ಗುರುವಾರ, ಸೆಪ್ಟೆಂಬರ್ 17, 2020

ರೋಹಿಣಿ (PDF at https://archive.org/details/dli.osmania.4196 - one part of this

 

https://archive.org/details/dlihttps://archive.org/details/dli.osmania.4196    

 

ಇದರಲ್ಲಿ ಮೂರು ಉತ್ತಮ ಗ್ರಂಥಗಳಿರುವುವು.

ನನ್ನ ಸಂಸಾರ,. ಲಲಿತೆಯ ಪಾತಿವ್ರತ್ಯ ರಕ್ಷಣೆ, ಮಧುಸೂದನ, ಶಂಕರಕಥಾಸಾರ, ರೋಹಿಣಿ, ವಿನಾಯಕವಿಜಯ 

--------------------------------

ರೋಹಿಣಿ

ಪ್ರಥಮ ಲಹರಿ.

ದಿಕ್ಕಿಲ್ಲದ ಮಗು.


ಹಿಮಗಾಲದಲ್ಲೊಂದುದಿನ ಕರುಣಾಕರನು ಕಲ್ಯಾಣನಗರದಲ್ಲಿದ್ದ

ತನ್ನ ಅಕ್ಕನನ್ನು ನೋಡಲು ಅಶ್ವಾರೂಢನಾಗಿ ಹೊರಟನು. ಆಗ ಸಂಧ್ಯಾ

ಕಾಲವಾಗಿದ್ದಿತು. ಹಿಮವು ಅವಿರಳವಾಗಿ ಸುರಿಯುತ್ತಿದ್ದಿತು. ಹಿಮದ

ಸರ್ವ ವ್ಯಾಪಕತೆಯಿಂದ, ಇದು ಮಾರ್ಗ, ಇದು ಹಳ್ಳ, ಇದು ದಿಣ್ಣೆ, ಇದು

ಮೈದಾನವೆಂಬುದೊಂದೂ ಗೋಚರವಾಗುತ್ತಿರಲಿಲ್ಲ. ಆದರೆ ಕರುಣಾ

ಕರನ ಅಶ್ವವು ಎಂತಹ ಮಾರ್ಗದಲ್ಲಿ ಹೋಗುವುದಕ್ಕೂ ಅಂಜುತ್ತಿರ

ಲಿಲ್ಲ. ಈ ಅಶ್ವದ ಬಲದಿಂದಲೇ ಮಾರ್ಗವು ದುರ್ಗಮವೆಂದು ಸಹ ಲಕ್ಷಿ

ಸದೆ ಕರುಣಾಕರನು ಸೋದರಿಯನ್ನು ನೋಡಲು ಹೊರಟಿದ್ದನು. ಅಶ್ವವು

ಸ ಬುದ್ದಿ ಕೌಶಲದಿಂದ ಅನೇಕ ಕಷ್ಟಗಳನ್ನನುಭವಿಸುತ್ತಾ ಮಾರ್ಗ

ಕ್ರಮಣ ಮಾಡತೊಡಗಿತು. ಅಷ್ಟರಲ್ಲೇ ಅಂಧಕಾರವು ಸರ್ವತ್ರವ್ಯಾ

ಪಿಸಿತು. ಇಂತಹ ರಾತ್ರಿಯಲ್ಲಿ ನಿಬಿಡವಾದ ಹಿಮವರ್ಷದಲ್ಲಿ ಕುದು

ರೆಯು ಕಲ್ಯಾಣ ನಗರದ ಉದ್ಯಾನವೊಂದರ ಸಮೀಪದಲ್ಲಿ ಬರುತ್ತಿರು

ವಾಗ ಕರುಣಾಕರನಿಗೆ ಒಂದು ಶಿಶುವಿನ ರೋದನ ಧ್ವನಿಯು ಕೇಳಿಸಿತು.

ತಕ್ಷಣವೇ ಅವನು ಅಶ್ವದಿಂದಿಳಿದು ಆಲಿಸಿ ಕೇಳಲು ಪ್ರಚಂಡಮಾರು

ತರವವಲ್ಲದೆ ಮತ್ತೇನೂ ಕೇಳಲಿಲ್ಲ. ಪುನಹ ಕುದುರೆಯನ್ನು ಹತ್ತಿ

ಮುಂದುವರಿಯುತ್ತಿರುವಲ್ಲಿ ಕುದುರೆಯು ಥಟ್ಟನೆ ಒಂದುಕಡೆ ನಿಂತು

ಬಿಟ್ಟಿತು. ಏನು ಮಾಡಿದರೂ ಮುಂದರಿಯಲೇ ಇಲ್ಲ. ಆಗ ಕರುಣಾ

ಕರನು ಪ್ರನಹ ಇಳಿದು ಸುತ್ತಲೂ ನೋಡಿದನಾದರೂ ಆ ಕತ್ತಲೆಯ

ಲ್ಲೇನೂ ಕಾಣಬರಲಿಲ್ಲ. ಆದರೂ ಬಿಡದೇ ಶೋಧಿಸತೊಡಗಳು ಕುದು

ರೆಯ ಮುಂಗಡೆ ಹಿಮವಾಪ್ನವಾದೊಂದು ಪ್ರದೇಶದಲ್ಲಿ ಏನೋ ಬಿದ್ದಿ

ರುವಂತೆ ಬೋಧೆಯಾಯಿತು. ಕರುಣಾಕರನು ಪರಿಶೀಲಿಸಲು ಅವನಿ

ಗೊಂದು ಎಳೆಯ ಮಗುವು ದೃಗ್ಗೋಚರವಾಯಿತು. ಅವನು ಅದನ್ನು

ಎರಡು ಕೈಗಳಿಂದ ಎತ್ತಿ ನೋಡಲು ಜೀವವಿರುವುದೆಂದು ತಿಳಿಯಿತು.



೨-----------------------------

ಮಗುವು ಮೆಲ್ಲನೆ ಅಳುತ್ತಿತ್ತು. ಕರುಣಾಕರನು ದುಃಖದಿಂದ-“ ಅಯ್ಯೋ !

ಪಾಪ” ಯಾರೂ ಈ ಶಿಶುವನ್ನು ಬಡತನದಿಂದಲೋ ಅಥವಾ ಇನ್ಯಾವ

ಕಾರಣದಿಂದಲೋ ಹಿಮಾವೃತವಾದ–ನರಸಂಚಾರರಹಿತವಾದ ಇಂತಹ

ಪ್ರದೇಶದಲ್ಲಿ ಹಾಕಿ ಹೋಗಿರುವರು. ಆಹ !! ಎಂತಹ ನಿರ್ಘೃಣರು

ಎಂದು ಹೇಳಿಕೊಂಡು ಸುತ್ತುಮುತ್ತಲೂ ನೋಡಲು ಯಾರ ಧ್ವನಿಯೂ

ಕೇಳಿಸಲಿಲ್ಲ. ಮತ್ತು ಯಾವ ಮನುಷ್ಯನೂ ಸಿಕ್ಕಲಿಲ್ಲ. ಆಗ ಅವನು

ಈ ಮಗುವನ್ನು ಇಲ್ಲಿ ಯಾರು ಹಾಕಿ ಹೋಗಿರುವರೋ ಅಂತಹರ ಶೋಕ

ನಿವಾರಣೆಗಾಗಿ ಈ ಶಿಶುವನ್ನು ಸಂರಕ್ಷಿಸುವೆನೆಂದು ಘಟ್ಟಿಯಾಗಿ ಹೇಳಿ

ಆ ಮಗುವಿಗೆ ತನ್ನ ಪಂಚೆಯನ್ನು ಹೊದಿಸಿ ಬೆಚ್ಚಗೆ ಮಾಡಿ ಕುದುರೆಯ

ಮೇಲೆ ಹತ್ತಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡು ತನ್ನ

ಅಕ್ಕನ ಊರಿಗೆ ಹೋಗುವುದನ್ನು ನಿಲ್ಲಿಸಿ ಹಿಂತಿರುಗಿ ತನ್ನ ಮನೆಗೆ

ಬಂದುಬಿಟ್ಟನು.


ಇವನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಅವನ ತಮ್ಮ ದಯಾ

ಕರನು ಬೇಗ ಬಂದು ಕುದುರೆಯನ್ನು ಹಿಡಿದುಕೊಂಡನು. ಕರುಣಾಕ

ರನು ಕುದುರೆಯ ಮೇಲೆ ಕುಳಿತಿದ್ದಂತೆಯೇ ಮಗುವನ್ನು ತೆಗೆದು ದಯಾ

ಕರನ ಕೈಯಲ್ಲಿ ಕೊಟ್ಟನು.


ದಯಾಕರನು ಅದನ್ನು ನೋಡಿ, ಅಣ್ಣಾ ! ಈ ಮಗುವು ಎಲ್ಲಿ

ಸಿಕ್ಕಿತು ? ಇದನ್ನು ಕಾಪಾಡತಕ್ಕವರು ಯಾರು ? ಇದರ ವೃತ್ತಾಂತ

ವೇನು ? “ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಮಾಡಲು ಕರುಣಾ

ಕರನು, ನಮ್ಮನ್ನು ಹೊರತು ಸಂರಕ್ಷಿಸತಕ್ಕವರು ಮತ್ತಾರು ? ಎಂದು

ಹೇಳಿ, “ ಆ ಮಗುವನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಬಾ ” ಎಂದನು.

ದಯಾಕರನು ಬೆಳಕಿನಲ್ಲಿ ಕ್ಷಣಕಾಲ ಮಗುವನ್ನು ಚೆನ್ನಾಗಿ ನೋಡಿ

" ಆಹಾ ? ಇದೆಂತಹ ಸುಂದರವಾದ ಹೆಣ್ಣು ಕೂಸು ! ಇದರ ಕಣ್ಣುಗಳು

ಎಷ್ಟು ರಮ್ಯವಾಗಿವೆ ! ಆಗಲೇ ಇದು ಸುತ್ತುಮುತ್ತಲೂ ನೋಡಿ ಹೇಗೆ

ನಗುವುದು ! ಪಾಯಶಃ ಇದಕ್ಕೆ ಹತ್ತು ಹನ್ನೊಂದು ತಿಂಗಳಿರಬಹುದು.

ಅಯ್ಯೋ ಪಾಪ ! ತುಂಬ ಹಸಿದಿರಬಹುದು. ಸ್ವಲ್ಪ ಹಾಲನ್ನು ಕುಡಿ

೩------------------------------------------------------------------


ಸೋಣ ! ಎಂಬದಾಗಿ ಹೇಳಿ ಹಾಲನ್ನು ಬಿಸಿ ಮಾಡಿ ಮಗುವಿಗೆ ಕುಡಿಸಿ

ದನು. ಮಗುವು ಮೆಲ್ಲಗೆ ಕುಡಿಯಲಾರಂಭಿಸಿತು. ಅಷ್ಟರಲ್ಲಿ ಹಿಮ

ದಲ್ಲಿ ತೊಯ್ದು ನಡುಗುತ್ತಲಿದ್ದ ಕರುಣಾಕರನು ಬೆಂಕಿಯನ್ನು ಕಾಸಿ

ಕೊಳ್ಳುತ್ತಾ ದಯಾಕರನನ್ನು ಕುರಿತು ತನಗೆ ಮಗುವು ಸಿಕ್ಕಿದ ಸಂಗತಿ

ಯನ್ನು ವಿಸ್ತಾರವಾಗಿ ಹೇಳಿದನು. ದಯಾಕರನು ಈ ಮಾತುಗಳನ್ನು

ಕೇಳಿ ಬಹು ಕೋಪಗೊಂಡು ಇಂತಹ ಸುಂದರವಾದ ಮಗುವನ್ನು

ಹಿಮದಲ್ಲಿ ಹಾಕಿ ಹೋದವರೆಂತಹ ಕ್ರೂರಾತ್ಮರೋ ! ಆಹಾ ! ಇಂಥವರೂ

ಈ ಲೋಕದಲ್ಲಿ ಇರುವರೇ ? ಅಯ್ಯೋ, ನೀವು ಆ ಮಾರ್ಗವಾಗಿ

ಪ್ರಯಾಣಮಾಡದೆ ಇದ್ದರೆ ಈ ಕೂಸಿನ ಗತಿ ಏನಾಗುತ್ತಿತ್ತೋ ? ಇಂಥ

ಮಗುವನ್ನು ಅದರ ಮಾತಾಪಿತೃಗಳೇ ಈ ರೀತಿ ತ್ಯಜಿಸಿದ್ದ ಪಕ್ಷದಲ್ಲಿ

ವಿಚಾರಣೆ ಇಲ್ಲದೆ ಅವರನ್ನು ಗಲ್ಲಿಗೆ ಹಾಕಬೇಕು ” ಎಂದು ಹೇಳಿ

ಮಗುವಿಗೆ ಬೆಚ್ಚಗೆ ಹೊದ್ದಿಸಿದನು. ಇದನ್ನು ಕೇಳಿ ಶಾಂತನಾದ ಕರು

ಣಾಕರನು- "ದಯಾಕರನೇ ! ಸಜ್ಜನರಿಗೆ ಪರನಿಂದೆಯು ಯೋಗ್ಯವಾದ

ದ್ದಲ್ಲ. ಆ ರೀತಿ ದೂಷಿಸುವುದು ಮಹಾ ಪಾತಕವು. ಆದರೆ ಯಾವ

ಕಾರಣದಿಂದ ಮಗುವನ್ನು ಹಿಮದಲ್ಲಿ ಹಾಕಿ ಹೋದರೋ ಅದನ್ನು ವಿಮ

ರ್ಶಿಸದೆ ಅವರನ್ನು ನೀಚರು, ಘಾತುಕರು, ಕ್ರೂರಾತ್ಮರು, ಎಂದು ನಾವು

ನಿಂದಿಸುವುದು ಕೂಡ ನ್ಯಾಯವಲ್ಲ” ಎಂದು ಹೇಳಿದನು.


ಅದಕ್ಕೆ ದಯಾಕರನು-ಈ ಶಿಶುವು ಯಾರದೋ ತಿಳಿಯಲಿಲ್ಲ.

ಮೈಮೇಲಿನ ಬಟ್ಟೆಗಳಾದರೋ ಬಹು ಶುಭ್ರವಾಗಿವೆ. ಆದರೂ ಅವು

ಅಷ್ಟು ಬೆಲೆಯುಳ್ಳವುಗಳಲ್ಲ. ಅದಿರಲಿ. ಇದಕ್ಕೆ ಏನು ಹೆಸರಿಡೋಣ ?

ಎಂದು ಕೇಳಿದನು. ಅದಕ್ಕೆ ದಯಾರ್ದಹೃದಯನಾದ ಕರುಣಾಕರನು

ಪಂಚಾಂಗವನ್ನು ತೆಗೆದುನೋಡಿ “ ಆ ಮಗುವು ದೊರೆತ ದಿವಸವು ರೋಹಿ

ಣೀನಕ್ಷತ್ರ ಯುಕ್ತವಾದ್ದರಿಂದ, ಬಹು ಸುಂದರವಾದ್ದರಿಂದಲೂ,

ರೋಹಿಣಿಯೆಂದೇ ನಾಮಕರಣವನ್ನು ಮಾಡೋಣ ಎಂದು ಹೇಳಿದನು.

ಅದನ್ನು ದಯಾಕರನು ಒಪ್ಪಿ ಮಗುವಿಗೆ ರೋಹಿಣಿಯೆಂದೇ ನಾಮಕರಣ

ವನ್ನು ಮಾಡಿ ಆ ರೋಹಿಣೀನಕ್ಷತ್ರಾಧಿದೇವತೆಯೆ ಇದನ್ನು ಕಾಪಾಡಲಿ

ಎಂದು ಆಶೀರ್ವದಿಸಿ ಮಗುವಿಗೆ ಬೆಚ್ಚಗೆ ಹೊದಿಸಿ ಮಲಗಿಸಿದನು.

೪----------------------------------------------------


ಕೂಡಲೆ ಮಗುವಿಗೆ ನಿದ್ರೆಯ ಬಂದಿತು. ಅನಂತರ ಸಹೋದರರಿಬ್ಬರೂ

ಭೋಜನವನ್ನು ಮಾಡಿ ಮಲಗಿದರು. ಕೂಡಲೇ ಪರೋಪಕಾರ

ಬುದ್ದಿಯು ಇದೇ ರೀತಿ ಕೊನೆಯವರಿಗೂ ಇವರಲ್ಲಿ ಸ್ಥಾಯಿಯಾಗಿ

ಇರುವುದೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವಂತೆ ನಿದ್ರೆಯು

ತ್ವರಿತವಾಗಿ ಬಂದಿತು. ನೋಡಿರಿ : ಪಾಠಕರೆ ! ವಿಧಿವಿಲಾಸವು ಎಂತಿರು

ವುದು ? ಸ್ವಲ್ಪಕಾಲದ ಮುಂಚೆ ಹಿಮದಲ್ಲಿ ಬಿದ್ದು ಮರಣೋನ್ಮುಖವಾ

ಗಿದ್ದ ಮಗುವು ಈಗ ಹೇಗೆ ಸುಖವಾಗಿ ನಿದ್ರಿಸುತ್ತಿರುವುದು ? ಕರುಣಾ

ಕರ ! ನೀನೇಧನ್ಯ ! ನಿನ್ನಂತಹ ಕರುಣಾಶಾಲಿಗಳು ಜಗತ್ತಿನಲ್ಲಿ ಅತಿ ವಿರಳ

ರಲ್ಲವೆ ?

----------------

ದ್ವಿತೀಯ ಲಹರಿ

ವಿಚಾರ

ಮರುದಿನ ಬೆಳಗ್ಗೆ ಆ ಮಗುಏನ ವದಂತಿಯ, ಅಂದರೆ ಕರುಣಾ

ಕರನ ಶಪಥವೂ ಮಗುವಿಗೆ ರೋಹಿಣಿ ಎಂದು ನಾಮಕರಣ ಮಾಡಿದ್ದೂ

ಊರಲ್ಲೆಲ್ಲಾ ವ್ಯಾಪಿಸಿತು. ಮಗುವು ದೊರೆತ ಕಾಡಿನಲ್ಲಿ ಒಂದು ಗುಡಿ

ಸಲು ಹಾಕಿಕೊಂಡು ಒಬ್ಬ ಕೃಷಿಕನು ವಾಸಮಾಡುತಲಿದ್ದನು. ಅವನು

ಕರುಣಾಕರನ ಹೊಲದ ಕಾವಲುಗಾರನು. ಆ ದಿನ ರಾತ್ರಿ ನಿದ್ರಿತನಾಗಿ

ದ್ದಾಗ ಬಾಗಲಿಗೆ ಏನೋ ಬಡಿದಂತೆ ಬಹಳ ಗಟ್ಟಿಯಾದ ಶಬ್ದವಾಯಿತು.

ರೈತನು ಅದನ್ನು ಕೇಳಿ ಮೇಲಕ್ಕೆದ್ದನು. ಆ ಸಮಯದಲ್ಲಿ ಅವನ ಕಿವಿಗೆ

ಒಂದು ರೋದನಧ್ವಸಿಯು ಕೇಳಿಬಂದಿತು. ಅದನ್ನು ಕೇಳಬಹುಭಯ

ಪಟ್ಟು ಬಾಗಿಲನ್ನು ತೆಗೆಯದೆ ಭದ್ರವಾಗಿ ಹಾಕಿಕೊಂಡು ನಿದ್ರೆ ಮಾಡ ತೊಡ

ಗಿದನು. ಮಾರನೆಯ ದಿನ ಪ್ರಾತಃಕಾಲ ಬಾಗಿಲನ್ನು ತೆಗೆದು ನೋಡಲು

ಒಬ್ಬ ಸಿಪಾಯಿಯು ಬಿದ್ದಿದ್ದನು. ಇದನ್ನು ರೈತನು ಕಂಡು ಭಯಪಟ್ಟು

ಈ ಸಂಗತಿಯನ್ನು ತನ್ನ ಯಜಮಾನನಾದ ಕರುಣಾಕರನಿಗೆ ತಿಳಿಸಿದನು.

ಕರುಣಾಕರನು ಇದನ್ನು ಕೇಳಿ ಆ ಸಿಪಾಯಿಯ ಮೂಲಕ ಈ ಮಗುವಿನ

೫-----------------------------------------------------------

ಸಮಾಚಾರವು ಏನಾದರೂ ತಿಳಿಯಬಹುದೆಂದು ಊಹಿಸಿ ರೈತನ ಜೊತೆ

ಯಲ್ಲಿಯೇ ಬಂದನು. ನೋಡಲಾಗಿ ಸಿಪಾಯಿಯುಮೃತನಾಗಿದ್ದನು. ಅವನ

ದೇಹವನ್ನೆಲ್ಲಾ ಶೋಧಿಸಲಾಗಿ ಒಂದು ಕಾಗದವು ಸಿಕ್ಕಿತು. ಅದರಲ್ಲಿ

ಹೀಗೆ ಬರೆದಿತ್ತು


ಯುದ್ದದಲ್ಲಿ ಮರಣೋನ್ಮುಖರನಾದೊಬ್ಬನು ಈ ಮಗುವನ್ನು ನನಗೆ

ಸಾಕುವುದಕ್ಕಾಗಿ ಕೊಟ್ಟನು. ನಾನು ವೃದ್ದನಾದ್ದರಿಂದ ನನ್ನ ಸ್ಥಳ

ವನ್ನು ಸೇರಬೇಕೆಂದು ಇದ್ದ ನೌಕರಿಯನ್ನು ಬಿಟ್ಟು ಮಗುವನ್ನು ಜತೆ

ಯಲ್ಲಿ ಕರೆದುಕೊಂಡು ಬರುವಾಗ ಮಾರ್ಗದಲ್ಲಿ ಹಸಿವು, ಬಳಲಿಕೆ,

ಆಯಾಸ, ಚಳಿ, ಮುಂತಾದುವುಗಳನ್ನು ಸಹಿಸಲಾರದೆ ಈಕುಟೀರವನ್ನು

ಕಂಡು ಇಲ್ಲಿಯಾದರೂ ಸ್ವಲ್ಪ ಸಹಾಯದೊರಕಿತೆಂದು ಯೋಚಿಸಿ

ಕೂಗಿದೆನು, ಅತ್ತೆನು. ಗೋಳಾಡಿದೆನು. ಏನು ಮಾಡಿದರೂ ಕುಟೀರದ

ಬಾಗಿಲು ತೆಗೆಯಲ್ಪಡಲಿಲ್ಲ. ಆದ್ದರಿಂದ ಇಲ್ಲಿ ಬಿದ್ದು ಪ್ರಾಣಬಿಡುವ ಅವ

ಸ್ಥೆಗೆ ಬಂದೆನು ” ಎಂದು ಬರೆದಿತ್ತು.


ಕರುಣಾಕರನು ನೋಡಿ ವಿಸ್ಮಯಾವಿಷ್ಟನಾಗಿ ಮಗುವಿನ ನಿಜವಾದ

ಸಂಗತಿಯೇನೋ ಗೊತ್ತಾಗಲಿಲ್ಲ. ಬಹುಶಃ ಈ ಮಗುವು ಆ ಸಿಪಾಯಿ

ಯದೇ ಎಂದು ಊಹಿಸಿ ಅತಿ ಪ್ರೇಮದಿಂದ ಸಾಕುತ್ತಾ ಬಂದನು. ರೋಹಿ

ಣಿಯ ಕೊಡ ತನ್ನ ಸಾಕು ತಂದೆಯಲ್ಲಿ ಅತ್ಯಂತ ವಿಧೇಯಳಾಗಿಯೂ

ವಿಶ್ವಾಸವುಳ್ಳವಳಾಗಿಯೂ ಇದ್ದುದೂ ಅಲ್ಲದೆ ಆ ಪಟ್ಟಣದ ನಿವಾಸಿಗ

ಳೆಲ್ಲರ ಪ್ರೀತಿಗೂ ಪಾತ್ರಳಾಗಿದ್ದಳು. ಹೀಗೆ ರೋಹಿಣಿಯು ಶುಕ್ಲ

ಪಕ್ಷದ ಚಂದ್ರಮನಂತೆ ವೃದ್ಧಿ ಹೊಂದುತ್ತಾ ಮನೆಯ ಕೆಲಸಗಳನ್ನು

ಮಾಡಿಕೊಂಡು ತನ್ನ ಸಾಕುತಂದೆಯ ಮತ್ತು ದಯಾಕರನ ಶುಶ್ರೂಷೆ

ಯನ್ನೂ ಮಾಡಿಕೊಂಡು ಎಲ್ಲರಿಗೂ ಬಹಳ ಅಚ್ಚು ಮೆಚ್ಚಾಗಿದ್ದಳು.

ಹೀಗೆ ಹನ್ನೆರಡು ವರ್ಷಗಳ ಕಳೆದವು.


ಒಂದುದಿನ ಕರುಣಾಕರನು ರೋಹಿಣಿಯನ್ನು ಕುರಿತು '' ಅಮ್ಮ

ಮಗುವೆ ! ಕಲ್ಯಾಣನಗರದಲ್ಲಿರುವ ನಮ್ಮ ಸಹೋದರಿ ಕರುಣಾಂಬೆಗೆ

ದೇಹದಲ್ಲಿ ಬಹಳ ಆಲಸ್ಯವೆಂದು ಸಮಾಚಾರ ಬಂದಿದೆ. ಅವಳು ಮುದುಕಿ!

೬-----------------------------------------------------

ವಯಸ್ಸಾಯಿತು. ಏನುತಾನೆ ಮಾಡಿಯಾಳು? ಕೆಲವು ಕಾಲದ ವರೆ

ವಿಗೂ ನಿನ್ನನ್ನು ಅವಳ ಸಮೀಪಕ್ಕೆ ಕಳುಹಿಸಬೇಕಂಬ ಇಚ್ಛೆ ಇದೆ.

ನಿನ್ನ ಅದೃಷ್ಟದಿಂದ ಆಕೆಗೆ ಆರೋಗ್ಯವಾಗಬೇಕು. ಎಂದು ಹೇಳಿದನು.

ಅದಕ್ಕೆ ರೋಹಿಣಿಯು ಕರುಣಾಕರನನ್ನು ಕುರಿತು ಅಪ್ಪಾ ! ತಮ್ಮ ಇಷ್ಟ

ದಂತೆಯೆ ನಡೆಯಲು ಸಂತುಷ್ಟಚಿತ್ತಳಾಗಿರುವೆನು. ತಮ್ಮ ಸಹೋದ

ರಿಯರಾದ ಕರುಣಾಂಬೆಯರ ಸೇವೆಯನ್ನು ಮನಃಪೂರ್ವಕವಾಗಿ ಮಾಡು

ವೆನಾದರೂ ತಮ್ಮನ್ನು ಅಗಲಿ ಹೇಗಿರಲಿ ” ಎಂದಳು.


ಅದನ್ನು ಕೇಳಿ ಕರುಣಾಕರನು ಮಗುವೇ ? “ ನಾನೇ ಜಾಗ್ರತೆ

ಯಾಗಿ ಬಂದು ನಿನ್ನನ್ನು ಕರೆದುಕೊಂಡು ಬರುವೆನು. ನಾನು ಬಂದು

ಕರೆದ ಹೊರ್ತು ನೀನು ಮತ್ತಾರ ಸಂಗಡ ಬರಕೂಡದು ” ಎಂದು

ಹೇಳಿದನು.


ರೋಹಿಣಿಯು ಆತನ ಮನೋಭಿಪ್ರಾಯವನ್ನು ತಿಳಿಯದೆ ಇದ್ದು

ದರಿಂದ ಸಂತೋಷದಿಂದ ಪ್ರಯಾಣಸನ್ನದ್ಧಳಾದಳು. ತಂದೆ ಮಗಳಿಬ್ಬರೂ

ಪ್ರಯಾಣಮಾಡಿ ಪೂರ್ವದಲ್ಲಿ ಈ ಮಗುವು ಬಿದ್ದಿದ್ದ ಸ್ಥಳವನ್ನು ಕಂಡು

ಕರುಣಾಕರನು- ರೋಹಿಣಿ ಈಗ ಹನ್ನೆರಡು ವರ್ಷಗಳ ಮುಂಚೆ ನೀನು

ಈ ಪ್ರದೇಶದಲ್ಲಿ ಬಿದ್ದಿದ್ದೆ ” ಎಂದು ಆ ಪ್ರದೇಶವನ್ನು ತೋರಿಸಿದನು.

ಅದನ್ನು ಕೇಳಿ ರೋಹಿಣಿಯು ಆ ಪ್ರದೇಶದಲ್ಲಿ ನಿಂತು ಭಗವಂತನ

ವ್ಯಾಪಾರವನ್ನು ಕುರಿತು ಆತನನ್ನು ಸ್ತೋತ್ರ ಮಾಡಿದಳು. ಅನಂತರ

ಕರುಣಾಕರನ ಕಡೆಗೆ ತಿರುಗಿ ಗದ್ಗದಧ್ವನಿಯಿಂದ ಎಲೈ ತಂದೆಯೆ?

"ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಈಶ್ವರಾನುಗ್ರಹದಿಂದ ನೀನು

ನನ್ನನ್ನು ಕಂಡು ಕಾಪಾಡಿದೆ. ಮತ್ತು ಈಗಲೂ ಕಾಪಾಡುತ್ತಲಿರುವಿ.

ನನ್ನ ಸಂರಕ್ಷಣೆಗೋಸ್ಕರ ಜಗದೀಶ್ವರನು ನಿನ್ನನ್ನು ಹೇಗೆ ಕಳುಹಿಸಿ

ದನೋ ಹಾಗೆಯೇ ನಾನು ಈಗ ಮಾಡತಕ್ಕ ಪ್ರಾರ್ಥನೆಯನ್ನು ಕೇಳಿ

ಆತನು ನೀನು ಮಾಡಿದ ಉಪಕಾರಕ್ಕೋಸ್ಕರ ದೀರ್ಘಾಯುಸ್ಸನ್ನು

ಕೊಟ್ಟು ನಮ್ಮೆಲ್ಲರನ್ನೂ ಸಂರಕ್ಷಿಸಲಿ ” ಎಂದು ಪ್ರಾರ್ಥಿಸುತ್ತೇನೆ

ಎಂದಳು.

೭----------------------------------------------------------


ಈ ಮಾತನ್ನು ಕೇಳಿ ಕರುಣಾಕರನ ಮನಸ್ಸು ಕರಗಿತು, ಆಕೆಯ

ತಲೆಯ ಮೇಲೆ ಕೈಯನ್ನಿಟ್ಟು “ಸಕಲ ಪ್ರಾಣಿಗಳನ್ನೂ ಸಂರಕ್ಷಿಸತ

ಕ್ಕವನು ಈಶ್ವರನು. ಆತನ ಸಂಕಲ್ಪಕ್ಕೆ ವಿರೋಧವಾಗಿ ಯಾವುದೂ

ನಡೆಯಲಾರದು. ಆತನ ಚಿತ್ತವಿದ್ದಂತೆ ಆಗಲಿ, ನನ್ನ ಆಯುರ್ಮಿತಿ ಎಷ್ಟಾ

ದರೂ ಇರಲಿ. ನಾನೇನೋ ನನ್ನ ಜೀವಮಾನವನ್ನೆಲ್ಲಾ ಭಗವಂತನ

ಸೇವೆಯಲ್ಲಿಯೇ ಕಳಯಬೇಕೆಂದು ದೃಢ ಪ್ರತಿಜ್ಞೆಯನ್ನು ಮಾಡಿದ್ದೇನೆ.

ಒಂದುವೇಳೆ ನಾನೇನಾದರೂ ಅಕಾಲಮೃತ್ಯುವಿಗೆ ತುತ್ತಾದರೂ ನಮ್ಮ

ಕರುಣಾಂಬೆಯು ನಿನ್ನನ್ನು ಕಾಪಾಡದಿರಳು.


ನಾನು ನಿನಗೆ ವಿದ್ಯೆಯನ್ನು ಕಲಿಸಲಿಲ್ಲ. ಧನವನ್ನು ಕೊಡಲು

ಧನಿಕನಾಗಿಲ್ಲ. ಆದರೂ ಈಶ್ವರನಲ್ಲಿ ಭಕ್ತಿಯನ್ನೂ ವಿಶ್ವಾಸವನ್ನೂ

ಉಂಟುಮಾಡಿರುವೆನು. ನೀನು ಸುಗುಣಿಯು. ವಿಧೇಯಳು. ಸತ್ಯವ್ರ

ತಳು. ನೀನು ಪರಮೇಶ್ವರನನ್ನು ಮಾತ್ರ ಯಾವಾಗಲೂ ಮರೆಯಬೇಡ;

ಆತನ ಅನುಗ್ರಹವಿಲ್ಲದೆ ಯಾವ ಪ್ರಾಣಿಯ ಭೂಮಿಯಲ್ಲಿ ಒಂದು

ನಿಮಿಷವಾದರೂ ಜೀವಿಸಲಾರದು. ಆತನಿಗೆ ಸಮ್ಮತವಾದ ಕೆಲಸವನ್ನೇ

ಮಾಡು. ಒಬ್ಬರ ಮನಸ್ಸಿಗೂ ವ್ಯಥೆಯುಂಟಾಗತಕ್ಕ ಮಾತನ್ನು ಆಡ

ಬೇಡ. ಉಪಕಾರಿಯಾಗಿರು. ದೇವರು ನಿನಗೆ ಒಳ್ಳೆಯದನ್ನು ಮಾಡು

ವನು. ಋಣಾನುಬಂಧವಿದ್ದರೆ ಈ ಲೋಕದಲ್ಲಿ ಇನ್ನೊಂದಾವರ್ತಿ

ಒಬ್ಬರನ್ನೊಬ್ಬರು ನೋಡುವೆವು. ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ

ನೋಡಲು ಯಾವ ಅಡ್ಡಿಯೂ ಇಲ್ಲ. ಎಂದು ಬುದ್ದಿ ಹೇಳಿ ಮಗ

ಳನ್ನು ಕಲ್ಯಾಣಪುರಕ್ಕೆ ಸೇರಿಸಿ ಕರುಣಾಂಬೆಯೊಡನೆ ಸಂಗತಿಯಲ್ಲವನ್ನೂ

ತಿಳಿಸಿ ಕರುಣಾಕರನು ಪುತ್ರಿ ವಿರಹ ವ್ಯಸನದಿಂದ ಕೂಡಿ ಆ ದೇಶದ ರಾಜ

ಧಾನಿಯಾದ ಸುವರ್ಣಪುರಕ್ಕೆ ಪ್ರಯಾಣ ಮಾಡಿದನು.


ಪಾಠಕಮಹಾಶಯರೇ ! ದೈವಘಟನೆಯು ವಿಚಿತ್ರವಾದುದು. ಆಹಾ !

ರೋಹಿಣಿಯು ಎಲ್ಲಿ ಹುಟ್ಟಿದಳು ! ಎಲ್ಲಿ ಬೆಳದಳು ! ಈಗ ಎಲ್ಲಿರುವಳು ? ಕರುಣಾಕರನಿಗೆ ತನ್ನ ಸಾಕುಮಗಳನ್ನು ತನ್ನ ಸಹೋದರಿಯ ಮನೆಗೆ

ಕಳುಹಿಸುವಾಗ್ಯೆ ಉಂಟಾದ ದುಃಖವೇ ಇಂತಿರುವಲ್ಲಿ ಸ್ವಂತ ಹೆಣ್ಣುಮ

ಕ್ಕಳನ್ನು ಪ್ರೀತಿಯಿಂದ ಸಲಹಿ ಮದುವೆ ಮುಂತಾದುವುಗಳನ್ನು ನಡೆಸಿ

೮--------------------------------------------------------------------

ಪತಿಯ ಮನೆಗೆ ಕಳುಹಿಸತಕ್ಕ ಕಾಲದಲ್ಲಿ ಉಂಟಾಗತಕ್ಕ ತಾಯಿತಂದೆಗಳ

ವ್ಯಥೆಯು ಎಷ್ಟೋ ಅದನ್ನು ವರ್ಣಿಸಲು ಶಕ್ಯವಲ್ಲ. ಅದನ್ನು ಪ್ರಾಜ್ಞ

ರಾದ ಅನುಭವೈಕವೇತ್ತರಾದ ಪಾಠಕರಿಗೇ ಬಿಟ್ಟಿರುವೆವು. ಇನ್ನು ಮುಂದೆ

ಕರುಣಾಂಬೆಯು ಯಾರು ? ಎಂಬುದನ್ನು ವಿಚಾರ ಮಾಡುವ

=== =

ತೃತೀಯಲಹರಿ.

ವಿದ್ಯಾಭ್ಯಾಸ.


ಕರುಣಾಂಬೆಯು ಒಬ್ಬ ಬಾಲವಿತಂತುವು. ಆಕೆಯು ಸುವರ್ಣ

ಪುರದ ಪುರಾಧ್ಯಕ್ಷನ ಮೂರನೆಯ ಪತ್ನಿಯು, ಪುರಾಧ್ಯಕ್ಷನು ಬಹು ದ್ರವ್ಯ

ವನ್ನೂ, ಯಶಸ್ಸನ್ನೂ, ಸಂಪಾದಿಸಿ ಮೃತಪಟ್ಟನು. ಕೂಡಲೇ ಆತನ

ಪ್ರಥಮ ದ್ವಿತೀಯ ಪತ್ನಿಯರ ಪುತ್ರರು ಕರುಣಾಂಬೆಗೆ ಮಾಸಾಶನ

ವನ್ನು ಕೊಟ್ಟು ಕಳುಹಿಸಿಬಿಟ್ಟರು.


ಕರುಣಾಂಬೆಯು ಸುವರ್ಣಪುರದಲ್ಲಿ ವಾಸಿಸಲು ಲಜ್ಜಿತಳಾಗಿ ಕಲ್ಯಾ

ಣಪುರಕ್ಕೆ ಬಂದು ವಾಸಮಾಡಲಾರಂಭಿಸಿದಳು: ಈಕೆಯು ಸುಗುಣಿ

ಸದಾಚಾರಸಂಪನ್ನಳು. ಯಾವಾಗಲೂ ಸತ್ಕಾಲಕ್ಷೇಪದಲ್ಲೇ ಕಾಲಯಾ

ಪನೆ ಮಾಡುತ್ತಾ ವಿದ್ಯಾವತಿಯಾಗಿದ್ದುದರಿಂದ ಅನೇಕಗ್ರಂಥಗಳನ್ನು ಪಠನ

ಮಾಡಿ ಅದರಿಂದ ತಿಳಿದು ಬಂದ ನೀತಿ ಮಾರ್ಗದಲ್ಲಿ ಸಂಚರಿಸುತ್ತ ಇತ

ರರಿಗೂ ಸನ್ಮಾರ್ಗವನ್ನು ಬೋಧಿಸುತ್ತ ತಪಸ್ಸಿಯಂತೆ ಇದ್ದಳು.


ರೋಹಿಣಿಯು ಬಂದ ಸ್ವಲ್ಪ ದಿನಗಳಲ್ಲಿಯೇ ಕರುಣಾಂಬೆಗೆ

ಪೂರ್ಣವಾಗಿ ದೇಹಾರೋಗ್ಯವುಂಟಾಯಿತು. ಮನೆಯ ಕೆಲಸಗಳನ್ನು

ಎಂದಿನಂತೆ ಮಾಡತೊಡಗಿದಳು. ಆಗ ರೋಹಿಣಿಯ ಕೂಡ ತನ್ನ

ಪ್ರೇಮದ ಸೋದರತ್ತೆಯ ಸಂಗಡ ಕೆಲಸ ಮಾಡಲುದ್ಯುಕ್ತಳಾದಳು.

ಕರುಣಾಂಬೆಯು ಬಹು ಸಂತೋಷಪಟ್ಟು ವಿರಾಮಕಾಲದಲ್ಲೆಲ್ಲಾ ಕಸೂತಿ

ಮೊದಲಾದ ಕೈ ಕೆಲಸಗಳನ್ನು ಅಭ್ಯಾಸ ಮಾಡಲಾರಂಭಿಸಿದಳು. ಚತು

ರೆಯಾದ ರೋಹಿಳೆಯು ಬಹು ಶೀಘ್ರದಲ್ಲಿಯೇ ಕರಕೌಶಲ ವಿದ್ಯೆಗಳಲ್ಲಿ ನಿಪುಣೆಯಾದಳು. ಇದನ್ನು ನೋಡಿದ ಕರುಣಾಂಬೆಯು ರೋಹಿಣಿಗೆ

೯-------------------------------------------------------------


ವಿದ್ಯಾಭ್ಯಾಸ ಮಾಡಿಸುವುದು ಉತ್ತಮವೆಂದು ಯೋಚಿಸಿ ಒಂದು ದಿವಸ ಮನೆಯ ಕೆಲ

ಸಗಳನ್ನೆಲ್ಲಾ ಮುಗಿಸಿ ವಿರಾಮದಲ್ಲಿರುವಾಗ ರೋಹಿಣಿಯನ್ನು ಕರೆದಳು. ಕೂಡಲೆ ರೋಹಿಣಿಯು ಸಮಾಪಕ್ಕೆ ಬಂದು ನಿಂತು ಏನು ಅಮ್ಮ ! ಕರೆದು ಎಂದು ಕೇಳಿ

ದಳು. ಕರುಣಾಂಬೆಯು ನಿನ್ನನ್ನು ನಾಳೆಯಿಂದ ಪಾಠಶಾಲೆಗೆ ಕಳುಹಬೇಕೆಂದಿರು

ವೆನು ಎಂದಳು.

ರೋ-ಅದೇತಕ್ಕೆ ?


ಕ-ವಿದ್ಯಾಭ್ಯಾಸಮಾಡುವುದಕ್ಕೆ.


ರೋ-ಮನೆ ಕೆಲಸಗಳನ್ನು ಮಾಡಿಕೊಂಡಿರುವ ಸ್ತ್ರೀಯರಿಗೆ ಓದುಬರಹವೇ

ತಕ್ಕೆ ? ನಾವೇನು ಪುರುಷರಂತೆ ನ್ಯಾಯಸ್ಥಾನಗಳಲ್ಲೂ, ಪಾಠಶಾಲೆಗಳಲ್ಲೂ ಕೆಲಸ ಮಾಡಬೇಕೆ ?


ಕ-ಪುರುಷರೇ ವಿದ್ಯೆಯನ್ನು ಕಲಿಯಬೇಕೆಂದೂ ಸ್ತ್ರೀಯರು ಕಲಿಯಬಾರ

ದೆಂದೂ ಜಗದೀಶನ ಸಿದ್ಧಾಂತವಲ್ಲ. ವಿದ್ಯಾಭಿಮಾನಿದೇವತೆಯಾದ ಸರಸ್ವತಿಯೇ ಸ್ತ್ರೀಯಲ್ಲವೆ ?


ರೋ-ಅಷ್ಟು ಮಾತ್ರಕ್ಕೆ ಸ್ತ್ರೀಯರು ವಿದ್ಯೆಯನ್ನು ಕಲಿಯಬೇಕೊ ?


ಕ-ಅಲ್ಲ. ಅದರಿಂದ ಪತಿಭಕ್ತಿ, ಮಾತಾಪಿತೃಭಕ್ತಿ, ದೈವಭಕ್ತಿ, ರಾಜಭಕ್ತಿ, ಗುರುಹಿರಿಯರಲ್ಲಿ ಭಕ್ತಿ, ಭೂತದಯೆ, ಇವೆಲ್ಲವೂ ಉಂಟಾಗುವವು.


ಕ-ಇನ್ನೂ ಇದೆ. ಮುಖ್ಯವಾಗಿ ತಾಯಿಯ ಮಕ್ಕಳನ್ನು ಪೋಷಿಸಬೇಕಾ

ದುದರಿಂದಲೂ, ತಾಯಿಯ ಬಳಿಯಲ್ಲಿಯೇ ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಕಳೆಯಬೇಕಾಗಿರುವುದರಿಂದ, ಸ್ತ್ರೀಯರೆಲ್ಲರೂ ವಿದ್ಯಾವತಿಯರಾಗಿದ್ದರೆ ಒಳ್ಳೆಯ ದಲ್ಲವೆ?


ರೋ-ಹಾಗಿದ್ದರೆ ಪೂರ್ವಕಾಲದಲ್ಲಿ ಯಾರಾದರೂ ವಿದ್ಯಾವತಿಯರಾ

ಗಿದ್ದರೋ ?


ಕ-ಅನೇಕ ಮಹಿಳೆಯರು ವಿದ್ಯಾವತಿಯರಾಗಿದ್ದರು. ಅತ್ರಿವಂಶದಲ್ಲಿ

ಹುಟ್ಟಿದ ವಿಶ್ವವರೆ, ಅಗಸ್ತ್ಯರ ಪತ್ನಿ ಲೋಪಾಮುದ್ರೆ, ಯಾಜ್ಞವಲ್ಕ್ಯರಪತ್ನಿ

ಮೈತ್ರೇಯಿ, ಇವರಲ್ಲದೆ ದೇವಹೂತಿ, ಸಂಗಮಿತೆ, ಖನೆ, ಶಕುಂತಲೆ, ರುಕ್ಕಿಣಿ, ಸತ್ಯ ಭಾಮೆ, ಚಂದ್ರಮತಿ ಮೊದಲಾದವರು ವಿದ್ಯಾನಿಧಿಗಳಾಗಿದ್ದರು.


ರೋ- ಈಗ ಇವರಲ್ಲಿ ಯಾರಾದರೂ ಇರುವರೋ ?

ಕ-ಇಲ್ಲ. ಇವರುಗಳೆಲ್ಲಾ ಪೂರ್ವಯುಗಗಳಲ್ಲಿ ಇದ್ದ ಮಹಿಳೆಯರು.

೧೦-------------------------------------------------------------

ರೋ-ಹಾಗಾದರೆ ಈ ಯುಗದಲ್ಲಿ ಯಾರೂ ಇಲ್ಲವೆ?


ಕ-ಭಾರತಿ, ಲೀಲಾವತಿ, ಸರೋಜಿನಿ, ಸುಬಾಲೆ, ಸೂರವತಿ, ಶೀಲವತಿ

ಮೊದಲಾದವರು ಈ ಯುಗದವರು. ಇವರೂ ಕೂಡ ಪರಲೋಕಯಾತ್ರೆಯನ್ನು ಮಾಡಿದ್ದರೂ, ಅವರಿಂದ ರಚಿಸಲ್ಪಟ್ಟ ಅನೇಕ ಗ್ರಂಥಗಳು ಅವರ ಪ್ರಸಿದ್ಧಿಗೆ ಕಾರಣ ವಾಗಿವೆ.


ರೋ-ಅತ್ತೆಮ್ಮ ! ಅವಗಳಾವುವು.

ಕ-ಪೂರ್ವಯುಗದ ಮಹಿಳೆಯರು ರಚಿಸಿರತಕ್ಕ ಗ್ರಂಥಗಳನ್ನು ಹೇಳಿಲೋ ?

ಅಧವಾ ಈ ಯುಗದ ಮಹಿಳೆಯರಿಂದ ರಚಿಸಲ್ಪಟ್ಟ ಗ್ರಂಥಗಳನ್ನು ಹೇಳಲೋ ?


ರೋ-ಎಲ್ಲವನ್ನೂ ಹೇಳಿ,


ಕ-ವಿಶ್ವವರೆಯು ಋಗ್ವೇಗೈದದ ಐದನೆ ಮಂಡಲದಲ್ಲಿ 28 ನೆಯ ಸೂಕ್ತ

ವನ್ನೂ, ಲೋಪಾಮುದ್ರಾದೇವಿಯು ಋಗ್ವೇದದಲ್ಲಿ 179 ನೆಯ ಸೂಕ್ತವನ್ನೂ ರಚಿಸುವರು. ಮೈತ್ರೇಯಿಯು ಮಿತ್ರರಾಜನ ವೇದಪಾಠಾಲಯದಲ್ಲಿ ಉಪಾಧ್ಯಾಯಿನಿ ಯಾಗಿದ್ದಳು, ದೇವಹೂತಿ ಯೆಂಬುವಳು ಕಪಿಲಮುನಿಯ ತಾಯಿಯು, ಈಕೆಯೇ ಮೊದಲು ತನ್ನ ಮಗನಿಗೆ ವಿದ್ಯಾಭ್ಯಾಸವನ್ನು ಮಾಡಿಸಿ ದರ್ಶನಶಾಸ್ತ್ರವನ್ನು ಪ್ರಚುರಪ ಡಿಸುವುದಕ್ಕೆ ಉತ್ತೇಜನ ಕೊಟ್ಟಳು. ಸಂಗಮಿತೆಯು ಸಿಂಹಳದ್ವೀಪಕ್ಕೆ ಹೋಗಿ ಬೌದ್ಧ ಮತಧರ್ಮಗಳನ್ನು ಬೋಧಿಸಿ ಅನೇಕರು ಬೌದ್ಧಮತವನ್ನವಲಂಬಿಸುವಂತೆ ಮಾಡಿದಳು, ವಿಕ್ರಮಾದಿತ್ಯರಾಯನ ಸಭೆಯ ಮಹಾಪಂಡಿತನೊಬ್ಬನ ಕುಮರಿಯಾದ ಖನೆಯು ಜೋತಿಷಶಾಸ್ತ್ರವನ್ನು ಅಭ್ಯಾಸಮಾಡಿ ಲೋಕೋಪಕಾರಮಾಡಿರುವಳು. ಶಕುಂತಲಾದೇ ವಿಯು ರಾಜನಾದ ದುಷ್ಯಂತಮಹಾರಾಜನಿಗೆ ಬರೆದ ಪತ್ರಿಕೆಯಿಂದಲೇ ಆಕೆಯು

ವಿದ್ಯಾವತಿಯಾಗಿದ್ದಳೆಂಬುದು ವ್ಯಕ್ತಪಡಿಸುವುದು. ರುಕ್ಕಿಣೀದೇವಿಯು ತನ್ನ ತಂದೆಯು ತನ್ನನ್ನು ದುಷ್ಟನಾದ ಶಿಶುಪಾಲನಿಗೆ ಕೊಟ್ಟು ವಿವಾಹವನ್ನು ಮಾಡಬೇಕೆಂದಿದ್ದ ಸಂಗ ತಿಯನ್ನು ಪತ್ರಮುಖೇನ ಬ್ರಾಹ್ಮಣನ ಮೂಲಕ ಶ್ರೀಕೃಷ್ಣ ಪರಮಾತ್ಮನಿಗೆ ತಿಳಿಸಿ

ಲ್ಲವೆ ? ಸತ್ಯಭಾರ, ಚಂದ್ರಮತಿ ಮೊದಲಾದವರೂ ಕೂಡ ಹೀಗೆಯೇ


ಕಲಯಗದಲ್ಲಾದರೋ ಮಂಡಮಿಶ್ರನ ಪತ್ನಿಯಾದ ಭಾರತೀದೇವಿಯು ತನ್ನ

ಗಂಡನಿಗೂ ಶ್ರೀಮಚ್ಛಂಕರಭಗವತ್ಪಾದಾಚಾರರವರಿಗೂ ನಡೆದ ವಾದದಲ್ಲಿ ಮಾಧ್ಯ ಸ್ಥ್ಯವನ್ನು ವಹಿಸಿರಲಿಲ್ಲವೆ ? ಭಾಸ್ಕರಾಚಾರ್ಯರವರ ಕುವರಿಯಾದ ಲೀಲಾವತಿಯು ಗಣಿತಶಾಸ್ತ್ರದಲ್ಲಿ ನಿಪುಣೆಯಾಗಿ ಲೀಲಾವತಿಯೆಂಬ ಗ್ರಂಥವನ್ನು ರಚಿಸಿರುವಳು. ಹೀಗೆ ಯೇ ಎಷ್ಟೋ ಮಂದಿ ಮಹಿಳೆಯರು ವಿದ್ಯಾವತಿಯರಾಗಿದ್ದರು,

೧೧------------------------------------------------------

ರೋ- ಅವರಂತೆಯೇ ನಾವೂ ಅಭ್ಯಾಸಮಾಡಲು ಆಗುವುದೇ ? ಏನೋ

ಸ್ವಲ್ಪ ಓದುಬರಹವನ್ನು ಕಲಿತರೆ ಸಾಲದೆ ?


ಕ-ಹಾಗಾದರೆ ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ?


ರೋ-ಸ್ವಲ್ಪ ಕಲಿಯುವುದಕ್ಕೂ ಕೂಡ ಪಾಠಶಾಲೆಗೇ ಹೋಗಬೇಕೆ ? ಮನೆ

ಯಲ್ಲಿ ಓದುಕೊಳ್ಳಲಾಗುವುದಿಲ್ಲವೆ ?


ಕ-ಪಾಠಶಾಲೆಯಲ್ಲಿರತಕ್ಕೆ ಅನುಕೂಲಗಳು ಮನೆಯಲ್ಲಿದ್ದರಿಂದ ಸುಲಭ

ವಾಗಿಯೂ ಜಾಗ್ರತೆಯಾಗಿಯ ಕಲಿಯಲು ಅವಕಾಶವಿಲ್ಲ.


ರೋ-ಪಾಠಶಾಲೆಯಲ್ಲಿರತಕ್ಕ ಅನುಕೂಲಗಳೇನು ?


ಕ-ಸರ್ಕಾರದವರು ಯೋಗ್ಯರಾದ ಉಪಾಧ್ಯಾಯರನ್ನು ನಿಯಮಿಸಿ ಸುಲಭ

ವಾಗಿ ವಿದ್ಯೆಯನ್ನು ಕಲಿಸಲು ಅನುಕೂಲವಾದ ಸಲಕರಣೆಗಳನ್ನು ಕಲ್ಪಿಸಿರುವರು.

ಅಲ್ಲದೆ ಅನೇಕರು ಅಲ್ಲಿ ವಿದ್ಯಾಭ್ಯಾಸಮಾಡುತ್ತಿರುವರು. ಆದುದರಿಂದ ಅಮೂಲ್ಯವಾ

ದ ವಿದ್ಯೆಯನ್ನು ಕಲಿಯಲು ಪಾಠಶಾಲೆಗೆ ಹೋಗುವುದು ಒಳ್ಳೆಯದು.


ರೋ-ವಿದ್ಯೆಯು ಅಮೂಲ್ಯವಾದದ್ದೆಂದು ಹೇಳಿದೆಯಲ್ಲ. ಅದು ಹೇಗೆ ?


ಕ–ಅದನ್ನು ವಿವರಿಸಿ ಹೇಳಬೇಕಾದರೆ ಅನೇಕ ದಿನಗಳು ಹಿಡಿಯುವುವು.


ರೋ-ಅಮ್ಮ ! ಚರ್ಚಿಸಿದುದಕ್ಕಾಗಿ ಅಜ್ಞಳಾದ ನನ್ನ ತಪ್ಪನ್ನು ಕ್ಷಮಿಸ

ಬೇಕು. ಎಂದು ನಮಸ್ಕಾರಮಾಡಿದಳು. ಅದನ್ನು ನೋಡಿ ಕರುಣಾಂಬೆಯು ಮಗೂ !

ರೋಹಿಣಿ ! ನೀನು ತಿಳಿದುಕೊಳ್ಳುವುದಕ್ಕಾಗಿ ಇಷ್ಟು ವಿಚಾರ ಮಾಡಿದುದು ಬಹಳ ಒಳ್ಳೆಯದೇಆಯಿತು ಎಂದು ಹೇಳಿ ಆಕೆಯನ್ನು ಆಲಂಗಿಸಿದಳು ಮತ್ತೆ ರೋಹಿಣಿ

ಯನ್ನು ಕುರಿತು ಮಗೂ ! ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ಎಂದು

ಪ್ರಶ್ನಿಸಲು ರೋಹಿಣಿಯು ಬಹು ನಮ್ರತೆಯಿಂದ ಅತ್ತೆ ! ತಂದೆಯು ಇದುವರಿಗೆ

ನನ್ನನ್ನು ಶಾಲೆಗೇತಕ್ಕೆ ಕಳುಹಿಸಲಿಲ್ಲ ಎಂದು ಕೇಳಿದಳು.


ಕ-ಮಗೂ ! ನಿಮ್ಮ ತಂದೆಯು ಇದ್ದ ಊರು ಬಹಳ ಸಣ್ಣದು. ಅಲ್ಲಿ

ಪಾಠಶಾಲೆ ಯಿಲ್ಲ.


ಕರುಣಾಂಬೆಯ ಮಾತಿನಂತೆ ರೋಹಿಣಿಯು ಮಾರನೆಯದಿನದಿಂದ ಪಾಠಶಾ

ಲೆಗೆ ಹೋಗಲಾರಂಭಿಸಿದಳು.


ಈ ಲೋಕದಲ್ಲಿ ತಿಳಿಯದವನಿಗೆ ಸುಲಭವಾಗಿ ತಿಳಿಸಬಹುದು. ತಿಳಿದವನಿಗೆ

ಇನ್ನೂ ಸುಲಭವಾಗಿ ತಿಳಿಸಬಹುದು. ತಿಳಿದೂ ತಿಳಿಯದ ಮೂರ್ಖನಿಗೆ ತಿಳಿಸಲು

ಬ್ರಹ್ಮನಿಗೂ ಕೂಡ ಅಸಾಧ್ಯವು, ಎಂಬ ಭರ್ತೃಹರಿಯ ನುಡಿಯಂತೆ ನಮ್ಮ ರೋಹಿ

೧೨------------------------------------------------------------------


ಣಿಗೆ ತಿಳಿಸುವುದು ಅತಿ ಸುಲಭ. ಅವಳಾದರೋ ಅತಿ ಚತುರೆ, ಕುಶಲಮತಿ, ಇಂಧವ

ಳಿಗೆ ಜಾಗ್ರತೆಯಾಗಿ ವಿದ್ಯೆಯು ಒರಲು ಅಭ್ಯಂತರವೇನಿರುವುದು ! ಅವಳು ಶಾಲೆಗೆ

ಹೋದ ಸ್ವಲ್ಪ ಕಾಲದಲ್ಲಿಯೇ ಓದಿ ಬರೆವುದರಲ್ಲೂ ಗಣಿತದಲ್ಲೂ ಬುದ್ದಿಮತಿಯಾ

ದಳು. ಆಗ ಸುಂದುಯಾದ ರೋಹಿಣಿಗೆ 16 ವರ್ಷಗಳು ತುಂಬಿದವು. ಕರುಣಾಂಬೆ

ಯು ಅವಳ ಸೌಂದರ್ಯವನ್ನೂ ಅವಳ ಜಾಣ್ಮೆಯನ್ನು ನೋಡಿ ಹಿಗ್ಗುತಲಿದ್ದಳು.

ವಾಚಕರೇ ಇನ್ನು ಕರುಣಾಕರ ದಯಾಕರ ವೃತ್ತಾಂತವನ್ನು ವಿವರಿಸುವೆವು ಇತ್ತ ಬನ್ನಿ,

--+--

ಚತುರ್ಥಲಹರಿ.

ಲೋಕದಲ್ಲಿ ರಸಿಕಜನರು ಸಾಮಾನ್ಯವಾಗಿ ಪಚ್ಚಕರ್ಪೂರ ಮುಂತಾದ ವಾಸ

ನಾದ್ರವ್ಯಗಳಿಂದ ಮಿಶ್ರಿತವಾದ ದಿವಸುಗಂಧಾನುಲೇಪನದಲ್ಲಿಯ ವಿವಿಧ ವಿಹಾರಗಳ

ಲ್ಲಿಯೂ, ನವನವಪದಾರ್ಧದರ್ಶನದಲ್ಲೂ ಉತ್ಸುಕರಾಗಿರುವರೇ ವಿನಾ ದುಃಖಕಷ್ಟ ಗಳನ್ನನುಭವಿಸಲಾರರು, ಚಳಿಗಾಲಪ್ರಾಪ್ತವಾದರೆ ರಾತ್ರಿ ಕಾಲದಲ್ಲಿ ಕಂಬಳಿಗಳನ್ನು ಹೊಡೆದುಕೊಳ್ಳುವುದರಲ್ಲಿಯೂ, ಬನಾತಿನ ಅಂಗಿಗಳನ್ನು ತೊಟ್ಟುಕೊಳ್ಳುವುದರ

ಲ್ಲಿಯೂ, ಕಸ್ತೂರಿಯ ಜಲದಿಂದ ಸುವಾಸಿತವಾದ ಅಡಿಕೆಯೂ, ಚಂದ್ರಬಿಂಬದಂತೆ

ಧಳಧಳಿಸುವ ವೀಳೆಯದೆಲೆಯೂ, ಶುಭ್ರವಾದ ಸುಣ್ಣವೂ ಇವುಗಳಿಂದ ರಂಜಿತವಾಗಿ ಕಾಂತಾಕರದಿಂದ ಅಲ್ಪವಾದ ತಾಂಬೂಲವನ್ನು ಸೇವಿಸುವುದರಲ್ಲಿ ಆಸಕ್ತರಾಗಿಯೂ, ಧೂಮವಿಲ್ಲದೆ ಜ್ವಲಿಸುವ ಕೆಂಡಗಳಿಂದ ತುಂಬಿರುವ ಅಗ್ಗಿಷ್ಟಿಕೆಯ ಸೇವನೆಯಲ್ಲಿಯೂ, ವಿಶಾಲವಾದ ವಟವೃಕ್ಷಛಾಯೆಯಲ್ಲಿ ವಿಹರಿಸುವುದರಲ್ಲಿಯೂ, ಶುಭ್ರವಾದ ಜಲದಲ್ಲಿ ಸ್ನಾನಮಾಡುವುದರಲ್ಲಿಯೂ, ವಿನೋದವ್ಯಾಪಾರಗಳಲ್ಲಿಯೂ ಆಶೆಯುಳ್ಳವರಾಗಿ

ರುವರು. ಆ ಕಾಲದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡುಗಳಿಂದ ವಿಶೇಷವಾಗಿ ಹೊರಗೆ ಹೊರಡದೆ ತಮ್ಮ ತಮ್ಮ ಮರಿಗಳನ್ನು ರೆಕ್ಕೆಗಳಲ್ಲಿ ಮುಚ್ಚಿಕೊಂಡಿರುವುವು. ಗದ್ದೆಗ

ಳಲ್ಲಿ ಭತ್ತದ ಪೈರುಗಳು ಸುವರ್ಣವರ್ಣದ ತೆನೆಗಳಿಂದ ಭೂಮಿಗೆ ಬಾಗಿರುವುವು. ವಸಂತಕಾಲದಲ್ಲಿ ಪಥಿಕರ ಶ್ರಮಪರಿಹಾರಕ್ಕಾಗಿ ಧರ್ಮಾತ್ಮರಿಂದ ಇಡಲ್ಪಟ್ಟಿದ್ದ ಅರವ ಟ್ಟಿಗೆಗಳು ಈಗ ಶೂನ್ಯವಾಗಿರುವುವು. ಉಷಃಕಾಲದಲ್ಲೆದ್ದು ನದಿಯಲ್ಲಿ ಸ್ನಾನಮಾಡಿ

ಮೇಲಕ್ಕೆ ಬರುವ ತಾಪಸರ ತುಟಿಗಳು ಶೀತದಿಂದ ಗಡಗಡನೆ ನಡುಗುವುದನ್ನು

ನೋಡಿದರೆ ಇಂತ ಉಪದ್ರವಕರವಾದ ಈ ಕಾಲವು ಶೀಘ್ರವಾಗಿ ತೊಲಗಿಹೋಗಲಿ

ಎಂದು ಶಪಿಸುವಂತೆ ಕಾಣುವುವು. ವೃಕ್ಷಗಳನ್ನು ನೋಡಿದರೆ ಸದ್ಗುರುವಿನಂತಿರುವ

೧೩--------------------------------------------------


ವಾಯುವಿನ ಸಹಾಯದಿಂದ ಸಂಚಿತಕರ್ಮಗಳಂತಿರುವ ಎಲ್ಲಾ ಪತ್ರಗಳನ್ನೂ ದೂರ

ಮಾಡಿ ನಿರ್ಲಿಪ್ತನಂತೆ ನಿರ್ಮಾಣವನ್ನು ಹೊಂದಿದಂತೆ ತೋರುವುವು. ಮೃಗಗಳು ಕಾಡಿ

ನಲ್ಲಿ ಬೆಳೆದಿರುವ ತೃಣಗಳನ್ನು ಯಥೇಚ್ಛವಾಗಿ ಉಪಯೋಗಿಸಿಕೊಂಡು ಆಶಾಪಾಶಬದ್ಧ ರಾಗಿರುವ ಕೃಪಣರ ಲೋಭದಂತೆ ನಿರಂಕುಶಗಳಾಗಿದ್ದವು. ಕೋಗಿಲೆಗಳು ಈ ಕಾಲವು

ತೊಲಗಿ ವಸಂತಕಾಲವು ಬಂದು ವೃಕ್ಷಗಳೆಲ್ಲವೂ ಚಿಗುರುವವರೆಗೂ ತಾವು ಅಧರಸ್ಪಂದ ಮಾಡಬಾರದೆಂದು ನಿಯಮವನ್ನು ಮಾಡಿಕೊಂಡಿರುವಂತೆ ಮೌನವಾಗಿದ್ದವು. ಕಾಗೆ

ಗಳು ತಮ್ಮ ಗೂಡಿನಲ್ಲಿ ತಮ್ಮ ತತ್ತಿಗಳೊಡನೆ ಕೋಗಿಲೆಗಳು ತಂದು ಇಟ್ಟ ಮೊಟ್ಟೆಗೆ

ಳನ್ನೂ ಕೂಡ ತನ್ನವುಗಳೇ ಎಂಬ ಭಾಂತಿಯಿಂದ ಅವುಗಳ ಮೇಲೆ ಕುಳಿತು ಪ್ರೀತಿ

ಯಿಂದ ಮರಿಗಳನ್ನು ಮಾಡುತಲಿದ್ದವು. ದುದ್ರರ ಗೃಹಗಳ ಭಿತ್ತಿಗಳಲ್ಲಿರುವ ತಿಗಣೆ

ಗಳು ಮೊದಲು ಮನುಷ್ಯರ ಶರೀರಗಳನ್ನು ಕಚ್ಚಿ ರಕ್ತ ಪಾನಮಾಡುತ್ತಿದ್ದ ದುರ್ಗುಣ

ವನ್ನು ಬಿಟ್ಟು ಸಜ್ಜನರ ಹಾಗೆ ಪರಹಿಂಸೆಯನ್ನು ಮಾಡದೆ ಮುನ್ನ ಮಾಡಿದ ಪಾಪವು

ಕಳೆಯಲಿ ಎಂದು ಉಪವಾಸವ್ರತದಿಂದ ಕೃಶವಾಗಿವೆಯೋ ಎಂಬಂತೆ ಚರ್ಮಮಾತ್ರ

ದಿಂದ ಪ್ರಾಣವನ್ನಿಟ್ಟು ಕೊಂಡಿರುವುವು. ಲೋಕಕ್ಕೆಲ್ಲಾ ತೆಜಸ್ಸನ್ನೂ ಔಷ್ಣ್ಯವನ್ನೂ ದಯಪಾಲಿಸತಕ್ಕ ಸೂರ್ಯದೇವನು ಸೌಮ್ಯನಾಗಿ ಹಿಮಕರನಂತಿರುವನು. ಸಂಚಾರಕ್ಕೆ

ಮಧ್ಯಾನ್ಹ ವೇಳೆಯು ಅತಿ ರಮ್ಯವಾಗಿರುವುದು, ನಿಶಿಯಲ್ಲಿ ನಿರಾಕಾಂತನು ಹಿಮಾವೃತ

ನಾಗಿ ಕಳೆಗುಂದಿರುವನು. ಪಡುವಣ ಗಾಳಿಯು ಶೀತಲವಾಗಿ ಬೀಸುತಲಿರುವುದು.

ಧರಣಿಯು ಎಲ್ಲಿ ನೋಡಿದರೂ ಪೈರುಪಚ್ಚೆಗಳಿಂದ ತುಂಬಿತುಳುಕಿ ಆಹ್ಲಾದಕರವಾಗಿ

ರುವುದು, ಚಾಡಿಕಾರರ ಮಾತಿಗೆ ಕಿವಿಗೊಡುವ ಪೃಥ್ವಿಪಾಲನ ಸಿರಿಯಂತೆಯೂ

ಉತ್ತಮವಾದ ಸ್ತ್ರೀಪುರುಷರ ಕೋಪದಂತೆಯೂ ಹಗಲು ಬೇಗ ತೊಲಗುತಲಿರುವುದು. ಕ್ಷಿತಿಪರೆಲ್ಲರೂ ತಮ್ಮ ವೈರಿಗಳಮೇಲೆ ಚತುರಂಗಸೇನಾಸಮೇತರಾಗಿ ಕದನಕ್ಕೆ ತೆರಳು

ವರು. ವಿಪಿನಗಳಲ್ಲಿ ಹಸ್ತಿಗಳು ಚಳಿಯನ್ನು ತಾಳಲಾರದೆ ತಮ್ಮ ತಮ್ಮ ಸೊಂಡಲುಗ

ಳನ್ನು ಬಾಯಲ್ಲಿ ಮುಚ್ಚಿಕೊಂಡು ಶೀತಳವಾದ ಜಲವನ್ನು ನೀರಡಿಕೆಯಾದಾಗ್ಯೂ ಕುಡಿಯಲಾರದೆ ಬಳಲುತಲಿರುವುವು. ವನಾವಳಿಗಳು ಪೂಗಳಿಲ್ಲದೆ ಮಲಗಿ ನಿದ್ರೆಹೋ ಗುತ್ತಿವೆಯೋ ಎಂಬಂತಿರುವುವು.


ಇಂತಹ ಶೈತ್ಯಗಾಲದಲ್ಲಿ ಒಂದಾನೊಂದು ದಿನ ಸಚ್ಚಿದಾನಂದನು ಅಗ್ಗಿಷ್ಟಿಕೆ

ಯಲ್ಲಿ ಬೆಂಕಿಯನ್ನು ಕಾಯಿಸಿಕೊಳ್ಳುತಲಿದ್ದನು. ಈತನ ವಾಸಸ್ಥಳವು ಸುವರ್ಣ

ಪುರಕ್ಕೆ ಅನತಿದೂರದಲ್ಲಿರುವ ಪದ್ಮ ಪುರಿ ಎಂಬುವುದೊಂದು ಸಣ್ಣ ಗ್ರಾಮ. ಈತನು ಪೂರ್ವದಲ್ಲಿ ಕೇರಳದೇಶದವನು. ಬಾಲ್ಯದಲ್ಲಿಯೇ ಮಾತಾಪಿತೃಗಳ ವಿಯೋಗವನ್ನು

೧೪--------------------------------------------------


ಹೊಂದಿ ಕಡುತರವಾದ ಕಷ್ಟಗಳನ್ನನುಭವಿಸಿ ಕೊನೆಗೆ ಈ ಪದ್ಮ ಪುರಿಗ್ರಾಮಕ್ಕೆ ಬಂದು

ಅಲ್ಲಿಯ ಜನರ ಅನುರಾಗಕ್ಕೆ ಪಾತ್ರನಾಗಿ ಅಲ್ಲಿ ವಾಸಿಸುತ್ತಿದ್ದನು. ಈತನು ವೇದಾ

ಧ್ಯಯನ ಸಂಪನ್ನನು, ಸದಾಚಾರಶೀಲನು, ಕರ್ಮಠನು, ದಾನಶೀಲನು. ಸತ್ಯವಂತನು,

ಬಹು ದರಿದ್ರಾವಸ್ಥೆಯಲ್ಲಿದ್ದ ಈತನು ಬಹುದಿವಸದಮೇಲೆ ಸತ್ಕುಲಪ್ರಸೂತೆಯೂ, ಸದಾಚಾರಸಂಪನ್ನಳೂ, ರೂಪವತಿಯೂ ಆದ ವಿಮಲಾಂಬೆಯೆಂಬ ಕನ್ಯಾರತ್ನವನ್ನು ವಿವಾಹಮಾಡಿಕೊಂಡು ಗೃಹಸ್ಥನಾಗಿ ಆ ಗ್ರಾಮದ ಜನರಿಂದ ಲಭಿಸಿದ ದ್ರವ್ಯದಿಂ

ದಲೇ ಕಾಲಯಾಪನೆಮಾಡುತಲಿದ್ದನು. ಬಹುದಿವಸವಾದಾಗ್ಯೂ ಈ ದಂಪತಿಗಳಿಗೆ ಸಂತಾನವುಂಟಾಗಲಿಲ್ಲ. ಇದು ತಮ್ಮ ಪೂರ್ವಾರ್ಜಿತಪಾಪವೆಂದೂಹಿಸಿ ಇದಕ್ಕೆ ಪುಣ್ಯ ತೀರ್ಥಸ್ನಾನ, ಮತ್ತು ಭಗವತೇವೆಯೇ ಪರಿಹಾರವೆಂದು ಯೋಚಿಸಿ ಸಕಲ ಪುಣ್ಯತೀರ್ಥ ಗಳಲ್ಲಿಯೂ ಮಿಂದು ಸಕಲ ಕ್ಷೇತ್ರಗಳಲ್ಲಿಯೂ ಭಗವಂತನ ಪಾದಸೇವೆಯನ್ನು ಪರ ಮಭಕ್ತಿಯಿಂದ ಮಾಡತೊಡಗಿದರು, ಕೂಡಲೆ ಮಾಡಿದ ದುಷ್ಕೃತ್ಯಗಳು ತೊಲಗಿ

ದವೋ ಎಂಬಂತೆ ವಿಮಲಾಂಬೆಯು ಈರ್ವರು ಪುತ್ರರನ್ನೂ ಓರ್ವ ಪುತ್ರಿಯನ್ನೂ

ಪಡೆದು ಮಕ್ಕಳ ಆಟಪಾಟಗಳನ್ನು ನೋಡದೆಯೇ ಸ್ವಾಮಿ ಪಾದಾರವಿಂದವನ್ನು ಸೇರಿ

ದಳು. ಪತ್ನಿ ಹೀನನಾದ ಸಚ್ಚಿದಾನಂದನು ಮಕ್ಕಳ ಅಭಿವೃದ್ಧಿಯನ್ನೇ ಮುಖ್ಯವಾಗಿ

ಟ್ಟು ಕೊಂಡು ಪತ್ನಿಯ ದುಃಖವನ್ನು ತೊರೆದು ಜೇಷ್ಠ ಪುತ್ರನಿಗೆ ಕರುಣಾಕರನೆಂದೂ

ಕನಿಷ್ಟನಿಗೆ ದಯಾಕರನೆಂದೂ ಕುವರಿಗೆ ಕರುಣಾಂಬೆಯೆಂದೂ ನಾಮಕರಣಗಳನ್ನು

ಮಾಡಿ ಮಾತೃಹೀನರಾದ ಮಕ್ಕಳೆನಿಸದಂತೆ ಸಂರಕ್ಷಿಸುತ್ತಲಿದ್ದನು. ತಾನು ದರಿದ್ರನಾ

ಗಿದ್ದಾಗ್ಯೂ ತನ್ನ ಇಬ್ಬರು ಮಕ್ಕಳನ್ನೂ ಒಂದೇಸಮನಾಗಿ ವಿದ್ಯಾವಂತರನ್ನಾಗಿ

ಮಾಡಬೇಕೆಂಬ ಕುತೂಹಲವು ಇವನಿಗೆ ಬಹಳವಾಗಿದ್ದಿತಾದರೂ ದ್ರವ್ಯಸಹಾಯವಿಲ್ಲ

ದ್ದರಿಂದ ಚಿಂತಾಬ್ಧಿಯಲ್ಲಿ ಮುಳುಗಿದ್ದನು.


ಇತ್ತ ಸುವರ್ಣವುರದ ಪುರಾಧ್ಯಕ್ಷನ ದ್ವಿತೀಯಪತ್ನಿಯು ಲೋಕಾಂತರವ

ನ್ನೈದಿದಳು, ಸೌಂದರ್ಯ, ಸುಗುಣ, ವಿವೇಕದಲ್ಲಿ ಬುದ್ದಿಮತಿಯಾಗಿ ಕರುಣಾಂಬೆ

ಯು ಹೆಚ್ಚು ಹಣ ಇರುವುದನ್ನು ಆ ಪುರಾಧ್ಯಕ್ಷನು ಕೇಳಿ ತನಗೆ ಆ ಕನ್ಯೆಯನ್ನು

ಕೊಟ್ಟರೆ ಬಹಳವಾಗಿ ಧನ ಕೊಡುವುದಾಗಿ ಹೇಳಿಸಿದನು. ಇದನ್ನು ಕೇಳಿ ಸಚ್ಚಿದಾನಂ

ದನು ಬಹು ದಃಖಿತನಾಗಿ ಮನಸ್ಸಿನಲ್ಲಿ ಇಷ್ಟವಿಲ್ಲದಿದ್ದರೂ ತನ್ನ ಗಂಡಮಕ್ಕಳ ವಿದ್ಯಾಭಿವೃದ್ಧಿಗೋಸ್ಕರವಾದರೂ ಇದು ಒಂದು ಪಕ್ಷ ಅನುಕೂಲವೆಂದೂ ಯೋಚಿಸಿ

ಮಗಳನ್ನು ಕೊಡಲೊಪ್ಪಿದನು, ಬಹಳ ವಿಜೃಂಭಣೆಯಿಂದ ಕರುಣಾಂಬೆಗೂ ಸುವರ್ಣ

ಪುರದ ಪುರಾಧ್ಯಕ್ಷನಿಗೂ ವಿವಾಹವು ನೆರವೇರಿತು. ಸಚ್ಚಿದಾನಂದನಿಗೆ ಅಪಾರವಾದ

ದ್ರವ್ಯವೂ ಲಭಿಸಿತು.

೧೫----------------------------------------------


ಎಲೌ! ಲಕ್ಷ್ಮೀದೇವಿಯೇ ! ನಿನ್ನ ಅನುಗ್ರಹವೊಂದಿದ್ದರೆ ಎಂಥವನಾದರೂ

ಸತ್ಕುಲಪ್ರಸೂತನೂ, ರೂಪವಂತನೂ, ವಿದ್ಯಾವಂತನೂ, ವಾಚಾಳಿಯ, ಸದ್ಗು

ಣಿಯ, ಆಗುವನು, ನಿನ್ನ ಕಟಾಕ್ಷ ಮಾತ್ರದಿಂದಲೇ ಎಲ್ಲ ಜನರೂ ಮಿತ್ರರೂ, ಬಂಧು

ಗಳೂ, ಆಗುವರು; ನೀನು ಮಾಡಬಾರದ ಕೆಲಸಗಳನ್ನೂ ಕೂಡ ಮಾಡಿಸಿಬಿಡುವೆ.

ಇಷ್ಟೇ ಅಲ್ಲ. ನೀನು ಮಾತಾಪಿತೃಗಳನ್ನೂ , ಭ್ರಾತೃಗಳನ್ನೂ, ಬಂಧು, ಮಿತ್ರರನ್ನೂ ಕ್ಷಣಮಾತ್ರದಲ್ಲೇ ಅಗಲಿಸುವೆ. ಪುನಃ ಸೇರಿಸುವೆ. ಹೇ ! ಧನಮಾತೆ ! ನಿನ್ನ ಶಕ್ತಿ

ಯು ಅಪಾರವಾದುದು. ನೀನು ವಿಮುಖಳಾದರೆ ಅಗ್ನಿ ಸಾಕ್ಷಿಯಾಗಿಯೂ, ಪಾಣಿಗ್ರಹ ಣಮಾಡಿಕೊಂಡು ಅರ್ಧಾಂಗಿಯೆನ್ನಿಸಿಕೊಂಡಿರುವ ಸತಿಯೂ ಕೂಡ ಜರಿಯುವಳು !

ಮುಖ್ಯವಾಗಿ ಲೋಕವೆಲ್ಲವೂ ನಿನ್ನ ದಯದಿಂದಲೇ ನಿಂತಿರುವುದು. ನೀನು ಮುನಿದರೆ

ಲೋಕವೇ ನಾಶವಾಗುವುದು. ಹೇ ! ಚಂಚಲಸ್ವರೂಪವೇ ನಿನಗೆ ಅನೇಕ ನಮಸ್ಕಾರ

ಗಳಿರಲಿ ! ನಮ್ಮನ್ನು ಅನುಗ್ರಹಿಸು, ಪ್ರಕೃತಸಚ್ಚಿದಾನಂರನೂ ಕೂಡ ನಿನ್ನ ಕಟಾಕ್ಷಸಂ ಪಾದನೆಗಾಗಿ ಮಾತೃವಿಹೀನಳಾದ ತನ್ನ ಮುದ್ದು ಕುವರಿಯನ್ನು ವೃದ್ಧನೂ, ಪುತ್ರವಂ

ತನೂ, ಪರಲೋಕಪ್ರಯಾಣೋನ್ಮುಖನೂ ಆದ ಸುವರ್ಣ ಪುರಾಧ್ಯಕ್ಷನಿಗೆ ಕೊಟ್ಟು ವಿವಾಹಮಾಡಿದನು.


ಈ ದ್ರವ್ಯದಿಂದ ಸಚ್ಚಿದಾನಂದನು ತನ್ನ ಪುತ್ರರೀರ್ವರಿಗೂ ವಿದ್ಯಾಭ್ಯಾಸಮಾ

ಡಿಸತೊಡಗಿದನು. ಕೆಲ ಕಾಲದಲ್ಲಿಯೇ ಸಕಲವಿದ್ಯಾಪಾರಂಗತರೂ, ಯೌವನಸ್ಥರೂ, ದೃಢಾಂಗರೂ ಆದ ಪುತ್ರರನ್ನು ನೋಡಿ ತಂದೆಯು ಸಂತೋಷಾಬ್ಬಿಯಲ್ಲಿ ಮುಳುಗಿ

ಇಂತು ಆಲೋಚಿಸಿದನು. ನನಗೆ ವೃದ್ಯಾಪ್ಯವು ಸನ್ನಿಹಿತವಾಗುತ್ತಾ ಬಂತು. ತನ್ನ ಪುತ್ರರೀರ್ವರಿಗೂ ಸುತ್ಕುಲಪ್ರಸೂತೆಯರಾದ ಕನ್ಯಾರತ್ನ ಗಳನ್ನು ತಂದು ವಿವಾಹವನ್ನು ನೆರವೇರಿಸಿದರೆ ತನ್ನ ವಂಶವು ಆಚಂದ್ರಾರ್ಕಸ್ಥಾಯಿಯಾಗಿ ನಿಲ್ಲುವುದೆಂದು ಭಾವಿಸಿ ಅನುರೂಪರಾದ ಕನ್ಯೆಯರನ್ನು ವಿಚಾರಮಾಡಲುಪಕ್ರಮಿಸಿದನು. ಇದನ್ನು ಅರಿತ ಕನ್ಯಾಪಿತೃಗಳನೇಕರು ಯೌವನಸ್ಥರೂ ರೂಪವಂತರೂ, ವಿದ್ಯಾವಂತರೂ, ಸದ್ಗುಣ

ಶೀಲರೂ, ಆದ ಕರುಣಾಕರ, ದಯಾಕರರಿಗೆ ಹೆಣ್ಣು ಕೊಡಲು ನಾನುತಾನೆಂದು ಮೇಲಾಡಲಾರಂಭಿಸಿದರು. ಪಾಠಕರೇ ! ಕನ್ಯಾಸಂಖ್ಯೆಯು ಅತ್ಯಧಿಕವಾಗಿರುವ ಈ ಕಾ

ಲದಲ್ಲಿ ಕನೈಯಪಿತನು ವರಪಿತನ ಸನ್ನಿಧಿಯಲ್ಲಿ ತನ್ನ ಕನ್ಯಾಪಿತೃತ್ವವನ್ನು ಹೋಗಲಾ ಡಿಸಿಕೊಡಬೇಕೆಂದು ಬಹು ನಮ್ರಭಾವದಿಂದ ಬೇಡಿಕೊಂಡರೆ ಆಗ, ವರಪಿತನ ಅಹಂ

ಕಾರವನ್ನೂ ಔದಾಸೀನ್ಯವನ್ನೂ ವರ್ಣಿಸುವುದು ಅಸಾಧ್ಯವೇಸರಿ, ಮತ್ತು ವರದಕ್ಷಿಣೆ,

ವಿವಾಹದ ವೆಚ್ಚ, ವರನಮುಂದಿನ ವಿದ್ಯಾಭ್ಯಾಸದ ವೆಚ್ಚ ಇವುಗಳೆಲ್ಲವನ್ನೂ ವಹಿಸಿ

೧೬-----------------------------------------------------------


ಕೊಂಡರೆ ತಮ್ಮ ಕನ್ಯೆಯನ್ನು ತಂದುಕೊಳ್ಳುವೆನೆಂಬುದೇ ಮೊದಲಾದ ವಾಗ್ದಾನ

ದಿಂದ ದರಿದ್ರನಾದ ಕನ್ಯಾ ಪಿತನನ್ನು ಹೊಡೆಯುವುದೂ, ಈ ಮೂಲಕ ಸುಯದವರ

ರಿಲ್ಲದೆ ಹೋಗಲ, ಕುರೂಪಿಯೋ ವೃದ್ದನೋ ಆದ ಆವನಾದರೊಬ್ಬನಿಗೆ ಕನ್ಯಾದಾ ನಮಾಡುವುದೂ ವಿಶೇಷಪ್ರಚಾರವಾಗಿ ಹೋಗಿದೆ. ಪಾಠಕಬಂಧೋ ! ಇದೇಕಾರಣ

ದಿಂದಲೇ ಅಲ್ಲದೆ, ಸ್ನೇಹಲತೆಯು ತನ್ನ ಪ್ರಾಣಬಲಿಯನ್ನಿತ್ತು ಲೋಕದಲ್ಲಿ ಯಶಃ

ಕಾಯದಿಂದ ವಿರಾಜಿತಳಾಗಿರುವಳು.


ಇಂತು ಈಗಣಕಾಲದಲ್ಲಿ ಎಷ್ಟೋ ಕನ್ಯಾಪಿತರರನ್ನು ಸುಲಿದು ಅನೇಕ ಮಹ

ನೀಯರು ದೊಡ್ಡ ಮನುಷ್ಯರಾಗಿರುವರು.


ವಿವಾಹವೃತ್ತಾಂತವನ್ನರಿತ ವಿರಕ್ತರಾದ ಕರುಣಾಕರ, ದಯಾಕರರು ತಮ್ಮ

ಜನಕನೆಡೆಗೈದಿ ನಮಸ್ಕರಿಸಿ ವಿನಯಪೂರ್ವಕವಾಗಿ ಇಂತು ವಿಜ್ಞಾಪಿಸಿಕೊಂಡರು.

ಲೋಕದಲ್ಲಿ ಪರೋಪಕಾರ ಶ್ಲಾಘವಾದ ಗುಣವೆಂದೂ ಅದನ್ನನುವರ್ತಿಸಿ ತಾವು ಆಮರಣಾಂತವಾಗಿ ಪರೋಪಕಾರ ನಿರತರಾಗಿಯೇ ಇದ್ದು ಈ ಕಳೇಬರವನ್ನು ತ್ಯಜಿಸ

ಬೇಕೆಂದೂ ಧೃಡಸಂಕಲ್ಪರಾಗಿರುವೆವ. ಪ್ರಕೃತದಲ್ಲಿ ತಾವೇನೋ ನಮಗೆ ವಿವಾಹ ಮಾಡಲುದ್ಯುಕ್ತರಾಗಿರುವು, ದಯವಿಟ್ಟು ಅದನ್ನು ಮನ್ನಿಸಬೇಕು; ಎಂದ ಮಕ್ಕಳ ನುಡಿಗಳನ್ನಾಲೈಸಿ ಸಚ್ಚಿದಾನಂದನು ಅಪ್ಪಾ ಮಕ್ಕಳಾ ! ವಿವಾಹಿತರಾದರೆ ನಿಮಗೆ

ಆಗತಕ್ಕ ತೊಂದರೆಗಳೇನು ? ಎಂದು ಕೇಳಿದನು.

ಮಕ್ಕಳು- ಅನೇಕವಿವೆ. ಅವುಗಳನ್ನೆಲ್ಲಾ ಸನ್ನಿಧಿಯಲ್ಲಿ ವಿಜ್ಞಾವಿಸಲು ಭೀತ

ರಾಗಿರುವೆವು.


ತಂದೆ--ಚಿಂತೆಯಿಲ್ಲ. ನಿರ್ಭಯರಾಗಿ ಹೇಳಬಹುದು.


ಮಕ್ಕಳು-ಅಸ್ಥಿ, ಮಾಂಸ, ಚರ್ಮ, ಇವೇ ಕೋಟೆಯಾಗಿಯೂ; ರಕ್ತ,

ಕೀವು, ಇವುಗಳೇ ಕಂದಕವಾಗಿಯೂ ಇರುವ ಈ ಅಸಹ್ಯಕರವಾದ ಶರೀರಸೌಖ್ಯ

ಕ್ಕೋಸ್ಕರ ನಾವು ವಿವಾಹ ಮಾಡಿಕೊಳ್ಳಬೇಕೆ ?


ತಂದೆ -ಇದು ಎಲ್ಲರಿಗೂ ತಿಳಿದಿರತಕ್ಕ ವಿಷಯವೆ ಎಲ್ಲರೂ ನಿಮ್ಮಂತೆಯೇ ಅಭಿಪ್ರಾಯಪಡುವರೆ ?


ಮಕ್ಕಳು- ಲೋಕದಲ್ಲಿರುವ ಪಟ್ಟಣಗಳ ಕೋಟೆಗಳಿಗೆಲ್ಲಾ ಸಾಧಾರಣ

ವಾಗಿ ನಾಲ್ಕು ದಿಕ್ಕುಗಳಲ್ಲೂ ನಾಲ್ಕ ಬಾಗಿಲುಗಳಿರುವುವು. ಈ ಶರೀರವೆಂಬವೆಂಬ ಕೋಟೆ ಗಾದರೋ ಒಂಭತ್ತು ದ್ವಾರವಿರುವುದು, ಅಸಹ್ಯಕರವಾದ ಇಂತಹ ದ್ವಾರಗಳನ್ನುಳ್ಳ

ಈ ಶರೀರಸುಖಕ್ಕೋಸ್ಕರ ವಿವಾಹಿತರಾಗಬಹುದೆ ?


೧೭------------------------------------------------------------------------

ತಂದೆ-ಈ ವಯಸ್ಸಿನಲ್ಲಿ ನೀವು ಇಷ್ಟು ಜಿಗುಪ್ಸೆಯನ್ನು ಹೊಂದಬಾರದು.

ನನ್ನ ಸಂತೋಷಕ್ಕಾದರೂ ನೀವು ವಿವಾಹವನ್ನು ಮಾಡಿಕೊಳ್ಳಲೇಬೇಕು. ನೀವು ಧನಿ ಕರಲ್ಲದಿದ್ದರೂ ಅಪಾರವಾದ ವಿದ್ಯೆಯೆಂಬ ಧನವನ್ನು ಆರ್ಜಿಸಿರುವಿರಿ.


ಮಕ್ಕಳು-ಜನಕನೇ, ತಾವು ಅಪ್ಪಣೆ ಕೊಡಿಸುವುದು ಯುಕ್ತವೇಸರಿ, ನಾವು

ಬ್ರಹ್ಮಚರ್ಯದಿಂದಲೇ ಇದ್ದು, ಪರೋಪಕಾರವನ್ನು ಮಾಡಿ ತನ್ಮೂಲಕ ಲಭಿಸತಕ್ಕ

ಪುಣ್ಯದಿಂದ ಸದ್ಧತಿಯನ್ನು ಪಡೆಯಬೇಕೆಂದಿರುವೆವು.


ತಂದೆ-ವಿವಾಹಿತರಾದರೆ ಅದು ಆಗುವುದಿಲ್ಲವೇ?


ಮಕ್ಕಳು-ಬಹಳ ಕಷ್ಟ.


ತಂದೆ - ಅದು ಹೇಗೆ ?


ಮಕ್ಕಳು...ಅರಿಕೆಮಾಡುವೆವು; ಸಾವಧಾನದಿಂದ ಲಾಲಿಸಬೇಕು.


ಕೋಮಲವಾಗಿ ಬೆಳೆದಿರುವ ಪುರುಷನೆಂಬ ವೃಕ್ಷಕ್ಕೆ ಸ್ತ್ರೀಯೆಂಬ ಲತೆಯು

ಸುತ್ತಿಕೊಂಡು ಮಕ್ಕಳೆಂಬ ಪುಷ್ಪಗಳು ಆ ಲತೆಯಲ್ಲಿ ಬಿಡುವವು. ಈ ಮಕ್ಕಳ

ಇಂಪಾದ ಮಾತುಗಳೇ ಆ ಪುಷ್ಪಗಳ ವಾಸನೆಯು; ಇದರ ಆಘ್ರಾಣದಿಂದ ವೃಕ್ಷ

ವೆಂಬ ಪುರುಷನ ಪರವಶನಾಗಿ ನೀರಿನಲ್ಲಿ ಸುಖವಾಗಿ ವಾಸಮಾಡುವ ಮೀನು

ಮಾಂಸದಾಶೆಗೆ ಸಿಕ್ಕಿ ನರಳುವಾ ಅತ್ತೆ, ಮಾವ, ಭಾವ, ಮೊದಲಾದವರ

ದುರ್ಬೋಧನೆಯಿಂದ ಮಾಡಬಾರದ ಕೆಲಸಗಳನ್ನು ಮಾಡಿ ಪಾಪಿಷ್ಟನಾಗಿ ಈ ಲೋಕ

ದಲ್ಲಿ ಜೀವಿಸಿರುವುದಕ್ಕಿಂತ ಚಿರಬ್ರಹ್ಮಚಾರಿಯಾಗಿಯೇ ಪರೋಪಕಾರ ನಿರತನಾ

ಗಿದ್ದು ಈ ದೇಹತ್ಯಾಗಮಾಡುವುದು ಉತ್ತಮವಲ್ಲವೆ?

ಇದನ್ನಾಲಿಸಿದ ಸಚ್ಚಿದಾನಂದನು ತನ್ನ ಮಕ್ಕಳ ಅಭಿಪ್ರಾಯವು ಯುಕ್ತವಾ

ಗಿದ್ದಾಗ್ಯೂ ತನ್ನ ವಂಶವು ಅಂಕುರಿಸದೆ ಇಲ್ಲಿಗೇ ನಿಲ್ಲುವುದೆಂಬ ಮನೋವೃಥೆಯನ್ನು ಹೊಂದಿದವನಾಗಿ ಆ ವ್ಯಥೆಯಿಂದ ಸ್ವಲ್ಪಕಾಲದಲ್ಲಿಯೇ ಇಹಲೋಕವಂ ಬಿಟ್ಟನು.

ಅನಂತರ ಉಳಿದವರು ಕರುಣಾಕರ, ದಯಾಕರರೀರ್ವರೆ. ವಾಚಕರೆ ! ಮುಂದೆ ರೋಹಿ

ಣಿಯ ವಿಚಾರವೇನು ? ಎಂಬುದನ್ನು ವಿವರಿಸುವ!

- -~--

೧೮----------------------------------------------------


ಪಂಚಮವಲ್ಲರಿ.


ರೋಹಿಣಿಯು ಸಕಲವಿದ್ಯಾ ಪಾರಂಗತಳಾಗಿಯ ವಿವೇಕಿಯಾಗಿಯೂ ಇರುವು

ದನ್ನು ಕರುಣಾಂಬೆಯು ನೋಡಿ ಅನುರೂಪ, ಗುಣವಂತನೂ, ಪ್ರಾಪ್ತ ವಯಸ್ಕನೂ, ವಿದ್ಯಾವಂತನೂ ಆದ ವರನಿಗೆ ಕೊಟ್ಟು ವಿವಾದವಂ ನೆರವೇರಿಸಬೇಕೆಂದು ಉದ್ದೇಶಿಸಿ

ಈ ವಿಚಾರವನ್ನು ತನ್ನ ಸಹೋದರನಾದ ಕರುಣಾಕರನಿಗೆ ತಿಳಿಸುವುದು ಉತ್ತಮವೆಂದು

ಯೋಚಿಸಿ ಸುವರ್ಣ ಪುರಕ್ಕೆ ಕಾಗದವನ್ನು ಬರೆದಳು ಅದರ ಒಕ್ಕಣೆಯು ಹೀಗೆ ಇದ್ದಿತು.


ಪ್ರಿಯಸಹೋದರನೇ !

ನೀನು ರೋಹಿಣಿಯನ್ನು ಇಲ್ಲಿ ಬಿಟ್ಟ ಬಹು ದಿನಗಳಾದಾಗ್ಯೂ ಅವಳನ್ನು

ನೋಡಲು ಒಂದಾವರ್ತಿಯಾದರೂ ಬರಲಿಲ್ಲ. ಕಾಗದವನ್ನು ಸಹ ಬರೆಯಲಿಲ್ಲ.

ಬಹುಶಃ ನೀವು ಯಾವುದೋ ಒಂದು ಪರೋಪಕಾರ೮ರ್ಯದಲ್ಲಿ ನಿರತನಾಗಿರಬಹದು. ಚಿಂತೆಯಿಲ್ಲ. ಪ್ರಕೃತ ರೋಣಿಗೆ ವಿವಾಹಕಾಲವುಮೀರುತ್ತಾ ಬಂದಿತು, ಇನ್ನು ಮೇಲೆ ಸಾವಕಾಶಮಾಡುವುದು ಯುಕ್ತವಾಗಿಲ್ಲ. ಯೋಚಿಸಿ ಅನುರೂಪನಾದ ವರನನ್ನು

ಗೊತ್ತು ಮಾಡಿ ಬರೆಯಬೇಕಲ್ಲದೆ ಕೂಡಲೆ ಇಲ್ಲಿಗೆ ಬರಬೇಕೆಂದು ಪ್ರಾರ್ಥಿಸುವ,

ಕಲ್ಯಾಣಪ್ರರ. ನಿನ್ನ ಪರಿಯಸಹೋದರಿ ಕರುಣಾಂಬೆ.


ಈ ರೀತಿ ಬರೆದು ಅಂಚೆಗೆಹಾಕಿದಳು. ಯಥಾಕಾಲದಲ್ಲಿ ಅದು ಕರುಣಾಕರನ

ಹಸ್ತಗತವಾಯಿತು. ಆದರೆ ಆಗ ಕರುಣಾಕರನು ಬರಲು ಅವಕಾಶವಾಗಲಿಲ್ಲ.


ಹೀಗೆ ಎರಡುದಿನಗಳು ಕಳೆದವು. ಮೂರನೆವಸ ರೋಹಿಣಿಯು ಮನೆಕೆಲಸಗ

ಳನ್ನೆಲ್ಲಾ ನೆರವೇರಿಸಿ ಅನಂತರ ಬೀದಿಯವರೆಗೆ ಬಂದಳು. ಆಗ ಅವಳಿಗೆ ಯಾವದೋ

ಒಂದು ಶಬ್ಬವು ಗಟ್ಟಿಯಾಗಿ ಕೇಳಿಸಿತು. ಇದೇ ಇರಬಹುದೆಂದು ಅದನ್ನೇ ಆಲೈಸುತ್ತಲಿ

ರುವಾಗ ಶಬ್ಬವು ಇನ್ನೂ ಹೆಚ್ಚಾಗಿ ಕೇಳುತ್ತಾಬಂತು. ಅಲ್ಲಿಯೇ ಕಂಭಬೊಪಾದಿ

ಯಲ್ಲಿ ನಿಂತುಬಿಟ್ಟಳು. ಕರುಣಾಂಬೆಯ ಕೊನೆಯ ಹೀಗೆ ಸ್ತಂಭೀಭೂತಳಾಗಿರು

ವುದನ್ನು ನೋಡಿ ಅವಳನ್ನು ಕುರಿತು ರೋಹಿಣಿ, ಏನು ಮಾಡುತ್ತಲಿರುವೆ? ಎಂದಳು.


ರೋ ---- ಅತ್ತೆಯವರೆ! ಏನೋ ಒಂದು ಶಬ್ಬವು ಕೇಳುತಲಿರುವುದು. ಅದು

ಏನಾಗಿರಬಹುದು?

೧೯----------------------------------------------------

ಕ-ಇದು ಗುಡುಗಿರಬಹುದು, ನಡಿ ಒಳಗೆ ಹೋಗೋಣ.


ರೋ- ಅಮ್ಮ ಇದು ಗುಡುಗಿನ ಶಬ್ದವಲ್ಲ. ಫರಂಗಿಯ ಶಬ್ದದಂತೆ

ತೋರು

ತ್ತದೆ. ಚೆನ್ನಾಗಿ ಆಲೈಸಿರಿ!


ಕ...ಇದ್ದರೂ ಇರಬಹುದು. ಸುವರ್ಣಪುರದಲ್ಲಿ ಏನೋ ಉತ್ಸವವಿರಬಹುದು.

ಅದಕ್ಕಾಗಿ ಸಂತೋಷಸೂಚಕವಾದ ಫಿರಂಗಿಗಳು ಹಾರುತ್ತಿರುವವು. ಅದನ್ನೇ ನುಕೇಳು

ವುದು, ನಡಿ ಒಳಕ್ಕೆ ಹೋಗೋಣ.


ರೋ-ಉತ್ಸವವಾದರೆ ಇನ್ನೊಂದು - ಫಿರಂಗವನ್ನೇಕೆ ಹಾರಿಸುವದು ? ಬಹಳ

ಹೊತ್ತಿನಿಂದ ಹಾರುತಲೇ ಇರುವುದು.


ಈ ...ಬಹುಶಃ ಈ ದಿನ ಸುವರ್ಣಪುಪುರಾಧೀಶನ ವರ್ಧಂತಿಯಾಗಿರಬಹುದು.


ರೋ --ಅಲ್ಲ. ಅತ್ತೆಮ್ಮ ಇದನ್ನು ಕೇಳಿದಾಗಿನಿಂದ ನನ್ನ ಮನಸ್ಸು

ಏಕೋ ಕಳವಳಪಡುತಲಿರುವುದು. ನನ್ನ ತಂದೆಯು ಇಲ್ಲಿಗೆ ನನ್ನನ್ನು ಕಳುಹಿಸುವಾಗ್ಗೆ

ತಾನೇ ಬಂದು ಕರೆದುಕೊಂಡುಹೋಗುವೆನು. ಋಣಾನುಬಂಧವಿದ್ದರೆ ಇನ್ನೊಂದಾ

ವರ್ತಿ ಈ ಲೋಕದಲ್ಲಿ ನೋಡುವೆವು ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲವೆಂದು ಹೇಳಿದ್ದನು. ಅದನ್ನು ಸ್ಮರಿಸಿಕೊಂಡರೆ ನನ್ನ ಮನೋ ವ್ಯಥೆಯು ಇನ್ನೂ ಹೆಚ್ಚುವುದು. ಅದಕ್ಕನುಸಾರವಾಗಿ ಸುವರ್ಣಪುರದ ಕಡೆ

ಯಿಂದಲೇ ಫಿರಂಗಿಗಳ ಶಬ್ದವು ಹೆಚ್ಚಾಗಿ ಕೇಳುತ್ತ ಬರುವುದು. ಇದಲ್ಲದೆ ತಂದೆಯು ಬಹಳದಿನಗಳಿಂದ ಇಲ್ಲಿಗೆ ಬರಲಿಲ್ಲ. ಯೋಚಿಸಿದರೆ ಆತನಿಗೇನೋ ವಿಪತ್ತು

ಸಂಭವಿಸಿರಬಹುದು ಎಂದು ಅತ್ತಳು.


ಕ - ರೋಹಿಣೀ ! ಇದೇನು ನೀನು ಹೀಗೆ ಅಳುವೆ? ಕರುಣಾಕರನಿಗೆ ಪತ್ರ

ಬರೆದಿರುವೆನು, ಬಂದರೂ ಬರಬಹುದು. ಇಲ್ಲವಾದರೆ ಉತ್ತರವಾದರೂ ಬರವುದು.

ನಡಿ. ಒಳಕ್ಕೆ ಹೋಗೋಣ.


ರೋಹಿಣಿಯು, ನಿಂತಿದ್ದ ಸ್ಥಳವನ್ನು ಬಿಟ್ಟು ಚಲಿಸಲಿಲ್ಲ. ಅಷ್ಟರಲ್ಲಿಯೇ

ಒಬ್ಬ ರಾಹುತನು ಒದು ವೇಗದಿಂದ ಕುದುರೆಯನ್ನು ಓಡಿಸಿಕೊಂಡು ಬಂದು ರೋಹಿಣಿ

ಯೆದುರಿಗೆ ನಿಂತು ಕರುಣಂಣಿಯರು ಎಲ್ಲಿ ? ಎಂದು ಕೇಳಲು ರೋಹಿಣಿಯು,

ಅತ್ತೆಮ್ಮ ! ಒಬ್ಬ ರಾಹುತನು ತಮ್ಮನ್ನು ನೋಡಬೇಕೆಂದು ಬಂದಿರುವನು ಎಂದು

ಹೇಳಿದಳು.

೨೦---------------------------------------------------


ಕರುಣಾಂಬೆಯು ಕೂಡಲೆ ಬಂದಳು. ರಾಹುತನು ಕಾಗದವನ್ನು ಕೊಟ್ಟು

ಹೀಗೆ ಹೇಳಿದನು, ಸುವರ್ಣಪುರ ಆದಂತಿಪುರದವರಿಬ್ಬರಿಗೂ ಬಲು ಘೋರವಾದ

ಯುದ್ಧವು ನಡೆಯುತಲಿರುವುದು. ಯುದ್ಧದಲ್ಲಿ ಗಾಯಪಟ್ಟು ಏಟುತಿಂದ ಸೈನಿಕರನ್ನು ಕರುಣಾಕರ, ದಯಾಕರರು ಉಪಚರಿಸುತಲಿರುವರು. ನಾನು ತಲೆತಪ್ಪಿಸಿಕೊಂಡು

ಬರುವದೇ ದುಸ್ತರವಾಯಿತು. ಕರುಣಾಕರನು ಈ ಕಾಗದವನ್ನು ತಮಗೆ ಕೊಡು

ವಂತೆ ಆಜ್ಞೆ ಮಾಡಿದ್ದಾನೆ ಎಂದು ಹೇಳಿ ಅದನ್ನು ಆಕೆಯ ಕೈಗೆ ಕೊಟ್ಟನು.


ಕರುಣಾಂಬೆಯು ಕಾಗದವನ್ನು ತೆಗೆದುಕೊಂಡು ನೋಡಿದಳು. ಅದರಲ್ಲಿ ಹೀಗೆ

ಒರೆದಿತ್ತು.


ಪ್ರಿಯಸಹೋದರಿ !

ನಿನ್ನ ಕಾಗದವು ಬಂದು ತಂದಿತು. ವಿಷಯಗಳು ಕ್ಷಿಪ್ರದ ನಡೆಯತಕ್ಕವು

ಗಳಾಗಿದ್ದರೂ, ನಡೆಸಲು ಅವಕಾಶವಿಲ್ಲವಾಗಿದೆ ಯಾವುದಕ್ಕೂ ಕಾಲವೊದಗಬೇಕು.

ರೋಹಿಣಿ . ಎಲ್ಲಿ ಇದ್ದಳು ? ಇಲ್ಲಿ ಬೆಳೆದಳು ? ಈಗ ಎಲ್ಲಿರುವಳು? ಯೋಚಿಸಿದರೆ

ಹೀಗೆಯೇ ಅವಳು ನಿರಂತರವೂ ಸುಖವಾಗಿರುವಳೆಂಬ ಪೂರ್ಣ ಭರವಸೆಯುಂಟು.

ನಾನೇನೋ ಪರೋಪಕಾರದಲ್ಲಿಯೇ ಈ ನಶ್ವರವಾದ ದೇಹವನ್ನು ತ್ಯಾಗಮಾಡುವೆನೆಂ

ಬುದು ಹೊಸ ವಿಷಯವಲ್ಲ. ದೇವರು ಎಲ್ಲರಿಗೂ ಕಲ್ಯಾಣವನ್ನುಂಟುಮಾಡಲಿ.

ಇತಿಪ್ರಿಯಸಹೋದರ

ಸುವರ್ಣಪುರ ಕರುಣಾಕರ.

ಕರುಣಾಕರ.

ಇದನ್ನವಲೋಕಿಸಿ ಕರುಣಾಂಬೆಯು ಭಯಭಾಂತಳಾಗಿ ನಡುಗಲಾರಂಭಿಸಿ

ದಳು. ಅದರಲ್ಲೂ ದಯಾಕರನ ವಿಷಯವೇ ಇಲ್ಲ , ಇಂತು ಸಹೋದರವತ್ಸಲೆಯಾದ ಕರುಣಾಂಬೆಯು ವ್ಯಥೆಪಡುವುದನ್ನು ನೋಡಿ ಬಂದಿದ್ದ ಸವಾರನು, ಸುಮ್ಮನೆ ವ್ಯಥೆಪ

ಟ್ಟರೆ ಫಲವೇನು ? ನಿಮ್ಮ ಸಮೀಪ ಬಂಧುಗಳಾರಾದರೂ ಸುವರ್ಣಪುರದಲ್ಲಿರುವರೋ ? ಎಂದು ಕೇಳಿದಳು.


ಕರುಣಾಂಬೆ-- ಇದ್ದರೇನು ?


ಸವಾರ ...ಇಂತಹ ಕಾಲದಲ್ಲಿ ಅವರಿಗೆ ಸಹಾಯಮಾಡದಿರುವುದುಂಟೆ ?


ಕ...ನಾವು ಮಾಡುವ ಸಹಾಯವೇನು ?


ಸವಾರ - ಶತ್ರುಗಳ ಕೈಗೆ ಸಿಕ್ಕದಂತೆ ತಪ್ಪಿಸುವುದು ಅಥವಾ ಸಿಕ್ಕಿ ಏಟು ತಿಂದು ಗಾಯಪಟ್ಟವರನ್ನು ಉಪಚರಿಸುವದು.

೨೧---------------------------------------------------------


ಕ-ಇವು ಸ್ತ್ರೀಯರಾದ ನಮ್ಮಿಂದ ಸಾಧ್ಯವೆ?


ಸವಾರ-ಪರೋಪಕಾರ ಮಾಡುವುದಕ್ಕೆ ಸ್ತ್ರೀಯರಾದರೇನು ? ಪುರುಷ

ರಾದರೇನು ?


ಕ-ಇರಲಿ, ವಿಪತ್ಕಾಲದಲ್ಲಿ ನೀನು ನಿನ್ನ ಬಂಧುಗಳನ್ನೂ, ಮಿತ್ರರನ್ನೂ

ಇಷ್ಟರನ್ನೂ, ಆಪ್ತರನ್ನೂ ಬಿಟ್ಟು ಇಲ್ಲಿಗೆ ಏತಕ್ಕೆ ಬಂದೆ ?


ಸವಾರ- ಪರೋಪಕಾರಪರಾಯಣನಾದ ಕರುಣಾಕರನ ಆಜ್ಞೆಯಂತೆ ನಾನು

ಬಂದಿರುವೆನೇ ವಿನಹ ಮತ್ತೆ ಬೇರೆಯಲ್ಲ.


ಕ--ಹಾಗಿದ್ದರೆ ಕರುಣಾಕರ, ದಯಾಕರರು ಅಲ್ಲಿ ಏನುಮಾಡುತಲಿರುವರು?

ಸವಾರ-ಸುವರ್ಣಪುರದಮಗೂ, ಅವಂತಿವುರದಮಗೂ ನಡೆಯುತಲಿರುವ

ಯುದ್ಧದಲ್ಲಿ ಘಾಯಪಟ್ಟ ಸೈನಿಕರನ್ನು ವೈದ್ಯಶಾಲೆಗೆ ಸಾಗಿಸಿ ಅಲ್ಲಿ ಉಪಚರಿಸು

ವುದೂ, ಮರಣೋನ್ಮುಖರಾಗಿರುವವರು ತಮ್ಮ ಪ್ರತ್ರಪೌತ್ರ ಕಳತ್ರಾದಿಗಳಿಗೆ ಅಂತ್ಯಕಾ

ಲದಲ್ಲಿ ಹೇಳುವ ಮಾತುಗಳನ್ನು ಬರೆದುಕೊಳ್ಳುವುದೂ ಇದೇ ಮೊದಲಾದ ಕಾರ್ಯ

ಗಳಲ್ಲಿ ಸ್ವಲ್ಪವೂ ಬೇಸರಪಡದಿರುವರು.


ಕ... ಇಷ್ಟು ದಿನಗಳ ಇಲ್ಲದ ಯುದ್ಧಕ್ಕೆ ಈಗ ಕಾರಣವೇನು ?


ಸವಾರ ಸುವರ್ಣ ಪುರದಮಗೂ, ಅವಂತಿವುರದವರಿಗೂ ಬಹುದಿನಗಳಿಂದ

ದ್ವೇಷವಿದ್ದಿತು. ಇದಕ್ಕಾಗಿ ಅವಂತಿವುರದವರು ಸುವರ್ಣಪುರದವರನ್ನು ಜಯಿಸಬೇ

ಕೆಂದು ಅನೇಕಾವರ್ತಿ ಪ್ರಯತ್ನ ಪಟ್ಟಾಗ್ಗೂ ಉಪಯೋಗವಾಗಲಿಲ್ಲ.


ಆ ---ಹಾಗಾದರೆ ಈಗ ಜಯಿಸಿದವರು ಅವಂತಿಪುರದವರೇ ?


ಸದಾರ-ಸಂದೇಹವೇನು ? ಜಯಲಕ್ಷ್ಮಿಯೂ ಐಶ್ವರ್ಯಲಕ್ಷ್ಮಿಯೂ ಬಹಳ

ಚಪಲೆಯರು, ಈ ಹೊತ್ತು ಇದ್ದಹಾಗೆ ನಾಳೆ ಇರುವುದಿಲ್ಲ. ನಾಳೆ ಇದ್ದ ಕಡೆ ನಾಡಿದ್ದು ಇರುವುದಿಲ್ಲ. ಆದರೆ ನಿರ್ಭಾಗ್ಯಲಕ್ಷ್ಮಿಯು ಅದು ಒಂದಾವರ್ತಿ ಬಂದರೆ ತೊಲಗಲು ಬಹು ಕಾಲಬೇಕು. ಮತ್ತು ತೊಲಗಿಸಲು ಬಹು ಪ್ರಯತ್ನ ಬೇಕು. ಅದರಂತೆಯೇ ಅವಂತಿ

ಪುರದವರೂ ಬಹು ಪ್ರಯತ್ನ ಮಾಡಿ ಕೊನೆಗೆ ಜಯಲಕ್ಷ್ಮಿಯನ್ನು ಹೊಂದಿದರು.


ಕ-- ಇನ್ನು ಮುಂದೆ ಸುವರ್ಣಪುರದರಸನಿಗೂ, ಪ್ರಜೆಗಳಿಗೂ ಏನುಗತಿ ?


ಸವಾರ - ಯುದ್ದದಲ್ಲಿ ಪ್ರತಿಭಟಿಸಿ ನಿಂತವರಲ್ಲನೇಕರು ಯಮಪುರವನ್ನೂ

ಕೆಲವರು ಕಾರಾಗಾರವನ್ನೂ ಸೇರಿದರು.

೨೨---------------------------------------------------------


ಕ-ಅಯ್ಯೋ ! ಸುವರ್ಣವುರದವರ ಗತಿಯು ಈ ಸ್ಥಿತಿಗೆ ಬಂತೆ ?

ಸವಾರ-ಯಾವ ಸ್ಥಿತಿಗೂ ಬರಲಿಲ್ಲ. ಪ್ರಜೆಗಳಿಗೆ ಯಾವ ವಿಧದಲ್ಲೂ ತೊಂದರೆಯನ್ನುಂಟುಮಾಡಕೂಡದೆಂದು ಅವಂತೀಶನು ಕಟ್ಟಪ್ಪಣೆ ಮಾಡಿರುವನು.


ಕ -ಪಾಗಾದರೆ ಅಷ್ಟೊಂದುಮಂದಿ ಯಮಾಲಯವನ್ನೂ, ಕಾರಾಗಾರ

ವನ್ನೂ ಸೇರಿದುದೇಕೆ ?


ಸವಾರ-ಜನ್ಮಪ್ರಭೃತಿ ಆ ದೊರೆಯ ಉಪ್ಪನ್ನೇ ತಿಂದು ಕಷ್ಟ ಕಾಲದಲ್ಲಿ

ಸಹಾಯಮಾಡದೆ ಇರಲು ಸೈನಿಕರ ಮನಸ್ಸೊಪ್ಪದೆ ರಣಕ್ಕೆ ನಿಂತರು. ಪ್ರಜೆಗಳಾ

ದರೋ ದೇಶವಾತ್ಸಲ್ಯದಿಂದಲೂ, ತಮ್ಮನ್ನು ಮಕ್ಕಳಿಗಿಂತಲೂ ಅತಿಶಯವಾಗಿ ಕಾಪಾ

ಡಿದ ದೊರೆಗೆ ಸಹಾಯ ಮಾಡದೆ ಇರುತ್ತದೆಂಬ ಉದ್ದೇಶದಿಂದ ಅವಂತೀಶನಿಗೆ ಪ್ರತಿ

ಭಟಿಸಿದರು.


ಕ-ಇಂತಹುದು ಯುದ್ದಕ್ಕೆ ತಕ್ಕೇತಕ್ಕೆ ನಿಂತನು ?


ಸವಾರ --- ತನ್ನ ಪೂರ್ವಿಕರ ಹೆಸರು ಶಾಶ್ವತವಾಗಿ ನಿಂತು ಅದರ ಕೋರಿ

ಕೆಯು ನೆರವೇರಲೆಂದಾಗಿ.


ಕ - ಹಾಗಾದರೆ ನಾವು ಈಗ ಏನುಮಾಡಬೇಕು ?


ಸವಾರ-ತಮ್ಮಿಷ್ಟದಂತೆ ಆಚರಿಸಬಹುದು ಎಂದು ಹೇಳಿ ಸವಾರನು ಉತ್ತರ

ವನ್ನು ನಿರೀಕ್ಷಿಸಿ ಕುದುರೆಯನ್ನೇರಿಕೊಂದು ಸುವರ್ಣ ನರದ ಕಡೆಗೆ ಹೊರಟು

ಹೋದನು.

------


ಷಷ್ಟ ಲಹರಿ.

ಸೂರ್ಯನು ಅಸ್ತಾಚಲಪ್ರಣಯಿಯಾಗಿದ್ದನು. ಪಕ್ಷಿಗಳು ಗೂಡುಗಳನ್ನು

ಸೇರುತಲಿದ್ದವು. ಮೆಲ್ಲನೆ ನಿಶಿಯು ತನ್ನ ರಾಜ್ಯಭಾರವನ್ನು ಆರಂಭಿಸಿದಳು. ಒಂದೆ

ರಡು ನಕ್ಷತ್ರಗಳು ಅಲ್ಲಲ್ಲಿ ಮಿಣುಗುತ್ತಿದ್ದುವು. ಹಿಮಕರನು ಲೋಕಕ್ಕೆ ಶಾಂತಿ

ಸುಖವನ್ನುಂಟುಮಾಡಲು ಪೂರ್ವದಿಗ್ಭಾಗದಲ್ಲಿ ಉದಯಿಸಿದನು. ಆಹಾ ! ಇಂತಹ ಆಹ್ಲಾದಕರ ವಾದ ನಿಶಿಯಲ್ಲಿ ಲೋಕವೆಲ್ಲವೂ ನಿದ್ರೆಯಲ್ಲಿ ಮಗ್ನನಾಗಿರುವುದು.

೨೩-----------------------------------------------------


ಆದರೆ ರೋಹಿಣಿಯಮಾತ್ರ ರೋದಿಸುತ್ತಲೇ ಇರುವಳು. ಕರುಣಾಂಬೆಯು ಇದನ್ನು

ನೋಡಿ ರೋಹಿಣಿ! ಏತಕ್ಕೆ ರೋದಿಸುವೆ? ಈಗ ಸುವರ್ಣಪುರಕ್ಕೆ ಪ್ರಯಾಣಮಾಡುವ

ಸಮಯವು ಸರಿಯಾಗಿಲ್ಲ. ಬೆಳಗಾಗುತ್ತಲೇ ಸುವರ್ಣ ವುರಕ್ಕೆ ಹೋಗೋಣ ಎಂದು

ಸಮಾಧಾನ ಮಾಡಿದಳು. ವಾಚಕರೇ ! ರೋಹಿಣಿಯು ಏತಕ್ಕೆ ರೋದಿಸಿದಳು

ಬಲ್ಲಿರಾ ? ಲೋಕದಲ್ಲಿ ಹೆತ್ತ ತಂದೆ, ಅನ್ನ ಹಾಕಿದವನೂ, ವಿದ್ಯೆ ಹೇಳಿದವನೂ, ಆಪತ್ಕಾಲದಲ್ಲಿ ಸಹಾಯಮಾಡಿದವನೂ, ಮಂತ್ರೋಪದೇಶ ಮಾಡಿದವನೂ ಇವರೈ

ವರೂ ತಂದೆಯ ಸಮಾನರು. ಇದನ್ನು ರೋಹಿಣಿ ಅರಿತವಳು. ಅಲ್ಲದೆ ತನ್ನ ಸಾಕು

ತಂದೆಯಾದ ಕರುಣಾಕರನಲ್ಲಿ ಬಹು ವಿಖ್ವಾಸ ಉಳ್ಳವಳು. ಇಂತಹ ತಂದೆಯನ್ನು

ಕಷ್ಟ ಕಾಲದಲ್ಲಿ ನೋಡದೆ ಹೇಗಿರುವಳು ?


ಕರುಣಾಂಬೆಯ ಸಮಾಧಾನ ವಂಚನೆಗಳು ಎಳ್ಳಷ್ಟಾದರೂ ಪ್ರಯೋಜನವಾಗ

ಲಿಲ್ಲ. ಇವರ ದುಃಖವನ್ನು ನಿವಾರಣೆ ಮಾಡುವುದ ಕ್ಕಾಗಿ ಲೋಕರಂಜಕನಾದ

ಭಾನುವೂ ಪ್ರಕಾಶಿಸಿದನು. ಕೂಡಲೆ ರೋಹಿಣಿಯು ಕರುಣಾಂಬೆಯೊಡನೆ ಸುವರ್ಣ

ಪುರಕ್ಕೆ ಹೊರಟರು. ಪಟ್ಟಣಪ್ರವೇಶಸಮಯದಲ್ಲಿ ಒಬ್ಬ ಮನುಷ್ಕನು ಬಂದು

ಇವ ರುಗಳನ್ನು ತಡೆದು "ನೀವು ಯಾರು ? ಎಲ್ಲಿಗೆ ಹೋಗುತ್ತೀರಿ '' ? ಎಂದು ಕೇಳಿ

ದನು. ಅದಕ್ಕೆ ರೋಣಿಯ “ ನಾವು ಎಲ್ಲಿಗೆ ಹೋದರೆ ನಿನಗೇನು ? ದಾರಿಯನ್ನು

ಬಿಟ್ಟು ತೊಲಗು, ” ಅಂದಳು. ಆ ಮನುಷ್ಯನು ಈಕೆಯ ಧೈರ್ಯವನ್ನು ನೋಡಿ

ಆಶ್ಚರ್ಯಪಟ್ಟ ಕೂಡಲೆ ಆಗ್ರಹವುಳ್ಳವನಾಗಿ ಒಂದು ಕೈಯಿಂದ ಕಡಿವಾಣವನ್ನು ಹಿಡಿದುಕೊಂಡು ಇನ್ನೊಂದು ಕೈಯಿಂದ ಆಕೆಯನ್ನು ಹೊಡೆಯಬೇಕೆಂದು ಯತ್ನಿ

ಸಿದನು. ಅಷ್ಟರಲ್ಲೇ ಆಕೆಯ ಅಬಲೆಯೆಂದು ಗೊತ್ತಾಯಿತು. ಹೊಡೆಯಬೇಕೆಂದು

ಎತ್ತಿದ ಕೈಯನ್ನು ಹಾಗೆಯೇ ಕೆಳಕ್ಕೆ ಇಳಿಸಿ ಮೃದುವಚನಗಳಿಂದ " ನೀನು

ಯಾರಮ್ಮ ? ಈಕೆಯು ಯಾರು ? ಎಲ್ಲಿಗೆ ಹೋಗುತ್ತೀರಿ" ? ಎಂದು ಕೇಳಿದನು.

ಅದಕ್ಕೆ ಆಕೆಯು " ಅದರ ಯೋಚನೆ ನಿನಗೇತಕ್ಕೆ ? ನನಗೆ ಬಹಳ ಕೆಲಸವಿದೆ. ನನಗೆ

ಅಡ್ಡಿ ಮಾಡಬೇಡ. ದಯವಿಟ್ಟು ನನ್ನನ್ನು ಒಳಕ್ಕೆ ಬಿಡು" ಎಂಬದಾಗಿ ಹೇಳಿದಳು. ಆ ಮನುಷ್ಯನು "ಈ ರಾಜಧಾನಿಯನ್ನು ಅವಂತಿ ದೇಶದವರು ಆಕ್ರಮಿಸಿಕೊಂಡಿದಾರೆ

ಎಂಬ ವಿಷಯವು ನಿಮಗೆ ತಿಳಿದಿರಲಾರದು. ನೀವು ಈಕೆಯ ಸಹಿತ ಈ ರಾಜಧಾನಿ

ಯನ್ನು ಪ್ರವೇಶಿಸಿದಕೂಡಲೆ ನಿಮಗೆ ಅನೇಕ ತೊಂದರೆಗಳು ಸಂಭವಿಸುವುವು.

ಒಂದುವೇಳೆ ನಿಮ್ಮಗಳ ಪ್ರಾಣಕ್ಕೂ ಕೂಡ ಹಾನಿ ಬರಬಹುದು. ನೀವು ಈ ರಾಜ

ಧಾನಿಗೆ ಪ್ರವೇಶಮಾಡುವುದು ಖಂಡಿತವಾಗಿಯೂ ಉಚಿತವಲ್ಲ" ಎಂದು ಹೇಳಿದನು


೨೪-------------------------------------


ರೋಹಿಣಿಯು ... ಅಯ್ಯೋ ! ಈ ವಿಷಯವು ನಮಗೆ ಮೊದಲೇ ತಿಳಿದಿತ್ತು.

ಆದರೂ ನೀನು ಈಗ ಪುನಃ ಆ ವಿಷಯವನ್ನೆ ವಿಶದವಾಗಿ ತಿಳಿಸಿದುದಕ್ಕೆ ನಾನು

ಬಹಳ ಕೃತಜ್ಞಳಾಗಿದ್ದೇನೆ. ಆದರೆ ಈ ರಾಜಧಾನಿಯಲ್ಲಿ ಅತ್ಯಾತುರವಾದ ಒಂದು

ಕಾರ್ಯವು ಇರುವುದುಂದ ಎಷ್ಟು ಕಷ್ಟಗಳು ಪ್ರಾಪ್ತವಾದರೂ ಅನುಭವಿಸಿಕೊಂಡು ಪ್ರವೇಶಿಸಬೇಕು. ನನಗೆ ಮರಣಭಯವಿಲ್ಲ. ಕಾರಾಗೃತಭಯವಿಲ್ಲ. ಇಂತಹ ಸಮ

ಯದಲ್ಲಿ ನೀನು ಅಡ್ಡಿ ಮಾಡಬೇಡ '' ಎ೦ದು ಬಾರಿಬಾರಿಗೂ ಪ್ರಾರ್ಥಿಸಿದಳು.


ಆ ಮನುಷ್ಯನು ನಿನಗೆ ಕಾರಾಗೃಹ ಪ್ರಾಪ್ತಿಯಾದರೆ ಏನುಮಾಡುದೆ ?


ರೋ -ಅನುಭವಿಸುವೆನು.


ಮನುಷ್ಯ....ಅಂತಹ ಕಷ್ಟವೇನು ನಿನಗೆ ಬಂದಿರುವುದು ?


ರೋ ...ನನ್ನ ಸಾಕು ತಂದೆಯಾದ ಕರುಣಾರರು ಈ ಯುದ್ಧದಲ್ಲಿ ಏಟು

ತಿಂದು ಗಾಯಪಟ್ಟ ಸೈನಿಕರನ್ನು ಉಪಚರಿಸುವುದರಲ್ಲಿ ನಿರತನಾಗಿರುವನು. ಆತನನ್ನು

ನಾನು ನೋಡಿಯೇ ತೀರಬೇಕು.


ಇದನ್ನು ನೋಡಿ ಆ ಮನುಷ್ಯನು ವಸ್ಮಿತನಾಗಿ " ನಾನೇನೋ ಒಳಗೆ ಬಿಡು

ವೆನು. ದೇವರು ಮಾಡಿದಂತೆ ಆಗಲಿ; ನಿನ್ನನ್ನು ದೇವರು ರಕ್ಷಿಸಲಿ" ಎಂದು ಹೇಳಿ

ಸ್ವಲ್ಪ ದೂರ ನಿಂತನು.


ರೋಹಿಣಿ, ಕರುಣಾಂಬೆಯರು ಪ್ರವೇಶ ಮಾಡಿ ಉದ್ಯಾನವನವನ್ನು ಸೇರಿದರು.

ಆಹಾ! ಕಾಲವು ಒಂದೇ ರೀತಿಯಲ್ಲರುವುದಿಲ್ಲ. ಚಕ್ರದೂಪಾದಿಯಲ್ಲಿ ತಿರುಗುತ್ತಲೇ ಇರುವುದು. ಈಗ ಸ್ವಲ್ಪ ದಿನಗಳಿಗೆ ಹಿಂದೆ ಪ್ರೇಕ್ಷಕರಿಗೆ ದು:ಖನಿವಾರಣೆಯನ್ನು

ಮಾಡಿ, ಸಂತೋಷವನ್ನು ಉಂಟುಮಾಡುತಲಿದದ ಸಸಿಗಳೂ, ಬಳ್ಳಿಗಳೂ, ವೃಕ್ಷಗಳೂ, ಕೃತಕಾಚಲಗಳೂ, ವಿಶ್ರಾಂತಿಗಾಗಿ ಏರ್ಪಸಿದ್ಧ ಆಸನಗಳೂ ಸಹ ಶೂನ್ಯವಾಗಿರು

ವುವು. ಹಾವಸೆಗ೦ಬ ಕೂದಲುಗಳಿಂದಲೂ, ತಾವರೆ ಎಂಬ ಮುಖದಿಂದಲೂ,

ಮೀನುಗಳೆಂಬ ಕಣ್ಣುಗಳಿ೦ದಲೂ, ದಡದಲ್ಲಿರುವ ಮಾವಿನ ಮರದ ಚಿಗುರುಗಳೆಂಬ ಚಂದ್ರಗಾವಿಯ ವಸ್ತ್ರದಿಂದಲೂ, ಸಂಪಿಗೆ ಹೂವೆಂಬ ಮೂಗಿನಿಂದಲೂ, ಸೆಳೆ ಎಂಬ ಸೊಂಟದಿಂದಲೂ, ಕುಮುದಪುಷ್ಪಗಳೆಂಬ ಮುಗುಳುನಗೆಯಿಂದಲೂ, ಕುಂದವೆಂಬ ಹಲ್ಲುಗಳಿಂದಲೂ, ನಿರ್ಮಲೋದಕವೆಂಬ ಲಾವಣ್ಯದಿಂದಲೂ ಕೂಡಿ ರಮಣೀಯವಾ

ಗಿದ್ದ ಸರಸ್ಸುಗಳು ಕಾಂತಿಹೀನವಾಗಿರುವುವು. ಅವರು ಇವೆಲ್ಲವನ್ನೂ ಅವಲೋಕಿ

ಸುತ್ತ ಮುಂದಕ್ಕೆ ತೆರಳಿದರು. ಅಷ್ಟರಲ್ಲೇ ಮತ್ತೊಬ್ಬ ಸೈನ್ಯಾಧಿಕಾರಿಯು ಬಂದು

ಇಬ್ಬರನ್ನೂ ತಡೆದು “ ನೀವು ಯಾರು ? ಎಲ್ಲಿಗೆ ಹೋಗುವಿರಿ ? '' ಎಂದು ಪ್ರಶ್ನೆ

೨೫---------------------------------------

ಮಾಡಲು ಅಷ್ಟು ಹೊತ್ತಿಗೆ ಎಲ್ಲಿಂದಲೋ ಒಂದು ಪಿರಂಗಿಯ ಗುಂಡು ರೋಹಿಣಿಯ ಕೈಯನ್ನು ಸವರಿಕೊಂಡು ಹೋಯಿತು, ಮತ್ತು ಅನೇಕ ಜನ ಸಿಪಾಯಿಗಳು ಬಂದು ಇವ

ರನ್ನು ಸುತ್ತಿಕ್ಕೊಂಡರು. ಅಷ್ಟರಲ್ಲಿ ಈ ಸಮಾಚಾರವು ಸೈನ್ಯಾಧಿಪತಿಗೂ ತಿಳಿಯಿತು.

ಆ ಸಮಯದಲ್ಲಿ ಆತನು ಅಲ್ಲಿಗೆ ಬಂದು ಬಾರಮ್ಮ ಹುಡುಗಿ ! ನನ್ನೊಡನೆ ! ಎಂದು

ಕರೆದನು ಆ ಸಮಯದಲ್ಲಿ ರೋಹಿಣಿಯು " ತನ್ನ ಸುತ್ತಮುತ್ತಲೂ ಸುತ್ತಿಕೊಂಡಿರುವ

ಜನರು ತನ್ನನ್ನು ಹಿಂಸೆಮಾಡುತಲಿದಾರೆ ಅದನ್ನು ತಪ್ಪಿಸಿಕೊಡಬೇಕು. ನಾನು

ಯಾರಿಗೂ ತೊಂದರೆಯನ್ನು ಕೊಡುವುದಕ್ಕೆ ಬಂದವಳಲ್ಲ. ನಾನು ಸಹಾಯವಿಲ್ಲದ

ಅಬಲೆ ಕಾರ್ಯಾಂತರವಾಗಿ ಈ ಯುದ್ಧರಂಗಕ್ಕೆ ಬಂದಿರುವೆನು. ಆದ್ದರಿಂದ ನನ್ನ

ಗೋಜಿಗೆ ಬರದಂತೆ ಈ ಸಿಪಾಯಿಗಳಿಗೆ ಕಟ್ಟಪ್ಪಣೆಯನ್ನು ಮಾಡಬೇಕೆಂದು" ಪ್ರಾರ್ಥಿ

ಸಿದಳು. ಅದಕ್ಕೆ ಆತನು ಈ ಪಟ್ಟಣವನ್ನು ನೀವುಗಳು ಪ್ರವೇಶಮಾಡುವುದಕ್ಕೆ

ಮುಂಚೆಯೆ, “ ನೀವು ಪ್ರವೇಶಮಾಡಬೇಡಿ ಹಾಗೆ ಪ್ರವೇಶ ಮಾಡಿದರೆ ತೊಂದರೆ ಯುಂಟಾಗುವುದು" ಎಂದು ಯಾರು ಎಚ್ಚರಿಸಲಿಲ್ಲವೆ? ಅದನ್ನು ನೀವು ಲಕ್ಷಿಸದೆ ಹೇಗೆ ಪುರಪ್ರವೇಶಮಾಡಿದಿರಿ? ಈಗ ಸಿಪಾಯಿಗಳು ಹಿಂಸಿಸುವರು. ಅದನ್ನು ತಪ್ಪಿಸಬೇಕೆಂದು

ಹೇಳುವಿರಿ ? ಬಂದದ್ದನ್ನೆಲ್ಲಾ ಅನುಭವಿಸಿಯೇ ತೀರಬೇಕು. ಎಂದು ಆಕೆಗೆ ತಿಳಿಸಿ

ನಿಂತಿರುವ ಸಿಪಾಯಿಗಳನ್ನು ಕರೆದು ನೀವು ಅವರ ಗೋಜಿಗೆ ಹೋಗಬೇಡಿ ನಿಮ್ಮ ಕೆಲಸಗಳಲ್ಲಿ ನಿರತರಾಗಿ ಎಂದಪ್ಪಣೆ ಮಾಡಿದನು.


ನಂತರ ರೋಹಿಣಿಯ ಕಡೆಗೆ ತಿರುಗಿ ನೀನು ಯಾರು ? ಈಕೆಯು ಯಾರು ?

ನಿನ್ನ ಹೆಸರೇನು ? ಈಕೆಯ ಹೆಸರೇನು ? ಈಕೆಗೆ ನೀನು ಏನುಆಗಬೇಕು ? ನೀವು ಇಲ್ಲಿಗೆ

ಬರಲು ಕಾರಣವೇನು ? ಎಂಬೀ ಅಂಶಗಳನ್ನು ನಿರ್ವಂಚನೆಯಾಗಿ ತಿಳಿಸಬೇಕು ಎಂದು

ದಕ್ಕೆ ರೋಹಿಣಿಯು ಆ ಸೈನ್ಯಾಧಿಪತಿಯನ್ನು ಕುರಿತು ನನ್ನ ಹೆಸರು ರೋಹಿಣಿ

ಈಕೆಯ ಹೆಸರು ಕರುಣಾಂಬೆ ಈಕೆಯು ಪೂರ್ವದಲ್ಲಿ ಈ ವುರಾಧ್ಯಕ್ಷನಾಗಿದ್ದವನ

ಪತ್ನಿಯು ನಿನ್ನೆಯದಿವಸ ನನ್ನ ಸಾಕುತಂದೆಯಾದ ಕರುಣಾಕರನು ಈ ಯುದ್ಧದ

ಸಂಗತಿಯನ್ನು ಸವಾರನ ಮೂಲಕ ನಮಗೆ ತಿಳಿಸಿದನು. ಆತನನ್ನು ಇಂತಹ ಕಷ್ಟ

ಕಾಲದಲ್ಲಿ ಖಂಡಿತವಾಗಿಯೂ ನೋಡಲೇಬೇಕೆಂಬ ಕುತೂಹಲದಿಂದ ಈ ತೊಂದರೆಗಳ

ನ್ನೆಲ್ಲಾ ಅನುಭವಿಸಿಕೊಂಡು ಒಂದೆವು. ಆತನನ್ನು ನೋಡಲು ಸಾವಕಾಶವಾಗುವುದು. ಜಾಗ್ರತೆಯಾಗಿ ಅಪ್ಪಣೆ ಕೊಡಿ ಎಂದು ಹೊರಡಲುದ್ಯುಕ್ತಳಾದಳು.


ಸೇನಾಪತಿಯು ಈಕೆಯ ಧೈರ್ಯವನ್ನೂ, ಪಿತೃವಾತ್ಸಲ್ಯವನ್ನೂ, ನೋಡಿ ಆನಂದಭರಿತನಾದಾಗೂ ಅದನ್ನು ತೋರ್ಪಡಿಸದೆ ಕರುಣಾಕರನು ನಿನಗೆ ಹೇಗೆ ಸಾಕು

೨೬------------------------------------------------


ತಂದೆಯು ? ಆತನಿಗಾಗಿ ನೀನು ಹೋಗಿ ಕಾರಾಗಾರವನ್ನು ಸೇರುವುದು ಯುಕ್ತವಲ್ಲ

ಎಂದು ಸಾರಿ ಹೇಳುತ್ತಿದ್ದರೂ ರೋಹಿಣಿಯ ಕೂಡ ಸೇನಾಪತಿಯೇ ! ಲೋಕದಲ್ಲಿ

ಹೆತ್ತ ತಂದೆ, ವಿದ್ಯೆ ಹೇಳಿದವನು, ಆಪತ್ಕಾಲದಲ್ಲಿ ಸಹಾಯಮಾಡಿದವನು, ಒಪ್ಪತ್ತು ಊಟಕ್ಕಿಕ್ಕಿದವನು, ಹೆಣ್ಣು ಕೊಟ್ಟು ಮನೆಯನ್ನು ಉದ್ಧಾರಮಾಡಿದವನು ಇವರೈ

ವರೂ ಪಿತೃಗಳು, ಮರಣೋನ್ಮುಖಳಾಗಿ ಹಿಮದಲ್ಲಿ ಬಿದ್ದಿದ್ದ ನನ್ನನ್ನು ಕರೆತಂದು ಸಾಕಿ

ಸಲಹಿ ಕಷ್ಟಪಟ್ಟ ಕರುಣಾಕರನು ಇಂತಹ ಯುದ್ದದಲ್ಲಿ ಏನಾದನೆಂಬುದನ್ನು ಸಹ

ನೋಡದೆ ಇರಲು ನಾನೇನು ಅಂತಹ ಕೃತಘ್ನವಳಲ್ಲ. ಇದು ನಿನ್ನಂಥ ಪ್ರಾಜ್ಞನಾದ

ಮನುಷ್ಯನು ತಿಳಿಯದ ವಿಷಯವಲ್ಲ ಎಂದು ಹೇಳಿ ಪ್ರತ್ಯುತ್ತರವನ್ನು ನಿರೀಕ್ಷಿಸ

ದೆಯೇ ರೋಹಿಣಿಯು ಕರುಣಾಂಬೆಯ ಸಹಿತವಾಗಿ ಪುರವನ್ನು ಪ್ರವೇಶಿಸಿದಳು.


ರೋಹಿಣಿಯು ಲಕ್ಷ್ಯಮಾಡದೆ ಪ್ರವೇಶಿಸಿದ್ದನ್ನು ಸೇನಾಧಿಕಾರಿಯು ಚಕ್ರವರ್ತಿ

ಯವರಿಗೆ ಅರಿಕೆಮಾಡಿದನು. ಚಕ್ರವರ್ತಿಯು ಕೂಡ ಈಕೆಯ ಧೈರ್ಯ, ಸ್ಥೈರ್ಯ,

ಪಿತೃವಾತ್ಸಲ್ಯ ಇವುಗಳನ್ನು ಕೇಳಿ ಆಶ್ಚರ್ಯಭರಿತನಾಗಿ ಆಕೆಯನ್ನು ನೋಡಲು ಕುತೂ ಹಲಪಟ್ಟು ಸೈನ್ಯಾಧಿಕಾರಿಯನ್ನು ಕುರಿತು ಆಕೆಯೊಬ್ಬಳೇ ಪ್ರವೇಶಿಸಿರುವಳೇ ? ಅಥವಾ ಮತ್ತಾರಾದರೂ ಜೊತೆಯಲ್ಲಿ ಬಂದಿರುವರೆ ? ಎಂದು ಪ್ರಶ್ನಿಸಲು ಸೇನಾಧಿಕಾರಿಯು

ತಾನು ಆಕೆಯನ್ನು ಕಂಡುದು ಮೊದಲ್ಗೊಂಡು ಸನ್ನಿಧಿಗೆ ಬರುವವರಿಗೆ ನಡೆದ ಸಮಾ

ಚಾರವನ್ನು ಅರಿಕೆ ಮಾಡಿದನು. ಇದನ್ನೆಲ್ಲಾ ಸಾವಧಾನದಿಂದ ಕೇಳಿದ ಚಕ್ರವ

ರ್ತಿಯು ಆಕೆಗೇನೂ ತೊಂದರೆ ಕೊಡದೆ ತನ್ನ ಬಳಿಗೆ ಕರತರಬೇಕೆಂದು ಸೇನಾಧಿಕಾರಿಗೆ ಆಜ್ಞಾಪಿಸಿದನು.


ಇತ್ತ ರೋಹಿಣಿಯು ಕರುಣಾಂಬೆಯೊಡನೆ ಯುದ್ಧರಂಗದಲ್ಲಿ ತನ್ನ ಸಾಕುತಂದೆ

ಯಾದ ಕರುಣಾಕರನನ್ನು ಹುಡುಕುತ್ತ ಅನೇಕ ಶವಗಳನ್ನು ತುಳಿಯುತ್ತಲೂ ದಾಟು

ತ್ತಲೂ, ಮರಣಸಂಕಟದಿಂದ ನರಳುತ್ತಿರುವ ಅನೇಕ ಯೋಧರನ್ನು ನೋಡಿ ಕನಿಕರಪ

ಡುತ್ತಲೂ, ಬಹುದೂರ ಅಲೆದಾಗ ಕರುಣಾಕರ, ದಯಾಕರರ ಸುಳಿವೇ ತಿಳಿಯ

ಲಿಲ್ಲ. ಅಷ್ಟರಲ್ಲಿ ಸೂರ್ಯದೇವನು ಅಸ್ತಂಗತವಾದನು. ರಣಾಂಗದಲ್ಲಿ ನಾಯಿ

ನರಿಗಳು, ಗೂಬೆಗಳು, ಭೂತಪ್ರೇತ ಪಿಶಾಚಾದಿಗಳು ತಮ್ಮ ಬಳಗಗಳೊಳಗೊಂಡು ಶುಭಶೋಭನಾದಿಗಳನ್ನು ಮಾಡುತ್ತ ಅನೇಕವಿಧವಾದ ಭೋಜನಗಳಿಂದ ಉಪಚರಿಸುತ್ತ

ತೃಪ್ತಿ ಹೊಂದಿ ಬೊಬ್ಬಿಡುತ್ತಲಿದ್ದುವು. ಅಂಧಕಾರ-ಅದರಲ್ಲೂ ಈ ಘೋರಭೀಕರವಾದ

ಶಬ್ದ ಇವುಗಳ ನಡುವೆ ಸಂಚರಿಸುತ್ತಿರುವ ರೋಹಿಣಿಯ ಮನಸ್ಸಿನ ರೀತಿಯನ್ನು ಪಾಠಕಮಹಾಶಯರೇ ಊಹಿಸಿಕೊಳ್ಳಲಿ.

೨೭-------------------------------------------------

ಚಕ್ರವರ್ತಿಯ ಅಪ್ಪಣೆಯಂತೆ ಸೇನಾಧಿಪತಿಯು ನಾಲ್ಕು ಕಡೆಗೂ ತನ್ನ ಸೇವ

ಕರನ್ನು ರೋಹಿಣಿಯನ್ನು ಹುಡುಕುವುದಕ್ಕೆ ಅಟ್ಟಿದನು, ಎಷ್ಟು ಹುಡುಕಿದಾಗ್ಯೂ

ರೋಹಿಣಿಯ ಮತ್ತು ಕರುಣಾಂಬೆಯರ ಸುಳಿವೇ ಗೊತ್ತಾಗಲಿಲ್ಲ. ಮುಂದೆ ಮಾಡ

ತಕ್ಕ ಕೆಲಸದ ಯೋಚನೆಯಲ್ಲಿ ಎಲ್ಲರೂ ಕುಳಿತಿರುವಾಗ ಅಲ್ಲಿಗೆ ಸೇನಾಧಿಪತಿಯು

ಬಂದನು.


ರಾತ್ರಿಯಲ್ಲಿ ಹೊದ್ದು ಕೊಂಡಿದ್ದ ಕಪ್ಪು ಶಾಲನ್ನು ದೂರ ಬಿಸಾಟು ಪೂರ್ವನಿ

ಶಾದೇವಿಯು ಶುಭ್ರವಸ್ತ್ರವನ್ನು ಪರಿಧಾನಮಾಡಿಕೊಳ್ಳುತ್ತಿರುವಳು. ನಿಬಿಡವೃಕ್ಷಗ

ಳೊಳಗಿಂದ ಒಂದೆರಡು ಪಕ್ಷಿಗಳ ಮಂಜುಳರವವು ಕಿವಿಗೆ ಕೇಳಿಬರುತ್ತಿರುವುದು. ಸೂರ್ಯೋದಯಕ್ಕೆ ಇನ್ನೂ ಎಷ್ಟೋ ಅವಕಾಶವಿದ್ದಿತು, ಪಕ್ಷಿ ಸಮೂಹವು ಇನ್ನೂ

ತಮ್ಮತಮ್ಮ ಗೂಡುಗಳಿಂದ ಹೊರಬಿದ್ದಿರಲಿಲ್ಲ. ಶೀತಲವಾದ ಮಂದಮಾರುತನು ತನ್ನ ಮಹತ್ವವನ್ನು ತೋರ್ಪಡಿಸುತ್ತಿರುವನು. ಪ್ರಾತಃಕಾಲದ ಶೀತವಾಯುವಿನ ಮಹತ್ವ

ವನ್ನು ಎಷ್ಟು ಬಣ್ಣಿಸಿದರೂ ಸ್ವಲ್ಪವೇ ಸರಿ ! ಎಷ್ಟು ಶೀತಲ, ಸುಗಂದ, ಮನಸ್ಸಿಗೆ ಎಷ್ಟೊಂದು ಆಹ್ಲಾದಕರ, ಇದರ ಸುಖಕರಸ್ಪರ್ಶದಿಂದ ಸರ್ವಾಂಗವೂ ಅಮೃತರಸ

ದಿಂದ ಅಭಿಷಿಕ್ತವಾದಂತೆ ಭಾಸವಾಗುತ್ತಲಿದೆ, ಅಂತಃಕರಣವು ಸುಪ್ರಸನ್ನವಾಗಿ ಉಲ್ಲಸಿತವಾಗುತ್ತದೆ. ಸೃಷ್ಟಿದೇವತೆಯ ಈ ಕಾಲದ ಸ್ವರೂಪವು ಎಷ್ಟು ಮಧುರ !

ಎಷ್ಟು ಕೋಮಲವಾದ ಆನಂದವನ್ನು ಕೊಡುವಂತಹದು ! ಈ ಮಾಧುರ್ಯದ

ಅಥವಾ ಕೋಮಲತೆಯ ಅನುಭವವನ್ನು ಸ್ವತಃ ಅನುಭವಿಸಿದ ಹೊರತು ಬರಿಯ

ವರ್ಣನೆಯಿಂದ ವ್ಯಕ್ತಮಾಡಲು ಅಶಕ್ಯವು. ದಿನಮಣಿಯು ಸ್ವಲ್ಪ ಸ್ವಲ್ಪವಾಗಿ ತನ್ನ

ಮುಖಮಂಡಲದ ಕಾಂತಿಯನ್ನು ಪ್ರಪಂಚಕ್ಕೆ ತೋರ್ಪಡಿಸಹತ್ತಿದನು, ಪಕ್ಷಿಗಳೆ

ಲ್ಲವೂ ಆಹಾರಾರ್ಥವಾಗಿ ಹಾರಿಹೋಗುತ್ತಿರುವುವು. ಪತಿಸಮ್ಮುಖದಿಂದ ಎದ್ದು

ಗೃಹಿಣಿಯರು ತಮ್ಮ ತಮ್ಮ ಗೃಹಕಾರ್ಯನಿರತರಾಗಿರುವರು. ಕೆಲಸವಿಲ್ಲದ ಸೋಮಾ

ರಿಗಳು ಇನ್ನೂ ಹಾಸಿಗೆಯಮೇಲೆ ಮಲಗಿಕೊಂಡು ಮುಸುಕುಗಳನ್ನು ಬಲವಾಗಿ ಎಳೆ ದುಕೊಳ್ಳುತ್ತಿರುವರು. ಸಣ್ಣ ಮಕ್ಕಳು ತಮ್ಮ ಮಾತೆಯರನ್ನು ಹಿಂಸಿಸಿ ತಿಂಡಿಯನ್ನು ಇಸುಕೊಂಡು ತಿನ್ನುತ್ತಾ ತಮ್ಮ ತಮ್ಮ ಕಪ್ಪುಹಲಿಗೆಗಳೊಂದಿಗೆ ಪಾಠಶಾಲೆಗೆ ಹೋಗು

ತಿರುವರು. ಹೀಗಿರುವಲ್ಲಿ ಸೇನಾಪತಿಯು ತನ್ನ ಸೇವಕರನ್ನು ಈಗ ಇನ್ನೊಂದು ಬಾರಿ

ಹುಡುಕಿ ಎಲ್ಲಿದ್ದಾಗ್ಯೂ ಆ ಹುಡುಗಿಯನ್ನು ಕರತರಬೇಕೆಂತಲೂ ಹಾಗೆ ಕರತರದೆ

ತಪ್ಪಿದಲ್ಲಿ ಚಕ್ರವರ್ತಿಯ ಎದುರಿನಲ್ಲಿ ಅಪಮಾನ ಹೊಂದಬೇಕಾಗುತ್ತದೆಂಬದಾಗಿಯೂ

ಹೇಳಿ ಅವರನ್ನೆಲ್ಲಾ ಕಳುಹಿಸಿ ತಾನೂ ಬಂದದಾರಿಯಲ್ಲಿ ಹೊರಟನು.

೨೮-------------------------------------------------------------


ರೋಹಿಣಿಯು ತನ್ನ ಅತ್ತೆಯೊಡನೆ ರಾತ್ರಿಯೆಲ್ಲಾ ಭಯದಿಂದಲೂ, ಕರುಣಾ

ಕರ, ದಯಾಕರರು ಸಿಗಲಿಲ್ಲವೆಂಬ ವ್ಯಸನದಿಂದಲೂ, ಕಲ್ಯಾಣಪುರದಿಂದ ನಡೆದು ಬಂದುದರಿಂದುಂಟಾದ ಆಯಾಸದಿಂದಲೂ, ಮುಂದಕ್ಕೆ ಒಂದು ಹೆಜ್ಜೆಯನ್ನಾದರೂ

ಇಡುವುದಕ್ಕೆ ಆಗದೆ ಹೋಗಲು ಅಲ್ಲಿಯೇ ಕುಳಿತುಬಿಟ್ಟಳು. ಭೃತ್ಯರಲ್ಲಿ ಒಬ್ಬನು ಇವರಿ

ಬ್ಬರನ್ನೂ ದೂರದಿಂದಲೇ ನೋಡಿ ಶವದುರ್ಗಂಧವಾದ ರಣಾಂಗದಲ್ಲಿ ಹೀಗೆ ಯೋಚ

ನಾಪರಳಾಗಿ ಕುಳಿತಿರುವ ಯುವತಿ ಯಾರು ? ಇವರು ಯಾವ ಕಾರ್ಯಾರ್ಥವಾಗಿ ಕುಳಿತಿರಬಹುದು? ನಮ್ಮ ಸೇನಾಪತಿಯು ಕರತರಬೇಕೆಂದು ಆಜ್ಞಾಪಿಸಿದ್ದು ಇವರನ್ನೇ

ಇರಬಹುದೆ ? ಹಾಗೆ ಇವರೇ ನಾವು ಹುಡುಕುವ ವ್ಯಕ್ತಿಯಾದಲ್ಲಿ ನನ್ನ ಅದೃಷ್ಟಕ್ಕೆ

ಎಣೆಯೇ ಇಲ್ಲ ಎಂದು ತನ್ನಲ್ಲಿ ತಾನೇ ಆಲೋಚಿಸುತ್ತಾ ಅವರ ಬಳಿಗೆ ಹೋಗಿ

ತಾಯೆ ! ತಾವು ಯಾರು ? ಇಲ್ಲಿಗೆ ಯಾತಕ್ಕಾಗಿ ಬಂದಿರುವಿರಿ? ಎಂದು ಕೇಳಲು

ರೋಹಿಣಿಯು ನಾವು ಯಾರಾದರೇನು ? ನಿನಗೆ ತಿಳಿದಿದ್ದರೆ ಕರುಣಾಕರ ದಯಾಕರರ ಸಮಾಚಾರವನ್ನು ತಿಳಿಸು ಇಲ್ಲವಾದರೆ ನಿನ್ನ ದಾರಿಯನ್ನು ಹಿಡಿದುಕೊಂಡು ಹೊರಡ

ಬಹುದು. ನಮ್ಮ ವೃತ್ತಾಂತವನ್ನು ತಿಳಿಸುವುದಕ್ಕೆ ಮುಂಚಿತವಾಗಿ ಕರುಣಾಕರ

ದಯಾಕರರ ಸಮಾಚಾರವನ್ನು ತಿಳಿಯಲು ನಮ್ಮ ಮನಸ್ಸು ಬಾಧಿಸುತ್ತಿರುವುದು.

ಎಂದು ಹೇಳಿದಳು ಈ ಮಾತುಗಳನ್ನು ಕೇಳಿದ ನೃತ್ಯನು ತನ್ನ ಸೇನಾಪತಿಬಳಿಗೆ

ಹೋಗಿ ಅಲ್ಲಿ ನಡೆದ ವಿದ್ಯಮಾನಗಳನ್ನು ಆದ್ಯಂತವಾಗಿ ತಿಳಿಸಿದರು. ಕೂಡಲೇ

ಸೇನಾಪತಿಯು ಭೃತ್ಯನ ಜೊತೆಯಲ್ಲಿ ಆ ವನಿತೆಯರಿಬ್ಬರಿದ್ದ ಸ್ಥಳಕ್ಕೆ ಹೊರಟನು. ಪೂರ್ವಪರಿಚಿತನಾದ ಸೇನಾಪತಿಯನ್ನು ನೋಡಿ ಕರುಣಾಂಬೆ ಯು ಅವನ ಬರುವಿಕೆಗೆ ಕಾರಣವನ್ನು ಕೇಳಿದಳು. ಅದಕ್ಕೆ ಸೇನಾಪತಿಯು ಚಕ್ರವರ್ತಿ ಸಾರ್ವಭೌಮರು

ತಮ್ಮನ್ನು ಅವರ ಬಿಡಾರಕ್ಕೆ ಕರೆತರುವಂತೆ ಆಜ್ಞಾಪಿಸುವರು. ಅದೇ ಪ್ರಕಾರ

ನಿಮ್ಮನ್ನು ಹುಡುಕುವುದಕ್ಕೋಸ್ಕರ ಅನೇಕ ಸೇವಕರನ್ನು ಕಳುಹಿಸಿ ಕಡೆಗೆ ಈ ಭೃತ್ಯ

ನಿಂದ ತಮ್ಮ ಸಮಾಚಾರವನ್ನು ತಿಳಿದು ನಾನೇ ಬಂದಿರುವೆನು. ಜಾಗ್ರತೆಯಾಗಿ ತಾವು

ಹೊರಟರೆ ತಮ್ಮನ್ನು ಚಕ್ರವರ್ತಿಸಾರ್ವಭೌಮರವರ ಸನ್ನಿಧಿಗೆ ಕರೆದುಕೊಂಡು

ಹೋಗುವೆನು ಎಂದು ಬಹು ನಮ್ರಭಾವದಿಂದ ಹೇಳಲು, ರೋಹಿಣಿ ಮತ್ತು ಕರು

ಣಾಂಬೆಯರು ತಮ್ಮನ್ನು ಚಕ್ರವರ್ತಿಯು ಕರೆಸಲು ಕಾರಣವೇನಿರಬಹುದು? ರಣಾಂಗಕ್ಕೆ ಪ್ರವೇಶಿಸಿದ ಸಂಗತಿಯನ್ನು ತಿಳಿದು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದಿರಬಹುದೆಂದು ಶಾಸನಮಾಡಲೇನಾದರೂ ಕರೆಸಿರುವನೋ ? ಹೇಗಿದ್ದರೂ ಹೋಗಿಯೇತೀರಬೇಕು. ಅವರ ಬಲಾತ್ಕಾರದಿಂದ ನಾವು ಹೋಗುವುದಕ್ಕಿಂತಲೂ, ಮರ್ಯಾದೆಯಾಗಿ ನಾವೇ

೨೯-------------------------------------------------------


ಹೋಗುವುದು ಉತ್ತಮ. ಆದರೆ ನಾನೇನೋ ವೃದ್ದಳು ರೋಹಿಣಿಯು ಯೌವನಾ ರಂಭದಲ್ಲಿರುವಳು. ಅಲ್ಲದೆ ಅಸಾಧಾರಣರೂಪವತಿಯು, ಜಗದೀಶ್ವರನು ಹಿಂದೆ ಅನಾಥ ಳಾಗಿದ್ದ ರೋಹಿಣಿಯನ್ನು ಕಾಪಾಡಿದಂತೆ ಈಗಲೂ ಪಾಲಿಸುವುದರಲ್ಲಿ ಸಂಶಯವೇನಿ

ರುವುದು ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ಸೇನಾಪತಿಯೊಡನೆ ಹೊರಟಳು.

ಎಲ್ಲರೂ ರಣಾಂಗಣವನ್ನು ಬಿಟ್ಟು ಒಂದು ಬಯಲಿಗೆ ಬಂದರು. ಅಲ್ಲಿ ಒಂದು ನದಿಯು ಹರಿಯುತ್ತಿತ್ತು. ತಪೋನಿಧಿಗಳಾದ ಬ್ರಾಹ್ಮಣರು ಲೋಕಕಲ್ಯಾಣಾರ್ಥವಾಗಿ ಸಂಚಾರ ಮಾಡಿಕೊಂಡು ಅಸ್ತಾಚಲಶಿಖರದಮೇಲೆ ವಿಶ್ರಮಿಸಿಕೊಂಡ ಸೂರ್ಯನಾರಾಯಣನಿಗೆ ಸೀತೋಪಚಾರಮಾಡಲೆಸಸಗಿರುವಂತೆ ಅರ್ಘ್ರಗಳನ್ನು ಕೊಡುತ್ತಲಿರುವರು. ಸುವಾಸಿನಿ

ಯರು ತುರುಬಿನಲ್ಲಿ ಹೂ ಮುಡಿದು ತಾಂಬೂಲವನ್ನು ಸವಿಯುತ್ತಾ ಥಳಥಳಿಸುವ

ಕೊಡಗಳನ್ನು ತೆಗೆದುಕೊಂಡು ದಂಡೆಯ ಮೇಲೆ ಕುಳಿತು ಪರಸ್ಪರ ವಿನೋದ ಹಾಸ್ಯಾ

ಸ್ಪದವಾದ ಮಾತುಗಳನ್ನಾಡುತ್ತಿರುವರು. ಇದನ್ನು ನೋಡಿದರೆ ಸುರಾಂಗನೆಯರು,

ಗಂಗೆಯ ಸುಧಾಮಯ ಸಲಿಂಕ್ಕಿಂತಲೂ ಈ ನದಿಯ ನೀರು ಹೆಚ್ಚು ಸವಿಯಾಗಿ ಕಂಡುಬಂದುದರಿಂದ ಸುವರ್ಣಕಲಶಗಳನ್ನು ತಂದು ಈ ನೀರನ್ನು ಒಯ್ಯುವರೋ

ಎಂಬಂತೆ ಕಾಣುತ್ತಿತ್ತು. ರೋಹಿಣಿ ಕರುಣಾಂಬೆಯರು ಈ ಸೃಷ್ಟಿ ವೈಭವವನ್ನೂ ಕೂಡ ನೋಡದೆ ಸೇನಾಪತಿಯ ಹಿಂದೆ ಸಾಗಿದರು. ಒಂದು ರಮ್ಯವಾದ ವನಸಿಕ್ಕಿತು, ಸಂತ

ಸವಾಗಿ ಹರಿಯುವ ಹಳ್ಳವು ನಾಗಮುರಿಯಂತೆ ಈ ಉದ್ಯಾನದಲ್ಲಿ ಹಾಯ್ದುಹೋಗಿ ದ್ದುದರಿಂದ ಅದು ಬಹು ರಮಣೀಯವಾಗಿದ್ದಿತು. ಹೀಗೆ ಮುಂದೆ ಎರಡು ಮಗ್ಗು

ಲಿಗೂ ವಿಧವಿಧವಾಗಿ ಗಿಡಗಳು ಹಾಕಲ್ಪಟ್ಟಿದ್ದವು. ಸ್ವಲ್ಪ ದೂರದಲ್ಲಿ ಒಂದು ರಮಣೀ ಯವಾದ ಸೌಧವು ಕಾಣಿಸುತ್ತಿತು. ಸೌಧದಿಂದ ವನವನ್ನು ಸೇರಲು ನಾಲ್ಕು ಹಾದಿ

ಗಳಿದ್ದುವು. ಅಲ್ಲಲ್ಲಿ ವೃಕ್ಷವಾಟಿಕೆಗಳಿದ್ದು ಅವುಗಳ ಮಧ್ಯದಲ್ಲಿ ವಿಶ್ರಾಂತಿಗಾಗಿ

ಹಲಗೆಯ ಮತ್ತು ಕಬ್ಬಿಣದ ಆಸನಗಳನ್ನು ಹಾಕಿದ್ದರು. ಉಪವನದಿಂದ ಮಂದಿರಕ್ಕೆ ಹೋಗುವುದಕ್ಕೆ ಕೆಂಪು ಮಣ್ಣು, ಮರಳುಸೇರಿಸಿ ಅದರಿಂದ ಮಾಡಿದ್ದ ಪ್ರಶಸ್ತವಾದ

ಮಾರ್ಗ. ಎದುರಿಗೆ ಮೂರು ಅಂತಸ್ತಿನ ಮಹಡಿಯವನೆ, ಅದಕ್ಕೆ ಹತ್ತುವುದಕ್ಕೆ ಅಮೃತಶಿಲೆಯಿಂದ ನಿರ್ಮಿತವಾದ ಮೆಟ್ಲುಗಳು, ಮನೆಯ ಮುಂಭಾಗದಲ್ಲಿ ಉಭಯ ಪಾರ್ಶ್ವದಲ್ಲಿಯೂ ಪಹರೆಯವರು ಇರುವುದಕ್ಕೆ ಮನೆಗಳು, ಮಹಡಿಯಮೇಲೆ ಸುಂದ

ರವಾದ ನೆಲಕ್ಕೆ ಚಿತ್ರಮಯವಾದ ರತ್ನ ಗಂಬಳಿಯನ್ನು ಹಾಸಿದ್ದರು. ಮಧ್ಯಭಾಗದಲ್ಲಿ

ಒಳ್ಳೆಯ ನುಣುಪಾದ ಕರಿ ಹಲಗೆಯ ವಿಸ್ತಾರವಾದ ದುಂಡುಮೇಜವಿದ್ದಿತು. ಅದರ

ಸುತ್ತಲೂ ನಾಲ್ಕಾರು ಕುರ್ಚಿಗಳಿದ್ದುವು. ಗೋಡೆಗಳನ್ನು ನಾನಾವಿಧವಾದ ಸುಂದರ

೩೦---------------------------------------------


ವಾದ ಚಿತ್ರಪಠಗಳಿಂದ ಅಲಂಕರಿಸಿದ್ದರು. ಈ ಗೃಹವು ಮೊದಲು ಸುವರ್ಣಪುರಾಧೀ

ಶ್ವರನ ಬೇಸಿಗೆಯಕಾಲದ ಆರಾಮಮಂದಿರವಾಗಿದ್ದಿತು. ಅವಂತೀಶನು ಆ ರಾಜ್ಯ

ವನ್ನು ತನ್ನ ಕೈವಶಮಾಡಿಕೊಂಡ ಕೂಡಲೇ ಪಟ್ಟಣದ ನಾನಾ ಭಾಗಗಳಲ್ಲಿಯೂ ಯುದ್ಧದಲ್ಲಿ ಮೃತಪಟ್ಟವರ ದೇಹಗಳು ನಾರುತ್ತಾ ಕೊಳೆತು ದುರ್ಗಂಧಗಳನ್ನು ದೆಸೆ

ದೆಸೆಗೂ ಬೀರುತ್ತಿದ್ದುದರಿಂದ ಆ ದುರ್ಗಂಧವನ್ನು ಸಹಿಸಲಾರದೆ ಈ ಮಂದಿರದಲ್ಲೇ ವಾಸಿಸುತ್ತಿದ್ದನು.


ಸೇನಾಪತಿಯು ರೋಹಿಣಿ ಕರುಣಾಂಬೆಯರೊಂದಿಗೆ ಆ ಮಂದಿರಕ್ಕೆ ಪ್ರವೇಶಿಸಿ

ದನು. ದಿವಾನಖಾನೆಯಲ್ಲಿ ಆರಾಮ ಕುರ್ಚಿಯಮೇಲೆ ಸುಖಾಸೀನನಾಗಿದ್ದ ಅವಂತೀಶ್ವ

ರನಿಗೆ ರೋಹಿಣಿ ಕರುಣಾಂಬೆಯರನ್ನು ತಾನು ಹುಡುಕಿಸಿ ಕರತಂದಿರುವೆನೆಂದು ವಿಜ್ಞಾಪಿ

ಸಿಕೊಂಡು ಆ ಯುವತಿಯರಿಬ್ಬರನ್ನೂ ದಿವಾನಖಾನೆಯಲ್ಲಿಯೇ ಬಿಟ್ಟು ತಾನು ಹೊರಟು ಹೋದನು. ಆ ಅವಂತೀಶನು, ಮೌನದಿಂದ ತಲೆವಾಗಿ ರೋಹಿಣಿ ಕರುಣಾಂಬೆಯರನ್ನು

ಕುರಿತು ನೀವು ಯಾರೆಂದು ಪ್ರಶ್ನೆ ಮಾಡಲು ಯಾವ ಉತ್ತರವೂ ಬರಲಿಲ್ಲ.

ಅವಂತೀಶ:-ಎಲೌ ಸುಂದರಿಯರೆ ಏತಕ್ಕೆ ಮೌನವನ್ನು ಧರಿಸಿರುವಿರಿ? ನನ್ನನ್ನು

ನಿಮ್ಮ ಸಹೋದರನೆಂದು ನಂಬಿ ನಿಮ್ಮ ವೃತ್ತಾಂತವನ ತಿಳಿಸಿ.


ಕರುಣಾಂಬೆ:-ಭೂಮೀಶ್ವರನೆ ! ನಾನು ಸುವರ್ಣವುರಾಧೀಶ್ವರನ ತೃತೀಯ

ಪತ್ನಿಯು. ಈಕೆಯು ನನ್ನ ಸೋದರಪಾಲಿತ ಪುತ್ರಿ.


ಅವಂತೀಶ :ಹಾಗಾದರೆ ನಿಮ್ಮ ಸೋದರರು ಯಾರು ?


ಕರುಣಾಂಬೆ:-ಆ ಪರೋಪಕಾರಶಿಖಾಮಣಿಗಳು ತಮಗೂ, ಸುವರ್ಣಪುರಾ

ಧೀಶ್ವರನಿಗೂ, ನಡೆದ ಯುದ್ಧರಂಗದಲ್ಲಿ ಘಾಯಪಟ್ಟು ಮರಣೋನ್ಮುಖರಾಗುವವರ ಸಹಾಯಕರಾಗಿ ಇಲ್ಲಿ ಇರುವರೆಂದು ತಿಳಿದು, ಬಂದೆವು.


ಅವಂತೀಶ:-ಹಾಗಾದರೆ ನೀವು ಕರುಣಾಕರ, ದಯಾಕರರ ಸಹೋದರಿಯರೊ?


ಕರುಣಾಂಬೆ :- ಹೌದು, ಮಹಾಪ್ರಭು !


ಅವಂತೀಶ :-ನಿಮ್ಮ ಬಳಿಯಲ್ಲಿ ನಿಂತಿರುವ ಈ ಸುಂದರೀಮಣಿಯು ಕರುಣಾಕ

ರರ, ದಯಾಕರರ ಸಾಕುಮಗಳೆಂದು ಹೇಳಿದರಷ್ಟೆ ? ಅದು ಹೇಗೆ ?


ಕರುಣಾಂಬೆಯು ಅವಂತೀಶನೊಡನೆ ರೋಹಿಣಿಯು ಶಿಶುವಾಗಿದ್ದಾಗಿನಿಂದಲೂ

ಅವಳ ಚರಿತ್ರೆಯನ್ನು ಸವಿಸ್ತಾರವಾಗಿ ವಿಜ್ಞಾಪಿಸಿಕೊಂಡಳು. ಇದನ್ನು ಕೇಳಿದ

ಕೂಡಲೇ ಅವಂತೀಶನು ತುಂಬಾ ವ್ಯಸನಾಕ್ರಾಂತನಾಗಿ ರೋಹಿಣಿ ಕರುಣಾಂಬೆಯರ

ಕಡೆಗೆ ತಿರುಗಿ---

೩೧-----------------------------------------


ಎಲೌ ! ಭಾತೃವಾತ್ಸಲರಾದ ರಮಣಿಯರೆ ? ನೀವು ಯಾವವಿಧವಾದ ಯೋಚ

ನೆಯನ್ನೂ ಮಾಡದಿರಿ ! ಕರುಣಾಕರ ದಯಾಕರರೀರ್ವರನ್ನೂ ಈ ದಿನ ಸಂಧ್ಯಾಕಾಲ

ದೊಳಗಾಗಿ ಎಲ್ಲಿದ್ದರೂ ಹುಡುಕಿಸಿ ತಮ್ಮ ಬಳಿಗೆ ಬರಮಾಡುವೆನು ಎಂದು ಹೇಳಿ ರೋಹಿಣಿಯನ್ನು ಕಣ್ಣು ತುಂಬ ನೋಡಿ ಆನಂದಪರವಶನಾಗಿ ಸೈನ್ಯಾಧಿಕಾರಿಯನ್ನು

ಕುರಿತು ಈ ಯುವತಿಯರಿಬ್ಬರನ್ನೂ ಕರೆದುಕೊಂಡು ಹೋಗಿ ಅವರಿಗಾಗಿ ಬೇರೆ

ಯೊಂದು ಕೊಠಡಿಯನ್ನು ತೆರವುಮಾಡಿಕೊಡಬೇಕು. ಮತ್ತು ಇವರ ಉಪಚಾರಗಳನ್ನು

ನೀನೇ ಸಾಕ್ಷಾತ್ತಾಗಿ ನೋಡಿಕೊಳ್ಳಬೇಕೆಂದು ಆಜ್ಞೆಯಿತ್ತು ಭೋಜನಶಾಲೆಯನ್ನು

ಹೊಕ್ಕನು.


ಭೋಜನಾಲಯದಲ್ಲಿ ಪದ್ಧತಿಗನುಸಾರವಾಗಿ ಎಲ್ಲವೂ ಸಿದ್ದವಾಗಿದ್ದಿತು.

ರಾಜಬಂಧುಗಳೂ, ಮಂತ್ರಿಗಳೂ, ಸೇನಾಧಿಕಾರಿಗಳೂ ಇತರ ಅಧಿಕಾರಿಗಳೂ ತಮ್ಮ

ತಮ್ಮ ನಿಯಮಿತಸ್ಥಳಗಳಲ್ಲಿ ಕುಳಿತರು. ಎಲ್ಲರೂ ಭುಂಜಿಸಿದರು. ಆದರೆ ಚಕ್ರವ

ರ್ತಿಯು ಮಾತ್ರ ನಿತ್ಯವೂ ಇದ್ದಂತೆ ಇರದೆ ಯಾರಜೊತೆಯಲ್ಲಿಯೂ ಮಾತನ್ನಾಡದೆ

ಸುಮ್ಮನೆ ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದನ್ನು ಕಂಡು ಉಳಿದವರೆ

ಲ್ಲರೂ ಚಕಿತರಾದರು. ಆದರೆ ಕಾರಣವನ್ನು ಕೇಳಲು ಯಾರಿಗೆತಾನೇ ಧೈರ್ಯ.

ಯಾರೊಬ್ಬರೂ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಸೇನಾಪತಿಯು ರೋಹಿಣಿ, ಕರುಣಾಂಬೆಯರನ್ನು ಕರೆದುಕೊಂಡು ಬಂದುಬಿಟ್ಟ ಸಂಗತಿ ವಿನಹ ಮತ್ಯಾವದನ್ನೂ

ಅರಿಯನು.

###

ಸಪ್ತಮಲಹರಿ.


ಚಿಂತೆಗೂ ಚಿತೆಗೂ ಒಂದು ಬಿಂದು ಮಾತ್ರ ವ್ಯತ್ಯಾಸವಿರುವಾದರೂ ಮೊದಲ

ನೆಯದು ನಿರ್ಜೀವ ವಸ್ತುಗಳನ್ನೂ ಎರಡನೆಯದು ಸಜೀವ ವಸ್ತುಗಳನ್ನೂ ದಹಿಸಿಬಿಡು

ವುದು, ಲೋಕದಲ್ಲಿ ಎಲ್ಲಾ ರೋಗಗಳಿಗೂ ಔಷಧಗಳೂ ಚಿಕಿತ್ಸೆಗಳೂ ಉಂಟು.

ಆದರೆ ಈ ಚಿಂತಾರೋಗಕ್ಕೆ ಯಾವ ಔಷಧವೂ ಚಿಕಿತ್ಸೆಯೂ ದೇವಲೋಕದ ವೈದ್ಯ ಶಿರೋಮಣಿಗಳಾದ ಅಶ್ವಿನೀದೇವತೆಗಳೂ ಕೂಡ ಕಂಡುಹಿಡಿದ ಹಾಗೆ ಕಾಣಬರಲಿಲ್ಲ.

೩೨----------------------------------------------


ಮತ್ತೆ ಮಾನುಷವೈದ್ಯರ ಪಾಡೇನು. ಈ ರೋಗವು ಒಂದಾವರ್ತಿ ಆಕ್ರಮಣಮಾಡಿ

ದರೆ ತನ್ನ ಇಷ್ಟಾ ಪೂರ್ತಿಯಾದಹೊರತು ಕದಲುವುದೇ ಇಲ್ಲ.


ಪಾತಕ ಮಹಾಶಯರೆ! ಚಿಂತೆಗಳು ಹಲವು ತರಗಳಾಗಿರುವುವು. ನವವಧು

ವಿಗೆ ಪತಿಯಚಿಂತೆ. ಅಪುತ್ರನಿಗೆ ಪುತ್ರನಚಿಂತೆ, ಬ್ರಹ್ಮಚಾರಿಗೆ ವಿವಾಹಚಿಂತೆ. ಕುರು

ಬನಿಗೆ ಕುರಿಯ ಚಿಂತೆ, ಲುಬ್ಧನಿಗೆ ಧನದಚಿಂತೆ, ಗೌಳಿಗನಿಗೆ ಆಕಳಚಿಂತೆ, ಬೇಡನಿಗೆ

ಮೃಗಗಳಚಿಂತೆ, ಬೆಸ್ತನಿಗೆ ಮೀನಿನಚಿಂತೆ, ರೋಗಿಗೆ ಮರಣದಚಿಂತೆ, ದರಿದ್ರನಿಗೆ ಸಾಲ

ದಚಿಂತೆ, ವೇಶ್ಯಗೆ ಧನಿಕಪ್ರಿಯವಿಟನಚಿಂತೆ, ದೇವತೆಗಳಿಗೆ ಭೂಲೋಕದಚಿಂತೆ,

ಮಕ್ಕಳಿಗೆ ತಿಂಡಿಯಂತೆ, ರೈಲ್ವೆಯವರಿಗೆ ಪ್ರಯಾಣಿಕರಚಿಂತೆ, ವಿಧುರನಿಗೆ ಪತ್ನಿಯ

ಚಿಂತೆ, ವಿತಂತುವಿಗೆ ಪತಿಯಚಿಂತೆ ಹೀಗೆ ಇರುವುವು.


ಇವೆಲ್ಲಕ್ಕಿಂತ ಪ್ರಬಲವೂ ದುಸ್ಸಹವೂ ಆದ ಚಿಂತೆಯೊಂದು ಇರುವುದು.

ಲೋಕದಲ್ಲಿ " ಅಪುತ್ರಸ್ಯ ಗತಿರ್ನಾಸ್ತಿ” ಎಂಬ ಶೃತಿಯಂತೆ ಮಕ್ಕಳಿಲ್ಲದವನಿಗೆ ಗತಿಇ

ಲ್ಲವೆಂಬುದೇನೋ ನಿಜ. ಮಕ್ಕಳಲ್ಲಿ ಎರಡು ವಿಧವೆಂಬುದು ಸರ್ವಸಾಮಾನ್ಯವಾದ

ವಿಷಯ ಅದರಲ್ಲಿ ಮೊದಲನೇಯದು ಗಂಡುಮಕ್ಕಳ ವಿಷಯವನ್ನು ನೋಡೋಣ. ಇವ

ರಲ್ಲಿ ಹುಟ್ಟಿದಕೂಡಲೇ ಸಾಯುವರು ಕೆಲವರು, ಮಧ್ಯಕಾಲದಲ್ಲಿ ಸಾಯುವರು ಕೆಲ

ವರು. ಬಹುದಿನಗಳವರಿಗೆ ಬದುಕಿ ಬಾಳಿ ದೇಹವನ್ನಿಡುವರು ಕೆಲವರು. ಇದು ಮೃತಪ

ಡುವರ ಸಂಗತಿಯು, ಇನ್ನು ಜೀವಿತಪುತ್ರರ ಸಂಗತಿಯನ್ನು ನೋಡುವ ಬಾಲ್ಯದಲ್ಲಿ ಮಾತಾಪಿತೃಗಳಿಂದ ಪೋಷಿತರಾಗಿ ವರ್ಣಾಶ್ರಮಧರ್ಮಕ್ಕನುಸಾರವಾದ ಕರ್ಮಗ

ಳನ್ನೂ ಯೌವನಾವಸ್ಥೆಯನ್ನೂ ಹೊಂದಿಸಿ, ತನ್ನನ್ನು ಹೊತ್ತು, ಹೆತ್ತು, ಸಾಕಿ,

ಸಲಹಿ, ವಿದ್ಯಾಭ್ಯಾಸಮಾಡಿಸಿದ ಮಾತಾಪಿತೃಗಳ ಇಷ್ಟಾನುಸಾರವಾಗಿ ನಡೆದು

ಬಾಳುವವನು ಸುಪುತ್ರನೆನ್ನಿಸಿಕೊಂಡು ತಾನು ಸಂತೋಷವಾಗಿದ್ದು ತನ್ನ ಮಾತಾಪಿತೃ

ಗಳನ್ನು ಆನಂದಾಬ್ದಿಯಲ್ಲಿ ಮುಳುಗಿಸುವನು. ಇಂಥವರು ದುಷ್ಪುತ್ರರಾದರೆ ಅವರು ಲೋಕಕಂಟಕರಾಗಿ ಮಾತಾಪಿತೃಗಳಿಗೆ ಶೂಲಪ್ರಯರಾಗಿ ತಾವೂ ದುಃಖಪಟ್ಟು ಅವ

ರನ್ನು ಚಿಂತಾಸಾಗರದಲ್ಲಿ ಯಾವಜೀವವ ಮುಳುಗಿರುವಂತೆ ಮಾಡಿ ತಾವೂ ಕಷ್ಟಪ

ಡುವರು. ಎಂತಹ ದುಷ್ಟುತ್ರರಾದರೂ, ಹೊತ್ತು, ಹೆತ್ತು, ಸಾಕಿ, ಸಲಹಿದ, ಮಾತಾ

ಪಿತೃಗಳು ತಮ್ಮ ಪುತ್ರರು ಎಲ್ಲಿಯಾದರೂ ಸುಖವಾಗಿರಲಿ! ಎನ್ನು ವರೇ ವಿನಹ ಅವರಿಗೆ ಯಾವ ವಿಧದಲ್ಲಿಯೂ ಕೇಡನ್ನು ಹಾರೈಸರು.

೩೩-------------------------------


ಅವಂತೀಶನು ಭೋಜನಾಲಯದಿಂದ ತನ್ನ ಕಿರುಮನೆಗೆ ಹೋಗಿ ಒಂದು

ವೇತಾಸನದಮೇಲೆ ಕುಳಿತು ಕಣ್ಣೀರು ಸುರಿಸುತ್ತಾ ರಾತ್ರಿಯನ್ನೆಲ್ಲಾ ಕಳೆದನು. ಸೂರ್ಯೋದಯಾತ್ಯತ್ವವೇ ಪ್ರತಿದಿನವೂ ಎದ್ದು ಗಾಳಿಸವಾರಿಹೊರಡುತ್ತಿದ್ದ ಚಕ್ರವ

ರ್ತಿಯು ಸೂರ್ಯೋದಯವಾಗಿ ಎರಡುಗಳಿಗೆಯಾದರೂ ಕಿರುಮನೆಯಿಂದ ಹೊರಗೆ ಬಾರದಿದ್ದುದನ್ನು ನೋಡಿ ಮಂತ್ರಿ ಮೊದಲಾದವರು ಕಳವಳಗೊಂಡರು. ಮುಖ್ಯಾ

ಮಾತ್ಯನು ಚಕ್ರವರ್ತಿಯ ಕಿರುಮನೆಯ ಬಳಿಗೆ ಬಂದು ಬಾಗಿಲಸಂದಿನಲ್ಲಿ ನೋಡಲು,

ರಾಜನು ಒಂದು ಆರಾಮವೇತ್ರಾಸನದಮೇಲೆ ಕುಳಿತು ಕೆನ್ನೆಯಮೇಲೆ ಕೈಯನ್ನಿ

ಟ್ಟುಕೊಂಡು ಏನನ್ನೋ ಯೋಚಿಸುತ್ತಿದ್ದುದನ್ನು ಕಂಡನು. ರಾಜನ ಪ್ರಕೃತಸ್ಥಿತಿ

ಯನ್ನು ನೋಡಿ ಮುಖ್ಯಾಮಾತ್ಯನಿಗೂ ದಾರಿ ತೋರದೆಹೋಯಿತು. ರಾಜನು

ಏತಕ್ಕೆ ಈರೀತಿ ಶೋಕಿಸುತ್ತಿರುವನೆಂಬುದಕ್ಕೆ ಕಾರಣವನ್ನು ಎಷ್ಟು ಯೋಚಿಸಿದರೂ ಕಂಡುಹಿಡಿಯಲಾರದೆಹೋದನು, ಕಡೆಗೆ ತನ್ನಲ್ಲಿತಾನೆ ರೋಹಿಣಿಯನ್ನು ನೋಡಿದ ದಿನದಿಂದಲೂ, ರಾಜನ ಸ್ಥಿತಿಯು ವಸ್ತುತಃಸರಿಯಾಗಿಲ್ಲವು. ಆಕೆಯ ರೂಪು,

ಲಾವಣ್ಯ, ಬುದ್ಧಿ ಶಕ್ತಿ ಮೊದಲಾದುವುಗಳಿಗೆ ಪರವಶನಾಗದ ಮನುಷ್ಯನು ಪಾಮ

ರನೇ ಸರಿ! ಹಾಗಿರುವಾಗ್ಗೆ ನಮ್ಮ ಚಕ್ರವರ್ತಿಯು ಆಕೆಯನ್ನು ನೋಡಿ ಮೋಹಿಸಿರ

ಬಹುದೆಂದು ಯೋಚಿಸಿದರೆ ಅದು ಸುಳ್ಳಾಗಲಾರದು. ಏಕೆಂದರೆ ಆಕೆಯು ಅವಿವಾಹಿ

ತಳು, ಯವ್ವನವತಿಯು, ರೂಪವತಿಯು, ಮತ್ತು ವಿದ್ಯಾವತಿ, ಚಕ್ರವರ್ತಿಯೂ ಕೂಡ

ರಾಜ್ಯ ಕಾರ್ಯದಲ್ಲಿ ನಿಪುಣನು, ಯುವಕನು, ರೂಪಿನಲ್ಲಿ ಅನಂಗನನ್ನೂ ಮರೆಸು

ವನು. ಈತನ ರಾಜ್ಯಸ್ಥಿತಿಯು ಹೇಗಿರುವುದೆಂದರೆ :--


ಬಡತನವು ಸ್ತ್ರೀಯರ ನಡುವಿನಲ್ಲಿಯೂ, ಮಾಂದ್ಧವು ಅವರ ನಡೆಯಲ್ಲಿಯೂ,

ಕಠಿಣತ್ವವು ಅವರ ಎದೆಯಲ್ಲಿಯೂ, ಚಾಂಚಲ್ಯವು ಅವರ ಕಡೆಗಣ್ಣಿನ ನೋಟದಲ್ಲಿಯೂ, ಕುಟಿಲತ್ವವು ಅವರ ಗುಂಗುರು ಕೂದಲುಗಳಲ್ಲಿಯೂ ಕಂಡುಬರುತ್ತಿರುವುದೇ ಹೊರತು ಜನರಲ್ಲಿ ಹುಡುಕಿದರೂ ಸಿಗುವುದಿಲ್ಲ. ಈ ವಿಧವಾದ ಬಿಕ್ಕಟ್ಟಿನಲ್ಲಿ ರಾಜ್ಯಭಾರಮಾ ಡುತ್ತಲಿರುವ ಸಾರ್ವಭೌಮನು ಒಬ್ಬ ಸ್ತ್ರೀಗೆ ಸೋತುದು ಆಶ್ಚರ್ಯವಲ್ಲವೆ?

ಹೇ ಮನಸ್ಸೇ ! ನಿನ್ನ ನಿರ್ಧರವೇ ನಿರ್ಧರ! ನಿನ್ನ ನಿಶ್ಚಯವೇ ನಿಶ್ಚಯ ! ನಿನ್ನ ನ್ಯಾಯವೇ ನ್ಯಾಯ ! ನಿನಗೆ ತಕ್ಕ ಹಾಗೆ ನಿನ್ನ ಸ್ನೇಹಿತರೀರ್ವರೂ (ಕಿವಿ, ಕಣ್ಣು) ಸಹಾಯಮಾ

ಡುವರು. ಭಗವಂತನ ನಿಯಾಮಕವಿದ್ದಂತೆ ಆಗಲಿ ಎಂದು ಯೋಚಿಸುತ್ತಾ, ಚಕ್ರವರ್ತಿ ಸಾರ್ವಭೌಮರಿಗೆ ಜಯವಾಗಲಿ' ಎಂದು ನನ್ನ ಭಾವದಿಂದ ಹೇಳಿದನು. ರಾಜನು

ಝಗ್ಗನೆ ತನ್ನ ಪೀಠದಿಂದ ಎದ್ದು ಮುಖ್ಯಮಾತ್ಮನನ್ನು ಬಳಿಗೆ ಬರಹೇಳಿದನು.

೩೪-----------------------------------------------

ಮಂತ್ರಿಯು ಉಚಿತಸ್ಥಾನದಲ್ಲಿ ಕುಳಿತುಕೊಂಡಮೇಲೆ ರಾಜನು ತನ್ನ ಪ್ರಕೃತಸ್ಥಿತಿಗೆ ಕಾರಣವನ್ನು ಹೇಳದೆ ಬೇರೆ ಯಾವವೋ ಒಂದೆರಡು ವಿಷಯಗಳನ್ನು ಪ್ರಸ್ತಾಪಿಸು

ತ್ತಿದ್ದು ತನಗೆ ಸ್ವಲ್ಪ ಅಸ್ವಸ್ಥತೆಯುಂಟಾಗಿರುತ್ತದೆಯೆಂತಲೂ ತನ್ನಿಂದ ನಿರ್ವಹಿಸಲ್ಪಡ ಬೇಕಾದ ಯಾವತ್ತು ಕಾರ್ಯವನ್ನೂ ಮಂತ್ರಿಯೇ ಸ್ವಲ್ಪ ಕಾಲದವರೆಗೆ ನಡೆಸಬೇ

ಕೆಂದೂ ಆತನಿಗೆ ಹೇಳಿ ಕಳುಹಿಸಿ ತಾನು ಹುಚ್ಚನಂತೆ ಆ ಕಿರುಮನೆಯ ಒಂದುಕಡೆ

ಯಿಂದ ಮತ್ತೊಂದುಕಡೆಗೆ ಶತಪಥ ಸುತ್ತುತ್ತಾ ಇದ್ದನು.

++ + ++

ಅಷ್ಟಮಲಹರಿ.

-------

ದಿವಾಕರನ ಪುತ್ರನಾದ ಶನೀಶ್ವರನ ದೆಶೆಯಲ್ಲಿರತಕ್ಕ ಯಾವ ಮನುಷ್ಯನಾದರೂ

ದುಃಖ, ಅಪಮಾನ, ಅಪಯಶಸ್ಸು, ಋಣ, ದಾರಿದ್ರ, ಇವುಗಳಿಂದ ಕಷ್ಟನಷ್ಟಗ

ಳಿಗೆ ಗುರಿಯಾಗಬೇಕಲ್ಲದೆ ಸುಖವನ್ನನುಭವಿಸುವ ಸಂಭವವು ಇಲ್ಲವೆಂದೇ ಹೇಳಿ

ದರೆ ಅದು ಅತಿಶಯೋಕ್ತಿಯಾಗಲಾರದು. ಅದರಲ್ಲೂ ಈ ಮಹಾರಾಯನು ಜನ್ಮ,

ದ್ವಿತೀಯಾ, ಚತುರ್ಥ, ಪಂಚಮ, ಸಪ್ತಮ, ಅಷ್ಟಮ, ದ್ವಾದಶ ಈ ಏಳು ಸ್ಥಾನಗ

ಳಲ್ಲಿದ್ದರೆ ಹೇಳಬೇಕಾದ್ದೇಇಲ್ಲ.


ಇತ್ತ ರಾಜ್ಯಭ್ರಷ್ಟನಾಗಿ ಓಡಿಹೋಗಿ ಕಾಡಿನಲ್ಲಿ ತಲೆತಪ್ಪಿಸಿಕೊಂಡು ತಿರುಗಾಡು

ತಿದ್ದ ಸುವರ್ಣಪುರಾಧೀಶ್ವರನು ಒಂದೆರಡುತಿಂಗಳುಕಾಲ ಗೆಡ್ಡೆಗೆಣಸುಗಳನ್ನು ತಿಂದು ಒಂದೇಮನಸ್ಸಿನಿಂದ ಈಶ್ವರನನ್ನು ಧ್ಯಾನಿಸುತ್ತಿದ್ದನು. ಈತನ ಧ್ಯಾನದಿಂದ ಈಶ್ವರನು ಪ್ರತ್ಯಕ್ಷನಾದನೋ ಎನ್ನುವಹಾಗೆ ಸುವರ್ಣ ಪರಾಧೀಶನಿಗೆ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವು ಕಾಣಿಸಿತು, ಆ ದೇವಸ್ಥಾನವು ಕಟ್ಟಲ್ಪಟ್ಟು ಬಹುಕಾಲವಾಗಿದ್ದಿತು. ಅದರ ಪ್ರಾಕಾರದ ಗೋಡೆಗಳೆಲ್ಲವೂ ಬಿರುಕುಬಿಟ್ಟು ಆಲ ಮತ್ತು ಅರಳಿಗಿಡಗಳಿಗೆ ಆವಾಸಸ್ಥಾ ನವಾಗಿದ್ದುವು. ದೇವಸ್ಥಾನದ ಪ್ರಾಂಗಣದಲ್ಲಿ ಒಂದು ದೊಡ್ಡ ಕೈಸಾಲೆ, ಮತ್ತು

ಸುತ್ತಲೂ ಕಲ್ಲಿನಿಂದ ಕಟ್ಟಲ್ಪಟ್ಟ ಸಣ್ಣಸಣ್ಣ ಮಂಟಪಗಳು. ಅವುಗಳಲ್ಲಿ ಪ್ರತಿಯೊಂದರ

ಲ್ಲಿಯ, ಒಂದೊಂದು ಲಿಂಗ ಮತ್ತು ಬಸವ, ಜಗದಂಬೆಯ ದೇವಸ್ಥಾನದ ಮುಂದುಗಡೆ ಪಾರಿಜಾತ, ಮತ್ತು ಒಂದು ಸಂಪಗೆಯ ವೃಕ್ಷವು ಬಹಳ ಎತ್ತರವಾಗಿ ಬೆಳೆದು

೩೫---------------------------------------

ತಮ್ಮಲ್ಲಿ ಬಿಟ್ಟ ಪುಷ್ಪಗಳ ರೇಖುಗಳನ್ನೆಲ್ಲಾ ಶ್ರೀ ಜಗದಂಬೆಯಮೇಲೆ ಉದುರಿಸು

ತ್ತಿದ್ದುವು. ಈಶ್ವರನ ದೇವಸ್ಥಾನದ ಮುಂದುಗಡೆಯಲ್ಲಿ ಒಂದು ದೊಡ್ಡ ಬಿಲ್ವಪ

ತ್ರೆಯ ಗಿಡವಿದ್ದಿತು, ದೇವಸ್ಥಾನದ ಹೊರಗಡೆ ಎಡಭಾಗದಲ್ಲಿ ಅನೇಕ ಬೇಲ ಮತ್ತು ಹಲಸಿನಮರಗಳು ಅನೇಕ ಮುಳ್ಳುಗಿಡಗಳಿಂದ ಆವೃತವಾಗಿದ್ದುವು. ಒಂದು ಸಣ್ಣ

ನದಿಯು ದೇವಸ್ಥಾನವನ್ನು ಸುತ್ತುಗಟ್ಟಿಕೊಂಡು ನಿದಾನವಾಗಿ ಪ್ರವಹಿಸುತ್ತಿದ್ದಿತು. ಸುವರ್ಣವುರಾಧೀಶನು ಅಲ್ಲಿ ಹರಿಯುತ್ತಿದ್ದ ನದಿಯ ಶೋಭೆಯನ್ನೂ ದೇವಸ್ಥಾನ

ವನ್ನೂ ತನ್ನ ಮನಸ್ಸಿನಲ್ಲೇ ವರ್ಣನೆಮಾಡುತ್ತಾ ದೇವಸ್ಥಾನದ ಸುತ್ತಲೂ ಸ್ವಲ್ಪ

ಹೊತ್ತು ಅಲೆದಾಡುತ್ತಾ ಅಲ್ಲಿ ಒಂದು ಹಲಸಿನಮರದಲ್ಲಿ ಪಕ್ಷವಾಗಿ ಬಿರುಕುಬಿಟ್ಟಿದ್ದ

ಒಂದು ಹಲಸಿನ ಹಣ್ಣನ್ನು ಕೊಯ್ದು ತಂದು ನದಿಯದಡದಲ್ಲಿಟ್ಟು ತಾನು ಉಟ್ಟು

ತೊಟ್ಟಿದ್ದ ಬಟ್ಟೆಗಳನ್ನೆಲ್ಲಾ ಒಗೆದು ಒಣಗಿಸಿಕೊಂಡು ತನ್ನ ನಿತ್ಯಕರ್ಮಗಳನ್ನು ತೀರಿಸಿ

ಕೊಂಡು ದೇವಸ್ಥಾನದ ಒಳಕ್ಕೆ ಹೋಗಿ ದೇವರಸಾನ್ನಿಧ್ಯದಲ್ಲಿ ನಿಂತು ಒಂದೇಮನಸ್ಸಿ

ನಿಂದ ದೇವರನ್ನು ಧ್ಯಾನಮಾಡಿ ತಾನು ತಂದಿದ್ದ ಹಣ್ಣನ್ನು ದೇವರಮುಂದೆ ಇರಿಸಿ ನಮಸ್ಕಾರಮಾಡಿ ಹಣ್ಣನ್ನು ತೆಗೆದುಕೊಂಡು ಕೈಸಾಲೆಯಲ್ಲಿ ಕುಳಿತುಕೊಂಡು

ಹಣ್ಣನ್ನೂ ಸಿಪ್ಪೆಯನ್ನೂ ಬೇರೆಬೇರೆಮಾಡಿ ತಾನು ತಿನ್ನಬೇಕೆಂದಿರುವಷ್ಟರಲ್ಲಿಯೇ ತನ್ನೆದು

ರಿಗೆ ಒಬ್ಬ ಮುದಿಬ್ರಾಹ್ಮಣನನ್ನು ಕಂಡು ಆತನಿಗೆ ದಂಡಪ್ರಣಾಮವನ್ನು ಮಾಡಿ ಹಲ

ಸಿನ ಹಣ್ಣಿನಲ್ಲಿ ಅರ್ಧಭಾಗವನ್ನು ಆತನಿಗೆ ಕೊಟ್ಟು ತಾನೂ ತಿಂದನು. ಮುದಿಬ್ರಾಹ್ಮ

ಣನು ಸುವರ್ಣಪುರಾಧೀಶನ ವೃತ್ತಾಂತವನ್ನೆಲ್ಲವನ್ನೂ ಸಮಗ್ರವಾಗಿ ಕೇಳಿ " ಎಲೈ

ಅರಸೇ ! ಇಲ್ಲಿಗೆ 8 ಮೈಲಿ ದೂರದಲ್ಲಿ ಜಯಪುರಿಯಲ್ಲಿ ಭೀಮರಾಜನೆಂಬುವನು ರಾಜ್ಯ ಭಾರಮಾಡುತ್ತಿರುವನು. ನೀನು ಆತನಬಳಿಗೆ ಈದಿವಸವೇ ಹೊರಟು ನಿನ್ನ ವೃತ್ತಾಂತ

ವನ್ನೆಲ್ಲ ವನ್ನೂ ತಿಳಿಸು. ಆತನು ನಿನಗೆ ಸಹಾಯಮಾಡುವನು. ಜಾಗ್ರತೆಯಲ್ಲಿಯೇ

ನಿನಗೆ ಮಂಗಳವುಂಟಾಗಲಿ'' ಎಂದು ಹರಸಿ ಎಲ್ಲಿಯೋ ಹೊರಟು ಹೋದನು.


ವಿಪ್ರವಾಕ್ಯದಂತೆ ಸುವರ್ಣವುರಾಧೀಶನು ತಕ್ಷಣವೇ ಹೊರಟು ಸಂಧ್ಯಾ

ಕಾಲಕ್ಕೆ ಸರಿಯಾಗಿ ಜಯಪುರಿಗೆ ಶೇರಿದನು. ನಿತ್ಯ ಪದ್ಧತಿಗನುಸಾರವಾಗಿ ಭೀಮರಾಜನು ದರ್ಬಾರನ್ನು ತೀರಿಸಿಕೊಂಡು ಊಟಕ್ಕೆ ಹೋಗುತ್ತಿರುವ ಹೊತ್ತಿಗೆ ಸರಿಯಾಗಿ

ದೂತನೊಬ್ಬನು, “ ಯಾರೋ ಒಬ್ಬರು ತಮ್ಮ ದರ್ಶನಾರ್ಥವಾಗಿ ಬಂದಿರುವರು "

ಎಂದು ವಿಜ್ಞಾಪಿಸಿಕೊಂಡನು. ರಾಜನು ತಕ್ಷಣವೇ ಆತನನ್ನು ಕರೆದುಕೊಂಡು ಬರು

ವಂತೆ ಆಜ್ಞೆಯಿತ್ತು ಅಲ್ಲಿಯೇ ಇದ್ದ ನೇತ್ರಾಸನದಮೇಲೆ ಕುಳಿತುಕೊಂಡು ಬಂದಿರ

ತಕ್ಕವರು ಯಾರಿರಬಹುದೆಂದು ಯೋಚಿಸುತ್ತಿರುವಷ್ಟರಲ್ಲಿಯೇ ದೂತರನಡುವೆ ಇದ್ದ

೩೬------------------------------------


ವ್ಯಕ್ತಿಯು “ ಭೀಮಮಹಾರಾಜರಿಗೆ ಜಯವಾಗಲಿ'' ಎಂದು ಸಾರಿದನು. ವ್ಯಕ್ತಿಯನ್ನು ಕಂಡಕೂಡಲೆ ಭೀಮರಾಜನ ಮನಸ್ಸಿನಲ್ಲಿ ಯಾವುದೋ ಒಂದುವಿಧ ಸಂತೋಷವು ಉತ್ಪನ್ನವಾಯಿತು. ಆದರೆ ಅದಕ್ಕೆ ಸರಿಯಾದ ಕಾರಣವನ್ನು ಕಂಡುಹಿಡಿಯಲಾರದೆ

ಹೋದನು. ವ್ಯಕ್ತಿಗೆ ಕುಳಿತುಕೊಳ್ಳಲು ಒಂದು ಆಸನವನ್ನು ತೋರಿಸಿ ಆತನ ಸ್ಥಿತಿ

ಗತಿಗಳನ್ನು ವಿಚಾರಿಸಲು ಆ ವ್ಯಕ್ತಿಯು ಸುವರ್ಣಪುರಾಧೀಶ್ವರನೆಂದು ತಿಳಿದುಬಂದ

ಕೂಡಲೆ ಭೀಮರಾಜನು ಆತನಿಗೆ ದಂಡಪ್ರಣಾಮವನ್ನು ಮಾಡಿ, " ಪ್ರಭುವೇ ! ತಪ್ಪನ್ನು ಮನ್ನಿಸಬೇಕು ನನ್ನನ್ನು ಪರೀಕ್ಷಿಸಬೇಕೆಂತಲೋ, ಅಥವಾ ಇನ್ನಾವಕಾರಣದಿಂದಲೋ

ತಾವು ಇಲ್ಲಿಗೆ ಏಕಾಕಿಯಾಗಿ ಬಂದಿರುವುದನ್ನು ನೋಡಿದರೆ ನನ್ನ ಮನಸ್ಸಿಗೆ ತುಂಬಾ ಅನುಮಾನವಾಗುತ್ತದೆ. ಬಾಲಕನಮೇಲೆ ಕೃಪೆ ಯಿಟ್ಟು ತಮ್ಮ ಆಗಮನಕ್ಕೆ ಕಾರಣ

ವನ್ನು ವಿಶದವಾಗಿ ತಿಳಿಸಬೇಕು ದೆ ನನ್ನಿಂದಾಗಬೇಕಾದ ಕಾರ್ಯವೇನಾದರೂ ಇದ್ದಲ್ಲಿ

ಅದನ್ನು ಮಾಡಲು ಅಪ್ಪಣೆಯನ್ನೂ ದಯಪಾಲಿಸಬೇಕೆಂದು : ಬೇಡಿಕೊಂಡನು. ಅದಕ್ಕೆ ಸುವರ್ಣಪುರಾಧೀಶ್ವರನು ತನ್ನ ವೃತ್ತಾಂತವನ್ನೆಲ್ಲ ಆದ್ಯಂತವಾಗಿ ತಿಳಿಸಲು ಭೀಮ

ರಾಜನು ಸುವರ್ಣವುರಾಧೀಶ್ವರನಿಗೆ ಊಟ ಉಪಚಾರಗಳನ್ನು ಮಾಡಿಸಿ ಮಾರನೆಯ

ದಿವಸದ ದರ್ಬಾರದಲ್ಲಿ ತನ್ನ ಮಂತ್ರಿ ಸೇನಾನಾಯಕರಿಗೆ ಸೈನ್ಯವನ್ನು ಸಜ್ಜುಗೊಳಿಸ

ಬೇಕೆಂದು ಕಟ್ಟಪ್ಪಣೆ ಮಾಡಿದನು. ಮಾರನೆಯದಿವಸ ಚತುರಂಗ ಸೈನ್ಯಸಮೇತವಾಗಿ ಸುವರ್ಣಪುರಾಧೀಶ್ವರನೂ, ಭೀಮರಾಜನೂ ಹೊರಟು ಅವಂತೀಶನು ಆಕ್ರಮಿಸಿ

ಕೊಂಡಿದ್ದ ಕೋಟೆಗೆ ಮುತ್ತಿಗೆ ಹಾಕಿ ಕ್ಷಣಕಾಲದಲ್ಲೇ ವಶಪಡಿಸಿಕೊಂಡು ತಮ್ಮ

ಧ್ವಜಪತವನ್ನು ಎತ್ತಿ ಕಟ್ಟಿದರು.


ಹಠಾತ್ತಾಗಿ ಶತ್ರುಗಳು ಕೋಟೆಯನ್ನು ಮುತ್ತಿದುದನ್ನು ಕೇಳಿ ಅವಂತೀಶನು

ಗಾಬರಿಬಿದ್ದನು. ಆಗ ತಾನೇ ಯುದ್ದ ಮಾಡಿ ತುಂಬಾ ನಷ್ಟಪಟ್ಟಿದ್ದುದರಿಂದಲೂ, ಯಾವುದೋ ಒಂದು ಚಿಂತೆಯಿಂದ ಕೊರಗುತ್ತಿದ್ದುದರಿಂದ, ಅವಂತೀಶನು ಕೌಲು ಮಾಡಿಕೊಳ್ಳಲುದ್ಯುಕ್ತನಾದನು.


ಏತನ್ಮಧ್ಯೆ ಅವಂತೀಶನು ರೋಹಿಣಿ ಮತ್ತು ಕರುಣಾಂಬೆಯರನ್ನು ತನ್ನ ಕಿರು

ಮನೆಗೆ ಕರೆಯಿಸಿ ರೋಹಿಣಿಯು ಕರುಣಾಕರನಿಗೆ ಸಿಕ್ಕಿದ ವಿವರವನ್ನೆಲ್ಲಾ ಮತ್ತೊಂದು

ಸಲಕೇಳಿ ಕರುಣಾಂಬೆಯನ್ನು ಕುರಿತು, " ಎಲೆ ತಾಯೆ, ಈ ಹುಡುಗಿಯೊಡನೆ

ನಿಮಗೆ ಕಾಗದ ವೊಂದುಸಿಕ್ಕಿತೆಂದು ನೀವು ಹೇಳಿದರಷ್ಟೆ ? ದಯಮಾಡಿ ಆ ಕಾಗದ

ವನ್ನು ನೋಡಲು ಕೊಡುವಿರಾ ?'' ಎಂದು ಕೇಳಲು ರೋಹಿಣಿಯು ತನ್ನ ಜೇಬಿನ

ಲ್ಲಿಟ್ಟು ಕೊಂಡಿದ್ದ ಚೀಟಿಯನ್ನು ಅವಂತೀಶನಿಗೆ ಕೊಟ್ಟಳು.

೩೭---------------------------------------


ಅವಂತೀಶನು ಕಾಗದವನ್ನು ಮತ್ತೆ ಮತ್ತೆ ಓದಿನೋಡಿ ಕಿರುಮನೆಯಲ್ಲಿದ್ದ ತನ್ನ

ಚಿಕ್ಕ ಪೆಟ್ಟಿಗೆಯೊಳಗಿನಿಂದ ಬೇರೆ ಇನ್ನೊಂದು ಕಾಗದವನ್ನು ತೆಗೆದು ನೋಡಲು, ಅದರ ಬರವಣಿಗೆಯ, ರೋಹಿಣಿಯುಕೊಟ್ಟ ಕಾಗದದ ಬರವಣಿಗೆಯ, ಒಂದೇ ಆಗಿತ್ತು.

ಅವಂತೀಶನು ತನ್ನ ಪೆಟ್ಟಿಗೆಯಿಂದ ತೆಗೆದ ಕಾಗದವನ್ನು ರೋಹಿಣಿಯಕೈಗೆ ಕೊಟ್ಟು

ಓದ ಹೇಳಿದನು. ರೋಹಿಯು ಓದಿದಳು. ಅದರಲ್ಲಿ ಹೀಗೆ ಬರೆದಿತ್ತು :


ಚಕ್ರವರ್ತಿ ಸಾರ್ವಭೌಮರಿಗೆ

ತಮಿಗೂ ಮತ್ತು ಸುವರ್ಣ ಪುರದವರಿಗೂ ನಡೆಯುತ್ತಿರುವ ಈ ಪ್ರಾಥಮಿಕ

ಯುದ್ಧದಲ್ಲಿ ತಾವು ಸೋತು ಓಡಿಹೋಗುತ್ತಿದ್ದಾಗ ತಮ್ಮ ಪ್ರೀತಿಪಾತ್ರಳಾದ ಅಹಲ್ಯೆ

ಯನ್ನು ಹೊರಕ್ಕೆ ಕರೆದುಕೊಂಡುಬರುವುದು ಬಹಳ ದುಸ್ತರವಾಯಿತು. ನಾನು

ಹೊಟ್ಟೆಗಿಲ್ಲದೆ ಕಲ್ಯಾಣನಗರದಬಳಿ ಉದ್ಯಾನವನದಲ್ಲಿ ರೂಪುಮರೆಸಿಕೊಂಡಿರುತ್ತೇನೆ.

ತಮ್ಮ ಪುತ್ರಿ ಅಹಲ್ಯೆಯಮೇಲೆ ಕೃಪೆಯಿಟ್ಟು ಜಾಗ್ರತೆ ಬಂದು ಆ ಮಗುವನ್ನು

ಕರೆದುಕೊಂಡು ಹೋಗಬೇಕು. ಸಾವಕಾಶಮಾಡಕೂಡದು. ಛಳಿ ಮಳೆ ಗಾಳಿಗಳ

ಬಡಿತಕ್ಕೆ ಸಿಕ್ಕಿ ನರಳುತ್ತಿರುವೆನು.


ರಾಮಲಾಲ್, 1 ನೇ ಪಟಾಲಂ.


ಕಾಗದವನ್ನು ಓದಿಕೊಂಡು ಅದನ್ನು ಅವಂತೀಶನಿಗೆ ಹಿಂದಿರುಗಿಕೊಟ್ಟುಬಿಟ್ಟಳು.

ಅವಂತೀಶಟು ಕರುಣಾಂಬೆಯಕಡೆಗೆ ತಿರುಗಿ " ಎಲೌ ತಾಯೆ ! ಈ ರೋಹಿಣಿಯನ್ನು

ನೋಡಿದರೆ ನನ್ನ ಪ್ರೀತಿಪುತ್ರಿ ಆ ಅಹಲ್ಯಯ ಜ್ಞಾಪಕವು ಪದೇಪದೇ ಬರುತ್ತಿರುವುದು.

ಆ ಅಹಲ್ಯೆಯ ಕತ್ತಿನಲ್ಲಿದ್ದ ತಾಯತಿನೊಳಗೆ ಕೆಲವು ವಿಪ್ರವಾಕ್ಯಗಳನ್ನು ಬರಸಿ ಕಟ್ಟಿ

ದ್ದೆನು, ರೋಹಿಣಿಯ ಕತ್ತಿನಲ್ಲಿರತಕ್ಕ ತಾಯಿತಿಯೊಳಗೇನಿದೆ. ಅದನ್ನು ತಾವು ಕಟ್ಟಿ

ದಿರಾ ? ಇಲ್ಲದಿದ್ದರೆ ಅದರೊಳಗೇನಿರುತ್ತದೆಂದು ತಾವು ದಯವಿಟ್ಟು ತಿಳಿಸಿದರೆ ನನ್ನ ಅನುಮಾನವು ಸುಳ್ಳೇ ಅಧವಾ ದಿಟವೆ? ಎಂಬುದು ವ್ಯಕ್ತವಾಗುತ್ತದೆ' ಎನ್ನಲು ಕರು

ಣಾಂಬೆಯು ರೋಹಿಣಿಯ ಕತ್ತಿನೊಳಗಿದ್ದ ತಾಯತಿಯನ್ನು ಬಿಚ್ಚಿ ತೆಗೆದು ಅದರೊಳ

ಗಿದ್ದ ಸಣ್ಣ ಚೀಟಿಯನ್ನು ತೆಗೆಯಲು ಅವಂತೀಶನು ಹೇಳಿದ್ದಂತೆಯೇ ಕೆಲವು ವಿಪ್ರವಾ

ಕ್ಯಗಳು ಅದರಲ್ಲಿ ಬರೆಯಲ್ಪಟ್ಟಿದ್ದಿತು, ಅದನ್ನು ನೋಡಿದ ತಕ್ಷಣದಲ್ಲಿಯೇ ಅವಂತೀ

ಶನು ರೋಹಿಣಿಯನ್ನು ತಬ್ಬಿಕೊಂಡು ಮುದ್ದಾಡುವುದಕ್ಕೆ ಮೊದಲುಮಾಡಿದನು,

ಕರುಣಾಂಬೆಗಂತೂ ಎಲ್ಲವೂ ಸ್ವಪ್ನ ಭಾಸವಾಗಿದ್ದಿತು.

---------------

೩೮---------------------------------------------


ನವಮಲಹರಿ.


ಇತ್ತ ಕಡೆ ಭೀಮರಾಜನೂ, ಸುವರ್ಣಪುರಾಧೀಶ್ವರನೂ ಕೋಟೆಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡು ಜಯಭೇರಿ ಹೊಡೆಸುತ್ತಿರುವಾಗ ಅವಂತೀಶನ ಮುಖ್ಯ

ಮಂತ್ರಿಯು ಸುವರ್ಣಪುರಾಧ್ಯಕ್ಷನ ಬಳಿಗೆ ಒಬ್ಬ ರಾಜದೂತನ ಕೈಯಲ್ಲಿ ತಾವು ಕೌಲುಮಾಡಿಕೊಂಡು ಅವರವರ ರಾಜ್ಯಗಳನ್ನು ಅವರವರಿಗೇ ಕೊಟ್ಟು ಪರಸ್ಪರ

ಸ್ನೇಹಿ ತರಾಗಿ ವರ್ತಿಸಲು ಅಭಿಪ್ರಾಯಪಟ್ಟಿರುವುದನ್ನು ಹೇಳಿಕಳುಹಿಸಲು ಅದೇಪ್ರಕಾರ

ಕೌಲಿಗೆ ಸುವರ್ಣ ಪುರಾಧೀಶನು ಒಪ್ಪಿ ಯುದ್ಧವನ್ನು ನಿಲ್ಲಿಸಿಬಿಡುವಂತೆ ಸೈನಿಕರಿಗೆ ಆಜ್ಞೆಯಿತ್ತನು. ಮಾರನೆಯ ದಿನ ಅವಂತೀಶನು ಎಲ್ಲರಿಗೂ ರಾಜಯೋಗ್ಯವಾದ ಔತನ

ವನ್ನು ಮಾಡಿಸಿ ಔತಣವಾದಮೇಲೆ ಸಭೆಯಲ್ಲಿ ನೆರೆದಿದ್ದ ಅನೇಕ ರಾಜರುಗಳು, ಪಂಡಿ

ತರು ಮೊದಲಾದವರೆದುರಿಗೆ ತನ್ನ ಪುತ್ರಿಯು ತನಗೆ ಲಭಿಸಿದ ವಿಷಯವನ್ನು ತಿಳಿಸಿ

ಅದಕ್ಕಾಗಿ ದೇವರನ್ನು ಕೊಂಡಾಡಿ ಸಭೆಯನ್ನು ಮುಕ್ತಾಯಮಾಡಿದನು. ಮತ್ತು

ಮೊದಲೇ ತನ್ನ ಚಾರರೆಲ್ಲರಿಗೂ ಆಜ್ಞೆ ಮಾಡಿದ್ದಂತೆ ಎಲ್ಲರೂ ಹುಡುಕಿ ಕರುಣಾಕರ ದಯಾಕರರನ್ನು ಆರೋತ್ತಿಗೆ ಸರಿಯಾಗಿ ಕರೆದುಕೊಂಡುಬರಲು ಅವರಿಬ್ಬರನ್ನೂ

ರೋಹಿಣಿ ಕರುಣಾಂಬೆಯರನ್ನೂ ಸುವರ್ಣ ಪುರಾಧ್ಯಕ್ಷ, ಭೀಮರಾಜರನ್ನೂ ಮೊದಲೇ ಅಣಿಮಾಡಿದ್ದ ಒಂದು ಚಿಕ್ಕ ಮನೆಗೆ ಕರೆದುಕೊಂಡು ಹೋಗಿ ಎಲ್ಲರೆದುರಿಗೂ ತನ್ನ

ಮಗಳು ಅಹಲೈಯು ಪುನಃ ಲಭಿಸಿದ ಸಂಗತಿಯನ್ನು ತಿಳಿಸಿದನು. ಎಲ್ಲರ ಕ್ಷೇಮ ಸಮಾಚಾರಗಳೂ ವಿಚಾರಿಸಲ್ಪಟ್ಟನಂತರ ಭೀಮರಾಜನು ಸುವರ್ಣಪುರಾಧ್ಯಕ್ಷನ

ಜೇಷ್ಠ ಪುತ್ರನೆಂದೂ, ರೋಹಿಣಿಯು ಅವಂತೀಶನ ಪುತ್ರಿಯೆಂದೂ ಗೊತ್ತಾದ ಬಳಿಕ ರೋಹಿಣಿಯನ್ನು ಭೀಮರಾಜನಿಗೆ ಕೊಟ್ಟು ವಿವಾಹಮಾಡಲು ಪ್ರಶಸ್ತವಾದ ಶುಭ

ಲಗ್ನವನ್ನು ಗೊತ್ತು ಮಾಡಿಸಿದರು. ಗೊತ್ತಾದ ದಿವಸ ಮದುವೆಯ ಆಗಿಹೋಯಿತು. ಕರುಣಾಕರನು ಅವಂತೀಶನ ಆಸ್ಥಾನದಲ್ಲಿ ಪ್ರಧಾನಮಂತ್ರಿಪವರನಾದನು. ದಯಾ

ಕರನನ್ನು ಭೀಮರಾಜನು ತನ್ನ ಬಳಿ ಮಂತ್ರಿಯನ್ನಾಗಿ ನೇಮಕಮಾಡಿಕೊಂಡನು.


ಪಾಠಕಮಹಾಶಯ! ಆವಂತೀಶನಿಗೆ ರೋಹಿಣಿಯ ಗುರುತನ್ನು ಮಾಡಿಕೊಟ್ಟ ಸುವರ್ಣಪುರಾಧ್ಯಕ್ಷನಿಗೆ ಭೀಮರಾಜನ ಸಂಬಂಧವು ಹೇಗೆ ಲಭಿಸಿತೆಂದು ಕೇಳ

ಬಹುದು. ಭೀಮರಾಜನ ಜನನಕಾಲದಲ್ಲಿ ಈತನ ಮಲತಾಯಿಯು ತನ್ನ ಸಂತಾನಕ್ಕೆ

ಮುಂದಕ್ಕೆ ಪಟ್ಟ ಕಟ್ಟುವ ಸಂಭವವು ತಪ್ಪಿಹೋಗಬಹುದೆಂಬ ಸಂಶಯದಿಂದ ಭೀಮ

೩೯--------------------------------------------------------


ರಾಜನನ್ನು ಒಂದು ತೊಟ್ಟಲಿನಲ್ಲಿ ಮಲಗಿಸಿ ಎಲ್ಲಿಯೋ ಒಂದು ಹೊಳೆಯಲ್ಲಿ ಬಿಟ್ಟು

ಬರುವಂತೆ ತನ್ನ ಕಡೆ ಆಳುಗಳಿಗೆ ತಿಳಿಸಿ ಅವರಿಗೆ ಬಹಳವಾಗಿ ಹಣವನ್ನು ಕೊಟ್ಟಿದ್ದಳು.

ಅವರು ಅದರಂತೆಯೇ ಹೊಳೆಯಲ್ಲಿ ಬಿಟ್ಟು ಬಂದಿದ್ದರು. ಒಂದು ದಿವಸ ಭೀಮರಾಜನ ಸಾಕುತಂದೆಯು ಕಾಡಿಗೆ ಬೇಟಿಮಾಡಲು ಹೋಗಿದ್ದು ತುಂಬಾ ದಣವಾಗಿದ್ದುದರಿಂದ ಹೊಳೆಯಬಳಿಗೆ ಬಂದು ನೀರನ್ನು ಕುಡಿದು ತನ್ನ ತೃಷೆಯನ್ನು ನೀಗಿಕೊಳ್ಳುವಷ್ಟರ

ಲ್ಲಿಯೇ ನದಿಯ ಪ್ರವಾಹದ ಮಧ್ಯದಲ್ಲಿ ತೇಲಿಕೊಂಡು ಬರುತ್ತಿದ್ದ ತೊಟ್ಟಿಲನ್ನು ನೋಡಿ

ಅದೇನೋ ಒಂದು ವಿಶೇಷವಿರಬಹುದೆಂದು ಊಹಿಸಿ ತನ್ನ ಬಳಿಯಲ್ಲಿದ್ದ ಅಂಬಿಗರಿಗೆ ತೊಟ್ಟಿಲನ್ನು ತರುವಂತೆ ಆಜ್ಞಾಪಿಸಲು ಅವರು ಆಜ್ಞೆಯನ್ನು ಶಿರಸಾವಹಿಸಿ ಈಜು

ಬಿದ್ದು ತೊಟ್ಟಿಲನ್ನೂ ಮತ್ತು ಅದರಲ್ಲಿದ್ದ ತೇಜೋವಂತನಾದ ಮಗುವನ್ನೂ ಸುರಕ್ಷಿ

ತವಾಗಿ ದಡಕ್ಕೆ ತಂದು ದೊರೆಗೆ ಅರ್ಪಿಸಿದರು. ತನಿಗೆ ಮಕ್ಕಳಿಲ್ಲದೆ ಇದ್ದುದರಿಂದ

ಭಗವಂತನು ಕರುಣಿಸಿ ದಯಪಾಲಿಸಿದ ಮಗುವನ್ನು ತನ್ನ ಮಗನೆಂದೇ ಭಾವಿಸಿ ಊರ

ನ್ನೆಲ್ಲಾ ತೋರಣ ಮೇಲ್ಕಟ್ಟುಗಳಿಂದ ಅಲಂಕಾರಮಾಡಿಸಿ ಬಹಳ ವಿಜೃಂಭಣೆಯಿಂದ ಪುತ್ರೋತ್ಸವವನ್ನು ಮಾಡಿಕೊಂಡನು. ಭೀಮರಾಜನಿಗೆ ಕೈಕಾಲದಲ್ಲಿ ವಿದ್ಯಾಭ್ಯಾ

ಸಮಾಡಿಸಿ ಸ್ವಲ್ಪ ಕಾಲದಲ್ಲೇ ಸಕಲವಿದ್ಯಾಪಾರಂಗತನನ್ನಾಗಿ ಮಾಡಿಸಿ ಆತನಿಗೆ ರಾಜ್ಯಭಾರವನ್ನು ವಹಿಸಿ ತಾನು ಪರಲೋಕವನ್ನೈದಿದನು.


ಭೀಮರಾಜನನ್ನು ಹೊಳೆಯಲ್ಲಿ ಹಾಕುವಂತೆ ಅಪ್ಪಣೆಮಾಡಿದ ಆತನ ಮಲ

ತಾಯಿಯು ತನ್ನ ಪ್ರಾಣೋತ್ರ ಮಣಕಾಲದಲ್ಲಿ ತಾನು ಮಾಡಿದ ಈ ಘೋರಕೃತ್ಯ ವನೊಪ್ಪಿಕೊಂಡು ಪ್ರಾಣಬಿಟ್ಟಳು.


ಭೀಮರಾಜನ ಸಾಕುತಂದೆಯು ಈತನು ತನಗೆ ಹೇಗೆ ಸಿಕ್ಕಿದನೆಂಬುದನ್ನು ಬರೆ

ಸಿಟ್ಟಿದ್ದು ತಾನು ಪ್ರಾಣಬಿಡುವಾಗ ಭೀಮರಾಜನನ್ನು ಹತ್ತಿರಕ್ಕೆ ಕರೆಯಿಸಿ ಎಲ್ಲಾ ವಿಷಯವನ್ನೂ ಆತನಿಗೆ ಸಾಂಗವಾಗಿ ತಿಳಿಸಿದ್ದನು. ಅದೇ ಪ್ರಸ್ತಾಪವು ಅವಂತೀಶನ ಕಿರುಮನೆಯಲ್ಲಿ ಬರಲು ಕಡೆಗೆ ಸುವರ್ಣಪುರಾಧ್ಯಕ್ಷನಿಗೂ ಭೀಮರಾಜನಿಗೂ ಇದ್ದ

ಸಂಬಂಧವು ವ್ಯಕ್ತವಾಯಿತು.


ಈ ರೀತಿ ಸುವರ್ಣಪುರ, ಅವಂತಿಪುರದವರಿಬ್ಬರಿಗೂ ಅನ್ಯೂನ್ಯ ಬಾಂಧವ್ಯ ಬೆಳ

ದುದರಿಂದ ಒಬ್ಬರೊಬ್ಬರಿಗೆ ಆಗಾಗ್ಗೆ ನಡೆಯುತ್ತಿದ್ದ ಕಲಹವು ತಪ್ಪಿ ಉಭಯಪಕ್ಷ

ದವರೂ ಸೌಖ್ಯವಾಗಿದ್ದರು.

ಸಂಪೂರ್ಣಂ.

PRINTED AT THE ROYAL PRESS, MYSORE-1916.













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ