮೇಲೆ ತನ್ನ ಕತ್ತನ್ನು ಹಾಕುತಾ, ಅವನ:

ಬೆನ್ನಿಗೆ ತನ್ನ ಮೈಯನ್ನು ಹಾಕಿ ಮೆಲ್ಲಗೆ ತಿಕ್ಕುತಾ ಹಲವು ವಿಧ

ದಲ್ಲಿಯೂ ತನ್ನ ಕೃತಜ್ಞತೆಯನ್ನು ತೋರಿಸುವ ಸನ್ನೆಗಳನ್ನು ಮಾಡಿತು.

ಹೀಗೆ ಮೃಗರಾಜನಿಗೂ ಕಯನಿಗೂ ಸ್ನೇಹವಾಯಿತು. ಅದು ಹೊರಗೆ

ಹೋದಾಗೆಲ್ಲಾ ಉತ್ತಮವಾದ ಮಾಂಸವನ್ನು ಕಚ್ಚಿಕೊಂಡು ಬಂದು

ಇವನ ಮುಂದೆ ಹಾಕುತಿತ್ತು. ಆ ಅಡಗನ್ನೂ ಅಲ್ಲಿದ್ದ ಗಿಡಗಳ ಹಣ್ಣು

ಗಳನ್ನೂ ತಿಂದು ಅವನು ಜೀವಿಸುತಿದ್ದನು. ಹೀಗೆ ನಾಲ್ಕಾರು ತಿಂಗ

ಳಾಯಿತು, ಒಂದು ದಿನ ಹಾಗೆಯೇ ಅಲಕ್ಷ್ಯವಾಗಿ ಕಾಡಿನಲ್ಲಿಸುತ್ತಾ

ಡುತಾ ಇರುವಾಗ್ಗೆ, ಸಕ್ರೂರನ ಕಡೇ ಆಳುಗಳು ಹೊಂಚುಹಾಕಿ

ಕೊಂಡು ಕಾದಿದ್ದು, ಕಯನನ್ನು ಹಿಡಿದು ಯಜಮಾನನ ಹತ್ತಿರಕ್ಕೆ

ಕರೆದುಕೊಂಡು ಹೋದರು. ಅಲ್ಲಿ ಜೀತಗಾರನ ಅಪರಾಧಕ್ಕಾಗಿ ವಿಚಾ

ರಣೆಯಾಗಿ, ಇವನನ್ನು ಸಿಂಹನ ಬಾಯಿಗೆ ಕೊಡಬೇಕೆಂದು ಹೇಳಿ

ದರು.


ಚಂಡಾಲರು ಇವನ ಆಯುಧವನ್ನು ಕಿತ್ತುಕೊಂಡು ಕೈ ಕಾಲು

ಗಳನ್ನು ಕಟ್ಟಿ ಆ ಘೋರಾರಣ್ಯದಲ್ಲಿ ಸಿಂಹ ಬರುವ ಹೊತ್ತಿಗೆ ಸರಿ

ಯಾಗಿ ಕರೆದುಕೊಂಡು ಹೋಗಿ ಬಿಟ್ಟರು. ಸಿಂಹವು ಜೀವಸಹಿತವಾದ

ಮನುಷ್ಯನನ್ನು ತಿನ್ನುವ ನೋಟವು ಬಹು ಚಿನ್ನಾಗಿರಬಹುದೆಂದು

ಅನೇಕ ಜನರು ನೆರೆದಿದ್ದರು. ಕಂಠೀರವನು ವಿಪರೀತವಾಗಿ ಆರ್ಭಟ

ಸುತಾ ಕತ್ತಿನ ಮೇಲಿನ ಕೂದಲನ್ನು ಕೆದರಿಕೊಂಡು ಕಂಣನ್ನು 

-----------------------------------------------

೬] ಸುಮತಿ ಮದನಕುಮಾರರ ಚರಿತ್ರೆ ೫೯ 


ಕೆಂಪಗೆ ಮಾಡಿಕೊಂಡು ಗುಡಗುಡನೆ ಬಂತು. ಎಲ್ಲರ ದೃಷ್ಟಿಯೂ

ಇದರಮೇಲೆ  ನಾಟಿಹೋಯಿತು. ಆಗಿನ ಆಶ್ಚರ್ಯವನ್ನು ಏನು

ಹೇಳೋಣ! ಅಂಥಾ ಆಟೋಪದಿಂದ ಬಂದ ಸಿಂಹವು ಅಪರಾಧಿಯ

ಕಾಲಮೇಲೆ ಬಿದ್ದು ಹೊರಳಾಡುತ್ತಾ ನಯಗರೆಯುತಾ, ಅತ್ಯಂತ

ಪ್ರೀತಿಯನ್ನು ತೋರಿಸಿತು. ಅಲ್ಲಿದ್ದವರೆಲ್ಲಾ ಆಶ್ಚರ್ಯಪಟ್ಟು, ಆ

ಮಹಾಮೃಗವು ಹೀಗೆ ಸಾಧುವಾಗುವುದಕ್ಕೆ ಕಾರಣವೇನೆಂದು ಗಟ್ಟಿ

ಯಾಗಿ ಕೂಗಿ ಕಯನನ್ನು ಕೇಳಲು, ಅವನು ತನಗೂ ಸಿಂಹಕ್ಕೂ

ಪೂರ್ವದಲ್ಲಿ ಆದ ಸ್ನೇಹದ ಕಥೆಯನ್ನು ಹೇಳಿದನು, ಅದನ್ನು ಕೇಳಿ

ಅಲ್ಲಿದ್ದವರೆಲ್ಲಾ ಕಾಡುಮೃಗಗಳಿಗೂ ಕೃತಜ್ಞತೆಯೂ ದಯಾರಸವೂ

ಉಂಟಲ್ಲಾ ಎಂದು ಬೆರಗಾಗಿ ಕಯನ ಅಪರಾಧವನ್ನು ಕ್ಷಮಿಸುವ

ಹಾಗೆ ಮಾಡಿದರು.

   ...

೬ ನೆ ಅಧ್ಯಾಯ


ಈ ಕಥೆಯನ್ನು ಕೇಳಿ ಮದನಕುಮಾರನು--ಈ ಕಥೆ ಬಹು

ಚೆನ್ನಾಗಿದೆ. ಸಿಂಹವು ಇಷ್ಟು ಸಾಧುವಾಗಿರುವುದುಂಟಿ? ಏನಾಶ್ಚರ್ಯ!

ಸಿಂಹ, ಹುಲಿ ಮೊದಲಾದ ಈ ಕಾಡುಮೃಗಗಳು ಸಿಕ್ಕಿದ್ದನ್ನೆಲ್ಲಾ

ಕೊಂದು ತಿನ್ನುವವು ಎಂದು ಬಲ್ಲೆ. ಇದೇನೋ ಅದ್ಭುತವಾಗಿದೆ,

ಎಂದನು. ಆಗ ಉಪಾಧ್ಯಾಯನು-- ಹಾಗಲ್ಲ, ಹಸಿವು ಆದಾಗ ಕಾಡು

ಮೃಗಗಳು ಸಿಕ್ಕಿದ್ದನ್ನು ಕೊಂದು ತಿನ್ನುವವು. ಹೊಟ್ಟೆ ತುಂಬಿದ್ದಾಗ

ಅವು ಯಾರ ತಂಟೆಗೂ ಹೋಗುವುದಿಲ್ಲ; ಕಾರಣವಿಲ್ಲದೆ ಯಾವ

ಕೇಡನ್ನೂ ಮಾಡುವುದಿಲ್ಲ; ಕೆಲವು ಜನರೂ, ಕೆಲವು ತುಂಟಹುಡುಗರೂ

ನಿಷ್ಕಾರಣವಾಗಿ ಪ್ರಾಣಿಗಳನ್ನು ಹಿಂಸಿಸುವರು. ಇಂಥವರಿಗಿಂತಲೂ.

ಈ ಕಾಡುಮೃಗಗಳೇ ಉತ್ತಮ. 

-------------------------------------------

೬೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 



ಸುಮತಿ-.ಹವುದು ಜೋಯಿಸರೆ, ನೀವು ಹೇಳುವುದು ನಿಜ.

ನಾನು ಬೀದಿಯಲ್ಲಿ ಹೋಗುತಿರುವಾಗ, ರೋಗದಿಂದ ನರಳುತಾ ಒಂದು

ಕಾಲು ಮುರಿದುಹೋಗಿ ಕುಂಟಕೊಂಡು ಹೋಗುತಿದ್ದ ಒಂದು ಕತ್ತೆ

ಯನ್ನು ಕಂಡೆ, ದೊಡ್ಡದಾದ ಒಂದು ಕಟ್ಟಿಗೆಯನ್ನು ಹಿಡಿದು ಒಬ್ಬ

ಹುಡುಗನು ಅದನ್ನು ಹೊಡೆದು ಅಟ್ಟಿಕೊಂಡು ಹೋಗುತಿದ್ದ.


ಅಯ್ಯೋ, ಹಾಗೆ. ಹೊಡೆಯಬಾರದು ಪ್ರಾಣಿಹಿಂಸೆಯನ್ನು

ಮಾಡಬಾರದು. ನಿನಗಿಂತಲೂ ಬಲವಾದವನು ನಿನ್ನನ್ನು ಹಡಿದು

ಹೀಗೆ ಹೊಡೆದರೆ ಆಗ ಹೇಗೆ ಇರುವುದು? ಎಂದೆ,


ಅದು ತಮ್ಮ ಮನೇ ಅಗಸರವನ ಕತ್ತೆ; ತಾನು ಹೊಡೆಯುತೇನೆ;

ನಾನು ಏನಾದರೂ ತಿರುಗಿ ಮಾತಾಡಿದರೆ ಅದೇ ದೊಣ್ಣೆಯಿಂದ

ನನ್ನನ್ನೂ ಗಟ್ಟಸುತೇನೆಂದು, ಆ ಹುಡುಗ ಗದರಿಸಿದನು.


ಆಗ ನಾನು--ಆ ಕತ್ತೆ ನಿಮ್ಮ ಅಗಸನದಾಗಲಿ, ನಿಮ್ಮ ಅಪ್ಪನ

ದಾಗಲಿ, ನೀನು ಹೊಡೆಯುವುದಕ್ಕೆ ಕಾರಣವಿಲ್ಲ. ದೇವರು ನಮ್ಮನ್ನು

ಹೇಗೆ ನಿರ್ಮಾಣಮಾಡಿದನೊ ಅವುಗಳನ್ನೂ ಹಾಗೆಯೇ ನಿರ್ಮಾಣ

ಮಾಡಿದಾನೆ. ನಮ್ಮ ಹಾಗೆಯೇ ಆ ಪ್ರಾಣಿಗಳಿಗೂ ಯಾತನೆಯಾಗು

ವುದು. ಆದ್ದರಿಂದ ಅದನ್ನು ಒಂದು ಏಟು ಹೊಡೆದೀಯೇ, ಜೋಕೆ ;

ನನ್ನನ್ನು ಹೊಡೆಯುವುದಕ್ಕೆ ಬಂದರೆ  ಹಲ್ಲು ಮುರಿದುಬಿಟ್ಟೇನು,

ಎಂದು ಹೇಳಿದೆ,


ಆಗ ಅವ ನನ್ನನ್ನು ಹೊಡೆಯಬೇಕೆಂದು ಬಂದ; ನಾನು

ಒಂದು ಹೊಗತಿ ಮಾಡಿದೆ. ಆ ಏಟು ಅವನ ಭುಜದಮೇಲೆಯೇ ಬಿತ್ತು.

ಪುನಃ ಹೊಡೆಯುವುದಕ್ಕೆ ಬಂದ; ನಾನು ಅವನ ಸೊಂಟಕ್ಕೆ ನುಗ್ಗಿ

ಅವನನ್ನು ಕೆಳಕ್ಕೆ ಎತ್ತಿಹಾಕಿ ಮೇಲೆ ಅಗತುಕೊಂಡೆ. ಆಗ ಅವನು

--ನಿನ್ನ ದಮ್ಮೈಯ ಬಿಡು ಎಂದ.


ಜೋಯಿಸ-- ದುಷ್ಪರಾಗಿರತಕ್ಕವರೆಲ್ಲರೂ ಹೇಡಿಗಳಾಗಿರುವು

ದೇನೋ ಲೋಕದಲ್ಲಿ ರೂಢಿಯಾಗಿದೆ. ಆಮೇಲೆ ನೀನು ಏನಮಾಡಿದೆ?


ಸುಮತಿ--ಆಗ ಅವನಿಗೆ ನಾನು ಹೇಳಿದ್ದು ಏನೆಂದರೆ

-ಎಲೋ ಹುಡುಗ, ನಿನ್ನನ್ನು ನಾನು ಹೊಡೆಯಬೇಕೆಂದಿರಲಿಲ್ಲ;

---------------------------------------------

೬] ಸುಮತಿ ಮದನಕುಮಾರರ ಚರಿತ್ರೆ ೬೧ 


ಆದರೆ ನನ್ನ ಗೋಜಿಗೆ ನೀನು ಬಂದಕಾರಣ, ಆ ಬಡಜಂತುವಿನ ತಂಟೆಗೆ

ಹೋಗುವುದಿಲ್ಲವೆಂದು ಮಾತುಕೊಡುವತನಕ ನಾನು ಬೇರೇ ನಿನ್ನನ್ನು

ಬಿಡುವುದಿಲ್ಲ ಎಂದೆ. ಆಗ ಕೂಡಲೆ ಅದರ ತಂಟೆಗೆ ತಾನು ಹೋಗುವು

ದಿಲ್ಲವೆಂದು ಮಾತಕೊಟ್ಟ ; ನಾನು ಅವನನ್ನು ಬಿಟ್ಟು ಬಿಟ್ಟೆ. ಅವನು

ಎದ್ದು ಹೊರಟುಹೋದ.


ಜೋಯಿಸ--ನೀನು ಒಳ್ಳೇ ಕೆಲಸ ಮಾಡಿದೆ. ಮೊನ್ನೆ ಈ

ಮದನ ಆ ಬಡಹುಡುಗನನ್ನು ಹೊಡೆಯುವುದಕ್ಕೆ ಹೋಗಿ ಹಳ್ಳಕ್ಕೆ

ಉರುಟಕೊಂಡಾಗ, ಆ ಬಡಹುಡುಗ ಇವನನ್ನು ಎತ್ತಲು, ಮದನನಿಗೆ

ಎಷ್ಟು ಹೀನಾಯವಾಗಿ ತೋರಿ ಅವಮಾನವಾಯಿತೊ, ಹಾಗೆಯೇ ಈ

ಹುಡುಗನಿಗೂ ಅವಮಾನವಾಗಿರಬಹುದು.


ಮದನ--ಜೋಯಿಸರೆ, ನಾನು ಬಡಹುಡುಗನನ್ನು ಹೊಡೆಯು

ವುದಕ್ಕೆ ಹೋಗುತಿರಲಿಲ್ಲ; ಅವ ನನ್ನ ಚಂಡನ್ನು ತಂದುಕೊಡಲಿಲ್ಲ,

ಅದರಿಂದ ಅವನನ್ನು ನಾನು ಹೊಡೆಯಹೋದೆ.


ಜೋಯಿಸ-- ನಿನ್ನ ಚಂಡನ್ನು ಅವ ತಂದು ಕೊಡಬೇಕೆಂದು

ಅವನಿಗೇನು ಅಗತ್ಯ? ಅದನ್ನು ತಂದು ಕೊಡೆಂದು ಅವನನ್ನು ಕೇಳು

ವುದಕ್ಕೆ ನಿನಗೇನು ಅಧಿಕಾರ?


ಮದನ--ಯಾಕೆ ಎಂದರೆ  ಅವನು ಚಿಂದಿಹುಡುಗ, ನಾನು

ದೊರೆಮಗ.


ಜೋಯಿಸ-- ಹಾಗಾದರೆ ಚಿಕ್ಕ ಹುಡುಗರು ಚಿಂದಿಯನ್ನು ಹಾಕಿ

ಕೊಂಡು ಬಡವರಾಗಿದ್ದ ಮಾತ್ರಕ್ಕೆ, ಬೇಕಾದವರು ಅವರಿಗೆ ಚಾಕರಿ

ಹೇಳಬಹುದೊ?


ಮದನ--ಹೇಳಬಹುದು,


ಜೋಯಿಸ-- ನಿನ್ನ ಬಟ್ಟೆ ಯೆಲ್ಲಾ ಹರಿದು ಹೋಗಿ ಆ ಚಿಂದಿ

ಯನ್ನು ನೀನು ಹಾಕಿಕೊಂಡಿದ್ದರೆ ಬೇಕಾದವರು ನಿನಗೆ ಕೆಲಸ

ಮಾಡೆಂದು ಆಜ್ಞಾಪಿಸಬಹುದಷ್ಟೆ ?


ಮದನನು ಪೆಚ್ಚುಮುಖವನ್ನು ಹಾಕಿಕೊಂಡು-- ಬೇಲಿಯ ಆಚೇ 

ಕಡೆ ಅವ ಇದ್ದದರಿಂದ, ಚೆಂಡನ್ನು ಈಚೇಕಡೆಗೆ ಹಾಕಬಹುದಾಗಿತ್ತು.

--------------------------------------------

62 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಜೋಯಿಸ--ವಿನಯವಾಗಿ ಅವನನ್ನು ನೀನು ಕೇಳಿಕೊಂಡಿ 

ದ್ದರೆ , ಚಂಡನ್ನವ ಈಚೆಕಡೆಗೆ ಎಸೆಯುತಿದ್ದರೂ ಎಸೆಯುತಿದ್ದ, ಅಹಂ

ಕಾರದಿಂದ ಮಾತನಾಡತಕ್ಕವನಿಗೆ ಯಾರು ತಾನೆ ಉಪಕಾರ ಮಾಡು

ತಾರೆ? ಆ ಹುಡುಗ ಬಡವನಾಗಿ ಹರಕಲು ಬಟ್ಟೆಯನ್ನು ಹಾಕಿಕೊಂಡು

ಇದ್ದಕಾರಣ, ನಿನ್ನ ಚಂಡನ್ನು ತಂದುಕೊಡುವುದಕ್ಕಾಗಿ ಅವನಿಗೆ

-ಏನಾದರೂ ದುಡ್ಡು ಕೊಟ್ಟೆಯ?


ಮದನ--ಇಲ್ಲ, ನಾನು ಅವನಿಗೆ ಕಾಸು ಕೊಡಲಿಲ್ಲ ಕೊಡುತೇ

ನೆಂದು ಹೋಗಲೂ ಇಲ್ಲ.


ಜೋಯಿಸ-- ಹಾಗಾದರೆ ನಿನ್ನ ಹತ್ತಿರ ಕಾಸು ಏನೂ ಇರಲಿಲ್ಲ

ವೇನೊ। (ಕೆಲವು ಹಣಗಳನ್ನು ತೆಗೆದು ತೋರಿಸುತಾ).


ಜೋಯಿಸ-- ಹಾಗಾದರೆ ಆ ಹುಡುಗ ನಿನ್ನಹಾಗೆಯೇ ಹಣಗಾರ

ನಾಗಿದ್ದನೋ ಏನೋ.


ಮದನ-- ಇಲ್ಲ ಉಪಾಧ್ಯಾಯರೆ, ಶುದ್ಧವಾಗಿ ತಿರುಕೆಯವನಾ

ಗಿದ್ದ, ಅವ ಕಟ್ಟಿಕೊಂಡಿದ್ದ ಕಚ್ಚೇಪಾವಡೆ ಸಹಿತ ಹರಿದು ಹೋಗಿತ್ತು.


ಜೋಯಿಸ--ಓಹೋ! ದೊಡ್ಡ ಮನುಷ್ಯರು, ದೊರೆ ಮಕ್ಕಳು,

ಎಂದರೆ ಈಗ ನನಗೆ ಅರ್ಥವಾಯಿತು. ತಮಗೆ ಬೇಕಾದ ಐಶ್ವರ್ಯ

ವಿದ್ದರೆ ಅದೆಲ್ಲವನ್ನೂ ತಾನೇ ಇರಿಸಿಕೊಂಡು ಅನುಭವಿಸಬಹುದು ;

ಬಡವರು ತಮಗೆ ಬಿಟ್ಟೀ ಕೆಲಸವನ್ನು ಮಾಡಿಕೊಡದೇ ಇದ್ದರೆ ಅವ

ರನ್ನು ಹಿಡಿದು ಹೊಡೆಯುವುದು; ಈ ಬಡವರು ಹೆದರಿಕೊಂಡು

ಮಾಡಿದರೂ, ಅವರಿಗೆ ಕೊಂಚವೂ ಪ್ರತ್ಯುಪಕಾರವನ್ನು ಮಾಡದೇ

ಇರುವುದು; ಇಂಥಾ ಕೆಲಸಗಳನ್ನು ಮಾಡತಕ್ಕವರೇ, “ ದೊರೆ

ಮಕ್ಕಳು, ? “ ಜಹಗೀರದಾರರು” “ದೊಡ್ಡ ಮನುಷ್ಯರು,

“ ಐಶ್ವರ್ಯವಂತರು,? “ ಭಾಗ್ಯವಂತರು,” ಎಂಬ ವಿಧ ವಿಧವಾದ

ಹೆಸರುಗಳನ್ನುಳ್ಳವರು! ಈಗ ತಿಳಿಯಿತು. ಹಾಗಾದರೆ. ಆ ಬಡ ಜೀತ

ಗಾರನಿಗೆ ಉಪಕಾರ ಮಾಡಿದ ಸಿಂಹವೇನೋ ದೊಡ್ಡ ಮನುಷ್ಯನಲ್ಲ.


ಈ ಪ್ರಕಾರ ಜೋಯಿಸನು ಮೂದಲಿಸಿ ಹಂಗಿಸುತಾ ಆಡಿದ

ಮಾತುಗಳನ್ನು ಕೇಳಿ ಮದನನ ಕಣ್ಣಿನಲ್ಲಿ ಗುಳಗುಳನೆ ನೀರು ಬಂತು.

------------------------------------------------

೬] ಸುಮತಿ ಮದನಕುಮಾರರ ಚರಿತ್ರೆ 63 


ಇವನು ಸ್ವಭಾವವಾಗಿ ಒಳ್ಳೆಯವನಾದಕಾರಣ, ತಾನು ಆ ಬಡಹುಡುಗ

ನನ್ನು ಎಲ್ಲಿಯಾದರೂ ಕಂಡರೆ, ಅವನಿಗೆ ಏನಾದರೂ ಕೊಡಬೇಕೆಂದು

ಮನಸ್ಸಿನಲ್ಲಿ ಮಾಡಿಕೊಂಡನು. ಇದಕ್ಕೆ ಸಮಯವೂ ದೊರೆಯಿತು.

ಆ ದಿನವೇ ಹೊತ್ತುಮುಳುಗುವ ಸಮಯದಲ್ಲಿ ಮದನನು ಮನೆಯನ್ನು

ಬಿಟ್ಟು ಒಂದು ಬೇಲೀ ಸಮೀಪದಲ್ಲಿ ಹೋಗುತಿರುವಾಗ, ಆ ದಿನ

ಸಿಕ್ಕಿದ್ದ ಬಡ ಹುಡುಗ ಬೇಲೀ ಹತ್ತಿರ ಕುಡುಗಲೇ ಹಣ್ಣನ್ನು ಆರಿಸಿ

ಕೊಂಡು ತಿನ್ನುತಿದ್ದನು. ಕೂಡಲೆ ಮದನನು ಅವನನ್ನು ಕುರಿತು--

ಎಲಪ್ಪ ಹುಡುಗ , ಯಾಕೆ ಇಂಥಾ ಚಿಂದಿಯನ್ನು ಹಾಕಿಕೊಂಡಿ

ದ್ಹೀಯೆ? ಒಂದು ಕಾಸಿನ ಅಗಲ ಕೂಡ ಗಟ್ಟಿಯಾಗಿಲ್ಲವಲ್ಲ! ನಿನಗೆ

ಬೇರೇ ಬಟ್ಟೆಗೆ ಗತಿಯಿಲ್ಲವೆ? ಎಂದನು. 

 

ಹುಡುಗ--ಇಲ್ಲ, ನನಗೆ ಎಲ್ಲಿಂದ ಬಂದೀತು; ನನ್ನ ಒಡಹುಟ್ಟಿ

ದವರು ೫ ಜನ ಅಕ್ಕತಂಗಿಯರು ೬ ಜರ ಅಣ್ಣ ತಂಮಂದಿರು. ಅವರೆ

ಲ್ಲರೂ ನನ್ನ ಹಾಗೆಯೇ ಒಂದು ಚೂರು ಬಟ್ಟೆಗೂ ಗತಿ ಇಲ್ಲದೇ ಇದಾರೆ,

ಇದು ಹೋಗಲಿ, ಬಟ್ಟೆ ಇಲ್ಲದಿದ್ದರೆ ಬೇಡ; ಒಪ್ಪೊತ್ತಾದರೂ ನಮಗೆ

ಹೊಟ್ಟೆತುಂಬಾ ಹಿಟ್ಟು ಸಿಕ್ಕಿದರೆ ಸಾಕು ; ಅದಕ್ಕೂ ಗತಿ ಇಲ್ಲವಾಗಿದೆ. 


ಮದನ--ಯಾಕೆ ಒಪ್ಪೊತ್ತು ಕೂಡ ನಿಮಗೆ ಹಿಟ್ಟಿಗೆ ಗತಿ ಇಲ್ಲ? 


ಹುಡುಗ--ಯಾಕೆಂದರೆ ನಮ್ಮಪ್ಪನಿಗೆ ಜ್ವರ ಬರುತಿದೆ. ತಲೇ

ಎತ್ತದೆ ಮಲಗಿದಾನೆ, ಈಗ ಕಣಮನೇ ದಿನ; ನಮ್ಮವ್ವ ಒಬ್ಬೊಂಟಿ 

ಗಳು. ಆರಂಬದ ಕೆಲಸವನ್ನು ಮಾಡುವಂಲ್ಲದೆ ಪೈರೆಲ್ಲಾ ಹಾಳಾಯಿತು.

ಆದರಿಂದ--ನೀವೆಲ್ಲಾ ಅನ್ನವಿಲ್ಲದೆ ಸಾಯುವ ಹೊತ್ತು ಬಂದಿತಲ್ಲಾ?

ನಿಮ್ಮನ್ನು ದೇವರೇ ರಕ್ಷಿಸಬೇಕು, ಎಂದು ನಮ್ಮವ್ವ ಹೇಳಿದಳು. 


`ಈ ಮಾತನ್ನು ಕೇಳಿ ಮದನಕುಮಾರನು ಏನೂ ಹೇಳದೆ 

ಸುಮ್ಮನೆ ಜೋಯಿಸರ ಮನೆಗೆ ಜಾಗ್ರತೆಯಿಂದ ಓಡಿಹೋಗಿ, ಮಾಡಿದ್ದ

ಅನ್ನವನ್ನೂ ಇತರ ತಿಂಡಿಗಳನ್ನೂ ಈಸುಕೊಂಡು, ತನ್ನ ಹಳೇ ಅಂಗಿ

ಗಳೆರಡನ್ನೂ ಒಂದೆರಡು ಪಂಚೆಗಳನ್ನೂ ತೆಗೆದುಕೊಂಡು ಬಂದು, ಆ

ಒಕ್ಕಲಿಗರ ಬಡಹುಡುಗನನ್ನು ನೋಡಿ--ಎಲ ಹುಡುಗ, ನೀನು ನನಗೆ

ಉಪಕಾರಮಾಡಿದೆ; ಅದರಿಂದ ಇದೆಲ್ಲವನ್ನೂ ನಿನಗೆ ಕೊಡುತೇನೆ,

-----------------------------------------------

64 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಹಿಡಿ. ನಾನು ದೊರೆಮಗ, ನನಗೆ ಬೇಕಾದಷ್ಟಿದೆ ಎಂದು ಅದೆಲ್ಲ

ವನ್ನೂ ಕೊಟ್ಟನು. ಆಗ ಆ ಬಡ ಹುಡುಗನ ಸಂತೋಷಕ್ಕೆ ಪಾರವೇ

ಇಲ್ಲದೇ ಹೋಯಿತು. ತಾನು ಉಪಕಾರವನ್ನು ಮಾಡಿ ಔದಾರ್ಯ

ವನ್ನು ಮೊಟ್ಟ ಮೊದಲು ತೋರಿಸಿದೆನಲ್ಲಾ, ಎಂದು ಮದನಿಗೆ

ಉಂಟಾದ ಸಂತೋಷವು ಆ ಒಕ್ಕಲಿಗರ ಹುಡುಗನ ಸಂತೋಷಕ್ಕೆ ಸಮ

ವಾಗಿತ್ತು. ಮದನನಿಗೆ ಇದರಿಂದ ಸ್ವಲ್ಪ ಅಹಂಕಾರ ಉಂಟಾಯಿತು. ಇವ

ಕೊಟ್ಟಿದ್ದನ್ನು ತೆಗೆದುಕೊಂಡ ಆ ಹುಡುಗ ಒಂದೆರಡು ಮಾತನಾಡಲು

ಬಾಯಿ ಬಿಟ್ಟನೋ ಇಲ್ಲವೋ ಎನ್ನುವಷ್ಟರೊಳಗೆ, ಮದನನು ಬಹು

ಅಟ್ಟ ಹಾಸದಿಂದ ಹೋಗಿ, ಮನೆಗೆ ಬರುತಿದ್ದ ಜೋಯಿಸನನ್ನು ಕಂಡು, 

ಹಿಗ್ಗಾಡುತಾ ತಾನು ಮಾಡಿದ ಕೆಲಸವನ್ನು ಆತನ ಸಂಗಡ ಹೇಳಿದನು.

ಜೋಯಿಸನು ಆತುರಪಡದೆ ನಿಧಾನವಾಗಿ ಬಟ್ಟೆ ಯನ್ನು ಆ ಹುಡುಗ

ನಿಗೆ ನೀನು ಕೊಟ್ಟದ್ದು ಒಳ್ಳೇದಾಯಿತು. ಯಾಕೆಂದರೆ ಅಂಗಿ

ಪಂಚೆಗಳೇನೋ ನಿನ್ನದು. ಅದು ಹಾಗಿರಲಿ, ನನ್ನನ್ನು ಕೇಳದೆ ನನ್ನ

ಮನೆಯಿಂದ ತಿಂಡೀ ಸಾಮಾನುಗಳನ್ನು ನೀನು ತಂದುಕೊಡುವುದಕ್ಕೆ

ಕಾರಣವೇನು? ಎಂದನು.


ಮದನ--ಆ ಹುಡುಗ ತನಗೆ ಬಹು ಹಸಿವು ಆಗುತ್ತಿದೆ; ತನಗೆ

ಅಣ್ಣ ತಮ್ಮಂದಿರೂ ಅಕ್ಕ ತಂಗಿಯರೂ ಬಹುವಾಗಿದಾರೆ. ತನ್ನ ತಂದೇ

ಮೈಗೆ ಸ್ವಸ್ಥ ವಿಲ್ಲ, ಬೆಳಸನ್ನು ರೂಢಿಸುವುದಕ್ಕೆ ಮತ್ತೆ ಯಾರೂ ಗತಿ

ಇಲ್ಲ ಎಂದು ಹೇಳಿದ, ಆದಕ್ಕಾಗಿ ಅವನಿಗೆ ಕೊಟ್ಟೆ. 


ಜೋಯಿಸ-- ನಿನ್ನ ಪದಾರ್ಥವನ್ನು ನೀನು ಕೊಟ್ಟು ಬಿಡುವುದಕ್ಕೆ

ನೀನು ಹೇಳಿದ್ದೇನೋ ಸರಿಯಾದ ಕಾರಣವೇ ಹೊರತು ಇತರರದನ್ನು

ಕೊಟ್ಟು ಬಿಡುವುದಕ್ಕಲ್ಲ. ನಿನ್ನನ್ನು ಕೇಳದೆ ನಿನ್ನ ಬಟ್ಟೆಯನ್ನೆಲ್ಲಾ

ತೆಗೆದು ಇನ್ನು ಯಾರಿಗಾದರೂ ಸುಮತಿ ಕೊಟ್ಟು ಬಿಟ್ಟರೆ ನೀನು

ಏನೆನ್ನುತೀಯೆ


ಮದನ--ಹಾಗೆ ಕೊಟ್ಟು ಬಿಟ್ಟರೆ ನಾನು ಸಹಿಸಲಾರೆ. ತಪ್ಪಾ

ಯಿತು, ತಮ್ಮ ಅಪ್ಪಣೆ ಇಲ್ಲದೆ ತಮ್ಮ ಪದಾರ್ಥಗಳನ್ನು ಯಾರಿಗೂ

ಇನ್ನು? ಮೇಲೆ ನಾನು ಕೊಡುವುದಿಲ್ಲ.

----------------------------------------------

೬] ಸುಮತಿ ಮದನಕುಮಾರರ ಚರಿತ್ರೆ ೬೫ 


ಜೋಯಿಸ-ಈ ಸಂಗತಿಯಲ್ಲಿ ಒಂದು ಚಿಕ್ಕ ಕಥೆ ಇದೆ, ಅದನ್ನು

ನೀನು ಓದಿದರೆ ಒಳ್ಳೇದು.

ಲೋಹಕನ ಕಥೆ

ಒಬ್ಬಾನೊಬ್ಬ ದೊರೆಗೆ ಲೋಹಕನೆಂಬ ಮಗ ಇದ್ದನು. ಮಗ

ನನ್ನು ದೊಡ್ಡ ವಿದ್ಯಾವಂತನನ್ನಾಗಿ ಮಾಡಿ ದೊರೆತನಕ್ಕೆ ಯೋಗ್ಯ

ನಾಗುವಂತೆ ಮಾಡಬೇಕೆಂಬ ಇಷ್ಟದಿಂದ ಘಟಿಕರಾದ ಉಪಾಧ್ಯಾಯರ

ಮೂಲಕ ತಂದೆಯು ಲೋಹಕನನ್ನು ತಯಾರುಮಾಡಿಸುತಿದ್ದನು.

ಒಂದು ದಿನ ತಂದೆಯು ಮಗನನ್ನು ಕರೆದು... ಈ ದಿವಸ ನೀನು ಕಲಿತು

ಕೊಂಡ ಸಂಗತಿ ಏನು? ಎಂದು ಕೇಳಿದನು. ಲೋಹಕನು-ಜೀಯಾ,

ಒಂದು ವ್ಯಾಜ್ಯವನ್ನು ನಾನು ಅನ್ಯಾಯವಾಗಿ ವ್ಯವಸ್ಥೆ ಮಾಡಿದ್ದಕ್ಕೋ

ಸ್ಕರ ನಮ್ಮ ಉಪಾಧ್ಯಾಯರು ನನಗೆ ಶಿಕ್ಷೆ ಮಾಡಿದರು, ಎಂದನು.

ದೊರೆಯು--ಮಗುವೆ, ಅದು ಹೇಗೆ? ಎಂದು ಕೇಳಲು ರಾಜಪುತ್ರನು

ಹೇಳಿದ್ದೇನೆಂದರೆ :--


ಬೀದಿಯಲ್ಲಿ ಇಬ್ಬರು ಹುಡುಗರು ಹೋಗುತಿದ್ದರು. ಅವರಲ್ಲಿ

ಒಬ್ಬ ಚಿಕ್ಕ ಹುಡುಗ, ಒಬ್ಬ ದೊಡ್ಡ ಹುಡುಗ. ದೊಡ್ಡ ಹುಡುಗನ ಹತ್ತಿರ

ಒಂದು ಚಿಕ್ಕ ಕುಲ್ಲಾವಿ ಇತ್ತು ; ಅವನಿಗೆ ಅದು ಅರ್ಧ ತಲೆಗೂ ಸಾಲುತಿ

ರಲಿಲ್ಲ. ಚಿಕ್ಕ ಹುಡುಗನ ಹತ್ತಿರ ಒಂದು ದೊಡ್ಡ ಕುಲ್ಲಾವಿ ಇತ್ತು;

ಅದು ಅವನ ತಲೆಗೆಲ್ಲಾ ಆಗಿ ಕಣ್ಣು ಸಹಾ ಮುಚ್ಚಿಹೋಗುತಿತ್ತು.

ಹೀಗಿರುವಲ್ಲಿ ದೊಡ್ಡ ಹುಡುಗನು ಚಿಕ್ಕ ಹುಡುಗನನ್ನು ಕುರಿತು-ನನಗೆ

ದೊಡ್ಡ ಕುಲ್ಲಾವಿ ಸರಿಯಾಗಿದೆ, ಅದನ್ನು ನನಗೆ ಕೊಡು ; ನಿನಗೆ ಚಿಕ್ಕ

ಕುಲ್ಲಾವಿ ಸರಿಯಾಗಿದೆ, ಇದನ್ನು ನೀನು ತೆಗೆದುಕೊ, ಎಂದು ಹೇಳಿ

ದನು. ಅದಕ್ಕೆ ಚಿಕ್ಕಹುಡುಗ ಒಪ್ಪಲಿಲ್ಲ... ತರುವಾಯ ದೊಡ್ಡ

ಹುಡುಗನು ಚಿಕ್ಕ ಹುಡುಗನಿಂದ ಬಲವಂತವಾಗಿ ದೊಡ್ಡ ಕುಲ್ಲಾವಿ

ಯನ್ನು ಕಿತ್ತುಕೊಂಡು ಸಣ್ಣ ಕುಲಾವಿಯನ್ನು ತನ್ನ ಪ್ರತಿಕಕ್ಷಿ ಯ

ಮೇಲೆ ಎಸೆದನು. ಅವರಿಬ್ಬರೂ ಹೀಗೆ ಜಗಳವಾಡುತ್ತಿರುವಾಗ, 

ನಾನು ದಾರಿಯಲ್ಲಿ ಹೋಗುತಿದ್ದೆ. ತಮ್ಮ ನ್ಯಾಯವನ್ನು ತೀರಿಸಿ 

------------------------------------------

೬೬ ಸುಮತಿ ಮದನಕುವತಾರರ ಚರಿತ್ರೆ [ಅಧ್ಯಾಯ 


ಕೊಡೆಂದು ಅವರು ನನ್ನನ್ನು ಕೇಳಿಕೊಂಡರು. ಆಗ ನಾನು ಚಿಕ್ಕ

ಕುಲ್ಲಾವಿ ಚಿಕ್ಕವನಿಗೂ ದೊಡ್ಡ ಕುಲ್ಲಾವಿ ದೊಡ್ಡನನಿಗೂ ಸಲ್ಲತಕ್ಕ

ದ್ಹೆಂದು ತೀರ್ಮಾನಮಾಡಿದೆ. ನಾನು ಹೀಗೆ ತೀರ್ಮಾನಮಾಡಿದ್ದ

ಕ್ಕಾಗಿ ನಮ್ಮ ಉಪಾಧ್ಯಾಯರು ನನ್ನನ್ನು ಶಿಕ್ಷಿಸಿದರು.


ಹೀಗೆಂದು ಲೋಹಕನು ಹೇಳಲಾಗಿ, ದೊರೆಯು --ಶಿಕ್ಷಿಸುವು

ದಕ್ಕೆ ಕಾರಣವೇನು? ದೊಡ್ಡವನು ದೊಡ್ಡ ಕುಲ್ಲಾವಿಯನ್ನೂ ಚಿಕ್ಕ

ವನು ಚಿಕ್ಕ ಕುಲ್ಲಾವಿಯನ್ನೂ ಹಾಕಿಕೊಳ್ಳುವುದು ನ್ಯಾಯವೇ, ಎಂದು

ಹೇಳಿದನು. ಕೂಡಲೆ ಅರಸುಮಗನು--ಅಪ್ಪಾಜಿ, ಹವುದು ಹಾಗೆಯೇ

ಸರಿ. ಆದರೆ ನಮ್ಮ ಉಪಾಧ್ಯಾಯರು ಹೇಳಿದ್ದು ಬೇರೆ. “ ಯಾವ

ಕುಲ್ಲಾವಿ ಯಾರ ತಲೆಗೆ ಆಗುವುದು ಎಂಬುವುದನ್ನು ತೀರ್ಮಾನಿಸಿದ್ದು

ನ್ಯಾಯ ತೀರಿಸಿದಹಾಗಾಗಲಿಲ್ಲ; ದೊಡ್ಡ ಹುಡುಗ ಚಿಕ್ಕ ಹುಡುಗನ 

ಕುಲ್ಲಾವಿಯನ್ನು ತೆಗೆದುಕೊಂಡದ್ದು ನ್ಯಾಯವೇ ಅನ್ಯಾಯವೆ?

ಎನ್ನುವುದನ್ನು ವ್ಯವಸ್ಥೆ ಮಾಡತಕ್ಕದ್ದೇ ಅಲ್ಲಿ ಮುಖ್ಯವಾದ ಸಂಗತಿ.

ಆದ್ದರಿಂದ ನೀನು ಮಾಡಿದ ತೀರ್ಮಾನ ನ್ಯಾಯವಾದ್ದಲ್ಲ.” ಹೀಗೆಂದು

ಅವರು ನನಗೆ ಹೇಳಿ ಗದರಿಸಿದರು. ಎಂಬದಾಗಿ ಉತ್ತರ ಕೊಟ್ಟನು.


ಈ ಕಥೆಯು ಮುಗಿಯುವ ಸಮಯಕ್ಕೆ ಸರಿಯಾಗಿ, ಮೈಮೇಲೆ

ಕಾಸಿನಗಲ ಬಟ್ಟೆಗೂ ಗತಿ ಇಲ್ಲದ ಒಬ್ಬ ಒಕ್ಕಲಿಗರ ಹುಡುಗನು

ಒಂದು ಬಟ್ಟೇ ಗಂಟನ್ನು ಕಂಕುಳಲ್ಲಿ ಇರುಕಿಕೊಂಡು ಓಡಿಓಡಿ ಹತ್ತಿ

ರಕ್ಕೆ ಬಂದನು. ಆ ಹುಡುಗನಿಗೆ ಮಂಡಿ ತರೆದುಹೋಗಿ ರಕ್ತ ಸುರಿಯು

ತಿತ್ತು; ಮೊಳಕೈ ಕೆತ್ತಿಹೋಗಿತ್ತು; ಕಣ್ಣಿನಲ್ಲಿ ಬಂದ ನೀರನ್ನು ಒರೆ

ಸಿದ ಕಲೆಯೂ ಇನ್ನೂ ಕಣ್ಣಿನಲ್ಲಿ ನೀರು ಬರುವ ಸಂದರ್ಭವೂ ಚೆನ್ನಾಗಿ

ಕಾಣುತಿತ್ತು. ಆ ಹುಡುಗನು ಮದನನ ಮುಂದೆ ಬಂದು ನಿಂತು, 

ಅವನನ್ನು ನೋಡಿ-- ಬುದ್ಧಿ, ಈ ನಿಮ್ಮ ಬಟ್ಟೆ ಗಳನ್ನು ನೀವೇ ತೆಗೆದು

ಕೊಳ್ಳಿ, ನಾನು ಒಲ್ಲೆ. ಈ ಮಾಳವಾದ ಬಟ್ಟೆ ನನ್ನ ಜೀವನಕ್ಕೆ

ಹೊಣೇಬೇಡುವಹಾಗೆ ಮಾಡಿತು, ಎಂದನು.


ಇದನ್ನು ಕಂಡು ಜೋಯಿಸನು, ಮದನ ಕೊಟ್ಟ ಉಪಹಾರ

ದಿಂದ ಏನೋ ವಿಸರ್ಯಾಸ ನಡೆದಿರಬೇಕೆಂದು ತನ್ನ ಮನಸ್ಸಿನಲ್ಲಿ 

------------------------------------------

6} ಸುಮತಿ ಮದನಕುಮಾರರ ಚರಿತ್ರೆ 67 


ಯೋಚಿಸಿಕೊಂಡು,--ಅದೇನು ಸಂಗತಿ? ಎಂದು ಕೇಳಿದನು.


ಅದಕ್ಕೆ ಆ ಶೂದ್ರರ ಹುಡುಗನು-- ಸ್ವಾಮಿ ನಾನು ಹೊಲದ

ಲ್ಲಿದ್ದೆ, ಈ ಬುದ್ಧಿಯವರು ಚಂಡಾಡುತಾ ಬಂದರು. ಚಂಡು ಬೇಲಿ

ಯೊಳಕ್ಕೆ ಬಿತ್ತು. ಅದನ್ನು ಈಚೆಗೆ ತೆಗೆದು ಎಸೆ ಎಂದು ನನಗೆ ಹೇಳಿ

ದರು, ನಾನು ಎಸೆಯಲಿಲ್ಲ. ಅದಕ್ಕಾಗಿ ನನ್ನನ್ನು ಹೊಡೆಯುವುದಕ್ಕೆ

ಬಂದರು, ನಾನೇನೂ ಇವರ ಚಾಕರನಲ್ಲ; ಇವರ ಸಂಸ್ಥಾಪನಕ್ಕೆ

ಸೇರಿದವನಲ್ಲ. ತಮ್ಮ ಹಳೇಪೈಕದವರನ್ನು ಕಂಡಹಾಗೆ ನನ್ನ ಮೇಲೆ

ರೇಗಿಕೊಂಡು ಬಂದರು. ಓಡಿಬರುತಾ ದಾರಿಯಲ್ಲಿ ಬಿದ್ದರು. ನಾನು

ಎತ್ತಿ ನಿಲ್ಲಿಸಿದ್ದೆ. ತರುವಾಯ ಅಂಗಿ ಪಂಚೆಗಳನ್ನು ತಂದು ಇನಾ

ಮಾಗಿ ಕೊಟ್ಟರು. ಅಂಗಿಯು ದಿವ್ಯವಾದ್ದು, ವಲ್ಲಿ ಉತ್ತಮವಾದ್ದು, 

ಕಲಾಪತ್ತು ಬೂಟಿ ದಾರೀದು.* ಅಂಗಿಯನ್ನು ನಾನು ಕೂಡಲೆ ತೊಟ್ಟು

ವಲ್ಲಿಯನ್ನು ಹೊದ್ದು ಆಚೆಗೆ ಹೊರಟೆ. ನನ್ನ ಜೊತೆಗಾರರಾದ

ಹುಡುಗರೆಲ್ಲಾ ನನ್ನನ್ನು ನೋಡಿ ಆಶ್ಚರ್ಯಪಡುತಾ,--ಎಲೆ ಹೈದಾ,

ಎಲೋ ಮಲ್ಲಾ, ಏನೆಲೆ ಮದುವೇ ಗಂಡಿನಹಾಗೆ ಸಿಂಗರಿಸಿಕೊಂಡು

ಹೊರಟೆ? ಎಂದು ಹಾಸ್ಯಮಾಡುತಾ “ ಎಲೆ ಮದುವೇಗಂಡು" ಎಂದು

ಒಬ್ಬ ಕೂಗುವುದು, “ ಎಲೋ ದೊರೆ ಮಗ?” ಎಂದು ಮತ್ತೊಬ್ಬ

ಕೂಗುವುದು, ಉಳಿದವರು ನನ್ನ ಮೇಲೆ ಮಣ್ಣು ಎರೆಚುವುದು, ಸಗಣಿ

ಯನ್ನು ಎಸೆಯುವುದು, ಕಲ್ಲಿನಿಂದ ಹೊಡೆಯುವುದು, ಚಪ್ಪಾಳೆ ಹಾಕಿ

ಕೊಂಡು ನಗುತಾ ನನ್ನ ಮುಂದೆ ಬಂದು ಕುಣಿಯುವುದು, ಕೆಲವರು

ನನ್ನ ಅಂಗಿಯನ್ನು ಎಳೆದು ಓಡಿಹೋವುದ್ಕು “ಎಲೆ ಆಟಗಾರರ ಹೈದಾ”

ಎಂದು ಕೂಗುವುದು ಹೀಗೆಲ್ಲಾ ಲೇವಡಿ ಮಾಡಿದರು. ಅವರಲ್ಲಿ ಒಬ್ಬ

ದೊಡ್ಡ ಹುಡುಗ ಬಂದು ನನ್ನನ್ನು ಕೆಳಕ್ಕೆ ನೂಕಿಬಿಟ್ಟು ಓಡಿಹೋ

ದನು. ನಾನು ಜೋಕುತಿಂದು ಮುಂದಕ್ಕೆ ಮುಗ್ಗರಿಸಿ ಬಿದ್ದೆ. ಮಂಡಿ

ಮೊಳಕೈ ಎಲ್ಲಾ ಕಿತ್ತುಹೋಗಿ ರಕ್ತಬಂತು; ಎದೆ ತರೆದು ಹೋಯಿತು.

ರಕ್ತ ಬಂದದ್ದನ್ನು ಕಂಡು ಕೆಲವರು ಹೆದರಿಕೊಂಡು ಓಡಿದರು. ಈ ಹಾಳು

....

*ಬುಟ್ಟ ದಾರದ್ದು,

----------------------------------------------

68 ಸುಮತಿ ಮದನಕುಮಾರರ ಚರಿತ್ರೆ [ ಅಧ್ಯಾಯ. 


ಬಟ್ಟೆಗಳಿಂದ ನನಗೆ ಇಂಥಾ ಗತಿ ಬಂತು. ನಾನು ಎಲ್ಲೆಲ್ಲಿ ಹೊಕ್ಕರೂ ಆ

ಹುಡುಗರು ನನ್ನನ್ನು ಬಿಡದೆ ಲೇವಡಿಮಾಡುತಾ ಹುಯಿಲುಹಾಕುತಾ

ಬಂದರು. ಆದ್ದರಿಂದ ಈ ಬುದ್ಧಿಯವರ ಬಟ್ಟೆಗಳನ್ನು ಅವರಿಗೆ ಒಪ್ಬಿ

ಸೋಣವೆಂದು ತಂದೆನು, ಹೀಗೆಂದು ಅವರಿಗೆ ಹೇಳಿದನು.


ಜೋಯಿಸ--ಅಯ್ಯೋ ಪಾಪ. ನಿಮ್ಮ ಮನೆ ಎಲ್ಲಿದೆ?


ಹುಡುಗ--ಸ್ವಾಮಿ, ನಮ್ಮ ಮನೆ ಈ ಕಾನಿನ ಆಚೆ ಒಂದು.

ಕೊಂಬಿನ ಕೂಗು.


ಜೋಯಿಸ- ಸುಮತಿ, ಅಡಿಗೆಯಾದಕೂಡಲೆ ಇವನ ತಂದೆಗೆ

ಸ್ವಲ್ಪ ಅನ್ನವನ್ನು ತೆಗೆದುಕೊಂಡು ಹೋಗಿ ಕೊಟ್ಟು ಬರುತೀಯಾ?


ಸುಮತಿ- ಅವರ ಮನೆ ಒಂದಕ್ಕೆ ನಾಲ್ಕರಷ್ಟು ದೂರವಿದ್ದರೂ

ಚಿಂತೆ ಇಲ್ಲ, ಅಗತ್ಯವಾಗಿ ಕೊಟ್ಟು ಬರುತೇನೆ.


ಈ ಮಾತನ್ನು ಕೇಳಿ ಜೋಯಿಸನು ಮನೆಯೊಳಕ್ಕೆ ಹೋದನು.

   ....

೭ ನೆ ಅಧ್ಯಾಯ


ಈ ಮಧ್ಯೆ ಮದನನು ಆ ಒಕ್ಕಲಿಗರ ಹುಡುಗನನ್ನು ಸುಮ್ಮನೆ

ದುರುಗುಟ್ಟಿಕೊಂಡು ನೋಡುತಾ, ಆ ಹುಡುಗನನ್ನು ಕುರಿತು,--

ಅಯ್ಯೋ ಹುಡುಗಾ ನಾನು ಈ ಹಾಳುಬಟ್ಟೆಗಳನ್ನು ನಿನಗೆ ಕೊಟ್ಟಿದ್ದ

ರಿಂದ ನಿನಗೆ ಇಂಥಾ ಪೆಟ್ಟಾಯಿತು.


ಹುಡುಗ-- ಬುದ್ಧಿ, ತಾವೇನಮಾಡೀರಿ? ನನಗೆ ಕೆಟ್ಟದನ್ನು

ಮಾಡಬೇಕೆಂದು ತಾವು ಬಟ್ಟೆಯನ್ನು ಕೊಡಲಿಲ್ಲ. ಏನಮಾಡುವುದು?

ಯತ್ನವಿಲ್ಲ. ಈ ಪೆಟ್ಟನ್ನು ನಾನು ಲಕ್ಷ್ಯಮಾಡುವುದಿಲ್ಲ. ಹೀಗೆಂದು

ಹೇಳಿ ಹೊರಟುಹೋದನು. ತರುವಾಯ ಮದನನು--ಸುಮತಿ,  ಆ

ಹುಡುಗ ಒಳ್ಳೆಯವನಾಗಿ ಕಾಣುತಾನೆ; ಅವ ಹಾಕಿಕೊಳ್ಳುವಂಥಾ.

ಬಟ್ಟೆ ನನ್ನ ಹತ್ತಿರ ಇದ್ದರೆ ಕೊಡಬಹುದಾಗಿತ್ತು.


ಸುಮತಿ --ಅಂಥಾ ಬಟ್ಟೆ ಸಿಕ್ಕುವುದೇನೂ ಕಷ್ಟವಲ್ಲ. ಅಗೋ 

--------------------------------------------

೩] ಸುಮತಿ ಮದನಕುಮಾರೆರ ಚರಿತ್ರೆ 69 


ಆ ಗುಡಿ ಕಾಣುವ ಗ್ರಾಮದಲ್ಲಿ ಒಂದು ಜವಳೀ ಅಂಗಡಿ ಇದೆ. ಅಲ್ಲಿ

ಬಡವರು ಹಾಕಿಕೊಳ್ಳುವಂಥಾ ಬಟ್ಟೆಗಳನ್ನು ಮಾರುತಾರೆ. ಬೇಕಾದರೆ

ನೀನು ಕೊಂಡುಕೊಳ್ಳಬಹುದು.


ಮಾರನೇ ದಿನ ಬೆಳಗ್ಗೆ ಸುಮತಿ ಮದನ ಇಬ್ಬರೂ ಹೊತ್ತಿಗೆ

ಮುಂಚೆ ಎದ್ದು ಜವಳೀ ಅಂಗಡಿ ಇರುವ ಗ್ರಾಮಕ್ಕೆ ಹೊರಟರು.

ಇವರು ಅರ್ಧದಾರಿಗೆ ಹೋದಕೂಡಲೆ ನಾಯಿ ಬೊಗಳುವ ಶಬ್ದ

ಕೇಳಿತು. ತರುವಾಯ ಕಾಲು ನಿಮಿಷಕ್ಕೆ ೮-೧೦ ಸೀಳುನಾಯಿಗಳು

ಭರ್ರನೆ ಓಡಿಹೋದವು. ಇದನ್ನು ಕಂಡು ಮದನನು ಇದೇನೆಂದು

ಸುಮತಿಯನ್ನು ಕೇಳಿದನು,


ಸುಮತಿ- ಇದು ದೊಡ್ಡಮನೇ ಮಂಜೈಯ ಹೆಗ್ಗಡೆಯ ಹಾವುಳಿ.

ಇವು ಅವನ ಬೇಟೇನಾಯಿಗಳು ; ಒಂದು ಮೊಲವನ್ನು ಹರಿಸಿಕೊಂಡು

ಹೋಗುತಿವೆ, ಯಾಕೆ ಅಂಥಾ ನಿರಪರಾಧಿಯಾದ ಪ್ರಾಣಿಗಳನ್ನು

ಕೊಲ್ಲುತಾರೆಯೋ ನಾನರಿಯೆ! ಹಾಗೆ ಬೇಟೆಯಾಡಬೇಕೆಂಬ ಆಶೆ

ಇದ್ದರೆ, ಹುಲಿ, ಕಿರುಬ, ಕಾಡಹಂದಿ ಮೊದಲಾದ ದುಷ್ಟಮೃಗಗಳಲ್ಲವೆ?

ಅವುಗಳನ್ನು ಯಾಕೆ ಹೊಡೆಯಬಾರದು?


ಮದನ--ಅಯ್ಯೋ! ಅಂಥಾ ಮೃಗಗಳ ಗೋಜಿಗೆ ಹೋಗು

ವುದು ಅಪಾಯಕರ.


ಸುಮತಿ-_-ಅಪಾಯವೂ ಇಲ್ಲ, ಏನೂ ಇಲ್ಲ. ಹಳ್ಳಿ ಗಾಡುಗಳಲ್ಲಿ

ಹುಲಿ, ಕಿರುಬ ಬಂದು ದನಗಳನ್ನೂ ಕುರಿಗಳನ್ನೂ ಕಚ್ಚಿಕೊಂಡು

ಹೋಗುವವು. ಆದ್ದರಿಂದ ಇವುಗಳನ್ನು ಕೊಲ್ಲಬೇಕೆಂದು ಆರೇಳು ಜನ

ದುಂಡಾಳುಗಳು ಈಟಿಗಳನ್ನೂ ಕರ್ಣಾಟಕ ಕೋವಿಗಳನ್ನ್ಕೂ ತೆಗೆದು

ಕೊಂಡು ಬೆಳಗಿನಜಾವದಲ್ಲಿ ಹೊರಡುತಾರೆ. ಇವರ ಮೈಮೇಲೆ ಬಟ್ಟೆ

ವಿಶೇಷವಾಗಿ ಇರುವುದಿಲ್ಲ; ದಟ್ಟಿಯನ್ನು ಮಾತ್ರ ಕಟ್ಟಕೊಂಡಿರು

ತಾರೆ. ಒಬ್ಬೊಬ್ಬ ಒಂದೊಂದು ಈಟಿಯನ್ನು ಹಿಡಿದುಕೊಂಡು ಬೇಟೆ

ಇರುವ ಹೊದರು, ಕೊರಕಲು, ಗುಹೆ ಇಲ್ಲೆಲ್ಲಾ ಹುಡುಕುತಾ ಗದ್ದಲ

ಮಾಡುತಾರೆ, ಮೃಗವು ಇದನ್ನು ತಡೆಯಲಾರದೆ ಬಾಲವನ್ನು ಅಲ್ಲಾ

ಡಿಸುತಾ ತಲೆಯನ್ನು ಕೊಡವಿಕೊಂಡು ನಿಂತು ಇವರನ್ನು ಕಂಡು ಗುರು 

----------------------------------------------

70 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಗುಟ್ಟುವುದು. ಆಗ ಒಬ್ಬ ಒಂದು ಈಟಿಯಿಂದ ಒಂದು ಪಕ್ಕೆಯನ್ನು 

ತಿವಿಯುವನು, ಆ ಕ್ಷಣದಲ್ಲಿಯೇ ಹುಲಿಯು ಗಟ್ಟಿಯಾಗಿ ಕೂಗುತಾ

ಅವನ ಮೇಲೆ ಹಾರುವುದು.


ಮದನ-- ಹಾಗಾದರೆ ಅವನನ್ನು ಹಿಡಿದು ಕೊಂದುಬಿಡುವೆನು.


ಸುಮತಿ--ಇಲ್ಲ ತಾಳು. ಅದು ಹಾರಿದಕೂಡಲೆ ಅವ ತಪ್ಪಿಸಿ

ಕೊಂಡು ಅದರ ಕೈಗೆ ಸಿಕ್ಕದೆ ಪಕ್ಕಕ್ಕೆ ಹಾರುವನು. ಒಡನೆಯೇ

ಇನ್ನೊಬ್ಬ ಬೇಟಿಗಾರನು ಅದರ ಇನ್ನೊಂದು ಪಕ್ಕೆಮೇಲೆ ಈಟಿಯಿಂದ.

ತಿವಿಯುವನು. ಅವನ ಮೇಲೆಯೂ ಹೀಗೆಯೇ ಮೃಗ ಹಾರುವುದು.

ಅವನೂ ತಪ್ಪಿಸಿಕೊಳ್ಳುವನು. ಆಗ ಇನ್ನೊಬ್ಬ ತಿವಿಯುವನು. ಹೀಗೆ

ಒಬ್ಬೊಬ್ಬರಾಗಿ ೮-೧೦ ಕಡೆ ತಿವಿಯಲು ಕೊನೆಗೆ ಮೃಗವು ಅರಚಿ

ನೊಂಡು ಕೆಳಕ್ಕೆ ಬಿದ್ದು ಗಾಯದಿಂದ ಪ್ರಾಣಬಿಡುವುದು.


ಮದನ--ಈ ನೋಟಾ ನೋಡುವುದಕ್ಕೆ  ಬಹು ಚೆನ್ನಾಗಿರ 

ಬಹುದು. ಮನೆಯಲ್ಲಿ ಕೂತು ಬಾಗಿಲ ಹಾಕಿಕೊಂಡು, ನಮಗೆ

ಅದರೆ ತೊಂದರೆ ಇಲ್ಲದಹಾಗೆ ಕಿಟಿಕಿಯಿಂದ ಈ ನೋಟವನ್ನು ನೋಡ

ಬೇಕೆಂದು ನನಗೆ ಆಶೆ ಇದೆ.


ಸುಮತಿ--ನನಗೆ ಅಂಥಾ ಆಶೆ ಇಲ್ಲ. ಹುಲಿ ನೋಡುವುದಕ್ಕೆ

ಎಂಥಾ ಸುಂದರವಾದ ಮೃಗ. ಅದು ಮರಣ ಸಂಕಟಪಡುವುದನ್ನು

ನಾವು ಯಾಕೆ ನೋಡಬೇಕು? ಇದು ಹಾಗಿರಲಿ. ಹುಲಿಯಂತೂ ದುಷ್ಟ

ಮೃಗ, ಅದನ್ನು ಕೊಲ್ಲುವರು; ಮೊಲ ಯಾರ ತಂಟೆಗೂ ಬರದ ಬಡ

ಜಂತುವಷ್ಟೆ. ಅದನ್ನು ಯಾಕೆ ಕೊಲ್ಲಬೇಕು? ಹೊಲಗಳಲ್ಲಿ ಸ್ವಲ್ಪ

ಕಾಳುಕಡ್ಡಿಯನ್ನು ತಿಂದುಕೊಂಡು ಹೋಗಬಹುದು. ಅಷ್ಟು ಮಾತ್ರಕ್ಕೇ

ಅದರ ಪ್ರಾಣವನ್ನು ಯಾಕೆ ತೆಗೆಯಬೇಕು? ಅಗೋ ನೋಡು ಮೊಲ.

ಈ ಕಡೆಗೆ ಓಡಿಹೋಯಿತು. ಅವರ ಕೈಗೆ ಸಿಕ್ಕದೇ ಇದ್ದರೆ ಆದೀತು.

ಅದು ಎತ್ತ ಲಾಗಿ ಹೋಯಿತೆಂದು ನನ್ನನ್ನು ಯಾರಾದರೂ ಕೇಳಿದರೆ

ನಾನು ಬೇರೆ ಹೇಳುವುದಿಲ್ಲ.


ಇವರಿಬ್ಬರೂ ಹೀಗೆ ಮಾತನಾಡುತಿರುವಾಗ ನಾಯಿಗಳು ಮೊಲ

ಹೋದ ಕಡೆಯನ್ನು ಕಾಣದೆ ದಿಕ್ಕುತೋಚದೆ ಬಾಯಿಬಿಟ್ಟು ಕೊಂಡು 

-----------------------------------------------

7] ಸುಮತಿ ಮದನಕುಮಾರರ ಚರಿತ್ರೆ ೭೧ 


ನಾಲಗೆಯನ್ನು ಅಲ್ಲಾಡಿಸುತಾ ಏದುತಾ ನಿಂತುಕೊಂಡುವು. ಅವುಗಳ

ಹಿಂದೆ ಕುದುರೆಯನ್ನು ಹತ್ತಿಕೊಂಡು ಒಬ್ಬ ಮನುಷ್ಯ ಬಂದು, ಸುಮತಿ

ಯನ್ನು ನೋಡಿ--ಮೊಲ ಎಲ್ಲಿ ಹೋಯಿತೆಲಾ? ಎಂದು ಕೇಳಿದನು.

ಸುಮತಿ ಮಾತನಾಡದಿರಲು--ಮೊಲ ಎಲ್ಲಿ, ಜಾಗ್ರತೆಯಾಗಿ ಹೇಳು,

ಎಂದು ಗದರಿಸಿದನು. ಸುಮತಿಯು ಅದು ಇಂಥಾಕಡೆಗೆ ಹೋಯಿ

ತೆಂದು ನಾನು ಹೇಳುವುದಿಲ್ಲ, ಎಂದು ನಿಧಾನವಾಗಿ ಹೇಳಿದನು. ಆಗ

ಆ ಕುದುರೇ ಸವಾರನು--ನೀನು ಹೇಳದಿದ್ದರೆ ನಾನು ಬಿಟ್ಟೇನೆ?

ಎಂದು ಕುದುರೆಯನ್ನು ಇಳಿದು, ಕೈಲಿದ್ದ ಚಾವಟಯಿಂದ ಸುಮತಿ

ಯನ್ನು ಹೊಡೆಯಲು ಮೊದಲುಮಾಡಿದನು. ತರುವಾಯ... ಈಗ

ಲಾದರೂ ಹೇಳೀಯ? ಎಂದು ಅವ ಕೇಳಲು, ಸುಮತಿಯು-- ಇಷ್ಟಾ

ದರೂ ನಾನು ಹೇಳಲಿಲ್ಲವಂತೆ ; ಇನ್ನು ಯಾಕೆ ಹೇಳಿಯೇನು? ನೀನು

ನನ್ನ ಪ್ರಾಣತೆಗೆದರೂ ಹೇಳುವುದಿಲ್ಲ ಎಂದನು. ಇದೆಲ್ಲವನ್ನೂ ಕಂಡು

ಮದನನು ದೊಡ್ಡ ದಾಗಿ ಅಳುವುದಕ್ಕೆ ಆರಂಭಿಸಿದನು. ಈ ಹುಡುಗನ

ಗೋಳಾಗಲಿ ಆ ಹುಡುಗನ ಧೈರ್ಯವಾಗಲಿ ಆ ನೀಚನ ಕಲ್ಲು ಮನ

ಸ್ಸನ್ನು ಬೇರೆ ಕರಗಿಸಲಿಲ್ಲ. ಇಷ್ಟರೊಳಗೆ ಅದೇ ದಾರಿಯಲ್ಲಿ ಮತ್ತೊ

ಬ್ಬನು ಕುದುರೇಮೇಲೆ ಏರಿಕೊಂಡು ಬಂದು ಅಲ್ಲಿ ನಿಂತ, ಆ ನೀಚ

ನನ್ನು ಕುರಿತು- ಯಾಕೆ ಹೆಗ್ಗಡೆಗಳೆ, ಆ ಹುಡುಗನನ್ನು ಹಾಗೆ

ಹೊಡೆಯುತೀರಿ? ಎಂದನು. ಆ ಮಾತಿಗೆ ಮಂಜೈಯಹೆಗ್ಗಡೆಯು-.-

ಅವನನ್ನು ಸೀಳಿ ತೋರಣಾ ಕಟ್ಟುತೇನೆ; ನಮ್ಮ ಮೊಲ ಹೋದ್ದನ್ನು 

ಕಂಡಿದಾನೆ, ಎತ್ತಲಾಗಿ ಹೋಯಿತೆಂದರೆ ಹೇಳುವುದಿಲ್ಲವಲ್ಲ! ಎಂದು

ಗರ್ಜಿಸಿದನು.


ಆಗ ದಾರಿಮನುಷ್ಯ--ನೋಡಿಕೊಳ್ಳಿ ಹೆಗ್ಗಡೆಗಳೆ ತಾವು

ಮಾಡುವ ಕೆಲಸವನ್ನು ಯೋಚಿಸಿಕೊಂಡು ಮಾಡಿ; ಇಗೋ ನೋಡಿ

ಹತ್ತಿರ ನಿಂತಿರುವ ಬಾಲಕ ದೊರೆಮಗ ; ಅನಂಗರಾಜರ ಕುಮಾರ;

ಆತನ ಗೋಜಿಗೆ ಎಲ್ಲಿಯಾದರೂ ಹೋಗಿ ಇಲ್ಲದ ಆಪತ್ತನ್ನು ತಂದು

ಕೊಂಡೀರಿ. (ಸುಮತಿಯನ್ನು ನೋಡಿ) ಎಲೋ ಮಗು, ಆ ಮೊಲ

ಯಾವ ದಿಕ್ಕಿಗೆ ಹೋಯಿತು? ನೀನು ಅದನ್ನು ಯಾತಕೆ ಹೇಳಬಾರದು?

ಯಾಕೆ ಏಟತಿನ್ನುತೀಯೆ, ಪ್ರಾಣಿ!

----------------------------------------------

72 ಸುಮತಿ ಮದನಕುನಾಾರರ ಚರಿತ್ರೆ [ಅಧ್ಯಾಯ


ಸುಮತಿ ಸ್ವಲ್ಪ ಚೇತರಿಸಿಕೊಂಡು-.ಆ ಬಡಜಂತುವನ್ನು

ಇವರಿಗೆ ಒಪ್ಪಿಸಿ ಕೊಲ್ಲಿಸುವುದಕ್ಕೆ ನನಗೆ ಇಷ್ಟವಿಲ್ಲ.


ದಾರಿಯವನು-_ ಈ ಹುಡುಗನ ಬುದ್ಧಿ ಏನು ಅದ್ಭುತವಾಗಿದೆ ?

ಹೆಗ್ಗಡೆಗಳೆ, ಈ ಬಾಲಕನ ಬುದ್ದಿಗೆ ಸಮವಾಗಿ ಅವನ ವಯಸ್ಸೂ

ದೇಹಶಕ್ತಿಯೂ ಇಲ್ಲದೆ ಇರುವುದು ನಿಮ್ಮ ಪುಣ್ಯವೆಂದು ತಿಳಿಯಿರಿ.

ನೀವು ಯಾವಾಗಲೂ ಅತಿ ಕೋಪಿಷ್ಠರು.


ಹೀಗೆ ಮಾತನಾಡುತಿರುವಾಗ ಮೊಲ ಹೋದ ದಾರಿಯ ವಾಸನೆ

ಯನ್ನು ತಿಳಿದು ನಾಯಿಗಳು ಆಕಡೆಗೆ ಓಡಲು ಮೊದಲುಮಾಡಿದುವು.

ಅದನ್ನು ಕಂಡು ಹೆಗ್ಗಡೆಯು ಕುದುರೆಯನ್ನು ಏರಿ, ತನ್ನ ಜೊತೆಯಲ್ಲಿದ್ದ

ಬೇಟೆಗಾರರನ್ನು ಕರೆದುಕೊಂಡು ಹೊರಟುಹೋದನು.


ದೂರದಲ್ಲಿ ನಿಂತು ಇದೆಲ್ಲವನ್ನೂ ನೋಡಿ ಅಳುತಿದ್ದ ಮದನನು

ಸುಮತಿಯ ಹತ್ತಿರಕ್ಕೆ ಬಂದು, ಹೇಗೆ ಇದ್ದೀಯೇ? ಎಂದು ಕೇಳಲಾಗಿ

ಸುಮತಿಯು--ಮೈಯೆಲ್ಲಾ ಬಾಸುಂಡೆಯಾಯಿತು. ಒಂದೆರಡು ಕಡೆ

ರಕ್ತವೂ ಬಂತು, ಏನಮಾಡುವುದು? ಅನುಭವಿಸಬೇಕು.


ಮದನ-- ನನ್ನ ಕೈಲಿ ಒಂದು ಕೋವಿ ಇರಬೇಕಾಗಿತ್ತು ;

ತಿಳಿಯುತಿತ್ತು.


ಸುಮತಿ--ಏನಮಾಡುತಿದ್ದೆ?


ಮದನ--- ನಿನ್ನನ್ನು ಅನ್ಯಾಯವಾಗಿ ಹೊಡೆದ ಆ ನೀಚನನ್ನು

ಕೊಂದುಹಾಕುತಿದ್ದೆ.


ಸುಮತಿ--ಹಾಗೆ ನೀನು ಮಾಡಿದ್ದರೆ, ಅದು ದೊಡ್ಡ ಅಪರಾಧ

ವಾಗುತಿತ್ತು.. ಯಾಕೆಂದರೆ ಅವನು ನನ್ನನ್ನು ಕೊಲ್ಲಬೇಕೆಂದು

ಬರಲಿಲ್ಲ. ನಾನು ದೊಡ್ಡವನಾಗಿದ್ದರೆ ಅವನು ನನ್ನ ತಂಟೆಗೆ ಬರುತಿರ

ಲಿಲ್ಲ. ಇನ್ನೇನು? ಅದೆಲ್ಲ ಮುಗಿದು ಹೋಯಿತಲ್ಲ, ಹೋಗಲಿ.

ನಮ್ಮ ಶತ್ರುಗಳ ಅಪರಾಧವನ್ನು ಕ್ಷಮಿಸಿಬಿಡೋಣ. ಹಾಗೆ ನಾವು

ಕ್ಷಮಿಸಿದರೆ, ಅವರೆಲ್ಲಾ ನಮಗೆ ಮಿತ್ರರಾಗುತಾರೆ. ಈ ಮಾತನ್ನು

ನಮ್ಮ ಜೋಯಿಸರು ಹೇಳಿದಾರೆ.


ಮದನ--ಅವ ಅಷ್ಟು ಹೊಡೆದರೂ ನೀನು ಅಳಲಿಲ್ಲವಲ್ಲ.

ನನಗೆ ಹೆಚ್ಚಾಗಿ ಅಳು ಬಂತು. 

--------------------------------------------------

7] ಸುಮತಿ ಮದೆನಕುಮಾರರ ಚರಿತ್ರೆ 73 


ಸುಮತಿ--ಅತ್ತುದರಿಂದ ಪ್ರಯೋಜನವೇನು? ಬಂದ ಕಷ್ಟ

ವನ್ನು ಅನುಭವಿಸಿಯೇ ತೀರಬೇಕು.


ಈ ಹುಡುಗರು ಇಬ್ಬರೂ ಈ ರೀತಿಯಲ್ಲಿ ಮಾತನಾಡಿಕೊಳ್ಳುತಾ

ಜವಳೀ ಅಂಗಡಿ ಇರುವ ಗ್ರಾಮಕ್ಕೆ ಹೋಗಿ ಅಂಗಡಿಯ ಮುಂದಿ

ನಿಂತು, ಬಡಜನರು ಹೊದ್ದುಕೊಳ್ಳುವಂಥಾ ಬಟ್ಟೆಗಳನ್ನು ತೆಗಿಸಿ

ದಾರಣೇಮಾಡಿ, ಆ ಬಡ ಒಕ್ಕಲಿಗರ ಹುಡುಗನಿಗೂ ಅವನ ಸಹೋದರ

ಸಹೋದರಿಯರಿಗೂ ಆಗುವಂತೆ ಬಟ್ಟೆಗಳನ್ನು ಕೊಂಡುಕೊಂಡರು.

ಮದನನು ತನ್ನ ಅಂಗಿ ಜೇಬಿನಲ್ಲಿದ್ದ ಹಣವನ್ನು ತೆಗೆದು ಅಂಗಡಿ

ಯವನಿಗೆ ಬಟ್ಟೇ ಕ್ರಯಕ್ಕಾಗಿ ಕೊಟ್ಟನು. ಆ ಜವಳಿಯನ್ನು ಗಂಟು

ಕಟ್ಟಿ ಸುಮತಿಯನ್ನು ಕುರಿತು. ಸುಮತಿ ಈ ಗಂಟನ್ನು ಹೊತ್ತು

ಕೊಳ್ಳುತೀಯ? ಎಂದನು.


ಸುಮತಿ--ಮದನ, ಇದನ್ನು ನಾನೇನೋ ಅಗತ್ಯವಾಗಿ ಹೊತ್ತು

ಕೊಳ್ಳುತೇನೆ. ಆದರೆ ನೀನೇ ಯಾಕೆ ಹೊತ್ತುಕೊಳ್ಳಕೂಡದು? ಹೇಳು.


ಮದನ-- ನಾವು ದೊಡ್ಡವರ ಮಕ್ಕಳಾಗಿ ಮೂಟೇ `ಹೊತ್ತು

ಕೊಳ್ಳುವುದು ಸಮನಲ್ಲ.


ಸುಮತಿ - ಯಾಕೆ ಹೊತ್ತುಕೊಳ್ಳಕೂಡದು? ಅದರಿಂದ ದೊಡ್ಡ

ವರ ಮಕ್ಕಳಿಗೆ ಯಾವ ತೊಂದರೆತಾನೆ ಉಂಟಾಗುವುದು? ದೇಹ

ದಾರ್ಡ್ಯವೇನೋ ಇರಬೇಕು.


ಮದನ--ಮೂಟೇ ಹೊತ್ತುಕೊಂಡರೆ ಸಾಧಾರಣ ಬಡಜನರ

ಹಾಗೆ ಕಾಣಿಸುತೇವೆ,


ಸುಮತಿ--ಹಾಗಾದರೆ ದೊಡ್ಡವರ ಮಕ್ಕಳಿಗೆ ಕೈಕಾಲು, ಕಣ್ಣು

ಮೂಗು, ಕಿವಿ, ಬಾಯಿ ಯಾವುದೂ ಇರಕೂಡದು ; ಯಾಕೆಂದರೆ ಬಡ

ವರಿಗೆ ಈ ಅಂಗಗಳೆಲ್ಲಾ ಇವೆಯಷ್ಟೆ.


ಮದನ--ಓ, ಈ ಅಂಗಗಳೆಲ್ಲಾ ಇದ್ದೇ ತೀರಬೇಕು. ಅವು

ಗಳೆಲ್ಲಾ ಉಪಯೋಗವಾಗಿವೆ.


ಸುಮತಿ--ನಂನಮ್ಮ ಕೆಲಸವನ್ನು ನಾವು ನಾವೇ ಮಾಡಿಕೊಳ್ಳು

ವುದು ಉಪಯೋಗವಲ್ಲವೊ?

-------------------------------------------------

೭೪ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ-


ಮದನ -- ಹವುದು, ಆದರೆ ಭಾಗ್ಯವಂತರ ಮನೆಯಲ್ಲಿ ಇಂಥಾ:

ಕೆಲಸವನ್ನು ಮಾಡುವುದಕ್ಕೆ ಆಳುಗಳು ಇರುತಾರೆ, ಅವರು ಅದನ್ನು

ಮಾಡುತಾರೆ.


ಸುಮತಿ- ಹಾಗಾದರೆ ಭಾಗ್ಯವಂತರಾಗಿರುವುದು ಒಳ್ಳೆಯದಲ್ಲ;.

ಯಾಕೆಂದರೆ, ಎಲ್ಲರೂ ಭಾಗ್ಯವಂತರಾಗಿದ್ದಲ್ಲಿ ಚಾಕರೀ ಮಾಡುವುದಕ್ಕೆ

ಯಾರೂ ಇಲ್ಲದೇ ಹೋಗುವರು. ಆಗ ನಾವೆಲ್ಲಾ ಉಪವಾಸ ಸಾಯ

ಬೇಕಾಗುವುದು.


ಮದನ--ಉಪವಾಸ ಸಾಯಬೇಕೆ?


ಸುಮತಿ-- ಹವುದು ಅನ್ನವನ್ನು ತಿನ್ನದಿದ್ದರೆ ನೀನು ಜೀವಿಸಿ 

ಕೊಂಡಿರುವುದಕ್ಕಾದೀತೆ ?


ಮದನ--ಆಗುವುದಿಲ್ಲ; ಅಷ್ಟು ಬಲ್ಲೆ. 


ಸುಮತಿ--ಅಂಥಾ ಅನ್ನವು ಅಕ್ಕಿಯಿಂದಾಗುವುದು, ಅಕ್ಕಿ ಬತ್ತ

ದಿಂದ ಸಿಕ್ಕುವುದು. ಬತ್ತ ಗದ್ದೆಯಲ್ಲಿ ಬೆಳೆಯುವುದು.


ಮದನ-- ಗದ್ದೆಯಲ್ಲಿ ಬತ್ತದ ಕಾಳುಗಳನ್ನು ಆರಿಸಿ ತಿನ್ನುತೇನೆ.


ಸುಮತಿ--ಅಗಲೂ ನೀನು ಕೆಲಸವನ್ನು ಮಾಡಿದಹಾಗಾಯಿತು.

ಬತ್ತವನ್ನು ಕುಟ್ಟಿ ಅಕ್ಕಿಯನ್ನು ತೆಗೆಯಬೇಕು. ಅದರಲ್ಲಿ ಅನ್ನವನ್ನು

ಮಾಡಿ ತಿನ್ನ ಬೇಕು.


ಇವರಿಬ್ಬರೂ ಹೀಗೆ ಮಾತನಾಡಿಕೊಳ್ಳುತಾ ಹೋಗುತಿರುವಾಗ.

ಸಮೀಪದಲ್ಲಿ ಬಹಳ ಶಬ್ದವಾಯಿತು. ಅದೇನೆಂದು ಹಿಂತಿರುಗಿ

ನೋಡಲು ಒಂದು ಕುದುರೆ ಓಡಿಹೋಗುತಿತ್ತು. ಅದರ ಸವಾರನು

ಕೆಳಗೆ ಬಿದ್ದು ಅವನ ಕಾಲು ರಿಕಾಪಿಗೆ ಸಿಕ್ಕಿಕೊಂಡಿತ್ತು. ಆ ಕುದುರೆ

ಅವನನ್ನು ಎಳೆದುಕೊಂಡು ಹೋಗುತಿತ್ತು. ದೈವಾಧೀನದಿಂದ ಕೆಳ

ಗೆಲ್ಲಾ ಒತ್ತಾಗಿ ಹುಲ್ಲು ಬೆಳೆದಿದ್ದಕಾರಣ, ಈ ಸವಾರನಿಗೆ ವಿಶೇಷವಾಗಿ

ಪೆಟ್ಟಾಗಲಿಲ್ಲ. ಸುಮತಿಯು ತನಗೆ ಅಪಾಯವಾದೀತೆಂದು ಭಯ

ಪಡದೆ ಇತರರಿಗೆ ಉಪಕಾರಮಾಡುವುದರಲ್ಲಿ ಯಾವಾಗ್ಯೂ ಮನಸ್ಸುಳ್ಳ

ವನಾಗಿದ್ದನು. ಆದಕಾರಣ ಕುದುರೆಯು ಇಕ್ಕಟ್ಟಾದ ಒಂದು ಸಂದಿ.

ನಲ್ಲಿ ನುಗ್ಗಿದ್ದನ್ನು ಕಂಡು, ಸುಮತಿಯು ತನ್ನ ಕೈಯಲಿದ್ದ ಗಂಟನ್ನು 

-------------------------------------------

7] ಸುಮತಿ ಮದನಕುಮಾರರ ಚರಿತ್ರೆ ೭೫.


ಕೆಳಕ್ಕೆ ಎಸೆದು, ಕುದುರೇ ಎದುರಿಗೆ ತಾನು ಹೋಗಿ ನಿಂತು ಅಡ್ಡಹಾಕಿ

ದನು ; ಅದು ನಿಂತುಕೊಂಡಿತು. ಕೂಡಲೇ ಈ ಹುಡುಗನು ಅದರ

ಲಗಾಮನ್ನು ಹಿಡಿದುಕೊಂಡನು. ಸ್ಪಲ್ಪ ಹೊತ್ತಿಗೆ ಇಬ್ಬರು ಮೂರು.

ಜನ ಆಳುಗಳೂ ಮತ್ತೊಬ್ಬ ಸವಾರನೂ ಅಲ್ಲಿಗೆ ಬಂದರು ; ಕೂಡಲೆ

ಕುದುರೇ ಮೇಲಿನಿಂದ ಬಿದ್ದು ರಿಕಾಪಿಗೆ ಕಾಲು ಸಿಕ್ಕಿಕೊಂಡು ಎಳಿಸಿ.

ಕೊಂಡು ಹೋಗುತಿದ್ದ ಮನುಷ್ಯನ ಕಾಲ ತೊಡಕನ್ನು ಬಿಡಿಸಿ, ಮೆಲ್ಲಗೆ.

ಎತ್ತಿ ಕೂರಿಸಿ, ಉಪಚಾರಮಾಡಿದರು. ಅವನೇ ಮಂಜೈಯ ಹೆಗಡೆ. 

ಚೆನ್ನಾಗಿ ಪ್ರಜ್ಞೆ ಬರಲು ಸುತ್ತಲೂ ತಿರುಗಿ ನೋಡಿ ಹೆಗ್ಗಡೆಯು-ಈ

ಹಾಳಕುದುರೆಯನ್ನು ನಿಲ್ಲಿಸಿದವರು ಯಾರು? ಎಂದು ಕೇಳಿದನು.

ಸಮೀಪದಲ್ಲಿದ್ದ ಅವನ ಸ್ಪೇಹಿತನು--ಹೆಗ್ಗಡೆಗಳೆ, ಈ ದಿನ ಬೆಳಗ್ಗೆ

ನೀವು ಯಾರನ್ನು ಚಾವಟಿಯಿಂದ ಬಾಯಿಗೆ ನೀರಕೇಳುವ ಮಟ್ಟಿಗೆ 

ಹೊಡೆದರೋ ಅದೇ ಹುಡುಗನೇ ಕುದುರೆಯನ್ನು ನಿಲ್ಲಿಸಿದವನು ;

ಇಗೋ ಈ ಸುಮತಿ. ಅವನ ಧೈರ್ಯವೂ ಚಮತ್ಕಾರವೂ ನಿಮ್ಮ

ಪುಣ್ಯಕ್ಕೆ ಒದಗಿ ಬರದಿದ್ದರೆ, ನಿಮ್ಮ ಆಶೆ ಇಲ್ಲಿಗೆ ತೀರುತಿತ್ತು, ಎಂದನು.


ಆಗ ಖೂಳನಾದ ಆ ಹೆಗ್ಗಡೆಯ ಮುಖದಲ್ಲಿ ದುಷ್ಟತನದ

ಕ್ರೌರ್ಯವೂ, ಅಹಂಕಾರವೂ, ಹೀನಾಯದಿಂದ ಉಂಟಾದ ನಾಚಿಕೆಯೂ,

ಕಾಣಿಸುತಿದ್ದವು. ತರುವಾಯ ಹೆಗ್ಗಡೆಯು ತನ್ನ ಉಡಿದಾರದ ತಾಯ.

ತಿಯ ತಿರುಪನ್ನು ತಿರುಗಿಸಿ ಎರಡು ಚಿನ್ನದ ಹಣವನ್ನು ತೆಗೆದು ಸುಮತಿ

ಯನ್ನು ನೋಡಿ-ಎಲೋ ಹುಡುಗ, ಹಿಂದೆ ನಡೆದದ್ದು ಹೋಗಲಿ. ನೀನು

ಕುದುರೇ ನಿಲ್ಲಿಸಿದ್ದಕ್ಕಾಗಿ ಈ ಇನಾಮನ್ನು ಹಿಡಿ, ಎಂದು ಅದನ್ನು ಅವ.

ನಿಗೆ ಕೊಡುವುದಕ್ಕೆ ಹೋದರು. ಸುಮತಿಯು ಇದನ್ನು ನೋಡಿ

ಅತ್ಯಂತ ತಿರಸ್ಕಾರಭಾವದಿಂದ ಆ ಕಡೆಗೆ ತಿರುಗಿಕೊಂಡು ಯಾವ

ಮಾತನ್ನೂ ಆಡದೆ, ಕೆಳಗೆ ಬಿದ್ದಿದ್ದ ಬಟ್ಟೇಗಂಟನ್ನು ಹೊತ್ತುಕೊಂಡು

ಮದನನನ್ನೂ ಒಡಗೂಡಿ ಹೊರಟುಹೋದನು.


ಈ ಇಬ್ಬರು ಹುಡುಗರೂ ಮೊದಲು ಚಿಂದೀ ಹಾಕಿಕೊಂಡು

ಬಂದಿದ್ದ ಆ ಬಡ ಹುಡುಗನ ಮೊಟ್ಟೇ ಮನೆಗೆ ಹೋದರು. ಆ ಹುಡು.

ಗನ ತಂದೆಗೆ ಜ್ವರ ಸ್ಪಲ್ಪ ಕಡಮೆಯಾಗಿತ್ತು. ಇವರಿಬ್ಬರೂ ಬರುವುದಕ್ಕೆ

-----------------------------------------------

7೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಮುಂಚೆಯೇ ರಾಮಜೋಯಿಸನೂ ಆ ಒಕ್ಕಲಿಗನ ಮನೆಗೆ ಹೋಗಿ,

ರೋಗಿಗೆ ಸ್ವಲ್ಪ ಔಷಧವನ್ನು ಕೊಟ್ಟು ಹೊರಟು ಹೋಗಿದ್ದನು. ಆಗ

ಮದನನು ತನ್ನ ಪರಿಚಿತನಾದ ಬಡಹುಡುಗನನ್ನು ಕರೆದು--ಎಲಪ್ಪಾ,

ನೀನು ಹಾಕಿಕೊಳ್ಳುವಂಥಾ ಬಟ್ಟೆಯನ್ನು ಈಗ ತಂದು ಇದೇವೆ;

ಇದನ್ನು ನೀನು ಹಾಕಿಕೊಂಡರೆ, “ಮದುವೇಗಂಡು” ಎಂದು ಯಾರೂ

ನಿನ್ನನ್ನು ಕೂಗಲಾರರು; ಇದನ್ನು ಹೊದ್ದುಕೊ, ಎಂದು ಅವನಿಗೆ

ಒಂದು ಪಂಚೆಯನ್ನು ಕೊಟ್ಟಿದ್ದಲ್ಲದೆ, ಅವನ ಮನೇಜನಕ್ಕೆಲ್ಲಾ

ಒಂದೊಂದು ಬಟ್ಟೆಯನ್ನು ಕೊಟ್ಟನು. ಆಗ ಆ ಜನರ ಸಂತೋಷಕ್ಕೆ

ಪಾರವೇ ಇಲ್ಲದೇ ಹೋಯಿತು. ಮನೇಜನರೆಲ್ಲರೂ ಬಂದು ಮದನನಿಗೂ

ಸುಮತಿಗೂ ಅಡ್ಡಬಿದ್ದು ತಮ್ಮ ಕೃತಜ್ಞತೆಯನ್ನು ತೋರಿಸಿದರು.

ಅವರ ಸಂತೋಷವನ್ನೂ ದೈನ್ಯವನ್ನೂ ನೋಡಿ ಮದನನ ಕಣ್ಣಿನಲ್ಲಿ

ಆನಂದಬಾಷ್ಪ ಸುರಿಯಿತು. ಅದೇಪ್ರಕಾರ ಸುಮತಿಗೂ ಆಯಿತು.

ತರುವಾಯ ಅಲ್ಲಿಂದ ಹಿಂತಿರುಗಿ ಮನೆಗೆ ಬರುತ್ತಾ ಮದನನು--

ಸುಮತಿ ಇಷ್ಟು ಸಂತೋಷ ಉಂಟಾಗುವಹಾಗೆ ಹಣವನ್ನು ನಾನು

ಯಾವಾಗಲೂ ವೆಚ್ಚಮಾಡಲಿಲ್ಲ. ನನಗೆ ಇನ್ನು ಯಾವ ಹಣ ದೊರೆ

ತರೂ ಇಂಥಾ ಪರೋಪಕಾರಕ್ಕೋಸ್ಕರವೇ ಕೊಡುತೇನೆಯೇ ಹೊರತು

ತಿಂಡೀ ಸಾಮಾನುಗಳಿಗೂ ಆಟದ ಸಾಮಾನುಗಳಿಗೂ ಖರ್ಚು

ಮಾಡುವುದಿಲ್ಲ, ಎಂದು ಹೇಳಿದನು. ಆಗ ಅವರಿಬ್ಬರೂ ಮನೆಗೆ

ಬಂದರು. ದಾರಿಯಲ್ಲಿ ಸುಮತಿ--ಲೋಕದಲ್ಲಿ ಅವರವರ ಮಟ್ಟಿಗೆ

ಅವರವರು ಕೆಲಸಮಾಡದಿದ್ದರೆ ಅನ್ನ ಸಿಕ್ಕುವುದಿಲ್ಲ.


ಮದನ --ಯಾಕೆ ಸಿಕ್ಕುವುದಿಲ್ಲ? ಧಾನ್ಯ ನೆಲದಲ್ಲಿ ತನ್ನಷ್ಟಕ್ಕೆ

ತಾನೇ ಬೆಳೆಯುವುದಿಲ್ಲವೆ?


ಸುಮತಿ --ಧಾನ್ಯವೇನೋ ನೆಲದಲ್ಲಿ ಬೆಳೆಯುವುದು. ಆದರೆ

ನೆಲವನ್ನು ಉಳಬೇಕು, ಹಸನುಮಾಡಬೇಕು.


ಮದನ--ಉಳುವುದು ಎಂದರೇನು?


ಸುಮತಿ-- ಒಂದು ದೊಡ್ಡ ಮರದ ತುಂಡಿಗೆ ನೊಗವನ್ನು ಕಟ್ಟರು

ವರು. ಅದನ್ನು ಹೊಲಗಳಲ್ಲಿ ಎರಡು ಎತ್ತು ಎಳೆದುಕೊಂಡು ಹೋಗು

ವುದನ್ನು ನೋಡಿಲ್ಲವೆ? 

----------------------------------

೭] ಸುಮತಿ ಮದನಕುಮಾರರ ಚರಿತ್ರೆ ೭೭


ಮದನ--ಹವುದು, ನೋಡಿದೇನೆ, ಅದೆಯೋ ಉಳುವುದು?


ಸುಮತಿ--ಹಾಗೆ ಉದ್ದವಾದ ಮರದ ತುಂಡಿಗೆ ನೇಗಿಲೆಂದು 

ಹೆಸರು. ನೇಗಿಲಿನ ಹಿಂಭಾಗದಲ್ಲಿ ಕೆಳಗಡೆ ಮೊನೆಯಾಗಿರುವ ಕಬ್ಬಿ 

ಣದ ಗುಳ ಪೆಟ್ಟಿರುವುದು. ಅದಕ್ಕೆ ಮೇಲುಭಾಗದಲ್ಲಿ ಉದ್ದವಾದ

ಒಂದು ಗೂಟವಿರುವುದು. ಮನುಷ್ಯನು ಆ ಗೂಟವನ್ನು ಬಲವಾಗಿ

ಒತ್ತಿ ಹಿಡಿದುಕೊಂಡು ಎತ್ತುಗಳನ್ನು ಮುಂದಕ್ಕೆ ಹೊಡೆದರೆ, ನೆಲವು

ಉದ್ದಕ್ಕೂ ಅಗೆದಹಾಗೆ ಆಗುವುದು. ಅದೇ ಉಳುವುದು. ಮೊದಲು.

ಉತ್ತ ಸ್ಥಳದ ಹತ್ತಿರಲೇ ಮತ್ತೆ ಉಳಬೇಕು. ಹೀಗೆ ಭೂಮಿಯನ್ನೆಲ್ಲಾ

ಉತ್ತು, ಮಣ್ಣು ತಳಮೇಲನಾದ ತರುವಾಯ ಬೀಜವನ್ನು ಚೆಲ್ಲುವರು.

ಆ ಮೇಲೆ ಹರತೇ ಹೊಡೆಯುವರು, ಸ್ವಲ್ಪದಿವಸದಲ್ಲಿ ಮೊಳಕೆ ಹೊರಟು

ಗಿಡವಾಗುವುದು.


ಮದನ-- ಹಾಗಾದರೆ ಬಹು ಆಶ್ಚರ್ಯಕರವಾಗಿದೆ. ನಾನೂ

ಸ್ವಲ್ಪ ಬೀಜವನ್ನು ಹಾಕಿ ಅದು ಹೇಗೆ ಗಿಡವಾಗುವುದೊ, ನೋಡಬೇಕು.


ಸುಮತಿ--ಹವುದು ಆಶ್ಚರ್ಯಕರವೇ ಸರಿ... ನೀನು ನಾಳೆ

ಭೂಮಿಯನ್ನು ಅಗೆದು ಹಸನುಮಾಡಿಕೊಂಡಿದ್ದರೆ ನಾನು ಬೀಜವನ್ನು

ತಂದುಕೊಡುತ್ತೇನೆ. ಅದನ್ನು ಹಾಕಿ ನೀನು ನೋಡುವೆಯಂತೆ --

ಹೀಗೆ ಮಾತನಾಡಿಕೊಂಡು ಇಬ್ಬರು ಹುಡುಗರೂ ಮರೆಗೆ ಹೋದರು. 


ಮಾರನೇದಿನ ಪ್ರಾತಃಕಾಲದಲ್ಲಿ ಮದನನು ಎದ್ದು ಹೊಲಕ್ಕೆ

ಹೋಗಿ ಸ್ವಲ್ಪಭೂಮಿಯನ್ನು ಕಷ್ಟ ಪಟ್ಟು ಅಗೆದು, ಮಧ್ಯಾನ್ನ ದವರೆಗೂ

ಶ್ರಮಪಟ್ಟು, ಮನೆಗೆ ಬಂದು, ಜೋಯಿಸನನ್ನು ಕಂಡು--ಜೋಯಿಸರೆ,

ಧಾನ್ಯ ಬೆಳೆಯಬೇಕೆಂದು ಹೊಲದಲ್ಲಿ ಇದುವರೆಗೂ ನಾನು ಕೆಲಸ.

ಮಾಡಿದೆ, ಆದ್ದರಿಂದ ನಾನು ಒಳ್ಳೇಹುಡುಗನಲ್ಲವೆ? ಎಂದು ಕೇಳಿದನು.


ಜೋಯಿಸ--ಅದು ಹಾಗಿರಲಿ, ನೀನು  ಬೆಳೆದ ಧಾನ್ಯವನ್ನು

ಹೇಗೆ ಉಪಯೋಗಿಸುತೀಯೋ ಅದರ ಮೇಲೆ ನೀನು ಒಳ್ಳೆಯವನು

ಕೆಟ್ಟವನು ಎಂಬ ಸಂಗತಿಯನ್ನು ತೀರ್ಮಾನಿಸಬೇಕಾಗಿದೆ. ಅದನ್ನು

ನೀನು ಏನಮಾಡಬೇಕೆಂದು ಯೋಚಿಸಿದ್ದೀಯೆ? 


ಮದನ-- ಇದರಲ್ಲಿ ಬತ್ತವನ್ನು ಬೆಳೆದು ಅನ್ನವನ್ನು ಮಾಡಿ.

ತಿನ್ನ ಬೇಕೆಂದು ಯೋಚಿಸಿದೇನೆ. 

--------------------------------------------

೭೮ ಸುಮತಿ ಮದನಕುಮಾರರ ಚಂತ್ರೆ [ಅಧ್ಯಾಯ


ಜೋಯಿಸ-- ನೀನೇ ಬಿತ್ತಿ ಬೆಳೆದುದನ್ನು ನೀನೇ ತಿನ್ನುವಂಥಾ

ಒಳ್ಳೇತನ ನಿನ್ನಲ್ಲಿ ಎಲ್ಲಿತರೋಣ? ಇತರ ಜನರೇನೋ ಹಾಗೆಯೇ

ಮಾಡಿಕೊಂಡಿದಾರೆ. ಹಾಗೆ ಅವರು ಮಾಡದೇ ಇದ್ದರೆ ಹೊಟ್ಟೆಗೆ

ಇಲ್ಲದೇ ಸಾಯಬೇಕಾಗುವುದು.


ಮದನ--ಅಂಥಾವರೆಲ್ಲಾ ಏನು ದೊರೆಮಕ್ಕಳೋ?


ಜೋಯಿಸ--ದೊರೆಮಕ್ಕಳು ಇತರರ ಹಾಗೆಯೇ ಅನ್ನಾ 

ತಿನ್ನುವುದಿಲ್ಲವೆ? ಇತರರು ಹೇಗೆ ಅನ್ನಕ್ಕಾಗಿ ಶ್ರಮಪಡುತಾರೆಯೋ

ಅದನ್ನು ದೊರೆ ಮಕ್ಕಳು ತಿಳಿದುಕೊಳ್ಳತಕ್ಕದ್ದು ಅಗತ್ಯವಲ್ಲವೆ?


ಮದನ--ದೊರೆಮಕ್ಕಳಿಗೆ ಆಳುಗಳಿದಾರೆ; ಅವರು ಬೆಳೆದು

ತಂದುಹಾಕುತಾರೆ. ನಮಗೋಸ್ಕರ ನಮ್ಮ ಹಳೇಪೈಕದವರು ಕೆಲಸ 

ಮಾಡುವುದಿಲ್ಲವೆ?


ಜೋಯಿಸ--ಅವರು ನಿಮಗೋಸ್ಕರ ಯಾಕೆ ಕೆಲಸಮಾಡುತಾರೆ?


ಮದನ --ನಾವು ಅವರಿಗೆ ಕೂಲಿ ಕಂಬಳಾ ಕೊಡುತೇವೆ;

ಅದಕ್ಕೋಸ್ಕರ.


ಜೋಯಿಸ--ಅವರಿಗೆ ಕೂಲಿ ಕಂಬಳಾ ಕೊಡಬೇಕಾದರೆ

ಮುಂಚಿತವಾಗಿ ಹಣವಿರಬೇಕಷ್ಟೆ? ಹಣಕ್ಕೆ ಗತಿ ಇಲ್ಲದವರು ತಾವೇ

'ವ್ಯವಸಾಯಮಾಡಿಕೊಂಡು ಧಾನ್ಯವನ್ನು ಬೆಳೆದುಕೊಳ್ಳ ಬೇಕಷ್ಟೆ ?


ಮದನ--ಹವುದು,


ಜೋಯಿಸ... ದೊರೆಮಕ್ಕಳ ಹತ್ತರ ಯಾವಾಗ್ಯೂ ಹಣನಿರು

ವುದೊ?


ಮದನ--ಒಂದೊಂದುವೇಳೆ ಇಲ್ಲದೇ ಇರುವುದೂ ಉಂಟು.


ಜೋಯಿಸ--ಅಂಥಾ ವೇಳೆಯಲ್ಲಿ ಧಾನ್ಯವನ್ನು ಸಂಪಾದಿಸುವುದ

ಕ್ಕಾಗಿ ದೊರೆಮಕ್ಕಳು ತಾವೇ ಕೆಲಸಮಾಡಬೇಕಾಗಿ ಬರುತ್ತೆಯೋ

ಇಲ್ಲವೊ?


ಮದನ-- ಹವುದು.


ಜೋಯಿಸ--ಇದು ಹಾಗಿರಲಿ.  ಮೊನ್ನೆ ನಾನು ಒಂದು ಕಥೆ

ಯನ್ನು ಓದಿದೆ, ಬೇಕಾದರೆ ನಿನಗೆ ಅದನ್ನು ಹೇಳುತೇನೆ ಕೇಳು.

------------------------------------------------

7] ಸುಮತಿ ಮದನಕುಮಾರರ ಚರಿತ್ರೆ 79 


ಇಬ್ಬರು ಅಣ್ಣ ತಮ್ಮಂದಿರು


ಹಿಸ್ಪವೆಂಬ ಪಟ್ಟಣದಲ್ಲಿ ಅಣ್ಣ ತಮ್ಮಂದಿರಾದ ಇಬ್ಬರು ಒಡ್ಡರಿ

ದ್ದರು. ಅಣ್ಣನ ಹೆಸರು ಬೀರಾಬೋಯಿ, ತಮ್ಮನ ಹೆಸರು ಮಾರಾ

ಬೋಯಿ. ಇವರಿದ್ದ ಊರಿಗೆ ೫೦ ಗಾವುದ ದೂರದಲ್ಲಿ ಒಂದು ಕಾಡಿತ್ತು.

ಆ ಕಾಡಿನಲ್ಲಿ ಚಿನ್ನ ಸಿಕ್ಕುವುದೆಂತಲೂ ಅಲ್ಲಿಗೆ ಹೋಗಿ ಚಿನ್ನವನ್ನು

ಅಗೆದು ತಂದು ಅನೇಕರು ಐಶ್ವರ್ಯವಂತರಾದರೆಂತಲೂ ವದಂತಿ

ಹರಡಿಕೊಂಡಿತ್ತು. ಇದನ್ನು ಕೇಳಿ ತಮ್ಮನಾದ ಮಾರಾಬೋಯಿಗೆ

ಆಶೆ ಹುಟ್ಟಿತು. ತಾನೂ ಆ ಕಾಡಿಗೆ ಹೋಗಿ ಚಿನ್ನವನ್ನು ಅಗೆದು

ತಂದು ಐಶ್ವರ್ಯವನ್ನು ಪಡೆಯಬೇಕೆಂದು ಮಾರನು ನಿಶ್ಚೈಸಿ

ಕೊಂಡನು. ಈ ಅಣ್ಣ ತಮ್ಮಂದಿರಿಬ್ಬರಿಗೂ ಪರಸ್ಪರ ವಿಶೇಷವಾಗಿ

ಪ್ರೇಮವಿದ್ದ ಕಾರಣ, ಒಬ್ಬನು ಇನ್ನೊಬ್ಬರಿಗೆ ಹೇಳದೇ ಯಾವ ಕೆಲಸ

ವನ್ನೂ ಮಾಡುತಿರಲಿಲ್ಲ. ಅದೇ ಪ್ರಕಾರ ತಮ್ಮನು ಒಂದು ದಿನ ಅಣ್ಣ

ನನ್ನು ಕುರಿತು--ಅಣ್ಣ, ನಾವು ಎಷ್ಟು ಕೆಲಸವನ್ನು ಮಾಡಿದರೂ

ಬರುವ ಕೂಲಿ ಹಿಟ್ಟಿಗೆ ಆದರೆ ಬಟ್ಟೆಗೆ ಇಲ್ಲ, ಬಟ್ಟೆಗೆ ಆದರೆ ಹಿಟ್ಟಿಗೆ

ಇಲ್ಲ, ಎನ್ನುವಹಾಗೆ ಇದೆಯೇ ಹೊರತು, ಕೈಕಾಲು ಮೆತ್ತಗಾಗಿ ಎರಡು

ದಿನ ಮನೆಯಲ್ಲಿ ಮಲಗಿಕೊಂಡರೆ ಮುರಿಸಿಕೊಂಡು ತಿನ್ನುವುದಕ್ಕೆ

ಮೂರುದುಡ್ಡಿಗೂ ಮಾರ್ಗವಿಲ್ಲ. ಇಂಥಾ ಬಡತನವನ್ನು ನಾವು ಎಷ್ಟು

ದಿವಸ ಅನುಭವಿಸಿದರೂ ಅದು ಸಮೆಯುವುದಿಲ್ಲ. ಆದಕಾರಣ ನಮ್ಮ

ದಾರಿದ್ರ್ಯವನ್ನು ಹೋಗಲಾಡಿಸಿಕೊಳ್ಳು ವುದಕ್ಕೆ ನಾನು ಒಂದು ಉಪಾಯ

ವನ್ನು ಹುಡುಕಿದೇನೆ. ನಾನು ೮--೧೦ ಜನ ಆಳುಗಳನ್ನು ಜೊತೆ

ಮಾಡಿಕೊಂಡು ಕಸವರ ಗುಡ್ಡದ ಕಾಡಿಗೆ ಹೋಗಿ ಅಲ್ಲಿ ಚಿನ್ನದ ಗಣಿ

ಯನ್ನು ಅಗೆದು ತೆಗೆದುಕೊಂಡು ಬಂದು ಹಣವಂತನಾಗಬೇಕೆಂದು

ಯೋಚಿಸಿಕೊಂಡಿದೇನೆ. ಆದರೆ ಈ ದೊಡ್ಡ ಕೆಲಸಕ್ಕೆ ಅನುಭವಶಾಲಿ

ಯಾದ ನಿನ್ನ ಸಹಾಯವಾಗಬೇಕು. ನೀನು ಏನಹೇಳುತೀಯೆ?

ಎಂದು ಕೇಳಿದನು.


ಅಣ್ಣನಾದ ಬೀರಾಬೋಯಿಯು ವಿಶೇಷ ಆಶೆಪಾತಕನಲ್ಲದೆ,

ದೇವರು ಕೊಟ್ಟದ್ದರಲ್ಲಿ ತೃಪ್ತಿ ಪಟ್ಟುಕೊಂಡು ಇರತಕ್ಕ ಸ್ವಭಾವವುಳ್ಳ 

------------------------------------------

80 ಸುಮತಿ ಮದನಕುಮಾರತ ಚರಿತ್ರೆ [ಅಧ್ಯಾಯ 


ವನು. ಇವನು ಮಾರಾಬೋಯಿಯ ಮಾತನ್ನು ಕೇಳಿ, ತನ್ನ ಮನಸ್ಸಿ

ನಲ್ಲಿ ಸ್ವಲ್ಪ ಹೊತ್ತು ಯೋಚಿಸಿಕೊಂಡು, ತರುವಾಯ ಮಾರನನ್ನು

ಕುರಿತು ಅವನ ಪ್ರಯತ್ನ ಸಾಗುವುದಕ್ಕೆ ಇರತಕ್ಕ ಕಷ್ಟಗಳನ್ನು ಹೇಳಿ

ದನು. ಎಷ್ಟೆಷ್ಟು ಬಗೆಯಲ್ಲಿ ಹೇಳಿದರೂ ತಮ್ಮ ಒಪ್ಪದೆ ಮುರಾಡ

ಹಾಕಿಕೊಂಡು ಕೂತನು. ಆಗ ಬೀರನು-- ತಮ್ಮ! ಎಷ್ಟು ಹೇಳಿದರೂ

ನೀನು ಕೇಳುವುದಿಲ್ಲ. ಚಿಂತೆ ಇಲ್ಲ; ನೀನು ಹೇಳಿದ ಪ್ರಕಾರವೇ

ನಡೆಯಲಿ; ನಿನ್ನ ಮನಸ್ಸು ಸಮಾಧಾನವಾಗಿರುವುದಕ್ಕಾಗಿ ನಿನ್ನ

ಸಂಗಡ ನಾನೂ ಬರುತೇನೆ. ಆದರೆ ನೀನೂ ನಿನ್ನ ಕಡೇ ಜನರೂ ಅಗೆದು

ತೆಗೆದ ಚಿನ್ನದಲ್ಲಿ ನನಗೆ ರವೆಯಷ್ಟೂ ಬೇಡ. ನನ್ನ ಸಂಪಾದನೆ ನಿನಗೆ 

ಬೇಡ, ಹೇಗಿದ್ದರೂ ನಿನ್ನ ಸಾಮಾನುಗಳನ್ನು ಹೇರಿಕೊಂಡು ಹೋಗು

ವುದಕ್ಕೆ ೩-೪ ಗಾಡಿಗಳನ್ನು ನೀನು ಮಾಡಿಕೊಂಡು ಹೋಗಬೇಕಷ್ಟೆ.

ಅದರ ಮೇಲೆ ನನ್ನ ಕೆಲವು ಸಾಮಾನುಗಳನ್ನೂ ಹೇರಿಕೊಂಡು

ಹೋಗುವಹಾಗೆ ನೀನು ಮಾಡಿಸಿಕೊಟ್ಟರೆ ಸಾಕು ಎಂದು ನುಡಿದನು.


ಅಣ್ಣ ತಮ್ಮಂದಿರಿಬ್ಬರೂ ಇದಕ್ಕೆ ಒಪ್ಪಿದರು. ಮಾರನು ತನ್ನ

ಮನೆಯಲ್ಲಿದ್ದ ಕುಡಿಕೆ ಮಡಕೆಗಳ ಸಹಿತವಾಗಿ ಮಾರಿ, ಮನೆಗುದ್ದಲಿ, 

ಎಲೆಗುದ್ದಲಿ, ಕಲ್ಲುಳಿ, ಚಿಮ್ಮಟಿಗೆ, ಕುಕ್ಕೆಗಳು, ಹಗ್ಗ ಮಚ್ಚು ಕತ್ತಿ,

ಕೊಡಲಿ, ಕುಡಗೋಲು, ಮೊದಲಾದ ಆಯುಧಗಳನ್ನು ಸಜ್ಜುಮಾಡಿ

ಕೊಂಡು ನಾಲ್ಕು ಗಾಡಿಯನ್ನು ಮಾಡಿ ಸಾಮಾನೆಲ್ಲನನ್ನೂ ಅವುಗಳ

ಮೇಲೆ ಹಾಕಿಕೊಂಡು ಹತ್ತು ಜನ ಆಳುಗಳನ್ನು ಕರೆದುಕೊಂಡು

ಹೊರಟನು. ಬೀರನಾದರೋ ಗುದ್ದಲಿ, ನೇಗಿಲು, ಕಳೆಕೊಕ್ಕೆ ಮೊದ

ಲಾದ ವ್ಯವಸಾಯಕ್ಕೆ ಅನುಕೂಲವಾದ ಆಯುಧಗಳನ್ನೂ ನಾಲ್ಕಾರು 

ಕಾಲುನಡೆಗಳನ್ನೂ ತರಹೇವಾರಿ ಬೀಜಗಳನ್ನೂ ತೆಗೆದುಕೊಂಡು

ಹೊರಟನು. ತಮ್ಮನಾದ ಮಾರನು ಮುಂಚಿತವಾಗಿಯೇ ಒಪ್ಪಿಕೊಂಡಿ

ದ್ದಂತೆ ಅಣ್ಣನ ಸಾಮಾನುಗಳನ್ನು ತನ್ನ ಗಾಡಿಯ ಮೇಲೆ ಹಾಕಿ

ಕೊಂಡು ಪ್ರಯಾಣ ಮಾಡಿದನು. ಕಸವರಗುಡ್ಡದ ಕಾಡು ಸಮೀಪಿ

ಸಿತು. ಅದರ ಹತ್ತಿರ ಹತ್ತಿರಕ್ಕೆ ಹೋದಹಾಗೆಲ್ಲಾ ಮಾರನ ಆಶೆಯೂ

ಕುತೂಹಲವೂ ಹೆಚ್ಚಾದವು. ಈ ವನಪ್ರದೇಶವಾದ ಕೂಡಲೆ ಬೀರಾ 

----------------------------------------------

7] ಸುಮತಿ ಮದನಕುಮಾರರ ಚರಿತ್ರೆ ೮೧ 


ಬೋಯಿಯು ಸುತ್ತ ಮುತ್ತ ನೋಡಿ ಭೂಗುಣ ಅಲ್ಲಿ ಚೆನ್ನಾಗಿದೆ

ಎಂದು ತಿಳಿದು, ಮಾರನನ್ನು ಕುರಿತು--ತಮ್ಮಾ; ಇನ್ನು ನಾನು

ಮುಂದಕ್ಕೆ ಬರಲಾರೆ, ನನ್ನ ಸಾಮಾನುಗಳನ್ನು ಈಚೆಗೆ ತೆಗೆದು

ಕೊಟ್ಟು ನೀವು ಮುಂದಕ್ಕೆ ಪ್ರಯಾಣಮಾಡಿ, ಚಿನ್ನ ಸಿಕ್ಕುವ ಕಸವರ

ಗುಡ್ಡ ಇನ್ನೂ ಹತ್ತು ಗಾವುದದ ಮೇಲಿದೆ. ನೀವೆಲ್ಲಾ ಹೋಗಿಬರುವ

ತನಕ್ಕ ನಾನು ಇಲ್ಲಿಯೇ ಇರುತೇನೆ, ಎಂಬದಾಗಿ ಹೇಳಿ ತನ್ನ

ಸಾಮಾನುಗಳನ್ನು ಈಚೆಗೆ ತೆಗೆದುಕೊಂಡು, ಹಿಂದೆ ನಿಂತನು; ತಮ್ಮ

ಎಷ್ಟು ಹೇಳಿದರೂ ಕೇಳಲಿಲ್ಲ; ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ

ಇಡಲಿಲ್ಲ.


ಆಗ, ಮಾರಾಬೋಯಿಯು ಅಣ್ಣನನ್ನ ಹೆಚ್ಚಾಗಿ ಬಲವಂತ

ಮಾಡಲಾರದೆ ಮನಸ್ಸಂಕೋಚಮಾಡಿಕೊಂಡು, ತನ್ನ ಸಾಮಾನು

ಗಳನ್ನೂ ಜನರನ್ನೂ ಮುಂದಕ್ಕೆ ಸಾಗಿಸಿಕೊಂಡು ಹೋಗುತಾ ಅವ

ರಲ್ಲಿ ಒಬ್ಬನನ್ನು ಕುರಿತು--ನಮ್ಮಣ್ಣನಲ್ಲಿ ನನಗೆ ಎಷ್ಟೋ ಮರ್ಯಾದೆ

ಇತ್ತು. ಈಗ ಆತನ ನಡತೆಯನ್ನು ಕಂಡು ಮನಸ್ಸಿಗೆ ಬಹು ಅಸಮಾ

ಧಾನವಾಗಿದೆ. ನಾವು ಮಾಡತಕ್ಕ ಮಹಾಪ್ರಯತ್ನಕ್ಕೆ ತಾನು ಸಹಾಯ

ಮಾಡಿ ಐಶ್ವರ್ಯನ್ನು ಸಂಪಾದಿಸಿ ಸುಖವಾಗಿರುವದನ್ನು ಬಿಟ್ಟು,

ಹೆಂಗಸರಹಾಗೆ ಹಠವನ್ನು ಮಾಡಿ ಹಿಂದೆ ನಿಂತುಕೊಂಡು ಇದಾನೆ.

ಇದು ಯಾವ ಕಾರ್ಯವನ್ನು ಸಾಧನೆಮಾಡುವುದಕ್ಕೋ ಗೊತ್ತಾಗ

ಲಿಲ್ಲ. ಆತನ ಮನಸ್ಸಿಗೆ ಬಂದಹಾಗೆ ಮಾಡಲಿ. ನಾವು ಯತ್ನಿಸಿದ

ಕಾರ್ಯವನ್ನು ಸಾಧಿಸಿ, ಸಾಹಸಮಲ್ಲರೆನಿಸಿಕೊಳ್ಳೋಣ, ಹಿಂತೆಗೆಯ

ಬಾರದು, ಎಂದು ಜೊತೆಗಾರರಿಗೆ ಪ್ರೋತ್ಸಾಹಿಸುತಾ ಮುಂದಕ್ಕೆ

ಹೊರಟನು. ಹೋಗು ಹೋಗುತಾ ಗಾಡಿ ಹೋಗುವುದಕ್ಕೆ ದಾರಿಯೇ

ಇರಲಿಲ್ಲ. ಅನೇಕ ಜಾತಿ ಮರಗಳು ಹೆಜ್ಜೆ ಹೆಜ್ಜೆಗೂ ಬೆಳೆದು ಗಗನಕ್ಕೆ

ಹೋಗಿದ್ದವು. ಕೆಳಗೆಲ್ಲಾ ಕಾಲಿಡುವುದಕ್ಕೆ ಜಾಗವಿಲ್ಲದೆ ಮುಳ್ಳು

ಪೊದೆಗಳು ಬೆಳೆದಿದ್ದವು. ಇವುಗಳನ್ನು ಕಡಿದು ಅಲ್ಲಲ್ಲಿ ದಾರಿಯನ್ನು

ಸಮಮಾಡಿಕೊಂಡು ಮುಂದಕ್ಕೆ ಹೊರಟರೆ, ಕಾಡೆಮ್ಮೆ ಮುಳ್ಳ ಹಂದಿ

ಮುಂತಾದ ಕೆಟ್ಟ ಮೃಗಗಳು ಅಲ್ಲಲ್ಲಿ ಇವರ, ಗಾಡೀ ಎತ್ತುಗಳನ್ನು

---------------------------------------------

 ೮೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 

  

ಒಂದೊಂದಾಗಿ ಎಳೆದುಕೊಂಡು ಹೋಗುತಾಬಂದವು, ಹೀಗೆ ಶ್ರಮ

ಪಟ್ಟುಕೊಂಡು ಬೆಟ್ಟವನ್ನು ಹತ್ತಿ, ಹಳ್ಳವನ್ನು ಇಳಿದು, ನದಿಗಳನ್ನು

ದಾಟಿ, ಅನ್ನ ನೀರಿಲ್ಲದೆ ಆಯಾಸಪಟ್ಟು, ಕೊನೆಗೆ ಇವರೆಲ್ಲರೂ ಕಸವರ

ಗುಡ್ಡವನ್ನು ತಲಪಿದರು. ಅಲ್ಲಿ ವಿಶೇಷವಾಗಿ ಅಗೆದು ಹುಡುಕಲು

ಚಿನ್ನದ ಅದಿರುಗಳು ಅನೇಕವಾಗಿ ಸಿಕ್ಕಿದವು. ಅದೆಲ್ಲವನ್ನೂ ಈಚೆಗೆ

ತೆಗೆದು ಹೊತ್ತುಕೊಂಡು ಊರಿಗೆ ಬರಬೇಕೆಂದು ನಿಶ್ಚೈಸಿದರು. ಅಷ್ಟು

ಹೊತ್ತಿಗೆ, ಇವರ ಸಂಗಡ ತೆಗೆದುಕೊಂಡು ಹೋಗಿದ್ದ ಸಾಮಾನುಗಳೆಲ್ಲಾ

ಮುಗಿದು ಎರಡು ಮೂರು ದಿವಸದಿಂದಲೂ ಪೇಚಾಡಿಹೋದರು.

ಕೆಲವರು ಹಸಿವಿನಿಂದಲೂ, ಕೆಲವರು ರೋಗದಿಂದಲೂ ಸತ್ತುಹೋಗಿ

ಇಬ್ಬರು ಮೂರು ಜನ ಮಾತ್ರ ಉಳಿದರು. ಈ ಜನರೂ ಮಾರನೂ

ಚಿನ್ನದ ಅದಿರುಗಳನ್ನು ಹೊತ್ತುಕೊಂಡು ಹಿಂತಿರುಗಿ ಬಹು ಶ್ರಮದಿಂದ

ಬೀರಾಬೋಯಿ ಇದ್ದ ಸ್ಥಳಕ್ಕೆ ಬಂದು ಸೇರಿದರು.


ಅತ್ತ ತಮ್ಮನ ಸಂಗಡ ಮುಂದಕ್ಕೆ ಹೊರಡುವುದಿಲ್ಲವೆಂದು ಹೇಳಿ

ಕಸವರಗುಡ್ಡದ ಕಾಡಿನ ಮುಂಭಾಗದಲ್ಲಿಯೇ ಉಳಿದುಕೊಂಡ ಬೀರಾ

ಬೋಯಿಯು ಅಲ್ಲಿದ್ದು ಒಂದು ಮರದ ಕೆಳಗೆ ಗುಡಿಸಲನ್ನು ಹಾಕಿ

ಕೊಂಡು ಇರುತ್ತಾ ಅಲ್ಲಿ ಸ್ವಲ್ಪ ಭೂಮಿಯನ್ನು ಅಗೆದು, ವ್ಯವಸಾಯ

ಮಾಡಿ, ತಾನು ತೆಗೆದುಕೊಂಡು ಹೋಗಿದ್ದ ಬಗೆಬಗೆ ಬೀಜಗಳನ್ನು ಬಿತ್ತಿ

ತರಕಾರಿಯನ್ನು ಬೆಳೆದು ತುಂಬಿಕೊಂಡು ಇದ್ದನ್ನು ಮತ್ತು ತನ್ನ

ಸಂಗಡ ತೆಗೆದುಕೊಂಡು ಹೊಗಿದ್ದ ಕುರಿಗಳೂ ಮೇಕೆಗಳೂ ಬಹಳ

ಮರಿಯನ್ನು ಹಾಕಿ ವೃದ್ಧಿ ಯಾದವು, ದನಗಳೂ ಕರುಗಳನ್ನು ಹಾಕಿ

ಇದೇ ರೀತಿಯಲ್ಲಿ ಹೆಚ್ಚಿದವು. ಈ ಕರಾವಿನಿಂದ ಹಾಲು, ಮೊಸರು

ಬೆಣ್ಣೆ, ತುಪ್ಪ, ಮೊದಲಾಗಿ ಸಮೃದ್ಧಿಯಾಗಿತ್ತು.


ಮಾರಾಬೋಯಿಯು ಅಣ್ಣನ ಬಿಡಾರಕ್ಕೆ ಬಂದು-ಅಣ್ಣ, ನಾವು

ಹೋದ ಅಷ್ಟು ಜನರಲ್ಲಿ ಕಳೆದುಳಿದು ನಾವು ೩ ಜನ ಮಾತ್ರ ನಿಂತೆವು.

ಉಳಿದವರೆಲ್ಲಾ ರೋಗದಿಂದಲೂ ಹಸಿವುಬಾಯಾರಿಕೆಯಿಂದಲೂ,  ದೇಹ

ಶ್ರಮದಿಂದಲೂ, ಸತ್ತುಹೋದರು. ನಾವೂ ಸಹಿತ ಹೊಟ್ಟೆಗೆ ಕಾಣದೆ

ಇಂದಿಗೆ ೩-೪ ಉಪವಾಸವನ್ನು ಮಾಡಿಕೊಂಡು ಬಂದಿದೇವೆ. ಮೊದಲು 

--------------------------------------------

7] ಸುಮತಿ ಮದನಕುಮಾರರ ಚರಿತ್ರೆ ೮೩ 


ನಮಗೆ ಅನ್ನವನ್ನು ಹಾಕಿಸು, ನಡೆದ ಸಂಗತಿಯನ್ನೆಲ್ಲಾ ಆಮೇಲೆ

ವಿಸ್ತಾರವಾಗಿ ಹೇಳುತೇನೆ ಎಂದು ನುಡಿದನು.


ಆಗ ಬೀರನು--ತಮ್ಮಯ್ಯ, ಮೊದಲು ನಾನೂ ನೀನೂ ಊರ

ಬಿಟ್ಟು ಹೊರಡುವಾಗ ನಿನ್ನ ಸಂಪಾದನೆ ನನಗೆ ಬೇಡ,  ನನ್ನ ಸಂಪಾ

ದನೆ ನಿನಗೆ ಬೇಡವೆಂದು ಒಡಂಬಡಿಕೆಯನ್ನು ಮಾಡಿಕೊಂಡದ್ದು ನಿನಗೆ 

ಜ್ಞಾಪಕವಿದೆಯೆ? ಆ ಪ್ರಕಾರ ಈಗಲೂ ನಾವು ನಡೆದುಕೊಳ್ಳ ಬೇಕಾ

ಗಿದೆ. ಆದಕಾರಣ ನಾನು ಸಂಪಾದನೆ ಮಾಡಿದ ತಿಂಡೀಸಾಮಾನು

ಗಳನ್ನು ನಿನಗೆ ನಾನು ಸುಮ್ಮನೇ ಕೊಡುವುದಿಲ್ಲ. ಇದನ್ನು ಖಂಡಿತ

ವಾಗಿ ತಿಳಿ, ಎಂದು ಹೇಳಿದನು. ಚಿನ್ನದ ಅದಿರುಗಳನ್ನೇ ತಂದು

ಹಾಕಿಕೊಂಡಿದ್ದ ಮಾರನು ಲಕ್ಷ್ಯವಿಲ್ಲದೆ--ಅಣ್ಣ, ಹಾಗೇ ಆಗಲಿ.

ನೀನು ನಮಗೆ ಹಾಕುವ ಅನ್ನಕ್ಕೆ ಬದಲಾಗಿ ಚಿನ್ನವನ್ನು ತೆಗೆದುಕೊ,

ಇದರಮೇಲೆ ನಿನ್ನ ಹಂಗೇನು? ಎಂದು ಧಿಕ್ಕರಿಸಿ ಮಾತನಾಡಿ ನಿತ್ಯವೂ

ಬೀರಾಬೋಯಿ ಮನೆಯಲ್ಲಿ ಊಟಮಾಡುತಾ, ಆಯಾ ದಿವಸಕ್ಕೆ

ತಕ್ಕಷ್ಟು ಚಿನ್ನವನ್ನು ಅವನಿಗೆ ವಾರಡಿಯಾಗಿ ಕೊಡುತಾ ಅಲ್ಲಿಯೇ

೧-೨ ತಿಂಗಳು ಇದ್ದು ಆರಯ್ಕೆ ಮಾಡಿಕೊಂಡು ಚೇತರಿಸಿಕೊಂಡನು.

ಇವನು ತಂದಿದ್ದ ಚಿನ್ನವೆಲ್ಲಾ ಮುಗಿದು ಹೋಯಿತು, ಕೈ ಬರಿದಾಯಿತು.

ಅಣ್ಣನು ಹಾಕಿದ ೩ ದಿವಸದ ಅನ್ನ ಇನನ ಮೇಲೆ ಬಾಕಿ ನಿಂತಿತು.

ಹಣವನ್ನಾಗಲಿ ಚಿನ್ನವನ್ನಾಗಲಿ ಕೊಡು, ಕೊಡು, ಎಂದು ಬೀರನು

ವರಾತುಮಾಡುತಿದ್ದನು. ಆಗ ತಮ್ಮನು ತನ್ನ ಸ್ಥಿತಿಯನ್ನು ನೋಡಿ

ಕೊಂಡು ದುಃಖಪಡುತಾ--ಅಯ್ಯೋ, ನನ್ನ ಹಣೆಯಲ್ಲಿ ಹೀಗೆ ಬರೆ

ಯಿತು. ನಾನು ಶ್ರಮಪಟ್ಟು ಸಂಪಾದಿಸಿದ ಚಿನ್ನದಲ್ಲಿ ವೀಸತೂಕವೂ

ನನಗೆ ಇಲ್ಲದಹಾಗಾಯಿತು. ಒಡಹುಟ್ಟಿದ ಅಣ್ಣ ಸಹಿತವಾಗಿ ನನಗೆ

ಶತ್ರುವಾದ, ಮೊದಲೆಲ್ಲಾ ನಯವಾಗಿ ಮಾತನಾಡಿಕೊಂಡಿದ್ದು ಇಂಥಾ

ಸಮಯದಲ್ಲಿ ಕೆಲಸ ಕೊಟ್ಟ. ತಾನು ೮ ದಿವಸ ನನಗೆ ಅನ್ನ ಹಾಕಿದ.

ನನ್ನ ಕಷ್ಟಾರ್ಜನೆಯನ್ನೆಲ್ಲಾ ಕಿತ್ತುಕೊಂಡು ನನ್ನನ್ನು ಕಾಡಪಾಲು

ಮಾಡಿದ, ಇವ ಎಂಥಾ ಅಣ್ಣ? ದಾಯಾದಿ ಮತ್ಸರವನ್ನು ಹೀಗೆ

ತೀರಿಸಿಕೊಂಡ ಅವನ್ನ ಬದುಕಲಿ. ನಾನು ದೇಶಾಂತರಗತನಾಗಿ ಹೋಗಿ 

--------------------------------------

೮೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಪ್ರಾಣವನ್ನು ಕಳೆದುಕೊಳ್ಳುತೇನೆ, ಎಂದು ಮಾರನು ಗೋಳಾಡುತಾ

ಆಚೆಗೆ ಹೊರಟನು. ಈ ಸಮಯವನ್ನೇ ನಿರೀಕ್ಷಿಸುತಿದ್ದ ಬೀರಾ

ಬೋಯಿಯು ಜಾಗ್ರತೆಯಾಗಿ ಹೋಗಿ ತಮ್ಮನ ಕೈ ಹಿಡಿದುಕೊಂಡು

ತಮ್ಮ, ಈ ಪ್ರಪಂಚವೆಲ್ಲಾ ಹೋದರೂ ಹೋಗಲಿ ಒಡಹುಟ್ಟಿದ

ನೀನೊಬ್ಬ ಚೆನ್ನಾಗಿದ್ದರೆ ಸಾಕು. ನಿನ್ನ ಚಿನ್ನವನ್ನೆಲ್ಲಾ ತೆಗೆದುಕೊ;

ನನ್ನ ಸಂಪಾದನೆಯೆಲ್ಲವನ್ನೂ ತೆಗೆದುಕೊ, ನನಗೆ ಏನೂ ಬೇಡ.

ನೀನು ಸುಖವಾಗಿದ್ದರೆ ಅದೇ ನನಗೆ ಒಂದು ಕೋಟಿ. ನಿನಗೆ ಬುದ್ಧೀ

ಕಲಿಸುವುದಕ್ಕೋಸ್ಟರವೇ ನಾನು ಬೇಕೆಂದು ಹೀಗೆ ಮಾಡಿದೆ. ನಾವು

ಎಷ್ಟು ಹಣವನ್ನೂ ಚಿನ್ನವನ್ನೂ ಸಂಪಾದಿಸಿದಾಗ್ಯೂ ನಮಗೆ ಬೇಕಾದ

ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಉಪಯೋಗವೇ ಹೊರತು

ಬೇರೆ ಇಲ್ಲ. ಶ್ರಮಪಡತಕ್ಕವನಿಗೆ ಇದ್ದಕಡೆಯಲ್ಲಿಯೇ ಬೇಕಾದ

ಪದಾರ್ಥ ಸಿಕ್ಕುವುದು. ಕೃಷಿಯೇ ಮನುಷ್ಯನಿಗೆ ಮುಖ್ಯವಾದ್ದು.

ಈ ಅರ್ಥವನ್ನು ನಿನಗೆ ಚೆನ್ನಾಗಿ ತಿಳಿಸಿದೇನೆ. ಈಗ ನಿನಗೆ ಬುದ್ಧಿ

ಬಂತೆಂದು ನಂಬಿದೇನೆ. ಈಗಲಾದರೂ ಇಲ್ಲದ ಆಶೆಯನ್ನು ಬಿಟ್ಟು

ಬಿಡು, ಎಂದು ಹೇಳಿದನು. ಮಾರಾಬೋಯಿಯು ಇದನ್ನು ಕೇಳಿ

ನಾಚಿಕೊಂಡು ಸುಮ್ಮನಾದನು; ಮತ್ತು ಅಣ್ಣನ ಔದಾರ್ಯವನ್ನು

ಕಂಡು ಅತ್ಯಾಶ್ಚರ್ಯಪಟ್ಟು, ಅವನಿಗೆ ವಿಶೇಷವಾಗಿ ಕೃತಜ್ಞನಾಗಿರುತ್ತಾ

ಭಂಗಾರದ ಬೆಟ್ಟವಿದ್ದರೂ ಸರಿಯೆ ಕೃಷಿಗಿಂತಲೂ ಅದು ಉತ್ತಮ

ವಾದ್ದಲ್ಲವೆಂದು ಅನುಭವದಿಂದ ತಿಳಿದುಕೊಂಡನು.


ಅಣ್ಣ ತಮ್ಮಂದಿರಿಬ್ಬರೂ ೩ ದಿವಸ ಅಲ್ಲಿಯೇ ಇದ್ದು ತಮ್ಮ

ಊರಿಗೆ ಹೋದರು. ಮಾರನು ತಾನು ತಂದ ಚಿನ್ನದಲ್ಲಿ ಅರ್ಥವನ್ನು

ಸ್ವೀಕರಿಸೆಂದು ಎಷ್ಟು ಹೇಳಿಕೊಂಡಾಗ್ಯೂ ಬೀರನು--ಶ್ರಮಪಟ್ಟು ತನ್ನ

ಅನ್ನವನ್ನು ತಾನು ಬೆಳೆದುಕೊಳ್ಳ ತಕ್ಕವನಿಗೆ ಚಿನ್ನಕ್ಕೆ ಏನೂ ಕಡಮೆ

ಇಲ್ಲ. ನಿನ್ನ ಚಿನ್ನ ನನಗೆ ಬೇಡಲೇಬೇಡ ಎಂದು ಖಂಡಿತವಾಗಿ

ಹೇಳಿದನು. 

...

-------------------------------------

  ೮ನೆ ಅಧ್ಯಾಯ


ರಾಮಾಜೋಯಿಸನು ಈ ಕಥೆಯನ್ನು ಮುಗಿಸಿದ ಕೂಡಲೆ

ಮದನನು-- ಜೋಯಿಸರ ಬೀರಾಬೋಯಿ ಬುದ್ಧಿವಂತನಾಗಿ ತೋರು

ತಾನೆ, ಇವನು ಇಲ್ಲದೇ ಇದ್ದರೆ ಮಾರನೂ ಅವನ ಸಂಗಡ ಇದ್ದವರೂ

ಹೊಟ್ಟೆಗೆ ಇಲ್ಲದೆ ಪ್ರಾಣವನ್ನು ಬಿಡಬೇಕಾಗಿತ್ತು. ಅದೇನೊ ಸರಿಯೆ, 

ಆದರೆ ಅವರು ಕಾಡಿನಲ್ಲಿ ಇದ್ದ ಕಾರಣ ಅವರಿಗೆ ಇಂಥಾ ಕಷ್ಟ ಪ್ರಾಪ್ತ

ವಾಯಿತು. ಮಾರ, ಮೊದಲಾದವರು ದೊಡ್ಡ ಪಟ್ಟಣದಲ್ಲಿದ್ದರೆ ಅವರಿಗೆ

ಬೇಕಾದಷ್ಟು ಧಾನ್ಯವೂ ಆಹಾರವೂ ದೊರೆಯುವುದಕ್ಕೆ ಸಂದೇಹವಿರ

ಲಿಲ್ಲ.


ಜೋಯಿಸ-- ಧಾನ್ಯ ಮೊದಲಾದ ಆಹಾರಗಳು ಎಲ್ಲಿ ದೊರೆಯು

ವವೋ ಅಂಥಾ ಕಡೆಯಲ್ಲಿಯೇ ಎಲ್ಲರೂ ಇರುವುದಕ್ಕೆ ಆದೀತೆ?


ಮದನ--ನಾನು ಹಾಗೆಯೇ ತಿಳಿದುಕೊಂಡು ಇದೇನೆ.


ಜೋಯಿಸ--ನಿರ್ಜನವಾಗಿ ಯಾವ ಧಾನ್ಯವೂ ಬೆಳೆಯದೇ

ಇರತಕ್ಕ ದೇಶಗಳು ಈ ಪ್ರಪಂಚದಲ್ಲಿ ಇಲ್ಲವೊ?


ಮದನ--ಅಂಥಾ ದೇಶ ಉಂಟು. ಬೀರಮಾರರಿಬ್ಬರೂ

ಹೋಗಿದ್ದ ಪ್ರಾಂತ್ಯ ಅಂಥಾದ್ದು.


ಜೋಯಿಸ-- ಪ್ರಪಂಚದಲ್ಲಿ ಇನ್ನೂ ಅಂಥಾ ದೇಶಗಳು ಎಷ್ಟೋ

ಇವೆ.


ಮದನ--ಜನರು ಅಂಥಾ ದೇಶಗಳಿಗೆ ಯಾಕೆ ಹೋಗಬೇಕು?

ತಮ್ಮ ಸ್ವದೇಶದಲ್ಲಿಯೇ ಇರುವುದುತಾನೆ.


ಜೋಯಿಸ--ಹಾಗಾದರೆ ಸಮುದ್ರದಮೇಲೆ ಜನರು ಹೋಗ

ಕೂಡದೆಂದಹಾಗಾಯಿತು; ಯಾಕೆಂದರೆ ಹಡಗು ಸಮುದ್ರದ ಮಧ್ಯದಲ್ಲಿ

ಒಡೆದು ಹೋಗಬಹುದು. ನಿರ್ಜನವಾಗಿರತಕ್ಕ ಒಂದು ದ್ವೀಪ ಅಲ್ಲಿಗೆ

ಹತ್ತಿರವಾಗಿರಬಹುದು. ಹೀಗಾದರೆ ಮನುಷ್ಯನು ಮೆಲ್ಲಗೆ ಈಜಿಕೊಂಡು

ಆ ದ್ವೀಪಕ್ಕೆ ಹೋದರೂ ಹೋದಾನು. ಆಹಾರಕ್ಕೆ ಏನಮಾಡಬೇಕು?


ಮದನ--ಇಂಥಾ ಅಪಾಯಗಳು ಯಾವಾಗಲಾದರೂ ಸಂಭವಿ

ಸಿದೆಯೆ ? 

-------------------------------------------------

೮೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಜೋಯಿಸ.-.ಎಷ್ಟೋ ಸಂಭವಿಸಿದೆ... ಒಂದಾನೊಂದು ಸಾರಿ:

ಮಾಳನೆಂಬ ಒಬ್ಬ ಅಂಬಿಗನು, ಹಡಗು ಒದಡೆದುಹೋದಕಾರಣ, 

ನಿರ್ಜನವಾದ ನಡುಗೆಡ್ಡೆಗೆ ಹೋಗಿ ಬಿದ್ದನು,


ಮದನ--ಇದು ಆಶ್ಚರ್ಯವಾಗಿದೆ. ಅವನಿಗೆ ಆಹಾರ ಹೇಗೆ

ಸಿಕ್ಕಿತು?


ಜೋಯಿಸ---ಅಲ್ಲಿ ಸಿಕ್ಕಿದ ಹಣ್ಣುಗಳನ್ನೂ ಗೆಡ್ಡೆ ಗೆಣಸುಗಳನ್ನೂ 

ತಿಂದುಕೊಂಡಿದ್ದನು.


ಮದನ--ಹೀಗೆ ಕಷ್ಟ ಪಡಲಾರದೆ ಅವನು ಸತ್ತುಹೋಗಲಿಲ್ಲವೆ?


ಜೋಯಿಸ-ಇಲ್ಲ. ಆಳು ಮೊದಲಿಗಿಂತಲೂ ಇನ್ನೂ ಬಲವಾದ.

ಇದು ಹಾಗಿರಲಿ. ಇನ್ನೊಂದು ವಿಚಿತ್ರವಾದ ಕಥೆ ಇದೆ. ಅದನ್ನು ಈ

ವಹಿಯಲ್ಲಿ ಬರೆದು ಇದೇನೆ, ನೀನು ಓದಬಹುದು,


ನಾಲ್ಕು ಜನ ನಾವಿಕರ ಕಥೆ


ಒಂದು ಪಟ್ಟಣದ ಕೆಲವು ಜನರು ಸೇರಿ ದ್ವೀಪಾಂತರದ ವ್ಯಾಪಾರ

ಮಾಡಲು ಗೊತ್ತುಮಾಡಿಕೊಂಡರು ; ಒಂದು ದೊಡ್ಡ ಹಡಗನ್ನು ಕಟ್ಟಿ

ಅದರಲ್ಲಿ ಕೂತು ಹೊರಟರು, ಹಡಗು ಅಲ್ಲಲ್ಲಿ ನಿಂತು, ಆಯಾ ರೇವು

ಪಟ್ಟಣಗಳಿಂದ ಬೇಕಾದ್ದನ್ನು ತರುತಾ,  ತಂದಿದ್ದ ಪದಾರ್ಥವನ್ನು ಅಲ್ಲಿ

ಮಾರುತಾ, ಮುಂದಕ್ಕೆ ಹೋಯಿತು. ದೈವಾಧೀನದಿಂದ ಗಾಳಿ ಹೆಚ್ಚಿ

ಈ ನಾವೆಯನ್ನು ಉತ್ತರ ಸಮುದ್ರಕ್ಕೆ ತಳ್ಳಿ ಕೊಂಡು ಹೋಯಿತು.

ಹಡಗು ನಡೆಸತಕ್ಕವನ ಯತ್ನ ಮೀರಿತು . ಯಾವ ದಿಕ್ಕೂ ತೋಚದೆ

ಜನರೆಲ್ಲಾ ಗಾಬರಿಯಾದರು. ತುಫಾನು ಸ್ವಲ್ಪ ಕಡಮೆಯಾದ

ಕೂಡಲೆ ದೂರದಲ್ಲಿ ಭೂಮಿ ಇದ್ದ ಹಾಗೆ ಕಾಣಿಸಿತು. ಚಳಿಗಾಲವಾ

ದ್ದರಿಂದ ಸಮುದ್ರದ ನೀರು ಗಟ್ಚಿಯಾಗಿತ್ತು. ಅದರ ಮೇಲೆ ಹಡಗು.

ನಡೆಯಲಾರದೆ. ಹೋಯಿತು. ಹಡಗಿನಲ್ಲಿ ಇದ್ದ ಸಾಮಾನುಗಳು

ಕೆಲವು ಮುಗಿದು ಹೋಗಿದ್ದ ಕಾರಣ ದೂರದಲ್ಲಿ ಕಾಣುವ ದ್ವೀಪದಿಂದ

ಆ ಸಾಮಾನನ್ನು ತಂದು ತುಂಬಿಕೊಂಡು ಮುಂದಕ್ಕೆ ಪ್ರಯಾಣ:

ಮಾಡಬೇಕೆಂದು ಯೋಚಿಸಿದರು. ಅಲ್ಲಿಗೆ ಹೋಗಿ ಬರಲು ಘಟಕ 

--------------------------------------

೮] ಸುಮತಿ ಮದೆನಕುಮಾರರ ಚರಿತ್ರೆ 87 


ರಾದ ನಾಲ್ಕು ಜನರನ್ನು ಸಜ್ಜುಮಾಡಿ ಕಳುಹಿಸಿದರು. ಆ ದ್ವೀಪವು

ಅಲ್ಲಿಗೆ ಒಂದು ಕೊಂಬಿನ ಕೂಗಿತ್ತು.


ಈ ನಾಲ್ಕು ಜನರೂ ಕೊಡಲಿ, ಮಚ್ಚುಕತ್ತಿ, ಒಂದೆರಡು ಪಾತ್ರೆ

ಗಳು, ಒಂದು ಚೀಲತುಂಬ ಗೋಧೀ ಹಟ್ಟು, ಒಂದು ಚೂರಿ, ಚಕ್ಕು

ಮುಕ್ಕ, ದೂದಿ, ಒಂದು ಕರ್ಣಾಟಕ ಕೋವಿ, ಸ್ವಲ್ಪ ಮದ್ದು,

ಹನ್ನೆರಡು ಗುಂಡು, ಸ್ವಲ್ಪ ಹೊಗೇಸೊಪ್ಪು, ಇಷ್ಟನ್ನು ಸಂಗಡ ತೆಗೆದು

ಕೊಂಡರು. ಶೀತವಲಯವಾದ ಆ ಪ್ರಾಂತದಲ್ಲಿ ಹಿಮದಗೆಡ್ಡೆ ಪರ್ವತದ

ಹಾಗೆ ಬಿದ್ದಿತ್ತು. ವಾಯುಗುಣ ವ್ಯತ್ಯಾಸವಾಗಿ ಹಿಮವು ಸ್ವಲ್ಪ ಕರಗು

ವುದಕ್ಕೆ ಮೊದಲಾದರೆ ತಮ್ಮ ಸಾಮಾನಿನ ಭಾರ ಹೆಚ್ಚಾಗಿ, ಹಿಮದಲ್ಲಿ

ತಾವು ದೊಸಗೊಂಡು ಸತ್ತುಹೋದೇವೆಂಬ ಭಯದಿಂದ ಇನ್ನೇನನ್ನೂ

ತೆಗೆದುಕೊಂಡು ಹೋಗಲಿಲ್ಲ. ಇವರು ಆ ದ್ವೀಪವನ್ನು ತಲಪಿ ಹುಡು

ಕಲು ಅಲ್ಲಿ ಮನುಷ್ಯರ ಸೆಲೆಯೇ ಇರಲಿಲ್ಲ. ಅಷ್ಟು ಹೊತ್ತಿಗೆ ಸಾಯಂ

ಕಾಲವಾಯಿತು. ಹಿಮದ ಹೊಡೆತ ಹೆಚ್ಚಾಯಿತು. ಚಳಿಯನ್ನು

ತಡೆಯಲಾರದೆ ಕೈಕಾಲುಗಳೆಲ್ಲಾ ಬೆರೆತುಕೊಂಡು ಹೋದವು. ಇವರು

ಬಂದದಾರಿಯೇ ತಿಳಿಯಲಿಲ್ಲ. ಅಗ ಹತ್ತಿರಿದ್ದ ಒಂದು ಗುಡಿಸಿಲಿನಲ್ಲಿ

ಆ ರಾತ್ರೆ ಮಲಗಿದ್ದು ಬೆಳಗಾದ ಮೇಲೆ ಉಳಿದ ಕೆಲಸವನ್ನು

ಮಾಡೋಣವೆಂದು ನಾಲ್ಕು ಜನರೂ ಅಲ್ಲಿಗೆ ಹೋಗಿ, ಅಲ್ಲಿ ವಿಶ್ರಮಿಸಿ

ನೊಂಡು ಸೂರ್ಯೋದಯಕ್ಕೆ ಎದ್ದು ಆ ದ್ವೀಪದ ಸ್ಥಿತಿಯನ್ನು ತಮ್ಮವ

ರಿಗೆ ತಿಳಿಸೋಣವೆಂದು ಬಂದರು. ಅಷ್ಟು ಹೊತ್ತಿಗೆ ಯಾವ ಕಾರಣ

ದಿಂದಲೋ ಗಟ್ಟ ಯಾಗಿದ್ದ ಸಮುದ್ರವೆಲ್ಲಾ ನೀರಾಗಿತ್ತು; ಅದನ್ನು

ಕಂಡು ಈ ನಾಲ್ಕು ಜನ ನಾವಿಕರಿಗೂ ಅತ್ಯಂತ ಭಯವಾಯಿತು.

ತಮ್ಮ ದೇಶಕ್ಕೆ ಸೇರಲು ಆ ಹಡಗಿನ ಆಶೆಯೊಂದು ಇತ್ತೇ ಹೊರತು

ಮತ್ತೇನೂ ಇಲ್ಲ. ಹೇಗೆತಾನೆ ತಮ್ಮ ಜನರ ಮುಖವನ್ನು ಅವರು

ನೋಡಿಯಾರು? ಹಿಂದೆ ಹಾಳು, ಮುಂದೆ ಮಹಾಸಮುದ್ರ ! ಇನ್ನೇನು

ಗತಿ? ಅವರ ಬುದ್ಧಿಗೆ ಮುಂದೆ ಏನೂ ತೋರಲಿಲ್ಲ.


ಹೀಗೆ ಕಥೆಯನ್ನು ಓದಿ ಅಲ್ಲಿಗೆ ನಿಲ್ಲಿಸಿ ಮದನನು- ಜೋಯಿ

ಸರೆ, ನಿರ್ಮಾನುಷ್ಯವಾದ ಅಂಥಾ ದ್ವೀಪದಲ್ಲಿ ಇವರು ಸೇರಿಕೊಂಡು,

-------------------------------------------

  ೮೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 

  

ಏನು ಮಾಡಿಯಾರು? ಇನ್ನು ಗತಿಯೇನು? ಇವರೆಲ್ಲರೂ ಸತ್ತು

ಹೋಗಿರಬೇಕಲ್ಲವೆ? ಎಂದನು. ಕೂಡಲೆ ಜೋಯಿಸನು--ಕಥೆಯ

ನ್ನೆಲ್ಲಾ ಓದಿದ ಮೇಲೆ ನಿನಗೆ ಗೊತ್ತಾಗುವುದು. ಅದು ಹಾಗಿರಲಿ.

ಒಂದು ಮಾತು ಹೇಳುತೇನೆ ಹೇಳು. ಈ ನಾಲ್ಕು ಜನ ನಾವಿಕರೂ

ಆದಿಯಿಂದಲೂ ಕಷ್ಟದಲ್ಲಿ ನುರುಗಿದ್ದರು. ಹಾಗಲ್ಲದೆ ಯಾವ ಕೆಲಸ

ವನ್ನೂ ಮಾಡುವುದಿಲ್ಲವೆಂದು ದೊರೆಮಕ್ಕಳ ಹಾಗೆ ಸುಮ್ಮನೇ ಕೂತು

ಕೊಂಡಿದ್ದರೆ, ಅವರಿಗೆ ಯಾರಾದರೂ ಅಲ್ಲಿ ಬಂದು ಸಹಾಯ ಮಾಡು

ವವರಿದ್ದರೆ? ಎಂದು ಕೇಳಿದನು. ಅದನ್ನು ಕೇಳಿ ಮದನನು--ಯಾವ

ಕೆಲಸ ಮಾಡಿಕೊಳ್ಳಬೇಕಾಗಿದ್ದರೂ ಅವರೇ ಮಾಡಿಕೊಳ್ಳ ಬೇಕು.

ಅವರಿಗೆ ಇನ್ನು ಯಾರು ಗತಿ ಇದ್ದರು? ಮೊದಲಿನಿಂದ ಅವರು ಕಷ್ಟಕ್ಕೆ

ನುರುಗಿದ್ದುದೇ ಒಳ್ಳೇದಾಯಿತು, ಎಂದು ನುಡಿದನು.


(ಕಥೆ ಮುಂದಕ್ಕೆ ಸಾಗಿದ್ದು ಹೇಗೆಂದರೆ) :.


ಕಷ್ಟ ಬಂತೆಂದು ಪ್ರಾಣವನ್ನು ಕಳೆದುಕೊಳ್ಳುವುದಕ್ಕಾದೀತೆ?

ಇದ್ದುದರಲ್ಲಿ ಜೀವಿಸಿಕೊಂಡಿರುವುದಕ್ಕೆ ಯತ್ನಿಸಬೇಕು. ಇದನ್ನು

ಯೋಚಿಸಿ ನಾಲ್ವರೂ ರಾತ್ರೆ ಮಲಗಿದ್ದ ಗುಡಿಸಲಿಗೆ ಹೋದರು.

ಗುಡಿಸಲೆಲ್ಲಾ ಮರದ ದಿಮ್ಮಿಯನ್ನು ಸೇರಿಸಿಯೇ ಕಟ್ಟಿತ್ತು. ಒಂದೊಂ

ದುಕಡೆ ಮಾತ್ರ ಸ್ವಲ್ಪ ಸಂದು ಬಿಟ್ಟಿದ್ದ ಕಾರಣ ತನುವಿನ ಗಾಳಿಯು

ಒಳಕ್ಕೆ ನುಗ್ಗಿ ರಾತ್ರೆಯಲ್ಲಿ ಚಳಿಯನ್ನು ಸಹಿಸುವದು ಕಷ್ಟವಾಗಿತ್ತು.

ಇದಕ್ಕಾಗಿ ಒಂದು ಉಪಾಯವನ್ನು ಹುಡುಕಿದರು. ಹತ್ತಿರ ಹನ್ನೆ

ರಡೇ ಗುಂಡುಗಳು ಇದ್ದವಷ್ಟೆ. ಅವುಗಳನ್ನು ಹನ್ನೆರಡು ಸಾರಿ

ಹಾರಿಸಿ ಆ ಕಾಡಿನಲ್ಲಿದ್ದ ಕೆಲವು. ಸಾರಂಗಗಳನ್ನು ಕೊಂದರು.

ಉದ್ದವಾದ ಕೊಂಬುಳ್ಳ ಈ ಮೃಗವು ಆ ದ್ವೀಪದಲ್ಲಿ ಬೇಕಾದಷ್ಟು

ಸಿಕ್ಕುತಿದ್ದವು. ಇವುಗಳನ್ನು ಚಕ್ರವಿಲ್ಲದ ಗಾಡಿಗೆ ಕಟ್ಟ ಮಂಜಿನ

ಗಡ್ಡೆಯ ಮೇಲೆ ಆ ಉತ್ತರವಲಯದವರು ಸವಾರಿಮಾಡುವುದುಂಟು.

ಇವುಗಳನ್ನು ಕೊಂದು ಮಾಂಸವನ್ನು ತೆಗೆದು ಇರಿಸಿಕೊಂಡರು. ಅದರ

ಚಕ್ಕಳದಿಂದ ಗುಡಿಸಲಿನಲ್ಲಿದ್ದ ಸಂದುಗಳನ್ನು ಮುಚ್ಚಿದರು. ತನು

ವಿಶೇಷವಾಗಿ ಇದ್ದ ಕಾರಣ ಮಾಂಸ ಸ್ವಲ್ಪವೂ ಕೆಡಲಿಲ್ಲ. ಕೆಲವು

ದಿವಸಗಳವರೆಗೂ ಆಹಾರಕ್ಕೆ ಅದು ಅನುಕೂಲಿಸಿತು.

----------------------------------------------

8] ಸುಮತಿ ಮದನಕುಮಾರರ ಚರಿತ್ರೆ ೮೯


ಆ ದ್ವೀಪದಲ್ಲಿ ಮುಖ್ಯವಾದ ಕ್ಷುದ್ರಮೃಗವು ಬಿಳೀಕರಡಿ, ಇದರ

ಬಾಧೆಯನ್ನು ತಪ್ಪಿಸಿಕೊಳ್ಳಲು ಇವರಿಗೆ ಆಯುಧಸಾಮಗ್ರಿ ಅನುಕೂಲ

ವಾಗಿರಲಿಲ್ಲ. ಕೋವಿ ಏನೋ ಇತ್ತು. ತಂದಿದ್ದ ಹನ್ನೆರಡು ಗುಂಡೂ

ತೀರಿಹೋಗಿತ್ತು. . ಆದಕಾರಣ ಕರಡೀ ಬೇಟೆಯಾಡುವುದಕ್ಕೆ

ಮತ್ತೊಂದು ಉಪಾಯ ತೋರಿತು. ಸಮಯಬಂದಾಗಲೇ ಮನುಷ್ಯನ

ಯುಕ್ತಿಯೂ ಬುದ್ಧಿಯೂ ವೃದ್ಧಿಯಾಗಿ ಪ್ರಕಾಶಕ್ಕೆ ಬರತಕ್ಕದ್ದು.

ಪಾಚೆಯಹಾಗಿರತಕ್ಕ ಒಂದು ಬಗೆ ಸಸ್ಯ ವಿನಾ ಮತ್ತೆ ಯಾವ

ಗಿಡವೂ ಅಲ್ಲಿ ಬೆಳೆಯುತಿರಲಿಲ್ಲ. ಆದರೆ ಸಮುದ್ರ ತೀರದಲ್ಲಿ ಒಂದು

ವಿಧವಾದ ಕುರುಚುಗಿಡ ಬೆಳೆದಿತ್ತು. ಅದರ ಬೇರು ಬಿಲ್ಲಿನಹಾಗೆ ಬಗ್ಗಿ

ಕೊಂಡಿತ್ತು. ಅದನ್ನು ಕಿತ್ತುಕೊಂಡು ಬಿಲ್ಲಿನ ಆಕಾರಕ್ಕೆ ಸಮಮಾಡಿ

ಕೊಂಡರು. ಜಿಂಕೆಚಕ್ಕಳದ ಬಾರು ಹೆದೆಯಾಯಿತು. ಸಮುದ್ರತೀರ

ದಲ್ಲಿ ಬಿದ್ದಿದ್ದ ತುಂಡುಗಳಿಂದ ದೊಣ್ಣೆಗಳನ್ನು ಮಾಡಿಕೊಂಡು ಅದರ

ತುದಿಗೆ ಸಾರಗದ ಸಣ್ಣ ಕೊಂಬುಗಳನ್ನು ಬಲಿದರು. ಅದೇ ಈಟಿಯಾ

ಯಿತು. ಅಲ್ಲಿ ವಿಸ್ತಾರವಾಗಿ ಸಿಕ್ಕುತಿದ್ದ ಸಾರಗದ ಉದ್ದವಾದ ಕೊಂಬು

ಗಳು ಬಾಣಗಳಾದವು, ಹೀಗೆ ಇಬ್ಬರು ಅಂಬು ಬಿಲ್ಲುಗಳನ್ನೂ, 

ಇನ್ನಿಬ್ಬರು ಈಟಿಯನ್ನೂ ತೆಗೆದುಕೊಂಡರು. ಈ ನಾಲ್ವರೂ ಒಳಪ್ರಾಂ

ತಕ್ಕೆ ಹೊರಟು ಸಿಕ್ಕಿದ ಕರಡಿಗಳನ್ನು ಕೊಲ್ಲುತಾ ಬಂದರು. ಈ ಕರಡಿ

ಗಳ ಜೊತೆಗೆ ಬಿಳೀ ನರಿಗಳೂ ನೀಲವರ್ಣವಾದ ನರಿಗಳೂ ಸಹಾ

ಸೇರಿಕೊಂಡು ಎಷ್ಟು ಕೊಂದರೂ ಅಷ್ಟು ಹೆಚ್ಚಾಗಿ ಬಾಧೆಯನ್ನು

ಕೊಡುತಾ ಬಂದವು.


ಆಗ ಮದನನು ಓದುವುದನ್ನು ನಿಲ್ಲಿಸಿ ಏನು ಭಯಂಕರವಾದ

ಬಾಳು, ಪ್ರತಿಕ್ಷಣದಲ್ಲಿಯೂ ಕಾಡುಮೃಗಗಳು ನುಂಗಿಕೊಳ್ಳುವವೆಂಬ

ಭೀತಿಯೇ ಭೀತಿ, ಏನು ಹೀನವಾದ ಅದೃಷ್ಟ ! ಎಂದನು.


ಜೋಯಿಸ--ಹಾಗೆ ಕಾಡುಮೃಗಗಳು ನುಂಗಿಕೊಳ್ಳಲಿಲ್ಲವಷ್ಟೆ. 


ಮದನ--ಅವುಗಳಿಗೆ ತಕ್ಕ ಆಯುಧಗಳನ್ನು ಹೊಸದಾಗಿ ಮಾಡಿ

ಕೊಂಡಕಾರಣ ನುಂಗಿಕೊಳ್ಳಲಿಲ್ಲ.


ಜೋಯಿಸ--ಅಪಾಯ ಸಂಭವಿಸಬಹುದೆಂಬ ಭೀತಿಯಿಂದಲೇ 

---------------------------------------

90 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. 


ಮನುಷ್ಯ ಕಷ್ಪಕ್ಕೆ ಗುರಿಯಾಗುವುದು. ಅಪಾಯ ಬಂದರೆ ತಪ್ಪಿಸಿಕೊಳ್ಳ

ಬಹುದು; ತಪ್ಪಿಸಿಕೊಳ್ಳುವುದಕ್ಕೆ ಯೋಗ್ಯತೆ ಇಲ್ಲದಿದ್ದರೆ ಅದೀಗ ಕಷ್ಟ. 


ಮದನ-- ತಾವು ಹೇಳಿದ್ದು ನನಗೆ ತಿಳಿಯಲಿಲ್ಲ.


ಜೋಯಿಸ.- ಹಾಗಾದರೆ ವಿವರಿಸುತೇನೆ. ನಿನ್ನ ಕಾಲಿಗೆ ಹಾವು

ಸುತ್ತಿಕೊಂಡಿದ್ದಾಗ ಅದು ನಿನ್ನನ್ನು ಕಡಿಯುವುದೆಂದು ನೀನು ತಿಳಿದು

ಕೊಂಡಿದ್ದೆ. ಆದುದರಿಂದ ಕಷ್ಟತೋರಿತು. ಹವುದೊ, ಅಲ್ಲವೊ?


ಮದನ-- ಹವುದು.


ಜೋಯಿಸ-- ಆ ನಿರ್ಭಾಗ್ಯದೆಸೆ ಸುಮತಿಗೆ ಇರಲಿಲ್ಲವಷ್ಟೆ.


ಮದನ--ಅದೂ ನಿಶ್ಚಯ, ಸ್ವಾಮಿ.


ಜೋಯಿಸ-- ಆದರೂ ಅದು ಕಡಿಯತತಕ್ಕ ಸಂಭವ ನಿನಗಿಂತಲೂ

ಅವನಿಗೆ ಹೆಚ್ಚಾಗಿತ್ತು. ಯಾಕೆಂದರೆ, ಅದನ್ನು ಅವನು ಹಿಡಿದು

ಕೊಂಡ. ಆದರೆ ಧೈರ್ಯವಾಗಿ ಹಿಡಿದುಕೊಂಡು, ಅದನ್ನು ಬೀಸಿ ಆಚೆಗೆ.

ಎಸೆದರೆ ಅಪಾಯ ಕಡಮೆಯೆಂದು ಅವನು ಬಲ್ಲ. ನಿನಗೂ ಅಂಥಾ

ತಿಳಿವಳಿಕೆ ಇದ್ದರೆ, ನಿನಗೂ ಅಷ್ಟು ಭಯ ಉಂಟಾಗುತಿರಲಿಲ್ಲ.


ಮದನ.---ನೀವು ಹೇಳುವುದು ನಿಜ, ಜೋಯಿಸರೆ. ಇನ್ನೊಂದು

ಸಾರಿ ಅಂಥಾ ಅಪಾಯಕ್ಕೆ ನಾನು ಒಳಗಾದರೆ, ನಾನೂ ಹಾಗೆಯೇ

ಧೈರ್ಯವನ್ನು ಅವಲಂಬಿಸುತೇನೆ.


ಜೋಯಿಸ--_ನಿನಗೆ ಮೊದಲು ಆದಹಾಗೆಯೇ ಈಗಲೂ ಸಂಕಟ

ಉಂಟಾದರೆ?


ಮದನ--ಒಂದುಕಾಲಕ್ಕೂ ಇಲ್ಲ. ಈಗ ನನಗೆ ಧೈರ್ಯ ಹೆಚ್ಚಾಗಿದೆ.


ಜೋಯಿಸ--ಅಪಾಯ ಉಂಟಾದಾಗ ಹೇಡಿಗಳಿಗಿಂತಲೂ ಧೈರ್ಯ

ಶಾಲಿಗಳಿಗೆ ಸಂಕಟ ಕಡಮೆ ಎಂತಲೊ?


ಮದನ--ಹವುದು.


ಜೋಯಿಸ--ಎಂಥಾ ಅಪಾಯ ಸಂಭವಿಸಿದರೂ ಹೀಗೆಯೇ

ಸರಿಯಷ್ಟೆ?


ಮದನ--ಹವುದು, ಜೋಯಿಸರೆ. ನಮ್ಮ ಅಪ್ಪಾಜಿಯೂ, 

ಅಮ್ಮಯ್ಯನೂ ಅಂದಳದಲ್ಲಿ ಕೂತು ಹೋಗುವಾಗ, ಅಂದಳ ಸ್ವಲ್ಪ 

-------------------------------------------------

೮] ಸುಮತಿ ಮದನಕುಮಾರರ ಚರಿತ್ರೆ 91 


ಅಳ್ಳಾಡಿದರೂ, ಅಮ್ಮಯ್ಯ ಭಯದಿಂದ ಕೂಗಿಕೊಳ್ಳುವರು. ನಮ್ಮ

ಅಪ್ಪಾಜಿ ಇದನ್ನು ಕಂಡು ನಗುವರು.


ಜೋಯಿಸ-- ಆಕೆಗೂ ನಿಮ್ಮ ಅಪ್ಪಾಜಿಯಷ್ಟು ಧೈರ್ಯವಿದ್ದರೆ,

ಆಕೆ ನಗುತಲೇ ಇದ್ದರು.


(ಕಥೆ ಮುಂದಕ್ಕೆ ಸಾಗಲಿ.)


ಈ ಮೃಗಗಳ ಬಾಧೆ ಹೆಚ್ಚಾಗುತಾ ಬಂತು. ಸಾರಗ, ಕರೀನರಿ,

ಬಿಳೀನರಿ, ಬಿಳೀಕರಡಿ ಇವುಗಳೇ ಮುಖ್ಯವಾದ ಕಾಡುಮೃಗಗಳು.

ಇವು ಈ ನಾವಿಕರನ್ನು ಪೀಡಿಸಲು ಬಂದಹಾಗೆಲ್ಲಾ ಉಪಾಯವನ್ನು

ಹುಡುಕಿ, ಅವುಗಳನ್ನು ಕೊಲ್ಲುತಿದ್ದರು. ಈ ಉತ್ತರ ಪ್ರಾಂತದಲ್ಲಿ

ರಾತ್ರಿ ಪ್ರಮಾಣ ಹೆಚ್ಚಾಗಿಯೂ ಅಹಃಪ್ರಮಾಣ ಕಡಮೆಯಾಗಿಯೂ

ಇರುವುದು. ಇದೂ ಅಲ್ಲದೆ ವರುಷದಲ್ಲಿ ಅನೇಕ. ತಿಂಗಳು ಸೂರ್ಯನ

ಕಿರಣವೇ ಕಾಣಿಸದೆ ಕತ್ತಲೆ ಕವಿದುಕೊಂಡಿರುವುದು. ಇದರಿಂದ ದೀಪ

ಅಗತ್ಯವಾಯಿತು. ಆ ದೀಪಕ್ಕೆ ಎಣ್ಣೆ ಎಲ್ಲಿದೆ? ಬತ್ತಿ ಯಾವುದು? ಹಣತೆ

ಯನ್ನು ಎಲ್ಲಿಂದ ತರಬೇಕು! ಇದಕ್ಕೆ ಯೋಚನೆ ಮಾಡಿ ಒಂದು

ಉಪಾಯವನ್ನು ತೆಗೆದರು. ಸಾರಗದ ತಲೆಯ ಮಿದುಳು ಎಣ್ಣೆ

ಯಾಯಿತು. ಅವರಲ್ಲಿದ್ದ ಬಟ್ಟೆಯೇ ಬತ್ತಿಯಾಯಿತು. ಅಲ್ಲಿ ಸಿಕ್ಕು

ತಿದ್ದ ಮಣ್ಣನ್ನು ತೆಗೆದು ಹಣತೆ ಮಾಡಿದರು. ಅದಕ್ಕೆ ಎಷ್ಟು

ಕೊಬ್ಬನ್ನು ಹಾಕಿದರೂ ನಿಲ್ಲದೇ ,ಸೋರಿಹೋಗುತಿತ್ತು. ಆದಕಾರಣ

ಒಂದು ಯುಕ್ತಿಯನ್ನು ಮಾಡಿ ಬೆಂಕಿಯಲ್ಲಿ ಅದನ್ನು ಸುಟ್ಟು ಕೊಬ್ಬು

ನಿಲ್ಲುವಹಾಗೆ ಮಾಡಿದರು. ಹತ್ತಿರಿದ್ದ ಚಕ್ಕುಮುಕ್ಕಿಯೇ ಬೆಂಕಿ

ಮಾಡುವುದಕ್ಕೆ ಅನುಕೂಲಿಸಿತು. ಹೀಗೆ ಕತ್ತಲೆ ಬಾಧೆಯನ್ನು ಪರಿ

ಹರಿಸಿಕೊಂಡರು. ಚಳಿ ಹೆಚ್ಚಾದಕಾರಣ ಬೆಚ್ಚಗಿರುವ ಹೊದಿಕೆ

ಬೇಕಾಯಿತು. ಇದಕ್ಕಾಗಿ ಸಾರಗದ ಚಕ್ಕಳವನ್ನು ತೆಗೆದುಕೊಂಡರು.

ಚಕ್ಕಳ ಒರಟಾದ್ದರಿಂದ ಅದನ್ನು ನೀರಿನಲ್ಲಿ ಕೆನೆಯಿಸಿ ಕೈಲಿ ತಿಕ್ಕಿದರು,

ಸ್ವಲ್ಪ ಮೃದುವಾಯಿತು. ಕೊಬ್ಬನ್ನು ಕಾಸಿ ಅದಕ್ಕೆ ಸವರಿದರು. ಇನ್ನೂ

ಮೃದುವಾಯಿತು, ಇದರಲ್ಲಿ ಕವಚ ಮೊದಲಾದ್ದನ್ನು ಮಾಡಿಕೊಂಡರು.

ಹೀಗೆ ತಾವು ಸುಖವಾಗಿರುವುದಕ್ಕೆ ಬೇಕಾದ್ದನ್ನೆಲ್ಲಾ ಕಲ್ಪಿಸಿಕೊಂಡರು.

-----------------------------------

92 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಈ ರೀತಿಯಾಗಿ ಅನೇಕ ದಿವಸಗಳು ಇವರು ಅಲ್ಲಿ ವಾಸವಾಗಿ

ರಲು,  ಮೀನು ಹಿಡಿಯುವುದಕ್ಕಾಗಿ ಕೆಲವು ಜನರು ದೋಣಿಗಳನ್ನು

ಹಾಕಿಕೊಂಡು ಸಮುದ್ರದ ಮೇಲೆ ಆ ಕಡೆಗೆ ಬಂದರು. ಸಮುದ್ರದ

ದಡದಲ್ಲಿ ಸ್ವಲ್ಪ ಹೊಗೆ ಕಾಣಿಸಲು ಅಲ್ಲಿ ಮನುಷ್ಯರಿರಬೇಕೆಂದು ದೋಣಿ

ಯನ್ನು ಇತ್ತ ತಿರುಗಿಸಿದರು. ಮನುಷ್ಯರ ಮುಖವನ್ನು ಕಂಡೇವೇ

ಎಂದು ಹಂಬಲಿಸುತಿದ್ದ ಈ ನಾಲ್ಕು ಜನ ನಾವಿಕರೂ ಬಹು ಸಂತೋಷ

ಪಟ್ಟು, ದೋಣೀಜನರನ್ನು ಕರೆದು ತಮ್ಮ ದುರವಸ್ಥೆ ಯನ್ನು ಅವರಿಗೆ

ಹೇಳಿಕೊಂಡರು. ಆ ಜನರು ಕನಿಕರದಿಂದ ಇವರನ್ನು ದೋಣಿಯ

ಮೇಲೆ ಕರೆದುಕೊಂಡು ಹೋದರು. ಈ ನಾಲ್ಕು ಜನರೂ ದಿನಕ್ರಮ

ದಲ್ಲಿ ತಮ್ಮ ದೇಶವನ್ನು ಸೇರಿಕೊಂಡರು.


ಈ ಕಥೆ ಮುಗಿಯಿತು. ಈ ಸಮಯಕ್ಕೆ ಸರಿಯಾಗಿ ತಮ್ಮ

ತಂದೇಮನೆಗೆ ಹೋಗಿದ್ದ ಸುಮತಿಯು ಅಲ್ಲಿಗೆ ಬಂದನು. ಬರುತಾ

ಜೊತೆಯಲ್ಲಿ, ಹಿಂದಕ್ಕೆ ಹದ್ದು ಎತ್ತಿಕೊಂಡು ಹೋಗುತಿದ್ದಾಗ, ಪ್ರಾಣ

ವನ್ನು ಉಳಿಸಿ ಮನೆಗೆ ಕೊಂಡುಹೋಗಿ ತಾನು ಸಾಕುತಿದ್ದ ಗಿಣೀ

ಮರಿಯನ್ನು ತೆಗೆದುಕೊಂಡು ಬಂದನು. ಅದು ಇವನ ಸಂಗಡಲೇ

ಹಾರುತಾ ಕುಪ್ಪುತಾ ಬರುವುದು, ತಲೆಯಮೇಲೆ ಹಾರುವುದು, ಭುಜದ

ಮೇಲೆ ಕೂರುವುದು. ಇವನ ಕೈಲಿದ್ದ ಹಣ್ಣನ್ನು ಕಿತ್ತು ಕಿತ್ತು ತಿನ್ನು

ವುದು, ಹೀಗೆ ಮಾಡಿಕೊಂಡುಬಂತು. ಇದನ್ನು. ಕಂಡು ಮದನನು

ಆಶ್ಚರ್ಯ ಪಡುತಾ- ಸುಮತಿ, ಈ ಗಿಣಿ ಇಷ್ಟೊಂದು ಸಾಧುವಾಗಿ ಒಗ್ಗಿ

ಕೊಳ್ಳುವುದಕ್ಕೆ ನೀನೇನು ಮಾಡಿದೆ? ಎಂದು ಕೇಳಿದನು, ಸುಮತಿಯು

ನಾನು ಮತ್ತೇನೂ ಮಾಡಲಿಲ್ಲ. ಅದನ್ನು ಮನೆಗೆ ತೆಗೆದುಕೊಂಡು

ಹೋಗಿ ಅನ್ನವನ್ನು ಹಾಕಿ ಆಗಾಗ್ಗೆ ಹಣ್ಣುಗಳನ್ನು ತಂದುಕೊಡುತಾ, 

ಕೈಮೇಲೆ ಕೂರಿಸಿಕೊಂಡು, ಆಡಿಸುತಾ ಲಾಲಿಸಿದೆ, ಅದಕ್ಕಾಗಿ ನನ್ನ

ಕಂಡರೆ ವಿಶೇಷ ಸಲಿಗೆಯಾಗಿದೆ, ಎಂದನು,


ಮದನ--ಇದು ಆಶ್ಚರ್ಯವಾಗಿದೆ, ಹಕ್ಕಿಗಳ ಹತ್ತಿರಕ್ಕೆ ಯಾರಾ

ದರೂ ಹೋಗಿ ನಿಂತರೆ ಅವು ಹಾರಿ ಹೋಗುವವು.


ಜೋಯಿಸ--ಅದಕ್ಕೆ ಕಾರಣವೇನು ಬಲ್ಲೆಯ? 

-------------------------------------

೮] ಸುಮತಿ ಮದನಕುಮಾರೆರ ಚರಿತ್ರೆ ೯೩


ಮದನ--ಅವು ಕಾಡ ಹಕ್ಕಿಗಳು,


ಜೋಯಿಸ-- ಕಾಡ ಹಕ್ಕಿ ಎಂದರೇನು?


ಮದನ--ಮಂದಿಯನ್ನು ಹತ್ತಿರಕೆ ಹೊದ್ದಗೊಡಿಸದೇ ಇರ 

ತಕ್ಕವು.


ಜೋಯಿಸ.-- ಗಿಣಿಯು ಹತ್ತಿರಕ್ಕೆ ಬರಗೊಡಿಸದೇ ಇರುವುದ.

ರಿಂದ, ಅದು ಕಾಡಹಕ್ಕಿಯಾಯಿತು ; ಅದು ಕಾಡಹಕ್ಕಿಯಾದ್ದರಿಂದ

ಹತ್ತಿರಕ್ಕೆ ಬರಗೊಡಿಸದೇ ಹೋಯಿತು. ಈ ಮಾತಿನಿಂದ ಏನು

ತಿಳಿದಹಾಗಾಯಿತು? ಗಿಣಿ ಕಾಡ ಹಕ್ಕಿಯ ಹಾಗೆ ಇದ್ದಾಗ ಮಂದಿ

ಯನ್ನು ಹತ್ತಿರಕ್ಕೆ ಹೊದ್ದಗೊಡಿಸುವುದಿಲ್ಲ. ಆದರೆ ಗಿಣಿ ಕಾಡ ಹಕ್ಕಿಯ

ಹಾಗೆ ವರ್ತಿಸುವುದಕ್ಕೆ ಕಾರಣವೇನು ಹೇಳು.


ಮದನ--ಅದೇನೋ ನನಗೆ ತಿಳಿಯದು ಗಿಣಿಗಳ ಸ್ವಭಾವ

ಯಾವಾಗಲೂ ಕಾಡಹಕ್ಕಿಯ ಹಾಗೆಯೇ ಇರತಕ್ಕದ್ದು.


ಜೋಯಿಸ. ಅವುಗಳ ಸ್ವಭಾವ ಹಾಗಿದ್ದರೆ ಈ ಗಿಣಿ ಸುಮತಿಗೆ

ಹೇಗೆ ಒಗ್ಗಿತು?


ಮದನ--ಅವನು ಯಾವಾಗಲೂ ಅದನ್ನು ಪ್ರೀತಿಯಿಂದ ಸಾಕು.

ತಾನೆ.


ಜೋಯಿಸ-ಹಾಗಾದರೆ ಪ್ರೀತಿಯಿಂದ ಸಾಕತಕ್ಕವರನ್ನ ಕಂಡರೆ

ಬೆಚ್ಚಿ ದೂರಾ ಓಡಿಹೋಗುವುದು ಪ್ರಾಣಿಗಳಿಗೆ ಸ್ವಭಾವವೊ?


ಮದನ-- ಹಾಗೆ ಓಡಿ ಹೋಗುವುದು ಅವುಗಳ ಸ್ಪಭಾವವಲ್ಲ,


ಜೋಯಿಸ--ಆದರದಿಂದ ಸಾಕದೇ ಇರುವ ಮನುಷ್ಯನನ್ನು

ಕಂಡರೆ ಮೃಗಗಳು ಓಡಿಹೋಗುವವಷ್ಟೆ ?


ಮದನ-- ಹವುದು.


ಜೋಯಿಸ--ಆದ್ದರಿಂದಲೇ ಅವು ಕಾಡಮೃಗಗಳೆಂದು ನೀನು

ಅನ್ನುತೀಯೊ ?


ಮದನ-- ಹವುದು.


ಜೋಯಿಸ--ತಮ್ಮನ್ನು ಹೊಡೆಯುತಾರೆ ಎಂಬ ಭಯದಿಂದ ಈ

ಮೃಗಗಳು ಓಡಿಹೋಗುವವು. ಹುಲಿ,  ಕರಡಿ, ಮುಂತಾದವುಗಳನ್ನು 

-------------------------------------------------

94 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಕಂಡರೆ ನೀನು ಹಾಗೆ ಓಡಿಹೋಗುತೀಯೆ. ಆದಕಾರಣ ನೀನೂ ಕಾಡ

ಮೃಗವಾಗಬೇಕಷ್ಟೆ ?


ಮದನ--(ಈ ಮಾತಿಗೆ ನಗುತಾ) ನಾನು ಕಾಡಮೃಗವಲ್ಲ

ಜೋಯಿಸರೆ.


ಜೋಯಿಸ--ಆದಕಾರಣ ಜಂತುಗಳನ್ನು ಸಾಧುವಾಗಿ ಮಾಡಿ

ಕೊಳ್ಳಬೇಕಾದರೆ ಅವುಗಳಿಗೆ ಹಿಂಸೆಮಾಡದೆ ಪ್ರೇಮದಿಂದ ಆದರಿಸ

ಬೇಕು. ಹಾಗಾದರೆ ನಿನ್ನಲ್ಲಿ ಅವುಗಳಿಗೆ ಭಯವಿಲ್ಲದೆ ಪ್ರೀತಿಯನ್ನು

ಇಟ್ಟುಕೊಂಡಿರುವುವು.


ಸುಮತಿ-- ತಾವು ಅಪ್ಪಣೆ ಕೊಡಿಸಿದ್ದು ನಿಜ ಉಪಾಧ್ಯಾಯರೆ.

ಒಬ್ಬ ಹುಡುಗನು ದಿನವಹಿ ತನ್ನ ತೋಟಕ್ಕೆ ಹೋಗಿ ಕೆಲಸ ಮಾಡಿ

ಕೊಂಡು ಬರುತಿದ್ದರು. ಆ ತೋಟದಲ್ಲಿ ಒಂದು ಫಟಸರ್ಪವಿತ್ತು.

ಈ ಹುಡುಗ ತೋಟದಲ್ಲಿ ಕೂತು ಅನ್ನಾ ತಿನ್ನುವಾಗೆಲ್ಲಾ ಒಂದು ಸಿಳ್ಳು

ಹಾಕುತಿದ್ದನು. ಆ ಹೊತ್ತಿಗೆ ಸರಿಯಾಗಿ ಆ ಹಾವು ಇವನ ಮುಂದೆ

ಬಂದು ಕೂತುಕೊಳ್ಳುತಿತ್ತು, ಹುಡುಗನು ಅದಕ್ಕೂ ಸ್ವಲ್ಪ ಆಹಾರ

ವನ್ನು ಹಾಕುತಿದ್ದನು. ಸರ್ಪವು ಅದನ್ನು ತಿಂದು ಹೊಟ್ಟೇ ತುಂಬಿಸಿ

ಕೊಂಡು ಸ್ವಲ್ಪ ಹೊತ್ತು ಆಡಿ, ತನ್ನ ಹುತ್ತಕ್ಕೆ ಹೊರಟು ಹೋಗು

ತಿತ್ತು. ಹೀಗೆ ಹಾವು ಸಹಿತ ಒಗ್ಗಿಕೊಂಡಿತ್ತು ಅವನ ಕೈಯಿಂದಲೇ

ಆಹಾರವನ್ನು ಇಸಕೊಂಡು ತಿಂದು ಹೊರಟು ಹೋಗುತಿತ್ತು.


ಮದನ--ಹಾವು ಅವನನ್ನು ಕಚ್ಚುತಿರಲಿಲ್ಲವೆ?


ಸುಮತಿ--ಇಲ್ಲ. ಹುಡುಗನು ಅದಕ್ಕೆ ಒಂದೆರಡು ಏಟ ಹೊಡೆ

ದರೂ ಅವನ ಗೋಜಿಗೆ ಹೋಗುತಿರಲಿಲ್ಲ.


ಈ ಮಾತನ್ನು ಕೇಳಿ ಮದನನಿಗೆ ಬಹಳ ಸಂತೋಷವಾಯಿತು.

ಸಹಜವಾಗಿ ಒಳ್ಳೇ ಹುಡುಗನಾದಕಾರಣ, ಯಾವುದಾದರೂ ಸಿಕ್ಕಿದ

ಪ್ರಾಣಿಗಳನ್ನು ಒಗ್ಗಿಸಿಕೊಂಡು, ಅವುಗಳನ್ನು ಸಾಕಬೇಕೆಂದು ಇವ

ನಿಗೆ ಆಶೆಹುಟ್ಟಿ ತನ್ನ ಅಂಗೀ ಜೇಬಿನಲ್ಲಿ ಸ್ವಲ್ಪ ಮಿಠಾಯಿಯನ್ನು

ಹಾಕಿಕೊಂಡು ಬೀದಿಗೆ ಹೊರಟನು. ದೂರದಲ್ಲಿ ಒಂದು ಹಂದೀಮರಿ

ಓಡಾಡುತಿತ್ತು. ಅದನ್ನು ಕಂಡು ಹಂದೀ ಹಂದೀ, ಇಲ್ಲಿ ಬಾ, ಬಾ, 

------------------------------------------

೮] ಸುಮತಿ ಮದನಕುಮಾರರ ಚರಿತ್ರೆ 95


ಎಂದು ಕರೆದು ಅದಕ್ಕೆ ತಿಂಡಿಯನ್ನು ಹಾಕಿದನು ಅದು ಬರದೇ ಓಡಿ

ಹೋಗುತಿತ್ತು. ಸಿಡುಕನಾದ ಈ ಮದನನು ಕೋಪದಿಂದ--ಛೀ

ಕೆಟ್ಟ ಹಂದಿಯೇ! ನಾನು ತಿಂಡೀ ಕೊಡುವುದಕ್ಕೆ ಹೋದರೆ ಓಡಿ

ಹೋಗುತೀಯ? ನಿನಗೆ ಬುದ್ಧಿ ಕಲಿಸುತ್ತೇನೆ, ಎಂದು ಓಡಿ ಹೋಗಿ

ಅದರ ಹಿಂಗಾಲನ್ನ ಹಿಡಿದುಕೊಂಡು ಎಳೆತರುತಿದ್ದನು. ಅದು ಅರಚಿ

ಕೊಂಡಿತು. ಅದರ ಅರಚಲು ಆದರ ತಾಯಿಗೆ ಕೇಳಿಸಿತು. ತಾಯಿ

ಹಂದಿಯು ಇತರ ಮರಿಹಂದಿಗಳೊಡನೆ ಸರ್ರನೆ ಮದನ ಇದ್ದ ಕಡೆಗೆ

ಓಡಿ ಬಂತು. ಇವನು ಹೆದರಿಕೊಂಡು ತನ್ನ ಕೈಲಿದ್ದ ಮರಿಯನ್ನು

ಬಿಟ್ಟು ಬಿಟ್ಟನು, ಅದು ಗಾಬರಿಯಲ್ಲಿ ಓಡಿ ಹೋಗುವಾಗ ಇವನ

ಎರಡು ಕಾಲು ಸಂದಿಯಲ್ಲಿ ನುಸಿದು ಹೊರಟು ಹೋಯಿತು. ಆ

ಜೋರನ್ನು  ತಡೆಯಲಾರದೆ ಮದನನು ಕೆಳಕ್ಕೆ ಬಿದ್ದನು. ಆ ಸ್ಥಳ

ಇಳಿಜಾರಾಗಿದ್ದಕಾರಣ, ಮೇಲಿನಿಂದಾ ಉರುಳಿಕೊಂಡು ಬಂದು ಕೆಳಗೆ

ಹರಿಯುತಿದ್ದ ಬಚ್ಚಲಿಗೆ ಮಗುಚಿಕೊಂಡನು. ಮೈಯೆಲ್ಲಾ ಕೊಚ್ಚೆ

ಯಾಯಿತು. ಈ ಹುಡುಗನಿಗೆ ಮತ್ತೂ ಕೋಪ ಹೆಚ್ಚಿತು. ಆ ಹಂದಿ

ಯನ್ನು ತಿರುಗಿ ಎಳೆತರಬೇಕೆಂದು ಹೋಗಿ ಅದನ್ನು ಹಿಡಿದುಕೊಂಡನು.

ಅದು ಇವನ ಕೈಗೆ ದಕ್ಕದೇ ಬಹಳ ತೊಂದರೆಮಾಡಿತು. ಈ ಜಗಳದಲ್ಲಿ

ಹಂದಿಯು ಹುಡುಗನನ್ನು ಎಳೆದುಕೊಂಡು ಹೋಗಿ, ನಾಲ್ಕು ಮಾರು

ದೂರದಲ್ಲಿ ಆಡುತಾ ಇದ್ದ ಕೋಳಿಗಳ ಮಧ್ಯೆ ಬಿತ್ತು. ಕೋಳಿಗಳೆಲ್ಲಾ

ಚದರಿ ಹಾರಿಹೋದವು. ಆ ಗುಂಪಿನಲ್ಲಿದ್ದ ಒಂದು ಹುಂಜವು ರೇಗಿ

ಕೊಂಡು, ಹರಿಸಿಕೊಂಡು ಬಂದು, ಮದನನ ಕಾಲನ್ನು ಕುಕ್ಕಿತು. 

ನಿಂತ ಕೋಳಿಗಳೆಲ್ಲಾ ಅದೇ ಪ್ರಕಾರ ಅವನನ್ನು ಕುಕ್ಕಲು ಆರಂಭಿಸಿ

ದವು. ಆಗ ಈ ಯಾತನೆಯನ್ನು ತಡೆಯಲಾರದೆ ಭಯದಿಂದ ಅರಚಿ

ಕೊಂಡನು. ಈ ಕೂಗು ಮನೇ ಒಳಗಿದ್ದ ರಾಮಜೋಯಿಸನಿಗೆ ಕೇಳಿ

ಸಿತು. ಆತನು ತಟ್ಟನೆ ಓಡಿ ಬಂದು ದೊರೆಮಗನನ್ನು ನೋಡಿದನು.

ಕಾಲಿನಿಂದ ತಲೆಯವರೆಗೂ ಆ ರಾಜಪುತ್ರನಿಗೆ ಬಚ್ಚಲ ಕೊಚ್ಚೆಯಲ್ಲಿ

ಅಭಿಷೇಕವಾಗಿತ್ತು. ಉಪಾಧ್ಯಾಯನು--ಮಗು,  ಹೀಗಾಗುವುದಕ್ಕೆ

ಕಾರಣವೇನಪ್ಪಾ, ಎಂದು ಕೇಳಲು,  ಮದನನು-- ಜೋಯಿಸರೇ,

---------------------------------------

96 ಸುಮತಿ ಮದನಕುಮೂರರ ಚರಿತ್ರೆ [ಅಧ್ಯಾಯ 


ತಾವು ಹೇಳಿದಂತೆ ಪ್ರಾಣಿಗಳಿಗೆ ಉಪಕಾರ ಮಾಡಬೇಕೆಂದು ಹೋದ್ದ

ರಿಂದ ಹೀಗಾಯಿತು. ಇದಕ್ಕೆ ನೀವೇ ಕಾರಣ, ಎಂದನು. ಆಗ

ಉಪಾಧ್ಯಾಯನು--ಅಪ್ಪಾ, ಚಿಂತೆ ಇಲ್ಲ. ನಿನಗೆ ಬಹಳ ಪೆಟ್ಟಾಗ

ಲಿಲ್ಲವಲ್ಲ, ಮನೆಗೆ ನಡೆ,ಮೈ ತೊಳೆದುಕೊ, ಎಂದು ಹೇಳಿ ಅವನನ್ನು

ಕರೆದುಕೊಂಡು ಹೋದನು.


ಮದನನು ಮೈ ತೊಳೆದುಕೊಂಡು ಬಂದಮೇಲೆ ಜೋಯಿಸನು.

ಈ ಅಪಾಯವು ಸಂಭವಿಸಿದ ರೀತಿಯನ್ನು ಕೇಳಿ ತಿಳಿದುಕೊಂಡು .-

ಅಪ್ಪ, ನಿನಗೆ ಬಾಧೆ ಆಯಿತು. ಇದಕ್ಕೆ ನಾನು ಹೇಗೆ ಕಾರಣನೊ

ತಿಳಿಯದು, ಹಂದೀ ಕಾಲನ್ನು ಹಿಡಿದು ಎಳೆತರುವಹಾಗೆ ನಾನು ನಿನಗೆ

ಹೇಳಿದೆನೆ?


ಮದನ--ಇಲ್ಲ, ಹಾಗೆ ಹೇಳಲಿಲ್ಲ. ಆದರೆ ಪ್ರಾಣಿಗಳಿಗೆ ಆಹಾರ

ವನ್ನು ಹಾಕಿದರೆ, ಅವು ನಮಗೆ ಒಗ್ಗಿಕೊಳ್ಳುವವು ಎಂದು ಹೇಳಿದಿರಿ.

ಇದಕ್ಕಾಗಿ ಆ ಹಂದಿಗೆ ನಾನು ದೋಸೆಯನ್ನು ಹಾಕೋಣನವೆಂದು

ಹೋದೆ,


ಜೋಯಿಸ.--ಆದರೆ ದಾರಿತಪ್ಪಿ ನೀನು ಆ ಕೆಲಸಕ್ಕೆ ಹೋದ್ದು

ನನ್ನ ತಪ್ಪಲ್ಲ. ನೀನು ಅದಕ್ಕೆ ತಿಂಡಿ ಹಾಕುತೀಯೆ ಎಂದು ಅದು

ಅರಿಯದು. ಆದ್ದರಿಂದ ನೀನು ಹಿಡಿದುಕೊಳ್ಳಲು ಅರಚಿಕೊಂಡಿತು.

ಮರಿಯ ಕೂಗನ್ನು ಕೇಳಿ ತಾಯಿ ಓಡಿಬಂತು. ಇದೆಲ್ಲಾ ನಿನಗೆ

ತಿಳಿವಳಿಕೆ ಇಲ್ಲದಕಾರಣ ಉಂಟಾಯಿತು. ಜಂತುಗಳ ಗೋಜಿಗೆ

ಹೋಗುವುದಕ್ಕೆ ಮುಂಚೆ ಅವುಗಳ ಸ್ವಭಾವವನ್ನು ತಿಳಿದುಕೊಳ್ಳಬೇಕು.

ಇದಲ್ಲದೆ ಇದ್ದರೆ ನೊಣವನ್ನು ಹಿಡಿಯುತೇನೆಂದು ಹೋಗಿ ಕಣಜದ

ಕೈಲಿ ಕಡಿಸಿಕೊಂಡ ಹುಡುಗನ ಬಾಳು ನಿನಗೂ ಉಂಟಾಗುವುದು.


ಮದನ--ಉಪಾಧ್ಯಾಯರೆ, ಒಬ್ಬ ಸಣ್ಣ ಹುಡುಗ ಹಾವಿಗೆ

ಆಹಾರನನ್ನು ಹಾಕಿ ಒಗ್ಗಿಸಿಕೊಂಡಿದ್ದನೆಂದು ಸುಮತಿ ಆ ದಿನ ಹೇಳ

ಲಿಲ್ಲವೆ?


ಜೋಯಿಸ--ಅದಾಗಬಹುದು. ಹೊಟ್ಟೆಗೆ ಇಲ್ಲದ ಬಾಧೆ

ಉಂಟಾದಾಗ ಹೊರತು ಯಾವ ಪ್ರಾಣಿಯೂ ಇತರರನ್ನು ತೊಂದರೆ 

-----------------------------------------------

೮] ಸುಮತಿ ಮದನಕುಮಾರರ ಚರಿತ್ರೆ ೯೭ 


ಮಾಡುವುದಿಲ್ಲ. ಆದರೆ ಅವುಗಳ ಸ್ವಭಾವವನ್ನು ನಾವು ಅರಿತು ಅವು

ಗಳ ಗೋಜಿಗೆ ಹೋಗಬೇಕೇ ಅಲ್ಲದೆ ಸುಮ್ಮನೆ ಹೋಗಬಾರದು.

ಇದಕ್ಕೆ ಒಂದು ಕಥೆ ಇದೆ.

ಆನೆ ಮತ್ತು ಚಿಪ್ಪಿಗ


ಒಬ್ಬ ಚಿಪ್ಪಿಗ ಇದ್ದನು. ಅವನು ನಿತ್ಯವೂ ತನ್ನ ಗುಡಿಸಲಿನಲ್ಲಿ

ಕೂತುಕೊಂಡು ಹೊಲಿಗೇ ಕೆಲಸವನ್ನು ಮಾಡುತಿದ್ದನು. ಆನೆಯನ್ನು

ಪ್ರತಿದಿನವೂ ನೀರ ಕುಡಿಸುವುದಕ್ಕೆ ಇವನ ಮನೇ ಮುಂದೆಯೇ

ಕರೆದುಕೊಂಡು ಹೋಗುತಿದ್ದರು. ಈ ಚಿಪ್ಪಿಗನು ತನ್ನ ಮನೇ ಕಿಟಕಿ

ಯೊಳಗಿನಿಂದ ಹಣ್ಣು, ತೆಂಗಿನಕಾಯಿ, ಮೊದಲಾದ ಯಾವುದಾದರೂ

ಒಂದು ತಿಂಡಿಯನ್ನು ದಾರಿಯಲ್ಲಿ ಹೋಗುತಿದ್ದ ಒಂದು ದೊಡ್ಡ ಅನೆಗೆ

ನಿತ್ಯವೂ ಕೊಡುವ ಪದ್ಧತಿ ಇತ್ತು. ಹೀಗೆ ಆ ಆನೆಯು ಅವನ ಸಂಗಡ

ಬಹು ಸಲಿಗೆಯಾಗಿತ್ತು. ಒಂದಾನೊಂದು ದಿನ ಆನೆಯು ಬರುತಾ

ಪದ್ಧತೀ ಪ್ರಕಾರಕ್ಕೆ ಚಿಪ್ಪಿಗನ ಮನೇ ಕಿಟಿಕಿಯೊಳಕ್ಕೆ ಸೊಂಡಿಲನ್ನು

ತಿಂಡಿ ಇಸಕೊಳ್ಳ ಬೇಕೆಂದು ನೀಡಿತು. ಆ ದಿನ ಚಿಪ್ಪಿಗನು ಯಾತಕ್ಕೋ

ಸ್ವರವೊ ಬಹಳ ಕೋಪವಾಗಿದ್ದನು. ಆನೆಯು ಸೊಂಡಿಲನ್ನು ಕಿಟಿಕಿ

ಯಲ್ಲಿ ಚಾಚಿದ ಕೂಡಲೆ ಚಿಪ್ಪಿಗನು ಸುಮ್ಮನೆ ಇರದೆ ತನ್ನ ಕೈಲಿದ್ದ ಸೂಜಿ

ಯಿಂದಆ ಸೊಂಡಿಲನ್ನು ತಿವಿದನು. ಕೂಡಲೇ ಗಜವು ಸೊಂಡಿಲನ್ನು

ಎಳೆದುಕೊಂಡು ಕೋಪವನ್ನು ತೋರಿಸದೆ ಹೊರಟುಹೋಯಿತು ;

ತರುವಾಯ ಕೆರೆಯಲ್ಲಿ ನೀರ ಕುಡಿದು ಬರುತಾ ಸೊಂಡಿರೊಳಕ್ಕೆ

ಐದಾರು ಕೊಡದಮಟ್ಟಗೆ ಕೊಚ್ಚೇ ನೀರನ್ನು ತುಂಬಿಕೊಂಡು ಚಿಪ್ಪಿಗನ

ಮನೇ ಕಿಟಿಕೀ ಹತ್ತಿರ ಬಂದು ನೀರೆಲ್ಲವನ್ನೂ ಅವನಮೇಲೆ ಸೊಂಡಿಲಿ

ನಿಂದ ಎರಚಿತು.. ಇದರಿಂದ ಚಿಪ್ಪಿಗನ ಮನೆಯೆಲ್ಲಾ ನೀರಾಯಿತು,

ಅವನಿಗೂ ಪೂರಾ ಸ್ನಾನವಾಯಿತು. ಇವನು ಮಾಡಿದ ಚೇಷ್ಟೆಗೆ

ತಕ್ಕ ಪ್ರಾಯಶ್ಚಿತ್ತ ವಾಯಿತು.


ಹೀಗೆಂದು ರಾಮಜೋಯಿಸನು ಕಥೆಯನ್ನು ಹೇಳಿ ಮುಗಿಸಲು,

ಮದನನು--ಜೋಯಿಸರೆ, ಜಂತುವಿನ ಶಕ್ತಿಯನ್ನು ನೋಡಿಕೊಂಡು, 

ಅವನು ಅದಕ್ಕೆ ತಕ್ಕಹಾಗೆ ನಡದುಕೊಳ್ಳ ಬೇಕಾಗಿತ್ತು. 

---------------------------------------------

98 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 



ಜೋಯಿಸ--ನೀನು ಹೇಳಿದ್ದು ಸರಿ, ನನಗೆ ಇನ್ನೊಂದು ಆನೇ

ಕಥೆ ಜ್ಞಾಪಕಕ್ಕೆ ಬರುತ್ತಿದೆ. ಅದು ಇದಕ್ಕಿಂತಲೂ ವಿಚಿತ್ರವಾಗಿದೆ,

ಹೇಳುತೇನೆ ಕೇಳು.


ಆನೆ ಮತ್ತು ಮಗು


ಒಂದಾನೊಂದು ಆನೆಗೆ ಮದ ಹತ್ತಿತ್ತು. ಅದು ವಿಪರೀತವಾಗಿ

ಆರ್ಭಟಸುತಾ ಕಟ್ಟಿ ಹಾಕಿದ್ದ ಸರಪಣಿಯನ್ನೂ ಮಿಣೀಹಗ್ಗವನ್ನೂ 

ಕಿತ್ತುಕೊಂಡು ಬಹು ರಭಸದಿಂದ ಹೊರಟಿತು. ಮಾಹುತನ ಹತೋಟ

ಮೀರಿತು... ಯಾರೂ ಅದನ್ನು ಅಡಗಿಸುವುದಕ್ಕಾಗಲಿಲ್ಲ. ಸಿಕ್ಕಿದ

ಮರಗಳನ್ನು ಮುರಿದು ಮನೆಗಳನ್ನುಉರುಳಿಸಿ, ಸಿಕ್ಕಿದ ಜನ

ರನ್ನು ಹಿಡಿದು ಬಡಿದು, ವಿಶೇಷವಾದ ಹಾವಳಿಯನ್ನು ಮಾಡು

ತಿದ್ದ ಆ ಆನೆಯ ಹೊಡೆತಕ್ಕೆ ಊರೆಲ್ಲಾ ಭಯದಿಂದ ಗಡಗಡನೆ

ನಡುಗಿ ಹೋಯಿತು. ಅದರ ಬಾಧೆಯನ್ನು ತಪ್ಪಿಸಿಕೊಳ್ಳುವು

ದಕ್ಕಾಗಿ ಮಾಹುತನ ಹೆಂಡತಿಯು ತನ್ನ ಮಗುವನ್ನು ಕಂಕು

ಳಲ್ಲಿ ಎತ್ತಿಕೊಂಡು ಓಡಿ ಹೋಗುತಿದ್ದಳು. ಅವಳನ್ನು ಕಂಡು

ಆನೆಯು ಹಿಂದಟ್ಟಿ ಕೊಂಡು ಬಂತು ಆ ಹೆಂಗಸು ಕೊನೆಗೆ ನಿಲ್ಲಲಾರದೆ

ತನ್ನ ಕಂಕುಳಲ್ಲಿದ್ದ ಮಗುವನ್ನು ಆನೆಯ ಮುಂದೆ ಮಲಸಿಸಿ-ಛಿ!

ನೀಚಜಂತುವೆ,  ಈ ಮಗುವನ್ನು ತಿಂದುಕೊ, ನನ್ನನ್ನೂ ಕೊಂದು

ಹಾಕು. ನಾವು ನಿನಗೆ ತಿಂಡಿಯನ್ನು ಹಾಕಿ ಸಾಕಿದ್ದಕ್ಕೆ ಇದೇ ನೀನು

ಮಾಡುವ ಪ್ರತ್ಯುಪಕಾರ. ಇಗೋ ನಿನ್ನ ರೋಷಕ್ಕೆ ನಾವೆಲ್ಲರೂ

ಬಲಿಯಾಗುತೇವೆ ; ಹೀಗೆಂದು ಎದುರಿಗೆ ಕೂಗಿ ಹೇಳಿದಳು. ಆಗ ಆ

ಗಜರಾಜನು ಆ ಮಗುವನ್ನು ಸೊಂಡಿಲಿನಿಂದ ಎತ್ತಿಕೊಂಡು ಮೇಲೆ

ಆಡಿಸಿ ತರುವಾಯ ಅದನ್ನು ತನ್ನ ಕತ್ತಿನ ಮೇಲೆ ಕೂರಿಸಿಕೊಂಡು

ಆ ಮಗುವಿಗೆ ಯಾವ ಯಾತನೆಯೂ ಇಲ್ಲದ ಹಾಗೆ ತಾಯಿಯ

ಮುಂದೆ ಮಲಗಿಸಿ ಆರ್ಭಟವನ್ನೆಲ್ಲಾ ಬಿಟ್ಟು ಸುಮ್ಮನೆ ನಿಂತು

ಕೊಂಡಿತು. ಆಗ ಮಾವುತನ ಹೆಂಡತಿಯು--ಛಿ, ನಡೆ ನಿನ್ನ

ಗೊತ್ತಿಗೆ,  ಎಂದು ಗದರಿಸಲು, ಕೂಡಲೆ ಗೊತ್ತಿಗೆ ಹೋಗಿ ಸಾದಾಗಿ

ನಿಂತುಕೊಂಡಿತು. ಕೂಡಲೆ ಅದನ್ನು ಕಟ್ಟಿ ಹಾಕಿದರು. 

-------------------------------------------

 9] ಸುಮತಿ ಮದನಕುಮಾಾರರ ಚರಿತ್ರೆ ೯೯


ಹೀಗೆ ಜೋಯಿಸನು ಹೇಳಿ ಮುಗಿಸಿದ ಎರಡು ಕಥೆಗಳನ್ನೂ

ಕೇಳಿ ಮದನನಿಗೆ ಬಹುವಾಗಿ ಆನಂದ ಉಂಟಾಯಿತು. ಮುಂದಕ್ಕೆ

ಜೀವಜಂತುಗಳ ವಿಷಯದಲ್ಲಿ ವಿವೇಕವಾಗಿದ್ದು ಅವುಗಳನ್ನು ಆದರ

ದಿಂದ ನೋಡಿಕೊಳ್ಳುತೇನೆಂದು ಮದನ ಹೇಳಿದನು.


..........

೯ ನೆ ಅಧ್ಯಾಯ


ಮಾರನೇ ದಿನ ಮದನನೂ ಸುಮತಿಯೂ ಇಬ್ಬರೂ ಸೇರಿ ಎಂದಿ

ನಂತೆ ತೋಟಕ್ಕೆ ಬಂದರು. ಅಲ್ಲಿ ತಾನು ಅಗೆದು ಮಡಿಮಾಡಿದ್ದ

ಪಾತಿಗೆ ಕೊತ್ತುಂಬರಿಯನ್ನು ಬಿತ್ತಬೇಕೆಂದು ಸುಮತಿಯು ತನ್ನ

ಸಂಗಡ ಸ್ವಲ್ಪ ಬೀಜವನ್ನು ತಂದಿದ್ದನು.


ಅವರಿಬ್ಬರೂ ಸೇರಿ ಕೆಲಸ ಮಾಡುತಾ ಇರುವಾಗ್ಗೆ,


ಮದನ--ಸುಮತಿ, ಮಂಜಿನಗಡ್ಡೆ ಯಿಂದ ತುಂಬಿ, ಛಳಿಯಿಂದ

ಪಂಚಪ್ರಾಣವನ್ನೂ ನಡುಗಿಸತಕ್ಕ ಒಂದಾನೊಂದು ದ್ವೀಪದಲ್ಲಿ ೩-೪

ಜನ ನಾವಿಕರು ವರ್ಷಾಂತರ ಇದ್ದರಂತಲ್ಲಾ ; ಈ ಕಥೆಯನ್ನು ನೀನು

ಕೇಳಿದ್ದೀಯಾ? ಆ ದೇಶದಲ್ಲಿ ಮನುಷ್ಯರನ್ನು ಉಂಡೆಯಾಗಿ ನುಂಗಿ

ಕೊಳ್ಳುವ ದೊಡ್ಡ ದೊಡ್ಡ ಕರಡಿ ಹೊರತು ಮತ್ತೆ ಯಾವ ಮೃಗವೂ

ಇಲ್ಲವಂತೆ.


ಸುಮತಿ-- ನಾನು ಕೇಳಿದೇನೆ.


ಮದನ--ಅದನ್ನು ನೆನಸಿಕೊಂಡರೆ ನಿನಗೆ ಅತ್ಯಂತ ಭಯವುಂ

ಟಾಗುವದಿಲ್ಲವೆ?


ಸುಮತಿ--ನನಗೇನೂ ಭಯವಾಗುವುದಿಲ್ಲ.


ಮದನ--ಅಂಥಾ ಹಾಳು ದೇಶದಲ್ಲಿ ಇರಬೇಕೆಂದು ಯಾಕೆ ಅಪೇ

ಕ್ಷಿಸುತೀಯೆ?


ಸುಮತಿ--ಅಂಥಾ ದೇಶದಲ್ಲಿ ಇರಬೇಕೆಂಬ ಅಪೇಕ್ಷೆ ನನಗಿಲ್ಲ. 

--------------------------------------

೧೦೦ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ 


ಆದರೆ ಹಾಗೆ ಸಂಭವಿಸಿದರೆ, ಅದು ನಮ್ಮ ಹಣೆಯಲ್ಲಿ ಬರೆದದ್ದೆಂದು.

ತಿಳಿದು ಅನುಭವಿಸಿಯೇ ತೀರಬೇಕು.


ಮದನ--ಅದೇನೋ ನಿಶ್ಚಯ. ಆದರೆ ಯಾರೂ ಇಲ್ಲದ ಅಂಥಾ

ದೇಶದಲ್ಲಿ ನಿನ್ನನ್ನು ಕರೆದುಕೊಂಡು ಹೋಗಿಬಿಟ್ಟರೆ ನಿನಗೆ ದುಃಖ

ಬರುವುದೋ ಇಲ್ಲವೋ ಹೇಳು.


ಸುಮತಿ--ಮನಸ್ಸಿಗೇನೋ ಸಂಕಟವಾಗುತ್ತೆ ನಿಜ. ಅಂಥಾ:

ಕ್ರೂರಮೃಗಗಳ ಬಾಥೆಯನ್ನು ತಪ್ಪಿಸಿಕೊಳ್ಳಲು, ನಾನು ಚಿಕ್ಕ ಹುಡುಗ

ನಾದ ಕಾರಣ ಶಕ್ತಿ ಸಾಲದೇ ಪೇಚಾಟವಾಗುವುದು ಖಂಡಿತ. ಆದರೆ

ಅತ್ತರೆ ಪ್ರಯೋಜನವೇನು?  ಅದಕ್ಕಿಂತಲೂ ತಕ್ಕ ಉಪಾಯವನ್ನು   

ಹುಡುಕಿ, ಬಂದ ಸಂಕಟವನ್ನು ಹೋಗಲಾಡಿಸಿಕೊಳ್ಳಲು ಯತ್ನಿಸ

ಬೇಕು.


ಮದನ--ನೀನು ಏನು ಉಪಾಯವನ್ನು ಮಾಡಬಲ್ಲೆ?


ಸುಮತಿ--ಸಿಕ್ಕಿದ ಸಾಮಾನುಗಳಿಂದ ಮನೆಯನ್ನು ಕಟ್ಟುತಿದ್ದೆ.


ಮದನ--ಮನೆಯನ್ನು ಕಟ್ಟುವುದಕ್ಕೆ ಯಾವ ಯಾವ

ಸಮಾನು ಬೇಕು? ಮರಗೆಲಸದವರು, ಕಾಮಾಟದವರು ಮೊದಲಾಗಿ

ಅನೇಕ ಕೆಲಸದವರು ಬೇಕಾಗುವುದು, ಇದಕ್ಕೇನು ಮಾಡುತೀಯೆ?


ಸುಮತಿ-. ಮನೆ ಎಂದರೆ ವಿಧ ವಿಧವಾದ ಮನೆಗಳಿವೆ, ಬಡವರ

ಮನೆಗಳು ನಿಮ್ಮ ಅರಮನೆಯ ಹಾಗೆ ಇರುವವೆ?


ಮದನ- ಹವುದು, ಬಡವರ ಮನೆ ಬಹು ಅಸಹ್ಯವಾಗಿರುವುದು,

ಅಂಥವರ ಮನೆಯಲ್ಲಿ ಅರಗಳಿಗೆಯೂ ನಾನು ಇರಲಾರೆ.


ಸುಮತಿ--ಅದರೂ ನೋಡು, ಬಡವರು ದೊಡ್ಡವರ ಹಾಗೆಯೇ

ಬಲಶಾಲಿಗಳಾಗಿಯೂ ಆರೋಗ್ಯವಂತರಾಗಿಯೂ ಇರುತಾರೆ. ನಿನಗೆ

ಮನೆ ಇಲ್ಲದೆ ಇದ್ದರೆ, ಬಡವರು ಮಾಡಿಕೊಂಡು ಇರುವಂಥಾ ಗುಡಿಸ

ಲಿನಲ್ಲಾದರೂ ವಾಸಮಾಡಿಕೊಂಡು ಇರುತಿದ್ದೆಯೇ ಹೊರತು, ಮೂರು

ಹೊತ್ತೂ ಮಳೆಯಲ್ಲಿ ನೆನೆದು ಬಿಸಿಲಿನಲ್ಲಿ ಒಣಗುತಿರಲಿಲ್ಲ.


ಮದನ. ಈ ಮಾತು ನಿಜ, ಆದರೆ ಅಂಥಾ ಮನೆಯನ್ನು ಕಟ್ಟು

ವುದು ಹೇಗೆ? 

-------------------------------------

9] ಸುಮತಿ ಮದನಕುಮಾರರ ಚರಿತ್ರೆ ೧೦೧ 



ಸುಮತಿ--ಹೇಗೆ ಎಂದರೆ, ನನ್ನ ಹತ್ತಿರ ಈಗ ಒಂದು ದೊಡ್ಡ

ಮಚ್ಚು ಕತ್ತಿಯೂ ಒಂದು ಗುದ್ದಲಿಯೂ ಇದ್ದರೆ, ತೋರಿಸಿಯೇನು.

ಗುದ್ದಲಿಯಲ್ಲಿ ಮಣ್ಣ ಅಗೆದು ನೀರ ಹಾಕಿ ಕಲೆಯಿಸಿ, ಮುದ್ದೇ ಕಟ್ಟಿ 

ಚಿಕ್ಕದಾಗಿ ಗೋಡೆಯನ್ನು ಹಾಕುವುದು, ಬಲವಾದ ಎರಡು ಕವೆ

ಗಳನ್ನು ಕಡಿದು ಎದುರುಬದುರಿಗೆ ನೆಡುವುದು. ಅದರ ಮೇಲೆ ಅಡ್ಡ

ಮರಗಳನ್ನು ಹಾಕಿ ಸಣ್ಣ ಕೊಂಬೆಗಳನ್ನು ಕಡಿದು ಮೇಲಿನಿಂದ ಕೆಳಗಿನ

ವರೆಗೂ ಎರಡು ಕಡೆಯೂ ಇಳಿಜಾರಾಗಿಯೂ ಸ್ವಲ್ಪ ಒತ್ತಾಗಿಯೂ

ಹಾಕುವುದು. ಆಮೇಲೆ ಹುಲ್ಲಿನ ಕಂತೆಗಳನ್ನು ತಂದು ಹಾಗೆ ಕಟ್ಟಿದ

ಹಾರಿನ ಮೇಲೆ ಒತ್ತಾಗಿ ಹಾಕುವುದು. 


ಮದನ--ಮನೆಯನ್ನು ಕಟ್ಟುವುದು ಇಷ್ಟು ಸುಲಭ ಎಂದು

ನನಗೆ ತಿಳಿಯದು. ಇಂಥಾ ಮನೆಗಳಲ್ಲಿ ಜನರು ವಾಸಮಾಡು `

ತಾರೆಯೆ? ಇದು ಸಾಧ್ಯವೆ?


ಸುಮತಿ--ಸಾಧ್ಯವೇ. ಅನೇಕ ದೇಶಗಳಲ್ಲಿ ಬಡ ಜನರು ಇಂಥಾ

ಮನೆಗಳಲ್ಲಿ ವಾಸಮಾಡುತಾರೆಂದು ನಾನು ಕೇಳಿದೇನೆ,


ಮದನ--ಹಾಗಾದರೆ. ನಾನೂ ಒಂದು ಮನೆಯನ್ನು ಕಟ್ಟ

ಬೇಕೆಂದು ಆಸೆಯಾಗುವುದು.


ಇವರಿಬ್ಬರೂ ಹೀಗೆ ಮಾತನಾಡುತಿರುವಾಗ ಜೋಯಿಸನು

ಬಂದು, ಓದುವುದಕ್ಕೆ ಬನ್ನಿ ಎಂದು ಕರೆದು, ಮದನನನ್ನು ಕುರಿತು--

ಪ್ರಾಣಿಗಳಿಗೆ ದಯಾರಸವನ್ನು ತೋರಿಸಬೇಕೆಂಬ ವಿಷಯವಾಗಿ ನಾನು

ಒಂದು ಒಳ್ಳೇ ಕಥೆಯನ್ನು ಹುಡುಕಿ ಇಟ್ಟಿದೇನೆ, ಅದನ್ನು ಓದು-.

ಎಂದು ಹೇಳಿದನು.


ಮದನ--ಅಗತ್ಯವಾಗಿ ಓದುತೇನೆ. ಈಚೆಗೆ ನನಗೆ ಓದುವುದು

ಚೆನ್ನಾಗಿ ಬಂತು. ಈಗ ನಾನು ಏನನ್ನಾದರೂ ಓದಿಕೊಳ್ಳುತಾ

ಅನಂದಪಡಬಲ್ಗೆ.


ಜೋಯಿಸ-- ಓದುವುದರಿಂದ ಅನೇಕರು ಆನಂದಪಡಬಲ್ಲರು.

ಓದುವುದಕ್ಕೆ ಬಂದಮೇಲೆ ವಿದ್ಯವನ್ನು ಕಲಿಯುವುದು ಭಾರವಾಗಿರು

ವುದಿಲ್ಲ. ಓದು ಬಲ್ಲವನು ಗ್ರಂಥಗಳನ್ನು ಓದಿ ಸಂತೋಷ ಪಡದೇ 

----------------------------------------------

೧೦೨ ಸುಮತಿ ಮದನಕುಮಾರರ ಚಂತ್ರೆ [ಅಧ್ಯಾಯ-


ಇದ್ದರೆ, ಆ ತಪ್ಪು ಅವನದೇ ಹೊರತು ಬೇರೆ ಅಲ್ಲ. ದೊರೆ ಮಕ್ಕಳು,

ದೊರೆ ಮಕ್ಕಳು, ಎಂದು ನೀನು ಆಗಾಗ್ಯೆ ಹೇಳುತೀಯಷ್ಟೆ. ಇಂಥಾ

ದೊರೆ ಮಕ್ಕಳು ಓದಿ ಬುದ್ಧಿವಂತರಾಗುವುದಕ್ಕೆ ಅವರಿಗೆ ಉಪಪತ್ತಿ

ಬಹಳವಾಗಿದೆ. ಯಾಕೆಂದರೆ ಅವರು ಹೊಟ್ಟೆಗೋಸ್ಕರ ಕಷ್ಟ ಪಟ್ಟು

ಸಂಪಾದನೆ ಮಾಡಬೇಕಾದ ಪ್ರಕೃತವಿಲ್ಲ. ದೊರೆ ಮಕ್ಕಳು ಆ ಕಾಲ

ವನ್ನೆಲ್ಲಾ ಓದುವುದರಲ್ಲಿ ಕಳೆದು ಬುದ್ಧಿ ವಂತರಾದರೆ, ಲೋಕಕ್ಕೆ

ಉಪಕಾರವಾಗುವುದು. ಇದನ್ನು ಬಿಟ್ಟು ಬೇಕು ಬೇಕಾದ ಬಟ್ಟೆಯನ್ನು

ಧರಿಸಿ ಬೇಕಾದ ಒಡವೆಯನ್ನು ಇಟ್ಟು ದೊರೆ ಮಕ್ಕಳು ಮೆರೆಯುವುದ

ರಿಂದ ಯಾರಿಗೆ ಯಾವ ಉಪಕಾರವಾದಹಾಗೆ ಆಯಿತು? ಇಂಥಾ

ಡಂಭವನ್ನು ಮಾಡುವುದಕ್ಕೆ ದೊರೆ ಮಕ್ಕಳೇ ಆಗಬೇಕೆ? ಹಣಗಾರರೆ

ಲ್ಲರೂ ಈ ಮೆರತವನ್ನು ಮೆರೆಯಬಹದು. ಇದು ಹಾಗಿರಲಿ, ಕಥೆಯನ್ನು

ಓದು ಎಂದನು, ಆಗ ಮದನನು ಕಥೆಯನ್ನು ಓದಿದನು- 


ಒಳ್ಳೇ ಹುಡುಗನ ಕಥೆ


ಒಂದು ಹಳ್ಳಿಯಲ್ಲಿ ಒಬ್ಬ ಹುಡುಗನಿದ್ದನು. ನೆರೇ ಊರಿನಲ್ಲಿ

ರುವ ತನ್ನ ಚಿಕ್ಕಮ್ಮನನ್ನು ನೋಡಬೇಕೆಂದು ಇವ ಹೊರಟನು. ಇವನ

ತಾಯಿ ಮಗನಿಗೆ ಬುತ್ತಿಯನ್ನು ಕಟ್ಟಿಕೊಟ್ಟಳು. ಅದನ್ನು ತೆಗೆದು

ಕೊಂಡು, ಈ ಹುಡುಗನು ದಾರಿಯಲ್ಲಿ ಹೋಗುತಿರುವಾಗ ಹೊಟ್ಟೆಗಿ

ಲ್ಲದೆ ಒಣಗಿಕೊಂಡಿದ್ದ ಒಂದು ನಾಯಿಯು ಬಾಲವನ್ನು ಅಳ್ಳಾಡಿಸುತಾ

ಇವನ ಮುಂದೆ ಬಂತು. ಈ ಹುಡುಗನು ಅದನ್ನು ನೋಡಿ, ಕನಿಕರ

ದಿಂದ ತನ್ನ ಬುತ್ತಿಯಲ್ಲಿದ್ದ ಅನ್ನವನ್ನು ಸ್ವಲ್ಪ ತೆಗೆದು ಅದಕ್ಕೆ ಹಾಕಿ

ದನು. ಆ ನಾಯಿಯು ಅನ್ನವನ್ನು ತಿಂದು ಸಂತೋಷದಿಂದ ಇವನ

ಹಿಂದೆಯೇ ಹೊರಟಿತು.


ಮುಂದಕ್ಕೆ ಹೋಗಲು ಒಂದು ಕುದುರೆಗೆ ಕಾಲು ಉಳುಕಿ ಹುಲ್ಲು

ನೀರು ಇಲ್ಲದೆ ಅದು ಬಿದ್ದಿತ್ತು. ಈ ಬಾಲಕನು ಅದನ್ನು ಕಂಡು, ಅದರ

ಮೈ ತಡವರಿಸಿ, ಕಾಲನ್ನು ನೀವಿ, ಕುದುರೆಯನ್ನು ಮೇಲಕ್ಕೆ ಎಬ್ಬಿಸಿ.

ನಿಲ್ಲಿಸಿ, ಸ್ವಲ್ಪ ಹುಲ್ಲನ್ನು ತಂದು ಹಾಕಿ, ನೀರನ್ನು ಕುಡಿಸಿದನು.

-----------------------------------------------

೯] ಸುಮತಿ ಮದನಕುಮಾರರ ಚರಿತ್ರೆ 103 


ಕುದುರೆಯು ಚೇತರಿಸಿಕೊಂಡು ಮೆಲ್ಲನೆ ಮುಂದಕ್ಕೆ ಹೊರಟಿತು. ಆಗ

ಈ ಹುಡುಗನು-- ಹೊತ್ತು ಬಹಳವಾಯಿತು. ದಾರಿ ಸಾಗಲಿಲ್ಲ,

ಸುತ್ತುಮುತ್ತ ಕಳ್ಳರ ಕಾಟವೆಂದು ಹೇಳುತಾರೆ. ಆದರೂ ಚಿಂತೆ ಇಲ್ಲ

ಸಂಕಟಪಡುತಿದ್ದ ಪ್ರಾಣಿಮಾತ್ರಕ್ಕೆ ನಾವು ಉಪಕಾರವನ್ನು ಮಾಡಿದರೆ

ನಮಗೆ ಪುಣ್ಯ ಉಂಟು. ನಮಗೆ ಬಂದ ಕಷ್ಟವನ್ನೆಲ್ಲಾ ದೇವರು ಪರಿ

ಹರಿಸುತಾನೆ, ಎಂದುಕೊಂಡನು.


ಆಮೇಲೆ ಮುಂದಕ್ಕೆ ಹೋಗಲು, ಅಲ್ಲಿ ಒಬ್ಬ ತುರುಕನು ಒಂದು

ಕೆರೆಯೊಳಗೆ ಎದೆಯುದ್ದ ನೀರಿನಲ್ಲಿ ಹೋಗುತಿದ್ದನು. ಈ ಒಳ್ಳೇ

ಹುಡುಗನು ಅವನನ್ನು ಕಂಡು--ಅಪ್ಪಾ, ನೀನು ಯಾರು? ನಡುನೀರಿ

ನಲ್ಲಿ ಯಾಕೆ ಹಾಗೆ ಹೋಗುತೀಯೇ? ಎಂದು ಕೂಗಿದನು. ಆ ಕುರು

ಡನು--ಅಯ್ಯಾ ನನಗೆ ಎರಡು ಕಣ್ಣೂ ಕಾಣುವುದಿಲ್ಲ. ದಾರಿತಪ್ಪಿ ಈ 

ಕಡೆಗೆ ಬಂದು ನೀರಿನೊಳಕ್ಕೆ ಬಿದ್ದೆ. ನನಗೆ ದಾರೀ ತೋರಿಸಯ್ಯ

ಎಂದನು. ಈ ಬಾಲಕನು ದಯಾರಸದಿಂದ ನೀರಿನ ತಡಿಗೆ ಹೋಗಿ

ಅಲ್ಲಿ ಬಿದ್ದಿದ್ದ ಉದ್ದವಾದ ಜಳವೆಯನ್ನು ತೆಗೆದುಕೊಂಡು, ಅದರ

ಮೂಲಕ ಕುರುಡನು ನೀರಿನ ತಡಿಗೆ ಬರುವಂತೆ ಮಾಡಿ, ಅವನನ್ನು

ದಾರಿಗೆ ಕರೆತಂದುಬಿಟ್ಟನು. ಈ ಉಪಕಾರಕ್ಕಾಗಿ ಕುರುಡನು ಹುಡುಗ

ನನ್ನು ಕೊಂಡಾಡಿ, ಹರಸಿ ಮುಂದಕ್ಕೆ ನಡೆದನು.


ತರುವಾಯ ಈ ಹುಡುಗನ ದಾರಿ ಸ್ವಲ್ಪ ಸಾಗಿತು. ಅಷ್ಟರಲ್ಲಿಯೇ

ಅಲ್ಲಿ ಒಬ್ಬ ಕುಂಟ ಕೂತುಕೊಂಡು--ಅಪ್ಪಾ ಧರ್ಮಾತ್ಮರೆ ನಾನು

ಎರಡು ಕಾಲೂ ಇಲ್ಲದ ಹೆಳವ, ನನಗೆ ಏನಾದರೂ ಕೊಟ್ಟು ಪುಣ್ಯ

ವನ್ನು ಕಟ್ಟಕೊಳ್ಳಿ, ಎಂದನು. ಈ ಬಾಲಕನು ಅದನ್ನು ಕಂಡು, 

ತನ್ನ ಹತ್ತಿರ ಇದ್ದ ಬುತ್ತಿಯ ಅನ್ನವನ್ನೆ,ಲ್ಲಾ ಅವನಿಗೆ ಇಕ್ಕಿ, ತಾನು

ಹಸಿದುಕೊಂಡು ಮುಂದಕ್ಕೆ ಹೊರಟನು.


ಆಗ ಅರ್ಥದಾರಿಕೂಡ ಸಾಗಿರಲಿಲ್ಲ.. ಸಾಯಂಕಾಲವಾಯಿತು,

ಮೋಡ ಕವಿದುಕೊಂಡಿತು, ಮಳೆ ಹುಯ್ಯುವುದಕ್ಕೆ ಮೊದಲಾಯಿತು

ಇವನ ಕಾಲಿಗೆ ಮುಳ್ಳು ಬಲಿದುಕೊಂಡು ತುಂಬಾ ಯಾತನೆಯಾಯಿತು.

ಒಂದು ಹೆಜ್ಜೆಯನ್ನೂ ಆಚೆಗೆ ಇಡಲಾರದೆ ಹುಡುಗನು, ಒಂದು ಕಲ್ಲಿನ 

-------------------------------------------------

೧೦೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಹತ್ತಿರ ಕೂತುಕೊಂಡು, ಅಳುವುದಕ್ಕೆ ಮೊದಲುಮಾಡಿದನು. ಆಗ

ಇವನ ಸಂಗಡಲೆ ಹೋಗುತಿದ್ದ ನಾಯಿಯು ಎಲ್ಲಿಂದಲೋ ಒಂದು

ಗಂಟನ್ನು ಕಚ್ಚಿಕೊಂಡು ಬಂದು ಮುಂದೆ ಹಾಕಿತು. ಹುಡುಗನು

ಅದನ್ನು ತೆಗೆದುಕೊಂಡು ಬಿಚ್ಚಿ ನೋಡಲು, ಅದರಲ್ಲಿ ಎರಡು ರೊಟ್ಟಿ 

ಇತ್ತು. ಇವನು ಆ ರೊಟ್ಟಿಯನ್ನು ತಿಂದು, ಸ್ವಲ್ಪ ಹಾಗೆಯೇ ಕೂತು

ಕೊಂಡನು.


ಆಗ ಒಂದು ಕುದುರೆಯು ಇವನ ಸಮೀಪಕ್ಕೆ ಬಂದು ನಿಂತಿತ್ತು,

ಇವನಿಗೆ ಕಾಲು ಬಹು ಯಾತನೆಯಾಗಿದ್ದ ಕಾರಣ ಅದರಮೇಲೆ ಹತ್ತಿ

ಕೊಂಡು ಹೋದರು. ಅದು ಇವನನ್ನು ದಾರಿಗೆ ಕರೆದುಕೊಂಡು

ಹೋಗಿಬಿಟ್ಟತು. ಅಷ್ಟುಹೊತ್ತಿಗೆ ಬೆಳದಿಂಗಳು ಬಂತು. ತಾನು ಆ

ದಿನ ಬೆಳಗ್ಗೆ ಹುಲ್ಲನ್ನು ಹಾಕಿ ಕಾಲನ್ನು ನೀವಿ, ಉಪಚರಿಸಿದ್ದ ಕುದು

ರೆಯೇ ಅದೆಂದು ತಿಳಿದುಕೊಂಡನು. ಮತ್ತು ಈ ನಾಯಿ ಇಲ್ಲದಿದ್ದರೆ

ನಾನು ಹಸಿವಿನಲ್ಲಿ ಸಾಯಬೇಕಾಗುತಿತ್ತು. ಈ ಕುದುರೆ ಇಲ್ಲದಿದ್ದರೆ

ರಾತ್ರೆ ಎಲ್ಲಾ ಕಾಡಿನಲ್ಲಿ ನರಳಬೇಕಾಗುತಿತ್ತು. ನಾನು ಮಾಡಿದ ಉಪ

ಕಾರವನ್ನು ಸ್ಮರಿಸಿಕೊಂಡು ಈ ಜಂತುಗಳು ನನಗೆ ಪ್ರತಿಯಾಗಿ ಉಪ

ಕಾರವನ್ನು ಮಾಡಿದವು. ನಾವು ಒಬ್ಬರಿಗೆ ಒಳ್ಳೇದನ್ನು ಮಾಡಿದರೆ

ಅದರ ಫಲ ನಮಗೆ ಎಂದಿಗಾದರೂ ಇದ್ದೇ ಇರುವುದು, ಎಂದುಕೊಂಡನು.


ಇವನಿಗೆ ಇನ್ನೊಂದು ಅಪಾಯ ಕಾಡಿತ್ತು. ಮುಂದಕ್ಕೆ ಹೊರ

ಡಲು ಇಬ್ಬರು ಕಳ್ಳರು ಹೊಂಚು ಹಾಕಿಕೊಂಡಿದ್ದು ಓಡಿಬಂದು ಇವ

ನನ್ನು ಹಿಡಿದುಕೊಂಡು ಬಟ್ಟೆಯನ್ನು ಕಿತ್ತುಕೊಳ್ಳುವುದಕ್ಕೆ ಮೊದಲು

ಮಾಡಿದರು... ಈ ಹುಡುಗನ ಸಂಗಡಲೇ ಬರುತಿದ್ದ ಬಡಕಲ

ನಾಯಿಯು ಒಬ್ಬ ಕಳ್ಳನ ಕಾಲನ್ನು ಚೆನ್ನಾಗಿ ಕಚ್ಚಿತು. ಅವನು

ಅದನ್ನು ಹರಿಸಿಕೊಂಡು ಓಡಿಹೋದನು. ಇಷ್ಟರಲ್ಲಿಯೇ “ಅಕೊ, 

ಅಲ್ಲಿದಾರೆ, ಹಿಡಿದುಕೊಳ್ಳಿ ಹಿಡಿದುಕೊಳ್ಳಿ,” ಎಂದು ಧ್ವನಿ ಕೇಳಿತು.

ಕೂಡಲೆ ಒಬ್ಬ ಮನುಷ್ಯನು ಇನ್ನೊಬ್ಬನ ಹೆಗಲಿನಮೇಲೆ ಕೂತುಕೊಂಡು

ಬಂದನು. ಆಕ್ಷಣವೇ ಇನ್ನೊಬ್ಬ ಕಳ್ಳನೂ, ಹುಡುಗನನ್ನು ಬಿಟ್ಟು ಬಿಟ್ಟು

ಓಡಿಹೋದನು. ಆಗ ಈ ಬಾಲಕನನ್ನು ಕುರಿತು ಹೆಗಲಮೇಲೆ ಕೂತಿದ್ದ 

----------------------------------------------

9] ಸುಮತಿ ಮದನಕುಮಾರರ ಚರಿತ್ರೆ ೧೦೫ 


ಮನುಷ್ಯನು--ಅಪ್ಪಾ, ಈ ಕಳ್ಳರು ನಿಮ್ಮನ್ನು ಹಿಡಿದು ಹೊಡೆದು ಎಲ್ಲ

ವನ್ನೂ ಕಸಗೊಳ್ಳುಬೇಕು, ಎಂದು ಮಾತನಾಡಿಕೊಂಡು ಬಂದರು.

ಇದನ್ನು ನಾನು ತಿಳಿದುಕೊಂಡೆ. ಹೆಳವನಾದ್ದರಿಂದ ಈ ಕುರುಡನ

ಹೆಗಲಿನ ಮೇಲೆ ಕೂತುಕೊಂಡು, ಅವನಿಗೆ ದಾರಿ ತೋರಿಸಿದೆ.

ಅವನು ನನ್ನನ್ನು ಎತ್ತಿಕೊಂಡು ಬಂದ. ನಾವಿಬ್ಬರೂ ನಿನಗೆ ಬಂದ

ಅಪಾಯವನ್ನು ತಪ್ಪಿಸಬೇಕೆಂದು ಬಂದೆವು ಎಂದು ಹೇಳಿದನು. ಆ

ಹುಡುಗನು ಇದಕ್ಕೆ ಸಂತೋಷಪಟ್ಟು ಅವರನ್ನು ತನ್ನ ಜೊತೆಯ

ಲ್ಲಿಯೇ ಊರಿಗೆ ಕರೆದುಕೊಂಡು ಹೋಗಿ ಉಪಚಾರವನ್ನು ಮಾಡಿ

ಕಳುಹಿಸಿದನು.


ಈ ರೀತಿಯಲ್ಲಿ ಕಥೆ ಮುಗಿಯಿತು. ಆಗ ಮದನಕುಮಾರನು-.-

ಜೋಯಿಸರ, ಈ ಕಥೆ ನಿಶ್ಚಯವಾಗಿದ್ದರೂ ಇರಬಹುದು. ಈ

ಸುಮತಿಯ ಮೇಲೆ ಮೃಗಾದಿಗಳಿಗೆಲ್ಲಾ ಪ್ರೇಮವಿದೆ, ಯಾಕೆಂದರೆ

ಇವನು ಅವುಗಳನ್ನು ಬಹು ಆದರದಿಂದ ಕಾಣುತಾನೆ ; ದೊಡ್ಡ ನಾಯಿ

ಯನ್ನು ನೋಡುವುದಕ್ಕೆ ನನಗೆ ಭಯವಾಗುವುದು, ಆದರೆ ನಾಯಿಯು

ಬಾಲವನ್ನು ಅಳ್ಳಾಡಿಸಿಕೊಳ್ಳುತಾ ಸುಮತಿಯ ಹಿಂದೆ ಸುತ್ತುವುದು.


ಜೋಯಿಸ--ನೀನೂ ಅದನ್ನು ಆದರಿಸಿದರೆ, ಆ ನಾಯಿಯು

ನಿನ್ನ ಕಂಡರೂ ಹಾಗೆಯೇ ಇರುವುದು. ಇದು ಹಾಗಿರಲಿ. ಒಳ್ಳೇ

ಹುಡುಗನ ಕಥೆಯನ್ನು ನೀನು ಓದಿದೆ. ಇದಕ್ಕೆ ಪ್ರತಿಯಾಗಿರುವ

ಗುಣವುಳ್ಳ ಮತ್ತೊಬ್ಬ ಹುಡುಗನ ಕಥೆಯನ್ನು ಸುಮತಿ ಓದುತಾನೆ

ಕೇಳು, ಎಂದನು. ಆಮೇಲೆ ಸುಮತಿಯು ಓದಲಾರಂಭಿಸಿದನು.


ಕೆಟ್ಟ ಹುಡುಗನ ಕಥೆ


ಒಂದು ಊರಿನಲ್ಲಿ ಕೋಪಿಷ್ಠನಾಗಿ ಪಿಸುಣನಾದ ಒಬ್ಬ ಮನುಷ್ಯ

ನಿದ್ದನು, ಇವನಿಗೆ ತುಂಟನಾದ ಒಬ್ಬ ಮಗ ಉಂಟು. ತಂದೆಯು

ಮಗನಿಗೆ ವಿದ್ಯಾಬುದ್ಧಿಯನ್ನು ಕಲಿಸದೆ, ಪೋಲಿಯಾಗಿ ಬಿಟ್ಟಿದ್ದನು.

ಈ ಹುಡುಗನು ಕಂಡವರನ್ನು ಬಯ್ಯುವುದೂ, ಸಿಕ್ಕಿದವರನ್ನು ಹೊಡೆ

ಯುವುದೂ, ಎಲ್ಲರ ಮನೆಯ ಮೇಲೂ ಕಲ್ಲ ಎಸೆಯುವುದೂ, ಇವೇ

ಮೊದಲಾದ ಅನೇಕ ತುಂಟತನಗಳನ್ನು ಮಾಡುತಿದ್ದನು. 

--------------------------------------------

೧೦೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 



ಈ ಹುಡುಗನು ಮಗ್ಗಲ ಗ್ರಾಮದಲ್ಲಿ ಆಗುತಿದ್ದ ಮಾರೀಜಾತ್ರೆ

ಯನ್ನು ನೋಡಬೇಕೆಂದು, ಒಂದು ದಿನ ಬೆಳಗ್ಗೆ ಎದ್ದು ಹೊರಟನು.

ಇವನ ಸ್ವಭಾವಕ್ಕೆ ಸರಿಯಾದ ಒಂದು ಕೆಟ್ಟ ನಾಯಿಯೂ ಇವನ

ಸಂಗಡಲೇ ಹೊರಟಿತು. ಊರ ಬಾಗಿಲಿನ ಹತ್ತಿರ ಒಬ್ಬ ಚಿಕ್ಕ ಹುಡು

ಗನು ನಾಲ್ವತ್ತು ಐವತ್ತು ಕುರಿಗಳನ್ನು ಅಟ್ಟಿಕೊಂಡು ಹೋಗುತಾ ಈ.

ತುಂಟನನ್ನು ನೋಡಿ,- ಎಲಣ್ಣಾ, ನಿನ್ನ ನಾಯಿಯನ್ನು ಸ್ವಲ್ಪದೂರ

ದಲ್ಲಿ ನಿಲ್ಲಿಸಿಕೊ. ಇಲ್ಲದಿದ್ದರೆ ಅದಕ್ಕೆ ನಮ್ಮ ಕುರಿಗಳೆಲ್ಲಾ ಹೆದರಿ

ಕೊಂಡು, ದಿಕ್ಕುದಿಕ್ಕಿಗೆ ಓಡಿಹೋಗುವವು, ಎಂದು ಕೇಳಿಕೊಂಡನು.

ಆ ಮಾತನ್ನು ಕೇಳಿದ ತಕ್ಷಣವೇ, ಆ ಕೆಟ್ಟ ಹುಡುಗನು ತನ್ನ ನಾಯಿ

ಯನ್ನು ಕರೆದು--ಭೈರೂ, ಛೂ, ಎಂದು ಅದನ್ನು ಕುರೀಹಿಂಡಿನ

ಮೇಲೆ ಛೂಬಿಟ್ಟನು. ಅದು ಬಗುಳುವುದಕ್ಕೆ ಮೊದಲು ಮಾಡಿತು.

ಕುರಿಗಳೆಲ್ಲಾ ಕೈಗೆ ಸಿಕ್ಕಿದಹಾಗೆ ದಿಕ್ಕ ಪಾಲಾದವು. ಆಗ ಕುರೀ

ಕಾಯುವ ಹುಡುಗನು ಇವ ಮಾಡಿದ ಕೆಲಸಕ್ಕೆ ಅಳುತಾ ಮನೆಗೆ

ಹೊರಟುಹೋದನು. ಆ ಹಿಂಡಿನಲ್ಲಿದ್ದ ಬಲವಾದ ಒಂದು ಟಗರು

ನಾಯಿಯಮೇಲೆ ತಿರುಗಿ ಬಿತ್ತು; ತನ್ನ ತಲೆಯಿಂದ ನಾಯಿಗೆ ಬಲ

ವಾದ ಡಿಕ್ಕಿಯನ್ನು ಹೊಡೆಯಿತು. ಟಗರಿಗಿದ್ದ ಉದ್ದವಾದ ಸನ್ನೇ 

ಕೊಂಬು ಆ ನಾಯಿಗೆ ಚುಚ್ಚಿಕೊಂಡಿತು. ಶ್ವಾನವು ಅರಚಿಕೊಳ್ಳುತಾ

ಓಡಿಹೋಯಿತು. ಅದಕ್ಕೆ ಪೂರಾ ಪೆಟ್ಟಾಯಿತು. ಇದಕ್ಕೆ ಸ್ವಲ್ಪವೂ

ವ್ಯಥೆಸಡದೆ, ತುಂಟುಹುಡುಗನು ಮುಂದಕ್ಕೆ ಹೋದನು. ಅಲ್ಲಿ ಒಬ್ಬ

ಹುಡುಗಿಯು ಮೊಸರಿನ ಮಡಕೆಯನ್ನು ಇಳುಕಿಕೊಂಡು ಕೂತಿದ್ದಳು.

ಅವಳು ಈ ಹುಡುಗನನ್ನು ನೋಡಿ--ಅಪ್ಪಾ, ಈ ತುಂಬಿದ ಗಡಿಗೆ

ಯನ್ನು ನಾನು ಎತ್ತಲಾರೆ. ಮಾರೀಜಾತ್ರೆಯಲ್ಲಿ ನಮ್ಮ ತಂದೆಯು

ಜನರಿಗೆ ದೊಡ್ಡ ಪಾನಕಪೂಜೆಯನ್ನು ಮಾಡಿಸುತಾರೆ. ಅನೇಕರಿಗೆ

ನೀರಮಜ್ಜಿಗೆಯನ್ನು ಹಾಕಿಸುತಾನೆ.. ಈ ಮಡಕೆಯನ್ನು ಎತ್ತಿ

ನನ್ನ ತಲೇ ಮೇಲೆ ಹೊರಿಸಯ್ಯಾ, ನಿನಗೆ ಪುಣ್ಯಬರುವುದು, 

ಎಂದಳು. ಇದಕ್ಕೆ  ದುಷ್ಟ ಹುಡುಗನು ಮೊಸರಿನ ಮಡಕೇ ಬಳಿಗೆ

ಹೋಗಿ ನಿಂತು--ಏನೆಲೇ ಹೆಣ್ಣೇ, ನಿಮ್ಮಪ್ಪ ಪಾನಕಪೂಜೇ ಮಾಡಿಸು 

---------------------------------------------

9] ಸುಮತಿ ಮದನಕುಮಾರರ ಚರಿತ್ರೆ ೧೦೭ 


ತಾನೊ? ಕಡಲೆಬೇಳೆ, ಹೆಸರಬೇಳೆಯನ್ನು ನನಗೂ ಕೊಡಿಸುತೀಯೋ,

ಎಂದು ಹೇಳುತಾ ಮೊಸರಿನ ಗಡಿಗೆಯನ್ನು ಎತ್ತಿ ಆ ಹುಡುಗೀ

ತಲೆಯಮೇಲೆ ಸುರಿದು ಬಿಟ್ಟನು. ಹುಡುಗಿಯು ಗಟ್ಟಿಯಾಗಿ ಅಳುತಾ

ಹೊರಬುಹೋದಳು.


ತಾನು ಮಾಡಿದೆ ಕೆಲಸ ಇಷ್ಟರಮಟ್ಟಿಗೆ ಸಾಗಿತಲ್ಲಾ, ತನ್ನನ್ನು

ಯಾರೂ ಏನನ್ನೂ ಮಾಡಲಿಲ್ಲವಲ್ಲಾ, ಎಂದು ಧೈರ್ಯದಿಂದ ಎದೆ 

ಯನ್ನು ಇನ್ನೂ ಕಲ್ಲುಮಾಡಿಕೊಂಡು ಮುಂದಕ್ಕೆ ನಡೆದನು. ಅಲ್ಲಿ

ಹತ್ತಿಪ್ಪತ್ತು ಜನ ಹುಡುಗರು ಚೆಂಡಾಡುತಿದ್ದರು. ಅವರ ಜೊತೆಗೆ

ಇವನೂ ಸೇರಿ, ಒಂದೆರಡು ಆಟವನ್ನು ಆಡಿ, ಅವರ ಚೆಂಡನ್ನು

ಆಳವಾದ ಒಂದು ಬಚ್ಚಲಿಗೆ ಹಾಕಿದನು. ಆ ಹುಡುಗರೆಲ್ಲರೂ ಚೆಂಡನ್ನು

ಹುಡುಕಬೇಕೆಂದು ಬಚ್ಚಲತಡಿಯಲ್ಲಿ ಬಂದು ಸಾಲಾಗಿ ನಿಂತುಕೊಂಡು

ನೋಡುತಿದ್ದರು. ಈ ನೀಚನು ಅವರಲ್ಲಿ ಒಬ್ಬ ಹುಡುಗನ ಮೇಲೆ

ಮತ್ತೊಬ್ಬ ಹುಡುಗನನ್ನು ತಳ್ಳಿದನು. ಅವನು ಇನ್ನೊಬ್ಬನ ಮೇಲೆ

ಬಿದ್ದನು. ಹೀಗೆ ಆ ಹುಡುಗರೆಲ್ಲರೂ ಒಬ್ಬರ ಮೇಲೆ ಒಬ್ಬರು ಬಿದ್ದು

ಬಚ್ಚಲೊಳಕ್ಕೆ ಉರುಟಿಕೊಂಡರು. ಎಲ್ಲರಿಗೂ ಮೈ ಎಲ್ಲಾ ಕೊಚ್ಚೆ

ಯಾಯಿತು. ಆ ದುರ್ಮಾರ್ಗನು ತಲೆಯನ್ನು ತಪ್ಪಿಸಿಕೊಂಡು ಓಡಿ

ಹೋದನು. ಮುಂದೆ ದಾರಿಯಲ್ಲಿ ಒಂದಾನೊಂದು ಕತ್ತೆ ಮೇಯು

ತಿತ್ತು. ಈ ದುಷ್ಪಶಿರೋಮಣಿಯು ಒಂದು ಮುಳ್ಳುಗಿಡವನ್ನು

ಮುರಿದು, ಅದರೆ ಬಾಲಕ್ಕೆ ಕಟ್ಟಿದನು. ತರುವಾಯ ಭೈರೂ, ಛೂ, 

ಎಂದು ತನ್ನ ನಾಯಿಯನ್ನು ಛೂಬಿಟ್ಟನು. ಒಕ್ಕಡೆ ಮುಳ್ಳು ಚುಚ್ಚು

ವುದು ಒಕ್ಕಡೆ ನಾಯಿ ಬಗುಳುವುದು, ಹೀಗೆ ಎರಡರ ಮಧ್ಯೆ ಸಿಕ್ಕಿ

ಕೊಂಡು ಕತ್ತೆಯು ಬಹು ಸಂಕಟಪಟ್ಟಿತು. ಆ ಗಾಬರಿಯಲ್ಲಿ ಕತ್ತೆಯು

ಓಡುತ್ತಾ ನಾಯಿಯ ಮೇಲೆ ಬಲವಾಗಿ ಒದ್ದುಬಿಟ್ಟಿತು. ಆ ಏಟಿನಿಂದ

ನಾಯಿಯು ಆ ಗಳಿಗೆಯಲ್ಲಿಯೇ ಸತ್ತು ಒರಗಿತು. ಈ ತುಂಟನು

ತನ್ನ ನಾಯಿ ಹೋಯಿತಲ್ಲಾ ಎಂದು ಸ್ವಲ್ಪವಾದರೂ ವ್ಯಸನಪಡದೆ-

ಹತ್‌! ನಿನಗೆ ಹಾಗೇ ಆಗಬೇಕು, ಎಂದು ಶ್ವಾನವನ್ನು ಬೈದು ಮುಂದಕ್ಕೆ

ಹೋದನು.

----------------------------------------------------

೧೦೮  ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ದಾರಿಯಲ್ಲಿ ಒಬ್ಬ ಕುರುಡ ಸಿಕ್ಕಿ-ಅಯ್ಯಾ, ಅದು ಯಾರು

ಧರ್ಮಾತ್ಮರು ; ದಾರಿಯನ್ನು ಕಾಣದೆ ಹೋಗುತಿದೇನೆ. ಕಾಲು ಬಹು

ನೋಯುತಿದೆ. ನನ್ನನ್ನು ಎಲ್ಲಿಯಾದರೂ ಒಂದು ಕಡೆ ಕೂರಿಸಪ್ಪಾ!

ನಿನಗೆ ಪುಣ್ಯಬರುವುದು ಎಂದನ್ನು. ಆಗ ಈ ಹುಡುಗನು--

ನನ್ನ ಹತ್ತಿರ ಬಂದು ಕೂತುಕೊ,  ಎಂದು ಕುರುಡನ ಕೈಯನ್ನು

ಹಿಡಿದುಕೊಂಡು ಹೋಗಿ, ಒಂದು ಹಸೀ ಸಗಣಿಯ ಗುಡ್ಡೆಯ ಮೇಲೆ

ಇವನನ್ನು ಕೂರಿಸಿ, ಈಗ ನಿನಗೆ ಮೆತ್ತಗೆ ಇದೆಯೋ? ಚೆನ್ನಾಗಿ

ಕೂತುಕೊ ; ಬಾಯಿ ಬಿಡು,  ತಿಂಡಿಯನ್ನು ಹಾಕುತೇನೆ,--ಅಂದನು.

ಅದೇ ಪ್ರಕಾರ ಆ ಕಪೋತಿಯು ಬಾಯನ್ನು ಬಿಡಲು, ಈ ನೀಚ

ಹುಡುಗನು ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಅವನ ಬಾಯಿಗೆ

ತುರುಕಿದನು. ಈ ಸುಳುವನ್ನು ತಿಳಿದು. ಕುರುಡನು ಆ ಹುಡುಗನ

ಬೆಟ್ಟುಗಳನ್ನು ಚೆನ್ನಾಗಿ ಕಡಿದುಬಿಟ್ಟಿನು.. ಅವನಿಗೆ ತಕ್ಕ ಶಿಕ್ಷೆ

ಯಾಯಿತು.


ಈ ಹುಡುಗನು ಮತ್ತೂ ಮುಂದಕ್ಕೆ ಹೋದನು. ದಾರಿಯಲ್ಲಿ

ಒಬ್ಬ ಕುಂಟನು--ಅಪ್ಪಾ ಒಂದು ಕಾಸು ಕೊಡು ಎಂದು ಕೇಳಿದನು.

ಈ ದುರ್ಮಾರ್ಗನು ಅವನ ಮುಂದೆ ಒಂದು ಕಾಸನ್ನು ಎಸೆದನು.

ಹೆಳವನು ಆ ಕಾಸನ್ನು ತೆಗೆದುಕೊಳ್ಳುವುದಕ್ಕಾಗಿ ಕೋಲನ್ನು ಊರಿ

ಕೊಂಡು ಸ್ವಲ್ಪ ಬಗ್ಗಿದ. ಆಗ ಈ ಹುಡುಗನು ಆ ಊರುಗೋಲನ್ನು

ತಳ್ಳಿ ಬಿಟ್ಟನು. ಆಗ ಕುಂಟ ಕೆಳಗೆ ಬಿದ್ದು ಪೆಟ್ಟಾಯಿತು. ಆ ಕುಂಟನ

ಹತ್ತಿರ ಇದ್ದ ಮೂರು ದುಡ್ಡನ್ನೂ ಅವರ ಬಟ್ಟೆಯನ್ನೂ ಈ ಕೆಟ್ಟ

ಹುಡುಗನು ಕಿತ್ತುಕೊಂಡು ಓಡಿಹೋದನು.


ದಾರಿಯಲ್ಲಿ ಹೋಗುತಾ, ಈ ತುಂಟನು ಒಬ್ಬರ ಮನೇ ಹಿತ್ತಲ

ಗೋಡೆಯನ್ನು ಹತ್ತಿ ಅಲ್ಲಿದ್ದ ಸೀಬೀಗಿಡದಿಂದ ಹಣ್ಣನ್ನು ಕೇಳುತಿ

ದ್ದನು. ಆ ಮನೇ ಯಜಮಾನನಿಗೆ ಇದು ತಿಳಿಯಿತು. ಅವನು

ತನ್ನ ನಾಯಿಯನ್ನು ಇವನ ಮೇಲೆ ಛೂಬಿಟ್ಟ. ಆ ನಾಯಿಯು

ಗೋಡೇ ಹತ್ತುತಿದ್ದ ಈ ಕೆಟ್ಟ ಹುಡುಗನ ಕಾಲನ್ನು ಚೆನ್ನಾಗಿ ಕಚ್ಚಿತು.

ಅಷ್ಟರಲ್ಲಿಯೇ ಯಜಮಾನನು ಬಂದು ಇವನನ್ನು ಗೋಡೇ ಮೇಲಿನಿಂದ 

-----------------------------------------------

೯] ಸುಮತಿ ಮದನಕುವರಾರರ ಚರಿತ್ರೆ cor 


ಕೆಳಕ್ಕೆ ಎಳೆದುಕೊಂಡು, ಬಾಯಿಗೆ ನೀರ ಕೇಳುವ ಮಟ್ಟಿಗೆ ಹೊಡೆದು.

--ಎಲಾ, ಖೂಳ, ನಿನ್ನಿಂದಲ್ಲವೆ ನನ್ನ ಕುರಿಗಳೆಲ್ಲಾ ಈ ದಿನ ಬೆಳಗ್ಗೆ

ಓಡಿ ಹೋದ್ದು! ಈಗ ನನ್ನ ಕೈಗೆ ಸಿಕ್ಕಿದ್ದೀಯೆ; ನಿನಗೆ ತಕ್ಕ ಶೀಕ್ಷೆ

ಯನ್ನು ಮಾಡಿದೇನೆ, ಎಂದು ಹೇಳಿ ಆಚೆಗೆ ತಳ್ಳಿ ಬಿಟ್ಟ.


ಈ ಹುಡುಗನು ಪೆಟ್ಟುತಿಂದು ಅಳುತ್ತಾ ಮುಂದಕ್ಕೆ ಇಂಥಾ

ಕೆಲಸಕ್ಕೆ ಹೋಗಬಾರದು ಎಂದುಕೊಳ್ಳುತಾ ಸ್ವಲ್ಪ ದೂರ ನಡೆದನು.

ಆಮೇಲೆ ನಾಯಿಬಾಲದ ಡೊಂಕಿನಹಾಗಿದ್ದ ಇವನ ಬುದ್ಧಿಯು ಕೆಟ್ಟ

ದಾರಿಗೇ ಎಳೆದುಕೊಂಡು ಹೋಯಿತು. ಅಲ್ಲಿ ಒಂದು ಹೊಲದ

ಹತ್ತಿರ ಒಂದು ಹಸುವು ಮೇಯುತಿತ್ತು. ಈ ಅವಿವೇಕಿಯು ಹಾರಿ

ಅದರ ಬೆನ್ನಿನಮೇಲೆ ಕೂತುಕೊಂಡು ಅದನ್ನು ಹೊಡೆದನು. ಪೂರ್ವ 

ದಲ್ಲಿ ಇವನಿಂದ ಬಚ್ಚಲಿಗೆ ನೂಕಿಸಿಕೊಂಡುು, ಹೊಡಬಾಳ ಪಟ್ಟ

ಹುಡುಗರೆಲ್ಲರೂ ಅಲ್ಲಿ ಆಡುತಿದ್ದರು, ಹಸುವಿನಮೇಲೆ ಇವನು ಕೂತಿದ್ದ

ದನ್ನು ಅವರು ಕಂಡು, ಇವನಿಗೆ ತಕ್ಕ ಕೆಲಸವನ್ನು ಕೊಡಬೇಕೆಂದು

ಶಬಿಕೆಯಿಂದ ಆ ಹಸುವನ್ನು ಚೆನ್ನಾಗಿ ಹೊಡೆದರು. ಅದು ಬಲವಾಗಿ.

ಓಡಿಹೋಯಿತು. ಅದರ ನಾಗಾಲ ಓಟಕ್ಕೆ ಮೇಲಿದ್ದ ಹಸುವಿನ ಸವಾ

ರನು ತಡೆಯಲಾರದೆ ಕೆಳಕ್ಕೆ ಮಗುಚಿಕೊಂಡು ನೀರು ತುಂಬಿದ ಒಂದು

ಹಳ್ಳದೊಳಕ್ಕೆ ಬಿದ್ದನು. ಮೈಕೈ ಎಲ್ಲಾ ತರೆದು ಹೋಯಿತು. ರಟ್ಟೆ

ಮುರಿಯಿತು. ಈ ಕಷ್ಪ ಪರಿಹಾರವಾದರೆ, ತಾನು ಎಂದಿಗೂ ಚೇಷ್ಟೆಗೆ

ಹೋಗುವುದಿಲ್ಲವೆಂದು ಆ ದುಷ್ಟನು ಅಂದುಕೊಳ್ಳುತಾ, ಗೋಳಾಡುತಿ

ದ್ದನು. ಕೊನೆಗೆ ಇವನ ಕೈಯಿಂದ ಗಡಿಗೇ ಮೊಸರನ್ನು ತನ್ನ ತಲೇ

ಮೇಲೆ ಸುರಿಸಿಕೊಂಡಿದ್ದ ಹುಡುಗಿಯು--ಇನ್ನು ಮೇಲೆ ಇಂಥಾ ಕೆಟ್ಟ

ತನಕ್ಕೆ ಹೋಗಬೇಡವೆಂದು ಬುದ್ಧಿ ಹೇಳಿ, ಅವನ ಕೈಹಿಡಿದು ಎಬ್ಬಿಸಿ

ಮೇಲಕ್ಕೆ ತಂದುಬಿಟ್ಟು ಹೊರಟುಹೋದಳು. 

...............

-------------------------------------------

೧೦ನೆ ಅಧ್ಯಾಯ


ಈ ರೀತಿಯಲ್ಲಿ ಕಥೆಯು ಓದಿ ಮುಗಿಯಿತು. ಆಗ ಮದನು--

ಉಪಾಧ್ಯಾಯರೆ, ಈ ಇಬ್ಬರು ಹುಡುಗರ ಗತಿ ಏನಾಯಿತು. ನೋಡಿ

ದಿರ? ಒಬ್ಬ ಹುಡುಗನ ಒಳ್ಳೇ ತನದಿಂದ ಕಂಡಕಂಡವರೆಲ್ಲರೂ ಅವನಿಗೆ

ಉಪಕಾರ ಮಾಡಿದರು. ಇನ್ನೊಬ್ಬ ಹುಡುಗನ ಕೆಟ್ಟತನದಿಂದ ಸಿಕ್ಕಿ

ದವರೆಲ್ಲರೂ ಇವನಿಗೆ ಶತ್ರುಗಳಾದರು. ಕಡೆಗೆ ಇವನಿಂದ ಅಪಕಾರ

ವನ್ನು ಹೊಂದಿದಾಗ್ಯೂ, ಆ ಮೊಸರಿನ ಹುಡುಗಿಯು ಇವನ ಕಷ್ಟಕ್ಕೆ

ಆಗಬೇಕಾಯಿತು ಎಂದು ಹೇಳಿದನು,


ಕೂಡಲೇ ರಾಮಜೋಯಿಸನು ಹೇಳಿದ್ದೇನೆಂದರೆ--ಅಯ್ಯೊ ಈ

ಪ್ರಪಂಚದಲ್ಲಿ ನಾವು ಮತ್ತೊಬ್ಬರಿಗೆ ದಯವನ್ನು ತೋರಿಸಿದರೆ, ಅವರೂ

ನಮಗೆ ದಯವನ್ನು ತೋರಿಸುವರು ; ನಾವು ಇತರರಿಗೆ ಉಪಕಾರ

ಮಾಡಿದರೆ, ಅವರೂ ನಮಗೆ ಪ್ರತ್ಯುಪಕಾರಮಾಡುವರು. ಯಾರಾದರೆ

ತಾನೇ ಏನು! ಎಂಥಾ ಹೀನಸ್ಥಿತಿಯಲ್ಲಿದ್ದರೆ ತಾನೇ ಏನು? ಅವರಿಂದ

ನಮಗೆ ಯಾವಾಗಲಾದರೂ ಒಂದೊಂದು ಕೆಲಸ ಆಗಲೇಬೇಕು. ಆದ್ದ

ರಿಂದ ಬುದ್ಧಿವಂತರು ಎಲ್ಲರಲ್ಲಿಯೂ ನಡತೆಯನ್ನು ಇಟ್ಟುಕೊಂಡಿರ

ಬೇಕು. ಹಾಗೆ ನಡತೆಯನ್ನು ಇಟ್ಟು ಕೊಂಡಿದ್ದರೆ, ನಮಗೆ ಅವರಿಂದ

ಉಪಕಾರ ಆಗುವುದು ಎಂತಲೇ ಅಲ್ಲ. ಹಾಗೆ ನಡತೆಪರರಾಗಿರುವುದು

ನಮ್ಮ ಕರ್ತವ್ಯವಾಗಿದೆ. ಉದಾರವಾದ ಮನಸ್ಸುಳ್ಳವರು ಎಲ್ಲರಿಗೂ

ಉಪಕಾರವನ್ನು ಮಾಡುವುದರಲ್ಲಿ ಸಂತೋಷವನ್ನು ಹೊಂದುತಿರಬೇಕು.

ಎಲ್ಲರಲ್ಲಿಯೂ ಸ್ನೇಹವನ್ನು ಬೆಳಸಿಕೊಂಡಿರಬೇಕು. ನಮಗೆ ಈಗಿರುವ

ಸ್ಥಿತಿಯಲ್ಲಿ ಇನ್ನೊಂದು ಗಳಿಗೆಗೆ ಏನಾಗುವುದೊ, ಕಂಡವರಿಲ್ಲ. ಅತ್ಯಂತ

ಹೀನ ಸ್ಥಿತಿಯಲ್ಲಿ ಇರತಕ್ಕವರು ಸಹಿತವಾಗಿ ನಮಗೆ ಉಪಕಾರವನ್ನು

ಮಾಡುವಂಥಾ ದುರ್ದಶೆ ಬಂದರೂ ಬರಬಹುದು. ಇದಕ್ಕಾಗಿ ಒಂದು

ಕಥೆ ಇದೆ. ಈಗ ಹೋಗಿ ಓಡಾಡಿಕೊಂಡು ಬನ್ನಿ.


ಹೀಗೆಂದು ಉಪಾಧ್ಯಾಯ ಹೇಳಿದ ಮಾತನ್ನು ಕೇಳಿ ಮದನನು

--ಆ ಕಥೆ ಈಗಲೇ ಅಪ್ಪಣೆಯಾಗಲಿ, ಎಂದು ಕೇಳಿದನು. 

-----------------------------------------------

೧೦] ಸುಮತಿ ಮದನಕುಮಾರರೆ ಚರಿತ್ರೆ ೧೧೧ 



ಜೋಯಿಸ--ಈಗ ಹೇಳುವುದಿಲ್ಲ. ಅದಕ್ಕೆ ಕಾಲ ಬರುತ್ತೆ ; ಆಗ

ಹೇಳಿಯೇನು. ಈಗ ತೋಟಕ್ಕೆ ಹೋಗಿ ಸ್ವಲ್ಪ ಕೆಲಸಮಾಡಬೇಕು.


ಮದನ--ಇನ್ನೊಂದು ಮಾತ ತಮ್ಮನ್ನ ಕೇಳಬೇಕೆಂದು ಇದೇನೆ.


ಜೋಯಿಸ--ನೀನು ಏನ ಕೇಳಿದರೂ ಹೇಳುತೇನೆ ಕೇಳು;

ಆದರೆ ನೀನು ಕೇಳುವ ಮಾತು ಸರಿಯಾಗಿರಬೇಕು.


ಮದನ---ಒಬ್ಬ ಮನುಷ್ಯನಿಗೆ ಎಲ್ಲಾ ಕೆಲಸ ಮಾಡುವುದಕ್ಕೂ

ಬಂದಿರಬೇಕು. ಇದನ್ನು ಯೋಚಿಸುತಾ ಇದೇನೆ.


ಜೋಯಿಸ--ಸರಿ. ಮನುಷ್ಯನಿಗೆ . ಪ್ರಜ್ಞೆ ಎಷ್ಟು ಹೆಚ್ಚಿದರೆ

ಅಷ್ಟು ಒಳ್ಳೇದು.


ಕೆಲವುಕಾಲ ಕಳೆಯಿತು. ಸ್ಪಲ್ಪ ದಿವಸದ ಕೆಳಗೆ ಒಂದು ಕಥೆ

ಯನ್ನು ಹೇಳುತೇನೆಂದು ಜೋಯಿಸರು ಹೇಳಿದ್ದರಷ್ಟೆ. ಆ ಕಥೆಯನ್ನು

ಹೇಳಬೇಕೆಂದು ಮದನನು ಕೇಳಿಕೊಂಡನು. ಅದು ಏನೆಂದರೆ: -


ತುರುಕನ ಕೃತಜ್ಞತೆ


ಪೂರ್ವದಲ್ಲಿ ಪಂಜಾಬುದೇಶದ ಹಿಂದೂರಾಜರಿಗೂ ನೆರೆರಾಜ್ಯದ

ತುರುಕರಿಗೂ ಆಗಾಗ್ಗೆ ಯುದ್ಧ ನಡೆಯುತಲೇ ಇತ್ತು. ಆಗಾಗ್ಗೆ

ಹಿಂದೂಗಳನ್ನು ತುರುಕರೂ ತುರುಕರನ್ನು ಹಿಂದೂಗಳೂ ಕೈಸೆರೆ

ಹಿಡಿದು ಆ ಖೈದಿಗಳನ್ನು ಗುಲಾಮರಹಾಗೆ ಮಾರುತಿದ್ದರು. ಹೀಗೆ

ಒಂದಾನೊಂದು ಯುದ್ಧದಲ್ಲಿ ಹಿಂದುಗಳು ಕೆಲವರನ್ನು ಸೆರೆಹಿಡಿದು

ಗುಲಾಮರನ್ನಾಗಿ ಮಾರಿದರು. ಅವರಲ್ಲಿ ಸುಲೇಮಾನ್ ಎಂಬ ಒಬ್ಬ

ಖೈದಿಯು ಸೇರಿದ್ದನು. ಆ ಖೈದಿಗಳನ್ನೆಲ್ಲಾ  ಮಾರಿದಹಾಗೆಯೇ ಈ

ಸುಲೇಮಾನನನ್ನು ಮಾರಿದರು. ಅಟಕ್‌ ಪಟ್ಟಣದ ಒಬ್ಬ ಸಾಹುಕಾರನು

ಅವನನ್ನು ಕೊಂಡುಕೊಂಡು ಬೇಕಾದಾಗ ಅವನ ಕೈಯಲ್ಲಿ ಬೇಕಾದ

ಕೆಲಸವನ್ನು ಮಾಡಿಸುತ್ತಾ ಉಳಿದ ಕಾಲದಲ್ಲಿ ತನ್ನ ಮನೇಬಾಗಿಲ

ಹತ್ತಿರ ಅವನನ್ನು ಬೇಡಿಹಾಕಿ ಕೂರಿಸಿ ಇರುತಾ ಇದ್ದನು. ಅದೇ

ಪ್ರಕಾರ ಸುಲೇಮಾನನು ಬಾಗಿಲಲ್ಲಿಯೇ ಕೂತು ಹೋಗಿಬರುವವರನ್ನು

ನೋಡಿಕೊಂಡಿದ್ದನು. 

-----------------------------------------

೧೧೨ ಸುಮತಿ ಮದನಕುಮಾರರ ಚರಿತ್ರೆ (ಅಧ್ಯಾಯ.


ಹೀಗಿರುವಲ್ಲಿ ಆ ಅಟಕ್‌ ಪಟ್ಟಣದಲ್ಲಿಯೇ ಇದ್ದ ಒಬ್ಬ ಮುಲ್ತಾನಿ

ಸಾಹುಕಾರನಿಗೆ ಒಬ್ಬನೇ ಒಬ್ಬ ಮಗ ಇದ್ದನು. ಮಗನ ಮೇಲೆ

ತಂದೆಗೆ ವಿಶೇಷವಾದ ಪ್ರೀತಿ ಇತ್ತು. ಈ ಹುಡುಗನು ನಿತ್ಯವೂ

ಮಠಕ್ಕೆ ಹೋಗುವಾಗ, ಸುಲೇಮಾನ ಕೂತಿದ್ದ ಮನೆಯ ಮಾರ್ಗ

ವಾಗಿಯೇ ಹೋಗುತಿದ್ದನು. ಆ ದಾರಿಯಲ್ಲಿ ಅಷ್ಟೊಂದು ಜನ ತಿರುಗು

ತಿದ್ದಾಗ್ಯೂ, ಒಬ್ಬರಾದರೂ ಒಂದು ದಿನವಾದರೂ ಸುಲೇಮಾನನ ಸಂಗಡ'

ಒಂದು ಮಾತನ್ನೂ ಆಡುತಿರಲಿಲ್ಲ. ಆದರೆ ಮುಲ್ತಾನೀ ಸಾಹುಕಾರನ

ಮಗ ಮಾತ್ರ ಮಠಕ್ಕೆ ಹೋಗುತಾ ಬರುತಾ ದಾರಿಯಲ್ಲಿ ಸುರೇಮಾನನ

ಹತ್ತಿರ ಸ್ವಲ್ಪ ಹೊತ್ತು ನಿಂತುಕೊಂಡು ಅವನ ಸಂಗಡ ನಾಲ್ಕು ಮಾತ

ನ್ನಾಡಿ ಹೋಗುತಿದ್ದರು. ಮೇಲೂ ಅನುಕೂಲವಾದಾಗೆಲ್ಲಾ ತನಗೆ

ದೊರೆತ ತಿಂಡಿಯನ್ನು ಆ ಪುಲಾಮನಾದ ಸುಲರೇಮಾನನಿಗೆ ತಂದು

ಕೊಡುತಿದ್ದನು. ಹೀಗೆ ಇವರಿಬ್ಬರಿಗೂ ಸ್ನೇಹ ಹೆಚ್ಚಿ ತು. ಹೀಗಿದ್ದಾಗ್ಯೂ

ಸುಲೇಮಾನನು ದುಃಖಪಡುತಲೇ ಇರುತಿದ್ದನು. ಮುಲ್ತಾನೀ ಸಾಹು

ಕಾರನ ಮಗನ ಸಂಗಡ ಮಾತನಾಡುತಾ ಇದ್ದಾಗ ಕೂಡ ದುಃಖವು

ಉಮ್ಮಿ ಉಮ್ಮಿ ಬರುತಿತ್ತು ; ಆಗಾಗ್ಗೆ ಕಣ್ಣಿನಲ್ಲಿ ನೀರು ಬರುತಿತ್ತು.

ಆದರೂ ಆ ದುಃಖವನ್ನು ನುಂಗುತಾ ಕಣ್ಣಿನಲ್ಲಿ ಬರುತಿದ್ದ ನೀರನ್ನು

ಒರಸಿಕೊಳ್ಳುತಾ ಇದ್ದನು. ಸಾಹುಕಾರನಮಗನು-ಯಾಕೆ ಅಳುತೀಯೆ?

ನಿನಗೆ ಏನು ಬೇಕು? ನನ್ನ ಸಂಗಡ ಹೇಳು ನಮ್ಮ ತಂದೆಗೆ ಹೇಳಿ

ಅದನ್ನು ಆಗಮಾಡಿಸುತೇನೆ. ಎಂದು ಎಷ್ಟು ಬಗೆಯಲ್ಲಿ ಕೇಳಿದರೂ

ಸುಲೇಮಾನನು ಬಾಯಬಿಡದೆ ಸುಮ್ಮನೆ ಇರುತಿದ್ದನು.


ಹೀಗಿರಲಾಗಿ, ಒಂದು ದಿನ ಆ ಗುಲಾಮನ ಗೋಳನ್ನು ನೋಡಿ

ಸಾಹುಕಾರನ ಮಗನಿಗೂ ಬಹಳ ವ್ಯಾಕುಲವಾಯಿತು. ಬಹು ಒಳ್ಳೆಯ

ವನಾದ ಸುಲೇಮಾನನಿಗೆ ಏನೋ ಕಷ್ಟಬಂದಿದೆಯಲ್ಲಾ, ಎಂದು

ಯೋಚಿಸುತಾ ಈ ಹುಡುಗನು ಒಂದು ದಿನ ಮನೆಗೆ ಹೋಗಿ ಊಟ

ವನ್ನು ಮಾಡದೆ ಸುಮ್ಮನೆ ಮಲಗಿಕೊಂಡನು. ಯಾರು ಎಬ್ಬಿಸಿದರೂ

ಏಳದೆ ಇರಲು, ಸಾಹುಕಾರನೇ ಬಂದು ಮಗನನ್ನು ಎಬ್ಬಿಸಿ ದುಗುಡ

ವೇನೆಂದು ಕೇಳಿದನು. ಆಗ ಬಾಲಕನು-- ಜೀಯ, ನಾನು ಮಠಕ್ಕೆ 

----------------------------------------------

10] ಸುಮತಿ ಮದನಕುಮಾರರ ಚರಿತ್ರೆ 113 


ಹೋಗುವ ದಾರಿಯಲ್ಲಿ ಒಬ್ಬ ಗುಲಾಮರವನು ಕೂತುಕೊಂಡಿರು

ತಾನೆ; ಅವನು ಬಹು ಒಳ್ಳೆಯವನು; ಅವನಿಗೆ, ಏನೋ ಸಂಕಟ

ಬಂದಿದೆ, ಯಾವಾಗಲೂ ಅಳುತ್ತಲೇ ಇರುತಾನೆ. ನೀವು ಏನಾದರೂ

ಮಾಡಿ ಅವನ ಕಷ್ಟವನ್ನು ಬಿಡಿಸಬೇಕು ಎಂದನು. ಮಗನ ಮೇಲಿನ

ವಿಶೇಷವಾದ ಪ್ರೀತಿಯಿಂದ ಸಾಹುಕಾರನು ಮೊದಲು ಅಲ್ಲಿಗೆ ಹೋಗಿ

ವಿಚಾರಿಸಬೇಕೆಂದು, ಮಗನನ್ನೂ ಕರೆದುಕೊಂಡು ಆ ಗುಲಾಮರವನು

ಇರುವ ಸ್ಥಳಕ್ಕೆ ಹೋದನು. 


ಸಾಹುಕಾರನು ಸುಲೇಮಾನನನ್ನು ಕುರಿತು--ನಿನಗೆ ಏನುಕಷ್ಟ

ಬಂದಿದೆ? ಯಾಕೆ ಅಳುತೀಯೆ? ಎಂದು ಎಷ್ಟು ಬಗೆಯಲ್ಲಿ ಕೇಳಿದರೂ

ಅವನು ಮಾತನಾಡಲಿಲ್ಲ. ಮತ್ತೆ ಸಾಹುಕಾರನು--ಯಾಕೆ ಮಾತ

ನಾಡುವುದಿಲ್ಲ? ಈವರೆಗೂ ನಿನ್ನ ಎದುರಿಗೆ ಸುಮ್ಮನೆ ನಿಂತುತಕೊಂಡು

ನೋಡಿದೆ. ನೀನು ಬಹು ನಿಧಾನಿ. ಅತ್ಯಂತ ಪ್ರಾಮಾಣಿಕ, ಎಂದು

ನಿನ್ನ ಮುಖಭಾವದಿಂದ ತೋರುತ್ತೆ. ನಿನ್ನ ಗುಣವನ್ನು ನನ್ನ ಮಗ

ಬಹುವಾಗಿ ಹೇಳಿದ, ಆ ಮಗುವನ್ನು ಕುರಿತು ಶಾನೆ ಆದರದಿಂದ

ಮಾತನಾಡತಕ್ಕ ಸುಲೇಮಾನನೆಂಬ ತುರುಕರವನು ನೀನೇ ಏನಪ್ಪ?

ಎಂದು ಕೇಳಿದನು. ಅದಕ್ಕೆ ಗುಲಾಮರವನು-- ಸ್ವಾಮಿ ಹವುದು,

ಭಾಗ್ಯಹೀನನಾದ ಆ ಮನುಷ್ಯ ನಾನೇ; ಈಗ ಮೂರು ವರುಷದಿಂದ

ಸೆರೆಮನೆಯಲ್ಲಿದೇನೆ. ಈ ಮೂರು ವರುಷದಿಂದಲೂ ನಿಮ್ಮ ಮಗ

ಹೊರತು ಮತ್ತೆ ಯಾರೂ, ನೀನು ಇದ್ದೀಯ? ಸತ್ತೆಯ? ಎಂದು

ಕೇಳಿದವರಿಲ್ಲ; ಈ ಹಸುಳೆ ಒಬ್ಬ ಮಾತ್ರ ಹಿತಕರವಾದ ನಾಲ್ಕು ಮಾತ

ನ್ನಾಡಿ, ದಯವಿಟ್ಟು ನನ್ನ ಕ್ಷೇಮಲಾಭವನ್ನು ವಿಚಾರಿಸುತಿದ್ದನು. ಈ

ಹಾಳ ನೀಚ ರಾಜ್ಯದಲ್ಲಿ ಆತ ಒಬ್ಬ ಚೆನ್ನಾಗಿದ್ದರೆ ಸಾಕೆಂದು ಕೋರು

ತೇನೆ. ಮುಸಲ್ಮಾನರಿಗಾಗಲಿ ಹಿಂದುಗಳಿಗಾಗಲಿ ಒಬ್ಬನೇಯಾಗಿರುವ

ಆ ದೇವರು ನಿಮ್ಮ ಮಗನನ್ನು ಸಂರಕ್ಷಿಸಲಿ ಎಂದು ಪ್ರಾರ್ಥಿಸುತೇನೆ,

ಹೀಗೆಂದು ಹೇಳಿದನು.


ಈ ಮಾತಿಗೆ ಮುಲ್ತಾನಿ ಸಾಹುಕಾರನು - ಅಯ್ಯ, ನಿನಗೆ

ಯಾವಾಗಲೊ ಏನೋ ದುಃಖಪ್ರಾಪ್ತವಾಗಿ ನೀನು ಸದಾ ಅಳುತಲೇ

-----------------------------------------

೧೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಇರುತೀಯೆ, ಎಂದು ನನ್ನ ಪುತ್ರ ಹೇಳುತಾನೆ; ಆ ದುಃಖವೇನು?

ಅದಕ್ಕೆ ಕಾರಣವೇನು? ಅದನ್ನು ಹೋಗಲಾಡಿಸುವುದಕ್ಕೆ ನನ್ನಿಂದ 

ಆಗಬೇಕಾದ ಸಹಾಯವೇನು? ಎಂದು ಕೇಳಿದನು.


ಸುಲೇರ್ಮಾ... ಸ್ವಾತಂತ್ರ್ಯ ಹೋಗಿ ನಿರ್ಬಂಧದಲ್ಲಿ ನರಳುತಾ

ಇರುವ ನಾನು ದುಃಖಪಡುವುದು ಏನು ಅಶ್ಚರ್ಯವೆ?


ಸಾಹುಕಾರ -- ನಮ್ಮವರು ಎಷ್ಟು ಜನರನ್ನು ನಿಮ್ಮವರು ಸೆರೆ

ಯಲ್ಲಿಟ್ಟು ಕೊಂಡಿದಾರೆ, ಅದನ್ನು ಕಾಣೆಯ?


ಸುಲೇಮಾನ್-.- ನಮ್ಮ ಜನರ ಕೆಟ್ಟತನಕ್ಕೆ ನಾನು ಜವಾಬು

ದಾರನಲ್ಲ. ಹಾಗೆಯೇ ನಿಮ್ಮವರ ಕೆಟ್ಟತನಕ್ಕೂ ನೀವು ಜವಾಬು

ದಾರರಲ್ಲ. ಆದರೆ ನನ್ನಮಟ್ಟಿಗೆ ಹೇಳಿಕೊಳ್ಳುತೇನೆ; ನಾನು ನಮ್ಮ

ದೇಶದಲ್ಲಿ ಯಾರನ್ನೂ ಸೆರೆಯಲ್ಲಿಟ್ಟು ಹಿಂಸೆಮಾಡಿದವನಲ್ಲ. ಪ್ರಾಣಿ

ಮಾತ್ರಕ್ಕೆ ಬಾಧೆಮಾಡಲು ನನಗೆ ಅಭಿಪ್ರಾಯವಿಲ್ಲ. ನಾನು ಇದು

ವರೆಗೆ ಯಾವ ಹಿಂದೂ ವರ್ತಕನನ್ನೂ ಹಾಳಮಾಡಿ ನನ್ನ ಮನೆ

ಯನ್ನು ತುಂಬಿಕೊಂಡವನಲ್ಲ. (ಹೀಗೆ ಮಾತನಾಡುತಿರಲು ಅವನ

ಕಣ್ಣಿನಲ್ಲಿ ನೀರು ಸುರಿಯುವುದಕ್ಕೆ ಮೊದಲಾಯಿತು... ಆ ದುಃಖ

ವನ್ನು ನುಂಗಿಕೊಂಡು ಸುಲೇಮಾನನು ಸ್ವಲ್ಪ ಸುದಾರಿಸಿಕೊಂಡು,

ಕೈಯನ್ನು ಕಟ್ಟಕೊಳ್ಳುತಾ ತಲೆಯನ್ನು ಬಗ್ಗಿಸಿಕೊಂಡು ಮುಂದಕ್ಕೆ

ಹೇಳಿದ್ದೇನೆಂದರೆ) ದೇವರು ದೊಡ್ಡವನು. ಅವನ ಇಷ್ಟವಿದ್ದಂತೆ

ನಾವು ನಡೆಯಬೇಕು.


ಸಾಹುಕಾರ-- ಅಯ್ಯ, ನೀನು ಪಡುವ ಕಷ್ಟವನ್ನು ನೋಡಿ

ವ್ಯಸನವಾಗುತಿದೆ. ನನ್ನ ಕೈಲಾದಮಟ್ಟಿಗೆ ಅದನ್ನು ಹೋಗಲಾಡಿಸಿ

ಯೇನು. ನಿನಗೆ ಬಿಡುಗಡೆ ಮಾಡಿಸಿಕೊಳ್ಳುವುದಕ್ಕೆ ಯಾವ ಸಾಹಸ

ಮಾಡಬಲ್ಲೆ?


ಸುಲೇರ್ಮಾ--ಎಂಥಾ ಕಷ್ಟವನ್ನಾದರೂ ಸಹಿಸುತೇನೆ. ಪ್ರಾಣ

ವನ್ನಾದರೂ ಕೊಡುವುದಕ್ಕೆ ಸಿದ್ಧವಾಗಿದೇನೆ.


ಸಾಹುಕಾರ-- ನೀನು ಅಷ್ಟು ದೂರ ಹೋಗತಕ್ಕ ಅಗತ್ಯವಿಲ್ಲ.

ನಿನ್ನ ಬಿಡುಗಡೆಗೆ ಒಂದು ಮಾರ್ಗವಿದೆ.

---------------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೧೫


ಸುಲೇಮಾನ್-ಆ ಮಾರ್ಗ ಯಾವುದು? ನನ್ನ ಪ್ರಾಣಹೋದರೂ

ಸರಿಯೆ ಅದನ್ನು ಸಾಧಿಸುವುದೇ ಸಿದ್ದ.


ಸಾಹುಕಾರ-- ಹಾಗಾದರೆ ಕೇಳು. ಈ ಊರಿನಲ್ಲಿ ನನಗೆ ಒಬ್ಬ

ಶತ್ರು ಇದಾನೆ. ಅವನು ನನಗೆ ಬಹು ಅವಮಾನವನ್ನು ಮಾಡಿದಾನೆ.

ಆದರೆ ಅವನು ಬಹು ಬಲಶಾಲಿ. ಅಷ್ಟೂ ಅಷ್ಟು ಅಹಂಕಾರಿ. ಅವನ

ಶಕ್ತಿಗೆ ಹೆದರಿಕೊಂಡು ಇದುವರೆಗೂ ಸುಮ್ಮನೇ ಇದೇನೆ. ನಿನ್ನನ್ನು

ನೋಡಿದರೆ ಬಹುಪರಾಕ್ರಮಶಾಲಿಯಾಗಿ ಕಾಣುತೀಯೆ, ಈ ಕಠಾರಿ

ಯನ್ನು ಹಿಡಿ ನನ್ನ ಸಂಗಡ ಬಾ; ಅವನನ್ನು ತೋರಿಸುತೇನೆ. ಕತ್ತಲೆ

ಯಾದಮೇಲೆ ಅವನನ್ನು ಪೂರೈಸಿಬಿಡು.


ಹೀಗೆಂದು ಹೇಳಿದ ಸಾಹುಕಾರನ ಮಾತನ್ನು ಕೇಳಿ, ಸುಲೇಮಾ

ನನಿಗೆ ಇವನಲ್ಲಿ ಅಲಕ್ಷ್ಯ ಹುಟ್ಟಿತು. ಕೂಡಲೆ ಕೋಪ ಬಂತು. ಆಗ

ಎರಡು ಕೈಯನ್ನೂ ಎರಡು ಕೆನ್ನಗೆ ಬಡಿದುಕೊಳ್ಳುತಾ--ತೋಬಾ,

ತೋಬಾ! ನಾನು ಇಂಥಾ ನೀಚರಿಗೆ ಸೆರೆಸಿಕ್ಕಬಹುದೆ ! ಎಲಾ ಛೀ,

ಹೋಗು, ಇಂಥಾ ಘಾತುಕಕೆಲಸಕ್ಕೆ ಸುಲೇಮಾನ ಎಂದಿಗೂ ಒಡಂ

ಬಡಲಾರ. ಇದೇಯೊ? ನಿಮ್ಮ ಹಿಂದೂ ಮತದ ನೀತಿ, ನಮ್ಮ ಜನ

ರೆಲ್ಲರನ್ನೂ ಈಗಲೇ ಸೆರೆಯಲ್ಲಿ ಇಟ್ಟರೂ ಸರಿಯೇ, ಪ್ರಾಣ ಹೋದರೂ

ಸರಿಯೆ, ಈ ಮಹಾಪಾತಕ ನನಗೆ ಬೇಡ, ಎಂದನು.


ಅದಕ್ಕೆ ಸಾಹುಕಾರನು ತನ್ನ ಮನಸ್ಸಿನಲ್ಲಿ ಆ ಮಾತನ್ನು

ಮೆಚ್ಚುತಾ ಆ ತುರುಕನನ್ನು ಕುರಿತು--ಅಯ್ಯ, ನಾನು ಹೇಳಿದ

ಮಾತನ್ನು ನಿಧಾನವಾಗಿ ಯೋಚಿಸು, ಎಂದು ಹೇಳಿ ಹೊರಟು

ಹೋದನು. ಮಾರನೇ ದಿನ ಮತ್ತೆ ಬಂದು-- ಏನಪ್ಪಾ,

ನಾನು ಹೇಳಿದ್ದನ್ನು ಯೋಚಿಸಿದೆಯ? ಎಂದನು. ಅದಕ್ಕೆ ಸುಲೇಮಾ

ನನು ಯಾವ ಮಾತನ್ನೂ ಆಡದೆ ಇವನ ಕಡೆಗೆ ತಿರುಗದೇ ಅಲಕ್ಷ್ಯ

ವಾಗಿ ಕೂತಿದ್ದರು. ಮತ್ತೆ ಮುಲ್ತಾನಿಯು--ಯಾಕೆ ಸುಮ್ಮನೇ

ಇದ್ದೀಯೆ? ನಾನು ನಿನ್ನೆ ಹೇಳಿದ ಮಾತು ಆಗ ಕೆಟ್ಟದೆಂದು ತೋರಿ

ದಾಗ್ಯೂ, ಯುಕ್ತವಾದ್ದೆಂದು ಈಗ ನೀನು ತಿಳಿದು ಇರಬಹುದು.

ಇದಕ್ಕೆ ಕಾರಣವನ್ನು ಈಗ ವಿಸ್ತಾರವಾಗಿ ಹೇಳುತೇನೆ ಎಂದನು. ಈ

-------------------------------------

೧೧೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ-


ಮಾತನ್ನು ಆಡಿ ಮುಗಿಸುವುದರೊಳಗೆ ಸಾಹುಕಾರನ ಮುಖವನ್ನು ದುರು

ಗುಟ್ಟಿಕೊಂಡು ನೋಡಿ, ಸುಲೇಮಾನನು--ನಿನ್ನ ಬಾಯಿಯನ್ನು

ಮುಚ್ಚು, ನಾನು ಪಡುತಿರುವ ಕಷ್ಟಕ್ಕೆ ಅಂಥಾ ಕೆಟ್ಟಮಾತ ಕೇಳುವ

ಕಷ್ಟವನ್ನೂ ತಂದು ಸೇರಿಸಬೇಡ, ನೀನು ಹೊರಟು ಹೋಗು, ಎಂದನು.

ಕೂಡಲೆ ಸಾಹುಕಾರನು ಸುಲೇಮಾನನನ್ನು ಕುರಿತು, ಅಪ್ಪಾ, ನೀನು

ಮಹಾಪುರುಷ, ಸಾಧಾರಣನಲ್ಲ ನಿನ್ನನ್ನು ನೋಡಿದಾಗಿನಿಂದಲೂ

ನಿನ್ನಲ್ಲಿ ನನಗೆ ಗೌರವ ಹೆಚ್ಚುತಿದೆ. ನಿನ್ನ ಮನಸ್ಸನ್ನು ನೋಡುವುದಕ್ಕೋ 

ಸ್ಕರ ನಿನ್ನ ಸಂಗಡ ಇಂಥಾ ಕೆಟ್ಟ ಮಾತನ್ನು ಆಡಿದ್ದೇ ಹೊರತು ಮತ್ತೆ

ಬೇರೇ ಇಲ್ಲ. ಪಾಪಕ್ಕೆ ನೀನು ಹೇಗೆ ಹೆದರುತೀಯೋ ನಾನೂ ಹಾಗೆ

ಯೇ ಹೆದರುತೇನೆ. ನಿನಗಾಗಿ ಕೊಡುವ ಹಣವನ್ನು ಕೊಟ್ಟು ಬಿಟ್ಟು

ಇದೇನೆ. ನಿನಗೆ ಬಿಡುಗಡೆಯಾಗಿದೆ. ಆ ಬೇಡಿಯನ್ನು ತೆಗೆದುಬಿಡು.

ಎಂದು ಹೇಳಿದನು ಮತ್ತು ಸುಲೇಮಾನನಿಗೆ ದಾರಿ ವೆಚ್ಚಕ್ಕಾಗಿ

ಕೊಟ್ಟು ಅವನನ್ನು ಉಪಚರಿಸಿ ತುರುಕಸ್ಥಾನಕ್ಕೆ ಪ್ರಯಾಣಮಾಡಿಸಿ

ಕಳುಹಿಸಿದನು.


ತರುವಾಯ ಕೆಲವು ತಿಂಗಳಾಯಿತು. ಒಂದು ರಾತ್ರೆ ಸರಿಹೊತ್ತಿ

ನಲ್ಲಿ ಆ ಮುಲ್ತಾನಿ ಸಾಹುಕಾರನ ಮನೆಗೆ ಬೆಂಕಿ ಬಿತ್ತು. ಮನೆಯು

ಎಲ್ಲಾ ಕಡೆಯಲ್ಲಿಯೂ ಹತ್ತಿಕೊಂಡು ಅರೆವಾಸಿ ಉರಿದು ಹೋದ

ಮೇಲೆ ಬೆಂಕಿಬಿದ್ದ ಸಂಗತಿ ಮನೇ ಜನಕ್ಕೆ ತಿಳಿಯಿತು. ಅವರವರು

ತಂತಮ್ಮ ತಲೆಯನ್ನು ತಪ್ಪಿಸಿಕೊಂಡು ಓಡಿ ಹೋದರು. ಅಲ್ಲಿದ್ದ

ಒಬ್ಬಿಬ್ಬರು ಆಳುಗಳು ಮೂರನೇ ಅಂತಸ್ತಿನಲ್ಲಿ ಮಲಗಿದ್ದ ಸಾಹುಕಾರ

ನನ್ನು ಎಬ್ಬಿಸಿ ಈಚೆಗೆ ಕರೆತರುವುದು ಬಹು ಕಷ್ಟವಾಯಿತು. ಇವ

ಇಳಿದ ಕೂಡಲೆ ಮರದ ಮೆಟ್ಟಿಲುಸಹಿತ ಹತ್ತಿಕೊಂಡು ಹೋಯಿತು.

ಆ ಗದ್ದಲದಲ್ಲಿ ಇನ್ನೊಂದು ದೊಡ್ಡ ಅಚಾತುರ್ಯ ನಡೆಯಿತು.

ಸಾಹುಕಾರನ ಮಗನು ಉಪ್ಪರಿಗೇ ಮೇಲೆ ಮಲಗಿ ನಿದ್ರೆ ಮಾಡುತಿ

ದ್ದನು. ಇವನನ್ನು ಕರೆತರಲು ಗಾಬರಿಯಲ್ಲಿ ಎಲ್ಲರೂ ಮರೆತು

ಬಿಟ್ಟರು. ಆ ಬಾಲಕನು ಬೆಂಕೀ ಶಕೆಯನ್ನು ತಡೆಯಲಾರದೆ ಎದ್ದು

ಈಚೆಗೆ ಓಡಿ ಬಂದು ಮಹಡೀ ಮೇಲೆ ನಿಂತು--ಅಯ್ಯೋ ನಾನು.

-------------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೧೩


ಸತ್ತುಹೋಗುತೇನೆ, ನನ್ನನ್ನು ಕರೆದುಕೊಳ್ಳಿ ಎಂಬುದಾಗಿ ಅಳುತಾ

ಕೈಗಳನ್ನು ಚಾಚಿದನು. ಇದನ್ನು ಕಂಡು ಸಾಹುಕಾರನು--ಅಯ್ಯೋ

ನನ್ನ ಮಗ ಹೋಗುತಾನೆಯಲ್ಲಾ ! ನನಗೆ ಇನ್ನೇನು ಗತಿ, ಯಾರಾ

ದರೂ ನನ್ನ ಮಗನನ್ನು ತಂದುಕೊಟ್ಟರೆ ನನ್ನ ಆಸ್ತಿಯಲ್ಲಿ ಅರ್ಥ

ವನ್ನು ಕೊಡುತೇನೆ, ಎಂದು ಕೂಗುತಾ ಕೆಳಕ್ಕೆ ಬಿದ್ದನು. ಜ್ಞಾನತಪ್ಪಿ

ಹೋಯಿತು. ಆ ಹುಡುಗನನ್ನು ಈಚೆಗೆ ಕರೆದುಕೊಳ್ಳ ಬೇಕೆಂದು

ಅಲ್ಲಿದ್ದ ಜನರೆಲ್ಲರೂ ಹೊರಟರು. ಅನೇಕ ಏಣಿಗಳನ್ನು ತಂದು ಹಾಕಿ

ದರು. ಆದರೇನು? ಆ ಮಹಾಜ್ವಾಲೆಯಲ್ಲಿ ಒಳಕ್ಕೆ ಯಾರುತಾನೇ

ನುಗ್ಗಿಯಾರು? ಬಾಗಿಲವಾಡಗಳೆಲ್ಲಾ ಹತ್ತಿಕೊಂದು ಉರಿಯುತಿದ್ದವು.

ಒಂದೊಂದು ಕಿಟಿಕಿಯಿಂದಲೂ ಈಚೆಗೆ ಉರಿ ಎರಚುತಿತ್ತು. ಆಗ

ಅಲ್ಲಿದ್ದವರೆಲ್ಲರೂ ಸಾಹುಕಾರನ ಮಗ ಸತ್ತು ಹೋದನೆಂದು ನಿಶ್ಚೈಸಿ

ಕೊಂಡರು.


ಇಷ್ಟರಲ್ಲಿಯೇ ಇನ್ನೊಂದು ಆಶ್ಚರ್ಯ ನಡೆಯಿತು. ಒಬ್ಬ

ಮನುಷ್ಯನು ಗುಂಪಿನಿಂದ ಬಹು ಧೈರ್ಯವಾಗಿ ಓಡಿಬಂದು ಒಂದು

ಏಣೀಮೇಲೆ ಹತ್ತಿ ಉರಿಯ ಒಳಕ್ಕೆ ನುಗ್ಗಿದನು. ಆಗ ವಿಶೇಷವಾಗಿ

ಹೊಗೆ ಸುತ್ತಿಕೊಂಡಿತು. ಆ ಹುಡುಗನ ಜೊತೆಗೆ ಇವನೂ ಸತ್ತ 

ನೆಂದು ಜನರು ತಿಳಿದುಕೊಂಡರು. ಆದರೆ ಕಾಲುಗಳಿಗೆಯೊಳಗಾಗಿ ಆ

ಧೀರನು ಹುಡುಗನನ್ನು ಎತ್ತಿಕೊಂಡು ಅದೇ ಏಣೀಮೇಲೆ ಇಳಿದು

ಬಂದು ಮಗುವನ್ನು ಸಾಹುಕಾರನ ಮುಂದೆ ನಿಲ್ಲಿಸಿದನು. ಆ ಮುಲ್ತಾ

ನಿಯು ಇದನ್ನು ಕಂಡು ಸಂತೋಷವೆಂಬ ಸಮುದ್ರದಲ್ಲಿ ಮುಳುಗಿ

ಪುತ್ರನನ್ನು ಬಾಚಿ ತಬ್ಬಕೊಂಡು--ಅಯ್ಯೋ ನನ್ನ ಪ್ರಾಣಪದಕವೇ!

ನೀನು ಜೀವಸಹಿತ ಬಂದೆಯಾ ! ನೀನು ಇನ್ನೊಂದು ಸಾರಿ ಹುಟ್ಟಿದ

ಹಾಗಾಯಿತಲ್ಲಾ ! ನನಗೆ ಪುತ್ರದಾನವನ್ನು ಮಾಡಿದ ಈ ಮಹಾ

ಪುರುಷ ಯಾರು? ಯಜ್ಞೇಶ್ವರನೇ ನನ್ನ ಮಗನನ್ನು ತಂದು ಕೊಟ್ಟ

ಹಾಗಾಯಿತು. ನೀನು ಯಾರು? ಎಂದು ಕತ್ತಿತ್ತಿ ನೋಡಿದನು.

ಮಗುವನ್ನು ಎತ್ತಿಕೊಂಡು ಬಂದವನು ಸಾಧಾರಣ ಬಟ್ಟೆಗಳನ್ನು

ಹಾಕಿಕೊಂಡಿದ್ದರೂ ಬಹು ಗಂಭೀರವಾಗಿ ಕಾಣಿಸುತಿದ್ದನು. ಆ 

--------------------------------------

೧೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಬಟ್ಟೆಯು ವಿಶೇಷವಾಗಿ ಸುಟ್ಟು ಹೋಗಿತ್ತು. ಅನನ ಮೈಮೇಲೆಲ್ಲಾ

ಮಸಿಯಾಗಿತ್ತು. ಗುರುತೇ ಸಿಕ್ಕಲಿಲ್ಲ. ಆತನು ಆ ಸೆಟ್ಟಿಯನ್ನು

ಕುರಿತು ಅಯ್ಯಾ ನಾನು ಯಾರಾದರೇನು? ನಿನ್ನ ಮಗನನ್ನು ಕರೆ

ದುಕೊ, ಎಂದನು. ಕೂಡಲೆ ಸೆಟ್ಟಿಯು. -ನೀನುಮಾಡಿದ ಉಪಕಾರಕ್ಕೆ

ಈಗ ಈ ಬಾಳಿಗೇ ಹೊನ್ನನ್ನು ಹಿಡಿ; ನಾಳೆ ನನ್ನ ಮಾತಿನಪ್ರಕಾರ

ನನ್ನ ಅರ್ಥ ಆಸ್ತಿಯನ್ನು ಕೊಡುತೇನೆ ಎನಲು, ಆ ಮನುಷ್ಯನು--

ಅಯ್ಯಾ ನಾನು ಏನನ್ನೂ ಒಲ್ಲೆ ಎಂದನು. ಸಾಹುಕಾರನು-ಧ್ವನಿಯನ್ನು

ನೋಡಿದರೆ ಯಾರೋ ನಾನು ಗುರುತುಕಂಡಹಾಗೆ ಇದೆ, ಎಂದು ಹೇಳಿ

ದನು. ಸಾಹುಕಾರನ ಮಗನು-ಜಿಯ್ಯಾ ನನಗೆ ಈಗ ತಿಳಿಯಿತು.

ಅವನು ನಮ್ಮ ಸುಲೇಮಾನ, ಎಂದು ಓಡಿಹೋಗಿ ಅವನನ್ನು ತಬ್ಬಿ

ಕೊಂಡನು. ಸಾಹುಕಾರನ ಆನಂದಕ್ಕೆ ಕೊನೆಯೇ ಇಲ್ಲದೆ ಹೋಯಿತು.

ಅವನನ್ನೂ ತನ್ನ ಮಗನನ್ನೂ ಕರೆದುಕೊಂಡು ನೆರೆ ಮನೆಗೆ ಹೋಗಿ

ಅಲ್ಲಿ ಕೂತು-ನೀನು ಎಲ್ಲಿಂದ ಬಂದೆ ನಿನಗೆ ನಾನು ಬಿಡುಗಡೆಯನ್ನು

ಮಾಡಿಸಿದ್ದೆನಲ್ಲ; ತಿರುಗಿ ನೀನು ಸೆರೆಗೆ ಹೇಗೆಬಿದ್ದೆ? ಎಂದು ಪ್ರಶ್ನೆ

ಮಾಡಿದನು.


ಆಗ ಸುಲೇಮಾನನು ಆ ಹಣವಂತನನ್ನು ಕುರಿತು--ಎರಡನೇ

ಸಾರಿ ಸೆರೆಯು ದೇವರ ದಯದಿಂದ ನನಗೆ ಸಂಭವಿಸಿದಹಾಗಾಯಿತು.

ಅದರಿಂದಲೇ ಮತ್ತೆ ನಾನು ಈ ಪಟ್ಟಣಕ್ಕೆ ಬಂದು ಒಬ್ಬ ಹಿಂದೂರಾಜ

ಪುತ್ರನ ಮನೆಯಲ್ಲಿ ಗುಲಾಮನಾಗಿದೇನೆ.ಈದೆಸೆ ನನಗೆ ಬಂದದ

ರಿಂದಲೇ ನನ್ನ ಕೃತಜ್ಞತೆಯನ್ನು ತೋರಿಸುವ ಸಮಯ ದೊರಕಿತು.

ಈಗ ನಿಜವನ್ನು ಹೇಳುತೇನೆ ಕೇಳು. ಈಗ ನನ್ನನ್ನು ಗುಲಾಮ

ನಾಗಿಮಾಡಿಕೊಂಡು ಇರತಕ್ಕ ದೊರೆಮಗನು ಪೂರ್ವದಲ್ಲಿ ಮುದುಕ

ನಾದ ನಮ್ಮ ತಂದೆಯನ್ನು ಗುಲಾಮನನ್ನಾಗಿ ಕೊಂಡುಕೊಂಡು ಅವ

ನನ್ನು ಹಿಂಸೆಮಾಡುತಿದ್ದನು. ಅದನ್ನು ನೆನೆಸಿಕೊಂಡೇ ನಾನು ಪೂರ್ವ

ದಲ್ಲಿ ಅಳುತಿದ್ದೆ. ಆ ದುಃಖವನ್ನು ಧರ್ಮಾತ್ಮನಾದ ನೀನು ಪರಿಹಾರ

ಮಾಡಿದೆ. ನಾನು ನಿನ್ನ ಔದಾರ್ಯದಿಂದ ಸೆರೆಯನ್ನು ತಪ್ಪಿಸಿಕೊಂಡು,

ನಮ್ಮ ತಂದೆಯನ್ನು ಇರಿಸಿಕೊಂಡಿದ್ದ ರಾಜಪುತ್ರನ ಬಳಿಗೆ ಹೋಗಿ, 

--------------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೧೯ 


ಮುದುಕನಾದ ನಮ್ಮ ತಂದೆಯನ್ನು ಬಿಟ್ಟುಬಿಡು ಎಂತಲೂ, ಪ್ರಾಯ

ದವನಾದ ನನ್ನನ್ನು ಗುಲಾಮನಾಗಿ ಇರಿಸಿಕೊಳ್ಳೆಂತಲೂ ಕೇಳಿಕೊಂಡೆ.

ಆತನಿಗೆ ದಯ ಹುಟ್ಟಿ ನಮ್ಮ ತಂದೆಯನ್ನು ಬಿಟ್ಟು ಬಿಟ್ಟು, ಆತನಿಗೆ

ಬದಲಾಗಿ ನನ್ನನ್ನು ಇಟ್ಟುಕೊಂಡನು. ಆಗಿನಿಂದ ಈ ಊರಿನಲ್ಲಿಯೇ

ಇರುತೇನೆ. ನೀನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು

ಮಾಡುವುದಕ್ಕೆ ಈಗ ಸಮಯ ಸಿಕ್ಕಿತು, ಎಂದು ಸುಲೇಮಾನನು ಹೇಳಿ

ದನು. ಸಾಹುಕಾರನು ಇದನ್ನು ಕೇಳಿ ಸುಲೇಮಾನನ ಒಳ್ಳೇ ಸ್ವಭಾವ

ವನ್ನು ಕೊಂಡಾಡಿದನು.


ಇಲ್ಲಿಗೆ ಕಥೆ ನಿಂತಿತು. ಇದನ್ನು ಕೇಳಿ ಸುಮತಿ, ಮದನ,

ಇವರಿಬ್ಬರಿಗೂ ಮನಸ್ಸೆಲ್ಲಾ ಬಹು ಕಲಕಿಹೋಯಿತು. ಇವರಿಬ್ಬರಿಗೂ

ಕಣ್ಣಿನಲ್ಲಿ ನೀರು ಬಂತು. ಇದನ್ನು ಕಂಡು ರಾಮಜೋಯಿಸನು

ಅವರಿಬ್ಬರನ್ನೂ ಕುರಿತು--ಇದು ಇಲ್ಲಿಗೆ ಸಾಕು. ನೀವು ತೋಟದಲ್ಲಿ

ಗುಡಿಸಲನ್ನು ಕಟ್ಟುತಿದ್ದ ಕಡೆಗೆ ನಡೆಯಿರಿ, ಎಂದನು. ಇವರಿಬ್ಬರೂ

ಅಲ್ಲಿಗೆ ಹೋಗಿ ನೋಡುವಲ್ಲಿ, ಮೊದಲು ಇವರು ಕಟ್ಟಿದ್ದ ಗುಡಿಸಲು

ಬೆಳಗ್ಗೆ ಬೀಸಿದ ವಿಪರೀತವಾದ ಗಾಳಿಗೆ ಬಿದ್ದುಹೋಗಿತ್ತು. ಮದನನು

ಅದನ್ನು ಕಂಡು, ಹೋಯಿತಲ್ಲಾ ಎಂದು ಸ್ವಲ್ಪ ಅಳುವುದಕ್ಕೆ ಮೊದಲು

ಮಾಡಿದನು. ಆಗ ಸುಮತಿಯು ಅವನನ್ನು ಕುರಿತು--ಮದನ, 

ಅಳಬೇಡ, ಇದು ಬಿದ್ದುಹೋದ್ದು ನಮ್ಮ ತಪ್ಪೇ ಸರಿ... ನಾನು ಹೋಗಿ

ಚೆನ್ನಾಗಿ ಪರೀಕ್ಷಿಸಿ ನೋಡಿದೆ. ಕವೆಗಳನ್ನು ನಾವು ಮೇಲೆಯೇ ನೆಟ್ಟು

ಇದ್ದೆವು. ಅದು ಭಾರವನ್ನು ತಡೆಯದೇ ಗಾಳಿಗೆ ಬಿದ್ದುಹೋಯಿತು.

ಮನೆಕಟ್ಟುವವರು ಕವೆಯನ್ನೂ ಕಂಭವನ್ನೂ ಬಹಳ ಬಲವಾಗಿ ನೆಡು

ವರು. ನಾವು ಅವರಹಾಗೆಯೇ ಬಲವಾಗಿ ಹದಿಯನ್ನು ಹಾಕಿ ಕವೆಯನ್ನು

ನೆಟ್ಟು ಮನೆಯನ್ನು ಕಟ್ಟಿದರೆ, ಗಾಳಿಬಂತು ಎಂದು ಭಯಪಡಬ ಕಾ

ದ್ದಿಲ್ಲ. ಹೀಗೆಂದು ಸುಮತಿಯು ಮದನನಿಗೆ ಸಮಾಧಾನ ಹೇಳಿದನು.


ಸುಮತಿ ಮದನ ಇಬ್ಬರೂ ಸೇರಿ ಇಳಿಜಾರಾಗಿ ಚಾವಣಿಹಾಕಿ

ಒಂದು ಮನೆ ಕಟ್ಟಿ ದರು.


ಅಷ್ಟು ದಿನಕ್ಕೆ ಇವರು ಬಿತ್ತಿ ಇದ್ದ ಬತ್ತವು ಹೊಡೆ ಹೊರಟಿತ್ತು. 

-------------------------------------

೧೨೦     ಸುಮತಿ ಮದನಕುಮಾರರ ಚರಿತ್ರೆ     [ಅಧ್ಯಾಯ 


ಮದನನು ನಿತ್ಯವೂ ಅದನ್ನು ನೋಡಿ ಬಂದು-- ನಾವು ಇರುವುದಕ್ಕೆ

ಮನೆಯನ್ನು ಕಟ್ಟಿದೆವು. ಬತ್ತ ಬೆಳೆದ ಕೂಡಲೆ ನಮಗೆ ಆಹಾರವು

ಸಿಕ್ಕುವುದು, ಇನ್ನು ಮೇಲೆ ನಾವು ಎಂಥಾ ಕಾಡಿನಲ್ಲಿ ಬೇಕಾದರೂ ಇರ

ಬಹುದು, ಅಲ್ಲವೆ? ಎಂದನು. ಅದಕ್ಕೆ ಸುಮತಿಯು ಈ ಬತ್ತ ಅನ್ನ

ವಾಗಬೇಕಾದರೆ ಮಧ್ಯೆ ಮಾಡಬೇಕಾದ ಕೆಲಸ ಇನ್ನು ಯೆಷ್ಟೋ ಇದೆ,

ಎಂಬುದಾಗಿ ಉತ್ತರ ಕೊಟ್ಟನು.


ರಾಮಜೋಯಿಸನಿಗೆ ಇನ್ನೊಂದು ತೋಟವಿತ್ತು. ಅದರಲ್ಲಿ

ಹಣ್ಣಿನ ಗಿಡವನ್ನೇ ಹಾಕಿಸಿ ಇದ್ದನು... ಮದನನು ಆಗಾಗ್ಗೆ ಆ

ತೋಟಕ್ಕೆ ಹೋಗಿ ಅಲ್ಲಿ ಹಣ್ಣುಗಳನ್ನು ಕಿತ್ತು ತಿಂದು ಹಲ್ಲಿಗೆ ರುಚಿ

ಇಳಿದಿತ್ತು. ಆದ್ದರಿಂದ ಅವನು ಜೋಯಿಸನ ಬಳಿಗೆ ಹೋಗಿ--

ಜೋಯಿಸರೆ ಇಂಥಾ ಹಣ್ಣಿನ ಗಿಡಗಳನ್ನು ನಮ್ಮ ತೋಟದಲ್ಲಿಯೂ

ಹಾಕಿಸಿದರೆ ಬಹು ಚೆನ್ನಾಗಿ ಇರುವುದು. ,ನನಗೆ ಕೆಲವು ಗಿಡಗಳನ್ನು

ಕೊಡಿ, ಎಂದು ಜೋಯಿಸನ ಅಪ್ಪಣೆಯನ್ನು ಪಡೆದು ಸುಮತಿ ಮದನ

ಇಬ್ಬರೂ ಸೇರಿ ಅಲ್ಲಿಗೆ ಹೋದರು. ಆ ತೋಟದಲ್ಲಿ ಕೋಮಲವಾಗಿ

ಬೆಳೆದಿದ್ದ ಸೊಸಿಗಳನ್ನು ಬುಡಸಹಜತವಾಗಿ ಕಿತ್ತು ಬೇರಿಗೆ ಮಣ್ಣನ್ನು

ಕಟ್ಟಿದರು. ಅವುಗಳನ್ನು ತಾವು ಮಾಡಿದ್ದ ತೋಟಕ್ಕೆ ತೆಗೆದುಕೊಂಡು

ಹೋಗಿ ನೆಲವನ್ನು ಅಗೆದು ಹಸನುಮಾಡಿ, ಪಾತೀಕಟ್ಟ, ಅದರಲ್ಲಿ ಸಣ್ಣ

ಗುಳಿಗಳನ್ನು ಮಾಡ್ಕಿ ಈ ಸೊಸಿಗಳನ್ನು ನೆಟ್ಟರು. ಆ ಸೊಸಿಗಳು

ಗಾಳಿಗೆ ಮುರಿದುಹೋಗದಹಾಗೆ ಅವುಗಳ ಮಗ್ಗುಲಲ್ಲಿ ಒಂದೊಂದು

ದಬ್ಬೆಯನ್ನು ನೆಟ್ಟು ಸೊಸಿಗೂ ಅದಕ್ಕೂ ಅಳ್ಳಕವಾಗಿ ನಾರನ್ನು ಕಟ್ಟ

ದರು. ಅದು ಬೇಸಗೇ ಕಾಲವಾದ್ದರಿಂದ ಅವುಗಳಿಗೆ ನೀರಹಾಕುವು

ದಕ್ಕೆ ತಕ್ಕ ಏರ್ಪಾಡನ್ನು ಮಾಡಿದರು.


ಈ ಹುಡುಗರು ಹೀಗೆ ಕೆಲಸಮಾಡುತಿರುವುದನ್ನು ನೋಡಿ

ರಾಮಜೋಯಿಸನಿಗೆ ಸಂತೋಷವಾಯಿತು. ಅವನು ಅವರನ್ನು

ಕುರಿತು--ಗಿಡಗಳಿಗೆ ನೀರ ಹಾಕಿದ ಹೊರತು, ಅವುಗಳು ಬೆಳೆಯುವು

ದಿಲ್ಲ. ಉತ್ತರದೇಶದಲ್ಲಿ ಗಂಗಾನದಿ ಎಂಬ ದೊಡ್ಡ ಹೊಳೆ ಇದೆ.

ಹೊಳೆ ಬಂದಾಗ ನೀರು ಉಕ್ಕಿ ಹರಿಯುವುದು. ಈ ನೀರು ಅಲ್ಲಲ್ಲಿ 

------------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೨೧ 


ನಿಂತುಕೊಂಡು ಕೊಂಚದಿವಸದಲ್ಲಿ ಇಂಗಿಹೋಗುವುದು. ಆ ನೀರಿನ

ಸಂಗಡ ಒಂದು ಬಗೆ ಎಕ್ಕಲುಬಂದು ಬೀಳುವುದು. ಇದರಿಂದ ಭೂಮಿ

ಹೆಚ್ಚಾಗಿ ಹುಲಸಾಗುವುದು. ಅದರಲ್ಲಿ ಯಾವುದನ್ನು ನೆಟ್ಟರೂ ಬಹು

ಚೆನ್ನಾಗಿ ಬೆಳೆಯುವುದು, ಹೀಗೆಂದು ಆ ಹುಡುಗರಿಗೆ ತಿಳಿಸಿದನು.


ಅದಕ್ಕೆ ಸುಮತಿಯು-- ಜೋಯಿಸಕ್ಕೆ ಅಲ್ಲೇ ಅಲ್ಲವೆ ಮೊಸಳೆ

ಯೆಂಬ ಕೆಟ್ಟ ಜಂತು ಇರತಕ್ಕದ್ದು? ಎಂದು ಶೇಳಿದನು. ಮದನನು

- -ಜೋಯಿಸರೆ ಅದು ಏನು? ಎನಲು ರಾಮಜೋಯಿಸನು--

ಅದೊಂದು ಕೆಟ್ಟಜಂತು, ಸ್ವಲ್ಪಹೊತ್ತು ಭೂಮಿಯಮೇಲೂ: ಸ್ವಲ್ಪ

ಹೊತ್ತು ನೀರಿನಲ್ಲಿಯೂ ಇರುತ್ತೆ. ಇದು ಮೊಟ್ಟೆಯನ್ನು ಹಾಕಿ

ಮರಳಿನಲ್ಲಿ ಹೂಳುವುದು. ಬಿಸಿಲಿನಲ್ಲಿ ಕೆಲವುವಾರಗಳವರೆಗೂ ಮರಳು

ಕಾದು ಶಖೆಯು ಮೊಟ್ಟೆಗೆ ವ್ಯಾಪಿಸುವುದು. ಕೊನೆಗೆ ಮೊಟ್ಟೆ ಒಡೆದು

ಮೊಸಳೇ ಮರಿಯಾಗುವುದು. ಇದು ಮೊದಲು ಚಿಕ್ಕದಾಗಿ ಇರುವುದು.

ಮೈ ಉದ್ದ. ಕಾಲು ನಾಲ್ಕು, ಆ ಕಾಲುಗಳು ಚಿಕ್ಕಚಿಕ್ಕದಾಗಿ ಇರು

ವವು. ಭೂಮಿಯಮೇಲೆ ನಡೆಯುವುದಕ್ಕೂ. ನೀರಿನಲ್ಲಿ ಈಜುವುದಕ್ಕೂ

ಅನುಕೂಲವಾಗಿದೆ. ಅದರ ಬೆನ್ನಿನ  ಮೇಲಿನಿಂದ ಬಾಲದ ಕೊನೇ

ವರೆಗೂ ಮೇಲುಗಡೆ ಗರಗಸದಹಾಗೆ ಇದೆ. ಅದು ನೋಡುವುದಕ್ಕೆ

ದೊಡ್ಡ ಹಲ್ಲಿಯಹಾಗೆ ಕಾಣುವುದು, ಇದು ಸಮುದ್ರದಲ್ಲಿಯೂ ಹೊಳೆ

ಯಲ್ಲಿಯೂ ದೊಡ್ಡ ಕೊಳದಲ್ಲಿಯೂ ಸಿಕ್ಕುವುದು. ಇದರ ಹಲ್ಲು

ಗರಗಸದಹಾಗೆ ಸಾಲಾಗಿರುವುದು. ಇದರ ಹತ್ತಿರಕ್ಕೆ ದನಕರುಗಳಾಗಲಿ

ಮನುಷ್ಯರಾಗಲಿ ಹೋದರೆ ಬಾಲದಿಂದ ಹೊಡೆದು ನೀರಿನೊಳಕ್ಕೆ

ಎಳೆದುಕೊಂಡು ಹೋಗುವುದು. ಇದು ಹೋಗುವಾಗ ನೀರು ಬಹಳ

ವಾಗಿ ಕದಲುವುದು. ಈಟಿಯನ್ನು ಹಿಡಿದು ಅದರ ಬಾಯಿಯೊಳಕ್ಕೆ

ಚುಚ್ಚಿ ಇದನ್ನು ಕೊಲ್ಲುವರು. ಬಲೆಯನ್ನು ಹಾಕಿ ಅದನ್ನು ಹಿಡಿಯು

ವರು. ಕೆಲವು ಕಡೆಯಲ್ಲಿ ಬೆಸ್ತರು ಎರಡು ತುದಿಯಲ್ಲಿಯೂ ಮೊನೆ 

ಯಾದ ಒಂದು ಬಾಕನ್ನು ಮಧ್ಯೆ ಹಿಡಿದು ಅದರ ಬಾಯಿಯೊಳಕ್ಕೆ

ಕೈಯನ್ನು ಹಾಕುವರು. ಮೊಸಳೆಯು ಮನುಷ್ಯರನ್ನು ನುಂಗ

ಬೇಕೆಂದು ಬಾಯನ್ನು ಮುಚ್ಚಿಕೊಳ್ಳುವುದು. ಆಗ ಅದರ ಬಾಯಿಗೆ

ಬಾಕು ಚುಚ್ಚಿ ಕೊಂಡು ಅದು ಸಾಯುವುದು. 

-------------------------------------

೧೨೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಹೀಗೆಂದು ರಾಮಜೋಯಿಸನು ಹೇಳಲು, ಮದನನು--ಇಂಥಾ

ಕೆಟ್ಟಮೃಗವನ್ನು ಒಗ್ಗಿಸಿಕೊಂಡು ಸಾಧುವಾಗಿ ಮಾಡಿಕೊಳ್ಳಬಹುದೆ?

ಎಂದು ಕೇಳಲು, ಅದಕ್ಕೆ ರಾಮಜೋಯಿಸನು-ಈ ಲೋಕದಲ್ಲಿ ಒಗ್ಗಿಸಿ

ಕೊಂಡು ಸಾಧುವಾಗಿ ಮಾಡಿಕೊಳ್ಳಲು ಆಗದೇ ಇರತಕ್ಕ ಜಂತುವೇ

ಇಲ್ಲವೆಂದು ನಿನಗೆ ಆಗಲೇ ಹೇಳಿದೇನೆ. ಮಿಸರ್‌ ದೇಶದಲ್ಲಿ ಮೊಸಳೆ

ಗಳನ್ನು ಸಾದುಮಾಡಿ ಸಾಕುತಾರೆ. ಮಕ್ಕಳು ಸಹಿತ ಅವುಗಳ ಸಂಗಡ

ಆಡುವುವು, ಎಂದು ಹೇಳಿದನು. ಅದಕ್ಕೆ ಮದನನು ಸಂತೋಷಪಟ್ಟು

--ಹಾಗಾದರೆ ಲೋಕದಲ್ಲಿರುವ ಜಂತುಗಳನ್ನೆಲ್ಲಾ ನಾನು ನೋಡ

ಬೇಕಲ್ಲಾ ಎಂದನು. ಆ ಮಾತಿಗೆ ಜೋಯಿಸನು--ಅಯ್ಯಾ, ಇದು

ಸಾಧ್ಯವಲ್ಲ, ಒಂದೊಂದು ದೇಶದಲ್ಲಿ ಒಂದೊಂದು ಬಗೆ ಜಂತುಗಳಿರು

ವವು. ಅವುಗಳನ್ನೆಲ್ಲಾ ಒಂದೇ ದೇಶದಲ್ಲಿ ನೋಡುವುದು ಕಷ್ಟ. ಆ

ಜಂತುಗಳನ್ನು ಕುರಿತು ಪುಸ್ತಕಗಳನ್ನು ಬರೆದಿದಾರೆ. ಅವುಗಳನ್ನು

ನೀನು ಓದಿ ಸುಲಭವಾಗಿ ತಿಳಿದುಕೊಳ್ಳಬಹುದು--ಎಂದು ನುಡಿದನು.


ಹೀಗಿರುವಲ್ಲಿ ಒಂದು ದಿನ ಸುಮತಿಯೂ ಮದನನೂ ಬೆಳಗ್ಗೆ

ಹೊತ್ತಿಗೆ ಮುಂಚೆ ಎದ್ದು ದೂರವಾಗಿ ಹೋಗಿ ಸಂಚಾರಮಾಡಿಕೊಂಡು

ಬರುವುದಕ್ಕೆ ಹೊರಟರು... ಬರುತಾ ದಾರಿಯಲ್ಲಿ ಸುತ್ತಾಟದಿಂದ

ಆಯಾಸದಿಂದ ಒಂದು ಮರದ ನೆರಳಿನಲ್ಲಿ ಕೂತುಕೊಂಡರು. ಬಿಸಿಲಲ್ಲಿ

ಅಲೆದು ಮುಖವನ್ನು ಕೆಂಪಗೆ ಮಾಡಿಕೊಂಡು ಹಸಿವಿನಿಂದ ಬಳಲಿ ಇದ್ದ

ಈ ಹುಡುಗರನ್ನ ಒಬ್ಬ ಶೂದ್ರಿತ್ತಿಯು ನೋಡಿ ಮರುಕದಿಂದ ಇವರ

ಬಳಿಯಲ್ಲಿ ಬಂದುನಿಂತು--ಅಪ್ಪಾ ಹುಡುಗರಾ, ನೀವು ಯಾಕೆ ಇಷ್ಟು

ಬಳಲಿಕೆಯಿಂದ ಇಲ್ಲಿ ಕೂತಿದೀರಿ? ಹೊತ್ತಾಯಿತು. ಹೊಟ್ಟೆಯಲ್ಲಿ

ಅನ್ನವಿಲ್ಲ. ಅಗೋ ಅಲ್ಲಿ ಕಾಣುವುದೇ ನಮ್ಮ ಊರು, ಇಲ್ಲಿಗೆ ಆಳು

ಕೂಗಿದೆ. ನೀವು ಅಲ್ಲಿಗೆ ಬಂದು ಸ್ವಲ್ಪ ಫಲಾಹಾರವನ್ನು ಮಾಡಿ

ಮುಂದಕ್ಕೆ ಹೊರಡಿ, ಎಂದಳು. ಈ ಹುಡುಗರು ಇಬ್ಬರೂ ಅದಕ್ಕೆ ಒಪ್ಪಿ,

ಆ ಶೂದ್ರಳ ಮನೆಗೆ ಹೋದರು. ಅವಳು ತನ್ನ ಹಿತ್ತಲ ಕಡೆಗೆಹೋಗಿ

ಎರಡು ಸವತೇಕಾಯಿಯನ್ನು ಕಿತ್ತು ತಂದು ಈ ಹುಡುಗರಿಗೆ ಕೊಟ್ಟು,

ತಿನ್ನಿ ಎಂದು ಹೇಳಿದಳು, ಒಂದು ಚಿಕ್ಕ ಪಂಚಪಾತ್ರೆಯಲ್ಲಿ ಹಾಲನ್ನು 

-------------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೨೩


ತಂದು ಇವರಿಬ್ಬರಿಗೂ ಕೊಟ್ಟಳು. ಅದನ್ನೆಲ್ಲಾ ತೆಗೆದುಕೊಂಡು ದಣು

ವನ್ನು ಆರಿಸಿಕೊಂಡು, ಸುಮತಿಯೂ ಮದನಕುಮಾರನೂ ಮನೆಗೆ

ಹೊರಡಬೇಕೆಂದು ಎದ್ದರು. ಅಷ್ಟರಲ್ಲಿಯೇ ಬಾಗಿಲ ಹತ್ತಿರ ಸಣ್ಣ

ಪುರಲೇಕಡ್ಡಿಯೂ ತೆಂಗಿನನೋಗೆಯೂ ಸ್ವಲ್ಪ ಸ್ವಲ್ಪ ಹಾಕಿತ್ತು.

ಮದನನು ಅದು ಯಾತಕ್ಕೆಂದು ಕೇಳಿದನು. ಆ ಗರತಿಯು ಅಪ್ಪಾ,

ಇದು ಹಿಟ್ಟು ಬೇಯಿಸಿಕೊಳ್ಳಲು ಉರಿಗೆ ಬೇಕಾಗುತ್ತೆ, ಎಂದಳು.

ಆ ಮಾತಿಗೆ ಮದನನು--ಅಯ್ಯೊ! ನಮ್ಮ ಮನೆಯಲ್ಲಿ ದಿವಸಕ್ಕೆ

ಒಂದು ಬಂಡಿ ಕಟ್ಟಿಗೆಯನ್ನು ಒಲೆಗೆ ಹಾಕುತಾರೆ. ಈ ಪುರಲೆ

ಯಾತಕ್ಕಾದೀತು? ಎಂದನು. ಕೂಡಲೇ ಆ ಗೌಡಿತ್ತಿಯು-- ಸ್ವಾಮಿ

ನೀವು ದೊಡ್ಡವರು. ಬೇಕಾದ ಭಾಗ್ಯವಿರಬಹುದು ಬೇಕುಬೇಕಾದ

ಅಡಿಗೆಯನ್ನು ನಿಮ್ಮ ಮನೆಯಲ್ಲಿ ಮಾಡುತಿರಬಹುದು. ಆದ್ದರಿಂದ

ಅಷ್ಟು ಸವುದೆ ಬೇಕಾಗುವುದು. ನಾವು ಬಡವರು. ಒಂದು ಮಡಕೆ

ಒಟ್ಟು ಒಂದು ಮಡಕೆ ಉದಕ ಆದರೆ ಸಾಕು. ಅಷ್ಟಕ್ಕೆ ಈ ಉರಿ

ಬೇಕಾದಷ್ಟಾಯಿತು, ಎಂದಳು. ಮದನನು ಅದನ್ನು ಕೇಳಿ ಅವರು

ಬಡವರೆಂದು ತಿಳಿದು ತನ್ನ ಅಂಗಿ ಜೇಬಿನಿಂದ ಒಂದು ಹಣವನ್ನು

ತೆಗೆದು -- ಅಮ್ಮ, ನೀನು ಕೊಟ್ಟ ಹಾಲಿನಿಂದಲೂ, ಸವತೇಕಾಯಿ

ನಿಂದಲೂ ನಮಗೆ ಹಸಿವು ಕಡಮೆಯಾಯಿತು. ನಿನ್ನ ಉಪಕಾರಕ್ಕೆ

ಈ ಹಣವನ್ನು ಹಿಡಿ, ಎನಲು, ಆಕೆಯು--ಅಪ್ಪಾ, ನಮ್ಮ ಮನೆಯಲ್ಲಿ

ನೀವು ಊಟಮಾಡತಕ್ಕವರಲ್ಲ. ಇಲ್ಲದಿದ್ದರೆ ನಾವು ತಿನ್ನುವ ಹಿಟ್ಟನ್ನೇ

ನಿಮಗೂ ಇಕ್ಕುತ್ತಿದ್ದೆ.  ನಮಗೆ ಹಣಕಾಸು ಏನೂ ಬೇಡ. ನಾವೇನೋ

ಬಡವರು. ಆದರೆ ಇಷ್ಟು ಹಾಲು ಕೊಟ್ಟ ಮಾತ್ರಕ್ಕೆ ನಿಮ್ಮಿಂದ ಹಣ

ವನ್ನು ಇಸಕೊಳ್ಳಲೆ? ನಾನು ಒಲ್ಲೆ ಎಂದಳು.


ಇವರು ಹೀಗೆ ಮಾತನಾಡುತಿರುವ ಸಮಯಕ್ಕೆ ಸರಿಯಾಗಿ

ದವಾಲಿಯನ್ನು ಹಾಕಿಕೊಂಡಿರುವ ಇಬ್ಬರು ಜವಾನರು ಬಂದರು.

ಅವರ ಹಿಂದೆ ಒಬ್ಬ ಬ್ರಾಹ್ಮಣ ಕಾಗದ ಕಡ್ಡಿಯನ್ನು ಹಿಡಿದುಕೊಂಡು

ಬಂದನು. ನಿನ್ನ ಮನೆಯನ್ನು ಜಪ್ತಿಮಾಡಿ ಸಾಮಾನುಗಳನ್ನೆಲ್ಲಾ

ತೆಗೆದುಕೊಂಡು ಹೋಗುವುದಕ್ಕೆ ಬಂದಿದೇವೆ. ನಿನ್ನ ಗಂಡ ಎಲ್ಲಿ? 

------------------------------------

೧೨೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಎಂದು ಆ ಒಕ್ಕಲಗಿತ್ತಿಯನ್ನು ಗದರಿಸಿ ಕೇಳಿದರು. ಅದಕ್ಕೆ ಆ ಬಡ

ಹೆಂಗಸು ಗಾಬರಿಯಾಗಿ ಭಯದಿಂದ-ಯಾರಪ್ಪಾ, ಜಪ್ತಿ ಮಾಡುತೀರಿ?

ನಾವು ಯಾವ ತಪ್ಪನ್ನೂ ಮಾಡಲಿಲ್ಲ. ನಾವು ಯಾರಿಗೂ ಮೂರು

ಕಾಸು ಸಾಲವನ್ನು ಕೊಡಬೇಕಾದ್ದಿಲ್ಲ, ಎಂದಳು. ಆ ಮಾತಿಗೆ ಆ

ಬಿಲ್ಲೇದವರು ಆಚೇ ಊರ ದೊಡ್ಡ ಶೆಟ್ಟಿಗೆ ನಿನ್ನ ಗಂಡ ಇಪ್ಪತ್ತೇಳು

ವರಹಾ ಕೊಡಬೇಕು. ಈಗಲೇ ಕೊಡದೇ ಇದ್ದರೆ,  ನಿನ್ನ ಮನೆ

ಮಡಕೆಯನ್ಸೆಲ್ಲಾ ಆಚೆಗೆ ಹಾಕುತೇವೆ. ನಿಮ್ಮನ್ನೆಲ್ಲಾ ಚಾವಡಿಗೆ

ಎಳೆದುಕೊಂಡು ಹೋಗುತೇವೆ, ಎಂದು ಕೂಗಾಡಿದರು. ಇಷ್ಟರಲ್ಲಿ ಆ

ಗರತಿಯ ಗಂಡ ಮನೆಗೆ ಬಂದನು. ಅವನು ಇದೇನೆಂದು ಕೇಳಲು

ಬಿಲ್ಲೇದವರು ಅವನಿಗೂ ಅದೇ ಮಾತನ್ನು ಹೇಳಿದರು, ಆ ಸಂಗತಿ

ಕಿವಿಗೆ ಬಿದ್ದಕೂಡಲೆ ಆ ಶೂದ್ರನ ಮುಖವು ಪೆಚ್ಚಾಯಿತು. ಇದು

ಯಾವ ಸಾಲವೆಂದು ಹೆಂಡತಿ ಕೇಳಿದಳು. ಆ ಗೌಡನು--ನಾನು

ಆ ಸಾಲವನ್ನು ಮಾಡಲಿಲ್ಲ. ನಿನ್ನ ತಮ್ಮನಿಗೆ ಒಂದು ತವಾಯಿ

ಬಂದಿತ್ತು. ಅವನ ಸಾಲವನ್ನು ತೀರಿಸುವುದಕ್ಕಾಗಿ ನಾನು ಹೊಣೆ

ಯಾದೆ. ಅದೇ ಇದು ಎಂದನು. ಅತ್ತ ಜವಾನರು ಇವನ ಮನೇ

ಸಾಮಾನುಗಳನ್ನು ಈಚೆಗೆ ತಂದು ಗಂಟುಕಟ್ಟ ಚಾವಡಿಗೆ ತೆಗೆದು

ಕೊಂಡು ಹೋಗಲು ಅನುವಾದರು.


ಇದನ್ನು ಕಂಡು ಒಕ್ಕಲಿಗನಿಗೆ ವಿಶೇಷ ಕೋಪ ಬಂತು. ಅವನ

ಹಂಜರಕ್ಕೆ  ಸಿಕ್ಕಿಸಿದ್ದ ಕುಡುಗೋಲನ್ನು ತೆಗೆದುಕೊಂಡು--ನನ್ನ

ಮಕ್ಕಳು ಹೊಟ್ಟಿಗಿಲ್ಲದೆ ಸಾಯುವ ಹೊತ್ತು ಬಂತು. ಇನ್ನು ನಾನಿ

ದ್ದೇನುಫಲ? ಕತ್ತು ಕುಯಿದುಕೊಂಡು ಪ್ರಾಣಾಬಿಡುತೇನೆ, ಎಂಬು

ದಾಗಿ ಕುಡುಗೋಲನ್ನು ಕತ್ತಿನಹತ್ತಿರಕ್ಕೆ ತೆಗೆದುಕೊಂಡು ಹೋದನು.

ಹೆಂಡತಿಯು ಓಡಿಬಂದು ಕೈಹಿಡಿದುಕೊಂಡಳು. ಅಳುತಾ ನಮ

ಗೇನುಗತಿ, ಎಂದು ಕೂಗಿಕೊಂಡಳು. ಮಕ್ಕಳೆಲ್ಲಾ ಓಡಿಬಂದು ಗೋಳಾ

ಡುತಾ, ಅಪ್ಪನನ್ನು ಸುತ್ತಿಕೊಂಡವು, ಇದನ್ನು ಕಂಡು ಸುಮತಿಗೆ

ದುಃಖಬಂತು. ಅವನು ಕಣ್ಣಿನಲ್ಲಿ ನೀರ ಹಾಕುತ, ಅಳುವುದಕ್ಕೆ

ಮೊದಲು ಮಾಡಿದನು. ಮದನನು ಇದೆಲ್ಲವನ್ನೂ ಸುಮ್ಮನೆ ನಿಂತು 

-----------------------------------

೧೦] ಸುಮತಿ ಮದನಕುಮಾರರ ಚರಿತ್ರೆ ೧೨೫


ನೋಡುತಾ ಇದ್ದು,ಸುಮತಿಯನ್ನೂ ಕರೆದುಕೊಂಡು ಮನೆಗೆ ಹೋದನು.

ಅಲ್ಲಿ ರಾಮಜೋಯಿಸನನ್ನು ಕುರಿತು--ಉಪಾಧ್ಯಾಯರೇ, ನಾನು

ನಮ್ಮ ಅಪ್ಪಾಜಿಯನ್ನು ನೋಡಿಕೊಂಡು ಬರುತೇನೆ. ಇವತ್ತು ನಮ್ಮ

ಅರಮನೆಗೆ ನನ್ನನ್ನು ಕಳುಹಿಸಿಕೊಡಿ ಎಂದನು. ಮದನನು ಜೋಯಿ

ಸರ ಮನೆಗೆ ಬಂದಾಗಿನಿಂದಲೂ ತನ್ನ ಊರಿಗೆ ಹೋಗಬೇಕೆಂದು

ಯಾವಾಗಲೂ ಅಂದವನಲ್ಲ. ಈಗ ಹೋಗಬೇಕೆಂದು ಅಪೇಕ್ಷಿಸು

ತಾನೆ, ಕಾರಣವೇನೋ ತಿಳಿಯದು. ಬೇಕಾದರೆ ಹೋಗಿಬರಲಿ ಎಂದು

ಜೋಯಿಸನು ಒಪ್ಪಿಕೊಂಡನು. ಮದನನು ಸಾಯಂಕಾಲಕ್ಕೆ ತಮ್ಮ

ಅರಮನೆಗೆ ಹೋಗಿ ಸೇರಿದನು. ಮಗ ಬಂದದಕ್ಕೆ ತಂದೆಗೆ ಬಹು

ಸಂತೋಷವಾಯಿತು. ತಾಯಿಯಂತೂ ಹಿಗ್ಗುತಾ ಮಗನನ್ನು

ಮುದ್ದಾಡುವುದಕ್ಕೆ ಆರಂಭಿಸಿದಳು. ಮಾರನೇ ದಿನ ಮದನನು

ತಂದೆಯನ್ನು ಕುರಿತು-ಅಪ್ಪಾಜಿ, ನನಗೆ ಸ್ಪಲ್ಪ ಹಣಬೇಕು, ಎಂದನು,

ದೊರೆಯು- ಮಗುವೆ, ಹಿಡಿ, ಎಂದು ಎರಡು ವರಹವನ್ನು ಕೈಗೆ

ಕೊಟ್ಟನು. ಮದನನು--ಜೀಯ, ನನಗೆ ಇಷ್ಟು ಸಾಲದು ಇನ್ನೂ

ಹೆಚ್ಚಾಗಿ ಬೇಕು, ಎಂದಮಾತಿಗೆ ಅರಸನು. -ಎಂದಿಗೂ ದುಡ್ಡು

ಬೇಕೆಂದು ಕೇಳದೇ ಇದ್ದ ನೀನು ಈಗ ಹೆಚ್ಚಾಗಿ ಬೇಕೆಂದು ಕೇಳು

ತೀಯಲ್ಲಾ, ಕಾರಣವೇನು? ಎಂದು ಕೇಳಿದನು. ಅದಕ್ಕೆ ಮದನನು

ಜೀಯ, ಒಂದು ಕೆಲಸಕ್ಕಾಗಿ ನನಗೆ ಹಣ ಬೇಕಾಗಿದೆ. ಅದನ್ನು

ನಿಮಗೆ ಹೇಳಿದರೆ ನೀವೇ ಒಪ್ಪಿಕೊಳ್ಳುತೀರಿ. ಆದರೆ ಕೆಲಸವಾದಮೇಲೆ

ಅದನ್ನು ತಮಗೆ ಅರಿಕೆ ಮಾಡುತೇನೆ ಎಂದನು. ಆಗ ಅರಸಿತ್ತಿಯು--

ಇದೆಲ್ಲಾ ರಾಮಜೋಯಿಸರು ಕಲಿಸಿಕೊಟ್ಟ ವಿದ್ಯವೊ? ನಮ್ಮ ಮಗು

ಮೊದಲಿಗೆ ಈಗ್ಯೆ ಕೆಟ್ಟು ಹೋದ ಪೂರ್ವದಲ್ಲಿ ದುಡ್ಡು ಬೇಕೆಂದು ಕೇಳು

ತಿರಲಿಲ್ಲ. ಈಗ ಅದನ್ನೂ ಕೇಳುತಾನೆ. ಇದ್ದ ಬುದ್ಧಿಯೂ ಹೋಯಿತು.

ಉಪಾದ್ರಿಯಿಂದ ಆದ ಉಪಕಾರ ಇದೇಯೆ. ಜೋಯಿಸನಿಗೆ ದುಡ್ಡು

ಬೇಕೇನೋ, ಅದಕ್ಕೋಸ್ಕರ ಹೇಳಿ ಕಳುಹಿಸಿದಾನೆ, ಎಂದು ಹರಟಿ 

ದಳು. ರಾಜಕುಮಾರನು--ಅಮ್ಮಯ್ಯ ಹೀಗೆ ಹೇಳಬೇಡಿ. ಇಷ್ಟ

ವಿದ್ದರೆ ಹಣವನ್ನು ಸುಮ್ಮನೆ ಕೊಡಿ. ಇಲ್ಲದಿದ್ದರೆ ಸಾಲವಾಗಿಯಾದರೂ.

---------------------------------------

`೧೨೬ ಸುಮತಿ ಮದನಕುಮಾಠರ ಚರಿತ್ರೆ [ಅಧ್ಯಾಯ 


ಕೊಟ್ಟಿ ರಿ. ನಾನು ತೀರಿಸುತೇನೆ, ಎಂದನು. ನೀನು ಹೇಗೆ ತೀರಿಸು

ತೀಯೆ, ಎಂದು ದೊರೆ ಕೇಳಲು,  ನೀವು ಆಗಾಗ್ಯೆ ವೆಚ್ಚಕ್ಕೆ ನನಗೋ

ಸ್ಕರ ಕಳುಹಿಸುವ ಹಣದಲ್ಲಿ ಈ ಸಾಲವನ್ನು ತೀರಿಸಿಕೊಳ್ಳಿ, ಇದು

ತೀರುವತನಕ ವೆಚ್ಚಕ್ಕೆ ನೀವು ಕಳುಹಿಸಬೇಡಿ ಎಂದು ಖಂಡಿತವಾಗಿ

ಮಾತನಾಡಿದನು. ಅರಸಿಗೆ ಈ ಮಾತನ್ನು ಕೇಳಿ ಅಸಮಾಧಾನ

ವಾಯಿತು. ಆಗ ಅರಸು ಇಪ್ಪತ್ತೇಳು ವರಹವನ್ನು ತೆಗೆದು ಮಗನಿಗೆ

ಕೊಟ್ಟನು. 


ದೊರೆಮಗನು ಅದನ್ನು ತೆಗೆದುಕೊಂಡು ರಾಮಜೋಯಿಸರ

ಮನೆಗೆ ಬಂದು ಸುಮತಿಯನ್ನೂ ಕರೆದುಕೊಂಡು, ಬಡಒಕ್ಕಲಗಿತ್ತಿಯ

ಮನೆಗೆ ಹೋದನು, ಅದುವರೆಗೆ ಅವಳ ಗಂಡನನ್ನು ಜವಾನರು

ಹಡಿದುಕೊಂಡು ಹೋಗಿ ಚಾವಡಿಯಲ್ಲಿ ಕೂರಿಸಿದ್ದರು. ಮನೆ ಮಕ್ಕ

ಳೆಲ್ಲಾ ಹಿಟ್ಟನ್ನು ತಿಂದು ಎರಡು ದಿವಸವಾಗಿತ್ತು. ಯಜಮಾನಿಯು

ಒಳಗೆ ಕೂತು ಅಳುತಾ ಇದ್ದಳು. ಮದನನು ಅವಳ ಸಮೀಪದಲ್ಲಿ

ನಿಂತುಕೊಂಡು-- ಅಮ್ಮಾ ಅಳಬೇಡ. ಈ ಹಣವನ್ನು ಕೊಟ್ಟು ಸಾಲ 

ವನ್ನು ತೀರಿಸಿ ನಿನ್ನ ಗಂಡನನ್ನು ಬಿಡಿಸಿಕೊಂಡು ಬಾ.  ಎಂದು ಆ

ಇಪ್ಪತ್ತೇಳು ವರಹಗಳನ್ನೂ ಅವಳ ಮುಂದೆ ಸುರಿದನು. ಇದನ್ನು

ಕಂಡು ಆ ಶೂದ್ರಿತ್ತಿಗೆ ಬಹು ಸಂತೋಷವಾಯಿತು. ಕೊನೆಗೆ ಮದನನ

ಕಾಲನ್ನು ಕಟ್ಟಿಕೊಂಡು, ಅವ ಮಾಡಿದ ಉಪಕಾರಕ್ಕೆ ಅಡ್ಡಡ್ಡ ಬಿದ್ದು

ಆ ಹಣವನ್ನು ಕಚೇರಿಗೆ ಕೊಟ್ಟು ಗಂಡನನ್ನು ಬಿಡಿಸಿಕೊಂಡು

ಬಂದಳು. ಆ ಗೌಡನು ಹಣ ಎಲ್ಲಿತ್ತು ಎಂದು ಕೇಳಲಾಗಿ--ನಮ್ಮ

ಭಾಗದ ಈಶ್ವರನಹಾಗೆ ಬಂದ ಈ ಮಗುವು ಹಣವನ್ನು ಕೊಟ್ಟನೆಂದು

ಗಂಡನಿಗೆ ಹೇಳಿದಳು. ಆಗ ಗವುಡನೂ ಸಹಿತ ಸುಮತಿ ಆ ಮದನ

ಕುಮಾರ ಇವರಿಬ್ಬರ ಕಾಲಿಗೂ ಬಿದ್ದು-_ಸ್ವಾಮಿ, ನಮ್ಮ ಮಕ್ಕಳು

ಮರಿಯೆಲ್ಲಾ ನಿಮ್ಮಿಂದ ಉಳಿದೆವು. ಇಲ್ಲದಿದ್ದರೆ, ಸತ್ತುಹೋಗುತಿದ್ದೆವು.

ನಿಮ್ಮ ಹೆಸರು ಹೇಳಿ ನಾವು ದೀಪಾ ಹತ್ತಿಸುತ್ತೇವೆ, ಎಂದು ಅವರನ್ನು

ಕೊಂಡಾಡಿದನು. ಸುಮತಿ ಮದನಕುಮಾರರಿಬ್ಬರೂ ಊರಿಗೆ ಬಂದು

ಬಿಟ್ಟರು. 

------------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೨೭


ಜೋಯಿಸನು ತಂದೇ ಮನೆಯಿಂದ ಮದನ ಬಂದನೆಂದು ತಿಳಿದು

ಅವನನ್ನು ಬಹು ಪ್ರೀತಿಯಿಂದ ಕಂಡು, ಅರಸೂ, ರಾಣಿಯೂ ಸುಖ

ವಾಗಿದಾರೆಯೆ ಎಂದು ಕ್ಷೇಮಲಾಭವನ್ನು ವಿಚಾರಿಸಿ, ಸುಲೇಮಾನನ

ಕಥೆಯನ್ನು ಮುಂದಕ್ಕೆ ಹೇಳುತೇನೆ ಕೇಳು, ಎಂದು ಹೇಳುವುದಕ್ಕೆ

ಮೊದಲುಮಾಡಿದನು.

...

೧೧ ನೆ ಅಧ್ಯಾಯ

[ ಸುಲೇಮಾನನ ಕಥೆ ಮುಂದೆ ಸಾಗಿದ್ದು ]


ಆಮೇಲೆ ಮುಲ್ತಾನಿ ಸಾಹುಕಾರನು ಮೊದಲು ತಾನು ವಾಗ್ದಾನ

ಮಾಡಿದ್ದ ಪ್ರಕಾರಕ್ಕೆ ತನ್ನ ಮಗನ ಪ್ರಾಣವನ್ನು ಉಳಿಸಿಕೊಟ್ಟ ಸುಲೇ

ಮಾನಸಿಗೆ ತನ್ನ ಆಸ್ತಿಯಲ್ಲಿ ಅರ್ಧವನ್ನು ತೆಗೆದುಕೊಳ್ಳೆ೦ದು ಬಹಳ 

ವಾಗಿ ಉಪಚರಿಸಿದರು. ಆದರೆ ಸುಲೇಮಾನನು ಸಾಹುಕಾರನ ಮಾತಿಗೆ

ಸ್ವಲ್ಪ ಉದಾರವಾದ ಮನಸ್ಸನ್ನೂ, ಸ್ವಲ್ಪ ತಿರಸ್ಕಾರಭಾವವನ್ನೂ ತೋರಿ

ಸುತ್ತಾ ಹೇಳಿದ್ದೇನೆಂದರೆ: - ತಾನು ನನಗೆ ಮಹತ್ತರವಾದ ಉಪಕಾರ

ವನ್ನು ಮಾಡಿದಿರಿ; ಅದಕ್ಕಾಗಿ ನನ್ನ ಪ್ರಾಣವೇ ತಮ್ಮದಾಗಿದೆ. ತಮ್ಮ

ಸೇವೆಯನ್ನು ಮಾಡುವುದರಲ್ಲಿ ಈ ದೇಹ ಹೋಗಿದ್ದರೆ ಚೆನ್ನಾಗಿತ್ತು.

ಆದರೆ ದೇವರ ಚಿತ್ತಕ್ಕೆ ಬರಲಿಲ್ಲ. ಆದಾಗ್ಯೂ ತಮ್ಮ ಉಪಕಾರವನ್ನು

ನಾನು ಮರೆಯಲಿಲ್ಲವೆನ್ನುವಹಾಗೆ ನನಗೆ ಸಮಯ ದೊರೆಯಿತಲ್ಲಾ,

ಅದಕ್ಕೆ ನಾರು ಕೃತಜ್ಞನಾಗಿರಬೇಕು, ಹೀಗೆಂದನು.


ಆದರೂ ಸಾಹುಕಾರನು ತುರುಕನ ಉಪಾಯವನ್ನು ಮರೆಯ

ಲಿಲ್ಲ. ಆ ಮುಲ್ತಾನಿಯು ಮತ್ತೆ ಸೆರೆಬಿದ್ದಿದ್ದ ಸುಲೇಮಾನನನ್ನು

ಬಿಡಿಸಿಕೊಂಡು, ಅವನಿಗೆ ಬೇಕಾದ ಉಪಚಾರವನ್ನು ಮಾಡಿ ಅವನ

ದೇಶಕ್ಕೆ ಕಳುಹಿಸಿಕೊಟ್ಟನು.


ತರುವಾಯ ಕೆಲವುಕಾಲ ಕಳೆದುಹೋಯಿತು. ಸಾಹುಕಾರನ 

---------------------------------

೧೨೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಮಗನು ದೊಡ್ಡವನಾದನು. ಇವನು ವಿದ್ಯಾವಂತನಾಗಿಯೂೂ ಬುದ್ದಿ

ವಂತನಾಗಿಯೂ ಇರುತ್ತಾ ತನ್ನ ತಂದೆಯ ಸಂಗಡ ಸೇರಿ ಬಹಳವಾಗಿ

ವ್ಯಾಪಾರವನ್ನು ಮಾಡುತಿದ್ದನು. ಒಂದಾನೊಂದು ಸಮಯದಲ್ಲಿ

ಇರಾನ್‌ ದೇಶಕ್ಕೆ ವ್ಯಾಪಾರಕ್ಕೋಸ್ಟರ ಇವರಿಬ್ಬರೂ ಹೊರಡಬೇಕಾಗಿ

ಬಂತು. ಆದರೆ ದುರುಳರಾದ ಮುಸಲ್ಮಾನ್‌ ಶತ್ರುಗಳ ಕಾಟ, ಛಳಿ

ಮತ್ತು ಮಾರ್ಗದಲ್ಲಿ ಉಂಟಾಗುವ ಇತರ ತೊಂದರೆ, ಇವುಗಳಿಂದ

ಆಫ್‌ಘನ್‌ ಸ್ಥಾನದಮೇಲೆ ಹಾದುಹೋಗುವ ದಾರಿಯನ್ನು ಬಿಡ

ಬೇಕಾಗಿ ಬಂತು. ಆದ್ದರಿಂದ ತಂದೆ ಮಕ್ಕಳಾದ ಸಾಹುಕಾರರಿಬ್ಬರೂ

ಹಡಗಿನಲ್ಲಿ ಕೂತು ಸಿಂಧುನದಿಯ ಮೇಲೆ ಹೊರಟು, ಅರಬೀಸಾಗರದ

ಮೇಲೆ ಹಾದು, ಪಾರ್ಷಿಕೊಲ್ಲಿಯ ಮಾರ್ಗವಾಗಿ ಈರಾನಿಗೆ ಹೋಗ

ಬೇಕೆಂದು ಹೊರಟರು. ಜಹಜು ಸಿಂಧುನದಿಯನ್ನೂ ಅರಬೀಸಾಗರ

ವನ್ನೂ ದಾಟ ಪಾರ್ಷಿಕೊಲ್ಲಿಯ ಸಮೀಪದಲ್ಲಿ ಹೋಗುತಿರುವಾಗ

ಸಮುದ್ರದ ಕಳ್ಳರಾದ ಕೆಲವು ಮುಸಲ್ಮಾನರು ಎರಡು ಹಡಗುಗಳನ್ನು

ವೇಗವಾಗಿ ತಂದು ಸಾಹುಕಾರನ ಹಡಗಿನಮೇಲೆ ಬಿದ್ದು ಹಿಂದೂ ಜನ

ರನ್ನು ಕೊಲ್ಲಲು ಮೊದಲುಮಾಡಿದರು. ಆದರೆ ಸಾಹುಕಾರನ ಮಗನು

ತಮ್ಮ ಕಡೆ ಜನರಿಗೆ ಧೈರ್ಯವನ್ನು ಹೇಳಿ ಅವರನ್ನೂ ಕಟ್ಟಿಕೊಂಡು

ಅಕೇಕ ತುರುಕರನ್ನು ಹೊಡೆದು ಆ ಎರಡು ಹಡಗುಗಳನ್ನು ನಾಶ

ಮಾಡಿದನು, ಆ ರೋಷದಿಂದ ಕೆಲವು ಕಳ್ಳರು ತಪ್ಪಿಸಿಕೊಂಡು

ಹೋಗಿ ಇನ್ನೂ ಕೆಲವು ಹಡಗುಗಳನ್ನು ತಂದು ಹಿಂದುಗಳನ್ನು ಜೈಸಿ

ಹಡಗನ್ನೆ ಲ್ಲಾ ಲೂಟಮಾಡಿ ಅಲ್ಲಿದ್ದವರನ್ನು ಕೈಸೆರೆ ಹಿಡಿದು, ತುರ್ಕೀ

ದೇಶಕ್ಕೆ ಕರೆದುಕೊಂಡುಹೋಗಿ ಅಂಗಡಿಯಲ್ಲಿ ಸಾಮಾನನ್ನು ಮಾರು

ವಂತೆ ಈ ಜನರನ್ನು ಗುಲಾಮರಹಾಗೆ ಮಾರಲು ಬೊಗದಾದ್‌ ಪಟ್ಟ

ಣದ ಪೇಟಿಯಲ್ಲಿ ಇರಿಸಿದರು. ಅಲ್ಲಿಗೆ ತುರ್ಕೀ ಸಾಹುಕಾರರು ಬಂದು.

ತಮಗೆ ಬೇಕಾದ ಗುಲಾಮರನ್ನು ಆರಿಸಿಕೊಂಡು, ಅವರ ಕ್ರಯವನ್ನು

ಕೊಟ್ಟು ಅವರನ್ನು ಕರೆದುಕೊಂಡು ಹೋಗುತಿದ್ದರು.


ಹೀಗಿರುವಲ್ಲಿ ಧಾರಾಳವಾದ ಮನಸ್ಸುಳ್ಳವನಾಗಿ ಗಂಭೀರವಾಗಿ

ಕಾಣಿಸುತಾ ದೊಡ್ಡ ಪದವಿಯಲ್ಲಿ ಇರತಕ್ಕವನಹಾಗೆ ತೋರುತಿದ್ದ ಒಬ್ಬ 

---------------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೨೯ 


ಪುರುಷನು ಸ್ವಲ್ಪ ಪರಿವಾರದೊಡನೆ ಅಲ್ಲಿ ಬಂದು ನಿಂತು, ಗುಲಾಮ

ರನ್ನಾಗಿ ಮಾರುವುದಕ್ಕೆ ನಿಲ್ಲಿಸಿದ್ದ ಜನರನ್ನು ಒಬ್ಬೊಬ್ಬರನ್ನಾಗಿ

ನೋಡುತಾ ಬಂದನು. ಆಗ ಮುಲ್ತಾನೀ ಸಾಹುಕಾರನ ಮಗನನ್ನು

ತೋರಿಸಿ, ಅವನ ಬೆಲೆ ಎಷ್ಟೆ ದು-ಮಾರುತಿದ್ದ ಸೆಟ್ಟಿಯನ್ನು ಕೇಳಿದನು.

ಆ ವರ್ತಕನು ಅವನ ಬೆಲೆ ಹತ್ತುಸಾವಿರ ವರಹವೆನಲು, ಆ ಪುರು

ಷನು--ಅಯ್ಯಾ ದೇಶದಲ್ಲಿ ಇವನಿಗಿಂತಲೂ ನಾಲ್ಕರಷ್ಟು ಶಕ್ತಿ ಹೆಚ್ಚಾ

ಗಿರತಕ್ಕ ಜನರನ್ನು ನೂರುವರಹಾದ ಪ್ರಕಾರ ಮಾರಿದೆ. ಈಗ ಇವನಿಗೆ

ಮಾತ್ರ ಒಂದಕ್ಕೆ ನೂರಾಗಿ ಹೇಳುತೀಯೆ, ಎಂದನು. ಆ ಮಾತಿಗೆ

ವರ್ತಕನು-- ಸ್ವಾಮಿ, ಇವನು ಶಕ್ತಿವಂತನಲ್ಲ, ನಿಜ ಆದಾಗ್ಯೂ ಇವ

ನಿಂದ ನಾನು ಶಾನೆ ನಷ್ಟ ಪಟ್ಟಿದೇನೆ. ಈ ಜನರನ್ನೆಲ್ಲಾ ಸಮುದ್ರದ

ಮೇಲೆ ನಾವು ಹಿಡಿದೆವು. ಈಗ ನೀವು ಕ್ರಯಕ್ಕೆ ಕೇಳುತಿರುವ ಹಿಂದುವು

ಆ ಹಡಗಿನಮೇಲಿದ್ದ ಜನರನ್ನೆಲ್ಲಾ ಎತ್ತ ಕಟ್ಟಿ, ನಮ್ಮ ಜನರು ಅನೇಕ

ರನ್ನು ಕೊಲ್ಲಿಸಿದನು. ತಾನೂ ನಮ್ಮವರನ್ನು ಬಹಳವಾಗಿ ಕೊಂದನು.

ಆದ್ದರಿಂದ ಇವನಿಂದ ಹತ್ತುಸಾವಿರ ವರಹವೇ ಬರಬೇಕು, ಇಲ್ಲ ಇವ

ಸಾಯುವ ತನಕ ಇವನ ಕೈಯಲ್ಲಿ ಕತ್ತೆಚಾಕರಿಯನ್ನು, ನಾನು

ಮಾಡಿಸಬೇಕು ; ಎಂದನು. ಆಗ ಆ ಪುರುಷಶ್ರೇಷ್ಠನು, ಈ ಸಮು

ದ್ರದ ಕಳ್ಳರನ್ನು ಅಷ್ಟರಮಟ್ಟಗೆ ಎದುರಿಸಿದ ಆ ಹಿಂದುವು ಯಾರೆಂದು

ಚೆನ್ನಾಗಿ ದೃಷ್ಟಿಸಿ ನೋಡಿದನು. ಅದುವರೆಗೂ ತಲೆಯನ್ನು ಬಗ್ಗಿಸಿ

ಕೊಂಡು ನೆಲವನ್ನೇ ನೋಡುತಿದ್ದ ಮುಲ್ತಾನಿ ಸಾಹುಕಾರನ ಮಗನು,

ಕತ್ತೆತ್ತಿ ಆ ಮನುಷ್ಯನನ್ನು ನೋಡಿ, ತಟ್ಟನೆ ಸುಲೇಮಾನ್‌ ಎಂದು

ಗಟ್ಟಿಯಾಗಿ ಕೂಗಿದನು. ಆ ಗಳಿಗೆಯಲ್ಲಿಯೇ ಆ ಮನುಷ್ಯನೂ ಸಹಿತ

ಇವನ ಗುರುತನ್ನು ಕಂಡುಹಿಡಿದು ಹೋಗಿ ಗಟ್ಟಿಯಾಗಿ ತಬ್ಬಿ

ಕೊಂಡನು. ಇವರಿಬ್ಬರೂ ಪರಸ್ಪರ ಬಹುದಿವಸ ಕಾಣದೇ ಇದ್ದ

ತಂದೆಮಕ್ಕಳೊ, ಎಂದು ಅಲ್ಲಿದ್ದವರು ಊಹಿಸುವ ಹಾಗಾಯಿತು.

ಮುಲ್ತಾನಿ ಸಾಹುಕಾರನು ತನಗೆ ಮಾಡಿದ ಉಪಕಾರವೆಲ್ಲಾ ಸುಲೇ

ಮಾನನ ಜ್ಞಾಪಕಕ್ಕೆ ಬಂತು. ಸುಲೇಮಾನನ ಕೃತಜ್ಞತೆಯು ಉಕ್ಕಿ

ಬಂತು. ವೃದ್ಧನಾದ ಮುಲ್ತಾನೀ ಸಾಹುಕಾರನೂ ಆ ಖೈದಿಗಳ

-----------------------------------

೧೩೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಗುಂಪಿನಲ್ಲಿ ಸೇರಿದ್ದನು. ಸುಲೇಮಾನನು ಆ ಮುದುಕನಿಗೆ ನಮಸ್ಕಾರ

ವನ್ನು ಮಾಡಿ,--ಅಯ್ಯಾ ನೀವು ನಮ್ಮ ತಂದೆಗಿಂತಲೂ ಹೆಚ್ಚು ;

ನನ್ನ ಪ್ರಾಣವನ್ನು ಎರಡುಸಾರಿ ಉಳಿಸಿದಿರಿ. ಎರಡುಸಾರಿ ನಮಗೆ

ಸೆರೆಯಿಂದ ಬಿಡುಗಡೆಮಾಡಿಸಿದಿರಿ. ತಮ್ಮ ಸೀಮೆಯನ್ನು ಬಿಟ್ಟು

ನಾನು ಇಲ್ಲಿಗೆ ಬಂದಮೇಲೆ ಈ ದೇಶದಲ್ಲಿ ಒಂದು ಯುದ್ಧವಾಗುತಿತ್ತು.

ಅದರಲ್ಲಿ ನಾನು ಒಬ್ಬ ಸಿಪಾಯಿಯಾಗಿ ಸೇರಿದೆ. ಕದನದಲ್ಲಿ ಮುಂದಾ

ಳಾದೆ. ಅದರಿಂದ ಸೇನಾಧಿಪತ್ಯವನ್ನು ಕೊಟ್ಟರು. ಇನ್ನೊಂದು

ಯುದ್ಧದಲ್ಲಿ ನಾನು ಪರಾಕ್ರಮವನ್ನು ತೋರಿಸಿ ಶತ್ರುಗಳನ್ನು ಜೈಸಿದೆ.

ಆಗ ಈ ದೇಶಸ್ಥರೆಲ್ಲರೂ ನನ್ನ ಮೇಲೆ ಸಂಪೂರ್ಣವಾದ ದಯವಿಟ್ಟು,

ಈ ರಾಜ್ಯದ ದೊರೆತನವನ್ನು ನನಗೆ ಕೊಟ್ಟರು. ಆಗಿನಿಂದಲೂ ನಾನು

ಇಲ್ಲಿ ದೊರೆಯಾಗಿದೇನೆ, ಎಂದನು.


ಹೀಗೆ ಆಡಿದ ಸುಲೇಮಾನನ ಮಾತಿನಿಂದ ಅಲ್ಲಿದ್ದ ಜನರೆಲ್ಲ

ರಿಗೂ ಆಶ್ಚರ್ಯವಾಯಿತು. ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ಬೆರಗಾಗಿ

ನಿಂತುಕೊಂಡರು. ತರುವಾಯ ಸುಲೇಮಾನನು ಆ ತಂದೆಮಕ್ಕಳಿಬ್ಬ

ರನ್ನೂ ಹಣಕೊಟ್ಟು ಬಿಡಿಸಿಕೊಂಡು ಹೋಗಿ ತನ್ನ ಅರಮನೆಯಲ್ಲಿ

ಅವರಿಗೆ ವಿಶೇಷವಾಗಿ ಉಪಚಾರವನ್ನು ಮಾಡಿ, ಸಾಹುಕಾರನನ್ನು

ಕುರಿತು-- ಸ್ವಾಮಿ, ತಾವು ಮಾಡಿದ ಉಪಕಾರವನ್ನು ಎಂದೆಂದಿಗೂ

ಮರೆಯಲಾರೆ... ಈ ದೇಹವೆಲ್ಲಾ ತಮ್ಮದೇ. ತಾವು ಮಾಡಿದ

ಕುಂಬಳಕಾಯಿನಷ್ಟು ಉಪಕಾರಕ್ಕೆ ಒಂದು ಸಾಸಿವೆಯಷ್ಟು ಪ್ರತ್ಯುಪ

ಕಾರವನ್ನು ಮಾಡಲು ನನಗೆ ದೊರೆತ ಸಮಯ ದೇವರ ದಯದಿಂದಲೇ

ದೊರೆಯಿತೇ ಹೊರತು ಮನುಷ್ಯಪ್ರಯತ್ನದಿಂದಲ್ಲ. ನಾನು ಈ ದೇಶಕ್ಕೆ

ಆರಸಾದಾಗಿನಿಂದಲೂ ಗುಲಾಮರಾಗಿ ಮಾಡಲ್ಪಟ್ಟ ಯಾವ ಹಿಂದು

ವನ್ನು ಕಂಡರೂ, ಅವರಿಗೋಸ್ಟರ ಹಣವನ್ನು ಕೊಟ್ಟು ಅವರ ಬಂಧ

ನನ್ನು ತಪ್ಪಿಸಿ, ಹಿಂದೂಸ್ಥಾನಕ್ಕೆ ಕಳುಹಿಸುತಾ ಇದೇನೆ ಎಂದು ಹೇಳಿ

ದನು... ಮತ್ತು ತಂದೆಮಕ್ಕಳಾದ ಸಾಹುಕಾರರಿಗೂ ಬೇಕಾದಷ್ಟು

ಐಶ್ವರ್ಯವನ್ನು ಕೊಟ್ಟು ಬಹುಮಾನವನ್ನು ಮಾಡಿ ಅವರ ಸಂಗಡ ಸೆರೆ

ಯಲ್ಲಿದ್ದವರೆಲ್ಲರನ್ನೂ ಬಿಡುಗಡೆ ಮಾಡಿಸಿ, ಎಲ್ಲರನ್ನೂ ಒಟ್ಟಿಗೆ ಹಿಂದೂ

ಸ್ಥಾನಕ್ಕೆ ಪ್ರಯಾಣಮಾಡಿ ಕಳುಹಿಸಿಕೊಟ್ಟನು. 

---------------------------------------

೧೧] ಸುಮತಿ ಮದನಕುನಾರರ ಚರಿತ್ರೆ ೧೩೧


ಈ ಪ್ರಕಾರ ಸುಲೇಮಾನನ ಕಥೆ ಮುಗಿಯಿತು. ತರುವಾಯ

ಸುಮತಿ ಮದನಕುಮಾರರಿಬ್ಬರೂ ಗುರುವಾದ ರಾಮಜೋಯಿಸನೂ

ಪೇಟೆಗೆ ಹೊರಟರು. ದೂರದಲ್ಲಿ ಒಂದು ಗುಂಪು ಬರುತಿತ್ತು. ಅವರ

ಮಧ್ಯೆ ಒಬ್ಬ ಮನುಷ್ಯನು ಒಂದು ಕರಡಿಯನ್ನು ಹಿಡಿದುಕೊಂಡು

ಬರುತಿದ್ದನು. ಆ ಕರಡಿಯು ಆ ಮನುಷ್ಯ ಹೇಳಿದಹಾಗೆ ನಿಂತು

ಕೊಳ್ಳುವುದೂ, ಲಾಗಾ ಹಾಕುವುದೂ ಹೀಗೆಲ್ಲಾ ಮಾಡುತಿತ್ತು. ಅದು

ವರೆಗೂ ಕರಡಿಯನ್ನು ಕಾಣದೇ ಇದ್ದ ಮದನನು--ಜೋಯಿಸರೆ, ಈ

ಕರಡಿ ಕೆಟ್ಟ ಮೃಗವೆ? ಇದನ್ನು ಸಾಕಿ ಒಗ್ಗಿಸಿಕೊಳ್ಳ ಬಹುದೆ? ಎಂದು

ಕೇಳಿದನು. ಅದಕ್ಕೆ ಜೋಯಿಸನು. ಅಯ್ಯ, ಹುಲಿ, ಸಿಂಹ, ಎಂಥಾ

ಕೆಟ್ಟಮೃಗಗಳೊ, ಕರಡಿ ಅಂಥಾ ಕೆಟ್ಟ ಮೃಗವಲ್ಲ. ಆದರೂ ಇದು

ಕೆಟ್ಟದೇ ಹೌದು. ಹಿಮಾಚಲ ಪರ್ವತಕ್ಕೆ ಉತ್ತರದಲ್ಲಿರುವ ರಾಜ್ಯದ

ಕರಡಿಗಳು ಹೆಂಗಸರನ್ನೂ ಸಣ್ಣ ಮಕ್ಕಳನ್ನೂ ಸಹ ಕೊಂದು ತಿಂದು

ಬಿಡುವವು. ಈ ಉತ್ತರದೇಶದ ಕರಡಿಯು ಹಿಂದೂಸ್ಥಾನದ ಕರಡೀ

ಹಾಗೆ ಕಪ್ಪಾಗಿರುವುದಿಲ್ಲ.. ಮಾಸಲುವರ್ಣವಾಗಿರುವುದು. ಒಂದಾ

ನೊಂದು ಕರಡಿಯು ತನ್ನ ಎರಡು ಮರಿಗಳನ್ನೂ ಕರೆದುಕೊಂಡು

ಕಾಡಿನಲ್ಲಿ ಬಂತು. ಊರಿಗೆ ಹೋಗುತಿದ್ದ ಮಾರ್ಗಸ್ಥರು ಒಂದು

ಕಡೆ ಇಳಿದು, ಅಡಿಗೆಯನ್ನು ಮಾಡಿಕೊಂಡು ಊಟಕ್ಕೆ ಕೂತು

ಕೊಂಡರು. ಆ ಕರಡಿಯು ಅಲ್ಲಿಗೆ ಬಂತು. ಅದನ್ನು ಕಂಡು

ಜನರು ಓಡಿ ಹೋದರು. ಅವರು ಬಡಿಸಿಕೊಂಡಿದ್ದ ಅನ್ನವನ್ನು

ಕರಡಿಯು ತೆಗೆದುಕೊಂಡು ಹೋಗುವುದಕ್ಕೆ ಮೊದಲು ಮಾಡಿತು.

ತಮ್ಮ ಎಲೇ ಅನ್ನ ಹೋಯಿತಲ್ಲಾ ಎಂದು ದುಃಖದಿಂದ ಈ ಜನರು

ತಮ್ಮ ಹತ್ತಿರಿದ್ದ ಒಂದು ಕೋವಿಯನ್ನು ಹಾರಿಸಿ, ಆ ಕರಡೀ ಮರಿ

ಗಳನ್ನು ಕೊಂದರು. ದೊಡ್ಡ ಕರಡಿಗೂ ಒಳ್ಳೇ ಆಯಕ್ಕೆ ಏಟು ಬಿದ್ದು

ಅದೂ ನಡೆಯಲಾರದಹಾಗಾಯಿತು. ದೊಡ್ಡ ಕರಡಿಯು ತನ್ನ ಏಟನ್ನು

ಸಹಿಸಿಕೊಂಡು ಮೆಲ್ಲಗೆ ತೆವಳಿಕೊಂಡು ಹೋಗಿ ತನ್ನ ಮರಿಗಳ

ಬಾಯಿಗೆ ಅನ್ನವನ್ನು ತೋರಿಸುವುದೂ, ಅವುಗಳನ್ನು ಮೇಲಕ್ಕೆ ಎತ್ತಿ

ಕೊಳ್ಳುವುದೂ, ಕೆಳಗೆ ಮಲಗಿಸುವುದೂ, ಸ್ವಲ್ಪ ದೂರ ತೆವಳಿಕೊಂಡು 

--------------------------------------

೧೩೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಹೋಗಿ ಒಂದು ಬಗೇ ಕೂಗನ್ನು ಕೂಗಿ ಮರಿಗಳನ್ನು ಕರೆಯುವುದೂ

ಮತ್ತೆ ಬಂದು ಆ ಮರಿಗಳ ಗಾಯವನ್ನು ನೆಕ್ಳುವುದೂ, ಹೊ! ಎಂದು.

ಅಳುವುದೂ ಆ ಸತ್ತುಹೋದ ಮರಿಗಳು ಏನುಮಾಡಿದರೂ ಮೇಲಕ್ಕೆ

ಏಳದೇ ಇರುವುದನ್ನು ಕಂಡು, ಕೋವಿಯಿಂದ ಹೊಡೆದ ಜನರ ಕಡೆಗೆ 

ತಿರುಗಿ, ಗುರ್ರೆಂದು ಕೋಪದಿಂದ ಆರ್ಭಟಿಸುವುದೂ, ಹೀಗೆ ಮಾಡಿತು.

ಮರಿಗಳ ಮೇಲಿನ ಪ್ರೇಮದಿಂದ ತನ್ನ ಯಾತನೆಯನ್ನೂ ಮರೆತು,

ಅವುಗಳನ್ನು ಕೊಂದ ಜನರನ್ನು ದುರದುರನೆ ನೋಡಿತು. ಅವರು

ಮತ್ತೆ ಕೋವಿಯನ್ನು ಬಾರುಮಾಡಿ, ಇದರ ಮೇಲೆ ಹಾರಿಸಿದರು.

ಕರಡಿಯು ಆ ಏಟನ್ನು ತಿಂದು ತನ್ನ ಮರಿಗಳ ಮೇಲೆ ಬಿದ್ದು ಅವು

ಗಳಿಗೆ ಆದ ಘಾಯವನ್ನು ನೆಕ್ಳುತಾ ಪ್ರಾಣವನ್ನು ಬಿಟ್ಟಿತು. ಹೀಗೆಂದು

ಜೋಯಿಸರು ಹೇಳಿದರು. 


ಆಗ ಸುಮತಿಯು. ಮನುಷ್ಯರು ಬಡಜಂತುಗಳ ಮೇಲೆ ಇಂಥಾ

ಕ್ರೌರ್ಯವನ್ನು ತೋರಿಸಬಹುದೆ? ಎನಲು, ಜೋಯಿಸ-ನಿನ್ನ ಮಾತು

ನಿಜ, ಮೃಗಗಳನ್ನು ಹಿಂಸೆಮಾಡುವುದರಲ್ಲಿ ಮನುಷ್ಯರು ಸಂತೋಷ

ಪಡುವರು. ಒಂದೊಂದು ಸಮಯದಲ್ಲಿ ಯಾವ ಪ್ರಯೋಜನವೂ ಇಲ್ಲ

ದಿದ್ದಾಗ್ಯೂ ಬೇಕುಬೇಕೆಂದು ಅವುಗಳನ್ನು ಕೊಲ್ಲುವರು, ಆದಾಗ್ಯೂ

ದುಷ್ಟ ಮೃಗಗಳಿಂದ ನಮಗೆ ಇರುವ ಪ್ರಾಣಭಯವು ಅವುಗಳು

ನಿರಪರಾಧಿಗಳಾಗಿದ್ದಾಗ್ಯೂ ಆ ಜಂತುಗಳನ್ನು ಕೊಲ್ಲುವಂತೆ, ನಮಗೆ

ಬುದ್ಧಿ ಹುಟ್ಟಿಸುವುದು, ಕೆಟ್ಟ ಮೃಗಗಳು ನಮಗೆ ಹಿಂಸೆಯನ್ನು

ಕೊಡುವವು. ಹಿಂಸೆಕೊಡುವಂಥಾ ಜಂತುಗಳಲ್ಲಿ ನಮಗೆ ದ್ವೇಷ

ಹುಟ್ಟುವುದು. ಈ ದ್ವೇಷದಿಂದಲೇ ಆ ಮೃಗಗಳ ಪ್ರಾಣವನ್ನು

ಸಮಯ ಸಿಕ್ಕಿದಾಗ ತೆಗೆಯುವೆವು ಎಂದು ಹೇಳಿದನು. ಆಗ

ಸುಮತಿಯು. ಆ ಮೃಗಗಳು ನಮ್ಮ ಮೇಲೆ ಬಿದ್ದರೆ ಅವುಗಳನ್ನು

ನಾಶಮಾಡುವುದಕ್ಕೆ ಸಿದ್ಧವಾಗಿರುವಂತೆ ಆಯುಧಗಳನ್ನು ನಾವು

ಹತ್ತಿರ ಇರಿಸಿಕೊಂಡಿದ್ದರೆ .ಸಾಕು. ನಮ್ಮ ಗೋಜಿಗೆ ಅವು ಬರದೇ 

ಇರುವಾಗಲೂ ಆ ಬಡಜಂತುಗಳ ಪ್ರಾಣವನ್ನು ತೆಗೆಯುವುದು ಯಾವ

ನ್ಯಾಯ? ಎಂದನು. ಇದನ್ನು ಕೇಳಿ--ಮಗು, ಸತ್ಪುರುಷರು ತಮ್ಮ 

--------------------------------------

೧೧} ಸುಮತಿ ಮದನಕುಮಾರರ ಚರಿತ್ರೆ ೧೩೩ 


ಶತ್ರುವನ್ನು ಸಹಿತ ದಯೆಯಿಂದ ನೋಡುತಾರೆಯೇ ಹೊರತು ನಾಶ

ಮಾಡುವುದಿಲ್ಲ, ಎಂದು ಜೋಯಿಸ ಉತ್ತರ ಕೊಟ್ಟನು.


ಹೀಗೆ ಇಬ್ಬರೂ ಮಾತನಾಡುತಿರುವಾಗ ಜನಗಳು ಗಾಬರಿ

ಯಿಂದ ದಿಕ್ಕು ದಿಕ್ಕಿಗೆ ಓಡಿ ಹೋಗುತಿದ್ದರು. ಇದಕ್ಕೆ ಕಾರಣವೇ

ನೆಂದು ನೋಡುವಲ್ಲಿ ಒಂದು ಕರಡಿ ಸರಪಣಿಯನ್ನು ಕಿತ್ತುಕೊಂಡು

ಓಡಿ ಬರುತಿತ್ತು. ಅದನ್ನು ನೋಡಿ, ರಾಮಜೋಯಿಸನು ಓಡಿ

ಹೋಗಿ ತನ್ನ ಕೈಕಟ್ಟಿಗೆಯಿಂದ ಅದನ್ನು ಹೆದರಿಸಿ ಮಧ್ಯ ದಾರಿಯಲ್ಲಿ

ನಿಲ್ಲಿಸಿದರು. ಕರಡಿಯು ಕೋಪದಿಂದ ಇವನ ಮೇಲೆ ಬೀಳುವುದಕ್ಕೆ

ಬಂತು. ಜೋಯಿಸರು ಗಟ್ಟಿಯಾಗಿ ಕೂಗಿ ಗದರಿಸುತಾ ದೊಣ್ಣೆ

ಯಿಂದ ಅದಕ್ಕೆ ಮೂರು ನಾಲ್ಕು ಬಲವಾದ ಏಟನ್ನು ಕೊಟ್ಟು, ಅದು

ಎಳಕೊಂಡು ಬರುತಿದ್ದ ಸರಪಣಿಯ ಕೊನೆಯನ್ನು ಹಿಡಿದುಕೊಂಡನು.

ಅಷ್ಟರಲ್ಲಿ ಕರಡಿಸಾಕುವವನು ಓಡಿಬಂದನು. ಅವನ ಕೈಗೆ ಜೋಯಿ

ಸನು ಸರಪಣಿಯನ್ನು ಕೊಟ್ಟು ಮುಂದಕ್ಕೆ ಹೀಗೆ ಬಿಟ್ಟು ಬಿಡದೆ

ಜಾಗ್ರತೆಯಾಗಿರೆಂದು ಹೇಳಿದನು.


ಆಗ ಈ ಕರಡಿಯ ಸಂಗಡ ತನ್ನ ಹಗ್ಗವನ್ನು ಕಿತ್ತುಕೊಂಡು

ಒಂದು ಕೋತಿಯು ಓಡಿಬರುತಿತ್ತು. ಮದನನು ಧೈರ್ಯದಿಂದ ಓಡಿ

ಹೋಗಿ ಅದನ್ನು ನಿಲ್ಲಿಸಿದನು. ಅದು ಇವನನ್ನು ಕಚ್ಚುವುದಕ್ಕೆ

ಬಂತು. ಇವನು ದೊಣ್ಣೆ ಯಿಂದ ಅದಕ್ಕೆ ಎರಡು ಏಟನ್ನು ಹೊಡೆದು

ಹಗ್ಗವನ್ನು ಹಿಡಿದುಕೊಂಡನು, ಕಪಿಯು ಇವನಿಗೆ ಹೆದರಿಕೊಂಡು

ನಿಂತುಕೊಂಡಿತು. ಅದನ್ನು ಅದರ ಪಾಲಕನು ಕರೆದುಕೊಂಡು

ಹೊರಟು ಹೋದನು. ಆಗ


ಮದನ-ಜೋಯಿಸರೆ, ಈ ಜಂತುಗಳು ಕಿತ್ತುಕೊಂಡು ಹೋಗು

ತಿರುವಾಗ ನಾವು ನಿಲ್ಲಿಸುವುದು ಅಪಾಯಕರವಲ್ಲವೆ?


ಜೋಯಿಸ-ಅಪಾಯವೇನೋ ಉಂಟು. ಆದರೆ ಅದರಿಂದ

ಎಷ್ಟು ಅಪಾಯ ಉಂಟಾಗುವುದೆಂದು ಜನರು ತಿಳಿದಿದಾರೊ, ಅಷ್ಟಿಲ್ಲ.

ನಾವು ಧೈರ್ಯಮಾಡಿ ಮುಂದಕ್ಕೆ ಹೋದರೆ ಅವುಗಳು ಹೆದರಿ

ಕೊಳ್ಳು ವವು. 

----------------------------------------

೧೩೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಸುಮತಿ--ನಿಮ್ಮ ಮಾತು ದಿಟ ನಾಯಿಗಳಲ್ಲಿಯೂ ಈ ಸ್ಪಭಾವ.

ವಿದೆ. ಒಂದು ನಾಯಿಯು ಮತ್ತೊಂದು ಹೊಸ ನಾಯಿಯನ್ನು

ನೋಡಿದರೆ ಎರಡೂ ಪರಸ್ಪರ ಹೆದರಿಕೊಂಡಿನೆಯೋ, ಎನ್ನುವಹಾಗೆ

ಬಹಳ ಜಾಗರೂಕತೆಯಿಂದ ಇರುವವು. ಆದರೆ ಒಂದು ಓಡುವುದಕ್ಕೆ

ಮೊದಲುಮಾಡಿದರೆ ಇನ್ನೊಂದು ಬೊಗಳುತಾ ಅದನ್ನು ಆಗ ಹರಿಸಿ

ಕೊಂಡು ಹೋಗುವುದು.


ಜೋಯಿಸ--ಈ ಸ್ವಭಾವ ನಾಯಿಗಳಲ್ಲಿ ಮಾತ್ರವೇ ಇಲ್ಲ.

ಇತರ ಜಂತುಗಳಲ್ಲಿಯೂ ಇದೆ. ಆಯುಧವಿಲ್ಲದೆ ಕಾಡುಜನರು ಹುಲಿ

ಕರಡಿಗಳನ್ನು ಬರೀ ಕೂಗು ಕೂಗಿ ಓಡಿಸಿದ್ದಾರೆ. ಎಂಥಾ ಮೃಗ

ವಾಗಲಿ ತಯಾರುಮಾಡಿಕೊಳ್ಳ ಬೇಕು. ಕಾಡಿನಲ್ಲಿ ಕುದುರೇ ಮರಿಗಳು

ಓಡಿಯಾಡುತಿರುವುದನ್ನು ನೋಡಿಲ್ಲವೆ? ಇವುಗಳನ್ನು ಹಿಡಿದು ಮೇಲೆ

ಹತ್ತಿಕೊಂಡು ಸವಾರಿ ಮಾಡುವುದು ಸುಲಭವೆ?


ಮದನ--ಸುಲಭವಲ್ಲ.. ಅದರ ಮೇಲೆ ಹತ್ತಿಕೊಳ್ಳುವುದಕ್ಕೆ

ಹೋದರೆ ಕೆಳಕ್ಳೆ ಕೆಡವಿಬಿಡುತ್ತೆ.


ಜೋಯಿಸ---ನಿನ್ನ ಕುದುರೆಯ ಮೇಲೆ ನೀನು ಕೂತು ಸವಾರಿ

ಮಾಡುವುದಿಲ್ಲವೆ?


ಮದನ-- ಅದಕ್ಕೆ ಅಭ್ಯಾಸವಾಗಿದೆ. 


ಜೋಯಿಸ--ಅದಕ್ಕೆ ಪೂರ್ವದಲ್ಲಿ ಅಭ್ಯಾಸವಾಗಿರಲಿಲ್ಲ ಮೊದಲು

ಕಾಡಿನಲ್ಲಿ ಪೋಲಿ ತಿರುಗುತಿತ್ತಷ್ಟೆ? ಅಂಥಾ ಕುದುರೆ ನಿನ್ನನ್ನು ಬೆನ್ನ 

ಮೇಲೆ ಕೂರಿಸಿಕೊಂಡು ತಿರುಗಾಡುವ ಬಗೆ ಹೇಗೆ?


ಮದನ-- ಅದಕ್ಕೆ ನಾವು ತಿಂಡಿ ಹಾಕುತೇವೆ,


ಜೋಯಿಸ--ಅಷ್ಟೇ ಅಲ್ಲ, ತಾಯಿ ಸಂಗಡ ಅದು ಲಾಯಕ್ಕೆ

ಬರುವಂತೆ ಅಭ್ಯಾಸಮಾಡುತೇವೆ; ಅಮೇಲೆ ಅದಕ್ಕೆ ಮಾಲೀಸು.

ಮಾಡುತೇವೆ. ಅದು ಕ್ರಮೇಣ ಸಾಧುವಾಗುವುದು. ಅದನ್ನು ಗೂಟಕ್ಕೆ

ಕಟ್ಟುತೇವೆ. ಆಮೇಲೆ ಸಬರಾ ಹಾಕುತೇವೆ. ಕಡಿವಾಣ ಹಾಕುತೇವೆ.

ಹೀಗೆ ಅವುಗಳನ್ನು ಕ್ರಮೇಣ ತಯಾರು ಮಾಡುತೇವೆ. ಮನುಷ್ಯ

ಹೇಳಿ ಹೇಳಿದ ಹಾಗೆ ಈ ಕರಡಿ ಕೇಳಬೇಕಾದರೆ ಅದಕ್ಕೆ ತಾನೆ ಏಟು  

-----------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೩೫ 


ಬಿದ್ದಿರಬೇಕು... ಆ ಏಟಿನ ಭಯ ಮನಸ್ಸಿನಲ್ಲಿ ಇದ್ದದರಿಂದಲೇ

ನಾನು ನಿಲ್ಲಿಸಿದಕೂಡಲೇ ನಿಂತುಕೊಂಡಿತು. ಇಲ್ಲದೇ ಇದ್ದರೆ ಅದರೆ

ಹಾವಳಿಯನ್ನು ತಡೆಯುವುದಕ್ಕೆ ಆಗುತಿರಲಿಲ್ಲ.


ಹೀಗೆ ಮಾತನಾಡುತಿರುವಾಗ ಮದನನ ಕೈ ಸ್ವಲ್ಪ ರಕ್ತವಾಗಿತ್ತು.

ಅದರ ಮೇಲೆ ಜೋಯಿಸನ ಕಣ್ಣು ಬಿತ್ತು. ರಕ್ತ ಹೇಗೆ ಬಂತೆಂದು

ಕೇಳಲು, ಕಪಿಯು ತನ್ನನ್ನು ಕಚ್ಚುವುದಕ್ಕೆ ಬಂದ ಸಂಗತಿಯನ್ನೆಲ್ಲಾ

ಮದನನು ಹೇಳಿದನು. ಆಗ ಜೋಯಿಸನು ಆ ಹುಡುಗನಿಗೆ ಗಾಯ

ವಾದ್ದಕ್ಕೆ ಪೇಚಾಡಿ ಅವನಿಗೆ ಮೊದಲಿಗಿಂತಲೂ ಈಗ ಧೈರ್ಯ

ಹೆಚ್ಚಾದ್ದಕ್ಕೆ ಸಂತೋಷಪಡುತಾ ಹೇಳಿದ್ದೇನೆಂದರೆ:-- 


ಮೃಗಗಳಲ್ಲಿ ಕಪಿಯು ಬಹು ವಿಚಿತ್ರವಾದ್ದು, ಇದು ಆಕಾರದಲ್ಲಿ

ಮನುಷ್ಯನನ್ನು ಹೋಲುವುದು, ಕರಡಿ ಹೇಗೆ ಸೀತ ದೇಶದಲ್ಲಿ ವಿಶೇಷ

ವಾಗಿರುವುದೊ ಕಪಿ ಹಾಗೆ ಉಷ್ಣ ದೇಶದಲ್ಲಿರುವುದು. ಇದಕ್ಕೆ ಚಟ

ವಟಕೆ ಹೆಚ್ಚು. ಮುಂದುಗಡೆ ಕಾಲು ಮನುಷ್ಯನ ಕೈಯಿನ ಹಾಗೆ

ಇರುವುದು. ಕಾಡಿನಲ್ಲಿ ಇದು ಹಿಂಡು ಹಿಂಡಾಗಿರುತಾ, ಅಲ್ಲಿ ಸಿಕ್ಕುವ

ಹಣ್ಣನ್ನು ಕಿತ್ತು ತಿಂದು ಜೀವಿಸುವುದು. ಗುಂಪುಕಟ್ಟಕೊಂಡು

ತೋಟಗಳಿಗೆ ನುಗ್ಗುವುದು. ಯಾರಾದರೂ ಬಂದರೆ, ಸಂಚುನೋಡಿ

ತಿಳಿಸುವುದಕ್ಕೆ ಒಂದೆರಡು ಕೋತಿಗಳನ್ನು ಕಾವಲಿಟ್ಟು, ಗುಂಪೆಲ್ಲಾ 

ಒಳಕ್ಕೆ ನುಗ್ಗುವುದು. ಕೆಲವು ಕೋತಿಗಳು ಗಿಡಕ್ಕೆ ಹತ್ತಿ ಹಣ್ಣುಗಳನ್ನು

ಕಿತ್ತು ಕೆಳಕ್ಕೆ ಹಾಕುವವು. ಕೆಳಗೆ ಇರತಕ್ಕ ಕಪಿಗಳು ಅವುಗಳನ್ನೆಲ್ಲಾ

ಜಾಗ್ರತೆಯಾಗಿ ಆಚೆಗೆ ಸಾಗಿಸುವವು.


ಸುಮತಿ-- ಜೋಯಿಸರೆ, ಕಾಗೆಯಲ್ಲಿಯೂ, ಈ ಗುಣವಿದೆ,

ಏನಾದರೂ ತಿಂಡಿಯನ್ನು ಹಾಕಿದ್ದರೆ ಅದನ್ನು ತಿನ್ನುವುದಕ್ಕೆ ಗುಂಪು

ಗುಂಪಾಗಿ ಬರುವುದು. ಒಂದೆರಡುಮಾತ್ರ, ಎತ್ತರವಾದ ಮರದ ಮೇಲೆ

ಕೂತುಕೊಂಡು ಜನರು ಯಾರಾದರೂ ಬಂದಕ್ಕೆ ಕೂಗಿ ಎಚ್ಚರವನ್ನು

ಹೇಳುವವು. ಇದನ್ನು ತಿಳಿದು ಗುಂಪೆಲ್ಲಾ ಹಾರಿ ಹೋಗುವುದು

ಎಂದನು.


ಇವರೆಲ್ಲರೂ ಮನೆಗೆ ಹೋದರು. ಅಷ್ಟರಲ್ಲಿ ರಾಜಪುತ್ರರನ್ನ 

-------------------------------------

೧೩೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಸ್ವಲ್ಪದಿನದ ಮಟ್ಟಿಗೆ ಕರೆತರಬೇಕೆಂದು ಕೊಟ್ಟಿದ್ದ ದೊರೆಯ ಅಪ್ಪಣೇ

ಪ್ರಕಾರ ಆಳುಗಳು ಕುದುರೆಯನ್ನು ತಂದು ನಿಲ್ಲಿಸಿಕೊಂಡು ಜೋಯಿ

ಸರ ಮನೇಬಾಗಿಲಲ್ಲಿ ಕಾದಿದ್ದರು. ಮದನನು ಇದನ್ನು ಕಂಡು ಪಂತರ

ಅಪ್ಪಣೆಯನ್ನು ಪಡೆದು, ಕುದುರೆಯಮೇಲೆ ಕೂತು ಅರಮನೆಗೆ

ಹೋದನು. ಅಲ್ಲಿ ದೊರೆಯೂ ಅರಸಿಯೂ ಬಹುಪ್ರೀತಿಯಿಂದ ಮಗ

ನನ್ನು ಕಂಡರು. ಗುರುವಿನ ಸಮೀಪದಲ್ಲಿ ತಾನು ಕಲಿಯುವ ವಿದ್ಯದ

ರೀತಿಯನ್ನು ಮದನನು ಆಗಾಗ್ಗೆ ತಂದೆ ತಾಯಿಗಳಿಗೆ ಹೇಳುತಾ

ಬಂದನು. ಆದರೆ ತಾನು ದೊರೆಯಿಂದ ಇಸಕೊಂಡು ಹೋದ ಇಪ್ಪ

ತ್ತೇಳು ವರಹದ ಸಂಗತಿಯನ್ನು ಮಾತ್ರ ಎತ್ತಲಿಲ್ಲ. ಹೀಗಿರಲು ಒಂದು

ಸೋಮವಾರದ ದಿನ ರಾಜನು ತನ್ನ ಮಗ, ಹೆಂಡತಿ, ಮತ್ತು ಇತರ

ಪರಿವಾರದೊಡನೆ ಶಿವದರ್ಶನಕ್ಕಾಗಿ ಸಾಯಂಕಾಲ ಗುಡಿಗೆ ಹೋದನು.

ಅಲ್ಲಿ ದರ್ಶನವನ್ನು ಮಾಡಿಕೊಂಡು ಹಿಂತಿರುಗುತಿರುವಾಗ ಅಲ್ಲಿದ್ದ ಜನ

ರಿಲ್ಲಾ ಮದನನನ್ನು ನೋಡಿ ಗುಸುಗುಸನೆ ಮಾತನಾಡುತಿದ್ದರು. ಆಗ

ನಾಲ್ಕು ನಿಮಿಷದೊಳಗಾಗಿ ಒಬ್ಬ ಶೂದ್ರಿತ್ತಿ ಬಂದು ಮದನನ ಕಾಲಿಗೆ

ಬಿದ್ದು,--ಬುದ್ದಿ ನೀವು ನಮ್ಮ ತಂದೆ, ನಮ್ಮಭಾಗದ ದೇವರು, ನಾನು

ಹತ್ತಿಸುವ ದೀಪ ತಮ್ಮದು, ಎಂದು ವಿನಯವಾಗಿಹೇಳಿದಳು. ದೊರೆಯು

ಈ ಆಶ್ಚರ್ಯಕರವಾದ ಸಂಗತಿ ಏನೆಂದು ವಿಚಾರಿಸಲಾಗಿ ರಾಜಕುಮಾ

ರನು ಆ ಬಡ ಒಕ್ಕಲಿಗರಿಗೆ ಇಪ್ಪತ್ತೇಳು ವರಹವನ್ನು ಕೊಟ್ಟು ಅವರ

ಕಷ್ಟವನ್ನು ಬಿಡಿಸಿದ ವಿಷಯ ಗೊತ್ತಾಯಿತು. ಕೂಡಲೆ ಅರಸ, ಅರಸಿ

ಇಬ್ಬರಿಗೂ ವಿಶೇಷ ಸಂತೋಷವಾಯಿತು. ಅವರು ಮಗನನ್ನು ತಬ್ಬಿ

ಕೊಂಡು ಮುದ್ದಾಡಿದರು. ಅರಸುಮಗನಿಗೆ ಪೂರ್ವಕ್ಕಿಂತಲೂ ಈಗ

ದೇಹದ ಶಕ್ತಿ ಹೆಚ್ಚಾಗಿತ್ತು ; ಮೊದಲಿನಂತೆ ಕೋಪಮಾಡಿಕೊಂಡು, 

ಮನಸ್ಸು ಬಂದಹಾಗೆ ಆಡುತ್ತಿರಲಿಲ್ಲ. ಹೀಗೆ ಎಲ್ಲಾ ಭಾಗದಲ್ಲಿಯೂ

ತಮ್ಮ ಮಗನು ವೃದ್ಧಿ ಯಾಗುತಾ ಇದಾನೆಂದು ತಿಳಿದು ರಾಜನಿಗೆ

ಸಂತೋಷವಾಯಿತು. 


ಮದನನು ಎಂದಿನಂತೆ ಮನೆಗೆ ಬಂದನು. ಒಂದಾನೊಂದು ದಿನ

ಒಂದು ಗುಬ್ಬಿಯು ಕಿಟಕಿಯಲ್ಲಿ ಬಂದು ಕೂತುಕೊಂಡಿತು. ಅದನ್ನು 

------------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೩೭ 


ಕಂಡು ಮದನ ಸ್ವಲ್ಪ ಅನ್ನವನ್ನು ತೆಗೆದುಕೊಂಡು ಹೋಗಿ ಹಾಕಿದನು.

ಗುಬ್ಬಿಯು ಅದನ್ನು ತಿಂದು ಹಾರಿಹೋಯಿತು. ಮಾರನೇ ದಿನವೂ

ಹಾಗೆಯೇ ಬಂದು ಕೂತುಕೊಂಡಿತು. ಮತ್ತೆ ಅನ್ನವನ್ನು ಚೆಲ್ಲಲು

ತಿಂದು ಹಾರಿಹೋಯಿತು. ಈ ಪ್ರಕಾರ ಗುಬ್ಬಿಯು ನಿತ್ಯವೂ ಬಂದು

ಅನ್ನವನ್ನು ತಿಂದುಹೋಗುವ ರೂಢಿಯನ್ನು ಇಟ್ಟುಕೊಂಡಿತು. ಇದಕ್ಕೆ

ಭಯ ಹೋಯಿತು. ಮದನನ ಕೈಯಿಂದಲೇ ಅನ್ನದ ಅಗುಳನ್ನು ಕಚ್ಚಿ

ಕೊಳ್ಳುವುದು ಅವನ ಮೈಮೇಲೆಲ್ಲಾ ಓಡಾಡುವುದು, ಹೀಗೆ ಗುಬ್ಬಿಯು

ಬಹು ಸಲಿಗೆಯಾಗಿ ಒಗ್ಗಿಕೊಂಡಿತು. ಮತ್ತೊಂದು ದಿನ ಈ ಗುಬ್ಬಿ 

ಹಾರಿಬಂದುದನ್ನು ಕಂಡು, ಮದನನು ಹೋಗಿ ಅನ್ನವನ್ನು ಹಿಡಿದು

ಕೊಂಡು ಬಂದು ನೋಡಲು, ಗುಬ್ಬಿಯು ಸತ್ತು ಬಿದ್ದಿತ್ತು. ಅದರ

ಕತ್ತು ಕತ್ತರಿಸಿಹೋಗಿ, ರಕ್ತ ಸುರಿದಿತ್ತು. ಅತ್ತಿತ್ತ ನೋಡಲು ದೂರ

ದಲ್ಲಿ ಮನೇ ಬೆಕ್ಕು ಕೂತಿತ್ತು. ಇವನನ್ನು ಕಂಡು ಅದು ಓಡಿ

ಹೋಯಿತು. ಮದನನು ಕಣ್ಣಿನಲ್ಲಿ ನೀರಹಾಕುತಾ ಜೋಯಿಸನ

ಸಮೀಪಕ್ಕೆ ಬಂದು, ನಿತ್ಯವೂ ತಾನು ಗುಬ್ಬಿಗೆ ಅನ್ನವನ್ನು ಹಾಕುತಿದ್ದ

ಸಂಗತಿಯನ್ನು ಹೇಳಿದನು. ಅದಕ್ಕೆ


ಜೋಯಿಸ---ಹಾಗೆ ಪ್ರಾಣಿಗಳನ್ನು ಪ್ರೀತಿಯಿಂದ ನಾವು ಆದರಿ

ಸಿದರೆ, ಅವುಗಳು ನಮ್ಮನ್ನು ಕಂಡು ಭಯಪಡದೇ ಒಗ್ಗಿ ಕೊಳ್ಳುವವು.


ಮದನ--ಹಾಗೆಯೇ ಒಗ್ಗಿಕೊಂಡು ಇತ್ತು. ಈ ದಿವಸ ಅದು

ಕಿಟಿಕಿಗೆ ಬಂದು ಕೂತುಕೊಂಡಕೂಡಲೇ ಅನ್ನವನ್ನು ತರೋಣವೆಂದು

ಈಚೆಗೆ ಬಂದೆ. ನಾನು ಹೋಗುವಷ್ಟರಲ್ಲಿಯೇ ನಮ್ಮ ಮನೇ ಬೆಕ್ಕು

ಅದನ್ನು ಕಚ್ಚಿ ಕೊಂದುಹಾಕಿಬಿಟ್ಟತ್ತು.


ಜೋಯಿಸ--ಅಯ್ಯೊ! ಪಾಸ! ನಿನ್ನ ಗುಬ್ಬಿ ಸತ್ತುಹೋಯಿತೆ?

ಆದರೆ ಈಗ ಆ ಬೆಕ್ಕಿಗೆ ಏನು ಮಾಡಬೇಕೆಂದು ಇದ್ದೀಯೆ?


ಮದನ--ಆ ಬೆಕ್ಕನ್ನ ಕೊಂದುಬಿಡಬೇಕು.


ಜೋಯಿಸ--ನಿನ್ನ ಗುಬ್ಬಿಯನ್ನು ಕಂಡರೆ ಆ ಬೆಕ್ಕಿಗೆ ವಿಶೇಷ

ಹಗೆತನವಿತ್ತೊ, ಅಥವಾ ಬೆಕ್ಕು ಹೊಟ್ಟಿಗೆ ಕಾಣದೆ ಹಕ್ಕಿಗಳನ್ನು

ಕೊಂದುಹಾಕುವ ತನ್ನ ಸ್ವಭಾವವನ್ನು ಅನುಸರಿಸಿ, ಈ ಗುಬ್ಬಿಯನ್ನು

ಕೊಂದುಹಾಕಿತೊ? 

--------------------------------------

೧೩೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಮದನ--ಈ ಗುಬ್ಬಿಯಮೇಲೆ ಅದಕ್ಕೆ ವಿಶೇಷ ಹಗೆತನವಿತ್ತೆಂದು

ಹೇಳಲಾರೆ. ಹೊಟ್ಟೆಗಿಲ್ಲದೆ ಇದನ್ನು ತಿನ್ನಬೇಕೆಂದು ಬಂದಿದ್ದರೂ

ಇರಬಹುದು.


ಜೋಯಿಸ.--ಅಳಿಲನ್ನೂ ಇಲಿಯನ್ನೂ ಆ ಜಾತಿ ಹಿಡಿಯುವ

ದಿಲ್ಲವೆ, ನೀನು ಕಾಣೆಯ? ಹಾಗೆ ಮಾಡದಂತೆ ಬೆಕ್ಕಿಗೆ ಬುದ್ಧಿಯನ್ನು

ನೀನು ಯಾವಾಗಲಾದರೂ ಕಲಿಸಿದ್ದೆಯ?


ಮದನ--ಇಲ್ಲ.. ಒಂದುದಿನ ಒಂದು ಬೆಕ್ಕು ಇಲಿಯನ್ನು

ಹಿಡಿದುಕೊಂಡಿತ್ತು. ಸುಮತಿಯು ಅದನ್ನು ಕಂಡು, ಇಲಿಯನ್ನು

ಬಿಡಿಸಿಕೊಂಡು, ಆಚೆಗೆ ಬಿಟ್ಟು ಬಿಟ್ಟೆ. ನಾನು ಅದರ ಗೋಜಿಗೆ

ಹೋಗಲಿಲ್ಲ.


ಜೋಯಿಸ--ಹಾಗಾದಕ್ಕೆ ಆ ಬೆಕ್ಕಿನ ತಪ್ಪಿಗಿಂತಲೂ ನಿನ್ನ ತಪ್ಪು

ಹೆಚ್ಚಾಯಿತೊ ಇಲ್ಲವೋ? ಬೆಕ್ಕು ಸಣ್ಣ ಪಕ್ಷಿಗಳನ್ನು ಹಿಡಿದು ಕೊಲ್ಲು

ವುದನ್ನು ನೀನು ಬಲ್ಲೆ. ಆದಾಗ್ಯೂ ನಿನ್ನ ಗುಬ್ಬಿಯ ಪ್ರಾಣವನ್ನು

ಕಾಪಾಡುವುದಕ್ಕೆ ನೀನು ಯತ್ನವನ್ನೇ ಮಾಡಲಿಲ್ಲ. ಅದಕ್ಕೆ ನೀನು

ಅನ್ನವನ್ನು ಹಾಕಿ ಒಗ್ಗಿಸಿಕೊಳ್ಳದಿದ್ದರೆ ಅದು ಕಾಡಿನಲ್ಲೇ ಹಾರಾಡಿ

ಕೊಂಡಿರುತಿತ್ತು. ಬೆಕ್ಕಿನ ಕೈಗೆ ಸಿಕ್ಕುತಲೇ ಇರಲಿಲ್ಲ. ಆದ್ದರಿಂದ

ಸಣ್ಣ ಪಕ್ಷಿಗಳನ್ನು ಕೊಲ್ಲಬಾರದೆಂದು ಒಳ್ಳೇ ಸ್ವಭಾವವನ್ನು ಬೆಕ್ಕಿಗೆ

ಕಲಿಸಬೇಕೊ ಇಲ್ಲವೊ? ನೀನು ಹಾಗೆ ಕಲಿಸದೇ ಹೋದ್ದರಿಂದ,

ತಪ್ಪು ನಿನ್ನದೆ, ಬೆಕ್ಕಿನದೆ?


ಮದನ--ನಾವು ಹಾಗೆ ಕಲಿಸುವುದಕ್ಕೆ ಆಗುವುದೆ?


ಜೋಯಿಸ-- ಚೆನ್ನಾಗಿಯೂ ಕಲಿಸಬಹುದು.


ಮದನ--ಇಂಥಾ ಕೆಟ್ಟ ಜಂತುಗಳು ಯಾಕೆ ಇರಬೇಕು?


ಜೋಯಿಸ--ಮತ್ತೊಂದು ಪ್ರಾಣಿಯನ್ನು ತಿಂದು ಜೀವಿಸುವ

ಜಂತುವನ್ನೆಲ್ಲಾ ನೀನು ಕೊಲ್ಲುತಾ ಬಂದರೆ, ಲೋಕದಲ್ಲಿ ಅನೇಕ

ಜಂತುಗಳು ಸತ್ತು ಹೋಗುವವು.


ಮದನ--ಗುಬ್ಬಿಯು ಇಂಥಾ ಕ್ರೂರಕೃತ್ಯವನ್ನು ಎಂದಿಗೂ

ಮಾಡುವುದಿಲ್ಲ. 

--------------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೩೯


ಜೋಯಿಸ--ಮಾತಿಗೆ ಪ್ರತಿಮಾತನ್ನು ಈಗ ನಾನು ಹೇಳುವು

ದಿಲ್ಲ. ಅದಕ್ಕೆ ಸಮಯವಿದೆ.


ಜೋಯಿಸನು ಈ ಪ್ರಕಾರ ಹೇಳಿ, ಮದನನನ್ನು ಸಂಗಡ

ಕರೆದುಕೊಂಡು ಬಂದು ಅವರೇ ಹೊಲದ ಸಮೀಪಕ್ಕೆ ಹೋದನು.

ಅಲ್ಲಿ ಗುಬ್ಬಿಗಳು ಹೆಚ್ಚಾಗಿ ಹಾರಿಯಾಡುತಿದ್ದವು. ಒಂದು ಗುಬ್ಬಿಯು

ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡಿತ್ತು. ಅದನ್ನು ಮದನನಿಗೆ

ತೋರಿಸಿ ಜೋಯಿಸ ಹೇಳುವುದೇನೆಂದರೆ :--


ಜೋಯಿಸ-.ಆ ಗುಬ್ಬಿಯ ಬಾಯಿಯಲ್ಲಿ ಇರುವುದೇನು,

ಬಲ್ಲೆಯ ?


ಮದನ --ಅವರೇ ಹುಳುವಿನಹಾಗೆ ಕಾಣುತಿದೆ.


ಜೋಯಿಸ.--ಆ ಹುಳುವು ಗುಬ್ಬೀ ಕೈಗೆ ಸಿಕ್ಕಿ ಪಡುತಿರುವ

ಕಷ್ಟವನ್ನು ಗುಬ್ಬಿ ಬಲ್ಲುದೆ?


ಮದನ--ಅರಿಯದು.


ಜೋಯಿಸ--ಬುದ್ಧಿಶಕ್ತಿಯುಳ್ಳ ಮನುಷ್ಯನು ಕೆಟ್ಟದೆಂದು ತಿಳಿ

ದಿರತಕ್ಕ ಜ್ಞಾನವು ಬುದ್ಧಿಶಕ್ತಿಯಿಲ್ಲದ ಇತರ ಜಂತುಗಳಿಗೆ ಎಲ್ಲಿ

ಬಂದೀತು? ಹೊಟ್ಟೆಗೋಸ್ಕರ ದನಗಳು ಹುಲ್ಲನ್ನು ಹೇಗೆ ತಿನ್ನುವವೊ

ಗುಬ್ಬಿಯೂ ಹಾಗೆ ಹುಳುವನ್ನು ತಿನ್ನುವುದು.


ಮದನ - ಹಾಗಾದರೆ, ನನ್ನ ಗುಬ್ಬಿಯನ್ನು ಕಚ್ಚಿ ಹಾಕಿದ ಬೆಕ್ಕಿಗೆ

ತಾನು ಮಾಡುವ ಕೆಲಸ ಅಪರಾಧವೆಂಬ ತಿಳಿವಳಿಕೆ ಇರಲಿಲ್ಲ.


ಜೋಯಿಸ- ಈ ಹುಳುವನ್ನು ಕಚ್ಚಿದ ಗುಬ್ಬಿಗೆ ತನ್ನ ಕೆಲಸದ 

ಕೆಟ್ಟತನ ಹೇಗೆ ಗೊತ್ತಿಲ್ಲವೊ, ಹಾಗೆಯೇ ಆ ಬೆಕ್ಕಿಗೂ ತನ್ನ ಕೆಟ್ಟತನ

ಗೊತ್ತಿರಲಿಲ್ಲ.  ನಿನ್ನ ಗುಬ್ಬಿಯಲ್ಲಿ ನಿನಗಿದ್ದ ಪ್ರೇಮವನ್ನು ಅದು ಅರಿ

ಯದು. ಆದ್ದರಿಂದ ಆ ಗುಬ್ಬಿಯನ್ನು ಕೊಂದಾಗ ನಿನಗೆ ಕೇಡನ್ನು

ಮಾಡಬೇಕೆಂದು ಅದು ಮನಸ್ಸಿನಲ್ಲಿ ಮಾಡಿಕೊಂಡಿರಲಿಲ್ಲ.


ಮದನ-- ನಾನು ಇನ್ನೊಂದು ಪಕ್ಷಿಯನ್ನು ಸಾಕಿದರೂ ಈ

ಬೆಕ್ಕು ಹೀಗೆಯೇ ಮಾಡೀತು.


ಜೋಯಿಸ--ಬೆಕ್ಕು ಹಾಗೆ ಕೊಲ್ಲದಂತೆ ತಪ್ಪಿಸಬಹುದು. 

--------------------------------------

೧೪೦ ಸುಮತಿ ಮದಡನಕುಮಾರರ ಚರಿತ್ರೆ [ಅಧ್ಯಾಯ


ಮದನ--ಅದು ಹೇಗೆ ತಪ್ಪಿಸುವುದು, ನನಗೆ ಅದನ್ನು ಹೇಳಿ

ಕೊಡಿ.


ಜೋಯಿಸ--ಅಗತ್ಯವಾಗಿ ಆಗಲಿ. ಒಂದು ಪ್ರಾಣಿಯನ್ನು

ಕೊಲ್ಲುವುದಕ್ಕಿಂತಲೂ ಅದರ ತಪ್ಪನ್ನು ತಿದ್ದುವುದು ಒಳ್ಳೇದು. ಈ

ಬೆಕ್ಕನ್ನು ಮರಿಯಾಗಿದ್ದಾಗಿನಿಂದಾ ನಾನು ಸಾಕಿದೆ. ಇದರ ಸ್ವಭಾವ

ಒಳ್ಳೇದು. ಊಟದಹೊತ್ತಿ ನಲ್ಲಿ ಬಂದು ಸುಮ್ಮನೇ ಕೂತುಕೊಳ್ಳುವುದು.

ಎಲೆಗೆ ಬಾಯಿಹಾಕುವುದಿಲ್ಲ. ನಾವು ಹಾಕಿದ್ದನ್ನು ತಿಂದುಕೊಂಡು

ಹೋಗುವುದು.


ಹೀಗೆ ಈ ಸಂಭಾಷಣೆ ಇಲ್ಲಿಗೆ ನಿಂತಿತು. ಕೆಲವು ದಿವಸ ಕಳೆಯಿತು.

ಅದು ಗಿಡಸೀಮೆಯಾದ್ದರಿಂದ, ಅನೇಕ ಪಕ್ಷಿಗಳು ವಿಶೇಷವಾಗಿ

ಸಂಚರಿಸುತಿದ್ದವು. ಜೋಯಿಸನು ಒಂದು ದಿನ ಒಂದು ಮೈನವನ್ನು

ಹಿಡಿದು ಒಂದು ಕಬ್ಬಿಣದ ಪಂಜರದಲ್ಲಿ ಕೂಡಿದನು. ಆ ಪಂಜರದ

ಕದದ ಕಡ್ಡಿಗಳನ್ನು ಬೆಂಕಿಯಲ್ಲಿ ಚೆನ್ನಾಗಿ ಕಾಸಿ,  ಆ ಕದವನ್ನು ಪಂಜ

ರದ ಬಾಗಿಲಿಗೆ ಎದುರಾಗಿ ಇಟ್ಟು, ಬೆಕ್ಕನ್ನು ಕರೆದು ಅಲ್ಲಿ ಬಿಟ್ಟು ಅಲ್ಲಿ

`ಯಾರೂ ಇಲ್ಲದಂತೆ ಮರೆಯಾಗಿ ನಿಂತುಕೊಂಡನು. ಆ ಮಾರ್ಜಾಲವು

ಪಂಜರದೊಳಗಿನ ಮೈನವನ್ನು ಹಿಡಿದು ಕೊಲ್ಲಬೇಕೆಂದು ಬಾಗಿಲ

ಮೇಲೆ ಹಾರಿತ್ತು. ಕಾದಿದ್ದ ಕಬ್ಬಿಣದ ಕಂಬಿಗಳು ತಗಲಿ ಅದರ

ಮೈಯೂ ಮೂತಿಯೂ ಸುಟ್ಟುಹೋದವು. ಮತ್ತೆ ನೆಗೆಯಿತು; ಮತ್ತೆ

ಹೀಗೆಯೇ ಸುಟ್ಟು ಹೋಯಿತು. ಹೀಗೆ ೪-೫ ಸಾರಿ ಹಾರಿ ಮೈಯ 

ನ್ನೆಲ್ಲ ಸುಟ್ಟುಕೊಂಡು ಅರಚಿಕೊಳ್ಳುತಾ ಮೈನದ ಗೋಜಿಗೆ ಪುನಃ

ಹೋಗದೆ, ಬೆಕ್ಕು ಹೊರಟುಹೋಯಿತು. ಅಂದಿನಿಂದ ಬೆಕ್ಕು ಯಾವ

ಹಕ್ಕಿಯನ್ನೂ ಹಿಡಿಯುವುದಕ್ಕೆ ಹೋಗುತಿರಲಿಲ್ಲ.


ಆಗ ಬೇಸಗೆ ಮೊದಲಾಗುತಿತ್ತು. ಮೇವುಸಿಕ್ಕುವುದು ಕಷ್ಟ

ವಾಗಿತ್ತು. ಒಂದಾನೊಂದು ದಿನ ರಾಮಜೋಯಿಸನೂ ಮದನನೂ

ಹೊಲದ ಕಡೆಗೆ ಹೋದರು. ಅಲ್ಲಿ ಸುಮತಿ ಮದನರಿಬ್ಬರೂ ಹಾಕಿದ್ದ

ಪೈರನ್ನು ಮೊಲಗಳು ಬಂದು ಮೇದು ಹಾಳುಮಾಡುತಿದ್ದವು. ಅದನ್ನು

ಕಂಡು ಮದನನು--ಉಪಾಧ್ಯಾಯಕೆ, ನೋಡಿದಿರ? ನಾನೂ ಸುಮತಿ 

-----------------------------------------

೧೧] ಸುಮತಿ ಮದನಕುಮಾರರ ಚರಿತ್ರೆ ೧೪೧. 


ಯೂ ಸೇರಿ ಮಾಡಿದ್ದ ಪೈರನ್ನು ಈ ಕೆಟ್ಟ ಮೊಲಗಳು ತಿಂದು ಕೆಡಿಸು

ತಿವೆ. ಇವುಗಳಿಗೆ ತಕ್ಕದ್ದನ್ನುಮಾಡಬೇಕು, ಎಂದು ಬಹು ಕೋಪ 

ದಿಂದ ನುಡಿದನು. ಆ ಮಾತಿಗೆ ಜೋಯಿಸನು--ಪೈರೆಲ್ಲಾ ಹಾಳಾ 

ದ್ದಕ್ಕೆ. ಪೇಚಾಡತಕ್ಕದ್ದೇಸರಿ ; ಆದರೆ ಅದನ್ನು ಹೇಗೆ ಸರಿಮಾಡುವುದು, 

ಎಂದು ಕೇಳಿದನು. ಹೇಗೆ ಎಂದರೆ, ಈ ಮೊಲಗಳನ್ನೆಲ್ಲಾ ತುಪಾಕಿ

ಯಿಂದ ಸುಟ್ಟುಬಿಡಬೇಕು, ಎಂದು ಮದನ ಉತ್ತರ ಹೇಳಿದನು.

ಇದಕ್ಕೆ ಜೋಯಿಸನು--ಸ್ವಲ್ಪ ದಿವಸಕ್ಕೆ ಮುಂಚೆ ಬೆಕ್ಕನ್ನು ಕೊಂದ

ಹಾಕಬೇಕು, ಯಾಕೆಂದರೆ ಗುಬ್ಬಿಯನ್ನು ತಿಂದಿತು ಎಂದು ಹೇಳಿದೆ.

ಈಗ ನಿರಪರಾಧಿಗಳಾದ ಮೊಲಗಳನ್ನು ಕೊಂದುಹಾಕಬೇಕು, ಯಾಕೆಂ

ದರೆ ಅವು ಸಸ್ಯಗಳನ್ನು ತಿಂದು ಬಿಟ್ಟವು ಎಂದು ಹೇಳುತೀಯ ಎಂಬದಾಗಿ

ನುಡಿದನು. ಈ ಮಾತನ್ನು ಕೇಳಿ ಮದನನು ಉತ್ತರ ಹೇಳುವುದಕ್ಕೆ

ತಿಳಿಯದೆ ಪೆಚ್ಚುಮುಖವನ್ನು ಹಾಕಿಕೊಂಡು, ಕೊನೆಗೆ ಗುರುವಿನ

ಸಂಗಡ--ಸಸ್ಯಗಳನ್ನು ತಿಂದುದಕ್ಕೋಸ್ಕರ ಅವುಗಳನ್ನು ಕೊಲ್ಲಬೇ

ಕೆಂದು ಅಲ್ಲ. ನಾನು ಹಾಕಿದ ಪೈರನ್ನು ಅವು ತಿಂದುಬಿಟ್ಟವು, ಆದ್ದ

ರಿಂದ ಕೊಲ್ಲಬೇಕು, ಎಂದನು. ಆ ಮೂಗಪ್ರಾಣಿಗಳು ನಿನ್ನ ಪೈರು

ಮತ್ತೊಬ್ಬನ ಪೈರು ಎಂದು ಬಲ್ಲವೆ? ನಿನ್ನ ಜಾಗ್ರತೆಯಲ್ಲಿ ನೀನು ಇರ.

ಬೇಕಾಗಿತ್ತು; ಹೊಲಕ್ಕೂ ತೋಟಕ್ಕೂ ಸರಿಯಾದ ಬೇಲಿಯನ್ನು

ಹಾಕಬೇಕಾಗಿತ್ತು. ಆಗ ಮೊಲಗಳು ಬಂದು ಪೈರನ್ನು ಹಾಳುಮಾಡು

ತಿರಲಿಲ್ಲ.. ಇದೂ ಅಲ್ಲದೆ, ಬೇಸಗೆ ಮೊದಲಾಯಿತು. ಪ್ರಾಣಿಗಳಿಗೆ.

ಮೇವು ಸಿಕ್ಕುವುದು ಕಡಮೆ. ಆದ್ದರಿಂದ ಅದು ಸಿಕ್ಕುವ ಕಡೆಗೆ

ಬಂದು ತಿನ್ನುವುವು. ಅದಕ್ಕೋಸ್ಕರ ಅವುಗಳನ್ನು ಕೊಂದುಹಾಕುವುದ

ಕ್ಕಿಂತಲೂ ಕ್ಷಮಿಸಿ ಬಿಟ್ಟು ಬಿಡುವುದು ಲೇಸು, ಎಂದು ಜೋಯಿಸ.

ಹೇಳಿದನು.


ಈ ಪ್ರಕಾರ ಮಾತನಾಡುತಾ ಜೋಯಿಸನು ಮದನನನ್ನು ಕರೆದು

ಕೊಂಡು ಮುಂದಕ್ಕೆ ಹೋದನು. ದಾರಿಯಲ್ಲಿ ಜೋಯಿಸನ ಹೊಲ

ಸಿಕ್ಕಿತು. ಅಲ್ಲಿ ಬೆಳೆದು ನಿಂತಿದ್ದ ಪೈರನ್ನು ಮಾಘದ ಹಕ್ಕಿಗಳು

ಗುಂಪು ಗುಂಪಾಗಿ ಬಂದು ತಿಂದು ನಾಶಮಾಡುತಿದ್ದವು. ಇವರು 

---------------------------------

೧೪೨ ಸುಮತಿ ಮದನಕುಮಾರರ ಚರಿತ್ರೆ  [ಅಧ್ಯಾಯ


ಇಬ್ಬರೂ ಹೋದಕೂಡಲೆ. ಆ ಹಕ್ಕಿಯ ಹಿಂಡು ಪರ್ರನೆ ಮೇಲಕ್ಕೆ

ಹಾರಿತು. ಮದನನು ಪಂತರೆ, ಯಾಕೆ ಈ ಹಕ್ಕಿಗಳು ಹಾರಿಹೋಗು

ತಿವೆ? ಎಂದು ಕೇಳಿದನು. ಅದಕ್ಕೆ ಜೋಯಿಸನು--ಇವುಗಳಿಗೆ

ಮಾಘದ ಹಕ್ಕಿ ಎಂದು ಹೆಸರು. ಬೇಸಗೆಯ ಹೊಡೆತದಿಂದ ಎಲ್ಲೆ

ಲ್ಲಿಯೂ ಮೇವು ಸಿಕ್ಕದೇ ಹೋದಕಾರಣ ಇಲ್ಲಿ ಬಂದು ಕಾಳನ್ನು ತಿಂದು

ಕೊಂಡು ಹೋಗುತಿವೆ, ಎಂದು ಹೇಳಿದನು.


ಮದನ--ಈ ಬೇಸಗೆ ಯಾಕೆ ಬರಬೇಕು? ಈ ಕಾಲದಲ್ಲಿ

ಎಲ್ಲಿಯೂ ಪ್ರಾಣಿಗಳಿಗೆ ಮೇವು ದೊರೆಯುವುದಿಲ್ಲ. ಈ ಕಾಲಕ್ಕಿಂತಲೂ

ಹಿಮಕಾಲ ಉತ್ತಮ.


ಜೋಯಿಸ. ಈ ದೇಶದಲ್ಲಿ ಶಖೆ ಹೆಚ್ಚಾದ್ದರಿಂದ ಹಾಗೆ ತೋರು

ವುದು. ಬೇರೆ ದೇಶದಲ್ಲಿ ಚಳಿ ಹೆಚ್ಚಾಗಿರುವುದು, ಅಂಥಾ ಕಡೆ ಬರೀ

ಬೇಸಗೆಯೇ ಇದ್ದರೆ ಸಾಕು ಎಂದು ಅಪೇಕ್ಷಿಸುವರು.


ಮದನ-- ಹಾಗಾದರೆ ವಿಶೇಷ ಶಖೆಯೂ ಇಲ್ಲದೆ ವಿಶೇಷ

ಚಳಿಯೂ ಇಲ್ಲದೆ ಸಮಧಾತುವಾದ ದೇಶದಲ್ಲಿರಬೇಕು.


ಜೋಯಿಸ--ಅಂಥಾ ದೇಶ ಸಿಕ್ಕುವುದು ಕಷ್ಟ. ಸಿಕ್ಕಿದರೂ ಆದರ

ವಿಸ್ತಾರ ಕಡಮೆ.


ಮದನ-- ಅಂಥಾ ದೇಶಕ್ಕೆ ಇತರ ಕಡೆಯಿಂದ ಜನಗಳೆಲ್ಲರೂ

ಹೋಗಿ ಅಲ್ಲಿಯೇ ವಾಸಮಾಡಿಕೊಂಡಿರಬಹುದು. ಹಾಗಾದರೆ ಆ ದೇಶ

ದಲ್ಲಿ ಸ್ವಲ್ಪವೂ ಸಿಕ್ಕುವುದಿಲ್ಲ.


ಜೋಯಿಸ-.ಈ ಮಾತಬಿಡು, ಎಂಥಾ ಕೆಟ್ಟ ದೇಶವಾಗಲಿ,

ಅಲ್ಲಿನ ಜನರಿಗೆ ಆ ದೇಶದಲ್ಲಿಯೇ ಅಭಿಮಾನವಿದ್ದೀತೇ ಹೊರತು

ಮತ್ತೆ ಬೇರೆ ಇಲ್ಲ. ಉತ್ತರ ಪ್ರಾಂತದಲ್ಲಿ ಕೆಲವು ದೇಶಗಳಿವೆ.

ಅಲ್ಲಿ ಚಳಿಯಿಂದ ನೀರೆಲ್ಲ ಗಡ್ಡೆ ಯಾಗುವುದು. ಭೂಮಿಯನ್ನು ಉಳು

ವುದೂ ಇಲ್ಲ, ಬಿತ್ತುವುದೂ ಇಲ್ಲ. ಅಲ್ಲಿ ಸಸ್ಯವರ್ಗ ಬೆಳೆಯುವುದು

ಕಷ್ಟ, ಹೊಟ್ಟೆಗಿಲ್ಲದೆ ಒಂದು ಬಗೆ ಪಾಸೆಯನ್ನು ಜನರು ತಿಂದು

ಜೀವಿಸುವರು. ಈ ಪಾಸೆಯು ಭೂಮಿಯ ಮೇಲೆ ಸಿಕ್ಕುವುದು. ಅದರ

ಮೇಲೆ ರಾಸಿ ರಾಸಿಯಾಗಿ ಹಿಮದಗಡ್ಡೆ ಬಿದ್ದಿರುವುದು. ಆ ಮಂಜಿನ 

--------------------------------------

೧೧] ಸುಮತಿ ಮದನಕುಮಾರರ ಚರಿತ್ರೆ   ೧೪೩ 


ಗಡ್ಡೆ ರಾಸಿಗಳನ್ನು ಆ ದೇಶದಲ್ಲಿ ಸಿಕ್ಕುವ ಒಂದು ಬಗೆ ಜಿಂಕೆಯು

ಕಾಲಲ್ಲಿ ಕೆದಕುವುದು. ಅದರ ಕೆಳಗೆ ಸಿಕ್ಕುವ ಪಾಸೆಯನ್ನು ತಿನ್ನು

ವುದು. ಈ ಜಿಂಕೆಯ ಹಾಲನ್ನು ಜನರು ಉಪಯೋಗಿಸುವರು. ಹಿಮ

ಕಾಲದಲ್ಲಿ ಕೊಡಲಿಯಿಂದ ಹೊಡೆದರೂ ಒಡೆಯದ ಹಾಗೆ ಆ ಜಿಂಕೆಯ

ಹಾಲು ಗಟ್ಟಿ ಯಾಗುವುದು. ಜನರು ಮರವನ್ನು ನೆಲದಲ್ಲಿ ನೆಟ್ಟು

ಮನೆಯನ್ನು ಮಾಡಿಕೊಳ್ಳುವರು. ಆ ಜನರು ಅತ್ಯಂತ ಬಡವರು.

ಆ ಜಿಂಕೆಯ ಹಾಲೂ ಅದರ ಮಾಂಸವೂ ಕರಡೀಮಾಂಸವೂ ಜನರ

ಆಹಾರವಾಗಿವೆ. ಆ ಕರಡೀ ಮಾಂಸ ಒಂದನ್ನು ಮಾತ್ರ ಬೇಯಿಸುವರು.

ಇದನ್ನು ಅಡತಕ್ಕದ್ದು ವಿಶೇಷ ದಿವಸಗಳಲ್ಲಿಯೇ. ನೆಲದಮೇಲೆ ಮಂಜಿನ

ಗಡ್ಡೆ ಬಿದ್ದು ನಡೆಯುವುದಕ್ಕೆ ಆಗದೇ ಇರುವುದು, ಆದ್ದರಿಂದ ಚಕ್ರವಿಲ್ಲದ

ಗಾಡಿಯನ್ನು ಮಾಡಿ ಆ ಜಿಂಕೆಯನ್ನು ಕಟ್ಟಿ ಅದರಲ್ಲಿ ಕೂತು ಹೊರಡು

ವರು. ಆ ಜನರ ಹತ್ತಿರ ಯಾವ ಹಣಕಾಸೂ ಇಲ್ಲ. ಆದರೂ ಸ್ವಭಾವ

ದಲ್ಲಿ ಒಳ್ಳೆ ಯವರು, ಪರದೇಶದವರು ಬಂದರೆ ಅವರನ್ನು ಉಪಚರಿ

ಸುವರು.


ಮದನ. ಇಷ್ಟು ಕಷ್ಟ ಪಟ್ಟುಕೊಂಡು ಆ ದೇಶದಲ್ಲಿ ಜನರು

ಯಾಕೆ ಇದಾರೆ?


ಜೋಯಿಸ--ಆ ದೇಶದಲ್ಲಿ ಮೊದಲಿನಿಂದಲೂ ಅವರು ಇದ್ದು

ರೂಢಿಯಾಗಿದೆ, ಎಷ್ಟು ಕಷ್ಟವಾದರೂ ಸರಿಯೆ ಸಹಿಸಿಕೊಂಡಾರೇ

ಹೊರತು ಬೇರೆ ದೇಶಕ್ಕೆ ಹೋಗುವುದಿಲ್ಲ.


ಮದನ--ಅವರು ಆ ಕಷ್ಟದಿಂದ ಸತ್ತು ಹೋಗುವುದಿಲ್ಲವೆ?


ಜೋಯಿಸ-- ಸುಮ್ಮನೆ ತಿಂದು ಮೈ ಬೆಳಸಿಕೊಂಡು ಯಾವ

ಕೆಲಸವನ್ನೂ ಮಾಡದೇ ಇರತಕ್ಕ ಜನರು ಯಾವ ಜಾಡ್ಯವೂ ಇಲ್ಲದೆ

ಸೌಖ್ಯವಾಗಿರುತಾರೆಯೆ?


ಮದನ--ಯಾವಾಗಲೂ ಹಾಗೆ ಸೌಖ್ಯವಾಗಿರುವುದಿಲ್ಲ.


ಜೋಯಿಸ-- ಸಾಕು ಸಾಲದು ಎನ್ನುವ ಹಾಗೆ ಹೊಟ್ಟೆಗೆ ತಿಂದು

ಜೀವಿಸತಕ್ಕ ಜನರು ಎಷ್ಟು ಕಷ್ಟವನ್ನಾದರೂ ಸಹಿಸತಕ್ಕವರಾಗಿರುವು

ದನ್ನು ನೀನು ಬಲ್ಲೆಯ? ಈ ವಿಷಯದಲ್ಲಿ ಒಂದು ಕಥೆಯನ್ನು ಹೇಳು

ತೇನೆ, ಕೇಳು. ಹೀಗೆಂದು ಜೋಯಿಸನು ಕಥೆಯನ್ನು ಹೇಳುವುದಕ್ಕೆ

ಪ್ರಾರಂಭಿಸಿದನು. 

-----------------------------------

೧೨ ನೆ ಅಧ್ಯಾಯ


ಮಾನಸಪುರವೆಂಬ ಪಟ್ಟಣದಲ್ಲಿ ಲಂಬೋದರನೆಂಬ ಒಬ್ಬ ಧನ 

ವಂತ ಇದ್ದನು. ಇವನು ಯಾವಾಗಲೂ ಆಹಾರದ ಮೇಲೆಯೇ

ಜ್ಞಾನವನ್ನು ಇಟ್ಟುಕೊಂಡಿದ್ದನು. ಇವನು ಹಾಸಿಗೆಯಿಂದ ಎದ್ದ

ಕೂಡಲೆ ಹುರಿಹಿಟ್ಟು, ಅವಲಕ್ಕಿ, ಪುಳ್ಳಂಗಾಯಿ ಉಂಡೆ ಇವುಗಳನ್ನೂ

ಇನ್ನೂ ಇತರ ತಿಂಡಿಯನ್ನೂ ತಿಂದು ಹಾಸಿಗೆಯನ್ನು ಬಿಟ್ಟು ಮೇಲಕ್ಕೆ

ಏಳುವುದೇ ಹೊರತು ಎದ್ದಮೇಲೆ ತಿಂಡಿಯನ್ನು ತಿಂದವನೇ ಅಲ್ಲ. ಇದು.

ಆದ ತರುವಾಯ ಬಗೆ ಬಗೇ ಷರಬತ್ತುಗಳನ್ನು ಬಟ್ಟಲುಗಳಿಗೆ ಬಗ್ಗಿಸಿ.

ಬಗ್ಗಿಸಿ ಆಳುಗಳು ತಂದುಕೊಡುತಿದ್ದರು. ಇದನ್ನೆಲ್ಲಾ ಹಿಂಗಿದ ತರು

ವಾಯ ಲಂಬೋದರನು ಅಡಿಗೇ ದಫೇದಾರನನ್ನು ಕರೆಯಿಸಿ, ಬಗೆಬಗೇ

ಅಡಿಗೆಯನ್ನು ಈ ಪ್ರಕಾರ ಮಾಡೆಂದು ಅವನಿಗೆ ಆಜ್ಞಾಪಿಸುತಿದ್ದನು.

ಆ ಅಡಿಗೆಯವರು ಐದು ಆರು ಜನರಿದ್ದರು, ಒಬ್ಬ ಸೀಪದಾರ್ಥ

ವನ್ನೇ ಮಾಡುವುದು ; ಇನ್ನೊಬ್ಬ ಸಾರು, ಹುಳಿಯನ್ನೇ ಮಾಡು

ವುದು; ಮತ್ತೊಬ್ಬ ಕರಿಯುವ ಕೆಲಸವನ್ನು ನೋಡಿಕೊಳ್ಳುವುದು ;

ನಾಲ್ಕನೆಯವನು ಅನ್ನವನ್ನು ಮಾಡುವುದು; ಐದನೆಯವನು ಕೋಸುಂ

ಬರಿಗಳನ್ನು ಮಾಡುವುದು. ಈ ಪ್ರಕಾರ ಒಬ್ಬೊಬ್ಬರು ಒಂದೊಂದು

ಬಗೆಯನ್ನು ಮಾಡುವುದಕ್ಕೆ ನೇಮಕವಾಗಿದ್ದರು. ಯಜಮಾನನು

ಹತ್ತುಗಳಿಗೆಯೊಳಗಾಗಿ ಊಟಕ್ಕೆ ಕೂತರೆ ಹದಿನೈದು ಇಪ್ಪತ್ತು

ಜನ ಒಬ್ಬನಿಗೆ ಬಡಿಸುವುದಕ್ಕೆ ಹೊರಡುತಿದ್ದರು. ಎಂಥಾ ಪದಾರ್ಥ

ವನ್ನು ಮಾಡಿ. ಬಡಿಸಿದರೂ ಇವನಿಗೆ ತೃಪ್ತಿಯಾಗುತಿರಲಿಲ್ಲ.

ಹೀಗೆ ನಾಲ್ಕುಗಳಿಗೆ ಕೂತು ತಿಂಡಿಯನ್ನು ತಿಂದ, ಕೂತಕಡೆಯಲ್ಲಿಯೇ

ಕೈಯನ್ನು ತೊಳೆದುಕೊಳ್ಳುತಿದ್ದನು. ಇವನ ಕೈಗೆ ನೀರ ಹಾಕುವ

ನೊಬ್ಬ. ಆ ಕೈಯನ್ನೂ ಮೂತಿಯನ್ನೂ ಉಜ್ಜುವನೊಬ್ಬ. ತೊಳೆದ.

ಮೇಲೆ ಚೌಕದಲ್ಲಿ ಒರಸುವನೊಬ್ಬ. ಈ ಪ್ರಕಾರ ಉಪಚಾರವಾಗು

ತಿತ್ತು. ಊಟವಾದ ಸ್ಥಳದಿಂದ ಇವನನ್ನು ನಾಲ್ಕು ಜನ ಕೈಹಿಡಿದು.

ಎತ್ತುತಿದ್ದರು. ಅವರ ಸಹಾಯದಿಂದ ಮೆಲ್ಲಗೆ ಮೇಲಕ್ಕೆ ಎದ್ದು 

--------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೪೫ 


ಒಂದುಮಾರು ದೂರ ಇರುವ ಮಂಚದಮೇಲೆ ಹಾ ಎಂದು ಬಿದ್ದು

ಕೊಳ್ಳುತಿದ್ದನು. ಅತ್ತ ಅಡಿಗೆಯವರು ಇವನ ಊಟವಾದ ಕೂಡಲೆ

ಮಧ್ಯಾನ್ಹದ ಫಲಾಹಾರಕ್ಕೆ ಮಾಡಲು ತೊಡಗುತಿದ್ದರು. ಮೂರನೇ

ಜಾವಕ್ಕೆ ಬೇಕುಬೇಕಾದ ರವೇ ಭಕ್ಷ್ಯಗಳನ್ನು ಮಾಡಿ ಯಜಮಾನನಿಗೆ

ತಂದು ಇರಿಸುತಿದ್ದರು. ಇವನು ಅದೆಲ್ಲವನ್ನೂ ಕೆವಳಿಸಿ ಪುನಃ ಮಲಗಿ

ಕೊಂಡು ತಾಂಬೂಲವನ್ನು ಅಗಿಯುತಾ ರಾತ್ರಿ ಊಟದ ಪರಿಕರವನ್ನು

ಅಡಿಗೆಯವರಿಗೆ ಹೇಳುತಿದ್ದನು. ಈ ಮಧ್ಯೆ ಏನಾದರೂ ತಿರುತಿಂಡಿ

ಯನ್ನು ತಿನ್ನುತಲೇ ಇರುವುದೊ, ತಾಂಬೂಲವನ್ನು ಅಗಿಯುತಲೇ

ಇರುವುದೊ, ಅಂತೂ ಯಾವದಾದರೂ ಒಂದು ನೆಪದಿಂದ ಬಾಯಾಡು

ತಲೇ ಇದ್ದನು. ಸಾಯಂಕಾಲವಾದಕೂಡಲೆ, ಎಡೆ ಸಿದ್ಧವಾಗುತಿತ್ತು.

ಅದನ್ನು ಮೆಲ್ಲುತಿದ್ದನು, ರಾತ್ರಿ ಒಂಭತ್ತು ಹತ್ತು ಗಳಿಗೆಯ ಸಮಯ

ದಲ್ಲಿ ನಿದ್ರೆ ಬರುವುದಕ್ಕೆ ಮುಂಚೆ ತೆಂಗಿನಕಾಯಿ ಗಾತ್ರ ಹಾಲುಕೋವೆ

ಯನ್ನು ಮಾಡಿ ಇರಿಸುತಿದ್ದರು. ಇದನ್ನು ಮೆದ್ದ ತರುವಾಯ ಅಬ್ಬರಿಸಿ

ಕೊಂಡು ಬಿದ್ದುಕೊಳ್ಳುತಿದ್ದನು. ಒಂದೆರಡು ಹೆಜ್ಜೆ ಅತ್ತ ಇತ್ತ ಇಡ

ಬೇಕಾಗಿದ್ದಾಗ್ಗೂ, ಎಲಾ ಯಾರಿದ್ದೀರೊ? ಎಂದು ಆಳುಗಳನ್ನು

ಕೂಗುತಿದ್ದನು, ನಾಲ್ಕು ಜನ ಎರಡು ಕಡೆಯಲ್ಲಿಯೂ ಹಿಡಿದುಕೊಂಡು

ಎಬ್ಬಿಸಿ ಕರೆದುಕೊಂಡುಹೋಗುತಿದ್ದರು. ಜಲಮಲಾದಿಗಳೆಲ್ಲಾ ಕೂತ

ಕಡೆಯಲ್ಲಿಯೇ ಆಗುತಿತ್ತು. ಇಂಥಾ ಉಪಚಾರವನ್ನು ಹೊಂದುತಿದ್ದ

ಈ ತಿಂಡಿಪೋತನ ಸ್ಥಿತಿಯನ್ನು ಏನು ಹೇಳೋಣ! ಹೊಟ್ಟೆ ಒಂದು

ಬೆಟ್ಟದ ಹಾಗಿತ್ತು. ಕೈಕಾಲೆಲ್ಲಾ ದೊಡ್ಡ ದೊಡ್ಡ ತೊಲೆಯ ಹಾಗಿತ್ತು.

ಕೆನ್ನೆಯೆಲ್ಲಾ ದಪ್ಪದಪ್ಪವಾಗಿ ಊದಿಕೊಂಡಿತ್ತು. ಯಾವಾಗಲೂ ಮೇಲು

ಸಿರನ್ನೇ ಹುಯ್ಯುತಿದ್ದನು. ರಾತ್ರೆ ಸ್ವಲ್ಪವೂ ನಿದ್ದೆ ಬರುತಿರಲಿಲ್ಲ.

ಪ್ರಾತಃಕಾಲದಲ್ಲಿ ಎದ್ದರೆ ಹೊಟ್ಟೆ ಯಲ್ಲಿ ಏನೋ ಸಂಕಟವಾಗುತಿತ್ತು.

ಆದರೂ ತಿಂಡಿಯನ್ನು ಮಾತ್ರ ಇವನು ಕಡಮೆ ಮಾಡುತಿರಲಿಲ್ಲ.

ಯಾವ ಹೊಸ ತಿಂಡಿಯನ್ನು ಮಾಡಿಸಿ ತಿನ್ನೋಣವೆಂಬುವುದೇ ಇವನ

ಮುಖ್ಯವಾದ ಜಪವಾಗಿತ್ತು. ಇಂಥವನಿಗೆ ರೋಗ ಬರುವುದೇನಾಶ್ಚರ್ಯ

ವಲ್ಲ. ತಿಂದ ತಿಂಡಿ ಸ್ವಲ್ಪವೂ ಜೀರ್ಣವಾಗುತಿರಲಿಲ್ಲ. ಅಜೀರ್ಣ 

--------------------------------------

೧೪೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ವಾಯು ಹೆಚ್ಚಿ ಕೈ ಕಾಲುಗಳಲ್ಲಿ ಒಂದು ಬಗೆ ಒಡೆತ ಹುಟ್ಟತು. 


ಈ ರೀತಿಯಲ್ಲಿ ರೋಗದಿಂದ ನೀಡಿತನಾಗಿದ್ದ ಲಂಬೋದರನು

ಆ ಸ್ಥಳದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದ ಒಬ್ಬ ವೈದ್ಯನನ್ನು ಕರೆಯಿಸಿ

ಪಂಡಿತರೆ, ನನಗೆ ಹೀಗೆ ಜಾಡ್ಯವುಂಟಾಗಿದೆ. ತಾವು ಹೊರತು

ಗುಣಮಾಡತಕ್ಕವರು ಇನ್ನು ಯಾರೂ ಇಲ್ಲ, ಎಂದನು. 


ವೈದ್ಯ--ಜಾಡ್ಯವೇನೊ ಬಲವಾಗಿದೆ. ಆದರೆ ತಮ್ಮ ಆಹಾರ

ಕ್ರಮದಿಂದ ತಾವು ರೋಗಕ್ಕೆ ಸಹಾಯ ಮಾಡುತೀರೊ, ಹೇಗೆ? 


ಲಂಬೋದರ-- ಪಂಡಿತರೆ, ಇಲ್ಲ ಆಹಾರದಲ್ಲಿ ನಾನು ಎಷ್ಟೊ

ಜಾಗರೂಕನಾಗಿದೇನೆ.. ಈ ಹಾಳ ಅಡಿಗೆಯವರು ನನಗೆ ನಿತ್ಯವೂ

ಅರೆಹೊಟ್ಟೆಯನ್ನೇ ಹಾಕುತಾರೆ.. ನಾನು ಹೇಳುವುದೇ ಒಂದು, 

ಇವರು ಮಾಡುವುದೇ ಒಂದು ಹೀಗೆ ಆಗಿದೆ. 


ವೈದ್ಯ--ತಾವು ನಿದ್ರೆಯನ್ನು ಹೆಚ್ಚಾಗಿ ಮಾಡುತೀರ? 


ಲಂಬೋದರ--ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರೆ,

ಯಾವಾಗಲಾದರೂ ಸ್ವಲ್ಪ ನಿದ್ರೆ ಬಂದರೆ ಸಾಕೆಂದು ಹಾಸಿಗೇ

ಮೇಲೆಯೇ ಮಲಗಿರುತೇನೆ,, ಒಂದುಸಾರಿಯೂ ನಿದ್ರೆ ಬರುವುದಿಲ್ಲ. 


ವೈದ್ಯ--ನೀವುಬೆಳಗ್ಗೆ ಎದ್ದು ಸಂಚಾರಮಾಡುವುದುಂಟೊ? 


ಲಂಬೋದರ-- ನಾನು ಚಳಿಯಲ್ಲಿ ಎದ್ದರೆ ನನ್ನ ಮೈಗೆ ಆಗು

ವುದಿಲ್ಲ. ಐದು ಗಳಿಗೆಗೆ ಮುಂಚೆ ನಾನು ಮುಸುಕನ್ನೇ ತೆಗೆಯುವುದಿಲ್ಲ.

ಅಂತೂ ನಾನು ಎಷ್ಟು ಜಾಗ್ರತೆಯಾಗಿ ಎದ್ದರೂ, ಹೊಟ್ಟೆಯಲ್ಲಿ

ಏನೋ ಉರಿಯುತಲೇ ಇರುವುದು. ತೇಗು ಬರುವುದು ಗೊತ್ತೇ ಇಲ್ಲ.

ವಾಯು ಸಡಿಲುವುದಂತೂ ಎಣಿಸುವುದಕ್ಕಾಗುವುದೇ ಇಲ್ಲ. 


ವೈದ್ಯ--ಜಾಡ್ಯವೇನೋ ಸ್ವಭಾವದಲ್ಲಿ ಕೆಟ್ಟದ್ದಾಗಿ ತೋರುತ್ತಿದೆ. 


ಲಂಬೋದರ--ಅಫೀಮನ್ನು ತಿಂದರೆ ನಿದ್ರೆ ಬರುವುದೆಂದು ಒಬ್ಬರು

ಹೇಳಿದರು. ನಾನು ಅದೇಪ್ರಕಾರ ಸಾಧಿಸುತಿದೇನೆ. ನಿಂಬೇಕಾಯಿ

ಗಾತ್ರದವರೆಗೂ ಅಫೀಮನ್ನು ನಿತ್ಯವೂ ನುಂಗುತಿದೇನೆ. ನಿದ್ರೆ ಬೇರೆ

ಬರುವುದಿಲ್ಲ. ಮತ್ತಾಗಿ ಬಿದ್ದಿರುತೇನೆ. ಮಲವಿಸರ್ಜನೆ ಸರಿಯಾಗಿ

ಆಗುವುದೇ ಇಲ್ಲ 

------------------------------------

೧೨೫ ಸುಮತಿ ಮದನಕುಮಾರರ ಚರಿತ್ರೆ ೧೪೭ 


ವೈದ್ಯ--ನೀವು ಹೊರಗೆ ಸಂಚಾರಮಾಡುವುದು ಉತ್ತಮ. 


ಲಂಬೋದರ--ಎಂಟಕ್ಕೆ ಹತ್ತಕ್ಕೆ ಎತ್ತಿನ ಗಾಡಿಯಲ್ಲಿ ಕೂತು

ಒಂದು ಕೊಂಬಿನ ಕೂಗು ಹಾಗೆಯೇ ಹೋಗಿಬರುತಿದ್ದೆ. ಗಾಡಿಯ ಕುಲು

ಕಾಟದಿಂದ ಮೈ ಸೇನೆ ಅಲುಗಿ ಸಂಕಟವಾಯಿತು. ಆದ್ದರಿಂದ ಈಚೆಗೆ

ಒಂದು ಪಲ್ಲಕ್ಕಿಯಲ್ಲಿ ಕೂತು ಹೊರಡುತಿದ್ದೆ. ಒಂದೊಂದುಕಡೆಗೆ

ಎಂಟೆಂಟು ಜನ ಬೆಸ್ತರನ್ನು ಹಾಕಿದರೂ ಹೊರಲಾರೆವೆಂದು ಅವರು

ಓಡಿಹೋಗುತಿದ್ದರು. ಅದರಲ್ಲಿಯೂ ಕುಲುಕಾಟ ಹೆಚ್ಚಾಯಿತು.

ಆದಕಾರಣ ಅದನ್ನೂ ಈಚೆಗೆ ಬಿಟ್ಟು ಬಿಟ್ಟೆ.


ವೈದ್ಯ--ನೀವು ತಿನ್ನುವ ಆಹಾರವನ್ನು ಸ್ವಲ್ಪ ಕಡಮೆಮಾಡಿ, 

`ನಿಮ್ಮ ಮನೆಯಲ್ಲಿಯೇ ದಿನಕೈ ಐದುಸಾರಿ ಶತಪಥವನ್ನು ಸುತ್ತೀರಾ?


ಲಂಬೋದರ--ಪಂಡಿತರೆ, ಹೀಗೆಲ್ಲಾ ಗುಣವಾಗುವುದಿಲ್ಲ. ನನ್ನ

ದೇಹಪ್ರಕೃತಿಯನ್ನು ಇನ್ನೂ ತಾವು ಚೆನ್ನಾಗಿ ಪರೀಕ್ಷಿಸಬೇಕು.

ನಾಡಿಯನ್ನು ಚೆನ್ನಾಗಿ ನೋಡಿ ಹೇಳಿ. ಇದು ತಮ್ಮ ಹಸ್ತಗುಣದಿಂದ

ವಾಸಿಯಾಗಬೇಕು.


ವೈದ್ಯ--ಅಳಲೇಕಾಯಿ ಕಷಾಯವನ್ನೂ ಜಾಪಾಳದ ಮಾತ್ರೆ

ಯನ್ನೂ, ರಸಗಂಧಕ ಪಾಷಾಣಗಳನ್ನೂ, ನಿಮಗೆ ಕೊಟ್ಟರೆ, ನಿಮ್ಮ

ರೋಗ ಹೋಗುವುದೆಂದು ನೀವು ತಿಳಿದು ಇದ್ದೀರಿ. ಆದರೆ ನಿಮ್ಮದು

ಔಷಧಕ್ಕೆ ಗುಣವಾಗತಕ್ಕ ಜಾಡ್ಯವಲ್ಲ,


ಲಂಬೋದರ--ನೀವು ಏನು ಕಠಿಣವಾಗಿ ಮಾತನಾಡುತೀರಿ!

ಸ್ವಲ್ಪವೂ ದಯಾರಸವಲ್ಲ. 


ವೈದ್ಯ--ನನಗೆ ತಿಳಿದುದನ್ನೆಲ್ಲಾ ನಾನು ಆಗಲೇ ನಿಮಗೆ ಹೇಳಿ

ಬಿಟ್ಟೆ, ನಿಮಗೆ ಚಿಕಿತ್ಸೆಯನ್ನು ಮಾಡುವುದಕ್ಕೆ ದೇವಪುರದಲ್ಲಿ ಒಬ್ಬ

ತಕ್ಕ ಪಂಡಿತರು ಇದಾರೆ. ನಾನು ಅವರಿಗೆ ಕಾಗದವನ್ನು ಬರೆದು

ಕೊಡುತೇನೆ. ಅವರು ಅನೇಕರಿಗೆ ವಾಸಿಮಾಡಿದಾರೆ. ನಿಮಗೆ ಅವ

ರಿಂದ ಅನುಕೂಲವಾಗಬಹುದು,


ಹೀಗೆ ಹೇಳಿದ ವೈದ್ಯನ ಮಾತನ್ನ ಕೇಳಿ ಲಂಬೋದರನು ಬಹಳ

ಅಧೈರ್ಯ ಪಟ್ಟನು, ಆದಿನ ಸಾಯಂಕಾಲ ತನ್ನ ರೋಗ ಇನ್ನೂ ಹೆಚ್ಚೀ 

--------------------------------------

೧೪೮ ಸುಮತಿ ಮದನಕುಮೂರರ ಚರಿತ್ರೆ [ಅಧ್ಯಾಯ 


ತೆಂದು ತಿಳಿದು, ದೇವಪುರಕ್ಕೆ ಹೋಗಿ ಅಲ್ಲಿನ ಪಂಡಿತನನ್ನು ಕಾಣ

ಬೇಕೆಂದು ನಿಶ್ಚಯಿಸಿಕೊಂಡನು. ಇದಕ್ಕಾಗಿ ಒಂದು ಪಲ್ಲಕ್ಕಿಯನ್ನು

ಏರ್ಪಡಿಸಿಕೊಂಡು ಅದರಲ್ಲಿ ಕೂತಹಾಗೆಯೇ ಆಹಾರಾದಿಗಳನ್ನು ತೆಗೆದು

ಕೊಳ್ಳುವುದಕ್ಕೆ ಅನುಕೂಲಮಾಡಿಕೊಂಡಿದ್ದನು. ದೇವಪುರವು ಅಲ್ಲಿಗೆ

ಒಂದು ದಿವಸದ ಪಯಣ. ಆದರೆ ಲಂಬೋದರನು ಅದನ್ನು ನಾಲ್ಕು

ದಿವಸದ ಪಯಣವಾಗಿಮಾಡಿಕೊಂಡು ಆ ವೂರಿಗೆ ತಲಪಿ, ಅಲ್ಲಿ ವೈದ್ಯನ

ಮನೆಯನ್ನು ವಿಚಾರಿಸಿಕೊಂಡು ಹೋಗಿ ಸೇರಿದನು. ಪಲ್ಲಕ್ಕಿಯಿಂದ 

ಇವನನ್ನು ಏಳೆಂಟು ಜನ ಹಿಡಿದು, ಈಚೆಗೆ ಇಳಿಸಿಕೊಂಡು ಒಳಕ್ಕೆ

ಕರೆದುಕೊಂಡು ಹೋದರು. 


ಆ ಮನೆಯೊಳಗೆ ಶಿರೋಮಣಿ ಎಂಬ ಪಂಡಿತನು--ಒಬ್ಬ ರೋಗಿಗೆ

ಈ ರೊಟ್ಟಿಯನ್ನು ತಿನ್ನು ಎನ್ನುವುದು, ಮತ್ತೊಬ್ಬ ರೋಗಿಗೆ ಈ ತುಪ್ಪ

ವನ್ನು ಅನ್ನಕ್ಕೆ ಹಾಕಿಕೊ ಎನ್ನುವುದು, ಈ ರೀತಿಯಲ್ಲಿ ರೋಗಿಗಳಿಗೆ

ಉಪಚಾರವನ್ನು ಮಾಡುತಿದ್ದನು. ಲಂಬೋದರನಿಗೆ ಆ ಪಂಡಿತ

ನನ್ನು ನೋಡಿ ಬಹು ಸಂತೋಷವಾಯಿತು; ಇವನು ತನ್ನ ಮನಸ್ಸಿ

ನಲ್ಲಿ--ಶಹಬಾಸು, ಪಂಡಿತ ಎಂದರೆ ಈತನೇ ಸರಿ, ಬೇಕಾದ ತಿಂಡಿ

ಯನ್ನು ತಿನ್ನಿ ಎಂದು ತಾನೇ ರೋಗಿಗಳಿಗೆ ಕೊಡುತಾನೆ. ನಮ್ಮ

ಊರಿನ ವೈದ್ಯನಹಾಗೆ ಇದು ತಿನ್ನಬೇಡ ಅದು ಕುಡಿಯಬೇಡ ಎಂದು

ಹೇಳುವುದಿಲ್ಲ. ಔಷಧದಲ್ಲಿ ತ್ರಾಣವಿದ್ದರೆ, ಪಥ್ಯವು ಯಾತಕ್ಕೆ? ಈತ

ನನಗೆ ಸಿಕ್ಕಿದ್ದು ನನ್ನ ಪುಣ್ಯೋದಯ, ಎಂದುಕೊಂಡನು. ತರುವಾಯ

ಶಿರೋಮಣಿ ಪಂಡಿತನನ್ನು ಕಂಡು ತಮ್ಮ ಊರ ಪಂಡಿತನ ಕಾಗದ

ವನ್ನು ಕೊಟ್ಟು ತನ್ನ ರೋಗವನ್ನೆಲ್ಲಾ ಹೇಳಿದನು. ಅದಕ್ಕೆ ಆ

ಪಂಡಿತನು--ಸ್ವಾಮಿ, ನಿಮ್ಮ ಜಾಡ್ಯ ನನಗೆ ಗೊತ್ತಾಯಿತು. ಇದನ್ನು

ವಾಸಿಮಾಡುವ ಭಾರ ನನ್ನದಾಗಿರಲಿ. ಆದರೆ ನಾನು ಹೇಳಿದಂತೆ

ಒಂದು ತಿಂಗಳಮಟ್ಟಿಗೆ ನೀವು ಕೇಳಬೇಕು, ನಿಮ್ಮ ಆಳುಗಳನ್ನೆಲ್ಲಾ

ಒಬ್ಬರೂ ಇಲ್ಲದಹಾಗೆ ಊರಿಗೆ ಕಳುಹಿಸಿಬಿಡಬೇಕು. ನನ್ನ ಮಾತಿನ

ಪ್ರಕಾರ ನಡೆಯದೆಹೋದರೆ, ಯಾವ ದೊರೆಯೇ ಆಗಲಿ, ನಾನು ಔಷಧ

ವನ್ನು ಕೊಡಲಾರೆ ಎಂದನು. ಇದಕ್ಕೆ ಲಂಬೋದರನು-- ತಾವು 

---------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೪೯ 


ಹೇಳಿದ್ದರಿಂದ ಈ ಮಾತಿಗೆ ಒಪ್ಪಿಕೊಳ್ಳುತೇನೆ. ಆದರೆ ನನ್ನ ಉಪ

ಚಾರಕ್ಕಾಗಿ ಯಾರೂ ಇರಕೂಡದು ಎಂದು ಹೇಳಿದ ಮಾತು ನಿಮ್ಮ

ಚಿಕಿತ್ಸೆಗೆ ವಿರೋಧವಾಗಿದೆ. ಔಷಧವನ್ನು ತೆಗೆದುಕೊಂಡರೆ  ನನ್ನ

ಆರೈಕೆಗೆ ಯಾರೂ ಇಲ್ಲದೆ ಪಥ್ಯ ಕೆಟ್ಟು ಹೋದೀತು.


ವೈದ್ಯ--ನಾನು ಚಿಕಿತ್ಸೆಯನ್ನು ಮಾಡಿ ವಾಸಿಮಾಡುವ ಭಾರ

ವನ್ನು ವಹಿಸಿದ ಮೇಲೆ, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿ

ಕೊಳ್ಳುವ ಕೆಲಸವೂ ನನ್ನದಾಗಿದೆ. ಇಷ್ಟವಿದ್ದರೆ ಔಷಧವನ್ನು ತೆಗೆದು

ಕೊಳ್ಳಿ. ಇಲ್ಲದಿದ್ದರೆ ಊರಿಗೆ ಹೊರಡಿ. ತಮ್ಮ ದಾಕ್ಷಿಣ್ಯಕ್ಕೋಸ್ಕರ

ಚಿಕಿತ್ಸೆ ಕ್ರಮವನ್ನು ಬಿಟ್ಟು ಬಿಟ್ಟು ನನ್ನ ಹೆಸರನ್ನು ಕೆಡಿಸಿಕೊಳ್ಳಲಾರೆ.

ಜಾಡ್ಯವು ಪ್ರಬಲವಾಗಿದೆ. ಆದರೂ ನಿಮ್ಮ ಮುಷ್ಕರವು ಅದನ್ನು ವೃದ್ಧಿ

ಮಾಡುತಿದೆ.


ಲಂಬೋದರ--ತಮ್ಮ ಚಿಕಿತ್ಸೆಯಲ್ಲಿ ನನಗೆ ಸೇನೆ ನಂಬಿಕೆವುಂಟು.

ಆದಕಾರಣ ತಾವು ಹೇಳಿದಂತೆಯೇ ಆಗಲಿ. ಹೀಗೆಂದು ಹೇಳಿ ತನ್ನ

ಚಾಕರರನ್ನೆಲ್ಲಾ ಲಂಬೋದರ ಊರಿಗೆ ಕಳುಹಿಸಿಬಿಟ್ಟನು.


ವೈದ್ಯ-- ಈ ದಿನ ನಿಮ್ಮ ದೇಹಸ್ಥಿತಿ ಹೇಗಿದೆ?


ಲಂಬೋದರ--ಇಷ್ಟುದೂರ ಪ್ರಯಾಣಮಾಡಿ ಬಂದದರಿಂದ

ವಿಗಡವಾಗಬಹುದು ಎಂದು ತಿಳಿದು ಇದ್ದೆ. ಆದರೆ ಹಾಗಿಲ್ಲ ಎಂದಿ

ಗಿಂತಲೂ ಈ ದಿನ ಹಸಿವು ಹೆಚ್ಚಾಗಿದೆ. ಆದ್ದರಿಂದ ದಯಮಾಡಿ

ಜಾಗ್ರತೆಯಲ್ಲಿ ನನಗೆ ಅನ್ನವನ್ನು ಹಾಕಿಸಬೇಕು.


ವೈದ್ಯ--ಸ್ವಾಮಿ, ಈ ರಾತ್ರೆ ಎಂಟು ಗಂಟೆಗೆ ಎಡೆ ಸಿದ್ಧವಾಗು

ವುದು. ಈ ಮಧ್ಯೆ ನಾನು ಔಷಧ ಕೊಡತಕ್ಕ ರೋಗಿಗಳನ್ನು ಹೋಗಿ

ನೋಡಿಕೊಂಡು ಬರುತೇನೆ.


ಹೀಗೆ ಹೇಳಿ, ಶಿರೋಮಣಿ ಪಂಡಿತನು ಹೊರಕ್ಕೆ ಹೊರಟು

ಹೋದನು. ಈ ಮಧ್ಯೆ ಲಂಬೋದರನು ತನ್ನ ಮನಸ್ಸಿನಲ್ಲಿ-- ಈಗಲೇ

ನನಗೆ ಊಟದಹೊತ್ತು ಮೀರಿತು. ಇನ್ನೂ ಎರಡು ಗಂಟೆಕಾಯ

ಬೇಕೆಂದು ಪಂಡಿತ ಹೇಳುತಾನೆ. ಆದ್ದರಿಂದ ಪ್ರಾಯಶಃ ಒಳ್ಳೆ ಅಡಿಗೆ

'ಯನ್ಸೇ ಮಾಡಿಸಿಯಾನು. ನಾನು ಈ ಮನೆಗೆ ಬಂದಾಗ ಬಡಬಗ್ಗರಿಗೆ 

-------------------------------------

೧೫೧ ಸುಮತಿ ಮದೆನಕುಮಾರರ ಚರಿತ್ರೆ [ಅಧ್ಯಾಯ. 


ಎಷ್ಟೊ ಉಪಚಾರವನ್ನು ಮಾಡಿ ಬೇಕಾದ ತಿಂಡಿಯನ್ನು ಕೊಡುತಿದ್ದ;

ನನ್ನಂಥವನಿಗೆ ಏನುಕಡಮೆ. ಪಂಚಭಕ್ಷ್ಯವೇ ತಯಾರಾಗುತಿರ

ಬಹುದು. ವೈದ್ಯನ ಅಡಿಗೆಯವನು ಬುದ್ಧಿಶಾಲಿಯಾಗಿಯೇ ಇರ

ಬಹುದು ಹೀಗೆಂದುಕೊಳ್ಳತಿದ್ಧನು. ಹಸಿವು ಹೆಚ್ಚಾಯಿತು. ಕೋಪ

ಬಂತು. ಮನೆಯಲ್ಲಿದ್ದ ಪರಿಚಾರಕನನ್ನು ಕರೆದು- -ಪಂಡಿತರು ಈಗಲೇ

ಮನೆಗೆ ಬರಲಾರರು. ನನ್ನ ಊಟಕ್ಕೆ ಹೊತ್ತಾಯಿತು. ತಂದು ಬಡಿಸು,

ಎಂದನು. ಪರಿಚಾರಕನು-- ಸ್ವಾಮಿ, ಪಂಡಿತರ ಅಪ್ಪಣೆಯಿಲ್ಲದೆ ರೋಗಿ

ಗಳು ಹೇಳುವ ಮಾತನ್ನು ನಾವು ಕೇಳಕೂಡದು, ಎಂದನು. ಅದಕ್ಕೆ

ಲಂಬೋದರನು--ಇನ್ನೂ ಐದುಗಳಿಗೆ ಕಳೆಯಬೇಕಾಯಿತಲ್ಲಾ!

ಹೊತ್ತು ಹೋಗುವುದೇ ಇಲ್ಲ. ಬಹು ತಾಮಸವಾಗಿದೆ ಎಂದು ಹೇಳಿ

ಕೊಳ್ಳುತಿದ್ದನು.


ಹೇಳಿದ್ದ ಹೊತ್ತಿಗೆ ಸರಿಯಾಗಿ ವೈದ್ಯ ಮನೆಗೆಬಂದನು. ಮೇಲೆ

ಎಲೆಯನ್ನು ಮುಚ್ಚಿ ಮುಚ್ಚಿ ಐದು ಆರು ಬೆಳ್ಳಿ ತಟ್ಟೆಗಳನ್ನು ತಂದಿ

ಟ್ಟರು.  ಮೇಲೆ ಮುಚ್ಚಿ ಒಂದು ಬೆಳ್ಳಿ ಪಂಚಪಾತ್ರೆಯನ್ನೂ ತಂದಿ

ಟ್ಟರು. ಲಂಬೋದರನಿಗೆ ಅನೇಕ ಭಕ್ಷ್ಯಭೋಜ್ಯಗಳು ಬಂದಿರಬಹುದು.

ಹೊಟ್ಟೆಯನ್ನು ತುಂಬಿಕೊಳ್ಳೋಣವೆಂದು ಆಸೆ ಹುಟ್ಟಿ ತು. ಅವನು

ಆ ತಟ್ಟೆಗೆ ಕೈ ಹಾಕುವ ಸಮಯದಲ್ಲಿ ಶಿರೋಮಣಿಯು--ಸ್ವಾಮಿ,

ಬೇರೆ ಔಷಧವನ್ನು ಕೊಟ್ಟರೆ ನಿಮಗೆ ತಡೆಯುವುದಿಲ್ಲ. ನೀವು ತಿನ್ನುವ

ಆಹಾರಕ್ಕೆ ಔಷಧವನ್ನು ಹಾಕಿದೆ. ಆದರೆ ನಿಮ್ಮ ರುಚಿಗೆ ಆ ಔಷಧ

ತೋರಲಾರದು. ಔಷಧದ ವೇಗವು ಹೆಚ್ಚಾದ್ದರಿಂದ, ಹೆಚ್ಚಾಗಿ ತಿಂದರೆ

ವಿರೋಧವಾದೀತು. ಆದಕಾರಣ ನೀವು ಆಹಾರವನ್ನು ಮಿತವಾಗಿಯೇ

ತಿನ್ನಬೇಕು, ಎಂದು ಹೇಳಿ ತಟ್ಟೆಗಳ ಮೇಲಿದ್ದ ಎಲೆಯನ್ನು ತೆಗೆಯಿ 

ಸಿದನು. ಒಂದರಲ್ಲಿ ಒಂದುಹಿಡಿ ದ್ರಾಕ್ಷಿ, ಇನ್ನೊಂದರಲ್ಲಿ ಎರಡು

ಕಿತ್ತಿಳೆಹಣ್ಣು, ಮತ್ತೊಂದರಲ್ಲಿ ನಾಲ್ಕು ಖರ್ಜೂರ ಹೀಗೆ ನಾಲ್ಕು ಐದು

ಬಗೆ ಹಣ್ಣುಗಳನ್ನು ಇರಿಸಿದ್ದರು. ಪಂಚಪಾತ್ರೆಯಲ್ಲಿ ಬರೀ ನೀರು

ಇತ್ತು. ಇದೆಲ್ಲವನ್ನೂ ನೋಡಿ ಲಂಬೋದರನಿಗೆ ವಿಶೇಷವಾಗಿ ಆಗ್ರಹ

ಬಂತು. ಅವನು ವೈದ್ಯನನ್ನು ಕುರಿತು--ಏನಿರಯ್ಯ, ಇದೇಯೋ 

-------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೫೨ 


ನೀವು ನನಗೆ ಮಾಡಿಸಿರುವ ಭಕ್ಷ್ಯಭೋಜ್ಯಗಳು! ನನ್ನ ಐಶ್ವರ್ಯಕ್ಕೆ ಈ

ದರಿದ್ರ ಆಹಾರವನ್ನು ತಿನ್ನಲೆ? ಎಂದನು. ಪಂಡಿತನು ಸುಮ್ಮನಿರದೆ

ನಾನು ಬೇಕೆಂತಲೇ ಈ ತಿಂಡಿಯನ್ನು ಇಡಿಸಿದೇನೆ, ಇದಲ್ಲದೆ, ನಿಮಗೆ

ಬೇಕಾದ ಪಕ್ವಾನ್ನಗಳನ್ನು ಬಡಿಸಿದರೆ, ಮಾರ್ಗಾಯಾಸದಿಂದ ದಣಿ

ದಿರುವ ನಿಮಗೆ ಜ್ವರ ಬಂದೀತು, ಎಂದು ಹೇಳಿದನು. ಲಂಬೋದರನಿಗೆ

ಇತರ ಮಾರ್ಗವೇನೂ ಇಲ್ಲದೆ ಹೋಯಿತು. ಆ ಹಂಣುಗಳನ್ನು

ತಿಂದು, ನೀರನ್ನು ಕುಡಿದು ಸಮ್ಮನೆ ಆದನು. ತಿಂಡಿಯನ್ನು ತಿಂದ 

ಕೂಡಲೆ ಮಲಗಿಕೊಂಡು ನಿದ್ರೆಮಾಡುವ ಅಭ್ಯಾಸವು ಇವನಿಗಿತ್ತು.

ಆದರೆ ಶಿರೋಮಣಿ ಪಂಡಿತನು ಚಮತ್ಕಾರವಾದ ಮಾತುಗಳನ್ನಾಡುತಾ

ನಾಲ್ಕುಗಳಿಗೇವರೆಗೆ ಕೂರಿಸಿಕೊಂಡನು. ತರುವಾಯ ಒಂದು ಚಿಕ್ಕ

ಮನೆಯಲ್ಲಿ ಹಾಸಿಗೆಯನ್ನು ಹಾಸಿ ಅಲ್ಲಿಗೆ ಲಂಬೋದರನನ್ನು ಒಬ್ಬ

ಆಳು ಕರೆದುಕೊಂಡು ಹೋದನು. ಆ ಹಾಸಿಗೆಯೆ ಸ್ಥಿತಿಯನ್ನು ಏನು

ಹೇಳೋಣ! ಮಂಚವಿಲ್ಲ, ಮೆತ್ತೆ ಇಲ್ಲ, ಸಂದಿಸಂದಿಗೆ ಹಾಕಿಕೊಳ್ಳುವ

ದಿಂಬುಗಳು ಮೊದಲೇ ಇಲ್ಲ. ಸೊಳ್ಳೇ ತೆರೆಯನ್ನು ಅಲ್ಲಿಗೆ ತರಲೇ

ಇಲ್ಲ. ಆದರೆ ಅಲ್ಲಿದ್ದದ್ದೆನು? ಒಂದು ಚಾಪೆಯನ್ನೂ ಅದರಮೇಲೆ  

ಒಂದು. ಜಮಖಾನವನ್ನೂ ಹಾಸಿ. ಒಂದು ತಲೆದಿಂಬನ್ನು

ಇಟ್ಟಿದ್ದರು. ಇದನ್ನು ಕಂಡು ಲಂಬೋದರನಿಗೆ ಕೋಪ ಇನ್ನೂ

ಹೆಚ್ಚಿತು. ಅವನು ಆಳಿನ ಮುಖವನ್ನು ದುರುಗುಟ್ಟಿಕೊಂಡು

ನೋಡಿ-- ನಿನೆಲಾ: ನನಗೆ ಇದೇನೆಲಾ ಹಾಸಿಗೆ? ಸರಿಯಾದ

ಹಾಸಿಗೆಯನ್ನು ತಂದು ಹಾಸು. ಎಂದು ಅಹಂಕಾರದಿಂದ ಗದರಿಸಿ

ದನು. ಆಗ ಆ ಆಳು--ತಮ್ಮ ಹಾಸಿಗೇ ವಿಷಯದಲ್ಲಿ ಪಂಡಿತರು

ನನಗೆ ಮಾಡಿದ ಅಪ್ಪಣೆಯನ್ನು ನಾನು ಸರಿಯಾಗಿಯೇ ತಿಳಿದು ಕೆಲಸ

ಮಾಡಿದೇನೆ. . ಅವರ ಮಾತನ್ನು ಮೀರಿ ನಿಮಗೆ ಆಗುವ ಚಿಕಿತ್ಸೆ

ಯನ್ನು ಕೆಡಿಸಲಾರೆ, ಎಂದು ಹೇಳುತಾ ಆ ಚಿಕ್ಕಮನೆಯನ್ನು ಬಿಟ್ಟು

ಹೊರಕ್ಕೆ ಹೋಗಿ, ಹೊರಗಡೇ ಬಾಗಿಲನ್ನು ಹಾಕಿಕೊಂಡನು. ಲಂಬೋ

ದರನಿಗೆ ರೋಷ ಇದ್ದುದೂ ಹೆಚ್ಚಿ ವೈದ್ಯನ ಕೆಟ್ಟತನಕ್ಕೆ ಹೇಗೆ ಶಿಕ್ಷೆಯನ್ನು

ಮಾಡಬೇಕೆಂದು ಯೋಚಿಸುತಿದ್ದನು. ಹಾಗೆಯೇ ನಿದ್ರೆ ಬಂತು. 

---------------------------------------

೧೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಬೆಳಗಾಗುವ ತನಕಲೂ ಎಚ್ಚರವಾಗಲಿಲ್ಲ, ಪಂಡಿತನು ಪ್ರಾತಃಕಾಲ

ದಲ್ಲಿ ಎದ್ದು ಲಂಬೋದರ ಮಲಗಿದ್ದ ಕೊಟಡಿಗೆ ಹೋಗಿ ವಿಶೇಷ

ಮರ್ಯಾದೆಯಿಂದ ಅವನ ಶರೀರಸ್ಥಿತಿಯನ್ನು ವಿಚಾರಿಸಿದನು. ರಾತ್ರೆ

ಒಳ್ಳೆ ನಿದ್ರೆ ಬಂದಿದ್ದಕಾರಣ ಇವನ ಸಿಡುಕೆಲ್ಲಾ ಕಡಮೆಯಾಗಿತ್ತು.

ಪಂಡಿತನು ಮರ್ಯಾದೆಯಿಂದ ಆಡಿದ ಮಾತು ಕಳಲಿಹೋಗುತಿದ್ದ

ಲಂಬೋದರನ ಆಗ್ರಹವೆಂಬ ಬೆಂಕಿಯನ್ನು ಚೆನ್ನಾಗಿ ಇದ್ದಿಲ

ಮಾಡಿತು.


ಲಂಬೋದರನು ಪಂಡಿತನಿಗೆ ಸರಿಯಾದ ಉತ್ತರವನ್ನು ಹೇಳಿ

ದನು. ಆದರೂ ಹಾಸಿಗೆ, ಆಹಾರ ಉಪಚಾರ, ಇವುಗಳ ವಿಷಯದಲ್ಲಿ

ಇವನಿಗಿದ್ದ ಅಸಮಾಧಾನವನ್ನು ಮಾತ್ರ ಮರೆಮಾಚಲಿಲ್ಲ. ಆಗ

ವೈದ್ಯನು--ನಾನು ಹೇಳಿದಹಾಗೆಲ್ಲಾ ತಾವು ಕೇಳಬೇಕೆಂದು ಮೊದಲೇ

ನಿಮ್ಮಲ್ಲಿ ಕಟ್ಟುಮಾಡಿಕೊಂಡಿದ್ದೆ, ತಮ್ಮ ಆರೋಗ್ಯಹೊರತು ನನಗೆ

ಬೇರೆ ತಾತ್ಪರ್ಯವಿಲ್ಲ. ನಿಮ್ಮ ಹಾಸಿಗೆಗೂ ಸಹಿತ ಔಷಧವನ್ನು ಹಾಕಿಸಿ

ದೇನೆ, ಈ ಔಷಧವನ್ನು ಮೆತ್ತೆಗೆ ಹಾಕುವುದಕ್ಕಾಗುವುದಿಲ್ಲ, ಆದ್ದ

ರಿಂದ ಈ ಜಮಖಾನವನ್ನು ಹಾಕಿಸಿದೇನೆ. ಎಂದು ಹೇಳಿದನು.

ಮಾರನೇದಿನ ಊಟಕ್ಕೆ ಸಿದ್ಧವಾಯಿತು; ಒಂದು ಹಿಡಿ ಅನ್ನ ಒಂದು

ಬಟ್ಟಲು ಪಾಯಸ,  ಎರಡು ಕಿತ್ತಿಳೇಹಣ್ಣು, ಇಷ್ಟನ್ನೂ ತಂದು ಬಡಿಸಿ

ದರು. ಲಂಬೋದರನ ಹೊಟ್ಟೆಯ ಒಂದು ಮೂಲೆಗೆ ಕೂಡ ಇದು

ಸಾಕಾಗಲಿಲ್ಲ. ಆನೇಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎಂದ ಹಾಗಾ

ಯಿತು. ಆದರೂ ಯತ್ನವಿಲ್ಲದೆ ಅದನ್ನೇ ತಿಂದು ಸುಮ್ಮನಾದನು.


ಆಮೇಲೆ ಪಂಡಿತನು ಅವನನ್ನು ಒಂದು ಚಿಕ್ಕಮನೆಗೆ ಎತ್ತಿಸಿ

ಕೊಂಡು ಹೋಗಿ ನಿಂತುಕೊಳ್ಳೆ೦ದು ಹೇಳಿದನು. ಲಂಬೋದರನು -.

ಪಂಡಿತರೇ ಕಾಲೆಲ್ಲಾ ಊದಿದೆ. ಒಳಗೆ ನೋವಾಗುತಿದೆ. ನಿಂತು

ಕೊಳ್ಳಲಾರೆ, ಎಂದು ಹೇಳಿದನು. , ಇದಕ್ಕೆ ಪಂಡಿತನು--ಎರಡು

ಕೈಯಲ್ಲಿಯೂ ಎರಡು ದೊಣ್ಣೆಗಳನ್ನು ಊರಿಕೊಂಡು ಸ್ವಲ್ಪ ಏಳಿ.

ಬೇಕಾದರೆ ಗೋಡೆಯನ್ನು ಒರಗಿಕೊಳ್ಳಿ ಎನಲು, ರೋಗಿಯು ಬಹು

ಪ್ರಯಾಸದಿಂದ ದೊಣ್ಣೆಯನ್ನು ಊರಿಕೊಂಡು ಎದ್ದು ನಿಂತುಕೊಂಡನು. 

--------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೫೩ 


ಒಂದು ಕಾಲು ಇನ್ನೊಂದು ಕಾಲಿಗಿಂತ ಹೆಚ್ಚಾಗಿ ಬಾತಿದ್ದರಿಂದ, ಒಂಟಿ

ಕಾಲಲ್ಲಿಯೇ ನಿಂತುಕೊಂಡನು. ದೊಣ್ಣೆಗಳೆರಡೂ ಊರೆಯಾದುವು.

ಆಗ ಪಂಡಿತನು ಥಟ್ಟನೆ ಆ ಕೊಟಡಿಯನ್ನು ಬಿಟ್ಟು ಹೊರಕ್ಕೆ ಹೋಗಿ

ಕದವನ್ನು ಮುಚ್ಚಿಕೊಂಡನು. ಆ ಕೊಟಡಿಯ ನೆಲವೆಲ್ಲಾ ದೊಡ್ಡ

ಕಬ್ಬಿಣದ ತಗಡಾಗಿತ್ತು. ಮುಂಚಿತವಾಗಿಯೇ ಪಂಡಿತನು ಗುಟ್ಟಾಗಿ

ಏರ್ಪಡಿಸಿದ್ದಂತೆ, ಅದರ ಕೆಳಗೆ ಬೆಂಕಿ ಹಾಕಿ ಉರಿಸುತಿದ್ದರು. ಆ ಕಬ್ಬಿ

ಣದ ನೆಲವು ಚೆನ್ನಾಗಿ ಕಾಯಿತು. ಲಂಬೋದರನ ಕಾಲಿಗೆ ಬಿಸಿಹತ್ತಿತು.

ಆ ಕಾಲನ್ನು ಮೇಲಕ್ಕೆ ಎತ್ತಿಕೊಂಡು ಇನ್ನೊಂದು ಕಾಲನ್ನು ಮೆಲ್ಲಗೆ

ಊರಿ ಮುಂದಕ್ಕೆ ಹೊರಡಲು ಯತ್ನಿಸಿದನು. ಅದಕ್ಕೂ ಬಿಸಿ ಹತ್ತಿತು.

ಕೊನೆಗೆ ಬಾಗಿಲು ತೆಗೆಯಿರಿ ಎಂದು ಅರಚುತ್ತಾ, ಕೋಲನ್ನು ಊರಿ

ಕೊಂಡು ಮೂಲೆಯಿಂದ ಮೂಲೆಗೆ ಬೇಗ ಬೇಗ ಸುತ್ತಾಡುವುದಕ್ಕೆ

ಆರಂಭಿಸಿದನು. ನಾಲ್ಕು ಘಳಿಗೆ ಓಡಾಟವಾಯಿತು. ಆಯಾಸ ಹೆಚ್ಚಾ

ಯಿತು. ಮೈ ಎಲ್ಲಾ ಬೆವರಿ ನೀರು ನೀರಾಯಿತು. ಪಂಡಿತನು

ರೋಗಿಗೆ ಆದ ಸಾಧಕ ಸಾಕೆಂದು ಯೋಚಿಸಿ, ಒಂದು ಹಾಸಿಗೇ ಮೇಲೆ

ಅವನನ್ನು ಮಲಗಿಸುವಂತೆ ಆಳಿಗೆ ಹೇಳಿದನು. ಅದರಮೇಲೆ ಅವನು

ಕೊಟಡಿಯಿಂದ ಈಚೆಗೆ ಕರೆತರಲ್ಪಟ್ಟು ಬೇರೆ ಹಾಸಿಗೆಮೇಲೆ ಮಲಗಿ

ಕೊಂಡನು. ಆ ವಿಶ್ರಾಂತಿಯು ಅವನಿಗೆ ಎಂದೂ ಇಲ್ಲದ ಆನಂದ

ವನ್ನುಂಟುಮಾಡಿತು. ಸಾಯಂಕಾಲಕ್ಕೆ ಪಂಡಿತನು ರೋಗಿಯನ್ನು

ಕಾಣಿಸಿಕೊಂಡನು. ವೈದ್ಯನಮೇಲೆ ಲಂಬೋದರನಿಗೆ ಅತ್ಯಂತ ಕೋಪ

ಬಂದಿತ್ತು. ಆದರೂ ಎಲೆಗೆ ತಂದು ಬಡಿಸಿದ ಅನ್ನದ ವಾಸನೆಯಿಂದ

ಅದು ಸ್ವಲ್ಪ ಅಡಗಿತು, ಈ ಪ್ರಕಾರ ರೋಗಿಗೆ ವೈದ್ಯನಮೇಲೆ ಸಿಟ್ಟು

ಹೆಚ್ಚುತಾ ಬಂದಹಾಗೆಲ್ಲಾ, ಜಾಡ್ಯ ಹರಿಯುತಾ ಬಂತು. ಪಂಡಿತ

ಹೇಳಿದಂತೆ ಕೇಳಿಕೊಂಡು ಲಂಬೋದರನು ಒಂದು ತಿಂಗಳವರೆಗೂ

ಕಾಲಹರಣಮಾಡಿದನು.. ಈ ಒಂದು ತಿಂಗಳು ಅವನಿಗೆ ಒಂದು

ವರುಷದ ಹಾಗೆ ಕಂಡಿತು. ಇವನ ಅಪ್ಪಣೇ ಪ್ರಕಾರ ಇವನ ಚಾಕ

ರರೂ ಬೆಸ್ತರೂ ಒಂದು ತಿಂಗಳ ತರುವಾಯ ಬಂದು ಕಾದಿದ್ದರು.

'ಲಂಬೋದರನು ವೈದ್ಯನಿಗೂ ಹೇಳದೇ ಮೇನದಲ್ಲಿ ಕೂತು ತನ್ನ 

----------------------------------------

೧೫೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಊರಿಗೆ ಹೊರಟನು. ಬರುತಾ ತನ್ನ ಮನಸ್ಸಿನಲ್ಲಿ ನಮ್ಮ ಊರ.

ಪಂಡಿತನು ಈ ನೀಚನಾದ ಶಿರೋಮಣಿಗೆ ಏನೋ ಹೇಳಿಕೊಟ್ಟು

ಹೀಗೆ ಮಾಡಿಸಿದಾನೆ, ಇರಲಿ. ನಾನು ಊರಿಗೆ ಹೋದಮೇಲೆ ಅವನ

ಆಟವನ್ನು ತಿಳಿಸುತೇನೆ ಎಂದುಕೊಳ್ಳುತಿದ್ದನು. ಊರಿಗೆ ಬಂದು

ಮಾನಸಪುರದ ಪಂಡಿತನಮನೆಗೆ ಹೋದನು. ಆ ವೈದ್ಯನಿಗೆ ಲಂಬೋ

ದರನ ಗುರುತೇ ತಿಳಿಯಲಿಲ್ಲ. ಪೂರ್ವಕ್ಕೆ ಈಗ್ಗೆ ಮೈ ನಾಲ್ಕರಲ್ಲಿ ಒಂದು

ಪಾಲಾಗಿತ್ತು. ಮುಖಬಣ್ಣ ತಿರುಗಿತ್ತು, ಕೋಲಿಲ್ಲದೆ ನಡೆಯುತಿದ್ದನು.

ತಿಂಡಿಪೋತನಾದ ಈ ರೋಗಿಯು ಆಗ್ರಹದಿಂದ ವಿಶೇಷವಾಗಿ ಆಡಿದ

ಹೆಚ್ಚು ಮಾತುಗಳನ್ನು ಕೇಳಿ--


ಪಂಡಿತನು--ಯಾಕೆ ಇಂಥಾ ನಿಷ್ಠುರೋಕ್ತಿಗಳನ್ನು ಆಡುತೀರಿ?

ನೀವಾಗಿಯೇ ಶಿರೋಮಣಿ ವೈದ್ಯರಲ್ಲಿ ಹೋದಿರಿ; ನಿಮ್ಮನ್ನು ಯಾರೂ

ಬಲವಂತ ಮಾಡಲಿಲ್ಲ.


ಲಂಬೋದರ....ಆ ವೈದ್ಯ ಬಹು ದೊಡ್ಡವನು, ಹೆಸರಾದ ಪಂಡಿತ

ಎಂದು ನೀವೇ ಹೇಳಿದವರು.


ಪಂಡಿತ-- ಹಾಗಾದರೆ ನಿಮಗೆ ಆತನಿಂದ ಕೇಡಾಯಿತೆ? ಜಾಡ್ಯ

ಕಡಮೆಯಾಯಿತೆ, ಹೆಚ್ಚಾಯಿತೆ?


ಲಂಬೋದರ--ಹೆಚ್ಚಾಯಿತೆಂದು ಹೇಳಲಾರೆ, ಈಗ ಹಸಿವು

ಚೆನ್ನಾಗಿದೆ, ನಿದ್ರೆ ಚೆನ್ನಾಗಿ ಹತ್ತುವುದು. ಸರಿಯಾಗಿ ನಡೆಯಬಲ್ಲೆ.


ಪಂಡಿತ- ಇಷ್ಟರಮಟ್ಟಿಗೆ ಗುಣವನ್ನುಂಟುಮಾಡಿದ ವೈದ್ಯ

ಕೆಟ್ಟವನೆಂದು ಹೇಳುವುದಕ್ಕೆ ಬಂದಿರ?


ಈ ಮಾತಿಗೆ ಲಂಬೋದರನು ಉತ್ತರ ಹೇಳುವುದಕ್ಕೆ ತಿಳಿಯದೆ

ಪೆಚ್ಚು ಮುಖವನ್ನು ಹಾಕಿಕೊಂಡು ನನ್ನ--ಮಾನಕ್ಕೆ ತಕ್ಕಹಾಗೆ

ಆಹಾರ ಉಪಚಾರಗಳಿಲ್ಲದೆ ಶಿರೋಮಣಿ ವೈದ್ಯನು ನನಗೆ ಅವಮಾನ

ಮಾಡಿದನು, ಎಂದನು. ಕೂಡಲೆ ಪಂಡಿತನು--ಹೇಗಾದರೂ ನಿಮಗೆ

ಮೋಸವನ್ನು ಮಾಡಿ ನಿಮಗೆ ಆರೋಗ್ಯವನ್ನು ಉಂಟುಮಾಡಿಕೊಟ್ಟರು.

ಆ ಪಂಡಿತರ ಯೋಗ್ಯತೆಗೆ ಸಮಾನವಿಲ್ಲ. ಬಡವರಿಗೆ ವಿಶೇಷವಾಗಿ.

ಆಹಾರ ಉಪಚಾರಗಳಿಲ್ಲ; ಆದುದರಿಂದ ಅವರಿಗೆ ರೋಗಬಂತು. ಅವ 

---------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೫೫ 


ರಿಗೆ ತಕ್ಕ ಹಾಗೆ ತಿಂಡಿಯನ್ನು ಹಾಕಿ ಗುಣಮಾಡುತಾನೆ. ಐಶ್ವರ್ಯ

ವಂತರಾದ ನಿಮಗೆ ಉಪಚಾರ ಹೆಚ್ಚಾಯಿತು; ಆದುದರಿಂದ ರೋಗ

ಬಂತು. ನಿಮಗೆ ತಿಂಡಿಯನ್ನು ಹಾಕದೆ ಗುಣಮಾಡಿದಾನೆ. ಇನ್ನು

ಯಾರಿಂದಲೂ ನಿಮ್ಮ ಜಾಡ್ಯ ವಾಸಿಯಾಗುತ್ತಿರಲಿಲ್ಲ. ಇದನ್ನು

ಖಂಡಿತವಾಗಿ ತಿಳಿಯಿರಿ, ಎಂದು ಸಮಾಧಾನ ಪಡಿಸಿದನು. ಆಗ

ಲಂಬೋದರನು ತನ್ನ ಮನಸ್ಸಿನಲ್ಲಿ ವೈದ್ಯನ ಮಾತೆಲ್ಲ ನಿಶ್ಚಯವೆಂದು

ಯೋಚಿಸಿಕೊಂಡು ಮಾನಸಪುರದ ಪಂಡಿತನಿಗೂ ಶಿರೋಮಣಿ ಪಂಡಿತ

ನಿಗೂ ಬಹುಮಾನವನ್ನು ಕೊಟ್ಟು ಕಳುಹಿಸಿ, ಅವನು ಹೇಳಿದಂತೆ

ಆಹಾರವ್ಯವಹಾರಗಳಲ್ಲಿ ಮಿತವರಿತು ನಡೆದುಕೊಳ್ಳುತಿದ್ದನು. ಆದ್ದ

ರಿಂದ ಯಾವ ಜಾಡ್ಯವೂ ಇಲ್ಲದೆ ಬಹು ದಿವಸ ಬದುಕಿದ್ದನು.


ಈ ಪ್ರಕಾರದಲ್ಲಿ ಕಥೆ ಮುಗಿಯಿತು.


ಆಗ ಮದನನು.. ಈ ಕಥೆ ಬಹು ವಿನೋದಕರವಾಗಿದೆ. ಇಂಥಾ

ಜಾಡ್ಯದಿಂದ ನರಳುತಿರುವ ಜನರು ನಮ್ಮ ಮನೆಗೆ ಬಂದರೆ, ಈ ಉಪಾ

ಯವನ್ನು ಅವರಿಗೆ ಹೇಳಿ ಕೊಡುತೇನೆ, ಎಂದನು. ಇದಕ್ಕೆ ಜೋಯಿ

ಸನು--ಹಾಗೆ ಸುಮ್ಮನೇ ಹೇಳುವುದು, ಸರಿಯಲ್ಲ. ನಿನ್ನನ್ನು ಕೇಳಿದರೆ.

ಹೇಳಬೇಕು, ಮನಸ್ಸು ಬಂದಹಾಗೆ ತಿಂದರೆ, ತಮ್ಮ ರೋಗ ಹೆಚ್ಚು

ವುದು ಎಂಬ ಸಂಗತಿಯನ್ನು ಆ ಜನರು ಅರಿಯದೇ ಇರಲಾರರು.

ಆದ್ದರಿಂದ ನೀನು ಹೊಸಮಾತನ್ನು ಅವರಿಗೆ ಹೇಳಿಕೊಟ್ಟ ಹಾಗಾಗ 

ಲಿಲ್ಲ. ಇದೂ ಅಲ್ಲದೆ ನೀನು ಚಿಕ್ಕಹುಡುಗ. ನೀನೇ ಎಷ್ಟೋ ವಿಷಯ

ಗಳನ್ನು ತಿಳಿದುಕೊಳ್ಳ ಬೇಕಾಗಿದೆ. ಆದ್ದರಿಂದ, ಇತರರಿಗೆ ಬುದ್ಧಿ

ಯನ್ನು ಕಲಿಸುವುದು ನಿನ್ನ ಕೆಲಸವಲ್ಲ. ಲೋಕದಲ್ಲಿ ಇರತಕ್ಕ ಐಶ್ವರ್ಯ

ವಂತರಲ್ಲಿ ಅರ್ಧಜನರಿಗೆ ಈ ಕಥೆ ಅನ್ವಯಿಸುತ್ತೆ. ಕಷ್ಟವೂ ಬಡತನವೂ

ಹೇಗೆ ಕೆಟ್ಟದೊ, ಮಿತವಿಲ್ಲದೆ ಇರತಕ್ಕದ್ದೂ ಹಾಗೆಯೇ ಕೆಟ್ಟದು, ಎಂದು

ಇದರಿಂದ ನಾವು ತಿಳಿದುಕೊಳ್ಳ ಬಹುದು. ವಿಶೇಷ ಚಳಿಯಾಗಿರುವ.

ಉತ್ತರದೇಶದ ಜನರು ಕಪ್ಪ ಪಡುವುದೇನೋ ನಿಜ. ಆದರೆ ರೋಗ

ವಿಲ್ಲದೇ ಇರುವವರು ಬಹುದಿವಸ ಬದುಕುವರು ; ಹೀಗೆಂದು ಜೋಯಿಸ.

ಹೇಳಿದನು. 

-------------------------------------

'೧೫೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 



ಹೀಗೆ ಸ್ವಲ್ಪಕಾಲ ಕಳೆಯಿತು. ಒಂದು ದಿನ ಸುಮತಿ ಮದನ

ಕುಮಾರರಿಬ್ಬರೂ ಆಡುತ್ತಾ ಕಾಡಿಗೆ ಹೊರಟುಹೋದರು. ಹಿಂತಿರುಗಿ

ಬರುವಾಗ ಇವರಿಗೆ ದಾರಿ ತಪ್ಪಿತು, ದೊಡ್ಡಮಳೆ ಬಂತು. ಮುಂದಕ್ಕೆ

ಕಾಲಿರಿಸುವುದು ಬಹು ಕಷ್ಟವಾಯಿತು. ದೈವಾಧೀನದಿಂದ ಸಮಾಪ

ದಲ್ಲೇ ಹಾಳುಗುಡಿ ಸಿಕ್ಕಲು ಬಂದು ಅದರೊಳಗೆ ಇವರಿಬ್ಬರೂ ಹೋಗಿ

ಸೇರಿಕೊಂಡರು. ಮಳೆ ಹೆಚ್ಚಾಗಿ, ಗುಡಿಯ ಒಳಕ್ಕೂ ನೀರು ನುಗ್ಗು

ವುದಕ್ಕೆ ಮೊದಲಾಯಿತು. ಮದನನು ಇದನ್ನೆಲ್ಲಾ ನೋಡಿ ಹೆದರಿ

ಕೊಂಡು ಕಣ್ಣಿ ನಲ್ಲಿ ನೀರನ್ನು ಬಟ್ಟಾಡಿಸುತಾ--ಸುಮತಿ, ಏನುಮಾ

ಡೋಣ? ಎಂದನು. ಅದಕ್ಕೆ ಸುಮತಿಯು- ಮಾಡುವುದೇನು?

ಮಳೆ ಕಡಮೆಯಾಗುವವರೆಗೂ ನಾವು ಇಲ್ಲಿಯೇ ಇರಬೇಕು ಎಂದನು.


ಮದನ--ಮಳೆ ಕಡಮೆಯಾಗದೆಯೇ ಇದ್ದರೆ?


ಸುಮತಿ. ಮಳೆಯಲ್ಲಿಯೇ ನೆನೆದುಕೊಂಡು ಹೋಗಬೇಕು, 

ಇಲ್ಲ, ಇದ್ದಕಡೆಯಲ್ಲಿಯೇ ಇರಬೇಕು.


ಮದನ. ಈ ಮಹಾರಣ್ಯದಲ್ಲಿ ನಾವಿಬ್ಬರೇ ಇರುವುದು ಹೇಗೆ?

ನನಗೆ ಹಸಿವು ಆಗುತಿದೆ. ಚಳಿ ಹೆಚ್ಚು. ಎಲ್ಲಿಯಾದರೂ ಬೆಂಕಿ

ಸಿಕ್ಕಿದರೆ ಕಾಸಿಕೊಳ್ಳ ಬಹುದು.


ಸುಮತಿ- ಕಾಡಿನಲ್ಲಿ ಎರಡು ಮರದ ತುಂಡನ್ನು ಒಂದಕ್ಕೊಂದು

ಉಜ್ಜಿ ಬೆಂಕಿಯನ್ನು ಮಾಡುತಾರೆಂದು ಕೇಳಿದೇನೆ.. ಆದರೆ ಇನ್ನೂ

ಒಂದು ಉಪಾಯವಿದೆ. ನನ್ನಲ್ಲಿ ಒಂದು ಚೂರಿ ಇದೆ. ಒಂದು

ಚೂರು ಚಕ್ಕಮುಕ್ಕಿಕಲ್ಲು ಸಿಕ್ಕಿದರೆ ಅದರ ಮೇಲೆ ಹೊಡೆದು ಬೆಂಕಿ

'ಯನ್ನು ಮಾಡಬಹುದು.


ಹೀಗೆ ಹೇಳಿ ಸುಮತಿಯು ಅತ್ತಿತ್ತ ನೋಡಿದನು. ಅಲ್ಲಿ ಒಂದು

ಚೂರು ಚಕ್ಕಮುಕ್ಕಿಯು ಸಿಕ್ಕಿತು. ಅದನ್ನು ತೆಗೆದುಕೊಂಡು ಚಾಕು

ವಿನ ಹಿನ್ನೆಯಿಂದ ಹೊಡೆದನು. ಒಂದೆರಡು ಬೆಂಕಿ ಕಿಡಿಗಳು ಉದುರಿ

ದವು. ಹತ್ತಿಕೊಳ್ಳುವುದಕ್ಕೆ ಏನೂ ಇರಲಿಲ್ಲ, ಅಲ್ಲಿ ಬಿದ್ದಿದ್ದ ತರಗನ್ನು

ಸೇರಿಸಿ ಚಕ್ಕಮುಕ್ಕಿಯನ್ನು ಹೊಡೆದನು. ಆ ತರಗು ತೇವೈಸಿಕೊಂಡಿ

ದ್ಹುದರಿಂದ ಹತ್ತಿಕೊಳ್ಳ ಲಿಲ್ಲ. ಇದನ್ನು ಕಂಡು ಮದನಿಗೆ ಇನ್ನೂ 

-------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೫೭ 


ಭಯಹೆಚ್ಚಿತು. ಅಷ್ಟುಹೊತ್ತಿಗೆ ಮಳೆ ಸ್ವಲ್ಪ ಕಡಮೆಯಾಯಿತ್ನು

ಸುಮತಿಮದನಕುಮಾರರಿಬ್ಬರೂ ಮನೆಗೆ ಹೊರಟರು. ಕಷ್ಟವನ್ನು

ಅರಿಯದ ಮದನನು ಹೆಜ್ಜೆಹೆಜ್ಜೆಗೂ ಸೊಂಟದುದ್ದ ಬದಿಯಲ್ಲಿ ಹೂತು.

ಕೊಳ್ಳುತಿದ್ದನು, ಮಧ್ಯೆಮಧ್ಯೆ ಸುಮತಿಯು ಅವರಿಗೆ ಧೈರ್ಯವನ್ನು

ಹೇಳಿ, ಮೇಲಕ್ಕೆ ಎತ್ತಿ ಕರೆದುಕೊಂಡು ಹೋಗುತಿದ್ದನು. ದಾರಿಯಲ್ಲಿ

ಯಾರೊ ಕಾಸಿಕೊಳ್ಳುತಾ ಇದ್ದು ಬಿಟ್ಟುಹೋದ ಸ್ಪಲ್ಪ ಬೆಂಕಿಯು

ಸಿಕ್ಕಿತು. ಸುಮತಿಯು ಅಲ್ಲಿ ಬಿದ್ದಿದ್ದ ಒಣಕಡ್ಡಿಗಳನ್ನು ಆರಿಸಿ

ಕೊಂಡು ಬಂದು ಬೆಂಕಿಗೆ ಹಾಕಿ ಉರಿಮಾಡಿದನು. ಇವರಿಬ್ಬರೂ

ಬೆಚ್ಚಗೆ ಕಾಸಿಕೊಂಡರು. ಆಗ ಮದನನು-- ಈ ಕಡ್ಡಿಗಳು ಎಂಥಾ

ಸಮಯಕ್ಕೆ ಬಂದವು ನೋಡಿದೆಯ?- ಎಂದನು.


ಸುಮತಿ--ಅಯ್ಯಾ, ನೀನು ಅರಮನೆಯಲ್ಲಿ ಸುಖವಾಗಿ ಬೆಳೆ

ದವನು. ದೊರೆಮಗ. ಈ ಕಷ್ಟವನ್ನೆಲ್ಲಾ ಅರಿಯೆ. ಮೈಮೇಲೆ

ಅಂಗೈ ಅಗಲ ಬಟ್ಟೆಯೂ ಇಲ್ಲದೆ, ಒಪ್ಪೊತ್ತಿಗೂ ಅನ್ನಕ್ಕೆ ಗತಿಯಿಲ್ಲದೆ,

ಇರತಕ್ಕ ಬಡವರ ಮಕ್ಕಳು ಎಷ್ಟೋ ಜನರಿದಾರೆ. ಅವರ ಗತಿ.

ಏನಾಗಬೇಕೋ, ನೋಡು. ಇಷ್ಟು ಕಷ್ಟಕ್ಕೇ ನೀನು ಈಗ ಒಂದು

ಗಳಿಗೆಯಿಂದ ಎಷ್ಟು ಅತ್ತೆಯೋ, ಅಷ್ಟರಮಟ್ಟಿಗೆ ಆ ಬಡಜನರು ಒಂದು.

ವರುಷದಲ್ಲಿ ಸಹಿತಾ ಅಳುವುದಿಲ್ಲ.


ಮದನ--ಈ ಕಷ್ಟವನ್ನೆಲ್ಲಾ ಬಡವರು ಅನುಭವಿಸುವ ಹಾಗೆ

ದೊರೆಯೂ ದೊರೆಮಕ್ಕಳೂ ಅನುಭವಿಸಬೇಕಾದ ಅಗತ್ಯವಿಲ್ಲ.


ಸುಮತಿ--ಅದು ಯಾಕೆ ಇಲ್ಲ? ದೊರೆಮಗನು ಬಡವರ ಹಾಗೆ

ಮನುಷ್ಯನಲ್ಲವೋ? ಮನುಷ್ಯನಾದಮೇಲೆ ಇತರರು ಅನುಭವಿಸುವ

ಹಾಗೆ ತಾನೂ ಕಷ್ಟವನ್ನು ಅನುಭವಿಸುವುದಕ್ಕೆ ರಾಜಕುಮಾರನು

ಯಾಕೆ ಅಭ್ಯಾಸಮಾಡಿಕೊಳ್ಳ ಬಾರದು?


ಮದನ--ಆಗಬಹುದು. ಆದರ ದೊರೆಮಕ್ಕಳಿಗೆ ಎಲ್ಲಾ ಅನು.

ಕೂಲವಾಗಿರುವುದು. ತಿನ್ನುವುದಕ್ಕೆ ತಿಂಡಿ ಇದೆ, ಹೊದೆಯುವುದಕ್ಕೆ

ಬಟ್ಟೆ ಇದೆ. ವೆಚ್ಚಮಾಡುವುದಕ್ಕೆ ಹಣವಿದೆ. ಬೇಕಾದ್ದೆಲ್ಲಾ ಇದೆ.


ಸುಮತಿ--ಇದೆಲ್ಲಾ ಏಕರೀತಿಯಾಗಿರುವುದೊ? ಧನವಂತರು 

----------------------------------

೧೫೮ ಸುಮತಿ ಮದನಕುವಸೆರರ ಚರಿತ್ರೆ [ಅಧ್ಯಾಯ 


ತಲೆಯಿಂದ ಕಾಲಿನವರೆಗೂ ಬಟ್ಟೆಯನ್ನು ಹಾಕಿಕೊಂಡಿದ್ದಾಗ್ಯೂ,

ಉತ್ತಮವಾದ ಶಾಲುಗಳನ್ನು ಹೊದ್ದುಕೊಂಡಿದಾಗ್ಯೂ, ಇವರಿಗೆ ಛಳಿ

ಜ್ವರ ಬಂತೊ ಎಂದು ತೋರುವ ಹಾಗೆ ಛಳಿಗೆ ಗಡಗಡನೆ ನಡುಗುವರು

ಬಡವರ ಮಕ್ಕಳು ಬೆತ್ತಲೆ ಹೊಲದಲ್ಲೆಲ್ಲಾ ಓಡಾಡುವರು.


ಮದನ--ಇದೇನೋ ನಿಜ. ನಮ್ಮ ಅಪ್ಪಾಜಿಯ ಓಲಗಕ್ಕೆ

ಬರತಕ್ಕ ಜನರು ಬೇಕಾದ ಬಟ್ಟೆಯನ್ನು ಹಾಕಿಕೊಂಡು ಇರುವರು.

ಆದರೂ ಛಳ್ಳಿ ಛಳಿ; ಎಂದು ಪೇಚಾಡುವರು. ಅತ್ತ ನಮ್ಮ ಚಾಕರ 

ರೆಲ್ಲರೂ ಬರೀ ಮೈಯನ್ನು ಬಿಟ್ಟುಕೊಂಡು ಓಡಾಡುವರು.


ಸುಮತಿ-- ಆದ್ದರಿಂದ ಓಡಾಡಿಕೊಂಡು ನಾವು ಮಾಡತಕ್ಕ ಕೆಲಸ

ದಿಂದ ನಮಗೆ ಮೈ ಬೆಚ್ಚಗಾಗುವುದು.


ಮದನ--ಆದರೆ ದೊಡ್ಡವರು ಈ ಅಲ್ಪರಹಾಗೆ ಓಡಾಡುವುದ:

ಯುಕ್ತವೆ?


ಸುಮತಿ-- ದೊಡ್ಡವರಿಗೆ ಕಾಯಪುಷ್ಟಿ ಇರಬೇಕಾದ್ದು ಯುಕ್ತ

ವಲ್ಲವೆ? ಹಾಗೆ ಯುಕ್ತವಾದರೆ ದೊಡ್ಡವರು ತಮ್ಮ ಅಂಗಗಳಿಗೆ ಸಾಧಕ 

ವಾಗುವಂತೆ ಕೆಲಸಮಾಡಬೇಕು; ಇಲ್ಲದಿದ್ದರೆ ಅವರಿಗೆ ಬಲ ಬರುವು

ದಿಲ್ಲ. ನಿಮ್ಮ ತಂದೆಯ ಸಭೆಗೆ ಬರತಕ್ಕ ಸಾಮಾಜಿಕರಿಗೆ ಹೊಲದಲ್ಲಿ

ಗೆಯ್ಯುವ ಒಕ್ಕಲು ಮಕ್ಕಳ ಶಕ್ತಿ ಇದೆಯೆ?


ಮದನ-- ನನಗೆ ತೋರಲಿಲ್ಲ. ಜೋಯಿಸರ ತೋಟದಲ್ಲಿ ನಾನು 

ಈಚೆಗೆ ಕೆಲಸಮಾಡುತಾ ಬಂದಮೇಲೆ ಮೊದಲಿಗಿಂತಲೂ ಈಗ ಶಕ್ತಿ

ಹೆಚ್ಚಿತು.


ಇವರು ಹೀಗೆ ಮಾತನಾಡುತಿರುವಲ್ಲಿ, ಒಬ್ಬ ಹುಡುಗನು ತಲೆಯ 

ಮೇಲೆ ಒಂದು ಸೌದೇ ಹೊರೆಯೆನ್ನು ಹೊತ್ತುಕೊಂಡು ಬರುವುದನ್ನು

ಸುಮತಿಯು ಕಂಡ್ಕು ಅವನ ಗುರುತು ಹಿಡಿದು--ಮದನ, ಹೋದ

ವರುಷ ನೀನು ಬಟ್ಟೆಯನ್ನು ಕೊಟ್ಟ ಆ ಬಡಹುಡಗನು ಇಗೊ ಇಲ್ಗಿ

ಬರುತಾ ಇದಾನೆ. ಇವನ ಊರು ಎಲ್ಲಿಯೋ ಸಮೀಪವಾಗಿರುವ ಹಾಗೆ

ಕಾಣುತಿದೆ. ಇವನು ನಮಗೆ ದಾರಿಯನ್ನು ತೋರಿಸಿಯಾನು,

ಎಂದನು; ತರುವಾಯ-- ದಾರಿಯನ್ನು ತೋರಿಸುತ್ತೀಯ? ಎಂದು ಆ 

-------------------------------------

ಸುಮತಿ ಮದನಕುಮಾರರ ಚರಿತ್ರೆ ೧೫೯ 


ಬಡಹುಡುಗನನ್ನು ಕೇಳಿದನು. ಅವನು ಬುದ್ಧಿ, ಅಗತ್ಯವಾಗಿ ತೋರಿ

ಸುತೇನೆ. ನಮ್ಮ ಬುದ್ಧಿ ಯವರಾದ ಮದನಕುಮಾರರು ಈ ಮಳೆಗೂ, 

ಗಾಳಿಗೂ, ಈ ಕತ್ತಲೆಯಲ್ಲಿ ಸಿಕ್ಕಿದ್ದು ಆಶ್ಚರ್ಯ. ನಿಮ್ಮ ಬಟ್ಟೆಯೆಲ್ಲಾ

ಒದ್ದೆಯಾಗಿದೆ. ಚಳಿಯಲ್ಲಿ ನಡುಗುತೀರಿ. ನಮ್ಮ ಗುಡಿಸಲಿಗೆ ದಯ

ಮಾಡಿ. ಬೆಂಕೀ ಕಾಸಿಕೊಂಡು ಹೋಗಬಹುದು. ನಮ್ಮ ತಂದೆ ಓಡಿ

ಹೋಗಿ ನೀವು ಇಲ್ಲಿದಾರೆಂದು, ರಾಮಜೋಯಿಸರಿಗೆ ಹೇಳಿ ಬರುತಾನೆ.

ತಾವು ಬನ್ನಿ, ಎಂದು ಕರೆದನು. ಮದನನು ಅದಕ್ಕೆ ಒಪ್ಪಿಕೊಂಡು,

ಸುಮತಿಯನ್ನು ಒಡಗೂಡಿ ಆ ಬಡಹುಡುಗನ ಸಂಗಡ ಹೋದನು.

ಸ್ವಲ್ಪ ದೂರದಲ್ಲಿಯೇ ಅವನ ಮನೆ ಸಿಕ್ಕಿತು. ಆ ಹುಡುಗನ ತಾಯಿ

ಹಂಜೀನೂಲುತ್ತಿದ್ದಳು. ಅವರ ಅಕ್ಕ ಹಿಟ್ಟ ಮಾಡುತ್ತಿದ್ದಳು. ಅವರ

ಅಪ್ಪನು ಒಂದು ಪುಸ್ತಕವನ್ನು ಮೆಲ್ಲಗೆ ಓದಿಕೊಳ್ಳುತಾ ಅಗ್ಗಿಷ್ಟಿಕೇ

ಹತ್ತಿರ ಬೆಂಕಿ ಕಾಯಿಸಿಕೊಳ್ಳುತಿದ್ದನು- ಅವರ ಮಗ್ಗುಲಲ್ಲಿ ಮೂರು

ನಾಲ್ಕು ಮಕ್ಕಳು ಚಿಂದಿಯನ್ನು ಹೊದ್ದು ಈಚಲ ಚಾಪೆಯ ಮೇಲೆ

ಮಲಗಿಕೊಂಡಿದ್ದವು.. ಆ ಬಡಹುಡುಗನು ಮನೆಯ ಒಳಕ್ಕೆ ಹೋಗಿ

ಸವುದೇ ಹೊರೆಯನ್ನು ಇಳುಕಿ--ಅಪ್ಪಾ, ಹೋದವರುಷ ನಮಗೆಲ್ಲ

ರಿಗೂ ಬಟ್ಟೆಯನ್ನು ಕೊಟ್ಟು ಉದ್ಧಾರಮಾಡಿದ ಮದನಕುಮಾರರು

ಬಂದು ಇದಾರೆ, ಕಾಡಿನಲ್ಲಿ ದಾರಿತಪ್ಪಿ ಹೋಗುತಿದ್ದರು. ನಾನು

ಕರೆದುಕೊಂಡು ಬಂದೆ ಎಂದನು. ಆ ಕ್ಷಣವೇ ಹುಡುಗನ ತಂದೆಯು

ಥಟ್ಟನೆ ಎದ್ದು, ಬಾಗಿಲಿಗೆ ಬಂದು,  ಸುಮತಿ, ಮದನ, ಇಬ್ಬರನ್ನೂ

ಕುರಿತು--ಸ್ಟಾಮಿ, ಒಳಕ್ಕೆ ದಯಮಾಡಬೇಕು, ಚಳಿಯಲ್ಲಿ ನಡುಗು

ತಿದ್ದೀರಿ, ಬೆಂಕೀಕಾಯಿಸಿಕೊಳ್ಳಿ; ತಮ್ಮ ಬಟ್ಟೆಯನ್ನು ಕೊಡಿ, ಹಿಂಡಿ

ಒಣಗಹಾಕುತೇನೆ, ಎಂದು ಬಹಳ ಮರ್ಯಾದೆಯಿಂದ ಒಳಕ್ಕೆ ಕರೆದು

ಕೊಂಡುಹೋಗಿ, ಬೆಂಕಿಯ ಮುಂದೆ ಕೂರಿಸಿನನು. ಆಗ ಅವನ ಹೆಂಡ

ತಿಯು--ಅಯ್ಯೋ, ನಾವು  ಬಹಳ ಬಡವರು, ನನ್ನ ಮನೆ ಸುಧಾಮನ

ಮನೆಯಾಗಿದೆ. ತಾವು ತಿನ್ನುವ ಪದಾರ್ಥವನ್ನು ನಾನು ಏನು

ಕೊಟ್ಟೇನು? ಜೋಳದ ಅರಳು ಇದೆ. ಇದನ್ನು ತಾವು ತಿಂದೀರ?

ಎಂದಳು. ಆ ಮಾತಿಗೆ ಮದನನು-- ತಾಯಿ, ನನಗೆ ಬಹಳ ಹೊತ್ತಿ 

--------------------------------------

೧೬೦ ಸುಮತಿ ಮದನಕುಮಾರರ ಚರಿತ್ರೆ (ಅಧ್ಯಾಯ. 


ನಿಂದಲೂ ಹಸಿವು ಆಗುತಿದೆ. ನೀನು ಏನಕೊಟ್ಟರೂ ತಿನ್ನುತೇವೆ,

ಎಂದು ಹೇಳಿದನು. ಆಗ ಜೋಳದ ಅರಳನ್ನು ಅವರಿಬ್ಬರೂ ತಿಂದು

ಅವರು ಕೊಟ್ಟ ಸ್ವಲ್ಪ ಮಜ್ಜಿಗೆಯನ್ನು ಕುಡಿದರು. ಆ ಮೇಲೆ ಆ 

ಮನುಷ್ಯ ಓದುತಿದ್ದ ಪುಸ್ತಕ ಯಾವುದು ಎಂದು ಕೇಳಿದರು. ಅದಕ್ಕೆ

ಅವನನು ಅದು ಭಾರತವೆಂದು ಹೇಳಿದನು. ಮದನನು-.-ನಮ್ಮ ಜೋಯಿ

ಸರು ಆ ಪುಸ್ತಕವನ್ನು ಓದು ಎಂದು ನಮಗೆ ಹೇಳಿದಾರೆ. ಅವರು

ಅದನ್ನು ಓದಿ ಆಗಾಗ್ಗೆ ಜನರಿಗೆ ಪುರಾಣ ಹೇಳುವುದುಂಟು. ಆಗ.

ಎಲ್ಲರೂ ಸದ್ದುಮಾಡದೆ ಬಹು ಭಕ್ತಿಯಿಂದ ಕೇಳುತಾರೆ, ಎಂದು

ಹೇಳಿದನು. ಅದಕ್ಕೆ ಆ ಮನುಷ್ಯನು-ಬುದ್ಧಿ, ಹವುದು, ರಾಮಜೋ

ಯಿಸರು ಬಹು ದೊಡ್ಡವರು. ಬಡಬಗ್ಗರಿಗೆ ಬಹು ಆಧಾರವಾಗಿದಾರೆ.

ಅನ್ನವಿಲ್ಲದವರಿಗೆ ಅನ್ನವನ್ನು ಕೊಡುತಾರೆ. ಬಟ್ಟೆಯಿಲ್ಲದವರಿಗೆ ಬಟ್ಟೆ

ಯನ್ನು ಕೊಡುತಾರೆ. ಆಲಸ್ಯವಾದಾಗ ಔಷಧವನ್ನು ಕೊಡುತಾರೆ.

ನಾವು ತಪ್ಪಿನಡೆದರೆ, ಬುದ್ಧಿಯನ್ನು ಹೇಳುತಾರೆ. ಪರಲೋಕಸಾಧನೆಗೆ

ಮಾರ್ಗವನ್ನು ತೋರಿಸುತಾರೆ. ನಾನು ಒಂದಾನೊಂದು ಕಾಲದಲ್ಲಿ

ಶುದ್ಧವಾಗಿ ಕೆಲಸಕ್ಕೆ ಬಾರದ ತುಂಟನಾಗಿದ್ದೆ. ಅವರು ನನಗೆ ಬುದ್ಧಿ

ಯನ್ನು ಹೇಳಿ ಮಾರ್ಗಕ್ಕೆ ತಂದರು. ಈಗ ನನ್ನ ಕೈಲಾದಮಟ್ಟಗೆ

ಸಂಸಾರವನ್ನು ಮಾಡಿಕೊಂಡು ಇದೇನೆ. ಹೋದ ವರುಷ ಮನೆಯವ

ರೆಲ್ಲರೂ ರೋಗದಲ್ಲಿ ಬಿದ್ದಿದ್ದೆವು. ರಾಮಜೋಯಿಸರು ಆ ಬೀಳ

ನ್ನೆಲ್ಲಾ  ಎತ್ತಿದರು. ನಮಗೆ ಆಗಾಗ್ಗೆ ಅನ್ನವನ್ನು ತಂದು ಇಕ್ಕಿ,

ಈ ಸುಮತಿ ನಮ್ಮನ್ನು ಉದ್ಧಾರಮಾಡಿದರು. ಆಗಿನಿಂದ ತಿಂಗಳಿಗೆ

ಹತ್ತು ಹಣದಮಟ್ಟಿಗೆ ಸಂಪಾದಿಸಿಕೊಂಡು ಸುಖವಾಗಿ ಜೀವನಮಾಡು.

ತಿದೇವೆ; ಹೀಗೆಂದು ನುಡಿದನು. ಅದಕ್ಕೆ ಮದನನು ಆಶ್ಚರ್ಯಪಟ್ಟು

ಏನಯ್ಯ ಒಂದು ತಿಂಗಳಿಗೆ ಹತ್ತು ಹಣವೇ ಸರಿಯೆ, ನೀನು

ಸಂಪಾದಿಸುವುದು? ಎಂದು ಕೇಳಲು, ಆ ರೈತನು--ಸ್ವಾಮಿ, ಇತರರು.

ಇದರಲ್ಲಿ ಅರ್ಧವನ್ನೂ ಸಂಪಾದಿಸಲಾರರು. ನಾನೇ ವಾಸಿ. ನನ್ನ

ಹೆಂಡತಿ ಹಂಜಿಯನ್ನು ನೂತು ಹಣವಡ್ಡದಮಟ್ಟಗೆ ಸಂಪಾದಿಸುತಾಳೆ.


ಮದನ--ಹನ್ನೊಂದು ಹಣ ಅಡ್ಡವಾಯಿತಲ್ಲ. ಇದು ನಿಮ್ಮ. 

-------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೬೧ 


ಜೀವನಕ್ಕೆ ಸಾಕೆ? ನಮ್ಮ ಅಮ್ಮಯ್ಯ ಒಂದು ದಿನ ಮುಡಿದುಕೊಳ್ಳುವ

ಹೂವಿಗೆ ಇದರ ಮೂರರಷ್ಟು ಕೊಡುತಾರಲ್ಲಾ |


ರೈತ-- ಬುದ್ಧಿ, ತಾವು ದೊಡ್ಡವರು. ದೊಡ್ಡವರ ಮಾತನ್ನು

ಆಡುತೀರಿ. ನಾವು ಬಡವರು. ಕೂಲಿ ಕಂಬಳಮಾಡಿಕೊಂಡು ದೇವರು

ಕೊಟ್ಟಿದ್ದರಲ್ಲಿ ತೃಪ್ತರಾಗಿದೇವೆ.


ಮದನ--ದೇವರು ನಿಮಗೆ ಯಾವ ಮಹದೈಶ್ವರ್ಯವನ್ನು ಕೊಟ್ಟ

 ದ್ದಕ್ಕೆ ನೀವು ತೃಪ್ತರಾಗಿರಬೇಕು.


ರೈತ-- ಬುದ್ಧಿ, ನಮಗಿರುವುದೆಲ್ಲಾ ದೇವರು ಕೊಟ್ಟದ್ಜೇ. ಹೊದಿ

ಯುವುದಕ್ಕೆ ಅಷ್ಟು ಬಟ್ಟೆ ಇದೆ. ಬಿಸಿಲಿಗೂ ಮಳೆಗೂ ಮರೆಯಾಗಿ

ಒಂದು ಮನೆ ಇದೆ. ಒಂದೇರು ಆರಂಬನಿದೆ. ಒಂದು ಹೊಲವಿದೆ.

ಇಷ್ಟು ಸಾಕು. ಇದೂ ಇಲ್ಲದೆ ಇರುವವರಿಗಿಂತಲೂ ನಾವು

ಉತ್ತಮರಲ್ಲವೆ? ಎಂದನು. ಆಗ ಆ ರೈತ ಆಡಿದಮಾತನ್ನು

ಕೇಳಿ, ಮದನನು ಆ ಬಡವನ ಒಳ್ಳೇತನಕ್ಕೆ ಆಶ್ಚರ್ಯಪಟ್ಟನು.

ಅಷ್ಟರಲ್ಲೇ ಮನೇಗರತಿಯು ಸುಮತಿ ಮದನ ಇಬ್ಬರಿಗೂ

ಒಂದೊಂದು ಪಾವು ಹಾಲನ್ನೂ, ಇನ್ನೂ ಅಷ್ಟು ಜೋಳದ ಅರಳನ್ನೂ

ಸ್ವಲ್ಪ ಬೆಲ್ಲವನ್ನೂ, ನಾಲ್ಕೈದು ಬಾಳೇಹಣ್ಣನ್ನೂ ತಂದು ಇಟ್ಟು,

ಹಸಿದು ಇರಬೇಡಿ, ಇದನ್ನು ತಿನ್ನಿ, ಎಂದು ಹೇಳಿದಳು. ಬಹಳವಾಗಿ

ಓಡಾಡಿ ಹಸಿದು ಆಯಾಸಪಟ್ಟಿದ್ದ ಇಬ್ಬರು ಹುಡುಗರಿಗೂ ಆ ಬಡವೆ

ತಂದ ತಿಂಡಿಯೇ ಬಹು ರುಚಿಯಾಗಿತ್ತು. ಇವರು ಅದನ್ನು ಮೆದ್ದರು.

ಈ ಮಧ್ಯೆ ಆ ರೈತನು ಹೋಗಿ, ರಾಮಜೋಯಿಸನಿಗೆ ಈ ಇಬ್ಬರು

ಹುಡುಗರೂ ಸೌಖ್ಯವಾಗಿದಾರೆ ಎಂದು ತಿಳಿಸಿದನು. ಇವರನ್ನು

ಹುಡುಕಿಕೊಂಡು ಬರುತಿದ್ದ ಜೋಯಿಸನು ಅರ್ಧದಾರಿಯಲ್ಲಿಯೇ ಈ

ಸಮಾಚಾರವನ್ನು ಕೇಳಿ ಆ ರೈತನ ಸಂಗಡಲೇ ಬಂದನು.


ಸುಮತಿ ಮದನ ಇಬ್ಬರೂ, ಗುರುಗಳು ಬರುವುದನ್ನು ಕೇಳಿ

ಎದ್ದು ಹೋಗಿ, ಅವರನ್ನು ಎದುರುಗೊಂಡು ಅವರಿಗೆ ನಮಸ್ಕಾರಮಾಡಿ

ದರು. ತರುವಾಯ, ತಾವು ಮಳೆಗೆ ಸಿಕ್ಕಿದ್ದೇ ಮೊದಲಾಗಿ ಆ ದಿನ

ತಮಗೆ ಸಂಭವಿಸಿದ್ದ ಕಷ್ಟಗಳನ್ನೆಲ್ಲಾ ಹೇಳಿದರು. ಜೋಯಿಸನು

-----------------------------------

೧೬೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಅವರು ಮಾಡಿದ ಕೆಲಸಕ್ಕೆ ಕೋಪಮಾಡಿಕೊಳ್ಳದೆ- ಮುಂದಕ್ಕೆ ಹೀಗೆ

ಹೋಗಬೇಡಿ, ಸ್ವಲ್ಪ ಜಾಗ್ರತೆಯಾಗಿರಿ, ಎಂದು ಹೇಳಿ, ಈ ಬಡರೈತನು

ಈ ಹುಡುಗರನ್ನು ಆದರಿಸಿದ್ದಕ್ಕಾಗಿ ಸಂತೋಷಪಟ್ಟು, ಅವರನ್ನು

ಕರೆದುಕೊಂಡು ಬಂದನು. ಬರುತಾ ದಾರಿಯಲ್ಲಿ--ಎಲೆ ಹುಡುಗರ,

ಕಾಡಿಗೆ ನೀವು ಹೀಗೆ ಹೊರಟುಹೋಗಬಾರದು. ಮಳೆಗೂ ಗಾಳಿಗೂ

ಕಾಡಿನಲ್ಲಿ ಸಿಕ್ಕಿ, ದಾರಿಯನ್ನು ಕಾಣದೆ ಹಳ್ಳಕೊಳ್ಳಕ್ಕೆ ಬಿದ್ದು ಸತ್ತು

ಹೋಗಿದಾರೆ; ಹಿಮದ ಗಡ್ಡೆಗಳೊಳಗೆ ಸಿಕ್ಕಿಸತ್ತುಹೋಗಿದ್ದಾರೆ,

ಎಂದನು. ಮದನ--. ಇಂಥಾ ಸಂದರ್ಭದಲ್ಲಿ ಪ್ರಾಣವನ್ನು

ಉಳಿಸಿಕೊಂಡು ಬರುವುದು ಕಷ್ಟವಲ್ಲವೆ? ಜೋಯಿಸ-- ಹವುದು,

ಆದರೆ ಇಂಥಾ ಕಷ್ಟವನ್ನೂ ಸಹಿಸಿಕೊಂಡು, ಪ್ರಾಣಸಹಿತ ಬಂದ ಜನ

ಗಳ ಕಥೆ ವಿಚಿತ್ರವಾದ್ದು ಒಂದು ಇದೆ, ಅದನ್ನು ನಾಳೆ ಹೇಳುತೇನೆ,

ಎಂದುಸುರಿದನು.


ಹೀಗೆ ಬರುತಾ ಮದನನು ಕತ್ತೆತ್ತಿ ಆಕಾಶವನ್ನು ನೋಡಿ--ಈ

ದಿನ ನಕ್ಷತ್ರಗಳು ಬಹಳವಾಗಿ ಕಾಣುವವು. ಇಷ್ಟೊಂದು ಯಾವಾ

ಗಲೂ ಕಾಣಿಸಲಿಲ್ಲ, ಎಂದನು, ಅದಕ್ಕೆ


ಜೋಯಿಸ--- ಇಷ್ಟೊಂದು ನಕ್ಷತ್ರಗಳು ಕಾಣಿಸಿದಾಗ್ಯೂ, ಇದ

ನ್ನೆಲ್ಲಾ ಲೆಕ್ಕಮಾಡಿದಾರೆ. ನಮ್ಮ ಬರೀಕಣ್ಣಿಗೆ ಕಾಣಿಸದ ನಕ್ಷತ್ರಗಳು

ಇನ್ನೂ ಎಷ್ಟೋ ಇವೆ,


ಮದನ--ಈ ನಕ್ಷತ್ರಕ್ಕೆ ಮೊದಲೂ ಇಲ್ಲ, ಕೊನೆಯೂ ಇಲ್ಲ.

ಇದನ್ನು ಲೆಕ್ಕ ಮಾಡುವುದು ಹೇಗೆ? ಈವತ್ತು ಕಾಡಿನಲ್ಲಿ ಮಳೆ

ಹುಯ್ಯಿತಷ್ಪೆ. ಆ ಹನಿಗಳನ್ನು ಲೆಕ್ಕಮಾಡುವುದಕ್ಕಾದೀತೆ? ಹಾಗೆ ಈ

ನಕ್ಷತ್ರಗಳಿಗೂ ಲೆಕ್ಕ ಸಿಕ್ಕುವುದಿಲ್ಲ.


ಜೋಯಿಸ--ಸುಮತಿ, ನಕ್ಷತ್ರಗಳ ಕೆಲವು ರಾಶಿಗಳನ್ನು ನಿನ್ನ

ಸ್ನೇಹಿತನಿಗೆ ತೋರಿಸಲಾರೆಯ?


ಸುಮತಿ-- ಜೋಯಿಸರೆ, ತಾವು ಹೇಳಿಕೊಟ್ಟಿರುವುದನ್ನೆಲ್ಲಾ

ಅಗತ್ಯವಾಗಿ ತೋರಿಸುತೇನೆ.


ಮದನ-- ನಕ್ಷತ್ರಗಳ ರಾಶಿ ಅಂದರೇನು? 

----------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೬೩


ಜೋಯಿಸ-- ಪೂರ್ವದಲ್ಲಿ ಈ ಆಕಾಶದ ನಕ್ಷತ್ರಗಳನ್ನು ನೋಡಿ

ದವರಿಗೆ ಅಧಿಕವಾದ ಪ್ರಕಾಶದಿಂದ ಕೆಲವೂ, ಸ್ಥಾ ನವಿಶೇಷದಿಂದ

ಕೆಲವೂ ಮುಖ್ಯವಾದವುಗಳೆಂದು ಕಾಣಿಸಿದವು.


ಇಂಥಾ ನಕ್ಷತ್ರಗಳು ಪುನಃ ನೋಡಿದಾಗ ನೇಟಾಗಿ ಸಿಕ್ಕುವಂತೆ 

ಅವುಗಳಿಗೆ ಬೇರೆಬೇರೆ ಹೆಸರುಗಳನ್ನು ಕೊಟ್ಟಿ ದಾರೆ. ಇಂಥಾ ನಕ್ಷತ್ರ

ಗಳ ಗುಂಪುಗಳೇ ರಾಶಿಗಳು. ಸುಮತಿ, ಸಪ್ತ ಋಷಿಗಳ ರಾಶಿಯನ್ನು

ತೋರಿಸು.


ಆಗ ಸುಮತಿ ಕತ್ತೆತ್ತಿ ನೋಡಿ, ಉತ್ತರದಿಕ್ಕಿನಲ್ಲಿ ಪ್ರಕಾಶಮಾನ

ವಾಗಿರುವ ಆ ಏಳು ನಕ್ಷತ್ರಗಳನ್ನು ತೋರಿಸಿದನು.


ಜೋಯಿಸ--ಮದನ,  ಆಕಾಶವನ್ನೆಲ್ಲಾ ಚೆನ್ನಾಗಿ ನೋಡು. ಈ

ಏಳು ನಕ್ಷತ್ರಗಳು ಯಾವಯಾವ ಸ್ಥಳದಲ್ಲಿ ಯಾವ ರೀತಿಯಾಗಿ

ಪ್ರಕಾಶಿಸುತ್ತಿವೆಯೋ ಹಾಗೆ ಇನ್ನು ಯಾವುದಾದರೂ ಏಳು ನಕ್ಷತ್ರಗಳು

ಇವೆಯೆ? ತೋರಿಸು.


ಮದನ--ಅಂಥಾ ನಕ್ಷತ್ರಗಳು ಇನ್ನು ಯಾವುದೂ ಇಲ್ಲ.


ಜೋಯಿಸ.--ಈ ಸಪ್ತಋಷಿಗಳ ನಕ್ಷತ್ರಗಳನ್ನು ಪುನಃ ತೋರಿಸು.


ಮದನ--(ಅದೇಪ್ರಕಾರ ತೋರಿಸಿದನು.)


ಜೋಯಿಸ--ಸರಿ. ಈ ನಕ್ಷತ್ರಗಳು ಜ್ಞಾಪಕವಿದ್ದರೆ, ಇವು

ಗಳ ಸಮೀಪದಲ್ಲಿರತಕ್ಕ ನಕ್ಷತ್ರಗಳನ್ನೆಲ್ಲಾ ನೋಡಿ ತಿಳಿದುಕೊಳ್ಳ

ಬಹುದು.


ಮದನ-- ಜೋಯಿಸರೆ ಇದು ಆಶ್ಚರ್ಯವಾಗಿದೆ. ನಮ್ಮ

ಅಮ್ಮಯ್ಯನಿಗೆ ಇದನ್ನು ತೋರಿಸಬೇಕು.


ಜೋಯಿಸ --ಈ ರಾಶಿಯಲ್ಲಿ ಮಂಚದ ಕಾಲಿನಹಾಗೆ ನಾಲ್ಕು

ನಕ್ಷತ್ರಗಳನ್ನು ನೋಡಿದೆಯಾ? ಆ ಹಿಂದುಗಡೆ ಕಾಲಿನಂಥಾ ಎರಡು

ನಕ್ಷತ್ರಗಳನ್ನು ಕಂಡೆಯಾ? ಅದರಿಂದ ಮೇಲಕ್ಕೆ ಹಾಗೆಯೇ ನೋಡು.

ಬಹಳ ಪ್ರಕಾಶವಾಗಿರುವ ಒಂದು ನಕ್ಷತ್ರವು ಕಾಣಿಸುವುದಿಲ್ಲವೆ? ಅದು

ಹನ್ನೆರಡು ನಕ್ಷತ್ರಗಳ ಸಾಲಿನಲ್ಲಿದ್ದಹಾಗೆಯೇ ಕಾಣುವುದು.


ಮದನ--ಹವುದು. ನನಗೆ ಕಾಣಿಸಿತು. ಅದು ಯಾವುದು? 

-------------------------------------

೧೬೪ ಸುಮತಿ ಮದನಕುಮಾರರೆ ಚರಿತ್ರೆ [ಆಧ್ಯಾಯ. 


ಜೋಯಿಸ--ಅದೇ ಧ್ರುವನಕ್ಷತ್ರ. ಅದು ಇದ್ದಕಡೆಯಲ್ಲಿಯೇ

ಇರುವುದು. ತನ್ನ ಸ್ಥಳವನ್ನು ಬಿಟ್ಟು ಅತ್ತಿತ್ತ ಚಲಿಸುವುದಿಲ್ಲ. ಅದನ್ನು

ನೋಡಿ ಉತ್ತರದಿಕ್ಕನ್ನು ತಿಳಿದುಕೊಳ್ಳಬಹುದು. 


ಮದನ--ಆ ನಕ್ಷತ್ರದ ಕಡೆಗೆ ನಾನು ತಿರುಗಿದರೆ, ಅದೇ

ಉತ್ತರದಿಕ್ಕೋ? ಹಾಗಾದರೆ ನನ್ನ ಬೆನ್ನ ಕಡೆಯೇ ದಕ್ಷಿಣದಿಕ್ಕಾಯಿತು, 


ಜೋಯಿಸ--ನೀನು ಹೇಳಿದ್ದು ಸರಿ. ಈಗ ಪೂರ್ವ ಯಾವುದು,

ಪಶ್ಚಿಮ ಯಾವುದು, ಹೇಳು.


ಮದನ-- ಸೂರ್ಯ ಹುಟ್ಟುವ ದಿಕ್ಕು  ಪೂರ್ವವಲ್ಲವೆ? 


ಜೋಯಿಸ-- ಹವುದು. ಆದರೆ ಈಗ ಸೂರ್ಯ ಇಲ್ಲವಲ್ಲಾ. 


ಮದನ-- ಹಾಗಾದರೆ ನನಗೆ ತಿಳಿಯದು. 


ಜೋಯಿಸ --ಸುಮತಿ, ನೀನು ಬಲ್ಲೆಯಾ ? 


ಸುಮತಿ--ಉತ್ತರದಿಕ್ಕಿಗೆ ನಾವು ತಿರುಗಿಕೊಂಡು ನಿಂತರೆ ನಮ್ಮ

ಬಲಗಡೆಯೇ ಪೂರ್ವ, ಎಡಗಡೆಯೇ ಪಶ್ಚಿಮ. 


ಜೋಯಿಸ--ನೀನು ಹೇಳಿದ್ದು ಸರಿ. 


ಮದನ--ಇದು ಜಾಣತನವೇ ಸರಿ, ಧ್ರುವ ನಕ್ಷತ್ರ ಒಂದು 

ತಿಳಿದರೆ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಈ ನಾಲ್ಕು ದಿಕ್ಕೂ ತಿಳಿದ

ಹಾಗಾಯಿತು. ಧ್ರುವನಕ್ಷತ್ರ ಇದ್ದ ಸ್ಥಳವನ್ನು ಬಿಟ್ಟು ಅಲುಗುವುದಿಲ್ಲ

ವೆಂದು ಹೇಳಿದಿರಿ. ಹಾಗಾದರೆ, ಇತರ ನಕ್ಷತ್ರಗಳು ಒಂದು ಕಡೆ

ಯಿಂದ ಮತ್ತೊಂದು ಕಡೆಗೆ ಹೋಗುವವೆ? 


ಜೋಯಿಸ--ಈಗ ಆಕಾಶವನ್ನು ನೋಡು. ಇನ್ನೊಂದು ಕಾಲ.

ದಲ್ಲಿಯೂ ನೋಡು. ತರುವಾಯ ನೀನು ಕೇಳಿದ ಪ್ರಶ್ನೆಗೆ ಉತ್ತರ

ವನ್ನು ನೀನೇ ಹೇಳುತೀಯೆ. 


ಮದನ--ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದಕ್ಕೆ ಒಂದು

ಕಾಗದದಮೇಲೆ ಗುರುತುಹಾಕಿಕೊಳ್ಳುವುದು ಉತ್ತಮ. 


ಜೋಯಿಸ--ಹೇಗೆ ಗುರುತು ಹಾಕುತೀಯೆ? 


ಮದನ--ಒಂದು ಕಾಗದವನ್ನು ತೆಗೆದುಕೊಳ್ಳುವುದು, ಮೊದಲು

ಸಪ್ತಋಷಿ ನಕ್ಷತ್ರವನ್ನು ಗುರುತು ಮಾಡುವುದು. ಆಮೇಲೆ ಆಕಾಶ 

------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೬೫ 


ದಲ್ಲಿರುವ ಹಾಗೆಯೇ, ಇತರ ನಕ್ಷತ್ರಗಳನ್ನು ಗುರುತುಮಾಡುವುದ್ಕು

ಅವುಗಳ ಹೆಸರುಗಳನ್ನು ಬರೆದುಕೊಡಬೇಕೆಂದು, ತಮ್ಮನ್ನು ಕೇಳಿ

ಕೊಳ್ಳುವುದು.


ಜೋಯಿಸ--ಅದು ಒಳ್ಳೇ ಕೆಲಸವೇ ಸರಿ. ಆದರೆ ಕಾಗದ

ಒಂದೇ ಸಮನಾಗಿ ಚಪ್ಪಟೆಯಾಗಿರುವುದು, ಆಕಾಶ ಹಾಗಿದೆಯೆ? 


ಮದನ--ಇಲ್ಲ, ಆಕಾಶವು ಎಲ್ಲಾ ಕಡೆಯಲ್ಲಿಯೂ ಭೂಮಿಯಿಂದ

ಮೇಲಕ್ಕೆ ಎದ್ದು ಮೇಲೆ ವ್ಯಾಪಿಸಿದ ದೊಡ್ಡ ಬುರುಜಿನ ಹಾಗೆ

ಕಾಣುವುದು.


ಜೋಯಿಸ-- ಹಾಗಾದರೆ ಗುಂಡಾಗಿರುವ ಒಂದು ಪದಾರ್ಥವನ್ನು

ತಂದರೆ, ಆಕಾಶಕ್ಕೆ ಇದನ್ನು ಹೋಲಿಸಬಹುದು. ನಕ್ಷತ್ರಗಳ ಗುರು

ತನ್ನು ತಪ್ಪಿಲ್ಲದೆ ಹಾಕಿಕೊಳ್ಳಬಹುದು.


ಮದನ--ಅಂಥಾ ಗೋಳ ಎಲ್ಲಿದೆ?


ಜೋಯಿಸ--ನಾನು ಕೊಡಿಸಿಕೊಡುತೇನೆ.


ಮದನ--ಜೋಯಿಸರೆ ನಕ್ಷತ್ರಗಳ ವಿಷಯವನ್ನು ತಿಳಿದುದ

ರಿಂದ ಪ್ರಯೋಜನವೇನು?


ಜೋಯಿಸ--ಇವುಗಳಿಂದ ಇನ್ನು ಯಾವ ಉಪಯೋಗವೂ

ಇಲ್ಲದೇ ಇದ್ದಾಗ್ಯೂ, ನೋಡುವುದಕ್ಕಾದರೂ ಬಹು ಚೆನ್ನಾಗಿ ಕಾಣಿ

ಸುವದಿಲ್ಲವೆ? ಒಬ್ಬರು ಒಳ್ಳೇ ಬಟ್ಟೆಯನ್ನು ಹಾಕಿಕೊಂಡು ಹೋದರೂ,

ಒಡವೆಯನ್ನು ಇಟ್ಟುಕೊಂಡು ಹೋದರೂ, ಒಂದು ಚಿತ್ರವನ್ನು ಬರೆ

ದಿದ್ದರೂ, ಒಂದು ಮನೆಯನ್ನು ಚೆನ್ನಾಗಿ ಕಟ್ಟಿದ್ದರೂ ಅದನ್ನೆಲ್ಲಾ

ನಾವು ನೋಡಿ ಆನಂದಪಡುತೇವೆ. ಆದರೆ ಈ ಗಗನದಲ್ಲಿ ಥಳಥಳ

ಗುಟ್ಟುವ ಅದ್ಭುತವಾದ ಈ ನಕ್ಷತ್ರವನ್ನು ನೋಡಿದರೆ ಆನಂದವಿಲ್ಲವೆ?

ಇಷ್ಟೇ ಉಪಯೋಗ ಸಾಕು. ಆದರೆ ಈ ನಕ್ಷತ್ರಗಳನ್ನು ತಿಳಿಯು

ವುದರಿಂದ ಇನ್ನೂ ಕೆಲವು ಪ್ರಯೋಜನ ಉಂಟು. ಸುಮತಿ, ನಿಮ್ಮ

ಚಿಕ್ಕಯ್ಯನ ಮನೆಗೆ ನೀನು ಹೋಗಿದ್ದಾಗ ನಡೆದ ಸಂಗತಿಯನ್ನು

ಹೇಳು.


ಸುಮತಿ--ಇಲ್ಲಿಗೆ ಒಂದು ಫಿರಂಗೀ ಎಸಗೆಯಲ್ಲಿ ನಮ್ಮ ಚಿಕ್ಕಪ್ಪನ 

------------------------------------

೧೬೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಊರು ಇರುವುದನ್ನು ನೀನು ಬಲ್ಲೆಯಷ್ಪೆ? ಒಂದು ದಿನ ನಮ್ಮ

ತಂದೆಯು ಅಲ್ಲಿಗೆ ಹೋಗಿ ಒಂದು ಮಾತನ್ನು ಹೇಳಿ ಬಾ, ಎಂದು ಕಳು

ಹಿಸಿದರು. ನನಗೆ ದಾರಿ ಚೆನ್ನಾಗಿ ಗೊತ್ತುಂಟು, ಆದ್ದರಿಂದ ನಾನು

ಆಲ್ಲಿಗೆ ಹೋಗಿ, ನಮ್ಮ ಚಿಕ್ಕಪ್ಪನನ್ನು ಕಂಡು ಮಾತನಾಡಿ ಪುನಃ

ಊರಿಗೆ ಹೊರಟೆ. ಹೊರಡುವಾಗ್ಗೆ ಸಾಯಂಕಾಲದ ಸಮಯವಾಗಿತ್ತು.

ಆದು ಶ್ರಾವಣಮಾಸ. ಕೃಷ್ಣ ಪಕ್ಷ, ಹೊತ್ತಾಯಿತು, ಹೋಗಬೇಡ

ವೆಂದು ನಮ್ಮ ಚಿಕ್ಕಪ್ಪ ಹೇಳಿದನು. ಆದಕ್ಕೆ ಆ ದಿನವೇ ಹಿಂತಿರುಗಿ

ಬರಬೇಕೆಂದು ನಮ್ಮ ತಂದೆಯವರು ಆಜ್ಞಾಪಿಸಿದ್ದಕಾರಣ ನಾನು

ಅಲ್ಲಿ ನಿಲ್ಲಲಿಲ್ಲ, ಜಾಗ್ರತೆಯಾಗಿಯೇ ಬಂದೆ. ಅರ್ಧದಾರಿಗೆ ಕತ್ತಲೆ

ಯಾಯಿತು.


ಮದನ--ನಿನಗೆ ಭಯವಾಗಲಿಲ್ಲವೆ?


ಸುಮತಿ--ಭಯ ಯಾಕೆ? ದಾರಿಕಾಣದೆ ರಾತ್ರೆಯೆಲ್ಲಾ ಕಾಡಿ

ನಲ್ಲಿದ್ದು ಬೆಳಗಾದಮೇಲೆ ಊರಿಗೆ ಬರುತಿದ್ದೆ. ಅಷ್ಟೇಹೊರತು ಇನ್ನು

ಯಾವ ಭಯವೂ ಇರಲಿಲ್ಲ. ಆದರೂ ಸ್ವಲ್ಪ ಮುಂದಕ್ಕೆ ಬಂದೆ.

ದೊಡ್ಡದಾಗಿ ಮಳೆಯೂ ಗಾಳಿಯೂ ಹೊಡೆಯುವುದಕ್ಕೆ ಮೊದಲಾ

ಯಿತು. ಮುಂದೆ ಹೆಜ್ಜೆ ಇಡುವುದಕ್ಕೆ ಆಗಲಿಲ್ಲ. ಆ ದಾರಿಯ ಮಗ್ಗು 

ಲಲ್ಲಿದ್ದ ಒಂದು ಹೊದರಿನ ಕೆಳಗೆ ಹೋಗಿ ಕೂತುಕೊಂಡೆ. ಬಹಳ

ಹೊತ್ತಿನಮೇಲೆ ಮಳೆ ಕಡಮೆಯಾಯಿತು. ಮತ್ತೆ ಊರಕಡೆ ಹೊರಟೆ.

ದಾರಿ ಚೆನ್ನಾಗಿ ತಪ್ಪಿಹೋಯಿತು. ಕಾಡಿನಲ್ಲಿ ಎಲ್ಲೆಲ್ಲಿಯೂ ತಿರುಗಿದೆ.

ದಾರಿಗೊತ್ತುಮಾಡುವುದಕ್ಕೆ ಯಾವ ಗುರುತೂ ಸಿಕ್ಶಲಿಲ್ಲ. ಅಲ್ಲಲ್ಲಿ

ಮಳೇನೀರಿನಿಂದ ತುಂಬಿ ಹರಿಯುವ ಕೆಲವು ಕೊಲ್ಲಿಗಳನ್ನು ಹಾದು

ನೊಂಡು ಬಂದೆ. ಮುಳ್ಳುಬೇಲಿಗಳನ್ನು ಹಾರಿಕೊಂಡು ಬಂದೆ. ನನ್ನ

ಕಾಲೆಲ್ಲಾ ತರೆದುಹೋಯಿತು. ಒಂದುಸಾರಿ ನೀರಿನಲ್ಲಿ ಕೊಚ್ಚಿ ಕೊಂಡು

ಹೋಗುತಿದ್ದೆ. ನನಗೆ ಈಜುವುದಕ್ಕೆ ಬರುತ್ತಿದ್ದಕಾರಣ ಪ್ರಾಣ ಉಳಿ

ಯಿತು. ಆಗ ಒಂದುಕಡೆ ಸ್ವಲ್ಪ ಬೆಳಕು ಕಾಣಿಸಿತು. ಯಾರೋ

ಪಂಜನ್ನು ಹಿಡಿದುಕೊಂಡು ಬರುವಹಾಗಿತ್ತು.


ಮದನ--ಆಗ ಸ್ವಲ್ಪ ಅನುಕೂಲವಾಯಿತಲ್ಲವೆ। 

-------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೬೭


ಸುಮತಿ-- ಹುಸಿನಗು ನಗುತ್ತಾ--ಮುಂದಕ್ಕೆ ಕೇಳು; ಯಾರಾ

ದರೂ ಕಳ್ಳರು ಬರುತಾರೆಯೊ, ಎಂದು ಮೊದಲು ನನಗೆ ಸಂಶಯ

ವಾಯಿತು. ಕಳ್ಳರು ಬಂದು ತಾನೆ ನನ್ನಂಥಾ ಬಡಹುಡುಗನನ್ನು

ಏನುಮಾಡುತಿದ್ದರು? ಹಾಗದಕಾಸಿನ ಚಿನ್ನವಾಗಲಿ ಬೇಳೇಕಾಸಿನ

ಬೆಳ್ಳಿಯಾಗಲಿ ನನ್ನ ಮೈಮೇಲೆ ಇರಲಿಲ್ಲ. ಆದರೆ ಕಳ್ಳತನಕ್ಕೆ ಬರೆ

ತಕ್ಕವನಾಗಿದ್ದರೆ ದೀಪವನ್ನು ತರಲಾರ, ಎಂದು ಯೋಚಿಸಿ,

ಧೈರ್ಯವಾಗಿ ಆ ಪಂಜಿನಕಡೆಗೆ ನಾನು ಹೊರಟೆ. ಮೊದಲು

ನನ್ನ ಬಲಗಡೆ ಕಾಣಿಸಿದ ಬೆಳಕು ನನ್ನ ಮುಂದುಗಡೆ ಹೋಗಿ

ಇನ್ನೊಂದು ದಿಕ್ಕಿಗೆ ತಿರುಗಿದ ಹಾಗಾಯಿತು. ಇದೇನಾಶ್ಚರ್ಯ

ಎಂದುಕೊಂಡೆ, ಆದರೂ ಅದು ಇದ್ದ ಕಡೆಗೇ ಹೋದೆ. ಮಧ್ಯೆ

ನೀರು ತುಂಬಿದ್ದ ಒಂದು ಹಳ್ಳಕ್ಕೆ ಬಿದ್ದು ಬಿಟ್ಟೆ. ಆಮೇಲೆ ಈಜಿ

ಕೊಂಡು ತಿರುಗಿ ಹೊರಟಿ. ಆ ಬೆಳಕು ನನ್ನನ್ನು ತಪ್ಪಿಸಿಕೊಂಡು

ಹೋಗುವಹಾಗೆ ಕಂಡಿತು. ಆ ಪಂಜನ್ನು ಹಿಡಿದಿದ್ದ ಮನುಷ್ಯನನ್ನು

ನಿಂತುಕೋ, ಎಂದು ಕೂಗುತ್ತಾ, ಅದರ ಕಡೆಗೆ ನಾನು ಓಡುವುದಕ್ಕೆ

ಮೊದಲುಮಾಡಿದೆ. ಅದುವರೆಗೆ ಆ ಬೆಳಕು ಮೆಲ್ಲಗೆ ಹೋಗು

ತಿತ್ತು. ನಾನು ಓಡುವುದಕ್ಕೆ ಆರಂಭಿಸಲು, ಆ ಬೆಳಕು ನನ್ನೆದು

ರಿಗೆ ಕುಣಿಯುತ, ಒಂದಕ್ಕೆ ಹತ್ತರಷ್ಟು ವೇಗವಾಗಿ ಓಡಿತು.

ನಾನೂ ಓಡಿದೆ; ದಾರಿಯಲ್ಲಿದ್ದ ಒಂದು ಜೋರೇ ತಡಿಯಲ್ಲಿ ನನ್ನ 

ಕಾಲು ಹೂತುಕೊಂಡಿತು. ಆ ಜೋರೆಯ ಮಧ್ಯೆ ಮನುಷ್ಯರು ಯಾರೂ

ಬಂದಿರಲಾರರೆಂದು ಆಗ ನಿಶ್ಚೈಸಿಕೊಂಡೆ. ನಾನು ನನೆದು, ಒದ್ದೆ

ಮುದ್ದೆಯಾಗಿದ್ದೆ. ಮೋಡ ಸ್ವಲ್ಪ ಹರೆಯಿತು. ರಾತ್ರೆ ಬಹಳಹೊತ್ತಿನ

ಮೇಲೆ. ಚಂದ್ರೋದಯವಾಯಿತು. ಚಂದ್ರನ ಬೆಳಕೂ, ನಕ್ಷತ್ರದ

ಬೆಳಕೂ ಸ್ವಲ್ಪ ಕಾಣಿಸಿತು. ಯಾವಕಡೆ ನೋಡಿದರೂ ದಿಕ್ಕೇ ತೋರದೆ

ಹೋಯಿತು. ಎಲ್ಲಿಯಾದರೂ ಒಂದು ನಾಯಿಯಾದರೂ ಬೊಗಳೀತೆ

ಎಂದು ಆಲಿಸಿ ಕೇಳಿದೆ. ಭರ್ರನೆ,ಬೀಸುವ ಗಾಳಿಯ ಶಬ್ದವೊಂದು

ಹೊರತು ಇನ್ನೇನೂ ಕೇಳಲಿಲ್ಲ. ಒಂದುಕಡೆ ನಿಂತುಕೊಂಡು ಏನು

ಮಾಡಲಿ ಎಂದು ಕತ್ತೆತ್ತಿ ನೋಡಿದೆ. ಆಗ ಸಪ್ತಋಷಿ ನಕ್ಷತ್ರದ ರಾಶಿ 

-------------------------------------

೧೬೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ನನ್ನ ಕಣ್ಣಿಗೆ ಬಿತ್ತು. ಅದರಮೇಲೆ ಧ್ರುವನಕ್ಷತ್ರ ಕಾಣಿಸಿತು. ನಮ್ಮ

ಚಿಕ್ಕಪ್ಪನ ಮನಗೆ ಹೋಗುವಾಗ್ಲೆ ನನಗೆ ಇದಿರಾಗಿ ಧ್ರುವನಕ್ಷತ್ರ

ಯಾವಾಗಲೂ ಕಾಣಿಸುತಿತ್ತು. ಅದರಕಡೆ ಬೆನ್ನುಮಾಡಿಕೊಂಡು

ನೆಟ್ಟಗೆ ಹೊರಟರೆ ನಮ್ಮ ಮನೆ ಸಿಕ್ಕಬಹುದೆಂದು ನಿರ್ಧರಿಸಿಕೊಂಡೆ,

ಅದೇ ಪ್ರಕಾರ ನನ್ನ ಮೂಗಿನ ನೇರಕ್ಕೆ ನೆಟ್ಟಗೆ ಹೊರಟೆ. ಬೆಳದಿಂಗಳ

ಪ್ರಕಾಶ ಹೆಚ್ಚಾಗುತಾ ಬಂದುದರಿಂದ, ಹಳ್ಳಕೊಳ್ಳಗಳಿಗೆ ಬೀಳದಂತೆ

ಬಂದೆ. ದಾರಿಗೊತ್ತಾಯಿತೆಂದು ಮನಸ್ಸಿಗೆ ಖಂಡಿತವಾಗಿ ತೋರಿತಾಗಿ,

ನನಗೆ ಆಯಾಸವೇ  ತೋರಲಿಲ್ಲ. ಅಷ್ಟು ಹೊತ್ತಿಗೆ ನಾಯಿ ಬೊಗ

ಳುವ ಸದ್ದು ಕೇಳಿತು. ನನಗೆ ಒಂದಕ್ಕೆ ಎರಡರಷ್ಟು ಬಲಬಂದಹಾಗೆ

ತೋರಿತು. ಹಾಗೆಯೇ ಓಡಿಬರಲು, ನಮ್ಮ ಊರು ಸಿಕ್ಕಿತು. ಮನೆಗೆ

ಹೋಗಿ ತಲಪಿದೆ.


ಮದನ--ಓಹೋ! ಧ್ರುವನಕ್ಷತ್ರವನ್ನು ತಿಳಿಯುವುದರಿಂದ

ಪ್ರಯೋಜನವಿದೆ! ಈ ನಕ್ಷತ್ರಗಳ ವಿಷಯವನ್ನೆಲ್ಲಾ ತಿಳಿದುಕೊಳ್ಳ

ಬೇಕು. ಸುಮತಿ ನಿನ್ನ ಮುಂದೆ ಹಾಗೆ ಹರಿದುಹೋದ ಬೆಳಕು

ಯಾವುದು? ಕೊನೆಗೆ ಗೊತ್ತಾಯಿತೆ?


ಸುಮತಿ-- ನಮ್ಮ ಅಯ್ಯನ ಸಂಗಡ ಹೇಳಿದೆ. ಅದು ಕೊಳ್ಳಿ

ಪಿಶಾಚಿ ಎಂದು ಹೇಳಿದರು. ಈಚೆಗೆ ಜೋಯಿಸರು ಅದನ್ನು ಚೆನ್ನಾಗಿ

ವಿವರಿಸಿದರು. ಜೋರೆಗಳಿಂದ ಒಂದು ಬಗೆ ಗಾಳಿ ಹೊರಟು ಬೆಳಕಿನ

ಹಾಗೆ ಕಾಣುವುದು, ಎಂದು ಹೇಳಿದರು.


ಹೀಗೆ ಮಾತನಾಡಿಕೊಂಡು, ಸುಮತಿ ಮದನ, ಜೋಯಿಸ

ಮೂರು ಜನವೂ ಜೋಯಿಸನ ಮನೆಗೆ ಬಂದು ಸೇರಿದರು. ಇಬ್ಬರು

ಹುಡುಗರೂ ಬೆಚ್ಚಗೆ ಹೊದ್ದುಕೊಂಡು ಮಲಗಿಕೊಂಡರು. ರಾಮ

ಜೋಯಿಸ ಮಾತ್ರ ಏನೊ ಪುಸ್ತಕವನ್ನು ನೋಡುತಾ ಇದ್ದನು. ಸ್ವಲ್ಪ

ಹೊತ್ತಿನಮೇಲೆ ಮದನನು ಓಡಿಬಂದು, ಜೋಯಿಸಕ್ಕೆ ಅದು ಒಂದು

ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು, ಎಂದನು.


ಜೋಯಿಸ---ಯಾವುದು, ಎಂದು ಕೇಳಲಾಗಿ, ರಾಜಪುತ್ರನು--

ಸಪ್ತಋಷಿ ನಕ್ಷತ್ರ. ಇದು ಚಲಿಸುವುದೇ ಇಲ್ಲವೇ, ನೋಡೋಣ 

------------------------------------

೧೨] ಸುಮತಿ ಮದನಕುಮಾರರ ಚರಿತ್ರೆ ೧೬೯ 


ವೆಂದು ಎಚ್ಚರವಾಗಿಯೇ ಮಲಗಿದ್ದೆ. ಈಗ ಎದ್ದು ಅಂಗಳದಲ್ಲಿ ಹೋಗಿ

ನೋಡಿದೆ, ಆ ಏಳು ನಕ್ಷತ್ರಗಳೂ ಮೊದಲಿದ್ದ ಕಡೆ ಈಗ ಇಲ್ಲ

ಎಂದು ಬಹು ಆತುರದಿಂದ ಹೇಳಿದನು. ಜೋಯಿಸನು--ಹವುದು.

ಅವು ಚಲಿಸುವವು. ಇವತ್ತಿಗೆ ಮಲಗಿಕೊಂಡು ನಿದ್ರೆಮಾಡು, ನಾಳೆ

ಮಾತನಾಡೋಣ ಎಂದು ಹೇಳಿದನು.

...

೧೩ನೆ ಅಧ್ಯಾಯ


ಮಾರನೇ ದಿನ ಮದನನು ಜೋಯಿಸನನ್ನು ಕುರಿತು--ತಾವು 

ಒಂದು ಕಥೆಯನ್ನು ಹೇಳುತೇನೆಂದು ಹೇಳಿದ್ದಿರಿ. ಅದನ್ನು ಈಗ

ಹೇಳಬೇಕೆಂದು ಕೇಳಿದನು. ಆಗ ಜೋಯಿಸನು ಹೇಳಿದ್ದು ಹೇಗೆಂದರೆ:


ಈ ಕಥೆ ನಡದದ್ದು ಪರ್ವತಪ್ರಾಂತದಲ್ಲಿ. ಅಲ್ಲಿ ಅತಿಯಾಗಿ

ಹಿಮದಗಡ್ಡೆ ದೊಡ್ಡ ದೊಡ್ಡದಾಗಿ ಬೀಳುವುದು. ಅದೇ ಒಂದು ಪರ್ವ

ತದ ಹಾಗೆ ಆಗುವುದು,


ಮದನ---ಹಿಮದಗಡ್ಡೆ ಎಂದರೇನು?


ಈ ಸೀಮೆಯಲ್ಲಿ ಬೆಟ್ಟದಮೇಲೆ ಚಳಿಗಾಲದಲ್ಲಿ ಹೆಚ್ಚಾಗಿ ಮಂಜು

ಬೀಳುವುದನ್ನು ನೋಡಿಬಲ್ಲೆಯಷ್ಪೆ. ಆ ಮಂಜೆಲ್ಲಾ ನೀರಿನ ಸಣ್ಣ

ಹನಿಗಳು. ಈ ಹನಿಗಳು ಚಳಿಯಿಂದ ಒಂದಕ್ಕೊಂದು ಸೇರಿಕೊಂಡು

ಗಟ್ಚಿಯಾಗಿ, ಹಲ್ಲೆ ಹಲ್ಲೆಯಾಗಿ ಬೀಳುವವು. ಇದು ಒಂದರಮೇಲೆ

ಒಂದು ಬಿದ್ದು ಮತ್ತೂ ಗಟ್ಟಿಯಾಗುವುದು. ಇದೇ ಹಿಮದ ಗಡ್ಡೆ.

ಬಿಸಿಲಿಗೆ ಇದು ಕರಗಿ ನೀರಾಗಿ ಹರಿಯುವುದು. ಚಳಿಗೆ ಗಟ್ಟಿ ಯಾಗಿ

ದಪ್ಪ ಆಲಿಕಲ್ಲಿನ ಹಾಗೆ ಆಗುವುದು.


ಒಂದಾನೊಂದು ಪರ್ವತದ ತಪ್ಪಲಲ್ಲಿ ಕೆಲವು ಕಾಡುಜನರು ಗುಡಿ

ಸಲನ್ನು ಕಟ್ಟಿಕೊಂಡು ವಾಸಮಾಡುತಿದ್ದರು. ಹಿಮದಗಡ್ಡೆಯು ಅಲ್ಲಿ

ವಿಶೇಷವಾಗಿ ಬೀಳುತಿತ್ತು. ಅದು ಮನೆಯಮೇಲೆ ಹೆಚ್ಚಾಗಿ ಬಿದ್ದು 

---------------------------------

೧೭೦ ಸುಮತಿ ಮದೆನಕುಮಾರರೆ ಚರಿತ್ರೆ [ಅಧ್ಯಾಯ 


ಭಾರವಾದಕಾರಣ ಮನೆಯು ಬಿದ್ದುಹೋದೀತೆಂಬ ಭಯದಿಂದ ಒಬ್ಬ

ಮನುಷ್ಯನೂ ಅವನ ಮಗನೂ ಚಾವಣಿಯ ಮೇಲೆ ಹತ್ತಿ, ಮಂಜಿನ

ಗಡ್ಡೆ ಯನ್ನು ತೆಗೆದು ಕೆಳಕ್ಕೆ ಹಾಕುತಿದ್ದರು. ಮತ್ತೊಬ್ಬ ಮಾರ್ಗಸ್ಥನು

ಇವರನ್ನು ಕುರಿತು--ಅಯ್ಯ, ಬೇಗ ಕೆಳಕ್ಕೆ ಇಳಿದು ಓಡಿಹೋಗಿರಿ,

ಬೆಟ್ಟದ ಮೇಲಿನಿಂದ ಹಿಮದಗಡ್ಡೆ ಪರ್ವತದ ಹಾಗೆ ಉರುಳಿ ಬರುತಿದೆ,

ನೀವು ಅದರಲ್ಲಿ ಸಿಕ್ಕಿಕೊಂಡು ಸತ್ತುಹೋದೀರಿ, ಎಂದನು. ಇದನ್ನು

ಕೇಳಿದ ಕೂಡಲೆ ಹಾರಿನಮೇಲಿನಿಂದ ಅಪ್ಪ ಮಕ್ಕಳಿಬ್ಬರೂ ಕೆಳಕ್ಕೆ 

ಇಳಿದು ಓಡಿಹೋದರು. ಕಾಲುಗಳಿಗೆಯೊಳಗೆ ಮಂಜಿನ ಗಡ್ಡೆಯು

ಉರುಳಿ ಬಂದು ಆ ಹಳ್ಳಿಯನ್ನೆಲ್ಲಾ ಮುಚ್ಚಿಕೊಂಡು ಬಿಟ್ಟಿತು, ಆ

ಮನುಷ್ಯನು ತನ್ನ ಹೆಂಡತಿ, ಮಕ್ಕಳು, ತಂಗಿ ಎಲ್ಲಾ ಹಿಮದಲ್ಲಿ ಸಿಕ್ಕಿ

ಸತ್ತುಹೋದರೆಂದು ತಿಳಿದು, ಮೂರ್ಛೆಹೋಗಿ, ಎದ್ದು ಇನ್ನೊಂದು

ಹಳ್ಳಿಗೆ ಹೋಗಿ ಸುದಾರಿಸಿಕೊಂಡು, ಐದುದಿವಸದ ಮೇಲೆ, ತನ್ನ

ಜನರು ಏನಾದರೋ ನೋಡೋಣವೆಂದು ಮಗನನ್ನೂ ಕರೆದುಕೊಂಡು

ಹೊರಟನು. ಇವನಿಗೆ ಮನೆ ಇದ್ದ ಸ್ಥಳವೇ ಗುರುತು ಸಿಕ್ಕಲಿಲ್ಲ.

ಆಗ ಬೇಸಗೆ ಸ್ವಲ್ಪ ಮೊದಲಾಗಿತ್ತು. ಹಿಮದ ಗಡ್ಡೆ ಸ್ವಲ್ಪ ಮೆತ್ತ

ಗಾಯಿತು. ಇವರಿಬ್ಬರೂ ಗುದ್ದಲಿ, ಹಾರೆ, ಎಲ್ಲವನ್ನೂ ತೆಗೆದು

ಕೊಂಡುಹೋಗಿ, ಒಂದೆರಡು ಕಡೆ ಅಗೆದು ನೋಡಿದರು. ಏನೂ ಸಿಕ್ಕ

ಲಿಲ್ಲ. ಇವನ ಭಾವಮೈದಂದಿರು ಸಹಾಯಕ್ಕೆ ಬಂದರು. ಎಲ್ಲರೂ

ಸೇರಿ ಅಗೆದು ನೋಡುವಲ್ಲಿ ಕಡೆಗೆ ಒಂದು ಸಣ್ಣ ತೂತು ಸಿಕ್ಕಿತು.

“ಅಣ್ಣಾ, ನಮ್ಮನ್ನು ಆಚೆಗೆ ಕರೆದುಕೊ ಕರೆದುಕೊ,"ಎಂಬ ಧ್ವನಿ

ಕೇಳಿಸಿತು. ಆಗ ಮನೇ ಯಜಮಾನನ, ಅವನ ಭಾವಮೈದನೂ

ಒಳಕ್ಕೆ ಇಳಿದರು. ಅಲ್ಲಿ ಅವನ ಹೆಂಡತಿಯೂ, ಅವನ ತಂಗಿಯ್ಕೂ

ಹದಿಮೂರು ವರುಷದ ಒಬ್ಬ ಹೆಣ್ಣಮಗಳೂ ಮೂರುಜನ ಮಾತ್ರ ಬದು

ಕಿದ್ದರು. ಅವರಿಗೂ ಚಳಿಯಿಂದ ಮೈಯೆಲ್ಲಾ ಬೆರತುಹೋಗಿತ್ತು. ಆ

ಮೂರು ಜನರನ್ನೂ ಮೇಲಕ್ಕೆ ಎತ್ತಿಕೊಟ್ಟರು. ಮೇಲಿದ್ದವರು ಅವ

ರನ್ನು ಕರೆದುಕೊಂಡರು. ಆ ಹೆಂಗಸರಿಗೆ ಸ್ಪಲ್ಪ ಆಹಾರವನ್ನು ಕೊಟ್ಟು

ಮೈಬೆಚ್ಚಗಾಗುವುದಕ್ಕೆ ತಕ್ಕ ಉಪಾಯವನ್ನು ಮಾಡಿ ಪ್ರಾಣವನ್ನು

ಉಳಿಸಿದರು. 

----------------------------------

೧೩] ಸುಮತಿ ಮದನಕುಮಾರರ ಚರಿತ್ರೆ ೧೭೧ 


ಈ ಅದ್ಭುತವಾದ ಸಂಗತಿಯನ್ನು ಅಲ್ಲಿನ ಕೋಶಾಧಿಕಾರಿಯು

ಕೇಳಿ ಅವರನ್ನು ಕರಸಿ, ವಿಚಾರಿಸಲಾಗಿ, ಆ ಯಜಮಾನನ ಹೆಂಡತಿ

ಹೇಳಿದ್ದು ಹೇಗೆಂದರೆ :--


ನಾನು ಮನೆಯಲ್ಲಿ ಕೆಲಸ ಮಾಡುತಿದ್ದೆ. ನನ್ನ ಯಜಮಾನನೂ

ಹಿರೀಮಗನೂ ಹಂಜರದಮೇಲೆ ಬಿದ್ದಿದ್ದ ಮಂಜಿನ ಗಡ್ಡೆಗಳನ್ನು

ಕೆಳಗೆ ತೆಗೆದುಹಾಕುತಿದ್ದರು. ಬೆಟ್ಟದಹಾಗೆ ಬರುತಿದ್ದ ಹಿಮದಗಡ್ಡೆಯು

ಕಾಣಿಸಿತು. ನಾನು ಜಾಗ್ರತೆಯಾಗಿ ಬೀದೀಬಾಗಿಲನ್ನು ಹಾಕಿಕೊಂಡೆ.

ಒಂದು ಗಳಿಗೆಯಲ್ಲಿ ಮನೇ ಚಾವಣಿಯು ಮುರಿದು ಕೆಳಕ್ಕೆ ಬಿತ್ತು.

ಕೊಟ್ಟಿಗೆಯಲ್ಲಿ ಒಂದು ಮೂಲೆಯಲ್ಲಿ ಮಾತ್ರ ಸ್ವಲ್ಪ ಸ್ಥಳವಿತ್ತು. ನಾನು ,

ನನ್ನ ನಾದಿನಿ, ನನ್ನ ಮಗಳು ಒಂದು ಕೈಮಗು, ಇಷ್ಟು ಜನವೂ ಅಲ್ಲಿ

ಹೋಗಿ ಸೇರಿಕೊಂಡೆವು. ಕೆಲವು ಕಾಲದವರೆಗೆ ಮನೆಯಲ್ಲಿದ್ದ ಸಾಮಾ

ನುಗಳನ್ನೆಲ್ಲಾ ತಿಂದು ಮುಗಿಸಿದೆವು. ಕೊಟ್ಟಿಗೆಯಲ್ಲಿ ಎರಡು ಆಡು

ಗಳು ಮಾತ್ರ ಬದುಕಿದ್ದವು. ಒಂದು ಗರ್ಭವಾಗಿತ್ತು. ಇನ್ನೊಂದು

ಕರೆಯುತಿತ್ತು. ಅದರ ಹಾಲನ್ನು ಕರೆದು, ನಾವೆಲ್ಲರೂ ಹೊಟ್ಟೆಗೆ

ಆಧಾರಮಾಡಿಕೊಳ್ಳುತಿದ್ದೆವು. ಚಳಿಯನ್ನು ತಡೆಯಲಾರದೆ ನನ್ನ

ಕೈ ಗಂಡುಮಗು ಸತ್ತುಹೋಯಿತು. ಇಪ್ಪತ್ತು ದಿವಸದವರೆಗೆ ಮಾತ್ರ

ಕೋಳೀ ಕೂಗಿಲ್ಲದೆ ಹಗಲು ರಾತ್ರೆ ಯಾವುದೂ ತಿಳಿಯಲಿಲ್ಲ. ಮನೆ

ಯಲ್ಲಿದ್ದ ಹುಲ್ಲನ್ನೇ ಮೆಲ್ಲಗೆ ಕಿತ್ತು ಆಡುಗಳಿಗೆ ಹಾಕುತ್ತಾ ಬಂದೆವು.

ಕತ್ತಲೆಯಲ್ಲಿ ಏನೂ ಕಾಣಿಸುತಿರಲಿಲ್ಲ. ಗಬ್ಬವಾಗಿದ್ದ ಆಡು ಮರೀ

ಹಾಕುವುದಕ್ಕೆ ಇನ್ನು ಇಪ್ಪತ್ತು ದಿವಸ ಬೇಕಾಗಿತ್ತು. ಇದರಿಂದ ನಾವು

ಅಲ್ಲಿದ್ದ ದಿವಸ ಸುಮಾರಾಗಿ ಗೊತ್ತಾಯಿತು. ಹಾಲು ಕರೆಯುವ

ಹೊತ್ತಾದರೆ, ಆಡು ತಾನಾಗಿ ಬಂದು ಕೈಯನ್ನು ನೆಕ್ಕುತಿತ್ತು. ಆಗ

ನಾವು ಹಾಲ ಕರೆದುಕೊಳ್ಳುತಿದ್ದೆವು. ತರುವಾಯ ನಮ್ಮನ್ನು ಮೇಲಕ್ಕೆ

ಎತ್ತಿತಂದರು.


ಈ ಪ್ರಕಾರ ಆ ಹೆಂಗಸು ಕೋಶಾಧಿಕಾರಿಯ ಮುಂದೆ ತಮ್ಮ

ಕಥೆಯನ್ನೆಲ್ಲಾ ವಿಸ್ತಾರವಾಗಿ ಹೇಳಿದಳು, ಎಂಬುದಾಗಿ ರಾಮಜೋಯಿ

ಸನು ಕಥೆಯನ್ನು ಮುಗಿಸಿದನು. 

-------------------------------------

೧೭೨ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ


ಮದನ--ಲೋಕದಲ್ಲಿ ಜನರು ಇನ್ನೂ ಯಾವ ಯಾವ ಕಷ್ಟ

ವನ್ನು ಅನುಭವಿಸುತಾರೋ?


ಜೋಯಿಸ--ಆದ್ದರಿಂದ ಅಂಥಾ ಕಷ್ಟಗಳು ಯಾವುದು ಬಂದರೂ

ಅದೆಲ್ಲವನ್ನೂ ಸಹಿಸಿಕೊಳ್ಳುವಹಾಗೆ ನಾವು ಶಕ್ತಿಯನ್ನು ಉಂಟುಮಾಡಿ

ಕೊಳ್ಳಬೇಕು.


ಮದನ--ಈ ಮಾತು ನಿಜವೆಂದು ನನಗೂ ಈಗ ತೋರುತಿದೆ.

ಮೊದಲಿಗೆ ಸ್ವಲ್ಪ ಯಾತನೆಯಾದರೂ ನಾನು ಅಳುವುದು, ಕೋಪ

ಮಾಡಿಕೊಳ್ಳುವುದು ಹೀಗಿತ್ತು; ಈಗ ನನಗೆ ಯಾವ ಯಾತನೆ

ಯಾದರೂ ಸರಿಯೆ, ನಾನು ಲಕ್ಷ್ಯಮಾಡುವುದೇ ಇಲ್ಲ.


ಜೋಯಿಸ--ನಿನಗೆ ಯಾವುದು ಉತ್ತಮವೆಂದು ತೋರುವುದು?

ಈಗಿನ ಸ್ಥಿತಿಯೆ ಪೂರ್ವದ ಸ್ಥಿತಿಯೆ ? 


ಮದನ--ಈಗ ನಾನು ಇರುವಹಾಗೆಯೇ ಇರುವುದು ಉತ್ತಮ.

ನನಗೆ ಮೊದಲು ಶರೀರದಲ್ಲಿ ಏನಾದರೂ ಆಲಸ್ಯ ಇರುತ್ತಲೇ ಇತ್ತು.

ನಿತ್ಯವೂ ಔಷಧವನ್ನು ಕೊಡುತಲೇ ಇದ್ದರು. ಈಗ ಯಾವ ರೋಗವೂ

ಇಲ್ಲ. ಸುಖವಾಗಿದೇನೆ. ಆದರೆ ಜೋಯಿಸರೆ, ಹಾಗೆ ವಿಪರೀತವಾಗಿ

ಹಿಮದಗಡ್ಡೆ ಬೀಳುವ ದೇಶ ಉಂಟೆ? ಅಂಥಾಕಡೆ ಜನ ಬದುಕು

ವುದಕ್ಕಾದೀತೆ?


ಜೋಯಿಸ--ಅಂಥಾ ದೇಶದಲ್ಲಿರತಕ್ಕವರಿಗೆ ಅದೇ ಸರಿಯಾಗಿದೆ.

ಅವರನ್ನು ಇನ್ನೆಲ್ಲಿಗೆ ಕರೆತಂದರೂ ತಮ್ಮದೇಶಕ್ಕೆ ಹೋಗಬೇಕೆಂದು

ಅಪೇಕ್ಷಿಸುತಾರೆ.


ಮದನ--ಅವರವರ ದೇಶ ಅವರಿಗೆ ಹೆಚ್ಚು. ಆದರೆ ನಮ್ಮ

ಅರಮನೆಗೆ ಬರತಕ್ಕ ಅನೇಕರು ತಮ್ಮ ಜನ್ಮಸ್ಥಳವು ಹಳ್ಳಿಗಾಡಾದಾಗ್ಯೂ

ಪಟ್ಟಣವಾಸವೇ ಉತ್ತಮವೆಂದು ಹೇಳುತಾರೆ; ಹಳ್ಳಿ ಗಾಡಿನಲ್ಲಿರತಕ್ಕ

ವರು ಕಾಡುಜನರೆಂದೆನ್ನುತಾರೆ.


ಜೋಯಿಸ. ಪಟ್ಟಣಗಳ ಮುಖವನ್ನು ನೋಡದೆ, ಅನೇಕ

ಜನರು ಇದಾರೆ. ಏನು ಸುಮತಿ ಈ ಹಳ್ಳಿ ಗಾಡನ್ನು ಬಿಟ್ಟು ಷಹರಿಗೆ

ಹೋಗಿ ಇರುವುದಕ್ಕೆ ನಿನಗೆ ಇಷ್ಟವಿದೆಯೆ? 

-------------------------------------

೧೩] ಸುಮತಿ ಮದನಕುಮಾರರ ಚರಿತ್ರೆ ೧೭೩


ಸುಮತಿ- ನಾನು ಒಲ್ಲೆ. ನಮ್ಮ ತಂದೆತಾಯನ್ನೂ, ನನಗೆ:

ಎಷ್ಟೋ ಉಪಕಾರವನ್ನು ಮಾಡಿದ ನಿಮ್ಮನ್ನೂ, ಹೀಗೆ ನನಗೆ ಬೇಕಾದ 

ವರನ್ನೆಲ್ಲಾ ಬಿಟ್ಟು, ನಾನು ಯಾಕೆ ಅಲ್ಲಿ ಹೋಗಲಿ?


ಮದನ--ಷಹರುಗಳಿಗೆ ನೀನು ಹೋಗಿಯೇ ಇಲ್ಲವೆ?


ಸುಮತಿ-_ಒಂದುಸಾರಿ ಹೋಗಿದ್ದೆ. ವಿಜಯನಗರಕ್ಕೆ ಕರೆದು

ಕೊಂಡು ಹೋಗಿದ್ದರು. ಆ ಜನದ ಗುಂಪೊ, ಆ ಬಚ್ಚಲ ನಾತವೊ, ಆ

ಸಂದುಗೊಂದೋ ಸಾಕು, ಸಾಕು! ಒಂದೊಂದು ಈಕಡೆ ಗಾಳಿ ಬೆಳಕಿಗೆ

ಸಹಿತ ಮಾರ್ಗವಿಲ್ಲ. ಪೇಟೇ ನೋಡುವುದಕ್ಕೆ ಹೋದೆ. ಅಲ್ಲಿ ಬೊಂಬಿಗೆ

ಕೈಕಾಲುಗಳನ್ನೂ, ಮುಖವನ್ನೂ ಮಾಡಿ ಇರಿಸಿದೆಯೋ ಎನ್ನುವ

ಹಾಗೆ, ದೊಡ್ಡದೊಡ್ಡ ಹೊಟ್ಟೆಯುಳ್ಳ ಜನರು. ಭೂತದಹಾಗೆ

ಕೂತಿರುತಿದ್ದರು. ಅವರು ಅತ್ತಿತ್ತ ತಿರುಗುವುದೇ ಕಷ್ಟವಾಗಿತ್ತು.

ಅವರನ್ನು ನೋಡಿ ನನಗೆ ಬಹಳ ನಗು ಬಂತು. ನಾನು ಇಳಿದಿದ್ದ

ಮನೆಯಲ್ಲಿ ಹೆಂಗಸು ಗಂಡಸರೆಲ್ಲರೂ, ಬೆಳಗಿನಿಂದ ಸಾಯಂಕಾಲದ

ವರೆಗೂ ಸಿಸ್ತುಮಾಡಿಕೊಳ್ಳುವುದರಲ್ಲಿಯೇ ಕಾಲವನ್ನು ಕಳೆಯುತಿದ್ದರು.

ಹುವ್ವಿಗೂ ಗಂಧಕ್ಕ್ರೂ ಐದು ಆರು ವರಹದಮಟ್ಟಿಗೆ ವೆಚ್ಚಮಾಡು

ತಿದ್ದರು. ಆದರೆ ಬಾಗಿಲಲ್ಲಿ ಬಂದು ನಿಂತುಕೊಂಡು. -ಅಮ್ಮಾ, ಭಿಕ್ಷ

ಎಂದು ಕೂಗುತಿದ್ದ ಕುಂಟರಿಗೆ ಕುರುಡರಿಗೆ ಒಂದು ಹಿಡಿಯನ್ನಾದರೂ

ಹಾಕುತಿರಲಿಲ್ಲ.


ಮದನ--ಅದೇನೋ ನಿಜ. ಆದರೆ ನನ್ನಂಥವನು ಅಲ್ಲಿದ್ದರೆ, ಆ

ಬಡಜನರಿಗೆ ಏನೂ ಕಡಮೆಮಾಡುತಿರಲಿಲ್ಲ. ನಾನು ಒಳ್ಳೆಯವನು,

ಉದಾರಿ, ಎಂಬುವುದನ್ನು ನೀನು ಬಲ್ಲೆಯಷ್ಟೆ? ದೊಡ್ಡ ಪದವಿಯಲ್ಲಿರ

ತಕ್ಕವರು ಒಳ್ಳೇ ಒಡವೆಯನ್ನಿಟ್ಟು ಒಳ್ಳೇ ಬಟ್ಟೆಯನ್ನುಟ್ಟು ಸಿಸ್ತು

ಮಾಡಿಕೊಳ್ಳ ಬೇಕಾದ್ದು ಅಗತ್ಯ.


ಸುಮತಿ--ಹಾಗೆ ಸಿಸ್ತು ಮಾಡಿಕೊಂಡದ್ದರಿಂದ ಪ್ರಯೋಜನ

ವೇನು? ಆ ಪೇಟೆಯಲ್ಲಿ ನಾನು ಹೋಗುತಿರುವಾಗ ನನಗೆ ಇಬ್ಬರು

ಹುಡುಗರು ಸಿಕ್ಕಿದರು. ಅವರ ಆಭರಣವನ್ನೂ ಉಡುಪನ್ನೂ

ನೋಡಿದರೆ, ನೀನು ಮೊದಲು ಇಲ್ಲಿಗೆ ಬಂದಾಗ ಹೇಗೆ ಇದ್ದೆಯೋ ಹಾಗೆ  

-----------------------------------

೧೭೪ ಸುಮತಿ ಮದ ನಕುಮಾರರ ಚರಿತ್ರೆ [ಅಧ್ಯಾಯ


ಕಾಣಿಸುತಿದ್ದರು. ಅವರು ದೊಡ್ಡವರ ಮಕ್ಕಳಾಗಿರಬಹುದೆಂದು ತಿಳಿದು

ನಾನು ಸ್ವಲ್ಪ ಅರುಗಾಗಿ ನಿಂತುಕೊಂಡೆ. ದೊಡ್ಡ ಪದವಿಯುಳ್ಳ ಜನ

ರಿಗೆ ಮರ್ಯಾದೆ ತೋರಿಸಬೇಕೆಂದು ನಮ್ಮಯ್ಯ ಹೇಳಿಕೊಟ್ಟಿದಾರೆ.

ಅದಕ್ಕಾಗಿಯೇ ಅವರಿಗೆ ದಾರಿಯನ್ನು ಬಿಟ್ಟು ನಾನು ಓರೆಯಾದೆ. ಇಷ್ಟರ

ಮಾನ ಅವರಿಗೆ ಸಾಲದೇ ಹೋಯಿತು. ನನ್ನ ಮಗ್ಗುಲಲ್ಲಿ ಹೋಗುತ್ತಾ

ನನ್ನನ್ನು ತಳ್ಳಿ ಬಿಟ್ಟು ಹೊರಟುಹೋದರು ; ನಾನು ಬಚ್ಚಲಿಗೆ ಬಿದ್ದೆ.

ಮೈಮೋರೆಯೆಲ್ಲಾ ಕೊಚ್ಚೆ ಯಾಯಿತು. ಅವರು ಚಪ್ಪಾಳೆ ಹಾಕಿ

ಕೊಂಡು ನಕ್ಕರು. ಯಾಕೆ ತಳ್ಳಿದಿರಿ, ಎಂದು ನಾನು ಕೇಳಿದೆ.

ಇಬ್ಬರೂ ಓಡಿಬಂದು ನನ್ನ ಕೆನ್ನೆಗೆ ಹೊಡೆದರು. ನಾನು ಎದ್ದು ಅವರಿ

ಬ್ಬರನ್ನೂ ಹೊಡೆಯುವುದಕ್ಕೆ ಮೊದಲುಮಾಡಿದೆ. ನನ್ನ ಏಟಿಗೆ 

ಇಬ್ಬರೂ ಅಳುತಾ ಓಡಿಹೋದರು, ಮೊದಲಿದ್ದ ಡಂಭ ಹಾರಿ

ಹೋಯಿತು. ನಾನು ನಮ್ಮೂರಿಗೆ ಹೊರಟುಬಂದೆ. ನನ್ನ ಜೊತೇ

ಹುಡುಗರು-- ಸುಮತಿ ಯಾವಾಗ ಬಂದೆ? ಸ್ವಸ್ಥವಾಗಿದೀಯಾ?

ಎಂದು ಒಬ್ಬೊಬ್ಬರಾಗಿ ವಿಚಾರಿಸಿದರು, ಷಹರಿನವರ ಗುಣವೂ,

ಹಳ್ಳಿಯವರ ಗುಣವೂ ಹೀಗಿದೆ.


ಜೋಯಿಸ--ಹಳ್ಳಿ ಗಾಡವಾಸವನ್ನು ಅಪೇಕ್ಷಿಸುವುದಕ್ಕೆ ಕಾರಣ

ಈಗ ಗೊತ್ತಾಯಿತೆ? ಷಹರಿನಲ್ಲಿರತಕ್ಕ ಜನರು ಯಾವ ಕೆಲಸವನ್ನೂ

ಮಾಡದೆ, ಸಿಸ್ತುಮಾಡಿಕೊಂಡು ಮೆರೆಯುವರು. ಅವರು ಯಾವ

ಉಪಯೋಗಕ್ಕೂ ಬರುವುದಿಲ್ಲ. ಕೂತುಕೂತು ಮೈಬೆಳೆಸಿಕೊಳ್ಳು

ವರು, ಕಷ್ಟಕ್ಕೆ ತಡೆಯಲಾರರು. ಹಳ್ಳಿಗಳಲ್ಲಿ ಕಷ್ಟ ಪಡದಿದ್ದರೆ

ಸಾಗುವುದಿಲ್ಲ. ಆದ್ದರಿಂದಲೇ ಹಳ್ಳಿ ಗಾಡವಾಸ ಬೇಡವೆಂದು ಅವರು

ಹೇಳುವರು. ಪಟ್ಟಣವಾಸಿಗಳಿಗೆ ಕಾಡಹರಟೆಯನ್ನು ಹರಟಿ ಕಾಲಾ

ಕಳೆಯುವುದಕ್ಕೆ ಜೊತೆಗಾರರು ಬೇಕಾದಷ್ಟು ಸಿಕ್ಕುವರು. ನಾಲ್ಕು

ಜನ ಸೇರಿದರೆ, ಇವನ ರುಮ್ಮಾಲು ಓರೆ ಅವರ ಮನೇಸಾರು ಸಪ್ಪೆ,

ಇವಳ ಮೂಗು ಉದ್ದ, ಅವನ ಬೆಟ್ಟು ಸಣ್ಣದು, ಎಂದು ಮತ್ತೊಬ್ಬ

ರನ್ನು ಆಕ್ಷೇಪಿಸಿ ಮಾತನಾಡುತಲೇ ಇರುವರೇ ಹೊರತು ಉಪಯೋಗ

ವಾದ ಕೆಲಸವನ್ನು ಏನೂ ಮಾಡುವುದಿಲ್ಲ. ಡಂಭವಾಗಿ ತಿರುಗುವುದೇ 

-------------------------------------

೧೩] ಸುಮತಿ ಮದನಕುಮಾರರ ಚರಿತ್ರೆ ೧೭೫ 


ಮುಖ್ಯವಾದ ಕಾರ್ಯ. ಒಳ್ಳೇ ಉಡುಪನ್ನು ಹಾಕಿಕೊಂಡು ಡಂಭ

ವಾಗಿದ್ದವರನ್ನು ಮಾತನಾಡಿಸುವರು. ಇಲ್ಲದೇ ಇದ್ದವರು ಸ್ನೇಹಿತ 

ರಾದಾಗ್ಯೂ ಸರಿಯೆ, ಮಾತನಾಡಿಸುವುದಿಲ್ಲ.


ಸುಮತಿ-_ಒಳ್ಳೇ ಬಟ್ಟೆಗೂ ಸ್ನೇಹಕ್ಕೂ ಸಂಬಂಧವೇನು,

ಜೋಯಿಸರೆ? ಒಳ್ಳೇ ಬಟ್ಟೆಯನ್ನು ಹಾಕಿಕೊಂಡವರಿಗೆ ಹೆಚ್ಚು

ಮರ್ಯಾದೆ ಯಾಕೆ? ಈ ಮಾತನ್ನು ಕೇಳಿದ ಕೂಡಲೆ ನನಗೆ ಒಂದು

ಕಥೆ ಜ್ಞಾಪಕಬರುವುದು, ಜೋಯಿಸರೆ.


ಮದನ--ಆ ಕಥೆಯನ್ನು ಹೇಳು.


ಜೋಯಿಸ--ಆ ಕಥೆ ನಾಳೆ ಆಗಲಿ,


ತರುವಾಯ ಮದನ, ಸುಮತಿ, ಇಬ್ಬರೂ ಆಡುವುದಕ್ಕೆ ಹೋದರು. 

ಜೋಯಿಸರ ಹೊಲದ ಮಧ್ಯೆ ಚಿಕ್ಕದಾದ ಒಂದು ಮರದ ದಿಮ್ಮಿ

ಬಿದ್ದಿತ್ತು. ಅದನ್ನು ಗುಡಿಸಲಿನ ಹತ್ತಿರಕ್ಕೆ ಉರುಳಿಸಿಕೊಂಡು ಬರೆ

ಬೇಕೆಂದು ಯತ್ನಿಸಿದರು. ಇವರಿಬ್ಬರೂ ಸೇರಿ ಅದನ್ನು ಕೈಯಿಂದ

ತಳ್ಳಿದರು. ಅದು ಉರುಳಲಿಲ್ಲ. ಆಗ ಸುಮತಿಯು ಎರಡು ಕಟ್ಟಿಗೆ

ಯನ್ನು ತೆಗೆದುಕೊಂಡು ಬಂದು, ಒಂದನ್ನು ಮದನನಿಗೆ ಕೊಟ್ಟು ಅದರ

ತುದಿಯಲ್ಲಿ ಮರವನ್ನು ಮೀಟು ಎಂದು ಹೇಳಿದನು. ಇನ್ನೊಂದು

ಕಟ್ಟಿಗೆಯಿಂದ ತಾನೂ ಅದನ್ನು ಮೀಟುತ್ತ ಬಂದನು. ಮರವು ಸುಲಭ

ವಾಗಿ ಉರುಳಿಕೊಂಡು ಹೋಯಿತು. ಆದರೆ ಆಗ ಉರುಳದೇ ಇದ್ದ

ಮರ ಈಗ ಉರುಳುವುದಕ್ಕೆ ಕಾರಣವೇನು? ಎಂದು ಕೇಳಲು, ಸುಮ

ತಿಯು--ಅದು ಈ ಕೋಲಿನ ತ್ರಾಣವೆಂದು ಹೇಳಿದನು. ಆ ಮಾತಿಗೆ

ದೊರೆಮಗನು--ಈ ಕಟ್ಟಿಗೆಗೆ ಇಷ್ಟು ತ್ರಾಣವಿದೆಯೆ? ಎಂದು

ಕೊಳ್ಳುತಾ, ಸುಮತಿಯ ಜೊತೆಯಲ್ಲಿ ಮರವನ್ನು ತಳ್ಳುತಾ ಹೋದನು.

ಥಟ್ಟನೆ ಕಟ್ಟಗೆ ಎರಡೂ ಮುರಿಯಿತು. ಅದನ್ನು ನೋಡಿ ಮದನನು

ಚಿಂತೆಯಿಲ್ಲ. ಕಟ್ಟಿಗೆ ತುದಿ ಸ್ವಲ್ಪ ಇದೆ, ಎಂದುಕೊಳ್ಳುತಾ, ಮುರಿದು

ಹೋದ ಮೊಳದುದ್ದ ಕಟ್ಟಿಗೆಯಲ್ಲಿ ದಿಮ್ಮಿಯನ್ನು ಮೀಟಿದ. ಅದು

ಉರುಳಲಿಲ್ಲ, ಯಾಕೆ ಉರುಳುವುದಿಲ್ಲವೆಂದು ಅವನು ಕೇಳಲು, 

ಸುಮತಿಯು--ಅದು ಈ ಸಣ್ಣ ಕೋಲಿಗೆ ಉರುಳುವುದಿಲ್ಲವೆಂದು 

-------------------------------------

೧೭೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ನಾನು ಆಗಲೇ ಹೇಳಿಬಿಡುತಿದ್ದೆ. ಆದರೆ ನೀನೇ ತಿಳಿದುಕೊಳ್ಳಲಿ:

ಎಂದು ಸುಮ್ಮನಾದೆ. ಕಟ್ಟಿಗೆಯು ಉದ್ದವಾಗಿದ್ದಷ್ಟೂ ಭಾರವನ್ನು

ಹೆಚ್ಚಾಗಿ ಎತ್ತುವುದು. ಆದರೆ ನಮ್ಮ ಕೈಗೆ ಅಡಗುವ ಹಾಗೆ ಇರಬೇಕು,

ಎಂದು ಹೇಳಿ ಬೇರೆ ಕಟ್ಟಿಗೆ ತರುವುದಕ್ಕೆ ಒಂದುಕಡೆಗೆ ಹೋದನು.


ಅಲ್ಲಿ ಒಂದು ಮರವನ್ನು ಇಬ್ಬರು ಆಳುಗಳು ನಿಂತು ಕಡಿಯು

ತಿದ್ದರು. ಮದನನಿಗೆ ಅದೂ ಒಂದು ಆಶ್ಚರ್ಯಕರವಾಗಿ ಕಂಡು

ಬಂತು. ಅವನು--ಇಂಥಾ ದೊಡ್ಡ ಮರವನ್ನು ಇವರು ಕಡಿದಾರೆ !

ಇವರಿಗೆ ಬುದ್ಧಿ ಇಲ್ಲ, ಎಂದನು. ಸುಮತಿಯು--ನಿನಗೆ ಹಾಗೆ ತೋರ

ಬಹುದು, ನನ್ನ ಜೊತೆಗೆ ಒಬ್ಬ ಆಳನ್ನು ಕೊಡು. ನಾನು ಅದನ್ನು

ಕಡಿದುಬಿಡುತೇನೆ ನೋಡು, ಎಂದನು; ತರುವಾಯ ಒಂದು ಚಮ್ಮಟಗೆ

ಯನ್ನು ತೆಗೆದುಕೊಂಡು ಸುಮ್ಮನೆ ಆ ಮರದಮೇಲೆ ಇಪ್ಪತ್ತು ಮುವ್ವತ್ತು

ಏಟುಗಳನ್ನು ಹೊಡೆದನು. ಅದು ಸ್ವಲ್ಪ ಜಜ್ಜಾಯಿತು. ಒಂದು ದಪ್ಪ

ಉಳಿಯನ್ನು ಅದರಮೇಲಿಟ್ಟು ಸ್ವಲ್ಪ ಹೊಡೆದನು. ಉಳಿಯ ಬಾಯಿ

ಸ್ವಲ್ಪ ಒಳಕ್ಕೆ ಹೋಯಿತು, ಸುಮತಿಯೂ, ಆಳೂ, ಇಬ್ಬರೂ ಚಮ್ಮಟಿಗೆ 

ಯಿಂದ ಉಳಿಯಮೇಲೆ ಹೊಡೆಯುತಾ ಬಂದರು, ಉಳಿ ಮರದ ಒಳಕ್ಕೆ

ಇಳಿದುಹೋಯಿತು. ಮತ್ತೊಂದು ಉಳಿಯನ್ನು ಅದರ ಮಗ್ಗುಲಲ್ಲಿ

ಇಟ್ಟು ಪುನಃ ಚಮ್ಮಟಗೆಯಿಂದ ಹೊಡೆದರು. ಮರ ಸೀಳಿಹೋಯಿತು.

ಈ ಪ್ರಕಾರ ಸುಮತಿಯು ಅದನ್ನು ಸೀಳಿದನು. ದಪ್ಪನಾಗಿರುವ ಒಂದು

ಸೀಳನ್ನು ಮನೆಗೆ ತೆಗೆದುಕೊಂಡು ಹೋಗೋಣವೆಂದು ಸುಮತಿಯು

ಹೇಳಿದನು. ಮದನ ಅದಕ್ಕೆ ಒಪ್ಪಲು, ಒಂದು ಕೋಲಿನ ಮಧ್ಯೆ ಹಗ್ಗ

ವನ್ನು ಕಟ್ಟ, ಆ ಹಗ್ಗಕ್ಕೆ ಈ ಸೀಳನ್ನು ಕಟ್ಟಿದರು. ಸುಮತಿ ಮದನ

ಇಬ್ಬರೂ-ಆ ಕೋಲನ್ನು ಹೆಗಲಮೇಲೆ ಹೊತ್ತುಕೊಂಡರು. ಮದನನು

ಆ ಹಗ್ಗಕ್ಕೆ ಹತ್ತಿರವಾಗಿ ಕೋಲನ್ನು ಹೆಗಲಮೇಲೆ ಹೇರಿಕೊಂಡನು.

ಸುಮತಿಯು ಇನ್ನೊಂದು ಕೊನೆಯಲ್ಲಿ ಹೊತ್ತುಕೊಂಡನು. ಮದನನಿಗೆ

ಭಾರ ಹೆಚ್ಚಾಯಿತು. ಆದರೆ ಸುಮತಿಯು ಲಕ್ಮ್ಯವಿಲ್ಲದೆ ಹೊತ್ತು

ಕೊಂಡು ಹೋಗುತಿರುವುದನ್ನು ಕಂಡು, ನಾಚಿಕೆಯಿಂದ ತಾನೂ

ಮಾತನಾಡದೆ ಸುಮ್ಮನೇ ಹೋದನು. ಜೋಯಿಸನು ಇವರಿಬ್ಬರನ್ನೂ 

--------------------------------------

೧೩) ಸುಮತಿ ಮದನಕುಮಾರರ ಚರಿತ್ರೆ ೧೭೭ 


ನೋಡಿ,-- ಮದನ, ಯಾರು ನಿನಗೆ ಇಷ್ಟೊಂದು ಭಾರವನ್ನು ಹೊರಿಸಿ

ದರು? ಎಂದನು. ಸುಮತಿ ಹೊರಿಸಿದನೆಂದು ಮದನ ಹೇಳಿದ

ಮಾತನ್ನು ಕೇಳಿ ಜೋಯಿಸನು-- ನಿನಗೆ ತಿಳಿಯದಂತೆ ಸುಮತಿಯು

ನಿನಗೆ ಮೋಸಮಾಡುವುದಕ್ಕೆ ಯತ್ನಿಸಿದ್ದು ಇದೇ ಮೊದಲು, ಎಂದು

ನುಡಿದನು. ಆ ಮಾತಿಗೆ ಸುಮತಿಯು-- ಗುರುಗಳೆ, ಮದನನಿಗೆ ಆಗಲೇ

ಭಾರವನ್ನು ಕಡಮೆಮಾಡುತಿದ್ದೆ. ಆದರೆ ಸನ್ನೆ ಮರವನ್ನು ನೋಡಿ

ಇವನಿಗೆ ಬಹು ಆಶ್ಚರ್ಯವಾಯಿತು. ಆದಕಾರಣ ಅದಕ್ಕೆ ಸಂಬಂಧ

ಪಟ್ಟ ಮತ್ತೊಂದು ಸಂಗತಿಯನ್ನು ತಿಳಿಸೋಣವೆಂದು ಹೀಗೆ ಹೊರಸಿ

ಕೊಂಡು ಬಂದೆ ಎಂದು ಹೇಳಿ, ತಾನು ಹೊತ್ತಿದ್ದಕಡೆ ಮದನನಿಗೆ

ಕೊಟ್ಟು, ಅವನಕಡೆ ತಾನು ಹೊತ್ತುಕೊಂಡು--ಮದನ, ಈಗ ಭಾರ

ಹೇಗಿದೆ? ಎಂದನು. ಮದನಕುಮಾರನು ಬೆರಗಾಗಿ--ನನಗೆ ಭಾರ

ಕಡಮೆಯಾಗಿದೆ, ಇದು ಹೇಗೆ ಆಯಿತು? ಎಂದನು. ಆಗ ಜೋಯಿ

ಸನು--ನೋಡು, ಮರದತುಂಡು ಮೊದಲಿಗಿಂತ ಈಗ ನಿನಗೆ ದೂರ

ವಾಗಿದೆ, ಸುಮತಿಗೆ ಹತ್ತಿರವಾಗಿದೆ. ಆದ್ದರಿಂದ ಭಾರವಾದಕಡೆ ಅವ

ನಿಗೆ ಹೋಯಿತು; ಹಗುರವಾದಕಡೆ ನಿನಗೆ ಬಂತು, ಎಂದನು. ಇದನ್ನು

ಕೇಳಿ, ಮದನನು ಆಹ! ಇದು ಚಮತ್ಕಾರವೇಸರಿ. ನಮಗೆ ತಿಳಿ

ಯದ ಸಂಗತಿ ಎಷ್ಟೋ ಇದೆ, ಎಂದುಕೊಂಡನು.


ತರುವಾಯ ಜೋಯಿಸನು ಮದನನನ್ನು ಅಂಗಡಿಗೆ ಕರೆದು

ಕೊಂಡು ಹೋಗಿ, ಒಂದು ತಕ್ಕಡಿಯನ್ನು ತೆಗೆದುಕೊಂಡು ಬಂದು

ಕಡ್ಡಿಯ ಮಧ್ಯಭಾಗಕ್ಕೆ ದಾರವನ್ನು ಕಟ್ಟ ಹಿಡಿದುಕೊಂಡನು. ಆಗ

ಎರಡುಕಡೆಗೂ ಸಮನಾದ ತೂಕವನ್ನು ಹಾಕಿದರೆ ಕಡ್ಡಿ ಹೀಗೆಯೇ

ನಿಂತುಕೊಳ್ಳುವುದು; ಆದರೆ ಆ ಕಡ್ಡಿಯ ಮಧ್ಯೆ ಕಟ್ಟಿರುವ ದಾರವನ್ನು

ಒಂದುಕಡೆಗೆ ಹೆಚ್ಚಾಗಿ ತಳ್ಳಿದರೆ ಏನಾಗುತ್ತೆ ನೋಡೋಣ, ಎಂದು

ಸ್ವಲ್ಪ ತಳ್ಳಲು ತಕ್ಕಡೀ ಕಡ್ಡಿಯು ಉದ್ದ ಹೆಚ್ಚಾಗಿದ್ದ ಕಡೆ ಕೆಳಕ್ಕೆ

ಬಂತು. ಪುನಃ ಜೋಯಿಸನು-- ಈಗ ನೋಡು, ತಕ್ಕಡಿ ಚಿಕ್ಕದಾದ

ಕಡೆ ಭಾರವನ್ನು ಹೆಚ್ಚಾಗಿ ಹಾಕಿದರೆ, ತೂಕ ಸರಿಯಾಗಿ ನಿಂತುಕೊಳ್ಳು

ವುದು ಎಂ ದು, ಆ ತಕ್ಕಡಿಯ ಸಣ್ಣ ತೋಳ ಕಡೆ ಭಾರವನ್ನು ಹೆಚ್ಚಿಸಿ

-------------------------------------

೧೭೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ದನು. ಉದ್ದವಾದ ಕಡೆ ಉದ್ದ ಎಷ್ಟು ಹೆಚ್ಚಾಗಿತ್ತೊ, ಗುತ್ತನಾದ

ಕಡೆ ಭಾರವನ್ನು ಅದಕ್ಕೆ ತಕ್ಕಂತೆ ಹೆಚ್ಚಿಸಲು, ತಕ್ಕಡಿಯು ನಿಂತು

ಕೊಂಡಿತು. ಇದನ್ನು ಕಂಡು ಮದನನು ಬೆರಗಾದನು.


ಆಮೇಲೆ ಜೋಯಿಸನು ತನ್ನ ಕಣಜದ ಹತ್ತಿರಕ್ಕೆ ಹೋಗಿ,

ಒಂದು ಚೀಲ ತುಂಬ ಬತ್ತವನ್ನ ತುಂಬಿ ಅದನ್ನು ಎತ್ತು ಎಂದು ಮದನ

ನಿಗೆ ಹೇಳಿದನು. ಮದನನು ಆ ಮಾತಿಗೆ ನಗುತ್ತಾ, ತನ್ನ ಕೈಲಾಗುವು

ದಿಲ್ಲವೆಂದು ಹೇಳಿದನು. ಆಗ ಉಪಾಧ್ಯಾಯನು ತೊಲೆಯ ನಾಗ

ವಾಸಕ್ಕೆ ಒಂದು ರಾಟೆಯನ್ನು ಕಟ್ಟಿ, ಬತ್ತದ ಚೀಲಕ್ಕೆ ಒಂದು ಹಗ್ಗದ

ಕೊನೆಯನ್ನು ಬಿಗಿದು, ಆ ಹೆಗ್ಗವನ್ನು ರಾಟೆಯಮೇಲಿನಿಂದ ತೆಗೆದು

ಕೊಂಡು, ಅದನ್ನು ಎಳೆಯುವಂತೆ ಮದನಿಗೆ ಹೇಳಿದನು. ಬತ್ತದ

ಚೀಲ ಮೇಲಕ್ಕೆ ಎದ್ದಿತು. ಆಗ ಮದನನು--ಇದೇನು ಸೋಜಿಗ!

ಆಗ ಎತ್ತುವುದಕ್ಕಾಗಲಿಲ್ಲ, ಈಗ ಎತ್ತುವುದಕ್ಟಾಯಿತು? ಎಂದು

ಹೇಳಲು, ಜೋಯಿಸನು--ದೊಡ್ಡವರು ಮಾಡತಕ್ಕ ಕೆಲಸವನ್ನು ಚಿಕ್ಕ

ವರು ಸಹಿತ ಮಾಡುವುದಕ್ಕೆ ಇದೂ ಒಂದು ಉಪಾಯ, ಎಂದನು.


ಮದನ--ವಿದ್ಯವನ್ನು ಕಲಿತುಕೊಳ್ಳುವುದು ಉತ್ತಮ. ಅದ

ರಿಂದ ನಮಗೆ ಬುದ್ಧಿಯು ಹೆಚ್ಚುವುದು. ದೇಹದ ಶಕ್ತಿಯೂ ಹೆಚ್ಚು

ವುದು. ಇಂಥಾ ಯುಕ್ತಿಗಳು ಇನ್ನೂ ಇವೆಯೆ?


ಜೋಯಿಸ-- ಬೇಕಾದಷ್ಟು ಇವೆ. ಮುಂದಕ್ಕೆ ಕಲಿತುಕೊಳ್ಳು

ವಂತೆ. ಮೊದಲು ಗಣಿತವನ್ನು ಕಲಿತುಕೊಂಡು ಬರವಣಿಗೆಯನ್ನು

ತಿಳಿದುಕೊ.


ಮದನ-- ಗಣಿತ ಎಂದರೇನು?


ಜೋಯಿಸ--ಅದು ಇಂಥಾದ್ದೆಂದು ಈಗ ಹೇಳುವುದಕ್ಕಾಗುವು

ದಿಲ್ಲ, ಈಗ ಅದರ ಸಂಗತಿಯನ್ನು ಸ್ವಲ್ಪ ತಿಳಿಸುತೇನೆ, ಆ ಗೋಡೆಯ

ಹತ್ತಿರ ಎಷ್ಟು ಬತ್ತದ ಕಾಳು ಬಿದ್ದಿದೆ, ಎಣಿಸು.


ಮದನ--ಇಪ್ಸತ್ತೈದು.


ಜೋಯಿಸ--ಆ ಚೀಲದ ಹತ್ತಿರ ಎಷ್ಟು ಕಾಳು ಬಿದ್ದಿದೆ?


ಮದನ--ಹದಿನಾಲ್ಕು. 

-------------------------------------

೧೩] ಸುಮತಿ ಮದನಕುಮಾರರ ಚರಿತ್ರೆ ೧೭೪


ಜೋಯಿಸ-- ಒಂದು ಗುಡ್ಡೆಯಲ್ಲಿ ಹದಿನಾಲ್ಕು, ಇನ್ನೊಂದು

ಗುಡ್ಡೆ ಯಲ್ಲಿ ಇಪ್ಪತ್ತೈದು, ಎರಡೂ ಸೇರಿ ಎಷ್ಟಾಯಿತು?


ಅದಕ್ಕೆ ಮದನ ಉತ್ತರವನ್ನ ಹೇಳಲಾರದೇ ಹೋದ. ಜೋಯಿ

ಸನು ಸುಮತಿಯ ಕಡೆಗೆ ತಿರುಗಲು, ಮುವ್ವತ್ತೊಂಭತ್ತಾಯಿತೆಂದು ಅವ

ಹೇಳಿದ.


ಜೋಯಿಸ--ಎರಡು ಗುಡ್ಡೆಯನ್ನು ಬೆರೆಸಿ ಬಿಡುತೇನೆ. . ಈಗ

ಕಾಳು ಎಷ್ಟಾ ಯಿತು ಎಣಿಸು.


ಮದನ— ಮುವ್ಚತ್ತೊಂಭತ್ತು.


ಜೋಯಿಸ--ಅದರಲ್ಲಿ ಹತ್ತೊಂಭತ್ತನ್ನು ನಾನು ತೆಗೆದು

ಕೊಂಡರೆ ಎಷ್ಟು ಉಳಿಯಿತು.


ಮದನ--ಎಣಿಸಬೇಕು.


ಜೋಯಿಸ--ಎಣಿಸದೇ ಹೇಳಲಾರೆಯ? ಸುಮತ್ತಿ ನೀನು

ಹೇಳು.


ಸುಮತಿ-- ಇಪ್ಪತ್ತು.


ಜೋಯಿಸ--ಈ ವಿಧವಾದ ಲೆಕ್ಕಾಚಾರವೇ ಗಣಿತ, ಆದರೆ

ಸುಲಭವಾಗಿ ಲೆಕ್ಕಾಮಾಡುವ ಮಾರ್ಗವಿದೆ, ಮಸಲ, ಈ ಚೀಲದಲ್ಲಿ

ಎಷ್ಟು ಬತ್ತದ ಕಾಳು ಇದೆ ಎಂದು ಕೇಳಿದಕ್ಕೆ ಎಂಟು ಹತ್ತು ದಿವಸ

ಕೂತು ಲೆಕ್ಕಾಮಾಡಿದರೂ ಆಗುವುದಿಲ್ಲ. ಆದರೆ ಗಣಿತ ಬಂದಿದ್ದರೆ

ಕಾಲುಗಳಿಗೆಯಲ್ಲಿ ಹೇಳಬಹುದು.


ಮದನ--ಇದೇನೋ ಅದ್ಭುತವಾಗಿದೆ. ನಂಬುವುದು ಕಷ್ಟ. 


ಜೋಯಿಸ--ಹಾಗಾದರೆ ಹೇಳುತೇನೆ, ಕೇಳು. ಈ ಚೀಲದಲ್ಲಿ

ಐವತ್ತು ಸೇರು ಬತ್ತವಿದೆ. ಸೇರಿಗೆ ಹದಿನಾರು ಚಟಾಕು. ಆದ್ದರಿಂದ

ಇದರಲ್ಲಿ ಎಂಟುನೂರು ಚಟಾಕು ಇದೆ. ಸೇರಿಗೆ ಎಂಭತ್ತು ರೂಪಾಯಿ

ತೂಕದ ಪ್ರಕಾರ, ಚಟಾಕಿಗೆ ಐದು ರೂಪಾಯಿ ತೂಕವಾಯಿತು.

ರೂಪಾಯಿ ತೂಕಕ್ಕೆ ಮೂವತ್ತು ಹಣತೂಕ ಅಥವಾ ನಾನೂರ

ಎಂಭತ್ತು ವೀಸತೂಕ, ಒಂದು ಕಾಳು ಒಂದು ವೀಸ ತೂಕವಿದೆ.

ಒಂದು ರೂಪಾಯಿ ತೂಕಕ್ಕೆ ನಾನೂರೆಂಭತ್ತು ಕಾಳಾಯಿತು. ಐದು 

------------------------------------

೧೮೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ರೂಪಾಯಿ ತೂಕಕ್ಕೆ ಎರಡು ಸಾವಿರದ ನಾನೂರು ಕಾಳಾಯಿತು. ಅದೇ

ಒಂದು ಚಟಾಕು. ಎರಡು ಸಾವಿರದ ನಾನೂರನ್ನು ಎಂಟುನೂರು

ಸಾರಿ ಗುಣಿಸಿದರೆ, ಬರುವಲೆಕ್ಕ ಈ ಚೀಲದಲ್ಲಿರುವ ಕಾಳಿನ ಲೆಕ್ಕ.


ಮದನ--ಜೋಯಿಸಕ್ಕೆ ಈ ಚಮತ್ಕಾರವನ್ನು ನನಗೆ ಹೇಳಿ

ಕೊಡಬೇಕು.


ಜೋಯಿಸ-ನಿನಗೆ ಬೇಕಾದ್ದನ್ನು ಹೇಳಿಕೊಡುತೇನೆ. ಇದು

ಹಾಗಿರಲಿ. ಒಂದು ಕಥೆಯನ್ನು ಹೇಳುತೇನೆ.


ಒಂದು ಊರಿನಲ್ಲಿ ಒಬ್ಬ ಅರಸು ಇದ್ದನು. ಇವನಿಗೆ ಕುದುರೆ

ಗಳಲ್ಲಿ ಬಹು ಪ್ರೀತಿ ಇತ್ತು. ಆವುಗಳಿಗೆ ಎಷ್ಟು ಕ್ರಯವನ್ನಾದರೂ

ಕೊಟ್ಟು ಕೊಂಡುಕೊಂಡು ಬಹು ಅಕ್ಕರೆಯಿಂದ ಸಾಕುತಿದ್ದನು. ಒಂದು

ದಿನ ಒಬ್ಬ ಅರಬ್ಬೀವರ್ತಕನು ಒಂದು ಅಶ್ವವನ್ನು ತಂದು ಅರಸನಿಗೆತೋ

ರಿಸಿದನು. ಈ ಕುದುರೆಯು ಸಲಕ್ಷಣವಾಗಿತ್ತು. ಸುಳಿ ಮೊದಲಾದ್ದೆಲ್ಲಾ

ಸರಿಯಾಗಿತ್ತು. ಹೀಗೆ ನೋಟಕ್ಕೆ ಸುಂದರವಾಗಿರಲು ದೊರೆಯು

ಅದರ ಮೇಲೆ ಏರಿಕೊಂಡು ಸ್ವಲ್ಪ ದೂರ ಓಡಾಡಿಸಿದನು.ಅದು ನಡಗೆ

ಯಲ್ಲಿಯೂ ಬಹು ಸೌಮ್ಯವಾಗಿತ್ತು. ಮತ್ತು ಸವಾರನು ಮಾಡಿದ

ಹಾಗೆಲ್ಲಾ ಸಂಜ್ಞೆಯನ್ನು ತಿಳಿದುಕೊಂಡು ಹೋಗುತಿತ್ತು. ಅರಸನಿಗೆ

ಇದನ್ನು ಕಂಡು ಬಹು ಸಂತೋಷವಾಯಿತು. ಅದರ ಕ್ರಯವೆಷ್ಟೆಂದು

ಅರಬ್ಬೀ ವರ್ತಕನನ್ನು ಕೇಳಲು ಅವನು-ಇದಕ್ಕೆ ಒಂದು ಸಾವಿರ

ವರಹವನ್ನು ಕೊಡಬೇಕೆಂದು ಹೇಳಿದನು. ಈ ಕ್ರಯ ಹೆಚ್ಚೆಂದು

ದೊರೆ ಹೇಳಲು, ಅರಬ್ಬರವನು ಕುದುರೆಯನ್ನು ತೆಗೆದುಕೊಂಡು

ಹೊರಟುಹೋಗುತಿದ್ದನು. ಅದರಮೇಲೆ ವಿಶೇಷ ಮನಸ್ಸಿದ್ದ ದೊರೆಯು

ಅವನನ್ನು ಹಿಂತಿರುಗಿ ಕರೆಯಿಸಿ, ಅದರ ಕ್ರಯವನ್ನು ಸಲುವಳಿಯಾಗಿ

ಮಾಡಿಕೊಳ್ಳುವುದಕ್ಕೆ ಮತ್ತೇನೂ ಮಾರ್ಗವಿಲ್ಲವೆ? ಎಂದು ಕೇಳ

ಲಾಗಿ, ಆ ಕುದುರೇ ಸಾಹುಕಾರನು--ಮಹಾಸ್ಟಾಮಿ, ನಾನು ಹೇಳಿದ

ಸಾವಿರ ವರಹಕ್ಕೆ ಒಂದು ಕಾಸು ಕಡಮೆಯಾದರೂ, ನಾನು ತೆಗೆದು

ಕೊಳ್ಳುವುದಿಲ್ಲ. ಅದು ಹಾಗಿರಲಿ. ನಾನು ಇನ್ನೊಂದು ಮಾತನ್ನು

ಹೇಳುತೇನೆ, ಲಾಲಿಸಬೇಕು. ಆ ಕುದುರೇ ಕಾಲಿನ ಲಾಳಕ್ಕೆ ಎಷ್ಟು 

------------------------------------

03] ಸುಮತಿ ಮದನಕುಮಾರೆರ ಚರಿತ್ರೆ ೧೮೧ 


ಮೊಳೆ ಹಾಕಿದೆಯೋ ಅಷ್ಟರಲ್ಲಿ ಒಂದನೇ ಮೊಳೆಗೆ ಒಂದು ಕಾಸನ್ನೂ, 

ಎರಡನೇ ಮೊಳೆಗೆ ಎರಡು ಕಾಸನ್ನೂ, ಮೂರನೇ ಮೊಳೆಗೆ ನಾಲ್ಕು

ಕಾಸನ್ನೂ, ನಾಲ್ಕನೇ ಮೊಳೆಗೆ ಎಂಟು ಕಾಸನ್ನೂ, ಐದನೇ ಮೊಳೆಗೆ

ಹದಿನಾರು ಕಾಸನ್ನೂ ಈ ಪ್ರಕಾರ ದ್ವಿಗುಣೋತ್ತ್ರರ ವೃದ್ಧಿಯಾಗಿ ನನಗೆ

ಅಪ್ಪಣೆಯಾಗಲಿ, ನಾನು ಕುದುರೆಯನ್ನು ತಮಗೆ ಒಪ್ಪಿಸುತೇನೆ, ಎಂದು

ಹೇಳಿದನು.


ಇದಕ್ಕೆ ದೊರೆಯು-- ಈ ವರ್ತಕ ಏನೂ ತಿಳಿದವನಲ್ಲ. ಮೊಳೆಗೆ

ಒಂದು ಕಾಸಿನ ಪ್ರಕಾರ ಕೇಳುತಾನೆ. ಮೊಳೆಯ ಲೆಕ್ಕ ಎಷ್ಟುತಾನೆ

ಆದೀತು? ಇದರಿಂದ ನಮಗೆ ಆದಾಯವಾಗುವುದೂ ಕುದುರೆಯವನಿಗೆ

ನಷ್ಟ ವಾಗುವುದೂ ಖಂಡಿತ, ಎಂದು ಯೋಚಿಸಿ, ಕುದುರೇ ಸಾಹು.

ಕಾರನ ಮೊಳೆ ಲೆಕ್ಕದ ಬೆಲೆಗೆ ಒಪ್ಪಿಕೊಂಡನು, ಆ ಹಣವನ್ನು ಲೆಕ್ಕಾ  

ಮಾಡಿ ಕೊಡಬೇಕಾಯಿತು. ಈ ಮಧ್ಯೆ ಅರಬ್ಬರವನು--ಮಹಾ

ಸ್ವಾಮಿ, ಈ ಲೆಕ್ಕದ ಪ್ರಕಾರ ತಾವು ನನಗೆ ಕೊಡಲೇಬೇಕೆಂದು ಹೇಳುವು

ದಿಲ್ಲ. ನಾನು ಮೊದಲು ಕೇಳಿದ ಸಾವಿರವರಹ ಅಪ್ಪಣೆಯಾದರೆ ಸಾಕಾ

ಗಿದೆ ಎಂದನು, ಆಗ ಅರಸು. ಏನಯ್ಯ, ಮಾತು ಒಂದೊ, ಎರಡೊ?

ಕಡಮೆ ಕ್ರಯಕ್ಕೆ ಕೊಡುತೇನೆಂದು ಒಪ್ಪಿ, ಈಗ ಮೊದಲು ಕೇಳಿದ

ಸಾವಿರ ವರಹವನ್ನೇ ಕೊಡೆಂದು ಹೇಳುತೀಯೆ. ಇದು ನ್ಯಾಯವಲ್ಲ

ಎಂದನು. ತಾವು ನನಗೆ ಈ ಎರಡರಲ್ಲಿ ಯಾವ ಕ್ರಯವನ್ನು ಕೊಡಿಸಿ

ದಾಗ್ಯೂ ಸರಿಯೆ, ಎಂದು ಕುದುರೆಸಾಹುಕಾರ ಹೇಳಲಾಗಿ, ರಾಜನು

ರಾಯಸದವರನ್ನು ಕರೆಯಿಸಿ, ಮೊಳೇಲೆಕ್ಕದ ಪ್ರಕಾರ ಕೊಡಬೇಕಾದ

ಹಣವನ್ನು ಲೆಕ್ಕಾಮಾಡುವಂತೆ ಹೇಳಿದನು. ರಾಯಸದವರು ಲೆಕ್ಕಾ  

ಚಾರ ಮಾಡಿ--ಕುದುರೇ ನಾಲ್ಕು ಕಾಲಿನಲ್ಲಿಯೂ ಇರುವ ಒಟ್ಟು ೨೪

ಮೊಳೆಗೆ ೩,೦೦೦ ವರಹದ ವರೆಗೆ ಆಗುತ್ತೆ; ಒಂದು ಕುದುರೆಗೆ

ಇಷ್ಟೊಂದು ಹಣವನ್ನು ಕೊಟ್ಟವರುಂಟೆ? ಎಂದು ಹೇಳಿದರು. ಆಗ

ದೊರೆಯು ಗಾಬರಿಯಾಗಿ, ಲೆಕ್ಕಾಚಾರ ತನಗ್ಗೆತಿಳಿಯದೇ ಇದ್ದದಕ್ಕಾಗಿ

ನಾಚಿಕೊಂಡು, ಅರಬ್ಬರವನಿಗೆ ಅವ ಮೊದಲು ಕೇಳಿದಂತೆ ೧,೦೦೦

ವರಹವನ್ನು ಕೊಟ್ಟು ಕುದುರೆಯನ್ನು ಕೊಂಡುಕೊಂಡನು. ,

...

 


ಭಾಗ-೨

೧೪ ನೆ ಅಧ್ಯಾಯ


ಆಗ ಸುಮತಿಯು ಕಥೆಯನ್ನು ಹೇಳಲು ಮೊದಲು ಮಾಡಿದ್ದು

ಹೇಗೆಂದರೆ:--


ಈಗ್ಗೆ ಅನೇಕ ವರುಷಗಳಿಗೆ ಮುಂಚೆ, ಸುರಪುರ ಪ್ರಾಂತ್ಯದಲ್ಲಿ

ಬೇಡರು ವಿಶೇಷವಾಗಿದ್ದರು. ಅವರಲ್ಲಿ ಧೀರನಾಯಕನೆಂಬುವನು

ಮುಖಂಡ. ಕೋಟೆ ಕೊತ್ತಳಗಳನ್ನು ಕಟ್ಟಿಕೊಂಡು, ಯಾವ ಶತ್ರು

ಬಂದರೂ ಹೊಡೆದು ಅಟ್ಟುತ್ತಾ ಇವನು ಬಹು ಪರಾಕ್ರಮಿಯಾ

ಗಿದ್ದನು. ಈ ಬೇಡರು ಅಂಗಪುಷ್ಟಿಯಾಗುವಂತೆ ಸಾಧಕಗಳನ್ನು

ಮಾಡುವುದೂ, ಕಷ್ಟಕ್ಕೆ ನುರುಗುವುದೂ, ಎಂಥಾ ಬಾಥೆ ಬಂದಾಗ್ಗೂ 

ಸಹಿಸಿಕೊಳ್ಳುವುದೂ, ಇಂಥಾ ಕೆಲಸಗಳಲ್ಲಿ ವಿಶೇಷ ಆಸಕ್ತಿಯುಳ್ಳವ

ರಾಗಿದ್ದರು. ಇವರಲ್ಲಿ ಇದೇ ಹುಡುಗರಿಗೆ ವಿದ್ಯಾಭ್ಯಾಸ. ದೊರೆ

ಮಕ್ಕಳಾದರೂ ಸರಿಯೆ, ಬಡವರ ಮಕ್ಕಳಾದರೂ ಸರಿಯೆ, ಪಕ್ಷಪಾತ

ವೇನೂ ಇರಲಿಲ್ಲ. ಎಲ್ಲರೂ ಏಕರೀತಿಯಾಗಿ ಕಷ್ಟಪಟ್ಟು ಸಮಯದಲ್ಲಿ

ಯಾವ ಕೆಲಸಕ್ಕಾದರೂ ಸಿದ್ಧವಾಗಿರುತಿದ್ದರು.


ಹೀಗಿರುವಲ್ಲಿ ತುರುಕರು ಈ ದಕ್ಷಿಣ ದೇಶಕ್ಕೆ ಆಗಾಗ್ಯೆ ಬಂದು,

ಕೊಳ್ಳೇ ಹೊಡೆದು, ಜನರನ್ನು ಕೊಂದು, ರಾಜ್ಯವನ್ನು ಹಾಳುಮಾಡಿ

ಹೋಗುತಿದ್ದರು. ಇವರ ಹಾವಳಿಯಲ್ಲಿ ಅನೇಕ ಸಂಸ್ಥಾನಗಳು

ಹೋದವು. ದೊಡ್ಡ ದೊಡ್ಡ ಪಟ್ಟಣಗಳೆಲ್ಲಾ ಹಾಳೂರುಗಳಾದವು.

ಇಂಥಾ ತುಂಟ ತುರುಕರನ್ನ್ನು ಎದುರಿಸುವುದಕ್ಕೆ ಈ ಬೇಡರು ಹೊರತು

ಮತ್ತೆಯಾರೂ ಇರಲಿಲ್ಲ. ಧೀರನಾಯಕನು ತನ್ನ ಜನರನ್ನು ಕರೆದು

ಕೊಂಡು ಹೋಗಿ, ಸಿಕ್ಕಿದ ಕಡೆ ತುರುಕರನ್ನು ಹೊಡೆದು ಓಡಿಸುತಾ

ಇದ್ದನು. ಈ ಬೇಡರು ಹಗಲು ಅನ್ನನಿಲ್ಲದೆ ಒಣಕಲು ರೊಟ್ಟಿಯನ್ನು

ಕಡಿಯುತಾ, ರಾತ್ರೆ ಮಲಗುವುದಕ್ಕೆ ಸ್ಥಳವಿಲ್ಲದೆ ಕಾಡಿನಲ್ಲಿ ಗಿಡದ

ಕೆಳಗೂ, ಬೇಲಿಯ ಕೆಳಗೂ, ಬಿದ್ದುಕೊಂಡಿರುತಾ, ಅತ್ಯಂತ ಶ್ರಮ

ಪಟ್ಟು ತುರುಕರನ್ನು ಅಡಗಮೆಟ್ಟಿ ದರು. ಕೊನೆಗೆ ಒಂದು ಸಮಯ

-----------------------------------

೧೮೬ ಸುಮತಿ ಮದನಕುಮಾರರ ಚಂತ್ರೆ [ಅಧ್ಯಾಯ 


ದಲ್ಲಿ ಈ ಎರಡು ಸೇನೆಗೂ ಕೈಗೂಡುವ ಸಂದರ್ಭ ಸಿಕ್ಕಿತು. ಕೊಂಬಿನ

ಕೂಗಿನ ದೂರದಲ್ಲಿ ಎರಡು ದಂಡೂ ಪಾಳಯವನ್ನು ಹಾಕಿ ಇಳಿದು

ಕೊಂಡಿತು. ತುರುಕರ ಕಡೆ ದಂಡು ಮುವ್ವತ್ತು ಸಾವಿರದ ಮೇಲಿತ್ತು.

ಧೀರನಾಯಕನ ಕಡೆಯವರೆಲ್ಲರನ್ನೂ ಸೇರಿಸಿ ಎಣಿಸಿದರೂ ಇನ್ನೂರು

ಕುದುರೆ, ಸಾವಿರ ಕಾಲಾಳು, ಇದರ ಮೇಲೆ ಆಗುತಿರಲಿಲ್ಲ. ಆದಾಗ್ಯೂ

ಬೇಡರ ಮುಂದೆ ಮುಸಲ್ಮಾನರು ಹಾಯುವುದು ಕಷ್ಟವಾಗಿತ್ತು. 


ಆಗ ಮುಸಲ್ಮಾನರ ಸೇನಾಸತಿಯಾದ ಜಲಾಲುದೀನನು ತನ್ನ

ಮನಸ್ಸಿನಲ್ಲಿ ಯುದ್ಧ ಮೊದಲಾಗುವುದಕ್ಕೆ ಮುಂಚೆ ಯೋಚಿಸಿಕೊಂಡು,

ಯುದ್ಧವಾಗುವುದಕ್ಕೆ ಮುನ್ನಾದಿನ ಸಾಯಂಕಾಲ ಉತ್ತಮವಾದ

ಅಡಿಗೆಯನ್ನು ಬೇಕಾದಷ್ಟು ಮಾಡಿಸಿ, ಆ ರುಚಿರುಚಿಯಾದ ಪದಾರ್ಥ

ಗಳನ್ನೂ ಮೆತ್ತಗಿರುವ ಸಾವಿರಾರು ಹಾಸಿಗೆಗಳನ್ನೂ ಹೊದಿಕೆಗಳನ್ನೂ

ಶತ್ರುಸೇನೆಗೆ ಕಳುಹಿಸಿ, ಆ ಬೇಡರ ಒಬ್ಬೊಬ್ಬ ಭಟನಿಗೂ ಪದಾರ್ಥ

ಗಳನ್ನು ಬಡಿಸಿ, ತಲೆಗೆ ಒಂದು ಹಾಸಿಗೇ ಪ್ರಕಾರ ಕೊಡುವಂತೆ

ಏರ್ಪಾಡು ಮಾಡಿಸಿದನು. ಒಂದೆರಡು ದಿವಸ ಹೀಗೆ ಚೊಕ್ಕ ಭೋಜನ

ವಾಯಿತು. ಮೆತ್ತಗಿರುವ ಹಾಸಿಗೆ ಸಿಕ್ಕಿದ್ದರಿಂದ ನಿದ್ರೆಯು ಚೆನ್ನಾಗಿ

ಬಂತು. ತರುವಾಯ ಬೇಡರ ಸೇನೆಯಲ್ಲಿ ಕೆಲವರು ತಪ್ಪಿಸಿಕೊಂಡು

ಓಡಿಹೋದರು. ಇನ್ನು ಕೆಲವರಿಗೆ ಆಲಸ್ಯ ಉಂಟಾಯಿತು. ಈ ಒಡ

ಕನ್ನು ತಿಳಿದು ಜಲಾಲುದೀನನು ತಾನು ಮಾಡಿದ ತಂತ್ರ ಸಾಗಿತಲ್ಲಾ,

ಎಂದು ಸಂತೋಷದಿಂದ ಶತ್ರುಗಳಿಗೆ ಯುದ್ಧ ಕೊಡುವುದಕ್ಕೆ ಅನು

ವಾದನು. ಧೀರನಾಯಕನು ಸೇನೆಯನ್ನು ಸಜ್ಜುಮಾಡಿಕೊಳ್ಳಬೇಕೆಂದು

ಹೊರಡುವಾಗ, ಅನೇಕರು ಬರದೇ ಹೋದರು. ಆಶ್ಚರ್ಯದಿಂದ

ಇದಕ್ಕೆ ಕಾರಣವೇನೆಂದು ಯೋಚಿಸಲು, ಉತ್ತಮವಾದ ತಿಂಡಿಯನ್ನೂ,

ಹಾಸಿಗೆಯನ್ನೂ ಜಲಾಲುದೀನನು ತನ್ನ ಸೇನೆಯವರಿಗೆಲ್ಲಾ ಮೂರು

ದಿನದಿಂದ ಹವಣಿಸಿಕೊಡುತಿದ್ದ ಸಂಗತಿ ತಿಳಿಯಬಂತು. ಆಗ ಬೇಡರ

ಸೇನಾಪತಿಯು--ಓಹೊ! ಮೋಸವಾಯಿತು. ವಿಶೇಷವಾಗಿ ಕಷ್ಟಪಟ್ಟು

ನುರುಗಿದ್ದ ಕಾರಣ ನಮ್ಮ ಜನರು ಶ್ರಮಕ್ಕೆ ಹೆದರದೆ ಪರಾಕ್ರಮ

ದಿಂದ ಹಗೆಗಳ ಮೇಲೆ ಬಿದ್ದು ಅವರನ್ನು ಸೋಲಿಸುತಿದ್ದರು. ಆದ್ದ 

--------------------------------------

೧೪] ಸುಮತಿ ಮದನಕುಮಾರರ ಚರಿತ್ರೆ ೧೮೩ 


ರಿಂದಲೇ ನಾವು ನೂರಾರು ಜನವಿದ್ದರೂ ಹತ್ತಿಪ್ಪತ್ತು ಸಾವಿರ ತುರುಕ

ರನ್ನು ಹೊಡೆದು ಓಡಿಸುತ್ತಿದ್ದೆವು. ತುರುಕರ ಸೇನೆಯು ಸೌಖ್ಯಾಪೇಕ್ಷೆ

ಯನ್ನು ಪಟ್ಟು, ಆನಂದವಾಗುತಿದ್ದ ಕಾರಣ, ಅವರಲ್ಲಿ ಹೇಡಿತನ

ಹೆಚ್ಚಾಗಿ, ಅವರು ಸೋತುಹೋಗುತಿದ್ದರು. ಜಲಾಲುದೀನನು ಈ

ಗುಟ್ಟನ್ನು ಅರಿತು ನಮ್ಮವರು ದೇಹ ಸೌಖ್ಯದ ರುಚಿಯನ್ನು ನೋಡು

ವಂತೆ ಮಾಡಿದಕಾರಣ ನಮ್ಮ ಸೇನೆಗೆ ಹೇಡಿತನ ಬಂತು ಎಂದು

ವ್ಯಸನಪಟ್ಟು, ಒಂದು ದಿನ ರಾತ್ರೆ ತನ್ನವರನ್ನು ಕುರಿತು--ನಮ್ಮ

ದೇಶಕ್ಕೋಸ್ಟರ ಪ್ರಾಣವನ್ನು ಒಪ್ಪಿಸತಕ್ಕಂಥಾ ಶೂರರು ಎಷ್ಟು ಜನ

ವಿದ್ದೀರಿ, ಅವರೆಲ್ಲಾ , ನನ್ನ ಸಂಗಡ ಹೊರಡಿ, ಎಂದನು, ಆಗ

ಮುನ್ನೂರು ಜನದಮಟ್ಟಿಗೆ ಆಯುಧಪಾಣಿಗಳಾಗಿ ಹೊರಟರು, ಅವ

ರನ್ನು ಕರೆದುಕೊಂಡು, ಸದ್ದು ಇಲ್ಲದಹಾಗೆ ಧೀರನಾಯಕನು ಶತ್ರು

ಸೇನೆಗೆ ನುಗ್ಗಿದನು. ತುರುಕರೆಲ್ಲರೂ ಬೇಕಾದ ತಿಂಡಿಯನ್ನು ತಿಂದು

ಆನಂದವಾಗಿದ್ದರು. ಈ ಮುನ್ನೂರು ಜನ ಬೇಡರೂ ತುರುಕರೆಲ್ಲರನ್ನೂ

ಛಿದ್ರಗಡಿತ ಕಡಿದರು, ಅನೇಕ ಜನ ತುರುಕರು ನಾಶವಾದರು. ಉಳಿ

ದವರು ಬೇಡರಮುಂದೆ ನಿಲ್ಲಲಾರದೆ ಓಡಿಹೋದರು. ಧೀರನಾಯಕ

ನಿಗೆ ಜಯವಾಯಿತು. ಆದರೆ ಜಲಾಲುದೀನನು ಮಾಡಿದ ಉಪಾಯ

ದಿಂದ ಇವನಿಗೆ ಕಷ್ಟ ಹೆಚ್ಚಾಯಿತು. ಹೀಗೆ ಸುಖವಾಗಿರತಕ್ಕ ಜನ

ಗಳು ಹೇಡಿಗಳಾಗುತಾರೆ, ಕಷ್ಟಪಡತಕ್ಕವರು ವೀರರಾಗಿ ಸಮಯ

ದಲ್ಲಿ ಗೆಲುತಾರೆ.


ಈ ರೀತಿಯಲ್ಲಿ ಕಥೆ ಮುಗಿಯಿತು.


ಆಗ ರಾಮಜೋಯಿಸನು-- ಮದನ, ತಳಕುಪಳಕಾಗಿ ಡಂಭ

ವಾಗಿರುವ ಉಡುಪನ್ನು ಹಾಕಿಕೊಂಡು ತಿರುಗುವ ಸಿಪಾಯಿಗಳ

ಹಣೇಬರವನ್ನು ನೋಡಿದೆಯ? ಈ ಮೇಲಿನ ಡಂಭದಿಂದ ಉಪ

ಯೋಗವಿಲ್ಲ. ಮುಖ್ಯವಾಗಿ ಬೇಕಾದ್ದು, ಧೈರ್ಯ, ಕಷ್ಟಬಂದರೆ ಸಹಿಸುವ

ಶಕ್ತಿ. ಇವೆರಡೂ ಇಲ್ಲದಿದ್ದರೆ ವೀರಭಟರ ಬಾಳು ಬಾಳೇ ಅಲ್ಲ. ಅದು

ಹಾಗಿರಲಿ. ಸಿಪಾಯಿಗಳಾಗಿ ಒಳ್ಳೇ ಉಡುಗೆಯನ್ನು ಹಾಕಿಕೊಂಡು

ತಿರುಗುವುದು ಉತ್ತಮವಾದ್ದೆಂದು ನೀನು ತಿಳಿದುಕೊಂಡಿದ್ದೀಯೆ. 

--------------------------------------

೧೮೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಅವರು ಪಡುವ ಕಷ್ಟವನ್ನು ನೀನು ಅರಿಯೆ. ಈ ದಂಡಿನ ಜನರು

ಹೊಟ್ಟೆಗೆ ಅನ್ನ ವಿಲ್ಲದೆ, ಕಣ್ಣಿಗೆ ನಿದ್ರೆ ಇಲ್ಲದೆ, ಮಳೆಯಲ್ಲಿ ನನೆದು,

ಬಿಸಿಲಿನಲ್ಲಿ ಸೀದು, ಗಾಳೀಬಡಿತವನ್ನುತಿಂದು, ಬೆಟ್ಟದಮೇಲಕ್ಕೆ

ಹತ್ತುತಾ, ಹಳ್ಳಕ್ಕೆ ಇಳಿಯುತಾ, ನದಿಗಳನ್ನೂ ಕೆರೆಗಳನ್ನೂ ಹಾದು

ಹೋಗುತಾ ಸಿಕ್ಕಿದಕಡೆ ಕೆಟ್ಟನೀರನ್ನು ಕುಡಿದು ಕೆಟ್ಟ ಆಹಾರವನ್ನೂ

ಸೊಪ್ಪುಸೆದೆಗಳನ್ನೂ ತಿನ್ನುತಾ, ಅದರಿಂದ ಉಂಟಾಗುವ ರೋಗ

ಗಳನ್ನು ಅನುಭವಿಸಿ ನರಳುತಾ, ಕೆಲವರು ಅದರಲ್ಲಿ ಸಾಯುತಾ,

ಮತ್ತೆ ಕೆಲವರು ಇದ್ದರೂ ಸತ್ತಹಾಗೆ ಶಕ್ತಿಹೀನರಾಗುತ್ತಾ ಸಂಕಟ

ಪಡುವರು. ಮತ್ತು ಯುದ್ಧಕ್ಕೆ ಹೋದರೆ ಕೈಹೋದರೂ ಹೋಯಿತು,

ಕಾಲುಹೋದರೂ ಹೋಯಿತು, ಪ್ರಾಣಹೋದರೂ ಹೋಯಿತು.

ಯುದ್ಧರಂಗದಲ್ಲಿ ಕುಟಕುಜೀವಹತ್ತಿ ನರಳುತಾ ಬಿದ್ದಿದ್ದಾಗ್ಗೂ ಹೆಣ

ವೆಂದು ಆಚೆಗೆ ಎಳೆದುಹಾಕುವರು. ಒಂದು ಸಮಯದಲ್ಲಿ ಶತ್ರುಗಳ

ಕತ್ತಿಗೆ ನಮ್ಮ ಕುತ್ತಿಗೆ ಗುರಿಯಾಗುವದು; ಮತ್ತೊಂದು ಕಾಲದಲ್ಲಿ

ನಮ್ಮ ಕಡೆಯವರೇ ನಮ್ಮನ್ನು ಕಡಿದುಹಾಕುವರು. ನಾವು ಸತ್ತಮೇಲೆ

ನಮ್ಮ ಹೆಂಡಿರು ಮಕ್ಕಳಿಗೆ ಯಾರೂ ಗತಿ ಇಲ್ಲದೆ, ಅವರು ತಿರುಪೆಗೆ

ಅಧಿಕಾರಿಗಳಾಗುವರು. ಶತ್ರುಗಳು ನಮ್ಮನ್ನು ಕೈಸೆರೆಹಿಡಿದರೆ, ಅನೇಕ

ವರುಷಗಳು ಸೆರೆಮನೆಯಲ್ಲಿ ಬಿದ್ದು ಸಾಯಬಜಬೇಕಾಗುವುದು. ದಂಡಿನ

ಜನರಿಗೆ ಇರುವ ಸುಖ ಈಗ ತಿಳಿಯಿತೆ? ಹೀಗೆಂದು ರಾಮಜೋಯಿಸ

ಹೇಳಿದನು. 


ಸಮತಿ-- ಅನ್ಯದೇಶದ ಶತ್ರುಗಳ ಬಾಧೆಯನ್ನು ತಪ್ಪಿಸುವುದ

ಕ್ಕಾಗಿ ಕಾದುಕೊಂಡಿರುವ ದಂಡಿನವರು ಎಷ್ಟು ಕಷ್ಟಕ್ಕೆ ಗುರಿಯಾ

ಗಿದಾರೆ! ಇಂಥಾ ಕಷ್ಪಜೀವಿಗಳನ್ನು ಸರ್ಕಾರದವರು ಕಾಪಾಡಬೇಕು. 


ಜೋಯಿಸ--ನೀನು ಹೇಳುವುದು ಸರಿಯೆ. ಆದರೆ ಆ ಪ್ರಾಣಿ

ಗಳಿಗೆ ಅಂಥಾ ಕಷ್ಟವನ್ನು ಯಾಕೆ ಕೊಡಬೇಕು. ಅವಿವೇಕದಿಂದ

ದುಡುಕಿ, ಮನಸ್ಸು ಬಂದಹಾಗೆ ರೇಗಿಕೊಂಡು, ನಿಷ್ಕಾರಣವಾಗಿ

ಯುದ್ಧವನ್ನು ಮಾಡಿ, ಸೋತರೆ ಈ ಸಿಪಾಯಿಗಳು ಕೆಟ್ಟವರು ಹೇಡಿ

ಗಳು ಸೋತುಹೋದರೆಂತಲೂ ಗೆದ್ದರೆ ತಮ್ಮ ಚಮತ್ಕಾರದಿಂದ ಗೆದ್ದೆ 

---------------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೮೯ 


ವೆಂತಲೂ; ಕೊಚ್ಚಿ ಕೊಂಡು, ಈ ಬಡಜೀವಿಗಳನ್ನು ಶತ್ರುಗಳ

ಬಾಯಿಗೆ ಬಲಿ ಒಪ್ಪಿಸುತಾರಲ್ಲಾ !. ಅಂಥಾ ನೀಚರಿಗೆ ಏನ

ಹೇಳೋಣ !


ಸುಮತಿ--ಯುದ್ಧ ಎನ್ನುವುದೇ ಕೆಟ್ಟದು, ಮತ್ತೊಬ್ಬ ನಿರಪ

ರಾಧಿಯಾದ ಪ್ರಾಣಿಯನ್ನು ಕೊಲ್ಲುವುದೇ ಅದರ ಮುಖ್ಯ ಉದ್ದೇಶ

ವಾದುದರಿಂದ ಯುದ್ಧ ಎನ್ನುವುದರಲ್ಲಿ ಅನ್ಯಾಯವೇ ಹೊರತು

ನ್ಯಾಯವಿಲ್ಲವೇ ಇಲ್ಲ. ಇಂಥಾ ದುಷ್ಕಾರ್ಯದಲ್ಲಿ ಉದ್ಯುಕ್ತರಾಗಿರುವ

ಸಿಪಾಯಿಗಳಿಗೆ ಮರಣಸಂಭವಿಸಿದರೆ, ಅದು ಅವರ ತಪ್ಪೇ ಅಲ್ಲದೆ

ಬೇರೆ ಉಂಟೆ?


ಜೋಯಿಸ-- ಈ ಭಟರು ತಾವಾಗಿ ಕೇಡನ್ನು ತಂದುಕೊಂಡರೆ

ತಪ್ಪು ಅವರದೇ ಹವುದು. ಆದರೆ ಯಾವ ಸರ್ಕಾರದವರಿಗೋಸ್ಕರ

ಇವರು ತಮ್ಮ ತಲೆಯನ್ನು ಒಪ್ಪಿಸುತಾರೆಯೋ ಅಂಥಾವರು ಆ ಬಡ

ಜನರ ಕ್ಷೇಮವನ್ನು ನೋಡಿಕೊಳ್ಳದೇಹೋದರೆ, ಸಿಪಾಯಿಗಳು

ಪೇಚಾಡಬೇಕಾದ್ದು ಸರಿಯಲ್ಲವೇ?


ಸುಮತಿ--ಯಾರಿಗೋಸ್ಕರ ಯುದ್ಧ ಜರುಗುವುದೋ ಅಂಥಾ

ವರೇ ಹೋಗಿ ಶತ್ರುಗಳ ಸಂಗಡ ಜಗಳವಾಡತಕ್ಕದ್ದು ಯುಕ್ತವಾಗಿದೆ.


ಜೋಯಿಸ. ಪೂರ್ವದಲ್ಲಿ ಪಾಂಡವಾದಿಗಳೆಲ್ಲಾ ಹಾಗೆಯೇ

ಮಾಡಿದರು. ಚಿಕ್ಕ ಹುಡುಗರು ಸಹಿತವಾಗಿ ಪರಾಕ್ರಮಿಗಳಾಗಿದ್ದರು.

ಅಭಿಮನ್ಯುವಿನ ಕಥೆಯನ್ನು ಕೇಳಿಲ್ಲವೆ?


ಸುಮತಿ-- ಜೋಯಿಸರೆ, ಆ ಕಥೆ ಬಹು ಚೆನ್ನಾಗಿದೆ. ಮದನ

ಕೇಳಲಿ ಅದನ್ನು ಅಪ್ಪಣೆ ಕೊಡಿಸಬೇಕು.

...

೧೫ ನೆ ಅಧ್ಯಾಯ


ಆಗ ಜೋಯಿಸನು ಅಭಿಮನ್ಯುವಿನ ಕಥೆಯನ್ನು ಹೇಳಿದ್ದು

ಹೇಗೆಂದರೆ:


ದ್ವಾಪರಯುಗದಲ್ಲಿದ್ದ: ಪಾಂಡುರಾಯನಿಗೆ ಪಾಂಡವರೆಂಬ ಐದು

ಜನ ಗಂಡುಮಕ್ಕಳಿದ್ದರು. ಪಾಂಡುರಾಯನ ಅಣ್ಣನಾದ ಧೃತರಾಷ್ಟ್ರ 

-------------------------------------

೧೯೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ರಾಯನಿಗೆ ಕೌರವರೆಂಬ ನೂರೊಂದುಜನ ಮಕ್ಕಳಿದ್ದರು. ಈ ಪಾಂಡವ

ಕೌರವರಿಗೆ ರಾಜ್ಯದ ಹಂಚಿಕೆಗೋಸ್ಕರ ಜಗಳಹುಟ್ಟಿತು. ಪಾಂಡವರ

ಕಡೆ ಅನೇಕ ಜನ ದೊರೆಗಳು ಸೇರಿದರು. ಕೌರವರ ಕಡೆಗೂ

ಹೀಗೆಯೇ ಅನೇಕರು ಸೇರಿದರು. ಈ ಎರಡು ಸೇನೆಗೂ ದೊಡ್ಡ ಯುದ್ಧ

ನಡೆಯಿತು. ಇದರಲ್ಲಿ ಐದುಜನ ಪಾಂಡವರೂ ನೂರೊಂದುಜನ

ಕೌರವರೂ ಸ್ವತಃ ನಿಂತು ಕದನವಾಡಿದರು. ಸ್ವಲ್ಪ ದಿವಸ ಯುದ್ಧ

ನಡೆದ ಮೇಲೆ ಕೌರವರ ಕಡೆಯಲ್ಲಿ ದ್ರೋಣಾಚಾರ್ಯನೆಂಬ ಬ್ರಾಹ್ಮಣ

ನಿಗೆ ಸರ್ವಸೇನಾಪತಿಯ ಅಧಿಕಾರವಾಗಲು, ಆತನು ಸೇನೆಯಲ್ಲಿಯೇ

ವ್ಯೂಹಗಳೆಂಬ ಕೋಟೆಯನ್ನು ಕಟ್ಟಿ ಯುದ್ಧಕ್ಕೆ ಮೊದಲುಮಾಡಿದನು.

ಒಂದು ಪದ್ಮವ್ಯೂಹವನ್ನು ಕಟ್ಟಿ ಬಹು ಘೋರವಾದ ಯುದ್ಧವನ್ನು

ಕೌರವರು ನಡೆಯಿಸುತಿರಲು, ಪಾಂಡವರ ಕಡೆಯಲ್ಲಿ ಮಹಾರಥಿಕರಾದ

ಭೀಮ ಅರ್ಜುನ ಇವರಿಬ್ಬರೂ ಯುದ್ಧರಂಗದ ಒಂದು ಕಡೆಯಲ್ಲಿ

ಕಾಳಗವಾಡುತಾ ಇದ್ದರು. ಪದ್ಮವ್ಯೂಹವನ್ನು ಭೇದಿಸಿಕೊಂಡು

ಹೋಗಿ ಶತ್ರುಗಳನ್ನು ಗೆಲ್ಲತಕ್ಕವರು ಯಾರೂ ಪಾಂಡವರ ಕಡೆಯಲ್ಲಿ

ಇರಲಿಲ್ಲ. ಇದನ್ನು ಕಂಡು ಅರ್ಜುನನ ಮಗನಾದ ಅಭಿಮನ್ಯು

ಎಂಬ ಹದಿನೆಂಟು ವರುಷದ ಹುಡುಗನು ತನ್ನ ದೊಡ್ಡಪ್ಪನಾದ ಧರ್ಮ

ರಾಯನಲ್ಲಿ ಅಪ್ಪಣೆಯನ್ನು ಪಡೆದು, ರಥವನ್ನೇರಿ ಶತ್ರುಸೇನೆಯನ್ನು

ನಾಶಮಾಡುತಾ ವ್ಯೂಹದೊಳಕ್ಕೆ ನುಗ್ಗಿ ಮಧ್ಯೆನಿಂತು, ಮಹಾಪರಾಕ್ರ

ಮದಿಂದ ಅತಿರಥ ಮಹಾರಥರುಗಳನ್ನೆಲ್ಲಾ ತರಿದು ಯಾರೂ ಇವನ

ಎದುರಿಗೆ ನಿಲ್ಲುವುದಕ್ಕಿಲ್ಲದಂತೆ ಮಾಡಿದನು. ಪ್ರಳಯಕಾಲದ ರುದ್ರನೇ

ಬಂದನೋ ಎನ್ನುವಹಾಗೆ ಆಯಿತು. ಶತ್ರುಗಳೆಲ್ಲರೂ ಓಡಿಹೋಗುವು

ದಕ್ಕೆ ಮೊದಲಾಯಿತು. ಹೇಡಿಗಳಾದ ಹೆಗೆಗಳು ಇವನ ಮುಂದೆ

ನಿಂತು ಯುದ್ಧವನ್ನು ಮಾಡಲಾರದೆ, ದ್ರೋಹದಿಂದ ಆರು ಜನ ಸೇರಿ

ಹಿಂದುಗಡೆ ಬಂದು ಈ ಮಹಾ ಪರಾಕ್ರಮಿಯನ್ನು ಕೊಂದರು.

ದ್ರೋಹದಸಂಗಡ ಯುದ್ಧಮಾಡುವುದಕ್ಕೆ ಯಾರಿಂದಲೂ ಆಗುವುದಿಲ್ಲ;

ಯಾಕೆಂದರೆ ಅದು ಎದುರಿಗೆ ಬಂದು ನಿಲ್ಲುವುದಿಲ್ಲ. ಹೀಗೆ ಹುಡುಗರು

ಸಹಿತ ಇತರರ ಸಹಾಯವನ್ನು ಕೋರದೆ ತಾವೇ ಯುದ್ಧಮಾಡು

ತಿದ್ದರು. 

--------------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೯೧


ಕಥೆಯು ಇಲ್ಲಿಗೆ ನಿಂತಿತು. ಆಗ


ಮದನ-- ಜೋಯಿಸರೆ ಅಭಿಮನ್ಯುವೇನೋ ಮಹಾಪರಾಕ್ರಮ

ಶಾಲಿಯೇ ಹವುದು. ಅನ್ಯಾಯವಾಗಿ ಅವನನ್ನು ಕೊಂದುಹಾಕಿದರು.

ಅದು ಹಾಗಿರಲಿ. ಯುದ್ಧದಲ್ಲಿ ಕೊನೆಗೆ ಯಾರಿಗೆ ಜಯವಾಯಿತು?


ಜೋಯಿಸ--ನೀನು ಓದಬಲ್ಲೆಯಷ್ಟೆ. ಅದನ್ನು ಪುಸ್ತಕದಲ್ಲಿ

ಓದಿಕೊಂಡು ನೀನೇ ತಿಳಿದುಕೊ.


ಹೀಗೆಂದು ಜೋಯಿಸ ಹೇಳಿದನು. ಆಗ ಸಾಯಂಕಾಲ

ವಾಯಿತು. ಮದನನು ಪ್ರತಿನಿತ್ಯವೂ ಆಕಾಶವನ್ನು ನೋಡಿ ಅಲ್ಲಿರುವ

ನಕ್ಷತ್ರಗಳ ಸ್ಥಾನಗಳನ್ನು ತನ್ನ ಬಳಿಯಲ್ಲಿರುವ ಕಾಗದದ ಗೋಳದ

ಮೇಲೆ ಗುರುತುಮಾಡಿಕೊಳ್ಳುತ್ತಲೇ ಇದ್ದನು. ಕೃತ್ತಿಕ, ಮೃಗಶಿರ,

ಅಶ್ವಿನಿ, ಇವೇ ಮೊದಲಾದ ರಾಶಿಗಳನ್ನು ಗುರುತುಮಾಡಿಕೊಂಡಿದ್ದನು.

ಆ ದಿನ ಗುರುವನ್ನು ನೋಡಿ


ಮದನ.-- ನಿತ್ಯವೂ ಈ ಕಕ್ಷತ್ರಗಳೆಲ್ಲಾ ಎಷ್ಟು ಚೆನ್ನಾಗಿ

ಭೂಮಿಯ ಸುತ್ತಲೂ ಸುತ್ತುವವು? '


ಜೋಯಿಸ--ಅವುಗಳು ಸುತ್ತುವವು ಎಂದು ನೀನು ಹೇಗೆ ಬಲ್ಲೆ?


ಮದನ--ಅವುಗಳು ಚಲಿಸತಕ್ಕದ್ದು ರಾತ್ರೆಹೊತ್ತು ನಮ್ಮ

ಕಣ್ಣಿಗೆ ಕಾಣುವುದು. 


ಜೋಯಿಸ-- ಚಲಿಸತಕ್ಕದ್ದು ನಕ್ಸತ್ರಗಳು, ಭೂಮಿಯಲ್ಲ

ಎಂದು ನೀನು ಹೇಗೆ ಬಲ್ಲೆ?


ಮದನ--ಭೂಮಿ ಇದ್ದಕಡೆಯಲ್ಲಿಯೇ ಇರುವುದು. ನಕ್ಷತ್ರಗಳು

ಚಲಿಸತಕ್ಕದ್ದು ನಮ್ಮ ಕಣ್ಜಿಗೆ ಕಾಣುವುದು.


ಜೋಯಿಸ--ದೋಣಿಯಮೇಲೆ ಯಾವಾಗಲೂ ನೀನು ಕೂತು

ಕೊಂಡು ಹೋಗಿದ್ದೀಯ? ಆಗ ಏನು ಕಾಣಿಸಿತು?


ಮದನ--ನಮ್ಮ ಅಪ್ಪಾಜಿಯವರ ಸೀಮೆ ಪಶ್ಚಿಮ ಸಮುದ್ರದ

ವರೆಗೂ ಇದೆ. ದೋಣಿಯಲ್ಲಿ ನಾನು ಕೂತು ಸಮುದ್ರದ ಮೇಲೆ ಸ್ಪಲ್ಪ

ದೂರ ಹೋಗಿದೇನೆ. ಆಗ ದೋಣಿಯು ಇದ್ದ ಸ್ಥಳದಲ್ಲಿಯೇ ಇದ್ದ

ಹಾಗೂ, ತಡಿಯಲ್ಲಿದ್ದ ಗಿಡ ಮರ ಬೆಟ್ಟ ಮೊದಲಾದ್ದೆಲ್ಲಾ ಓಡಿಹೋ 

------------------------------------

೧೯೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ

ಗುತಿದ್ದ ಹಾಗೂ ಕಾಣಿಸಿತು.


ಜೋಯಿಸ--ಅದೇ ರೀತಿಯಲ್ಲಿ ಓಡಿಹೋಗುತಿರುವ ಭೂಮಿ

ಇದ್ದಕಡೆಯಲ್ಲಿಯೇ ಇದ್ದಹಾಗೂ, ಚಲಿಸದೇ ಇರುವ ನಕ್ಷತ್ರಗಳು

ಓಡಿಹೋಗುತಿರುವ ಹಾಗೂ ಯಾಕೆ ಕಾಣಿಸಬಾರದು?


ಮದನ--ಚಿಕ್ಕ ಚಿಕ್ಕದಾಗಿರುವ ಸೂರ್ಯ ಚಂದ್ರ ನಕ್ಷತ್ರಗಳು

ಓಡಿಹೋದರೂ ಹೋಗಬಹುದು. ಇಷ್ಟು ಗಾತ್ರ ಇರುವ ಭೂಮಿ

ಚಲಿಸೀತೆ? 


ಜೋಯಿಸ.-ಚಂದ್ರ ಸೂರ್ಯ ನಕ್ಷತ್ರಗಳು ಚಿಕ್ಕಚಿಕ್ಕದು

ಎಂದು ನಿನಗೆ ಹೇಗೆ ತಿಳಿಯಿತು?


ಮದನ--ನಮ್ಮ ಕಣ್ಣಿಗೆ ಚಿಕ್ಕದಾಗಿ ಕಾಣಿಸುವುದಿಲ್ಲವೆ? ಇನ್ನೇ

ನಾಗಬೇಕು?


ಈ ಮಾತನ್ನು ಕೇಳಿ ಜೋಯಿಸನು ಆಗ ಸುಮ್ಮನೇ ಆದನು.

ಮಾರನೇ ದಿನ ಜೋಯಿಸನು ಮದನನನ್ನು ಕರೆದುಕೊಂಡು ಮೈದಾನ

ವಾದ ಪ್ರದೇಶಕ್ಕೆ ಹೋದನು. ಆಗ ಪಟಾ ಆಡಿಸುವ ಕಾಲವಾಗಿತ್ತು.

ದೂರದಲ್ಲಿ ಒಬ್ಬ ಪಟಾ ಆಡಿಸುತಿದ್ದನು. ಅದನ್ನು ಕಂಡು,


ಜೋಯಿಸ--ಮದನ, ಅಗೋ ಆಲ್ಲಿ ಆಕಾಶದಲ್ಲಿ ಕಾಣಿಸು

ವುದೇನು?


ಮದನ-- ಏನೋ ಸಣ್ಣ ಹಕ್ಕಿಯ ಹಾಗೆ ಕಾಣುತಿದೆ.


ಆಗ ಗಾಳಿ ಕಡಮೆಯಾಯಿತು. ಪಠದ ದಾರವನ್ನು ಎಳೆಯುತ್ತ

ಬಂದರು.


ಜೋಯಿಸ--ಈಗ ಏನು ಕಾಣುತಿದೆ ನೋಡು.


ಮದನ--ಏನೋ ಗುಂಡಗೆ ಕಾಣುತಿದೆ. (ಪಟವನ್ನು ಇನ್ನೂ

ಹತ್ತಿರಕ್ಕೆ ಎಳೆದರು.) .


ಮದನ-- ಜೋಯಿಸರೆ ಅದು ಹತ್ತರ ಹತ್ತರಕ್ಕೆ ಬರುತಿದೆ.

ಈಗ ನೋಡಿದರೆ ಅದು ಎಂಟುಮೂಲೇ ಚಟ್ಟಿಯಂತೆ ಕಾಣುತ್ತೆ,


ಆಗ ಗಾಳಿ ಜೋರಾಯಿತು. ಪಠ ಆಡಿಸುತ್ತಿದ್ದವನು ದಾರ 

ವನ್ನು ಹೆಚ್ಚಾಗಿ ಬಿಡುವುದಕ್ಕೆ ಮೊದಲು ಮಾಡಿದರು. ಪಟವು ಮೇಲು 

-----------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೯೩ 


ಮೇಲಕ್ಕೆ ಹೋಗಿ ದೂರವಾಗಿ ಹಾರಿತು.


ಜೋಯಿಸ-- ಈಗ ಹೇಗೆ ಕಾಣುತಿದೆ?


ಮದನ ಆಕಾಶವನ್ನು ನೋಡುತಾ--ಪುನಃ ಚಿಕ್ಕದಾಗಿ ಕಾಣಿಸು

ವುದು. ಅಗೋ! ಇನ್ನೂ ಸಣ್ಣದಾಯಿತು. ಓಹೋ ! ಒಂದು

ಹಕ್ಕಿಯ ಹಾಗೆ ಕಾಣುತಿದೆ. ಎಷ್ಟು ದೂರವಾಗಿ ಹೋದರೆ ಅಷ್ಟು

ಸಣ್ಣ ದಾಗಿ ಕಾಣುವುದು.


ಜೋಯಿಸ--ಈಗ ನಮಗೆ ಕಾಣುವ ಸೂರ್ಯನು ದೂರವಾಗಿ

ಇನ್ನೂ ಹಿಂದು ಹಿಂದಕ್ಕೆ ಹೋದರೆ ಹೇಗೆ ಕಾಣಿಸುವುದು?


ಮದನ--(ಸ್ವಲ್ಪ ಯೋಚಿಸಿ) ಪಟವು ಹಿಂದು ಹಿಂದಕ್ಕೆ ಹೋದ

ಹಾಗೆಲ್ಲಾ ಸಣ್ಣ ಸಣ್ಣವಾಗಿ ಕಂಡರೆ ಸೂರ್ಯನೂ ಹಾಗೆಯೇ ಕಾಣ

ಬೇಕು.


ಜೋಯಿಸ--ಸೂರ್ಯನು ಹಾಗೆ ಬಹು ದೂರಕ್ಕೆ ಹೋದರೆ

ಅದು ಸಣ್ಣಗೆ ನಕ್ಷತ್ರದ ಹಾಗೆ ಕಾಣಿಸುವುದು. ಇದು ಹಾಗಿರಲಿ. ನಮಗೆ

ಆಕಾಶದಲ್ಲಿ ಕಾಣುವ ನಕ್ಷತ್ರಗಳು ನಮ್ಮ ಸಮೀಪ  ಸಮೀಪಕ್ಕೆ

ಬಂದರೆ ಹೇಗೆ ಕಾಣುವುದು? ಸಣ್ಣಗೆ ಕಾಣಿಸೀತೆ?


ಮದನ--ಪಟವು ನಮ್ಮ ಹತ್ತರ ಹತ್ತರಕ್ಕೆ ಬಂದ ಹಾಗೆಲ್ಲಾ

ದೊಡ್ಡದಾಗಿ ಕಾಣಿಸಿದರೆ, ನಕ್ಸತ್ರವೂ ಹಾಗೆಯೇ ಕಾಣಿಸಬೇಕು.


ಜೋಯಿಸ--ಆ ನಕ್ಷತ್ರವು ಸಮೀಪ ಸಮೀಪಕ್ಕೆ ಬಂದರೆ

ಸೂರ್ಯನ ಅಗಲ ಕಾಣಿಸಬಹುದೆ? 


ಮದನ--ಹವುದು.


ಜೋಯಿಸ-- ಸೂರ್ಯನೇ ನಮಗೆ ಸಮೀಪವಾಗಿ ಬಂದರೆ

ಹೇಗೆ ತೋರುವುದು? ಅದರ ಗಾತ್ರ ಇದ್ದಷ್ಟೇ ಇರುವುದೊ?


ಮದನ.--ಹತ್ತರಕ್ಕೆ ಬಂದ ಹಾಗೆಲ್ಲಾ ದೊಡ್ಡದಾಗಿ ಕಾಣಿಸ

ಬೇಕು.


ಜೋಯಿಸ-- ಹಾಗಾದರೆ, ನಾವು ಇರುವ ಭೂಮಿಯು ಸೂರ್ಯ

ನಿಗಿಂತಲೂ ನಕ್ಷತ್ರಕ್ಕಿಂತಲೂ ದೊಡ್ಡದಾಗಿ ಕಾಣಿಸುವುದು ನಿಶ್ಚಯ 

ವಲ್ಲ. ಅವುಗಳು ಇಲ್ಲಿಂದ ಬಹುದೂರದಲ್ಲಿವೆ. ಇಲ್ಲಿಂದ ಯಾರಾದರೂ 

------------------------------------

೧೯೪ ಸುಮತಿ ಮದನಕುಮಾರರೆ ಚರಿತ್ರೆ [ಅಧ್ಯಾಯ


ಸೂರ್ಯನ ಸಮಾಪಕ್ಕೆ ಹೋದರೆ ಭೂಮಿಯು ಅವರ ಕಣ್ಣಿಗೆ ಹೇಗೆ 

ಕಾಣಿಸುವುದು?


ಮದನ--ನನಗೆ ತಿಳಿಯದು.


ಜೋಯಿಸ-- ತಿಳಿಯದೆ! ಒಂದು ಪದಾರ್ಥವೇ ಇದ್ದಸ್ಥಳವನ್ನು

ಬಿಟ್ಟು ದೂರವಾಗಿ ಹೋಗಿ ನಾವು ಇದ್ದಕಡೆಯಲ್ಲಿಯೇ ಇದ್ದರೂ

ಒಂದೇ, ಅಥವಾ ಆ ಪದಾರ್ಥವು ಇದ್ದಕಡೆಯಲ್ಲಿಯೇ ಇದ್ದು ನಾವು

ದೂರವಾಗಿ ಹೋದರೂ ಒಂದೇ. ನಮ್ಮನ್ನು ಬಿಟ್ಟು ಪಟ ದೂರವಾಗಿ

ಹೋದರೂ ಸರಿಯೆ, ಪಟವನ್ನು ಬಿಟ್ಟು ನಾವು ದೂರವಾಗಿ ಹೋದರೂ

ಸರಿಯೆ, ಫಲವೆಲ್ಲಾ ಒಂದೇ ಅಲ್ಲವೆ? ನಮಗೂ ಅದಕ್ಕೂ ಸ್ವಲ್ಪದೂರ

ಬಿಟ್ಟರೆ ಸರಿ.


ಮದನ--_ಹವುದು.


ಜೋಯಿಸ-- ಹಾಗಾದರೆ, ಭೂಮಿಯಿಂದ ಆಕಾಶಕ್ಕೆ ಯಾರಾ

ದರೂ ಹಾರಿಹೋದರೆ ನಮ್ಮ ಭೂಮಿ ಹೇಗೆ ಕಾಣಿಸುವುದು?


ಮದನ--ನಾವು ಮೇಲಕ್ಕೆ ದೂರವಾಗಿ ಹೋಗುತಾ ಹೋಗುತಾ

ಭೂಮಿ ಸಣ್ಣವಾಗುತ ಬರುವುದು.


ಜೋಯಿಸ. ಆದ್ದರಿಂದ ಸೂರ್ಯ ಚಿಕ್ಕದೆಂತಲೂ ಭೂಮಿ 

ದೊಡ್ಡದೆಂತಲೂ  ಹೇಳಬಾರದು,


ಸೂರ್ಯನೂ ಚಂದ್ರನೂ ನಕ್ಷತ್ರಗಳೂ ನಮ್ಮ ಕಣ್ಣಿಗೆ ಎಷ್ಟು

ದೊಡ್ಡದಾಗಿ ಕಾಣಿಸುವವೊ ಅದಕ್ಕಿಂತಲೂ ಎಷ್ಟೋ ದೊಡ್ಡದಾಗಿವೆ

ಎಂದು ಈಗಲಾದರೂ ಊಹಿಸಿಕೊ.


ಈಪ್ರಕಾರ ಮಾತನಾಡಿಕೊಂಡು ಬರುತಿರುವಾಗ ದಾರಿಯಲ್ಲಿ

ಒಂದು ಹಳ್ಳಿ ಸಿಕ್ಕಿತು. ಆ ಊರಮುಂದೆ ಮಾರೀ ಗುಡಿಯ ಬಳಿ ರಂಗ

ಸ್ಥಳದಲ್ಲಿ ಒಬ್ಬ ಹಾವಾಡಿಗನು ಡೋಲನ್ನ್ನು ಬಡಿಯುತಾ ಇದ್ದನು.

ಅಲ್ಲಿಗೆ ಜನಗಳು ಓಡಿಹೋಗುತಿದ್ದರು. ಅದನ್ನು ತಿಳಿದು ಮದನನು

ತಾನೂ ಅಲ್ಲಿಗೆ ಹೋಗಬೇಕೆಂದು ಅಪೇಕ್ಷಿಸಿದನು. ಜೋಯಿಸನು

ಸುಮತಿಮದನ ಇಬ್ಬರನ್ನೂ ಕರೆದುಕೊಂಡು ಅಲ್ಲಿಗೆ ಹೋದನು, ಆ

ಗುಂಪಿನ ಸಂಗಡ ಇವರೂ ನಿಂತುಕೊಂಡರು. ಆ ಗಾರುಡಿಗನು ತನ್ನ 

------------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೯೫. 


ಹಸ್ತಲಾಘವ ವಿದ್ಯಗಳನ್ನೂ ವಿಶೇಷವಾಗಿ ತೋರಿಸಿ, ಒಂದು ತಂತ್ರ

ವನ್ನು ಕೊನೆಗೆ ಇರಿಸಿಕೊಂಡು, ಸುತ್ತಲೂ ನಿಂತಿದ್ದ ಜನರನ್ನು ನೋಡಿ

ಹೇಳಿದ್ದೇನೆಂದರೆ ; ಇಗೋ ನೋಡಿ ಸಾಧಾರಣವಾದ ವಿದ್ಯಗಳೆಲ್ಲಾ 

ಆಯಿತು. ವಿಚಿತ್ರವಾದ ಇನ್ನೊಂದು ಅದ್ಭುತವನ್ನು ಕೊನೆಯಲ್ಲಿ

ತೋರಿಸಬೇಕೆಂದು ನಿಲ್ಲಿಸಿದ್ದೆ. ಇಗೊ ನೋಡಿ, (ಒಂದು ಮೀನನ್ನು

ಹಿಡಿದು) ನನ್ನ. ಕೈಯಲ್ಲಿ ಒಂದು ಮೀನಿದೆ. ಇದಕ್ಕೆ ಜೀವವಿಲ್ಲ.

ಆದಾಗ್ಯೂ ಅದನ್ನು ಸಾಕಿದವನು ಇಂಥವನೆಂದು ಬಲ್ಲದು ನಾನು

ಯಾವ ಕಡೆಗೆ ಕರೆದರೂ ಆಕಡೆಗೆ ಬರುವುದು. ಹೀಗೆ ಹೇಳಿ ಆ ಗಾರುಡಿ

ಗನು ಒಂದು ತಟ್ಟೆಯಲ್ಲಿ ನೀರನ್ನು ಹಾಕಿ ಆ ಮೀನನ್ನು ಅದರಲ್ಲಿ

ಬಿಟ್ಟು ತನ್ನ ಬಳಿಯಲ್ಲಿದ್ದ ರಾಗೀರೊಟ್ಟಿಯ ಮುರುಕನ್ನು ಅದಕ್ಕೆ

ತೋರಿಸಿದನು. ಅದು ನಿರ್ಜೀವ ಪದಾರ್ಥವಾಗಿದ್ದಾಗ್ಗೂ ಇವನು

ರೊಟ್ಟಿಯನ್ನು ಯಾವಕಡೆಗೆ ಹಿಡಿದರೆ ಆಕಡೆಗೆಲ್ಲಾ ಅದು ತಿರುಗು

ತಿತ್ತು. ಇದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟರು. ಮದನನಿಗಂತೂ

ಏನೂ ತೋರಲಿಲ್ಲ, ಬೆಕ್ಕಸ ಬೆರಗಾದನು.


ಜೋಯಿಸ, ಸುಮತ್ತಿ ಮದನ ಇವರು ಮೂರುಜನರೂ ಮನೆಗೆ

ಬಂದರು. ಮದನಿಗೆ ಮೀನಿನ ತಂತ್ರ ಗೊತ್ತೇ ಆಗಲಿಲ್ಲ. ಅವನು

ಇದನ್ನು ಕುರಿತು ಸುಮತಿಯೊಡನೆ ಪ್ರಸ್ತಾಪಮಾಡಲು, ಸುಮತಿಯು

--ನಾನೂ ಹಾಗೆಯೇ ಮಾಡಿ ನಿನಗೆ ತೋರಿಸುತೇನೆಂದು ಹೇಳಿ,

ಮೇಣದಲ್ಲಿ ಒಂದು ಮಾನಿನ ಆಕಾರವನ್ನು ಮಾಡಿ ತಟ್ಟೆಯಲ್ಲಿ

ನೀರನ್ನು ಹಾಕಿ ಮೀನನ್ನು ಅದರಮೇಲೆ ತೇಲಬಿಟ್ಟನು. ಒಂದು

ರೊಟ್ಟೀ ಚೂರನ್ನು ಹಿಡಿದು ಆ ಮೀನಿನಕಡೆಗೆ ತೋರಿಸಲು, ಅದು

ರೊಟ್ಟೀಕಡೆಗೆ ಓಡಿಬಂತು. ಮದನನು ಆಶ್ಚರ್ಯಪಟ್ಟು ಅದರ

ಗುಟ್ಟನ್ನು ತನಗೆ ತೋರಿಸಿಕೊಡು ಎಂದು ಕೇಳಿದನು.


ಆಗ ಸುಮತಿಯು--ಇಗೋ ನೋಡು, ಈ ಮೀನಿನ ಬಾಯಿಂದ

ಬಾಲದವರೆಗೂ ಒಂದು ಕಬ್ಬಿಣದ ತಂತಿ ಇವೆ, ಈ ರೊಟ್ಟಿಯೊಳಗೆ

ಒಂದು ಕಬ್ಬಿಣದ ಮುರುಕು ಇದೆ, ಎಂದನು. - ಮದನನಿಗೆ ಇದು

ಚೆನ್ನಾಗಿ ತಿಳಿಯಲಿಲ್ಲ. ಕೂಡಲೆ ಅಲ್ಲಿದ್ದ ಜೋಯಿಸನು ಅದನ್ನು

ವಿವರಿಸಿದ್ದು ಹೇಗೆಂದರೆ ;-- 

------------------------------------

೧೯೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ತನ್ನ ಎಡದ ಅಂಗೈಯಲ್ಲಿ ೩-೪ ಸೂಜಿಗಳನ್ನು ಹಾಕಿಕೊಂಡು

ಬಲದ ಕೈಯಲ್ಲಿ ರೊಟ್ಟಿ ಯೊಳಗಿದ್ದ ಕಬ್ಬಿಣದ ಮುರುಕನ್ನು ಅದರ

ಮೇಲೆ ಹಿಡಿಯಲು, ಆ ಸೂಜಿಗಳೆಲ್ಲೂ ಮೇಲಕ್ಕೆ ನೆಗೆದು ಆ ಕಬ್ಬಿಣದ

ತುದಿಗೆ ಅಂಟಕೊಂಡವು. ಜೋಯಿಸನು ತನ್ನ ಕೈಲಿದ್ದ ಕಬ್ಬಿಣದ

ಬೀಗದಕೈಯನ್ನು ಕೆಳಗೆ ಇಟ್ಟು ಸ್ವಲ್ಪ ದೂರದಲ್ಲಿ ಈ ಕಬ್ಬಿಣದ

ಮುರುಕನ್ನು ಇರಿಸಿದನು. ಆಕ್ಷಣವೇ ಆ ಬೀಗದ ಕೈ ಬೇಗ

ಹೋಗಿ ಕಬ್ಬಿಣದ ಮುರುಕಿಗೆ ಅಂಟಿಕೊಂಡಿತು. ಇದಕ್ಕೆಲ್ಲಾ ಕಾರಣ

ವೇನೆಂದು. ಮದನ ಪ್ರಶ್ನೆ ಮಾಡಲು, ಜೋಯಿಸನು - ಕಬ್ಬಿಣದ

ಗಣಿಯಲ್ಲಿ ಒಂದುವಿಧವಾದ ಕಲ್ಲು ಸಿಕ್ಕುವುದು. ಇದಕ್ಕೆ ಸೂಜಿಕಲ್ಲು

ಅಥವಾ ಅಯಃಕಾಂತಶಿಲೆ ಎಂದು ಹೆಸರು, ಈ ಕಲ್ಲಿನಲ್ಲಿ ಕಬ್ಬಿಣವ

ನ್ನೆಲ್ಲಾ ತನ್ನಕಡೆಗೆ ಎಳೆದುಕೊಳ್ಳುವ ವಿಚಿತ್ರವಾದ ಒಂದು ತ್ರಾಣವಿದೆ,

ಆ ಕಲ್ಲಿನಮೇಲೆ ಒಂದು ಕಬ್ಬಿಣದ ಮುರುಕನ್ನು ತಿಕ್ಕಿದರೆ ಆ ಕಬ್ಬಿ

ಣಕ್ಕೂ ಆ ಶಿಲೆಯ ತ್ರಾಣ ಬರುವುದು. ಮೀನಿನ ಬಾಯಿಯಕೊನೆ

ಯಲ್ಲಿ ಸೂಜಿಕಲ್ಲಿನಮೇಲೆ ತಿಕ್ಕಿದಂಥಾ ಕಬ್ಬಿಣದ ತಂತಿ ಇದೆ.

ರೊಟ್ಟಿಯ ಚೂರಿನ ಒಳಗೆ ಸಾಧಾರಣವಾದ ಕಬ್ಬಿಣದ ಮುರುಕು

ಇದೆ. ಆದ್ದರಿಂದ ರೊಟ್ಟಿಗೆ ಮೀನುಬಂದು ಅಂಟಕೊಳ್ಳುವುದು

ಹೀಗೆಂದು ಹೇಳಿದನು-


ಈ ಮಾತನ್ನು ಕೇಳಿದ ಮದನನು--ಈ ಮೀನನ್ನು ಹೇಗೆ ಹೇಗೆ

ತಿರುಗಿಸಿದರೂ ಒಂದೇಕಡೆಗೆ.ತಿರುಗುತಿತ್ತು. ಅದು ಹೇಗೆ?


ಜೋಯಿಸ--ಅದನ್ನು ಹೇಗೆ ತಿರುಗಿಸಿದಾಗ್ಗೂ ಅದು ಉತ್ತರ

ದಕ್ಷಿಣವಾಗಿ ನಿಂತುಕೊಳ್ಳುವುದು ಉತ್ತರದಿಕ್ಕಗೆ ತಿರುಗಿಕೊಳ್ಳುವ

ಗುಣ ಇದರಲ್ಲಿದೆ, ಈ ಗುಣವನ್ನು ಕಂಡುಹಿಡಿದು ಉತ್ತರಮುಖಿ

ಯನ್ನು ಮಾಡಿದಾರೆ. ಈ ಉತ್ತರಮುಖಿಯಲ್ಲಿ ದಿಕ್ಕುಗಳನ್ನೂ ಉಪ

ದಿಕ್ಕುಗಳ್ನೂ ಗುರುತುಮಾಡಿ, ಮಧ್ಯೆ ಒಂದು ಗುಬಟನ್ನು ಇರಿಸಿ ಅದ

ರಮೇಲೆ ಸೂಜಿಕಲ್ಲಿಗೆ ತಿಕ್ಕಿದ ಒಂದು ಸೂಜಿಯನ್ನು ಮಧ್ಯಕ್ಕೆ ಸರಿ

ಯಾಗಿ ತೂಕಾನೋಡಿ ನಿಲ್ಲಿಸಿ ಇರುತಾರೆ. ಆ ಸೂಜಿಗೆ ಯಾವ

ಕಡೆಯೂ ಇಲ್ಲದಿರುವಕಾರಣ ಉತ್ತರದಿಕ್ಕಿಗೇ ತಿರುಗಿಕೊಳ್ಳುವುದು. 

-----------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೯೭ 


ಮದನ--ಈ ಉತ್ತರಮುಖಿಯಿಂದ ಉಪಯೋಗವೇನು? 


ಜೋಯಿಸ-- ಈ ಹೊಸ ಉಪಾಯವನ್ನು ಏರ್ಪಡಿಸುವುದಕ್ಕೆ

ಮುಂಚೆ, ಸಮುದ್ರದಮೇಲೆ ಪ್ರಯಾಣಮಾಡುವ ನಾವಿಕರಿಗೆ ಬಹು

ಕಷ್ಪವಾಗಿತ್ತು. ಮಸಲ ಪೂರ್ವದಿಕ್ಕಿಗೆ ಹಡಗನ್ನು ತಿರುಗಿಸಿಕೊಂಡು

ಹೊರಟರೆ ಆ ದಿಕ್ಕಿಗೇ ಹೋಗುತಿದ್ದರು. ಗಾಳಿ ಬಂದು ಬೇರೇ ಕಡೆಗೆ

ಹಡಗನ್ನು ತಳ್ಳಿಕೊಂಡು ಹೋದರೆ ಅಲ್ಲಿಗೆಲ್ಲಾ ಹೋಗುತಿದ್ದರು.

ಮೋಡ ಕವಿದುಕೊಂಡರೆ ದಿಕ್ಕುತೋರುತಿರಲಿಲ್ಲ. ರಾತ್ರೆ ಹೊತ್ತು

ಮತ್ತೂ ಕಪ್ಪವಾಗಿತ್ತು. ನಕ್ಷತ್ರಗಳು ಕಾಣಿಸಿದರೆ ಅದನ್ನು ನೋಡಿ

ದಿಕ್ಕುಗಳನ್ನು ತಿಳಿದುಕೊಳ್ಳು ತಿದ್ದರು. ಆದೂ ಕಾಣಿಸದೇ ಇದ್ದರೆ ಅವರ

ಕಷ್ಪವನ್ನು ಹೇಳಲು ಶಕ್ಯವಲ್ಲ. ಎತ್ತನೋಡಿದರೂ ನೀರು. ಎಲ್ಲಿ

ನೋಡಿದರೂ ಕತ್ತಲೆ, ಹೀಗೆ ಆಗುತಿತ್ತು. ಆದರೆ ಉತ್ತರಮುಖಿಯನ್ನು

ಕಂಡುಹಿಡಿದ ಈಚೆಗೆ ಈ ಕಷ್ಟವೆಲ್ಲಾ ತಪ್ಪಿತು. ಇದರಿಂದ ದಿಕ್ಕು 

ಗಳೆಲ್ಲಾ ಗೊತ್ತಾಗುತಿದ್ದಕಾರಣ, ಸಮುದ್ರದ ಮೇಲೆ ಸಿಕ್ಕಿದಕಡೆ

ಸುತ್ತದೆ, ಯಾವ ಕಡೆಗೆ ಹೋಗಬೇಕೋ ಅಲ್ಲಿಗೆ ನೆಟ್ಟಗೆ ಹೋಗುತಾರೆ. 


ಮದನ--ಇದು ತಿಳಿಯುವುದಕ್ಕೆ ಮುಂಚೆ ಏನ ಮಾಡುತಿದ್ದರು? 


ಜೋಯಿಸ. -ಸಮುದ್ರದಮೇಲೆ ಬಹಳ ದೂರ ಹೋಗುತಿರಲಿಲ್ಲ. 

ತಡಿಯ ಹತ್ತರಲೇ ಹಡಗನ್ನು ನಡೆಯಿಸಿಕೊಂಡು ಒಂದು ರೇವಿಠಿಂದ

ಇನ್ನೊಂದು ರೇವಿಗೆ ಹೋಗುತಿದ್ದರು. ಈ ದೇಶದ ಸರಕುಗಳು

ಇನ್ನೊಂದು ದೇಶಕ್ಕೂ, ಅಲ್ಲಿನ ಸರಕುಗಳು ಇಲ್ಲಿಗೂ ಸಾಗುವುದಕ್ಕೆ

ಆಗುತಿರಲಿಲ್ಲ. ಸೌಖ್ಯವಾಗಿ ನಾವು ಜೀವಿಸಿಕೊಂಡು ಇರಬೇಕಾದರೆ

ನಮಗೆ ಅಲ್ಲಿನ ಸರಕುಗಳೂ ಬೇಕು, ಇಲ್ಲಿನ ಸರಕುಗಳೂ ಬೇಕು. 


ಸುಮತಿ-- ಇಲ್ಲಿ ಆಗುವ ಸರಕಿನಿಂದಲೇ ನಾವು ಜೀವಿಸಿಕೊಂ

ಡಿರುವುದಕ್ಕೆ ಆಗುವುದಿಲ್ಲವೆ? ಎಷ್ಟು ಇದ್ದರೆ ಅಷ್ಟೇ ಸಾಕು. 


ಜೋಯಿಸ--ಈ ಮಾತು ನಿಜ. ನಮ್ಮ ಸೀಮೆಯಲ್ಲಿ ಆಗುವ

ಸರಕು ಜೀವನಕ್ಕೆ ಸಾಕು. ದೇಶಾಂತರದಿಂದ ಬರುವ ಸರಕಿನಿಂದ

ನಮಗೆ ಕೆಟ್ಟದ್ದೇ ಹೊರತು ಒಳ್ಳೇದಲ್ಲ. ಆದಾಗ್ಗೂ ಒಂದೊಂದು

ದೇಶದಲ್ಲಿ ಒಂದೊಂದು ವಿಶೇಷವಾದ ಪದಾರ್ಥವಾಗುವುದು. ಹೆಚ್ಚಾ 

------------------------------------

೧೯೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ದ್ದನ್ನು  ಬೇರೇಕಡೆಗೆ ಕಳುಹಿಸಿ, ಬೇಕಾದ್ದನ್ನು ತಂದುಕೊಂಡರೆ,

ಜನರು ವಿಶೇಷ ಸುಖವಾಗಿರಬಹುದು.


ಸುಮತಿ- ಏನೂ ಆಗದೇ ಇರತಕ್ಕ ಉತ್ತರಪ್ರಾಂತ್ಯದ ಕೊನೆ

ಯಲ್ಲಿ ಇದ್ದದನ್ನೇ ತಿಂದುಕೊಂಡು ಜನರು ತೃಪ್ತರಾಗಿದಾರೆಂದು ಹೇಳಿ

ದೀರಷ್ಟೆ.


ಜೋಯಿಸ--ಹವುದು, ಆ ಉತ್ತರಪ್ರಾಂತ್ಯದಲ್ಲಿ ಚಳಿ ಬಹು

ಹೆಚ್ಚು. ಹಿಮ ಯಾವಾಗಲೂ ಬೀಳುವುದು. ಅದು ಗಟ್ಟಿಯಾಗಿ ಗೆಡ್ಡೆ

ಯಾಗುವುದು. ಕರಗುವುದೇ ಇಲ್ಲ. ಅಲ್ಲಿ ಯಾವ ಗಿಡವೂ ಬೆಳೆಯು

ವುದಿಲ್ಲ. ಆದ್ದರಿಂದ ಮನೇಕಟ್ಟು ವುದಕ್ಕೆ ಮರ ಸಿಕ್ಕುವುದಿಲ್ಲ. ಆದರೆ

ಇತರ ದೇಶದಿಂದ ಕೊಚ್ಚಿಕೊಂಡು ಬಂದು, ಸಮುದ್ರತೀರದಲ್ಲಿ ಬಿದ್ದಿ

ರುವ ಮರವನ್ನು ತಂದು ಅದನ್ನು ನಿಲ್ಲಿಸಿ, ಮೇಲೆ ಮಣ್ಣ ಬಳಿಯು

ವರು. ಕಲ್ಲಿನಲ್ಲಿಯೂ ಮಣ್ಣಿನಲ್ಲಿಯೂ ಗೋಡೆಯನ್ನು ಕಟ್ಟುವರು.

ಇಂಥಾ ಗುಡಿಸಿಲಿನಲ್ಲಿ ಜನರು ವಾಸಮಾಡುವರು. ಮನೆಯೊಳಗೆ ಒಂದು

ದೀಪ ಯಾವಾಗಲೂ ಉರಿಯುತ್ತಲೇ ಇರುವುದು. ಅದರಿಂದ ಜನರಿಗೆ

ಬೆಳಕು ಉಂಟಾಗುವುದು. ಅವರ ಅಡಿಗೆಯೆಲ್ಲಾ ಅದರಲ್ಲಿ ಆಗುವುದು.

ಮತ್ತು ಮನೆಯೆಲ್ಲಾ ಬೆಚ್ಚಗೆ ಆಗುವುದು. ಚಳಿಯಿಂದ ನೀರೆಲ್ಲಾ

ಗಟ್ಟಿಯಾಗುವುದು. ಸಮುದ್ರದಮೇಲೆ ಹಿಮದಗೆಡ್ಡೆಯು ಪರ್ವತದಹಾಗೆ

ತೇಲುತ್ತಾ ಇರುವುದು. ಅವುಗಳು ಗಾಳಿಯ ದೆಸೆಯಿಂದ ಒಂದರಮೇಲೆ

ಒಂದು ಬೀಳುವುದು. ಇದರ ಮಧ್ಯೆ ಹಡಗು ಮೊದಲಾದ್ದು ಸಿಕ್ಕಿದರೆ

ಚೂರುಚೂರಾಗುವುದು. ಈ ಮಂಜಿನ ಬೆಟ್ಟಗಳಮೇಲೆ ಬಿಳೀಕರಡಿ

ಮಲಗಿಕೊಂಡು ನಿದ್ರೆಮಾಡುತಿರುವುದು.


ಮದನ--ಇಂಥಾ ದೇಶದಲ್ಲಿ ಜನರು ಏನನ್ನು ತಾನೆ ತಿಂದು

ಬದುಕಿಯಾರು?


ಜೋಯಿಸ-.-ಆ ಉತ್ತರಸಮುದ್ರದಲ್ಲಿ ಇನ್ನೇನೂ ಸಿಕ್ಫುವುದಿಲ್ಲ.

ಒಂದು ವಿಧವಾದ ಮೀನು ಮಾತ್ರ ಸಿಕ್ಕುವುದು. ಇದರಿಂದ ಅವರಿಗೆ

ಬೇಕಾದ್ದೆಲ್ಲಾ ದೊರೆಯುವುದು. ಅದರ ಮಾಂಸದಿಂದ ಹೊಟ್ಟೇ ತುಂಬಿ

ಕೊಳ್ಳುವರು. ಅದರ ಕೊಬ್ಬು ದೀಪಕ್ಕೆ ಎಣ್ಣೆಯಾಗುವುದು, ಅದರ 

-------------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೧೯೯ 


ಚಕ್ಕಳವನ್ನೇ ಮನೆಯ ಒಳಗಡೇಗೋಡೆಗೆ ಅಂಟಿಸುವರು. ಇದರೆ

ಮೇಲೆ ನೀರು ಕೆಂದುವುದಿಲ್ಲ ಇಂಥಾ ಉಪಯೋಗವಾದ ಜಂತು

ವನ್ನು ಹಿಡಿಯುವುದೇ ಜನರ ಮುಖ್ಯವಾದ ಕೆಲಸ. ಆ ಸಮುದ್ರದಲ್ಲಿ

ತಿಮಿಂಗಿಲವೆಂಬ ಒಂದು ವಿಧವಾದ ಜಲಜಂತು ಸಿಕ್ಕುವುದು. ಇದು

ಈವರೆಗೆ ನಾವು ಕಂಡದ್ದರಲ್ಲಿ ಅತ್ಯಂತ ದೊಡ್ಡಮೃಗವಾಗಿದೆ. ಉದ್ದ

ದಲ್ಲಿ ಅರುವತ್ತು ಎಪ್ಪತ್ತು ಮೊಳ ಇರುವುದು; ಸಮುದ್ರದಮೇಲೆ ಕಾಣಿ

ಸುವ ಒಂದು ಚಿಕ್ಕ ಬೆಟ್ಟವೋ ಎನ್ನುವ ಹಾಗೆ ನೀರಿನಮೇಲೆ ತೇಲುತಿ

ರುವುದು. ಅದರ ತಲೆಯಲ್ಲಿ ಎರಡು ತೂತು ಇದೆ. ಆ ತೂತಿನಿಂದ

ಕಾರಂಜಿಹಾರಿದಂತೆ ನೀರನ್ನು ಹಾರಿಸುತ್ತಲೇ ಇರುವುದು. ಅದರ

ಬಾಲದಿಂದ ಒಂದುಸಾರಿ ನೀರನ್ನು ಬಡಿದರೆ ಒಂದು ದೊಡ್ಡ ಬಿರುಗಾಳಿ

ಎದ್ದಹಾಗೆ ಗಾಳಿ ಹೊರಟು ಸಮುದ್ರ ಉಕ್ಕುವದು. ಯಾವಾಗ

ಲಾದರೂ ಅಕಸ್ಮಾತ್ತಾಗಿ ಇದಕ್ಕೆ ಹಡಗು ಸಿಕ್ಕಿದರೆ, ಅದನ್ನು ತಲೆ

ಕೆಳಗೆ ಮಾಡುವುದು ವಿನಾ ಇನ್ನು ಯಾವ ಕೆಟ್ಟತನಕ್ಕೂ ಇದು ಬರು

ವುದಿಲ್ಲ. ಇದು ಮೀನನ್ನೇ ತಿಂದೇ ಜೀವಿಸುವುದು. ಇಂಥಾ ಮೃಗ

ವನ್ನು ಹಿಡಿದು ಕೊಲ್ಲುತಾರೆ. ಆ ದೇಶದವರು ಹೊಟ್ಟೆಗಿಲ್ಲದೆ, ಅದನ್ನು

ಹಿಡಿಯುತಾರಾದ್ದರಿಂದ, ಅವರು ಅಷ್ಟು ಆಕ್ಷೇಪಣೆಗೆ ಗುರಿಯಾಗು

ವುದಿಲ್ಲ. ಇತರ ಜನರು ಯಾಕೆ ಆ ಕೆಲಸಕ್ಕೆ ಹೋಗಬೇಕು? ಯಾಕೆಂ

ದರೆ ಅದರಿಂದ ಒಂದು ವಿಧವಾದ ಎಣ್ಣೆ ಹೊರಡುವುದು. ಅದು ಅನೇಕ

ಕೆಲಸಕ್ಕೆ ಉಪಯೋಗವಾಗುವುದು. ಮೇಲೂ, ತಿಮಿಂಗಿಲದ

ಮೂಳೆಯು ಬಹು ಗಟ್ಟಿಯಾಗಿಯೂ ವಿಶೇಷವಾಗಿ ಬಗ್ಗತಕ್ಕದ್ದಾ

ಗಿಯೂ ಇರುವಕಾರಣ, ಅದರಿಂದಲೂ ಬಹಳ ಉಪಯೋಗ ಉಂಟು.


ಇಂಥಾ ಮೃಗವನ್ನು ಕೊಲ್ಲುವುದು ಬಹು ಕಷ್ಟವಾದ ಕೆಲಸವೇ

ಸರಿ. ಜನರು ಹಡಗಿನಮೇಲೆ ಕೂತು ಹೊರಡುವರು. ತಿಮಿಂಗಿಲ

ವನ್ನು ದೂರದಲ್ಲಿಯೇ ಕಂಡಕೂಡಲೆ ೮-೧೦ ಜನ ದೋಣಿಯಲ್ಲಿ

ಕೂತು ಅದರ ಸಮಾಪಕ್ಕೆ ಹೋಗುವರು. ಅವರಲ್ಲಿ ಒಬ್ಬನು ಒಂದು

ಹಗ್ಗದ ಕೊನೆಗೆ ಕೊಕ್ಕೆ ಯಹಾಗಿರುವ ಒಂದು ಹರಿತವಾದ ಆಯುಧ

ಎನ್ನು ಕಟ್ಟ ಅದನ್ನು ತಿಮಿಂಗಿಲದಕಡೆ ಎಸೆಯುವನು. ಕೂಡಲೆ ಅದು 

--------------------------------------

೨೦೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಹಗ್ಗವನ್ನು ತನ್ನ ಮೈಗೆಲ್ಲಾ ಸುತ್ತಿಕೊಳ್ಳು ವದಕ್ಕೆ ಮೊದಲುಮಾಡಿ,

ನೀರಿನೊಳಕ್ಕೆ ಹೊರಟು ಹೋಗುವುದು. ಅದು ಎಷ್ಟು ಎಳೆದರೂ

ಬರುವ ಹಾಗೆ ಹಗ್ಗವನ್ನೂ ಉದ್ದವಾಗಿ ಬಿಡುವರು. ಹೀಗೆ ತಾನು

ಹಾಕಿಕೊಂಡ ಕಟ್ಟನ್ನು ತಾನು ಸಹಿಸಲಾರದೆ ಮೇಲಕ್ಕೆ ಏಳುವುದು.

ಮತ್ತೆ ಜನರು ಹೋಗಿ ಹೀಗೆಯೇ ಹೊಸಕಟ್ಟು ಅದಕ್ಕೆ ಬೀಳುವಹಾಗೆ

ಮಾಡುವರು. ಈ ಬಂಧದಿಂದ ತಾನಾಗಿಯೇ ಆ ಮಹಾಜಂತುವು

ಸಾಯುವುದು.


ಸುಮತಿ--ಅದರ ಹತ್ತರಕ್ಕೆ ಹಡಗು ಹೋದರೆ ಅದನ್ನು ಮುಳು

ಗಿಸುವುದು ಹೊರತು ತಿಮಿಂಗಿಲವು ಇನ್ನು ಏನೂಮಾಡುವುದಿಲ್ಲವೆಂದು

ಹೇಳಿದಿರಿ. ಹಾಗಾದರೆ ಆ ನಿರಪರಾಧಿಯಾದ ಬಡಜಂತುವನ್ನು

ಯಾಕೆ ಕೊಲ್ಲಬೇಕು?


ಜೋಯಿಸ--ಅಯ್ಯ, ವಿಧವಿಧವಾದ ಪ್ರಯೋಜನದಮೇಲಿನ

ದೃಷ್ಟಿಯಿಂದ ಜನರು ಎಲ್ಲಾ ಕಾರ್ಯಗಳಿಗೂ ಪ್ರವೇಶಮಾಡುವರು.

ಇದನ್ನು ನೀನು ಅರಿಯಬೇಕಾದರೆ ಪ್ರಪಂಚ ಧರ್ಮವನ್ನು ನೀನು ಇನ್ನೂ

ಚೆನ್ನಾಗಿ ತಿಳಿಯಬೇಕು. ಅದು ಹಾಗಿರಲಿ. ಈ ತಿಮಿಂಗಿಲವು ಅನೇಕ

ಮೀನುಗಳನ್ನು ಕೊಲ್ಲುವುದು. ಇದು ಸಾಯುವುದರಿಂದ ಆ ನಿರಪ

ರಾಧಿಗಳಾದ ಮೀನುಗಳಿಗೆ ಸಂತೋಷವಾಗುವುದಿಲ್ಲವೆ? ಮತ್ತು ಆ

ಮಹಾ ಶೀತಪ್ರದೇಶದಲ್ಲಿ ಮತ್ತೆ ಏನೂ ಸಿಕ್ಚುವುದಿಲ್ಲವಾಗಿ ಜನರು

ಇದರ ಮಾಂಸವನ್ನು ತಿಂದು ಹೊಟ್ಟೇ ತುಂಬಿಕೊಳ್ಳುವರು.


ಮದನ-- ಅಷ್ಟು ಕಷ್ಟವನ್ನಾದರೂ ಪಟ್ಟುಕೊಂಡು ಅಂಥಾ

ಕೆಟ್ಟ ಪ್ರಾಂತ್ಯದಲ್ಲಿ ಜನರು ಯಾಕೆ ವಾಸಮಾಡಬೇಕು? ಸುಭಿಕ್ಷವಾಗಿ

ರುವ ಬೇರೇದೇಶಕ್ಕೆ ಯಾಕೆ ಹೋಗಿ ಸುಖನಾಗಿರಬಾರದು?


ಜೋಯಿಸ--ಅವರ ದೇಶವೇ ಅವರಿಗೆ ಸುಖವಾಗಿದೆ. ಇತರ

ದೇಶವನ್ನು ಅವರು ಒಲ್ಲರು. ಇತರ ದೇಶೀಯರನ್ನು ಕಂಡರೆ ಅವರಿಗೆ

ಸೇರುವುದಿಲ್ಲ.


ಮದನ. ಈ ಕಾಡು ಜನರಿಗೆ ತಮಗಿಂತಲೂ ಉತ್ತಮರಾದವ

ರನ್ನು ಕಂಡರೆ ಸೇರುವುದಿಲ್ಲವೆಂದರೇನು? ಇವರು ಎಷ್ಟು ಮಾತ್ರ

ದವರು? 

-----------------------------------

೧೫] ಸುಮತಿ ಮದನಕುಮಾರರ ಚರಿತ್ರೆ ೨೦೧


ಜೋಯಿಸ-- ನೀನು ಹಾಗೆ ತಿಳಿದಿದೀಯೆ. ಅವರು ಇತರರಿಗಿಂ

ತಲೂ ತಾವು ಬುದ್ಧಿ ವಂತರೆಂದು ತಿಳಿದುಕೊಂಡಿದಾರೆ. ಮಸಲ, 

ಈ ತಿಮಿಂಗಿಲನನ್ನು ಹಿಡಿಯುವುದರಲ್ಲಿ ಅವರ ಸಾಮರ್ಥ್ಯಕ್ಕೆ ಸಮಾನ

ವಾದ್ದು ಯಾರದೂ ಅಲ್ಲ. ಅವರೂ ಹಾಗೆಯೇ ಎಲ್ಲರಿಗಿಂತಲೂ ತಾವೇ

ಬುದ್ಧಿವಂತರೆಂದು ತಿಳಿದಿದಾರೆ. `


ಮದನ--ಅವರ ಅವಿವೇಕವನ್ನು ಅವರಿಗೆ ತೋರಿಸಿಕೊಟ್ಟು,

ಅವರಿಗೆ ಬುದ್ದೀ ಕಲಿಸಬೇಕೆಂದು ನನಗೆ ಇಷ್ಟವಿದೆ,


ಜೋಯಿಸ--ನಿನ್ನ ಊಳಿಗದವರಿಗಿಂತಲೂ ನೀನು ಎಷ್ಟೋ

ಬುದ್ಧಿವಂತನೆಂದು ನೀನು ತಿಳಿದುಕೊಂಡಿಲ್ಲವೊ? ಅವರನ್ನು ಅತಿ

ನಿಕೃಷ್ಟವಾಗಿ ನೀನು ಕಾಣುವುದಿಲ್ಲವೊ?


ಮದನ--ಅವರನ್ನು ಕಂಡರೆ ಪೂರ್ವದಲ್ಲಿ ನನಗಿದ್ದ ಅಸಹ್ಯ ಈಗ

ಇಲ್ಲ. ಆದಾಗ್ಯೂ ನಾನು ದೊರೆಮಗನಾದ್ದರಿಂದ ಅವರಿಗಿಂತಲೂ

ನಾನು ಉತ್ತಮ.


ಜೋಯಿಸ. -ದೊರೆಮಗ, ದೊರೆಮಗ, ಎಂದು ನೀನು ಹೇಳು

ತಲೇ ಇರುತೀಯೆ. ಅದಕ್ಕೆ ನನಗೆ ಇನ್ನೂ ಚೆನ್ನಾಗಿ ಅರ್ಥವಾಗಲಿಲ್ಲ.


ಮದನ--ಯಾವ ಕೆಲಸವನ್ನೂ ಮಾಡದೆ ಇರುವಂಥಾ ಮತ್ತು

ನಮ್ಮ ಅಪ್ಪಾಜಿಯ ಸಮೀಪದಲ್ಲಿಯೂ ನಮ್ಮ ಅಮ್ಮಯ್ಯನ ಸಮೀಪ

ದಲ್ಲಿಯೂ ಊಳಿಗದವರು ಕಾದುಕೊಂಡು ನಿಂತಿರುವ ಹಾಗೆ ಯಾರ

ಸಮೀಪದಲ್ಲಿ ನಿಂತಿರುತಾರೆಯೋ ಅಂಥಾ ಮನುಷ್ಯನು ದೊರೆಮಗ. 


ಜೋಯಿಸ--ಇಂಥಾ ಮನುಷ್ಯನು ಇತರರನ್ನು ತಿರಸ್ವಾರಭಾವ

ದಲ್ಲಿ ಕಾಣಬಹುದೊ?


ಮದನ-..ಆ ಮಾತನ್ನು ನಾನು ಆಡಲಿಲ್ಲ. ಆದರೆ ದೊರೆಮ 

ಗನು ಇತರರಿಗಿಂತಲೂ ಶ್ರೇಷ್ಟ.


ಜೋಯಿಸ---ಯಾತರಲ್ಲಿ ಶ್ರೇಷ್ಠ? ಆರಂಬವನ್ನು ಮಾಡಿ ದವಸಾ

ಬೆಳೆಯುವುದರಲ್ಲಿಯೆ? ಬಟ್ಟೆ ನೆಯ್ಯುವುದರಲ್ಲಿಯೆ? ಮನೆಕಟ್ಟುವುದರ

ಲಿಯೆ? ಯಾತರಲ್ಲಿ?


ಮದನ--ದೊರೆ ಮಕ್ಕಳು ಮನೇ ಕಟ್ಟುವುದೂ ಇಲ್ಲ, ಆರಂಬ.

ಮಾಡುವುದೂ ಇಲ್ಲ ಬಟ್ಟೇ ನೆಯ್ಯುವುದೂ ಇಲ್ಲ. 

------------------------------------

೨೦೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಜೋಯಿಸ. ತಿಳುವಳಿಕೆಯಲ್ಲಿ ಶ್ರೇಷ್ಠವೊ? ನೀನು ಇಲ್ಲಿಗೆ

ಬಂದಾಗ ನಿನಗೆ ತಿಳುವಳಿಕೆ ಎಲ್ಲರಿಗಿಂತಲೂ ಹೆಚಾಗಿತ್ತೆ?


ಮದನ--ನಾನು ಇಲ್ಲಿಗೆ ಬಂದಾಗ ನನಗೆ ಇಷ್ಟು ತಿಳುವಳಿಕೆ

ಇರಲಿಲ್ಲ.


ಜೋಯಿಸ--ಏನೂ ಅರಿಯದೇ ಇದ್ದಾಗ್ಗೂ, ಏನೂಮಾಡುವು

ದಕ್ಕೆ ಬರದೇ ಇದ್ದಾಗ್ಗೂ, ನೀನುಮಾತ್ರ ಶ್ರೇಷ್ಠನಾಗಬಹುದು ;

ಇತರರಿಗಿಂತಲೂ ಒಂದುವಿಷಯವನ್ನಾ ದರೂ ಚೆನ್ನಾಗಿ ತಿಳಿದುಕೊಂ

ಡಿದ್ದ ಜನರುಮಾತ್ರ ಅನ್ಯದೇಶದವರಾಗಿ ತಿಮಿಂಗಿಲಗಳನ್ನು ಹಿಡಿಯು

ವುದರಲ್ಲಿ ಅಷ್ಟು ಚತುರರಲ್ಲದೇ ಇರತಕ್ಕ ಇತರರಿಗಿಂತಲೂ ತಾವು

ಶ್ರೇಷ್ಠರು ಎಂದು ಹೇಳಿಕೊಳ್ಳ ಕೂಡದೊ? ನೀನು ಯಾವ ಕೆಲಸವನ್ನೂ

ಮಾಡಲಾರೆ; ನೀನು ಈಜ ಬಲ್ಗೆಯ? ದೋಣಿಯನ್ನು ಕಟ್ಟಬ

ಲ್ಲೆಯ ? ತಿಮಿಂಗಿಲವನ್ನು ಹಿಡಿಯಬಲ್ಲೆಯ? ಹಸಿವನ್ನು ತಡೆಯಬ

ಲಲ್ಲೆಯ? ನೀನು ಏನಮಾಡಬಲ್ಲೆ ? ಯಾವ ಕೆಲಸವನ್ನೂ ಮಾಡದೇ

ಇರತಕ್ಕವನು ಹೇಗೆ ಶ್ರೇಷ್ಠನಾದಾನು?


ಮದನ--ಜೋಯಿಸರೆ, ಇದನ್ನೆಲ್ಲಾ ಕೇಳಿದರೆ ನನಗೆ ಏನೂ

ತಿಳಿಯದೆಂದು ತೋರುತ್ತೆ.


ಜೋಯಿಸ--ಇನ್ನುಮೇಲೆ ಹಾಗೆಯೇ ತಿಳಿದುಕೊಂಡಿರು.

....

೧೬ನೆ ಅಧ್ಯಾಯ.


ಹೀಗೆ ಕೆಲವುದಿನ ಕಳೆಯಿತು. ರಾಮಜೋಯಿಸನು ವರುಷಕ್ಕೆ

ಒಂದುಸಾರಿ ಆವೂರ ಜನರಿಗೆಲ್ಲಾ ಧಾತ್ರೀಹವನದ ಸಮಾರಾಧನೆ

ಯನ್ನು ಮಾಡಿಸುತಿದ್ದನು. ಆವೂರಲ್ಲಿದ್ದ ಬ್ರಾಹ್ಮಣರಿಗೇ ಅಲ್ಲದೆ,

ಇತರ ವರ್ಣದವರಿಗೂ ತೃಪ್ತಿಯಾಗಿ ಅನ್ನವನ್ನು ಹಾಕಿಸುತಿದ್ದನು.

ಅದಕ್ಕಾಗಿ ಒಂದುದಿನ ಜೋಯಿಸನ ಮನೆಯಿಂದ ಊರಿನವರಿಗೆಲ್ಲಾ

ಔತಣ ಬಂತು. ಬ್ರಾಹ್ಮಣರ ಹೆಂಗಸರು ಗಂಡಸರು ಎಲ್ಲರೂ ವಿಶಾಲ

ವಾದ ತೊಟ್ಟೀ ಮನೆಯಲ್ಲಿ ಕೂತುಕೊಂಡಿದ್ದರು, ಮತ್ತು ಇತರ ವರ್ಣಸ್ಥ

------------------------------------

೧೬] ಸುಮತಿ ಮದನಕುಮಾರರ ಚರಿತ್ರೆ ೨೦೩ 


ರೆಲ್ಲರೂ ತಮ್ಮ ಹೆಂಗಸರು ಮಕ್ಕಳುಗಳನ್ನು ಕರೆದುಕೊಂಡು ಬಂದು

ಬ್ರಾಹ್ಮಣರ ಊಟವಾಗಲೆಂದು ಕಾದುಕೊಂಡು ಹೊರಗಡೇ ಜಗಲಿಗಳ

ಮೇಲೆ ಕೂತಿದ್ದರು. ಜೋಯಿಸನು ಬಂದ ಅತಿಥಿಗಳನ್ನು ಬಡವರು

ಭಾಗ್ಯವಂತರು ಎಂದು ನೋಡದೆ ಒಬ್ಬೊಬ್ಬರನ್ನಾಗಿ ಎದುರುಗೊಂಡು

ಕರೆತಂದು ಅಲ್ಲಲ್ಲಿ ಎಡೆಮಾಡಿ ಕೂರಿಸಿ, ಅವರ ಕ್ಷೇಮಲಾಭವನ್ನು

ವಿಚಾರಿಸಿ ಅವರ' ಗೃಹಕೃತ್ಯವನ್ನೆ,ಲ್ಲಾ ಕೇಳಿ ಅವರನ್ನು ಆದರಿಸು

ತಿದ್ದನು.


ಹೀಗೆ ಜೋಯಿಸನು ಬೇರೇ ಕೆಲಸದಲ್ಲಿ ಇದ್ದನಾದಕಾರಣ, 

ಮದನನಿಗೆ ಸ್ಪಲ್ಪ ಬಿಡುವಾಯಿತು. ಆಗ ಇವನು ಸುಮ್ಮನಿರದೆ

ಜೋಯಿಸನ ಮನೆಯಲ್ಲಿದ್ದ ಒಂದು ಹೆಂಗರುವನ್ನು ಬಿಚ್ಚಿಕೊಂಡು

ಬಂದು ಒಂದು ಮರದ ತುಂಡಿಗೆ ಕಟ್ಟಿ ಹೊಡೆಯುವುದಕ್ಕೆ ಮೊದಲು

ಮಾಡಿದನು. ಅಲ್ಲಿದ್ದ ಹುಡುಗರೆಲ್ಲಾ ಮದನನು ಏನ ಮೂಡುತಾನೋ

ನೋಡಬೇಕೆಂದು ಇವನ ಸುತ್ತಲೂ ನಿಂತುಕೊಂಡಿದ್ದರು, ಇವನು

ಕರುವನ್ನು ಕಟ್ಟಿಗೆಯಿಂದ ಗಟ್ಟಿಯಾಗಿ ಹೊಡೆಯಲು, ಎಂದಿಗೂ

ಭಾರವನ್ನು ಎಳೆದ ಅಭ್ಯಾಸವನ್ನೇ ಕಾಣದಂಥಾ ಆ ಹೆಂಗರು ಮನಸ್ಸು

ಬಂದಕಡೆಗೆ ಇವನನ್ನು ಅಡ್ಡಾದಿಡ್ಡಿ ಯಾಗಿ ಎಳೆದುಕೊಂಡು

ಹೋಯಿತು. ಆ ವೇಗದಲ್ಲಿ ಮದನನ ಕೈಕಾಲುಗಳೆಲ್ಲಾ ತರೆದುಹೋ

ದವು. ಕೊನೆಗೆ ಕರುವು ಇವನನ್ನು ಎಳೆದುಕೊಂಡುಹೋಗಿ ದೊಡ್ಡ

ಹಳ್ಳಕ್ಕೆ ಕೆಡವಿತು. ಮೈಯೆಲ್ಲಾ ಕೊಚ್ಚೆಯಾಯಿತು. ಇವನ ಹಿಂದೆ,

"ಹೋ" ಎಂದು ಕೂಗಿಕೊಡು ಓಡಿಬರುತಿದ್ದ ಹುಡುಗರೆಲ್ಲಾ ಹಾಸ್ಯ

ಮಾಡಿ ಗೊಳ್‌ ಎಂದು ಗಟ್ಟಿಯಾಗಿ ನಕ್ಕರು. ಮದನನಿಗೆ ಈ ಹಾಸ್ಯ

ದಿಂದ ನಾಚಿಕೆ ಉಂಟಾಗಿ ಕೊನೆಗೆ ಅದು ಕೋಪವನ್ನು ಎಬ್ಬಿಸಿತು.

ದೊರೆಮಗನು ಹಳ್ಳದಿಂದ ಮೇಲಕ್ಕೆ ಎದ್ದು ಆ ಹುಡುಗರು ನಿಂತಿದ್ದ :

ಕಡೆಗೆ ಬಂದು ಒಬ್ಬೊಬ್ಬರನ್ನಾಗಿ ಹಿಡಿದು ಹೊಡೆಯುವುದಕ್ಕೆ ಮೊದಲು

ಮಾಡಿದನು. ಕೆಲವರಿಗೆ ಒಳ್ಳೇ ಪೆಟ್ಟು ಬಿತ್ತು. ಇನ್ನು ಕೆಲವರು

ಮದನನ ಕೈಗೆ ಸಿಕ್ಕದೆ ಕೂಗುತಾ ಓಡಿಹೋದರು. ಈ ಮದನನು

ಭಾಗ್ಯವಂತರ ಮಗನಲ್ಲಾ, ಇವನನ್ನು ತಾವು ಹಿಂತಿರುಗಿ ಹೊಡೆದರೆ 

---------------------------------------

೨೦೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ತಮ್ಮನ್ನು ಆಮೇಲೆ ಏನಮಾಡಿಯಾರೋ ಎಂಬ ಭಯದಿಂದ ಇವನ

ಕೈಲಿ ಏಟತಿಂದು ಸುಮ್ಮನೇ ಹೊರಟುಹೋದರು. ಈ ಗದ್ದಲ ಹೆಚ್ಚಾಗಿ,

ಮಡಿ ಉಟ್ಟುಕೊಂಡು ಎಲ್ಲರಿಗೂ ಬಡಿಸುತಿದ್ದ ಜೋಯಿಸನ ಕಿವಿಗೆ

ಮುಟ್ಟಿತು. ಜೋಯಿಸನು ತನ್ನ ಮನೇ ಬಾಗಿಲಿಗೆ ಬಂದು ನೋಡಲು

ಮೈಯನ್ನು ತರೆಸಿಕೊಂಡು ಕೊಚ್ಜೆಯಾಗಿ ಶರೀರವೆಲ್ಲಾ ನನೆದು

ಹೋಗಿದ್ದ ಮದನನು ಮನೇಕಡೆಗೆ ಓಡಿ ಬರುತಿದ್ದನೆ, ರಾಮಜೋಯಿ

ಸನು ಅವನನ್ನು ಕರೆದುಕೊಂಡು ಹೋಗಿ ಸ್ನಾನವನ್ನು ಮಾಡಿಸಿ ಒಣ

ಗಿದ್ದ ಬಟ್ಟೆ ಯನ್ನು ಕೊಡಿಸಿ, ಆಗ ಯಾವ ಮಾತನ್ನೂ ಆಡದೆ ಸುಮ್ಮನೆ

ಆದನು. ತರುವಾಯ ಆ ಸಂಗತಿಯನ್ನೆಲ್ಲಾ ಕೇಳಿ ತಿಳಿದುಕೊಂಡು

ಮಾರನೇ ದಿನ ಮದನನನ್ನು ನೋಡಿ--ಮದನ, ನೀನು ನಿನ್ನೇದಿನ

ಬಹಳ ಚೆನ್ನಾಗಿ ಕರುವನ್ನು ಹೊಡೆದು, ಕೈಲಾಗದ ಹುಡುಗರನ್ನು

ಚಚ್ಚಿ, ಹೆಚ್ಚಾದ ಪರಾಕ್ರಮವನ್ನು ತೋರಿಸಿದಹಾಗಿದೆ ಎಂದನು.


ಮದನ-- ಜೋಯಿಸರ ಆ ಕೆಟ್ಟ ಹುಡುಗರೆಲ್ಲಾ ನನ್ನನ್ನು

ಹಾಸ್ಯಮಾಡಿಕೊಂಡು ನಕ್ಕರು. ಅದಕ್ಟೋಸ್ಕರ ನನಗೆ ಕೋಪಬಂತು.


ಜೋಯಿಸ.--ಅವರು ನಕ್ಕದ್ದರಿಂದ ನಿನಗೇನು ಕಡಮೆಯಾ

ಯಿತು?


ಮದನ-- ಇತರರು ನಮ್ಮನ್ನು ನೋಡಿ ನಕ್ಕರೆ ಕೋಪ ಬರದೇ

ಯಿರುವುದಿಲ್ಲ.


ಜೋಯಿಸ-- ಇದನ್ನು ನಿವಾರಣಮಾಡಿಕೊಳ್ಳುವುದಕ್ಕೆ ಎರಡು

ಮಾರ್ಗ ಉಂಟು. ಇತರರು ಹಾಸ್ಯಮಾಡುವ ಕೆಲಸಕ್ಕೆ ನಾವು ಹೋಗ

ಲೇಬಾರದು, ಅಥವಾ ಹೋದರೂ ಅವರು ಮಾಡಿದ ಹಾಸ್ಯವನ್ನು ಸಹಿಸಿ

ಕೊಂಡು ಸುಮ್ಮನೇ ಇರಬೇಕು.


ಮದನ--ಅಂಥಾ ಸಂದರ್ಭದಲ್ಲಿ ಯಾರೂ ಸುಮ್ಮನೇ ಇರುವುದ

ಕ್ಳಾಗುವುದಿಲ್ಲ.


ಜೋಯಿಸ--ನಿನ್ನಂಥಾ ಕೋಪಿಷ್ಠ ಈ ಪ್ರಪಂಚದಲ್ಲಿ ಯಾರೂ

ಇಲ್ಲ. ಚಳಿಯಾದ ಸೀಮೆಯಲ್ಲಿರುವ ಜನರೆಲ್ಲಾ ವರಟರೆಂತಲೂ,

ನೀನು ಬಹು ಬುದ್ಧಿಶಾಲಿ ಎಂತಲೂ ಅವರು ನಿನಗೆ ಸಮಾನವಲ್ಲ 

------------------------------------

೧೭] ಸುಮತಿ ಮದನಕುಮಾರರ ಚರಿತ್ರೆ ೨೦೫ 


ವೆಂತಲೂ ಆದಿನ ಹೇಳಿಕೊಂಡೆ; ಆದರೆ ಆ ಬಡಜನರು ಎಲ್ಲರೂ ದೊರೆ

ಮಕ್ಕಳಲ್ಲ. ಆದಾಗ್ಲೂ ಅವರಲ್ಲಿರುವ ನಡತೆ ದೊರೆಮಕ್ಕಳಲ್ಲಿ ಇದು

ವರೆಗೂ ಕಾಣಬಂದಿಲ್ಲ. ಅವರನ್ನು ಯಾರಾದರೂ ಹಾಸ್ಯಮಾಡಿದರೆ,

ನಿನ್ನಹಾಗೆ ಅವರು ಕೋಪಮಾಡಿಕೊಡು ಸಿಕ್ಕಿದವರನ್ನೈಲ್ಲಾ ಹೊಡೆ

ಯುವುದಿಲ್ಲ. ಒಬ್ಬನನ್ನು ಒಬ್ಬ ಹಾಸ್ಯಮಾಡಿದರೆ, ಅವರಿಬ್ಬರೂ

ಒಂದು ಮನೆಯಲ್ಲಿ ತಮ್ಮ ಜನರ ಸಭೆಸೇರಿಸಿ, ಅವರ ಮುಂದೆ ಇಬ್ಬ

ರಲ್ಲಿ ಒಬ್ಬನು ತನ್ನ ಪ್ರತಿಕಕ್ಷಿಯನ್ನು ಹಾಸ್ಯಮಾಡಿ ಪದಗಳನ್ನು

ಹಾಡುವನು.  ಹೀಗೆ ಹಾಡಿ ಹಾಡಿ ಅವನಿಗೆ ಸಾಕಾದಮೇಲೆ ಪ್ರತಿ

ಕಕ್ಷಿಯು ಅದೇರೀತಿಯಲ್ಲಿ ಇವನಮೇಲೆ ಪದವನ್ನು ಹಾಡುವನು.

ಇವರಿಬ್ಬರಲ್ಲಿ ಯಾರ ಪದಗಳು ಸಭೆಯವರಿಗೆ ಹೆಚ್ಚು ನಗುವನ್ನು

ಉಂಟುಮಾಡುವುದೋ ಅವನೇ ಜೈಸಿದನೆಂದು ಹೇಳಿ ಅವನಿಗೆ ಬಹು

ಮಾನವನ್ನು ಮಾಡುವರು. ಆ ವರಟು ಜನರ ವ್ಯಾಜ್ಯ ಹೀಗೆ ವ್ಯವ

ಸ್ಥೆ ಯಾಗುವುದೇ ಹೊರತು ಸಿಕ್ಕಿದವರನ್ನು ಹಿಡಿದು ಹೊಡೆಯುವುದ

ರಿಂದ ಅಲ್ಲ. ಬಡವರು ನಿರಪರಾಧಿಗಳಾಗಿದ್ದಾಗ್ಲೂ ಸರಿಯೆ ಅವರನ್ನು

ಹಿಡಿದು ಹೊಡೆಯುವ ಸುಗುಣ ದೊರೆಮಕ್ಕಳಲ್ಲಿಯೇ ಹೊರತು. ಆ

ವರಟು ಜನರಲ್ಲಿ ಇಲ್ಲ. ಈ ಮಾತನ್ನು ಕೇಳಿ ಮದನ ನಾಚಿಕೊಂಡು

ಸುಮ್ಮನಾದನು. 

...

೧೭ ನೆ ಅಧ್ಯಾಯ.


ಅತ್ತ ಮದನನ ತಂದೆಯಾದ ಅನಂಗರಾಜನ ಅರಮನೆಯಲ್ಲಿ

ನಡೆಯಬೇಕಾದ ಒಂದು ದೊಡ್ಡ ಮಹೋತ್ಸವವು ಸಮೀಪಿಸಿತು.

ದೊರೇ ಹೆಂಡತಿಯಾದ ಮೀನಾಂಬಕೀದೇವಿಯ ತಂಗಿಯಾದ ಕಮ

ಲಾಂಬಕೀದೇವಿಯನ್ನು ಕೋಡೂರು ಪಾಳಯಗಾರನಾದ ಮಲ್ಲನಾಯ

ಕನಿಗೆ ಕೊಟ್ಟು ಮದುವೆಯಾಗಿತ್ತು. ಕಮಲಾಂಬಕಿಯು ಬಸಿರಾಗಿ

ದ್ದಳು. ಮೀನಾಂಬಕಿಯು ತನ್ನ, ತಂಗಿಯನ್ನು ಕರೆತಂದು ಅಕ್ಷತೆಪ್ರ 

ಸ್ತವನ್ನು ವಿಶೇಷ ವೈಭವದಿಂದ ಜರುಗಿಸಬೇಕೆಂದು ಯೋಚಿಸಿದಳು. 

-------------------------------------

೨೦೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಇದಕ್ಕಾಗಿ ಬೇಕಾದ ಅಣಿಯನ್ನು ಅತಿ ಸಂಭ್ರಮದಿಂದ ಮಾಡಿದಳು.

ಒಂದು, ಶುಭಲಗ್ನವು ಗೊತ್ತಾಯಿತು. ಬಂಧುವರ್ಗಕ್ಕೆಲ್ಲಾ ಔತಣ

ಗಳು ಹೋಗಿ, ಅವರು ಒಬ್ಬೊಬ್ಬರಾಗಿ ಬರುತಾ ಇದ್ದರು. ಇಂಥಾ

ಉತ್ಸವಕಾಲದಲ್ಲಿ ರಾಜಕುಮಾರ ಇಲ್ಲದೇ ಇದ್ದರೆ ಸರಿಯಾಗಿದ್ದೀತೆ?

ಈ ಕಾಲದಲ್ಲಿಯೂ ಅತಿಶಯದ ಪುತ್ರನನ್ನು ಕರೆಸಿ ನೋಡದಿದ್ದರೆ

ಇನ್ನು ಯಾವಾಗತಾನೆ ಕರೆಸಬೇಕು? ಎಷ್ಟರಮಟ್ಟಿಗೆತಾನೆ ರಚನೆ

ಯಾಯಿತು, ಚಂದ್ರ ಇಲ್ಲದ ಇರುಳಿನಹಾಗೆ ಇರದೆ? ಆದ್ದರಿಂದ

ಮಗನನ್ನು ಕರೆತರುವುದಕ್ಕೆ ಆಳುಗಳನ್ನ್ಕೂ ಪಲ್ಲಕ್ಕಿಯನ್ನೂ ರಾಮ

ಜೋಯಿಸನ ಅಗ್ರಹಾರಕ್ಕೆ ಕಳುಹಿಸಿದರು.


ಈ ಪ್ರಸ್ತದ ಸಮಾಚಾರವೂ ಅದಕ್ಕಾಗಿ ರಾಜಕುಮಾರನನ್ನು

ಕರೆಯುವುದಕ್ಕೆ ಬರುವುದೂ ಸಹಾ ಮುಂಚಿತವಾಗಿಯೇ ರಾಮಜೋ

ಯಿಸನಿಗೆ ಗೊತ್ತಾಗಿತ್ತು. ವಿವೇಕದಲ್ಲಿ ಕಾಡಕಲ್ಲಿನ ಹಾಗೆ ಇದ್ದ ರಾಜ

ಪುತ್ರನನ್ನು ಅನೇಕ ಉಪಾಯಗಳಿಂದ ಸ್ವಲ್ಪಮಟ್ಟಿಗೆ ಸರಿಮಾಡಿ ವಿದ್ಯ

ವನ್ನು ಕಲಿಸಿದ್ದ ಜೋಯಿಸನು, ತಂದೇಮನೆಗೆ ಮದನನು ಹೋಗು

ವುದರಿಂದುಂಟಾಗುವ ಕೇಡನ್ನು ಯೋಚಿಸಿಕೊಂಡು, ಅವನನ್ನು ಕಳು

ಹಿಸುವುದಕ್ಕೆ ಇಷ್ಟವಿಲ್ಲದೇ ಇದ್ದನು. ಆದರೆ ಈ ಲೋಕದಲ್ಲಿ

ಒಂದೊಂದು ವೇಳೆ ನಮ್ಮ ಇಷ್ಟಕ್ಕೆ ವಿರೋಧವಾಗಿಯೂ  ನಡೆಯಬೇ

ಕಾಗುವುದು. ಆದ್ದರಿಂದ ತಂದೇಮನೆಗೆ ಹೋಗಿಬರುತೇನೆಂದು ಆಶೆ

ಯಿಂದ ಕೇಳಿಕೊಳ್ಳಲು ಬಂದ ಮದನಸಿಗೆ, ಆಗಲಿ ಎಂದು ಮನಸ್ಸಿ

ಲ್ಲದೆ ಅಪ್ಪಣೆಯನ್ನು ಕೊಡಬೇಕಾಯಿತು. ಆದರೆ ಮದನನಿಗೂ

ಸುಮತಿಗೂ ವಿಶೇಷವಾಗಿ ಸ್ನೇಹ ಬೆಳೆದಿತ್ತಾದಕಾರಣ, ಅವನನ್ನು ತನ್ನ

ಸಂಗಡ ಅರಮನೆಗೆ ಕಳುಹಿಸಬೇಕೆಂದು ಹಠ ಮಾಡಿದನು. ಇದಕ್ಕೂ

ರಾಮಜೋಯಿಸ ಒಪ್ಪಿದನು. ಹೀಗೆ ಈ ಇಬ್ಬರು ಹುಡುಗರೂ ಬನ

ವಾಸಿಗೆ ಬಂದು ತಲಸಿದರು.


ಮಗನು ಬಂದದ್ದು ಮೀನಾಂಬಕಿಗೆ ಬಹು ಸಂತೋಷವಾಯಿತು.

ದೊರೆಯ ನಂಟರೆಲ್ಲರೂ ಸಂಸಾರಸಮೇತವಾಗಿ ಪ್ರಸ್ತಕ್ಕೆ ಬಂದಿ

ದ್ದರು. ಅಕ್ಷತೇಪ್ರಸ್ತವು ವಿಶೇಷವಾಗಿ ಅಟ್ಟಹಾಸದಿಂದ ಜರುಗಿತು. 

----------------------------------

೧೭] ಸುಮತಿ ಮದನಕುಮಾರರೆ ಚರಿತ್ರೆ ೨೦೭ 


ಪದ್ಧತೀಪ್ರಕಾರ ಸಾಯಂಕಾಲ ಆರತಿಅಕ್ಷತೆಯು ಬಿಡದೇ ಎಳು

ದಿವಸ ನಡೆಯಿತು. ಆ ಕಾಲದಲ್ಲಿ ರಾಜಶ್ರೀಯರೇ ಬಹಳವಾಗಿ ಸೇರಿ

ಆ ವಿಭವವನ್ನು ನಡೆಯಿಸಿ ಹಾಡನ್ನು ಹೇಳಿ ವಿನೋದವಾಗಿ ಕಾಲವನ್ನು

ಕಳೆಯುತಿದ್ದರು. ಆ ಪೆಣ್ಮಣಿಯರ ಸಭೆಯಲ್ಲಿ ಓರೆದುರುಬಿನ

ವಯ್ಯಾರಿಯರು, ಸಣ್ಣ ಕುಂಕುಮದ ಬಿನ್ನಾಣಿಯರು, ಕೊಂಕು ಕುರು

ಳಿನ ಕುಲಕಲಾಟಯರು, ಹುಸಿನಗೆಯ ಸೊಗಸುಗಾತಿಯರು, ನುಣ್ಗಲ್ಲ

ದವಳು, ಎಸಳು ಮೂಗಿನವಳು, ಕೊಂಕುಗುರುಳಿನವಳು, ಉಂಗುಟ

ದಲ್ಲಿ ನೆಲವನ್ನು ಕೆರೆಯದಿದ್ದರೆ ತನ್ನ ಸೊಗಸು ಕಾಣುವದಿಲ್ಲವೆನ್ನುವಳು

ಹುಬ್ಬನ್ನು ಮೇಲಕ್ಕೆ ಎತ್ತಿ ಸ್ವಲ್ಪ ಗಂಟುಹಾಕಿಕೊಂಡು ಸ್ವಲ್ಪ ಸ್ವಲ್ಪ

ನಗುತಿರುವ ಬಿಂಕಗಾತಿ, ಎಣೆಗಂಟನ್ನು ಉದ್ದವಾಗಿ ಹಾಕಿಕೊಂಡು

ಅದಕ್ಕೆ ಹೂವನ್ನು ದಟ್ಟವಾಗಿ ಸುತ್ತಿ ಆ ಗಂಟನ್ನು ಬೆನ್ನಿನಮೇಲೆ

ಭುಜದಿಂದ ಭುಜಕ್ಕೆ ಉರುಳಿಸಿಯಾಡುತಿರುವ ಒಲಪಿನವಳು, ಓರೆ

ನೋಟದ ಕಪಟಿ ತಲೆಗಿಟ್ಟ ಒಡವೆಯ ಭಾರ ಹಿಂದಕ್ಕೆ ಜಗಿಯಲು

ತಲೆಯನ್ನು ಮುಂದಕ್ಕೆ ಬಗ್ಗಿಸಿಕೊಂಡಿರುವ ಹೊಸ ಮದುವಣ

ಗಿತ್ತಿ, ಕತ್ತಿಗೆ ಇಟ್ಟ ಒಡವೆಯ ಭಾರದಿಂದ ತಿರುಗುವುದಕ್ಕಾಗದೆ

ಕೊಂಚವಾಗಿ ದೇಹವನ್ನೇ ತಿರುಗಿಸಿ ನೋಡುತಿರುವ ಡಂಭದವಳು, 

ನೆವನೆವದಲ್ಲಿ ಸೆರಗನ್ನು ಜಾರಿಸಿ ತುಯಿದುತುಯಿದು ಹೊದೆಯುವ

ವಯ್ಯಾರಿ, ಕ್ಷಣಕ್ಷಣಕ್ಕೆ ಮುಖವನ್ನು ಒರಸಿಕೊಳ್ಳುವ ಸೊಗಸುಗಾತಿ, 

ಕೆಳಗಡೇ ತುಟಿಯನ್ನು ಆಗಾಗ್ಗೆ ಹಿಡಿದು ನೋಡಿಕೊಳ್ಳುವ ಚತುರೆ,

ಸಮಯ ಬಂದಾಗ ಗಂಡಸರ ಮುಖವನ್ನು ನೋಡಿ ಬಂದ ಹುಸಿನಗು

ವನ್ನು ಮರೆಮಾಚಿಕೊಳ್ಳುವುದಕ್ಕೆ ತುಟಿ ಎರಡನ್ನೂ ಮುಡಿಕಚ್ಚಿಕೊ

ಳ್ಳುವ ಚಪಲೆ, ನಿಜವಾದ ಧ್ವನಿಯನ್ನು ಮರೆಸಿಕೊಂಡು ಮಾತನಾಡುವ

ಮಾಯಾಂಗಕ್ಕೆ ಏನೂ ಇಲ್ಲದೆ ಸುಮ್ಮನೆ ಕೂತಿರುವ ಗರತಿ, ಇವರೆ

ಲ್ಲರೂ ಸಭೆ ಸೇರಿದ್ದರು, ಪ್ರತಿಯೊಬ್ಬ ಆರಸಿತ್ತಿಯ ಹತ್ತಿರದಲ್ಲೂ

ಒಬ್ಬಳು ಎಲೆ ಅಡಕೆಯನ್ನು ನೀಡುತ್ತಲೂ, ಒಬ್ಬಳು ಕಾಳಂಜಿಯನ್ನು

ಹಿಡಿಯುತ್ತಲೂ, ನಿಂತಿರುತಿದ್ದರು, ಈ ರಾಣಿವಾಸದ ಅರಸಿಯರೆಲ್ಲರೂ

ಕೈವಸ್ತ್ರವನ್ನೂ ದೊಡ್ಡದಾದ ಚಿನ್ನದಲ್ಲಿ ಮಾಡಿದ ನೆಸ್ಯದ ಡಬ್ಬಿಗಳನ್ನೂ

-------------------------------------

೨೦೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಹಿಡಿದು ಆಗಾಗ್ಗೆ ಡಬ್ಬಿಯನ್ನು ತೆಗೆದು ನೆಸ್ಯದ ಚುಟಗಿಯನ್ನು

ಸೇದುತಾ ಇದ್ದರು.


ಈ ರೀತಿಯಲ್ಲಿದ್ದ ಹೆಂಗಸರ ಮಂಡಳಿಯೊಳಕ್ಕೆ, ರಾಜಪುತ್ರನು

ತಕ್ಕ ಶೃಂಗಾರವನ್ನು ಮಾಡಿಕೊಂಡು ಬಂದನು. ಆ ರಾಜಾಂಗನೆಯ

ರೆಲ್ಲರ ದೃಷ್ಟಿಯೂ ಇವನ ಕಡೆಗೆ ತಿರುಗಿತು. ಒಬ್ಬಳು ಅವನ ಕಣ್ಣು

ನೋಡು, ಎಷ್ಟು ಅಗಲವಾಗಿದೆ; ಎಂದಳು. ಇನ್ನೊಬ್ಬಳು-- ಆ

ಮೂಗೂ, ಆ ಹಲ್ಲುಬಾಯಿದೆರೆಯೂ ರಾಜಲಕ್ಷಣಗಳೇ ಸರಿ, ಎಂದಳು.

ಇನ್ನೊಬ್ಬಳು-ಅವನ ನಡೆಗೆ ಎಷ್ಟು ಠೀವಿಯಾಗಿದೆ ಎಂದಳು. ಒಬ್ಬ ಅರ

ಸಿತ್ತಿಯು--ಹೆತ್ತರೆ ಇಂಥಾ ಮಗನನ್ನು ಹೆರಬೇಕು, ಎಂದು ನಿಟ್ಟುಸಿರ

ಬಿಟ್ಟಳು. ಇನ್ನೊಬ್ಬ ರಾಜಸ್ತ್ರೀಯು--ಅದಕ್ಕೂ ಪುಣ್ಯವಿರಬೇಡವೆ?

ಪೂರ್ವ ಜನ್ಮದಲ್ಲಿ ಈಶ್ವರನ ಪೂಜೆ ಮಾಡಿರಬೇಕು ; ಎಂದಳು. ಅವನ

ತಲೇಕೂದಲು ಮೊದಲುಮಾಡಿಕೊಂಡು ಅಂಗುಷ್ಟದವರೆಗೂ ಇವನ

ಸೌಂದರ್ಯವನ್ನು ಎಲ್ಲರೂ ಹೊಗಳುವುದಕ್ಕೆ ಮೊದಲು ಮಾಡಿದರು.

ಒಬ್ಬ ಬಾಲೆಯು ತಟ್ಟನೆ ಎದ್ದು ಬಂದು ಅವನ ಕೆನ್ನೆಗೆ ಮುತ್ತು 

ಕೊಟ್ಟಳು. ಒಬ್ಬ ದಿಟ್ಟಿಗಾತಿಯು ಅವನನ್ನು ಎತ್ತಿಕೊಂಡು. ಅಪ್ಪಾಜಿ,

ನನ್ನನ್ನು ಮದುವೆಯಾಗುತೀರ? ಎಂದು ನಗುತಾ ಹಾಸ್ಯಮಾಡಿದಳು.

ಅವಳ ಹತ್ತಿರ ನಿಂತಿದ್ದ ಚೆಲುವರಸಿ ಎಂಬುವಳು-- ನಾನು ಒಲ್ಲೆ, 

ಚೆಲುವರಸಿಯನ್ನು ಮದುವೆಯಾಗುತೇನೆ, ಎಂದು ಹೇಳಿ ಪುಟ್ಟು

ಸ್ವಾಮಿ, ಎಂಬದಾಗಿ ಹೇಳಿಕೊಟ್ಟಳು, ಇದನ್ನೆಲ್ಲಾ ಕೇಳಿ ಮದನನಿಗೆ

ಮೈ ಉಬ್ಬಿ ಹೋಯಿತು. ಬಹು ಬಿಂಕದಿಂದ ತಾಯಿಯ ಸಮಾಪಕ್ಕೆ

ಹೋಗಿ ಕೂತುಕೊಂಡನು.


ಮದನನೂ ಸುಮತಿಯೂ ಯಾವಾಗಲೂ ಒಟ್ಟಿಗೆ ಇರುತಿದ್ದರು.

ರಾಜಕುಮಾರನು ಎಲ್ಲಿ ಹೋದಾಗ್ಗೂ ತನ್ನ ಸಂಗಾತಿಯಾದ ಸುಮತಿ

ಯನ್ನು ಬಿಟ್ಟು ಹೋಗುತಿರಲಿಲ್ಲ. ಅವನು ಯಾವಾಗಲೂ ಜೊತೆ

ಯಲ್ಲಿಯೇ ಇರುತಿದ್ದನು. ಅವನನ್ನು ಅದೇ ಪ್ರಕಾರ ರಾಣಿವಾಸಕ್ಕೂ

ಮದನನು ಕರೆದುಕೊಂಡು ಬಂದನು. | ಅಯ್ಯೊ! ಆ ಸ್ತ್ರೀ ಸಾನನ್ನಿಧ್ಯದ

ಮಂತ್ರ ಎಂಥಾದ್ದೋ! ಮದನನು ಒಳಕ್ಕೆ ಹೊಕ್ಕ ಕೂಡಲೆ ಸುಮತಿ 

------------------------------------

೧೭] ಸುಮತಿ ಮದನಕುಮಾರರ ಚರಿತ್ರೆ ೨೦೯ 


ಯನ್ನು ಮರೆತುಬಿಟ್ಟನು. ಯಾವ ಒಡವೆಯೂ ಇಲ್ಲದೆ ಹೊದ್ದಿದ್ದ

ಪಂಚೆ ಹೊರತು ಮತ್ತೆ ಯಾವ ದುಕೂಲವೂ ಇಲ್ಲದೆ ಇದ್ದ ಸುಮತಿಯು

ಆ ಸಭೆಯಲ್ಲಿ ದೂರವಾಗಿಯೇ ಕೂತುಕೊಂಡನು.


ಆಗ ಒಬ್ಬ ಅರಸಿತ್ತಿಯು- ಈ ಗಂಡು ಯಾವುದೋ ಕಾಣೆ, 

ದೊಣ್ಣೆಯ ಹಾಗೆ ಒರಟು ಒರಟಾಗಿದೆ; ನಮ್ಮ ಪುಟ್ಟಸಾಮಿಗೆ ದೃಷ್ಟಿ

ಪರಿಹಾರಾರ್ಥವಾಗಿ ಇದನ್ನು ತಂದು ಕೂರಿಸಿದಾರೆಯೊ ಕಾಣೆ?

ಎನಲು : ಅವಳ ಪಕ್ಕದಲ್ಲಿ ಕೂತಿದ್ದ ಒಬ್ಬ ಸಿಸ್ತುಗಾತಿಯು. ಆ

ಗಂಡಿಗೆ ಭೂಷಣವಾಗಿ ಒಂದು ಬಟ್ಟೆಗೆಕೂಡ ಗತಿ ಇಲ್ಲ, ಇದರ

ಮೇಲೆ ಸುವರ್ಣವೈರಿ; ಇದನ್ನು ಏನೆಂದು ಇಲ್ಲಿಗೆ ಕರೆತಂದರೋ

ಕಾಣವ್ವ, ಎನಲು: ಈ ಮಾತನ್ನು ಕಿವಿಗೊಟ್ಟು ಕೇಳುತಿದ್ದ ಒಬ್ಬ

ದಿಟ್ಟಿಗಾತಿಯು-ಐ! ತೆಗೆ ಯಾರೊ ಹಾರವರ ಹೈದ, ದಕ್ಷಿಣೆಗೆ

ಬಂದಿದೆಯೋ ಏನೋ, ಏನಾದರೂ ಕೊಟ್ಟು ಕಳುಹಿಸವ್ವ ಎನಲು;

ಹತ್ತಿರಿದ್ದ ಮಿಠಾರಿಯೊಬ್ಬಳು- ಈ ಹಾರವರ ಹುಡುಗ ನಮ್ಮ ಮದನನಿಗೆ

ಸಂಗಾತಿಯೊ? ಎನಲು : ಕೊನೆಗೆ ಅಲ್ಲಿದ್ದ ಒಬ್ಬ ಹಳ್ಳೀ ಗಡಾವಣೆ

ಗಾತಿಯು-.-ಏನಾ? ನಮ್ಮ ದೊರೆಮಕ್ಕಳ ಸಂಗಡ ಆಡಾಕೆ ಈ

ಹಾರವರ ಹಕ್ಕಳಾ? ಅವರ ಹರಟೆ ಅವರ ಚಾಳಿ ನಮ್ಮ ಹಕ್ಕಳಿಗೂ

ಬರಾಕಿಲ್ಲವಾ? ಎಂದಳು. ಹೀಗೆ ಅಲ್ಲಿದ್ದ ಅರಸಿಯರಲ್ಲಿ ಒಬ್ಬೊಬ್ಬರು

ಒಂದೊಂದು ರೀತಿಯಾಗಿ ಸುಮತಿಯನ್ನು ಆಡಿಕೊಂಡರು,


ಆಗ ಹಸೇಮೇಲೆ ಪಟ್ಟಭದ್ರೆಯಾಗಿ ಅಕ್ಕನ ಹತ್ತಿರ ಕೂತಿದ್ದ

ಕಮಲಾಂಬಕಿಯು-ಅಕ್ಕಯ್ಯ, ಅಲ್ಲಿ ಕುಕ್ಕರಬಡದಿರುವ ಹಾರವರಹೈದ

ಯಾವಾಗ ನೋಡಿದರೂ ನಮ್ಮ ಪುಟ್ಟಸಾಮಿಯ ಸಂಗಡಲೇ ಹಿಂದೆ

ಹಿಂದೆಯೇ ಸುತ್ತುತಾನೆ. ಈ ಪಂಜೆ ಹೈಕಳ ಗೆಳೆತನ ನಮ್ಮ ಮಕ್ಕ

ಳಿಗೆ ಒಳ್ಳೇದೆ? ಆ ಹುಡುಗರ ಸಂಗಡ ನಮ್ಮ ಹುಡುಗರು ಆಡುತಿದ್ದರೆ

ನಮಗೆ ತಾನೆ ಮಾನವೆ? ಎಂದಳು


ಮೀನಾಂಬಕಿ- ಆ ಹುಡುಗ ಬಹು ಬುದ್ಧಿ ಶಾಲಿಯಂತೆ, ವಿದ್ಯೆ

ಚೆನ್ನಾಗಿ ಬರುವುದಂತೆ, ಅವನು ರಾಜಸನ್ನಿಧಾನದಲ್ಲಿ ಬಹು ಅಚ್ಚು

ಮೆಚ್ಚು. ಅಂಥಾ ಹುಡುಗರ ಜೊತೆಯಲ್ಲಿ ನಮ್ಮ ಪುಟ್ಟುಸಾಮಿಯು 

-------------------------------------

೨೧೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಇದ್ದರೆ ಅವನಿಗೂ ಚೆನ್ನಾಗಿ ಬುದ್ಧಿ ಬರುವುದು ಎಂದ್ಕು ಮಗುವನ್ನು

ಅವನ ಜೊತೆಗೆ ಹಾಕಿದಾರೆ.


ಕಮಲಾಂಬಕಿ-- ಹೇಳಿಕೊಡುವ ಉಪಾಧ್ಯಾಯ ಜಾಣನಾದರೆ

ಸರಿ, ಕಾಡಹುಡುಗರನ್ನು ದೊರೆಯಮಕ್ಕಳಸಂಗಡ ಸೇರಿಸಲೇಕೆ?


ಮೀನಾಂ--ಇನ್ನು ರಾಮಜೋಯಿಸನಿಗಿಂತ ಗಟ್ಟಿಗರು ಈ

ಪ್ರಾಂತ್ಯದಲ್ಲಿ ಯಾರೂ ಇಲ್ಲ ಹುಡುಗರಿಗೆ ವಿದ್ಯಾಕಲಿಸುವುದರಲ್ಲಿ

ಅವನು ನಿಸ್ಸೀಮನಂತೆ. ಅವನೂ ಸಹಿತ, ಮದನಿಗೆ ಸಹವಾಸ.

ಸರಿಯಾಗಿರಬೇಕು, ಈ ಸುಮತಿ ಎಂಬ ಹುಡುಗನನ್ನು ಅವನ ಜೊತೆಗೆ

ಹಾಕಿದರೆ ತಾನು ಪಾಠವನ್ನು ಹೇಳುತೇನೆ; ಇಲ್ಲದಿದ್ದರೆ, ಒಲ್ಲೆ ಎಂದು

ಹೇಳಿದ. ಅದಕ್ಕೆ ನಿಮ್ಮ ಭಾವಾಜಿಯವರು ಒಪ್ಪಿದರು.


ಕಮಲಾಂ--ಸುಮತಿಯೊ ಗಿಮತಿಯೊ, ನಾನು ಕೇಳಲಾರೆ;

ನಾಯಿಯ ಹೆಸರು ಸಂಪಿಗೆ ಎಂದ ಹಾಗಿದೆ. ರಾಮಜೋಯಿಸ ಪಾಠ 

ಹೇಳುವುದಿಲ್ಲ ಅಂದರೆ, ಅವರ ಅಪ್ಪ ಇನ್ನೊಬ್ಬ ಬರುತಾನೆ. ಆ

ಹಾರವರ ಹೈದನನ್ನು ನಮ್ಮ ಮಗುವಿನ ಜೊತೆಗೆ ಹಾಕಬೇಡವೆಂದರೆ

ಆಯಿತು, ಹೇಳಿದಮಾತ ಅವ ಕೇಳಬೇಕು.


ಮೀನಾಂ-- ನಾವು ಹಾಗೆಲ್ಲಾ ಹೇಳಿದರೆ ಕೇಳತಕ್ಕ ಬ್ರಾಹ್ಮಣ

ನಲ್ಲ, ರಾಮಜೋಯಿಸ; ನಾವು ಆತನಿಗೆ ಒಂದು ಕಾಸನ್ನೂ ಕೊಡು

ವುದಿಲ್ಲ. ನಮ್ಮಿಂದ ಆತನಿಗೆ ಯಾವ ಉಪಕಾರವೂ ಇಲ್ಲ. ಹೀಗಿರು

ವಲ್ಲಿ ನಮ್ಮ ಮಾತನ್ನು ಆತ ಕೇಳಲಾರ.


ಕಮಲಾಂ-- ಇದೂ ಅಲ್ಲದೆ, ಅಕ್ಕಯ್ಯ, ಕಾಕು ಎಂದು ಎರಡು

ಅಕ್ಷರ ಬರೆದರೆ ಉಪಯೋಗವೇನು? ದೊರೆಮಕ್ಕಳು ಬಿಳೀಕಾಗದದ:

ಮೇಲೆ. ಕರೀಕಪ್ಪನ್ನು ಹತ್ತಿಸಿ ಹಾರವರಹಾಗೆ ಹೊಟ್ಟೇ ಹೊರೆಯ

ಬೇಕೊ? ಸಾಮು ಮಾಡುವುದು. ಕುಸ್ತಿಮಾಡುವುದು, ಪಟಾತಿರುಗಿಸು

ವುದು, ಅಂಬು ಬಿಲ್ಲು ಹೊಡೆಯುವುದು, ಜನರಿಗೆಲ್ಲಾ ಭಯವನ್ನು

ಹುಟ್ಟಿಸಿ, ರಾಜ್ಯವನ್ನು ಜೈಸಿ ದೊರೆತನಮಾಡುವುದು, ಪಗಡೆ ಚದು

ರಂಗ ಮೊದಲಾದ ಆಟಗಳನ್ನಾಡುವುದು ಅಷ್ಟರಮಟ್ಟಿಗೆ ನಮ್ಮ ಮಕ್ಕ

ಳಿಗೆ ಬಂದರೆ ಸಾಕು. 

----------------------------------------

೧೬] ಸುಮತಿ ಮದನಕುಮಾರರ ಚರಿತ್ರೆ ೨೧೧


ಮೀನಾಂಬಕಿ--ನಾನೂ ಹಾಗೆಯೇ ಅಂದೆ. ನನ್ನ ಮಾತು

ಯಾವುದು ಸಾಗುತ್ತೆ? ಒಳ್ಳೇ ಪಂಡಿತನಾದವನೇ ಒಳ್ಳೇ ದೊರೆಯಾಗು

ತಾನಂತೆ. ಬುದ್ಧಿಯವರು ಆಗಾಗ್ಗೆ ಈ ಮಾತನಾಡುತ್ತಲೇ ಇರು

ತಾರೆ. ಬ್ರಾಹ್ಮಣರ ಸಹವಾಸದಿಂದ ನಮ್ಮ ಮಗು ವೃದ್ಧಿಗೆ ಬರುತಾ

ನಂತೆ. ಏನೋ, ಏನಾದರೂ ಮಾಡಿಕೊಳ್ಳಿ. ನಾನು ಆ ಮಾತಿಗೆ

ಹೋಗುವದಿಲ್ಲ.


ಕಮಲಾಂ-- ಮೊದಲಿನಿಂದಲೂ ಹಾರವರಿಗೂ ನಿಮ್ಮ ಮನೆಯವ

ರಿಗೂ ಗಂಟು. ಭಾವಾಜಿಗೆ ಹಾರವರು ಏನೋ ಮಂತ್ರಹಾಕಿ ಕೈ

ವಶಮಾಡಿಕೊಂಡಿದಾರೆ.


ಹೀಗೆ ಎಲ್ಲರೂ ಮನಸ್ಸುಬಂದಹಾಗೆ ಸುಮತಿಯನ್ನು ಆಡಿಕೊ

ಳ್ಳುತಿದ್ದರೇ ಹೊರಯು, ಒಬ್ಬರಾದರೂ ಅವನನ್ನು ಮಾತಾಡಿಸಲಿಲ್ಲ. ಆಗ

ಆ ಗುಂಪಿನಲ್ಲಿ ಲಲಿತೆ ಎಂಬ ಒಬ್ಬ ಬಡ ಅರಸುಮಗಳು ಇದ್ದಳು.

ಇವಳಿಗೆ ವರ್ಷೂವರೆಯಲ್ಲಿ ತಾಯಿ ಸತ್ತುಹೋದಳು. ಈ ತಬ್ಬಲಿ

ಮಗುವನ್ನು ಅವಳ ಚಿಕ್ಕಪ್ಪ ಸಾಕಿದರು. ಸ್ತ್ರೀಧರ್ಮವಿಚಾರದಲ್ಲಿ

ಆತನ ತಾತ್ಪರ್ಯವೇನೆಂದರೆ :--ಹೆಂಗಸು ಮನೇಕೆಲಸವನ್ನೆಲ್ಲಾ ಬೇಸರ

ಪಡದೆ ಮಾಡಬೇಕು ; ಮತ್ತೊಬ್ಬರಿಗೆ ಹೇಳಿಮಾಡಿಸುವ ಬಿಂಕ

ಯಾಕೆ? ಪಾತಿವ್ರತ್ಯವಿದ್ದರೆ ಸಾಕು; ಒಡವೆ ಯಾಕೆ? ಹರಿದಬಟ್ಟೆ

ಯನ್ನು ಹೊಲಿಯುವದಕ್ಕೆ ಬಂದರೆ ಆಯಿತು ; ಕಸೂತಿ ಎಂಬ ಹೆಸರಿ

ನಿಂದ ಬಟ್ಟೇ ತೂತುಮಾಡಿ ಹರಿಯುವ ನಾಜೋಕಿನಿಂದೇನು?

ಹಾಡನ್ನು ರಾಗವಾಗಿಯೂ ಸ್ಪಷ್ಟವಾಗಿಯೂ ಹೇಳಿದರೆ ಚೆನ್ನ; ಸರಿ

ಗಮ ಎಂದುಕೊಂಡು ತಲೆಯನ್ನು ಅಲ್ಲಾ ಡಿಸುತಾ ಹಾಡುವ ಸಂಗೀತ

ವೆಂಬ ಸದ್ದುಮಾಡುವ ಶಾಸ್ತ್ರದಿಂದ ಆಗತಕ್ಕದ್ದೇನು? ನಿಶ್ಚಲವಾದ

ಮನಸ್ಸು ಇರಬೇಕು; ಗೋಷಾ ಯಾಕೆ? ಬಡವರಿಗೆ ಉಪಕಾರ

ಮಾಡುವುದು ಉತ್ತಮ ; ಹೆಮ್ಮೆಯನ್ನು ತೋರಿಸಿದರೆ ಬಂದ ಭಾಗ್ಯ

ವೇನು? ಇತರರನ್ನು ಕಂಡು- ಸಂತೋಷಪಡುವುದು ಲೇಸು ; ಅಸೂಯೆ

ಎಂದಿಗೆ ಕಟ್ಟಿಬಂದೀತು? ಇದೇ ಮೊದಲಾದ ಅಭಿಪ್ರಾಯವುಳ್ಳಂಥಾ

ಚಿಕ್ಕಪ್ಪನಾದ ಲಲಿತೆಯ ಪೋಷಕನು ಇಂಥಾ ಅಭಿಪ್ರಾಯಕ್ಕೆ ಅನು 

---------------------------------

೨೦೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಗುಣವಾಗಿ ಮಗಳನ್ನು ಸಾಕಿದರು. ಇಂಥಾ ಗುಣಸ೦ಪತ್ತನ್ನು ಉಳ್ಳ 

ಲಲಿತೆಯು ಸುಮತಿ ಕೂತಿದ್ದ ಬಳಿಗೆ ಹೋಗಿ ಅವನನ್ನು ಆದರಿಸಿ

ಅಲ್ಲಿದ್ದ ಕೆಲವು ಹಣ್ಣುಗಳನ್ನು ತೆಗೆದು ಅವನಿಗೆ ಕೊಡುವುದಕ್ಕೆ

ಹೋದಳು. ಆಗ ಸುಮತಿಯು--ತಾಯಿ, ತಮಗೆ ಕೃತಜ್ಞನಾಗಿದೇನೆ ;

ಹಣ್ಣನ್ನಾಗಲಿ ಯಾವ ಪದಾರ್ಥವನ್ನಾಗಲಿ ಯಾರು ಕೊಟ್ಟರೂ

ಸುಮ್ಮನೆ ತೆಗೆದುಕೊಳ್ಳಬಾರದೆಂದು ನಮ್ಮ ಗುರುಗಳ ಅಪ್ಪಣೆಯಾಗಿದೆ,

ಎಂದನು. ಗೋಪಾಳದ ಬ್ರಾಹ್ಮಣರು, ಪಂಜೆಹಾರವರು, ಎಂದು ಹೇಳಿ

ದವರ ಮುಖವೆಲ್ಲಾ ಸುಮತಿಯ ಗಾಂಭೀರ್ಯವನ್ನು ಕಂಡು ಚಿಕ್ಕದಾ

ದವು. ಈ ಮಧ್ಯೆ ಮದನನು ಸುಮತಿಯನ್ನು ಮರೆತು ಬಿಟ್ಟನು.

ಈ ಹೆಂಗಸರ ಹೆಬ್ಬುಬ್ಬಿನ ಮಾತಿನಿಂದ, ತಾನು ಎಷ್ಟೋ ಬುದ್ಧಿಶಾಲಿ

ಯೆಂದು ತಿಳಿದುಕೊಂಡನು. 

...

೧೮ನೆ ಅಧ್ಯಾಯ


ಈ ಪ್ರಕಾರ ಮದನನ ಬುದ್ಧಿಯೆಲ್ಲಾ ಬದಲಾಯಿಸಿತು. ಇವನ

ಚಿಕ್ಕಮ್ಮ ಕಮಲಾಂಬಿಕೆಯ ಮಗನಾದ ವಾನರರಾಜನೂ, ಮತ್ತು

ಇವನ ಸೋದರಮಾವನ ಮಗನಾದ ತಮ್ಮನಾಯಕನ್ಶೂ ಓರಗೇ

ಹುಡುಗರಾಗಿದ್ದರು. ಇವರು ಮದನನ ಸಂಗಡ ಸೇರಿ ಆಡುವುದಕ್ಕೆ

ಆರಂಭಿಸಿದರು. ಈ ಹುಡುಗರಿಬ್ಬರೂ ಮನಸ್ಸು ಬಂದಕಡೆಗೆ ಮದನ

ನನ್ನು ಕರೆದುಕೊಂಡು ಹೋಗುವುದು, ಸಿಕ್ಕಿದವರ ಮೇಲೆ ಕಲ್ಲೆಸೆಯು

ವುದು, ಸಿಕ್ಕಿದ ಮರವನ್ನು ಹತ್ತುವುದು ಅಂಗಡಿಗಳಿಗೆ ಹೋಗಿ ಕೈಗೆ

ಸಿಕ್ಕಿದ್ದನ್ನು ಎಳೆದುಕೊಂಡು ಬರುವುದು, ಬಡ ಹುಡುಗರು ಸಿಕ್ಕಿದರೆ

ಅವರನ್ನು ಹಿಡಿದು ಹೊಡೆದು ಅವರು ಗೋಳಾಡುವ ವಿನೋದವನ್ನು

ನೋಡುವುದು, ಕಂಡವರನ್ನು ಬೈದು ಅವರಮೇಲೆ ಉಗುಳುವುದು, ಇವೇ

ಮೊದಲಾದ ಅನೇಕ ತುಂಟತನಗಳನ್ನು ಮಾಡುತಾ ಹೊರಟರು.

ಒಂದೆರಡುಸಾರಿ ಈ ಸಂಗಾತಿಗಳಿಬ್ಬರೂ ಮದನನನ್ನು ಜೂಜಾಡುವು

ದಕ್ಕೆ ಎಳೆದುಕೊಂಡು ಹೋದರು. ಜೂಜುಗಾರರು ಇವರುಗಳಲಿದ್ದ 

---------------------------------------

೧೮] ಸುಮತಿ ಮದನಕುಮಾರೆರ ಚರಿತ್ರೆ ೨೦೩ 


ದುಡ್ಡನ್ನೂ ಮೈಮೇಲಿದ್ದ ಕೆಲವು ಒಡವೆಗಳನ್ನೂ ಜೂಜಾಡಿ ಕಸಿದು

ಕೊಂಡು ಆಚೆಗೆ ಕಳುಹಿಸಿದರು. ಸುಮತಿಯು ಇವರ ಸಂಗಡಲೇ

ಇರುತಾ ಮದನ ಕೆಟ್ಟ ಕೆಲಸಕ್ಕೆ ಹೋದಾಗೆಲ್ಲಾ ಅದು ಸರಿಯಲ್ಲವೆಂದು

ಎಚ್ಚರವನ್ನು ಹೇಳುತಲೇ ಇದ್ದನು. ಆದರೆ ಮಂಗರಾಜ, ತಿಮ್ಮ

ನಾಯಕ, ಇವರಿಬ್ಬರ ದುರ್ಬೋಧೆಯು ಬಲವಾಗಿದ್ದ ಕಾರಣ, ಸುಮತಿ

ಹೇಳಿದ ಬುದ್ಧಿವಾದ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಬರುತ

ಬರುತಾ ಮದನನಿಗೆ ಸುಮತಿಯಕಂಡರೆ ಆಗದಹಾಗಾಯಿತುು. ಇದೂ

ಅಲ್ಲದೆ ರಾಮಜೋಯಿಸನ ಹೆಸರನ್ನು ಯಾವಾಗ ತೆಗೆದಾಗ್ಗೂ, ಮದ

ನನು ಈ ತುಂಟ ಹುಡುಗರ ಸಂಗಡ ಸೇರಿಕೊಂಡು ಸ್ಟಲ್ಪ ಅಸಡ್ಡೆ ಯಾಗಿ

ಮಾತನಾಡುವುದು ಹೆಚ್ಚುತಾ ಬಂತು. ಇವರಿಬ್ಬರೂ ಸೇರಿ ಮದನನ

ಬುದ್ಧಿಯನ್ನು ಕೆಡಿಸಿ ತಂದಿಟ್ಟ ಕೆಟ್ಟತನವನ್ನು ಕಂಡು ಸುಮತಿಯು

ಅದು ಸರಿಯಲ್ಲವೆಂದು ಹೇಳಿದಾಗಲೆಲ್ಲಾ ಸುಮ್ಮನಿರೊ, ಹಾರವ,

ನೀನೇನು ಬಲ್ಲೆ? ಎಂದು ಅವನನ್ನು ಬಯ್ಯುತಿದ್ದುದಲ್ಲದೆ ಒಂದೆರಡು

ಸಾರಿ ಮಂಗರಾಜನು ಅವನನ್ನು ಹಿಡಿದು ಹೊಡೆದನು. ಆದರೆ ಸುಮ

ತಿಗೆ ಮದನನಮೇಲಿದ್ದ ಪ್ರೀತಿಯು ಇಂಥಾ ಪೆಟ್ಟಿನಿಂದ ಉಂಟಾದ

ಕೋಪಕ್ಕಿಂತಲೂ ಮಿಂಚಿ ಇತ್ತು.


ಹೀಗಿರಲಾಗಿ ಆ ಊರಲ್ಲಿ ಭಾಗವತರ ಆಟದವರು ಹೊಸದಾಗಿ

ಬಂದು ಒಂದು ದಿನ ಆಟವನ್ನು ಕಟ್ಟಿದರು. ಅದನ್ನು ನೋಡುವುದಕ್ಕೆ

ಹೋಗೋಣವೆಂದು ಮಂಗರಾಜನೂ ತಿಮ್ಮನಾಯಕನೂ ಮದನನನ್ನು

ಎಳೆದರು. ಸುಮತಿಯೂ ಮದನನ ಬೆನ್ನಹತ್ತಿಹೋದನು. ಆಟ

ಕಟ್ಟತು. ಆಗ ಮದನನ ತುಂಟ ಸಂಗಾತಿಗಳಿಬ್ಬರೂ ಮನಸುಬಂದ

ಹಾಗೆ ಕೂಗುವುದೂ, ಗಟ್ಟಿಯಾಗಿ ನಗುವುದೂ, ಹೀಗೆಲ್ಲಾ ಗದ್ದಲವನ್ನು

ಮಾಡಿದ್ದರಿಂದ ಆಟಗಾರರು ಹಾಡುವ ಹಾಡನ್ನು ಯಾರೂ ಚೆನ್ನಾಗಿ

ಕೇಳದಂತೆ ಆಯಿತು. ಮದನನೂ ಇವರಜೊತೆಗೆ ಸೇರಿಕೊಂಡು

ಕೂಗುಮಾಡುತಿದ್ದನು. , ಇವರು ಅರಸುಮಕ್ಕಳಾದ್ದರಿಂದ, ಇವರನ್ನು

ಸ್ವಲ್ಪ ಮಾತನಾಡಿಸಿದರೂ ಏನುಬಂದೀತೋ ಎಂದು ಸುಮ್ಮನಿರುತಾ, 

ಇವರು ಮಾಡುತಿದ್ದ ಗದ್ದಲಕ್ಕೆ ಮನಸ್ಸಿನಲ್ಲಿಯೇ ಇವರನ್ನು ಬೈಯುತಾ 

---------------------------------------

೨೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಇದ್ದರು. ಸುಮತಿಗೆ ಈ ಹುಡುಗರ ನಡತೆ ಬಹಳ ಅಸಮಾಧಾನ

ವನ್ನು ಉಂಟುಮಾಡಿತು. ಆದರೂ ಅವನು ಎಲ್ಲವನ್ನೂ ತಾಳೆ

ಕೊಂಡು ಮುಖವನ್ನು ಗಂಟುಹಾಕಿಕೊಂಡು ಮಾತನಾಡದೆ ದೂರವಾಗಿ

ಕೂತಿದ್ದನು.


ಈ ಮಧ್ಯೆ ಮಂಗರಾಜನು ಮದನನನ್ನು ಕುರಿತು--ಪುಟ್ಟ

ಸಾಮಿ, ನಾವು ಈಗ ಒಂದು ದೊಂಬಿಮಾಡಿ ಆಟವನ್ನು ಕೆಡಿಸೋಣ,

ಎಂದನು. ಈ ಮಾತಿನ ಅರ್ಥವು ಮದನನಿಗೆ ಗೊತ್ತಾಗಲಿಲ್ಲ.

ಆದರೂ ಈ ಇಬ್ಬರು ಹೊಸಸ್ನೇಹಿತರ ಸ್ವಭಾವವು ಇವನ ಮನಸ್ಸಿನಲ್ಲಿ

ಚೆನ್ನಾಗಿ ನಾಟಿದ್ದಕಾರಣ, ಮದನನು ಅವರ ಮಾತಿಗೆ ಒಪ್ಪಿ ಹಾಗೇ

ಮಾಡೋಣವೆಂದನು. ಕೂಡಲೆ ಈ ಮೂರುಜನವೂ ಸೇರಿ ಕಿತ್ತಿಳೇ

ಹಣ್ಣಿನಸಿಪ್ಪೆ, ಬಾಳೇಹಣ್ಣಿನಸಿಪ್ಪೆ, ಜಲ್ಲೀಕಲ್ಲು, ಮರಳು ಹೆಂಚಿಬಕ್ಕರೆ

ಇವುಗಳನ್ನು ಕುಣಿಯುತ್ತಾ ಇದ್ದ ಆಟಗಾರರಮೇಲೆ ಎಸೆಯುತ್ತಾ, 

ಗಟ್ಟಿಯಾಗಿ ಕೂಗಿಕೊಳ್ಳುತ್ತಾ, ದೀಪಗಳನ್ನು ಆರಿಸುತ್ತಾ ಬಹಳ

ಆಭಾಸವನ್ನು ಮಾಡಿದರು. ಇವರು ದೊರೆಮಕ್ಕಳೆಂದು ಯಾರೂ

ಯಾವಮಾತನ್ನೂ ಆಡದೆ ಸುಮ್ಮನೆ ಬಾಯಿಮುಚ್ಚಿ ಕೊಂಡಿದ್ದರು,


ಆದರೆ ಈ ಕೆಟ್ಟತನವನ್ನು ಕಂಡು ಸುಮತಿಯು ಸಹಿಸಲಾರದೆ

ಅವರನ್ನು ಕುರಿತು. -ಅಯ್ಯಾ, ಇದು ಸರಿಯಲ್ಲ, ಎಂದನು.


ಮಂಗರಾಜ-- ನೀನೇನು ಬಲ್ಲೆಯೋ, ಸುಮ್ಮನೆ ಕೂತಿರು. ಅವರ

ಆಟಕ್ಕೆ ತಕ್ಕಹಾಗೆ ನಾವು ಚೇಷ್ಟೆಯನ್ನು ಮಾಡುತೇವೆ, ಚೆನ್ನಾಗಿ

ಆಟವನ್ನು ಕಟ್ಟದೆ, ಯಾಕೆ ಇಂಥಾ ಗತಿಗೆಟ್ಟ ಆಟವನ್ನು ಇಲ್ಲಿ ಬಂದು

ಆಡಬೇಕು?


ಸುಮತಿ--ನಾನು ಇಂಥಾ ಆಟಗಳನ್ನು ಎಂದಿಗೂ ನೋಡಿರಲಿಲ್ಲ.

ಇದೇ ಮೊದಲು. ಆದಕಾರಣ ಇದರ ವಿಷಯದಲ್ಲಿ ನಾನು ಏನೂ

ಹೇಳಲಾರೆ. ಆದರೆ ಆಟ ಚೆನ್ನಾಗಿಲ್ಲದಿದ್ದರೆ ಸುಮ್ಮನೆ ಕೂತುಕೊಂಡು

ಇರಬೇಕು. ಅಥವಾ ಎದ್ದು ಮನೆಗೆ ಹೊರಟುಹೋಗಬೇಕು. ಇದನ್ನು

ಬಿಟ್ಟು ಇಂಥಾ ತುಂಟತನವನ್ನು ನಾವು ಮಾಡವುದು ಯೋಗ್ಯವಲ್ಲ.

ಇಂಥಾ ದೊಡ್ಡ ಪಟ್ಟಣದಲ್ಲಿ ಆಟವನ್ನು ಕಟ್ಟಲು ಬಂದಿರತಕ್ಕವರು 

-------------------------------------

೧೮] ಸುಮತಿ ಮದನಕುಮಾರರ ಚರಿತ್ರೆ ೨೧೫ 


ತಮ್ಮ ಯೋಗ್ಯತೆಯನ್ನೆಲ್ಲಾ ಪ್ರಾಮಾಣಿಕವಾಗಿ ತೋರಿಸಿಯಾರು,

ಇನ್ನೂ ಚೆನ್ನಾಗಿ ಆಡುವುದಕ್ಕೆ ಅವರಿಗೆ ಬಂದಿದ್ದರೆ ಆಡದೆಬಿಡುತಿರ

ಲಿಲ್ಲ, ಅವರಿಗೆ ಬಾರದ ಆಟವನ್ನು ಆಡಲಿಲ್ಲವೆಂದು ಆ ಬಡಜನರನ್ನು

ಹೀಗೆ ಅಗಡುಮಾಡುವುದು ಯುಕ್ತವಲ್ಲ. ನಿಮ್ಮ ಮನೆಗೆ ಔತಣದ

ಊಟಕ್ಕೆ ಬಂದ ಜನರು ಅಡಿಗೆ ಚೆನ್ನಾಗಿಲ್ಲವೆಂದು ನಿಮ್ಮ ಮನೆಯವ

ರನ್ನು ಹಿಡಿದು ಬೈದು ಹೊಡೆಯುವುದಕ್ಕೆ ಹೇಗೆ ಬಾಧ್ಯರಲ್ಲವೊ,

ಹಾಗೆಯೇ ನೀವು ಈ ಆಟಗಾರರಿಗೆ ಅವಮಾನಮಾಡಲು ಬಾಧ್ಯರಲ್ಲ.

ಈ ಪ್ರಕಾರ ಈ ಹುಡುಗರಲ್ಲಿ ಚರ್ಚೆಹುಟ್ಟಿ ತು. ಮಂಗರಾಜನು

ಸುಮತಿಯ ಮಾತನ್ನು ಕೇಳಿ ಅವನನ್ನು ಮನಸ್ಸುಬಂದಹಾಗೆ ಬೈದನು.

ಅವರ ಸಮೀಪದಲ್ಲಿದ್ದ ಒಬ್ಬ ವಿದೇಶಿಯು ಇವರು ಇಂಥವರೆಂದು ತಿಳಿ

ಯದೆ ಸುಮತಿ ಹೇಳಿದ ಬುದ್ಧಿ ವಾದ ಸರಿಯಾದ್ದೆಂದು ಹೇಳಿದನು.

ಇಷ್ಟಕ್ಕೇ ಮಂಗರಾಜನಿಗೆ ಆಗ್ರಹಬಂತು. ಅವನಿಗೂ ಮಗನಿಗೂ

ಜಗಳಹತ್ತಲು, ತಾನು ದೊರೆಮಗನೆಂಬ ಅಹಂಕಾರದಿಂದ ಮಂಗನು

ಆ ವಿದೇಶಿಯ ಕೆನ್ನೆಯಮೇಲೆ ಒಂದೇಟನ್ನು ಹೊಡೆದನು. ಕೂಡಲೆ

ಆ ವಿದೇಶಿಯು ಮುಖನೋಡದೆ ಮಂಗರಿಗೆ ದಿಂದಿರಗನ ಹಣ್ಣನ್ನು

ಕೊಡಲು, ಈ ರಾಜಪುತ್ರನು ಬಾಯನ್ನು ಹೆಚ್ಚುಮಾಡಿದನು.

ಅದನ್ನು ಸಹಿಸಲಾರದೆ ಈ ಹುಡುಗನಿಗೆ ತಕ್ಕದ್ದನ್ನು ಮಾಡಬೇಕೆಂದು

ಆ ವಿದೇಶದನನು ಮಂಗನನ್ನು ಎತ್ತಿ ತನ್ನ ಕಾಲಕೆಳಗೆ ಹಾಕಿಕೊಂಡು

ಅವನನ್ನು ತುಳಿಯುವುದಕ್ಕೆ ಮೊದಲುಮಾಡಿದನು. ಮಂಗರಾಜನಿಗೆ

ಯಾತನೆ ಬಲವಾಯಿತು. ಏನುಮಾಡಿದರೂ ಎಷ್ಟು ಅರಚಿಕೊಂಡರೂ

ಆ ಎದುರಾಳಿಯು ಬಿಡದೆ ತುಳಿಯುತ್ತಾ ಬಂದನು. ತಿಮ್ಮನಾಯ

ಕನೂ ಮದನನೂ ತಮ್ಮ ಸಂಗಾತಿಯನ್ನು ಬಿಡಬೇಕೆಂದು ಎಷ್ಟು

ಹೇಳಿದಾಗ್ಯೂ--ಆದ್ದೆಲ್ಲಾ ಆಗಲಿ, ನಾನು ಈ ತುಂಟ: ಹುಡುಗನಿಗೆ

ಬುದ್ಧಿಯನ್ನು ಕಲಿಸಿಯೇಬಿಡುತೇನೆ, ಎಂದನೇಹೊರತು, ಆ ಮನು

ಷ್ಯನು ಅವನನ್ನು ಬಿಡಲಿಲ್ಲ. ಕೊನೆಗೆ ಸುಮತಿಯು ಕನಿಕರದಿಂದ--

ಅಯ್ಯಾ, ಈಗ್ಗೆ ಬಿಟ್ಟುಬಿಡು; ಈಗ ಆದ ಶಿಕ್ಷೆ ಸಾಕು, ಎಂದು ಕೇಳಿ

ಕೊಳ್ಳಲು ಆ ಪುರುಷನು ನಿನ್ನ ಒಡನೆಯನ್ನೂ ಶೃಂಗಾರವನ್ನೂ ನೋಡಿ 

-------------------------------------

೨೧೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. 


ಬಿಡುವುದಿಲ್ಲ. ಬುದ್ಧಿಶಾಲಿಯಾದ ಆ ಹುಡುಗ (ಸುಮತಿ) ಕೇಳಿ

ಕೊಂಡದ್ದರಿಂದ ಬಿಟ್ಟಿದ್ದೇನೆ.  ಇನ್ನು ತುಂಟಾಟವನ್ನು ಬಿಟ್ಟು ಬುದ್ಧಿ

ಯನ್ನು ಕಲಿತುಕೊ, ಅರಸುಮಕ್ಕಳು ಇಷ್ಟು ಅವಿವೇಕದಿಂದ ನಡೆದು

ಕೊಳ್ಳುತಾರೆಂದು ನಾನು ಯೋಚಿಸಿರಲಿಲ್ಲ ಎಂದು ಹೇಳಿ ಆ ಮಂಗ

ನನ್ನು ಬಿಟ್ಟು ಕಳುಹಿಸಿದನು


ಆಗ ಮಂಗರಾಜನು ಮನೆಯಹತ್ತಿರ ಬರುತಬರುತಾ, ಅವನಿಗೆ

ಧೈರ್ಯ ಹೆಚ್ಚುತಾ ಬಂತು. ಮಂಗನು ತನ್ನ ಜೊತೆಗಾರರನ್ನು ಕುರಿತು

--ನಾಯಿ ಹೊಡೆಯುವದಕ್ಕೆ ಬಣ್ಣದ ಕೋಲೆ? ಆ ಅಲ್ಪನಸಂಗಡ

ನನಗೇನು ಎಂದು ನಾನು ಸುಮ್ಮನಿದ್ದೆ; ಇಲ್ಲದಿದ್ದರೆ ಅವನ ಆಟವನ್ನು

ತಿಳಿಸುತಿದ್ದೆ, ಹೀಗೆಂದು ಹೇಳಿದನು. ಇವರೆಲ್ಲಾ ಮನೆಗೆ ಬಂದಮೇಲೆ

ಹುಡುಗರಸಂಗಡ ಮಾತನಾಡುತಾ ಅನಂಗರಾಜನು ಸುಮತಿಯನ್ನು

ಕುರಿತು -ಅಯ್ಯಾ, ಮಗು ನೀನು ಆಟವನ್ನು ನೋಡಿಕೊಂಡು ಬಂದಿ

ಯಲ್ಲ; ಅದು ಹೇಗಿತ್ತು? ಎಂದನು. ಅದಕ್ಕೆ ಸುಮತಿಯು-- ಬುದ್ಧಿ,

ಇಂಥಾ ಆಟಗಳನ್ನು ನಾನು ನೋಡುವುದಕ್ಕೆ ಇದೇ ಮೊದಲು, ಆದ್ದ

ರಿಂದ ಆಡಿದ್ದು ಹೀಗಿತ್ತು ಎಂದು ಹೇಳುವುದಕ್ಕೆ ನನ್ನ ಕೈಲಾಗದು.

ಆದರೆ ಆ ಆಟದಲ್ಲಿ ಉದ್ದಕ್ಕೂ ಮೋಸ,  ಕಳ್ಳತನ, ಕಾಪಟ್ಯ, ಸುಳ್ಳು,

ಇದೇ ತುಂಬಿತ್ತು, ಇಂಥಾದ್ದನ್ನು ನೋಡುವುದಕ್ಕೆ ದೊಡ್ಡವರೆಲ್ಲಾ

ಹೋಗಿ ತಮ್ಮ ಕಾಲವನ್ನು ವ್ಯರ್ಥವಾಗಿ ಕಳೆಯುವದಲ್ಲದೆ, ಅದನ್ನು

ನೋಡುವುದಕ್ಕೆ ತಮ್ಮ ಮಕ್ಕಳುಗಳನ್ನೂ ಕಳುಹಿಸಿ, ಆ ಹುಡುಗರೂ

ಕೆಟ್ಟತನವನ್ನು ಕಲಿತುಕೊಳ್ಳುವ ಹಾಗೆ ಮಾಡುತಾರಲ್ಲಾ ಎಂದು ನನಗೆ

ಆಶ್ಚರ್ಯವಾಗಿದೆ, ಎಂದು ನುಡಿದನು. ಸುಮತಿಯು ಆಡಿದಮಾತು

ನಿಶ್ಚಯವೆಂದು ಅನಂಗರಾಜನು ಹೇಳಿ ನಕ್ಕನು. ಆದರೆ ಈ ಹುಡು.

ಗನ ಮಾತು ಅಲ್ಲಿದ್ದ ರಾಜಸ್ತ್ರೀಯರಿಗೆ ಸರಿಬೀಳಲಿಲ್ಲ. ಆದರೂ ದೊರೆ

ಆಡಿದ ಮಾತಿಗೆ ಪ್ರತಿಯಾಗಿ ಆಡದೆ ಇವರೆಲ್ಲರೂ ಸುಮ್ಮನಿರಬೇಕಾಗಿ

ಬಂತು. 


ಮಾರನೇ ದಿನ ಅರಮನೆಯಲ್ಲಿ ಜೂಜನ್ನು ಇಟ್ಟು ಪಗಡೆಯಾಡು

ವುದೆಂದು ಗೊತ್ತಾಯಿತು. ಆ ಆಟಕ್ಕೆ ಹುಡುಗರೂ ರಾಣಿವಾಸದಲ್ಲಿ 

-----------------------------------

೧೮] ಸುಮತಿ ಮದನಕುಮಾರರ ಚರಿತ್ರೆ ೨೧೭ 


ರುವ ಅರಸಿತ್ತಿಯರೂ ಸೇರಿದರು. ಒಬ್ಬೊಬ್ಬರಾಗಿ ಆಡುತ್ತಾ ವಿಶೇಷ

ವಾಗಿ ದ್ರವ್ಯವನ್ನು ಸೋಲುತ್ತಾ ಬಂದರು. ಈ ಆಟಕ್ಕೆ ಲಲಿತೆ ಎಂಬ

ಅರಸು ಮಗಳು, ಸುಮತಿ ಇವರಿಬ್ಬರುಮಾತ್ರ ಹೋಗಲಿಲ್ಲ. ಕೊನೆಗೆ

ಇವರ ಸರದಿಬಂತು. ತನಗೆ ಆಟ ಬರುವುದೇ ಇಲ್ಲವೆಂತಲೂ, ಅಥವಾ

ಆಡಿದಾಗ್ಗೂ ತಮ್ಮ ಚಿಕ್ಕಪ್ಪ ಸುಮ್ಮನೇ ಇರಲಾರನೆಂತಲೂ, ಲಲಿತೆಯು

ತಪ್ಪಿಸಿಕೊಂಡಳು, ಆದರೆ ಸುಮತಿಗೆ ಇತರರ ಬಲವಂತ ಹೆಚ್ಚಾ

ಯಿತು, ಮಂಗರಾಜನಂತೂ ಮನಸ್ಸು ಬಂದಹಾಗೆ ಹರಟಿ--ಏನೊ

ಹಾರುವ, ನಾವೆಲ್ಲಾ ಸೋಲುವದನ್ನು ನೋಡಿಕೊಂಡಿದ್ದು, ನೀನು

ತಂದ ಹಣವನ್ನು ಮಾತ್ರ ಕಟ್ಟಿಕೊಂಡು ಹೋಗುತೀಯಾ? ನೀನು

ಆಡಲೇಬೇಕು. ಇಲ್ಲದಿದ್ದರೆ, ಬಿಡುವುದಿಲ್ಲ ಎಂದನು. ಅದಕ್ಕೆ ಸುಮ

ತಿಯು--ನನ್ನ ಹತ್ತಿರ ಒಂದು ಕಾಸೂ ಇಲ್ಲ ನನಗೆ ಆಟವೂ ಬಾರದು

ನಾನು ಆಡುವುದೂ ಇಲ್ಲ, ಎಂದು ಹೇಳಿದನು. ಆಗ ಅಲ್ಲಿದ್ದ ಕಮ

ಲಾಂಬಕೀದೇವಿಯೇ ಮೊದಲಾದ ಅರಸಿತ್ತಿಯರಿಗೆ ಸುಮತಿಯನ್ನು

ಗೇಲೀಮಾಡಲು ಇದು ಒಂದು ಸಮಯ ಸಿಕ್ಕಿತು. ಪಂಗೂಳಿ ಹಾರು

ವರ ಹೈದನಿಗೆ ನಮ್ಮ ಸಭೆಯಲ್ಲಿ ಆಟವನ್ನು ಹರಟಿ ಗೆಲ್ಲುವುದಕ್ಕೆ

ಬಂದೀತೆ? ತೆಗೆ ನಾನು ನೋಡಲಾರೆ! ಎಂದು ಆಡಿಕೊಂಡರು.

ಮತ್ತು ಲಲಿತೆಯನ್ನು ಕುರಿತು.-ಏನೇ ಬಿನ್ನಾಣ ಆ ಹೈದ ಒಂದು

ಪದಾರ್ಥವೆಂದು ನೀನು ಮಾತನಾಡಿಸಿಕೊಂಡು ಹೋಗುತೀಯಲ್ಲ! ಈಗ

ಅವನ ಬಣ್ಣ ಏನಾಯಿತು ನೋಡಿದೆಯಾ? ಎಂದು ಹಂಗಿಸಿದರು. 


ಈ ಮಾತು ಲಲಿತೆ ಸಹಿಸಲಿಲ್ಲ. ಅವಳು--ಅಪ್ಪಾ ಸುಮತಿ, 

ಇವರ ಹಂಗಣೆಯನ್ನು ನಾನು ಕೇಳಲಾರೆ ಏನಾದರೂ : ಆಗಲಿ.

ನಾನು ನಿನಗೆ ಹಣವನ್ನು ಕೊಡುತೇನೆ. ನೀನು ಪಗಡೇ ಆಡು

ಎಂದಳು. ಈ ಮಾತಿಗೆ ಸುಮತಿಯು- ತಾಯಿ, ಎಂದಿಗೂ ಜೂಜಾ

ಡಬಾರದೆಂದು ನಮ್ಮ ಗುರುಗಳು ಹೇಳಿದಾರೆ. ಇದಲ್ಲದೆ ಇತರರಲ್ಲಿ

ಸುಮ್ಮನೆ ಹಣವನ್ನು ತೆಗೆದುಕೊಳ್ಳ ಬಾರದೆಂದು ಹೇಳಿದಾರೆ. ಅದಾ

ಗ್ಯೂ ನಿಮ್ಮ ಬಲವಂತ ಹೆಚ್ಚಾದಕಾರಣ ನಾನು ಆಡುತೇನೆ. ಗೆಲಲ್ಲಿ

ಸೋಲಲಿ, ಅದರ ಆದಾಯನಷ್ಟ ನಮಗೆ ಬೇಡ, ಎಂದು ಹೇಳಿ

---------------------------------- 

೨೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಆಟಕ್ಕೆ ಮೊದಲುಮಾಡಿದನು. ಸ್ಪಲ್ಪ ಹೊತ್ತಿನಲ್ಲಿ ಆಟದ ಕ್ರಮವನ್ನು

ತಿಳಿದು, ಆಡುತಾ ಅಲ್ಲಿದ್ದವರೆಲ್ಲರನ್ನೂ ಸೋಲಿಸಿದನು. ಎಲ್ಲರೂ

ತಂದ ಹಣವೂ ಇವನದಾಯಿತು, ಆಗ ಈ ಹುಡುಗನು ಹತ್ತಿರಿದ್ದ

ಲಲಿತೆಯ ಮುಂದೆ ಆ ಹಣವನ್ನೆಲ್ಲಾ ಸುರಿದು, ಅದನ್ನು ತೆಗೆದುಕೊಳ್ಳು

ವಂತೆ ಹೇಳಿದನು. ಅವಳು ಅದರಲ್ಲಿ ಸ್ವಲ್ಪವನ್ನಾದರೂ ಸ್ತೀಕರಿ

ಸೆಂದು ಬೇಡಿಕೊಂಡದ್ದರಿಂದ, ಸುಮತಿಯು ಅವಳ ಮಾತನ್ನು ನಡೆಸಿ 

ಕೊಟ್ಟು, ಅವಳು ಮೆಚ್ಚುವರೀತಿಯಲ್ಲಿ ಆ ಹಣಕ್ಕೆ ಸದ್ವಿನಿ

ಯೋಗವನ್ನು ಮಾಡುತೇನೆಂದು ಹೇಳಿದನು. ಮಾರನೇ ದಿನ ಬೆಳಗ್ಗೆ

ಹೊತ್ತಿಗೆಮುಂಚೆ ಎದ್ದು ಹೊರಕ್ಕೆ ಹೋಗಿ ಆ ದಿನ ಸಾಯಂಕಾಲ

ಹಿಂತಿರುಗಿ ಬಂದು ಅರಮನೆಗೆ ಸೇರಿದನು. ಅರೆಗಳಿಗೆಯೂ ಸುಮತಿ

ಯನ್ನು ಬಿಟ್ಟು ಇರದೇ ಇದ್ದ ಮದನನು ಇವನನ್ನು ಮರೆತೇಬಿಟ್ಟನು.

ಇವ ಎಲ್ಲಿ, ಎಂದು ಯಾರೂ ವಿಚಾರಮಾಡಲೇ ಇಲ್ಲ. ಅನಂಗರಾಜ

ಮಾತ್ರ ಒಂದುಸಾರಿ ಕೇಳಿ ಸುಮ್ಮನಾದನು. 


ಆದರೆ ಸಾಯಂಕಾಲ ಸುಮತಿಯು ಮನೆಗೆ ಬರಲು, ಲಲಿತೆಯು

ನೀನು ಎಲ್ಲಿ ಹೋಗಿದ್ದೆಯಪ್ಸಾ? ಬೆಳಗಿನಿಂದಲೂ ನಿನ್ನನ್ನು ಕಾಣಲಿಲ್ಲ

ವಲ್ಲಾ, ಎಂದಳು. ಅದಕ್ಕೆ ಸುಮತಿಯು ಹೇಳಿದ್ದೇನೆಂದರೆ--ತಾಯಿ,

ನಿನ್ನೆ ನೀವು ಕೊಟ್ಟ ಹಣವನ್ನು ನಿನಿಯೋಗಿಸುವುದಕ್ಕಾಗಿ ಹೋಗಿದ್ದೆ.

ಇಲ್ಲಿಗೆ ಎರಡು ಹರದಾರಿಯಲ್ಲಿ ಒಂದು ಗ್ರಾಮವಿದೆ. ಅಲ್ಲಿ ಒಬ್ಬ

ಶೂದ್ರಿತಿ ಇದಾಳೆ. ಅವಳು ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸುತಿದ್ದ

ವಳು. ಅವಳ ತಂದೆತಾಯಿಗಳಿಬ್ಬರೂ ಬಹಳ ಮುದುಕರು. ಅವರಿಗೆ

ಇವಳು - ಹೊರತು ಇನ್ನು ಯಾರೂ ಮಕ್ಕಳಿಲ್ಲ. ಈ ಮುದು

ಕರ ಪೋಷಣೆಗೆ ಯಾರೂ ಇಲ್ಲದೇ ಹೋದಾರಲ್ಲಾ, ಎಂಬ ಭಯ

ದಿಂದಲೇ ಇವಳು ಮದುವೆಮಾಡಿಕೊಳ್ಳಲಿಲ್ಲ ಮೊದಲಿನಿಂದಲೂ ಇತ

ರರ ಮನೆಯಲ್ಲಿ ದುಡಿದು ಮಾತಾಪಿತೃಗಳನ್ನು ಸಂರಕ್ಷಣೆ ಮಾಡು

ತಿದ್ದಳು. ಈಗ ಅವಳಿಗೂ ಮುಪ್ಪು ಬಂತು. ಎಪ್ಪತ್ತು ವರುಷದ

ಸಮಯವಾಯಿತು. ಚಾಕರಿ ಮಾಡಲಾರಳು. ಹೊಟ್ಟಿಗಿಲ್ಲದೆ ಬಹು

ಸಂಕಟಪಡುತಿದಾಳೆ. ಆದಕಾರಣ ಆ ಬಡವಳಿಗೆ ಸಹಾಯಮಾಡ 

-------------------------------------

೧೮] ಸುಮತಿ ಮದನಕುಮಾರರ ಚರಿತ್ರೆ ೨೧೯


ಬೇಕೆಂದು, ಅಲ್ಲಿಗೆ ಹೋಗಿ ನೀವು ಕೊಟ್ಟು ಹಣವನ್ನು ನಿಮ್ಮ ಹೆಸರಿನ

ಮೇಲೇ ಅವಳಿಗೆ ಕೊಟ್ಟು ಜೀವನಾ ಮಾಡಿಕೊಳ್ಳುವಂತೆ ಹೇಳಿ ಬಂದೆ, 

ಹೀಗೆಂದು ಸುಮತಿ ಹೇಳಿದನು. ಅದಕ್ಕೆ ಲಲಿತೆಯು. ಅಯ್ಯ,

ನೀನು ಮಾಡಿದ ಕೆಲಸ ಉತ್ತಮನಾದ್ದು. ದೀನರಾದವರಿಗೆ ಉಪ

ಕಾರ ಮಾಡುವುದಕ್ಕಿಂತಲೂ ಇನ್ನು ಧರ್ಮವಿಲ್ಲ. ಆದರೆ ಆ ಹಣವನ್ನು

ನಿನ್ನ ಹೆಸರಿನಮೇರೆಯೇ ಕೊಡಬೇಕಾಗಿತ್ತು, ಎಂದಳು. ಇದಕ್ಕೆ

ಸುಮತಿಯು ಅಮ್ಮಯ್ಯ, ಆ ಹಣ ನನ್ನದಲ್ಲ, ತಾವು ಕೊಟ್ಟಿದ್ದು. ಆದ್ದ 

ರಿಂದ ಧರ್ಮ ತಮಗೇ ಹೊರತು ನನಗಲ್ಲ. ಅದನ್ನು ಹಾಗೆ ನಾನು

ಉಪಯೋಗಿಸಿದರೆ. ನೀವು ಸಂತೋಷಪಟ್ಟೀರಿ, ಎಂದು ತಿಳಿದೇ ನಾನು

ಹಾಗೆ ವೆಚ್ಚಮಾಡಿದೆ. ಈ ಅರಮನೆಯಲ್ಲಿ ಎಷ್ಟೋ ಜನ ಅರಸು

ಮಕ್ಕಳು ಬಂದು ನೆರೆದಿದ್ದಾರೆ. ಸಾಲವನ್ನಾದರೂ ಮಾಡಿ ಜೂಜಾಡಿ

ಕೆಡುತಾರೆ. ಆ ಹಣಕ್ಕೆಲ್ಲಾ ಸರಿಯಾದ ಉಪಯೋಗವನ್ನು ಹುಡುಕಿ, 

ಬಡವರಿಗೆ ಸಹಾಯಮಾಡಿದರೆ ಎಷ್ಟು ಚೆನ್ನಾದ್ದೀತು! ಇದನ್ನು

ಬಿಟ್ಟು, ತಮ್ಮ ಪೋಷಣೆಯಲ್ಲಿಯೇ ನಿರತರಂಗಿದ್ದಾರೆ. ಇವರಿಗೆ

ಎಲ್ಲವೂ ಅನುಕೂಲವಾಗಿರಬೇಕು. ಬಿಸಿಲಾಗದು. ಚಳಿಯಾಗದು.

ನಾಲ್ಕುಮಾರು ದೂರ ನಡೆಯುವುದಕ್ಕಾಗದು. ಅರಘಳಿಗೆಯೂ ಊಟ

ಹೊತ್ತು ಹೋಗಕೂಡದು. ಹೀಗೆಲ್ಲಾ ಮಾಡಿಕೊಂಡು ದೇಹಪೋಷಣೆ

ಯನ್ನು ಬಹು ಅಕ್ಕರೆಯಿಂದ ಮಾಡಿಕೊಳ್ಳು ತಾರೆ. ಇವರಿಗೆ ಸ್ವಲ್ಪ

ನೆಗಡಿ ಬಂದರೆ ಹತ್ತುಜನ ವೈದ್ಯರು ಮನೆಗೆ ಸುತ್ತುತಲೇ ಇರಬೇಕು.

ಇತರ ಬಡಜನರು ಮಾತ್ರ ಕಷ್ಟ ಪಟ್ಟು ಸಾಯಬೇಕು. ಬಡವರು

ಎಷ್ಟು ಶ್ರಮಪಟ್ಟರೂ ಈ ಹಣವಂತರ ಮನಸ್ಸಿಗೆ ಅದು ಬರುವುದೇ

ಇಲ್ಲ. ಮನುಷ್ಯ ಮನುಷ್ಯರಿಗೆ ಇಷ್ಟು ವ್ಯತ್ಯಾಸ ಉಂಟೆ? ಸ್ವಲ್ಪವೂ

ದಯಾರಸವಿಲ್ಲದಿದ್ದರೆ, ಬಡವರು ಇವರಲ್ಲಿ ಸೇರಿಯಾರೆ? ಬೇಕಾದ

ಒಡವೆಗಳನ್ನು ಹೇರಿಕೊಂಡು, ಉಡುಪನ್ನು ಹಾಕಿಕೊಂಡು, ಮುಖ

ವನ್ನೂ ಮೈಯನ್ನೂ, ಕೈಕಾಲುಗಳನ್ನೂ ಕುಣಿಸುತಾ, ಇಲ್ಲದ ಅಭಿನಯ

ವನ್ನು ಮಾಡುತಾ, ಡಂಭದಿಂದ ಮೆರೆಯುತಾರೆ. ಈ ಐಶ್ವರ್ಯವೆಲ್ಲಾ ಬಡ

ವರ ಮನೆ ಹಾಳಾಗಿ ಅರಮನೆಗೆ ಬಂದದ್ದೇ ಹೊರತು, ಕಷ್ಟ ಪಟ್ಟು ಇವರು

-------------------------------------

೨೨೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. 


ಹೊಸದಾಗಿ ಸಂಪಾದಿಸಲಿಲ್ಲ. ಕೃಷಿಮಾಡಿ ಅದರ ಫಲವನ್ನು ಅನು.

ಭವಿಸುತಾ ಬಡವರಿಗೆ ಸಹಾಯಮಾಡುತಾ, ಯಾರಿಗೂ ಕೇಡನ್ನುಂಟು

ಮಾಡದೆ, ಇರಬೇಕೆಂದು ನಮ್ಮ ಗುರುಗಳು ಹೇಳಿದಾರೆ. ಆದರೆ ಈ ಹಣ

ಗಾರರ ತಾತ್ಪರ್ಯ ಹಾಗಿಲ್ಲ. .ತಾವು ಎಷ್ಟು ಕೆಲಸಮಾಡದೇ ಇದ್ದರೆ,

ಅಷ್ಟು ದೊಡ್ಡವರು ; ತಮ್ಮ ಬಳಿಯಲ್ಲಿ ಚಾಕರರು ಎಷ್ಟು ಹೆಚ್ಚಾಗಿದ್ದರೆ,

ತಾವು ಅಷ್ಟು ದೊಡ್ಡವರು ; ಲೋಕವನ್ನು ತಾವು ಎಷ್ಟು ಬಾಧಿಸಿ, ಬಡ

ವರನ್ನು ಹಾಳುಮಾಡಿ, ತಾವು ಡಂಭಮಾಡಿದರೆ, ತಾವು ಅಷ್ಟು

ದೊಡ್ಡವರು,--ಹೀಗೆಂದು ತಿಳಿದು ಇದಾರೆ. ಕಾಪಟ್ಯವು ಎಷ್ಟು

ಹೆಚ್ಚಾಗಿದ್ದರೆ. ಅಷ್ಟು ಮರ್ಯಾದೆ ಎಂತಲ್ಕೂ ಇತರರನ್ನು ಎಷ್ಟು

ಮೋಸಮಾಡಿದಕ್ಕೆ ಆದು ಅಷ್ಟು ಯುಕ್ತಿ ಎಂತಲೂ, ತಿಳಿದುಕೊಂಡಿ

ದಾರೆ. ಇವರ ಅಹಂಕಾರದ ಹೊಗರಿನಲ್ಲಿ ಒಳ್ಳೇ ಮಾತು ಕಿವಿಗೇ 

ಬೀಳುವುದಿಲ್ಲ. ಹೀಗೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಯು.

ಸುಮತಿಯ ಬುದ್ಧಿಯನ್ನು ಕೊಂಡಾಡುತಾ ಅಪ್ಪಾ ನೀನು ಹೇಳಿದ್ದೆಲ್ಲಾ

ನಿಜ. ಇಂಥಾ ಒಳ್ಳೇಮಾತು ಒಳ್ಳೇ ಮನಸ್ಸುಳ್ಳವರಿಗೆ ಹೊರತು

ಇತರರಿಗೆ ಬರುವುದಿಲ್ಲ. ಐಶ್ವರ್ಯಮದದಿಂದ ಜನರು ಬಡವರಿಗೆ ಮೋಸ

ಮಾಡುವುದು ನಿಜ. ಆದರೆ ಹುಲೀ ಚಕ್ಕಳವನ್ನು ಹೊದ್ದು ಗದ್ದೆಯಲ್ಲಿ

ಮೆಯ್ಯುವುದಕ್ಕೆ ಹೋದ ಕತ್ತೆಯು ತನ್ನ ಕೂಗಿನಿಂದಲೇ ತಾನು ಕೆಟ್ಟ

ಹಾಗೆ ಈ ದುಷ್ಟರೂ ಸಹ ತಮ್ಮ ಅವಿವೇಕದಿಂದಲೇ ತಾವು ಕೆಡು

ತಾರೆಂದು ಹೇಳಿದಳು. 

...

೧೯ ನೆ ಅಧ್ಯಾಯ


ಹೀಗೆ ಆ ದಿನ ಕಳೆದುಹೋಯಿತು. ಮಾರನೇ ದಿನ ಮದನನೂ

ಅವನ ಹೊಸ ಸ್ನೇಹಿತರೂ ಉದ್ಯಾನವನಕ್ಕೆ ಹೋಗಿ ಆಟವನ್ನು ಆಡಿ

ನೊಂಡು ಬರಬೇಕೆಂದು ಹೊರಟರು. ಅವರ ಸಂಗಡ ಲಲಿತೆಯೇ

ಮೊದಲಾದ ಒಬ್ಬಿಬ್ಬರು ಹೆಣ್ಣು ಹುಡುಗರೂ ಸುಮತಿಯೂ ಹೋದರು.

ಎಲ್ಲರೂ ಹೊಗೇಬತ್ತಿಯನ್ನು ಸೇದುವುದಕ್ಕೆ ಮೊದಲು ಮಾಡಿದರು.

ಮಂಗರಾಜನು ಒಂದು ಸುತ್ತನ್ನು ಸುತ್ತಿ ಬೆಂಕಿಹತ್ತಿಸಿ, ನೀನೂ.

---------------------------------

೧೯] ಸುಮತಿ ಮದನಕುಮಾರರ ಚರಿತ್ರೆ ೨೨೧ 


ಅದನ್ನು ಸೇದಬೇಕೆಂದು ಲಲಿತೆಗೆ ಬಲವಂತಮಾಡಿ, ಬತ್ತಿಯನ್ನು

ಒಂದು ಸಾರಿ ಸೇದಿಸಿದರು. ಆ ಕ್ಷಣವೇ ಅವಳಿಗೆ ತಲೇಸುತ್ತಿ ವಮನ

ವಾಗುವ ಹಾಗಾಯಿತು. ಆ ವನದ ಒಂದು ಕಡೆ ಓಡಾಡುತಿದ್ದ ಸುಮ

ತಿಯು ಬಂದುನೋಡಿ-- ಏಕೆ ಹೀಗೆಮಾಡಿದೆ ಎಂದು ಮಂಗರಸನನ್ನು

ಕೇಳಲು, ಅವನು ನೀನೇನು ಕೇಳುವುದು ಎಂದು, ಸುಮತಿಯನ್ನು

ಹಿಡಿದು ಹೊಡೆಯುವುದಕ್ಕೆ ಪ್ರಾರಂಭಿಸಿದನು. ಮಂಗನು ತನ್ನ ಕೈಲಿದ್ದ

ಕಲ್ಲಿನಿಂದ ಮುಖದ ಮೇಲೆ ಮೂರುನಾಲ್ಕು ಏಟ ಹೊಡೆದ ಕಾರಣ

ಸುಮತಿಗೆ ಮುಖವೊಡೆದು ಮೈಕೈಯೆಲ್ಲಾ ರಕ್ತವಾಯಿತು. ಈ ವಿಪ 

ರೀತವನ್ನು ಕೇಳಿ, ದೊರೆಯು ಅಲ್ಲಿಗೆ ಬಂದು ವಿಚಾರಿಸುವಲ್ಲಿ, ಸುಮ

ತಿಯು ತಾನೇ ಅಕಸ್ಮಾತ್ತಾಗಿ ತಗಲಿಸಿಕೊಂಡನೆಂದು ಮಂಗ ಮೊದ

ಲಾದವರು ಹೇಳಿದರು. ಆದರೆ ಲಲಿತೆಯೂ ಸುಮತಿಯೂ ನಡೆ

ದದ್ದನ್ನು ಹೇಳಿಬಿಟ್ಟರು. ಇದನ್ನು ಕೇಳಿ ದೊರೆಯು ಕೋಪಮಾಡಿ

ಕೊಂಡು ಹೊರಟುಹೋಗಿ ಸುಮತಿಯ ಹಣೇಮೇಲಿನ ಗಾಯ

ಮಾಯುವುದಕ್ಕೆ ತಕ್ಕ ಔಷಧವನ್ನು ಕೊಡಿಸಿದನು. ಕೆಲವು ಹುಡು 

ಗರು ಮೀನಾಂಬಕೀದೇವಿಗೆ ಈ ಜಗಳವನ್ನು ಹೇಳುತ್ತಾ, ಹೊಗೇಬತ್ತಿ

ಯನ್ನು ಸೇದಬೇಕೆಂದು , ಹುಡುಗರಿಗೆಲ್ಲಾ ಸುಮತಿಯೇ ಹೇಳಿ

ಕೊಟ್ಟನೆಂತಲೂ, ಎಲ್ಲರನ್ನೂ ಹಿಡಿದು ಸುಮತಿಯೇ ಹೊಡೆಡನೆಂತಲೂ

ಹೇಳಿದರು. ಅಕ್ಕನ ಸಮಾಪದಲ್ಲಿಯೇ ಇದ್ದ ಕಮಲಾಂಬಕೀದೇವಿಯು

ಕೇಳಿ--ಅಗೊ ನಾನು ಹೇಳಲಿಲ್ಲವೆ? ಈ ಹಾಳ ಹಾರವರ ಜೊತೆಗೆ

ನಮ್ಮ ಹುಡುಗರು ಸೇರಿದರೆ ಹೀಗೆ ಕೆಟ್ಟು ಹೋಗುವರು, ನಮ್ಮ ಅರ

ಮನೆಗಳಿಗೆ ಇಂಥಾವರು ಬರಲೇಕೂಡದು, ಅಕ್ಕಯ್ಯ, ಎಂದಳು,

ಕೂಡಲೆ ದೊರೆಯು ಉದ್ಯಾನವನದಿಂದ ಅಲ್ಲಿಗೆ ಬಂದು, ಸುಮತಿ

ಯಿಂದ ಯಾವ ತಪ್ಪೂ ಅಲ್ಲವೆಂದು ಹೇಳುವತನಕ, ಆ ಹುಡುಗನನ್ನು

ಬೈಯುತಿದ್ದ ಹೆಂಗಸರ ಹರಟೆಗೆ ಕೊನೆಮಿತಿಯೇ ಇರಲಿಲ್ಲ.


ಈ ದೊರೆ ಮಕ್ಕಳ ಚರ್ಯಗಳನ್ನು ಕಂಡು ಸುಮತಿಗೆ ಬಹು

ಅಸಹ್ಯ ಹಿಡಿಯಿತು. ಆದರೂ ಯಾವ ಮಾತನ್ನೂ ಆಡದೆ ಸುಮ್ಮನೆ

ಆದನು. ಬೆಳಗಾದಮೇಲೆ ರಾಜಪುತ್ರರೆಲ್ಲರೂ ಸೇರಿ, ಕಾಡು ಸುತ್ತುವು 

------------------------------------

೨೨೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. 


ದಕ್ಕೆ ಹೋಗಬೇಕೆಂದು ನಿಷ್ಕರ್ಷೆಮಾಡಿಕೊಂಡರು. ಸುಮತಿಯೂ

ಇವರ ಸಂಗಡಲೇ ಹೊರಟನು. ಮಂಗರಾಜ ಮೊದಲಾದ ಕೆಲವು 

ಹುಡುಗರಿಗೆ ಇವನಮೇಲೆ ದ್ವೇಷವಿತ್ತು. ಮದನನು ಈ ಕೆಟ್ಟ ಹುಡು

ಗರ ಸಹವಾಸದಲ್ಲಿಯೇ ಲೋಲನಾಗಿ ಸುಮತಿಯನ್ನು ಮಾತನಾಡಿಸದೆ

ಸುಮ್ಮನೆ ಹೋಗುತಿದ್ದನು. ಮುನ್ನಾದಿವಸ ನಡೆದ ಜಗಳಕ್ಕೆ ಕಾರಣ

ವೇನೆಂದು ಮದನ ಕೇಳಲೂ ಇಲ್ಲ. ಅವ ಕೇಳದೆ ನಾನು ಯಾಕೆ

ಹೇಳಲೆಂದು ಸುಮತಿ ಹೇಳಲೂ ಇಲ್ಲ ಇವರೆಲ್ಲರೂ ಹೋಗುತಿರು

ವಾಗ, ಸ್ವಲ್ಪದೂರದಲ್ಲಿ ಕೆಲವು ಜನರು ಗುಂಪು ಸೇರಿಕೆಇಂಡಿದ್ದರು.

ಅದಕ್ಕೆ ಕಾರಣವೇನೆಂದು ಕೇಳಲಾಗಿ, ಸ್ವಲ್ಪ ಹೊತ್ತಿನಲ್ಲಿಯೇ ಗೂಳಿ

ಕಾಳಗವಾಗುವುದೆಂದು ಹೇಳಿದರು... ಆಗ ಸುಮತಿಯು-- ನಾವು

ಗೂಳಿಕಾಳಗಕ್ಕೆ ಹೋಗಬಾರದು. ಅವು ಕಿತ್ತುಕೊಂಡು ಜನರಮೇಲೆ

ನುಗ್ಗಿದರೆ ತಪ್ಪಿಸಿಕೊಳ್ಳುವುದು ಕಷ್ಟ. ಇಂಥಾ ಅಪಾಯ ಯಾವು

ದಕ್ಕೂ, ಪುಟ್ಟಸ್ವಾಮಿಯನ್ನು ಸಿಕ್ಕಿಸುವುದಿಲ್ಲವೆಂದು ಮೀನಾಂಬಕಿಗೆ

ಮಾತ ಕೊಟ್ಟು ಬಂದಿದ್ದೀರಿ, ಎಂದನು. ಆಗ ಅವರಲ್ಲಿ ಒಬ್ಬ ಹುಡು

ಗನು ಗೂಳಿಗಳನ್ನು ಉದ್ದವಾದ ಹಗ್ಗಕ್ಕೆ ಕಟ್ಟಿರುತಾರೆ. ಅದನ್ನು ಕಿತ್ತು

ಕೊಂಡು ಬರಲಾರವು. ಅಥವ ಬಂದರೂ ಇಂಥಾ ಅಪಾಯ ಸಂಭವಿಸಿ

ತೆಂದು ಯಾರುತಾನೆ ಅರಮನೆಗೆ ಹೋಗಿ ಹೇಳುತಾರೆ? ಎಂದನು,


ಹುಡುಗರು--ಯಾರೂ ಹೇಳುವುದಿಲ್ಲ.


ಸುಮತಿ- ನಾನು ಒಬ್ಬರಮೇಲೆ ಚಾಡಿ ಹೇಳಬೇಕೆಂದು ಇಲ್ಲ.

ಆದರೆ ಎಲ್ಲಿಗೆ ಹೋಗಿದ್ದಿರಿ, ಏನು ನಡೆಯಿತು? ಎಂದು ಕೇಳಿದರೆ

ನಾನು ಏನಹೇಳಲಿ?


ಹುಡುಗರು-- ನಮ್ಮ ದಾರಿಯಲ್ಲಿ ನಾವು ಹೋಗುತಿದ್ದೆವೆಂದು

ಅಷ್ಟರಮಟ್ಟಿಗೆ ಹೇಳು. ಮುಂದಕ್ಕೆ ಬೇಡ.


ಸುಮತಿ-- ಹಾಗಾದರೆ ನಾವು ನಿಶ್ಚಯವನ್ನು ಹೇಳಿದಹಾಗಾಗು

ವುದಿಲ್ಲ. ಮತ್ತೂ ಗೂಳೀಕಾಳಗದಲ್ಲಿ ಅಪಾಯವುಂಟು. ನಾವು ಅಲ್ಲಿಗೆ

ಹೋಗಬಾರದು. ಮದನನನ್ನು ಅಲ್ಲಿಗೆ ಕರೆದುಕೊಂಡು ಹೋಗಲೇ

ಕೂಡದು..(ಹೀಗೆ ಸುಮತಿ ಆಡಿದ ಮಾತು ಅಲ್ಲಿದ್ದವರು ಯಾರಿಗೂ

ಸರಿಬೀಳಲಿಲ್ಲ). 

------------------------------------

೧೯] ಸುಮತಿ ಮದನಕುಮಾರರ ಚರಿತ್ರೆ ೨೨೩ 


ಹುಡುಗರು--ಲೋಕದಲ್ಲೆಲ್ಲಾ ತಾನೇ ಬುದ್ಧಿವಂತನೆಂದು ಈ

ಸುಮತಿ ಕೊಚ್ಚಿ ಕೊಳ್ಳುತಾನೆ,


ತಿಮ್ಮನಾಯಕ-.. ಈ ಭಿಕ್ಷಾನ್ನದ ಹಾರುವ ದೊರೆಮಕ್ಕಳಾದ

ನಮಗೆ ಬುದ್ಧೀಕಲಿಸುವುದಕ್ಕೆ ಬರುತಾನೆ! ಮದನನು ಇವನ ಸ್ನೇಹಾ

ಮಾಡಿದಮಾತ್ರಕ್ಕೆ ಇವ ಹೆಚ್ಚಿಕೊಂಡ


ಮಂಗ-- ನಮ್ಮ ಪುಟ್ಟಸಾಮಿಯು ನಿನಗೆ ಮಾಡಿದ ಉಪಕಾರಕ್ಕೆ

ನೀನು ಅವನಮೇಲೆ ಚಾಡೀ ಹೇಳುತೀಯೇನೆಲಾ?


ಸುಮತಿ- -ಚಾಡೀಹೇಳಬೇಕಾದ ಅಗತ್ಯ ನನಗಿಲ್ಲ. ನಾನು

ಭಿಕ್ಷಾನ್ನದನನಾದರೆ, ನಿಮ್ಮಗಳಿಂದ ನನಗೆ ಯಾವ ಉಪಕಾರವೂ

ಆಗತಕ್ಕದ್ದಿಲ್ಲ.


ಇದುವರೆಗೂ ಸುಮ್ಮನೇ ಇದ್ದ ಮದನನು ಈ ಮಾತನ್ನು ಕೇಳಿ

ಕೋಪಗೊಂಡು--ಏನೆಲೋ! ನನಗೆ ಅವಮಾನ ಮಾಡುತೀಯಾ?


ಸುಮತಿ--ನಾನು ಅವಮಾನಮಾಡುವುದಿಲ್ಲ. ನೀನೂ ನಿನ್ನ

ಸ್ನೇಹಿತರೂ ಸೇರಿ ನನಗೆ ಅವಮಾನಮಾಡುತೀ(ರಿ.


ಮದನ-ನೀನೇನು ಮಹಾ ದೊಡ್ಡಮನುಷ್ಯನೊ?


ಸುಮತಿ -- ಇದುವರೆಗೂ ನೀನು ದೊಡ್ಡಮನುಷ್ಯನೆಂದು

ಕೊಂಡಿದ್ದೆ.


ಮದನ--ಈಗ ನಾನು ದೊಡ್ಡ ಮನುಷ್ಯನಲ್ಲವೇನೊ? ನನ್ನನ್ನು

ಬೈಯುತೀಯಾ?


ಹೀಗೆಂದು ಕೋಪದಿಂದ ಉಳ್ಳಂಬಿರಿಸಿಗೂ ಸುಮತಿಯ ಕೆನ್ನೆಗೆ

ಮದನ ಒಂದು ಏಟನ್ನು ಹೊಡೆದನು. ಆಗ ಸುಮತಿಯ ಧೈರ್ಯ ಸ್ವಲ್ಪ

ಕುಂದಿತು. ಅವನು ಎರಡು ಕೈಯಿಂದಲೂ ಮುಖವನ್ನು ಮುಚ್ಚಿ

ಕೊಂಡು ಅಳುತಾ--ಮದನೆ, ನೀನು ನನಗೆ ಹೀಗೆ ಮಾಡುತೀಯೆಂದು

ತಿಳಿದಿರಲಿಲ್ಲ ಎಂದನು. ಆ ಕಾಲದಲ್ಲಿ ಹತ್ತಿರಿದ್ದ, ತುಂಟಹುಡುಗರೆಲ್ಲಾ

--ಪುಟ್ಟಸಾಮಿ, ಇನ್ನೂ ನಾಲ್ಕು ಎಟ ಕೊಡಿ ಕೊಡಿ, ಎಂದು ಕೂಗಿದ್ದ

ಲ್ಲದೆ. ಇದೇ ಸಮಯವೆಂದು ಎಲ್ಲರೂ ಒಂದೊಂದು ಏಟ ಹಾಕುವು

ದಕ್ಕೆ ಮೊದಲುಮಾಡಿ,--ಎಲ್ಲಿ ನಿನ್ನ ಮುಖ ತೋರಿಸು, ಹೇಡಿ, ಎಂದು 

--------------------------------------

೨೨೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಕೂಗಿದರು. ಸುಮತಿಯು ಅಳುವುದನ್ನು ಬಿಟ್ಟು ಚೇತರಿಸಿಕೊಂಡು

ಮೇಲಕ್ಕೆ ಎದ್ದು-- ನನ್ನಮೇಲೆ ಯಾರು ಬರುತೀರಿ, ಬನ್ನಿ, ಎಂದು

ಹೇಳುತಾ ಒಬ್ಬೊಬ್ಬರನ್ನಾಗಿ ಹಿಡಿದ್ಕು ಕುಕ್ಕಿ, ಉರುಳಿಸುತಾ ಬಂದನು.

ಅತಿಮೂರ್ಖನಾದ ಮಂಗರಾಜಮಾತ್ರ ಇವನ ಮೇಲೆ ಹೋರಾಟಕ್ಕೆ

ನಿಂತುಕೊಂಡನು. ಕೊನೆಗೆ ಸುಮತಿಯ ಕೈಬಲವಾಗಿ ಮಂಗನಿಗೆ ಪೆಟ್ಟು

ಜೋರಾಯಿತು. ಮಂಗರಸನು ಮೇಲಕ್ಕೆ ಏಳಲು ಕೈಲಾಗದೆ ಕೆಳಕ್ಕೆ

ಬಿದ್ದು ಬಿಟ್ಟನು. ಇದುವರೆಗೂ ಸುಮತಿಯನ್ನು ಹಾಸ್ಯಮಾಡುತಿದ್ದ

ಹುಡುಗರೆಲ್ಲರೂ ಅವ ಜೈಸಿದ್ದನ್ನು ಕಂಡು--ಭಲಾ! ಭಲರೇ ಸುಮತಿ!

ಎಲ್ಲರನ್ನೂ ಗೆದ್ದ! ಎಂದು ಅವನ ಬೆನ್ನ್ನ ತಟ್ಟಿ ಕೊಂಡಾಡುವುದಕ್ಕೆ

ಪ್ರಾರಂಭಿಸಿದರು. ಆದರೆ ಸುಮತಿಯು ಈ ಸ್ತೋತ್ರಕ್ಕೆ ಉಬ್ಬದೆ,

ಮಂಗನ ಸಮಾಪಕ್ಕೆ ಹೋಗಿ ಅವನ ಕೈಹಿಡಿದು ಎಬ್ಬಿಸಿ. -ಅಯ್ಯಾ,

ಏಳು ನಿನಗೆ ಪೆಟ್ಟು ಬಲವಾಗಿ ಬಿತ್ತು. ನೀನಾಗಿ ಬಂದಕಾರಣ ನಾನು

ಜಗಳಕ್ಕೆ ನಿಂತೆ, ಎಂದು ಹೇಳಿದನು. ತರುವಾಯ, ಹುಡುಗರೆಲ್ಲರೂ

ಸೇರಿ ಗೂಳೀಕಾಳಗದ ಸ್ಥಳಕ್ಕೆ ಹೋದರು. ಹೋಗಬೇಡಿ, ಎಂದು

ಸುಮತಿ ಎಷ್ಟು ಹೇಳಿದರೂ ಕೇಳಲಿಲ್ಲ. ಕೇಳದೇಇದ್ದ ಕಾರಣ

ಅವರ ಸಂಗಡ ತಾನೂ ಹೊರಟನು. ಮದನನ ಕ್ಷೇಮವನ್ನೇ ನೋಡ

ಬೇಕೆಂಬ ಕುತೂಹಲವು ಹೆಚ್ಚಾಗಿದ್ದ ಕಾರಣ, ಸುಮತಿಗೆ ಇದಕ್ಕೆ

ಪೂರದಲ್ಲಿ ಬಿದ್ದ ಏಟಿನ ಯಾತನೆಯೂ, ಆದ ಅವಮಾನವೂ, ಲೇಶವೂ

ತೋರಲಿಲ್ಲ. ಗೂಳೀಕಾಳಗಕ್ಕೆ ಮೊದಲಾಯಿತು.


ಈ, ಮಧ್ಯೆ ಒಬ್ಬ ಸಿದ್ದಿಯವನು ಅಲ್ಲಿಗೆ ಬಂದು, ಈ ದೊರೆ ಮಕ್ಕಳ

ಹತ್ತಿರ ಭಿಕ್ಷ ಕೇಳುವುದಕ್ಕೆ ಮೊದಲು ಮಾಡಿದನು. ಅವ ನಿಜವಾಗಿ

ದರಿದ್ರನೆಂದು ತಿಳಿದಿದ್ದಾಗ್ಗೂ, ಅವನ ಮುಖದ ಕಪ್ಪನ್ನೂ ಅವನ

ತಲೇಕೂದಲನ್ನೂ ನೋಡಿ ಹಾಸ್ಯಮಾಡಿಕೊಂಡು ನಗುವುದರಲ್ಲಿ ಈ

ದೊರೆಮಕ್ಕಳು ಚತುರರಾದರೇ ಹೊರತು, ದೀನನಾದವನಿಗೆ ಸಹಾಯ

ಮಾಡಬೇಕೆಂಬ ಬುದ್ಧಿಯನ್ನು ಇವರು ತೋರಿಸಲೇ ಇಲ್ಲ. ಇದನ್ನು

ಕಂಡು ಸುಮತಿಯು ಅವನಲ್ಲಿ ನಿಜವಾದ ದಯಾರಸದಿಂದ ತನ್ನ ಹತ್ತಿ 

ರಿದ್ದ ಒಂದೇ ಒಂದು ಹಣವನ್ನು ತೆಗೆದು ಅವನಿಗೆ ಕೊಟ್ಟು- ಅಪ್ಪಾ 

--------------------------------------

೧೯] ಸುಮತಿ ಮದನಕುಮಾರರ ಚರಿತ್ರೆ ೨೨೫ 


ನನ್ನಲ್ಲಿ ಇನ್ನೇನೂ ಇಲ್ಲ, ಈ ಒಂದು ಹಣ ಮಾತ್ರ ದೊರೇಮನೆಯಲ್ಲಿ

ನಿನ್ನೆ ದಕ್ಷಿಣೆಯಾಗಿ ಬಂದಿತ್ತು. ಇದನ್ನು ಹಿಡಿ ಎಂದು ಕೊಟ್ಟನು.

ತಾನೂ ಆ ಸಿದ್ದಿಯವನಿಗೆ ಉಚಿತವನ್ನು ಕೊಡಬೇಕೆಂದು ಮದ

ನನು ನೋಡಿಕೊಳ್ಳಲು ಹತ್ತಿರ ಇದ್ದ ದುಡ್ಡೆಲ್ಲ ವೆಚ್ಚವಾಗಿ ಹೋಗಿತ್ತು.

ತುಂಟರ ಹಾವಳಿಯಲ್ಲಿ ಒಂದು ಕಾಸೂ ಉಳಿದಿರಲ್ಲ.


ತರುವಾಯ ಹುಡುಗರೆಲ್ಲರೂ ಗೂಳೀಕಾಳಗವಾಗುವ ಕಡೆಗೆ ತಿರು

ಗಿದರು.. ಆಗ ಸುಮತಿಯು--ಅಲ್ಲಿಗೆ ಹೋಗುವುದು ಸರಿಯಲ್ಲ;

ನಾವು ಹುಡುಗರು,  ದೊಡ್ಡವರ ಗುಂಪಿನ ಮಧ್ಯೆ ನಾವು ಸಿಕ್ಕಿಕೊಂಡರೆ

ಈಚೆಗೆ ಬರುವುದಕ್ಕೂ ಇಲ್ಲದೆ ಅಲ್ಲಿ ಇರುವುದಕ್ಕೂ ಇಲ್ಲದೆ ಕಷ್ಟವಾಗು

ವುದು. ಗೂಳಿ ತಪ್ಪಿಸಿಕೊಂಡು ಈಚೆಗೆ ಬಂದರೆ, ಜನರನ್ನು ತುಳಿದು

ಬಿಟ್ಟೀತು. ನಾವು ಚಿಕ್ಕವರಾದ್ದರಿಂದ, ನಮ್ಮನ್ನು ದೊಡ್ಡವರು ತಳ್ಳಿ

ಬಿಟ್ಟು ತಾವು ತಪ್ಪಿಸಿಕೊಂಡು ಓಡಿಹೋಗವರು. ಗೂಳಿಯು ನಮ್ಮನ್ನು

ತುಳಿದುಬಿಡಬಹುದು. ಇಷ್ಟರಮೇಲೆ ಬೇಕಾದವರು ಹೋಗಲಿ. ಆದರೆ

ಮದನ ಮಾತ್ರ ಹೋಗುವುದು ಸರಿಯಲ್ಲ. ಅವನಿಗೆ ಏನಾದರೂ

ಅಪಾಯ ಸಂಭವಿಸಿದರೆ ದೊರೆಗೂ ಅರಸಿಗೂ ಬಹಳ ವ್ಯಾಕುಲ ಉಂಟಾ

ದೀತು,--ಹೀಗೆಂದು ಹೇಳಿದನು. ಈ ಮಾತನ್ನು ಯಾರೂ ಲಕ್ಷ್ಯ

ಮಾಡಲಿಲ್ಲ. ಆದಕಾರಣ ಸುಮತಿಯೂ ಅವರ ಸಂಗಡಲೇ ಹೋದನು,


ಗೂಳಿಗಳು ಕಾದಾಡುತಿದ್ದ ರಂಗದ ಸುತ್ತಲೂ ಜನರ ಗುಂಪು

ನಿಂತಿತ್ತು. ಅವರ ಹತ್ತಿರ ಈ ಹುಡುಗರೂ ನುಸುಳಿಕೊಂಡು ಹೋಗಿ

ನಿಂತರು. ಆಗ ಗೂಳಿಗಳ ಕಾಳಗ ಬಲವಾಗಿ ನಡೆಯುತ್ತಿತ್ತು. ಕೊನೆಗೆ

ಒಂದು ದೊಡ್ಡ ಗೂಳಿಯು ಇನ್ನೊಂದನ್ನು ತಿವಿದು ಸೋಲಿಸಿತು. ಈ

ಎರಡು ಗೂಳಿಗಳೂ ಒಂದನ್ನು ಒಂದು ಹರಿಸಿಕೊಂಡು ಜನರಮೇಲೆ

ನುಗ್ಗಿದವು. ಜನರೆಲ್ಲಾ ಛಿನ್ನಾಭಿನ್ನವಾಗಿ ಓಡಿದರು. ಇಬ್ಬರು ಗಂಡಸ

ರನ್ನೂ ಒಬ್ಬ ಹೆಂಗಸನ್ನೂ ಒಬ್ಬ ಹುಡುಗನನ್ನ ಗೂಳಿಗಳು ತುಳಿದು

ಬಿಟ್ಟವು. ಇಬ್ಬರ ಪ್ರಾಣಹೋಯಿತು. ಇಬ್ಬರಿಗೆ ಕಾಲುಮುರಿದು

ಪೂರಾ ಪೆಟ್ಟಾಯಿತು. ಮದನನ ಸಂಗಡ ಇದ್ದ ಹುಡುಗರೆಲ್ಲರೂ

ಗಾಬರಿಯಾಗಿ ಓಡಿಹೋದರು. ಮದನಕುಮಾರ ಮಾತ್ರ ಓಡಿಬರುತಾ 

--------------------------------------

೨೨೬ ಸುಮತಿ ಮದನಕುಮಾರರೆ ಚರಿತ್ರೆ [ಅಧಾಯ


ದಾರಿಯಲ್ಲಿ ಮುಗ್ಗುರಿಸಿ ಬಿದ್ದನು. ಭೂಮಿ ಹಳ್ಳದಿಣ್ಣೆಯಾಗಿದ್ದದ

ರಿಂದಲೋ ಅಥವಾ ಹಿಂದಟ್ಟಿ ಕೊಂಡು ಬರುತಿದ್ದ ಗೂಳಿಗೆ ಭಯಪಟ್ಟದ

ರಿಂದಲೋ ಅಂತು ಹೇಗೋ ಕೆಳಕ್ಕೆ ಬಿದ್ದಬಿರಸಿಗೆ ಕೆನ್ನೆ  ಮೈಯೆಲ್ಲಾ

ತರೆದುಹೋಯಿತು. ಎಡದರಟ್ಟೆ ಉಳುಕಿತು. ಇವನ ಸಮೀಪಕ್ಕೆ

ಓಡಿಬರುತಿದ್ದ ಗೂಳಿಯ ರಭಸವನ್ನು ಕಂಡು ಅಲ್ಲಿದ್ದ ಜನರೆಲ್ಲಾ

--ಅಯ್ಯೊ, ಹುಡುಗ ಹೋದನಲ್ಲಾ ಎಂದು ಕೂಗಿಕೊಳ್ಳುತಿದ್ದರೇ

ಹೊರತು ಯಾರೂ ಆ ಗೂಳಿಯನ್ನು ನಿಲ್ಲಿಸುವುದಕ್ಕೆ ಧೈರ್ಯಮಾಡ

ಲಿಲ್ಲ. ಮಂಗರಾಜ ಮೊದಲಾದ ವೀರರೆಲ್ಲಾ ಇವನಕಡೆ ತಿರುಗಿಕೂಡ

ನೋಡದೆ ಓಡಿಹೋದರು ಕಳತ್ರ ಬಿದ್ದಿದ್ದ ಮದನನಿಗೂ ಗೂಳಿಗೂ

ಎರಡುವಮೊಳ ಬಿಟ್ಟಿತು. ದೊರೆಮಗನ ಪರಿಣಾಮ ಅಲ್ಲಿಗೆ ಆಯಿತೆಂಬ

ದಾಗಿ ಅಲ್ಲಿದ್ದ ಜನರೆಲ್ಲಾ ಹೋ! ಎಂದು ಕೂಗಿದರು. ಅಲ್ಲಿ ಯಾರೋ

ಕೊನೆಗೆ ಮೊಳೆ ಪೆಟ್ಟಿದ್ದ ಭಾರುಕೋಲನ್ನು ಕೆಡವಿಕೊಂಡು ಹೋಗಿ

ರಲು, ಆ ಸಮಯಕ್ಕೆ ಸುಮತಿಯು ಅದನ್ನು ತೆಗೆದುಕೊಂಡು ದೈರ್ಯದಿಂದ

ಓಡಿಹೋಗಿ ಗೂಳಿಯ ಪಕ್ಕೆಗೆ ತಿವಿದನು. ಆ ಗಳಿಗೆಯಲ್ಲಿಯೇ ಆ

ಮಹಾವೃವಭವು ರೋಷದಿಂದ ಸುಮತಿಯ ಕಡಿ ತಿರುಗಿ ಇವನ ಕಾಲಿನ

ಸಂದಿಗೆ ಕೊಂಬನ್ನು ಹಾಕುವುದಕ್ಕೆ ಹೊರಟಿತು. ಮದನನಮೇಲೆ ಬಂದ

ಮೃತ್ಯು ಸುಮತಿಯ ಕಡೆಗೆ ತಿರುಗಿತು. ಅಲ್ಲಿ ದೂರದೂರವಾಗಿ ನಿಂತು

ನೋಡುತಿದ್ದ ಜನರಲ್ಲಿ ಸುಮತಿಯ ಧೈರ್ಯವನ್ನು ನೋಡಿ ಹುಟ್ಟಿದ

ಮೆಚ್ಚಿಕೆಯೂ ಆಶ್ಚರ್ಯವೂ, ಇಂಥಾ ಹುಡುಗನ ಪ್ರಾಣವನ್ನು ಗೂಳಿ

ಅಪಹರಿಸುವುದಲ್ಲಾ ಎಂಬ ವ್ಯಸನದಲ್ಲಿ ಕಲಕಿಹೋಯಿತು. ಇನ್ನೇನು

ಗತಿ! ಎಂದು ಜನರೆಲ್ಲರೂ ಕೂಗುವದಕ್ಕೈ ಮೊದಲುಮಾಡಿದರು. ಆ

ಸಮಯಕ್ಕೆ ಸರಿಯಾಗಿ ಒಬ್ಬ ಮನುಷ್ಯನು ಗುಂಪಿನೊಳಗಿನಿಂದ

ಸಿಡಿಲು ಹೊಡೆದಹಾಗೆ ಓಡಿಬಂದು ತನ್ನ ಮುಷ್ಟಿಯಿಂದ ಗಟ್ಟಿಯಾಗಿ

ಗೂಳಿಯ ಮೂಗಿನಮೇಲೆಯೂ ಅದರ ಪಕ್ಕೆಯಮೇಲೆಯೂ ಗುದ್ದಿ

ದನು. ಅದಕ್ಕೆ ಇನ್ನೂ ರೋಷಹೆಚ್ಚಿ ಈ ಮನುಷ್ಯನಮೇಲೆ ತಿರು

ಗಿತು. ಆದರೆ ಈ ಆಪದ್ಬಂಧುವು ಗೂಳಿಯ ಕೈಗೆ ಸಿಕ್ಕದಹಾಗೆ ಅದಕ್ಕೆ

ವಿಶೇಷವಾಗಿ ಏಟನ್ನು ಕೊಡುತ್ತಾ, ಅದರ ಬಾಲವನ್ನು, ಹಿಡಿದು ಎಳೆ 

--------------------------------------

೧೯] ಸುಮತಿ ಮದನಕುಮಾರರ ಚರಿತ್ರೆ ೨೨೭ 


ಯುತ್ತಾ, ಅದರ ಸಂಗಡ ಸ್ವಲ್ಪದೂರ ಓಡುತ್ತಾ, ಅದು ತಿರುಗಿ ಹರಿಸಿ

ಕೊಂಡು ಬಂದರೆ ಸೊಟ್ಟ ಸೊಟ್ಟನಾಗಿ ಹೋಗುತ್ತಾ. ಹಳ್ಳದೊಳಕ್ಕೆ

ದುಮುಕುತ್ತಾ, ತಿಟ್ಟಿನ ಮೇಲಕ್ಕೆ ಕಡಿದಾದ ಸ್ಥಳದಲ್ಲಿ ಹತ್ತುತ್ತಾ,

ಸಮಯ ಸಿಕ್ಕಿದಾಗಲೆಲ್ಲಾ ಮೊನಚಾದ ಕಲ್ಲನ್ನು ಹಿಡಿದು ಅದರ

ಅಪಾಯಸ್ಥಳಕ್ಕೂ ಪಕ್ಕೆಗೂ ಮೂತಿಯ ಮೇಲೆಯೂ ಮನಸ್ವಿ ಹೊಡೆ

ಯುತ್ತಾ ಬಂದನು. ಗೂಳಿಯು ತನ್ನ ಶತ್ರುವನ್ನು ತೀರಿಸಿಕೊಳ್ಳ

ಬೇಕೆಂಬ ಆಕ್ರೋಶದಿಂದ .ಅವನ ಹಿಂದೆ ಹಿಂದೆಯೇ ಹೋಗಿ, ಹಳ್ಳ

ಗಳಿಗೆ ಬಿದ್ದು, ದಿಣ್ಣೆಗಳ  ಮೇಲೆ ಮುಗ್ಗರಿಸಿ, ಮೈಯೆಲ್ಲಾ ತರೆದು

ಹೋದ್ದೂ ಅಲ್ಲದೆ, ಅವನ ಕೈಪೆಟ್ಟಿನಿಂದ ಅಸ್ತಾವಸ್ಥೆ ಯಾಗಿ ಕೆಳಗೆ ಬಿದ್ದು

ಬಿಟ್ಟಿತು; ಮೇಲಕ್ಕೆ ಎಳಲಾರದೆ ಹೋಯಿತು, ಅಗ ಅಲ್ಲಿದ್ದ ಜನ

ರೆಲ್ಲಾ ಸೇರಿ ಆ ಗೂಳಿಗೆ ಹಗ್ಗವನ್ನು ಕಟ್ಟಿ, ಎಳೆದುಕೊಂಡು ಹೋದರು.

ಹೀಗೆ ಸುಮತಿಯ ಪ್ರಾಣ ಉಳಿಯುಶು. ಆಗ ಈ ಪ್ರಕಾರ ಆ ಗೂಳಿ

ಯನ್ನು ಅಡ್ಡಗಟ್ಟಿ ಪ್ರಾಣದಾನವನ್ನು ಮಾಡಿದ ಪ್ರಣ್ಯಾತ್ಮ ಯಾರೆಂದು

ಸಾವಕಾಶವಾಗಿ ನೋಡಿಕೊಳ್ಳಲು, ಅವನು ಸ್ವಲ್ಪಹೊತ್ತಿಗೆ ಮುಂಚೆ

ಸುಮತಿಯಿಂದ ಯಾಚನೆಯನ್ನು ಇಸುಕೊಂಡಿದ್ದ ಸಿದ್ದಿಯವನಾಗಿ

ದ್ದನು. ಸುಮತಿಯು ಮದನ ಸುರಕ್ಷಿತನಾಗಿದಾನೆಂದು ತಿಳಿದು ಬಹು

ಸಂತೋಷದಿಂದ ಆ ಸಿದ್ದಿಯವನನ್ನು ಕರೆದುಕೊಂಡು ತಮ್ಮ ತಂದೆ ಇದ್ದ

ಗ್ರಾಮಕ್ಕೆ ಹೊರಟುಹೋದನು.


ಅತ್ತ ದೊರೆಮಗನಾದ ಮದನನನ್ನು ಹುಡುಕುವುದಕ್ಕೆ ಬಂದಿದ್ದ

ಓಲೆಕಾರರು, ಪೆಟ್ಟು ಏನೂ ಇಲ್ಲದಿದ್ದಾಗ್ಗೂ ಭಯದಿಂದ ಕಳಕ್ಕೆ ಬಿದ್ದು

ಜ್ಞಾನತಪ್ಪಿ ಹೋಗಿದ್ದ ಮದನನನ್ನು ಎತ್ತಿಕೊಂಡು ಅರಮನೆಗೆ

ಹೋದರು.


ಮಗನಿಗೆ ಉಂಟಾದ ಅಪಾಯದ ಸಂಗತಿಯನ್ನು ರಾಣೀವಾಸದ

ಲ್ಲಿದ್ದ ದೊರೇ ಹೆಂಡತಿಯು ಕೇಳಿ ಗಾಬರಿಯಾಗಿ--ಅಯ್ಯೋ, ನನ್ನ

ಕಂದನಿಗೆ ಹೀಗಾಯಿತಲ್ಲಾ ! ಇನ್ನೇನುಗತಿ ಎಂದು ಗಟ್ಟಿಯಾಗಿ

ಅಳುತ್ತಾ ಅರಮನೆಯಿಂದ ಈಚೆಗೆ ಬಂದಳು. ಕೂಡಲೆ ಸಮಾಪದ

ಲ್ಲಿದ್ದ ರಾಜಸ್ತ್ರೀಯರೆಲ್ಲಾ ವ್ಯಸನಸಪಡುವವರಂತೆ ಕಣ್ಣಿಗೆ ಸೆರಗನ್ನು 

------------------------------------

೨೨೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಹಾಕಿಕೊಂಡು ರಾಣಿಯ ಸಂಗಡ ತಾವೂ ಈಚೆಗೆ ಹೊರಟರು. ಆ

ಸಮಯಕ್ಕೆ ಸರಿಯಾಗಿ ಮದನನ ಸಂಗಡ ಹೋಗಿದ್ದ ಹುಡುಗರು ಕೆಲ

ವರು ಬಂದು, ಮದನನಿಗೆ ವಿಶೇಷವಾಗಿ ಏನೂ ಗಾಯವಾಗಲಿಲ್ಲ

ವೆಂದು ಹೇಳಿದರು. ಅವರ ಹಿಂದುಗಡೆಯಲ್ಲಿಯೇ ಮದನನೂ ಬಂದನು.

ರಾಣಿಯು ಅವನನ್ನು ನೋಡಿ, ಅತ್ಯಾನಂದದಿಂದ ಎತ್ತಿಕೊಂಡು

ಅವನ ಗುಣಗಳನ್ನು ಹಾಡಿಹಾಡಿಕೊಂಡು ಮುದ್ದಾಡಿದಳು. ತರು

ವಾಯ ಪುಟ್ಟುಸಾಮಿಯಸಂಗಡ ಹೋಗಿದ್ದ ಹುಡುಗರೆಲ್ಲರೂ ಅಲ್ಲಿಬಂದು

ನಿಂತಿರುವುದನ್ನೂ ಆ ಗುಂಪಿನಲ್ಲಿ ಸುಮತಿ ಇಲ್ಲದೇ ಇರುವುದನ್ನೂ

ಕಂಡು ಆಕೆಯು ಎಲ್ಲರೂ ಬಂದಿದಾರೆ, ಆ ಕೆಟ್ಟ ಹುಡುಗನಾದ ಸುಮತಿ

ಮಾತ್ರ ಇಲ್ಲಿಲ್ಲ. ಅವನೇ ಪುಟ್ಟು ಸಾಮಿಗೆ ಈ ಅಪಾಯವನ್ನು ತಂದು

ಬಿಟ್ಟಿರಬೇಕು ಆ ಗಂಡನ್ನು ಕಂಡರೆ ಮೊದಲಿನಿಂದಲೂ ನನಗೆ ಆಗದು.

ಆ ಗೂಳಿಯು ಆ ಗಂಡನ್ನೇ ಹಾದುಕೆಡವಿದ್ದರಾಗಿತ್ತು. ಹೀಗೆಂದು

ಕೋಪದಿಂದ ಗರ್ಜಿಸಿದಳು.


ಮದನ--ಅಮ್ಮಯ್ಯ, ಸುಮತಿಯನ್ನು ತಾವು ಯಾಕೆ ಬಯ್ಯು

ತೀರಿ, ಅವನಿಂದ ನನಗೆ ಅಪಾಯವೇನೂ ಉಂಟಾಗಲಿಲ್ಲ. ಇನ್ನೂ

ಅವನು ಹೇಳಿದ ಬುದ್ಧಿವಾದವನ್ನು ನಾನು ಕೇಳಿದ್ದರೆ ಹೀಗೆಲ್ಲಾ

ಆಗುತಿರಲಿಲ್ಲ.


ರಾಣಿ--ಹಾಗಾದರೆ, ಇದೆಲ್ಲಾ ಯಾರಿಂದ ಆಯಿತು?


ಮದನ--ಇಂಥಾ ಅಪಾಯ ಉಂಟಾಗಬಹುದೆಂದು ಸುಮತಿಯು

ಮುಂಚಿತವಾಗಿಯೇ ನಮಗೆ ಹೇಳಿದ. ಅವನ ಮಾತನ್ನು ನಾವು

ಕೇಳದೇಹೋದೆವು. ಗೂಳಿಯು ನನ್ನನ್ನು ಹರಿಸಿಕೊಂಡು ಬರುವುದನ್ನು

ಕಂಡು ಅಲ್ಲಿದ್ದವರೆಲ್ಲಾ ಭಯದಿಂದ ಕೂಗಿಕೊಳ್ಳುತಿದ್ದರೇ ಹೊರತು, 

ಯಾರೂ ಅದನ್ನು ಹಿಡಿದು ನಿಲ್ಲಿಸಲಾರದೇ ಹೋದರು. ಸುಮತಿಯು

ಒಂದು ಕೋಲಿನಿಂದ ಅದನ್ನು ತಿವಿದನು. ಆಗ ಗೂಳಿಯು ಅವನ

ಕಡೆಗೆ ತಿರುಗಿತು. ಆಗ ಜ್ಞಾನತಪ್ಪಿ ನಾನು ಅಲ್ಲಿ ಬಿದ್ದುಬಿಟ್ಟಿ. ಆ

ಮೇಲೆ ಏನಾಯಿತೋ ನಾನರಿಯೆ.


ಓಲೆಕಾರರು--ಬುದ್ಧಿ, ಸುಮತಿಗೆ ಅಪಾಯಸಂಭವಿಸಿ ಅವನನ್ನು 

------------------------------------

೨೦] ಸುಮತಿ ಮದನಕುಮಾರರ ಚರಿತ್ರೆ ೨೨೯

ಗೂಳಿಯು ಹಾಯುವುದರೊಳಗಾಗಿ ಒಬ್ಬ ಸಿದ್ದಿಯವ ಬಂದು ಗೂಳಿ

ಯನ್ನು ಹೊಡೆದು. ಕೆಳಕ್ಕೆ ಕೆಡವಿದನು. ಅವ ಇಲ್ಲದಿದ್ದರೆ ಸುಮ

ತಿಯು ಉಳಿಯುತಿರಲಿಲ್ಲ. 


ರಾಣಿ--ತಾನು ಸುಮತಿಯನ್ನು ಅನ್ಯಾಯವಾಗಿ ದೂಷಿಸಿದ್ದ

ಕ್ಕಾಗಿ ನಾಚಿಕೊಂಡು) ಈಗ ಆ ಹುಡುಗ ಎಲ್ಲಿಹೋದ? 


ಓಲೆಕಾರರು--ಅವನಿಗೆ ಏನೂ ಪೆಟ್ಟಾಗಲಿಲ್ಲ. ಆ ಸಿದ್ಧಿಯವ

ನನ್ನು ಅವನು ಕರೆದುಕೊಂಡು ಹೋಗುತಿದ್ದುದನ್ನು ಕಂಡು ಬಂದೆವು.

ಈ ಮಾತನ್ನು ಕೇಳಿ, ಅಲ್ಲಿದ್ದ ರಾಣಿವಾಸದವರೆಲ್ಲಾ, ಸ್ವಲ್ಪ

ಹೊತ್ತಿಗೆಮುಂಚೆ ತಾವು ತಿರಸ್ಕರಿಸಿ ಮಾತನಾಡಿದ ಸುಮತಿಯನ್ನು ಆಗ

ವಿಶೇಷವಾಗಿ ಕೊಂಡಾಡಲು ಮೊದಲುಮಾಡಿದರು. ಮದನನು ನಡೆದ

ಸಂದರ್ಭವನ್ನೆಲ್ಲಾ ಸವಿಸ್ತಾರವಾಗಿ ಹೇಳಿದನು. ಆಗ ದೊರೆಯು--

ಸುಮತಿಗೆ ಇಲ್ಲಿನ ಚರ್ಯಗಳು ಸರಿಬೀಳದೆ ಅವನಿಗೆ ಅವಮಾನವಾದ್ದ

ರಿಂದ ಅವನು ಅಸಮಾಧಾನಪಟ್ಟುಕೊಂಡು ಇಲ್ಲಿಂದ ಹೊರಟು

ಹೋಗಿರಬೇಕು. ಮದನ, ಅಂಥಾ ಒಳ್ಳೇ ಹುಡುಗನನ್ನು ನೀನು ಹೊಡೆ

ಯಬಹುದೆ? ನಾಚಿಕೆ ಇಲ್ಲವೆ? ಅವನು ನಿನಗೆ ಮಾಡಿದ ಉಪಕಾರಕ್ಕೆ

ಇದೇಯೋ ಪ್ರತ್ಯುಪಕಾರ? ಎಂದನು. ಆಗ ಮದನನು ತಲೆಬಾಗಿ

ನಿಂತು, ಕಣ್ಣಿನಲ್ಲಿ ನೀರನ್ನು ಸುರಿಸುವುದಕ್ಕೆ ಮೊದಲು ಮಾಡಿದನು. 


ಮಗನು ಅಳುತಾ ಇರುವುದನ್ನು ನೋಡಿ ಸಹಿಸಲಾರದೆ ರಾಣಿಯು

ಅವನನ್ನು ಸಮದಾಯಿಸಿ ಮುದ್ದಿ ಸುವುದಕ್ಕೆ ಹೊರಟಳು. ಪುನಃ

ದೊರೆಯು-ಮಗನಮೇಲೆ ವಾತಸಲ್ಯವನ್ನು ತೋರಿಸಿ ಅವನನ್ನು ಮುದ್ದಿ

ಸುವುದಕ್ಕೆ ಇದು ಸಮಯವಲ್ಲ. ಅತ್ಯಂತ ನೀಚಕೃತ್ಯವನ್ನು ಮಾಡಿ

ಇವನನ್ನು ಹೆತ್ತ ತಾಯಿ ತಂದೆಗಳಿಗೆ ಅವಮಾನವನ್ನು ತಂದಂಥಾ ಈ,

ಹುಡುಗನು ಅಂಥಾ ಅಭಿಮಾನಕ್ಕೆ ಪಾತ್ರನಲ್ಲ; ಹೀಗೆಂದು ಹೇಳಿದ

ದೊರೆಯ ಕಟುವಾದ ಮಾತಿನಿಂದ ರಾಣಿಗೆ ಮನಸು ಬಹಳವಾಗಿ ಕಲಕಿ

ಹೋಯಿತು. ಅವಳು ಅಳುತ್ತಾ ಇದ್ದ ತನ್ನ ಮಗನನ್ನು ಒಳಕ್ಕೆ

ಕರೆದುಕೊಂಡು ಹೊರಟುಹೋದಳು. ಮತ್ತು ಮದನನು ಸುಮತಿ

ಯನ್ನು ಹೊಡೆಯುವುದಕ್ಕೆ ಉಂಟಾದ ಸಂದರ್ಭಗಳನ್ನೆಲ್ಲಾ ಕಣ್ಣಾರ 

----------------------------------------

೨೩೦ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ

ಕಂಡ ಒಬ್ಬ ಹುಡುಗನಿಂದ ಪುನಃ ಕೇಳ್ಳಿ, ದೊರೆಯು ಮನಸ್ಸಿಗೆ

ಹೆಚ್ಚಾದ ಖೇದವನ್ನು ಉಂಟುಮಾಡಿರೊಂಡನು.

...


೨೦ ನೆ ಅಧ್ಯಾಯ


ಹೀಗಿರುವಲ್ಲಿ ದೊರೆಯ ಅರಮನೆಗೆ ರಾಮಜೋಯಿಸನು

ಅಕಸ್ಮಾತ್ತಾಗಿ ಒಂದು ದಿನ ಬಂದನು. ದೊರೆಮಗನ ನಡತೆಯಲ್ಲಿ

ಈಚೆಗೆ ಉಂಟಾದ ಅನರ್ಥ ಯಾವುದೂ ಜೋಯಿಸನಿಗೆ ತಿಳಿದಿರಲಿಲ್ಲ.

ಅವ ಬಂದಕೂಡಲೆ ದೊರೆಯು ತಕ್ಕ ಮರ್ಯಾದೆಯನ್ನು ತೋರಿಸಿ

ಕೂರಿಸಿಕೊಂಡನ್ನು ಆದರೆ ಅರಸನ ಮನಸ್ಸಿಗೆ ಏನೋ ಕಿಂಕೃತಿ

ಯುಂಟಾಗಿದೆ ಎಂಬ ಭಾವವನ್ನು ತಿಳಿದು, ಅದಕ್ಕೆ ಮದನನೇ ಕಾರಣ

ವಾಗಿರಬೇಕೆಂದು ಯೋಚಿಸಿ, ಜೋಯಿಸನು ಮುಖ್ಯವಾಗಿ ಆ ಹುಡು

ಗನ ಯೋಗಕ್ಷೇಮವನ್ನು ವಿಚಾರಿಸಿದರು. ಆಗ ಅರಸು--ಸ್ವಾಮಿ,

ನಾನು ಏನ ಹೇಳಲಿ. ಆ ಹುಡುಗನ ವಿಷಯದಲ್ಲಿ ನನಗಿದ್ದ ಆಸೆ

ಯೆಲ್ಲಾ ಭಗ್ನವಾಯಿತು. ಈಚೆಗೆ ಅವ ಮಾಡಿದ ಒಂದೆರಡು ಕಾರ್ಯ

ದಿಂದ ಅವನಲ್ಲಿ ಆಮೂಲವಾಗಿ ಕೆಟ್ಟಗುಣವೇ ತುಂಬಿದೆ, ಅಹಂಕಾರ

ವಿಶೇಷವಾಗಿದೆ ಎಂದು ಹೇಳಬೇಕು. ಹೀಗೆಂದು ಹೇಳಿ ಮದನನ

ನಡತೆಯನ್ನು ವಿವರಿಸಿ, ಅವನನ್ನು ಬೈದು, ತನ್ನಅದೃಷ್ಟವನ್ನು 

ಬೈದುಕೊಂಡನು.


ಈ ಮಾತಿಗೆ ಜೋಯಿಸನು-- ದೊರೆಯೆ, ನಿಮ್ಮ ಪುತ್ರನ ನಡತೆ

ಬದಲಾಯಿಸಿದ್ದನ್ನು ಕೇಳಿ ನನಗೂ ಸ್ವಲ್ಪ ಸಂಕಟವಾಯಿತು. ಆದರೆ

ಸರಿಮಾಡುವುದಕ್ಕೆ ಆಗದ ದುರ್ಗುಣ ಯಾವುದೂ ಆತನಲ್ಲಿಲ್ಲ. ಕೆಟ್ಟ

ದಾರಿಗೆ ಇಷ್ಟು ಸುಲಭವಾಗಿ ಬೀಳತಕ್ಕ  ಸ್ವಭಾವವೇನೋ ಅಪಾಯ

ಕರವಾದ್ದೇ ಹವುದು. ಆದರೆ ಈ ಕೆಟ್ಟತನ ನೀವು ಯೋಚಿಸುವ

ಮಟ್ಟಿಗೆ ಅವನನ್ನು ಅವರಿಸಿಕೊಂಡಿದೆ ಎಂದು ನಾನು ನಂಬಿಲ್ಲ. ನಾವು

ಅಂಗಸಾಧನೆಯನ್ನು ಮಾಡುವಾಗ್ಗೆ ಮೈ ಬಗ್ಗ ಬೇಕಾದರೆ, ಸ್ವಲ್ಪದಿವಸದ

ಸಾಧಕ ಅಗತ್ಯವಷ್ಟೆ, ಬುದ್ಧಿಗೂ ಹಾಗೆಯೇ. ಅದು ಒಂದು ಮಾರ್ಗ 

-------------------------------------

೨೦] ಸುಮತಿ ಮದನಕುಮಾರರ ಚರಿತ್ರೆ ೨೩೧ 


ವನ್ನು ಬಿಟ್ಟು ಇನ್ನೊಂದು ಮಾರ್ಗಕ್ಕೆ ಬರಬೇಕಾದರೆ, ಸ್ವಲ್ಪ ದಿವಸದ

ಸಾಧನೆ ಅಗತ್ಯವಲ್ಲವೆ? ಇಷ್ಟಕ್ಕೆ, ನಿರಾಶೆಯಾಯಿತಲ್ಲಾ, ಎಂದು ನೀವು

ಯಾಕೆ ವ್ಯಥೆಪಡಬೇಕು?


ದೊರೆ- ಜೋಯಿಸರೆ, ತಮ್ಮ ಉದಾರವಾದ ಸ್ವಭಾವಕ್ಕೆ ಅನು

ಗುಣವಾದ ಮಾತನ್ನೇ ಆಡುತೀರಿ, ತಮ್ಮ ಮಾತಿನಿಂದ ಉಂಟಾಗುವ

ಆಸೆಯು. ತಂದೆಯಾದ ನನಗೆ ಆಪ್ಯಾಯಮಾನವಾಗಿಯೇ ಇದೆ. 

ಆದಾಗ್ಯೂ ತಟ್ಟನೆ ಒಳ್ಳೇಮಾರ್ಗವನ್ನೆಲ್ಲಾ ಬಿಟ್ಟು ಕೆಟ್ಟ ಮಾರ್ಗಕ್ಕೆ

ತಿರುಗಿ ತಮ್ಮಲ್ಲಿ ಇದ್ದಾಗ ಕಲಿತುಕೊಂಡು ವಿವೇಕವನ್ನೆಲ್ಲಾ ಒಟ್ಟಿಗೆ

ಮರೆತುಬಿಟ್ಟು, ನನ್ನ ಮಗ ಸನ್ಮಾರ್ಗಕ್ಕೆ ಬರುತಾನೆ, ಎಂಬ ಆಸೆ

ನನಗೆ ಹೇಗೆ ಹುಟ್ಟೀತು?


ಜೋಯಿಸ- ಹಾಗಲ್ಲ. ಮನುಷ್ಯಸ್ಟಭಾವದಲ್ಲಿರತಕ್ಕ ಮುಖ್ಯ

ವಾದ ದೋಷ ಬೇರೆ, ನಿಮ್ಮ ಮಗನಲ್ಲಿ ಇರುವ ಅಸ್ಥೈರ್ಯ ಬೇರೆ, ಎಂದು  

ತಿಳಿದಿದ್ದೀರಾ? ಲೋಕದಲ್ಲಿ ಜನರು ಮಾಡತಕ್ಕ ಕೆಟ್ಟ ಕೆಲಸವೆಲ್ಲಾ

ಬೇಕೆಂದು ಮಾಡುವುದೆಂತಲೇ ಯೋಚಿಸಕೂಡದು. ಜನಸಾಮಾನ್ಯ

ದಲ್ಲಿ ಸ್ಥೈರ್ಯವಿಲ್ಲದೇ ಇರುವುದೇ ಹೆಚ್ಚಾಗಿದೆಯೇ ಹೊರತು ದುರ್ಗುಣ

ಹೆಚ್ಚಾಗಿಲ್ಲ.


ದೊರೆ--ತಾವು ಹೇಳುವುದು ಬಹಳ ಯೋಗ್ಯವಾಗಿದೆ. ಇಷ್ಟು

ದಿವಸವೂ ಅತಿ ಲಾಲನೆಯಿಂದ ಕೆಟ್ಟುಹೋದ ಹುಡುಗನಲ್ಲಿ ದೋಷ

ಇರುವುದೇನೂ ಹೆಚ್ಚಲ್ಲ. ಆದರೆ ಇಷ್ಟೊಂದು ದುರ್ಮಾರ್ಗಕ್ಕೆ ಅವನು

ನಿಷ್ಕಾರಣವಾಗಿ ಪ್ರವೇಶಿಸಿದ್ದನ್ನು ನೋಡುವಲ್ಲಿ ಅವನ ಒಳ್ಳೇ ಸ್ವಭಾವ

ದಲ್ಲೇ ಕುಂದಕವಿಬೆಯೆಂದು ನಾನು ತಿಳಿಯುತೇನೆ.


ಜೋಯಿಸ--ಅಂಥಾ ಕುಂದಕವೇನೂ ತೋರುವುದಿಲ್ಲ. ಇಲ್ಲಿಗೆ

ಅವ ಬಂದಮೇಲೆ ಅವನ ಜೊತೆಯಲ್ಲಿ ತಿರುಗಾಡತಕ್ಕ ಹುಡುಗರ.

ಸ್ವಭಾವವೆಂಥಾದ್ಟೋ ಅದನ್ನು ಕೊಂಚ ಯೋಚಿಸಬೇಕು. ತಮ್ಮ

ಜೊತೆಗಾರರು ಮಾಡತಕ್ಕ ಕೆಲಸವನ್ನು ತಾವೂ ಮಾಡದೇ ಇರತಕ್ಕದ್ದು

ವಯಸ್ಸಾದ ಅನುಭವಶಾಲಿಗಳಿಗೇ ಕಷ್ಟವಾಗಿರುವಲ್ಲಿ ನಿಮ್ಮ ಮಗನ

ಮಾತೇನು? ಲೋಕದಲ್ಲಿ ಎಲ್ಲರೂ ಹಿಡಿದಿರುವ ದಾರಿಯನ್ನು ನಾವು 

-----------------------------------

೨೩೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಬಿಡುವುದೂ, ಡಂಭವಾಗಿ ಕಾಣಿಸತಕ್ಕ ಕೆಟ್ಟತನವನ್ನು ಬಿಟ್ಟು ಒಳ್ಳೇ

ತನವನ್ನು ಅನುಸರಿಸುವುದೂ ಪ್ರಪಂಚದಲ್ಲಿ ಬಹುಶ್ರಮ. ಎಂಥಾ

ಒಳ್ಳೇ ಮನುಷ್ಯನಾಗಲೀ ಹೊರಗಡೆ ಡಂಭಕ್ಕೆ ಸೋಲುವನು. ನಿಮ್ಮ

ಮಗನಲ್ಲಿ ಕೋಪವೂ, ದುಡುಕೂೂ, ವಿಶೇಷವಾಗಿದೆ ಎನ್ನ ತೀರ,

ಅದೇನೋ ಸರಿ. ಆದರೆ ಅದನ್ನೇ ಒಳ್ಳೇದಾರಿಗೆ ತಿರುಗಿಸಲಾಗಿ ಒಳ್ಳೇ

ಪ್ರಯೋಜನ ಉಂಟಾಗುವುದು. ದುರ್ಮಾರ್ಗಕ್ಕೆ ಎಳೆಯುವ ಗುಣ 

ವನ್ನು ಸರಿಮಾಡಿಕೊಂಡರೆ, ಅದೇ ಸನ್ಮಾರ್ಗಕ್ಕೆ ಎಳೆಯುವ ಗುಣ

ವಾಗುವುದು. 


ಪೋಲಕ, ಋಷಿ


ಒಂದಾನೊಂದು ಪಟ್ಟಣದಲ್ಲಿ ಪೋಲಕನೆಂಬ ಒಬ್ಬ ಹುಡುಗ.

ನಿದ್ದನು. ಬಾಲ್ಯದಿಂದಲೂ ಶಿಕ್ಷೆ ಇಲ್ಲದೆ ಇವನು ಪೋಲಿಯಾಗಿ

ತಿರುಗುತಾ, ಕನ್ನಾ ಹಾಕುವುದು, ದಾರೀಕಟ್ಟಿ ತಲೆವೊಡೆಯುವುದು,

ಸಿಕ್ಕಿದವರ ಮನೆಗೂ ಹುಲ್ಲುಮೆದೆಗಳಿಗೂ ಬೆಂಕಿ ಹಾಕುವುದು, ಹೀಗೆಲ್ಲಾ

ಮಾಡುತಾ, ಆವೂರಿಗೆ ದೊಡ್ಡ ಹೆಮ್ಮಾರಿಯಾಗಿದ್ದನು. ಸರಕಾರದವರು

ಇವನನ್ನು ಆಗಾಗ್ಗೆ ಹಿಡಿದು ಶಿಕ್ಷೆ ಮಾಡುತಲೇ ಇದ್ದರು. ಇವನು

ಸ್ವಲ್ಪಕಾಲದಲ್ಲಿಯೇ ದರಿದ್ರನಾದನು. ನೆಂಟರು ಇಷ್ಟರು ಯಾರೂ ಇವ

ನನ್ನು ಹತ್ತಿರ ಸೇರಿಸಲಿಲ್ಲ. ತಿನ್ನುವುದಕ್ಕೆ ಗತಿ ಇಲ್ಲದೆ ಹೋಯಿತು.

ಕೊನೆಗೆ ಕಾಡಿನಲ್ಲಿ ಯಾರೂ ಕಾಣದಹಾಗೆ ಅವಿತುಕೊಂಡಿರುತಾ, ಸಿಕ್ಕಿ

ದವರ ಹತ್ತಿರ ಸಿಕ್ಕಿದ್ದನ್ನು ಸುಲಿದುಕೊಂಡು ಹೊಟ್ಟೇ ಹೊರೆಯು

ತಿದ್ದನು. ಒಂದುದಿನ ಪೋಲಕನು ಆರಣ್ಯದಲ್ಲಿ ಹೋಗುತಿರುವಾಗ್ಗೆ 

ಒಂದು ಹಾಳುಗುಡಿ ಸಿಕ್ಕಿತು. ಅಲ್ಲಿರುವ ದೇವರನ್ನು ಕಿತ್ತು ಹಾಕಿ

ದರೆ ಅದರ ಕೆಳಗೆ ಏನಾದರೂ ನಿಕ್ಷೇಪ ಸಿಕ್ಕ ಬಹುದೆಂದು, ಆ ದೇವಾ

ಲಯದೊಳಕ್ಕೆ ಹೊಕ್ಕನು. ಗರ್ಭಗೃಹದವರೆಗೂ ಹೋಗುವಾಗ್ಗೆ 

ಒಳಗೆ ಒಬ್ಬ ಋಷಿಯು ತಪಸ್ಸು ಮಾಡುತಾ ಕೂತಿದ್ದನು. ಆಗ

ಪೋಲಕನು ತನ್ನ ಮನಸ್ಸಿನಲ್ಲಿ--ಇಲ್ಲಿ ಯಾವನೋ ಕೂತಿದಾನೆ;

ಇವನಿಗೆ ಒಂದು ಒದೆತವನ್ನು ಕೊಟ್ಟು ಉರುಳಿಸಿ ಇದ್ದದನ್ನು ಕಿತ್ತು

ಕೊಂಡು ಹೋಗೋಣ, ಎಂದು ಯೋಚಿಸಿ, ಆ ಮುನಿಯ ಜಟೆಯನ್ನು 

------------------------------------

೨೦] ಸುಮತಿ ಮದನಕುಮಾರರ ಚರಿತ್ರೆ ೨೩೩ 


ಹಿಡಿದು ಮುಂದಕ್ಕೆ ಎಳೆದುಕೊಂಡು ಅವನನ್ನು ಹೊಡೆಯುವುದಕ್ಕೆ

ಮೊದಲುಮಾಡಿದನು. ಋಷಿಯು ಎಚ್ಚತ್ತು ನೋಡಿ ತನಗೆ ದೊಡ್ಡ

ವಿಪತ್ತು ಬಂತೆಂದು ತಿಳಿದು ಆ ದುಷ್ಟನನ್ನು ಕುರಿತು-- ಎಲ ಪ್ರಾಣಿ,   

ನನ್ನನ್ನು ಯಾಕೆ ಹೊಡೆಯುತೀಯೆ? ನನ್ನ ಬಳಿಯಲ್ಲಿ ಒಂದು

ಸೋರೇಬುರುಡೆ ಒಂದು ಕೌಪೀನ, ಇಷ್ಟು ಹೊರತು ಏನೂ ಇಲ್ಲ.

ನನ್ನನ್ನು ಹೊಡೆಯುವುದರಿಂದ ನಿನಗೆ ಪಾಪಮಾತ್ರ ಸಂಭವಿಸುವುದು.

ಮನುಷ್ಯನು ಲೋಕದಲ್ಲಿ ಒಳ್ಳೇ ಕೆಲಸವನ್ನು ಮಾಡಿದರೆ ಅವನಿಗೆ

ಒಳ್ಳೇದಾಗುವುದು ; ಕೆಟ್ಟ ಕೆಲಸವನ್ನು ಮಾಡಿದರೆ ಕೆಟ್ಟದಾಗುವುದು.

ಇದಕ್ಕೆ ನೀನೇ ದೃಷ್ಟಾಂತ. ನೀನೇನೋ ಸಮರ್ಥನೇ ಸರಿ. ಆದರೆ

ಸಾಮರ್ಥ್ಯವನ್ನು ದುರ್ಮಾರ್ಗದಲ್ಲಿ ವೆಚ್ಚಮಾಡಿದೆ. ಆದ್ದರಿಂದ ಒಂದು

ತುತ್ತು ಅನ್ನಕ್ಕೆ ಸಹಿತ ಗತಿ ಇಲ್ಲದವನಾಗಿದ್ದೀಯೆ. ಇಂಥಾ ಕಾರ್ಯ

ಗಳನ್ನೇ ನೀನು ಮುಂದಕ್ಕೂ ಮಾಡಿದರೆ ನಿನ್ನ ಪಾತಕವು ಇನ್ನೂಹೆಚ್ಚು

ವುದು. ಇಂಥಾ ದಾರಿಯನ್ನೇ ಬಿಟ್ಟು ಒಳ್ಳೇತನವನ್ನು ಹಿಡಿ; ಈ

ವೂರನ್ನು  ಬಿಟ್ಟು ಇನ್ನೊಂದುವೂರಿಗೆ ಹೋಗಿ ಅಲ್ಲಿ ಕೃಷಿಮಾಡಿ, ಈಗ

ನಿನಗೆ ಇರುವ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸು. ನೀನು ಶ್ರೇಯೋ

ವಂತನಾಗಿ ಬದುಕುತೀಯೆ ; ಇತರರಿಗೂ ಉಪಕಾರವನ್ನು ಮಾಡು

ತೀಯೆ. ಹೀಗೆಂದು ಮುನಿ ನುಡಿದನು. ಈ ಬುದ್ಧಿ ವಾದವು ಸೋಲಕನ

ಮನಸ್ಸಿಗೆ ಅಂಟಿತು. ಅವನು ಋಷಿಗೆ ನಮಸ್ಕಾರವನ್ನು ಮಾಡಿ ಆತ

ನನ್ನು ಬಿಟ್ಟು ಮತ್ತೊಂದು ಊರಿಗೆ ಹೊರಟುಹೋದನು; ಅಲ್ಲಿ

ಇನನು ಒಳ್ಳೇ ನಡತೆಯಿಂದ ದಿನಕ್ರಮೇಣ ಹಣವನ್ನು ಸಂಪಾದಿಸಿ

ಸುಖವಾಗಿ ಬಾಳಿದನು.


ಹೀಗೆ ಕಥೆಯನ್ನು ಹೇಳಿ ಮುಗಿಸಿ, ರಾಮಜೋಯಿಸನು ನುಡಿ

ದದ್ದು ಹೇಗೆಂದರೆ : .


ಅಯ್ಯಾ ದೊರೆಯೆ, ಹುಡುಗರು ಕೆಟ್ಟು ಹೋದರೆಂದು ನಿರಾಶೆ

ಯಿಂದ ಸುಮ್ಮನೆ ಇರಬಾರದೆಂಬ ವಿಷಯವು ಈ ಕಥೆಯಿಂದ ಗೊತ್ತಾ

ಯಿತಷ್ಟೆ? ಯಾವ ಕೆಲಸವನ್ನು ಮಾಡುವುದಕ್ಕೆ ತಮಗೆ ಸಂಪೂರ್ಣ

ವಾದ ಯೋಗ್ಯತೆ ಇದೆ ಎಂಬ ಸಂಗತಿ ಯಾರಿಗೂ ತಿಳಿಯದು.

--------------------------------------

೨೩೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಒಬ್ಬೊಬ್ಬರಲ್ಲಿ ಒಂದೊಂದು ಯೋಗ್ಯತೆ ಇದ್ದೇ ಇರುವುದು. ಆದರೆ

ಅದು ಬೂದಿಮುಚ್ಚಿದ ಕೆಂಡದಹಾಗೆ ಪ್ರಕಾಶಕ್ಕೆ ಬರದೇ ಆರುತ್ತೆ.

ಸ್ವಭಾವವಾದ ಇಂಥಾ ಶಕ್ತಿಯನ್ನು ಹೊರಪಡಿಸುವಂತೆ ಮಾಡುವುದು

ವಿದ್ಯಾವ್ಯಾಸಂಗ, ದುರ್ಮಾರ್ಗಕ್ಕೆ ತಿರುಗಿಸಿದರೆ ಕೆಟ್ಟಗುಣವೆನ್ನಿಸಿ

ಕೊಳ್ಳತಕ್ಕ ಶಕ್ತಿಯೇ ಸನ್ಮಾರ್ಗಕ್ಕೆ ತಿರುಗಿಸಿದರೆ ಮಹಾಕಾರ್ಯಗಳನ್ನು

ನಿರ್ವಹಿಸತಕ್ಕ ಸದ್ಗುಣವಾಗುವುದು.


ದೊರೆ --ಕೆಟ್ಟು ಹೋಗಿದ್ದ ಪೋಲಕನಿಗೆ ಋಷಿಯ ದೆಸೆಯಿಂದ

ಹೇಗೆ ಬುದ್ಧಿಬಂತೋ ಹಾಗೆಯೇ ನನ್ನ ಮಗನಿಗೆ ತಮ್ಮಿಂದ ಬುದ್ಧಿ

ಬರಬೇಕಾಗಿದೆ. ತಮ್ಮ ಕೈಲಿ ಕೊಟ್ಟಿದ್ದೇನೆ, ಹೇಗಾದರೂ ಮಾಡಿ.

ಆದರೆ ಈಗ ಅವನ ಸ್ಥಿತಿ ನೋಡಲಾಗಿ ಅವ ಹೇಗೆ ಯೋಗ್ಯನಾದಾನೊ 

ತಿಳಿಯದು.


ಜೋಯಿಸ--ಅವನ ಬುದ್ಧಿ ಹೇಗೆ ಇದೆಯೊ ಅದರ

ಪ್ರಕಾರ ಆಗುವುದು. ಆದರೆ ಅವನು ಸ್ವಭಾವದಲ್ಲಿ ಒಳ್ಳೇತನ,

ಔದಾರ್ಯ, ದಯಾರಸ ಇವುಗಳನ್ನುಳ್ಳವನಾಗಿದಾನೆ. ಆಗಲೇ

ಅವನು ಮಾಡಿದ ಕೆಟ್ಟಕೆಲಸಗಳಿಗಾಗಿ ಅವನಿಗೆ ನಾಚಿಕೆಹುಟ್ಟಿರಬೇಕು.

ಪರೀಕ್ಷಿಸಿ ನೋಡೋಣ.


ಹೀಗೆ ಹೇಳಿ ದೊರೆಯು ಜೋಯಿಸನನ್ನು ತನ್ನ ಅರಮನೆಯ

ಅಂತಃಪುರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅರಸಿಯೇ ಮೊದ

ಲಾದವರೆಲ್ಲರೂ ಆತನಿಗೆ ಬಹಳ ಮರ್ಯಾದೆಯನ್ನು ತೋರಿಸಿದರು.

ಆದರೆ ಅರೆಗಳಿಗೆಗೆ ಮುಂಚೆ ಎಲ್ಲರೂ ಕೊಂಡಾಡುತಿದ್ದ ಮದನನಿಗೆ

ಉಪಾಧ್ಯಾಯನನ್ನು ಕಂಡಕೂಡಲೆ, ಹಾವಿಗೆ ಗರುಡಪಚ್ಪೆಯನ್ನು

ತೋರಿಸಿದಂತೆ ಆಯಿತು. ಆತನಿಗೆ ತಕ್ಕ ಮರ್ಯಾದೆಯನ್ನೇನೋ

ಮಾಡಿದನು; ಆತ ಕೇಳಿದ ಮಾತಿಗೆಲ್ಲಾ ಸದುತ್ತರವನ್ನು ಬಹು

ವಿನಯವಾಗಿಯೇನೋ ಹೇಳಿದನು. ಆದರೆ ಅವನ ತಲೆಯು ಕೆಳಕ್ಕೆ 

ಬಗ್ಗಿ ಇತ್ತು. ಏನೋ ಒಂದು ಬಗೆಯ ವ್ಯಸನವೂ ಪಶ್ಚಾತ್ತಾಪವೂ

ಅವನ ಮುಖದಲ್ಲಿ ತೋರಿಬರುತಿತ್ತು. ಇದನ್ನು ಕಂಡು ಜೋಯಿಸನು

ಅರಸನನ್ನು ನೋಡಿ--ಮದನನಲ್ಲಿ ಇರುವ ಒಳ್ಳೇ ಗುಣಕ್ಕೆ ಜಾಗ್ರತೆ

ಯಾಗಿ ದೃಷ್ಟಾಂತ ದೊರೆಯುವುದು ಎಂದು ರಹಸ್ಯವಾಗಿ ಹೇಳಿದನು. 

------------------------------------

೨೦] ಸುಮತಿ ಮದನ ಕುಮಾರರ ಚರಿತ್ರೆ ೨೩೫


ಇದನ್ನು ಕೇಳಿ ದೊರೆಗೆ ಸಂತೋಷವಾಯಿತು.


ಕೂಡಲೆ ಅಕ್ಷತೆಪ್ರಸ್ತಕ್ಕಾಗಿ ಅರಮನೆಗೆ ಬಂದಿದ್ದ ನಂಟರೆಲ್ಲಾ

ತಂತಮ್ಮ ಊರಿಗೆ ಹೊರಟು ಹೋದರು. ಲಲಿತೆಯು ಸ್ವಲ್ಪ ದಿವಸ

ಹೆಚ್ಚಾಗಿ ಉಳಿದಳು. ಒಂದು ದಿನ ಭೋಜನನೆಲ್ಲಾ ಆದ ತರುವಾಯ

ದೊರೆ, ದೊರೇ ಹೆಂಡತಿ, ರಾಮಜೋಯಿಸ, ಲಲಿತೆ, ಮದನ ಇವರೆ

ಲ್ಲರೂ ಓಲಗಶಾಲೆಯಲ್ಲಿ ಸೇರಿದರು, ಜೋಯಿಸರಿಗೆ ಜೂಜಾಡುವುದು

ಇಷ್ಟವಿಲ್ಲವಾದಕಾರಣ, ಲಲಿತೆಯು ಒಂದು ಕಥೆಯನ್ನು ಓದಬೇಕೆಂದು

ಗೊತ್ತುಮಾಡಿದರು. ಆ ಪ್ರಕಾರ ಲಲಿತೆಯು ಓದಿದ ಕಥೆ ಹೇಗೆಂದರೆ :-


ಮಲ್ಲ ಹೊಲ್ಲರ ಕಥೆ


ಒಂದು ಊರಿನಲ್ಲಿ ನೆರೆಮನೆ ಹೊರಮನೆಯಲ್ಲಿ ವಾಸವಾಗಿದ್ದ

ಇಬ್ಬರು ಕುರುಬರಿಗೂ ಇಬ್ಬರು ಗಂಡುಮಕ್ಕಳು ಇದ್ದರು, ಇವರಲ್ಲಿ

ಒಬ್ಬನ ಹೆಸರು ಮಲ್ಲ; ಮತ್ತೊಬ್ಬನ ಹೆಸರು ಹೊಲ್ಲ. ಈ ಹುಡುಗ

ರಿಬ್ಬರೂ ಒಟ್ಟಿಗೆ ತಂತಮ್ಮ ತಂದೆಯ ಕುರಿಗಳನ್ನು ಕಾಯುತಾ,

ಕಾಡಿನಲ್ಲಿ ಸುತ್ತಾಡಿಕೊಂಡು ಇರುತಿದ್ದರು.


ಮಲ್ಲನು ದೃಢಾಂಗನಾಗಿಯೂ, ಸೌಮ್ಯವಾದ ಮುಖವುಳ್ಳವ

ನಾಗಿಯೂ ಇದ್ದನು. ಹೊಲ್ಲನು ದೇಹದಾರ್ಢ್ಯದಲ್ಲಿ ಸ್ವಲ್ಪ ಕಡಿಮೆ

ಯಾಗಿಯೂ ಎಂಥಾ ಕಷ್ಟತರವಾದ ಕಾರ್ಯಕ್ಕೂ ಅನುಕೂಲವಾಗಿರು

ವಂತೆ ಲಿವಿಯಾದ ಅಂಗಗಳುಳ್ಳ ವನಾಗಿಯೂ ಇದ್ದನು. ಮುಖದಲ್ಲಿ

ರೌದ್ರವೂ ಅಹಂಕಾರವೂ ಕಾಣುತಿತ್ತು. 


ಇವರಿಬ್ಬರೂ ಕಾಡಿನಲ್ಲಿ ತಂತಮ್ಮ ಕುರಿಗಳನ್ನು ಕಾಯುತಿರು

ವಾಗ,  ಹೊಲ್ಲನು ಮಲ್ಲನನ್ನು ನೋಡಿ-- ಮಲ್ಲ, ನೋಡು, ಆ ಹದ್ದು

ಎಷ್ಟು ಮೇಲಕ್ಕೆ ಹಾರಿ ಹೋಗಿದೆ; ಅದಕ್ಕೆ ಇರುವಂತೆ ನನಗೂ ರೆಕ್ಕೆ 

ಇದ್ದರೆ, ನಾನೂ ಮೇಲಕ್ಕೆ ಹಾರಿ ಹೋಗುತಿದ್ದೆ.


ಮಲ್ಲ--ದುಷ್ಟತನದಲ್ಲಿಯೂ ಕೆಟ್ಟತನದಲ್ಲಿಯೂ ಹದ್ದು ಎತ್ತಿದ

ಕೈ. ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆಲ್ಲಾ ಇದು ಶತ್ರುವಾಗಿದೆ

ಈ ಹದ್ದಿನ ಹಾಗೆ ಇರುವುದಕ್ಕಿಂತಲೂ, ಅಗೋ ಆ ನದೀತೀರದಲ್ಲಿ

ಹಾರಾಡುವ ಹಂಸದ ಹಾಗೆ ಇದ್ದರೆ ಚೆನ್ನಾಗಿ ಇದ್ದೀತು. ಹಂಸವು 

----------------------------------

೨೩೬ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ


ಒಬ್ಬರ ತಂಟೆಗೂ ಹೋಗುವುದಿಲ್ಲ. ತನ್ನ ತಂಟೆಗೆ ಯಾರಾದರೂ

ಬಂದರೆ ಬಿಡುವುದಿಲ್ಲ.


ಹೀಗೆ ಮಾತನಾಡುತಿರುವ ಸಮಯದಲ್ಲಿ ಒಂದು ಹದ್ದು ಆಕಾಶ

ದಿಂದ ಕೆಳಕೆ ಬಂದು ಕೋಳೀಮರಿಯೊಂದನ್ನು ಎತ್ತಿಕೊಂಡು

ಹಾರಿತು. ಕೂಡಲೆ ಹತ್ತಿರ ಕಾದುಕೊಂಡಿದ್ದ ಒಬ್ಬ ಹುಡುಗನು ತನ್ನ

ಬಿಲ್ಲಿನಿಂದ ಒಂದು ಕಲ್ಲನ್ನು ಹೊಡೆಯಲು, ಹದ್ದು ಆ ಏಟನ್ನು ತಿಂದು.

ಕೆಳಕ್ಕೆ ಬಿದ್ದು ಮರಣಸಂಕಟದಿಂದ ಒದ್ದಾಡುತಿತ್ತು.


ಮಲ್ಲ--ವಿಶೇಷವಾಗಿ ದುರಾಶೆಯುಳ್ಳ ಜನರ ಪಾಡೆಲ್ಲಾ ಕೊನೆಗೆ

ಹೀಗೆಯೇಸರಿ. ಎಲ್ಲರಿಗಿಂತಲೂ ಹೆಚ್ಚಾಗಿ ತಾವು ಮೇಲಕ್ಕೆ ಏರ

ಬೇಕೆಂದು ಯತ್ನಮಾಡುವಾಗ ಏನೋ ಒಂದು ಬಿಜ್ಜುಬಡಿದು ಅವರು.

ಕೆಳಕ್ಕೆ ಬೀಳುತಾರೆ.


ಹೊಲ್ಲ--ನಾನು ಗಗನಕ್ಕೆ ಹಾರಿ ಪ್ರಾಣವನ್ನು ಬಿಟ್ಟಾದರೂ

ಬಿಟ್ಟೇನು; ಇಲ್ಲಿ ಕೆಳಗೆ ಬಿದ್ದಿರಲಾರೆ.


ಮಲ್ಲ--ನಮ್ಮ ಕಷ್ಟಸುಖಗಳೆರಡೂ ದೇವರ ಕೈಲಿದೆ. ನಿರಪ 

ರಾಧಿಗಳನ್ನು ಅನ್ಯಾಯವಾಗಿ ಹಿಂಸೆಮಾಡಿ ಮೇಲಕ್ಕೆ ಏರುವುದ

ಕೈಂತಲೂ, ಒಬ್ಬರ ಗೋಜಿಗೂ ಹೋಗದೆ ಕೆಳಗೆ ಬಿದ್ದಿರುವುದು.

ಮೇಲು.


ಹೀಗೆ ಇಬ್ಬರೂ ಮಾತನಾಡಿಕೊಂಡರು. ಮಲ್ಲನು ಯಾವಾಗಲೂ

ನಿಧಾನಿಯಾಗಿ ಒಳ್ಳೇ ಕಾರ್ಯಗಳನ್ನು ಮಾಡುವುದರಲ್ಲಿಯೇ ಬುದ್ಧಿ

ಯುಳ್ಳವನಾಗಿದ್ದನು. ಆದರೆ ಹೊಲ್ಲನು ಮರಗಳನ್ನು ಹತ್ತುತಾ,

ಬೆಟ್ಟಗಳನ್ನು ಹತ್ತುತಾ, ಅಲ್ಲಿಂದ ಧುಮುಕುತಾ, ಇವೇ ಮೊದಲಾದ

ಅನೇಕ ಸಾಹಸ ಕಾರ್ಯಗಳನ್ನು ಮಾಡುವುದರಲ್ಲಿಯೇ ಬುದ್ಧಿಯುಳ್ಳವ

ನಾಗಿದ್ದನು. ಒಂದು ದಿನ ಕಾಡಿನಲ್ಲಿ ಹೋಗುತಿರುವಾಗ ಹೊಲ್ಲನಿಗೆ

ಒಂದು ತೋಳನಮರಿ ಸಿಕ್ಕಿತು. ಅವನು ಅದನ್ನು ಹಿಡಿದುಕೊಂಡು

ಮನೆಗೆ ತಂದು ಅದನ್ನು ಸಾಕುತಾಬಂದನು. ಆ ತೋಳವು ದಿನಕ್ರಮ

ದಲ್ಲಿ ದೊಡ್ಡದಾಗುತಾ ನೆರೆಹೊರೆಯವರ ಕುರಿಗಳನ್ನೂ ಮೇಕೆಗಳನ್ನೂ

ಹಿಡಿದು ಕೊಲ್ಲುತಾ ಇತ್ತು. ಇಂಥಾ ಮೃತ್ಯುವನ್ನು ಸಾಕಿ ಎಲ್ಲರಿಗೂ 

-----------------------------------

೨೦] ಸುಮತಿ ಮುದನ ಕುಮಾರರ ಚರಿತ್ರೆ ೨೩೭ 


ಹಿಂಸೆಯನ್ನುಂಟುಮಾಡುವುದು ಸರಿಯಲ್ಲವೆಂದು ಯಾರು ಎಷ್ಟು

ಹೇಳಿದಾಗ್ಗೂ ಹೊಲ್ಲನು ಅಂಥವರ ಮೇಲೆ ಬಿದ್ದು ಅವರನ್ನು ಹೊಡೆ

ಯುವುದಕ್ಕೆ ಹೋಗುತಿದ್ದನು. ಹೀಗೆ ಈ ಹೊಲ್ಲನು ಆ ಊರಿನ

ಜನಗಳಿಗೆ ಮಾರಿಯಾಗಿದ್ದನು. ಇವನ ತೋಳವು ಹೆಮ್ಮಾರಿಯಾಗಿತ್ತು.


ಈ ತೋಳವು ಒಂದು ದಿನ ಮಲ್ಲ ಮೇಯಿಸುತಿದ್ದ ೩ ಆಡು

ಗಳನ್ನು ಯಾರೂ ಇಲ್ಲದ ಸಮಯದಲ್ಲಿ ಹೊಡೆದು ಕೊಂದು ಅವು

ಗಳನ್ನು ತಿನ್ನುವುದಕ್ಕೆ ಆರಂಭಿಸಿತು. ಮಲ್ಲನು ಇದನ್ನು ಕಂಡು

ಅದನ್ನು ಹಿಡಿದುಕೊಳ್ಳುವುದಕ್ಕೆ ಹೋಗಲು ಆ ದುಷ್ಟ ಜಂತುವು

ಇವನ ಮೇಲೆ ಬಿದ್ದು ಗಾಯವನ್ನು ಮಾಡಿತು. ಆಗ ಮಲ್ಲನು

ಅದನ್ನು ಲಕ್ಷ್ಯಮಾಡದೆ ತೋಳನನ್ನು ಹಿಡಿದು ಅದರ ಕತ್ತನ್ನು

ಕಿವಿಚಲು ಆರಂಭಿಸಿದನು. ಇವನ ಶಕ್ತಿ ಬಲವಾದ್ದರಿಂದ ಅದರ

ತುಂಟತನ ಏನೂ ನಡೆಯದೇ ಹೋಯಿತು. ಕೊನೆಗೆ ತೋಳನು

ಸತ್ತು ಕೆಳಕ್ಕೆ ಬಿತ್ತು.


ತನ್ನ ತೋಳನಿಗೆ ಈ ಗತಿ ಬಂದದ್ದನ್ನು ಕಂಡು ಹೊಲ್ಲನು,

ಮಹಾ ಕೋಪದಿಂದ ಮಲ್ಲನ ಮೇಲೆ ಬಿದ್ದು ಹೊಡೆಯುವುದಕ್ಕೆ

ಹೋದನು. ಮಲ್ಲನು ಬುದ್ಧಿ ಹೀನನಾದ ಹೊಲ್ಲನ ಆಟೋಪವನ್ನೆಲ್ಲಾ

ನೋಡಿ ಆತ್ಮಸಂರಕ್ಷಣಾರ್ಥವಾಗಿ ಅನನನ್ನು ಎದುರಿಸಲು ತಾನು ಅನು

ವಾದನು. ಇಬ್ಬರಿಗೂ ದೊಡ್ಡದಾಗಿ ಮಲ್ಲಯುದ್ಧ ತೊಡಗಿತು. ಕೊನೆಗೆ

ಮಲ್ಲನು ಹೊಲ್ಲನನ್ನು ಕೆಳಕ್ಕೆ ಕೆಡವಿ ಮೇಲೆಹತ್ತಿ ಕೂತುಕೊಂಡು

ಎಲ ಹೊಲ್ಲಾ ! ನೀನು ದುಷ್ಟನಾಗಿದ್ದೀಯೆ ; ಅದಕ್ಕೆ ತಕ್ಕ ಫಲವನ್ನು

ಅನುಭವಿಸಿದೆ. ಇನ್ನುಮೇಲೆ ಒಳ್ಳೇದಾರಿಯಲ್ಲಿ ನಡೆ. ನನ್ನಮೇಲೆ

ನೀನು ಕೈಮಾಡಿದ್ದರಿಂದ ಇಷ್ಟಕ್ಕೆ ಬಂತು. ಇಲ್ಲದಿದ್ದರೆ ನಿನ್ನ

ತಂಟೆಗೆ ನಾನು ಬರುತಿರಲಿಲ್ಲ. ಇಂದಿಗೆ ನಿನ್ನನ್ನು ಪ್ರಾಣಸಹಿತ

ಬಿಟ್ಟಿದೇನೆ. ಎದ್ದು ಹೋಗು, ಎಂದನು. ಕೂಡಲೆ ಹೊಲ್ಲನು ನಾಚಿ

ಕೊಂಡು ಹೊರಟು ಹೋದನು.


ಇದು ನಡೆದ ಸ್ವಲ್ಪ ದಿವಸಕ್ಕೆ ಮಲ್ಲನು ಕಾಡಿನಲ್ಲಿ ಕುರಿಗಳನ್ನು

ಕಾಯುತಿರುವಾಗ ದಂಡಿನ ಜನರು ಊರಿಂದ ಊರಿಗೆ ಹೋಗುತಾ

 ------------------------------------------

೨೩೮ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಗಟ್ಟಿ ಮುಟ್ಟಾಗಿದ್ದ ಇವನನ್ನು ಕಂಡು--ಎಲ ಕುರುಬ,  ಕುರೀಕಾಯು

ವುದರಿಂದ ನಿನಗೆ ಬರುವುದೇನು? ನಮ್ಮ ಜೊತೆಗೆ ಬಾ. ನೀನು

ಬಲವಾಗಿದ್ದೀಯೆ. ಚೆನ್ನಾಗಿ ಯುದ್ಧಮಾಡಬಹುದು. ಕೊಳ್ಳೇ

ಹೊಡೆದುಕೊಂಡು ಬರಬಹುದು. ನಿನ್ನ ಬಡತನನೆಲ್ಲಾ ಇದರಿಂದ

ಹೋಗುವುದು ಎಂದರು. ಅದಕ್ಕೆ ಮಲ್ಲನು--ಸ್ಟಾಮಿ, ನಮ್ಮ ತಂದೆ

ತಾಯಿಗಳು ಬಹಳ ಮುದುಕರು, ಅವರನ್ನ ಬಿಟ್ಟು ಬಂದಕ್ಕೆ ಪಾಲ

ನೆಗೆ ಯಾರೂ ಇಲ್ಲದೆ ಅವರು ಕಾಡಪಾಲಾಗುವರು. ಇದೂ ಅಲ್ಲದೆ

ನಿಮ್ಮ ದಂಡಿಗೆ ಬಂದು ಸೇರಿದರೆ, ನಿರಪರಾಧಿಗಳಾದ ಅನೇಕರನ್ನು

ಕೊಲ್ಲಬೇಕು. ಅನೇಕರಿಗೆ ಹಿಂಸೆಕೊಡಬೇಕು. ಇದರಿಂದ ಪಾಪ

ಸಂಭವಿಸುವುದು. ನನ್ನ ಕುರಿಯೇ ನನಗೆ ಸಾಕು ಎಂದನು.


ಈ ಮಾತಿಗೆ ಕೋಪಗೊಂಡು ದಂಡಿನ ಭಟರು ದಪ್ಪವಾಗಿ ಬೆಳೆ

ದಿದ್ದ ಅವನ ಒಂದೆರಡು ಕುರಿಗಳನ್ನು ಎತ್ತಿಕೊಂಡು ಹೋದರು. ಈ

ತುಂಟತನವನ್ನು ಕಂಡು ರೋಷದಿಂದ ಮಲ್ಲನು ಕೈಯಲ್ಲಿ ಒಂದು

ಕಟ್ಟಿಗೆಯನ್ನು ಹಿಡಿದು-- ನನ್ಸ ಕುರಿಗಳನ್ನು ಬಿಟ್ಟು ಬದಲು ಮಾತ

ನಾಡಿ, ಇಲ್ಲದಿದ್ದರೆ ನನ್ನ ಸಂಗಡ ಜಗಳಕ್ಕೆ ಬನ್ನಿ ಎಂದನು. ದಂಡಿ

ನವರು ಇದನ್ನು ಲಕ್ಷ್ಯಮಾಡದೆ ಇರಲು, ಮಲ್ಲನು ತನ್ನ ದೊಣ್ಣೆ

ಯನ್ನು ತಿರುಗಿಸುತಾ ಅವರ ಮೇಲೆ ಬಿದ್ದು, ಎಲ್ಲರಿಗೂ ಪೆಟ್ಟುಮಾಡಿ

ಕುರಿಯನ್ನು ಬಿಡಿಸಿಕೊಂಡದ್ದಲ್ಲದೆ ಅವರ ಸೇನಾಪತಿಯ ಸಮೀಪಕ್ಕೆ

ಹೋಗಿ, ನಡೆದ ಸಮಾಚಾರವನ್ನೆಲ್ಲಾ ತಿಳಿಸಿದನು. ಆಗ ಆ ಸೇನಾ

ಪತಿಯು ತನ್ನ ಭಟರ ತುಂಟತನಕ್ಕಾಗಿ ಅವರನ್ನು ಶಿಕ್ಷಿಸಿ, ಮುಂದಕ್ಕೆ

ಹೊರಟನು.


ಹೀಗೆ ಅವರು ಮುಂದಕ್ಕೆ ಹೋಗುತಿರುವಾಗ, ಹೊಲ್ಲನು

ಇವರನ್ನು ಕಂಡು ಬೆರಗಾದನು. ನಮ್ಮ ಜೊತೆಗೆ ಬರುತೀಯಾ

ಎಂದು ಸೇನೆಯವರು ಅವನನ್ನು ಕೇಳಿದರು. ಹೊಲ್ಲನು ಆಗಲಿ

ಎಂದು ಒಪ್ಪಿ ಅನರ ಸಂಗಡ ಹೊರಟನು. ಇವನು ಶತ್ರುಗಳನ್ನು

ಕೊಲ್ಲುವುದರಲ್ಲಿಯೂ, ಗಡಿದುರ್ಗಗಳನ್ನು ಹಿಡಿಯುವುದರಲ್ಲಿಯೂ

ವಿಶೇಷ ಪರಾಕ್ರಮವನ್ನು ತೋರಿಸಿದ ಕಾರಣ, ಇವನ ಖ್ಯಾತಿಯು 

--------------------------------

೨೦] ಸುಮತಿ ಮದನ ಕುಮಾರರ ಚರಿತ್ರೆ ೨೩೯ 


ದಿನೇ ದಿನೇ ಹೆಚ್ಚುತ ಬಂತು. ಸ್ವಲ್ಪ ದಿವಸದಲ್ಲಿಯೇ ಇವನಿಗೆ

ದೊಡ್ಡ ಸೇನಾಧಿಕಾರವಾಯಿತು.


ಈ ಕಥೆಯನ್ನು ಉದ್ದಕ್ಕೂ ಕೇಳುತಾ ಇದ್ದ ಮದನನ ಕಣ್ಣಿ ನಲ್ಲಿ

ನೀರು ಸುರಿಯುವುದಕ್ಕೆ ಮೊದಲಾಯಿತು... ಮಗು, ಯಾಕಪ್ಪಾ .

ಅಳುತೀಯೆ? ಎಂದು ರಾಣಿಯು ಕೇಳಲು- ಅಮ್ಮಯ್ಯ, ನನಗೆ

ಸುಮತಿಯ ಜ್ಞಾಪಕಬಂತು. ಸುಮತಿಗೆ ಈ ಮಲ್ಲನ ವಯಸ್ಸು

ಬಂದರೆ ಅವನೂ ಇವನ ಹಾಗೇ ಬಹು ಒಳ್ಳೆ ಯವನಾಗಿದ್ದಾನು,

ಎಂದು ಮದನನು ಹೇಳಿದನು. ಆಗ ರಾಣಿಯು--ಯಾಕೆ ಹಾಗನ್ನು

ತೀಯೆ? ಹೊಲ್ಲ ಏನು ಕಡಮೆಯಾಗಿದಾನೆಯೆ? ಸೈನ್ಯದಲ್ಲಿ ದೊಡ್ಡ

ಅಧಿಕಾರವನ್ನು ಮಾಡುತಿದಾನಲ್ಲ? ಎಂದಳು. ಮದನನು-ಅಮ್ಮಯ್ಯ,

ಹಾಗಲ್ಲ. ಹೊಲ್ಲ ಎಂಥಾ ಪದವಿಯಲ್ಲಾ ದರೂ ಇರಲಿ ಅದರಿಂದ

ಬಂದ ಭಾಗ್ಯವೇನು? ತಂದೆತಾಯಿಗಳಲ್ಲಿಯೂ, ದೇವರಲ್ಲಿಯೂ

ವಿಶೇಷ ಭಕ್ತಿ ಯನ್ನಿಟ್ಟುಕೊಂಡಿರುವಂಥಾ ಮಲ್ಲನು ಏನೂ ಅರಿಯದವ

ನೆಂದು ಹಳಿಯಲಾಗದು. ಹೊಲ್ಲನ ಡಂಭವೆಲ್ಲಾ ಹಾಗಿರಲಿ. ಮಲ್ಲನೇ

ಉತ್ತಮ, ನಾನು ಆ ಹೊಲ್ಲನ ಹಾಗೆ ಒಬ್ಬ ನೀಚ,


ಹೀಗೆಂದು ಮಗ ಆಡಿದ ಮಾತನ್ನು ದೊರೆ ಕೇಳಿ ಇಷ್ಟು

ಜಾಗ್ರತೆಯಾಗಿ ಬುದ್ಧಿ ಬಂತಲ್ಲಾ ಎಂದು ಸಂತೋಷಪಡುತಾ, ಅವ

ನನ್ನು ಕುರಿತು--ಮಗು ನಿನ್ನ ತಪ್ಪು ನಿನಗೆ ತಿಳಿಯಿತಲ್ಲಾ, ನನಗೆ

ಅಷ್ಟೇ ತೃಪ್ತಿಯಾಯಿತು, ಎಂದು ಹೇಳಿದನು. ಲಲಿತೆಯು ಕಥೆಯನ್ನು

ಮುಂದಕ್ಕೆ ಓದಲು ಆರಂಭಿಸಿದಳು ಹೇಗೆಂದರೆ: -


ಮಲ್ಲನು ತನ್ನ ಕುರೀಹಿಂಡನ್ನು ಕರೆದುಕೊಂಡು ಹೋಗಿ,

ಬೆಟ್ಟದ ಕಿಬ್ಬೆಯಲ್ಲಿ ಮೇಯಿಸುವ ಪದ್ಧತಿಯಿತ್ತು.  ಅಲ್ಲಿನ ಹೊದರು

ಗಳಲ್ಲಿಯೂ ಗುಹೆಗಳಲ್ಲಿಯ್ಕೂ ಹುಲಿ ಕಿರುಬ ತೋಳ ಮುಂತಾದ

ದುಷ್ಟ ಜಂತುಗಳು ಸೇರಿಕೊಂಡು, ಮೇಯುವುದಕ್ಕೆ ಬಂದ ಕುರಿಗಳಲ್ಲಿ

ಯಾರೂ ಅರಿಯದಂತೆ ಒಂದೊಂದು ಕುರಿಯನ್ನು ಕಚ್ಚಿಕೊಂಡು ಓಡಿ

ಹೋಗುತಿದ್ದವು.. ಇಂಥಾ ಕೆಟ್ಟ ಮೃಗಗಳನ್ನು ಕೊಂದು ಊರ

ಜನಕ್ಕೆ ಉಪಕಾರಮಾಡುವುದರಲ್ಲಿ ಹೊರತು, ಮತ್ತೆ ಯಾವ ವಿಧವಾದ 

-----------------------------------

೨೪೦ ಸುಮತಿ ಮದನಕುವಮಾರರ ಚರಿತ್ರೆ [ಅಧ್ಯಾಯ 


ಪ್ರಾಣಿಹಿಂಸೆಯಲ್ಲಿಯೂ ಮಲ್ಲನಿಗೆ ಇಷ್ಟವಿರಲಿಲ್ಲ... ಎಲ್ಲಾ ಭಾಗ

ದಲ್ಲಿಯೂ ಶಕ್ತನಾದ ಇವನನ್ನೇ ಮುಂದಾಳಾಗಿ ಇಟ್ಟುಕೊಂಡು, ಅವ

ಹೇಳಿದಂತೆ ಕೇಳಿಕೊಂಡು ಆ ಊರ ಕುರುಬರು ತಮ್ಮ ಕುರೀಹಿಂಡು

ಗಳನ್ನು ಕಾಪಾಡಿಕೊಳ್ಳುತಿದ್ದರು,


ಮಲ್ಲನು ಒಂದು ದಿನ ಈಟಿಯನ್ನು  ಕೈಯಲ್ಲಿ ಹಿಡಿದು ಹೆಚ್ಚಾಗಿ

ಹಾವಳಿಮಾಡುತಿದ್ದ ಒಂದು ಕಿರುಬವನನ್ನು ಹರಿಸಿಕೊಂಡು ಹೋದನು.

ಅದು ದಿಕ್ಕು ದಿಕ್ಕಿಗೆ ಓಡಿ ಹೋಯಿತು. ಅದರ ಹಿಂದೆ ಹಿಂದೆಯೇ

ಇವನೂ ಹೋಗಿ ಅದನ್ನು ಕೊಂದನು. ಆದರೆ ದಾರಿತಪ್ಪಿ ಹೋಯಿತು.

ಎತ್ತ ನೋಡಿದರೂ ದೊಡ್ಡ ದೊಡ್ಡ ಬಂಡೆಗಳೇ ಕಾಣುತಿದ್ದವು. ಅಲ್ಲಿಂದ

ಈಚೆಗೆ ಬರಬೇಕೆಂದು ಸ್ವಲ್ಪ ದೂರ ಹೊರಡಲು, ಒಂದು ದೊಡ್ಡ

ಕಾಡು ಸಿಕ್ಕಿತು. ದೊಡ್ಡ ದೊಡ್ಡ ಮರಗಳು ಒತ್ತಾಗಿ ಬೆಳೆದಿದ್ದವು.

ಹೆಜ್ಜೆಯಿಡುವುದಕ್ಕೆ ಕೂಡ ಸ್ಥಳವಿರಲಿಲ್ಲ. ಬಂಡೆಗಳ ಮೇಲಿನಿಂದ

ದೊಣೆನೀರು ಅಲ್ಲಲ್ಲಿ ಹೇರಳವಾಗಿ ಸುರಿಯುತಿತ್ತು. ಆ ಸಮಯಕ್ಕೆ

ಸರಿಯಾಗಿ ಸಾಯಂಕಾಲವಾಯಿತು. ಸೂರ್ಯ ಮುಳುಗಿದನು.

ಕತ್ತಲೆ ಕವಿಯಿತು. ಸ್ವಲ್ಪ ದೂರ ಹೋಗಲು, ಆಚೆಗೆ ಕಣ್ಣೇ ಕಾಣಿಸ

ಲಿಲ್ಲ. ಸ್ವಲ್ಪ ವಿರಾಮವಾಗಿದ್ದ ಆ ಪ್ರದೇಶದಲ್ಲಿ ಒಂದು ಬಂಡೆಯ

ಕೆಳಗೆ ರಾತ್ರೆ ಮಲಗಿದ್ದು ಬೆಳಗಾದ ಮೇಲೆ ದಾರಿಯನ್ನು ಹುಡುಕಿ

ಕೊಂಡು ಊರ ಕಡೆ ಹೋಗೋಣವೆಂದು ಇವನು ಕೂತುಕೊಂಡನು.

ಸ್ವಲ್ಪ ದೂರದಲ್ಲಿ ಒಂದು ಬಂಡೇ ಸಮಿಪದಲ್ಲಿ ಬೆಳಕು ಕಾಣಿಸಿತು.

ಅದು ಇರುವ ದಿಕ್ಕಿಗೆ ಮಲ್ಲನು ತಡವರಿಸಿಕೊಂಡು ಮೆಲ್ಲಗೆ ಹೋಗಿ

ಮರೆಯಾಗಿನಿಂತು ನೋಡುವಾಗ, ಅಲ್ಲಿ ಕೆಲವು ಸಿಪಾಯಿಗಳು ಕೂತು

ಬೆಂಕೀ ಕಾಯಿಸಿಕೊಳ್ಳುತಿದ್ದರು, ಅವರ ಮಧ್ಯೆ ಬಹಳ ವಯಸ್ಸಾದ

ಒಬ್ಬ ಮುದುಕನೂ ಅವನ ಹತ್ತಿರ ರೂಪಿಣಿಯಾಗಿ ಪ್ರಾಯಸಮರ್ಥ

ಳಾಗಿದ್ದ ಒಬ್ಬ ಹುಡುಗಿಯೂ ಕೂತಿದ್ದರು, ಆ ಹುಡುಗಿ ಕಣ್ಣಿನಲ್ಲಿ

ನೀರಸುರಿಸುತಾ ಇದ್ದಳು. ಆ ಸಿಪಾಯಿಗಳ ಹಾರಾಟವನನ್ನೂ ಈ

ಮುದುಕನ ಅತಿ ದೀನವಾದ ಮುಖರಸವನ್ನೂ ನೋಡಿ, ಆ ವೃದ್ಧನೂ

ಹುಡುಗಿಯೂ ಇವರ ಕ್ಸೆಗೆ ಸೆರೆಸಿಕ್ಶಿರಬೇಕೆಂದು ಯೋಚಿಸಿ ಅವರನ್ನು 

-----------------------------------

೨೦] ಸುಮತಿ ಮದನ ಕುಮಾರರ ಚರಿತ್ರೆ ೨೪೧ 


ಬಿಡಿಸಿಕೊಳ್ಳುವುದಕ್ಕೆ ಯತ್ನಿಸಲು ಹೊರಟನು. ಆದರೆ ಏನು ಪ್ರಯೋ

ಜನ? ಮಲ್ಲನ ಹತ್ತಿರ ಒಂದು ಆಯುಧವೂ ಇರಲಿಲ್ಲ. ಸಹಾಯಕ್ಕೆ

ಮತ್ತೆ ಯಾರೂ ಇಲ್ಲ. ಸಿಪಾಯಿಗಳಾದರೊ ನೂರಾರು ಜನದ ಮೇಲಿ

ದ್ದರು. ಆದಕಾರಣ ಇವರನ್ನು ಉಪಾಯದಿಂದ ಗೆಲ್ಲಬೇಕೆಂದು

ಯೋಚಿಸಿ ತನ್ನ ಬಳಿಯಲ್ಲಿದ್ದ ಗುಂಡುಗೊಡಲಿಯಿಂದ ಮರದ ಕೊಂಬೆ

ಗಳನ್ನು ಕಡಿದು ಅದಕ್ಕೆ ಬೆಂಕಿಹತ್ತಿಸಿದನು. ಆ ಎತ್ತರವಾದ ಸ್ಥಳದಲ್ಲಿ

ಉರಿಯುತಿದ್ದ ಆ ಬೆಂಕಿಯ ಪ್ರಭೆಯು ಸುತ್ತಲೂ ಇದ್ದ ಬೆಟ್ಟ ಗುಟ್ಟದ

ಮೇಲೂ ಕಾಡುಗಿಡಗಳ ಮೇಲೂ ಬಿದ್ದು ಅದೆಲ್ಲಾ ಹೆಚ್ಚಾಗಿ ಬೆಳಕಾ

ಯಿತು. ಅಕಸ್ಮಾತ್ತಾಗಿ ಏನಾದರೂ ಒಂದು ಸಂಗತಿ ಜರುಗಿದರೆ

ಅದನ್ನು ಕಂಡು ಕೂಡಲೆ ಗಾಬರಿಯಿಂದ ಭಯಪಟ್ಟು ಎಲ್ಲಾ ಕೆಲಸ 

ವನ್ನೂ ಬಿಟ್ಟು ಬಿಡುವ ಸ್ವಭಾವವು ಯಾವಾಗಲೂ ಮನುಷ್ಯಸಾಮಾನ್ಯ

ರಲ್ಲಿ ಇದೆ. ಎಂದು ತಿಳಿದಿದ್ದ ಮಲ್ಲನು ಸುತ್ತಲೂ ಪರ್ವತಗಳಿಂದ

ಆವೃತವಾದ ಒಂದು ಜಾಗದಲ್ಲಿ ನಿಂತು ತನ್ನ ಕೈಲಾದಮಟ್ಟಗೂ ಗಟ್ಟಿ 

ಯಾಗಿ ವಿಧ ವಿಧವಾಗಿ ಕೂಗಿಕೊಂಡನು. ಹೊಳಲು ಕೊಡುತಿದ್ದ

ಆ ಸ್ಥಳದ ಸ್ವಭಾವದಿಂದ ಈ ಕೂಗು ಸುತ್ತಲೂ ಬಹಳ ದೂರಕ್ಕೆ ಅತಿ

ಯಾಗಿ ಕೇಳಿಸಿತು. ವಿಪರೀತವಾದ ಈ ಬೆಂಕಿಯ ಪ್ರಕಾಶವನ್ನು

ಕಂಡು ಈ ಗದ್ದಲವನ್ನು ಕೇಳಿ ಗಾಬರಿಪಟ್ಟದ್ದ ಆ ಸಿಪಾಯಿಗಳು

ಭಯದಿಂದ ದಿಕ್ಕೆಟ್ಟು ಕಿತ್ತುಮುರಿದು ಓಡಿ ಹೋದರು.


ಇದೆಲ್ಲವನ್ನೂ ದೂರದಲ್ಲಿ ನಿಂತು ನೋಡುತಿದ್ದ ಮಲ್ಲನು ಆ

ಮುದುಕನ ಹತ್ತಿರ ಹೋಗಿ ಆತನನ್ನೂ ಆ ಯುವತಿಯನ್ನೂ ಎತ್ತಿ

ಕೊಂಡು ನಿರ್ಭೀತಿಯಾದ ಒಂದು ಸ್ಥಳಕ್ಕೆ ಹೋಗಿ ಅಲ್ಲಿ ಕೂತುಕೊಂ

ಡನು. ಆಗ ಮುದುಕನು ಮಲ್ಲನನ್ನು ಕುರಿತು-_-ಅಯ್ಯಾ, ನೀನು

ಯಾರು, ಯಕ್ಷನೋ, ಕಿನ್ನರನೋ, ಕಿಂಪುರುಷನ್ಫೋ, ಸಿದ್ಧನೋ,

ರಾಕ್ಷಸನೊ ಪಿಶಾಚವೊ, ಅಥವಾ ಮನುಷ್ಯನೊ? ನೀನು ಯಾರೋ

ನಾನರಿಯೆ. ಮಹತ್ತಾದ ಅಪಾಯದಲ್ಲಿ ಸಿಕ್ಕಿದ ನಮಗೆ ಪಂಚಪ್ರಾಣವೂ

ಹೋಗಿತ್ತು. ನಮ್ಮಿಬ್ಬರ ಮರಣವು ಗಳಿಗೆಯೋ ಕ್ಷಣವೋ ಎನ್ನುವ

ಹಾಗಿತ್ತು. ಹೀಗೆ ಮೃತ್ಯುವಿನ ದವಡೆಯಲ್ಲಿ ಸಿಕ್ಕಿಕೊಂಡಿದ್ದ ನಮ್ಮನ್ನು 

-------------------------------------

೨೪೨ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ಬಿಡಿಸಿಕೊಂಡು ಬಂದ ನಿನ್ನ ಪರಾಕ್ರಮವನ್ನು ಕೊಂಡಾಡಲೆ! ದಿಕ್ಕಿ

ಲ್ಲದ ನಮಗೆ ಪ್ರಾಣದಾನವನ್ನು ಮಾಡಿದ ನಿನ್ನ ದಯಾರಸವನ್ನು

ಕೊಂಡಾಡಲೆ! ನಿನಗೆ ನಾವು ಹೇಗೆತಾನೆ ಪ್ರತ್ಯುಪಕಾರವನ್ನು ಮಾಡಿ

ಯೇವು? ಎಂದನು. ಆಗ ಮಲ್ಲನು--ತಾತ, ಅಕಸ್ಮಾತ್ತಾಗಿ ನಡೆದ

ಕಾರ್ಯನಿರ್ವಾಹವು ಅಲ್ಪನಾದ ನನ್ನಿಂದಾಯಿತು ಎಂದು ತಾವು

ಹೇಳುವ ಮಾತು ಪ್ರೇಮದಿಂದ ಬರುವ ಮಾತಾಗಿದೆ ಎಂದು ಹೇಳಿ

ಅವರನ್ನು ಕರೆದುಕೊಂಡು ಮುಂದಿನ ಊರಿಗೆ ಹೋಗಿ ಅಲ್ಲಿ ಆ

ಮಾರನೇ ದಿನ ತಂಗಿದ್ದು ಭೋಜನಾದಿಗಳು ಆದನಂತರ ಆ ವೃದ್ಧ

ನನ್ನು ಕುರಿತು--ತಾತ, ತಮಗೆ ಇಂಥಾ ವಿಪತ್ತು ಯಾಕೆ ಬಂತು

ಎಂದನು, ಆಗ ಮುದುಕನು ತನ್ನ ಕಥೆಯನ್ನು ಹೇಳಿಕೊಂಡಿದ್ದು

ಹೇಗೆಂದರೆ :— 


ಚಾರುದತ್ತ ಅವನ ಮಗಳು


ಅಯ್ಯಾ ಮಗು ಕೇಳು. ನಾನು ಅಲ್ಪ, ಆದಾಗ್ಗೂ ನಮಗೆ

ಪ್ರಾಣದಾನವನ್ನೇ ಮಾಡಿದ ನಿನ್ನಂಥಾ ಮಹಾಪುರುಷನ ಮಾತನ್ನು

ಇಷ್ಟರಮಟ್ಟಿಗೆ ನಡಸಿಕೊಡಲಾರೆನೆ? ಹೇಳುತ್ತೇನೆ ಕೇಳು. ನನ್ನ

ಹೆಸರು ಚಾರುದತ್ತ, ಸಿಂಧು ದೇಶದ ಒಂದು ರೇವು ಪಟ್ಟ ಣದಲ್ಲಿ ನಾನು.

ಹುಟ್ಟಿದ್ದು. ನಮ್ಮ ತಂದೆಯು ಬಹು ದೊಡ್ಡ ವರ್ತಕ. ನನ್ನ ಚಿಕ್ಕ

ವಯಸ್ಸಿನಲ್ಲಿಯೇ ತಾಯಿತಂದೆಗಳು ಇಬ್ಬರೂ ದೈವಾಧೀನರಾದ್ದರಿಂದ,

ಲೋಕವ್ಯವಹಾರದಲ್ಲಿ ನನಗೆ ಬಹಳವಾಗಿ ಅಸಹ್ಯಹುಟ್ಟಿ ದೇಶಾಟನ

ಮಾಡಬೇಕೆಂದು ನಾನು ಹೊರಟೆನು. ನಮ್ಮ ತಂದೆಯು ಬಹು

ಸಮರ್ಥನಾಗಿದ್ದನು. ವಿದ್ಯಾವ್ಯಾಸಂಗವನ್ನು ಮಾಡುತಾ ಗ್ರಂಥಗಳಲ್ಲಿ

ಕಾಲವನ್ನು ಕಳೆಯಬೇಕೆಂಬ ಆಶೆಯು ನನಗೆ ಆತನಿಂದಲೇ

ಉಂಟಾದ್ದು. ಆತನ ಅಪರಿಮಿತವಾದ ಐಶ್ವರ್ಯವು ನನ್ನ ದೇಶಾಟ

ನೆಗೆ ಸಹಾಯಕಾರಿಯಾಯಿತು.


ಮೊದಲು ನಾನು ಮಿಸರ್‌ ದೇಶಕ್ಕೆ ಹೋದೆನು. ಪಾಂಡಿತ್ಯಕ್ಕೂ

ಸಮಸ್ತ ಕುಶಲ ವಿದ್ಯೆಗಳಿಗೂ ಆ ದೇಶವು ಪೂರ್ವದಿಂದಲೂ ನೆಲೆ

ಎಂದು ಖ್ಯಾತಿಗೊಂಡಿತ್ತು. ಅಲ್ಲಿ ಉತ್ತಮವಾದ ನೀಲನದಿಯು ಹರಿ 

---------------------------------

20] ಸುಮತಿ ಮಡನ ಕುಮಾರರ ಚರಿತ್ರೆ ೨೪೨ 


ಯುತಿದೆ. ಈ ನದಿಯಿಂದ ದೇಶವೆಲ್ಲಾ ಪಾವನವಾಗಿದೆ. ಸ್ವಲ್ಪ

ವ್ಯವಸಾಯದಿಂದಲೇ ಬೆಳೆ ಒಂದಕ್ಕೆ ಹತ್ತರಷ್ಟಾಗುವುದು. ಇದರಿಂದ:

ಜನರೆಲ್ಲಾ ಪುಷ್ಪರಾಗಿ ಅವರಿಗೆ ಗ್ರಂಥವ್ಯಾಸಂಗಕ್ಕೂ ಕುಶಲ ವಿದ್ಯಾ

ವ್ಯಾಸಂಗಕ್ಕೂ ಬಹಳವಾಗಿ ಅವಕಾಶ ದೊರೆತಿತ್ತು. ರಾಜ್ಯದ ಉನ್ನತ

ಸ್ಥಿತಿಗೆ ಯಾವುದು ಕಾರಣವಾಯಿತೋ ಅದೇ ಅದರ ಹೀನದಶೆಗೂ:

ಕಾರಣವಾಯಿತು. ಹೆಚ್ಚು ಗೈಮೆಯಿಂದ ದೊರೆಯುತಿದ್ದ ಆದಾಯವು.

ಜನರಿಗೆ ಒಂದು ಬಗೆಯ ಜಡತ್ವವನ್ನು ಉಂಟುಮಾಡಿತು. ಈ ಜಡ 

ತ್ವವು ದುರ್ಮಾರ್ಗಕ್ಕೆ ಎಳೆಯಿತು. ಮಂದಿಯೆಲ್ಲಾ ಕೆಟ್ಟತನದಲ್ಲಿ

ಇಳಿಯಾಮುಳುಗಿದ್ದರು. ಪರಾಕ್ರಮ ಜನರಲ್ಲಿ ಲವಲೇಶವೂ ಇರಲಿಲ್ಲ. 


ಮಲ್ಲ--ಕಾಡಿನಲ್ಲಿಯಾದರೂ ಇದ್ದು ಕಾಲವನ್ನು ಕಳೆಯಬಲ್ಲೆನೇ 

ಹೊರತು ಇಂಥಾ ಹೇಡಿಗಳ ಸೀಮೆಯಲ್ಲಿ ಅರೆಗಳಿಗೆಯೂ ಇರಲಾರೆ. 


ಚಾರುದತ್ತ--ಅಯ್ಯಾ, ನಿನ್ನ ಮಾತನ್ನು ಮೆಚ್ಚಿದೆ. ನನ್ನ

ಅಭಿಮತವೂ ಹಾಗೆಯೇ ಸರಿ. ಅದರಿಂದಲೇ ಆ ದೇಶವನ್ನು ಬಿಟ್ಟು

ನಾನು ಹೊರಟು ಹೋದೆ. ಅಲ್ಲಿಂದ ಮಗ್ಗುಲ ದೇಶವಾದ ಅರಬ್ಬೀ

ಸ್ಥಾನಕ್ಕೆ ಬಂದೆ. ಅಲ್ಲಿನ ಜನರ ಸ್ವಭಾವವೂ ಬೇರೆ. ಇಲ್ಲಿಗೆ ಬರು.

ವಾಗ ದಾರಿಯಲ್ಲಿ ಮರಳಕಾಡನ್ನು ದಾಟಿಕೊಂಡು ಬರಬೇಕಾಗಿತ್ತು.

ಅದರಿಂದ ಒಂಟೆಯನ್ನು ಬಾಡಿಗೆಗೆ ತೆಗೆದುಕೊಂಡು ಅದರ ಮೇಲೆ

ಕೂತು ಹೊರಟೆ. ಮರಳಕಾಡಿನ ಪ್ರಯಾಣಕ್ಕೆ ಒಂಟೆಯು  ಬಹಳ

ಅನುಕೂಲವಾದ್ದು. ಇದು ಎಷ್ಟು ಕಷ್ಟವನ್ನಾದರೂ ಸಹಿಸುವುದು.

ಸಾಧಾರಣವಾದ ಸೊಪ್ಪು ಸಿಕ್ಕಿದಾಗ್ಗೂ ಅದನ್ನು ತಿಂದು ಹೊಟ್ಟೆಯನ್ನು

ತುಂಬಿಕೊಳ್ಳುವುದು. ಮತ್ತು ಆಹಾರ ನೀರು ಏನೂ ಇಲ್ಲದೆ ೯-೧೦

ದಿನಸಗಳಾದಾಗ್ಗೂ ಕಾಡಿನಲ್ಲಿ ನಡೆದುಕೊಂಡು ಹೋಗುತಲೇ ಇರು.

ವುದು. ಇಂಥಾ ವಾಹನವನ್ನೇರಿ ಹೊರಟೆ. ಬರುತ ಬರುತಾ ಎತ್ತ

ನೋಡಿದರೂ ಮರಳೇ ಕಾಣಿಸುತಿತ್ತು. ಒಂದು ಪ್ರಾಣಿಯ ಸಂಚಾರವೂ.

ಇಲ್ಲದೆ ನಾವೇ ನಾವಾಗಿದ್ದೆವು. ಸೂರ್ಯನು ನೆತ್ತೀಮೇಲಕ್ಕೆ ಬಂದನು.

ಬಿಸಿಲಿನ ವೇಗವನ್ನು ತಡೆಯುವುದಕ್ಕೆ ಆಗಲಿಲ್ಲ. ನನಗೆ ಮೈಲೆಲ್ಲಾ

ಉರಿ ಕಾಣಿಸಿತು. ವಿಪರೀತವಾದ ಬಾಯಾರಿಕೆ ಹತ್ತಿತು, ಎಷ್ಟು 

---------------------------------------

೨೪೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ನೀರ ಕುಡಿದು ಬಾಯಿಯನ್ನು ತೇವಮಾಡಿಕೊಂಡರೂ ದಾಹ ಅಡಗ

ಲಿಲ್ಲ. ಸಾಯಂಕಾಲದ ಹೊತ್ತಿಗೆ ಒಂದು ತಿಟ್ಟಿನ ಹತ್ತಿರ ಡೇರಾ

ಹಾಕಿ ಇಳಿದುಕೊಂಡೆವು. ಅಲ್ಲಿ ಆ ರಾತ್ರೆ ತಂಗಿದ್ದು ಮಾರನೇ ದಿನ

ಬೆಳಗ್ಗೆ ಹೊರಟೆವು. ಸ್ಪಲ್ಪ ದೂರ ಹೊರಟ ಕೂಡಲೆ ಧೂಳು ಕಾಣಿ

ಸಿತು. ಕೂಡಲೆ ಅರಬ್ಬರ ಒಂದು ಗುಂಪು ನಮ್ಮೆದುರಿಗೆ ಬಂತು,

ಅವರೆಲ್ಲರೂ ಆಯುಧಪಾಣಿಗಳಾಗಿದ್ದರು. ಅವರೆಲ್ಲರೂ ಹತ್ತಿಕೊಂಡು

ಬರುತಿದ್ದ ಉತ್ತಮವಾದ ಕುದುರೆಗಳು ಜಿಂಕೆಗಳ ಹಾಗೆ ಓಡಿ ಬರುತಿ

ದ್ದವು. ಇವರು ಯುದ್ಧಕ್ಕಾಗಿಯೇ ಬಂದರು. ಆದರೆ ನಾವುಗಳು

ಯಾವ ದುರಭಿಪ್ರಾಯವೂ ಇಲ್ಲದೆ ಸುಮ್ಮನೆ ಹೋಗುತಿರುವುದನ್ನು

ಕಂಡು ಅವರು ಸ್ವಲ್ಪ ಹಿಂತೆಗೆದರು. ಅವರಲ್ಲಿ ಮುಖಂಡನಾಗಿ

ತೋರಿದ ಒಬ್ಬ ಪುರುಷನು ನನ್ನನ್ನು ಕುರಿತು.- ನೀವು ಯಾರು?

ಎಲ್ಲಿಗೆ ಹೋಗುತೀರಿ? ಎಂದು ಕೇಳಿದನು. ಅರಬ್ಬಿ ಭಾಷೆಯನ್ನು

ಸ್ವಲ್ಪ ಅಭ್ಯಾಸಮಾಡಿದ್ದ ನಾನು ನಮಗೆ ಯಾವ ವಿಧವಾದ ಕೆಟ್ಟ

ಮನಸ್ಸೂ ಇಲ್ಲ. ಸುಮ್ಮನೆ ದೇಶವನ್ನು ನೋಡಿಕೊಂಡು ಹೋಗು

ವುದಕ್ಕಾಗಿ ಬಂದೆನೆಂದು ಹೇಳಿದೆ. ಆಗ ಅವನು ನನ್ನ ಮುಖವನ್ನು

ದೃಷ್ಟಿಸಿ ನೋಡುತಾ ನನ್ನಲ್ಲಿ ಏನೋ ಸುಗುಣವನ್ನು ಕಂಡವನಂತೆ, 

ನನ್ನಲ್ಲಿ ದಯವನ್ನು ಸೂಚಿಸುವನಹಾಗೆ ಹಸನ್ಮುಖಿಯಾಗಿ, ನನ್ನ ಕೈ 

ಹಿಡಿದುಕೊಂಡು ಹೇಳಿದ್ದೇನೆಂದರೆ —


ಅಣ್ಣಯ್ಯ, ನೀನು ಭಯಪಡತಕ್ಕದ್ದಿಲ್ಲ. ನಮ್ಮಲ್ಲಿಗೆ ಅತಿಥಿ

ಯಾಗಿ ಬಂದಮೇಲೆ ನೀನೂ ನಮಗೆ ಸಮಾನನೇ ಸರಿ. ನಾವು ವರಟು

ಜನರೆಂಬುದೇನೋ ನಿಜ, ಆದರೆ ಇತರ ಕಡೆ ಇರುವಂತೆ ನಮ್ಮಲ್ಲಿ

ದ್ರೋಹವಿಲ್ಲ, ಧೈರ್ಯವಾಗಿರು. ಹೀಗೆಂದು ಹೇಳಿದಕೂಡಲೆ, ಆ

ಗುಂಪಿನ ಜನರೆಲ್ಲರೂ ಬಂದು ನನ್ನೆದುರಿಗೆ ನಿಂತು, ನಾನು ಅವರ

ದೊರೆಯೋ ಎನ್ನುವ ಹಾಗೆ ನನಗೆ ಸಲಾಂಮಾಡಿದರು. ಕೊನೆಗೆ

ಅವರ ಮುಖಂಡನೋ ಅಥವಾ ದೊರೆಯೋ ಆಗಿದ್ದ ಪುರುಷನು

ಮರ್ಯಾದೆಯಿಂದ ನನ್ನನ್ನು ಕರೆದುಕೊಂಡು ಹೋಗಿ ಅವರ ಪಾಳಯ

ದಲ್ಲಿ ಇಳಿಸಿಕೊಂಡನು. ರೊಟ್ಟಿ, ಮಾಂಸ, ಹಣ್ಣುಗಳು ಇವುಗಳನ್ನು 

----------------------------------------

[೨೦ ಸುಮತಿ ಮದನ ಕುಮಾರರ ಚರಿತ್ರೆ ೨೪೫ 


ನನಗಾಗಿ ತಂದಿಟ್ಟರು, ಅವರ ಕೊಟ್ಟ ಮಾಂಸಗಳನ್ನು ಬಿಟ್ಟು ನನ್ನ

ರೊಟ್ಟಿಯನ್ನೂ ಅವರ ಹಾಲು ಹಣ್ಣುಗಳನ್ನೂ ನಾನು ತೆಗೆದುಕೊಂಡು

ವಿಶ್ರಮಿಸಿಕೊಂಡೆ. ಅವರ ಆದರವನ್ನು ನಾನು ಕೈಗೊಳ್ಳುತಾ ಅಲ್ಲಿಯೇ

ಕೆಲವು ದಿವಸಗಳನ್ನು ಕಳೆದೆ, ಆ ದೇಶದಲ್ಲಿ ಉಷ್ಣ ಹೆಚ್ಚು. ಸೂರ್ಯನ

ವೇಗವನ್ನು ಸಹಿಸುವುದಕ್ಕೆ ಆಗುವುದೇ ಇಲ್ಲ. ಭೂಮಿಯೆಲ್ಲಾ

ಬರೀ ಮರಳು. ನೆಲನನ್ನು ಉಳುವುದೇ ಇಲ್ಲ. ಬಿತ್ತನೆಯನ್ನು

ಬಿತ್ತುವುದೇ ಇಲ್ಲ... ಖರ್ಜೂರ ಮೊದಲಾದ ಒಂದೆರಡು ಹಣ್ಣುಗಳು

ವಿನಾ ಮತ್ತೆಯೇನೂ ಈ ಸೀಮೆಯಲ್ಲಿ ಬೆಳೆಯುವುದೇ ಇಲ್ಲ. ಕುರಿ

ಒಂಟೆ, ಕುದುರೆ ಇವುಗಳನ್ನು ಸಾಕುವುದು, ಕೆಲವು ವ್ಯಾಪಾರ ಮಾಡು

ವುದು, ಇದೇ ಇಲ್ಲಿನ ಜನರ ವೃತ್ತಿ. ಹೋಕೆಯನ್ನು ಅರಿಯಲೇ

ಅರಿಯರು. ಶಾಂತವಾಗಿದ್ದರೆ ದೇವತೆಗಳಿಗೆ ಸಮಾನರಾಗಿರುವರು.

ಕೋಪ ಬಂದರೆ ದೊಡ್ಡ ರಾಕ್ಷಸರಿಗಿಂತಲೂ ಕಡೆಯಾಗುವರು.


ನಾನು ಅಲ್ಲಿರುವಾಗ ನೆರೇ ರಾಜ್ಯದ ಒಬ್ಬ ರಾಯಭಾರಿಯು

ಅಲ್ಲಿಗೆ ಬಂದು ದೊರೆಯನ್ನು ಕಂಡನು. ತರುವಾಯ ತಮ್ಮ ದೊರೆಯ

ಐಶ್ವರ್ಯವನ್ನೂ ಡಂಭವನ್ನೂ ಅವನ ಚತುರಂಗಗಳನ್ನೂ ಅವನ

ಪರಾಕ್ರಮವನ್ನೂ ವಿಶೇಷವಾಗಿ ವಿವರಿಸಿ ಅಂಥಾ ದೊರೆಗೆ ಅಧೀನ 

ವಾಗಿದ್ದುಕೊಂಡು ಆತನ ಸಂರಕ್ಷಣೆಯನ್ನು ಪಡೆದು ಆತನಿಗೆ ಕಪ್ಪ

ವನ್ನು ಕೊಡುತಾ ಸುಖವಾಗಿರಬಹುದು ಎಂದು ವಿಸ್ತಾರವಾಗಿ ಅರಿಕೆ

ಮಾಡಿಕೊಂಡನು.


ಡಂಭ ಎಂಬುದನ್ನೆ ಅರಿಯದ ಅರಬ್ಬರ ದೊರೆಯು ತನ್ನ

ಡೇರೆಯ ಬಾಗಿಲಲ್ಲಿ ಕಾಲಮೇಲೆ ಕಾಲನ್ನು ಹಾಕಿಕೊಂಡು ಕೂತು

ಕೊಂಡಿದ್ದನು. ಆ ರಾಯಭಾರಿಯ ಮಾತನ್ನು ಕೇಳಿ ಆತನ ಪರಿವಾರ

ವೆಲ್ಲಾ ಕಿಡಿ ಕಿಡಿಯಾಯಿತು. ಆದರೆ ದೊರೆಯು ಕೋಪಗೊಳ್ಳದೆ.

ನಿಧಾನವಾಗಿ ಆ ರಾಯಭಾರಿಯನ್ನು ಕುರಿತು ಆಡಿದ ಮಾತಿನ ಸರಣಿ

ಹೇಗೆಂದರೆ ;__.


ಅಯ್ಯಾ, ವೃದ್ಧನಾಗಿಯೂ ವಿವೇಕಶಾಲಿಯಾಗಿಯೂ ಇರುವ

ನೀನು ಬೇರೆ ಕೆಲಸಕ್ಕಾಗಿ ನಮ್ಮಲ್ಲಿಗೆ ಬಂದಿದ್ದರೆ ನಿನ್ನ ಸಾಮರ್ಥ್ಯಕ್ಕೂ 

--------------------------------------

೨೪೬ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ 


ನಿಮ್ಮ ದೊರೆಯ ಐಶ್ಚರ್ಯಕ್ಕೂ ತಕ್ಕಂತೆ ಮರ್ಯಾದೆ ದೊರೆಯು

ತಿತ್ತು. ನಿಮ್ಮ ದೊರೆಯ ಹತ್ತಿರಿರುವ ಚಿನ್ನ ಬೆಳ್ಳಿ ಜವಾಹಿರು ನಮ್ಮ

ಲ್ಲಿಲ್ಲ. ಆದರೆ ಪರಾಕ್ರಮವೆಂಬ ಐಶ್ವರ್ಯ ಮಾತ್ರ ನಮ್ಮವರಲ್ಲಿದೆ.

ಅರಬ್ಬರಾದ ನಾವುಗಳು ಈ ದೇಶ ಹುಟ್ಟಿದಾಗಿನಿಂದ ಇದುವರೆಗೆ

ಯಾರಿಗೂ ಅಧೀನರಾಗಿರಲಿಲ್ಲ. ಮುಂದಕ್ಕೂ ಹೀಗೆಯೇ. ನಿಮ್ಮ

ರಾಜನಿಗೆ ಈ ವಿಷಯವನ್ನು ತಿಳಿಸಬೇಕು. ನಿನ್ನ ಮುಖಾಂತರ

ಅಂಬು ಬಿಲ್ಲನ್ನು ಹೊರತು ಮತ್ತೇನನ್ನೂ ನಸರಾಗಿ ಕಳುಹಿಸಲಾರೆವು.

ಒಂದು ಪಕ್ಷದಲ್ಲಿ ನಮ್ಮನ್ನು ನೀವು ಜಯಿಸಿದಾಗ್ಲೂ ಈ ದೇಶದಿಂದ

ನಿಮಗೆ ಪ್ರಯೋಜನವೇನೂ ಇಲ್ಲ. ನಮಗೆ ಶತ್ರುಗಳಾಗಿ ಬಂದವರು

ನಮ್ಮ ಅಂಬಿನ ಪೆಟ್ಟಿಗೆ ತಲೆಯನ್ನು ತಪ್ಪಿಸಿಕೊಂಡರೂ, ಏನೂ ಸಿಕ್ಚದ

ಈ ನಾಡಿನಲ್ಲಿ ಹಸಿವು ಬಾಯಾರಿಕೆಯಿಂದ ಪ್ರಾಣವನ್ನು ಬಿಡಬೇಕಾಗು

ವುದು. ಇದು ಖಂಡಿತವೆಂದು ನಿಮ್ಮ ಅರಸನಿಗೆ ಅರಿಕೆಮಾಡು,


ಇದಕ್ಕೆ ಮಲ್ಲನು-- ಈ ಜನದ ಬಾಳು ಎಂಥಾ ಉತ್ತಮವಾದದ್ದು !

ಯಾವ ವೀರನೂ ಇವರ ಮುಂದೆ ಹಾಯಲಾರ. ನಮ್ಮ ದುರ್ನಡ

ತೆಯೇ ನಮ್ಮನ್ನು ಮತ್ತೊಬ್ಬರಿಗೆ ಅಡಿಯಾಳಾಗಿ ಮಾಡುವುದೇ ಅಲ್ಲದೆ

ಮತ್ತೆ ಯಾವುದೂ ಅಲ್ಲ.


ಚಾರುದತ್ತ-- ಈ ಜನರ ವಿಷಯದಲ್ಲಿ ನಾನು ಪಟ್ಟ ಅಭಿಪ್ರಾ

ಯವೂ ನಿನ್ನ ಅಭಿಪ್ರಾಯವೂ ಒಂದೇ ಆಗಿದೆ. ನನ್ನ ತಿಳಿವಳಿಕೆ ಈ

ಭಾಗದಲ್ಲಿ ಸರಿಯಾದ್ದು ಹವುದೋ ಅಲ್ಲವೋ ತಿಳಿದುಕೊಳ್ಳೋಣವೆಂದೇ

ಆ ದೇಶದ ಸ್ಥಿತಿಯನ್ನು ಸ್ವಲ್ಪ ವಿವರಿಸಿ ಹೇಳಿದೆ. ದುರ್ನಡತೆಯು

ದೇಶಗಳನ್ನು ಹಾಳುಮಾಡಿದೆ. ಚಕ್ರಾಧೀಶ್ವರರನ್ನು ಸಿಂಹಾಸನದಿಂದ

ಉರುಳಿಸಿದೆ. ನಮ್ಮ ನಡತೆ ಒಳ್ಳೇದಾಗಿದ್ದರೆ ನಮ್ಮನ್ನು ಯಾರೂ

ಜಯಿಸಲಾರರು


ಇದುವರೆಗೂ ಈ ಕಥೆಯನ್ನು ಕೇಳುತಾ ಇದ್ದು ಸಾಕಾಗಿ ಕೊನೆಗೆ

ತಡೆಯಲಾರದೆ ಮದನನು ರಾಮಜೋಯಿಸನನ್ನು ಕುರಿತು,


ಮ--ಜೋಯಿಸರೆ, ನಾನು ಒಂದು ಸಂಗತಿಯನ್ನು ಕೇಳಬೇಕು. 


ಜೋ--ನಿನಗೆ ಮನಸ್ಸು ಬಂದದನ್ನು ಕೇಳು. 

-------------------------------------

೨೦] ಸುಮತಿ ಮದನ ಕುಮಾರರ ಚರಿತ್ರೆ ೨೪೭


ಮ- ಬಡವರು ಭಾಗ್ಯವಂತರಿಗಿಂತ ಗುಣಾಢ್ಯರಾಗಿಯ್ಕ ಧೈರ್ಯ

ಶಾಲಿಗಳಾಗಿಯೂ, ಉತ್ತಮರಾಗಿಯೂ ಇದಾರೆಂದು ಈ ಕಥೆಗಳಿಂದ

ತೋರಿಬರುವುದು.


ಜೋ-- ಒಂದೊಂದು ವೇಳೆ ಹೀಗಿರುವುದು ನಿಜ.


ಮ.--ಇತರ ಕಡೆಯಲ್ಲಿರುವ ಹಾಗೆಯೇ ಇಲ್ಲಿಯೂ ಯಾಕೆ ಇರ

ಬಾರದು? ಈ ದೇಶದಲ್ಲಿರತಕ್ಕ ಬಡವರೆಲ್ಲಾ ಭಾಗ್ಯವಂತರಿಗಿಂತಲೂ

ಉತ್ತಮರೊ?


ಜೋ--ನೀನು ಹೀಗೆ ತಿಳಿದುಕೊಂಡು ಇದ್ದೀಯೆ ಎಂದು ನಾನು

ಯೋಚಿಸುತೇನೆ. ಯಾಕೆಂದರೆ ಯಾವ ಕೆಲಸವಾಗಬೇಕಾದರೂ ನೀನು

ಬಡವರಿಗೆ ಹೇಳುತೀಯಲ್ಲದೆ ಭಾಗ್ಯವಂತರಿಗೆ ಹೇಳುವುದಿಲ್ಲ.


ಮ --ಹವುದು. ಆದರೆ ಈ ಸಂಗತಿ ಬೇರೆ. ಭಾಗ್ಯವಂತರಿಗೆ

ಮಾಡಿ ಅಭ್ಯಾಸವಿಲ್ಲದ ಅನೇಕ ಕೆಲಸಗಳನ್ನು ಬಡವರಿಗೆ ಮಾಡಿ

ಅಭ್ಯಾಸವುಂಟು.


ಜೋ--ಅಂಥಾ ಕೆಲಸಗಳು ಉಪಯುಕ್ತವಾಗಿವೆಯೆ ಇಲ್ಲವೆ?


ಮ- ಬಡವರು ಮಾಡುವ ಅನೇಕ ಕೆಲಸಗಳು ಉಪಯುಕ್ತ

ವಾದವುಗಳೇ ಸರಿ. ಅವರು ನೆಲವನ್ನು ಉಳುತಾರೆ ಬೆಳೆ ಬೆಳೆಯು

ತಾರೆ, ಕಬ್ಬಿಣ ಕೆಲಸವನ್ನು ಮಾಡುತಾರೆ, ಅಡಿಗೆ ಮಾಡುತಾರೆ ಬಟ್ಟೆ

ನೇಯುತಾರೆ, ಅದನ್ನು ಒಗೆಯುತಾರೆ, ದನ ಕಾಯುತಾರೆ, ಹಾಲಕರೆ

ಯುತಾರೆ, ಮುಖ್ಯವಾಗಿ ನಮ್ಮ ಸೌಖ್ಯಕ್ಕೆ ಬೇಕಾದ ಅನೇಕ ಕಾರ್ಯ

ಗಳನ್ನು ಮಾಡತಕ್ಕವರು ಅವರೇ.


ಜೋ.-- ಏನು, ಬಡವರು ಇದೆಲ್ಲವನ್ನೂ ಮಾಡುತಾರೆಯೆ?


ಮ-. ಹವುದು, ಅವರು ಮಾಡದಿದ್ದರೆ ಮತ್ತೆ ಯಾರು ಮಾಡು

ವವರು? ನೇಗಿಲ ಹಿಡಿದು ಉಳುವುದು, ಚಮ್ಮಟಗೆ ಹಿಡಿದು ಬಡಿಯು

ವುದೂ, ಮಣ್ಣತುಳಿದು ಗೋಡೆಹಾಕುವುದೂ, ಇದೆಲ್ಲಾ ಭಾಗ್ಯವಂತರಿಗೆ

ಮಾನವೊ?


ಜೋ.--ಕೆಲವು ದಿವಸಗಳ ಕೆಳಗೆ ನಮ್ಮ ತೋಟದಲ್ಲಿ ನೀನು

ಒಂದು ಗುಡಿಸಲನ್ನು ಕಟ್ಟಲಿಲ್ಲವೆ? 

------------------------------------

೨೪೮ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ. 


ಮ--ಅದೇನೋ ನಾನು ವಿನೋದಕ್ಕಾಗಿ ಕಟ್ಟಿದ್ದು. ಯಾರೂ

ಅಲ್ಲಿ ವಾಸವಾಗಿರಬೇಕೆಂದು ಕಟ್ಟಿದ್ದಲ್ಲ.


ಜೋ-ಉಪಯೋಗಕರವಾದ ಕೆಲಸಗಳನ್ನು ಮಾಡದೇ ಇರು

ವುದು ಭಾಗ್ಯವಂತರಿಗೆ ಒಂದು ಯೋಗ್ಯತೆಯೆಂದು ನೀನು ಇನ್ನೂ

ತಿಳಿದುಕೊಂಡಿದೀಯೆ.. ಹಾಗೆ ಯಾರಾದರೂ ಒಳ್ಳೇ ಕೆಲಸಗಳನ್ನು

ತಪ್ಪಿ ಮಾಡಿದರೆ ಅಂಥವನ ದೊಡ್ಡತನ ಹೋಗುವುದೆಂದು ಭಾವನೆಯೊ?


ಈ ಮಾತನ್ನು ನೇಳಿ ಮದನನಿಗೆ ನಾಚಿಕೆ ಹುಟ್ಟಿತು. ಇದು

ತನ್ನ ಅಭಿಪ್ರಾಯವಲ್ಲ ತಮ್ಮ ತಾಯಿ ಮೊದಲಾದ ರಾಣಿವಾಸದ

ವರ ಅಭಿಪ್ರಾಯವೆಂದು ಮದನ ಹೇಳಿದ.


ಜೋ--ಉತ್ತಮರು ಯಾರು, ಬಡವರೆ ಭಾಗ್ಯವಂತರೆ? ಎಂದು

ನೀನು ಈಗತಾನೆ ಪ್ರಶ್ನೆ ಮಾಡಿದೆಯಲ್ಲ. ಉಳುವುದು, ಬಿತ್ತುವುದು,

ನೆಯ್ಯುವುದು, ಮನೆ ಕಟ್ಟುವುದು ಇಂಥಾದ್ದನ್ನೆಲ್ಲಾ ಬಡವರು ತಮ

ಗೋಸ್ಕರ ಮಾಡಿಕೊಳ್ಳುವುದೇ ಅಲ್ಲದೆ ಭಾಗ್ಯವಂತರಿಗೋಸ್ಕರವೂ

ಮಾಡುತಾರೆ.  ಆದ್ದರಿಂದ ಭಾಗ್ಯವಂತರು ಯಾವ ಕೆಲಸವನ್ನೂ

ಮಾಡದೆ ಸುಮ್ಮನೆ ಕೂತಿದ್ದಮೇಲೆ, ಭಾಗ್ಯವಂತರಿಗಿಂತಲೂ ಬಡವರೇ

ಉತ್ತಮರೆಂದು ಸ್ಪಷ್ಟವಾಗುವುದು.


ಮ-- ಹವುದು. ಆದರೆ ಬಡವರು ಹಾಗೆ ಮಾಡುವುದು.

ಲೋಕೋಪಕಾರಕ್ಕಾಗಿ ಅಲ್ಲ, ಅವರು ಅದರಿಂದ ಜೀವನ ಮಾಡಿ

ಕೊಳ್ಳು ತಾರೆ.


ಜೋ--ಹಾಗಾದರೆ ಹೇಳು, ನಿನಗೆ ಎಂಥವರು ಇದ್ದರೆ ಉತ್ತಮ;

ಜೀವನೋಸಾಯಕ್ಕಾದರೂ ಸರಿಯೆ, ಉುಪಯೋಗಕರವಾದ ಕೆಲಸವನ್ನು

ಮಾಡತಕ್ಕ ಬಡ ಜನರೆ ಅಥವಾ ಎಂದಿಗೂ ಉಪಯುಕ್ತವಾದ ಯಾವ

ಕೆಲಸವನ್ನೂ ಮಾಡದ ಐಶ್ವರ್ಯವಂತರೆ?


ಮ--ನಾನು ತಮ್ಮನ್ನು ಈ ವಿಷಯದಲ್ಲಿ ಪ್ರಶ್ನೆ ಮಾಡಿದಾಗ

ಐಶ್ಚರ್ಯವಂತರು ಉಪಯುಕ್ತವಾದ ಕೆಲಸವನ್ನೇ ಮಾಡಬೇಕೆಂದು

ನನ್ನ ತಾತ್ಪರ್ಯವಲ್ಲ. ಆಗ ನನಗೆ ತೋರದೆ ಹೋಯಿತು, ಈಗ.

ಹೇಳುತೇನೆ ಕೇಳಬೇಕು. ಐಶ್ವರ್ಯವಂತರು ಬಡವರಿಂದ ಸಾಮಾನು 

--------------------------------------

೨೦] ಸುಮತಿ ಮದನ ಕುಮಾರರ ಚರಿತ್ರೆ ೨೪೯ 


ಗಳನ್ನು ಕೊಂಡುಕೊಳ್ಳುವುದರಿಂದ ಅವರಿಗೆ ಹಣವನ್ನು ಕೊಟ್ಟು

ಎಷ್ಟೋ ಉಪಕಾರವನ್ನು ಮಾಡುತಾರೆ


ಜೋಯಿಸ-- ಹಣವೆಂದರೇನು?


ಮದನ-- ಒಂದು ತಲೆ ಅಥವಾ ಮತ್ತೆ ಯಾವುದಾದರೂ ಒಂದು

ಗುರುತು ಉಳ್ಳ ಚಿನ್ನದ ಮತ್ತು ಬೆಳ್ಳಿಯ ತುಂಡುಗಳು ಅಥವಾ

ಬಿಲ್ಲೆಗಳು. 


ಜೋಯಿಸ-- ಅಂಥಾ ಚಿನ್ನ ಬೆಳ್ಳೀ ತುಂಡುಗಳಿಂದ ಉಪಯೋಗ

ವೇನು?


ಮದನ--ನಾವು ಹಣವನ್ನು ಕೊಟ್ಟರೆ ಎಲ್ಲರೂ ತೆಗೆದುಕೊಳ್ಳು

ತಾರೆ ; ಅದಕ್ಕೆ ಬದಲಾಗಿ ನಮಗೆ ಬೇಕಾದ ಸಾಮಾನುಗಳನ್ನು

ಕೊಡುತಾರೆ.


ಜೋಯಿಸ--ಈ ಹಣದ ಬಿಲ್ಲೆ ಗಳಿಂದಲೇ ನಿಜವಾದ ಪ್ರಯೋಜನ

ಯಾವುದೂ ಇಲ್ಲ; ಇಂಥಾ ಬಿಲ್ಲೆಗಳನ್ನು ಬಡವರಿಗೆ ಐರಶ್ವರ್ಯವಂತರು

ಕೊಟ್ಟು ಅವರಿಂದ ಮನೆ ಬಾಗಿಲು. ಬಟ್ಟೆ ಬರೆಗಳು, ತಿಂಡೀಸಾಮಾನು

ಗಳು,  ಮೊದಲಾದ್ದನ್ನು ತೆಗೆದುಕೊಂಡು ತನ್ಮೂಲಕ ಬಡವರಿಗೆ

ಉಪಕಾರವನ್ನು ಮಾಡುತಾರೆ ಎಂದಹಾಗಾಯಿತಷ್ಪೆ?


ಮದನ.--ಈ ಬಿಲ್ಲೆಗಳು ಪ್ರಯೋಜನಕ್ಕೆ ಬಾರದವುಗಳೆಂದು

ಹೇಳಕೂಡದು. ಬಡವರು ಇವುಗಳನ್ನು ಕೊಟ್ಟು ತಮಗೆ ಬೇಕಾದ

ಸಾಮಾನುಗಳನ್ನು ಕೊಂಡುಕೊಳ್ಳ ಬಹುದು.


ಜೋಯಿಸ- ಬಡವರ ಹತ್ತಿರ ಹಣವಿದ್ದರೆ ತಮಗೆ ಬೇಕಾದ್ದನ್ನು

ಕೊಂಡುಕೊಳ್ಳ ಬಹುದು ಎಂತಲೊ?


ಮದನ-- ಹವುದು.


ಜೋಯಿಸ. ಹಾಗಾದರೆ ಬಡವರು ಅಂಥಾ ಉಪಯುಕ್ತವಾದ

ಸಾಮಾನುಗಳನ್ನು ಯಾರಿಂದ ಕೊಂಡುಕೊಳ್ಳಬೇಕು? ಐಶ್ವರ್ಯ

ವಂತರು ಇಂಥಾ ಸಾಮಾನುಗಳು ಯಾವುದನ್ನೂ ಮಾಡುವುದಿಲ್ಲ.

ನೀನು ಮೊದಲೇ ಹೇಳಿದ್ದೀಯೆ; ಆದಕಾರಣ ಬಡವರು ತಮ್ಮ

ತಮ್ಮಲ್ಲೇ ಒಬ್ಬರಿಂದೊಬ್ಬರು ಕೊಂಡುಕೊಳ್ಳ ಬೇಕಾಯಿತು.

-----------------------------------

೨೫೦ ಸುಮತಿ ಮವನಕುಮಾನರ ಚರಿತ್ರೆ [ಅಧ್ಯಾಯ 


ಮದನ--ಹಾಗೆ ಹೇಳುವುದಕ್ಕಾಗುವುದಿಲ್ಲ. ಯಾಕೆಂದರೆ ಬಹಳ

ಐಶ್ಚರ್ಯವಂತರಾದವರು ಬೇಕಾದ ಒಡವೆಗಳನ್ನು ಇಟ್ಟುಕೊಂಡು

ಉತ್ತಮವಾದ ಬಟ್ಟೆಗಳನ್ನ್ನಿಟ್ಟು ಅಂಗಡಿಗಳಲ್ಲಿ ಸಾಮಾನುಗಳನ್ನು

ಮಾರುತ್ತಾ ಇರುವುದಿಲ್ಲವೆ? 


ಜೋಯಿಸ.--ಆ ಸಾಮಾನುಗಳನ್ನೆಲ್ಲಾ ಅವರು ಮಾಡುವುದಿಲ್ಲ.

ಇತರ ಬಡಜನರಿಂದ ಅವುಗಳನ್ನು ತಯಾರ್ಮಾಡಿಸಿ ಆ ಸಾಮಾನು

ಗಳನ್ನು ಅಂಗಡಿಯಲ್ಲಿಟ್ಟು ಮಾರುತಾರೆ. ಹೇಗೆ ಯೋಚಿಸಿದಾಗ್ಲೂ

ಐಶ್ವರ್ಯವಂತರು ಉಪಯೋಗವಾದ ಯಾವ ಕೆಲಸವನ್ನೂ ಮಾಡುವು

ದಿಲ್ಲ, ಬಡವರು ನಿಜವಾಗಿ ಪ್ರಯೋಜನಕ್ಕೆ ಬರತಕ್ಕ ಸಾಮಾನುಗಳ

ನ್ನೆಲ್ಲಾ ಮಾಡುತಾರೆ, ಎನ್ನುವ ಮಾತು ಖಂಡಿತವಾಯಿತು. ಒಂದು

ಊರಿನಲ್ಲಿ ಬರೀ ಐಶ್ವರ್ಯವಂತರೇ ಇದ್ದರೆ, ಅವರು ಯಾವ ಕೆಲಸ

ವನ್ನೂ ಮಾಡುವುದಿಲ್ಲವಾದ್ದರಿಂದ ಅವರೆಲ್ಲಾ ಹೊಟ್ಟೆಗಿಲ್ಲದೆ ಸಾಯ

ಬೇಕಾಗುವುದು, ಅವರಲ್ಲಿ ಎಷ್ಟು ಹಣವಿದ್ದಾಗ್ಗೂ ಉಪಯೋಗವಿಲ್ಲ.

ಒಂದು ಊರಿನಲ್ಲಿ ಬರೀ ಬಡವರೇ ಇದ್ದರೆ, ಅವರೆಲ್ಲಾ ಒಂದೊಂದು

ಉದ್ಯೋಗವನ್ನು ಅನುಸರಿಸಿಕೊಂಡು ಯಾವಾಗಲೂ ಕೆಲಸ ಮಾಡು

ವುದರಿಂದ ಜನಕ್ಕೆ ಬೇಕಾದ ಸಾಮಾನುಗಳನ್ನೆಲ್ಲಾ ಅವರೇ ಮಾಡಿ

ಕೊಳ್ಳುತಾರೆ; ಅವರಲ್ಲಿ ಹಣವಿಲ್ಲದಿದ್ದಾಗ್ಗೂ ಅವರು ಹಿಟ್ಟು ಬಟ್ಟೆಗಿಲ್ಲದೆ

ಸಾಯುವುದಿಲ್ಲ. ಆದರೆ ಈ ದಿನ ಹೊತ್ತಾಯಿತು. ಈ ಮಾತು ಇಲ್ಲಿಗೆ

ಸಾಕು. ಲಲಿತೆಯು ನಿಂತ ಕಥೆಯನ್ನು ನಾಳೆ ಹೇಳಲಿ... ಹೀಗೆಂದು

ಎಲ್ಲರೂ ತಮ್ಮ ಕೆಲಸಕ್ಕೆ ಹೊರಟು ಹೋದರು. 

...

೨೧ ನೆ ಅಧ್ಯಾಯ 

ಆ ಮಾರನೆ ದಿನ ಬೆಳಗ್ಗೆ ಮದನನು ಹಾಸಿಗೆಯಿಂದ ಎದ್ದ

ತರುವಾಯ, ಮುನ್ನಾದಿನ ಚಾರುದತ್ತನ ಕಥೆಯಲ್ಲಿ ಅರಬ್ಬರು ಕುದುರೆ

ಸವಾರಿಮಾಡುವ ಸಂಗತಿಯನ್ನು ಕೇಳಿದ್ದನಾದಕಾರಣ, ಹಾಗೆಯೇ

ತಾನೂ ಸವಾರಿಮಾಡಬೇಕೆಂದು ಯೋಚಿಸಿ ಅದರ ಮೇಲೆ ಹತ್ತಿಕೊಂಡು 

--------------------------------------

[೨೧ ಸುಮತಿ ಮದನಕುಮಾರರ ಚರಿತ್ರೆ ೨೫೧ 


ಹೊರಟನು. ಅದನ್ನು ವಿಶೇಷವಾಗಿ ಚಮಕಾಯಿಸಲು ಕುದುರೆಯು

ಅತಿ ನೇಗವಾಗಿ ಓಡಿ ಹೋಯಿತು. ದಾರಿಯಲ್ಲಿ ಒಂದು ಕಳ್ಳ ಬದಿಯ

ಜೋರೆ ಸಿಕ್ಕಿತು. ಕುದುರೆಯು ಕಾಣದೆ ಅದರೊಳಕ್ಕೆ ಕಾಲನ್ನು

ಇಡಲು, ಕಾಲು ಹೂತುಕೊಂಡಿತು. ಮೇಲಕ್ಕೆ ಎತ್ತುವುದಕ್ಕೆ ಆಗ

ಲಿಲ್ಲ... ಕೂಡಲೆ ದೊರೆಮಗನು ಸ್ವಲ್ಪ ಜಾಗರೂಕನಾಗಿ ಕುದುರೆಯ

ಒಂದು ಪಕ್ಕಕ್ಕೆ ಸರಿದುಕೊಂಡನು. ಆದರೆ ಇವನ ಮೈಯೆಲ್ಲಾ ಬದಿ 

ಯಾಯಿತು. ಆಗ ಅರಸುಮಗನು ಕೆಟ್ಟ ಮುಖವನ್ನು ಹಾಕಿಕೊಂಡು

ಕಾಲುನಡಗೆಯಲ್ಲಿಯೇ ಮುಂದಕ್ಕೆ ಹೊರಟನು. ದಾರಿಯಲ್ಲಿ ಒಬ್ಬ

ಭಿಕ್ಷದವನು ತನ್ನ ೪-೬ ವರುಷದ ೨ ಗಂಡು ಹುಡುಗರನ್ನು ಸಂಗಡ

ನಡಸಿಕೊಂಡು ೬ ತಿಂಗಳ ಮಗು ಒಂದನ್ನು ಹೆಗಲ ವೇಲೆ ಮಲಗಿಸಿ

ಕೊಂಡು ಬರುತಿದ್ದನು. ತಾನು ಒಂದು ಲಂಗೋಟಿಯನ್ನು ಹಾಕಿ

ದ್ದನು. ಸಂಗಡ ಬರುತಿದ್ದ ಹುಡುಗರಿಬ್ಬರೂ ಬರೀಮೈಲಿದ್ದರು. ಚಿಂದಿ

ಚಿಂದಿಯಾದ ಒಂದು ಮೊಳದ ತುಂಡನ್ನು ಮಾತ್ರ ಆ ಕೈಮಗುವಿಗೆ

ಹೊದ್ದಿಸಿಕೊಂಡಿದ್ದನು. ಇಂಥಾ ಭಿಕ್ಷದವನು ದೊರೆ ಮಗನ ಮುಂದೆ

ನಿಂತು ಸ್ವಾಮಿ, ತಮ್ಮ ಮುಖ ಲಕ್ಷಣವನ್ನು ನೋಡಿದರೆ ಪುಣ್ಯವಂತರ

ಹಾಗೆ ಕಾಣುತೀರಿ, ಮೈಯೆಲ್ಲಾ ವಿಶೇಷ ಕೊಚ್ಚೆಯಾಗಿದೆ. ಇದೇನು

ಕಾರಣ? ಎಂದು ಕೇಳಿ ತನ್ನ ಬಡತನವನ್ನು ತಿಳಿಸಿ,  ಮಕ್ಕಳೆಲ್ಲರೂ

ಹೊಟ್ಟಿಗೆ ತಿಂದು ೨ ದಿವಸವಾಯಿತು, ಕೈಮಗುವು ಚಳಿ ಜ್ವರ ಬಂದು 

ನಡುಗುತಿದೆ, ಸ್ವಾಮಿ ತಮ್ಮಿಂದ ಪ್ರಾಣ ಉಳಿಯಬೇಕು, ಎಂದು

ಅತ್ಯಂತ ದೈನ್ಯದಿಂದ ಹೇಳಿಕೊಂಡನು. ಇನನ ಮಾತನ್ನೆಲ್ಲಾ ಕೇಳಿ

ಇವನ ಸ್ಥಿತಿಯನ್ನು ನೋಡಿ ಮದನಿಗೆ ಮರುಕಹುಟ್ಟಿತು. ಕೂಡಲೆ

ಉದಾರ ಮನಸ್ಸುಳ್ಳ ರಾಜಕುಮಾರನು ತನ್ನ ಹತ್ತಿರಿದ್ದ ಒಂದು

ಹಣವನ್ನು ಅವನಿಗೆ ಕೊಟ್ಟನು. ಆಗ ಆ ದರಿದ್ರನು ಮದನನನ್ನು

ಹರಸಿ ಮುಂದಕ್ಕೆ ಹೊರಟನು. ಅಷ್ಟರಲ್ಲಿಯೇ ರಾಜಪುತ್ರನು

ಮುಂದಕ್ಕೆ ಹತ್ತು ಮಾರು ನಡೆಯಲು ಅಲ್ಲಿ ಒಂದು ಕುರಿಮಂದೆ

ಸಿಕ್ಕಿತು. ಅದರಲ್ಲಿದ್ದ ಒಂದು ಆಡನ್ನು ಸೀಳುನಾಯಿಯೊಂದು ಹೆರಿಸಿ

ಕೊಂಡು ಹೋಗಿ ಅದನ್ನು ಗಾಯಮಾಡಿ ಕೊಲ್ಲುವುದಾಗಿತ್ತು. ಇಂಥಾ 

-------------------------------------

೨೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಘೋರಕೃತ್ಯವನ್ನು ಯಾವಾಗಲೂ ಸಹಿಸಲಾರದ ಮದನನು ಇದನ್ನು

ಕಂಡು ನಾಯಿಯನ್ನು ಹೊಡೆಯುವದಕ್ಕೆ ಹೋಗಲು, ಅದು ಆಡನ್ನು

ಬಿಟ್ಟು ಬೊಗಳುತಾ ಇವನ ಮುಂದೆ ಬಂದು ನಿಂತುಕೊಂಡಿತು.

ಹುಡುಗನಾದ್ದರಿಂದ ಇವನಿಗೆ ಭಯಪಡದೆ ಶ್ವಾನವು ಇವನ ಬಟ್ಟೆ

ಯನ್ನು ಕಚ್ಚಿ ಹರಿದು ಮೇಲೆಬಿದ್ದು ಮೈಯನ್ನು ಪರಚುತಿತ್ತು,

ಇನ್ನೊಂದು ಅಡಿಕೇ ಕಡಿಯುವ ಹೊತ್ತಿನಲ್ಲಿ ಆ ಕೆಟ್ಟ ನಾಯಿಯು

ಹುಡುಗನ ಮೈಯನ್ನೆಲ್ಲಾ ಕಚ್ಚಿ ಪ್ರಾಣವನ್ನೇ ಕಳೆಯುತಿತ್ತು. ಅಷ್ಟ

ರಲ್ಷಿಯೇ ಆಗತಾನೆ ಮದನಿಂದ ಭಿಕ್ಷೆಯನ್ನು  ಈಸುಕೊಂಡು ಮಕ್ಕ

ಳನ್ನೂ ಕರೆದುಕೊಂಡು ಅತ್ತ ಹೋಗುತಿದ್ದ ತಿರುಕೆಯವನು ನಾಯಿಯ

ಕೆಟ್ಟತನವನ್ನು ದೂರದಿಂದಲೇ ಹಿಂತಿರುಗಿ ನೋಡಿ ತನ್ನ ಕೈಮಗುವನ್ನು

ಸಂಗಡ ಬರುತಿದ್ದ ೬ ವರುಷದ ಹುಡುಗನಾದ ತನ್ನ ದೊಡ್ಡ ಮಗನ

ಕೈಗೆ ಕೊಟ್ಟು ಓಡಿಬಂದು ಹತ್ತಿರಿದ್ದ ಒಂದು ದೊಣ್ಣೆಯಿಂದ ಆ ಶ್ವಾನ

ವನ್ನು ಚೆನ್ನಾಗಿ ಹೊಡೆದು ಹಿಂತಿರುಗಿ ಬರದಂತೆ ಆಚೆಗೆ ಅಟ್ಟಿದನು,

ಆಮೇಲೆ ಮದನನು ಮುಂದಕ್ಕೆ ಹೊರಡಲು, ಅವನ ಎದುರಿಗೆ ರಾಮ

ಜೋಯಿಸನು ಸ್ನಾನವನ್ನು ಮಾಡಿಕೊಂಡು ಒದ್ದೇ ಬಟ್ಟೆಯ ಹಿಂಡಿಕೆ

ಯನ್ನು ಕಟ್ಟಿ ತಲೇ ಮೇಲೆ ಇರಿಸಿಕೊಂಡು ಒಂದು ಕೈಯಲ್ಲಿ ಹುವ್ವಿನ

ಬುಟ್ಟಿಯನ್ನೂ ಇನ್ನೊಂದು ಕೈಯಲ್ಲಿ ಪಂಚಪಾತ್ರೆಯನ್ನೂ ಹಿಡಿದು

ಮಂತ್ರವನ್ನು ಹೇಳುತಾ ಬರುತಿದ್ದನು. ಆತನನ್ನು ಕಂಡಕೂಡಲೆ,

ಮದನನು ಏನೋ ಮಹಾಕಾರ್ಯನಿರ್ವಾಹ ಮಾಡಿದವನಂತೆ ಜಾಗ್ರತೆ

ಯಾಗಿ ಉಪಾಧ್ಯಾಯನ ಹತ್ತಿರಕ್ಕೆ ಓಡಿಹೋಗಿ, ಇವನ ಮೈಯೆಲ್ಲಾ

ಮಣ್ಣಾಗಿರುವುದನ್ನು ಕಂಡು ಆತ ಇಥೇನೆಂದು ಇವನನ್ನು ಪ್ರಶ್ನೆ

ಮಾಡುವುದಕ್ಕೆ ಮುಂಚಿತವಾಗಿಯೇ-- ಜೋಯಿಸರೆ, ಒಂದು ಕೆಟ್ಟ

ಸೀಳುನಾಯಿ ನಮ್ಮ ಸುಮತಿಯ ಮೇಕೆಯನ್ನು ಕೊಂದುಹಾಕುತಿತ್ತು.

ನಾನು ಅಷ್ಟರಲ್ಲಿಯೇ ಓಡಿಹೋಗಿ ಅದನ್ನು ಹೆದರಿಸಿ ಬಿಡಿಸದಿದ್ದರೆ

ಮೇಕೆಬೇರೆ ಉಳಿಯುತಿರಲಿಲ್ಲ ಎಂದನು. ಜೋಯಿಸನ ಸಂಗಡಲೇ

ಪಾದಚಾರಿಯಾಗಿ ಬರುತಿದ್ದ ಆ ದೊರೆಯು ಎರಡು ಮಾರು ದೂರದಲ್ಲಿ

ಬರುತಿದ್ದ ಗೋಪಾಳದನನನ್ನು ನೋಡಿ--ಇವ ಯಾರು? ನೋಡಿದರೆ 

----------------------------------

೨೧] ಸುಮತಿ ಮದನಕುಮಾರರ ಚರಿತ್ರೆ      ೨೫೩

ಜೀವಶವವಾಗಿದಾನೆ. ಅವನ ಮಕ್ಕಳು ಅವನಿಗಿಂತಲೂ ಕೇಡಾಗಿವೆ.

ಕಾಲನ್ನು ಎತ್ತಿ ಇರಿಸಲಾರವು, ಎಂದನು.


ಮದನ--ಅಪ್ಪಾಜಿ, ನಾಯಿಯನ್ನು ನಾನು ಹೊಡೆಯುವುದಕ್ಕೆ

ಹೋದಾಗ ಅದು ನನ್ನ ಮೇಲೆ ಬಿದ್ದು ನನ್ನನ್ನು ಕೊಂದುಹಾಕುತಿತ್ತು.

ಈತನು ನಾಯಿಯನ್ನು ಹೊಡೆದು ಓಡಿಸಿ ನನ್ನನ್ನು ಉಳಿಸಿದನು.

ಆದ್ದರಿಂದ ೨ ದಿವಸದಿಂದ ಅನ್ನಕ್ಕೆ ಗತಿಯಿಲ್ಲದೆ ಉಪವಾಸವಾಗಿರುವ

ಈ ಬಡವನನನ್ನೂ ಇವನ ಮಕ್ಕಳನ್ನೂ ಕರೆದುಕೊಂಡು ಹೋಗಿ

ನಮ್ಮ ಅರಮನೆಯಲ್ಲಿ ಒಂದು ದಿನ ಹೊಟ್ಟೆ ತುಂಬಾ ಅನ್ನವನ್ನು ಹಾಕಿ

ಕಳುಹಿಸೋಣವೆಂದು ಇದ್ದೆ. ಇವನ ಎಳೇಮಗುವಿಗೆ ಚಳಿಬಂದು

ನಡುಗುತಿದೆ. ಈಚೆಗೆ ನನ್ನ ನಡತೆ ಸರಿಯಾಗಿಲ್ಲ. ನನ್ನ ತಪ್ಪನ್ನೆಲಾ

ಮರೆತು ಈ ಬಡವನಿಗೂ ಅವನ ಮಕ್ಕಳಿಗೂ ಒಂದು ದಿನ ಅನ್ನ

ಹಾಕುವಂತೆ ಅಪ್ಪಣೆ ಮಾಡಬೇಕು ಅಪ್ಪಾಜಿ.


ಇಷ್ಟರಲ್ಲಿಯೇ ಮದನನ ಕುದುರೇ ಆಳು ಓಡಿಬಂದು ಬದಿಯಲ್ಲಿ

ಸಿಕ್ಕಿಕೊಂಡಿದ್ದ ಕುದುರೆಯನ್ನು ಈಚೆಗೆ ತೆಗೆದು ಅದನ್ನು ಹಿಡಿದು

ಕೊಂಡು ಇವರೆಲ್ಲಾ ಮಾತನಾಡುತಾ ನಿಂತಿದ್ದೆಡೆಗೆ ಬಂದನು. ಆ

ದೊರೆಯು ಅವನನ್ನು ಕಂಡು ಇದೇನೆಂದು ಕೇಳಲು, ಆಳು ಅರಸ

ನನ್ನು ಕುರಿತು. ಪರಾಕು ಸ್ವಾಮಿ, ಚಿಕ್ಕ ಬುದ್ದಿಯವರ ಅಪ್ಪಣೇ

ಪ್ರಕಾರ ನಾನು ಕುದುರೆಯನ್ನು ಸವಾರಿಗೆ ಸಜ್ಜುಮಾಡಿದೆ.  ಅವರು

ಅದರ ಮೇಲೆ ಕೂತುಕೊಂಡು ಹೋಗುತಾ ಅರಬ್ಬರು ಸವಾರಿಮಾಡ 

ತಕ್ಕ ತರಹನನ್ನೆಲ್ಲಾ ಹೇಳುತಾ ಬರುತಿದ್ದರು. ಅಷ್ಟರಲ್ಲಿಯೇ.

ಕುದುರೆಯು ಹತೋಟತಪ್ಪಿ ಓಡುವುದಕ್ಕೆ ಮೊದಲುಮಾಡಿತು. ಮದನ

ಸುಮಾರರು ಯಾವ ಕಡೆಗೆ ಹೋದರೊ ಅದು ನನ್ನ ಕಣ್ಣಿಗೆ ಕಾಣಿಸಲೇ

ಇಲ್ಲ. ತರುವಾಯ ಕುದುರೆಯು ಸಿಕ್ಕಿತು. ಅದರ ಮೈಯೆಲ್ಲಾ

ಕೊಚ್ಚೆಯಾಗಿತ್ತು, ಹೀಗೆಂದು ಸಂಗತಿಯನ್ನೆಲ್ಲಾ ಅರಿಕೆ ಮಾಡಿದನು.

ಇದನ್ನು ಕೇಳಿ ದೊರೆಯು-- ಈ ಕುದುರೆಯು ಯಾವಾಗಲೂ ಸಾದು

ವಾಗಿಯೇ ಇರುವುದು. ಆದರೂ ಈ ಸಮಯದಲ್ಲಿ ಇಷ್ಟು ಆಭಾಸಕ್ಕೆ

ಕಾರಣವೇನೋ ಗೊತ್ತಾಗಲಿಲ್ಲ, ಎಂದು ಹೇಳಿ, ಮದನನ ಕೈಲಿದ್ದ 

---------------------------------------

೨೫೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಚಾವಟಯನ್ನೂ ಅವನ ಕಾಲಿನಲ್ಲಿದ್ದ ಮಮರೇಜನ್ನೂ ಕಂಡು, ಈ

ಆಯುಧಗಳ ತಂಟೆಯಿಂದ ಕುದುರೆಯು ಹತೋಟತಪ್ಪಿರಬೇಕೆಂದು

ತಿಳಿದುಕೊಂಡನು. ಮದನನ ಅವಿವೇಕಕ್ಕೆ ಸ್ಪಲ್ಪ ಕೋಪಬಂತು.

ಆದರೆ ಅದನ್ನು ತೋರ್ಪಡಿಸದೆ, ಮದನ ಮಾಡಿದ ಅವಿವೇಕವನ್ನೂ

ಅದರಿಂದ ಉಂಟಾಗುತಿದ್ದ ಅಪಾಯವನ್ನೂ ಮಗನಿಗೆ ತಿಳಿಸಿ, 

ಮುಂದಕ್ಕೆ ಹಾಗೆ ಮಾಡಬಾರದೆಂದು ಬುದ್ಧಿ ಹೇಳಿ, ಎಲ್ಲರನ್ನೂ

ಕರೆದುಕೊಂಡು ಮನೆಗೆ ಬಂದು, ಸಂಗಡ ಬಂದಿದ್ದ ಬಡವನಿಗೂ ಅವನ

ಮಕ್ಕಳಿಗೂ ಹೊಟ್ಟೆ ತುಂಬಾ ಊಟವನ್ನು ಮಾಡಿಸುವಂತೆ ಅಪ್ಪಣೆ

ಮಾಡಿದನು. ಅವರೆಲ್ಲರೂ ತೃಪ್ತಿಯಾಗಿ ಭೋಜನಮಾಡಿ ದೊರೆಯ

ಎದುರಿಗೆ ಬಂದು ನಿಂತರು. ಈ ಉಪಕಾರಕ್ಕಾಗಿ ಕೃತಜ್ಞತೆಯು

ಅವರ ಮುಖಭಾವದಲ್ಲಿ ತೋರುತಿತ್ತು. ಅರಸನು ಅವರ ಮಾತಿನಿಂದ ಆ

ಬಡವನು ಗಟ್ಟದ ಸೀಮೆಯವನಾಗಿರಬೇಕೆಂದು ಯೋಚಿಸಿ, ಆ ಮಕ್ಕ

ಳಿಗೂ ಅವನಿಗೂ ಅಂಥಾ ಕಷ್ಟ ಯಾಕೆ ಪ್ರಾಪ್ತವಾಯಿತೆಂದು ವಿಚಾ

ರಿಸಿದರು. ಅದಕ್ಕೆ ಅವ ಹೇಳಿದ್ದು ಏನೆಂದರೆ :--


ಗಟ್ಟದ ಸೀಮೆಯವನ ಕಥೆ.


ಮಹಾಸ್ವಾಮಿ, ತಾವು ಈ ದಿನ ನನ್ನ ಪ್ರಾಣವನ್ನೇ ಉಳಿಸಿದಿರಿ

ಇದನ್ನು ನಾನು ಎಂದೆಂದಿಗೂ ಮರೆಯಲಾರೆ. ನನ್ನ ಕಥೆಯನ್ನು

ತಮಗಲ್ಲದೆ ಮತ್ತೆ ಯಾರಿಗೆ ಹೇಳಬೇಕು? ನಾನು ಗಟ್ಟದ ಸೀಮೆಯ

ವನು. ನಮ್ಮ ದೇಶದಲ್ಲಿ ಎಲ್ಲಿ ನೋಡಿದಾಗ್ಲೂ ಕಲ್ಲುಗುಡ್ಡಗಳು

ಬಂಡೆಗಳು ಇವೆ. ರಾಜ್ಯ ಅಷ್ಟು ಸುಭಿಕ್ಷನಾದ್ದಲ್ಲ. ಕಂಬು ಹುರಳಿ

ಇವು ಹೊರತು ಮತ್ತೆ ಯಾವ ಧಾನ್ಯವೂ ಹೆಚ್ಚಾಗಿ ಬೆಳೆಯುವುದಿಲ್ಲ.

ಎಷ್ಟು ಕಷ್ಟಪಟ್ಟು ಗೈಮೆ ಮಾಡಿದರೂ ಬೆಳೆ ಸ್ವಲ್ಪ. ಚಳಿ ಹೆಚ್ಚು.

ಜನಬಡ. ಹೆಚ್ಚಾದ ಕಷ್ಟಕ್ಕೆ ಇವರ ದೇಹ ನುರುಗಿದೆ. ನಮ

ದೇಶದ ಜನರಿಗೆ ತಂದೆತಾಯಿಗಳಲ್ಲಿಯೂ ಹಿರಿಯರು ಗುರುಗಳಲ್ಲಿಯೂ

ಭಕ್ತಿಯೂ ಪ್ರೀತಿಯೂ ಅಧಿಕ. ತಮ್ಮ ದೇಶದ ಮೇಲೆ ವಿಶೇಷವಾದ

ಅಭಿಮಾನವುಂಟು, ಆ ದೇಶದ ಒಂದು ಗ್ರಾಮದಲ್ಲಿ ನಮ್ಮದೊಂದು.

ಮೊಟ್ಟೆ ಮನೆ ಇದೆ. ನಮ್ಮ ತಂದೆತಾಯಿಗಳು ಆ ಊರಲ್ಲಿದಾರೆ. 

------------------------------------

೨೧] ಸುಮತಿ ಮದನಕುಮಾರರ ಚರಿತ್ರೆ                 ೨೫೫ 


ಅವರ ಸಂಸಾರ ಬಹು ದೊಡ್ಡದು, ನಾವು ಬಹು ಬಡವರು. ನಮ್ಮ

ತಂದೆಯು ಸೇನೆಯಲ್ಲಿ ಸೇರಿ ೪ ವರುಷ ಚಾಕರಿ ಮಾಡಿದವನು.

ಆತನ ಹಾಗೆಯೇ ನಾನೂ ದಂಡಿನಲ್ಲಿ ಚಾಕರಿಯನ್ನು ಮಾಡಬೇಕೆಂದು

ವಿಶೇಷವಾಗಿ ಆಶೆಯಿತ್ತು. ನಾನು ಒಬ್ಬನೇ ಮಗನಾದ್ದರಿಂದ

ನನ್ನನ್ನು ಕಳುಹಿಸುವುದಕ್ಕೆ ಆತನಿಗೆ ಇಷ್ಟವಿರಲಿಲ್ಲ.


ಒಂದು ದಿನ ರಾತ್ರೆ ಮುಪ್ಪಿನ ಮುದುಕರಾದ ನಮ್ಮ ತಂದೆ

ತಾಯಿಗಳೂ ನಾವೂ ಮತ್ತು ಮನೆಯ ಇತರ ಜನರೂ ಎಲ್ಲರೂ ಸೇರಿ

ನಮ್ಮ ಹಟ್ಟಿಯಲ್ಲಿ ದೊಡ್ಡ ಅಗ್ಗಿಷ್ಟಿಗೆಯನ್ನಿಟ್ಟು ಬೆಂಕಿಯನ್ನು

ಕಾಸಿಕೊಳ್ಳುತಿದ್ದೆವು, ಆ ರಾತ್ರೆ ಜಾವಹೊತ್ತು ಆದಮೇಲೆ, ತಲೆಗೆ

ಒಂದು ಕಿರೀಟವನ್ನಿಟ್ಟು, ಕತ್ತಿನಿಂದ ಸೊಂಟದವರೆಗೂ ಕಬ್ಬಿಣದ

ಉಂಗುರದಿಂದ ಮಾಡಿದ ಕವಚವನ್ನು ತೊಟ್ಟು, ಮಂಡಿಯವರೆಗೂ

ವೀರಕಾಶೆಯನ್ನು ಹಾಕಿದ ಪಂಚೆಯನ್ನುಟ್ಟು. ಸೊಂಟಕ್ಕೆ ಚಕ್ಕಳದ

ನಡುಕಟ್ಟನ್ನು ಕಟ್ಟಿ, ಪಕ್ಕದಲ್ಲಿ ಕತ್ತಿಯನ್ನೂ ಗುರಾಣಿಯನ್ನೂ ಕಟ್ಟಿ 

ಕೊಂಡು ಆಜಾನುಬಾಹುವಾಗಿದ್ದ ಒಬ್ಬ ವೀರನು ನಮ್ಮ ಮನೆ

ಯೊಳಕ್ಕೆ ಬಂದು ನಮ್ಮ ತಂದೆಯ ಎದುರಿಗೆ ನಿಂತುಕೊಂಡು. ಏನೈ 

ಹುಲಿನಾಯಕ, ನನ್ನನ್ನು ಮರೆತುಬಿಟ್ಟಿಯಾ? ಎಂದು ಹಸನ್ಮುಖ

ನಾಗಿ ಕೇಳಿದನು. ನಮ್ಮ ತಂದೆಯು ಆತನನ್ನು ದೃಷ್ಟಿಸಿ ನೋಡಿ--

ಬುದ್ಧಿ, ಬುದ್ಧಿ ತಮ್ಮನ್ನು ಮರೆತೇನೆ ನನ್ನೊಡೆಯನನ್ನ, ದಯಮಾಡ

ಬೇಕು, ಎಂದು ಒಂದು ಮಣೆಯ ಮೇಲೆ ಆತನನ್ನು ಕೂರಿಸಿದನ್ನು

ಅವರಿಬ್ಬರೂ ಕುಶಲಪ್ರಶ್ನೆಗಳನ್ನು ಮಾಡಿ ಮಾತನಾಡಿಕೊಂಡ ತರು

ವಾಯ ಆ ವೀರನು--ಹುಲಿನಾಯಕ, ನಮ್ಮ ದಂಡಿನ ತುಕ್ಕಡಿ ಇಲ್ಲಿಗೆ

ಒಂದು ಕೊಂಬಿನ ಕೂಗಿನಲ್ಲಿ ಬಂದು ಇಳಿದಿದೆ, ಇಂದಿಗೆ ಮೂರು

ದಿವಸಕ್ಕೆ ನಮ್ಮ ಸೇನೆಯು ಕೊಡೆಯಾಲದ ರೇವಿನಲ್ಲಿ ಹಡಗನ್ನು ಹತ್ತಿ

ಒಂದು ದ್ವೀಪಕ್ಕೆ ಹೊರಡಬೇಕು. ಅಲ್ಲಿನ ಜನರಿಗೂ ನಮ್ಮವರಿಗೂ

ಸ್ಪಲ್ಪ ವೈಷಮ್ಯಹುಟ್ಟದೆ. ನಾವು ಅವರನ್ನು ಜೈಸಬೇಕು ಅಥವಾ

ಅವರಲ್ಲಿ ಸ್ನೇಹವನ್ನು ಬೆಳಸಿಕೊಳ್ಳಬೇಕು. ಇದು ಹೊರತು ನಮ್ಮ

ಹಡಗಿನವರಿಗೆ ಉಳಿಗಾಲವಿಲ್ಲವಾಗಿದೆ. ನಿನ್ನನ್ನು ನೋಡಿಕೊಂಡು 

------------------------------------

೨೫೬ ಸುಮತಿ ಮದನಕುಮಾರರ ಚರಿತ್ರೆ      [ಅಧ್ಯಾಯ 


ಹೋಗುವುದಕ್ಕಾಗಿ ಬಂದೆ. ದಾರಿಯಲ್ಲಿ ಬರುತಾ ಮಳೆಯಿಂದ ನೆನೆದು

ಚಳಿಯಾಗುತಿದೆ, ಹಸಿವೂ ಹೆಚ್ಚಾಗಿದೆ, ಎಂದು ಹೇಳಿದನು. ಆಗ

ನಮ್ಮ ಯಜಮಾನನು -- ಸ್ವಾಮಿ, ಈ ಬೆಂಕಿಯನ್ನು ಕಾಸಿಕೊಳ್ಳ

ಬಹುದು. ತಾವು ಅರಸುಗಳು ನಾವು ಬೇಡರು, ನಮ್ಮ ಮನೆಯಲ್ಲಿ

ತಾವು ಊಟಮಾಡುವುದಿಲ್ಲ. ಸ್ವಾಮಿಗೆ ನಾನೇನ ಒಪ್ಪಿಸಲಿ, ಎಂದು

ಹೇಳಿ, ಜೋಳದ ಅರಳನ್ನೂ ಅರ್ಥ ಸೇರು ಹಾಲನ್ನೂ ಬಹುಶ್ರಮ

ದಿಂದ ತಂದು ಅತನಿಗೆ ಅರ್ಪಿಸಿ, ಐವತ್ತು ಅತ್ತೀ ಹಣ್ಣನ್ನು ಮುಂದಿಟ್ಟು

ತೆಗೆದುಕೊಳ್ಳ ಬೇಕೆಂದು ಹೇಳಿದನು... ಆ ವೀರನು ಅಯ್ಯಾ, ಆದರ

ದಿಂದ ನೀನು ಕೊಟ್ಟಿ ಈ ಆಹಾರದ ರುಚಿ ಎಂಥಾ ಭಕ್ಷ್ಯಭೋಜ್ಯಗಳಿಗೆ

ತಾನೇ ಬಂದೀತು, ಸಂಕೋಚವನ್ನು ಮಾಡಿಕೊಳ್ಳಬೇಡ, ಎಂದು

ಅವೆಲ್ಲವನ್ನೂ ಮೆದ್ದು ನಾವುಗಳು ಆತನಿಗಾಗಿ ಹಾಸಿದ ಚಾಪೆಮೇಲೆ

ಮಲಗಿ ವಿಶ್ರಮಿಸಿಕೊಂಡನು. ಅದೆಲ್ಲವನ್ನೂ ನೋಡಿ ದಂಡಿನ

ಚಾಕರಿ ಮಾಡಬೇಕೆಂದು ನನಗಿದ್ದ ಅಶೆ ಮತ್ತೂ ಅಧಿಕವಾಯಿತು.

ಆತನ ಸಂಗಡಲೇ ನಾನೂ ಬರುಬೇನೆಂದು ಆತನಿಗೆ ಹೇಳಿಕೊಂಡೆ:

ಆತನು ದಂಡಿನ ಚಾಕರಿಯಲ್ಲಿ ಉಂಟಾಗತಕ್ಕ ವಿಧವಿಧವಾದ ಕಷ್ಟ

ಗಳನ್ನು ವರ್ಣಿಸಿ ಹೇಳಿದನು : ಅನ್ನ ನೀರಿಲ್ಲದೇ ೩-೪ ದಿವಸಗಳಾ

ದರೂ ಉಪವಾಸ ಇರಬೇಕಾದ ಸಂಭವ, ಅಲ್ಲಿ ಉಂಟಾಗತಕ್ಕ ರೋಗ,

ಪ್ರಾಣಾಪಾಯಗಳು, ಪ್ರಾಣಿವಥೆಯಿಂದ ಉಂಬಾಗುವ ಪಾಪ, 

ಮಾರ್ಗಶ್ರಮ ಇವೇ ಮುಂತಾಗಿ ಅನೇಕ ವಿಧವಾದ ಕಷ್ಟಗಳನ್ನು

ವಿಶದಪಡಿಸಿದನು. ಇದು ಯಾವುದೂ ನನ್ನ ಮನಸ್ಸಿಗೆ ಅಂಟಲಿಲ್ಲ.

ಸೇನೆಯ ಚಾಕರಿಗೆ ಸೇರಿಕೊಂಡು ಆತನ ಸಂಗಡ ಹೋಗಲೇಬೇಕೆಂದು

ನಿಶ್ಚೈಸಿಕೊಂಡೆ. ರಾತ್ರೆ ಮೊದಲುಕೋಳಿ ಕೂಗಿತು. ಆ ವೀರಭಟ

ನಾದ ತುಕ್ಕಡೀದಾರನು ಎದ್ದು ದಂಡಿನ ಪಾಳಯಕ್ಕೆ ಹೊರಡಲು ಸಿದ್ಧ

ವಾದನು. ನಾನೂ ಆತನ ಸಂಗಡಲೇ ತೆರಳುವುದಕ್ಕೆ ಸಜ್ಜುಮಾಡಿ

ಕೊಂಡೆ. ಹೊರಡುವ ಸಮಯ ಬಂತು. ವೃದ್ಧಳಾದ ನಮ್ಮ ತಾಯಿ

ಬಂದು ನನ್ನನ್ನು ತಬ್ಬಿಕೊಂಡು--ಅಯ್ಯೋ ಮಗನೇ ನೀನು ಒಬ್ಬನೇ

ನನಗೆ ಗಂಡುಮಗ; ಉಳಿದ ಏಳು ಜನವೂ ಹೆಣ್ಣುಮಕ್ಕಳು, ನಿನ್ನಿಂದ 

-----------------------------------

೨೧] ಸುಮತಿ ಮದನಕುಮಾರರ ಚರಿತ್ರೆ              ೨೫೭ 


ನಮ್ಮ ಮನೆ ಬೆಳಕು ಕಾಣಬೇಕೆಂದು ಇದ್ದೆನಲ್ಲಪ್ಪಾ! ಹಾಳ ರಣಕ್ಕೆ

ನಿನ್ನನ್ನು ಕಳುಹಿಸಿ ನಾನು ಹೇಗೆ ಹೊಟ್ಟೇ ಹಿಡಿಯಲಿ! ಎಂದು ವಿಧ

ವಿಧದಲ್ಲಿ ಹಂಬಲಿಸಿಕೊಂಡು ಅಳುತಿದ್ದಳು. ನನ್ನ ತಂಗಿಯರೆಲ್ಲರೂ

--ಅಯ್ಯೋ ಅಣ್ಣಾ, ಅಣ್ಣಾ ಹೋಗುತೀಯಾ |! ನಮಗೆ ಯಾರು

ಗತಿ! ಎಂದು ರೋದನ ಮಾಡುತಿದ್ದರು. ಅದೆಲ್ಲವನ್ನೂ ನೋಡಿ

ನನಗೂ ಮನಸ್ಸು ಸ್ವಲ್ಪ ಕರಗಿತು, ಕಣ್ಣಿನಲ್ಲಿ ನೀರು ಬಂತು. ನಾನು

ರಾತ್ರೆಮಾಡಿದ ಸಂಕಲ್ಪವನ್ನು ಬಿಟ್ಟುಬಿಡಲೇ ಎನ್ನುವಮಟ್ಟಿಗೂ ಮನ

ಸ್ಸೆಲ್ಲಾ ಕಲಕಿ ಹೋಯಿತು. ನಮ್ಮ ತಂದೆಯ ಮುಖವನ್ನು ನೋಡಿದೆ.

ಆತನ ಕಣ್ಣಿನಲ್ಲಿಯೂ ನೀರು ಬಂತು. ಅದನ್ನು ಸಹಸಿಕೊಂಡು

ಹೆಂಡತಿಯನ್ನು ನೋಡಿ--ಅವನು ರಣಕ್ಕೆ ಹೋಗಲೇ ಬೇಕೆಂದು

ಮುಷ್ಕರಮಾಡುತಾನೆ, ಅವನನನ್ನು ಯಾಕೆ ತಡೆಯುತೀಯೆ? ಬಿಟ್ಟು

ಬಿಡು. ಆಯುಸ್ಸಿದ್ದರೆ ಬದುಕಿಬರುತಾನೆ. ಇಲ್ಲದಿದ್ದರೆ ವೀರಸ್ವರ್ಗ

ಬರುವುದು. ಎಷ್ಟು ದಿನವಿದ್ದರೂ ಸಾಯಲೇಬೇಕು, ಎಂದನು.

ನಮ್ಮ ತಂದೆತಾಯಿಗಳಿಗೆ ನಾನು ನಮಸ್ಕಾರ ಮಾಡಿ, ಅವರ ಹರಕೆ

ಯನ್ನು ಕೈಗೊಂಡು, ಹತ್ತಿರ ನಿಂತಿದ್ದ ತುಕ್ಕಡಿದಾರನಾದ ಆ ಭೀಮ

ರಾಜನ ಸಂಗಡ ಹೊರಟೆ. ಆತನು ಸೇನೆಯಲ್ಲಿ ನನಗೆ ಒಂದು ಚಿಕ್ಕ

ಅಧಿಕಾರವನ್ನು ಮಾಡಿಕೊಟ್ಟನು.


ತರುವಾಯ ಹಡಗನ್ನು ಏರಿ ಆ ದ್ವೀಪಕ್ಕೆ ಹೋಗಿ ಅಲ್ಲಿ ಪಾಳ

ಯವನ್ನು ಹಾಕಿ ಇಳಿದುಕೊಂಡೆವು. ಸರ್ವ ಸೇನಾಪತಿಯಾಗಿದ್ದ ಆ

ಭೀಮರಾಜನು ತನ್ನೊಳಗೆ ಯೋಚಿಸುತಾ ನಾಲ್ಕು ಉಪಾಯಗಳಲ್ಲಿ

ದಾನೋಪಾಯವು ಪರಾಕ್ರಮಿಗಳಿಗೆ ತಕ್ಕದ್ದಲ್ಲ. ಶತ್ರುಗಳನ್ನು

ಜೈಸುವುದಕ್ಕೆ ಸಾಮಭೇದೋಪಾಯಗಳನ್ನು ಮಾಡಬೇಕು. ಇದಕ್ಕೆ

ಅವರು ಸಗ್ಗದಿದ್ದರೆ ಅಂಥಾ ಕಾಲದಲ್ಲಿ ದಂಡೋಪಾಯವನ್ನು ಅನುಸರಿಸ

ಬೇಕೆಂದು ತಿಳಿದು ನನ್ನನ್ನೂ ಇನ್ನೂ ಇಬ್ಬರನ್ನೂ ಸಂಗಡ ಕರೆದು

ಕೊಂಡು ಆ ದ್ವೀಪದ ಕಾಡುಜನರ ದೊರೆಯ ಹತ್ತಿರಕ್ಕೆ ಹೋಗಿ

ಅವರ ಮಾತಿನಲ್ಲಿಯೇ ಸಂಭಾಷಣೆಯನ್ನು ಮಾಡಿ, ಆ ಜನರಲ್ಲಿ

ಸ್ನೇಹವನ್ನು ಮಾಡಿಕೊಂಡನು. 

------------------------------------

೨೫೮ ಸುಮತಿ ಮದನಕುಮಾರರ ಚರಿತ್ರೆ,     [ಅಧ್ಯಾಯ:


ಈ ರೀತಿಯಲ್ಲಿ ಸ್ನೇಹ ಬೆಳೆಯಿತಲ್ಲಾ ಎಂಬ ಸಂತೋಷವನ್ನು

ತೋರ್ಪಡಿಸುವುದಕ್ಕಾಗಿ ಆ ಕಾಡುಜನರ ಮುಖಂಡರಾದ ಪ್ರಭುಗಳೆ 

ಲ್ಲರೂ ಕಾತರರಾಗಿದ್ದರು. ಅವರಲ್ಲಿ ಒಬ್ಬ ಆಯಗಾರನು ಹೊರಕ್ಕೆ

ಬಂದು ನಿಂತು ಇತರರನ್ನು ಕುರಿತು--ಎಲ ಅಪ್ಪಾ, ಅಣ್ಣಂದಿರಾ,.

ಬನ್ನಿ. ನಮ್ಮ ಮನಸ್ಸಿಗೆ ಈ ಸಮಯದಲ್ಲಿ ಉಂಟಾದ ಹರ್ಷವನ್ನು

ನಮ್ಮವರಲ್ಲಿ ರೂಢಿಯಾಗಿರುವ ಕುಣಿದಾಟದಿಂದ ತೋರಿಸೋಣ,

ಎಂದು ತನ್ನ ಕತ್ತಿಯನ್ನು ರುಳಪಿಸುತಾ ಕೂಗಿದನು. ಆಗ ಆ

ಕಾಡುಜನರೆಲ್ಲಾ ತಮ್ಮ ಆಯುಧಗಳನ್ನು ಹಿಡಿದುಕೊಂಡು ಹುಚ್ಚು

ಹುಚ್ಚಾಗಿ ಅರಚಿಕೊಳ್ಳುತಾ ಕಾಡಕುಣಿತವನ್ನು ಕುಣಿದರು. ತರು

ವಾಯ ಅವರ ಪದ್ಧತೀಪ್ರಕಾರ ನಮ್ಮಗಳಿಗೆ ಉಪಚಾರವನ್ನು ಮಾಡಿ

ನಮ್ಮನ್ನು ಕಳುಹಿಸಿಕೊಟ್ಟರು. ಇದುವರೆಗೆ ಎಲ್ಲಾ ಹುವ್ವಿನ ಸರ

ವನ್ನು ಎತ್ತಿದಹಾಗೆ ಸುಲಲಿತವಾಗಿಯೇ ಸಾಗಿತು. ದಂಡಿನನರು

ಮಾಡುವ ಕಾರ್ಯನಿರ್ವಾಹವೆಲ್ಲವೂ ಕಷ್ಟವಿಲ್ಲದೆ ನಡೆಯತಕ್ಕದ್ದೆಂದು

ನನಗೆ ತೋರಿತು. ಆದರೆ ಒಂದೆರಡು ದಿನಗಳಲ್ಲಿಯೇ ನನಗೆ ಅನುಭವ

ಸಾಲದೆಂದು ಗೊತ್ತಾಯಿತು. 


ಆ ಜನರಲ್ಲಿ ಸ್ನೇಹವನ್ನು ಮಾಡಿಕೊಂಡು ಅವರು ನಮ್ಮ ದೊರೆಗೆ

ಕಪ್ಪ ಮೊದಲಾದ್ದನ್ನು ಕೊಡತಕ್ಕದ್ದೆಂಬ ನಿಷ್ಕರ್ಷೆಯಿಂದ ಭೀಮ

ರಾಜರು ಆ ಸೇನೆಯೊಡನೆ ಆ ಊರನ್ನು ಬಿಟ್ಟು ಹೊರಟರು. ನಾನೂ.

ಅವರ ಸಂಗಡಲೇ ಇದ್ದೆ. ಒಂದು ದಿನ ಮಧ್ಯಾಹ್ನದ ಪೈಣ ಆದೆ.

ತರುವಾಯ ನಮಗೆ ದಾರಿತಪ್ಪಿ ಹೋಯಿತು. ಎಲ್ಲಿ ನೋಡಿದರೂ

ಗಟ್ಟ ಬೆಟ್ಟಗಳು, ದಾರಿಕಟ್ಟಿಕೊಂಡು ತುಂಬಿ ಹರಿಯುವ ಕಳ್ಳತೊರೆ

ಗಲು, ಕೊಲ್ಲಿಗಳು, ಒಂದು ಕಡೆ ನೋಡಿದರೆ ಆಕಾಶಕ್ಕೆ ಊರೇ

ಕೊಟ್ಟಂತೆ ಕಾಣಿಸುವ ಬಹು ಎತ್ತರವಾದ ಮರಗಳು, ಇನ್ನೊಂದು ಕಡೆ

ಎಷ್ಟು ದೂರ ನೋಡಿದಾಗ್ಗೂ ಹೆಜ್ಜೆಯನ್ನು ಇಡುವದಕ್ಕೆ ಸಹಿತವಾಗಿ

ಸ್ಥಳವಿಲ್ಲದೆ ಇರುವ ಹಾಗೆ ದಟ್ಟವಾಗಿ ಬೆಳೆದು ಹೆಣಿದುಕೊಂಡಿರುವ

ಮುಳ್ಳು ಪೊದೆಗಳು, ಇವುಗಳೆಲ್ಲಾ ಸಿಕ್ಕಿದವು, ಕೈಲಿದ್ದ ಆಯುಧ 

ಗಳಿಂದ ಕೈಲಾದಮಟ್ಟಿಗೂ ಮರಮುಂಡಿಗೆಯನ್ನು ಕಡಿದುಕೊಂಡು 

-------------------------------------

೨೧] ಸುಮತಿ ಮದನಕುಮಾರರ ಚರಿತ್ರೆ ೨೫೯ 


ದಾರಿಯನ್ನು ಮಾಡಿಕೊಂಡು ಹೊರಟೆವು, ನಾವು ಮಾಡಿದ ಅಪ.

ರಾಥಕ್ಕೆ ಈ ಕಷ್ಟ ಸಾಲದೆಂದು ದೇವರ ಮನಸ್ಸಿಗೆ ತೋರಿತೋ

ಏನೋ! ಸ್ವಲ್ಪ ದೂರ ಇಂಥಾ ಘೋರಾರಣ್ಯದಲ್ಲಿ ನಾವು ಹೊರಡಲು,

ನಾಲ್ಕು ಕಡೆಯಿಂದಲೂ ಕವಣೇಕಲ್ಲು ಬಂದು ಬೀಳುವುದಕ್ಕೆ ಮೊದ

ಲಾಯಿತು. ಕೂಡಲೆ ಸರಳುಗಳೂ ಬಂದು ಬೀಳುವುದಕ್ಕೆ ಮೊದಲಾ

ದವು. ಎಲ್ಲಾ ದಿಕ್ಕಿನಿಂದಲೂ ಇಂಥಾ ಮೃತ್ಯುವಿನ ಮಳೆ ಸುರಿಯುತ್ತಾ

ಬಂತು. ನಮ್ಮ ಸೇನೆಯಲ್ಲಿ ಅನೇಕರು ಪೆಟ್ಟು ತಗಲಿ ಸತ್ತು ಹೋದರು,

ಯಾರು ಎಲ್ಲಿ ಅವಿತುಕೊಂಡರೆ ಅವರು ಅಲ್ಲಿಯೇ ಪೆಟ್ಟು ತಗಲಿ ಒರಗು

ತಿದ್ದರು, ನಮ್ಮ ಸೇನೆಯವರೂ ದಿಕ್ಕು ದಿಕ್ಕಿಗೆ ಕೋವಿಯನ್ನು

ಹಾರಿಸಿದರು. ಆದರೆ ಪ್ರಯೋಜನವೇನು? ನಮ್ಮ ಏಟು ಯಾರಿಗೂ

ತಗಲಲಿಲ್ಲ. ಆದ್ದರಿಂದ ಯಾರೂ ಸಾಯಲಿಲ್ಲ. ದಿಕ್ಕಗಳೂ ಆಕಾಶವೂ

ನಮ್ಮ ಮೇಲೆ ಮುನಿದಂತೆ ತೋರಿತು. ಕಣ್ಣಿಗೆ ಕಾಣದ ಕೈಗಳಿಂದ

ಬರುವ ಪೆಟ್ಟನ್ನು ತಪ್ಪಿಸಿಕೊಳ್ಳುವದು ಹೇಗೆ? ನಮ್ಮ ಮಂದಿಯೆಲ್ಲಾ

ಛಿನ್ನಭಿನ್ನವಾಗಿ ಹೋಯಿತು. ಕೊನೆಗೆ ನಮಗೆ ಬಂದ ದುರ್ದಶೆ

ಯನ್ನು ಏನೆಂದು ಹೇಳಲಿ! ಭೀಮರಾಜರ ಕಾಲಿಗೆ ಒಂದು ಅಂಬು

ತಗಲಿತು. ಅವರ ಕುದುರೆಯು ಏಟು ಬಿದ್ದು ಸತ್ತು ಹೋಯಿತು.

ಅಡಿಕೇ ಕಡಿಯುವಷ್ಟು ಹೊತ್ತಿನಲ್ಲಿಯೇ ಅವರ ಪಕ್ಕೆಗೆ ಒಂದು ಬಾಣ

ತಗಲಿತು. ನಾನೂ ಅವರೂ ಮುಂದೆ ಓಡುವದಕ್ಕೆ ಮೊದಲು ಮಾಡಿ

ದೆವು. ಆದರೆ ಅವರಿಗೆ ರಕ್ತ ಬಹಳವಾಗಿ ಸುರಿದು ಹೋಗಿತ್ತು.

ನಿತ್ರಾಣವಾಗಿ ಅವರು ನೆಲಕ್ಕೆ ಬಿದ್ದು ಬಿಟ್ಟರು.


ಆ ಸಮಯದಲ್ಲಿ ಅಲ್ಲಿನ ಕಾಡುಜನರಲ್ಲಿ ಒಬ್ಬಬ್ಬರು ಮರದ

ಪೊಟ್ಟರೆಗಳಿಂದಲೂ ಹೊದರುಗಳಿಂದಲೂ ತಲೆಯನ್ನು ಈಚೆಗೆ ಹಾಕಿ

ದರು. ಅವರ ಮುಖವನ್ನು ಕಂಡ ಕೂಡಲೆ ನನಗೆ ಅತ್ಯಾಗ್ರಹವುಂ

ಟಾಯಿತು. ಕೈಲಿದ್ದ ಕತ್ತಿಯನ್ನು ಝಳಪಿಸುತ್ತಾ ಹೊರಟೆ. ಆ

ಹೇಡಿಗಳು ಓಡುವದಕ್ಕೆ ಆರಂಭಿಸಿದರು. ನಾನು ಅವರ ಬೆನ್ನಹತ್ತಿ

೪-೫ ಜನರನ್ನು ತುಕ್ಕಡತುಕ್ಕಡ ಮಾಡಿದೆ. ಕೂಡಲೆ ಅಲ್ಲಿದ್ದ

ಒಂದೊಂದು ಹೊದರಿನಿಂದಲೂ ಹತ್ತು ಹತ್ತು ಕತ್ತೆ ಕಿರಿಚಿದ ಹಾಗೆ 

------------------------------------

೨೬೦ ಸುಮತಿ ಮದನಕುಮಾರರ ಚರಿತ್ರೆ        [ಅಧ್ಯಾಯ 


ಕಿರಚಲು, ಹೊರಟಿತು. ಪ್ರತಿಧ್ವನಿಯಿಂದ ಸದ್ದು ಇನ್ನೂ ಅತಿ

ಭಯಂಕರವಾಗಿ ತೋರಿತು. ಅಲ್ಲಿ ಅವಿತುಕೊಂಡಿದ್ದ ಆ ಕಾಡುಜನ

ರೆಲ್ಲಾ ನನ್ನ ಒಬ್ಬನಿಗೆ ಹೆದರಿ ನನ್ನ ಕೈಗೆ ಸಿಕ್ಕದ ಹಾಗೆ ಓಡಿ

ಹೋದರು. ಈ ನೀಚರಿಂದಲೇ ಇಷ್ಟೊಂದು ನಷ್ಟಕ್ಕೆ ಕಾರಣವಾಯಿ

ತೆಂದು ತಿಳಿದುಕೊಂಡೆ. ಬಂದ ಭಾಗ್ಯವೇನು? ನಾನು ಎಷ್ಟು ಕಾದಿ

ಜಯವನ್ನು ಹೊಂದಿದರೂ ನೋಡಿ ಸಂತೋಷಪಡುವ ಕಣ್ಣು ಮುಚ್ಚಿ

ಹೋಗುತಾ ಇತ್ತು. ಭೀಮರಾಜರ ಪ್ರಾಣವೆಲ್ಲಾ ಉಡುಗಿ ಹೋಯಿತು.

ಪ್ರಾಣವು ಅರೆಗಳಿಗೆಯಲ್ಲಿ ಹೋಗುವದಾಗಿತ್ತು. ನಾನು ಅವರ ಸಮೀ 

ಪಕ್ಕೆ, ಹೋಗಿ ಕೂತುಕೊಂಡೆ, ಅವರೆ ಸ್ಥಿತಿಯನ್ನು ನೋಡಿ ನನಗೆ

ಬಹು ದುಃಖ ಬಂತು. ಅಂಥಾ ವೀರರಾದ ಗುಣಾಢ್ಯರಾದ ಪುರುಷರು

ಲೋಕದಲ್ಲಿ ಸಿಕ್ಕುವದು ಕಷ್ಟ. ಅವರು ನನ್ನ ಮುಖವನ್ನು ನೋಡಿ--

ಅಯ್ಯಾ, ಅಳಬೇಡ; ನನ್ನ ಗತಿ ನನಗಾಯಿತು. ನೀನು ತಲೇತಪ್ಪಿಸಿ

ಕೊಂಡು ಊರಿಗೆ ನಡೆ. ನಿಮ್ಮ ತಂದೆ ಹುಲಿನಾಯಕನ ಮುಪ್ಪಿನ

ಕಾಲದಲ್ಲಿ ಪಿತೃಸೇವೆಯನ್ನು ಮಾಡಿಕೊಂಡಿದ್ದು ಅವನನ್ನು ಒಪ್ಪ

ಮಾಡು. ಹುಲಿನಾಯಕ ಬಹು ಸತ್ಯವಂತ. ಅವನಿಂದ ಒಂದಾ

ನೊಂದು ಕಾಲದಲ್ಲಿ ನನ್ನ ಪ್ರಾಣ ಉಳಿಯಿತು. ಪುನಃ ನನ್ನ ಕೊನೆ

ಗಾಲಕ್ಕೆ ನೀನು ಆದೆ, ತಂದೆಮಕ್ಕಳಾದ ನಿಮ್ಮ ಉಪಕಾರವನ್ನು

ಹೇಗೆ ಮರೆಯಲಿ? ಶಿವ ಶಿವಾ!.-ಹೀಗೆನ್ನುತಾ ಇರುವಾಗ ಪ್ರಾಣ

ಹೋಯಿತು.


ಶತ್ರುಗಳ ಭಯದಿಂದ ಆತನ ಶರೀರಕ್ಕೆ ಮತ್ತೆ ಯಾವ ವಿಧ

ವಾದ ಸಾರ್ಥಕ್ಯವನ್ನೂ ಮಾಡುವದಕ್ಕಾಗದೆ ಅಲ್ಲಿಯೇ ಆತನಿಗೆ ಕಲ್ಲು

ಮಲ್ಲಯ್ಯನನ್ನು ಮಾಡಿ ಮುಂದಕ್ಕೆ ಹೊರಟೆ.


(ಈ ಮಾತನ್ನು ಹೇಳುವಾಗ ಆ ಗಟ್ಟದ ಕೆಳಗಿನವನ ಕಣ್ಣಿನಲ್ಲಿ

ನೀರು ಬಂತು. ಆಗಲೇ ಲಲಿತೆಯ ಕಣ್ಣಿ ನಲ್ಲಿಯೂ ಗುಳಗುಳನೆ

ಕಂಬನಿಗಳು ಹೊರಬಿವು. ಬಿಕ್ಕಳಿಸಿಕೊಂಡು ಆಕೆ ಅಳುವಳೋ,

ಎನ್ನುವ ಹಾಗೆ ತೋರಿತು. ಆದರೆ ಅಷ್ಟರಲ್ಲಿಯೇ ತನ್ನ ಸೆರಗಿನಿಂದ

ಕಣ್ಣನ್ನು ಒರೆಸಿಕೊಂಡು ದುಃಖವನ್ನು ತಡೆದುಕೊಂಡಳು). 

------------------------------------

೨೧] ಸುಮತಿ ಮದನಕುಮಾರರ ಚರಿತ್ರೆ ೨೬೧


ಗಟ್ಟದ ಕೆಳಗಿನವನು--ಆಗ ನನಗೆ ಬಿದ್ದಿದ್ದ ಪೆಟ್ಟಿನ ಯಾತನೆ

ಸ್ವಲ್ಪ ತೋರಿತು. ಯಾವುದೋ ಒಂದು ಬಗೆಯ ಕಾಡುಸೊಪ್ಪನ್ನು

ತರೆದು ಕಲ್ಲಮೇಲೆ ಅರೆದು ಅದನ್ನು ನನ್ನ ಗಾಯಕ್ಕೆ ಮೆತ್ತಿದೆ.--

ಅಲ್ಲಿದ್ದ ಕಾಡುಗೆಡ್ಡೆಯನ್ನೂ ಹಣ್ಣುಗಳನ್ನೂ ಕಿತ್ತು ತಿಂದೆ. ಕತ್ತಲೆ

ಯಾಯಿತು. ಅತ್ಯಂತ ಆಯಾಸದಿಂದಲೂ ಬಹು ದಿನಗಳಿಂದ ನಿದ್ರೆ

ಇಲ್ಲದ್ದರಿಂದಲೂ ಒಂದು ಮರದ ಕೆಳಗೆ ಮಲಗಿಕೊಂಡೆ, ಎಚ್ಚರವೇ

ಇಲ್ಲದೆ ನಿದ್ರೆ ಒಂತು, ಬೆಳಗ್ಗೆ ಎದ್ದು ನೋಡುವಲ್ಲಿ ಗಾಯದ ಯಾತನೆ

ಸ್ವಲ್ಪ ಕಡಮೆಯಾಗಿತ್ತು. ಹೀಗೆಯೇ ಕಾಡಿನಲ್ಲಿ ಹೋಗುತಿರುವಾಗ

ಒಂದು ನದಿ ಕಾಣಿಸಿತು. ಅದರ ತೀರದಲ್ಲಿ ಕಾಡುಜನರ ಗುಡಿಸಲಿನ

ಗುಂಪು ಕಾಣಿಸಿತು. ಅದನ್ನು ಕಂಡಕೂಡಲೆ ನನಗೆ ಭಯವುಂಟಾ

ಯಿತು. ಶತ್ರುಗಳ ದೆಸೆಯಿಂದ ಭಯ ಪಟ್ಟು ಪಟ್ಟು, ಅವರ ಪೆಟ್ಟನ್ನು

ಸಹಿಸಿ ಸಹಿಸಿ, ಸಾಕಾಗಿ, ಕಳೆದ ಮೂರು ದಿವಸದಿಂದ ಸ್ವಲ್ಪ ಭೀತಿ

ತಪ್ಪಿತ್ತು. ಈಗ ಪುನಃ ಇವರ ಗುಂಪಿಗೆ ಹೋಗಿ ಅವರಿಗೆ ಪ್ರಾಣ

ನನ್ನು ಒಪ್ಪಿಸಲೆ? ಅಥವಾ ಕಾಡಬಿದ್ದು ಹಿಂದಕ್ಕೆ ಹೊರಟು ಹೋಗಲೆ?

ಈ ಯೋಚನೆ ಬಹಳವಾಗಿ ಮನಸಿಗೆ ಹತ್ತಿತು. ಆದರೆ ಏಕಾಕಿ

ಯಾಗಿದ್ದು ಕಾಡಿನಲ್ಲಿ ಮೃಗಾದಿಗಳ ಭಯದಿಂದಲೂ ಆಹಾರಾದಿಗಳು

ಇಲ್ಲದೆ ಉಂಟಾದ ಕಷ್ಟದಿಂದಲೂ ಪೇಚಾಡಿ ಸಾಕಾಗಿದ್ದ ಕಾರಣ, ಈ

ಕಾಡುಜನಗಳ ಕೈಲಿ ನನ್ನ ಪ್ರಾಣ ಹೋದರೂ ಹೋಗಲಿ, ಜನರ

ಗೋಷ್ಠಿಯಲ್ಲಿ ಇರಲೇ ಬೇಕೆಂಬ ಆಶೆಯು ಹುಟ್ಟಿತು. ಆದ್ದರಿಂದ ಆ

ಗುಡಿಸಲುಗಳಿದ್ದ ಸ್ಥಳಕ್ಕೆ ಹೋಗಿ ಒಂದು ಗುಡಿಸಲಿನೊಳಕ್ಕೆ ನುಗ್ಗಿ

ದೆನು. ಒಳಗಿನಿಂದ ಒಬ್ಬ ಮುದುಕನು ಈಚೆಗೆ ಬಂದು ನನ್ನನ್ನು

ಕಂಡು ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿಕೊಂಡು ಅವರ ಮಾತಿ

ನಲ್ಲಿ ನನ್ನ ಪೂರ್ವೋತ್ತರವನ್ನು ವಿಚಾರಿಸಿದನು. ನನಗೆ ಆ ಭಾಷೆ

ಸ್ವಲ್ಪ ಗೊತ್ತಿದ್ದಕಾರಣ, ಅಲ್ಲಿಯೊಂದು ಇಲ್ಲಿಯೊಂದು ಮಾತನಾಡಿ ಆ

ಮುದುಕ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟೆನು. ತರುವಾಯ

ಇದ್ದದನ್ನು ನನಗೆ ಇಕ್ಕಿ ತಾವು ಉಪವಾಸವಾಗಿರುತ್ತಾ ಸಾಯಂಕಾಲದ

ಹೊತ್ತಿಗೆ ಕಾಡು ಮೃಗಗಳನ್ನೂ ಹಕ್ಕಿಗಳನ್ನೂ ಹೊಡೆದುಕೊಂಡು 

-------------------------------------

೨೬೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಬಂದು ತಾವು ತಿನ್ನುತಿದ್ದರು. ತಮ್ಮ ಪಾಡು ಹೀಗೆ ಅಹನ್ಯಹನಿ 

ಕಾಲಕ್ಷೇಪವಾಗಿದ್ದಾಗ್ಲೂ ಅತಿಥಿಯಾದ ನನ್ನ ಉಪಚಾರದಲ್ಲಿ ಸ್ವಲ್ಪವೂ

ಕೊರತೆ ಮಾಡುತಿರಲಿಲ್ಲ.


ಅವರಿಗೆ ಉಪಪತ್ತಿಯ ವಿಷಯದಲ್ಲಿ ಬಡತನವೇ ಹೊರತು, 

ಒಳ್ಳೇತನದಲ್ಲಿ ಬಡತನವಿಲ್ಲ. ಸಿಕ್ಕಿದ ಕಾಡು ಮೃಗಗಳನ್ನೆಲ್ಲಾ

ಹೊಡೆದು ತಿನ್ನುವದು ಶುದ್ಧವಾದ ಒಳ್ಳೇತನವೆಂದು ನಾನು ಹೇಳಿ

ಬರಲಿಲ್ಲ. ಯುದ್ಧದಲ್ಲಿ ಹೇಗೆ ಹಿಂಸೆಯೂ ಪ್ರಾಣಿವಥೆಯೂ ತುಂಬಿರು

ವದೋ ಹಾಗೆಯೇ ಬೇಟೆಯಾಡುವದರಲ್ಲಿಯೂ ಇರುವದರಿಂದ, 

ಬೇಟೆಯೂ ಕಾಡುಮೃಗಗಳ ಮೇಲೆ ಮಾಡುವ ಯುದ್ಧವೆಂತಲೇ

ಹೇಳಬೇಕು. ಇದರಿಂದ ಪಾಪಸಂಘಟನೆಗೇನೂ ಸಂದೇಹವಿಲ್ಲ. ಆದರೆ

ಬಡತನವೂ ಅಜ್ಞಾನವೂ ಈ ದೋಷದ ವೇಗವನ್ನು ಸ್ವಲ್ಪ ಕಡಮೆ

ಮಾಡುವುದು.  ಧರ್ಮಸೂಕ್ಷ್ಮಗಳನ್ನು ತಿಳಿಯದೆ. ಬಡತನದಿಂದ

ನೀಡಿತರಾಗಿದ್ದ ಆ ಜನಗಳು ಬೇಟೆಯಾಡುವದು ಕೆಟ್ಟದೆಂದು ತಿಳಿದಿರ 

ಲಿಲ್ಲ. ಅದನ್ನು ಬಿಟ್ಟರೆ ಅವರಿಗೆ ಗತಿಯೂ ಇರಲಿಲ್ಲ. ಆದಾಗ್ಗೂ

ಅವರ ಯೋಗ್ಯತೆ ಇದ್ದಮಟ್ಟಿಗೆ ಅವರ ನಡತೆಯು ಬಹಳ ಸಮರ್ಪಕ

ವಾಗಿತ್ತು.


ಈ ಜನಗಳಿಗೂ ಕೆಲವು ಶತ್ರುಗಳಿದ್ದರು. ಅವರಿಗೂ ಇವರಿಗೂ

ಆಗಾಗ್ಗೆ ಜಗಳವಿದ್ದೇ ಇತ್ತು. ಈ ಜಗಳದಲ್ಲಿ ನಾನು ಈ ಜನರಿಗೆ

ಮಾಡಿದ ಸಹಾಯದಿಂದ ಅವರಿಗೆ ಜಯವುಂಟಾಯಿತು. ಅವರ

ಸಂಗಡ ಸೇರಿ ನಾನೂ ಅನೇಕ ಯುದ್ಧಗಳನ್ನು ಮಾಡಿದೆ... ಬಹು

ಶ್ರಮಪಟ್ಟೆ. ಇದೆಲ್ಲಾದರಿಂದಲೂ ವಿವೇಕವೇನೋ ಸ್ಪಲ್ಪ ಉಂಟಾ

ಯಿತು. ಆದರೆ ಒಂದಕ್ಕೆ ಹತ್ತರಷ್ಟು ನಷ್ಟ ಪಟ್ಟೆ. ಆ ಜನರ ದಯಕ್ಕೆ

ನಾನು ಪಾತ್ರನಾಗಿದ್ದೆನಾದಕಾರಣ, ನೆವನೆವದಲ್ಲಿ ನನಗೆ ಬೇಕಾದ

ಇನಾಮುಗಳನ್ನು ಅವರು ಕೊಟ್ಟರು. ಆ ಸೀಮೆಯಲ್ಲಿ ಚಿನ್ನವೂ

ಬೆಳ್ಳಿಯೂ ವಿಶೇಷವಾಗಿ ಸಿಕ್ಳುತಿದ್ದವು. ನಾವುಗಳು ಈ ಲೋಹ

ಗಳಿಗೆ ಯಾವ ಬೆಲೆ ಇದೆ ಎಂದು ತಿಳಿದುಕೊಂಡಿದೇವೆಯೊ ಆ ಅರ್ಥದಲ್ಲಿ

ಅವರು ತಿಳಿದಿರಲಿಲ್ಲ. ಇತರ ಲೋಹಗಳಂತೆಯೇ ಚಿನ್ನ ಬೆಳ್ಳಿಯೂ 

-------------------------------------

23] ಸುಮತಿ ಮದನಕುಮಾರರ ಚರಿತ್ರೆ           ೨೬೩ 


`ಒಂದೊಂದು ಲೋಹಗಳು, ಎಂದು ತಿಳಿದಿದ್ದರು, ಆದರೆ ಚಿನ್ನ ಬೆಳ್ಳಿ

ಗಳನ್ನು ಕಂಡಾಗಲೆಲ್ಲಾ ಹೆಚ್ಚಾದ ಆಸ್ಥೆಯನ್ನೂ ಆಶೆಯನ್ನೂ ನಾನು

ತೋರ್ಪಡಿಸಿದ್ದರಿಂದ, ನನ್ನನ್ನು ನೋಡುವದಕ್ಕೆ ಬಂದವರೆಲ್ಲಾ ಒಂದು

ಚಿನ್ನದ ಮುರುಕನ್ನಾಗಲಿ ಬೆಳ್ಳೀ ಮುರುಕನ್ನಾಗಲಿ ನನಗೆ ಉಪಹಾರ

ವಾಗಿ ತಂದು ಕೊಡುತಿದ್ದರು. ಇದೆಲ್ಲವನ್ನೂ ಕೂಡಿದಮಟ್ಟಿಗೂ

ಸಂಪಾದಿಸಿಕೊಂಡು ನಾನು ಊರಿಗೆ ಬಂದು ಸೇರಿದೆ. ಹಣ್ಣು ಹಣ್ಣು 

ಮುದುಕರಾಗಿದ್ದ ನಮ್ಮ ತಂದೆತಾಯಿಗಳಿಬ್ಬರೂ ಬದುಕಿದ್ದರು.

ನನ್ನನ್ನು ಕಂಡಕೂಡಲೆ ಅವರಿಗೆ ವಿಪರೀತವಾಗಿ ಆನಂದ ಉಂಟಾ

ಯಿತು. ಸ್ವಲ್ಪ ದಿವಸದ ಮೇಲೆ ಮದುವೆಯಾದೆ. ಭಾಗ್ಯಹೀನರಾದ

ಈ ಮಕ್ಕಳು ಹುಟ್ಟಿದರು. ಸ್ವಲ್ಪ ಭೂಮಿಕಾಣಿಗಳನ್ನು ಮಾಡಿಕೊಂಡು

ಆರಂಬವನ್ನು ಮಾಡುತಾ, ಇದ್ದದರಲ್ಲಿ ನೆಮ್ಮದಿ ಕುಳವೆನ್ನಿಸಿಕೊಂಡೆ.

ಹೀಗೆ ಎರಡು. ವರ್ಷ ಸುಖವಾಗಿದ್ದೆ. ದೊಡ್ಡ ರೋಗದಿಂದ ನನ್ನ

ದನಗಳೆಲ್ಲಾ ಸತ್ತು ಹೋದವು. ನನ್ನ ಬದುಕೆಲ್ಲಾ ಹಾಳಾಯಿತು.

ಸರ್ಕಾರದ ಕಂದಾಯಕಾಣಿಕೆಗಾಗಿ ನನ್ನ ಸ್ಪತ್ತೆಲ್ಲಾ ಹೋಯಿತು.

ಹೆಚ್ಚಿನ ಬಡತನ ಬಂತು. ವೃದ್ಧರಾದ ನಮ್ಮ ತಂದೆತಾಯಿಗಳು

ಹೊಟ್ಟಿಗೆ ಗತಿ ಇಲ್ಲದೆ ಮೂರು ದಿನ ಉಪವಾಸವಾಗಿ ನರಳಿ ಪ್ರಾಣ

ಬಿಟ್ಟರು. ಈ ಕಷ್ಟದಿಂದಲೇ ನನ್ನ ಹೆಂಡತಿಯೂ ಸತ್ತಳು. ಇಂದಿಗೆ

ನಾಲ್ಕು ದಿನವಾಯಿತು. ನಾನು ಮಾಡಿದ ಪಾಪ ಹರಿಯಲಿಲ್ಲ. ಈ

ತಬ್ಬಲಿ ಮಕ್ಕಳನ್ನು ಕಟ್ಟಿಕೊಂಡು ಈ ಹಾಳ ಜನ್ಮವನ್ನು ಕಳೆಯ

ಬೇಕಾಗಿದೆ. ದೇಶಾಂತರಕ್ಕಾದರೂ ಹೋಗೋಣವೆಂದು ಮಕ್ಕಳನ್ನೂ

ಕರೆದುಕೊಂಡು ಹೊರಟೆ. 

...


೨೨ ನೆ ಅಧ್ಯಾಯ

ಈ ಕಥೆಯನ್ನು ಕೇಳಿ ಅಲ್ಲಿದ್ದವರ ಮನಸ್ಸೆಲ್ಲಾ ಕರಗಿತು. ಎಲ್ಲರ

ಕಣ್ಣಿನಲ್ಲಿಯೂ ನೀರು ಬಂತು, ತಾವುಗಳು ಅವನಿಗೆ ಸಹಾಯ

ಮಾಡುವದಾಗಿ ಅಲ್ಲಿದ್ದವರೆಲ್ಲರೂ ಧೈರ್ಯ ಹೇಳಿದರು, ಆಗ ಅಲ್ಲಿದ್ದ

ಲಲಿತೆಯು ಇತರರಿಗಿಂತಲೂ ಅಧಿಕವಾದ ದುಃಖದಿಂದ ಪೀಡಿತಳಾ 

---------------------------------

೨೬೪ ಸುಮತಿ ಮದನಕುಮಾರರ ಚರಿತ್ರೆ       (ಅಧ್ಯಾಯ. 


ದಾಗ್ಗೂ ಉಕ್ಕಿ ಉಕ್ಕಿ  ಬರುವ ಕಣ್ಣೀರನ್ನು ಸೆರಗಿರಿಂದ ಒರಸಿ.

ಕೊಳ್ಳುತ್ತಾ, ವ್ಯಸನವನ್ನು ತಡೆದುಕೊಂಡು-- ಏನೈ , ನಿನ್ನ ಹೆಸರು

ಕಪನಿನಾಯಕನೆಂತಲೆ? ಎಂದು ಕೇಳಿದಳು. ಆ ಮಾತಿಗೆ ಆ ಗಟ್ಟದ

ಕೆಳಗಿನವನು ಬೆರಗಾಗಿ-- ಹವುದು ತಾಯೆ, ಎಂದನು. ಲಲಿತೆಯು-.-

ಹಾಗಾದರೆ ನಿನಗೆ ಯಾರೂ ದಿಕ್ಕಿಲ್ಲವೆಂದು ತಿಳಿಯಬೇಡ, ಭೀಮ

ರಾಜರಿಗೆ ಸಮಾನರಾದ ಮತ್ತೊಬ್ಬರು ಇದಾರೆ. ಅವರ ಪರಿಚಯ

ನಿನಗೆ ಇಲ್ಲದಿದ್ದರೂ ಅವರು ನಿನಗೆ ಉಪಕಾರ ಮಾಡದೇ ಇರರು.

ನೀನು ಹೇಳುವ ಭೀಮರಾಜರು ನಮ್ಮ ತಂದೆಗೆ ಅಣ್ಣ, ಆದ್ದರಿಂದ.

ನನಗೆ ದೊಡ್ಡಪ್ಪನಾಗಬೇಕು. ಸತ್ಯವಂತರಾದ ಭೀಮರಾಜರು ಹೋದ್ದ

ಕ್ಕಾಗಿ ಈ ಸೀಮೆಗೆ ಸೀಮೆಯೇ ಅಳುತಿದೆ. ಅವರಿಗೆ ಸಂಭವಿಸಿದ

ಅಕಾಲಮರಣವು ನಮ್ಮ ಮನೆಗೇ ಮೃತ್ಯುಬಡಿದ ಹಾಗಾಯಿತು,

ಎಂದು ಆಗಾಗ್ಗೆ ಹಲುಬುತಿರುವದಲ್ಲದೆ ತಮ್ಮ ಚಿಕ್ಕಪ್ಪನವರು ತಮ್ಮ

ಅಣ್ಣನಾದ ಭೀಮರಾಜರಿಂದ ಬಂದ ಕಾಗದಗಳನ್ನು ಕಣ್ಣೀರಸುರಿಸುತಾ

ಒಮ್ಮಿಂದೊಮ್ಮೆ ಓದಿಯೋದಿ ಸಂಕಟಪಡುವರು. ಆ ಕಾಗದಗಳನ್ನು

ನಾನು ಓದಿದೇನೆ. ಒಂದೊಂದರಲ್ಲಿಯೂ-- ನನ್ನ ಸಂಗಡ ಬಂದಿರುವ

ಕಪನಿನಾಯಕನೆಂಬ ಗಟ್ಟದ ಕೆಳಗಿನ ಹುಡುಗನು ಬಹಳ ನಂಬಿಕೆ

ಯುಳ್ಳವನು. ಅವನಿಂದ ನಾನು ಬಹುವಾಗಿ ಉಪಕೃತಿಯನ್ನು

ಹೊಂದಿದೇನೆ. ಅವನಿಗೆ ಯಾವ ಪ್ರತ್ಯುಪಕಾರವನ್ನು ಮಾಡಲಿ ಎನ್ನು

ವುದನ್ನೇ ಸದಾ ಯೋಚಿಸುತಿದೇನೆ. ಈ ಅರ್ಥಕ್ಕೆ ಬರೆದಿದೆ : ಹೀಗೆಂಬ

ದಾಗಿ ಲಲಿತೆಯು ನುಡಿದಳು,


ಇದು ಕಿವಿಗೆ ಬಿದ್ದ ಕೂಡಲೆ ಗಟ್ಟದ ಕೆಳಗಿನವನು ಅತ್ಯಾನಂದ

ದಿಂದ ತಟ್ಟನೆ ಎದ್ದು ಮೈಮರೆತು ಲಲಿತೆಯನ್ನು ಕಂಕುಳಿಗೆ ಎತ್ತಿ

ಕೊಂಡು ಅವಳ ತಲೆಯನ್ನು ತಡವರಿಸುತಾ,--ಅಮ್ಮಾ, ಇಂದಿಗೆ

ನಾನು ಧನ್ಯನಾದೆ; ನಿಮ್ಮ ದರುಶನವಾದ ಈ ದಿನವೇ ಸುದಿನ. ಆ

ಪುಣ್ಯಾತ್ಮರಾದ ನನ್ನೊಡೆಯ ಭೀಮರಾಜರ ವಂಶದಲ್ಲಿ ಒಂದು ಕೊನೆ

ಯನ್ನು ನೋಡಿದೆನಲ್ಲಾ ! ಇದು ನನ್ನ ಭಾಗ್ಯವೇ ಸರಿ ನನ್ನ ಬಡತನ

ದಿಂದ ನಾನು ಈ ಕಡೆಗೆ ಬಂದು ತಮ್ಮ ಭೇಟಿಮಾಡಿದೆನಾದ್ದರಿಂದ 

--------------------------------------

೨೨] ಸುಮತಿ ಮದನಕುಮಾರರೆ ಚರಿತ್ರೆ              ೨೬೫ 


ನನ್ನ ಬಡತನವೂ ನನಗೆ ಎಷ್ಟೋ ಹಿತವಾಗಿದೆ, ಎಂದನು. ಆ

ಕ್ಷಣದಲ್ಲಿಯೇ ತನ್ನ ನಡತೆಯನ್ನು ಕಂಡು, ಲಲಿತೆಯು ನಾಚಿಕೆ

ಯಿಂದಲೂ ಗಾಬರಿಯಿಂದಲೂ ಪೀಡಿತಳಾಗಿದಾಳೆಂದು ಯೋಚಿಸುತ್ತಾ

ಆ ಕಪನಿನಾಯಕನು-- ತಾಯಿ ಕೋಪಕೆಲಸವಿಲ್ಲ. ಮೇರೆದಪ್ಪಿ ನಡೆದ

ನನ್ನ ನಡತೆಯನ್ನು ಕ್ಷಮಿಸಬೇಕು. ನನಗೆ ಎರಡನೇ ತಂದೆ ಎಂದು

ನಾನು ಭಾವಿಸಿದ್ದ ನಮ್ಮ ಭೀಮರಸರ ವಂಶಕ್ಕೆ ಒಂದು ಕೊನೆ ಇದೆ  

ಯಲ್ಲಾ ಎಂಬ ಪರಮಾನಂದವು ಪ್ರಜ್ಞೆತಪ್ಪಿ ಮಾಡುವಂಥಾ ಕಾರ್ಯ

ವನ್ನು ನನ್ನಿಂದ ಮಾಡಿಸಿತು. ಇದು ನನ್ನ ಅಪರಾಧ ;--ಹೀಗೆಂದು

ಕ್ಷಮಾಪಣೆಯನ್ನು ಬೇಡಿಕೊಂಡನು. ಜನರ ಸ್ವಭಾವವನ್ನರಿತ

ಲಲಿತೆಯು ಆ ಕಪನಿನಾಯಕನು ದೋಷರಹಿತನೆಂದು ತಿಳಿದು ತನ್ನ 

ದೊಡ್ಡಪ್ಪನ ಸಂಗತಿಗಳನ್ನು ಸವಿಸ್ತಾರವಾಗಿ ಕೇಳಿ ತಿಳಿದುಕೊಳ್ಳುವ

ದಕ್ಕೆ ಒಬ್ಬ ಸಿಕ್ಕಿದನಲ್ಲಾ ಎಂಬ ಸಂತೋಷದಿಂದ ಸುಮ್ಮನಾದಳು.


ಆಗ ಹೊತ್ತಾಯಿತು. ಅಲ್ಲಿದ್ದ ಜನರೆಲ್ಲರೂ ಎದ್ದು ಹೊರಟು

ಹೋದರು. ಉದ್ದಕ್ಕೂ ಈ ಕಥೆಯನ್ನು ಗಮನವಿಟ್ಟು ಕೇಳುತಿದ್ದ

ಮದನನು ರಾಮಜೋಯಿಸರ ಹಿಂದೆಯೇ ಹೊರಟು ಏನೋ ಒಂದು

ವಿಶೇಷ ಸಂಗತಿಯನ್ನು ಮಾತನಾಡಬೇಕೆಂಬ ಇಷ್ಟ ತನಗಿದೆ ಎಂದು

ತೋರ್ಪಡಿಸಿಕೊಂಡನು. ಆಗ ರಾಮಜೋಯಿಸನು ಇವನ ಮುಖ

ರಸದ ಅಭಿಪ್ರಾಯವನ್ನು ತಿಳಿದು ಮದನನನ್ನು ಕುರಿತು ಅತ್ಯಂತ

ಪ್ರೀತಿಯಿಂದ ಅವನ ತಲೆಯನ್ನು ತಡವರಿಸುತಾ--ಮತ್ತೇನೈ, ಏನ

ಮಾತನಾಡಬೇಕೆಂದು ಬಂದೆ? ಎಂದನು.


ಮದನ--(ಕಣ್ಣಿನಲ್ಲಿ ನೀರನ್ನು ತಂದುಕೊಂಡು) ಉಪಾಧ್ಯಾ

ಯಕರೆ, ಬಾಯಿಂದ ಹೇಳಲಾರೆ, ನಾನು ಬಹು ಕೆಟ್ಟ ಹುಡುಗನಾದೆ,

ನಾನು ಕೃತಘ್ನ, ಪೂರ್ವದಲ್ಲಿ ತಮಗೆ ನನ್ನ ಮೇಲೆ ಇದ್ದ ಪ್ರೀತಿ ಈಗ

ಇಲ್ಲವೆಂದು ತೋರುತ್ತೆ.


ಜೋಯಿಸ---ನಿನ್ಸ ತಪ್ಪು ನಿನಗೆ ತಿಳಿದರೆ, ಬುದ್ಧಿವಂತನಾದ್ದಕ್ಕೆ

ಅದು ಒಂದು ಗುರುತು. ನಿನ್ನ ಮನಸ್ಸಿನಲ್ಲಿ ಇರುವದೇನು, ಹೇಳು.

ಯಾಕೆ ಪೇಚಾಡುತೀಯೆ?

----------------------------------

೨೬೬ ಸುಮತಿ ಮದೆನಕುಮಾರರ ಚರಿತ್ರೆ        [ಅಧ್ಯಾಯ


ಮದನ--ನಾನು ತಮ್ಮ ಕೋಪಕ್ಕೆ ಪಾತ್ರನಾಗುವುದಕ್ಕೆ ಮಾಡ

ತಕ್ಕಂಥಾ ಕೆಟ್ಟ ಕೆಲಸವನ್ನು ಮಾಡಿದೇನೆ. ತಾವು ನನ್ನ ಮೇಲೆ

ಆಗ್ರಹವನ್ನು ತೋರಿಸುವುದಕ್ಕೆ ಬದಲಾಗಿ ಒಳ್ಳೇ ಮಾತನ್ನೇ ಆಡುತಾ

ಇದೀರಲ್ಲಾ ; ಇದರಿಂದ ನನಗೆ ಇನ್ನೂ ಹೆಚ್ಚಾಗಿ ದುಃಖಬರುವುದು.


ಜೋಯಿಸ--ನೀನು ಏನಾದರೂ ಅಪರಾಧವನ್ನು ಮಾಡಿದ್ದರೆ,

ಇನ್ನು ಮೇಲೆ ಅಂಥಾದ್ದನ್ನು ಮಾಡುವದಿಲ್ಲವೆಂದು ಮನಸ್ಸಿನಲ್ಲಿ

ನಿಶ್ಚೈಸಿಕೊಳ್ಳುವನಾಗು. ಏನಾದರೂ ಒಂದು ತಪ್ಪನ್ನು ಯಾರಾದರೂ

ಯಾವಾಗಲಾದರೂ ಮಾಡಲೇ ಮಾಡುತಾರೆ. ಅದನ್ನು ತಿಳಿದು

ಅಂಥಾ ಕಾರ್ಯವನ್ನು ಉತ್ತರೋತ್ತರ ಮಾಡುವದಿಲ್ಲವೆಂಬದಾಗಿ

ಖಂಡಿತಮಾಡಿಕೊಳ್ಳಬೇಕು.


ಮದನ-- ಗುರುಗಳೆ ತಾವು ನನಗೆ ಅಪ್ಪಣೆ ಕೊಡಿಸಿದ್ದು ಬುದ್ಧಿ

ವಾದವೇ ಸರಿ. ನನ್ನ ಮನಸ್ಸಿನಲ್ಲಿ ಸೇರಿಕೊಂಡು ಒಳಗೆ ಚುಚ್ಚುತಾ

ನನ್ನನ್ನು ತಳಮಳಗುಟ್ಟಿಸುತಿರುವ ಸಂಗತಿಯನ್ನು ತಮಗೆ ಅರಿಕೆ

ಮಾಡುತೇನೆ. ತಾವು ನನ್ನನ್ನು ತಮ್ಮ ಮನೆಯಲ್ಲಿಟ್ಟುಕೊಂಡು 

ಪೋಷಣೆಮಾಡಿದಿರಿ, ವಿದ್ಯವನ್ನು ಕಲಿಸಿದಿರಿ, ಬುದ್ಧಿಯನ್ನು ಹೇಳಿದಿರಿ,

ನನ್ನ ನಡತೆಯನ್ನು ತಿದ್ದಿದಿರಿ. ಇಷ್ಟಾದಾಗ್ಗೂ ತಮ್ಮ ದೃಷ್ಟಿ ಸ್ವಲ್ಪ

ಮರೆಯಾದಕೂಡಲೆ ನನಗೆ ಇಲ್ಲದ ಕೆಟ್ಟ ತನವೆಲ್ಲಾ ಬಂತು.


ಜೋಯಿಸ-- ನಿನ್ನ ವಿಷಯವಾಗಿ ಯಾಕೆ ಇಷ್ಟು ನೈಚ್ಯವನ್ನು

ಹೇಳಿಕೊಳ್ಳುತೀಯೆ? ಬುದ್ಧಿ ಕಡಮೆಯಾಗಿ ಸ್ವಲ್ಪ ಗರ್ವ ಉಂಟಾ

ಗಿತ್ತೋ ಏನೋ, ಅದಕ್ಕಾಗಿ ಇಷ್ಟು ಪೇಚಾಟವೇಕೆ? ಈ ದೋಷ

ನಿನ್ನಲ್ಲಿ ಯಾವಾಗಲೂ ಇತ್ತೇ ಇತ್ತು. 


ಮದನ--ನನ್ನಲ್ಲಿ ಅರೆಗರ್ವದ ದೋಷವೂ ಬುದ್ಧಿಲೋಪವೂ

ಇರುವುದೇನೋ ನಿಜ. ಆದರೆ ಇದಕ್ಕಿಂತಲೂ ಹೆಚ್ಚಿನ ದೋಷ ನನ್ನಲ್ಲಿ

ಹುಟ್ಟಿದೆ; ಅದು ಯಾವುದೆಂದರೆ ಕೃತಘ್ನತೆ.


ಜೋಯಿಸ--ಇಂಥಾ ಅಪರಾಧ ನಿನ್ನಲ್ಲಿ ಹುಟ್ಟುವುದು ಸಾಧ್ಯವೆ?

ಇದು ನಿಜವೆ?


ಮದನ-- ನಡೆದುದನ್ನೈಲ್ಲಾ ತಮ್ಮಲ್ಲಿ ಅರಿಕೇಮಾಡುತೇನೆ. 

-----------------------------------

೨೨] ಸುಮತಿ ಮದನಕುಮಾರರೆ ಚರಿತ್ರೆ ೨೬೭ 


ತಾವೇ ಯೋಚಿಸಬೇಕು. ತನ್ಮು ಮನೆಗೆ ನಾನು ಆರಂಭದಲ್ಲಿ ವಿದ್ಯಾ

ಭ್ಯಾಸಕ್ಕಾಗಿ ಬಂದಾಗ, ನಾನು ದೊರೆಮಗನೆಂತಲೂ, ಯಲ್ಲರಿಗಿಂತಲೂ

ದೊಡ್ಡವನೆಂತಲೂ ಉಳಿದವರೆಲ್ಲಾ ಅಲ್ಪರೆಂತಲೂ, ತಿಳಿದಿದ್ದೆ.


ಜೋಯಿಸ-- ಈ ಎರಡು ಅವಿವೇಕಗಳೂ ಮೊದಲಿನಿಂದಲೂ

ನಿನ್ನಲ್ಲಿ ಇದ್ದೇ ಇತ್ತು, ಇದು ನಿಜ.


ಮದನ-- ತಮ್ಮಲ್ಲಿ ಯಾವ ಗುಣವಿಲ್ಲದಿದ್ದರೂ ತಾವು ಇತರರಿ

ಗಿಂತಲೂ ದೊಡ್ಡವರೆಂದು ಜನರು ತಿಳಿದುಕೊಂಡಿರತಕ್ಕದ್ದು ಶುದ್ಧ

ಅವಿವೇಕನೆಂದು ನೀವು ಹೇಳಿ ಬುದ್ಧೀ ಕಲಿಸಿದ್ದಿರಿ. ಅಲ್ಪರೆಂದು

ನಾನು ತಿರಸ್ಕಾರ ಮಾಡುತಿದ್ದ ಜನರೆಲ್ಲರೂ ನನಗಿಂತಲೂ ಎಷ್ಟೋ

ಉಪಯುಕ್ತವಾದ ಕೆಲಸಗಳನ್ನು ಮಾಡುತಿದ್ದರು. ನಾನೇ ದೊಡ್ಡವ

ನೆಂದು ತಿಳಿದಿದ್ದ ನಾನು ನನ್ನ ಅವಿವೇಕವನ್ನು ತಿಳಿದು ನಾಚಿಕೊಂಡು

ಇರುತಿದ್ದೆನಷ್ಟೆ. ಅರಮನೆಗೆ ಪ್ರಸ್ತಕ್ಕಾಗಿ ಬಂದಾಗಿನಿಂದ ಅಹಂಕಾರ

ದಲ್ಲಿ ಮೆರೆಯುತಿದ್ದ ಅರಸುಮಕ್ಕಳುಗಳಲ್ಲಿಯೂ ಅರಸಿತ್ತಿಯವರಲ್ಲಿಯೂ

ನಾನು ಓಡಿಯಾಡುತ್ತಲೇ ಇದ್ದೆ. ನಾನು ತಮ್ಮಿಂದ ಕಲಿತಿದ್ದ ವಿವೇಕ

ವನ್ನೆಲ್ಲಾ ಮರೆತುಬಿಡುವಹಾಗೆ ಈ ಜನರು ಮಾಡಿಬಿಟ್ಟರು.


ಜೋಯಿಸ -ಅದನ್ನು ಹೇಗೆ ಹೇಳುವುದು? ಒಳ್ಳೇ ಕೆಲಸ 

ಗಳನ್ನು ಮಾಡುವುದೇ ಲೋಕದಲ್ಲಿ ಉತ್ತಮೋತ್ತಮವಾದ ಗುಣವೆಂದು

ನಿನಗೆ ನಾನು ತಿಳಿಯದೇ ಹೇಳಿಕೊಟ್ಟೆನೋ ಏನೋ, ಆ ರಾಜಕುಮಾ

ರರೂ ಅರಸಿತ್ತಿಯರೂ ನನಗಿಂತಲೂ ಬುದ್ಧಿವಂತರಾಗಿರಬಹುದು.

ಅವರು ಒಳ್ಳೇ ಮಾತನ್ನೇ ಹೇಳಿಕೊಟ್ಟಿರಬಹುದು.


ಮದನ -- ಗುರುಗಳೆ, ಹಾಗಲ್ಲ. ಅವರು ಬುದ್ಧಿವಂತರೂ ಅಲ್ಲ.

ಒಳ್ಳೆಯವರೂ ಅಲ್ಲ. ಅವರಿಗೆ ಇದು ಯಾವುದೂ ಬಾರದು, ಆದರೆ

ಬೇಕಾದ ಒಡವೆಯನ್ನಿಟ್ಟುಕೊಳ್ಳುವುದು, ಬೇಕಾದ ಬಟ್ಟೆಯ ಧರಿಸಿ

ಕೊಳ್ಳುವುದು, ಹೆಂಗಸು ಗಂಡಸು ಎಂಬ ಭೇದವಿಲ್ಲದೆ ಕ್ಷೌರದಕತ್ತಿ

ಯನ್ನು ಹಿಡಿದು ಮುಖಕ್ಷೌರವನ್ನು ಮಾಡಿಕೊಳ್ಳುವುದು ಹುಬ್ಬನ್ನೂ

ಪನ್ನೆಯನ್ನೂ  ತಿದ್ದಿಕೊಳ್ಳುವುದು ಕೆಲಸಕ್ಕೆ ಬಾರದ ಹರಟೆಯನ್ನು

ಹರಟುವುದು, ಜೂಜು ಮೊದಲಾದ ದುಷ್ಕಾರ್ಯಗಳಲ್ಲಿ ಕಾಲವನು 

--------------------------------------

೨೬೮ ಸುಮತಿ ಮದನಕುಮಾರೆರೆ ಚರಿತ್ರೆ          [ಅಧ್ಯಾಯ 


ಕಳೆಯುವುದು, ಇವುಗಳನ್ನು ಮಾತ್ರ ಬಲ್ಲರು. ಆದರೆ ನಡೆನುಡಿಗಳಲ್ಲಿ

ಮರ್ಯಾದೆಯಾಗಿರಬೇಕೆಂದುಮಾತ್ರ ಹೇಳಿಕೊಟ್ಟರು. ನಾನು ಅವರ

ಮಾತನ್ನು ನಂಬಿದೆ.


ಜೋಯಿಸ--ಇದು ಒಳ್ಳೇ ಮಾತು. ಎಲ್ಲರೂ ಮರ್ಯಾದೆ

ಯಾಗಿರಬೇಕು. ಇದನ್ನು ನಿನಗೆ ಅವರು ಹೇಳಿಕೊಟ್ಟಿದ್ದರಿಂದ

ಉಪಕಾರಮಾಡಿದರೆಂದು ತಿಳಿ, ಇದು ಅಪಕಾರವಲ್ಲ.


ಮದನ-- ಹಾಗೆ ಹೇಳಲಾಗದು. ಮರ್ಯಾದೆಯುಳ್ಳ ವನಾಗಿಯೂ

ಇರಬೇಕೆಂದು ಅವರು ನನಗೆ ಹೇಳಿಕೊಟ್ಟಿದ್ದರೆ ಸರಿಯಾಗಿತ್ತು. ಇವರು

ಹೇಳಿದ ಬುದ್ಧಿವಾದದಿಂದ ನನ್ನ ವರಟುತನ ಹೆಚ್ಚಿತು.


ಜೋಯಿಸ - ಹಾಗಾದರೆ ತಮಗೆ ತಿಳಿಯದ ಅಂಶವನ್ನು ಈ

ಅರಸುಮಕ್ಕಳೂ ಅರಸಿತ್ತಿಯರೂ ನಿನಗೆ ಹೇಳಿಕೊಟ್ಟ ಹಾಗಾಯಿತು,


ಮದನ--ಹಾಗೇಸರಿ. ನನ್ನ ಬುದ್ಧಿ ಮೋಸಹೋಯಿತು. ಅವರು

ಆಡಿದ ಹಾಗೆಲ್ಲಾ ನಾನು ಆಡುವುದಕ್ಕೆ ಮೊದಲು ಮಾಡಿದೆ. ನಮ್ಮ

ಸುಮತಿಯನ್ನು ಅವರು ನೋಡಿ ಹಾಸ್ಯಮಾಡಿದರು. ನಾನೂ ಅವರ

ಜೊತೆಗೆ ಸೇರಿಕೊಂಡೆ. ಸುಮತಿಯ ಸಂಗವನ್ನು ಬಿಟ್ಟು ಬಿಟ್ಟೆ.


ಜೋಯಿಸ-ಅಯ್ಯೋ ಪಾಪ! ಸುಮತಿ ಯೇನೋ ನಿನ್ನಲ್ಲಿ ವಿಶೇಷ

ವಾಗಿ ಪ್ರೀತಿಯನ್ನು ಇಟ್ಟುಕೊಂಡಿದಾನೆ. ಆದರೂ ಚಿಂತೆಯಿಲ್ಲ.

ಅವನಿಗೆ ಬೇರೆ ಕೆಲಸವಿದೆ. ನೀನು ಎಷ್ಟೇ ಬುದ್ಧಿಶಾಲಿಯಾಗಿದ್ದಾಗ್ಗೂ 

ನಿನ್ನ ಸಂಗಡ ಸೇರಿ ಹರಟೇ ಬಡಿದುಕೊಂಡು ಕೂತಿದ್ದರೆ ಅವನ ಹೊಟ್ಟೆ

ಹೇಗೆ ತುಂಬಬೇಕು? ಅವನ ಆರಂಬದ ಕೆಲಸವನ್ನು ಅವನೇ ನೋಡಿ

ಕೊಂಡು ಅರಸುಮಕ್ಕಳ ಸಹಾಯಕ್ಕೆ ನಿನ್ನನ್ನು ಬಿಟ್ಟು ಬಿಡಬೇಕು.

ಅವನ ಇಷ್ಟವೂ ಹಾಗೆಯೇ ಇದೆ. ನಿಮ್ಮ ಅಪ್ಪಾಜಿಯವರು ಬಲವಂತ

ಮಾಡದಿದ್ದರೆ ಅವನು ನಿನ್ನ ಸಂಗಡ ಬರುತಿರಲಿಲ್ಲ. ನಿನಗೇನೋ

ದೊರೆಮಕ್ಕಳ ಸಂಗ ಸಿಕ್ಕಿತು. ಇನ್ನು ಅವನಿಂದೇನು?


ಮದನ-- ತಾವು ಹಾಗೆ ತಿಳಿಯಕೂಡದು. ಸುಮತಿಯು ನನ್ನ

ಅಪರಾಧವನ್ನೆಲ್ಲಾ  ಕ್ಷಮಿಸಿ, ಪೂರ್ವದಂತೆಯೇ ನನ್ನ ಸಂಗಡ ಸಲಿಗೆ

ಯಾಗಿ ಮಾತನಾಡಿಕೊಂಡಿರುವತನಕ ನನ್ನ ಮನಸ್ಸು ಸಮಾಧಾನ 

---------------------------------------

೨೨] ಸುಮತಿ ಮದನಕುಮಾರರ ಚರಿತ್ರೆ ೨೬೯ 


ವಾಗಿರಲಾರದು. ಇದಕ್ಕಾಗಿ ನಾನು ಏನಬೇಕಾದರೂ ಮಾಡುತೇನೆ.


ಜೋಯಿಸ-- ಹಾಗಾದರೆ ದೊಡ್ಡ ಅರಸುಮಕ್ಕಳ ಸಂಗವೆಲ್ಲಾ

ನಿನಗೆ ತಪ್ಪಿ ಹೋಗುವದಲ್ಲಾ.


ಮದನ — ಅದನ್ನೆಲ್ಲಾ ನಾನು ಲಕ್ಷ್ಯಮಾಡುವುದಿಲ್ಲ. (ಈ ರೀತಿ

ಯಲ್ಲಿ ಮದನನು ಹೇಳಿ ತಾನು ಸುಮತಿಯನ್ನು ಹೊಡೆದದ್ದೇ ಮೊದ

ಲಾಗಿ ಎಲ್ಲಾ ಸಂಗತಿಯನ್ನೂ ವಿಸ್ತಾರವಾಗಿ ಗುರುವಿಗೆ ಅರಿಕೆ

ಮಾಡಿದನು.)


ಜೋಯಿಸ-- ನಿನ್ನ ಅಪರಾಧವೇನೋ ಅಲ್ಪವಾದ್ದಲ್ಲ. ಈ,

ಅಭಿಪ್ರಾಯವನ್ನು ನಿನಗೆ ಹೇಳದೆ ನಾನು ಮರೆಮಾಚಲಾರೆ. ಆದರೂ

ಸುಮತಿಯು ಬಹು ದಯಾಳುವಾದ್ದರಿಂದ ನಿನ್ನ ದುರ್ನಡತೆಯನ್ನು

ಅವನು ಕ್ಷಮಿಸುವನೆಂಬ ಭಾಗದಲ್ಲಿ ನನಗೇನೂ ಸಂದೇಹ ತೋರುವುದೇ

ಇಲ್ಲ.


ಮದನ--ಹಾಗಾದರೆ ಸುಮತಿಯನ್ನು ತಾವು ಇಲ್ಲಿಗೆ ಕರೆದು

ತರುತೀರ?


ಜೋಯಿಸ--ಸುಮತಿ ಇಲ್ಲಿಗೆ ಯಾಕೆ ಬರಬೇಕು? ಅವನಿಗೆ

ನೀನು ಅವಮಾನ ಮಾಡಲಿಲ್ಲವೆ? ಬೈಲಿಲ್ಲವೆ? ಕೊನೆಗೆ ಹೊಡೆಯಲೂ

ಇಲ್ಲವೆ? ಇಷ್ಟೂ ಯಾತಕ್ಕೋಸ್ಕರ? ನಿನಗೆ ವಿವೇಕವಾದ ಮಾತನ್ನು

ಹೇಳಿಕೊಟ್ಟು ನಿನಗೆ ಆಗುತಿದ್ದ ಅಪಾಯವನ್ನು ತಪ್ಪಿಸಬೇಕೆಂದು

ಯತ್ನಮಾಡಿದ್ದಕ್ಕೋಸ್ಕರ. ಹೀಗಿರುವಾಗ್ಗೆ ಯಾರಾದರೂ ನಿನ್ನ

ಸಮೀಪಕ್ಕೆ ಬಂದಾರೆಂದು ತಿಳಿದು ಇದ್ದೀಯ? 


ಮದನ-- ಹಾಗಾದರೆ ನಾನು ಏನಮಾಡಲಿ?


ಜೋಯಿಸ---ನಿನಗೆ ಮತ್ತೆ ಸುಮತಿಯ ಸಂಗ ಬೇಕಾದರೆ ಅವರ

ಮನೆಗೆ ಹೋಗಿ ಅವನಿಗೆ ಉಪಚಾರವನ್ನು ಹೇಳಿ ಕ್ಷಮಾಷಣೆಯನ್ನು

ಬೇಡಿಕೊಳ್ಳ ಬೇಕು.


ಮದನ--ನನ್ನು ಆ ಬಡ ಹಾರವರ ಮನೆಗೆ ಹೋಗಿ ಅವರಿ

ಮನೇ ಜನದ ಎದುರಿಗೆಲ್ಲಾ ನನ್ನ ಸಂಗತಿಯನ್ನು ಹರಪೆಮಾಡಿ

ಕೊಳ್ಳಲೆ? 

-------------------------------------

೨೭೦ ಸುಮತಿ ಮದೆನಕುಮಾರರೆ ಚರಿತ್ರೆ [ಅಧ್ಯಾಯ 


ಜೋಯಿಸ.--ಇದಕ್ಕಾಗಿ ನಾನು ಏನಬೇಕಾದರೂ ಮಾಡುತೇನೆ

ಎಂದು ಈಗತಾನೆ ನೀನು ಎಂದೆಯಲ್ಲಾ ? ಈಗ ನಿನ್ನ ಸ್ನೇಹಿತನ 

ಮನೆಗೆ ಹೋಗಿ ಅವನನ್ನು ನೋಡುವುದಕ್ಕೆ ನನ್ನ ಕೈಲಾಗದು ಎನ್ನು

ತೀಯೆ. ಒಬ್ಬ ಮನುಷ್ಯ ಕೆಟ್ಟ ಕೆಲಸ ಮಾಡಿದಾಗ್ಗೂ ಅದು ಅವಮಾನ

ವಲ್ಲವೊ? ಅದರಿಂದ ಹರಪೆಯಾಗಲಿಲ್ಲವೊ? ಅದನ್ನು ತಾನು ಮಾಡಿದೆ

ನೆಂದು ಒಪ್ಪಿಕೊಂಡು ತಪ್ಪನ್ನು ಸರಿಮಾಡಿಕೊಂಡಮಾತ್ರಕ್ಕೆ ಅದು.

ಹರಪೆಯಾಯಿತೊ?


ಮದನ-- ದೊರೆಮಗನಾದ ನನ್ನಂಥವನು ಆ ಬಡ ಹಾರವರ

ಮನೆಗೆ ಹೋಗಿ ನನ್ನಿಂದ ತಪ್ಪಾಯಿತು, ಎಂದು ಆ ಹಾರವ ಹುಡು

ಗನ ಮುಂದೆ ನಿಂತು ಒಪ್ಪಿಕೊಂಡರೆ, ಜನರು ಏನೆಂದಾರು?


ಜೋಯಿಸ--ಏನೆನ್ನುತಾರೆಯೆ? ನೀನು ಬುದ್ಧಿವಂತ, ಒಳ್ಳೆಯ

ವನು ಕೃತಜ್ಞ ಎನ್ನುತಾರೆ. ಯಾವುದು ಹೇಗಾದರೂ ಇರಲಿ ; ನಿನ್ನ

ಮನಸ್ಸು ಬಂದಹಾಗೆ ಮಾಡು ; ನಾನು ಏನನ್ನೂ ಹೇಳುವುದಿಲ್ಲ.

ಸುಮತಿ ನಿನಗೆ ಸಂಗಾತಿಯಾಗುವುದಕ್ಕೆ ಅಯೋಗ್ಯ ಎಂದು ಇನ್ನೂ

ತಿಳಿದುಕೊಂಡಿದ್ದೀಯೆ. ಹಾಗೆಯೇ ಆಗಲಿ. ನಿನ್ನ ಹೊಸ ಸಂಗಾತಿ

ಗಳಾದ ಅರಸುಮಕ್ಕಳ ಸ್ನೇಹವನ್ನೇ ಮಾಡಿಕೊಂಡಿರು.


ಮದನ--(ಅಳುತ್ತ) ತಾವು ನಿಂತುಕೊಳ್ಳದೆ ಹೊರಟು ಹೋಗು

ತೀರಲ್ಲಾ !


ಜೋಯಿಸ--ನನಗೆ ತೋರಿದ ಮಾತನ್ನು ನಾನು ಹೇಳಿದೆ. ನನ್ನ

ಮಾತನ್ನು ಕೇಳದೇ ಇದ್ದರೆ ನಿನ್ನ ಮನಸ್ಸು ಬಂದಹಾಗೆ ಮಾಡು.

ನಾವು ಆಡುತಿದ್ದ ಮಾತು ಇಲ್ಲಿಗೆ ಮುಗಿಯಿತು. ಇನ್ನು ನಾನು

ಹೊರಡುತೇನೆ.


ಮದನ---ತಾವು ಹೋಗಬೇಡಿ. ಸುಮತಿಗೆ ನಾನು ಹಾಗೆಲ್ಲಾ

ಮಾಡಿದ್ದಕ್ಕಾಗಿ ನಮ್ಮ ಅಪ್ಪಾಜಿ ಮೊದಲೇ ಕೋಪವಾಗಿದಾರೆ.

ತಾವೂ ನನ್ನ ಬಿಟ್ಟು ಹೊರಟು ಹೋದರೆ, ನನಗೆ ಇತ್ತ ಬಾ ಎನ್ನುವ

ವರೇ ಇಲ್ಲದ ಹಾಗಾಗುವುದು.


ಜೋಯಿಸ--ಅದು ನಿನ್ನ ತಪ್ಪೇ. ಮಾಡಿದ ತಪ್ಪನ್ನು ಒಪ್ಪಿ 

------------------------------------

೨೨] ಸುಮತಿ ಮದನಕುಮಾರರ ಚರಿತ್ರೆ ೨೭೧ 


ಕೊಂಡು ಎಲ್ಲರಿಗೂ ಒಳ್ಳೆಯವನಾಗುವುದು ನಿನ್ನ ಕೈಲಿದೆ. ಹಾಗೆ

ನೀನು ಮಾಡಿದರೆ, ನಿಮ್ಮ ಅಪ್ಪಾಜಿಯವರಿಗೆ ಸಂತೋಷವಾಗುವುದು,

ಸುಮತಿಯ: ನಿನ್ನ ಅಪರಾಧವನ್ನು ಕ್ಷಮಿಸಿ ಎಂದಿನಂತೆ ನಿನಗೆ

ಸಂಗಾತಿಯಾಗಿರುವನು, ಪೂರ್ವದಲ್ಲಿ ನಾನು ತಿಳಿದಿದ್ದ ಹಾಗೆಯೇ

ಈಗಲೂ ನೀನು ಸ್ವಲ್ಪ ಮಟ್ಟಿಗೆ ಗುಣಾಢ್ಯನೆಂದು ನಾನು ತಿಳಿಯುವೆನು. 


ಮದನ--ನನ್ನ ದುರ್ಗುಣಗಳನ್ನೆಲ್ಲೂ ತಾನು ಕೇಳಿದಮೇಲೆಯೂ

ನನ್ನ ವಿಷಯದಲ್ಲಿ ಒಳ್ಳೇ ಅಭಿಪ್ರಾಯವನ್ನು ತಾವು ಇಟ್ಟುಕೊಂಡಿರ

ಬಹುದೆ? 


ಜೋಯಿಸ-- ನಿನ್ನಲ್ಲಿ ಹೆಮ್ಮೆಯೂ ಅಜಾಗರೂಕತೆಯೂ ಇವೆ.

ಆದರೆ ಸ್ವಲ್ಪ ಒಳ್ಳೇತನವೂ ಧಾರಾಳವಾದ ಮನಸ್ಸೂ ನಿನಗೆ

ಉಂಟೆಂದು ತಿಳಿದಿದ್ದೆ. ಮೇಲೆ ಕಂಡ ದುರ್ಗುಣಗಳಿಂದ ನನ್ನ ದೋಷ

ವನ್ನು ನಿನಗೆ ತೋರಿಸಿ ಮೇಲೆ ಕಂಡ ಸುಗುಣದ ದೆಸೆಯಿಂದ ನಿನ್ನ

ತಪ್ಪನ್ನು ತಿದ್ದಬಹುದೆಂದು ತಿಳಿದಿದ್ದೆ. ಆದಕಾರಣ, ಸುಮತಿಯ

ಸಂಗಡ ನೀನು ಜಗಳವಾಡಿದ್ದಕ್ಕಾಗಿ ಬಹಳವಾಗಿ ಪೇಚಾಡುತಿದ್ದ

ನಿಮ್ಮಪ್ಪಾಜಿಯವರ ಸಂಗಡ ನಿನಗೆ ಅನುಕೂಲವಾಗಿಯೇ ಮಾತ

ನಾಡಿದೆ. ಅಕಸ್ಮಾತ್ತಾಗಿ ಕೋಪಬಂದು ಜಗಳ ಹುಟ್ಟಿರಬಹುದೇ

ಹೊರತು, ಸಂದರ್ಭಗಳನ್ನೆ,ಲ್ಲಾ ನಿದಾನವಾಗಿ ಯೋಚಿಸಿದರೆ, ನನಗೆ

ಬೇರೆ ಅಭಿಪ್ರಾಯ ಉಂಟಾಗುವುದೆಂತಲೂ ; ನಿನ್ನ ದೋಷವು ನಿನಗೇ

ತಿಳಿದು ನೀನು ಅದನ್ನು ಒಪ್ಪಿಕೊಳ್ಳುತಿದ್ದೆ. ಎಂತಲೂ ; ರಾಜರ

ಸಂಗಡ ನಾನು ಹೇಳಿದೆ. ನಿನ್ನ ನಡತೆ ಹೀಗೆ ಇದೆ ಎಂದು ತಿಳಿದಿದ್ದರೆ,

ನಿನ್ನ ಪರವಾಗಿ ನಾನು ಎಂದಿಗೂ ಮಾತನಾಡುತಿರಲಿಲ್ಲ. ನೀನು

ಸುಮತಿಯ ಮೇಕೇಮರಿಯನ್ನು ಬಿಡಿಸಿಕೊಂಡು ಬಂದದ್ದೂ, ಗಟ್ಟದ

ಕೆಳಗಿನವನ ಕಥೆಯನ್ನು ಕೇಳಿ ಪರಿತಾಪಪಟ್ಟಿದ್ದೂ ; ಇವುಗಳನ್ನೆಲ್ಲಾ

ನೋಡಿ ನಿನ್ನಲ್ಲಿ ಸುಗುಣವಿದೆ ಎಂಬದಾಗಿಯೂ, ಆದಕಾರಣ ನೀನು

ದುರ್ಮಾರ್ಗವನ್ನೇ ಯಾವಾಗಲೂ ಹಿಡಿಯಲಾರೆ ಎಂಬದಾಗಿಯೂ,

ಮಾಡಿದ ಅಪರಾಧವನ್ನು ಒಪ್ಪಿಕೊಳ್ಳುವ ಧಾರಾಳವಾದ ಮನಸ್ಸು,

ನಿನ್ನಲ್ಲಿ ಉಂಟೆಂಬುದಾಗಿಯೂ ನಾನು ಹೇಳಿದೆ. ಇಂಥಾ ಸುಗುಣ 

--------------------------------------

229 ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಗಳಿರುವುದೇ ಉತ್ತಮಪುರುಷರ ಲಕ್ಷಣ, ಕೆಟ್ಟ ದಾರಿಯನ್ನು ಹಿಡಿದು

ನೀಚರಾಗುವುದೇ ಅಧಮರ ಲಕ್ಷಣ.


ಮದನ---ಜೋಯಿಸರೆ, ತಾವು ಅಪ್ಪಣೇಕೊಡಿಸಿದ್ದು ನನ್ನ ಮನ

ಸ್ಸಿಗೆ ಬಂತು. ನಾನು ಸುಮತಿಯ ಮನೆಗೆ ಹೋಗಿ ನನ್ನ ತಪ್ಪನ್ನು

ಕ್ಷಮಿಸಬೇಕೆಂದು ಆತನನ್ನು ಬೇಡಿಕೊಳ್ಳುತೇನೆ, ತಾವೂ ನನ್ನ ಸಂಗಡ

ದಯಮಾಡುತೀರ?


ಜೋಯಿಸ-- ತಾಳು, ತಾಳು ನಿದಾನಿಸಿಕೊ. ನಾನು ಹೇಳಿದ

ಬುದ್ಧೀಮೂತು ನಿನ್ನ ಮನಸ್ಸಿಗೆ ತಟ್ಟಿದ್ದು ಸಂತೋಷವೇ ಸರಿ. ಆದರೆ

ನೀನು ಯಾವ ಕೆಲಸವನ್ನು ಮಾಡಬೇಕಾದರೂ ದುಡುಕು ಹೆಚ್ಚು.

ತಾಳು, ಸುಮತಿಯ ಮನೆಗೆ ನೀನು ಹೊರಡುವುದಕ್ಕೆ ಮುಂಚೆ ನಿಮ್ಮ

ಅಪ್ಪಾಜಿಯನ್ನೂ ಅಮ್ಮಯ್ಯನನ್ನೂ ಕೇಳಿ ಅವರ ಅಪ್ಪಣೆಯನ್ನು

ಪಡೆಯಬೇಕು. ಈ ಮಧ್ಯೆ ಸುಮತಿಯ ತಂದೆಯಾದ ಸೂರ್ಯಭಟ್ಟನ

ಮನೆಗೆ ಹೋಗಿ ಸುಮತಿಯ ಯೋಗಕ್ಷೇಮವನ್ನು ವಿಚಾರಿಸಿಕೊಂಡು

ಬರುತೇನೆ.


ಮದನ--ಹಾಗೇ ಆಗಲಿ. ನಾನು ಸುಮತಿಯ ಕ್ಷೇಮಲಾಭ

ವನ್ನು ವಿಚಾರಿಸಿದೆನೆಂದು ಆವನಿಗೆ ಹೇಳಿ, ಅವನನ್ನು ನೋಡುವ

ತನಕ ನನಗೆ ಮನಸ್ಸು ಸಮಾಧಾನಕ್ಕೆ ಬರುವುದಿಲ್ಲ... ಗೂಳಿ ಹಾಯು

ತಿದ್ದಾಗ ಸುಮತಿಯ ಪ್ರಾಣವನ್ನು ಉಳಿಸಿದ ಮನುಷ್ಯನಿಗೂ ನಾನು

ಏನಾದರೂ ಉಪಕಾರವನ್ನು ಮಾಡಬೇಕು,


ಈ ಮಾತನ್ನು ಕೇಳಿ ಸುಮತಿಯ ಒಳ್ಳೇತನಕ್ಕೆ ಸಂತೋಷ

ಪಡುತಾ, ರಾಮಜೋಯಿಸನು ಹೋಗಿ: ಅನಂಗರಾಜನನ್ನು ಕಂಡು

ನಡೆದ ಸಂಗತಿಯನ್ನೆಲ್ಲಾ ಹೇಳಿದನು... ಅನಂಗರಾಜನು ತನ್ನ

ಮಗನಿಗೆ ವಿವೇಕವು ಉದಯಿಸುತ್ತಿರುವುದನ್ನು ಕೇಳಿ ಸಂತೋಷ

ಪಟ್ಟನು. ಮತ್ತು ತನ್ನ ಮಗನು ಸುಮತಿಯ ಮನೆಗೆ ಹೋಗಿ ಅವನ

ಕ್ಷಮೆಯನ್ನು ಬೇಡಿಕೊಂಡು ಎಂದಿನಂತೆ ಅವನ ಸ್ನೇಹವನ್ನು ಬೆಳೆಯು

ಸಿದರೆ ಸಾಕೆಂದು ಕೋರಿದನು.  

...

-----------------------------------

೨೩] ಸುಮತಿ ಮುದನಕುಮಾರರ ಚರಿತ್ರೆ ೨೭೩ 

                            ೨೩ನೆ ಅಧ್ಯಾಯ

ತರುವಾಯ, ಸೂರ್ಯಭಟ್ಟನು ತನ್ನ ತುಡಿಕೇಮನೆಯಲ್ಲಿ ಇದಾ

ನೆಂದು ಕೇಳಿ ರಾಮಜೋಯಿಸನು ಅಲ್ಲಿಗೆ ಕಾಲನಡಗೆಯಲ್ಲಿಯೇ

ಹೊರಟನು. ಆ ಮನೆಯು ಒಂದು ಬೆಟ್ಟದ ಕಿಬ್ಬಿಯಲ್ಲಿತ್ತು. ಸಮೀ 

ಪದಲ್ಲಿಯೇ ಒಂದು ಚಿಕ್ಕನದಿ ಹರಿಯುತಿತ್ತು. ಜೋಯಿಸನು ಅಲ್ಲಿಗೆ

ಹೋಗಿ ತಲಪಿದಾಗ,ಸೂರ್ಯಭಟ್ಟನು ತೋಟದಲ್ಲಿ ಅಗತೆ ಮೊದಲಾದ್ದನ್ನು 

ಮಾಡುತಿದ್ದರು. ತಂದೆಯು ಕೆಲಸಮಾಡುತ್ತಾ ಮಗನಿಗೆ ವೇದವನ್ನು

ಸಂಥೆ ಹೇಳುತಾ ಕೆಲವು ಸೂಕ್ತಗಳನ್ನೂ ಸ್ತೋತ್ರಗಳನ್ನೂ ಹೇಳಿ

ಕೊಡುತಾ ಇದ್ದನು, ಸುಮತಿಯು ರಾಮಜೋಯಿಸನನ್ನು ದೂರ

ದಲ್ಲಿಯೇ ಕಂಡಕೂಡಲೆ ಬೇಗ ಆತನ ಸಮೀಪಕ್ಕೆ ಓಡಿಹೋಗಿ ಅತನಿಗೆ

ನಮಸ್ಕಾರವನ್ನು ಮಾಡಿ ಅವರ ಕುಶಲವನ್ನು ವಿಚಾರಿಸಿದನು. ತರು

ವಾಯ 


ಸುಮತಿ-- ಗುರುಗಳೆ, ತಾವು ಬರುವ ದಾರಿಯನ್ನು ನೋಡಿದರೆ.

ತಾವು ದೊರೆಯ ಅರಮನೆಯಿಂದ ಬರುವಹಾಗೆ ಕಾಣುತ್ತೆ. 


ಜೋಯಿಸ--ಹವುದು. ಆದರೆ ನೀನೂ ಮದನನೂ ಪೂರ್ವ

ದಂತೆ ಸ್ನೇಹಿತರಾಗಿಲ್ಲವೆಂದು ತೋರುತ್ತೆ. 


ಸುಮತಿ_-_ನನಗೂ ಅದೇ ಚಿಂತೆಯಾಗಿದೆ. ಮದನನು ತನ್ನ

ನಡತೆಯನ್ನು ಬದಲಾಯಿಸಿಕೊಂಡು ನನ್ನ ಸಂಗವನ್ನು ಬಿಡುವುದಕ್ಕೆ.

ಕಾರಣ ನನ್ನಿಂದ ಉಂಟಾಗಲಿಲ್ಲ, ಹೇಗಾದರೂ ಆಗಲಿ, ಅವನು

ಕ್ಷೇಮವಾಗಿದ್ದರೆ ಸಾಕು. ಅದೇ ನನಗೆ ಬೇಕಾದ್ದು. 


ಜೋಯಿಸ--ನೀನು ಅರಮನೆಯಲ್ಲಿಯೇ ಇದ್ದರೆ ಅವನ ಕ್ಷೇಮ 

ಗೊತ್ತಾಗುತ್ತಿತ್ತು. ಯಾರಿಗೂ ತಿಳಿಸದೆ ನಿನ್ನಲ್ಲಿ, ಎಷ್ಟೋ ಪ್ರೀತಿಯ

ನ್ನಿಟ್ಟು ಕೊಂಡಿರುವ ಧೊರೆಗೂ ಹೋಗಿಬರುತ್ತೇನೆಂದು ಹೇಳದೆ ನೀನು

ಬಂದುಬಿಟ್ಟೆಯಲ್ಲ. 


ಸುಮತಿ--ಅಪ್ಪಣೆಯಾದರೆ ನಡೆದ ಸಂಗತಿಯನ್ನು ನಡೆದ

ಹಾಗೆಯೇ ಅರಿಕೇಮಾಡುತ್ತೇನೆ, ಮದನನಮೇಲೆ ದೋಷಾರೋಪಣೆ 

-----------------------------------

೨೭೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಮಾಡುವುದಕ್ಕೆ ಇಷ್ಟವಿಲ್ಲ. ಆದರೆ ನಿಶ್ಚಯವನ್ನು ಹೇಳಬೇಕು.

ಅರಮನೆಗೆ ಹೋಗುವುದಕ್ಕೆ ನನಗೆ ಮೊದಲೇ ಇಷ್ಟವಿರಲಿಲ್ಲವೆಂಬ

ಸಂಗತಿ ತಮಗೆ ಗೋಚರವೇ ಇತ್ತು. ಧೊರೆಮಕ್ಕಳೂ ರಾಣಿವಾಸ

ದವರೂ ನನ್ನ ಬಟ್ಟೆ ಬರೆಯನ್ನೂ ನಡತೆಯನ್ನೂ ನೋಡಿ ಹಾಸ್ಯಮಾಡ

ಬಹುದೆಂದು ನನಗೆ ಭಯವಿದ್ದೇ ಇತ್ತು. ಮದನ ನನ್ನ ಸಂಗಾತಿ

ಯಾಗಿದ್ದಾಗ್ಗೂ ಅವನು ಅವರ ಮನೆಗೆ ಹೋದರೆ ನನ್ನಸಂಗ ಮಾಡಿದ್ದ

ಕ್ಕಾಗಿ ನಾಚಿಕೊಳ್ಳುತ್ತಾನೆಂದು, ನಾನು ತಿಳಿದುಕೊಂಡೇ ಇದ್ದೆ.


ಜೋಯಿಸ -- ಆಶ್ಚರ್ಯವೇನು? ಅವರು ದೊಡ್ಡವರು, ನೀವು

ಬಡವರು.


ಸುಮತಿ--ದೊಡ್ಡವರು ಬಡವರನ್ನು ಕಂಡರೆ ಲಕ್ಷ್ಮ್ಯವಿಲ್ಲದೆ, ಅವ

ರಿಗೆ ಅವಮಾನಮಾಡುತ್ತಾರೆಂದು ನಾನು ಬಲ್ಲೆ. ಆದರೆ ಈ ಸಂದರ್ಭ

ಬೇರೆ. ನಿನ್ನ ಜೊತೆಗೆ ನನ್ನನ್ನು ಸೇರಿಸಿಕೊ, ಎಂದು ಮದನನನ್ನು

ನಾನು ಬೇಡಿಕೊಳ್ಳಲಿಲ್ಲ. ನಾವೇನೋ ಬಡವರು ಹವುದು. ತಾವು

ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದಿರಿ. ಮದನನೂ

ಅಲ್ಲಿಗೆ ಬಂದು ತಾನಾಗಿಯೇ ನನ್ನ ಸಂಗವನ್ನು ಬಯಸಿ ಬಯಸಿಮಾಡಿ

ಕೊಂಡನು. ನಾನು ಅವನನ್ನು ಕಂಡರೆ ಮರ್ಯಾದೆಯಾಗಿಯೇ ಇದ್ದೆ.


ಜೋಯಿಸ: -ನಿನ್ನ ಆಟಪಾಟಗಳಲ್ಲಿ ನೀನು ತಾಳ್ಮೆಯಿಂದಲೇ

ಇದ್ದದ್ದು ನಿಜ.


ಸುಮತಿ--ಮದನನಲ್ಲಿ ನನಗೆ ಪ್ರೀತಿ ಇದ್ದಾಗ್ಗೂ ನಾನೇನೂ

ಅವರ ಮನೆಗೆ ಬೇಕೆಂದು ಹೋದವನಲ್ಲ. ಬೇಕಾದ ಸಿಸ್ತನ್ನು ಮಾಡಿ

ಕೊಂಡು ಮೆರೆಯುತ್ತಿದ್ದ ಆ ರಾಜಬಂಧುಗಳ ಮಂಡಲಿಯಲ್ಲಿ ನನ್ನಂಥಾ

ಒರಟು ಹುಡುಗ ದೃಷ್ಟಿ ಪರಿಹಾರಕ್ಕಾಗಿ ಇರತಕ್ಕದ್ದೇ ಹೊರತು ಬೇರೆ

ಇಲ್ಲ. ಎಲ್ಲರೂ ನನ್ನನ್ನು ನೋಡಿ ನಕ್ಕರು, ಹಾಸ್ಯಮಾಡಿದರು, ಆಟದ

ಕೋಡಂಗಿಯನ್ನು ಕಂಡಹಾಗೆ ಗೇಲಿಮಾಡಿದರು. ಅವರು ಒಡನೆ,

ಸಿಸ್ತು, ಜೂಜು, ಇಂಥಾ ಅಲ್ಪವಾದ ವಿಷಯದಲ್ಲಿ ಹರಟೆಯನ್ನು ಹರ

ಟುತಿದ್ದರೇ ಅಲ್ಲದೆ, ' ನಾರಾಯಣ, ಕೃಷ್ಣ' ಎಂತಲಾಗಲ್ಲಿ, ತಂದೆ

ತಾಯಿಗಳು ಹೇಳಿದಹಾಗೆ ಕೇಳಬೇಕೆಂತಲಾಗಲಿ, ಬಡವರಿಗೆ ಉಪ 

---------------------------------------

[24 ಸುಮತಿ ಮದನಕುಮಾರರ ಚರಿತ್ರೆ ೨೭೫.


ಕಾರಮಾಡಿ ಅವರನ್ನು ಕಾಪಾಡಬೇಕು ಎಂತಲೇ ಆಗಲಿ ಅವರ ಬಾಯಿ

ನೊಳಗಾಗಿ ಬರುತಿರಲಿಲ್ಲ.


ಜೋಯಿಸ--ನೀನು ಎಲ್ಲವನ್ನೂ ಸಹಿಸಿಕೊಂಡು ಸ್ವಲ್ಪ ಸುಮ್ಮ

ನಿರಬೇಕಾಗಿತ್ತು. ನೀನು ಯಾಕೆ ಜಗಳಕ್ಕೆ ಹೋದೆ?


ಸುಮತಿ_--ನನಗೇನೋ ಸ್ವಲ್ಪ ಕೋಪ ಬಂತು. ಕ್ಷಮಿಸಬೇಕು. 

ಒಬ್ಬ ಬುದ್ಧಿ ಶಾಲಿನಿಯಾದ ಹುಡುಗಿ ಆ ಮಂಡಲಿಯಲ್ಲಿದ್ದಳು. ಅವಳು

ನನಗೆ ಒಳ್ಳೇಮಾತನಾಡಿ ಉಪಚಾರಮಾಡಿದ್ದಕ್ಕಾಗಿ ಅವಳನ್ನು

ಎಲ್ಲರೂ ಲೇವಡಿಹತ್ತಿಸುವುದಕ್ಕೆ ಪ್ರಾರಂಭಿಸಿದರು. ನಾನು ಅವಳ ಪರ

ವಾಗಿ ಎರಡು ಮಾತನ್ನಾಡಬೇಕಾಯಿತು. ಇತರರು ನಮ್ಮನ್ನು ಕೆಣ

ಕಿದರೆ ಆತ್ಮಸಂರಕ್ಷಣೆ ಮಾಡಿಕೊಳ್ಳಬಹುದೆಂದು ತಾವೇ ಹೇಳಿಕೊಟ್ಟಿ

ದ್ದೀರಷ್ಟೇ? 


ಜೋಯಿಸ- ನಿನ್ನಿಂದ ಅಷ್ಟೊಂದು ತಪ್ಪಿತ ನಡೆಯಿತೆಂದು ನಾನು

ಹೇಳಬರಲಿಲ್ಲ. ಅಂತು ನೀನು ಧೊರೆಯನ್ನು ಕಂಡು ಆತನ ಅಪ್ಪಣೆ

ಯನ್ನು ತೆಗೆದುಕೊಂಡು ಬರಬೇಕಾಗಿತ್ತು.


ಸುಮತಿ--ನನಗೂ ಆ ಭಾಗದಲ್ಲಿ ಸ್ವಲ್ಪ ಚಿಂತೆಯಾಗಿಯೇ ಇದೆ.

ಆದರೆ ಗೂಳಿಕಾಳಗಕ್ಕೆ ಹೋಗಬೇಡವೆಂದು ನಾನು ಹೇಳಿದಮಾತ್ರಕ್ಕೆ

ಮದನನು ನನ್ನನ್ನು ಬೈದು ಹೊಡೆದದ್ದು ಸರಿಯಲ್ಲ. ಅವನ ಮೇಲೆ

ನನಗಿದ್ದ ಪ್ರೀತಿಯಿಂದ ನಾನು ಅವನನ್ನು ಹಿಂತಿರುಗಿ ಹೊಡೆಯದೆ

ಸುಮ್ಮನಾದೆ.


ಜೋಯಿಸ --ಧೊರೆಯೇನೋ ನಿನ್ನ ನಡತೆಯನ್ನು ಕೊಂಡಾಡಿ

ದನು. ಅದು ಹಾಗಿರಲಿ. ಮದನನನ್ನು ಗೂಳಿ ಹಾಯುವುದಕ್ಕೆ

ಬಂದಾಗ ನೀನು ಅವನ ಪ್ರಾಣವನ್ನು ಉಳಿಸಿದೆಯಂತಲ್ಲಾ?


ಸುಮತಿ--ಅಂಥಾ ಸಂದರ್ಭದಲ್ಲಿ ಇನ್ನು ಯಾರಿಗಾದರೂ ನಾನು

ಹಾಗೆಯೇ ಮಾಡುತಿದ್ದೆ.


ಜೋಯಿಸ--ನೀನು ಗುಣವಂತ. ಆದರೆ ಮದನನ ಸಂಗ

ವನ್ನು ಬಿಟ್ಟೇಬಿಡುತ್ತೀಯ? 


ಸುಮತಿ--ಅವರು ದೊಡ್ಡವರು, ದೊಡ್ಡವರ ಸಂಗವೇ ಅವನಿ 

---------------------------------

೨೭೬ ಸುಮತಿ ಮದನಕುಮಾರರ ಚರಿತ್ರೆ     [ಅಧ್ಯಾಯ 


ಗಿರಲಿ. ನಾವು ಬಡವರು, ನಮ್ಮಪಾಡಿಗೆ ನಾವು ಇರುತ್ತೇವೆ. ನಾನು

ಅವನ ಸಂಗ ಬಿಟ್ಟವನಲ್ಲ, ಅವನಾಗಿಯೇ ನನ್ನನ್ನು ಬಿಟ್ಟು ಬಿಟ್ಟ.


ಜೋಯಿಸ- ಅವನು ತನ್ನಿಂದ ತಪ್ಪಾಯಿತೆಂದು ಒಪ್ಪಿಕೊಂಡರೆ?


ಸುಮತಿ--ಹಾಗಾದರೆ ಏನಿದ್ದರೂ ನಾನು ಮರೆತುಬಿಡುತೇನೆ.

ಮದನ ಸ್ವಲ್ಪ ಮುಂಗೋಸಿ. ಆದರೆ ಅವನ ಹೃದಯ ಒಳ್ಳೇದು.

ತುಂಟಹುಡುಗರ ಸಹವಾಸದಿಂದ ಅವನು ಹಾಗೆ ಕೆಟ್ಟು ಹೋದ.


ಜೋಯಿಸ--ಮದನನು ತನ್ನ ತಪ್ಪನ್ನೂ ಒಪ್ಪಿಕೊಳ್ಳುತ್ತಾನೆ.

ನಿನ್ನನ್ನು ಕಾಣುವತನಕ ಅವನಿಗೆ ಮನಸ್ಸು ಸಮಾಧಾನವಿಲ್ಲ.


ಸುಮತಿ- ಅವನು ಇನ್ನು ಎಷ್ಟು ಸಾರಿ ನನ್ನನ್ನು ಹೊಡೆದರೂ

ಚಿಂತೆಇಲ್ಲ. ಮದನನನ್ನು ನೋಡುವುದಕ್ಕೆ ನಿಮ್ಮಸಂಗಡ ಬರಲೆ?


ಜೋಯಿಸ--ಅದೇನೂ ಅಗತ್ಯವಿಲ್ಲ. ತಪ್ಪು ಅವನದಾದ್ದರಿಂದ

ಅವನೇ ಇಲ್ಲಿಗೆ ಬರುತಾನೆ, ಸುಮ್ಮನಿರು. ಇದು ಹಾಗಿರಲಿ, ನಿನ್ನ

ಪ್ರಾಣವನ್ನು ಉಳಿಸಿದ ಹಬ್ಬಸಿಯವನು ಎಲ್ಲಿ? ಧೊರೆಯು ಅವನ

ಸಂಗತಿಯನ್ನು ಕೇಳಿಕೊಂಡು ಬರಹೇಳಿದ. 


ಸುಮತಿ--ಅವನು ನಮ್ಮ ಮನೆಯಲ್ಲಿಯೇ ಇದಾನೆ. ಇಲ್ಲಿಯೇ

ಊಟಮಾಡಿಕೊಂಡು ನಮ್ಮ ಕೊಟ್ಟಿಗೆಯಲ್ಲಿ ಮಲಗಿಕೊಳ್ಳುತ್ತಾನೆ.

ಬಹಳ ಒಳ್ಳೆಯವನು. ಯಾವ ಕೆಲಸವನ್ನಾದರೂ ಮಾಡುತಾನೆ. 

ಅವನಿಗೆ ಪಾಲುಮಾರಿಕೆ ಸ್ವಲ್ಪವೂ ಇಲ್ಲ.


ಈ ಪ್ರಕಾರ ಮಾತನಾಡಿಕೊಂಡು ಜೋಯಿಸನು ಧೊರೇಮನೆಯ

ಕಡೆಗೆ ಹೊರಟನು.


ಅತ್ತ ಅರಮನೆಯಲ್ಲಿ ಲಲಿತೆಯ ಚಿಕ್ಕಪ್ಪನು ಪ್ರಸ್ತಕ್ಕಾಗಿ

ಬಂದಿದ್ದ ತನ್ನ ಹೆಣ್ಣುಮಗಳನ್ನೂ (ಲಲಿತೆಯನ್ನು) ಕರೆದುಕೊಂಡು

ಹೋಗುವುದಕ್ಕಾಗಿ ಬಂದಿದ್ದನು. ಅಲ್ಲಿ ಗಟ್ಟದಕೆಳಗಿನವರ ಚರಿತ್ರೆ

ಯನ್ನು ಕೇಳಿ ಆತನಿಗೂ ಬಹು ವ್ಯಸನಉಂಟಾಯಿತು. ಈ ಅರಸು

ತಮ್ಮಂಣನಾದ ಭೀಮರಾಜನಿಂದ ಬಂದಿದ್ದ ಕಾಗದಗಳ ಒಕ್ಕಣೆಗಳನ್ನು

ನೆನಿಸಿಕೊಂಡು ಸಂಕಟಪಡುತ್ತಾ, ದೀನನಾದ ಆ ಮನುಷ್ಯನಿಗೆ ಸಹಾ

ಯಮಾಡಬೇಕೆಂದು ಅವನನು. ಕುರಿತು--ಎಲೆ, ಕಪನಿನಾಯಕ  

------------------------------------

೨೩] ಸುಮತಿ ಮದನಕುಮಾರರ ಚರಿತ್ರೆ ೨೭೭ 


ನಮ್ಮ ಜಹಗೀರಿನಲ್ಲಿ ನಿನಗೆ ಭೂಮಿಯ ಕೊಡಿಸುತ್ತೇನೆ ಅದನ್ನು

ವ್ಯವಸಾಯ ಮಾಡಿಕೊಂಡು ಸುಖವಾಗಿರು, ಎಂದನು. ಆಗ ಅನಂಗ

ರಾಜನು ಆ ಬಡವನಿಗೆ ಒಂದು ಮನೆಯನ್ನೂ, ಎರಡು ಜೋಡಿ

ಎತ್ತನ್ನೂ, ಮತ್ತು ಬೇಕಾದ ಇತರ ಸಾಮಾನುಗಳನ್ನೂ ತೆಗೆದುಕೊಡು

ವುದಾಗಿ ಹೇಳಿದನು. ಈ ಸಮಯಕ್ಕೆ ಸರಿಯಾಗಿ ಸೂರ್ಯಭಟ್ಟನ ಮನೆ

ಯಿಂದ ಅರಮನೆಗೆ ಬಂದ ರಾಮಜೋಯಿಸನು.-ತಾವುಗಳೆಲ್ಲಾ

ದೊಡ್ಡವರು, ದೊಡ್ಡವನಿಗೆ ಸಹಾಯ ಮಾಡುತ್ತೀರಿ, ನಾನು ಬಡವ

ನಾದದ್ದರಿಂದ ಆ ಬಡ ಎಳೇ ಮಕ್ಕಳಿಗೆ ಹಾಲಾಗುವಂತೆ ಎರಡು ಹಸು

ವನ್ನೂ ಐದು ಮೇಕೆಯನ್ನೂ ಕೊಡುತ್ತೇನೆ, ಎಂದು ನುಡಿದನು. ಈ

ಪ್ರಕಾರ ಲಕ್ಷ್ಮೀ ಕಟಾಕ್ಷ ಒದಗಿದ್ದನ್ನು ಕಂಡು ಕಸನಿನಾಯಕನು

ಆನಂದದಿಂದ ಎಲ್ಲರಿಗೂ ನಮಸ್ಕಾರವನ್ನು ಮಾಡಿದನು.


ಲಲಿತೆಯು ಅರ್ಧಾಂತಕವಾಗಿ ಓದಿ ನಿಲ್ಲಿಸಿದ್ದ ಹೊಲ್ಲಮಲ್ಲರ

ಕಥೆಯು ಕೆಟ್ಟುಹೋಗಿದ್ದ ತನ್ನ ಮಗನ ಬುದ್ಧಿಯನ್ನು ಸರಿಮಾಡಿತಾದ

ಕಾರಣ, ಅದನ್ನು ಮದನನು ಪೂರ್ತಿಯಾಗಿ ಕೇಳಲೆಂದು ಧೊರೆಯು

ಕಾರಣ, ಅದನ್ನು ಮದನನು ಪೂರ್ತಿಯಾಗಿ ಕೇಳಲೆಂದು ಧೊರೆಯು

ಯೋಚಿಸಿ, ಆದಿನ ರಾತ್ರೆ ಭೋಜನವಾಗಿ ಎಲ್ಲರೂ ಎಲೆ ಅಡಕೆಯನ್ನು

ಹಾಕಿಕೊಳ್ಳುತ್ತಾ ಕೂತುಕೊಂಡಾಗ, ರಾಮಜೋಯಿಸನನ್ನೂ ಕರೆ

ಯಿಸಿ ಕೂರಿಸಿಕೊಂಡು ಲಲಿತೆಯ ಕೈಲಿ ಆ ಕಥೆಯನ್ನು ಪೂರ್ತಿಯಾಗಿ

ಓದಿಸಿದನು.

...

೨೪ನೆ ಅಧ್ಯಾಯ

ಹೊಲ್ಲಮಲ್ಲರಕಥೆ ಮುಂದಕ್ಕೆ ಸಾಗಿದ್ದು---


ಹೊಲ್ಲಮಲ್ಲರ ಕಥೆಯಲ್ಲಿ ಬರುವ ಚಾರುದತ್ತನ ಚರಿತ್ರೆಯನ್ನು

ಲಲಿತೆಯು ಮುಂದಕ್ಕೆ ಓದಿ ಸಾಗಿಸಿದ್ದು ಏನೆಂದರೆ; ಚಾರುದತ್ತ

ಹೇಳುತ್ತಾನೆ.


ಅನೇಕ ತಿಂಗಳವರೆಗೂ ನಾನು ಅರಬ್ಬರದೇಶದಲ್ಲಿಯೇ ಇದ್ದೆ.

ಡಂಭವಿಲ್ಲದೆ ಸಜ್ಜನರಾಗಿದ್ದ ಆ ಮಂದಿಯ ಸಹವಾಸದಲ್ಲಿಯೇ ನಾನು 

-----------------------------------

೨೭೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಇದ್ದರೆ ಆಗಿತ್ತು, ಹಾಗಾಗಿದ್ದರೆ ನಮ್ಮ ದೇಶವೂ ನಮ್ಮ ಜನರೂ

ಹಾಳಾದ ದುಃಖವನ್ನು ಈ ಪಾಪಿಕಣ್ಣಿನಲ್ಲಿ ನಾನು ನೋಡದೆ ಸೌಖ್ಯ

ವಾಗಿರುತಿದ್ದೆ. ಆದರೆ ನಾನು ನಡೆದು ತಂದದ್ದಕ್ಕೆ ಹೊಣೆಯಾರು?

ಕೊನೆಗೆ ನಾನು ದೇಶವನ್ನು ಬಿಟ್ಟು ಹೊರಟೆ. ಆ ಜನರೆಲ್ಲಾ

ನನ್ನನ್ನು ಎಷ್ಟೋ ಆದರದಿಂದ ಕಂಡರು; ಅವರ ಸೀಮೆಯ ಉತ್ತಮ

ನಾದ ತೇಜಿಯೊಂದನ್ನು ಇತರ ಉಪಹಾರಗಳ ಸಂಗಡ ನನಗೆ

ಕೊಟ್ಟರು; ಬಹಳದೂರ ಬಂದು ನನಗೆ ದಾರಿತೋರಿಸಿ ಸಾಗಕಳುಹಿಸಿ

ದರು. ನಾನು ನಮ್ಮ ಊರಿಗೆ ಬಂದುತಲಪವಿದೆ. ನಿರ್ಮಾನುಷ್ಯವಾದ

ಸ್ಥಳದಲ್ಲಿದ್ದು ಕೊಂಡು ದೇವರಧ್ಯಾನದಲ್ಲಿ ನಿಂತ ಆಯುಸ್ಸನ್ನೆಲ್ಲಾ ಕಳೆಯ

ಬೇಕೆಂದು ದೃಢಮಾಡಿಕೊಂಡೆ, ನಾನು ನೋಡಿದ್ದರಲ್ಲಿ ನನಗೆ ತೋರು

ವುದೇನೆಂದಕ್ಕೆ ಯಾವ ಮನುಷ್ಯನು ಯಾವ ತಂಟೆಗೂ ಹೋಗದೆ

ಲೋಕದ ಚರ್ಯಗಳನ್ನೆಲ್ಲಾ ನೋಡುತ್ತಾ, ದೇವರಧ್ಯಾನದಲ್ಲಿ ಕಾಲವನ್ನು

ಕಳೆಯುತ್ತಾನೆಯೋ ಅವನೇ ಧನ್ಯ. ಅನೇಕ ಧೊರೆಗಳು ಎಷ್ಟು

ಐಶ್ವರ್ಯವಿದ್ದರೂ ಸಮಾಧಾನವಿಲ್ಲದೆ ತಮ್ಮ ಬಾಳಿಗಿಂತಲೂ ಒಬ್ಬ ಬಡ

ಜೋಗಿಯ ಬಾಳು ಉತ್ತಮವಾದದ್ದು, ಎಂದು ಮ್ಯಸನಪಡುತ್ತಿದ್ದದ್ದನ್ನು

ನಾನು ನೋಡಿದೇನೆ. ಜನಬಾಹುಳ್ಯವಿದ್ದಷ್ಟೂ ಲೋಕದಲ್ಲಿ ಶ್ರಮವೂ

ದುಃಖವೂ ಹೆಚ್ಚು. ಆದ್ದರಿಂದ ಒಂದು ನದೀತೀರದಲ್ಲಿ ನಿರ್ಮಾನುಷ್ಯ

ಪ್ರದೇಶವನ್ನು ಹುಡುಕಿ ಅಲ್ಲಿ ಒಂದು ಗುಡಿಸಲನ್ನು ಕಟ್ಟಿಕೊಂಡು,

ಸ್ವಲ್ಪ ತೋಟವನ್ನು ಮಾಡಿಕೊಂಡು ವಾಸವಾಗಿದ್ದೆ.


ಯೋಗ್ಯಳಾದ ಒಬ್ಬ ಹೆಂಗಸನ್ನು ಮದುವೆಯಾದೆ, ಏಳುವರುಷ

ಆಕೆಯೊಡನೆ ಸಂಸಾರಮಾಡಿಕೊಂಡಿದ್ದೆ. ಈ ಹುಡುಗಿ ಹುಟ್ಟಿದಳು.

ತರುವಾಯ ನನ್ನ ಹೆಂಡತಿ ಸತ್ತಳು. ನನ್ನ ಮಗಳನ್ನು ನೋಡಿ

ಕೊಂಡು ಅವಳನ್ನು ಸಾಕುವುದರಲ್ಲಿ ಆ ದುಃಖವನ್ನು ಮರೆತೆ. ಇವಳು

ಉಪಯುಕ್ತವಾದ ಮನೆಗೆಲಸಗಳನ್ನು ಮಾಡಿಕೊಂಡಿರುವುದರಲ್ಲಿಯೂ

ಆಲ್ಬಸ್ಪಲ್ಪಕಾಲ ಉಳಿದರೆ ಉತ್ತಮವಾದ ಗ್ರಂಥಗಳನ್ನು ಓದುವುದ

ರಲ್ಲಿಯೂ ನಿರತಳಾಗಿದ್ದಳು. ಇಲ್ಲದ ಸಿಸ್ತನ್ನು ಮಾಡಿಕೊಳ್ಳುವದರ

ಲ್ಲಿಯೂ, ಇಲ್ಲದ ಒಡವೆಯನ್ನು ಹೇರಿಕೊಳ್ಳುವುದರಲ್ಲಿಯೂ, ಜಡತ್ವ 

------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೭೯ 


ದಿಂದ ಕೂತಿರುವುದರಲ್ಲಿಯೂ, ಸಂಗೀತವನ್ನು ಹಾಡುವುದರಲ್ಲಿಯೂ,

ಒಲಪನ್ನು ಬೀರಿ ಬಿನ್ನಣವನ್ನು ತೋರುವುದರಲ್ಲಿಯೂ, ಅವಳನ್ನು

ತಯಾರುಮಾಡಲಿಲ್ಲ. ಹೆಂಗಸಿನಲ್ಲಿ ಇಂಥಾ ದುರ್ಗುಣಗಳಿದ್ದರೆ ಆ

ಮನೆಯೇ ನಾಶವಾಗುವುದು. ಇಂಥಾ ಸ್ತ್ರೀಯರು ಎಷ್ಟು ಹೆಚ್ಚಿದರೆ

ರಾಜ್ಯಕ್ಕೆ ಅಷ್ಟು ಕ್ಷೋಭೆಯುಂಟಾಗುವುದು, ಈ ಮಧ್ಯೆ ನಾನು

ಗ್ರಂಥಕಾಲಕ್ಷೇಪವನ್ನು ಮಾಡುತ್ತಾ ಬ್ರಹ್ಮಸೃಷ್ಟಿಯಲ್ಲಿರುವ ಚರಾ

ಚರವಸ್ತುಗಳನ್ನು ನೋಡಿ ಸಂತೋಷಪಡುತ್ತಾ ಇದ್ದೆನು. ಹೀಗಿರುವಲ್ಲಿ

ಒಂದುದಿನ ಸಾಯಂಕಾಲ ಅಸ್ತಂಗತನಾಗುತ್ತಿರುವ ಸೂರ್ಯನ ಕಿರಣದದೆಸೆ

ಯಿಂದ ವಿಚಿತ್ರವಾಗಿ ಕಾಣುತಿದ್ದ ಆಕಾಶವನ್ನು ನೋಡುತ್ತಾ ನಾನು

ನನ್ನ ಪರ್ಣಶಾಲೆಯ ಬಾಗಿಲಲ್ಲಿ ಕೂತಿದ್ದೆ. ಎತ್ತರವಾಗಿ, ಗೌರವಶಾಲಿ

ಯಾಗಿ, ಮುಖದಲ್ಲಿ ಸ್ವಲ್ಪ ಕ್ರೌರ್ಯವನ್ನುಳ್ಳ ಒಬ್ಬ ಪುರುಷಶ್ರೇಷ್ಠನು

ಮಿತವಾದ ಪರಿವಾರದೊಡನೆ ನನ್ನ ಸಮಾಪವೃತ್ತಿಗೆ ಬಂದನು.

ಕೂಡಲೆ ಪುಷ್ಪಗಳಿಂದಲೂ ಫಲಗಳಿಂದಲೂ ಭರಿತವಾಗಿ ನಗುತ್ತಿದ್ದ

ನನ್ನ ತೋಟವನ್ನು ನೋಡಿ ಮೆಚ್ಚಿಗೆಯಿಂದ ತಲೆಯನ್ನು ತೂಗಿದನು.

ಆಗ ನಾನು--ಸ್ವಾಮಿ, ಈ ತೋಟದಲ್ಲಿ ತಾವೂ ತಮ್ಮಕಡೆಯವರೂ

ಸ್ಪಲ್ಪ ವಿಶ್ರಮಿಸಿಕೊಂಡು ಅಲ್ಲಿನ ಫಲಗಳಿಂದ ತಮ್ಮ ಕ್ಷುತ್ತನ್ನು ಪರಿಹ

ರಿಸಿಕೊಂಡು ದಯಮಾಡಬಹುದಲ್ಲ, ಎಂದು ಕೇಳಿಕೊಂಡೆ. ಆತನು

ಹಾಗೆಯೇಮಾಡಿ ಕೊಂಚಹೊತ್ತು ಇದ್ದು ಹೊರಡುವ ಸಮಯದಲ್ಲಿ

ನನ್ನನ್ನು ಕುರಿತು.-ಅಯ್ಯಾ, ನಿನ್ನಿಂದ ನಾಕು ಉಪಕೃತನಾದೆ;

ನಿನಗೆ ಏನು ಬೇಕು? ಕೇಳಿಕೊ. ನನ್ನ ಪದವಿಗೂ ನಾನು ನಿನಗೆ

ತೋರಿಸಬೇಕಾದ ಕೃತಜ್ಞತೆಗೂ ಏನ ಕೇಳಿದರೂ ಸ್ವಲ್ಪವೇ ಸರಿ

ಎಂದನು. ನಮ್ಮ ದೇಶವನ್ನು ಜೈಸಿಕೊಳ್ಳುತ್ತಾ ಎಲ್ಲೆಲ್ಲಿಯೂ ಹರಡಿ

ಕೊಳ್ಳುತಿದ್ದ ಶಕರಿಗೆ ಆತನು ಅಧಿಪತಿಎಂದು ಅರಿತು, ನಾನು ಹೇಳಿ

ದ್ಹೇನೆಂದರೆ :-


ಚಾರುದತ್ತ--ಹಾಗೆ ತಮ್ಮ ಅಧಿಕಾರಕ್ಕೆ ಯಾವುದು ದೊಡ್ಡದಲ್ಲ

ದಿದ್ದರೆ, ಯುದ್ಧಾದಿಗಳಿಲ್ಲದಂತೆ ಸಮಾಧಾನವನ್ನೂ, ನಮ್ಮ ದೇಶೀ

ಯರು ಪರರಿಗೆ ಅಧೀನವಾಗಿರದಂತೆ ಸ್ವಾತಂತ್ರ್ಯವನ್ನೂ ಕೊಟ್ಟು 

-------------------------------------

೨೮೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ.


ಕಾಪಾಡಬೇಕು.


ಶಕಾಧಿಪತಿ- -ಯುದ್ಧಾದಿಗಳೆಲ್ಲಾ ನಿಂತು ಹೋಯಿತಾದ್ದರಿಂದ

ಮೊದಲನೇದನ್ನೇನೋ ನಾನು ಕೊಟ್ಟೇ ಇದೇನೆ: ದೇಹಶ್ರಮಪಡದೆ

ಜಡತ್ವದಲ್ಲಿಯೂ ನೀತಿಮಾರ್ಗವಿಲ್ಲದೆ ದುರ್ಮಾರ್ಗದಲ್ಲಿಯೂ ಪರಾ

ಕ್ರಮವಿಲ್ಲದೆ ಹೇಡಿತನದಲ್ಲಿಯೂ ಇಳಿಯಮುಳುಗಿರುವ ನಿಮ್ಮ ದೇಶದ

ಜನರಿಗೆ ಎರಡನೇದು (ಸ್ವಾತಂತ್ರ್ಯ) ದೊರೆಯುವುದು ಅಸಾಧ್ಯ, ನಮ್ಮ

ಸೇನೆಯೊಡನೆ ನಾನು ನಮ್ಮ ದೇಶಕ್ಕೆ ಹೊರಟು ಹೋದಾಗ್ಗೂ ಮತ್ತೆ

ಯಾರಾದರೂ ಬಂದು ನಿಮ್ಮ ದೇಶವನ್ನು ಜೈಸಲೇ ಜೈಸುತ್ತಾರೆ. ಈ 

ವಿಷಯವನ್ನು ಬಿಡು. ನಿನ್ನ ಮಟ್ಟಿಗೆ ನಿನಗೇನು ಬೇಕೋ ಕೇಳಿ

ಕೊಳ್ಳುವನಾಗು.


ಚಾರುದತ್ತ--(ನಗುತ್ತಾ) ನನಗೆ ಬೇಕಾದ್ದೆಲ್ಲಾ ಇದ್ದೇ ಇದೆ.

ಆದರೆ ನಾನು ಈ ತೋಟದಲ್ಲಿ ಹೊಸದಾಗಿ ಅಗತೆಮಾಡಿ ಗಿಡವನ್ನು

ಹಾಕಿರುವ ಪ್ರದೇಶವನ್ನು ನಿನ್ನವರು ತುಳಿಯದಂತೆ ನೀನು ಆಜ್ಞೆ

ಮಾಡಿದರೆ ಅದೇ ನಿನ್ನಿಂದ ನನಗೆ ಆಗಬೇಕಾದ ದೊಡ್ಡ ಉಪಕಾರ.


ಶಕಾಧಿಪತಿ-_(ತನ್ನ ಪರಿವಾರದವರ ಡೆಗೆ ತಿರುಗಿ) ಅಃ!

ಎಂಥಾ ಮಾತು! ಈತನ ಮನೋನಿಶ್ಚಯದಲ್ಲಿಯೂ ಆಶಾರಾಹಿತ್ಯ 

ದಲ್ಲಿಯೂ ದೇವಾಂಶವಿದೆ ಎಂದು ತಿಳಿಯಿರಿ. ಈತನು ಸಾಧಾರಣ

ನಲ್ಲ, ನಾನು ಈ ಚಾರುದತ್ತನಾಗಿ ಹುಟ್ಟಿದ್ದರಾಗಿತ್ತು. (ತರುವಾಯ

ಚಾರುದತ್ತನ ಕಡೆಗೆ ತಿರುಗಿ) ಅಯ್ಯಾ ನಾಳೇ ಮಧ್ಯಾಹ್ನ ನೀನು

ನನ್ನನ್ನು ಬಂದು ಕಾಣು.


ಹೀಗೆ ಹೇಳಿ ತನ್ನ ವೀರಭಟರು ಯಾರೂ ನನ್ನ ಗೋಜಿಗೆ ಬರ

ಕೂಡದೆಂದು ಆಜ್ಞಾಪಿಸಿ ಶಕಾಧಿಸನು ಹೊರಟು ಹೋದನು. ಅದೇ

ಪ್ರಕಾರ ಆತನು ಹೇಳಿದ್ದ ಹೊತ್ತಿಗೆ ಸರಿಯಾಗಿ ನಾನು ಶಕಸೇನೆಯ

ಪಾಳಯಕ್ಕೆ ಹೋದೆ, ಈ ಜನರು ಉತ್ತರ ಪ್ರಾಂತ್ಯದಿಂದ ಬಂದ

ವರು, ಇವರ ದೇಶವು ಶುದ್ಧವಾಗಿ ಕಾಡುರಾಜ್ಯ. ಅಲ್ಲಿ ಹುಲ್ಲು

ಹೊರತು ಮತ್ತೆಯೇನೂ ಬೆಳೆಯುವುದಿಲ್ಲ... ಇವರು ವ್ಯವಸಾಯ

ಮಾಡುವುದನ್ನು ಅರಿಯರು. ದನ, ಕುದುರೆ ಒಂಟೈ, ಇವುಗಳನ್ನು 

---------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೮೧ 


ಕಾಯುವುದೆ, ಇವರ ಮುಖ್ಯ ವೃತ್ತಿ. ಈ ಜಂತುಗಳ ಹಾಲಿನಲ್ಲಿ ಆದ

ಹುಳಿಮೊಸರು, ಬೇಟೆಯಾಡಿ ತಂದ ಕಾಡುಮೃಗಗಳ ಮಾಂಸ, ಇವು

ಗಳೇ ಇವರ ಆಹಾರ. ಎರಡು ಕಂಬವನ್ನು ಸಿಲ್ಲಿಸಿ ಅದಕ್ಕೆ ಒಂದು

ಅಡ್ಡಕಡ್ಡಿಯನ್ನು ಕಟ್ಟ ಅದರ ಮೇಲಿನಿಂದ ದಪ್ಪವಾದ ಬಟ್ಟೆ ಯನ್ನು

ಎರಡು ಕಡೆಗೂ ಇಳಿಜಾರಾಗಿ ಕಟ್ಟುವರು. ಇದೇ ಇವರೆ ಮನೆ.

ಕುದುರೇ ಸವಾರಿಯಲ್ಲಿ ಈ ಜನರು ಅರಬ್ಬರ ಹಾಗೇ ಬಹು ಸಮರ್ಥರು,

ಲಗಾಮು ಇಲ್ಲದೆ ಒಂದು ಹಗ್ಗವೂ ಇಲ್ಲದೆ ಇವರು ಎಷ್ಟು ದೂರ

ವಾದರೂ ಬೆತ್ತಲ ಕುದುರೆಯ ಮೇಲೆ ಹೋಗಬಲ್ಲರು,. ಥೈರ್ಯ

ದಲ್ಲಿಯೂ ಇವರು ಅರಬ್ಬರಿಗೆ ಸಮಾನರು. ಈಟಿ, ಅಂಬು, ಬಿಲ್ಲುಗಳೇ

ಇವರ ಆಯುಧ. ಕುದುರೇ ಮೇಲೆ ಎಷ್ಟು ದಿನವಾದರೂ ಹಗಲು

ರಾತ್ರೆ ಎನ್ನದೆ ಇರಬಲ್ಲರು. ಪ್ರಪಂಚದ ದೇಶಗಳನ್ನೆಲ್ಲಾ ಜೈಸು

ವುದಕ್ಕೆ ಈ ಜನರ ನಿನಾ ಮತ್ತೆ ಯಾರೂ ತಕ್ಕವರಲ್ಲ. ಇವರನ್ನು

ಜೈಸಿ ಅಡಗಿಸಬೇಕೆಂದು ಯಾರು ಪ್ರಯತ್ನಮಾಡಿದರೂ ಸಾಗಲಿಲ್ಲ. 


ಪಾರಸೀಕಪತಿಗಳಲ್ಲಿ ದರವೇಶಗುಸ್ತಾಸ್ಪನೆಂಬುವನೇ ಬಹು

ಖ್ಯಾತಿವಂತನು. ಈ ಶಕರನ್ನು ಅಡಗಮೆಟ್ಟಿ ಅಡಿಯಾಳಾಗಿ ಮಾಡಿ

ಕೊಳ್ಳಬೇಕೆಂದು ಇವನಿಗೆ ತೋರಿತು. ಅದಕ್ಕಾಗಿ ದರವೇಶನು ಬಹು

ದೊಡ್ಡ ದಂಡಿನೊಡನೆ ಶಕರ ರಾಜ್ಯದ ಮೇಲೆ ತೆರಳಿದನು. ಶಕಾಧಿ

ರಾಜನು ತನ್ನ ಜನರನ್ನು ಸಜ್ಜುಮಾಡಿಕೊಂಡು ಹೊರಟನು. ಶಕರು

ಕುದುರೆಗಳನ್ನೇರಿ ಶತ್ರುಗಳು ಬರುವುದನ್ನು ಕಂಡು ಅವರಿಗೆ ಹೆದರಿ

ಓಡಿ ಹೋದವರಂತೆ ಕಾಡಿನೊಳಕ್ಕೆ ಓಡಿ ಹೋದರು. ಪಾರಸೀಕರೂ

ಇವರ ಬೆನ್ನಹತ್ತಿ ಅನೇಕ ಗಾವುದಗಳು ಹೋದರು. ಕೊನೆಗೆ

ಪಾರಸೀಕರ ಕಣ್ಣಿಗೆ ಶಕರಲ್ಲೊಬ್ಬನಾಗಲಿ ಕಾಣಿಸಲಿಲ್ಲ. ಎತ್ತ ನೋಡಿ

ದರೂ ಮರಳಕಾಡು, ಒಂದು ಗಿಡವಿಲ್ಲ, ಒಂದು ಸೆರೆ ನೀರಿಗೂ ಗತಿ

ಇಲ್ಲ. ಪಾರಸಿ ಸೇನೆ ಬಹು ಆಯಾಸಪಟ್ಟು ನಷ್ಟವಾಯಿತು. ದರವೇಶ

ನಿಗೆ ದಿಕ್ಕೇ ತೋಚದೇ ಹೋಯಿತು. ಹಗೆಗಳನ್ನು ಹೀಗೆ ಕಾಡಿನ

ಮಧ್ಯೆ ತಂದು ಬಿಟ್ಟು ಇನ್ನು ಯಾವ ವಿಧದಲ್ಲಿಯೂ ತಮ್ಮ ಮೇಲೆ ಅವರ

ಕೈನಡೆಯಲಾರದೆಂದು ತಿಳಿದು, ಶಕರು ಧೈರ್ಯಮಾಡಿಕೊಂಡರು. 

---------------------------------------

೨೮೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಇಂಥಾ ಕಷ್ಟ ಬಂತಲ್ಲಾ ! ಏನು ಮಾಡಬೇಕೆಂದು ದರವೇಶನು ತನ್ನ

ಮಂತ್ರಿಗಳೊಡನೆ ಆಲೋಚನೆ ಮಾಡುತ್ತಾ ಕೂತಿರುವಲ್ಲಿ, ಒಬ್ಬ

ಭಟನು ಬಂದು ಮಹಾ ತೇಜಿಯನ್ನೇರಿ ಅತಿ ವೇಗವಾಗಿ ದರವೇಶನ

ಪಾಳಯಕ್ಕೆ ನುಗ್ಗಿ, ಆ ದೊರೆಯ ಮುಂದೆ ಬಂದು ನಿಂತು ಒಂದು 

ಗಂಟನ್ನು ಆತನ ಮುಂದೆ ಇರಿಸಿ, ಕೂಡಲೆ ಅಶ್ವಾರೂಢನಾಗಿ ಕಣ್ಣ

ಮುಚ್ಚಿ ಬಿಡುವುದರೊಳಗಾಗಿ ಹೊರಟು ಹೋದನು. ಪಾರಸೀಕರೆಲ್ಲ

ರಿಗೂ ಗಾಬರಿಯಾಯಿತು. ದೊರೆಯು ಆಶ್ಚರ್ಯಪಡುತ್ತಾ ಆ

ಗಂಟನ್ನು ಬಿಚ್ಚಿಸಿ ನೋಡುವಾಗ ಅದರಲ್ಲಿ ಒಂದು ಇಲಿ, ಒಂದು ಹಕ್ಕಿ,

ಒಂದು ಮೀನು, ಒಂದು ಕಟ್ಟು ಅಂಬು ಇಷ್ಟು ಇದ್ದವು. ಇದನ್ನು

ಕಂಡ ಕೂಡಲೆ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯದಿಂದ ವಾಕ್‌ಸ್ತಂಭ

ವಾಯಿತು. ಆಗ ದೊರೆಯು--ಶಕನು ನಮಗೆ ಕಳುಹಿಸಿರುವ ಉಪ

ಹಾರಕ್ಕೆ, ತಾವು ನಮಗೆ ವಿಧೇಯರಾಗುತೇವೆಂತ ಅರ್ಥ; ಹ್ಯಾಗಂ

ದರೆ: ಇಲಿಯು ಭೂಮಿಯನ್ನು ಸೂಚಿಸುವುದು, ಯಾಕಂದರೆ ಅದು

ನೆಲದಲ್ಲಿ ಬಿಲವನ್ನು ಮಾಡಿಕೊಂಡು ವಾಸಮಾಡುವುದು. ಮೀನು

ನೀರನ್ನು ಸೂಚಿಸುವುದು, ಯಾಕೆಂದರೆ ಅದು ನೀರು ಅಥವಾ ಸಮುದ್ರ

ದಲ್ಲಿ ವಾಸಮಾಡುವುದು. ಹಕ್ಕಿಯು ಆಕಾಶವನ್ನು ಸೂಚಿಸುವುದು

ಯಾಕೆಂದರೆ ಅದು ಅಂತರಿಕ್ಷದಲ್ಲಿ ಹಾರಾಡುವುದು. ಅಂಬುಗಳು

ಶತ್ರುಗಳ ಆಯುಧ. ಅವರ ದೇಶದ ನೆಲ ಜಲ, ಆಕಾಶ, ಇದೆಲ್ಲ

ವನ್ನೂ ನಮಗೆ ಒಪ್ಪಿಸಿ, ತಾವೂ ನಮಗೆ ವಿಧೇಯರಾಗಿದೇವೆಂದು

ತಿಳಿಯಪಡಿಸಿದಂತಾಯಿತು,--ಈ ಪ್ರಕಾರ ದೊರೆಯು ಅದಕ್ಕೆ ಅರ್ಥ

ಮಾಡಿದನು.


ಆಗ ಸಮಿಪದಲ್ಲಿದ್ದ ಒಬ್ಬ ವೃದ್ಧ ಮಂತ್ರಿಯು ಹೇಳಿದ್ದೇ

ನೆಂದರೆ:-ಜೀಯ, ಪರಾಕು. ಇದಕ್ಕೆ ಸ್ವಾಮಿ ಮಾಡಿದ ಅರ್ಥ

ವಲ್ಲದೆ ಬೇರೆ ಅರ್ಥ ಉಂಟು, ಅಭಯವಾದರೆ ಅರಿಕೆ ಮಾಡು

ತ್ತೇನೆ, ಈ ಘೋರಾರಣ್ಯದ ಮಧ್ಯೆ ನಾವು ಬಂದು ನಿಲ್ಲುವುದಕ್ಕೆ

ನೆರಳಿಲ್ಲದೆ ಕುಡಿಯುವುದಕ್ಕೆ ನೀರಿಲ್ಲದೆ ಸೇನೆಯೆಲ್ಲಾ ನಷ್ಟ ಹೊಂದಿ

ನಮಗೆ ದಿಕ್ಕೇ ತೋಚದೆ ಇದೆ. ಶತ್ರುಗಳಲ್ಲಿ ಒಬ್ಬನಾದರೂ ನಮ್ಮ 

------------------------------------

೨೪] ಸುಮತಿ ಮದನಕುಮಾರರ ಚಂತ್ರೆ ೨೮೩ 


ಕೈಗೆ ಸಿಕ್ಕಲಿಲ್ಲ. ನಷ್ಟವೆಲ್ಲಾ ನಮಗಾಗಿದೆಯೊ ಅವರಿಗಾಗಿದೆಯೊ?

ಇದೇ ನಮಗೆ ಸೋಲೆಂದು ತಿಳಿಯಬೇಕು; ಸೋಲಿಗೆ ಇದಲ್ಲದೆ ಬೇರೆ

ಎರಡು ಕೊಂಬು ಇದೆಯೆ? ಇಲಿಯಂತೆ ನೆಲವನ್ನು ಕೊರೆದುಕೊಂಡು

ಹೋಗಬೇಕು ; ಅಥವಾ ಮೀನಿನ ಹಾಗೆ ನೀರಿನಲ್ಲಿ ಮುಳುಗಿ ಹೋಗ

ಬೇಕು; ಹೀಗೆ ಯಾವದಾದರೂ ಒಂದು ಮಾರ್ಗವಾಗಿ ನಾವು ತಪ್ಪಿಸಿ

ಕೊಂಡು ಹೋದರೆ ಸರಿ, ಇಲ್ಲದಿದ್ದರೆ ನಾವು ಶಕರ ಅಂಬಿನಿಂದ ಸಾಯ

ಬೇಕು. ಇದೇ ಶತ್ರುಗಳ ಉಪಹಾರಕ್ಕೆ ಅರ್ಥ,- ಎಂದು ಅರಿಕೆ

ಮಾಡಿದನು. ಇದನ್ನು ಕೇಳಿ ದೊರೆಯ ಮನಸ್ಸು ಜೋಲುಬಿತ್ತು.

ದರವೇಶನು ಅರ್ಥ ಮಾಡುವುದರಲ್ಲಿ ತಾನು ದುಡುತಿದೆನೆಂದು ಒಪ್ಪಿ

ಕೊಂಡು ತನ್ನ ದೇಶಕ್ಕೆ ಹಿಂತಿರುಗಿ ಹೊರಟು ಹೋದನು. ಅವನ

ದಂಡೆಲ್ಲಾ ನಾಶವಾಯಿತು. ಶತ್ರುಗಳು ಒಬ್ಬನಾದರೂ ಇವರಿಂದ

ಹೆತನಾಗಲಿಲ್ಲ.


ಇನ್ನೊಂದು ಕಾಲದಲ್ಲಿ ಲೋಲಾಕ್ಷನೆಂಬ ಮತ್ತೊಬ್ಬ ದೊರೆಯು

ಶಕರನ್ನು ಜೈಸಬೇಕೆಂದು ಯತ್ನಿಸಲು ಅವರು ಇವನನ್ನು ಸೋಲಿಸಿ

ಕೈಸೆರೆ ಹಿಡಿದರು. ಮಾರನೇ ದಿನ ಊಟದ ಹೊತ್ತು ಬಂತು. ಆಗ

ಶಕರಾಜನು ಲೋಲಾಕ್ಷನನ್ನು ಒಳಗಿನಿಂದ ಕರೆದು ತಂದು, ಉತ್ತಮ

ವಾದ ಪೀಠದಲ್ಲಿ ಕುಳ್ಳಿ ರಿಸಿ,  ಆತನಿಗೆ ಭಕ್ಷ್ಯಭೋಜ್ಯಾದಿ ಶ್ರೇಷ್ಠವಾದ

ಆಹಾರಗಳನ್ನು ಲೋಲಾಕ್ಷನಿಗೆ ಬಡಿಸಿಸಿ, ತಾನು ಮಾತ್ರ ದೂರವಾಗಿ

ಕುಳಿತು ಎಂದಿನಂತೆ ತಮ್ಮ ಜನರ ಕಾಡುತಿಂಡಿಯನ್ನು ತಿನ್ನುತ್ತಾ

ಹೇಳಿದ್ದೇನೆಂದರೆ:-


ಶಕರಾಜ--ಸ್ವಾಮಿ, ತಮಗೆ ನಮ್ಮ ಕಾಡತಿಂಡಿಯ ಮೇಲೆ

ಇಷ್ಟವೆ? ಅಥವಾ ತಮಗೆ ಬಡಿಸಿರುವ ಆಹಾರದ ಮೇಲೆ ಇಷ್ಟವೆ?


ಲೋಲಾಕ್ಷ--(ಶಕರು ತನಗೆ ಮಾಡಿದ ಮರ್ಯಾದೆಗೆ ಸಂತೋಷ

ದಿಂದಲೂ ಆಶ್ಚರ್ಯದಿಂದಲೂ ಒಡಗೂಡಿ) ನೀವು ಹೇಳಿದಂತೆ ತಮ್ಮ

ತಿಂಡಿ ಕಾಡುತಿಂಡಿಯೇ ಸರಿ. ನನಗೆ ತಾವು ಅತ್ಯಂತ ಪ್ರೀತಿಯಿಂದ

ತಂದು ಬಡಿಸಿರತಕ್ಕ ಷಡ್ರಸೋಪೇತವಾದ ಆಹಾರವು ನಮ್ಮ ಸೀಮೆಯ

ತಿಂಡಿಯಾಗಿದೆ. ಇದಕ್ಕೆ ಸಮಾನ ಉಂಟೆ? 

---------------------------------------

೨೮೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಶಕರಾಜ-- ಹಾಗಾದರೆ, ದೊರೆಯೆ, ಇಂಥಾ ಗತಿ ಇಲ್ಲದೆ ಅಸಹ್ಯ

ವಾದ ಆಹಾರವನ್ನು ತಿಂದು ಜೀವಿಸತಕ್ಕ ನಮ್ಮನ್ನು ಯಾವ ಆಶೆ

ಯಿಂದ ಜೈಸುವುದಕ್ಕೆ ದಯಮಾಡಿದಿರಿ? ನಮ್ಮ ತಿಂಡಿಯನ್ನು ತಿಂದು

ನಮ್ಮ ಬಾಳನ್ನು ಬಾಳುವ ಕಪ್ಟಜೀವಿಗಳಾದ ನಮ್ಮ ಜನರನ್ನು ಪರಾ

ಜಯ ಮಾಡುವುದು ಅಸಾಧ್ಯ. ಆದಕಾರಣ ಶಕರನ್ನು ಇನ್ನುಮೇಲೆ

ನಿಮ್ಮ ಸ್ನೇಹಿತರಲ್ಲಿ ಗಣನೆಮಾಡಿಕೊಳ್ಳಿ. ನಿಮ್ಮ ಸೀಮೆಯ ತಿಂಡಿಯ

ಸ್ವಾರಸ್ಯವು ನಮ್ಮ ಶಕರಿಗೆ ತಿಳಿಯಲೇಬೇಡ. ಅವರು ಅದನ್ನು

ತಿಳಿದರೆ ನಿಮ್ಮ ದೇಶದ ಮೇಲೆ ಅವರು ಬಂದು ಬಿದ್ದು ನಿಮ್ಮನ್ನು

ಜೈಸಿಯಾರು. ಆದ್ದರಿಂದ ನಿಮ್ಮ ಆಹಾರದ ರುಚಿಯನ್ನು ಅವರು

ಅರಿಯದೇ ಇರಲೆಂದು ನೀವು ದೇವರಿಗೆ ಪ್ರಾರ್ಥನೆಮಾಡಿ.


ಶಕರಾಜನು ಈ ಪ್ರಕಾರ ಬುದ್ಧಿಯನ್ನು ಹೇಳಿ ಲೋಲಾಕ್ಷ 

ನನ್ನು ಸೆರೆಯಿಂದ ಬಿಡುಗಡೆಮಾಡಿ, ಹತಶೇಷವಾಗಿರುವ ಆತನ

ದಂಡನ್ನು ಕರೆದುಕೊಂಡು ತನ್ನ ರಾಜ್ಯಕ್ಕೆ ಹೋಗಬಹುದೆಂದು

ಹೇಳಿದನು.


ಈ ಶಕರ ಸ್ವಭಾವ ಇಂಥಾದ್ದು. ನಾನು (ಚಾರುದತ್ತ) ಅವರ

ಪಾಳಯದಲ್ಲಿ ಹೋಗುತ್ತಿರುವಾಗ ಒಂದು ಕಡೆಯಲ್ಲಿ ಗಂಡಸರು ಗುಂಪು

ಗುಂಪಾಗಿ ಸೇರಿಕೊಂಡು ಒಂದು ಗುಂಪಿನವರು ಇನ್ನೊಂದು ಗುಂಪಿನವರ

ಮೇಲೆ ಕೃತಕ ಯುದ್ಧ ಮಾಡುವುದು, ಎದುರಾಳಿಗಳು ಅವರನ್ನು ಎದು

ರಿಸುವುದು ; ಮತ್ತೊಂದು ಕಡೆಯಲ್ಲಿ ಹುಡುಗರು ಅಂಬು ಹೊಡೆಯುವು

ದನ್ನು ಅಭ್ಯಾಸ ಮಾಡುವುದು ಇನ್ನೊಂದು ಎಡೆಯಲ್ಲಿ ಹೆಂಗಸರು

ಒಂದು ಒಡವೆಯೂ ಇಲ್ಲದೆ ಇದ್ದಾಗ್ಗೂ ಮನೆಗೆಲಸ ಮುಂತಾದ್ದನ್ನು

ಯಾವಾಗಲೂ ಮಾಡುವುದು, ಸೌಂದರ್ಯವಿಲ್ಲದಿದ್ದಾಗ್ಗೂ ದೃಢಾಂಗ

ರಾಗಿರುವುದು, ಹೀಗೆ ಇದ್ದರು.


ಕೊನೆಗೆ ನಾನು ಅರಸನ ಗುಡಾರದ ಬಳಿಗೆ ಹೋದೆ. ಅದು

ಇತರ ಗುಡಾರಗಳಂತೆ ಸಾಧಾರಣವಾಗಿಯೇ ಇತ್ತು. ಅಲ್ಲಿ ಭಟರು

ನನ್ನನ್ನು ರಾಜ ಸಂಮುಖಕ್ಕೆ ಕರೆದುಕೊಂಡು ಹೋಗಿ ಬಿಟ್ಟರು.

ಶಕಾಧಿಸತಿಯು ನನ್ನನ್ನು ಬಹುಮರ್ಯಾದೆಯಿಂದ ಕಂಡನು. 

------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೮೫ 


ಅರ್ಧಾಸನದಲ್ಲಿ ಕುಳ್ಳಿರಿಸಿಕೊಂಡು ನಾನು ತಿರುಗಿದ ದೇಶ ದೇಶದ

ವರ್ತಮಾನಗಳನ್ನೆಲ್ಲಾ ನನ್ನಿಂದ ಕೇಳುವುದಕ್ಕೆ ಮೊದಲು ಮಾಡಿ

ದನು. ಅವನು ಸಂಸ್ಕಾರಿಯಲ್ಲದಿದ್ದಾಗ್ಗೂ ಅವನ ಬುದ್ಧಿಶಕ್ತಿಯೂ

ಗ್ರಾಹಕಶಕ್ತಿಯೂ ಅನ್ಯಾದೃಶವಾಗಿ ತೋರಿಬಂತು. ಸಂಸ್ಕಾರಿಗಳಲ್ಲಿ

ಇರಬೇಕಾದ ಕೌಶಲ್ಯವೆಲ್ಲಾ ಆತನಲ್ಲಿ ಸ್ವಭಾವವಾಗಿಯೇ ಇತ್ತು.

ಮತ್ತೊಂದು ವಿಶೇಷವೇನೆಂದಕ್ಕೆ ಆತನಿಗೆ ನಮ್ಮ ರೀತಿಗಳೂ ಪದ್ಧತಿ

ಗಳೂ ವಿಶೇಷವಾಗಿ ಗೊತ್ತಾಗಿದ್ದವು.  ಶರೀರವನ್ನೂ ಬುದ್ಧಿಯನ್ನೂ

ಸಪ್ಪೆಮಾಡತಕ್ಕ ಕಾರ್ಯಗಳನ್ನೂ ನಮ್ಮ ಅಧಿಕವಾದ ಅಪೇಕ್ಷೆ

ಗಳನ್ನೂ ಇಲ್ಲದ ನಾಜೋಕನ್ನೂ ಕಂಡರೆ ಆತನಿಗೆ ಅತ್ಯಂತವಾಗಿ

ತಿರಸ್ಕಾರ ಹುಟ್ಟಿತು.


ಇಂಥಾ ದುರ್ಗುಣಗಳು ಶತ್ರುಗಳ ಆಯುಧಕ್ಕಿಂತಲೂ ತೀಕ್ಷ್ಣ 

ವಾಗಿ ಮನುಷ್ಯನ ಪೌರುಷವನ್ನು ನಾಶಮಾಡುವವು ಎಂದು ಹೇಳು

ತ್ತಿದ್ದನು.


ಒಂದು ದಿನ ಆ ಶಕಾಧಿಪತಿಯ ಸಭೆಯಲ್ಲಿ ಸುಂದರಿಯಾದ

ಒಬ್ಬ ಸೂಳೆಯು ಮೇಳವನ್ನು ಕಟ್ಟಿ ಮನೋಹರವಾಗಿ ಕುಣಿಯುತ್ತಿ

ದ್ದಳು. ನೋಡಿದವರೆಲ್ಲರೂ ಆನಂದ ಪಡುತ್ತಿದ್ದರು. ಈ ದೊರೆಯು

ಅದನ್ನು ನೋಡಿ ಇವಳು ಕಪಿಯಾಗಿ ಹುಟ್ಟಿದ್ದರೆ ಚೆನ್ನಾಗಿತ್ತು

ಎಂದನು. ಮತ್ತೊಬ್ಬನು ಸಂಗೀತವನ್ನು ಬಹುಚೆನ್ನ್ನಾಗಿ ಹಾಡುತ್ತಿ

ರಲು ದೊರೆಯು ಅವನನನ್ನು ಕುರಿತು ಎಲೈ ಗಾಯಕನೆ, ನೀನು ಈ

ಸಿಂಧುದೇಶೀಯರ ಸಭೆಯಲ್ಲಿ ಬೇಕಾದರೆ ಗಾನಮಾಡಿಕೊ, ನಮ್ಮ

ಶಕರಪಾಳಯದಲ್ಲಿ ಗಾನಮಾಡೀಯೆ, ನಿನಗೆ ತಲೇಹುಯಿಸಿಯೇನು

ಎಂದನು.


ತರುವಾಯ ಆ ಶಕಾಧಿಪನು ಊಟಕ್ಕೆ ಎದ್ದನ್ನು ಒಣಗಿದ

ಮಾಂಸದ ತುಂಡು ಸ್ವಲ್ಪ, ಗಟ್ಚಿಯಾಗಿ ಹೆತ್ತು ಇದ್ದ ಹುಳಿ ಮೊಸರು,  

ಬೇಯಿಸಿದ ಬೆರೆಕೆ ಸೊಪ್ಪು, ಯಾವುದೋ ಒಂದು ಬಗೆ ಒಣಕಲ ಹಿಟ್ಟು,

ಇಷ್ಟನ್ನು ತಂದು ಬಡಿಸಿದರು. ದೊರೆಯು ಚಾರುದತ್ತನನ್ನು ಕುರಿತು 

---------------------------------------

೨೮೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


--ಅಯ್ಯಾ, ನೀನು ನಮ್ಮ ತಿಂಡಿಯನ್ನು ತಿನ್ನುವುದಿಲ್ಲವಷ್ಪೆ. ಸ್ವಲ್ಪ

ಹುಳಿ ಮೊಸರನ್ನಾದರೂ ತೆಗೆದುಕೊಳ್ಳುವನಾಗೈ, ಎಂದು ತರಿಸಿಕೊಟ್ಟು

ನಮ್ಮ ಆಹಾರ ನಿನಗೆ ಹ್ಯಾಗೆ ತೋರುತಿದೆ? ಎಂದು ಕೇಳಿದನು.

ಆಗ ನಾನು ನನ್ನ ಮನಸ್ಸಿನಲ್ಲಿ ಈ ಶಕರು ಇಂಥಾ ಕಾಡತಿಂಡಿಯನ್ನು

ತಿಂದು ದೇಹವನ್ನು ಗಟ್ಟಿಯಾಗಿ ಮಾಡಿಕೊಂಡಿದಾರೆ. ಆದ್ದರಿಂದಲೇ

ಇಷ್ಟು ಪರಾಕ್ರಮಿಗಳಾಗಿ ಯಾರೂ ಲಕ್ಷ್ಯವಿಲ್ಲದೆ ರಾಜ್ಯಗಳನ್ನೆಲ್ಲಾ

ಜೈಸಿದಾರೆ. ನಮ್ಮ ದೇಶದವರಾದರೋ, ಬೇಕಾದ ಪಕ್ವಾನ್ನಗಳನ್ನು 

ವಾಸನೆಕಟ್ಟಿರುವ ಬಗೆ ಬಗೆ ತಿಂಡಿಗಳನ್ನೂ ಮಾಡುವುದರಲ್ಲಿಯೂ

ತಿನ್ನುವುದರಲ್ಲಿಯೂ ಬಹು ಚುರುಕರು. ಈ ಆಹಾರದಿಂದಲೇ ನಮ್ಮ

ವರಿಗೆಲ್ಲಾ ಪೌರುಷ ಕಡಮೆಯಾಗಿ ಅನ್ಯರಿಗೆ ಅಧೀನರಾಗಿರುವುದು,

ಹೀಗೆಂದು  ಯೋಚಿಸಿ, ದೊರೆಯನ್ನು ಕುರಿತು-- ಸ್ವಾಮಿ, ನೀವು

ಕೇಳಿದ ಪ್ರಶ್ನೆಗೆ ನಾನು ಏನು ಉತ್ತರವನ್ನು ಹೇಳಲಿ? ನಿಮ್ಮ

ಆಹಾರವು ನಿಮ್ಮ ಪುತ್ರರಿಗೆ ಅಷ್ಟು ಆಪ್ಯಾಯನವಲ್ಲದಿದ್ದಾಗ್ಗೂ ನಿಮ್ಮ

ಶತ್ರುಗಳಿಗೆ ಹೃದಯವಿದಳನವಾಗಿದೆ, ಎಂದು ಹೇಳಿದೆನು. ದೊರೆಗೆ

ನನ್ನ ಮಾತಿನಲ್ಲಿ ಏನೋ ಒಂದು ಪ್ರೀತಿ ತೋರಿ, ನನ್ನಲ್ಲಿ ವಿಶೇಷ

ವಾಗಿ ಮೈತ್ರಿಯನ್ನು ಇಟ್ಟುಕೊಂಡು, ಯಾವಾಗಲೂ ಮಹತ್ಕಾರ್ಯ

ಗಳನ್ನು ಕೈಕೊಳ್ಳಬೇಕಾದಾಗ ನನ್ನಲ್ಲಿ ಆಲೋಚನೆಯನ್ನು ಕೇಳುತ್ತಾ

ನನ್ನನ್ನು ಎಡೆಬಿಡದೆ ಸಮೀಪದಲ್ಲಿಯೇ ಇರಿಸಿಕೊಂಡಿದ್ದನು. ಈತನ 

ಸ್ನೇಹದಿಂದ ನಾನು ಶಕರನ್ನು ಈ ಸೀಮೆಯಿಂದ ಹಿಂದಕ್ಕೆ ಕಳುಹಿಸಿ

ನಮ್ಮ ದೇಶಸ್ಥರಿಗೆ ಸ್ವಾತಂತ್ರ್ಯ ದೊರೆಯುವಂತೆ ಮಾಡದಿದ್ದಾಗ್ಗೂ,

ಸಮಯವರಿತು ನಾನು ಹೇಳುತಿದ್ದ ಮಂತ್ರಾಲೋಚನೆಯಿಂದ ನಮ್ಮ

ದೇಶೀಯರಿಗೆ ಹಿಂಸೆ ಕಡಮೆಯಾಗಿ ಸೌಖ್ಯ ಹೆಚ್ಚಾಯಿತು. ಈ

ಶಕರಾಜನ ದರ್ಪಕ್ಕೆ ಅವನಕಡೇ ಜನರೆಲ್ಲರೂ ನಡುಗುತಿದ್ದರು.

ಯಾರಿಗೂ ಯಾವ ಕೆಟ್ಟಾಟಕ್ಕ್ಯೂ ಆಸ್ಪದವಿರಲಿಲ್ಲ. ಈತನ ರಾಜ್ಯವು

ರಾಮರಾಜ್ಯವಾಗಿತ್ತು. ಆದರೆ. ಕಾಲಗತಿಯಿಂದ ಈತನು ದೈವಾಧೀನ

ನಾಗಲು, ಇವನ ದಿವಸದಲ್ಲಿ ಅಡಗಿ ನಾಯಮರಿಯ ಹಾಗೆ ಬಿದ್ದಿದ್ದ

ತುಂಟ ಪಾಳಯಗಾರರೆಲ್ಲರೂ ಎದ್ದು ಕೂತುಕೊಂಡರು. ಇವರನ್ನು 

------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೮೭ 


ಅಡಗಮೆಟ್ಟುವುದಕ್ಕೆ ಹೊಸ ದೊರೆಗೆ ಸಾಮರ್ಥ್ಯವಿಲ್ಲದೆ ಹೋಯಿತು.

ನಮ್ಮ ಸೀಮೆಯ ಜನರಿಗೆ ಒಂದಕ್ಕೆ ಹತ್ತರಷ್ಟು ಕಷ್ಟ ಪ್ರಾಪ್ತ

ವಾಯಿತು. ಕೊನೆಗೆ ಒಬ್ಬ ಪುಂಡು ಪಾಳೆಯಗಾರನು ಒಂದು ದಿನ

ನನ್ನ ತೋಟವನ್ನೂ ಹೊಲವನ್ನೂ ಹಾಳಮಾಡಿ ನನ್ನ ಗುಡಿಸಲಿಗೆ

ಬೆಂಕಿ ಹತ್ತಿಸಿ, ನನಗೂ ನನ್ನ ಮಗಳಿಗೂ ಬೇಡೀಹಾಕಿ ನಮ್ಮನ್ನು

ಕಾಡಿಗೆ ತಂದು ಮಾರಿಗೆ ಬಲೀ ಕೊಡುವದಾಗಿದ್ದನು, ಮುಂದಿನ

ಸಂಗತಿಯೆಲ್ಲಾ ಶೂರನಾದ ನಿನಗೆ (ಮಲ್ಲನಿಗೆ) ತಿಳಿದೇ ಇದೆ,


ಈ ರೀತಿಯಲ್ಲಿ ಚಾರುದತ್ತನು ತನ್ನ ಕಥೆಯನ್ನು ಹೇಳಿ ಮುಗಿ

ಸಿದನು.


ಇದನ್ನು ಮಲ್ಲನ ಮನೇ ಜನರೆಲ್ಲಾ ಗಮನವಿಟ್ಟು ಕೇಳಿದರು.

ಅತಿ ವೃದ್ಧನಾದ ಮಲ್ಲನ ತಂದೆಯು ಎದ್ದು ಸಂತೋಷದಿಂದ ಚಾರು

ದತ್ತನನ್ನು ಅಪ್ಪಿಕೊಂಡು ತಮ್ಮ ಕೈಲಾದಮಟ್ಟಗೆ ಶತ್ರುಗಳ ಬಾಧೆ

ಯನ್ನು ನಿವಾರಣ ಮಾಡುವದಾಗಿಯೂ ಚಾರುದತ್ತನ ಪ್ರಾಣಕ್ಕೆ

ಬದಲಾಗಿ ತಮ್ಮ ಪ್ರಾಣವನ್ನು ಕೊಡುವುದಾಗಿಯೂ ವಾಗ್ದಾನ ಮಾಡಿ

ದನು. ತಮ್ಮ ದೇಶದ ಮೇಲೆ ಬರುತ್ತಿದ್ದ ಶತ್ರುಗಳನ್ನು ಮಲ್ಲನ

ಊರಿನವರು ಎಲ್ಲರೂ ಒಟ್ಬಾಗಿಸೇರಿರಿ ಎದುರಿಸುವುದೆಂದು ನಿಶ್ಚೈಸಿ

ಕೊಂಡರು. ಮಲ್ಲನು ತನ್ನ ಊರಿನ ಸುತ್ತಲೂ ಇದ್ದ ೮-೧೦

ಗ್ರಾಮಗಳಿಗೆ ಹೋಗಿ ಸಿಕ್ಕಿದ ಗಂಡಾಳುಗಳನ್ನೆ ಲ್ಲಾ ಕೂಡಹಾಕಿದನು,

ಶಕರ ಬಾಧೆಯನ್ನು ಅನುಭವಿಸಿ ಸಾಕಾಗಿದ್ದ ಆ ಜನರೆಲ್ಲಾ ಒಗ್ಗ

ಟ್ಟಾಗಿ ಮಲ್ಲನ ಪ್ರಯತ್ನ ಉತ್ತಮವಾದದ್ದೆಂದು ತಿಳಿದು ಜಗಳಕ್ಕೆ

ಸಿದ್ಧವಾದರು. ವೃದ್ಧರು ತಮ್ಮ ಅನುಭವದಿಂದಲೂ, ಯೌವ್ಚನಸ್ಥರು

ಅಂಗಶಕ್ತಿಯಿಂದಲೂ ವಯಸ್ಸಿಗೆ ತಕ್ಕ ವೀರಾವೇಶದಿಂದಲೂ ತೆರಳಿ

ದರು. ಎಲ್ಲರೂ ಐಕಕಂಠ್ಯವಾಗಿ ಮಲ್ಲನನ್ನು ತಮಗೆ ಮುಂದಾಳಾಗಿ

ಮಾಡಿಕೊಂಡರು. ಅವ ಹೇಳಿದಂತೆ ತಾವೆಲ್ಲರೂ ನಡೆದುಕೊಳ್ಳ

ತಕ್ಕದ್ದೆಂದು ವೃದ್ಧರಾದವರೆಲ್ಲರೂ ಒಂದು ಸಮಾಖ್ಯ ಮಾಡಿದರು.


ಆಗ ಚಾರುದತ್ತನು ಇದೆಲ್ಲವನ್ನು ನೋಡಿ, ಮಲ್ಲನನ್ನು ಒಂದು

ಕಡೆಗೆ ಕರೆದುಕೊಂಡು ಹೋಗಿ ರಹಸ್ಯವಾಗಿ ಅವನ ಸಂಗಡ ಹೇಳಿ 

-------------------------------------

೨೮೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ದ್ಹೇನೆಂದರೆ :-


ಅಯ್ಯಾ ಮಗುವೆ, ಈಗ ಶತ್ರುಗಳನ್ನು ಎದುರಿಸಿ ಓಡಿಸುವುದ

ಕ್ಕಾಗಿ ನಿನ್ನ ಜೊತೆಗೆ ಸೇರಿಕೊಂಡಿರುವ ಸಜ್ಜನರ ಸದ್ಗುಣವೂ, ನೀನು

ನನಗೆ ಮಾಡಿದ ಮಹದುಪಕೃತಿಯೂ, ದುರಾಶೆಯಿಂದ ಉನ್ಮತ್ತರಾಗಿ

ರುವ ದುಷ್ಟ ಶತ್ರುಗಳನ್ನು ಮಾರಾಂತು ಸೋಲಿಸಿ ಮೂಲೋತ್ಪಾಟನ

ವನ್ನು ಮಾಡಬೇಕೆಂಬ ನನ್ನ ಕುತೂಹಲವೂ, ಇವುಗಳೆಲ್ಲಾ ಒಟ್ಟು

ಗೂಡಿಕೊಂಡು ನಾನು ತಿಳಿದಿರುವ ಕೆಲವು ರಹಸ್ಯಗಳನ್ನು ಹೊರಪಡಿ

ಸೆಂದು ನೂಕುತ್ತಲಿವೆ. ನಾನು ಎಷ್ಟೋ ದೇಶಗಳನ್ನು ಸುತ್ತಿದೆ

ಎಷ್ಟೋ ಜನರನ್ನು ನೋಡಿದೆ, ಅನೇಕ ಗ್ರಂಥಗಳನ್ನು ಓದಿದೆ, ಎಷ್ಟೋ

ಪದಾರ್ಥಗಳನ್ನು ಅವುಗಳ ಪ್ರಯೋಜನಗಳನ್ನು ಪರೀಕ್ಷೆಮಾಡಿ ತಿಳಿದು

ಕೊಂಡೆ. ಆದಾಗ್ಗೂ ನನಗೆ ತಿಳಿಯದೆ, ತಿಳಿಯತಕ್ಕ ಅಂಶಗಳು

ಇನ್ನು ಅನೇಕವಾಗಿವೆ. ಆದರೂ ನನಗೆ ತಿಳಿದ ಒಂದು ಸಂಗತಿ

ಯನ್ನು ಹೇಳುತ್ತೇನೆ, ಎಂದು ಕೆಲವು ರಹಸ್ಯಗಳನ್ನು ಮಲ್ಲನಿಗೆ ಹೇಳಿ

ಕೊಟ್ಟನು.


ತರುವಾಯ ಹೊಲ್ಲನು ಹೆಚ್ಚಾದ ದಂಡಿನೊಡನೆ ಬಂದು ಜಗಳಕ್ಕೆ

ಅನುವಾದನು. ಮತ್ತು ಕೂಡಲೆ ಮಲ್ಲ ಇದ್ದ ಕಡೆಗೆ ಹೊಲ್ಲನು

ಸೇನಾಪತಿಯ ಉಡುಪನ್ನು ಹಾಕಿಕೊಂಡು ಬಹು ಡಂಭವಾಗಿ ಬಂದು

--ಮಲ್ಲ, ನಿನಗೆ ಇನ್ನೂ ಬುದ್ಧಿ ಬರಲಿಲ್ಲವೆ? ಒಂದು ಗಳಿಗೆಯಲ್ಲಿ

ದೇಶವನ್ನೆಲ್ಲಾ ಹಾಳುಮಾಡಿ ಈ ಊರ ಜನರನ್ನೆಲ್ಲಾ ಕೊಂದು ರಾಜ್ಯ

ವನ್ನು ಕೈವಶಮಾಡಿಕೊಳ್ಳುತೇನೆ, ಎಂದನು. ಅದಕ್ಕೆ ಮಲ್ಲನು ಈ

ಸೇನಾಪತಿಯು ಇಂಥವನೆಂದು ಅರಿಯದೆ ಅನುಮಾನಪಟ್ಟು ಕೊನೆಗೆ

ಧ್ವನಿಯಿಂದ ಗೊತ್ತುಮಾಡಿಕೊಂಡು-- ಹೊಲ್ಲ, ಈ ಡಂಭವನ್ನು ಬಿಡು.

ನೀನು ಹುಟ್ಟಿದ ಊರನ್ನು ಜೈಸಿ ಜನರಿಗೆ ಹಿಂಸೆಯನ್ನುಂಟುಮಾಡಿ

ದರೆ, ಅದು ದೊಡ್ಡತನವೂ ಅಲ್ಲ. ಪರಾಕ್ರಮ ಮೊದಲೇ ಅಲ್ಲ.

ಲೋಕದಲ್ಲಿ ಜನರ ಕಷ್ಟವನ್ನು ನಿವಾರಣೆಮಾಡಿ ಲೋಕೋಪಕಾರ

ಮಾಡುವುದು ಉತ್ತಮರ ಲಕ್ಷಣ. ನೀನು ಕೆಟ್ಟ ದಾರಿಗೆ ಹೋಗಿ

ಜಗಳಕ್ಕೆ ನಿಲ್ಲುತೇನೆಂದು ಹಠ ಮಾಡಿದರೆ ನಾನು ಕೊನೆಗೂ ಕಾದಿಬಿಡು 

----------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೮೯


ತೇನೆ. ಊರ ಜನರನ್ನು ಬೇರೇ ನಿನ್ನ ವಶಕ್ಕೆ ಬಿಟ್ಟುಕೊಡುವುದಿಲ್ಲ

ಎಂದನು. ಆಗ ಹೊಲ್ಲನು ಆಗ್ರಹದಿಂದ ಹೊರಟು ಹೋದನು. ಅವನ

ಸೇನೆಗೂ ಮಲ್ಲನ ಜನರಿಗೂ ಜಗಳ ಆರಂಭವಾಯಿತು. ಯುದ್ಧ

ಮಾಡುವುದರಲ್ಲಿ ಚೆನ್ನಾಗಿ ನುರುಗಿದ್ದ ಹೊಲ್ಲನ ಭಟರು ಆ ಊರ

ಮಂದಿಯನ್ನೆಲ್ಲಾ ಸಾಯಗೊಲೆಹಾಕಿ ಹುಡಿಬಡಿದರು. ಮಲ್ಲನ

ಊರಿನ ರೈತರು ಎಂದಿಗೂ ಇಂಥಾ ಕದನಗಳಲ್ಲಿ ಕಾದಿದವರಲ್ಲವಾದ್ದ

ರಿಂದ ಅವರು ಶತ್ರುಗಳ ಎದುರಿಗೆ ನಿಲ್ಲಲಾರದೆ ಓಡಿಹೋಗುವ

ಹೊತ್ತು ಬಂತು. ಹೊಲ್ಲನಿಗೆ ಇನ್ನೇನು ಜಯವಾಯಿತು ಎಂದು

ಶತ್ರುಗಳು ಸಂತೋಷವಾಗಿ ಕೂಗಿಕೊಂಡು ಎದುರಾಳುಗಳನ್ನು

ಹಿಂದಟ್ಟಿ ಹೋಗುತಿರುವಾಗ ನೂರು ಸಿಡಿಲು ಏಕಕಾಲದಲ್ಲಿ ಹೊಡೆದ

ಹಾಗೆ ಸದ್ದಾಯಿತು. ಸುತ್ತಲೂ ಇದ್ದ ಬೆಟ್ಟದ ಬಂಡೆಗಳೆಲ್ಲಾ ಹಾರಿ

ಹೊಲ್ಲನ ಸೇನೆಯ ಮೇಲೆ ಬಿತ್ತು. ಭೂಮಿ ಬಿರಿದು ಹೋಗಿ ಹೊಲ್ಲನ

ಸೇನೆ. ಅದರಲ್ಲಿ ದೊಸಕೊಂಡುಹೋಯಿತು. ಅನೇಕರು ಸತ್ತು

ಹೋದರು ; ಕೆಲವರು ಕೈಕಾಲು ಮುರಿದು, ಸಾಯುತಾ ಬಿದ್ದಿದ್ದರು.

ಅಕಸ್ಮಾತ್ತಾಗಿ ದೇವರ ಕೃಪೆಯಿಂದ ಮಲ್ಲನ ಕಡೆಯವರಿಗೆ ಜಯ

ವಾಯಿತು. ಆಗ ಆ ಊರ ಜನರೆಲ್ಲಾ ಮಲ್ಲನ ಎದುರಿಗೆ ಬಂದು

ವಿಶೇಷವಾಗಿ ಮರ್ಯಾದೆ ಮಾಡಿ ಅವನಿಂದ ತಮ್ಮ ಊರೂ ತಮ್ಮ

ಜನರೂ ಉಳಿದರೆಂದು ಅವನನ್ನು ಹೊಗಳಿದರು... ಆಗ ಮಲ್ಲನು

ಹೊಲ್ಲನ ಗತಿ ಏನಾಯಿತೋ ನೋಡೋಣವೆಂದು ಹುಡುಕಿಸುವಾಗ

ಅವನ ಅಂಗಗಳೆಲ್ಲಾ ಮುರಿದು ಮುಖವೆಲ್ಲಾ ಜಜ್ಜಿ ಹೋಗಿ ಸತ್ತು

ಹೋಗಿದ್ದನು. ಅವನ ಮೇಲೆ ಅನೇಕ ಹೆಣಗಳು ಬಿದ್ದಿದ್ದವು.

ಗುರುತು ಸಿಕ್ಚುವುದೇ ಕಷ್ಟವಾಯಿತು. ಮಲ್ಲನು ಅವನ ಹೆಣವನ್ನು

ತೆಗೆಯಿಸಿ ಹೂಳಿಸಿದನು. ತರುವಾಯ ತಾನು ಗೌರವಶಾಲಿಯಾಗಿ

ಊರಲ್ಲಿ ಜನರಿಗೆ ಬೇಕಾದ ಉಪಕಾರವನ್ನು ಮಾಡಿಕೊಂಡಿದ್ದನು.

ಚಾರುದತ್ತನು ಮಾಡಿದ ಉಪಕಾರಕ್ಕಾಗಿ ಗ್ರಾಮದವರೆಲ್ಲಾ ಸೇರಿ

ಅವನಿಗೆ ಒಂದು ಭೂಮಿಯನ್ನು ಮಾಡಿಕೊಟ್ಟರು. ಅದನ್ನು ಗ್ರಾಮದ

ರೈತರೇ ಉತ್ತು ಬಿತ್ತಿ ಬಂದ ಬೆಳೆಯನ್ನು ಚಾರುದತ್ತನ ಜೀವನಕ್ಕೆ 

--------------------------------------

೨೯೦ ಸುಮತಿ ಮದನಕುಮಾರರ ಚರಿತ್ರೆ   (ಅಧ್ಯಾಯ. 


ಕೊಡುತ್ತಿದ್ದರು. ಚಾರುದತ್ತನ ಕಥೆ ಹೀಗೆ ಮುಗಿಯಿತು.


ಹೀಗೆ ಕಥೆಯನ್ನು ಲಲಿತೆಯು ಓದಿ ಪೂರೈಸಿದ ತರುವಾಯ


ಮದನ-- ಬಂಡೆಗಳೆಲ್ಲಾ ಒಡೆದು ಭೂಮಿ ಎಲ್ಲಾ ಬಿರಿದು

ದೊಡ್ಡ ಸೇನೆ ಮಡಿದು ಹೋಗಬೇಕಾದರೆ ಆ ಶಕ್ತಿ ಎಂಥಾದ್ದು? ಆ

ತ್ರಾಣ ಯಾವುದು?


ಜೋಯಿಸ--.ಗಂಧಕ ಕಡ್ಡಿಯುಪ್ಪು ಮೊದಲಾದ ಪದಾರ್ಥ

ಗಳನ್ನು ಸೇರಿಸಿ ಮಾಡಿರುವ ಪುಡಿಯ ತ್ರಾಣ.


ಮದನ-- ಇದು ಮದ್ದು, ಇದನ್ನು ಸಾಧಾರಣವಾಗಿ ಕೋವಿ

ಗಳಿಗೆ ಹಾಕಿ ಹಾರಿಸುತಾರಷ್ಟೆ? ಇಂಥಾ ವಿಪರೀತ ಅದರಿಂದ ಹೇಗೆ

ಉಂಟಾದೀತು?


ಜೋಯಿಸ--ಅದು ಸಾಧಾರಣವಾದ ಶಕ್ತಿ. ಅದರಲ್ಲಿ ಇನ್ನೂ

ಕೆಲವು ಕ್ರಮಗಳನ್ನು ನಡಸಿದರೆ ಒಂದಕ್ಕೆ ನೂರರಷ್ಟು ತ್ರಾಣ

ಹುಟ್ಟುವುದು.


ಮದನ-- ಚಾರುದತ್ತನು ಅಲ್ಪನಾಗಿ ಕಂಡರೂ ಅವನು ಎಂಥಾ

ರಹಸ್ಯಗಳನ್ನು ಬಲ್ಲವನು? ಇವನು ಇಲ್ಲದಿದ್ದರೆ ಮಲ್ಲನ ಕಡೆಯವರಿಗೆ

ಜಯವಾಗುತಿರಲಿಲ್ಲ. ನಾವು ದೊಡ್ಡವರು, ನಾವು ಐಶ್ವರ್ಯವಂತರು,

ನಾವು ದೊರೆಮಕ್ಕಳು, ನಾವು ಅರಸಿತ್ತಿಯರು, ಹೀಗೆ ಹಾಗೆ ಎಂದು

ಪ್ರತಿಷ್ಠೆಯನ್ನು ಕೊಚ್ಚಿ ಕೊಂಡು ಮೆರೆಯುವ ಮನುಷ್ಯರು ಈಗಲಾ

ದರೂ ತಿಳಿದುಕೊಳ್ಳಲಿ. ಈ ಚಾರುದತ್ತನ ಕಥೆಯನ್ನು ಜೋಯಿಸರು

ಆ ಜನರಿಗೆ ಓದಿ ಹೇಳಿದ್ದರೆ, ತಮಗಿಂತಲೂ ಎಷ್ಟೋ ಭಾಗದಲ್ಲಿ ಬುದ್ಧಿ

ಶಾಲಿಯಾಗಿರುವ ಸುಮತಿಯನ್ನು ಅವರು ಅಷ್ಟೊಂದು ತಿರಸ್ಕಾರ

ಮಾಡಿ ಅವನಿಗೆ ಅಷ್ಟು ಅವಮಾನ ಮಾಡುತಿರಲಿಲ್ಲ.


ದೊರೆ--ಇಷ್ಟು ದಿವಸವೂ ಜೋಯಿಸರು ನಿನಗೆ ಹೇಳಿಕೊಟ್ಟ

ಬುದ್ಧಿ ವಾದವೂ, ಯೋಗ್ಯನಾದ ಸುಮತಿಯೊಡನೆ ನಿನಗೆ ಇದ್ದ ಇಷ್ಟು

ದಿವಸದ ಸ್ನೇಹವೂ ಯಾವ ಉಪಯೋಗಕ್ಕೂ ಬಾರದೆ, ನಾಚಿಗೆ ಕೆಟ್ಟು

ಸುಮತಿಯನ್ನು ನೀನು ಹೊಡೆಯುವ ಮಟ್ಟಗೆ ನಿನ್ನಲ್ಲಿ ದುಡುಕು

ಇರುವಾಗ ಜೋಯಿಸರು ಅರೆಗಳಿಗೆ ಓದಿ ಹೇಳಿದ ಕಥೆಯಿಂದ ಅವರೆ 

--------------------------------------

೨೪] ಸುಮತಿ ಮದನಕುಮಾರರ ಚರಿತ್ರೆ ೨೪೧ 


ಲ್ಲರೂ ಬುದ್ದಿ ಶಾಲಿಗಳಾಗುತಾರೆಂದು ನೀನು ಹೇಗೆ ಹೇಳಬಲ್ಲೆ?


ಮದನ--(ನಾಚಿಕೆಯಿಂದ) ಅಪ್ಸಾಜಿ, ನನ್ನಿಂದ ಅಪರಾಧ

ವಾಯಿತು. ಇಲ್ಲಿಗೆ ಕ್ಷಮಿಸಬೇಕು. ನಾನು ಇನ್ನು ಮೇಲೆ ಹೀಗೆ

ಮಾಡಿದರೆ ನನ್ನ ಮುಖವನ್ನು ತಾವು ನೋಡಬೇಡಿ.


ಹೀಗೆ ಹೇಳಿ ಕೇವಲ ಲಜ್ಜೆಯಿಂದ ಮಾತನಾಡದೆ ಆ ಕೊಟ್ಟಡಿ

ಯಿಂದ ಹೊರಟು ಹೋದನು.


ದೊರೆ-- ಪ್ರಯೋಜನವೇನು? ಗಾಳಿ ತಿರುಗಿದ ಹಾಗೆ ಈ

ಹುಡುಗನ ಸ್ವಭಾವವೂ ತಿರುಗುವುದು.


ಜೋಯಿಸ--ಈಗ ಅವನ ಮನಸ್ಸಿಗೆ ಅಂಟದ ಸಂಗತಿಗಳಿಗಾಗಿ

ಸಂತೋಷಪಡಬೇಕು. ಈ ಲೋಕದಲಿ ಅನೇಕ ಜನರಿಗೆ ಒಂದೊಂದು

ತಪ್ಪನ್ನೂ ಮಾಡಿ ಮಾಡಿ ಮನಸ್ಸು ಜಿತವಾಗಬೇಕು.


ಕೂಡಲೆ ಮದನನು ಮನೆಯೊಳಕ್ಕೆ ಹೋಗಿ ತನ್ನ ಡಂಭವಾದ

ಬಟ್ಟೆಗಳನ್ನೂ ಒಡವೆಗಳನ್ನೂ ತೆಗೆದುಹಾಕಿ, ಬಡವರ ಹಾಗೆ ಬಟ್ಟೆ

ಯನ್ನು ಹೊದ್ದು ಹೊರಕ್ಕೆ ಹೊರಟನು.


ರಾಣಿ--ಮಗು ಇದೇನು ಬಟ್ಟೆ? ಇಂಥಾ ವೇಷ ದೊರೆ ಮಕ್ಕ

ಳಿಗೆ ಯೋಗ್ಯವಾದದ್ದೆ?


ಮದನ--ಅಮ್ಮಯ್ಯ, ನಿಮ್ಮ ಡಂಭದ ಬಟ್ಟೆಗಳು ಸಾಕು. ನಿಮ್ಮ

ಆಭರಣಗಳೂ ಸಾಕು. ನನಗೆ ಇಷ್ಟರಮಟ್ಟನ ಬುದ್ಧಿ ಬಂದಿದ್ದರೆ

ನಮ್ಮ ಮನೆಯಲ್ಲಿ ಪ್ರಸ್ತಕ್ಕಾಗಿ ಸೇರಿದ್ದ ಆ ಕೂಟದ ನಡತೆ ನನಗೆ

ಬರುತಿರಲಿಲ್ಲ; ಯೋಗ್ಯನಾದ ಸುಮತಿಯ ವಿಷಯದಲ್ಲಿ ನಾನು

ಅಷ್ಟು ದುಡುಕನ್ನು ತೋರಿಸುತಲೂ ಇರಲಿಲ್ಲ.


ಹೀಗೆಂದು ಹೇಳಿದ ರಾಜಪುತ್ರನ ಮಾತನ್ನು ಕೇಳಿ ಕೆಲವರಿಗೆ

ಆಶ್ಚರ್ಯವೂ ಕೆಲವರಿಗೆ ಸಂತೋಷವೂ ಉಂಟಾಯಿತು.


ಮಾರನೇ ದಿವಸ ಬೆಳಗ್ಗೆ ಮದನನು ಜೋಯಿಸರ ಬಳಿಗೆ

ಹೋಗಿ ಅವರಿಗೆ ಎಂದಿನಂತೆ ಪ್ರಾತಃಕಾಲದ ನಮಸ್ಕಾರವನ್ನು ಮಾಡಿ,

“ ಜೋಯಿಸರೆ, ಸುಮತಿಯನ್ನು ನಾನು ನೋಡಬೇಕು. ಅವರ

ಮನೆಗೆ ಹೋಗೋಣ ಎಂದನು. ಅದರಂತೆ ಜೋಯಿಸನೂ ಮದ 

-------------------------------------

೨೯೨ ಸುಮತಿ ಮದನಕುಮಾರರ ಚರಿತ್ರೆ (ಅಧ್ಯಾಯ 


ನನೂ ಸೂರ್ಯಭಟ್ಟರ ಮನೆಗೆ ಹೊರಟರು. ಮದನನು ಸುಮತಿಯ

ಮೇಕೇಮರಿಯನ್ನು ಸಂಗಡ ಕರೆದುಕೊಂಡು ಹೋರಟನು. ಸಂಗಾತಿ

ಯನ್ನು ನೋಡಲು ಕೇವಲ ಕುತೂಹಲನಾಗಿದ್ದ ಮದನನ ಕಣ್ಣಿಗೆ

ಮೊದಲು ಸುಮತಿ ಕಾಣಿಸಿದರು. ಕೂಡಲೆ ದೊರೆ ಮಗನು ಅತಿ

ವೇಗದಿಂದ ಮದನನ ಕಡೆಗೆ ನಗುತಾ ಓಡಿ ಬಂದನು. ಆಗ ಸುಮ 

ತಿಯು ಇವನ ಅಭಿಪ್ರಾಯವನ್ನು ತಿಳಿದುಕೊಂಡು ಮದನನನ್ನು

ಬಾಚಿ ತಬ್ಬಿಕೊಂಡನು. ಈ ಪ್ರಕಾರ ಇಬ್ಬರೂ ಒಂದು ಗಳಿಗೆಯಲ್ಲಿ

ಪೂರ್ವದಂತೆಯೇ ಸ್ನೇಹಿತರಾದರು.


ಅಷ್ಟರಲ್ಲಿಯೇ ರಾಮಜೋಯಿಸನೂ ಅಲ್ಲಿಗೆ ಬಂದು ಒದಗಿ,

ಸುಮತಿಯನ್ನು ಕುರಿತು,


ಜೋಯಿಸ.--ಸುಮತಿ, ನಿನ್ನ ಸ್ನೇಹಿತನನ್ನು ಕರೆದುಕೊಂಡು

ಬಂದಿದೇನೆ. ತಾನು ಪರಿತಾಪಸಟ್ಟು ಅಪರಾಧ ಮಾಡಿದೆನೆಂದು

ನಿನ್ನ ಮುಂದೆಯೇ ಒಪ್ಪಿಕೊಂಡು ಕ್ಷಮೆಯನ್ನು ಕೇಳಿಕೊಳ್ಳುವುದಕ್ಕೆ

ಬಂದಿದಾನೆ.


ಮದನ--ಗುರುಗಳೇ, ಪರಿತಾಪವೇನೋ ನನಗೆ ಚೆನ್ನಾಗಿಯೇ

ಉಂಟು. ಆದರೆ ನನ್ನ ದುರ್ನಡತೆಯನ್ನು ಸುಮತಿ ಕ್ಷಮಿಸಿಯಾನೆ?


ಸುಮತಿ--ಹಾಗೆ ಹೇಳಬೇಡ, ಮದನ, ನನ್ನಲ್ಲಿ ನಿನಗೆ ಇದ್ದ

ಪ್ರೀತಿಯೊಂದು ಹೊರತು ನಿಂತದ್ದೆಲ್ಲವನ್ನೂ ಮರೆತುಬಿಟ್ಟೆ,


ಹೀಗೆ ಹೇಳಿದ ಕೂಡಲೆ ಮದನನು ಪೂರ್ವದಲ್ಲಿ ತಾನು ನಾಯಿ

ಯಿಂದ ಕೊಲ್ಲಲ್ಪಡುತಿದ್ದ ಸುಮತಿಯ ಮೇಕೇಮರಿಯೊಂದನ್ನು

ಬಿಡಿಸಿಕೊಂಡು ಇಷ್ಟು ದಿನವೂ ಬಹು ಜಾಗರೂಕತೆಯಿಂದ ಪೋಷಣೆ

ಮಾಡಿ ತನ್ನ ಸಂಗಡಲೇ ಕರೆದುಕೊಂಡು ಬಂದದ್ದನ್ನು ಸುಮತಿಗೆ

ಕೊಟ್ಟು, ಅದರ ಪೂರ್ವ ವೃತ್ತಾಂತವನ್ನೆ,ಲ್ಲಾ ವಿಸ್ತಾರವಾಗಿ ಹೇಳಿ

ದನು. ಆಗ ಸುಮತಿಗೆ ತನ್ನ ಮೇಕೇಮರಿ ಉಳಿಯಿತಲ್ಲಾ ಎಂದು

ಸಂತೋಷ ಮತ್ತೂ ಹೆಚ್ಚಾಯಿತು. ಸುಮತಿಯು ಜೋಯಿಸನನ್ನೂ

ದೊರೆ ಮಗನನ್ನೂ ತಮ್ಮ ಮನೆಗೆ ಕರೆದುಕೊಂಡು ಹೋದನು. ಆ

ಮನೆ ಅಷ್ಟು ದೊಡ್ಡದಲ್ಲದಿದ್ದಾಗ್ಗೂ ಅನುಕೂಲವಾಗಿಯೂ ನೋಡುವು 

--------------------------------------

೨೪] ಸುಮತಿ ಮದನಕುಮಾರರೆ ಚರಿತ್ರೆ ೨೯೩ 


ದಕ್ಕೆ ಬಹು ನಿರ್ಮಲವಾಗಿಯೂ ಇತ್ತು. ಸೂರ್ಯಭಟ್ಟನೂ ಆತನ

ಹೆಂಡತಿಯೂ ಈ ಅತಿಥಿಗಳನ್ನು ನೋಡಿ ಬಹಳ ಸಂತೋಷದಿಂದ

ಅವರನ್ನು ಉಪಚರಿಸಿದರು, ಸೂರ್ಯಭಟ್ಟನೂ ರಾಮಜೋಯಿಸನೂ

ತಮ್ಮ ಸ್ನಾನಾಹ್ನಿಕಗಳನ್ನೂ ಪಾರಾಯಣ ದೇವತಾರ್ಚನೆ ಮೊದಲಾದ

ನಿತ್ಯ ಕರ್ಮಗಳನ್ನು ತೀರಿಸಿಕೊಂಡು ಭೋಜನವನ್ನು ಮಾಡಿದರು.

ಮದನನಿಗೂ ಸ್ನಾನವಾಯಿತು. ಮೈಯನ್ನು ಒರೆಸುತೇನೆಂದು

ಜೋಯಿಸ ಕರೆದರೂ ಒಲ್ಲದೆ ರಾಜಪುತ್ರನು ತಾನೇ ಒರಸಿಕೊಂಡು--

“ ಜೋಯಿಸರೆ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕಲ್ಲದೆ

ಇತರರ ಸಹಾಯವನ್ನು ಅಸೇಕ್ಷಿಸಬಾರದೆಂದು ತಾವು ನನಗೆ ಹೇಳಿ

ಲ್ಲವೆ ? ಆದ್ದರಿಂದ ನಾನೇ ವರಸಿಕೊಳ್ಳುತ್ತೇನೆ” ಎಂದನು. ಹಣೆಗೆ

ವಿಭೂತಿಯನ್ನೂ ಚುಕ್ಕೀಬಟ್ಟನ್ನೂ ಇಡುತೇನೆ ಬಾ, ಎಂದು ಕರೆದರೆ

ಮದನನು “ ಗುರುಗಳೆ, ಚುಕ್ಕೀಬಟ್ಟನ್ನು ಇಟ್ಟು ಶೃಂಗಾರ ಮಾಡಿ

ಕೊಳ್ಳ, ಸಿಸ್ತುಗಾರರ ಮಾತನ್ನು ಕೇಳಿ ನನಗೆ ಆಗಬೇಕಾದ್ದೆಲ್ಲಾ

ಆಯಿತು. ಸಿಸ್ತನ್ನು ಒಲ್ಲೆ. ವಿಭೂತಿಯೇ ಸಾಕು” ಎಂದನು. ಸುಮ

ತಿಯ ತಾಯಿಯು ಇವನಿಗೆ ಮಣೆಯನ್ನು ಹಾಕಿ ಮುಂದೆ ಅಗ್ರದ ಬಾಳೆ

ಎಲೆಯನ್ನು ಹಾಕಿ ಊಟಕ್ಕೆ ಬಡಿಸಿದಳು. ಮದನನು ಮಣೆಯನ್ನು

ಎತ್ತಿ ಗೋಡೆಗೆ ಒರಗಿಸಿ ಬರೀ ನೆಲದ ಮೇಲೆಯೇ ಕೂತುಕೊಂಡನು.

ಊಟ ಮಾಡುತಿರುವಾಗ ಸುಮತಿಯ ತಾಯಿಯು--“ಅಯ್ಯಾ, ನಿನ 

ಗೇನು ಕಡಮೆ? ಯಾಕೆ ಒಂದು ಒಡವೆಯೂ ಮೈಮೇಲೆ ಇಲ್ಲದೆ

ಇದ್ದೀಯೆ? ಎಂದು ಕೇಳಿದಳು. ಅದಕ್ಕೆ ರಾಜಕುಮಾರನು--“ ತಾಯಿ, 

ಸುಮತಿ ಮೈ ಮೇಲೆ ಯಾವ ಒಡವೆಯೂ ಇಲ್ಲ. ಆದಾಗ್ಗೂ ಅವನು

ಎಷ್ಟೋ ಬುದ್ಧಿಶಾಲಿಯಾಗಿಲ್ಲವೆ ? ಒಡವೆಯನ್ನು ಇಟ್ಟು ಮೆರೆದರೆ

ಬಂದ ಭಾಗ್ಯವೇನು ?” ಎಂದನು.


ಊಟವಾದ ತರುವಾಯ ಎದ್ದು ಕೈ ತೊಳೆದುಕೊಂಡು ಬಾಗಿಲ

ಜಗಲಿಯ ಮೇಲೆ ಕೂತಿದ್ದ ಹಬ್ಬಸಿಯವನನ್ನು ನೋಡಿ, ಗೂಳಿ

ಹಾಯುತ್ತಿದ್ದಾಗ ಸುಮತಿಯ ಪ್ರಾಣವನ್ನು ಉಳಿಸಿದವನು ಇವನೇ

ಎಂದು ಅರಿತು, 

---------------------------------------

೨೯೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ


ಮದನ-- ಅಯ್ಯಾ, ನೀನು ನಮ್ಮ ಸುಮತಿಯ ಪ್ರಾಣವನ್ನು

ಕಾಪಾಡಿದ ಆಪದ್ಭಂಧುವಲ್ಲವೆ? ಉಪಕಾರಕ್ಕೆ ಪ್ರತ್ಯುಪಕಾರವನ್ನು

ಮಾಡದೆ, ನಾನು ಅಲಕ್ಷ್ಯಯವಾಗಿದ್ದ ಸಂಗತಿಗಳಲ್ಲಿ ಇದು ಒಂದು

ದೊಡ್ಡದು.


ಹಬ್ಬಸಿ- ಬುದ್ಧಿ, ನಾನು ಸುಮತಿಯ ಸಂಗಡ ಇವರ ಮನೆಗೆ

ಬಂದಾಗಿನಿಂದ ಇದುವರೆಗೆ ಸಜ್ಜನರಾದ ಈ ಮನೆಯವರಿಂದ ನಾನು

ಹೊಂದಿದ ಉಪಕಾರ ಎಷ್ಟೋ ಭಾರವಾಗಿ ನನ್ನ ತಲೆಯ ಮೇಲೆ

ಕೂತಿದೆ. ನನಗೆ ಇನ್ನು ಬೇಕಾದ್ದು ಏನೂ ಇಲ್ಲ.


ಮದನ--ಆದರೆ ದೊರೆಮಗನಾದ ನಾನು ಮಾಡುವ ಉಪಕಾರದ

ಸ್ಪಭಾವವನ್ನು ಇನ್ನೂ ನೀನು ಅರಿಯೆ.


ಹೀಗೆಂದ ತರುವಾಯ ಮದನನು ಆ ದೊರೆಮಗ ಎನ್ನುವ

ಸ್ವಪ್ರತಾಪದ ಮಾತು ಮತ್ತೆ ತನ್ನ ಬಾಯಲ್ಲಿ ಹೊರಟತಲ್ಲಾ ಎಂದು

ಮನಸ್ಸಿನಲ್ಲಿಯೇ ಸಂಕೋಚಮಾಡಿಕೊಂಡು, ಪುನಃ ಹಬ್ಬಸಿಯವ

ನನ್ನು ಕುರಿತು.“ ಅಯ್ಯಾ, ನಾನು ಉಪಕಾರ ಮಾಡುತೇನೆಂದು

ಅಲ್ಲ, ನಮ್ಮ ಅಪ್ಪಾಜಿಗೆ ಹೇಳಿ ನಿನಗೆ ಬೇಕಾದ್ದನ್ನು ಕೊಡಿಸುತೇನೆ?

ಎಂದನು.


ತರುವಾಯ ಹಬ್ಬಸಿಯವನಿಗೂ ಊಟವಾಯಿತು. ಈ ಮಧ್ಯೆ

ಮದನನು ಸುಮತಿಯ ಅಕ್ಕ ತಂಗಿ ಮೊದಲಾದವರಲ್ಲಿ ಯಾವ

ಟೇಂಕಾರವೂ ಇಲ್ಲದೆ ಸಲಿಗೆಯಾಗಿ ಮಾತನಾಡುತಾ ಗರ್ವವನ್ನು

ಲೇಶವೂ ತೋರಿಸದೆ ಇದ್ದನು. ರಾಜಪುತ್ರನ ನಡತೆಯನ್ನು ನೋಡಿ

ಸೂರ್ಯಭಟ್ಟನ ಮನೆಯವರೆಲ್ಲರಿಗೂ ಬಹು ಸಂತೋಷವಾಯಿತು.

ಹೀಗೆ ಐಶ್ಚರ್ಯವಂತರು ನಿಗರ್ವಿಗಳಾಗಿದ್ದರೆ ಅವರಿಗೆ ಸುಲಭವಾಗಿ

ಗೌರವವೂ ಸೌಜನ್ಯವೂ ದೊರೆಯುವವು. ಇದನ್ನು ಬಿಟ್ಟು ಅಹಂಕಾರ

ದಿಂದ ಬಡವರ ಕಡೆಗೆ ತಿರುಗಿಯೂ ನೋಡದೆ ಆಡುನ ಮಾತುಗಳ

ನ್ನೆಲ್ಲಾ ಘರ್ಜನೆಮಾಡಿ ಆಡುತಾ ಹೆಜ್ಜೆ ಹೆಜ್ಜೆಗೂ ಕೋಪವನ್ನು

ಮಾಡಿಕೊಂಡು ಎಲ್ಲರನ್ನೂ ತಿರಸ್ಕರಿಸಿ ಮಾತನಾಡಿ ಮೆರೆಯುವರು.


ಆಗ ಮನೆಯವರೆಲ್ಲರಿಗೂ ಊಟವಾಗಿ ಎಲ್ಲರೂ ಸಾವಕಾಶದಿಂದ 

----------------------------------

೨೫] ಸುಮತಿ ಮದನಕುಮಾರರ ಚರಿತ್ರೆ ೨೯೫ 


ಮೂರನೇ ಹಜಾರದಲ್ಲಿ ಕೂತುಕೊಂಡಿರುವಾಗ ಮದನನು ಹಬ್ಬಸಿಯ

ವನ ಪೂರ್ವೋತ್ತರವನ್ನು ವಿಚಾರಿಸಿದನು. 

...

೨೫ನೆ ಅಧ್ಯಾಯ 

ಆಗ ಮದನನು ಹಬ್ಬಸಿಯವನನ್ನು ಕುರಿತು--ಅಯ್ಯಾ. ನಿಮ್ಮ

ದೇಶದವರಿಗೆ ಈ ಗೂಳೀ ಕಾಳಗದ ಅಭ್ಯಾಸ ಹೆಚ್ಚಾಗಿರುವಂತೆ ತೋರು

ತಿದೆ. ಇಲ್ಲದೇ ಇದ್ದರೆ ಉಗ್ರವಾದ ಆ ಗೂಳಿಯನ್ನು ಹಾಗೆ ಎದುರಿಸು

ವುದಕ್ಕಾದೀತೆ? ಕಾಡುಮೃಗಗಳನ್ನು ಸಾದಾಗಿ ಮಾಡುವುದಕ್ಕೆ ನನಗೂ

ತಿಳಿಯುವುದು. ಆದರೆ ಅಂಥಾ ಭಯಂಕರವಾದ ಗೂಳಿಯನ್ನು

ನಾನು ಯಾವಾಗಲೂ ನೋಡಿರಲಿಲ್ಲ. ಆ ದಿನ ನೀನು ಇಲ್ಲದಿದ್ದರೆ

ನನ್ನ ಪ್ರಾಣವೇ ಉಳಿಯುತಿರಲಿಲ್ಲ. ಹೀಗೆಂದು ಮದನ ಹೇಳಿದನ್ನು

ಅದಕ್ಕೆ ಹಬ್ಬಸಿಯವನು--ಬುದ್ಧಿ, ಈ ಬಗೆ ಗೂಳಿಕಾಳಗ, ಕೋಣನ

ಕಾಳಗ ಟಗರಿನ ಕಾಳಗ ಮೊದಲಾದ್ದು ದೇಶ ದೇಶದಲ್ಲಿಯೂ ಉಂಟು;

ನಮ್ಮ ದೇಶದಲ್ಲಿ ಒಂದು ಕಡೆಯೇ ಅಲ್ಲ. ಮೊನ್ನೆ ನಡೆದ ಕಾಳಗ

ಅಷ್ಟರಲ್ಲಿಯೇ ಇದೆ. ಇದಕ್ಕಿಂತಲೂ ಅಧಿಕವಾದ್ದನ್ನು ಎಷ್ಟೋ

ನೋಡಿದೇನೆ, ಎಂದನು. 


ಕೂಡಲೆ ತಾನು ಕಾಡುಮೃಗಗಳನ್ನು ಸಾದುಮಾಡುವುದಕ್ಕೆ

ಬಲ್ಲೆನೆಂತಲೂ ಇತರರಿಗಿಂತ ಹೆಚ್ಚಾಗಿ ಈ ವಿಷಯಗಳನ್ನು ತಿಳಿದು

ಇದೇನೆಂತಲೂ ಮದನನು ತನ್ನ ಸ್ವಪ್ರತಾನವನ್ನು ಹೇಳಿಕೊಳ್ಳುವ

ದುರಭ್ಯಾಸ ತನಗೆ ಇನ್ನೂ ಹೋಗಲಿಲ್ಲವಲ್ಲಾ, ಎಂದು ಮನಸ್ಸಿನಲ್ಲಿಯೇ

ಪೇಚಾಡಿಕೊಂಡು, ಹಬ್ಬಸಿಯವನನ್ನು ಕುರಿತು--ಅಯ್ಯಾ ಮಿತ್ರನೆ, 

ಇದೆಲ್ಲವನ್ನೂ ನೀನು ಎಲ್ಲಿ ವಿಶೇಷವಾಗಿ ನೋಡಿದ್ದೀಯೆ? ಹೇಳು,

ಎಂದನು. 


ಅದಕ್ಕೆ ಹಬ್ಬಸಿಯವನು-- ಸ್ವಾಮಿ, ನಾನು ಎಷ್ಟೋ ದೇಶವನ್ನು

ಸುತ್ತಿದೇನೆ. ಅನೇಕ ದ್ವೀಪಾಂತರಗಳಿಗೆ ಹೋಗಿದೇನೆ. ಒಂದಾ

ನೊಂದು ಸೀಮೆಯಲ್ಲಿ ಜನರು ಕುದುರೆಯನ್ನು ಹತ್ತಿ ಕಾಡಿಗೆ ಹೋಗಿ 

-------------------------------------

೨೯೬ ಸುಮತಿ ಮದನಕುವಾಾರರೆ ಚರಿತ್ರೆ [ಅಧ್ಯಾಯ 


ಕಾಡಗೂಳಿಗಳನ್ನು ಹಿಡಿಯುವರು. ಅವರು ಬಲವಾಗಿ ಉದ್ದವಾಗಿ

ರುವ ಒಂದು ಹಗ್ಗದ ಕೊನೆಗೆ ಜೀರುಗುಣಿಕೇ ಹಾಕಿ ಅದನ್ನು ಕೈಲಿ

ಹಿಡಿದುಕೊಂಡಿರುವರು. ಇವರನ್ನು ಕಂಡಕೂಡಲೆ ರೋಷದಿಂದ

ಗೂಳಿಯು ಮೇಲೆ ಬೀಳುವುದಕ್ಕೆ ಬಂದು ನೆಗೆಯುವುದು. ಆಗ

ಕುದುರೇ ಮೇಲೆ ಕೂತಿರುವ ಮನುಷ್ಯನು ತನ್ನ ಕೈಲಿರುವ ಜೀರು

ಗುಣಿಕೆಯನ್ನ್ನು ಬಹು ಚಮತ್ಕಾರವಾಗಿ ಎಸೆಯುವನು. ಆ ಹಗ್ಗ

ಹೋಗಿ ಗೂಳಿಯ ಕಾಲಿಗೆ ಬೀರಿಕೊಳ್ಳುವುದು- ಆ ಕ್ಷಣದಲ್ಲಿಯೇ

ಕುದುರೆಯು ಗೂಳಿಯ ಸುತ್ತಲೂ ಪ್ರದಕ್ಷಿಣೆಯಾಗಿ ಅತಿವೇಗದಿಂದ

ಸುತ್ತುವುದು. ಹಾಗೆಯೇ ಹಗ್ಗವು ಗೂಳಿಯ ಕಾಲಿಗೂ ಮೈಗೂ

ಚೆನ್ನಾಗಿ ಸುತ್ತಿಕೊಳ್ಳುವುದು. ಆಗ ಅದರ ಯತ್ನ ತಪ್ಪಿಹೋಗಿ

ಮೇಲಕ್ಕೆ ಏಳಲಾರದೆ ನೆಲಕ್ಕೆ ಬಿದ್ದು ಬಿಡುವುದು; ಈ ಬೇಟೆಗಾರನು

ಕುದುರೆಯ ಮೇಲಿನಿಂದ ಇಳಿದು ಕಠಾರಿಯನ್ನು ಹಿಡಿದು ಆ ಗೂಳಿಯ

ಕೊಂಬಿನ ಹಿಂಭಾಗದಲ್ಲಿ ತಿವಿದು ಅದನ್ನು ಕೊಲ್ಲುವನು.

ಒಂದಾನೊಂದು ಸಮಯದಲ್ಲಿ ಒಂದು ವಿಚಿತ್ರ ನಡೆಯಿತು.

ಒಂದು ಊರಿನಲ್ಲಿ ಒಬ್ಬ ಅಪರಾಧಿಯನ್ನು ಸೆರೆಮನೆಗೆ ಹಾಕಿದರು.

ಅವನನು ಆ ಊರ ದೊರೆಯನ್ನು ಕುರಿತು--ನನಗೆ ಮರಣದಂಡನೆ

ಯನ್ನು ಕೊಟ್ಟಾಗ್ಲೂ ಸರಿಯೆ, ಸೆರೆಮನೆಗೆ ಮಾತ್ರ ಹಾಕಿಸಕೂಡದು.

ನಾನು ಯಾವಾಗಲೂ ರಣದಲ್ಲಿ ಕತ್ತೀ ಹಿಡಿದು ಬಾಳಿದ ವೀರಭಟ.

ಅಪಮಾನಕ್ಕೆ ಅಂಜುವೆನು, ಮರಣಕ್ಕೆ ಅಂಜುವುದಿಲ್ಲ. ನನ್ನ

ಸಾಮರ್ಥ್ಯವನ್ನು ತೋರಿಸುವ ಒಂದು ವಿಚಿತ್ರವನ್ನು ಮಾಡುವುದಕ್ಕಾ

ಗಲಿ ಅಥವಾ ಅದರಲ್ಲಿ ನನ್ನ ಪ್ರಾಣವನ್ನು ಒಪ್ಪಿಸುವುದಕ್ಕಾಗಲಿ

ಅಪ್ಪಣೆಯಾಗಬೇಕು; ನನಗೆ ಇದಕ್ಕಾಗಿ ನನ್ನ ಕುದುರೆಯನ್ನೂ ಉದ್ದ

ವಾದ ಹಗ್ಗವನ್ನೂ ಅಪ್ಸಣೇ ಕೊಡಿಸಬೇಕು ಇನ್ನೇನೂ ಬೇಡ.

ಎಂದನು. ದೊರೆಯು ಅದೇ ರೀತಿಯಲ್ಲಿ ಅಪ್ಪಣೆ ಮಾಡಿದನು.

ಇವನ ಸಾಹಸವನ್ನು ನೋಡುವುದಕ್ಕಾಗಿ ಒಂದು ದಿನ ಎಲ್ಲರೂ ಸೇರಿ

ದರು. ಸಾಹಸಗಾರನು ಕುದುರೆಯ ಮೇಲೆ ಏರಿ ಹೊರಡಲು ಎದುರಿಗೆ

ಒಂದು ದೊಡ್ಡ ಗೂಳಿಯು ಅಬ್ಬರಿಸಿಕೊಂಡು ಬಂತು. ಈ ಮನುಷ್ಯನು 

----------------------------------------

೨೫] ಸುಮತಿ ಮದನಕುಮಾರರೆ ಚರಿತ್ರೆ ೨೯೭ 


ತನ್ನ ಕುದುರೆಯನ್ನು ಹಿಂದಕ್ಕೂ ಮುಂದಕ್ಕೂ ಸೊಟ್ಟ ಸೊಟ್ಟಿ ನಾ

ಗಿಯೂ ಓಡಿಸುತಾ ಬಂದನು. ಗೂಳಿಯು ಇವನ ಹಿಂದೆಯೇ ಹರಿಸಿ

ಯಾಡುತಾ ಹೋಯಿತು. ಇವನು ಅದಕ್ಕೆ ಸಿಕ್ಕಲಿಲ್ಲ. ಕೊನೆಗೆ ಆ

ವೃಷಭಕ್ಕೆ ಆಯಾಸವಾಗಿ ವೇಗವನ್ನು ಕಡಮೆಮಾಡಿತು. ಆಗ ತನ್ನ

ಕೈಲಿದ್ದ ಹಗ್ಗವನ್ನು ಎಸೆದು ಅದು ಮುಗ್ಗರಿಸಿ ಬೀಳುವಂತೆ ಮಾಡಿ

ಹತ್ತಿರಕ್ಕೆ ಬಂದು ಅದನ್ನು ಕಟ್ಟಿ ಹಾಕಿದನು. ಹೀಗೆ ಹಬ್ಬಸಿಯವನು

ಹೇಳಿದ ಕೂಡಲೆ,


ಮದನ--ಅವನು ಎಂಥಾ ಸಮರ್ಥನಾಗಿರಬೇಕು! ನಾವೇ

ಐಶ್ವರ್ಯವಂತರು, ನಾವೇ ದೊರೆಮಕ್ಕಳು, ನಮಗೆ ಯಾರೂ ಸಮಾನ

ರಿಲ್ಲ, ಎಂದು ಮೆರೆಯತಕ್ಕವರೆಲ್ಸಾ ಬಂದು, ಅಂಥಾ ಗೂಳಿಯೊಂದನ್ನು

ಕಟ್ಟಿಹಾಕಲಿ, ನೋಡೋಣ!


ಹಬ್ಬಸಿ-_ಬುದ್ಧಿ ಒಬ್ಬೊಬ್ಬ ಪುರುಷನಲ್ಲಿ ಒಂದೊಂದು ಗುಣ

ವಿರುತ್ತೆ... ಜನರ ಕ್ಬೇಮಕ್ಕಾಗಿ ದೇವರು ಒಂದೊಂದು ದೇಶದಲ್ಲಿ

ಒಂದೊಂದು ಸಾಮರ್ಥ್ಯವನ್ನು ಮನುಷ್ಯನಿಗೆ ಕೊಟ್ಟಿದಾನೆ, ಆದರೆ

ಯಾವ ಯೋಗ್ಯತೆಯೂ ಇಲ್ಲದೆ ಯಾವ ಕೆಲಸವನ್ನೂ ಮಾಡದೆ ಇತರರು

ತಂದು ಹಾಕಿದ್ದನ್ನು ತಿಂದು ಹಾಕುತ್ತಾ ಕೂತ ಕಡೇ ಬಿಟ್ಟು ಏಳದೆ

ಪ್ರತಿಷ್ಠೆ ಹತ್ತುವ ಜನರು ನಿಮ್ಮ ದೇಶದಲ್ಲಿ ಬೇಕಾದಷ್ಟಿದಾರೆ, ನಮ್ಮ

ದೇಶದಲ್ಲಿ ಒಬ್ಬನೂ ಇಲ್ಲ. ಇವರು ಬಡವರನ್ನು ಬಹು ಅಲಕ್ಷ್ಯ

ವಾಗಿ ಕಾಣುತಾರೆ, ಆ ಬಡವರು ಇಲ್ಲದಿದ್ದರೆ ಇವರು ಬದುಕುವುದು

ಹೇಗೋ ಕಾಣೆ.


ಮದನ--ಹವುದಯ್ಯ, ನೀನು ಹೇಳುವುದು ನಿಜವಾದ ಮಾತು.

ನಾನು ಓದುವುದಕ್ಕೆ ಮೊದಲ್ಮಾಡಿದಾಗಿನಿಂದಲೂ ನನ್ನ ಅಭಿಪ್ರಾಯವೂ

ಹಾಗೆಯೇ. ಆಮೇಲೆ ಆ ಸಾಹಸಗಾರ ಏನುಮಾಡಿದ?


ಹಬ್ಬಸಿ- ತರುವಾಯ ಇನ್ನೊಂದು ವೃಷಭವು ತೆವರಿಕೊಂಡು

ಇವನ ಮೇಲೆ ಬೀಳುವುದಕ್ಕೆ ಬಂತು. ಆಗ ಆ ಸಾಹಸಗಾರನು

ಕುದುರೆಯನ್ನು ಬಿಟ್ಟು ಇಳಿದು, ಕೊನೆಗೆ ಕಬ್ಬಿಣದ ಮೊಳೆಯನ್ನು

ಪೆಟ್ಟಿದ್ದ ಒಂದು ಕೋಲನ್ನು ಕೈಯಲ್ಲಿ ಹಿಡಿದು, ಓಮ್ಮೆ ಗೂಳಿಯ

--------------------------------------

೨೯೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಮುಂದಿ ಒಮ್ಮೆ ಅದರ ಹಿಂದೆ ಒಮ್ಮೆ ಅದರ ಮಗ್ಗುಲಲ್ಲಿ ಹೀಗೆ ಹಾರಿ

ನಿಲ್ಲುತಾ ಓಡುತಾ ನಿಂತಕಡೆಯಲ್ಲಿ ನಿಲ್ಲದೆ ಅದನ್ನು ಸುತ್ತಾಡಿಸುತಾ

ಇದ್ದನು. ಒಂದು ಸಾರಿ ಗೂಳಿಯು ತನ್ನ ಕೊಂಬನ್ನು ತನ್ನ, ಶತ್ರು

ವಿನ ಪೃಷ್ಠಭಾಗಕ್ಕೆ ಹಾಕಿ ಹಾದು ಕೊಲ್ಲುವ ಸಮಯ ಬಂತು, ಅವನು

ಅಲ್ಲಿಗೆ ಸಮಾಪ್ತಿಯಾದನೆಂದು ಸಭೆಯೆಲ್ಲಾ ಗೊಳ್ಳನೆ ಕೂಗಿಕೊಂಡಿತು.

ಆಗ ಆ ಸಾಹಸಿಯು ಹಿಂಗಣ್ಣ ಎಸೆದು ಅದರ ಬೆನ್ಸಿನ ಮೇಲೆ ಕೂತು

ಕೊಂಡನು. ಅದು ರೋಷದಿಂದ ಓಡುವುದಕ್ಕೂ ನೆಗೆಯುವುದಕ್ಕೂ

ಮೊದಲು ಮಾಡಿತು. ಇವನು ಹೆದರದೆ ಒಂದು ಕೈಲಿ ಅದರ ಕೊಂಬನ್ನು

ಹಿಡಿದು ಇನ್ನೊಂದು ಕೈಯಿಂದ ಕೋಲಿನ ಕೊನೇ ಮೊಳೆಯನ್ನು

ಅದರೆ ಆಯಕ್ಕೆ ಚುಚ್ಚುತಾ ಬಂದನು. ಕಡೆಗೆ ಆ ಮಹಾ

ವೃಷಭವು ಆಲಿ ಅಬ್ಬರಿಸಿ ಶಕ್ತಿ ಕುಂದಿ ಕೆಳಕೆ ಬಿದ್ದು ಬಿಟ್ಟತು. ಈ

ಸಾಹಸಿಯು ಅದರ ಮೇಲಿನಿಂದ ಇಳಿದುಬಂದು ದೊರೆಗೆ ನಮಸ್ಕಾರ

ಮಾಡಿದರು. ಇವನ ಸಾಮರ್ಥ್ಯಕ್ಕೆ ಆಶ್ಚರ್ಯಪಟ್ಟು ಸಭೆಯವರೆಲ್ಲಾ

ಮರದ ಮನುಷ್ಯರಂತೆ ತೋರಿದರು. ಇವನ ಸೆರೆ ಬಿಡುಗಡೆಯಾಯಿತು.


ಹಬ್ಬಸಿಯವನು ಈ ಪ್ರಕಾರ ಹೇಳಿದ ಮಾತನ್ನು ಕೇಳಿ ಮದ

ನನೂ ಅತ್ಯಂತವಾಗಿ ಬೆರಗಾದನು. ಆಗ ರಾಮಜೋಯಿಸನು--ಅರ

ಮನೆಗೆ ಹೊರಡೋಣ ಏಳೆಂದು ಹೇಳಲು, ಮದನನು--ಗುರುಗಳೆ,

ನಾನು ಇಲ್ಲಿ ಕೆಲವು ದಿವಸ ಇದ್ದು ಬರುತೇನೆ. ನನ್ನ ಅವಿವೇಕವನ್ನೂ

ಕೃತಘ್ನತೆಯನ್ನೂ ಯಾವಯಾವ ವಿಧದಲ್ಲಿ ಹೋಗಲಾಡಿಸಿಕೊಳ್ಳೋಣ

ವೆಂದಾಗ್ಗೂ ಆಗದೆ ಇದೆ; ಅದರ ಪಾಪವನ್ನು ಇವರ ಸತ್ಸಹವಾಸದಲ್ಲಿ

ಕಳೆಯಬೇಕೆಂದಿದೇನೆ. ಈ ಅರ್ಥವನ್ನು ಸುಮತಿಯಲ್ಲಿ ಹೇಳಿಕೊಂಡೂ

ಇದೇನೆ, ಎಂದನು. ಆಗ ಸುಮತಿಯು ರಾಜಪುತ್ರನನ್ನು ತಬ್ಬಿಕೊಂಡು

--ಮದನ, ಕಳೆದುಹೋದ ಸಂಗತಿಯನ್ನೈಲ್ಲಾ ಬಿಟ್ಟು ಬಿಡು, ನಾವಿ

ಬ್ಬರೂ ಪೂರ್ವದಂತೆಯೇ ಸಂಗಾತಿಗಳೆಂದು ತಿಳಿ ಎಂದನು. ಸುಮ

ತಿಯ ಮನೆಯವರೆಲ್ಲರೂ ರಾಜಕುಮಾರನ ಸದ್ಗುಣಗಳನ್ನು ಕಂಡು

ಬೆಕ್ಕಸಬೆರಗಾಗಿ ಇವನನ್ನು ಕೊಂಡಾಡುತಿದ್ದರು. ರಾಮಜೋಯಿಸನು

ದೊರೆಗೆ ತಾನು ಸಮಾಧಾನ ಹೇಳಿ ಮದನನು ಕೆಲವು ದಿವಸ ಇಲ್ಲಿ 

-----------------------------------------

೨೫] ಸುಮತಿ ಮದನಕುಮಾರರ ಚರಿತ್ರೆ ೨೯೯ 


ಇರುವುದಕ್ಕೆ ಆತನನ್ನು ಒಪ್ಪಿಸುತೇನೆಂದು ಹೇಳಿ ಅರಮನೆಗೆ ಹೊರಟು

ಹೋದನು.


ಮದನನು ಆ ಬ್ರಾಹ್ಮಣರ ಮನೆಯಲ್ಲಿರುತಾ ಸುಮತಿಯ ಸಂಗಡ

ಹೊಲ ಗದ್ದೆ ತೋಟಗಳಲ್ಲಿ ಓಡಿಯಾಡುತಾ, ಮನೆಗೆ ಬಂದು ಹೊಟ್ಟೆ

ತುಂಬಾ ಊಟಮಾಡುತ್ತಾ ಸಾಯಂಕಾಲವಾದಮೇಲೆ ಜಾಗ್ರತೆಯಾ

ಗಿಯೇ ಮಲಗಿಕೊಂಡು ಚೆನ್ನಾಗಿ ಕಣ್ಣು ತುಂಬಾ ನಿದ್ರೆ ಮಾಡುತಾ

ಬಂದನು. ಮೊದಲು ದಿನ ಸುಮತಿಯು ಬೆಳಗಿನ ಜಾವದಲ್ಲಿಯೇ

ಇವನನ್ನು ಎಬ್ಬಿಸಲು ಈ ಅರಸುಮಗನಿಗೆ ಪಾಲುಮಾರಿಕೆ ಹೆಚ್ಚಾ

ಗಿತ್ತು. ಏಳದೇ ಹೋದರೆ ತಮ್ಮ ತಂದೆಯೂ, ರಾಮಜೋಯಿಸರೂ,

ಸುಮತಿಯೂ, ಅವರ ಮನೇ ಜನಗಳೂ ತನ್ನನ್ನು ಶುದ್ಧ ಜಡನೆಂದು

ತಿಳಿದುಕೊಂಡಾರೆಂಬ ಭೀತಿಯು ಸುಮತಿಯು ಕೂಗಿದ ಕೂಡಲೆ

ಎಚ್ಚೆತ್ತು ಮೇಲಕ್ಕೆ ಏಳುವಂತೆ ಮಾಡಿತು. ದೇವರ ನಾಮಸ್ಮರಣೆಯನ್ನು

ಮಾಡುತಾ ಮದನನು ಝಗ್ಗನೆ ಮೇಲಕ್ಕೆ ಎದ್ದನು. ಮಾರನೇ ದಿವಸ

ಈ ಪಾಲುಮಾರಿಕೆಯೇ ಇರಲಿಲ್ಲ. ಈ ರೀತಿಯಲ್ಲಿ ಮದನನ ಚಟುವಟಕೆ

ಹೆಚ್ಚಿತು. ಮೊದಲಿದ್ದ ಸಿಡುಕಲು ಹೋಯಿತು. ತೋಟದಲ್ಲಿಯಾಗಲಿ

ಮನೆಯಲ್ಲಿಯಾಗಲಿ ಸುಮತಿ ಮಾಡುತಿದ್ದ ಕೆಲಸಕ್ಕೆಲ್ಲಾ ತಾನು

ಹೊಕ್ಕು ಅವನ ಸರಿಗೂ ಕೆಲಸ ಮಾಡುತಾ ಬಂದನು. ಹೀಗೆ ಚಿಕ್ಕ

ಹಳ್ಳಿ ಯಲ್ಲಿ ವಾಸವಾಗಿರುವಾಗ ಅನೇಕ ಬಡಜನರು ಮಾಡುವ

ಕೆಲಸಗಳನ್ನು ನೋಡಿ, ಲೋಕದಲ್ಲಿ ಬಡವರೇ ಕೆಲಸ ಮಾಡತಕ್ಕವ

ರೆಂತಲೂ ಅವರು ಇಲ್ಲದಿದ್ದರೆ ಭಾಗ್ಯವಂತರು ಒಂದು ನಿಮಿಷವೂ ಜೀವಿ

ಸಲಾರರೆಂತಲೂ ರಾಜಪುತ್ರನಿಗೆ ಚೆನ್ನಾಗಿ ತೋರಿತು. ಈ ಮಧ್ಯೆ

ಕಾಲದಲ್ಲಿ ರಾಮಜೋಯಿಸನು ಆಗಾಗ್ಗೆ ಬಂದು ದೊರೆಮಗನನ್ನು

ವಿಚಾರಿಸಿಕೊಂಡು ಹೋಗುತಲೇ ಇದ್ದನು. ಆಗ ಒಂದು ದಿನ ಜೋಯಿ

ಸನು ರಾಜಪುತ್ರನ ಒಳ್ಳೆ ಗುಣಗಳನ್ನು ಆಗಾಗ್ಗೆ ಕೊಂಡಾಡುತಾ

ಒಂದು ಸಾರಿ ಅವನನ್ನು ಕುರಿತು:--


ಮದನ, ಕೇಳು. ಲೋಕದಲ್ಲಿ ದೊಡ್ಡವರು ಎಂದು ಹೆಸರನ್ನು

ಪಡೆದವರೆಲ್ಲಾ ಅರೆಗಳಿಗೆಯೂ ನಿರುದ್ಯೋಗಿಗಳಾಗಿದ್ದವರಲ್ಲ. ಯಾವ

-------------------------------------

೩೦೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ

ದಾದರೂ ಒಂದು ಕಾರ್ಯದಲ್ಲಿ ಉದ್ಯುಕ್ತರಾಗಿಯೇ ಇರುತಿದ್ದರು.

ಮತ್ತು ಇಂಥಾ ಮಹಾತ್ಮರು ಡಂಭವನ್ನೇ ಅರಿಯರು. ಬಡತನವೇ

ಸಿರಿತನವೆಂದು ತಿಳಿದಿದ್ದರು. ದೀನಾನಾಥರಲ್ಲಿ ಯಾವಾಗಲೂ ದಯಾ

ಪರರಾಗಿ ಅನ್ಯರಿಗೆ .ಉಪಕಾರವನ್ನೇ ಮಾಡುತಾ ಆತ್ಮಸೌಖ್ಯವನ್ನು

ನೋಡದೆ ನಿರಂತರವಾಗಿ ಲೋಕೋಪಕಾರದಲ್ಲಿಯೇ ಮನಸ್ಸನ್ನು

ಇಟ್ಟು ಕೊಂಡು ಇರುತಿದ್ದರು. ಈ ಪ್ರಕಾರ ಜೋಯಿಸನು ಬುದ್ಧಿ

ಯನ್ನು ಹೇಳಿದನು. ಮದನನಿಗೂ ಸುಮತಿಗೂ ಸ್ನೇಹವು ಪೂರ್ವಕ್ಕೆ

ಈಗ್ಗೆ ಹತ್ತರಷ್ಟು ವೃದ್ಧಿ ಯಾಯಿತು; ಮದನನು ಒಂದು ದಿನ ಸಾಯಂ

ಕಾಲದಲ್ಲಿ ಮಾತನಾಡುತಾ ಕೂತುಕೊಂಡಿರುವಾಗ್ಗೆ ಹಬ್ಬಸಿಯವನು

ತನ್ನ ಪೂರ್ವವೃತ್ತಾಂತವನ್ನು ಹೇಳಿಕೊಂಡನು.

...

೨೬ನೆ ಅಧ್ಯಾಯ

ಹಬ್ಬಸಿಯವನ ಚರಿತ್ರೆ


ಇವನು ಹೇಳಿದ್ದು ಹೇಗೆಂದರೆ--ನಾನು ಮಿಸ್ಟರ್‌, ಬರ್ಬರ

ಹಬ್ಬಸಿ ಮೊದಲಾದ ರಾಜ್ಯದ ಕಡೆಯವನು. ಅಲ್ಲಿ ಶೆಖೆ ಬಹು

ಹೆಚ್ಚು. ಎಲ್ಲಿನೋಡಿದರೂ ಮರಳು ಕಾಡು ಇರುವುದು. ಖರ್ಜೂ

ರದ ಮರವೇ ಹೇರಳವಾಗಿರುವುದು. ಸಿಂಹ ಹುಲಿ ಆನೆ ಇವುಗಳೇ

ಇಲ್ಲಿನ ಕ್ರೂರ ಜಂತುಗಳು. ಈ ದೇಶದಲ್ಲಿ ಚಳಿಗೂ ಗಾಳಿಗೂ ಲೇಶವೂ

ವ್ಯಾಪನೆ ಇಲ್ಲದಂತೆ ಬಲವಾದ ಗೋಡೆಗಳನ್ನು ಹಾಕಿ ಮನೇ ಕಟ್ಟ

ದಾರೆ. ಅಲ್ಲಿ ಇಂಥಾ ಮನೆಗಳನ್ನು ನಾವು ಕಾಣಲೇ ಕಾಣೆವು.

ಹುಲ್ಲಿನ ಗುಡಿಸಿಲೇ ನಮ್ಮ ಮನೆಗಳು. ಇಂಥಾ ಗುಡಿಸಿಲು ೪೦-೫೦

ಇದ್ದರೆ ಒಂದುವೂರು. ನೀವು ಮನೆಗಳಲ್ಲಿ ಅಗತ್ಯವಿಲ್ಲದ ಏನೇನೋ

ಸಾಮಾನುಗಳನ್ನು ಇರಿಸಿಕೊಂಡು ಇರುತೀರಿ. ನಿಮಗೆ ಏನು

ಇದ್ದಾಗ್ಗೂ ನೀವು ತೃಪ್ತಿಯಾಗಿ ಸುಖವಾಗಿರುವಂತೆ ಕಾಣುವುದಿಲ್ಲ.

ನಿಮ್ಮ ಬಾಗಿಲಿಗೆ ಯಾರಾದರೂ ಬಂದರೆ ಅವರನ್ನು ಆಚೆಗೆ ಅಟ್ಟ

ಬಿಡುತೀರಿ, ನಮ್ಮ ಹತ್ತಿರ ಈ ವಿಪರೀತದ ಸಾಮಾನುಗಳು ಯಾವುದೂ

------------------------------------

೨೬] ಸುಮತಿ ಮದನಕುಮಾರರ ಚರಿತ್ರೆ ೩೦೧ 


ಇಲ್ಲ... ಈ ಹೆಬ್ಬುಬ್ಬುಗಳನ್ನು ನಾವು ಅರಿಯಲೇ ಅರಿಯೆವು. ಯಾರಾ

ದರೂ ಹೊಸಬರು ನಮ್ಮ ಗುಡಿಸಿಲಿಗೆ ಬಂದರೆ ಅವರನ್ನು ಬಹಳವಾಗಿ

ಉಪಚರಿಸುತ್ತೇವೆ. ನಿಮ್ಮ ಸೀಮೆಯಲ್ಲಿ ಐಶ್ವರ್ಯವಂತರೆಂತಲೂ

ಬಡವರೆಂತಲೂ ಭೇದವನ್ನು ಮಾಡಿಕೊಂಡಿದೀರಿ. ನಿಮ್ಮ ಐಶ್ವರ್ಯ

ವಂತರು ಯಾವ ಬದುಕನ್ನೂ ಮಾಡದೆ ಕಾಲವನ್ನು ಕಳೆಯುತ್ತಾ ತಾವು

ದೊಡ್ಡವರೆಂದು ಮೆಡಮೆಟ್ಟೆ ಹತ್ತುತಾ, ಬಡವರನ್ನು ಬಹು ತಿರಸ್ಕಾರ

ವಾಗಿ ಕಾಣುತಾ ಇದಾರೆ. ನಮ್ಮ ದೇಶದಲ್ಲಿ ಮನುಷ್ಯರೆಲ್ಲಾ ಒಂದೇ

ಸಮ, ಹೆಚ್ಚು ಕಡಮೆಯೇ ಇಲ್ಲ. ದೇವರು ಎಲ್ಲ ಜಂತುಗಳನ್ನು ನಿರ್ಮಿ

ಸಿದ ಹಾಗೆಯೇ ಮನುಷ್ಯರನ್ನು ನಿರ್ಮಿಸಿದನಲ್ಲವೆ? ಐಶ್ವರ್ಯದ ಕಪಿ

ಬಡ ಕಪಿ, ಐಶ್ವರ್ಯದ ನಾಯಿ ಬಡನಾಯಿ, ಐಶ್ವರ್ಯದ ಕಾಗೆ ಬಡ

ಕಾಗೆ--ಹೀಗೆ ಭೇದಗಳು ಉಂಟಿ? ಇಲ್ಲದ ಪಕ್ಷದಲ್ಲಿ, ಮನುಷ್ಯವರ್ಗಕ್ಕೆ

ಮಾತ್ರ ಈ ವ್ಯತ್ಯಾಸ ಹೇಗೆ ಬಂತು? ನಿಜವಾದ ಯೋಗ್ಯತೆಯೂ

ಸದ್ಗುಣವೂ ಇರತಕ್ಕವರೇ ದೊಡ್ಡವರು; ಇಲ್ಲದವರು ಬಡವರು. ಹೀಗಿರು

ವಲ್ಲಿ ನಿಮ್ಮ ದೇಶದವರ ಚರ್ಯವು ನನ್ನ ಕಣ್ಣಿಗೆ ವಿಚಿತ್ರವಾಗಿ ಕಾಣು

ವುದು.


ಮದನ--ನೀನು ಹೇಳುವುದು ನಿಜವಾದ ಮಾತು, ನಿಮ್ಮ

ಸೀಮೆಯ ಕಾಡುಮೃಗಗಳ ವಿಷಯವೇನು?


ಹಬ್ಬಸಿ-- ಅಲ್ಲಿನ ಮೃಗಗಳಲ್ಲಿ ಸಿಂಹವೇ ಬಹು ಉಗ್ರವಾದದ್ದು.

ಒಂದೊಂದು ಕಾಲದಲ್ಲಿ ನಮ್ಮ ಸೀಮೆಯ ಪ್ರಾಯದ ಆಳುಗಳೆಲ್ಲಾ

ಒಟ್ಟಗೆ ಸೇರಿ ಕೈಯಲ್ಲಿ ಭರ್ಜಿಯನ್ನು ಈಟಿಯನ್ನು ಹಿಡಿದು ಸಿಂಹ 

ಇರುವ ಸ್ಥಳವನ್ನು ಅರಸಿಕೊಂಡು ಹೋಗುವರು. ಅದು ಸಿಕ್ಕಿದ

ಕೂಡಲೆ ಅದರ ಸುತ್ತಲೂ ಸುತ್ತಿಕೊಂಡು ಅದನ್ನು ಅಬ್ಬರಿಸುತಾ

ಅಟ್ಟುತಾ ಭರ್ಜಿಯಿಂದ ಹಿಂದುಗಡೆಯಲ್ಲಿ ತಿವಿಯುತಾ ಹೋಗುವರು.

ಮೃಗರಾಜನು ತನಗೆ ಈ ಶತ್ರುಗಳು ಯಾವ ಲಕ್ಷ್ಯವೆಂದು ಉಪೇಕ್ಷೆ

ಯಿಂದ ಮೆಲ್ಲಗೆ ನಡೆದುಕೊಂಡು ಹೋಗುವುದು. ಬಲವಾದ ಏಟನ್ನು

ಅದಕ್ಕೆ ಯಾರು ಹೊಡೆಯುತಾರೆಯೋ ಅಂಥವನು ಅದರ ಕೈಗೆ ಸಿಕ್ಕಿ

ಪ್ರಾಣವನ್ನು ಒಪ್ಪಿಸದೆ ಇರುವುದು ಅಪೂರ್ವ, ಆದಾಗ್ಗೂ ಅದರ

---------------------------------------

೩೦೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಏಟಿಗೆ ಸಿಕ್ಕದೆ ನೆಗೆದು ತಪ್ಪಿಸಿಕೊಂಡು ಅದನ್ನು ಕೊಂದು ಹಾಕಿ

ಊರಿಗೆ ಹೊತ್ತುಕೊಂಡು ಬರುವರು. ಊರ ಜನರೆಲ್ಲರೂ ಬೇಟೆ

ಗಾರರಿಗೆ ಸನ್ಮಾನವನ್ನು ಮಾಡುವರು,


ಮದನ--ಅಯ್ಯೋ, ಇದೇನು ಭಯಂಕರವಾದ ಬೇಟೆ! ಕಾಡಿ

ನಲ್ಲಿ ಒಬ್ಬೊಬ್ಬರೇ ಸಿಂಹವನ್ನು ಕಂಡರೆ ಎದುರಿಸುವುದು ಅಸಾಧ್ಯವೇ

ತಾನೆ?


ಹಬ್ಬಸಿ--ಅದು ಯಾವಾಗಲೂ ಅಸಾಧ್ಯವೆಂದು ಹೇಳಕೂಡದು.

ಇದಕ್ಕೆ ನಮ್ಮ ತಂದೆಯೇ ದೃಷ್ಟಾಂತ. ಆತನು ಕಾಡಿನಲ್ಲಿ ಹೋಗು

ಕಿರುವಾಗ ಒಂದು ಸಿಂಹವು ಮನುಷ್ಯನ ವಾಸನೆಯನ್ನು ತಿಳಿದು ಎದು

ರಿಗೆ ಬಂತಂತೆ. ಒಂಟಿಯಾಗಿದ್ದ ನಮ್ಮ ತಂದೆಯು ಹೆದರದೆ ಆದ ವಿಧಿ

ಯಾಗಲಿ ಎಂದು ನಿಶ್ಚೈಸಿಕೊಂಡು, ಸೊಂಟದಲ್ಲಿದ್ದ ಉದ್ದವಾದ ಚೂರಿ

ಯೊಂದನ್ನು ಹಿರಿದುಕೊಂಡು ಅದರ ಅಪಾಯ ಸ್ಥಳಕ್ಕೆ ತಿವಿಯುತಾ

ಬಂದನಂತೆ. ಅದರ ಕೈಗೆ ಸಿಕ್ಕದಂತೆ ಹಾರಿ ಹಾರಿ ಹೊಡೆಯುತಿದ್ದ

ಈತನ ಪೆಟ್ಟು ಬಲವಾಗಿ ಬಳಲಿಕೆಯಿಂದ ಸಿಂಹವು ನೆಲಕ್ಕೆ ಬಿತ್ತು.

ಕೂಡಲೆ ಇನ್ನೂ ನಾಲ್ಕು ಪೆಟ್ಟನ್ನು ಹಾಕಿ ಅದನ್ನು ನಮ್ಮ ತಂದೆಯು

ಕೊಂದು ಹಾಕಿದನು. ಇದರಿಂದ ನಮ್ಮ ಅಯ್ಯನಿಗೆ ಆ ಊರಿನ ಜನ

ರಲ್ಲಿ ಮಾನ ಹೆಚ್ಚಾಯಿತು ಆತನ ಪ್ರಖ್ಯಾತಿ ಆ ಪ್ರಾಂತ್ಯದಲ್ಲೆಲ್ಲಾ ಹರ

ಡಿಕೊಂಡಿತು. ಈ ತಂದೆಯ ಕೈಕೆಳಗೆ ನನಗೆ ಬೇಟೆಯಾಡುವುದರಲ್ಲಿ

ಬಹು ಚೆನ್ನಾಗಿ ಶಿಕ್ಷೆಯಾಯಿತು. ಮೊದಲು ಮೊದಲು ನನ್ನ ಕೈಲಿ 

ಜಿಂಕೆ ಮೊಲ-- ಇವುಗಳನ್ನು ನಮ್ಮ ತಂದೆಯು ಬೇಟೆಯಾಡಿಸಿದನು.

ತರುವಾಯ ಹುಲಿ ಮೊದಲಾದ್ದನ್ನು ಹಿಡಿಯಲು ಆರಂಭಿಸಿದೆ.


ಒಂದು ಸಮಯದಲ್ಲಿ ಇನ್ನೊಂದು ವಿಚಿತ್ರವಾದ ಕೆಲಸ ನಡೆ

ಯಿತು. ನದೀ ತೀರದಲ್ಲಿರುವ ಗದ್ದೆಗಳನ್ನು ನೀರಿನಲ್ಲಿ ವಾಸಮಾಡುವ

ನೀರಕುದುರೆ ಎಂಬ ಒಂದು ಜಂತುವು ಬಹಳವಾಗಿ ಹಾಳುಮಾಡು

ವುದು... ಇದರ ಕೈಕಾಲು ಮೊಸಳೇದರ ಹಾಗೆ, ಮೂತಿ ಅಷ್ಟು ಉದ್ದ

ವಲ್ಲ, ಬಾಯಲ್ಲಿ ಎರಡು ಕೋರೆ ಇರುವುದು. ಇದು ನೀರಿನಿಂದ

ಈಚೆಗೆ ಬಂದು ತಡಿಯಲ್ಲಿ ಓಡಿಯಾಡುವುದು. ಈ ಜಂತುಗಳನ್ನು

-----------------------------------

೨೬] ಸುಮತಿ ಮದನಕುಮಾರರ ಚರಿತ್ರೆ ೩೦೩ 


ಬೆದರಿಸಿ ಓಡಿಸಿ ಪೈರನ್ನು ಕಾಯಲು ಹತ್ತಿಪ್ಪತ್ತು ಜನ ಪಡ್ಡೆಯಾದ

ಹುಡುಗರೆಲ್ಲಾ ಸೇರಿ ಹೊರಟೆವು. ಒಂದು ದೊಡ್ಡ ನೀರ ಕುದುರೆಯು

ಗದ್ದೆಗಳನ್ನು ತುಳಿದು ಪೈರನ್ನು ನಾಶಮಾಡುತಿತ್ತು. ಹಗಲೆಲ್ಲಾ

ನೀರಿನಲ್ಲಿ ಇದ್ದು ರಾತ್ರೆ ಹಾವಳಿಗಾಗಿ ಈಚೆಗೆ ಬರುವುದು. ಅವರ

ಸಂಗಡ ೮-೧೦ ರಾತ್ರೆ ಕಾದೆ. ಅದರೆ ಹಾವಳಿಯನ್ನು ತಪ್ಪಿಸುವುದಕ್ಕೆ

ಆಗಲಿಲ್ಲ. ನಾವೆಲ್ಲರೂ ಒಂದು ಉಪಾಯ ಮಾಡಿದೆವು. ಅದು

ನೀರಿನ ತಡಿ ಬಿಟ್ಟು ಪೈರಿನೊಳಕ್ಕೆ ಚೆನ್ನಾಗಿ ನುಗ್ಗಿ ಬರಲೆಂದು ನಾವೆ

ಲ್ಲರೂ ಅವಿತುಕೊಂಡಿದ್ದೆವು. ಅದು ಗದ್ದೆಯೊಳಕ್ಕೆ ಬಹು ದೂರ ಬಂತು.

ನಾವೆಲ್ಲರೂ ಎದ್ದು ಒಟ್ಟಿಗೆ ಕೂಗುವುದಕ್ಕೆ ಮೊದಲು ಮಾಡಿದೆವು,

ಇದಕ್ಕೆ ಆ ಜಂತುವು ಹೆದರದೆ, ನಮ್ಮ ಗುಂಪಿನ ಮೇಲೆ ನುಗ್ಗಿತು.

ನಾವು ಯಾತರಿಂದ ಹೊಡೆದರೂ, ಅದಕ್ಕೆ ಸ್ವಲ್ಪವೂ ಪೆಟ್ಬಾಗಲಿಲ್ಲ.

ಅದರ ಚರ್ಮ ಅಷ್ಟು ಗಟ್ಟಿಯಾದ್ದು. ನಮ್ಮಲ್ಲಿ ಒಬ್ಬ ಧೈರ್ಯಶಾಲಿಯು

ಅದರ ಸಮೀಪದಲ್ಲಿ ನಿಂತು ಅಪಾಯ ಸ್ಥಳಕ್ಕೆ ಹೊಡೆದು ನೋಡೋಣ

ವೆಂದು ಹತ್ತಿರಕ್ಕೆ ಹೋದನು. ಆ ದುಷ್ಪಮೃಗವು ಬಾಯಲ್ಲಿ ಇವನ

ದೇಹವನ್ನು ಎಳೆದುಕೊಂಡು ಕಾಲನ್ನು ತೊಡೆಯಿಂದ ಅಗಿದು ಶರೀರ

ವನ್ನು ನುಂಗುವುದಕ್ಕಾಗಿ ಮೇಲಕ್ಕೆ ಎತ್ತಿತು. ಆಗ ನಾನು ರೋಷ

ದಿಂದ ನನ್ನ ಅಂಬಿನ ಹೆದೆಗೆ ಒಳ್ಳೆ ಹರಿತವಾದ ಒಂದು ಬಾಣವನ್ನು

ಸೇರಿಸಿ, ನಿಗನಿಗನೆ ಬೆಂಕಿಯ ಹಾಗೆ ಉರಿಯುತಿದ್ದ ಅದರ ಕಣ್ಣಿಗೆ ಸರಿ

ಯಾಗಿ ಗುರಿಹಿಡಿದು ಚೆನ್ನಾಗಿ ತುಯಿದು ಬಾಣವನ್ನು ಹೊಡೆದೆನು.

ಆ ಕ್ಷಣದಲ್ಲಿಯೇ ಆ ಜಲಚರನು ತಾನು ಹಿಡಿದಿದ್ದ ಮನುಷ್ಯನನ್ನು

ಬಿಟ್ಟು ನೆಲದಮೇಲೆ ಬಿದ್ದು ಮಡಿಯಿತು. ನಮ್ಮ ಜೊತೆಗಾರರೆಲ್ಲರೂ

ನನ್ನನ್ನು ಬಾಚಿ ತಬ್ಬಿಕೊಂಡರು. ಮೆರವಣಿಗೆ ಮಾಡಿಕೊಂಡು ಊರಿಗೆ

ಕರೆದುಕೊಂಡು ಬಂದರು. ಆಗ ವೃದ್ಧನಾದ ನಮ್ಮ ತಂದೆಯು ಬಂದು

ನನ್ನ ಕೈಹಿಡಿದು, “ಭಲ! ನನ್ನ ಹುಡುಗ ಇಷ್ಟರಮಟ್ಟಿನ ಬಹುಮಾನ

ವನ್ನು ಪಡೆಯುವ ತನಕ ದೇವರು ನನ್ನನ್ನು ಕಾಪಾಡಿದನಲ್ಲಾ |?

ಎಂದು ಹೇಳಿ, “ ಇನ್ನು ಮೇಲೆ ನೀನು ಅಂಬು ಬಿಲ್ಲು ಹಿಡಿಯುವುದಕ್ಕೆ

ಯೋಗ್ಯ” ಎಂದು ನನಗೆ ಹೇಳಿ ಬೆನ್ನನ್ನು ತಟ್ಟಿದನು. ನಮ್ಮ ಜನರ 

---------------------------------------

೩೦೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ 


ಲ್ಲೆಲ್ಲಾ ವಿಶೇಷ ಬಹುಮಾನವಾಯಿತು. ಹೀಗೆ ಹಬ್ಬಸಿಯವನು ತನ್ನ

ಕಥೆಯನ್ನು ಹೇಳಿ ಮುಗಿಸಿದನು. 

...

೨೭ನೆ ಅಧ್ಯಾಯ


ಮದನನು ಇದೆಲ್ಲವನ್ನೂ ಕೇಳಿದನು. ಅವನ ಬುದ್ಧಿಯು

ಈಚೆಗೆ ವಿಶೇಷವಾಗಿ ಪ್ರಚುರವಾಯಿತು. ಅವನ ಹೃದಯವು ದೊಡ್ಡ

ದಾಯಿತು. ಈ ಅರಸುಮಗನು ತನ್ನ ಮನಸ್ಸಿನಲ್ಲಿ-- ಈ ಲೋಕದಲ್ಲಿ

ಒಬ್ಬೊಬ್ಬ ಒಂದೊಂದು ಕೆಲಸದಲ್ಲಿ ಸಮರ್ಥನಾಗಿರುತಾನೆ. ಯೋಗ್ಯತೆ

ಯನ್ನು ತಿಳಿಯದೆ ಇವರು ಹೆಚ್ಚು ಇವರು ಕಡಮೆ,  ಎಂದು ನಾವು

ಭೇದವನ್ನು ಕಲ್ಪಿಸಿಕೊಂಡು ಇತರರನ್ನು ತಿರಸ್ಕರಿಸುವುದು ಶುದ್ಧವಾಗಿ

ಕೆಟ್ಟದು ಎಂದು ತಿಳಿದುಕೊಂಡನು.


ಮಗನು ಈಚೆಗೆ ಬಹಳ ಬುದ್ಧಿಶಾಲಿಯಾಗಿದಾನೆಂದು ಕೇಳಿ

ದೊರೆಯು ಸಂತೋಷಸಟ್ಟು ಅವನನ್ನು ಬನವಾಸಿಗೆ ಕರೆದುಕೊಂಡು

ಹೋಗಬೇಕೆಂದು ತಾನೇ ಅಶ್ವಾರೂಢನಾಗಿ ಸೂರ್ಯಭಟ್ಟನ ಮನೆಯ

ಸಮೀಪಕ್ಕೆ ಬಂದನು. ಆಗ ಸೂರ್ಯಭಟ್ಟನು ದೂರದಿಂದಲೇ ಆರಸ

ನನ್ನು ನೋಡಿ ಎದುರಿಗೆ ಹೋಗಿ ಫಲ ಮಂತ್ರಾಕ್ಷತೆಯನ್ನು ಕೊಟ್ಟು

ಹರಸಿ ಕುಶಲಪ್ರಶ್ನೆಯನ್ನು ಮಾಡಿ ತನ್ನ ಮನೆಗೆ ದಯಮಾಡಿಸಬೇ

ಕೆಂದು ವಿನಯವಾಗಿ ಕೇಳಿಕೊಂಡನು. ದೊರೆ ಅದೇ ಪ್ರಕಾರ ಹೋಗಿ

ಅಲ್ಲಿ ಕೂತುಕೊಂಡು, ಆ ಮನೇ ಜನರ ಕ್ಷೇಮಲಾಭವನ್ನೂ ಮುಖ್ಯ

ವಾಗಿ ಸುಮತಿಯ ಕುಶಲವನ್ನೂ ವಿಚಾರಿಸಿ ತರುವಾಯ ತನ್ನ ಮಗನಿಗೆ

ವಿವೇಕ ಬಂದುದಕ್ಕಾಗಿ ಅವನನ್ನು ಸ್ವಲ್ಪ ಸ್ತೋತ್ರ ಮಾಡಿದನು.

ಮತ್ತು ಸೂರ್ಯಭಟ್ಟನನ್ನು ಕುರಿತು, 


ದೊರೆ--ಸೂರ್ಯಭಟ್ಟರೆ, ತಾವು ಮಾಡಿದ ಉಪಕಾರವನ್ನು

ನಾನು ಎಂದೆಂದಿಗೂ ಮರೆಯ ಕೂಡದು. ನಮ್ಮ ಮಗುವನ್ನು ತಮ್ಮ

ಮನೆಯಲ್ಲಿ ಇರಿಸಿಕೊಂಡು ಪೋಷಿಸಿದಿರಿ. ಅನ್ವರ್ಥವಾದ ಹೆಸರನ್ನುಳ್ಳ

ತಮ್ಮ ಮಗ ಸುಮತಿಯ ಸಹವಾಸದಿಂದ ನಮ್ಮ ಹುಡುಗನು 

-------------------------------------

೨೭] ಸುಮತಿ ಮದನಕುಮಾರರ ಚರಿತ್ರೆ ೨೦೫ 


ಮಾರ್ಗಕ್ಕೆ ಬಂದನು. ಇದಕ್ಕೆ ಸರಿಯಾದ ಉಪಕಾರವನ್ನು ನಾನು

ಮಾಡಲು ನನಗೆ ಯೋಗ್ಯತೆಯೇ ಇಲ್ಲ. ಆದರೂ ಇದನ್ನು ಸ್ವೀಕರಿಸ

ಬೇಕು; ತಮ್ಮ ಅಪ್ಪಣೆಯಾದರೆ ನಮ್ಮ ಮಗನನ್ನು ಊರಿಗೆ ಕರೆದು

ಕೊಂಡು ಹೋಗುತೇನೆ. ಹೀಗೆ ಹೇಳಿ ಒಂದು ಬೆಳ್ಳಿ ತಟ್ಟೆಯಲ್ಲಿ

ತುಂಬಾ ಚಿನ್ನದ ಮೊಹರವನ್ನು ಹಾಕಿ ಕೊಡುವುದಕ್ಕೆ ಹೋದನು.


ಸೂರ್ಯಭಟ್ಟ--ದೊರೆಯೆ, ನಾನು ಅಷ್ಟಕ್ಕೆ ಶಕ್ತನಲ್ಲ. ಕ್ಷಮಿಸ

ಬೇಕು.


ದೊರೆ- ಚಿಂತೆಯಿಲ್ಲ. ಇದನ್ನು ತೆಗೆದುಕೊಳ್ಳ ಬೇಕು. ಸಂಕೋಚ

ಬೇಡ. ನಾನು ಮನಃ ಪೂರ್ತಿಯಾಗಿ ಕೊಡುತೇನೆ.


ಸೂರ್ಯ--ಇದನ್ನು ನಾನು ತೆಗೆದುಕೊಂಡರೆ ನನ್ನ ಹೆಂಡತಿ

ಸುಮ್ಮನೆಬಿಟ್ಟಾಳೆ? ಈ ಒಡವೇ ಮಾಡಿಸು, ಆ ಒಡವೇ ಮಾಡಿಸು

ಎಂದು ವೇಧಿಸಿಯಾಳು, ನಮ್ಮ ಹೆಣ್ಣು ಹುಡುಗರೆಲ್ಲಾ ಪಟ್ಟೇ

ಅಂಚಿನ ಸೀರೆಗೆ ಇಳಿಯುತಾರೆ. ನಮ್ಮ ಪಾತಿ ಪಾರ್ವತಮ್ಮನವರಾಗು

ತಾಳೆ; ನಮ್ಮ ಅಚ್ಚಿ ಲಕ್ಷಮ್ಮನವರಾಗುತಾಳೆ. ಇವರೆಲ್ಲಾ ಶೃಂಗಾರ

ವನ್ನು ಮಾಡಿಕೊಂಡು ಮೆರೆಯುವುದಕ್ಕೆ ಆರಂಭಿಸುತಾರೆ. ಆಮೇಲೆ

ನನ್ಮು ಮನೆಯಲ್ಲಿ ಕೆಲಸಮಾಡುವವರು ಯಾರು?


ದೊರೆ- -ನೀವು ದೊಡ್ಡ ಸಂಸಾರಿಗಳು. ಮುಂದೆ ಅನೇಕ

ಪ್ರಸ್ತ ಮುಂತಾದ ವೆಚ್ಚದ ಸಮಯ ಬಹಳವಾಗಿದೆ. ಅದಕ್ಕೆ ಈ

ದ್ರವ್ಯ ಉಪಯೋಗಿಸಲು ತೆಗೆದುಕೊಳ್ಳಿ,


ಸೂರ್ಯಭಟ್ಟ- ರಾಜನೆ, ನಡೆಯತಕ್ಕ ಮಾತಲ್ಲ. ನಾವು ದುಡ್ಡು

ಕಾಸನ್ನು ಹೀಗೆ ಓಡಾಡಿಸಿದರೆ ನಮ್ಮ ಮನೇ ಹೆಂಗಸರೂ ಗಂಡಸರೂ

ಕೆಲಸಾ ಮಾಡಿಯಾರೆ? ನಮ್ಮ ತಾಯಿ ಮೊದಲ ಕೋಳಿ ಕೂಗುವಾಗ

ಎದ್ದು ನಮ್ಮ ತಂದೆಗಳು ಪಂಚಪಂಚ ಉಷಃಕಾಲಕ್ಕೆ ಸ್ನಾನಕ್ಕೆ

ಹೊರಡುವುದಕ್ಕೆ ಮುಂಚಿತವಾಗಿ ಮನೆ ಕೆಲಸಗಳನ್ನೆಲ್ಲಾ ಮುಗಿಸು

ತಿದ್ದರು. ಈಗಿನವರು ಎರಡನೇ ಕೋಳಿ ಕೂಗಿದ ಮೇಲೆ ಏಳುತಾರೆ.

ಕಾಲ ಕೆಟ್ಟುಹೋಯಿತು. ಹೀಗಿರುವಲ್ಲಿ ನಾವು ಒಡವೆವಸ್ತುಗಳನ್ನೂ

ಪಟ್ಟೇ ಅಂಚಿನ ಸೀರೆಯನ್ನೂ ಮಾಡಿಕೊಟ್ಟರೆ ನಮ್ಮ ಸಂಸಾರ ನಡೆ 

----------------------------------

೩೦೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ.


ಯುವುದು ಹೇಗೆ? ದೊರೆಯೆ, ಬೇಡ. ನಮ್ಮ ಸಂಸಾರದಲ್ಲಿ ವೈಮನಸ್ಯ

ವನ್ನು ತಂದು ಹಾಕಬೇಡಿ. ವಿವಾಹಾದಿಗಳು ಆಗಬೇಕಾದ್ದು ನಿಜ.

ಆದರೆ ಏನು? ನಮ್ಮ ಕಷ್ಟಾರ್ಜನೆಯಲ್ಲಿ ಇಂಥಾ ಸದ್ವ್ಯಯವನ್ನು 

ಮಾಡಬೇಕು. ಡಂಭದಿಂದ ನಮಗೆ ಪ್ರಯೋಜನವಿಲ್ಲ. 


ದೊರೆ.--ದ್ರವ್ಯರೂಪವಾಗಿ ತಾವು ಸ್ವೀಕರಿಸದಿದ್ದರೆ ಚಿಂತೆಯಿಲ್ಲ.

ನಮ್ಮ ಅರಮನೆಯಿಂದ ಒಂದು ಉತ್ತಮವಾದ ಭೂಮಿಯನ್ನು ನಿಮಗೆ

ಮಾನ್ಯವಾಗಿ ನಡಸಿಕೊಡುತೇನೆ. ಅದನ್ನಾದರೂ ಅಂಗೀಕರಿಸಬೇಕು.

ಸೂರ್ಯಭಟ್ಟ--ರಾಜನೆ, ನನ್ನ ಕೈಲಾದ ಮಟ್ಟಗೂ ಅರಿಕೇ ಮಾಡಿ

ಕೊಂಡೆ. ನಾನು ಹೇಳುವುದರ ಧರ್ಮ ಸೂಕ್ಷ್ಮ ತಮಗೆ ಗೋಚರ

ವಾಗಲಿಲ್ಲ. ಈಗ ವಿನಯವಾಗಿ ಅರಿಕೇ ಮಾಡಿಕೊಳ್ಳುತ್ತೇನೆ. ನಾವು

ಸಪ್ತಪೌರುಷದಿಂದಲೂ ರಾಜಸ್ಪತ್ತನ್ನು ಅಪೇಕ್ಷಿಸಿದವರಲ್ಲ. ಅದರಿಂದ

ಜೀವನಮಾಡಿದವರಲ್ಲ. ಈಗಲೂ ಅದು ನಮಗೆ ಬೇಡ. 


ಹೀಗೆ ಸೂರ್ಯಭಟ್ಟನು ಮೊದಲೆಲ್ಲಾ ಪ್ರಕಾರಾಂತರವಾಗಿ ಬೇಡ

ವೆಂದು ದೊರೆಯ ಉಪಕಾರವನ್ನು ತಿರಸ್ಕರಿಸಿ, ಕೊನೆಗೆ ಅರಸನ ಬಲ

ವಂತ ಹೆಚ್ಚಾಗಲು ತನ್ನ ಮನಸ್ಸಿನಲ್ಲಿದ್ದ ಮಾತನ್ನು ಸ್ಪಷ್ಟ ಪಡಿಸಿದನು.

ಅರಸನು ಆತನ ನೀತಿಗೂ ನಿಸ್ಪೃಹತ್ವಕ್ಕೂ ಸಂತೋಷಪಟ್ಟು, ಅತ್ಯಂತ

ಭಕ್ತಿಯಿಂದ ಆತನಿಗೂ ಆತನ ಹೆಂಡತಿಗೂ ನಮಸ್ಕಾರವನ್ನು ಮಾಡಿ

--ಸ್ವಾಮಿ, ನೀವು ಮಹಾಪುರುಷರು; ಆಶೆಯೆಂಬ ಮಹಾಪಾಶದಲ್ಲಿ

ಸಿಕ್ಕಿ ನರಳುವ ಈ ಲೋಕದಲ್ಲಿ ತಮ್ಮಂಥವರನ್ನು ಇದುವರೆಗೂ ನಾನು

ನೋಡಿರಲಿಲ್ಲ. ಇಂದಿಗೆ ನನ್ನ ಜನ್ಮ ಸಾರ್ಥಕವಾಯಿತು, ಎಂದು

ಕರ್ಮನಿಷ್ಠನಾದ ಆ ಬ್ರಾಹ್ಮಣನನ್ನು ಮನಃಪೂರ್ತಿಯಾಗಿ ಹೊಗ

ಳುತಾ ಅರಮನೆಗೆ ಪ್ರಯಾಣ ಸನ್ನದ್ಧನಾದನು. 


ಆಗ ಮದನನು ಎದ್ದು ಆ ದಂಪತಿಗಳಿಗೆ ನಮಸ್ಕಾರವನ್ನು

ಮಾಡಿ, ಅವರ ಆಶೀರ್ವಚನವನ್ನು ಪಡೆದು, ಸುಮತಿಯ ಸಮಾಪಕ್ಕೆ

ಬಂದು ಅವನನ್ನು ತಬ್ಬಿಕೊಂಡು--ಸುಮತಿ, ನಿನ್ನಿಂದ ನನಗಾದ

ಪ್ರಯೋಜನಕ್ಕೆ ನನ್ನ ದೇಹವನ್ನು ಕುಯಿದು ಒಪ್ಪಿಸಿದರೂ ಸ್ವಲ್ಪವೇ

ಇದೆ. ಅಪ್ಪಾಜಿ ಕೊಡುವುದಕ್ಕೆ ಯತ್ನಿಸಿದ ಅಲ್ಪವನ್ನು ಸೂರ್ಯಭಟ್ಟರು 

---------------------------------------

೨೭] ಸುಮತಿ ಮದನಕುಮಾರರ ಚರಿತ್ರೆ ೩೦೭ 


ತಿರಸ್ಕರಿಸಿದರು, ನಮ್ಮ ಕೃತಜ್ಞತೆಯನ್ನು ನಾವು ತೋರಿಸುವುದಕ್ಕೆ

ಅವರು ಆಸ್ಪದವನ್ನೇ ಕೊಡಲಿಲ್ಲವಲ್ಲಾ ! ಎಂದು ಮನಸ್ಸಿಗೆ ಖೇದ

ವಾಗಿದೆ. ಆದರೆ ನಮ್ಮ ಉಪಕಾರಸ್ಮರಣೆಯನ್ನು ನಾವು (ದೊರೆಯೂ

ನಾನೂ) ಸಮಯವರಿತು ತೋರಿಸಲೇ ತೋರಿಸುತೇವೆ, ನಿನ್ನ ಸಂಗ

ವನ್ನು ಬಿಟ್ಟು ನಾನು ವಿಶೇಷ ದಿವಸ ಇರಲಾರೆ. ನಾವಿಬ್ಬರೂ ಒಟ್ಟಿಗೇ

ಇರುವುದಕ್ಕೆ ಏರ್ಪಾಡನ್ನು ಮಾಡುತೇನೆ, ನನ್ನ ನಡತೆಯು ವ್ಯತ್ಯಾಸ

ವಾಗಿ ದುರ್ಮಾರ್ಗಕ್ಕೆ ಬೀಳುವ ಹಾಗಾದರೆ, ನಾನು ಇಲ್ಲಿಗೆ ಬಂದು

ಸ್ವಲ್ಪ ದಿವಸ ಇದ್ದು ವಿವೇಕವನ್ನು ಕಲಿತುಕೊಂಡು ಹೋಗುತೇನೆ.,

ಹೀಗೆ ಹೇಳಿ ಕಣ್ಣಿನಲ್ಲಿ ನೀರತಂದುಕೊಳ್ಳುತಾ ಹಬ್ಬಸಿಯವನ ಕಡೆಗೆ

ತಿರುಗಿ ಆಯ್ಯಾ, ನೀನು ನನಗೆ ಪರಮಾಪ್ತ, ಯಾವಾಗಲೂ ನನ್ನ

ಸಮಾಪದಲ್ಲಿಯೇ ಇರು. ನಮ್ಮ ಸಂಗಡಲೇ ಬಾ, ಎಂದು ಹೊರಟನು.

ಆಗ ಸುಮತಿಯೂ ಸೂರ್ಯಭಟ್ಟನೂ ರಾಜಪುತ್ರನನ್ನೂ ರಾಜನನ್ನೂ

ಸಾಗಕಳುಹಿಸುವುದಕ್ಕೆ ಹೋದರು. ದೊರೆಯು ಅವರಿಗೆ

ಉಪಚಾರೋಕ್ತಿಗಳನ್ನು ಹೇಳಿ, ದೂರವಾಗಿ ಬಂದಿರಿ, ಹಿಂದಕ್ಕೆ

ದಯಮಾಡಿಸಿ ಎಂದು ನುಡಿದನು. ಪರಸ್ಪರ ಅಗಲಿ ಹೊರಟು

ಹೋಗುವ ಸಮಯವೂ ಬಂತು. ಎಲ್ಲರ ಕಣ್ಣಿನಲ್ಲಿಯೂ ನೀರೂ

ಬಂತು. ಕೊನೆಯಲ್ಲಿ ದೊರೆಯು ಸುಮತಿಯನ್ನು ಕರೆದು ಅಯ್ಯಾ,

ಬುದ್ಧಿಶಾಲಿಯೇ, ಎಷ್ಟು ಬಗೆಯಲ್ಲಿ ಹೇಳಿಕೊಂಡಾಗ್ಗೂ ನಮ್ಮ ಕೃತ

ಜ್ಞತಾ ಸೂಚಕವಾದ ಉಪಚಾರವನ್ನು ಅಲ್ಪ ಸ್ವಲ್ಪವಾಗಿಯಾದರೂ

ಸ್ವೀಕರಿಸಲು ನಿಮ್ಮ ಯಜಮಾನರಿಗೆ ಮನಸ್ಸು ಬರದೇ ಹೋಯಿತು.

ನಿನ್ನಿಂದ ನಮಗೆ ಆದ ಉಪಕಾರಕ್ಕಾಗಿ ನಮ್ಮ ಪ್ರತ್ಯುಪಕಾರವನ್ನು

ಸೂಚಿಸುವುದಕ್ಕೆ ಏನಾದರೂ ಒಂದು ಗುರುತನ್ನು ನೀನಾದರೂ ಹಿಡಿ,

ಎಂದನು. ಅದಕ್ಕೆ ಸುಮತಿಯು ಬುದ್ಧಿ, ಹಾಗೆ ಪ್ರತ್ಯುಪಕಾರ ಮಾಡ

ಬೇಕೆಂದು ತಮ್ಮ ಮನಸ್ಸಿನಲ್ಲಿದ್ದರೆ. ಈ ಸತ್ಪುರುಷನಾದ ಹಬ್ಬಸಿಯ

ವನಿಗೆ ಸಹಾಯಮಾಡಬೇಕು. ಅವನನ್ನು ತಾವು ಸಂರಕ್ಸಿಸಿದರೆ

ಅದೇ ನಮಗೆ ಪ್ರತ್ಯುಪಕಾರ, ಮತ್ತೆ ಯಾವುದೂ ಅಗತ್ಯವಿಲ್ಲ,

ದೊರೆಯೂ ರಾಜಪುತ್ರನೂ ಅವರನ್ನು ಕೊಂಡಾಡುತಾ ಅರಮನೆಗೆ 

--------------------------------------

೩೦೮ ಸುಮತಿ ಮದನಕುಮಾರರ ಚರಿತ್ರೆ


ಹೋದನು. ರಾಮಜೋಯಿಸನು ಅರಸನ ಉಪಚಾರ

ವನ್ನು ತಿರಸ್ಕರಿಸಿದನು. ತರುವಾಯ ರಾಮಜೋಯಿಸನನ್ನು ಆಗಾಗ್ಗೆ

ಹೋಗಿ ನೋಡುತಾ, ಸುಮತಿಯನ್ನು ಪದೇ ಪದೇ ಕಾಣುತಾ ವಿವೇಕ

ಶಾಲಿಯಾಗಿ ಮದನಕುಮಾರನು ರಾಜನ ಸಿಂಹಾಸನಕ್ಕೆ ನಿಜವಾದ

ಭೂಷಣನಾಗಿದ್ದನು.


ಸಂಪೂರ್ಣಂ.

===================================

ಈ ಗ್ರಂಥದ ವಿಷಯವಾಗಿ


೧೮ ನೆಯ ಶತಮಾನದಲ್ಲಿ ಥಾಮಸ್‌ ಡೇ ಎಂಬಾತನು ಇಂಗ್ಲಿಷಿನಲ್ಲಿ

ಬರೆದ " Standford and Merton"ಎಂಬ ಕೃತಿಯ ಮಾದರಿಯಲ್ಲಿ

ಬರೆದದ್ದು ಈ ಕಾದಂಬರಿ: -ಸುಮತಿ ಮದನ ಕುಮಾರರೆ ಚರಿತ್ರೆ. ಡೇ

ರೂಸೌ ಎಂಬ ಫ್ರಂಚ್‌ ತತ್ತ್ವಜ್ವಾನಿಯ ಶಿಷ್ಟ ಶಾಲೆಗಳ್ನು ಮಕ್ಕಳಿಗೆ

ಕಥೆಗಳ ಮೂಲಕವೂ ಸ್ವಾರಸ್ಯವಾದ ಮಾತುಗಳ ಮೂಲಕವೂ ಸದ್ಗುಣಗ

ಳನ್ನೂ ಸೈನ್ಸ್‌ ಮೊದಲಾದ ವಿಷಯಗಳನ್ನೂ ಸುಲಭವಾಗಿಯೂ ಸ್ವಾರಸ್ಯ

ವಾಗಿಯೂ ಬೋಧಿಸಬಹುದೆಂಬುದನ್ನು ಸಮರ್ಥಿಸುವುದಕ್ಕಾಗಿಯೇ

‘Sandford and Merton’ ಎಂಬ ಬೋಧಪ್ರದ ಕಾದಂಬರಿ

ಯನ್ನು ರಚಿಸಿದ. ಆದು ಬಹುಕಾಲ ಜನಪ್ರಿಯವಾಗಿತ್ತು. ಪುಟ್ಟಣ್ಣ

ನವರು ಆ ಕಥೆಯನ್ನು ಕನ್ನಡದಲ್ಲಿ ಎಷ್ಟು ರಸವತ್ತಾಗಿ ಕಟ್ಬದಾರೆ

ಎಂಬುದು ಈ ಪುಸ್ತಕವನ್ನು ಓದಿದವರಿಗೆ ಮನವರಿಕೆಯಾಗದಿರದು.


ಪುಟ್ಟಣ್ಣನವರು (೧೮೫೪-೧೯೩೦) ಶ್ರೀ ಚಾಮರಾಜ ಒಡೆಯರವರ

ಕಾಲದಲ್ಲಿ ಕನ್ನಡದ ಪುನರುಜ್ಜಿವನಕ್ಕಾಗಿ ಶ್ರಮಿಸಿದ ಉತ್ಸಾಹಿಗಳು,

ಬಾಲಕರಿಗಾಗಿ ಅವರು ರೀಡರುಗಳನ್ನೂ ಹಿಂದೂ ದೇಶದ ಚರಿತ್ರೆಯನ್ನೂ

ಬರೆದರು; " ನೀತಿಚಿಂತಾಮಣಿ "(ಸುಮತಿ ಮದನಕುಮಾರರ ಚರಿತೆ?

ಮೊದಲಾದ ನೀತಿಯೋಧಕ ಕಥೆಗಳನ್ನು ರಚಿಸಿದರು. ಷೇಕ್ಸ್‌ ಪಿಯರ್‌

ಕವಿಯ ಕೆಲವು ನಾಟಕಗಳನ್ನು ನಾಟಕಕಥಾರೂಪಗಳಲ್ಲಿ ಕನ್ನಡಕ್ಕೆ

ತಂದರು. ಪಾಳೆಯ ಗಾರರ ದರಿತ್ರೆಗಳನ್ನು ಸಂಗ್ರಹಿಸಿದರು. 'ಕುಣಿಗಲು 

ರಾಮಾಶಾಸ್ತ್ರಿಗಳ ಚರಿತ್ರೆ ಮೊದಲಾದ ಜೀವನ ಚರಿತೆಗಳನ್ನೂ "ಮಾಡಿ

ದ್ವುಣ್ಣೋ ಮಹಾರಾಯ ',  ಮುಸುಗ ತೆಗೆಯೇ ಮಾಯಾಂಗನೆ?

ಮೊದಲಾದ ಸ್ವತಂತ್ರ ಕಾದಂಬರಿಗಳನ್ನೂ ರಚಿಸಿದರು. ಕನ್ನಡಕ್ಕೆ

ಪುಟ್ಟಣ್ಣನವರು ಮಾಡಿರುವ ಸೇವೆ ನೆನಸಿಕೊಳ್ಳಬೇಕಾದದ್ದು. ಪುಟ್ಟಣ್ಣ

ನವರದು ಮನೆ ಮಾತಿನ ಶೈಲಿ, ಅವರ ಭಾಷೆ ಸುಲಭವಾದದ್ದು,

ಸರಳವಾದದ್ದು ;ಆವರೂ ಸತ್ವದಿಂದ ಕೂಡಿದ್ದು. ಕನ್ನಡ ಪುಸ್ತಕಗಳ

ಭಾಷೆ ಕೃತಕವಾಗುತ್ತಿರುವ ಈಗಿನ ಕಾಲದಲ್ಲಿ ಪುಟ್ಟಣ್ಣನವರ ಪುಸ್ತಕಗ

ಳನ್ನು ನಮ್ಮ ಹುಡುಗ ಹುಡುಗಿಯರೂ ದೊಡ್ಮವರೂ ಪದೇ ಪದೇ ಓದು

ವುರದರಿಂದ ವಿಶೇಷ ಪ್ರಯೋಜನವುಂಟು: ಬರಹಗಾರರ ಭಾಷೆ ಸರಳವಾಗಿ,

ಸುಲಭವಾಗಿ, ನಿಜವಾದ ಕನ್ನಡವಾಗಿ, ಅವರ ಕೃತಿಗಳು ಕನ್ನಡದ

ಸಾಮಾನ್ಯ ಜನರನ್ನು ಒಲಿಸಿಕೊಳ್ಳುವ ಸಂಭನವುಂಟು.