https://archive.org/details/dli.osmania.3418
ದಿವ್ಯಸುಂದರಿ
ಅಥವಾ ದೀರ್ಘಪ್ರಯತ್ನ.
೧ನೆಯ ಪ್ರಕರಣ.
ಬುದ್ದಿ: ಕರ್ಮಾನುಸಾರಿಣೀ !
ಇದೆಲ್ಲ ನಿಜವಾದ ಶಿಕ್ಷಣವನ್ನು ಹೊಂದದ ಪರಿಣಾಮವು.
ಯಾವನೊಬ್ಬನು ಹೆಚ್ಚಿನ ಮಹತ್ವಾಕಾಂಕ್ಷೆಯಿಂದ ಹೆಚ್ಚಿನ ಪ್ರಯತ್ನ ಮಾಡಹತ್ತಿದನೆಂದರೆ, ಅವನಿಗೆ ನಮ್ಮಲ್ಲಿ ಎಷ್ಟೋ ಜನರು ಆರಂಭಶೂರನೆಂಬದಾಗಿ ಹಾಸ್ಯಮಾಡಲಿಕ್ಕೆ ಪ್ರಾರಂಭಿ ಸುತ್ತಾರೆ. ಎಷ್ಟೋ ಮಿತ್ರರಿಗೆ ನನ್ನ ವಿಚಾರವನ್ನು ಹೇಳಲು ಅವರು ನನಗೆ ಚೇಷ್ಟೆಯನ್ನೇ ಮಾಡಹತ್ತಿರುತ್ತಾರೆ. ಯಾಕಂದರೆ ನನ್ನ ಆ ಕಲ್ಪನೆಯು ನನ್ನ ಶಕ್ತಿಗೆ ಮೀರಿದ್ದೆಂದು ಅವರ ತಿಳುವಳಿಕೆಯದೆ! ಇದರಿಂದ ನಮ್ಮ ತರುಣರು ಆತ್ಮವಿಶ್ವಾಸಕ್ಕೆ ಎಷ್ಟು ಮೆಚ್ಚಿರುತ್ತಾರೆಂಬುವದು ಸ್ಪಷ್ಟವಾಗಿ ತಿಳಿಯುವಂತಿದೆ. ಇವರಿಗೆ ಯಾವದೊಂದು ಸಣ್ಣ ಕಾರ್ಯವನ್ನು ಕೂಡ “ ನಾನು ಮಾಡಿಯೇ ತೀರೇನು ? ಎಂಬ ನಿಶ್ಚಯಾತ್ಮಕವಾದ ಬಲವಿರುವದಿಲ್ಲ. ಅದೇ ಸ್ವತಂತ್ರಭೂಮಿಯಾದ ಅಮೇರಿಕಾ ದಲ್ಲಿ ಯಾವನೊಬ್ಬ ಕ್ಷುಲ್ಲಕ ಭಿಕ್ಷುಕನ ಸಣ್ಣ ಮಗುವಿಗೆ ಕೂಡ ಪರಾವಲಂಬನದ ಬಗೆ ನಾಚಿಕೆಯಿರುತ್ತದೆ. ಇದೆಲ್ಲ ಅಲ್ಲಿಯ ಸಂಸ್ಕಾರವಿಶೇಷವು. ತಾವು ಮನುಷ್ಯ ಜನ್ಮವನ್ನು ತಾಳಿ, ತಮಗೆ ದೇವರು ಬುದ್ಧಿ ಸಾಮರ್ಥ್ಯವನ್ನೂ, ಸದೃಢವಾದ ಅವಯವ
೨-------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ಗಳನ್ನೂ ಕೊಟ್ಟಿರುತ್ತಿರಲಿಕ್ಕೆ ದುರ್ಬಲನಿರುತ್ತೇನೆಂಬ ವಿಚಾರವು ಅಲ್ಲಿಯ ತರುಣರ ಮನಸ್ಸಿನಲ್ಲಿ ಎಂದೂ ಉತ್ಪನ್ನವಾಗುವದಿಲ್ಲ. ಇಂಥ ಪುಣ್ಯಭೂಮಿಗೆ ಶಿಕ್ಷಣದ ಸಲು ವಾಗಿ ನಮ್ಮ ಅಣ್ಣನು ನನ್ನನ್ನು ಕಳಸಿದ್ದಕ್ಕಾಗಿ ನಾನು ಆತನ ಮಹದುಪಕಾರವನ್ನು ಯಾವಜೀವ ಮರೆಯುವಂತಿಲ್ಲ. ನಾನು ಸಣ್ಣವನಿರುವಾಗಲೇ ನನ್ನ ತಾಯಿತಂದೆಗಳು ತೀರಿಕೊಂಡರು. ಅವರ ಪಾಲನ-ಸೂತ್ರವು ಹರಿದು ಹೋದಮೇಲೆ ನನ್ನ ಮನೆ ರಾಜ್ಯವು ಪ್ರಳಯವಾಯಿತೆಂದು ತಿಳಿದೆನು. ಆದರೆ ನಮ್ಮ ಅಣ್ಣನಿಗೆ ನನ್ನ ವಿಚಾರ ಗಳೆಲ್ಲ ಯೋಗ್ಯವಾಗಿ ತೋರಿದ್ದರಿಂದ ಬಡತನವಿದ್ದರೂ ಅಂಜದೆ, ಅಮೇರಿಕಾಕ್ಕೆ ಕಳಿಸಿ ನನಗೆ ನನ್ನ ಇಚ್ಚಿತ ಶಿಕ್ಷಣವನ್ನು ಕೊಡಿಸಿದನು. ಈಶ್ವರಕೃಪೆಯಿಂದ ಆ ಶಿಕ್ಷ ಣವೂ ಒಳ್ಳೆ ರೀತಿಯಿಂದ ಪೂರ್ಣವಾಯಿತು. ನನ್ನ ಇಚ್ಛೆಯನ್ನೂ, ವಿಚಾರವನ್ನೂ ನೋಡಿ ಅಮೇರಿಕಾದ ಪ್ರೊಫೆಸರರಿಗೆ ಆಶ್ಚರ್ಯವಾಗಿ ಅವರು ಒಳ್ಳೆ ಕಳಕಳಿಯಿಂದ ನನಗೆ ಕಲಿಸುವದನ್ನು ಕಲಿಸಿದರು. ಆ ಅತ್ಯಂತ ದೂರವಾದ ಎರಡನೇ ದೇಶದಲ್ಲಿ ನನ್ನ ಸ್ಥಿತಿಯು ಹೇಗಾದೀತೆಂಬ ಬಗ್ಗೆ ನನಗೆ ಮೊದಲು ಒಳ್ಳೆ ಚಿಂತೆಯಾಯಿತು' ಆದರೆ ಅಲ್ಲಿಯ ಎಲ್ಲ ದಿವಸಗಳು ಸುಖದಿಂದ ಕಳೆದವು. ಇತ್ತ ಕಡೆಗೆ ಬಂದಮೇಲೆ ಈಗ ನನ್ನ ಎಷ್ಟೋ ಮಿತ್ರರು ನನಗೆ ನವಕರಿ ಕೊಡಿಸುವದರ ಸಲುವಾಗಿ ಪ್ರಯತ್ನ ಮಾಡುತ್ತಾರೆ, ಕೆಲವರು ದೊಡ್ಡ ದೊಡ್ಡ ನಾಹೇಬರಿಗೆ ಭೆಟ್ಟಿಯಾಗಿ ದೊಡ್ಡ ಪಗಾ ರದ ನವಕರಿಯನ್ನು ಕೊಡಿಸುತ್ತೇವೆಂದು ಪತ್ರ ಬರೆಯುತ್ತಿರುವರು; ಆದರೆ ಪರಾಧೀನ ವೆಂಬ ಸರಪಳಿಯಿಂದ ಕೈ ಕಾಲುಗಳನ್ನು ಕಟ್ಟಿಸಿಕೊಂಡು, ನನ್ನ ಎಲ್ಲ ವಿಚಾರದ ಮೇಲೆ ನೀರು ಬಿಡಲಿಕ್ಕೆ ನಾನು ಎಂದೂ ಸಿದ್ದನಾಗುವದಿಲ್ಲ. ನನ್ನ ಕಾರ್ಯವು ಕಷ್ಟ ಸಾಧ್ಯ
ವಾದದ್ದೆಂಬುವದನ್ನು ನಾನು ಪೂರ್ಣವಾಗಿ ತಿಳಿದಿರುತ್ತೇನೆ; ಆದರೂ ಅದನ್ನು ನಾನು ಮಾಡಿಯೇ ತೀರುತ್ತೇನೆಂದು ನನಗೆ ನಂಬಿಗೆಯದೆ. ಹೇಗಾದರೂ ಮಾಡಿ ಧನವನ್ನು ಸಂಪಾದಿಸುವದಾಗಲಿ, ಇಹಲೋಕಯಾತ್ರೆಯನ್ನು ಮುಗಿಸುವದಾಗಲಿ ನಿಜವಾದ ಮಾನವೀ ಧರ್ಮವೆನಿಸುವದಿಲ್ಲ. ನನಗೆ ಬಿಕ್ಕೆ ಬೇಡುವ ಪ್ರಸಂಗವು ಬಂದರೂ ಚಿಂತೆ ಯಿಲ್ಲ; ಆದರೆ ನಾನು ನನ್ನ ಆಯುಷ್ಯವು ಜಗತ್ತಿಗೆ ಹಿತಕರವಾದದ್ದೆಂಬುವದನ್ನು ಜನರ ನಿದರ್ಶನಕ್ಕೆ ತಂದ ಹೊರ್ತು ಇರುವದಿಲ್ಲ. ಮನುಷ್ಯನಿಗೆ ಆತ್ಮಬಲವೂ, ಈ ಬಲಸಂಪಾದನಕ್ಕೆ ಧೈರ್ಯವೂ ಬೇಕು. ನಾನು ದುರ್ಬಲನೂ, ಪಾಪಿಯೂ ಆಗಿರು ತೇನೆಂಬ ಮನಸ್ಸಿನ ವಿಚಾರವು ಮನುಷ್ಯನನ್ನು ಎಲ್ಲ ಭಾಗದಿಂದಲೂ ಕಟ್ಟಿ ಹಾಕಿ ಬಿಡುತ್ತದೆ, ನನ್ನ ಸಾಂಸತ್ತಿಕ ಸ್ಥಿತಿಯು ಚನ್ನಾಗಿಲ್ಲದಿದ್ದರೂ ನನ್ನ ಮನಸ್ಸು ನನಗೆ
ನೀನು ದರಿದ್ರನೆಂದು ಎಂದೂ ಅನ್ನುವದಿಲ್ಲ. ತಿರುಗಿ ನನಗೆ ಅದು “ ನೀನು ಪ್ರಯತ್ನ
ಮಾಡು, ಅಂದರೆ ನಿನ್ನ ಇಷ್ಟಗಳೆಲ್ಲವೂ ಸಿದ್ಧಿಯಾಗುತ್ತವೆ!” ಎಂದು ಹೇಳುತ್ತದೆ
ಈ ಪ್ರಕಾರ ವಿಚಾರಮಾಡುತ್ತ ಒಂದು ದಿವಸ ಸಂಜೆಯ ನಾಲ್ಕು ಹೊಡೆಯುವ ಸುಮಾರಕ್ಕೆ ವಿನಾಯಕನು ತನ್ನ ಮನೆಯೊಳಗಿನ ವಾಚನಾಲಯದಲ್ಲಿ ತಿರುಗಾಡುತ್ತಿ
೩-----------------------------------------------೧ನೆಯ ಪ್ರಕರಣ- ಬುದ್ದಿ: ಕರ್ಮಾನುಸಾರಿಣಿ !
ದ್ದನು. ಅವನ ಅಣ್ಣನ ಹೆಸರು ಕೃಷ್ಣರಾಯ. ಇಬ್ಬರೂ ಚಿಕ್ಕಂದಿನಲ್ಲಿಯೇ ಮಾತಾ ಪಿತೃವಿಹೀನರಾಗಿದ್ದರೂ, ಸದುದ್ಯಮಶೀಲಸ್ವಭಾವದವರಾಗಿದ್ದ ಗ್ಧರಿಂದ ಅವರು ತಮ್ಮ ಆಯುಷ್ಯವನ್ನು ಒಳ್ಳೆ ರೀತಿಯಿಂದ ಕಳೆಯುವವರಾಗಿದ್ದರು. ಅವರ ತಂದೆ ಯು ತೀರಿಕೊಂಡಾಗ ವಿನಾಯಕನಿಗೆ ಹನ್ನೆರಡು ವರ್ಷಗಳಾಗಿದ್ದು, ಕೃಷ್ಣರಾಯ ನಿಗೆ ಇಪ್ಪತ್ತು ವರ್ಷಗಳಾಗಿದ್ದವು. ತಂದೆತಾಯಿಗಳು ಇರುವಾಗಲೇ ಕೃಷ್ಣರಾಯನ ಲಗ್ನವಾಗಿದ್ದಿತು. ವಿನಾಯಕನು ಇನ್ನೂ ಅವಿವಾಹಿತನಾಗಿಯೇ ಇದ್ದನು. ವಿನಾಯ ಕನ ಮೇಲೆ ಕೃಷ್ಣರಾಯನ ಪ್ರೀತಿಯು ಬಹಳವಾಗಿದ್ದಿತು. ತಾಯಿತಂದೆಗಳ ಪಶ್ಚಾತ್ ವಿನಾಯಕನಿಗೆ ಕೃಷ್ಣರಾಯನು ಸ್ವಲ್ಪಾದರೂ ಯಾತಕ್ಕೇನು ಕಡಿಮೆಮಾಡಿದ್ದಿಲ್ಲ. ವಿನಾಯಕನು ಅಣ್ಣನನ್ನು ಪಿತೃಸಮಾನನೆಂದು ಭಾವಿಸಿದ್ದನು. ಅವನ ಆಜ್ಞೆಯನ್ನು ಎಂದೂ ಉಲ್ಲಂಘಿಸುತ್ತಿದ್ದಿಲ್ಲ. ಇವರ ತಂದೆಯು ಸ್ವತಂತ್ರವಾದ ಉದ್ಯೋಗದಿಂದ ಕಾಲಹರಣ ಮಾಡುವವನಾಗಿದ್ದನು. ಅವನು ತನ್ನ ಮಕ್ಕಳ ಶಿಕ್ಷಣದ ಸಲುವಾಗಿ ಭಗೀರಥಪ್ರಯತ್ನ ಮಾಡಿದನು. ಅವನ ಪ್ರಯತ್ನ ವಾದರೂ ಫಲಕಾರಿಯಾಯಿತು. ತಂದೆಯ ಪಶ್ಚಾತ್ ಕುಟುಂಬದ ಎಲ್ಲ ಭಾರವು ಕೃಷ್ಣರಾಯನ ಮೇಲೆ ಬಿದ್ದಿತು. ಅವನು ತನ್ನ ಆಯುಷ್ಯನೌಕೆಯನ್ನು ಬೇರೊಂದು ಮಾರ್ಗದಿಂದ ನಡಿಸಬೇಕಾಯಿತು. ಅವನ ಅಲ್ಪ ಸ್ವಲ್ಪ ಪಿತ್ರಾರ್ಜಿತ ಆಸ್ತಿಯು ನಿಜಾಮನ ರಾಜ್ಯದಲ್ಲಿದ್ದು, ಒಂದು ಸಣ್ಣ ಮನೆಯು ಮಾತ್ರ ಮುಂಬಯಿಯಲ್ಲಿದ್ದಿತು. ಮಕ್ಕಳ ಶಿಕ್ಷಣಕ್ಕಾಗಿ ಅವನ ತಂದೆಯು ಮುಂಬಯಿಗೆ ಬಂದಿದ್ದನು. ಕೃಷ್ಣರಾಯನು ಕಾಲೇಜನ್ನು ಹೊಕ್ಕ ಅಲ್ಪಾವಧಿ ಯಲ್ಲಿಯೇ ತಂದೆಯು ತೀರಿಕೊಂಡದ್ದರಿಂದ ಅವನು ನಿರ್ವಾಹವಿಲ್ಲದೆ ಇದ್ದ ಆಸ್ತಿ ಯನ್ನು ವ್ಯವಸ್ಥೆಗೊಳಿಸುವದಕ್ಕಾಗಿ ಕಾಲೇಜನ್ನು ಬಿಡಬೇಕಾಯಿತು. ತಮ್ಮನ ಶಿಕ್ಷಣ ಕ್ರಮಕ್ಕೆ ಬಾಧೆಯಾಗಬಾರದೆಂದು ಅವನು ಮುಂಬಯಿಯಲ್ಲಿ ೫೦ ರೂಪಾಯಿಯ ನವಕರಿಯ ಮೇಲೆ ನಿಂತಿದ್ದನು. ಕೃಷ್ಣರಾಯನಿಗೆ ಒಬ್ಬ ಚಿಕ್ಕಪ್ಪನಿದ್ದನು. ಅವನ ಹೆಸರು ನೀಲಕಂಠರಾಲಯ, ಅವನು ಇವರಿಬ್ಬರಿಂದ ಬೇರೆಯಿದ್ದು ಶ್ರೀಮಂತನಾಗಿ ದ್ದನು. ಅವನು ನಿಪುತ್ರಕನಾಗಿದ್ದದ್ದರಿಂದ ವಿನಾಯಕನನ್ನು ಬಹಳವಾಗಿ ಪ್ರೀತಿಸುತ್ತಿ ದ್ದನು. ಕೃಷ್ಣರಾಯನು ತನ್ನ ಆಸ್ತಿಯ ವ್ಯವಸ್ಥೆಯಸಲುವಾಗಿ ನಿಜಾಮನ ರಾಜ್ಯಕ್ಕೆ ಹೋದಾಗ ವಿನಾಯಕನು ನೀಲಕಂಠರಾಯನ ಮನೆಯಲ್ಲಿಯೇ ಇರುತ್ತಿದ್ದನು. ಮೊದ ಲಿನ ಹೆಂಡತಿಯು ತೀರಿಕೊಂಡ ಎಷ್ಟೋ ದಿವಸದ ಮೇಲೆ ಜನರ ವಿಶೇಷಾಗ್ರಹದಿಂದ ನೀಲಕಂಠರಾಯನು ಎರಡನೇ ಲಗ್ನವನ್ನು ಮಾಡಿಕೊಂಡಿದ್ದನು. ಈ ಲಗ್ನವಾದ ಸ್ವಲ್ಪ ದಿವಸಗಳಲ್ಲಿಯೇ ಅವನು ನಿಪುತ್ರಿಕನಾಗಿ ಮೃತಬಟ್ಟನು. ಇದರಿಂದ ನೀಲಕಂಠ ರಾಯನ, ಕೃಷ್ಣರಾಯ --ವಿನಾಯಕರ ಸಂಬಂಧವು ಕಡಿದುಹೋಯಿತು. ಆಮೇಲೆ ಕೃಷ್ಣರಾಯನು ಬಹಳವಾಗಿ ಮುಂಬಯಿಯಲ್ಲಿಯೇ ಇರುತ್ತಿದ್ದನು. ವಿನಾಯಕನು ತನ್ನ ಇಪ್ಪತ್ತೆರಡನೇ ವರ್ಷದಲ್ಲಿ ಎಮ್. ಎ. ಆಗಿ ಭೂಸ್ತರಶಾಸ್ತ್ರ-ಖನಿಜಶಾಸ್ತ್ರಗಳ
-೪-------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಅಭ್ಯಾಸಮಾಡಲಿಕ್ಕೆ ಅಮೇರಿಕಾಕ್ಕೆ ಹೋಗಿ, ಅಲ್ಲಿಯ ನಾಲ್ಕು ವರ್ಷದ ಅಭ್ಯಾಸ ಕ್ರಮವನ್ನು ಮುಗಿಸಿ, ಆ ಕಡೆಯ ಅನೇಕ ವಿಶ್ವವಿದ್ಯಾಲಯಗಳಲ್ಲಿ ಇನಾಮು ತಕ್ಕೊಂಡು ಅದೇ ಮುಂಬಯಿಗೆ ತಿರುಗಿ ಬಂದಿದ್ದನು. ಆಗ ಖನಿಜಶಾಸ್ತ್ರದಲ್ಲಿ ವಿಶೇಷ ವಾಗಿ ಅಭ್ಯಾಸಮಾಡಿದ ವಿನಾಯಕನು ಮುಂದೆ ಯಾವ ಕೆಲಸ ಮಾಡುತ್ತಾನೆಂಬುವ ದರ ಕಡೆಗೆ ಸರ್ವರ ಲಕ್ಷವಿದ್ದಿತು. ತನ್ನ ಮುಂದಿನ ಕರ್ತವ್ಯ ಕರ್ಮದ ಬಗ್ಗೆ ವಿನಾ ಯಕನಿಗಾದರೂ ಒಳ್ಳೆ ಚಿ೦ತೆಯಿದ್ದಿತು. ಈ ವೇಳೆಯಲ್ಲಿ ವಿನಾಯಕನಿಗೆ ಇಪ್ಪತ್ತಾರು ವರ್ಷಗಳಾಗಿದ್ದು, ಕೃಷ್ಣರಾಯನಿಗೆ ಮೂವತ್ತು ನಾಲ್ಕು ವರ್ಷಗಳಾಗಿದ್ದವು. ಇದೇ ಈ ಕಾದಂಬರಿಗೆ ಆರಂಭಕಾಲವು.
* ವಿನಾಯಕನು ತಿರುಗಿ ಮುಂಬಯಿಗೆ ಬಂದ ಕೂಡಲೆ ಕೃಷ್ಣರಾಯನಿಗೆ ಒಳ್ಳೆ ಆನಂದವಾಯಿತು. ಮುಂದೆ ವಿನಾಯಕನು ಯಾವ ಕೆಲಸ ಮಾಡುತ್ತಾನೆಂಬುವದರ ಕಡೆಗೆ ಅವನ ಲಕ್ಷವಿದ್ದಿತು. ವಿನಾಯಕನು ಬರುವಾಗ ತನ್ನ ಸಂಗಡ ಎಷ್ಟೋ ಪುಸ್ತ ಕಗಳನ್ನೂ, ಅನೇಕ ಜಾತಿಯ ಸಣ್ಣ ಸಣ್ಣ ಶಿಲೆಗಳನ್ನೂ ತಂದಿದ್ದನು. ಅವುಗಳನ್ನು ಇಡುವದರ ಸಲುವಾಗಿ ಕೃಷ್ಣರಾಯನು ವಿನಾಯಕನಿಗೆ ಒಂದು ದೊಡ್ಡ ಕೋಣೆ ಯನ್ನು ಕೊಟ್ಟಿದ್ದನು. ವಿನಾಯಕನು ಯಾವಾಗಲೂ ಆ ಕೋಣೆಯಲ್ಲಿ ಕುಳಿತು ಆ ಕಲ್ಲುಮಣ್ಣುಗಳ ಪರೀಕ್ಷೆಯನ್ನು ಮಾಡುತ್ತಿದ್ದನು. ಮುಂದೇನು ಮಾಡಬೇಕೆಂಬ ಬಗ್ಗೆ ಅವನಿಗೆ ಚಿಂತೆಯಿದ್ದರೂ, ಅವನು ಭಾವೀ ಯೋಜನೆಯನ್ನು ಅಮೇರಿಕಾಕ್ಕೆ ಹೋಗುವ ಮೊದಲೇ ಮಾಡಿದ್ದನು.
- ದಕ್ಷಿಣ ಹೈದರಾಬಾದದಲ್ಲಿ ಒಬ್ಬ ಶ್ರೀಮಂತ ಜಹಾಗೀರದಾರನು ಇರುತ್ತಿದ್ದನು. ಅವನ ಹೆಸರು ರಾಜಾಬಹಾದ್ದೂರ ಚಿಂತಾಮಣಿರಾಯ ಹರಿಹರ ದೇಶಪಾಂಡೆ. ಅವನು ನಿಜಾಮನ ರಾಜ್ಯದೊಳಗಿನ ಕಿಸನಗಡ ತಾಲೂಕಿನ ಜಹಾಗೀರದಾರನಾಗಿ ದ್ದನು. ಅವನು ತನ್ನ ರಾಜ್ಯದಲ್ಲಿ ಬಹುತೇಕ ರಾಜಾಸಾಹೇಬನೆಂಬ ಹೆಸರಿನಿಂದ ಪ್ರಸಿದ್ದಿಯಾಗಿದ್ದನು. ಈ ಕಿಸನಗಡ ತಾಲೂಕು ಗೋದಾವರಿ ನದಿಯ ಉತ್ತರ ದಕ್ಷಿಣ ದಂಡೆಗಳಲ್ಲಿ ಹಬ್ಬಿದ್ದು, ಅದರ ಉತ್ತರ ದಂಡೆಯಲ್ಲಿ ಪರ್ವತಕ್ಕೆ ಹೊಂದಿದ ನೂರಾರು ಎಕರೆ ಭೂಮಿಯು ಹಾಗೆಯೇ ಪಡಬಿದ್ದಿದ್ದಿತು. ಆ ಭೂಮಿಯಲ್ಲಿ ಬೆಲೆಯುಳ್ಳ ಅನೇಕ ಧಾತುಗಳಿದ್ದದ್ದರಿಂದ ಪ್ರಯತ್ನ ಮಾಡಿದರೆ ಅದರಲ್ಲಿ ಬಹಳ ಲಾಭವಾದೀತೆಂದು ವಿನಾ ಯಕನ ತಿಳುವಳಿಕೆಯಿದ್ದಿತು. ಅವನು ಆ ಭೂಮಿಯನ್ನು ಲಾವಣಿಯಿಂದ ಹಿಡಕೊ ಳ್ಳುವ ಪ್ರಯತ್ನ ಮಾಡುತ್ತಿದ್ದನು. ರಾಜಾಸಾಹೇಬನಿಗೆ ಮಾಧವರಾಯನೆಂಬ ಹೆಸರಿನ ಒಬ್ಬ ದಿವಸಹೋದ ಸಜ್ಜನಗೃಹಸ್ಥನು ದಿವಾಣನಾಗಿದ್ದನು. ಅವನಿಗೂ, ವಿನಾಯಕ ನಿಗೂ ಸ್ವಲ್ಪ ಆಪ್ತ ಸಂಬಂಧವಿದ್ದದ್ದರಿಂದ ಅವನು ತನ್ನ ಕೈಯಿಂದಾದಷ್ಟು ಸಹಾಯ ಮಾಡಿ ಆ ಭೂಮಿಯನ್ನು ನಿನಗೆ ದೊರಕಿಸಿಕೊಡುತ್ತೇನೆಂಬದಾಗಿ ವಿನಾಯಕನಿಗೆ ಹೇಳಿದ್ದನು. ರಾಜಾಸಾಹೇಬನು ಯಾವಾಗಲೂ ಶ್ರೀಮಂತರೀತಿಯಿಂದ ಮುಂಬ
೫---------------------------------------------------------೧ನೆಯ ಪ್ರಕರಣ-ಬುದ್ಧಿ; ಕರ್ಮಾನುಸಾರಿಣೀ !
ಯಿಯ ಮಹಾಲಕ್ಷ್ಮೀ ದೇವಾಲಯದ ಪಾರ್ಶ್ವದಲ್ಲಿ ಕಟ್ಟಿಸಿದ ತನ್ನ ಸ್ವಂತ ಬಂಗಲೆ ಯಲ್ಲಿ ಇರುತ್ತಿದ್ದನು. ರಾಜಾಸಾಹೇಬ ವಿನಾಯಕರಿಗೂ ದೂರ ಆಪ್ತ ಸಂಬಂಧ ವಿದ್ದಿತು. ಆದರೆ ರಾಜಾಸಾಹೇಬನಿಗೆ ವಿನಾಯಕನಂಥ ಬಡತನದ ಮನುಷ್ಯನಿಗೆ ನನಗೂ-ನಿಮಗೂ ಆತನದೆಯೆಂದು ಹೇಳುವದು ಲಜ್ಜೆಯ ಮಾತಾಗಿ ತೋರಿದ್ದ ರಿಂದ ಅವನು ಆ ಸಂಬಂಧವಾಗಿ ಒಂದು ' ಬ್ರ' ಅಕ್ಷರವನ್ನಾದರೂ ಉಚ್ಚರಿಸುತ್ತಿದ್ದಿಲ್ಲ.
ಈ ಪ್ರಕರಣದ ಆರಂಭದಲ್ಲಿ ಹೇಳಿದ ಪ್ರಕಾರ ಆ ದಿವಸ ವಿನಾಯಕನು ಕೋ ಣೆಯಲ್ಲಿ ವಿಚಾರಮಾಡುತ್ತ ತಿರುಗಾಡುತ್ತಿರುವಾಗ ಕೋಣೆಯ ಬಾಗಿಲು ತೆರೆಯಿತು. ಒಳಗೆ ೨೭-೨೮ ವರ್ಷದ ಒಬ್ಬ ಅತ್ಯಂತ ಸುಂದರ ಸ್ತ್ರೀಯು ನಗುತ್ತ ಒಳಗೆ ಬಂದು ವಿನಾಯಕನನ್ನು ಕುರಿತು:- “ ಮೈದುನರೇ, ನಿಜವಾಗಿ ಹೇಳಿರಿ. ಯಾವಾಗಲೂ ಈ ಕಲ್ಲುಮಣ್ಣುಗಳನ್ನು ನೋಡಿ ಯಾವ ವಿಚಾರ ಮಾಡುತ್ತೀರಿ ? ” ಎಂದಳು.
ಬಂದ ಸ್ತ್ರೀಯ ಹೆಸರು ಯಮುನೆ. ಅವಳು ಕೃಷ್ಣರಾಯನ ಹೆಂಡತಿಯು. ಅವಳು ಪ್ರೇಮಲಸ್ವಭಾವದವಳಿದ್ದು, ವಿನಾಯಕನನ್ನು ಬೆನ್ನಿಗೆ ಬಿದ್ದ ತಮ್ಮನಂತೆ ಸಂರಕ್ಷಿಸುತ್ತಿದ್ದಳು. ವಿನಾಯಕನು ಅವಳಲ್ಲಿ ಅತ್ಯಂತ ಶ್ರದ್ಧೆಯುಳ್ಳವನಾಗಿದ್ದನು. ಅವನು ಗಂಭೀರಸ್ವರದಿಂದ ಅಂದದ್ದೇನಂದರೆ:-( ಅತ್ತಿಗೆಯವರೇ, ಇವು ನಿಮಗೆ ಕಲ್ಲುಮಣ್ಣುಗಳಂತಿರುತ್ತವೆ. ಆದರೆ ಇವೇ ನವ ಭಾರತಭೂಮಾತೆಯ ಆಭರಣಗಳು.
• ಬಹುರತ್ನಾ ವಸುಂಧರಾ ” ಎಂಬುವದು ಲೋಕಪ್ರಸಿದ್ದವಾಗಿದೆ. ಈ ರತ್ನ ಗಳು ವಸುಂಧರೆಯ ಗರ್ಭದಲ್ಲಿರುತ್ತವೆ. ಇವುಗಳನ್ನು ಶೋಧಿಸಿ ತೆಗೆಯಬೇಕಾದರೆ ಮಾತೃ ಭೂಮಿಯ ವಿಲಕ್ಷಣ ಸೇವೆಮಾಡಲಿಕ್ಕೆ ಬೇಕು. ವಿಶೇಷತಃ ಹಿಂದುಸ್ತಾನದಂಥ ಪುಣ್ಯಮಯ ಭೂಮಿಯಲ್ಲಿ ಇದ್ದಷ್ಟು ಅಮೂಲ್ಯ ಮತ್ತು ಅದೃಶ್ಯಸಂಪತ್ತು ಇತರ ಯಾವ ಭೂಮಿಯಲ್ಲಿಯೂ ಇರುವದಿಲ್ಲ; ಆದರೂ ಒಳ್ಳೇ ಸುಶಿಕ್ಷಿತ ಜನರು ಕೂಡ ಈ ಸಂಪತ್ತಿಗೆ ಲಕ್ಷಗೊಡುವದಿಲ್ಲ. ಅವರಲ್ಲಿ ಕೆಲವರ ವಿಚಾರ-ವಾದವಿವಾದಗಳಂತೂ ವಿಚಿತ್ರವಾಗಿರುತ್ತವೆ. ಸ್ತ್ರೀಯರು ಜೋಡುಗಳನ್ನು ಮೆಟ್ಟಬೇಕೋ-ಎತ್ತರವಾದ ಬೂಟುಗಳನ್ನು ಮೆಟ್ಟಬೇಕೋ, ಅವರು ಸೀರೆಗಳನ್ನು ಉಡಬೇಕೋ - ಉದ್ದನ ನೀರಿ ಗೆಯ ಅಂಗಿಯನ್ನು ತೊಡಬೇಕೋ... ಎಂಬೀ ಮೊದಲಾದ ವಿಷಯಗಳ ಬಗ್ಗೆ ಇವರು ಹೆಚ್ಚಿನ ವಾದವಿವಾದಗಳನ್ನು ನಡಿಸುತ್ತಿದ್ದು ಹೆಚ್ಚಿನ ವ್ಯಾಸನೇಬಲ ಸ್ತ್ರೀಯರನ್ನು ಪೂಜಿಸಲಿಕ್ಕೂ ಸಿದ್ಧರಾಗಿರುತ್ತಾರೆ. ಈ ಪ್ರಕಾರ ಸರ್ವಸಾಮರ್ಥ್ಯವನ್ನು ನಾರೀ ಪೂಜೆಯಲ್ಲಿ ನಾಶಮಾಡುತ್ತಿರುವ ಇವರು ಹಿಂದುಸ್ತಾನದ ಭೂಮಿಯಲ್ಲಿ ಅಡಗಿರುವ ಸಂಪತ್ತಿನ ಕಡೆಗೆ ಹೇಗೆ ಲಕ್ಷಗೊಟ್ಟಾರು. ! ” ಎಂದನು.
ಆಗ ಯಮುನೆಯು ಕೆಲಹೊತ್ತು ಸುಮ್ಮನೆ ನಿಂತು ಆ ಮೇಲೆ:-( ಸ್ತ್ರೀಯರ ಸಂಬಂಧವಾಗಿ ಈ ಮಾರ್ಗ ಹಿಡಿದ ಜನರಿಗೆಲ್ಲ ಹುಚ ರೆಂದನ್ನಲಿಕ್ಕೆ ಬೇಕಾಯಿತಲ್ಲ !”
೬------------------------------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ.
ವಿನಾಯಕ:- ಅವರು ಹುಚ್ಚರಲ್ಲ. ಒಂದುವೇಳೆ ಅವರು ಹುಚ್ಚರಾಗಿದ್ದರೆ ಇಷ್ಟು ನಮ್ಮ ಭಾರತೀಯ ಪೂರ್ವಸಂಸ್ಕೃತಿಯ ಮಹತ್ವವೇ ಕಡಿಮೆಯಾಗುತ್ತಿದ್ದಿಲ್ಲ. ಅವರು ನಿಜವಾಗಿ ಚತುರರಿದ್ದರೆ ನಮ್ಮ ಭಾರತೀಯ ಸಂಸ್ಕೃತಿಗೆ ಮತ್ತಿಷ್ಟು ಉಜ್ವಲ ಸ್ವರೂಪವು ಪ್ರಾಪ್ತವಾಗುತ್ತಿದ್ದಿತು. ಕುರುಡನ ಕೈಯೊಳಗಿನ ಕಂದೀಲಿನಂತೆ ಇವರ ಶಿಕ್ಷಣದ ಪರಿಣಾಮವಾಗಿದೆ.”
ಈ ಪ್ರಕಾರ ಯಮುನಾ-ವಿನಾಯಕರ ಸಂಭಾಷಣವು ನಡೆದಿರುತ್ತಿರಲು ರಾಜಾ ಸಾಹೇಬನ ದಿವಾಣ ಮಾಧವರಾಯನು ಅಲ್ಲಿಗೆ ಬಂದನು. ಕೂಡಲೆ ಸಂಭಾಷಣವು ಮುಗಿದು ಯಮುನೆಯು ಮನೆಯೊಳಗೆ ಹೊರಟುಹೋದಳು. ವಿನಾಯಕನು ಮಧ ವರಾಯನ ಯಥೋಚಿತ ಸತ್ಕಾರವನ್ನು ಮಾಡಿ ಅವನನ್ನು ಒಂದು ಆರಾಮ ಖುರ್ಚಿಯ ಮೇಲೆ ಕುಳ್ಳಿರಿಸಿದನು. ಮತ್ತು ತಾನು ಅವನ ಹತ್ತಿರವೇ ಒಂದು ಖುರ್ಚಿಯ ಮೇಲೆ ಕುಳಿತು ಮಾತಾಡಹತ್ತಿದನು.
ವಿನಾಯಕ:- ರಾಜಾಸಾಹೇಬರ ಕಡೆಯ ವರ್ತಮಾನವೇನು ? ”
ಮಾಧವ: ವಾರ್ತೆಯು ಮಂಗಲಕರವಾಗಿದೆ. ರಾಜಾಸಾಹೇಬರು ಭೂಮಿ ಯು ಪಡಬಿದ್ದಿರುವದರಿಂದ ಅದನ್ನು ನಿಮಗೆ ತೀರ ಕಡಿಮೆ ಹಣಕ್ಕೆ ಲಾವಣೀ ಕೊಡಲು ಒಪ್ಪಿರುತ್ತಾರೆ. ಆ ಎಲ್ಲ ಭೂಮಿಯು ಗೋದಾವರಿ ನದಿಯ ಆಚೆಕಡೆ ಯಲ್ಲಿರುತ್ತದೆ. ಅಲ್ಲಿ ರಾಮಪುರಗ್ರಾಮವು ಸಾಧಾರಣ ದೊಡ್ಡದಿರುವದರಿಂದ ಆ ಭೂಮಿಯು ರಾಮಪುರದ ಭೂಮಿಯೆಂದೇ ಪ್ರಸಿದ್ದಿಯಾಗಿರುತ್ತದೆ. ಕಾಗದಪತ್ರಗಳಾ
ದರೂ ಆ ಹೆಸರಿನಿಂದಲೇ ಆಗಬೇಕಾಗಿರುತ್ತವೆ.”
ವಿನಾಯಕ:- ( ಆ ಭೂಮಿಯು ಪಡಬಿದ್ದಿರುವದು ನಿಜ; ಆದರೆ ಅದರ ಹೊಟ್ಟೆಯಲ್ಲಿ ಅನೇಕ ಹೆಚ್ಚಿನ ಬೆಲೆಯ ವಸ್ತುಗಳು ಅಡಕವಾಗಿರುತ್ತವೆಂಬುವದನ್ನು ತಾವು ರಾಜಾಸಾಹೇಬರಿಗೆ ಹೇಳಿರುವಿರೇನು ? ೨೨
ಮಾಧವ:- ಹೇಳಿದೆನು, ಆದರೆ ಅದರ ಮೇಲೆ ಅವರ ವಿಶ್ವಾಸವಿಲ್ಲ. ಇರಲಿ. ಅಲ್ಲಿಂದ ತಂದ ಕಲ್ಲು ಮೊದಲಾದವುಗಳನ್ನು ನನಗೆ ತೋರಿಸುವಿರೇನು? ”
( ಆನಂದದಿಂದ ” ಎಂದನ್ನು ವಿನಾಯಕನು ಮಾಧವರಾಯನನ್ನು ಸಂಗಡ ಕರಕೊಂಡು ಬಂದು ದೊಡ್ಡ ಟೇಬಲ್ಲಿನ ಹತ್ತಿರ ಹೋದನು, ಮತ್ತು ಅದರ ಮೇಲಿದ್ದ ಒಂದು ಕಲ್ಲು ತಕ್ಕೊಂಡು:- ಈ ಕಲ್ಲು ರಾಮಪುರದ ಒಂದು ಭಾಗದಲ್ಲಿ ಬಹಳ ವಾಗಿ ಸಿಗುವಂತಿದೆ. ಖನಿಜಶಾಸ್ತ್ರದಲ್ಲಿ ಈ ಕಲ್ಲಿಗೆ ( ವೈಸ ' ಎಂಬ ಹೆಸರು ಅದೆ. ಈ ಕಲ್ಲಿನಿಂದ ಕಬ್ಬಿಣ, ನಿಕಲ್, ತಾಮ್ರಗಳನ್ನು ತೆಗೆಯಬಹುದು. ಈ ಮತ್ತೊಂದು ಕಲ್ಲು ನೋಡಿರಿ, ಇದರ ಹೆಸರು ಪ್ಯಾಂಕಲಿನಾಯಿಟಿ. ಈ ಕಲ್ಲಿನಿಂದ ತವರು ತೆಗೆಯ ಲಿಕ್ಕೆ ಬರುತ್ತದೆ. ಕಬ್ಬಿಣ, ತಾಮ್ರ, ತವರು, ನಿಕಲ್ ಮೊದಲಾದ ಧಾತುಗಳು ಭರತ
೭---------------------------------------------------------------೧ನೆಯ ಪ್ರಕರಣ ಬುದ್ಧಿ: ಕರ್ಮಾನುಸಾ ಣಿ ! |
ಖಂಡದಲ್ಲಿ ವಿಪುಲವಾಗಿ ಸಿಗಹತ್ತಿದರೆ ನಮ್ಮ ದೇಶಕ್ಕೆ ಬಹಳ ಕಲ್ಯಾಣವಾಗು ವಂತಿದೆ, ”
ಎಂಬದಾಗಿ ಈ ಮೊದಲಾದ ಅಲ್ಲಿದ್ದ ಎಲ್ಲ ಕಲ್ಲುಗಳ ವಿಷಯಕ್ಕೆ ವಿಸ್ತಾರವಾದ ಮಾಹಿತಿಯನ್ನು ಹೇಳಿ ಅವನು ಆ ಕಲ್ಲುಗಳಿಂದ ಧಾತುಗಳನ್ನು ತೆಗೆಯಲಿಕ್ಕೆ ಉಪಯು ಕವಾದ ತಾನು ಸಿದ್ಧ ಮಾಡಿಟ್ಟ ತರತರದ ಯಂತ್ರಗಳ ನಮೂನೆಗಳನ್ನು ತೋರಿಸಿ ದನು. ಆಗ ವಿನಾಯಕನ ಬುದ್ದಿ ಸಾಮರ್ಥ್ಯದ ಸಲುವಾಗಿ ಮಾಧವರಾಯನಿಗೆ ಒಳ್ಳೆ ಆಶ್ಚರ್ಯವಾಯಿತು. ಇಷ್ಟರಲ್ಲಿ ನಾಯಂಕಾಲವಾಯಿತು. ಆಗ ವಿನಾಯಕನು ದೀವಿಗೆಯನ್ನು ಹಚ್ಚಿ ಉಳಿದ ಅಲ್ಪಸ್ವಲ್ಪ ಸಂಗತಿಯನ್ನು ಮಾಧವರಾಯನಿಗೆ ಹೇಳಿ ದನು. ಆ ಎಲ್ಲ ವಿಷಯಪರಿಚಯ ಮಾಡಿಕೊಟ್ಟ ಬಗ್ಗೆ ಮಾಧವರಾಯನು ವಿನಾ ಯಕನ ಆಭಾರ ಮನ್ನಿಸಿ ಅವನ ಅಪ್ಪಣೆಯನ್ನು ತಕ್ಕೊಂಡು ಹೊರಟುಹೋದನು. ಅವನು ಹೋದಮೇಲೆ ವಿನಾಯಕನು ಆರಾಮಖುರ್ಚಿಯ ಮೇಲೆ ಕುಳಿತು ತಿರುಗಿ ತನ್ನ ವ್ಯವಸಾಯದ ಬಗ್ಗೆ ಆಲೋಚಿಸಹತ್ತಿದನು. ಸ್ವಲ್ಪಾವಧಿಯಲ್ಲಿ ಓಡುತ್ತ ಒಬ್ಬ ಮನುಷ್ಯನು ವಿನಾಯಕನ ಕೋಣೆಯಲ್ಲಿ ಬಂದು ಭೀತಸ್ವರದಿಂದ:-( ತಮ್ಮ ಹೆಸರು ವಿನಾಯಕರಾಯರೇನು ? ೨೨
ವಿನಾಯಕ:- ( ಭಯಚಕಿತನಾಗಿ ) ಹೌದು. ನಿಮ್ಮ ಕೆಲಸವೇನು ? ೨೨
ಬಂದವ:- ಏಳಿರಿ, ಏಳಿರಿ, ಬೇಗನೆ ನನ್ನ ಸಂಗಡ ಬರಿ ನಿಮ್ಮ ಮೇಲೆ ದೊಡ್ಡ ಸಂಕಟವು ಬಂದಿರುತ್ತದೆ. ”
ವಿನಾಯಕ:- ನಾನು ಎದ್ದೆನು; ಆದರೆ ಅಂಥ ಕಠಿಣ ಪ್ರಸಂಗವೇನು ? ”
ಬಂದವ:-( ತಾವು ಸುಮ್ಮನೆ ಇಲ್ಲಿ ವೇಳೆಯನ್ನು ಕಳೆಯಬೇಡಿರಿ. ನಾನು ಹಾದಿಯಲ್ಲಿ ನಿಮಗೆ ಎಲ್ಲ ಸಂಗತಿಯನ್ನು ಹೇಳುತ್ತೇನೆ. ಲಗು ನಡೆಯಿರಿ. ಹೊರಗೆ ಗಾಡಿಯು ನಿಂತಿರುತ್ತದೆ.”
ವಿನಾಯಕ:- ( ತ್ವರೆಯಿಂದ ಡೇಸು ಹಾಕಿಕೊಂಡು ) ತಮ್ಮ ಹೆಸರೇನು ? ಮತ್ತು ತಾವು ಇಷ್ಟು ಯಾಕೆ ಗಾಬರಿಯಾಗಿದ್ದೀರಿ? ನನ್ನ ಮೇಲೆ ಬಂದ ಸಂಕಟ ವೇನು ? ೨)
ಬಂದವ:- ( ತ್ವರೆಯನ್ನು ತೋರಿಸುತ್ತ ) ನಾನು ತಮಗೆಲ್ಲ ಹೇಳುವೆನು. ತಾವು ಮೊದಲು ನನ್ನ ಸಂಗಡ ಹೊರಡಿರಿ. ಒಂದು ಪ್ಲೇ ಸ್ಟೋರಿಯಾ ಗಾಡಿಗೆ ಟ್ರಾಮದ ಧಕ್ಕೆ ತಗಲಿದ್ದರಿಂದ ತಮ್ಮ ಬಂಧು ಕೃಷ್ಣರಾಯನು ಆ ಗಾಡಿಯ ಮೇಲಿಂದ ಬಿದ್ದು ಎಚ್ಚರದಪ್ಪಿರುತ್ತಾನೆ. ನನ್ನ ಹೆಸರು ಗೋಪಾಳರಾಯ, ನಾನು ಶ್ಯಾಮರಾಯರೆಂಬ ಒಬ್ಬ ಸಧನಗೃಹಸ್ಥರ ನವಕರನು. ಅವರೂ, ನಾನೂ ಕೂಡಿ ಬೀದಿಯಲ್ಲಿ ಹೋಗು ತಿದ್ದೆವು. ಇಷ್ಟರಲ್ಲಿ ಮೇಲಿನ ದುರ್ಘಟ ಪ್ರಸಂಗವನ್ನು ಕಣ್ಣಾರೆ ಕಂಡದ್ದರಿಂದ
೮-----------------------------------------------------------ದಿ ಸು೦ದ, ಅಥವಾ ದೀರ್ಘ ಪ್ರಯತ್ನ,
ಶಾಮರಾಯರು ನನ್ನನ್ನು ತಮ್ಮ ಕಡೆಗೆ ಕಳಿಸಿದರು. ಅವರ ಮಾತಿನ ಮೇಲಿಂದ ಅವರು ಕೃಷ್ಣರಾಯನ ಜೀವದ ಗೆಳೆಯರಿರಬಹುದಾಗಿ ತೋರುತ್ತದೆ ?
- ಗೋಪಾಳರಾಯನ ಈ ಮಾತುಗಳನ್ನು ಕೇಳಿ ವಿನಾಯಕನ ಅಂತಃಕರಣವು ಕಳವಳಗೊಂಡಿತು. ಕೂಡಲೆ ಅವನು ಮನೆಯಿಂದ ಹೊರಬಿದ್ದನು. ಹೋಗುವ ಕಾಲಕ್ಕೆ ಯಮುನೆಗೆ ಎಲ್ಲ ವಾರ್ತೆಯನ್ನು ತಿಳಿಸಿ ಹೋಗಬೇಕೆಂದು ಅವನಿಗೆ ತೋರಿ ತು. ಆದರೆ ಬಂದ ಮನುಷ್ಯನು ಒಳ್ಳೆ ತ್ವರೆಯನ್ನು ತೋರಿಸಿದ್ದರಿಂದಲೂ, ಸ್ವತಃ ತಾನು ಆ ದುಃಖಕಾರಕ ವಾರ್ತೆಯಿಂದ ಹತಬುದ್ಧನಾದದ್ದರಿಂದಲೂ ಅವನು ವಿಶೇಷ ವಿಚಾರಮಾಡದೆ ಕೂಡಲೆ ಆ ಮನುಷ್ಯನೊಡನೆ ಗಾಡಿಯಲ್ಲಿ ಹೋಗಿ ಕುಳಿತನು. ಆ ಇಬ್ಬರು ಕೂಡುತ್ತಲೇ ಗಾಡಿಯು ವೇಗದಿಂದ ಹೊರಟುಹೋಯಿತು.
೨ನೆಯ ಪ್ರಕರಣ.
ಇಂದಿರೆಯ ಆತ್ಮನಿವೇದನ ! ತ್ರಿಯ ಸಮಯ. ಎಂಟು ಎಂಟೂವರಿ ಆಗಿರಬಹುದು, ಆ ವೇಳೆಯಲ್ಲಿ ಮುಂಬಯಿಯಂಥ ದೊಡ್ಡ ಪಟ್ಟಣದಲ್ಲಿ ಜನಸಂದಣಿಯನ್ನು ಬಣ್ಣಿಸು ವದೇನದೆ ! ಆ ಜನಸಂದಣಿಯೊಳಗಿಂದ ವಿನಾಯಕನ ಗಾಡಿಯು
ಮೆಲ್ಲಮೆಲ್ಲನೆ ಹೋಗುತ್ತಿದ್ದಿತು. ಆಗ ವಿನಾಯಕನ ಶರೀರವು ಮಾತ್ರ ಗಾಡಿಯಲ್ಲಿ ಕುಳಿತಿದ್ದಿತು. ಅವನ ಮನಸ್ಸು ಕೃಷ್ಣರಾಯನ ಕಡೆಗೆ ಹೋಗಿದ್ದಿತು. ನಡುನಡುವೆ ಅವನು ಗೋಪಾಳರಾಯನಿಗೆ ಕೃಷ್ಣರಾಯನ ಸಂಬಂಧವಾಗಿ ಪ್ರಶ್ನೆ ಮಾಡುತ್ತಿದ್ದನು; ಆದರೆ ಗೋಪಾಳರಾಯನಿಂದ ತಿಳಿಯುತ್ತಿದ್ದ ಸಂಗತಿಯು ಅಸಮಾ ಧಾನಕಾರವೂ, ಚಿಂತೆಯನ್ನು ಹೆಚ್ಚಿಸುವದೂ ಆದದ್ದರಿಂದ ಅವನು ಗೋಪಾಳರಾಯ ನಿಗೆ ಹೆಚ್ಚು ಪ್ರಶ್ನೆಗಳನ್ನೂ ಮಾಡಲಿಲ್ಲ. ಗಾಡಿಯು ಅನಂತ ಬೀದಿಗಳನ್ನು ದಾಟಿ ಕಡೆಗೆ ಒಂದು ಸಣ್ಣ ಗಲ್ಲಿಯನ್ನು ಹೊಕ್ಕು ಮೂಲೆಯೊಳಗೆ ಒತ್ತಟ್ಟಿಗಿದ್ದ ಸಣ್ಣ ದುಮ ಜಲೀ ಬಂಗಲೆಯ ಹತ್ತಿರ ಬಂದು ನಿಂತಿತು. ಗಾಡಿಯು ನಿಲ್ಲುತ್ತಲೇ ಗೋಪಾಳ ರಾಯನು ವಿನಾಯಕನನ್ನು ಕರಕೊಂಡು ಆ ಬಂಗಲೆಯೊಳಗೆ ಹೋದನು.
ಆ ಬಂಗಲೆಯು ಸಣ್ಣದಿದ್ದರೂ ಚಿತ್ತಾಕರ್ಷಕವಾಗಿದ್ದಿತು. ಅದರ ಸುತ್ತಲೂ ಒಂದು ಮನೋಹರವಾದ ತೋಟವಿದ್ದಿತು. ಅದರ ಎಲ್ಲ ಭಾಗದಲ್ಲಿಯೂ ವಿದ್ಯುದ್ದೀಪಿ
೯-------------------------------------------೨ನೆಯ ಪ್ರಕರಣ- . ಇ೦ದಿರೆಯ ಆತ್ಮ ನಿವೇದನ !
ಕೆಗಳು ಮಿನುಗುತ್ತಿದ್ದವು, ಉಪ್ಪರಿಗೆಯ ಮೇಲೆ ವಿದ್ಯುಲ್ಲತೆಯ ಪಂಖಗಳು ಗರಗರ ತಿರುಗುತ್ತಿದ್ದವು. ಗೋಪಾಳರಾಯನು ವಿನಾಯಕನನ್ನು ಆ ಉಪ್ಪರಿಗೆಯಿಂದ ಈ ಉಪ್ಪರಿಗಿಗೆ ಈ ಉಪ್ಪಿರಿಗೆಯಿಂದ ಆ ಉಪ್ಪರಿಗಿಗೆ ಕರಕೊಂಡು ಹೋಗುತ್ತ ಮಧ್ಯ ಭಾಗದಲ್ಲಿದ್ದ ಒಂದು ವಿಶಾಲವಾದ ಉಪ್ಪರಿಗೆಯಲ್ಲಿ ಕರಕೊಂಡು ಹೋಗಿ ಒಂದು ಆರಾಮ ಖುರ್ಚಿಯ ಮೇಲೆ ಕೂಡ್ರಿಸಿದನು. ನಂತರ ಅವನು ವಿನಾಯಕನ ಕಡೆಗೆ ಏನೋ ಚಮತ್ಕಾರಿಕ ದೃಷ್ಟಿಯಿಂದ ನೋಡಹತ್ತಿದನು. ಆಗ ವಿನಾಯಕನು ಅವನಿಗೆ ( ಅಣ್ಣನೆಲ್ಲಿ ? ' ಎಂದು ಪ್ರಶ್ನೆ ಮಾಡಿದನು. ಕೃಷರಾಯನಿಗೆ ಒಳಗೆ ಎಲ್ಲಿಯೋ ಮಲಿ ಗಿಸಿದ್ದು, ಡಾಕ್ಟರನ ಉಪಚಾರ ನಡೆದಿರುವದಾಗಿ ವಿನಾಯಕನಿಗೆ ತೋರಿತು. ಅವನು ಮೇಲಿನ ಪ್ರಶ್ನವನ್ನು ಎಷ್ಟು ಕಳಕಳಿಯಿಂದ ಮಾಡಿದ್ದಾನೆಂಬುವದನ್ನು ಬೇರೆ ಹೇಳ ಬೇಕಾಗಿಲ್ಲ. ಆ ಪ್ರಶ್ನೆ ಕ್ಕೆ ಉತ್ತರವನ್ನು ಕೊಡುವಾಗ ಗೋಪಾಳರಾಯನ ಮುಖ ಮುದ್ರೆಯ ಮೇಲೆ ಹರ್ಷರೇಖೆಯು ಕಾಣಿಸಿತು. ಅವನು ಆಗ:-( ನಿಲ್ಲಿರಿ. ತಾವು ಸ್ವಸ್ಥ ಕೂಡ್ತಿರಿ. ಈ ಪ್ರಶ್ನೆ ಕ್ಕೆ ಉತ್ತರವನ್ನು ಶಾಮರಾಯರು ಕೊಡುತ್ತಾರೆ. ” ಎಂದ
ನ್ನು ತ ದಿವಾಣಖಾನೆಯ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಂಡು ಹೊರಟುಹೋದ ನು. ಇದನ್ನೆಲ್ಲ ನೋಡಿ ವಿನಾಯಕನು ಆಶ್ಚರ್ಯಚಕಿತನಾದನು. ಅವನಿಗೆ ಇದೇನು ಗೊಂದಲವೆಂಬುವದು ತಿಳಿಯಲಿಲ್ಲ. ಅವನು ಆ ಸಂಬಂಧವಾಗಿ ವಿಚಾರ ಮಾಡುತ್ತಿ ರುವಷ್ಟರಲ್ಲಿ ದಿವಾಣಖಾನೆಯ ಬಾಗಿಲು ತೆರೆದು, ಇಬ್ಬರು ಒಳಗೆ ಬಂದರು. ಅವರಲ್ಲಿ ಒಬ್ಬನು ನಮ್ಮ ವಾಚಕರಿಗೆ ಪರಿಚಯವಿದ್ದ ಗೋಪಾಳರಾಯನು. ಇನ್ನೊಬ್ಬನು ಶಾಮರಾಯನು, ಒಳಗೆ ಬರುವಾಗ ಶಾಮರಾಯನು ಬಾಗಿಲು ಹಾಕಿಕೊಳ್ಳುವದರ ಸಲುವಾಗಿ ತಕ್ಕ ವ್ಯವಸ್ಥೆಯನ್ನು ಮಾಡಿ ಬಂದಿದ್ದನು. ಶಾಮರಾಯನು ಬಂದ ಕೂಡಲೆ ವಿನಾಯಕನು ಶಾಮರಾಯನನ್ನು ಕುರಿತು:- ನಮ್ಮ ಅಣ್ಣನೆಲ್ಲಿ? ಇನ್ನೂ ನನಗೆ
ಯಾಕೆ ಆತನ ದರ್ಶನ ಮಾಡಿಸುವದಿಲ್ಲ ? ” ಎಂದನು.
ಒಂದು ಸಾದಾ ಖುರ್ಚೆಯನ್ನು ಎಳಕೊಂಡು ಶಾಮರಾಯನು ವಿನಾಯಕನ ಹತ್ತಿರ ಕುಳಿತು ಅಂದದ್ದೇನಂದರೆ:- ಈ ಗೋಪಾಳನು ನಿಮಗೆ ಸುಳ್ಳು ಹೇಳಿದನು. ಈ ಬಗ್ಗೆ ನನ್ನನ್ನು ಕ್ಷಮಿಸಿರಿ. ನಿಮ್ಮ ಅಣ್ಣಂದಿರಿಗೆ ಅಚಾರಿ ಮೊದಲಾದದ್ದೇನೂ ಇಲ್ಲ. ಇವನು ನಿನ್ನ ಅಣ್ಣಂದಿರ ಸಂಬಂಧವಾಗಿ ಹೇಳಿದ ಸಂಗತಿಯೆಲ್ಲ ಸುಳ್ಳಿರುವದು. ನನಗೆ ಈ ಸಂಬಂಧವಾಗಿ ಬಹಳ ಕೆಡಕೆನಿಸಿತು. ನಾನು ನಿಮ್ಮನ್ನ ಹೈ ಕರಕೊಂಡು ಬರಲಿಕ್ಕೆ ಹೇಳಿದ್ದೆನು. ಇರಲಿ, ನೀವು ಬಂದದ್ದಕ್ಕೆ ನಿಮ್ಮ ಅಭಾರವನ್ನು ಎಷ್ಟು ಮನ್ನಿಸಿದರೂ ಸ್ವಲ್ಪ ಸರಿ. ”
'ಶಾಮರಾಯನ ಮಾತನ್ನು ಕೇಳಿ ವಿನಾಯಕನಿಗೆ ಅವರಿಬ್ಬರ ಸಂಬಂಧವಾಗಿ ಬಹಳ ಸಿಟ್ಟು ಬಂದಿತು, ಆದರೂ ಅಣ್ಣನ ಖೇದಕಾರಕ ವಾರ್ತೆಯು ಅಸತ್ಯವಾದ ದೈ೦ಬವದನ್ನು ಕೇಳಿ ಒಂದು ರೀತಿಯಿಂದ ಅವನಿಗೆ ಆನಂದವಾದದ್ದರಿಂದ ಅವನು
೧೦------------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ.
ಕ್ರೋಧಪ್ರದರ್ಶನಮಾಡದೆ ಸ್ವಲ್ಪ ತಿರಸ್ಕಾರದಿಂದ:-( ಈ ಪ್ರಕಾರವಾಗಿ ನನ್ನನ್ನು
ವಂಚಿಸಿ ಇಲ್ಲಿಗೆ ಕರಕೊಂಡು ಬಂದ ಉದ್ದೇಶವಾದರೂ ಯಾವದು? ??
ಶ್ಯಾಮರಾಯ:- ಎರಡನೇ ಉದ್ದೇಶವೇನೂ ಇಲ್ಲ, ಒಂದು ತೀರ ಕುಲ್ಲಕ ಕಾರ್ಯದ ಸಲುವಾಗಿ ನಾನು ನಿಮ್ಮನ್ನು ಇಲ್ಲಿಗೆ ಕರಿಸಿರುವೆನು. ನನ್ನ ಕಡೆಗೆ ಒಂದು ಕಾಗದವಿರುತ್ತದೆ. ಆ ಕಾಗದದ ಮೇಲೆ ನಿಮ್ಮ ಸಹಿ ಬೇಕಾಗಿದೆ. ”
ವಿನಾ:- ( ಕ್ರೋಧಾಶ್ಚರ್ಯಗಳಿಂದ ) ನನ್ನ ಸಹಿ? ಅದು ಯಾತಕ್ಕೆ? ಕಾಗದವನ್ನು ನೋಡಿದ ಹೊರ್ತು ನಾನು ಸಹಿ ಮಾಡುವದಿಲ್ಲ. ”
ಶಾಮ:-( ತಾವು ಅಗತ್ಯವಾಗಿ ಕಾಗದವನ್ನು ನೋಡಿರಿ. ಆ ಸಂಬಂಧ ವಾಗಿ ನನ್ನದೇನೂ ಅಡ್ಡಿಯಿಲ್ಲ. ಏನೋ ಕೆಟ್ಟ ಉದ್ದೇಶದ ಸಲುವಾಗಿ ನಾನು ತಮ್ಮ ಸಹಿ ಬೇಡುತ್ತೇನೆಂದು ತಿಳಿಯಬೇಡಿರಿ. ” ಹೀಗನ್ನುತ್ತ ಅವನು ಗೋಪಾಳನ ಕೈಯ ಇದ್ದ ಕಾಗದವನ್ನು ಇಸುಕೊಂಡು ಅದನ್ನು ವಿನಾಯಕನ ಕೈಯಲ್ಲಿ ಕೊಟ್ಟನು.
ಮೊದಲು ಆ ಕಾಗದವನ್ನು ಓದಿನೋಡಿ ನಂತರ ನಿಶ್ಚಯಿಸಬೇಕಾದದ್ದನ್ನು ನಿಶ್ಚ ಯಿಸಬೇಕಾಗಿ ವಿನಾಯಕನು ಆಲೋಚಿಸಿದ್ದನು, ಆದರೆ ಆ ಕಾಗದವು ತನ್ನ ಕೈಯಲ್ಲಿ ಬರುತ್ತಲೇ ಆ ಕಾಗದವನ್ನು ಓದಿನೋಡುವ, ಅದರ ಮೇಲೆ ಸಹಿ ಮಾಡುವ ಕಾರಣ ವಿಲ್ಲೆಂದು ಮನಸ್ಸಿನಲ್ಲಿ ಹುಟ್ಟಿದ್ದರಿಂದ ಅವನು ಆ ಕಾಗದವನ್ನು ಹಾಗೆಯೇ ಶಾಮ ರಾಯನ ಕೈಯಲ್ಲಿ ತಿರುಗಿ ಕೊಟ್ಟು:-ಕಾಗದದಲ್ಲಿ ಯಾವ ಸಂಗತಿಯೇ ಇರಲಿ. ನಾನು ಅದನ್ನು ಓದುವದೂ ಇಲ್ಲ, ಮತ್ತು ಅದರ ಮೇಲೆ ಸಹಿಯನ್ನೂ ಮಾಡುವ ದಿಲ್ಲ. ” ಎಂದನ್ನಲು ಶಾಮರಾಯನು ಆಶ್ಚರ್ಯದಿಂದ:- ಇದೇನು ವಿನಾಯಕ ರಾಯ ! ನಾವು ಒಳ್ಳೆ ಶಿಕ್ಷಿತರೆಂದು ನೀವು ಅನ್ನು ವದೇನು, ನಿಮ್ಮಲ್ಲಿ ಇಷ್ಟು ಧೈರ್ಯವು ಕೂಡ ಇಲ್ಲವೆಂಬುವದೇನು? ಮೊದಲು ಆ ಕಾಗದವನ್ನು ಓದಿಯಾದರೂ ನೋಡಿರಿ.” ಎಂದನ್ನು ತಿರುಗಿ ಆ ಕಾಗದವನ್ನು ವಿನಾಯಕನ ಕೈಯಲ್ಲಿ ಕೊಟ್ಟನು. ಆ ಕಾಗದದ ಮೇಲೆ ಸಹಿ ಮಾಡಲಿಕ್ಕಿಲ್ಲವೆಂದು ವಿನಾಯಕನು ನಿಶ್ಚಯಿಸಿದ್ದರೂ, ಆ ಕಾಗದದಲ್ಲಿ ಬರೆದಿರುವದಾದರೂ ಏನು ನೋಡಬೇಕೆಂದು ಅವನಿಗೆ ಸಾಹಜಿಕ ಜಿಜ್ಞಾಸೆಯುತ್ಪನ್ನ ವಾಗಿ ಕೂಡಲೆ ಆ ಕಾಗದವನ್ನು ಓದಲಿಕ್ಕೆ ಆರಂಭಿಸಿದನು. ಅವನು ನಾಲ್ಕಾರು ಸಾಲುಗಳನ್ನು ಓದುತ್ತಲೇ ಅವನ ಗೌರವರ್ಣದ ಮುದ್ರೆಯು ಕ್ರೋಧದಿಂದ ಕೆಂಪಾ ಯಿತು. ಅವನು ಕೈಯಲ್ಲಿದ್ದ ಕಾಗದವನ್ನು ಮುದುಡಿ ದೂರ ಚಲ್ಲಿ ಸಂತಾಪದಿಂದ: * ಇದೇನು? ಇದು ಬೊಟ್ಟಿ ಮೃತ್ಯು ಪತ್ರವು! ಇದರ ಮೇಲೆ ನಾನು ಸಹಿಯನ್ನು ಮಾಡಬೇಕೇ ? ” ಎಂದನು.
ವಿನಾಯಕನ ಈ ರಾಗವನ್ನು ನೋಡಿ ಗೋಪಾಳ-ಶಾಮರಾಯರು ಬಿದಿಖಿದಿ ನಕ್ಕರು. ನಂತರ ಒಳ್ಳೆ ಗಂಭೀರಸ್ವರದಿಂದ ಶಾಮರಾಯ: ವಿನಾಯಕರಾಯ,
೧೧-------------------------------------------೨ನೆಯ ಪ್ರಕರಣ- ಇಂದಿರೆಯ ಆತ್ಮ ವೇದನ !
ಅಶಿಕ್ಷಿತ.ಸುಶಿಕ್ಷಿತ ಈ ಶಬ್ದಗಳಲ್ಲಿರುವ ತಾರತಮ್ಯವನ್ನು ಇತ್ತಕಡೆಗೆ ತಿಳಕೊಳ್ಳುವದು ಬಹಳ ಕಠಿಣವಾಗಿದೆ. ಅಶಿಕ್ಷಿತರಿಂದ ಸ್ತ್ರೀಯರ ಸಲುವಾಗಿ ಆಗುವ ಉಪೇಕ್ಷೆಯು ಸುಶಿಕ್ಷಿತರಾದ ನಿಮ್ಮಂಥವರಿಂದಲೂ ಆಗಬೇಕೇ? ಈ ಮೃತ್ಯು ಪತ್ರವು ಬೊಟ್ಟಿಯದೆ ಎಂಬುವದು ಮೇಲೇ ತೋರುತ್ತದೆ. ಆದದ್ದರಿಂದಲೇ ಅದರ ಮೇಲೆ ನಿಮ್ಮ ಸಹಿ ಯನ್ನು ಬೇಡುತ್ತೇನೆ. ನಿಮ್ಮ ಸಹಿಯಿಂದ ಅನಾಥಳಾದ ಒಬ್ಬ ಸ್ತ್ರೀಯ ಮೇಲೆ ನಿಮ್ಮ ಉಪಕಾರವು ಎಷ್ಟಾಗುತ್ತದೆಂಬುವದನ್ನು ನೀವು ವಿಚಾರಮಾಡಿದಿರೇನು? ಆ ಸ್ತ್ರೀಯು ತರುಣಿಯಿದ್ದು ವಿಧವೆಯಾಗಿರುವಳು. ಅವಳ ಸರ್ವ ಆಯುಷ್ಯವು ವ್ಯರ್ಥವಾಗಿ ಹೋಗುತ್ತದೆ. ಇಂಥ ಸ್ತ್ರೀಯ ಸಂರಕ್ಷಣೆಯ ಸಲುವಾಗಿ ಮೊಟ್ಟ ಮೃತ್ಯು ಪತ್ರವನ್ನು ಸ್ಥಾಪಿಸುವದು ಪಾಪವಲ್ಲದಿದ್ದು, ಪುಣ್ಯಾಂಶವೇ ಆಗಿರುವದು. ಈ ಪರಹಿತಕಾರ್ಯಕ್ಕೆ ನೀವಷ್ಟು ಸಹಿಮಾಡಲಿಕ್ಕೆ ಹೆದರಿದರೆ ನಿಮ್ಮಿಂದ ಮುಂದೆ ದೇಶದ ಯಾವ ಕಲ್ಯಾಣ
ವಾಗುವದೋ ಏನೋ ” ಎಂದನು.
ಶಾಮರಾಯನ ಈ ಪರೋಪಕಾರ-ಪುಣ್ಯ ಕಾರ್ಯಗಳ ವ್ಯಾಖ್ಯೆಯನ್ನು ಕೇಳಿ ವಿನಾಯಕನ ಮನಸ್ಸು ಸಂತಾಪಗೊಂಡಿತು. ತಾನು ಒಳ್ಳೆ ನೀಚರ ಕೈಯಲ್ಲಿ ಸಿಕ್ಕೆ ನೆಂದು ಅವನಿಗೆ ತೋರಹತ್ತಿತು. ಅವನು ಪೂರ್ವವತ್ ರಾಗದಿಂದ:- 7 ಆ ಸ್ತ್ರೀಯ ಉದರಂಭರಣದ ಸಲುವಾಗಿ ಅನೇಕ ಸದುದ್ಯೋಗಗಳಿರುತ್ತಿರಲಿಕ್ಕೆ ಇಂಥ ನಿಂದ್ಯಕಾ ರ್ಯಕ್ಕೆ ಕೈ ಹಾಕಿರುವ ಉದ್ದೇಶವೇನೋ ಯಾರಿಗೆ ಗೊತ್ತು! ಇರಲಿ. ಆ ಸಂಬಂಧ ನನ್ನ ಕರ್ತವ್ಯವಲ್ಲ. ನಿಷ್ಕಾರಣ ತೊಂದರೆಗೊಟ್ಟು ನೀವು ನನ್ನನ್ನು ಇಲ್ಲಿಗೆ ಕರಿಸಿದಿರಿ. ಈಗ ಕೃಪೆಮಾಡಿ ನನಗೆ ಮನೆಗೆ ಹೋಗುವಂತೆ ಮಾಡಿರಿ ” ಹೀಗನ್ನುತ್ತ ಖರ್ಚೆ ಯನ್ನು ಬಿಟ್ಟಿದ್ದನು. ಮತ್ತು ಹೊರಗೆ ಹೋಗುವದಕ್ಕಾಗಿ ತಾನು ಬಂದ ಬಾಗಿಲಿನ ಹತ್ತಿರ ಹೋದನು, ಆದರೆ ಬಾಗಿಲು ಮುಚ್ಚಿದ್ದನ್ನೂ, ಶಾಮರಾಯ-ಗೋಪಾಳರು ಸ್ವಸ್ಥ ತಂತಮ್ಮ ಖುರ್ಚಿಯ ಮೇಲೆ ಕುಳಿತದ್ದನ್ನೂ ನೋಡಿ ಅವನು ಸಂತಾಪದಿಂದ: (( ಶಾಮರಾಯ, ಬಾಗಿಲು ತೆರೆಯಿರಿ. ನಾನು ಹೋಗುವೆನು. ಈ ಮನೆಯೆಂದರೆ ಸುಶಿಕ್ಷಿತ ವಂಚಕರ ಕೇಂದ್ರಸ್ಥಾನವು ! ಈ ಸಂಗತಿಯು ನನಗೆ ಮೊದಲೇ ಗೊತ್ತಾಗಿ ದ್ದರೆ ನಾನು ಇಲ್ಲಿಗೆ ಬರುತ್ತಿದ್ದಿಲ್ಲ.”
ಶಾಮರಾಯ:- ( ( ವಿನಾಯಕನ ಹತ್ತಿರ ಹೋಗಿ ನಗುತ್ತ ) ವಿನಾಯಕ ರಾಯ, ತಮಗೆ ಮನೆಗೆ ಹೋಗುವ ಇಚ್ಚೆಯಿದ್ದರೆ ಈ ಕಾಗದದ ಮೇಲೆ ಸಹಿ ಮಾಡಿರಿ, ಸಹಿಮಾಡಿದ ಹೊರ್ತು ಇಲ್ಲಿಂದ ನಿಮಗೆ ಬಿಡುಗಡೆಯಾಗಲಾರದು. ನಿಮ್ಮ ಪಾಪಪುಣ್ಯಗಳ ವ್ಯಾಖ್ಯೆಯು ಹೇಗದೆಯೋ ನನಗೆ ತಿಳಿಯಲೊಲ್ಲದು. ಒಬ್ಬ ಅನಾಥ ಸ್ತ್ರೀಯ ಸಲುವಾಗಿ ಕೈಯಿಂದ ಹಣಕೊಡುವದು ಒತ್ತಟ್ಟಿಗಿರಲಿ, ಸುಮ್ಮನೆ ಸಹಿ ಮಾಡುವದೇ ನಿಮಗೆ ಪಾಸಮಯವಾಗಿ ತೋರುತ್ತದೆ. ಈ ಕಾಗದದ ಮೇಲೆ ಸಹಿ
-೧೨-----------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ಮಾಡಲಿಕ್ಕೆ ಹೇಳುವ ನಾವು, ನಿಮಗೆ ವಂಚಕರಾಗಿ ತೋರುತ್ತೇವೆ. ನೀವು ಗ್ರಾಜು ಯೇಟರಿದ್ದಂತೆ ನಾನೂ ಇರುತ್ತೇನೆ. ಅಂದಮೇಲೆ ನೀವು ನನಗೆ ವಂಚಕನೆಂದು ಅನ್ನು ವದು ಸರ್ವಥಾ ಅನ್ಯಾಯವಾಗಿದೆ. ”
ವಿನಾ:- ( ಸಂತಾಪದಿಂದ ) ಒಂದು ಸಾರೆ ಯಾಕೆ ? ನೂರಾರು ಸಾರೆ ಅಂದೇನು ? ಗ್ರಾಜುಯೇಟರಿಗೆ ಮೋಸಮಾಡುವ ಸನದುಗಳನ್ನು ಯಾರೂ ಕೊ ಟಿಲ್ಲ! ಅಥವಾ ಅವರು ಮಾಡುವ ಪ್ರತಿಯೊಂದು ನಿಂದ ಕೃತ್ಯಗಳು ಒಳ್ಳೆಯವಿರಲಿಕ್ಕೆ ಬೇಕೆಂದು ಈಶ್ವರನ ಆಜ್ಞೆಯಿಲ್ಲ. ಮೊಟ್ಟ ಮೃತ್ಯು ಪತ್ರವನ್ನು ಮಾಡುವದು ಪುಣ್ಯ ಕೃತ್ಯವೆಂದು ನಿಶ್ಚಯವಾದರೆ, ಪುಣ್ಯ ಸಂಚಯಕ್ಕಾಗಿ ಬೀದಿಬೀದಿಯಲ್ಲಿ ಮೀನಿಗಳು ಆದಾವು ! ”
ಶಾಮರಾಯನು ವಿನಾಯಕನ ಮಾತುಗಳನ್ನು ಶಾಂತಚಿತ್ತದಿಂದ ಕೇಳುತ್ತಿ ದ್ದನು. ಉತ್ತರವನ್ನೂ ಶಾಂತರೀತಿಯಿಂದ ಕೊಡುತ್ತಿದ್ದನು; ಆದರೆ ಇಷ್ಟರ ಮೇಲಿಂದ ಆ ಮೂರ್ತಿಯು ಶಾಂತಮೂರ್ತಿಯೆಂದು ಯಾರೂ ತಿಳಿಯುವ ಕಾರಣವಿಲ್ಲ. ಶಾಮ ರಾಯನು ತಾನು - ಗ್ರಾಜುಯೇಟ ' ಇದ್ದೆನೆಂದು ವಿನಾಯಕನಿಗೆ ಈ ಪೂರ್ವದಲ್ಲಿ ಹೇಳಿದ್ದು ವಾಚಕರ ಸ್ಮರಣೆಯಲ್ಲಿರುವದಷ್ಟೆ? ಅವನು ಕಾಯಿದೆಯ ಅಭ್ಯಾಸಮಾಡಿ ಎಲ್ ಎಲ್., ಬಿ. ಆಗಿದ್ದನು. ಮತ್ತು ಒಂದು ಕೋರ್ಟಿನಲ್ಲಿ ಅವನು ವಕೀಲಕಿ ಕೆಲ ಸವನ್ನು ಮಾಡುತ್ತಿದ್ದನು; ಆದರೆ ಸ್ವಲ್ಪ ಶ್ರಮದಲ್ಲಿ ಅಪಾರ ಧನ ಸಂಪಾದಿಸುವ ಮೊಟ್ಟ ಮೃತ್ಯುಪತ್ರದಂಥ ಪುಣ್ಯಕರ್ಮಕ್ಕೆ ಅವನು ವಿಶೇಷ ಮೆಚ್ಚಿದವನಾಗಿದ್ದದ್ದರಿಂದ ಒಮ್ಮೆ ಒಬ್ಬನಿಗೆ ಉಪಕಾರಮಾಡಿ ಮತ್ತೊಬ್ಬನ ತಲೆ ಹಾರಿಸುವದಕ್ಕಾಗಿ ಬೊಟ್ಟಿ ಕಾಗದಪತ್ರ ಹುಟ್ಟಿಸಿದನು. ಆಗ ನಾರಾನಾರ ವಿಚಾರಸ್ಥನಾದ ನ್ಯಾಯಾಧೀಶನು ಈ ಸುಶಿಕ್ಷಿತನಿಗೆ ಬ್ರಿಟಿಶ ಹದ್ದಿನೊಳಗಿನ ಯಾವ ಕೋರ್ಟಿನಲ್ಲಿಯ ವಕೀಲಕಿ ಕೆಲಸ ಕೊಡಬಾರದಾಗಿ ನಿಶ್ಚಯಿಸಿದನು. ಇದರಿಂದ ಶಾಮರಾಯನ ಬುದ್ದಿಯು ಮತ್ತಿಷ್ಟು ಪ್ರಗಲ್ಪವಾಗಿ ಅವನು ತನ್ನ ಪೂರ್ವ ವ್ಯವಸಾಯವನ್ನು ಕೋರ್ಟಿನ ಹೊರಗೂ ನಡಿಸಹತ್ತಿದನು.
ವಿನಾಯಕನು ಬೀದಿಬೀದಿಯಲ್ಲಿ ಮೀನಿಗಳಾದಾವೆಂದು ಅಂದದ್ದಕ್ಕೆ ಶಾಮ ರಾಯನು ನಗುತ್ತ:-. ವಿನಾಯಕರಾಯ, ಖನೀಮಾಡುವದು ಪಾಪವೆಂಬುವದು ನಿಜ; ಆದರೆ ಯುದ್ಧದಲ್ಲಿ ಆಗುವ ಮನುಷ್ಯವಧೆಗೆ ಮಾತ್ರ ಪಾಪವೆನ್ನದೇ ಇರು ವದು ಆಶ್ಚರ್ಯಕಾರಕವಾಗಿದೆ. ರಾಷ್ಟ್ರ ರಾಷ್ಟ್ರಗಳಲ್ಲಿ ಯುದ್ಧವು ನಡೆದಂತೆ ಸಮಾ ಜದಲ್ಲಿ ಜೀವನಾರ್ಥ 'ಕಲಹಗಳು ನಡೆದೇ ಇರುತ್ತವೆ. ಅರ್ಥಾತ್ ಇಂಥ ಪ್ರಸಂಗ ದಲ್ಲಿ ಮೊಟ್ಟ ಕಾಗದಪತ್ರವನ್ನು ಸಿದ್ದ ಮಾಡುವದಾಗಲಿ, ಖನೀ ಮಾಡುವದಾಗಲಿ ನಿಶ ಯವಾಗಿ ಪಾಪವಲ್ಲ. ಇರಲಿ. ಈ ಸಂಬಂಧ ನನಗೆ ವಾದಮಾಡುವ ಇಚೆ ಯಿಲ್ಲ.
೧೩-------------------------------------------೨ ನೆಯ ಪ್ರಕರಣ. ಇ೦ದಿರೆಯ ಆತ್ಮನಿವೇದನ !
ನನಗೆ ಈಗ ವೇಳೆಯೂ ಇಲ್ಲ. ನೀವು ಮನೆಗೆ ಹೋಗಬೇಕಾಗಿದ್ದರೆ ಸಹಿಮಾಡಿರಿ. ಇಲ್ಲವಾದರೆ ಇಲ್ಲಿ ನೀವು ಶರೆಮನೆಯಲ್ಲಿದ್ದಂತೆ ಇರಿ.”
- ಶಾಮರಾಯನ ಈ ಮಾತುಗಳನ್ನು ಕೇಳಿ ವಿನಾಯಕನ ಮನಸ್ಸಿನಲ್ಲಿ ಸಿಕ್ಕೂ, ಭೀತಿಯೂ ಒಮ್ಮೆಲೇ ಉತ್ಪನ್ನವಾದವು. ಆಗ ಅವನು ಉದ್ವೇಗದಿಂದ:- ನೀವು ಹೀಗೆ ನನ್ನನ್ನು ಎಷ್ಟು ದಿವಸ ಅಡಗಿಸಿಡುವಿರಿ? ಎಂದಾದರೂ ನನ್ನ ಬಿಡುಗಡೆ ಯಾಗೇ ಆಗುವದು. ಬಿಡುಗಡೆಯಾದ ಮೇಲೆ ಇದರ ಪ್ರತಿಫಲವನ್ನು ನೀವು ನಿಶ್ಚಯ ವಾಗಿ ಅನುಭೋಗಿಸಬೇಕಾದೀತು. ”
ಶಾನು:- ( ನಗುತ್ತ ) ವಿನಾಯಕರಾಯ, ಈ ಪ್ರಸಂಗವು ನಿಮಗೆ ಚಮ ತಾರವಾಗಿ ತೋರಿದ್ದರಿಂದ ನಿಮ್ಮ ಮನಸ್ಸು ಅಸ್ವಸ್ಥವಾಗುವದು ಸಾಹಜಿಕವಾಗಿದೆ. ನೀವು ಇಂದಿನ ರಾತ್ರಿ ಇಲ್ಲಿಯೇ ವಿಶ್ರಾಂತಿಯನ್ನು ತಕ್ಕೊಳ್ಳಿರಿ. ಬೆಳಗಾದ ಮೇಲೆ ನಿಮ್ಮ ಮನೋಭಿಲಾಷೆಯನ್ನು ಹೇಳಿರಿ. ”
ಎಂದನ್ನು ಗೋಪಾಳನನ್ನು ಸಂಗಡ ಕರಕೊಂಡು ಎರಡನೇ ಬಾಗಿಲಿಂದ ಹೊರಟುಹೋದನು, ಮತ್ತು ತಿರುಗಿ ಒಬ್ಬನೇ ಬಂದು:_( ತಾವು ಚಿಂತೆಮಾಡ ಬೇಡರಿ. ನಾನು ಈಗಲೇ ತಮಗೆ ಫಲಾಹಾರ ಮೊದಲಾದದ್ದನ್ನು ಕಳಿಸುತ್ತೇನೆ. ಇಲ್ಲಿ ಪಲಂಗ ಮೊದಲಾದವು ಇರುತ್ತವೆ. '” ಎಂದನ್ನು ಬಾಗಿಲು ಮುಚ್ಚಿಕೊಂಡು ಹೊರಟುಹೋದನು.
ಶಾಮರಾಯನು ಹೋದಮೇಲೆ ದಿವಾಣಖಾನೆಯಲ್ಲಿ ವಿನಾಯಕನೊಬ್ಬನೇ ಆದನು. ಆಗ ವಿಚಾರಮಾಡಲಿಕ್ಕೆ ಆಸ್ಪದವಾದದ್ದರಿಂದ ಅವನು ನಡೆದ ಯಾವತ್ತೂ ಸಂಗತಿಯ ಸಲುವಾಗಿ ಆಲೋಚನೆ ಮಾಡಹತ್ತಿದನು. ಒಮ್ಮೆ ಅವನು ತನ್ನ ಬುದ್ದಿ ದೋಷದಿಂದ ಇಂಥ ಸಂಕಟದಲ್ಲಿ ಸಿಕ್ಕಿನೆಂದು ತನ್ನ ಬುದ್ಧಿಯನ್ನು ಹಳಿಯುತ್ತಿದ್ದನು; ಒಮ್ಮೆ ಶಾಮರಾಯನ ಮೇಲೆ ಸಂತಪ್ತನಾಗುತ್ತಿದ್ದನು; ಒಮ್ಮೆ ಅವನು ಇದೆಲ್ಲ ಅದೃಷ್ಟ ಚಮತ್ಕಾರವೆಂದು ನೆನಿಸುತ್ತಿದ್ದನು. ಮನೆಯಲ್ಲಿ ಅಣ್ಣ-ಅತ್ತಿಗೆಯರು ನನ್ನ ದಾರಿಯನ್ನು ನೋಡುತ್ತಿದ್ದಾರು; ನಾನು ಬರುವಾಗ ಏನೂ ಹೇಳದೆ ಬಂದದ್ದರಿಂದ ಇಬ್ಬರೂ ಚಿಂತೆಯನ್ನು ಮಾಡುತ್ತಿದ್ದಾರು; ನನ್ನ ಶೋಧದ ಸಲುವಾಗಿ ಅಣ್ಣನು ಅತ್ತಿತ್ತ ತಿರುಗಾಡುತ್ತಿದ್ದಾನು; ಇತ್ಯಾದಿ ಅನೇಕ ವಿಚಾರಗಳು ಆ ವೇಳೆಯಲ್ಲಿ ಅವನ ಮನಸ್ಸಿನಲ್ಲಿ ಉತ್ಪನ್ನ ವಾದವು. ವಿಶೇಷತಃ ಏನುಮಾಡಿದರೆ ತನ್ನ ಬಿಡುಗಡೆಯಾದೀ ತೆಂಬುವದೇ ಅವನ ಅಂತಃಕರಣದ ಮುಖ್ಯ ವಿಚಾರವಾಗಿದ್ದಿತು. `ಅವನು ಆ ವಿಚಾರ ದಲ್ಲಿರುವಾಗ ಬಾಗಿಲು ತೆರೆದು ಒಬ್ಬ ಮನುಷ್ಯನು ಒಳಗೆ ಬಂದು, ಕುಡಿಯುವ ನೀರನ್ನೂ, ಫಲಾಹಾರವನ್ನೂ ಅವನ ಮುಂದಿಟ್ಟು ಕೂಡಲೆ ಹೊರಟುಹೋದನು. ಸಂಕಟದಿಂದ ಉದ್ವಿಗ್ನನಾಗಿದ್ದ ವಿನಾಯಕನಿಗೆ ಹೊಟ್ಟೆ ಹಸಿವೆಯಾಗಿದ್ದರೂ, ಆ ಫಲಾ
೧೪--------------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ಹಾರ ಮುಟ್ಟದೆ ಅವನು ಪಲಂಗದ ಮೇಲೆ ಹೋಗಿ ಬಿದ್ದನು. ವಿದ್ಯುಲ್ಲತೆಯ ದೀವಿ ಗೆಯು ಇನ್ನೂ ಪ್ರಕಾಶಮಯವಾಗಿದ್ದು, ಬೀಸಣಿಕೆಯು ಗರಗರ ತಿರಗುತ್ತಿದ್ದಿತು. ವಿನಾಯಕನು ಪಲಂಗದ ಮೇಲೆ ಬಿದ್ದು ಕೊಂಡು ತನ್ನ ಅದೃಷ್ಟದ ವಿಚಾರಮಾಡು ತಿರಲಿಕ್ಕೆ ಸಹಜ ಕಣ್ಣಿಗೆ ಕಣ್ಣು ಹತ್ತಿತು. ನಿದ್ರಾಭಂಗವಾಗುವ ವೇಳೆಗೆ ಅವನಿಗೆ ಒಬ್ಬ ಅತ್ಯಂತ ಸುಂದರ ಸ್ತ್ರೀಯು ತನ್ನ ಹತ್ತಿರ ಬಂದು ತನಗೆ ಏಳಿರಿ, ಪ್ರಯತ್ನ ಮಾಡಿರಿ, ಅಂದರೆ ಮುಕ್ತರಾದೀರಿ, ' ಎಂದು ಹೇಳುವಂತೆ ಒಂದು ಚಮತ್ಕಾರಿಕ ಸ್ವಷ್ಟವು ಬಿದ್ದಿತು. ಸ್ವಪ್ನವು ಮುಗಿಯುತ್ತಲೇ ಅವನಿಗೆ ಎಚ್ಚರವಾಯಿತು. ಕಣ್ಣು ತೆರೆದು ಅವನು ತನ್ನ ದೃಷ್ಟಿಯನ್ನು ಹೊರಚೆಲ್ಲುತ್ತಿರಲಿಕ್ಕೆ ಒಬ್ಬ ತರುಣ ಸುಂದರ ಸ್ತ್ರೀಯ ದೃಷ್ಟಿಗೆ ಬಿದ್ದಳು. ಅವಳಿಗೆ ಬಹಳವಾದರೆ ೧೬-೧೭ ವರ್ಷವಾಗಿರಬಹುದು. ಅವಳು ತೆಳ್ಳನ್ನ ಶುಭ್ರ ವಸ್ತ್ರವನ್ನು ಉಟ್ಟು ಕೊಂಡಿದ್ದಳು; ಅವಳ ಮೈ ಮೇಲೆ ವಿಶೇಷ ಅಲಂಕಾರಗಳೇನೂ ಇದ್ದಿಲ್ಲ. ಒಮ್ಮಿಂದೊಮ್ಮೆಲೆ ಈ ದಿವಾಣಖಾನೆಯಲ್ಲಿ ಇಂಥ ಸ್ತ್ರೀಯಳ ಆಗಮನವು ಹೇಗಾಯಿತೆಂಬ ಬಗ್ಗೆ ಮೊದಲು ವಿನಾಯಕನಿಗೆ ಆಶ್ಚರ್ಯ ವೆನಿಸಿತು; ಆದರೆ ಈ ಆಶ್ಚರ್ಯವು ಬೇಗನೆ ಇಲ್ಲದಂತಾಗಿ ಅಂತಃಕರಣದಲ್ಲಿ ಒಂದು ಪ್ರಕಾರದ ಭೀತಿಯು ಹುಟ್ಟಿತು. ಕೂಡಲೆ ಅವನು ಕಣ್ಣು ಮುಚ್ಚಿ ಕೊಂಡು ಬಂದ ಸ್ತ್ರೀಯ ಕಡೆಗೆ ಬೆನ್ನು ಮಾಡಿ ಮಲಗಿದನು. ಅವನು ಮನಸ್ಸಿನಲ್ಲಿ ಬಂದ ಸ್ತ್ರೀಯು ವೇಶೈಯಿರಬಹುದೆಂದು ಆಲೋಚಿಸಿದನು. ಶಾಮರಾಯನು ತನ್ನ ಕೈಯಿಂದಾಗ ದ್ದಕ್ಕೆ ಈ ಸ್ತ್ರೀಯಿಂದಾದರೂ ಮೋಹಗೊಳಿಸಿ ನನ್ನ ಸಹಿ ತಕ್ಕೊಳ್ಳುವ ವಿಚಾರ ಮಾಡಿದಂತೆ ಕಾಣಿಸುತ್ತದೆ; ಎಂದಾಲೋಚಿಸಿ ಅವನು ಬೇಕಾದವರು ಬೇಕಾದದ್ದು ಮಾಡಲಿ, ನಾನಂತೂ ಎಂದೂ ಸಹಿ ಮಾಡಲಿಕ್ಕಿಲ್ಲವೆಂದು ನಿಶ್ಚಯಿಸಿದನು. ಸ್ವಲ್ಪ ವೇಳೆ ಆ ಸಂಬಂಧವಾಗಿ ವಿಚಾರಮಾಡುತ್ತಿರಲಿಕ್ಕೆ ತಿರುಗಿ ಅವನಿಗೆ ಬಂದ ಸ್ತ್ರೀಯನ್ನು ಚನ್ನಾಗಿ ನೋಡದೆ ಅವಳಿಗೆ ವೇಶೈಯೆಂಬ ಆರೋಪವನ್ನು ಕೊಡುವದು ಯೋಗ್ಯ ವಲ್ಲೆಂದು ತೋರಿತು. ಅವನು ಬೆನ್ನು ತಿರುಗಿಸಿ ಅವಳಿಗೆ ಕಾಣದಂತೆ ಅವಳನ್ನು ನೋಡಹತ್ತಿದನು. ಎಷ್ಟೋ ವೇಳೆಯವರೆಗೆ ನೋಡಿದ ಮೇಲೆ ಅವನಿಗೆ ಬಂದ ಸ್ತ್ರೀಯು ವೇಶೈಯಲ್ಲವೆಂಬುವದು ಖಾತ್ರಿಯಾಯಿತು. ಆಗ ಅವನಿಗೆ ಆ ಸ್ತ್ರೀಯ ಮೇಲೆ ಮಾಡಿದ ಆರೋಪದ ಸಲುವಾಗಿ ಅನುತಾಪವಾಯಿತು; ಆದರೂ ಇಂಥ ವೇಳೆಯಲ್ಲಿ ಎರಡನೇ ಪುರುಷರ ದಿವಾಣಖಾನೆಯಲ್ಲಿ ಪರಸ್ತ್ರೀಯು ಬರುವದು ವಿಸಂಗತ ವಾದದ್ದರಿಂದ ಅವಳು ಯಾವ ಉದ್ದೇಶದಿಂದ ಬಂದಿದ್ದಾಳೆಂಬುವದರ ಸಲುವಾಗಿ ಅವ ನಿಗೆ ಒಳ್ಳೆ ಜಿಜ್ಞಾಸೆಯುತ್ಪನ್ನವಾಯಿತು. ಆ ಸ್ತ್ರೀಯು ಕುಲೀನಳಾಗಿದ್ದರೂ ಇಂಥ ಅಪರಾತ್ರಿಯಲ್ಲಿ ಪರಪುರುಷನ ಹತ್ತಿರ ಬಂದು ನಿಲ್ಲುವದು ಅಯೋಗ್ಯವಾದದ್ದರಿಂದ ಅವಳ ಉದ್ದೇಶವು ಕೆಟ್ಟದಿರಬೇಕಾಗಿಯೂ, ಅವಳು ಬಹಳ ಮಾಡಿ ಮೃತ್ಯು ಪತ್ರದ ಸಹಿಗಾಗಿಯೇ ಬಂದಿರಬೇಕೆಂದೂ ಅವನು ತರ್ಕಿಸಿದನು. ಅಷ್ಟರಲ್ಲಿ ಅವನಿಗೆ
೧೫------------------------------------೨ನೆಯ ಪ್ರಕರಣ-ಇಂದಿರೆಯ ಆತ್ಮನಿವೇದನ !
ಸ್ವಪ್ನದ ಸ್ಮರಣೆಯಾಯಿತು, ಒಬ್ಬ ಸ್ತ್ರೀಯು ಏಳಿರಿ; ಪ್ರಯತ್ನ ಮಾಡಿರಿ, ಅಂದರೆ ಮುಕ್ತರಾದೀರಿ. ' ಎಂದು ಅಂದದ್ದರ ಅರ್ಥ ವಿಚಾರವು ಅವನ ಮನಸ್ಸಿನಲ್ಲಿ ಉತ್ಪನ್ನ ವಾಯಿತು. ಸ್ವಪ್ನದ ಮೇಲೆ ಅವನ ವಿಶ್ವಾಸವಿದ್ದಿಲ್ಲ. ಆದರೆ ಸ್ವಪ್ನದಲ್ಲಿ ನೋಡಿದ ಮಾತೇ ಎಚ್ಚರವಾದ ಕೂಡಲೆ ಕಾಣಿಸಿದ್ದರಿಂದ ಅರ್ಥಾತ್ ಅವನಿಗೆ ಒಳ್ಳೆ ಆಶ್ಚರ್ಯ ವಾಯಿತು. ಆ ಸ್ತ್ರೀಯನ್ನು ವಿಚಾರಿಸಿ ಸಂಶಯನಿವೃತ್ತಿ ಮಾಡಿಕೊಳ್ಳಬೇಕೆಂದು ಅವ ನಿಗೆ ತೋರಹತ್ತಿತು. ಎಷ್ಟೋ ವೇಳೆಯಾದರೂ ಆ ಸ್ತ್ರೀಯು ಮಾತಾಡದೆ ಮುಖ ವನ್ನು ಕೆಳಗೆ ಮಾಡಿಕೊಂಡು ವಿನಯದಿಂದ ನಿಂತದ್ದನ್ನು ನೋಡಿ ಅವನು “ ನೀವು ಯಾರು ” ಎಂದು ಕೇಳಿದನು. ಆಗ ತರುಣಿಯು ವೀಣಾನಿಂದಿತಸ್ವರದಿಂದ:- ನನ್ನ ಹೆಸರು ಇಂದಿರೆ, ” ಎಂದಂದಳು.
ವಾಸ್ತವಿಕ ಇಂದಿರೆಯ ಈ ಸ್ವರವು ಸ್ವಾಭಾವಿಕವಾದದ್ದಾಗಿದ್ದಿತು. ಅವಳು ಹುಟ್ಟಾ ವಿನಯವತಿಯಾಗಿದ್ದಳು, ಆದರೆ ವಿನಾಯಕನು ಆ ವೇಳೆಯಲ್ಲಿ ಆಪತ್ತಿನಲ್ಲಿ ದ್ದದ್ದರಿಂದ ಪ್ರತಿಯೊಬ್ಬರು ತನ್ನನ್ನು ವಂಚಿಸುವ ಪ್ರಯತ್ನ ಮಾಡಹತ್ತಿದ್ದಾರೆಂದು ಅವ ನಿಗೆ ತೋರುತ್ತಿದ್ದಿತು. ಆ ಪ್ರಕಾರ ಆ ಸ್ತ್ರೀಯ ಸಂಬಂಧವಾಗಿಯೂ ಅವನಿಗೆ ಅದೇ ವಿಚಾರವು ತೋರಿತು. ಇವಳು ತನ್ನ ಮಧುರಸ್ಕರದಿಂದ ಸಕ್ಕರೆಯ ಮಳೆಯನ್ನು ಸುರಿಸಿ ನನಗೆ ವಂಚಿಸುವವಳು ಇರಲಿ, ನಾನು ಯಾರ ಮೋಹಜಾಲಕ್ಕೂ ಬೀಳುವವ ನಲ್ಲ. ಎಂದು ಮನಸ್ಸಿನಲ್ಲಿ ನಿರ್ಧರಿಸಿ:
ವಿನಾ: - (( ಶಾಮರಾಯನಿಗೂ, ನಿಮಗೂ ಏನು ಸಂಬಂಧ? ನೀವು ಇಷ್ಟು ರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಿ? ”
ಇಂದಿರೆ:- ( ಖೇದಸ್ವರದಿಂದ ) ನಾನು ಶಾಮರಾಯನ ಪುತ್ರಿಯು, ನಿಮ್ಮ ಹಿತದ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ”
ವಿನಾ:- ( ನಗುತ್ತ ) ಪರೋಪಕಾರ ಮಾಡುವದೊಂದು ನಿಮ್ಮ ಮನೆಯ ವ್ರತವೇ ಕಾಣಿಸುತ್ತದೆ. ನಿಮ್ಮ ತಂದೆ ಶಾಮರಾಯನಾದರೂ ನನಗೆ ಉಪಕಾರ ಮಾಡು ವದಕ್ಕೋಸ್ಕರವೇ ಇಲ್ಲಿಗೆ ಕರಕೊಂಡು ಬಂದು ಈ ತುರಂಗದಲ್ಲಿ ಇಟ್ಟಿದ್ದಾನೆ. ನೀವೂ ಇದಕ್ಕಿಂತಲೂ ಹೆಚ್ಚಿನ ಉಪಕಾರ ಮಾಡುವದಕ್ಕೋಸ್ಕರ ನನ್ನನ್ನು ಮತ್ತೊಂದು ಘೋರವಾದ ಕಾರಾಗಾರದಲ್ಲಿ ಇಡುವಂತೆ ಕಾಣಿಸುತ್ತದೆ. ?
ಇಂದಿರೆ:- ( ಕೆಲಹೊತ್ತು ಸುಮ್ಮನಿದ್ದು ನಂತರ ಮಧುರಸ್ವರದಿಂದ ) ತಮಗೆ ಹಾಗೆ ತೋರುವದರಲ್ಲಿ ಆಶ್ಚರ್ಯವೇನೂ ಇಲ್ಲ. ಇಲ್ಲಿ ಬರುವ ಜನರೆಲ್ಲರು ನಿಮ್ಮನ್ನು ವಂಚಿಸುವದಕ್ಕಾಗಿಯೂ, ನಿಮಗೆ ತೊಂದರೆಗೊಡುವದಕ್ಕಾಗಿಯೂ ಬರುತ್ತಾರೆಂದು ನಿಮ್ಮ ತಿಳುವಳಿಕೆಯಾಗುವದು ಸಾಹಜಿಕವಾಗಿದೆ; ಆದರೆ ಎಲ್ಲ ಮನುಷ್ಯರ ಸ್ವಭಾ
೧೬-----------------------------------------------------------ದಿವ್ಯ ಸು೦ದರಿ ಕಥನ: ದೀರ್ಘ ಪ್ರಯತ್ನ.
ವವು ಎಂದೂ ಒಂದೇ ಇರುವದಿಲ್ಲ. ನಾನು ಇಲ್ಲಿಗೆ ಬಂದದ್ದರ ಉದ್ದೇಶವು ತೀರ ಬೇರೆ ತರದ್ದಾಗಿದೆ. ”
ವಿನಾಯಕ:- ಇಲ್ಲಿಗೆ ಬಂದ ಉದ್ದೇಶವಾದರೂ ಬೇರೆಯಾಗಿದೆ, ಎಂದು ನೀವು ಅನ್ನು ವದರ ಅರ್ಥವೇ ನನಗೆ ತಿಳಿಯುವದಿಲ್ಲ. ನೀವು ಇಲ್ಲಿಗೆ ಬಂದ ಉದ್ದೇ ಶವು ಒಳ್ಳೆಯದಾಗಿದ್ದರೂ ಇಂಥ ಅಪರಾತ್ರಿಯಲ್ಲಿ ಒಬ್ಬರೇ ಪರಪುರುಷರ ಬಳಿಗೆ ಬರುವದು ಅನುಚಿತವಾಗಿ ತೋರುವದಿಲ್ಲವೇ ? ”
ಇಂದಿರೆ:- ( ಕೆಳಗೆ ಮುಖಮಾಡಿ ) ತೋರುತ್ತದೆ; ಆದರೆ ಸಂಕಟ ಪ್ರಸಂಗ ದಲ್ಲಿ ಮಾಡಬೇಕೇನು? ನಾನು ಬಂದರೂ ಸ್ವಂತಬುದ್ದಿಯಿಂದ ಬಂದಿಲ್ಲ. ಹಿರಿಯರ ಆಜ್ಞಾನುಸಾರ ಬಂದಿರುವೆನು. ”
ವಿನಾಯಕ:- ( ಆಶ್ಚರ್ಯದಿಂದ ) ಯಾರು ಶಾಮರಾಯರು? ಅವರ ಆಜ್ಞೆ ಯನ್ನು ನೀವು ಮಾನ್ಯ ಮಾಡಿದಿರಿ? ”
ಇಂದಿರೆ:-" ನಾನು ಒಳ್ಳೆ ಪರಿಸ್ಥಿತಿಯಲ್ಲಿ ಇದ್ದದ್ದಾಗಿದ್ದರೆ ಈ ಅಜ್ಞೆಯನ್ನು ಎಂದೂ ಮಾನ್ಯ ಮಾಡುತ್ತಿದ್ದಿಲ್ಲ. ಇಷ್ಟೆ ಯಾಕೆ ? ಈ ಆಜ್ಞೆಯನ್ನು ತಂದೆಯು ಮಾಡದೆ, ತಂದೆಯ ತಂದೆಯಾದ ಜಗನ್ನಿಯಾಮಕನು ಕೂಡ ಮಾಡಿದ್ದರೂ ನಾನು ಅದನ್ನು ಎಂದೂ ಪಾಲಿಸುತ್ತಿದ್ದಿಲ್ಲ, ಆದರೆ ಏನು ಮಾಡುವದು ! ನನ್ನ ಸ್ಥಿತಿಯು ವಿಲಕ್ಷಣವಾದದ್ದದೆ. ನೀವು ಈಗ ಕಾರಾಗಾರದಲ್ಲಿದ್ದಂತೆ ನಾನೂ ಕಾರಾಗಾರದ ಲಿಯೇ ಇದ್ದೇನೆ!”
ವಿನಾಯಕ:-( ಆಶ್ಚರ್ಯ ! ತಂದೆಯ ಮನೆಯಲ್ಲಿ ಮಗಳಿಗೆ ಕೈದಿಯೇ !! ಒಳ್ಳೇದು, ನಿಮ್ಮ ಲಗ್ನವಾಗಿರಬಹುದಾಗಿ ಕಾಣಿಸುತ್ತದೆ ? ”
ಇಂದಿರೆ:- ( ಕಣ್ಣುಂಬ ನೀರು ತಂದು ಕಾತರಸ್ಕರದಿಂದ ) ನಾನು ವಿವಾಹಿತ ಟೆಂಬುವದೂ-ಅವಿವಾಹಿತಳೆಂಬುವದೂ, ನಾನು ಸಧವೆಯೆಂಬುವದೂ-ವಿಧವೆಯೆಂಬು ವದೂ ನನಗೆ ಯಾವದೂ ಪರಿಚಯವಿಲ್ಲ. '
ವಿನಾಯಕ:- ( ಆಶ್ಚರ್ಯದಿಂದ ) ನೀವು ವದಾದರೂ ಏನು? ೨೨
ಇಂದಿರೆ:- ನಾನು ಸತ್ಯವಾಗಿ ಮಾತಾಡುತ್ತೇನೆ. ನೀವು ನನ್ನ ಮೇಲೆ ವಿಶ್ವಾ ಸವ ಡಲಿಕ್ಕೆ ಏನ ೧ ಅಡ್ಡಿಯಿಲ್ಲ. ನನ್ನ ಸಂಗತಿಯನ್ನಷ್ಟು ಕೇಳುವ ಕೃಪೆಮಾಡಿರಿ. ನನ್ನ ತಂದೆಯ, ಗೋಪಾಳರಾಯನೂ ನನ್ನನ್ನು ಇತ್ತ ಕಡೆಗೆ ಕಳಿಸಿ ಎಲ್ಲಿಯೂ ಹೊರಗೆ ಹೋಗಿದ್ದಾರೆ. ಅವರು ಮೂರು ಅಥವಾ ನಾಲ್ಕು ಹೊಡೆಯುವ ಸುಮಾ ರಕ್ಕೆ ತಿರುಗಿ ಬಂದರು. ಅವರು ಬರುವಷ್ಟರಲ್ಲಿಯೇ ನನ್ನ ಸಂಗತಿಯನ್ನು ಹೇಳು ತೇನೆ. 2)
೧೭-----------------------------------------------------೨ನೆಯ ಪ್ರಕರಣ- ಇಂದಿರೆಯ ಆತ್ಮನಿವೇದನ !
ಇಷ್ಟು ಹೊತ್ತು ಇಂದಿರೆಯು ಎದ್ದು ನಿಂತೇ ಮಾತಾಡುತ್ತಿದ್ದಳು. ಅವಳು ತನ್ನ ಸಂಗತಿಯನ್ನು ಹೇಳಲಿಕ್ಕೆ ಆರಂಭಿಸಿದ ಕೂಡಲೆ ವಿನಾಯಕನು ತನ್ನ ಪಲಂಗದಿಂದ ದೂರ ಇದ್ದ ಒಂದು ಖುರ್ಚೆ ಯಕಡೆಗೆ ಬೊಟ್ಟು ತೋರಿಸಿ:-( ನೀವು ಮೊದಲು ಆ
ಖುರ್ಚಿಯ ಮೇಲೆ ಕುಳಿತು, ನಂತರ ಹೇಳುವದನ್ನೆಲ್ಲ ಹೇಳಿರಿ.”
ವಿನಾಯಕನ ಸಹಾನುಭೂತಿಯನ್ನು ಕಂಡು ಇಂದಿರೆಯು ನಾಚಿದಂತೆ ನಟಿಸಿ ಖುರ್ಚಿಯ ಮೇಲೆ ಕುಳಿತು:- ನಾನು ಚಿಕ್ಕಂದಿನಲ್ಲಿಯೇ ನನ್ನ ತಾಯಿಯ ಮೊಲೆಯ ಹಾಲಿಗೆ ಎರವಾಗಿದ್ದೇನೆ. ನನ್ನ ತಾಯಿಯ ವಿಯೋಗವಾದಂದಿನಿಂದ ತಂದೆಯೇ ನನ್ನ ಸಂರಕ್ಷಕನಾದದ್ದರಿಂದ ಯಾವಾಗಲೂ ನಾನು ಆತನ ಸಂಗಡಲೇ ಇದ್ದು ಬೆಳೆದಿರುತ್ತೇನೆ. ಗೋಪಾಳರಾಯನಾದರೂ ನನ್ನ ತಂದೆಯ ಸಹವಾಸದಲ್ಲಿ ಇರಲಿಕ್ಕೆ ಹತ್ತಿ ಬಹಳ ವರ್ಷಗಳಾದವು; ಆದರೆ ಅವನು ಯಾರು ? ಅವನ ಉದ್ಯೋಗ ವೇನು? ಈ ಮೊದಲಾದದ್ದು ಇಂದಿಗೂ ನನಗೆ ಗೊತ್ತಿಲ್ಲ. ನನ್ನ ಸ್ಮರಣೆಯಲ್ಲಿ ನಮ್ಮ ತಂದೆಯು ಮೊದಲು ಹಿಂದೂಧರ್ಮದವನಿದ್ದನೆಂಬುವದು ಮಾತ್ರ ಉಳಿದದೆ”
ವಿನಾಯಕ:- ( ನಡುವೇ ಬಾಯಿ ಹಾಕಿ ) ಮತ್ತು ಈಗ ಅವರು ಕ್ರಿಸ್ತಿ ಧರ್ಮದವರು ಇರುತ್ತಾರೆ ? ”
ಇಂದಿರೆ: - II ಇಲ್ಲ. ಈ ಮುಂಬಯಿಯಲ್ಲಿ ವಿಶ್ವಧರ್ಮಸಮಾಜವೆಂಬ ಹೆಸ ರಿನ ಒಂದು ಸಂಸ್ಥೆಯದೆ. ಅದರಲ್ಲಿ ನಮ್ಮ ತಂದೆಯು ಸಮಾವೇಶವಾಗಿದ್ದಾನೆ. ನಮ್ಮ ತಂದೆಯು ಆ ಸಂಸ್ಥೆಗೆ ಸೇರಿದ ಮೇಲೆ ನಾನೂ ಸೇರಬಹುದೆಂದು ನೀವು ಊಹಿಸ ಬಹುದು. ನನಗೆ ನಿರಾಕಾರಕ್ಕಿಂತಲೂ ಸಾಕಾರದ ಮೇಲೆ ಹೆಚ್ಚು ವಿಶ್ವಾಸವದೆ??
ವಿನಾಯಕ:-ಅದು ಯೋಗ್ಯ. ಪ್ರತ್ಯಕ್ಷ ಕಂಡದ್ದನ್ನೇ ಪ್ರಮಾಣಿಸಿ ನೋಡ ಬೇಕೆಂದು ಆರ್ಯವಚನವಿರುವಾಗ ಅಪ್ರತ್ಯಕ್ಷಕ್ಕೆ ಮೆಚ್ಚುವದು ಹುಚ್ಚತನವಾಗಿದೆ.”
ಇಂದಿರೆ:-( ಹಾಗನ್ನಿರಿ, ಅಥವಾ ಮನೋಭಾವನೆಯಿಂದ ರಿ. ನಾನು ತಂದೆಯ ಸಂಗಡ ಎಷ್ಟೋ ಸಾರೆ ಆ ಸಮಾಜಕ್ಕೆ ಹೋಗಿರುವೆನು. ಅಲ್ಲಿ ಎಷ್ಟೋ ಜನರು ಸಾಕಾರ-ನಿರಾಕಾರಗಳ ಬಗ್ಗೆ ವೃಥಾ ವಾದವಿವಾದ ಮಾಡಿ ಅದರಲ್ಲಿಯೇ ತಮ್ಮ ಸರ್ವ ವಾಕ್ಚಾತುರ್ಯವನ್ನು ಖಚು ಮಾಡುತ್ತಾರೆ. ' ಧರ್ಮ ಇದು ಶಬ್ಲಾ ಡಂಬರದ ವಿಷಯವಲ್ಲ. ಅದಕ್ಕೆ ಅನುಭವವೇ ಬೇಕು. ಶರೀರ, ಆತ್ಮ, ಪರಮಾತ್ಮ ಇವುಗಳಲ್ಲಿಯ ಭೇದಜ್ಞಾನವೂ, ನಿರಾಕಾರದ ತಿಳುವಳಿಕೆಗೆ ಬೇಕಾಗುವ ಯೋಗ ಸಾಮರ್ಥ್ಯವೂ ಅವರಲ್ಲಿ ಇದ್ದೇ ಇಲ್ಲ. ಯಾವ ಸ್ವರೂಪವನ್ನು ತಿಳಕೊಳ್ಳಲಿಕ್ಕೆ ಮಹಾ ಮಹಾ ಜ್ಞಾನಿಗಳು ಕೂಡ ತಮ್ಮಿಂದ ಆಗಲಾರದೆಂದು ಅಂದಿರುವರೋ ಆ ನಿರ್ಗುಣಸ್ವರೂಪದ ಬಗ್ಗೆ ಈ ಸಮಾಜದಲ್ಲಿ ಬೇಕಾದವನು ಬಲ್ಲೆನೆಂದು ಅನ್ನುತ್ತಿರು ತಾನೆ. ಗೋಪಾಳರಾಯನು ಎಂಥ ಮನುಷ್ಯನೆಂಬುವದು ನಿಮಗೆ ಸ್ವಲ್ಪಾನುಭವ
೧೮---------------------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ದಿಂದಲೇ ಗೊತ್ತಾಗಿದೆ. ಇಂಥ ಯಃಕಶ್ಚಿತ ಮನುಷ್ಯನು ಕೂಡ ಸಮಾಜದ ವ್ಯಾಸ ಪೀಠದ ಮೇಲೆ ನಿಂತುಕೊಂಡು ಗುರುವಾಗಿ ( ಎಲೈ ದೇವನೇ, ನೀನು ಹಾಗೆ ಇರುವಿ, ಹೀಗೆ ಇರುವಿ” ಎಂಬದಾಗಿ ಪಾಠಮಾಡಿದ ಕೆಲವು ನಿಶ್ಚಿತ ವಾಕ್ಯಗಳನ್ನು ಅನ್ನುತ್ತಾನೆ.
ಇದು ಕೇವಲ ನಿರಾಕಾರತತ್ವದ ಅಪಹಾಸ್ಯವಲ್ಲವೇ ? "
ಮೊದಲು ವಿನಾಯಕನು, ಇಂದಿರೆಯು ನಾಧಾರಣ ಸ್ತ್ರೀಯರಂತೆ ಅಲ್ಪಸ್ವಲ್ಪ ಕಲಿತಿರಬಹುದೆಂದು ಊಹಿಸಿದ್ದನು; ಆದರೆ ಅವಳ ಮೇಲಿನ ವ್ಯಾಖ್ಯಾನವನ್ನು ಕೇಳಿ ಆಶ್ಚರ್ಯಚಕಿತನಾಗಿ ಅವನು:
ವಿನಾಯಕ:- ಹೌದು, ನೀವನ್ನು ವದು ಎಷ್ಟೋ ಮಟ್ಟಿಗೆ ನಿಜವಾಗಿದೆ. ದೊಡ್ಡ ದೊಡ್ಡ ಮನುಷ್ಯರು ಕೇವಲ ಅಭಿಮಾನವಶರಾಗಿ ಅಸಹ್ಯ ತತ್ವಗಳಿಗೆ ಮನಸೋತು, ತಮ್ಮ ಆಯುಷ್ಯವನ್ನು ವ್ಯರ್ಥಗಳೆಯುವದು ರಾಷ್ಟ್ರೀಯ ದೃಷ್ಟಿಯಿಂದ ಬಹಳ ಹಾನಿಕರವಾಗಿದೆ. ಇರಲಿ. ಮುಖ್ಯ ವಿಷಯವು ಮೂಲೆಗೆ ಬೀಳಹತ್ತಿದೆ. ಶಾಮ ರಾಯನು ಬರುವಷ್ಟರಲ್ಲಿ ನೀವು ನಿಮ್ಮ ವಿಷಯವನ್ನು ಹೇಳಿದರೆ ಒಳಿತು. ಇಲ್ಲವಾ ದರೆ ನಾನು ಇದಕ್ಕಿಂತಲೂ ಹೆಚ್ಚು ಸಂಕಟವನ್ನು ಅನುಭೋಗಿಸಬೇಕಾದೀತು.”
ಇಂದಿರೆ:-( ( ನಗುತ್ತ ) ಆ ಸಂಬಂಧ ತಾವು ಚಿಂತೆ ಮಾಡಬೇಡಿರಿ. ಅವರು ಮೂರು ಅಥವಾ ನಾಲ್ಕು ಹೊಡೆಯುವ ಸುಮಾರಕ್ಕೆ ಬರುವರು. ಈಗ ಬಹಳವಾ ದರೆ ಹನ್ನೆರಡು ಹೊಡೆದಿರಬಹುದು. ತಂದೆಯ ಸಂಗಡ ನಾನು ಆ ಸಮಾಜಕ್ಕೆ ಹೋಗುತ್ತಿದ್ದೇನೆಂದು ನಿಮಗೆ ಹೇಳಿರುವೆನಷ್ಟೇ. ಅಲ್ಲಿಗೂ ಎರಡನೇ ಸ್ಥಳಕ್ಕೂ ತಂದೆಯಸಂಗಡ ಹೋಗುತ್ತಿದ್ದುದರಿಂದ ಸ್ತ್ರೀಯರ ಸ್ವಾಭಾವಿಕಧರ್ಮವಾದ ಲಜ್ಜೆಯು ನನ್ನಲ್ಲಿ ಲೋಪವಾಯಿತು. ನನ್ನ ಮಾತಾಡುವ ಪದ್ಧತಿಯಲ್ಲಿ ಕೂಡ ಎಷ್ಟೋ ಹೆಚ್ಚು ಕಡಿಮೆಯಾಗಿದೆ. ಕುಲೀನ ಸ್ತ್ರೀಯರಂತೆ ನಡೆಯಬೇಕೆಂದು ನನ್ನಿಚ್ಚೆಯಿದ್ದರೂ ಅದು ನನಗೆ ಸಾಧಿಸದಂತಾಗಿದೆ. ಇದರಲ್ಲಿ ನನಗೆ ಎಷ್ಟು ಹಾನಿಯಾಗಿರುತ್ತದೆಂಬು ವದು ಎಷ್ಟೋ ಜನರಿಗೆ ತೋರಿರುವದಿಲ್ಲ. ಎಷ್ಟೋ ಜನರಿಗೆ ಸ್ತ್ರೀಯರು ಯಾವಾ ಗಲೂ ಪುರುಷರ ಸಂಗಡ ತಿರುಗಾಡುವದೂ, ವಿನೋದ ಮಾಡುವದೂ ಒಳ್ಳೆ ಸುಧಾ ರಣೆಯೆಂದು ತೋರುವದು. ಈಶ್ವರನು ಸ್ತ್ರೀ-ಪುರುಷ ಹೀಗೆ ಎರಡು ವರ್ಗ ಮಾಡಿದ್ದು ತಪ್ಪಾಯಿತು. ಆ ತಪ್ಪನ್ನು ಸುಧಾರಿಸುವದೇ ಈ ಸುಧಾರಕರ ಹಣೆಯಲ್ಲಿ ಬರೆದದೆ. ಇದು ನನಗೆ ಅತಿಶಯ ಕುಧಾರಣೆಯಾಗಿ ತೋರುತ್ತದೆ. ಕುಲೀನ ಸ್ತ್ರೀಯ ಸಂಸ್ಕಾರ ಗಳನ್ನು ನಾಶಮಾಡಿ, ಅವಳ ಶೀಲಸಂವರ್ಧನದ ಮಾರ್ಗವನ್ನು ಕಂಟಕಮಯಮಾಡು ವದಕ್ಕೆ ಸುಧಾರಣೆಯೆಂದನ್ನ ಬೇಕಾದರೆ ವಿಷಕ್ಕೆ ಅಮೃತವೆಂದು ಯಾಕೆ ಅನ್ನ ಬಾರ ದೆಂಬ ಪ್ರಶ್ನವು ಸಾಹಜಿಕವಾಗಿ ಹುಟ್ಟುವದು. ಯಾವ ಸ್ತ್ರೀಗೆ ಹೀಗೆ ಬಹುಜನ ಪುರುಷ ರಲ್ಲಿ ಒಂದೇಸವನೆ ೧೦-೧೨ ವರ್ಷ ಇರಬೇಕಾಗಿರುತ್ತದೆಯೋ ಆ ಸ್ತ್ರೀಯ ಹೃದಯ
೧೯-------------------------------------------------೨ನೆಯ ಪ್ರಕರಣ-ಇಂದಿರೆಯ ಆತ್ಮ ವೇದನ !
ದೊಳಗಿನ ಕೋಮಲವಿಕಾರವು ಕಠೋರವೂ ಶರೀರದೊಳಗಿನ ಮೃದುತ್ವವು ನಾಶವೂ ಆಗುವದಲ್ಲದೆ ಇನ್ನೂ ಸೃಷ್ಟಿಯ ಕೆಲಕೆಲವು ಶಾಸನಗಳಿಗೆ ಗುರಿಯಾಗಬೇಕಾಗುವದು. ನನಗೆ ಈ ಬಗ್ಗೆ ಒಳ್ಳೆ ಭೀತಿಯಾದದ್ದರಿಂದ ನಾನು ಈ ಸ್ಥಿತಿಯಿಂದ ಲಗು ಮುಕ್ತ ಳಾದೆನು. ನಾನು ಪೂರ್ವದ ಪುರಾಣದೊಳಗಿನ ಸ್ತ್ರೀಯರ ಚರಿತ್ರವನ್ನು ಓದಲಿಕ್ಕೆ ಪ್ರಾರಂಭಿಸಿದೆನು. ಭಾರತ-ರಾಮಾಯಣಗಳಲ್ಲಿ ಒಳ್ಳೆ ವಿಶ್ವಾಸವನ್ನಿಟ್ಟೆನು. ಅವು ಗಳೊಳಗಿನ ಸಾಧೋ ಸ್ತ್ರೀಯರಂತೆ ನಾನೂ ಒಬ್ಬಳು ಆಗಬೇಕೆಂದು ನೆನಿಸಿ, ತದ್ವತ ನಡೆದು ಸ್ತ್ರೀಯರ ಪ್ರಾಕೃತಿಕ ಧರ್ಮವನ್ನು ಜೋಕಿಸಿದೆನು; ಆದರೂ ಚಿಕ್ಕಂದಿನಲ್ಲಿ ವಾಣಿ-ಲಜ್ಜೆಗಳ ಮೇಲೆ ಆದ ಕುಪರಿಣಾಮವು ಇನ್ನೂ ಸಮೂಲವಾಗಿ ನಾಶವಾಗಿಲ್ಲ. ಮನೆಯಲ್ಲಿ ನಾಲೈದು ಮಂದಿ ಹೆಂಗಸರಾದರೂ ಇದ್ದರೆ ಈ ದೋಷವೂ ನನ್ನಲಿ ಉಳಿಯುತ್ತಿರಲಿಲ್ಲ. ನನ್ನ ಮಾತಿನಲ್ಲಿ ಹಾಗೇನಾದರೂ ತಪ್ಪು ಸಂಭವಿಸುತ್ತಿದ್ದರೆ, ಸಂಭವಿಸುವ ಕಾರಣವು ತಮಗೆ ತಿಳಿಯಲೆಂದು ನಾನು ಇಷ್ಟುದ್ದ ತಮಗೆ ಹೇಳುವ ಪ್ರಸಂಗವು ಪ್ರಾಪ್ತವಾಯಿತು. ಏನಾದರೂ ಭಯಂಕರ ಕೃತ್ಯವನ್ನು ಮಾಡಿ ಒಮ್ಮೆಲೇ ಅನಂತ ದ್ರವ್ಯವನ್ನು ಗಳಿಸುವದು ನಮ್ಮ ತಂದೆಯ ಸ್ವಭಾವವಾಗಿದೆ. ಇಂದಿನವರೆಗೆ ಇಂಥ ಅನೇಕ ಕೃತ್ಯಗಳನ್ನು ಮಾಡಿರುವನು. ಅವುಗಳಲ್ಲಿ ಒಂದೂ ಫಲಪ್ರದವಾ ದದ್ದು ಹೊರಡಲಿಲ್ಲ. ತಿರುಗಿ ಒಮ್ಮೊಮ್ಮೆ ಅವುಗಳ ಪ್ರತಿಫಲವನ್ನು ಮಾತ್ರ ಅನುಭೋ ಗಿಸಬೇಕಾಗುತ್ತದೆ. ನೀವು ಈಗ ಕೈದಿನಲ್ಲಿ ಇರುವ ಕಾರಣವಾದರೂ ಇದೇ ಆಗಿದೆ.
( ಇದೇ ಪಟ್ಟಣದಲ್ಲಿ ನೀಲಕಂಠರಾಯನೆಂಬ ಹೆಸರಿನ ಒಬ್ಬ ಸಧನಗೃಹಸ್ಥನು ಇರುತ್ತಿದ್ದನು. ಅವನಿಗೂ ನಮಗೂ ಸ್ವಲ್ಪ ಆಪ್ತ ಸಂಬಂಧವದೆ. ಅವನ ಸಂಪತ್ತನ್ನು ದೊರಕಿಸುವದಕ್ಕಾಗಿ ತಂದೆಯು ಭಯಂಕರ ಉದ್ಯೋಗವನ್ನು ಪ್ರಾರಂಭಿಸಿರುವನು. ನೀಲಕಂಠರಾಯನಿಗೆ ಮೊದಲು ಲಗ್ನ ಮಾಡಿಕೊಳ್ಳುವ ಅಪೇಕ್ಷೆಯಿದ್ದಿಲ್ಲ. ತಂದೆಯ ಮಧ್ಯಸ್ತಿಕೆಯಿಂದ ಅವನು ಲಗ್ನ ಮಾಡಿಕೊಳ್ಳಲು ಸಿದ್ದನಾದನು. ಈ ಲಗ್ನವು ನನ್ನ ಸಂಗಡ ಆಗಬೇಕೆಂದು ನಿಶ್ಚಯವಾಯಿತು. ನೀಲಕಂಠರಾಯನು ಒಮ್ಮೆ ನನ್ನನ್ನು ನೋಡುವದಕ್ಕಾಗಿ ನಮ್ಮ ಮನೆಗೆ ಬಂದನು. ಅಲ್ಲಿಯವರೆಗೆ ನನಗೆ ಈ ಲಗ್ನದ ಗೊಂದಲವು ಗೊತ್ತಿರಲಿಲ್ಲ. ನೀಲಕಂಠರಾಯನು ನಮ್ಮ ಮನೆಯಿಂದ ಹೋದಮೇಲೆ ನನಗೆ ತಂದೆಯು ಲಗ್ನ ವಾರ್ತೆಯನ್ನು ಹೇಳಿದನು. ನಾನು ಇಂಥ ವೃದ್ಧನ ಸಂಗಡ ಲಗ್ನ ವಾಗಲಿಕ್ಕೆ ಒಪ್ಪುವದಿಲ್ಲವೆಂದು ಹೇಳಿದೆನು. ವಿನಾಯಕರಾಯ, ಜನ್ಮದಾತಪಿತ ನನ್ನು ನಿಂದಿಸಲಿಕ್ಕೆ ಮನಸ್ಸಿಗೆ ಕೆಡಕೆನಿಸುತ್ತದೆ; ಆದರೆ ಮಾಡುವದೇನು? ಹಾಗೆ ಮಾಡಿದ ಹೊರ್ತು ಗತಿಯಿಲ್ಲ. ಆ ಕಾಲಕ್ಕೆ ನನಗೆ ಹೇಳಿದ ತಂದೆಯ ಉಪದೇಶ ವಚನಗಳ ಸ್ಮರಣೆಯಾಯಿತೆಂದರೆ ಮೈಮೇಲಿನ ಕೂದಲುಗಳು ನೆಟ್ಟಗಾಗುತ್ತವೆ. ತಂದೆಯು ಹೇಳಿದ್ದು:- ಇದೇನೂ ನಿಜವಾದ ಲಗ್ನವಲ್ಲ. ನೀನು ಅವನ ಹತ್ತರ ಒಂದು ಗಳಿಗೆ ಹೊತ್ತು ಉಪಾಧ್ಯಾಯರ ಮಂತ್ರಮುಗಿಯುವ ತನಕ ಕೂಡ್ರು, ಅವನು
೨೦----------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಮನೆಗೆ ಹೋಗುವಾಗ ನೀನೂ ಅವನ ಸಂಗಡ ಹೋಗು. ಕೂಡಲೆ ನಾನು ಒಂದೆ ರಡು ತಾಸಿನಲ್ಲಿ ನಿನ್ನನ್ನು ಮನೆಗೆ ಕರಕೊಂಡು ಬರುವೆನು. ಇಷ್ಟು ಮಾಡಿದರಾ ಯಿತು. ನಿನ್ನನ್ನು ಅವನ ಮನೆಗೆ ಎಂದೂ ಕಳಿಸುವದಿಲ್ಲ. ಅವನೂ ನಮ್ಮ ಮನೆಗೆ ಎಂದೂ ಬರುವದಿಲ್ಲ. ಇದೇನು ನಿಜವಾದ ಲಗ್ನ ವಲ್ಲೆಂದು ಯಾವತ್ತರಿಗೂ ತಿಳಿಯು ವದು. ಮುಂದೆ ನಿನಗನುಗುಣವಾದ ಕಲಿತ ತರುಣ ವರನೊಡನೆ ನಿನ್ನ ಲಗ್ನ ವನ್ನು ಒಳ್ಳೆ ವೈಭವದಿಂದ ಮಾಡುವೆನು, ” ಇತ್ಯಾದಿ ಆತನ ವಿಚಾರವನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಯಾದ ವಿಕಾರವು ಆ ಈಶ್ವರನಿಗೇ ಗೊತ್ತು. ನಾನು ಈ ಬಗ್ಗೆ ತಂದೆಗೆ ಉತ್ತರವನ್ನು ಕೊಡದೆ ಸಿಟ್ಟಿನಿಂದ ಎರಡನೇ ಕಡೆಗೆ ಹೊರಟುಹೋದನು ಆದರೆ ತಂದೆಯು ಲಗ್ನದ ಸಿದ್ಧತೆಯನ್ನು ನಡಿಸಿಯೇ ಇದ್ದನು. ಲಗ್ನದಲ್ಲಿ ತಂದೆಯ ಕಡೆಯ ವರೂ, ನೀಲಕಂಠರಾಯನ ಕಡೆಯವರೂ ಯಾರೂ ಇದ್ದಿಲ್ಲ. ಆಪ್ತ ಸ್ವಕೀಯರಿಗೆ ತಿಳಿಸಿದರೆ ಈ ಲಗ್ನವು ಮುರಿದುಹೋದೀತೆಂಬ ಭೀತಿಯಿಂದ ನೀಲಕಂಠರಾಯನು ಒಂದು ಆಳನ್ನೂ, ಒಬ್ಬ ಮಿತ್ರನನ್ನೂ ಸಂಗಡ ಕರಕೊಂಡು ಲಗ್ನ ಮುಹೂರ್ತದ ಸುಮಾರಕ್ಕೆ ಬಂದನು. ವರನಂತೂ ಲಗ್ನಕ್ಕೆ ಬಂದು ಹಾಜರಾದನು. ವಧುವಿನ ದರ್ಶನವೇ ಇಲ್ಲ. ಆ ದಿವಸ ತಂದೆಯ ಲಕ್ಷವು ನನ್ನ ಮೇಲೆ ಬಹಳವಾಗಿದ್ದಿತು. ಆದರೂ ನನಗೆ ನನ್ನ ಆಯುಷ್ಯದ ಬಗ್ಗೆ ಪೂಜ್ಯಭಾವವಿದ್ದದ್ದರಿಂದ ಒಳ್ಳೆ ಯುಕ್ತಿ ಯಿಂದ ಯಾರಿಗೂ ತಿಳಿಯದಂತೆ ಮನೆಯಿಂದ ಹೊರಬಿದ್ದೆನು. ಒಬ್ಬ ಮೈತ್ರಿಣಿಯ ಕೈಕಾಲುಬಿದ್ದು ಅವಳ ಮನೆಯಲ್ಲಿ ನಾಲ್ಕು ದಿವಸ ಕಾಲಗಳೆದನು. ನಾನಿಲ್ಲವಾದದ್ದ ರಿಂದ ಲಗ್ನವು ನಿಂತುಹೋದೀತೆಂದು ನನ್ನ ಭಾವನೆಯಾಗಿದ್ದಿತು. ಆದರೆ ನನ್ನ ಭಾವ ನೆಯು ವಿಪರೀತವಾಯಿತು. ಲಗ್ನವಾಗಿ ನೀಲಕಂಠರಾಯನು ನಾಲ್ಕು ಕೈಯವನಾ ಗಿಯೇ ಹೋದನು. ನಾನು ತಪ್ಪಿಸಿಕೊಂಡು ಹೋದದ್ದು ತಂದೆಗೆ ತಿಳಿದ ಕೂಡಲೆ ಅವನು ಒಬ್ಬ ನಾಯಕಿಣಿಯ ಬಳಿಗೆ ಹೋಗಿ ಅವಳ ಹದಿನಾರು ಹದಿನೇಳು ವರ್ಷದ ಒಬ್ಬ ತಂಗಿಯನ್ನು ಎಷ್ಟೋ ದುಡ್ಡು ಕೊಟ್ಟು ಮನೆಗೆ ಕರಕೊಂಡು ಬಂದನು. ಆಯಿತು, ಲಗ್ನವಾಯಿತು! ಹುಡುಗೆಯು ತನ್ನ ಮನೆಗೆ ಹೋದಳು. ಮುದುಕಹುಡು ಗನೂ ತನ್ನ ಮನೆಗೆ ಹೋದನು. ಈ ಪ್ರಕಾರವಾಗಿ ಆ ಖೆಟ್ಟಿ ಇಂದಿರೆಯ ಸಂಗಡ ನೀಲಕಂಠರಾಯನ ಲಗ್ನ ವಾದದ್ದು ನಿಜ; ಆದರೆ ಅದರ ಸರ್ವ ಪ್ರಾಯಶ್ಚಿತ್ತವನ್ನು ನಿಜವಾದ ಇಂದಿರೆಯು ಭೋಗಿಸಬೇಕಾಗಿರುತ್ತದೆ. ೧೫-೨೦ ದಿವಸವಾದ ಕೂಡಲೆ ನೀಲಕಂಠರಾಯನ ಕಡೆಯಿಂದ ನನಗೆ ಕರೆಯುವದರ ಸಲುವಾಗಿ ಮನುಷ್ಯನು ಬಂದನು. ಆಗ ತಂದೆಯು ನನ್ನ ಪ್ರಕೃತಿಯು ಸ್ವಸ್ಥವಿಲ್ಲವಾಗಿ ಸುಳ್ಳು ನೆವಹೇಳಿ ನನ್ನನ್ನು ಕಳಿಸಲಿಲ್ಲ. ಈ ಲಗ್ನದ ಸಲುವಾಗಿ ತಂದೆಯು ನೀಲಕಂಠರಾಯನ ಕಡೆ ಯಿಂದ ಮೂರುಸಾವಿರ ರೂಪಾಯಿ ತಕ್ಕೊಂಡಿದ್ದನು. ಮತ್ತು ಎರಡು ಸಾವಿರ ರೂಪಾ ಯಿಯ ಆಭರಣಗಳು ಕೈಯಲ್ಲಿ ಸಿಕ್ಕಿದ್ದವು. ಆದರೂ ಇಷ್ಟರಿಂದ ಅವನಿಗೆ ಸಮಾ
೨೧----------------------------------------------೨ನೆಯ ಪ್ರಕರಣ-೦ದಿರೆಯ ಆತ್ಮನಿವೇದನ !
ಧಾನವಾಗಲಿಲ್ಲ. ನೀಲಕಂಠರಾಯನ ಎಲ್ಲ ಸಂಪತ್ತು ಸಿಗಬೇಕೆಂದು ಇನ್ನೂ ಅವನ ಅಪೇಕ್ಷೆಯದೆ. ಕೆಲವು ದಿವಸದ ಮೇಲೆ ನಾನು, ತಂದೆ, ಗೋಪಾಳರಾಯ ಹೀಗೆ ಮೂವರು ಮಿರಜಿಗೆ ಹೋಗಿ ಅಡವಿಯೊಳಗಿನ ಒಂದು ಮನೆಯಲ್ಲಿ ಇದ್ದೆವು. ಅಲ್ಲಿಗೆ ಕರಕೊಂಡು ಹೋದ ತಂದೆಯ ಉದ್ದೇಶವೇನೆಂಬುವದು ನನಗೆ ಸ್ವಲ್ಪ ಪರಿಚಯ ವಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಒಂದು ದಿವಸ ತಂದೆಯು ( ಇಂದಿರೆಯು ಅಂತಾ ವಸ್ಥೆಯಲ್ಲಿದ್ದಾಳೆ, ) ಎಂಬದಾಗಿ ತಾರು ಮಾಡಿ ನೀಲಕಂಠರಾಯನನ್ನು ಮಿರಜಿಗೆ ಕರಿಸಿಕೊಂಡನು. ನೀಲಕಂಠರಾಯನು ಅಲ್ಲಿಗೆ ಬಂದ ಮೇಲೆ ಇಂದಿರೆಯ ಹೆಸರಿನಿಂದ ಮೃತ್ಯು ಪತ್ರವನ್ನು ಮಾಡಬೇಕೆಂದು ಅವನಿಗೆ ತಂದೆಯು ಬಹಳ ಆಗ್ರಹಮಾಡಿದನು; ಆದರೆ ಏನಿದ್ದಿತೋ ಏನೋ ಅವನು ಮೃತ್ಯುಪತ್ರಕ್ಕೆ ಒಪ್ಪಿಗೆಯನ್ನು ಕೊಡಲಿಲ್ಲ. ವಿನಾಯಕರಾಯ,”
ಈ ಕಡೆಯ ಶಬ್ದವನ್ನು ಕಾತಸ್ವರದಿಂದ ಉಚ್ಚರಿಸಿ ಕಣ್ಣಿನಿಂದ ಕಣ್ಣೀರು ಸುರಿಸಿಹತ್ತಿದಳು.
ಆಗ ವಿನಾಯಕ:- ( ತ್ವರೆಯಿಂದ ) ಮುಂದೇನಾಯಿತು ? ”
ಇಂದಿರೆ:-( ಕಣ್ಣೀರು ಒರಿಸುತ್ತ) ಮುಂದಿನದೇ? ಅದನ್ನು ಹೇಳಲಿಕ್ಕೆ ನಾಲಗಿಯೇ ಏಳಲೊಲ್ಲದು. ತಂದೆ-ಗೋಪಾಳರಾಯರು ಕೂಡಿ ಆ ವೃದ್ಧನನ್ನು ಕೊಂದುಹಾಕಿದರು. ಮತ್ತು ಅವನು ಪ್ಲೇಗಿನಿಂದ ಸತ್ತನಾಗಿ ಸಕಲರಿಗೂ ತಿಳಿಸಿ, ತಂದೆಯು ಮಿರಜಿಯಿಂದ ಹೊರಬಿದ್ದನು. ಮುಂದೆ ಅವನು ಒಂದು ಮೊಟ್ಟ ಮೃತ್ಯು ಪತ್ರವನ್ನು ಸಿದ್ಧ ಮಾಡಿದನು. ಈಗ ಅದನ್ನು ನಿಜವೆಂದು ಮಾಡಿ ಸಂಪತ್ತನ್ನೆಲ್ಲ ಎತ್ತಿ ಹಾಕುವದೇ ಅವನ ಕರ್ತವ್ಯವಾಗಿದೆ. ವಿನಾಯಕರಾಯ, ಇದೇ ನನ್ನ ಚರಿತ್ರೆ. ಇದರ ಮೇಲಿಂದ ಈಗ ನಾನು ವಿವಾಹಿತಳೊ-ಕುಮಾರಿಕೆಯೋ, ಅಥವಾ ಸಧ ವೆಯೋ-ವಿಧವೆಯೋ ಅದನ್ನು ನೀವೇ ವಿಚಾರಿಸಿರಿ. ವಿನಾಯಕರಾಯ, ಲಗ್ನ ಕಾಲ ದಲ್ಲಿ ನಾನು ನನ್ನ ತಂದೆಯ ಕೈಗೆ ಸಿಕ್ಕದ್ದಾಗಿದ್ದರೆ ನನ್ನ ಆಯುಷ್ಯವು ವ್ಯರ್ಥವಾಗಿ ಹೋಗುತ್ತಿದ್ದಿತು; ಆದರೆ ನಾನು ಈ ಸರ್ವ ಪ್ರಸಂಗಗಳಿಗೂ ಎದೆಗೊಟ್ಟು ನಿಂತಿದ್ದ ರಿಂದ ನನ್ನ ಶೀಲವು ಸ್ಥಿರವಾಗಿ ಉಳಿಯಿತು. ಜನ್ಮದಾತಪಿತನು ತನ್ನ ಒಬ್ಬಳೇ ಒಬ್ಬ ಮಗಳ ವಿಷಯದಲ್ಲಿ ಇಂಥ ಕ್ರೂರವರ್ತನವನ್ನಿಡುವ ಮಾದರಿಯು ಜಗತ್ತಿನಲ್ಲಿ ಇದೊಂದೇ ಆಗಿರಬಹುದು ! ?
ಇಂದಿರೆಯು ಕಡೆಯ ಎರಡು ವಾಕ್ಯಗಳನ್ನು ಒಳ್ಳೆ ಗಂಭೀರವಾಗಿ ಉಚ್ಚರಿ ಸಿದಳು. ಆ ವಾಕ್ಕೊಚ್ಛಾರ ಮಾಡುವಾಗ ಅವಳ ಕಣ್ಣುಗಳು ಕಣ್ಣೀರುಗಳಿಂದ ತುಂಬಿಬಂದವು. ಅವಳ ಮಾತನ್ನು ಕೇಳುತ್ತ ವಿನಾಯಕನು ತಟಸ್ಥನಾಗಿ ಕುಳಿತಿದ್ದನು. ಅವಳು ಹೇಳಿದ ಸಂಗತಿಯ ಬಗ್ಗೆ ವಿಚಾರಮಾಡುತ್ತ ಅವನು:- ತಿಳಿಯಿತು, ನೀಲ
೨೨---------------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಕಂಠರಾಯನ ಲಗ್ನವು ಒಳ್ಳೆ ತ್ವರೆಯಿಂದ ಆಯಿತೆಂಬುವದನ್ನೂ, ಲಗ್ನ ವಾದನಂತರ ಕೂಡಲೆ ಮಿರಜಿಗೆ ಹೋಗಿ ಅಲ್ಲಿ ಸತ್ತನೆಂಬುವದನ್ನೂ ಮಾತ್ರ ಕೇಳಿದ್ದೆನು; ಆದರೆ ಅವನ ಲಗ್ನದಲ್ಲಿ ಯೂ, ಮೃತ್ಯುವಿನಲ್ಲಿಯೂ ಇಂಥ ಚಮತ್ಕಾರಿಕ ಸಂಗತಿಯು ಅಡಕ ವಾಗಿದ್ದಿತೆಂಬ ಬಗ್ಗೆ ನನಗೆ ಸ್ವಲ್ಪಾದರೂ ಸಂಶಯವಿರಲಿಲ್ಲ. ನೀಲಕಂಠರಾಯನು ನನ್ನ ಚಿಕ್ಕಪ್ಪನು. ಕಾರಣ ಈ ಮೃತ್ಯುಪತ್ರದ ಮೇಲೆ ನನ್ನ ಸಹಿಯನ್ನು ತಕ್ಕೊಳ್ಳುವ ದರಲ್ಲಿ ಶಾಮರಾಯನಿಗೆ ಲಾಭವುಂಟೆಂಬುವದರಲ್ಲಿ ಸಂಶಯವಿಲ್ಲ. ಒಳ್ಳೇದು, ನೀವು ಈ ಪೂರ್ವದಲ್ಲಿ ನನ್ನಂತೆ ಕೈದಿನಲ್ಲಿ ಇರುತ್ತೀರೆಂದು ಹೇಳಿದಿರಲ್ಲ. ಅದು ಹೇಗೆ ? ”
ಇಂದಿರೆ:- ಈ ತೊಟ್ಟಿ ಮೃತ್ಯು ಪತ್ರವು ನನ್ನ ಹೆಸರಿನದದೆ. ತಂದೆಯ ಕೃತ್ಯಕ್ಕೆ ನಾನು ಒಪ್ಪದಿದ್ದದ್ದರಿಂದ ಅವನು ನನಗೆ ಸಾಧಾರಣ ಪ್ರತಿಬಂಧದಲ್ಲಿಯೇ ಇಟ್ಟಿದ್ದಾನೆ. ನಾನು ನೀಲಕಂಠರಾಯನೊಡನೆ ಲಗ್ನವಾಗಿತ್ತೆಂದು ಜನರಿಗೆ ತಿಳಿಸೇ ನೆಂದು ಅವನಿಗೆ ಬಹಳ ಭೀತಿಯದೆ. ಈಗ ನೀವು ಕುಳಿತಿರುವ ದಿವಾಣಖಾನೆಯ ಒಂದು ಭಾಗಕ್ಕೆ ಇರುವ ಒಂದು ಸಣ್ಣ ಕೋಣೆಯಲ್ಲಿ ನನ್ನನ್ನು ಇಟ್ಟಿದ್ದಾನೆ. ಹೊರಗೆ ಹೋಗುವಾಗ ಅವರಿಬ್ಬರೂ ಬಾಗಿಲು ಮುಚ್ಚಿಕೊಂಡು ಹೋಗುತ್ತಾರೆ. ”
ವಿನಾ :- ನೀವು ಇಲ್ಲಿಗೆ ಹೇಗೆ ಬಂದಿರಿ ? ೨೨
ಇಂದಿರೆ: ಅವರೇ ಮಧ್ಯ ಬಾಗಿಲು ತೆರೆದದ್ದರಿಂದ ಬಂದೆನು. ಈ ಬಾಗಿ ಲನ್ನು ಅವರು ಬೇಕಂತಾ ತೆರೆದಿಟ್ಟಿದ್ದರು. ನನ್ನ ಮೇಲೆ ನಿಮ್ಮ ಸಹಿ ತಕ್ಕೊಳ್ಳುವ ಭಾರವನ್ನು ಹಾಕಿರುವರು. ಈ ಮೃತ್ಯು ಪತ್ರದ ಮೇಲೆ ನಿಮ್ಮ ಸಹಿ ಮಾಡಿಸಿದರೆ ನಿಮ್ಮೊಡನೆ ನನ್ನ ಲಗ್ನ ಮಾಡುವ ಪ್ರಯತ್ನ ಮಾಡುತ್ತೇವೆಂದು ಹೇಳಿದ್ದಾರೆ. ”
ವಿನಾ.:-(ಈಗ ನೀವು ನನ್ನ ಕಡೆಗೆ ನನ್ನ ಸಹಿ ಮಾಡಿಸಿಕೊಳ್ಳುವದಕ್ಕೆ ಬಂದಿ ರುವಿರೇನು ? ”
ಇಂದಿರೆ:-( ಇಲ್ಲ. ತಾವು ಈ ಮೃತ್ಯು ಪತ್ರದ ಮೇಲೆ ಸಹಿ ಮಾಡೀರೆಂದು ನನಗೆ ಎಳ್ಳಷ್ಟಾದರೂ ಖಾತ್ರಿಯಿಲ್ಲ. ಮೇಲಾಗಿ ಮಾಡಬೇಕೆಂದು ನನ್ನ ಇಚ್ಛೆಯೂ ಇಲ್ಲ. ಈ ಪತ್ರದ ಮೇಲೆ ನಿಮ್ಮ ಸಹಿಯಾಗಿ, ಆ ಪತ್ರವು ನಿಜವಾದ ಪತ್ರವೆಂದು ನಿಶ್ಚಯ ವಾಗಿ ತಂದೆಗೆ ನೀಲಕಂಠರಾಯನ ಸಂಪತ್ತು ಸಿಕ್ಕದ್ದಾದರೆ ನನ್ನ ಆಯುಷ್ಯಕ್ಕೆ ಎಷ್ಟು ದುರ್ದಶಿಯು ಪ್ರಾಪ್ತವಾದೀತೆಂಬುವದನ್ನು ನೀವೇ ವಿಚಾರಮಾಡಿರಿ. ತಾವು ಇಲ್ಲಿಂದ ಬಿಡುಗಡೆಯಾಗುವ ಪ್ರಯತ್ನ ಮಾಡುವದಾದರೆ, ನಾನು ಶಕ್ತಾನುಸಾರ ಸಹಾಯ ಮಾಡುವೆನು. ಇದಕ್ಕಾಗಿ ನಿಮ್ಮ ಕಡೆಗೆ ಬಂದಿರುವೆನು. ”
ಮೊದಲೇ ವಿನಾಯಕನು ಇಂದಿರೆಯ ಅಲೌಕಿಕ ಬುದ್ದಿಯ ಸಲುವಾಗಿ ಅಶ್ಚ ರ್ಯಚಕಿತನಾಗಿದ್ದನು. ಅದರಲ್ಲಿ ತನಗೆ ಸಹಾಯ ಮಾಡುತ್ತೇನೆಂಬ ಅವಳ ಉದಾರ ಮನಸ್ಸನ್ನೂ, ಧೈರ್ಯವನ್ನೂ ನೋಡಿ ಅತ್ಯಾನಂದತುಂದಿಲನಾದನು. ಈ ಸ್ಥಿತಿಯಲ್ಲಿ
೨೩--------------------------------------------------೨ನೆಯ ಪ್ರಕರಣ-ಇಂದಿರೆಯ ಆತ್ಮ ನಿವೇದನ !
ಅವನು ತನ್ನ ಖೇದಕಾರಕ ಸ್ಥಿತಿಯನ್ನು ಮರೆತು ಅವಳ ವಿಷಯವಾಗಿ ದುಃಖಬಡು ತ್ತಿದನು. ಆಗ ಅವನು ಖೇದಮಿಶ್ರಿತ ಮಧುರಸ್ವರದಿಂದ:- “ ನಿಮ್ಮ ಮಾತಿನ ಮೇಲಿಂದ ನೀವು ಇನ್ನೂ ಅವಿವಾಹಿತರಾಗಿಯೇ ಇರುತ್ತೀರೆಂಬುವದು ಸ್ಪಷ್ಟವಾಗಿದೆ. ಒಳ್ಳೇದು, ತಂದೆಯ ಶರೆಮನೆಯಿಂದ ಮುಕ್ತರಾದ ಮೇಲೆ ಲಗ್ನ ಮಾಡಿಕೊಳ್ಳಬೇ ಕೆಂದು ನಿಮ್ಮ ವಿಚಾರವಿರಬಹುದಷ್ಟೆ ? ”
ಇಂದಿರೆ:-" ಯೋಗ್ಯ ಪತಿಯೊಡನೆ ಲಗ್ನ ವಾಗಬೇಕೆಂದು ಯಾವ ಸ್ತ್ರೀಯು ಇಚ್ಚಿಸಲಿಕ್ಕಿಲ್ಲ. ಆದರೆ ನನಗೆ ಈ ಸಂಬಂಧವಾಗಿ ಆಶೆಯಿಲ್ಲ. ಯಾಕಂದರೆ ನನ್ನ ಅಂತಃಕರಣದಲ್ಲಿ ಅಧಿಷ್ಠಿತವಾದ ರಮ್ಯ ಮೂರ್ತಿಯು ನನ್ನ ಸಂಗಡ ಲಗ್ನ ವಾಗಲಿಕ್ಕೆ ಒಪ್ಪಲಿಕ್ಕಿಲ್ಲೆಂದು ನನಗೆ ಸಂಪೂರ್ಣವಾಗಿ ತಿಳಿದದೆ. ”
ವಿನಾ:- ಅವರ ಹೆಸರನ್ನು ನನಗೆ ತಿಳಿಸಿದರೆ, ನನ್ನ ಬಿಡುಗಡೆಯಾದ ನಂತರ ನಾನು ಮಿತಿಮೀರಿ ಪ್ರಯತ್ನ ಮಾಡಿ ಅವರೊಡನೆ ನಿಮ್ಮ ಲಗ್ನ ವಾಗುವಂತೆ ವ್ಯವಸ್ಥೆ ಮಾಡೇನು, ”
ಇಂದಿರೆ:-( ನಾಚಿಕೆಯಿಂದ ) ಅವರ ಹೆಸರು ಹೇಳುವದರಲ್ಲಿ ವಿಶೇಷವಿಲ್ಲ. ನಾನು ಅವರನ್ನು ಚನ್ನಾಗಿ ಬಲ್ಲೆನು. ಅವರನ್ನು ಲಗ್ನವಾಗಬೇಕೆಂದು ನನಗೆ ತೋರ ಹತ್ತಿ ಬಹಳ ದಿವಸಗಳಾದವು. ನಾನು ತೀರ ನಿರ್ದೋಷ ಸ್ಥಿತಿಯಲ್ಲಿರುವಾಗ ಅವರ ಸಂಗಡ ನನ್ನ ಲಗ್ನ ಮಾಡಬೇಕೆಂದು ಒಬ್ಬ ಗೃಹಸ್ಥನು ಎಷ್ಟೋ ಪ್ರಯತ್ನ ಮಾಡಿ ದನು; ಆದರೆ ಅವರು ಸಮಾಜಿಸ್ಟರಾಗಿಲ್ಲವೆಂಬ ಕಾರಣದಿಂದ ಅವರ ಸಂಗಡ ನನ್ನ ಲಗ್ನ ಮಾಡಲಿಕ್ಕೆ ತಂದೆಯು ಒಪ್ಪಲಿಲ್ಲ. ಆಗ ಈ ಮಾತು ಅವರಿಗೆ ತಿಳಿದಿದ್ದಿ ತೋ ಇಲ್ಲೋ ನನಗೆ ಪರಿಚಯವಿಲ್ಲ. ನನಗೆ ಈ ಮಾತು ತಿಳಿದಿದ್ದಿತು. ಅಂದಿನಿಂದ ಆ ರಮ್ಯ ಮೂರ್ತಿಯನ್ನು ಅನೇಕ ಸಾರೆ ನೋಡಿದ್ದರಿಂದ ಅವರ ಸಂಗಡಲೇ ಲಗ್ನವಾಗ ಬೇಕೆಂಬ ಇಚ್ಛೆಯು ಪ್ರಬಲವಾಯಿತು. ನನ್ನ ಮನಸ್ಸನ್ನು ಸಂಪೂರ್ಣವಾಗಿ ಎಳ ಕೊಳ್ಳುವಂಥ ಅವರ ಸಂಬಂಧವಾದ ಎಷ್ಟೋ ಮಾತುಗಳು ನನ್ನ ಕಿವಿಗೆ ಬಂದು ತಾಕಿರುತ್ತವೆ. ಅವರು ಅತ್ಯಂತ ಸದ್ದು ಣಿಗಳೂ, ಸುಶೀಲರೂ ಇರುತ್ತಾರೆ. ಅವರ ಸಂಗಡ ನಾನು ಲಗ್ನ ವಾಗಬೇಕೆಂದು ಹಂಬಲಿಸುವದಂತೂ ನಿಜ, ಆದರೆ ಈ ಚಮ ತ್ಯಾರಿಕ ಪರಿಸ್ಥಿತಿಯಲ್ಲಿರುವ ನನ್ನ ಸಂಗಡ ಲಗ್ನ ವಾಗುವದು, ಅವರ ಲೋಕವ್ಯವ ಹಾರಕ್ಕೆ ಭಂಗ ತರುವದಾದದ್ದರಿಂದ ಲಗ್ನವನ್ನು ಆಗದಿರುವದೇ ಶ್ರೇಯಸ್ಕರವಾಗಿದೆ. ನಾನು ಅವರಲ್ಲಿ ಏಕನಿಷ್ಠಾ ಪ್ರೇಮವನ್ನು ಇಟ್ಟಿದ್ದೇನೆ. ಮನಸ್ಸಿನಿಂದ ಅವರನ್ನು ವರಿಸಿ ದೇನೆ. ಅವರ ಮಂಗಲಚಿಂತನದಲ್ಲಿಯೇ ಆಯುಷ್ಯವನ್ನು ಕಳೆಯಬೇಕೆಂದು ನಿಶ್ಚಯಮಾಡಿದ್ದೇನೆ. ಅವರ ಹೆಸರು ಹೇಳಿದರೆ ಅವರ ಪವಿತ್ರತೆಯನ್ನು ಕಡಿಮೆ ಮಾಡಿದಂತಾಗುತ್ತದೆ, ಆದದ್ದರಿಂದಲೇ ನಾನು ನಿಮಗೆ ಅವರ ಹೆಸರು ಹೇಳಿಲ್ಲ. ಈ ಬಗ್ಗೆ ಕ್ಷಮಿಸಬೇಕು ?
೨೪------------------------------------------------- ದಿವ್ಯ ಸು೦ದ ಅಥವಾ ದೀರ್ಘ ಪ್ರಯತ್ನ,
ಈಗ ಇಂದಿರೆಯ ವಿಷಯವಾಗಿ ವಿನಾಯಕನ ಮನಸ್ಸಿನಲ್ಲಿ ಆದರವು ಹುಟ್ಟಿತು. ಅವನು ಇಲ್ಲಿಯವರೆಗೆ ಅವಳನ್ನು ಚನ್ನಾಗಿ ನೋಡಿರಲಿಲ್ಲ. ಈಗ ಅವಳ ಉದಾತ್ತ ವಿಚಾರವನ್ನು ಕೇಳಿದ ಕೂಡಲೆ ತನ್ನ ನಿರ್ಮಲ ದೃಷ್ಟಿಯನ್ನು ಅವಳ ಮೇಲೆ ಒಗೆದು, ಸಹಾನುಭೂತಿಪೂರ್ವಕ ಒಂದು ದುಃಖದ ಸುಸ್ಕಾರವನ್ನು ಬಿಟ್ಟನು. ಇಷ್ಟರಲ್ಲಿ ಅವನಿಗೆ ತನ್ನ ಕೈದಿನ ಬಗ್ಗೆ ಸ್ಮರಣೆಯಾಯಿತು. ಕೂಡಲೆ ಅವನು:- ನಿಮ್ಮ ಸ್ಥಿತಿಯು ಅತ್ಯಂತ ಶೋಚನೀಯವಾದದ್ದೆಂಬುವದರಲ್ಲಿ ಸಂಶಯವಿಲ್ಲ. ಇಲ್ಲಿಂದ ನನ್ನ ಬಿಡುಗಡೆಯಾದ ಮೇಲೆ ನಿಮ್ಮ ಬಗ್ಗೆ ಪ್ರಯತ್ನ ಮಾಡುವೆನು. ” ಹೀಗನ್ನುತ್ತ ಘಡಿ ಯಾಲವನ್ನು ನೋಡಿ:-ಒಂದು ಹೊಡೆಯಿತು. ಈಗ ನನ್ನ ಬಿಡುಗಡೆಯ ಬಗ್ಗೆ ಯಾವ ಪ್ರಯತ್ನ ಮಾಡುವಿರಿ ? "
ಇಂದಿರೆ:-( ನೀವು ಹೇಳಿದ್ದು ಮಾಡುವೆನು. ”
ವಿನಾ:-( ನನ್ನ ಬಿಡುಗಡೆಯಿಂದ ಶಾಮರಾಯನು ನಿಮ್ಮ ಮೇಲೆ ಸಂಶಯ ವನ್ನು ಕಲ್ಪಿಸುತ್ತಾನೋ ಹೇಗೋ ? ”
ಇಂದಿರೆ:- ಏನೂ ಸಂಬಂಧವಿಲ್ಲ. ಈ ಬಗ್ಗೆ ನೀವು ಚಿಂತೆಮಾಡುವ ಕಾರ ಣವಿಲ್ಲ. ”
* ವಿನಾ:- ( ಈ ದಿವಾಣಖಾನೆಯಿಂದ ಹೊರಬೀಳಲಿಕ್ಕೆ ಯಾವ ತರದ ಮಾರ್ಗವೂ ಇಲ್ಲ. ನಿಮ್ಮ ಕೋಣೆಯಿಂದ ಹೊರಬೀಳಲಿಕ್ಕೆ ಕಡೆಗೆ ಹಾರಿಹೋಗಲಿಕ್ಕೆ ಕಿಡಿಕಿ ಮೊದಲಾದವುಗಳ ಅನುಕೂಲವದೆಯೇ ಹೇಗೆ ? ”
ಇಂದಿರೆ:-ಕಿಡಿಕಿ ಮೊದಲಾದವೇನೂ ಇಲ್ಲ. ಅದಕ್ಕೆ ಎರಡು ಬಾಗಿಲುಗಳಿ ದ್ದರೂ ಅವನ್ನು ತಂದೆಯು ಹೋಗುವಾಗ ಮುಚ್ಚಿಕೊಂಡು ಹೋಗಿರುತ್ತಾನೆ. ಯಾಕೆ, ತಾವು ನನ್ನ ಹಿಂದೆ ಬಿ. ಅಂದರೆ ಅದನ್ನು ನೋಡಿದರೆ ಯಾವತ್ತೂ ತಿಳಿಯುವದು ?
ಹೀಗನ್ನುತ್ತ ತನ್ನ ಖುರ್ಚಿಯ ಮೇಲಿಂದ ಎದ್ದಳು. ವಿನಾಯಕನೂ ಪಲಂಗದ ಮೇಲಿಂದೆದ್ದು ಅವಳ ಹಿಂದೆ ಕೋಣೆಯ ಕಡೆಗೆ ತಿರುಗಿದನು. ಆಗ ಅವನಿಗೆ ಬಹಳ ತಾಪವಾಗಿದ್ದಿತು. ಹೊಟ್ಟೆಯ ಹಸಿವೆಯಾಗಿದ್ದು ಬಾಯಿಯು ಒಣಗಿಹೋಗಿದ್ದಿತು; ಆದರೂ ಅವನಿಗೆ ಏನಾದರೂ ತಿನ್ನುವ ಇಚ್ಛೆಯಾಗಲಿಲ್ಲ. ಫಲಾಹಾರವಿದ್ದ ಸ್ಥಳದಲ್ಲಿ ಯೇ ನೀರಿನ ತಂಬಿಗೆಯಿದ್ದಿತು. ಬಾಯಿಯು ಒಣಗಿದ್ದರಿಂದ ಸ್ವಲ್ಪ ನೀರು ಕುಡಿಯ ಬೇಕೆಂದು ಅವನು ತಂಬಿಗೆಯೊಳಗಿಂದ ಬಾಂಬುವಿನೊಳಗೆ ನೀರು ಹಾಕಿಕೊಂಡು ಅದನ್ನು ಬಾಯಿಗೆ ಹಚ್ಚಿದನು. ಇಷ್ಟರಲ್ಲಿ ಇಂದಿರೆಯು ಒಳಗಿಂದ ಓಡಿಬಂದು ( ಹಾ, ಹಾ, ನೀರು ಕುಡಿಯಬೇಡಿರಿ. ಅದರಲ್ಲಿ ಮದವೇರುವ ಔಷಧವನ್ನು ಕೂಡಿಸಿ ದ್ದಾರೆ! ” ಎಂದು ಅನ್ನುವಷ್ಟರಲ್ಲಿ ಅವನು ಒಂದೆರಡು ಗುಟುಕು ನೀರು ಕುಡಿದನು. ಅವಳ ಆ ಶಬ್ದವನ್ನು ಕೇಳಿ ಅವನು ಜಾ೦ಬುವನ್ನು ಕೆಳಗಿಟ್ಟು ಹೆದರಿ:-( ನಿಜವಾಗಿ
೨೫---------------------------------------------------------- ೨ನೆಯ ಪ್ರಕರಣ- ಇಂದಿರೆಯ ಆತ್ಮ ನಿವೇದನ !
ಇದರಲ್ಲಿ ಮದವೇರುವ ಔಷಧವದೆಯೇ ? ಇದರಿಂದ ನನ್ನ ಮೇಲೆ ಏನು ಪರಿಣಾಮ ವಾಗುವದೋ ಏನೋ ! ”
ಇಂದಿರೆ:-( ನೀವಿಷ್ಟು ಹೆದರಬೇಡಿರಿ, ಒಳಗೆ ಮೋರಿಯದೆಅದರಲ್ಲಿ ಮುಂಚೆ ನೀವು ಆ ನೀರನ್ನು ಕಾರುವ ಪ್ರಯತ್ನ ಮಾಡಿರಿ. ”
ವಿನಾ:-(ಕಾರಿ) ಆ ನೀರು ವಿಷವಿರುತ್ತವೆ. ಈ ಬಗ್ಗೆ ಮೊದಲೇ ನೀವು ನನಗೆ ಯಾಕೆ ಹೇಳಲಿಲ್ಲ? ನವಕರನು ತಂದಿಟ್ಟ ಕೂಡಲೆ ಆ ನೀರನ್ನು ನಾನು ಕುಡಿದಿದ್ದರೆ ಒಳ್ಳೆ ಅನರ್ಥವಾಗುತ್ತಿದ್ದಿತು. ನನಗೆ ಈ ಪ್ರಕಾರ ವಿಷದ ನೀರು ಕುಡಿಸುವ ಅವರ ಉದ್ದೇಶವಾದರೂ ಯಾವದು ???
ಇಂದಿರೆ: ಆ ನೀರು ವಿಷದ ನೀರಲ್ಲ. ಒಂದು ಪ್ರಕಾರದ ಮದವೇರಿಸುವ ನೀರು ಇರುತ್ತವೆ. ಆ ಮದದಲ್ಲಿ ಮನುಷ್ಯನಿದ್ದನೆಂದರೆ ಹೇಳಿದ ಹಾಗೆ ಕೇಳುತ್ತಾನೆ. ಆ ನೀರಿನಿಂದ ನೀವು ಮದವೇರಿದ ಕೂಡಲೆ ನಿಮ್ಮ ಸಹಿ ತಕೊಳ್ಳಬೇಕೆಂದು ತಂದೆಯ ಪ್ರಯತ್ನವಿದ್ದಿತು. ಈ ನೀರಿನ ಮದವು ಸುಮಾರು ೧೨ ತಾಸು ಇರುತ್ತದೆ. ನಿಮಗೆ ಈಗ ಮದವೇರಲಿಕ್ಕಿಲ್ಲ. ಒಂದುವೇಳೆ ಏರಿದರೂ ಅದು ಸ್ವಿ' ಏರಿತು. ಈ ನೀರನ್ನು ನೀವು ಕುಡಿದೀರೆಂದು ನಾನು ಮೊದಲಿನಿಂದಲೇ ಲಕ್ಷವಿಟ್ಟಿದ್ದೆನು. ನೀವು ಫಲಾಹಾರಕ್ಕೆ ಕುಳಿತಕೂಡಲೆ ನಾನು ಸೂಚಿಸುತ್ತಿದ್ದನು. ಆದರೆ ನೀವು ಫಲಾಹಾರ ಮಾಡದೆ ಹಾಗೆಯೇ ಮಲಗಿದ್ದರಿಂದ ನನಗೆ ಸೂಚಿಸುವ ಭಾಗವು ಉಳಿಯಲಿಲ್ಲ. ಇರಲಿ, ಆ ಸಂಬಂಧವಾಗಿ ನೀವೆಷ್ಟೋ ಆಲೋಚಿಸಬೇಡಿರಿ. ಬರಿ, ನನ್ನ ಕೋಣೆಯನ್ನು ನೋಡಿರಿ.”
ವಿನಾಯಕನು ತನ್ನ ಭವಿತವ್ಯದ ವಿಚಾರಮಾಡುತ್ತ, ಕೂಡಲೆ ಅವಳ ಕೋಣೆ ಯಲ್ಲಿ ಹೋದನು, ಮತ್ತು ಕೊಣೆಯನ್ನು ಚನ್ನಾಗಿ ನಿರೀಕ್ಷಣಮಾಡಹತ್ತಿದನು. ಆ ಕೋಣೆಯಲ್ಲಿ ವಿದ್ಯುಲ್ಲತೆಯ ದೀವಿಗೆಯೊಂದು ಮಾತ್ರ ಇದ್ದಿತು. ಬೀಸಣಿಕೆಯಿದ್ದಿಲ್ಲ. ಆ ಕೋಣೆಯಾದರೂ ಒಳ್ಳೆ ಗಟ್ಟಿಮುಟ್ಟಾಗಿದ್ದು ಅದಕ್ಕೆ ಒಂದೂ ಕಿಡಿಕಿಯಿದ್ದಿಲ್ಲ. ಆ ಕೋಣೆಗೆ ಮೇಲೆ ಕಟ್ಟಿಗೆಯ ಛತ್ತಿದ್ದು ಇಳಿಜಾರಾಗಿದ್ದಿತು. ಅದರಿಂದ ವಿನಾಯಕನಿಗೆ ಸ್ವಲ್ಪ ಸಂತೋಷವಾಯಿತು. ಆ ಕಟ್ಟಿಗೆಯ ಛತ್ತಿನ ಯಾವದೊಂದು ಹಲಿಗೆಯನ್ನು ತೆಗೆದರೆ ಏನಾದರೂ ಪಾರಾಗಿ ಹೋಗುವ ಮಾರ್ಗವು ಸಿಕ್ಕಿತೆಂದು ಅವನಿಗೆ ಆಶೆಯು ಹುಟ್ಟಿತು. ಅದರ ಮೇಲೆ ಮಂಗಳೂರಿನ ಗಟ್ಟಿ ಮುಟ್ಟ ಹಂಚುಗಳನ್ನು ಹೊಚ್ಛಿರಬಹು ದೆಂದು ಅವನ ಕಲ್ಪನೆಯಿದ್ದರೂ ಎಲ್ಲಿ ಕಬ್ಬಿಣದ ಹಲಿಗೆಗಳನ್ನು ಕೂಡ್ರಿಸಿರುವರೋ ಏನೋ ಎಂಬ ಸಂಶಯದಿಂದ ಮೇಲೆ ಹೆಚ್ಚಿಗೆ ಏನು ? ” ಎಂದು ಇಂದಿರೆಗೆ ವಿಚಾರಿಸಿದನು. ಇಂದಿರೆಯು ( ಮಂಗಳೂರಿನ ಹಂಚು ಇರುತ್ತವೆ.” ಎಂಬದಾಗಿ ಹೇಳಿದ ಮೇಲೆ ಅವನಿಗೆ ಬಹಳ ಆಶಯು ಹುಟ್ಟಿ, ಯಾವ ಉಪಾಯದಿಂದ ಹಲಿಗೆ
೬-----------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಯನ್ನು ತೆಗೆಯಬೇಕೆಂದು ಅವನು ವಿಚಾರಮಾಡಹತ್ತಿದನು. ಅವನು ಇಂದಿರೆಗೆ ಕೋಣೆಯ ಒಂದು ದಿಕ್ಕಿಗೆ ಬೊಟ್ಟು ತೋರಿಸಿ ( ಈ ಭಾಗಕ್ಕೆ ಕೋಣೆಯ ಆಚೆಕಡೆಗೆ ಏನದೆ? ” ಎಂದು ಕೇಳಿದನು. ಇಂದಿರೆಯು ( ಆ ಕಡೆಗೆ ಒಂದು ಸಣ್ಣ ಕೋಣೆಯ ಭಾಗವು ಬಂದಿದೆ. ಆ ಕೋಣೆಗೆ ಅಭ್ಯವಿದ್ದು ಅದು ತೋಟದ ಹಿಂದಿನ ಭಾಗಕ್ಕೆ ಹೋಗಿದೆ.” ಎಂದಳು. ಇ೦ದಿರೆಯ ಈ ಶಬ್ದವನ್ನು ಕೇಳಿಯಂತೂ ವಿನಾಯಕನಿಗೆ ಬಹಳೇ ಸಮಾಧಾನವಾಯಿತು. ಅವನು ಇಂದಿರೆಯ ಪಲಂಗವನ್ನು ಸ್ವಲ್ಪ ಆಚೆ ಕಡೆಗೆ ಎಳಕೊಂಡು ಅದರ ಮೇಲೆ ಒಂದು ಖುರ್ಚಿಯನ್ನಿಟ್ಟನು. ಮತ್ತು ಬೊಕ್ಕಣ ದೊಳಗಿಂದ ಚಾಕುವನ್ನು ತೆಗೆದು ಅದರ ತುದಿಯಿಂದ ಅವನು ಛತ್ತಿನ ಹಲಿಗೆಯ ಸ್ಕೂವನ್ನು ಸಡಿಲು ಮಾಡಹತ್ತಿದನು. ಹಲಿಗೆಯು ತೆಳ್ಳಗಿದ್ದು ಸ್ಕೂವು ಸಣ್ಣದಿದ್ದು ದರಿಂದ ಚಾಕುವಿನ ಸಹಾಯದಿಂದ ಆ ಹಲಿಗೆಯು ಕಡೆಗೆ ಬಂದಿತು. ಆಗ ಅದರ ಮೇಲೆ ಹಂಚುಗಳು ಕಾಣಿಸಹತ್ತಿದವು. ಖುರ್ಚಿಯ ಮೇಲೆ ನಿಂತುಕೊಂಡು ವಿನಾ ಯಕನು ಒಂದು ಹಂಚನ್ನು ತಲೆಯಿಂದ ಮೇಲಕ್ಕೆತ್ತುವ ಪ್ರಯತ್ನ ಮಾಡಿದನು. ಆ ಹಂಚುಗಳು ಒಳ್ಳೆ ಗಟ್ಟಿಯಾಗಿ ಕೂಡ್ರಿಸಿದ್ದವು. ವಿನಾಯಕನು ಮೊದಲೇ ಶಕ್ತಿ ಸಂಪನ್ನನು. ಅದರಲ್ಲಿ ಈಗ ಸಮಯವಿದ್ದದ್ದರಿಂದ ಅವನ ಶಕ್ತಿಯು ದ್ವಿಗುಣಿತವಾಯಿತು. ಅವನು ತಲೆಯಿಂದ ೨-೩ ಸಾರೆ ಆಘಾತ ಕೊಟ್ಟ ಕೂಡಲೆ ಒಂದು ಹಂಚು ಮೇಲಕ್ಕೆ ದ್ದಿತು. ಆಗ ಅದನ್ನು ಓರೆಮಾಡಿ ಆಕಾಶದೊಳಗಿನ ತಾರಾಮಂಡಲದ ದರ್ಶನ ತಕ್ಕೊಂ ಡನು. ಆ ವೇಳೆಯಲ್ಲಿ ಅವನಿಗೆ ಆದ ಆನಂದವು ಅವರ್ಣನೀಯವಾಗಿದ್ದಿತು. ಮಧ್ಯ ದಲ್ಲಿಯ ಒಂದು ಹಂಚು ಬದಿಗಾದದ್ದರಿಂದ ಎಡಬಲದ ಹಂಚುಗಳೂ ಬದಿಗಾದವು. ಆಗ ಅವನು ಮತ್ತೊಂದು ಹಂಟು ತೆಗೆಯಲಾಗಿ ಅವನಿಗೆ ಸಾಕಷ್ಟು ಹಾದಿಯಾಯಿತು. ಇಷ್ಟಾಗಲಿಕ್ಕೆ ಒಂದೂವರಿ ಹೊಡೆಯಿತು. ಹೋಗಲಿಕ್ಕೆ ಮಾರ್ಗವಾದಕೂಡಲೆ ಅವನ ತಲೆಯಲ್ಲಿ ಮತ್ತೊಂದು ಕಲ್ಪನೆಯು ಹುಟ್ಟಿತು. ಆಗ ಅವನು ಇಂದಿರೆಯನ್ನು ಕುರಿತು:- ನಿಮ್ಮಲ್ಲಿ ಒಂದು ಚಲೋ ಕುಡಗೋಲು ಅದೆಯೇನು ? ” ಎಂದನು. ಆಗ ಇಂದಿರೆಯು ( ಅದೆ ” ಎಂದನ್ನು ತನ್ನ ಪಲಂಗದ ಮೇಲಿನ ಗಾದಿಯ ಬುಡ ದಲ್ಲಿದ್ದ ತೀಕ್ಷ್ಯಧಾರೆಯ ಥಳಥಳ ಹೊಳೆಯುವ ಒಂದು ಸಣ್ಣ ಕತ್ತಿಯನ್ನು ವಿನಾಯ ಕನ ಕೈಯಲ್ಲಿ ಕೊಟ್ಟಳು. ಆ ಕತ್ತಿಯು ವಿಲಾಯತಿಯದಿದ್ದು ಬಹಳ ಹದನವಾಗಿ ದ್ದಿತು. ಆ ಕತ್ತಿಯನ್ನು ನೋಡಿದ ಕೂಡಲೆ ಅವನಿಗೆ ಬೇರೊಂದು ಸಂಶಯವು ಬಂದು ಇಂದಿರೆಗೆ:-( ಇಂಥ ತೀಕ್ಷ್ಯ ಧಾರೆಯ ಕತ್ತಿಯನ್ನು ನೀವು ಯಾತರಸಲುವಾಗಿ ಇಟ್ಟು ಕೊಂಡಿರುವಿರಿ? ” ಎಂದು ಕೇಳಲು ಅದಕ್ಕೆ ಇಂದಿರೆಯು ಉತ್ತರವನ್ನು ಕೊಡದೆ ತಾನು ಉಟ್ಟುಕೊಂಡ ಪತ್ರಲದ ಸೆರಗಿನಿಂದ ಮುಖವನ್ನು ಮರೆಮಾಡಿಕೊಂಡು ಅಳ ಹತ್ತಿದಳು.
೨೭--------------------------------------------೨ ನೆಯ ಪ್ರಕರಣ- ಇ೦ದಿರೆಯ ಆತ್ಮನಿವೇದನ !
ಆಗ ವಿನಾ:-ನನ್ನ ಪ್ರಶ್ನೆಗೆ ನೀವು ಉತ್ತರವನ್ನು ಕೆಣಡದೆ ಹೀಗೆ ಅಳುವ ಕಾರಣವೇನು ? ನೀವು ಯಾವ ರೀತಿಯಿಂದಲೂ ನನ್ನಲ್ಲಿ ಅನುಮಾನಗ್ರಸ್ತರಾಗದೆ ನಿಜವಾದ ಕಾರಣವನ್ನು ಹೇಳಿರಿ.”
ಇಂದಿರೆ:- ( ನಿರುಪಾಯಳಾಗಿ ) ಇಂಥ ಚಮತ್ಕಾರಿಕ ಪರಿಸ್ಥಿತಿಯಲ್ಲಿ ಯಾವಾಗ ಎಂಥೆಂಥ ಮಾನಭಂಗವಾಗುವ ಪ್ರಸಂಗಗಳು ಬರುತ್ತವೆಂಬುವದಕ್ಕೆ ನಿಯಮವಿಲ್ಲ. ಅಂಥ ಮಾನಭಂಗವಾಗುವ ಪ್ರಸಂಗವು ಬಂದಲ್ಲಿ ದೇಹಪಾತವನ್ನು ಮಾಡಿಕೊಳ್ಳುವದಕ್ಕಾಗಿ ಇಂಥ ಪಂಚಪ್ರಾಣದ ಮೈತ್ರಿಣಿಯ ಹೊರ್ತು ಎರಡನೆಯ ವರು ಯಾರೂ ಉಪಯೋಗ ಬೀಳುವದಿಲ್ಲವೆಂದು ! ”
ವಿನಾ:- ಇಂದಿರೆ, ನೀವು ಹೀಗೆ ಹುಚ್ಚರಂತೆ ಮಾಡಬೇಡಿರಿ. ಆತ್ಮಹತ್ಯ ದಂಥ ಭಯಂಕರ ಪಾಪವು ಜಗತ್ತಿನಲ್ಲಿ ಮತ್ತೊಂದಿಲ್ಲ. ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿಯೂ, ಪವಿತ್ರವಾಗಿಯೂ ಇಡಿರಿ, ಅಂದರಾಯಿತು. ಯಾರ ಮಾನಸಿಕ ಸಾಮರ್ಥ್ಯವು ಅತ್ಯಂತ ಉಜ್ವಲವಾಗಿರುವದೋ, ಅವರ ಮೇಲೆ ಬೇಕಾದವರು ಬೇಕಾ ದಷ್ಟು ಬಲಾತ್ಕಾರಮಾಡಿದರೂ ಅವರಿಂದ ಅನ್ಯಥಾಚರಣೆಯು ಸಂಭವಿಸಲಾರದು ಯಾವಾಗಲೂ ಮನಸ್ಸಿನ ಪ್ರವೃತ್ತಿಯು ಸನ್ಮಾರ್ಗದಕಡೆಗೆ ಇದ್ದಿತೆಂದರೆ ಎಂಥ ಸಂಕ ಟದಲ್ಲಿಯಾದರೂ ಪರಮೇಶ್ವರನು ಪಾರುಮಾಡುತ್ತಾನೆ. ಮನುಷ್ಯನು ಮೃತ್ಯುವಿನ ನಿಮಂತ್ರಣಕ್ಕೆ ಯಾವಾಗಲೂ ಸಿದ್ಧನಾಗಿರುವಾಗ ಅವನಿಗೆ ಆತ್ಮಹತ್ಯವು ಯಾಕೆ ಬೇಕು ? ನೀವು ನಿಮ್ಮ ಶೀಲಸಂವರ್ಧನದ ಪ್ರಯತ್ನವನ್ನು ಬಿಡಬೇಡಿರಿ; ಪೂರ್ವ ಕಾಲದಲ್ಲಿ ಆಗಿಹೋದ ಸಾಧಿಯರ ಚರಿತ್ರವನ್ನು ಕಣ್ಣಿನ ಮುಂದೆ ಇಡಿರಿ. ಮಾನಸಿಕ ದೌರ್ಬಲ್ಯದ ವಿಚಾರವನ್ನು ಎಂದೂ ಮನಸ್ಸಿನಲ್ಲಿ ತರಬೇಡಿರಿ.” ಹೀಗ ನ್ನು ಸ್ವಲ್ಪ ಹೊತ್ತು ನಿಂತು:- ನಿಮ್ಮ ಕಡೆಗೆ ಮೇಣಬತ್ತಿಯಿದ್ದರೆ ಹಚ್ಚಿರಿ. ಈಗ ವಿದ್ಯುಲ್ಲತೆಯ ದೀವಿಗೆಯನ್ನು ಹಚ್ಚಬೇಕಾಗಿದೆ.”
(C ಅದೆ, ಹಚ್ಚುವೆನು. ” ಎಂದನ್ನು ಇಂದಿರೆಯು ತನ್ನ ಪೆಟ್ಟಿಗೆಯೊಳಗಿಂದ ಒಂದು ಮೇಣಬತ್ತಿಯನ್ನು ತೆಗೆದು ಅದನ್ನು ಹಚ್ಚಿ ಒಂದು ಟೇಬಲ್ಲಿನ ಮೇಲಿಟ್ಟಳು. ನಂತರ ವಿನಾಯಕನು ದಿವಾಣಖಾನೆಯೊಳಗಿನ ದೀವಿಗೆಯನ್ನು ಹಚ್ಚಿ, ಬೀಸಣಿಕೆಯ ತಿರುಗುವಿಕೆಯನ್ನು ಕಡಿಮೆ ಮಾಡಿದನು. ಮತ್ತು ದೀವಿಗೆಯ ಹತ್ತರ ವಿದ್ಯುಲ್ಲತೆಯ ತಂತಿಯನ್ನು ಆ ಖಡ್ಡದಿಂದ ಹರಿದು ಅದನ್ನು ಬಿಡುತ್ತ ಬಿಡುತ್ತ ಅವನು ದಿವಾಣ ಖಾನೆಯೊಳಗೆ ಬರುವ ಪ್ರವೇಶದ್ವಾರದ ತನಕ ಒಯ್ದನು. ಅಲ್ಲಿ ವಿದ್ಯುಲ್ಲತೆಯ ಪ್ರವಾಹ ವನ್ನು ಬಿಡತಕ್ಕ ತಂತಿಯನ್ನು ಮೇಲ್ಬಾಗಕ್ಕೂ, ಪ್ರವಾಹರೋಧಕ ತಂತಿಯನ್ನು ಕೆಳ ಭಾಗಕ್ಕೂ ಇಟ್ಟನು. ಇದೇ ಪ್ರಕಾರ ಅವನು ಇಂದಿರೆಯ ಕೋಣೆಯೊಳಗಿನ ದೀವಿ ಗೆಯನ್ನು ಹೊತ್ತಿಸಿ, ಅದರ ತಂತಿಯನ್ನು ಪ್ರವೇಶದ್ವಾರದ ಕೋಣೆಯ ಮೇಲಿಟ್ಟನು.
೨೮-------------------------------------------- ದಿವ್ಯ ಸು೦ದರಿ ಆಥವಾ ದೀರ್ಘ ಪ್ರಯತ್ನ,
ಇಷ್ಟು ಸಿದ್ಧತೆಯನ್ನು ಮಾಡಲಿಕ್ಕೆ ವಿನಾಯಕನ ಉದ್ದೇಶವೇನಿದ್ದಿ ತೆಂದು ವಾಚಕರು ಪ್ರಶ್ನೆ ಮಾಡಬಹುದು.-ಆ ಬಾಗಿಲಿನೊಳಗೆ ಕೀಲಿಯಿದ್ದು, ಅದು ಒಂದೇ ಕೈಯಿಂದ ಒಳಗೂ ಹೊರಗೂ ಕೂಡಿಯೇ ಕೀಲಿಬೀಳುತ್ತಿದ್ದಿತು. ಅರ್ಥಾತ್ ಆ ಬಾಗಿಲನ್ನು ಒಳಗಿನಿಂದ ಬಂದುಮಾಡಲಿಕ್ಕೆ ಸವಡಿಲ್ಲವಾದದ್ದರಿಂದ ವಿನಾಯಕನು ಈ ಹೊಸ ಯುಕ್ತಿಯನ್ನು ಮಾಡಬೇಕಾಗಿದ್ದಿತು. ಅವನು ಆ ತಂತಿಯನ್ನು ಇಟ್ಟು ಇನ್ನು ಬಿಡು ಗಡೆಯಾಗಬೇಕೆನ್ನುವಷ್ಟರಲ್ಲಿ ಅಟ್ಟದ ಮೇಲೆ ಬೂಟಿನ ಖಾಡ ಖಾಡ ಸಪ್ಪಳವಾಗ ಹತ್ತಿತು. ಆ ಕೂಡಲೆ ಇಂದಿರೆಯು ತ್ವರೆಮಾಡಿ ಹೊರಬೀಳಿರಿ. ” ಎಂದಳು. ಇಂದಿ ರೆಯ ಶಬ್ದವನ್ನು ಕೇಳುತ್ತಲೇ ವಿನಾಯಕನು ಅತಿ ಬೇಗ ವಿದ್ಯುತ್ಪವಾಹವನ್ನು ಆರಂಭಿಸಿದನು. ಮತ್ತು ಅವನು ಅವಳ ಕೈಯಲ್ಲಿ ಕತ್ತಿಯನ್ನು ಕೊಟ್ಟು :-( ಕೇವಲ ನಿಮ್ಮ ಕೃಪೆಯಿಂದಲೇ ನಾನು ಬಿಡುಗಡೆಯಾಗುತ್ತೇನೆ; ಈ ಸಂಬಂಧವಾಗಿ ನಿಮ್ಮ ಆಭಾರವನ್ನು ಎಷ್ಟು ಮನ್ನಿಸಿದರೂ ಕಡಿಮೆಯೇ ಸರಿ. ನನ್ನ ಸಲುವಾಗಿ ನಿಮಗೆ ನಿಮ್ಮ ತಂದೆಯಿಂದ ಎಷ್ಟೋ ತೊಂದರೆಯಾಗುವ ಸಂಭವವದೆ, ಅದಕ್ಕಾಗಿ ನಾನು ಮೊದಲು ಕ್ಷಮೆ ಬೇಡುತ್ತೇನೆ. ನಿಮಗೆ ನಿಮ್ಮ ಆಣೆಯದೆ-ಯಾರ ಮೇಲೆ ನೀವು ಏಕನಿಷ್ಠಾ ಪ್ರೇಮವನ್ನು ಮಾಡುತ್ತೀರೋ ಅವರಾಣೆಯಾಗಿ-ನೀವು ಆತ್ಮಹತ್ಯವನ್ನು ಮಾಡಿ ಕೊಳ್ಳಬೇಡಿರಿ! ” ಎಂದನ್ನುತ್ತ ತನ್ನ ನಿರ್ಮಲವಾದ ಪ್ರೇಮದೃಷ್ಟಿಯನ್ನು ಅವಳ ಮೇಲೆ ಒಗೆದು, ಆ ದೃಷ್ಟಿಯಿಂದಲೇ ಅವಳ ಕರುಣಾಜನಕದೃಷ್ಟಿಯ ನಿರೋಪವನ್ನು ತಕ್ಕೊಳ್ಳುತ್ತ ಪಲಂಗದ ಮೇಲಿನ ಖರ್ಚೆಯನ್ನು ಹತ್ತಿ ಹಂಚಿನ ಮೇಲೆ ಹೋದನು. ಅಲ್ಲಿಂದ ಅವನು ಮೆಲ್ಲನೆ ಕೋಣೆಯಲ್ಲಿ ಹೋಗಿ ಮುಂದೆ ಅಟ್ಟದಿಂದ ಕೆಳಗೆ ತೋಟ ದಲ್ಲಿ ಹೋಗಿ ಹೊರಬೀಳುವ ಮಾರ್ಗವನ್ನು ಶೋಧಿಸಹತ್ತಿದನು. ಇತ್ತ ಶಾಮರಾಯ ಗೋಪಾಲರು ಹೊರಗಿನಿಂದ ಬಂದಕೂಡಲೆ ತಮ್ಮ ದಿವಾಣಖಾನೆಯಲ್ಲಿ ಹೋಗಿ ಯುರೋಪಿಯನ್ ಪದ್ಧತಿಯ ತಂತಮ್ಮ ಪೋಷಾಕನ್ನು ತೆಗೆದಿಟ್ಟು ವಿನಾಯಕನ ದಿವಾಣಖಾನೆಯ ಬಾಗಿಲು ತೆಗೆದು ಒಳಗೆ ಹೋಗಹತ್ತಿದರು; ಆದರೆ ಅಷ್ಟರಲ್ಲಿ ವಿದ್ಯುಲ್ಲತಾಪ್ರವಾಹದ ಚಮತ್ಕಾರಿಕವಾದ ಧಕ್ಕೆಯು ಇಬ್ಬರಿಗೂ ತಗಲಲು, ಅವರು ಗಟ್ಟಿಯಾಗಿ ಒದರಿ ದೂರ ಓಡಿದರು. ಅದರ ಕಾರಣವು ಶಾಮರಾಯನ ಲಕ್ಷದಲ್ಲಿ ಕೂಡಲೆ ಬಂದಿತು. ಅವನು ತರೆಯಿಂದ ಕೆಳಗೆ ಹೋಗಿ ವಿದ್ಯುಲ್ಲತೆಯ ಮುಖ್ಯ ಪ್ರವಾಹವನ್ನೇ ಕಟ್ಟು ಮಾಡಿದನು. ವಿನಾಯಕನು ಓಡಿಹೋಗಿರಬಹುದೆಂಬ ಕಲ್ಪ ನೆಯು ಅವನಿಗೆ ಇನ್ನೂ ಹುಟ್ಟಿದ್ದಿಲ್ಲ. ಅವನು ಇಬ್ಬರು ನವಕರರನ್ನು ಕರಕೊಂಡು ಮೇಲೆ ಹೋಗಿ ಕಂದೀಲು ಹಚ್ಚಿಸಿ ವಿನಾಯಕನ ದಿವಾಣಖಾನೆಯಲ್ಲಿ ಹೋದನು. ಪಲಂಗದ ಮೇಲೆ ವಿನಾಯಕನು ಇಲ್ಲದ್ದನ್ನು ನೋಡಿ ಅವನ ಮನಸ್ಸು ಕಳವಳ ಗೊಂಡಿತು. ಅವನು ಹಾಗೆಯೇ ಇಂದಿರೆಯ ಕೋಣೆಯಲ್ಲಿ ಹೋದನು. ಅಲ್ಲಿ ನೋಡು ತಾನೆ, ಇಂದಿರೆಯೊಬ್ಬಳೇ ನಲಂಗದ ಮೇಲೆ ಮಲಗಿದ್ದಾಳೆ, ಆಗ ಅವಳನ್ನು ಎಬಿ ಸಿ
೨೯-----------------------------------------೨ನೆಯ ಪ್ರಕರಣ- ಇ೦ದಿರೆಯ ಆತ್ಮ ವೇದನ !
ಅವನು 1 ಇಂದೂ, ವಿನಾಯಕನೆಲ್ಲಿ? ” ಎಂದು ಕೇಳಿದನು. ಆಗ ಇಂದಿರೆಯ ಸರ್ವಾ೦ಗದಲ್ಲಿಯೇ ನಡುಗು ಹುಟ್ಟಿದ್ದಿತು. ಅವಳು ಭಯಾಕುಲ ಸ್ವರದಿಂದ: (( ಅವರು ಎಲ್ಲಿದ್ದಾರೋ ಏನೋ ನನಗೆ ಗೊತ್ತಿಲ್ಲ. ಈಗ ಎಷ್ಟೋ ಹೊತ್ತಿನ ಮುಂದೆ ನಾನು ಅವರ ಕೋಣೆಯಲ್ಲಿ ಹೋಗಿದ್ದೆನು. ಅಲ್ಲಿಗೆ ಹೋದಕೂಡಲೆ ಅವರು ನನ್ನ ಮೂಗಿನ ಹತ್ತರ ಎಂಥಹದೋ ಒಂದು ಬಿಳೇ ರುಮಾಲು ಹಿಡಿದರು; ಆ ಕೂಡಲೆ ನಾನು ಎಚ್ಚರದಪ್ಪಿದೆನು. ಮುಂದೇನಾಯಿತೆಂಬುವದು ನನಗೆ ಸ್ವಲ್ಲೂ ಪರಿಚಯವಿಲ್ಲ. ನಾನು ದಿವಾಣಖಾನೆಯಲ್ಲಿದ್ದೆನು, ನನ್ನನ್ನು ಇಲ್ಲಿಗೆ ತಂದು ಯಾರು ಮಲಗಿಸಿರುವರೋ ಏನೋ, ” ಹೀಗನ್ನುತ್ತ ಸ್ವಲ್ಪ ಹೊತ್ತು ಸುಮ್ಮನಿದ್ದು, ನಂತರ ಅತ್ತಿತ್ತ ನೋಡಿದಂತೆ ಮಾಡಿ: ಅಪ್ಪಾ ಇದೇನು, ಮೇಲೆ ಕಿಂಡಿಯು ” ಎಂದಳು. ಆ ಕೂಡಲೆ ಸರ್ವರ ಲಕ್ಷವು ಮೇಲಕ್ಕೆ ಹೋಯಿತು. ವಿನಾಯಕನು ಯಾವ ಮಾರ್ಗದಿಂದ ಓಡಿಹೋದ ನೆಂಬುವದು ಸರ್ವರಿಗೂ ತಿಳಿಯಿತು. ಶಾಮರಾಯನು ಕೂಡಲೆ ಹಿಂದಿನ ಬಾಗಿಲನ್ನು ತೆರೆದು ಎಲ್ಲರೊಡನೆ ತೋಟವನ್ನು ಹೊಕ್ಕು ಹುಬ್ಬಿಗೆ ಕೈಹಚ್ಚಿ ದೂರ ನೋಡಹತ್ತಿ ದನು. ಅಷ್ಟರಲ್ಲಿ ತೋಟದ ಗೋಡೆಯ ಕಬ್ಬಿಣದ ಕಟ್ಟೆಯ ಮೇಲಿಂದ ವಿನಾಯ ಕನು ಏರುತ್ತಿರುವದು ಅವನ ದೃಷ್ಟಿಗೆ ಬಿದ್ದಿತು. ಆ ಕ್ಷಣವೇ ಅವನು ತನ್ನ ಇಬ್ಬರು ಸೇವಕರಿಗೆ ಅವನನ್ನು ಹಿಡಿಯುವದರ ಸಲುವಾಗಿ ಅವನ ಬೆನ್ನ ಹತ್ತಬೇಕೆಂದು ಆಜ್ಞೆ ಯನ್ನು ಮಾಡಿದನು. ಇದು ವಿನಾಯಕನಿಗೆ ಕೂಡಲೆ ಲಕ್ಷದಲ್ಲಿ ಬಂದಿತು. ಅವನು ತ್ವರೆಮಾಡಿ ಕಟ್ಟೆಯ ಮೇಲಿಂದ ಹೊರಗೆ ಹಾರಿದನು. ಮತ್ತು ಸಪ್ತಋಷಿಮಂಡಲೆ ಯಿಂದ ಓಡಿಹೋಗುವ ದಿಕ್ಕನ್ನು ನಿಶ್ಚಯಿಸಿ ಬೇಗಬೇಗನೆ ಓಡಲಿಕ್ಕೆ ಹತ್ತಿದನು. ಸೇವಕರೂ ಕಟ್ಟೆಯ ಮೇಲಿಂದ ಹಾರಿ ಭರದಿಂದ ಕಾಲು ಕಿತ್ತು ಹಾಕುತ್ತ ವಿನಾಯ ಕನ ಸಮೀಪದಲ್ಲಿಯೇ ಹೋಗಹತ್ತಿದರು. ಇಲ್ಲಿಯವರೆಗೆ ವಿನಾಯಕನ ಪ್ರಕೃತಿಯು ನೆಟ್ಟಗಿದ್ದಿತು. ಇಲ್ಲಿಯವರೆಗೆ ಅವನ ದೇಹದಲ್ಲಿ ವಿಷದ ನೀರಿನ ಪರಿಣಾಮವೇನೂ ಆಗಿದ್ದಿಲ್ಲ; ಆದರೆ ಬೀದಿಯಲ್ಲಿ ಓಡಿಹೋಗುತ್ತಿರುವಾಗ ಅವನಿಗೆ ಸ್ವಲ್ಪ ಸ್ವಲ್ಪ ಮದದ ವಿಕಾರವಾಗಹತ್ತಿತು. ಬರಬರುತ್ತ ಬೀದಿಯಲ್ಲಿ ಬೀಳುತ್ತೇನೋ ಏನೋ ಎಂದು ಅವ ನಿಗೆ ಭೀತಿಯಾಗಹತ್ತಿತು. ಆದರೂ ಹಿಂದೆ ಸೇವಕರು ಬೆನ್ನು ಹತ್ತಿದ್ದರಿಂದ ಅವನು
ಆ ಅವಸ್ಥೆಯಲ್ಲಿಯೇ ಓಡುತ್ತಿದ್ದನು. ಈಗ ಮಾತ್ರ ವಿನಾಯಕನ ಕಾಲುಗಳು ನಡುಗ. ಹತ್ತಿದವು. ಅವನ ಓಡುವ ಗತಿಯು ಸಾಹಜಿಕವಾಗಿ ಕಡಿಮೆಯಾಗಹತ್ತಿತು. ಈ ಮಾನದಿಂದ ಇಬ್ಬರೂ ಸೇವಕರು ಅವನ ತೀರ ಹತ್ತರವೇ ಬರಹತ್ತಿದರು. ಒಂದು ವೇಳೆ ವಿನಾಯಕನ ಅದೃಷ್ಟವು ಇನ್ನೂ ಚಮತ್ಕಾರವಾದದ್ದಾಗಿದ್ದರೆ ಆ ವೇಳೆಯಲ್ಲಿ ಅವನು ನಿಶ್ಚಯವಾಗಿ ಆ ಸೇವಕರ ಕರಪಾಶದಲ್ಲಿ ಸಿಕ್ಕು, ತಿರುಗಿ ಶಾಮರಾಯನ ಶರೆ ಮನೆಯನ್ನು ಪ್ರವೇಶಿಸುತ್ತಿದ್ದನು; ಆದರೆ ಅಷ್ಟರಲ್ಲಿ ಒಂದು ದೊಡ್ಡ ಸುಂದರ ಮೋಟಾ ರಗಾಡಿಯು ಪೂರ್ಣ ಪ್ರಕಾಶದಿಂದಲೂ, ವೇಗದಿಂದಲೂ ದೂರದಲ್ಲಿ ಬರುವದನ್ನು
೩೦----------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ.
ನೋಡಿ ವಿನಾಯಕನು ಆ ದಿಕ್ಕಿಗೆ ತಿರುಗಿ ಗಟ್ಟಿಯಾಗಿ:- ಬದುಕಿಸಿರಿ ! ಬದುಕಿ ಸಿರಿ!! ” ಎಂದು ಒದರಿ ಮೊಣಕಾಲೂರಿ ಕೆಳಗೆ ಬಿದ್ದನು. ಮೊಟಾರದಲ್ಲಿ ಇಬ್ಬರು ಸುಂದರ ತರುಣ ಸ್ತ್ರೀಯರು ಕುಳಿತಿದ್ದರು. ಅವರು ಮೋಟಾರ ನಡಿಸುವವನಿಗೆ ಮೋಟಾರ ನಿಲ್ಲಿಸಲಿಕ್ಕೆ ಹೇಳಿ, ಆ ಬಿದ್ದ ಮನುಷ್ಯನನ್ನು ಗಾಡಿಯಲ್ಲಿ ತಕ್ಕೊಳ್ಳುವ ಆಜ್ಞೆ ಮಾಡಿದರು. ಮೋಟಾರ ವಡಿಸುವವನು ಒಳ್ಳೆ ಚಲಾಖೆಯ ಮನುಷ್ಯನಿದ್ದನು. ಅವನು ತ್ವರೆಯಿಂದ ಕೆಳಗಿಳಿದು ಅರುವುದಪ್ಪಿ ಬಿದ್ದಿದ್ದ ವಿನಾಯಕನನ್ನು ಗಾಡಿಯಲಿ ಹಾಕಿಕೊಂಡನು. ಇಷ್ಟರಲ್ಲಿ ಶಾಮರಾಯನ ಸೇವಕರು ಮೋಟಾರದ ಹತ್ತರವೇ ಬಂದಿದ್ದರು. ಅವರು ಬಲಾತ್ಕಾರದಿಂದ ವಿನಾಯಕನನ್ನು ಹೊತ್ತುಕೊಂಡು ಹೋಗುವ ವಿಚಾರಮಾಡಿದ್ದರು; ಆದರೆ ಹಿಂದಿನಿಂದ ಮತ್ತೆರಡು ಮೋಟಾರಗಾಡಿಗಳು ಬರುತ್ತಿರು ವದನ್ನು ನೋಡಿ ಅವರು ಓಡಿಹೋದರು. ಇದರಿಂದ ವಿನಾಯಕನು ಅವರ ಕೈಯೊ ಳಗೆ ಸಿಗದೆ, ಅನಾಯಾಸವಾಗಿ ಬಿಡುಗಡೆಯಾದನು !
೩೧-------------------------------------------------೩ನೆಯ ಪ್ರಕರಣ-ಸು೦ದರ. ಭವನ.
೩ನೆಯ ಪ್ರಕರಣ.
ಸುಂದರ-- ಭವನ,
ವಿನಾಯಕನನ್ನು ಹಾಕಿಕೊಳ್ಳುವದಕ್ಕಾಗಿ ಮೋಟಾರವು ಸ್ವಲ್ಪ ಹೊತ್ತು ಇಲ್ಲಿ ನಿಂತದ್ದರಿಂದ ಹಿಂದಿನ ಎರಡು ಮೋಟಾರಗಳು ಸಹಜವೇ ಅವರ ಹತ್ತರ ಬಂದವು. ಅನಂತರ ಆ ಮೂರೂ ಮೋಟಾರಗಳು ಒಂದರ ಹಿಂದೊಂದು ಭರದಿಂದ ತಾಡದೇವಿಯ ಬೀದಿಯಿಂದ ಮಹಾಲಕ್ಷ್ಮಿಯ ಭಾಗಕ್ಕೆ ಹೋಗಹತ್ತಿದವು. ಒಂದು ಪ್ರಚಂಡ ಮತ್ತು ಅತ್ಯಂತ ಸುಂದರವಾದ ಬಂಗಲೆಯ ಹತ್ತರ ಮೂರೂ ಮೋಟಾರಗಾಡಿಗಳು ಬಂದಕೂಡಲೆ ಅಲ್ಪಸ್ವಲ್ಪ ಹೊಳೆಯುತ್ತಿದ ಆ ಬಂಗಲೆಯು ಒಮ್ಮೆಲೇ ವಿದ್ಯುಲ್ಲತೆಯ ಬೆಳಕಿನಿಂದ ಝಗಝಗಿಸಹತ್ತಿತು. ಬಂಗೆ ಲೆಯ ಸುತ್ತು ಮುತ್ತಲು ಇದ್ದ ವಿಶಾಲವಾದ ತೋಟದ ಹೊರಗಿನ ಒಂದು ಬಾಗಿಲನ್ನು ತೆರೆದು, ೫-೬ ಮಂದಿ ಸೇವಕರು ಮೋಟಾರದೊಳಗಿನ ಜನರಿಗೆ ವಂದನೆಯನ್ನು ಸಮ ರ್ಪಿಸುವದಕ್ಕಾಗಿ ಮರ್ಯಾದೆಯಿಂದ ನಿಂತಿದ್ದರು. ಮೆಲ್ಲಮೆಲ್ಲನೆ ಮೋಟಾರವು ಆ ಸುಂದರವಾದ ತೋಟದೊಳಗೆ ಹಾಯ್ದು ಬಂಗಲೆಯ ಮಂಟಪದ್ವಾರದ ಹತ್ತರ ನಿಂತಿತು. ಒಳಗೆ ಕುಳಿತಿದ್ದ ಇಬ್ಬರು ಸ್ತ್ರೀಯರು ನವಕರರಿಗೆ ಕರಿಸಿ, ವಿನಾಯಕನನ್ನು ಒಂದು ವಿವಕ್ಷಿತ ಮಹಾಲಿನಲ್ಲಿ ಒಯು ಮಲಗಿಸಬೇಕೆಂದು ಆಜ್ಞಾಪಿಸಿ, ಅದೇ ಮೋಟಾರನ್ನು ಡಾಕ್ಟರನಿಗೆ ಕರಕೊಂಡು ಬರುವದಕ್ಕಾಗಿ ಕಳಿಸಿದರು. ಅನಂತರ ಮೂರೂ ಮೋಟಾರದೊಳಗಿನ ಜನರು ಮುಂಚೆ ತಮ್ಮ ತಮ್ಮ ದಿವಾಣಖಾನೆಗೆ ಹೋಗದೆ, ವಿನಾಯಕನನ್ನು ಮಲಗಿಸಿದ ದಿವಾಣಖಾನೆಗೆ ಹೋಗಿ ಅವನನ್ನು ದಿಟ್ಟಿಸಿ ನೋಡಹತ್ತಿದರು. ಅವರಲ್ಲಿ ಇಬ್ಬರು ಸ್ತ್ರೀಯರೂ, ಇಬ್ಬರು ಪುರುಷರೂ ಪೋಷಾಕು ಮೊದಲಾದವುಗಳಿಂದ ವಿಶೇಷ ಐಶ್ವರ್ಯ ಸಂಪನ ರಂತೆ ಕಾಣಿಸುತ್ತಿದ್ದುದು ರಿಂದ ಅವರು ರಾಜವಾಡೆಯಂತಿರುವ ಈ ಬಂಗಲೆಯ ಯಜಮಾನರಾಗಿದ್ದಾರೆಂದೂ, ಉಳಿದವರು ಅವರ ನವಕರರಾಗಿದ್ದಾರೆಂದೂ ಸಹಜ ಗುರ್ತು ಹಿಡಿಯಲಿಕ್ಕೆ ಬರುವಂತಿ ದ್ದಿತು. ವಿನಾಯಕನ ಮೈಬಣ್ಣವು ಗೌರವರ್ಣವುಳ್ಳದ್ದಾಗಿದ್ದಿತು. ಅವನ ಕಣ್ಣು, ಮೂಗು, ಹಣೆ ಮೊದಲಾದವು ಅವನ ಸೌಂದರ್ಯವನ್ನು ಹೆಚ್ಚಿಸುತ್ತಿದ್ದವು; ಅಗಲ
೩೨------------------------------------------------------- ದಿವ್ಯ ಸು೦ದರಿ ಆಥವಾ ದೀರ್ಘ ಪ್ರಯತ್ನ.
ವಾಗಿದ್ದ ಹಣೆಯು ಅವನ ಬುದ್ದಿವಂತಿಕೆಗೆ ಸಾಕ್ಷಿಯಾಗಿದ್ದಿತು; ಶಕ್ತಿ, ತೇಜ, ಸೌಜನ್ಯ, ಸುಶೀಲತ್ವ ಮೊದಲಾದವುಗಳು ಮುಖದ ಮೇಲೆ ಸ್ಪಷ್ಟವಾಗಿ ಕಾಣುತ್ತಿದ್ದವು; ಅವನ
ಪಾಕು ತೀರ ಸಾದಾ ತರಹದಿದ್ದಿತು; ಆದರೂ ಅದು ಅವನಿಗೆ ಚನ್ನಾಗಿ ಒಪ್ಪಿ ದ್ದಿತು. ಅವನು ಮೂಕಾವಸ್ಥೆಯಲ್ಲಿದ್ದರೂ ತೇಜಃಪುಂಜವಾದ ಮುಖಲಕ್ಷಣದಿಂದ ಸರ್ವರ ಆದರಕ್ಕೂ ಪಾತ್ರನಾಗಿದ್ದನು. ಕೂಡಲೆ ಒಬ್ಬ ಡಾಕ್ಟರನು ಬಂದು ವಿನಾಯ ಕನ ಪ್ರಕೃತಿಯನ್ನು ನೋಡಿ ಇವರ ಹೊಟ್ಟೆಯಲ್ಲಿ ಸ್ವಲ್ಪ ಮಾದಕ ಪದಾರ್ಥವು ಸೇರಿರ ಬಹುದೆಂದು ಹೇಳಿ, ಅದಕ್ಕೆ ತಕ್ಕ ಔಷಧವನ್ನು ಕುಡಿಸಿ, ಗಾಬರಿಯಾಗುವ ಕಾರಣ ವಿತ್ತೆಂದು ಹೇಳಿ ಹೊರಟುಹೋದನು. ಡಾಕ್ಟರನ ಹಿಂದೆ ಮೆಲ್ಲಮೆಲ್ಲನೆ ಎಲ್ಲರೂ ದಿವಾಣಖಾನೆಯಿಂದ ಹೊರಟುಹೋಗಿ ತಂತಮ್ಮ ದಿವಾಣಖಾನೆಯಲ್ಲಿ ಮಲಗಿದರು.
ಮೆಲ್ಲಮೆಲ್ಲನೆ ರಾತ್ರಿಯು ಮುಗಿದು ಮೂಡಣದಿಕ್ಕಿನ ಮುಗಿಲಿನಲ್ಲಿ ಕೆಂಪು ಬಣ್ಣವು ಕಾಣಿಸಹತ್ತಿತು. ಬೆಳಗಿನ ಶೀತಲವಾದ ಉತ್ಸಾಹಕ ಮಂದವಾಯುವ ಬೀಸಹತ್ತಿತು. ಪ್ರಶ್ನೆಗಳು ತಮ್ಮ ಗೂಡಿನೊಳಗಿಂದಲೇ ವಸುಂಧರೆಯನ್ನು ನಿರೀಕ್ಷಿಸಿ ಮಧುರಾಲಾಪದಿಂದ ಹಾಡಹತ್ತಿದವು. ಮುಂಬಾಪುರಿಯ ಬೀದಿಗಳಲ್ಲಿ ಮನುಷರ ಗದ್ದಲವು ಪ್ರಾರಂಭವಾಯಿತು. ಮೆಲ್ಲಮೆಲ್ಲನೆ ಪೃಥ್ವಿಯು ಹೆಚ್ಚು ಪ್ರಕಾಶಮಾನವಾಗ ಹತ್ತಿತು. ಕೂಡಲೆ ಬಾಲಸೂರ್ಯನ ಆಗಮನವಾಯಿತು. ಪ್ರಾತಃಕಾಲದ ಬಿಸಿಲಿ ನಿಂದ ಎಲ್ಲ ಮುಂಭಾಪುರಿಯು ಬಿಳೇ ಜರತಾರಿ ಶಾಲನ್ನು ಉಟ್ಟು ಕೊಂಡಂತೆ ಕಾಣಿಸ ಹತ್ತಿತು, ಇನ್ನೂ ವಿನಾಯಕನು ಮೆತ್ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಇಷ್ಟ ರಲ್ಲಿ ಬಂಗಲೆಯೊಳಗಿನ ದೊಡ್ಡ ಗಡಿಯಾಳದಲ್ಲಿ ಎಂಟು ಹೊಡೆಯಿತು. ಕೂಡಲೆ ವಿನಾಯಕನಿಗೆ ಬಡಿದು ಎಬ್ಬಿಸಿದಂತಾಗಲು ಅವನು ಹಾಸಿಗೆಯ ಮೇಲಿಂದ ಎದ್ದು ಕುಳಿತು ಅತ್ತಿತ್ತ ಹುಚ್ಚನಂತೆ ನೋಡಹತ್ತಿದನು. ತಾನು ಎಲ್ಲಿದ್ದೇನೆ, ತನ್ನ ಅವಸ್ಥೆಯು ಈಗ ಹೇಗಿದೆ, ಮೊದಲಾದದ್ದು ಅವನಿಗೆ ಮೊದಲು ಏನೂ ತಿಳಿಯಲಿಲ್ಲ. ಆ ವೇಳೆ ಯಲ್ಲಿ ಆ ದಿವಾನಖಾನೆಯ ಕಿಡಕಿಗಳು ತೆರೆದದ್ದರಿಂದ ಅಲ್ಪಸ್ವಲ್ಪ ಬಿಸಿಲು ಒಳಗೆ ಬಿದ್ದಿದ್ದಿತು. ಕಿಡಿಕಿಯೊಳಗಿಂದ ತೋಟದೊಳಗಿನ ಗಿಡ ಹೂಗಳು ಸ್ಪಷ್ಟವಾಗಿ ಕಾಣಿ ಸುತ್ತಿದ್ದವು. ಆ ಸ್ಥಿತಿಯನ್ನು ನೋಡಿ ತಾನು ನಿಶ್ಚಯವಾಗಿ ಶರೆಮನೆಯಲ್ಲಿ ಇಲ್ಲವೆಂದು ವಿನಾಯಕನಿಗೆ ದೃಢವಾಯಿತು. ತಾನು ಇಲ್ಲಿಗೆ ಹೇಗೆ ಬಂದೆನೆಂಬ ಬಗ್ಗೆ ಅವನು ಆಲೋಚನೆ ಮಾಡಹತ್ತಿದನು. ಗಡಿಯಾಲದ ಸರಪಳಿಯನ್ನು ಅಲ್ಲಾಡಿಸುತ್ತ ಶರೆಮನೆ
ಯಿಂದ ಓಡಿಬಂದಾಗಿನಿಂದ ಅವನು ನೆನಪುಮಾಡಹತ್ತಿದನು. ಆಗ ಅವನಿಗೆ ಮೋಟಾ ರದ ನೆನಪು ಬಂದಿತು. ಅದೇ ಮೋಟಾರದ ಯಜಮಾನನು ತನ್ನ ನ್ನು ಇಲ್ಲಿಗೆ ತಂದಿರ ಬಹುದೆಂದು ಅವನಿಗೆ ತೋರಹತ್ತಿತು. ಅವನು ತನ್ನ ಸ್ಥಿತ್ಯಂತರದ ಬಗ್ಗೆ ಆಲೋಚನೆ ಮಾಡುತ್ತಿರುವಷ್ಟರಲ್ಲಿ ಅವನಿಗಿಂತ ೩-೪ ವರ್ಷ ಹೆಚ್ಚು ವಯಸ್ಸಾದ ಒಬ್ಬ ಗೃಹ ಸ್ಥನು ಅಲ್ಲಿಗೆ ಬಂದನು. ಅವನು ನಿಃಸಂಕೋಚವೃತ್ತಿಯಿಂದ ಪಲಂಗದ ಮೇಲೆ
೩೩--------------------------------------೩ನೆಯ ಪ್ರಕರಣ-ಸುಂದರ- ಭವನ.
ಕುಳಿತು, ವಿನಾಯಕನಿಗೆ ಪ್ರಕೃತಿಸಂಬಂಧವಾಗಿ ಪ್ರಶ್ನೆ ಮಾಡಿದನು. ಆ ಗೃಹಸ್ಥನ ಮುಖಮುದ್ರೆಯ ಮೇಲೆಯೂ ಸೌಜನ್ಯವು ತುಂಬಿ ತುಳುಕುತ್ತಿದ್ದಿತು; ಅವನ ಪ್ರಾತಃ ಕಾಲದ ಪೋಷಾಕಾದರೂ ಒಳ್ಳೇ ರಮಣೀಯವಾಗಿದ್ದಿತು; ಎರಡೂ ಕೈಗಳ ಬೆರಳು ಗಳಲ್ಲಿ ವಜ್ರದ ಉಂಗುರಗಳಿದ್ದವು; ಎಡ ಮುಂಗೈಮೇಲೆ ಬಂಗಾರದ ಗಡಿಯಾಳವು ಬಂಗಾರದ ಪಟ್ಟಿಯಿಂದ ಕಟ್ಟಿದ್ದಿತು; ಸುವಾಸಿಕವಾದ ಎಣ್ಣೆಯನ್ನು ಹಚ್ಚಿ ಬಾಚಿದ ತಲೆಯ ಕೂದಲುಗಳು ಮಿರಿಮಿರಿ ಮಿಂಚುತ್ತಿದ್ದವು. ಆ ಗೃಹಸ್ಥನಿಗೆ ವಿನಾಯಕನಿಂದ ಪ್ರಕೃತಿಯ ಸಂಬಂಧವಾಗಿ ಸಂತೋಷಕಾರಕ ಉತ್ತರವು ಹೊರಡುತ್ತಿರುವಷ್ಟರಲ್ಲಿಯೇ ಆ ದಿವಾಣಖಾನೆಗೆ ಇಬ್ಬರು ತರುಣಸ್ತ್ರೀಯರು ಬಂದರು. ಅವರಿಬ್ಬರು ಒಳ್ಳೇ ರೂಪ ವತಿಯರಾಗಿದ್ದರು. ಅವರ ಮುಖದ ಮೇಲೆ ಸುಶೀಲತೆಯ ಲಕ್ಷಣವು ಕಂಗೊಳಿಸು ತಿದ್ದಿತು. ಅವರಿಬ್ಬರೂ ಮಹಾರಾಷ್ಟ್ರೀಯರಿದ್ದರೇನೋ ನಿಜ, ಆದರೆ ಅವರ ಪೋಷಾಕು ಮೊದಲಾದದ್ದು ತೀರ ನವೀನ ಪದ್ಧತಿಯದಿದ್ದು, ಅದರಲ್ಲಿ ಮಹಾರಾ ಷ್ಟ್ರೀಯ, ಫಾರಸಿ, ಯುರೋಪಿಯನ್ ಸೋಷಾಕಿನ ಬೆರಿಕೆಯಾದದ್ದು ಸ್ಪಷ್ಟವಾಗಿ ಕಾಣಿಸುತ್ತಿದ್ದಿತು. ಅವರಲ್ಲಿ ಒಬ್ಬ ಸ್ತ್ರೀಯು ೧೪-೧೫ ವರ್ಷದವಳಿದ್ದು, ಇನ್ನೊಬ್ಬಳು ೨೦-೨೧ ವರ್ಷದವಳಿದ್ದಳು. ಆ ಇಬ್ಬರು ಸ್ತ್ರೀಯರಲ್ಲಿ ಚಿಕ್ಕವಯಸ್ಸಿನ ಸ್ತ್ರೀಯು ಅಪ್ರತಿಮ ಸುಂದರಿಯಾಗಿದ್ದಳು. ಅವಳ ಪೋಷಾಕಾದರೂ ದೊಡ್ಡ ಸ್ತ್ರೀಗಿಂತ ಬಹಳ ಸಾದಾತರಹದ್ದಿದ್ದಿತು. ದೊಡ್ಡ ಸ್ತ್ರೀಯು ಕಣ್ಣಿನಮೇಲೆ ಬಂಗಾರದ ಚೌಕಟ್ಟಿನ ಚಾಳೀಸು ಹಾಕಿಕೊಂಡು ಕಾಲಿನಲ್ಲಿ ಲೇಡೀ ಬೂಟುಗಳನ್ನು ಹಾಕಿಕೊಂಡಿದ್ದಳು. ಫಾರಸಿ ಪದ್ಧತಿಯಂತೆ ಅವಳು ಒಂದು ರೇಶಿಮೆ ಸೀರೆಯನ್ನು ಉಟ್ಟುಕೊಂಡು ಎರಡೂ ಹುಬ್ಬುಗಳ ನಡುವೆ ಕುಂಕುಮ ಹಚ್ಚಿಕೊಂಡಿದ್ದಳು. ಅವಳ ತಲೆಯಮೇಲಿನ ಜಡೆಯು ಬಿಟ್ಟಿದ್ದಿತು. ಬಾಲಿಕೆಯ ಪೋಷಾಕು ಈ ತರುಣಿಯಂತೆ ಇದ್ದಿಲ್ಲ. ಅವಳು ಮಹಾ ರಾಷ್ಟ್ರ ಪದ್ಧತಿಯ ಬಿಳೇ ಪತ್ರಲವನ್ನು ಉಟ್ಟು ಕೊಂಡು, ಕಾಲಿನಲ್ಲಿ ಜೋಡು ಹಾಕಿ ಕೊಂಡಿದ್ದಳು. ಅವಳು ದೊಡ್ಡದಾದ ಹಣೆಯಮೇಲೆ ಸ್ಪಷ್ಟವಾಗಿ ಕಾಣಿಸುವಂತೆ ಕುಂಕುಮವನ್ನು ಹಚ್ಚಿಕೊಂಡಿದ್ದಳು. ಅವರಿಬ್ಬರೂ ದಿವಾನಖಾನೆಯಲ್ಲಿ ಬರುತ್ತಲೇ ಬಾಗಿಲಿನ ಹತ್ತಿರ ನಿಂತಿದ್ದ ಸೇವಕನು ಒಳಗೆ ಬಂದು, ಎರಡು ಖುರ್ಚೆಗಳನ್ನು ವ್ಯವ ಸ್ಥೆಯಿಂದ ಸಲಂಗದ ಹತ್ತಿರ ಇಟ್ಟು ಹೊರಟುಹೋದನು. ಅವರಿಬ್ಬರು ಖರ್ಚೆಯ ಮೇಲೆ ಕುಳಿತ ಕೂಡಲೆ ವಿನಾಯಕನ ಹತ್ತಿರ ಇದ್ದ ಗೃಹಸ್ಥನು ಹೊಸ ಪದ್ಧತಿಯ ಪ್ರಕಾರ ವಿನಾಯಕನಿಗೆ ಅವರಿಬ್ಬರ ಪರಿಚಯ ಮಾಡಿಕೊಟ್ಟನು. ಅವನು ತರುಣಿಯ ಕಡೆಗೆ ಬೊಟ್ಟು ತೋರಿಸಿ:- ಇವಳು ನನ್ನ ಪತ್ನಿ. ಇವಳ ಹೆಸರು ಮಧುರೆ ” ನಂತರ ಬಾಲಿಕೆಯ ಕಡೆಗೆ ಬೊಟ್ಟು ತೋರಿಸಿ:-( ಇವಳು ನನ್ನ ತಂಗಿ. ಇವಳ ಹೆಸರು ದಿವ್ಯಸುಂದರಿ.” ಎಂಬದಾಗಿ ಅನ್ನುತ್ತಿರಲಿಕ್ಕೆ ಮಧುರೆಯು ತನ್ನ ಕೈಯನ್ನು ವಿನಾಯ ಕನ ಮುಂದೆ ಚಾಚಿದಳು. ವಿನಾಯಕನೂ ತನ್ನ ಕೈಯನ್ನು ಮುಂದಕ್ಕೆ ಚಾಚಿದನು,
೩೪--------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ಮುಗಳುನಗೆಯೊಡನೆ ಹಸ್ತಾಂದೋಲನವಾಯಿತು. ದಿವಸುಂದರಿಯೂ ಇದೇ ಕಿತ್ತ ಯನ್ನು ನೀಡಿದಳು. ವಿನಾಯಕನು ಎಷ್ಟೋ ವರ್ಷ ಅಮೇರಿಕಾದಲ್ಲಿ ಇದ್ದವನಾದ ದ್ದರಿಂದ ಈ ಪದ್ಧತಿಯು ಅವನಿಗೆ ಹೊಸದೆಂಬುವಂತಿದ್ದಿಲ್ಲ; ಆದರೂ ಈ ಪದ್ಧತಿಯು ಇಲ್ಲಿಯೂ ಬಳಿಕೆಯಲ್ಲಿ ಬಂದದ್ದನ್ನು ನೋಡಿ ಆಶ್ಚರ್ಯವೆನಿಸಿತು. ವಿನಾಯಕನ ಹತ್ತರ ಕುಳಿತ ತರುಣ ಗೃಹಸ್ಥನ ಹೆಸರು ರಾಮರಾಯ. ಅವನು ವಿನಾಯಕನಿಗೆ ಈ ಮೊದಲೇ ತನ್ನ ಪರಿಚಯ ಮಾಡಿಕೊಟ್ಟಿದ್ದನು. ಆ ಇಬ್ಬರು ಸ್ತ್ರೀಯರು ವಿನಾಯಕನಿಗೆ ಪ್ರಕೃ ತಿಯು ಹೇಗದೆಯೆಂದು ಕೇಳಲು, ಅವನು ತನ್ನ ಸ್ವಾಭಾವಿಕ ಮಧುರಸ್ವರದಿಂದ ಪ್ರಕೃತಿಯು ಚನ್ನಾಗಿರುವದೆಂದು ತಿಳಿಸಿದನು. ನಂತರ ರಾಮರಾಯನು ಒಬ್ಬ ಮನು ಷ್ಯನನ್ನು ಕರೆದು ಪ್ರಾತರ್ವಿಧಿಯ ಸಲುವಾಗಿ ವಿನಾಯಕನನ್ನು ಕರಕೊಂಡು ಹೋಗಲಿಕ್ಕೆ ಹೇಳಿದನು. ಮತ್ತು ಎರಡನೇ ಮನುಷ್ಯನಿಗೆ ಚಹಾದ ವ್ಯವಸ್ಥೆ ಮಾಡ ಲಿಕ್ಕೆ ಹೇಳಿದನು. ವಿನಾಯಕನು ಮುಖಮಾರ್ಜನ ಮಾಡಿ ಬಂದು ಕುಳಿತ ಕೂಡಲೆ ಚಹಾಪಾರ್ಟಿಯು ನಡೆಯಿತು. ಚಹಾಪಾರ್ಟಿ ನಡೆದಾಗ ವಿನಾಯಕನು ತನ್ನ ಯೋಗ್ಯತೆ ಮೀರಿ ಆದರಸಾರವಾಯಿತೆಂದು ನಮ್ರತೆಯಿಂದ ಸೂಚಿಸಿದನು. ಚಹಾಪಾರ್ಟಿ ಯಾದ ಮೇಲೆ ಮಧುರಾ-ದಿವ್ಯಸುಂದರಿಯರು ವಿನಾಯಕನಿಗೆ ರಾತ್ರಿಯಲ್ಲಿ ಓಡಿ ಬಂದ ಕಾರಣವನ್ನು ಕೇಳಿದರು. ಆಗ ವಿನಾಯಕನು ನಡೆದ ಎಲ್ಲ ಸಂಗತಿಯನ್ನು ಸವಿಸ್ತಾರವಾಗಿ ಹೇಳಿದನು. ರಾಮರಾಯ-ಮಧುರೆ-ದಿವ್ಯಸುಂದರಿಯರ ಪರಿಚ ಯವು ಅನಾಯಾಸವಾಗಿ ಆದದ್ದರಿಂದಲೂ, ವೈಭವದಿಂದ ತನಗಿಂತ ಅವರ ಯೋಗ್ಯ ತೆಯು ಹೆಚ್ಚಿನದಿದ್ದದ್ದರಿಂದಲೂ ವಿನಾಯಕನು ತನಗೊದಗಿದ ಸಂಕಟ ಪ್ರಸಂಗ ವನ್ನು ಒಳ್ಳೆ ಚಾತುರ್ಯದಿಂದ ಹೇಳುತ್ತಿದ್ದನು. ಅವನು ಆ ಸಂಗತಿಯನ್ನು ಹೇಳುತ್ತಿ ರವಾಗ ಮಧ್ಯದಲ್ಲಿ ತನ್ನ ಚರಿತ್ರವನ್ನೂ ಹೇಳುತ್ತಿದ್ದನು. ಮೊದಲೇ ಅವನ ಮಧುರ ಸ್ವರಕ್ಕೂ ಸಾದಾವೃತ್ತಿಗೂ, ಈಶ್ವರದ ಸೌಂದರ್ಯಕ್ಕೂ ಬೆರಗಾದ ಅವರು ಅವನ ಪೂರ್ವಾಪರ ಚರಿತ್ರವನ್ನು ಕೇಳಿ ಅವನ ಸಂಬಂಧವಾಗಿ ತುಂಬಾ ಆದರಬುದ್ದಿಯು ಳ್ಳವರಾದರು. ವಿನಾಯಕನ ಪೂರ್ವಾಪರ ಚರಿತ್ರವನ್ನು ಕೇಳಿ ಆ ಮೂವರಲ್ಲಿ ದಿವ್ಯ ಸುಂದರಿಯ ಮನಸ್ಸಿನ ಮೇಲೆ ಅವನ ಸಂಬಂಧವಾಗಿ ಏನೋ ಒಂದು ವಿಶೇಷ ಪರಿ ಣಾಮವುಂಟಾಯಿತು. ಅವನು ಮಾತಾಡುವಾಗ ಅವನನ್ನು ಅವಳು ಬೇರೊಂದು ವಿಶೇಷ ತರದ ದೃಷ್ಟಿಯಿಂದ ನಡುನಡುವೆ ನೋಡುತ್ತಿದ್ದಳು. ಅವಳಿಗೆ ಇಂದಿರೆಯ 'ವಿಷಯವಾಗಿ ಖೇದವೆನಿಸಿತು. ವಿನಾಯಕನು ತಾನು ಹೇಳುವ ಸಂಗತಿಯನ್ನು ಮುಗಿಸು ವಾಗ ಅವರು ಮಾಡಿದ ಉಪಕಾರದ ಸಲುವಾಗಿ ಅಂತಃಕರಣಪೂರ್ವಕ ಕೃತಜ್ಞತೆ ಯನ್ನು ವ್ಯಕ್ತವಡಿ ರಾಮರಾಯನನ್ನು ಕುರಿತು:- ಈಗ ಮನೆಗೆ ಹೋಗಲಿಕ್ಕೆ ನನಗೆ ಅಪ್ಪಣೆಯನ್ನು ಕೊಟ್ಟರೆ ನನ್ನ ಮೇಲೆ ಬಹಳ ಉಪಕಾರವಾಗುತ್ತದೆ. ಅಣ್ಣನೂ, ಅತ್ತಿಗೆಯೂ ನನ್ನ ದಾರಿಯನ್ನು ನೋಡುತ್ತಿದ್ದಾರು. ಅತ್ತಿಗೆಯಂತೂ ಇಡೀ ರಾತ್ರಿ
೩೫------------------------------------೬ನೆಯ ಪ್ರಕರಣ-ಸುಂದರ.ಭವನ,
ಅಳುತ್ತ ಕುಳಿತಿರಬಹುದು. ಅವಳು ನನ್ನನ್ನು ತನ್ನ ಜೀವದಂತ ಜೋಕಿಸುತ್ತಾಳೆ. ಹೀಗನ್ನುತ್ತಿರಲಿಕ್ಕೇ. ಅವನ ಕಣ್ಣಿನ ಮುಂದೆ ಯಮುನೆಯ ಪ್ರಶಾಂತ-ಪವಿತ್ರ ಮೂರ್ತಿಯು ಕಾಣಿಸಹತ್ತಿತು. ಆಗಲೇ ಅವನ ಕಣ್ಣುಗಳು ಕಣ್ಣೀರಿನಿಂದ ತುಂಬಿ ಬಂದವು. ಆಗ ರಾಮರಾಯನು:-( ಆ ಬಗ್ಗೆ ತಾವು ಏನೂ ಕಾಳಜಿಯನ್ನು ಮಾಡ ಬಾರದು. ಈಗಲೇ ನಿಮ್ಮ ಮನೆಗೆ ಮನುಷ್ಯನನ್ನು ಕಳಿಸಿ ನಿಮ್ಮ ಕ್ಷೇಮವಾರ್ತೆಯನ್ನು ತಿಳಿಸುತ್ತೇನೆ. ಈಗ ಸ್ವಲ್ಪ ವೇಳೆಯಲ್ಲಿ ಡಾಕ್ಟರರೂ ಬಂದಾರು. ಅವರು ನಿಮಗೆ ಹೋಗ ಲಿಕ್ಕೆ ಅಪ್ಪಣೆ ಕೊಟ್ಟರೆ ಆಗ ವಿಚಾರಮಾಡಿದರಾದೀತು. ” ಎಂದನ್ನಲು ಇಲ್ಲಿಯ ತನಕ ಸುಮ್ಮನಿದ್ದ ಮಧುರೆಯು:- ಡಾಕ್ಟರರು ಹೋಗಲಿಕ್ಕೆ ಅಡ್ಡಿಯಿಲ್ಲವೆಂದು ಹೇಳಿದರೂ ನಾವು ಇಂದು ಹೋಗಗೊಡುವದಿಲ್ಲ. ನಾಳೆ ಬೇಕಾದರೆ ಅವರು ಹೋಗಲಿ, ಏನೇ ದಿವಸುಂದರಿ? ” ಎಂದಳು. ಆಗ ದಿವ್ಯಸುಂದರಿಯು ನಗುತ್ತ: ( ಹೌದು, ನನ್ನ ಮನಸ್ಸಿನೊಳಗೂ ಅದೇ ಅದೆ. ಅಣ್ಣಾ, ನೀನು ಮೊದಲು ಇವರ ಮನೆಗೆ ಸುದ್ದಿಯನ್ನು ಕಳುಹಿಸು. ಅಂದರೆ ಇವರ ಚಿಂತೆಯು ಕಡಿಮೆಯಾಗುವದು. ” ಎಂದನ್ನಲು ಕೂಡಲೆ ರಾಮರಾಮಯನು ಎದ್ದು ಹೊರಗೆ ಹೋಗಿ ವಿನಾಯಕನ ಅಣ್ಣನ ಕಡೆಗೆ ಒಂದು ಸಣ್ಣ ಚೀಟಿಯನ್ನು ಬರೆದು ಕಳುಹಿಸಿದನು.
ಕೇವಲ ಅದೃಷ್ಯಚಮತ್ಕೃತಿಯಿಂದ ವಿನಾಯಕನು ಈ ದೊಡ್ಡ ಶ್ರೀಮಂತರ ಬಂಗಲೆಗೆ ಯಾವ ರೀತಿಯಿಂದ ಮುಟ್ಟಿದನೆಂಬುವದು ನಮ್ಮ ವಾಚಕರಿಗೆ ತಿಳಿದದ್ದೇ ಅದೆ. ಯಾವ ಬಂಗಲೆಗೆ ಹೋಗಬೇಕೆಂದು ವಿನಾಯಕನು ಎಷ್ಟೋ ದಿವಸದಿಂದ ಯೋಗವನ್ನು ಹುಡುಕುತ್ತಿದ್ದನೋ, ಆ ಬಂಗಲೆಯಲ್ಲಿ ಈ ಪ್ರಕಾರ ಅನಾಯಾಸವಾಗಿ ತನ್ನ ಪ್ರವೇಶವಾದದ್ದರಿಂದ ಅವನಿಗೆ ಈಶ್ವರೀಯೋಜನೆಯ ಸಲುವಾಗಿ ಬಹಳ ಆಶ. ರ್ಯವಾಯಿತು. ಅವನು ಈಶ್ವರನಿಗೆ ಎಷ್ಟೋ ಸಾರೆ ಮನೋಮಯ ಪ್ರಣಾವ್ರ ಮಾಡಿದನು. ವಿನಾಯಕನು ಈಗಿದ್ದ ಬಂಗಲೆಯು ದಕ್ಷಿಣಹೈದರಾಬಾದದ ಪ್ರಸಿದ್ಧ ಜಹಾಗೀರದಾರನಾದ ರಾಜಾಬಹಾದ್ದೂರ ಚಿಂತಾಮಣಿರಾಯ ಹರಿಹರ ದೇಶಪಾಂಡೆ ಇವನದಿದ್ದಿತು. ಇವನು ಎಷ್ಟೋ ದುಡ್ಡು ಸೂರಿಮಾಡಿ ರಾಜವಾಡೆಯಂತೆ ಈ ಬಂಗ ಲೆಯನ್ನು ಕಟ್ಟಿಸಿದ್ದನು. ಈ ಬಂಗಲೆಯ ಸುತ್ತು ಮುತ್ತು ಒಂದು ರಮ್ಯವಾದ ತೋಟ ವಿದ್ದಿತು. ಆ ತೋಟಕ್ಕೆ ಭವ್ಯವಾದ ಎರಡು ಬಾಗಿಲುಗಳಿದ್ದು, ಪ್ರತಿಯೊಂದು ಬಾಗಿ ಲಿನಲ್ಲಿ ಎರಡು ವಿದ್ಯುದ್ದೀಪಿಕೆಗಳಿದ್ದವು. ಬಂಗಲೆಯೊಳಗೆ ವರ್ಣಿಸುವದೇನು? ಎತ್ತ ನೋಡಿದರೂ ವಿದ್ಯುದ್ದೀಪಿಕೆಗಳ ಗರಗರ ತಿರುಗುವ ವಿದ್ಯುಲ್ಲತೆಯ ಬೀಸಣಿಕೆಗಳ ರಾಶಿಯೇ ಕಾಣಿಸುತ್ತಿದ್ದಿತು. ಈ ಬಂಗಲೆಗೆ ಐದು ಅಂತಸ್ತುಗಳಿದ್ದು ತರತರದ ಶಿಲೆ ಗಳಿಂದ ಕಟ್ಟಿದ್ದರಿಂದ ಅದು ಸರ್ವಾ೦ಗಸುಂದರವಾಗಿ ಶೋಭಿಸುತ್ತಿದ್ದಿತು. ಬಂಗ ಲೆಯ ಪ್ರವೇಶದ್ವಾರದ ಹತ್ತರ ಸಂಗಮವರೀ ಕಲ್ಲಿನ ಸುಂದರವಾದ ಒಂದು ಮಂಟ ಪವಿದ್ದು, ಪ್ರವೇಶದ್ವಾರದ ಒಳಗೆ ಒಂದು ದೊಡ್ಡ ದಿವಾಣಖಾನೆಯಿದ್ದಿತು. ಇದೇ
೩೬--------------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ದಿವಾಣಖಾನೆಯಿಂದ ಮೇಲಕ್ಕೆ ಹೋಗಲಿಕ್ಕೆ ಕೆಂಪುಬಣ್ಣದ ಕಲ್ಲಿನ ಒಂದು ಅಗಲ ವಾದ ಅಟ್ಟವಿದ್ದು, ಓಡಾಡಲಿಕ್ಕೆ ಅನುಕೂಲವಾಗಬೇಕೆಂದು ಅದರ ಒಂದು ಭಾಗಕ್ಕೆ ಕೆಳಗಿನಿಂದ ಮೇಲಿನ ಅಂತಸ್ತಿನ ತನಕ ಹಿತ್ತಾಳಿಯ ಗಡುತರವಾದ ಕಟ್ಟು ಇದ್ದಿತು. ಇದೇ ಅಟ್ಟದ ಹತ್ತರ ಮೇಲೆ ಹೋಗುವದಕ್ಕಾಗಿ ಒಂದು ವಿದ್ಯುಲ್ಲತೆಯ ತೊಟ್ಟಿಲವೂ ಇದ್ದಿತು. ಬಂಗಲೆಯೊಳಗಿನ ಎಲ್ಲ ದಿವಾಣಖಾನೆಗಳು ಪಾಶ್ಚಾತ್ಯ ಪದ್ಧತಿಯಿಂದ ಶೃಂಗ ರಿಸಿದ್ದವು. ಎಷ್ಟೋ ಕಡೆಗೆ ಇಟಾಲಿ-ಫ್ರಾನ್ಸ್ ದೇಶಗಳಲ್ಲಿ ಸಿದ್ಧವಾದ ಸಣ್ಣ ಸಣ್ಣ ನಗ್ನ ಮೂರ್ತಿಗಳು ಸುಂದರವಾದ ಆಸನಗಳ ಮೇಲೆ ಬಹು ಭವ್ಯವಾಗಿ ಕಾಣಿಸುತ್ತಿದ್ದವು.
ರಾಜಾಬಹಾದೂರ ಚಿಂತಾಮಣಿರಾಯನು ಒಬ್ಬ ಸಜ್ಜನ ಗೃಹಸ್ಥನಾಗಿದ್ದನು. ಅವನ ಹತ್ತರ ಪಿತ್ರಾರ್ಜಿತ ಸಂಪತ್ತು ಅಗಣ್ಯವಾಗಿದ್ದಿತು. ಅಲ್ಲದೆ ಅವನೂ ತನ್ನ ಕಾಲಕೀರ್ದಿಯಲ್ಲಿ ಎಷ್ಟೋ ಹಣಗಳಿಸಿದ್ದನು. ಅವನು ಕಾಲೇಜದ ಒಂದೂ ಪರೀಕ್ಷೆ ಯನ್ನು ಕೊಡದಿದ್ದರೂ ಇಂಗ್ರೇಜೀಭಾಷೆಯ ಮೇಲೆ ಒಳ್ಳೇ ಪ್ರಭುತ್ವವುಳ್ಳವನಾಗಿ ದ್ದನು. ವಿಶೇಷತಃ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಅವನ ಮನಸ್ಸಿನ ಮೇಲೆ ಚನ್ನಾಗಿ ಪರಿಣಾಮವಾಗಿದ್ದಿತು. ಅವನು ಪ್ರತಿಯೊಂದು ವಿಷಯಕ್ಕೆ ಪಾಶ್ಚಾತ್ಯ ಪದ್ಧತಿಯನ್ನು ಅನುಸರಿಸುತ್ತಿದ್ದನು. ಅವನ ಅನುಕರಣಪದ್ಧತಿಯು ವಿಲಕ್ಷಣವಾದದ್ದಾಗಿದ್ದಿತು. ಅನುಕರಣಮಾಡುವ ವಿಷಯದ ಶಕ್ಯಾಶಕ್ಯವನ್ನೂ, ಒಳಿತುಹೀನವನ್ನೂ ವಿಚಾರ ಮಾಡುತ್ತಿದ್ದಿಲ್ಲ. ಅವನಿಗೆ ಸುಧಾರಣೆಯ ಸವಿಯು ಬಹಳವಾಗಿ ಹತ್ತಿದ್ದರಿಂದ ಹೈದ ರಾಬಾದದಂಥ ಪಟ್ಟಣವು ಕೂಡ ಇರಲಿಕ್ಕೆ ಅಯೋಗ್ಯವಾಗಿ ತೋರಿತು. ಅಷ್ಟರ ಸಲುವಾಗಿ ಅವನು ಆ ವಿಶಾಲವಾದ ಬಂಗಲೆಯನ್ನು ಮುಂಬಯಿಯಲ್ಲಿ ಕಟ್ಟಿಸಿದ್ದನು. ಅವನಿಗೆ ರಾಮರಾಯನೆಂಬ ಒಬ್ಬ ಮಗನೂ, ದಿವ್ಯಸುಂದರಿಯೆಂಬ ಒಬ್ಬ ಮಗಳೂ ಹೀಗೆ ಇಬ್ಬರೇ ಮಕ್ಕಳಿದ್ದರು. ಅವನು ಮಗನ ಶಿಕ್ಷಣದ ಸಲುವಾಗಿ ಬಹಳ ಪ್ರಯತ್ನ ಬಟ್ಟನು. ಮುಂಬಯಿಯಲ್ಲಿ ಕಲಿಯುವದಾದ ಮೇಲೆ ರಾಮರಾಯನನ್ನು ಹೆಚ್ಚಿನ ಶಿಕ್ಷಣಕ್ಕಾಗಿ ವಿಲಾಯತಿಯಲ್ಲಿ ಇಟ್ಟನು. ರಾಮರಾಯನು ಕೆಂಬ್ರಿಜ್ ವಿಶ್ವವಿದ್ಯಾಲ ಯದ ಬಿ. ಎ. ಆದ ಮೇಲೆ ಚಿಂತಾಮಣಿರಾಯನು ಹೆಂಡಿರುಮಕ್ಕಳು ಸಹಿತ ಇಂಗ್ಲಂ ಡಕ್ಕೆ ಹೋಗಿ ರಾಮರಾಯನನ್ನು ಸಂಗಡ ಕರಕೊಂಡು ಬಂದನು. ಇಂಗ್ಲಂಡದಿಂದ ಬಂದ ಸ್ವಲ್ಪ ದಿನಗಳಲ್ಲಿಯೇ ಚಿಂತಾಮಣಿರಾಯನ ಕುಟುಂಬವು ತೀರಿಕೊಂಡಿತು. ಆಗ ಅವನಿಗೆ ಪುನಃ ಲಗ್ನ ವಾಗಲಿಕ್ಕೆ ಎಷ್ಟೋ ಶ್ರೀಮಂತರು ಆಗ್ರಹಮಾಡಿದರು; ಆದರೆ ಅದಕ್ಕೆ ಅವನು ಒಪ್ಪಲಿಲ್ಲ. ಶ್ರೀಮಂತದೃಷ್ಟಿಯಿಂದ ಚಿಕ್ಕಂದಿನಲ್ಲಿಯೇ ರಾಮ ರಾಯನ ಲಗ್ನವಾಗಿದ್ದಿತು. ಅವನ ಹೆಂಡತಿಯ ನಿಜಾಮನ ರಾಜ್ಯದೊಳಗಿನ ಒಬ ಜಹಾಗೀರದಾರನ ಮಗಳಾಗಿದ್ದಳು. ಅವಳು ಸುಶೀಲಳೂ, ಚೆಲುವೆಯೂ ಆಗಿದ್ದಳು ಚಿಂತಾಮಣಿರಾಯನ ಮನೆಯಲ್ಲಿ ಸುಧಾರಣೆಯು ಅಂಗಾಲಿನಿಂದ ನಡುನೆತ್ತಿಯವರೆಗೆ ಹಬ್ಬಿದ್ದರೂ ಅದರ ಪ್ರಭಾವವು ಎಲ್ಲರ ಮೇಲೆಯೂ ಸರಿಯಾಗಿ ಆಗಿದ್ದಿಲ್ಲ. ರಾಮರಾ
೩೭--------------------------------------------೩ನೆಯ ಪ್ರಕರಣ-ಸು೦ದರ ಭವನ,
ಯನು ವಿಲಾಯತಿಯಲ್ಲಿ ಶಿಕ್ಷಣವನ್ನು ಹೊಂದಿದ್ದರೂ, ಅನನಿಗೆ ಭಾರತೀಯ ಸಂಸ್ಕೃ ತಿಯ ಸಲುವಾಗಿ ಒಳ್ಳೆ ಅಭಿಮಾನವಿದ್ದಿತು. ತುಲನಾತ್ಮಕ ದೃಷ್ಟಿಯಿಂದಲೂ, ಚಿಕಿ ತೃ ಕಬುದ್ದಿಯಿಂದಲೂ ಅವನಿಗೆ ತನ್ನ ವೇದಾಂತಧರ್ಮವೇ ಸರ್ವಶ್ರೇಷ್ಟವಾಗಿ ತೋರಿತು. ಅವನಿಗೆ ಇಂಗ್ಲೀಜೀ ಪೋಷಾಕು ಕೂಡ ಅಷ್ಟು ಪ್ರಿಯಕರವಾಗಿದ್ದಿಲ್ಲ. ಯಾವನಾದರೂ ಒಬ್ಬ ಯುರೋಪಿಯನ್ ಗೃಹಸ್ಥನು ತನ್ನ ಭೆಟ್ಟಿಯ ಸಲುವಾಗಿ ಮನೆಗೆ ಬಂದರೆ, ಅವನು ತನ್ನ ಹಿಂದೂ ಪೋಷಾಕಿನಿಂದಲೇ ಅವನಿಗೆ ಭೆಟ್ಟಿಗೊಡು ತಿದ್ದನು. ಚಿಂತಾಮಣಿರಾಯನಿಗೆ ಇದು ಸೇರುತ್ತಿದ್ದಿಲ್ಲ. ಪಾಶ್ಚಾತ್ಯ ಪದ್ಧತಿಯ ಮೇಲೆ ಅವನು ಬಹು ಪ್ರೇಮಿ. ತನ್ನ ಮಕ್ಕಳನ್ನು ಒಳ್ಳೆ ಪೋಷಾಕಿನಿಂದ ಅಲಂಕರಿಸಿ, ಅವ ರನ್ನು ತನ್ನ ಸಂಗಡ ಕರಕೊಂಡು ದೊಡ್ಡ ದೊಡ್ಡ ಜನರಿಗೆ ಭೆಟ್ಟಿಯಾಗುವದರಲ್ಲಿ ಅವನು ಉತ್ಕಟಾಪೇಕ್ಷಿ. ಅವನು ಮಗಳ ಹೆಸರನ್ನು ಒಳ್ಳೆ ಆನಂದದಿಂದ 4 ದಿವ್ಯ ಸುಂದರಿ ” ಎಂಬದಾಗಿ ಇಟ್ಟಿದ್ದನು. ದಿವ್ಯಸುಂದರಿಯು ತನ್ನ ಹೆಸರಿನಂತೆ ಸ್ವರ್ಗದ ಅಪ್ಸರೆಯೇ ಆಗಿದ್ದಳು. ಅವಳು ಚಿಕ್ಕಂದಿನಲ್ಲಿ ಮನಮುಟ್ಟಿ ಅಭ್ಯಾಸ ಮಾಡಿದ್ದಳು. ಅವಳ ಸ್ಮರಣಶಕ್ತಿಯು ವಿಲಕ್ಷಣವಾದದ್ದು ; ಅವಳ ಬುದ್ದಿಯು ಬಹು ಜಾಗೃತವಾ ದದ್ದು ; ಅವಳ ವರ್ತನವು ಅನುಕರಣೀಯವಾದದ್ದು ; ಬೂಟು, ಚಾಳೀಸು ಮೊದಲಾ ದವುಗಳಿಂದ ಅಲಂಕೃತಳಾಗಿ, ಹೆಗಲ ಮೇಲಿನ ಜರೀಕಾಠಿಯ ಪತ್ರಲದ ಸೆರಗನ್ನು ಗೆಲುವಿನ ನಿಶಾನೆಯಂತೆ ಅಲ್ಲಾಡಿಸುತ್ತ ಅತ್ತಿತ್ತ ತಿರುಗಾಡಿ ಸುಶಿಕ್ಷಿತ ಸ್ತ್ರೀಯೆಂದು ಎಲ್ಲ ರಿಗೆ ಹೇಗೆ ಗುರ್ತುಮಾಡಿಕೊಡಬೇಕೆಂಬುವದು ಅವಳಿಗೆ ಪರಿಚಯವಿದ್ದಿಲ್ಲ. ಅರ್ಥಾತ್ ದಿವ್ಯಸುಂದರಿಯು ಶ್ರೀಮಂತಳಿದ್ದಳು. ಸುಶೀಲಳಿದ್ದಳು. ಇಂಗ್ರೇಜೀ ಮತ್ತು ಸಂಸ್ಕೃತ ಭಾಷೆಗಳನ್ನು ಚನ್ನಾಗಿ ಅರಿತವಳಿದ್ದಳು. ಒಟ್ಟಿನ ಮೇಲೆ ದಿವಸುಂದರಿಯು ನಮ್ಮ ಹಿಂದೂಸಮಾಜಕ್ಕೆ ಒಳ್ಳೇ ಭೂಷಣಳಾಗಿದ್ದಳು. ಅವಳ ಹೃದಯವು ಅತ್ಯಂತ ಉದಾರವಾಗಿದ್ದಿತು. ಅವಳ ಅಂತಃಕರಣದಲ್ಲಿ ಕುದ್ರವಿಚಾರಗಳು ಎಂದೂ ಹುಟ್ಟು ತಿದ್ದಿಲ್ಲ. ಹಿಂದೂಧರ್ಮದ ಮೇಲೆ ಅವಳ ವಿಲಕ್ಷಣ ಶ್ರದ್ದೆಯಿದ್ದಿತು. ಸಾಕಾರ-ನಿರಾ ಕಾರಗಳ ಬಗ್ಗೆ ವಾದಮಾಡುವದಕ್ಕಿಂತ ಪರಮೇಶ್ವರನ 'ಮೇಲೆ ಭಕ್ತಿಮಾಡುವದು ಅವಳಿಗೆ ಹೆಚ್ಚಿನದಾಗಿ ತೋರುತ್ತಿದ್ದಿತು. ಅವಳಲ್ಲಿ ಒಂದು ಸಣ್ಣ ಈಶ್ವರಮೂರ್ತಿಯಿ ದ್ದಿತು. ದರದಿವಸ ಪ್ರಾತಃಕಾಲದಲ್ಲಿ ಸ್ನಾನಮಾಡಿದ ಕೂಡಲೆ ಅವಳು ಆ ಮೂರ್ತಿ ಯನ್ನು ಪೂಜಿಸುತ್ತಿದ್ದಳು. ಚಿಂತಾಮಣಿರಾಯನು ನಾಸ್ತಿಕನಿದ್ದಿಲ್ಲ! ಅವನೂ ತನ್ನ ಬಂಗಲೆಯ ಸಮೀಪದಲ್ಲಿರುವ ಒಂದು ದೇವಾಲಯಕ್ಕೆ ಪ್ರತಿದಿವಸ ಹೋಗಿ ನಮ ಸ್ಕಾರಮಾಡಿ ಬರುತ್ತಿದ್ದನು. ಆದರೂ ಅವನಿಗೆ ದಿವ್ಯಸುಂದರಿಯ ಅಪಾರ ಭಕ್ತಿಯನ್ನು ನೋಡಿ ಕೌತುಕವಾಗುತ್ತಿದ್ದಿತು. ಒಮ್ಮೊಮ್ಮೆ ಅವನು ದಿವ್ಯಸುಂದರಿಗೆ ಮೂರ್ತಿಪೂ
ಜೆಯ ಸಂಬಂಧವಾಗಿ ಪಾದ್ರಿಯರಂತೆ ಪ್ರಶ್ನೆ ಮಾಡಿ ಚೇಷ್ಟೆ ಮಾಡುತ್ತಿದ್ದನು. ಆಗ ಅವಳು ತಂದೆಗೆ ಭಕ್ತಿಭಾವದ ಮಹಾತ್ಮಯನ್ನು ಸವಿಸ್ತಾರವಾಗಿ ಹೇಳಿ ತಂದೆಯನ್ನು
೩೮-------------------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ಆಶ್ಚರ್ಯಸಾಗರದಲ್ಲಿ ಮುಳುಗಿಸುತ್ತಿದ್ದಳು. ದಿವ್ಯಸುಂದರಿಯ ಅಂತಃಕರಣವು ಬಹು ದಯಾದ್ರ್ರವಾಗಿದ್ದಿತು. ಬಡಬಗ್ಗರಿಗೆ ಅವಳು ಕಲ್ಪತರುವಾಗಿದ್ದಳು. ತಾನು ಯಾವ ದೊಂದು ಹೆಚ್ಚಿನ ಕಿಮ್ಮತ್ತಿನ ಬಟ್ಟೆಯನ್ನು ಉಟ್ಟು ಕೊಳ್ಳುವಾಗ ನನ್ನ ಎಷ್ಟೋ ಭಗಿನಿ ಯರಿಗೆ ಮೈ ಮುಚ್ಛವಷ್ಟು ವಸ್ತ್ರಗಳು ಕೂಡ ಇರಲಿಕ್ಕಿಲ್ಲವೆಂದು ಆಲೋಚಿಸಿ ಮರು ಗುತ್ತಿದ್ದಳು. ಪಕ್ವಾನ್ನವನ್ನು ಊಟಮಾಡುವಾಗ ( ಅಯ್ಯೋ! ಎಷ್ಟೋ ಜನರಿಗೆ ಹೊಟ್ಟೆ ತುಂಬುವಷ್ಟು ರೊಟ್ಟಿ ಚಟ್ಲಿಯು ಕೂಡ ಸಿಗುತ್ತದೆಯೋ ಇಲ್ಲೋ ” ಎಂದು ವಿಚಾರಿಸಿ ಕಣ್ಣೀರು ಸುರಿಸುತ್ತಿದ್ದಳು. ಅವಳು ಶ್ರೀಮಂತರ ಮಗಳಾಗಿದ್ದರೂ ಸಾದಾ ರೀತಿಯಿಂದ ನಡೆಯುತ್ತಿದ್ದಳು. ಅವಳಿಗೆ ಶ್ರೀಮಂತಿಕೆಯ ಅಭಿಮಾನವು ತಿಲಾಂಶವಾ ದರೂ ಇದ್ದಿಲ್ಲ. ಅವಳು ಅತ್ಯಂತ ಸುಂದರಿಯಾಗಿದ್ದಳು. ಅವಳ ವರ್ಣಾವಯವಗಳ ಸಲುವಾಗಿ ಬ್ರಹ್ಮನು ಬಹು ಪರಿಶ್ರಮ ತೆಗೆದುಕೊಂಡಿದ್ದನು. ವಿನಾಯಕನು ಇಂದಿರೆ ಯನ್ನು ನೋಡಿದಾಗ ಅವಳಂಥ ಸುಂದರ ಸ್ತ್ರೀಯು ವಾಸ್ತವ್ಯವೇ ಜಗತ್ತಿನಲ್ಲಿ ಇಲ್ಲ ವೆಂದು ಭಾವಿಸಿದ್ದನು, ಆದರೆ ಅದೇ ದಿವಸುಂದರಿಯನ್ನು ನೋಡಿದ ಕೂಡಲೆ ಅವನ ಭ್ರಮೆಯು ದೂರಾಯಿತು. ದಿವ್ಯಸುಂದರಿಯು ಇಂದಿರೆಗಿಂತ ಎಷ್ಟೋ ಪಟ್ಟು ಸುಂದರ ಳಿದ್ದಳು. ಯಾವ ಲಜ್ಞೆಯು ಇಂದಿರೆಯ ನಡೆನುಡಿಗಳಲ್ಲಿ ಇದ್ದಿಲ್ಲವೋ ಅದು ದಿವ್ಯ ಸುಂದರಿಯಲ್ಲಿ ಮೂರ್ತಿಮಂತವಾಗಿದ್ದದ್ದರಿಂದ ದಿವಸುಂದರಿಯ ಸೌಂದರ್ಯರೂಪ ವಾದ ವಜ್ರವನ್ನು ಬಂಗಾರದ ಕುಂದಣದಲ್ಲಿ ಕೂಡ್ರಿಸಿದಂತಾಗಿದ್ದಿತು. ಇರಲಿ.
ರಾಮರಾಯನು ಹೊರಗೆ ಹೋಗಿ ಚೀಟಿಯನ್ನು ಬರೆದು ತಿರುಗಿ ಬರುವದ ರೊಳಗಾಗಿ ಮಧುರಾ-ದಿವಸುಂದರಿಯರು ವಿನಾಯಕನಿಗೆ ಎಷ್ಟೋ ಪ್ರಶ್ನೆ ಮಾಡಿದ್ದರು. ವಿನಾಯಕನು ಅವರಿಗೆ ಉತ್ತರಗೊಡುತ್ತ:- ನಿನ್ನೆ ರಾತ್ರಿ ನೀವು ಎಲ್ಲಿಗೆ ಹೋಗಿ ದ್ದಿರಿ? ” ಎಂದು ಕೇಳಿದನು.
ಆಗ ಮಧುರೆಯು ನಕ್ಕು:-( ನಿನ್ನೆ ಒಂದು ನಾಟಕ ಕಂಪನಿಯವರು ನಮಗೆ ಆಮಂತ್ರಣಮಾಡಿದ್ದರಿಂದ ನಾಟಕ ನೋಡುವದರ ಸಲುವಾಗಿ ನಾವು ಹೋಗಿದ್ದೆವು. ತಮಗೆ ನಾಟಕ ನೋಡುವದರಲ್ಲಿ ಅಭಿರುಚಿಯದೆಯೋ ಇಲ್ಲೋ? ”
ವಿನಾ:- ಇಲ್ಲ. ನಾನು ನನ್ನೇ ವಯಸ್ಸಿನಲ್ಲಿ ಎಲ್ಲ ಅಂದರೆ ೨-೩ ನಾಟಕ ನೋಡಿದ್ದೇನೆ. ”
ಇದೇ ವೇಳೆಯಲ್ಲಿ ರಾಮರಾಯನು ಒಳಗೆ ಬರುತ್ತಿದ್ದನು. ಅವನು ವಿನಾಯಕನ ಈ ವಾಕ್ಯವನ್ನು ಸ್ಪಷ್ಟವಾಗಿ ಕೇಳಿದನು. ಅವನು ತನ್ನ ಸ್ಥಾನದ ಮೇಲೆ ಕೂಡುತ್ತ ಕೂಡುತ್ತ:- ಹಾಗಾದರೆ ನಾಟಕದ ಮೇಲೆ ನಿಮಗೆ ಅಭಿರುಚಿಯಿದ್ದಂತೆ ಕಾಣಿಸು
ವದಿಲ್ಲವೆಂದು ಅನ್ನಲಿಕ್ಕೆ ಬೇಕು. ”
ವಿನಾ:- ಹೌದು. ನನಗೆ ಅದರಲ್ಲಿ ಅಷ್ಟು ಅಭಿರುಚಿಯಿಲ್ಲ; ಆದರೆ ನಿನ್ನಿನ
೩೯----------------------------------------೩ನೆಯ ಪ್ರಕರಣ-ಸುಂದರ.ಭವನ.
ಪ್ರಸಂಗದಲ್ಲಿ ಕೇವಲ ನಾನು ನಾಟಕದಿಂದಲೇ ಉಳಿದೆನೆಂದ ಮೇಲೆ ಈಗ ಮಾತ್ರ ನಾಟಕ ನೋಡುವದು ಅಹಿತವೆಂದು ತೋರಲೊಲ್ಲದು. ೨೨
ದಿವಸುಂದರಿ:- “ ಅದು ಕೇವಲ ಕರ್ಮಧರ್ಮಸಂಯೋಗವಾಗಿದೆ. ಅದರ ಶ್ರೇಯಸ್ಸನ್ನು ನಾಟಕಕ್ಕೆ ಕೊಡುವ ಕಾರಣವಿಲ್ಲ. ನನಗಂತೂ ಈ ನಾಟಕವು ಮೊದಲು ಸೇರುವದಿಲ್ಲ. ನಮ್ಮ ಮನೆಯಲ್ಲಿ ನಾಟಕ ನೋಡುವ ಅಪೇಕ್ಷೆಯು ಯಾರಿಗೂ ಇಲ್ಲ. ಒಂದು ಉತ್ತಮ ಸಂಸ್ಕೋದ್ದಾರಕ್ಕಾಗಿ ನಿನ್ನೆ ಆ ನಾಟಕವು ಇದ್ದದ್ದರಿಂದ ಒಬ್ಬ ಗೃಹಸ್ಥನ ಆಗ್ರಹದಿಂದ ನಾವು ಹೋಗಬೇಕಾಯಿತು. ಆಗ ನಾನು ತಂದೆಗೆ ನಾಟಕ ವನ್ನು ನೋಡಲಿಕ್ಕೆ ಹೋಗುವ ಕಾರಣವಿಲ್ಲ. ಬೇಡಿದಷ್ಟು ವರ್ಗ ಹಣವನ್ನು ಕೊಟ್ಟು, ಮನೆಯಲ್ಲಿ ಕೂಡುವದು ಉತ್ತಮವಾದದ್ದೆಂದು ಹೇಳಿದೆನು; ಆದರೂ ನಮ್ಮ ತಂದೆಯು ಆ ಸಭ್ಯಗೃಹಸ್ಥನ ಆಶೆಯನ್ನು ನಿರಾಶೆಮಾಡಲಿಲ್ಲ.”
ದಿವ್ಯ ಸುಂದರಿಯ ಮಾತು ಮುಗಿಯುತ್ತಿರುವಷ್ಟರಲ್ಲಿ ಅಲ್ಲಿಗೆ ಡಾಕ್ಟರ ಸಾಹೇ ಬರು ಬಂದರು. ಅವರನ್ನು ನೋಡಿದ ಕೂಡಲೆ ದಿವ್ಯಸುಂದರಿ-ಮಧುರೆಯರು ಒತ್ತ ಟ್ಟಿಗೆ ಸರಿದರು. ರಾಮರಾಯನು ಅವರನ್ನು ಆದರಪೂರ್ವಕ ವಿನಾಯಕನ ಹತ್ತರಿ ರುವ ಖುರ್ಚಿಯ ಮೇಲೆ ಕುಳ್ಳಿರಿಸಿದನು. ಡಾಕ್ಟರರು ತಲೆಯ ಮೇಲಿನ ಟೊಪ್ಪಿಗೆ ಯನ್ನು ಕೆಳಗಿಟ್ಟು ವಿನಾಯಕನಿಗೆ ಪ್ರಕೃತಿಯ ಬಗ್ಗೆ ವಿಚಾರಿಸಿದರು. ಆಗ ವಿನಾಯ ಕನು ಈಗ ಆರಾಮ ಇದ್ದೇನೆಂದು ಹೇಳಲು ಡಾಕ್ಟರರು ಅವನ ಎದೆಯನ್ನು ಹಿಡಿದು: ( ಹೌದು. ಈಗ ನಿಮ್ಮ ಪ್ರಕೃತಿಯು ಸುಧಾರಿಸುತ್ತ ನಡೆದಿರುವದು, ಇನ್ನೂ ನೀವು ವಿಶೇಷವಾಗಿ ಶ್ರಮಮಾಡದೆ ಕುಳಿತಲ್ಲಿಯೇ ಇರಬೇಕು. ಇನ್ನು ನಿಮಗೆ ಔಷಧವು ಕಾರಣವಿಲ್ಲ. ” ಎಂಬದಾಗಿ ಹೇಳಿ ಹೊರಟುಹೋದರು. ಡಾಕ್ಟರರು ಇಂದು ವಿನಾ ಯಕನಿಗೆ ಹೋಗಬಾರದೆಂದು ಹೇಳಿದ್ದಕ್ಕಾಗಿ ದಿವ್ಯಸುಂದರಿ-ಮಧುರೆಯರು ಅವರು ಹೋದ ಮೇಲೆ ಅವರ ಆಭಾರಮನ್ನಿಸಿದರು. ಅನಂತರ ಆ ನಾಲ್ಕರೂ ಎಷ್ಟೋ ವೇಳೆಯವರೆಗೆ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತ ಕುಳಿತಿದ್ದರು. ಅಷ್ಟರಲ್ಲಿ ಚಿಂತಾಮಣಿರಾಯನು ಸಂಗಡ ಕೃಷ_ರಾಯನನ್ನು ಕರಕೊಂಡು ಅಲ್ಲಿಗೆ ಬಂದನು. ಕೃಷ್ಣರಾಯನಿಗೆ ರಾಮರಾಯನ ಚೀಟಿಯನ್ನು ನೋಡಿದ ಕೂಡಲೆ ಅತ್ಯಾನಂದ ವಾಯಿತು. ಅವನು ತ್ವರೆಯಿಂದ ವಿನಾಯಕನ ಭೆಟ್ಟಿಯ ಸಲುವಾಗಿ ಬಂದನು. ಕೃಷ್ಣ ರಾಯನನ್ನು ನೋಡಿದ ಕೂಡಲೆ ವಿನಾಯಕನ ಕಣ್ಣುಗಳು ಕಣ್ಣೀರಿನಿಂದ ತುಂಬಿದವು. ಆಗ ಚಿಂತಾಮಣಿರಾಯನು ರಾಮರಾಯನನ್ನು ಕುರಿತು:- ರಾಮರಾಯ, ಈ ಕೃಷ್ಣರಾಯರು ವಿನಾಯಕರಾಯರನ್ನು ಕರಕೊಂಡು ಹೋಗಲಿಕ್ಕೆ ಬಂದಿದ್ದಾರೆ. ” ಎನ್ನಲು ಆಗ ರಾಮರಾಯನು ಉತ್ತರ ಕೊಡುವಷ್ಟರಲ್ಲಿಯೇ ದಿವಸುಂದರಿಯು: ( ಇಲ್ಲ, ಇಲ್ಲ; ಇಂದು ಅವರನ್ನು ನಾವು ಕಳಿಸುವದಿಲ್ಲ. ಡಾಕ್ಟರರೂ ಇಂದು ಅವ ಥಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಲಿಕ್ಕೆ ಹೇಳಿದ್ದಾರೆ. ನಮಗೂ ಇಂದು ಅವರನ್ನು
೪೦----------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ಇಲ್ಲಿಯೇ ಇಟ್ಟು ಕೊಳ್ಳಬೇಕೆಂಬ ಅಪೇಕ್ಷೆಯದೆ ” ಎಂದನ್ನಲು ಚಿಂತಾಮಣಿರಾಯ ನು ಕೃಷ್ಣರಾಯನ ಕಡೆಗೆ ನೋಡಿದನು. ವಿನಾಯಕನು ಸ್ವಲ್ಪ ಕಾಲದಲ್ಲಿಯೇ ಈ ಎಲ್ಲ ಜನರ ತುಂಬಾ ಪ್ರೀತಿಗೆ ಪಾತ್ರನಾದದ್ದು ನೋಡಿ ಕೃಷ್ಣರಾಯನ ಹೃದಯವು ಆನಂದಮಯವಾಯಿತು. ಆಗ ಅವನು:- ಇಷ್ಟು ತ್ವರೆಯಿಂದ ಕರಕೊಂಡು ಹೋಗಲಿಕ್ಕೆ ಮನೆಯಲ್ಲಿ ಅಂಥ ತೊಂದರೆಯೇನೂ ಇದ್ದಿಲ್ಲ. ಯಾರು ಈತನನ್ನು ಪರಿ ಪರಿಯಿಂದ ಗೋಳಾಡಿಸಿರುವರೋ ಅವರ ಸಂಬಂಧವಾಗಿ ಯೋಗ್ಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ೨೨
ರಾಮರಾಯ:_II ಈಗಲಾದರೂ ಆ ಸಂಬಂಧ ವ್ಯವಸ್ಥೆಯನ್ನು ಮಾಡಲಿಕ್ಕೆ ಬರುವಂತಿದೆ. ನೀವು ಆ ಉದ್ಯೋಗಕ್ಕೆ ಹತ್ತಿರಿ. ನಾಳೆ ತಪ್ಪದೆ ಇವರನ್ನು ಕಳಿಸು ತೇವೆ. ೨)
ಕೃಷ್ಟರಾಯನು ನಿರುಪಾಯನಾದನು. ಅವನಿಗೆ ಆ ಎಲ್ಲರ ಮಾತನ್ನು ಮುರಿದು ವಿನಾಯಕನನ್ನು ಕರಕೊಂಡು ಹೋಗುವದು ಯುಕ್ತವಾಗಿ ತೋರಲಿಲ್ಲ. ಆಗ ಅವನು ನಗೆಮೊಗದಿಂದ ನಿಮ್ಮ ಇಷ್ಟದಂತಾಗಲೆಂದಂದು ಚಿಂತಾಮಣಿರಾಯನ ಅಪ್ಪಣೆಯನ್ನು ತಕ್ಕೊಂಡು ಮನೆಗೆ ಹೊರಟುಹೋದನು. ಚಿಂತಾಮಣಿರಾಯನು ಆ ದಿವಾಣಖಾನೆ ಯಿಂದ ಹೊರಟುಹೋಗುವಾಗ ವಿನಾಯಕನನ್ನು ಉದ್ದೇಶಿಸಿ:-( ನನಗೆ ಮಾಧವ ರಾಯನು ರಾಮಪುರದ ಹೊಲದ ಸಲುವಾಗಿ ಎಲ್ಲ ಹೇಳಿದ್ದಾನೆ. ನೀವು ಇನ್ನು ನಾಲ್ಕು ದಿವಸ ಬಿಟ್ಟು ನನಗೆ ಭೆಟ್ಟಿಯಾಗಿರಿ, ಅಂದರೆ ಎಲ್ಲ ಕಾಗದಪತ್ರಗಳ ವ್ಯವಸ್ಥೆ ಮಾಡಿ ಬಿಟ್ಟರಾಯಿತು. ” ಎಂದನ್ನಲು ವಿನಾಯಕನು ಸ್ವಲ್ಪ ಮುಂದಕ್ಕೆ ಹೋಗಿ ನನ್ನ ವಾಗಿ:-( ಒಳ್ಳೇದು, ನೀವು ಕರಿಸಿದ ಕೂಡಲೆ ನಾನು ಬರಲಿಕ್ಕೆ ಸಿದ್ಧನಿರುತ್ತೇನೆ. ತಾವು ಮಾಧವರಾಯರಿಗೆ ತಿಳಿಸಿದರೆ ಅವರು ನನ್ನನ್ನು ಕರಿಸುತ್ತಾರೆ. ” ಎಂದನು. ಆಗ ಚಿಂತಾಮಣಿರಾಯನು ' ಒಳ್ಳೇದು ' ಎಂದು ಹೇಳಿ ಹೊರಟುಹೋದನು. ಇತ್ತ ದಿವ್ಯಸುಂದರಿ-ಮಧುರೆಯರು ಸ್ನಾನ ಮಾಡುವದಕ್ಕಾಗಿ ಎರಡನೇ ಕಡೆಗೆ ಹೊರಟು ಹೋದರು. ಕೆಲಹೊತ್ತು ವಿನಾಯಕ-ರಾಮರಾಯರು ಮಾತಾಡಿ ಅವರೂ ಸ್ನಾನ ಕಾಗಿ ಹೊರಟುಹೋದರು.
ವಿನಾಯಕನು ಸಾಧಾರಣ ಸ್ಥಿತಿಯವನಾದದ್ದರಿಂದ ಅವನಿಗೆ ಚಿಂತಾಮಣಿ ರಾಯನ ಶ್ರೀಮಂತಿಕೆಯ ಆದರದಿಂದ ನಾಚಿಕೆಯೆನಿಸುತ್ತಿದ್ದಿತು. ಮಧ್ಯಾಹ್ನದ ಊಟ ವಾದ ಕೆಲಹೊತ್ತಿನ ಮೇಲೆ ರಾಮರಾಯನು ವಿನಾಯಕನ ದಿವಾಣಖಾನೆಗೆ ಬಂದನು. ನಂತರ ಅವರು ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಹತ್ತಿದರು. ಕೆಲ ಹೊತ್ತಿನ ಮೇಲೆ ದಿವಸುಂದರಿ-ಮಧುರೆಯರು ಅಲ್ಲಿಗೆ ಬಂದರು. ಆಗ ಸಮಾಜಸುಧಾ ರಣೆ ಮೊದಲಾದ ವಿಷಯಗಳ ಬಗ್ಗೆ ಹೆಚ್ಚು ವಾದವಿವಾದಗಳು ನಡೆಯಹತ್ತಿದವು. ಈಗ ಮಾತ್ರ ವಿನಾಯಕನು ನಾಚಿಕೆ ಬಿಟ್ಟಿದ್ದನು. ಅವನು ತನ್ನ ಮತಗಳನ್ನು ಸ್ಪಷ್ಟ
೪೧----------------------------೩ನೆಯ ಪ್ರಕರಣ-ಸುಂದರ.ಭವನ.
ವಾಗಿ ಹೇಳಹತ್ತಿದನು. ಈಗಿನ ಸುಧಾರಣೆಯಿಂದ ಭಾರತೀಯ ಸಂಸ್ಕೃತಿಗೆ ಎಷ್ಟು ಹಾನಿಯಾಗುತ್ತದೆಂಬುವದನ್ನು ಅವನು ಒಳ್ಳೆ ಮಾರ್ಮಿಕರೀತಿಯಿಂದ ವಿವರವಾಗಿ ಹೇಳುತ್ತಿದ್ದನು. ಸತ್ಯಾಗ್ರಹವಾದ ಅವನ ಮಾತಿನಿಂದ ಆ ಮೂವರಿಗೆ ಸಿಟ್ಟು ಬಾರದೆ, ಅವನ ಸಲುವಾಗಿ ಮತ್ತಿಷ್ಟು ಆದರವೇ ಹೆಚ್ಚಾಯಿತು. ಆಗ ದಿವ್ಯಸುಂದರಿಯು: (( ತಾವು ಅಮೇರಿಕೆಯಲ್ಲಿ ಮೂರು ನಾಲ್ಕು ವರ್ಷ ಇದ್ದಿರಿ. ಅಲ್ಲಿ ಈ ಸುಧಾರಣೆಯು ಬಹಳಾಗಿರುತ್ತದೆಂದು ಹೇಳುತ್ತಾರೆ. ” ಎಂದನ್ನಲು ವಿನಾಯಕನು ( ಇರುವದು ನಿಜ; ಅದು ಈಗ ನಾಮಶೇಷವಾಗಿ ತೋರಹತ್ತಿದೆ. ಅಲ್ಲಿ ಎಷ್ಟೋ ದೊಡ್ಡ ದೊಡ್ಡ ಜನರು ಈಗಿನ ಸುಧಾರಣೆಗೆ ಬೇಸರವುಳ್ಳವರಾಗಿ ಈಗಿನ ಯಾಂತ್ರಿಕಜೀವನವು ಯಾವಾಗ ಮುಗಿದೀತೆಂದು ಹಾದಿಯನ್ನು ನೋಡುತ್ತಿರುತ್ತಾರೆ. ಅಮೇರಿಕಾದ ಒಬ್ಬ ಶ್ರೀಮಂತನು ನಮ್ಮ ಪೂರ್ವದ ಋಷಿಗಳಂತೆ ಅರಣ್ಯದಲ್ಲಿ ಪರ್ಣಶಾಲೆಯನ್ನು ಕಟ್ಟಿಕೊಂಡು, ಅಲ್ಲಿ ತೀರ ಸೌಮ್ಯವೃತ್ತಿಯಿಂದ ಆರಹತ್ತಿದ್ದಾನೆ. ನಮ್ಮ ಪುರಾಣದೊಳಗಿನ ವಾಕ್ಯಗಳನ್ನು ಕೇಳಿ ಅವನು ಮೊದಲು ಅವುಗಳ ಬಗ್ಗೆ ಹಾಸ್ಯಮಾಡುತ್ತಿದ್ದನು. ಯಾವಾಗ ಅವನು ಈಗಿನ ಸುಧಾರಣೆಗೆ ಬೇಸರಗೊಂಡು ಸ್ವತಃ ಆಶ್ರಮದಲ್ಲಿ ಇರಹತ್ತಿದನೋ ಆಗಲೇ ಅವನು ಹಿಂದೂಧರ್ಮದ ಆಶ್ರಮಚತುಷ್ಟಯದ ಬಗ್ಗೆ ವಿಶೇಷ ಸ್ತುತಿಮಾಡಿದನು. ಈ ಆಶ್ರಮಗಳನ್ನು ಸರ್ವ ಧರ್ಮದವರೂ ಪ್ರತಿಪಾಲಿಸುವದು ಪವಿತ್ರಕರ್ತವ್ಯ ಕರ್ಮ ವೆಂದು ಬೋಧಿಸಿ, ಸಾವಿರಾರು ಜನರು ಆಶ್ರಮದಲ್ಲಿ ಇರುವಂತೆ ಮಾಡಿದನು. ”
ವಿನಾಯಕನ ಈ ಮಾತಿನ ಪರಿಣಾಮವು ದಿವಸುಂದರಿಯ ಮೇಲೆ ವಿಶೇಷ ವಾಗುತ್ತ ಹೋಯಿತು. ರಾಮರಾಯ-ಮಧುರೆಯರ ಮೇಲೆ ವಿನಾಯಕನ ಮಾತಿನ ಪರಿಣಾಮವು ಆಗಲಿಲ್ಲವೆಂಬಂತಿಲ್ಲ. ರಾಮರಾಯನ ಮನಸ್ಸು ನಿರಭಿಮಾನವುಳ್ಳದ್ದಾಗಿ ದ್ದಿತು. ಇಂದಿನವರೆಗೆ ಅವನು ಯಾವ ತಪ್ಪುಗಳು ತಪ್ಪುಗಳಲ್ಲವೆಂದು ಭಾವಿಸಿದ್ದನೋ ಅವೆಲ್ಲ ವಿನಾಯಕನ ಮಾತಿನಿಂದ ತಪ್ಪುಗಳೇ ಇರುತ್ತವೆಂದು ಒಪ್ಪಿದನು. ಈ ಪ್ರಕಾರ ಎಷ್ಟೋ ಹೊತ್ತು ಮಾತಾಡುವದಾದ ಮೇಲೆ ರಾಮರಾಯನು ವಿನಾಯಕನಿಗೆ ತಮ್ಮ ಬಂಗಲೆಯನ್ನೆಲ್ಲ ತೋರಿಸಬೇಕೆಂದಾಲೋಚಿಸಿ, ಆ ಪ್ರಕಾರ ಅವನನ್ನು ಕರಕೊಂಡು ಒಂದೊಂದು ದಿವಾಣಖಾನೆಯನ್ನು ತೋರಿಸುತ್ತ - 'ಬಲಿಯರ್ಡ ' ಆಟದ ದಿವಾಣಖಾ ನೆಗೆ ಹೋಗಿ : ನಿಮಗೆ ಈ ಆಟ ಬರುತ್ತದೆಯೇ ? ಎಂದು ವಿನಾಯಕನನ್ನು ಕೇಳಿ ದನು. ಅವನು ತನಗೆ ಬರುವದಿಲ್ಲವಾಗಿ ಹೇಳಲು ದಿವಸುಂದರಿಯು ಮಧುರೆಗೆ ರಾಮ ರಾಯನ ಕೂಡ ಆ ಆಟವನ್ನು ಆಡಬೇಕೆಂದು ಹೇಳಿದಳು. ಕೂಡಲೆ ಅವಳು ಕೈಯಲ್ಲಿ ಕಟ್ಟಿಗೆಯನ್ನು ತಕ್ಕೊಂಡು ರಾಮರಾಯನ ಸಂಗಡ ಅಡಹತ್ತಿದಳು. ಬಲಿಯರ್ಡ ಆಟದ ಟೇಬಲು ಮಧ್ಯಭಾಗದಲ್ಲಿದ್ದು, ಅದರ ಸುತ್ತಲು ಎರಡು ಬಾಕುಗಳಿದ್ದವು. ದಿವ್ಯಸುಂದರಿಯ ಸೂಚನೆಯಂತೆ ವಿನಾಯಕನು ಒಂದು ಬಾಕಿನ ಮೇಲೆ ಕುಳಿತು, ಆ ಆಟವನ್ನು ನೋಡುತ್ತಿದ್ದನು. ಮೊದಲು ದಿವ್ಯಸುಂದರಿಯು ಎದ್ದು ನಿಂತೇ ಆ ಆಟ
೪೨------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ವನ್ನು ನೋಡುತ್ತಿದ್ದಳು. ನಂತರ ಅವಳೂ ಎದುರಿನ ಒಂದು ಬಾಕಿನ ಮೇಲೆ ಕುಳಿ ತಳು, ಆಟವು ಒಳ್ಳೆ ಭರಕ್ಕೆ ಬಂದಿತು. ಎಲ್ಲರೂ ಆಟದಲ್ಲಿಯೇ ಮಗ್ನರಾದರು. ಇಷ್ಟರಲ್ಲಿ ಆ ದಿವಾಣಖಾನೆಯ ಕಡೆಗೆ ಇಪ್ಪತ್ತೈದು ಇಪ್ಪತ್ತಾರು ವರ್ಷದ ಒಬ್ಬ ಯುರೋಪಿಯನ್ ಡೇಸು ಹಾಕಿಕೊಂಡ ಮನುಷ್ಯನು ಬಂದನು, ಅವನು ತಲೆಯ ಮೇಲೆ ಬೋಳಗುಮುಟದಂಥ ಯುರೋಪಿಯನ್ ಟೊಪ್ಪಿಗೆಯನ್ನು ಹಾಕಿಕೊಂಡಿ ದ್ದನು. ಮೂರ್ತಿಯ ಬಾಯಿಯಲ್ಲಿ ಒಂದು ಸಿಕೊಟ್ಟಿದ್ದು, ಬಾಯಿಯಿಂದ ಆಗಗಾಡಿ ಯ ಎಂಜನಿನಂತ ಹೊಗೆಯು ಹಾಯುತ್ತಿದ್ದಿತು. ಮೂರ್ತಿಯು ದಿವಾಣಖಾನಯ ಬಾಗಿಲಿನ ಹತ್ತಿರ ಬಂದಕೂಡಲೆ ಸಿಗ್ನಲ ಆಗದಿದ್ದ ಗಾಡಿಯಂತೆ ಅಲ್ಲಿ ನಿಂತು ಮತ್ತೆ ರಡು ಸಾರೆ ಸಿಕ್ರೇಟು ಸೇದಿ ಗಿರಣಿಯ ಬಂಬಿನಂತೆ ಹೊಗೆಯನ್ನು ಬಿಡುತ್ತ ದಿವಾಣ ಖಾನೆಯೊಳಗೆ ಬಂದಿತು. ಸಾಹೇಬರು ಬಂದಕೂಡಲೆ ರಾಮರಾಯನು ಆಟವನ್ನು ಆಡುತ್ತಲೇ • ವಸಂತರಾಯ, ಬರಿ ” ಎಂದನು. ಆಗ ವಸಂತನು ದಿವಸುಂದರಿಯು ಕುಳಿತ ಬಾಕಿನ ಒಂದು ಮೂಲೆಯಲ್ಲಿ ಕುಳಿತನು, ದಿವಾಣಖಾನೆಯಲ್ಲಿ ಕಾಲಿಡುತ್ತಲೇ ವಸಂತನ ದೃಷ್ಟಿಯು ವಿನಾಯಕನ ಮೇಲೆ ಬಿದಿ ದ್ದಿತು. ಇಂಥ ಗೊತ್ತು ಗುರಿಯಿಲ್ಲದ ತರುಣನ ಪ್ರವೇಶವು ಕೇವಲ ಅಂತಃಪುರದಲ್ಲಿ ಯೇ ಆದದ್ದನ್ನು ನೋಡಿ ಅವನು ವಿನಾ ಯಕನ ಮೇಲೆ ತನ್ನ ವಿಷಮಯವಾದ ನೋಟವನ್ನು ಚೆಲ್ಲಿದನು. ಈ ಮನೆಯಲ್ಲಿ ತನಗೆ ಎಷ್ಟು ಮಾನವಿರುತ್ತದೆಂಬುವದನ್ನೂ, ದಿವ್ಯಸುಂದರಿಯ ಹತ್ತರವೇ ಕೂಡ್ರಲಿಕ್ಕೆ ತನಗೆ ಅಡ್ಡಿಯಿಲ್ಲವೆಂಬುವದನ್ನೂ ವಿನಾಯಕನಿಗೆ ತೋರಿಸುವ ಉದ್ದೇಶದಿಂದ ಅವನು ದಿವ್ಯ ಸುಂದರಿಯ ಬಾಕಿನಮೇಲೆ ಕುಳಿತಿದ್ದನು; ಆದರೆ ದಿವ್ಯಸುಂದರಿಯು ಅವನಿಗೆ ಬಹು ಅಪಮಾನಮಾಡಿದಳು. ಅವನು ಬಾಕಿನಮೇಲೆ ಕುಳಿತ ಕೂಡಲೆ ಅವಳು ಮುಖವನ್ನು ಕಿವಿಚಿಕೊಂಡು ಕುಳಿತ ಬಾಕಿನ ಮೇಲಿಂದೆದ್ದು, ವಿನಾಯಕನ ಬಾಕಿನ ಮೇಲೆ ಹೋಗಿ ಕುಳಿತುಕೊಂಡಳು. ಈ ರೀತಿಯನ್ನು ನೋಡಿ ವಸಂತನಿಗೆ ಮರಣ ಪ್ರಾಯವಾದ ನಾಚಿಕೆಯೆನಿಸಿತು. ಆಗ ಅವನು ನರಿನರಿ ಹಲ್ಲುಕಡಿಯುತ್ತ ಕೆಂಗಣ್ಣಿ ನಿಂದ ವಿನಾಯಕನನ್ನು ನೋಡಿದನು, ಆ ಕಡೆಗೆ ವಿನಾಯಕನ ಲಕ್ಷವಿದ್ದಿಲ್ಲ. ದಿವ್ಯ ಸುಂದರಿಯು ವಿನಾಯಕನ ಬಾಕಿನ ಮೇಲೆ ಕುಳಿತ ಕೂಡಲೆ ವಿನಾಯಕನು ತಾನಲ್ಲಿ ಕೂಡ್ರುವದು ವಿಹಿತವಲ್ಲೆಂದಾಲೋಚಿಸಿ ಬಾಕು ಬಿಟ್ಟು ಮೇಲಕ್ಕೇಳಹತ್ತಿದನು. ಆಗ ದಿವಸುಂದರಿಯು “ ಕೂಡ್ರಿರಿ, ” ಎಂದು ಕೈ ಸನ್ನೆ ಮಾಡಿದ್ದರಿಂದ ನಿರುಪಾಯನಾಗಿ ಅವನು ಅಲ್ಲಿಯೇ ಕುಳಿತುಕೊಂಡನು.
ಬಂದ ಸಾಹೇಬನ ಹೆಸರು ವಸಂತರಾಯನೆಂಬುವದು ನಿಜವು, ಅವನು ಪಾಶ್ಚಾತ್ಯರ ಪ್ರತಿಯೊಂದು ವಿಷಯವನ್ನು ಹೊಗಳುವಂಥ, ಪೌರ್ವಾತ್ಯರ ಪ್ರತಿ ಯೊಂದು ವಿಷಯವನ್ನು ದೂಷಿಸುವಂಥ ಒಬ್ಬ ಗೃಹಸ್ಥನ ಮಗನು. ಅವನು ಚಿಕ್ಕಂದಿ ನಲ್ಲಿಯೇ ಸ್ಟೇಚ್ಛಾಚಾರಿಯಾಗಿದ್ದನು. ಅವನು ಇಂಗ್ರೇಜೆಯನ್ನು ಅಷ್ಟಕ್ಕಷ್ಟೇ
೪೩------------------------------------------------------------೩ನೆಯ ಪ್ರಕರಣ ಸುಂದರ.ಭವನ
ಕಲಿತಿದ್ದನು; ಆದರೂ ಇಂಗ್ರೇಜಿ ಭಾಷೆಯಲ್ಲಿ ಒಳ್ಳೆ ರೀತಿಯಿಂದ ಮಾತಾಡಲಿಕ್ಕ ಅವನು ಕಲಿತಿದ್ದನು. ಅವನ ತಂದೆ-ತಾಯಿಗಳು ೨-೨ ವರ್ಷದವನಿರುವಾಗಲೇ ತೀರಿಕೊಂಡದ್ದರಿಂದ ಅವನು ಆಗಿನಿಂದಲೇ ಸ್ವತಂತ್ರನಾಗಿದ್ದನು. ಮನಬಂದಂತೆ ನಡೆಯುವದು ಯುಕ್ತವಿಂದು ಹೇಳುವವರು ಒಬ್ಬರಾದರೂ ಅವನಿಗಿದ್ದಿಲ್ಲ. ಬರಬ ರುತ್ತ ಅವನ ದುರ್ನಡತೆಯು ಮಿತಿಮೀರಲು ಹಿಂದೂಸಮಾಜದವರು ಅವನನ್ನು ತಿರ ಸ್ಮರಿಸಹತ್ತಿದರು. ರೋಗಿಯ ಬೇಡುವಿಕೆಯೂ, ವೈದ್ಯರ ಹೇಳುವಿಕೆಯೂ ಒಂದೇ ಆದಂತಾಗಲು ಕೂಡಲೆ ಅವನು ಹಿಂದೂಸಮಾಜವನ್ನು ನಿಂದಿಸುತ್ತ ನಮ್ಮ ವಾಚಕ ರಿಗೆ ಗೊತ್ತಿರುವ ವಿಶ್ವಧರ್ಮಸಮಾಜಕ್ಕೆ ಕುಲಗೆಟ್ಟನು. ಅಂದಿನಿಂದ ಅವನ ಮರ್ಯಾ ದೆಯು ಹೆಚ್ಚಾಯಿತು. ಅವನು ತನ್ನ ಇಂಗ್ರೇಜೀ ಮಾತಿನಿಂದ ಆ ಸಮಾಜದಲ್ಲಿ ಒಳ್ಳೆ ಅಧಿಕಾರವಂತನಾದನು. ಮೊದಲೇ ಅವನು ಮಳೆಗಾಲದ ಅಮಾವಾಸ್ಯೆಯ ಕವಳ ದಂತೆ ಕರೇ ಬಣ್ಣದವನು; ಅದರಲ್ಲಿ ಅಂಗಾಲಿನಿಂದ ನಡುನೆತ್ತಿಯವರೆಗೂ ಅಚ್ಚ ಯುರೋಪಿಯನ್ ಪೋಷಾಕು; ಮತ್ತದರಲ್ಲಿ ಕುಳಿತದ್ದಕ್ಕೂ-ನಿಂತದ್ದಕ್ಕೂ, ಹಿಡಿದ ದ್ದಕ್ಕೂ- ಮುಟ್ಟಿದ್ದಕ್ಕೂ ಇಂಗ್ರೇಜಿಯ ಮಾತು. ಅಂದ ಮೇಲೆ ಕೇಳುವದೇನು? ಎಲ್ಲರೂ ಅವನಿಗೆ “ ಕಾಳಾಸಾಹೇಬ ” ಎಂದು ಕರೆಯಹತ್ತಿದರು. ಅವನಿಗೆ ತಾನು ಹಿಂದೂ ಹೆಸರಿನಿಂದ ಕರಿಸಿಕೊಳ್ಳುವದಕ್ಕಿಂತ ಕಾಳಾಸಾಹೇಬ ಎಂದು ಕರಿಸಿಕೊಳ್ಳು ವದು ಅಭಿಮಾನಾಸ್ಪದವಾಗಿ ತೋರಿತು. ಅವನು ಇಂಗ್ಲೀದೇ ಪದ್ಧತಿಯಂತೆ ಸ್ವಲ್ಪ ವ್ಯಾಪಾರೀ ಶಿಕ್ಷಣವನ್ನು ಸಂಪಾದನೆ ಮಾಡಿದ್ದನು. ಅವನಿಗೆ ಒಂದು ಬ್ಯಾಂಕಿನಲ್ಲಿ ನಾಲ್ಕತ್ತು ರೂಪಾಯಿಯ ನವಕರಿಯಿದ್ದಿತು. ರಾಜಾಸಾಹೇಬ ಚಿಂತಾಮಣಿರಾಯ ನಿಗೆ ಬ್ಯಾಂಕಿಗೆ ಕೊಡತಕ್ಕೊಳ್ಳುವದರ ಸಲುವಾಗಿ ವಸಂತರಾಯನಂಥ ಒಬ್ಬ ಮನು ಷ್ಯನ ಅವಶ್ಯಕತೆಯಿದ್ದುದರಿಂದ ಅವನು ಒಂದು ಸಾರೆ ಆ ಸಂಗತಿಯನ್ನು ವರ್ತಮಾ ನಪತ್ರದಲ್ಲಿ ಜಾಹೀರುಮಾಡಿದನು. ಕೂಡಲೆ ವಸಂತರಾಯನು ಎಷ್ಟೋ ದೊಡ್ಡ ದೊಡ್ಡ ಜನರ ಸರ್ಟಿಫಿಕೇಟುಗಳನ್ನು ತಕ್ಕೊಂಡು ರಾಜಾಸಾಹೇಬನ ಸನ್ನಿಧಿಗೆ ಬಂದನು. ಚಿಂತಾಮಣಿರಾಯನು ಬಂದ ಉಮೇದವಾರರಲ್ಲಿ ವಸಂತರಾಯನ ಅರ್ಜಿ ಯನ್ನು ಮನ್ನಿಸಿ, ಅವನಿಗೆ ಐವತ್ತು ರೂಪಾಯಿ ಪಗಾರದ ನವಕರಿ ಕೊಟ್ಟನು. ವಸಂತನು ನವಕರಿಗೆ ನಿಂತಕೂಡಲೆ ಯಾವತ್ತೂ ಜನರ ಪರಿಚಯ ಮಾಡಿಕೊಂಡನು. ಅವನು ತನ್ನ ಕೆಲಸವನ್ನು ಒಳ್ಳೆ ದಕ್ಷತೆಯಿಂದ ಮಾಡುತ್ತಿದ್ದದ್ದರಿಂದ ಚಿಂತಾಮಣಿ ರಾಯ-ರಾಮರಾಯರು ಅವನನ್ನು ಬಹಳವಾಗಿ ಪ್ರೀತಿಸಹತ್ತಿದರು. ಅವನಿಗೆ ಕೆಲವು ದಿನದ ಮೇಲೆ ಚಿಂತಾಮಣಿರಾಯನು ಎಪ್ಪತ್ತೈದು ರೂಪಾಯಿ ಪಗಾರವನ್ನು ಕೂಡ ಹತ್ತಿದನು. ವಸಂತರಾಯನಲ್ಲಿ ಅನೇಕ ದುರ್ಗುಣಗಳಿದ್ದವು; ಆದರೂ ಅವನು ಜಮಾ ಖರ್ಚಿನಲ್ಲಿ ಒಳ್ಳೆ ಚತುರನೂ, ವ್ಯಾಪಾರದಲ್ಲಿ ಧೂರ್ತನೂ ಆಗಿದ್ದುದರಿಂದ ಅವನ
೪೪---------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ದುರ್ಗುಣಗಳನ್ನೆಲ್ಲ ಗಣನೆಗೆ ತರಲಿಕ್ಕೆ ಬರುವಂತಿದ್ದಿಲ್ಲ. ಅವನು ಪ್ರತಿಯೊಂದು ಬ್ಯಾಂಕಿನ ಸ್ಥಿತಿಗತಿಗಳನ್ನು ಕೂಡಲೆ ಕಂಡುಹಿಡಿಯುತ್ತಿದ್ದನು. ಇರಲಿ.
ದಿವ್ಯಸುಂದರಿಯು ವಸಂತನಿಗೆ ಹೇಗೆ ಅಪಮಾನ ಮಾಡಿದಳೆಂಬುವದು ನಮ್ಮ ವಾಚಕರ ಸ್ಮರಣೆಯಲ್ಲಿರಬಹುದು. ಅವನು ಆಗ ಅಲ್ಲಿ ಸ್ವಲ್ಪ ಹೊತ್ತು ಕುಳಿತಂತೆ ಮಾಡಿ ಮಾನಭಂಗದ ವಿಚಾರಮಾಡುತ್ತ ದಿವಾಣಖಾನೆಯಿಂದ ಹೊರಟುಹೋದನು. ಸ್ವಲ್ಪ ವೇಳೆಯಾದ ಮೇಲೆ ಬಲಿಯರ್ಡದ ಆಟವು ಮುಗಿಯಲು, ಎಲ್ಲರೂ ಅಲ್ಲಿಂದೆದ್ದು ತಂತಮ್ಮ ದಿವಾಣಖಾನೆಗೆ ಹೋದರು. ಮಾರನೇ ದಿವಸ ಎದ್ದ ಕೂಡಲೆ ಪ್ರಾತಃಕಾ ಲದಲ್ಲಿ ಚಹಾದ ವ್ಯವಸ್ಥೆ ಮಾಡುತ್ತಿರುವಾಗ ಕೃಷ್ಣರಾಯನು ವಿನಾಯಕನನ್ನು ಕರ ಕೊಂಡು ಹೋಗುವದಕ್ಕಾಗಿ ಬಂದನು. ಆಗ ಕೃಷ್ಣರಾಯನನ್ನು ನೋಡಿ ರಾಮ ರಾಯನು:-( ನಾವು ಇನ್ನು ಸ್ವಲ್ಪ ವೇಳೆಯಲ್ಲಿ ವಿನಾಯಕರಾಯರನ್ನು ಕರಕೊಂಡು ನಿಮ್ಮ ಸನ್ನಿಧಿಗೆ ಬರುವವರಿದ್ದೆವು. ನಿಷ್ಕಾರಣ ನೀವು ಶ್ರಮತಕ್ಕೊಂಡಂತಾಯಿತು. ” ಎಂದನ್ನಲು ಆಗ ರಾಮರಾಯನಿಗೆ ಏನುತ್ತರವನ್ನು ಕೊಡಬೇಕೆಂಬುವದು ಕೃಷ್ಣರಾ ಯನಿಗೆ ತಿಳಿಯದೆ ಹೋಯಿತು. ತನ್ನ ಬಂಧುವಿನ ಸಲುವಾಗಿ ಇಂಥ ಗರ್ಭ ಶ್ರೀ ಮಂತರು ಇಷ್ಟು ಆದರಸತ್ಕಾರ ಮಾಡುವದನ್ನು ನೋಡಿ ಕೃಷ್ಣರಾಯನಿಗೆ ಸಾನಂದಾ ಶ್ಚರ್ಯವಾಯಿತು. ಆಗ ಅವನು:-" ನನ್ನ ಬಂಧುವಿಗೆ ತಾವು ಪ್ರಾಣದಾನ ಕೊಟ್ಟಿ ರುವಿರಿ. ಆದ್ದರಿಂದ ನಾನು ಜನ್ಮ ಜನ್ಮದಲ್ಲಿಯೂ ತಮ್ಮ ಉಪಕಾರವನ್ನು ಮರೆಯು ವಂತಿಲ್ಲ. ” ಎಂದನ್ನಲು ರಾಮರಾಯನು ಸಹಾನುಭೂತಿಯಿಂದ:- ಕೃಷ್ಣರಾಯ, ಇದರಲ್ಲಿ ನಾವೇನು ಅಂಥ ಹೆಚ್ಚಿನ ಉಪಕಾರ ಮಾಡಿರುವೆವು? ನಾವು ನಮ್ಮ ಕರ್ತ ವ್ಯವನ್ನು ಮಾತ್ರ ಮಾಡಿರುವೆವು. ನಮ್ಮೆಲ್ಲರಿಗೆ ಇವರಂಥ ವಿದ್ವಾನರೂ, ಸದುದ್ಯಮ ಶೀಲರೂ ಆದ ತರುಣಗೃಹಸ್ಥರ ಸಹವಾಸವು ಒಂದು ದಿವಸ ಸಂಘಟಿಸಿದ ಬಗ್ಗೆ ತಿರುಗಿ ನಾವು ಇವರ ಉಪಕಾರವನ್ನು ಎಷ್ಟು ಮನ್ನಿಸಿದರೂ ಕಡಿಮೆಯೇ ಸರಿ, ” ಎಂದನು. ಆಗ ಮಧುರೆಯು ಕೃಷ್ಣರಾಯನನ್ನು ಕುರಿತು:- ( ಬಹಳ ಮಾಡಿ ಇವರ ಅತ್ತಿಗೆಯವರು ನಿಮ್ಮನ್ನು ಕಳಿಸಿರಬಹುದು. ?”
ಕೃಷ್ಣ:- ಹೌದು ಅವಳು ಇವನನ್ನು ತನ್ನ ತಮ್ಮನೆಂದು ಭಾವಿಸಿರುತ್ತಾಳೆ. ಅವಳು ಒಂದೇಸವನೆ ಅಳುತ್ತ ಕುಳಿತಿದ್ದಾಳೆ. ಈತನು ನಿಮ್ಮಲ್ಲಿ ಇರುತ್ತಾನೆಂದು ಕೇಳಿದ ಮೇಲೆ ಅವಳಿಗೆ ಸ್ವಲ್ಪ ಸಮಾಧಾನವಾಗಿದೆ. ?”
ಇಂಥ ಮೃದುಸ್ವಭಾವದ ಯಮುನೆಯನ್ನು ಒಮ್ಮೆಯಾದರೂ ನೋಡಬೇಕೆಂದು ದಿವ್ಯಸುಂದರಿಗೆ ತೋರಿತು. ಅವಳು ಮಧುರಸ್ವರದಿಂದ ವಿನಾಯಕನನ್ನು ಕುರಿತು: « ಒಂದು ಸಾರೆ ಯಮುನಕ್ಕನವರನ್ನು ಇಲ್ಲಿಗೆ ಕರಕೊಂಡು ಬಂದರೆ ಬಹಳ ಉಪಕಾ ಠವಾದಂತಾಗುತ್ತದೆ, ”
೪೫---------------------------------------------------------------------೩ನೆಯ ಪ್ರಕರಣ-ಸುಂದರ.ಭವನ. -
ವಿನಾಯಕನು ನಗುತ್ತ, ಎಲ್ಲರ ಅಪ್ಪಣೆಯನ್ನು ತಕ್ಕೊಳ್ಳುತ್ತ:- " ಆಗಲಿ, ಅವ ಶ್ಯವಾಗಿ ಕರಕೊಂಡು ಬರುತ್ತೇನೆ. "
ಇದೇ ವೇಳೆಯಲ್ಲಿ ಮಧುರೆಯು ಏನೋ ಧ್ಯಾನಿಸಿ ವಿನಾಯಕನನ್ನು ಕುರಿತು: (( ನಿಮ್ಮ ಯಮುನಕ್ಕನವರ ತಂದೆಯ ಹೆಸರು ವಿಶ್ವನಾಥರಾಯ ದೇಶಮುಖ
ಅಲ್ಲವೇ?
ವಿನಾಯಕ:- ಹೌದು. ಅವರು ಹೈದರಾಬಾದದಲ್ಲಿ ಪ್ರಸಿದ್ದ ಶ್ರೀಮಂತ ರಾಗಿದ್ದಾರೆ. '
ಮಧುರೆ:-( ಆಗ್ರಹಸೂಚಕಸ್ವರದಿಂದ ಹಾಗಾದರೆ ಅವರನ್ನು ಅಗತ್ಯವಾಗಿ ಕರಕೊಂಡು ಬನ್ನಿ. ಅವರಿಗೂ ನಮಗೂ ಬೇಗ ಆಪ್ತ ಸಂಬಂಧವಾಗುವದದೆ. ನಮ್ಮ ಅಣ್ಣನಿಗೆ ಯಮುನಕ್ಕನವರ ಚಿಕ್ಕ ತಂಗಿಯನ್ನು ಕೊಡುವದಾಗಿ ನಿಶ್ಚಿತವಾಗಿದೆ. ”
ವಿನಾ:- ಹೌದು. ಅದು ನನಗೆ ಗೊತ್ತಿದೆ. ”
ದಿವಸುಂದರಿ:- (ನಗು) ಹಾಗಾದರೆ ಈ ಮೊದಲು ನೀವು ನಮಗೆ ಈ ಸಂಗತಿಯನ್ನು ಯಾಕೆ ಹೇಳಲಿಲ್ಲ? ಇದರ ಹೊರ್ತು ನೀವೂ ನಮ್ಮ ಸಂಬಂಧಿಕ ರಿದ್ದೀರೆಂದು ತಂದೆಯು ಹೇಳುತ್ತಾನೆ. ”
ದಿವ್ಯಸುಂದರಿಯ ಈ ಪ್ರಶ್ನೆಗೆ ವಿನಾಯಕನು ಏನೂ ಉತ್ತರಕೊಡಲಿಲ್ಲ. ಯಾಕಂದರೆ, ಗರ್ಭ ಶ್ರೀಮಂತರಾದ ಅವರಿಗೆ ನೀವು ನಮ್ಮ ನಂಟರೆಂದು ಹೇಳುವದು ಅವನಿಗೆ ಲಜ್ಜೆಯ ಮಾತಾಗಿ ತೋರಿತು. ಕೃಷ್ಣರಾಯನು ಕಳ್ಳು ಬಳ್ಳಿಯ ಸಲುವಾಗಿ ಮಾತಾಡುವದನ್ನೆಲ್ಲ ಮಾತಾಡಿ, ಎಲ್ಲರ ಅಪ್ಪಣೆಯನ್ನು ತಕ್ಕೊಂಡು ವಿನಾಯಕನನ್ನು ಕರಕೊಂಡು ಮನೆಗೆ ಹೊರಟನು. ವಿನಾಯಕನಿಗೆ ಯಮುನೆಯ ಮೋರೆಯನ್ನು ಯಾವಾಗ ನೋಡೇನೆಂಬಾತುರವು ಬಹಳವಾಗಿದ್ದಿತು. ಅವನು ಲಗು ಲಗು ಕಾಲು ಹಾಕಿ ಮನೆಯನ್ನು ಮುಟ್ಟಿದನು. ಮನೆಯಲ್ಲಿ ಯಮುನೆಯು ವಿನಾಯಕನ ಮಾರ್ಗ ನಿರೀಕ್ಷಣಮಾಡುತ್ತ ಮುಂಚೀಬಾಗಿಲಿನ ಹತ್ತಿರ ನಿಂತುಕೊಂಡಿದ್ದಳು. ವಿನಾಯಕನು ಮನೆಯಲ್ಲಿ ಕಾಲು ಇಡು ಇಡುತ್ತಲೇ ಅವಳು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಳು. ಅವಳಿಗೆ ಹೋದ ಜೀವವು ಪುನಃ ಬಂದಂತಾಯಿತು. ಎಷ್ಟೋ ಹೊತ್ತು ಅವಳಿಗೆ ಮಾತಾಡಲಿಕ್ಕೆ ಕೂಡ ಬರಲಿಲ್ಲ. ಅವಳು ಹಾಗೂ ಹೀಗೂ ಮಾಡಿ ಮನಸ್ಸನ್ನು ಸಮಾ ಧಾನಬಡಿಸಿಕೊಂಡು ಅಂದದ್ದೇನಂದರೆ:- ( ವಿನಾಯಕರಾಯ, ಹೋಗುವಾಗ ಇಂಥಲ್ಲಿಗೆ ಹೋಗುತ್ತೇನೆಂದು ಕೂಡ ಹೇಳಿಹೋಗಬಾರದೇನು ? ” ಎಂದಳು. ಆಗ ವಿನಾಯಕನು ಕಣ್ಣೀರು ಒರಿಸಿಕೊಳ್ಳುತ್ತ " ಇದೆಲ್ಲ ಆ ಬಂದ ಮನುಷ್ಯನ ತಂತ್ರವು, ಅಣ್ಣನು ಟ್ರಾಮಿನ ಆಘಾತದಿಂದ ಬಿದ್ದು ಎಚ್ಚರದಪ್ಪಿರುತ್ತಾನೆಂದು ಕೇಳಿದ ಕೂಡಲೆ ಗಾಬರಿಯಾಗಿ ಹೊರಟುಹೋದೆನು, ” ಎಂದನು. ಆಮೇಲೆ ಯಮುನೆಯು ವಿನಾ
೪೬---------------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಯಕನು ಒಲ್ಲೆಂದರೂ ಕೇಳದೆ ತಾನು ಮೊದಲೇ ಸಿದ್ಧ ಮಾಡಿಟ್ಟ ಫಲಾಹಾರವನ್ನು ಅವನ ಮುಂದಿಟ್ಟಳು. ವಿನಾಯಕನು ಸ್ವಲ್ಪ ಫಲಾಹಾರ ಮಾಡಿದನು. ಅದರಿಂದ ಯಮುನೆಗೆ ತುಂಬಾ ಸಮಾಧಾನವಾಯಿತು. ಈ ಪ್ರಕಾರ ಕೆಲಹೊತ್ತು ವಿನಾಯಕ ಯಮುನೆಯರ ಮಾತುಕಥೆಯಾದ ಮೇಲೆ ಕೃಷ್ಣರಾಯನು ವಿನಾಯಕನನ್ನು ಸಂಗಡ ಕರಕೊಂಡು ನೀಲಕಂಠರಾಯನ ಮನೆಗೆ ಹೋದನು. ಮಿರಜಿಯಲಿ ಶಾಮರಾಯನ ಕೈಯಿಂದ ಸಾಯುವ ಮೊದಲೇ ನೀಲಕಂಠರಾಯನು ತನ್ನ ತಂಗಿಯ ಮಗನಾದ ಜಗನ್ನಾಥನನ್ನು ಹತ್ತರ ಕರಿಸಿಕೊಂಡು ತನ್ನ ಆಸ್ತಿಯಲ್ಲಿ ಅವನ ಹೆಸರ್ವೆ ಆಗ ಬೇಕೆಂದು ಮೃತ್ಯು ಪತ್ರ ಮಾಡಿಟ್ಟಿದ್ದನು. ಈ ಪತ್ರವು ಸರಕಾರದಲ್ಲಿಯೂ ನಮದಾಗಿ ದ್ದಿತು. ಈ ಮೃತ್ಯು ಪತ್ರದಲ್ಲಿ ಶಾಮರಾಯನು ಸಿದ್ಧ ಮಾಡಿದ ಮೊಟ್ಟ ಮೃತ್ಯುಪತ್ರದ ಉಲ್ಲೇಖವೂ ಆಗಿದ್ದಿತು. ಕೃಷ್ಣರಾಯ-ವಿನಾಯಕರು ಜಗನ್ನಾಥನಿಗೆ ಈ ಎಲ್ಲ ಸಂಗ ತಿಯನ್ನು ತಿಳಿಸಿ, ಅವನನ್ನು ಸಂಗಡ ಕರಕೊಂಡು ಹೋಗಿ ಫಿರ್ಯಾದಿಯನ್ನು ಕೊಟ್ಟರು. ಪಿರ್ಯಾದಿಯನ್ನು ಹಿಡಿದು ಪೋಲೀಸರು ತ್ವರೆಯಿಂದ ಚವಕಸಿ ನಡಿಸಿ ದರು. ಶಾಮರಾಯನಿದ್ದ ಮನೆಯಲ್ಲಿ ಯಾರೂ ಇದ್ದಿಲ್ಲ. ಮನೆಯ ಯಜಮಾನನಿಂದ ಶಾಮರಾಯನು ಮೊಟ್ಟ ಹೆಸರಿನಿಂದ ಭಾಡಿಗಿ ತೆಗೆದುಕೊಂಡಿದ್ದನೆಂಬದಾಗಿ ಪೋಲೀ ಸರಿಗೆ ಕಂಡುಬಂದಿತು. ಪೋಲೀಸರು ಆ ಸಂಬಂಧವಾಗಿ ಎಷ್ಟು ಶೋಧಮಾಡಿ ದರೂ ಕಾರ್ಯದಲ್ಲಿ ಜಯವು ಸಿಗಲಿಲ್ಲ.
ಮೂರು ನಾಲ್ಕು ದಿವಸವಾದ ಮೇಲೆ ಚಿಂತಾಮಣಿರಾಯನ ದಿವಾಣ ಮಾಧವ ರಾಯನು ವಿನಾಯಕನ ಬಳಿಗೆ ಬಂದು, ಚಿಂತಾಮಣಿರಾಯರು ಕರೆಯುತ್ತಾರೆಂದು ಹೇಳಿ ಸಂಗಡ ಅವನನ್ನು ಕರಕೊಂಡು ಹೋದನು. ಆ ವೇಳೆಯಲ್ಲಿ ಚಿಂತಾಮಣಿ ರಾಯನು ಒಂದು ಆರಾಮಖುರ್ಚಿಯ ಮೇಲೆ ಕುಳಿತು ಇಂಗ್ರೇಸೀ ದೈನಿಕ ವರ್ತಮ ನಪತ್ರವನ್ನು ಓದುತ್ತಿದ್ದನು. ವಿನಾಯಕನು ದಿವಾಣಖಾನೆಯಲ್ಲಿ ಬಂದಕೂಡಲೆ ಚಿಂತಾಮಣಿರಾಯನು ಒಂದು ಖುರ್ಚೆಯಕಡೆಗೆ ಬೊಟ್ಟು ಮಾಡಿ ವಿನಾಯಕನಿಗೆ ಕೂಡಲಿಕ್ಕೆ ಹೇಳಿದನು. ಮಾಧವರಾಯನೂ ವಿನಾಯಕನ ಹತ್ತಿರ ಇದ್ದ ಖುರ್ಚೆಯ ಮೇಲೆ ಕುಳಿತನು. ಆ ಮೇಲೆ ಚಿಂತಾಮಣಿರಾಯ-ವಿನಾಯಕರ ಸಂಭಾಷಣವು ಪ್ರಾರಂಭವಾಯಿತು,
- ಚಿಂತಾ:-( ವಿನಾಯಕರಾಯ, ನೀವೇನೋ ನಮ್ಮ ರಾಮಪುರದ ಭೂಮಿ ಯನ್ನು ಲಾವಣಿಗೆ ಬೇಡುವಿರಿ ಖರೆ; ಆದರೆ ಅದರಿಂದ ನಿಮಗೇನು ಲಾಭವಾಗುವದೋ ನನಗೆ ತಿಳಿಯದಾಗಿದೆ. ಆ ಭೂಮಿಯಲ್ಲಿ ಕಬ್ಬಿಣ ಮೊದಲಾದ ಧಾತುಗಳು ಹೊರಡು ಶವೆನ್ನುವದು ಆಶ್ಚರ್ಯವಾಗಿದೆ. ”
ವಿನಾ:-( ಆಶ್ಚರ್ಯವೇನೂ ಇಲ್ಲ. ನಾನು ಅಲ್ಲಿಯ ಕಲ್ಲುಮಣ್ಣು ಪರೀಕ್ಷಿ ಸಿಯೇ ಈ ಯೋಜನೆ ಮಾಡಿರುತ್ತೇನೆ, ”
೪೭--------------------------------------------------------------೩ನೆಯ ಪ್ರಕರಣ-ಸುಂದರ ಭವನ
ಚಿಂತಾ:-"ಆಗಲಿ, ಭೂಮಿಯನ್ನೇನೋ ಕೊಡುವೆನು. ಇಂಥ ದೊಡ್ಡ ಕೆಲಸಕ್ಕೆ ದುಡ್ಡಿನ ವ್ಯವಸ್ಥೆ ಏನು ಮಾಡಿರುವಿರಿ? ”
ವಿನಾ:- ನನ್ನ ಹತ್ತರ ಕೆಲವು ದ್ರವ್ಯವದೆ. ಇದರ ಹೊರ್ತು ನನ್ನ ನಾಲ್ಕಾರು ಮಂದಿ ಮಿತ್ರರು ಅಲ್ಪಸ್ವಲ್ಪ ದುಡ್ಡಿನ ಸಹಾಯ ಮಾಡುತ್ತೇವೆಂದು ವಚನ ಕೊಟ್ಟಿದ್ದಾರೆ. ಅಮೇರಿಕಾದಲ್ಲಿ ನಾನಿದ್ದ ಕಬ್ಬಿಣ ಕಾರಖಾನೆಯ ಯಜಮಾನನು ನನಗೆ ಬೇಕಾಗುವ ಎಷ್ಟೋ ಯಂತ್ರಗಳನ್ನು ಹಬಂದೀ ಪ್ರಕಾರ ಹಣ ತಕ್ಕೊಂಡು ಕೊಡಲಿಕ್ಕೆ ಒಪ್ಪಿದ್ದಾನೆ. ಮೊದಲು ಸಣ್ಣ ಪ್ರಮಾಣದಿಂದ ಕಾರಖಾನೆಯನ್ನು ಪ್ರಾರಂಭಿಸಿ, ಲಾಭಲಕ್ಷಣವು ಕಂಡರೆ ಹೆಚ್ಚು ಹಣ ಕೂಡಿಸುವ ಯತ್ನ ಮಾಡುವೆನು, ”
ಚಿಂತಾ:-( ಆಗಲಿ, ಮೊದಲು ನಮ್ಮಲ್ಲಿ ಉದ್ಯೋಗಮಾಡುವ ಜನರೇ ಕಡಿಮೆ. ಇಂಥದರಲ್ಲಿ ನೀವು ಇಂಥ ದೊಡ್ಡ ಉದ್ಯೋಗಕ್ಕೆ ಯತ್ನ ಮಾಡುತ್ತಿರುವಾಗ ನಾವು ಆಶ್ರಯಗೊಡುವದು ವಿಹಿತವೇ ಆಗಿದೆ. ಇದಕ್ಕಾಗಿ ನಿಮಗೆ ನಾನು ಆ ಭೂಮಿ ಯನ್ನು ೯೯ ವರ್ಷದ ಕರಾರಿನಿಂದ ಲಾವಣಿ ಕೊಟ್ಟಿದ್ದೇನೆ. ಮೊದಲಿನ ಹತ್ತು ವರ್ಷ ನೀವು ನಮಗೆ ಏನೂ ಕೊಡಬೇಡಿರಿ. ಮುಂದೆ ಇಪ್ಪತ್ತೈದು ವರ್ಷದ ತನಕ ಬರೇ ಕಂದಾಯವನ್ನು ನೋಡಿಕೊಳ್ಳಿರಿ. ಅನಂತರ ಪ್ರತಿವರ್ಷ ಕಂದಾಯವನ್ನು ನೋಡಿಕೊಂಡು ಅದರ ನಾಲ್ಕಷ್ಟು ರಕಂ ನನಗೆ ಕೊಡುತ್ತ ಹೋಗಿರಿ. ಈ ಕರಾರಿ ನಿಂದ ನಿಮಗೆ ಸುಲಭವಾಗಿ ಮುಂದೆ ಲಾಭಾಂಶವು ತೋರಿದರೆ ನಮಗೂ ಅಷ್ಟು ಲಾಭವಾಗುವದು. ಬರೇ ಹಾನಿಯಾಗುವ ಲಕ್ಷಣವು ತೋರಿದರೆ ಮೊದಲಿನ ಹತ್ತು ವರ್ಷ ನೀವು ಬೇಕಾದಾಗ ಬಿಡಲಿಕ್ಕೆ ಅಡ್ಡಿಯಿಲ್ಲ. ”
ಚಿಂತಾಮಣಿರಾಯನ ಈ ಕರಾರನ್ನು ಕಂಡು ವಿನಾಯಕನಿಗೆ ಬಹಳ ಆನಂದ ವಾಯಿತು. ಅವನು ಆ ಸವಲತಿಯ ಸಲುವಾಗಿ ಚಿಂತಾಮಣಿರಾಯನ ಆಭಾರವನ್ನು ಬಹಳವಾಗಿ ಮನ್ನಿಸಿದನು. ಇನ್ನು ಚಿಂತಾಮಣಿರಾಯನ ಅಪ್ಪಣೆಯನ್ನು ತಕ್ಕೊಂಡು ವಿನಾಯಕನು ದಿವಾಣಖಾನೆಯಿಂದ ಹೊರಬೀಳಬೇಕೆನ್ನುವಷ್ಟರಲ್ಲಿ ವಂಸತರಾಯ ರಾಮರಾಯರು ಮಾತಾಡುತ್ತ ನಿಂತದ್ದು ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಆಗ ಅವನು ಚಿಂತಾಮಣಿರಾಯನಿಗೆ ನಮಸ್ಕಾರಮಾಡಿ ಕೆಳಗೆ ಇಳಿದು ಹೋಗುವ ಅಟ್ಟದ ಕಡೆಗೆ ಹೋಗಹತ್ತಿದನು. ಆದರೆ ಅಷ್ಟರಲ್ಲಿ ರಾಮರಾಯನು ಅವನನ್ನು ಕರೆದು ಪರಭಾರೆ ಹೋಗುವ ಬಗ್ಗೆ ಅವನ ಮೇಲೆ ದೋಷವನ್ನು ಹೊರಿಸಿದನು. ಆಗ ವಿನಾ ಯಕನು ನಗುತ್ತ “ ನೀವು ಏನೋ ಮಾತಾಡುತ್ತ ನಿಂತಿದ್ದರಿಂದ ನಿಮ್ಮ ಭೆಟ್ಟಿಯಾ ಗದೆ ಹಾಗೆಯೇ ಹೋಗುತ್ತಿದ್ದೆನು. ” ಎಂದನು.
ರಾಮರಾಯನು ವಸಂತನ ಸಂಗಡ ಮಾತಾಡುವ ವಿಷಯವನ್ನು ಬಿಟ್ಟು ಕೊ ಟ್ಟನು. ಅವನು ನಾಲೈದು ಹೆಜ್ಜೆ ಮುಂದಕ್ಕೆ ಸರಿದು ವಿನಾಯಕನ ಕೈ ಹಿಡಕೊಂಡು
೪೮-----------------------------------------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
" ನೀವು ಇಂದು ಬರುವವರಿದ್ದೀರೆಂಬುವದನ್ನು ನಾನು ತಂದೆಯವರಿಂದ ಈ ಮೊದಲೇ ಕೇಳಿದ್ದನು, ನೀವು ಬರುವಾಗ ಯಮುನಕ್ಕನವರನ್ನು ಕರಕೊಂಡು ಬಂದೀರೆಂಬ ಆಶೆ ಯಿಂದ ಮನೆಯಲ್ಲಿ ಎಷ್ಟೋ ಸಿದ್ದತೆಮಾಡಿದ್ದರು. ಒಳ್ಳೇದು ನಡೆಯಿರಿ, ಒಳಗೆ. ಚಹಾ ತಕ್ಕೊಂಡು ಹೋಗುವಂತಿರಿ.” ಎಂದನ್ನು ವಿನಾಯಕನನ್ನು ಕರಕೊಂಡು ಒಳಗೆ ಹೋದನು. ವಸಂತರಾಯನು ಹಾಗೆಯೇ ಹೊರಗೆ ನಿಂತಿದ್ದನು. ವಿನಾಯ ಕನನ್ನು ಕಂಡಕೂಡಲೆ ತನ್ನ ಸಂಗಡ ಮಾತಾಡುವದನ್ನು ಬಿಟ್ಟು, ಅವನ ಕೈ ಹಿಡಿದು ಅವನ ಸತ್ಕಾರಮಾಡಿದ್ದನ್ನೂ, ತಾನು ಹತ್ತರ ಇರಲಿಕ್ಕೆ ಅವನಿಗೊಬ್ಬನಿಗೇ ಚಹಾದ ಆಮಂತ್ರಣಮಾಡಿದ್ದನ್ನೂ ನೋಡಿ ವಸಂತನ ಅಂತಃಕರಣದಲ್ಲಿ ಕಾಲಕೂಟ ವಿಷದ ಕಾರಂಜಿಯು ಪುಟಿಯಹತ್ತಿತು. ವಿನಾಯಕನ ಸಂಬಂಧವಾಗಿ ಅವನ ಮನಸ್ಸಿನಲ್ಲಿ ಭಯಂಕರ ಮತ್ಸರವು ಉತ್ಪನ್ನವಾಯಿತು. ವಿನಾಯಕನು ಯಮುನೆಯನ್ನು ಕರ ಕೊಂಡು ಬಾರದ್ದಕ್ಕಾಗಿ ದಿವ್ಯಸುಂದರಿ-ಮಧುರೆಯರು ದುಃಖಪ್ರದರ್ಶನ ಮಾಡಿದರು. ವಿನಾಯಕನು ನಾಲ್ಕೆಂಟು ದಿವಸಗಳಲ್ಲಿ ನಿಜವಾಗಿ ಅತ್ತಿಗೆಯನ್ನು ಕರಕೊಂಡು ಬರು ತೇನೆಂಬದಾಗಿ ಆಶ್ವಾಸನಗೊಟ್ಟು ಚಹಾ ತಕ್ಕೊಂಡು ಮನೆಗೆ ಬಂದನು. ಮನೆಗೆ ಬಂದ ಕೂಡಲೆ ದಿವ್ಯಸಂದರಿ-ಮಧುರೆಯರು ನಿಮ್ಮನ್ನು ತಮ್ಮ ಮನೆಗೆ ಕರಕೊಂಡು ಬರಬೇ ಕೆಂದು ಹೇಳಿರುತ್ತಾರೆಂದು ಯಮುನೆಗೆ ತಿಳಿಸಿದನು. ಆಗ ಅವಳು ಅಂಥ ಶ್ರೀಮಂತರ ಮನೆಗೆ ಸಾಮಾನ್ಯಳಾದ ನಾನು ಬರುವದು ತಕ್ಕದಲ್ಲವೆಂದು ಅಂದಳು. ಆಗ ವಿನಾ ಯಕನು ಯಾವ ರೀತಿಯಿಂದಲೂ ಅವರ ಮನೆಗೆ ಬರಲಿಕ್ಕೆ ಅಡ್ಡಿಯಿಲ್ಲವೆಂದು ಹೇಳಲು ಅವಳು ಒಪ್ಪಿದಳು. ಮೂರು ನಾಲ್ಕು ದಿವಸವಾದ ಮೇಲೆ ವಿನಾಯಕನು ಯಮುನೆಯನ್ನು ಸಂಗಡ ಕರಕೊಂಡು ಚಿಂತಾಮಣಿರಾಯನ ಬಂಗಲೆಗೆ ಬಂದನು. ಯಮುನೆಯ ಶೀಲಸ್ವಭಾವವನ್ನೂ, ಮಧುರವಚನವನ್ನೂ, ಅಪೂರ್ವಜ್ಞಾನವನ್ನೂ ನೋಡಿ ದಿವ್ಯಸುಂದರಿ-ಮಧುರೆಯರು ಆಶ್ಚರ್ಯಚಕಿತರಾದರು. ಯಮುನೆಯು ಅಪ್ಪ ತಿಮ ಸುಂದರಿಯಿದ್ದಳು. ಅವಳು ದಿವ್ಯಸುಂದರಿಗಿಂತ ಸುಂದರಿಯೆಂಬುವದನ್ನೂ, ದಿವಸುಂದರಿಯು ಅವಳಿಗಿಂತ ಸುಂದರಿಯೆಂಬುವದನ್ನೂ ಹೇಳುವದು ಕಠಿಣವಾಗಿ ದ್ದರೂ ಅವಳು ಮಧುರೆಗಿಂತ ಎಷ್ಟೋ ಪಟ್ಟು ಸುಂದರಳಿದ್ದಳು. ಯಮುನೆಯ ಸಾದಾ ಪೋಷಾಕನ್ನು ನೋಡಿದ ಕೂಡಲೆ ಮಧುರೆಗೆ ತನ್ನ ಬೆರಿಕೆಯ ಉಡಿಗೆ-ತೊಡಿಗೆಗಳ ಸಲುವಾಗಿ ಸ್ವಲ್ಪ ನಾಚಿಕೆಯಾಯಿತು. ಅದರಲ್ಲಿಯೂ ಸಾದಾಪೋಷಾಕಿನ ಅವಳು ಇಂಗ್ರೇಜೀಭಾಷೆಯಲ್ಲಿ ಮಾತಾಡುವದನ್ನು ನೋಡಿಯಂತೂ ಮಧುರೆಗೆ ಹೇಗೋ ಹೇಗೋ ಆಯಿತು ದಿವ್ಯಸುಂದರಿ-ಮಧುರೆಯರು ಯಮುನೆಗೆ ಬಹಳವಾಗಿ ಆದರಿಸಿ ದರು. ಮೂವರ ಅಂತಃಕರಣಗಳೂ ನಿರ್ಮಲವಾಗಿದ್ದುದರಿಂದ ಅವರಲ್ಲಿ ಪರಸ್ಪರ ಪ್ರೇಮಭಾವವು ಬೇರುಗೊಂಡಿತು. ಯಮುನೆಗೆ ಮೇಲೆ ತಮ್ಮ ಮನೆಗೆ ಬರುತ್ತಿರ ಬೇಕೆಂದು ದಿವ್ಯಸುಂದರಿ-ಮಧುರೆಯರು ತಮ್ಮ ಆಗ್ರಹದ ಅಪೇಕ್ಷೆಯನ್ನು ತಿಳಿಸಿದರು.
೪೯-------------------------------------------------------------------------೩ನೆಯ ಪ್ರಕರಣ-ಸುಂದರ.ಭವನ,
ಕೂಡಲೆ ಯಮುನೆಯು ಎಲ್ಲರ ಅಪ್ರಣೆಯನ್ನು ಹೊಂದಿ ವಿನಾಯಕನ ಕೂಡ ಕೆಳ ಗಿಳಿದು ಗಾಡಿಯಲ್ಲಿ ಕುಳಿತಳು. ಗಾಡಿಯಲ್ಲಿ ಕುಳಿತ ಕಾಲಕ್ಕೆ ಅವಳ ದೃಷ್ಟಿಯು ಸಾಹಜಿಕವಾಗಿ ಬಂಗಲೆಯ ನಡುವಿನ ಅಂತಸ್ತಿನ ನಡುವಿನ ಕಿಡಿಕಿಯ ಕಡೆಗೆ ಬಿದ್ದಿತು. ನೋಡುತ್ತಾಳೆ, ಆ ಕಿಡಿಕಿಯ ಹತ್ತರ ದಿವಸುಂದರಿಯು ನಿಂತುಕೊಂಡು ನಗೆಮೊಗ ದೊಡನೆ ಕೈಯನ್ನು ಮೇಲಕ್ಕೆತ್ತಿ ನಿರೋಪಗೊಡುತ್ತಾಳೆ. ಹಾಗೇ ಮೇಲಕ್ಕೆ ಯಮು ನೆಯು ನೋಡಲು ಅದೇ ಕಿಡಿಕಿಯ ಮೇಲೆ ಒಂದು ಕಲ್ಲಿನಲ್ಲಿ ಕೊರೆದ ಸುಂದರ ಸುವ ರ್ಣಾಕ್ಷರಗಳು ಕಂಡವು. ಅವುಗಳನ್ನು ನೋಡಿ ಅವಳು ವಿನಾಯಕನನ್ನು ಕುರಿತು: ( ವಿನಾಯಕರಾಯ, ಬಂಗಲೆಯ ಮೇಲೆ ಏನು ಬರೆದದೆಯೆಂಬುವದನ್ನು ನೀವು ನೋಡಿರುವಿರೋ? ?” ಎಂದು ಕೇಳಲು ವಿನಾಯಕನು ಆ ಕಡೆಗೆ ನೋಡುತ್ತಾನೆ. ದಿವ್ಯಸುಂದರಿಯು ನಾಚಿಕೆಯ ನೋಟದಿಂದ ತನ್ನ ಕಡೆಗೆ ನೋಡುತ್ತ ನಿಂತು ಕೊಂಡಿದ್ದಾಳೆ. ಮೇಲ್ಬಾಗಕ್ಕೆ ಕಲ್ಲಿನಲ್ಲಿ ಕೊರೆದ ಅಕ್ಷರಗಳೂ ತನ್ನನ್ನು ನೋಡು ಇವೆಯೋ ಏನೋ ಅನ್ನುವಂತೆ ರಮಣೀಯವಾಗಿ ಕಾಣಿಸುತ್ತವೆ. ಆ ದಿಕ್ಕಿನ ಕಡೆಗೆ ವಿನಾಯಕನು ನೋಡಿದರೂ ಅವನಿಂದ ತನ್ನ ಪ್ರಶ್ನೆಗೆ ಉತ್ತರವು ದೊರೆಯದ್ದರಿಂದ ಯಮುನೆಯು ( ವಿನಾಯಕರಾಯ, ಏನು ಬರೆದದೆ ? ೨” ಎಂದು ಕೇಳಿದಳು. ವಾಸ್ತವಿಕ ಯಮುನೆಯು ಆ ಅಕ್ಷರಗಳನ್ನು ಓದಿದ್ದಳು; ಆದರೂ ಆ ಪ್ರಶ್ನೆಯನ್ನು ಅವಳು ವಿನಾಯಕನಿಗೆ ಯಾಕೆ ಮಾಡಿದಳೋ ಏನೋ ! ತಿರುಗಿ ಯಮುನೆಯ ಮತ್ತೊಂದು ಪ್ರಶ್ನೆಗೆ ವಿನಾಯಕನು ಜಾಗೃತನಾಗಿ ( ಸುಂದರಭವನ ” ಎಂಬ ದಾಗಿ ಅಂದನು.
೫೦---------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
೪ನೆಯ ಪ್ರಕರಣ.
ಸಖಿ ಸಂದರ್ಶನ!
ಚಿ೦ತಾಮಣಿರಾಯನ ಪರಿವಾರದೊಡನೆ ವಿನಾಯಕನ ಪರಿಚಯವು ಬೆಳೆ **ಯುತ್ತ ಹೋದಂತೆ ವಸಂತನ ಮತ್ಸರವೂ ಬೆಳೆಯುತ್ತ ನಡೆಯಿತು. ವಿನಾಯ ಕನ ಮೇಲೆ ಮತ್ಸರಮಾಡಲಿಕ್ಕೆ ವಿನಾಯಕನು ವಸಂತರಾಯನಿಗೆ ಏನೂ ಕೆಡಕು ಮಾಡಿದ್ದಿಲ್ಲ; ಆದರೂ ಚಿಂತಾಮಣಿರಾಯನ ಬಂಗಲೆಯಲ್ಲಿ ವಿನಾಯಕನ ಪ್ರವೇಶ ವಾದಂದಿನಿಂದ ವಸಂತನಿಗೆ ವಿನಾಯಕನು ಶಲ್ಯದಂತ ತೋರಹತ್ತಿದನು. ವಸಂತನೂ ಹಾಗೂ ಹೀಗೂ ಮಾಡಿ ಚಿಂತಾಮಣಿರಾಯನಿಂದ ಪ್ರತಿ ತಿಂಗಳಿಗೆ ಎಪ್ಪತ್ತೈದು ರೂಪಾಯಿ ಪಗಾರವನ್ನು ದೊರಕಿಸುತ್ತಿದ್ದನು. ಆ ದೃಷ್ಟಿಯಿಂದ ಅವನು ಚಿಂತಾಮಣಿ ರಾಯನಲ್ಲಿ ದೊಡ್ಡ ಹುದ್ದೆದಾರನಾಗಿದ್ದನೆಂಬಂತಿಲ್ಲ; ಆದರೂ ವಸಂತನು ತಾನು ಸುಧಾರಣೆಯ ಕಟ್ಟಭಿಮಾನಿಯಾಗಿದ್ದುದರಿಂದ ಚಿಂತಾಮಣಿರಾಯನಂಥ ಸುಧಾ ರಣಾಪ್ರಿಯ ಗೃಹಸ್ಥನಿಗೆ ಒಳ್ಳೆ ಪ್ರಿಯಕರನೆಂದು ತಪ್ಪು ತಿಳುವಳಿಕೆ ಮಾಡಿಕೊಂಡಿ ದ್ದನು. ತನ್ನ ಯುರೋಪಿಯನ್ ಪೋಷಾಕಕ್ಕೆ ಅಲ್ಲಿ ಬಹಳ ಮಾನವದೆಯೆಂದು ಅವ ನಿಗೆ ಭ್ರಮೆಯಾದಂದಿನಿಂದ ಅವನು ಯುರೋಪಿಯನ್ ಪೋಷಾಕು, ಯುರೋಪಿ ಯನ್ ನಡೆನುಡಿ ಇವುಗಳಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಲಿಕ್ಕಿಲ್ಲವೆಂದು ದೃಢ ನಿಶ್ಚಯ ಮಾಡಿದ್ದನು, ಆದರೆ ಇದರಿಂದ ವಸಂತಮೂರ್ತಿಯು ಜನರ ಉಪಹಾಸಕ್ಕೆ ಮಾತ್ರ ಪಾತ್ರವಾಗಿದ್ದಿತು. ಅವನ ಕಲ್ಲಿದ್ದಲಿಯಂತೆ ಮಿರಿಮಿರಿ ಮಿಂಚುವ ಕಪ್ಪು ಬಣ್ಣವೂ, ಬಾಯಿ ತೆಗೆದ ಕೂಡಲೆ ಕಾರ್ಮೋಡದ ಮಿಂಚಿನಂತೆ ಕಾಣುವ ಹಲ್ಲು ಗಳೂ, ಹುರಿಮಾಡಿದ ಮೀಶಿಯೂ, ಅಚ್ಛ ನೀರಿನಹಣ್ಣಿನ ಬಣ್ಣವನ್ನು ತಿರಸ್ಕರಿಸುವ ತುಟಿಗಳೂ, ಕ್ರಾಪಿನಿಂದ ಯುಕ್ತವಾದ ತಲೆಯ, ಮಸೀದೆಯ ಮೇಲಿರುವ ಗುಮಟ ದಂತೆ ತಲೆಯ ಮೇಲಿದ್ದ ಟೊಪ್ಪಿಗೆಯೂ ಎಂದೂ ನಗದೇ ಇದ್ದ ಜನರನ್ನು ನಗಿಸುತ್ತಿ ದ್ದವು; ಇವು ಬೇಕಾದಂಥ ದುಃಖಿತ ಮನುಷ್ಯನಿದ್ದರೂ, ಚಿಂತಾಯುಕ್ತ ಮನುಷ್ಯ ನಿದ್ದರೂ ಅವನನ್ನು ಸ್ವಲ್ಪಾದರೂ ನಗಿಸದೆ ಬಿಡುತ್ತಿದ್ದಿಲ್ಲ. ಆದರೂ ವಸಂತನು ತಾನು ಬಹು ಸುಂದರನೆಂದು ತಿಳಕೊಂಡಿದ್ದನು. ಇಷ್ಟೇ ಅಲ್ಲ, ತನ್ನ ಈ ಪೋಷಾಕು, ತನ್ನ ಈ ಇಂಗ್ರೇಜೀ ಮಾತಾಡುವ ಪದ್ಧತಿ, ತನ್ನ ಈ ಸೌಂದರ್ಯ ಇವುಗಳಿಂದ ದಿವ್ಯ ಸುಂದರಿಯ ಮನಸ್ಸಿನಲ್ಲಿ ವಿಶೇಷ ಪರಿಣಾಮವುಂಟಾಗಿ ಅವಳು ತನ್ನ ನ್ನು ಏನೋ ಬೇರೊಂದು ಪ್ರೇಮಮಯದೃಷ್ಟಿಯಿಂದ ನೋಡುತ್ತಿದ್ದಾಳೆಂದು ಅವನಿಗೆ ಸಂಶಯವು
೫೧----------------------------------೪ನೆಯ ಪ್ರಕರಣ-ಸಖಿಸಂದರ್ಶನ!
ಉತ್ಪನ್ನವಾಗಿದ್ದಿತು. ಈ ಸಂಶಯದ ಕಲ್ಪನೆಯು ಅವನ ಹೃದಯಪಟಲದ ಮೇಲೆ ಮೂರ್ತಿಮಂತವಾದ ಕೂಡಲೆ ಅವನು ಭಾವೀಸುಖದ ಮುಂಡಿಗೆಗಳನ್ನು ತಿಂದು ತಿಂದು ಉಬ್ಬು ಸಬಡುತ್ತಿದ್ದನು. ಒಮ್ಮೊಮ್ಮೆ ಅವನ ಮನಸ್ಸಿನಲ್ಲಿ ದೈದೀಭಾವವಾಗಲು ಅವ ನಿಗೂ, ಮನಸ್ಸಿಗೂ ಅಪಾರವಾದ ಕಲಹವು ನಡೆಯುತ್ತಿದ್ದಿತು. ಕಡೆಗೆ ಕಲಹದಲ್ಲಿ ವಸಂತನಿಗೇ ಜಯವು ಬರುತ್ತಿದ್ದಿತು. ಅವನು ತನ್ನ ಮನಸ್ಸಿಗೆ ( ಎಲೈ ಮನಸ್ಸೇ, ಪ್ರೇಮವು ರಹಸ್ಯವಾಗಿದೆ. ಅದನ್ನು ಹೊರಪಡಿಸಲಿಕ್ಕೆ ದಿವ್ಯಸುಂದರಿಗೆ ಬರುವಂತಿಲ್ಲ. ದಿವ್ಯಸುಂದರಿಯು ಸುಧಾರಣಾಪ್ರಿಯಳಾಗಿರುವದರಿಂದ ನನ್ನಂಥ ಸುಧಾರಣಾಶಿಖರ ವನ್ನೇರಿದ ಮನುಷ್ಯನ ಹೊರ್ತು ಎರಡನೆಯವರು ಯಾರು ಅವಳ ಮನಸ್ಸಿಗೆ ಬರು ವರು? ಮುಖ್ಯ ಕಾರಣ-ವಸಂತ ಮತ್ತು ದಿವಸುಂದರಿ ಈ ಹೆಸರುಗಳ ಜೋಡಾದ ರೂ ಎಷ್ಟು ರಮಣೀಯವಾಗಿ ಕಾಣಿಸುತ್ತದೆ. ಅರ್ಥಾತ್ : ದಿವಸುಂದರಿ ” ಎಂದನ್ನು ವಾಗ ಎಷ್ಟು ನನ್ನ ಮನಸ್ಸಿಗೆ ಆನಂದವಾಗುತ್ತದೆಯೋ ಅಷ್ಟೇ ಆನಂದವು ದಿವ್ಯ ಸುಂದರಿಗೆ ವಸಂತ ” ಎಂದನ್ನು ವಾಗ ಆಗುತ್ತಿರಬಹುದು, ಮತ್ತು ದಿವಸುಂದರಿಯು ಹಗಲಿರುಳೂ ( ವಸಂತ, ವಸಂತ ” ಎಂದು ಜಪಿಸುತ್ತ ಕುಳಿತಿರುತ್ತಾಳೆ. ” ಎಂದು ಹೇಳುತ್ತಿದ್ದನು. ವಾಚಕರೇ, ಇಷ್ಟು ದೊಡ್ಡ ಒಜ್ಜೆಯನ್ನು ಮನಸ್ಸಿನ ಮೇಲೆ ಹೇರಿ ದರೆ ಅದು ಕುಸಿಬೀಳದೆ ಏನು ಮಾಡೀತು ?
ಚಿಂತಾಮಣಿರಾಯನ ಬಂಗಲೆಯಲ್ಲಿ ವಿನಾಯಕನ ಪ್ರವೇಶವಾದಂದಿನಿಂದ ದಿವ್ಯ ಸುಂದರಿಯು ತನ್ನ ಕಡೆಗೆ ನೋಡದೆ, ವಿನಾಯಕನ ಕಡೆಗೆ ಚಮತ್ಕಾರ ದೃಷ್ಟಿಯಿಂದ ನೋಡುತ್ತಾಳೆಂದೂ, ಅವನೊಡನೆ ಸವಿ ಸವಿ ಮಾತುಗಳನ್ನಾಡುತ್ತಾ ಇಂದೂ ವಸಂತನು ತರ್ಕಿಸಿದನು. ವಾಸ್ತವ್ಯ ದಿವ್ಯಸುಂದರಿಯು ವಸಂತನ ಕಡೆಗೆ ಎಂದೂ ನೋಡಿದ್ದಿಲ್ಲ, ಮತ್ತು ಅವನೊಡನೆ ಎಂದೂ ಮಾತಾಡಿದ್ದಿಲ್ಲ, ಆದರೂ
ಯಾವ ಕಾರಣದಿಂದಲೋ ಏನೋ ಯಾರಿಗೆ ಗೊತ್ತು, ವಸಂತನು ದಿವಸುಂದರಿಯ ಹೃದಯವು ವಸಂತಮಯವಾಗಿರುತ್ತದೆಂದು ಭಾವಿಸಿದ್ದನು. ಇಂಥ ಭ್ರಾಮಕ ಕಲ್ಪನೆಗಳಿಂದ ಹುಚ್ಚನಾಗಿದ್ದ ವಸಂತನ ಕಣ್ಣಿಗೆ ದಿವ್ಯ ಸುಂದರಿಯು ವಿನಾಯಕ ನೊಡನೆ ಗುಲು ಗುಲು ಮಾತಾಡುವದು ಕಾಣಿಸಿದ ಕೂಡಲೆ ಅವನು ವಿನಾ ಯಕನ ವಿಷಯವಾಗಿ ವೈಷಮ್ಯ ತಾಳುವದರಲ್ಲಿ ಆಶ್ಚರ್ಯವೇನು ? ಇಂದಿಲ್ಲ ನಾಳೆ, ಹೇಗಾದರೂ ಮಾಡಿ ತನ್ನ ಮೋಹಿನೀ ಅಸ್ತ್ರದಿಂದ ದಿವ್ಯ ಸುಂದರಿಯನ್ನು ವಶಮಾಡಿ ಕೊಂಡರೆ ಚಿಂತಾಮಣಿರಾಯನು ಸ್ತ್ರೀಸ್ವಾತಂತ್ರನ್ಯಾಯದಿಂದ ದಿವ್ಯಸುಂದರಿಯ ಲಗ್ನವನ್ನು ನನ್ನೊಡನೆಯೇ ಮಾಡುವದರಲ್ಲಿ ಸಂದೇಹವಿಲ್ಲ ಎಂಬದಾಗಿ ಸಂಪೂರ್ಣ ಭರವಸ ಮಾಡಿಕೊಂಡು, ವಸಂತನು ವಿನಾಯಕನ ವಿರುದ್ದವಾಗಿ ರಾಮರಾಯನ ಕಿವಿಯಲ್ಲಿ ತುಂಬಬಾರದ್ದನ್ನು ತುಂಬಹತ್ತಿದನು. ವಿನಾಯಕನು ಅಶಿಕ್ಷಿತನಿದ್ದಾನೆ; ಅವನು ಸುಧಾರಣಾಪ್ರಿಯನಲ್ಲ. ಹಿಂದೂ ಇದ್ದಾನೆ; ಮೂರ್ತಿಪೂಜಕನಿದ್ದಾನೆ; ಸಭ್ಯಸ್ತ್ರೀಯರ
೫೨-------------------------------------------ದಿವಸುಂದರಿ ಅಥವಾ ದೀರ್ಘ ಪ್ರಯತ್ನ,
ಕೂಡ ಹೇಗೆ ನಡೆಯಬೇಕು; ಇದು ಅವನಿಗೆ ತಿಳಿಯುವದಿಲ್ಲ; ಶ್ರೀಮಂತರ ಸಂಗಡ ನಡಕೊಳ್ಳಬೇಕಾದ ವರ್ತನವು ಅವನಿಗೆ ಗೊತ್ತಿಲ್ಲ; ಅವನ ಪೋಷಾಕು ಸಾದಾ ಇರು ಇದೆ; ಅವನು ಶೋಧಿಸಿದ ಉದ್ಯೋಗವಾದರೂ ನೀಚತರಹದದೆ; ಈ ಮೊದಲಾದ ಅನೇಕ ಸುಳ್ಳೆಂದು ಸೊಕ್ಕೊಂದು ವಸಂತನು ರಾಮರಾಯನ ಕಿವಿಯಲ್ಲಿ ತುಂಬಿ ದನು. ಆದರೆ ವಸಂತನ ಈ ಅಧಮತನದ ಬೋಧದಿಂದ ಸಾರಾಸಾರ ವಿಚಾರಿಯಾದ ರಾಮರಾಯನ ಮನಸ್ಸಿನ ಮೇಲೆ ಏನೂ ಪರಿಣಾಮವಾಗಲಿಲ್ಲ. ತಿರುಗಿ ವಿನಾಯಕನ ವಿಷಯವಾಗಿ ರಾಮರಾಯನ ಮನಸ್ಸಿನಲ್ಲಿ ಮೊದಲಿಗಿಂತ ಹೆಚ್ಚಾದ ಆದರವೂ, ಮೊದಲೇ ವಸಂತನ ವಿಷಯವಾಗಿ ಉದಾಸೀನಳಾಗಿದ್ದ ದಿವ್ಯ ಸುಂದರಿಯ ಮನಸ್ಸಿನಲ್ಲಿ ಅವನ ವಿಷಯವಾಗಿ ತುಂಬಾ ತಿರಸ್ಕಾರವೂ ಉತ್ಪನ್ನವಾದವು. ವಿನಾಯಕನ ರಮ್ಯ ಮೂರ್ತಿ, ಸೌಮ್ಯ ಸ್ವಭಾವ, ಮಧುರವಚನ, ವಿನಮ್ರವರ್ತನ, ಅತುಲಬುದ್ದಿ ಸಾಮರ್ಥ ಮೊದಲಾದವುಗಳು ಯಾರ ಮನಸ್ಸಿನಲ್ಲಿ ತಾನೇ ಅದರವನ್ನು ಹುಟ್ಟಿಸಲಿಕ್ಕಿಲ್ಲ!
ಚಿಂತಾಮಣಿರಾಯನ ಭೂಮಿಯನ್ನು ಲಾವಣಿಯಿಂದ ಹಿಡಕೊಂಡ ಕೂಡಲೆ ವಿನಾಯಕನು ರಾಮಪುರಕ್ಕೆ ಹೋಗುವ ಸಿದ್ದತೆ ನಡಿಸಿದನು. ಆಗಂತೂ ಚಿಂತಾ ಮಣಿರಾಯನ ಮನೆಯಲ್ಲಿ ಅವನಿಗೆ ಹೆಚ್ಚು ಅದರ-ಸತ್ಕಾರಗಳು ಆಗಹತ್ತಿದವು. ಅದ ರಲ್ಲಿಯೂ ವಿನಾಯಕನು ಮುಂಬಯಿ ಬಿಟ್ಟು ರಾಮಪುರಕ್ಕೆ ಹೊರಟ ದಿವಸವಂತೂ ಸ್ವತಃ ಚಿಂತಾಮಣಿರಾಯನು ವಿನಾಯಕನಿಗೆ ಎಷ್ಟೋ ಗೌರವಮಾಡಿದನು. ದಿವ್ಯ ಸುಂದರಿಗಂತೂ ಆ ದಿವಸವು ವಿಚಿತ್ರತರವಾಗಿ ಕಾಣಿಸಿತು. " ಸುಂದರಭವನ ” ವೆಂಬ ಸುವರ್ಣಾಕ್ಷರಗಳಿಂದ ಶೋಭಾಯಮಾನವಾಗಿ ಕಾಣಿಸುತ್ತಿದ್ದ ಕಿಡಿಕಿಯ ಹತ್ತರ ನಿಂತುಕೊಂಡು ದಿವ್ಯಸುಂದರಿಯು ಕಣ್ಣುಂಬ ಕಣ್ಣೀರು ತುಂಬಿಕೊಂಡು ವಿನಾಯಕ ನನ್ನು ನಿರೀಕ್ಷಣಮಾಡುತ್ತಿದ್ದಳು, ಆ ಕಡೆಗೆ ಸ್ವಲ್ಪಾದರೂ ವಿನಾಯಕನ ಲಕ್ಷವಿದ್ದಿಲ್ಲ. ತೋಟದ ಹೊರಗೆ ಬಂದು ಗಾಡಿಯಲ್ಲಿ ಕುಳಿತ ಕೂಡಲೆ ವಿನಾಯಕನ ದೃಷ್ಟಿಯು ಸಾಹಜೀಕವಾಗಿ ಹಿಂದಕ್ಕೆ ತಿರುಗಿತು. ನೋಡುತ್ತಾನೆ, ದಿವ್ಯ ಸುಂದರಿಯ ಅಪೂರ್ವ ೩ಗ್ಗ ಮೂರ್ತಿಯು ವಿರಾಜಮಾನವಾಗಿದೆ ! ಆ ಸ್ಥಿತಿಯನ್ನು ನೋಡಿ ವಿನಾಯಕನಿಗೆ ಸಾನಂದಾಶ್ಚರ್ಯವಾಯಿತು. ಅವನು ತನ್ನ ಕೈಯೊಳಗಿನ ರುಮಾಲವನ್ನು ಮೇಲ ಕೈತ್ತಿ ಹೋಗಿಬರುತ್ತೇನೆಂಬದಾಗಿ ದಿವ್ಯಸುಂದರಿಗೆ ಸೂಚಿಸಿದನು. ದಿವ್ಯಸುಂದರಿಯ ನಗೆಮೊಗದಿಂದ ತನ್ನ ಕೈಯನ್ನು ಮೇಲಕ್ಕೆತ್ತಿ ನಿರೋಪಗೊಟ್ಟಳು. ವಸಂತನು ದೂರ ನಿಂತುಕೊಂಡು ಈ ಎಲ್ಲ ಚಮತ್ಕಾರವನ್ನು ನೋಡುತ್ತಿದ್ದನು. ಅವನು ಕೆಲಹೊತ್ತು ತೆರೆದ ರೆಪ್ಪೆಯನ್ನು ಮುಚ್ಚದಂತೆ ಕೆಂಗಣ್ಣಿನಿಂದ ದಿವ್ಯಸುಂದರಿಯನ್ನು ನೋಡಿ, ಹಲ್ಲು ಗಳನ್ನು ಕರಕರ ಕಡಿಯುತ್ತ ತನ್ನ ಮನೆಗೆ ಹೊರಟುಹೋದನು.
ದಿವ್ಯಸುಂದರಿಯು ಕಿಡಿಕಿಯ ಹತ್ತಿರ ನಿಂತುಕೊಂಡು ವಿನಾಯಕನ ಗಾಡಿಯು ಮರೆಯಾಗುವ ತನಕ ಆ ಗಾಡಿಯನ್ನು ನೋಡಿದಳು. ಆ ಗಾಡಿಯು ಹೋಗಿ ಎಷ್ಟೋ
೫೩------------------------------------------------------------೪ನೆಯ ಪ್ರಕರಣ-ಸಖಿಸಂದರ್ಶನ!
ಹೊತ್ತಾದರೂ ಅವಳು ವಿನಾಯಕನ ಭವ್ಯ ಮೂರ್ತಿಯನ್ನು ಹೃದಯಪಟಲದ ಮೇಲೆ ಸ್ಥಾಪಿಸಿಕೊಂಡು ಏನೋ ವಿಚಾರಿಸುತ್ತ ಆ ಕಿಡಿಕಿಯ ಹತ್ತಿರವೇ ನಿಂತುಕೊಂಡಿದ್ದಳು; ಆದರೆ ಅಷ್ಟರಲ್ಲಿ ಯಾರೋ ಹಿಂದಿನಿಂದ ಬಂದು ಮೆತ್ತನ್ನ ಎರಡು ಕೈಗಳಿಂದ ಅವಳ ಕಣ್ಣು ಗಳನ್ನು ಮುಚ್ಚಿದರು. ಆ ಕೂಡಲೆ ದಿವ್ಯಸುಂದರಿಯು ಜಾಗೃತಳಾಗಿ ಆ ಕೈಗಳು ಯಾರವೆಂಬುವದನ್ನು ಹುಡುಕಹತ್ತಿದಳು. ಮೊದಲು ಅವಳು ಮಧುರೆಯಿರಬೇಕಾಗಿ ತರ್ಕಿಸಿದಳು; ಆದರೆ ಕೈಯನ್ನು ಹಿಡಿದು ನೋಡಿದ ಮೇಲೆ ಅವಳಿಗೆ ಮಧುರೆಯಲ್ಲ ವೆಂದು ನಂಬಿಗೆಯಾಯಿತು. ಅವಳು ಸ್ವಲ್ಪ ವೇಳೆ ಸುಮ್ಮನಿದ್ದು ಒಮ್ಮೆಲೇ ಹರ್ಷಪೂರಿತ ಸ್ವರದಿಂದ- ಓಹೋ, ನೀನು ಪರ್ವತದ ಮೇಲಿನಿಂದ ಹರಿಯುವ ನಮ್ಮ ನರ್ಮ ದೆಯು ಅಲ್ಲವೇ? ” ಎಂದಳು.
ದಿವ್ಯಸುಂದರಿಯ ಕಣ್ಣು ಮುಚ್ಚಿದ ಸ್ತ್ರೀಯ ಹೆಸರು ನರ್ಮದೆ ಹೌದು, ಅವಳು ದಿವ್ಯಸುಂದರಿಯ ಕಣ್ಣುಗಳ ಮೇಲಿನ ಕೈಗಳನ್ನು ತೆಗೆದು ನಗುತ್ತ:- ಹೌದು, ಅಶ್ರುವಾಹಿನೀ ದಿವಸುಂದರಿ! ನಾನು ಪರ್ವತದ ಮೇಲಿನಿಂದ ಹರಿಯುತ್ತೇನೆಂಬು ವದು ನಿಜ, ಆದರೆ ಕಣ್ಣೀರುಗಳು ನಿನ್ನ ಮೇಲಿನಿಂದ ಹರಿಯುತ್ತವಲ್ಲ ! ಇದೇ ನೋಡು, ನನ್ನ ಕೈಗಳು ಎಷ್ಟು ತೊಯ್ದಿರುತ್ತವೆ. ” ಎಂದಳು. ದಿವ್ಯಸುಂದರಿಯ ಕಣ್ಣಿನಿಂದ ಕಣ್ಣೀರು ಸುರಿಯುತ್ತಿದ್ದುದರಿಂದ ನರ್ಮದೆಯ ಕೈಗಳು ತೊಯ್ದಿದ್ದವು. ಅವಳು ತೊಯ್ದ ಕೈಗಳನ್ನು ತೋರಿಸಿದ ಕೂಡಲೆ ದಿವ್ಯಸುಂದರಿಗೆ ಬಹಳ ನಾಚಿಕೆ ಯೆನಿಸಿತು. ನರ್ಮದೆಗೆ ಹೇಳಬೇಕಾದದ್ದು ಅವಳಿಗೆ ತಿಳಿಯದೆ ಹೋಯಿತು. ನರ್ಮ ದೆಯು ದಿವ್ಯಸುಂದರಿಯ ಬಾಲಸಖಿಯಾಗಿದ್ದಳು. ಚಿಕ್ಕಂದಿನಿಂದ ಗಂಟುಬಿದ್ದ ಅವ ರಿಬ್ಬರ ಸ್ನೇಹವು ಒಂದೇಸವನೆ ಹೆಚ್ಚುತ್ತಲೇ ನಡೆದಿದ್ದಿತು. ನರ್ಮದೆಯು ದಿವ್ಯಸುಂದ ರಿಗಿಂತ ವಯಸ್ಸಿನಿಂದ ಹಿರಿಯಳಾಗಿದ್ದಳು. ಅವಳ ತಾಯಿತಂದೆಗಳು ಸಾಧಾರಣ ಸ್ಥಿತಿ ಯವರಿದ್ದು, ಅವರು ಮಹಾಲಕ್ಷ್ಮೀದೇವಾಲಯದ ಹತ್ತರ ಸ್ವಂತ ಮನೆಯಲ್ಲಿ ಇರುತ್ತಿ ದ್ದರು. ನರ್ಮದೆಯು ಲಗ್ನವಾದ ಕೆಲವು ದಿವಸ ಗಂಡನ ಮನೆಯಲ್ಲಿದ್ದಳು; ಆದರೆ ದೀವಳ ಗಂಡನು ಅವಳ ಸೌಖ್ಯಕ್ಕೆ ನೀರು ಬಿಟ್ಟು ಸ್ವಲ್ಪ ದಿನದಲ್ಲಿಯೇ ಮೃತಪಟ್ಟಿದ್ದ ರಿಂದಲೂ, ಗಂಡನ ಮನೆಯಲ್ಲಿ ಗಂಡನ ಹೊರ್ತು ಮಿಕ್ಕವರು ಯಾರೂ ಇಲ್ಲದ್ದರಿಂದಲೂ ಅವಳು ಮರಳಿ ತಂದೆಯ ಮನೆಯನ್ನು ಸೇರಿದ್ದಳು. ತನ್ನ ಗಂಡನ ಮನೆಯ ದುಡ್ಡನ್ನು ತಂದು ಅವಳು ತಂದೆಯಕಡೆಗೆ ಕೊಡಲಿಕ್ಕೆ ಹೋದಳು; ಅದರೆ ತಂದೆಯು ತನ್ನ ಕಡೆಗೆ ಇಟ್ಟು ಕೊಳ್ಳಲೊಪ್ಪದೆ ಅವಳ ಕಡೆಗೇ ಇರಲಿಕ್ಕೆ ಹೇಳಿದನು. ನರ್ಮದೆಯು ಆಚಾ ರವಂತಳೂ, ಬುದ್ದಿವಂತಳೂ, ಉದಾರಳೂ ಆಗಿದ್ದಳು. ಅವಳು ಗಂಡನು ಸತ್ತನಂತರ ತೀರ ಸಾದಾ ಉಡಿಗೆಯನ್ನು ಧರಿಸುತ್ತಿದ್ದಳು. ಅವಳಿಗೆ ಇಂಗ್ರೇಜಿ-ಸಂಸ್ಕೃತ ಮಹಾ ರಾಷ್ಟ್ರ ಭಾಷೆಗಳು ಬರುತ್ತಿದ್ದದ್ದರಿಂದ ಅವಳು ಆ ಎಲ್ಲ ಭಾಷೆಯ ಪುಸ್ತಕಗಳನ್ನು ತರಿಸಿ ಕೊಂಡು ಪ್ರತಿನಿತ್ಯ ಓದುತ್ತಿದ್ದಳು. ಬೆಳಗಿನ ಐದು ಹೊಡೆದ ಕೂಡಲೆ ಎದ್ದು ಸ್ನಾನ
೫೪-----------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಮಾಡಿ, ಆ ವೇಳೆಯಿಂದ ರಾತ್ರಿ ಹನ್ನೊಂದು ಹೊಡೆಯುವ ತನಕ ಈಜಾಪುನಸ್ಕಾರ, ಪಠಣ-ಪಾಠಣ ಮೊದಲಾದ ಕೆಲಸಗಳನ್ನು ಎಡಬಿಡದೆ ಮಾಡುತ್ತಿದ್ದಳು. ನರ್ಮದೆಯ ಅಲ್ಪ ಸ್ವಲ್ಪ ವಿಶ್ರಾಂತಿಯ ವೇಳೆಯೆಂದರೆ ದಿವ್ಯಸುಂದರಿಯ ಕೂಡ ಮಾತಾಡುವದೇ ಆಗಿದ್ದಿತು. ಆ ವೇಳೆಯನ್ನಾದರೂ ಅವಳು ವ್ಯರ್ಥ ಹೋರಗೊಡುತ್ತಿದ್ದಿಲ್ಲ. ದಿವ್ಯ ಸುಂದರಿಯ ಮೇಲೆ ಪವಿತ್ರಪ್ರೇಮವು ಬಹಳವಾಗಿದ್ದಿತು. ದಿವ್ಯಸುಂದರಿಯ ಸರಳ ಮನಸ್ಸು ಅವಳ ಮನಸ್ಸಿಗೆ ಬಹಳವಾಗಿ ಬಂದಿದ್ದಿತು. ದಿವ್ಯ ಸುಂದರಿಗೆ ತಾನು ಶ್ರೀಮಂತರ ಮಗಳೆಂಬ ಬಗ್ಗೆ ಸ್ವಲ್ಪಾದರೂ ಅಭಿಮಾನವಿಲ್ಲದ್ದನ್ನು ನೋಡಿ ಅವಳ ವಿಷಯವಾಗಿ, ನರ್ಮದೆಯ ಮನಸ್ಸಿನಲ್ಲಿ ಆದರವು ಹುಟ್ಟಿದ್ದಿತು, ನರ್ಮದೆ ಯಂತೆ ದಿವ್ಯಸುಂದರಿಯ ಹೃದಯದಲ್ಲಿಯೂ ನರ್ಮದಾಮಯ ಆದರಭಾವವು ತುಂಬಿ ಹೋಗಿದ್ದಿತು. ವಿಶೇಷತಃ ನರ್ಮದೆಯು ಇಂಥ ಪ್ರಾಯದಲ್ಲಿ ವಿಧವೆಯಾಗಿದ್ದರೂ ಅವಳು ಯಾವಾಗಲೂ ಸಮಾಧಾನದಿಂದ ಇರುವದನ್ನು ನೋಡಿ ದಿವ್ಯ ಸುಂದರಿಗೆ ಪರಮಾಶ್ಚರ್ಯವಾಗುತ್ತಿದ್ದಿತು. ನರ್ಮದೆಯ ಪಾರಮಾರ್ಥಿಕ ವಿಚಾರವನ್ನು ಒಂದೇ ಸವನ ಕೇಳುತ್ತ ಕೂಡಬೇಕೆಂದು ದಿವಸುಂದರಿಗೆ ತೋರುತ್ತಿದ್ದಿತು. ನರ್ಮದೆಯು ಬಂದಳೆಂದರೆ ದಿವ್ಯ ಸುಂದರಿಗೆ ಪರಮಾನಂದವಾಗುತ್ತಿದ್ದಿತು. ಒಂದು ವೇಳೆ ಅವಳು ಒಂದು ದಿವಸ ಬರಲಿಲ್ಲವೆಂದರೆ ದಿವ್ಯಸುಂದರಿಗೆ ಹಳಹಳಿಯಾಗುತ್ತಿದ್ದಿತು.
ಕಳೆದ ನಾಲೈದು ದಿನ ಏನೋ ಕಾರಣದ ನಿಮಿತ್ತವಾಗಿ ನರ್ಮದೆಯು ತನ್ನ ಬಳಿಗೆ ಬಾರದ್ದರಿಂದ ದಿವ್ಯಸುಂದರಿಗೆ ಅಸಮಾಧಾನವಾಗಿದ್ದಿತು. ಆದರೂ ಅದು ವಿನಾಯಕನ ಆಗಮನಲಾಭದಿಂದ ಕೆಲವಂಶ ಕಡಿಮೆಯಾಗಿದ್ದಿತು. ನರ್ಮದೆಯ ವಿಚಾರದಂತ ವಿನಾಯಕನ ವಿಚಾರವೂ ಉದಾತ್ತವಾದದ್ದೆಂದು ದಿವಸುಂದರಿಗೆ ತಿಳಿದುಬಂದದ್ದರಿಂದ ಆ ವಿಚಾರವನ್ನು ನರ್ಮದೆಗೆ ಯಾವಾಗ ಹೇಳೇನೆಂದು ದಿವ್ಯ ಸುಂದರಿಯು ಹಾತರಿಯುತ್ತಿದ್ದಳು. ಈ ಮುಂಚೆಯೇ ನರ್ಮದೆಗೂ ವಿನಾಯಕನ ವಿಷಯವಾದ ಸಕಲ ಸಂಗತಿಯು ತಿಳಿದದ್ದರಿಂದ ಅವಳಿಗೂ ಅವನ ಸಂಬಂಧವಾಗಿ ಪೂಜ್ಯಭಾವವು ಉತ್ಪನ್ನವಾಗಿದ್ದಿತು. ವಿನಾಯಕನ ಮನೋಹರಮೂರ್ತಿಯು ದಿವ್ಯ ಸುಂದರಿಯ ಹೃದಯಮಂದಿರದಲ್ಲಿ ಪ್ರಸ್ತಾಪಿತವಾಗಿರುವದನ್ನು ನೋಡಿ ನರ್ಮದೆಗೆ ಸಮಾಧಾನವಾಯಿತು. ಆದರೆ ದಿವಸುಂದರಿಯು ಶ್ರೀಮಂತರ ಮಗಳು, ವಿನಾಯಕನು ಬಡವರ ಮಗನು, ಎಂಬ ಕಾರಣದಿಂದ ಇವರ ಸಂಬಂಧವಾಗುತ್ತದೆಯೋ ಇಲ್ಲೋ ಎಂದು ಸಂಶಯ ಬರಲು ಅವಳಿಗೆ ಸ್ವಲ್ಪ ನಿರಾಶೆಯೂ ಆಯಿತು.
ದಿವ್ಯಸುಂದರಿಗೆ - ಅಶ್ರುವಾಹಿನೀ ' ಎಂದು ನರ್ಮದೆಯು ಅಂದಕೂಡಲೆ ಅವಳು ನಾಚಿದಳು, ನರ್ಮದೆಗೆ ಉತ್ತರವೇನು ಕೊಡಬೇಕೆಂಬುದು ತಿಳಿಯದ್ದರಿಂದ ಅವಳು ಸುಮ್ಮನೆ ಕುಳಿತಳು. ಆಗ ನರ್ಮದೆಯು:- ದಿವ್ಯಸುಂದರಿ, ಕಣ್ಣುಗಳ
೫೫--------------------------------------------------------------------೪ನೆಯ ಪ್ರಕರಣ-ಸಖಿ ಸಂದರ್ಶನ!
ಮೇಲೆ ಅಶ್ರುರೂಪವಾದ ದುರ್ಬಿನಿನ ಕನ್ನಡಿಯನ್ನು ಇಟ್ಟು ಏನು ಅಂಥಹದನ್ನು ನಿರೀಕ್ಷಣಮಾಡುತ್ತಿದ್ದಿ? ” ಎಂದಳು.
ದಿವ್ಯಸುಂದರಿಯ ಸ್ವಭಾವವು ಮೊದಲೇ ಸರಳವಾದದ್ದು. ಅಸತ್ಯ ಮಾತೇ ಅವಳು ಅರಿಯಳು; ಮೇಲಾಗಿ ಆ ಪ್ರಶ್ನೆಯು ನರ್ಮದೆಯಂಥ ಪ್ರೀತಿಯ ಸಖಿಯದು. ಕಾರಣ ನರ್ಮದೆಗೆ ಉತ್ತರಗೊಡಲಿಕ್ಕೆ ಅವಳಿಗೆ ನಾಚಿಕೆಯೆನಿಸಿತು; ಆದರೂ ಅವಳು ನಿಜವಾದ ಉತ್ತರವನ್ನು ಕೊಟ್ಟಳು. ಅವಳು:- ನರ್ಮದೆ, ಇಂದು ವಿನಾಯಕ ರಾಯರಿಗೆ ನಿರೋಪಗೊಡುವ ಕಾಲಕ್ಕೆ ಕಣ್ಣುಗಳು ಅಶ್ರುಗಳಿಂದ ತುಂಬಿಬಂದವು. ಈ ಕಣ್ಣೀರುಗಳು ಯಾಕೆ ಬರುತ್ತವೆಂಬುವದು ನನಗೆ ತಿಳಿಯಲೊಲ್ಲದು. ಒಮ್ಮೊಮ್ಮೆ ನಿನ್ನ ಸಂಬಂಧವಾಗಿಯೂ ಕೂಡ ಮನಸ್ಸಿನಲ್ಲಿ ಯಾವದೊಂದು ವಿಚಾರವು ಬಂದರೆ, ತಟ್ಟನೆ ಕಣ್ಣಲ್ಲಿ ಕಣ್ಣೀರು ಉದುರುತ್ತವೆ. ನರ್ಮದೆ, ನಡೆ, ನನ್ನ ದಿವಾಣಖಾನೆಯಲ್ಲಿ ಮಾತಾಡುತ್ತ ಕೂಡೋಣ. ” ಹೀಗನ್ನುತ್ತ ನರ್ಮದೆಯ ಕೈಯನ್ನು ಹಿಡಕೊಂಡು ದಿವಾಣಖಾನೆಗೆ ಬಂದಳು. ಅಲ್ಲಿ ಇಬ್ಬರೂ ಸಮೀಪದಲ್ಲಿರುವ ಖುರ್ಚೆಗಳ ಮೇಲೆ ಕುಳಿತುಕೊಂಡು ಮಾತಾಡಹತ್ತಿದರು."
ದಿವ್ಯ:- ನರ್ಮದೆ, ಕಣ್ಣುಗಳಿಂದ ಹೀಗೆ ಕಣ್ಣೀರುಗಳು ಯಾಕೆ ಬರುತ್ತವೆ? ಬರುವದು ಹಿತಕ್ಕೊ ಅಹಿತಕ್ಕೋ ?”
ನರ್ಮದೆ:- ದಿವ್ಯಸುಂದರಿ, ಕಣ್ಣೀರುಗಳ ಯೋಗ್ಯತೆಯು ಬಹಳ ದೊಡ್ಡ ದಿರುತ್ತದೆ. ಪ್ರತ್ಯೇಕ ಅಶ್ರುಬಿಂದುವಿನ ಸಲುವಾಗಿ ಅಂತಃಕರಣದೊಳಗಿನ ಬೇರೆ ಬೇರೆ ಮನೋವೃತ್ತಿಗೆ ಹೆಚ್ಚು ಕಡಿಮೆ ಬೆಲೆಯನ್ನು ಕೊಡಬೇಕಾಗುತ್ತದೆ. ಹೀಗೆ ಬೆಲೆ ಯನ್ನು ಕೊಟ್ಟ ಹೊರ್ತು ಕಣ್ಣುಗಳಿಂದ ಒಂದು ಅಶ್ರುಬಿಂದುವಾದರೂ ಬೀಳುವದಿಲ್ಲ. ಹರ್ಷ, ಶೋಕ ಮೊದಲಾದ ವಿಕಾರಗಳ ಪ್ರವಾಹವು ಹೃದಯದಲ್ಲಿ ಹರಿಯಿತೆಂದರೆ, ಆಗ ಹೃದಯವು ಸಿಗ್ಗಮಯವಾಗುತ್ತದೆ. ಆ ಸ್ನಿಗ್ಧತೆಯೇ ಕಣ್ಣುಗಳಿಂದ ಅಶ್ರುರೂಪ ವಾಗಿ ಹೊರಬೀಳುತ್ತದೆ. ಯಾರ ಕಣ್ಣುಗಳಿಂದ ಇಂಥ ವಿಶೇಷ ಪ್ರಸಂಗದಲ್ಲಿಯೂ ಕೂಡ ಕಣ್ಣೀರು ಸುರಿಯುವದಿಲ್ಲವೋ ಅವರಿಗೆ ಜನರು ಪಾಷಾಣಹೃದಯರೆಂದು ಅನ್ನುತ್ತಾರೆ. ಒಮ್ಮೊಮ್ಮೆ ಈ ಪಾಪಾಣಹೃದಯರೂ ಕೂಡ ಅನುತಾಪದಿಂದ ದಗ್ಗ ರಾಗುತ್ತಾರೆ, ಮತ್ತು ಈ ದಗ್ಧತೆಯನ್ನು ಶಾಂತಮಾಡುವದರ ಸಲುವಾಗಿ ಅವರಿಗೆ ಅಶ್ರುಗಳನದ ಹೊರ್ತು ಎರಡನೇ ಉಪಾಯವೇ ಉಳಿಯುವದಿಲ್ಲ. ದಿವ್ಯಸುಂದರಿ, ಈಗ ತಿಳಿಯಿತೇ? ವಿನಾಯಕರಾಯರಿಗೆ ನಿರೋಷಗೊಡುವ ಕಾಲಕ್ಕೆ ಕಣ್ಣಿರುಗಳು
ಯಾಕೆ ಬಂದವೆಂಬುವದು. ೨
ದಿವ್ಯ:-( ತಿಳಿಯಿತು. ಅದಿರಲಿ, ಹಿಂದಿನ ಸಂವಾದದಲ್ಲಿ ನಿರಾಕಾರ ಸಾಕಾರ ಗಳ ಪ್ರಸ್ತಾಪವು ಹೊರಟಿದ್ದಿತಷ್ಟೇ? ಯಾರಿಗೆ ಪರಮಾತ್ಮನ ನಿರಾಕಾರತ್ವದ ಬಗ್ಗೆ
೫೬----------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಅನುಭವವಾಗುವದಿಲ್ಲವೋ ಅವರು ಸಗುಣಭಕ್ತಿಯನ್ನು ಮಾಡುವದು ನೆಟ್ಟಗೋ, ನಿರ್ಗುಣಭಕ್ತಿಯನ್ನು ಮಾಡುವದು ನೆಟ್ಟ ಗೋ ? ”
ನರ್ಮದೆ:- ದಿವ್ಯ ಸುಂದರಿ, ಯಾರಿಗೆ ಅನುಭವದಿಂದ ದೇವರ ನಿರಾಕಾರ ತ್ವವನ್ನು ಪ್ರತ್ಯಕ್ಷ ನೋಡುವ ಸಾಮರ್ಥವಿಲ್ಲವೋ ಅವರು, ಪರಮೇಶ್ವರನ ಸಗುಣಸ್ಕ ರೂಪಕ್ಕೆ ಅಥವಾ ಸಗುಣಭಕ್ತಿಗೆ ಹೆಸರಿಡುವದು ಮೂರ್ಖತನವಾಗಿದೆ. ಪರಮೇಶ್ವ ರನ ಆಕಾರವು ಸಾಕಾರವಾದದ್ದೂ ನಿರಾಕಾರವಾದದ್ದೋ ಎಂಬ ಪ್ರಶ್ನೆಯು ಯಾರ ಅಂತಃಕರಣದಲ್ಲಿ ಉತ್ಪನ್ನವಾಗುತ್ತದೆಯೋ, ಅವರ ಅಂತಃಕರಣವು ಅತ್ಯಂತ ಕ್ಷುದ್ರ ವಿಚಾರಗಳಿಂದ ಮಲಿನವಾಗಿದೆಯೆಂದು ನಿಸ್ತಂಕವಾಗಿ ಹೇಳಬಹುದು. ಯಾರ ಅಂತಃ ಕರಣವು ಕೇವಲ ಭಕ್ತಿಯಿಂದಲೇ ತುಂಬಿರುತ್ತದೆಯೋ ಅವರ ಅಂತಃಕರಣದಲ್ಲಿ ದೇವರು ಹೇಗಿದ್ದಾನೆಂಬ ಪ್ರಶ್ನೆಯು ಉತ್ಪನ್ನ ವಾಗಲಿಕ್ಕೆ ಸ್ಥಳವೇ ಇರುವದಿಲ್ಲ. ಅವರು ಯಾವದೊಂದು ಪಾಷಾಣಮೂರ್ತಿಯ ಮುಂದಾಗಲಿ, ಅಥವಾ ಕಾಷ್ಠಮೂರ್ತಿಯ ಮುಂದಾಗಲಿ, ಅಥವಾ ಯಾವದೊಂದು ಧಾತುಮೂರ್ತಿಯ ಮುಂದಾಗಲಿ ಕೂಡ್ರಲಿ; ಅವರು ಎದುರಿನ ಮೂರ್ತಿಯ ಘಟಕಾವಯವಗಳ ಕಡೆಗೂ, ಸ್ವರೂಪದ ಕಡೆಗೂ ಲಕ್ಷಗೊಡದೆ ಅದರೊಳಗಿನ ಚೈತನ್ಯದ ಕಡೆಗೆ ಲಕ್ಷಗೊಡುತ್ತಾರೆ. ಎರಡನೆಯವರ ಉದಾಹರಣೆ ಯಾಕೆ ? ನೀನು ಆ ಗೌರೀಶಂಕರನ ಭಾವಪಟದ ಮುಂದೆ ಏನೆಂದು ಕೂಡ್ರುವಿ? ಭಾವಪಟದ ಚೌಕಟ್ಟು ವಿಲಾಯತಿಯದು, ಕಾಜಿನ ಹರಳು ಜರ್ಮನಿ ಯದು, ಚಿತ್ರವು ರವಿವರ್ಮನದು, ಎಂದು ಅದರ ಮುಂದೆ ಕೂಡುವಿಯೇನು? ಇಲ್ಲ. ನೀನು ಆ ಚೌಕಟ್ಟಿನ ಅಥವಾ ಚಿತ್ರದ ಪೂಜೆಮಾಡುವದಿಲ್ಲ. ಶ್ರೀಶಂಕರನ ಅತುಲ ಸಾಮರ್ಥದ ಪೂಜೆಯನ್ನು ಮಾಡುವಿ. ನಿರಾಕಾರತತ್ವವನ್ನು ಅನುಭವದಿಂದ ತಿಳಿ ಯುವಂಥ ಸಾಮರ್ಥವಿಲ್ಲದವರು ತಾವು ಸ್ವತಃ ನಿರಾಕಾರದ ವಿಷಯವಾಗಿ ಭ್ರಮಿಷ್ಟ ರಾಗಿ, ವಾಕ್ಸತುತ್ವದಿಂದ ಎರಡನೆಯವರನ್ನೂ ಭ್ರಮಿಷ್ಯರನ್ನಾಗಿ ಮಾಡುವದಕ್ಕಿಂತ ಮೂರ್ತಿಪೂಜಕರಾಗುವದು ಬಹಳ ಉತ್ತಮ. ಉಪನಿಷಧ, ವೇದ, ಬಾಯಬಲ, ಕುರಾಣ ಮೊದಲಾದ ಗ್ರಂಥಗಳಲ್ಲಿ ಏನೋ ಅಲ್ಪ ಸ್ವಲ್ಪ ನಿರಕಾರದ ವಿಷಯವು ಹೊರಟಿತೆಂದರೆ, ಅಷ್ಟರ ಮೇಲಿಂದ ಮೂರ್ತಿಯನ್ನು ಒಗೆಯುವ, ನಾನು ನಿರಾಕಾರ ವಾದಿಯೆಂದು ಹೇಳುವ ಅಧಿಕಾರವು ಯಾರಿಗೂ ಇಲ್ಲ. ನಿರಾಕಾರವಾದಿಯಾಗಬೇ ಕೆಂದು ಅನ್ನುವವರು ಆ ಪ್ರಕಾರದ ಅಭ್ಯಾಸಮಾಡಿ, ಆತ್ಮವನ್ನು ಪರಮಾತ್ಮನೊಡನೆ ತಾದಾತ್ನ ಮಾಡುವ ಸಾಮರ್ಥ್ಯವನ್ನು ಸಂಪಾದಿಸಿಕೊಳ್ಳಬೇಕು, ನಂತರ ನಾವು ನಿರ್ಗುಣೋಪಾಸಕರೆಂದು ಹೇಳಬೇಕು. ದಿವ್ಯಸುಂದರಿ, ಈ ನಿರ್ಗುಣೋಪಾಸದ ಅಭ್ಯಾಸವನ್ನು ಮಾಡುವದಾದರೂ ಬಹಳ ಕಠಿಣ. ಅದಕ್ಕೆ ಶುದ್ಧಾಚರಣೆಯ ಮನೋನಿಗ್ರಹವೂ ಬೇಕು. ನಿರ್ಗುಣೋಪಾಸನವು ಇದೆ ಒ೦ದು ವಕ್ಷ್ಯತ್ವದ ವಿಷಯ ವಲ್ಲ. ಅದಕ್ಕೆ ಅನುಭವಸಾಮರ್ಥವೇ ಬೇಕು. ಈ ಸಾಮರ್ಥ್ಯವನ್ನು ದೊರಕಿಸಿ
೫೭------------------------------------------೪ನೆಯ ಪ್ರಕರಣ-ಸಖಿಸಂದರ್ಶನ!
ಕೊಳ್ಳುವದು ಬಹು ಕಠಿಣವಾದದ್ದರಿಂದ ಸಗುಣೋಪಾಸಕ ಜನರೇ ಹೆಚ್ಚಿರುತ್ತಾರೆ.
ಮತ್ತು ಹಾಗಿರುವದರಿಂದ ಬಹು ಕಲ್ಯಾಣವಾಗುವದು. ” ಎಂದಳು.
ನರ್ಮದೆಯ ಈ ಭಾಷಣವನ್ನು ದಿವ್ಯಸುಂದರಿಯು ಒಳ್ಳೆ ಲಕ್ಷಪೂರ್ವಕವಾಗಿ ಕೇಳುತ್ತಿದ್ದಳು. ಅವಳ ಮಾತು ಮುಗಿದ ಕೂಡಲೆ ದಿವಸುಂದರಿಯು ಆರ್ತಸ್ಕರ ದಿಂದ:-* ನರ್ಮದೆ, ಆ ವಿಷಯವು ಇರಲಿ ಬಿಡು. ನಿಮ್ಮ ಅವ್ವನು ಮೊನ್ನೆ ಇಲ್ಲಿಗೆ ಬಂದು ಒಂದು ಸಂಗತಿಯನ್ನು ಹೇಳಿ ಹೋಗಿದ್ದಾಳೆ.”
ನರ್ಮದೆ:- ( ನಕ್ಕು) ಏನು ಹೇಳಿರುವಳು ? ”
ದಿವ್ಯ:-( ನಿಜಾಮನ ರಾಜ್ಯದಲ್ಲಿ ನಿರ್ಮಲವೆಂಬ ಹೆಸರಿನ ಕ್ಷೇತ್ರವದೆಯಂತೆ. ನೀನು ಎಲ್ಲಾ ತ್ಯಾಜ್ಯ ಮಾಡಿ ಅಲ್ಲಿಗೆ ಹೋಗಬೇಕೆಂದು ಆಲೋಚನೆ ಮಾಡಿರುತ್ತೀ
ಯಂತೆ. ಈ ಪ್ರಕಾರ ನೀನು ಹೋಗಬಾರದಾಗಿ ಮಾತೆಯ ಅಭಿಪ್ರಾಯವದೆ. ನರ್ಮದೆ, ಹೀಗೆ ನೀನು ಅಲ್ಲಿಗೆ ಹೋಗಲಿಕ್ಕೇಬೇಕೆಂದು ಆಲೋಚಿಸಿರುವಿಯೇನು? ”
ನರ್ಮದೆ:-ಹೌದು ದಿವ್ಯಸುಂದರಿ, ನಾನು ನಿನಗೆ ನನ್ನ ಎಲ್ಲ ವಿಚಾರವನ್ನು ತಿಳಿಸಿರುವದಿಲ್ಲವೇ? ”
ದಿವ್ಯ:- ( ಕಣ್ಣೀರು ಸುರಿಸುತ್ತ ) ನೀನು ನಿರ್ಮಲಕ್ಷೇತ್ರಕ್ಕೆ ಹೋಗಿ ಮಾಡುವದನ್ನೆಲ್ಲ ಇಲ್ಲಿಯೇ ಮಾಡಲಿಕ್ಕೆ ಬರುವಂತಿಲ್ಲೇನು ? ”
ನರ್ಮದೆ:- ದಿವಸುಂದರಿ, ಮನುಷ್ಯನ ಚಮತ್ಕಾರವಾದ ಮನಸ್ಸಿನ ಸ್ಥಿತಿಯು ನಿನಗೆ ಇನ್ನೂ ಗೊತ್ತಾಗಿಲ್ಲ. ಇಲ್ಲಿಯೇ ಇದ್ದು ಮಾಡಬೇಕಾದದ್ದನ್ನು ಮಾಡಲಿಕ್ಕೆ ಬರುವದಿಲ್ಲೆಂಬಂತಿಲ್ಲ, ಆದರೆ ಇಲ್ಲಿ ಮನಸ್ಸನ್ನು ಚಂಚಲಮಾಡುವ ಪರಿಸ್ಥಿ ತಿಯು ಇದ್ದದ್ದರಿಂದ ನನ್ನಂಥವಳಿಗೆ ತೀರ ನಿರಾಮಯಸ್ಥಳಕ್ಕೆ ಹೋಗಿರುವದು ಯೋಗ್ಯವಾಗಿದೆ. ನಿಧಾನ ನನ್ನ ಮನಸ್ಸಿನ ಮೇಲೆ ನನ್ನ ಸಂಪೂರ್ಣಾಧಿಕಾರವು ಕೂಡ್ರುವ ತನಕ ನಾನು ಏಕಾಂತದಲ್ಲಿಯೇ ಅಭ್ಯಾಸವನ್ನು ಮಾಡಲಿಕ್ಕೆಬೇಕು. ಒಳ್ಳೇದು, ಈಗ ಹೊತ್ತು ಬಹಳವಾಗಿದೆ. ನಾನು ಮನೆಗೆ ಹೋಗಲಿಕ್ಕೆಬೇಕು. ಬೇಕಾದರೆ ನಾಳೆ ಈ ಸಂಬಂಧವಾಗಿ ಮತ್ತಿಷ್ಟು ಮಾತಾಡುತ್ತ ಕೂಡೋಣ, ”
ಹೀಗನ್ನುತ್ತ ಖುರ್ಚೆಯಮೇಲಿಂದ ಎದ್ದು ಅವಳು ಮನೆಗೆ ಹೋದಳು. ದಿವ್ಯ ಸುಂದರಿಯು ಅವಳನ್ನು ಅಟ್ಟದ ವರೆಗೆ ಕಳಿಸಿ ತಿರುಗಿ ಬಂದು ತನ್ನ ದಿವಾಣಖಾನ ಯನ್ನು ಹೊಕ್ಕಳು, ಮತ್ತು ಶಂಕರನ ಭಾವಪಟದ ಎದುರಿಗೆ ಕುಳಿತು, ತನ್ನಯವೃತ್ತಿ ಯಿಂದ ಕಣ್ಣೀರು ಸುರಿಸುತ್ತ ಎರಡೂ ಕೈಗಳನ್ನು ಜೋಡಿಸಿ ಗದ್ದ ದಸ್ವರದಿಂದ: ( ಭೋ ದೇವರದೇವಾ, ನೀನು ನನ್ನಂಥ ಅಜ್ಞಭಕ್ತಳ ಸಲುವಾಗಿ ಸಾಕಾರವಾಗಿಯೇ ಇರು. ನೀನು ಅನಂತರೂಪಿಯಾಗಿದ್ದರೂ, ಸರ್ವ ಚರಾಚರ ವಸ್ತುಗಳನ್ನು ವ್ಯಾಪಿಸಿ ದ್ದರೂ ನನ್ನ ಸಲುವಾಗಿ ಮಾತ್ರ ಈ ಚತುರ್ಭುಜಮೂರ್ತಿಯೇ ಆಗಿರು. ನೀನು ನಿರಾ
೫೮-----------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ಕಾರವಾಗಿರುತ್ತೀಯೆಂದು ಕೇಳಿ ನನಗೆ ಕಸಬಿಸಿಯಾಗುತ್ತದೆ. ನಿನ್ನ ಚರಣಕಮಲ ಗಳ ಮೇಲೆ ಮಸ್ತಕವನ್ನಿಟ್ಟು ಕಣ್ಣೀರು ಸುರಿಸುವದರಲ್ಲಿ ಆಗುವಷ್ಟು ಆನಂದವು ನಿನಗೆ ಚರಣಕಮಲಗಳಿಲ್ಲವೆಂಬ ಭಾವನೆಯಿಂದ ಎಂದೂ ಆಗುವದಿಲ್ಲ. ನೀನು ನನ್ನಂಥ ಭಕ್ತರ ಮೇಲೆ ಪ್ರೇಮಮಾಡುವದರಿಂದ ನಿನಗೆ ಹೃದಯವದೆ! ಕರುಣಾದೃಷ್ಟಿಯಿಂದ ನಮ್ಮನ್ನು ನೋಡುವದರಿಂದ ನಿನಗೆ ಕಣ್ಣುಗಳಿರಲಿಕ್ಕೆ ಬೇಕು !! ಭಗವಂತಾ, ಈ ನಿನ್ನ ಮಹದಾನಂದದಾಯಕ ಸಾಕಾರಸ್ವರೂಪವನ್ನು ಬಿಟ್ಟು, ಯಾಕೆ ನಾನು ಭ್ರಾಮಕ ದೃಷ್ಟಿಯಿಂದ ನಿರಾಕಾರವನ್ನು ತಿಳಕೊಳ್ಳುವ ಯತ್ನ ಮಾಡಲಿ! ” ಹೀಗನ್ನುತ್ತ ಶ್ರೀಶಂಕರಭಕ್ತಿವಿಶೇಷದಿಂದ ತನ್ನ ಮಸ್ತಕವನ್ನು ನೆಲಕ್ಕೆ ಹಚ್ಚಿ ಭೂದೇವಿಗೆ ಕಣ್ಣೀ ರಿನ ಮಜ್ಜನವನ್ನು ಮಾಡಿಸಿದಳು.
ಸಖಿಸಂದರ್ಶನದ ಒಂದು ಚಿತ್ರವನ್ನಂತೂ ತೆಗೆದು ನಾವು ವಾಚಕರಿಗೆ ತೋರಿ ಸಿದೆವು. ಇನ್ನು ಈಗ ಎರಡನೇ ಚಿತ್ರವನ್ನು ತೆಗೆದು ತೋರಿಸುವದು ನಮಗೆ ಬಹು ಕಠಿಣವಾಗಿದೆ. ಯಾಕಂದರೆ ಈ ಚಿತ್ರವು ಮೊದಲನೇ ಚಿತ್ರದಂತೆ ಸುಲಭಸಾಧ್ಯ ವಾದದ್ದಲ್ಲ. ಇದರ ಸ್ವರೂಪಾನಿಗಳು ವಿಲಕ್ಷಣವಾದವುಗಳಿರುತ್ತವೆ. ಈ ಚಿತ್ರವನ್ನು ತೆಗೆಯಲಿಕ್ಕೆ ಸಾಕ್ಷಾತ್ ವಿಶ್ವಕರ್ಮನೇ ಬೇಕು. ಆದರೂ ವಸ್ತುಸ್ಥಿತಿಯಲ್ಲಿ ವಿಪ ರ್ಯಾಸಮಾಡದೆ ಆ ಚಿತ್ರವನ್ನು ರೂಪಿಸಲಿಕ್ಕೆ ನಾವು ಪ್ರಾರಂಭಿಸಿರುತ್ತೇವೆ. ಮುಂಬ ಯಿ ಪಟ್ಟಣದಲ್ಲಿ ಗಿರಗಾಂವದ ಒಂದು ಭಾಗಕ್ಕೆ ಇರುವ ಕೋಣೆಯಲ್ಲಿ ಒಬ್ಬ ತರು ಣಿಯು ಒಂದು ಸಾದಾ ಖುರ್ಚಿಯ ಮೇಲೆ ಕುಳಿತು, ( ಯುವತೀರಂಜನ' ಎಂಬ ಹೆಸರಿನ ಒಂದು ಸಚಿತ್ರ ಮಾಸಿಕ ಪುಸ್ತಕವನ್ನು ಓದುತ್ತಿದ್ದಳು. ಅವಳು ಈಗಿನ ಹೊಸ ಪದ್ಧತಿಯಂತೆ ಮೈಮೇಲೆ ಒಂದು ಶರ್ಟು ಹಾಕಿಕೊಂಡು ಉಫ್ ಅಂದರೆ ಗಾಳಿಗೆ ಹಾರುವಂಥ ತೆಳ್ಳನ್ನ ಶುಭ್ರವಸ್ತ್ರವನ್ನು ಉಟ್ಟುಕೊಂಡಿದ್ದಳು. ಅವಳು ಸಾಧಾರಣ ಎಣ್ಣೆ ಗರಿದಿನ ಬಣ್ಣದವಳಾಗಿದ್ದಳು. ಅವಳ ಮುಖದ ಮೇಲೆ ಸೌಂದರ್ಯದ ಯಾವ ಚಿಣ್ಣೆಗಳೂ ಇದ್ದಿಲ್ಲ; ಆದರೂ ಅವಳು ನೀಟವಾಗಿ ಬೈತಲೆಯನ್ನು ತೆಗೆದುಕೊಂಡು, ಹಣೆಯ ಮೇಲೆ ಸಾಸಿವೆಕಾಳಿಗಿಂತಲೂ ಸಣ್ಣದಾದ ಚಿಕ್ಕೆಯನ್ನು ಇಟ್ಟು ಕೊಂಡು ಎಷ್ಟೋಮಟ್ಟಿಗೆ ತನ್ನ ಮುಖದ ಮೇಲೆ ಕುರೂಪತ್ವದ ಲಕ್ಷಣವನ್ನು ಅಡಗಿಸಿದ್ದಳು. ಅವಳ ಕೈಯಲ್ಲಿ ಪುಸ್ತಕ ಮಾತ್ರ ಇದ್ದದ್ದು ನಿಜ, ಆದರೆ ಅದರ ಕಡೆಗೆ ಸ್ವಲ್ಪಾದರೂ ಅವಳ ಲಕ್ಷವಿಲ್ಲದಿದ್ದು, ಅವಳು ಯಾವದೋ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದಳು. ನಡುನಡುವೆ ಪುಸ್ತಕದ ಪಾನು ತಿರುವಿಹಾಕುತ್ತ ಒಂದು ದಿಕ್ಕಿನ ಕಡೆಗೆ ತನ್ನ ಮುಂದಿನ ಆಯುಷ್ಯದ ಚಿತ್ರಪಟವದೆಯೆಂಬ ಭಾವನೆಯಿಂದ ಎಷ್ಟೋ ಹೊತ್ತು ನೋಡುತ್ತಿದ್ದಳು. ಈ ರೀತಿಯಿಂದ ಅವಳು ನೋಡುತ್ತಿರುವಾಗ ಒಮ್ಮೊಮ್ಮೆ ಅವಳ ಮುಖಮುದ್ರೆಯು ಉದಾಸೀನವಾಗುತ್ತಿದ್ದಿತು; ಒಮ್ಮೊಮ್ಮೆ ಅವಳು ನಿರಾಶೆಯ
೫೯---------------------------------೪ನೆಯ ಪ್ರಕರಣ- ಸಖಿಸಂದರ್ಶನ!
ಸುಸ್ಕಾರವನ್ನು ಬಿಡುತ್ತಿದ್ದಳು; ಹೊರಗೆ ಅವಳು ಸುಧಾರಣಾಪ್ರಿಯಳಾಗಿ ಕಾಣಿಸು ತ್ತಿದ್ದರೂ ಅಂತಃಕರಣದೊಳಗಿನ ಎಷ್ಟೋ ಪ್ರವೃತ್ತಿಗಳು ಅವಳಿಗೆ ಇನ್ನೂ ಅನು ಕೂಲವಾಗಿದ್ದಿಲ್ಲ; ಒಮ್ಮೊಮ್ಮೆ ಈ ಪ್ರವೃತ್ತಿಗಳು ಅವಳ ಅಂತಃಕರಣದಲ್ಲಿ ದೊಡ್ಡ ಬಂಡನ್ನೇ ಮಾಡುತ್ತಿದ್ದವು; ಒಮ್ಮೊಮ್ಮೆ ತನ್ನ ಮನೋವೃತ್ತಿಗಳು ತನ್ನನ್ನು ದುರ್ಮಾ ರ್ಗದ ಕಡೆಗೆ ಒಯ್ಯುತ್ತವೆಂದು ಆಲೋಚಿಸಲು ಅವಳಿಗೆ ಅನುತಾಪವಾಗುತ್ತಿದ್ದಿತು; ಆದರೆ ಆ ವೇಳೆಯು ಹೋಯಿತೆಂದರೆ ತಿರುಗಿ ಅವಳ ಮನಸ್ಸಿನಲ್ಲಿ ಸುಧಾರಿಸಿದ ಐಹಿಕಸುಖದ ವಿಚಾರವು ಬರುತ್ತಿದ್ದಿತು; ಮತ್ತು ಇದರಲ್ಲಿಯೇ ವಿನೋದವಿರುತ್ತ ದೆಂದು ಅವಳಿಗೆ ತೋರುತ್ತಿದ್ದಿತು. ಈ ಪ್ರಕಾರ ಅವಳು ವಿಚಾರಸಾಗರದಲ್ಲಿ ಮುಳು ಗೇಳುತ್ತಿರುವಾಗ ಅವಳ ಕೋಣೆಯ ಬಾಗಿಲಿನ ಮೇಲೆ ಕಟಕಟ ಸಪ್ಪಳವಾಯಿತು. ಆ ಕೂಡಲೆ ಆ ಸ್ತ್ರೀಯು ತನ್ನ ಖುರ್ಚೆಯಮೇಲಿಂದ ಚಟಕ್ಕನೆ ಎದ್ದು ಕೋಣೆಯ ಬಾಗಿಲು ತೆಗೆದಳು. ಮೊದಲು ಅವಳಿಗೆ ವಸಂತರಾಯನೇ ಬಂದಿರಬೇಕಾಗಿ ತೋರಿತು; ಆದರೆ ಅವನ ಬದಲಾಗಿ ತನ್ನ ಸಖಿಯ ಆಗಮನವಾದದ್ದರಿಂದ
ಅವಳಿಗೆ ಒಳ್ಳೆ ಆನಂದವಾಯಿತು. ಅವಳ ದರ್ಶನವಾಗುತ್ತಲೇ ಈ ಸ್ತ್ರೀಯು ನಗುತ್ತ ಅವಳನ್ನು ಒಳಗೆ ಕರಕೊಂಡು ಬಂದು:-( ಲೀಲೆ, ನಾಲೈದು ದಿವಸ ಗಳಿಂದ ನಿನ್ನ ದರ್ಶನವೇ ಇಲ್ಲ! ಚಂದ್ರಿಕೆಯು ಎಲ್ಲಿಗೆ ಹೋಗಿದ್ದಿತು. ” ಎಂದ ನ್ನುತ್ತ ಅವಳ ಕೈಯನ್ನು ಹಿಡಿದು ಖುರ್ಚಿಯ ಮೇಲೆ ಕೂಡ್ರಿಸಿದಳು. ಲೀಲೆಯು ಇಂದು ವಿಶೇಷ ಮನೋಹರವಾದ ಪೋಷಾಕು ಹಾಕಿಕೊಂಡದ್ದರಿಂದ ಅವಳ ಆ ಚಿತ್ರವಿಚಿತ್ರ ಆಪಾದಮಸ್ತಕಾಕೃತಿಯನ್ನು ಆ ಸ್ತ್ರೀಯು ಒಳ್ಳೆ ಕುತೂಹಲದಿಂದ ನೋಡುತ್ತಿದ್ದಳು. ಲೀಲೆಯು ಖುರ್ಚಿಯ ಮೇಲೆ ಕುಳಿತ ಕೂಡಲೆ ನಗುತ್ತ: (( ಈ ಯುವತೀರಂಜನ ಮಾಸಿಕ ಪುಸ್ತಕದೊಳಗಿನ ಕೆಲಕೆಲವು ವಾಕ್ಯಗಳನ್ನು ಮುಖ ಪಾಠ ಮಾಡುವದಾಗಿ ಕಾಣಿಸುತ್ತದೆ. ಇರಲಿ, ಸರಲೆ, ಈ ಚಂದ್ರಿಕೆಯು ಎಲ್ಲಿಗೆ ಹೋಗಿರಬಹುದು ನೀನೇ ಹೇಳು ? ” ಕೋಣೆಯೊಳಗಿದ್ದ ಮೊದಲಿನ ಸ್ತ್ರೀಯ ಹೆಸರು “ ಸರಿ ” ಎಂಬುವದು ನಿಜ, ಅವಳು ಲೀಲೆಯ ಕಡೆಗೆ ಏನೋ ಚಮತ್ತಾ ರಿಕ ದೃಷ್ಟಿ ಪಾತದಿಂದ ನೋಡಿ ಸ್ವಲ್ಪ ವ್ಯಂಗಸ್ವರದಿಂದ:- ಬಹಳ ಮಾಡಿ ಚಕೋ ರದ ಭೆಟ್ಟಿಯ ಸಲುವಾಗಿ ಹೋಗಿರಬೇಕು; ಆದರೆ ಭೆಟ್ಟಿಯಾಯಿತೇ? ಈಗ ಚಕೋ ರಕ್ಕೆ ಪೋಲೀಸರು ಬೆನ್ನು ಹತ್ತಿರುವದರಿಂದ ಅದು ಅತ್ತಿತ್ತ ಹಾರಾಡಹತ್ತಿರುತ್ತದೆ! ?
ಲೀಲೆ:-ಪೋಲೀಸರ ಕೈಯಿಂದ ಪಾರಾಗುವ ಮಂತ್ರವನ್ನು ಅವರು ಚನ್ನಾಗಿ ಕಲಿತಿರುತ್ತಾರೆ. ಮತ್ತು ಪುಣೆಯಲ್ಲಿ ಒಬ್ಬ ದೊಡ್ಡ ಮನುಷ್ಯನ ದ್ರವ್ಯವನ್ನು ಅಪಹ ರಿಸಿ, ಈಗ ಮೂರ್ತಿಯು ಒಬ್ಬ ದೊಡ್ಡ ಸರದಾರನಂತೆ ಇರುತ್ತದೆ.''
ಸರಲೆ:- ( ಆಶ್ಚರ್ಯದಿಂದ) ಲೀಲೆ, ನಿಜವೇನು ? ಅವರು ಬಹಳ ಮಾಡಿ ಆ ಇಂದಿರೆಯನ್ನು ಮುಂದು ಮಾಡಿ ಧನವನ್ನು ಕೂಡಿಸಿರಬಹುದು. ಸುಂದರಿಯಾದ
೬೦-----------------------------೬-ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಇಂದಿರೆಯನ್ನು ಒಬ್ಬ ವೃದ್ಧನಿಗೆ ಕೊಟ್ಟು ಆ ನೆವದಿಂದ ದುಡ್ಡು ಅಪಹರಿಸಿರಬಹುದು. ಚಲೋಹುಡುಗೆ ಇಂದಿರೆ! ನಿಜವಾಗಿ ಅವಳ ಸಲುವಾಗಿ ನನಗೆ ದಯವು ಬರುತ್ತದೆ.”
ಲೀಲೆ:-ಛೇ! ಛೇ! ಅವಳು ಮಹಾಗುಲಾಮ ಫೋರಿಯು. ಅವಳು ಶಾಮ ರಾಯನ ತಂತ್ರದಂತೆ ನಡೆದಿದ್ದರೆ ಅವನು ಲಕ್ಷ ರೂಪಾಯಿ ಖಾವಂದನಾಗುತ್ತಿದ್ದನು; ಆದರೆ ಆ ಹುಚ್ಚಮುಂಡಿಯ ಹಣೆಯಲ್ಲಿ ವೈಭವದಿಂದ ಇರುವದೇ ಬರೆದಿಲ್ಲ. ರಂಡೆಯು ಇಹಲೋಕದ ರತಿಯಾಗಿದ್ದಾಳೆ; ಆದರೆ ಯಾವಾಗಲೂ ಗೋಸಾವಣಿ-ಬೈರಾಗಿಣಿ ಯಂತ ಧೂತವಸ್ತ್ರವನ್ನು ಉಟ್ಟು ಕೊಳ್ಳುತ್ತಾಳೆ ! ”
ಸರಿ:- ಹೋ ಹೋ ! ಇದು ಮಾತ್ರ ನಿಜ. ಒಂದು ವೇಳೆ ನಾವಿಬ್ಬರು ಅವಳಷ್ಟು ಸುಂದರರಿದ್ದರೆ ನಮ್ಮ ಈ ಪೋಷಾಕು ನಮಗೆ ಬಹಳೇ ಶೋಭಾಯಮಾನ ವಾಗಿ ಕಾಣಿಸುತ್ತಿದ್ದಿತು. ಹೋಗಲಿ ಬಿಡು ಅದು; ಏನು, ಶಾಮರಾಯನೊಡನೆ ನಿನ್ನ ಲಗ್ನವು ನಿಶ್ಚಿತವಾದಂತೆ ಕಾಣಿಸುತ್ತದೆ? ??
ಲೀಲೆಗೆ ಸ್ತ್ರೀಧರ್ಮಾನುಸಾರ ಲಜ್ಞೆಯೇ ಇದ್ದಿಲ್ಲ. ಅವಳು ಒಬ್ಬ ಅಸಾಧಾರಣ ಸ್ತ್ರೀಯಿದ್ದಳು. ಸರಲೆಯ ಪ್ರಶ್ನ ದಿಂದ ಅವಳಿಗೆ ಲಜ್ಜೆಯು ಹುಟ್ಟಲಿಲ್ಲ. ಅವಳು ನಿರ್ಲಜ್ಞೆಯಿಂದ:
ಲೀಲೆ:- ಈಗ ಅದರಲ್ಲಿ ನಿಶ್ಚಯಿಸುವದಾದರೂ ಏನು? ಅವರು ನನಗೆ ಆ ಬಗ್ಗೆ ಒಂದು ಪತ್ರವನ್ನೇ ಬರೆದುಕೊಟ್ಟಿದ್ದಾರೆ. ನಾನೂ ಅವರಿಗೆ ಒಂದು ಪತ್ರವನ್ನು ಬರೆದು ಕೊಟ್ಟಿದ್ದೇನೆ. ಇಬ್ಬರಿಗೂ ಅನುಕೂಲವೇಳೆಯು ದೊರೆಯಿತೆಂದರೆ ಸಹಜ ಒಂದು ತಾಸಿನಲ್ಲಿ ಲಗ್ನವು ಆಗೇ ಹೋಗುತ್ತದೆ ! ”
ಸರಿ:- ( ವ್ಯಂಗಸ್ವರದಿಂದ ) ಆ ಲಗ್ನದಿಂದಾದರೂ ಈಗ ನಿಮ್ಮಿರ್ವರ ಯಾವ ವ್ಯವಹಾರಗಳಿಗೆ ತೊಂದರೆ ಬಂದಿರುತ್ತದೆ? ಎಲ್ಲ ಕೆಲಸಗಳೂ ಎಡಬಿಡದೆ ನಡೆದಿರುತ್ತವೆ. ”
ಲೀಲೆ:- ( ಸರಿ, ನಮ್ಮ ದಂತೂ ಆಯಿತು, ಹೋಗಲಿ ಬಿಡು. ವಸಂತ ರಾಯನೊಡನೆ ನಿನ್ನ ಲಗ್ನ ವಾಗದಿದ್ದರೂ ನೀನು ಆತನ ಸಂಗಡ ಮಾಡುವ ಎಲ್ಲ ವ್ಯವ ಹಾರಗಳು ಎಷ್ಟೋ ಸಾರೆ ನನ್ನ ಕಣ್ಣಿಗೆ ಬಿದ್ದಿರುತ್ತವೆ. ಸರಿ, ಹೌದೋ ಅಲ್ಲೋ?”
ಸರಲೆ:-( ಲೀಲೆ, ಇದಕ್ಕೆ ನೀನು ಸುಧಾರಣೆಯೆಂದನ್ನು ಶ್ರೀ ನಿಜ; ಆದರೆ ಎಷ್ಟೋ ಜನರು ಈ ಬಗ್ಗೆ ನಿಂದೆಯನ್ನು ಮಾಡುತ್ತಾರೆ. ಒಮ್ಮೊಮ್ಮೆ ನನಗೂ ಈ ಕೆಲಸವು ಅಯೋಗ್ಯವಾಗಿ ತೋರುತ್ತದೆ. ?
ಲೀಲೆ:- ( ನಗುತ್ತ ) ಅಹಾ! ಹುಚ್ಚ ಸರಿ !! ನಿನಗೆ ಸ್ವಲ್ಪಾದರೂ ಧೈರ್ಯ ವಿಲ್ಲ. ಮೊದಲು ಯಾವದೊಂದು ಹೊಸ ವಿಷಯವನ್ನು ಅನುಕರಣ ಮಾಡುತ್ತಿರು ವಾಗ ಜನರ ನಿಂದ್ಯೋಕ್ತಿಗಳನ್ನು ಸಹನ ಮಾಡಬೇಕಾಗುತ್ತದೆ. ಒಂದು ವೇಳೆ
೬೧---------------------------------೪ನೆಯ ಪ್ರಕರಣ- ಸಖಿಸಂದರ್ಶನ!
ನೀನು ಜನರ ಆ ಬಡಬಡಿಯ ಕಡೆಗಾದರೂ ಯಾಕೆ ಲಕ್ಷಗೊಡಬೇಕು? ಸ್ತ್ರೀಯರು ನೀಟವಾಗಿ ಬೈತಲೆಯನ್ನು ತಕ್ಕೊಂಡು, ಬಾಚಣಿಯಿಂದ ಕುಂಕುಮವನ್ನು ಹಚ್ಚಿ ಕೊಂಡು, ಕೈಯಲ್ಲಿ ಕರವಸ್ತ್ರವನ್ನು ಹಿಡಕೊಂಡು, ಕಾಲಿನಲ್ಲಿ ಬೂಟುಗಳನ್ನು ಹಾಕಿ ಕೊಂಡು ಪುರುಷರ ಸಂಗಡ ಮಾತುಕಥೆಗಳನ್ನಾಡುತ್ತ ಬೀದಿಯಲ್ಲಿ ತಿರುಗಾಡಿದ ಕೂಡಲೆ ಇವರ ಒದರಾಟವು ಪ್ರಾರಂಭವಾಗುವದು. ಸ್ವತಃ ತಮಗೂ ಸುಧಾರಣೆಯು
ಬೇಡ, ಮಂದಿಮಾಡಿದರೂ ಸಹಿಸುವಂತಿಲ್ಲ. ”
ಸರಿ:- “ ( ಅತ್ತಿತ್ತ ನೋಡಿ ) ಸಿಕ್ಕ ಸಿಕ್ಕ ಜನರೊಡನೆ ಸ್ನೇಹಮಾಡು ವದೂ, ಅವರೊಡನೆ ಮಧ್ಯಪಾನಮಾಡುವದೂ ಸುಧಾರಣೆಯಲ್ಲವಷ್ಟೆ ? ”
ಲೀಲೆ:- ಇದು ಕೂಡ ನಿಸ್ಸಂಶಯವಾಗಿ ಸುಧಾರಣೆಯು ಹೌದು. ಯಾವ ಹಕ್ಕುಗಳು ಪುರುಷರಿಗೆ ಇರುತ್ತವೆಯೋ ಅವೇ ಹಕ್ಕುಗಳು ಸ್ತ್ರೀಯರಿಗೂ ಇರುತ್ತವೆ. ಸ್ಟೇಚ್ಛಾಚಾರಿಯಾಗಿ ನಡೆಯುವ ವುರುಷನಿಗೆ ಮಾತ್ರ ಬ್ರಹ್ಮನು ಸನದು ಕೊಟ್ಟಿದ್ದಾನೆ; ಆದರೆ ಸ್ತ್ರೀಯರು ಮಾತ್ರ ಕಳವುಮಾಡಿದಂತೆ ಕಾಣಿಸುತ್ತದೆ. ಇದು ಒತ್ತಟ್ಟಿಗಿರಲಿ. ನಾಲ್ಕಾರು ಮಂದಿ ಪುರುಷರ ಪರಿಚಯವಾದ ಹೊರ್ತು ಲಗ್ನವನ್ನು ಯಾರ ಸಂಗಡ ಆಗಬೇಕೆಂಬುವದು ಗೊತ್ತಾಗುವದಿಲ್ಲ. ಇದು ನೋಡು. ಪಾಪ-ಪುಣ್ಯಗಳು ಕೇವಲ ಮನಸ್ಸಿನ ಕಲ್ಪನೆಗಳಾಗಿರುತ್ತವೆ. ಕೆಲವು ಕೆಲಸಗಳು ಎಷ್ಟೋ ಜನರಿಗೆ ಪಾಪಮಯ ವಾಗಿ ತೋರಿದರೆ ಅವೇ ಕೆಲಸಗಳು ಎಷ್ಟೋ ಜನರಿಗೆ ಪುಣ್ಯಮಯವಾಗಿ ತೋರು ಇವೆ. ಸ್ತ್ರೀಯರು ಮಧ್ಯಪಾನಮಾಡುವದೂ, ನಾಲ್ಕಾರು ಮಂದಿ ಪುರುಷರೊಡನೆ ಪತಿಯಂತೆ ವರ್ತನವಿಡುವದೂ ನಿಜವಾಗಿ ಪಾಪವಲ್ಲ. ಈ ಬಗ್ಗೆ ಜನರು ಬೇಕಾದಷ್ಟು ನಿಂದೆಯನ್ನು ಮಾಡಲಿ, ನಮ್ಮ ಸುಧಾರಣಾರಥವು ಹೀಗೆಯೇ ಪ್ರಗತಿಯಿಂದ ಮುಂದೆ ಹೋಗುವದು, ಈ ನಿಂದೆಯನ್ನು ಮಾಡುವವರು ಮಾತ್ರ ಹಿಂದೆಯೇ ಉಳಿಯುವರು. ಹೋಗಲಿ, ಇಂಥ ನಿಂದಕರ ನಿಂದೆಗೆ ನೀನೆಂದೂ ಕಿವಿಗೊಡಬೇಡ, ಒಂದು ವೇಳೆ ನಾವು ಜನರ ನಿಂದೆಯ ಕಡೆಗೆ ಲಕ್ಷಗೊಟ್ಟು ನಡೆಯಹತ್ತಿದರೆ ನಮ್ಮ ಕೈಯಿಂದ ಒಂದು ಸುಧಾರಣೆಯಾದರೂ ಧಡಕ್ಕೆ ಹತ್ತುವದಿಲ್ಲ. ಮಾನವರ ಮೆಚ್ಚಿಗೆಯಿಲ್ಲದ ನಮ್ಮ ಕೆಲಸ ಗಳಿಗೆ ದೇವತೆಗಳ ಮೆಚ್ಚಿಗೆಯಿರುತ್ತದೆಂಬುವದು ( ಶa arಶg 74ಕೆ ra : ” ಎಂಬ ಶೋಕದಿಂದ ಪೂರ್ಣ ಸಿದ್ಧವಾಗುತ್ತದೆ. ಈ ಸ್ಪಷ್ಟವಾದ ನ್ಯಾಯವು ಈ ನಿಂದಕರ ಲಕ್ಷದಲ್ಲಿ ಯಾಕೆ ಬರುವದಿಲ್ಲವೋ ಏನೋ ! ”
ವಾಚಕರೇ! ನೋಡಿದಿರಾ !! ಲೀಲೆಯ ಪಾಂಡಿತ್ಯವನ್ನು ಇಂಥ ಸ್ತ್ರೀಯರ ಸಂಖ್ಯೆಯು ಬೆಳೆಯುತ್ತ ಹೋದಲ್ಲಿ ನಮ್ಮ ಹಿಂದೂಸಮಾಜಸ್ತ್ರೀಪದ್ದತಿಯ ಕುರುಹು ಸ್ವಲ್ಪಾದರೂ ಉಳಿದೀತೇ? ಲೀಲೆಯ ಪಾಂಡಿತ್ಯಕ್ಕೆ ಸರಿಯು ತೀರ ಮುಗ್ಧಳಾಗಿ ಹೋದಳು. ಅವಳು ಲೀಲೆಯ ಕಡೆಗೆ ನೋಡಿ « ಲೀಲೆ, ನಿನ್ನ ಉಪ ದೇಶವಚನಗಳಿಂದ ನನ್ನ ಮನಸ್ಸಿನ ಸಂಶಯವು ಸಮೂಲವಾಗಿ ಲೋಪವಾಯಿತು, ”
೬೨----------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ.n
ಎಂದಳು. ಅಷ್ಟರಲ್ಲಿ ಖಾಡಖಾಡ ಬೂಟಿನ ಸಪ್ಪಳ ಮಾಡುತ್ತ ವಸಂತನು ಕೋಣೆ ಯಲ್ಲಿ ಬಂದನು. ಅವನು ಬಂದಕೂಡಲೆ ಒಂದು ಮೂಲೆಯೊಳಗಿದ್ದ ಖುರ್ಚಿಯ ಮೇಲೆ ಕುಳಿತು, ಟೊಪ್ಪಿಗೆಯನ್ನು ಹತ್ತಿರದಲ್ಲಿದ್ದ ಮೇಜಿನ ಮೇಲಿಟ್ಟು ಹುಶಹುಶ ಮಾಡಹತ್ತಿದನು. ಲೀಲಾ-ಸರಲೆಯರ ಕಡೆಗೆ ಅವನ ಲಕ್ಷವಿದ್ದಿಲ್ಲ. ಅವನ ಕಣ್ಣು ಗಳು ಕೆಂಪಗಾಗಿದ್ದವು. ಅವನು ಒಳಗೆ ಬಂದಕೂಡಲೆ ಮದ್ಯದ ವಾಸನೆಯು ಕೋಣೆ ತುಂಬ ಪಸರಿಸಿತು. ಮೂರ್ತಿಯು ಮದಿರಾಮಂದಿರಕ್ಕೆ ಹೋಗಿ ಬಂದಿರುತ್ತದೆಂಬುವ ದನ್ನು ಅವರಿಬ್ಬರು ಕೂಡಲೆ ಕಂಡುಹಿಡಿದರು. ವಸಂತನು ಬಂದ ಕೆಲಹೊತ್ತಿನ ಮೇಲೆ ಲೀಲೆಯು ನಗುತ್ತ ವಸಂತನನ್ನು ಕುರಿತು ' ಶಾಮರಾಯರು ನಿಮಗೆ ಒಂದು ಕೆಲಸದ ಸಲುವಾಗಿ ಹೇಳಿದ್ದಾರೆ. ” ಎಂದಂದಳು, ಇತ್ತ ಸರಿಯು ತ್ವರೆಯಿಂದ ಸ್ಟೋವ ಹೊತ್ತಿಸಿ ಚಹಾಮಾಡಲಿಕ್ಕೆ ಆರಂಭಿಸಿದಳು. ಲೀಲೆಯು ( ಶಾಮರಾಯ ” ಎಂದಂದ ಕೂಡಲೆ ವಸಂತನು ಜಾಗೃತಾವಸ್ಥೆಯಲ್ಲಿ ಬಂದು, ಲೀಲೆಯ ಕಡೆಗೆ ತಿರುಗಿ (( ಶಾಮರಾಯರು ನನಗೆ ಯಾವ ಕೆಲಸವನ್ನು ಹೇಳಿದ್ದಾರೆ. ” ಎಂದು ಕೇಳಲು ಲೀಲೆಯು ತನ್ನ ಕೈಯೊಳಗಿನ ಪತ್ರವನ್ನು ಅವನ ಕೈಯಲ್ಲಿ ಕೊಟ್ಟಳು. ಕೈಯಲ್ಲಿ ಪತ್ರವು ಸಿಕ್ಕ ಕೂಡಲೆ ಅವನು ಪತ್ರದ ಮೇಲಿನ ಹೊದಿಕೆಯನ್ನು ತೆಗೆದೊಗೆದು ಆ ಪತ್ರವನ್ನು ಒಳ್ಳೆ ಉತ್ಸುಕತೆಯಿಂದ ಓದಹತ್ತಿದನು. ಪತ್ರದ ಅಭಿಪ್ರಾಯವನ್ನು ನೋಡಿ ಅವನಿಗೆ ಮಿತಿಮೀರಿ ಆನಂದವಾಯಿತು. ಅವನು ಆನಂದದ ಭರದಲ್ಲಿ ಗಟ್ಟಿ ಯಾಗಿ:-( ಆ ವಿನಾಯಕನಿಗೆ ಇನ್ನು ಮೇಲೆ ನನ್ನ ಕೈಯನ್ನು ತೋರಿಸುತ್ತೇನೆ. ” ಎಂದಂದು ನಗುತ್ತ ಲೀಲೆಯ ಕಡೆಗೆ ನೋಡಿ ( ಒಳ್ಳೇದು, ನಾನು ಈ ಪತ್ರದ ಪ್ರಕಾರ ವ್ಯವಸ್ಥೆ ಮಾಡುತ್ತೇನೆ. ” ಎಂದನು. ಇಷ್ಟರಲ್ಲಿ ಸರಲೆಯು ಚಹಾದ ಪೋಲಿಗಳನ್ನು ತಂದು ಒಬ್ಬೊಬ್ಬರಿಗೆ ಒಂದು ಪೇಲಿಯನ್ನು ಕೊಟ್ಟು ತಾನೂ ಒಂದು ಪೇಲಿಯನ್ನು ತಕ್ಕೊಂಡಳು. ಲೀಲೆಯು ಚಹಾ ಕುಡಿದು ಆ ಇಬ್ಬರ ಅಪ್ಪಣೆಯನ್ನು ತಕ್ಕೊಂಡು ಹೊರಟುಹೋದಳು. ಲೀಲೆಯು ಹೋದಕೂಡಲೆ ವಸಂತ ಸರಿಯರ ಮಾತು ಕಥೆಗಳು ಪ್ರಾರಂಭವಾದವು.
- ಸರಳೆ:- (ಮುಸುಡಿ ಗಂಟುಹಾಕಿಕೊಂಡು ) ನೋಡಿದಿರಾt ಲೀಲೆಯ ಪೋಷಾಕು!! ನನಗೆ ಬಂಗಾರದ ಚಾಳೀಸೂ, ಲೇಡೀ ಬೂಟ್ಟೂ ಬೇಕೆಂದು ನಿಮಗೆ ಎಷ್ಟೊಸಾರೆ ಹೇಳಿರುವೆನು; ಆದರೂ ಆ ಕಡೆಗೆ ನೀವು ಸ್ವಲ್ಪಾದರೂ ಲಕ್ಷಗೊಡು ವದಿಲ್ಲ. ” . ವಸಂತ:- ( ಅವಳಿಗೆ ಕಾಣದಂತೆ ಅವಳನ್ನು ಕೆಟ್ಟ ಕಣ್ಣಿನಿಂದ ನೋಡಿ) ಸರಿ, ನಿನಗಿಂತ ಮೊದಲು ನಿನ್ನ ಪೋಷಾಕಿನ ಬಗ್ಗೆ ನನಗೆ ಬಹಳ ಹಳಹಳಿಯಾಗಿದೆ. ಏನು ಮಾಡಲಿ, ಕೈಯಲ್ಲಿ ದ್ರವ್ಯವಿಲ್ಲ. ಒಮ್ಮೆ ಕೈಯಲ್ಲಿ ಹಣದ ಸಂಗ್ರಹವಾಯಿ ತಂದರೆ ನಿನ್ನ ಇಚೆ ಯನ್ನು ಪೂರ್ಣಮಾಡುವೆನು, ”
೬೩------------------------------------------೪ನೆಯ ಪ್ರಕರಣ-ಸಖಿಸಂದರ್ಶನ!
ಸರಲೆ:-( ಆ ದ್ರವ್ಯವು ನಿಮ್ಮ ಕೈಯಲ್ಲಿ ಕೊಡಬೇಕೆಂದು ನನ್ನ ಇಚ್ಛೆಯು ಪೂರ್ಣವಾಗಬೇಕೆಂದು ? ?)
ವಸಂತ:- ( ಸರಣಿಯನ್ನು ಹತ್ತರ ಜಗ್ಗಿ ಕೊಂಡು ) ಇದನ್ನು ನೋಡು, ಶಾಮರಾಯನ ಪತ್ರದ ಮೇಲಿಂದ ಒಂದು ಹುಂಡಿಯು ಬೇಗನೆ ದೊರೆಯುವಂತೆ ಕಾಣುತ್ತದೆ. ಆ ರಕಂ ಸಿಕ್ಕ ಕೂಡಲೆ ನಿನಗೆ ಬೇಕಾದದ್ದನ್ನು ತಂದು ಚಲ್ಲಿ ಬಿಡುತ್ತೇನೆ. ”
ಸರಲೆ:- ( ಮಧ್ಯಪಾನಮಾಡಿದವರಂತೆ ಉನ್ಮತ್ತಳಾಗಿ ಹರ್ಷಭರದಿಂದ ) ಈ ಮಾತು ನಿಜವಷ್ಟೇ ? ”
ವಸಂತ:- ( ಕುತ್ತಿಗೆಯ ಮೇಲೆ ಕೈಯನ್ನು ಹಾಕಿ ) ನಾನು ನಿನ್ನಾಣೆಯಾಗಿ ಸುಳ್ಳು ಹೇಳುವದಿಲ್ಲ, ನನ್ನ ಪ್ರೇಮಸರ್ವಸ್ವವೇ ನೀನಾಗಿರುವಿ. ನಿನ್ನ ಶೃಂಗಾರ ದಿಂದಾಗುವ ಆನಂದವು ಆ ನಿರಾಕಾರದೇವನಿಗೆ ಗೊತ್ತು! ೨೨
ಹೀಗನ್ನುತ್ತ ಸರಲೆಯನ್ನು ಆಲಂಗಿಸಿದನು. ಇದರಿಂದ ಸರಿಗೆ ಅತ್ಯಾನಂದ ವಾಯಿತು. ಅವಳು ಮೆಲ್ಲನೆ ವಸಂತನ ಕೈಯಿಂದ ತನ್ನ ಕೈಯನ್ನು ಬಿಡಿಸಿಕೊಂಡು ಶಾಲು ಮೈಮೇಲೆ ಹಾಕಿಕೊಂಡು ತಿರುಗಾಡುವದಕ್ಕೆ ಸಮುದ್ರದಂಡೆಗೆ ಹೋದಳು. ಸರಲೆಯು ಹೋದ ಕೂಡಲೆ ವಸಂತನು ಮೇಲಕ್ಕೆದ್ದು ಬಾಗಿಲು ಹಾಕಿಕೊಂಡು ಸೊಟ್ಟ ಮೋರೆ ಮಾಡಿಕೊಂಡು ತನ್ನಷ್ಟಕ್ಕೆ ತಾನೇ “ ಈ ನಮ್ಮ ಅಮ್ಮ ವಕ್ರಳಿಗೆ ಬೂಟು ಚಾಳೀಸು ಬೇಕಂತೆ. ಅಹಹ ಏನು ಇವಳ ಅಪೇಕ್ಷೆ ! ಇವಳಿಗೆ ವಸಂತನು ತನ್ನೊಡನೆ ಲಗ್ನವಾಗುತ್ತಾನೆಂದು ತೋರಿದೆ. ಆದರೆ ಈ ವಸಂತಬಹಾದ್ದೂರನು ದಿವ್ಯಸುಂದರಿಯನ್ನೆ ತನ್ನ ರಾಣಿಯನ್ನಾಗಿ ಮಾಡಿಕೊಳ್ಳುವನು! ಶಾಮರಾಯ ಗೋಪಾಳರಾಯರ ಸಹವಾಸದಿಂದ ಚಿಂತಾಮಣಿರಾಯನ ದುಡ್ಡಿನ ಕೊಪ್ಪರಿಗೆಯೂ, ದಿವ್ಯಸುಂದರಿಯೂ ಕೈವಶವಾಗದಿದ್ದರೆ ನಾವು ಮಾಡಿದ ಕಾರಸ್ಥಾನವು ಕಾರಸ್ಥಾನವೇ? ಮೊದಲು ಯಾವ ಬಗೆಯಿಂದಾದರೂ ವಿನಾಯಕನನ್ನು ದೂರಮಾಡಿ, ನಂತರ ಯುಕ್ತಿ ಪ್ರಯುಕ್ತಿಯಿಂದ ರಾಮರಾಯನ ಮನಸ್ಸಿನಲ್ಲಿ ನನ್ನ ಸಲುವಾಗಿ ಪೂಜ್ಯ ಬುದ್ದಿಯನ್ನು ಹುಟ್ಟಿಸಿ ದಿವ್ಯಸುಂದರಿಗೆ ವಸಂತನ ಮನೋಹರ ಸಾಮರ್ಥ್ಯವನ್ನು ತೋರಿಸಲಿಕ್ಕೆ ಬೇಕು. ” ಹೀಗನ್ನುತ್ತ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಒಂದು ದಿಕ್ಕಿನ ಕಡೆಗೆ ನೋಡಿದನು. ಆಗ ಅವನು ಪ್ರಳಯಕಾಲದ ಯಮನಂತೆ ತೋರಿದನು |
೬೪------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
೫ನೆಯ ಪ್ರಕರಣ.
ವನದೇವತೆ!
|ನಿನಾಯಕನು ರಾಮಪುರಕ್ಕೆ ಬಂದು ಆರು ತಿಂಗಳಾಗಿದ್ದಿತು. ಅವನು ವ್ಯ' ಮೊದಲು ಹಮ್ಮಿದ ಉದ್ಯೋಗವು ಆರುತಿಂಗಳದಿದ್ದರೂ, ಪರಿಶ್ರಮವಿಶೇಷದಿಂದ ಶುದ್ದ ಕಬ್ಬಿಣದ ಕಾರಖಾನೆಯನ್ನೇ ಹೊರಡಿಸಿದನು. ಈ ಕೆಲಸಕ್ಕೆ ಅವನಿಗೆ ಆಗ ತಕ್ಕಷ್ಟು ಧನದ ಸಹಾಯವಾಗದಿದ್ದರೂ, ಅವನಂತೆ ಉದ್ಯೋಗಶೀಲರಾದ ನಾಲ್ಕಾರು ಮಂದಿ ತರುಣರ ಸಹಾಯವು ಮಾತ್ರ ಅವನಿಗೆ ಲಭಿಸಿದ್ದಿತು. ಆ ತರುಣರಾದರೂ ಬೇರೆ ಬೇರೆ ದೇಶಗಳಲ್ಲಿ ಖನಿಜಶಾಸ್ತ್ರಾಭ್ಯಾಸವನ್ನು ಮಾಡಿದವರಾಗಿದ್ದರು. ಅವರಲ್ಲಿ ಇಬ್ಬರಂತೂ ಬಡೋದಾ ಮೈಸೂರ ಸಂಸ್ಥಾನಗಳಲ್ಲಿ ಖನಿಜವಸ್ತು ಶೋಧನದ ನವ ಕರರಿದ್ದರು. ಆ ಸಂಸ್ಥಾನಗಳಲ್ಲಿ ವಿಪುಲವಾಗಿ ಖನಿಜಗಳು ಸಿಗುತ್ತಿದ್ದರೂ, ಕಾರ ಖಾನೆಯನ್ನು ತೆಗೆಯಲಿಕ್ಕೆ ಅನುಕೂಲತೆಗಳಿದ್ದರೂ ಅಲ್ಲಿ ಕಾರಖಾನೆಯನ್ನು ತೆಗೆ ಯುವ ಲಕ್ಷಣವು ತೋರದ್ದರಿಂದ ಅವರು ನವಕರಿಗೆ ನೀರು ಬಿಟ್ಟು ವಿನಾಯಕನಿಗೆ ಬಂದು ಕೂಡಿದರು. ವಿನಾಯಕನು ಅವರನ್ನು ತನ್ನ ಕಾರಖಾನೆಯಲ್ಲಿ ಹಿಸೇದಾರರ 'ನಾಗಿ ಮಾಡಿದನು. ಈ ಎಲ್ಲರ ಅಲ್ಪಸ್ವಲ್ಪ ಭಾಂಡವಲವು ಏಕತ್ರವಾದದ್ದರಿಂದ ಆರು
ತಿಂಗಳೊಳಗೇ ವಿನಾಯಕನ ಕಾರಖಾನೆಯು ಒಳ್ಳೆ ರೂಪಕ್ಕೆ ಬಂದಿತು.
ವಿಶ್ವಕರ್ಮನು ನಿರ್ಮಾಣಮಾಡಿದ ಭೂಮಿಯ ಮೇಲೆ ಕಾದಂಬರಿಯ ಕಥಾ ನಕದ ಆರಂಭದ ವೇಳೆಯಲ್ಲಿ ರಾಮಪುರಗ್ರಾಮವು ಎಡಬಲ ಹಳ್ಳಿಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಆ ರಾಮಪುರಭೂಮಿಯಲ್ಲಿ ರಾಮಪುರಸಹಿತ ಹದಿನಾರು ಹಳ್ಳಿ ಗಳು ಮಾತ್ರ ಇದ್ದವು. ರಾಮಪುರಪ್ರದೇಶವು ಎಲ್ಲ ಕೂಡಿ ಹದಿನೈದು-ಇಪ್ಪತ್ತು ಹರ ದಾರಿ ವಿಸ್ತಾರವುಳ್ಳದ್ದದೆ. ಈ ಪ್ರದೇಶದ ದಕ್ಷಿಣದಿಕ್ಕಿಗೆ ಗೋದಾವರಿ ನದಿಯು ಹರಿಯುತ್ತಿದ್ದು, ಉತ್ತರದಿಕ್ಕಿಗೆ ಪರ್ವತದ ಪಂಕ್ತಿಯು ಹಬ್ಬಿರುತ್ತದೆ. ರಾಮಪುರದಿಂದ ಹತ್ತು ಹರದಾರಿಯ ಮೇಲೆ ಗೋದಾವರಿ ನದಿಯಿದ್ದು, ಅಲ್ಲಿ ಬಸರಾಬಾದವೆಂಬ ಹೆಸರಿನ ಒಂದು ಹಳ್ಳಿಯದೆ, ಈ ಹಳ್ಳಿಯಿಂದ ರಾಮಪುರಕ್ಕೆ ಹೋಗಲಿಕ್ಕೆ ಒಂದು ಸಣ್ಣ ಚಕ್ಕಡಿಯ ಹಾದಿಯದೆ. ರಾಮಪುರಕ್ಕೆ ಹೋಗಲಿಕ್ಕೆ ಅನುಕೂಲವಾಗಿ ಬೇಜ
೬೫---------------------------------೫ನೆಯ ಪ್ರಕರಣ-ವನದೇವತೆ !
ವಾಡೆಯೆಂಬ ರೇಲ್ವೇ ಸ್ಟೇಶನ್ನು ಇರುತ್ತದೆ. ಇಲ್ಲಿಂದ ಬಸರಾಬಾದದ ತನಕ ಸಣ್ಣ ಸಣ್ಣ ಉಗಿಯ ಹಡಗಗಳು ಹೋಗಬರಲಿಕ್ಕೆ ಶಕ್ಯವಿರುತ್ತದೆ; ಆದರೆ ಇಷ್ಟರ ಮೇಲಿಂದ ಬಸರಾಬಾದವು ನದೀತೀರದ ಬಂದರವಿರುತ್ತದೆಂದು ಯಾರೂ ತಿಳಿಯ ಬಾರದು. ವಿನಾಯಕನು ಹೋದಾಗ ಅದು ಹಳ್ಳಿಯಾಗಿದ್ದು, ಈಗಲೂ ಅದೇ ಸ್ಥಿತಿ ಯಲ್ಲಿರುತ್ತದೆ. ವಿನಾಯಕನು ರಾಮಪುರಕ್ಕೆ ಹೋದ ಕೂಡಲೆ ಅಲ್ಲಿಯ ಜನರ ದಾರಿದ್ರ ಸ್ಥಿತಿಯನ್ನು ನೋಡಿ ಅವನಿಗೆ ಬಹು ದುಃಖವೆನಿಸಿತು. ದೀನರು ಮುಂಜಾವಿನಿಂದ ಸಂಜೆಯತನಕ ತಮ್ಮ ಹೊಲಗಳಲ್ಲಿ ಕಾಬಾಡಗಷ್ಯ ಮಾಡಿದರೂ, ಅವರ ಮೈಮುಚ್ಚು ವಷ್ಟು ಬಟ್ಟೆಗಳಿಲ್ಲದ್ದನ್ನೂ, ಹೊಟ್ಟೆ ತುಂಬುವಷ್ಟು ಆಹಾರವಿಲ್ಲದ್ದನ್ನೂ ನೋಡಿ ಅವನ, ಅವನ ಸ್ನೇಹಿತರ ಅಂತಃಕರಣಗಳು ದ್ರವಿಸಿ ಅವರ ಕಣ್ಣುಗಳಲ್ಲಿ ಕಣ್ಣೀರುಗಳು ತುಂಬಿಬಂದವು. ಯಾರ ಪರಿಶ್ರಮದಿಂದ ನಮ್ಮ ಭರತಖಂಡದ ನಿವಾಸಿಗಳಿಗೆ ಅನ್ನ ವಸ್ತ್ರಗಳು ಸಿಗುತ್ತವೆಯೋ, ಆ ಒಕ್ಕಲಿಗರ ದೈನ್ಯಾವಸ್ಥೆಯನ್ನು ನೋಡಿ ವಿನಾಯಕ ನಂಥ ಕರುಣಾಳುವಾದ ಮನುಷ್ಯನ ಹೃದಯವು ವಿದೀರ್ಣವಾದದ್ದರಲ್ಲಿ ಆಶ್ಚರ್ಯ ನಿಲ್ಲ! ವಿನಾಯಕನು ಒಕ್ಕಲಿಗರ ಮನೆಮನೆಗೆ ಹೋಗಿ ವಿಚಾರಿಸಿ ರಾಮಪುರದಲ್ಲಿ ಧಾನ್ಯ ಬಿತ್ತಲಿಕ್ಕೆ ಸಮರ್ಥವಾದ ಭೂಮಿಗಳು ಸ್ವಲ್ಲೇ ಇದ್ದರೂ, ಅವು ಬರೇ ಮಳೆಯ ನೀರಿಂದಲೇ ಬೆಳೆಯಬೇಕಾದದ್ದರಿಂದ ಅಷ್ಟಕ್ಕಷ್ಟೆ ಬೆಳೆ ಬರುತ್ತವೆಂಬ ಮಾತನ್ನು ಮನವರಿಕೆ ಮಾಡಿಕೊಂಡನು. ಆ ಪ್ರದೇಶದಲ್ಲಿ ವಿಶೇಷವಾಗಿ ಶಲೆಯು ಹೊರಡು ವಂತಿದ್ದರೂ, ಆ ವೇಳೆಯಲ್ಲಿ ಬಾವಿಗಳೊಂದೂ ಇದ್ದಿಲ್ಲ. ಹನ್ನೆರಡು ತಿಂಗಳೂ ಹರಿಯ ತಕ್ಕ ಸಣ್ಣ ಸಣ್ಣ ನಾಲ್ಕಾರು ನದಿಗಳಿದ್ದರೂ ಅವುಗಳಿಗೆ ಕಾಲುವೆಗಳಿದ್ದಿಲ್ಲ. ಪ್ರದೇಶ ದಲ್ಲಿ ವಿಪುಲವಾಗಿ ನೀರಿನ ಸಂಗ್ರಹವಿದ್ದರೂ, ಜನರು ದರಿದ್ರಾವಸ್ಥೆಯಲ್ಲಿದ್ದ ಬಗ್ಗೆ ವಿನಾ ಯಕನು ಚಿಂತಾಮಣಿರಾಯನ ಮೇಲೆ ದೋಷವನ್ನು ಹೊರಿಸಿದನು. ಅವನು ಮುಂಬ ಯಿಯಲ್ಲಿ ಕೇವಲ ವಿನೋದಕ್ಕಾಗಿ ರಾಜಮಹಾಲನ್ನು ಕಟ್ಟಿಸಿದ್ದಕ್ಕಿಂತ ಈ ಪ್ರದೇಶ ದಲ್ಲಿ ಅನೇಕ ಭಾವಿಗಳನ್ನು ತೆಗಿಸಿದ್ದರೆ, ನದಿಗಳಿಗೆ ಮೂರುನಾಲ್ಕು ಕಾಲವೆಗಳನ್ನು ಹಚ್ಚಿದ್ದರೆ ಈ ಜನರೆಲ್ಲ ಸುಖದಿಂದಿರುತ್ತಿದ್ದರು; ಮತ್ತು ತನಗೂ ಸುಖವಾಗುತ್ತಿದ್ದಿತು. ಇತ್ಯಾದಿ ಅನೇಕ ವಿಚಾರಗಳು ಆ ವೇಳೆಯಲ್ಲಿ ವಿನಾಯಕನ ಮನಸ್ಸಿನಲ್ಲಿ ಬಂದವು. ವಿನಾಯಕನು ಅಲ್ಲಿಗೆ ಹೋದಮೇಲೆ ಮನೆಮನೆಗೆ ಹೋಗಿ ವಿಚಾರಿಸಿ, ಅವರ ಬಡ ತನದ ಸಂಬಂಧವಾಗಿ ಸಹಾನುಭೂತಿಯನ್ನು ವ್ಯಕ್ತಮಾಡಿದನು, ಮತ್ತು ತಾನು ಬಂದ ಉದ್ದೇಶವನ್ನು ಹೇಳಿ ಅವನು ಆ ಒಕ್ಕಲಿಗರಲ್ಲಿ ಎಷ್ಟೋ ಸದುದ್ಯೋಗಶೀಲರಿಗೆ ತನ್ನ ಕಾರಖಾನೆಯಲ್ಲಿ ನವಕರಿ ಕೊಡುವದಾಗಿ ಆಶ್ವಾಸನೆ ಕೊಟ್ಟನು.
ರಾಮಪುರದಿಂದ ಐದು ಮೈಲಿನ ಮೇಲಿದ್ದ ಒಂದು ಪರ್ವತದ ನೆರೆಯಲ್ಲಿ ವಿನಾ ಯಕನು ತನ್ನ ಕಾರಖಾನೆಯನ್ನು ಪ್ರಾರಂಭಿಸಿದ್ದನು. ಆ ಕಾರಖಾನೆಯ ಸಮೀಪದಲ್ಲಿ ಹರಿಯುತ್ತಿದ್ದ ನದಿಯಿಂದ ಒಂದು ಕಾಲನೆಯನ್ನು ತೆಗೆದು ಕಾರಖಾನೆಗೆ ನೀರು ಬರು
೬೬-------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ವಂತೆ ಯತ್ನ ಮಾಡಿದನು. ಆ ನೀರಿನಲ್ಲಿ ಕಾರಖಾನೆಗೆ ಬೇಕಾದಷ್ಟು ನೀರು ಉಪಯೋ ಗಿಸಿಕೊಂಡು, ಉಳಿದ ನೀರನ್ನು ಸುತ್ತು ಮುತ್ತಲಿನ ಭೂಮಿಗಳಿಗೆ ಕೊಡುತ್ತ ಬಂದದ್ದ ರಿಂದ ಕಾರಖಾನೆಯ ಸುತ್ತು ಮುತ್ತಿನ ಭೂಮಿಯೆಲ್ಲ ಹಚ್ಚಗೆ ಕಾಣಿಸಹತ್ತಿತು. ಭಾಂಡ ವಲು ತಕ್ಕಷ್ಟೇ ಇದ್ದದ್ದರಿಂದ ವಿನಾಯಕನು ಯಂತ್ರ ಸಾಮಗ್ರಿಗಾಗಿ ಉತ್ತಮ ಮಂದಿ ರವನ್ನು ಕಟ್ಟಿಸಿ, ಉಳಿದ ಕೆಲಸದ ಸಲುವಾಗಿ ಹತ್ತು ಹನ್ನೆರಡು ಪರ್ಣಶಾಲೆಗಳನ್ನು ಕಟ್ಟಿಸಿದನು. ಕೂಲಿಕಾರರಿಗೆ ಇರುವದರಸಲುವಾಗಿ ಎಷ್ಟೋ ಗುಡಿಸಲುಗಳನ್ನು ಕಟ್ಟಿ ಸಿದನು. ಈ ಕಾರಖಾನೆಯಲ್ಲಿ ವಿನಾಯಕಸಹಿತ ಆರುಮಂದಿ ಅಧ್ಯಾಪಕರಿದ್ದರು. ಅಲ್ಲದೆ ಕೆಲಸ ಕಲಿಯುವದಕ್ಕಾಗಿ ಅನಂತ ಜಾತಿಯ ವಿದ್ಯಾರ್ಥಿಗಳೂ ಕೂಡಿದ್ದರು. ಇವರೆಲ್ಲರ ಆಯುಷ್ಯಕ್ರಮವು ಆಶ್ರಮದೊಳಗಿನ ಋಷಿಗಳಂತೆ ನಿಯಮಬದ್ಧವಾಗಿ ನಡೆದಿದ್ದಿತು. ಶುದ್ಧ ಹವಾ ಸೇವನೆ, ಯೋಗ್ಯ ಶಾರೀರಿಕ ಶ್ರಮ, ಉತ್ತಮಾಹಾರ, ವ್ಯಾಯಾಮ ಇವುಗಳಿ೦ದ ಕಾರಖಾನೆಯೊಳಗಿನ ಜನರ ಮುಖಮಂಡಲದ ಮೇಲೆ ತೇಜೋತ್ಸಾಹಗಳು ಕಂಡುಬರುತ್ತಿದ್ದವು. ಮತ್ತು ಪ್ರತಿಯೊಬ್ಬರಿಗೆ ತಾವು ಹಿಡಿದ ಕಾರ್ಯದಲ್ಲಿ ನಿಜವಾಗಿ ಜಯ ಬರುತ್ತದೆಂಬ ಸ್ವಾಭಾವಿಕ ವಿಶ್ವಾಸವು ಉತ್ಪನ್ನ
ವಾಗಿದ್ದಿತು.
ಕಾರಖಾನೆಗೆ ಮೂರ್ತ ಸ್ವರೂಪವನ್ನು ತರುವದಕ್ಕಾಗಿ ಮೊದಲಿನ ಆರು ತಿಂಗಳು ವಿನಾಯಕನು ಮಾಡಿದ ಪರಿಶ್ರಮದ ಕಲ್ಪನೆಯನ್ನು ಮಾಡುವದು ದುರಾಪಾಸ್ತವೇ ಸರಿ, ಆ ಕೆಲಸವನ್ನು ಮಾಡುತ್ತಿರುವಾಗ ಅವನಿಗೆ ರಾತ್ರಿ ನಿದ್ರೆ ಬರುತ್ತಿದ್ದಿಲ್ಲ. ಎಂಟೆಂಟು ದಿವಸಗಟ್ಟೆ ವಿಶ್ರಾಂತಿಯು ಸಿಗುತ್ತಿದ್ದಿಲ್ಲ. ಎಷ್ಟೋ ದಿವಸ ಹೊತ್ತು ಹೊತ್ತಿಗೆ ಹೊಟ್ಟೆಗೆ ಅನ್ನ ಸಹಾ ಬೀಳುತ್ತಿರಲಿಲ್ಲ. ಅವನು ಆ ಕಾರ್ಯದಲ್ಲಿ ಇಷ್ಟು ಮಗ್ನನಾಗಿದ್ದರೂ ಅವನ ಚಿತ್ತವೃತ್ತಿಯು ಯಾವಾಗಲೂ ಪ್ರಸನ್ನ ವಾಗಿಯೂ, ಶಾಂತವಾಗಿಯೂ, ಸಮಾ ಧಾನವಾಗಿಯೂ ಇರುತ್ತಿದ್ದಿತು. ಎಷ್ಟೋ ನಿರುತ್ಸಾಹದ ಪ್ರಸಂಗಗಳು ಬಂದಾಗಾ ದರೂ ಅವನ ಉತ್ಸಾಹವು ಕುಗ್ಗುತ್ತಿರಲಿಲ್ಲ. ಯಾರು ಏನೇ ತಪ್ಪು ಮಾಡಲಿ, ಅವನು ಆ ಸಂಬಂಧವಾಗಿ ಸಿಟ್ಟು ಮಾಡದೆ, ಮನಸ್ಸಿನಲ್ಲಿ ಸಂತಾಸಗೊಳ್ಳದೆ, ತಪ್ಪು ಮಾಡಿದವರಿಗೆ ಸವಿಮಾತುಗಳಿಂದ ತಿಳಿಸಿ ಹೇಳಿ ಮುಂದೆ ಅವರಿಂದ ತಪ್ಪಾಗದಂತೆ ಯತ್ನ ಮಾಡುತ್ತಿ ದ್ದನು. ಒಮ್ಮೊಮ್ಮೆ ವಿನಾಯಕನಿಗೆ ಎಷ್ಟೋ ಕೈ ಕಾಲುಬಿಡುವಂಥ ಕಠಿಣಪ್ರಸಂಗ ಗಳು ಬರುತ್ತಿದ್ದವು; ಆದರೂ ಅವನ ಮುಖಮಂಡಲದ ಮೇಲೆ ಧೈರ್ಯ, ಗಾಂಭೀರ್ಯ, ನಮ್ರತೆ, ಪ್ರಫುಲ್ಲತೆ ಮೊದಲಾದ ಚಿನ್ಮಗಳೇ ದೃಷ್ಟಿಗೆ ಬೀಳುತ್ತಿದ್ದವು, ನಿರಾಶೆ, ಉದ್ವಿಗ್ನತೆ, ಕ್ರೋಧ ಮೊದಲಾದ ವಿಕಾರಗಳು ಎಂದೂ ಯಾರದೃಷ್ಟಿಗೂ ಬೀಳುತ್ತಿ ದಿಲ್ಲ. ಈ ಪ್ರಕಾರ ವಿಲಕ್ಷಣೋತ್ಸಾಹದಿಂದಲೂ, ಅವಿಶ್ರಾಂತ ಪರಿಶ್ರಮದಿಂದಲೂ, ವಿಚಾರಪೂರ್ಣ ಕಾರ್ಯಕ್ಷಮತೆಯಿಂದಲೂ ಆರುತಿಂಗಳದಲ್ಲಿಯೇ ವಿನಾಯಕನು ತನ್ನ ಕಾರಖಾನೆಗೆ ತಂದ ಮೂರ್ತಸ್ವರೂಪವನ್ನು ಇತರರಿಗೆ ತರಲಿಕ್ಕೆ ಆರುವರ್ಷವಾ
೬೭--------------------------------೫ ನೆಯ ಪ್ರಕರಣವನದೇವತೆ !
ದರೂ ಸಾಲುತ್ತಿದ್ದಿತೋ ಇಲ್ಲೋ ಶಂಕಾಸ್ಪದವಾಗಿದೆ. ಯಾವದೊಂದು ವ್ಯವ ಸಾಯದಲ್ಲಿ ಯಶಃಪ್ರಾಪ್ತಿಯಾಗುವದು, ವ್ಯವಸಾಯಕ್ಕಿಂತಲೂ ವ್ಯವಸಾಯ ಮಾಡುವವರನ್ನೇ ಸರ್ವಸ್ವೀ ಅವಲಂಬಿಸಿರುತ್ತದೆ. ತಮ್ಮ ಸರ್ವಶಕ್ತಿಯನ್ನೂ, ಸರ್ವ ಬುದ್ದಿ ಸಾಮರ್ಥ್ಯವನ್ನೂ, ನಿಶ್ಚ ಯದ ಸರ್ವಬಲವನ್ನೂ ಒಟ್ಟುಗೂಡಿಸಿ ಏಕನಿಷ್ಟೆಯಿಂದ ಉದ್ಯೋಗ ಮಾಡುವದು ವ್ಯವಸಾಯದ ಕೀರ್ತಿಗೆ ಗುರುದುರ್ಗ ನಾಗಿದೆ. ಪ್ರತಿಯೊಂದು ಕಾರ್ಯ ಕೈ ತಪಶ್ಚರ್ಯವು ಅವಶ್ಯವಾಗಿ ಬೇಕೇಬೇಕು. ಮನಸ್ಸಿನ ಸರ್ವವ್ಯಾಪಾರಗಳನ್ನು ತಾನು ಹಿಡಿದ ಒಂದೇ ಕಾರ್ಯದಲ್ಲಿಯೇ ಮಗ್ನವಾಗುವಂತೆ ವರಾಡಲಿಕ್ಕೆ ಬೇಕು, ಅದರ ವ್ಯತಿರಿಕ್ತನಾಗಿ ಎರಡನೇ ಯಾವ ವಿಷಯವನ್ನೂ ಮನಸ್ಸಿ ನಲ್ಲಿ ತರಬಾರದು. ಹೀಗೆ ನಿಶ್ಚಯದ ಬಲದಿಂದ ಯಾವದೊಂದು ಉದ್ಯೋಗವನ್ನು ಆರಂಭಿಸಿದರೆ ಅದರಲ್ಲಿ ಫಲವು ನಿಶ್ಚಯವಾಗಿ ಸಿಕ್ಕೇಸಿಗುವದು, ಯಾವದೊಂದು ಉದ್ಯೋಗದಲ್ಲಿ ತಾನು ಯಶ ಸ್ವಿಯಾಗುತ್ತೇನೆಂಬ ಮನೋಭಾವನೆಯಿದ್ದರೆ ಆ ಕಾರ್ಯದ ಫಲ ನನ್ನು ನೋಡಿ ಮನಸ್ಸು ಆಶ್ಚರ್ಯಯುಕ್ತವಾಗಿ ಹೋಗುತ್ತದೆ. ಯೌಗಿಕಬಲದಿಂದ ಯಾವದೊಂದು ಕೆಲಸ ಮಾಡಿದರೆ ಅದು ಸಿದ್ದಿ ಯಾಗಲಿಕ್ಕೇಬೇಕೆಂಬುವದು ಯೋಗದ ನಿಯಮವೇ ಆಗಿರು ಇದೆ. ಇದೊಂದು ಕರ್ಮಯೋಗವಿರುತ್ತದೆ. ಫಲಾಶೆಯನ್ನು ತ್ಯಾಗಮಾಡಿ ಸರ್ವ ಮನೋವ್ಯಾಪಾರಗಳನ್ನೂ, ಸರ್ವಶಾರೀರಿಕ ಶಕ್ತಿಗಳನ್ನೂ ಹಿಡಿದ ಕಾರ್ಯದ ಸಲುವಾಗಿ ಖರ್ಚು ಮಾಡಿದರೆ ಆ ಕೆಲಸವು ಜಯಪ್ರದವಾಗಲಿಕ್ಕೇ ಬೇಕು. ಪರಮೇಶ್ವರನು ಸರ್ವರಿಗೂ ಕಮತೆ, ತೇಜ, ವೀರ್ಯ ಮೊದಲಾದವುಗಳನ್ನು ಕೊಟ್ಟಿದ್ದರೂ ಅವುಗಳ ಜತೆಗೆ ದೃಢ ಸಂಕಲ್ಪವು ಬೇಕು. ನಾನು ಈ ಕೆಲಸವನ್ನು ಮಾಡಿಯೇ ತೀರುವೆನೆಂಬ ಮನೋಬಲವು ಬೇಕು! ಕೇವಲ ಈ ಮನೋಬಲದ ಅಭಾವದಿಂದಲೇ ಶಕ್ತಿ ಸಾಮರ್ಥ ಗಳಿದ್ದ ನನ್ನ ನೂರಾರು ಮಂದಿ ತರುಣರು ಚಕ್ಕಲುಬಕ್ಕಲು ಹಾಕಿ ಕೊಂಡು ಕುಳಿತಿರುತ್ತಾರೆ. ನಮ್ಮ ಎಷ್ಟೋ ಜನರು ಸಂಘಶಕ್ತಿ ಯಿಂದ ಎಷ್ಟೋ ಉದ್ಯೋಗಗಳನ್ನು ಆರಂಭಿಸಿ, ಅಪಯಶಸ್ಸನ್ನು
೬೮------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ಹೊಂದಿರುವದು ಮೇಲೆ ದೃಷ್ಟಿಗೆ ಬೀಳುತ್ತದೆ. ಇದಕ್ಕೆ ಈ ಜನರಲ್ಲಿ ಆತ್ಮವಿಶ್ವಾಸವಿಲ್ಲದಿರುವದೇ ಮೂಲಮಂತ್ರವಾಗಿದೆ. ಸ್ವಾರ್ಥ, ಕ್ರೋಧ, ಮತ್ಸರ, ಕಲಹ ಮೊದಲಾದವುಗಳಿಂದ ವಿವ ಶರಾದ ಜನರು ಯಾವ ಕಾರ್ಯದಲ್ಲಿಯೂ ಯಶೋವಂತರಾಗ ಲಿಕ್ಕೆ ಸಮರ್ಥರೆನಿಸುವದಿಲ್ಲ. ಇಂಥ ಜನರು ಬೇಕಾದಷ್ಟು ಸಂಸ್ಥೆ ಗಳನ್ನು ಸ್ಥಾಪಿಸಿದರೂ ಅವು ಸ್ವಲ್ಪ ದಿನದಲ್ಲಿಯೇ ಮುರಿದು ಮೂಲೆ ಗುಂಪಾಗಿ ಬೀಳುವದು ಅರಿದಲ್ಲ. ಯಶಃಪ್ರಾಪ್ತಿಗಿಂತಲೂ ಸ್ವಾರ್ಥವೇ ಹೆಚ್ಚಾಗಿ ತೋರುವ ಉದ್ಯೋಗವು ಯಶಸ್ವಿಯಾದ ದ್ದರ ಉದಾಹರಣೆಯು ಒಂದೂ ಸಿಗುವದಿಲ್ಲ. ನಮ್ಮ ಹಿಂದು ಸ್ನಾನದೊಳಗಿನ ಎಷ್ಟೋ ಅಹಂ ಅಹಂ ಎಂಬ ಸಂಸ್ಥೆಗಳು ಕೇವಲ ಸ್ವಾರ್ಥಪರಾಯಣರಾದ ಅವಿಶ್ವಾಸಿ ಜನರ ಕೃತಿಯಿಂದ ಮುಳುಗಿಹೋದ ಅನೇಕ ಉದಾಹರಣೆಗಳನ್ನು ತೋರಿಸಬ ಹುದು. ಕಾರ್ಯದಲ್ಲಿ ಜಯಪ್ರದವಾಗಬೇಕೆನ್ನುವವರು ಸ್ವಾರ್ಥ, ಅವಿಶ್ವಾಸ, ದ್ವೇಷ, ಮತ್ಸರ ಮೊದಲಾದ ದುರ್ಗುಣಗಳನ್ನು ದೂರೀಕರಿಸಿ ಉದ್ಯೋಗವನ್ನು ಆರಂಭಿಸಲಿಕ್ಕೆ ಬೇಕು, ಮಾನಾಪ ಮಾಡದವಿಷಯಕ್ಕೆ ಲಕ್ಷಗೊಡದೆ ಮಾನಸಿಕ-ಶಾರೀರಿಕ ಸರ್ವ ಶಕ್ತಿಗಳನ್ನು ಆ ಉದ್ಯೋಗದಲ್ಲಿಯೇ ಖರ್ಚು ಮಾಡಲಿಕ್ಕೆ ಬೇಕು. ಮನಸ್ಸನ್ನು ಫಲಾಶೆಯಲ್ಲಿ ತೊಡಗಿಸದೆ, ಅದನ್ನು ಆ ಕಾರ್ಯ ದಲ್ಲಿಯೇ ಸ್ಥಿರಗೊಳಿಸಬೇಕು. ಪಾಶ್ಚಾತ್ಯ ದೇಶದಲ್ಲಿ ಯಶಸ್ವಿಗಳಾ ದಂಥ ಕಲ್ಪಕ ಮತ್ತು ಕಾರಖಾನೆದಾರರ ಚರಿತ್ರೆಯಲ್ಲಿ ಕಲಿಯ ತಕ್ಕ ವಿಷಯವೆಂದರೆ ಇದೇ ವಿಷಯವಾಗಿದೆ. ತ್ಯಾಗವು ಮನು ವ್ಯನ ಸರ್ವಸ್ವವಾಗಿದೆ; ಆದರೆ ನಮ್ಮಲ್ಲಿ ಎಷ್ಟೋ ಜನರು ನಿಶ್ವಾರ್ಥ ವೃತ್ತಿಯನ್ನು ತ್ಯಾಗಮಾಡಿ ಸ್ವಾರ್ಥಶಿಖರದ ಮೇಲೆ ಹೋಗಿ ಕುಳಿ ತಿರುತ್ತಾರೆ. ಮತ್ತು ಅಲ್ಪ ಲಾಭಕ್ಕಾಗಿಯೇ ಅವರು ತಮ್ಮ ಪ್ರಖರವಾದ ಮನೋಬಲವನ್ನು ಮಲಿನ ಮಾಡಿಕೊಳ್ಳುತ್ತಾರೆ. ವಿನಾಯಕನು ಇಂಥ ಕ್ಷುದ್ರ ಸ್ವಾರ್ಥದಿಂದ ನೂರಾರು ಹರದಾರಿ ದೂರದಲ್ಲಿದ್ದನು. ಅವನು ಆತ್ಮವಿಶ್ವಾಸದಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಿದ್ದಿಲ್ಲ. ನನ್ನ ಹತ್ತರ ದುಡಿಲ್ಲ, ನನ್ನ ಹತ್ತರ ಮನುಷ್ಯಬಲವಿಲ್ಲ, ನಾನು ಹೇಗೆ ಮಾಡಬೇಕು, ಏನು
೬೯----------------------------೫ನೆಯ ಪ್ರಕರಣವನದೇವತೆ !
ಮಾಡಬೇಕು, ಎಂಬದಾಗಿ ಆಲೋಚಿಸಿ ಹೆಂಗಸಿನಂತೆ ಅಳುತ್ತ ಕೂಡುವದು ಅವನಿಗೆ ಗೊತ್ತೇ ಇದ್ದಿಲ್ಲ. ಹಿಡಿದ ಕಾರ್ಯವನ್ನು ಮಾಡಿಯೇ ತೀರುತ್ತೇನೆಂಬದಾಗಿ ಅವನಿಗೆ ಆತ್ಮವಿಶ್ವಾಸವಿದ್ದಿತು. ಅವನ ಸಹಾಧ್ಯಾಯಿಗಳೂ, ಅವನ ಸಂಗಡ ಬಂದ ವಿದ್ಯಾರ್ಥಿ ಗಳೂ ಅವನಂತೆಯೇ ಸದುದ್ಯಮಶೀಲರಾಗಿದ್ದುದರಿಂದ ಕಾರಖಾನೆಗೆ ಆರು ತಿಂಗಳೊ ಳಗೇ ಮೂರ್ತಸ್ವರೂಪವು ಪ್ರಾಪ್ತವಾಯಿತು. ಪರಮೇಶ್ವರನು ಮನುಷ್ಯನಿಗೆ ಪ್ರತಿ ಯೊಂದು ಕೆಲಸದಲ್ಲಿ ಸುಫಲವನ್ನುಂಟುಮಾಡಿಕೊಳ್ಳುವಂಥ ಶಕ್ತಿಯನ್ನು ಕೊಟ್ಟಿದ್ದಾನೆ; ಆದರೆ ಈ ಸುಫಲವು ಈಶ್ವರೀದತ್ತ ಶಕ್ತಿಯು ಜಾಗರೂಕವಾಗಿದ್ದರೆ ಸಿಗುವದು. ಶಕ್ತಿ ಯು ನಿದ್ರಿತಾವಸ್ಥೆಯಲ್ಲಿದ್ದರೆ ಫಲವು ಸಿಗುವದಿಲ್ಲ. ಈ ಶಕ್ತಿಯನ್ನು ಜಾಗೃತಾವಸ್ಥೆ ಯಲ್ಲಿಡುವದೂ ನಿದ್ರಿತಾವಸ್ಥೆಯಲ್ಲಿಡುವದೂ ಕೇವಲ ಮಾನವೀ ಸ್ವಾಧೀನವಾಗಿದೆ. ಆ ಜವಾಬದಾರಿಯನ್ನು ಈಶ್ವರನು ತಕ್ಕೊಂಡಿಲ್ಲ. ವಿನಾಯಕನು ತನ್ನ ಸರ್ವ ಶಕ್ತಿಯನ್ನು ಜಾಗರೂಕವಾಗಿಟ್ಟಿದ್ದರಿಂದಲೇ ಅವನ ಅಂಕುರರೂಪವಾದ ಕಾರಖಾನೆಯು ಸ್ವಲ್ಪ ದಿವಸಗಳಲ್ಲಿ ವೃಕ್ಷರೂಪ ಧಾರಣಮಾಡಿತು.
ಕಾರಖಾನೆಯಿಂದ ಸ್ವಲ್ಪ ಅಂತರದ ಮೇಲೆ ಹರಿಯುತ್ತಿದ್ದ ಒಂದು ಸಣ ಹಳ್ಳದ ನೀರಿನ ಮೇಲಿಂದ ಅದರ ಉಗಮಸ್ಥಾನದಲ್ಲಿ ತಾಮ್ರವಿರಬೇಕಾಗಿ ವಿನಾಯಕ ನಿಗೆ ಸಂಶಯವು ಬಂದಿತು. ಆ ನೀರಿನ ಪ್ರಯೋಗಮಾಡಿ ನೋಡಿದ ಮೇಲೆ ಅದರಲ್ಲಿ ಸ್ವಲ್ಪ ತಾಮ್ರವು ಅವನಿಗೆ ಸಿಕ್ಕಿತು. ತಾಮ್ರವು ದೃಷ್ಟಿಗೆ ಬಿದ್ದ ಕೂಡಲೆ ವಿನಾಯಕನು ಒಂದು ದಿವಸ ಸಂಧ್ಯಾಕಾಲದಲ್ಲಿ ಹಳ್ಳದ ಉಗಮಸ್ಥಾನಕ್ಕೆ ಹೋಗಬೇಕೆಂದು ನಿಶ್ಚ ಯಿಸಿ, ಆ ಪ್ರಕಾರ ಅವನೊಬ್ಬರ್ನೆ ಹತ್ತರವೇ ಕಾಣಿಸುತ್ತಿದ್ದ ಪರ್ವತದ ಮೇಲೆ ಏರಿ ಹೋಗಿ ಉಗಮಸ್ಥಾನದ ಹತ್ತಿರ ನಿಂತನು. ಅಲ್ಲಿಯ ಎಷ್ಟೋ ಕಲ್ಲುಗಳನ್ನು ನೋಡಿದ ಮೇಲೆ ವಿನಾಯಕನಿಗೆ ಒಳ್ಳೆ ಆಶ್ಚರ್ಯವಾಯಿತು. ಅವನ ಹೃದಯವು ದುಃಖ ದಿಂದ ದ್ರವಿಸಲು ಕಣ್ಣುಗಳಿಂದ ಕಣ್ಣೀರುಗಳು ಕೆಳಗೆ ಬಿದ್ದವು. ಅವನು:- ಜಗ ದ್ವಂದ್ಯ ಆರ್ಯಾವರ್ತಾ, ನಿನ್ನ ಹೊಟ್ಟೆಯಲ್ಲಿ ಈ ಪ್ರಕಾರ ಅಗಣಿತಸಂಪತ್ತು ಅಡ ಗಿದ್ದರೂ, ನಿನ್ನ ಪುತ್ರರಾದ ನಾವು ಕೇವಲ ಆಲಸ್ಯ, ಮತ್ಸರ, ದ್ವೇಶ, ಸ್ವಾರ್ಥ, ವೃಥಾಕಲಹ ಮೊದಲಾದವುಗಳಿಂದ ಕಾಲಕ್ಷೇಪಮಾಡಿ ನಿಷ್ಕಾರಣ ಉಪವಾಸವಿದ್ದು ಸಾಯುತ್ತೇವೆ. ನಿರ್ಲಜ್ಜಿ ಭಾರತವಾಸೀ, ನಿನ್ನ ಬಾಗಿಲಲ್ಲಿ ಕಲ್ಪವೃಕ್ಷವಿರುತ್ತದೆ, ನೀನು ಪ್ರಯತ್ನ ಮಾಡಿದರೆ ಅದು ನಿನಗೆ ಇಷ್ಟವಾದದ್ದನ್ನು ಕೊಡಲಿಕ್ಕೆ ಸಿದ್ಧವಿರು ತದೆ; ಆದರೆ ಸ್ವಾರ್ಥಲೋಲುಪನಾದ ಆಲಸ್ಯಾ, ನೀನು ಈ ಕಲ್ಪವೃಕ್ಷದ ಅವಹೇಲನ ಮಾಡಿ ಎರಡನೆಯವರ ಮನೆಮನೆಯನ್ನು ತಿರುಗಿ ಬಿಕ್ಕಬೇಡುತ್ತಿರುವಿ. ಧಿಕಾರ! ಧಿಕ್ಕಾರವಿರಲಿ ನಿನಗೆ!! ನಿನಗೆ ಜಗತ್ತಿನಲ್ಲಿ ಎಷ್ಟೂ ಮಾನವಿಲ್ಲ. ನಿನಗೆ ಎರಡನೇ ದೇಶದಲ್ಲಿ ಕೇವಲ ವರ್ಣಭೇದದ ಸಲುವಾಗಿ ಯಾರೂ ಬರಗೊಡುವದಿಲ್ಲ. ನಿನ್ನ ಸ್ವಂತದೇಶದಲ್ಲಿಯೇ ನಿನಗೆ ಬೆಲೆಯಿಲ್ಲ! ಇದಕ್ಕಿಂತಲೂ ನಿನ್ನ ಹೆಚ್ಚಿನ ಶೋಚನೀಯ
೭೦----------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ಸ್ಥಿತಿಯು ಯಾವದು? ಮೂರ್ಖಾ, ಕಣ್ಣು ತೆಗೆ. ಇನ್ನಾದರೂ ಜಾಗರೂಕನಾಗು ! ಈ ಕಲ್ಪವೃಕ್ಷದ ಉಪಾಸನೆಯನ್ನು ಮಾಡು. ಮನೆಯಲ್ಲಿದ್ದ ಕಾಮಧೇನುವಿನ ಸೇವೆ ಯನ್ನು ಮಾಡು. ನಿಜವಾದ ಸೌಖ್ಯ-ಶಾಂತಿಗಳಿಗೆ ನೀನು ಎರವಾಗಿರುವಿ. ಈಗ ನಿಶ್ಚಯ ಮಾಡಿ ಫಲಾಶೆಯನ್ನು ಮಾಡದೆ ಅವಿಶ್ರಾಂತ ಪರಿಶ್ರಮದಿಂದ ಈ ಕಾಮಧೇನು . ವಿನ ಸೇವೆಯನ್ನು ಮಾಡು. ನಿನ್ನ ದೇಶ, ನಿನ್ನ ಮಾಯಾಭೂಮಿ ಇವು ನಿನಗೆ ಬೇಕಾ ದದ್ದು ಕೊಡಲಿಕ್ಕೆ ಸಮರ್ಥವಾಗಿವೆ! ಹುಚ್ಚಾ, ಜಗದೊಳಗಿನ ಸರ್ವ ಸ್ವಾಸ್ಥ್ಯಕರ ವಾದ ಹವೆಯ ಮಿಶ್ರಣವು ನಿನ್ನ ಭೂಮಿಯಲ್ಲಿ ಇರುತ್ತದೆ. ಜಗದೊಳಗಿನ ಸರ್ವ ವನಸ್ಪತಿಗಳನ್ನು ಪ್ರಸವಣಮಾಡುವ ಸಾಮರ್ಥ್ಯವು ನಿನ್ನ ಭೂಮಿಯಲ್ಲಿಯದೆ. ಪ್ರತಿ ಯೊಂದು ಧಾತುಗಳು ನಿನ್ನ ಜನ್ಮಭೂಮಿಯ ಗರ್ಭದಲ್ಲಿ ಸಮಾವೇಶವಾಗಿವೆ. ಹೀಗಿದ್ದು ನೀನು ದರಿದ್ರನಾಗಿರುವಿ, ಭಿಕ್ಷುಕನಾಗಿರುವಿ, ಎಲ್ಲ ಜಗತ್ತಿನಲ್ಲಿ ನಿನಗೆ ತಿರಸ್ಕಾರ ! ನಿನಗೆ ಧಿಕ್‌ಧಿಕ್ !! ಬೇಕಾದ ಧಾನ್ಯಗಳು ನಿನ್ನ ದೇಶದಲ್ಲಿ ಬೆಳೆಯುತ್ತಿರುವಾಗ ನಿನ್ನ ಹೊಟ್ಟೆಯು ಬರಿದಾದದ್ದಿರಬೇಕೇ? ಹುಚ್ಚಾ, ಏಳು, ಎಚ್ಚರಾಗು. ಪ್ರಯತ್ನ ಮಾಡು; ಅಂದರೆ ಮರಳಿ ನೀನು ಉನ್ನ ತಾ ಶಿಖರವನ್ನೇರುವಿ. ಯಾರಾದರೂ ಬಂದು ನನಗೆ ಜಾಗೃತ ಮಾಡಿಯಾರು, ಯಾರಾದರೂ ನನಗೆ ಮಾರ್ಗವನ್ನು ತೋರಿಸಿಯಾರು; ಎಂಬ ಭ್ರಾಮಕ ಕಲ್ಪನೆಯಿಂದ ನೀನು ಮಲಗಬೇಡ. ನಿನ್ನ ಮಾರ್ಗವನ್ನು ನೀನೇ ಶೋಧಿಸಲಿಕ್ಕೆ ಬೇಕು. ಪ್ರಯತ್ನ ಮಾಡಿ ಫಲವನ್ನು ಹೊಂದು. ಬೇಕಾದರೆ ಆ ಮೇಲೆ ಆತ್ಮ ತ್ಯಾಗಮಾಡು, ಮಾತ್ರ ನಿರುದ್ಯೋಗಿಯ, ಆಲಸ್ವಿಯೂ ಆಗಿ ಆತ್ಮನಾಶವನ್ನು ಮಾಡಿಕೊಳ್ಳಬೇಡ ! ” ಎಂದನು. ಆ ವೇಳೆಯಲ್ಲಿ ವಿನಾಯಕನು ಪರ್ವತದ ಮೇಲೆ ಹೋಗಿ ಕುಳಿತಿದ್ದುದರಿಂದ ಅವನಿಗೆ ತನ್ನ ಮಾತೃಭ ಮಿಯ ಅನಂತಸ್ವರೂಪವು ಕಂಡಹಾಗೆ ಅವನ ಅಂತಃಕರಣದಲ್ಲಿ ಅವಳ ವಿಷಯವಾಗಿ ಅನಂತ ವಿಚಾರಗಳು ಬರಹತ್ತಿದವು. ಮೇಲಿಂದ ಮನೋಹರವಾಗಿ ಕಾಣಿಸತಕ್ಕ ಭೂಮಿಯನ್ನು ನೋಡಿ ಅವನ ಹೃದಯವು ಒಮ್ಮೆ ದುಃಖದಿಂದ ತುಂಬಿಬರುತ್ತಿದ್ದಿತು; ಒಮ್ಮೆ ಕಣ್ಣುಗಳಿಂದ ಅಶ್ರುಬಿಂದುಗಳು ದಳ ದಳ ಸುರಿಯುತ್ತಿದ್ದವು. ವಿನಾಯಕನು ಕಳಿತ ಆ ವೇಳೆಯು ಬಹಳೇ ಚಿತ್ತಾಕರ್ಷಕವಾಗಿದ್ದಿತು. ಭಗವಾನ್ ಸೂರ್ಯನಾರಾಯಣನು ಪತ್ತೆ ಮಾಂಬುಧಿಯಲ್ಲಿ ಧುಮುಕುವ ವೇಳೆಯಾದದ್ದರಿಂದ ಅವನು ಒಂದು ಅರಣ್ಯದ ಹಿಂದಿನ ಭಾಗದಿಂದ ಅಸ್ಕಾಚಲದ ಕಡೆಗೆ ಸಾಗಿದ್ದನು. ಪರ್ವತದ ಮೇಲೆ ವಿಸ್ತಾರಗೊಂಡ ಸೂರ್ಯಕಿರಣಗಳಿಂದ ಪರ್ವತಕ್ಕೆ ಒಂದು ತರದ ಭವ್ಯ ಸ್ವರೂಪವು ಪ್ರಾಪ್ತವಾಗಿದ್ದಿತು. ಮೇಯುವದಕ್ಕಾಗಿ ಮೇಲಕ್ಕೆ ಹೋಗಿದ್ದ ದನಗಳ ಹಿಂಡು ಮೆಲ್ಲಮೆಲ್ಲನೆ ಕೆಳಗಿಳಿಯ ತಿದ್ದಿತು. ಆ ಹಿಂಡಿನ ಹಿಂದೆ ದನಕಾಯುವವರು ಲಾವಣೋಪದಗಳನ್ನು ಹೇಳುತ್ತ ನಡೆದಿದ್ದರು. ಕಾಕುಳ್ಳನ್ನು ಆರಿಸಲಿಕ್ಕೆ ಬಂದ ಬಡ ಒಕ್ಕಲಿಗರ ಹೆಂಗಸರು ತಲೆಯ ಮೇಲೆ ಕುಳ್ಳಿನ ಬುಟ್ಟಿಯನ್ನು ಹೊತ್ತುಕೊಂಡು ಮೆಲ್ಲಮೆಲ್ಲನೆ ಇಳಿಯುತ್ತಿದ್ದರು. ದೂರ
೭೧----------------------------------------- ೫ನೆಯ ಪ್ರಕರಣವನದೇವತೆ ! .
ದಲ್ಲಿ ಹೆಗಲಿನ ಮೇಲೆ ಒಕ್ಕಲತನದ ಹಗ್ಗ ಹುರಿಗಳನ್ನು ಹಾಕಿಕೊಂಡು ಮನೆಯ ಕಡೆಗೆ ಹೋಗುವ ಒಕ್ಕಲಿಗರು ಕಾಣಿಸುತ್ತಿದ್ದರು. ಆರ್ಯಭೂಮಿಯ ಈ ದೀನ ಕೂಸುಗಳ ದರ್ಶನವು ಒಮ್ಮೆಲೇ ಆದದ್ದರಿಂದ ವಿನಾಯಕನು ಚಿತ್ರದಂತ ತಟಸ ನಾದನು. ಮತ್ತು ಅವನು ಏಕಾಗ್ರದೃಷ್ಟಿಯಿಂದ ಅದೃಷ್ಟವನ್ನು ನೋಡಹತ್ತಿದನು. ಇತರರ ದೃಷ್ಟಿಯಿಂದ ಆ ದೃಷ್ಯವು ಮಹತ್ವವಾಗಿ ತೋರುತ್ತಿದ್ದಿತೋ ಇಲ್ಲೊ; ಆದರೆ ಅವನಿಗೆ ಮಾತ್ರ ಆ ತನ್ನ ಶ್ರಮಸಹಿಷ್ಣು ಬಂಧು-ಭಗಿನಿಗಳ ವಿಷಯವು ಮಹತ್ವ ವಾಗಿ ತೋರಿತು. ಅವನು ಒಳ್ಳೆ ಜಿಜ್ಞಾಸೆಯಿಂದ ಆ ಕಡೆಗೆ ನೋಡುತ್ತಿದ್ದನು. ಸೂರ್ಯನು ಮುಳುಗಿ ಕತ್ತಲೆಯಾದೀತೆಂಬದರ ಕಡೆಗೂ, ಅನಂತರ ತಾನು ಹೋಗು ವದಕ್ಕೆ ಬಹಳ ಕಠಿಣವಾದೀತೆಂಬದರ ಕಡೆಗೂ ಅವನ ಸ್ನೇಲ್ಲಾದರೂ ಲಕ್ಷವಿದ್ದಿಲ್ಲ. ಅವನು ಹೀಗೆ ತನ್ನಯ ಸ್ಥಿತಿಯಲ್ಲಿರುವಾಗ ಯಾವಳೋ ಒಬ್ಬಳು • ವಿನಾಯಕ ರಾಯ ' ಎಂಬದಾಗಿ ಕರೆದಂತೆ ಅವನಿಗೆ ಭಾಸವಾಯಿತು. ಕೂಡಲೆ ಅವನು ಜಾಗೃತ ನಾಗಿ ಆಶ್ಚರ್ಯದಿಂದ ಹಿಂದಕ್ಕೆ ತಿರುಗಿ ನೋಡುತ್ತಾನೆ. ಹಸುರು ಬಣ್ಣದ ತೆಳ್ಳನ್ನ ಸೀರೆಯನ್ನು ಉಟ್ಟು ಕೊಂಡಿದ್ದ ಅತ್ಯಂತ ಸುಂದರಳಾದ ಹದಿನಾರು-ಹದಿನೇಳು ವರ್ಷದ ಒಬ್ಬ ಸ್ತ್ರೀಯು ನಿಂತಿದ್ದಾಳೆ.! ವಿನಾಯಕನು ಆ ಸ್ತ್ರೀಯ ಕಡೆಗೆ ಆಶ್ಚರ್ಯದಿಂದ ನೋಡಹತ್ತಿದ ಕೂಡಲೆ ಆ ಸ್ತ್ರೀಯು ಮುಗುಳುನಗೆಯಿಂದ:-ತಮಗೆ ನನ್ನ ಗುರ್ತು ಸಿಕ್ಕಿಲ್ಲೆಂದು ಕಾಣಿಸುತ್ತದೆ ? ” ಎನ್ನಲು ವಿನಾಯಕನು:- ನಿಮ್ಮ ಗುರ್ತು ನನಗೆ ಹತ್ತದಿದ್ದರೆ ನಿಮ್ಮ ಕಡೆಗೆ ನಾನು ಇಷ್ಟು ಆಶ್ಚರ್ಯದಿಂದ ನೋಡುತ್ತಿದ್ದಿಲ್ಲ. ನಿಮ್ಮ ಗುರ್ತನ್ನು ನಾನು ಎಂದೂ ಮರೆಯುವಂತಿಲ್ಲ. ನಿಮ್ಮ ದಯದಿಂದಲೇ ನಿಮ್ಮ ಜನನಕಾರಾಗೃಹದಿಂದ ಬಿಡುಗಡೆಯಾದೆನು. ನಿಮ್ಮ ಹೆಸರು ಇಂದಿರೆಯಲ್ಲವೇ ? ಶಾಮರಾಯನೂ, ಅವನ ಸ್ನೇಹಿತರೂ ಕುಶಲದಿಂದಿರುತ್ತಾರಷ್ಟೆ? ” ಎಂದನು.
ವಿನಾಯಕನ ಹಿಂದೆ ಬಂದ ಸ್ತ್ರೀಯ ಹೆಸರು ಇಂದಿರೆಯು ನಿಜ. ಅವಳ ಗುರ್ತು ನಮ್ಮ ವಾಚಕರಿಗೆ ಈ ಪೂರ್ವದಲ್ಲಿಯೇ ಆಗಿಹೋಗಿದೆ. ಅವಳು ಇಂಥ ಅಕಾಲದಲ್ಲಿ, ಇಂಥ ನಿರ್ಜನಸ್ಥಳದಲ್ಲಿ ಒಮ್ಮೆಲೆ ಬಂದದ್ದನ್ನು ನೋಡಿ ವಿನಾಯಕನಿಗೆ ಆಶ್ಚರ್ಯ ವಾದದ್ದು ಸಾಹಜಿಕವಾಗಿದೆ. ವಿನಾಯಕನ ಆ ಪ್ರಶ್ನವನ್ನು ಕೇಳಿ ಇಂದಿರೆಯ ಮುಖ ಮಂಡಲದ ಮೇಲೆ ಸ್ವಲ್ಪ ಉದಾಸೀನತೆಯ ಲಕ್ಷಣವು ಕಾಣಿಸಿತು. ಅವಳು ಸ್ವಲ್ಪ ಖೇದಕಾರಕಸ್ವರದಿಂದ:- ತಂದೆಯ ಕುಶಲವು ತಮ್ಮ ಸ್ವಾಧೀನದಲ್ಲಿಯದೆ. ತಾವು ಕೃಪೆಮಾಡಿದರೆ ಅವನಿಗೆ ಸ್ವಲ್ಪ ಸ್ವಸ್ಥತೆಯು ಪ್ರಾಪ್ತವಾದೀತು; ಇಲ್ಲವಾದರೆ ಪೋಲೀ ಸರ ಇರುಕಿನಿಂದ ಬದುಕುವದೇ ಕಠಿಣವಾಗಿದೆ. ತಾವು ಪೋಲೀಸರ ಕಡೆಗೆ ಫಿರ್ಯಾ ದಿಯನ್ನು ಮಾಡಿದಂದಿನಿಂದ ನಮ್ಮ ಮನೆಯವರೆಲ್ಲರೂ ಕಾರಾಗೃಹದಲ್ಲಿಯೇ ಇರ ಬೇಕಾಗಿದೆ. ಕಡೆಗೆ ಬೇಸತ್ತು ತಂದೆಯು ನನ್ನನ್ನು ಕರಕೊಂಡು ತಮಗೆ ಕ್ಷಮೆ ಬೇಡುವದರ ಸಲುವಾಗಿ ಇಲ್ಲಿಗೆ ಬಂದನು. ಆದರೆ ಅವನಿಗೆ ಸ್ವತಃ ಭೆಟ್ಟಿಯಾಗಲಿಕ್ಕೆ
೭೨------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ನಾಚಿಕೆಯೆನಿಸಿದ್ದರಿಂದ ಅವನ ಬದಲು ನಾನೊಬ್ಬಳೇ ಭೆಟ್ಟಿಗೆ ಬರಬೇಕೆಂದು ನಿಶ್ಚಯ ವಾಯಿತು. ಇಂದು ನಾಲ್ಕು ಹೊಡೆಯುವ ಸುಮಾರಕ್ಕೆ ನಾನು ತಮ್ಮ ಕಾರಖಾನೆಯ ಕಡೆಗೆ ಹೋಗುತ್ತಿದ್ದೆನು; ಆದರೆ ದೂರದಿಂದಲೇ ತಾವು ಪರ್ವತದ ಮೇಲೆ ಏರಿ ಹೋಗುವದು ಕಾಣಿಸಿದ್ದರಿಂದ ನಾನು ಕಾರಖಾನೆಗೆ ಹೋಗುವ ದಾರಿಯನ್ನು ಬಿಟ್ಟು, ಪರ್ವತದ ಮಾರ್ಗವನ್ನು ಹಿಡಿದು ಬಂದು ತಮ್ಮ ಭೆಟ್ಟಿಯನ್ನು ತಕ್ಕೊಂಡೆನು. ” ಎಂದಳು. ಆಗ ವಿನಾಯಕನು ಸ್ವಲ್ಪ ಹೊತ್ತು ಸುಮ್ಮನಿದ್ದು:-( ನಾನು ಕೂಡಲೆ ಫಿರ್ಯಾದಿಯನ್ನು ತೆಗೆದುಹಾಕುವ ಪ್ರಯತ್ನ ಮಾಡುತ್ತೇನೆ ಆದರೆ ನಿಮ್ಮ ತಂದೆಯು ಬಹಳ ಕೆಟ್ಟ ಕೆಲಸ ಮಾಡಿರುವನೆಂದು ಪೋಲೀಸರಿಗೆ ಗೊತ್ತಿರುವದರಿಂದ ನಾನು ಫಿರ್ಯಾದಿಯನ್ನು ಹಿಂದಕ್ಕೆ ತಕ್ಕೊಂಡರೂ ಪೋಲೀಸರಿಗೆ ನಿಮ್ಮ ತಂದೆಯ ಸಂಬಂಧ ವಾದ ಸಿಟ್ಟು ಕಡಿಮೆಯಾಗಲಿಕ್ಕಿಲ್ಲ. ಏನೇ ಆಗಲಿ, ನಾನು ಫಿರ್ಯಾದಿಯನ್ನು ತೆಗೆದು ಹಾಕುವ ಪ್ರಯತ್ನ ಮಾಡುತ್ತೇನೆ; ಆದರೆ ಇಂಥ ಕೆಲಸವನ್ನು ಇನ್ನೆಂದೂ ಮಾಡುವ ದಿಲ್ಲೆಂದು ಅವರು ಒಪ್ಪಿರುವರೇ ? )
ಇಂದಿರೆಯು ಸ್ವಲ್ಪ ಹೊತ್ತು ಸುಮ್ಮನಿದ್ದು:- ಒಪ್ಪಿಗೆಯ ಬಗ್ಗೆ ಆತನು ನನಗೆ ಹೇಳಿಲ್ಲ. ಅವರು ನಿಜವಾಗಿ ನುಡಿದಂತೆ ನಡೆದರೆಂದು ನನಗೆ ತೋರುವದಿಲ್ಲ. ಮನುಷ್ಯನ ಪ್ರತ್ಯೇಕ ರೋಗಕ್ಕೆ ಔಷಧವಿರುತ್ತದೆ; ಆದರೆ ಸ್ವಭಾವಕ್ಕೆ ಔಷಧವಿರುವ ದಿಲ್ಲ. ಅದಕ್ಕಾಗಿಯೇ ಕ್ಷಮೆ ಬೇಡಲಿಕ್ಕೆ ಬರುವದು ಅತ್ಯಂತ ಲಜ್ಞಾರ್ಹ ವಿಷಯ ವಾಗಿದೆ; ಆದರೆ ಏನು ಮಾಡಬೇಕು, ಎಷ್ಟೆಂದರೂ ಆತನು ನನ್ನ ಜನ್ಮದಾತ ತಂದೆಯು, ಅದರಿಂದ ಮನಸ್ಸು ಕಳವಳಗೊಳ್ಳುತ್ತದೆ.”
ವಿನಾಯಕ:- ( ನೀವು ನಿಮ್ಮ ತಂದೆಯ ಸಲುವಾಗಿ ಕ್ಷಮೆ ಬೇಡಲಿಕ್ಕೆ ಬಂದದ್ದು ಅನುಚಿತವಿಷಯವಲ್ಲ. ಅಂತಃಕರಣದಲ್ಲಿ ಅನುತಾಪವು ಹುಟ್ಟಿದ ಹೊರ್ತು ಕ್ಷಮೆ ಬೇಡುವ ಇಚ್ಛೆಯಾಗುವದಿಲ್ಲ. ಇದರ ಮೇಲಿಂದ ಶಾಮರಾಯನು ಮುಂದೆ ಒಳ್ಳೇರೀತಿಯಿಂದ ನಡೆದಾನೆಂದು ಊಹಿಸಲಿಕ್ಕೆ ಬರುತ್ತದೆ. ಅದು ಹೇಗೇ ಇರಲಿ. ನಿಮ್ಮ ಸಲುವಾಗಿ ನನ್ನದೊಂದು ವಿನಂತಿಯದೆ. ಅದನ್ನು ನೀವು ಪಾಲಿಸಲಿಕ್ಕೆ ಬೇಕು. ಒಳಗಡೆ ನನಗೆ, ನೀವು ಒಬ್ಬ ಸದ್ಗುಣಸಂಪನ್ನ ತರುಣನೊಡನೆ ಲಗ್ನ ವಾಗುತ್ತೇನೆಂದು ಹೇಳಿದ್ದಿರಿ. ಈಗಲೂ ಅವನ ಸಂಗಡ ಲಗ್ನ ವಾಗದಿದ್ದರೆ ಅಬಗ್ಗೆ ಈಗ ಹೆಚ್ಚು ಪ್ರಯತ್ನ ಮಾಡಲಿಕ್ಕೆ ಬೇಕು, ಹೆಸರು ಹೇಳಿದರೆ ಅಬಗ್ಗೆ ನಾನೂ ಪ್ರಯತ್ನ ಮಾಡುವೆನು.”
- ಇಂದಿರೆ:- ( ವಿನಾಯಕನನ್ನು ಒಂದು ಬಾರೆ ಕಡೆಗಣ್ಣಿನಿಂದ ನೋಡಿ ) ನಾನೂ ಅದೇ ಪ್ರಯತ್ನದಲ್ಲಿದ್ದೇನೆ; ಆದರೆ ಕಾರ್ಯವಾದಾಗಲೇ ಖರೆ. ಒಳ್ಳೇದು, ನಾನು ಹೋಗುತ್ತೇನೆ.”
೭೩------------------------------೫ನೆಯ ಪ್ರಕರಣವನದೇವತ!
ಹೀಗನ್ನುತ್ತ ಮತ್ತೊಮ್ಮೆ ವಿನಾಯಕನನ್ನು ನೋಡಿ ಹಿಂದಕ್ಕೆ ತಿರುಗಿದಳು. ಆಗ ವಿನಾಯಕನು “ ನಿಲ್ಲಿರಿ. ಇಂಥ ಸಂಜೆಯ ವೇಳೆಯಲ್ಲಿ ನೀವು ಈ ಅಡವಿಯಲ್ಲಿ ಎತ್ತ ಹೋಗುವಿರಿ? ಕೆಳಗೆ ಕಾರಖಾನೆಗೆ ನಡೆಯಿರಿ. ಊಟಮಾಡಿ ರಾತ್ರಿ ಅಲ್ಲಿಯೇ ಇದ್ದು ಪ್ರಾತಃಕಾಲದಲ್ಲಿ ಹೋದರಾಯಿತು. ಹೇಗೂ ಶಾಮರಾಯನು ಇಲ್ಲಿಯೇ ಹತ್ತರದಲ್ಲಿ ಇರುತ್ತಾನೆಂದು ನೀವು ಹೇಳಿದಿರಿ. ಆತನನ್ನು ಕರಕೊಂಡು ಬರುವದರ ಸಲುವಾಗಿ ಮನುಷ್ಯನನ್ನು ಕಳಿಸುತ್ತೇನೆ. ನೀವು ಆಬಗ್ಗೆ ಸ್ವಲ್ಪಾದರೂ ಚಿಂತೆಮಾಡ ಕೂಡದು.” ಎಂದನು. ವಿನಾಯಕನ ಈ ಮಧುರವಚನಗಳನ್ನು ಕೇಳಿ ಇಂದಿರೆಗೆ ಸ್ವಲ್ಪ ಮೋಹವು ಉತ್ಪನ್ನವಾಯಿತು. ವಿನಾಯಕನ ಆಜ್ಞೆಯನ್ನು ಮುರಿಯಬಾರದೆಂದು ಅವಳಿಗೆ ತೋರಹತ್ತಿತು; ಆದರೆ ಅಷ್ಟರಲ್ಲಿ ಮತ್ತೆ ಅವಳ ಮನಸ್ಸು ವಿಪರೀತವಾಯಿತು. ಅಂತಃಕರಣದಲ್ಲಿ ಉತ್ಪನ್ನವಾದ ಮೋಹವನ್ನು ದೂರ ಚಲ್ಲಿಕೊಟ್ಟು ತಿರುಗಿ ಹೋಗು ವದಕ್ಕೆ ಅವಳು ನಿಶ್ಚಯಿಸಿ ನಗುತ್ತ:-( ನನಗೇನೂ ಅಷ್ಟು ಭೀತಿಯಾಗುವದಿಲ್ಲ. ನನ್ನ ತಂದೆಯ ಸಮೀಪದಲ್ಲಿರುತ್ತಾನೆ. ಕಾರಣ ನಾನು ನನ್ನ ತಂದೆಯ ಕಡೆಗೆ ಹೋಗುತ್ತೇನೆ. ” ಎಂದನ್ನು ರೂಪಸ ಹೆಜ್ಜೆ ಹಾಕುತ್ತ ಗಿಡದ ಗುಂಪಿನಲ್ಲಿ ಹೊರಟುಹೋಗಿ ಕಾಣದಂತಾದಳು. ಈ ವೇಳೆಯಲ್ಲಿ ವಿನಾಯಕನ ಅಂತಃಕರಣ ದಲ್ಲಿ ಅನಂತವಿಚಾರಗಳ ತುಮುಲಯುದ್ಧವು ನಡೆದಿದ್ದಿತು. ಇಂದಿರೆಯ ಅದ್ದು ತಚರಿ ತ್ರದ ವಿಚಾರಮಾಡುತ್ತ ಮಾಡುತ್ತ ಅವನು ಮೆಲ್ಲಮೆಲ್ಲನೆ ಒಂದೊಂದು ಹೆಜ್ಜೆ" ಕಿತ್ತು ಹಾಕುತ್ತ ಆ ಪರ್ವತದ ಇಳುಕಲನ್ನು ಇಳಿಯಹತ್ತಿದನು. ಇಂಥ ಸುಂದರ-ಸದ್ದು ಣಿಯ ಜನ್ಮವು ನರರಾಕ್ಷಸನ ಮನೆಯಲ್ಲಿ ಆದದ್ದಕ್ಕೆ ಅವನಿಗೆ ಬಹ: ಖೇದವೆನಿಸಿತು. ಮತ್ತು ಅವನಿಗೆ ಅವಳ ವಿಷಯವಾಗಿ ಸಹಾನುಭೂತಿಯು ತೋರಹತ್ತಿತು. ಯಾವ ತರುಣನೊಡನೆ ಲಗ್ನವು ನಿಶ್ಚಿತವಾಗಿದೆಯೆಂಬುವದನ್ನು ಮೂರು ನಾಲ್ಕು ಸಾರೆ ವಿಚಾ ರಿಸಿದರೂ, ಅವಳು ಯಾಕೆ ಹೇಳಲಿಕ್ಕೆ ಹಿಂಜರಿದಿದ್ದಾಳೆಂಬ ಬಗ್ಗೆ ಅವನಿಗೆ ಒಳ್ಳೆ ದಿಗಿಲು ಬಿದ್ದಿತು. ಆ ವಿಚಾರದಲ್ಲಿಯೇ ಅವನು ತನ್ನ ಕಾರಖಾನೆಯ ಕಡೆಗೆ ಹೋಗ ಹತ್ತಿದನು.
ವಾಚಕರೇ, ಇಂದಿರೆಯು ಪರಸ ಹೆಜ್ಜೆಗಳನ್ನು ಹಾಕುತ್ತ ನಿಜವಾಗಿ ಪರ್ವ ತದಿಂದ ಹೊರಟು ಹೋಗಿರಬಹುದೇ ? ಇಲ್ಲ. ಅಲ್ಲಿಂದ ಅವಳು ಕಣದಂತಾದಳೆಂಬು ವದು ನಿಜ, ಆದರೆ ಅವಳು ಬಹಳ ದೂರ ಹೋಗಿದ್ದಿಲ್ಲ. ಗಿಡದ ಮರೆಗೆ ಹೋಗು ಹೋಗುತ್ತ ಒಂದು ದೊಡ್ಡ ಮರದ ಮರೆಗೆ ನಿಂತುಕೊಂಡು, ಅಲ್ಲಿಂದ ವಿನಾಯಕನ ಕಡೆಗೆ ಏಕಾಗ್ರದೃಷ್ಟಿಯಿಂದ ನೋಡುತ್ತಿದ್ದಳು. ವಿನಾಯಕನು ಎದ್ದು ಪರ್ವತದಿಂದ ಇಳಿಯಹತ್ತಿದ ಕೂಡಲೆ ಇಂದಿರೆಯು ಗಿಡದ ಮರೆಗೆ ಮೆಲ್ಲಮೆಲ್ಲನೆ ಮುಂದಕ್ಕೆ ಸರಿದು ನೀಟವಾಗಿ ನಿಂತು ಅವನನ್ನು ನೋಡಹತ್ತಿದಳು. ನೋಡುನೋಡುತ್ತ ಅವಳು ಒಂದು ಗಿಡಕ್ಕೆ ಆತುಕೊಂಡು ನಿಂತಳು. ಅವಳು ಸುವಾಸಿಕ ಭ್ರಷಗಳನ್ನು
೭೪--------------------------------------------ದಿನ ಸುಂದರಿ ಅಥವಾ ದೀರ್ಘ ಪ್ರಯತ್ನ,
ಹರಿದು ಉಡಿಯಲ್ಲಿ ಹಾಕಿಕೊಂಡು ಬಂದಿದ್ದಳು. ಅವನ್ನು ಈಗ ಬೊಗಸೆಯಲ್ಲಿ ಹಾಕಿ ಕೊಂಡಳು. ಈ ಸಾಯಂಕಾಲದ ವೇಳೆಯಲ್ಲಿ ವನದೇವತೆಯಂತೆ ಕಾಣಿಸುತ್ತಿದ್ದ ಆ ಸುಂದರಿಯಾದ ಇಂದಿರೆಯ ಪ್ರತಿಮೆಯನ್ನು ಕುಶಲಚಿತ್ರಕಾರನು ಒಳ್ಳೆ ಕೌಶಲ್ಯ ದಿಂದ ತೆಗೆಯುತ್ತಿದ್ದನು. ಉದ್ವೇಗಭರದಿಂದ ಇಂದಿರೆಯು ಬರುವಾಗ ಈ ಹೂವುಗಳನ್ನು ವಿನಾಯಕರಾಯರಿಗೆ ಕೊಡುವದರ ಸಲುವಾಗಿ ತಂದಿದ್ದೆನು; ಆದರೆ ಇಲ್ಲಿಗೆ ಬಂದ ಮೇಲೆ ಏನಾಯಿತೋ ಏನೋ, ಇವುಗಳನ್ನು ಅವರಿಗೆ ಕೊಡಲಿಕ್ಕೆ ಧೈರ್ಯವೇ ಆಗಲಿಲ್ಲ. ವಿನಾಯಕರಾಯ, ನಿನ್ನ ಸಲುವಾಗಿ ತಂದ ಈ ಹೂವುಗ ಳನ್ನು ನಿಮಗೇ ಅರ್ಪಿಸುತ್ತೇನೆ. ” ಎಂದನ್ನು ವಿನಾಯಕನು ಹೋಗುವ ದಿಕ್ಕಿಗೆ ಆ ಹೂವುಗಳನ್ನು ಒಗೆದಳು. ಅನಂತರ ಸ್ವಲ್ಪ ಹೊತ್ತು ಸುಮ್ಮನಿದ್ದು ಅವಳು ದೀರ್ಘ ಶ್ವಾಸಬಿಟ್ಟು ತನ್ನಷ್ಟಕ್ಕೆ ತಾನೇ:-' ಅವರು ನನಗೆ " ನೀನು ಯಾರಸಂಗಡ ಲಗ್ನ ವಾ ಗುವದನ್ನು ನಿಶ್ಚಯಿಸಿರುವಿ ” ಎಂಬದಾಗಿ ಮೂರು ನಾಲ್ಕು ಸಾರೆ ವಿಚಾರಿಸಿದರು. ಆದರೆ ಆ ನನ್ನ ಪ್ರೇಮಮೂರ್ತಿಯ ಹೆಸರನ್ನು ಹೇಳಿದರೆ ಅವರು ಮನಸ್ಸಿಗೆ ಅಸ ಮಾಧಾನ ಮಾಡಿಕೊಂಡಾರೆಂದು ಬಿಟ್ಟೆನು; ಯಾಕಂದರೆ ಆ ಹೆಸರು ವಿನಾಯಕರಾ ಯರ ಹೊರ್ತು ಬೇರೆಯಿದ್ದಿಲ್ಲ. ನನ್ನ ದೇ ತಪ್ಪಾಯಿತು. ಯಾವ ಕಾಲದಲ್ಲಿ ತಂದೆಯ ಕಾರಾಗೃಹದಿಂದ ಅವರ ಬಿಡುಗಡೆಯಾಯಿತೋ, ಅದೇ ಕಾಲದಲ್ಲಿ ಅವರ ಕಡೆ ಯಿಂದ ವಿವಾಹವಚನವನ್ನು ತೆಗೆದುಕೊಂಡಿದ್ದರೆ ಇಂದು ಅದೇ ಮಾತನ್ನು ಅವರಿಗೆ ನಿರ್ಭೀತಮನಸ್ಸಿನಿಂದ ಕೇಳಲಿಕ್ಕೆ ಬರುತ್ತಿದ್ದಿ ತು; ಆದರೆ ಒಬ್ಬರಿಗೆ ಪ್ರತ್ಯಾಶೆಯಿಂದ ಪರೋಪಕಾರ ಮಾಡುವದು ಅನುಚಿತವಾದದ್ದೆಂದು ಆ ವೇಳೆಯಲ್ಲಿ ನಾನು ಹಾಗೆ ಮಾಡಲಿಲ್ಲ. ಈಗ ಏನಾಗುವದೋ ಏನೋ, ಅವರಿಗೆ ವಿಚಾರಿಸುವ ಧೈರ್ಯವೇ ಆಗಲೊಲ್ಲದು. ಸ್ವಲ್ಪ ದಿವಸಗಳ ಪೂರ್ವದಲ್ಲಿ ಒಬ್ಬ ಗೃಹಸ್ಥನೊಡನೆ ತಂದೆಯ ಸಂಭಾ ಷಣವು ನಡೆದಾಗ ಚಿಂತಾಮಣಿರಾಯರ ಪುತ್ರಿ ದಿವಸುಂದರಿಯೊಡನೆ ವಿನಾಯಕ ರಾಯರ ಲಗ್ನ ವಾಗುವದಾಗಿ ಪ್ರಸ್ತಾಪವು ಹೊರಟಿದ್ದಿತು. ನನಗಿಂತ ದಿವ್ಯಸುಂದ ರಿಯು ಸುಂದರಳೂ, ಸುಶೀಲಳೂ ಇರಬಹುದೇ ? ಒಂದು ವೇಳೆ ನಾನು ಅವಳಿಗಿಂತ ಸುಂದರಿಯಿದ್ದರೂ, ಆ ಸೌಂದರ್ಯಕ್ಕೆ ಮನ್ನಿ ಸುವದೆಂತು ? ನಾನು ಸ್ವತಃ ಶರೀರ ಮನಸ್ಸುಗಳಿಂದ ನಿರ್ಮಲಳಿದ್ದೇನೆ, ಮತ್ತು ಇದರಂತೆಯೇ ಯಾವಜೀವ ನಿರ್ಮಲ ಳಾಗಿರುತ್ತೇನೆ; ಆದರೆ ನನ್ನಿ ನಿರ್ಮಲತ್ವವು ವಿನಾಯಕರಾಯರ ಮನಸ್ಸನ್ನು ನನ್ನ ಕಡೆಗೆ ಹೇಗೆ ತಿರುಗಿಸಬೇಕು ? ಮೊದಲೇ ಇವಳು ಶಾಮರಾಯನ ಪುತ್ರಿ, ಅದರಲ್ಲಿ ನೀಲಕಂಠರಾಯನೊಡನೆ ಲಗ್ನವಾಗಿದ್ದಾಳೆ; ಎಂಬ ಕಾರಣಗಳಂತೂ ನನ್ನ ವಿಷಯ ದಲ್ಲಿ ತಿರಸ್ಕಾರ ಮಾಡಲಿಕ್ಕೆ ಸಂಪೂರ್ಣ ಸಮರ್ಥವಿರುತ್ತವೆ. ದೇವಾ, ಈ 'ಇಂದಿರೆಯ ಜನವೆಲ್ಲ ಹೀಗೆಯೇ ಶೂನ್ಯವಾಗಿ ಹೋಗಬೇಕೇ ? ವಿನಾಯಕರಾಯ, ನೀವು ಈ ಇಂದಿರೆಯನ್ನು ಸ್ವೀಕಾರ ಮಾಡಲಿಕ್ಕಿಲ್ಲವೆಂದು ನನಗೆ - ನಂಬಿಗೆಯಿದ್ದುದರಿಂದಲೇ
೭೫-------------------------------೫ನೆಯ ಪ್ರಕರಣವನದೇವತೆ!
ನಾನು ನನ್ನನ್ನು ಸ್ವೀಕರಿಸಿರೆಂದು ನಿಮಗೆ ವಿನಂತಿಯನ್ನು ಮಾಡಿಕೊಂಡಿಲ್ಲ. ವಿನಾಯ ಕರಾಯ, ನೀವು ಇಂದಿರೆಯನ್ನು ಸ್ವೀಕಾರ ಮಾಡದಿದ್ದರೂ, ಈ ಇಂದಿರೆಯು ನಿಮ್ಮ ವಳೇ ಇದ್ದಾಳೆಂಬುವದನ್ನು ಮಾತ್ರ ಪೂರ್ಣ ಧ್ಯಾನದಲ್ಲಿಡಿರಿ. ಇಂದಿರೆಯ ಪ್ರತಿ ಯೊಂದು ಶ್ವಾಸೋಚ್ಛಾಸಗಳು ನಿಮ್ಮ ಮಂಗಲಕಾಮನದ ಸಲುವಾಗಿಯೇ ಬಿಡು ಇವೆ. ನಿಮ್ಮ ವಿಷಯವಾಗಿಯೇ ಮನಸ್ಸಿನಲ್ಲಿ ವಿಚಾರತರಂಗಗಳು ಹುಟ್ಟುವವು. ಪ್ರತ್ಯಕ್ಷವಾಗಿಯೂ, ಅಪ್ರತ್ಯಕ್ಷವಾಗಿಯೂ ನಿಮ್ಮ ಸೇವೆಯನ್ನೇ ಮಾಡುವದು ! ಎರಡು ಶರೀರಗಳು ಕೆಲವು ಧರ್ಮಬಂಧನಗಳಿಂದ ಏಕತ್ರವಾದರೆ ವಿವಾಹವಾಗುತ್ತ ದೆಂಬುವದು ನಿಜವಿದ್ದರೂ, ಎರಡು ಶರೀರಗಳಲ್ಲಿ ಎಷ್ಟೋ ಹರದಾರಿ ದೂರವಿದ್ದರೂ ವಿವಾಹವಾಗುತ್ತದೆಂಬ ಇಂದಿರೆಯ ತಿಳುವಳಿಕೆಯನ್ನು ಇಂದಿರೆಯು ಸ್ಪಷ್ಟ ಮಾಡಿ ತೋರಿಸುವಳು. ಭಕ್ತವತ್ಸಲನಾದ ಶಂಕರಾ, ನನ್ನಿ ಸಂಕಲ್ಪದ ಸಲುವಾಗಿ ನನಗೆ ಮನೋಬಲವನ್ನು ಕೊಡು, ಇಷ್ಟೇ ಈ ದಾಸಿಯು ನಿನಗೆ ವಿನಂತಿಯನ್ನು ಮಾಡು ವಳು. ” ಎಂಬದಾಗಿ ಅನ್ನುತ್ತ ಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಮಂದ ಗತಿಯಿಂದ ಆ ಪರ್ವತಪ್ರದೇಶದಿಂದ ಯಾವ ಕಡೆಗೋ ಹೊರಟುಹೋದಳು.
ಮತ್ತ ನಾಲ್ಕು ತಿಂಗಳು ಹೋದ ಮೇಲೆ ವಿನಾಯಕನ ಕಾರಖಾನೆಯು ವಿಶೇಷ ಉನ್ನತಾವಸ್ಥೆಗೆ ಬಂದಿತು. ಅವನ ಕಾರಖಾನೆಯು ಒಳ್ಳೆ ರೀತಿಯಿಂದ ನಡೆಯುತ್ತ
ದೆಂದು ತಿಳಿದ ಕೂಡಲೆ ಅವನ ಮಿತ್ರ ಮೊದಲಾದವರು ಕಾರಖಾನೆಯನ್ನು ನೋಡ ಲಿಕ್ಕೆ ಬರಹತ್ತಿದರು. ನಡುವೆ ಎರಡು ಸಾರೆ ಯಮುನಾ-ಕೃಷ್ಣರಾಯರು ವಿನಾಯಕ ನಿಗೆ ಭೆಟ್ಟಿಯಾಗಿ ಹೋಗಿದ್ದರು. ಹಾಗೆಯೇ ವಿನಾಯಕನು ಒಂದು ಸಾರೆ ಕೆಲವು ಯಂತ್ರ ಸಾಮಗ್ರಿಗಳನ್ನು ಒಯ್ಯುವದಕ್ಕಾಗಿ ಮುಂಬಯಿಗೆ ಬಂದನು. ವಿನಾಯಕನು ತನ್ನ ಕಾರಖಾನೆಯಲ್ಲಿ ಯಶಸ್ವಿಯಾಗುತ್ತ ಹೋದದ್ದನ್ನು ಕೇಳಿ ಚಿಂತಾಮಣಿ ರಾಯನು ಆಗ ವಿನಾಯಕನಿಗೆ ವಿಶೇಷ ಆದರಸತ್ಕಾರ ಮಾಡಿದನು. ವಿನಾಯಕನ ದರ್ಶನದಿಂದ ದಿವ್ಯ ಸುಂದರಿಗೆ ಬ್ರಹ್ಮಾನಂದವಾಯಿತು. ವಿನಾಯಕನು ಬಂದ ಕೂಡಲೆ ಅವನೊಡನೆ ಏನೇನು ಮಾತಾಡಬೇಕೆಂಬುದನ್ನು ಅವಳು ಮೊದಲೇ ಆಲೋಚಿಸಿ ಇಟ್ಟಿದ್ದಳು. ಆದರೆ ಪ್ರತ್ಯಕ್ಷ ವಿನಾಯಕನ ಭೆಟ್ಟಿಯಾದ ಕೂಡಲೆ ಅವಳಿಗೆ ಮಿತಿ ಮೀರಿ ನಾಚಿಕೆಯಾಯಿತು. ಅವಳ ಬಾಯಿಯಿಂದ ಒಂದು ಶಬ್ದವಾದರೂ ಹೊರಡ ಲಿಲ್ಲ. ಈ ಪೂರ್ವದಲ್ಲಿ ಅವಳು ವಿನಾಯಕನ ಕೂಡ ನಿರ್ಲಜ್ಞೆಯಿಂದ ಮಾತಾಡುತ್ತಿ ದ್ದಳು; ಆದರೆ ಈಗ ಅವಳಿಗೆ ಹಾಗೆ ಮಾತಾಡಲಿಕ್ಕೆ ಬರಲಿಲ್ಲ. ನಾಚುತ್ತ ನಾಚುತ್ತ ಮಾತಾಡುವ, ಕದ್ದು ಕದ್ದು ನೋಡುವದೂ ವಿನಾಯಕನ ಲಕ್ಷದಲ್ಲಿ ಕೂಡಲೆ ಬಂದಿತು. ದಿವ್ಯಸುಂದರಿಯ ವಿಷಯವಾಗಿ ವಿನಾಯಕನು ಇಲ್ಲಿಯವರೆಗೆ ನಿರ್ವಿಕಾರ ನಾಗಿದ್ದನು. ಆದರೆ ಈಗಿನ ಅವಳ ವರ್ತನವು ಅವನಿಗೆ ವಿಲಕ್ಷಣವಾಗಿ ತೋರಿತು. ಮತ್ತು ಅವನ ಅಂತಃಕರಣದಲ್ಲಿ ದಿವ್ಯಸುಂದರಿಯಂಥ ವಿಕಾರಗಳೇ ಉತ್ಪನ್ನ ವಾದವ,
೭೬----------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ಯಾವ ವಿಕಾರದಿಂದ ದಿವ್ಯಸುಂದರಿಯು ವಿನಾಯಕನಿಗೆ ಯಾವದೊಂದು ಪ್ರಶ್ನೆ ಯನ್ನು ಮಾಡುತ್ತಿದ್ದಳೋ, ಅದೇ ವಿಕಾರದಿಂದ ವಿನಾಯಕನು ದಿವ್ಯಸುಂದರಿಗೆ ಉತ್ತರವನ್ನು ಕೊಡಹತ್ತಿದನು. ಈ ಸ್ಥಿತಿಯು ಪರಸ್ಪರರ ಲಕ್ಷದಲ್ಲಿ ಬಂದಕೂಡಲೆ ಇಬ್ಬರಲ್ಲಿಯೂ ಲಜ್ಞಾಯುಕ್ತ ಪ್ರೇಮವೂ, ಶಕ್ಯಾಶ ಕ್ಯತೆಯ ವಿಚಾರವೂ ಉತ್ಪನ್ನ ವಾದವು. ಆ ವಿಚಾರದಿಂದ ಒಮ್ಮೆ ಇಬ್ಬರ ಮುಖಕಮಲಗಳು ನಿರಾಶೆಯಿಂದ ಬತ್ತಿ ದರೆ, ಮತ್ತೊಮ್ಮೆ ಆಶೆಯಿಂದ ವಿಕಾಸವಾಗುತ್ತಿದ್ದವು. ಮುಂಬಯಿಯಿಂದ ರಾಮ ಪುರಕ್ಕೆ ಬರುವಾಗ ವಿನಾಯಕನು ದಿವ್ಯ ಸುಂದರಿಗೆ ಹೋಗಿಬರುತ್ತೇನೆಂದು ಹೇಳಿ ದಾಗಂತೂ ಅವಳ ಕಣ್ಣುಗಳಲ್ಲಿ ಕಣ್ಣೀರುಗಳು ಚಮಕಿಸಿದವು. ಬಾಯಿಯಿಂದ ಶಬ್ದಗಳೇ ಹೊರಡದಂತಾದವು. ರಾಮಪುರಕ್ಕೆ ಬಂದ ಮೇಲೆ ವಿನಾಯಕನಿಗೂ ನಾಲೈದು ದಿವಸ ದಿವ್ಯ ಸುಂದರಿಯ ವಿಷಯವಾಗಿ ಹಳಹಳಿಯಾಯಿತು. ನಂತರ ಕಾರಖಾನೆಯ ಕೆಲಸದಲ್ಲಿ ಅವನ ಮನಸ್ಸು ಮಗ್ಗವಾಗಲು ಅವನಿಗೆ ದಿವ್ಯ ಸುಂದರಿಯ ವಿಸ್ಮರಣವಾಯಿತು. ಅವನ ಸರ್ವ ಶಾರೀರಿಕ-ಮಾನಸಿಕ-ಸಾಮರ್ಥಗಳು ಕಾರಖಾ ನೆಯ ಕೆಲಸದಲ್ಲಿಯೇ ಖರ್ಚಾಗಹತ್ತಿದವು.
ವಿನಾಯಕನ ಕಾರಖಾನೆಯು ರಾಮಪುರದಲ್ಲಿ ಸ್ಥಾಪಿತವಾಗಿ ಇಂದಿಗೆ ಒಂದೂ ವರಿ ವರ್ಷವಾಯಿತು. ಕಾರಖಾನೆಯು ಒಳ್ಳೆ ಭರಭರಾಟೆಯ ಸ್ಥಿತಿಗೆ ಬಂದಿತು. ಕೆಲವರು ಕೇವಲ ಸಂಪತ್ತಿಕ ತೊಂದರೆಯಿಂದ ಈ ಕಾರಖಾನೆಗೆ ಪ್ರಚಂಡಸ್ವರೂ ಪವು ಬರಲಿಕ್ಕಿಲ್ಲೆಂಬ ಲೇಖವನ್ನೂ, ಕೆಲವರು ಸ್ವಲ್ಪ ಭಾಂಡವಲಿನಿಂದ ವಿನಾಯಕನು ತನ್ನ ಕಾರಖಾನೆಯನ್ನು ಎಷ್ಟು ಉತ್ಕೃಷ್ಟ ರೀತಿಯಿಂದ ನಡಿಸಿರುತ್ತಾನೆಂಬ ಯಥಾ ತಥ್ಯ ಲೇಖವನ್ನೂ ಪ್ರಸಿದ್ದ ವರ್ತಮಾನಪತ್ರಗಳಲ್ಲಿ ಕೊಡಹತ್ತಿದರು. ಈ ಎರಡೂ ತರದ ವರ್ತಮಾನಪತ್ರಗಳನ್ನು ಚಿಂತಾಮಣಿರಾಯನು ಓದುತ್ತಿದ್ದದ್ದರಿಂದ ಅವನ ಮನಸ್ಸಿನಲ್ಲಿ ವಿನಾಯಕನ ವಿಷಯವಾಗಿ ಮೊದಲಿಗಿಂತ ಅಧಿಕವಾದ ಆದರವು ಉತ್ಪ
ವಾಯಿತು. ವಿನಾಯಕನಿಗೆ ಹೆಚ್ಚು ಹಣದ ಸಹಾಯ ಮಾಡಬೇಕೆಂದು ಅವನಿಗೆ ತೋರಹತ್ತಿತು. ಎರಡು ವರ್ಷವಾದ ಕೂಡಲೆ ಈ ಕಾರಖಾನೆಯು ಮತ್ತಿಷ್ಟು ಬೆಳ ವಣಿಗೆಯನ್ನು ಹೊಂದಿತು. ಈ ಕಾರಖಾನೆಯಲ್ಲಿ ಸಿದ್ಧವಾದ ಶುದ್ದ ಕಬ್ಬಿಣ, ತಾಮ್ರ, ಹಿತ್ತಾಳಿಗಳು ಪೇಟೆಯಲ್ಲಿ ಮಾರಹತ್ತಿದವು. ಈ ಕಾರಖಾನೆಯ ವಿಷಯವಾಗಿ ಅನೇಕ ಸದಭಿಪ್ರಾಯಗಳು ಚಿಂತಾಮಣಿರಾಯನ ಕಿವಿಗೆ ಬೀಳಹತ್ತಿದ ಕೂಡಲೆ ಅವನು ಒಮ್ಮೆ ಸ್ವತಃ ವಿನಾಯಕನ ಕಾರಖಾನೆಯನ್ನು ನೋಡಬೇಕೆಂಬ ಉತ್ಸುಕತೆಯುಳ್ಳವ ನಾದನು ರಾಮರಾಯ-ದಿವಸುಂದರಿ-ಮಧುರೆಯರಿಗೂ ಆ ಕಾರಖಾನೆಯನ್ನು ನೋಡ ಬೇಕೆಂಬ ಉತ್ಕಟಾಪೇಕ್ಷೆಯಿದ್ದಿತು. ಆಗ ಸರ್ವಾನುಮತಿಯಿಂದ ರಾಮಪುರಕ್ಕೆ ಹೋಗುವದು ನಿಶ್ಚಿತವಾಯಿತು. ಆ ಪ್ರಕಾರ ಎಲ್ಲ ಜನರು ಹೊರಟುಹೋಗಿ ಮೊದಲು ಹೈದರಾಬಾದವನ್ನು ಸೇರಿದರು, ಹೈದರಾಬಾದಕ್ಕೆ ಬಂದಮೇಲೆ ಚಿಂತಾಮಣಿರಾಯನ
೭೭----------------------------------೫ನೆಯ ಪ್ರಕರಣ- ವನದೇವತೆ !
ಮೈಯಲ್ಲಿ ಸ್ವಲ್ಪ ಅಸ್ವಸ್ಥತೆಯಾದದ್ದರಿಂದ ಅವನು ತಾನು ಹೋಗುವದು ರಹಿತಮಾಡಿ ಮಿಕ್ಕವರನ್ನು ರಾಮಪುರಕ್ಕೆ ಕಳಿಸಿಕೊಟ್ಟನು. ವಿನಾಯಕನಿಗೆ ಈ ಸಂಗತಿಯು ಮೊದಲೇ ತಿಳಿದಿದ್ದಿತು. ಮೊದಲು ಬಸರಾಬಾದದಿಂದ ರಾಮಪುರಕ್ಕೆ ಹೋಗಲಿಕ್ಕೆ ಚಕ್ಕಡಿಯ ಹೊರ್ತು ಬೇರೆ ಸುಲಭತೆಯಿದ್ದಿಲ್ಲ; ಆದರೆ ವಿನಾಯಕನು ಕಾರಖಾನೆಯು ಪ್ರಾರಂಭವಾದ ಕೂಡಲೆ ಸ್ವತಃ ಎರಡು ಕುದುರೆಯ ಗಾಡಿಗಳನ್ನೂ, ಎರಡು ಹತ್ತುವ ಕುದುರೆಗಳನ್ನೂ ಇಟ್ಟಿದ್ದನು, ದಿವ್ಯಸುಂದರಿಯು ತನ್ನ ಕಾರಖಾನೆಯನ್ನು ನೋಡುವ ದಕ್ಕಾಗಿ ಬರುತ್ತಾಳೆಂಬುವದನ್ನು ಕೇಳಿ ಅವನಿಗೆ ಪರಮಾನಂದವಾಯಿತು. ಅವನು ಒಳ್ಳೇ ಉತ್ಸುಕತೆಯಿಂದ ಕುದುರೆಯ ಮೇಲೆ ಕುಳಿತು, ಸಂಗಡ ಕುದುರೆಯ ಗಾಡಿ ಗಳನ್ನು ಕೂಡಿಸಿಕೊಂಡು ಬಸರಾಬಾದಕ್ಕೆ ಬಂದಿದ್ದನು. ರಾಮರಾಯನ ಹಡಗವು ನಾಲ್ಕು ಹೊಡೆಯುವ ಸುಮಾರಕ್ಕೆ ಬರಬೇಕಾಗಿದ್ದಿತು. ಆದರೆ ಹಾದಿಯಲ್ಲಿ ಏನೋ ತೊಂದರೆಯಾದದ್ದರಿಂದ ಹಡಗವು ಸಂಜೆಯ ಆರು ಹೊಡೆಯುವಾಗ ಬಂದಿತು. ಆಗ ವಿನಾಯಕನು ಎಲ್ಲರನ್ನು ಇಳಿಸಿಕೊಂಡು, ಅವರ ಯಥೋಚಿತವಾದ ಆದರಸಾರ ಮಾಡಿ, ಅವರಿಗೆ ಚಹಾ ಮೊದಲಾದ ಉಪಹಾರ ಮಾಡಿಸಿದನು. ಹಡಗವು ನಾಲ್ಕು ಹೊಡೆಯುವಾಗ ಬಂದಿತೆಂದರೆ, ಕೂಡಲೆ ಹೊರಟು ರಾಮಪುರಕ್ಕೆ ಹೋಗಬೇಕೆಂದು ವಿನಾಯಕನ ವಿಚಾರವಿದ್ದಿತು; ಆದರೆ ಬಸರಾಬಾದದಲ್ಲಿಯೇ ಸಂಜೆಯ ಏಳು ಹೊಡ ದದ್ದರಿಂದ ಆಗ ರಾಮಪುರಕ್ಕೆ ಹೋಗಬೇಕೋ, ಹೋಗಬಾರದೋ ಎಂಬ ಬಗ್ಗೆ ವಿನಾಯಕನಿಗೆ ದೊಡ್ಡ ವಿಚಾರವು ಬಿದ್ದಿತು. ರಾತ್ರಿಯ ಕಾಲವಾದರೂ ಬೆಳದಿಂಗಳು ಇರುತ್ತದೆ, ಕುದುರೆಯ ಗಾಡಿಗಳಿರುತ್ತವೆ, ಬಹಳವಾದರೆ ಹೋಗಲಿಕ್ಕೆ ಹತ್ತು ಹೊಡೆ ದೀತು, ಇತ್ಯಾದಿ ಕಾರಣಗಳಿಂದ ರಾಮರಾಯ ಮೊದಲಾದವರು ವಿನಾಯಕನಿಗೆ ಆಗಲೇ ಹೋಗಬೇಕೆಂದು ಹೇಳಿದರು. ಸರ್ವಸಮ್ಮತಿಯಾದ ಮೇಲೆ ವಿನಾಯಕನು ಕುದುರೆಯ ಗಾಡಿಗಳನ್ನು ಸಿದ್ಧ ಮಾಡಲಿಕ್ಕೆ ಹೇಳಿದನು. ಸಿದ್ದವಾಗಿ ಗಾಡಿಗಳ ಮೇಲೆ ಕೂಡುವವರೆಲ್ಲರೂ ಕುಳಿತಮೇಲೆ ಗಾಡಿಗಳು ಹೋಗಹತ್ತಿದವು. ವಿನಾಯಕನ ಓರ್ವ ಮಿತ್ರನು ಕುದುರೆಯ ಮೇಲೆ ಕುಳಿತುಕೊಂಡು ಎಲ್ಲಕ್ಕೂ ಮುಂದೆ ಹೋಗುತ್ತಿದ್ದನು. ಅವನ ಹಿಂದೆ ನವಕರ ಜನರ ಗಾಡಿಯಿದ್ದಿತು. ಈ ಗಾಡಿಯ ಹಿಂದೆ ರಾಮರಾಯ ದಿವ್ಯಸುಂದರಿ-ಮಧುರೆಯರು ಕುಳಿತ ಗಾಡಿಯಿದ್ದು, ಇದರ ಹತ್ತಿರದಲ್ಲಿಯೇ ವಿನಾಯ ಕನು ಹತ್ತಿದ ಕುದುರೆಯಿದ್ದಿತು. ಗಾಡಿಗಳು ವೇಗದಿಂದ ಹೋಗುತ್ತಿದ್ದದ್ದರಿಂದ ಅವು ಗಳ ಖಡಖಡ ಧಡಧಡ ಸಪ್ಪಳವೂ, ಹಾದಿಯಲ್ಲಿ ಹಾರತಕ್ಕ ಧೂಳಿಯೂ, ಭರನೆ ಬೀಸುವ ಗಾಳಿಯೂ, ಹಿಟ್ಟು ಚಲ್ಲಿದಂತೆ ಬಿದ್ದಿದ್ದ ಬೆಳದಿಂಗಳೂ, ಪರ್ವತವೂ ದಿವ್ಯಸುಂದರಿ-ಮಧುರೆಯರಿಗೆ ನವೀನವಾಗಿದ್ದದ್ದರಿಂದ ಅವರಿಗೆ ಆ ಪ್ರವಾಸವು ಒಳ್ಳೇ ವಿನೋದವಾಗಿ ತೋರಹತ್ತಿತು. ಒಮ್ಮೊಮ್ಮೆ ಅರಣ್ಯದೊಳಗಿನ ಕತ್ತಲೆಯನ್ನು ನೋಡಿ ಅವರ ಮನಸ್ಸಿಗೆ ಭೀತಿಯೆನಿಸುತ್ತಿದ್ದಿತು. ಸುಮಾರು ಒಂದೂವರೆ ತಾಸು ಗಾಡಿಗಳು
೭೮---------------------------------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ವೇಗದಿಂದ ಹೋದವು; ಆದರೆ ಮುಂದೆ ಏರುದಾರಿಯಾದದ್ದರಿಂದ ಗಾಡಿಗಳು ಮೆಲ್ಲ ಮೆಲ್ಲನೆ ಹೋಗಹತ್ತಿದವು. ಗಾಡಿಗಳು ಈ ಪ್ರಕಾರ ಏರುದಾರಿಯಲ್ಲಿ ಏರಹತ್ತಿದ ಕೂಡಲೆ ದಿವ್ಯಸುಂದರಿಯ ಮುದ್ರೆಯು ಒಮ್ಮೆಲೆ ಭಯಾಂಕಿತವಾಯಿತು. ಅವಳು ಮಧುರೆಯನ್ನು ಸಮೀಪಕ್ಕೆ ಕರೆದು ಭಯಭೀತಸ್ವರದಿಂದ:- ಮಧುರಕ್ಕೆ, ಅದು ನೋಡು ಭೂತ! ” ಎಂದಳು. ದಿವ್ಯಸುಂದರಿಯ ಪುಕ್ಕ ಸ್ವಭಾವವನ್ನು ನೋಡಿ ರಾಮರಾಯ-ಮಧುರೆಯರು ನಕ್ಕರು. ರಾಮರಾಯನು:- ದಿವ್ಯಸುಂದರಿ, ಸುಮ್ಮನೆ ಭ್ರಮೆಯಿಂದ ಹೆದರಬೇಡ. ಜಗತ್ತಿನಲ್ಲಿ ಭೂತದ ಅಸ್ತಿತ್ವವೇ ಇಲ್ಲವೆಂದು ಈಗಿನ ಎಷ್ಟೋ ವಿದ್ವಾಂಸರ ಅಭಿಪ್ರಾಯವದೆ. ಒಂದು ವೇಳೆ ಇದ್ದರೂ ಇಷ್ಟು ಜನರು ಸಂಗಡವಿರಲು ಹೆದರುವ ಕಾರಣವಿಲ್ಲ. ” ಎನ್ನಲು ದಿವಸುಂದರಿಯು ಗಾಬರಿಯ ಸ್ವರದಿಂದಲೇ:-( ಅಣ್ಣಾ, ನನಗೆ ಭ್ರಮೆಯಿಲ್ಲ. ಅದೇ ನೋಡು. ಆ ಗಿಡದ ಕೆಳಗೆ ಇನ್ನೂ ಬೆಳ್ಳಗೆ ಏನೋ ಕಾಣಿಸುತ್ತದೆ. ” ಎಂದನ್ನಲು ಎಲ್ಲರ ದೃಷ್ಟಿಗಳೂ ಆ ದಿಕ್ಕಿನ ಕಡೆಗೆ ಹೊರಳಿದವು. ಅತ್ತ ಕಡೆಗೆ ನೋಡುತ್ತಿರುವಾಗ ಎಷ್ಟೋ ಜನರು : ಛೇ! ಅಲ್ಲಿ ಯೇನೂ ಇಲ್ಲ. ' ಎಂಬದಾಗಿ ಅಂದು ಹಾಸ್ಯ ಮಾಡಿದರು. ಕೆಲವರು - ಅಲ್ಲಿ ಏನೋ ಕಾಣಿಸುವದು ನಿಜವು; ಆದರೆ ಅದು ಭೂತವು ಮಾತ್ರವಲ್ಲ. ” ಎಂದರು. ಇತರರಂತೆ ವಿನಾಯಕನೂ ಆ ದಿಕ್ಕಿನ ಕಡೆಗೆ ನೋಡುತ್ತಿದ್ದನು. ಆ ದಿಕ್ಕಿನ ಕಡೆಗೆ ಅವನು ತನ್ನ ಕುದುರೆಯನ್ನು ಮುಂದೆ ಸ್ವಲ್ಪ ಹೊಡೆದುಕೊಂಡು ಹೋಗಲಾಗಿ ಗಿಡದ ಕೆಳಗೆ ಬಿಳೇ ಪೋಷಾಕನ್ನು ಹಾಕಿಕೊಂಡ ಒಬ್ಬ ಮನುಷ್ಯನು ನಿಂತಿದ್ದಾನೆಂದು ಅವನಿಗೆ ಸ್ಪಷ್ಟ
ವಾಗಿ ತೋರಹತ್ತಿತು. ಕೆಲ ಹೊತ್ತು ವಿನಾಯಕನು ತಟಸ್ಥನಾಗಿ ನಿಂತಮೇಲೆ ಗಿಡದ ಕೆಳಗಿದ್ದ ಬಿಳೇ ಪೋಷಾಕಿನ ಮೂರ್ತಿಯು ಗಿಡದ ನೆರಳನ್ನು ಬಿಟ್ಟು, ಮಂದ ಹೆಜ್ಜೆ ಯಿಂದ ಮುಂದಕ್ಕೆ ಬಂದು ವಿನಾಯಕನನ್ನು ಉದ್ದೇಶಿಸಿ ಕೈ ಬೀಸಿತು. ಆ ಕೂಡಲೆ ವಿನಾಯಕನು ಆ ದಿಕ್ಕಿನ ಕಡೆಗೆ ಕುದುರೆಯನ್ನು ಓಡಿಸಿದನು. ಕುದುರೆಯು ಆ ದಿಕ್ಕಿಗೆ ಹೋದದ್ದನ್ನು ನೋಡಿ ಸರ್ವರಿಗೂ ಆಶ್ಚರ್ಯವಾಯಿತು. ಕೆಲವರ ಅಂತಃಕರಣದಲ್ಲಿ ಸ್ವಲ್ಪ ಭೀತಿಯೂ ಉತ್ಪನ್ನ ವಾಯಿತು. ವಿನಾಯಕನ ಮಿತ್ರನು ಇಷ್ಟು ಹೊತ್ತು ಕುದು ರೆಯನ್ನು ನಿಲ್ಲಿಸಿಕೊಂಡು ಸುಮ್ಮನೆ ನೋಡುತ್ತಿದ್ದನು; ಆದರೆ ವಿನಾಯಕನೊಬ್ಬನೇ
ಆ ದಿಕ್ಕಿಗೆ ತಿರುಗಿದ್ದನ್ನು ನೋಡಿ, ಅವನೂ ಆ ದಿಕ್ಕಿಗೆ ತನ್ನ ಕುದುರೆಯನ್ನು ಓಡಿಸಿ ದನು. ಕುದುರೆಯು ವೇಗದಿಂದ ಹೋಗಿ ವಿನಾಯಕನ ಕುದುರೆಯನ್ನು ಹಿಂಬಾಲಿ ಸಿತು. ವಿನಾಯಕನು ಆ ಗಿಡದ ಸಮೀಪಕ್ಕೆ ಹೋದ ಕೂಡಲೆ ( ಯಾರು ವಿನಾ ಯಕರಾಯರೇನು ? ” ಎಂಬ ಮಧುರಶಬ್ದವು ಆ ಗಿಡದ ಕೆಳಗೆ ನಿಂತಿದ್ದ ಮೂರ್ತಿಯ ಮುಖದಿಂದ ಹೊರಟಿತು. ವಿನಾಯಕನಿಗೆ ಆ ಧ್ವನಿಯು ಪರಿಚಯವುಳ್ಳದ್ದಿದ್ದುದರಿಂದ ಅವನಿಗೆ ಬಹಳ ಆಶ್ಚರ್ಯವಾಗಿ ಅವನು:- ಯಾರು ಇಂದಿರೆ ? ” ಎಂದನು,
ಗಿಡದ ಕೆಳಗಿನ ಆಕೃತಿ:- ( ಸಣ್ಮತಸ್ವರದಿಂದ ) ಹೌದು ಅವಳೇ, ?”
೭೯---------------------------------------- ೫ನೆಯ ಪ್ರಕರಣ ವನದೇವತೆ!
ವಿನಾ:- ( ಕುದುರೆಯನ್ನು ಇಳಿದು ಇಂದಿರೆಯ ಹತ್ತಿರ ಹೋಗಿ) ನೀವು ಇಂಥ ಭಯಂಕರ ರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಿ? ನಮ್ಮ ಗಾಡಿಯನ್ನು ನೋಡಿ ನಮಗೆ ಕೈ ಬೀಸಿ ಕರೆದ ಕಾರಣವೇನು ? ”
ಇಂದಿರೆ:- ( ಖೇದಕಾರಸ್ವರದಿಂದ ) ವಿನಾಯಕರಾಯ, ಭಯಂಕರ ರಾತ್ರಿಯಾದರೂ ಈಶ್ವರೀದತ್ತ ಧೈರ್ಯದಿಂದ ನಾನು ಕೇವಲ ನಿಮ್ಮ ಪ್ರಾಣ ಉಳಿಸು ವದರ ಸಲುವಾಗಿ ಈ ಅಡವಿಗೆ ಬಂದಿದ್ದೇನೆ. ನನ್ನ ತಂದೆಯನ್ನು ಕ್ಷಮಿಸಿ ನೀವು ಆತನ ಮೇಲಿನ ಫಿರ್ಯಾದಿಯನ್ನು ಹಿಂದಕ್ಕೆ ತಕ್ಕೊಂಡರೂ ಆ ಬಗ್ಗೆ ಅವನು ನಿಮ್ಮ ಉಪಕಾರವನ್ನು ಸ್ವಲ್ಪಾದರೂ ನೆನಿಸದೆ, ಇನ್ನೂ ಮೃತ್ಯು ಪತ್ರದೊಳಗೆ ನಮೂದಿಸಿರುವ ಆಸ್ತಿಯ ಸಲುವಾಗಿ ಬಡಿದಾಡುತ್ತಿರುತ್ತಾನೆ. ಅಷ್ಟರ ಸಲುವಾಗಿ ನನ್ನ ತಂದೆ, ಗೋಪಾಳರಾಯ ಇವರಿಬ್ಬರು ನಿಮ್ಮನ್ನು ಈ ಅಡವಿಯಲ್ಲಿಯೇ ಕೊಲ್ಲುವ ಪ್ರಯತ್ನ ಮಾಡಿದ್ದಾರೆ. ”
ಏನಿದ್ದಿ ತೋ ಏನೋ, ಈ ಕಡೆಯ ಶಬ್ದವನ್ನು ಉಚ್ಚರಿಸುವಾಗ ಇಂದಿರೆಯ ಕಣ್ಣುಗಳಿಂದ ದಳದಳ ಕಣ್ಣೀರುಗಳು ಸುರಿದವು.
ವಿನಾ:- ( ನಡುಗುತ್ತ ) ನೀವು ನಿಮ್ಮ ಪ್ರಾಣದಾಶೆಯನ್ನು ಬಿಟ್ಟು, ತಂದೆಯ ದುಷ್ಕೃತ್ಯವನ್ನು ಹೇಳುವದಕ್ಕಾಗಿ ಇಂಥ ಭಯಂಕರವಾದ ಅರಣ್ಯದಲ್ಲಿ ಬಂದದ್ದ ಕ್ಕಾಗಿ ನಾನು ನಿಮ್ಮ ಉಪಕಾರವನ್ನು ಎಷ್ಟು ಕೊಂಡಾಡಿದರೂ ಸ್ವಲ್ವೇ ಸರಿ. ನಿಮಗೂ, ನನಗೂ ಯಾವ ಋಣಾನುಸಂಬಂಧವದೆಯೋ ಏನೊ, ಪ್ರತ್ಯೇಕ ಸಂಕಟ ದೊಳಗಿಂದ ನಿಮ್ಮಿಂದ ನಾನು ಬದುಕಬೇಕೆಂದು ಪರಮೇಶ್ವರೀ ಸಂಕೇತವಿದ್ದಂತೆ ತೋರುತ್ತದೆ. ನಿಮ್ಮಿ ಉಪಕಾರ-ಋಣದಿಂದ ನಾನು ಮುಕ್ತನಾಗುವದು ಅಶಕ್ಯ
ವಾಗಿದೆ. ”
ಇಂದಿರೆ:-( ನೀವು ನನಗೆ ನಿಷ್ಕಾರಣ ಸ್ತುತಿಸುತ್ತೀರಿ. ನನ್ನ ಕರ್ತವ್ಯ ಕರ್ಮವನ್ನಷ್ಟು ಮಾತ್ರ ನಾನು ಮಾಡಿರುವೆನು. ನನ್ನ ತಂದೆಯ ಕಡೆಯಿಂದ ಮನು ವ್ಯವಧೆಯಾಗಬಾರದೆಂಬ ನನ್ನ ಪ್ರಯತ್ನದಲ್ಲಿ ನನ್ನ ಸ್ವಾರ್ಥವಿಲ್ಲೆಂಬುವ ಹಾಗಿಲ್ಲ.
ಹೇಗೇ ಇರಲಿ, ನೀವು ಮಾತ್ರ ಒಳ್ಳೆ ಜಾಗೃತೆಯಿಂದ ಇರಿ.”
ವಿನಾ:-( ನೀವು ನಿಮ್ಮಿ ಕೃತಿಗೆ ಬೇಕಾದ ಹೆಸರು ಇಡಿರಿ. ನಾನಂತೂ ಈ ಕೃತಿಗೆ ಪರೋಪಕಾರವೆಂದೇ ಹೆಸರಿಡುವೆನು. ನಿಮ್ಮ ತಂದೆಯು ಬೇಕಾದ ಪ್ರಯತ್ನ ದಿಂದ ನನ್ನನ್ನು ಕೊಲ್ಲಲಿ, ಆ ವಿಷಯವಾಗಿ ನನಗೆ ಸ್ವಲ್ಪಾದರೂ ಚಿಂತೆಯಿಲ್ಲ. ಬದು ಕುವದೂ, ಸಾಯುವದೂ ಮನುಷ್ಯನ ಕೈಯೊಳಗಿನ ಆಟವಲ್ಲ. ಅದೆಲ್ಲ ಈಶ್ವರೀ ಸೂತ್ರವಾಗಿರುವದು. ಸಂಪದ-ವಿಪದುಗಳನ್ನು ನಾನು ಆ ದಯಾಘನನ ಸ್ವಾಧೀನ ಮಾಡಿದ್ದೇನೆ. ”
೮೦----------------------------------------೮೧ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಇಂದಿರಿ:- ಹಾಗಾದರೆ ನಾನಿನ್ನು ಸೂಚಿಸಿದರೂ ನೀವು ಹೀಗೆಯೇ ಹೋಗುವಿರಾಯಿತು. ” -
ವಿನಾ:- ಇಲ್ಲ. ಸಂಕಟದ ಸೂಚನೆಯಾಗಿಯೂ ಆ ಸಂಕಟದಿಂದ ಉಳಿ ಯಲಿಕ್ಕೆ ಪ್ರಯತ್ನ ಮಾಡದಿದ್ದರೆ, ಈಶ್ವರನ ಅವಜ್ಞೆ ಮಾಡಿದಂತಾಗುತ್ತದೆ. ಶಾಮ ರಾಯನು ನನ್ನನ್ನು ಕೊಲ್ಲಲಿಕ್ಕೆ ಯಾವ ಪ್ರಯತ್ನ ಮಾಡಿರುವನು ? ”
ಇಂದಿರೆ:-( ಇಂದು ಸ್ವಚ್ಛವಾಗಿ ಬೆಳದಿಂಗಳು ಬಿದ್ದಿರುವದರಿಂದಲೂ, ನೀವು ಕುದುರೆಯ ಮೇಲೆ ಕುಳಿತು ಹೋಗುವದರಿಂದಲೂ ನಮ್ಮ ತಂದೆಗೆ ಸಹಜವಾಗಿ ನಿಮ್ಮ ಗುರ್ತು ಹಿಡಿಯಲಿಕ್ಕೆ ಬರುವಂತಿದೆ. ಈ ಏರುದಾರಿಯನ್ನು ಏರಿಹೋದ ಕೂಡಲೆ ಬಲಭಾಗಕ್ಕೆ ಒಂದು ಸಣ್ಣ ಮರಡಿಯಿರುತ್ತದೆ. ಆ ಮರಡಿಯ ಮೇಲೆ ನನ್ನ ತಂದೆಯೂ, ಗೋಪಾಳರಾಯನೂ ಚಲೋ ಎರಡು ಬಂದೂಕುಗಳನ್ನು ಹಿಡಿದು ಕೊಂಡು ನಿಂತಿದ್ದಾರೆ. ನೀವು ಈ ಹಾದಿಯಲ್ಲಿ ಇಂಥ ವೇಳೆಯಲ್ಲಿಯೇ ಹೋಗುತ್ತೀ ರೆಂಬುವದು ಅವರಿಗೆ ಮೊದಲೇ ತಿಳಿದಂತೆ ಕಾಣಿಸುತ್ತದೆ. ನೀವು ಆ ಮರಡಿಯ ಎದುರ್ಭಾಗಕ್ಕೆ ಹೋದ ಕೂಡಲೆ ನಿಮ್ಮ ಮೇಲೆ ಬಂದೂಕುಗಳ ಪ್ರಯೋಗ ಮಾಡಿ ಅಡವಿಯಲ್ಲಿ ಓಡಿಹೋಗಬೇಕೆಂದು ಅವರು ಆಲೋಚಿಸಿದ್ದಾರೆ. ಅವರ ಈ ದುರಾ ಲೋಚನೆಯು ನನಗೆ ತಿಳಿದ ಕೂಡಲೆ ತಮ್ಮ ಭೆಟ್ಟಿಯನ್ನು ತಕ್ಕೊಳ್ಳಬೇಕೆಂದು ನಾನು ಈ ರೀತಿ ಪ್ರಯತ್ನ ಮಾಡಿದೆನು, ನೀವು ಈಗ ನಿಮ್ಮ ಪ್ರಾಣರಕ್ಷಣೆಯ ಉಪಾ ಯವನ್ನು ಮಾಡಿರಿ; ಆದರೆ ನನ್ನ ತಂದೆಯ ಜೀವಕ್ಕೆ ಮಾತ್ರ ಅಪಾಯ ಮಾಡಬೇಡಿರಿ. ಅವನಿಗೆ ಯಾವ ತರದ ಶಿಕ್ಷೆಯನ್ನೂ ಮಾಡಬೇಡಿರಿ. ಕೃತಘ್ನ ಸ್ವಭಾವರೋಗಕ್ಕೆ ತಕ್ಕ ಔಷಧವನ್ನು ಕೊಡುವ ಸಾಮರ್ಥ್ಯವು ನನ್ನಲ್ಲಿಲ್ಲ; ಆದರೆ ಆ ಸಾಮರ್ಥ್ಯವು ನಿಮ್ಮಲ್ಲಿದ್ದರೂ ನೀವೇ ಆತನ ಪಾತಕಕ್ಕೆ ಪ್ರತಿಫಲವನ್ನು ಕೊಡಬೇಡಿರಿ. ಆ ತರದ ಪ್ರತಿಫಲದಾಯಕ ಕಾರ್ಯವನ್ನು ಈಶ್ವರನು ಕೈಕೊಂಡೇ ನಿಂತಿರುವನು.”
ಹೀಗನ್ನುತ್ತ ಸುಮ್ಮನೆ ನಿಂತಳು. ವಿನಾಯಕನು ಇಂದಿರೆಯ ಮಾತಿನ ಸಂಬಂಧ ವಿಚಾರಮಾಡಹತ್ತಿದನು. ಶಾಮರಾಯನಿಗೆ ಶಿಕ್ಷೆಯನ್ನು ಮಾಡದೆ, ಜೀವವನ್ನು ಹೇಗೆ ಉಳಿಸಿಕೊಳ್ಳಬೇಕೆಂಬ ಬಗ್ಗೆ ಅವನು ಕೆಲಹೊತ್ತು ಆಲೋಚಿಸಿ ಅನಂತರ ತನ್ನ ಮಿತ್ರ ನಿಗೆ ಕುದುರೆಯ ಮೇಲಿಂದ ಇಳಿದು ಬರಲಿಕ್ಕೆ ಸನ್ನೆ ಮಾಡಿದನು. ಆ ಸನ್ನೆ ಯಿಂದ ವಿನಾಯಕನ ಉದ್ದೇಶವೆಲ್ಲ ಅವನ ಲಕ್ಷದಲ್ಲಿ ಬರಲು ಅವನು ಕುದುರೆಯ ಮೇಲಿಂದ ಇಳಿದು ಅದನ್ನು ಒಂದು ಗಿಡಕ್ಕೆ ಕಟ್ಟಿದನು. ವಿನಾಯಕನೂ ತನ್ನ ಕುದುರೆಯನ್ನು ಗಿಡಕ್ಕೆ ಕಟ್ಟಿದನು. ಆ ಮೇಲೆ ಅವರಿಬ್ಬರು ಸಪ್ಪಳವಾಗದಂತೆ ಹೆಜ್ಜೆಯನ್ನು ಹಾಕುತ್ತ ಅಡವಿಯನ್ನು ಹೊಕ್ಕರು. ಹೋಗುಹೋಗುತ್ತ ಶಾಮರಾಯ ಗೋಪಾಳರು ಕುಳಿತ ಮರಡಿಯು ಅವರಿಗೆ ಸ್ಪಷ್ಟವಾಗಿ ಕಾಣಿಸಹತ್ತಿತು. ಸ್ವಲ್ಪ ದೂರ ಹೋದಮೇಲೆ
೮೧--------------------------------೫ನೆಯ ಪ್ರಕರಣವನದೇವತೆ !
ಅವರಿಗೆ ಶಾಮರಾಯ-ಗೋಪಾಳರಾಯರು ಸ್ಪಷ್ಟವಾಗಿ ಕಾಣಿಸಿದರು. ಮತ್ತಿಷ್ಟು ದೂರ ಹೋದಮೇಲೆ ಅವರಿಗೆ ಆ ಇಬ್ಬರ ಮಾತುಗಳೂ ಸ್ಪಷ್ಟವಾಗಿ ಕೇಳ
ಹತ್ತಿದವು.
ಶಾಮರಾಯ, ಗೋಪಾಳರಾಯ ಇವರು ಹಾದಿಯ ಕಡೆಗಿರುವ ಕಲ್ಲಿನ ಮೇಲೆ ಕುಳಿತುಕೊಂಡಿದ್ದರು. ಅವರಿಬ್ಬರೂ ಮರಡಿಯ ಮೇಲೆ ಇದ್ದ ದರಿಂದ ಅವರಿಗೆ ಹಾದಿ ಯಲ್ಲಿ ಓಡಿಬರತಕ್ಕ ಕುದುರೆಯ ಗಾಡಿಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಇಬ್ಬರೂ ಶಿಪಾಯಿಯರಂತೆ ಪೋಷಾಕು ಹಾಕಿಕೊಂಡು, ಬಂದೂಕು ಬಾರ ಮಾಡಿಕೊಂಡು ಏಕಾಗ್ರದೃಷ್ಟಿಯಿಂದ ಹಾದಿಯ ಕಡೆಗೆ ನೋಡುತ್ತಿದ್ದರು. ಗಾಡಿಗಳು ಓಡುತ್ತ ಬರು ವಾಗ ಒಮ್ಮೆಲೇ ನಿಂತಿದ್ದನ್ನು ನೋಡಿ, ಆ ಇಬ್ಬರ ಅಂತಃಕರಣದಲ್ಲಿ ಅನೇಕ ವಿಚಾರ ಗಳು ಉತ್ಪನ್ನವಾಗಿ ಅವರು ಆ ಸಂಬಂಧವಾಗಿ ಮಾತಾಡುತ್ತಿದ್ದರು.
ಗೋಪಾಳ: ಗಾಡಿಗಳು ಮಧ್ಯದಲ್ಲಿಯೇ ಯಾಕೆ ನಿಂತವು?
ಶಾಮ: ಏನಾದರೂ ಹರಿಮುರಿಯಾಗಿ ನಿಂತಿದ್ದಾವು. ಈಗ ೧೦-೧೫ ಮಿನೀಟಿನಲ್ಲಿ ಇಲ್ಲಿಗೆ ಬಂದಾವು. ಗೋಪಾಳರಾಯ, ನೀಟವಾಗಿ ಗುರಿಯನ್ನು ಮಾತ್ರ ಹೊಡೆ. ಇಲ್ಲವಾದರೆ ಮಾಡಿದ್ದೆಲ್ಲ ಮಸಿನುಂಗಿಹೋದೀತು. ”
ಗೊಪಾಳ:-( ನಾನಂತೂ ನೀಟವಾಗಿ ಹೊಡೆಯುವೆನು. ನೀವೂ ಸರಿ ಯಾಗಿ ನೋಡಿ ಹೊಡೆಯಿರಿ. ಅಂದರೆ ಬಹಳ ಮಾಡಿ ಇಬ್ಬರ ಗುಂಡುಗಳೂ ತಾಕಿ ಯಾವು. ಕಡೆಗೆ ಒಂದಾದರೂ ತಾಕುವದರಲ್ಲಿ ಸಂದೇಹವಿಲ್ಲ. ಶಾಮರಾಯ, ಇಂದು ವಿನಾಯಕನು ನಮ್ಮಿ ಕೃತಿಯಿಂದ ಸತ್ತದ್ದಾದರೆ, ಭಲೆ ! ನಮ್ಮ ಸ್ಥಿತಿಯಲ್ಲಿ ಎಷ್ಟು ಹೆಚ್ಚು ಕಡಿಮೆಯಾಗುವದು ! ! ”
ಶಾಮ:- ( ನಕ್ಕು ) ನೀಲಕಂಠರಾಯನ ಎಲ್ಲ ಆಸ್ತಿಯನ್ನು ಅಪಹರಿಸಲಿಕ್ಕೆ ಅನುವಾಗುತ್ತದೆ. ಅಲ್ಲದೆ ಇದರಿಂದ ದೀನನಾದ ವಸಂತನ ಒಂದು ಕಾರ್ಯವೂ ಆಗು ವದು. ಚಿಂತಾಮಣಿರಾಯನಿಗೆ ದಿವ್ಯಸುಂದರಿಯೆಂಬ ಮಗಳಿದ್ದಾಳೆ; ಅವಳು ಮೊದಲು ವಸಂತನನ್ನು ಪ್ರೀತಿಸುತ್ತಿದ್ದಳು; ಆದರೆ ವಿನಾಯಕನು ದೃಷ್ಟಿಗೆ ಬಿದ್ದಂದಿನಿಂದ ಅವಳು ವಸಂತನನ್ನು ತಿರಸ್ಕರಿಸಿ, ವಿನಾಯಕನೊಡನೆ ಸ್ನೇಹ ಬೆಳೆಸುತ್ತಿದ್ದಾಳೆ. ಒಂದು ವೇಳೆ ವಿನಾಯಕನು ಸತ್ತದ್ದಾದರೆ ಅವಳು ಪುನಃ ವಸಂತನ ಮೇಲೆ ಪ್ರೀತಿಮಾಡಬಹುದು. ಅವಳೊಡನೆ ವಸಂತನ ಲಗ್ನವಾದರೆ ಕೇಳುವದೇನು ? ಚಿಂತಾಮಣಿರಾಯನ ಮಾನ ಖಂಡನೆಯನ್ನು ಅರಗಳಿಗೆಯಲ್ಲಿ ಮಾಡಬಹುದು ! ಒಳ್ಳೇದು, ಅದೇ ನೋಡು-ಗಾಡಿ ಗಳ ಸಪ್ಪಳವಾಗಹತ್ತಿತು. ಲಕ್ಷಗೊಟ್ಟು ನೀಟವಾಗಿ ಕೂಡ್ರು. ”
ಈ ವೇಳೆಯಲ್ಲಿ ಗಾಡಿಗಳ ಸಪ್ಪಳವಾದದ್ದು ನಿಜವಿದ್ದಿತು. ದಿವ್ಯಸುಂದರಿ-ಮಧು ರೆಯರಿಗೆ ವಿಶೇಷವಾಗಿ ನೀರಡಿಕೆಯಾದದ್ದರಿಂದ ಗಾಡಿಹೊಡೆಯುವವರು ಹತ್ತರ
೮೨-----------------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ದಲ್ಲಿಯೇ ಇದ್ದ ಒಂದು ಝರಿಯ ಕಡೆಗೆ ಗಾಡಿಗಳನ್ನು ಹೊಡೆದರು. ಆ ಕೂಡಲೆ ಗೋಪಾಳಶಾಮರಾಯರು ಹಾದಿಯ ಕಡೆಗೇ ನೋಡುತ್ತ ಕುಳಿತರು. ಇಷ್ಟರಲ್ಲಿ ವಿನಾಯಕನು ತನ್ನ ಸ್ನೇಹಿತನೊಡನೆ ತೀರ ಅವರ ಸಮೀಪಕ್ಕೆ ಬಂದಿದ್ದನು. ಈ ಪ್ರಕಾರ ಸಮೀಪಕ್ಕೆ ಬಂದರೂ ಅವರ ಲಕ್ಷವೆಲ್ಲ ಗಾಡಿಗಳ ಕಡೆಗೇ ಇದ್ದದ್ದರಿಂದ, ಅವರಿಗೆ ತಮ್ಮ ಹಿಂದೆ ಯಾರು ಬಂದಿದ್ದಾರೆಂಬುದು ತಿಳಿಯಲಿಲ್ಲ. ವಿನಾಯಕ ಮತ್ತು ಅವನ ಸ್ನೇಹಿತ ಇವರ ಹತ್ತರ ಆಯುಧಗಳೇನೂ ಇದ್ದಿಲ್ಲ. ಅರ್ಥಾತ್ ಅವರಿಗೆ ತಮ್ಮ ಕಾರ್ಯಭಾಗವನ್ನು ಒಳ್ಳೆ ಯುಕ್ತಿಯಿಂದ ಸಾಧಿಸಿಕೊಳ್ಳಬೇಕಾಗಿದ್ದಿತು. ವಿನಾಯಕನು ಆ ಯುಕ್ತಿಯನ್ನು ಯೋಚಿಸಿಯೂ ಇಟ್ಟಿದ್ದನು. ಗೋಪಾಳನ್ನೂ, ಶಾಮರಾಯನೂ ಚಿತ್ರದಂತೆ ಕುಳಿತು ಹಾದಿಯ ಕಡೆಗೆ ನೋಡುತ್ತಿದ್ದದ್ದನ್ನು ಕಂಡು ವಿನಾಯಕನೂ, ಅವನ ಸ್ನೇಹಿತನೂ ಅವರ ಹತ್ಯರ ಅತ್ಯಂತ ತ್ವರೆಯಿಂದ ಹೋಗಿ ಅವರು ಪ್ರತೀಕಾರ ಮಾಡುವಷ್ಟರಲ್ಲಿಯೇ ವಿನಾಯಕನು ಶಾಮರಾಯ-ಗೋಪಾಳರ ಬೆನ್ನು ಗಳ ಮೇಲೆ ಒಂದೊಂದು ಹೊಡತವನ್ನು ಹೊಡೆದು ಕಲ್ಲಿನ ಮೇಲಿಂದ ಅವರನ್ನು ಕೆಳಗೆ ದೂಡಿ ದನು, ಅಕಸ್ಮಾತ್ತಾಗಿ ತಗಲಿದ ವಿಲಕ್ಷಣಪ್ರಹಾರದಿಂದ ಇಬ್ಬರೂ ಬಕ್ಕಬರಲೆ ನೆಲಕ್ಕೆ ಬಿದ್ದರು. ಇಬ್ಬರ ಬಂದೂಕುಗಳು ಮಸಿಯಿಂದ ತುಂಬಿದ್ದವು. ಅವುಗಳಲ್ಲಿ ಗೋಪಾಳನ ಬಂದೂಕು ಹಾರಲಿಲ್ಲ; ಆದರೆ ಶಾಮರಾಯನ ಬಂದೂಕಿನ ಕುದುರೆಗೆ ಆಘಾತವಾಗಿ ಅದು ಕೂಡಲೆ ಹಾರಿದ್ದರಿಂದ, ಗುಂಡು ಶಾಮರಾಯನ ಎಡಗೈಗೆ ತಗಲಿತು. ವಿನಾ ಯಕನು ಕೂಡಲೆ ಅವರಿಬ್ಬರ ಬಂದೂಕುಗಳನ್ನು ಕಸಕೊಂಡು ಅವರನ್ನು ಎಬ್ಬಿಸಿ ಕೂಡ್ರಿಸಿದನು. ಮತ್ತು ಅವರಿಗೆ ಎಲ್ಲೆಲ್ಲಿ ಪೆಟ್ಟು ತಗಲಿರುತ್ತದೆಂದು ವಿಚಾರಿಸಿದನು. ಶಾಮರಾಯನು ವಿನಾಯಕನ ಧ್ವನಿಯನ್ನು ಕೂಡಲೆ ಗುರ್ತು ಹಿಡಿದಿದ್ದನು; ಆದರೂ ಗುಂಡಿನ ಹೊಡತದಿಂದ ಬೋಳೆ ಬಂದದ್ದರಿಂದ ಅವನು “ ಅಯ್ಯೋ ನನ್ನ ಕೈಯೇ? ಎಂದು ಕೈಯನ್ನು ಮೇಲಕ್ಕೆ ಮಾಡಿ ' ಅವ್ವಾ ಅವ್ವಾ, ದೇವಾ ದೇವಾ' ಎಂದು ಕೂಗಿದನು. ಕೂಡಲೆ ವಿನಾಯಕನು ಕಿಸೆಯೊಳಗಿಂದ ಕರವಸ್ತ್ರವನ್ನು ತೆಗೆದು ಶಾಮ ರಾಯನ ಗಾಯಕ್ಕೆ ಚನ್ನಾಗಿ ಕಟ್ಟಿ ಶಾಮರಾಯನನ್ನು ಕುರಿತು:-( ಶಾಮರಾಯ, ನನ್ನನ್ನು ಕೊಲ್ಲಲಿಕ್ಕೆ ಪ್ರಯತ್ನ ಮಾಡಿದ ನಿಮಗೆ ದೇವರೇ ಈ ಸ್ಥಿತಿಯನ್ನು ತಂದಿರು ವನು.” ಎಂಬದಾಗಿ ನುಡಿದನು.
ಈಗ ಶಾಮರಾಯನು ಪೂರ್ಣ ಜಾಗೃತಾವಸ್ಥೆಗೆ ಬಂದಿದ್ದನು; ಆದರೂ ಅವನಿಗೆ ಮರಣಪ್ರಾಯ ಲಜ್ಞೆಯಾದದ್ದರಿಂದ ಅವನು ಮೋರೆ ಕೆಳಗೆ ಮಾಡಿಕೊಂಡು ಸ್ವಸ್ಥ ವಾಗಿ ಕುಳಿತಿದ್ದನು. ಗೋಪಾಳನಂತೂ ಗೊಲ್ಲನೇ ಆಗಿದ್ದನು. ಅವನ ಅರ್ಧಜೀವವೇ ಹೋಗಿದ್ದಿತು. ವಿನಾಯಕನು ಮುಂದೇನು ಮಾಡುತ್ತಾನೆಂಬ ಬಗ್ಗೆ ಅವರಿಬ್ಬರಿಗೆ ಒಳ್ಳೆ ದಿಗಿಲು ಬಿದ್ದಿತು. ಇಬ್ಬರೂ ಏನೂ ಮಾತಾಡದ್ದನ್ನು ನೋಡಿ ವಿನಾಯಕನು
೮೩-----------------------------------------೫ನೆಯ ಪ್ರಕರಣವನದೇವತೆ!
" ಶಾಮರಾಯ, ನೀವು ನನ್ನನ್ನು ಕೊಲ್ಲಲಿಕ್ಕೆ ನಾನು ಮಾಡಿದ ಅಪರಾಧವಾದರೂ ಯಾವದು? ” ಎಂದನು. ವಿನಾಯಕನ ಈ ಪ್ರಶ್ನೆಗೆ ಶಾಮರಾಯನಿಂದ ಏನೂ ಉತ್ತ. ರವು ದೊರೆಯಲಿಲ್ಲ ಆಗ ವಿನಾಯಕನು ಪುನಃ:-ಶಾಮರಾಯ, ನೀವು ಬೇಕಾ ದಷ್ಟು ಪ್ರಯತ್ನ ಮಾಡಿದರೂ ನೀಲಕಂಠರಾಯನ ಒಂದು ಕವಡಿ ಸಹ ನಿಮಗೆ ಸಿಗ ಲಾರದು, ಯಾಕಂದರೆ, ದೇವರ ಇಚ್ಛೆಯು ಹಾಗಿಲ್ಲ. ಸುಮ್ಮನೆ ಇಂಥ ಪಾಪಕೃತ್ಯ ದಿಂದ ಜನೋಪಹಾಸಕ್ಕೆ ಮಾತ್ರ ಪಾತ್ರರಾಗುತ್ತೀರಿ.” ಎಂದನು. ವಿನಾಯಕನ ಈ ಶಬ್ದವನ್ನು ಕೇಳಿ ಶಾಮರಾಯನ ಬಾಯಿಯೊಳಗಿನ ನೀರು ಹೇಳದೆ ಕೇಳದೆ ಓಡಿ ಹೋದವು. ತನ್ನನ್ನು ಹಿಡಿದು ವಿನಾಯಕನು ಪೋಲೀಸರ ಸ್ವಾಧೀನ ಮಾಡಿದರೆ ತನ್ನ ವಿಟಂಬನಕ್ಕೆ ಮೇರೆಯಿಲ್ಲವಾಗುತ್ತದೆಂದು ಆಲೋಚಿಸಿ ಅವನು ಅತ್ಯಂತ ನಮ್ರತೆ ಯಿಂದ ವಿನಾಯಕನನ್ನು ಕುರಿತು:-ವಿನಾಯಕರಾಯ, ಇದೊಂದು ಸಾರೆ ನನ್ನನ್ನು ಕ್ಷಮಿಸಿರಿ. ಈ ಮುಂದೆ ತಿಲಾಂಶವಾದರೂ ನಿಮಗೆ ತ್ರಾಸು ಕೊಡುವದಿಲ್ಲ. ಇದರ ಮೇಲೆಯೂ ಕೊಟ್ಟರೆ ನೀವು ಬೇಕಾದ ಶಿಕ್ಷೆ ಮಾಡಿರಿ,” ಎನ್ನಲು ಆಗ ವಿನಾಯ ಕನು:-< ಶಾಮರಾಯ, ನಿಮಗೆ ಕ್ಷಮಿಸುವದೂ, ವಿಪಾರೀ ಸರ್ಪಕ್ಕೆ ಹಾಲು ಕುಡಿ ಯಲಿಕ್ಕೆ ಹಾಕುವದೂ ಒಂದೇ ಆದರೂ ನಾನು ಈಗ ನಿಮ್ಮ ತಪ್ಪಿಗೆ ಕ್ಷಮಿಸುತ್ತೇನೆ. ನಿಮಗೆ ಹೇಳುವದಿಷ್ಟೆ: ಈ ಮುಂದೆ ನಿಮ್ಮ ಕಲ್ಯಾಣಕ್ಕಾದರೂ ಸನ್ಮಾರ್ಗದಿಂದ ನಡೆ ಯಿರಿ.” ಎಂದನು.
ವಿನಾಯಕನ ಕ್ಷಮಾವಾಕ್ಯವು ಕಿವಿಯಲ್ಲಿ ಬೀಳುತ್ತಲೇ ಶಾಮ-ಗೋಪಾಳರು ಮೆಲ್ಲನೆ ಅರಣ್ಯವನ್ನು ಹೊಕ್ಕು ಓಡಿಹೋದರು. ಅವರು ಹೋದ ಮೇಲೆ ವಿನಾಯ ಕನ್ನೂ, ಅವನ ಸ್ನೇಹಿತನ ಒಂದೊಂದು ಬಂದೂಕು ಹಿಡಿದುಕೊಂಡು, ಬಂದ ಹಾದಿ ಯಿಂದ ಹಿಂದಿರುಗಿ ಬಂದು ಗಿಡದ ಕೆಳಗಿನ ಕುದುರೆಗಳನ್ನು ಬಿಚ್ಚಹತ್ತಿದರು. ಅಷ್ಟ ರಲ್ಲಿ ಇಂದಿರೆಯು ಬಂದು ವಿನಾಯಕನ ಮುಂದೆ ನಿಲ್ಲಲು ವಿನಾಯಕನು:- ನೀವು ಇನ್ನೂ ಇಲ್ಲಿಯೇ ಇರುವಿರೋ? ನೀವು ಹೋಗಿರಬಹುದೆಂದು ಭಾವಿಸಿದ್ದೆನು ! ನಾನು ಶಾಮರಾಯನಿಗೆ ಕ್ಷಮಿಸಿ ಬಂದಿದ್ದೇನೆ. ಮುಖ್ಯವಾಗಿ ಇಂದು ನನ್ನ ಪ್ರಾಣವು ನಿನ್ನಿಂದಲೇ ಉಳಿಯಿತು. ಆ ಸಂಬಂಧವಾಗಿ ನಿಮ್ಮ ಉಪಕಾರವನ್ನು ಹೊಗಳಲಿಕ್ಕೆ ನನ್ನದೊಂದು ನಾಲಿಗೆಯಿಂದಾಗದು. ಈ ಉಪಕಾರ-ಋಣದೊಳಗಿನ ಕೆಲವಂಶವನ್ನಾ ದರೂ ತೀರಿಸಲಿಕ್ಕೆ ನನಗೆ ಯಾವದಾದರೊಂದು ಕೆಲಸವನ್ನು ಹೇಳಿದರೆ, ಅದನ್ನು ನಾನು ಒಳ್ಳೆ ಆನಂದದಿಂದ ಮಾಡುವೆನು.” ಎಂದನ್ನಲು ಇಂದಿರೆಯು ಸ್ವಲ್ಪ ನಕ್ಕು: “ ನೀವು ತೀರ ಅನುಚಿತೋಕ್ತಿಯನ್ನು ಅಡಿದಿರಿ. ನನ್ನ ತಂದೆಯು ನಿಮಗೆ ಅನಂತ ಅಪರಾಧಗಳನ್ನು ಮಾಡಿದರೂ, ನೀವು ಮತ್ತೂ ಆತನನ್ನು ಕ್ಷಮಿಸಿದಿರಿ. ಕಾರಣ ಈ ನಿಮ್ಮ ಮಹದುಪಕಾರದ ಸಲುವಾಗಿ ನಾನು ನಿಮ್ಮ ಆಜನ್ಮ ಋಣಿಯಾಗಿದ್ದೇನೆ.
೮೪-----------------------------------------------------------------ದಿವಸುಂದರಿ ಅಥವಾ ದೀರ್ಘ ಪ್ರಯತ್ನ,
ನಿಮ್ಮ ಕಡೆಗೆ ನನ್ನದೊಂದು ಕೆಲಸವದೆ, ಆದರೆ ಅದನ್ನು ನೀವು ಪಾಲಿಸುತ್ತೀರೋ ಇಲ್ಲೋ ಎಂಬುವದು ಸಂಶಯಾಸ್ಪದವಾಗಿದೆ.” ಎಂದನ್ನಲು ಆಗ ವಿನಾಯಕನು:-( ಅಗತ್ಯವಾಗಿ ಹೇಳಿರಿ. ಶಕ್ತಿಯಿದ್ದಷ್ಟು ಪ್ರಯತ್ನ ಮಾಡುವೆನು.” ಎಂದನ್ನಲು ನಾಚಿಕೆಯೂ ಕೂಡಲೆ ಸುವಿಚಾರವೂ ಹುಟ್ಟಿ ಇಂದಿರೆಯು:-( ಆ ನನ್ನ ಕೆಲಸವನ್ನು ಮುಂದೆ ಎಂದಾದರೂ ನಿಮಗೆ ಹೇಳುವೆನು. ಮೊದಲೇ ನಾನು ಪ್ರಯತ್ನ ಮಾಡಿ ನೋಡುವೆನು. ನನ್ನಿಂದಾ ಗದಿದ್ದರೆ ನಿಮಗೆ ಹೇಳುವೆನು.” ಎಂದಳು. ವಿನಾಯಕನಿಗೆ ಇಂದಿರೆಯ ಈ ಗೂಢ ವಿಚಾರವು ತಿಳಿಯಲಿಲ್ಲ. ಅಲ್ಲದೆ ಅವನ ಲಕ್ಷವಾದರೂ ಆಗ ಹಾದಿಯ ಮೇಲಿರುವ ಗಾಡಿಗಳಕಡೆಗಿದ್ದಿತು. ಆಗ ಅವನು:-( ನೀವು ನಿಮ್ಮ ಇಚ್ಛೆಯಂತೆ ನಿಮ್ಮ ಕೆಲಸದ ಬಗ್ಗೆ ಅಪ್ಪಣೆ ಮಾಡಿದಾಗ ಅದನ್ನು ನಾನು ಶಿರಸಾವಹಿಸಿ ಮಾಡಲಿಕ್ಕೆ ಸಿದ್ಧನಿದ್ದೇನೆ; ಆದರೆ ಇಂಥ ರಾತ್ರಿಯಲ್ಲಿ ನೀವು ಎಲ್ಲಿಗೆ ಹೋಗುವದು? ನಮ್ಮ ಗಾಡಿಯೊಳಗೆ ಕುಳಿತು ನಮ್ಮ ಕಾರಖಾನೆಗೆ ಬರಿ. ಮುಂಜಾನೆ ನೀವು ಹೋಗಬೇಕಾದ ಸ್ಥಳಕ್ಕೆ ಕಳಿಸಿಕೊಡುವೆನು.” ಎನ್ನಲು ಇಂದಿರೆಯು ನಗುತ್ತ:- ನನಗೆ ರಾತ್ರಿಯಲ್ಲಿ ಭೀತಿ ಯಾಗುವದಿಲ್ಲ. ನೀವು ಹೇಗೆ ವಿಪದ-ಸಂಪದಗಳನ್ನು ಈಶ್ವರಸ್ವಾಧೀನಮಾಡಿ ಅವನ ಮೇಲೆ ವಿಶ್ವಾಸವಿಟ್ಟು ನಡೆಯುತ್ತೀರೋ, ಹಾಗೆಯೇ ನಾನೂ ಸರ್ವಭಾರವನ್ನು ಈಶ್ವ ರನ ಮೇಲೆ ಹಾಕಿರುತ್ತೇನೆ. ಆ ದಯಾಘನನೇ ನನ್ನ ಸಂರಕ್ಷಕನಾಗಿರುವನು. ೨ ಎಂದನ್ನು ಅಡವಿಯಲ್ಲಿ ಹೊರಟುಹೋದಳು. ವಿನಾಯಕನೂ, ಅವನ ಸ್ನೇಹಿ ತನೂ ಅವಳ ವಿಷಯವಾಗಿ ಆಶ್ಚರ್ಯಬಡುತ್ತ ಗಾಡಿಗಳ ಹತ್ತಿರ ಬಂದರು. ಅವ ರಿಬ್ಬರು ಬಂದಕೂಡಲೆ ಗಾಡಿಗಳು ಭರದಿಂದ ರಾಮಪುರದ ಮಾರ್ಗವನ್ನು ಆಕ್ರಮಣ ಮಾಡಹತ್ತಿದವು.
=====
೮೫--------------------------------------------------------------- ೬ನೆಯ ಪ್ರಕರಣ.
ದೀ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ !
ರಾಮಪುರದಲ್ಲಿ ರಾಮರಾಯ-ದಿವ್ಯಸುಂದರಿ-ಮಧುರೆಯರು ಹತ್ತು ಹನ್ನೆರಡು ದಿವಸವಿದ್ದರು. ಮೂವರ ಆ ಹತ್ತು ಹನ್ನೆರಡು ದಿವಸ ಗಳು ಒಳ್ಳೆ ವಿನೋದದಿಂದ ಕಳೆದುಹೋದವು. ವಿನಾಯಕನ
ಕಾರಖಾನೆಯು ತೀರ ಸಣ್ಣದಿರಬಹುದಾಗಿ ಅವರ ತಿಳುವಳಿಕೆ ವರ್ಷ ಯಿದ್ದಿತು; ಆದರೆ ಆ ಕಾರಖಾನೆಯ ಪ್ರಚಂಡಸ್ವರೂಪವನ್ನೂ, ಅಲ್ಲಿ ಅನೇಕ ಜನರು ಕೆಲಸಮಾಡುತ್ತಿರುವದನ್ನೂ ನೋಡಿ ಅವರಿಗೆ ಆಶ ರ್ಯವೆನಿ ಸಿತು. ರಾಮರಾಯನು ಈ ಮೊದಲು ಕಾರ್ಯಾರ್ಥ ರಾಮಪುರಕ್ಕೆ ಅನೇಕ ಸಾರೆ ಬಂದವನಾದದ್ದರಿಂದ ಅವನಿಗೆ ರಾಮಪುರದ ಜನರ ದುಸ್ಥಿತಿಯ ಬಗ್ಗೆ ಸಂಪೂರ್ಣ ಪರಿಚಯವಿದ್ದಿತು. ಆದರೆ ಈಗ ವಿನಾಯಕನ ಕಾರಖಾನೆಯು ಸ್ಥಾಪನವಾದಂದಿ ನಿಂದ ಆ ದುಸ್ಥಿತಿಯೆಲ್ಲ ಲೋಪವಾಗಿ ಸುಸ್ಥಿತಿಯು ಪ್ರಾಪ್ತವಾಗಿರುವದನ್ನು ನೋಡಿ ಅವನು ಬಾಯಿಯಲ್ಲಿ ಬೊಟ್ಟು ಕಚ್ಚಿಕೊಂಡನು. ಮತ್ತು ತಾನು ಇಲ್ಲಿಯ ವರೆಗೆ ಜನರ ದೈನ್ಯಾವಸ್ಥೆಯನ್ನು ದೂರಮಾಡದ್ದಕ್ಕಾಗಿ ಮನಸ್ಸಿನಲ್ಲಿ ನೊಂದುಕೊಂಡನು. ನದಿಗಳಿಗೆ ಅಲ್ಲಲ್ಲಿಗೆ ಒಡ್ಡುಗಳನ್ನು ಹಾಕಿಸಿ ಕಾಲವೆಗಳನ್ನು ತೆಗೆಯಿಸಿ, ಸಕಲ ಭೂಮಿಗೂ ನೀರು ಹಾಯುವಂತೆ ಮಾಡಿದ ವಿನಾಯಕನ ಪ್ರಯತ್ನ ವನ್ನು ನೋಡಿ ಯಂತೂ ಅವನ ಕಣ್ಣುಗಳು ಆನಂದಾಶ್ರುಗಳಿಂದ ತುಂಬಿದವು. ಮೊದಲೇ ವಿನಾಯ ಕನ ವಿಷಯವಾಗಿ ಆ ಮೂವರ ಮನಸ್ಸಿನಲ್ಲಿ ಅದರೋತ್ಪನ್ನವಾಗಿದ್ದಿತು; ಆದರೆ ಈಗ ಕೇಳುವದೇನು? ವಿನಾಯಕನ ಸದುದ್ಯಮಶೀಲತ್ವವನ್ನು ಪ್ರತ್ಯಕ್ಷನೋಡಿ ಅವ ರಲ್ಲಿ ಅವನ ಸಂಬಂಧವಾಗಿ ಸಾದರಪೂರ್ವಕವಾದ ಅಭಿಮಾನವು ತಲೆದೋರಿತು. ದಿವ್ಯಸುಂದರಿಯ ಮನಸ್ಸಿನಲ್ಲಿಯಂತೂ ವಿಲಕ್ಷಣವಾದ ಬೇರೊಂದು ಪರಿಣಾಮ ವಾಯಿತು. ಮೊದಲೇ ವಿನಾಯಕನ ಸೌಂದರ್ಯ-ಸದ್ಗುಣಗಳ ರಾಶಿಯನ್ನು ನೋಡಿ ಅವಳು ಅವನ ಮೇಲೆ ಲುಬ್ಬಳಾಗಿದ್ದಳು. ಈಗ ಅವನ ವಿಲಕ್ಷಣ ಕರ್ತೃತ್ವ ಶಕ್ತಿಯನ್ನು ನೋಡಿ ಅವಳು ತನ್ನ ಹೃದಯಸಿಂಹಾಸನದ ಮೇಲೆ ಅವನ ಮೂರ್ತಿಯನ್ನು ವಿರಾಜ ಮಾನಮಾಡಿದಳು. ತನ್ನ ತಂದೆ ಚಿಂತಾಮಣಿರಾಯನು ತನ್ನ ಕಾರ್ಯಕ್ಕೆ ಸಮ್ಮತಿ
೮೬-------------------------------------------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ಗೊಡಲಿಕ್ಕಿಲ್ಲವೆಂದು ಅವಳಿಗೆ ನಂಬಿಗೆಯಿದ್ದರೂ, ಅವಳು ವಿನಾಯಕನೊಡನೇ ಲಗ್ನವಾಗಬೇಕೆಂದು ನಿಶ್ಚಯಿಸಿದಳು. ರಾಮಪುರದಲ್ಲಿ ದಿವ್ಯಸುಂದರಿಯು ಇರುವಾಗ ಅವಳು ತನ್ನ ಕೂಡ ನಡಕೊಂಡ ವರ್ತನದ ಮೇಲಿಂದ ವಿನಾಯಕನ ಮನಸ್ಸಿನಲ್ಲಿ ಯೂ ಅವಳ ಬಗ್ಗೆ ಬೇರೊಂದು ಪರಿಣಾಮವಾಯಿತು. ದಿವ್ಯಸುಂದರಿಯು ತನ್ನ ಮನ ಸ್ಪನ್ನು ಆಕರ್ಷಣಮಾಡಿಕೊಂಡದ್ದರಿಂದಲೋ ಅಥವಾ ಮತ್ತೇನೋ ತನ್ನ ಅಂತಃ ಕರಣದಲ್ಲಿ ದಿವ್ಯಸುಂದರಿಯ ಪ್ರವೇಶವಾಯಿತೆಂದು ಅವನು ಭಾವಿಸಿದನು; ಆದರೂ ದಿವಸುಂದರಿಗಿಂತ ಅವನ ಮನಸ್ಸು ಖಂಬೀರವಾಗಿದ್ದದ್ದರಿಂದ ದಿವ್ಯ ಸುಂದರಿಯು ಮಾತಾಡುವಾಗ ನಾಚುವಂತೆ ಅವನು ನಾಚುತ್ತಿದ್ದಿಲ್ಲ. ಅವನ ಮನಸ್ಸು ನಿರ್ವಿಕಾರ ವಾಗಿದ್ದಿತೆಂದು ಹೇಳಲಿಕ್ಕೆ ಬಾರದಿದ್ದರೂ ಅವನು ತನ್ನ ಮನೋದಯವನ್ನು ಹೊರಗೆ ಯಾರಿಗೂ ತಿಳಿಯಗೊಡಲಿಲ್ಲ. ಹತ್ತು ಹನ್ನೆರಡು ದಿವಸವಾದ ಮೇಲೆ ರಾಮರಾಯನು ಊರಿಗೆ ಹೋಗಲಿಕ್ಕೆ ಹೊರಟನು. ಆಗ ದಿವಸುಂದರಿಯು ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡು ವಿನಾಯಕನ ನಿರೋಸಬೇಡಿದ ಕೂಡಲೆ ನಿರುಪಾಯನಾಗಿ, ಆಗ ಮಾತ್ರ ಅವನು ಕಣ್ಣೀರು ಹಾಕಿದನು. ದಿವ್ಯಸುಂದರಿ ಮೊದಲಾದವರನ್ನು ಕಳಿಸಿ ಕೊಡುವದಕ್ಕಾಗಿ ಅವನು ಬಸರಾಬಾದದ ತನಕ ಹೋಗಿದ್ದನು. ಅಲ್ಲಿಗೆ ಹೋಗಿ ಒಂದು ಸುಂದರವಾದ ಸಣ್ಣ ಬೋಟಿನಲ್ಲಿ ಅವರನ್ನು ಕೂಡ್ರಿಸಿ ಅವನು ಹಿಂದಿರುಗಿ ದನು. ಅವನು ಹಿಂದಕ್ಕೆ ತಿರುಗಿದರೂ, ಬೋಟು ಕಾಣಿಸುವ ತನಕ ಅವನ ದೃಷ್ಟಿ ಯೆಲ್ಲ ಆ ಕಡೆಗೇ ಇದ್ದಿತು. ದಿವ್ಯಸುಂದರಿಯು ದೃಷ್ಟಿಸೀಮೆಯನ್ನು ದಾಟಿಹೋದ ಮೇಲೆ ಅವನೂ ತನ್ನ ದೃಷ್ಟಿಯನ್ನು ಜುಲುಮೆಯಿಂದ ಹಿಂದಕ್ಕೆ ತಕ್ಕೊಂಡು, ಕಟ್ಟಿದ್ದ ಕುದುರೆಯನ್ನು ಬಿಚ್ಚಿ ಅದರ ಮೇಲೆ ಹತ್ತಿಕೊಂಡು, ಇನ್ನು ಓಡಿಸಬೇ ಕೆಂಬುವಷ್ಟರಲ್ಲಿ ಇಂದಿರೆಯು ತನ್ನ ಕಡೆಗೆ ಸಹಾಸ್ಯವದನದಿಂದ ನೋಡುತ್ತಿರುವದು ಅವನ ದೃಷ್ಟಿಗೆ ಬಿದ್ದಿತು. ಈ ತರುಣಿಯು ಹೀಗೆ ಅಕಸ್ಮಾತ್ ಮೇಲಿಂದ ಮೇಲೆ ನನ್ನ ದೃಷ್ಟಿಗೆ ಯಾಕೆ ಬೀಳುತ್ತಿರಬಹುದೆಂಬ ಬಗ್ಗೆ ಅವನ ಮನಸ್ಸಿನಲ್ಲಿ ಒಳ್ಳೆ ವಿಚಾರವು ಹುಟ್ಟಿತು. ಈಗ ಈ ಸಂಬಂಧವಾಗಿ ಅವಳಿಗೆ ಕೇಳಿಯೇ ಬಿಡಬೇಕೆಂದು ಅವನು ಯೋಚಿಸಿ, ಅವಳಿದ್ದ ಕಡೆಗೆ ಕುದುರೆಯನ್ನು ತಿರುವಿದನು; ಆದರೆ ಇಂದಿ ರೆಗೆ ಏನು ತಿಳಿಯಿತೋ ಏನೋ ಯಾರಿಗೆ ಗೊತ್ತು! ತನ್ನ ಕಡೆಗೆ ವಿನಾಯಕನು ಬರುವದನ್ನು ನೋಡಿ ಅವಳು ಕೂಡಲೆ ಬಸರಾಬಾದಗ್ರಾಮದಲ್ಲಿ ಹೊಕ್ಕಳು. ಇದನ್ನು ನೋಡಿ ವಿನಾಯಕನು ಆಶ್ಚರ್ಯಚಕಿತನಾಗಿ, ಆ ಸಂಬಂಧವಾಗಿ ವಿಚಾರಿ ಸುತ್ತ ತಿರುಗಿ ರಾಮಪುರ ಮಾರ್ಗವಾಗಿ ಕುದುರೆಯನ್ನು ಹೊಡೆದು ಕಾರಖಾನೆಗೆ ಬಂದನು.
ಮೇಲೆ ಹೇಳಿದ ಮಾತಿಗೆ ಒಂದು ವರ್ಷವಾದ ಮೇಲೆ ವಿನಾಯಕನ ಕಾರ ಖಾನೆಯು ಮತ್ತಿಷ್ಟು ಮೂರ್ತ ಸ್ವರೂಪವನ್ನು ಹೊಂದಿತು. ಕಾರಖಾನೆಯಲ್ಲಿ ಶುದ್ಧ
೮೭---------------------------------------- ೬ನೆಯ ಪ್ರಕರಣದೀ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ !
ಧಾತುವು ಸಿದ್ದವಾಗಹತ್ತಿದ ಕೂಡಲೆ ವಿನಾಯಕನು ಆ ಧಾತುವಿನ ಅನೇಕ ವಸ್ತುಗ ಳನ್ನು ಮಾಡಲಿಕ್ಕೆ ಪ್ರಾರಂಭಿಸಿದನು. ಅದರಲ್ಲಿಯೂ ಅವನಿಗೆ ಯಶಸ್ಸು ಸಿಗಹತ್ತಿತು. ಈ ಪ್ರಕಾರ ತನ್ನ ಕಾರಖಾನೆಯು ಪ್ರಸಿದ್ದಿಗೆ ಬಂದಕೂಡಲೆ ಅವನ ಮನಸ್ಸಿನಲ್ಲಿ ವ್ಯಾಪಾರದೃಷ್ಟಿಯಿಂದ ಸರಕನ್ನು ತೀವ್ರವಾಗಿ ಸ್ವಲ್ಪ ಖರ್ಚಿನಿಂದ ಪೇಟೆಗೆ ಹೇಗೆ ಕಳಿಸಬೇಕೆಂಬ ಬಗ್ಗೆ ಆಲೋಚನೆಯು ಹುಟ್ಟಿತು. ರಾಮಪುರದಿಂದ ಮಧ್ಯಪ್ರಾಂತ ದೊಳಗಿನ ಚಾಂದಾ ಪಟ್ಟಣದ ತನಕ ಒಂದು ಚಕ್ಕಡಿಯ ಹಾದಿಯಿದ್ದಿತು. ಈ ಹಾದಿಯಲ್ಲಿ ಆಗಗಾಡಿಯ ಮಾರ್ಗವನ್ನು ಮಾಡಬೇಕೆಂದು ವಿನಾಯಕನಿಗೆ ತೋರ ಹತ್ತಿತು. ಆಗ ಅವನು ಅದರ ಪರವಾನಗಿಯ ಸಲುವಾಗಿ ಸರಕಾರದಲ್ಲಿ ಬಹು ಪ್ರಯತ್ನ ಮಾಡಿದನು. ಆದರೆ ಆ ಕೆಲಸದಲ್ಲಿ ಅವನಿಗೆ ಯಶಸ್ಸು ದೊರೆಯಲಿಲ್ಲ. ಬಸರಾಬಾದದಲ್ಲಿ ದೊಡ್ಡ ಬೋಟುಗಳು ನಿಲ್ಲಲಿಕ್ಕೆ ಆಸ್ಪದವಿಲ್ಲದ್ದರಿಂದ ಅಲ್ಲಿಯೂ ಸರಕು ಹೆಚ್ಚು ಒಯ್ಯಲಿಕ್ಕೆ ಅನುಕೂಲವಾಗಲಿಲ್ಲ. ಆಗ ವಿನಾಯಕನು ಬೇಜವಾ ಡದ ಸಮೀಪದಲ್ಲಿ ಗೋದಾವರಿ ನದಿಯ ದಂಡೆಯ ಮೇಲಿರುವ ವಜಿರಾಬಾದದ ತನಕ ಮಾರ್ಗವನ್ನು ಮಾಡಬೇಕೆಂದು ನಿಶ್ಚಯಿಸಿದನು. ಮತ್ತು ಆ ಬಗ್ಗೆ ನಿಜಾಮ ಸರಕಾರದಿಂದ ಪರವಾನಗಿ ದೊರಕಿಸಿದನಲ್ಲದೆ, ಆ ಸರಕಾರದಿಂದ ಮಾರ್ಗಸ್ಥಾಪನೆ ಗಾಗಿ ದುಡ್ಡಿನ ಸಹಾಯವನ್ನೂ ಮಾಡಿಕೊಂಡನು. ಈ ರೀತಿಯಿಂದ ಸಹಾಯವು ಸಿಕ್ಕಮೇಲೆ ವಿನಾಯಕನು ಆ ಕೆಲಸವನ್ನು ಒಳ್ಳೆ ಒತ್ತರದಿಂದ ಮಾಡಿಸಹತ್ತಿದನು. ಹಾದಿಗೆ ಹಾಕತಕ್ಕ ಗಾಡಿಯ ಹಳಿ ಮೊದಲುಮಾಡಿಕೊಂಡು ಗಾಡಿಯ ಡಬ್ಬಿ, ಎಂಜನ ಮೊದಲಾದ ಎಲ್ಲ ಸಾಮಾನುಗಳನ್ನು ತನ್ನ ಕಾರಖಾನೆಯಲ್ಲಿಯೇ ಸಿದ್ದ ಪಡಿಸಿ ದನು, ರಾಮಪುರದಿಂದ ವಜೆರಾಬಾದವು ಹದಿನೆಂಟು ಮೈಲಿದ್ದು, ಆ ರೇಲೈಯನ್ನು ಪ್ರಾರಂಭಿಸಲಿಕ್ಕೆ ಸ್ವತಃ ನಿಜಾಮಸರಕಾರದ ಬಾದಶಹನೇ ಬಂದನು. ಆ ಪೂರ್ಣ ಸ್ವದೇಶೀ ಗಾಡಿಯನ್ನು ಚಾಲೂಮಾಡುವಾಗ ನಿಜಾಮನು ಅತ್ಯಂತ ಸಂತೋಷ ಪ್ರದ ರ್ಶನಮಾಡಿದನು, ಮತ್ತು ಅವನು ವಿನಾಯಕನ ಬೆನ್ನು ಚಪ್ಪರಿಸಿ ಅವನಿಗೆ ಒಳ್ಳೆ ಪಾರಿತೋಷಕವನ್ನು ಕೊಟ್ಟನು. ಆ ಸಮಾರಂಭವನ್ನು ನೋಡುತ್ತಿರುವಾಗ ಎಷ್ಟೋ ಜನರ ಕಣ್ಣುಗಳಲ್ಲಿ ಆನಂದಾಶ್ರುಗಳು ತುಂಬಿಬಂದವು. ಎಷ್ಟೋ ಜನರು ವಿನಾಯಕ ನನ್ನು ಅಪ್ಪಿಕೊಂಡು ಅವನಿಗೆ ಯಥೋಚಿತ ಗೌರವ ಮಾಡಿದರು. ಗಾಡಿಯಾದ ಮೇಲೆ ವಿನಾಯಕನ ಸಾಮಾನುಗಳು ಎಷ್ಟೋ ಪೇಟೆಗಳಿಗೆ ಸ್ವಲ್ಪ ಖರ್ಚಿನಿಂದ ತೀವ್ರ ವಾಗಿ ಹೋಗಹತ್ತಿದವು. ಅದರಿಂದ ಅವನ ಕಾರಖಾನೆಯ ಬೆಳಕು ದಿಗ್ಗೇಶವನ್ನೆಲ್ಲ ವ್ಯಾಪಿಸಿತು.
ಕಾರಖಾನೆಯ ಬೆಳವಣಿಗೆಯ ಸಂಗಡ ವಿನಾಯಕ-ದಿವಸುಂದರಿಯರ ಪ್ರೇಮ ಭಾವವೂ ಬೆಳೆಯುತ್ತ ನಡೆಯಿತು. ಆ ಅವಧಿಯಲ್ಲಿ ವಿನಾಯಕನು ನಾಲೈದು ಸಾರ ಮುಂಬಯಿಗೆ ಏನೋ ಕೆಲಸದ ನಿಮಿತ್ತ ಹೋಗಿದ್ದನು. ಹೋದ ಕಾಲಕ್ಕೆ ದಿವ್ಯ
೮೮--------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಸುಂದರಿಯ ಮುಖದರ್ಶನವಾಗುತ್ತಿದ್ದುದರಿಂದ ವಿನಾಯಕನ ಮೂರ್ತಿಯು ದಿವ್ಯ ಸುಂದರಿಯ ಅಂತಃಕರಣವನ್ನೆಲ್ಲ ಪೂರ್ಣವಾಗಿ ವ್ಯಾಪಿಸಿತು. ವಿನಾಯಕನಂತೆ ದಿವ್ಯ ಸುಂದರಿಯೂ ಮತ್ತೊಂದು ಸಾರೆ ಮಧುರೆಯೊಡನೆ ರಾಮಪುರಕ್ಕೆ ಹೋಗಿ, ಅಲ್ಲಿ ಹತ್ತು ಹನ್ನೆರಡು ದಿವಸವಿದ್ದು ಮುಂಬಯಿಗೆ ತಿರುಗಿ ಬಂದಿದ್ದಳು. ಈ ರೀತಿಯಿಂದ ಉಭಯತರ ಪ್ರೇಮಭಾವವು ಬೆಳೆಯುತ್ತ ಹೋದದ್ದನ್ನು ನೋಡಿ, ವಸಂತನ ಸೇಡು ತೀರಿಸಿಕೊಳ್ಳುವ ಬುದ್ದಿಯು ಪ್ರಜ್ವಲಿತವಾದದ್ದು ಸಾಹಜಿಕವಾಗಿದೆ. ಅವನು ಈ ಸಂಬಂಧವಾಗಿ ಎಲ್ಲರಿಗೂ ಒಳ್ಳೆ ಶಾಸನಮಾಡಬೇಕೆಂದು ಕೃತನಿಶ್ಚಯಮಾಡಿದನು. ಯಾವ ದಿವಸ ದಿವ್ಯಸುಂದರಿಯು ವಸಂತನ ಅಪಮಾನಮಾಡಿ ವಿನಾಯಕನ ಸನ್ಮಾನ ಮಾಡಿದಳೋ, ಆ ದಿವಸದಿಂದಲೇ ವಸಂತನು ವಿನಾಯಕ ಮೊದಲಾದವರ ಮೇಲೆ ಹಲ್ಲು ಮಸೆಯಹತ್ತಿದನು. ಅವನಿಗೆ ಶಕ್ಯವಿದ್ದಷ್ಟು ಸಹಾಯಮಾಡಲಿಕ್ಕೆ ಶಾಮರಾಯ ಗೋಪಾಳರಾಯರಂಥ ಧೂರ್ತಸ್ನೇಹಿತರೇ ಕೂಡಿದ್ದರು. ಆದ್ದರಿಂದ ವಿನಾಯಕನ ಕಾರಖಾನೆಯಂತೆ ಅವನ ಉದ್ಯೋಗವಾದರೂ ಭರಭರಾಟಿಗೆ ಬಂದದ್ದರಲ್ಲಿ ಆಶ್ಚರ್ಯ ವೇನೂ ಇಲ್ಲ.
ಒಂದು ಸಾರೆ ವಿನಾಯಕನು ಏನೋ ಕೆಲಸದ ಸಲುವಾಗಿ ಮುಂಬಯಿಗೆ ಹೋದಾಗ ನಿತ್ಯದಂತೆ ಚಿಂತಾಮಣಿರಾಯನ ಭೆಟ್ಟಿಯ ಸಲುವಾಗಿ ಅವನ ಬಂಗಲೆಗೆ ಹೋದನು. ಎಷ್ಟೋ ಹೊತ್ತು ಚಿಂತಾಮಣಿರಾಯನೊಡನೆ ವಿನಾಯಕನು ಮಾತಾ ಡುತ್ತ ನಿಂತರೂ ರಾಮರಾಯ, ದಿವ್ಯ ಸುಂದರಿ, ಮಧುರೆ ಮೊದಲಾದವರು ಯಾರೂ ಹೊರಗೆ ಬಾರದ್ದರಿಂದ ಇಲ್ಲಿಯವರೆಗೆ ಶಾಂತವಿದ್ದ ಅವನ ಮನಸ್ಸು ಚಂಚಲವಾಯಿತು. ತಾನು ಇಲ್ಲಿ ಬಂದು ನಿಂತು ಎಷ್ಟೋ ಹೊತ್ತಾದರೂ ದಿವಸುಂದರಿಯು ಇನ್ನೂ ಯಾಕೆ ನನಗೆ ಭೆಟ್ಟಿಯಾಗಿರಲಿಕ್ಕಿಲ್ಲವೆಂಬ ಬಗ್ಗೆ ಅವನ ಮನಸ್ಸಿನಲ್ಲಿ ವಿಚಾರವು ಹುಟ್ಟಿತು. ಅವನು ಒಮ್ಮೆ ದಿವ್ಯಸುಂದರಿಯು ಎಲ್ಲಿ ಹೋಗಿದ್ದಾಳೆಂದು ಚಿಂತಾಮಣಿರಾಯನಿಗೆ ಕೇಳಬೇಕೆಂದು ಹವಣಿಸುತ್ತಿದ್ದನು, ಕೂಡಲೆ ದಿವ್ಯಸುಂದರಿಯ ಸಂಬಂಧವಾಗಿ
ಚಿಂತಾಮಣಿರಾಯನಲ್ಲಿ ಚರ್ಚೆ ಮಾಡಿದರೆ ಅವನ ಮನಸ್ಸಿನಲ್ಲಿ ಬೇರೊಂದು ಸಂಶಯವು ಬರುತ್ತದೆಯೋ ಏನೋ ಎಂದು ನೆನಿಸಿ ಅಷ್ಟಕ್ಕೆ ನಿರಾಶನಾಗುತ್ತಿದ್ದನು. ಈ ಪ್ರಕಾರ ಅವನ ಮನಸ್ಸಿನ ಸ್ಥಿತಿಯಾದ ಮೇಲೆ ಅವನಿಗೆ ಅಲ್ಲಿ ನಿಲ್ಲುವಂತಾಗಲಿಲ್ಲ. ಕೂಡಲೆ ಅವನು ಚಿಂತಾಮಣಿರಾಯನ ಅಪ್ಪಣೆಯನ್ನು ತಕ್ಕೊಂಡು ಬಂಗಲೆಯಿಂದ ಹೊರಬಿದ್ದು ಹಾದಿಯನ್ನು ಹಿಡಿದನು. ಚಿಂತಾಮಣಿರಾಯನ ಬಂಗಲೆಯಲ್ಲಿ ಹೋದ ಕೂಡಲೆ ನಿತ್ಯದಂತೆ ದಿವ್ಯಸುಂದರಿಯ ಭೆಟ್ಟಿಯಾಗುವದರಲ್ಲಿ ಸಂದೇಹವಿಲ್ಲವೆಂಬ ತನ್ನ ತಿಳುವಳಿ ಕೆಯು ಸುಳಾಗುವತನಕ ಅವನ ಮನಸ್ಸಿನಲ್ಲಿ ವಿಶೇಷ ವಿಚಾರಗಳೇನೂ ಬಂದಿದ್ದಿಲ್ಲ; ಆದರೆ ದಿವ್ಯಸುಂದರಿಯ ಭೆಟ್ಟಿಯಾಗದೆ ಅವನು ಯಾವಾಗ ಬಂಗಲೆಯಿಂದ ಹೊರ ಬಿದ್ದನೋ ಆಗಲೇ ಅವಳ ವಿಷಯವಾಗಿ ಅವನ ಮನಸ್ಸಿನಲ್ಲಿ ಸ್ವಾಭಾವಿಕವಾಗಿ
೮೯-------------------------------------------೬ನೆಯ ಪ್ರಕರಣದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ !
ಅನೇಕ ವಿಚಾರಗಳು ಹುಟ್ಟಿದವು. ಆ ವಿಷಯವಾಗಿ ವಿಚಾರಮಾಡುತ್ತಿರುವಾಗ ಅವನು ತನ್ನ ಮನಸ್ಸಿಗೆ ಹೇಳಿದ್ದೇನಂದರೆ:-( ಎಲೈ ಮನಸ್ಸೇ, ದಿವ್ಯ ಸುಂದರಿಯ ದರ್ಶನದ ಸಲುವಾಗಿ ನಿನಗಿಷ್ಟು ಉತ್ಸುಕತೆಯು ಯಾಕೆ? ಅವಳು ನಿನಗೆ ದರ್ಶನಗೊಡಲಿಕ್ಕೇ ಬೇಕೆಂಬುವದಕ್ಕೆ ಅವಳ ಮೇಲೆ ನಿನ್ನ ಹಕ್ಕಾದರೂ ಎಲ್ಲಿಯದು? ಅವಳ ದರ್ಶನ ವಾಗಲಿಲ್ಲೆಂದು ನಿನಗಿಷ್ಟು ಹಳಹಳಿಯು ಯಾಕೆ ? ಮನಸ್ಸೇ, ನೀನು ಸಂಪೂರ್ಣ ನಿಗ್ರಹಿಯಾಗಲಿಕ್ಕೆ ಬೇಕು. ನೀನು, ವಿನಾಯಕನಂಥ ಸತ್ಯಾಗ್ರಹೀಮನುಷ್ಯನ ಹೃದಯದಲ್ಲಿ ವಾಸಮಾಡಿರುತ್ತೀಯೆಂಬುವದನ್ನು ಲಕ್ಷದಲ್ಲಿಡು. ದಿವ್ಯಸುಂದರಿಯು ಸುಂದರಿಯಿದ್ದಾಳೆ ! ಇರಲಿ, ಅವಳನ್ನು ನೋಡುವ ಅಧಿಕಾರವು ನಿನಗಿಲ್ಲ. ದಿವ್ಯ ಸುಂದರಿಯು ಸದ್ದು ಣಿಯಿದ್ದಾಳೆ! ಇರಲಿ, ಅವಳ ಗುಣಾನುಕರಣಮಾಡಲಿಕ್ಕೆ ನಿನಗೆ ನಿಸರ್ಗಸಿದ್ದವಾದ ಹಕ್ಕು ಅದೆ; ಆದರೆ ಅಷ್ಟಕ್ಕೆ ಅವಳ ಮೇಲೆ ಲುಬ್ಧಳಾಗುವ ಹಕ್ಕು ನಿನಗಿಲ್ಲ. ಆದ್ದರಿಂದ ನೀನು ಯಾವನೊಬ್ಬ ಕಾಮುಕನಂತೆ ದಿವ್ಯಸುಂದರಿಯ ವಿಷ ಯವಾಗಿ ವಿಚಾರಮಾಡಬೇಡ, ೨” ಎಂದನು.
ಈ ಪ್ರಕಾರ ಅವನು ತನ್ನ ಮನಸ್ಸಿಗೆ ಖಂಡಿತವಾಗಿ ಹೇಳಿದನೇನೋ ನಿಜ; ಆದರೆ ಹೋಗುಹೋಗುತ್ತ ಅವನ ಮನಸ್ಸು ಒಮ್ಮೆಲೆ ಹಕ್ಕಿಯಂತೆ ಹಾರಿ ವಿದ್ಯು ದ್ವೇಗದಿಂದ ಚಿಂತಾಮಣಿರಾಯನ ಬಂಗಲೆಯನ್ನು ಹೊಕ್ಕಿತು. ಮತ್ತು ಅದು ದಿವ್ಯ ಸುಂದರಿಯ ಸಂಗಡ ಮಾತಾಡುತ್ತಿದ್ದ ಗತವಚನದ ದರ್ಶನಪಟವನ್ನು ಅಲ್ಲಿಂದ ಕದ್ದು ತಂದು ಅವನಿಗೆ ತೋರಿಸಿತು. ಆಪೂರ್ವದ ರಮ್ಯಚಿತ್ರವನ್ನು ನೋಡಿನೋಡಿದಂತೆ ಮನಸ್ಸಿನ ನಿಶಯದ ಒಡ್ಡು ಒಡೆದು ಚೂರಾಗಹತ್ತಿತು. ಯಾವಳು ನಿನ್ನ ಮೇಲೆ ಪ್ರೇಮಮಾಡುತ್ತಾಳೋ ಅವಳ ಮೇಲೆ ನೀನು ಪ್ರೇಮವನ್ನು ಯಾಕೆ ಮಾಡಬಾರದು? ಎಂಬದಾಗಿ ಮನಸ್ಸು ಪ್ರಶ್ನೆ ಮಾಡಲು ಅವನು ಪುನಃ ದಿವಸುಂದರಿಯ ವಿಚಾರದಲ್ಲಿ ಮಗ್ನನಾದನು. ಆ ಸ್ಥಿತಿಯಲ್ಲಿ ಅವನು ಮಾರ್ಗಕ್ರಮಣ ಮಾಡುತ್ತಿರುವಾಗ ತಾನು ಎಲ್ಲಿಗೆ ಹೋಗಬೇಕು, ಎಷ್ಟು ವೇಳೆಯಾಗಿದೆ, ಎಂಬದನ್ನು ಕೂಡ ಮರೆತನು. ಒಬ್ಬ ಅಮಲೇರಿದ ಮನುಷ್ಯನಂತೆ ಶೂನ್ಯದೃಷ್ಟಿಯಿಂದ ಕೆಳಗೆ ನೋಡುತ್ತ ಹೋಗ ಹತ್ತಿದನು. ಕೆಲಹೊತ್ತಿನ ಮೇಲೆ ಅವನ ಮನಸ್ಸಿನ ಈ ಸ್ಥಿತಿಯು ಬದಲಾಯಿಸಲು ಆಗ ಅವನಿಗೆ ಸ್ವಲ್ಪ ನಾಚಿಕೆಯೆನಿಸಿತು. ಆ ವೇಳೆಯಲ್ಲಿ ಮನಸ್ಸು ಚಂಚಲವಾಗ. ಬಾರದೆಂದು ಅವನು ಅದರ ಮೇಲೆ ನಿಗ್ರಹದ ಬಹುಭಾರವನ್ನು ಹಾಕಲು ಅದು ಕೂಡಲೆ ಪೂರ್ವ ಸ್ಥಿತಿಗೆ ಬಂದು ದಿವಸುಂದರಿಯನ್ನು ಮರೆತುಬಿಟ್ಟಿತು. ಆಗ ಅವನು ತನ್ನ ಕಾರ್ಯದ ವಿಚಾರಮಾಡಿ, ಹೊತ್ತು ಬಹಳವಾದದ್ದರಿಂದ ಲಗುಲಗು ಹೆಜ್ಜೆ ಹಾಕುತ್ತ ಮಹಾಲಕ್ಷ್ಮೀಯ ಸ್ಟೇಶನಕ್ಕೆ ಬಂದು ಕುಲಾಬದ ಕಡೆಗೆ ಹೋಗುವ ಗಾಡಿ ಯನ್ನು ಹತ್ತಿದನು. ಗಾಡಿಯು ಹೋಗಹತ್ತಿದ ಕೂಡಲೆ ಅವನ ಬಾಯಿಯ ಮುಂದ ಒಂದು ತೆಕ್ಕೆಗಡುತರ ಹೊಗೆಯು ಹಾಯಿತು. ಮತ್ತು ಅವನ ಕೈಯನ್ನು ಯಾವನೋ
೯೦------------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಹಿಡಿದು ' ಗುಡ್‌ಮಾರ್ನಿಂಗ ಮಿಸ್ಕರ ವಿನಾಯಕರಾಯ ” ಎಂಬದಾಗಿ ಉಚ್ಚರಿಸಿದನು. ಬಾಯಿಯ ಮುಂದಿನ ಹೊಗೆಯನ್ನು ವಿನಾಯಕನು ಕೈಯಿಂದ ಹೊಡೆದು ನೋಡು ತಾನ. ಎದುರಿಗೆ ವಸಂತರಾಯ! ಸ್ವಾರಿಯು ಪೂರ್ಣ ಯುರೋಪಿಯನ್ ಪೋಷಾಕು ಹಾಕಿಕೊಂಡು ಭತ್ತದ ಗೊಳಲು ಹಾಕಿದ ಕಮ್ಮಾರನ ಕುಲುಮೆಯಂತೆ ಹೊಗೆ ಯನ್ನು ಬಿಡುತ್ತ ವಿರಾಜಮಾನವಾಗಿ ಕುಳಿತದೆ. ವಿನಾಯಕನು ವಸಂತನಿಗೆ ತಿರುಗಿ ನಮಸ್ಕಾರಮಾಡಿದನು. ಆಗ ವಸಂತನು:
ವಸಂತ:- ಇಂದು ತಮ್ಮ ಭೆಟ್ಟಿಯಾದದ್ದೆಂದರೆ ಆನಂದಕಾರಕ ಸಂಗತಿಯೇ ಸರಿ. ತಾವು ಚಿಂತಾಮಣಿರಾಯರ ಭೆಟ್ಟಿಗೆ ಹೋದಂತೆ ಕಾಣಿಸುತ್ತದೆ. ಆಯಿತೇನು ಅವರ ಬೆಟ್ಟ ? ”
ವಿನಾ:- ( ಸ್ವಲ್ಪ ನಕ್ಕು) ಹೋ, ಆಯಿತು. ಇಷ್ಟು ಗಂಟೆಗೆ ಭೆಟ್ಟಿಗೆ ಬರಿ ಯೆಂದು ಅವರು ಮೊದಲೇ ನನಗೆ ತಿಳಿಸಿದ್ದರಿಂದ ಅವರ ಭೆಟ್ಟಿಯಾಗಲಿಕ್ಕೆ ಎಷ್ಟೋ ತೊಂದರೆಯಾಗಲಿಲ್ಲ. ”
ವಸಂತ:- ( ವ್ಯಂಗಸ್ವರದಿಂದ) ಆದರೆ ನಿಮ್ಮ ಮೋರೆಯು ಸಪ್ಪಗಾಗಿರುವ ದರಿಂದ ಎಲ್ಲರ ಭೆಟ್ಟಿಯಾದಂತೆ ಕಾಣಿಸುವದಿಲ್ಲ ? ೨೨
ವಿನಾ:- ( ವಸಂತನ ಮಾತಿನ ಅಭಿಪ್ರಾಯವು ತಿಳಿದರೂ ನಗುತ್ತ ) ನನಗೆ ಕೇವಲ ಚಿಂತಾಮಣಿರಾಯರ ಭೆಟ್ಟಿಯು ಬೇಕಾಗಿದ್ದಿತು. ಆ ಪ್ರಕಾರ ಅವರ ಬೆಟ್ಟ
ಯಾಯಿತಲ್ಲದೆ ಕೆಲಸವೂ ಆಯಿತು.
ವಸಂತ:-( ನಿಮ್ಮ ಕಲ್ಪನೆಯಂತೆ ನಿಮ್ಮ ಕೆಲಸವಾದರೂ ಅದು ಪೂರ್ಣ ವಾಗಿರಲಿಕ್ಕಿಲ್ಲ. ದಿವ್ಯಸುಂದರಿಬಾಯಿಸಾಹೆಬರ ಭೆಟ್ಟಿಯಾಗಿರಲಿಕ್ಕಿಲ್ಲ. ಅವರು ಏನೋ ಕೆಲಸದ ಸಲುವಾಗಿ ಹೈದರಾಬಾದಕ್ಕೆ ಹೋಗಿದ್ದಾರೆಂದು ಕೇಳಿದ್ದೇನೆ. ” * ವಿನಾ:- ಅವರು ಹೈದರಾಬಾದಕ್ಕೇ ಹೋಗಲಿ, ಮತ್ತೆಲ್ಲಿಗಾದರೂ ಹೋಗ ಲಿ, ಅವರ ಸಂಬಂಧ ವಿಚಾರಮಾಡಲಿಕ್ಕೆ ನಿಮಗೂ, ನನಗೂ ಕೂಡೇ ಕಾರಣವಿಲ್ಲ. ”
ವಸಂತ:- ( ಗಟ್ಟಿಯಾಗಿ ನಕ್ಕು) ವಿನಾಯಕರಾಯ, ದಿವ್ಯಸುಂದರಿಯ ಸಂಬಂಧವಾದ ಸಂಗತಿಯನ್ನು ತಿಳಿಯಲಿಕ್ಕೆ ನಿಮಗೆ ಎಷ್ಟೋ ಉತ್ಸುಕತೆಯಿಲ್ಲವೇ ? ”
ವಿನಾ:- ಇದು ನಿಮಗೆ ಯಾತರಿಂದ ತಿಳಿಯುತ್ತದೆ ? ”
ವಸಂತ:- (ನಗುತ್ತ) ನೀವು ಚಿಂತಾಮಣಿರಾಯನ ಬಂಗಲೆಯನ್ನು ಪ್ರವೇಶ ಮಾಡಿದಂದಿನಿಂದ ದಿವ್ಯ ಸಂದರಿಯ ವಿಷಯವಾಗಿ ತೋರಿಸುತ್ತಿರುವ ನಿಮ್ಮ ಆಚರಣೆ ಯೇ ವಿಲಕ್ಷಣವಾಗಿರುತ್ತದೆಂದು ಒಮ್ಮೆ ನನಗೆ ಚಿಂತಾಮಣಿರಾಯ-ರಾಮರಾಯರು ಹೇಳಿದ್ದರಿಂದ, ”
೯೧-------------------------------------೬ನೆಯ ಪ್ರಕರಣ-ದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ !
ವಸಂತನ ಈ ಮಾತುಗಳೆಲ್ಲ ಬೊಡ್ಡಿಯಿಂದ ತುದಿಯ ತನಕ ಸುಳ್ಳಿದ್ದವು. ವಸಂತನ ಈ ಮಾತುಗಳನ್ನು ಕೇಳಿ ವಿನಾಯಕನಿಗೆ ಮೊದಲು ಭೀತಿಯೆನಿಸಿತು. ಅಷ್ಟ ರಲ್ಲಿ `ಅವನ ಸಾತ್ವಿಕ ಮನೋವೃತ್ತಿಯು ತಪ್ತವಾಗಲು ಅವನು ಸ್ವಲ್ಪ ಸಿಟ್ಟಿನಿಂದ ಮಾತಾಡಹತ್ತಿದನು.
ವಿನಾ:-( ಆ ಇಬ್ಬರು ತಂದೆಮಕ್ಕಳು ಇಂಥ ಕ್ಷುದ್ರಬುದ್ಧಿಯವರಿರುವದಿಲ್ಲ. ಒಂದು ವೇಳೆ ಅವರು ಹಾಗೆ ಅಂದಾಗ್ಯಾದರೂ ಆ ಬಗ್ಗೆ ನನಗೆ ಸ್ವಲ್ಪಾದರೂ ಹೆದರಿಕೆ ಯಿಲ್ಲ; ಯಾಕಂದರೆ ದಿವ್ಯಸುಂದರಿಯ ಸಂಬಂಧವಾಗಿ ವಿಚಾರಮಾಡಲಿಕ್ಕೆ ನನಗೆ ಏನೂ ಅಧಿಕಾರವಿಲ್ಲವೆಂಬುವದನ್ನು ನಾನು ಮೊದಲಿನಿಂದಲೇ ತಿಳಿದಿರುತ್ತೇನೆ. ನೀವಾ ದರೂ ಹೀಗೆ ಮನಬಂದಂತೆ ಕುಲೀನ ಸ್ತ್ರೀಯರ ಸಲುವಾಗಿ ಚರ್ಚೆ ಮಾಡಬಾರ ದಾಗಿ ನನ್ನ ವಿನಂತಿಯದೆ, ”
ವಸಂತ:- (ಸ್ವಲ್ಪ ಮೆತ್ತಗಾಗಿ) ಆ ಬಂಗಲೆಯೊಳಗಿನ ಚರ್ಚೆಯ ಸಲು ವಾಗಿ ನೀವು ಹೆದರುವ ಕಾರಣವಿಲ್ಲ. ಯಾಕಂದರೆ, ದಕ್ಷಿಣಮಹಾರಾಷ್ಟ್ರದೊಳಗಿನ ಒಬ್ಬ ಸಂಸ್ಥಾನಿಕನ ಸಂಗಡ ದಿವ್ಯಸುಂದರಿಯ ಲಗ್ನವಾಗುವದು ನಿಶ್ಚಯವಾಗಿರುತ್ತ ದೆಂದು ಕೇಳಿರುತ್ತೇನೆ. ಈಗ ಸಂಸ್ಥಾನಿಕನು ವಿಲಾಯತಿಗೆ ಹೋಗಿರುವದರಿಂದ ಲಗ್ನ ಕಾರ್ಯವು ನಿಂತಿರುತ್ತದೆ. ”
ವಿನಾ:- ( ( ಮುಖಮುದ್ರೆಯಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡದೆ ) ಏನೇ ಇರಲಿ, ಆ ಲಗ್ನದ ವಿಷಯವಾದರೂ ನಮಗೇತಕ್ಕೆ ? ”
ವಸಂತ:- ನೀವು ಕೋರ್ಟಿಗೆ ಹೋಗುವದಾಗಿ ಕಾಣಿಸುತ್ತದೆ ? ”
ವಿನಾ: ದಿ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ ಬ್ಯಾಂಕಿಗೆ ನಾನು ಹೋಗುತ್ತೇನೆ. ವರ್ತಕರು ಕೊಟ್ಟ ಇಪ್ಪತ್ತಾರುಸಾವಿರ ರೂಪಾಯಿಗಳನ್ನು ಈ ಬ್ಯಾಂಕಿನಲ್ಲಿ ಇಡಬೇಕಾಗಿದೆ. ಈ ಬ್ಯಾಂಕು ಮೊನ್ನೆ ಮೊನ್ನೆ ಸ್ಥಾಪನವಾಗಿರುತ್ತ ದಂತೆ. ಇದರ ಸ್ಥಿತಿಗತಿಯು ನನಗೆ ಗೊತ್ತಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಬೇಕು. ೨)
ವಸಂತ:- ( ಗಾಂಭೀರ್ಯದಿಂದ ) ಹೋ, ಈ ಬ್ಯಾಂಕು ಒಳ್ಳೆ ರೀತಿ ಯಿಂದ ನಡೆದಿದ್ದು, ಮುಂಬಯಿ ವರ್ತಕರ ವರ್ಗದಿಂದ ಅದಕ್ಕೆ ಹೆಚ್ಚು ಮಾನ್ಯವು ಪ್ರಾಪ್ತವಾಗಿರುವದು. ಇಲ್ಲಿಯವರೆಗೆ ಚಿಂತಾಮಣಿರಾಯರ ದುಡ್ಡು ಬೇರೆ ಬೇರೆ ಬ್ಯಾಂಕಿನಲ್ಲಿದ್ದಿತು; ಆದರೆ, ಈ ಬ್ಯಾಂಕಿನ ಉಚ್ಛಸ್ಥಿತಿಯನ್ನು ನೋಡಿ ಅವರು ತಮ್ಮ ದುಡ್ಡನ್ನೆಲ್ಲ ಇದೇ ಬ್ಯಾಂಕಿನಲ್ಲಿ ಇಟ್ಟಿರುವರು. ಈ ಬ್ಯಾಂಕಿನ ಪ್ರತಿಯೊಂದು ಭಾಗವು ಒಂದು ಸಾವಿರ ರೂಪಾಯಿಯದು ಇರುತ್ತದೆ. ಆಗ ಮಾತ್ರ ಪೇಟೆಯ ಭಾವವು ಹದಿನೈದು ನೂರು ರೂಪಾಯಿಯಾಗಿದೆ. ”
೯೨--------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ.
ವಿನಾ:-""( ಆಶ್ಚರ್ಯಚಕಿತನಾಗಿ) ಈ ಬ್ಯಾಂಕಿನ ಚಾಲಕರು ಯಾರಿದ್ದಾರೆ?”
ವಸಂತ:-"( ದೊಡ್ಡ ಸ್ವರದಿಂದ ) ಚಾಲಕರಿಬ್ಬರಿದ್ದು ಅವರು ಪಂಜಾಬ ದೊಳಗಿನ ಜಮೀನದಾರರಿರುತ್ತಾರೆ. ಒಬ್ಬನ ಹೆಸರು ಲಾಲಾ ಜಸವಂತಸಿಂಹಜಿ. ಇನ್ನೊಬ್ಬನ ಹೆಸರು ಲಾಲಾ ಬದ್ರಿನಾಥ, ಇಬ್ಬರೂ ಕೋಟ್ಯಧೀಶರಾಗಿದ್ದು, ವ್ಯಾಪಾ ರದ ಧೋರಣದಲ್ಲಿ ವಿಲಕ್ಷಣ ಜ್ಞಾನಸಂಪಾದನ ಮಾಡಿರುತ್ತಾರೆ. ಈಗ ಮುಂಬಯಿಯ ಪೇಟೆಯ ಸೂತ್ರವು ಇವರಿಬ್ಬರ ಕೈಯೊಳಗೇ ಇರುತ್ತದೆಂದರೆ ಅತಿಶಯೋಕ್ತಿಯಾಗ ಲಿಕ್ಕಿಲ್ಲ. ಮೊದಲು ಈ ಬ್ಯಾಂಕಿನ ಡಿರೆಕ್ಟರರು ಪಂಜಾಬಿಯವರೇ ಇದ್ದರು; ಆದರೆ ಮುಂಬಯಿಯ ವರ್ತಕರು ವಿಶ್ವ ಪ್ರಯತ್ನ ಮಾಡಿ ಎಲ್ಲ ಡಿರೆಕ್ಟರರನ್ನು ಮುಂಬಯಿಯವ ರನ್ನೆ ಮಾಡಿರುತ್ತಾರೆ. ಅದರಲ್ಲಿ ಅಭಿಮಾನದ ಸಂಗತಿಯೇನಂದರೆ-ರಾಜಾಬಹಾ ದೂರ ಚಿಂತಾಮಣಿರಾಯರು ಈ ಬ್ಯಾಂಕಿನ ಡಿರೆಕ್ಟರರಾಗಿರುತ್ತಾರೆ. ”
ಈ ಪ್ರಕಾರ ಈರ್ವರ ಸಂಭಾಷಣವು ನಡೆಯುತ್ತ ಹೋಗುವಷ್ಟರಲ್ಲಿ ಚರ್ಚೆ ಗೇಟದ ಸ್ಟೇಶನ್ನು ಬಂದಿತು. ಆ ಕೂಡಲೆ ಇಬ್ಬರೂ ಗಾಡಿಯಿಂದ ಇಳಿದು ಬ್ಯಾಂಕಿನ ಕಡೆಗೆ ಹೋದರು. ವಸಂತನು ವಿನಾಯಕನಿಗೆ ಮೇಲೆ ಹೇಳಿದ ಪ್ರಕಾರ ಬ್ಯಾಂಕಿನ ಸಂಬಂಧವಾಗಿ ತೋರಿಸಿದ ರಮ್ಯ ಚಿತ್ರವು ನಿಜವಿದ್ದಷ್ಟು ಬೊಟ್ಟಿಯಿದ್ದಿತು. ಈ ಬ್ಯಾಂಕು ಪ್ರಾರಂಭವಾದದ್ದೂ ನಿಜ; ಮತ್ತು ಸ್ವಲ್ಪ ದಿವಸದಲ್ಲಿ ಅದು ಇಡೀ ಮುಂಬಯಿ ಇಲಾಖೆಯಲ್ಲಿ ಪ್ರಸಾರವಾದದ್ದೂ ನಿಜ; ಆದರೆ ಆ ಸಂಸ್ಥೆಯನ್ನು ಇಬ್ಬರು ಪಂಜಾಬದವರು ತೆಗೆದಿರುತ್ತಾರೆಂಬ ಸಂಗತಿಯು ತೀರ ಅಸತ್ಯವಾದದ್ದಿದ್ದು, ಅದರ ಬೆಳವಣಿಗೆಯ ಸ್ಥಿತಿಯು ಕೂಡ ಮೊಸತರಹದ್ದಿದ್ದಿತು. ಆ ಬ್ಯಾಂಕಿನ ಚಾಲಕರು, ಒಳ್ಳೇ ನಾ, ನಾ ಎಂಬುವ ಚತುರ ವರ್ತಕರಿಗೆ ಒತ್ತಟ್ಟಿಗಿರಲಿ, ಅತ್ಯಂತ ತೈಲಬುದ್ದಿ ಯವರೆಂದೆನಿಸಿಕೊಳ್ಳುವ ಗುಪ್ತ ಪೋಲೀಸರ ಕಣೋಳಗೆ ಮಣ್ಣು ಹಾಕಿ ತಮ್ಮ ಅಕಟೋವಿಕಟಕಾರ್ಯವನ್ನು ಪ್ರಚಂಡವಾಗಿ ನಡಿಸಿದ್ದರು. ವಸಂತನು ಯಾವ ಇಬ್ಬರು ಪಂಜಾಬೀ ಗೃಹಸ್ಥರನ್ನು ಮಿತಿಮೀರಿ ವರ್ಣನಮಾಡಿದನೋ ಆ ಇಬ್ಬರು ಗೃಹಸ್ಥರು ನಿಜವಾಗಿ ಯಾರಿದ್ದಾರೆಂಬುವದು ನಮ್ಮ ವಾಚಕರಿಗೆ ತಿಳಿದದ್ದಾದರೆ, ಇಂಥ ನೀಚಮನುಷ್ಯರು ಕೂಡ ಮುಂಬಯಿಯಂಥ ಪಟ್ಟಣದಲ್ಲಿ ನಿರ್ಭೀತಿಯಿಂದ ತಮ್ಮ ವ್ಯವಸಾಯ ಮಾಡುತ್ತಾರೆಂಬುವದನ್ನು ನೋಡಿ ಆಶ್ಚರ್ಯವಾಗದಿರದು. ಬ್ಯಾಂಕಿನ ಇಬ್ಬರು ಚಾಲಕರು ಎರಡನೆಯವರು ಯಾರೂ ಅಲ್ಲವಾಗಿದ್ದು, ನಮ್ಮ ವಾಚಕರಿಗೆ ಈ ಪೂರ್ವದಲ್ಲಿಯೇ ಪರಿಚಯವುಳ್ಳ ಶಾಮರಾಯ-ಗೋಪಾಳರಾಯ ರಾಗಿದ್ದರು. ಆ ಇಬ್ಬರು ತಮ್ಮ ಗಡ್ಡಗಳನ್ನು ಉದ್ದವಾಗಿ ಬೆಳಿಸಿ, ತಲೆಯ ಮೇಲೆ ದೊಡ್ಡ ದೊಡ್ಡ ಪಂಜಾಬದ ಪಟಕಗಳನ್ನು ಸುತ್ತುತ್ತಿದ್ದರು. ಅವರು ತಮ್ಮ ಬ್ಯಾಂಕ
ನ್ನು ಸರಕಾರದಲ್ಲಿ ನೊಂದುಮಾಡಿ .ದಿವಸದಿವಸಕ್ಕೆ ಮುಂಬಯಿಯನ್ನು ಲೂಟು
೯೩------------------------------------------------------೬ನೆಯ ಪ್ರಕರಣ-ಡೀ ಕಾಮರ್ಸ ಬ್ಯಾಂಕ ಆಫ್ ಇಂಡಿಯಾ !
ಮಾಡಹತ್ತಿದರು. ಸಾಧಿಸಿದಷ್ಟು ಜನರ ದುಡ್ಡನ್ನು ಅಪಹಾರಮಾಡುವದೇ ಅವರ ಉದ್ಯೋಗವಾಗಿದ್ದಿತು; ಅವರ ನಿಜವಾದ ಉದ್ದೇಶವು ಚಿಂತಾಮಣಿರಾಯನ ಎಲ್ಲ ದುಡ್ಡು ಅಪಹಾರ ಮಾಡಬೇಕೆಂಬುವದಾಗಿದ್ದಿತು. ಅವರಿಗೆ ಚಿಂತಾಮಣಿರಾಯನ ದುಡ್ಡನ್ನು ಅಪಹರಿಸಲಿಕ್ಕೆ ಶಕ್ಯವಿದ್ದಿತು. ಚಿಂತಾಮಣಿರಾಯನ ಎಲ್ಲ ದುಡ್ಡಿನ ಕೊಡ ಕೊಳ್ಳುವ ವ್ಯವಹಾರವು ವಸಂತನ ಮುಖಾಂತರವೇ ನಡೆಯುತ್ತಿದ್ದದ್ದರಿಂದಲ, ವಸಂತನು ಆ ಬ್ಯಾಂಕಿನ ಉತ್ಪಾದಕರಲ್ಲಿ ಒಬ್ಬನಾಗಿದ್ದದ್ದರಿಂದಲೂ ಚಿಂತಾಮಣಿ ರಾಯನ ದುಡ್ಡಿನ ಪೆಟ್ಟಿಗೆಯನ್ನು ಹೊತ್ತು ಕೊಂಡು ಹೋಗಲಿಕ್ಕೆ ಆ ಬ್ಯಾಂಕಿಗೆ ತೊಂದರೆಯೇನೂ ಇದ್ದಿಲ್ಲ. ಬಾಕಿನ ಬೆಳವಣಿಗೆಯನ್ನು ವಸಂತನು ಚಿಂತಾಮಣಿ ರಾಯನಿಗೆ ಉಪ್ಪು ಕಾರ ಹತ್ತಿ ಹೇಳುತ್ತಿದ್ದದ್ದರಿಂದ ಚಿಂತಾಮಣಿರಾಯನ ಬುದ್ದಿಯು ವಿಪರೀತವಾಯಿತು. ಅವನು ವಿಶೇಷ ವಾದ-ವಿವಾದ ಮಾಡದೆ, ತನ್ನ ಎಲ್ಲ ಧನ ಸಂಚಯವನ್ನು ಕಾಮರ್ಸ ಬ್ಯಾಂಕಿನಲ್ಲಿ ಒಯ್ದಿಟ್ಟು, ತನ್ನ ಕೈಯಿಂದಲೇ ಭಾವೀ ಸಂಕಟದ ಪರ್ವತವನ್ನು ಕಿತ್ತು ಮೈಮೇಲೆ ಹಾಕಿಕೊಂಡನು.
ವಿನಾಯಕನು ಬ್ಯಾಂಕಿನ ಕೆಲಸ, ಮತ್ತಿತರ ಕೆಲಸ ಮೊದಲಾದವುಗಳನ್ನು ಮುಗಿಸಿಕೊಂಡು, ರಾಮಪುರಕ್ಕೆ ಹೋಗುವ ಸಿದ್ಧತೆಯನ್ನು ಮಾಡಿ ಹೇಳಿಬರುವ ದಕ್ಕಾಗಿ ಚಿಂತಾಮಣಿರಾಯನ ಬಂಗಲೆಗೆ ಹೋದನು; ಆದರೆ ಚಿಂತಾಮಣಿರಾಯನು ವಿನಾಯಕನಿಗೆ ರಾಮಪುರಕ್ಕೆ ಹೋಗಲಿಕ್ಕೆ ಅಪ್ಪಣೆಯನ್ನು ಕೊಡಲಿಲ್ಲ. ಅವನು ಹೇಳಿದ್ದೇನಂದರೆ:- ನೀವು ಇಷ್ಟು ದಿವಸವೇ ಇದ್ದಿರಿ, ಇನ್ನು ನಾಲ್ಕು ದಿವಸ ಇರಲಿಕ್ಕೆ ಬೇಕು. ರಾಮರಾಯ, ದಿವ್ಯಸುಂದರಿ ಮೊದಲಾದವರು ಹೈದರಾಬಾದಕ್ಕೆ ಹೋಗಿದ್ದಾರೆ, ಅವರು ಇಂದೇ ತಿರುಗಿ ಬರುವವರಿದ್ದಾರೆ. ಬರುವ ಶನಿವಾರ ನಮ್ಮಲ್ಲಿ ದೊಡ್ಡ ಸಮಾರಂಭವಾಗುವದದೆ. ಸರಕಾರದವರು ನನಗೆ ಕೆ. ಸೀ. ಎಸ್. ಆಯ. ಎಂಬ ಅತ್ಯಂತ ಗೌರವದ ಪದವಿಯನ್ನು ಕೊಟ್ಟಿದ್ದರಿಂದ ನಾನು ಇಲ್ಲಿಯ ದೊಡ್ಡ ದೊಡ್ಡ ಯುರೋಪಿಯನ್, ಮತ್ತು ಹಿಂದೀಗೃಹಸ್ಥರಿಗೆ ರಾತ್ರಿ ಉಪಹಾರದ ಸಲು ವಾಗಿ ನಿಮಂತ್ರಣಮಾಡುವವನಿದ್ದೇನೆ. ನೀವು ಆ ಕಾಲಕ್ಕೆ ಅವಶ್ಯವಾಗಿ ಇರಲಿಕ್ಕೆ ಬೇಕು. ಆ ಸಮಾರಂಭವಾದ ಮೇಲೆ ನೀವು ಬೇಕಾದಾಗ ರಾಮಪುರಕ್ಕೆ ಹೋಗ ಬಹುದು. ” ಈ ಪ್ರಕಾರ ಹೇಳಲು ವಿನಾಯಕನು ನಿರುಪಾಯನಾದನು. ಅವನು ಚಿಂತಾಮಣಿರಾಯನ ಅಪ್ಪಣೆಯ ಪ್ರಕಾರ ಆ ಸಮಾರಂಭದ ತನಕ ಇದ್ದನು. ಅವನು ದಿವಸುಂದರಿಯ ಭೆಟ್ಟಿಯಾಗದೆ ರಾಮಪುರಕ್ಕೆ ಹೋಗುವವನಿದ್ದನು; ಆದರೆ ಇಂದು ದಿವ್ಯಸುಂದರಿಯು ಬರುವವಳಿದ್ದಾಳೆಂಬುವದನ್ನು ಕೇಳಿ, ಅವನ ಮನಸ್ಸಿನಲ್ಲಿ ತಿರುಗಿ ಅವಳ ವಿಷಯದ ವಿಚಾರಗಳು ಬರಹತ್ತಿದವು. ಅವಳ ಭೆಟ್ಟಿಯನ್ನು ತಳ್ಳಬೇ ಕೆಂದು ಮತ್ತೆ ಅವನಿಗೆ ಅಪೇಕ್ಷೆಯಾಯಿತು; ಆದರೆ ಅಷ್ಟರಲ್ಲಿ ಸಂಸ್ಥಾನಿಕನ ಸಂಗಡ ಅವಳ ಲಗ್ನ ವಾಗುವದೆಂಬ ಮಾತು ನೆನಪಿಗೆ ಬಂದಕೂಡಲೆ ಅವನ ಆಶೆಯು ನಿರಾಶೆ
೯೪-----------------------------------ದಿವಸುಂದರಿ ಅಥವಾ ದೀರ್ಘ ಪ್ರಯತ್ನ.
ಯಾಗಿ ಅವಳ ಭೆಟ್ಟಿಯಾಗಬೇಕೊ ಆಗಬಾರದೋ ಎಂಬ ವಿಚಾರದಲ್ಲಿ ಅವನು ಎರಡು ದಿವಸ ಕಳೆದನು.
ಇಂದು ಸಮಾರಂಭದ ಶನಿವಾರ ದಿವಸ. ಆ ದಿವಸ ಪ್ರಾತಃಕಾಲದಿಂದ ಸಾಯಂಕಾಲದ ವರೆಗೆ ಚಿಂತಾಮಣಿರಾಯನ ಸಮಾರಂಭದ ಸಿದ್ದತೆಯು ಮಿತಿಮೀರಿ ನಡೆದಿದ್ದಿತು. ಅತ್ತಿತ್ತ ಧ್ವಜ, ಪತಾಕೆ, ತೋರಣ ಮೊದಲಾದವುಗಳನ್ನು ಕಟ್ಟುವ ಕೆಲಸವೂ, ವಿದ್ಯುದ್ದೀಪಿಕೆಗಳನ್ನು ಹಚ್ಚುವ ಕೆಲಸವೂ ಭರದಿಂದ ನಡೆಯಹತ್ತಿತು. ಸಾಯಂಕಾಲದ ನಾಲ್ಕು ಹೊಡೆಯುವ ಸುಮಾರಕ್ಕೆ ಚಿಂತಾಮಣಿರಾಯನ ಬಂಗ ಲೆಯು ಇಂದ್ರಭವನದಂತೆ ಸುಂದರವಾಗಿ ಕಾಣಿಸಹತ್ತಿತು. ಸಾಯಂಕಾಲದ ವೇಳೆ ಯಾದ ಕೂಡಲೆ ಆ ಎಲ್ಲ ವಿದ್ಯುದ್ದೀಪಿಕೆಗಳು ಒಮ್ಮೆಲೇ ಪ್ರಜ್ವಲಿತವಾದವು. ತೋಟ ದಲ್ಲಿ ಬ್ಯಾಂಡು ಮಧುರಸ್ವರದಿಂದ ಬಾರಿಸಹತ್ತಿತು. ಬಂಗಲೆಗೆ ಒಂದರಹಿಂದೊಂದು ದೊಡ್ಡ ದೊಡ್ಡ ಜನರ ಗಾಡಿಗಳು ಬರಹತ್ತಿದವು. ನಿಮಂತ್ರಿತ ಯುರೋಪಿಯನ್, ಹಿಂದೀ ಪುರುಷ-ಸ್ತ್ರೀಯರು ತಮ್ಮ ತಮ್ಮ ಸ್ಥಳದ ಮೇಲೆ ಕುಳಿತುಕೊಳ್ಳಲು ಮೊದಲು ಸ್ವಲ್ಪ ಹೊತ್ತು ಹಿಂದೂಪದ್ದತಿಯ ಗಾಯನವಾಯಿತು. ಅನಂತರ ನಿಮಂತ್ರಿತಜನ ರಿಗೆ ಉಪಹಾರದ ಬಗ್ಗೆ ಸೂಚನೆಯಾಯಿತು. ಆ ಕೂಡಲೆ ಅವರು ತೋರಿಸಿದ ದಿವಾಣಖಾನೆಯಲ್ಲಿ ಹೋಗಿ ಕುಳಿತರು. ಜಾತಿಧರ್ಮದಂತೆ ಬೇರೆ ಬೇರೆ ಎಲ್ಲರ ಉಪಹಾರದ ವ್ಯವಸ್ಥೆಯಾದ ಮೇಲೆ ಟೊಂಕಕಟ್ಟಿಕೊಂಡು ನಿಂತಜನರಿಗೆ ಸ್ವಲ್ಪ ವಿಶ್ರಾಂತಿಯು ಸಿಕ್ಕತು. ಅರ್ಥಾತ್ ದಿವಸುಂದರಿ-ವಿನಾಯಕರಿಗೆ ಮಾತಾಡಲಿಕ್ಕೆ ಅನುವು ಸಿಕ್ಕಿತು. ಉಪಹಾರ ತೀರಿಸಿಕೊಂಡು ನಿಮಂತ್ರಿತಜನರು ತಿರುಗಿ ತಂತಮ್ಮ ಸ್ಥಳದ ಮೇಲೆ ಕುಳಿತಮೇಲೆ ನಾಲೈದು ಮಂದಿ ಯುರೋಪಿಯನ್ ನರ್ತಕಿಯರ ನೃತ್ಯವು ಪ್ರಾರಂಭವಾಯಿತು. ಆ ಕುಣಿಯುವ ಸ್ತ್ರೀಯರು ಅಚ್ಚ ಪ್ರಾಯದವರಿದ್ದು, ಅವರ ಪೋಷಾಕು ಕೋಲುಮಿಂಚಿನಂತೆ ಥಳಥಳ ಹೊಳೆಯುತ್ತಿದ್ದಿತು. ಅವರ ವಿಲಕ್ಷಣ ಅಭೂತಪೂರ್ವ ನೃತ್ಯದಿಂದ ಸಕಲರಿಗೂ ಆಶ್ಚರ್ಯವಾಯಿತು. ನಮ್ಮ ಅರಸಿಕ ವಿನಾಯಕನಿಗೆ ಮಾತ್ರ ಅದು ಅಸಹ್ಯವಾಗಿ ತೋರಿತು. ಅವನು ಮೆಲ್ಲನೆ ಯುಕ್ತಿಯಿಂದ ಎದ್ದು, ಆ ದಿವಾಣಖಾನೆಯ ಹಿಂದಿನ ಭಾಗದಲ್ಲಿರುವ ಒಂದು ಬಾಕಿನ ಮೇಲೆ ಕುಳಿತು ಆಕಾಶಸ್ಥ ತಾರೆಗಳನ್ನು ನಿರೀಕ್ಷಣಮಾಡಹತ್ತಿದನು. ವಿನಾಯಕ ನೆಂದರೆ ಅಷ್ಟು ದೊಡ್ಡ ಮನುಷ್ಯನಾಗಿದ್ದರಿಂದ, ಅವನು ಅಲ್ಲಿಂದ ಎದ್ದು ಹೋದದ್ದು
ಯಾರ ಲಕ್ಷದಲ್ಲಿಯೂ ಬರಲಿಲ್ಲ. ನಮ್ಮ ದಿವ್ಯಸುಂದರಿಗೆ ಮಾತ್ರ ಅವನು ದೊಡ್ಡವ ನಾಗಿದ್ದನು. ಅವಳ ಲಕ್ಷವೆಲ್ಲ ಅವನ ಕಡೆಗೇ ಇದ್ದಿತು. ಅವನು ಎದ್ದು ಹೋದ ೧-೧೨ ಮಿನೀಟಿನಲ್ಲಿ ಸಂಧಿಯನ್ನು ಸಾಧಿಸಿ, ಅವಳೂ ಸ್ತ್ರೀಸಮಾಜದಿಂದ ಎದು ವಿನಾಯಕನಿದ್ದ ಸ್ಥಳಕ್ಕೆ ಹೋದಳು. ವಿನಾಯಕನು ಒಂದೇಸವನೆ ಆಕಾಶದ ಕಡೆಗೆ ನೋಡುತ್ತಿರುವದನ್ನು ಕಂಡು ಅವಳು ಮೆಲ್ಲನೆ ಅವನು ಕುಳಿತ ಬಾಕಿನ ಹಿಂದೆ
೯೫---------------------------೬ನೆಯ ಪ್ರಕರಣ-ದೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ !
ಹೋದಳು. ಮತ್ತು ಅವಳು ಮಧುರಸ್ವರದಿಂದ:- ನೀವು ಯಾಕೆ ಇತ್ತ ಬಂದಿರಿ? ” ಎನ್ನಲು ಆ ಪರಿಚಯದ ಮಧುರಶಬ್ದವು ಕಿವಿಗೆ ಮುಟ್ಟುತ್ತಲೇ ಆಕಾಶಸ್ಥ ಚಂದ್ರಿಕೆಯ ಕಡೆಗಿದ್ದ ವಿನಾಯಕನ ಲಕ್ಷವು ಹತ್ತಿರದಲ್ಲಿದ್ದ ಚಂದ್ರಿಕೆಯ ಕಡೆಗೆ ತಿರುಗಿತು. ಆಗ ಅವನು ನಗುತ್ತ:-( ನಾನು ಮನೆಗೆ ಹೋಗಬೇಕೆಂದು ಮಾಡಿದ್ದೇನೆ; ಆದರೆ ಅಪ್ಪಣೆಯಿಲ್ಲದೆ ಹೇಗೆ ಹೋಗಬೇಕೆಂದು ಆಲೋಚಿಸಿ ನಿಂತಿದ್ದೇನೆ. ” ಎಂದನ್ನಲು ದಿವ್ಯ ಸುಂದರಿಯು ವಿನಾಯಕನು ಕುಳಿತ ಬಾಕಿನ ಮೇಲೆ ಕುಳಿತು:- ಯಾಕೆ ! ತಮಗೆ ಈ ಸಮಾರಂಭವು ಮನಸ್ಸಿಗೆ ಬಂದಂತೆ ಕಾಣುವದಿಲ್ಲ ? ೨” ಎಂದಂದಳು. ಆಗ ವಿನಾಯಕನು ಸ್ವಲ್ಪ ಹೊತ್ತು ಸುಮ್ಮನಿದ್ದು:- ಹೌದು. ನನಗೆ ಇಂಥ ನೃತ್ಯ ಮೊದ ಲಾದವು ಸೇರುವದಿಲ್ಲ? ” ಎಂದನ್ನಲು ದಿವ್ಯಸುಂದರಿಯು:-" ನನಗೆ ನೃತ್ಯವೇ
ಯಾಕೆ; ಇಡೀ ಸಮಾರಂಭವೇ ನನ್ನ ಮನಸ್ಸಿಗೆ ಬಂದಿಲ್ಲ. ತಂದೆಗೆ ಈ ಮಹೋತ್ಸ ವವು ಬೇಡೆಂದು ಹೇಳಿದರೂ ಕೇಳಲಿಲ್ಲ. ” ಎಂದಂದಳು.
ಈ ಪ್ರಕಾರ ದಿವಸುಂದರಿ-ವಿನಾಯಕರ ಸಂಭಾಷಣವು ನಡೆದಿರುವಾಗ ದಿವಾಣಮಾಧವರಾಯನು ಬಂದನು. ಅವನು ಬಂದಕೂಡಲೆ ವಿನಾಯಕನು ಅವನನ್ನು ಆದರಪೂರ್ವಕವಾಗಿ ಕೂಡಿಸಿ ನೋಡುತ್ತಾನೆ, ಅವನ ಮುಖ ಕಮಲವ ಬತ್ತಿ ಹೋಗಿದೆ! ಆಗ ವಿನಾಯಕನು ಇದೇನು ಮಾಧವರಾಯ ! ನಿಮ್ಮ ಮೋರೆಯು ಹೀಗೇಕೆ ಆಗಿದೆ!” ಎನ್ನಲು ಆಗ ಮಾಧವರಾಯನು ಉಸುರ್ಗರೆ ಯುy ( ವಿನಾಯಕರಾಯ, ವಿಶ್ವಾಸಿಕರಾದ ನಿಮ್ಮೊಡನೆ ನನ್ನ ಚಿಂತಾಕಾರಣವನ್ನು ಹೇಳಲಿಕ್ಕೆ ಅಡ್ಡಿಯೇನೂ ಇದ್ದಿಲ್ಲ: ಆದರೆ ಕೆಲವು ಕಾರಣಗಳ ಸಲುವಾಗಿ ಈಗಲೇ ನನ್ನ ಚಿಂತಾಕಾರಣವನ್ನು ಹೇಳಲಿಕ್ಕೆ ಬರುವಂತಿಲ್ಲ. ಈ ಬಗ್ಗೆ ಕ್ಷಮಿಸಬೇಕು. ” ಎಂದ ನಲು ವಿನಾಯಕನು ಗಾಂಭೀರ್ಯದಿಂದ ( ತಮಗೆ ಬಂದ ಸಂಕಟವನ್ನು ಶಕ್ಯಾನು ಸಾರ ನಾನು ಪರಿಹರಿಸಲಿಕ್ಕೆ ಆಜನ್ಮ ಸಮರ್ಥನಾಗಿರುವದರಿಂದ, ಚಿಂತಾಕಾರಣವನ್ನು ವಿಚಾರಿಸಿದೆನು. ಕಾರಣವನ್ನು ನನಗೆ ಹೇಳದಿದ್ದರೂ, ಅದಕ್ಕೆ ನನ್ನಿಂದೇನಾದರೂ ಸಹಾಯವಾಗಬೇಕಾಗಿದ್ದರೆ ಆ ಪ್ರಕಾರ ನನಗೆ ಅವಶ್ಯವಾಗಿ ಆಜ್ಞೆಯನ್ನು ಮಾಡಿರಿ.” ಎಂದನು.
ಈ ಪ್ರಕಾರ ಈರ್ವರ ಸಂಭಾಷಣವು ನಡೆಯುತ್ತಿರಲು ಹನ್ನೊಂದು ಹೊಡೆ ಯಿತು. ಸಮಾರಂಭದ ಕೆಲಸವೂ ಮುಗಿದು, ಬಂದ ಜನರು ಚಿಂತಾಮಣಿರಾಯನ ಅನುಜ್ಞೆಯನ್ನು ಪಡೆದು ಸಹಾಸ್ಯದಿಂದ ಮನೆಗೆ ಹೋಗಹತ್ತಿದರು. ಮನುಷ್ಯರವ ದಿಂದ ಪ್ರತಿಧ್ವನಿಗೊಳ್ಳುತ್ತಿದ್ದ ದಿವಾಣಖಾನೆಯು ಅರ್ಧತಾಸಿನಲ್ಲಿ ಜನಶೂನ್ಯವಾ ಯಿತು. ಚಿಂತಾಮಣಿರಾಯನು ತನ್ನ ದರ್ಬಾರದ ಪೋಷಾಕನ್ನು ತೆಗೆಯಹತ್ತಿದನು. ಏಕಾಂತ ಮಾತಾಡಲಿಕ್ಕೆ ಇದು ಸುಸಂಧಿಯೆಂದು ಯೋಚಿಸಿ ಮಾಧವರಾಯನು ಕುಳಿತ
೯೬-----------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ಸ್ಥಳವನ್ನು ಬಿಟ್ಟು ಮೇಲಕ್ಕೆದ್ದು, ಮೆಲ್ಲಗೆ ಚಿಂತಾಮಣಿರಾಯನ ಹತ್ತಿರ ಹೋದನು. ನಡುರಾತ್ರಿಯಲ್ಲಿ ಚಿಂತಾಕ್ರಾಂತನಾಗಿ ಬಂದ ಮಾಧವರಾಯನನ್ನು ನೋಡಿದ ಕೂಡಲೆ ಚಿಂತಾಮಣಿರಾಯನ ಎದೆಯು ಧಸಕ್ಕೆಂದಿತು. ಅವನು ಗಾಬರಿಷ್ಕರದಿಂದ: CC ಮಾಧವರಾಯ, ನೀವು ಏನೋ ನನಗೆ ಒಂದು ಚಿ೦ತಾದಾಯಕ ಸಂಗತಿಯನ್ನು ಹೇಳಲಿಕ್ಕೆ ಬಂದಂತೆ ಕಾಣಿಸುತ್ತದೆ.” ಎಂದನ್ನಲು ಮಾಧವರಾಯನು ಸ್ವಲ್ಪ ಹೊತ್ತು ಸುಮ್ಮನೆ ನಿಂತು:- ಒಂದು ಅಶುಭವಾರ್ತೆಯು ನನ್ನ ಕಿವಿಗೆ ತಾಕಿದೆ, ಅದನ್ನು ಹೇಳುವದಕ್ಕಾಗಿ ನಾನು ಬಂದಿದ್ದೇನೆ.” ಎಂದನ್ನು ತಿರುಗಿ ಸುಮ್ಮನೆ ನಿಂತನು. ಮತ್ತೆ ಕೆಲಹೊತ್ತಿನ ಮೇಲೆ ಅವನು ಯಾವದೋ ಸಂಗತಿಯನ್ನು ಚಿಂತಾಮಣಿರಾಯನ ಕಿವಿಯಲ್ಲಿ ಹೇಳಿದನು. ಆ ಸಂಗತಿಯು ಚಿಂತಾಮಣಿರಾಯನ ಕಿವಿಯಲ್ಲಿ ಬಿದ್ದ ಕೂಡಲೆ ಅವನು ನಿಮಿಷಮಾತ್ರ ಕಲ್ಲಿನ ಗೊಂಬೆಯಂತೆ ನಿಂತು ನಂತರ ಗಟ್ಟಿಯಾಗಿ ( ಹಾಯ ಹಾಯ ” ಎನ್ನುತ್ತ ನೆಲದ ಮೇಲೆ ಹೊತ್ತುಕೊಂಡು ಬಿದ್ದನು. ಚಿಂತಾಮಣಿರಾಯ ನೊಡನೆ ಏನಾದರೂ ಮಾಧವರಾಯನ ಗುಪ್ತಾಲೋಚನೆಯು ಇರಬಹುದೆಂದು ತಿಳಿದು ದಿವಸುಂದರಿ-ವಿನಾಯಕರು ದೂರದಲ್ಲಿದ್ದರು; ಆದರೆ ಚಿಂತಾಮಣರಾಯನ (ಹಾಯ ಹಾಯ' ಶಬ್ದವನ್ನು ಕೇಳುತ್ತಲೇ ಇಬ್ಬರೂ ವಿದ್ಯುದ್ವೇಗದಿಂದ ಓಡಿಬಂದು, ಚಿಂತಾ ಮಣಿರಾಯನ ಮಸ್ತಕದ ಹತ್ತಿರ ಕುಳಿತು ಅವನಿಗೆ ಗಾಳಿಯನ್ನು ಹಾಕಹತ್ತಿದರು. ಒಮ್ಮೆಲೇ ಆದ ತಂದೆಯ ಚಮತ್ಕಾರಿಕ ಸ್ಥಿತಿಯನ್ನು ನೋಡಿ, ದಿವ್ಯಸುಂದರಿಯ ಕಳಗಿಂದ ಅಶ್ರುಧಾರೆಗಳು ಹರಿಯಹತ್ತಿದವು. ಅವಳು ತಂದೆಯ ಹೃದಯದ ಮೇಲೆ ಮಸ್ತಕವನ್ನಿಟ್ಟು ಗಟ್ಟಿಯಾಗಿ ಅಳಹತ್ತಿದಳು. ಅದನ್ನು ಕೇಳಿ ರಾಮರಾಯ, ಮಧುರೆ ಇವರೂ ತ್ವರೆಯಿಂದ ಓಡಿಬಂದರು. ಮೂರ್ಛಾಗತನಾಗಿ ಬಿದ್ದ ಚಿಂತಾಮಣಿ ರಾಯನನ್ನು ನೋಡಿ ಸರ್ವರೂ ಗಾಬರಿಯಾದರು. ಕೆಲವರು ಡಾಕ್ಟರರನ್ನು ಕರೆಯ ಲಿಕ್ಕೆ ಹೋದರು. ಅವರ ನಿತ್ಯದ ಡಾಕ್ಟರನು ಕೂಡಲೆ ಬಂದನು. ಅವನು ಯೋಗ್ಯೂ ಪಚಾರಮಾಡಿ ಚಿಂತಾಮಣಿರಾಯನ ಮೂರ್ಛಯನ್ನು ದೂರಮಾಡಿದನು. ಮೂರ್ಛ ಯು ತಿಳಿದ ಕೂಡಲೆ ಚಿಂತಾಮಣಿರಾಯನು ತನ್ನ ದೃಷ್ಟಿಯನ್ನು ರಾಮರಾಯನ ಕಡೆಗೆ ತಿರುಗಿಸಿ, ಅವನಕಡೆಗೆ ಚಮತ್ಕಾರಿಕ ದೃಷ್ಟಿಯಿಂದ ನೋಡಹತ್ತಿದನು. ತಂದೆಯ ಈ ವಿಲಕ್ಷಣವಾದ ನೋಟವು ರಾಮರಾಯನಿಗೆ ತಿಳಿಯಲಿಲ್ಲ. ಅವನು: (( ಅಪ್ಪಾ, ಈಗ ನಿಮಗೆ ಹೇಗಿರುವದು? ” ಎಂದನು. ಚಿಂತಾಮಣಿರಾಯನು ಏನೂ
ಮಾತಾಡಲಿಲ್ಲ. ಅವನು ಪೂರ್ವವತ ಚಮತ್ಕಾರಿಕ ದೃಷ್ಟಿಯಿಂದ ಒಮ್ಮೆ ರಾಮ ರಾಯನ ಕಡೆಗೆ, ಒಮ್ಮೆ ದಿವಸುಂದರಿಯ ಕಡೆಗೆ ನೋಡುತ್ತಿದ್ದನು. ದಿವ್ಯಸುಂದರಿಯು ಕಣ್ಣೀರು ಒರಿಸಿಕೊಳ್ಳುತ್ತೆ:- ಅಪ್ಪಾ, ನಾವೆಲ್ಲರೂ ಗಾಬರಿಯಾಗಿದ್ದೇವೆ. ನಿಮಗೆ ಈಗ ಗುಣವದೆಯೇ ಹೇಗೆ ? ” ಎಂದಳು. ದಿವ್ಯ ಸುಂದರಿಯ ಮಾತಿನಿಂದ ಚಿಂತಾಮಣಿ ರಾಯನಿಗೆ ಸುಮ್ಮನೆ ಇರುವದಾಗಲಿಲ್ಲ. ಅವನು ಒಮ್ಮೆ ಕೈಯಿಂದ ಹಣೆಗೆ ಹೊಡ
೯೭-------------------------------೬ನೆಯ ಪ್ರಕರಣ-ದೀ ಕಾವರ್ಸ ಬ್ಯಾಂಕ ಆಫ್ ಇಂಡಿಯಾ!
ಕೊಂಡು:- ಮಕ್ಕಳೇ, ನಮ್ಮ ಸರ್ವ ವೈಭವವು ನಮ್ಮ ಕೈ ಬಿಟ್ಟು ಹೋಯಿತು, ಜನರಿಗೆ ಮುಖವನ್ನು ತೋರಿಸದಂತಾಯಿತು. ಆ ವಸಂತನ ಕಾಮರ್ಸ ಬ್ಯಾಂಕು ಮುಳುಗಿತು ! ” ಎಂದನು. ಚಿಂತಾಮಣಿರಾಯನ ಮಾತಿನಿಂದ ರಾಮರಾಯನ ಮನ ಸ್ಸಿನ ಮೇಲೆ ಆದ ಪರಿಣಾಮವು ಅವನಿಗೇ ಪರಿಚಯ! ಮಧುರೆಯ ಮಿತಿಮೀರಿ ಹಳಹಳಿಬಡಹತ್ತಿದಳು. ದಿವಸುಂದರಿಯು ಮಾತ್ರ ಶಾಂತಳಿದ್ದಳು. ತಂದೆಯದು ಬಹಳ ಹಾನಿಯಾಯಿತೆಂಬುವದು ಅವಳಿಗೆ ತಿಳಿಯಿತು. ಆದರೆ ಅಷ್ಟರ ಸಲುವಾಗಿ ಇಷ್ಟು ದುಃಖವೇಕೆಯೆಂಬುವದು ಅವಳಿಗೆ ತಿಳಿಯಲಿಲ್ಲ. ಏನೂ ಅರಿಯದ ಕುಮಾರಿ ದಿವ್ಯ ಸುಂದರಿ ! ಈ ಜಗತ್ತಿನಲ್ಲಿ ಕೇವಲ ಧನದಿಂದಲೇ ಜನರು ಮಾನಗೊಡುತ್ತಾರೆಂಬು ವರೂ, ಧನವಿದ್ದರೇನೇ ಎಲ್ಲರೂ ಪ್ರಿಯರಾಗುತ್ತಾರೆಂಬುವದೂ, ಧನದೇವತೆಯು ಕೈ ಬಿಟ್ಟು ಹೋದ ಮೇಲೆ ಆಕಾಶವೇ ಹೊತ್ತು ಕೊಂಡು ಬಿದ್ದಂತಾಗುತ್ತದೆಂಬುವದೂ ಆ ಮುಗ್ಗ ದಿವ್ಯ ಸುಂದರಿಗೆ ಏನು ಪರಿಚಯ !! ರಾಮರಾಯ, ಚಿಂತಾಮಣಿರಾಯ ಇವರ ಮಹತ್ವಾಕಾಂಕ್ಷೆಯು ಅದೊಂದು ದುಡ್ಡನ್ನೇ ಅವಲಂಬಿಸಿದ್ದಿತು. ಅವರಿಗೆ ದುಡ್ಡಿನಿಂದಲೇ ಮಾನವದೆಯೆಂಬುವದು ಪೂರ್ಣ ಪರಿಚಯವಿದ್ದಿತು. ಎಷ್ಟೋ ಪ್ರಸಂಗದಲ್ಲಿ ಶ್ರೀಮಂತ ಮನುಷ್ಯರು ತಾವು ಜಗತ್ತಿನಲ್ಲಿ ಇಷ್ಟು ಕೀರ್ತಿಶಾಲಿಗಳು ಧನ ದಿಂದಲೇ ಆಗಿರುತ್ತೇವೆಂಬದನ್ನು ಮರೆತು, ತಮ್ಮ ಹತ್ರ ಇರುವ ಇತರ ಸದ್ದು ಣಗ ಳಿಂದ ಆಗಿರುತ್ತೇವೆಂದು ತಿಳಿಯುತ್ತಾರೆ; ಆದರೆ ವಿಲಕ್ಷಣವಾದ ಕಾಲಚಕ್ರದಿಂದ ಸಂಪತ್ತು ಮಣ್ಣು ಪಾಲಾಯಿತೆಂದರೆ ಆ ಕೂಡಲೆ ಅವರ ಕಣ್ಣುಗಳು ತೆರೆಯುತ್ತವೆ. ಆಗ ತೋರುವ ಸದ್ದು ಣದ ಬರೇ ಚೀಲವನ್ನು ನೋಡಿ ಅವರಿಗೆ ಬಹಳ ಅನುತಾಪವಾ ಗುತ್ತದೆ. ಈ ಸ್ಥಿತಿಯೇ ಆ ವೇಳೆಯಲ್ಲಿ ಚಿಂತಾಮಣಿರಾಯ ರಾಮರಾಯರಿಗೆ ಪ್ರಾಪ್ತ ವಾಗಿದ್ದಿತು. ನಮ್ಮ ಹತ್ತರ ಇಷ್ಟು ದುಡ್ಡಿದ್ದು ನಾವು ಅದರಿಂದ ಜಗತ್ತಿಗೆ ಏನು ಉಪ ಕಾರ ಮಾಡಿದೆವು, ಎಂಬ ಪ್ರಶ್ನವು ಅವರ ಹೃದಯದಲ್ಲಿ ಹರಿದಾಡಹತ್ತಿತು. ನೀವು ನಿಮ್ಮ ದುಡ್ಡನ್ನು ಸದುದ್ಯೋಗದಲ್ಲಿ ಖರ್ಚುಮಾಡದೆ, ಕೇವಲ ಜನರಿಗೆ ವೈಭವವನ್ನು ತೋರಿಸುವದಕ್ಕೋಸ್ಕರ ಖರ್ಚು ಮಾಡಿದರೆಂದು ಅವರ ಮನೋದೇವತೆಯು ಹೇಳಿದ ಕೂಡಲೆ ಅವರಿಗೆ ವಿಶೇಷ ಹಳಹಳಿಯಾಯಿತು. ಮಧುರೆಯ ಮುಖ್ಯ ದೇವತೆಯೆಂದರೆ ಧನದೇವತೆಯೇ ಆಗಿದ್ದಳು. ಇಂದು ಇಂಥ ತೀರೆಯನ್ನು ಉಡಬೇಕು, ನಾಳೆ ಇಂಥ ಆಭರಣವನ್ನಿಟ್ಟು ಕೊಳ್ಳಬೇಕು, ನಾಡದು ಊರೊಳಗಿನ ದೊಡ್ಡ ದೊಡ್ಡ ಸ್ತ್ರೀಯ ರಿಗೆ ಚಹಾದ ಆಮಂತ್ರಣ ಹೇಳಬೇಕು; ಎಂಬುವದೇ ಅವಳ ಕರ್ತವ್ಯ ಕರ್ಮವಾಗಿ ದ್ದಿತು. ಇಂಥ ಮಧುರೆಗೆ ಬ್ಯಾಂಕು ಮುಳುಗಿದ ಸುದ್ದಿಯನ್ನು ಕೇಳಿ ಕಲ್ಪನಾತೀತ ವಾದ ದುಃಖವಾಗುವದು ಅರಿದಲ್ಲ ! ಮೂವರೂ ಗತಧೈರ್ಯರಾಗಿ ಕಣ್ಣೀರು ಸುರಿ ಸುತ್ತಿದ್ದರು; ಆದರೆ ನಮ್ಮ ದಿವಸುಂದರಿಯು ಶಾಂತವಾಗಿ ಕುಳಿತಿದ್ದಳು. ತಂದೆಯ ಪ್ರಕೃತಿಯ ಮೇಲೆಯಾದ ಪರಿಣಾಮದಿಂದ ಮಾತ್ರ ಅವಳು ದುಃಖಿತಳಾಗಿದ್ದಳು.
೯೮ -----------------------------ದಿವ್ಯ ಸು೦ದು ಅಥವಾ ದೀರ್ಘ ಪ್ರಯತ್ನ.
ತಂದೆಗೆ ಕ್ಷೇಮವಾಗಬೇಕೆಂದು ಅವಳು ಆತನಿಗೆ ಗಾಳಿಯನ್ನು ಹೊಡೆಯುತ್ತಿದ್ದಳು; ಅನೇಕ ಧೈರ್ಯವಚನಗಳನ್ನು ಹೇಳುತ್ತಿದ್ದಳು, ಒಮ್ಮೊಮ್ಮೆ ಅಸ್ಥಿರವಸ್ತುವಿನ ಬಗ್ಗೆ ಶೋಕಮಾಡಬಾರದೆಂದು ವೇದಾಂತವನ್ನೂ ಹೇಳುತ್ತಿದ್ದಳು.
ಚಿಂತಾಮಣಿರಾಯನಿಗೆ ಆ ರಾತ್ರಿಯು ಭಯಪ್ರದಸ್ತಿತಿಯಲ್ಲಿಯೇ ಕಳೆಯಿತು. ಅವನು ಕ್ಷಣದಲ್ಲಿ ಅಳಹತ್ತಿದನೆಂದರೆ, ಕ್ಷಣದಲ್ಲಿ ಮೂರ್ಛಿಯನ್ನು ಹೊಂದುತ್ತಿದ್ದನು. ಒಮ್ಮೆ ಹುಚ್ಚನಂತೆ ಹೊರಳಾಡಹತ್ತಿದರೆ, ಮತ್ತೊಮ್ಮೆ ಎಲ್ಲ ಜಗತ್ತಿನ ಮೇಲೆ ಕ್ರುದ್ದ ನಾಗುತ್ತಿದ್ದನು. ವಿನಾಯಕ-ಮಾಧವರಾಯರು ಬೆಳತನಕ ಚಿಂತಾಮಣಿರಾಯನ ಸಮೀಪದಲ್ಲಿಯೇ ಕುಳಿತಿದ್ದರು. ಬೆಳಗಿನ ಶೀತಲವಾಯುವಿನಿಂದ ಚಿಂತಾಮಣಿರಾಯ ನಿಗೆ ಸ್ವಲ್ಪ ನಿದ್ರೆ ಹತ್ತಿತು. ಅದರಿಂದ ಎಲ್ಲರೂ ಗುಣವಾಯಿತೆಂದು ತಿಳಿದುಕೊಂಡರು; ಆದರೆ ಬೆಳಗಾದ ಮೇಲೆ ನೋಡಲು ಚಿಂತಾಮಣಿರಾಯನ ಮುಖಮುದ್ರೆಯ ಮೇಲೆ ವಿಲಕ್ಷಣ ರೂಪಾಂತರವಾಗಿದ್ದಿತು. ಕಣ್ಣು ಒಳಗೆ ಹೋಗಿದ್ದವು; ಮುಖವ ಕಪ್ಪಾ ಗಿದ್ದಿತು; ಧ್ವನಿಯು ಕುಗ್ಗಿದ್ದಿತು. ಈ ಸ್ಥಿತಿಯನ್ನು ನೋಡಿ ವಿನಾಯಕ-ಮಾಧವರಾಯ ರಿಗೆ ಸಾಂಸತ್ತಿಕ ಚಮತ್ಕಾರಿಕ ಶಕ್ತಿಯ ಸಲುವಾಗಿ ಆಶ್ಚರ್ಯವಾಯಿತು. ಚಿಂತಾಮಣಿ ರಾಯನಿಗೆ ಚಹಾ ತಕ್ಕೊಳ್ಳಲಿಕ್ಕೆ ಅಪೇಕ್ಷೆಯಿಲ್ಲದಿದ್ದರೂ, ಡಾಕ್ಟರರ ವಿಶೇಷಾಗ್ರಹ ದಿಂದ ಅವನು ಮೊದಲು ಸ್ವಲ್ಪ ಉಪಹಾರ ತಕ್ಕೊಂಡು ಚಹಾವನ್ನು ಕುಡಿದನು. ಆ ಮೇಲೆ ಅವನಿಗೆ ಸ್ವಲ್ಪ ಶಕ್ತಿಯು ಬಂದಂತಾಗಲು ಅವನು ಮಾಧವರಾಯನಿಗೆ ಹತ್ತರ ಕರೆದು:- ನೀವು ಮೊದಲು ಮನುಷ್ಯನನ್ನು ಕಳಿಸಿ ವಸಂತರಾಯನನ್ನು ಕರಿಸಿರಿ. ಅವನಿಗೆ ಆ ಬ್ಯಾಂಕಿನ ಬಗ್ಗೆ ಎಲ್ಲ ಪರಿಚಯವದೆ. ” ಎಂದನ್ನಲು ಮಾಧವರಾಯನು ಸಿಟ್ಟಿನಿಂದ:- ರಾಜಾಸಾಹೇಬ, ಆ ವಸಂತನೇ ನಿಮ್ಮ ಎಲ್ಲ ಸಂಪತ್ತನ್ನು ಮುಳುಗಿ ಸಿದನು. ಆ ನೀಚ ಶಿಕ್ಷಿತ ತರುಣನಲ್ಲಿ ನೀವಷ್ಟು ವಿಶ್ವಾಸವಿಡಬಾರದೆಂದು ನಾನು ನಿಮಗೆ ಎಷ್ಟೊಸಾರೆ ಹೇಳಿದರೂ, ನೀವು ಕೇಳಲಿಲ್ಲ. ( ವಿದ್ಯಾಸನು ತನಾದ ದುಪ್ಪ ನನ್ನು ತ್ಯಜೀಕರಿಸಬೇಕು, ” ಎಂಬದಾಗಿ ವಚನವದೆ. ಇತ್ತ ಕಡೆಗೆ ನಮ್ಮ ಸಮಾ ಜದಲ್ಲಿ ಈ ವಚನದ ಕಡೆಗೆ ಲಕ್ಷವಿಲ್ಲದ್ದರಿಂದ ವಿದ್ಯಾಸಮನ್ವಿತ ದುಷ್ಯರಿಂದ ಎಲ್ಲ ಸಮಾಜವು ದುರ್ದಶಾವಸ್ಥೆಯನ್ನು ಹೊಂದಹತ್ತಿದೆ. ” ಎಂದಂದನು. ಆಗ ಚಿಂತಾ ಮಣಿರಾಯನು ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ “ ಈ ವಿಷಯವಾಗಿ ವಸಂತನ ಅಂಗವೇನಿರುವದು? ” ಎಂದು ಕೇಳಲು ಮಾಧವನು ಮತ್ತಿಷ್ಟು ಸಿಟ್ಟಿನಿಂದ ( ಅವನೇ ಈ ನಾಟಕದ ಸೂತ್ರಧಾರನು. ಶಾಮರಾಯ, ಗೋಪಾಳರಾಯ ಎಂಬೀರ್ವರು ಅವನ ಜೀವದ ಗೆಳೆಯರು. ಅವರಿಬ್ಬರೂ ಪಂಜಾಬೀವೇಷ ಧಾರಣಮಾಡಿಕೊಂಡು ಈ ಬ್ಯಾಂಕು ಸ್ಥಾಪಿಸಿದರು. ಕಡೆಗೆ ನಿಮ್ಮಂತ ಸಾವಿರಾರು ಜನರ ಧನವನ್ನು ಅಪಹಾರ ಮಾಡಿದರು. ” ಎಂದಂದನು. ಬ್ಯಾಂಕಿನ ಉತ್ಪಾದಕರಲ್ಲಿ ಶಾಮರಾಯ, ಗೋಪಾಳ ರಾಯರು ಸಮಾವೇಶರಾಗಿರುತ್ತಾರೆಂಬದನ್ನು ಕೇಳಿ ವಿನಾಯಕನಿಗೆ ಪರಮಾಶ್ಚರ್ಯ
೯೯----------------------೬ನೆಯ ಪ್ರಕರಣ-ಡೀ ಕಾಮರ್ಸ ಬ್ಯಾಂಕ್ ಆಫ್ ಇಂಡಿಯಾ !
ವಾಯಿತು. ಈ ಮುಳುಗಿದ ಬ್ಯಾಂಕಿನಲ್ಲಿಯೇ ವಿನಾಯಕನು ವರ್ತಕರ ಇಪ್ಪತ್ತೊಂದು ಸಾವಿರ ರೂಪಾಯಿಗಳನ್ನು ಇಟ್ಟಿದ್ದನೆಂಬುವದು ವಾಚಕರು ಮರೆತಿರಲಿಕ್ಕಿಲ್ಲ. ಅದ ಕಾಗಿ ಅವನೂ ಮನಸ್ಸಿನಲ್ಲಿ ಚಿಂತೆಮಾಡಹತ್ತಿದನು. ಮಾಧವರಾಯನ ಮಾತಿಗೆ ಚಿಂತಾಮಣಿರಾಯನು:- ಮಾಧವರಾಯ, ಮಿ೦ಚಿಸಿದ್ದಕ್ಕೆ ಚಿಂತಿಸಿ ಫಲವಿಲ್ಲ. ಈ ಬಗ್ಗೆ ಮುಂದೇನಾದರೂ ಪ್ರಯತ್ನ ಮಾಡಲಿಕ್ಕೆ ಬೇಕು. ನೀವು ಈ ಸಂಗತಿಯನ್ನು ಪೋಲೀಸರಿಗೆ ತಿಳಿಸಿರುವಿರೇನು? ” ಎಂದನ್ನಲು ಮಾಧವರಾಯನು ( ಇಲ್ಲ. ಪೋಲೀ ಸರೇ ಈ ಸುದ್ದಿಯನ್ನು ನನಗೆ ಹೇಳಿರುವರು. ನಿನ್ನೆ ರಾತ್ರಿ ಎಂಟು ಹೊಡೆಯುವ ಸುಮಾರಕ್ಕೆ ನನ್ನ ಪರಿಚಯದ ಇನಸ್ಪೆಕ್ಟರನು ನನ್ನ ಬಳಿಗೆ ಬಂದು ಮೂವರೂ ತಪ್ಪಿಸಿಕೊಂಡು ಹೋಗಿರುತ್ತಾರೆ, ಅವರು ಇರುವ ಸ್ಥಳವು ಗೊತ್ತಾಗಿಲ್ಲ.' ಎಂಬ ದಾಗಿ ಹೇಳಿದನು. ಆ ಮೂವರು ಒಬ್ಬ ಪೋಲೀಸನಿಗೆ ಚನ್ನಾಗಿ ವಂಚಿಸಿದ್ದರಿಂದ, ಪೋಲೀಸರು ಅವರ ಶೋಧಕ್ಕಾಗಿ ಬಹು ಪ್ರಯತ್ನ ಬಡುತ್ತಾರೆ. ಆ ಮೂವರ ಇರು ವಿಕೆಯು ಗೊತ್ತಾಗದ್ದರಿಂದ ಪೋಲೀಸರು ಮೊದಲು ಬ್ಯಾಂಕನ್ನು ತಮ್ಮ ಸ್ವಾಧೀನ ತಕ್ಕೊಂಡರು. ಆದರೆ ಬ್ಯಾಂಕಿನೊಳಗಿನ ತಿಜೋರಿಯು ಬರಿದಿದ್ದು ಮಹತ್ವದ ಕಾಗದ ಪತ್ರಗಳೂ ಇರುವದಿಲ್ಲ. ಡಿರೆಕ್ಟರರಲ್ಲಿ ಪ್ರಸಿದ್ದ ಶ್ರೀಮಂತ ಗಿರಧರಲಾಲ, ರಾಮಲಾಲ ಎಂಬೀರ್ವರು ಕೂಡಲೆ ಮಾನಚ್ಯುತಿಯಾಗಬಾರದೆಂದು ಆತ್ಮಹತ್ಯ ಮಾಡಿಕೊಂಡರಾಗಿ ವಾರ್ತೆಯದೆ. ಡಿರೆಕ್ಟರರ ಸ್ವಂತ ದುಡ್ಡು ಹೋದರೂ ಹೋಗಲಿ. ಎರಡನೆಯವರ ಹಣದ ಜವಾಬದಾರಿಯೂ ಅವರ ತಲೆಯ ಮೇಲೆ ಬಿದ್ದಿದೆ. ” ಎಂದನ್ನಲು ಚಿಂತಾ ಮಣಿರಾಯನು ?( ಹೌದು ಮಾಧವರಾಯ, ನಾನು ಇದೇ ಚಿಂತೆಯಿಂದಲೇ ಹೀಗೆ ತಸ್ತನಾಗಿದ್ದೇನೆ. ಸ್ವಂತ ಧನವು ಹೋದರೂ ಹೋಗಲಿ, ಆದರೆ ಎರಡನೆಯವರ ಧನವನ್ನು ಎಲ್ಲಿಂದ ಕೊಡಬೇಕೆಂಬುವದೇ ನನಗೆ ಪರಮ ಚಿಂತೆಯಾಗಿದೆ. ಹೆಚ್ಚು ಬಡ್ಡಿಯ ಆಶೆಯಿಂದ ನಾನು ನನ್ನ ಸರ್ವಸಂಪತ್ತನ್ನು ಈ ಬ್ಯಾಂಕಿನಲ್ಲಿ ಇಟ್ಟಿದ್ದನು. ” ಎಂದನ್ನು ಒಂದು ದೊಡ್ಡ ಶ್ವಾಸವನ್ನು ಬಿಟ್ಟು ಕುಳಿತ ಬಾಕಿನ ಮೇಲೆ ಹಾಗೇ ಅಡ್ಡಬಿದ್ದನು. ಡಾಕ್ಟರನು ತಿರುಗಿ ಅವನಿಗೆ ನಿದ್ರೆ ಬರುವಂತೆ ಮಾಡಿದನು. ಅವನಿಗೆ ನಿದ್ರೆ ಹತ್ತಿದ ಕೂಡಲೆ ದಿವ್ಯಸುಂದರಿಯ ಹೊರ್ತು ಎಲ್ಲರೂ ದಿವಾಣಖಾನೆಯಿಂದ ಹೊರಬಿದ್ದರು.
===
೧೦೦-----------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
೭ನೆಯ ಪ್ರಕರಣ,
ವಿವಾಹ,
ಮನುಷ್ಯನ ಬುದ್ದಿಯು ದೈವಾಧೀನವಾಗಿರುವದರಿಂದ ಎಷ್ಟೋ ಜಾಣರೆಂದೆನ್ನಿಸಿಕೊಳ್ಳುವ ಜನರು ಕೂಡ ಒಮ್ಮೊಮ್ಮೆ ಅಜ್ಞಾನ ಸಾಗರದಲ್ಲಿ ಹೊತ್ತುಕೊಂಡು ಬೀಳಬೇಕಾಗುತ್ತದೆ. ಆ ಪ್ರಕಾರ ಚಿಂತಾಮಣಿರಾಯನಂಥ ಧೋರಣದ ಮನುಷ್ಯನು ಕೇವಲ
ದುರ್ದೈವದಿಂದ ಜಾರಿಬಿದ್ದದ್ದರಲ್ಲಿ ಆಶ್ಚರ್ಯವಿಲ್ಲ. ತನ್ನೆಲ್ಲ ದುಡ್ಡು ಬ್ಯಾಂಕಿನಲ್ಲಿ ಮುಳುಗಿದರೂ ಅವನಿಗೆ ಇಷ್ಟು ದುಃಖವಾಗುತ್ತಿದ್ದಿಲ್ಲ; ಆದರೆ ಅವನು ಡಿರೆಕ್ಟರರಲ್ಲಿ ಒಬ್ಬನಾಗಿದ್ದದ್ದರಿಂದ ಎರಡನೆಯವರಿಗೆ ಕೊಡುವ ಹಣದ ಸಲುವಾಗಿ ಅವನಿಗೆ ಬಹಳ ಚಿಂತೆಯು ಬಂದಿತು. ಕಡೆಗೆ ಅವನು ಮುಂಬಯಿಯಲ್ಲಿರುವ ತನ್ನ ಸುಂದರಭವನವೆಂಬ ರಾಜವಾಡೆಯನ್ನೂ, ಅದರ ಹತ್ತಿರ ಇದ್ದ ನೂತನ ಪದ್ದತಿಯಿಂದ ಕಟ್ಟಿಸಿದ ಬಾವಿಯನ್ನೂ ಮಾರಿ ಹದಿಮೂರು ಲಕ್ಷ ರೂಪಾಯಿಗಳನ್ನು ಕೋರ್ಟಿನಲ್ಲಿ ಕಟ್ಟಿದನು. ಈ ಪ್ರಕಾರ ಕೈಯೊಳಗಿನ ದುಡ್ಡೆಲ್ಲ ಹೋಗಿ ಜೋಗಿಯಾದ ಮೇಲೆ ಅವನಿಗೆ ಮುಂದೆ ಹೇಗೆ ಮಾಡಬೇಕೆಂಬ ಬಗ್ಗೆ ದೊಡ್ಡ ವಿಚಾರವು ಬಿದ್ದಿತು. ಈ ವೇಳೆ ಯಲ್ಲಿ ಅನೇಕ ಜನರು ಅನೇಕ ತರದ ಯುಕ್ತಿ ಪ್ರಯುಕ್ತಿಯನ್ನು ಹೇಳಿದರು. ಅದರಲ್ಲಿ ದಿವ್ಯಸುಂದರಿಯ ವಿಚಾರವೇ ಚಿಂತಾಮಣಿರಾಯನಿಗೆ ಸರಿಬಿದ್ದಿತು. ದಿವ್ಯಸುಂದರಿಯು ಹೇಳಿದ್ದೇನಂದರೆ:-ಅಪ್ಪಾ, ನಿಮಗೆ ಇಂಥ ಶಿಕ್ಷೆ ಮಾಡುವದರಲ್ಲಿ ಪರಮೇಶ್ವರನ ಏನಾದರೂ ಸದುದ್ದೇಶವಿರಲಿಕ್ಕೆ ಬೇಕು. ನಿಮಗೆ ಈಗ ಸಾಧಾರಣ ವೃದ್ದಾಪ್ಯಕಾಲವು ಪ್ರಾಪ್ತವಾಗಿದ್ದರೂ ಇನ್ನೂ ನೀವು ವೈಭವಲೋಲುಪರಾದದ್ದನ್ನು ನೋಡಿ, ದೇವರು ನಿಮ್ಮ ಕಣ್ಣಿನಲ್ಲಿ ಅಂಜನ ಹಾಕಿದಂತೆ ಕಾಣುತ್ತದೆ. ಪೂರ್ವದಲ್ಲಿ ದೊಡ್ಡ ದೊಡ್ಡ ರಾಜರು ಕೂಡ ಆಶ್ರಮಚತುಷ್ಟಯದಂತೆ ನಡೆದರು. ವೃದ್ಧಾಪ್ಯಕಾಲದಲ್ಲಿ ವಾನ ಪ್ರಸ್ಥಾಶ್ರಮವನ್ನು ಗ್ರಹಣವಾಡಿ ಅಧ್ಯಾತ್ಮವಿಚಾರದಲ್ಲಿ ಸರ್ವ ಕಾಲವನ್ನು ಕಳೆದರು. ಆ ಪರಂಪರೆಯನ್ನು ಲೋಪಮಾಡಿದ್ದರಿಂದಲೇ ನಮ್ಮ ದೇಶಕ್ಕೆ ಹೀಗೆ ಹೀನಸ್ಥಿತಿಯು ಪ್ರಾಪ್ತವಾಯಿತು. ಮನುಷ್ಯನಿಗೆ ಯಾವಾಗಲೂ ಈ ಸಂಪತ್ತಿನ ಸಲುವಾಗಿ ನಿರೀಕ್ಷೆ ಯಿರಲಿಕ್ಕೆ ಬೇಕು. ಹುಟ್ಟಿದಾಗ ಯಾರೂ ಸಂಪತ್ತು ತಂದಿರುವದಿಲ್ಲ. ಮೃತ್ಯುವಿನ ನಿಮಂತ್ರಣಬಂದಾಗ ಯಾರೂ ಸಂಗಡ ದುಡ್ಡು ತಕ್ಕೊಂಡು ಹೋಗುವದಿಲ್ಲ. ಸುಕೃತ
೧೦೧-----------------------------------------------------------------------೭ನೆಯ ಪ್ರಕರಣ ವಿವಾಹ.
ಅಥವಾ ದುಷ್ಕೃತ ಸಂಚಯವೇ ಆತ್ಮದ ಚಿರ ಸಹಚರವಾಗಿರುತ್ತದೆ. ಕಾರಣ ನಾವೆ ಲ್ಲರೂ ವಿನಾಶಕಾಲದಲ್ಲಿ ನಮ್ಮ ಮೂಲಗ್ರಾಮವಾದ ಆಸನಗಡ ಗ್ರಾಮಕ್ಕೆ ಹೋಗಿ ರೋಣ, ಈಗಿನ ನಿಮ್ಮ ವಿಪತ್ಕಾಲದಲ್ಲಿ ನಿಮ್ಮ ದೊಡ್ಡ ದೊಡ್ಡ ಮುಂಬಯಿ ಸ್ನೇಹಿ ತರು ನಿಮ್ಮನ್ನು ಮಾತಾಡಿಸುವದಿಲ್ಲ; ಅವರಿಂದ ನಿಮಗೆ ಯಾವತರದ ಸಹಾಯವೂ ಆಗುವದಿಲ್ಲ. ಅಂದಮೇಲೆ ನಿಮಗೆ ಇಲ್ಲಿರುವದರಿಂದ ಯಾವ ತರದ ಲಾಭವೂ ಇಲ್ಲ. ನಿಮ್ಮ ಜಹಾಗೀರು ಇನ್ನೂ ಸ್ಥಿರವಾಗಿದೆ. ಕಿಸನಗಡದಲ್ಲಿ ಭವ್ಯವಾದ ವಾಡೆಯೂ ಅದೆ. ಅಲ್ಲಿ ನೀವು ಇದ್ದು ದೇವರ ಧ್ಯಾನದಲ್ಲಿಯೇ ಕಾಲಕಳೆಯಿರಿ. ರಾಮರಾಯನು ಸಕಲ ಜಹಾಗೀರಿನ ವ್ಯವಸ್ಥೆ ಮಾಡಲಿ. ಇದೇ ಈಗಿನ ಪವಿತ್ರ ಕರ್ತವ್ಯ ಕರ್ಮವು. ಈ ಕರ್ತವ್ಯವನ್ನು ನೀವು ಮರೆತದ್ದರಿಂದಲೇ ಈಶ್ವರನು ನಿಮಗೆ ಇಂಥ ಮಹಾ ಶಿಕ್ಷೆ ಯನ್ನು ಕೊಟ್ಟಿರುವನು. ” ಎಂದಳು.
ದಿವ್ಯ ಸುಂದರಿಯ ಈ ಬೋಧವು ಚಿಂತಾಮಣಿರಾಯನಿಗೆ ಸರಿದೋರಿತು. ಇಲ್ಲಿಯವರೆಗೆ ಕಿಸನಗಡವೆಂದರೆ ಚಿಂತಾಮಣಿರಾಯನು ಸೊಟ್ಟ ಮುಸುಡಿಯನ್ನು ಮಾಡುತ್ತಿದ್ದನು. ಅದೇ ಈಗ ಅವನಿಗೆ ತನ್ನ ಕರ್ತವ್ಯಭೂಮಿಯು ಮುಂಬಯಿಯಲ್ಲ ದಿದ್ದು, ಕಿಸನಗಡವೆಂಬುವದು ಸ್ಮರಣವಾಯಿತು. ಮತ್ತು ಅವನಿಗೆ ಮಾತೃಭೂಮಿಯ ಅವಲೋಕನ ಮಾಡದ ಬಗ್ಗೆ ಅತ್ಯಂತ ಅನುತಾಪವಾಯಿತು. ರಾಮರಾಯನು ಬೇಕಾದಷ್ಟು ಶಿಕ್ಷಣಸಂಪಾದನ ಮಾಡಿದವನಾಗಿದ್ದರೂ, ಈ ಪ್ರಸಂಗದಲ್ಲಿ ಅವನ ಬುದ್ದಿಯು ಕುಂಠಿತವಾಗಿದ್ದಿತು. ಮುಂದೇನು ಮಾಡಬೇಕೆಂಬ ಆಲೋಚನೆಯಲ್ಲಿಯೇ ಅವನೂ ಮಗ್ನನಾಗಿದ್ದನು. ಆದರೆ ದಿವ್ಯಸುಂದರಿಯ ಭಾಷಣವನ್ನು ಕೇಳಿ ಒಮ್ಮೆಲೆ ಅವನ ಮನಸೂ ಕಿಸನಗಡದ ಕಡೆಗೆ ಹೊರಳಿತು. ತಂದೆಮಕ್ಕಳಿಗೆ ದಿವ್ಯಸುಂದರಿಯ ಅಭಿಪ್ರಾಯವು ಯೋಗ್ಯವಾಗಿ ಕಾಣುತ್ತಲೇ ಅವರು ಎರಡನೇ ದಿವಸ ಮುಂಬಯಿ ಯನ್ನು ಬಿಟ್ಟು ಕಿಸನಗಡಕ್ಕೆ ಬಂದರು. ಕಿಸನಗಡದ ಆ ಸಭ್ಯ ವರ್ತನದ ಪ್ರೇಮಲ ಮನುಷ್ಯರನ್ನು ನೋಡಿ ಚಿಂತಾಮಣಿರಾಯನ ಕಣ್ಣಿನ ಮುಂದೆ ಮುಂಬಯಿಯ ಸುಧಾರಿಸಿದ ಮನುಷ್ಯರ ಕೃತ್ರಿಮ ಸಭ್ಯತೆಯು ಮೂರ್ತಿಮಂತವಾಗಿ ನಿಂತಿತು. ಹರಕು ಧೋತರವನ್ನುಟ್ಟಂಥ, ಅಲ್ಲಲ್ಲಿಗೆ ಗಂಟುಹಾಕಿದ ಮುಂಡಾಸಗಳನ್ನು ಸುತ್ತಿಕೊಂಡಂಥ, ಚಣ್ಣದ ಅರಿವೆಯ ಅಂಗಿಯನ್ನು ಹಾಕಿಕೊಂಡಂಥ ಕಿಸನಗಡದ ಜನರ ಬಾಯಿಯೊ ಳಗಿಂದ ಮೇಲೆ ಹೊರಡುತ್ತಿದ್ದ ಧನಿಯರು ' ಎಂಬ ಶಬ್ದವನ್ನು ಕೇಳಿ ಅವನ ಕಣ್ಣುಗಳಲ್ಲಿ ಕಣ್ಣೀರುಗಳು ಉದುರಹತ್ತಿದವು. ಈ ಭಾರತಭೂಮಿಯ ನಿಜವಾದ ಮಕ್ಕಳನ್ನು ಬಿಟ್ಟು-ಇವರ ಉಪೇಕ್ಷೆಯನ್ನು ಮಾಡಿ, ಆ ಪಟ್ಟಣದೊಳಗಿನ ಲೋಲು ಗಾರರ ಅದರ ಸತ್ಕಾರ ಮಾಡಿದ ಬಗ್ಗೆ ಅವನಿಗೆ ಪೂರ್ಣ ಖೇದವಾಯಿತು. ರಾಮರಾ ಯನ ಸ್ಥಿತಿಯಾದರೂ ಹಾಗೇ ಆಯಿತು. ಆ ಸಣ್ಣ ಧನಿಯರು ” ಎಂದನ್ನು ಪುನ: ಪುನಃ ನಮಸ್ಕಾರ ಮಾಡಹತ್ತಿದ ಕೂಡಲೆ ರಾಮರಾಯನ ಮನಸ್ಸಿನಲ್ಲಿ ಕಲ್ಪನಾತೀ
೧೦೨ -------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ತವಾದ ರೂಪಾಂತರವಾಯಿತು. ಆಗ ಅವನಿಗೆ ಮುಂಬಯಿಯೊಳಗಿನ ಶೇಕಕ್ಕಾಂಡ ಮಾಡುವ ಗಾವಠಿ ಸಾಹೇಬರ ಹೃದಯವು ದೊಡ್ಡದೋ, ಈ ಆಸನಗಡಜನರ ಹೃದಯವು ದೊಡ್ಡದೋ ಎಂಬ ಬಗ್ಗೆ ದೊಡ್ಡ ಪ್ರಶ್ನೆಯೇ ಬಿದ್ದಿತು. ವಿಚಾರ ಮಾಡುತ್ತ ಮಾಡುತ್ತ ಕಡೆಗೆ ಅವನಿಗೆ ಕಿಸನಗಡಜನರ ಹೃದಯವು ದೊಡ್ಡದೆಂದು ಸಂಪೂರ್ಣ ಮನವರಿಕೆಯಾಯಿತು. ಸಾರಾಂಶ, ನಿಜವಾದ ಕಾರ್ಯಕ್ಷೇತ್ರಕ್ಕೆ ಬಂದದ್ದರಿಂದ ರಾಮರಾಯ-ಚಿಂತಾಮಣಿರಾಯರಿಗೆ ಬಹು ಸಮಾಧಾನವಾಯಿತು. ಅವರ ಕಾಲ ಕ್ರಮಣವು ಒಳ್ಳೆ ರೀತಿಯಿಂದ ನಡೆಯಹತ್ತಿತು.
ಕಿಸನಗಡಕ್ಕೆ ಹೋದ ಆರು ತಿಂಗಳಲ್ಲಿಯೇ ಚಿಂತಾಮಣಿರಾಯನ ಸ್ಥಿತಿಯಲ್ಲಿ ಬಹಳ ಹೆಚ್ಚು ಕಡಿಮೆಯಾಯಿತು. ಯಾವಾಗಲೂ ವಿನೋದದಿಂದ ಕಾಲಗಳೆಯು ತಿದ್ದ ಅವನಿಗೆ ವಾನಪ್ರಸ್ಥಾಶ್ರಮವು ಸರ್ವಸ್ವವಾಗಿ ತೋರಿತು. ಸುಧಾರಣೆಯೆಂದು ವಿನೋದದ ಹಾಸಿಗೆಯಲ್ಲಿ ಹೊರಳಾಡುವ ಮನುಷ್ಯನು ಪಶುಸಮಾನನೆಂದು ಅವನಿಗೆ ತೋರಹತ್ತಿತು. ಅವನು ಸರ್ವವೇಳೆಯನ್ನು ಏಕಾಂತದಲ್ಲಿ ಕಳೆಯುತ್ತಿದ್ದನು. ಯಾರ ಭೆಟ್ಟಿಯನ್ನೂ ವಿಶೇಷವಾಗಿ ತಕ್ಕೊಳ್ಳುತ್ತಿರಲಿಲ್ಲ. ಅವನ ಮುಖಲಕ್ಷಣವು ಈಗ ಪ್ರಶಾಂತವಾಗಿಯೂ, ಅಧ್ಯಾತ್ಮವಿಚಾರದಿಂದ ಗಂಭೀರವಾಗಿಯೂ ತೋರುತ್ತಿದ್ದಿತು ಈ ಪ್ರಕಾರ ಇರುತ್ತಿರಲು ಒಂದು ದಿವಸ ವಾಡೆಯ ಹೊರಗೆ ಯಾರೋ ( ರಾಜಾಸಾ ಹೇಬರ ಬೆಟ್ಟಗೆ ಒಬ್ಬ ಗೃಹಸ್ಥರು ಬಂದಿದ್ದಾರೆ. ” ಎಂಬದಾಗಿ ಕೂಗಿದರು. ಆ ವೇಳೆ ಯಲ್ಲಿ ರಾಮರಾಯನು ಚಿಂತಾಮಣಿರಾಯನ ಹತ್ತರವೇ ಕುಳಿತಿದ್ದನು. ಆಗ ಚಿಂತಾ ಮಣಿರಾಯನು ರಾಮರಾಯನಿಗೆ ಹೇಳಿದ್ದೇನಂದರೆ- ರಾಮರಾಯ, ಹೋಗು, ಯಾರು ಬಂದಿದ್ದಾರೆ ನೋಡು, ಅವರಿಗೆ ಹಾಗೇ ಹೋಗಲಿಕ್ಕೆ ತಿಳಿಸು. ಯಾರ ಬೆಟ್ಟ ಯೂ ನನಗೆ ಬೇಕಿಲ್ಲ. ಅಷ್ಟರು-ಬಂಧುಬಳಗದವರು ಸಂಕಟಕಾಲದಲ್ಲಿ ಎಷ್ಟು ನೆರವಾಗುತ್ತಾರೆಂಬುವದು ಈಗ ನನಗೆ ಸಂಪೂರ್ಣ ಅನುಭವವಾಗಿದೆ. ಸರ್ವ ಮಿತ್ರರಲ್ಲಿ ಶ್ರೇಷ್ಠನೂ, ಸರ್ವಾಪ್ತರಲ್ಲಿ ಪ್ರೇಮಳನ್ನೂ, ಆಪತ್ಕಾಲಸಹಾಯಕನೂ ಆದ ಭಗವಂತನ ಸನ್ನಿಧಿಯ ಹೊರ್ತು ನನಗೆ ಈಗ ಇತರರ ಭಟ್ಟ ಬೇಕಿಲ್ಲ. ” ಎಂದನು. ತಂದೆಯ ಈ ಉದ್ದಾರವನ್ನು ಕೇಳಿ ರಾಮರಾಯನು ಅಲ್ಲಿಂದೆದ್ದು, ಯಾರು ಬಂದಿದ್ದಾರೆಂಬುದನ್ನು ನೋಡುವದರ ಸಲುವಾಗಿ ಹೊರಗೆ ಬಂದನು. ನೋಡುತ್ತಾನೆ ವಿನಾಯಕನು ! ಆ ಪ್ರಸಂಗದಲ್ಲಿ ಚಿಂತಾಮಣಿರಾಯ-ರಾಮರಾಯರ ಹೃದಯದಲ್ಲಿ ಎಷ್ಟೋ ವಿಷಯಗಳ ಸಲುವಾಗಿ ತಿರಸ್ಕಾರವು ಉತ್ಪನ್ನವಾಗಿದ್ದರೂ ವಿನಾಯಕ, ವಿನಾಯಕನ ಅಣ್ಣ ಕೃಷ ರಾಯ, ಮಾಧವರಾಯ ಈ ಮೂವರ ವಿಷಯವಾಗಿ ಮಾತ್ರ ಅವರ ಮನಸ್ಸಿನಲ್ಲಿ ಪೂರ್ಣ ಅದರವಿದ್ದಿತು. ವಿನಾಯಕನನ್ನು ನೋಡಿದ ಕೂಡಲೆ ರಾಮರಾಯನ ಹೃದ ಯವು ಆನಂದಮಯವಾಯಿತು. ಅವನು ವಿನಾಯಕನಿಗೆ ಆದರಪೂರ್ವಕವಾಗಿ ಒಳಗೆ ಕರಕೊಂಡು ಬಂದನು. ಆಗ ವಿನಾಯಕನು:- ಎಲ್ಲರ ಕುಶಲರಾಗಿದ್ದಾ
೧೦೩------------------------------------------೭ನೆಯ ಪ್ರಕರಣ ವಿವಾಹ.
ರಷ್ಟೆ? ರಾಜಾಸಾಹೇಬರು ಎಲ್ಲಿರುವರು ? ” ಎಂದು ಕೇಳಿದ ಕೂಡಲೆ ರಾಮ ರಾಯನು:- ಸರ್ವರೂ ಕುಶಲರಾಗಿದ್ದಾರೆ. ಬರಿ, ತಮ್ಮನ್ನು ರಾಜಾಸಾಹೇಬರ ಕಡೆಗೆ ಕರಕೊಂಡು ಹೋಗುತ್ತೇನೆ. ” ಎ೦ದನ್ನು ತ ಮುಂದಕ್ಕೆ ಹೋಗಹತ್ತಿದನು. ಅವನ ಹಿಂದೆ ವಿನಾಯಕನು ಹೋಗಹತ್ತಿದನು. ಪೂರ್ವದ ಪದ್ಧತಿಯಿಂದ ಕಟ್ಟಿದ ಆ ಹಳೇವಾಡೆಯ ಈ ಚೌಕಿನಿಂದ ಆ ಚೌಕಿಗೆ ಆ ಚೌಕಿನಿಂದ ಈ ಚೌಕಿಗೆ ಹೋಗು ಹೋಗುತ್ತ ಅವರಿಬ್ಬರು ವಾಡೆಯ ಹಿಂಭಾಗದ ಬಾಗಿಲಿನ ಹಿಂದೆ ಇದ್ದ ವಿಶಾಲ ವಾದ ತೋಟವನ್ನು ಹೊಕ್ಕು ಎದುರಿಗೆ ಕಾಣಿಸುತ್ತಿದ್ದ ಶಿವಾಲಯದಲ್ಲಿ ಹೋದರು. ಶಿವಾಲಯವು ಸಣ್ಣದಾದರೂ ಬಹು ಸುಂದರವಾಗಿದ್ದಿತು. ಆ ಶಿವಾಲಯದ ಒಂದು ಮೂಲೆಯಲ್ಲಿ ಚಿಂತಾಮಣಿರಾಯನು ಕುಳಿತಿದ್ದನು. ಅವನು ಮೈ ಮೇಲೆ ಶುಭ್ರವಾದ ಮಡಿಯ ವಸ್ತ್ರಗಳನ್ನು ಧಾರಣಮಾಡಿದ್ದನು. ತಲೆಯ ಮೇಲಿನ ಕೂದಲುಗಳೂ, ಗಡ್ಡವೂ ಬಹಳವಾಗಿ ಬೆಳೆದಿದ್ದವು. ಅವನ ಹತ್ತರ ಐದಾರು ಅಧ್ಯಾತ್ಮವಿಷಯದ ಪುಸ್ತಕಗಳು ಬಿದ್ದಿದ್ದವು. ಇಂಥ ಶಾಂತ-ಗಂಭೀರಾವಸ್ಥೆಗಳಲ್ಲಿದ್ದ ಚಿಂತಾಮಣಿರಾಯ ನನ್ನು ನೋಡಿ ವಿನಾಯಕನ ಕಣ್ಣುಗಳು ಅಶ್ರುಗಳಿಂದ ತುಂಬಿಬಂದವ. ಅವನು ಚಿಂತಾಮಣಿರಾಯನಿಗೆ ನಾಷ್ಟಾಂಗನಮಸ್ಕಾರವನ್ನು ಮಾಡಿ ಅವನ ಬಳಿಯಲ್ಲಿ ಹೋ ದನು. ಈ ವೇಳೆಯಲ್ಲಿ ದಿವಸುಂದರಿ-ಮಧುರೆಯರು ಅಲ್ಲಿಯೇ ಕುಳಿತಿದ್ದರು. ವಿನಾ ಯಕನು ಸುಮ್ಮನೆ ಕುಳಿತದ್ದನ್ನು ನೋಡಿ ಚಿಂತಾಮಣಿರಾಯನು ವಿನಾಯಕನನ್ನು ಉದ್ದೇಶಿಸಿ:- ನಮ್ಮ ಭೆಟ್ಟಿಗಾಗಿ ನೀವಿಷ್ಟು ದೂರ ಬಂದದ್ದಕ್ಕಾಗಿ ನಮ್ಮೆಲ್ಲರಿಗೆ ಪರಮಾನಂದವಾಯಿತು. ನಿಮ್ಮ ಕಾರಖಾನೆಯ ಕೆಲಸವು ಚನ್ನಾಗಿದೆಯಷ್ಟೇ? ” ಎಂದು ಕೇಳಲು ವಿನಾಯಕನು ನಮ್ರವಾಗಿ:- ಹೌದು ರಾಜಾಸಾಹೇಬ, ಕಾರ ಖಾನೆಯ ಕೆಲಸವು ಚನ್ನಾಗಿ ನಡೆದದೆಯೆಂದು ಮೇಲೆ ಪತ್ರ ಬರುತ್ತವೆ. ನಾನು ಸ್ವತಃ ಇನ್ನೂ ಕಾರಖಾನೆಗೆ ಹೋಗಿಲ್ಲ. ನಾನು ಇಷ್ಟು ದಿವಸ ಮುಂಬಯಿ ಮೊದ ಲಾದ ಸ್ಥಳಗಳಲ್ಲಿ ಇದ್ದೆನು. ನಾನು ತಮಗೊಂದು ಆನಂದದ ಸಂಗತಿಯನ್ನು ಹೇಳ ಲಿಕ್ಕೆ ಬಂದಿದ್ದೇನೆ. ” ಎಂದನ್ನಲು ಚಿಂತಾಮಣಿರಾಯನು:- ಈಗ ನನಗೆ ಆನಂದದ ಸಂಗತಿಯೂ ಬೇಕಾಗಿಲ್ಲ, ದುಃಖದ ಸಂಗತಿಯೂ ಬೇಕಾಗಿಲ್ಲ; ಎರಡೂ ಅಷ್ಟೇ ನಾನು ಮುಂಬಯಿಯನ್ನು ಬಿಡುವಾಗ ನೀವೂ, ಕೃಷ್ಣರಾಯನೂ, ಮಾಧವರಾಯನೂ ಕೂಡಿ ಬ್ಯಾಂಕಿನ ಸಂಬಂಧವಾಗಿ ಶೋಧನಡಿಸಿರುವಿರೆಂದು ಕೇಳಿದ್ದೆನು. ಆ ಕಾರ್ಯ ದಲ್ಲಿ ನೀವು ಯಶಸ್ವಿಗಳಾದರಷ್ಟೆ? ” ಎಂದನ್ನ ಲು ವಿನಾಯಕನು:- ಪರಮೇಶ್ವರನ ಕೃಪೆಯಿಂದ ಪೂರ್ಣ ಯಶಸ್ವಿಯಾದೆವೆಂದನ್ನಲಿಕ್ಕೆ ಏನೂ ಅಡ್ಡಿಯಿಲ್ಲ. ಪೋಲೀ ಸರು ಆರಂಭದಲ್ಲಿ ಕೌಕಸಿಮಾಡುವದಕ್ಕೆ ಒಳ್ಳೆ ಆತುರಮಾಡಿದರು. ಆದರೆ ಏನಾ ಯಿತೋ ಯಾರಿಗೆ ಗೊತ್ತು, ಆ ಚೌಕಸಿಯು ತಣ್ಣಗಾಗಹತ್ತಿತು. ನನಗೆ ಸಹಾಯಕ ನಾಗಿದ ಪೋಲೀಸ ಇನಸ್ಪೆಕ್ಟರನು ಬಹು ಹುಷಾರ ಮನುಷ್ಯನಾಗಿದ್ದನು. ಈ ಚೌಕ
೧೦೪------------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಸಿಯು ತಣ್ಣಗಾಗುತ್ತ ಹೋದಂತೆ ಅವನ ಉತ್ಸುಕತೆಯು ಹೆಚ್ಚಾಯಿತು. ಅವನು ಬೇರೊಂದು ಮಾರ್ಗದಿಂದ ಶೋಧಿಸಲಿಕ್ಕೆ ಆರಂಭಿಸಿದನು. ನಾನಿಷ್ಟು ದಿವಸ ಒಂದೇ ಸವನೆ ಅವನ ಸಂಗಡಲೇ ಇದ್ದೆನು. ಶೋಧ ಮಾಡುಮಾಡುತ್ತ ಕಡೆಗೆ ನಮ್ಮಿಬ್ಬರಿಗೆ ಆಸಾಮದೊಳಗಿನ ಚೇರಾಪುಂಜೀ ಗ್ರಾಮದಲ್ಲಿ ಎಲ್ಲ ಸಂಪತ್ತು ಸಿಕ್ಕಿತು. ಶಾಮ ರಾಯ ಗೋಪಾಳರಾಯ, ವಸಂತ ಮೊದಲಾಗಿ ಇಪ್ಪತ್ತು ನಾಲ್ಕು ಜನರ ಒಂದು ಟೋಳಿಯಿದ್ದು, ಅದರಲ್ಲಿ ಚೇರಾಪುಂಜಿಯ ಒಬ್ಬ ಜಮೀನದಾರನೂ ಸಮಾವೇಶ ವಾಗಿರುತ್ತಾನೆ. ಅವರಲ್ಲಿ ಬಂಗಾಲಿ, ಪಂಜಾಬಿ ಮೊದಲಾದ ಸರ್ವ ಜಾತಿಯವರಿದ್ದು ಎಷ್ಟೋ ವಿಶ್ವವಿದ್ಯಾಲಯದೊಳಗಿ ಸುಶಿಕ್ಷಿತರೂ ಸಮಾವೇಶವಾಗಿರುತ್ತಾರೆ. ಆ ಜಮೀ ನದಾರನ ಮನೆಯಲ್ಲಿ ಎಲ್ಲ ಕಾಗದಪತ್ರಗಳೂ, ಸಂಪತ್ತೂ ಸಿಕ್ಕಿರುತ್ತದೆ. ಮೂಲ ಸಂಸತ್ತಿನಲ್ಲಿ ಸ್ವಲ್ಪಾಂಶ ಮಾತ್ರ ನಷ್ಟವಾದಂತೆ ಕಾಣಿಸುತ್ತದೆ. ಈ ಪ್ರಕಾರ ಬ್ಯಾಂಕಿನ ಶೋಧವಾದದ್ದರಿಂದ ಮುಂಬಯಿಯೊಳಗಿನ ನೂರಾರು ಜನರು ಪೋಲೀಸ ಇನಸ್ಪೆಕ್ಷ ರನ ಸ್ತುತಿ ಮಾಡುತ್ತಿರುತ್ತಾರೆ. ಈ ಶೋಧದಲ್ಲಿ ಸ್ವಲ್ಪ ಜನರು ಮಾತ್ರ ಸಿಕ್ಕಿರುತ್ತಾರೆ. ಶಾಮರಾಯ, ಗೋಪಾಳರಾಯ, ವಸಂತ ಇವರ ಶೋಧವಾಗಿಲ್ಲ. ಈಗ ಆ ಚೌಕಸಿಗೆ ವಿಶೇಷಸ್ವರೂಪವು ಬಂದದ್ದರಿಂದ ಬೇಗನೆ ಎಲ್ಲರ ಶೋಧವಾಗಲಿಕ್ಕೆ ಅಡ್ಡಿಯಿಲ್ಲ. ಆ ಜಮೀನದಾರನಲ್ಲಿ ಯಾರ ಯಾರ ದುಡ್ಡು ಎಷ್ಟೆಷ್ಟೆಂಬ ಬಗ್ಗೆ ಬರೆದಿಟ್ಟ ಪ್ರಾಮಾ ಣಿಕತನದ ಜಮಖರ್ಚಿನ ಬುಕ್ಕೂ ಸಿಕ್ಕಿರುತ್ತದೆ. ಆದದ್ದರಿಂದ ಕಳಕೊಂಡವರ ದುಡ್ಡು ಬೇಗನೆ ಪೋಲೀಸರಿಂದ ಸಿಗುವದು. ” ಎಂದನು.
- ವಿನಾಯಕನು ಬ್ಯಾಂಕಿನ ವಾರ್ತೆಯನ್ನು ಸವಿಸ್ತಾರವಾಗಿ ಹೇಳಿದರೂ ನಾವು ಅದನ್ನು ಸಂಕ್ಷೇಪಿಸಿ ಬರೆದಿರುತ್ತೇವೆ. ವಿನಾಯಕನ ಹೇಳುವದು ಮುಗಿದ ಮೇಲೆ ಚಿಂತಾಮಣಿರಾಯನು:- ವಿನಾಯಕರಾಯ, ನಿಮ್ಮ ಉಪಕಾರವು ನಮ್ಮ ಮೇಲೆ ಬಹಳವಾಯಿತು, ಆ ಬಗ್ಗೆ ನಿಮ್ಮ ಉಪಕಾರವನ್ನು ನಾನು ಮನ್ನಿಸದಿದ್ದರೂ ರಾಮರಾ ಯನು ಮನ್ನಿಸುವನು. ಯಾಕಂದರೆ, ಈಗ ನಾನು ಆ ಸಂಪತ್ತಿನಿಂದ .ಅಲಿಪ್ತನಾಗಿರು ವೆನು. ನಿಮ್ಮಿ ಉಪಕಾರಋಣದಿಂದ ಮುಕ್ತನಾಗುವದು ಅಶಕ್ಯವೇ ಸರಿ; ಆದರೂ ಅಂಶತಃ ಮುಕ್ತನಾಗಬೇಕೆಂದು ನಾನು ರಾಮಪುರದ ಎಲ್ಲ ಭೂಮಿಯನ್ನು ನಿಮಗೆ ಬಕ್ಷೀಸುಕೊಡುತ್ತೇನೆ. ಈ ಭೂಮಿಯನ್ನು ಕೆವಲ ನೀವು ಉಪಕಾರ ಮಾಡಿದರೆಂದು ನಿಮಗೆ ನಾನು ಬಕ್ಷೀಸು ಕೊಡುವದಿಲ್ಲ. ಆದರೆ ಬೆಲೆ ಬಾಳದಿದ್ದ ಭೂಮಿಯಲ್ಲಿ ಈಗ ನೀವು ಬಂಗಾರದಂತ ಬೆಲೆ ಬರುವಂತೆ ಮಾಡಿದ ಪ್ರಯತ್ನ ಗುಣಕ್ಕೆ ಈ ಅಲ್ಪ ಪಾರಿ ತೋಷವನ್ನು ಕೊಟ್ಟಿದ್ದೇನೆ. ನಮ್ಮ ದೇಶದಲ್ಲಿ ಸದುದ್ಯಮಶೀಲರೂ, ಕಲ್ಪಕರೂ ಆದ ಜನರು ಸ್ವಲ್ಪ ಇರುತ್ತಾರೆ. ನಾವು ಕೈಯಿಂದಾದಷ್ಟು ಅಂಥವರ ಬಗ್ಗೆ ಈ ಪ್ರಕಾರ ಉತ್ಸಾಹಗೊಟ್ಟರೆ ನಮ್ಮ ದೇಶಕ್ಕೆ ಒಳ್ಳೇ ಹಿತವಾಗುವ ಸಂಭವವಿದೆ, ” ಎಂದಂದನು. ಆಗ ವಿನಾಯಕನು:-" ನನ್ನ ಯೋಗ್ಯತೆಗೆ ನೀವು ಕೊಟ್ಟ ಬಕ್ಷೀಸು ತೀರ ಹೆಚ್ಚಿನದೇ
೧೦೫-------------------------------------೬ನೆಯ ಪ್ರಕರಣ-ವಿವಾಹ
ಸರಿ. ” ಎಂದನ್ನಲು ರಾಮರಾಯನು:- ತಮ್ಮ ಯೋಗ್ಯತಾದೃಷ್ಟಿಯಿಂದ ನೋಡಿ ದರೆ ತಮಗೆ ಕೊಟ್ಟ ಬಕ್ಷೀಸು ತೀರ ಕಡಿಮೆ ತರಹದು. ಇರಲಿ. ತಾವು ಮೊದಲು ಫಲಾಹಾರ ಮೊದಲಾದದ್ದು ತೆಗೆದುಕೊಂಡು ಸ್ವಲ್ಪ ವಿಶ್ರಾಂತಿಯನ್ನು ತಕ್ಕೊಳ್ಳಿರಿ. ಆ ಮೇಲೆ ಬೇಕಾದಷ್ಟು ಹೊತ್ತು ಮಾತಾಡುತ್ತ ಕುಳಿತುಕೊಳ್ಳಿರಿ. ” ಎಂದಂದು ಅವನು ಫಲಾಹಾರದ ಸಿದ್ಧತೆಗಾಗಿ ದಿವಸುಂದರಿ-ಮಧುರೆಯರನ್ನು ಕಳಿಸಿದನು. ಅವರು ಹೋದ ಕೆಲಹೊತ್ತಿನ ಮೇಲೆ ರಾಮರಾಯ: -ವಿನಾಯಕರು ಹೋಗುವದಕ್ಕಾಗಿ ಎದ್ದರು. ಆಗ ಚಿಂತಾಮಣಿರಾಯನು ರಾಮರಾಯನನ್ನು ಉದ್ದೇಶಿಸಿ,:-' ರಾಮರಾಯ, ನೀನು ಇವರಿಗೆ ಫಲಾಹಾರಕ್ಕೆ ಕಳಿಸಿ ಕಾಗದ-ಪೌತಿ-ಲೆಕ್ಕಣಿಕೆಗಳನ್ನು ತೆಗೆದುಕೊಂಡು ಬಾ. ನಾನು ಒಂದು ಪತ್ರ ಬರೆಯಬೇಕಾಗಿದೆ. ” ಎಂದನು. ಚಿಂತಾಮಣಿರಾಯನ ಮಾತಾಡಿದ್ದರ ಅರ್ಥವು ಕೂಡಲೆ ರಾಮರಾಯನಿಗೆ ತಿಳಿಯಿತು. ಆದದ್ದರಿಂದ ಅವನು ನಗುತ್ತ ವಿನಾಯಕನನ್ನು ಕರಕೊಂಡು ಹೋದನು. ವಿನಾಯಕನಿಗೆ ಮಾತ್ರ ರಾಮ ರಾಯನ ನಕ್ಕ ಕಾರಣವು ತಿಳಿಯಲಿಲ್ಲ. ವಿನಾಯಕನ ಆ ದಿವಸವು ಅಲ್ಲಿಯೇ ಕಳೆದು ಹೋಯಿತು. ದಿವ್ಯಸುಂದರಿಗೆ ಕಡೆಗೆ ಕ್ಷೇಮಸಮಾಚಾರವನ್ನಾದರೂ ಕೇಳಬೇಕೆಂದು ವಿನಾಯಕನು ಬಹು ಪ್ರಯತ್ನ ಮಾಡಿದನು. ಆದರೆ ಏನಿದ್ದಿತೋ ಏನೋ, ಚಿಂತಾಮ ೯ಣಿರಾಯನು ರಾಮರಾಯನ ಕಡೆಯಿಂದ ಪತ್ರ ಬರಿಸಿದ ಸಂಗತಿಯನ್ನು ಕೇಳಿದಾಗಿ ನಿಂದ ಅವಳು ವಿನಾಯಕನ ಎದುರಿಗೆ ಒಂದು ಕ್ಷಣಹೊತ್ತಾದರೂ ನಿಲ್ಲಲಿಲ್ಲ. ಮೊದಲು ಅವಳು ವಿನಾಯಕನೊಡನೆ ಎಷ್ಟೋ ಮಾತುಗಳನ್ನಾಡುತ್ತಿದ್ದಳು; ಆದರೆ ಈ ವೇಳೆ ಯಲ್ಲಿ ಅವಳು ವಿನಾಯಕನೊಡನೆ ಮಾತಾಡುವದೊತ್ತಟ್ಟಿಗಿರಲಿ, ವಿನಾಯಕನ ಕಡೆಗೆ ಹಣಿಕಿ ಹಾಕಿ ನೋಡಲಿಲ್ಲ. ಎರಡನೇ ದಿವಸ ವಿನಾಯಕನು ಚಹಾವನ್ನು ತಕ್ಕೊಂಡು ಅನಂತರ ಊರಿಗೆ ಹೋಗುವ ಮಾತನ್ನು ತೆಗೆದನು; ಆದರೆ ಅವನಿಗೆ ರಾಮರಾಯನು ಹೋಗಲಿಕ್ಕೆ ಸಮ್ಮತಿಯನ್ನು ಕೊಡಲಿಲ್ಲ. ಇನ್ನೂ ೫-೬ ದಿವಸ ನಿಮಗೆ ಹೋಗಲಿಕ್ಕೆ ಮಾರ್ಗವಿಲ್ಲೆಂದು ಖಂಡಿತವಾಗಿ ಹೇಳಿದ್ದರಿಂದ ವಿನಾಯಕನು ನಿರುಪಾಯನಾಗಿ ಅಲ್ಲಿಯೇ ಇದ್ದನು. ಸುಮ್ಮನೆ ತಿರುಗಾಡುವದು ವಿನಾಯಕನಿಗೆ ಕಡುಹಗೆಯಂತೆ ಇದ್ದ ದ್ದರಿಂದ ಅವನು ಆ ಹಳ್ಳಿಯೊಳಗಿನ ಒಕ್ಕಲಿಗರ ಗುರ್ತುಮಾಡಿಕೊಂಡನು. ಮತ್ತು ಅವರ ಹೊಲದೊಳಗಿನ ಮಣ್ಣು ಶೋಧಿಸಿ ಇಂಥಿಂಥ ಭೂಮಿಯಲ್ಲಿ ಇಂಥಿಂಥ ಪೈರು ಬೆಳೆಯಬೇಕೆಂದು ತಿಳಿಸಿಕೊಟ್ಟನು. ಅವನು ಇದಕ್ಕಾಗಿ ದಿನಾ ಹೊಲಕ್ಕೆ ಹೋಗಿ ಸಾಯಂಕಾಲಕ್ಕೆ ವಾಡೆಗೆ ಬರುತ್ತಿದ್ದನು. ಅವನು ಒಂದು ದಿವಸ ವಾಡೆಯಲ್ಲಿ ಪ್ರವೇ ಶಿಸುವಾಗ, ಅದೇ ವಾಡೆಯೊಳಗಿಂದ ಹೊರಬಿದ್ದ ಕೃಷ್ಣರಾಯನನ್ನು ನೋಡಿದನು. ಅಣ್ಣನಾದ ಕೃಷ್ಣರಾಯನನ್ನು ನೋಡಿದ ಕೂಡಲೆ ಅವನಿಗೆ ಆನಂದವಾದಷ್ಟು ಆತ್ಮ ರ್ಯವೂ ಆಯಿತು. ಅವನು ಅಣ್ಣನ ತೀರ ಸಮೀಪಕ್ಕೆ ಹೋಗಿ ಸತಸ್ವರದಿಂದ: ( ಅಣ್ಣಾ, ಇದೇನು ನೀವು ಇತ್ತ ಬಂದಿರಿ ? ಅಂಥ ಮಹತ್ವದ ಕಾರಣವಿಲ್ಲವಷ್ಟೆ? ”
೧೦೬---------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
ಎಂದು ಕೇಳಲು ಕೃಷರಾಯನು:-( ಮಹತ್ವದ ಕಾರಣವಿದ್ದದ್ದರಿಂದಲೇ ನಾನು ಇಲ್ಲಿಗೆ ಬಂದಿರುವೆನು. ನನ್ನ ಸಂಗಡ ನಡೆ, ಅಂದರೆ ನಿನಗೆ ಎಲ್ಲಿ ಗೊತ್ತಾಗುವದು.” ಎಂದಂದನು. ವಿನಾಯಕನು ಗೊಂದಲದಲ್ಲಿ ಬಿದ್ದನು. ಅವನು ವಿಚಾರಮಾಡುತ್ತ ಕೃಷ್ಣ ರಾಯನ ಹಿಂದೆ ವಾಡೆಯೊಳಗೆ ಹೋದನು. ಹೋಗಿ ನೋಡುತ್ತಾನೆ, ಅಲ್ಲಲ್ಲಿಗೆ ಅಸ್ತ್ರ ವ್ಯಸ್ತವಾಗಿ ಬಿದ್ದ ಸಾಮಾನುಗಳನ್ನು ವ್ಯವಸ್ಥೆ ಮಾಡುವದರ ಸಲುವಾಗಿ ಎಷ್ಟೋ ಪುರುಷ-ಸ್ತ್ರೀಯರು ಮಗ್ನರಾಗಿದ್ದಾರೆ. ಇದನ್ನು ನೋಡಿ ವಿನಾಯಕನಿಗೆ ಮತ್ತಷ್ಟು ಆಶ್ಚರ್ಯವಾಯಿತು; ಆದರೆ ಈ ಸ್ಥಿತಿಯೂ ಅವನಿಗೆ ಬಹಳ ಹೊತ್ತು ಉಳಿಯಲಿಲ್ಲ. ಯಮುನೆಯು ವಿನಾಯಕನನ್ನು ನೋಡಿದ ಕೂಡಲೆ ಮುಂದಕ್ಕೆ ಬಂದು ನಗುತ್ತ: ( ಬ್ರಿ, ಮೈದುನರೇ, ಸ್ತ್ರೀರತ್ನವನ್ನು ದೊರಕಿಸುವದಕ್ಕಾಗಿ ನಮ್ಮನ್ನು ಬಿಟ್ಟು ನೀವೂ ಬ್ಬರೇ ಬರಬೇಕೇ ? ಆದರೂ ನಾವು ನಿಮ್ಮನ್ನು ಬಿಡುವಂತಿಲ್ಲ. ” ಎಂದನ್ನಲು ವಿನಾಯ ಕನಿಗೆ ಸರ್ವಸಂಗತಿಯು ಲಕ್ಷದಲ್ಲಿ ಬಂದಿತು. ಅದೇ ವೇಳೆಯಲ್ಲಿ ಕೃಷ್ಣರಾಯನು ವಿನಾ ಯಕನಿಗೆ ಎಲ್ಲ ವಾರ್ತೆಯನ್ನು ಹೇಳಿದ್ದರಿಂದ ವಿನಾಯಕನು ಮನದಲ್ಲಿಯೇ ಧನ್ಯನಾ ದೆನೆಂದು ಹಿಗ್ಗಿದನು. ಯಾವ ದಿವಸ ಚಿಂತಾಮಣಿರಾಯನು ಸರ್ವರ ಸಮಕ್ಷ ರಾಮ ರಾಯನ ಕಡೆಯಿಂದ ಪತ್ರ ಬರಿಸಿದನೋ ಆ ದಿವಸದೇ ಇದೆಲ್ಲ ಪರಿಣಾಮ. ಇದು ವಿನಾಯಕನಂತೆ ನಮ್ಮ ವಾಚಕರ ಲಕ್ಷದಲ್ಲಿ ಬಾರದೇ ಇರಲಿಕ್ಕಿಲ್ಲ. ಹಾಗೆಯೇ ಈ ಲಗ್ನವು ದಿವಸುಂದರಿ-ವಿನಾಯಕರದೆಂಬುವದನ್ನೂ ಬೇರೆ ಹೇಳಲಿಕ್ಕೆ ಕಾರಣವಿಲ್ಲ. ದಿವಸುಂದರಿ-ವಿನಾಯಕರ ಲಗ್ನದ ನಿಶ್ಚಯವಾದ ಕೂಡಲೆ ರಾಮರಾಯ, ಕೃಷ್ಣ ರಾಯ ಮೊದಲಾದ ಉಭಯ ಪಕ್ಷದವರು ಲಗ್ನದ ಒಳ್ಳೆ ಸಿದ್ದತೆ ಮಾದಡಿರು. ಸುಮು ಹೂರ್ತದಲ್ಲಿ ಒಳ್ಳೆ ವೈಭವದಿಂದ ದಿವ್ಯಸುಂದರಿ-ವಿನಾಯಕರ ಲಗ್ನವಾಯಿತು. ಆ ಲಗ್ನದಲ್ಲಿ ವಿದ್ಯುದ್ದೀಪಿಕೆಗಳು ದೃಷ್ಟಿಗೆ ಬೀಳಲಿಲ್ಲ, ಬ್ಯಾಂಡಿನ ಸಪ್ಪಳವು ಕೇಳಬರ ಅಲ್ಲ, ಮದ್ದು-ಮಸಿಗಳು ಹಾರಲಿಲ್ಲ, ವೇಶೈಯರ ಹಾಡು-ಕುಣಿತಗಳು ಕಂಡು ಬರಲಿಲ್ಲ; ಆದರೆ ಗೃಹಸ್ಥಧರ್ಮದ ಯಾವತ್ತೂ ರಹಸ್ಯಗಳು ಆ ಲಗ್ನದಲ್ಲಿ ಒಂದೂ ಆಗದೆ ಉಳಿಯಲಿಲ್ಲ. ಆ ಲಗ್ನ ಪದ್ಧತಿಯನ್ನು ನೋಡಿ ಎಷ್ಟೊ ಸಹೃದಯ ಮನುಷ್ಯರ ಕಣ್ಣುಗಳು ಆನಂದಾಶ್ರುಗಳಿಂದ ತುಂಬಿಬಂದವು. ಚಿಂತಾಮಣಿರಾಯನು-ಅಲ್ಲ ರಾಮರಾಯನು ಈ ಪ್ರಸಂಗದಲ್ಲಿ ಪಾತ್ರಾಪಾತ್ರ ವಿಚಾರಮಾಡಿ ಬಡ-ಬಗ್ಗರಿಗೆ ಕುರುಡ-ಕುಂಟರಿಗೆ, ಮೂಕ-ಕಿವುಡರಿಗೆ ಮೊದಲಾದ ಎಷ್ಟೋ ಅನಾಥರಿಗೆ ದಾನಧರ್ಮ ಮಾಡಿದನು. ಮತ್ತು ಹೊಲಿಯರು ಮೊದಲು ಮಾಡಿಕೊಂಡು ತನ್ನ ಪ್ರಜೆ ಗಳಿಗೆಲ್ಲ ನಾಲ್ಕು ದಿವಸ ಮಿಷ್ಟಾನ್ನದ ಊಟಗೊಟ್ಟನು.
====
೧೦೭ ------------------------------೮ನೆಯ ಪ್ರಕರಣ-ವಸಂತನ ಕಾರಸ್ಥಾನ.
೮ನೆಯ ಪ್ರಕರಣ
ವಸಂತನ ಕಾರಸ್ಥಾನ,
ಲಗ್ಸ ಸಮಾರಂಭವು ಮುಗಿದ ಮೇಲೆ ಕೃಷ್ಣರಾಯನು ವಿನಾಯಕ-ದಿವ್ಯ ಅದು ಸುಂದರಿಯರನ್ನು ಕರಕೊಂಡು ಮುಂಬಯಿಗೆ ಬಂದನು. ವಿನಾಯಕನು ನಾಲ್ಕು ದಿವಸ ಅಲ್ಲಿದ್ದು ಪುನಃ ರಾಮಪುರಕ್ಕೆ ಹೊರಟು ಬಂದನು.
ನಮ್ಮಂಥ ಸಾಧಾರಣ ಸ್ಥಿತಿಯ ಕುಟುಂಬದಲ್ಲಿ ದಿವ್ಯಸುಂದರಿಯು ಹೇಗೆ ನಡೆಯುತ್ತಾಳೆಂಬ ಬಗ್ಗೆ ಯಮುನೆಗೆ ಒಳ್ಳೆ ಚಿಂತೆಯಾಗಿದ್ದಿತು; ಆದರೆ ಬಂದ ನಾಲ್ಕು ದಿವಸದಲ್ಲಿಯೇ ಅವಳ ಉದ್ಯೋಗವ್ಯವಸ್ಥೆ, ಮಾತಾಡುವ ಪದ್ಧತಿ, ಹೊತ್ತು ಹೊತ್ತಿಗೆ ಕೆಲಸಮಾಡುವ ರೀತಿ ಈ ಮೊದಲಾದ ಬಾಲಬೋಧ ವರ್ತನವನ್ನು ನೋಡಿ ಯಮು ನೆಯ ಚಿಂತೆಯು ದೂರಾಯಿತು. ಇಷ್ಟೇ ಅಲ್ಲ. ಅವಳ ಮನಸ್ಸಿನಲ್ಲಿ ದಿವ್ಯಸುಂದ ರಿಯ ವಿಷಯವಾಗಿ ಸಹೋದರಿ ಅದರವು ಉತ್ಪನ್ನವಾಯಿತು. ಸ್ವಲ್ಪ ದಿವಸದಲ್ಲಿ ಅವರಿಬ್ಬರ ಮನಸ್ಸುಗಳು ಒಂದಾದವು. ನೆರೆಮನೆಯ ಸ್ತ್ರೀಯರಿಗೂ ಈ ರಾಜಾಬಹಾ
ರರ ಮಗಳು ಹೇಗೆ ನಡಕೊಳ್ಳುತ್ತಾಳೋ ಏನೋ ಎಂಬ ಬಗ್ಗೆ ದೊಡ್ಡ ವಿಚಾ ರವೇ ಬಿದ್ದಿದ್ದಿತು. ಆದರೆ ದಿವ್ಯ ಸುಂದರಿಯ ನಿರಭಿಮಾನ, ಸರಳವೂ ಪ್ರೇಮಲವೂ ಆದ ವರ್ತನ ಇವುಗಳನ್ನು ನೋಡಿ ಅವರಿಗೆ ಅವಳ ವಿಷಯವಾಗಿ ಆಶ್ಚರ್ಯವೆನಿ ಸಿತು. ಈ ಪ್ರಕಾರ ದಿವಸುಂದರಿಯು ಮುಂಬಯಿಯಲ್ಲಿ ಒಂದು ತಿಂಗಳು ಇದ ಮೇಲೆ ಒಂದು ದಿವಸ ಕಿಸನಗಡದಿಂದ ರಾಮರಾಯನು ಬಂದನು. ಅವನು ತನ್ನ ಸುಂದರಭವನದಲ್ಲಿ ನಾಲ್ಕು ದಿವಸವಿದ್ದು, ಆ ಮೇಲೆ ದಿವ್ಯಸುಂದರಿಯನ್ನು ಕರ ಕೊಂಡು ಕಿಸನಗಡಕ್ಕೆ ಹೋದನು. ಈಗ ಚಿಂತಾಮಣಿರಾಯನಿಗೆ ಸರ್ವಸಂಪತ್ತು ಮರಳಿ ಸಿಕ್ಕದ್ದರಿಂದ ಅವನಿಗೆ ತಿರುಗಿ ಮುಂಬಯಿಯಲ್ಲಿ ಪೂರ್ವ ವೈಭವದಿಂದ ಇರಲಿಕ್ಕೆ ಅಡ್ಡಿಯಿದ್ದಿಲ್ಲ; ಆದರೆ ಅವನಿಗೆ ವಾನಪ್ರಸ್ಥಾಶ್ರಮದ ಶಾಂತಿಸುಖದ ಸವಿಯು ಹತ್ತಿದ್ದ ರಿಂದ ಕಿಸನಗಡವನ್ನು ಬಿಡಲಿಕ್ಕೆ ಇಚ್ಚೆಯಿದ್ದಿಲ್ಲ. ರಾಮರಾಯನ ಮಾನಸಿಕ ಅವ ಸ್ಥೆಯೂ ತನ್ನ ತಂದೆಯಂತೆಯೇ ಆಗಿದ್ದಿತು. ಮುಂಬಯಿಯಲ್ಲಿದ್ದು ಮೋಟಾರದೊ ಳಗೆ ಕುಳಿತು ಸುಮ್ಮನೆ ಅತ್ತಿತ್ತ ತಿರುಗಾಡುವದಕ್ಕಿಂತ ಆಸನಗಡದ ಕರ್ತವ್ಯಕ್ಷೇತ್ರ ದಲ್ಲಿ ಸುಗುಣಸಂಪನ್ನ ಜನರೊಡನೆ ಕಾಲಕ್ಷೇಪ ಮಾಡುವದು ಅವನಿಗೆ ಈಗ ಅತಿ
೧೦೮--------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಶ್ರೇಯಸ್ಕರವಾಗಿ ತೋರಹತ್ತಿತು. ಮುಂಬಯಿಯ ಮಿತ್ರರ ಸಂಗಡ ನಿರರ್ಥಕವಾಗಿ ಹರಟಿಯನ್ನು ಹೊಡೆಯುವದಕ್ಕಿಂತ ಕೃಷಿಕರ್ಮಬಾಂಧವರಿಗೆ ಅವರ ಸುಖದುಃಖದ ಮಾತು ಹೇಳುವದರಲ್ಲಿ ಏನಾದರೂ ವಿಶೇಷವಿರುತ್ತದೆಂದು ಅವನಿಗೆ ತೋರಹತ್ತಿತು. ಅವನು ಒಬ್ಬ ಜಾಣ ವೈದ್ಯನನ್ನು ಕರಿಸಿ ಒಂದು ಧರ್ಮಾರ್ಥ ಔಷಧಾಲಯವನ್ನು ಕಿಸನಗಡದಲ್ಲಿ ಪ್ರಾರಂಭಮಾಡಿದನು. ಮತ್ತು ಅಲ್ಲಿ ಒಕ್ಕಲಿಗರ ಸಲುವಾಗಿ ಒಂದು ನವೀನ ಪದ್ಧತಿಯ ಶಾಲೆಯನ್ನು ಸ್ಥಾಪಿಸಿದನು. ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಸಂಗಡ ಕೃಷಿಶಿಕ್ಷಣಕೊಡುವ ನಿಯಮವಿದ್ದದ್ದರಿಂದ ಒಕ್ಕಲಿಗರಿಗೆ ಬಹಳ ಲಾಭವಾ ಗಹತ್ತಿತು. ಒಕ್ಕಲಿಗರ ಚಮತ್ಕಾರಿಕ ವರ್ತನ, ಭ್ರಾಮಕ ಕಲ್ಪನೆ, ಮದ್ಯದಂಥ ದುಷ್ಟವ್ಯಸನ ಇವುಗಳನ್ನು ಹೋಗಲಾಡಿಸುವದರ ಸಲುವಾಗಿ ಅವನು ಬಹಳೇ ಪ್ರಯತ್ನ ಮಾಡಿದನು. ಅದರಲ್ಲಿ ಅವನಿಗೆ ಸುಯಶಸ್ಫೂ ಪ್ರಾಪ್ತವಾಯಿತು. ಚತುರ ನಾದ ಇಂಜನಿಯರನನ್ನು ನವಕರಿಗೆ ಇಟ್ಟು ಕೊಂಡು ಎಲ್ಲ ಭೂಮಿಯಲ್ಲಿಯೂ ನೀರು ಹಾಯುವಂತೆ ಮಾಡಿದ್ದರಿಂದ ಜಹಾಗೀರಿನ ಉತ್ಪನ್ನವು ವಿಶೇಷವಾಗಿ ಬೆಳೆಯಿತು. ಒಕ್ಕಲಿಗರ ಸ್ಥಿತಿಯ ಬದಲಾಯಿಸಿತು. ಸುಧಾರಿಸಿದ ರಂಟೆ-ಕುಂಟೆ, ಉತ್ತಮ ಮಬೀಜ ಮೊದಲಾದವುಗಳ ಅನುಕೂಲತೆ ಮಾಡಿಕೊಟ್ಟಿದ್ದರಿಂದ ಒಕ್ಕಲಿಗರಿಗೆ ಮಿತಿಮೀರಿ ಲಾಭವಾಗಹತ್ತಿತು. ಈ ರೀತಿಯಿಂದ ರಾಮರಾಯನ ಕಾರ್ಯ ಕ್ಷೇತ್ರವು ಬೆಳೆಯುತ್ತ ಹೋದದ್ದರಿಂದ ಅವನಿಗೆ ಕಿಸನಗಡ ಬಿಟ್ಟು, ನಾಲ್ಕು ದಿವಸ ವಾದರೂ ಎರಡನೇ ಕಡೆಗೆ ಹೋಗಲಿಕ್ಕೆ ಇಚ್ಛೆಯಾಗುತ್ತಿದ್ದಿಲ್ಲ. ಗಂಡನ ಮನೆಯಿಂದ ಬಂದಂದಿನಿಂದ ದಿವ್ಯಸುಂದರಿಯ ಸೌಮ್ಯವೂ ಪ್ರೇಮಲವೂ ಆದ ವರ್ತನವನ್ನು ನೋಡಿ ಚಿಂತಾಮಣಿರಾಯನಿಗೆ ಬಹು ಸಮಾಧಾನವಾಯಿತು. ದಿವ್ಯಸುಂದರಿಯು ಹಾಗೂ ಹೀಗೂ ಒಂದು ತಿಂಗಳು ತವರ್ಮನೆಯಲ್ಲಿದ್ದ ಮೇಲೆ ತನ್ನನ್ನು ರಾಮಪುರಕ್ಕೆ ಕರಕೊಂಡು ಹೋಗಬೇಕೆಂದು ಮೇಲೆ ವಿನಾಯಕನಿಗೆ ಪತ್ರ ಬರೆದಳು. ಆಗ ವಿನಾಯಕನು ದಿವಸುಂದರಿಯನ್ನು ಕರಕೊಂಡು ಬಂದು ರಾಮಪುರಕ್ಕೆ ಕಳಿಸುವ ದಕ್ಕಾಗಿ ಕೃಷ್ಣರಾಯನಿಗೆ ಪತ್ರ ಬರೆದನು. ವಿನಾಯಕನಿಗಿಂತ ಮೊದಲು ಯಮುನೆ ಯು ದಿವ್ಯಸುಂದರಿಯನ್ನು ಕರಕೊಂಡು ಬರಬೇಕೆಂದು ಕೃಷ್ಣರಾಯನಿಗೆ ಗಂಟು ಬಿದ್ದಿದ್ದಳು. ಅದೇ ಸಮಯದಲ್ಲಿ ವಿನಾಯಕನ ಪತ್ರವು ಬಂದ ಕೂಡಲೆ ಕೃಷ್ಣ ರಾಯನು ಯಮುನೆಯ ಹೇಳಿಕೆಯಿಂದ ಇಬ್ಬರ ಪ್ರಪಂಚಕ್ಕೆ ಬೇಕಾದ ಸಾಮಾನು ಗಳನ್ನು ಸಿದ್ದಪಡಿಸಿ ಅವನ್ನು ಮುಂದಾಗಿಯೇ ರಾಮಪುರಕ್ಕೆ ಕಳಿಸಿದನು. ಮತ್ತು ಯಮುನೆಯನ್ನು ಕರಕೊಂಡು ಕಿಸನಗಡಕ್ಕೆ ಬಂದನು. ಅಲ್ಲಿ ನಾಲ್ಕು ದಿವಸವಿದ್ದು ಚಿಂತಾಮಣಿರಾಯನ ಆಜ್ಞಾನುಸಾರ ದಿವ್ಯ ಸುಂದರಿಯನ್ನು ಕರಕೊಂಡು ರಾಮ ಪುರಕ್ಕೆ ಬಂದನು. ಅವನು ಬರುವದಕ್ಕಿಂತ ಮೊದಲೇ ವಿನಾಯಕನು ಸ್ಥಳ ಮೊದ ಲಾದದ್ದನ್ನು ಗೊತ್ತು ಮಾಡಿಟ್ಟಿದ್ದನು. ಯಮುನೆಯು ನಾಲ್ಕು ದಿವಸ ರಾಮಪುರದಲ್ಲಿದ್ದು,
೧೦೯-----------------------------------೮ ನೆಯ ಪ್ರಕರಣ-ವಸಂತನ ಕಾರಸ್ಥಾನ,
ದಿವ್ಯಸುಂದರಿಗೆ ಸಂಸಾರದ ಪರಿಚಯ ಮಾಡಿಕೊಟ್ಟು ನಂತರ ಕೃಷ್ಣರಾಯನೊಡನೆ ಮುಂಬಯಿಗೆ ಹೊರಟುಹೋದಳು. . ಸಂಸಾರಭಾರವು ಒಮ್ಮೆಲೆ ಬಿದ್ದದ್ದರಿಂದಲೂ, ಇಷ್ಟು ದಿವಸ ವಿನೋದ-ವಿಶ್ರಾಂತಿ ಗಳಿಂದ ಕಾಲ ಕಳೆದದ್ದರಿಂದಲೂ ಈಗ ಮನೆಯ ಎಲ್ಲ ಕೆಲಸಮಾಡಲಿಕ್ಕೆ ದಿವ್ಯಸುಂದ ರಿಗೆ ತೊಂದರೆಯಾದೀತೆಂದು ವಿನಾಯಕನು ಅಡಿಗೆ ಮಾಡುವದರ ಸಲುವಾಗಿ ಒಬ್ಬ ನವಕರನನ್ನು ಗೊತ್ತು ಮಾಡಿದ್ದನು; ಆದರೆ ಆ ವ್ಯವಸ್ಥೆಯು ದಿವ್ಯಸುಂದರಿಯ ಮನ ಸ್ಸಿಗೆ ಬರಲಿಲ್ಲ. ಅವಳು ಭಾಂಡೆ ಮೊದಲಾದ ಸಾಮಾನುಗಳನ್ನು ತಿಕ್ಕುವದಕ್ಕಾಗಿ ಒಬ್ಬ ಮೇಲಕರಣಿಯನ್ನು ನವಕರಿಗೆ ಇಟ್ಟು ಕೊಂಡು ಉಳಿದ ಎಲ್ಲ ಕೆಲಸವನ್ನು ತಾನೇ ಸ್ವತಃ ಮಾಡಹತ್ತಿದಳು. ಮೊದಲು ಅವಳಿಗೆ ಸಾಕಜ್ಞಾನವು ಅಷ್ಟಕ್ಕಷ್ಟೇ ಇದ್ದಿತು; ಆದರೆ ಮುಂಬಯಿಯಲ್ಲಿ ಒಂದು ತಿಂಗಳು ಪತಿಗೃಹದಲ್ಲಿದ್ದಾಗ ಅನೇಕ ತರದ ಪಾಕ ವನ್ನು ಸಿದ್ಧ ಮಾಡುವ ಶಿಕ್ಷಣವನ್ನು ಯಮುನೆಯ ಕಡೆಯಿಂದ ಕಲಿತಿದ್ದಳು. ಉತ್ತಮ ಬುದ್ದಿಯೂ, ಪತಿ ಚಿತ್ರಸಂತುಷ್ಟ ಮಾಡುವ ವಿಲಕ್ಷಣವಾದ ಉತ್ಸುಕತೆಯೂ ಇದ್ದದ್ದ ರಿಂದ ವಿನಾಯಕನಿಗೆ ಅತಿಶಯ ರುಚಿಕರವಾದ ಆಹಾರವು ಸಿಗಹತ್ತಿತು. ಪ್ರಪಂಚದ ಸಲುವಾಗಿ ಕಾರಖಾನೆಯ ಕಡೆಗೆ ಸ್ವಲ್ಪ ಲಕ್ಷವು ಕಡಿಮೆಯಾದೀತೆಂದು ವಿನಾಯಕನಿಗೆ ಮೊದಲು ಭೀತಿಯಾಗಿದ್ದಿತು. ಆದರೆ ದಿವ್ಯಸುಂದರಿಯು ಪ್ರಪಂಚದ ಸಲುವಾಗಿ ವಿನಾ ಯಕನಿಗೆ ಕಡ್ಡಿಯಷ್ಟಾದರೂ ಚಿಂತೆಯಾಗದಂತೆ ಪ್ರಪಂಚದ ವ್ಯವಸ್ಥೆಯನ್ನಿಟ್ಟಳು. ಮೆಲ್ಲಮೆಲ್ಲನೆ ಕಾರಖಾನೆಯೊಳಗಿನ ಎಲ್ಲ ಜನರಿಗೆ ದಿವ್ಯಸುಂದರಿಯ ಪರಿಚಯವಾಯಿ ತು. ಅವಳ ಸದಾಚರಣೆ, ಪ್ರೇಮಲವೃತ್ತಿ, ದೀನದಯೆ ಮೊದಲಾದ ಗುಣಗಳನ್ನು ನೋಡಿ, ಪ್ರತ್ಯಕ್ಷ ಮೃಡಾಣಿಯೇ ದಿವಸುಂದರಿ ನಾಮದಿಂದ ಅವತರಿಸಿರುವಳೆಂದು ಎಲ್ಲರಿಗೂ ತೋರಹತ್ತಿತು. ತನ್ನ ಕೂಡ ನಡಕೊಳ್ಳುತ್ತಿದ್ದ ದಿವ್ಯ ಸುಂದರಿಯ ವರ್ತನ ವನ್ನು ನೋಡಿ ವಿನಾಯಕನು ಹರ್ಷತುಂದಿಲನಾದನು. ಕೇವಲ ಪೂರ್ವಜನ್ಮದ ಪುಣ್ಯ ಸಂಚಯದಿಂದ ಇಂಥ ಸುಸ್ವಭಾವದ ಪತ್ನಿಯು ದೊರಕಿದಳೆಂದು ನೆನಿಸಿ, ಅವನು ಪರಮೇಶ್ವರನ ಬಗ್ಗೆ ಕೃತಜ್ಞತೆಯನ್ನು ಪ್ರಕಟೀಕರಿಸಿದನು. ಈ ಪ್ರಕಾರವಾಗಿ ಈ ಸುಖದಾಂಪತ್ಯದ ಸಂಸಾರರಥವು ಮೂರು ವರ್ಷದವರೆಗೆ ನಿರ್ವಿಘ್ನವಾಗಿ ನಡೆಯಿತು. ಈ ಅವಧಿಯಲ್ಲಿ ದಿವ್ಯಸುಂದರಿಯು ಒಬ್ಬ ಸುಂದರ ಪುತ್ರನನ್ನು ಹಡೆದಿದ್ದಳು. ತನ್ನ ಹೊಟ್ಟೆಯ ಮಕ್ಕಳು ಬದುಕಿದ್ದರಿಂದ ಮಧುರೆಯು ದಿವ್ಯಸುಂದರಿಯ ಮಗನನ್ನು ತನ್ನ ಹತ್ತರ ಇಟ್ಟು ಕೊಂಡಿದ್ದಳು. ಯಮುನೆಗೆ ಎರಡು ಮಕ್ಕಳು ಇದ್ದವು. ಅವೂ ಒಮ್ಮೆ ಮೈ ಮಧುರೆಯ ಹತ್ತಿರ ಇರುತ್ತಿದ್ದವು. ಮಧುರೆಯ ಪೂರ್ವದ ವೈಭವದ ಅಭಿಮಾನವು ಸಮೂಲವಾಗಿ ನಾಶವಾದದ್ದರಿಂದ ಚಿಂತಾಮಣಿರಾಯನಿಗೆ ಆನಂದವಾಯಿತು. ಚಿಂತಾ ಮಣಿರಾಯನ ವೃದ್ದಾಪ್ಯಕಾಲದ ದಿವಸಗಳು ಒಳ್ಳೇ ಸುಖದಿಂದ ಕಳೆಯುತ್ತಿದ್ದವು. ಈಗ ತನ್ನ ಸಂಸಾರವೆಂಬ ಕಲ್ಪನೆಯು ಅವನಿಗಿಲ್ಲದಿದ್ದರೂ, ರಾಮರಾಯನ ಸುಖ
೧೧೦-----------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ವನ್ನು ನೋಡಿ ಅವನಿಗೆ ಸಮಾಧಾನವೆನಿಸಿತು. ದಿವ್ಯಸುಂದರಿಯ ಲಗ್ನ ವಾದ ಮೂರನೇ ವರ್ಷಕ್ಕೆ ಚಿಂತಾಮಣಿರಾಯನಿಗೆ ಒಮ್ಮೆಲೆ ದೇಹದಲ್ಲಿ ಅಸ್ವಸ್ಥತೆಯು ಉತ್ಪನ್ನ ವಾಯಿತು. ವೃದ್ದಾಪ್ಯಕಾಲದ ವೇದನೆಗಳನ್ನು ಸಹಿಸುವ ಶಕ್ತಿಯಿಲ್ಲದಂತಾದ ಕೂಡಲೆ ಅವನು ದಿವ್ಯಸುಂದರಿ-ವಿನಾಯಕರನ್ನು ಹತ್ತಿರ ಕರಿಸಿಕೊಂಡನು. ದಿನದಿನಕ್ಕೆ ಅವನ ಪ್ರಕೃತಿಯು ವೈದ್ಯನ ಶಕ್ತಿಗೆ ನಿಲುಕದಂತಾಯಿತು. ದಿವ್ಯಸುಂದರಿಯು ಬಂದ ಎಂಟ ನೇ ದಿವಸದಲ್ಲಿ ಚಿಂತಾಮಣಿರಾಯನು ಔಷಧೋಪಚಾರವನ್ನು ಕಟ್ಟು ಮಾಡಿಸಿ, ಒಳ್ಳೆ ಸಮಾಧಾನವೃತ್ತಿಯಿಂದ ಎಲ್ಲರ ನಿರೋಪನ್ನು ತೆಗೆದುಕೊಂಡನು. ಮತ್ತು ತನ್ನ ಇಹ ಲೋಕದ ಯಾತ್ರೆಯನ್ನು ಪೂರ್ಣಮಾಡಿ ದಿವ್ಯಲೋಕಕ್ಕೆ ಹೊರಟುಹೋದನು. ಚಿಂತಾಮಣಿರಾಯನ ಮೃತ್ಯುವಿನಿಂದ ಎಲ್ಲ ಕಿಸನಗಡದ ಜನರು ಹಳಹಳಿ ಬಟ್ಟರು. ಅವನ ಪರಿವಾರಕ್ಕಾದ ದುಃಖವನ್ನ೦ತೂ ವರ್ಣಿಸಲಿಕ್ಕೆ ಎಷ್ಟು ಲೆಕ್ಕಣಿಕೆಯಿಂದಾ ದರೂ ಆಗದು, ಚಿಂತಾಮಣಿರಾಯನ ಉತ್ತರಕಾರ್ಯವು ಯಥಾಸಾಂಗವಾಗಿ ಪೂರ್ಣ ವಾಯಿತು. ಮಧುರೆಯ ಆಗ್ರಹದಿಂದ ದಿವ್ಯ ಸುಂದರಿಯು ವಿನಾಯಕನೊಡನೆ ರಾಮ ಪುರಕ್ಕೆ ಹೋಗಲಿಲ್ಲ. ಕೆಲವು ದಿವಸ ತವರ್ಮನೆಯಲ್ಲಿಯೇ ಇದ್ದಳು. ಚಿಂತಾಮಣಿ ರಾಯನು ಸತ್ತ ಇಪ್ಪತ್ತು-ಇಪ್ಪತ್ತೈದು ದಿವಸವಾದ ಮೇಲೆ ಒಂದು ದಿವಸ ದಿವ್ಯ ಸುಂದರಿಯು ವಾಡೆಯಲ್ಲಿ ಒಕ್ಕಲಗಿತ್ತಿಯರೊಡನೆ ಮಾತಾಡುತ್ತ ಕುಳಿತಿರುವಾಗ ಒಬ್ಬ ಅರವತ್ತು-ಅರವತ್ತೈದು ವರ್ಷದ ಸಭ್ಯನಾಗಿ ಕಾಣಿಸುತ್ತಿದ್ದ ವೃದ್ದ ಗೃಹ ಸ್ಥನು ಚಿ೦ತಾಯುಕ್ತ ಮುದ್ರೆಯಿಂದ ಒಳಗೆ ಬಂದನು. ಮತ್ತು ಕುಳಿತಿದ್ದ ಸ್ತ್ರೀಯರ ಕಡೆಗೆ ನೋಡಿ ( ರಾಮರಾಯರು ಮನೆಯಲ್ಲಿ ಇದ್ದಾರೇನು ? ” ಎಂದು ಕೇಳಿದನು.
ದೀನಸ್ವರದಿಂದ ಹೇಳಿದ ಈ ವಾಕ್ಯವನ್ನು ಕೇಳಿದ ಕೂಡಲೆ ಮುದುಕನು ಏನೋ ಚಿಂತಾವಾರ್ತೆಯನ್ನು ಹೇಳಲಿಕ್ಕೆ ಬಂದಿರಬೇಕೆಂದು ಭಾವಿಸಿ, ದಿವ್ಯಸುಂದ ರಿಯು ಸಹಾನುಭೂತಿಪೂರ್ವಕ:- ಬರಿ ಕೂಡಿರಿ. ರಾಮರಾಯರು ಊರಿಗೆ ಹೋಗಿದ್ದಾರೆ. ಅವರು ನಾಳೆ ಇಲ್ಲವೆ ನಾಡದು ಬಂದಾರು. ನಿಮ್ಮ ಕೆಲಸವೇನು ? ” ಎಂದಳು. ದಿವ್ಯಸುಂದರಿಯು ತೋರಿಸಿದ ಸ್ಥಳದ ಮೇಲೆ ಕುಳಿತನಂತರ ಅವನು ದೀರ್ಘಶ್ವಾಸಬಿಟ್ಟು:-( ನಾನು ರಾಮಪುರದಿಂದ ವಿನಾಯಕರಾಯರ ಪತ್ರವನ್ನು ತಕ್ಕೊಂಡು ಬಂದಿದ್ದೇನೆ. ಅವರ ಪ್ರಕೃತಿಯಲ್ಲಿ ಒಮ್ಮಿಂದೊಮ್ಮೆಲೆ ವಿಶೇಷ ಅಸ್ವಸ್ಥ ಶೆಯು ಸಂಭವಿಸಿದ್ದರಿಂದ, ಅವರು ನಾಲ್ಕಾರು ಜನರನ್ನು ಸಂಗಡ ಕರಕೊಂಡು ಮುಂಬಯಿಯಲ್ಲಿರುವ ಕೃಷ್ಣರಾಯರ ಕಡೆಗೆ ಹೋಗುವದಕ್ಕಾಗಿ ಹೊರಟಿದ್ದಾರೆ. ಅವರು ವಜೀರಾಬಾದದಿಂದ ಬೋಟಿನೊಳಗೆ ಕುಳಿತು ರಾಜಮಹೇಂದ್ರಿಗೆ ಹೋಗಿ ಅಲ್ಲಿಂದ ರೇಲ್ವೆಯಿಂದ ಮುಂಬಯಿಗೆ ಹೋಗುತ್ತಾರೆ. ತಮ್ಮ ಸೌಭಾಗ್ಯವತಿಯು ಹಾದಿಯಲ್ಲಿಯೇ ತಮಗೆ ಭೆಟ್ಟಿಯಾಗಲಿಕ್ಕೆ ಬರಬೇಕೆಂದು ತಿಳಿಸುವದಕ್ಕಾಗಿ ನನಗೆ
೧೧೧--------------------------------೮ನೆಯ ಪ್ರಕರಣ-ವಸಂತನ ಕಾರಸ್ಥಾನ.
ಮುಂದೆ ಕಳಿಸಿದ್ದಾರೆ. ಇಲ್ಲಿಂದ ವರಂಗಲ್ಲದ ಸ್ಟೇಶನ್ನು ಸಮೀಪವಾಗಿರುವದರಿಂದ ಹಾದಿಯಲ್ಲಿ ಅವರ ಭೆಟ್ಟಿಯಾಗಲಿಕ್ಕೆ ಸಂಶಯವಿಲ್ಲ. ಇದೇ ಅವರು ಪತ್ರ ಕೊಟ್ಟಿ ದ್ದಾರೆ. ” ಎಂದನ್ನು ಪತ್ರವನ್ನು ದಿವಸುಂದರಿಯ ಕೈಯಲ್ಲಿ ಕೊಟ್ಟನು. ವಿನಾಯಕ ನಿಗೆ ವಿಶೇಷ ಅಜಾರಿಯಾಗಿದೆಯೆಂಬುವದನ್ನು ಕೇಳಿದ ಕೂಡಲೆ ದಿವ್ಯ ಸುಂದರಿಯ ಕೈಕಾಲೇ ಹೋದವು. ಅವಳು ಆ ಪತ್ರದ ಮೇಲಿನ ಆವರಣವನ್ನು ತೆಗೆದೊಗೆದು, ಪತ್ರವನ್ನು ಓದಲಿಕ್ಕೆ ಆರಂಭಮಾಡಿದಳು. ಪತ್ರದಲ್ಲಿ ಮುದುಕನು ಹೇಳಿದ ಸಂಗ ತಿಯೇ ಇದ್ದಿತು. ಅಕ್ಷರಗಳಾದರೂ ವಿನಾಯಕನ ಅಕ್ಷರಗಳಂತೆಯೇ ಇದ್ದವು. ಆ ಪರಿಚಯದ ಅಕ್ಷರವನ್ನು ನೋಡಿ, ಗಂಡನ ವ್ಯಾಧಿಯ ಸಂಗತಿಯನ್ನು ಓದಿ ಅವಳ ಅವಸ್ಥೆಯು ಒಳ್ಳೆ ಚಮತ್ಕಾರವಾದದ್ದಾಯಿತು. ರೆಕ್ಕೆಯನ್ನು ಕಟ್ಟಿಕೊಂಡು ವಿನಾ ಯಕನ ಹತ್ರ ಹಾರಿಹೋಗಬೇಕೆಂದು ಅವಳು ಆಲೋಚಿಸಿದಳು. ಆದರೆ ಆ ರೀತಿ ಯಿಂದ ಹೋಗುವದು ಮನುಷ್ಯ ಪ್ರಾಣಿಗೆ ಅಸಾಧ್ಯವೆಂಬುವದು ಲಕ್ಷದಲ್ಲಿ ಬಂದ ಕೂಡಲೆ ಅವಳು ತೀರ ಖಿನ್ನಳಾದಳು. ಅವಳು ಆ ಪತ್ರವನ್ನು ಮಧುರೆಗೆ ತೋರಿಸಿ, ಮುಂದೇನು ಮಾಡಬೇಕೆಂಬ ಬಗ್ಗೆ ಅವಳಿಗೆ ವಿಚಾರಿಸಿದಳು. ಮಧುರೆಯಾದರೂ ಏನು ಮಾಡುವಳು ? ರಾಮರಾಯನು ಮನೆಯಲ್ಲಿ ಇಲ್ಲದ್ದರಿಂದ ದಿವಸುಂದರಿಗೆ ಯಾರ ಸಹಾಯವನ್ನು ಕೊಡಬೇಕೆಂಬುವದು ಅವಳಿಗೆ ತಿಳಿಯಲಿಲ್ಲ. ಮನುಷ್ಯನ ಮೇಲೆ ಯಾವದೊಂದು ದುರ್ಘಟಪ್ರ ಸಂಗವು ಬಂದಿತೆಂದರೆ ಆಗ ಬುದ್ದಿ ಯು ಕುಂಠಿತವಾಗಿ ಹೋಗುತ್ತದೆ. ಈ ಪ್ರಕಾರ ಮಧುರಾ-ದಿವ್ಯ ಸುಂದರಿಯರು ಚಿಂತೆಮಾಡುತ್ತಿರುವಾಗ ಆ ಮುದುಕನು ತನ್ನ ಜಿಹ್ವಾಯಂತ್ರಕ್ಕೆ ಕೀಲಿಯನ್ನು ಕೊಟ್ಟನು. ಅವನು ದಿವ್ಯ ಸುಂದರಿಯ ದುಃಖವನ್ನು ಬೆಳಿಸಿ ಬೇಗನೆ ವಿನಾಯಕನಿಗೆ ಭೆಟ್ಟಿಯಾಗಬೇಕೆಂಬ ಆತುರವನ್ನು ಬೆಳಿಸಿದನು. ಅವನು ಗಂಭೀರ ವಾಗಿ:- ಅಹೋ ದಿವಸುಂದರಿಬಾಸಾಹೇಬರೇ, ಇದಕ್ಕೆ ಇಷ್ಟು ವಿಚಾರವ ಯಾತಕ್ಕೆ? ರಾಮರಾಯರು ಮನೆಯಲ್ಲಿ ಇಲ್ಲದಿದ್ದರೇನಾಯಿತು, ಅವರಿಗೊಂದು ಪತ್ರವನ್ನು ಬರೆದಿಟ್ಟು ನನ್ನ ಸಂಗಡ ನಡೆಯಿರಿ, ಹಿಂದಿನಿಂದ ರಾಮರಾಯರೂ ಮುಂಬಯಿಗೆ ಬಂದರಾಯಿತು. ಇದರಲ್ಲಿ ತೊಂದರೆಯಾದರೂ ಯಾವದದೆ ? ಈಗ ಸಣ್ಣ ಹುಡುಗರು ಕೂಡ ಆಗಗಾಡಿಯಲ್ಲಿ ಕುಳಿತು ಕಾಶಿಯಿಂದ ರಾಮೇಶ್ವರಕ್ಕೆ ಹೋಗುತ್ತಾರೆ. ನೀವು ನೋಡಿದರೆ ಓದಿದವರು, ಅಲ್ಲದೆ ನಾನು ನಿಮ್ಮ ಸಂಗಡಲೇ
ಇರುತ್ತೇನೆ ರಾಮರಾಯರ ಆಜ್ಞೆಯಿಲ್ಲದೆ ಹೇಗೆ ಹೋಗಬೇಕೆಂದು ನಿಮಗೆ ಚಿಂತೆ ಯಾಗಿರಬಹುದು; ಆದರೆ ಒಮ್ಮೊಮ್ಮೆ ಪ್ರಸಂಗಾನುಸಾರ ಹಿರಿಯರ ಅಪ್ಪಣೆಯಿಲ್ಲದೆ ಹೋಗಬೇಕಾಗುತ್ತದೆ. ವಿನಾಯಕರಾಯರು ನೋಡಿದರೆ ಬೇಗನೆ ಕರಕೊಂಡು ಬರಲಿಕ್ಕೆ ಹೇಳಿದ್ದಾರೆ. ಈಗ ನೀವು ಲಗು ಹೊರಟರೆ ರಾಜಮಹೇಂದ್ರ ಸ್ಟೇಶನ್ನದಲ್ಲಿ ಅವರಾನಿನ್ನೂ ಭೆಟ್ಟಿಯಾಗಬಹುದು. ” ಎಂದನು.
೧೧೨------------------------------------ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.
* ಮುದುಕನ ಈ ಉದ್ದಾರವನ್ನು ಕೇಳಿ ದಿವ್ಯ ಸುಂದರಿಯ ಮನಸ್ಸಿನಲ್ಲಿ ಅನಂತ ವಿಚಾರಗಳು ಉತ್ಪನ್ನವಾದವು. ಪತ್ರದೊಳಗಿನ ಅಕ್ಷರಗಳು ಅವಳ ಪೂರ್ಣ ಪರಿಚಯ ದವೇ ಇದ್ದದ್ದರಿಂದ, ಆ ಮುದುಕನು ಸುಳ್ಳು ಹೇಳುತ್ತಾನೆಂದು ಅವಳಿಗೆ ಸಂಶ ಯವು ಒರಲಿಲ್ಲ. ಬಹುದಿವಸ ಪತಿಯನ್ನ ಗಲಿದ್ದರಿಂದಲೂ, ಪತಿಗೆ ಸ್ವಸ್ಥವಿಲ್ಲೆಂದೂ ಹಾದಿಯಲ್ಲಿ ಭೆಟ್ಟಿಯಾಗಬೇಕೆಂದೂ ಹೇಳಿದ್ದನ್ನು ಕಿವಿಯಾರೆ ಕೇಳಿದ್ದರಿಂದಲೂ ಅವಳು ಹೋಗುವದನ್ನು ನಿಶ್ಚಯಿಸಿದಳು. ಕೂಡಲೆ ರಾಮರಾಯನಿಗೆ ಒಂದು ಪತ್ರವನ್ನು ಬರೆದಿಟ್ಟು ಹೊರಟು, ತ್ವರೆಯಿಂದ ಆ ಮುದುಕನ ಸಂಗಡ ವರಂಗಲ್ಲು ಸ್ಟೇಶನಕ್ಕೆ ಬಂದು ಮುಟ್ಟಿದಳು. ರಾಜಮಹೇಂದ್ರಿಯ ಕಡೆಗೆ ಹೋಗುವ ಗಾಡಿಯು ರಾತ್ರಿ ಹತ್ತೂವರೆಗೆ ಬಂದಿತು. ಅದು ಬಂದ ಕೂಡಲೆ ಇಬ್ಬರೂ ಸೆಕಂಡಕ್ಲಾಸಿನ ಗಾಡಿ ತಿಕೀಟು ತಕೊಂಡು ಗಾಡಿಯ ಮೇಲೆ ಹೋಗಿ ಕುಳಿತರು. ಗಾಡಿಯು ಕೆಲವು ದಾರಿ ಯನ್ನು ಕ್ರಮಿಸುವ ತನಕ ಅವಳು ಎಚ್ಚರದಿಂದ ಕುಳಿತಿದ್ದಳು. ಅನಂತರ ಅವಳು ಮುದುಕನ ಮೇಲೆ ವಿಶ್ವಾಸವಿಟ್ಟು ಹಾಗೇ ಬಾಕಿಗೆ ಒರಗಿಕೊಳ್ಳಲು ದುರ್ದೈವ ದಿಂದಲೋ ಏನೋ ಅವಳಿಗೆ ಗಪ್ಪನೆ ನಿದ್ರೆಯು ಹತ್ತಿತು. ದಿವ್ಯಸುಂದರಿಗೆ ನಿದ್ರೆ ಹತ್ತು ತಲೇ ಶಾಂತವಾಗಿದ್ದ ಆ ಮುದುಕನ ಮುಖವು ಭೀಷಣವಾಗಹತ್ತಿತು. ಅವನು ಬೊಕ್ಕಣದೊಳಗಿಂದ ಒಂದು ಸಣ್ಣ ಬಾಟ್ಲಿಯನ್ನು ತೆಗೆದು, ಅವಳ ಕಡೆಗೆ ಒಳ್ಳೆ ಚಮತ್ಕಾರಿಕ ದೃಷ್ಟಿಯಿಂದ ನೋಡಹತ್ತಿದನು. ಅಂದಮೇಲೆ ಆ ಬಾಟ್ಲಿಯಲ್ಲಿ ಏನಿ ದ್ವಿತೋ ಏನೋ ಯಾರಿಗೆ ಗೊತ್ತು ?
ದಿವಸುಂದರಿಯು ಹೋಗಿ ಎರಡು ದಿವಸವಾಯಿತು. ಮೂರನೇ ದಿವಸ ರಾಮರಾಯನು ಮನೆಗೆ ಬಂದನು. ಬಂದ ಕೂಡಲೆ ಅವನಿಗೆ ಮಧುರೆಯು ಎಲ್ಲ ಸಂಗ ತಿಯನ್ನು ಹೇಳಿದಳು. ಮಧುರೆಯ ಮಾತಿನಿಂದ ದಿವ್ಯ ಸುಂದರಿಯು ಹೋದದ್ದು ಬಹಳ ಒಳ್ಳೇದಾಯಿತೆಂದು ರಾಮರಾಯನಿಗೆ ತೋರಿತು. ಯಾಕಂದರೆ, ದಿವ್ಯ ಸುಂದರಿ-ವಿನಾಯಕರ ಅನ್ನೋನ್ಯವಾದ ಅಕಥನೀಯಪ್ರೇಮವನ್ನು ರಾಮರಾಯನು ಬಲ್ಲವನಾಗಿದ್ದನು. ವಿನಾಯಕನ ವಿಷಯವಾಗಿ ರಾಮರಾಯನ ಮನಸ್ಸಿನಲ್ಲಿ ನಿಲ ಕ್ಷಣವಾದ ಪ್ರೇಮವು ಮನೆಮಾಡಿಕೊಂಡದ್ದರಿಂದ ತಾನೂ ಮಧುರೆಯೊಡನೆ ಇನ್ನ ರಡು ದಿವಸ ಬಿಟ್ಟು ಮುಂಬಯಿಗೆ ಹೋಗಬೇಕೆಂದು ನಿಶ್ಚಯಿಸಿದನು. ಎರಡು ದಿವಸವಾದ ಮೇಲೆ ಮುಂಬಯಿಗೆ ಹೊರಡುವ ಸಿದ್ಧತೆ ಮಾಡುವಷ್ಟರಲ್ಲಿ ಶ್ರೇಷ್ಠ ಮನ್ನನು ಒಂದು ಸುಂದರವಾದ ಲಖೋಟಿಯನ್ನು ತಂದು ರಾಮರಾಯನ ಕೈಯಲ್ಲಿ ಕೊಟ್ಟನು. ಆ ಲಖೋಟಿಯು ಕೈಯಲ್ಲಿ ಬಿದ್ದ ಕೂಡಲೆ ರಾಮರಾಯನು ಅದು ದಿವ್ಯ ಸುಂದರಿಯ ಪತ್ರವೆಂಬುವದನ್ನು ಗುರ್ತು ಹಿಡಿದು ಅದರ ಮೇಲಿನ ಆವರಣವನ್ನು ಹರಿ ಯಲಿಕ್ಕೆ ಯತ್ನ ಮಾಡುವಷ್ಟರಲ್ಲಿ ಪತ್ರದ ಮೇಲೆ ಮದ್ರಾಸದ ಛಾಪು ಕಾಣಿಸಿತು. ಆಗ ರಾಮರಾಯನಿಗೆ ಸಖೇದಾಶ್ಚರ್ಯವಾಯಿತು. ಲಖೋತಿಯ ಒಂದು ಬದಿ
೧೧೩---------------------------------೮ನೆಯ ಪ್ರಕರಣ-ವಸಂತನ ಕಾರಸ್ಥಾನ.
ಯಲ್ಲಿ ' ದಿವಸುಂದರಿ ' ಯೆಂದು ಬರೆದಿದ್ದು, ಅದರ ಕೆಳಗೆ “ ಶ ಆಕೆಗೆ Fa: ” ಎಂಬ ಸುಂದರ ವಾಕ್ಯವು ಬರೆದಿದ್ದಿತು. ಬಂದ ಪಾಕೇಟು ದಿವಸುಂದರಿಯು ಉಪಯೋಗಿಸುವಂಥ ಪಾಕೇಟಿನಂತಹದೇ ಇದ್ದದ್ದರಿಂದಲೂ, ಪಾಕೇಶಿನ ಮೇಲ ಕ್ಷರಗಳು ಅವಳಂಥಹವೇ ಇದ್ದದ್ದರಿಂದಲೂ ರಾಮರಾಯನು ಬಂದ ಪಾಕೇಟು ದಿವ್ಯಸುಂದರಿಯದೇ ಎಂದು ನಿರ್ಧರಿಸಿದನು; ಆದರೆ ಪಾಕೇಟಿನ ಮೇಲೆ ಮದ್ರಾಸು ಛಾಪು ಇರುವ ಕಾರಣವೇನೆಂದಾಲೋಚಿಸಿ ಮತ್ತೆ ಅವನು ಗೊಂದಲದಲ್ಲಿ ಬಿದ್ದನು. ಇಷ್ಯರಲ್ಲಿ ಮಧುರೆಯು ಬಂದು ಪತಿಯ ಕೈಯೊಳಗಿದ್ದ ಲಖೋಟಿಯ ಕಡೆಗೆ ನೋಡಿ:- ದಿವ್ಯಸುಂದರಿಯ ಪತ್ರವು ಬಂದಂತೆ ತೋರುತ್ತದೆ. ” ಎಂದಳು. ಆಗ ರಾಮರಾಯನು:- ಹೌದು, ಪತ್ರವು ಅವಳದೇ ಇರುತ್ತದೆ; ಆದರೆ ಅದರ ಮೇಲೆ ಮದ್ರಾಸದ ಛಾಪು ಇರುವದಲ್ಲ! ” ಎನ್ನಲು ಮಧುರೆಯು ಬೆರಗಾಗಿ ( ಏನು! ಮದ್ರಾಸ. ” ಎಂದನ್ನಲು ರಾಮರಾಯನು ಹೌದು ' ಎಂದುತ್ತರಗೊಟ್ಟು, ಪತ್ರದ ಮೇಲಿನ ಆವರಣವನ್ನು ಗುರ್ತಿಗಿಟ್ಟು ಪತ್ರವನ್ನು ಓದಲಿಕ್ಕೆ ಆರಂಭಮಾಡಿದನು; ಆದರೆ ಪತ್ರದೊಳಗಿನ ಪ್ರತಿಯೊಂದು ಶಬ್ದಗಳು ಅವನ ಹೃದಯವನ್ನು ಭೇದಿಸಹತ್ತಿ ದವು. ಬರುಬರುತ್ತ ಅವನ ಮುಖಚಿನ ವು ಬದಲಿಸಹತ್ತಿತು. ಕಡೆಗೆ ಅವನು ಕೈಯಿಂದ ಹಣೆಹಣೆ ಹೊಡೆದುಕೊಂಡು ಕುಳಿತಿದ್ದ ಖುರ್ಚಿಯ ಮೇಲೆ ಹಾಗೇ ಬಿದ್ದು ಕೊಂಡನು. ಈ ಸ್ಥಿತಿಯನ್ನು ನೋಡಿ ಮಧುರೆಯು ತೀರ ಹುಚ್ಚಿಯಂತಾದಳು. ಅವಳು ತ್ವರಿತವಾಗಿ ರಾಮರಾಯನ ತಲೆಗೆ ನೀರು ತಟ್ಟಿ, ಹತ್ತಿರ ಕುಳಿತು ಗಾಳಿ ಯನ್ನು ಹಾಕಹತ್ತಿದಳು. ಸ್ವಲ್ಪ ವೇಳೆಯಾದ ಮೇಲೆ ರಾಮರಾಯನಿಗೆ ಎಚ್ಚರ ಹುಟ್ಟಲು ಮಧುರೆಯು ಕಣ್ಣೀರು ಒರಿಸಿಕೊಳ್ಳುತ್ತ ( ಅಂಥಹದೇನು ಆ ಪತ್ರದಲ್ಲಿ ಅಶುಭವಾರ್ತೆಯದೆ? ” ಎಂದು ಕೇಳಿದಳು. ಆಗ ರಾಮರಾಯನು ದೀರ್ಘನಿಶ್ವಾಸವನ್ನು ಬಿಟ್ಟು “ ನೀನೇ ಆ ಪತ್ರವನ್ನೊದು, ಅಂದರೆ ನಿನಗೆಲ್ಲ ತಿಳಿಯುತ್ತದೆ.” ಎಂದನು. ರಾಮರಾಯನು ಹೀಗೆ ಹತಾಶಾಸ್ವರದಿಂದ ಮಾತಾಡಿದ್ದರಿಂದ ಮಧುರೆಯು ಗದಗದ ನಡುಗಿ, ಕೆಳಗೆ ಬಿದ್ದ ಕಾಗದಗಳನ್ನೆಲ್ಲ ದುಂಡಗೆ ಮಾಡಿ ಅದರಲ್ಲಿ ರಾಮರಾಯನು ಓದಿದ ಪತ್ರವನ್ನು ಹುಡುಕಹತ್ತಿದಳು. ಅಷ್ಟರಲ್ಲಿ ಅವಳಿಗೆ ಒಂದು ಫೋಟೋ ತೆಗೆದ ಕಾಗದವು ಸಿಕ್ಕಿತು. ಕೂಡಲೆ ಅವಳು ಅದನ್ನು ರಾಮರಾಯನ ಕೈಯಲ್ಲಿ ಕೊಟ್ಟು ಇದೇನು ಯಾರ ಫೋಟೋ ? ” ಎಂದಳು. ರಾಮರಾಯನು ಘೋರ ಚಿ೦ತಾಗ್ರಸ್ತನಾಗಿ ಹೋದದ್ದರಿಂದ ಪತ್ರದ ಸಂಗಡ ಏನೇನು ಇರುತ್ತವೆ, ಎಂಬದರ ಕಡೆಗೆ ಅವನ ಲಕ್ಷವು ಹೋಗಿದ್ದಿಲ್ಲ. ಮಧುರೆಯು ಕೊಟ್ಟ ಪೋಟೋವನ್ನು ನೋ ಡಿದ ಕೂಡಲೆ ಅವನ ಕಣ್ಣುಗಳು ಬೆಂಕಿಯಂತೆ ಕೆಂಪಗಾದವು. ಆ ಫೋಟೋವನ್ನು ಏನು ಸುಡಲೋ, ಹರಿಯಲೋ, ಕಾಲೊಳಗೆ ಹಾಕಿ ತುಳಿಯಲೋ ಎಂದಂದು ನರಿ ನರಿ ಹಲ್ಲುಕಡಿಯಹತ್ತಿದನು. ಆದರೆ ಅಷ್ಟರಲ್ಲಿ ಅವನಿಗೆ ಏನು ತಿಳಿಯಿತೋ ಏನೋ,
೧೧೯--------------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಅವನು:- ಇದೇ ನರಾಧಮನೇ ನಮ್ಮ ಕುಲಕ್ಕೆ ಕಲಂಕಹಚ್ಚಿದನು ! ” ಎಂದ ನ್ನುತ್ತ ಆ ಹೋಟೋವನ್ನು ವ್ಯವಸ್ಥೆಯಿಂದ ಆ ಪಾಕೇಟಿನಲ್ಲಿ ಇಟ್ಟನು.
ಆ ಇಬ್ಬರಿಗೂ ಈ ಪ್ರಕಾರ ಚಮತ್ಕಾರಿಕ ಸ್ಥಿತಿಯು ಪ್ರಾಪ್ತವಾಗಬೇಕಾದರೆ ಆ ಪತ್ರದಲ್ಲಿ ಇದ್ದದ್ದಾದರೂ ಏನೆಂಬದನ್ನು ತಿಳಿಯಬೇಕೆಂದು ವಾಚಕರಿಗೆ ಇಚ್ಛೆ ಯಾಗುವದು ಸಾಹಜಿಕವಾಗಿದೆ. ಆದ್ದರಿಂದ ಆ ಪತ್ರದಲ್ಲಿಯ ಅಭಿಪ್ರಾಯವನ್ನು ಯಥಾವತ್ ಕೆಳಗೆ ಕೊಟ್ಟಿರುತ್ತೇವೆ.
ನಂ. ೨೧ ಮಾವುಂಟರೋಡ
ಮದ್ರಾಸ, ತಾರೀಖು # # # ಪರಮ ಪ್ರಿಯ ರಾಮರಾಯರಿಗೆ,
ಭಗಿನೀ ದಿವ್ಯಸುಂದರಿಯ ಸಾಷ್ಟಾಂಗಪ್ರಣಿಪಾತಗಳು. ಮುಂದಿನ ಸಂಗತಿ ಯನ್ನು ಓದಿ ನಿಮ್ಮ ಮನಸಿಗೆ ದುಃಖವೆನಿಸೀತು; ಆದರೆ ಅದಕ್ಕೆ ಉಪಾಯವಿಲ್ಲ, ನಾನು ಈಗ ತಮ್ಮ ಮತ್ತು ವಿನಾಯಕರಾಯನ ಮನೆಯನ್ನು ಬಿಟ್ಟೆನು, ಈ ಬಗ್ಗೆ ನನಗೆ ಚಿಂತೆಯಿಲ್ಲ. ನಾನು ಉಭಯವಂಶಕ್ಕೆ ಕಲಂಕ ಹಚ್ಚಿದೆನೆಂದು ನೀವು ಅಂದೀರಿ; ಆದರೆ ಅದಕ್ಕೆ ನನ್ನ ಜವಾಬದಾರಿಯಿಲ್ಲ. ಚಿಕ್ಕಂದಿನಿಂದ ನನಗೆ ದೊರೆತ ಶಿಕ್ಷಣದಿಂದ ನನ್ನ ಮನಸ್ಸಿನ ಮೇಲೆ ಯಾವ ಪರಿಣಾಮವಾಗಿದ್ದಿತೋ ಆ ಪರಿಣಾಮದ ದೃಷ್ಟ ಫಲವು ನನಗೆ ನಿಜವಾಗಿ ಈಗ ದೊರೆತಂತೆ ಕಾಣಿಸುತ್ತದೆ. ನನ್ನ ಅಧಃಪತನವಾಯಿ ತಂದು ನೀವು ಅಂದೀರಿ; ಆದರೆ ನನಗೆ ಮಾತ್ರ ಹಾಗೆ ತೋರುವದಿಲ್ಲ. ಇಷ್ಟೆ
ಯಾಕೆ, ನನಗೆ ನನ್ನ ಆಯುಷ್ಯದ ಸಾರ್ಥಕತೆಯು ಈಗ ಆರಂಭವಾಯಿತೆಂದು ತೋರುತ್ತದೆ. ಮೊದಲಿನಿಂದಲೆ ನನ್ನ ಮನಸ್ಸು ವಸಂತರಾಯರಲ್ಲಿಯೇ ಬೇರುಗೊಂಡಿ ಡ್ಡಿತು. ನೀವೂ, ತಂದೆಯವರೂ ಈ ಬಗ್ಗೆ ಸ್ವಲ್ಪ ವಿಚಾರಿಸದೆ, ಬಲಾತ್ಕಾರದಿಂದ ವಿನಾ ಯಕರಾಯರೊಡನೆ ನನ್ನ ಲಗ್ನ ಮಾಡಿಕೊಟ್ಟಿರಿ. ಅದರ ಪರಿಣಾಮವೇ ಇದೆಲ್ಲ! ವಿಚಾರಿಸಿನೋಡಿದರೆ ನನ್ನ ಪತಿಗಳು ವಸಂತರಾಯರೇ ಇರುತ್ತಾರೆ. ಇಲ್ಲಿಯವರೆಗೆ ಅವರನ್ನಗಲಿದ ನಾನು ಇಂದು ದೇವೀ ಕೃಪೆಯಿಂದ ಅವರನ್ನು ಕೂಡಿರುವೆನು. ಈ ಬಗ್ಗೆ ವಸಂತರಾಯರೂ, ನಾನೂ ಕೂಡಿಯೇ ಕುಳಿತು ತೆಗಿಸಿದ ಪೋಟೋದ ಒಂದು ಪ್ರತಿಯನ್ನು ತಮ್ಮ ಕಡೆಗೆ ಕಳಿಸಿರುತ್ತೇನೆ. ನಿಮಗೆ ಇನ್ನು ಅಲ್ಪಸ್ವಲ್ಪ ಬರಬೇಕಾದ ದುಡ್ಡಲ್ಲ ವಸಂತರಾಯರ ಕಡೆಗಿದ್ದಿತು. ಅದನ್ನು ನಾನೇ ಯುಕ್ತಿಯಿಂದ ಮತ್ತೊಂದು ಸ್ಥಳದಲ್ಲಿ ಇಟ್ಟಿರುತ್ತೇನೆ. ಅದರೊಳಗೆ ಎರಡುಲಕ್ಷ ರೂಪಾಯಿ ನೋಟುಗಳು ಪೇಟೆ ಯಲ್ಲಿ ಖರ್ಚಾಗುವದು ಶಕ್ಯವಿಲ್ಲದ್ದರಿಂದ ಅವುಗಳನ್ನು ವಸಂತರಾಯರು ಈ ಪೂರ್ವ ದಲ್ಲಿಯೇ ನನ್ನ ಕಡೆಗೆ ಕೊಟ್ಟಿದ್ದರು. ಅವುಗಳನ್ನು ಬರುವಾಗ ನಾನು, ಮಲಗುವ ಫಲಂಗದ ಗಾದಿಯ ಕೆಳಗೆ ಇಟ್ಟು ಬಂದಿರುತ್ತೇನೆ. ಹಿಂದಕ್ಕೆ ತಂದೆಯವರ ಗಡಿಯಾ
-೧೧೫------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ.
ಲದ ಮುತ್ತಿನ ಸರಪಳಿಯು ಕಳವಿನಿಂದ ಹೋಯಿತೆಂದು ನಿರ್ಧರವಾಗಿರುವದಷ?.. ವಾಸ್ತವಿಕ ಅದನ್ನು ನಾನೇ ಕದ್ದು ವಸಂತರಾಯರಿಗೆ ಬಕ್ಷೀಸು ಕೊಟ್ಟಿದ್ದನು. ಅವರು ಅದನ್ನು ಸ್ವಲ್ಪ ದಿವಸಗಳ ಪೂರ್ವದಲ್ಲಿ ತಿರುಗಿ ನನ್ನ ಕೈಯಲ್ಲಿ ಕೊಟ್ಟಿದ್ದರು. ಅದನ್ನೂ ಬರುವಾಗ ಗಾದಿಯ ಕೆಳಗೆ ಇಟ್ಟು ಬಂದಿರುತ್ತೇನೆ. ಉಳಿದ ರೂಪಾಯಿಗಳ ಸಲು ವಾಗಿ ಇನ್ನೂ ನೀವು ಪೋಲೀಸರ ಮುಖಾಂತರ ಚೌಕಸಿ ಮಾಡುತ್ತಿರುವಿರಿ; ಆನಂತರ ಹಾಗೆ ಮಾಡಬಾರದು; ಯಾಕಂದರೆ ಆ ರಕಮಿನ ಅಪಕಾರಕ ವಸಂತರಾಯರಿಗಿಂತ ನಾನೇ ಹೆಚ್ಚು ಜವಾಬದಾರಳಾಗಿದ್ದೇನೆ. ನೀನು ಸಣ್ಣ ಮಗುವನ್ನು ಬಿಟ್ಟು ಹೇಗೆ ಹೋದೀ ಎಂದು ನೀವು ನನಗೆ ಅಂದೀರಿ; ಆದರೆ ಆ ಸಂಪತ್ತು ವಿನಾಯಕನದಾದದ್ದ ರಿಂದ ಅವನಿಗೆ ಅದನ್ನು ಕೊಡಿರಿ. ಹೆಚ್ಚಿಗೆ ಏನು ಬರೆಯುವದು! ಇದೇ ನನ್ನ ಕಡೆಯ ಪತ್ರವು,
( ತಮ್ಮ ಭಗಿನೀ-ದಿವ್ಯಸುಂದರಿ, ” ಮೇಲಿನ ಪತ್ರದಿಂದ ರಾಮರಾಯ-ಮಧುರೆಯರಿಗೇ ಗೊಂದಲಬಿದ್ದ ಮೇಲೆ ದಿವ್ಯಸುಂದರಿಯ ಅಕ್ಷರಗಳನ್ನು ಎಂದೂ ನೋಡದೆ ಇದ್ದಂಥ ವಾಚಕರು ವಿಶೇಷ ವಾಗಿ ಗೊಂದಲದಲ್ಲಿ ಬೀಳುವದು ಆಶ್ಚರ್ಯವಲ್ಲ! ವಾಚಕರೇ, ಇಲ್ಲಿಯವರೆಗಿನ ದಿವ್ಯಸುಂದರಿಯ ಶುದ್ಧಾಚರಣೆಯನ್ನು ಕಣ್ಮುಟ್ಟಿ ನೋಡಿರುವ ನಿಮಗೆ ( ಈ ಪತ್ರವು ದಿವ್ಯಸುಂದರಿಯದೇ ? ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ನೀವು
• ಅಲ್ಲ' ಎಂದು ಹೇಳದೆ ಎಂದೂ ಇರಲಿಕ್ಕಿಲ್ಲ. ವಾಚಕಮಹನೀಯರೇ, ನಿಮ್ಮ ಅಭಿ ಪ್ರಾಯವು ನಿಜವಾಗಿದೆ. ಈ ಚಿತ್ರವೆಂದರೆ ವಸಂತನ ಕಾರಸ್ಥಾನ ! ಅವನು ಯಾವ ನೀಚರಲ್ಲಿ ಶಿಕ್ಷಣವನ್ನು ತಕ್ಕೊಳ್ಳುತ್ತಿದ್ದನೋ ಆ ನೀಚರು ಬೇಕಾದ ಅಕ್ಷರಗಳನ್ನು ತೋರಿಸಿದರೂ ತದ್ರೂಪ ಆ ಅಕ್ಷರಗಳಂತೆಯೇ ಬರೆಯುತ್ತಿದ್ದರು. ಇಂಥ ಚತುರ ಲೇಖಕರಿಗೆ ವಿನಾಯಕ-ದಿವ್ಯಸುಂದರಿಯರ ಅಕ್ಷರಗಳಂತೆ ಅಕ್ಷರಗಳನ್ನು ಬರೆಯಲಿಕ್ಕೆ ಏನು ಕಠಿಣವಾದೀತು ! ಅದು ಅವರ ಕೈಯೊಳಗೇ ಇದ್ದಿತು. ಈ ನೀಚರ ಪತ್ರ ದಿಂದ ಪಾಪ, ಆ ಸುಖದಾಂಪತ್ಯದ ಸರ್ವ ಚರಿತ್ರಸೃಷ್ಟಿಯು ಬದಲಾಗಿಹೋಯಿತು !
ಈ ಪತ್ರದ ರಹಸ್ಯವನ್ನು ನಾವು ನಮ್ಮ ವಾಚಕರಿಗೆ ಹೇಳಿದ್ದಾಯಿತು. ಆದರೆ ಆ ರಹಸ್ಯವನ್ನು ರಾಮರಾಯನಿಗೆ ಯಾರು ಹೇಳಬೇಕು. ಅವನು ಆ ಎಲ್ಲ ಸಂಗತಿಯು ನಿಜವೆಂದು ಭಾವಿಸಿದನು. ಆ ಬಗ್ಗೆ ಅವನಿಗೆ ಸಾಕಷ್ಟು ಪುರಾವೆಗಳೂ ಸಿಕ್ಕವು, ಪತ್ರವು ದಿವ್ಯಸುಂದರಿಯ ಕೈಯಿಂದ ಬರೆದದ್ದು ; ಗಾದಿಯ ಕೆಳಗೆ ಎರಡುಲಕ್ಷ ರೂಪಾಯಿಯ ಪ್ರಾಮಿಶರೀ ನೋಟು ಸಿಕ್ಕವು; ತಂದೆಯ ಮುತ್ತಿನ ಸರಪಳಿಯು ಸಿಕ್ಕಿತು; ಒಬ್ಬ ರಿಗೊಬ್ಬರು ಕೊರಳಲ್ಲಿ ಕೈ ಹಾಕಿಕೊಂಡು ತೆಗಿಸಿದ ವಸಂತದಿವ್ಯಸುಂದರಿಯರ ಫೋಟೋವಂತೂ ಅವನ ಕೈಯೊಳಗೇ ಇದ್ದಿತು ಇದಕ್ಕಿಂತ ಹೆಚ್ಚಿನ ಪುರಾವೆಗಳು ಏನು ಬೇಕು ? ಇಷ್ಟು ಪುರಾವೆಗಳನ್ನು ಚತುರ ನ್ಯಾಯಾಧೀಶನ ಮುಂದಿಟ್ಟರೆ ಅವನು
೧೧೬-------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ.
ಕೂಡ ದಿವಸುಂದರಿಗೆ ಕುಲಕಲಂಕಿನಿಯೊಂದನ್ನು ವನು; ಅಂದ ಮೇಲೆ ರಾಮರಾಯ ನಂಥ ಸಾಧಾರಣ ಮನುಷ್ಯನು ಹಾಗೆ ಭಾವಿಸುವದರಲ್ಲಿ ಆಶ್ಚರ್ಯವೇನು ? ದಿವಸುಂದರಿಯ ಆ ಪತ್ರದಿಂದ ಅವನ ಸ್ಥಿತಿಯು ನಿಜವಾಗಿ ಹುಚ ನಂತಾಗಿದ್ದಿತು. ಜಗತ್ತಿನಲ್ಲಿ ಮುಖವನ್ನು ತೋರಿಸಲಿಕ್ಕೆ ಕೂಡ ಮಾರ್ಗವು ಉಳಿಯಲಿಲ್ಲವೆಂದು ಅವನಿಗೆ ಕ್ಷಣಕ್ಷಣಕ್ಕೆ ತೋರಹತ್ತಿತು. ಇಲ್ಲಿಯವರೆಗೆ ದಿವ್ಯ ಸುಂದರಿಯ ವಿಷಯ ವಾಗಿ ಮಧುರೆಯ ಮನಸ್ಸು ಶುದ್ದ ಮಯವೂ, ಆದರಪೂರ್ಣವೂ ಆಗಿದ್ದಿತು; ಆದರೆ ಈಗ ಅವಳ ಮನಸ್ಸಿನಲ್ಲಿ ದಿವ್ಯಸುಂದರಿಯ ವಿಷಯವಾಗಿ ತಿರಸ್ಕಾರವು ಹುಟ್ಟಿತು. ಅವಳಿಗೆ ದಿವ್ಯಸುಂದರಿಯ ಪ್ರತ್ಯೇಕ ಪೂರ್ವಾಚರಣೆಗಳ ಬಗ್ಗೆ ಒಂದರಮೇಲೊಂದು ಸಂಶಯಗಳು ಬರಲಿಕ್ಕೆ ಹತ್ತಿದವು. ಹೀಗೆ ಅವಳಿಗೆ ಸಂಶಯಪಿಶಾಚಿಯು ಗಂಟುಬಿದ್ದ ಕೂಡಲೆ ಅವಳ ಮನಸ್ಸಿನ ವಿಕಾರಗಳು ವಿಪರೀತವಾದವು. ಅವಳು ರಾಮರಾಯ
ನನ್ನು ಕುರಿತು:-( ನೀವು ಬರುವ ಹೊರ್ತು ಹೋಗಬೇಡೆಂದು ನಾನು ದಿವ್ಯಸುಂದ ರಿಗೆ ಎಷ್ಟೋ ಸಾರೆ ಹೇಳಿದೆನು; ಆದರೆ ಅವಳು ಇಂಥ ಕೆಲಸವನ್ನು ಮಾಡುವವಳಾದ ದ್ದರಿಂದ ನನ್ನ ಮಾತು ಕೇಳದೆ ಆ ಮುದುಕನ ಸಂಗಡ ಹೊರಟುಹೋದಳು. ನಂತರ ಸ್ವಲ್ಪ ಹೊತ್ತು ವಿಚಾರಮಾಡಿ:-( ನನಗೆ ಆ ಮುದುಕನ ಬಗ್ಗೆ ಆಗಲೇ ಸಂಶಯವು ಬಂದಿತು. ಇದನ್ನು ನಾನು ಹೇಳಬೇಕೆನ್ನುವಷ್ಟರಲ್ಲಿ ಅವಳು ಆ ಮುದು ಕನನ್ನು ಏಕಾಂತಸ್ಥಳಕ್ಕೆ ಕರಕೊಂಡು ಹೋಗಿ ಮಾತಾಡಹತ್ತಿದಳು. ” ನಂತರ ಮತ್ತೆ ಸ್ವಲ್ಪ ಹೊತ್ತು ನಿಂತು:- ಇತ್ತ ಕಡೆಗಂತೂ ದಿವ್ಯಸುಂದರಿಯು ಬಾಗಿಲು ಮುಚ್ಚಿಕೊಂಡು ಎಷ್ಟೋ ಸಾರೆ ಒಳಗೆ ಕುಳಿತುಕೊಳ್ಳುತ್ತಿದ್ದಳು. ನಾನು ಹೀಗೇಕೆಂದು ಕೇಳಿದರೆ ' ದೇವರ ಪ್ರಾರ್ಥನೆ ಮಾಡುತ್ತೇನೆ. ” ಎಂದು ಹೇಳುತ್ತಿದ್ದಳು. ದೇವರ ಪ್ರಾರ್ಥನೆ ಎಲ್ಲಿಯದು! ಗುಪ್ತವಾಗಿ ಇಂಥ ಪ್ರೇಮಪತ್ರಗಳನ್ನು ಬರೆಯುವದಕ್ಕಾ ಗಿಯೇ, ಹೀಗೆ ಒಂದಲ್ಲ ಎರಡಲ್ಲ, ನೂರಾರು ಪುರಾವೆಗಳನ್ನು ರಾಮರಾಯನಿಗೆ ಹೇಳಿದಳು. ಮನುಷ್ಯನ ಮನಸ್ಸೆಂದರೆ ಇದೊಂದು ಚಮತ್ಕಾರವಾದ ವಸ್ತುವು. ಆ ಮನಸ್ಸಿಗೆ ಒಮ್ಮೆ ಯಾವದೊಂದು ವಸ್ತುವು ಒಳ್ಳೇದೆಂದು ಮನವರಿಕೆಯಾಯಿ ತಂದರೆ ಸಾಕು, ಆ ವಸ್ತುವು ಪ್ರತ್ಯಕ್ಷ ಪಿಶಾಚಿಯಾಗಿದ್ದರೂ ಅದನ್ನು ಒಯ್ದು ಬ್ರಹ್ಮ ಪದದ ಮೇಲೆ ಕೂಡ್ರಿಸುತ್ತದೆ; ಆದರೆ ಅದೇ ಮನಸ್ಸಿಗೆ ಒಮ್ಮೆ ಯಾವದೊಂದು ವಸ್ತುವು ಕೆಟ್ಟದ್ದೆಂದು ನಂಬಿಗೆಯಾದರೆ ತೀರಿತು, ಆ ವಸ್ತುವು ಪ್ರತ್ಯಕ್ಷ ಬ್ರಹ್ಮನಿದ್ದರೂ, ಅವನನ್ನು ತೀರ ಅಧೋಸ್ಥಾನದಲ್ಲಿ ಒಯ್ದು ಕೂಡ್ರಿಸುತ್ತದೆ. ಈ ನ್ಯಾಯದಂತೆ ಈಗ ಮಧುರಾ-ರಾಮರಾಯರಿಗೆ ದಿವ್ಯಸುಂದರಿಯ ಪ್ರತಿಯೊಂದು ಆಚರಣೆಯ ಸಲುವಾಗಿ ಸಂಶಯಗಳು ತಲೆದೋರಿದವು. ದಿವ್ಯಸುಂದರಿಯು ವಸಂತನ ಬೆನ್ನು ಹತ್ತಿ ಓಡಿ ಹೋದಳು, ಎಂಬ ಮಾತು ಬರಬರುತ್ತ ದೃಢವಾಗಹತ್ತಿತು. ಮುಂದೇನು ಮಾಡ ಬೇಕು, ಮುಂದೇನು ಮಾಡಬಾರದು ಎಂಬ ವಿಚಾರದಲ್ಲಿಯೇ ರಾಮರಾಯನ
೧೧೭---------------------------------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ,
ನಾಲ್ಕು ದಿವಸಗಳು ಕಳೆದವು. ಅನಂತರ ಹೀಗೆ ಸ್ವಸ್ಥ ಕೂಡುವದು ವಿಹಿತವಲ್ಲೆಂದು ಆಲೋಚಿಸಿ, ಅವನು ವಿನಾಯಕ ಕೃಷ್ಣರಾಯರಿಗೆ ಈ ವರ್ತಮಾನವನ್ನು ತಿಳಿಸ ಬೇಕೆಂದು ಯೋಚಿಸಿದನು. ಮೊದಲು ಅವನು ಇಬ್ಬರಿಗೂ ಪತ್ರಮುಖಾಂತರ ಈ ವಾರ್ತೆಯನ್ನು ತಿಳಿಸಬೇಕೆಂದು ನಿಶ್ಚಯಿಸಿದನು; ಆದರೆ ಹಾಗೆ ಮಾಡಿದರೆ ಈ ಮಾತು ವಿಶೇಷ ಬೈಲಿಗೆ ಬೀಳುವದೆಂಬ ವಿಚಾರವು ಬರಲು ಅವನು ಆ ಇಬ್ಬರಿಗೆ ಕೂಡಲೆ ಕಿಸನಗಡಕ್ಕೆ ಬರಬೇಕೆಂದು ಪತ್ರ ಬರೆದನು. ಪತ್ರವು ಹೋದಕಾಲಕ್ಕೆ ಕೃಷ್ಣರಾ ಯನು ಯಮುನೆಯೊಡನೆ ಎರಡನೇ ಗ್ರಾಮಕ್ಕೆ ಹೋಗಿದ್ದುದರಿಂದ ಅವನಿಗೆ ರಾಮ ರಾಯನ ಪತ್ರವು ನಾಲ್ಕು ದಿವಸ ತಡವಾಗಿ ಮುಟ್ಟಿತು. ವಿನಾಯಕನಿಗೆ ಮಾತ್ರ ಪತ್ರವು ವೇಳೆಗೆ ಮುಟ್ಟಿದ್ದರಿಂದ ಅವನು ಕೂಡಲೆ ಕಿಸನಗಡಕ್ಕೆ ಹೊರಟುಬಂದನು. ರಾಮರಾಯನು ಒಳ್ಳೆ ಕಷ್ಟದಿಂದ ವಿನಾಯಕನಿಗೆ ಆ ಎಲ್ಲ ಸಂಗತಿಯನ್ನು ಹೇಳಿ ದನು, ಮತ್ತು ದಿವ್ಯಸುಂದರಿಯ ಹೋಟೋ ಸಹಿತವಾಗಿದ್ದ ಪತ್ರವನ್ನೂ ಅವನಿಗೆ ನೋಡುವದಕ್ಕಾಗಿ ಕೊಟ್ಟನು. ಆ ಪತ್ರವನ್ನು ಓದಿ, ರಾಮರಾಯನು ಹೇಳಿದ ವಾರ್ತೆಯನ್ನು ಕೇಳಿ ವಿನಾಯಕನ ಮಸ್ತಕದ ಮೇಲೆ ವಜ್ರಾಪಾತವಾದಂತಾಯಿತು. ಈ ವೇಳೆಯಲ್ಲಿ ಮೃತ್ಯುವು ಬಂದು ತನ್ನನ್ನು ಈ ಜಗತ್ತಿನಿಂದ ಮುಕ್ತ ಮಾಡಿದರೆ ಒಳ್ಳೆ ದಾಗುವದೆಂದು ಅವನು ನೆನಿಸಿದನು. ಎಲ್ಲಿ ಅತ್ಯಂತ ಪ್ರೇಮವಿರುತ್ತದೆಯೋ ಅಲ್ಲಿಯೇ ಪಾಪಮಯ ಶಂಕೆಯೂ ಇರುತ್ತದೆಂದು ಹಿರಿಯರು ಹೇಳುವದು ಸುಳ್ಳಲ್ಲ. ಆ ಪತ್ರದ ಮೇಲೆ ವಿಶ್ವಾಸವಿಡಬೇಕಾಗಿಯೇ ವಿನಾ ಯಕನಿಗೆ ತೋರಹತ್ತಿತು. ಮತ್ತು ಆ ದೃಷ್ಟಿಯಿಂದಲೇ ಅವನು ದಿವ್ಯಸುಂದರಿಯ ಹಿಂದಿನ ಆಚರಣೆಯ ಬಗ್ಗೆ ವಿಚಾರಮಾಡಹತ್ತಿದ ಕೂಡಲೆ ಅವನಿಗೆ ಪ್ರತಿಯೊಂದು ಮಾತಿನಲ್ಲಿ ವಸಂತ-ದಿವಸುಂದರಿಯರ ಪ್ರೇಮವು ಸ್ಪಷ್ಟವಾಗಿ ಕಾಣಿಸಹತ್ತಿತು. ಈ ವಿಚಾರದಿಂದ ವಿನಾಯಕನ ಸ್ಥಿತಿಯು ಹುಚ್ಚನಂತಾಯಿತು; ಆದರೂ ಅವನು ಅದನ್ನು ತನ್ನ ಮನಸ್ಸಿನಿಂದಲೇ ದೂರೀಕರಿಸಿ, ರಾಮರಾಯನ ನಿರೋಪವನ್ನು ತಕ್ಕೊಂಡು ತಿರುಗಿ ತನ್ನ ಕಾರಖಾನೆಗೆ ಹೊರಟುಹೋದನು. ಕಾರಖಾನೆಗೆ ಹೋದ ಮೇಲೆ ನಾಲೈದು ದಿವಸ ಅವನ ಮನಸ್ಸಿನ ಸ್ಥಿತಿಯು ಚಮತ್ಕಾರಿಕವಾಯಿತು; ಆದರೆ ಮೆಲ್ಲಮೆಲ್ಲನೆ ಅವನು ಮನದಿಂದ ಸರ್ವ ವಿಚಾರವನ್ನು ತೆಗೆದುಹಾಕಿ, ಪುನಃ ತನ್ನ ಸರ್ವ ಮನೋವ್ಯಾಪಾರಗಳನ್ನು ಕಾರಖಾನೆಯ ಕಡೆಗೆ ಹಚ್ಚಿದನು. ಅವನ ಮನೋನಿಗ್ರಹವು ಬೆಳೆಯುತ್ತ ಬೆಳೆಯುತ್ತ ಹೋದಂತೆ ಕಡೆಗೆ ಅವನು ಇನ್ನು ಮುಂದೆ ಸ್ತ್ರೀಯರ ಮುಖವನ್ನೇ ನೋಡಬಾರದೆಂದು ನಿಶ್ಚಯಮಾಡಿದನು. ಮೊದಲೇ ಕಾರ ಖಾನೆಯಲ್ಲಿ ಸ್ತ್ರೀಯರು ಯಾರೂ ನವಕರಿಗಿದ್ದಿಲ್ಲ; ಆದರೂ ಈ ಮುಂದೆ ಸ್ತ್ರೀಯರನ್ನು ನವಕರಿಗೆ ತಕ್ಕೊಳ್ಳಬಾರದು, ಸ್ತ್ರೀಸಮೇತವಾಗಿ ಯಾರೂ ಕಾರಖಾನೆಯಲ್ಲಿ ಇರ ಭಾರದು, ಎಂಬದಾಗಿ ಅವನು ನಿಯಮ ಮಾಡಿದನು. ಕಾರಖಾನೆಯ ಕೆಲಸವು
೧೧೮-------------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ತೀರಿ ಸ್ವಲ್ಪ ಹೊತ್ತು ವಿಶ್ರಾಂತಿಯು ಸಿಕ್ಕಾಗ ವಿನಾಯಕನು ತೀರ ಏಕಾಂತದಲ್ಲಿ ಈಶ್ವರೀ ಚಿಂತನಮಾಡಹತ್ತಿದನು. ಈಶ್ವರೀ ಚಿಂತನೆಗಾಗಿ ತಾನು ಕಟ್ಟಿಸಿದ ಶಾಂತ ವೂ, ರಮಣೀಯವೂ ಆದ ಶಿವಾಲಯದಲ್ಲಿ ಹೋಗಿ ಕೂಡಹತ್ತಿದನು.
ರಾಮರಾಯನ ಪತ್ರವು ಕೃಷ್ಣರಾಯನಿಗೆ ಸಿಕ್ಕ ಕೂಡಲೆ ಅವನು ಮೊದಲು ಯಮುನೆಯೊಡನೆ ಮುಂಬಯಿಗೆ ಬಂದು, ಅಲ್ಲಿಂದ ಒಬ್ಬನೇ ಕಿಸನಗಡಕ್ಕೆ ಹೊರಟು ಬಂದನು. ಇಲ್ಲಿಯವರೆಗೆ ಅವನಿಗೆ ದಿವ್ಯಸುಂದರಿಯ ಸಂಬಂಧವಾಗಿ ಏನೂ ಸುದ್ದಿಯು ತಿಳಿದಿದ್ದಿಲ್ಲ. ಕಿಸನಗಡಕ್ಕೆ ಬಂದ ಮೇಲೆ ರಾಮರಾಯನು ಅವನಿಗೆ ಎಲ್ಲ ಸಂಗತಿ ಯನ್ನು ಹೇಳಿದನು, ಮತ್ತು ದಿವ್ಯಸುಂದರಿಯ ಪತ್ರವನ್ನೂ, ಪೋಟೋವನ್ನೂ ಅವನ ಕೈಯಲ್ಲಿ ಕೊಟ್ಟನು. ಈ ಸಂಗತಿಯಿಂದ ಕೃಷ್ಣರಾಯನ ಮನಸ್ಸಿನಲ್ಲಿ ಮೊದಲು ವಿನಾಯಕನಂತೆಯೇ ಪರಿಣಾಮವಾಯಿತು; ಆದರೆ ವಿನಾಯಕನ ಮೇಲಿದ್ದ ದಿವ್ಯ ಸುಂದರಿಯ ಅಕೃತ್ರಿಮಪ್ರೇಮದ ಚಿತ್ರಪಟವು ಅವನ ಕಣ್ಣಿನ ಮುಂದೆ ಮೂರ್ತಿಮಂತ ವಾಗಿ ನಿಲ್ಲಲು ಅವನ ವಿವೇಕಗೃಹದ ಬಾಗಿಲು ತೆರೆಯಿತು. ಕೂಡಲೆ ಅವನು ಆ ಬಾಗಿಲಿನಿಂದ ಹೊರಬಿದ್ದು ಯೋಗ್ಯಮಾರ್ಗ ಹುಡುಕಹತ್ತಿದನು. ಯಾವ ನೀಚರು ವಿನಾಯಕನಂಥ ಚತುರ-ಕರ್ತವ್ಯದಕ್ಷ ಮನುಷ್ಯನಿಗೆ ಕೂಡ ಮೋಸಮಾಡುವದರಲ್ಲಿ ಹಿಂದುಮುಂದು ನೋಡಲಿಲ್ಲವೋ ಅವರಿಗೆ ಇಂಥ ತೊಟ್ಟ ಪತ್ರವನ್ನು ಬರೆದು ದಿವ್ಯ ಸುಂದರಿಯನ್ನು ಮೋಸಗೊಳಿಸುವದು ಏನು ದೊಡ್ಡಿತ್ತಾದದ್ದು ! ಎಂಬೀ ಶಂಕೆಯು ಕೃಷ್ಣರಾಯನ ತಲೆಯಲ್ಲಿ ಉತ್ಪನ್ನವಾಯಿತು. ಅವನು ಆ ದೃಷ್ಟಿಯಿಂದಲೇ ಎಲ್ಲ ಸಂಗತಿಗಳ ಬಗ್ಗೆ ವಿಚಾರಮಾಡಹತ್ತಿದನು. ವಾಚಕರೇ, ರಾಮರಾಯನ ಮುಖ್ಯ ಪುರಾವೆಗಳೆಂದರೆ ದಿವಸುಂದರಿಯ ಗಾದಿಯ ಕೆಳಗೆ ಪ್ರಾಮಿಸರಿ ನೋಟ, ಮುತ್ತಿನ ಸರಪಳಿಯೂ ಸಿಕ್ಕದ್ದೇ ಆಗಿದ್ದವು; ಆದರೆ ದಿವ್ಯಸುಂದರಿಯನ್ನು ಕರಕೊಂಡು ಹೋ ಗುವದಕ್ಕಾಗಿ ಬಂದಿದ್ದ ಮುದುಕನಿಗೆ ಈ ಕೆಲಸಮಾಡಲಿಕ್ಕೆ ಶಕ್ಯವಿದ್ದಿಲ್ಲವೆಂಬುವದು ಯಾತರ ಮೇಲಿಂದ ? ಅವನು ಇತರರ ಕಣ್ಣು ತಪ್ಪಿಸಿ ಈ ಕೆಲಸಮಾಡಲಿಕ್ಕೆ ಬರು ವಂತಿದ್ದಿತು. ಕೃಷ್ಣರಾಯನಾದರೂ ಇದೇ ದೃಷ್ಟಿಯಿಂದ ವಿಚಾರಮಾಡಿದ ಕೂಡಲೆ ಅವನಿಗೆ ದಿವ್ಯಸುಂದರಿಯು ನಿರ್ದೋಷಿಯಿರುತ್ತಾಳೆಂದು ತೋರಹತ್ತಿತು. ಕಾರಣ ದೀನಳ ಬಿಡುಗಡೆಯ ಸಲುವಾಗಿ ಪ್ರಯತ್ನ ಮಾಡದೆ, ಔದಾಸೀನ್ಯವನ್ನು ತಾಳುವದು ಅವನಿಗೆ ಮೂರ್ಖತನವೆಂದು ತೋರಹತ್ತಿತು. ಅವನು ಆ ದಿವಸ ಕಿಸನಗಡದಲ್ಲಿದ್ದು ಮಾರನೇ ದಿವಸ ಪೋಟೋಸಹಿತ ಪತ್ರವನ್ನು ತಕ್ಕೊಂಡು ಮುಂಬಯಿಗೆ ಬಂದನು. ಮನೆಗೆ ಬಂದ ಕೂಡಲೆ ಯಮುನೆಗೆ ಎಲ್ಲ ಸಂಗತಿಯನ್ನು ಹೇಳಿ, ಪತ್ರ ಮೊದಲಾದದ್ದು ಯಮುನೆಯ ಮುಂದಿಟ್ಟು ಹೊರಗೆ ಎಲ್ಲಿಯೋ ಹೋದನು. ಆ ಸಂಗತಿಯನ್ನು ಕೇಳಿ ಪ್ರಥಮ ಯಮುನೆಯ ಮನಸ್ಸಿನಲ್ಲಿಯೂ ಕೃಷ್ಣರಾಯನಂತಯೇ ಪರಿಣಾಮವಾಯಿ ತು; ಆದರೆ ಅಷ್ಟರಲ್ಲಿ ಅವಳ ವಿವೇಕಮಂದಿರದ ಬಾಗಿಲು ತೆರೆಯಲು ಅವಳು ಆ ಸಂಗ
೧೧೯------------------------------------------ಆನೆಯ ಪ್ರಕರಣ- ವಸಂತನ ಕಾರಸ್ಥಾನ.
ತಿಯ ಕಡೆಗೆ ಬೇರೊಂದು ದೃಷ್ಟಿಯಿಂದ ನೋಡಹತ್ತಿದಳು. ಕಣ್ಣೆದುರಿಗೆ ಪತ್ರವನ್ನಿ
ಟ್ಟು ಕೊಂಡು ವಿಚಾರಮಾಡುತ್ತಿರಲಿಕ್ಕೆ ಅವಳಿಗೊಂದು ಸಂಶಯವು ಬಂದಿತು. ಆ ಕೂಡಲೆ ಅವಳು ದಿವ್ಯ ಸುಂದರಿಯ ಮೊದಲಿನ ಪತ್ರವನ್ನು ಹುಡುಕಿ ತೆಗೆದಳು: ಸೂರ್ಯಕಾಂತ ಕನ್ನಡಿಯನ್ನು ತಕ್ಕೊಂಡು, ಅದರಿಂದ ಮೊದಲಿನ ಪತ್ರದೊಳಗಿನ ಅಕ್ಷರಗಳನ್ನು ನೋಡಹತ್ತಿದಳು. ಯಮುನೆಯ ಈ ಕಾರ್ಯವೂ ನಡೆದಿರುವಾಗ ಕೃಷ್ಣರಾಯನು ಹೊರಗಿನಿಂದ ಬಂದನು. ಕೃಷ್ಣರಾಯನನ್ನು ನೋಡುತ್ತಲೇ ಯಮು ನೆಯು ಹರ್ಷದಿಂದ:-ಅಹೋ, ಈ ಪತ್ರವು ಬೊಟ್ಟಿ ಪತ್ರವಿರಲಿಕ್ಕೆ ಬೇಕು. ಇದ ರಲ್ಲಿ ಎಷ್ಟೋ ಅಕ್ಷರಗಳು ದಿವ್ಯಸುಂದರಿಯ ಅಕ್ಷರಗಳಂತೆ ಇರುವದಿಲ್ಲ, ಅವಳು ಯಾವಾಗಲೂ ಪತ್ರದ ಸಲುವಾಗಿ ಉಪಯೋಗಿಸುವ ಕಾಗದವೂ ಇದಲ್ಲ, ಎರಡೂ ಕಾಗದಗಳನ್ನು ಬೆಳಕಿಗೆ ಹಿಡಿದು ನೋಡಿದರೆ ಕಾಗದಗಳ ಕಾರಖಾನೆಯ ಹೆಸರು ಬೇರೆ ಬೇರೆ ಇರುತ್ತವೆ. ಇದರಿಂದ ಈ ಪತ್ರವು ನಿಶ್ಚಯವಾಗಿ ಬೊಟ್ಟಿಯಿರಲಿಕ್ಕೆ ಬೇಕು, ” ಎಂದಳು. ಈ ಪ್ರಕಾರವಾದ ಯಮುನೆಯ ವಿಚಾರವನ್ನು ಕೇಳಿ ಕೃಷ್ಣ ರಾಯನ ವಿಚಾರವೂ ದ್ವಿಗುಣಿತವಾಯಿತು. ಅವನೂ ಒಳ್ಳೇ ಸೂಕ್ಷವಾಗಿ ಮಾಯ ಕ್ರಾಸ್ಕೋಪು ' ತಕ್ಕೊಂಡು ಪತ್ರವನ್ನು ನೋಡಹತ್ತಿದನು. ಪತ್ರವನ್ನು ನೋಡುವದಾ ಗುತ್ತಲೇ ಅಲ್ಲಿಗೆ ಎರಡನೇ ಒಬ್ಬ ಗೃಹಸ್ಥನು ಬಂದನು. ಕೂಡಲೆ ಯಮುನೆಯು ಅಲ್ಲಿಂದ ಹೊರಟುಹೋದಳು. ಯಮುನೆಯು ಹೋದ ಮೇಲೆ ಬಂದ ಗೃಹಸ್ಥನೂ, ಕೃಷ್ಣರಾಯನೂ ಕೂಡಿ ಪತ್ರ ಮತ್ತು ಪೋಟೋ ಇವುಗಳ ವಿಷಯವಾಗಿ ಎಷ್ಟೋ ಹೊತ್ತು ಆಲೋಚನೆಮಾಡಿದರು. ನಂತರ ಅವರು ಮುಂದೆ ಮಾಡಬೇಕಾದದ್ದನ್ನು ನಿಶ್ಚಯಿಸಿ, ಹೊರಗೆ ಹೊರಟುಹೋದರು.
ವಾಚಕರೇ, ದಿವಸುಂದರಿಯ ಸಂಬಂಧವಾಗಿ ಯಾರು ಏನೇ ಅನ್ನಲ್ಲಿ ಅವಳು ಪೂರ್ಣ ನಿರ್ದೋಷಿಯಿರುತ್ತಾಳೆಂದು ನಿಮಗೆ ಪೂರ್ಣ ಮನವರಿಕೆಯಾಗಿರುವ ದಷ್ಟೇ? ಅಂತೆಯೇ ಅವಳ ಮುಂದಿನ ವ್ಯವಸ್ಥೆಯೇನಾಯಿತೆಂಬದನ್ನು ತಿಳಕೊಳ್ಳ ಲಿಕ್ಕೆ ನೀವು ಆತುರಬಡುತ್ತಿರಬಹುದು. ಆದದ್ದರಿಂದ ಆ ದೀನಳ ಸಮಾಚಾರವನ್ನು ಮೊದಲು ನಾವು ನಿಮಗೆ ತಿಳಿಸುವೆವು. ಆ ವೃದ್ಧನಲ್ಲಿ ವಿಶ್ವಾಸವನ್ನಿಟ್ಟು ದಿವ್ಯಸುಂದ ರಿಯು ಗಾಡಿಯಲ್ಲಿ ಮಲಗಿದ ಮೇಲೆ ಆ ಗೃಹಸ್ಥನು ಕಿಸೆಯಿಂದ ಒಂದು ಬಾಟ್ಟಿ ಯನ್ನು ತೆಗೆದು, ಅದರ ಕಡೆಗೆ ಚಮತ್ಕಾರಿಕದೃಷ್ಟಿಯಿಂದ ನೋಡಹತ್ತಿದನು, ಎಂಬ ಸಂಗತಿಯು ನಮ್ಮ ವಾಚಕರಿಗೆ ಗೊತ್ತೇ ಇರುತ್ತದೆ. ಆ ಮೇಲೆ ಆ ಮುದುಕನು ತನ್ನ ರುಮಾಲದ ಮೇಲೆ ಆ ಬಾಟ್ಟಿಯೊಳಗಿರುವ ಔಷಧದ ಎರಡು ಹನಿಗಳನ್ನು ಹಾಕಿದನು. ಆ ಮೇಲೆ ಆ ರುಮಾಲವನ್ನು ಮೆಲ್ಲನೆ ದಿವಸುಂದರಿಯ ಮೂಗಿನ ಹತ್ತರ ಹಿಡಿದನು. ಅವಳು ನಿದ್ರೆಯಲ್ಲಿದ್ದದ್ದರಿಂದ ಅವಳಿಗೆ ಇದೇನೂ ತಿಳಿಯಲಿಲ್ಲ. ಅವಳ ಶರೀರದಲ್ಲಿ ರುಮಾಲದ ಮೇಲಿದ್ದ ವಿಷವು ಶ್ವಾಸೋಚ್ಛಾಸಮಾರ್ಗವಾಗಿ
೧೨೦----------------------------------- ದಿವಸುಂದರಿ ಅಥವಾ ದೀರ್ಘ ಪ್ರಯತ್ನ,
ಪ್ರವೇಶಿಸಿತು. ಅದರಿಂದ ಅವಳು ಎಚ್ಚರದಪ್ಪಿ ಬಿದ್ದುಕೊಂಡಳು. ಗಾಡಿಯು ಬೇರು ವಾಡಾ ಸ್ಟೇಶನ್ನಕ್ಕೆ ಬಂದಕೂಡಲೆ ಅವರಿಬ್ಬರು ಮುಂಬಯಿಗೆ ಹೋಗುವದರ ಸಲು ವಾಗಿ ರಾಯಚೂರ ಕಡೆಗೆ ಹೋಗತಕ್ಕ ಗಾಡಿಯಲ್ಲಿ ಕುಳಿತುಕೊಳ್ಳಬೇಕಾಗಿದ್ದಿತು. ಆದರೆ ಆ ಮುದುಕನ ಒಲವು ಬೇರೆ ಕಡೆಗೆ ಇದ್ದದ್ದರಿಂದ ಅವನು ಗಾಡಿಯಿಂದ ಇಳಿ ಯದೆ ದಿವಸುಂದರಿ ಸಮೇತವಾಗಿ ಮದ್ರಾಸದ ಕಡೆಗೆ ಬಂದನು. ಎರಡನೇ ದಿವಸ ಸಂಜೆಯ ಸುಮಾರಕ್ಕೆ ಮದ್ರಾಸವು ಹತ್ತರ ಬಂದಬಂದಂತೆ ದಿವಸುಂದರಿಯ ಮೂ ರ್ಛಯು ದೂರಾಗಹತ್ತಿತು. ಆಗ ಅವಳು ಕಣ್ಣು ತೆಗೆದು ಅತ್ತಿತ್ತ ನೋಡಹತ್ತಿದಳು. ಮತ್ತಷ್ಟು ವೇಳೆಯಾದ ಮೇಲೆ ಅವಳು ಪೂರ್ಣ ಜಾಗೃತಾವಸ್ಥೆಯನ್ನು ಹೊಂದಿ ದಳು. ಆಗ ಅವಳು ಎದ್ದು ಕುಳಿತು ಕಿಡಕಿಯೊಳಗಿಂದ ಹಣಿಕಿಹಾಕಿ ನೋಡಹತ್ತಿ ದಳು. ಅವಳು ಮುಂಬಯಿಯ ಸಮೀಪದ ಸ್ಟೇಶನ್ನು ಗಳನ್ನು ಅನೇಕ ಸಾರೆ ನೋಡಿ ದ್ದರಿಂದಲೂ, ಸ್ಟೇಶನ್ನ ದಲ್ಲಿ ಅಯ್ಯರ, ಚೆಟ್ಟಿ ಮೊದಲಾದ ಮದ್ರಾಸೀ ಜನರನ್ನು ನೋಡಿದ್ದರಿಂದಲೂ ತಾನು ಬೇರೊಂದು ಗ್ರಾಮಕ್ಕೆ ಬಂದಿರುತ್ತೇನೆಂಬದಾಗಿ ಕೂಡಲೆ ಅವಳಿಗೆ ತಿಳಿಯಿತು. ಮೊದಲೇ ಅವಳು ವಿನಾಯಕನ ವ್ಯಾಧಿಪೀಡಿತ ವಾರ್ತೆಯನ್ನು ಕೇಳಿ ಚಿಂತಾಕ್ರಾಂತಳಾಗಿದ್ದಳು. ಅದರಲ್ಲಿ ಈಗ ತಾನು ಬೇರೊಂದು ಗ್ರಾಮಕ್ಕೆ ಬಂದದ್ದನ್ನು ಕಂಡು ಅವಳು ಭಯಾಕುಲಳಾದಳು. ಆಗ ಅವಳು ಕಾತರಸ್ಕರದಿಂದ ಮುದುಕನನ್ನು ಉದ್ದೇಶಿಸಿ:- ಅಯ್ಯೋ! ಇದೇನು? ನೀವು ಮುಂಬಯಿಗೆ ಹೋಗದೆ ಇತ್ತ ಯಾವ ಕಡೆಗೆ ಬಂದಿರಿ? ” ಎಂದಳು. ಆಗ ಮುದುಕನು ನಗುತ್ತ: ಅವ್ವನ ವರೇ, ಹೀಗೆ ಹೆದರಬೇಡಿರಿ. ನಿನ್ನೆ ರಾತ್ರಿ ನಿಮಗೇನಾಗಿದ್ದಿತೋ ಏನೋ ಯಾರಿಗೆ ಗೊತ್ತು, ನೀವು ಗಾಡಿಯಲ್ಲಿ ಮೈಮೇಲೆ ಎಚ್ಚರವಿಲ್ಲದೆ ಬಿದ್ದಿದ್ದಿರಿ; ಇದರಿಂದ ನಾನು ಪೂರ್ಣ ಗಾಬರಿಯಾಗಿದ್ದನು. ಆದರೆ ಅಷ್ಟರಲ್ಲಿ ಬೇರೂವಾಡಾ ಸ್ಟೇಶನ್ನ ದಲ್ಲಿ ಒಬ್ಬ ಉತ್ತಮ ಡಾಕ್ಟರನು ಕೂಡಿದನು. ಅವನು ನಿಮಗೆ ಯೋಗ್ಯವಾದ ಔಷಧವನ್ನು ಕೊ ವೃದ್ದರಿಂದ ನೀವು ಈಗ ಚನ್ನಾಗಿ ಮಾತಾಡಲಿಕ್ಕೆ ಹತ್ತಿದ್ದೀರಿ. ಬೇವಾಡಾ ಸ್ಟೇಶ ನಕ್ಕೆ ಬಂದಮೇಲೆ ಅಲ್ಲಿಯ ಸ್ಟೇಶನ್ನ ಮಾಸ್ತರರು ಸ್ವತಃ ನನ್ನ ಹತ್ತಿರ ಬಂದು ಹೇಳಿ ದರೇನಂದರೆ:- ದಿವ್ಯಸುಂದರಿಬಾಯಿಯು ಬಂದರೆ ಅವಳನ್ನು ಮುಂಬಯಿಗೆ ಕಳಿ ಸದೆ, ಮದ್ರಾಸಕ್ಕೆ ಕಳಿಸಬೇಕೆಂತಲೂ, ತಮ್ಮ ಪ್ರಕೃತಿಯಲ್ಲಿ ಸ್ವಸ್ಥವಿದ್ದು ತಾವು ಮದ್ರಾ ಸದ ಮಾವುಂಟರೋಡಿನ ೨೧ನೇ ನಂಬರಿನ ಮನೆಯಲ್ಲಿ ಇಳಿಯುತ್ತೇವೆಂತಲೂ ವಿನಾ ಯಕರಾಯರು ಹೇಳಿರುವರು. ” ಎಂಬದಾಗಿ ಹೇಳಿದರು. ಆ ಸ್ಟೇಶನ್ನ ಮಾಸ್ತರರು ಬಹಳ ಒಳ್ಳೆಯವರಿದ್ದರು. ಅವರು ಮುಂಬಯಿಯ ತಿಕೀಟುಗಳನ್ನು ತಮ್ಮ ಕಡೆಗೆ ಇಟ್ಟು ಕೊಂಡು, ಮದ್ರಾಸದ ಟಿಕೀಟುಗಳನ್ನು ಕೊಟ್ಟರು. ತಾವು ಈಗ ಮದ್ರಾಸದ ಸಮೀಪಕ್ಕೆ ಬಂದಿರುತ್ತೀರಿ. ಇನ್ನು ಬಹಳವಾದರೆ ಹದಿನೈದು ಮಿನೀಟಿಗೆ ಸ್ಟೇಶನ್ನ ಕೈ ಹೋಗುತ್ತೀರಿ, ಅಲ್ಲಿಂದ ಅರ್ಧ ತಾಸಿನೊಳಗೆ ಹೋಗಬೇಕಾದ ಸ್ಥಳಕ್ಕೆ ಹೋಗು
ವಿರಿ, ” ಎಂದನು.
೧೨೧------------------------------ಆನೆಯೆ ಪ್ರಕರಣ-ವಸಂತನ ಕಾರಸ್ಥಾನ.
- ದಿವಸುಂದರಿಯು ಈ ಕಾದಂಬರಿಯ ಮೇಲೆ ವಿಶ್ವಾಸವನ್ನಿಟ್ಟರೂ, ಅವಳ ಮನಸ್ಸು ಅಸ್ವಸ್ಥವಾಯಿತು. ತಾನು ಮನೆಯನ್ನು ಬಿಟ್ಟು ತಪ್ಪು ಮಾಡಿದೆನೆಂದು ಅವ ಳಿಗೆ ತೋರಹತು. ಸ್ವಲ್ಪ ವೇಳೆಯಲ್ಲಿ ಅವರಿಬ್ಬರು ಸ್ಟೇಶನ್ನಕ್ಕೆ ಬಂದು ಮುಟ್ಟಿದರು. ಕೂಡಲೆ ಮಾವುಂಟರೋಡದ ಇಪ್ಪತ್ತೊಂದನೇ ನಂಬರಿನ ಮನೆಯನ್ನು ಹೊಕ್ಕರು. ಈ ಮನೆಯು ಪ್ರತ್ಯೇಕ ಒಂದು ಭಾಗಕ್ಕೆ ಸಾಧಾರಣ ಎತ್ತರದ ಪ್ರದೇಶದ ಮೇಲೆ ಕಟ್ಟಿದ್ದಿತು. ಅಲ್ಲಿಗೆ ಹೋದ ಮೇಲೆ ಆ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಆ ಮುದುಕನು ಆಶ್ಚರ್ಯಚಕಿತನಾದಂತೆ ನಟಿಸಿ ಆ ಮನೆಯ ಕಾವಲುಗಾರನನ್ನು ಕರಿಸಿ:-( ಇಂದು ಇಲ್ಲಿಗೆ ವಿನಾಯಕರಾಯ ಎಂಬ ಹೆಸರಿನ ಗೃಹಸ್ಥರು ಬಂದಿದ್ದಿ ಲ್ಲವೇ ? ” ಎಂದನು. ಇದನ್ನು ಕೇಳಿ ಕಾವಲುಗಾರನು ಮುದುಕನಿಗೆ ನಮಸ್ಕಾರ ಮಾಡಿ ಮುದುಕನ ಕೈಯಲ್ಲಿ ಒಂದು ಪತ್ರವನ್ನು ಕೊಡುತ್ತ:- ಹೌದು ಹುಜೂರ, ಅವರು ಮಧ್ಯಾಹ್ನ ದಲ್ಲಿ ಬಂದಿದ್ದರು; ಆದರೆ ಅಷ್ಟರಲ್ಲಿ ಪಾಂಡೀಚರಿಯೊಳಗಿನ ಒಬ್ಬ ಕಾರಖಾನದಾರರು ಅವರಿಗೆ ಭೆಟ್ಟಿಯಾಗಿ, ಕೂಡಲೆ ಅವರನ್ನು ಪಾಂಡೀಚರಿಗೆ ಕರೆ ಕೊಂಡು ಹೋದರು. ಅವರು ಮನೆಯ ಭಾಡಿಗೆಯನ್ನು ಕೊಟ್ಟಿದ್ದಾರೆ. ಕಾರಣ ತಮಗಿರಲಿಕ್ಕೆ ಅಡ್ಡಿಯಿಲ್ಲ.” ಎಂದನು. ಕಾವಲುಗಾರನ ಮಾತನ್ನು ಕೇಳಿ ಆ ಮುದು ಕನು ಪತ್ರದ ಮೇಲೆ ದೃಷ್ಟಿಯನ್ನು ಹಾಕಿದನು. ಅವನು ಪತ್ರವನ್ನು ಒಡೆಯಲಿಕ್ಕೆ ಹೋಗಿ ತಪ್ಪು ಧ್ಯಾನದಲ್ಲಿ ಬಂದಂತೆ ನಟಿಸಿ:- ಅಹಹಾ! ವಿನಾಯಕರಾಯರು ಇದನ್ನು ತಮ್ಮ ಸಲುವಾಗಿ ಬರೆದಿಟ್ಟಿರುತ್ತಾರೆ.” ಎಂದನ್ನು , ಆ ಪತ್ರವನ್ನು ದಿವ್ಯ ಸುಂದರಿಯ ಕೈಯಲ್ಲಿ ಕೊಟ್ಟನು. ಪತ್ರವು ವಿನಾಯಕನದಲ್ಲವೆಂಬುವ ಬಗ್ಗೆ ಈಗಲೂ ಅವಳಿಗೆ ಸಂಶಯವು ಬರಲಿಲ್ಲ. ಅವಳು ಕೂಡಲೆ ಆ ಪತ್ರವನ್ನು ಒಡೆದು, ಅದರಲ್ಲಿದ್ದ ನಾಲ್ಕು ಸಾಲುಗಳನ್ನು ಓದಿ ನೋಡಿದಳು. “ ಪ್ರಕೃತಿಯು ಈಗ ಒಳ್ಳೇ ಸುಧಾರಿಸಿದೆ. ಒಂದು ಮಹತ್ವದ ಕೆಲಸದ ಸಲುವಾಗಿ ಪಾಂಡೀಚರಿಗೆ ಹೋಗಿರುತ್ತೇನೆ. ನೀನೂ ನಿನ್ನನ್ನು ಕರೆಯಲಿಕ್ಕೆ ಬಂದ ಮನುಷ್ಯನ ಸಂಗಡ ಪಾಂಡೀಚರಿಗೆ ಬಾ, ಗ್ರಾಮವು ನೋಡತಕ್ಕಂಥಹದಿರುತ್ತದೆ. ತಿಳಿಯುವದು, ಆಶೀರ್ವಾದ.” ಪತ್ರದೊಳಗಿನ ಅಕ್ಷರಾ ಭಿಪ್ರಾಯಗಳ ಸಲುವಾಗಿ ದಿವಸುಂದರಿಗೆ ಸ್ವಲ್ಲೂ ಸಂಶಯವು ಬರಲಿಲ್ಲ. ಅಂದು ಒಂದು ದಿವಸ ಅವಳು ಅಲ್ಲಿಯೇ ಕಾಲಕಳೆದು ಎರಡನೇ ದಿವಸ ಮುದುಕನೊಡನೆ ಪಾಂಡೀಚರಿಗೆ ಹೊರಟುಹೋದಳು.
ಕಾಮರ್ಸ ಬ್ಯಾಂಕಿನ ಪ್ರವರ್ತಕರಾದ ಶಾಮರಾಯ, ಗೋಪಾಳ, ವಸಂತ ಮೊದಲಾದವರು ಪೋಲೀಸರ ಬಾಯಿಯೊಳಗೆ ಗಡ್ಡಿ ಕೊಟ್ಟು ಓಡಿಹೋಗಿದ್ದರು ಅವರು ಈಗ ತಮ್ಮ ವಸತಿಯನ್ನು ಪಾಂಡೀಚರಿಯಲ್ಲಿ ಮಾಡಿದ್ದರು. ಪಾಂಡೀಚರಿಯ ಜನರಿಗೆ ತಾವು ಇಂಡಿಯನ್ ಬ್ರಿಶ್ಚನ್ನರೆಂದು ಹೇಳಿದ್ದರು. ತಮ್ಮ ಜಾಣತನದಿಂದ ದೊರ ಕಿಸಿದ ಐದು ಲಕ್ಷ ರೂಪಾಯಿಗಳನ್ನು ತಕ್ಕೊಂಡು ತಾವೆಲ್ಲರೂ ಪಾರಿಸಕ್ಕೆ ಹೋಗಿರ
೧೨೨--------------------------------------------- ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ಬೇಕಂದು ವಿಚಾರಮಾಡಿದ್ದರು; ಆದರೆ ದಿವಸುಂದರಿಯ ಹೊರ್ತು ಪರಿಸಕ್ಕೆ ಹೋಗುವದು ವಸಂತನಿಗೆ ಅನುಚಿತವಾಗಿ ತೋರಿದ್ದರಿಂದ, ಅವನು ತನ್ನ ವಿಲಕ್ಷಣ ಬುದ್ದಿ ಸಾಮರ್ಥ್ಯದಿಂದ ದಿವ್ಯಸುಂದರಿಯು ಪಾಂಡೀಚರಿಗೆ ಬರುವಂತೆ ಮಾಡಿದ್ದನು. ಆ ಗ್ರಾಮದ ಹೊರಗಿನ ಒಂದು ಸುಂದರವಾದ ಬಂಗಲೆಯಲ್ಲಿ ದಿವ್ಯಸುಂದರಿಯು ಹೋದ ಕೂಡಲೆ ಅವಳು ಆ ವೃದ್ಧನನ್ನು ಕುರಿತು:-( ಅವರು ಎಲ್ಲಿದ್ದಾರೆ? ನಾನು ಬಂದದ್ದು ಅವರಿಗೆ ತಿಳಿಸಿದರೆ ಒಳ್ಳೇದಾದೀತು. ” ಎಂದಳು. ಆಗ ಮುದುಕನು ನಗುತ್ತ:-( ತಾವು ಈಗ ನಿರ್ಭಿತರಾಗಿ ಇಲ್ಲಿ ಕೂಡ್ರಿರಿ, ನಾನು ಈಗಲೇ ಶೋಧಿಸಿ ಅವರಿಗೆ ಇಲ್ಲಿಗೆ ಕರಕೊಂಡು ಬರುವೆನು.” ಎಂದನ್ನು ಎರಡನೇ ದಿವಾಣಖಾನೆಯಲ್ಲಿ ಹೋದನು. ಅಲ್ಲಿ ವಸಂತ-ಶಾಮರಾಯರು ಏನೋ ಮಾತಾಡುತ್ತ ಕುಳಿತಿದ್ದರು. ಅವರು ಆ ಮುದುಕನನ್ನು ನೋಡಿದ ಕೂಡಲೆ ಸುಮ್ಮನಾದರು. ಶಾಮರಾಯನು ಆ ಮುದುಕನಿಗೆ “ ಯಾರು ? ಎಂದು ಪ್ರಶ್ನೆ ಮಾಡಿದನು. ಇಷ್ಟರಲ್ಲಿ ಆ ಮುದುಕನು ಖದಖದಾ ನಕ್ಕನು. ಮತ್ತು ಕೃತ್ರಿಮವಾದ ಬಿಳೇ ಮೀಶೆ ಮೊದಲಾದವುಗಳನ್ನು ತೆಗೆದೊಗೆದು, ಆ ಇಬ್ಬರಿಗೂ ನಮಸ್ಕಾರಮಾಡಿದನು. ಆ ಕೂಡಲೆ ವಸಂತನು ಖುರ್ಚಿಯಿಂದ ಎದ್ದು ಅವನ ಬೆನ್ನು ಚಪ್ಪರಿಸಿ:-( ಶಾಬಾಸ ಗೋಪಾಳ, ಕೆಲಸ ವಾಯಿತೇನು ? ” ಎಂದನು. ಗೋಪಾಳನು ವಸಂತನ ಕೈಯನ್ನಲ್ಲಾಡಿಸಿ:- ಕೆಲಸ ವಾಯಿತೇನು! ಹತ್ತರದ ದಿವಾಣಖಾನೆಯಲ್ಲಿಯೇ ತಮ್ಮ ರಾಣೀಸಾಹೇಬರನ್ನು ತಂದು ಕೂಡ್ರಿಸಿದ್ದೇನೆ.” ಎಂದನು. ಗೋಪಾಳನ ವಾಕ್ಯವನ್ನು ಕೇಳಿ ವಸಂತನಿಗೆ ಮೂರು ಲೋಕದಲ್ಲಿ ಹಿಡಿಸಲಾರದಷ್ಟು ಸಂತೋಷವಾಯಿತು. ಅವನು ಕೂಡಲೆ ಒಳಗೆ ಹೋಗಿ ಸರಲಾ-ಲೀಲೆಯನ್ನು ದಿವಸುಂದರಿಯ ಆದರ-ಸತ್ಕಾರದ ಸಲುವಾಗಿ ಕಳಿಸಿದನು. ಅವರಿಬ್ಬರು ಮೊದಲು ದಿವ್ಯಸುಂದರಿಗೆ ಬಾಯಿಮುಕ್ಕಳಿಸುವದಕ್ಕಾಗಿ ನೀರು ಕೊಟ್ಟು, ನಂತರ ಚಹಾ ತಂದು ಕೊಟ್ಟರು. ಚಹಾವನ್ನು ತಕ್ಕೊಂಡ ಮೇಲೆ ಅವಳ ಮನಸ್ಸಿಗೆ ಸಮಾಧಾನವಾಯಿತು. ಮೂರು-ನಾಲ್ಕು ದಿವಸಗಳ ಪ್ರವಾಸದಿಂದ ಅವಳಿಗೆ ಯಾವಾಗ ನೆಲ ಸಿಕ್ಕಿತೋ ಏನೋ ಅನ್ನುವ ಹಾಗೆ ಆಗಿದ್ದಿತು. ಅವರಿಬ್ಬರೂ ಅವಳಿಗೆ ಸ್ವಲ್ಪ ವಿಶ್ರಾಂತಿಯನ್ನು ತಕ್ಕೊಳ್ಳಿರೆಂದು ಹೇಳಿ ಹೋದ ಮೇಲೆ ಅವಳು ದಿವಾಣಖಾನೆಯ ಬಾಗಿಲನ್ನು ಒಳಗಿನಿಂದ ಬಿಗಿ ಮಾಡಿಕೊಂಡು, ಸ್ವಲ್ಪ ಹೊತ್ತು ಪರ ಮತ್ನನ ಚಿಂತನವನ್ನು ಮಾಡಿ ಹಾಗೆಯೇ ಕುಳಿತ ಸ್ಥಳದಲ್ಲಿ ಮಲಗಿದಳು ಮಲಗಿದ ಕೂಡಲೆ ಅವಳಿಗೆ ನಿದ್ರೆ ಹತ್ತಿತು. ನಿದ್ರೆಯಲ್ಲಿ ಅವಳಿಗೆ ಎಷ್ಟೋ ಅಶುಭ ಸ್ವಪ್ನಗಳು ಬಿದ್ದವು. ಅವಳು ಹಾಗೆಯೇ ಎಷ್ಟೋ ಹೊತ್ತು ಮಲಗಿದ್ದಳು. ಆಗ ಅವಳ ದಿವಾಣ ಖಾನೆಯ ಬಾಗಿಲಿನ ಮೇಲೆ ಯಾರೋ ಒಳ್ಳೆ ಗಟ್ಟಿಯಾಗಿ ಎರಡು ಸಾರೆ ಹೊಡೆ ದರು. ಅದರಿಂದ ಅವಳಿಗೆ ಕೂಡಲೆ ಎಚ್ಚರವಾಯಿತು. ವಿನಾಯಕರಾಯರು ಬಂದ ರೆಂಬ ಹರ್ಷದಿಂದ ಕೂಡಲೆ ಅವಳು ಬಾಗಿಲನ್ನು ತೆರೆದಳು; ಆದರೆ ಬಾಗಿಲು ತೆಗೆದ
೧೨೬------------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ.
ಕೂಡಲೆ ಕಲ್ಪನೆಯಲ್ಲಿ ಇಲ್ಲದ ಬೇರೊಬ್ಬ ಭಯಂಕರ ಮನುಷ್ಯನು ಎದುರಿಗೆ ಕಾಣಿಸಿ ದ್ದರಿಂದ ಅವಳು ಗದಗದ ನಡುಗಿದಳು. ಅವಳ ಕಣ್ಣಿನ ಮುಂದೆ ಕತ್ತಲೆಯು ಕಾಣಿ ಸಿತು. ಅವಳು ಭೀತಿವಿಹ್ವಲಳಾಗಿ ಹಿಂದಕ್ಕೆ ಸರಿದ ಕೂಡಲೆ ಸಾಹೇಬಪೋಷಾಕಿನ ವಸಂತಮೂರ್ತಿಯು ದಿವಾಣಖಾನೆಯಲ್ಲಿ ಬಂದಿತು. ಅವನು ಬಂದು ನಗುತ್ತ: ( ಯಾಕೆ ದಿವ್ಯಸುಂದರಿ, ನನ್ನನ್ನು ನೋಡಿ ಇಷ್ಟೇಕೆ ಹೆದರುವದು ? ನನ್ನ ಗುರ್ತು ಹತ್ತಲಿಲ್ಲವೇ? ನೀನು ಈಗ ವಸಂತನ ಅರ್ಧಾಂಗಿಯಲ್ಲವೇ? ಅಥವಾ ವಸಂತನ ಯಜಮಾನಿಣಿಯಲ್ಲವೇ? ಆ ದರಿದ್ರ ವಿನಾಯಕನ ಕಾರಖಾನೆಯಿಂದ ಬಿಡುಗಡೆ ಯಾಗಿ ನನ್ನ ಪದರಿನಲ್ಲಿ ಬಿದ್ದದ್ದಕ್ಕೆ ನೀನು ಸಂತೋಷಸಾಗರದಲ್ಲಿ ಮುಳುಗಿರುವಿ ಯಷ್ಟೆ? ” ಎಂದಂದನು. ವಸಂತನ ಈ ವಿಷಾರೀ ಶಬ್ದವನ್ನು ಕೇಳಿ ದಿವಸುಂದ ರಿಯ ಅಂತಃಕರಣವು ಜರ್ಝರವಾಯಿತು. ಅವಳಿಗೆ ಈಗ ತನ್ನ ಪರಿಸ್ಥಿತಿಯ ಬಗ್ಗೆ ಚನ್ನಾಗಿ ಮನವರಿಕೆಯಾಯಿತು. ತಾನು ಸುವಿಚಾರಮಾಡದೆ ಮುದುಕನ ಸಂಗಡ ಬಂದದ್ದಕ್ಕಾಗಿ ತನ್ನ ಮೇಲೆ ತಾನೇ ಸಂತಾಪಗೊಂಡಳು. ಈ ಪ್ರಕಾರ ದಿವಸುಂದ ರಿಯು ಮನದಲ್ಲಿ ಖೇದಗೊಳ್ಳುತ್ತ ನಿಂತಿರಲು ವಸಂತನು ಪುನಃ:- ದಿವ್ಯಸುಂದರಿ, ಪೂರ್ವದ ಸಂಗತಿಯು ನಿನ್ನ ಧ್ಯಾನದಲ್ಲಿರುವದೇ? ಆ ವೇಳೆಯಲ್ಲಿ ನೀನು ನಿಜವಾಗಿ ನನ್ನಲ್ಲಿಯೇ ಆಸಕ್ತಳಾಗಿದ್ದಿ. ನಿನ್ನ ತಂದೆಯ ಮನಸ್ಸಿನಲ್ಲಿ ನನ್ನೊಡನೆಯೇ ನಿನ್ನ ಲಗ್ನ ಮಾಡಿಕೊಡಬೇಕೆಂಬುವದಿದ್ದಿತು. ಆದರೆ ವಿನಾಯಕನು ನಿಮ್ಮ ತಂದೆಗೆ ಬ್ಯಾಂಕಿ ನಲ್ಲಿ ಮುಳುಗಿದ ದುಡ್ಡನ್ನೆಲ್ಲ ಪುನಃ ದೊರಕಿಸಿಕೊಟ್ಟಿದ್ದರಿಂದ, ನಿರ್ವಾಹವಿಲ್ಲದೆ ಪ್ರತ್ಯುಪಕಾರವೆಂದು ನಿಮ್ಮ ತಂದೆಯು ವಿನಾಯಕನೊಡನೆ ನಿನ್ನ ಲಗ್ನ ಮಾಡಿಕೊ ಟೈನು; ಆದರೆ ಅದೇನೂ ನಿಜವಾದ ಲಗ್ನವಲ್ಲ. ಅದು ಕೇವಲ ಕನ್ಯಾವಿಕ್ರಯವಾ ಗಿದೆ. ಈ ಸಂಬಂಧವಾಗಿ ವಿನಾಯಕನಿಗೆ ಯೋಗ್ಯ ದಂಡನೆಯನ್ನು ಮಾಡಬೇಕೆಂದು ನಿಶ್ಚಯಿಸಿದ ಪ್ರಕಾರ ಈಗ ಯೋಗ್ಯ ದಂಡನೆಯನ್ನು ಮಾಡಿರುವೆನು. ವಿನಾಯಕನಿಗೆ ಆದ ಶಿಕ್ಷೆಯ ಸಲುವಾಗಿ ನಿನಗೆ ಪರಮಾನಂದವಾಗಿರಬಹುದೆಂದು ನನ್ನ ತಿಳುವಳಿಕೆ ಯದೆ. ” ಎಂದನು. ಇದಕ್ಕೂ ದಿವ್ಯಸುಂದರಿಯು ಏನೂ ಮಾತಾಡಲಿಲ್ಲ. ಅವಳ ಮನಸ್ಸಿನಲ್ಲಿ ಬೇರೆ ವಿಕಾರವು ಉತ್ಪನ್ನವಾಯಿತು. ಅವಳು ಮೊದಲು ಭೀತಿಯಿಂದ ವ್ಯಾಕುಲೆಯಾದಳು; ನಂತರ ವಿಲಕ್ಷಣ ಚಿಂತಾಗ್ನಿಯಿಂದ ಬೆಂದಳು; ಬರುಬರುತ್ತ ಅವಳ ಸಾತ್ವಿಕ ಕೋಪವು ಪ್ರಜ್ವಲಿತವಾಯಿತು; ಅವಳು ಕೆರಳಿದ ಹೆಣ್ಣು ಹುಲಿಯಂತ ವಸಂತನ ಮೇಲೆ ಕ್ರುದ್ಧಳಾದಳು. ಅವಳ ಬೆಂಕಿಯಂತೆ ಕೆಂಪಾದ ಕಣ್ಣುಗಳನ್ನೂ, ಥರಥರ ನಡುಗುವ ತುಟಿಗಳನ್ನೂ ನೋಡಿ ಕ್ಷಣಮಾತ್ರ ವಸಂತನೂ ಹೆದರಿಹೋದನು. ಅವಳು ಕೋಪದಿಂದ:-( ವಸಂತ, ಸುಮ್ಮನೆ ಹೋಗು. ನನ್ನ ಸಂಬಂಧವಾಗಿಯೂ ನನ್ನ ಪತಿಯ ಸಂಬಂಧವಾಗಿಯೂ ಬಾಯಿಯಿಂದ ಒಂದು ಕೆಟ್ಟ ಶಬ್ದವು ಹೊರಟ ಬ್ಲಾದರೆ ಎಚ್ಚರಿಕೆ! ”
೧೨೪--------------------------------------------------------------ದಿವ್ಯ ಸು೦ದರಿ ಅಥವಾ ದೀರ್ಘ ಪ್ರಯತ್ನ,
ವಸಂತ:- "ಮೊದಲು ಸ್ವಲ್ಪ ಹೆದರಿ, ಇಲ್ಲವಾದರೆ ಈಗ ನೀನು ಮಾಡುವದಾ ದರೂ ಏನು ? ”
ದಿವ್ಯ:-" (ಸಂತಾಪದಿಂದ) ಪರಮೇಶ್ವರನು ಕೊಟ್ಟ ಬುದ್ದಿಯಂತೆ ಮಾಡು ವೆನು ” ?
ವಂಸತ:-" ( ವ್ಯಂಗಸ್ವರದಿಂದ) ಈ ಸ್ಥಿತಿಯಲ್ಲಿ ನೀನು ಮಾಡುವದಾದರು ಏನು ? ನಿನಗೆ ಅಂಥ ಸಾಮರ್ಥ್ಯವೆಲ್ಲಿಯದು ? ”
ದಿವ್ಯ:-" ( ಸತ್ಯಾಗ್ರಹಸ್ವರದಿಂದ ) ಪ್ರತಿಯೊಂದು ಒಳ್ಳೆ ಕೆಲಸವನ್ನು ಮಾಡ ಲಿಕ್ಕೆ ನನಗೆ ದೇವರು ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ”
ವಸಂತ:-" ( ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳ ಹತ್ತಿರ ಹೋಗಿ ) ದಿವ್ಯಸುಂದರಿ, ನಿನಗೆ ಹುಚ್ಚು ಬೇರೆ ಹಿಡಿದಿಲ್ಲವಷ್ಟೆ ??
ವಸಂತನು ಇನ್ನೂ ಮುಂದೇನೋ ಮಾತಾಡುವವನಿದ್ದನು; ಆದರೆ ಅವನ ಕಾಮುಕಾಚರಣೆಯನ್ನು ನೋಡಿ ದಿವ್ಯಸುಂದರಿಯ ರಾಗವು ಅನಾವರವಾಯಿತು. ಅವಳು ಹತ್ತರದ ಖುರ್ಚೆಯನ್ನು ಎತ್ತಿ ವಸಂತನ ತಲೆಯ ಮೇಲೆ ಹಾಕಿದಳು. ಅವನ ತಲೆಯಲ್ಲಿ ಎಷ್ಟೋ ಡೊಂಬಾಳುಗಳು ಬಿದ್ದು ರಕ್ತವು ಪುಟಿಯಹತ್ತಿತು. ಅವನಿಗೆ ಗಟ್ಟಿ ಯಾಗಿ ಒದರುವಷ್ಟು ವೇದನೆಯಾಗಹತ್ತಿತು. ಒದರಿದರೆ ಹತ್ತರದ ಮನೆಯೊಳಗಿನ ಜನರು ಓಡಿಬಂದಾರೆಂದು ಹೆದರಿ, ತಲೆಯ ಮೇಲಿನ ಗಾಯಗಳನ್ನು ಗಟ್ಟಿಯಾಗಿ ಹತ್ತಿಕ್ಕಿಕೊಂಡು, ದಿವ್ಯಸುಂದರಿಯ ಮೇಲೆ ಹಲ್ಲು ತಿನ್ನುತ್ತ ಅವನು ಆಚೆಕಡೆಯ ದಿವಾಣಖಾನೆಗೆ ಹೊರಟುಹೋದನು. ಅವನು ಹೊರಗೆ ಕಾಲು ಇಡು ಇಡುತ್ತಲೇ ಅವಳು ಬಿಗಿಯಾಗಿ ಕದವನ್ನು ಹಾಕಿಕೊಂಡಳು. ಪ್ರಾಣಹೋದರೂ, ಯಾರು ಬಂದರೂ ಕದವನ್ನು ತೆಗೆಯಬಾರದೆಂದು ನಿಶ್ಚಯಮಾಡಿದಳು. ಅವಳ ಸಂತಾಪದ ವೇಗವು ಮೆಲ್ಲಮೆಲ್ಲನೆ ಕಡಿಮೆಯಾಗಹತ್ತಿತು. ಮುಂದೇನು ಮಾಡಬೇಕೆಂಬ ಬಗ್ಗೆ ಅವಳಿಗೆ ಒಳ್ಳೆ ಚಿಂತೆಯಾಯಿತು. ಅವಳು ಖರ್ಚೆಯ ಮೇಲೆ ಕುಳಿತು ಆ ಸಂಬಂಧ ವಾಗಿ ವಿಚಾರಿಸಹತ್ತಿದಳು. ಅವಳು ಮನದೊಳಗೆ ಆಲೋಚಿಸಿದ್ದೇನಂದರೆ: «« ಸತೀತ್ವವು ಸ್ತ್ರೀಯರ ಮುಖ್ಯ ಸಂಪತ್ತಾಗಿದೆ. ಈ ಸಂಪತ್ತಿನ ಸಂರಕ್ಷಣೆಯಲ್ಲಿ ಪ್ರಾಣ ಹೋದರೂ ಅಡ್ಡಿಯಿಲ್ಲ. ಸತೀತ್ವವನ್ನು ಸಂರಕ್ಷಿಸದಿದ್ದರೆ ಮನುಷ್ಯ-ಪಶುಗಳಲ್ಲಿ ಭೇದ ವೇನು? ಜಗನ್ನಾಯಕಾ! ನನ್ನ ಮೇಲೆ ಬೇಕಾದಂಥ ಆಪತ್ತು ಬರಲಿ, ನಾನು ಸತೀ ತ್ವವನ್ನು ಯಾವದೊಂದು ರೀತಿಯಿಂದಾದರೂ ಕಾಯ್ದು ಕೊಳ್ಳುವೆನು. ಪತಿಗಳು ಕೊಟ್ಟ ಮನೋಬಲದ ಪರೀಕ್ಷೆಯನ್ನು ಮಾಡಲಿಕ್ಕೆ ಇದು ತಕ್ಕ ವೇಳೆಯು ” ಎಂದ ನ್ನುತ್ತ ಖುರ್ಚಿಯ ಮೇಲಿಂದ ಎದ್ದು, ಒಂದು ಕಿಡಕಿಯ ಹತ್ತಿರ ಹೋಗಿ ನಿಂತಳು. ಆ ದಿವಾನಖಾನೆಗೆ ಬಾಗಿಲಿದ್ದ ಗೋಡೆಗೆ ಕಿಡಕಿಯಿದ್ದಿಲ್ಲ. ಹಿಂದಿನ ಗೋಡೆಗೆ
೧೨೫ --------------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ.
ಮಾತ್ರ ಎರಡು ಕಿಡಕಿಗಳಿದ್ದವು. ಅದರಲ್ಲಿ ಅವಳು ಒಂದು ಕಿಡಕಿಯ ಹತ್ತಿರ ನಿಂತು ಕೊಳ್ಳಲು ಅವಳಿಗೆ ಪಾಂಡೀಚರಿ ಪಟ್ಟಣದ ಎಷ್ಟೊ ಭಾಗವು ಕಾಣಿಸಹತ್ತಿತು. ಪಟ್ಟಣದ ಒಂದು ಭಾಗಕ್ಕೆ ಆಗಗಾಡಿಗಳು ಓಡಾಡುತ್ತಿದ್ದವು. ಮತ್ತೊಂದು ಭಾಗಕ್ಕೆ ಸಮುದ್ರದ ತೆರೆಗಳು ಒಂದರಮೇಲೊಂದು ಪುಟಿಯುತ್ತಿದ್ದವು. ಈ ಸ್ಥಿತಿಯನ್ನು ನೋಡಿ ದಿವ್ಯಸುಂದರಿಯ ಮನಸ್ಸಿಗೆ ಕೆಲವಂಶ ಸಮಾಧಾನವೆನಿಸಿತು. " ಅದರಲ್ಲಿ ಸೂರ್ಯಾಸ್ತ ಸಮಯವಾದದ್ದರಿಂದ ಪಟ್ಟಣವು ಒಳ್ಳೇ ರಮಣೀಯವಾಗಿ ಕಾಣಿಸು ತಿದ್ದಿತು. ಪಟ್ಟಣದ ಸೌಂದರ್ಯವನ್ನು ನೋಡುತ್ತಲೇ ಆ ದುಷ್ಟರ ಕೈಯೊಳಗಿಂದ ಹೇಗೆ ಪಾರಾಗಬೇಕೆಂಬ ಬಗ್ಗೆ ಅವಳು ವಿಚಾರಮಾಡಹತ್ತಿದಳು. ಎಷ್ಟೋ ಹೊತ್ತು ವಿಚಾರಮಾಡಿ ಯಾವದೋ ಒಂದು ವಿಚಾರವನ್ನು ಸ್ಥಿರಪಡಿಸಿ ಮತ್ತೆ ಬಂದು ಖುರ್ಚೆ ಯಮೇಲೆ ಕುಳಿತಳು. ಸ್ವಲ್ಪ ವೇಳೆಯಾದ ಮೇಲೆ ಸಂಜೆಯಾಯಿತು. ಅವಳ ದಿವಾಣ ಖಾನೆಯಲ್ಲಿ ಕತ್ತಲೆಯು ಪಸರಿಸಿತು. ಮಧುರೆಯು ಬರುವಾಗ ಅವಳಿಗೆ ಎಷ್ಟೋ ಉಂಡಿಯನ್ನು ಕಟ್ಟಿಕೊಟ್ಟಿದ್ದಳು. ಅವಳು ಉಂಡಿಯ ಡಬ್ಬಿಯ ಬಾಯಿಯನ್ನು ತೆಗೆದು ಅದರಲ್ಲಿಯ ಒಂದು ಉಂಡಿಯನ್ನು ತಿಂದು ಮೇಲೆ ಸ್ವಲ್ಪ ನೀರು ಕುಡಿದಳು, ಆ ಡಬ್ಬಿ ಯಲ್ಲಿ ಅವಳು ಒಂದು ಉಡುವ ಶೀರೆಯನ್ನೂ, ಹತ್ತು ರೂಪಾಯಿಯನ್ನೂ ಇಟ್ಟಿ ದ್ದಳು. ರಾತ್ರಿ ೮೯ ಹೊಡೆದ ಮೇಲೆ ದಿವಾಣಖಾನೆಯ ಬಾಗಿಲಿನ ಹತ್ತರ ಯಾರೋ ಗುಜುಗುಜು ಮಾತಾಡಹತ್ತಿದ್ದರಿಂದ ಅವಳು ಖುರ್ಚಿಯಿಂದ ಎದ್ದು ಬಾಗಿಲಿನ ಹತ್ತಿರ ಹೋಗಿ ನಿಂತುಕೊಂಡಳು. ಇಷ್ಟರಲ್ಲಿ ಬಾಗಿಲಿನ ಮೇಲೆ ಧಪಾಧಪಾ ಹೊಡೆ ಯುತ್ತ ಶಾಮ-ವಸಂತರು ಬಾಗಿಲು ತೆರೆಯೆಂದು ದಿವಸುಂದರಿಗೆ ಒದರಹತ್ತಿದರು; ಆದರೆ ದಿವಸುಂದರಿಯು ಸ್ವಸ್ಥವಾಗಿ ನಿಂತಲ್ಲಿಯೇ ನಿಂತುಕೊಂಡಳು. ವಿವೇಕಶೂನ್ಯ ನಾದ ವಸಂತನು ಬಾಗಿಲು ಮುರಿಯಲೆಂದು ಅದರ ಮೇಲೆ ಒಳ್ಳೆ ಜೋರಿನಿಂದ ನಾಲ್ಕು ಸಾರೆ ಹೊಡೆದನು. ಆದರೆ ಬಾಗಿಲು ಗಟ್ಟಿ ಮುಟ್ಟಾಗಿ ಇದ್ದದ್ದರಿಂದ ಅದು ಜುಮ್ಮ ಅನ್ನಲಿಲ್ಲ. ವಸಂತನು ಹಾಗೆಯೇ ಅವಿಚಾರದ ಕೆಲಸಮಾಡುವದನ್ನು ನೋಡಿ ಶಾಮರಾಯನು ವಸಂತನನ್ನು ಕುರಿತು “ ಕತ್ತೆ, ಬಾಗಿಲಿನ ಮೇಲೆ ಆಗುವ ಸಪ್ಪಳವನ್ನು ಕೇಳಿ ನೆರೆಯ ಜನರು ಓಡಿಬಂದಾರು, ಅದರಿಂದ ಇಲ್ಲಿಯವರೆಗೆ ಪ್ರಯತ್ನ ಬಟ್ಟು ಸಿದ್ಧ ಪಡಿಸಿದ ಆಲೋಚನಾಮಂದಿರವು ಹೊತ್ತುಕೊಂಡು ಬಿದ್ದಿತು. ಹೋಗಲಿ ಈಗ, ನಾಳೆ ಸ್ಕೂಮೊಳೆ ತೆಗೆಯುವ ತಕ್ಕ ಸಾಧನವನ್ನು ತಂದರೆ ಬೊಬ್ಬಾಟವಿಲ್ಲದೆ ಬಾಗಿಲನ್ನು ತೆಗೆಯಲಿಕ್ಕೆ ಬರುತ್ತದೆ. ” ಎಂದನ್ನು ವಸಂತ ನನ್ನು ಕರಕೊಂಡು ಹೊರಟು ಹೋದನು. ಮೇಲಿನ ಭಾಷಣದಿಂದ ಇಂದು ರಾತ್ರಿಯೇ ಬಾಗಿಲು ತೆಗೆಯುವ ಪ್ರಯತ್ನ ಮಾಡದೆ ನಾಳೆ ಮಾಡುತ್ತಾರೆಂಬುವದು ದಿವ್ಯಸುಂದರಿಯ ಪೂರ್ಣ ಲಕ್ಷದಲ್ಲಿ ಬಂದಿತು. ಅದರಿಂದ ಇದೊಂದು ರಾತ್ರಿಯಾದ ರೂ ನಿಷ್ಕಂಟಕವಾಗಲಿಕ್ಕೆ ಅಡ್ಡಿಯಿಲ್ಲವೆಂದೂ, ಮತ್ತು ಇಂಥ ನಿಷ್ಕಂಟಕವಾದ
೧೨೬------------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ರಾತ್ರಿಯಲ್ಲಿ ತಾನೇನಾದರೂ ಪ್ರಯತ್ನ ಮಾಡದೆ ಸುಮ್ಮನೆ ಕಾಲಹರಣ ಮಾಡಿದರೆ, ಆ ದಯಾಘನನಾದ ಪರಮಾತ್ಮನಲ್ಲಿ ತಾನು ದೊಡ್ಡ ಗುಳ್ಳೇಗಾರಳಾಗುವೆನೆಂದೂ ಅವಳಿಗೆ ತೋರಿತು. ತೋರಿದಂತೆ ಕೂಡಲೆ ಅವಳು ಆ ಉದ್ಯೋಗಕ್ಕೆ ಹತ್ತಿದಳು. ದಿವಾಣಖಾನೆಯಲ್ಲಿ ಹಗ್ಗದಿಂದ ಎಳೆಯುವ ಒಂದು ಬೀಸಣಿಕೆಯಿದ್ದಿತು. ಆ ಬೀಸಣಿ ಕೆಯ ಗಡುತರವಾದ ಹಗ್ಗವನ್ನು ತೆಗೆದುಕೊಂಡು, ಅದರ ಒಂದು ತುದಿಯನ್ನು ಕಿಡ ಕಿಗೆ ಗಟ್ಟಿಯಾಗಿ ಕಟ್ಟಿ ಇನ್ನೊಂದು ತುದಿಯನ್ನು ಕೆಳಗೆ ಬಿಟ್ಟಳು. ಕಿಡಕಿಗೆ ಗಜ ವನ್ನು ಹಚ್ಚಿದ್ದರಿಂದ ಆ ಮುಖವಾಗಿ ಹೊರಬೀಳುವದು ಶಕ್ಯವಿದ್ದಿಲ್ಲ; ಆದರೆ ಕಿಡಕಿಯ ಮೇಲ್ಬಾಗಕ್ಕಿದ್ದ ಒಂದು ಬರೇ ಕಾಜಿನ ಪಟದ ಕಿಡಕಿಯಿಂದ ಮಾತ್ರ ಪಾರಾಗಲಿಕ್ಕೆ ಬರುವಂತಿದ್ದಿತು. ಅವಳು ಮೆಲ್ಲನೆ ಕಾಜಿನ ಪಟವನ್ನು ಒಡೆದು ಹೊರಬೀಳುವ ಮಾರ್ಗ ಮಾಡಿಕೊಂಡಳು. ಮಾರ್ಗವಾದ ಮೇಲೆ ಒಂದರಮೇಲೊಂದು ಖುರ್ಚೆಯನ್ನಿಟ್ಟು, ಅವುಗಳ ಮೇಲೇರಿ ತನ್ನ ಡಬ್ಬಿಯನ್ನು ತಕ್ಕೊಂಡು ಕೆಳಗೆ ಇಳಿಯಲಿಕ್ಕೆ ಆರಂಭ ಮಾಡಿದಳು. ಆಗ ಅವಳ ಶರೀರದಲ್ಲಿ ಕಂಪನವು ಹುಟ್ಟಿದ್ದಿತು. ತನಗೆ ಈಗ ಯಾರಾ ದರೂ ನೋಡಿದರೆ ಮುಂದೆ ತನ್ನ ಅವಸ್ಥೆಯೇನಾದೀತೆಂಬ ಬಗ್ಗೆ ಅವಳಿಗೆ ಪುನಃ ಪುನಃ ವಿಚಾರಗಳು ಬರಹತ್ತಿದವು. ಮತ್ತು ಇದೇ ಕಾಲದಲ್ಲಿ ತಾನು ಇಳಿಯುವಾಗ ಎಲ್ಲಿ ಬೀಳುತ್ತೇನೋ ಏನೋ ಎಂಬ ಬಗ್ಗೆ ಅವಳಿಗೆ ಭೀತಿಯೂ ಆಗಹತ್ತಿತು. ಆದರೂ ಅವಳು ಧೈರ್ಯದಿಂದ ಕೆಳಗಿಳಿದಳು. ಆ ಸ್ವಾತಂತ್ರಭೂಮಿಗೆ ಕಾಲು ಇಡುತ್ತಲೇ ಅವಳು ಪರಮಾತ್ಮನಿಗೆ ಭಕ್ತಿಭರದಿಂದ ಸಾಷ್ಟಾಂಗ ನಮಸ್ಕಾರ ಮಾಡಿದಳು. ಇನ್ನು ಇಲ್ಲಿ ಬಹಳ ಹೊತ್ತು ನಿಲ್ಲುವದು ಅಯೋಗ್ಯವೆಂದು ತಿಳಿದು, ಅವಳು ಒಳ್ಳೆ ತ್ವರೆ ಯಿಂದ ಮಾರ್ಗದ ಮೇಲೆ ಬಂದಳು. ಆಗ ಮಾತ್ರ ಅವಳ ಜೀವದಲ್ಲಿ ಜೀವವು ಬಂದಿತು. ಆಗ ಅವಳ ಮನಸ್ಸಿನಲ್ಲಿ ಅನಂತವಿಚಾರಗಳು ಬಂದರೂ ಅವಳು ಸ್ಟೇಶನ್ನದ ಕಡೆಗೆ ತರೆಯಿಂದ ಹೋಗುತ್ತಿದ್ದಳು. ವಸಂತನು ಬಂದು ತಿರುಗಿ ತನ್ನನ್ನು ಹಿಡ ಕೊಂಡು ಹೋದಾನೆಂದು ಆಗ ಅವಳಿಗೆ ಭೀತಿಯಿದ್ದಿಲ್ಲ; ಯಾಕಂದರೆ ಹಾಗೆ ವಸಂತನು ಮಾಡಿದ ಕೂಡಲೆ ಅವನನ್ನು ಪೋಲೀಸರ ಸ್ವಾದೀನಮಾಡಲಿಕ್ಕೆ ಅವಳು ಸಿದ್ದಳಾಗಿ ದ್ದಳು. ಅವಳಿಗೆ ಒಮ್ಮೆ ಈಗಲೇ ಪೋಲೀಸರ ಕಡೆಗೆ ಹೋಗಿ ಅವರಿಗೆ ವಸಂತನ ಎಲ್ಲ ದುರಾಚರಣೆಯನ್ನು ತಿಳಿಸಬೇಕೆಂದು ತೋರಿತು, ಆದರೆ ಹೀಗೆ ಮಾಡಿದರೆ ಪ್ರಸಂಗಾತ್ ಪೋಲೀಸರ ಸಹಾಯಕ್ಕಾಗಿ ನಾನು ಎಷ್ಟೋ ದಿವಸ ಇಲ್ಲಿರುವ ಪ್ರಸಂಗ ವು ಬಂದೀತಂದು ನೆನಿಸಿ ಅವಳು ಹಾಗೆ ಮಾಡುವದನ್ನು ಬಿಟ್ಟಳು. ಅವಳಿಗೆ ಒಮ್ಮೆ ಎಲ್ಲರಿಗೂ ತಾರುಮಾಡಿ ಅವರನ್ನು ಇಲ್ಲಿಗೆ ಕರಿಸಬೇಕೆಂದು ತೋರಿತು; ಆದರೆ ತೀರ ಅಪರಿಚಿತವಾದ ಸರಗ್ರಾಮದಲ್ಲಿ ಅವರೆಲ್ಲರ ಹಾದಿಯನ್ನು ನೋಡುತ್ತ ಮೂರು-ನಾಲ್ಕು ದಿವಸ ಎಲ್ಲಿರಬೇಕೆಂದು ಆಲೋಚಿಸಿ, ಹಾಗೆ ಮಾಡುವದನ್ನೂ ಬಿಟ್ಟಳು, ಕಡೆಗೆ ಅವಳು ತ್ವರೆಯಿಂದ ರಾಮಪುರಕ್ಕೆ ಹೋಗಬೇಕೆಂದಾಲೋಚಿಸಿ, ಆ ಪ್ರಕಾರ ಸ್ಟೇಶ
೧೨೭-----------------------------------------------೮ ನೆಯ ಪ್ರಕರಣ-ವಸಂತನ ಕಾರಸ್ಥಾನ.
ನಕ್ಕೆ ಬಂದು ರಾಜಮಹೇಂದ್ರಿಯ ಕಡೆಗೆ ಹೋಗತಕ್ಕ ಗಾಡಿಯ ಬಗ್ಗೆ ವಿಚಾರ ಮಾಡಹತ್ತಿದಳು. ಸ್ವಲ್ಪ ವೇಳೆಯ ಪೂರ್ವದಲ್ಲಿ ರಾಜಮಹೇಂದ್ರಿಯ ಕಡೆಗೆ ಹೋಗುವ ಗಾಡಿಯು ಹೋಯಿತೆಂತಲೂ, ಎರಡನೇ ಗಾಡಿಯು ಬೆಳಗಿನ ಐದುಗಂಟೆಗೆ ಹೋಗು ಇದೆಂತಲೂ ಸ್ಟೇಶನ್ನ ದಲ್ಲಿದ್ದ ಜನರು ಅವಳಿಗೆ ಹೇಳಿದರು. ಆಗ ಅವಳಿಗೆ ಬಹು ಚಿಂತೆಯಾಯಿತು. ಬೆಳಗಿನ ಐದು ಹೊಡೆಯುವತನಕ ಸ್ಟೇಶನ್ನ ದಲ್ಲಿದ್ದರೆ ಮತ್ತೇನು ಹೊಸ ಸಂಕಟವು ಪ್ರಾಪ್ತವಾಗುವದೊ ಏನೋ ಎಂದು ಅವಳಿಗೆ ಭೀತಿಯಾಯಿತು. ಹೀಗೆ ವಿಚಾರಮಾಡುತ್ತ ಅವಳು ಒಂದು ಬಾಕಿನ ಮೇಲೆ ಕುಳಿತಳು. ಅದೇ ಬಾಕಿನ ಮೇಲೆ ಒಬ್ಬ ಯುರೋಪಿಯನ್ ಸ್ತ್ರೀಯು ಕುಳಿತಿದ್ದಳು. ಕೆಲಹೊತ್ತಿನ ಮೇಲೆ ಅವಳ ಹತ್ತರ ಒಬ್ಬ ಯುರೋಪಿಯನ್ ಗೃಹಸ್ಥನು ಬರಲು ಅವರಿಬ್ಬರೂ ಇಂಗ್ಲೀಷಿನಿಂದ ಮಾತಾಡಹತ್ತಿದರು. ದಿವ್ಯಸುಂದರಿಗೆ ಇಂಗ್ಲೀಷು ಚನ್ನಾಗಿ ಬರುತ್ತಿದ್ದುದರಿಂದ, ಅವ ರಿಬ್ಬರೂ ಬೋಟಿನಿಂದ ರಾಜಮಹೇಂದ್ರಿಗೆ ಹೋಗುತ್ತಾರೆಂಬುವದು ಅವಳಿಗೆ ತಿಳಿ ಯಿತು. ಆ ಕೂಡಲೆ ಅವಳು ಮಡಂಸಾಹೇಬರ ಹತ್ತಿರ ಹೋಗಿ, ಇಂಗ್ರೇಜೀ ಪದ್ಧತಿಯಂತೆ ನಮಸ್ಕಾರಮಾಡಿ:- ನಾನೂ ರಾಜಮಹೇಂದ್ರಿಗೆ ಹೋಗಬೇಕು. ನಾನು ಬರುವದರೊಳಗೆ ಗಾಡಿಯು ಹೋಗಿದ್ದಿತು. ಇನ್ನು ಮತ್ತೊಂದು ಗಾಡಿಗೆ ಹೋಗಬೇಕೆಂದರೆ ಬೆಳಗಿನ ಐದು ಹೊಡೆಯುವ ತನಕ ಇಲ್ಲಿಯೇ ಕೂಡಬೇಕಾಗು ತದೆ. ನೀವು ಹೇಗೂ ಬೋಟಿನಿಂದ ಹೋಗುತ್ತೀರಿ. ಇಲ್ಲಿಂದ ಯಾವಾಗ ಬೋಟು ಹೊರಡುತ್ತದೆಂಬದನ್ನು ಹೇಳಿದರೆ ನನ್ನ ಮೇಲೆ ಕೃಪೆ ಮಾಡಿದಂತಾಗುತ್ತದೆ. ” ಎಂದಳು.
ಆ ಯುರೋಪಿಯನ್ ಸ್ತ್ರೀಯು ಹುಟ್ಟಾ ಸುಶೀಲಳಾಗಿದ್ದಳು. ಅದರಲ್ಲಿ ಸಾದಾಸೋಷಾಕಿನ, ಹಿಂದೂ ಸ್ತ್ರೀಯಾದ ದಿವ್ಯ ಸುಂದರಿಯು ಉತ್ತಮರೀತಿಯಿಂದ ಇಂಗ್ರೇಜೀ ಮಾತಾಡುವದನ್ನು ನೋಡಿ ಅವಳ ಬಗ್ಗೆ ಲೇಡಿಯ ಹೃದಯದಲ್ಲಿ ಅದ ರವು ಹುಟ್ಟಿತು. ಆಗ ಅವಳು ನಗುತ್ತ:- ಬೋಟು ರಾತ್ರಿ ಹತ್ತಕ್ಕೆ ಹೊರಡುತ್ತದೆ. ಆದರೆ ಈ ಬೋಟು ರಾಜಮಹೇಂದ್ರಿಗೆ ಮುಂಜಾನೆ ಹೊರಡುವ ಗಾಡಿಗಿಂತ ತಡ ವಾಗಿ ಮುಟ್ಟುತ್ತದೆ. ಕಾರಣ ನೀವು ಬೋಟಿನಿಂದ ಹೋಗುವದು ಚನ್ನಾಗಿ ಕಾಣಿ ಸುವದಿಲ್ಲ. ನಮಗೆ ಸಮುದ್ರ ಮಾರ್ಗದಿಂದ ಪ್ರವಾಸಮಾಡುವದು ವಿನೋದಪರ ವಾದದ್ದರಿಂದ ನಾವು ಬೋಟಿನಲ್ಲಿ ಕುಳಿತು ಹೋಗುತ್ತೇವೆ. ” ಎಂದಳು. ಇದನ್ನು ಕೇಳಿ ದಿವ್ಯಸುಂದರಿಯು ತಾನೂ ಬೋಟಿನಿಂದಲೇ ಹೋಗಬೇಕೆಂದು ಆಲೋಚಿಸಿ ದಳು; ಯಾಕಂದರೆ ಅವಳು ಯಾವರೀತಿಯಿಂದಾದರೂ ಪಾಂಡೀಚರಿಯನ್ನು ಬಿಟ್ಟು ಹೋಗಬೇಕೆಂದನ್ನುತ್ತಿದ್ದಳು. ಪ್ರವಾಸದಲ್ಲಿ ಒಂದೆರಡು ದಿನ ಹೆಚ್ಚಿಗೆ ಹೋದರೂ ಅಡ್ಡಿಯಿಲ್ಲ. ಆದರೆ ಪಾಂಡೀಚರಿಯಲ್ಲಿ ಒಂದು ಕ್ಷಣ ಸಹ ನಿಲ್ಲಬಾರದೆಂದು ಅವಳಿಗೆ ತೋರುತ್ತಿದ್ದಿತು. ಆಗ ಅವಳು ತನ್ನ ಇಚ್ಛೆಯೂ ಬೋಟಿನಿಂದಲೇ ಹೋಗಬೇಕೆಂದಿ
೧೨೮---------------------------------- ------------------------------ದಿವ್ಯ ಸುಂದರಿ ಅಥವಾ ದೀರ್ಘಪ್ರಯತ್ನ,
ರುತ್ತದೆಂದು ಯುರೋಪಿಯನ್ ಸ್ತ್ರೀಯಳಿಗೆ ತಿಳಿಸಿದಳು. ಆಗ ಯುರೋಪಿಯನ್ ಸ್ತ್ರೀಯಳಿಗೆ ಪರಮಾನಂದವಾಯಿತು. ರಾಜಮಹೇಂದ್ರಿಯ ತನಕ ನಿಮ್ಮ ಸಂಗಡ ಹೋಗುವದರಿಂದ ಬೇಸರವಾದರೂ ಹೋದೀತೆಂದು ಅವಳು ಹೇಳಿದಳು, ಇಷ್ಟು ಮಾತಾಡಿ ಹತ್ತು ಹನ್ನೆರಡು ಮಿನಿಟ ಆದ ಕೂಡಲೆ ಆ ಮೂವರೂ ಭಾಡಿಗೆಯ ಗಾಡಿಯಲ್ಲಿ ಕುಳಿತು ಬಂದರಕ್ಕೆ ಹೋದರು. ಮತ್ತು ಬೋಟಿನ ತಿಕೀಟು ತಕ್ಕೊಂಡು ಬೋಟಿನಲ್ಲಿ ಹೋಗಿ ಕುಳಿತರು.
ವಾಸ್ತವಿಕ ದಿವ್ಯಸುಂದರಿಯು ಪಾಂಡೀಚರಿಯನ್ನು ಬಿಟ್ಟು ಘಾತಮಾಡಿ ಕೊಂಡಳು. ಒಂದುವೇಳೆ ಅವಳು ಆ ರಾತ್ರಿ ಅದೇ ದಿವಾಣಖಾನೆಯಲ್ಲಿ ಇದ್ದದ್ದಾಗಿ ದ್ದರೆ, ಅವಳ ಚರಿತ್ರೆಯೇ ಬದಲಾಗುತ್ತಿದ್ದಿತು. ಆದರೆ ಅದೃಷ್ಟದ ಘಟನಾಚಕ್ರದ ಮುಂದೆ ಅವಳ ಪ್ರಯತ್ನವಾದರೂ ಏನು ನಡೆದೀತು ! ಅವಳಿಗೆ, ತನ್ನ ಸೆರೆ ಬಿಡಿಸು ವದರ ಸಲುವಾಗಿ ಕೃಷ್ಣರಾಯನು ತನ್ನ ಬೆನ್ನ ಹಿಂದೆಯೇ ಸಂಗಡ ಜಾಣರಾದ ಪೋಲೀಸರನ್ನು ಕರಕೊಂಡು ಹೊರಟಿದ್ದಾನೆಂಬುವದು ಏನು ಪರಿಚಯ !! ಅವಳು ಬೋಟಿನಲ್ಲಿ ಕುಳಿತ ವೇಳೆಯಲ್ಲಿಯೇ ಅತ್ತ ಕೃಷ್ಣರಾಯನು ಬ್ರಿಟಿಶ ಮತ್ತು ಫ್ರೆಂಚ ಶಿಪಾಯಿಯರನ್ನು ಸಂಗಡ ಕರಕೊಂಡು ವಸಂತನ ದಿವಾಣಖಾನೆಯನ್ನು ಹೊಕ್ಕಿ ದ್ಧನು. ಪೋಲೀಸರ ದೃಷ್ಟಿಗೆ ಬೀಳುವದೊಂದೇ ತಡ; ವಸಂತರಾಯ, ಶಾಮರಾಯ, ಗೋಪಾಳರಾಯ ಮೊದಲಾದವರು ಪೋಲೀಸರ ಸ್ವಾಧೀನರಾದರು. ಆದರೆ ದಿವ್ಯ
ಸುಂದರಿಯು ಎಲ್ಲಿಯೂ ಕಾಣದ್ದರಿಂದ ಕೃಷ್ಣರಾಯನು ಗಾಬರಿಯಾದನು. ಅವನು ವಸಂತನಿಗೆ ಅವಳ ಸಂಬಂಧವಾಗಿ ಪ್ರಶ್ನೆ ಮಾಡಿದನು. ಈಗ ಸುಳ್ಳು ಹೇಳುವದರಲ್ಲಿ ಅರ್ಥವಿಲ್ಲೆಂದು ಬಗೆದು, ವಸಂತನು ಇದ್ದ ಸಂಗತಿಯನ್ನು ಇದ್ದಂತೆ ಹೇಳಿದನು. ಆ ಕೂಡಲೆ ಕೃಷ್ಣರಾಯನು ಮತ್ತೊಂದು ದಿವಾಣಖಾನೆಗೆ ಹೋದನು. ಆದರೆ ಬಾಗಿಲು ಒಳಗಿಂದ ಬಿಗಿಮಾಡಿದ್ದನ್ನು ನೋಡಿ ಅವನು ನಿರುಪಾಯನಾದನು. ಅವನು ದಿವ್ಯಸುಂದ ರಿಗೆ ಎಷ್ಟೋ ಸಾರೆ ಕೂಗಿದನು; ಆದರೆ ಬಾಗಿಲು ತೆರೆಯಲಿಲ್ಲ. ಆಗ ಕೃಷ್ಣರಾಯನು ಬಹು ಚಿ೦ತಾಗ್ರಸ್ತನಾದನು. ದಿವ್ಯಸುಂದರಿಯು ಆತ್ಮಹತ್ಯೆ ಮಾಡಿಕೊಂಡ ಏನೆ ಎಂದು ಅವನಿಗೆ ಸಂಶಯವಾಯಿತು. ಕೂಡಲೆ ಪೊಲೀಸರು ಅಷ್ಟು ರಾತ್ರಿ ಯಲ್ಲಿ ಇಕ್ಕಳ ಮೊದಲಾದದ್ದು ತರಿಸಿ ಬಾಗಿಲು ತೆರೆದರು. ಆಗ ಎಲ್ಲರೂ ದಿವಾಣ ಖಾನೆಯೊಳಗೆ ಪ್ರವೇಶಮಾಡಿದರು; ಆದರೆ ಒಳಗೆ ಏನದೆ ? ದಿವಾಣಖಾನೆಯು ತೀರ ಶೂನ್ಯವಾಗಿದೆ! ಅದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಕೃಷ್ಣ ರಾಯನು ದೀವಿಗೆಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ಎಲ್ಲ ಕಡೆಗೂ ನೋಡಹತ್ತಿ ದನು. ಇಷ್ಟರಲ್ಲಿ ಕಿಡಕಿಯ ಗಜಕ್ಕೆ ಹಗ್ಗ ಕಟ್ಟಿದ್ದನ್ನೂ, ಕಿಡಕಿಯ ಮೇಲ್ಬಾಗದ ಕನ್ನಡಿ ಒಡೆದದ್ದನ್ನೂ ನೋಡಿ ಎಲ್ಲ ಸಂಗತಿಯು ಕೃಷ್ಣರಾಯನ ಲಕ್ಷದಲ್ಲಿ ಬಂದಿತು. ಈ ದುಷ್ಟನ ಕೈಯಿಂದ ಬಿಡುಗಡೆಯಾಗುವದಕ್ಕಾಗಿ ದಿವ್ಯಸುಂದರಿಯು ಮಾಡಿದ
೧೨೯-------------------------------------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ.
ಸಾಹಸವನ್ನು ನೋಡಿ ಕೃಷ್ಣರಾಯನು ಬಾಯಿಯಲ್ಲಿ ಬೊಟ್ಟು ಕಚ್ಚಿಕೊಂಡನು; ಆದರೆ ಅವಳು ಎಲ್ಲಿ ಹೋದಳು, ಅವಳು ನನಗೆ ಹೇಗೆ ಭೆಟ್ಟಿಯಾದಾಳು, ಎಂಬ ಬಗ್ಗೆ ಮಾತ್ರ ಅವನಿಗೆ ವಿಲಕ್ಷಣ ಚಿಂತೆಯಾಯಿತು. ಪೋಲೀಸರ ಸಂಗಡ ಕೃಷ್ಣರಾಯ ನೊಬ್ಬನೇ ಇದ್ದದ್ದರಿಂದ ಅವಳ ಶೋಧಕ್ಕಾಗಿ ಅವನೇ ಹೋಗಬೇಕಾಯಿತು. ಅವನು ಪೋಲೀಸರ ಅನುಜ್ಞೆಯನ್ನು ಹೊಂದಿ ಕೂಡಲೆ ಸ್ಟೇಶನ್ನಕ್ಕೆ ಬಂದನು; ಆದರೆ ಅಲ್ಲಿಯೂ ಅವಳ ಶೋಧವಾಗಲಿಲ್ಲ. ಅವನು ಆಗ “ ಈ ಮೊದಲೇ ಹೆವೀಗಿ ರುವ ಗಾಡಿಯಿಂದ ದಿವ್ಯ ಸುಂದರಿಯು ಕಿಸನಗಡಕ್ಕೆ ಅಥವಾ ರಾಮಪುರಕ್ಕೆ ಹೋಗಿರ ಬಹುದು. ” ಎಂಬದಾಗಿ ತರ್ಕಿಸಿ ರಿಪ್ಲಾಯ ತಾರುಮಾಡಿದನು; ಆದರೆ ತಾರಿನಿಂದ ಸಮಾಧಾನಕಾರಕವಾದ ಉತ್ತರವು ಸಿಗಲಿಲ್ಲ. ಕೃಷ್ಣರಾಯನು ಎರಡನೇ ದಿವಸವೂ ಪಾಂಡೀಚರಿಯಲ್ಲಿ ಸೂಕ್ಷ್ಮವಾಗಿ ಶೋಧಮಾಡಿದನು; ಆದರೆ ಶೋಧವಾಗಲಿಲ್ಲ. ಪೋಲೀಸರ ಚವಕಸಿಯ ಸಲುವಾಗಿ ಕೃಷ್ಣರಾಯನು ಮೂರು ನಾಲ್ಕು ದಿವಸ ಪಾಂಡೀಚರಿಯಲ್ಲಿಯೇ ಇರಬೇಕಾಯಿತು. ನಾವು ಫ್ರೆಂಚಹದ್ದಿನಲ್ಲಿರುತ್ತೇವೆ; ಆದ ದ್ದರಿಂದ ನಮ್ಮ ಚವಕಸಿಯನ್ನು ಇಲ್ಲಿಯೇ ಮಾಡಬೇಕೆಂದು ವಸಂತ ಮೊದಲಾದವರು ಹೇಳಿಕೊಂಡರು. ಆದರೆ ಪಾಂಡೀಚರಿಯ ಫ್ರೆಂಚ ಗವರ್ನರನು ಎಲ್ಲ ವಿಷಯವನ್ನು ಕೇಳಿಕೊಂಡು ಸರ್ವರಿಗೂ ಬ್ರಿಟಿಶರ ಸ್ವಾಧೀನಮಾಡಿದನು. ಆ ಮೇಲೆ ಕೃಷ್ಣರಾ ಯನು ಎಲ್ಲರನ್ನು ಕರಕೊಂಡು ಮುಂಬಯಿಗೆ ಬಂದನು. ಅಲ್ಲಿ ಮೊದಲು ಪೋಲೀ ಸರ ಪ್ರಾಥಮಿಕ ಚವಕಸಿಯು ಪ್ರಾರಂಭವಾಯಿತು.
ಇತ್ತ ದಿವ್ಯಸುಂದರಿಯು ರಾಜಮಹೇಂದ್ರಕ್ಕೆ ಬಂದ ಮೇಲೆ ಬಸರಾಬಾದಕ್ಕೆ ಹೋಗುವ ಒಂದು ಭಾಡಿಗೆಯ ನಾವೆಯಲ್ಲಿ ಕುಳಿತು ಬಸರಾಬಾದಕ್ಕೆ ಬಂದಳು. ಬಸರಾಬಾದಕ್ಕೆ ಬರುತ್ತಲೇ ಸಂಜೆಯಾದದ್ದರಿಂದ, ಅವಳೊಬ್ಬಳಿಂದಲೇ ಆಗ ರಾಮಪುರಕ್ಕೆ ಹೋಗುವದು ಶಕ್ಯವಿಲ್ಲದ್ದರಿಂದಲೂ ಅವಳು ನದಿಯ ದಂಡೆಯ ಮೇಲೆ ಕುಳಿತು ಇಂದು ರಾತ್ರಿ ಎಲ್ಲಿರಬೇಕೆಂಬ ಬಗ್ಗೆ ವಿಚಾರಮಾಡಹತ್ತಿದಳು. ಈ ಪೂರ್ವ ದಲ್ಲಿ ಅವಳು ಅನೇಕ ಸಾರೆ ಬಸರಾಬಾದಕ್ಕೆ ಬಂದಿದ್ದರೂ, ಅವಳಿಗೆ ಆ ಹಳ್ಳಿಯಲ್ಲಿ ಯಾರ ಪರಿಚಯವೂ ಇದ್ದಿಲ್ಲ. ಅವಳು ವಿಚಾರಮಾಡುತ್ತ ಕುಳಿತಿರುವಷ್ಟರಲ್ಲಿ ಹಳ್ಳಿ ಯೊಳಗಿನ ನಾಲೈದು ಮಂದಿ ಒಕ್ಕಲಗಿತ್ತಿಯರು ಮಣ್ಣಿನ ಕೊಡವನ್ನು ತಕ್ಕೊಂಡು ನದಿಗೆ ಬಂದರು. ನದಿಯ ದಂಡೆಯ ಮೇಲೆ ಒಬ್ಬ ಬ್ರಾಹ್ಮಣ ಸ್ತ್ರೀಯು ಕುಳಿತದ್ದು ನೋಡಿ, ಬೇರೆ ಬೇರೆ ಹೆಂಗಸರು ಬೇರೆ ಬೇರೆ ತರ್ಕಮಾಡುತ್ತ ಅವಳ ಹತ್ತಿರ ಬಂದು
ಅವಳನ್ನು ಮಿಕಿ ಮಿಕಿ ನೋಡಹತ್ತಿದರು. ಆಗ ದಿವಸುಂದರಿಯು ಒಬ್ಬ ಹೆಂಗಸು ನನ್ನು ಕುರಿತು:-ಅಮ್ಮಾ, ರಾಮಪುರಕ್ಕೆ ಹೋಗುವದಕ್ಕಾಗಿ ಇಲ್ಲಿಂದ ಒಂದು ಭಾಡಿಗೆಯ ಗಾಡಿಯು ಸಿಕ್ಕೀತೇ ? ” ಎಂದು ಕೇಳಲು ಆ ಹೆಂಗಸು ಕೊಡವನ್ನು ಕೆಳ ಗಿಟ್ಟು ದಿವ್ಯಸುಂದರಿಯ ಸಮೀಪದಲ್ಲಿ ಕುಳಿತು:- ಇಲ್ಲ ಅಮ್ಮ, ಇಲ್ಲಿ ಬಾಡಿಗೆಯ
೧೩೦--------------------------------- ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಗಾಡಿಯು ಸಿಗುವದಿಲ್ಲ. ” ಎಂದಳು. ಆ ಹೆಂಗಸು ಕೆಳಗೆ ಕುಳಿತ ಕೂಡಲೆ ಎಲ್ಲ ಹೆಂಗ ಸರೂ ಕೆಳಗೆ ಕುಳಿತರು. ಮತ್ತು ತಮ್ಮ ತಮ್ಮೊಳಗೆ ದಿವ್ಯ ಸುಂದರಿಯ ವಿಷಯವಾಗಿ ಸಹಾನುಭೂತಿಯಿಂದ ಮಾತಾಡಹತ್ತಿದರು. ಆಗ ದಿವ್ಯಸುಂದರಿಯು ಒಬ್ಬ ಹೆಂಗಸನ್ನು ಉದ್ದೇಶಿಸಿ:- ಇಲ್ಲಿ ಬ್ರಾಹ್ಮಣರ ಮನೆಗಳು ಇರುವವೇ ಹೇಗೆ? ” ಎಂದು ಕೇಳಲು ಆ ಹೆಂಗಸು:- ಇಲ್ಲ. ಒಬ್ಬ ಇಂದಿರೆಯೆಂಬ ಬ್ರಾಹ್ಮಣ ಸ್ತ್ರೀಯಳು ಮಾತ್ರ ಕೆಲವು ದಿವಸ ಇದ್ದಳು. ರಾಮಪುರದ ಕಾರಖಾನೆಯ ಅಧಿಪತಿಯೊಡನೆ ಅವಳ ಲಗ್ನ ವಾದದ ರಿಂದ ಅವಳು ಈಗ ರಾಮಪುರದಲ್ಲಿರುತ್ತಾಳೆ. ” ಎಂದನ್ನಲು ದಿವ್ಯ ಸುಂದರಿಯು ಆಶ್ಚರ್ಯಚಕಿತಳಾದಳು. ಅವಳಿಗೆ ಕೂಡಲೆ ಮತ್ತೊಂದು ಶಂಕೆಯು ಬಂದು ಅವಳು ಆ ಹೆಂಗಸನ್ನು ಕುರಿತು:- ರಾಮಪುರದ ಕಾರಖಾನೆಯ ಅಧಿಪತಿಯ ಲಗ್ನವು ಈ ಪೂರ್ವದಲ್ಲಿ ಆಗಿದ್ದಿಲ್ಲವೇನು ? ” ಎಂದು ಕೇಳಲು ಒಬ್ಬ ಹೆಂಗಸು:- ಹೌದು. ಆಗಿದ್ದಿತು. ಮೊದಲನೇ ಹೆಂಡತಿಯು ವ್ಯಭಿಚಾರಿಯಿದ್ದು, ಅವಳು ಯಾವನೋ ಒಬ್ಬನ ಸಂಗಡ ಓಡಿಹೋಗಿರುವಳಂತೆ. ” ಎಂದು ಅಂದಳು. ಈ ಮಾತನ್ನು ಕೇಳಿ ಯಂತೂ ದಿವ್ಯಸುಂದರಿಗೆ ಎಷ್ಟು ಖೇದವಾಯಿತೆಂಬುವದನ್ನು - ವರ್ಣಿಸಲಿಕ್ಕೆ ನಮ್ಮಂಥ ಸಾವಿರಾರು ಲೆಕ್ಕಣಿಕೆಯಿಂದಾದರೂ ಆಗದು! ಆಗ ಮೂರನೇ ಒಬ್ಬ ಹೆಂಗಸು: * ನಮ್ಮ ಅಣ ನು ಕಾರಖಾನೆಯಲ್ಲಿ ನವಕರನಿದ್ದಾನೆ. ಅವನು ಮೊನ್ನೆ ಇಲ್ಲಿಗೆ ಬಂದಿ ದ್ದನು. ಅವನು ಹೇಳಿದ್ದೇನಂದರೆ:- ಕಾರಖಾನೆಯ ಚಾಲಕನ ಹೆಂಡತಿಯು ಓಡಿ ಹೋದದ್ದರಿಂದ, ಇನ್ನು ಮುಂದೆ ಲಗ್ನ ವಾಗಲಿಕ್ಕಿಲ್ಲೆಂದು ನಿಶ್ಚಯಮಾಡಿದ್ದಾನೆ. ಇಷ್ಟೇ ಅಲ್ಲ, ಕಾರಖಾನೆಯಲ್ಲಿ ಸ್ತ್ರೀಯರ ಪ್ರವೇಶವೇ ಆಗಬಾರದೆಂದು ಎಲ್ಲರಿಗೂ ಕಟ್ಟಪ್ಪಣೆ ಮಾಡಿದ್ದಾನೆ. ಇಂದಿರೆಯೊಡನೆ ಲಗ್ನವಾಯಿತೆಂಬವದು ತೀರ ಸುಳದೆ. ಅವಳು ಎರಡನೇ ಗ್ರಾಮಕ್ಕೆ ಹೋಗಿದ್ದಾಳೆ. ” ಎಂದು ಹೇಳಿದಳು. ಆಗ ಮತ್ತೊಬ್ಬ ಸ್ತ್ರೀಯಳು ದಿವ್ಯಸುಂದರಿಯನ್ನು ಕುರಿತು:- ಅಮ್ಮಾ, ನೀವು ಈಗ ನಮ್ಮ ಮನೆಗೆ ನಡೆಯಿರಿ, ರಾತ್ರಿ ನಮ್ಮಲ್ಲಿದ್ದು ಬೆಳಗಾದ ಮೇಲೆ ರಾಮಪುರಕ್ಕೆ ಹೋಗಿರಿ, ” ಎಂದಂದಳು. ಆಗ ದಿವ್ಯ ಸುಂದರಿಯು ಹೊಳೆಯ ದಂಡೆಯ ಮೇಲೆ ತನ್ನಲ್ಲಿದ್ದ ಫಲಾ ಹಾರವನ್ನು ತಿಂದಳು. ಅನಂತರ ಒಕ್ಕಲಗಿತ್ತಿಯ ಹೇಳಿಕೆಯ ಪ್ರಕಾರ ಅವಳ ಮನೆ ಯಲ್ಲಿ ಅಂದಿನ ರಾತ್ರಿಯನ್ನು ಕಳೆದಳು. ಬೆಳಗಾದ ಮೇಲೆ ಪ್ರಾತರ್ವಿಧಿ ಮುಗಿಸಿ ಕೊಂಡು ಸಂಗಡ ಒಬ್ಬ ಮನುಷ್ಯನನ್ನು ಕರಕೊಂಡು ರಾಮಪುರದ ಮಾರ್ಗವನ್ನು ಹಿಡಿದಳು. ದೀನಳು ಎಂದೂ ಕಾಲನರಿಗೆಯಿಂದ ನಡೆದವಳಲ್ಲ; ಆದರೂ ಪ್ರಸಂಗವು ಮನುಷ್ಯನಿಗೆ ಎಲ್ಲವನ್ನೂ ಕಲಿಸುವದಾದದ್ದರಿಂದ ಅವಳು ದುಃಖವನ್ನು ಸೋಸುತ್ತ ನಡೆದು ಹೋಗುತ್ತಿದ್ದಳು, ನಡೆನಡೆದು ಸಾಕಾಯಿತೆಂದರೆ ಗಿಡದ ಬುಡದಲ್ಲಿ ಕುಳಿತು ಕೊಳ್ಳಬೇಕು, ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು, ಅನಂತರ ಮತ್ತೆ ನಡೆ ಯಬೇಕು ಎಂಬೀ ಕ್ರಮದಿಂದ ಅವಳು ಮಧ್ಯಾಹ್ನದ ಹನ್ನೆರಡು ಹೊಡೆಯುವ
೧೩೧-----------------------------------------------------------------ಆನೆಯ ಪ್ರಕರಣ-ವಸಂತನ ಕಾರಸ್ಥಾನ.
ಸುಮಾರಕ್ಕೆ ಕಾರಖಾನೆಯ ಹತ್ತಿರ ಹೋದಳು. ಅಲ್ಲಿಗೆ ಹೆ :ದ ಮೇಲೆ ಸಂಗಡ ಕರ ಕೊಂಡು ಹೋದ ಮನುಷ್ಯನಿಗೆ ಎರಡು ರೂಪಾಯಿಗಳನ್ನು ಕೊಟ್ಟು, ಹಿಂದಿರುಗಿ ತನ್ನ ಗ್ರಾಮಕ್ಕೆ ಹೋಗಲಿಕ್ಕೆ ತಿಳಿಸಿದಳು. ತಾನೊಬ್ಬಳೇ ಕಾರಖಾನೆಯ ತೀರ ಸಮೀಪಕ್ಕೆ ಹೋದಳು. ಕೂಡಲೆ ಪತಿಯ ಭೆಟ್ಟಿಯಾಗಿ ಸರ್ವ ದುಃಖದ ಪರಿಮಾರ್ಜನ ವಾದೀತೆಂದು ಅವಳಿಗೆ ಬಹಳ ಆಶೆಯಿದ್ದಿತು; ಆದರೆ ಅವಳಾಶೆಯು ವ್ಯರ್ಥವಾಯಿತು. ದ್ವಾರಪಾಲಕನು ಅವಳ ಗುರ್ತು ಹಿಡಿಯಲಿಲ್ಲ. ಅವನು ಇವಳು ಬೇರೆ ಯಾವ ಸ್ತ್ರೀಯಾದರೂ ಇರಬಹುದೆಂದು ತರ್ಕಿಸಿದನು. ಅವನು ಹೆಂಗಸರಿಗೆ ಒಳಗೆ ಹೋಗ ಲಿಕ್ಕೆ ಆಜ್ಞೆಯಿತ್ತೆಂದು ಹೇಳಿ, ಬೇಗನೆ ಅವಳಿಗೆ ಅಲ್ಲಿಂದ ಹೊರಟುಹೋಗಲಿಕ್ಕೆ ತಿಳಿಸಿ ದನು. ಆ ದ್ವಾರಪಾಲಕನ ಮಾತನ್ನು ಕೇಳಿ ಅವಳಿಗೆ ಅತ್ಯಂತ ಚಿಂತೆಯಾಯಿತು. ಅವಳು:- ಹಾಗಿದ್ದರೆ ನಾನು ಕಾಗದ ಬರೆದುಕೊಡುತ್ತೇನೆ. ಅದನ್ನಾದರೂ ಅವ ರಿಗೆ ಒಯ್ದು ಕೊಡು. ” ಎಂಬದಾಗಿ ಹೇಳಲು ಆ ಮಾತಿಗೆ ದ್ವಾರಪಾಲಕನು ಒಪ್ಪಿದನು. ಕೂಡಲೆ ಅವಳು «« ತಮ್ಮ ನನ್ನ ದಾಸೀ ದಿವಸುಂದರಿಯು ಒಳಗೆ ಬರಲಿಕ್ಕೆ ಅಜ್ಜಿ ಯನ್ನು ಬೇಡುತ್ತಾಳೆ, "ಎಂಬದಾಗಿ ಕಾಗದ ಬರೆದು ವಿನಾಯಕನ ಕಡೆಗೆ ಕಳಿಸಿದಳು. ಆದರೆ ಪ್ರತ್ಯುತ್ತರವನ್ನು ನೋಡಿ ಮಸ್ತಕದ ಮೇಲೆ ವಜ್ರಾಪಾತವಾದಂತಾಯಿತು. “ ನೀನು ಉಭಯಕುಲಕ್ಕೆ ಕಲಂಕವನ್ನು ಹಚ್ಚಿದ್ದರಿಂದ ನಿನ್ನ ದರ್ಶನವನ್ನು ತಕ್ಕೊಳ್ಳ ಲಿಕ್ಕೆ ನನಗೆ ಅಪೇಕ್ಷೆಯಿಲ್ಲ. ಎಂಥವಳೇ ನೀನಾದರೂ ಈಶ್ವರನು ನಿನಗೆ ಕಲ್ಯಾಣ ಮಾಡಲೆಂದು ಇಚ್ಚಿಸುತ್ತೇನೆ. ನನ್ನ ಸಂಬಂಧತಂತುವು ಹರಿದುಹೋಯಿತಂದು ತಿಳಿದು, ನೀನು ಮನಬಂದಂತೆ ಹೋಗು, ” ಎಂಬ ವಿನಾಯಕನ ಪ್ರತ್ಯುತ್ತರವನ್ನು ಒದಿ ಅವಳು ಅಪಾರ ದುಃಖಮಹಾಸಾಗರದಲ್ಲಿ ಮುಳುಗಿದಳು. ವಿನಾಯಕನಂಥ ಸುಶೀಲ ಮತ್ತು ಧೈರ್ಯಮನಸ್ಸಿನ ತರುಣನಿಗೆ ವಸಂತನ ಮಾಯಾವಿತನವು ತಿಳಿ ಯದ್ದಕ್ಕೆ ದಿವ್ಯಸುಂದರಿಯ ದುರ್ದೈವವೇ ಕಾರಣವೆಂದನ್ನಲಿಕ್ಕೆ ಬೇಕು. ವಿನಾಯ ಕನ ಆ ಪ್ರತ್ಯುತ್ತರವನ್ನು ನೋಡಿ ದಿವ್ಯಸುಂದರಿಯು ಸ್ವಲ್ಪ ಹೊತ್ತು ಮುಗ್ಧಳಾಗಿ ದ್ದಳು. ಆ ಮೇಲೆ ಅವಳು ಇನ್ನು ಮುಂದೆ ಪತಿಗೆ ಪ್ರಾರ್ಥನೆ ಮಾಡಿಕೊಳ್ಳುವದರಲ್ಲಿ ಯೂ, ತಾನು ನಿರ್ದೋಷಿಯಿದೇನೆಂದು ತೋರಿಸಿಕೊಡುವದರಲ್ಲಿಯೂ ಅರ್ಥವಿ ಲೈಂದು ನೆನಿಸಿ, ಪತಿಯ ಮಂಗಲವನ್ನು ಚಿಂತಿಸಿ ನಿಂತ ಹೆಜ್ಜೆಯಿಂದ ಹಿಂದುರಿಗಿ ಪರ್ವತದ ನೆರೆಯಲ್ಲಿದ್ದ ಭಯಂಕರವಾದ ಒಂದು ಅರಣ್ಯವನ್ನು ಹೊಕ್ಕಳು, ಮತ್ತು ಅವಳು ಒಂದೇಸವನೆ ಪರಮಾತ್ಮನ ಧ್ಯಾನಮಾಡುತ್ತ ಹಾಗೆಯೇ ಮುಂದಕ್ಕೆ ಹೋ ದಳು. ಆಗ ಅವಳಿಗೆ ತನ್ನ ಶರೀರದ ಮೇಲೆ ಸ್ವಲ್ಪಾದರೂ ಎಚ್ಚರವಿದ್ದಿಲ್ಲ. ಬಿಸಿಲು ಉರಿ, ಕಲ್ಲು-ಮುಳ್ಳು, ಹಸಿವೆ-ನೀರಡಿಕೆ ಇವುಗಳ ಕಡೆಗೆ ಅವಳ ಸ್ವಲ್ಪಾದರೂ ಎಚ್ಚರ ವಿದ್ದಿಲ್ಲ. ಹುಚ್ಚು ಹಿಡಿದವಳಂತೆ ಗುಡ್ಡವನ್ನು ಹತ್ತುತ್ತ ಇಳಿಯುತ್ತ ಮುಂದಕ್ಕೆ ನಡೆ ದಳು. ಅವಳಿಗೆ ಭೀತಿಯೆಂಬುವದು ಲೇಶವಾದರೂ ಇದ್ದಿಲ್ಲ. ಅವಳು ತನ್ನ ಪ್ರತಿ
೧೩೨--------------------------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಯೊಂದು ಹೆಜ್ಜೆಯನ್ನು ನಿಶ್ಚಯದಿಂದ ಕಿತ್ತು ಹಾಕುತ್ತಿದ್ದಳು. ಸೂರ್ಯನು ಮುಳುಗಿ ದನು, ಸಾಯಂಕಾಲವಾಯಿತು; ಆದರೂ ಅವಳು ಒಂದೇಸವನ ನಡೆದಿದ್ದಳು. ಹೋಗುಹೊಗುತ್ತ ಅವಳು ಗುಡ್ಡದ ತಲೆಯ ಮೇಲೆ ಹೋದಳು. ಆಗ ಮಾತ್ರ ಅವ ಳಿಗೆ ಬಹಳ ಸಾಕಾಯಿತು. ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ ಕಿತ್ತು ಇಡುವ ಶಕ್ತಿಯು ಅವಳಲ್ಲಿ ಉಳಿದಿರಲಿಲ್ಲ. ಕಾರಣ ಅವಳು ನಿಂತಲ್ಲಿಯೇ ನಿಂತುಬಿಟ್ಟಳು. ಆಗ ಅವಳಿಗೆ ತನ್ನಿಂದ ಸ್ವಲ್ಪ ಅಂತರದ ಮೇಲೆ ಒಂದು ಸಣ್ಣ ಸರೋವರವು ಕಾಣಿಸಿತು. ಮತ್ತು ಸರೋವರದ ಆಚೆಕಡೆಗೆ ಒಂದು ಗುಡಿಸಲು ಕಾಣಿಸಿತು. ಆದರೆ ಅವಳಿಗೆ ಮುಂದಕ್ಕೆ ಹೋಗುವ ಶಕ್ತಿಯಿಲ್ಲದ್ದರಿಂದ ಅವಳು ಅಲ್ಲಿಯೇ ಒಂದು ದೊಡ್ಡ ಮರದ ಕೆಳಗೆ ಪವಡಿಸಿದಳು. ನೆಲವು ಸಿಗುತ್ತಲೇ ಅವಳಿಗೆ ಗಾಢನಿದ್ರೆಯು ಹತ್ತಿತು. ಅಸ್ತಾಚಲ ದಲ್ಲಿ ಹೋದ ಸೂರ್ಯನು ಉದಯಾಚಲದಲ್ಲಿ ಬಂದನು. ಅವನ ಅರುಣಪ್ರಭೆಯಿಂದ ಸೃಥ್ವಿಯು ಪ್ರಕಾಶಮಾನವಾಗಹತ್ತಿತು. ಪರ್ವತದ ಮೇಲೆ ದಿವ್ಯಪ್ರಕಾಶವು ಪಸರಿ ಸಿತು. ಆದರೂ ದಿವ್ಯಸುಂದರಿಯು ಗಾಢನಿದ್ರೆಯಲ್ಲಿದ್ದಳು. ಹೀಗೆ ಎಷ್ಟೋ ಹೊತ್ತು ಗಾಢನಿದ್ರಾವಸ್ಥೆಯಲ್ಲಿರುವಾಗ ಯಾರೋ “ ದಿವಸುಂದರಿ ದಿವಸುಂದರಿ ” ಎಂದು ನಾಲೈದು ಸಾರೆ ಕರೆದದ್ದರಿಂದ ಅವಳಿಗೆ ಒಮ್ಮೆಲೇ ಎಚ್ಚರವಾಯಿತು. ಅವಳು ಕಣ್ಣು ತೆಗೆದು ಅತ್ತಿತ್ತ ನೋಡಹತ್ತಿದಳು. ಒಬ್ಬ ಪ್ರಶಾಂತ ಮತ್ತು ಪ್ರಭಾವಶೀಲ ಸನ್ಯಾಸಿನಿಯ ತೊಡೆಯ ಮೇಲೆ ತನ್ನ ಮಸ್ತಕವಿದ್ದು, ಅವಳು ತನಗೆ ಆಲಿಂಗನಮಾಡು ತಿರುವದನ್ನು ನೋಡಿ ದಿವ್ಯಸುಂದರಿಗೆ ಆಶ್ಚರ್ಯವಾಯಿತು. ತಾನು ಎಲ್ಲಿದ್ದೇನೆಂಬ ಕಲ್ಪನೆಯೇ ಅವಳಿಗೆ ಆಗಲಿಲ್ಲ. ಅವಳು ಆಗ ಕುಗ್ಗಿದ ಸ್ವರದಿಂದ:- ಅವ್ವಾ, ನೀವು ಯಾರು? ಒಂದು ಗಿಡದ ಕೆಳಗೆ ಮಲಗಿದ ನಾನು ಈ ದೇವಾಲಯಕ್ಕೆ ಹೇಗೆ ಬಂದೆನು? ” ಎಂದಳು. ಶುಕ್ರೂಷೆಯನ್ನು ಮಾಡುವ ಸನ್ಯಾಸಿನಿಯು:- ದಿವ್ಯ ಸುಂದರಿ, ನನ್ನ ಗುರ್ತು ಹತ್ತಲಿಲ್ಲವೇ? ನಾನು ನಿನ್ನ ಸಖಿ ನರ್ಮದೆಯು ” ಎಂದಂದ ಕೂಡಲೆ ದಿವ್ಯಸುಂದರಿಯು ಪೂರಾ ಕಣ್ಣು ತೆಗೆದು ನೆಟ್ಟಗೆ ನರ್ಮದೆಯ ಕಡೆಗೆ ನೋಡಿದಳು. ಆಗ ದಿವಸುಂದರಿಗೆ ಹೇಗಾಯಿತೋ ಏನೋ, ಅವಳನ್ನು ಕಂಡು ಬಿಕ್ಕಿ ಬಿಕ್ಕಿ ಅಳಹತ್ತಿದಳು. ಇವಳು ಹೀಗೆ ಯಾಕೆ ಅಳುತ್ತಾಳೆ, ಈ ಅರಣ್ಯದಲ್ಲಿ ಒಬ್ಬಳೇ ಯಾಕ ಹೀಗೆ ಬಂದಳು; ಎಂಬುವದು ನರ್ಮದೆಗೆ ಏನೂ ತಿಳಿಯಲಿಲ್ಲ. ಈ ಸ್ಥಿತಿಯಲ್ಲಿ ದಿವ್ಯಸುಂದರಿಗೆ ಕೇಳುವದೂ ಶಕ್ಯವಿದ್ದಿಲ್ಲ. ಯಾಕಂದರೆ, ಅವಳ ಸ್ಥಿತಿಯು ಬಹಳ ಸಾಮಾನ್ಯ ತರಹದ್ದಾಗಿದ್ದಿತು. ಅಳುಅಳುತ್ತಲೇ ಅವಳು ಮೂರ್ಛ ಬಂದು ಬೀಳುತ್ತಿ ದ್ದಳು, ನರ್ಮದೆಯು ಒಳ್ಳೇ ಕಷ್ಟದಿಂದ ಅವಳನ್ನು ಸುಮ್ಮನಿರಿಸಿದಳು. ಮೂರು ನಾಲ್ಕು ದಿವಸದೊಳಗೆ ದಿವ್ಯಸುಂದರಿಗೆ ಸ್ವಲ್ಪ ಗುಣವಾಗಲು ಆಗ ನರ್ಮದೆಯು ಅವಳ ಸಂಗತಿಯನ್ನು ವಿಚಾರಿಸಿದಳು.
===
೧೩೬---------------------------------------- ೯ ನೆಯ ಪ್ರಕರಣ.
೯ನೆಯ ಪ್ರಕರಣ
ಪ್ರೇಮದ ಸುಂದರ-ಭವನ,
ಆರು ವರ್ಷ ಅಗಲಿದ ದಿವ್ಯ ಸುಂದರಿ-ನರ್ಮದೆಯರ ಭೆಟ್ಟಿಯು ಇಂದು ಅಕಸ್ಮಾತ್ತಾಗಿ ಪ್ರಾಪ್ತವಾಗಿದ್ದಿತು. ಸನ್ಯಾಸವೃತ್ತಿಯಿಂದ ಇರುವದು ಅತ್ಯಂತ ಕಠಿಣವೆಂದು ನರ್ಮದೆಗೆ, ಅವಳ ತಂದೆ ತಾಯಿಗಳು ಬಹಳ ಸಾರೆ ಹೇಳಿದ್ದರು; ಆದರೆ ಆ ನಿಶ್ಯಸ್ತ್ರಭಾ
ವದ ತರುಣಿಯು ಒಂದೇಸವನೆ ಆರು ವರ್ಷ ಅರಣ್ಯದಲ್ಲಿದ್ದು, ಎಷ್ಟೋ ರೀತಿಯಿಂದ ಸ್ವಪ್ರಗತಿಯನ್ನು ಮಾಡಿಕೊಂಡಿದ್ದಳು. ಅರ್ಧ ತಪಸ್ರೇಜಿ ದಿಂದಲೇ ಅವಳು ವಿಲಕ್ಷಣಪ್ರಶಾಂತಳೂ, ಪ್ರಭಾವಶೀಲಳೂ ಆಗಿದ್ದಳು. ಅವಳ ದೃಷ್ಟಿಯು ಪ್ರೇಮಲವಾಗಿಯೂ, ಸತೇಜವಾಗಿಯೂ ಕಾಣಿಸುತ್ತಿದ್ದಿತು. ಅವಳ ವಾಣಿಯು ಮಧುರವೂ, ಗಂಭೀರವೂ ಆಗಿದ್ದಿತು. ಪರಬ್ರಹ್ಮನ ಸಾನ್ನಿಧ್ಯದಿಂದ ಅವಳ ಮನಸ್ಸು ಉಲ್ಲಸಿತವಾಗಿದ್ದಿತು. ಈ ಪ್ರಕಾರ ಪವಿತ್ರತೆಯಿಂದ ಸತೇಜವಾದ ರಮಣೀಯತ್ವವನ್ನು ದಿವ್ಯಸುಂದರಿಯು ಇಂದಿನವರೆಗೆ ಎಲ್ಲಿಯೂ ನೋಡದ್ದರಿಂದ, ಅವಳಿಗೆ ನರ್ಮದೆಯ ದರ್ಶನದಿಂದ ಅವರ್ಣನೀಯವಾದ ಆಶ್ಚರ್ಯವಾಯಿತು. ನರ್ಮದೆಯ ಇತಿಹಾಸವು ಅಷ್ಟೇನೂ ದೊಡ್ಡದಿದ್ದಿಲ್ಲ. ಅವಳು ಅದನ್ನು ಹತ್ತು-ಹದಿ ನೈದು ಮಿನೀಟಿನಲ್ಲಿ ದಿವ್ಯಸುಂದರಿಗೆ ಹೇಳಿದಳು. ಮನೆಯನ್ನು ಬಿಟ್ಟು ಬಂದ ಮೇಲೆ ಅವಳು ಒಬ್ಬ ಯೋಗಿಯ ಹತ್ತರ ಯೋಗಶಾಸ್ತ್ರದ ಅಭ್ಯಾಸಮಾಡಿದಳು. ಮತ್ತು ಯೋಗಿಯ ಹೇಳಿಕೆಯಂತೆ ಅವಳು ಪರ್ವತದ ಮೇಲಿನ ಪೂರ್ಣೆಶ್ವರವೆಂಬ ಹೆಸರಿನ ದೇವಾಲಯಲಕ್ಕೆ ಬಂದು ಏಕಾಂತದಲ್ಲಿ ಇರಹತ್ತಿದಳು. ಈ ಮೊದಲೇ ಕಂದಮೂಲ ಗಳ ಮೇಲೆ ಇರುವ ರೂಢಿಯಿದ್ದದ್ದರಿಂದ ಅವಳಿಗೆ ಆ ಅರಣ್ಯದಲ್ಲಿ ಹೇಗೆ ನಿರ್ವಾಹ ಮಾಡಬೇಕೆಂಬ ವ್ಯಸನವೇ ಇದ್ದಿಲ್ಲ. ನರ್ಮದೆಯು ತನ್ನ ಚರಿತ್ರೆಯನ್ನು ಹೇಳಿದ ಮೇಲೆ ದಿವ್ಯಸುಂದರಿಯು ತನ್ನ ಕಥೆಯನ್ನೆಲ್ಲ ನರ್ಮದೆಗೆ ಹೇಳಿದಳು. ದಿವ್ಯಸುಂದ
೧೩೯--------------------------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ರಿಯ ಸ್ವಭಾವವನ್ನು ಹುಟ್ಟಾ ಅರಿತ ನರ್ಮದೆಯು ಅವಳ ಚರಿತ್ರವಲ್ಲ ನಿಜವಾದ ದ್ದೆಂದು ಭಾವಿಸಿದಳು. ಮತ್ತು ಯೌಗಿಕಮಹಾತ್ಮಯಿಂದ ದಿವಸುಂದರಿಯ ಮುಂದಿನ ಭವಿತವ್ಯವನ್ನು ತಿಳಿದು, ಸ್ವಲ್ಪ ದಿನದಲ್ಲಿಯೇ ನೀನು ಮರಳಿ ನಿನ್ನ ಪತಿಯನ್ನು ಇದೇ ಸ್ಥಳದಲ್ಲಿಯೇ ಕೂಡುವಿ. ಕಾರಣ ನೀನು ಅಲ್ಲಿಯ ತನಕ ನನ್ನ ಬಳಿಯಲ್ಲಿ ಸ್ವಸ್ಥವಾ ಗಿರು, ಎಂದು ದಿವಸುಂದರಿಗೆ ಸೂಚಿಸಿದಳು. ಆಗ ದಿವ್ಯಸುಂದರಿಯ ಮನಸ್ಸಿಗೆ ಎಷ್ಟೋ ಸಮಾಧಾನವಾದಂತಾಗಲು ಅವಳು ನರ್ಮದೆಯ ಹೇಳಿಕೆಯ ಪ್ರಕಾರ ಅವಳ ಹತ್ತಿರ ಇರಹತ್ತಿದಳು.
ಪೂರ್ಣೇಶ್ವರ ದೇವಾಲಯವಿದ್ದ ಗುಡ್ಡದ ಉತ್ತರದಿಕ್ಕಿಗೆ ಪಾಯಧ್ಯಾಲಾ ಎಂಬ ಒಂದು ಸಣ್ಣ ನದಿಯು ಹರಿಯುತ್ತದೆ. ಅದರ ದಂಡೆಯಲ್ಲಿ ಇಪ್ಪತ್ತು-ಇಪ್ಪ ಓದು ಮನೆಯುಳ್ಳ ಒಂದು ಹಳ್ಳಿಯದೆ, ದಿವ್ಯಸುಂದರಿಯು ಆ ದೇವಾಲಯದಲ್ಲಿ ಇರಹತ್ತಿದ ಮೇಲೆ ನರ್ಮದೆಯು ಅವಳಿಗಾಗಿ ಆ ಹಳ್ಳಿಯಿಂದ ಅಕ್ಕಿ, ಸಕ್ಕರೆ, ಚಹಾ ಮೊದಲಾದ ಪದಾರ್ಥಗಳನ್ನು ತರಿಸಹತ್ತಿದಳು, ಪರ್ವತದ ಮೇಲೆ ಎಷ್ಟೋ ಗವಳಿ ಗರ ಮನೆಗಳಿದ್ದವು. ಆ ಗವಳಿಗರು ಒಳ್ಳೆ ಭಕ್ತಿಭಾವದಿಂದ ನರ್ಮದೆಗೆ ಸಾಕಾಗು ವಷ್ಟು ಹಾಲನ್ನು ತಂದು ಕೊಡುತ್ತಿದ್ದರು. ಒಂದು ದಿವಸ ದಿವ್ಯಸುಂದರಿಗೆ ಬೇಕಾದ ಸಾಮಾನು ಮುಗಿದದ್ದರಿಂದ ನರ್ಮದೆಯು ಒಬ್ಬ ಗವಳಿಣಿಯ ಕೈಯಲ್ಲಿ ದುಡ್ಡು ಕೊಟ್ಟು ಸಾಮಾನು ತರುವದಕ್ಕಾಗಿ ಅವಳನ್ನು ಆ ಹಳ್ಳಿಗೆ ಕಳಿಸಿ ತಾನು ಈಶ್ವರೀ
ಭಜನೆಯಲ್ಲಿ ಲೀನವಾದಳು. ಗವಳಿಣಿಯು ಸಾಮಾನು ತಂದಳು. ತಂದ ಆ ಸಾಮಾ ನನ್ನು ದಿವ್ಯಸುಂದರಿಯು ವ್ಯವಸ್ಥೆಯಿಂದ ಇಡುತ್ತಿರುವಾಗ ಸಕ್ಕರೆಯನ್ನು ಹಾಕಿದ ಕಾಗದದ ಕಡೆಗೆ ಅವಳ ಲಕ್ಷವು ಹೋಯಿತು. ಅದು ಒಂದು ವರ್ತಮಾನಪತ್ರದ ತುಂಡು ಇದ್ದಿತು. ಅವಳು ಅದನ್ನು ತೆಗೆದುಕೊಂಡು ಅದರೊಳಗಿನ ವಿಷಯ ವನ್ನು ಓದಹತ್ತಿದಳು. ಓದೋದುತ್ತ ಅವಳ ಕಣ್ಣುಗಳು ಕಣ್ಣೀರುಗಳಿಂದ ತುಂಬಿ ಬಂದವು. ಭಯಂಕರವಾದ ಛಳಿ ಬಂದವರಂತೆ ಅವಳು ಗದಗದ ನಡುಗಹತ್ತಿ ದಳು. ಇಷ್ಟರಲ್ಲಿ ಭಜನಕಾರ್ಯವನ್ನು ಮುಗಿಸಿಕೊಂಡು ನರ್ಮದೆಯು ಅಲ್ಲಿಗೆ ಬಂದು, ದಿವ್ಯಸುಂದರಿಯ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತಳಾಗಿ ಹೀಗಾಗಲು ಕಾರಣವೇನೆಂದು ಅವಳಿಗೆ ವಿಚಾರಿಸಿದಳು. ಆಗ ದಿವ್ಯಸುಂದರಿಯು ಆರ್ತಸ್ವರದಿಂದ ಆ ವರ್ತಮಾನಪತ್ರದ ತುಂಡನ್ನು ಓದಲಿಕ್ಕೆ ಆರಂಭಿಸಿದಳು.
ಯೋಗ್ಯ ನ್ಯಾಯ!
ಎಷ್ಟೋ ದಿವಸ ಕಾಮರ್ಸಬ್ಯಾಂಕಿನ ಸಲುವಾಗಿ ನಡೆದ ಖಟ್ಟೆಯು ಇಂದು ತೇರ್ಗಡೆಯಾದದ್ದನ್ನು ಕೇಳಿ, ಯಾರೂ ನ್ಯಾಯಾಧೀಶನ ಪ್ರಶಂಸೆ ಮಾಡದೆ ಇರಲಿ ಕಿಲ್ಲ. ಪೋಲೀಸರು ಮಾಡಿದ ಪ್ರಯತ್ನದ ಸಲುವಾಗಿ ಅವರು ಸ್ತುತಿಗೆ ಪಾತ್ರರಾಗಿ
೧೩೫-----------------------------------------------೯ನೆಯ ಪ್ರಕರಣ-ಪ್ರೇಮದ ಸುಂದರ.ಭವನ.
ದ್ದರೂ, ಶೋಧದ ಶ್ರೇಯಸ್ಸನ್ನು ಕೃಷ್ಣ ರಾಯನಿಗೇ ಕೊಡಲಿಕ್ಕೆ ಬೇಕು. ಬ್ಯಾಂಕಿನ ಹೆಸರಿನಿಂದ ಜನರಿಗೆ ವಂಚಿಸುವದರಿಂದ ದೇಶಕ್ಕೆ ಎಷ್ಟು ಹಾನಿಯಾಗುತ್ತದೆಂಬ ಬಗ್ಗೆ ನ್ಯಾಯಾಧೀಶನು ಮಾಡಿದ ಉದ್ದಾರವ ವಿಚಾರಮಾಡುವಂಥಹದಾಗಿದೆ. ಈ ಖತಿ ಯಲ್ಲಿ ಎಲ್ಲ ಅಂದರೆ ಇಪ್ಪತ್ತೆಂಟು ಜನರು ಆರೋಪಿಗಳಿದ್ದು, ಅದರಲ್ಲಿ ಎಲ್ಲರಿಗೂ ಹೆಚ್ಚು ಕಡಿಮೆ ಶಿಕ್ಷೆಯಾಗಿರುತ್ತದೆ. ವಸಂತ, ಶಾಮರಾಯ, ಗೋಪಾಳ ಈ ಮೂವರ ಮೇಲೆ ಮತ್ತಿಷ್ಟು ಹೆಚ್ಚು ಆರೋಪಗಳು ಹೊತ್ತಿದ್ದರಿಂದ ಅವರಿಗೆ ಆಜನ್ಮ ಕಾಳಾವಾಣಿಯ ಶಿಕ್ಷೆಯಾಯಿತು. ವಸಂತನು, ರಾಮಪುರದ ಕಾರಖಾನೆಯ ಒಡೆಯನಾದ ವಿನಾಯಕ ರಾಯನ ಹೆಂಡತಿಯನ್ನು ಓಡಿಸಿಕೊಂಡ ಹೋಗುವ ಪ್ರಯತ್ನ ಮಾಡಿದ್ದನು; ಆದರೆ ಆ ಸಾಧೀಮಣಿಯು ಅವನ ಕೈಯಿಂದ ಒಳ್ಳೆ ಯುಕ್ತಿಯಿಂದ ಪಾರಾದಳು, ಮತ್ತು ಅವಳು ಇವತ್ತಿನವರೆಗೆ ಎಲ್ಲಿದ್ದಾಳೆಂಬುವದು ಶೋಧವಾಗಿಲ್ಲ. ಯಾವ ಪೋಟೋ ಗ್ರಾಫರನು ಆ ಸಾದ್ವಿಯ ಹೆಸರಿಗೆ ಕಲಂಕ ಹಚ್ಚುವದಕ್ಕಾಗಿ ವಸಂತದಿವ್ಯಸುಂದರಿ ಯರ ಫೋಟೋವನ್ನು ತೆಗೆದಿದ್ದನೋ, ಆ ಪೋಟೋ ನಿಜವಾದ ಪೋಟೋ ಅಲ್ಲ ವಾಗಿದ್ದು, ಅವನು ಒಬ್ಬ ಕುಶಲ ಚಿತ್ರಕಾರನ ಕಡೆಯಿಂದ ಮೊದಲು ವಸಂತ-ದಿವ್ಯ ಸುಂದರಿಯರ ಚಿತ್ರವನ್ನು ತೆಗೆಯಿಸಿ ಅದರ ಮೇಲಿಂದ ಪೋಟೋ ತೆಗೆದಿದ್ದನು. ಇದು ಮೊದಲು ಕೃಷ್ಣರಾಯನ ಲಕ್ಷದಲ್ಲಿ ಬಂದಿತು. ಮಾಯಾಸ್ಕೋಪವೆಂಬ ಹೆಸರಿನ ಕನ್ನಡಿಯೊಳಗಿಂದ ಅಸ್ಸಲ ಫೋಟೋದೊಳಗಿನ ಶರೀರಕೃತಿಗೂ, ಚಿತ್ರದ ಮೇಲಿಂದ ತೆಗೆದ ಫೋಟೋದೊಳಗಿ ಶರೀರಕೃತಿಗೂ ವಿಲಕ್ಷಣವಾದ ಹೆಚ್ಚು ಕಡಿಮೆಯು ಕಂಡುಬಂದಿತು. ಯಾವ ಚಿತ್ರಕಾರನು ಈ ಚಿತ್ರವನ್ನು ತೆಗೆದಿದ್ದನೋ ಅವನಿಗೂ ಹಿಡಿಯುವದರಲ್ಲಿ ಬಂದಿತು; ಆದರೆ ನ್ಯಾಯಾಧೀಶನು ಅವನ ಮೇಲೆ ದಯ ಮಾಡಿ ಅವನನ್ನು ಬಿಟ್ಟು ಕೊಟ್ಟನು. ನ್ಯಾಯಾಧೀಶನು ಖಟ್ಟೆಯ ತೇರ್ಗಡೆಯನ್ನು ಹೇಳುವಾಗ ಆರೋಪಿಗಳ ಬುದ್ಧಿಮತ್ತೆಯ ಸ್ತುತಿಯನ್ನು ಮಾಡಿದನಲ್ಲದೆ, ಅವರು ಆ ಬುದ್ಧಿಯನ್ನು ಕೆಟ್ಟ ಕೆಲಸದಲ್ಲಿ ಖರ್ಚುಮಾಡಿದ ಬಗ್ಗೆ ಖೇದಪ್ರದರ್ಶನಮಾಡಿದನು. ಎಲ್ಲದರಲ್ಲಿಯೂ ಶೋಚನೀಯ ಸಂಗತಿಯೇನಂದರೆ, ವಿನಾಯಕ-ದಿವ್ಯ ಸುಂದರಿಯರ ಸಂಯೋಗಕಾಲವು ಪ್ರಾಪ್ತವಾದರೂ ವಿನಾಯಕರಾಯನು ದಿವ್ಯಸುಂದರಿಯ ಮೇಲೆ ವ್ಯಭಿಚಾರದ ಆರೋಪವನ್ನು ಹೊರಿಸಿ, ಅವಳ ಭೆಟ್ಟಿಯನ್ನು ತಕ್ಕೊಂಡಿಲ್ಲ. ಹಾಗೆಯೇ ಇಂಥ ನಿರ್ದೋಷಪತ್ನಿಯ ಮೇಲೆ ನಿಷ್ಕಾರಣ ಅಪವಾದರೂಪ ಭಾರವನ್ನು ಹೊರಿಸಿ ದನೆಂದು ತಿಳಿದ ಮೇಲೆ ಅವನಿಗೆ ಮಿತಿಮೀರಿ ಮನಸ್ತಾಪವಾಗಿದೆ. ಅವನು ದಿವ್ಯ ಸುಂದರಿಯ ಶೋಧಮಾಡುತ್ತ ಹುಚ್ಚನಂತ ಅಡವಡವಿಯನ್ನು ತಿರುಗುತ್ತಿದ್ದಾನೆ. ಹಾಯ ! ಹಾಯ ! ಈ ಸುಖದಾಂಪತ್ಯದ ಸಂಸಾರರಥದ ಚಿತ್ರಗಳನ್ನು ಅಗಲಿಸಿದ ನೀಚನ ಸಲುವಾಗಿ ಪರಮೇಶ್ವರನು ಯಾವ ನರಕವನ್ನು ನಿರ್ಮಾಣಮಾಡಿದ್ದಾನು! "
೧೩೬ ---------------------------------ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ,
ಎಂಬದಾಗಿ ಓದಿಹೇಳಿ ದಿವಸುಂದರಿಯು ಕಣ್ಣೀರು ಸುರಿಸಹತ್ತಿದಳು ಆಗ ನರ್ಮದೆಯು:- ದಿವಸುಂದರಿ, ಕಣ್ಣೀರು ಸುರಿಸಬೇಡ, ನಿನ್ನ ಪಾತಿವ್ರತ್ಯಧರ್ಮ ವೂ, ವಿನಾಯಕನ ಪಾತಿವ್ರತ್ಯಧರ್ಮವೂ, ಲೋಕದಲ್ಲಿ ಪ್ರಕಾಶಮಾನವಾಗಿ, ನಿಮ್ಮಿ ರ್ವರ ಕೀರ್ತಿಯು ಅಜರಾಮರವಾಗಲೆಂಬ ಸದ್ದೇತುವಿನಿಂದಲೇ ದೇವರು ನಿಮಗೆ ಈ ಪರಿಯ ಕಷ್ಟಗಳನ್ನು ಂಟುಮಾಡಿ, ನಿಮ್ಮನ್ನಗಲಿಸಿ ನಿಮ್ಮ ಸತ್ವ ಪರೀಕ್ಷಣ ಮಾಡಿರು ವನು. ಇನ್ನು ಮುಂದೆ ಶೀಘ್ರದಲ್ಲಿಯೇ ದೇವರು ನಿಮಗೆ ಸುಖವನ್ನುಂಟುಮಾಡುವನು. ವಿಚಾರಮಾಡಿದರೆ ಈ ನಿಮ್ಮ ಕಷ್ಟವೆಂಬುವದು ನಿಮ್ಮಿರ್ವರ ಪವಿತ್ರಪ್ರೇಮಾಧಿಕ್ಯ ವನ್ನೇ ಉಂಟುಮಾಡುವದು. ಕಾರಣ ಇನ್ನು ಮುಂದೆ ನೀನು ಚಿಂತಮಾಡದೆ ಪರಮೇ ಶ್ವರನ ಧ್ಯಾನದಲ್ಲಿ ಮಗ್ನಳಾಗು. ಕೂಡಲೆ ನಿನ್ನ ಪತಿಯು ಸಂದರ್ಶನಸುಖಾಮೃತವನ್ನು ಪಾನಮಾಡಿಸುವದರಲ್ಲಿ ಎಷ್ಟೋ ಸಂಶಯವಿಲ್ಲ. ” ಎಂಬದಾಗಿ ಹೇಳಲು ದಿವ್ಯ ಸುಂದ ರಿಯು ನರ್ಮದೆಯ ವಚನದಲ್ಲಿ ವಿಶ್ವಾಸವನ್ನಿಟ್ಟು ಈಶ್ವರೀಚಿ೦ತನದಲ್ಲಿ ಲೀನವಾದಳು.
ನಿರ್ದೋಷ ಪತ್ನಿಯ ಮೇಲೆ ಆರೋಪವನ್ನು ಹೊರಿಸಿದ್ದರಿಂದ ವಿನಾಯಕನಿಗೆ ಆದ ಅನುತಾಪವನ್ನು ವರ್ಣಿಸುವದು ಅಶಕ್ಯವೇ ಸರಿ. ಆ ಸಂಬಂಧ ಅವನು ಮಿತಿ ಮೀರಿ ದುಃಖಮಾಡಿದನು. ಅವನ ಕಣ್ಣೀಳಗಿನ ಕಣ್ಣೀರು ಕಾಲಿವೆಯಾಗಿ ಹರಿದವು. ಖಟ್ಟೆಯು ಮುಗಿದ ಮೇಲೆ ಕೃಷ್ಣರಾಯನು ಅವನಿಗೆ ಎಷ್ಟೋ ಸಮಾಧಾನ ಹೇಳಿ, ದಿವ್ಯಸುಂದರಿಯ ಶೋಧಕ್ಕಾಗಿ ಎಷ್ಟೋ ಮಂದಿ ಮನುಷ್ಯರನ್ನು ಕಳಿಸಿದನು. ಆದರೂ ವಿನಾಯಕನು ಇಷ್ಟಕ್ಕೇ ಸ್ವಸ್ಥ ಕೂಡ್ರಲಿಲ್ಲ. ಒಳ್ಳೆ ಕಷ್ಟದಿಂದ ಮುಂಬಯಿಯಲ್ಲಿ ನಾಲ್ಕು ದಿವಸವಿದ್ದು ತಿರುಗಿ ಕಾರಖಾನೆಗೆ ಬಂದು, ಕಾರಖಾನೆಯೋಳಗಿನ ಯಾವತ್ತೂ ಜನರನ್ನು ಒತ್ತಟ್ಟಿಗೆ ಕೂಡಿಸಿ, ಅವರೆಲ್ಲರನ್ನು ಕುರಿತು ಹೇಳಿದ್ದೇನಂದರೆ:-( ನಿರ್ದೋ ಪಪತ್ನಿಯ ಮೇಲೆ ಅಪವಾದ ಹೊರಿಸಿ ಅವಳನ್ನು ದೂರೀಕರಿಸಿದ ಬಗ್ಗೆ ನನಗೆ ಮಿತಿ ಮೀರಿ ಖೇದವಾಗಿದೆ. ಅವಳು ಎತ್ತ ಹೋದಳೆಂಬುವದೂ ಅಥವಾ ಆತ್ಮಹತ್ಯೆ ಮಾಡಿ ಕೊಂಡಳೆಂಬುವದೂ ಯಾವದೂ ತಿಳಿಯಲಿಲ್ಲ. ಕಾರಣ ನಾನು ಇಂದಿನಿಂದ ಅವಳ ಶೋಧಾರ್ಥವಾಗಿ ಗಿರಿ-ಕಂದರ, ಅಡವಿ-ಅರಣ್ಯ, ಹಳ್ಳ-ಕೊಳ್ಳ ಮೊದಲಾದವುಗ ಳನ್ನು ತಿರುಗುವೆನು. ದೈವಯೋಗದಿಂದ ಅವಳು ಲಭಿಸಿದರೆ ಅವಳೊಡನೆ ಪುನಃ ಈ ಕಾರಖಾನೆಗೆ ಬಂದು ನಿಮಗೆ ದರ್ಶನಕೊಡುವೆನು; ಇಲ್ಲವಾದರೆ ಇದೇ ನನ್ನ ಅಂತ್ಯದ ಭಟ್ರಿಯೆಂದು ತಿಳಿಯಿರಿ, ನಾನು ಯಾವದಾದರೂ ಒಂದು ಘೋರಾರಣ್ಯವನ್ನು ಸೇರಿ ಈಶ್ವರೀಚಿಂತನದಲ್ಲಿ ಕಾಲಗಳೆಯುತ್ತ ಒಂದು ದಿವಸ ಬಿದ್ದು ಹೋಗುವೆನು. ” ಎಂದು ಹೇಳಿದನು. ಆಗ ಅವನ ಪರಿವಾರಕ್ಕಾದ ದುಃಖವನ್ನು ವರ್ಣಿಸುವದೇನದೆ! ಎಷ್ಟೋ ಜನರು ದಳದಳ ಕಣ್ಣೀರು ಸುರಿಸುತ್ತ ಹೋಗಬೇಡಿರೆಂದು ಕೈ ಮುಗಿದು ಬೇಡಿಕೊಂಡರೆ, ಎಷ್ಟೋ ಜನರು ಸಣ್ಣ ಹುಡುಗರಂತೆ ಗಟ್ಟಿಯಾಗಿ ಅಳುತ್ತ ಕಾಲಿಗೆ ಬಿದ್ದರು. ಆದರೆ ನಿಶ್ಚಯವೆಂದರೆ ವಿನಾಯಕನ ನಿಶ್ಚಯವೇ ನಿಶ್ಚಯವು! ಮಟಮಟ
೧೩೭-------------------------------------------------೯ನೆಯ ಪ್ರಕರಣ- ಪ್ರೇಮದ ಸುಂದರ ಭವನ
ಮಧ್ಯಾಹ್ನ ಹನ್ನೆರಡು ಹೊಡೆದಾಗ ತಾನಾಗಿಯೇ ಬಾಗಿಲಿಗೆ ಬಂದ ಸಾಧೀಸತಿ ಯನ್ನು ದೂರೀಕರಿಸಿದ ವಿನಾಯಕನು, ತಾನೂ ಮಟಮಟ ಮಧ್ಯಾಹ್ನದಲ್ಲಿಯೇ ಕಾರಖಾನೆಯನ್ನು ದೂರೀಕರಿಸಿದನು. ಸರ್ವಜನರು ಕಣ್ಣೀರು ಸುರಿಸುತ್ತಿರಲು ನೀವೆ ಲ್ಲರೂ ಪರಮೇಶ್ವರ ರೂಪಿಗಳಿದ್ದೀರೆಂದು ಹೇಳಿ ನಮಸ್ಕಾರಮಾಡಿ, ಕಾರಖಾನೆಯ ಕಡೆಗೆ ಬೆನ್ನು ಮಾಡಿ ದಿವಸುಂದರಿಯು ಹೋದ ಮಾರ್ಗವನ್ನು ಹಿಡಿದು ಹೋಗಹತ್ತಿ ದನು. ಅವನು ಈ ಗುಡ್ಡದಿಂದ ಆ ಗುಡ್ಡಕ್ಕೆ ಈ ಅಡವಿಯಿಂದ ಆ ಅಡವಿಗೆ ಹೋ ಗುತ್ತ ಹೋಗುತ್ತ ಒಂದು ತಿಂಗಳು ಗುಡ್ಡಗಾಡಪ್ರದೇಶದಲ್ಲಿಯೇ ಕಾಲಗಳೆದನು; ಆದರೆ ಅವನಿಗೆ ದಿವ್ಯ ಸುಂದರಿಯ ಶೋಧವೇ ಆಗಲಿಲ್ಲ. ಒಂದು ತಿಂಗಳೆಂಬುವದರೊ ಳಗೆ ಅವನ ಶರೀರದಲ್ಲಿ ವಿಲಕ್ಷಣ ತಾರತಮ್ಯವಾಯಿತು. ಅತ್ಯಂತ ಜೀವಕ್ಕೆ ಜೀವ ಗೊಡುವ ಮಿತ್ರನಿಂದಲೂ ವಿನಾಯಕನ ಗುರ್ತು ಹಿಡಿಯುವದಾಗುವಂತಿದ್ದಿಲ್ಲ. ಈ ಅಡವಿಯಲ್ಲಿ ತಾನೊಬ್ಬನೇ ತಿರುಗುತ್ತೇನೆಂದು ವಿನಾಯಕನ ಕಲ್ಪನೆಯಿದ್ದಿತು; ಆದರೆ ವಸ್ತುಸ್ಥಿತಿಯು ಹಾಗಿದ್ದಿಲ್ಲ. ಅವನ ಹಿಂದೆಯೇ ಒಬ್ಬ ಅನುಚಾರಿಕೆಯು ತಿರುಗುತ್ತಿ ದ್ದಳು. ವಿನಾಯಕನು ಕುಳಿತನೆಂದರೆ, ಅವಳೂ ಒಂದು ಗಿಡದ ಮರೆಗೆ ಕುಳಿತು ಕೊಳ್ಳುತ್ತಿದ್ದಳು. ವಿನಾಯಕನು ಎದ್ದನೆಂದರೆ, ಅವಳೂ ಎದ್ದು ಅವನ ಹಿಂದೆ ನಡೆ ಯುತ್ತಿದ್ದಳು. ತನ್ನ ಶರೀರದ ಮೇಲೆಯೇ ಅರುವಿಲ್ಲದ ವಿನಾಯಕನಿಗೆ ಆಗ ತನ್ನ ಹಿಂದೆ ಯಾರು ಬರುತ್ತಾರೆಂಬ ಕಲ್ಪನೆಯೂ ಕೂಡ ಹುಟ್ಟಲಿಲ್ಲ. ವಿನಾಯಕನ ಹಿಂದಿದ್ದ ತರುಣಿಯು ಇಂಥವಳೇ ಎಂಬದನ್ನು ನಮ್ಮ ಚಾಣಾಕ್ಷ ವಾಚಕರು ತರ್ಕಿಸಿರಬಹುದು. ವಾಚಕರೇ, ನಿಮ್ಮ ತರ್ಕದಂತೆ ಅವಳು ಇಂದಿರೆಯು ಹೌದು. ಈ ಪ್ರಕಾರ ವಿನಾಯ ಕನ ಹಿಂದೆ ತಿರುಗುವದರಲ್ಲಿ ಅವಳ ಉದ್ದೇಶವೇನಿದ್ದಿ ತೋ ಏನೋ ಅದು ಈಶ್ವರನಿಗೆ ಅರಿಕೆ! ಆ ಗುಡ್ಡಗಾಡು ಪ್ರದೇಶದಲ್ಲಿ ಹೊಕ್ಕು ತಿಂಗಳಾದ ಮೇಲೆ, ತಿರುಗುತ್ತ ತಿರು ಗುತ್ತ ಈಶ್ವರೀಸಂಕೇತದಿಂದಲೋ ಏನೋ, ವಿನಾಯಕನು ಪೂರ್ಣೆಶ್ವರ ದೇವಾಲ ಯದ ಹತ್ತರ ಬಂದನು. ಬಂದ ಕೂಡಲೇ ದೇವರನ್ನು ನೋಡಬೇಕೆಂದು ಅವನು ದೇವಾಲಯವನ್ನು ಹೊಕ್ಕು, ಎದುರಿಗೆ ಕಾಣಿಸುವ ಶಿವಲಿಂಗಕ್ಕೆ ಸಾಷ್ಟಾಂಗ ನಮ ಸಾರಮಾಡಿ, ಸ್ವಲ್ಪ ದೃಷ್ಟಿಯನ್ನು ಹೊರಳಿಸಲು ಅವನಿಗೆ ಪ್ರಶಸ್ತಿ ಪ್ರಕಾಶದ ಕಿಡ ಕಿಯ ಹತ್ತರ ಧ್ಯಾನಮಗ್ನಳಾಗಿ ಕುಳಿತಿದ್ದ ಗೌರವರ್ಣದ ಒಬ್ಬ ತರುಣಿಯು ಕಾಣಿ ಸಿದಳು. ಆಗ ಅವನು ಆಶ್ಚರ್ಯಚಕಿತನಾಗಿ ಒಳ್ಳೆ ದಿಟ್ಟಿಸಿ ಆ ತರುಣಿಯ ಕಡೆಗೆ ನೋಡಿ ಅವಳ ಗುರ್ತು ಹಿಡಿದು ( ದಿವ್ಯ ಸುಂದರಿ ” ಎಂದು ಕರೆದನು. ಕೂಡಲೆ ಧ್ಯಾನಸ್ಥ ತರುಣಿಯು ಮುಚ್ಚಿದ ಕಣ್ಣುಗಳನ್ನು ತೆರೆದು ನೋಡುತ್ತಾಳೆ ! ತನ್ನ ಹೃದ ಯೇಶಕ ವಿನಾಯಕನು ಹತ್ತರವೇ ನಿಂತಿದ್ದಾನೆ. ಆಗ ಅವಳು ತಟ್ಟನೆ ಎದ್ದು ದಬದಬ ಸಂತೋಷದ ಕಣ್ಣೀರಿನ ಮಳೆಯನ್ನು ಸುರಿಸುತ್ತ ಪ್ರೇಮಭರದಿಂದ ಪತಿಯನ್ನು ಅವಚಿಕೊಂಡಳು.
೧೩೮------------------------------------- ದಿವಸುಂದರಿ ಅಥವಾ ದೀರ್ಘಪ್ರಯತ್ನ,
ವಾಚಕರೇ! ಆಗಿನ ಅವರೀರ್ವರ ಚಮತ್ಕಾರಿಕವಾದ ಮುಖಮುದ್ರೆಯ ಪ್ರತಿ ಬಿಂಬವನ್ನು ಈ ಕಾದಂಬರಿಯಲ್ಲಿ ಹಾಕಿ ನಿಮ್ಮ ನೇತ್ರಾನಂದವನ್ನು ಮಾಡಬೇಕೆಂದು ನಮ್ಮ ಅಪೇಕ್ಷೆಯಿದ್ದರೂ, ರವಿವರ್ಮನು ವಿಶ್ವಕರ್ಮಾವತಾರಿಯಾಗದ್ದರಿಂದ ನಮ್ಮ ಇಷ್ಟವು ಪೂರ್ಣವಾಗಲಿಲ್ಲ. ಇನ್ನು ಅವರು ಪರಸ್ಪರ ಆಲಿಂಗನಮಾಡಿದ ಕಾಲಕ್ಕೆ ಅವರ ಮನಸ್ಸಿಗೆ ಎಷ್ಟು ಆನಂದವಾಯಿತಂಬುವದನ್ನು ಹೇಳಬೇಕಾದರೆ ನಾವು ಅವರ ಹೃದಯವನ್ನೇ ಸೀಳಿ ನೋಡಿ ವರ್ಣಿಸಬೇಕಾಗಿದ್ದಿತು. ಹಾಗೆ ಮಾಡುವದು ಅಸಂಭ ವನೀಯವಾದದ್ದರಿಂದ ಆ ಆನಂದದ ಬಗ್ಗೆಯೂ ನಾವು ವರ್ಣಿಸಿರುವದಿಲ್ಲ. ಈ ಬಗ್ಗೆ ಕ್ಷಮೆಯಿರಲಿ.
ಆಲಿಂಗನಾನಂತರ ಈರ್ವರೂ ತಮಗೊದಗಿದ ದುಃಖಮಯ ಸಂಗತಿಯ ಸಲು ವಾಗಿ ಎಷ್ಟೋ ಹೊತ್ತು ಮಾತಾಡುತ್ತ ಕುಳಿತುಕೊಂಡರು. ಅವರ ಪ್ರಸ್ತಾಪವು ಮುಗಿ ಯುವಾಗ ನರ್ಮದೆಯು ಅವರ ಬಳಿಗೆ ಬಂದು ಈರ್ವರೂ ರತಿಮನ್ಮಥರಂತ ಕುಳಿ ತದ್ದು ನೋಡಿ, ಸಂತೋಷಪ್ರದರ್ಶನಮಾಡಿದಳು. ಅನಂತರ ನರ್ಮದೆಯ ಆಗ್ರಹದ ಪ್ರಕಾರ ಮೂರು ನಾಲ್ಕು ದಿವಸ ಅವಳ ಬಳಿಯಲ್ಲಿಯೇ ಇದ್ದು, ಆ ಮೇಲೆ ವಿನಾಯ ಕನು ದಿವ್ಯಸುಂದರಿಯೊಡನೆ ಕಾರಖಾನೆಗೆ ಬಂದನು. ಆಗ ಕಾರಖಾನೆಯೊಳಗಿನ ಯಾವತ್ತೂ ಜನರಿಗೆ - ಕಳಕೊಂಡ ಅಮೃತವು ಪುನಃ ಸಿಕ್ಕಾಗ ದೇವತೆಗಳಿಗೆ ಆನಂದ ವಾದಷ್ಟು' ಅನಂದವಾಯಿತು.
ವಿನಾಯಕನು ಪಸಮೇತ ತಿರುಗಿ ಕಾರಖಾನೆಗೆ ಬಂದ ಸಂಗತಿಯನ್ನು ಕೇಳಿ ಅವನ ಅಷ್ಟರು ಆನಂದಾಬಿಯಲ್ಲಿ ಮುಳುಗಿದರು. ಕೃಷ್ಣರಾಯ, ರಾಮ ರಾಯ, ಯಮುನ, ಮಧುರೆ ಮೊದಲಾದವರು ಒಮ್ಮೆ ಕಾರಖಾನೆಗೆ ಬಂದು ಮೂರು ನಾಲ್ಕು ದಿವಸವಿದ್ದು ಮರಳಿ ಹೊರಟುಹೋದರು.
ವಿನಾಯಕನು ಮತ್ತಷ್ಟು ಉಮೇದಿನಿಂದ ಕಾರಖಾನೆಯ ಕೆಲಸವನ್ನು ಮಾಡ ಹತ್ತಿದ್ದರಿಂದ ಕಾರಖಾನೆಯ ಉತ್ಪನ್ನವು ಕಲ್ಪನಾತೀತವಾಗಿ ಬೆಳೆಯಿತು. ವಿನಾಯ ಕನು ಆಗ ಕೆಲವು ಹಣ ಖರ್ಚು ಮಾಡಿ ತನ್ನ ಯೋಗ್ಯತೆಗೆ ತಕ್ಕಂಥ ಒಂದು ಬಂಗಲೆ ಯನ್ನು ಕಟ್ಟಿಸಿದನು. ಆ ಬಂಗಲೆಯಲ್ಲಿ ವಿನಾಯಕನು ದಿವ್ಯಸುಂದರಿಯೊಡನೆ ಇರ ಹತ್ತಿದ ಕೂಡಲೆ ಯಾರೋ ಬೆಳಗಾಗುವದರೊಳಗೆ ಬಂದು ಆ ಬಂಗಲೆಯ ಮುಂದಿನ ಅಂಗಳದ ಕಸವನ್ನು ತೆಗೆದು ನೆಲಸಾರಮಾಡಿ ಹೋಗಹತ್ತಿದರು. ಇದು ವಿನಾಯ ಕನ ಲಕ್ಷದಲ್ಲಿ ಬಂದ ಕೂಡಲೆ ಅವನು ತನ್ನ ಸಲುವಾಗಿ ಯಾರಿಗೂ ಶ್ರಮವಾಗಬಾರ ದೆಂದು ಆ ಪ್ರಕಾರ ಸೇವೆಮಾಡುವವರ ಶೋಧಮಾಡಿದನು. ಆದರೆ ಅವನಿಗೆ ಯಾರೂ ಸಿಗಲಿಲ್ಲ. ಇದೆಲ್ಲ ಯಾರ ಕೃತ್ಯವಿದ್ದೀತೆಂಬದನ್ನು ನಮ್ಮ ವಾಚಕರು ಮಾತ್ರ ಕಂಡು
೧೩೯-------------------------------೯ನೆಯ ಪ್ರಕರಣ-ಪ್ರೇಮದ ಸುಂದರ.ಭವನ,
ಹಿಡಿದಿರಬಹುದು. ಈ ಪ್ರಕಾರ ಸೇವೆಯನ್ನು ಮಾಡುವವಳು ಇಂದಿರೆಯು, ಅವಳು ಪತಿಯ ಸಂರಕ್ಷಣೆಯ ಸಲುವಾಗಿ ಬೆನ್ನ ಹಿಂದಿರುವ ಯಾವಳೊಬ್ಬ ದೂರೀಕೃತ ಸಾಧ್ವಸಹಧರ್ಮಿಣಿಯಂತ ವಿನಾಂಕನ ಹಿಂದಿರುತ್ತಿದ್ದಳು; ಆದರೆ ಅವಳು ತನ್ನನ್ನು ನೋಡಿ ವಿನಾಯಕನ ಮನಸ್ಸು ತಲ್ಲಣಗೊಂಡೀತೆಂಬ ಭಯದಿಂದ ಎಂದೂ ಅವನ ದೃಷ್ಟಿಗೆ ಬೀಳುತ್ತಿದ್ದಿಲ್ಲ. ಒಂದು ದಿವಸ ಅವಳು ಗುಡ್ಡದ ಮೇಲಿನ ವನಪುಷ್ಪಗಳನ್ನು ಸಂಗ್ರಹಮಾಡಿ, ಯೋಜಿಸಿದ ಅಕ್ಷರಗಳು ಎದ್ದು ಕಾಣಿಸುವಂತೆ ಅವುಗಳಿಂದ ಒಂದು ಮಾಲೆಯನ್ನು ಮಾಡಿದಳು. ನಿತ್ಯದಂತ ಅವಳು ತೀರ ಬೆಳಗಿನಲ್ಲಿ ಎದ್ದು, ವಿನಾಯ ಕನ ಬಂಗಲೆಗೆ ಹೋಗಿ ಆ ಬಂಗಲೆಯ ಮುಂಚೆ ಬಾಗಿಲಿಗೆ ಆ ಮಾಲೆಯನ್ನು ಕಟ್ಟಿ ದಳು. ನಂತರ ಮೆಲ್ಲನೆ ಅಂಗಳದ ಕಸವನ್ನು ಹೊಡೆದು ನೆಲಸಾರಣಮಾಡಹತ್ತಿದಳು. ಇಂದು ಬೇಕಂತಾ ವಿನಾಯಕನು ಎಚ್ಚರದಿಂದಿದ್ದನು. ದಿವ್ಯಸುಂದರಿಯೂ ಕುಳಿತೇ ಇದ್ದಳು. ಬಾಗಿಲಲ್ಲಿ ನೀರು ಹಾಕುವ ಸಪ್ಪಳವಾಯಿತು. ಕೂಡಲೆ ಈರ್ವರೂ ಬಾಗಿಲು ತೆರೆದು ಹೊರಗೆ ಬಂದರು. ವಿನಾಯಕನು ಭರದಿಂದ ಇಂದಿರೆಯ ಹತ್ತಿರ ಹೋಗಿ - ಯಾರವರು? ” ಎಂದನು. ಆಗ ಅವಳು ' ನಾನು ತಮ್ಮ ದಾಸಿ ಇಂದಿರೆ. ' ಎಂದಳು. ಆಗ ವಿನಾಯಕ-ದಿವ್ಯಸುಂದರಿಯರಿಗೆ ಎಷ್ಟು ಆಶ್ಚರ್ಯವಾಗಿದ್ದಿತೆಂಬುವದನ್ನು ವಾಚ ಕರೇ ತರ್ಕಿಸಬಹುದಾಗಿದೆ.
ಇಂದಿರೆಯು “ ನಾನು ತಮ್ಮ ದಾಸಿ...' ಎಂದಂದ ಕೂಡಲೆ ದಿವಸುಂದರಿಯು ಪ್ರೇಮಭರದಿಂದ ಇಂದಿರೆಯ ಕೈಯನ್ನು ಹಿಡಿದು ' ಗೆಳತೀ, ಬಾ ಒಳಗೆ, ನಿನ್ನ ಗುರ್ತು ಹತ್ತಿತು. ಯಾವ ಆಕಾಂಕ್ಷೆಯಿಲ್ಲದೆ ಇಷ್ಟು ಸೇವೆ ಮಾಡುತ್ತೀಯೆಂದ ಮೇಲೆ ನೀನೇ ಧನ್ಯಳು. ” ಎಂದಳು.
ಆಗ ಇಂದಿರೆಯು:- ( ದಿವ್ಯಸುಂದರಿಯೊಡನೆ ಒಳಗೆ ಹೋಗುತ್ತ) ಸಖಿ, ನೀನು ಮಾತ್ರ ಧನ್ಯಳು”
ವಿನಾಯಕ:- (ನಡುವೇ ಬಾಯಿ ಹಾಕಿ ) ಇಂದಿರೆ, ಈ ರೀತಿಯಿಂದ ಸೇವೆ ಮಾಡುವ ನಿನ್ನ ಉದ್ದೇಶವಾದರೂ ಯಾವದು? ”
ಇಂದಿರೆ:-( ಈ ಶರೀರರೂಪವಾದ ಬಂಗಲೆಯು ನಿಮ್ಮ ಬಂಗಲೆಯಂತೆ ಅನ್ವ ರ್ಥಕವಾಗಬೇಕೆಂಬುವದೇ ನನ್ನ ಉದ್ದೇಶವು ! ”
ವಿನಾ:- (ಆಶ್ಚರ್ಯದಿಂದ) ಈ ಬಂಗಲೆಯಲ್ಲಿ ಅಂಥ ವಿಶೇಷವೇನಿರುವದು? ” ಇಂದಿರೆ:- ಹೊರಗೆ ನಡೆಯಿರಿ, ಅಂದರೆ ಎಲ್ಲ ತಿಳಿಯುವದು. ?
ಆಗ ಎಲ್ಲರೂ ಹೊರಗೆ ಬಂದ ಮೇಲೆ ಇಂದಿರೆಯು ಪುಷ್ಪಮಾಲೆಯ ಕಡೆಗೆ ಬೊಟ್ಟು ಮಾಡಿ ' ನೋಡಿದಿರಾ? ಅದನ್ನು ' ಎಂದಳು.
ಆಗ ಪುಷ್ಪಗಳಿಂದ ಸಾಧಿಸಿದ ಅಕ್ಷರಗಳನ್ನು ನೋಡಿ ವಿನಾಯಕನ ಕಣ್ಣುಗಳು ಪ್ರೇಮಾಶ್ರುಗಳಿಂದ ತುಂಬಿಬಂದವು. ದಿವ್ಯಸುಂದರಿಯ ಅವಸ್ಥೆಯೂ ಹಾಗೆಯೇ ಆಯಿತು.
೧೪೦--------------------------------------- ದಿವ್ಯಸುಂದರಿ ಅಥವಾ ದೀರ್ಘಪ್ರಯತ್ನ,
ಆಗ ವಿನಾಯಕನು ದಿವ್ಯಸುಂದರಿಯನ್ನು ಕುರಿತು:- ದಿವ್ಯಸುಂದರಿ, ಇಂದಿರೆಯು ಏನು ಬರೆದಿದ್ದಾಳೆ?” ಎಂದನು. ಆಗ ದಿವ್ಯಸುಂದರಿಯು ಉಲ್ಲಾಸದಿಂದ:
(( ಪ್ರೇಮದ ಸುಂದರ-ಭವನ ” ಎಂದಳು.
ವಿನಾಯಕನು ಪ್ರೇಮಾತಿಶಯದಿಂದ ಇಂದಿರೆಯ ಮನೋಭೀಷ್ಟ್ರವನ್ನು ಪೂರ್ಣಮಾಡಿ ಕೃತಕೃತ್ಯನಾದನು. ಇದರಿಂದ ದಿವ್ಯ ಸುಂದರಿ ಮೊದಲಾದ ವಿನಾಯ ಕನ ಯಾವತ್ತೂ ಆಸ್ತೇಷ್ಟರಿಗೆ ಪರಮಾನಂದವಾಯಿತು.
ಸಾಂಬನು ಸರ್ವರಿಗೂ ಸುಖವನ್ನುಂಟುಮಾಡಲಿ!
ಮತ್ತು ನಮ್ಮನ್ನು ಪುತ್ರವತ್ ಸದಯಾಂತಃಕರಣದಿಂದ ಕಾಪಾಡುತ್ತಿರುವ
ಸಾರ್ವಭೌಮ ಪಂಚಮಜಾರ್ಜ ಪ್ರಭುಗಳಿಗೆ ತೀವವೇ ಸಾಂಪ್ರತ ಘನಘೋರಯುದ್ದದಲ್ಲಿ
- ಜಯವನ್ನು ಕೊಡಲಿ !! ವೃತ್ತ ಅವನ ಕಾರಭಾರದಲಿ ಭಾರತದೊಳ್ ಸುಖಶಾಂತಿ ತೋರ್ಪುದೊ |
ಅವನ ಕಾರಭಾರದಲಿ ವಿದ್ಯೆಯ ದುಂದುಭಿ ಗರ್ಜಿಸುತ್ತದೋ || ಅವನ ಕಾರಭಾರದಲಿ ಧರ್ಮಕೆ ವಿಷ್ಣುವು ತಟ್ಟಲಾರದೋ | ಆ ವರಕಾರಭಾರ, ವರಜಾರ್ಜನರೇಂದ್ರನದಲ್ಲದಾರದೋ ||
ಅವನು ಭೋಗದಲ್ಲಿ ಸುರಭೂಪ! ಪರಾಕ್ರಮದಲ್ಲಿ ಸಿಂಹನೋ । ಆವನು ದಾನದಲ್ಲಿ ಕಲಿಕರ್ಣ ! ಸುರೂಪದೊಳಾರತೀಶನೇ || ಆವನು ಶೀಲದಲ್ಲಿ ಜನಮೇಜಯ | ನೀತಿಗೆ ಚಾರು ಶುಕ್ರನೋ! ಆ ವರಜಾರ್ಜಭೂಪನತಿತೀವ್ರದೆ ಪೊಂದಲಿ ಯುದ್ಧ ಕೀರ್ತಿಯಂ || ( ಆ ವರಜಾರ್ಜ ಭೂಪ ಸಲೆ ಧನ್ಯನು ಧನ್ಯನು !! ಸರ್ವಸೌಖ್ಯದಿಂ)
ಕುಧರ ಸುತಾವರ, ಶಂಕರ, । ಬುಧಗುರುವರ, ಚಾರು ಕರುಣ ಪಾರಾವಾರ ||
ವಿಧುಶೇಖರ, ಗುಣಮಂದಿರ | ಕುಧುರಾಲಯ, ದಿವ್ಯಕಾಯ, ಪಾಲಿಸು ನಿರುತಂ |
=====================================================================