https://archive.org/stream/dli.osmania.3510
OU _198441
=========================================
ವಾಸುದೇವ ಸಾಹಿತ್ಯರತ್ನಮಾಲೆ--೫
ಮತ್ತು
ಮನೋಹರ ಗ್ರಂಥಮಾಲೆಯ ೧೧೨ನೆಯ ಕುಸುಮ
ಪ್ರೇಮ ವಿಜಯ
(ಕಾಲ್ಪನಿಕ ಮತ್ತು ಐತಿಹಾಸಿಕ ಸಂಪೂರ್ಣ ಕಥೆಗಳ ಸಂಗ್ರಹ)
ಬರೆದವರು:
ಕೆರೂರ ವಾಸುದೇವಾಚಾರ್ಯರು.
ಫೆಬ್ರುವರಿ ಬೆಲೆ
೧೯೫೨ ೨-೮-೦
========================================
ಪ್ರಕಾಶಕರು:
ಧೀರೇಂದ್ರ ವಾಸುದೇವಾಚಾರ್ಯ ಕೆರೂರ
ಬಾಗಿಲುಕೋಟೆ,
ಪುಸ್ತಕ ಮಾರಾಟಗಾರರು :
ವಾಸುದೇವ ಪುಸ್ತಕಾಲಯ ಮನೋಹರ ಗ್ರಂಥಮಾಲೆ
ಬಾಗಿಲ ಕೋಟಿ, ಧಾರವಾಡ.
ಮುದ್ರಕರು:
ವಿ. ವಾಯ್. ಜಠಾರ
ಕರ್ನಾಟಿಕ ಪ್ರಿಂಟಿಂಗ್ ವರ್ಕ್ಸ, ಧಾರವಾಡ
====================================
ಪ್ರಕಾಶಕರ ಮಾತು
ಪ್ರಕಾಶಕರ ಮಾತು
ನಾನು ಮನೋಹರ ಗ್ರಂಧಮಾಲೆಯು ಸಂವಾದಕರಾದ ಶ್ರೀ ಜಿ. ಬಿ. ಜೋಶಿಯವರ ಸಹಾಯದಿ೦ದ ದಿವಂಗತ ಕೆರೂರ ತಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನೆಲ್ಲ ಒಂದು ಕ್ರಮಬದ್ದವಾದ ತಿಯಲ್ಲಿ ಪುಸ್ತಕರೂಪವಾಗಿ ಪ್ರಕಟಿಸಬೇಕೆಂದೆಣಿಸಿ ಈ“ನಾಸುದೇವ ಸಾಹಿತ್ಯರತ್ನ ಮಾಲೆ"ಯನ್ನು ಪ್ರಾರಂಭಿ ಸಿದ್ದೇನೆ. ಹನ್ನೊಂದು ಸಂಪೂರ್ಣ ಹದಗಳ ಸಂಗ್ರಹವಾದ - ಪ್ರೇಮಪಿಜಯ” ಆ ಮಾಲೆಯಲ್ಲಿಯ ಐದನೆಯ ರತ್ನ.
- ನಂಜನಗೂಡಿನ ಸತಿಷಿಣೀ ಗ್ರಂಥಮಾಲೆಯ ಸಂಪಾದಿಕೆಯರಾದ ಶ್ರೀಮತಿ ತಿರುಮಲಾಂಬಾ ಅವರು ದಿವಂಗತ ವಾಸುದೇವಾಚಾರ್ಯರ ಮೇಲಿನ ತಮ್ಮ ಗೌರವದಿಂದ, ಮೈಲಿದ : ಸಚಿತ್ರ ಭಾರತ ' ದ ಮೊದಲ ಸಂಪುಟವನ್ನು ಸಮಯಕ್ಕೆ ಒದಗಿಸಿಕೊಟ್ಟು ಸಹಾಯ ಮಾಡಿದ್ದಾರೆ ; ಅದಕ್ಕಾಗಿ ನಾನು ಅವರಿಗೆ ಉಪಕೃತನಾಗಿದೆ ನೆ ಅಲ್ಲದೆ ಈ ಮೊದಲೆ ಸಚಿತ್ರ ಭಾರತದ ಮೂರೂ ಸಂಪುಟಗಳನ್ನು ಕೊಟ್ಟು ಗ್ರಂಥ ಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ ಮೂರನೆಯ ಸಂಪುಟವೊಂದನ್ನು ಕೊಟ್ಟ ಶ್ರೀಮಂಗಳ ವೇಧೆ ಶ್ರೀನಿವಾಸರಾಯರಿಗೂ ನಾನು ಋಣಿಯಾಗಿದ್ದೇನೆ.
- ಧೀರೇಂದ್ರ ನಾ, ಕೆರೂರ
============================================
ಅ ರಿ ಕೆ
ವಾಸುದೇವಾಚಾರ್ಯರು ಆಗಾಗ ತಮ್ಮ ಸಚಿತ್ರ ಭಾರತ ' ದಲ್ಲಿ ಈ ಕತೆಗಳನ್ನು ಬರೆದರು. ಸಂಪೂರ್ಣಕಥೆ' ಎಂದು ಅವರು ಇದಕ್ಕೆ ಕರೆದರು. ಅವುಗಳಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳದೊಂದು, ಚಾರಿತ್ರಿಕ ಕಥೆಗಳದೊಂದು ಪತ್ತೇದಾರಿ ಕಥೆಗಳದೊಂದು ಸಾಮಾಜಿಕ ಕಥೆಗಳದೊಂದು ಹೀಗೆ ಬೇರೆ ಬೇರೆ ಸಂಕಲನಗಳನ್ನು ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸರಿಟ್ಟು ಪ್ರಕಟಿಸಲಾಗಿದೆ. ಈ - 'ಪ್ರೇಮ ವಿಜಯ ' ಅಂತಹ ಮೊದಲನೆಯ ಸಂಕಲನ. 'ಬೆಳಗಿದದೀಪಗಳು'ಎರಡನೆಯದು. - 'ತೊಳೆದಮುತ್ತು' ಮೂರನೆಯದು. - 'ಬೆಳ್ಳಿ ಚಿಕ್ಕ' ನಾಲ್ಕನೆಯದು.
ಏಕಸಮಯದಲ್ಲಿ ಈ ಗ್ರಂಥಗಳು ವಾಸುದೇವ ಸಾಹಿತ್ಯರತ್ನ ಮಾಲೆಯಲ್ಲಿ ಪ್ರಕಟವಾಗಿಯೂ, ಮನೋಹರ ಗ್ರಂಥಮಾಲೆಯಲ್ಲಿಯ ಗ್ರಾಹಕರಿಗೂ ದೊರೆಯುವಂತಾದುದು, ಮತ್ತು ಅದಕ್ಕೆ ಅನುಕೂಲ ಮಾಡಿ - ಕೊಟ್ಟುದು ಶ್ರೀ ಧೀರೇಂದ್ರ ನಾ. ಕೆರೂರ ಅವರ ಸಹಕಾರ ಸಹಾಯದಿಂದ ಎಂಬದನ್ನು ಬೇರೆ ಹೇಳಬೇಕಾಗಿಲ್ಲಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ
- ಜಿ ಬಿ. ಜೋಶಿ
=======================================
ಆಚಾರ್ಯರ ಆಚಾರ್ಯರು
ಕವಿನುತ ಕರ್ನಾಟಕದಲ್ಲಿ ಪಂಡಿತರಿಗೆ ಗಂಡುಮೆಟ್ಟಾಗಿರುವ ಬಾಗಲ
ಕೋಟೆಯ ಸಮೀಪದಲ್ಲಿ ಫಟಪ್ರಭಾ ನದಿಯ ದಂಡೆಯ. ಮೇಲೆ ಇರುವ
ದೊಂದು ರಮಣೀಯವಾದ ಪ್ರದೇಶದಲ್ಲಿ ಹೆರಕಲ್ಲು ಎಂಬ ಚಿಕ್ಕದಾದ ಗ್ರಾಮ
ವಿರುತ್ತದೆ, ಗ್ರಾಮದ ದಕ್ಷಿಣ ಮರ್ಯಾದೆಯಾಗಿದ್ದ ಗುಡ್ಡವನ್ನು ಅಡ್ತ
ಸೀಳಿ ಘಟಪ್ರಭೆಯು ಒಳ್ಳೇ ಆರ್ಭಟೆಯಿಂದ ಹೆರಕಲ್ಲಿನ ಪೂರ್ವಮರ್ಯಾದೆ
ಯಾಗಿ ಹರಿದುಹೋಗ.ತ್ತದೆ. ಊರ ಮಗ್ಗಲನ್ನೊರಸಿ ಹಾಯಿುತ್ತಿ ರುವ
ಆ ನಿರ್ಮಲವಾದ ನದಿಯ ಸೌಲಭಕ್ಕಾಗಿಯೂ, ಊರಿನ ದಕ್ಷಿಣ ಪಶ್ಚಿಮ
ಮರ್ಯಾದೆಗಳಾಗಿರುವ ಪರ್ವತಗಳ ವೃಕ್ಷಮಯವಾದ ಘನವಾದ ಶೋಭೆಗೆ
ಮೆಚ್ಚಿಯೂ ಪೂರ್ವಕಾಲರಲ್ಲಿ ಬ್ರಾಹ್ಮಣರು ಹೆರಕಲ್ಲು ಗ್ರಾಮವನ್ನು ತಮ್ಮ
ಅಗ್ರಹಾರವನ್ನಾಗಿ ಮಾಡಿಕೊಂಡಿದ್ದರು.
ನ್ಯಾಯ ವೇದಾಂತಾದಿ ಶಾಸ್ತ್ರಗಳಲ್ಲಿ ಪಾರಂಗತರಾದ ಪಂಡಿ
ತರೂ, ಪದಕ್ರಮ ಜಟಾಘನಾಂತವಾಗಿ ಅಸ್ಖಲಿತವಾದ ವಾಣಿಯಿಂದ ವೇದ
ಪಠಣವನ್ನು ಮಾಡುವ ವಿಪ್ರೇತ್ತಮರೂ, ಕಾವ್ಯನಾಟಕ ಅಲಂಕಾರಾದಿ
ಗಳಲ್ಲಿ ಒಳ್ಳೇ ಮಾರ್ಮಿಕರಾದ ರಸಿಕರೂ ಅಗ್ನಿಹೋತ್ರಾದಿಗಳಲ್ಲಿ ನಿರತ
ರಾಗಿರುವ ದೀಕ್ಷಿತರೂ ಅಲ್ಲಿ ವಾಸಮಾಡಿರುವುದರಿಂದ ಹೆರಕಲ್ಲ ಗ್ರಾಮವು
ವಿದ್ಯಾಪಕ್ಷಪಾತಿಗಳಾಗಿದ್ದ ಶ್ರೀಮಂತರಿಂದ ಪೂಜ್ಯರಾದ ದ ಕ್ಷೇತ್ರವೇ ಆಗಿತ್ತು.
ಸಂಸ್ಕೃತ ವಿದ್ಯೆಯ ಹ್ರಾಸಕಾಲವು ಪ್ರಾಸ್ತವಾದ ಬಳಿಕಾದರು ಇಂದಿಗೆ ೭೫
ವರ್ಷಗಳ ಪೂರ್ವದಲ್ಲಿ ಆ ಗ್ರಾಮವು ತನ್ನ ಬಿರುದನ್ನು ಕಳಕೊಂಡಿದ್ದಿಲ್ಲ.
ತುಲಸೀವನದ ಮಧ್ಯದಲ್ಲಿರುವ ಶ್ರೀ ನಾರಾಯಣ ದೇವರ ರಮಣೀಯವಾದ
ಮಂದಿರದಲ್ಲಿ ಕುಳಿತು ಪಂಡಿತರು ತಮ್ಮತಮ್ಮೊಳಗೆ ಪೂರ್ವಪಕ್ಷ ಪರ ಪಕ್ಷ
ಗಳನ್ನು ನಡಿಸುತ್ತಲೇ ಇದ್ದರು. ಮನೆಮನೆಗಳಲ್ಲಿ ವೇದಘೋಷವು ಅವಿರತ
ನಾಗಿ ಕೇಳಬಂದೇ ಬರುತ್ತಿತ್ತು. ವನೋಪವನಗಳಲ್ಲಿಯೂ ವೃಕ್ನಗಳ ನೆಳಲಿ
ನಲ್ಲಿ ಕುಳಿತುಕೊಂಡು, ನ್ಯಾಯ, ವ್ಯಾಕರಣ ಶಾಸ್ತ್ರಗಳನ್ನು ಕಲಿಯುವ
ವಿದ್ಯಾರ್ಥಿಗಳು, ಗುರುಗಳು ಹೇಳಿಕೊಟ್ಟ ವಿಷಯಗಳ ಚಿಂತನೆ ಮಾಡುತ್ತಲೇ
ಇದ ರು.
-----------------------------------------
ii
ಗುರುಗಳ ಪೂಜೆಯ ಉಪಕರಣಗಳನ್ನು ಹರಟೇ ಕೊಚ್ಚುತ್ತೆ
ನದಿಯ ಘಾಟಿನಲ್ಲಿ ಕುಳಿತು ತೊಳೆಯುವದು ಆಲ್ಲಿಯ ಶಿಶ್ಯವರ್ಗಕ್ಕೆ ಒಂದು
ವಿನೋದದ ಆಟವೇ ಆಗಿತ್ತು. ದೇವತಾರ್ಚನಕ್ಕಾಗಿ ಹೂತುಳಸಿಗಳನ್ನು
ತೆಗೆಯುವದು ಅವರಿಗೆ ಪವಿತ್ರನಾದ ಕರ್ತವ್ಯಕರ್ಮವೇ. ಗುರುಗಳೆ ಮನೆ
ಯಲ್ಲಿ ನೀರು ತುಂಬುವುದೆಂದರೆ ತಮ್ಮ ಶಕ್ತಿ ಚಾಪಲ್ಯಗಳಿಗೊಂದು ಸ್ಫೂರ್ತಿ
ಯುತವಾದ ವ್ನಾಯಾಮಪೇ ಎಂದು ತಿಳಿದು ಅವರು ನಾ ಮುಂದೆ ನೀ ಮಂದೆ
ಎನ್ನುತ್ತೆ ಗಡಿಬಿಡಿಯಿಂದೆ ಕೊಡಗಳನ್ನು ಹೊತ್ತಾಡುತ್ತಿದ್ದರು. ನದಿಯಲ್ಲಿ
ಈಸುತ್ತೆ ಸ್ಫೂರ್ತಿಯಿಂದೆ ಬಡಿದಾಡುವೆದೆಕ್ಟೊಂದು ನೆಪ ಬೇಕಾದ್ದರಿಂದ
ಆ ಪೋರರು ಗುರುಭಕ್ತಿ ಪುರಸ್ಸರವಾಗಿ ಅಧ್ಯಾಪಕರ ಬಟ್ಟೆಗಳನ್ನು ತೊಳೆಯು
ವದಕ್ಕೆ ನದಿಗೆ ಹೋಗುತ್ತಿದ್ದರು. ಅನಧ್ಯಯನದ ದಿವಸವು ಪ್ರಾಪ್ತವಾದ
ರಂತೂ ಊರಂತೂರೆಲ್ಲ ಆ ವಿದ್ಯಾರ್ಥಿಗಳು ನಡಿಸಿದ ಅನರ್ಥಕ್ಕೆ ಎಣೆಯೇ
ಇಲ್ಲ. ಈ ಓಣಿಯಲ್ಲಿ ಅವರು ಫಣಿಚೆಂಡಾಡಿ ಹೋಗಿಬರುವವರ ಹಾದಿ
ಯನ್ನು ಕಟ್ಟಿಬಿಡುವರು, ಆ ಓಣಿಯಲ್ಲಿ ಆವರಾಡುತ್ತಿರುವ ಚಿಣೇಕೋಲಾಟ
ದಿಂದ ಎಷ್ಟೋ ಜನ ಹೆಂಗಸರ ಸೂರೂರಿನ ಕೊಡಗಳೊಡೆದು ವ್ಯಾಜ್ಮಗಳು ನಡೆಯು
ವವು. ಕೆಲವರು ಬೋರೇ ಗಿಡಗಳನ್ನು ಒಳಿತಾಗಿ ಅಲ್ಲಾಡಿಸಿ ಹಣ್ಣು ಕಾಯಿ
ಎಲೆಗಳನ್ನು ಕೂಡಿಯೇ ಉದುರಿಸಿಬಿಡುವರು. ಉನ್ನತವಾದ ವೃಕ್ಷಾಗ್ರ
ಗಳಲ್ಲಿ ರಾಖಾಮೃಗಗಳಿಗೂ ನಿಲುಕದಿರುವ ಕಾಯಿಗಳನ್ನು ಾ ಬಾಲಕರು
ಜಿದ್ದು ಕಟ್ಟಿ ಹರಿಯುವರು. ಹುಡುಗರು ನಡಿಸಿರುವ ಅಂಥ ಅನರ್ಧಗಳನ್ನು
ನಿಲ್ಲಿಸಬೇಕೆಂದು ಸಿಟ್ಟ ಮಾಡಲು ಬಂದಿರುವ ಆ ವೃವ ದರ ನುಡಿಗಳನ್ನು
ಯಾರಾದರೂ ಕಿವಿಯ ಮೇಲೆ ಹಾಕಿಕೊಂಡಿದ್ದರೆ ಆಣೆ.
.
ಒಂದು ದಿನೆ ಹತ್ತೆಂಟು ಜನ ವಿದ್ಯಾರ್ಥಿಗಳು ಚಪಲನಾದ ವಟುವಾಗಿ
ರುವ ತಮ್ಮ ಸಹಾಧ್ಯಾಯಿಯೋರ್ವನನ್ನು ಗುರುಗಳಾಜ್ಞೆಯಿಂದ ಹಿಡಿಯುವ
ದಕ್ಕಾಗಿ ಆವನ ಬೆನ್ನಟ್ಟಿ ಓಡಾಡುತ್ತಿದ್ದರು. ಸಾಹಸಿಯಾದ ಆ ವಟುವು
ಟಣ್ಣನೆ ಬೇಲಿಯನ್ನು ಜಿಗಿದು ನದಿಯ ದಂಡೆಯ ಮೇಲಿರುವ ತೋಟದಲ್ಲಿ
ಹೊಕ್ಳುಕೊಂಡನು. ಬಲಿತ ವಯಸ್ಸಿನವರಾದ ಕೆಲ ಜನ ವಿದ್ಯಾರ್ಥಿಗಳು
ಬೇಲಿಯನ್ನು ಹಿರಿದು ತೋಟದಲ್ಲಿ ಹೊಕ್ಕು ಆ ವಟುವನ್ನು ಸುತ್ತು ಗಟ್ಟಿ
ದರು. " ಹಿಡಿ ಭಾರತೀರಮಣ!' " ಬಿಡಬೇಡ, ಗೋವಿಂದ!”
---------------------------------------------------------
iii
ಎಂದು ಕೂಗುತ್ತ ಅವರಿನ್ನು ಆ ಪೋರನನ್ನು ಹಿಡಿಯುವಷ್ಟರಲ್ಲಿಯೇ ಅವನು
ಇಣಿಜೆಯ ಚಾಪಲ್ಯದಿಂದ ಬಳಿಯಲ್ಲಿರುವ ಹುಣಿಚೆಯ ಹೆಮ್ಮರವನ್ನೇರಿ ಕುಳಿ
ತನು. ಹಿಡಿಯ ಬಂದ ಲಂಗೋಟಿಯವರಾದರೂ ವಾನರರ ಪಿತಾಮುಹರು,
ಅವರು ಸರಸರನೆ ಆ ಮರವನ್ನೇರಿ ಗುರುಪುತ್ರನನ್ನು ಹಿಡಿಯುವ ಸಾಹಸ
ನಡಿಸಿದರು. ನೆಲದ ಮೇಲಿನ ಓಡಾಟಕ್ಕಿಂತಲೂ ಹೆಚ್ಚಿನದಾದ ಗೊಂದಲವು
ಗಿಡಡ ಮೇಲೆ ನಡೆಯಿತು. ಕಡೆಗೆ ಭಾರತಿರಮಣನು ಗುರುಪುತ್ರನಿದ್ದ
ತುದಿಯ ಕೊಂಬೆಗೆ ಬಂದು ಅವನನ್ನು ಇನ್ನು ಹಿಡಿಯುವವನು. ಅಕೋ !
ಅಷ್ಟರಲ್ಲಿ ಕೆಳಗೆಯೇ ತುಂಬಿ ಹರಿಯುವ ನದಿಯಲ್ಲಿ " ಧುಡುಮ್ಮ! ' ಎಂಬ
ಗಂಭೀರವಾದ ಸಪ್ಪಳವಾಯಿತು. "ಅಯ್ಯೊ ಘಾತವಾಯಿತು ಹುಡುಗ
ಸತ್ತನೆ”ಂದವರೇ ' ಮರದಮೇಲಿನವರೆನರೂ 'ಧಡಧಡಮ್ಮನ ಹೊಳೆಯಲ್ಲಿ
ಹಾರಿಕೊಂಡರು. ಆದರ ಪ್ರವಾಹದ ಸೆಳವಿಗೆ ಅಂಜಿ ಅವರೆಲ್ಲರೂ ಮರಳಿ
ದಂಡೆಗೆ ಬಂದರು.
ಆಟಗಳಲ್ಲಿ ತಮಗೆ ಹಿರಿಗಡಿಯಾದವನು. ಹೊರಟೆ ಹೋದನೆಂದು
ಹುಡಗರ ಮರುಕ ಅದ್ದಿತೀಯನಾದ ಬುದ್ಧಿಶಾಲಿಯು ಎಂದು
ಅವನ ಸಹಾಧ್ಯಾಯಿಗಳು ವ್ಯಸನದಿಂದ ನುಡಿದರು ದಂಡೆಯ ಮೇಲೆ ನೆರೆ
ದಿದ್ದ ಹೆಣ್ಣು ಮಕ್ಕಳು ದುಃಖಾರ್ತೆಯರಾಗಿ " ಆಯ್ನೋ! ಪುಟಚಂಡಿನಂಥ
ಮಗುವೆ ! ಎಂದು ಉದ್ದಾರ ತೆಗೆದು ಕೂಸನ್ನು ಬದುಕಿಸಿಕೊಳ್ಳಿರೆಂದು
ಕಂಡಕಂಡವರಿಗೆ ಅಲ್ಪರೆದು ಹೇಳಿಕೊಳ್ಳುತ್ತಿದ್ದರು.
" ಅಕೊ! ಆಲ್ಲಿ ನೋಡಿರಿ, ಆನಂದ ತೀರ್ಥ ಮಾವನು ಗುರುಪ್ರತ್ತ
ನನ್ನು ಬಗಲಲ್ಲಿ ಔಚಿಕೊಂಡು ಹೇಗೆ ಆರ್ಭಟೆಯಿಂದ ಈಸಿ ಬರುತ್ತಿರುವನು!”
ಎಣದು ಅಪ್ಪಣ್ಣನು ಆನಂದದಿಂದ ಕೂಗುತ್ತ ಕುಣಿದಾಡಿದನು ಆನಂದ
ತೀರ್ಥ ಮಾವನು ಹುರುಪಿನಿಂದ ಈಸಿ ಮಗುವನ್ನು ಎತ್ತಿ ಕೊಡು ಬರುತ್ತಿ
ರುವದನ್ನು ಎಲ್ಲರೂ ಕಂಡು ಹರ್ಷಿತರಾದರು. ಕಾಶಿ-ರಾಮೇಶ್ವ ರದತನಕ
ಮುಂದೆ ಬೆಳಕು ಮಾಡುವ ಆ ಮಹಾಮಣಿಯನ್ನು ಆನಂದತೀರ್ಥ ಮಾವನು
ಸುರಕ್ಷಿತವಾಗಿ ದಂಡೆಯ ಮೇಲೆ ತಂದಿರಿಸಿದನು.
ಮೃತ್ಯುವಿನ ಕೈಗೆ ಸಿಕ್ಕಿದ ತಮ್ಮ ಮಗನ ಗತಿಯೇನಾಗುತ್ತದೋ
ಎಂದು ಹೌಹಾರಿ ದಂಡೆಯ ಮೇಲೆ ನಿಂತಿದ್ದ ಯಲಗುರದಾಚಾರ್ಯರು
--------------------------------------
iv
ತಮ್ಮ ಸಕಲಾಭೀಷ್ಟಗಳ ನಿಧಾನನಾಗಿರುವ ಸ್ವಾಮಿಯು (ಆ ಹುಡುಗನ
ಹೆಸರು) ಸುರಕ್ಷಿತವಾಗಿ ದಂಡೆಗೆ ಬಂದ ಕೂಡಲೆ ಅವನನ್ನು ಸಂಭ್ರಮದಿಂದ
ಅಪ್ಪಿಕೊಂಡು ಮನೆಗೆ ಕರಕೊಂಡು ಹೋದರು.
ಯಲಗುರದಾಚಾರ್ಯರೆಂದರೆ ಯಾರೆಂದು ನಮ್ಮ ವಾಚಕರು ಕೇಳ
ಬಹುದು. ಕೆರೂರ ಗ್ರಾಮದಲಲ್ಲಿ ಘನವಿದ್ವಾ೦ಸರದೊಂದು ಮನೆತನವಿರು
ತ್ತದೆ. ಭಾರದ್ವಾಜ ಗೋತ್ರೋತ್ಪನ್ನರಾದ ಆ ಮಹನೀಯರು ಯಜುರ್ವೆೇ
ದದ ತೈತ್ತರೀಯ ಶಾಖೆಯಲ್ಲಿಯ ಆಪಸ್ತಂಭ ಸೂತ್ರಾಧ್ಯಾಯಿಗಳು. ಯಲ
ಗುರದಾಚಾರ್ಯರ ತಂದೆ ಕಕ್ಕಂದಿರಾದ ಶ್ರೀನಿವಾಸಾಚಾರ್ಯ ಹಾಗೂ
ತಮ್ಮಣ್ಣಾಚಾರ್ಯರೆಂಬ ಅಸಾಧ್ಯರಾದ ಬುದ್ಧಿವಂತರು, ಜಗದ್ಮಿಖ್ಯಾತರಾದ
ಶ್ರೀಮತ್ ಧೀರೇಂದ್ರತೀರ್ಥ ಸ್ವಾಮಿಗಳವರ ಬಳಿಯಲ್ಲಿ ಅಧ್ಯಯನ ಮಾಡಿ
ಷಟ್‌ಶಾಸ್ತ್ರ ಪಂಡಿತರಾಗಿ ಪಾಲಕೀಪದಸ್ತರಾಗಿ ಹೋದರು. ಯಲಗುರ
ದಾಚಾರ್ಯರಾದದರೂ ಮಾನ್ಯರಾದ ಪಂಡಿತರು. ಆದರೆ ಅವರೊಳ್ಳೇ ಸಾಧು
ವೃತ್ತಿಯುಳ್ಳವರೂ ದಂಭರಹಿತರೂ ಲೌಕಿಕವನ್ನರಿಯದನರೂ ಆಗಿದ್ದರಿಂದ
ಗೃಹಕೃತ್ಯ ದ ತೊಂದರೆಗೆ ಬೇಸತ್ತು ವೃತ್ತಿ ಸ್ವಾಸ್ಥಿಗಳನ್ನು ಬಿಟ್ಟು ಕೊಟ್ಟು ಹೆರ
ಕಲ್ಲ ಗ್ರಾಮಕ್ಕೆ ತಮ್ಮ ಕುಟುಂಬವನ್ನು ತೆಗೆದುಕೊಂಡು ಬಂದಿದ ರು. ಯಲ
ಗುರದಾಚಾರ್ಯರ ಸಂತಾನದ ಅಭಿವೃದ್ಧಿಯಾದ ಬಳಿಕ ಆವರು ಮಕ್ಕಳ ವಿದ್ಗಾ
ಭ್ಯಾಸಕ್ಕಾಗಿ (ಲೌಕಿಕ ವಿದ್ಯಾಭ್ಯಾಸಕ್ಕಾಗಿ) ಬಾಗಲಕೋಟಿಯ ಪಟ್ಟಣಕೆ
ಬಂದು ಅಲ್ಲಿ ವಾಸಮಾಡಿಕೊಂಡಿದ್ದರು. ಮನೆಗೆ ಮುಖ್ಯರಾಗಿರುವವರು ಪಂಡಿ
ತರೂ ಧರ್ಮನಿಷ್ಠರೂ ಸತ್‌ಶೀಲರೂ ಆಗಿರಲು ಅವರ ಪುತ್ರಮಿತ್ರ ಕಳತ್ರಾದಿ
ಗಳೆಲ್ಲರೂ ಅವರಂತೆಯೇ ಆಗಿರುವದೇನು ಆಶ್ಚರ್ಯ? ದೇವತಾರ್ಚನ,
ಪುರಾಣಶ್ರವಣ, ವಿದ್ಯಾ ದಾನ, ಆನ್ನ ಸಂತರ್ಪಣೆ, ಶಿಷ್ಟ,ಸಂಭಾವನೆಗಳು ಯಲ
ಗುರದಾಚಾರ್ಯರ ಮನೆಯಲ್ಲಿ ಸತಿಸುತರ ಆಸ್ಥಾಪೂರ್ವಕವಾದ ಸಹಾಯ್ಯ
ದಿಂದ ಯಥಾಸಾಂಗವಾಗಿ ಸಾಗುತ್ತಿ ದ್ದವು. ವಿದ್ಯಾ ಸಂಪತ್ತಿ ಗಿಂತಲೂ ಹೆಚ್ಚಿನ
ಸಂಪತ್ತು ಮತ್ತೊಂದು ತಾನಿಲ್ಲ ಅನ್ನದಾನಕ್ಕಿಂತಲೂ ಬೇರೊಂದು ಆತ್ಮ
ತುಷ್ಪಿಯಿಲ್ಲ. ಯಲಗುರದಾಚಾರ್ಯರ ಆರು ಜನ ಮಕ್ಕಳಲ್ಲಿ ಎಲ್ಲರೂ
ಸಂಸ್ಕೃತ ಭಾಷಾವಿಶಾರದರಾಗಿರುವದಲ್ಲದೆ, ಅವರಲ್ಲಿ ಒಬ್ಬರಿಗೆ ಪುರಾಣ
ಗಳಲ್ಲಿ ಅಭಿರುಚಿಯ, ಒಬ್ಬರಿಗೆ ನ್ಯಾಯ ವ್ಯಾಕರಣಗಳಲ್ಲಿ ಮಿಗಿಲಾದ ಲಕ್ಕು;
---------------------------------------------
v
ಸ್ವಯಂವ್ಯಕ್ತನಾದ ಗಣಿತಜ್ಞ ನೋರ್ವನಂತೂ ಆ ವಿಷಯದಲ್ಲಿ ಎಲ್ಲರಿಗೂ
ಮೀರಿ ನಿಂತನು. ಉಳಿದ ಮೂವರು ಬುದ್ಧಿವಂತರು, ಸನ್ಮಾನ್ಯರಾದ
ಲೌಕಿಕಲಾಗತಕ್ಕುವರು.
ಯಲಗುರದಾಚಾರ್ಯರ ದ್ವಿತೀಯ ಚಿರಂಜೀವರಾಗಿದ್ದ ಸ್ವಾಮಿ
ರಾಯಾಚಾರ್ಯರು ಅದ್ವಿತೀಯದಾದ ಬುದ್ಧಿಶಾಲಿಗಳಾಗಿರುವದರಿಂದ ಆವರು
ಬಹು ತೀವ್ರವಾಗಿ ವಿದ್ಯಾಗ್ರತಣವನ್ನು ಮಾಡಿ ಚಿಕ್ಕವಯಸ್ಸಿನಲ್ಲಿಯೇ (ಹದಿ
ನಾಲ್ಕು ಹದಿನೈದು ವರ್ಷದಲ್ಲಿಯೇ) ವಿದ್ಯಾ ವಂತರಲ್ಲಿ ಗಣನೆಯನ್ನು ಹೊಂದಿ
ದರು. ತಂದೆಯವರು ಪ್ರಮಿತರಾದ ಪಂಡಿತರೆಂದಿನಿಸಿಕೊಂಡಿದ್ದರೂ ತಂದೆ
ಮಕ್ಕಳ ವಿದೈಯು ತೀವ್ರವೇ ಏಕರೂಪವಾಯಿತು. ಪುಣೆಯಲ್ಲಿ ಪ್ರಸಿದ್ಧಿ
ಯನ್ನು ಪಡೆದಿದ್ದ... ಶಾಸ್ತ್ರಿಗಳ ಬಳಿಯಲ್ಲಿ ಇನ್ನು ಮುಂದೆ ಶಾಸ್ತ್ರಾಧ್ಯ
ಯನ ಮಾಡಬೇಕೆಂದು ಸ್ವಾಮಿರಾಯಾಚಾರ್ಯರು ಹಿರಿಯರ ಅನುಜ್ಞೆ
ಯನ್ನು ಪಡಕೊಂಡು ಪುಣಿಗೆ ಹೋದರು.
ಲಬ್ಧಪ್ರತಿಷ್ಠರಾದ ಶಾಸ್ತ್ರಿಗಳವರಿಗೆ ಯಾರ ಲಕ್ಷ್ಯವೂ ಇದ್ದಿಲ್ಲ. ಕರ್ನಾ
ಟಕಸ್ಥರಂತೂ ಅವರಿಗೆ ತುಚ್ಛರಾಗಿ ಕಾಣುತ್ತಿದ್ದರು. ಅದಕ್ಕಾಗಿ "ಶಾಸ್ತ್ರೀ
ಬುವಾ" ನವರು ನಮ್ಮ ಹೊಸ ಪಂಡಿತರನ್ನು ಚನ್ನಾಗಿ ಆದರಿಸಲಿಲ್ಲ. ಆದರೂ
ವಿದ್ಧಾರ್ಥಿಗಳಿಗೆ ಉಚಿತವಾದ ಲೀನತೆಯಿಂದ ಸ್ವಾಮಿರಾಯಾಚಾರ್ಯರು
ಶಾಸ್ತ್ರಿಗಳೊಡನೆ ನಡಕೊಳ್ಳುತ್ತಿದ್ದು, ಇತರ ವಿದ್ಯಾರ್ಥಿಗಳ ವ್ಯಾಸಂಗ ನಡೆ
ದಾಗ ಇವರು ಪ್ರಸಂಗಾನುಸಾರವಾಗಿ ಸೂಚನೆಗಳನ್ನು ಮಾಡಿ ಶಮ್ಮ ಜಾಣ್ಮೆ
ಯನ್ನು ಪ್ರಕಟಮಾಡುತ್ತಿದ್ದದನ್ನು ಕಂಡು ಆ ಪುಣೆಯ ಪಂಡಿತರು ನಮ್ಮ
ಆಚಾರ್ಯರನ್ನು ಮುಂದಕ್ಕೆ ಕರೆದು ಪಕ್ವವಿದ್ಯರಾದ ಶಿಷ್ಯರೊಡನೆ ಇವರಿಗೂ
ವ್ಯಾಸಂಗ ಮಾಡಿಸಲಾರಂಭಿಸಿದರು. ಮೂರು ನಾಲ್ಕು ತಿಂಗಳುಗಳಲ್ಲಿಯೇ
ಆ ಆದ್ಭುತ ವ್ಯಕ್ತಿಯಾದ ಶಿಷ್ಯನ ಪೂರ್ವಪಕ್ಷಗಳಿಗೆ ಸಮಾಧಾನವನ್ನು
ಹೇಳಬೇಕಾದರೆ ಶಾಸ್ತ್ರಿ ಮಹಾರಾಜರಿಗೆ ಪ್ರಯಾಸವಾಗಲಾರಂಭಿಸಿತು.
ಹೀಗೆ ಪುಣೆಯಲ್ಲಿ ಅರು ತಿಂಗಳು ಕಳೆದ ಬಳಿಕ ಆಚಾರ್ಯರು ಕಾಶಿಗೆ
ಹೋಗುವ ನಿಶ್ಚಯವನ್ನು ಮಾಡಿದರು. ಹೋಗುವದಕ್ಕೆ ಶಾಸ್ತ್ರಿಗಳ ಅನುಜ್ಞೆ
ಯನ್ನು ಕೇಳಲಾಗಿ ಅವರಂದೆದ್ದು : " ಯಾಕೆ ಆಚಾರ್ಯರೇ, ಈಗಾಗಲೇ
ಹೊರಟಿರೇನು? ನಮ್ಮಲ್ಲಿ ಇದ್ದದ್ದರ ಪ್ರಯೋಜನನೇನಾಯಿತು? "
-------------------------------------
vi
" ಪ್ರಯೋಜನವೇನಾಗಲಿಲ್ಲವೆಂದರೂ ಒಂದು ಮಾತಿನ ಜ್ಞಾನವು
ನನಗಾಯಿತು. ದಂಭರಹಿತರಾದ ನಮ್ಮ ತಂದೆಯವರು ಸಾಮಾನ್ಯರಾದ
ಪಂಡಿತರೆಂದು ಇಷ್ಟು ದಿನ ನಾನು ತಿಳಿದಿದ್ದೆನು. ದೊಡ್ಡ ಪಂಡಿತರೆಂದು
ಡಂಕೆಯನ್ನು ಹೊಡಿಸುತ್ತಿರುವರಾದ ತಮ್ಮ ಪರಿಚಯವು ನನಗಾದ ಬಳಿಕ
ತಮಗಿಂತಲೂ ನನ್ನ ತಂದೆಯವರು ಕಡಿಮೆಯ ವಿದ್ಯಾಂಸರಲ್ಲವೆಂದು ನನಗೆ
ಜ್ಞಾನವಾದದ್ದು ಚಿಕ್ಕದಾದ ಲಾಭವಲ್ಲ'' ಎಂದು ಹೇಳಿದವರೇ ಸ್ವಾಮಿ
ರಾಯಾಚಾರ್ಯರು ಕಾಶೀ ಪಟ್ಟಣದ ದಾರೀ ಹಿಡಿದರು.
ಕಾಶೀ ಪಟ್ಟಣವೆಂದರೆ ಸಂಸ್ಕೃತ ವಿದ್ಯೆಗೆ ತವರಮನೆಯು. ಗಂಗಾ
ವಿಶ್ವೇಶ್ವರರ ಸನ್ನಿಧಾನದಿಂದ ಪರಮ ಪವಿತ್ರವಾಗಿರುವ ಆ ಮಹಾಕ್ಷೇತ್ರಕ್ಕೆ
ನಿತ್ಯದಲ್ಲಿಯೂ ಲಕ್ಷಾವಧಿ ಜನ ಧರ್ಮಬುದ್ದಿಯುಳ್ಳವರಾದ ಸಾತ್ವಿಕರು
ಬಮದು ಅಲ್ಲಿ ಚೇತನದ ಸತ್ಶೃತ್ಯಗಳನ್ನು ಮಾಡುವರು. ರಾಜಮಂದಿರ
ಗಳಂತೆ ತೋರುವ ಧರ್ಮಶಾಲೆಗಳನ್ನೂ, ಸಮೀಚೀನವಾಗಿರುವ ಅನ್ನ ಛತ್ರ
ಗಳನ್ನೂ, ರಾಜಾ ಜಹಾಗೀರದಾರ. ಜಮೀನುದಾರ ಸೆಟ್ಟಿ ಸಾವುಕಾರ
ಮುಂತಾದ ಧಾರ್ಮಿಕರಾದ ಸತ್ಪುರುಷರು. ಅನೇಕವಾಗಿ ಕಟ್ಟಿಸಿರುವರು.
ಸಂಸ್ಕೃತ ವಿದ್ಯೆಗೆ ಉತ್ತೇಜನವನ್ನು ಕೊಡುವದೆಂದರೆ ಧರ್ಮದ ಒಂದು
ದೊಡ್ಡ ಅಂಶವೇ ಎಂದು ಆಗಿನ ಜನರು ತಿಳಿಯುತ್ತಿದ್ದರು. ಅದಕ್ಕಾಗಿ ಶಿಂದೆ,
ಹೋಳಕರ, ಗಾಯಕವಾಡ, ಮೈಸೂರ ಒಡೆಯರು “ಮುಂತಾದ ರಾಜರೂ
ಬಂಗಾಲದಲ್ಲಿಯ ದೊಡ್ಡ ದೊಡ್ಡ ಜಮೀನದಾರರೂ, ಕಾಶೀ ಪಟ್ಟಣದಲ್ಲಿರುವ
ಆನೇಕ ಪಾಠಶಾಲೆಗಳಗೆ ಆಶ್ರ ಯದಾತರಾಗಿದ್ದರು. ಪಾಠಶಾಲೆಗಳ ಮುಖ್ಯ
ಗುರುಗಳೆಂದರೆ, ಘನವಿದ ದ್ವಾಂಸರಾದ ಭಟ್ಲಾಚಾರ್ಯರು. ಆಂಥ ವಿದ್ವಾಂಸ
ರಿಗೆ ರಾಜಾಶ್ರಯವಿರುವದಲ್ಲದೆ ಅನೇಕ ಜನ ಯಾತ್ರಿಕರು ಅವರಿಗೆ ಭಕ್ತಿ ಪುರ
ಸ್ಸರವಾಗಿ ಹೇರಳವಾದ ಕಾಣಿಕೆಗಳನ್ನು ಕೊಟ್ಟು ಹೋಗುತ್ತಿದ್ದರು. ವಿದ್ಯಾರ್ಥಿ
ಗಳಿಗಾದರೂ ಅನ್ನವಸ್ತ್ರಕ್ಕೆ ಎಷ್ಟು ಮಾತ್ರವೂ ಕೊರತೆಯಿಲ್ಲ. ಹೀಗೆ
ಗುರುಶಿಷ್ಯ ರೀರ್ವರಿಗೂ ಎಷ್ಟುಮಾತ್ರವೂ ಚಿಂತೆಯಿಲ್ಲ. ಹೀಗಿರಲು ವಿದ್ಯಾ
ಪೀಠಗಳಲ್ಲಿ ಅವಿರತವಾಗಿ ವ್ಯಾಸಂಗ ನಡೆದಿರುವದು ಆಶ್ಚರ್ಯವೇನು 7
ಒಂದೊಂದು ಪಾಠಶಾಲೆಯಲ್ಲಿ ನೂರು ಇನ್ನೂರಕ್ಕಿಂತಲೂ ಕಡಿಮೆಯಾದ
ವಿದ್ಯಾರ್ಥಿಗಳ ಸಂಖ್ಯೆಯಿಲ್ಲ. ಇಂಥವು ನೂರಾರು ಪಾಠಶಾಲೆಗಳಲ್ಲಿ,
--------------------------------------
vii
ರಾಮಾಶಾಸ್ತ್ರಿಗಳ ಪಾಠಶಾಲೆಗಿಂತಲೂ ತಮ್ಮ ಪಾಠಶಾಲೆಯ ಬೆಳಕು
ಹೆಚ್ಚುಗಬೇಕೆಂದು ಚಟ್ಟೋಪಾಧ್ಯಾಯರು ತನ್ನು ವಿದ್ಯಾರ್ಥಿಗಳಿಗೆ ಅವಿ
ಶ್ರಾಂತವಾಗಿ ವಿದ್ಯಾದಾನ ಮಾಡುವರು. ಚಟ್ಟೋಪಾಧ್ಯಾಯರ ಶಾಲೆಗಿಂತ
ತಮ್ಮ ಶಾಲೆಯ ಯೋಗ್ಯತೆಯು ಕಡಿಮೆಯದಾಗಿರಬಾರದೆಂದು ಮಹಾ
ಮಹೋಪಾಧ್ಯಾಯರಾದ ಹನುಮಂತಾಚಾರ್ಯರು ತಮ್ಮ ಶಿಷ್ಕರಿಗೆ ಹಗಲಿ
ರುಳು ಪಾಠ ಹೇಳುತ್ತಿದ್ದರು. ಹೀಗೆ ಸ್ಪರ್ಧೆಯಿಂದ ನಡೆದಿರುವ ಪಾಠಶಾಲೆ
ಗಳ ಉತ್ಕರ್ಷವು ವರ್ಣನಾತೀತವಾಗಿತ್ತು.
ಸ್ವಾಮಿರಾಯಾಚಾರ್ಯರು ಮಹಾಮಹೋಪಾಧ್ಯಾಯರಾದ ಚಿಕ್ಕೇರೂರ
ಹನುಮಂತಾಚಾರ್ಯರ ಪಾಠಶಾಲೆಯಲ್ಲಿ ನಿಂತುಕೊಂಡರು. ಹೆನುಮಂತಾ
ಚಾರ್ಯರವರು ಕರ್ನಾಟಕಸ್ಥರಾದ್ದರಿಂದ ಅವರು ನಮ್ಮ ಬಾಗಲಕೋಟೆಯ
ಆಚಾರ್ಯರನ್ನು ಆದರದಿಂದ ತಮ್ಮಲ್ಲಿ ಕರಕೊಂಡು ವಿದ್ಯಾದಾನ ಮಾಡ
ಲಾರಂಭಿಸಿದರು.
ತನ್ನ ರಾಜಧಾನಿಯಲ್ಲಿಯೂ ಕಾಶಿಯಲ್ಲಿರುವಂಥದೊಂದು ಸಂಸ್ಕೃತ
ಮಹಾ ವಿದ್ಯಾಲಯವಿರಬೇಕೆಂದೆಣಿಸಿ ಶಿಂದೇನು ಹನುಮಂತಾಚಾರ್ಯರ ಪಾಠೆ
ಶಾಲೆಗೆ ಪಾಠಶಾಲೆಯನ್ನೇ ಗ್ವಾಲ್ಹೇರಕ್ಕೆ ತೆಗೆದುಕೊಂಡು ಹೋದನು.
ನಮ್ಮ ಆಚಾರ್ಯರ ವ್ಯಾಸಂಗವು” ಇನ್ನು ಮುಂದೆ ಗ್ವಾಲ್ಹೇರದಲ್ಲಿ ನಡೆಯಿತು.
ಗುರುಗಳೆಂದರೆ ಸಾಕ್ಷಾತ್ ಸರಸ್ವತೀ ದೇವಿಯ ವರಪುತ್ರರಂಥವರು; ಶಿಷ್ಯನು
ಧೀಮಂತನೂ, ಚತುರನೂ, ಆನಲಸ ವ್ಯಾಸಂಗಪ್ರಿಯನೂ ಆದ ತರುಣನು.
ಸ್ವರ್ಗದಿಂದ ಬೀಳುವ ಗಂಗಾಪ್ರವಾಹದ ಪ್ರಚಂಡವಾದ ಜಲರಾಶಿಯನ್ನು
ಮಹೇಶ್ವರನು ನಿರಾಯಾಸವಾಗಿ ತನ್ನ ಜಡೆಯಲ್ಲಿ ಹಿಡಿದಂತೆ, ಗುರುಗಳ
ಮುಖದಿಂದ ಅಸ್ಖಲಿತವಾಗಿ ಹೊರಡುವ ಪ್ರವಚನವೆಂಬ ಮಹಾಪ್ರವಾಹ
ವನ್ನು ಶಿಷ್ಯನು ನಿಶ್ಶೇಷವಾಗಿ ಕುಡಿದುಬಿಡುವನು. ಸತ್ಪಾತ್ರದಲ್ಲಿ ದಾನ
ಮಾಡಿದವನ ಧನ್ಯತೆಗೆ ಅಳವಿಲ್ಲ. ತಮ್ಮ ಕೀರ್ತಿಯನ್ನು ಲೋಕದಲ್ಲೆಲ್ಲಾ
ಹರಡುವಂಥ ಪ್ರವೀಣನಾದ ಶಿಷ್ಯನು ತಮಗೆ ದೊರೆತನೆಂಬ ಅಭಿಮಾನದಿಂದ
ಮಹಾಮಹೋಪಾಧ್ಯಾಯರು ತಮ್ಮ ವಿದ್ಯಾಸಂಸತ್ತನ್ನೆಲ್ಲ ಸ್ವಾಮಿರಾಯಾ
ಚಾರ್ಯರ ಸ್ವಾಧೀನಮಾಡಿ ಕೃತಾರ್ಥರಾದರು, ಹೀಗೆ ಆರು ವರ್ಷ ಕಾಶಿ
ಗ್ವಾಲ್ಹೇರಗಳಲ್ಲಿ ವಿದ್ಯಾರ್ಜನವಾದ ಬಳಿಕ ಗುರುಗಳೊಂದು ದಿನ ಆಚಾರ್ಯ
---------------------------------------
viii
ರನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು "ಸ್ವಾಮಿರಾಯಾಚಾರ್ಯ, ನೀವು
ಸಕಲ ವಿದ್ಯಾಪಾರಂಗತರಾದಿರಿ. ನ್ಯಾಯಶಾಸ್ತ್ರದ ರಹದ್ಯವಂತೂ ನಿಮಗೆ
ತಿಳಿದಷ್ಟು ಇನೊ ಬೃರಿಗೆ ತಿಳಿದಿಲ್ಲ. ನಿಮ್ಮನ್ನು ಸೋಲಿಸುವ ವಿದ್ವಾಂಸನಿಲ್ಲ.
ನಿಮಗೆ ಹೋದಲ್ಲಿ ವಿಜಯ!” ಎಂದು ಆಶೀರ್ವದಿಸಿ ಸ್ವಸ್ಥಾನಕ್ಕೆ ಹೋಗಲು
ಆಜ್ಞೆ ಕೊಟ್ಟ ರು.
ಗುರುಗಳಾಜ್ಞೆಯಾದೆ ಬಳಿಕ ಆಚಾರ್ಯರು ಬಡೋದೆಗೆ ಹೋಗಿ
ಅಲ್ಲಿಯ ಸಂಸ್ಥಾನದಿಂದ ಬಹು ಮರ್ಯಾದೆಯನ್ನು ಹೊಂದಿ ಪುನಃ ಕಾಶೀ
ಪಟ್ಟಣಕ್ಕೆ ಬಂದರು, ಅಲ್ಲಿಯ ಭಟ್ಟಾಚಾರ್ಯರ ಚಮತ್ಕಾರವಾದ ಪೂರ್ವ
ಪಕ್ಷಗಳ ಇಂಗಿತವನ್ನರಿತುಕೊಂಡು ತಮ್ಮ ವಿಲಕ್ಸ್ಮಣವಾದ ಪೂರ್ವಪಕ್ಷ
ಗಳಿಂದ ಅಲ್ಲಿಯ ಜನರನ್ನು ಚಕಿತರನ್ನೂಗಿ ಮಾಡುತ್ತೆ ಆಚಾರ್ಯರು ಸರ್ವರ
ಆದರಕ್ಕೂ ಪಾತ್ರರಾಗಿದ್ದರು.
ಹೀಗೆ ಕಾಶಿಯಲ್ಲಿರುವಾಗ ಆಚಾರ್ಯರ ತೀರ್ಥರೂಪರಾದ ಯಲಗುರ
ದಾಚಾರ್ಯರು ಆಚಾರ್ಯರ ಸ್ವಪ್ನದಲ್ಲಿ ಬಂದು "ಸ್ವಾಮಿ, ನಿನ್ನ ವಿದ್ಯಾ
ಭ್ಯಾಸವು ಸಂಪೂರ್ಣವಾದಂತಾಯಿತು, ನೀನಿನ್ನು ಊರಿಗೆ ನಡೆ. ನಮ್ಮ
ಇಹಲೋಕದ ಯಾತ್ರೆಯು ಮುಗಿಯಿತು”? ಎಂದು ಹೆೇಳಿದಂತಾಯಿತಶು.
ಆಚಾರ್ಯರಿಗೆ ಸ್ವಪ್ನ ಬೀಳುವದೇ ಕಡಿಮೆ; ಬಿದ್ದರೆ ಅದರಲ್ಲಿ ಕಂಡ ಸಂಗತಿ
ಗಳು ಸತ್ಯವಾಗಿಯೇ ಪರಿಣಮಿಸುತ್ತಿದ್ದವು. ಅದಕ್ಕಾಗಿ ಅವರು ಸ್ವಪ್ನವನ್ನು
ಕಂಡು ವ್ಯಗ್ರಚಿತ್ತರಾಗಿ ಒಮ್ಮೆಲೆ ಹೊಂಟು ಊರಿಗೆ ಬಂದರು. ಆದರೆ
ಭಗವತ್ ಸಂಕಲ್ಪಾನುಸಾರವಾಗಿ ಆಚಾರ್ಯರಿಗೆ ಪಿತೃದರ್ಶನದ ಲಾಭವಾಗ
ಲಿಲ್ಲ. ಯಲಗುರದಾಜಾರ್ಯರು ತೀರಿಕೊಂಡು ೧೫ ದಿವಸಗಳಾಗಿಹೋಗಿ
ದ್ದವು (ಅವರು ಪರಲೋಕವಾಸಿಗಳಾದನ್ನು ಶಕೆ ೧೭೮೮ ಕ್ಷಯಸಂವತ್ಸ
ರದ ಪುಷ್ಕ ವದಿ ಅಮಾವಾಸ್ಯೆ.)
ಅಚಾರ್ಯರು ಕೃತವಿದ್ಯರಾಗಿ ಊರಿಗೆ ಬಂದಾಗ ಅವರು ಕೇವಲ
ಇಪ್ಪತ್ತೈದು ವರ್ಷದವರಾಗಿದ್ದ ರು. ಯಲಗುರದಾಚ?ರ್ಯೇರು ತೀರಿಕೊಂಡ
ರೆಂಬ ವರ್ತಮಾನವನ್ನು ಕೇಳಿ್ ಅವರ ಸ್ನೇಹಿತರಾದ ಪಂಡಿತರೋರ್ವರು
ಸ್ವರ್ಗಸ್ಥರಾದ ಯಲಗುರದಾಚಾರ್ಯರ ಕುಟುಮಬದವರ ಸಮಾಚಾರಕ್ಕಾಗಿ
ಬಂದಿದ್ದರು. ಆಗ ಅವರು ಸಮ್ಮ ಆಚಾರ್ಯರನ್ನು ಕುರಿತು "ಕಾಶಿಗೆ ಹೋಗಿ
--------------------------------------
ix
ಘನಪಂಡಿತರಾಗಿ ಬಂದ ಸ್ಹಾಮಿರಾಯುಚಾರ್ಯರಾರು??” ಎಂನು ಕೇಳಲು
ಆಚಾರ್ಯರು ಆ ವೃದ್ಧರಿಗೆ ನಮಸ್ಕರಿಸಿ " ಸ್ವಾಮಿನ್, ತಮ್ಮ ಅನು
ಗ್ರಹಕ್ಕೆ ಪಾತ್ರನಾದ ಸ್ವಾಮಿರಾಯಾಚಾರ್ಯನೆಂಬವನು ನಾನೇ ಎಂದು
ವಿನತದಿಂದ ಹೇಳಿದರು. ಆ ಮಾತು ಕೇಳಿ ಆ ವೃದ್ಧರು ವಿಸ್ಮಿತರಾಗಿ,
": ಏನು ತರುಣರೆ, ನಿಮ್ಮ ತಲೆಯ ಮೇಲಿನ ಮಾಂಸವಿನ್ನ ಆಂಲ್ಲ ನೀವು
ಘನವಿದ್ವಾಂಸರೆ? ” ಎಂದು ತರುಣರೂ, ರೂಪವಂತರೂ ದರ್ಪಶಾಲಿಗಳೂ
ಆಗಿರುವ ಆಚಾರ್ಯರ ಮುಖನನ್ನು ನೋಡಿ ಸಂತೋಷದಿಂದ ನಕ್ಕು
ಕೇಳಿದರು.
ಮುಂದೆ ಸ್ವಲ್ಪ ದಿವಸಗಳಲ್ಲಿಯೇ ಆಚಾರ್ಯರು ಗದ್ವಾಲಿಯ ರಾಜನ
ಸಭೆಗೆನಹೋದರು. ಅಲ್ಲಿ ಸುಬ್ಬಾಶಾಸ್ತ್ರಿಯೆಂಬ ಘನವಿದ್ವಾಂಸರು ಧೆರ್ಮಾಧಿ
ಕಾರಿಗಳಾಗಿದ್ದರು. ಸಭೆಯಲ್ಲಿ ಸುಬ್ಬಾಶಾಸ್ತ್ರಿಗಳಿಗೂ ಆಚಾರ್ಯರಿಗೂ
ನ್ಯಾಯಶಾಸ್ತ್ರದಲ್ಲಿ ವಾದವಿವಾದ ನಡೆದು ಆಚಾರ್ಯರೇ ಅಧಿಕರಾದೆ ಪಂಡಿತ
ರೆಂದು ನಿರ್ಣಯವಾಯಿತು ಸುಬ್ಬಾಶಾಸ್ತ್ರಿಗಳನ್ನು ಗೆದ್ದವರು ಅದುವರೆಗೆ
ಯಾರೂ ಹುಟ್ಟಿದ್ದಿಲ್ಲ. ಆಚಾರ್ಯರು ಆ ಮಹಾಪಂಡಿತರನ್ನು ಗೆದ್ದರೆಂಬ
ವರ್ತಮಾನವು ನಾಲ್ಕೂಕಡೆಗೆ ಹಬ್ಬಿ ಅವರ ಕೀರ್ತಿಯು ಎಲ್ಲ ಕಡೆಯಲ್ಲಿಯೂ
ಹರಡಿಕೊಂಡಿತು.
ಅಲೌಕಿಕ ಪಂಡಿತರಾದ ಚಿತ್ತಾಪುರದ ಶ್ರೀ ಸೂರ್ಯಪರಾಕ್ರಮ ಸ್ವಾಮಿ
ಗಳವರು ಚಾತುರ್ಮಾಸಕ್ಕಾಗಿ ಬಾಗಲಕೋಟೆಗೆ ದಿಗ್ವಿಜಯ ಮಾಡುವವ
ರಾಗಿದ್ದರು. ಸ್ವಾಮಿಗಳ ಸಹೋದರರಾದ ವಾಸುದೇವಾಚಾರ್ಯರು ಒಳ್ಳೇ
ಘಟ್ಟಗರಾದ ನೈಯಾಯಿಕರು. ಅವರು ಅಭಿಮಾನದಿಂದ ನ್ಯಾಯಶಾಸ್ತ್ರ
ದಲ್ಲಿ ನಮ್ಮ ಆಚಾರ್ಯರನ್ನು ಕೆಣಕಬಂದರು. ಆಗ ಸ್ವಾಮಿಗಳವರೇ
ತಮ್ಮನನ್ನು ಕುರಿತು " ವಾಸುದೇವ, ಯಾರೊಡನೆ ಪ್ರಸಂಗ ಮಾಡಲೆಣಿ
ಸುವಿ ನೀ? ಆಚಾರ್ಯರೊಡನೆ ಪ್ರಸಂಗ ಮಾಡಿ ಪಾರಾಗುವೆನೆಂಬ ಧೈರ್ಯ
ನನಗಿಲ್ಲ. ನಿನ್ನ ಪಾಡೇನು?'' ಎಂದು ಹೇಳಿ ಆಚಾರ್ಯರಿಗೆ ಮೇಣೆಯಲ್ಲಿ
ಕುಳಿತು ಸಂಚಾರ ಮಾಡುವ ಬಹುಮಾನವನ್ನು ಕೊಟ್ಟು ಅವರನ್ನು ಬಹು
ಪರಿಯಾಗಿ ಗೌರವಿಸಿದರು.
ಶಾಸ್ತ್ರಾಧ್ಯಯನವನ್ನು ಮಾಡಿ ಪಂಡಿತರೆನ್ಸಿಸಿಕೊಳ್ಳುವದು ಅಸಾಧ್ಯ
-----------------------------------------
x
ವಾದ ಮಾತಲ್ಲ. ಆದರೆ ಶಾಸ್ತ್ರದ ತತ್ವ್ತಗಳನ್ನು ಕರತಲಾಮಲಕವಾಗಿ ಮಾಡಿ
ಕೊಂಡು ಅತುಲವಾದ ಬುದ್ಧಿ ವೈಚಿತ್ರ್ಯದಿಂದ ಬೇಕಾದ ಪೂರ್ವಪಕ್ಷಗಳನ್ನು,
ಶ್ರೋತೃಗಳು ಆಶ್ಚರ್ಯಚಕಿತರಾಗುವಂತ್ಕೆ, ಸಪ್ರಮಾಣವಾಗಿ ಖಂಡಿಸುವ
ದಾಗಲಿ ಮಂಡಿಸುವದಾಗಲಿ, ಪೂರ್ವಜನ್ಮಾರ್ಜಿತವಾದ ಸುಕೃತದ ಫಲವೇ
ಹೊರತಾಗಿ ಮತ್ತೊಂದಿಲ್ಲ ಸಭೆಯಲ್ಲಿ ಕುಳಿತು ಪಂಡಿತರೊಡನೆ ವಾದ
ವಿವಾದವನ್ನು ನಡೆಸುತ್ತಿರುವಾಗ ಆಚಾರ್ಯರ ಹೃದಯದಲ್ಲಿ ವಿಲಕ್ಷಣವಾದ
ಉತ್ಸಾಹವು ತುಂಬಿಕೊಳ್ಳುತ್ತಿತ್ತು. ಅವರ ವಿಷಯಪರಿಜ್ಞಾನವೂ ಅಸ್ಪಲಿತ
ವಾದ ವಾಕ್ಪಾಟವವೂ ಮುಖದ ವಿಲಕ್ಷಣವಾದ ವರ್ಚಸ್ವವೂ ಪ್ರತಿವಾದಿಗಳ
ಮನಸ್ಸಿನಲ್ಲಿ ಒಂದು ವಿಲಕ್ಷಣವಾದ ಭೀತಿಯನ್ನುಂಟುಮಾಡುತ್ತಿದ್ದವು.
ವಿಷಯಾನುವಾದವನ್ನು ಮಾಡಿ ಹೀಗೆ ಹೀಗೆ ಪ್ರಮಾಣವೆಂದು ಆಚಾರ್ಯರು
ದೃಢಜ್ಞಾನದ ಪ್ರಗಲ್ಭತೆಯಿಂದ ಹೇಳಿದರೆ ಶಂಕೆಯನ್ನು ತೆಗೆದುಕೊಳ್ಳಲು
ಪ್ರಜ್ಞೆ ಯಾರಿಗೆ? ಎಲ್ಲರೂ ಬ್ಯಾರಿಸ್ಟರರಾಗಿ ಬರುತ್ತಾರೆ, ಆದರೆ ಅವರೆಲ್ಲರೂ
ಇನ್‌ವ್ಹೆರ್ಯಾರಿಟಿ, ನೋರ್ಟನ್ ಇಲ್ಲನೆ ಸಿಂಹರಾಗುವದಿಲ್ಲವಷ್ಪೆ? ಕಾಳ
ಹೆಸ್ತಿಯ ರಂಗಾಚಾರ್ಯ, ಶೃಂಗರಾಚಾರ್ಯ ಮುಂತಾದ ದಿಗ್ಗಜೋಪಮ
ರಾದ ಪಂಡಿತರು ಬಾಗಿಲಕೋಟಯ ಅಚಾರ್ಯರೊಡನೆ ವಾದ ಮಾಡು
ವದು ಸರ್ವಥಾ ಶ್ರೇಯಸ್ಕರವಾದದ್ದಲ್ಲವೆಂ ದು ಮನಗಂಡುಹೋದರು.
ಶ್ರೀಮತ್ ಸತ್ಯವೀರ ಶ್ರೀಪಾದಂಗಳವರು ಪುನರ್ನಿವಾಹದ ಖಂಡನಾರ್ಥ
ವಾಗಿ ಸಕಲ ದೇಶಗಳಿಂದ ಪ್ರಬಲರಾದ ಪಂಡಿತರನ್ನು ಕರಿಸಿಕೊಂಡಿದ್ದರು.
ಆ ಮಹಾಪಂಡಿತರ ಸಭೆಯಲ್ಲಿ ನಮ್ಮ ಆಚಾರ್ಯರು ಅಗ್ರಗಣ್ಯರೆಂದೆನ್ಲಿಸಿ
ಕೊಂಡರು. ಅವರು ಹೇಳಿದ್ದೇ ಪ್ರಮಾಣವಾಗಿತ್ತು.
ವಿದ್ಯಾ ಸಂಪತ್ತಿನಿಂದ ಪರಿಪೂರ್ಣರಾಗಿದ್ದ ನಮ್ಮ ಆಚಾರ್ಯರಿಗೆ
ಧನಕನಕಗಳ ಅಭಿಲಾಷೆಯೂ, ಐಹಿಕಸುಖಗಳ ಅಪೇಕ್ಷೆಯೂ ಎಷ್ಟು
ಮಾತ್ರವೂ ಇರಲಿಲ್ಲ. ಧನದಾಶೆಗಾಗಿ ಅವರು ಅನ್ಯರ ಆರ್ಜವವನ್ನು ಮಾಡಿ
ಸ್ವಾಭಿಮಾಫಕ್ಕೆ ಹಾನಿತಂದುಕೊಳ್ಳಲಿಲ್ಲ. ಸನ್ ೧೮೮೦ರ ಸುಮಾರಕ್ಕೆ
ಬಡೋದೆಯ ಸಂಸ್ಥಾನದವರು ಆಚಾರ್ಯರನ್ನು ತಮ್ಮಲ್ಲಿ ಇಟ್ಟುಕೊಳ್ಳ
ಬೇಕೆಂದು ಅಪೇಕ್ಷಿಸಿ ಅವರಿಗೆ ತಿಂಗಳಾ ದೀಡನೂರು ರೂಪಾಯಿಗಳ ಕಾಣಿಕೆ
ಯನ್ನು ಕೊಡುವದಲ್ಲದೆ ಮನೆಯ ವೆಚ್ಚವನ್ನುದರೂ ನೋಡಿಕೊಳ್ಳುತ್ತೇ
----------------------------------------
xi
ವೆಂದು ಹೇಳಿ ಆಚಾರ್ಯರಿಗೆ ಬಡೋದೆಗೆ ಬರಬೇಕೆಂದು ಬರಿಸಿದ್ದರು
ಅದಕ್ಕೆ ಆಚಾರ್ಯರು ಸಮ್ಮತಿಸದೆ ತಮಗೆ ಬರುವದಕ್ಕಾಗುವದಿಲ್ಲವೆಂದು
ಪ್ರತ್ಯುತ್ತರವನ್ನಿತ್ತರು. ಈ ಸಂಗತಿಯನ್ನರಿತು ಆಚಾರ್ಯರ ತಮ್ಮಂದಿರಾದ
ರಾಘವೇಂದ್ರಾಚಾರ್ಯ ವಕೀಲರು ಆಚಾರ್ಯರನ್ನು ಕುರಿತು ಬಡೆೋದೆಯ
ಆಶ್ರಯವನ್ನು ನಿರಾಕರಿಸಬಾರದಿತ್ತು ಎಂದು ಸೂಚಿಸಲು, ಆಚಾರ್ಯರು
"ರಾಘವೇಂದ್ರ, ಬಡೋದೆಯ ಸಂಸ್ಥಾನಕ್ಕೆ ಒಬ್ಬ ಪಂಡಿತನು ಬೇಕಾಗಿರುವ
ನೆಂದು ತಿಳಿದು ನಾನಿಷ್ಟು ಕಷ್ಟಪಟ್ಟು ವಿದ್ಯಾರ್ಜನವನ್ನು ಮಾಡಲಿಲ್ಲ
ಕರ್ನಾಟಕದ ಹೆಸರನ್ನೂ ವಿಶೇಷತಃ ಬಾಗಲಕೋಟಿಯ ಹೆಸರನ್ನೂ ಬೆಳಕಿಗೆ
ತರಬೇಕೆಂಬ ಉದ್ದೇಶವನ್ನಿಟ್ಟುಕೊಂಡೇ ನಾನು ಪಂಡಿತನಾಗಿರುವೆನು ”
ಎಂದು ಸ್ನಾಭಿಮಾನಪೂರ್ವಕವಾಗಿ ಹೇಳಿದರು.
ಆಚಾರ್ಯರು ದಂಭರಹಿತವಾದ ಆಚರಣವುಳ್ಳವರಾ ದಾಗ್ಯೂ, ಭಕ್ತಿ
ಪುರಸ್ಸರವಾದ ದೇವತಾರ್ಚನವೂ ಶ್ರದ್ಧೆಯ ಪಾಠಪ್ರವಚನ ಪಾರಾಯಣ
ಗಳೂ ಯಥಾಶಕ್ತಿಯಾದ ಅನ್ನ ಸಂತರ್ಪಣವೂ ಆ ತಪಸ್ವಿಗಳ ಮನೆಯಲ್ಲಿ
ಯಥಾಸಾಂಗವಾಗಿ ನಡೆಯುತ್ತಿದ್ದವು. ಅವರ ಬ್ರಹ್ಮತೇಜಸ್ಸಿನ ದೀಪ್ತಿಗೆ
ಪಾಶ್ಚಿಮಾತ್ಯ ವಿದ್ಯಾ ಸಂಪನ್ನರಾದವರು ಕೂಡ ಬೆರಗಾಗಿ ಹೋಗುತ್ತಿದ್ದರು.
ಮುಂಬಯಿಯ ವಿಶ್ವವಿದ್ಯಾಲಯದ ಪದವೀಧರರಲ್ಲಿ ಮಾನನೀಯರಾದ
ಗಂಗಾಧರರಾನ ಜಾಂಭೇಕರ ಇವರು ಬಾಗಲಕೋಟೆಯಲ್ಲಿ ಮಾಮಲೇದಾರ
ರಾಗಿರುವಾಗ, ಒಂದು ದಿನ ಆಚಾರ್ಯರ ಸಂದರ್ಶನಕ್ಕಾಗಿ ಆವರು ಮನೆಗೆ
ಬಂದಿದ್ದರು. ಉಚ್ಛವರ್ಗದ ಪದವೀಧರರೂ (First class B.A.)
ದರ್ಪಶಾಲಿಗಳೂ ಆದ ಮಾಮಲೇದಾರರವರು. ಆದರೆ ಗಂಗಾಧರರಾಯರು
ಆಚಾರ್ಯರ ಮುಖದಲ್ಲಿ ಉಕ್ಕುತ್ತಿರುವ ವಿದ್ಯಾವರ್ಚಸ್ವವನ್ನು ಕಂಡು
ವಿಸ್ಮಿತರಾಗಿ ಕೈಜೋಡಿಸಿಕೊಂಡು ನಿಂತರಲ್ಲದೆ, ತಮಗಾಗಿ ಕೊಟ್ಟ ಆಸನದಲ್ಲಿ
ಕುಳ್ಳಿ ರಲು ಅವರಿಗೆ ಧೈರ್ಯಸಾಲಲಿಲ್ಲ. ನಿಂತಲ್ಲಿಯೇ ನಾಲ್ಕುಮಾತುಗಳನ್ನಾಡಿ
ಮಾಮಲೇದಾರರು ಆಚಾರ್ಯರ ಅಪ್ಪಣೆತೆಗೆದುಕೊಂಡು ಮನೆಗೆ ಹೋದರು.
ಜಾಂಭೇಕರರಂಥ ಇಂಗ್ಲೀಶ್ ಭಾಷಾಪ್ರವೀಣರು ತೀರ ಕಡಿಮೆ. ಸಂಸ್ಕೃತ
ದಲ್ಲಿಯಾದರೂ ಅವರ ಕೈಹಿಡಿದವರಿಲ್ಲ.
ಇದು ಹೊರಗಿನವರ ಮಾತಾಯಿತು, ಆದರೆ ಪ್ರತ್ನಕ್ಷ ಆಚಾರ್ಯರ
-----------------------------------------
xii
ತಮ್ಮಂದಿರು ಕೂಡಾ ಅವರೆದುರಿನೆಲ್ಲಿ ನಿಂತು ಮಾತಾಡಲು ಅಂಜಿ ನಡಗು
ತ್ತಿದ್ದರು, ತಮ್ಮಂದಿರೆಂದರೆ ಸಾಮಾನ್ಯರೆಲ್ಲ. ಇಬ್ಬರು ಡಿಸ್ತ್ರಿಕ್ಟ ಕೋರ್ಟಿನ
ವಕೀಲರು, ಒಬ್ಬರು ಸರ್ವೆ ಕಮೀಶನರರ ಸಿರಸ್ಥೆದಾರರು:, ಮತ್ತೊಬ್ಬರು
ತಿಂಗಳಾ ಇನ್ನೂರು ರುಪಾಯಿ ಸಂಬಳವುಳ್ಳ ಶಾಲಾಧಿಕಾರಿಗರು ಆಚಾರ್ಯರು
ಮಾತಾಡುವವರ ನಿಷ್ಟುರರಲ್ಲ; ಅಂತಃಕರಣದಲ್ಲಿ ಕಠೋರರಲ್ಲ. ಅವರಿಗೆ
ಜನರ ಸಂಪರ್ಕವೂ ಬೇಡಾಗಿದ್ದಿಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರೆ
ಮಕ್ಕಳನ್ನು ಪ್ರೇಮದಿಂದ ಜಗ್ಗಿಕೊಂಡು. ಹೋಗಿ ಮೈತಿಕ್ಕಿ ಸ್ನಾನಕ್ಕೆ
ಹಾಕುವದೂ ಅವಂಗೆ ತಿನ್ನಲಿಕ್ಕೆ ಕೊಡುವದೂ ಅಕ್ಕತಂಗೆಂದಿರನ್ನು ಬಳಿಯಲ್ಲಿ
ಕುಳ್ಳಿರಿಸಿಕೊಂಡು ಅವರಾಡುವ ಹುಚ್ಚುಚ್ಚು ಮಾತುಗಳನ್ನು ಕೇಳಿಕೊಳ್ಳು
ವದೂ ಅವರಿಗೆ ವಿನೋದಾಗ್ರದವಾದ ಸಂಗತಿಗಳು ಬಣಗಾರ ರಾಚಪ್ಪನೂ
ಕೋಮಟಿಗರ ಗೋವಿಂದಪ್ಪನೂ ಬಡಿಗರ ಸಂಗಪ್ಪನೂ ನಿತ್ಯದಲ್ಲಿಯೂ
ಆಚಾರ್ಯರ ಬಳಿಯಲ್ಲಿ ಸಲಿಗೆಯಿಂದ ಹಳಿತು ಹರಟೇಹೊಡೆಯುವವರು.
ಈ ಮಹಾತ್ಮರ ಚರಿತ್ರವನ್ನು ಬರೆಯಹೋದರೆ ಒಂದು ದೊಡ್ಡ
ಗ್ರಂಥವೇ ಆಗುವದು. ಇನ್ನೊಂದು ಅತಿ ಮಹೆತ್ವವಾದ ಸಂಗೆತಿಯೆಸನ್ನು
ಹೇಳಿ ಈ ಲೇಖನನ್ನು ಮುಗಿಸುತ್ತೇವೆ.
ಸನ್ ೧೮೮೮ ರಲ್ಲಿ ಕರವೀರ (ಕೊಲ್ಹಾಪೂರ) ಮಠದವರಾದ ಶ್ರೀ
ಸಂಕೇಶ್ವರ ಸ್ವಾಮಿಗಳಿಗೂ ಜಗದ್ಗುರುಗಳಾದ ಶ್ರೀ ಶೃಂಗೇರೀ ಮಠದ
ಸ್ವಾಮಿಗಳಿಗೂ ಉತ್ತರಕರ್ನಾಟಕದಲ್ಲಿಯ ಆಧಿಕಾರದ ವಿಷಯವಾಗಿ
ವ್ಯಾಜ್ಯನಡೆದಿತ್ತು. ಆಗ ಶ್ರೀ ಶ್ರಂಗೇ ರಿ ಸ್ವಾಮಿಗಳವರು ಕೊಲ್ಲಾಪುರಕ್ಕೆ
ದಿಗ್ವಿಜಯಮಾಡಿದ್ದರು. ಅಸಾದಾರಣರಾದ ವಿದ್ವಾಂಸರಾದ ಶ್ರೀಮತ್
ಶೃಂಗೇರಿ ಸ್ವಾಮಿಗಳವರ ಸಂಸಡ ಮಾತಾಡಬೇಕೇಂದರೆ ನಮ್ಮಲ್ಲಿ ಪಂಡಿತರಿಲ್ಲ
ವೆಂದೆಣಿಸಿ ಸಂಕೇಶ್ವರದ ಸ್ವಾಮಿಗಳವರು ತಮಗೆ ಪರಮಸ್ನೇಹಿತರಾಗಿದ್ದ
ಬಾಗಲಕೋಟೆಯ 'ಆಚಾರ್ಯರನ್ನು ಒಳ್ಳೇ ಆಗ್ರಹಪೂರ್ವಕವಾಗಿ ಕರೆಸಿ
ಕೊಂಡಿದ್ದರು. ಕುಂದಗೋಳಕರೆಂಬವರಿಗೆ ಬ್ರಾಹ್ಮಣತ್ವವನ್ನು ಕೊಡ ಬೇಕಾ
ಗಿಯೂ ಇನ್ನೂ ಬೇರೆ ಶಾಸ್ತ್ರಾರ್ಥಗಳ ವಿಷಯವಾಗಿ ಆಚಾರ್ಯರಿಗೂ
ಶೃಂಗೇರಿಯ ಜಗದ್ಗುರುಗಳವರಿಗೂ ಸಂವಾದಗಳು ನಡೆದೇ ಇದ್ದವು. ಆಗ
ಶೃಂಗೇರಿಯ ಸ್ವಾಮಿಗಳವರ ಬಳಿಯಲ್ಲಿಗುವ ಕೆಲಜನ ಪ್ರತಿಷ್ಠಿತರಾದ ಶಿಷ್ಯರು
--------------------------------------
xiii
ಆಚಾರ್ಯರ ವಿದ್ಯೆಯ ನೆಲೆಯನ್ನು ನೋಡುವೆ ಲವಲವಿಕೆಯಿಂದ ಅವರೊ
ಡನೆ ನ್ಯಾಯಶಾಸ್ತದಲ್ಲಿ ವಾದಮಾಡಲಾರಂಭಿಸಿದರು. ಬರಬರುತ್ತೆ ವಾದವು
ಶೃಂಗೇರಿಯ ಸ್ವಾಮಿಗಳವರಿಗೂ ಆಚಾರ್ಯರಿಗೂ ಹತ್ತಿತು ಸಿಂಹಶಾರ್ದೂಲ
ಗಳ ಅದೃಷ್ಟಪೂರ್ವವಾದ ಮಹಾಯುದ್ಧವು ಆಯತ್ತವಾಗಿ ಉಪಸ್ಥಿತವಾಗಿ
ರಲು ನೋಡುವವರ ಕುತೂಹಲಕ್ಕೇನು ಕಡಿಮೆ? ಕೊಲ್ಹಾಪುರದ ಪ್ರಮಿತ
ರಲ್ಲಿ ಎರಡು ಬಣಗಳು. ಒಂದು ಬಣನು ಶೃಂಗೇರಿಯ ಜಗದ್ಗುರುಗಳದು,
ಮತ್ತೊಂದು ಸಂಕೇಶ್ವರದ ಸ್ವಾಮಿಗಳದು. ಸಂಕೇಕ್ವರದ ಬಣದವರಿಗೆಲ್ಲ
ನಮ್ಮ ಆಚಾರ್ಯರಲ್ಲಿ ಆಭಿಮಾನ, ಕೊಲ್ಲಾಪುರ ಸಂಸ್ಥಾನದ ದಿವಾನರೂ,
ಅಧಿಕಾರಿಗಳೂ, ಪಂಡಿತರೂ ಕೂಡಿ ಸಭೆ ನೆರೆಸಿದರು. ಎರಡು ದಿವಸ
ಸರಿಸಮಾನವಾದ ವಾದವಾಯಿತು. ಆ ವಾದದಲ್ಲಿ ಸಂಸ್ಕ್ರತವಲ್ಲದೆ
ಮತ್ತೊಂದು ಭಾಷೆಯ ಉಸಯೋಗವನ್ನು ಮಾಡಬಾರದೆಂಬ ನಿರ್ಬಂಧವಿತ್ತು.
ಆಚಾರ್ಯರು ಒಂದು ಕೋಟಿಕ್ರಮವನ್ನು ತೆಗೆದು ಅನುವಾದವನ್ನು
ಮಾಡಲು ಅದರ ಇತ್ಯರ್ಥವು ಶೃಂಗೇರಿಯವರಿಗೆ ಸಹಸಾ ಮನನವಾಗ
ಲೊಲ್ಲದು. ಆಗಲವರು ದ್ರಾವಿಡ ಭಾಷೆಯಲ್ಲಿ ತಮ್ಮ ಶಿಷ್ಕರ ಅಭಿಪ್ರಾಯ
ವನ್ನು ತೆಗೆದುಕೊಳ್ಳಲಾರಂಭಿಸಿದರು. ಆದನ್ನು ಕೇಳಿ ದಿವಾನ್‌ಬಹದ್ದೂರ
ರವರು ಜಗದ್ಗುರುಗಳ ವಾದದ ನಿಂತಿತೆಂದು ವಿದ್ವಜ್ಜನರ ಅಭಿಪ್ರಾಯವನ್ನು
ತೆಗೆದುಕೊಂಡು ನಿರ್ಣಯಿಸಿದರು. ಸ್ವಾಮಿಗಳಾದರೂ ಆ ಮಾತಿಗೆ
ಒಪ್ಪಿಕೊಂಡರು.
ಸಂಗಡಲೆ ದಿವಾನರು ಆಚಾರ್ಯರನ್ನು ದಿವ್ಯರಥದಲ್ಲಿ ಕುಳ್ಳಿರಿಸಿ
ಊದಿಸುತ್ತೆ ಬಾರಿಸುತ್ತೆ ಮೆರಿಸಿಕೊಂಡು ಅವರನ್ನು ಸಂಕೇಶ್ವರದ ಮಠಕ್ಕೆ
ತಂದು ಮುಟ್ಟಿಸಿದರು. ಆಚಾರ್ಯರನ್ನು ಕಾಣುತ್ತಲೆ ಸಂಕೇಶ್ವರದ ಸ್ವಾಮಿ
ಗಳವರು ಹರ್ಷಾತಿರೇಕದಿಂದ ಕುಣಿದು ಅವರನ್ನು ಬಹುಪರಿಯಾಗಿ ಸಂಭಾವಿ
ಸಿದರು. ಮರುದಿವಸ ಕೊಲ್ಫಾಪುರದ ರಾಜಧಾನಿಯೆಲ್ಲೆಲ್ಲ ಆಚಾರ್ಯರ
ಸ್ತುತಿಯೇ ಸ್ತುತಿಯು. ಅವರ ಮೇಲೆ ಮರ್ಯಾದೆ ಸಂಭಾವನೆ ಉಡುಗರೆ
ದಕ್ಷಿಣೆಗಳ ಸುರಿಮಳೆಯಾಯಿತು. ಕೊಲ್ಲಾಪುರದ ರಾಜಮಾತೆಯವರು
ಒಳ್ಳೇ ಆದರದಿಂದ ಆಚುರ್ಯರನ್ನು ಅರಮನೆಗೆಕರೆಸಿಕೊಂಡು ಮಹಾವಸ್ತ್ರ
ದಕ್ಷಿಣೆಗಳನ್ನು ಸಮರ್ಪಿಸಿದರು. ಪ್ರತ್ಯಕ್ಷ ಶೃಂಗೇರಿಯ ಸ್ವಾಮಿಗಳೇ
--------------------------------------
xiv
ಆಚಾರ್ಯರಿಗೆ ಅನರ್ಘವಾದದ್ದೊಂದು ಶಾಲನ್ನೂ ಹೇರಳವಾದ ದಕ್ಷಿಣೆ
ಯನ್ನೂ ಕೊಡುವವರಾದರು. ಸಂಕೇಶ್ವರದ ಸ್ವಾಮಿಗಳಂತೂ ಆಚಾರ್ಯರಿಗೆ
ತಮ್ಮ ಸರ್ವಸ್ವವನ್ನಾದರೂ ಕೊಡಲು ಸಿದ್ಧರಾದರು.
ಕೊಲ್ಹಾಪುರದ ಸಮಾಚಾರದ ನಂತರ ಆಚಾರ್ಯರು ಮುಂದೆ ಯಾವ
ಸಭೆಗೂ ಹೋಗಲಿಲ್ಲ. ಅರ್ಶವಿಕಾರದಿಂದೆ ಅವರ ಪ್ರಕೃತಿಯು ಕ್ಷೀಣ
ವಾಗುತ್ತೆ ನಡೆದಿತ್ತು. ಮುಂದೆ ಶಕೆ ೧೮೦೫ ವಿಜಯ ಸಂವತ್ಸರದೆ ಆಷಾಢ
ವದಿ ೫ ದಿವಸ ಅಂದರೆ ಜಯತೀರ್ಥ ಸ್ವಾಮಿಗಳ ಪುಣ್ಯತಿಥಿಯ ದಿವಸವೆ
ಆಚಾರ್ಯರು ವೈಕುಂಠವಾಸಿಗಳಾದರು. ಆಯಿತು ! ಅದೊಂದು ಕಾಲವೇ
ಆಗಿಹೋಯಿತು. ಆಚಾರ್ಯರಿರುವಾಗ ಅವರಿಗೆ ಸಮಾನರಾದ ಪಂಡಿತರು
ಅಲ್ಲಲ್ಲಿ ಕಂಗೊಳಿಸುತ್ತಿದ್ದರು. ತರುವಾಯದಲ್ಲಿ, ಪ್ರಸಿದ್ದರಾದ ಪಂಡಿತರು
ಒಬ್ಬೊಬ್ಬರೇ ಪರಂಧಾಮಕ್ಕೆ ತೆರಳಿಹೋದ್ದರಿಂದ ಈಗ ಸಂಸ್ಕತ ವಿದ್ಯೆ ಗೆ
ಆಧಾರವಿಲ್ಲದಂತಾಗುವ ಸಮಯವು ಬಂದೊದಗಿದೆ. ಈ ಸ್ಟಿತ್ಯಂತರವನ್ನು
ಕಂಡು ಪಂಡಿತವರ್ಯರಾದ ಯಲತ್ತೂರ ಕೃಷ್ಣಾ ಚಾರ್ಯರು ಉದ್ಗಾರ
ತೆಗೆದದ್ದೇನಂದರೆ "ಬಾಗಲಕೋಟೆಯ ಆಚಾರ್ಯರು ತೀರಿಕೊಂಡಂದಿನಿಂದ
ಕಂಡಕಂಡವರು ಶಾಲು ಸೊದ್ದು ಕೊಂಡು ತಾವು ಪಂಡಿಶರೆಂದು ಹೇಳಿಕೊಳ್ಳ
ಲಾರಂಭಿಸಿದ್ದಾರೆ. "
ವಾಸುದೇವಾಚಾರರರು ಹುಟ್ಟಿ ಬೆಳೆದದ್ದು ಅವರೇ ಬರೆದಂತೆ ಇಂತಹ
ಪಂಡಿತ ಮನೆತನದಲ್ಲಿ, ಸ್ವಾಮಿರಾಯಾಚಾರ್ಯರ ಒಬ್ಬ ತಮ್ಮನಾದ ಶ್ರೀನಿವಾಸಾಚಾ
ರ್ಯರ ಮಕ್ಕಳೇ ಈ ವಾಸುದೇವಾಚಾರ್ಯರು. ಇವರ ಸಂಸ್ಕೃತಪಾಂಡಿತ್ಯದ
ಮೂಲ ಹೀಗೆ ವಂಶಪರಂಪರೆಯಾಗಿ ಬಂದಿದೆ. ಆ ಜ್ಞಾನದ ಕೆಚ್ಚನ್ನೇ ಇವರು
ಕನ್ನಡಕ್ಕೆ ಒಳಸಿಕೊಂಡಿದ್ದಾರೆ ವಸ್ತ್ರ ಹಳೆಯ ಮಾದರಿ ಯದಾದ ದರೂ ಚೊಕ್ಕ ಬಂಗಾ
ರದ್ದು; ವಸ್ತು ಎಂತಹ ತೊಡಿಗೆಯ ಮೆರೆಗಿದ್ದರೂ ಚಿರನೂತನವಾಗಿದೆ. ಇದೇ
ಅವರ ಬರಹದ ವೈಶಿಷ್ಟ್ಯ. ಈಗ ತಮಗೆ ಆಚಾರ್ಯರ ಆಚಾರ್ಯರ ಪರಿಚಯವಾ
ದಂತಾಯಿತು. ಇನ್ನು ಈ ಆಚಾರ್ಯರ ಪರಿಚಯನನ್ನೂ, ಇವರ ಸಾಹಿತ್ಯಪರಿಚಯ
ವನ್ನೂ ವಿಸ್ತಾರವಾಗಿ ಮಾಡಿಕೊಡುನ ನಿಶ್ಚಯ ಮಾಡಿದ್ದರಿಂದ ಬೇರೆಯಾಗಿಯೆ
ಒಂದು ಪ್ರಶಸ್ತಿ ಗ್ರಂಥವನ್ನು ಪ್ರಕಟಿಸಲು ಗೊತ್ತು ಮಾಡಿದ್ದೇನೆ.
ಜಿ. ಬಿ. ಜೋಶಿ
----------------------------------------------
ಪರಿವಿಡಿ
ಆಚಾರ್ಯರ ಆಚಾರ್ಯರು i-xiv
೧.ಕ್ರೀಡಾವಿವಾಹ ೧
೨.ಸತಿಯ ವಿಜಯ ೧೬
೩.ಪತಿಗಳ ಸ್ವಾತುತ್ರ್ಯಹಾನಿಯು ೨೮
೪.ಪಂಡಿತಬೃಹಲ್ಲಾಂಗೂಲವ್ಯಾಘ್ರ ೪೯
೫.ಪ್ರಣಯದರ್ಪಣ ೭೩
೬.ಎದೆಯ ವ್ಲೇಲಿನ ಕಲ್ಲು ಇಳಿಯಿತು ೯೮
೭.ದುರ್ಮತಿಯ ದುರ್ವಿಲಾಸ ೧೩೫
೮.ರಾಖೀ ಬಂಧನ ಬಂಧುತ್ವ ೧೪೯
೯.ಅನರ್ಥ ನಿವಾರಣವು ೧೬೦
೧೦.ಶಿಲ್ಪಿಗನ ಶಿಲಾಮೂರ್ತಿ ೧೭೩
೧೧.ಪ್ರೇಮವಿಜಯ ೨೦೬
======================================
ಬರಲಿರುವ ಗ್ರಂಥಗಳು
ದಿವಂಗತ ಕೆರೂರ ವಾಸುದೇವಾಚಾರ್ಯರ
೧.ಬೆಳಗಿದ ದೀಪಗಳು (ಚರಿತ್ರಾತ್ಮಕ ಕಥೆಗಳು)
೨.ಬೆಳ್ಳೀ ಚಿಕ್ಕಿ (ಪತ್ತೇದಾರಿ ಕಥೆಗಳು)
೩.ತೊಳೆದ ಮುತ್ತು ( ಸಾಮಾಜಿಕ ಕಥೆಗಳು)
===========================================
ಕ್ರೀಡಾವಿವಾಹ
ಸೂರ್ಯವಂಶಸಂಭವನಾದ ನಾಗಾದಿತ್ಯನೆಂಬ ರಾಜನು ರಾಜಸ್ಥಾನ
ದಲ್ಲಿ ಎಡೂರ ಎಂಬ ಚಿಕ್ಕ ರಾಜ್ಯದ ಆಧಿಪತಿಯಾಗಿದ್ದನು. ಘನತೆಗೇರಿದ
ವಲ್ಲಭೀಪುರದ ಮಹಾರಾಜನಾಗಿದ್ದ ಶಿಲಾದಿತ್ಯ ಕುಲದಲ್ಲಿ ಹುಟ್ಟಿದ
ನಾಗಾದಿತ್ಕರಾಜರು ಚಿಕ್ಕದಾದ ರಾಜ್ಯದ ಅಧಿಪತಿಯಾಗಿದ್ದರೂ ಸೂರ್ಯವಂಶ
ಸಂಭವನಾದ ಅವನಿಗೆ ಆ ಕಾಲೀನರಾದ ರಾಜರಲ್ಲಿ ಬಹುಮರ್ಯಾದೆ
ಇತ್ತು. ಅಳಿದುಹೋಗಿದ್ದ ತನ್ನ ಪೂರ್ವಜರ ಘನವಾದ ವೈಭವವನ್ನು
ಮತ್ತೆ ಗಳಿಸಿಕೊಳ್ಳಬೇಕೆಂದು ಕಡುಗಲಿಯಾದ ನಾಗಾದಿಕ್ಕನು ಭಿಲ್ಲ,
ರಜಪೂತ ಮುಂತಾದ ಶೂರರಾದ ಜನಾಂಗದವರ ಸ್ತೋಮವನ್ನು
ಕಟ್ಟಿ ಕೊಂಡು ಅನುಕೂಲವಾದ ಸಮಯವನ್ನು ಕಾದುಕೊಂಡಿದ್ದನು.
ಇಂಥ ಸಂದಿನಲ್ಲಿ ಜಗದಂಬೆಯಾದ ಭವಾನಿಯು ನಾಗಾದಿತ್ಯನ
ಕನಸಿನಲ್ಲಿ ಬಂದು "ನಿನ್ನ ಮಗನು ನಿಮ್ಮ ಪೂರ್ವಜರ ಹೆಸರನ್ನು
ಮರೆಯಿಸುವಂಥ ಪ್ರತಾಪಶಾಲಿಯಾದ ಪುರುಷನಾಗುವನು" ಎಂದು ಹೇಳಿದಂತೆ
ಆಯಿತು. ತನ್ನ ಪ್ರಿಯ ಭಾರ್ಯೆಯಾದ ಪುಷ್ಪವತಿದೇವಿಯು ಎಳೆ
ಬಸಿರಿನ ಕಳೆಯಿಂದೊಡಗೂಡಿರುವ ಕಾಲಕ್ಕೆ ತನಗೆ ಬಿದ್ದಿರುವ ಕನಸು
ಸರ್ವಥಾ ನಿಜವೆಂದು ನಂಬಿ ಆ ರಾಜನು ಪರಮ ಸಂತುಸಷನಾಗಿ ರಾಣಿ
ಯನ್ನು ಅಧಿಕವಾಗಿ ಪ್ರೀತಿಸುತ್ತಲೂ ಆದರಿಸುತ್ತಲೂ ಅವಳ ಬಯಕೆ
ಗಳನ್ನು ಪೂರೈಸುತ್ತಲೂ ಇದ್ದನು. ತನ್ನ ಬಸಿರಿನಲ್ಲಿ ಒಡಮೂಡಿದ
ವರಕುಮಾಗನು ಅಲಕನಾದ ಪ್ರಭಾವಶಾಲಿಯೂ ವೀರನೂ ಆಗಲುಳ್ಳವ
ನೆಂದು ಭವಾನೀಮಾತೆಯು ಪತಿಯ ಸ್ವಪ್ನದಲ್ಲಿ ಹೇಳಿರುವದನ್ನರಿತು
ಪುಷ್ಪವತಿದೇವಿಯು ತನ್ನ ತವರುಮನೆಯವರಾದ ಪ್ರಮಾರರಾಜರ
ಕುಲದೇನತೆಯಾದ ಶ್ರೀ ಅಂಬಾಭವಾನಿಯ ದರ್ಶನಕ್ಕಾಗಿ ಒಳ್ಳೇ ಸಡಗರ
ದಿಂದ ಹೊರಟಳು.
ಪುಷ್ಪವತಿದೇವಿಯು ನಿಶ್ಚಿಂತವಾದ ಮನಸ್ಸಿನಿಂದ ಅಂಬಾಭವಾನಿಯ
ಕ್ಷೇತ್ರದಲ್ಲಿ ಹೇರಳವಾಗಿ ದಾನಧರ್ಮಗಳನ್ನು ಮಾಡಿದಳು. ಬ್ರಾಹ್ಮಣ
ಸುವಾಸಿನಿಯರ ಪೂಜೆಗಳಾದವು. ದೇವಿಗೆ ಎಲೆಪೂಜೆ ಕುಂಕುಮಪೂಜೆ,
೨ --------------------------------------------------------------------------
ಅಭಿಷೇಕ, ಆರತಿ, ಧೂಪ-ದೀಪ ನೈವೇದ್ಯಗಳ ಸಮಾರಾಧನೆಗಳಾದವು.
ಜೋಯಿಸರು ಗ್ರಹಗಳನ್ನೆಲ್ಲ ಒಂದೇ ಗೋದಲೆಯಲ್ಲಿ ಕಟ್ಟಿ ಅವುಗಳಿಂದ
ಶುಭತರವಾದ ಫಲಗಳನ್ನು ರಾಣಿಗೆ ಕೊಡಿಸಿದರು. ಅರ್ಚಕರ ಕೌಶಲ್ಯಕ್ಕೆ
ಮೆಚ್ಚಿ ಜಗದಂಬೆಯು ಬಲಪ್ರಸಾದವನ್ನೇ ಕೊಟ್ಟಳು. ಹೀಗೆ ಕೃತಾರ್ಥಳಾಗಿ
ರಾಣಿಯು ದೇವತೆಯ ಅನುಜ್ಞೆಯನ್ನು ಪಡಕೊಂಡು ತನ್ನ ರಾಜಧಾನಿಗೆ
ತೆರಳಿದಳು.
ನಾವು ಚಿಂತಿಸುತ್ತಿರುವದೊಂದಾದರೆ ದೇವರು ಮಾಡುವದು
ಮತ್ತೊಂದೇ ಆಗಿರುವದೆಂಬದು ಮನೋರಥಪ್ರವಾಸಿಗಳೆಲ್ಲರೂ ಕಂಡು
ಕೊಂಡಿದ್ದ ಸಂಗತಿಯಷ್ಪೆ? ಭವಾನೀದೇನಿಯು ಪ್ರಸನ್ನಳಾಗಿ ತನಗೆ
ಅಪ್ಪಣೆಯನ್ನು ಕೊಟ್ಟ ಸಂಗತಿಯನ್ನು ಸಂಪ್ರೀತನಾಗಿದ್ದ ತನ್ನ ಪತಿಗೆ
ಅಕ್ಕರತೆಯಿಂದ ಹೆೇಳುವೆನೆಂದೂ ತನಗಾಗತಕ್ಕ ಪುಂಸವನ ವಿಧಿಯು ಒಳ್ಳೇ
ವಿಜೃಂಭಣೆಯಿಂದ ನೆರವೇರುವದೆಂಯೂ ಅಸದ್ಯಶವಾದ ಪುತ್ರೋತ್ಸವವು
ರಾಜ್ಯದಲ್ಲೆಲ್ಲ ಹಬ್ಬಿಕೊಂಡರುವದೆಂದೂ ಯೋಚಿಸುತ್ತೆ ಅಂದಣವನ್ನೇರಿ
ಬರುತ್ತಿರುವ ಪುಷ್ಪವತಿದೇವಿಗೆ, ತನ್ನ ಸೌಭಾಗ್ಯನೌಕೆಯು ಒಮ್ಮಿಂದೊ-
ಮ್ಮೆಲೆ ದುಃ:ಖಸಾಗರದಲ್ಲಿ ಸಿಡಿದೊಡೆದು ಮುಳುಗಿ ಹೋಗುವದೆಂಬದರ
ಅಠಿಕೆಯಾಗುವದು ಹೇಗೆ?
ಸುಖಮಯವಾದ ಪಯಣಗತಿಯಿಂದೆ ಪುಷ್ಪವತಿಯು ತನ್ನ ರಾಜ
ಧಾನಿಯ ಸಮೀಪದಲ್ಲಿದ್ದ ಬೀರನಗರಕ್ಕೆ ಬಂದಿಳಿಯುವಷ್ಟರಲ್ಲಿಯೇ ದುರ್ಧರ
ವಾದ ದುರ್ವಾರ್ತೆಯು ಆ ಸೀಮಂತಿನಿಯ ಸುರಮ್ಯವಾದ ಸಂಕಲ್ಪ ಶತವನ್ನೆಲ್ಲ
ಆಕಳಿಸಿಕೊಂಡು ಅವಳ ಹೊಟ್ಟೆಯಲ್ಲಿ ದುಃಖದ ಕಿಚ್ಛನ್ನ ಹೊಯ್ದಿತು.
ದ್ರೋಹಿಗಳಾದ ಕೆಲ ಜನ ಭಿಲ್ಲರು ನಿಶ್ಚಿಂತನಾಗಿ ನಿದ್ದೆಗೈಯುತ್ತಿದ್ದ
ನಾಗಾದಿತ್ಯರಾಜನನ್ನು ಮಂಚದಲ್ಲಿಯೇ ಕಡಿದು ತುಂಡುತುಂಡಾಗಿ ಮಾಡಿ
ಕೊಂದುಹಾಕಿದ್ದರು. ಬೆಳಗಾಗುವದರೊಳಗಾಗಿಯೇ ರಾಜನ ಅರಮನೆಯು
ಸುಟ್ಟು ಬೂದಿಯಾಗಿ ಬಿದ್ದಿತ್ತು. ಆಪ್ತರಿಷ್ಟರೆಲ್ಲರೂ ಕೃತಘಘ್ನರ ಖಡ್ಗಗಳಿಗೆ
ಈಡಾಗಿ ಹತರಾಗಿಹೋಗಿದ್ದರು, ಈ ದುಃಸಹನಾದ ವಾರ್ತೆಯನ್ನು
ಕೇಳಿ ತುಂಬಿದ ಬಸಿರಿನಿಂದ ಬೆಸಲಾದ ಆ ಸುಕುಮಾರಿಯು ಸಿಡಿಲು ತಾಗಿ
ದಂತಾಗಿ ಧಡಕ್ಕನೆ ನೆಲಕ್ಕುರುಳಿ ನಿಶ್ಚೇತನಳಾಗಿ ಬಿದ್ದುಕೊಂಡಳು. ನೂರು
೩--------------------------------------------------------------------------
ಜನ್ಮಗಳಲ್ಲಿಯಾದರೇನು, ಅಬಲೆಯಾದ ಆ ಪತಿವ್ರತೆಯು ಮಾಡಿರ
ಬಹುದಾದ ಅಪರಾಧಗಳೆಷ್ಟರವು, ಅವಳಿಗಾದ ಕಠಿಣತರವಾದ ಶಿಕ್ಷೆಯೆಂಥದು!
ಆ ಕೋಮಲಾಂಗಿಯು ಎದೆ ಎದೆ ಬಡಕೊಂಡು ಕಲ್ಮರಗಳು ಕರಗುವಂತೆ
ಗೋಳಿಟ್ಟು ಅತ್ತಳು. ಆದರೆ ಉಪಾಯವೇನು? ಚಿಲಿಕೆಚಿಲಿಕೆಯಾಗಿ
ಒದೆದು ಹೋಗಿದ್ದ ಅವಳ ಎದೆಯು ಮತ್ತೆ ಗಟ್ಟಿಯಾಗುವದೆಂತು ?
ಆ ದೀನೆಯಾದ ರಾಣಿಯು ಇನ್ನಾರಿಗೆ ಶರಣು ಹೋಗಬೇಕು ?
ಅವಳಿಗೆ ನಿಲ್ಲಲು ನೆಳಲು ಕೂಡ ಇರಲಿಲ್ಲ. ಅರಮನೆಯ ಕುಲಪುರೋಹಿತರು
ಬೀರನಗರದಲ್ಲಿ ಬಂದು ನಿಂತುಕೊಂಡಿದ್ದರು. ಅವರೇ ಸ್ವಾಮಿಭಕ್ತಿಪುರಸ್ಸರ
ವಾಗಿ ಪುಷ್ಪವತಿದೇವಿಯನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡರು. ಆಶ್ರಿತರ
ಆಶ್ರಯ:ರಲ್ಲಿ ಇರುವ ಪ್ರಸಂಗವು ರಾಣಿಗೆ ಬಂದಿತೆ! ಕಾಲಚಕ್ರವೆ,
ನೀನೆಂತು ತಿರುಗುವೆ ?
ಆಪನ್ನ ಸತ್ತೆಯಾದ ಪುಷ್ಪವತಿದೇವಿಯು ಕೆಲವು ದಿವಸಗಳ ಮೇಲೆ
ಚೆನ್ನಿಗನಾದ ಕುವರನನ್ನು ಪಡೆದಳು. ಮಗುವಿನ ಸೊಗಯಿಸುವ ಮೊಗವನ್ನು
ಕಂಡು ಆ ಮಾತೆಗೆ ಸಮಾಧಾನವಾದರೂ, ಅಂತು ವಿರಾಜಿಸುವ ರಾಜ
ಕುಮಾರನನ್ನು ಪ್ರೇಮದಿಂದಿತ್ತಿ ಕೊಂಡು ಅಕ್ಕರತೆಯನ್ನು ಪಡುವ ತನ್ನ
ಪತಿರಾಜನಿಲ್ಲನಾದನಲ್ಲಾ ಎಂದು ನೆನೆಸಿ ಆ ಕೋಮಲಾಂತ:ಕರಣೆಯು
ಕಣ್ಣೀರು ಸುರಿದಳು. ಅವಯವಸೌಷ್ಯವದಿಂದ ವಿರಾಜಿಸುವ ಶುಭಾಂಗನಾದ
ಸುತನನ್ನು ಚುಂಬಿಸುವ ಮಾತೆಯ ಮುಖದಲ್ಲಿ ಆನಂದದ ದ್ರವವಿರಲಿಲ್ಲ.
ಚಿಂತಾಕುಲೆಯಾದ ಆ ಜನನಿಯ ಸ್ತನದಲ್ಲಿ ಸತ್ವ ಶಾಲಿಯಾದ ಆ ಅರ್ಭಕನ
ಹೊಟ್ಟೆ ತುಂಬುವಷ್ಟು ಹಾಲೂ ಬರುತ್ತಿದ್ವಿಲ್ಲ. ಭೂಕಾಂತನಾದ ಪತಿಯು
ತನ್ನಲ್ಲಿರಿಸಿದ ನ್ಯಾಸದ ಭಾರವನ್ನಿಳುಹಿ ತಾನಿನ್ನು ತನ್ನ ಪತಿಯ ಸಮಾಗಮ
ವನ್ನೈದುವೆನೆಂದು ಹೇಳಿ ಪುಷ್ಟವತಿಯು ತನ್ನ ಕುಮಾರನನ್ನು ಪುರೋಹಿತರ
ಮಮತಾಳುವಾದ ಪತ್ನಿಯ ಸ್ವಾಧೀನಕ್ಕೆ ಕೊಟ್ಟು ಪರಲೋಕದ ಮಾರ್ಗವನ್ನು
ಹಿಡಿದಳು.
* * * *
ಕುಮಾರ ಬೊಪ್ಪನು ಪರಭೃತನಾಗಿ ಪುರೋಹಿತರ ಮನೆಯಲ್ಲಿ ಬಿದಿ
ಗೆಯ ಚಂದಿರನಂತೆ ಬೆಳೆಯಲಾರಂಭಿಸಿದನು. ಸಾಹಸಿಯಾದ ಆ ಕ್ಷತ್ರಿಯ
೪ ---------------------------------------------------------------------
ಕುಮಾರನ ಬಾಲಲೀಲೆಗಳನ್ನು ಕಂಡು ಪುರೋಹಿತರಿಗೆ ಕೌತುಕವಾಗುತ್ತಿ
ದ್ದರೂ ಅವನನ್ನು ಹಿಡಿಯುವದು ಅವರಿಗೆ ಪ್ರಯಾಸವಾಯಿತು. ಊರಲ್ಲಿಯ
ಹುಡುಗರೊಂದಿಗೆ ವ್ಯಾಜ್ಯವನ್ನಾಡಿ ಅವರನ್ನು ಹೊಡೆದು ಬರುತ್ತಿದ್ದನು;
ಅಂಜಿಕೆಯಿಲ್ಲದೆ ನದಿಯಲ್ಲಿ ಧುಡುಮ್ಮನೆ ಹಾರಿಕೊಂಡು ಈಸುವನು;
ಮೇಯಲಿಕ್ಕೆ ಬಿಟ್ಟಿರುವ ಕುದುರೆಗಳನ್ನು ಹತ್ತಿ ಕೊಂಡು ರಭಸದಿಂದೆ ಓಡಿಸು
ವನು. ಗಗನಚುಂಬಿತವಾದ ವೃಕ್ಷಗಳನ್ನೇರಿ ಫಲಗಳನ್ನು ಕೊಯ್ಯುವನು.
ನಾಗಾದಿಕ್ಯನ ವೈರಿಗಳಿಗೆ ಈ ಕುಮಾರನ ಸಮಾಚಾರವು ತಿಳಿದರೆ ಒಳಿತಾಗ
ಲಿಕ್ಕಿಲ್ಲವೆಂದು ಪುರೋಹಿಶರು ಚಿಂತಾಕುಲರಾದರು. ಸೂರ್ಯನ ಮರಿ
ಯನ್ನು ಅಡಗಿಸಿಡುವದೆಂತು?
ಸ್ಪಾಮಿಕಾರ್ಯಕ್ಕಾಗಿ ಆ ವಿಪ್ರದಂಪತಿಗಳು ತಾವಿದ್ದ ಊರು ಬಿಟ್ಟು
ಪಾರೇಶ್ವರನೆಂಬ ಅರಣ್ಯದಲ್ಲಿ ಗುಡಿಸಲವನ್ನು ಕಟ್ಟಿಕೊಂಡು ತಮ್ಮಲ್ಲಿರುವ
ಮಹಾನ್ಯಾಸವನ್ನು ಕಾಪಾಡಿಕೊಳ್ಳುತ್ತೆ ಬಂದರು. ಈ ಮಹಾರಣ್ಯದ
ಮಧ್ಯದಲ್ಲಿ ತ್ರಿಕುಟಾದ್ರಿ ಎಂಬ ಪರ್ವತವಿದ್ದು ಅದರಡಿಯಲ್ಲಿ ನಾಗೇಂದ್ರ
ವೆಂಬ ಬ್ರಾಹ್ಮಣರ ಅಗ್ರಹಾರವಿತ್ತು. ಅಲ್ಲಿಯ ಬ್ರಾಹ್ಮಣರ ಕೈಯಲ್ಲಿ
ವಿದ್ಯೆಯನ್ನೂ ಅರಣ್ಯವಾಸಿಗಳಾದ ಭಿಲ್ಲರ ಸಂಗತಿಯಲ್ಲಿ ಶಸ್ತ್ರಾಸ್ತ್ರಗಳ ಉಪ
ಯೋಗವನ್ನೂ ಬೊಪ್ಪಕುಮಾರನು ಕಲಿಯಲಾರಂಭಿಸಿದನು. ಆಕಳುಗಳನ್ನು
ಕಾಯುವದೇ ಅವನ ಉಪಜೀವನದ ಸಾಧನವಾಗಿತ್ತು. ಅವ್ಯಾಹತವಾದ
ವ್ಯಾಯಾಮದಿಂದಲೂ ಯಥೇಚ್ಛವಾಗಿ ಸೇವಿಸುತ್ತಿರುವ ಗೋರಸದ ಪುಷ್ಟಿ
ಯಿಂದಲೂ ಸ್ವಚ್ಛವಾದ ಹವೆಯಲ್ಲಿ ಸ್ವಚ್ಛಂದವಾಗಿ ವಿಹರಿಸುವದರಿಂದಲೂ
ಬೊಪ್ಪನು ದೃಡಾಂಗನೂ ಸಶಕ್ತನೂ ರೂಪಸಂಪನ್ನನೂ ಆದ ತರುಣನಾಗಿ
ವಿರಾಜಿಸುತಲಿದ್ದನು. ಅವನ ಧೈರ್ಯವನ್ನೂ ಸಾಹಸವನ್ನೂ ಚಾತುರ್ಯ
ವನ್ನೂ ಕಂಡು ಭಿಲ್ಲ ಜನರೆಲ್ಲರೂ ಬೊಪ್ಪನೇ ತಮಗೆ ರಾಜನಾದರೆ ಒಳಿತಾ
ಗುವದೆಂದು ಎಣಿಸುತ್ತಿ ದ್ದರು,
ಪಾರೇಶ್ವರಾರಣ್ಯದಲ್ಲಿ ಪ್ರಾಚೀನಕಾಲದ ದೇವಸ್ಥಾನಗಳು ಅನೇಕ
ವಾಗಿದ್ದವು. ಜೈನರ ವಿಹಾರಗಳೂ ಬ್ರಾಹ್ಮಣರ ಆಗ್ರಹಾರಗಳೂ ನದಿ
ನಿರ್ಝರ ಸರೋವರಾದಿ ತೀರ್ಥಗಳೂ ಆ ಚಿತ್ರಮಯನಾದ ಅರಣ್ಯದಲ್ಲಿ
ಕಂಗೊಳಿಸುವದರಿಂದ ಸುರ- ಕಿನ್ನರ ಯಕ್ಷ-ಗಂಧರ್ವರು ಕುತೂಹಲದಿಂದ
೫ -----------------------------------------------------------------------------
ಅಲ್ಲಿಗೆ ಬಂದು ಆನಂದದಿಂದ ಕ್ರೀಡಿಸುತ್ತಿದ್ದರು ಕಾಲಕೂಟವಿಷದಿಂದ
ಸಂತ್ರಸ್ಥನಾಗಿ ಗಿರಿಜಾಕಾಂಕನಾದ ಸಾಕ್ಷಾತ್ ನೀಲಕಂಠನೇ ಬಿಸಿಲಿಗೆ
ಅಪ್ಪಣೆಯಿಲ್ಲದ ಆ ಶೈತ್ಯನಿವಾಸಕ್ಕೆ ಬಂದು ಸುಖದಿಂದ ಕಾಲ ಕಳೆಯು
ತ್ತಿದ್ದನು.
ಬೊಪ್ಪನು ಈ ಅರಣ್ಯದಲ್ಲಿ ತನ್ನೆ ಗೋಗಣವನ್ನು ಸಂಚರಿಸಿಕೊಂಡು
ಬರುತ್ತಿದ್ದನು. ಒಂದು ದಿನ ಭಿಲ್ಲನಾಯಕನ ಕೆಂದಾಕಳವು ಹಿಂಡಲೇ
ಇಲ್ಲ. ಕೊಡವಾಲ್ಲರೆವ ಆ ದೊಡ್ಡಾಕಳವು ಹಿಂಡದಿರಲು ನಾಯಕನಿಗೆ
ತುಸು ವಿಷಾದವಾಯಿತು. ಮರುದಿವಸವಾದರೂ ಆಕಳು ಹಿಂಡಲಿಲ್ಲ.
ನಾಯಕನು ಬೊಪನನ್ನು ಕುರಿತು, “ ಆಕಳು ಯಾಕೋ ಹಿಂಡಲೊಲ್ಲದು,
ಬೇನೆ ಬೇಸರಿಕೆನೂ ತೋರುವದಿಲ್ಲ; ಯಾರಾದರೂ ಹಿಂಡಿಕೊಳ್ಳು
ತ್ತಾರೋ ಲಕ್ಷ್ಯವಿಟ್ಟು ನೋಡು.” ಎಂದು ಹೇಳಿದನು. ಬೊಪ್ಪನು ಆ
ದಿವಸ ಆಕಳಿನ ಬೆನ್ನು ಬಿಡಲೆ ಕಾಯ್ದುಕೊಂಡು ಬಂದರೂ ಅದು
ಹಿಂಡಲೇ ಇಲ್ಲ. ಆಗ ನಾಯಕನು ಕೋಪಿಷ್ಟನಾಗಿ " ಬೊಪ್ಪರಾಯ,
ಆಕಳಿನ ಹಾಲನ್ನು ನೀನಾದರೂ ಕುಡಿಯುತ್ತಿರುವಿ, ಇಲ್ಲವೆ ಅನ್ಯರಿಗೆ
ಅನುಕೂಲನಾಗಿ ಹಿಂಡಿಕೊಳ್ಳಲಿಕ್ಕೆ ಕೊಡುವಿ. ಸಂದೇಹವಿಲ್ಲ! ” ಎಂದು
ನುಡಿದನು.
" ನಾಯಕರೆ, ನೀವು ಸಂದೇಹಗೊಳ್ಳಲು ಆಸ್ಪದವಿರುವದು. ಆದರೆ
ಆವಿನ ಹಾಲನ್ನು ನಾನು ಕುಡಿದಿಲ್ಲ. ಅನ್ಯರಿಗೂ ಕೊಡಲಿಲ್ಲ ಆವು ಹಿಂಡ
ದಿರುವದು ಆಶ್ಚರ್ಯವು. ನಾಳಿಗೆ ಇದರ ಶೋಧನನ್ನು ಮಾಡಿಯೇ
ತೀರುವೆನು."
ಬೊಪ್ಪನು ಅಂದು ಬುತ್ತಿ ತಿನ್ನಲಿಲ್ಲ ನೀರಡಿಕೆಗಾಗಿ ಹಳ್ಳಕ್ಕೆ ಹೋಗ
ಲಿಲ್ಲ; ಗೆಳೆಯರೊಂದಿಗೆ ಆಟಗಳನ್ನಾಡಲಿಲಬ್ಲ. ಆಕಳಿನ ಬೆನ್ನು ಬಿಡದಲೆ
ಅವನು ನಡೆದಿದ್ದನು. ಮೂರನೆಯದಿನ ಪ್ರಹರದಲ್ಲಿ ಆ ಧೇನುವೆ ದಟ್ಟಾಗಿ
ಬೆಳೆದಿರುವ ಗಿಡದ ಗುಂಪಿನಲ್ಲಿ ಹೊಕ್ಕಿತು. "ನಿಶ್ಚಯದವನಾದ ಬೊಪ್ಪ
ನಾದರೂ ಕಲ್ಲು-ಮುಳ್ಳುಗಳನ್ನು ಲೆಕ್ಕಿಸದೆ ಅದೇ ಗಿಡದ ಗುಂಪಿನಲ್ಲಿ
ಹೊಕ್ಕನು. ಅಕೋ! ಚಮತ್ವಾರ ನೋಡಿರಿ! ಧೇನುವು ಸರ್ಪಭೂಷಣ
ನಾದ ಯೋಗೀಶ್ವರನೋರ್ವನ ಕೈಯೊಳಗಿದ್ದ ಕಪಾಲದಲ್ಲಿ ತನ್ನ ನಾಲ್ಕೂ
೬ --------------------------------------------------------------------------
ಮೊಲೆಗಳೊಳಗಿಂದ ಸಂತತಧಾರೆಯಾಗಿ ಹಾಲು ಕರೆಯುತ್ತಿತ್ತು! ಅದನ್ನು
ಕಂಡು ಬೊಪ್ಪನು ಉದ್ರೇಕದಿಂದ "ಯಾರು ನೀನು ಶಾಪಸನೆ? ಯಾರ
ದೆಂದು ನೀನು ಈ ಆವನ್ನು ಹಿಂಡಿಕೊಳ್ಳುತ್ತಿರುನೆ? " ಎಂದು ಕೇಳಿ
ದಾಕ್ಷಣನೆ ಆ ಯೋಗೀಶ್ವರನು ಅಲ್ಲಿಯೇ ಇರುವದೊಂದು ಶಿವಲಿಂಗದಲ್ಲಿ
ಅಂತರ್ಧಾನನಾದನು. ಬೊಪ್ಪನ ಗರ್ಜನೆಯನ್ನು ಕೇಳಿ ಬಳಿಯಲ್ಲಿಯೇ
ಮತ್ತೊಂದು ಗಿಡದಡಿಯೆಲ್ಲಿ ಧ್ಯಾನಸ್ಥನಾಗಿ ಕುಳಿತಿರುವ ಹಾರೀಶ ಮಹಾ
ಮುನಿಯು ಎಚ್ಚತ್ತು ಇದೇನು ಸಮಾಚಾರವೆಂದು ಆ ಗೋವು ಗೋಪಾಕ
ರಿದ್ದೆಡೆಗೆ ಬಂದನು.
ಹಾರೀತನನ್ನು ಕಂಡಾಕ್ಸಣವೇ ಬೊಪ್ಪನು ಅವನಿಗೆ ನಮಸ್ಕರಿಸಿ
ನಡೆದ ಚಮತ್ಕಾರವಾದ ಸಂಗತಿಯನ್ನೆಲ್ಲ ನಿವೇದಿಸಿದನು. ಆ ವರ್ತಮಾನ
ವನ್ನು ಕೇಳಿ ಮುನಿಪುಂಗವನಾದ ಹಾರೀತನು ಪರಮ ಸಂತುಷ್ಟನಾಗಿ
" ವತ್ಸನೆ, ನಿನ್ನ ಯೋಗ್ಯತೆಯು ದೊಡ್ಡದು; ಪ್ರತ್ಯಕ್ಷ ಮಹೇಶ್ವರನೆ ಇಂದು
ನಿನಗೆ. ದರ್ಶನವನ್ನು ಕೊಟ್ಟನು. ನಿನಗೆ ನಿಶ್ಚಯವಾಗಿ ಉತ್ತರೆೋತ್ತರ
ಉಚ್ಛ್ರೇಯವಾಗುವದು. ನಿತ್ಯದಲ್ಲಿಯೂ ನೀನಿಲ್ಲಿಗೆ ಬಂದು ಈ ಶಿವಲಿಂಗದ
ಪೂಜೆಯನ್ನು ಮಾಡುತ್ತೆ ಹೋಗು. ಇಷ್ಟು ದಿವಸ ನಾನು ಈ ಏಕಲಿಂಗ
ದೇವರ ಪೂಜಿ ಮಾಡುತ್ತಿದ್ದೆನು. ಇನ್ನು ಮೇಲೆ ಪರಮೇಶ್ವರನ ಪ್ರೀತ್ಯಾಸ್ಪದ
ನಾದ ನಿನ್ನಿಂದಲೇ ಈ ಮಹಾಲಿಂಗದ ಪೂಜೆಯಾಗತಕ್ಕದ್ದು.” ಎಂದು
ಹೇಳಿ ಬೊಪ್ಪನಿಗೆ ಅಪ್ಪಣೆ ಕೊಟ್ಟನು.
ಈ ಸಮಾಚಾರವನ್ನರಿತು ಭಿಲ್ಲರೆ ನಾಯಕನಿಗೂ ಅತಿಶಯವಾದ
ಆನಂದವಾಯಿತು. ಭಗವತ್‌ಕೃಪೆಗೆ ಪಾತ್ರನಾಗಿದ್ದ ಬೊಪ್ಪನು ತನ್ನ
ಸ್ನೇಹಿತನಾಗಿರುವದನ್ನರಿತು ಅವನು ಕೃತಕೃತ್ಯನೂ ಆದನು. ಅಂದಿನಿಂದ
ಬೊಪ್ಪನು ಸರ್ವರಿಂದ ಆದರಿಸಲ್ಪಟ್ಟವನೂ ಸರ್ವರಿಗೆ ಮಾನ್ಯನೂ
ಆದನು. ತೇಜಃಪುಂಜನಾದ ಆ ನವತರುಣನು ರಜಪೂತ ಸರದಾರನ
ಆಢ್ಯತೆಯಿಂದ ಮೆರೆದನು ದನಕಾಯುವದನ್ನು ಬಿಟ್ಟು ಅನನು ಯುದ್ಧ
ಕಲೆಯನ್ನು ಚೆನ್ನಾಗಿ ಕಲಿತುಕೊಂಡನು. ಕುದುರೆಗಳನ್ನೇರುವದರಲ್ಲಿಯಾಗಲಿ,
ಬೇಟೆಯಾಡುವದರಲ್ಲಿಯಾಗಲಿ, ಗುರಿಯಿಟ್ಟು ಬಾಣ ಹೊಡೆಯುವದರಲ್ಲಿ
ಯಾಗಲಿ, ಕುಸ್ತಿ-ಆಟ ವ್ಯಾಯಾಮಗಳಲ್ಲಿಯಾಗಲಿ ಬೊಪ್ಪನಿಗೆ ಸರಿ
೭-----------------------------------------------------------------------
ಯಾದವರು ಆ ಪ್ರಾಂತದಲ್ಲಿ ಯಾರೂ ಇರಲಿಲ್ಲ.
* * * *
ಒಂದು ದಿನ ಬೊಪ್ಪರಾಯನು ಸಡಗರದ ಉಡಿಗೆ-ತೊಡಿಗೆಗಳನ್ನು
ಮಾಡಿಕೊಂಡು ಕುದುರೆಯನ್ನು ಕುಣಿಸುತ್ತ ಅರಣ್ಯದಲ್ಲಿ. ಸಂಚರಿಸುತ್ತಿರು
ವಾಗ ಮಂಜುಲವಾಣಿಯರಾದ ಕೆಲ ಜನ ಯುವತಿಯರು ಒಂದು
ಮಾಮರದ ಘನವಾದ ಛಾಯೆಯಲ್ಲಿ ಕುಳಿತು ಇನಿದಾದ ಗಾನವನ್ನು
ಮಾಡುತ್ತಿರುವದನ್ನು ಕಂಡು ಕುತೂಹಲಯುಕ್ತನಾಗಿ ಅವನು ಅವರ
ಬಳಿಯಲ್ಲಿಯೇ ಸುಳಿದಾಡುತ್ತಿದ್ದನು. ಕುಸುಮಮಾಲೆಯ ಮಧ್ಯದಲ್ಲಿ
ನಿರಾಜಿಸುತ್ತಿರುವ ಇಂದುವದನೆಯೋರ್ವಳ ಸೌಂದರ್ಯವನ್ನು ಕಂಡಂತೂ
ಬೊಪ್ಪಕುಮಾರನು ಮೋಹಿತನಾಗಿ ಹೋದವನು ಆ ಯುವತಿಯರು
ವಿನೋದಗೈಯುತ್ತಲೂ ಗಾನಮಾಡುತ್ತಲೂ ಕೆಲಕಾಲವನ್ನು ಕಳೆದ ಬಳಿಕ
ಸರ್ವಾಂಗ ಸುಂದರಿಯಾದ ಆ ನವತರುಣಿಯು ಉಯ್ಯಾಲೆಯನ್ನಾಡುವ
ಪ್ರಸ್ತಾಸನನ್ನು ತೆಗೆದಳು. ಆ ವಿಚಾರವು ಆಕೆಯ ಗೆಳತಿಯರೆಲ್ಲರಿಗೂ
ರುಚಿಸಿತು. ಆದರೆ ಹಗ್ಗಗಳೆಲ್ಲಿ? ಇನ್ನು ಹೇಗೆ ಮಾಡಬೇಕೆಂದು ಅವ
ಯೋಚಿಸುತ್ತಿ ರುವಾಗ ಇದೊಳ್ಳೇ ಸಮಯವೆಂದು ಬೊಪ್ಪನು ನೆಟ್ಟನೆ
ಅವಳೆದುರಿನಲ್ಲಿ ಬಂದು ನಿಂತುಕೊಂಡನು.
ಈ ನವಾವತಾರನಾದ ಭೂಮದನನನ್ನು ಕಂಡು ಆ ಯುವತಿಯ
ರೆಲ್ಲರೂ ವಿಭ್ರಮಗೊಂಡು ತಟಸ್ಥರಾಗಿ ಅವನ ದಿವ್ಯಾಂಗವನ್ನು ನೋಡುತ್ತೇ
ನಿಂತರು. ಆ ಯುವತೀವೃಂದದಲ್ಲಿ ಮುಖ್ಯಳಾಗಿದ್ದ ಕಮಲಾವತಿಯು
ಸೊಲಾಂಕೀ ಕುಲದ ಸರದಾರನ ಮಗಳು. ರೂಪವತಿಯಾದ ಆ
ದಿವ್ಯಾಂಗನೆಯು ಉತ್ತ ಮೋತ್ತಮವಾದ ವಸ್ತ್ರಾಲಂಕಾರಗಳನ್ನು ಧರಿಸಿರು
ವದರಿಂದ ಆಕೆಯ ಸೊಬಗು ಬೊಪ್ಪನನ್ನು ಮೋಹಿಸಿದ್ದು ಅರಿದಲ್ಲ!
ಅವಳಿಗಿಮ್ಮಡಿಯಾದ ಸುಂದರನಾಗಿದ್ದ ಬೊಪ್ಪಕುಮಾರನನ್ನು ಕಂಡು
ಆ ಕಾಮಿನಿಯ ಹೃದಯದಲ್ಲಿ ಅನಂಗನ ಸಂಚಾರವಾದದ್ದಾದರೂ ಸಹಜವೇ.
ಆಯತ್ತವಾಗಿ ಪ್ರಾಪ್ತವಾಗಿರುವ ಸುಸಮಯವನ್ನು ಎಂದಿಗೂ
ಹೋಗಗೊಡದವನಾದ ಬೊಪ್ಪಕುಮಾರನು ದಿಟ್ಟತನದಿಂದ ಕಮಲಾವತಿಯ
ಸಮೀಪಕ್ಕೆ ಹೋಗಿ ' ಮೋಹನಾಂಗಿ, ನಿಮ್ಮೆಲ್ಲರ ಮನಸ್ಸಿನಲ್ಲಿ ಜೋಕಾಲಿ
೮----------------------------------------------------------------------------
ಯನ್ನಾಡುವ ಇಚ್ಛೆಯಾಗಿರಲು ನಿಮಗೆ ಅನುಕೂಲನಾಗದಿರುವದು ನನಗೆ
ಉಚಿತವಲ್ಲ. ಹಗ್ಗಗಳನ್ನು ತಂದು ಕೊಡಲೇನು ?" ಎಂದು ಮಂದಹಾಸ
ಗೈಯುತ್ತೆ ಕೇಳಿದನು.
"ತಂದು ಕೊಟ್ಟರೆ ಉಪಕಾರವಾದೀತು " ಎಂದು ಕಮಲಾವತಿಯ
ಸಖಿಯೋರ್ವಳು ನುಡಿದಳು.
" ಹಾಗದರೆ ನನ್ನದೊಂದು ಮಾತನ್ನು ಈ ಕಮಲಾವತೀದೇವಿಯು
ಕೇಳಿದರೆ ನಾನು ನಿಮ್ಮ ಮಾತು ಕೇಳತಕ್ಕವನು. ” ಎಂದು ಬೊಪ್ಪನು
ಕಮಲಾವತಿಯ ಮುಖವನ್ನು ನೋಡುತ್ತೆ ನುಡಿದನು.
"ಏನು ಮಾತದು?” ಎಂದು ಕಮಲಾವತಿಯು ಎಳೆನಗೆಯನ್ನು
ತಳೆದು ಕೇಳಿದಳು.
" ನೀವು ಜೋಕಾಲಿಯನ್ನಾಡಿದ ಬಳಿಕ ನನ್ನ ಕೂಡ ಬೇರೊಂದು
ಆಟವನ್ನಾಡಬೇಕು.
ಈ ಮಾತಿಗೆ ಯಾಕಃಗಲೊಲ್ಲದೆಂದು ಆ ಮುಗ್ದೆಯು ಬೊಪ್ಪಕುಮಾರ
ನಿಗೆ ವಚನವನ್ನು ಕೊಟ್ಟ ಬಳಿಕ ಆ ತರುಣನು ತನ್ನ ಕುದುರೆಯನ್ನೇರಿ
ಕೊಂಡು ಹೋಗಿ ಅಲ್ಪಕಾಲದಲ್ಲಿಯೇ ಹಗ್ಗಗಳನ್ನು ತೆಗೆದುಕೊಂಡು ಬಂದು
ಆ ನಾರಿಯರು ಕುಳಿತಿರುವ ಮಾವಿನಗಿಡಕ್ಕೆ ಜೋಕಾಲಿಯನ್ನು ಕಟ್ಟಿ
ಕೊಟ್ಟನು. ಬೊಪ್ಪರಾಯನು ತೂಗುವವನು. ಚಲುವೆಯರಾದ ಆ ಚಪಲೆ
ಯರು ಸುಸ್ವರವಾದ ಗಾನದೊಂದಿಗೆ ಜೋಕಾಲಿಯನ್ನಾಡುವವರು ! ಆ
ಮನೋಜ್ಞವಾದ ಕ್ರೀಡಾವಿಲಾಸವನ್ನು ಬಣ್ಣಿಸಬೇಕಾದರೆ ಪರಮ ರಸಿಕನಾದ
ಕವಿಯೇ ಬೇಕಲ್ಲದೆ ನಮ್ಮಂಥವರ ತುತ್ತು ಅದಲ್ಲ.
ಆಂದೋಲನಮಹೋ್ತ್ಸವವು ಮುಗಿದ ಬಳಿಕ ಕಮಲಾವತಿಯು ಲೀಲಾ
ವಿಲಾಸದಿಂದ ಬೊಪ್ಪರಾಯನನ್ನು ಕುರಿತು “ ಮುಂದಿನ ಆಟವಾವದು? ”
ಎಂದು ಕೇಳಿದಳು
" ವಿವಾಹಕ್ರೀಡೆ.” ಎಂದು ಆ ಮದನಸುಂದರನು ಗಾಂಭೀರ್ಯದಿಂದ
ನುಡಿದನು.
ಈ ಮಾತು ಕೆಳಿದಾಕ್ಷಣವೇ ಕಮಲಾವತಿಯೂ ಕೆಲ ಜನ ಸಖಿಯರೂ
ಕೂಡಿ ಪರಿಹಾಸಗೈದು ನಕ್ಕರು. ಕಮಲಾವತಿಯ ಇಂಗಿತವನ್ನರಿತವಳಾದ
೯ ------------------------------------------------------------------------------
ಸಖಿಯೋರ್ವಳು ಆ ವಿನೋದಗಾರ್ತಿಯರನ್ನು ತಡೆದು " ಯಾಕೆ ಹಾಗೆ
ನಗುವಿರಿ ಚದುರೆಯರೆ ! ಕಮಲಾವತೀ, ಈ ಪ್ರಭಾವಶಾಲಿಗಳು ಹೇಳಿದ
ಆಟವನ್ನಾಡಲು ನೀನು ವಚನಕೊಟ್ಟಿರುವಿ. ಇನ್ನು ಬಿಟ್ಟಿದ್ದಲ್ಲ. ಈ ಹೊಸ
ಆಟವು ಬಹು ವಿನೋದಪರವಾವದ್ದಾಗುವದೆಂದು ನನಗೆ ತೋರುತ್ತದೆ. "
ಎಂದು ನುಡಿದಳು. ಆ ವಿಗಡೆಯರಲ್ಲಿ ಈ ವಿಷಯದ ಭವತಿ ನಭವತಿಯಾಗಿ
ಕಡೆಗೆ ಮದುವೆಯ ಆಟವನ್ನೂಡುವದು ನಿಶ್ಚಿತವಾಯಿತು.
ಸಂಗಡಲೆ ದೊಡ್ಡ ಸಮಾರಂಭವೆನಿಸಿತು. ಕೆಲ ಜನ ಸಖಿಯರು
ಹೂಗಳನ್ನು ಕೊಯ್ದು ತಂದರು. ಕೆಲವರು ವಿಚಿತ್ರವರ್ಣದ ಪತ್ರ ಪಲ್ಲವ
ಗಳನ್ನು ತಂದರು. ಕೆಲವರು ಅಕ್ಷತೆಗಳನ್ನು ಸಿದ್ಧಗೊಳಿಸಿದರು. ಅವರೆಲ್ಲರೂ
ಕುಳಿತಿದ್ದ ವಿಸ್ತೀರ್ಣವಾದ ಮಾಮರವೇ ವಿವಾಹಮಂಟಸವಾಯಿತು.
ಪುರೋಹಿತಗಿತ್ತಿಯಾದವಳು ಕಮಲಾವತಿಯ ಸೆರಗಿಗೆ ಬೊಪ್ಪರಾಯನ
ಉತ್ತರೀಯದ ತುದಿಯನ್ನು ಕಟ್ಟಿ ಗಂಟುಹಾಕಿದಳು. ಓರ್ವ ಸಖಿಯು
ವಧೂವರರ ಕೊರಳಿಗೆ ಪುಷ್ಪ ಮಾಲೆಗಳನ್ನು ತೊಡಕಿಸಿದಳು. ಮತ್ತೊರ್ವಳು
ಅವರ ಹಣೆಗೆ ಕುಂಕುಮಾಕ್ಷತೆಗಳನ್ಸ್ಟಿಟ್ಟಳು. ವಧೂವರರು ಮಾವಿನಗಿಡದ
ಸುತ್ತಲೂ ತಿರುಗಿ ಸಪ್ತಪದಿಯನ್ನು ಮಾಡಿದರು, ಈ ವಿಧಾನಗಳೆಲ್ಲ
ಸಖೀಜನರಿಗೆ ಆಟವೇ ಆಗಿ ತೋರಿದ್ದರೂ ಪ್ರೇಮ ಸಂಬದ್ಧರಾದ ಆ ವಧೂ
ವರರ ಮನೋವೃತ್ತಿಯು ಬಹು ಚಮತ್ಕಾರವಾದದ್ದಾಗಿತ್ತು ಅನ್ಯೋನ್ಯರ
ಸ್ಪರ್ಶದಿಂದ ಅವರ ಅವಯವಗಳು ಕಂಪಿತವಾದವು. ತಮ್ಮ ತಮ್ಮ
ಮನಸ್ಸಿನಲ್ಲಿ ತಾವು ಸತಿಪತ್ನಿಯರಾದೆವೆಂದು ಅವರು ಭಾವಿಸಿಕೊಂಡರು.
ಸಖೀಜನರ ವಿನೋದಗಳೆಲ್ಲ ಪ್ರೇಮಪರವಶಳಾದ ಕಮಲಾವತಿಗೆ ವ್ಯತ್ಯಾಸ
ವಾಗಿ ತೋರಿದವು.
ವಿನೂತನವಾದ ಈ ಕ್ರೀಡಾವಿವಾಹವು ಸಾಂಗವಾಗಿ ಮುಗಿಯಿತು.
ತಾನಿನ್ನು ಮನೆಗೆ ತೆರಳುವ ಸಮಯ ಬಂದಿತೆಂದು ಕಂಡ ಕಮಲಾವತಿಯು
ಉದ್ವಿಗ್ನಳಾದಳು, ತಾನು ರಚಿಸಿದ ಕುಸುಮಮಾಲೆಯನ್ನು ಆ ವಧೂಮಣಿಯು
ಭೊಪ್ಪರಾಯನ ಕೊರಳಿಗೆ ಹಾರಿ ವಿರಹದ ಭೀತಿಯಿಂದ ಕಣ್ಣಿಗೆ ನೀರು
ತಂದಳು. ಆ ಧೀರನಾದ ಕುಮಾರನು ತನಗುಂಟಾಗುವ ವಿರಹವ್ಯಥೆಯನ್ನು
ಹೇಗಾದರೂ ಸಹಿಸಬಲ್ಲವನಾಗಿದ್ದನು, ಆದರೆ ಕಮಲಾವತಿಯ ನಯನ
೧೦ ------------------------------------------------------------------------
ಗಳಲ್ಲಿ ಮಿಡಿದಿರುವ ಕಂಬನಿಗಳನ್ನು ಕಂಡು ಅವನೆದೆಯಲ್ಲಿಯೂ ಶೂಲವು
ಚುಚ್ಚಿದಂತಾಗ್ಕಿ ಕೋಪಾಗ್ನಿಯ ಕಿಡಿಗಳನ್ನುಗುಳುವ ಅವನ ಕಣ್ಣುಗಳು
ಆಶ್ರುಕಲುಷಿತವಾದವು. ಬಳಿಯಲ್ಲಿ ಸಖೀಜನರಿರುವದನ್ನು ಮರೆಶುಬಿಟ್ಟು
ಬೊಪ್ಪರಾಯನು ಕಮಲಾವತಿಯನ್ನು ಭರದಿಂದೆ ಆಲಿಂಗಿಸಿ “ ಪ್ರಿಯೆ
ಈ ವಿರಹವು ಅಲ್ಬಕಾಲದ್ದು. " ಎಂದು ಹೇಳಿದನು. ಅನಿರ್ವಹವಾಗಿದ್ದ
ಆ ಪ್ರಿಯಜನರ ವಿಯೋಗವು ಬೇಗನೆ ಸಂಭವಿಸಿತು. ಪರಸ್ಪರರನ್ನು
ಹಿಂತಿರುಗಿ ನೋಡುತ್ತೆ ನೋಡುತ್ತೆ ಬಾಷ್ಪಲೋಚನರಾದ ಆ ಪ್ರಿಯಜನರು
ಹೊರಟುಹೋದರು.
ಕಮಲಾವತಿ ಬೊಪ್ಪರಾಯರ ರಹಸ್ಯವು ಕಮಲಾವತಿಯ ತಂದೆಗೆ
ತಿಳಿದಿರಲಿಲ್ಲ. ಹೇಳುವವರು? ಉಪವರಳಾದ ತನ್ನ ಮಗಳ ಮದುವೆ
ಯನ್ನು ಮಾಡಬೇಕೆಂದು ಕಮಲಾನತಿಯ ತಂದೆಯಾದ ಸೊಲಾಂಕಿ
ಸರದಾರನು ಯೋಗ್ಯ ಸ್ಥಳಗಳೆಲ್ಲಿ ಅವಳನ್ನು ಕೊಡುವದು ನಿಶ್ಚಯಿಸಿದನು.
ಈ ಸಂಗಶಿಯನ್ನರಿತು ಕಮಲಾವತಿಯ ಸ್ಥಿತಿಯು ಅಡಕೊತಿನಲ್ಲಿ ಸಿಕ್ಕ
ಅಡಿಕೆಯಂತಾಯಿತು. ತನಗೆ ಪ್ರಿಯನೂ ಪತಿಯೂ ಆಗಿರುವ ಬೊಪ್ಪ
ರಾಯನನ್ನು ಬಿಟ್ಟು ಅವನ ಪಾಣಿಗ್ರಹಣಕ್ಕೆ ಸಿದ್ಧಳಾಗುವದು ಹೀಗೆ
ಒಲ್ಲೆನೆನ್ನುವಳೆ, ಏನು ಕಾರಣವನ್ನು ಹೇಳಬೇಕು? ಸೊಲಾಂಕಿಕುಲ
ಸಂಭೂತೆಯಾದ ಆ ಧೀರೆಯು ಧೈರ್ಯವನ್ನು ತಾಳಿ ರುಕ್ಮಿಣೀದೇವಿಯು
ಶ್ರೀಕೃಷ್ಣನಿಗೆ ಬರೆದ ಪತ್ರದ್ದೊಂದು ಪ್ರತಿ ಮಾಡಿ ಅದನ್ನು ಬೊಪ್ಪ ರಾಯನ
ಕಡೆಗೆ ಕಳಿಸಿದಳು. ಬೊಪ್ಪ ಕುಮಾರನಾದರೂ ಭಿಲ್ಲನಾಯಕರೊಡನೆ
ಆಲೋಚನೆಗೈದು " ಮತ್ತೊಂದು ರುಕ್ಕ್ಮಿಣೀಹರಣನಾಗುವದು " ಎಂದು
ಅವನು ಕಮಲಾವತಿಗೆ ತಿಳಿಸಿದನು.
ಕಮಲಾವತಿಯ ತಂದೆಯೂ ಅವನು ನಿಯಮಿಸಿದ ವರಪಕ್ಷದವರೂ
ಜೋಯಿಸರನ್ನೂ ಸಾಧುಸಂತರನ್ನೂ ಕರೆಸಿ ಈ ಸಂಬಂಧವು ಎಷ್ಟರ ಮಟ್ಟಿಗೆ
ಕೂಡಿಬರುವುದೋ ಎಂದು ವಿಚಾರಿಸ ತೊಡಗಿದರು. ಜೋಯಿಸರ ಗಣಿತದಲ್ಲಿ
ಈ ಸಂಬಂಧವು ಗೌಣವಾಗಿ ಕಂಡಿತು. ಜ್ಞಾನಿಯಾದ ಸಾಧು ಓರ್ವನು.
ಕಮಲಾವತಿಯ ಹಸ್ತವನ್ನು ಪರೀಕ್ಷಿಸಿ ಇವಳು ಈ ಮೊದಲೇ ವಿವಾಹಿತ
೧೧ ------------------------------------------------------------------------------
ಳಾಗಿರುವಳೆಂದು ಹೇಳಿದನು.
ಈ ನಿರ್ಣಯದಿಂನ ವಿವಾಹದ ವಿಚಾರವಂತೂ ನಿಂತೇಹೋಯಿತು.
ಮಾನಧನನಾದ ಆ ಸೊಲಾಂಕಿ ಸರದಾರನ ಹೆಸರಿಗೆ ಕಲಂಕವು ತಗಲಿ
ದಂತಾಗಿ ಅನನ ಕೋಪಾಗ್ನಿಯು ಪ್ರ ಜ್ವಲಿತವಾಯಿತು. ಕಮಲಾವತಿಯನ್ನು
ಏಕಾಂತದಲ್ಲಿ ಕರೆಸಿ ತಂದೆಯು ಅವಳನ್ನು ನಿರ್ಭತ್ಸಿಸಿ, ನಿಜವಾದ ಸಂಗತಿಯನ್ನು
ನೀನು 'ಹೇಳಲೇಬೇಕೆಂದು ಸಾಧಿಸಿ ಕೇಳಿದನು. ಈ ಸಮಯದಲ್ಲಿ ಸತ್ಯವನ್ನು
ಹೇಳದಿದ್ದರೆ ಸತ್‌ಕುಲಜೆಯಾದ ತನ್ನ ಹೆಸರಿಗೆ ಕಪ್ಪುತಗಲುವದೆಂದು
ತಿಳಿದು ಕಮಲಾವಕಿಯು ನಡೆದ ವಿದ್ಯಮಾನವನ್ನೆಲ್ಲ ನುಡಿದು ಹೇಳಿದಳು,
ಮಗಳಲ್ಲಿ ಕುಕರ್ಮದ ದೋಷವಿಲ್ಲೆಂದರಿತ ಆ ಸರದಾರನ ಮನಸ್ಸಿಗೆ
ಸಮಾಧಾನವಾದರೂ ಗುರುಜನರ ಅನುಜ್ಞೆಯಿಲ್ಲದೆ ಅಜ್ಞಾತಕುಲಶೀಲನಾದ
ತರುಣನೊಡನೆ ಕಮಲಾವತಿಯು ರಹೆಸ್ಕದಲ್ಲಿ ಮದುವೆ ಮಾಡಿಕೊಂಡದ್ದು
ಕಂಡು ಅವನು ಅವಳಲ್ಲಿ ಅತ್ಯಂತವಾದ ಕೋಪವನ್ನು ತಳೆದನು. ಮಗಳ
ಮೇಲಿಷ್ಟು ಕೋಪವನ್ನು ತಾಳಿದವನು ಉದ್ದತನಾದ ಆಳಿಯನ ಮೇಲೆ
ಸಿಟ್ಟ ಗೆದ್ದದ್ದು ಹೆಚ್ಚಿನದೆಲ್ಲ.
ಬೊಪ್ಪರಾಯನಿದ್ದ ಸ್ಥಳವು ಕಮಲಾವತಿಯ ತಂದೆಯ ಅಧಿಕಾರ
ಕ್ಕೊಳಗಾದದ್ದಿತ್ತು. ಬೊಪ್ಪರಾಯನನ್ನು ಹಿಡಿತರಲು ಸರದಾಠನು
ನಾಲ್ಕೂ ಕಡೆಗೂ ತನ್ನ ಜನರನ್ನು ಕಳಿಸಿದನು. ಕಮಲಾವತಿಗೆ ಮತ್ತೊಂದು
ಮದುವೆಯನ್ನು ಮಾಡುವ ವಿಚಾರವು ರಹಿತವಾದ ಬಳಿಕ ಭಿಲ್ಲರ ನಾಯಕನಿಗೆ
ತನ್ನೊಡೆಯನಾದ ಸೊಲಾಂಕಿ ಸರದಾರನೊಡನೆ ವ್ಯಾಜ್ಯಮಾಡಲು
ಆಸ್ಪದವು ಉಳಿಯಲಿಲ್ಲಾದ್ದರಿಂದ ಬೊಪ್ಪನ ಬೆನ್ನು ಕಟ್ಟಿ ತನ್ನ ಸ್ವಾಮಿಗೆ
ದ್ರೋಹಿಯಾಗುವದು ಅವನಿಗೆ ಸರಿಯಾಗಲಿಲ್ಲ. ಬೊಪ್ಪನು ಏಕಾಕಿಯಾದನು.
ಅನನೆಷ್ಟು ಸಮರ್ಥನೂ ಸಾಹೆಸಿಯೂ ಚತುರನಾದ ವೀರನೂ ಆಗಿದ್ದರೂ
ಫಲವೇನು? ಬಲವಂತನಾದ ಸಂಸ್ಥಾನಾಧಿಪತಿಯೊಡನೆ ಒಬ್ಬೊಂಟಗನಾದ
ಬೊಪ್ಸರಾಯನು ಕಾದುವದೆಂತು? ' जीवनरा द्रशतानि पश्यात ' ಎಂಬಂತೆ
ಆ ಕ್ಷತ್ರಿಯ ಕುಮಾರನು ಚಿತ್ತೂರ ರಾಜಧಾನಿಗೆ ಬಂದುಬಿಟ್ಟನು.
ಒಂದಾನೊಂದು ಕಾಲದಲ್ಲಿ ಆರ್ಯಾವರ್ತದ ಚಕ್ರವರ್ತಿಗಳಾದ
ಪ್ರಮಾರರ ವಂಶಸ್ಥನಾದ ಓರ್ವ ರಾಜನು ಚಿತ್ತೂರಿನ ರಾಜನಾಗಿದ್ದನು.
೧೨------------------------------------------------------------------------
ಅವನ ಕಾಲದಲ್ಲಿ ಚಿತ್ತೂರಿನ ರಾಜ್ನವಾದರೂ ಸಾಮಾನ್ಯವಾದದ್ದಾಗಿದ್ದಿಲ್ಲ.
ಅನೇಕ ಜನ ಮಾಂಡಲಿಕ ರಾಜರು ಅವನ ಅಧಿಪತ್ಯಕ್ಕೆ ಒಳಗಾಗಿದ್ದರು.
ಆ ಮಾಂಡಲಿಕರಲ್ಲಿ ಕಮಲಾವತಿಯ ತಂದೆಯೂ ಒಬ್ಬನಾಗಿದ್ದನು.
ಬೊಪ್ಪ ರಾಯನು ಪ್ರಮಾರ ಕುಲದವ ದೌಹಿತ್ರನಾಗಿರುವ ಸಂಗತಿ
ಯನ್ನರಿತು ಚಿತ್ತೂರಿನ ರಾಜನು ಅವನನ್ನು ತನ್ನ ಮಾಂಡಲಿಕನನ್ನೂಗಿ
ಮಾಡಿಕೊಂಡು ಅವನಿಗೊಂದು ಪ್ರಾಂತವನ್ನು ಉಂಬಳಿಯಾಗಿ ಹಾಕಿ
ಕೊಟ್ಟನು. ಅಸಹಾಯಶೂರನಾದ ಬೊಪಾಪ ರಾಯನು ತನ್ನ ಪರಾಕ್ರಮ
ವನ್ನು. ಪ್ರಕಟಮಾಡಿ ಒಬ್ಬೊಬ್ಬರನ್ನಾಗಿ ಚಿತ್ತೂರಿನ ವೈರಿಗಳನ್ನು ಮುರಿದು
ಹಾಕಿ ಆದರಕ್ಕೆ ಪಾತ್ರನಾದನು. ಚಿತ್ತೂ ರ ರಾಜ್ಯ ದ ಮಾಂಡಲಿಕ
ರೆಲ್ಲರೂ ಹಿಂದೆ ಬಿದ್ದರು. ಬೊಪ್ಸನೋರ್ವನೆ ಆ ರಾಜಸಭೆಯ ಮುಖ್ಯಾ:
ಲಂಕಾರನಾದನು. ನಮ್ಮ ಕಥಾನಾಯಕನ ಉತ್ಶ್ರೇಯವನ್ನು ಕಂಡು
ಉಳಿದ ಮಾಂಡಲಿಕರೆಲ್ಲ ಹೊಟೆಕಿಚ್ಛಾಯಿತು. ಹೇಗಾದರೂ ಮಾಡಿ
ಬೊಪ್ಸನ ಅಧ್ವರ್ಯವನ್ನು ಮುರಿಯಬೇಕೆಂದು ಅವರು ಸಮಯಪ್ರತಿೀಕ್ಷೆ
ಯನ್ನು ಮಾಡುತ್ತಲರಯವಾಗ ವಾಯವ್ಯಪ್ರಾ ೦ತದ ನಿವಾಸಿಯಾದ ಪ್ರಬಲ
ನಾದ ಯವನರಾಜನೊಬ್ಬನು ಚಿತ್ತೂರಿನ ಮೇಲೆ ಸಾಗಿಬಂದನು. ಆಗ
ಮಾಂಡಲಿಕರೆಲ್ಲರೂ ರಾಜನನ್ನು ಕುರಿಕು “ಬೊಪ್ಪನೋರ್ವನೆ ನಿಮಗೆ
ಅಭಿಮತನಾದ ವೀರನಾಗಿರಲು ನಮ್ಮಿಂದ ಪ್ರಯೋಜನವೇನು ? ಈಗ
ಬಂದೊದಗಿದ ಪರರಾಯರ ಅಭಿಯೋಗವನ್ನು ಅವನೇ ನಿಸ್ತರಿಸಿಕೊಳ್ಳಲಿ.”
ಎಂದು ನಿಷ್ಕುರವಾಗಿ ಹೇಳಿದರು.
ಪರಮೇಶ್ವರನ ಪ್ರೀತಿಪಾತ್ರನಾದ ಬೊಪ್ಪರಾಯನು ಪರಚಕ್ರ ವನ್ನು
ಓಡಿಸಲು ರಾಜನಿಂದ ವೀಳ್ಯವನ್ನೆತ್ತಿ ದನು. ಸಾಹಸಿಗಳಾದ ಚಿತ್ತೂರಿನ
ಭಟರನ್ನು ಕಟ್ಟಿಕೊಂಡು ಬೊಪ್ಪನು ಶತ್ರುಗಳೊಂದಿಗೆ ಆವೇಶದಿಂದ ಕಾದಿ
ಅವರನ್ನು ಅಲ್ಪ ಕಾಲದಲ್ಲಿಯೆ ಓಡಿಸಿಬಿಟ್ಟನು. ತನ್ನ ಭಗಿನೀಸುತನ
ವಿಜಯದ ವಾರ್ತೆಯನ್ನು ಕೇಳಿ ಚಿತ್ತೂರಿನ ರಾಜನಿಗೆ ಪರಮಾವಧಿಯ
ಸಂತೋಷವಾಯಿತು. ಅಂದಿನಿಂದ ಬೊಪ್ಪನ ತಲೆಯ ಮೇಲೆ ಚೌರಗಳು
ಹಾರಲಾರಂಭಿಸಿದವು. ರಾಜ್ಯದಲ್ಲಿ ಕರ್ತುಮಕರ್ತುಂ ಶಕ್ತಿಯುಳ್ಳವನು
ಎಂದರೆ ಬೊಪ್ಪನೊಬ್ಬನೇ!
೧೩-------------------------------------------------------------------
ಆಗ ಕಮಲಾವತಿಯ ತಂದೆಯ ಕಣ್ಣುಗಳು ತೆರೆದವು. ವಿನೀತನಾಗಿ
ಅವನು ಬೊಪ್ಪನ ಬಳಿಗೆ ಬಂದು ಕಮಲಾವತಿಯನ್ನು ಪರಿಗ್ರಹಿಸಬೇಕೆಂದು
ಬೇಡಿಕೊಂಡನು. ಅವನನ್ನು ಕುರಿತು ಬೊಪ್ಪರಾಯನು " ಅಭಿಮಾನಿ
ಯಾದ ಸೊಲಾಂಕಿ ಕುಲಸಂಭವನೆ, ನಾನು ನಿನ್ನ ಮಗಳ ಗಂಡನಾಗಿದ್ದರೂ
ನಿನ್ನನ್ನು ನನ್ನ ಮಾಂಡಲಿಕನನ್ನಾಗಿ ಮಾಡಿಕೊಂಡ ಬಳಿಕೇ ನಿನಗೆ ನಾನು
ಮಾವನೆಂದು ಕರೆಯುವೆನು. ವಲ್ಲಭೀಪುರವರಾಧೀಶ್ವರರ ವಂಶಸಂಭವನಾದ
ನಾನು ನಿನ್ನೊಡನೆ ಶರೀರಸಂಬಂಧವನ್ನು ಮಾಡಲಿಕ್ಕೆ ಅಯೋಗ್ಯನಾಗಿದ್ದೆ
ನಲ್ಲವೆ ? * ಎಂದು ಹಂಗಿಸಿ ನುಡಿದನು.
ಈ ವರ್ತಮಾನವನ್ನು ಕೇಳಿ ಕಮಲಾವತಿಗೆ ಅಭಿಮಾನವೂ ಅತಿ
ಆನಂದವೂ ಆದರೂ ತನ್ನ ಪ್ರಾಣಕಾಂತನು ವೃಥಾಭಿಮಾನಕ್ಕೀಡಾಗಿ
ತನ್ನನ್ನು ನಿಷ್ಕಾರಣವಾಗಿ ದೂರಿರಿಸಿ ದುಃಸಹವಾದ ವಿರಹವ್ಯಥೆಗೆ ಈಡು
ಮಾಡುತ್ತಾನಲ್ಲಾ ಎಂದು ವ್ಯಸನಪಟ್ಟಳು.
" ನನ್ನ ಮದುವೆಯು ಕಡೆಗೆ ಆಡುವ ಅಟವಾಯಿತಲ್ಲೆ ! ಪ್ರಾಣ
ಕಾಂತರೆಂಥ ದೊಡ್ಡ ಪ್ರತಿಜ್ಞೆಯನ್ನು ಮಾಡಿರುವರು ! ನನ್ನನ್ನು ಕರೆಸಿ
ಕೊಳ್ಳಬೇಕೆಂದು ನಾನವರಿಗೆ ಪತ್ರ ಬರಕೊಂಡು ಕೇಳಿಕೊಂಡರೆ ಅವರು
ತಮ್ಮ ಪ್ರತಿಜ್ಞೆಯನ್ನು ಭಾರ್ಯೆಗಾಗಿ ಹಿಂದಿಡಲಿಕ್ಕಿಲ್ಲವೇನು ? ಅವರ
ಮನೋಹರವಾದ ಮುಖನನ್ನು ನಾನೆಂದು ಕಾಣುವೆನೆಂದು ಹಲಬುತ್ತಿರುವ
ಚಿಂತೆ ಅವರಿಗೆ ಇರಲಿಕ್ಕಿಲ್ಲವೆ? ” ಎಂದು ಚಿಂತಿಸಿ ಉಸುರ್ಗರೆದಳು.
ಆದದ್ದು ಆಗಲಿ, ಪ್ರಿಯನಿಗೊಂದು ಪತ್ರವನ್ನು ಬರೆದು ಕಳಿಸಲೇಬೇಕೆಂದು
ಆ ಕಾಂತಸಂದರ್ಶನಲಾಲಸೆಯು ನಿಶ್ಚಯಿಸಿದಳು.
ಇತ್ತ ಬೊಪ್ಪರಾಯನು ಸೌರಾಷ್ಟ್ರದೇಶವನ್ನು ಜಯಿಸಲು ಸಾಗಿ
ಹೋದಾಗ ಚಿತ್ತೂರ ರಾಜನ ಮಾಂಡಲಿಕರೆಲ್ಲರೂ ಸ್ವಾಮಿದ್ರೋಹಿಗಳಾಗಿ
ಬಂಡುಮಾಡಿ ಅರಮನೆಯನ್ನು ಮುತ್ತಿ ಮುರಿದುಹಾಕಿ ರಾಜನನ್ನೂ,
ಅನನ ಪುತ್ರಕಲತ್ರಾದಿಗಳನ್ನೂ ಸಂಹರಿಸಿಬಿಟ್ಟರು. ಬೊಪ್ಪರಾಯನು
ವಿಜಯಿಯಾಗಿ ಮರಳಿ ಬರುವದರೊಳಗಾಗಿ ಈ ಅನರ್ಥಗಳೆಲ್ಲ ಮುಗಿದು
ಹೋಗಿದ್ದವು. ಆ ಪ್ರತಾಪಶಾಲಿಯ ಆಗಮನದಿಂದ ಮಾಂಡಲಿಕರೆಲ್ಲರೂ
ಬೆದರಿ ತಮ್ಮ ತಮ್ಮ ಊರುಗಳಿಗೆ "ಯಃ ಪಲಾಯತಿ ಸ ಜೀವತಿ' ಎಂಬ
೧೪ ---------------------------------------------------------------------------
ನ್ಯಾಯವನ್ನನುಸರಿಸಿ ಓಡಿಹೋದರು.
ಚಿತ್ತೂರಿಗೆ ಇನ್ನು ಬೊಪ್ಪರಾಯನೇ ಒಡೆಯನು. ಪರಮಾತ್ಮನ
ಅನುಗ್ರಹನೇ ಅವನ ಮೇಲೆ. ಆಘಟತಘಟನೆಯಾಗಿ ಅದೃಷ್ಟಪೂರ್ವವಾದ
ರೀತಿಯಿಂದ ಅವನು ದೊಡ್ಡದೊಂದು ರಾಷ್ಟ್ರಕ್ಕೆ ಅಧಿಪತಿಯಾದದ್ದು
ಆಶ್ಚರ್ಯವೇನು? ರಾಜಕಾರಣಧುರಂಧರನೂ ಪರಾಕ್ರಮಿಯೂ ಆದ
ಬೊಪ್ಪರಾಯನಿಗೆ ಮಾಂಡಲಿಕರೆಲ್ಲರೂ ಬೇಗನೆ ವಶರಾದರು.
ಇಂದು ಬೊಪ್ಪರಾಯನ ರಾಜ್ಯಾರೋಹಣದ ಮಹಾಸಮಾರಂಭವು.
ಚತುರಂಗಸೇನೆಯಿಂದ ಸಂರಕ್ಷಿತಳಾದ ಕಮಲಾವತಿದೇವಿಯು ಅಂದಣ
ವನ್ನೇರಿಕೊಂಡು ತನ್ನ ಪತಿರಾಯನ ಮಂದಿರಕ್ಕೆ ಬಂದಳು. ಚಿತ್ತೂರ
ಪಟ್ಟಣವು ಸುಧಾಶುಭ್ರವಾಗಿ ಕಂಗೊಳಿಸುತ್ತಿತ್ತು. ಈ ಮಹೋತ್ಸವವನ್ನು
ನೋಡಲೆಂದು ನಂದನವನದೇವಿಯೇ ಚಿತ್ತೂರಿನ ಬೀದಿಗಳಲ್ಲಿ ನಿಂತಿರುವಳೋ
ಎಂಬಂತೆ ಬೀದಿಗಳಲ್ಲಿ ಘನವಾದ ಮಂಟಪಗಳು ವಿರಾಜಿಸುತ್ತಿ ದ್ವವು,
ಅಲಂಕೃತರಾದ ನರನಾರಿಯರಿಂದಲೂ ಗಜಾಶ್ಚರಥಗಳಿಂದಲೂ ಆ ರಾಜ
ಧಾನಿಯ ಬೀದಿಗಳೆಲ್ಲ ಸಂದಟಿಕವಾಗಿ ಹೋಗಿದ್ದವು. ಭೇರಿ ತುತೂರಿಗಳ
ಘನವಾದ ನಿನಾದದಿಂದಲ್ಲೂ ವೀಣಾ ಮೃದಂಗಗಳ ಮಧುರ ಸ್ವರಗಳಿಂದಲೂ,
ವಾರಾಂಗನೆಯರ ಮಂಜುಲವಾದ ಗಾನಗಳಿಂದಲೂ ತುಂಬಿ ಹೋಗಿದ್ದ
ಚಿತ್ತೂರ ನಗರಿಯಲ್ಲಿ ನಾದಬ್ರಹ್ಮನು ಹರ್ಷಾತಿರೇಕದಿಂದ ನಟಸುತ್ತಿ ರುವನೊ
ಎಂಬಂತೆ ತೋರುತ್ತಿತ್ತು.
ಅನೇಕ ತೀರ್ಥಗಳಲ್ಲಿಯ ಪುಣ್ಯೋದಕಗಳನ್ನು ತೆಂದು ಬೊಪ್ಪರಾಯ
ಕಮಲಾವತೀದೇವಿಯರಿಗೆ ಅಭಿಷೇಕ ಮಾಡಿದ ಬಳಿಕ ಆಚಾರ್ಯ
ಪುರೋಹಿತರೂ, ಬ್ರಾಹ್ಮಣ ಸುವಾಸಿನಿಯರೂ ಶಾಸ್ತ್ರೋಕ್ತವಾಗಿಯೂ
ಸಂಪ್ರದಾಯಾನುಸಾರವಾಗಿಯೂ ಅವರಿಗೆ ಮುಕುಟಧಾರಣವಿಧಿಯನ್ನು
ಮಾಡಿಸಿದರು. ಸಕಲ ಸಾಮಂತ ರಾಜರಿಂದ ಸೇವಿತನಾದ ಬೊಪ್ಪರಾಯನು
ಮಹಾಸಭೆಯಲ್ಲಿ ಸಿಂಹಾಸನಾರೂಢನಾದನು. ಬೊಪ್ಪರಾಯನಿಗೆ ಅಂದಿನಿಂದ
"ಬೊಸಪ್ಪಮಾರಾಯ''ನೆಂಬ ಬಿರುದು ಬಂದಿತು.
ಘಮಘಮಿಸುವ ಅನೇಕ ವರ್ಣದ ಪುಷ್ಪಗಳ ಸೆಂಡುಗಳಿಂದಲೂ,
ಸರಗಳಿಂದಲೂ ಅಲಂಕೃಶವಾದ ಮಹಾಮಂಚದಲ್ಲಿ ರತಿದೇವಿಯನ್ನು
೧೫ -----------------------------------------------------------------------------
ಹೀಯಾಳಿಸುವಂಥ ಆದ್ವಿತೀಯವಾದ ಸೌಂದರ್ಯದಿಂದೊಪ್ಪುವ ಕಮಲಾ
ವತೀದೇವಿಯು ತನ್ನ ಪ್ರಾಣೇಶ್ವರನ ಮಾರ್ಗಪ್ರತೀಕ್ಷೆ ಮಾಡುತ್ತಿದ್ದಳು.
ಕಾಲಹಾನಿಯನ್ನು ಕ್ಷಮಿಸದವನಾದ ಬೊಪ್ಪಮಾರಾಯನು ಎಂಥ ಮಹತ್ವ
ವಾದ ಕೆಲಸಗಳನ್ನಾದರೂ ನಾಳಿಗಿಟ್ಟು ತನ್ನಮನೋರಮೆಯ ಸುಹಾಸಯುತ
ವಾದ ಮುಖವನ್ನು ಚುಂಬಿಸಲು ಉತ್ಸುಕನಾಗಿ ಶಯ್ಯಾಗೃಹಕ್ಕೆ ಧಾವಿಸಿ
ಬಂದನು. ತಮ್ಮ ಹೃದಯದಲ್ಲಿದ್ದ ದುಸ್ಸಹವಾದ ವಿರಹವ್ಯಥೆಯನ್ನು
ಸಂಪೂರ್ಣವಾಗಿ ಹಿಂಡಿತೆಗೆಯಲುದ್ಯುಕ್ತರಾಗಿರುವರೋ ಎಂಬಂತೆ ಆ
ಪತಿಪತ್ನಿಯರು ಪರಸ್ಪರರನ್ನು ಬಿಗಿದಪ್ಪಿಕೊಂಡರು. ಅವರ ಕ್ರೀಡಾ
ವಿವಾಹವು ಕಡೆಗೆ ಸತ್ಯವಾಗಿ ವಿಲಾಸಕ್ರೀಡೆಗಳಲ್ಲಿ ಪರಿಣಮಿಸಿತು.
=========================================
ಸತಿಯ ವಿಜಯವು
ತರುಣನೂ, ವಿದ್ಯಾವಂತನೂ, ಉದಾರನೂ ಆಗಿದ್ದ ರಾಜಪುತ್ರ
ನೊಬ್ಬನು ಬಹಳ ದಿವಸಗಳ ಹಿಂದೆ ಒಂದಾನೊಂದು ದೇಶದಲ್ಲಿ ರಾಜ್ಯವನ್ನು
ಆಳುತ್ತಿದ್ದನು. ಆನೇಕ ವರ್ಷಗಳಾಗಿ ಹೋದರೂ ರಾಜನು ತನ್ನ
ವಿವಾಹವನ್ನು ಮಾಡಿಕೊಳ್ಳಲಿಲ್ಲ. ರಾಜನ ಪಶ್ಚಾತ್ ದೇಶವು ಅನಾಯಕ
ವಾಗುವದೆಂಬ ಚಿಂತೆಯಿಂದ ರಾಜ್ಯದೊಳಗಿನ ಪ್ರಮುಖರಾಗಿದ್ದ ಪ್ರಜೆ
ಗಳೆಲ್ಲರೂ ರಾಜನ ಬಳಿಗೆ ಹೋಗಿ, ರಾಜರು ವಿವಾಹಿತರಾಗಬೇಕೆಂದು
ಅತ್ಯಾಗ್ರಹಪೂರ್ವಕವಾಗಿ ಬೇಡಿಕೊಂಡರು. ತಾನು ಮಾಡುವ ಸೂಚನೆಗೆ
ಪ್ರಜರು ಒಪ್ಪಿಕೊಳ್ಳುತ್ತಿದ್ದರೆ ಪ್ರಜರ ಇಚ್ಛೆಯಂತೆ ತಾನು ವಿವಾಹವನ್ನು
ಮಾಡಿಕೊಳ್ಳುವದಕ್ಕೆ ಸಿದ್ಧವಿರುವನೆಂದು ರಾಜನು ಅವರಿಗೆ ವಿದಿತ ಮಾಡಿದನು.
ಆ ಸೂಚನೆಯೆಂದರೆ ರಾಜನು ತನ್ನ ಮನಸ್ಸಿಗೆ ಒಪ್ಪಿಗೆಯಾದ ಕನ್ಯೆಯನ್ನೇ
ಮದುವೆಯಾಗುವದು. ಅದಕ್ಕೆ ಪ್ರಜರು ಯಾವ ಪ್ರಕಾರದ ಪ್ರತಿಬಂಧನ
ನ್ನಾಗಲಿ ಅಸಂತೋಷವನ್ನಾಗಲಿ ತೋರಿಸಕೂಡದು. ಆ ದೇಶದ ರೂಢಿ
ಯಂತೆ ವಿವಾಹವಿಷಯದಲ್ಲಿ ಯಾರಿಗೂ ಸ್ವಾತಂತ್ರ್ಯವಿದ್ದಿದ್ದಿಲ್ಲ. ಆ ದೇಶದ
ರೂಢಿಯು ಸ್ವಯಂವರದ ವಿರುದ್ಧವಾಗಿತ್ತು; ಆದರೆ, ತನ್ನ ಮನಸ್ಸಿಗೆ
ಇಷ್ಟಳಾದ ಕನ್ಯೆಯನ್ನೇ ಮದುವೆಯಾಗುವಮ ರಾಜನ ಇಚ್ಛೆಯಾಗಿತ್ತಾ.
ಹಟವನ್ನು ತೊಟ್ಟ ರಾಜನ ಸೂಚನೆಯನ್ನು ಮಾನ್ಯ ಮಾಡದಿದ್ದರೆ, ರಾಜನು
ತನ್ನ ಆಯುಷ್ಯವನ್ನೆಲ್ಲ ಬ್ರಹ್ಮಚರ್ಯದಲ್ಲಿಯೇ ಕಳೆಯುವನೆಂಬ ಭೀತಿಯಿಂದ
ಪ್ರಜರು ರಾಜನ ಸೂಚನೆಯನ್ನು ಒಪ್ಪಿಕೊಂಡರು.
ಸ್ವಲ್ಪ ದಿವಸಗಳಲ್ಲಿಯೇ ಲಗ್ನ ಸಮಾರಂಭದ ಸಿದ್ದತೆಗೆ ಪ್ರಾರಂಭ
ವಾಯಿತು. ಸರದಾರರೂ, ಜಹಾಗೀರದಾರರೂ, ದೊಡ್ಡ ದೊಡ್ಡ ಅಧಿಕಾರ
ಸ್ಮರೂ ಯಥಾಶಕ್ತಿ ಪ್ರಯತ್ನಪಡಹತ್ತಿದರು. ಪಟ್ಟಾಭಿಷಿಕ್ತ ರಾಜನ
ಮದುವೆಯ ಸಿದ್ಧತೆಯದು. ಅಂದ ಮೇಲೆ ಕೇಳುವದೇನು? ರಾಜ್ಯದ ತುಂಬ
ನೋಡಿದಲ್ಲೆಲ್ಲ ಉತ್ಸುಹವು ತುಂಬಿತುಳುಕುತ್ತಿತ್ತು. ಕಡೆಗೆ ಲಗ್ನದ
ಮುಹೂರ್ತವು ಸಮಾಪಿಸಿ, ಪ್ರಯಾಣ. ಸಿದ್ಧತೆಯು ನಡೆಯಿತು.
ಪ್ರಯಾಣಮುಹೂರ್ತವು ಬಂದೊದಗಲು ` ಸೈನ್ಯವು ಸಿದ್ಧವಾಗಿ ನಿಂತಿತ್ತು
೧೭ -----------------------------------------------------------------------------
ನರನಾರಿಯರೆಲ್ಲರೂ ಉತ್ತಮೋತ್ತಮವಾದ ಉಡಿಗೆತೊಡಿಗೆಗಳಿಂದ
ಶೃಂಗಾರರಾಗಿ ನಾನಾವಿಧವಾದ ವಾಹನಗಳಲ್ಲಿ ಕುಳಿತುಕೊಂಡು ಮಾರ್ಗ-
ವನ್ನಾಕ್ರಮಿಸಹತ್ತಿದರು. ಪರ್ವತಪ್ರಾಯವಾದ ಗಜರಾಜನ ಬೆನ್ನಮೇಲೆ
ಶೋಭಿಸುವ ಸುವರ್ಣಮಯವಾದ ಅಂಬಾರಿಯಲ್ಲಿ ಕುಳಿತುಕೊಂಡು
ರಾಜವರನು ಕನ್ಯಾಗೃಹಾಭಿಮುಖನಾಗಿ ನಡೆದನು. ರಾಜನ ಬಲಭಾಗದಲ್ಲಿ
ಆರ್ಧ ಸೈನ್ಯವೂ, ಎಡಭಾಗದಲ್ಲಿ ಅರ್ಧ ಸೈನ್ಯವೂ ನಡೆದಿತ್ತು. ವರಪಕ್ಷವು
ರಾಜಧಾನಿಯನ್ನು ದಾಟಿ ನಿಬಿಡವಾದ ವೃಕ್ಷವಲ್ಲಿಗಳಿಂದಾಚ್ಛಾದಿತವಾದ ವನ
ಪ್ರದೇಶವನ್ನು ಹೊಕ್ಕಿತು. 'ರಾಜನು ಸರೋವರದ ಕೂಡ, ವೃಕ್ಷಗಳ
ಕೂಡ ಅಥವಾ ಪರ್ವತದ ಕೂಡ ಲಗ್ನವನ್ನು ಮಾಡಿಕೊಳ್ಳವನೋ ಹೇಗೆ ? '
ಎಂದು ಜನರು ತಮ್ಮತಮ್ಮೊಳಗೆ ಪ್ರಶ್ನಗಳನ್ನು ಮಾಡಹತ್ತಿದರು. ಕಟ್ಟಕಡೆಗೆ
ಈ ಪರಿವಾರವೆಲ್ಲ ಆ ಅರಣ್ಯದೊಳಗಿನ ಒಂದು ಪ್ರದೇಶದಲ್ಲಿ ಮುನಿಗಳ
ಆಶ್ರಮದಂತೆ ಕಂಡುಬರುವ ಒಂದು ಪರ್ಣಕುಟಯ ಹತ್ತರ ಬಂದು
ನಿಂತಿತು. ಪರ್ಣಕುಟಯ ಎದುರಿಗೆ ಸ್ಫಟಿಕಸಮಾನವಾದ ಸ್ವಚ್ಛ ಜಲ
ದಿಂದ ಪೂರಿತವಾದ ಸರೋವರವಿತ್ತು. ಸರೋವರದ ಸುತ್ತಲೂ ನೈಸರ್ಗಿಕ
ವಾದ ಸುಂದರ ತೋಟಗಳಿದ್ದ ವು. ಇಂಥದೊಂದು ತೋಟದೊಳಗಿನ
ವೃಕ್ಷಾವಲಂಬಿತವಾದ ತೂಗುವ ಮಣೆಯ ಮೇಲೆ ವೃದ್ಧ ಮನುಷ್ಯ ನೊಬ್ಬನು
ವಿಶ್ರಮಿಸಿಕೊಂಡಿದ್ದನು , ರಾಜನು ಈ ವೃದ್ಧನ ಕೂಡ ವಿವಾಹಿತನಾಗುವನೇ
ನೆಂದು ಕೆಲವರು ಪರಿಹಾಸಮಾಡಹೆತ್ತಿದ್ದರು. ಗಜರಾಜನು ಕುಟಿಜದ
ಹತ್ತರ ಬಂದ ಕೂಡಲೆ, ರಾಜನು ತನ್ನ ಪರಿವಾರವು ಅಲ್ಲಿಯೇ ನಿಲ್ಲುವದಕ್ಕೆ
ಹೇಳಿದನು. ಇಷ್ಟರಲ್ಲಿ ಮನೋಹರಳಾದ, ಸುಸ್ವರೂಪಿಯಾದ, ಸುಂದರಳಾದ
ರಮಣಿಯೋರ್ವಳು ಅಲ್ಲಿಗೆ ಬಂದು ಆ ವೃದ್ಧ ಪುರುಷನು ಕುಳಿತಿದ್ದ ತೂಗುವ
ಮಣೆಯನ್ನು ತೂಗಹತ್ತಿದಳು.
ಸಿಂಹಾಸಹಾರೂಡಢನಾಗುನ ಮುಂಚಿತವಾಗಿ ರಾಜನು ಅನೇಕ ಸಾರೆ
ಇದೇ ಅರಣ್ಯದಲ್ಲಿ ಬರುತ್ತಿದ್ದು, ಈ ಕುಮಾರಿಕೆಯು ತನ್ನ ಕೆಲಸದಲ್ಲಿ
ಅತ್ಯಂತ ದಕ್ಷಳಾಗಿರುವಳೆಂಬದನ್ನು ಕಂಡುಹಿಡಿದಿದ್ದನು. ಅವಳು ತನ್ನ
ವೃದ್ಧ ಪಿತನ ಶುಶ್ರೂಷೆಯನ್ನು ಮನಃಪೂರ್ವಕವಾಗಿ ಮಾಡುತ್ತಿದ್ದಳು.
ನೀರು ತಂದು ಅವನಿಗೆ ಸ್ನಾನವನ್ನು ಹಾಕೋಣ, ಅಡಿಗೆ ಮಾಡಿ ಅವನಿಗೆ
೧೮------------------------------------------------------------------------
ಊಟವನ್ನು ಬಡಿಸೋಣ, ಅವನಿಗೆ ವಿಶ್ರಮಿಸಿಕೊಳ್ಳುವದಕ್ಕಾಗಿ ಶಯ್ಯೆ
ಯನ್ನು ಸಿದ್ಧಮಾಡಿ ಕೊಡೋಣ, ಅವನು ವಿಶ್ರಮಿಸಿಕೊಂಡನೆಂದರೆ ಅವನ
ಪಾದಸೇವೆಯನ್ನು ಮಾಡೋಣ ಮುಂತಾದ ಕೆಲಸಗಳನ್ನು ಮಾಡುವಾಗ,
ಮಧುರಸ್ವರದಿಂದ ಯಾವಾಗಲೂ ಗಾನವನ್ನು ಮಾಡುತ್ತಿರುವ ಕೋಕಿಲೆ
ಯಂತೆ ಅವಳು ಆನಂದಿತಳೂ, ಉಲ್ಲಸಿತಳೂ, ತೇಜಸ್ವಿನಿಯೂ ಆಗಿ
ತೋರುತ್ತಿದ್ದಳು. ಈ ಅವಳ 'ಆನಂದದಾಯಕ ಸ್ವಭಾವದ ಪರಿಣಾಮವು
ರಾಜನ ಮೇಲೆ ಒಳಿತಾಗಿ ಆಗಿತ್ತು. ಲಗ್ನವನ್ನು ಮಾಡಿಕೊಂಡರೆ, ಇವಳ
ಕೂಡಲ್ಲದೆ ಇನ್ನೊಬ್ಬಳನ್ನು ಕಣ್ಣೆತ್ತಿ ನೋಡಲಿಕ್ಕಿಲ್ಲೆಂದು ರಾಜನು ಪ್ರತಿಜ್ಞೆ
ಯನ್ನು ಮಾಡಿದ್ದನು.
ಈ ಪ್ರಚಂಡವಾದ ಸೇನೆಯನ್ನು ನೋಡಿ ಆ ಕುಮಾರಿಕೆಗೆ ಬಹಳ
ಆಶ್ಚರ್ಯವಾಯಿತು, ಅಶ್ವಾರೂಢನಾಗಿ ಅನೇಕ ಸಾರೆ ತನ್ನ ಆಶ್ರಮದ
ಮುಂದೆ ಹಾದು ಹೋಗುತ್ತಿರುವ ಪುರುಷನು ರಾಜನಿರುವನೆಂಬ ಕಲ್ಪನೆಯು
ಅವಳಿಗೆ ಇದ್ದಿದ್ದಿಲ್ಲ. ಈ ಪರಿವಾರವು ಇಲ್ಲಿ ಯಾಕೆ ಕೂಡಿರುವದೆಂದು
ಅವಳು ತನ್ನ ತಂದೆಗೆ ಕೇಳಲು ಅವನು ಅಂದದ್ದು : ಮಗಳೆ, ಈ ರಾಜನು
ಕನ್ಯಾಶೋಧಾರ್ಥವಾಗಿ ದೂರ ದೇಶಕ್ಕೆ ಹೊರಟರುವನು.”
ಇಷ್ಟರಲ್ಲಿ ರಾಜನು ಆನೆಯ ಮೆಲಿಂದಿಳಿದು, ಆ ವೃದ್ಧ ಮನುಷ್ಯನ
ಹತ್ತರ ಬಂದು ಶಿಷ್ಟಾಚಾರದಂತೆ ಅವನಿಗೆ ಪ್ರಣಿಪಾತವನ್ನು ಮಾಡಿದನು.
"ಮಗನೆ ನಿನಗೆ ಏನು ಬೇಕಾಗಿದೆ? ? ಎಂದು ಆ ವೃದ್ಧನು ಕೇಳಿದ ಕೂಡಲೆ,
ರಾಜನ ಮುಖವು ಪ್ರಪುಲ್ಲಿತವಾಗಿ ಅನನು ಅಂದದ್ದು; "ನೀವು ನನ್ನನ್ನು
ನಿಮ್ಮ ಜಾಮಾತನನ್ನಾಗಿ ಮಾಡಿಕೊಳ್ಳ ಬೇಕೆಂನು ನನ್ನ ಪ್ರಾರ್ಥನೆಯಿದೆ.”
ಮುದುಕನ ಆನಂದವು ಪೃಥ್ವಿಯಲ್ಲಿ ಹಿಡಿಸಂತಾಗಿ ಅವನು
ಅಂದದ್ದು : " ರಾಜನೆ ನನ್ನಂಥ ದರಿದ್ರನಾದವನ ಕನ್ಯೆಯನ್ನು ನೀನು
ಯಾಕೆ ಅಪೇಕ್ಷಿಸುವಿ? ನಾವು 'ದೀನರೂ, ದರಿದ್ರರೂ ಆಗಿರುವೆವು.”
" ಈ ಕನ್ಯೆಯ ಮೇಲೆ ಪ್ರೇಮವಿರುವಂತೆ ಯಾವಳ ಮೇಲೂ ಇಲ್ಲ”
ಎಂದು ರಾಜನು ನುಡಿದನು.
" ಹೀಗಾಗಿದ್ದರೆ, ಅವಳು ನಿನ್ನವಳೇ ಇರುವಳು” ಎಂದು ಆ
ವೃದ್ಧನು ನುಡಿದನು.
೧೯ --------------------------------------------------------------------------
ಈ ವೃದ್ಧಪುರುಷನು ಒಳ್ಳೇ ಜ್ಞಾನಸಂಪನ್ನನಾಗಿದ್ದು, ತನ್ನ ಜ್ಞಾನಾನು
ಭವದ ಲಾಭವನ್ನು ತನ್ನ ಮಗಳಿಗಾದರೂ ಮಾಡಿಕೊಟ್ಟಿದ್ದನು. " ಈ
ನನ್ನ ಮಗಳ ಸಲುವಾಗಿ ಕೊಡಬೇಕಾಗಿರುವ ವರದಕ್ಷಿಣೆಯು ನನ್ನ ಹತ್ತರ
ಇಲ್ಲ ಕೇವಲ ಆಶೀರ್ವಾದಗಳನ್ನು ಮಾತ್ರ ಕೊಡುವೆನು? ಹೀಗೆ ಅವನು
ಆ ರಾಜನಿಗೆ ಹೇಳಿದನು. ರಾಜನು ವಧುವಿಗೆ ಶ್ರೇಷ್ಠವಾದ ವಸ್ತ್ರಾಭರಣ
ಗಳನ್ನು ಕೊಟ್ಟು, ಅವುಗಳನ್ನು ಮೈಮೇಲೆ ಧಾರಣಮಾಡುವದಕ್ಕೆ ಅವಳಿಗೆ
ಹೇಳಿದನು. ಅವಳು ಆ ಪ್ರಕಾರ ಮಾಡಿದಳು. ಆ ಕನೈಯು ರಾಜನ
ಮನೆಗೆ ರಿಕ್ತಹಸ್ತದಿಂದ ಹೋಗಲಿಲ್ಲ. ಅವಳು ವರದಕ್ಷಿಣೆಯನ್ನು ಸಂಗಡ
ತೆಗೆದುಕೊಂಡು ಹೋದಳು. ಆ ವರದಕ್ಷಿಣೆಯು ಯಾವ ಸ್ವರೂಪದ್ದಾಗಿ
ತ್ತೆಂದು ನಿಮ್ಮ ಕಲ್ಪನೆಯಿರುವದು? ಮುತ್ತು ರತ್ನಗಳ ಆಭರಣಗಳನ್ನು
ಇಡುವದಕ್ಕಾಗಿ ಅವಳಗೆ ರಾಜನಿಂದ ಕೊಡಲ್ಪಟ್ಟ ಪಟ್ಟ ಗೆಯಲ್ಲಿ ತಂದೆಯ
ಮನೆಯಲ್ಲಿ ಅವಳು ದಿನಾಲೂ ಉಡುತೊಡುತ್ತಿದ್ದ ಹಳೇ-ಹರಕ ಬಟ್ಟೆ
ಗಳನ್ನು ಹಾಕಿದಳು. ಈಗ್ಗೆ ಆ ಅರಣ್ಯದಲ್ಲಿ ಆ ವೃದ್ಧಮನುಷ್ಯನೊಬ್ಬನೇ
ಉಳಿದನು. ಅವನ ಶುಶ್ರೂಸೆಗಾಗಿ ಒಬ್ಬ ಸೇನಕನು ನಿಯೋಜಿಸಲ್ಪಟ್ಟನು.
ಅವನಿಗಾದರೂ ಹೆಚ್ಚಿನ ಅಪೇಕ್ಟೆಯಿದ್ದಿದ್ದಿಲ್ಲ.
ನೂತನ ಪರಿಣತಳಾದ ಪತ್ನಿಯನ್ನು ರಾಜನು ತನ್ನ ಅರಮನೆಗೆ ಕರೆ
ತಂದನು. ಇವಳು ಬಡ ಕುಲದವಳಾದ್ದರಿಂದ ದರಬಾರದೊಳಗಿನ ಅನೇಕ
ಸರದಾರರಿಗೆ ಈ ಶರೀರಸಂಬಂಧವು ಸೇರಲಿಲ್ಲ. ತಮ್ಮೊಳಗಿನ ಯಾವನಾದ
ರೊಬ್ಬ ಸರದಾರನ ಕನ್ಯೆಯ ಪಾಣಿಗ್ರಹಣವನ್ನು ರಾಜನು ಮಾಡಬೇಕಾಗಿ
ತ್ತೆಂದು ಅವರ ಮನೀಷೆಯಾಗಿತ್ತು. ರಾಣಿಯ ಪದವನ್ನು ಈ ಬಡ
ಕುಲೋತ್ಪನ್ನ ಕನ್ನೆಯು ಅಲಂಕರಿಸಿದಳೆಂದು ಹಲವರು ಮತ್ಸರಗ್ರಸ್ತರಾದರು.
ಈ ದರಿದ್ರಳ ಮುಂದೆ ತಮ್ಮ ಶಿರವನ್ನು ಹೇಗೆ ಬಾಗಿಸಬೇಕೆಂದು ಕೆಲವರು
ಯೋಚಿಸಿದರು. ಆದರೆ, ಈ ನೂತನ ರಾಜ್ಞಿಯು ತನ್ನ ಮಧುರಸ್ವಭಾವ
ದಿಂದಲೂ ಸೌಮ್ಯ ಹಾಗೂ ಪ್ರೇಮಲ ವರ್ತನದಿಂದಲೂ ಎಲ್ಲರನ್ನು
ಮೋಹಿಸಿದಳು. ಕ್ರಮೇಣ ಎಲ್ಲರೂ ರಾಣಿಯ ಮೇಲೆ ಪ್ರೇಮವನ್ನು
ಮಾಡಹತ್ತಿದರು. ಎಂಥ ಪರಿಸ್ಥಿತಿಯಲ್ಲಾದರೂ ರಾಣಿಯು ನಿರ್ವಿಕಾರಳೂ
ಶಾಂತಳೂ ಆಗಿ ಕಂಗೊಳಿಸುತ್ತಿದ್ಧಳು.
೨೦ -----------------------------------------------------------------------------
ಸ್ವಲ್ಪ ವರ್ಷಗಳಲ್ಲಿಯೇ ರಾಣಿಯು ಕನ್ಯಾರತ್ನವನ್ನು ಪ್ರಸವಿಸಿದಳು.
ಪತಿ ಸತ್ನಿಗಳಿಗೆ ಹಿಡಿಸಲಾರದಷ್ಟು ಆನಂದವಾಯಿತು. ರಾಜಪುತ್ರಿಯು
ಮೂರು ನಾಲ್ಕು ವರ್ಷದವಳಾಗಲು ರಾಜನು ರಾಣಿಯ ಹತ್ತರ ಬಂದು
ಅಂದದ್ದು: " ರಾಜ್ಯದಲ್ಲಿ ಶಾಂತತೆಯು ಭಂಗವಾಗತಕ್ಕ ಸಂಭವವಿದೆ;
ಹಾಗೂ. ಸದ್ಯದ ಸ್ಥಿತಿಯು ಬಹಳ ಅನಿಷ್ಟ ಕಾರಕವಾಗಿ ತೋರುತ್ತದೆ"
ಇದಕ್ಕೆ ಕಾರಣವೇನೆಂದು ರಾಣಿಯು ಕೇಳಲು ಅವನು ಹೇಳಿದ್ದು :
" ನಿನ್ನ ಕೂಡ ಲಗ್ನವಾದ ಕೂಡಲೆ, ಈ ರಾಜ್ಯಕೈ ಆಧಾರವಾಗಿರುವ
ಬಲಾಢ್ಯ ಸ ಸರದಾರರ ಮನಸ್ಸಿನಲ್ಲಿ ಮತ್ಸರಾಗ್ನಿಯು ಹೊತ್ತಿತು. ಬಡ
ಕುಲದಲ್ಲಿ ಉತ್ಪನ್ನಳಾದ ನಿನ್ನ ಮಗಳಿಗೆ ರಾಜ್ಯಪದವು ದೊರೆಯುವದೆಂಬ
ಕಲ್ಪನೆಯು ಅವರಿಗೆ ಆಸಹ್ಯವಾಗಿದೆ. ಉತ್ತಮ ಕುಲದಲ್ಲಿ ಜನ್ಮವನ್ನು
ತಾಳಿದವರಿಗೆಯೇ ರಾಜ್ಯಸದವು : ದೊರೆಕತಕ್ಕದಾಗಿದ್ದು, ನಾನು ಮುಖ್ಯ
ಪ್ರಧಾನನ ಮಗನನ್ನು ದತ್ತಕ ತೆಗೆದುಕೊಳ್ಳಬೇಕೆಂದು ಅವರ ಇಚ್ಛೆಯಿದೆ.
ನಮ್ಮ ಕನ್ಯೆಯು ದೊಡ್ಡವಳಾದ ಬಳಿಕ , ಸರ್ವರ ಆಗ್ರಹಕ್ಕೆ ಒಳಪಟ್ಟು
ಅವಳಿಗೆ ರಾಜ್ಯವನ್ನು ಕೊಡದೆ ಹೆರವರ 'ಮಗನನ್ನು ನಾನು ದತ್ತಕ ತೆಗೆದು
ಕೊಂಡರೂ ಮುಂದೆ ಉಭಯತರಲ್ಲಿ ವಿರೋಧವು ಬಂದೇ ಬರುವದು. ಇದಕ್ಕೆ
ತಕ್ಕ ಉಪಾಯವು ಯಾವದೆಂಬದರೆ ಬಗ್ಗೆ ನಾನು ಬಹಳ ಪರಿಯಿಂದ
ವಿಚಾರಮಾಡಿ ನೋಡಿದೆನು... ಈ ಕನ್ಯೆಯನ್ನು ಹೊಡೆದು ಹಾಕದ
ಹೊರತು ಅನ್ಯೋಪಾಯವು ತೋರುವದಿಲ್ಲ.” ಆಗ್ಗೆ ರಾಣಿಯು ಉತ್ತರ
ವನ್ನು ಕೊಟ್ಟಿದ್ದು " ನಿಮ್ಮ ಕೂಡ ರಾಜ್ಯಪದದ ಸುಖೋಪಭೋಗ:
ವನ್ನು ತೆಗೆದುಕೊಳ್ಳಬೇಕೆಂದು ಯತ್ಕಿಂಚಿತ್ತಾದರೂ ನನ್ನ ಅಪೇಕ್ಷೆಯಿಲ್ಲ. ನನ್ನ
ಇಚ್ಛೆಯು ನನ್ನ ಸ್ವಾ ಧೀನವಾಗಿದೆ. ನನ್ನ ವ್ಯಕ್ತಿತ್ವವು- ಅಹಂಕಾರವು --
ನಿಮ್ಮಲ್ಲಿ ಲಯ ಹೊಂದಿದೆ. ಅದರಲ್ಲಿ ಅಲ್ಪಸ್ವಲ್ಪ ಉಳಿದಿರುವದನ್ನು
ನಿಮ್ಮ ಇಚ್ಛೆಗೆ ಪ್ರತಿಗಾಮಿಯಾಗಬೇಕೆಂದಲ್ಲ, ಆದರೆ ನಿಮ್ಮ ಸೇವೆಗಾಗಿ
ಕಾಯ್ದು ಕೊಂಡಿದ್ದೇನೆ. ನಿಮ್ಮ ಇಚ್ಛಾನುರೂಪನಾಗಿ ಮಗಳ ವ್ಯವಸ್ಥೆ
ಯನ್ನು ಮಾಡಬೇಕು. ನಿಜವಾಗಿ ಹೇಳುವದಾದರೆ, ಅವಳು ನನ್ನ ಕನ್ಯೆ
ಯೆಂದು ನನ್ನ ಅಂತಃಕರಣವು ಎಂದೂ ಮನ್ನಿಸಿಲ್ಲ....”
ಪತಿಯ ವಿಷಯನಾಗಿ ರಾಣಿಯ ಭಕ್ತಿಯು ಯಾವ ಬಗೆಯದಾಗಿತ್ತು
೨೧ ----------------------------------------------------------------------
ಹಾಗೂ ಪತಿಯ ಕೂಡ ಅವಳು ಯಾವ ಬಗೆಯಿಂದ ಆಚರಿಸುತ್ತಿದ್ದಳು
ಎಂಬದಕ್ಕೆ ಈ ಮೇಲಿನ ಉತ್ತರವು ಸಾಕ್ಷೀರೂಪವಾಗಿದೆ.
ಮಾರನೇ ದಿವಸ ಮಧ್ಯರಾತ್ರಿಯಲ್ಲಿ ರಾಜನು ಕನ್ಯೆಯನ್ನು ಕೊಲೆಗಡ
ಕರ ಸ್ವಾಧೀನ ಮಾಡಿ ಆ ಸಂಗತಿಯನ್ನು ರಾಣಿಗೆ ವಿದಿತಮಾಡಿದನು.
ರಾಣಿಯ ಚಿತ್ತವೃತ್ತಿಯು, ಯಾವ ಸಂಗತಿಯೂ ಸಂಭವಿಸಿರದಂತೆ ಶಾಂತ
ವಾಗಿಯೂ ಆನಂದಿತವಾಗಿಯೂ ಉಲ್ಲಸಿತವಾಗಿಯೂ ತೋರುತ್ತಿತ್ತು.
ಯಾವದೇ ಬಾಹ್ಯ ಪರಿಸ್ಥಿತಿಯ ಪರಿಣಾಮದ ಲವಲೇಶವಾದರೂ ಅವಳ
ಮುಖದ ಮೇಲೆ ಪ್ರತಿಬಿಂಬಿತವಾಗಿದ್ದಿಲ್ಲ.
ಈ ತನ್ನ ಕೃತ್ಯದಿಂದ ಪ್ರತಿಯೊಬ್ಬನು ಸಂತುಷ್ಟನಾಗಿರುವನೆಂದು
ರಾಜನು ಯೋಚಿಸಿದ್ದು. ಮುಂದೆ ಒಂದೆರಡು ವರ್ಷಗಳಲ್ಲಿ ರಾಜನಿಗೆ
ಪುತ್ರೋತ್ಸವವಾಯಿತು. ರಾಜಪುತ್ರನನ್ನು ಸರ್ವರೂ ಪ್ರೀತಿಸಹತ್ತಿದರು.
ಅವನು ಐದಾರು ವರುಷದವನಾದ ಕೂಡಲೆ, ರಾಜ್ಯದಲ್ಲಿ ಪುನಃ ಅಸಂತೋಷದ
ಚಿಹ್ನಗಳು ತೋರಹತ್ತಿದವು.
ರಾಜನು ಅಂದದ್ದು : "ಸದ್ಯದ ಈ ಪರಿಸ್ಥಿತಿಯು ಬಹಳೇ ಕಠಿಣ
ವಾಗಿದೆ. ರಾಜ್ಯದಲ್ಲಿ ಯಾದವರಂತೆ ನಮ್ಮನಮ್ಮೊಳಗೆ ಯುದ್ಧವಾಗಬಾರ
ದೆಂದು ನನ್ನ ಅಭಿಲಾಷೆಯು. ಅದಕ್ಕಾಗಿ ಈ ಹುಡುಗನನ್ನಾದರೂ ಕೊಲ್ಲಲೇ
ಬೇಕು.”
ಇದನ್ನು ಕೇಳಿ ರಾಣಿಯು ನಕ್ಕು, ಅವಳಿಗೆ ಸ್ವಾಭಾನಿಕವಾಗಿದ್ದ
ಉಲ್ಹಾಸವೃತ್ತಿಯಿಂದ ಅಂದದ್ದು: "ಈ ರಾಷ್ಟ್ರವೇ ನನ್ನ ಆತ್ಮವಿದ್ದು,
ಅದರ ಹೊರತು ನನ್ನದೆಂಬುವದು ಏನೂ ಇಲ್ಲ. ನಾನು ಸೂರ್ಯನಂತೆ
ಯಾವಾಗಲೂ ಕೊಡುತ್ತಿ ರುವೆನಲ್ಲದೆ ತೆಗೆದುಕೊಳ್ಳುವದಿಲ್ಲ.”
ನಮಗೆ ಯಾವ ಇಚ್ಛೆಯೂ ಹಾಗೂ ಯಾತರಿಲ್ಲ ಆಸಕ್ತಿಯೂ ಇಲ್ಲದ
ಬಳಿಕ ನಮ್ಮ ಆನಂದವು ಕುಗ್ಗುವದಕ್ಕೆ ಕಾರಣನೇಸು ? ಸೂರ್ಯನಂತೆ
ನಾವು ಯಾವಾಗಲೂ ಕೊಡುತ್ತಲೂ, ಪ್ರಕಾಶಿಸುತ್ತಲೂ ಇರಬೇಕು.
ಆಯಿತು, ಅಕ್ಕನಂತೆ ತಮ್ಮನ ವ್ಯವಸ್ಥೆಯಾದರೂ ಆಯಿತು! ಮುಂದೆ
ವರ್ಷಗಳಲ್ಲಿ ರಾಣಿಗೆ ಮೂರನೇ ಕೂಸು ಹುಟ್ಟಿತು. ಆದಾದರೂ ಮೂರು
ನಾಲ್ಕು ವರ್ಷಗಳಲ್ಲಿ ತನ್ನ ಒಡಹುಟ್ಟಿದವರ ಗತಿಯನ್ನೇ ಹೊಂದಿತು.
೨೨------------------------------------------------------------------------
ರಾಣಿಯು ತನ್ನ ಉಲ್ಹಸಿತವೃತ್ತಿಯನ್ನು ಯಾವ ಉಪಾಯಗಳಿಂದ
ಸ್ಥಿರವಾಗಿ ಕಾಯ್ದು ಕೊಂಡಿದ್ದಳು? ರಾಜಮಂದಿರದಲ್ಲಿ ಪ್ರವೇಶಿಸಿದಂದಿನಿಂದ,
ರಾಜನ ಸಾನ್ನಿಧ್ಯವು ಅವಳಿಗೆ ದೊರಕದೆ ಸಮಯದಲ್ಲಿ ತನ್ನ ಮಂದಿರ
ದೊಳಗಿನ ಏಕಾಂತವಾಸವನ್ನು ಸೇರಿ, ರಾಜಪತ್ನಿಗೆ ಅನುರೂಪವಾಗಿ ತೋರ
ಬೇಕೆಂದು ತಾನು ಮೈಮೇಲೆ ಧಾರಣನಾಡುತ್ತಿದ್ದ ಉಚ್ಚಉಚ್ಚವಾದ
ವಸ್ತ್ರಾಭರಣಗಳನ್ನು ತೆಗೆದಿಟ್ಟು, ಪೆಟ್ಟಿಗೆಯಲ್ಲಿದ್ದ ತನ್ನ ಹಳೇ ವಸ್ತ್ರಗಳನ್ನು
ಧರಿಸಿ, ಆ ವೇಷದಲ್ಲಿ ತಾನು ಯಾರಿರುವಳೆಂಬದರ ವಿಚಾರವನ್ನು ಮಾಡು
ತ್ತಿದ್ದಳು, ಐಶ್ವರ್ಯದ ಕ್ಷಣಿಕವಾದ ಸುಖದ ಮೋಹಕ್ಕೆ ಅವಳು ಅಂಕಿತ
ಳಾಗಿದ್ದಿಲ್ಲ. ಕ್ಷಮೆ, ದಮ, ತಿತಿಕ್ಷೆ, ಶಾಂತಿ, ಸಹನಶೀಲತೆ ಸತ್ಯ ನಿಷ್ಕತೆ
ಮುಂತಾದ ಸದ್ಗುಣಗಳಿಂದ ಪ್ರಾಪ್ತವಾಗುವ ಆತ್ಮಸುಖದಲ್ಲಿ ಅವಳು ರತ
ಳಾಗಿದ್ದಳು. " ಮುಕುಟವನ್ನು ಧಾರಣಮಾಡಿದ ಮಸ್ತಕವು ಚಿಂತೆಯಿಂದ
ಗ್ರಸ್ತವಾಗಿರುತ್ತದೆ" ಎಂಬ ತತ್ವವನ್ನು ಅವಳು ಚನ್ನಾಗಿ ಅರಿತಿದ್ದಳು. ಪಕ್ಷಿ
ಗಳಂತೆ ತಾನೊಬ್ಬಳು ಸರೋವರದ ತಟಾಕದಲ್ಲಿ ಗಾನವಿಹಾರ ಮಾಡುವ
ಅರಣ್ಯಕನ್ನಿಕೆಯೆಂಬದನ್ನು ಅವಳು ಮರೆತಿದ್ದಿಲ್ಲ. ರಾಜಮಂದಿರದಲ್ಲಿ ಅವಳ
ಸ್ವತಂತ್ರತೆಯು ನಷ್ಟವಾದದ್ದಕ್ಕಾಗಿ ಅವಳಿಗೆ ವಿಷಾದವೆನಿಸಿದ್ದಿಲ್ಲ. ರಾಜ್ಯ
ವ್ಯವಹಾರದೊಳಗಿನ ಯಾವದೇ ಕಾರ್ಯದಲ್ಲಿ ಸ್ವಸುಖಕ್ಕಾಗಿ ಅವಳು
ಅಭಿಮಾನಪಡುತ್ತಿದ್ದಿಲ್ಲ. ರಾಜ್ಯದೊಳಗಿನ ಐಶ್ವರ್ಯವು ರಾಜ್ಯದ ಉನ್ನತಿ
ಗಾಗಿಯೇ ಇರುವದೆಂದು ತಿಳಿದು, ಅವಳು ಯಾವ ವಸ್ತುವಿನಲ್ಲಿಯೂ ಆಸಕ್ತ
ಳಾಗಿದ್ದಿಲ್ಲ. ಅವಳು ತನ್ನ ಆತ್ಮವನ್ನು ಪರಿಸ್ಥಿತಿಯ ಸಂಗತಗಳಿಂದ ಅಲಿಪ್ತ
ವಾಗಿಟ್ಟಿದ್ದಳು. ಸರ್ವ ಪ್ರಾಣಿಮಾತ್ರಗಳಲ್ಲಿ ಚೇತನಾರೂಪದಿಂದ ವ್ಯಕ್ತ
ನಾಗಿರುವ ಈಶನ ಚಿಂತನೆಯಲ್ಲಿ ಅವಳು ಯಾವಾಗಲೂ ಮಗ್ನಳಾಗಿರುತ್ತಿ
ದ್ದಳು. ಈ ರೀತಿಯಾಗಿ ತನ್ನ ವಾಸನೆಗಳನ್ನೂ, ಆಸಕ್ತಿಗಳನ್ನೂ ಇಲ್ಲದಂತೆ
ಮಾಡಿ, ಅವಳು ತನ್ನ ಆತ್ಮೋನ್ನತಿಯನ್ನು ಸಾಧಿಸಿದ್ದಳು. ' ಸ್ವಕರ್ತವ್ಯ '
ವೆಂಬುದು ಅವಳಿಗೆ ಇದ್ದಿದ್ದಿಲ್ಲ. ಅವಳು ಕ್ಷುದ್ರವಿಷಯಗಳ ಬಂಧನದಿಂದ
ಮುಕ್ತಳಾಗಿದ್ದಳು. ಇವೇ ಸಾಧನಗಳಿಂದ ರಾಣಿಯು ರಾಜಮಂದಿರದಲ್ಲಿರುವ
ವರೆಗೆ ತನ್ನ ಉಲ್ಲಸಿತವೃತ್ತಿಯನ್ನು ಕಾಯ್ದು ಕೊಂಡಿದ್ದಳು.
ಒಂದು ದಿನ ರಾತ್ರಿಯಲ್ಲಿ ರಾಜನು ಹತ್ತರ ಬಂದು ಅಂದದ್ಡೇನಂದರೆ,
೨೩-----------------------------------------------------------------------
“ ಇನ್ನು ಮುಂಜಿ ನಮಗಾಗುವ ಸಂತತಿಯ ಹತ್ಯೆಯನ್ನು ಮಾಡುವ
ಪಾಪಾಚರಣವನ್ನು ನಾನು ಮಾಡಲಾರೆನು. ದತ್ತಕನನ್ನು ತೆಗೆದುಕೊಳ್ಳುವ
ಕಲ್ಪನೆಯಾದರೂ ನನಗೆ ಸರಿದೋರುವದಿಲ್ಲ. ಈ ವಿಷಯನಾಗಿ ನಾನು
ಪೂರ್ಣವಾಗಿ ವಿಚಾರಮಾಡಿರುವೆನು; ಇನ್ನೊಂದು ಲಗ್ನ ಮಾಡಿಕೊಳ್ಳದ
ಹೊರತು ನನಗೆ ಶಾಂತಿಯು ದೊರೆಯಲಾರದೆಂದು ನನ್ನ ಮತವಾಗಿದೆ.”
ರಾಣಿಯು ಈ ಮಾತಿಗೆ ಸ್ವಸಂತೋಷದಿಂದ ತನ್ನ ಒಪ್ಪಿಗೆಯನ್ನು
ಕೊಟ್ಟಳು, ಯಾಕಂದರೆ, ಅವಳ ಸುಖವು ಪರರ ಮೇಲೆ ಅವಲಂಬಿಸಿರದೆ,
ತನ್ನಲ್ಲಿ ವಾಸಮಾಡಿಕೊಂಡಿರುವ ಸದ್ಗುಣಗಳಿಂದ ಲಭಿಸುವ ಸುಖವೇ
ನಿಜವಾದ ಸುಖವೆಂದು ಅವಳ ಮನವರಿಕೆಯಾಗಿತ್ತು. ಪತಿ, ಪಿತಾ, ಅಪತ್ಯ
ಮುಂತಾದವರಿಂದ ದೊರೆಯತಕ್ಕ ಸುಖವನ್ನು ಅವಳು ಅಪೇಕ್ತಿಸಿದ್ದಿಲ್ಲ.
ಅವಳ ಸಮಾಧಾನವೃತ್ತಿಯನ್ನು ನೋಡಿ ರಾಜನು ಆಶ್ಚರ್ಯಭರಿತ
ನಾಗಿ ಅಂದದ್ದು: “ ನಿನ್ನ ಮುಂದಿನ ವಿಚಾರವು ಯಾವ ಬಗೆಯದಾಗಿದೆ?
“ ನಿಮ್ಮ ಇಚ್ಛೆಯೇ ನನ್ನ ಇಚ್ಛೆಯು. " ಎಂದು ರಾಣಿಯು
ಪ್ರತ್ಯುತ್ತರವನ್ನು ಕೊಟ್ಟಳು.
“ನೀನು ಇಲ್ಲಿ ಇರುವದರಿಂದ ಗೃಹಕಲಹಗಳು ಹುಟ್ಟುವವು; ಅದಕ್ಕಾಗಿ
ನೀನು ಅರಣ್ಯವನ್ನು ಸೇರುವದು ಉಚಿತವಾದದ್ದು."
ಕೂಡಲೆ ರಾಣಿಯು ತನ್ನ ಮೈಮೇಲಿನ ವಸ್ತ್ರಾಭರಣಗಳನ್ನು ತೆಗೆದು
ತನ್ನ ಜೀರ್ಣವಸ್ತ್ರಗಳನ್ನು ಪರಿಧಾನಮಾಡಿ ತನ್ನ ಅರಣ್ಯದ ಮಾರ್ಗ
ವನ್ನವಲಂಬಿಸಿದಳು. ಒಳ್ಳೇ ಆನಂದದಿಂದಲೂ, ಸಂತೋಷದಿಂದಲೂ ತನ್ನ
ತಂದೆಯ ಸುಖಶಾಂತಿಗೃಹವನ್ನು ಪ್ರವೇಶಿಸಿದಳು. ತಂದೆಯಾದರೂ
ಅವಳಂತೆಯೇ ಶಾಂತಿಸಾಮ್ರಾಜ್ಯದಲ್ಲಿದ್ದನು. ರಾಜನಿಂದ ಆಶ್ರಮದಲ್ಲಿ
ಇಡಲ್ಪಟ್ಟ ಸೇವಕನು ಮರಳಿ ರಾಜಧಾನಿಗೆ ಹೋದನು,
ಮುಂದೆ ಒಂದು ದಿವಸ ರಾಜನು ಆ ಆಶ್ರಮದ ಮಾರ್ಗವಾಗಿ
ಹೋಗುತ್ತಿರುವಾಗ ಅವನಿಗೆ ರಾಣಿಯ ಸ್ಮರಣವಾಗಿ ಅವಳ ವಿಷಯವಾಗಿ
ಅವನ ಅಂತಃಕರಣವು ಕರಗಿ ಅವಳ ಸಮಾಧಾನವನ್ನು ಮಾಡಬೇಕೆಂದಾ
ಆಶ್ರಮನ್ನುಹೊಕ್ಕನು. ಆಶ್ರಮದಲ್ಲಿದ್ದ ತನ್ನ ಪತ್ನಿಯು ಸ್ಮಿತಮುಖಳಾಗಿಯೂ,
ಆನಂದಿತಳಾಗಿಯೂ ಇದ್ದದ್ದನ್ನು ಕಂಡನು. ಅವಳನ್ನು ಸಮಾಧಾನ
೨೪------------------------------------------------------------------------
ಪಡಿಸುವ ಅವಶ್ಯಕತೆಯೇ ಅವನಿಗೆ ಉಳಿಯಲಿಲ್ಲ. " ರಾಜಮಂದಿರಕ್ಕೆ
ಬಂದು, ನಾನು ಮದುವೆಯಾಗುವ ನೂತನ ಭಾರ್ಯಳ ಸ್ವಾಗತವನ್ನು
ಮಾಡುವಿಯಾ?? ಎಂದು ರಾಜನು ಕೇಳಲು, ಅವಳ ಮುಖದ ಮೇಲೆ
ಯಾವ ಬಗೆಯ ಮತ್ಸರದ ವಿಕಾರವೂ ತೋರದೆ, ಅವಳು ಸಂತೋಷದಿಂದ
ತನ್ನ ಅನುಮತಿಯನ್ನು ಕೊಟ್ಟಳು. ಎರಡನೆಯ ಲಗ್ನದ ವ್ಯವಸ್ಥೆಯೆಲ್ಲ
ಅವಳಿಗೆ ಒಪ್ಪಿಸಲ್ಪಟ್ಟಿತು. ಅವಳ ಸುವ್ಯವಸ್ಥೆಯಿಂದ ಪ್ರಜರೆಲ್ಲರೂ ಸಂತುಷ್ಟ
ರಾದರು. ಹೊಸ ಭಾರ್ಯಳು ಪರಿವಾರಸಹಿತವಾಗಿ ಮಂಗಲವಾದ್ದಗಳ
ಧ್ವನಿಯಲ್ಲಿ ಒಳ್ಳೇ ಸೊಬಗಿನಿಂದ ರಾಜಮಂದಿರದ ಮಹಾದ್ವಾರದಲ್ಲಿ ಬಂದು
ನಿಲ್ಲಲು, ಸುಮಂಗಲಾರಾಣಿಯೂ, ಇತರ ಸ್ತ್ರೀಯರೂ ಒಳ್ಳೇ ಪ್ರೇಮ
ಪೂರ್ವಕವಾಗಿ ಅವಳ ಸ್ವಾಗತವನ್ನು ಮಾಡಿದರು. ಸುಮಂಗಲೆಯ ಹಾಗೂ
ನೂತನ ಭಾರ್ಯಳ ದೃಷ್ಟಾದೃಷ್ಟವಾದ ಕೂಡಲೆ, ಸುಮಂಗಲೆಯು ಮಾತೆ
ಯಂತೆ ಅವಳ ಚುಂಬನವನ್ನು ತೆಗೆದುಕೊಂಡು ಅವಳನ್ನು ಗಟ್ಟಿಯಾಗಿ ಅಪ್ಪಿ
ಕೊಂಡಳು. ತಾಯಿಯು ಮಗಳನ್ನು ಪ್ರೀತಿಸುವಂತೆ ಸುಮಂಗಲಾರಾಣಿಯು
ಅಭಿನವ ರಾಣಿಯನ್ನು ಪ್ರೀತಿಸಹತ್ತಿ ದಳು. ನೂತನ ರಾಜ್ಞಿಯ ಸೌಂದರ್ಯ
ವನ್ನು ನೋಡಿ ಎಲ್ಲ ಸ್ತ್ರೀಯರು ಮೋಹಿತರಾದರು. ಆದಕ್ಕೆ ಪ್ರಥಮ
ರಾಜ್ಞಿಯ ನೈತಿಕ ಸೌಂದರ್ಯವನ್ನೂ, ಅವಳ ಮನಸ್ಸಿನ ಸಮತ್ವವನ್ನೂ
ನೋಡಿ ಸರ್ವರೂ ಆಶ್ಚರ್ಯಭರಿತರಾದರು. ದ್ವಿತೀಯ ರಾಜ್ಞಿಯು
ಬರುವಾಗ ತನ್ನ ಸಂಗಡ ಚಿಕ್ಕವರಾದ ಇಬ್ಬರು ಸಹೋದರರನ್ನು
ಕರತಂದಿದ್ದಳು. ಆ ದೇಶದ ಸಾಂಪ್ರದಾಯದಂತೆ ಲಗ್ನ ಪ್ರೀತ್ಯರ್ಥವಾಗಿ
ಪ್ರಜರಿಗೆ ಒಂದು ಸುಗ್ರಾಸದ ಭೋಜನಸಮಾರಂಭವು ಸಾದರಿಸಲ್ಪಟ್ಟಿತು.
ಈ ಭೋಜನದ ವ್ಯವಸ್ಥೆಯೆಲ್ಲ ಸುಮಂಗಲಾರಾಣಿಗೆ ಒಪ್ಪಿಸಲ್ಪಟ್ಟಿತ್ತು.
ಸುಮಂಗಲೆಯ ಶಾಂತವಾದ ಮುಖಕಾಂತಿಯನ್ನು ನೋಡಿ, ಎಲ್ಲರ
ಅಂಶಃಕರಣಗಳು ಕರಗಿದವು. ರಾಜಮಂದಿರದಲ್ಲಿ ಮಿಲಿತರಾದ ಜನರ
ನೇತ್ರಗಳೊಳಗಿಂದ ಅಶ್ರುಧಾರೆಗಳು ಸುರಿಯಹತ್ತಿ ದವು. ಲಗ್ನ ಸಮಾರಂಭದ
ಆವಶೇಷಕಾರ್ಯವು ಮುಗಿದ ಬಳಿಕ ರಾಣಿಯು ಮರಳಿ ಅರಣ್ಯಕ್ಕೆ ಹೋಗ
ಬೇಕೆಂಬ ಕಲ್ಪನೆಯು ಎಲ್ಲರಿಗೂ ಅಸಹ್ಯವಾಗಿ ತೋರಹತ್ತಿತು. ವಿಚಾರ
ಮಾಡಹತ್ತಿದಂತೆ ಸುಮಂಗಲೆಯ ವಿಷಯಕವಾಗಿದ್ದ ಮತ್ಸರಗ್ರಸ್ತ
೨೫ --------------------------------------------------------------------------
ವಿಚಾರಗಳು ಪ್ರಜರ ಮನಸ್ಸುಗಳೊಳಗಿಂದ ಅಸ್ತವಾಗಹತ್ತಿದವು. ಲಗ್ನ
ಸಮಾರಂಭವು ಸಂಪೂರ್ಣವಾಗಿ ಮುಗಿದ ಬಳಿಕ ಸುಮಂಗಲಾ
ರಾಣಿಯು ಸರ್ವರ ಅಪ್ಪಣೆಯನ್ನು ಪಡೆದುಕೊಂಡು, ರಾಜನ
ಬಳಿಗೆ ಬಂದು " ಪ್ರಭ:ಗಳೆ, ನಾನು ಬಂದಿರುವ ಕೆಲಸವು ಮುಗಿ
ಯಿಶು; ಇನ್ನು. ಮೇಲೆ ನಿಮ್ಮ ಇಚ್ಛಾನುಸಾರವಾಗಿ ನಾನು ನನ್ನ
ತಂದೆಯ ಹತ್ತರ ಹೋಗುವೆನು. ರಾಜರು ಇಚ್ಛಸಿದಾಗ ಈ ದಾಸಿಯು
ಸೇವೆಗಾಗಿ ಸಿದ್ಧಳೇ ಇರುವಳು. '' ರಾಣಿಯ ಈ ಶಬ್ದಗಳನ್ನು ಕೇಳಿ
ರಾಜಮಂದಿರದೊಳಗಿನ ಸ್ತ್ರೀಯರ ಹೃದಯಗಳು ವಿದೀರ್ಣವಾದವು. ಕಂಬನಿ
ಯಿಂದ ಅವರ ನೇತ್ರಗಳು ತುಂಬಿಬಂದವು. ಕೃತಕರ್ಮಕ್ಕಾಗಿ ತಮ್ಮ
ನಿಷ್ಠುರಪೂರ್ಣವಾದ ಆಚರಣಕ್ಕಾಗಿ, ಅವರು ಪೂರ್ಣವಾಗಿ ಪಶ್ಚಾತ್ತಾಪ
ಪಟ್ಟು ಅಂದದ್ದು; " ದೇವಿ, ನೀನು ದರಿದ್ರನ ಮಗಳಲ್ಲ ದೇವಲೋಕದ
ಪುಣ್ಯಾತ್ಮಳಾಗಿರುವಿ !" ಬಳಿಕ ರಾಣಿಯು, ರಾಜ್ಯದಲ್ಲಿ ಶಾಂತತೆಯು
ಸ್ಥಿರವಾಗಿ ಬಾಳಬೇಕೆಂಬುದರ ಸಲುವಾಗಿ ರಾಜನು ತನ್ನ ಮಕ್ಕಳನ್ನು ಹೇಗೆ
ಕೊಲೆಗಡಕರ ಸ್ವಾಧೀನಮಾಡಿದನೆಂಬ ಸಂಗತಿಯನ್ನು ಹೇಳಿದಳು. ಈ
ವೃತ್ತಾಂತವನ್ನು ಕೇಳಿ ದ್ವಿತೀಯ ರಾಜ್ಞಿಯು ರೋದನಮಾಡಹತ್ತಿದಳು,
ಅವಳು ಅಂದದ್ದು: " ನಿಮ್ಮ ಕನ್ಯೆಯೂ ಪುತ್ರರೂ ಕೊಲ್ಲಲ್ಪಟ್ಟರು;
ನನಗೆ ಮಾತ್ರ ಅವರ ರಕ್ತದ ನದಿಯೊಳಗಿಂದ ಇಲ್ಲಿಗೆ ಬರಬೇಕಾಯಿತು. "
ಆಗ ಅಲ್ಲಿ ನೆರೆದ ಜನರೆಲ್ಲರೂ ರಾಜನ ನಿರ್ಭತ್ಸನೆಯನ್ನು ಮಾಡಹತ್ತಿ
ದರು. ರಾಜನು ಅಂದದ್ದು : "ಕುಲೀನ ಸ್ತ್ರೀಯರೆ, ಸರದಾರರೆ, ಹಾಗೂ
ರಾಜ್ಯಕ್ಕೆ ಮೂಲಾಧಾರರಾಗಿರುವ ಪ್ರಜಾಜನರೆ, ಸುಮಂಗಲೆಯ ಹೊರತಾಗಿ
ಇಲ್ಲಿರುವವರೆಲ್ಲರೂ ಅಳುತ್ತಿರುವರು. ಸುಖದುಃಖಗಳ ಮಿಶ್ರಣದಿಂದ ನನ್ನ
ಸ್ಥಿತಿಯಾದರೂ ಹಾಗೆಯೇ ಆಗಿದೆ. ಪ್ರಜಾಜನರೆ, ಅಭಿಮಾನಕ್ಕೆ ಒಳಪಟ್ಟು
ರೂಢಿಯ ಮೂಢ ಶ್ರದ್ಧೆಯಿಂದ ಗ್ರಸ್ತರಾಗಿ ನೀವು ಇಂದಿನವರೆಗೆ ರಾಣಿಯ
ವಿಷಯವಾಗಿ ನಿಷ್ಠುರತೆಯನ್ನು ಧಾರಣಮಾಡಿದಕ್ಕಾಗಿ ನಾನು ನಿಮ್ಮನ್ನು
ದೂಷಿಸಲು ಇಚ್ಛಿಸುವದಿಲ್ಲ. ನೀವು ನ ನನಗೆ ಪುತ್ರಸಮಾನರು. ನನ್ನ ನೇತ್ರ
ಗಳು ಅಶ್ರುಗಳಿಂದ ಪೂರ್ಣವಾಗಿವೆ. ಆದರೆ ಅವು ದುಃಖಾಶ್ರುಗಳಿರದೆ
ಆನಂದದ....ಪ್ರೇಮದ....ಅಶ್ರುಗಳಾಗಿವೆ. ನಿಮ್ಮ ಅಶ್ರುಗಳಾದರೂ ಅವೇ
೨೬ ------------------------------------------------------------------------------
ರೂಪವನ್ನು ಹೊಂದಲಿ, ”
ಬಳಿಕ ಸುಮಂಗಲೆಯನ್ನುದ್ದೇಶಿಸಿ ಅಂದದ್ದು : " ಸಂಪೂರ್ಣವಾದ
ರಾಜ್ಯದಲ್ಲಿ ನೀನೊಬ್ಬಳೇ ಸುಖಿಯಾಗಿರುವಿ, ನೀನು ಚಿರಸುಖಿಯೂ
ಚಿರಾನಂದಿಯೂ ಆಗಿ ಬಾಳು. *
"ಅಷ್ಟರಲ್ಲಿ ರಾಜನ ನೂತನ ಪತ್ನಿಯ ತಂದೆಯು ಅಲ್ಲಿಗೆ ಬಂದನು. ಅಲ್ಲಿ
ನಡೆದಿದ್ದ ಎಲ್ಲ ವೃತ್ತಾಂತಗಳು ಅವನಿಗೆ ವಿದಿತವಾಗಲು, ಅವನ ಮೋರೆಯ
ಮೇಲೆ ಒಂದು ವಿಲಕ್ಷಣವಾದ ಸಂಶಯದ ಚಿಹ್ನವು ತೋರಹತ್ತಿತು. ಇವನಾ
ದರೂ ನೆರೆಯಲ್ಲಿದ್ದ ಒಂದು ಚಿಕ್ಕದೇಶದ ಅರಸು, ಇವನು ತುಸು ಹೊತ್ತು
ವಿಚಾರಿಸಿ, ಮನಸ್ಸಿನಲ್ಲಿ ಯಾವದೋ ಒಂದು ನಿರ್ಣಯವನ್ನು ಸ್ಥಿರಪಡಿಸಿ,
ಸುಮಂಗಲೆಯ ಪತಿಯನ್ಸು ಕುರಿತು ಅಂದದ್ದು : " ರಾಜರೇ, ನೀವು ನಿಮ್ಮ
ಮೂವರೂ ಮಕ್ಕಳನ್ನು ಕೊಲ್ಲುವದಕ್ತಾಗಿ ಯಾವ ಕೊಲೆಗಡಕರ ಸ್ವಾಧೀನ
ಮಾಡಿದ್ದಿರಿ? ಅವರನ್ನು ಇಲ್ಲಿ ಕರೆಸಿದರೆ ಗೂಢವಾಗಿರುವ ಎಷ್ಟೋ ಸಂಗತಿ
ಗಳ ಸ್ಪಷ್ಟೀಕರಣವಾಗುವದೆಂದು ನನಗೆ ಹೊಳೆಯಹತ್ತಿದೆ.'' ಕೂಡಲೆ
ಕೊಲೆಗಡಕರನ್ನು ಕರೆಸಿ, ವಿಚಾರಿಸಲಾಗಿ ಅವರು ಹೇಳಿದ್ದೇನಂದರೆ,
" ಮಹಾರಾಜರಾದ ಪ್ರಭುಗಳೆ, ಈ ರಾಜಪಿಂಡದ ಸುಂದರಾಕೃತಿಗಳಾದ
ಬಾಲಿಕೆ ಬಾಲಕರನ್ನು ಕೊಲ್ಲಲು ನಮ್ಮ ಕೈಗಳು ಮೇಲಕ್ಕೇಳಲಿಲ್ಲ.
ಕೈಯ್ಯೊಳಗಿನ ಶಕ್ತಿಯು ನಷ್ಟವಾಗಿ ನಮ್ಮ ಶಸ್ತ್ರಗಳು ತಾವಾಗಿಯೆ: ನೆಲಕ್ಕೆ
ಬಿದ್ದವು. ರಾಜಹತ್ಯೆಯ ಹಾಗೂ ಬಾಲಹತ್ರೈಯ ಪಾಪಗಳು ನಮ್ಮನ್ನು
ಭಯಭೀತ ಮಾಡಿದವು. ಮೂರೂ ಪ್ರಸಂಗಗಳಲ್ಲಿ ಇದೇ ಪ್ರಕಾರದ ಭೀತಿಯೂ,
ಮನೋದೌರ್ಬಲ್ಯವೂ ಮೂರ್ತಿಮಂತವಾಗಿ ನಮ್ಮೆದುರು ನಿಂತದ್ದರಿಂದ
ನಾವು ಆ ಬಾಲಕರನ್ನು ಅರಣ್ಯದಲ್ಲಿಯೇ ಬಿಟ್ಟುಬಂದೆವು; ಹಾಗೂ...”
ನೂತನ ಪತ್ನಿಯ ರಾಜನು ; "" ಸಾಕು ಸಾಕು, ಮುಂದಿನ ಕಥೆಯೆಲ್ಲ
ನನಗೆ ಗೊತ್ತಾಗಿದೆ. ರಾಜರೇ, ಮೃಗಯಾವ್ಯಸನವು ನನಗೆ ಬಹಳ.
ಅರಣ್ಯದಲ್ಲಿ ಬೇಟಿಗಾಗಿ ಹೋದಾಗ ನನಗೆ ಈ ಬಾಲಿಕೆಯೂ -- ರಾಜನ
ಈಗಿನ ದ್ವಿತೀಯ ಪತ್ನಿಯು ಈ ಉಭಯ ಬಾಲಕರೂ ದೊರೆತರು.
ನಿಪುತ್ರಕನಾದ ನನಗೆ ಇವರಲ್ಲಿ ಸಂತಾನಸ್ನೇಹ ಹುಟ್ಟುವದು ಸಹೆಜವಾದದ್ದೇ.
ಸ್ವಲ್ಪದರಲ್ಲಿ ಹೇಳುವದದೆಂದರೆ, ಈ ನಿಮ್ಮ ದ್ವಿತೀಯ ಭಾರ್ಯಳು ಇನ್ನು
೨೩ --------------------------------------------------------------------
ಮುಂದೆ ನಿಮ್ಮ ಭಾರ್ಯಳಾಗಿರದೆ ಕನ್ಯೆಯಾಗಿರುವಳು. "
ಈ ವೃತ್ತಾಂತವನ್ನು ಕೇಳಿ ಸರ್ವರಿಗೂ ಪರಮಾನಂದವಾಯಿತು.
ಸುಮಂಗಲೆಯೇ ರಾಣಿಯಾದಳು; ಹಾಗೂ ಅವಳ ಹಿರಿಯ ಮಗನೇ
ಯುವರಾಜನಾದನು.
ಪ್ರೇಮದ ಸಲುವಾಗಿ ವಿವಾಹಿತ ಸ್ತ್ರೀಯು ಸರ್ವಸಂಗಪರಿತ್ಕಾಗವನ್ನು
ಮಾಡುವದೇ ಅವಳ ಪ್ರಧಾನಧರ್ಮವು. ಪತ್ನೀಧರ್ಮವೆಂಬದು ಇದೇ.
ಪತಿಯಲ್ಲಿ ಪತ್ನಿಯೂ, ಪತ್ನಿಯಲ್ಲಿ ಪತಿಯೂ ವಾಸಮಾಡಿಕೊಂಡಿರುವದೇ
ಪತಿ- ಪತ್ನಿಗಳ ಧರ್ಮವು. ಸ್ತ್ರೀಯು ತನ್ನ ಪತಿಯೇ ತನಗೆ ಪರಮಾತ್ಮ
ನೆಂದು ತಿಳಿದು, ತನ್ನ ದೇಹವನ್ನೂ, ಮನಸ್ಸನ್ನೂ ಪತಿಗೆ ಸಮರ್ಪಿಸುವಂತೆ,
ಪತಿಯಾದರೂ ತನ್ನ ಸರ್ವಸ್ವವನ್ನು ಪತ್ನಿಯಲ್ಲಿ ವಾಸಮಾಡಿಕೊಂಡಿರುವ
ಪರಮಾತ್ಮನಿಗೆ ನಿವೇದಿಸುವದೇ ವೈವಾಹಿಕಸ್ಮಿತಿಯ ಜೀವಿತವಾಗಿದೆ. ಇದರಲ್ಲಿ
ವೃಕ್ತಿವಿಷಯಕವಾದ ಸ್ವಾರ್ಥದ ಲೇಶವಾದರೂ ಇರಕೂಡದು. ಪಾಣಿಗ್ರಹಣ
ದೊಳಗಿನ ಮುಖ್ಯ ಕಲ್ಪನೆಯೆಂದರೆ, ಪತ್ನಿಯು ತನ್ನ ಕಯ್ಯನ್ನು ಸತಿಯ
ಕಯ್ಯಲ್ಲಿ ಕೊಡುತ್ತಾ ಳೆ; ಪತಿಯು ತಮ್ಮಿಬ್ಬರಹಸ್ತಗಳನ್ನು ಆ ಪರಮೇಶ್ವರನಿಗೆ
ಅರ್ಪಿಸುತ್ತಾನೆ.
ಪತಿಯು ಪತ್ನಿಯಲ್ಲಿ, ಪತ್ನಿಯು ಪತಿಯಲ್ಲಿ ಹೀಗೆ ಪರಸ್ಪರರೂ
ಪರಸ್ಪರರಲ್ಲಿ ಲೀನರಾದರೆ - ಏಕರೂಪರಾದರೆ - ವೈವಾಹಿಕಸ್ತಿತಿಯು
ಭೂಲೋಕದೊಳಗಿನ ಸ್ವರ್ಗವಾಗುವದು.
==========================================
ಪತಿಗಳ ಸ್ವಾತಂತ್ರ್ಯಹಾನಿಯು
ಪ್ರತಿಷ್ಠಾನ ನಗರೆದ ಮಹಾರಾಜನ ಪ್ರೇಮದ ಕುಮಾರಿಯಾದ
ಸುಧಾಲಹರೀ ಎಂಬ ವಿದುಷಿಯಾದ ತರುಣಿಯು (ಕಾಲಿದಾಸನ ಚೂಡಾ
ಮಣಿಯಂತೆ) ತನಗೆ ವಿದ್ಯಾವಿಭೂಷಣನೂ ಕಲಾಕೋವಿದನೂ ಚತುರನೂ
ಸುಂದರನೂ ಆದ ಪತಿಯು ದೋರಕಿದರೆಯೇ ತಾನು ಮದುವೆಯಾಗುವೆ
ನಲ್ಲದೆ ಸಾಮಾನ್ಯರಾದೆ ರಾಜಕುಮಾರರ ಪಾಣಿಗ್ರಹಣಕ್ಕೆ ತಾನು ಒಪ್ಪುವ
ದಿಲ್ಲವೆಂಬ ಪಣವನ್ನು ತೊಟ್ಟಿದ್ದಳು. ರಾಜಕುಮಾರರಾಗಿರದೆ ಹಾಗೆಯೇ
ಸಾಮಾನ್ಯರಾದ ನಾಗರಿಕರಲ್ಲಿ ಸುಧಾಲಹರಿಯು ಬಯಸುನಂಥ ವರಗಳು
ಒಂದೆರಡು ಸಿಕ್ಕರೂ ಸಿಕ್ಕಬಹುದಾಗಿತ್ತು. ಆದರೆ ಸುಧಾಲಹರಿಯ ತಂದೆಯು
ಮಹಾರಾಜನು! ಅವನು ತನ್ನ ಪ್ರೇಮದ ಕುಮಾರಿಯನ್ನು ಸಾಮಾನ್ಯರಾದ
ನಾಗರಿಕರಿಗೆ ಕೊಡಲೊಪ್ಪುತ್ತಿದ್ದಿಲ್ಲ. ಮುಂದೆ ವಿಚಾರವೇನು? : "ಸ್ಮಾರ್ತಂ
ಭಾಗವತಂ ಚ ವೈಷ್ಣ ವಮಿತಿ" ಎಂದು ಪಂಚಾಂಗವನ್ನು 'ತ್ರೇಧಾ' ಮಾಡಿ
ಕೊಟ್ಟಂಥ ಮಲ್ಲಂಭಟ್ಟ ಜೋಯಿಸ್ಟರು ರಾಜಕುಮಾರಿಯಾದ ಸುಧಾಲಹರಿಯ
ಜಾತಕವನ್ನು ಬರೆದು. ಆದರಲ್ಲಿ ಆ ಕನ್ಯಾರತ್ನಕ್ಕೆ ಅನುರೂಪನಾದ
"ಸತಿಪ್ರಾಪ್ತಿ ಭವಿತವ್ಯಂ" ಎಂದು ಉಲ್ಲೇಖಿಸಿದ್ದರಿಂದ ಮಹಾರಾಜನಿಗೆ ತನ್ನ
ಮಗಳ ಲಗ್ನದ ಚಿಂತೆ ವಿಶೇಷವಾಗಿ ಇರಲಿಲ್ಲ. ಸುಧಾಲಹರಿಯಾದರೂ
ಎದೆಯೊಡಕೊಂಡಿದ್ದಿಲ್ಲ.
ಕಿಸುಕಾಡಿನಲ್ಲಿ (ಮಾಣಿಕ್ಯಾರಣ್ಯದ ಮಧ್ಯದಲ್ಲಿ) ಮುತ್ತಿನ ಕೋಟೆ
ಯೆಂಬ ಚಿಕ್ಕದಾದ ಊರು, ಚಿಕ್ಕದಾದದ್ದೊಂದು ರಾಜೃದ ರಾಜಧಾನಿ
ಯಾಗಿತ್ತು. ಚಿಕ್ಕದಾದ ರಾಜ್ಯವೆಂದರೆ, ಮುತ್ತಿನ ಕೋಟಿಯ ಅರಮನೆಯ
ಮಾಳಿಗೆಯ ಮೇಲೆ ನಿಂತು ನೋಡಿದರೆ ಕಾಣುವ ಕ್ಲಿತಿಜನೇ ಆ ರಾಜ್ಯದ
ಚತುಃಸೀಮೆಯಾಗಿತ್ತು. ಆ ದೇಶದ ರಾಜನಾದ ಸುರೇಂದ್ರನು ಕ್ಷತ್ರಿಯ
ಶ್ರೇಷ್ಠರಾದ ಪ್ರಮಾರ ರಾಜರ ವಂಶಜನಾಗಿರುವದರಿಂದ ಅವನ ರಾಜ್ಯವು
ಅಂಗೈಯನ್ನು ಚಿಕ್ಕದಾಗಿದ್ದರೂ 'ಇವನು ನಮ್ಮ ಸಮಾನಸ್ಕಂಧನಲ್ಲ'ವೆಂದು
ಹೇಳಲು ಭರತಖಾಡದಲ್ಲಿಯ ಯಾವ ರಾಜನಿಗೂ ಧೈರ್ಯವಿದ್ದಿಲ್ಲ.
ಯಾಕೆಂದರೆ ಪ್ರಮಾರರೇ ಭೂವಲ್ಲಭರೆಂಬ ನಾಣ್ನುಡಿಯು ಸಕಲರಾದ
೨೯ --------------------------------------------------------------------
ಕ್ಷತ್ರಿಯರೆ ಮುಖದಲ್ಲಿದ್ದಿತು. ಮುತ್ತಿನ ಕೋಟೆಯ ರಾಜ್ಯದ ವಿಸ್ಮಾರವು
ನೂರಾ ವರ್ಷಗಳಾರೆಭ್ಯ ಇದ್ದಕಿದ್ದಷ್ಟೆಯೇ ಇದ್ದರೂ ಅಲ್ಲಿಯ ರಾಜರನ್ನು
ತಮ್ಮ ಅಂಕಿತದಲ್ಲಿಟ್ಟು ಕೊಳ್ಳುವನೆಂದರೆ ಪುಲಿಕೇಶಿ ಸಾರ್ವಭೌಮನಿಂದ ಆಗಿ
ದ್ದಿಲ್ಲ. ಪೆರ್ಮಡಿಯಿಂದಾಗಿದ್ದಿಲ್ಲ! ಯಾಕೋ, ಯಾರು ಬಲ್ಲರು? ಪ್ರಮಾರರ
ಮೇಲೆ ಕೈಮಾಡಬಾರದೇಂಬ. ಬುದ್ಧಿಯು ಆ ಸಾರ್ವಭೌಮರಿಗಾಗಿರ
ಬಹುದು.
ಸುರೇಂದ್ರ ಪ್ರಮಾರನು ಸುಂದರನೂ ದೃಢಾಂಗನೂ ತರುಣನೂ
ಆದ ರಾಜನಾಗಿದ್ದನು. ವಿಶ್ವಾಮಿತ್ರನ ಕಾಲದಿಂದ ರಾಜಧಾನಿಯಾಗಿ
ಮೆರೆಯುತ್ತಿದ್ದ ಕಾನ್ಯಕುಬ್ಬ ನಗರದಲ್ಲಿಯ ಮಹಾವಿದ್ಯಾಲಯದಲ್ಲಿ
ಅಧ್ಯಯನ. ಮಾಡಿ ಸುರೇಂದ್ರರಾಜನು ಘನವಿದ್ವಾಂಸ ನೂ ಸಕಲ ಕಲಾ
ಕೋವಿದನೂ ಆಗಿರುವನೆಂದು ಹೊಗಳಿಸಿಕೊಂಡು ಮರಳಿ ತನ್ನ ರಾಜ್ಯಕ್ಕೆ
ಬರುವಾಗ. ಮಾರ್ಗದಲ್ಲಿ ಸುಧಾಲಹರಿಯ ಪಾಂಡಿತ್ಯ ಸೌಂದರ್ಯಗಳ
ಖ್ಯಾತಿಯನ್ನು ಕೇಳಿ ಪ್ರತಿಷ್ಠಾನ ಪಟ್ಟಣನಲ್ಲಿ ಉಳುಕೊಂಡು ವಿದ್ಯೆಯಲ್ಲಿ
ಸುಧಾಲಹರಿಯನ್ನು ಸೋಲಿಸಿ (ಕಥಾಸಂಗ್ರಹದಲ್ಲಿಯ ರಾಜಕುಮಾರನಂತೆ)
ಅರವತ್ತುನಾಲ್ಕು ಕಲೆಗಳಲ್ಲಿಯೂ ಪರೀಕ್ಷೆಯನ್ನು ಕೊಟ್ಟು ಅವಳನ್ನು
ಮದುವೆಯಾಗಿ ತನ್ನ ರಾಜಧಾನಿಗೆ ಬಂದನು.
ರಾಜರಾಣಿಯರೀರ್ವರೂ ಸುಂದರರು, ತಾರುಣ್ಯದ ಭರದಲ್ಲಿದ್ದವರು,
ಈರ್ವರೂ ಚತುರರು, ಕಾವ್ಯ ರಸಾಸ್ವಾದವನ್ನು ಸೇವಿಸಿದವರು.
ಪ್ರೇಮಾಲಾಪ ಕ್ರೀಡಾವಿನೋದಗಳ ಹೊರತು ಮತ್ತೊಂದು ಮಾತಿನ
ಧ್ಯಾನವೇ ನವೀನರಾದ ಆ ರಾಜದಂಪತಿಗೆ ಇದ್ದಿಲ್ಲ. ಕ್ಷಣಹೊತ್ತು
ಸುಧಾಲಹರಿಯು ಕಣ್ಮರೆಯಾದರೆ ಸುರೇಂದ್ರನು ವಿರಹ ವಿರಹವೆಂದು
ಕೂಗುವನು. ರಾಜನು. ಒಂದು ನಿಮಿಷ ಅತ್ತಿತ್ತಲಾದನೆಂದರೆ ರಾಣಿಯು
ಚಕ್ರವಾಕಿಯಂತೆ ಕೊರಗುವಳು. ರಾಣಿಯ ತನ್ನ ಬಲಗೈಯನ್ನು ರಾಜನ
ಹೇಗಲ ಮೇಲೆ ಹಾಕಿದಾಗ ರಾಜನು ತನ್ನ ವಾಮಬಾಹುವನ್ನು ಆ
ವಾಮಲೋಚನೆಯ ಭುಜದ ಮೇಲಿಟ್ಟಿರುವನು. “ನಿನ್ನ ನಳಿತೋಳು
ಸೋತಿರುವದೇನು ಪ್ರಿಯೆ?” ಎಂದು ಕೇಳಿ ಪ್ರಿಯನು ತನ್ನ ರಮಣಿಯನ್ನು
ಬಲಭಾಗದಲ್ಲಿರಿಸಿಕೊಂಡು ಅವಳ ವಾಮಬಾಹುಪಾಶದಲ್ಲಿ ತಾನು ಸಿಕ್ಕು
೩೦ -----------------------------------------------------------------------------
ಅವಳನ್ನು ತಾನು ತನ್ನ ಬಲದೋಳಿನಲ್ಲಿ ಅಕ್ಕರತೆಯಿಂದ ಹಿಡಿಯುವನು.
" ಪ್ರಾಣೇಶ್ವರರೆ, ತಮ್ಮ ದೃಷ್ಟಿಕ್ಷೇಪವು ಆವ ಧನ್ಯವಾದ ವಸ್ತುವಿನ ಮೇಲೆ
ನೆಲಿಸಿರುವದು? ” ಎಂದು ರಾಣಿಯು ಕೇಳಿದಾಗ, “ ಪ್ರಿಯಳೆ, ನಿನ್ನ ಮುಖ-
ಚಂದ್ರಮದಲ್ಲಿ, * ಎಂದು ರಾಜನು ಹೇಳುವನು.
"ಕಾಂಶರೆ, ತಾವು ನಿನ್ನೆ ನನ್ನನ್ನು ಪ್ರೀತಿಸಿದಷ್ಟೆಯೇ ಇಂದಾದರೂ
ಪ್ರೀತಿಸುವಿರೋ?” ಎಂದು ರಾಣಿಯು ಸಾಲಸನೇತ್ರಿಯಾಗಿ ರಾಜನ
ಮುಖವನ್ನು ನೋಡುತ್ತೆ ಕೇಳಲಾಗಿ "ಮನೋರಮೆ, ನಿನ್ನಿಗಿಂತ ಇಮ್ಮಡಿ
ಯಾಗಿ!” ಎಂದು ರಾಜನು ಉತ್ತರವನ್ನು ಕೊಡುವನು.
“ಪ್ರಿಯೆ, ನೀನು ನಾಳಿಗೆ ನನ್ನನ್ನು ಎಷ್ಟು ಪರಿಯಾಗಿ ಪ್ರೀತಿಸುವಿ?”
"ಇಂದಿಗಿಂತಲೂ ಹೆಚ್ಚಾಗಿ! ಸಂದೇಹವೇಕೆ?''
ಹೀಗೆ ಅವರ ಮನೋವೃತ್ತಿಯು ಅನ್ಯೋನ್ಯರಲ್ಲಿ ತನ್ಮಯವಾಗಿ
ಹೋಗಿತ್ತು.
ವಿವಾಹವಾಗಿ ಒಂದು ವರ್ಷವಾಗುತ್ತ ಬಂದಿದ್ದರೂ ಆ ಸತಿಸತಿಯಗ
ಪ್ರೇಮವು ಎಷ್ಟು ಮಾತ್ರವೂ ಶಿಥಿಲವಾಗಿದ್ದಿಲ್ಲ. ಊಟ-ಉಪಚಾರ,
ವಿಹಾರ-ವಿಶ್ರಾಂತಿ, ರಾಜನೀತಿ, ಕಾವ್ಯಾಲಂಕಾರಗಳ ವಿಚಾರಗಳೆಷ್ಟು
ಮಾತ್ರವೂ ಅವರಿಗೆ ಬೇಕಾಗಲಿಲ್ಲ.
किमपि किमपि मन्दं मन्दमासक्तियोगा-
दविरलित कपोलं जल्पतोरक्रमेण |
अशिथिल परिरम्भ व्यापृतैकैक्दोष्णो
रविदित गतयामा रात्रिरेव व्यरंसीत् ॥
ಎಂಬಂತೆ ಹೆಗಲು ರಾತ್ರಿಗಳನ್ನು ಏಕಪ್ರಕಾರವಾಗಿ ಕಳೆಯುತ್ತಿದ್ದರು.
ಜಗತ್ತಿನಲ್ಲಿ ಯಾರಾದರೂ ಇಂಥ ಅದೃಷ್ಟ ಪೂರ್ವವಾದ ಪ್ರೇಮನಿರ್ಭರವನ್ನು'
ಕಂಡದ್ದುಂಟೆ?
ಒಂದು ದಿನ ಆ ರಾಜದಂಪತಿಗಳು ಪ್ರೇಮದಿಂದ ಒಬ್ಬರ ಹೇಗಲ
ಮೇಲೊಬ್ಬರು ತೋಳಿಟ್ಟುಕೊಂಡು ಅರಮನೆಯ ಚಂದ್ರ ಶಾಲೆಯಲ್ಲಿ ವಿಲಾಸ
ದಿಂದ ನಿಂತುಕೊಂಡಿರುವಾಗ ಭಟ್ಟಿಂಗಿಯು ಪರಾಕು ಹೇಳಿ, ರಾಜ್ಯದ
ಮಹಾಪ್ರಧಾನರು ಬಂದಿರುನದನ್ನು ನಿವೇದಿಸಿದನು. ಆಜ್ಞೆಯಾದ ಮೇರೆಗೆ
೩೧ --------------------------------------------------------------------------
ಪ್ರಧಾನನು ಬಲು ಎಚ್ಚರದಿಂದ ಕಾಲಸಪ್ಪಳವನ್ನು ಕೂಡ ಮಾಡದೆ ರಾಜರ
ಸನ್ನಿಧಾನದಲ್ಲಿ ಬಂದು ನಿಂತು ಪ್ರಣಾಮಮಾಡಿದನು.
"ಯಾಕೆ ಪ್ರಧಾನರೇ, ನೀವು ನಮಗೆ ಕೇವಲ ಅವಶ್ಯಕರು;
ನಿಮ್ಮಂಥವರು ಇಲ್ಲಿ ಬರಬೇಕಾದರೆ ಪರಾಕು ಹೇಳಿಸಿಕೊಂಡು ಬರುವ
ಅವಶ್ಯವಿದ್ದಿಲ್ಲ. ನಾವೂ ನಮ್ಮೀ ಪ್ರಿಯತಮರಾದ ಅರ್ಧಾಂಗಿಯವಗೂ
ಪಾರ್ವತೀ ಪರಮೇಶ್ವರರಂತೆ ಅನಿಯುಕ್ತರಾದ ದಂಪತಿಗಳು. ಇನ್ನೂ
ಆನೇಕ ನರ್ಷಗಳವರೆಗೆ ನಾವು ಹೀಗೆಯೇ ನಡಕೊಳ್ಳತಕ್ಕವರು, ಈ
ರಾಜ್ಯದ ಮುಖ್ಯ ಪ್ರಧಾನರಾದ ನೀವು ಹೀಗೆ ಸಂಕೋಚಗೊಂಡರೆ ನಮ್ಮೀ
ರಾಜ್ಯವು ನಡೆಯುನದೆಂತು? ಇದಲ್ಲದೆ ಸತಿಪತಿಯರ ಪ್ರೇಮವೂ ದಾಂಪತ್ಯ
ಸ್ಥಿತಿಯೂ ಹೇಗಿರತಕ್ಕದ್ದೆಂಬದರ ಉದಾಹರಣವನ್ನು ಲೋಕಕ್ಕೆ ತೋರಿಸ
ಬೇಕೆಂಬ ಕುತೂಹಲವಾದರೂ ನಮಗಿರುವದರಿಂದ ನಾವು ಹೀಗೆ ನಡ
ಕೊಳ್ಳುವೆವು” ಎಂನು ರಾಜನು ಆಜ್ಞಾಪಿಸಿದನು.
“ಪ್ರಭೋ! ಆಜ್ಞೆಯಾದರೆ ಮಹಾರಾಜರು ಹೇಳುವ ದಃಂಪತ್ಯ
ಸ್ಥಿತಿಯ ರೀತಿಯನ್ನು ಕುರಿತಾಗಿಯೇ ಮಹಾರಾಜರೊಬ್ಬರ ದಿವ್ಯಶ್ರವಣ
ಪಥಕ್ಕೆ ಕೆಲವು ಸಂಗತಿಗಳನ್ನು ನಿವೇದಿಸಲಪೇಕ್ಷಿಸಿ ನಾನು ಬಂದಿರುವೆನು.?
ಎಂದು ಪ್ರಧಾನನು ಬೆಸಗೊಂಡನು.
"ನಮ್ಮ ರಾಣಿಯವರ ಸಮಕ್ಷಮದಲ್ಲಿಯೇ ಏನು ನಿರೂಪಿಸುವ
ದನ್ನು ನೀವು ನಿರೂಪಿಸಿರಿ. ನಮ್ಮ ದೇಹಗಳೆರಡಾಗಿದ್ದರೂ ಜೀವವು
ಒಂದೇ ಎಂಬದನ್ನು ನೀವು ಮರೆಯಲಾಗದು'' ಎಂದು ಸುರೇಂದ್ರರಾಜನು
ವಿಧಿಸಿದನು. "
ಮಾತಾಡಲೋ ಬಿಡಲೋ ಎಂದು ಪ್ರಧಾನನು ಕೊಂಚ ಸಂಕೋಚ
ಗೊಂಡು ಕಡೆಗೆ ಅನಿರ್ವಾಹಕ್ಕಾಗಿ ಗಟ್ಟಿಮನಸ್ಸು ಮಾಡಿ ಮಾತಾಡಿದನು.
"ಲೋಕದ ಸ್ಥಿತಿಯನ್ನು ಅರಿಯದ ಮಹಾರಾಜರು ತಾರುಣ್ಯದ
ಭರದಲ್ಲಿ ಪುರಾಣೇತಿಹಾಸಗಳಲ್ಲಿ ವರ್ಣಿಸಲ್ಪಟ್ಟ ಪ್ರೇಮದ ಪ್ರಶಂಸೆಯನ್ನು
ಮಾಡಿ ತದನುರೂಪವಾಗಿ ಆಚರಿಸುತ್ತಿ ರಬಹುದು, ಆದರೆ ಶಾಸ್ತ್ರೋಕ್ತ ವಾದ
ಪ್ರೇಮದ ವ್ಯಾಪಾರವು ಒಮ್ಮೊಮ್ಮೆ ರೂಢಿಯಲ್ಲಿ ಕೇಡಿಗೆ ಕಾರಣವಾಗುವ
ದುಂಟು, ನಮ್ಮ ರಾಜ್ಯದಲ್ಲಿಯ ಹೆಂಡಂದಿರೆಲ್ಲರೂ ತಮ್ಮ ಪತಿಗಳನ್ನು
೩೨ ---------------------------------------------------------------------------
ರಟ್ಟೆ ಹಿಡಿದು ನಿಲ್ಲಿಸಿ "ಗಂಡನಾಗಬಲ್ಲ ಪುರುಷನೆ, ರಾಜರು ರಾಣಿಯವರನ್ನು
ಪ್ರೀಸುವಂಶೆ ನೀನು ನನ್ನನ್ನು ಪ್ರೀತಿಸದಿರಲು ನಿನಗೇನು ಬೇನೆ?” ಎಂದು
ಪ್ರಶ್ನೆ ಮಾಡುತ್ತಿರುವರು. ಸಮೀಪದಲ್ಲಿಯೇ ಹಾಯದು ಹೋಗುವಾಗ
ಗಂಡನು ತಿಳಿಗೇಡಿತನದಿಂದ ಹೆಂಡತಿಗೆ ಮುದ್ದಿಕ್ಕದೆ ನಡೆದ ತಪ್ಪಿಗಾಗಿ
ಆ ಮಾನಿನಿಯು ಅಂದಿನ ದಿನವೇ ಅವನೊಡನೆ ಮಾತಾಡುವದನ್ನು ಬಿಟ್ಟು
ಗಂಟುಮೋರೆಯನ್ನಿಕ್ಕಿ ಕೊಂಡಿರುವಳು. ಹೆಂಗಸರು ನಿರ್ಬಂಧಿಸಿಟ್ಟಿ ಪ್ರೇಮಾ
ಚರಣದ ನಿಯಮಗಳನ್ನು ಪತಿಯು ಉಲ್ಲಂಘಿಸಿದರೆ ಅವನ ಓಲಗವಾಗಿ
ಮನೆಯಲ್ಲಿ ಕಾಲಿಡುವೆನೆಂದರೆ ರಣಧೀರನಾದಂಥವನಿಗೆ ಕೂಡ ಅಸಾಧ್ಯ
ವಾಗಿ ಹೋಗುವದು. ಹೇಳುವದೇನಂದರೆ ಸುರದಂಪತಿಗಳಂತೆಯೂ
ಗಂಧರ್ವಯುಗ್ಮದಂತೆಯೂ ಮಹಾರಾಜ ಮಹಾರಾಣಿಯವರು ಪ್ರೇಮೋ
ಲ್ಲಾಸದಿಂದ ಲೀಲೆಗೈಯ್ಯುತ್ತಿರುವದನ್ನು ಕಂಡು ನಾಗರಿಕರಾದ ಗೃಹಿಣಿ
ಯರು ಗೃಹಕರ್ಮಗಳನ್ನು ತ್ಯಜಿಸಿ ರಾಣಿರಾಜರಂತೆಯೇ ತಾವಿರಬೇಕೆಂಬ
ದುರಾಗ್ರಹವನ್ನು ಕೊಟ್ಟು ಪತಿಗಳೊಡನೆ ಅಖಂಡವಾಗಿ ವ್ಯಾಜ್ಯವನ್ನು
ಮಾಡುತ್ತಿರುವರು. ಮನೆಮನೆಗಳಲ್ಲಿಯೂ ಇಂಥ ವ್ಯಾಜ್ಯಗಳು ಮುಸಗಿ
ಕೊಂಡಿರುವದರಿಂದ ರಾಜ್ಯದ ಶಾಂತತೆಯ: ಭಂಗವಾಗುವ ಚಿಹ್ನೆಗಳು
ವ್ಯಕ್ತವಾಗುತ್ತಲಿವೆ. ರಾಜರಾಣಿಯರ ದೃಢಬಂಧನವು ಸಡಿಲಾಗದಿದ್ದರೆ
ಪ್ರಜಾಜನರ ದುಃಸ್ಥಿತಿಗೆ ಕಡೆಮೊದಲು ಇಲ್ಲದಂತಾಗುವದೆಂಬ ಸಂಕಟಕ್ಕಾಗಿ
ಗಂಡಂದಿರಾದ ಪ್ರಜರು ಬಂಡುಮಾಡುವ ಉದ್ಯೋಗದಲ್ಲಿದ್ದಾರೆ. ರಾಜ
ರಾಣಿಯರಿನ್ನು ತಮ್ಮ ಪ್ರೇಮವನ್ನು ಸುವಿಚಾರದಿಂದ ನಿಯಂತ್ರಿಸದಿದ್ದರೆ
ರಾಜರ ಸಿಂಹಾಸನಕ್ಕೆಯೇ ಆತಂಕ ಬರುವದು. "
ರಾಣಿಯು ಮಂದಸ್ಮಿತೆಯಾಗಿ ರಾಜನ ಮುಖವನ್ನು ನೋಡಿದಳು;
ರಾಜನು ಅವಳ ಮುಖನನ್ನು ವಿಚಾರಗ್ರಸ್ತನಾದವನಂತೆ ನೋಡಿದನು, ಈ
ವಿಷಯವಾಗಿ ಅವರಿಬ್ಬರು ಮಾತಾಡಬೇಕೆನ್ನುವಪ್ಟರಲ್ಲಿಯೇ ಪ್ರಧಾನನು
ಭೀತಿವ್ಯಂಜಕವಾದ "ಅಯ್ಯೋ!” ಎಂಬ, ಉದ್ದಾರವನು ತೆಗೆದು
ರಾಜಧಾನಿಯ ಸಮಾಸದಲ್ಲಿರೆವ ದಿನ್ನೆಯ. ಕಡೆಗೆ ಹುಬ್ಬುಗೈಯಿಕ್ಕಿ
ನೋಡಲಾರಂಭಿಸಿದನು.
ಸಂಸ್ಕಾ ನದ ಪ್ರಜಾಜನರಾಗಿದ್ದ ಗಂಡಂದಿರೆಲ್ಲರೂ ಒಕ್ಕಟ್ಟನಿಂದ
೩೩ --------------------------------------------------------------------------
ದಿನ್ನೆಯ ಮೇಲೆ ಕಲೆತು ಇನ್ನು ಸೈನಿಕರ ವ್ಯವಸ್ತೆಯಿಂದ ಸಾಲು ಸಾಲಾಗಿ
ನಡೆತಂದು ರಾಜಧಾನಿಯ ಮೇಲೆ ಅಭಿಯೋಗಮಾಡತಕ್ಕವರಂತೆ ಕಂಡರು,
ಪ್ರಧಾನನು ಆ ಜನರ ಸಾಹಸವನ್ನು ಕಂಡು " ಮಹಾರಾಜರು ಅವ
ಲೋಕಿಸಬೇಕು. ಆ ಜನರೆಲ್ಲರೂ ಅರಮನೆಯ ಮೇಲೆಯೇ ಸಾಗಿಬರುವಂತೆ
ಕಾಣುತ್ತದೆ” ಎಂದು ಚಿಂತಾಕುಲನಾಗಿ ನಿವೇದಿಸಿದನು.
ಮಾತುಮಾತಾಡುವಷ್ಟರಲ್ಲಿಯೇ ಪತ್ನೀಜನತ್ರಸ್ತರಾದ ಪತಿಗಳ
ಸೇನೆಯು ಮುತ್ತಿನ ಕೋಟೆಯಲ್ಲಿ ಸೇರಿ ತರಂಗತರಂಗವಾಗಿ ಅರಮನೆಯ
ಪಟಾಂಗಣದಲ್ಲಿ ಹೊಕ್ಕಿಕೊಂಡು ಬಿಗಿದು ನಿಂತಿತು. ಡೊಳ್ಳುಹೊಟ್ಟಿಯ
ಗಂಡಂದಿರೂ ಎಲುವಿನ ಹಂದರದಂತಿರುವ ಗಂಡಂದಿರೂ ಹಲ್ಲುಬೀರರೂ
ಬಚ್ಚಬಾಯಿಯವರೂ ಕುಂಟರೂ ಕುರುಡರೂ ವೃದ್ಧರೂ ತರುಣರೂ
ಸಿಂಗರಪ್ರಿಯರೂ ಅರಸಿಕರೂ ತಮ್ಮ ತಮ್ಮ ವೈಪರೀತೃವನ್ನು ಲಕ್ಷಿಸದೆ
ಐಕ್ಯಮತದಿಂದ ಕಲೆತು ಸಾಗಿಬಂದಿದ್ದರು. ಎಲ್ಲರ ಕೈಯಲ್ಲಿಯೂ ಒಂದೊಂದು
ವಿನಂತಿಪತ್ರದ ದೊಡ್ಡ ಸುರುಳೆ. ಜನರ ಸಮುದಾಯವೆಲ್ಲವೂ ಪಟಾಂಗಣ
ದಲ್ಲಿ ಬಂದು ನಿಂತುಕೊಂಡಿತೆಂದು ಕಂಡ ಬಳಿಕ ಆ ಜನರಿಗೆ ನಾಯಕನಾಗಿದ್ದ
ಪ್ರತಿಷ್ಟತನಾದ ಪ್ರಾಡ್ವಿವೇಕನೋರ್ವನು (ವಕೀಲನು) ತನ್ನ ಕೈಯಲ್ಲಿರುವ
ವಿನಂತಿಪತ್ರವನ್ನು ಪ್ರಧಾನನ ಮುಖಾಂತರವಾಗಿ ರಾಜರಿಗೆ ಸಮರ್ಥಿಸಿ
(ರಾಜರಾಣಿಯರು ತಮ್ಮ ಪ್ರೇಮದ ವ್ಯಾಪಾರಗಳನ್ನು ಸುವಿವೇಕದಿಂದ
ಸಡಿಲಿಸದಿದ್ದರೆ ನಮ್ಮಗಳಿಗೆಲ್ಲ ಹೆಂಡಂದಿರಿಂದ ವಿಲಕ್ಷಣವಾದ ಪೀಡೆಯಾಗಿ
ಸಂಸಾರಸುಖದಲ್ಲಿ ಮಣ್ಣು ಕಲೆತು ಹೋಗುವದು ಎಂದು ಅವನು ವಿನಯ
ದಿಂದ ಹೇಳಿಕೊಂಡರೂ ಪ್ರತಿಕೂಲವಾದ ಉತ್ತರದಿಂದ ತಾವೆಲ್ಲರೂ ಸರ್ವಥಾ
ಸಮಾಧಾನವನ್ನು ಹೊಂದಲಿಕ್ಕಿಲ್ಲವೆಂಬ ಭಾವವನ್ನು ಅವನು ತನ್ನ ಮುಖದಲ್ಲಿ
ತಳೆದ ದರ್ಪದಿಂದಲೇ ಸೂಚಿಸಿದನು.
ರಾಜನು ಆ ಕಾಗದವನ್ನು ಜನರ ನಾಯಕನ ಮೋರೆಯ ಮೇಲೆ
ಬೀಸಿ ಎಸೆದು " ತೆಗೆದುಕೊಂಡು ಹೋಗಿರಿ! ಈ ಸೊಪ್ಪೆಯ ಸೂಡಿನಂಥ
ಕಾಗದವನ್ನು ಓದಲು ನನಗೆ ಅವಕಾಶವಿಲ್ಲ! ಆದರೂ ಅದರ ಇತ್ಯರ್ಥವನ್ನು
ನಾನು ಊಹಿಸಿರುವೆನು. ಪ್ರೇಮದ ಹೆಂಡರನ್ನು ಸತ್ಕರಿಸಿ ಸಮಾಧಾನ
ಗೊಳಿಸಲರಿಯದವರಾದ ನಿಮ್ಮಂಥ ಮೂರ್ಖರ ಮುಖಾವಲೋಕನವನ್ನು
೩೪ ----------------------------------------------------------------------------------
ಕೂಡ ನಾನು ಮಾಡಲಿಚ್ಚಿಸುವದಿಲ್ಲ!?” ಎಂದು ಅತಿದರ್ಪದಿಂದೆ ನುಡಿದ
ರಾಜನ ಕಣ್ಣು ಗಳಲ್ಲಿ ಉದುರುತ್ತಿರುವ ಜ್ಯೊತಿಯ ಕಿಡಿಗಳನ್ನು ಕಂಡು
ಜನರು ಅಲ್ಲಿಯೇ ಎದೆಗುಂದಿದವರಾಗಿ ನಿಂತುಕೊಂಡರು.
" ಕಹಳೆಯನ್ನು ಊದಿ ಸೇನೆಯನ್ನು ಬರಮಾಡು ” ಎಂದು ರಾಜನು
ತನ್ನ ಅನುಚರನಿಗೆ ಸೂಚಿಸಿದನು. .ಹತ್ತು ನಿಮಿಷಗಳಲ್ಲಿ ರಾಜನ ಸೇನೆಯು
ಬಂದ ಸೂಚನೆಯಾಯಿತು. ಸೈನ್ಯವೆಂದರೆ ಒಬ್ಬನೇ ಒಬ್ಬನಾದ ಅವಿವಾಹಿತ
ನಾದ ಭಟನು. ಶಸ್ತ್ರಾಸ್ತ್ರಗಳನ್ನು ತೊಟ್ಟು ಆಢ್ಯತೆಯಿಂದ ರಾಜನೆದುರಿಗೆ
ಬಂದು ನಿಂತು ಪ್ರಣಾಮಮಾಡಿ “ಸ್ಟೆನ್ಯದಲ್ಲಿಯ ವಿವಾಹಿತರಾದ ಭಟರೆಲ್ಲರೂ
ಬಂಡಿನಲ್ಲಿ ಸೇರಿರುವದರಿಂದ ಸೈನ್ಯದ ಕರ್ತೃತ್ವದ ಭಾರವೆಲ್ಲ ನನ್ನೊಬ್ಬ
ಮೇಲೆಯೇ ಬಿದ್ದಿರುವದು; ಆದರೂ ಚಿಂತೆಯಿಲ್ಲ.ರಾಜಾಜ್ಞೆಯನ್ನು
ನೆರವೇರಿಸಲು ನಾನೊಬ್ಬನೇ ಸಮರ್ಥರಿರುನೆನು. ನಾನು ಆವಿವಾಹಿತ
ನಾಗಿದ್ದರೂ ವಾತ್ಸ್ಯಾಯನನ ಕಾಮಸೂತ್ರ ಮುಂತಾದ ಗ್ರಂಥಗಳನ್ನೂ
ರಸಭರಿತವಾದ ಕಾವ್ಯನಾಟಕಗಳನ್ನೂ ಓದಿದವನಾಗಿರುವದರಿಂದ ಮಹಾ
ರಾಜರ ಅಭಿಪ್ರಾ ಯವು ನನಗೆ ಸರಿಯಾಗಿ ತೋರುತ್ತದೆ. ಪ್ರೆೇಮವೇ
ಜಗಚ್ಚಾಲಕವಾದ ಸೂತ್ರವಾಗಿರುವದಲ್ಲವೆ? ಎಂದು ಬೆಸಗೊಂಡನು.
ಸೈನ್ಯವು (ಒಬ್ಬ ಭಟನೇ 1) ಹೀಗೆ ರಾಜಾಜ್ಞೆಯನ್ನು ಪರಿಪಾಲಿಸಲು
ಸಿದ್ಧವಾಗಿ ನಿಂತಿರಲು ಮಂಗಳಮ್ಮನ ಗುಡಿಯ ದೇವದಾಸಿಯಾಗಿದ್ದ
ತರುಣಿಯು ಲಗುಬಗೆಯಿಂದ ಮುಂದಾಗಿ ಬಂದು ಆ ಸೈನ್ಯಕ್ಕೆ ನೆರವಾಗಲು
ಸಿದ್ಧಳಾಗಿ ನಿಂತುಕೊಂಡಳು, ಈ ಸಂಯುಕ್ತವಾದ ರಾಜಸೇನೆಯ ದರ್ಪಕ್ಕೆ
ಬೆದರಿ ಪತಿಜನಸೇನೆಯು ಮೊತ್ತ ಮೊದಲು ಕೊಂಚ ಹಿಂದಕ್ಕೆ ಸರಕೊಂಡಿತು.
ಆದರೆ ಅವರ ನಾಯಕನು ಅವರನ್ನು ಮತ್ತೆ ಹುರಿದುಂಬಿಸಿದ್ದರಿಂದ ಆ
ಜನರೆಲ್ಲರೂ ಮತ್ತೆ ಹೊದೆದಾಟಕ್ಕೆ ಸಿದ್ದರಾಗಿ ನಿಂತುಕೊಂಡರು. ಇಷ್ಟ
ಮೂರ್ತಿಗಳಾದ ರಾಜದಂಪತಿಗಳ ಮೇಲೆ ತಮ್ಮ ಗಂಡಂದಿರು ಬಂಡುಮಾಡಿ
ರುವ ಸಮಾಚಾರವನ್ನರಿತು ಆ ರಾಜ್ಯದಲ್ಲಿದ್ದ ಸತಿಯರೆಲ್ಲರೂ ತಮ್ಮ ಕೈಗಳ
ಲ್ಲಿರುವ ಕೆಲಸಗಳನ್ನು ಆಲ್ಲಿಯೇ ಚಲ್ಲಿಕೊಟ್ಟು ಬಂಡಿನ ಪ್ರತೀಕಾರವನ್ನು
ಮಾಡಲಪೇಕ್ಷಿಸಿ ಅರಮನೆಗೆ ಧಾವಿಸಿ ಬಂದರು, ರಾಜನ ಸೇನಾದ್ವಯಕ್ಕೂ
(ಬ್ರಹ್ಮಚಾರಿ ದೇವದಾಸಿಯರಿಗೂ) ಬಂಡುಗಾರರಿಗೂ ಇನ್ನೀಗಲೆ ಕದನವೆಸ
೩೫ ----------------------------------------------------------------------------
ಗುವದೆಂಬಪ್ಪರಲ್ಲಿ ಪ್ರಮೀಲೆಯ ಸೇನೆಯಂತಿರುವ ಸ್ತ್ರೀಜನಸಮುದಾಯವು
ಅರಮನೆಯ ಪ್ರಾಂಗಣದಲ್ಲಿ ಧುಮುಕಿ ಬಂದಿತು. ನೀಲಾಳಕಿಯರು ತಮ್ಮ
ಹಿಕ್ಕಿದ ಕೂದಲುಗಳನ್ನೂ ಜಂತಣಿಗೆಗಳನ್ನೂ ಹಾಗೆಯೇ ಹಿಡುಕೊಂಡು
ಬಂದಿದ್ದರು. ಮೈತೊಳೆದು ಸೀರೆಯನ್ನುಟ್ಟುಕೊಂಡ ಸುಸ್ತನಿಯರು ಕುಪ್ಪಸ
ಗಳನ್ನು ತೊಡುವ ವಿಚಾರವನ್ನೂ ಬಿಟ್ಟುಬಂದಿದ್ದರು. ಹೆಂಚಿನ ಮೇಲಿನ
ಹೋಳಿಗೆಯು ಹೊತ್ತಲೊಲ್ಲದೇಕೆಂದು ಬಿಟ್ಟುಕೊಟ್ಟು ಕೆಲವರು ಎದ್ದು
ನಡೆದರು. ಕೆಲವರ ಕೈಯಲ್ಲಿ ಸಮ್ಮಾರ್ಜನಿಗಳು, ಕೆಲವರ ಕೈಯಲ್ಲಿ
ಲಟ್ಟಣಿಗೆಗಳು, ಕೆಲವರ ಕೈಯಲ್ಲಿ ಒನಕೆಗಳಿದ್ದವು. ಉಂಡು ಕೈಬಾಯಿ
ತೊಳಕೊಳ್ಳುವ ಎಚ್ಚರವು ಕೆಲವರಿಗಿಲ್ಲ ಅಳುವ ಕೂಸುಗಳ ಎಚ್ಚರಿಕೆ
ಕೆಲವರಿಗಿಲ್ಲ. ಹೀಗೆ ಸ್ತ್ರೀಸೇನೆಯು ರಾಜರಾಣಿಯರ ಸಂರೆಕ್ಷಣಾರ್ಥವಾಗಿ
ಸಾಗಿಬಂದಿತು. ಕೆಲ ಹ ವಿದುಷಿಯರು ಅವಸರವಸರದಲ್ಲಿಯೇ ರಾಜದಂಪತಿ
ಗಳಿಗೆ ಮಾನಪತ್ರಗಳನ್ನು ಬರಕೊಂಡು ಬಂದಿದ್ದರು.
ಹೀಗೆ ಅಸಸ್ಮಾತ್ಮಾಗಿ ತಮ್ಮ ಪತ್ನೀಜನರು ರಾಜರ ಸಹಾಯಕ್ಕೆ
ಬಂದದ್ದು ಕಂಡು ಬಂಡುಗಾರರಾದ ಗಂಡಂದಿರು ಹತಾಶರಾಗಿ ಆ ಪ್ರಬಲ
ವಾದ ಅಬಲಾಜನಸೇನೆಗೆ ಹಾದಿಯನ್ನು ಕೊಟ್ಟು ತಾವು ಒತ್ತಟ್ಟಿಗಾಗಿ
ನಿಂತರು. ಆಗ ಸುವಾಸಿನೀಜನರ ಅಗ್ರ ಗಣ್ಯಳಾದ " ವಾಣೀಮುಖದರ್ಪಣ
ಮಣಿ: ಎಂಬ ಬಿರುದುಳ್ಳ ವಿದುಷಿಯು ರಾಜರಾಣಿಯರಿಗೆ ಅಕ್ಕರತೆಯಿಂದ
ಸೇಸೆದಳೆದು ಜರದಗೊಂಬೆಯ ರೇಸಿಮೆಯ ದಾರದಿಂದ ಕಟ್ಟಿದ ಮಾನಪತ್ರ
ವನ್ನು ಅವರಿಗೆ ಸಮರ್ಪಿಸಿ "ನಯನಾನಂದಕರರಾದ ನಮ್ಮ ರಾಜದಂಪತಿ
ಗಳು ಸ್ವರ್ಗೀಯವಾಗಿರುವ ತಮ್ಮ ಪ್ರೇಮವ್ಯಾಪಾರಗಳನ್ನು ಅಚಾಧಿತ
ವಾಗಿಯೂ ಚಿರಕಾಲದವರೆಗೂ ನಡಿಸತಕ್ಕದ್ದು " ಎಂದು ಪ್ರಾರ್ಥಿಸಿದಳು.
ರಾಜನು ಪರಮಸಂಶುಷ್ಟನಾಗಿ ಮುಗುಳುನಗೆ ನಗುತ್ತ ಆ ಮಾನಪತ್ರ
ವನ್ನು ಆದರದಿಂದೆತ್ತಿ ಕೊಂಡು ಶ್ರುತಿರಂಜನವಾಗುವಂತೆ ಓದಿದನು. ಪತ್ನೀ
ಜನ ಸಮುದಾಯವೆಲ್ಲ " ವಾಣೀಮುಖದರ್ಸ್ಪಣಮಣಿ''ಯ ಪದಲಾಲಿತ್ಯ
ವನ್ನೂ ಅರ್ಥಚಾತುರ್ಯವನ್ನೂ ಬಹುಪರಿಯಾಗಿ ಕೊಂಡಾಡಿತು. ಓದುವ
ದಾದ ಕೂಡಲೆ ಎಲ್ಲರೂ ಒಟ್ಟುಗೂಡಿ ಪ್ರಚಂಡವಾದ ಕರತಲಧ್ವನಿಯನ್ನು
ಮಾಡಿದರು. ರಾಜನ ಮುಖ್ಯ ಸೈನ್ಯವೂ ( ಒಬ್ಬನೇ 'ಓಬ್ಬನಾದ
೩೬----------------------------------------------------------------------------
ಬ್ರಹ್ಮಚಾರಿಯೂ ಸಹಕಾರಿಸೇನೆಯಾಗಿದ್ದ ಜೀವದಾಸಿಯೂ) ಅರ್ಭಟೆ
ಯಿಂದೆ "" ಜಯ ಮಕರದ್ವಜ | ಜಯಪಂಚಶರ !'' ಎಂದು ಕೂಗಿದರು.
ಬಳಿಕ ರಾಜನು ಅಭಿಮಾನದೃಪ್ತನಾಗಿ ಖಡ್ಗವನ್ನು ನೇವರಿಸಿ
ನಿರ್ನಿಣ್ಣರಾಗಿರುವ ಪತಿಜನರ ಸಮುದಾಯವನ್ನುದ್ದೇಶಿಸಿ " ಕರ್ತವ್ಯಕ್ಕೂ
ಪ್ರೇಮಕ್ಕೂ ಪರಾಜ್ಮುಖರಾಗಿರುವ ಬಂಡುಗಾರರಾದ ಪತಿಗಳೆ, ಈ ಅಂಗಜನ
ಸೇನೆಯೊಡನೆ ಕಾದಲು ನೀವು ಪ್ರವೃತ್ತರಾಗುವಿರೋ,ಇಲ್ಲವೆ ಶರಣಾಗತರಾಗಿ
ನಿಮ್ಮ ನಿಮ್ಮು ಪತ್ನೀಜನರನ್ನು ಆದರದಿಂದ ಮನೆಗೆ ಕರೆಕೊಂಡು ಹೋಗಿ
ಆವರ ಇಚ್ಛಾನುವರ್ಕಿಗಳಾಗಿ-ನಡಕೊಂಡು ಸುಖಿಗಳಾಗುವಿರೋ?'' ಎಂದು
ಗದ್ದರಿಸಿ ಕೇಳಿದನು.
ವಿಚಾರಸಮ್ಮೂಢರಾದ ಆ ಪತಿಗಳೆಲ್ಲರೂ ನಿರುತ್ತರರಾಗಿ ಕಲ್ಲುಗೊಂಬೆ
ಗಳಂತೆ ನಿಂತುಕೊಂಡರು. ಆಗ ಪ್ರಧಾನನೆದ್ದು ಮುಂದಕ್ಕೆ ಬಂದು ನಿಂತು
" ನನ್ನಂತೆಯೇ ದಾಂಪತ್ಯಸ್ಥಿತಿಯಲ್ಲಿದ್ದ ಪತಿಗಳೆ, ವೃದ್ಧದಂಪತಿಗಳಲ್ಲಿ
ನಾನೂ ನನ್ನ ಅರ್ಧಾಂಗಿಯೂ ವೃದ್ಧತಮರು. ದಾಂಪತೃಸ್ಥಿತಿಯಲ್ಲಿಯ
ಸುಖದುಃಖಗಳನ್ನು ಅಟ್ಟು ಉಂಡವರು. ಅದಕ್ಕಾಗಿ ನಾನಾಡುವ ಮಾತು
ಪ್ರಮಾಣನೆಂದು ತಿಳಿದು ನೀವೆಲ್ಲರೂ ಅದನ್ನು ಮನ್ಸಿಸಬೇಕೆಂದು ನಾನು
ಕೋರುತ್ತೇನೆ. ಇಂದಿನ ಪ್ರಸಂಗದಲ್ಲಿ ನಾವು ಪರಾಜಿತರಾದಂತಾಗಿರುವೆವು.
ನಮ್ಮೀ ಸರಾಜಯವು ನವೀನವಾದದ್ದಲ್ಲ. ಈ ಲಲನೆಯರನ್ನು ಮದುವೆ
ಯಾದ ದಿವಸವೇ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು
ಬಿಟ್ಟಿರುವೆವು. ಗೃಹಿಣೀ ಎಂಬ ಬಿರುದನ್ನು ಹೆಂಡರಿಗೆ ಕೊಟ್ಟು ನಾವು ನಮ್ಮ
ಮನೆಗಳನ್ನು ಅವರ ಸ್ವಾಧೀನಮಾಡಿ ರಣಾಂಗಣ, ಕೃಷಿಕರ್ಮ, ವ್ಯಾಪಾರ,
ಉದ್ದಿಮೆ ಮುಂತಾದ ಹೊರಗಿನ ಕೆಲಸಕ್ಕೆ ನಿಂತೆವು. ಇನ್ನು ಮಿಡಿಕಿ
ಫಲವೇನು? ಮನೆಯ ಹಂಬಲವು ನಮಗಿದ್ದರೆ ಆ ಮನೆಗಳೊಡತಿಯರಾದ
ಹೆಂಡರ ಸ್ವಾಧೀನರಾಗಿಯೇ ನಾವಿರಬೇಕಲ್ಲದೆ ಮತ್ತೊಂದು ಮಾರ್ಗವಿಲ್ಲ!”
ಎಂದು ಉಪದೇಶವನ್ನು ಮಾಡಿದನು.
ಕೂಡಲೆ ಒಪ್ಪಂದವಾಯಿತು. ಸತಿ ಪತಿಯರು ಸರಸ್ಪರರನ್ನು ಇದಿರು
ಗೊಳ್ಳಬೇಕೆಂಬ ನಿರ್ಣಯವಾದ ಮೇರೆಗೆ ರಾಜ ರಾಣಿಯರು ಅಗ್ರ
ಮರ್ಯಾದೆಗನುಸರಿಸಿ 'ನೀರಕ್ಷೀರ'ವೆಂಬ ಆಲಿಂಗನವಿಶೇಷಕ್ಕೊಳಗಾದರು
೩೭ --------------------------------------------------------------------------------
ತರುಣ ತಗುಣಿಯರಾದ ಸತಿ-ಪತಿಗಳು ಒಬ್ಬರನ್ನೊಬ್ಬರು ಒಳಿತಾಗಿ
ಬಿಗಿದಪ್ಪಿಕೊಂಡರು. ಮಧ್ಯಮ ವಯಸ್ಕರಾದ ದಂಪತಿಗಳು ಚುಂಬನದ
ಮೇಲೆ ಕೆಲಸ ಸಾಗಿಸಿಕೊಂಡರು. ಪರಸ್ಪರರ ಹಲ್ಲುಗಳಷ್ಟು ಉದುರಿ
ಹೋಗಿವೆಯೋ ನೋಡುವ ನೆವಕ್ಕಾಗಿ ವ್ಯದ್ದ ದಂಪತಿಗಳು ಬಾಯಿ ತೆರೆದು
ನಕ್ಕು ಪರಸ್ಪರರ ಭುಜಗಳ ಮೇಲೆ ಹಸ್ತಗಳನ್ನಿಕ್ಕಿ ' ಇನ್ನಾದರೂ
ಸಮಾಧಾನವಾಯಿತಷ್ಟೆ ? ' ಎಂದು ಪ್ರಶ್ನ ಮಾಡಿದರು. ಪ್ರಧಾನನು ತನ್ನ
ಅರ್ಧಾಂಗಿಯ ಸಮಾಪಕ್ಕೆ ಹೋಗಲಾಗಿ ಆ ಧರ್ಮಪತ್ನಿಯು ಆದರ
ದಿಂದೆದ್ದು ಗಂಡನಿಗೆ ತಲೆಬಾಗಿ ಪ್ರಣಾಮ ಮಾಡಿದಳು.
ಹೀಗೆ ಮುತ್ತಿನ ಕೋಟಿಯ ರಾಜ್ಯದಲ್ಲಿ ವಿಯೋಗವಿಲ್ಲದ ದಾಂಪತ್ಯ
ಸ್ಥಿತಿಯು ಸ್ಥಾಪಿತವಾಯಿತು. ಗಂಡಹೆಂಡಂದಿರೊತ್ತಟ್ಟಿಗೆ ಕುಳಿತರೆ ಒಬ್ಬರ
ಹೆಗಲಮೇಲೊಬ್ಬರ ಕೈ ಇರಲೇಬೇಕಾಗಿತ್ತು. ಎದ್ದರೆ ಅವರಿಬ್ಬರೂ ಕೈಗೆ
ಕೈಹಿಡಕೊಂಡೆಯೇ ಮತ್ತೊಂಡೆಡೆಗೆ ಹೋಗತಕ್ಕವರು, ಊಟಕ್ಕೆ ಕುಳಿರೆ
ಗಂಡನು ಹೆಂಡತಿಗೆ ತುತ್ತುಮಾಡಿ ಹಾಕುವನು; ಹೆಂಡತಿಯು ಗಂಡನ
ಬಾಯಿಯಲ್ಲಿ ತುತ್ತು ಹಾಕತಕ್ಕವಳು. ಬರಬರುತ್ತೆ ಪ್ರೇಮಬಂಧನ
ಗಳು ಸಡಿಲಾಗುತ್ತೆ ಬಂದರೂ ಮೇಲ್ಕಂಡ ಶಿಷ್ಟ್ರಾಚಾರಗಳನ್ನು ಮುರಿಯ
ತಕ್ಕದ್ದಲ್ಲವೆಂಬ ಕಟ್ಟಳೆಯಾಗಿತ್ತಾದ್ದರಿಂದ ಆವುಗಳನ್ನಾ ದಂಪತಿಗಳು
ಅಧಿರ್ನಾಹಕ್ಕಾಗಿ ಪಾಲಿಸುತ್ತಲಿದ್ದರು, ಅವುಗಳಿಗಾಗಿ ವ್ಯಾಪಾರ ಉದ್ದಿಮೆ
ಗಳು ನಿಂತುಹೋದವು. `ಹೊಲಮನೆಯ ಕೆಲಸಗಳು ಕೆಟ್ಟು ಹೋದವು.
ಸಾಹಸದ ಕಾರ್ಯಗಳನ್ನು ಮಾಡುವೆನೆಂದರೆ ಯಾರಿಗೂ ಅವಕಾಶವಿಲ್ಲ.
ಒಪ್ಸಂದವಿಲ್ಲದೆ ಪತಿಗಳೊಡನೆ ಜಗಳಾಡಿ ಮತ್ತೆ ಕೂಡುವಂಥ ಪೂರ್ವದ
ವಿನೋದಮಯವಾದ ಕ್ರಮವೇ ಚನ್ನಾಗಿತ್ತೆಂದು ಮಧ್ಯಮ ವಯಸ್ಕರಾದ
ಹೆಂಡಂದಿರ ಅಭಿಪ್ರಾಯವಾಗಿತ್ತು, " ವಾಣೀ ಮುಖದರ್ಪಣಮಣಿ"ಯು
ಈ ವಿಚಾರವನ್ನರಿತು ಒಪ್ಪಂದದ ನಿಯಮಗಳಲ್ಲಿ ಕೆಲಮಟ್ಟಿಗೆ ಹೆಚ್ಚು
ಕಡಿಮೆಯಾಗಬೇಕೆಂದು ರಾಜರಿಗೆ ವಿನಂತಿಯನ್ನು ಮಾಡಿಕೊಳ್ಳಲೋಸುಗ
ಮಹಿಳೆಯರ ಸಭೆ ಕೂಡಿಸಿದಳು. ಆದರೆ ಹೊಸ ಮೊದಲುಗಿತ್ತಿಯರಾದ
ತರುಣಿಯರಿಗೆ ಇಂಥ ಹೆಚ್ಚುಕಡಿಮೆಗಳು ಸರ್ವಥಾ ಇಷ್ಟವಾಗಿದ್ದಿಲ್ಲವಾದ್ದ
ರಿಂದ ಆ ವಿಚಾರವು ಹಾಗೆಯೇ ಉಳಿದುಹೋಯಿತು.
೩೮----------------------------------------------------------------------
ಹೀಗೆ ಅನೇಕ ದಿವಸಗಳು ಕಳೆದುಹೋದವು. ಒಂದು ದಿವಸ ರಾಜನೂ
ರಾಣಿಯೂ ರಾಣೀವಾಸದಲ್ಲಿ ದಿಂಬಕ್ಕೆ ಆತುಕೊಂಡು ಒಬ್ಬರೊಬ್ಬರ
ಹೆಗಲಮೇಲೆ ಕೈಹಾಕಿಕೊಂಡು ಕುಳಿತಿದ್ದರು. ಒಂದು ಪ್ರಹರದವರೆಗೆ
ಹಾಗೆಯೇ ಕುಳಿತಿದ್ದರೂ ಏನು ಮಾತಾಡಬೇಕೆಂಬದನ್ನರಿಯದೆ ಅವರು
ಮಾಡಿ ಕೂಡಿಸಿದ ಗೊಂಬೆಗಳಂತೆ ಸುಮ್ಮನೆಯೇ ಇದ್ದರು. ತನಗೆ ಅವಗತ
ವಾಗಿರುವ ಆನೇಕ ಭಾಷೆಗಳ ಸಾಂಪ್ರದಾಯಗಳಿಗನುಸರಿಸಿಯೂ ತನಗೆ
ಗೊತ್ತಿಲ್ಲದ ಇನ್ನೂ ಕೆಲವು ಭಾಷೆಗಳಿಗನುಸರಿಸಿಯೂ ತಾನು ರಾಣಿಯನ್ನು
ಬಹುಪರಿಯಾಗಿ ಪ್ರೀತಿಸುತ್ತಿರುವನೆಂದು ರಾಜನು ಹೇಳಿದನು. ಆ ಮಾತು
ಕೇಳಿ ಚತುರೆಯಾದ ಸುಧಾಲಹರಿಯು ಗಹಗಹಿಸಿ ನಕ್ಕು ತಾನು
ವಲ್ಲಿವೃಕ್ತಗಳ ಭಾಷಾಸರಣಿಯಿಂದ ರಾಜನನ್ನು ಪ್ರೀತಿಸುತ್ತಿರುವೆನೆಂದು
ಹೇಳಿದಳು.
ವಿವಾಹವಾದಂದಿನಿಂದ ಅಂದಿನ ವರೆಗೆ ತಾನು ಅನನ್ಯಭಾವದಿಂದಲೂ
ಏಕಾಗ್ರಚಿತ್ತದಿಂದಲೂ ರಾಣಿಯನ್ನು ಪ್ರೀತಿಸುತ್ತಿದ್ದದ್ದಕ್ಕಾಗಿ ತನ್ನ ಮತಿಯು
ಮಲೆತುಹೋಗಿದ್ದರಿಂದ ತಾನು ರಾಣಿಯಿಂದ ನಗಿಸಿಕೊಂಡೆನೆಂಬದನ್ನು
ಕಂಡು ರಾಜನು ವಿಷಾದವನ್ನು ತಳೆದನು. ಆದರೂ ಅವನು ತನ್ನ ಮನೋ
ವೃತ್ತಿಯನ್ನು ತೋರಗೊಡದೆ ಆ ಕೋಮಲಾಂಗಿಯ ಸುಲಲಿತವಾದ ಹಸ್ತ
ವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅದರೊಡನೆ ಆಡುತ್ತ ಕುಳಿತನು.
ಅಷ್ಟಾದ ಬಳಿಕಾದರೂ ಮುಂದೇನು ಮಾಡಬೇಕೆಂಬದನ್ನರಿಯದೆ ರಾಜನು
ಒಮ್ಮೆ ಕಿಟಕೆಗೆ ಹಾಕಿದ್ದ ರೇಸಿಮೆಯ ತೆರೆಯಮೇಲಿದ್ದ ಹೂಬಳ್ಳಿಗಳ ಸುಳು
ವನ್ನು ನಿರೀಕ್ಷಿಸಿ ನೋಡಿದನು. ಬಳಿಕವನು ಗೋಡೆಯ ಮೇಲಿದ್ದ ರಾವಣನ
ಚಿತ್ರವನ್ನು ನೋಡಿ "ಈ ದಶಾಸ್ಯನಿಗೆ ಹತ್ತೂ ಬಾಯಿಗಳಿಂದ ಉಣ
ಬೇಕಾಗುತ್ತಿತ್ತೊ? ಒಂದೇ ಬಾಯಿಂದ ಉಣ್ಣುವ ಕೆಲಸವಾಗುತ್ತಿದ್ದರೆ
ಅವನು ತನ್ನ ಬಾಯಿಗಳನ್ನೆಲ್ಲ ಎಂಜಲ ಮಾಡಿಕೊಳ್ಳುತ್ತಿದ್ದಿಲ್ಲ. ನಾಪಿತನು
ಇವನ ಹತ್ತು ತಲೆಗಳ ಕ್ಷೌರವನ್ನು ತೀರಿಸುನಷ್ಟರಲ್ಲಿಯೇ ಮೊದಲನೆಯ
ತಲೆಯು ಮತೆ ಬೆಳೆದು ಕ್ಷೌರಕ್ಕೆ ಯೋಗ್ಯವಾಗಿರುತಿ ದ್ಲಿಲ್ಲವೇ? ಪ್ರೇಮ
ದಿಂದ ಮಂಡೋದರಿಯನ್ನು ಚುಂಬಿಸುವ ಸುಖವು ಯಾವ ಮುಖಕ್ಕೆ? "
ಎಂದು ವಿಚಾರ ಮಾಡುತ್ತಿರುವಾಗ ರಾಣಿಯು ತನ್ನ ಹಸ್ತವನ್ನು ರಾಜನ
೩೯ ----------------------------------------------------------------------------
ಕೈಯೊಳಗಿಂದ ಮೆಲ್ಲನೇ ಸೆಳಕೊಂಡಳು. ರಾಜನು ಬೆದರಿದವನಾಗಿ
“ರಾಣಿಯನ್ನು ಬಿಟ್ಟು ತನ್ನ ಮನಸ್ಸು ಅನ್ಯ ವಿಷಯಗಳ ಕಡೆಗೆ ಹರಿದಿತಲ್ಲಾ!”
ಎಂದು ಚಿಂತಿಸಿ ನಿಷಾದಕ್ಕೀಡಾದನು,
ಅಷ್ಟರಲ್ಲಿ ಪ್ರಧಾನನು ರಾಣೀವಾಸದ ಹೊರಮಗ್ಗಲಲ್ಲಿಟ್ಟಿರುವ
ಮೃದಂಗದ ಮೇಲೆ ಮೆಲ್ಲನೆ ಕೈ ಹೊಡೆನು ತಾನು ಬಂದಿರುವೆನೆಂದು ಆ
ವಿಲಾಸಿಗಳಾದ ದಂಪತಿಗಳಿಗೆ ಸೂಚನೆಗೈದು ಆಜ್ಞೆಯಾದ ಕೂಡಲೆ ಒಳಗೆ
ಬಂದು " ಪ್ರಭುಗಳು ಚಿತ್ತೈಸಬೇಕು! ರಾಜೋದ್ಯಾನದಲ್ಲಿಯ ನೀರಿನ
'ನಳ'ವು ಎಲ್ಲಿಯೋ ಕೆಟ್ಟಿರುವದರಿಂದ ವಿಹಾರಸ್ಥಾನಗಳಲ್ಲಿಯೂ ಲತಾ
ಮಂಟಪಗಳಲ್ಲಿಯೂ ನೀರು ಹೊಕ್ಕು ಕೇಡಾಗಿರುವದಲ್ಲದೆ ಹೂವಿನ ಗಿಡ
ಗಳೂ ಹಣ್ಣಿನ ಗಿಡಗಳೂ ಹೆಚ್ಚು ಕಡಿ ಸಟಗ ನೀರುಂಡು ಕೆಟ್ಟು ಹೋಗುತ್ತ
ಲಿವೆ, '' ಎಂದು ಅರುಹಿದನು.
ಈ ವರ್ತಮಾನವನ್ನು ಕೇಳಿ ರಾಜನು ಚಕಿತನಾಗಿ, ತಾನು
ಪ್ರಿಯಾನುಪ್ರಸಾದರತನಾದ ಪತಿಯೆಂಬ ಭಾವವನ್ನು ಮರೆತು ರಾಜ್ಯದ
ಆಸ್ತಿಯ ಪರಿಪಾಲಕನಾದ ರಾಜನೆಂಬ ಧ್ಯಾನವನ್ನಿಟ್ಟುಕೊಂಡು ತನ್ನ
ಪ್ರಿಯ ಭಾರ್ಯೆಯ ಅನುಜ್ಞೆಯನ್ನು ಪಡಕೊಳ್ಳದೆ ನೆಟ್ಟನೆ ಉದ್ಯಾನದ
ಮಾರ್ಗವನ್ನು ಹಿಡಿದನು
ತೋಟದಲ್ಲಿರುವ ನಳದ ನೀರಿನ ಉಛ್ವಾಸದಲ್ಲಿ ನೀರು ತುಂಬಿ ಹೊರ
ಚಲ್ಲುತ್ತಿರುವದರಿಂದ ಕಂಡಕಂಡಲ್ಲಿ ನೀರು ನೀರೇ ಆಗಿಹೋಗಿತ್ತು. ಆ
ಅನರ್ಥವನ್ನು ಕಂಡು ರಾಜನು ಸೇವಕರಿಗೆ ಕಹಳೆಗಳನ್ನೂದ ಹೇಳಿ ರಾಜ
ಧಾನಿಯಲ್ಲಿರುವ ಪತಿಜನರನ್ನೆ ಲ್ಲ ತೋಟಕ್ಕೆ ಬರಮಾಡಿದನು. ಆ ಜನರೆಲ್ಲರೂ
ಸಲಿಕೆ ಗುದ್ದಲಿ ಹಾರಿ ಸೊನ್ನೆಕೋಲು ಕೊಡಲಿ ಬೆಡಗಗಳನ್ನು ತೆಗೆದು
ಕೊಂಡು ಉತ್ಸಾಹದಿಂದ ಬಂದರು. ರಾಜನು ಆ ಜನರಲ್ಲಿ ಅನೇಕ ತಂಡ
ಗಳನ್ನು ಮಾಡಿ ಒಂದೊಂದು ತಂಡದವರಿಗೆ ಒಂದೊಂದು ಕೆಲಸವನ್ನು
ಹೇಳಿದನು. , ಕೆಲವರು ಲತಾಮಂಟಪಗಳಲ್ಲಿ ಹೊಕ್ಕಿರುವ ನೀರನ್ನು ಬಳಿದು
ತೆಗೆಯಲಾರಂಭಿಸಿದರು. ಕೆಲವರು ಇಳಿಮೆಟ್ಟಿನಲ್ಲಿ ನಿಂತಿರುವ ನೀರನ್ನು
ತೆಗಿಯಲುದ್ಯುಕ್ತ ರಾದರು. ಕೆಲವರು ಸಚೈಲರಾಗಿ ಉಛ್ವಾಸದಲ್ಲಿಳಿದು
ಮುಳುಮುಳುಗಿ ಎಲ್ಲಿ ಏನು ಪ್ರತಿಬಂಧವಾಗಿದೆಯೆಂಬದನು ನೋಡುವ
೪೦ ------------------------------------------------------------------------
ಹವಣಿಕೆಗೆ ಬಿದ್ದರು. ಹಗಲು ಹನ್ನೆರಡು ತಾಸು ಆ ಜನರೆಲ್ಲರೂ ನೀರು-
ಕೆಸರುಗಳೆನ್ನದೆ ಹಾಡುತ್ತಲೂ ಸಿಳ್ಳುಹಾಕುತ್ತಲೂ ಕೂಗಾಡುತ್ತಲೂ ಚೀರಾ
ಡುತ್ತಲೂ ಒಳ್ಳೇ ಉಬ್ಬಿನಿಂದ ಕೆಲಸ ಮಾಡಿದರು. ಹೀಗೆಯೇ ಎಂಟಾನೆಂಟು
ದಿನಸ ಕೆಲಸ ನಡೆದರೆ ಅವ್ವ ಮಂಗಳವ್ವಗೆ ಉಡಿ ತುಂಬಿಸುತ್ತೇನೆಂದು
ಪತ್ನೀಜನರ ಬಾಹುಪಾಶದ ಉರಲನ್ನು ತಪ್ಪಿಸಿಕೊಂಡು ಬಂದವರಾದ ಆ
ಪತಿಗಳು ಬೇಡಿಕೊಂಡರು, ಪ್ರತಿಬಂಧವಿಲ್ಲಿರುವದೆಂದು ಯಾವನಾದ
ರೊಬನಿಗೆ ಶಂಕೆ ಬಂದರೆ ಅವನು ಅಲ್ಲಿಯೇ ಕೈಹಿಂದಕ್ಕೆ ತಕ್ಕೊಳ್ಳು ವನು.
" ಇದನೆಯೇ ಕೆಲಸದ ಹರವಾಗಿ ಹೋದರೆ ನಾಳಿಗೇನು ಮಾಡುವೆ ಮಗನೆ,
"ಸುಮ್ಮನಿರು" ಎಂದು. ವಿಚಾರಿಯಾದ ಗೃಹಸ್ಥನೊಬ್ಬನು ಶೋಧದ
ಹವ್ಯಾಸಕ್ಕೆ ಬಿದ್ದವನಿಗೆ ಬೋಧಿಸುತ್ತಿದ್ದನು
" ಮಾಡಲೊಲ್ಲನೇಕೆ ಕೆಂಗಣ್ಣಾ ! ಈಗಲೆ ಇವನು ಕೆಲಸವನ್ನು
ಮುಗಿಸಿ ಹೆಂಡತಿಯ ಕೈಗೆ ಸಿಕ್ಕು ವಿಲಿವಿಲಿಯಾಗಿ ಒದ್ದಾಡಲಿ, ಯಾರು
ಬೇಡನ್ನುತ್ತಾರೆ?' ಎಂದು ಮತ್ತೊಬ್ಬನು ಪರಿಹಾಸಮಾಡಿ ನುಡಿದನು.
ಇಳಿಹೊತ್ತಾದ ಬಳಿಕ ಕೆಲಸಮಾಡುವ ಜನರಿಗೆಲ್ಲ ರಾಜರ ಮಹಾನಸ
ದಿಂದ ಬುತ್ತಿ ಬಂದಿತು. ಅದರಲ್ಲಿ ಅನೇಕ ಪ್ರಕಾರದ ಪಕ್ವಾನ್ನಗಳಿದ್ದವು.
ಚಲೋ ಇಡಿ ಬದನೀಕಾಯಿ ಪಲ್ಲೆ, ಎಣೆಗಾರ ಜೋಳದ ಬಕ್ಕರಿ, ಬುತ್ತಿ
ಕಲಸನ್ನಗಳೂ ಇದ್ದವು. ಅಷ್ಟು ಸಾಲದೆ ರಾಜನು ಅಡಿಗೆಯವನಿಗೆ “ಉಂಡೀ
ದಶಿಮೀ ತಾ”ಎಂದು ಆಜ್ಞಾಪಿಸಿದನು. ಜನರೆಲ್ಲರೂ ಕೈ ಕಾಲುಗಳನ್ನು; ತೊಳೆದು
ಕೊಂಡು ಪ್ರಶಸ್ತವಾಗಿ ಕುಳಿತು ಸವಿಸವಿಯಾಗಿರುವ ಆ ಪದಾರ್ಥಗಳನ್ನು
ಯಥೇಚ್ಛವಾಗಿ ತಿಂದು ರಾಜನನ್ನು ಹಾಡಿ ಹರಿಸಿದರು. ಉಗ್ರಾಣದವನು
ಜನರಿಗೆ ಎಲೆಅಡಿಕೆಗಳನ್ನಾದರೂ ಹಂಚಿದನು. ಕೇಳುವದೇನು? ಹರಟೆಗೆ
ಪ್ರಾರಂಭವಾಯಿತು. ಎಲೆ ಅಡಿಕೆಗಳು ಹರಟೆಗೆ ಬಲು ಅನುವಾದವುಗಳು.
ಹೀಗೆ ಭೋಜನ ತಾಂಬೂಲವಾಗ್ವಿನೋದಗಳಾದ ಬಳಿಕ ಜನರು ಮತ್ತೆ
ತಮ್ಮ ತಮ್ಮ ಆಯುಧಗಳನ್ನು ತೆಗೆದುಕೊಡು ಕೆಲಸಕ್ಕೆ ಹೊರಟರು,
" ಕಕ್ಕಪ್ಪಾ, ಇಂದು ಬೆಳತನಕ ಆದರೂ ಇಲ್ಲಿಯೇ ಇದ್ದು ರಾಜರ
ಕೆಲಸವನ್ನು ಹೊಡೆದು ಕೆಡವೋಣ !'' ಎಂದು ಕೆಂಗಣ್ಣನಂದನು.
" ಹೊಡಿ ಮತ್ತೇನಿದೆ! ಬೇಕಾದ ಹಾಗೆ ಉಂಡುತಿಂದು ಹರಟೆ
೪೧---------------------------------------------------------------------
ಯಾಡಲಿಕ್ಕೆ ಒಳ್ಳೇ ಸುಸಮಯವು ಪ್ರಾಪ್ತವಾಗಿದೆ. ಮೇಲೆ ಹೆಂಡರ
ಕಾಟವಿಲ್ಲ! '' ಎಂದು ಕಕ್ಕಲನು ನುಡಿದು ನಕ್ಕನು.
ರಾಜನಾದರೂ ಅವರ ಸಂವಾದವನ್ನು ಕೇಳಿ ಮುಗುಳುನಗೆ ನಕ್ಕು
ಮತ್ತೆ ಉಛ್ರಾಸದ ಕಡೆಗೆ ನಡೆದನು. ಅಲ್ಲಿ ಕುಳಿತು ರಾಜನೇನೋ ಆಲೋ
ಚಿಸಿ ತೋಟಗನಿಗೆ ದೋಟಿಯ ಕೋಲು ತಾರೆಂದು ಹೇಳಿದನು. ಆ ದೋಟಿ
ಯನ್ನು ಉಛ್ವಾಸದ ತಳದಲ್ಲಿ ಆಡಿಸಲಾಗಿ ಬಾಳೇಸೊಪ್ಪಿಯ ಸಿಂಬೆಯೊಂದು
ಆ ದೋಟಿಗೆ ಹತ್ತಿ ಬಂದಿತು. ಆ ಸಿಂಬೆಯೇ ಪ್ರತಿಬಂಧವು! ಅದನ್ನು
ತೆಗೆದಾಕ್ಷಣನೆ ನೀರು ನಿತ್ಯದಂತೆ ಉಛ್ವಾಸದ ತಳದಲ್ಲಿರುವ ಮೋರಿಗುಂಟ
ಹರಿಯ ಲಾರಂಭಿಸಿದ್ದರಿಂದ ಉಛ್ವಾಸವು ಬರಿದಾಗಿ ನೀರಿನ ಕೇಡು ನಿಂತಿತು..
" ಎಲೆಲೆ | ನಾನೀ ಸಿಂಬೆಯನ್ನು ಹಿರಿದು ತೆಗೆದದ್ದಕ್ಸಾಗಿ ನನಗೂ ನನ್ನೀ
ಜನರಿಗೂ ಕೆಲಸವೇ ಇಲ್ಲದಂತಾಯಿತಲ್ಲ! * ಎಂದವನೇ ಅವನು ಆ
ಸಿಂಬೆಯನ್ನು ಮತ್ತೆ ಯಥಾಪ್ರಕಾರವಾಗಿ ಮೋರಿಯ ಬಾಯಿಗೆ ತುರುಕಿ
ಬಿಟ್ಟನು.
ಈ ಸಮಾಚಾರವನ್ನೆಲ್ಲ ರಾಣಿಯು ಯಾವಾಗ ಬಂದು ನೋಡುತ್ತೆ
ನಿಂತಿದ್ದಳೋ ನಿಂತಿದ್ದಳು. ಅವಳನ್ನು ಕಾಣುತ್ತಲೆ ರಾಜನು ಬೆದರಿ ಶಾನು
ಸಿಂಬೆಯನ್ನು ಹೊರಗೆ ತೆಗೆದದ್ದನ್ನೂ ಮತ್ತೆ ಇದ್ದಕ್ಕಿದ್ದಂತೆಯೇ ಅದನ್ನು
ಮರಳಿ ತುರುಕಿದ್ದನ್ನೂ ಅವಳು ನೋಡಿದಳೇನೆಂದು ಶಂಕಿಸಿ ಚಿಂತಾಕುಲ
ನಾಗಿ ನಿಂತುಕೊಂಡನು. ಕ್ಷಣಹೊತ್ತಿನಲ್ಲಿಯೇ ಅವನು ವಿಚಾರ ತಿಳಿದು
ನಗೆಮುಖನನ್ನು ತಾಳಿ ರಾಣಿಯ ಸಮೀಪಕ್ಕೆ ಹೋಗಿ "ಓ ಮನೋರಮೆ,
ನೀನಾವಾಗ ಬಂದಿ? ನೀನು ಬಳಿಯಲ್ಲಿರದಿದ್ದಕ್ಕಾಗಿ ನನ್ನ ಮನಸ್ಸು ವ್ಯಗ್ರ
ವಾಗಿ ಹೋಗಿತ್ತು ” ಎಂದು ನುಡಿದು ಅವಳ ಪದ್ಮಸದೃಶವಾದ ಹಸ್ತವನ್ನು
ಹಿಡಿದುಕೊಂಡು ನಿಂತನು.
ರಾಣಿಯು ಒಳ್ಳೇ ಆಢ್ಯತೆಯಿಂದ ತನ್ನ ಹಸ್ತವನ್ನು ಸೆಳೆದುಕೊಂಡು
ಪತಿರಾಯನನ್ನು ಕುರಿತು "ಆ ಸಿಂಬೆಯನ್ನು ಮತ್ತೇಕೆ ಹಾಗೆ ತುರುಕಿದಿರಿ?”
ಎಂದು ಕೇಳಿದಳು.
"ಅದರಲ್ಲೇನಾಯಿತು? ಅದನ್ನು "ನಾನು ಹೊತ್ತು ಕೊಂಡು ಆರ
ಮನೆಗೆ ತರಬೇಕಾಗಿತ್ತೇನು? ''
೪೨ ------------------------------------------------------------------------
" ಮಾತುಗಳೆಲ್ಲಾ ಗೊತ್ತಿವೆ! ತಟ್ಟು ತಡೆಯಿಲ್ಲದೆ ಮುಂಚಿನಂತೆ
ಮೋರಿಯಲ್ಲಿ ನೀರು ಹರಿಯಲಾರಂಭಿಸಿದರೆ ನಿನ್ನೀ ಕಪಟೋದ್ಯೋಗಗಳೆಲ್ಲ
ನಿಂತುಹೋಗಿ ಅರಮನೆಗೆ ಬರಬೇಕಾಗುವದೆಂದು ನೆನೆದು ಮತ್ತೆ ಆ
ಮೋರಿಗೆ ತಟ್ಟು ಹಾಕಿ ಬೆಳತನಕ ಇಲ್ಲಿಯೇ ಕೆಲೆಯಬೇಕೆಂಬ ವಿಚಾರವು
ನಿಮ್ಮದಾಗಿರುವದೆಂಬದನ್ನು ನಾನು ಅರಿಯೆನೇನು ?” ಎಂದು ರಾಣಿಯು
ಬಹು ತೀಕ್ಷ ವಾದ ವಾಗ್ಬಾಣಗಳನ್ನು ಬಿಟ್ಟಿಳು.
"ಹಾಗಂದರೇನು ಪ್ರಿಯೆ? " ರಾಜನು ನಿಷೇಧಿಸಿ
ನುಡಿದನ್ನು
"ಕೋಟಿ ಹಾಳಾದರೂ ಚಿಂತೆಯಿಲ್ಲ. ಅರಮನೆಗೆ ಬಂದು ನನ್ನೊಡನೆ
ನಾಲ್ಕು ಪ್ರೇಮದ ಮಾತಾಡಕೂಡದೆಂದಿಣಿಸಿ ರಾತ್ರಿ ಬೆಳತನಕ ನೀವಿಲ್ಲಿಯೇ
ಉಳಿಯಬೇಕೆಂಬ ಉದ್ಯೋಗ ನಡಿಸಿರುವದನ್ನು ನಾನು ಕಾಣೆನೆ?" ಎಂದು
ರಾಣಿಯು ಮತ್ತೆ ನುಡಿದಳು,
ಈ ಮಾತು ಕೇಳಿ ರಾಜನು ಈರ್ಷೆಗೇರಿ, " ಒಂದು ರಾತ್ರಿ ನಾನು
ಮನೆಗೆ ಬರಲಿಲ್ಲವೆಂದು ಕಲ್ಪಿಸಿದರೂ ಘಾತವೇನಾಯಿತು? ವೀರಣ್ಣನ
ಮುಂದಿನ ಬಸವಣ್ಣನಂತೆ ಗಂಡನು ಹೆಂಡತಿಯ ಮುಂದೆ ಯಾವಾಗಲು
ಕೈಕಟ್ಟಿಕೊಂಡೆಯೇ ಕುಳಿತಿರಬೇಕೇನು?
" ನಿಮಗಾರು ಅರಮನೆಗೆ ಬಾರೆನ್ನುತ್ತಾರೆ? ನನಗೋಸ್ಕರವಂತೂ
ಬರಲೇಬೇಡಿರಿ! ?'. ಎಂದು ನುಡಿದ ಆ ರಾಣಿಯ ಸುಲಲಿತವಾದ ಮುಖದಲ್ಲಿ
ಕೋಪಾಗ್ನೆಯು ಉರಿಯುತ್ತ ಲಿರುವದರಿಂದ, ತನ್ನ ಪ್ರೇಮಸರ್ವಸ್ವದ ನಿಧಾನ
ವಾಗಿರುವ. ಆ ಮುಖವನ್ನು ಕಣ್ಣೆತ್ತಿ ನೋಡಲು ರಾಜನಿಗೆ ಧೈರ್ಯವಾಗಲಿಲ್ಲ.
ಕಡಕಡಿಸಿ ಸಿಡಿಲು ಗಡನೆ ಅಡಗಿಹೋಗುವಂತೆ ರಾಜ್ಞಿಯು ಅಲ್ಲಿಂದೆದ್ದು
ಅರಮನೆಗೆ ತೆರಳಿದಳು.
ರಾಜನಿಗಾದರೂ ವಿಪರೀತವಾದ ಕೋಪ ಬಂದಿತು. ಆದರವನು
ಒಳ್ಳೇ ವಿಚಾರಿಯೂ ಸಹನಶೀಲನೂ ಆದ ಧೀರನಾಗಿದ್ದು ಈ ಕ್ಷಣದವರೆಗೂ
ನಿಸ್ಸೀಮವಾದ ಪ್ರೇಮದಿಂದ ತಾನು ಪ್ರೀತಿಸುತ್ತಿದ್ದ ರತಿಸುಂದರಿಯಾದ
ಭಾರ್ಯೆಯನ್ನು ನಿಷ್ಠುರ ವಚನಗಳಿಂದ ನೋಯಿಸುವದು ಅವನ ಮನಸ್ಸಿಗೆ
ಬರಲಿಲ್ಲ. " ಇದನ್ನೆಲ್ಲ ನಾನು ಸಹಿಸಬೇಕೆ?' ಎಂಬ ಉದ್ಗಾರವು ಅವನು
೪೩----------------------------------------------
ಮುಖದಿಂದ ಹೊರಡದೆ ಇರಲಿಲ್ಲ ಮತ್ತೆ ವಿಚಾರಗೈದು ಅವನು
ಅಂದದ್ದು : " ಮಾಡುವದೇನು? ಇದಕ್ಕೆಲ್ಲ. ನಾನೇ ಉತ್ತೇಜನವನ್ನು
ಕೊಟ್ಟೆನೆಂದು ಇಷ್ಟೊಂದಾಯಿತಷ್ಪೆ? ಪದಾರ್ಥಗಳ ಗುಣಧರ್ಮಗಳು
ನಿರ್ಣೀತವಾಗಿರುವಂತೆ ಸುಖದುಃಖಗಳಲ್ಲಿ ಇದು ಸುಖವು, ಇದು ದುಃಖ
ವೆಂಬದರ ನಿರ್ಣಯವಾಗಿಲ್ಲ. ಕದನವು ಪಾಪ್ತವಾದರೆ ಅದು ಹೀನಸತ್ವನಾದವ
ನಿಗೆ ದುಃಖಗಳಲ್ಲಿ ಅತಿ ದೊಡ್ಡ ದುಃಖವು. ಅದರೆ ವೀರಾಗ್ರೇಸರನಿಗೆ ಅದೇ
ಕದನವೇ ದೊಡ್ಡದೊಂದು ಸಮಾರಂಭವೆನಿಸುವದು. ಇದು ಮನಃಪ್ರವೃತ್ತಿ
ಯಿಂದುಂಟಾದ ತಿಳುವಳಿಕೆಯ ಮಾತಲ್ಲದೆ ವಸ್ತುತಃ ಯಾವ ಸಂಗತಿಯಲ್ಲಾ
ಗಲಿ ಯಾವ ವಸ್ತುವಿನಲ್ಲಾಗಲಿ ತಾನೇ ಸುಖವಿರುವದೆಂದು ಹೇಳಲಾಗದು.
ಹೋಗಲಿ ಕೋಮಲೆಯಾದ ಅಬಲೆಯವಳು. ಅವಳೊಡನೆ ಸ್ಪರ್ಧೆ
ಮಾಡುವದೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನಿಕ್ಕುವದೂ ಒಂದೇ, ಎಂದು
ವಿಚಾರಗೈಯು:ತ್ತ ರಾಜನು ಭರ್ರನೆ ದೋಟಿಯು ಕೋಲಿನಿಂದ ಮೋರಿಯಲ್ಲಿ
ರುವ ಸಿಂಬೆಯನ್ನು ತೆಗೆದು ನೆಟ್ಟಗೆ ತೋಟದ ಮನೆಯ ಮುಂದಿರುವ ಕಟ್ಟೆಗೆ
ಬಂದು, ಕೆಲಸ ಮಾಡುತ್ತಿರುವ ಪುರಜನರನ್ನೆಲ್ಲ ಕರೆಸಿ "ಪ್ರಜಾಜನರೆ,
ನೀರಿನ ಪ್ರತಿಬಂಧದ ಕಾರಣವು ಗೊತ್ತಾಯಿತು. ಮೋರಿಯ ಬಾಯಿಗೆ ಈ
ಸಿಂಬೆಯು ಸಿಕ್ಕಿರುವದರಿಂದ ಇಷ್ಟೆಲ್ಲ ಕೇಡಾಯಿತ್ತು ಇನ್ನೇನು ನಿಮಗೆ
ಪ್ರಯಾಸಮಾಡುವ ಕಾರಣವಿಲ್ಲ. ಸ್ವೇಚ್ಛೆಯಿಂದ ಮನೆಗೆ ಹೋಗುವವರಾ
ಗಿರಿ" ಎಂದು ಹೇಳಿದನು.
" ಇನ್ನೇನೆಂದು ಮನೆಗೆ ಹೋಗೋಣ ಪ್ರಭೋ | ಹೆಂಡರ ಆಜ್ಞೆ,
ಯಿಲ್ಲದೆ ನಾನಿಲ್ಲಿಗೆ ಕೆಲಸಕ್ಕೆ ಬಂದ ತಪ್ಪಿಗಾಗಿ ನಮಗೇನು ದಂಡವೋ
ಕಾಣೆವು. ಶಿಕ್ಷೆಯನ್ನು ಭೋಗಿಸಿದ ಅನಂತರವಾದರೂ ಆ ಹೆಂಡರ
ಮುಂದೆ ಕುಳಿತು ಆವರ ಕೈಯೊಳಗಿನ ಬಳೆಗಳನ್ನು ಎಣಿಸಬೇಕು;
ಅವರು ನಮ್ಮ ತೊಡೆಯಮೇಲೆ ತಲೆಯಿಟ್ಟು ಮಲಗಿಕೊಂಡರೆ ಅತ್ತಿತ್ತ
ಅಲ್ಲಾಡಲರಿಯದೆ ನಾವು ಸುಮ್ಮನೆ ಕುಳ್ಳಿರಬೇಕು ; ಬೇಸರ ಬಂದರೆ ಅವರ
ಬೆನ್ನು ಮೇಲೆ ಕೈಯಾಡಿಸಿ ಹಣೆಯ ಮೇಲಿನ ಬೆವರನ್ನು ಜೋಕೆಯಿಂದ
ಒರಿಸುವದೇ ನಮಗೆ ವಿನೋದವು. ಇದೆಲ್ಲ ಪೀಡೆ ಇದೊಂದು ರಾತ್ರಿಯಾ
ದರೂ ತಪ್ಪೀತೆಂದು ಮಾಡಿದ್ದೆವು. ಅದು ಪ್ರಭುಗಳಾದ ತಮ್ಮ ಮನಸ್ಸಿಗೆ
೪೪ ----------------------------------------------------------------------------
ಬರಲಿಲ್ಲ. ಆ ಸಿಂಬೆಯನ್ನೇಕೆ ಕಡೆಗೆ ತೆಗೆದಿರಿ? ಮತ್ತೆ ಇದ್ದಕಿದ್ದಂತೆಯೇ
ಇರಿಸಿರಿ. ಕೆಲಸಕ್ಕೆ ಪ್ರಾರಂಭವಾಗಲಿ.”
ಸಜ್ಜನರೆ, ಯತ್ನವಿಲ್ಲ, ನಾನು ಆ ಸಿಂಬೆಯನ್ನು ಯಾರಿಗೂ ತಿಳಿಯ
ಗೊಡದಂತೆ ಮತ್ತೆ ಅಲ್ಲಿಯೇ ಇರಿಸಿದ್ದೆನು. ರಾಣಿಯವರು ಯಾವಾಗ
ಬಂದಿದ್ದರೋ, ನನ್ನ ಕೃತ್ಯವನ್ನು ಹೇಗೆ ನೋಡಿದರೋ ದೇವರೇ ಬಲ್ಲ.
ಅವರು ನನ್ನ ಉದ್ದೇಶವನ್ನು ಕಂಡುಹಿಡಿದು ನನ್ನ ಮೇಲೆ ಸಿಟ್ಟಾಗಿ, ಅರ
ನೆಗೆ ಬರಬೇಡವೆಂದು ನನಗಾಜ್ಞೆಯನ್ನು ವಿಧಿಸಿ ಹೊರಟುಹೋದರು.
ಏನು ಮಾಡಲಿ?”
" ಹೀಗಾಯಿತೇನು ದೇವರೂ ! ಎಂದೊಬ್ಬ ಧೂರ್ತನು
ಉದ್ಗಾರ ತೆಗೆದು " ಯತ್ನವಿಲ್ಲ! ಗಂಡಂದಿರ ತುಡುಗು ಹೆಂಡರ ಕೈಗೆ ಸಿಕ್ಕಿ
ತೆಂದರೆ ಆಗತಕ್ಕ ಅಪ್ರತಿಷ್ಠೆಗೆ ಪರಿಮಿತಿಯಿಲ್ಲವೆಂಬದನ್ನು ನಾನು ಅನುಭವಿಸಿ
ದವನು. ಮಹಾರಾಜರು ಭೀತಿಗೊಂಡದ್ದು ಹೆಚ್ಚಿನದಲ್ಲ.” ಎಂದು ಕನಿಕರ
ದಿಂದ ನುಡಿದನು.
" ಅರಮನೆಗೆ ಬರಬೇಡವೆಂದು ವಿಧಿಸಿ ಹೋಗಿರಲು ನಾನಿನ್ನು ಎಲ್ಲಿಗೆ
ಹೋಗಲಿ, ನೀವೇ ಹೇಳಿರಿ" ಎಂದು ಅರಸನು ಚಿಂತಾಕುಲನಾಗಿ
ನುಡಿದನು
ಆಗ ಪ್ರಧಾನನು ಮಧ್ಯದಲ್ಲಿ ಬಾಯಿಹಾಕಿ, "ದೇವರೂ, ಹೆಂಗಸಿನ
ಮಾತದು. ಹೆಂಗಸರೊಂದು ವಿಪರೀತವಾದ ಮಾತಾಡಿದರೂ ಅವರ ಭಾವ
ದಲ್ಲಿ ಹಾಗಿರುವದಿಲ್ಲ. ಪ್ರಭುಗಳು ಅರಮನೆಗೆ ಹೋದ ಕೂಡಲೆ ರಾಣಿಯವ
ರನ್ನು ಬಲು ಬಿಗಿಯಾಗಿ ಅಪ್ಪಿಕೊಂಡು ಅವರ ಮುಖದಿಂದ ನಿಷೇಧದ
ಶಬ್ಧವು ಹೊರಡುವಷ್ಟರಲ್ಲಿಯೇ ಅಧರವನ್ನು ಅನೇಕಾವರ್ತಿ ಚುಂಬಿಸಿಬಿಡಿರಿ.
ಬಾಯಿಗೆ ಕೀಲಿಯೇ ಬಿದ್ದಂತಾಗುವದು. ಈ ರಾಜ್ಯದಲ್ಲಿ ಅತಿ ಪುರಾತನ
ನಾದ ಪತಿಯು ನಾನು. ನಾನು ಹೇಳಿದ ಅನುಭವದ ಮಾತಿನಲ್ಲಿ ಪ್ರಭುಗಳ
ವಿಶ್ವಾಸವಿರಲಿ. * ಎಂದು ತನ್ನ ಅನುಭವದ ಮಾತು ಹೇಳಿದನು. ` ಕುದು
ರೆಗೆ ಕಡಿವಾಣವನ್ನು ಕಲ್ಪಿಸಿದ ಜಾಣನು ಹೆಂಗಸರಿಗೆ ಹೊಸತರದ ಬಾಯ್
ತಡೆಯನ್ನು ಕಲ್ಪಿಸಿದ ಪ್ರಧಾನನೂ ಸಮಾನವಾದ ಯೋಗ್ಯತೆಯವರು!
" ನಾವಾದರೂ ಹಾಗೆಯೇ ಮಾಡಬಹುದಲ್ಲವೆ ಪ್ರಧಾನರೇ? "
೪೫-------------------------------------------------------------------------------
ಎಂದೋರ್ವ ನಾಗರಿಕನು ಪ್ರಧಾನನ ಅನುಭವದ ಮಾತಿಗೆ ತಲೆದೂಗಿ
ಕೇಳಿದನು.
" ಅವಶ್ಯ ಮಾಡಿರಿ. ಈ ರೀತಿಯಿಂದ ನಿಶ್ಚಯವಾಗಿ ನಿಮ್ಮ ಹೆಂಡರ
ಮನಸ್ಸು ಸಮಾಧಾನ ಹೊಂದುವದು. ಆದರೆ ಸಮಾಧಾನವಾದ ಬಳಿಕ
ಮನೆ ಬಿಟ್ಟೀಕೆ ಹೋಗಿದ್ದಿರೆಂದು ಹೆಂಡರು ನಿಮ್ಮನ್ನು ಕೇಳಿದಾಗ ಮಾತ್ರ
ಯಥಾರ್ಥವನ್ನೇ ಹೇಳಬೇಕಲ್ಲದೆ ಸುಳ್ಳು ಹೇಳಿದರೆ ಭಟ್ಟಿ ಕೆಡುವದು; ಔಷಧ
ತೆಗೆದುಕೊಂಡ ಮೇಲೆ ಅಪಥ್ಯ ಮಾಡಿದಂತಾಗುವದು. ''
ಅರಸನು ನೆಟ್ಟನೆ ಅರಮನೆಗೆ ಹೋಗಿ ಒಳ್ಳೇ ಚಾಪಲ್ಯದಿಂದಲೂ
ಕೌಶಲ್ಯದಿಂದಲೂ ಪ್ರಧಾನನು ಹೇಳಿಕೊಟ್ಟ ಪ್ರಯೋಗವನ್ನು ಮಾಡಿದನು.
ಪ್ರಯೋಗವು ತಪ್ಪದೆ ಸಾಧಿಸಿತು. ಉರಿಯಾದ ಕೂಡಲೆ ಹೊಗೆ ಅಡಗಿ
ಹೋಗುವಂತೆ ರಾಣಿಯ ಕೋಪವೆಲ್ಲ ಬಯಲಾಗಿಹೋಯಿತು.
" ನೀರಿನ ಪ್ರವಾಹಕ್ಕೆ ಪ್ರತಿಬಂಧವಾಗುವಂತೆ ಮತ್ತೆ ಆ ಸಿಂಬೆ
ಯನ್ನೇಕೆ ಅಲ್ಲಿರಿಸಿದಿರಿ?'' ಎಂದು ರಾಣಿಯು ಮಂದಸ್ಮಿತೆಯಾಗಿ ಕೇಳಿದಳು.
" ಸಕ್ಕರೆಯ ಅಖಂಡವಾದ ಆಸ್ವಾದನದಿಂದ ಬಾಯಿಕಟ್ಚಿಹೋಗು
ವಂತೆ ಅಖಂಡವಾಗಿ ನಾವು ನಡಿಸಿದ ಪ್ರೇಮವ್ಯಾಪಾರಗಳಿಂದ ಪ್ರೇಮವು
ಸ್ಫೂರ್ತಿರಹಿತವಾದಂತೆ ನನಗೆ ಭಾಸವಾಯಿತು. ಅದಕ್ಕಾಗಿ ಒಂದು ದಿವಸ
ವ್ರತದಿಂದಿದ್ದರೆ ಹೊಸ ಸ್ಫೂರ್ತಿಯು ಬರುವದೋ ನೋಡಬೇಕೆಂದು
ಯೋಚಿಸಿ ನಾನು ಹೀಗೆ ಮಾಡಿದೆನು.” ಎಂದು ಪ್ರಧಾನನ ಸೂಚನೆಯನ್ನು
ಧ್ಯಾನದಲ್ಲಿಟ್ಟುಕೊಂಡು ರಾಜನು ಸತ್ಯವನ್ನೇ ಹೇಳಿದನು.
ರಾಣಿಯು ಬಹು ಪ್ರೀತಳಾಗಿ ಕಾಂತನನ್ನು ತಾನಾಗಿ ಮತ್ತಿಷ್ಟು
ಬಿಗಿಯಾಗಿ ಅಪ್ಪಿಕೊಂಡು " ಪ್ರಿಯರೇ, ನೀವು ಮಾಡಿದ್ದು ವಿಹಿತವು.
ಕಾಂತರಲ್ಲಿ ನನ್ನ ಪ್ರೇಮವು ಅನ್ಯೂನವಾಗಿ ಉಳಿದಿದ್ದರೂ ಹಗಲು ರಾತ್ರಿ
ಹಾಗೆ ಮೈಗೆ ಮೈ ಹೊಂದಿಕೊಂಡು ಕುಳ್ಳಿರುವದು ನನಗಾದರೂ ಬೇಸರ
ವಾದಂತಾಗಿತ್ತು. ಪ್ರಾಣೇಶ್ವರರ ಇಚ್ಛೆಯಂತಾಗಿರುವದೋ ಎಂಬದನ್ನು
ಅರಿಯದೆ ನಾನು ಇಷ್ಟು ದಿನ ಸುಮ್ಮನೆ ಇದ್ದೆನು. ಆದರೂ ಇತ್ತಿತ್ತಲಾಗಿ
ಸೂಕ್ಷ್ಮವಾಗಿ ನಿರೀಕ್ಷಿಸಿ ನೋಡಿದರೆ ಒಡೆಯರ ಮನಸ್ಸಿಗಾದರೂ ನನ್ನ ಮೈಗೆ
ಮೈ ಹೊಲಕೊಂಡು ಕೂಡುವದು ಬರಲಿಲ್ಲವೆಂದೂ ಹೆಂಡತಿಯ ಮನಸ್ಸು
೪೬ -------------------------------------------------------------------------------
ಹೇಗೋ ಎಂದು ಶಂಕಿಸಿ ತಾವು ಅನಿರ್ವಾಹಕ್ಕಾಗಿ ಹಾಗೆ ನಿತ್ಯದಲ್ಲಿ ಪ್ರವೃತ್ತ
ರಾಗಿದ್ದರೆಂದೂ ನಾನು ತರ್ಕಿಸಿ ಪರೀಕ್ಷೆ ಮಾಡಬೇಕಾಗಿ ಆ ಸಿಂಬೆಯನ್ನು
ಉಛ್ರಾ ಸದಲ್ಲಿರಿಸಿದೆನು. "
"ಯಾಕೆ ಪ್ರಿಯೆ. ನನ್ನ ನಿರಂತರವಾದ ಸಮಾಗಮದಿಂದ ನಿನಗೆ
ತೊಂದರೆಯೇ?"
"ಹಾಗಂದರೆ ನನ್ನ ನಾಲಿಗೆ ಕಡಿದುಬಿದ್ದೀತು! ಆದರೂ ಅನ್ನದಿಂದ
ತುಂಬಿದ. ಹರಿವಾಣವನ್ನು ಸಂತತವಾಗಿ ಮುಂದಿಟ್ಟು ಕೊಂಡರೆ ಜಾಡ್ಯವು
ಬರದಿರುವದೇ? ಹಸಿದಮೇಲೆಯೇ ಉಣ್ಣಬೇಕೆಂದು ಅನೇಕರು ಭೋಜನ
ಸಮಯದವರೆಗೆ ಬಾಯಿಯಲ್ಲಿ ನೀರು ಕೂಡಾ ಹಾಕಿಕೊಳ್ಳುವದಿಲ್ಲ. ಹಸಿವೆ
ಯಾಗಬೇಕೆಂದು ಅನೇಕರು ವ್ಯಾಯಾಮಗಳನ್ನೂ ಶ್ರಮದ ಕೆಲಸಗಳನ್ನೂ
ಮಾಡುತ್ತಾರಲ್ಲವೆ? ಹಾಗೆಯೇ ಪತಿಯ ಮುಖವನ್ನು ಯಾವಾಗ ಕಾಣು
ವೆನೋ ಎಂಬ ಕುತೂಹಲವುಂಬಾಗುವವರಿಗೆ ಪತಿಯಿಂದ ದೂರಿರುವದು
ಅವಶ್ಯವು* ಎಂದು ರಾಣಿಯು ಮುಗುಳುನಗೆ ನಗುತ್ತೆ ನುಡಿದಳು.
ಕೋಟದಲ್ಲಿ ಕೆಲಸಮಾಡುತ್ತಿದ್ದ ಪುರಜನರೆಲ್ಲ "" ಯತ್ನವೇನಿದೆ?
ಎಂದು ಚಿಂತಿಸುತ್ತೆ ಅರ್ಭಕರು ಶಾಲೆಗೆ ನಡೆದಿರುವಂತೆ ನಡೆದಿದ್ದರು.
"ಮನೆಗೇನೆಂದು ಹೋಗೋಣ? ಇಲ್ಲಿಯೇ ಅನಲೋಕಿತೇಶ್ವರನ
ಹಾಳುದೇಗುಲವು ನಮ್ಮೆಲ್ಲರನ್ನು ಒಳಕೊಳ್ಳುವಂತಿದೆ. ಹೇಗೆ ಅಣ್ಣಗಳ್ಳರಾ? "
ಎಂದು ಉಗ್ರಳಾದ ಹೆಂಡತಿಯ ಗಂಡನೊಬ್ಬನು ಸೂಚಿಸಿದನು.
"ಆದದ್ದಾಗಲಿ ಬಾಚಣ್ಣಾ, ಕೆಟ್ಟೆ ಮನೆಗೆ ಹೋಗಿಬಿಡೋಣ.
ಇದೊಂದು ದಿನ ತಪ್ಪಿಸಿಕೊಂಡರೆ ನಾಳಿಗಾದರೂ ಸಾವು ಬಿಡುವಂತಿದೆ
ಏನು?” ಎಂದೊಬ್ಬನು ನುಡಿದನು.
ಯಾಕೆ, ಈಗಾಗಲೆ ಎಡೆಯೊಡಕೊಂಡಿರುವಿರೊ? ಪ್ರಧಾನರು ಹೇಳಿ
ಕೊಟ್ಟಿರುವ ಗುರುಮಂತ್ರದ ಪ್ರಯೋಗಮಾಡಿ ನೋಡೋಣ. ಅದೇನು
ಹುಸಿಹೋಗಲಿಕ್ಕಿಲ್ಲ." ಎಂದು ಮತ್ತೊಬ್ಬನು ಪ್ರೋತ್ಸಾಹಿಸಿದನು.
ಹಾಗೂ ಹೀಗೂ ಮಾಡಿ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ
ಬಂದರು. ಒಳಗೆ ಪ್ರವೇಶಮಾಡಲು ಸಹಸಾ ಯಾರಿಗೂ ಧೈರ್ಯವಿದ್ದಿಲ್ಲ.
ಅನುಕೂಲವೇನೆಂದರೆ ಎಲ್ಲರ ಮನೆಗಳ ಬಾಗಿಲಗಳೂ ತೆರೆದಿಟ್ಟಿದ್ದವು.
೪೭ -------------------------------------------------------------------------
ಹಣೆಯಿಕ್ಕಿ ನೋಡಲಿಕೃಂತೂ ಅವಕಾಶನಿದ್ದಿ ತು, ಧೈರ್ಯಸ್ಥನೊಬ್ಬನು ನೆಟ್ಟನೆ
ಒಳಹೊಕ್ಕು ಅಂಗಳದಲ್ಲಿಯೇ ಬಂದುಬಿಟ್ಟನು. ಅಂದರೂ ಪ್ರತೀಕಾರದ
ಲಕ್ಷಣಗಳು ತೋರಿಬರಲಿಲ್ಲ. ಮನೆಯೆಲ್ಲ ಉಡುಗಿ ಸಾರಿಸಿ ಸ್ವಚ್ಛವಾಗಿತ್ತು. ಆ
ಧೈರ್ಯಸ್ಥನಾದ ಪತಿಯು ಪಡಸಾಲೆಯಲ್ಲೆಲ್ಲ ಆಡ್ಡಾಡಿ "ಇಷ್ಟು ಭಾಗವಂತೂ
ನನ್ನ ಸ್ವಾಧೀನಕ್ಕೆ ಬಂದಿತೇ' ಎಂಬ ಸಂತೋಷದಿಂದ ನಡುಮನೆಯಲ್ಲಿ
ಹೊಕ್ಕು ನೋಡಿದನು. ಅಲ್ಲಿಯೂ ಸ್ವಚ್ಛತೆ ಸುವ್ಯವಸ್ಥೆಗಳು ಕಂಡವು.
ಅಷ್ಟರಲ್ಲಿ ಅವನ ಅರ್ಧಾಂಗಿಯು ಉಜ್ಜಿದ ಕೊಡದಲ್ಲಿ ಗುಂಡದ ಸವಿ
ನೀರು ತುಂಬಿಕೊಂಡು ಬಂದವಳು ಗಂಡನನ್ನು ಕಂಡು ಆಶ್ಚರ್ಯದಿಂದ
" ಓಹೋ! ನೀವೀಗಲೇ ಬಂದುಬಿಟ್ಟರೇನು? ಇಂದಿನ ರಾತ್ರಿ ನೀವು
ಬರುವದಿಲ್ಲೆ ಅದು ನಾನು ಖಂಡಿತವಾಗಿ ತಿಳಿದಿದ್ದೆನು. ಇಷ್ಟು. ದಿವಸ
ಸುಮನೆ ಕುಳಿತು ಮೈ ಮರಗಟ್ಟಿದಂತಾಗಿತ್ತು. ಇಂದು ಮೈತುಂಬ ದುಡಿತ
ವಾದ್ದರಿಂದ ಮನಸ್ಸಿಗೆ ಉಲ್ಲಾಸವಾಗಿದೆ. ನೀವೊಬ್ಬರೇ ಬಂದಿರೋ ಊರ
ಗಂಡಸರೆಲ್ಲರೂ ಬಂದರೋ ?"
"ಎಲ್ಲರೂ ಬಂದರು. ನಿಮ್ಮ ಸೇವೆಗೆ ಸಿದ್ಧರಾಗಿರಬೇಡವೆ?” ಎಂದು
ಗಂಡನು ನಗೆಮೊಗವನ್ನು ತಾಳಿ ಪ್ರಶ್ನಮಾಡಿದನು.
"ನಿಮ್ಮ ಸೇನೆಗೆ ನಾವು, ನಮ್ಮ ಸೇವೆಗೆ ನೀವು. ಎರಡೂ ಸೇವೆಗಳು
ಸಾಕುಬೇಕಾಗಿ ಹೋದವು. ಮೊನ್ನಿನ ಒಪ್ಪಂದವನ್ನು ತೆಗೆದುಹಾಕಿ
ರಾಜರ ವಿವಾಹಕ್ಕೆ ಮುಂಚಿತವಾಗಿದ್ದ ಸ್ಥಿತಿಯೇ ಇರತಕ್ಕದ್ದೆಂದು ನಾವು
ನಿರ್ಣಯಮಾಡಿದ್ದೇವೆ.”
"ಕೆಲ ಜನ ತರುಣಿಯರು ನಿಮ್ಮೀ ಮಾತಿಗೆ ಪ್ರತಿಕೂಲರಾಗಿದ್ದ
ರಲ್ಲವೆ? ”
"ಅಹುದು. ನವತರುಣಿಯರ ಹಿತಕ್ಕಾಗಿ, ಲಗ್ನವಾದಂದಿನಿಂದ ಒಂದು
ವರ್ಷದವರೆಗೆ ಮಾತ್ರ ಪತಿಯು ಒಪ್ಪಂದದ ಮೇರೆಗೆ ತನ್ನ ಅರ್ಥಾಂಗಿಯ
ಸ್ವಾಧೀನದಲ್ಲಿರತಕ್ಕವನು. "
ಈ ರೀತಿಯಾಗಿ ಪತಿಗಳಿಗೆ ಸ್ವಾತಂತ್ರ್ಯದ ( ಅಂಥ ಸರ್ವತಂತ್ರ
ಸ್ವಾತಂತ್ರ್ಯವಲ್ಲ) ಪ್ರಾಪ್ತಿಯಾದ ಬಳಿಕ ಮುತ್ತಿನಕೋಟೆಯ ರಾಜ್ಯಕ್ಕೆ
ಮತ್ತೆ ಜೀವನಕಳೆ ತುಂಬಿದಂತಾಯಿತು, ಹೆಂಡರ ಅನುಮೋದನ ದೊರೆ
೪೮----------------------------------------------------------------------------
ತದ್ದರಿಂದ ಗುರುಗಳು ಸಾಲೆಯ ಬಾಗಿಲವನ್ನು ತೆರದು ಮಕ್ಕಳಿಗೆ ಕಲಸ
ಲಾರಂಭಿಸಿದರು. ವ್ಯಾಪಾರಸ್ಥರೂ ಉದ್ಯಮಶೀಲರೂ ತಮ್ಮ ತಮ್ಮ
ಉದ್ಯೋಗಕ್ಕೆ ಹತ್ತಿದರು, ಹೊಲಗಳಲ್ಲಿ ಪೈರುಗಳು ಕಂಡವು. ಆಟದ
ಮನೆಗಳಲ್ಲಿ ತನನನನ ರಾಗಗಳೆದ್ದವು. ಹುಡುಗರು ಹಾಲು ಕುಡಿದು
ಗರಡೀಮನೆಗಳಲ್ಲಿ ಸಾಧಕಗಳನ್ನು ನಡಿಸಿದರು. ಪ್ರಧಾನನ ಚಿಂತೆ ಬಿಟ್ಟತು.
ಹೋದ ವರ್ಷ ಕಂದಾಯದ ಹಣದಲ್ಲಿ ಮೂರು ಕಾಸು ಕೂಡಾ ಬಂದಿದ್ದಿಲ್ಲ.
ನಿಂತ ಕಂದಾಯವೂ ನಡೆಯುವ ವರ್ಷದ ಕಂದಾಯವೂ ಕೂಡಿಯೇ ಈಗ
ಬೊಕ್ಕಸಕ್ಕೆ ಬಂದು ಮುಟ್ಟಿತು.
ಈ ರೀತಿಯಾಗಿ ಪುರುಷರಿಗೆ ಸ್ವಾತಂತ್ರ್ಯಪ್ರಾಪ್ತಿಯಾದರೂ ಹೆಂಡರ
ಈಪ್ಸಿಕವು ಸಾಧಿಸುವಷ್ಪೆಲ್ಲ ಸಾಧಿಸಿಯೇ ತೀರಿತು. ಒಪ್ಪಂದವು ಮುರಿದು
ಹೋಗಿದ್ದರೂ ತಮಗೆ ಪ್ರಾಪ್ತವಾದ ಸ್ವಾತಂತ್ರ್ಯದ ಉಪಯೋಗವನ್ನು
ಹೇಗೆ ಬೇಕಾದ ಹಾಗೆ ಪುರುಷರು ಮಾಡಿ ಕೊಳ್ಳಲು ಅಸಮರ್ಥರಾಗಿದ್ದರಿಂದ
ಅವರು ಅಂತರಂಗದ ಸಮಯದಿಂದ (ಕರಾಕದಿಂದ) ತಮ್ಮ ಸ್ವಾತಂತ್ರ್ಯ
ವನ್ನು ಅನೇಕಾಂಶಗಳಲ್ಲಿ ಹೆಂಡರ ಕಡೆಗೆ ಒಪ್ಬಿಸಿಬಿಟ್ಟರು. ಕೆಲವರು
ಬಹಿರಂಗದಲ್ಲಿ ಸ್ವತಂತ್ರರಾಗಿ ಕಂಡರೂ ಅಂತರಂಗದಲ್ಲಿ ಹೆಂಡರ ಅಧೀನರೇ.
ಕೆಲವರಂತೂ ಅಂತರಂಗ ಬಹಿರಂಗಗಳಲ್ಲಿ ಕೂಡಿಯೇ ಪರಾಧೀನರು.
ಪುರುಸರು ತಮ್ಮ ಸ್ವಾತಂತ್ರ್ಯವನ್ನು ಹೆಂಡರ ವಶಕ್ಕೆ ಕೊಡಲಾಗದೆಂದು
ರಾಜಶಾಸನವು ಮಾತ್ರ ಇದ್ದಿತು. ಆದರೇನು? ಗಂಡನು ತನ್ನ ಸ್ವಾತಂತ್ರ್ಯ
ವನ್ನು ಹೆಂಡತಿಗೆ ಕಾಗದ ಮಾಡಿ ಬರಕೊಡುತ್ತಿದ್ದನೆಲ್ಲಿ ? ರಾಜರಿಗೆ ತಿಳಿಯ
ಗೊಡದೆ ಒಳಗಿಂದೊಳಗೆ ಬಾಯಿ ಮಾತಿನಿಂದ ಸ್ವಾತಂತ್ರ್ಯವನ್ನು ಕಳಕೊಳ್ಳುವ
ಗಂಡಂದಿರಿಗೆ ರಾಜಶಾಸನವೇನು ಮಾಡುತ್ತಿತ್ತು? ಇಂದಿಗೆ ಮುತ್ತಿನ
ಕೋಟೆಯ ರಾಜ್ಯವು ಹಾಳಾಗಿ ಹೇಳಹೆಸರಿಲ್ಲದೆ ಹೋಗಿದ್ದರೂ ಪುರುಷರು
ಆ ಕಾಲದಲ್ಲಿ ಮೂರ್ಖತನದಿಂದ ಕಳಕೊಂಡ ಸಾತಂತ್ರ್ಯವು ಅವರಿಗೆ
ಸರ್ವಧಾ ಮರಳಿ ಬರಲಿಲ್ಲ. ಈಗಾದರೂ ಲೇಖನದಿಂದ ಪುರುಷನಗೆ ತನ್ನ
ಸ್ವಾತಂತ್ರ್ಯ ವನ್ನು ಮಾರಿಕೊಳ್ಳಲಿಕ್ಕೆ ಬಾರದಿದ್ದರೂ ಅನೇಕರು ಕಳವಿನಿಂದ
ಅದನ್ನು ಮಾರಿಕೊಳ್ಳುತ್ತಲೇ ಇದ್ದಾರೆ.
==================================
೪೯-----------------------------------------------------------------------------
ಪಂಡಿತ ಬೃಹಲ್ಲಾಂಗೂಲವ್ಯಾಘ್ರ
ಇತ್ತಿತ್ತಲಾಗಿ ನಮ್ಮ ಭರತಖಂಡದಲ್ಲಿ ಅನೇಕ ಪಂಥದ ಜ್ಞಾತಿಯವರು
ಸಭೆ, ಮಹಾಸಭೆ, ಪರಿಷತ್ತು, ಸಮ್ಮೇಲನಗಳನ್ನು ಸ್ಥಾಪಿಸಿ ತಮ್ಮ ತಮ್ಮ
ಉನ್ನತಿಯನ್ನು ಮಾಡಿಕೊಳ್ಳುತ್ತಿರುವದನ್ನು ಕಂಡು ಗಂಗಾಸಾಗರ ಸಂಗಮದ
ಬಳಿಯಲ್ಲಿರುವ ಸುಂದರಬನವೆಂಬ ಮಹಾರಣ್ಯವಾಸಿಗಳಾದ ವ್ಯಾಘ್ರಜಾತಿಯ
ಮಹಾಜನಗಳೆಲ್ಲ ಕೂಡಿ ತಮ್ಮ ವರ್ಗದ ಉನ್ನತಿಯ ಬಗ್ಗೆ ಒಂದು ಮಹಾ
ಪರಿಷತ್ತನ್ನು ಸ್ಥಾಪಿಸಬೇಕೆಂದು ಯೋಚಿಸಿದರು. ಪುಷ್ಕವದಿಯ ಕಡುತರ
ವಾದ ಅಮಾವಾಸ್ಯೆಯ ರಾತ್ರಿಯ ದ್ವಿತೀಯ ಯಾಮದಲ್ಲಿ ಸುಂದರಬನದ
ಅತಿನಿಬಿಡವಾದ ಅರಣ್ಯದ ಮಧ್ಯವದಲ್ಲಿರುವದೊಂದು ರಮಣೀಯವಾದ
ದಿನ್ನೆಯ ಮೇಲೆ ಸಭೆ ಕೂಡತಕ್ಕದ್ದಾಗಿತ್ತು. ವ್ಯಾಘ್ರ, ಮಹಾವ್ಯಾಘ್ರ,
ವ್ಯಾಘ್ರರಾಜ, ವ್ಯಾಘ್ರೇಶ್ವರಾದಿ ಮಹಾಪ್ರಭೃತಿಗಳೆಲ್ಲರೂ ಸಕುಟುಂಬ
ಸಪರವಾರರಾಗಿ ಮೆಲ್ಲಮೆಲ್ಲನೆ ಸಭಾಸ್ಥಾನಕ್ಕೆ ದಯಮಾಡುವವರಾದರು.
ಸಭಿಕರೆಲ್ಲರ ದೈದೀಪ್ಯಮಾನವಾದ ನೇತ್ರಗಳಿಂದ ಉಕ್ಕುತ್ತಿರುವ ತೇಜಸ್ಸಿನಿಂದ
ಆ ಸಭಾಸ್ಥಾನವೆಲ್ಲ ಪ್ರಕಾಶವನ್ನು ಹೊಂದಿ ಜಗಜಗಿಸುತ್ತಿತ್ತು. ತಾರ
ತಮ್ಯಾನುಸಾರವಾಗಿ ಸಭಿಕರೆಲ್ಲರೂ ಸಾಲುಸಾಲಾಗಿ ದಿನ್ನೆಯ ಸುತ್ತಲೂ ಕಣ
ಕಟ್ಟಿ ಕುಳಿತುಕೊಂಡರು. ಬರುವವರೆಲ್ಲರೂ ಬಂದಬಳಿಕ, ಶ್ರೀ, ಅಮಿತೋದರ
ಶಾರ್ದೂಲರೆಂಬ ವಯೋವೃದ್ಧರು ಸಭೆಗೆ ಅಧ್ಯಕ್ಷರಾಗಬೇಕೆಂದು ಒಬ್ಬರು
ಸೂಚಿಸಿದರು; ಆನೇಕರು ಆ ಸೂಚನೆಗೆ ಆನುಮೋದನವನ್ನು ಕೊಟ್ಟ
ಬಳಿಕ ಸರ್ವಾನುಮತದಿಂದ ಶ್ರೀ. ಅಮಿತೋದರ ಧೊರೆಗಳು ಅಧ್ಯಕ್ಷರಾದರು.
ಮಾನನೀಯರಾದ ಅಧ್ಯಕ್ಷರು ತಮ್ಮ ಭವ್ಯವಾದ ಬಾಲವನ್ನು ಭರದಿಂದೆ
ಬೀಸುತ್ತೆ ಒಳ್ಳೇ ಆಢ್ಯತೆಯಿಂದ ದಿನ್ನೆಯ ತುಟ್ಟಿತುದಿಯಲ್ಲಿ ತಮಗಾಗಿ
ಮಾಡಿಟ್ಟ ಮಹಾಸನದಲ್ಲಿ ವಿರಾಜಮಾನರಾಗಿ ಸಭೆಯ ಉದ್ದೇಶವನ್ನು
ಘಡಘಡನೆ ಗರ್ಜಿಸುತ್ತಿರುವ ವಿಶದವಾದ ವಾಣಿಯಿಂದ ವಿವರಿಸಲಾರಂಭಿ
ಸಿದ್ದಿಂತೆನೆ :
" ವ್ಯಾಘ್ರ ಸುಂದರಿಯರೆ, ಸತ್ವಶಾಲಿಗಳಾದ ನನ್ನ ಬಾಂಧವರೆ, ನಮ್ಮ
ಜ್ಞಾತಿಯವರ ಇತಿಹಾಸದಲ್ಲಿ ಇಂದಿನ ದಿವಸವು ಚಿರಸ್ಮರಣೀಯವಾಗ
೫೦ -------------------------------------------------------------------------
ತಕ್ಕಂಥದು. ಪರಾಕ್ರಮಶಾಲಿಗಳೂ ಮಹಾವಂಶಸಂಭವರೂ ವನೌಕಸರೂ
ಕೇವಲ ವಿಶುದ್ಧವಾದ ಶೋಣಿತಾಹಾರಿಗಳೂ ಆಗಿರುವ ಜ್ಞಾತಿ ಬಾಂಧವರು
ಆಸ್ಥೆಯಿಂದ ಇಲ್ಲಿಗೆ ದಯಮಾಡಿ ನಮ್ಮ ಜ್ಞಾತಿಯ ಉದ್ಭರಣಾರ್ಥಪಾಗಿ
ಯತ್ನಮಾಡುತ್ತಿರುವದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ.
ನಿಂದಕರೂ ಮತ್ಸರಿಗಳೂ ಆಗಿರುವ ಬೇರೆ ಜಾತಿಯ ಪ್ರಾಣಿಗಳು ಹೇಳುವ
ದೇನಂದರೆ ವ್ಯಾಘ್ರರು ವಿಕತ್ರರಾಗಿರದೆ ತಮ್ಮ ತಮ್ಮಷ್ಟಕ್ಕೆ ಜೀಕಿ ಬೇರೆಯಾಗಿ
ಆಡವಿಯಲ್ಲಿ ಸಂಚರಿಸಿ ತಮ್ಮ ತಮ್ಮ ಗುಹೆಗಳಲ್ಲಿ ಏಕಾಕಿಗಳಾಗಿರುತ್ತಾರೆ.
ಬಂಧುಪ್ರೇಮದಿಂದ ಮಿಲಿತರಾಗಿ ಏಕಮತದಿಂದ ಕೆಲಸ ಮಾಡುವದು
ವ್ಯಾಘ್ರರಿಗೆ ಗೊತ್ತಿಲ್ಲ. ಈ ನಿಂದಾತ್ಮಕವಾದ ವಾದವನ್ನು ಖಂಡಿಸುವದೇ
ನಮ್ಮೀ ಮಹಾಪರಿಷತ್ತಿನ ಮುಖ್ಯವಾದ ಉದ್ದೇಶಗಳಲ್ಲಿ ಒಂದಾಗಿದೆ. ನಮ್ಮ
ಜ್ಞಾತಿಯ ಸುಸಂಸ್ಕೃತಿಯ ಕೆಲಸವು ಬಹು ಜಾಗೃತೆಯಿಂದ ನಡೆದಿದ್ದು
ನಾವಿನ್ನು ಮುಂದೆಮುಂದಕ್ಕೆ ಹೆಜ್ಜೆಗಳನ್ನಿಕ್ಕುತ್ತೆ ಹೋಗಿ ಅಲ್ಪ ಕಾಲದಲ್ಲಿಯೇ
ಜಗತ್ತಿನಲ್ಲಿಯ ಸಕಲ ಪ್ರಾಣಿವರ್ಗಗಳಿಗಿಂತಲೂ ನಾವೇ ವಿದ್ಯೆಯಲ್ಲಿಯೂ
ಸುಸಂಸ್ಕೃತಿಯಲ್ಲಿಯೂ ಸೌಜನ್ಯದಲ್ಲಿಯೂ ಅಗ್ರಗಣ್ಯರಾಗತಕ್ಕವರು, ಇನ್ನು
ಇದೇ ರೀತಿಯಾಗಿ ಕಾಲಕಾಲಕ್ಕೆ ನಾವೆಲ್ಲರೂ ಕಲೆತು ಸಮಾಲೋಚನ
ಗೈಯುತ್ತೆ ನಡೆದರೆ, ಸುಖಶಾಂತಿಗಳ ಹೆಚ್ಚಳವು ನೆಲೆಗೊಂಡಿರುವಾಗ, ನಾವು
ಅನ್ಯಪ್ರಾಣಿಗಳ ಶರೀರಬಂಧನವನ್ನು ಬಿಡಿಸಿ ನಮ್ಮ ಜಠರಾಗ್ನಿಯನ್ನು
ನಿರ್ವಿಘ್ನವಾಗಿ ತೃಪ್ತಿ ಗೊಳಿಸಬಹುದು, (ಸಾಧು! ಸಾಧು! ಎಂದು
ಸಭಿಕರೆಲ್ಲರು ತಮ್ಮ ಪುಚ್ಛಗಳನ್ನು ಆರ್ಭಟೆಯಿಂದ ನೆಲಕ್ಕಪ್ಪಳಿಸಿ ತುಮುಲ
ವಾದ ನಿನಾದವನ್ನೆಬ್ಬಿಸಿದರು.) ಬಾಂಧವರೆ, ಇನ್ನು ಪ್ರಸ್ತುತವನ್ನು ಕುರಿತು
ನಾಲ್ಕುಮಾತು ಹೇಳುತ್ತೇನೆ. ಇತ್ತಿತ್ತಲಾಗಿ ಯಾವ ನಿಮಿತ್ತವಾಗಿಯೋ
ಏನೋ ನಮ್ಮಲ್ಲಿ ನಾಗರಿಕತೆಯು ಕೊಂಚ ಕಡಿಮೆಯಾಗುತ್ತೆ ಬಂದಿರುವ
ದೆಂದು ಹೇಳಲು ನನಗೆ ವಿಷಾದವಾಗುತ್ತದೆ. ಈ ಸಂಗತಿಯನ್ನು ನಾವು
ಒಪ್ಪಿಕೊಳ್ಳಲೇಬೇಕು. ಆದರೆ ಈ ಕೊರತೆಯನ್ನು ನಾವು ನಿರಾಯಾಸವಾಗಿ
ತೆಗೆದುಹಾಕಬಲ್ಲೆವು. ಇತ್ತಿತ್ತಲಾಗಿ ಹುಟ್ಟಿದ ಹುಳ ಮೊದಲುಮಾಡಿ
ಕೊಂಡು ಸನುಸ್ತಪ್ರಾಣಿಗಳೂ ವಿದ್ಯಾಸಂಸ್ಕಾರವನ್ನು ಹೊಂದಿವೆ. ನಾವೇಕೆ
ಹಿಂದುಳಿಯಬೇಕು? ನಮ್ಮಲ್ಲಿ ಜಿಜ್ಞಾಸೆಯುಂಟಾದದ್ದೊಂದು ಸುಚಿಹ್ನವೇ.
೫೧ -----------------------------------------------------------------------
ಜಿಜ್ಞಾಸೆಯುಂಟಾದ ಮೇಲೆ ಗಳಿಕೆಯು ಮಾರಿದ ಮಾತಲ್ಲ. ಯಾವ
ಸಾಫನದಿಂದ ನಾವು ಸುಶಿಕ್ರಿಶರಾಗಬಹುಜಿಂದು ಆರೋಚಿಸುವದಕ್ಕಾಗಿಯೇ
ನಮ್ಮಾ ಪರಿಷತ್ತು ಕೂಡಿದೆ. ಇನ್ನು ಸಭೆಯ ಕೆಸಲವು ಪ್ರಾರಂಭವಾಗ
ಬಹುದು. ಮಾತಾಡಲಿಚ್ಛಿಸುವ ಮಹನೀಯರು ಮಾತಾಡಲಿ. ನಾನಿನ್ನು
ನನ್ನ ಸ್ಥಳದಲ್ಲಿ ಕುಳಿತುಕೊಳ್ಳುತ್ತೇನೆ. ”
ದಿಗ್ಬರ್ಶನಾತ್ಮಕವಾಗಿರುವ ಅಧ್ಯಕ್ಷರ ಭಾಷಣವನ್ನು ಕೇಳಿ ಸಭಿಕ
ರೆಲ್ಲರೂ ಸಂತೋಷಗೊಂಡು ಘುಡಿಘುಡಿಸಿ ಗರ್ಜಿಸಿ ಅವರನ್ನು ಅಭಿನಂದಿ
ಸಿದರು. ಬಳಿಕ ಅನೇಕರು ಅನೇಕವಾದ ಸೂಚನೆಗಳನ್ನು ತಂದು ಅವುಗಳ
ಸಮರ್ಥನಕ್ಕಾಗಿ ದೊಡ್ಡ ದೊಡ್ಡ ಅನುವಾದಗಳನ್ನು ಮಾಡಿದರು. ಭಾಷಣ
ಗಳು ವ್ಯಾಕರಣಶುದ್ದವಾಗಿಯೂ ಅಲಂಕಾರಿಕವಾಗಿಯೂ ಆಗಿದ್ದರೂ
ವ್ಯಾಖ್ಯಾತೃಗಳ ಘೋರ ಗಂಭೀರವಾದ ನಿಃಸ್ವನಕ್ಕಾಗಿ ಎಣ್ದೆಸೆಗಳೆಲ್ಲ
ಧಿಮ್ಮಿಟ್ಟು ಹೋದವು. ಸಭೆಯ ಮುಖ್ಯ ಕಾರ್ಯವೆಲ್ಲ ಮುಗಿದ ಬಳಿಕ
ಅಧ್ಯಕ್ಷರು ಸಭಾಜನರನ್ನು ಕುರಿತು " ಮಹನೀಯರೆ, ನಮ್ಮ ವ್ಯಾಘ್ರ
ಕುಲಕ್ಕೆ ವಿಭೂಷಣರಾದ ಶ್ರೀಮತ್ ಪಂಡಿತ ಬೃಹಲ್ಲಾಂಗೂಲವ್ಯಾಘ್ರ
ಎಂಬವರು ' ಮನುಷ್ಯನ ಸ್ವಭಾವ ದಿಗ್ನರ್ಶನ'ವೆಂಬ ವಿಷಯದ ಮೇಲೆ
ಮಹತ್ವವುಳ್ಳದ್ದೊಂದು ನಿಬಂಧವನ್ನು ಓದತಕ್ಕವರಾಗಿರುತ್ತಾರೆ; ಎಲ್ಲರೂ
ಸಾವಧಾನಚಿತ್ತರಾಗಿ ಕೇಳಬೇಕು.”
ಪಕ್ವಾನ್ನದ ಹೆಸರು ಕೇಳುತ್ತಲೇ ಹೊಟ್ಟೆ ಬಾಕರ ಬಾಯಿಗೆ ನೀರು
ಬರುವಂತೆ " ಮನುಷ್ಯ" ನೆಂಬ ಶಬ್ದವನ್ನು ಕೇಳಿದಾಕ್ಷಣವೆ ತರುಣರಾದ
ವ್ಯಾಫ್ರರಿಗೆ ಕ್ಷುಥೆಯ ಬಾಧೆಯಾದಂತಾಯಿತು. ಆದರೆ ಪರಮಾನ್ನವಿಲ್ಲದೆ
ಬರಿಗೈಯನ್ನು ಸುರಿದಂತೆ ಮಾಡಿದರೆ ಪ್ರಯೋಜನವಿಲ್ಲೆಂದು ನೆನೆದು ಆ
ಜನರು ಸಂಯಮಿಗಳಾಗಿ ಸಮಾಧಾನ ತಳೆದರು. ವ್ಯಾಖ್ಯಾತೃಗಳಾದ
ಪಂಡಿತರು ಅಧ್ಯಕ್ಷರ ಸೂಚನೆಯ ಮೇರಿಗೆ ಎದ್ದುನಿಂತು ಆ ವನೋದ್ದೇಶ
ದಲ್ಲಿಯ ಮೊಲ ಹುಲ್ಲೆಗಳ ಕಾಲುಗಳಲ್ಲಿಯ ನಾಡಿಗಳು ಸತ್ತುಹೋಗುವಂಥ
ರೌದ್ರವಾದ ವಾಣಿಯಿಂದೆ ಉಪಕ್ರಮಿಸಿದ್ದೇನಂದರೆ : " ಅಧ್ಯಕ್ಷರೆ,
ವ್ಯಾಘ್ರಸೀಮಂತಿನಿಯರೆ, ಮಹನೀಯರಾದ ಮೃಗವೈರಿಗಳೇ, ದಯವಿಟ್ಟು
ಕೇಳಿರಿ,
೫೨ --------------------------------------------------------------------------
" ಮನುಷ್ಯರೆಂದರೆ ಒಂದು ಪ್ರಕಾರದ ದ್ವಿಪಾದಗಳು. ಅವರಿಗೆ
ರಿಕ್ಕೆಗಳಿದ್ದರೆ ಹದ್ದುಕಾಗೆಗಳಲ್ಲಿಯೇ ಅವರ ಗಣನೆಯಾಗುತ್ತಿತ್ತು; ಆದರೆ
ಅವರು ನಿಜವಾಗಿ ಪಕ್ಷಿಗಳಲ್ಲ. ಹೋಲಿಕೆ ನೋಡಿದರೆ ಅವರು ಚತುಷ್ಪಾದ
ಪ್ರಾಣಿಗಳ ವರ್ಗಕ್ಕೆ ಸೇರುತ್ತಾರೆ. ಚತುಷ್ಪಾದವಾದ ಪಶುಗಳ ಅಂದವೂ
ಬಲವೂ ಮನುಷ್ಯರಿಗೆಷ್ಟುಮಾತ್ರವೂ ಇಲ್ಲವೆಂದು ಅವರನ್ನು ಪಕ್ಷಿಗಳಲ್ಲಿ
ಎಳೆಯುವದು ಅನ್ಯಾಯವು !
"ಮನುಷ್ಯರಿಗೂ ಚತುಷ್ಬಾದ ಪಶುಗಳಾದ ಮಂಗಗಳಿಗೂ ಸಾಮ್ಯತೆ
ಬಹಳ ! ಆದರೆ ಅವನಿಗೆ ಬಾಲವಿಲ್ಲ. ಬೇಡ. ಉತ್ಕ್ರಾಂತಿಯ ತತ್ವದಂತೆ
ಪ್ರಾಣಿಗಳು ಕ್ರಮೇಣ ತಮ್ಮಲ್ಲಿ ಕೊರತೆಯಾಗಿರುವ ಅವಯವಗಳನ್ನು
ಪಡಕೊಳ್ಳುವಂತೆ ಮನುಷ್ಯನಿಗೆ ಕಾಲಾನುಸಾರವಾಗಿ ಬಾಲವು ಹುಟ್ಟಿ
ಅವನು ಊರ್ಜಿತವಾದ ದಶೆಯನ್ನು ಹೊಂದಬಾರಬೇಕೆ? ಬರಬರುತ್ತೆ
ಬಾಲದ ಲಾಭವನ್ನು ಹೊಂದಿ ಮನುಷ್ಯ ನು ಅನ್ಯೂನವಾದ ಮರ್ಕಟರೂಪ
ವನ್ನು ತಾಳಿ ವಿರಾಜಿಸಬಹುದೆಂದು ನಾವು ಆಶೆಯನ್ನು ತಳೆದರೆ ಅದು
ಶಶಿವಿಷಾಣಸಮವಾದ ಮಾತೆಂದು ಯಾರೂತಿಳಿಯತಕ್ಕದ್ಧಲ್ಲ. ' ಮನುಷ್ಯನ
ದೇಹವು ರುಚಿಕರವಾಗಿಯೂ ಪುಸ್ಟಿ ಕರವಾಗಿಯೂ ಪಾಚಕವಾಗಿಯೂ ಇರುವ
ಪಕ್ವಾನ್ನ ಸಮವಾದ ಆಹಾರವು ನಮಗಾಗಿರುವದೆಂಬದನ್ನು ನೀವೆಲ್ಲರೂ
ಅರಿಯದೆ ಇಲ್ಲ. ( ಈ ಮಾತು ಕೇಳಿ ಶ್ರೋತೃಗಳ ಬಾಯಿಗೆ ನೀರುಬಂದು
ಅವರೆಲ್ಲರೂ ಲಚಲಚನೆ ಬಾಯಿ ಬಡಿಯಲಾರಂಭಿಸಿದರು. ) ಅವರನ್ನು
ಬೇಟೆಯಾಡಿ ಹಿಡಿತರುವದಾದರೂ ಸತ್ವಶಾಲಿಗಳಾದ ನಮಗೆ ಅತಿ ಸುಲಭ
ವಾದ ಮಾತೆಂಬದನ್ನಾದರೂ ನೀವು ಬಲ್ಲಿರಿ. ಚಿಗರೆಗಳಂತೆ ಅವರು ಬೇಗನೆ
ಓಡಿಹೋಗಲಾರರು. ಕೋಣಗಳಂತೆ ಅವರಿಗೆ ಕೋಡುಗಳಿಲ್ಲ; ಇದ್ದದ್ದಾದರೂ
ಇರಿಯುವ ಶಕ್ತಿ ಅವರಿಗೆಲ್ಲಿ? ತಿಳಿದು ನೋಡಿದರೆ ಸೃಷ್ಟಿಕರ್ತನು ಉದಾರ
ನಾಗಿ ವ್ಯಾಘ್ರ ಕುಲಕ್ಕೆ ಆಯತ್ತವಾಗಿ ಭಕ್ಷ್ಯವಿರಲೆಂದೆಣಿಸಿ ಮನುಷ್ಯನನ್ನು
ನಿರ್ಮಿಸಿರಲಿಕ್ಕೆ ಸಾಕು ! ಹೀಗೆಂದೇ ದೇವರು ಮನುಷ್ಯನನ್ನು ಅಷ್ಟು
ಆಜಾಗಲನೆನ್ನಾಗಿ ಮಾಡಿದ್ದಾನೆ. ನಮ್ಮ ಆಹಾರಕ್ಕಾ ಗೆ ಮನುಷ್ಯನ
ನಿರ್ಮಾಣವಾಗದಿದ್ದಕೆ ಅವನಂಥ ಬಲಹೀನನೂ ಜಗತ್ತಿನಲ್ಲಿ ನಡೆದಿರುವ
ಹೋರಾಟಗಳಲ್ಲಿ ಸರ್ವಥಾ ಸೇರಲರಿಯದವನೂ ಆದ ಪ್ರಾಣಿಯ ಜನ್ಮವೇ
೫೩ ----------------------------------------------------------------------
ತಕ್ಕೆ? ಮನುಷ್ಯನು ನಮಗೆ ಇಷ್ಟವಾದ ಆಹಾರವೆಂದು ನಾವೆಲ್ಲರೂ
ವಾದವಿಲ್ಲದೆ ಒಪ್ಪಿಕೊಳ್ಳುವದು ಸರಿಯಲ್ಲವೆ? ಅವನ ಸುಕೋಮಲವಾದ
ಮಾಂಸಕ್ಕಾಗಿಯೂ ಇನ್ನೂ ಅನೇಕವಾದ ವಿಚಾರಗಳ ಮೂಲಕವಾಗಿಯೂ
ಅವನಲ್ಲಿ ನಮ್ಮೆಲ್ಲರಿಗೆ ಲಾಲಸೆ ಹೆಚ್ಚು. ಮತ್ತೊಂದು ಚಮತ್ಕಾರವೆನಂದರೆ,
ಮನುಷ್ಯರು ನಮಲ್ಲಿ ನಿಸ್ಸೀಮವಾದ ಆದರವುಳ್ಳವರಾಗಿರುವದಾದರೂ
ನಿಸ್ಸಂದೇಹವಾದ ಸಂಗತಿಯು. ನಾನು ಹೇಳುವದು ಯಥಾರ್ಥವೋ ಎಂದು
ಇಲ್ಲಿ ನೆರೆದ ಸಭ್ಯಗೃಹಸ್ಥ ರಲ್ಲಿ ಯಾರಾದರೂ ಸಂಶಯಪಡಲಾಗದು.
ಯಾಕೆಂದರೆ ನಾನು ಈ ಮಾತಿನ ಬಗ್ಗೆ ಸ್ವತಃ ಅನುಭವವನ್ನು ತೆಗೆದು
ಕೊಂಡಿದ್ದೇನೆ. ಈ ಯಾಮಿನೀ ಕಾಲದಲ್ಲಿ ಇಲ್ಲಿ ನೆರೆದ ಮಹಾತ್ಮರಲ್ಲಿ
ಒಬ್ಬರಾದರೂ ಈ ವಿಷಯದ ಚಿಕಿತ್ಸೆಗಾಗಿ ನನ್ನಷ್ಟು ದೇಶ ದೇಶ ಸಂಚಾರ
ಮಾಡಿದವರಿರಲಿಕ್ಕಿಲ್ಲವೆಂದು ಹೇಳಿದರೆ ನನ್ನನ್ನು ನೀವು ವಾತುಲನಾದ
ಜಲ್ಬಕನೆಂದು ಕರೆಯುವಿರಿ. ಆದರೆ ವಸ್ತುಸ್ಥಿತಿ ಹೀಗಿರುವದು. ನಾನು
ಸುಳ್ಳು ಹೇಳುವದಿಲ್ಲ.
" ಸಂಚಾರ ಮಾಡುತ್ತೆ ಮಾಡುತ್ತೆ, ಸತ್ವಶಾಲಿಗಳಾದ ನಮ್ಮ ಕುಲ
ದವರು ಮಾಡಿಕೊಂಡಿರುವ ವಾಸಸ್ಥಾನವಾದ, ಸುಂದರಬನದ ಉತ್ತರ
ದಿಗ್ಭಾಗದಲ್ಲಿ ಅಡ್ಡಾಡುತ್ತಿರುವಾಗ, ಆಕಳು, ಮನುಷ್ಯ, ಕುರಿ ಮುಂತಾದ
ನಿರ್ಜೀವ ನಿಸ್ಸತ್ವವಾದ ಪ್ರಾಣಿಗಳಿದ್ದುಕೊಂಡಿರುವದೊಂದು ಪ್ರದೇಶಕ್ಕೆ
ಬಂದೆನು. ಅಲ್ಲಿಯ ಜನರು ಎರಡು ಬಣ್ಣದವರು. ಕರೀ ಮನುಷ್ಯರೂ ಬಿಳೀ
ಮನುಷ್ಯರೂ. ಅಲ್ಲಿ ನಾನೊಂದು ಕಾರ್ಯವಿಶೇಷಕ್ಕಾಗಿ ಹೋಗಿದ್ದೆನು. "
ಆಗ ಮಹಾದಂಷ್ಟ್ರನೆಂಬ ತರುಣ ವ್ಯಾಫ್ರುನು " ಕಾರ್ಯವಿಶೇಷ
ವೆಂದರೇನು, ಎಂಬುದನ್ನು ನಮ್ಮ ಪಂಡಿತರಾದ ವ್ಯಾಖ್ಯಾತೃಗಳನ್ನು ನಾನು
ಕೇಳಬಹುದಷ್ಟೆ ? ' ಎಂದು ಕೇಳಲೋ ಬೇಡವೋ ಎಂದು ಹೆದರುತ್ತೆ
ಕೇಳಿದನು.
ವ್ಯಾಖ್ಯಾನಕಾರರು " ಕಾರ್ಯವಿಶೇಷವೆಂದರೆ ಭಕ್ಷ್ಯಾನ್ವೇಷಣವೇ
ಹೊರತಾಗಿ ಮತ್ತೊಂದಿಲ್ಲ. ಭಕ್ಷ್ಯಾನ್ವೇಷಣವೆಂದು ಸ್ಪಷ್ಟವಾಗಿ ಹೇಳುವದು
ಗೌಣವೆಂದೆಣಿಸಿ ಅದಕ್ಕೆ ಕಾರ್ಯವಿಶೇಷನೆಂಬ ಗೌರವದ ಹೆಸರಿಟ್ಟಿದ್ದಾರೆ.
ಸಾರ್ವತ್ರಿಕವಾಗಿರುವ ಈ ಅವಶ್ಯವಾದ ಉದರಂಭರಣೋದ್ಯಮಕ್ಕೆ ಎಲ್ಲ
೫೪ ---------------------------------------------------------------------------
ಕಾಲದಲ್ಲಿಯೂ "ಕಾರ್ಯವಿಶೇಷ'' ವೆಂಬ ಅಢ್ಯತೆಯ ಹೆಸರನ್ನು ಕೊಡುವದು
ಸಮರ್ಪಕವಾದದ್ದಲ್ಲ. ಮಹಾತ್ಮರೂ ಪ್ರತಿಷ್ಠಿತರೆಂದೆನ್ನಿಸಿಕೊಳ್ಳುವವರೂ
ಮಾಡುವ ಕೆಲಸಕ್ಕೆ ಕಾರ್ಯವಿಶೇಷವೆಂಬ ಉದಾತ್ತವಾದವಾದ ಹೆಸರು. ಬಡವರೂ
ಕೀಳರೂ ಮಾಡಿಕೊಳ್ಳುವ ಹೊಟ್ಟೆಯ ವ್ಯವಸಾಯಕ್ಕೆ ಕಳ್ಳತನವೆಂದೂ
ದಾಸ್ಕವೆಂದೂ ಭಿಕ್ಕೆಯೆಂದೂ ಕರೆಯುತ್ತಾರೆ. ಹೀನಸತ್ವನು ಮಾಡಿದ ಕೆಲ
ವೊಂದು ಕೆಲಸಕ್ಕೆ ' ತುಡುಗು' ಎಂಬ ನಿಂದ್ಯವಾದ ಹೆಸರು. ಅದನ್ನೇ ಒಬ್ಬ
ಬಲಿಷ್ಕನು ಒತ್ತಾಯದಿಂದ ಮಾಡಿದರೆ ಅದಕ್ಕೆ ಸುಲಿಗೆ? ಎಂದೆನ್ನುತ್ತಾರೆ.
ಇಂಥ ಬಲಿಷ್ಠನಿಗಾದರೂ ತಪ್ಪದೆ ಸುಲಿಗೆಗಾರನೆಂದು ಹೇಳಕೂಡದು,
ಒಮ್ಮೊಮ್ಮೆ ಅವನಿಗೆ ವೀರನೆಂದು ಹೇಳಬೇಕಾಗುತ್ತದೆ, ಸುಲಿಗೆಗಾರನಿಗೆ
ಶಿಕ್ಷೆ ಮಾಡುವದು ಸಾಧ್ಯವಿದ್ದಾಗ ಮಾತ್ರ ಅವನ ಕಂಸ ಕ್ರೈ ಕಳ್ಳತನವೆನ್ನ
ಬೇಕು; ಇಲ್ಲದಿದ್ದರೆ ಆದು ಪರಾಕ್ರಮೇ ಅಲ್ಲವೆ? ಈ ಸೂಕ್ತವಾದ ಭೇದ
ಗಳನ್ನು ನೀವೆಲ್ಲರೂ ಸುಧಾರಿಸಿದ ಜನರೊಡನೆ ಸಂಪರ್ಕವನ್ನಿಟ್ಟಿರುವಾಗ
ಚನ್ನಾಗಿ ಲಕ್ಷ್ಯದಸಿಟ್ಟು ಕೊಳ್ಳಬೇಕೆಂದು ನಾನು ಕೋರುತ್ತೆ ನೆ, ಇಲ್ಲದಿದ್ದರೆ
ನೀವು ಪ್ರಸಂಗ ಅಪ್ರಸಂಗಗಳಲ್ಲಿ ಮೇಲ್ಕಂಡ ಶಬ್ದಗಳ ಉಪಯೋಗವನ್ನು
ವಿಮರ್ಶಿಸದೆ ಮಾಡಿದರೆ ಜನರು ನಿಮಗೆ ಮೂಢರೂ ಅಸಂಸ್ಕೃತರೂ ಎಂದು
ಹೆಸರಿಡುವರು, ವಾಸ್ತವವಾಗಿ ವಿಚಾರ ಮಾಡಿದರೆ ಈ ಶಬ್ದಭೇದಗಳಲ್ಲಿ
ಏನೂ ಅರ್ಥವಿಲ್ಲ. ಎಲ್ಲರು ಮಾಡುವದು ಒಂದೇ. ಉದರಂಭರಣವು!
"ಇರಲಿ ನನ್ನ ವೃತ್ತಾಂತವನ್ನು ಮುಂದೆ ಸಾಗಿಸುವೆನು. ಏನು
ಹೇಳುತ್ತಿದ್ದೆನು? ಹಾಂ, ಮನುಷ್ಯರು ಹುಲಿಗಳಲ್ಲಿ ಭಕ್ತಿಯುಳ್ಳವರಾಗಿರು
ತ್ತಾರೆ, .ಆಗಲೆ ಉಪಕ್ರಮಿಸಿದ ಮೇರೆಗೆ ನಾನೊಂದು ದಿವಸ ಜನರ ವಸತಿ
ಯುಳ್ಳ ಭಾಗದಲ್ಲಿ ಕಾರ್ಯವಿಶೇಷಕ್ಕಾಗಿ ಹೊಂಟಿನು, ಕೆಲವು ಸಂವತ್ಸರ
ಗಳಾಚೆಗೆ ಸುಂದರಬನದಲ್ಲಿ ನೌಕೋದ್ಯಮ ಸಂಘವೆಂಬ ವಾಣಿಜ್ಯ ಸಂಘವು
ಸ್ಫಾಪಿಸಲ್ಪಟ್ಟಿತ್ತೆಂಬದನ್ನು ನೀವೆಲ್ಲರೂ ಅರಿತೇ ಇರುವಿರಿ. ''
ಆಗ ಆ ಮಹಾದಂಷ್ಟ್ರನೆಂಬ ಪ್ರಚ್ಛಕನು ಮತ್ತೆ ಎದ್ದು ನಿಂತು
" ನೌಕೋದ್ಯಮ ಸಂಘವೆಂದರೆ ಎಂಥ ಸೋಜಿಗವಾದ ಪ್ರಾಣಿಯದು ? "
ಎಂದು ಕೇಳಿದನು.
"" ಅದೆಂಥ ಪ್ರಾಣಿಯೆಂಬದರ ಜ್ಞಾನವು ನನಗೆ ಚನ್ನಾಗಿ ಇದೆ ಎಂದು
೫೫ -----------------------------------------------------------------------
ನಾನು ಸರ್ವಥಾ ಹೇಳಲಾರೆನು. ನಾನು ಅದರ ಬಹಿರಂಗ ಸ್ವರೂಪವನ್ನು
ನೋಡಿದವನಲ್ಲ. ಅದು ಆವ ವರ್ಗದ ಪ್ರಾಣಿಯೆಂಬದನ್ನು ನಾನು ವಿಚಾರಿಸಿ
ಕೇಳಲಿಲ್ಲ. ಅದನ್ನು ಮನುಷ್ಯರೇ ನಿರ್ಮಾಣ ಮಾಡಿದರೆಂದೂ ಅದು
ಮನುಷ್ಯರ ಹೊಟ್ಟೆಯನ್ನು ಸೀಳಿ ರಕ್ತವನ್ನು ಹೀರಿಕೊಂಡು ಉಪಜೀವಿಸಿ
ಮೈಬಿಡುವದೆಂದೂ ನಾನು ಕೇಳಿದ್ದು ಸರಿ. ಮನುಷ್ಯಜಾತಿಯಂಥ
ಅವಿಚಾರಿಯಾದ ಜಾತಿಯೇ ಇಲ್ಲವೆಂಬದನ್ನು ನಾನು ನಿಮಗೆ ಹೇಳಲೇ
ಬೇಕಾಗಿದೆ. ಮನುಷ್ಯನು ಮನುಷ್ಯನ ವಧವನ್ನು ಯಾವ ರೀತಿಯಾಗಿ ಮಾಡ
ಬೇಕೆಂಬ ಆಲೋಚನೆಯಲ್ಲಿಯೇ ನಿರತನಾಗಿರುತ್ತಾನೆ. ಇದಕ್ಕೆ ಅವನು
ಉಪಯೋಗಿಸುತ್ತಿರುವ ಶಸ್ತ್ರಾಸ್ತ್ರಗಳೇ ಸಾಕ್ಷಿಯು. ಮನುಷ್ಯರು ಹಿಂಡು
ಹಿಂಡಾಗಿ ಬಂದು ವಿಸ್ತೀರ್ಣವಾದ ಬಯಲಿನಲ್ಲಿ ನಿಂತು ಮೇಲ್ಕ ೦ಡ ಶಸ್ತ್ರಾಸ್ತ್ರ
ಗಳ ಪ್ರಯೋಗದಿಂದ ಬುದ್ಧ್ಯಾ ಪರಸ್ಪರರನ್ನು ನಿಷ್ಕಾರಣವಾಗಿ ಕೊಲ್ಲುತ್ತಿರು
ತ್ತಾರೆಂದು ನಾನು ಕೇಳಿದ್ದೇನೆ. ಮೇಲೆ ಹೇಳಿದ ನೌಕೋದ್ಯಮ ಸಂಘವನ್ನು
ಮನುಷ್ಯರು ಪ್ರಯತ್ನಪೂರ್ವಕವಾಗಿ ಪರಸ್ಪರರ ಸಂಹಾರಾರ್ಥವಾಗಿ ನಿರ್ಮಿ
ಸಿರುವರೆಂದು ಸದೃಡವಾದ ನಂಬಿಗೆಯಾಗಿದೆ.
" ಇದಷ್ಟೆಲ್ಲ ವಿಷಯಾಂತರವಾಯಿತು. ಇನ್ನು ಮೇಲಾದರೂ ನೀವು
ಮಧ್ಯದಲ್ಲಿ ಅನವಶ್ಯಕವಾದ ಪ್ರಶ್ನಗಳನ್ನು ಮಾಡಿ ವ್ಯಾಖ್ಯಾನದ ಓಘಳ್ಳೆ
ಪ್ರತಿಹತಿಯನ್ನು ತರಬಾರದೆಂದು ಬೇಡಿಕೊಳ್ಳುತ್ತೇನೆ. ವ್ಯಾಳ್ಯವು ಸ್ವಲ್ಪ
ಉಳಿದಿರುವದು. ಹೇಳತಕ್ಕ ಮಹತ್ವದ ಸಂಗತಿಗಳು ಬಹಳಾಗಿವೆ ! ಸುಧಾರಿ
ಸಿದ ರಾಷ್ಟ್ರಗಳಲ್ಲಿ ಇಂಥ ಕೃತ್ಯಗಳಿಗೆ ವ್ಯವಸ್ಥಾಭಂಗವೆಂದು ಹೇಳುತ್ತಿದ್ದು
ಆವು ಅವರಲ್ಲಿ ಸರ್ವಥಾ ಅಕ್ಷಮ್ಯವಾಗಿರುವದೆಂದು ನಾನು ಅಧ್ಯಕ್ಷರ ಬೆಂಬಲ
ವನ್ನು ಪಡೆದು ಸೂಚಿಸುತ್ತೇನೆ.
“ಸಭ್ಯಗೃಹಸ್ಥರೆ ಮಾನಿನಿಯರೆ, ಕೇಳಿರಿ. ನಾನು ಕಾರ್ಯವಿಶೇಷ
ಕ್ಕಾಗಿ ನೌಕೋದ್ಯಮ ಸಂಘವು ಸ್ಥಾಪಿತವಾಗಿರುವ ಮಾಲ್ಟಾ ಎಂಬ ಸ್ಥ ಸ್ಥಳಕ್ಕೆ
ಹೋದೆನು. ಅಲ್ಲಿ ಬಿದರುಗಳಿಂದ ಮಾಡಿದ ಚಮತ್ಕಾರವಾದದ್ದೊಂದು
ಚೌಕಟ್ಟಿನ ಮಧ್ಯ ದಲ್ಲಿ ಎಳೆ ಮಧುರವಾಗಿ ತೋರುವ ಪುಷ್ಪವಾದ ಮೇಕೆ
ಯನ್ನು ಕಟ್ಟಿದ್ದರು. ಹೀಗೆ ಆಯತ್ತವಾಗಿ ಪ್ರಾಪ್ತವಾಗಿರುವ ಸ್ವಾದಿಷ್ಟವಾದ
ಕವಳವನ್ನು ಸ್ವಾಹಾ ಮಾಡುವದಕ್ಕಾಗಿ ತೆರದಿಟ್ಟ ಚೌಕಟ್ಟಿನಲ್ಲಿ ನಾನು
೫೬ -------------------------------------------------------------------------
ಹೊಕ್ಕೆನು. ಆ ಮಾಟದ ಕಟ್ಟಡದಲ್ಲಿ ನಾನು ಸೇರಿದೆನಿಲ್ಲವೊ ಅಷ್ಟರಲ್ಲಿ
ಅದರ ಬಾಗಿಲವು ತನ್ನಿಂದ ತಾನೇ ಮುಚ್ಚಿಕೊಂಡದ್ದು ಆಶ್ಚರ್ಯವಲ್ಲವೆ ?
ಆಕೋ, ಕೂಡಲೆ ಅನೇಕ ಜನ ಮನುಷ್ಯರು ಆ ಕಟ್ಟಡದ ಸುತ್ತಲೂ ನೆರೆ
ದರು. ನನ್ನ ಆಗಮನದಿಂದ ಆ ಜನರಿಗೆಲ್ಲ ಸರಮಾವಧಿಯ ಆನಂದವಾಗಿ
ತ್ತೆೈಂಬದು ತನ್ನಿಂದ ತಾನೇ ವ್ಯಕ್ತವಾಗಿತ್ತು. ಅವರು ಕೇಕೆಹೊಡೆದು ಕೂಗಿ
ದರು; ಯಥೇಷ್ಟವಾಗಿ ನಕ್ಕರು; ಆನಂದಪ್ರದರ್ಶನಾತ್ಮಕವಾದ ಅನೇಕ
ಪ್ರಕಾರದ ಉನ್ಮಾದದ ಕೆಲಸಗಳನ್ನು ಮಾಡಿದರು. ಅವರು ನನ್ನ ಬಲವನ್ನೂ
ಸೌಂದರ್ಯವನ್ನೂ ಕುರಿತು ಬಹುಪರತಯಾಗಿ ಪ್ರಶಂಸೆ ಮಾಡಿದ ರೆಂದು ನನಗೆ
ಸಹಜವಾಗಿ ಕಂಡುಬಂದಿತು. ನನ್ನ ದಂಷ್ಟ್ರಗಳ ಬಲುಮೆಯನ್ನೂ, ಉಗುರು
ಗಳ ತೀಕ್ಷ್ಣತೆಯನ್ನೂ ಬಾಲದ ಸೌಂದರ್ಯವನ್ನೂ ಕಂಡು ಆ ಬೆರಗಾಗಿ
ಹೋದರು ತನಗೂ ಪ್ರೇಮದಿಂದ ನನ್ನನ್ನು ತಾಯಿಗಂಡನೆಂಬ
ಮರ್ಯಾದಾಯುತವಾದ ವಿಶೇಷಣದಿಂದ ಸಂಭಾವಿಸಿದರು.
" ಕಡೆಗೆ ಅವರೆಲ್ಲರೂ ಕೂಡಿ ನಾನಿದ್ದ ಕಟ್ಟಡವನ್ನು [ ಅದಕ್ಕೆ ಮನು
ಷ್ನರು 'ಬಲೆ' ಎಂದೆನ್ನುತ್ತಾರೆ.] ಅಮಾತವಾಗಿ ಎತ್ತಿ ಅದನ್ನು ಬಂಡಿಯಲ್ಲಿ
ಇಟ್ಟರು. ಬೆಳ್ಳಿಯ ಗುಂಡಿನಂಥ ಪುಷ್ಪವಾಗಿರುವ ಎರಡು ಹೋರಿಗಳನ್ನು
ಆ ಬಂಡಿಗೆ ಹೂಡಿದ್ದರು; ಏನು ಹೇಳಲಿ, ಆ ಹೋರಿಗಳನ್ನು ಕಂಡಾಕ್ಷಣವೆ
ಆವುಗಳನ್ನು ಹೇಗೆ ಮಾಡಿ ತಿನ್ನಲಿ ನಂಬ ಬಲವತ್ತರವಾದ ಆಕಾಂಕ್ಷೆ ನನ
ಗಾಯಿತು. ಆದರೆ ಮಾಡಲೇನು? ಬಲೆಯೊಳಗಿಂದ ಹೊರಗೆ ಬರುವದು
ಸಾಧ್ಯವಾಗಿದ್ದಿಲ್ಲ. ಕಟ್ಟಡದಲ್ಲಿ ನನ್ನನ್ನು ಸೆರೆಹಿಡಿದವರು ದಯಾಲುಗಳಾಗಿ
ನನಗಾಗಿ ಸಮರ್ಪಿಸಿರುವ ಮೇಕೆಯನ್ನು ಹೆರಿದು ತಿಂದು ಉಪಹಾರವನ್ನು
ಮುಗಿಸಿಕೊಂಡೆನು. ಬಂಡಿಯಲ್ಲಿ ಕುಳಿತು ಮೆರೆಯುತ್ತಲ್ಲೂ, ಮೆರೆವಣಿಗೆ
ನಡೆದಾಗ ಸ್ವೇಚ್ಛೆಯಿಂದ ಉಪಹಾರ ಮಾಡುತ್ತಲೂ ನಾನು ವೈಭವದಿಂದ
ನಗರಕ್ಕೆ ಸಾಗಿಬಂದ ಮೇಲೆ ನನ್ನನ್ನು ಒಬ್ಬ ಗೌರಕಾಯದ ಗೃಹಸ್ಥನ
ಮನೆಗೆ ತಂದು ಮುಟ್ಟಿಸಿದರು. ಆ ಗೃಹಸ್ಥನು ನನಗೆ ಉಚಿತವಾದ ಸ್ವಾಗತ
ವನ್ನಿತ್ತು ಕಬ್ಬಿಣದ ಕಂಬಿಗಳಿಂದ ಅಲಂಕೃತವಾದದ್ದೊಂದು ಅಂದವಾದ ಮನೆ
ಯಲ್ಲಿ ನನ್ನನ್ನು ಇರಿಸುವಂತೆ ಏರ್ಪಾಡು ಮಾಡಿದನು. ಅಲ್ಲಿ ನನಗೆ ನವ
ಮಾಂಸದ ಭೋಜನವು ಕಾಲಕಾಲಕ್ಕೆ ಯಥೇಷ್ಟವಾಗಿ ಸಿಕ್ಕುತ್ತಿತ್ಮು. ನಿತ್ಯ
೫೭------------------------------------------------------------------------------
ದಲ್ಲಿಯೂ ಅನೇಕ ವರ್ಣದವರಾದ ಮನುಷ್ಯರು ಬಂದು ನನ್ನ ಸಂದರ್ಶನ
ವನ್ನು ಹೊಂದಿ ಕೃತಾರ್ಥರಾಗುತ್ತಿದ್ದರು. ಸುರಮ್ಯವಾಗಿಯೂ ಸುರಕ್ಷಿತ
ವಾಗಿಯೂ ಸುಖಮಯವಾಗಿಯೂ ಇರುವ ಆ ಮಂದಿರದಲ್ಲಿ ನಾನು ಎಷ್ಟೋ
ಕಾಲವನ್ನು ಕಳೆದೆನು. ಈ ಸ್ಥಿತಿಯಲ್ಲಿ ನಾನು ಸುಖಿಯಾಗಿಯೂ ತೃಪ್ತ
ನಾಗಿಯೂ ಇದ್ದೆನೆಂದು ಹೇಳಿದರೆ ನಿಮಗೆ ವ್ಯತ್ಯಾಸವಾಗಿ ತೋರುವದು.
ಆದರೆ ಕಾಲಾನುಸಾರವಾಗಿ ನನ್ನ ಮೈಯುಂಡದ್ದರಿಂದ ನನಗೆ ಸುಖವೇ
ಭಾಸಿಸಿತು. ಕೆಲವು ಕಾಲದ ಮೇಲೆ ನನಗೆ ಈ ಸಿತಿಯ ಬೇಸರ ಬಂದಿತು.
ನನ್ನೀ ಸುಂದರಬನದಲ್ಲಿಯ ಸ್ವೇಚ್ಛೆ ಯ ವಿಹಾರಗಳೂ, ಪ್ರಚ್ಛಾಯಶೀತಲ
ವಾದ ಗುಹಾನಿವಾಸವೂ ಒಯ್ಯಾರದ ಲಾಂಗೂಲಚಾಲನವನ್ನು ಮಾಡುವ
ವ್ಯಾಘ್ರ ಸುಂದರಿಯರ ಸಮಾಗಮಸುಖವೂ ಎರವಾದವೆಂಬ ಚಿಂತೆಯು
ಒಮ್ಮೊಮ್ಮೆ ನನಗಾಗುತ್ತಿತ್ತು. ಬಂಧನದ ವ್ಯಸನವು ನನಗಾಗಿ
ನಾನೊಮ್ಮೊಮ್ಮೆ ಚೀರುವೆನು, ಒಮ್ಮೊಮ್ಮೆ ಒಳಿತಾಗಿ ಗರ್ಜಿಸುವೆನು,
ಒಮ್ಮೊಮ್ಮೆ ಪಂಜರದ ಕಂಬಿಗಳನ್ನು ನನ್ನ ಬಲವುಳ್ಳ ಮುಂಗಾಲುಗಳಿಂದ
ಒಳಿತಾಗಿ ಬಡಿಯುವೆನು. ಮಾತೃಭೂಮಿಯಾದ ಸುಂದರಬನವೆ, ನಿನ್ನ
ಸಂಸ್ಮರಣವು ಯಾವ ಧೀರನಾದ ವ್ಯಾಘ್ರನಿಗೆ ಆಗದಿರುವದು? ಆದರೆ
ನಿಷ್ಟರುಣರಾದ ಮನುಷ್ಯರು, ನಾನು ದುಃಖಿತನಾಗಿ ಗೋಳಾಡುತ್ತಿರುವದನ್ನು
ಲೆಕ್ಕಿಸದೆ, ಕಬ್ಬಿಣದ ಕೃತ್ರಿಮವಾದ ಕೋರೆಗಳಿಂದ (ಬರ್ಚಿಗಳಿಂದ) ನನ್ನನ್ನು
ಚುಚ್ಚುವರು; ಸೊಕ್ಕಿಗೆ ಬಂದಿರುವನೆಂದು ನಂಬಿ ನನಗೆ ಆಹಾರವನ್ಸಿಕ್ಳುವ
ದನ್ನು ನಿಲ್ಲಿಸುವರು. ಆ ಸನಿಗೂಳಿನ ಆಶೆಗಾಗಿ ಮತ್ತೆ ನಾನು ನಮ್ರನಾಗಿರು
ವೆನು. ಆದರೂ ನನ್ನ ಮಾತೃಭೂಮಿಯ ನೆನಪಾಗದೆ ಇರುವದು ಹೇಗೆ?
ಹಸಿವೆಯಾದ ಹೊರತು ನಾನು ಕೂಳು ತಿನ್ನುವದನ್ನು ವರ್ಜ ಮಾಡಿದೆನು.
ಬಲವತ್ತರವಾದ ನಿದ್ದೆಯು ತಾನಾಗಿ ಬಂದ ಹೊರತು ನಾನು ಮಲಗುತ್ತಲೇ
ಇರಲಿಲ್ಲ. ಹಸಿವೆಯಾದಾಗಲಾದರೂ ನಾನು ಮಿತಿಯಿಂದಲೇ ಶಿನ್ನುತ್ತಿದ್ದೆನು.
ಧಡೆ ಪಂಚೇರು ಹೆಚ್ಚಿಗೆ ತಿಂದಿದ್ದಾದರೆ ವಿಶೇಷವಾದ ಮಾತಲ್ಲ. ಹೀಗೆ
ದುಃಖಪರಾಯಣನಾದ ನಾನು ಯೋಗಿಯಂತೆ ಆತ್ಮಸಂಯಮಿಯಾಗಿಯೇ
ಇದ್ದೆನು. "
ವ್ಯಾಖ್ಯಾನಕಾರರಿಗೆ ಮಾತೃಭೂಮಿಯ ನೆನಪಾಗಿ ದುಃಖವಾದದ್ದ ರಿಂದ
೫೮------------------------------------------------------------------------
ಅವರು ಅಧೋಮುಖರಾಗಿ, ಮಾತಾಡಲರಿಯದೆ ಕೆಲಹೊತ್ತು ಸ್ತಬ್ಧರಾಗಿ
ನಿಂತುಕೊಂಡರು. ನೆಲದ ಮೇಲೆ ಒಂದೆರಡು ಕಂಬನಿಗಳಾದರೂ ಉದುರಿ
ದಂತೆ ಕಂಡವು. ಅವುಗಳೇನು ನಿಜವಾದ ಕಂಬನಿಗಳೋ, ಸಂಚರದಲ್ಲಿರು
ವಾಗ ಅವರಿಗೆ ಸಿಕ್ಕುತ್ತಿದ್ದ ಸವಿಗೂಳಿನ ನೆನೆಪಾದ್ದರಿಂದ ಬಾಯಿಗೆ ಬಿಟ್ಟ
ನೀರಿನ ಹನಿಗಳು ಕಟಬಾಯಿಯಿಂದ ಇಳಿದುಬಿದ್ದವೋ ಹೇಳಲಾಗದು.
ವ್ಯಾಖ್ಯಾತೃಗಳು ಮತ್ತೆ ವಿಚಾರ ತಳೆದು ಧೈರ್ಯವನ್ಸವಲಂಬಿಸಿ ತಮ್ಮ
ವ್ಯಾಖ್ಯಾನವನ್ನು ಸಾಗಿಸಿದರು.
"ಆ ಸುಖಮಯವಾದ ಬಂದಿವಾಸದಿಂದ ಹೇಗೆ ಮುಕ್ತನಾದೆನೆಂಬ
ಸಂಗತಿಯನ್ನು ನಾನು ಬೆಳಿಸಿ ಹೇಳಲಿಚ್ಛಿಸುವದಿಲ್ಲ. ಆ ನನ್ನ ಮಂದಿರ
ವನ್ನು ಉಡುಗುನವನು ಒಂದು ದಿನಸ ಕಸ ಉಡುಗಿದ ಮೇಲೆ ಅದರ
ಬಾಗಿಲವನ್ನು ತೆರೆದಿಟ್ಟೆಯೇ ಹೋದನು. ನನಗಾಗಿರುವ ವ್ಯಸನವನ್ನು
ಕಂಡು ದಯೆಹುಟ್ಟಿ, ಅವನು. ಹಾಗೆ: ಮಾಡಿದನೊ ಮರೆಗೂಳಿತನವೇ
ಕಾರಣವೋ ತಿಳಿಯುವ ಬಗೆ ಇನ್ನೆಂತು? ಇರಲಿ. ನಾನು ಬಿಗಿದು ಪಾರಾಗಿ
ಬಂದೆನಂತೂ ಸರಿ. ಅಲ್ಲಿಯೇ ಮಾರ್ಗದಲ್ಲಿ ಸೊಳಿಕನಂಥ ತೋಟಗ
ನೊಬ್ಬನು ಸಿಕ್ಕನು. ಅಷ್ಟೇ ಆಯಿತೆಂದ! ಒಂದೇ ಓಟದಲ್ಲಿ ನಾನು ಈ
ನಮ್ಮ ಪ್ರಿಯತಮವಾವ ಜನ್ಮಭೂಮಿಗೆ ಬಂದುಬಿಟ್ಟೆನು.
" ಈ ನನ್ನೆ ಸಾಹಸಯುತವಾದ ಚಮತ್ಕಾರದ ವೃತ್ತಾಂತವನ್ನು
ಹೇಳುವ ಉದ್ದೇಶವೇನಂದರೆ, ಆ ಪರಿಯಾಗಿ ನಾನು ಮನುಷ್ಯವಸತಿ
ಯಲ್ಲಿರುವಾಗ ಆ ಜಂತುಗಳ ಗುಣದೋಷಗಳ ನಿರೀಕ್ಷಣನನ್ನು ಮಾಡಲು
ನನಗೆ ಅವಕಾಶವು ದೊರೆತಿತು. ಸ್ವಾನುಭವದಿಂದ ನಾನು ಹೇಳುವ
ಮಾತು ನಿಮಗೆ ಬೋಧಪ್ರದವಾಗದೆ ಇರದು. ಅನೆಕ ಜನ ಪ್ರವಾಸಿಗಳು
ಕೈಗಂಟುಹಾಕಿ ಒಂದಕ್ಕೆ ನಾಲ್ಕುಮಾಡಿ ತನ್ನು ಪ್ರವಾಸದ ವೃತ್ತಾಂತ
ಗಳನ್ನು ಕಥೆಮಾಡಿ ಹೇಳಿ ಜನರ ಮನೋರಂಜನವನ್ನು ಮಾಡುವದುಂಟು,
ಅಂಥ ನಿರ್ಲಜ್ಜವಾದ ಸುಳ್ಳು ಹೇಳುವದು ನನ್ನಿಂದ ಸರ್ವಥಾ ಆಗದು.
ನನ್ನ ಅನುಭವಕ್ಕೆ ತಟ್ಟದ ಸಂಗತಿಗಳನ್ನೇ ನಾನು ಹೇಳುವೆನು. ಮನುಷ್ಯರ
ಸ್ವಭಾವ ಆಚಾರ ವಿಚಾರಗಳ ಬಗ್ಗೆ ಇದುವರೆಗೆ ನಾವು ಕೇಳಿದ ಸಂಗತಿ
ಗಳಲ್ಲಿ ನನ್ನ ವಿಶ್ವಾಸವು ತಿಲಮಾತ್ರವೂ ಇಲ್ಲ. ದುರ್ಬಲರಾದ ಮನುಷ್ಯರು
೫೯ ------------------------------------------------------------------------------
ತಮಗಾಗಿ ಉತ್ತುಂಗವಾದ ಪ್ರಾಸಾದ ಹರ್ಮ್ಯಮಂದಿರಗಳನ್ನು ಕಟ್ಟಿ
ಕೊಂಡಿರಬಲ್ಲರೆಂಬ ಅಸಂಬದ್ಧವಾದ ಮಾತುಗಳನ್ನು ನಾವು ಕೇಳಿರುಪೆವಷ್ಟೆ?
ವರ್ಷಾನವರ್ಷ ನಾನು ಮನುಷ್ನರ ವಸತಿಯಲ್ಲಿದ್ದವನಾದರೂ ಆ ಜನರು
ಮನೆಕಟ್ಟುವ ಉದ್ಯೋಗ ಮಾಡಿದ್ದನ್ನು ನಾನು ನೋಡಲೇ ಇಲ್ಲ. ಅವರಲ್ಲಿ
ಅಂಥ ಗುಹೆಗಳನ್ನು ಕಟ್ಟಿ ಕೊಳ್ಳುವಂಥ ಸಾಮರ್ಥ,ಸಿರುವದೆಂಬ ಬಗ್ಗೆ
ಪ್ರಮಾಣವೇನೂ ಇರುವದಿಲ್ಲ. ದಿನ್ನೆದಿನ್ನೆಗಳಲ್ಲಿ ಆಯುತ್ತವಾಗಿರುವ
ಆನೇಕವಾದ ಗುಹೆಗಳನ್ನು ಕಂಡು ಸಾಹಸಿಗಳಾದ ಕೆಲ ಜನ ಮನುಷ್ಯರು
ಆಲ್ಲಿ ಹೋಗಿ ಇರಲಾರಂಭಿಸಿದರೆಂದು ನಾನು ತರ್ಕಿಸುತ್ತೀನಿ.
“ಮನುಷ್ಯರು ದ್ವಿವಿಧವಾದ ಆಹಾರಿಗಳಾಗಿರುವಣ, ಆಂದರೆ ಆವರು
ಕೋಳಿಕುರಿಗಳನ್ನೂ ತಿನ್ನಬಲ್ಲರು; ಇತ್ತ ಗಡ್ದೆ- ಗೆಣಸು ಹಣ್ಣು. ಹಂಪಲ
ಗಳನ್ನೂ ತಿನ್ನುತ್ತಾರೆ ದೊಡ್ಡ ದೊಡ್ಡ ಮರಗಳನ್ನು ಅವರು ತಿನ್ನಲಾರರು;
ಆದರೆ ಚಿಕ್ಕ ಸಸಿಗಳನ್ನೂ ಬೇರುಗಳನ್ನೂ ಸಾಧಿಸುವಂಥ ಇನ್ನುಳಿದ
ವನಸ್ಪತಿಯ ಭಾಗಗಳನ್ನೂ ಅವರು ನುಂಗಿ ನೀರು ಕುಡಿಯುವದುಂಟು,
ಹುಲ್ಲುದಂಟು ಮುಂತಾದವುಗಳ ಮೇಲಂತೂ ಅವರ ಪ್ರೇಮ ಬಹಳ, ಹೊಲ
ತೋಟಗಳೆಂಬ ಚಿಕ್ಕ ಚಿಕ್ಕ ಭೂಪ್ರದೇಶಗಳಲ್ಲಿ ಆರು ಅನೇಕ ಪ್ರಕಾರದ
ಬೆಳೆಗಳನ್ನು ಬೆಳಿಸಿಕೊಳ್ಳುತ್ತಾರೆ. ಆದರೆ ಒಬ್ಬ ಮನುಷ್ಯನು ಮತ್ತೊಬ್ಬ
ಮನುಷ್ಯನ ಹೊಲದಲ್ಲಿ ಮೇಯಲಿಕ್ಕೆ ಹೋಗಕೂಡದಂತೆ !
"ಅವರು ಹಣ್ಣು ಗಡ್ಡೆ ಬಳ್ಳಿ ಪಲ್ಲೆಗಳನ್ನು ತಿನ್ನುವರೆಂಬ ವಿಷಯದಲ್ಲಿ
ವಾದವಿಲ್ಲ. ಆದರೆ ಅವರು ಹುಲ್ಲು ತಿನ್ನುವರೆಂದು ಮಾತ್ರ ನಿಶ್ಚಯದಿಂದ
ಹೇಳಲಾರೆನು. ನನ್ನೆದುರಿಗೆ ಒಬ್ಬ ಮನುಷ್ಯನಾದರೂ ಹುಲ್ಲು ತಿನ್ನಲಿಲ್ಲ,
ಆದರೂ ಒಂದು ಮಾತ್ರ ಸಂಶಯಾಸ್ಪದವಾಗಿದೆ. ಬಿಳಿಬಣ್ಣದ
ಮನುಷ್ಯರೂ ದೈವುಳ್ಳವರಾದ ಕೆಲಜನ ಕಪ್ಪು ಬಣ್ಣದ ಮನುಷ್ಯರೂ
ಹೊಲಗಲ್ಲ ಹುಲ್ಲುಬೆಳೆಸಿ ಅದಕ್ಕೆ ಶಾದ್ವಲ' (ಗದ್ದೆ) ಎಂದು ಹೇಳುತ್ತಾರೆ.
ಆ ಹುಲ್ಲನ್ನು ತಿನ್ನುವದಕ್ಕಲ್ಲದೆ ಮತ್ತಿಕನ್ನೇತಕ್ಕೆ ಬೆಳಸುತ್ತಿರುವರು ?
"ಸಾಹೇಬರಾಗಲಿ, ದೊಡ್ಡವರೆಂಬವರಾಗಲಿ, ಹುಲುತಿನ್ನುವ ಪ್ರಾಣಿಗಳ್ಲೇಯೇ
ಗಣಿಸಲ್ಪಡುತ್ತಾರೆ' ಎಂದು ಒಬ್ಬ ಕಪ್ಪು ಬಣ್ಣದ ಮನುಷ್ಯನು ಅಂದದನ್ನು
ನಾನು ಕಿವಿಮುಟ್ಟ ಕೇಳಿದ್ದೇನೆ. ಅರ್ಥಾತ್ ದೊಡ್ಡ ವರು ಹುಲ್ಲು ತಿನ್ನು
೬೦ ----------------------------------------------------------------------------
ತ್ಲಿರುವದು ಸಿದ್ಧಾಂತವು.
" ಮನುಷ್ಯರು ಪಶುಪಕ್ಷಿ ಮುಂತಾದವುಗಳನ್ನು ಪೂಜಿಸುವರು.
ನನ್ನನ್ನೇ ಎಷ್ಟು ಭಕ್ತಿವಿಶೇಷದಿಂದ ಪೂಜಿಸುತ್ತಿದ್ದರೆಂಬದನ್ನು ನಾನು
ಆಗಲೇ ಹೇಳಿರುವೆನು. ಅವರು ಕುದುರೆಗಳನ್ನಾದರೂ ಪೂಜಿಸುವರು.
ಅವುಗಳಿಗಾಗಿ ವಿಶ್ರಾಮಸ್ಥಾನಗಳನ್ನು ಕಟ್ಟಿಸುತ್ತಾರೆ, ಅವುಗಳಿಗೆ ಕಾಲ
ಕಾಲಕ್ಕೆ ಅನ್ನೋದಕಗಳನ್ನು ಸಮರ್ಪಿಸುತ್ತಾರೆ. ಆಸ್ಥೆಯಿಂದ ಅವುಗಳ
ಮೈ ಕೈಗಳನ್ನು ತಿಕ್ಕಿ ಸಿಂಗರಿಸುತ್ತಾರೆ. ಕುದುರೆಗಳು ಮನುಷ್ಯರಿಗಿಂತ
ಶ್ರೇಷ್ಠವಾದ ಪ್ರಾಣಿಗಳೆಂದೇ ಅವರು ಅವುಗಳನ್ನು ಆದರದಿಂದ ಸೇವಿಸುತ್ತಿರು
ವದು ವಾಸ್ತವವೇ, ಆಕಳುಗಳನ್ನಾದರೂ ಅತ್ಕಾದರದಿಂದ ಅವರು
ಭಜಿಸುವರು. ಮತ್ತೊಂದು ವಿಲಕ್ಷಣವಾದ ಸಂಗತಿಯೆಂದರೆ ಮನುಷ್ಯರು
ಆಕಳಿನ ಹಾಲು ಕುಡಿಯುತ್ತಾರೆ! ಕೇಳಿದಿರಾ, ಈ ಸಂಗತಿಯಿಂದ
ಮುಂಚಿನ ಕಾಲದ ಕೆಲಜನ ವ್ಯಾಫ್ರ ಪಂಡಿತರು ತರ್ಕಿಸಿದ್ದೇನಂದರೆ,
ಮನುಷ್ಯರು ಪೂರ್ವಜನ್ಮದಲ್ಲಿ ದನಗಳ ಕರುಗಳೇ ಆಗಿರಬಹುದು ! ಹೀಗೆ
ವಾದ ಮಾಡುವದಕ್ಕಿಂತಲೂ ಮನುಷ್ಯರು ಸ್ವಭಾವತಃ ಪಶುತುಲ್ಯ ಬುದ್ಧಿ
ಯವರೇ ಎಂದು ಅವರಿಗೆ ಪಶುಗಳ ಹಾಲಿನ ಮೇಲೆ ಪ್ರೇಮ ಹೆಚ್ಚೆಂದು
ನಾನು ಅನುಮಾನ ಮಾಡುತ್ತೇನೆ. ಇದು ಹಾಗಿರಲಿ, ಮನುಷ್ಯರು ತಮಗೆ
ಆಹಾರವಾಗಿದ್ದ ಕುರಿ ಕೋಳಿ ದನ ಮುಂತಾದ ಮಾಂಸಲವಾದ ಪ್ರಾಣಿ
ಗಳನ್ನು ಹಿಂಡುಹಿಂಡಾಗಿ ಕಟ್ಟಿಕೊಂಡು ಜೋಪಾನು ಮಾಡುತ್ತಾರೆ. ಒಳ್ಳೇ
ಹಂಚಿಕೆ. ನಾವಾದರೂ ನಮಗೆ ರುಚಿಕರವಾದ ಮಾಂಸವುಳ್ಳವರಾದ
ಮನುಷ್ಯರನ್ನು ಗೋದಲೆಗಳಲ್ಲಿ ಕಟ್ಟ ಮೇಯಿಸಿ ಬೇಕುಬೇಕಾದಾಗ ತಿನ್ನ
ಲನುವಾಗುವಂತೆ ಮಾಡಿದರೆ ಎಷ್ಟು ಅನುಕೂಲವಾಗುವದು ನೋಡಿರಿ!
ಅಂಥ ಸುಯೋಗವು ಬೇಗನೆ ಬರುವದೆಂದು ನಾನು ಆಶಿಸುತ್ತೇನೆ,
"ದನಕರು ಕುರಿ ಆಡು ಕುದುರೆ ಮುಂತಾದ ಪ್ರಾಣಿಗಳನ್ನು
ಮನುಷ್ಯರು ಪೂಜಿಸುವಂತೆಯೇ ಅವರು ಆನೆ ಒಂಟಿ ಕತ್ತೆ ನಾಯಿ ಬೆಕ್ಕು
ಗಳಲ್ಲದೆ ಅನೇಕ ಜಾತಿಯ ಪಕ್ಷಿಗಳ ಅರೈಕೆಯನ್ನಾದರೂ ಮಾಡುತ್ತಾರೆ.
ಇದಕ ಫಲಿತಾರ್ಥವೇನೆಂದರೆ, ಮನುಷ್ಯರು ನಿಸರ್ಗತಃ ಸಕಲ ಪ್ರಾಣಿಗಳ
ದಾಸರೂ ಭಕ್ತರೂ ಆಗಿರುವರು, ಅವರು ಅನೇಕ ಪ್ರಕಾರದ ಮಂಗಗಳ
೬೧ -------------------------------------------------------------------------
ನ್ನಾದರೂ ಸಾಕುವರು. ಅವುಗಳಿಗಾಗಿ ಉನ್ನತವಾದ ಸ್ತಂಭಗಳನ್ನು ಮಾಡಿ
ಕೊಟ್ಟರುವದರಿಂದ ಬೇರೆ ಪ್ರಾಣಿಗಳಿಗಿಂತಲೂ ಮಂಗಗಳು ಉಚ್ಛಾಸನ
ಗಳಲ್ಲಿ ಮೆರೆಯುವವು. ಮಂಗಗಳು ಮನುಷ್ಯನ ವರ್ಗದವುಗಳೆಂದು ತಿಳಿದು
ಅವುಗಳಲ್ಲಿ ಅವನಿಗೆ ಪಕ್ಷಪಾತವಿರುವಂಕೆ ಕಾಣುತ್ತದೆ.
"ಮನುಷ್ಯರ ರೀತಿಗಳು ಒಳ್ಳೇ ವಿನೋದಾಸ್ಟದವಾಗಿವೆ. ಅವರಲ್ಲಿಯ
ರಾಜಕೀಯ ವ್ಯವಸ್ಥೆಯಾದರೂ ಸೋಜಿಗವಾದದ್ದು. ಇವುಗಳ ಬಗ್ಗೆ ನಾನು
ಸವಿಸ್ತಾರವಾಗಿ ಹೇಳಲಿಚೈಸುತ್ತೇನೆ. "
ವ್ಯಾಖ್ಯಾನವು ಈ ಮಟ್ಟಿಗೆ ಬಂದ ಸಮಯದಲ್ಲಿ ಅಧ್ಯಕ್ಷರು ತಮ್ಮ
ಆಸನವನ್ನು ಬಿಟ್ಟು ಅತ್ಯದ್ಭುತವಾದ ಜಿಗತವನ್ನು ಮಾಡಿ ಹಾರುತ್ತೆ
ಎಲ್ಲಿಗೋ ನಡೆದರು, ವಿಚಾರಿಸಲಾಗಿ ತಿಳಿದದ್ದೇನಂದರೆ ಅಧ್ಯಕ್ಷರು
ವ್ಯಾಖ್ಯಾನವನ್ನು ಕೇಳುತ್ತೆ ಕುಳಿತಾಗ ಒಂದು ಎರಳೆಯು ಒಮ್ಮಿಂದೊಮ್ಮೆಲೆ
ಅವರ ದೃಷ್ಟಿಗೆ ಬಿದ್ದಿತು. ಕಾರ್ಯವಿಶೇಷವು ಬಂದೊದಗಿದಾಗ ಎಲ್ಲಿಯ
ವ್ಯಾಖ್ಯಾನ ಏನು ಕಥೆ! ಅಧ್ಯಕ್ಷರು ಎದ್ದುಹೋಗಿ ವ್ಯಾಖ್ಯಾನಕ್ಕೆ ತೊಂದರೆ
ತಂದದ್ದು ಕಂಡು ಬೃಹಲ್ಲಾಂಗೂಲ ಪಂಡಿತರಿಗೆ ಅಸಮಾಧಾನವಾಯಿತು.
ಆಗ ಸಭಿಕರಲ್ಲಿ ಒಬ್ಬ ಬುದ್ಧಿವಂತನು " ಪಂಡಿತರೆ, ಅಧ್ಯಕ್ಷರು ಕಾರ್ಯ
ವಿಶೇಷಕ್ಕಾಗಿ ದಯಮಾಡಿರುವರು. ನೋಡಿದಿರಾ, ಚಿಗರೆಗಳ ಹಿಂಡೇ
ಸಮಾಸಿಸಿರುವ ನಾತವು ನನಗೆ ಬರುತ್ತಲಿದೆ. ನೀವೂ ಬನ್ನಿರಿ ಹೋಗೋಣ,
ಸಭೆಯ ಕೆಲಸವು ನಾಳಿಗೆ ಆಗಲಿ '' ಎಂದು ಸೂಚಿಸಿದಾಕ್ಷಣವೇ ಸಭಾ
ವಿಸರ್ಜನವಾಗಿ ಎಲ್ಲರೂ ಎರಳೆಗಳ ಗುಂಪಿನೆಡೆಗೆ ಸಾಗಿಹೋದರು.
ಮರುದಿವಸ ಮತ್ತೆ ಯಥಾಪ್ರಕಾರವಾಗಿ ಮಹಾಸಭೆಯ ಕೆಲಸಕ್ಕೆ
ಪ್ರಾರಂಭವಾಯಿತು. ಪಂಡಿತ ಬೃಹಲ್ಲಾಂಗೂಲರವರು ತಮ್ಮ ವ್ಯಾಖ್ಯಾನ
ವನ್ನು ಮುಂದೆ ಸಾಗಿಸುವವರಾದರು.
"ಅಧ್ಯಕ್ಷರೆ, ಸುಪುಚ್ಛವತಿಯರಾದ ವನಿತೆಯರೇ, ವ್ಯಾಘ್ರ ಶ್ರೇಷ್ಠರೇ,
ಮನುಷ್ಯರ ವಿವಾಹಸದ್ದತಿಯನ್ನೂ ಇನ್ನುಳಿದ ಬೇರೆ ಚಮತ್ಕಾರವಾದ
ರೂಢಿಗಳನ್ನೂ ಕುರಿತು ಕೆಲವು ಮಹತ್ವದ ಸಂಗತಿಗಳನ್ನು ನಿಮಗೆ
ಹೇಳುವೆನೆಂದು ನಾನು ನಿನ್ನೇದಿನ ವಚನಕೊಟ್ಟ ಮೇರೆಗೆ ಈಗ ಹೇಳಲುಪ
ಕ್ರಮಿಸುನೆನು.
೬೨ ---------------------------------------------------------------------------
" ಮದುವೆಯೆಂದರೆ ಏನೆಂಬದನ್ನು ನೀವೆಲ್ಲರೂ ಅರಿಯದೆ ಇಲ್ಲ.
ಅವಶ್ಯತೆ ಕಂಡಹಾಗೆ ನೀವೆಲ್ಲರೂ ವಿವಾದಸಂಬಂಧವನ್ನು ಮಾಡಿಕೊಂಡೇ
ಇರುವಿರಿ. ಆದರೆ ವಿವಾಹದ ಅರ್ಥವು ಮನುಷರಲ್ಲಿ ಬೇರೆಯಾಗಿರುವದು. ನಮ್ಮ
ವ್ಯಾಫ್ರಜ್ಞಾತಿಯವರಲ್ಲಿಯ ವಿವಾಹವೆಂದರೆ ಸಮಾನಾಧಿಕಾರಿಗಳಾದ
ಸ್ತ್ರೀಪುರುಷರು ತಮ್ಮ ಇಚ್ಛೆಯಿರುವವರೆಗೆ ನಡಿಸತಕ್ಕಂಥ ತಾಂತ್ರಿಕವಾದ
ಪ್ರೇಮದ ವ್ಯವಹಾರವು. ಮನುಷ್ಯರಲ್ಲಿ ವಿವಾಹವೆಂದರೆ ಜನ್ಮದ ಗಂಟು!
ಮನುಷ್ಯರಲ್ಲಿಯ ವಿವಾಹಗಳು ಸಮ್ಮತವಾದವುಗಳೆಂತಲೂ ಅಸಮ್ಮತವಾದವು
ಗಳೆಂತಲೂ ಎರಡು ಪ್ರಕಾರದವು. ಇವುಗಳಲ್ಲಿ ಸಮ್ಮತವಾದ ವಿವಾಹಕ್ಕೆ
ಮರ್ಯಾದೆ ಹೆಚ್ಚು, ಸಮ್ಮತವಾದ ಆಥವಾ ವಿಧಿಪೂರ್ವಕವಾದ ವಿವಾಹದಲ್ಲಿ
ಉಪಾಧ್ಯಾಯನು 'ಮಧ್ಯವರ್ತಿಯಾಗಿರುವನು."
ಮಹಾದಂಷ್ಟ್ರನು ಮಧ್ಯದಲ್ಲಿ ಎದ್ದು ನಿಂತು " ಉಪಾಧ್ಯಾಯನೆಂದರೆ
ಯಾವ ವಸ್ತುವದು ಎಂಬದನ್ನು, ವ್ಯಾಖ್ಯಾತೃಗಳು ದಯಮಾಡಿ ಹೇಳುವಿ
ರೇನು? * ಎಂದು ಕೇಳಿದನು.
"ಶಬ್ದಕಂಟಕಸಮುಚ್ಚಯವೆಂಬ ಕೋಶದಲ್ಲಿ 'ಉಪಾಧ್ಯಾಯನೆಂದರೆ
ಓದನಮೋದಕಾದಿಗಳನ್ನು ತಿಂದು ಜನರನ್ನು ಅಬಾಧಿತವಾಗಿ ವಂಚಿಸುವ
ಬ್ರಾಹ್ಮಣನು.' ಎಂದು ಹೇಳಿದೆ. ಆದರೆ ಈ ವ್ಯಾಖ್ಕೆ ದೋಷರಹಿತವಾದದ್ದಲ್ಲ.
ಯಾಕೆಂದರೆ, ಅನೇಕ ಜನ ಉಪಾಧ್ಯಾಯರು न मांसभक्षणे दोषः ಎಂಬ ತತ್ವ
ದವರಾಗಿರುತ್ತಾರೆ. ಅನೇಕರು ಮಾಂಸವನ್ನು ತಿನ್ನುವದಲ್ಲದೆ ಮಾದಕ
ದ್ರವ್ಯಗಳನ್ನು ಯಥೇಷ್ಟವಾಗಿ ಸೇವಿಸುತ್ತಾರೆ. ಕೆಲವರಂತೂ ಸರ್ವಭಕ್ಷಕ
ರಾಗಿದ್ದಾರೆ. ಕೇವಲ ಓದನಮೋದಕಗಳನ್ನು ತಿನ್ನುವವರು ಉಪಾಧ್ಯಾಯ
ರೆಂದು ಹೇಳುವದಾದರೂ ತಪ್ಪೇ. ಕಾಶೀ ಎಂಬ ಪಟ್ಟಣದಲ್ಲಿ ಓದನಮೋದಕ
ಗಳನ್ನೇ ತಿಂದುಕೊಂಡಿರುವ ಅನೇಕನಾದ ಗೂಳಿಗಳಿರುತ್ತವೆ. ಆದರೆ
ಅವುಗಳು ಉಪಾಧ್ಯಾಯರಾಗಲರಿಯವು. ಯಾಕೆಂದರೆ ಆವು ಅನ್ಯರನ್ನು
ವಂಚಿಸಲರಿಯವು! ಇನ್ನು ಯಾವ ವಂಚಕನೇ.ಆಗಲಿ ಅವನು ಓದನಮೋದಕ
ಗಳನ್ನು ತಿನ್ನತೊಡಗಿದರೆ ಅವನಿಗೆ ಉಪಾಧ್ಯಾಯನೆಂಬ ಹೆಸರು ಬರ
ಬಹುದು.
“ವಿಧಿಪೂರ್ವಕವಾದ ವಿವಾಹದ ಮುಖ್ಯ ಲಕ್ಷಣವೆಂದರೆ, ವಧೂವರಗಳ
೬೩-----------------------------------------------------------------
ಸಂಧಾನಕ್ಕೆ ಮಧ್ಯವರ್ತಿಯಾಗಿ ಒಬ್ಬ ಉಪಾಧ್ಯಾಯನು ಬಂದು ಯಥಾ
ಸ್ಥಿತ ನಾಗಿ ಕುಳಿತುಕೊಳ್ಳುವದು ಹಾಗೆ ಕುಳಿತಲ್ಲಿ ಕುಳಿತು ಅವನು ಧ್ವನಿ
ತೆಗೆದು ವಿಲಕ್ಷಣವಾದ ಅವಸರದಿ೦ದ ವಾತಾಡುತ್ತಿರುವನು. ಅವನ ಆ
ಜಲ್ಪನಕ್ಕೆ ವಿವಾಹಮಂತ್ರ ಎಂಬ ಹೆಸರು. ಇಂಥ ಪ್ರಸಂಗಗಳಲ್ಲಿ ನಡೆದಿರುವ
ಇತ್ಥ೦ಭೂತವಾದ ವಿಧಾನದ ಪರಿಜ್ಞಾನವು ನನಗೆ ಚೆನ್ನಾಗಿ ಆಗಿಲ್ಲವೆಂದು
ಹೇಳಲು ನನಗೆ ವಿಷಾದವಾಗುತ್ತದೆ. ಆದರೂ ಅವರ ಸಾರಾಂಶವೆಲ್ಲ ಹೀಗಿ
ರಲಿಕ್ಕೆ ಸಾಕು. ಹೇಗೆಂದರೆ: 'ವಧೂವರರೆ, ವಿವಾಹದ ಬಂಧನದಿಂದ ನೀವು
ಒಂದಾಗಿರಿ. ಹೀಗೆ ನೀವು ಶೃಂಕಲಾಬದ್ಧರಾದರೆ ಓದನಮೋದಕಗಳ
ಕೊರತೆ ನನಗೆಂದಿಗೂ ಆಗದು. ಆದ್ದರಿಂದ ನೀವು ಉಭಯತರು ಬದ್ಧರಾಗಿರಿ.
ಈ ವಧುವಿನ ಜೀವಮಾನವಿರುವವರಗೆ ಇವಳಿಗಾಗತಕ್ಕ ಸ೦ಸ್ಕಾರಗಳ ನಿಯಾ
ಮಕನು ನಾನಾಗಿ ಬೇಕುಬೇಕಾದಷ್ಟು, ಓದನನೋದಕಗಳನ್ನು ಗಳಿಸಿಕೊಳ್ಳು
ವೆನು. ನಿಮಗೆ ಮಕ್ಕಳಾದರೆ ಅವರಿಗಾಗುವ ಸಂಸ್ಕಾರಗಳಲ್ಲಿಯೂ ನನಗೆ
ಓದನಮೋದಕಗಳು ಅವಶ್ಯವಾಗಿ ಸಿಕ್ಕುವವು. ಅವಕ್ಕಾಗಿ ನೀವು ದಂಪತಿ
ಗಳಾಗಿರಿ, ನೀವು ಕುಟುಂಬದ ಮುಖ್ಯರಾಗಿ ಆಚರಿಸುತ್ತಿರುವ ವ್ರತನಿಯ
ಮಗಳಲ್ಲಿಯೂ ನಾನು ದಯವಿಟ್ಟು ಬಂದು ವಾಯನ ದಕ್ಷಿಣಾದಿಗಳನ್ನು
ತೆಗೆದುಕೊಳ್ಳುವೆನು. ಅದಕ್ಕಾಗಿ ನೀವು ಪತಿಪತ್ನಿಯರಾಗಿರಿ ನೀವೀ
ರ್ವರೂ ಏಕಜೀವರಾಗಿರಿ, ಒಬ್ಬರನ್ನೊಬ್ಬರು ಅಗಲಿರಬೇಡಿರಿ. ಅಗಲಿದರೆ
ನನ್ನ ಪ್ರಾಪ್ತಿಗೆ ಹಾನಿ ತಟ್ಟುವದು. ಅಗಲಿದ್ದೇ ಆದರೆ ನನಗೆ ಹೆಚ್ಚಿನ
ಪ್ರಾಪ್ತಿಯಾಗುವಂತೆ ಘೋರತರವಾದ ಪ್ರಾಯಶ್ಚಿತ್ತವನ್ನು ಹೊಂದಿ ಮತ್ತೆ
ಕೂಡಿಕೊಳ್ಳುವಿರಿ., ಇದು ನಮ್ಮ ಜ್ಞಾನಿಗಳಾದ ಪೂರ್ವಜರು ವಿಧಿಸಿರುವ
ಆಜ್ಞೆಯು.' ಇಂಥ ಫೋರತರವಾದ, ಪ್ರಾಯಶ್ಚಿತ್ತಕ್ಕೆ ಹೆದರಿಯೇ ಜನರು
ವಿಧಿಪೂರ್ವಕವಾದ ವಿವಾಹವೆಂದರೆ ಕಡಿಯದಂಥ ಸಂಬಂಧವೆಂದು ಅವರು
ಹೇಳುತ್ತಿರುವರು.
"ನಮ್ಮ ವ್ಯಾಘ್ರವರ್ಗದವರಲ್ಲಿ ವ್ಯವಹೃತವಾಗಿರುವ ವಿವಾಹ
ಪದತಿಗೆ ಮನುಷ್ಯರು ಅಸಮ್ಮತವಾದ ಪದ್ಧತಿಯೆಂದು ಕರೆಯುತ್ತಾರೆ. ಈ
ವಿವಾಹಪದ್ಧತಿಯು ಮನುಷ್ಯ ಜಾತಿಯಲ್ಲಿ ಅಪರೂಪವಾದದ್ದೆಂದು ನಾನು
ಹೇಳಲಾರೆನು. ಮನುಷ್ಯರಲ್ಲಿ ಅನೇಕ ಜನ ಸಿ ಸ್ತ್ರೀಪುರುಷರು ಸಮ್ಮತವಾದ
೬೪ ------------------------------------------------------------------------
ವಿವಾಹ ಪದ್ಧತಿಗೆ ಒಳಗಾಗಿರುವದಲ್ಲದೆ ಅಸಮ್ಮತವಾದ ಪದ್ಧತಿಯನ್ನಾದರೂ
ಅವಲಂಬಿಸಿಕೊಂಡಿರುವರು. ವಿಧಿಪೂರ್ವಕವಾದ ವಿವಾಹಗಳು ಮುಚ್ಚು
ಮರೆಯಾಗಿ ನಡಿಯುವದಿಲ್ಲ. ಆದರೆ ಅಸನ್ಮತವಾದ ನಿವಾಹಗಳು ಅನಶ್ಯ
ವಾಗಿ ಏಕಾಂಶದಲ್ಲಿಯೇ ಅಗತಕ್ಕವುಗಳು. ಅಸಮ್ಮತವಾದ ವಿವಾಹದ
ಗುಟ್ಟು ಹೊರಬಿದ್ದಿತೆಂದರೆ ಆ ವಧುವಿನ ಪೂರ್ವದ ಗಂಡನು ಆಗಂತುಕನಾಗಿ
ಬಂದಿರುವ ಹೊಸ ಗಂಡನನ್ನು ಬಡಿಯಲಿಕ್ಕೆ ಹೋಗಿ ಅನನನ್ನು ಬಹುಪರಿ
ಯಾಗಿ ಬಾಧಿಸುತ್ತಾನೆ. ಇದ್ದಿಲ್ಲ ಉಪಾಧ್ಯಾಯರ ಕುಚೋದ್ಯತನದ ಪರಿ
ಣಾಮವಾಗಿರುವದಾಗಿ ತೋರುತ್ತದೆ. ಯಾಕೆಂದರೆ ಅಸಮ್ಮತವಾದ ವಿವಾ
ಹಕ್ಕೆ ಉಪಾಧ್ಯಾಯನು ಬೇಕಾಗಿಯೂ ಇರುವದಿಲ್ಲ; ಅಲ್ಲಿ ಅವನಿಗೆ ಓದನ
ಮೋದಕಗಳ ಪ್ರಾಪ್ತಿಯೂ ಇರುವದಿಲ್ಲ.
" ಮನುಷ್ಯರಲ್ಲಿ ಅನೇಕರು ( ಸ್ರ್ರೀಪುರುಷರೀರ್ವರೂ ). ನಮ್ಮ
ವಿವಾಹದ ( ಅಸಮ್ಮತವಾದ ವಿವಾಹದ) ಪದ್ಧತಿಯ ಅಭಿಲಾಷೆಯನ್ನೇ
ತಳೆದವರಾಗಿರುತ್ತಾರೆ. ಆದರೆ ಉಪಾಧ್ಯಾಯರ ಅಂಜಿಕೆಗಾಗಿ ತಾವು
ಹೊಂದಿದ ವಿವಾಹಸಂಬಂಧದ ವಾರ್ತೆಯನ್ನು ಕೂಡಾ ಯಾರಿಗೂ ತಿಳಿಯ
ಗೊಡುವದಿಲ್ಲ. ಈ ಅಸಮ್ಮತವಾದ ವಿವಾಹಾಚರಣವು ಪ್ರತಿಷ್ಠಿತರಾದ
ಜನರಲ್ಲಿಯೇ ಅಧಿಕವಾಗಿರುವದೆಂಬದನ್ನು ನಾನು ಮನುಷ್ಯರ ವಸತಿಯಲ್ಲಿರು
ವಾಗ ಮನಗಂಡಿರುವೆನು. ಆರ್ಥಾತ್, ಸಭ್ಯಗೃಹಸ್ಥರೆ. ನಮ್ಮ ವಿವಾಹ
ಪದ್ಧತಿಯು ಮನುಷ್ಯರಲ್ಲಿ ಸನ್ಮಾನ್ಯರಾದವರಿಗೆ ಇಷ್ಟವಾದದ್ದೆಂದು ತೋರಿ
ರಲು ನಮ್ಮ ವಿವಾಹಪದ್ಧತಿಯೇ ಶ್ರೇಷ್ಠವಾದದ್ದಲ್ಲವೆ? ಸುಕರವಾಗಿಯೂ
ಇಷ್ಟವಾಗಿಯೂ ಪ್ರೇಮಸಂಪೂರಿತವಾಗಿಯೂ ಶಿಷ್ಟಸಮ್ಮತವಾಗಿಯೂ
ಇರುವ ನಮ್ಮ ವಿವಾಹದ ಪದ್ಧತಿಯು ಸೋಜಿಗವಾಗಿರುವ ಪ್ರಾಣಿವರ್ಗದವ
ರಾದ ಮನುಷ್ಯರಲ್ಲಿ ಸಾರ್ವತ್ರಿಕವಾಗಿರಲೆಂದು ನಾನು ಹಾರೈಸುತ್ತೇನೆ.
ಮನುಷ್ಯರಲ್ಲಿ ಕೆಲಜನ ಬುದ್ಧಿ ಶಾಲಿಗಳು ಅಪ್ರತಿಹತವಾದ ಪ್ರೇಮಯುತ
ವಾಗಿರುವ ಅಸಮ್ಮತವಾದ ವಿವಾಹಪದ್ಧತಿಯೇ ಶ್ರೇಷ್ಠವಾದದ್ದೆಂದು
ಬೋಧಿಸಿ ಗ್ರಂಥಗಳನ್ನು ಕೂಡ ಬರೆದಿದ್ದಾರೆ. ಇಂಥ ಜ್ಞಾನಪ್ರಕಾಶವುಳ್ಳ
ಮಹಾತ್ಮರಾದ ಮನುಷ್ಯರನ್ನು ನಮ್ಮೀ ಮಹಾಪರಿಷತ್ತಿನ ಸನ್ಮಾನಿತ
ಸಭಾಸದರನ್ನಾಗಿ ಮಾಡಿಕೊಳ್ಳತಕ್ಕದ್ದೆಂದು ನಾನು ವಿನಯದಿಂದ
೬೫ --------------------------------------------------------------------
ಸೂಚಿಸುತ್ತೇನೆ. ಇಂಥ ಜನರನ್ನು ನಾವು ಭಕ್ಷಿಸುವದನ್ನು ಬಿಟ್ಟು ಬಿಡಬೇಕು.
ಯೂಕೆಂದರೆ ಈ ವಿವಾಹದೆ ಪದ್ದತಿಯಲ್ಲಾದರೂ ಸ ಮನುಷ್ಯ ರಿಗೂ
ಸಾಮ್ಯತೆ ಉಂಟಾಗುವದಲ್ಲವೆ ?
" ಮೇಲೆ ವಿವರಿಸಿದ ಎರಡು ವಿವಾಹಪದ್ಭತಿಗಳಲ್ಲದೆ ವಿನಿಮಯ
ವಿವಾಹವೆಂಬ ಮೂರನೆಯ ಪದ್ಧತಿಯಾದರೂ ಮನುಷ್ಯರಲ್ಲಿ ಇರುವದಾಗಿ
ತೋರುತ್ತದೆ. ಪ್ರಸಂಗವಿಶೇಷದಲ್ಲಿ ಹೀಗೆ ಸತಿಸತಿಗಳಾದವರು ಪರಸ್ಪರರ
ಸಮ್ಮತಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಾರೆ."
ಮತ್ತೆ ಮಹನದಂಷ್ಟ್ರನೆದ್ದು " ದುಡ್ಡು ಎಂದರೇನು?” ಎಂದು
ಕೇಳಿದನು.
" ದುಡ್ಡೆಂದರೆ ಮನುಷ್ಯನು ಭಕ್ತಿಪುರಸ್ಸರನಾಗಿ ಪೂಜಿಸುತ್ತಿರುವ
ದೇವತೆಯು. ಸಮಸ್ತ ದೇವತೆಗಳಲ್ಲಿ ದುಡ್ಡಿನ ದೇವತೆಯೇ ಶ್ರೇಷ್ಠವಾ
ದದ್ದು. ಬೆಳ್ಳಿ, ಬಂಗಾರ, ತಾಮ್ರದ ಬಿಲ್ಲೆಗಳ ಮೇಲೆ ಈ ದೇವತೆಯ
ಪ್ರತಿಮೆಯಿರುವದು. ಕಬ್ಬಿಣ, ತವರು, ಕಟ್ಟಗೆ ಮುಂತಾದ ಕಡಿಮೇ ತರದ
ಬಿಲ್ಲೆಗಳಲ್ಲಿ ಈ ದೇವತೆಯೆ ಸಾನ್ನಿಧ್ಯವಿರಲಾರದಂತೆ! ಉಣ್ಣೆ, ರೇಸಿಮೆ,
ತೊಗಲು ನೂಲುಗಳಿಂದ ಮಾಡಿದ ಚೀಲಗಳಲ್ಲಿ ದುಡ್ಡಿನ ದೇವತಾಮೂರ್ತಿ
ಗಳನ್ನು ಇಟ್ಟು ಜನರು ಆ ಚೀಲಗಳನ್ನು ಟೊಂಕದಲ್ಲ ಭದ್ರವಾಗಿ ಕಟ್ಟಿ
ಕೊಂಡು ತಿರುಗುವರು. ಯಾರ ಮನೆಯಲ್ಲಿ ಈ ದೇವತಾಮೂರ್ತಿಗಳು
ಅಸಂಖ್ಯವಾಗಿವೆಯೋ ಆ ಮನೆಯ ಗೌರವವನ್ನು ಬಣ್ಣಿಸಲಸಾಧ್ಯವು. ಈ
ಮೂರ್ತಿಗಳ ಪ್ರಾಪ್ಮಿಗಾಗಿ ಮನುಷ್ಯ ರು ಜೀವದ ಎಚ್ಚರವಿಲ್ಲದೆ ಸಾಹಸ
ಮಾಡುತ್ತಾರೆ. ಈ ದೇವತೆಯ ಅರ್ಚಕರಿಗೆ ( ಅಂದರೆ. ಹೆಚ್ಚಾಗಿ ದುಡ್ಡು
ಗಳಿಸಿದವರಿಗೆ ) ಎಲ್ಲಿ ಹೋದಲ್ಲಿ ಬಹುಮಾನವು ! ಅಂಥವರ ಕೃಪಾಕಟಾಕ್ಷ
ಮಾತ್ರದಿಂದಲೇ ಬಡವರು ಕೃತಾರ್ಥರಾಗುತ್ತಾರೆ,
" ಸಕಲವಾದ ಮನುಷ್ಯವ್ಯಾಪಾರಗಳಲ್ಲಿ ಆ ದುಡ್ಡಿನ ದೇವತೆಯ
ಸಾನ್ನಿಧ್ಯವಿದ್ದೇ ಇರುವದು. ಅದರ ಮಹಾತ್ಮ್ಯವೇ ಅಂಥ ವಿಚಿತ್ರ ವಾದದ್ದು,
ಅದರ ಪ್ರಸಾದದಿಂದ ಬೇಕಾದ ವಸ್ತುವಿನ ಪ್ರಾಪ್ತಿಯನ್ನು ಮಾಡಿಕೊಳ್ಳ
ಬಹುದು. ಆ ದೇವತೆಯ ಸಂಪೂರ್ಣವಾದ ವಾಸವು ಯಾರ ಮನೆ
ಯಲ್ಲಿಯೋ ಅವರು ಬೇಕಾದಂಥ ಕ್ರೂರ ಕರ್ಮಗಳನ್ನು ಮಾಡಿ ದಕ್ಕಿಸಿ
೬೬ ----------------------------------------------------------------------------
ಕೊಳ್ಳಬಲ್ಲರು. ದುಡ್ಡಿನ ಬೆಂಬಲವಿಲ್ಲದೆ ಸಂಭಾವನೆಯನ್ನು ಹೊಂದಿದಂಥ
ಒಂದಾದರೂ ಸದ್ಗುಣವು ಈ ಭೂತಲದಲ್ಲಿ ಇರುವದೋ ? यस्यास्ति वित्तं
सनरः कुलीनः । स पडितः स श्रुतिमान् गुणज्ञः ॥ स एव वक्ता स च दर्शनीयः ।
सर्वे गुणाः कांचनमाश्रयते ॥ ಎಂಬ ಸೂಕ್ತಿಯು ಮನುಷ್ಯರ ಪ್ರಚಾರದಲ್ಲಿ
ಇರುವದು. ”
ಸುವರ್ಣಾಂಗಿಯೂ ಸುದಂಷ್ಟ್ರೆಯೂ ಆದ ವ್ಯಾಘ್ರಯುವತಿಯೋ
ರ್ವಳು ಇನಿದಾಗಿ ಗರ್ಜಿಸಿ " ಪಂಡಿತರೆ, ನಿಮ್ಮ ಸೂಕ್ತಿಯ, ಅರ್ಥವನ್ನು
ನಮಗೆ ತಿಳಿಯುವ ಹಾಗೆ ಹೇಳಬಾರದೆ? '' ಎಂದು ಮಂದಸ್ಮಿತೆಯಾಗಿ
ಕೇಳಿದಳು. ಆಗ ಪಂಡಿತರು ಸಂತೋಷದಿಂದ ತಲೆಯೂಗಿ ನಕ್ಕು ಚತುರೆ
ಯಾದ ಯುವತಿಯೆ ಕೇಳು. " ಎಂದು ಅರ್ಥವನ್ನು ಹೇಳಿದರು.
"ಯಾರಲ್ಲಿ ದುಡ್ಡು ಇರುವದೋ ಆ ಮನುಷ್ಯನೇ ಕುಲೀನನು;
ಅವನೇ ಪಂಡಿತನು; ಅವನೇ ಬಹುಶ್ರುತನು ಅವನೇ ಸುಂದರನು. ಸಾರಾಂಶ,
ಎಲ್ಲ ಗುಣಗಳು ದುಡ್ಡಿನಲ್ಲಿಯೇ ಇರುವವು.
ಎಲ್ಲ ಸಭಾಸನರು ಈ ಮೂರ್ಖತನದ ಸೂಕ್ತಿಯನ್ನು ಕೇಳಿ
ಅಪಹಾಸಮಾಡಿ ನಕ್ಕು ಚಪ್ಪಾಳೆ ಹೊಡೆದರು.
"ಕೇಳಿರಿ! ಪಂಡಿತನ ವಿದ್ಯಾಸಂಪತ್ತಿಯು ಎಷ್ಟಾಗಿದ್ದರೂ ಅವನಲ್ಲಿ
ಹಣವಿಲ್ಲದಿದ್ದರೆ ಅನನು ಮೂರ್ಖನಿಗಿಂತಲೂ ಕಡೆಯಾದ ಯೋಗ್ಯತೆ
ಯವನು. ನಮ್ಮಲ್ಲಿವ್ಮಾಘ್ರ ಶ್ರೇಷ್ಠನೆಂದರೆ ಸೌಂದರ್ಯ, ಬಲ, ಪರಾಕ್ರಮಾದಿ
ಗುಣವುಳ್ಳವನೆಂಬ ಅರ್ಥವಾಗುತ್ತದೆ. ಮನುಷ್ಯನಲ್ಲಿ ಶ್ರೇಷ್ಠನಾದ ಮನುಷ್ಯ
ನೆಂದರೆ ಬಹಳ ಹಣವಿದ್ದವನೆಂಬ ಅರ್ಥವೇ ಅರ್ಥವು. ಅವನು ಮೂರ್ಖ
ನಾಗಿದ್ದರೂ ಚಿಂತೆಯಿಲ್ಲ, ಕುರೂಪಿಯಾಗಿದ್ದರೂ ಚಿಂತೆಯಿಲ್ಲ, ಕುಕರ್ಮ
ಗಳನ್ನು ಮಾಡಿ ದುಡ್ಡಗಳಿಸಿದವನಾಗಿದ್ದರೂ ಚಿಂತೆಯಿಲ್ಲ.
" ಈ ಪ್ರಕಾಂವಾಗಿರುವ ದುಡ್ಡಿನ ಸರ್ವತೋಮುಖವಾಗಿರುವ
ಮಾಹಾತ್ಮ್ಯವನ್ನು ಕಂಡು ಅದರ ಪ್ರ ಚಾರವನ್ನು ನಮ್ಮೀ ಜನಾಂಗದಲ್ಲಿ
ಮಾಡಿಸಬೇಕೆಂಬ ಕುತೂಹಲವು ನನಗಾಗಿತ್ತು.. ಆದರೆ ನಾನು ಹೆಚ್ಚು
ಹೆಚ್ಚಾಗಿ ಈ ಬಗ್ಗೆ ವಿಚಾರಣೆಯನ್ನು ಮಾಡಲಾಗಿ ಆ ಪದ್ಧತಿಯು
ಅಪ್ರಶಸ್ತವಾದದ್ದೆಂದು ಕಂಡುಬಂದಿತು. ಮನುಷ್ಯಮಾತ್ರಕ್ಕೆ ಉಂಟಾಗಿರುವ
೬೭ ---------------------------------------------------------------------------
ಅನೇಕವಾದ ಅನರ್ಥಗಳಿಗೆ ದುಡ್ಡಿನ ಉಪದ್ವ್ಯಾಪವೇ ಮೂಲವಾಗಿರುವದು.
ಹುಲಿಗಳಾಗಲೀ, ಇನ್ನುಳಿದ -ಸತ್ವಶಾಲಿಗಳಾದ ಪ್ರಾಣಿಗಳಾಗಲೀ, ಸ್ವ
ಪಾತೀಯರನ್ನು ಕಂಡು ಮತ್ಸರಪಟ್ಟು ದ್ವೇಶಿಸುವದಿಲ. ಈ ನಿಂದ್ಮವಾದ
ದುರ್ಗುಣವು ಮನುಷ್ಯರೆಂಬ ಕೀಳುಪ್ರಾಣಿಗಳಲ್ಲಿ ಮನೆಮಾಡಿಕೊಂಡಿದೆ.
ಇದಕ್ಕೆಲ್ಲ ಮೂಲವೆಂದರೆ ಅವರ ಆರಾಧ್ಯದೇವತೆಯಾದ ಕಾಂಚನದ
ತಾಳಿಯೇ. ಆದರ ಪ್ರಾಪ್ತಿಗಾಗಿ ಆ ದುರ್ದೈವಿಗಳಾದ ಪ್ರಾಣಿಗಳು ಒಬ್ಬರ
ಕುತ್ತಿಗೆಯನ್ನೊಬ್ಬರು ಹಿಚುಕಲು ಹಿಂದೆ ಮುಂದೆ ನೋಡುವದಿಲ್ಲ. ಜನ
ಸಮುದಾಯವನ್ನು ಕಟ್ಟಿಕೊಂಡು ಯುದ್ಧವೆಂಬ ಮಹಾವ್ಯಾಜ್ಯವನ್ನು
ಅವರು ಆಗಾಗ್ಗೆ ಮಾಡುವದುಂಟು. ಇದಾದರೂ ದುಡ್ಡಿಗಾಗಿಯೇ, ಈ
ವಿಚಾರಗಳಿಗಾಗಿ, ನಮ್ಮಲ್ಲಿ ಹಣದ ಪ್ರಸಾರವನ್ನು ಮಾಡುವದು ಸರ್ವಥಾ
ಘಾತಕವಾದದ್ದೆಂದು ತಿಳಿದು ಆ ವಿಚಾರವನ್ನು ನಾನು ಬಿಟ್ಟು ಕೊಟ್ಟೆ
ನೆಂದು ಆಗಲೇ ಹೇಳಲಿಲ್ಲವೆ? ಈ ಸುವಿಚಾರವು ಮನುಷ್ಯರಲ್ಲಿ ಹುಟ್ಟ
ಲೊಲ್ಲದು.
"ಮನುಷ್ಮರ ಮದುವೆಯ ಸಾಂಪ್ರದಾಯದಂತೆಯೇ ಅಪಹಾಸ್ಯಾ
ಸ್ಪದವಾಗಿಯೂ ನಿಂದ್ಯವಾಗಿಯೂ ಇರುವ ಅನೇಕವಾದ ರೂಢಿಗಳಿರುವವು,
ಅವುಗಳನ್ನೆಲ್ಲ ಹೇಳುತ್ತೆ ಕುಳಿತರೆ ನಮ್ಮ ಕಾರ್ಯವಿಶೇಷಗಳಿಗೆ ವ್ಯತ್ಯಯ
ಬರುವದೆಂದು ತಿಳಿದು ನಾನು ನನ್ನ ವ್ಯಾಖ್ಯಾನವನ್ನು ಮುಗಿಸುತ್ತೇನೆ.
ಅವಕಾಶವಾದರೆ ಮತ್ತೊಂದು ದಿವಸ ಆ ಗತಿಗಳನ್ನು ಸವಿಸ್ತಾರವಾಗಿ
ವರ್ಣಿಸುವೆನು.”
ಹೀಗೆ ನುಡಿದು ಪಂಡಿತ ಬೃಹಲ್ಲಾಂಗೂಲವ್ಯಾಫ್ರರವರು ತಮ್ಮ
ವ್ಯಾಖ್ಯಾನದ ಸಮಾಸ್ತಿಯನ್ನು ಮಾಡಿದರು. ಸಕಲ ಸಭಾಸದರು ತಮ್ಮ ತಮ್ಮ
ಅದ್ಭುತವಾದ ಬಾಲಗಳನ್ನು ಎತ್ತೆತ್ತಿ ನೆಲಕ್ಕೆ ಅಪ್ಪಳಿಸಿದರು. ತಿಳಿದವರಾದ
ಕೆಲ ಜನ ವ್ಯಾಘ್ರ ರು ಗುಡುಗಿ ವ್ಯಾಖ್ಯತೃಗಳನ್ನು ಸಂಭಾವಿಸಿದರು.
ದೀರ್ಥನಖನೆಂಬ ತರುಣನಾದ ವ್ಯಾಘ್ರ ಪದವೀಧರನು ಎದ್ದುನಿಂತು
ವ್ಯಾಖ್ಯಾತೃಗಳಿಗೆ ಪ್ರತಿವಾದಿಯಾಗಿ ಮಾತಲಾರಂಭಿಸಿದನು.
"ಮಹಿಲೆಯರೇ, ಸಭ್ಯಗೃಹಸ್ಥರೇ ನಿಮ್ಮೆಲ್ಲರ ಪ್ರತಿನಿಧಿಯಾಗಿ ನಾನು
ಬೃಹಲ್ಲಾಂಗೂಲ ಪಂಡಿತರ ಉಪಕಾರವನ್ನು ಸ್ಮರಿಸಿ ಪರಮ ಆಲ್ಹಾದಕರ
೬೮ -----------------------------------------------------------------------
ವಾದ ಕರ್ತವೃವನ್ನು ನೆರವೇರಿಸಲು ನನಗೆ ಅಭಿಮಾನವೇ. ಶಾಸ್ತ್ರದ
ಸೂಕ್ಷ್ಮವಾದ ತತ್ವಗಳನ್ನು ಪರ್ಯಾಲೋಚಿಸಲಾಗಿ ಇಂದಿನ ವ್ಯಾಖ್ಯಾನವು
ತಥ್ಯಾಂಶವಿಲ್ಲದ್ದಾಗಿಯೂ ಮಿಥ್ಯಾವಿಚಾರಗಳಿಂದ ಸರಿಪ್ಲುತವಾದದ್ದಾಗಿಯೂ
ಆಯಿತೆಂದು ಹೇಳಲು ಅಭ್ಯಂತರವಿಲ್ಲ. ಪಂಡಿತರೂ ಅಧೀಶರೂ ಸನ್ಮಾನ್ಯರೂ
ಆಗಿದ್ದರೂ ಆವರ ವ್ಯಾಖ್ಯಾನವನ್ನು ಕೇಳಿದವರಿಗೆ ಅವರು ಮೂರ್ಖರೇ
ಎಂದು ಭಾಸವಾಗದೆ ಇರದು...
"" ಅಸಭ್ಯವರ್ತನವು! ತಡೆಯಿರಿ, ಆ ಭಾಷಣೋದ್ಭತನನ್ನು! ”
ಎಂದು ಅನೇಕರು ಕೂಗಿದರು. ಆಗ ಅಧ್ಯಕ್ಷರು ತರುಣನಾದ ಆ ದೀರ್ಘನಖ
ನನ್ನು ಕುರಿತು: " ತರುಣನಾದ ಪದವೀಧರನೆ, ಸುಶಿಕ್ಷಿತರ ಮೇಳೆಗಳಲ್ಲಿ
ನೀನಾಡಿದಂತೆ ಅಪ್ರಿಯವಾದ ಸತ್ಯವನ್ನಾಡುವದು ಅಸಭ್ಯವರ್ತನನೆಂದು
ಗೃಹೀತವಾಗಿದೆ. ಪಾರ್ಲಿಮೆಂಟ ಸಭೆಯಲ್ಲಿ ನಡೆಯುವ ವಾದವಿವಾದಗಳಲ್ಲಿ
ಇದಕ್ಕೂ ಅಭದ್ರವಾದ ಆರೋಪಗಳನ್ನು ಒಬ್ಬ ಸಭಾಸದನು ಮತ್ತೊಬ್ಬ
ಸಭಾಸದನ ಮೇಲೆ ಸುಖೇನೈನ ಮಾಡಬಹುದು.'' ಎಂದು ಸೂಚಿಸಿದರು.
" ಕೇಳಿರಿ! ಕೇಳಿರಿ!” ಎಂದು ಎಲ್ಲರೂ ಅಧ್ಯಕ್ಷರ ಮಾತಿನ
ಸ್ವಾರಸ್ಯಕ್ಕೆ ಮೆಚ್ಚಿ ಕೂಗಾಡಿದರು.
ದೀರ್ಥನಖನು ಉಪಕ್ರಮಿಸಿದ್ದು: " ಅಧ್ಯಕ್ಷರ ಆಜ್ಞೆಗೆ ನಾನು
ಒಳಗಾಗಿರುವೆನು. ವ್ಯಾಖ್ಯಾತೃಗಳು ಒಳ್ಳೇ ಸತ್ಯವಾದಿಗಳಾಗಿರುವರೆಂದೂ,
ಅವರ ಸಂಭಾಷಣದ ಮುಖ್ಯ ಭಾಗದಲ್ಲೆಲ್ಲ ಅಸತ್ಯತೆಯ ಜಾಲವಿದ್ದರೂ
ಒಂದೊಂದು ಮಾತುಗಳು. ಸತ್ಯವಾದವುಗಳೆಂದು ನಾವು ಅಂಗೀಕರಿಸಿ
ಕೊಳ್ಳಬಹುದು. ಅವರು ವಿಖ್ಯಾತರಾದ ಜ್ಞಾನಿಗಳೆಂದು ನಾವೆಲ್ಲರೂ
ಒಪ್ಪಿಕೊಂಡಿದ್ದೇವೆ, ಆದರೆ ಅವರ ವ್ಯಾಖ್ಯಾನದಲ್ಲಿ ಕಿವಿಯಲ್ಲಿ ಹಾಕಿ
ಕೊಳ್ಳುವಂಥ ಮಾತು ಒಂದಾದರೂ ಇದ್ದಿಲ್ಲ. ಆದರೂ ಅವರು ಮಾಡಿದ
ಉಪದೇಶಪರವಾದ ಭಾಷಣದಿಂದ ನಾವು ಉಪಕೃತರಾಗಿರತಕ್ಕದ್ದು;
ಮಾತ್ರ ಆ ಉಪದೇಶಗಳಿಗೆ ನಾನು ಸರ್ವಥಾ ಒಪ್ಪಿಗೆಯನ್ನು ಕೊಡ
ಲಾರೆನು. ಮನುಷ್ಯರಲ್ಲಿ ವ್ಯವಹೃತವಾದ ವಿವಾಹದ ಪದ್ಧತಿಯನ್ನು
ಕುರಿತು ಅನರು ಹೇಳಿದ ಮಾತುಗಳಲ್ಲಿ 'ಅಥ'ದಿಂದ'ಇತಿ' ಯ ವರೆಗೆ ಅಸತ್ಯವು
ತುಂಬಿಹೋಗಿದೆ.
೬೯ ---------------------------------------------------------------------
" ನಮ್ಮಲ್ಲಿ ಯಾವನಾದರೊಬ್ಬ ವ್ಯಾಘ್ರನು ಪ್ರಜೋತ್ಪತ್ತಿಯ
ನಿಮಿತ್ತವಾಗಿ ಸುಂದರಿಯರಾದ ವ್ಯಾಘ್ರೀಯರೊಡನೆ ಸಂಯೋಗವನ್ನು
ಬಯಸಿದರೆ ಅದಕ್ಕೆ ವಿವಾಹವೆನ್ನುತ್ತಾರೆ. "ಸಮ್'ಎಂದರೆ ಸಂಗಡ, "ಯುಜ'
ಎಂದರೆ ಕೂಡೋಣ ಎಂಬೆರಡು ಘಟಕಗಳಿಂದ ಸಂಯೋಗ ಶಬ್ದವು ಹುಟ್ಟಿದೆ.
ಮನುಷ್ಯರ ವಿವಾಹವು ಈ ರೀತಿಯಾಗಿರುವದಿಲ್ಲ. ಸ್ವಭಾವತಃ ಮನುಷ್ಯನು
ಬಲಹೀನನೂ ಪರಾವಲಂಬಿಯೂ ಆಗಿರುವದರಿಂದ ಉಚ್ಛರಾದವರ ಅನು
ಕೂಲತೆಯ ಅವನಿಗೆ ಅವಶ್ಯವಾಗಿ ಬೇಕು. ಅದಕ್ಕಾಗಿ ತನ್ನ ವರ್ಗದ
ಸ್ತ್ರೀಯೊಬ್ಬಳ ಅಧೀನನಾಗಿದ್ದು ಅವಳು ಹೇಳಿದಂತೆ ಅವನು ನಡಕೊಳ್ಳಲೇ
ಬೇಕಾಗಿರುವದು. ಇಂಥ ಸಂಬಂಧಕ್ಕೆ ಮನುಷ್ಯನು ಮದುವೆಯೆಂದು
ಹೇಳುತ್ತಾನೆ. ಸಾಕ್ಷಿಗಳೆದುರಿಗೆ ಈ ಸಂಬಂಧವನ್ನು ಮಾಡಿಕೊಂಡರೆ
ಅದಕ್ಕೆ ವಿಧಿಸೂರ್ವಕವಾದ ವಿವಾಹವೆಂಬ ಹೆಸರು. ಆ ಸಾಕ್ಷಿಗಳಿಗೆ ಉಪಾ
ಧ್ಯಾಯರೆಂದೆನ್ನುತ್ತಾರೆ, ನಮ್ಮ ವ್ಯಾಖ್ಯಾನಕಾರರು ವಿವಾಹದ ವಿಧಾನಗಳ
ವಿಷಯವಾಗಿ ಹೇಳಿದ ಸಂಗತಿಯು ಸಪ್ರಮಾಣವಾದದ್ದಲ್ಲ. ನಿಜವಾದ
ವಿಧಾನವೆಂದರೆ ಸಾಮಾನ್ಯವಾಗಿ ಹೀಗಿರುತ್ತದೆ :
ಉಪಾಧ್ಯಾಯನು ವಧುವರರನ್ನು ಕೇಳುತ್ತಾನೆ, ""ಈ ನಿಮ್ಮ
ವಿವಾಹವಿಧಾನಕ್ಕೆ ನಾನು ಸಾಕ್ಸಿಯಾಗಿರುವದಕ್ಕೆ ನಿಮಗೆ ಸಮ್ಮತಿಯೇ,? "
ವರನು: "ಸ್ವಾಮಿ ಈ ಸ್ತ್ರೀಯು ನನ್ನ ಸ್ವಾಮಿನಿಯೂ ನನ್ನ
ನಿಯಾಮಕಳೂ ಆಗಿರಬೇಕೆಂದು ನಾನು ಒಪ್ಪಿಕೊಂಡಿರುವದಕ್ಕೆ ನೀವು
ಸಾಕ್ಷಿಗಳಾಗಿರಿರಿ ಮರಣದಿಂದ ನಮ್ಮ ಸಂಬಂಧವು ಕಡಿಯುವವರೆಗೆ
ನಾನು ಮೇಲ್ಕಂಡ ರೀತಿಯಿಂದ ಇರಲು ಒಪ್ಪಿಕೊಳ್ಳುತ್ತೇನೆ.”
ಉಪಾಧ್ಯಾಯ ; "ಮತ್ತೇನಾದರೂ ಹೇಳುವದಿದೆಯೋ?"
ವರನು : "ನಾನು ಶಪಥಮಾಡಿ ವಚನ ಕೊಡುವದೇನಂದರೆ ನಾನು
ಈ ಸ್ತ್ರೀಯ ಅವ್ಯಭಿಚಾರಿಯಾದ ದಾಸನೂ ಪರಿಚಾರಕನೂ ಆಗಿರುವೆನು.
ನಮ್ಮೀರ್ವರ ಜೀವನಕ್ರಮಕ್ಕೆ ಅವಶ್ಯವಾಗಿರುವ ಪದಾರ್ಥಗಳನ್ನೆ ಲ್ಲ ನಾನು
ಸ್ವಸಂತೋಷದಿಂದ ತಂದು ಈ ಸ್ತ್ರೀಯ ಸ್ವಾಧೀನ ಮಾಡುವೆನು. ನಾನು
ದೊರಕಿಸಿದ್ದನ್ನೆಲ್ಲ ತಿಂದು ಬಿಡುವದೊಂದೇ ಇವಳ ಕೆಲಸವು.”
ಉಪಾಧ್ಯಾಯ : ( ವಧುವನ್ನು ಕುರಿತು) "ನೀನೇನೆನ್ನುವಿ ?"
೭೦--------------------------------------------------------------------------
ವಧುವು: "ಈ ಮನುಷ್ಯನು ನನ್ನ ಪರಿಚಾರಕನೂ ಹೇಳಿದ್ದನ್ನು
ಕೇಳಿಕೊಂಡಿರುವ ದಾಸನೂ ಆಗಿರಬಹುದೆಂದು ನಾನು ಒಪ್ಪಿಗೆ ಕೊಟ್ಟಿದ್ದೇನೆ.
ಇವನು ನನ್ನ ಮನಸ್ಸಿಗೆ ಬರುವವರಿಗೆ ನಾನಿನನನ್ನು ನನ್ನ ಸೇವೆಯಲ್ಲಿ
ಇಟ್ಟುಕೊಳ್ಳುವನು, ಇವನ ಸಹಾಯವೂ ಸಮಾಗಮವೂ ನನಗೆ ಬೇಡಾದ
ಕ್ಷಣವೇ ಇವನನ್ನು ನಾನು ಹೊರಗೆ ಹುಕುವೆನು.
ಉಪಾಧ್ಯಾಯ; ""ತಥುಸ್ತು.”
"ಈಗಲೆ ನಾನು ತೋರಿಸಿಕೊಟ್ಟಂಥ ದೋಷಗಳು ನಮ್ಮ ವ್ಯಾಖ್ಯಾನ
ಕಾರರ ಭಾಷೆಯಲ್ಲಿ ಅನೇಕಾಗಿರುವವು. ನಾಣ್ಯವು ಮನುಷ್ಯರಿಂದ
ಸಂಪೂಜಿತವಾದ ವಸ್ತುವೆಂದು ಈಗಲೇ ಪಂಡಿತರು ಹೇಳಿದರಲ್ಲವೆ?. ಈ
ಮಾತಿನಲ್ಲಿ ದೋಷವಿರುವದು. ನಾಣ್ಯವೆಂದರೆ ಪ್ರಾಣಹಾರಕವಾದ ವಿಷವೇ
ಆಗಿರುತ್ತದೆ, ಮನುಷ್ಯರು ಅಪಾಯಕಾರಕವಾದ ವಿಷಪದಾರ್ಥಗಳನ್ನು
ತಿನ್ನುವಂಥ ವ್ಯಸನಗಳಲ್ಲಿ ನಿಮಗ್ನರಾಗಿರುವರು.. ಅದಕ್ಕಾಗಿಯೇ ಇವರಿಷ್ಟು
ನಾಣ್ಯದ ರಾಶಿಯನ್ನು ಸಂಪಾದಸಿಕೊಳ್ಳುವ ಹವಣಿಕೆಯಲ್ಲಿರುವರು. ಬೆಳ್ಳಿ
ಬಂಗಾರಗಳನ್ನು ಅವರಿಷ್ಟು ಆತುರರಾಗಿ ಸಂಪಾದಿಸಿಕೊಳುತ್ತಿರುವದನ್ನು
ಕಂಡು ಅವು ತಿನ್ನಲಿಕ್ಕೆ ರುಚಿಕರವಾಗಿರುವವೆಂದು ನಾನು ಚಿಕ್ಕವನಿದ್ದಾಗ
ತಿಳುಕೊಂಡಿದ್ದೆನು. ನಾಣ್ಯ ಗಳು ಹೊಟ್ಟೆಗೆ ಹಿತವೊ ಎಂಬ ಅನುಭವವನ್ನು
ತೆಗೆದುಕೊಳ್ಳಬೇಕೆಂದು ನಾನು ನಿಶ್ಚಯಿಸಿಕೊಂಡೆನು ವಿದ್ಯಾಧರೀ
ನದಿಯ ಸುರಮ್ಯವಾದ ತೀರದಲ್ಲಿ ಒಬ್ಬ ಮನುಷ್ಯನನ್ನು ನಾನು ಹಿಡಿದು
ಕೊಂದಾಗ ಅವನ ಟೊಂಕದಲ್ಲಿ ಚೀಲದಲ್ಲಿ ಕೆಲವು ಬೆಳ್ಳಿಯ ನಾಣ್ಯ
ಗಳನ್ನು ಕಂಡೆನು. ನಾನು ಕೂಡಲೆ ಆ ಚೀಲಕ್ಸೆ ಚೀಲವನ್ನೇ ಗಳಮ್ಮನೆ
ನುಂಗಿಬಿಟ್ಟಿನು, ಆ ರಾತ್ರಿ ನನಗುಂಟಾದ ಹೊಟ್ಟಿ ಕಡಿತದ ಬಾಧೆಯನ್ನು
ಯಾರ ಮುಂದೆ ಹೇಳಲಿ! ನಾಣ್ಯವು ವಿಷವಾಗದಿದ್ದರೆ ನನ್ನ ಹೊಟ್ಟೆ
ಕಡಿಯುತ್ತಿತ್ತೆ?"
ದೀರ್ಫನಖನ ಭಾಷಣವಾದ ಬಳಿಕ ಇನ್ನೂ ಕೆಲವು ಖಂಡನ ಮಂಡ
ನಾತ್ಮಕವಾದ ಭಾಷಣಗಳಾದವು. ಕಡೆಗೆ ಆಧ್ಯಕ್ಷರು ತಮ್ಮ ಉಲ್ಕಾ
ಸಮಾನವಾದ ನೇತ್ರಗಳನ್ನು ಒಳಿತಾಗಿ ತೆರೆದು ನೋಡಿ, ಮೈ ಒಡ್ಡ ಮುರು
ಕೊಂಡು ಆಲಸ್ಯದ ಜಾಡ್ಯವನ್ನು ನೀಗಿ ಒಳಿತಾಗಿ ಗರ್ಜಿಸಿ, ಮಹಾ
೭೧ ---------------------------------------------------------------------------
ಪರಿಷತ್ತಿನ ಕೆಲಸವು. ಅಂದಿಗೆ ಮುಗಿಯಿತೆಂದು ಸೂಚಿಸಿ ಸಭಾಸದರಿಗೆ
ನಾಲ್ಕು ಸಮಾರೋಪಣದ ಮಾತುಗಳನ್ನು ಹೇಳುವವರಾದರು :
" ವಿದುಷಿಯರೆ, ಮಹಾಜನಗಳೆ, ರಾತ್ರಿಯು ಬಹಳಾದಂತಾಯಿತು.
ಕಾರ್ಯವಿಶೇಷದ ಸಮಯವೂ ಸಮೀಪಿಸಿರುವದು. ಎರಳೆಗಳ ಹಿಂಡು
ಯಾವಾಗ ಬರುವದೋ ಯಾವಾಗ ಬಿಡುವದೋ ಯಾರು ಹೇಳಬಲ್ಲರು?
ಅದಕ್ಕಾಗಿ ನಾವು ಇಲ್ಲಿ ನಿರರ್ಥಕವಾಗಿ ಹೆಚ್ಚಿಗೆ ಕಾಲಕಳೆಯದರೆ ನಾವು
ನಮ್ಮ ಸಿದ್ಧತೆಯಲ್ಲಿರತಕ್ಕದ್ದು ಉಚಿತವು. ಅದಕ್ಕಾಗಿ ನಾನೊಂದು ದೊಡ್ಡ
ವ್ಯಾಖ್ಯಾ ನವನ್ನು ಕೊಟ್ಟು ಹೊತ್ತು ಗಳೆಯುವದಿಲ್ಲ. ಈ ರಾತ್ರಿಯಲ್ಲಿ ನಡೆದ
ಭಾಷಣಗಳೆಲ್ಲ ಸರಸವಾದವೆಂದು ನಾವೂ ನೀವೂ ಕೂಡಿಯೇ ಒಪ್ಪಿಕೊಳ್ಳ
ಬೇಕಾಗಿದೆ. ಪಂಡಿತ ಬೃಹಲ್ಲಾಂಗೂಲರು ಮನೋರಂಜಕವಾಗಿಯೂ
ಉಪದೇಶಪರವಾಗಿಯೂ ಆಗಿರುವ ವ್ಯಾಖ್ಯಾನವನ್ನು ಕೊಟ್ಟು ಪೂರ್ವಪಕ್ಷ
ಪರಪಕ್ಷಗಳಿಗೆ ಆಸ್ಪದವನ್ನು ಕೊಟ್ಟಿದ್ದು ಕೇಳಿ ನನಗೆ ತುಂಬಾ ಸಂತೊಷ
ವಾಗಿದೆ. ಇಂದು ನಾವು ಕೇಳಿದ ಭಾಸಣಗಳ ಮೇಲಿಂದ ಮನುಷ್ಯರು
ಅಸಂಸ್ಥತರಾದ ಜನಾಂಗದವರೆಂಬ ಸಿದ್ಧಾ೦ತವನ್ನು ಕಟ್ಟಲಭ್ಯಂತರವಿಲ್ಲ.
ನಾವು ವ್ಯಾಘ್ರರು ನಿಃಸಂದೇಹವಾಗಿ ಪ್ರಶಸ್ತವಾಗಿ ಸುಧಾರಿಸಿದ ವರ್ಗದವರು.
ಅದಕ್ಕಾಗಿ ಮನುಷ್ಯಜಾತಿಯವರಿಗೆ ವಿದ್ಯಾದಾನವನ್ನು ಕೊಟ್ಟು ಅವರನ್ನು
ಮುಂದಕ್ಕೆ ತರುವ ಕಾರ್ಯಗೌರವವು ನಮ್ಮದಾಗಿದೆ. ದೇವರು ನಮಗೀ
ರಮಣಿಯವಾದ ಸುಂದರಬನವನ್ನು ತೋರಿಸಿದ್ದಾದರೂ ಇದೇ ಉದ್ದೇಶ
ದಿಂದಲೇ ಎಂದು ನಾನು ನಿಶ್ಚಯ ಪೂರ್ವಕವಾಗಿ ಪ್ರತಿಪಾದಿಸುತ್ತೇನೆ.
ಮನುಷ್ಯರು ವಿದ್ಯಾ ಸಂಸ್ಕಾರವನ್ನು ಪಡೆದು ವಿಚಾರಶೀಲರಾದ ಹಾಗೆ ಅವರ
ಅಂಗಗಳು ಕೋಮಲತೆಯನ್ನು ಹೊಂದಿ ಮಾಂಸವು ಕಳಿತ ಗುಳಂಬದಂತೆ
ರುಚಿಕರವಾಗುವದು. ಮನುಷ್ಯರ ದೇಹದಲ್ಲಿ ಸುಕುಮಾರತೆಯು ಹೆಚ್ಚಾದ
ಹಾಗೆ ಅವರು ಹೀನಸತ್ವರಾಗಿ ನಮ್ಮ ಆಹಾರಕ್ಕೆ ಸುಲಭವಾಗಿ ಈಡಾ
ಗುವರು. ಅವರಲ್ಲಿ ವಿದ್ಯೆಯು ಹೆಚ್ಚಾದ ಹಾಗೆ ತಾವು ವ್ಯಾಘ್ರ ರ ಜೀವನಾ
ಧಾರವಾದ ಭಕ್ಷ್ಯಗಳು ಹುಟ್ಟಿದ್ದು ನಿರ್ವಿವಾದ ಮಾರೆಂದು ಅವರು
ಜೊಕ್ಕನೆ ತಿಳುಕೊಳ್ಳುವರು. ಇಂಥ ವಿದ್ಯೆ ನಾಗರಿಕತೆಯನ್ನು ನಾವು
ಮನುಷ್ಯವರ್ಗಕ್ಕೆ ಕಲಿಸಬೇಕೆಂಬದೇ ನಮ್ಮ ಪರಿಷತ್ತಿನ ಉದ್ದೇಶವು, ಈ
೭೨ --------------------------------------------------------------------------
ಸಂಗತಿಯನ್ನು ನೀವೆಲ್ಲರೂ ಸಂಪೂರ್ಣವಾಗಿ ಲಕ್ಷ್ಯದಲ್ಲಿಡಬೇಕೆಂದು ನಾನು
ಆಗ್ರಹಪೂರ್ವಕವಾಗಿ ಸೂಚಿಸುತ್ತೇನೆ.”
ಅಧ್ಯಕ್ಷರು ಮಾತಾಡಿ ಕುಳಿತ ಕೂಡಲೆ ಅಲ್ಲೋಲಕಲ್ಲೋಲವಾದ
ಬಾಲಗಳ ಅಪ್ಪಳಿಸುವಿಕೆಯೂ ಆಭಿನಂದನಪೂರ್ವಕವಾದ ಗರ್ಜನಗಳೂ
ವನೋದ್ದೇಶಗಳಲ್ಲೆಲ್ಲ ಪ್ರತಿಧ್ವನಿಗೊಟ್ಟಿ ಬಳಿಕ ಸಭಾವಿಸರ್ಜನವಾಯಿತು.
==========================================
೭೩----------------------------------------------------------------------
ಪ್ರಣಯದರ್ಪಣ
"I was as a gem concealed;
Me my burning ray revealed ”
— Koran.
ಜಗತ್ತಿನಲ್ಲಿ ಸಮಾಜಗಳಲ್ಲಿಯ ಗರ್ಭಶ್ರೀಮಂತರೇ, ಐಹಿಕಸೌಖ
ಸಂಪತ್ತಿಗೆ ಬಾಧ್ಯರು. ಐಹಿಕ ಸೌಖ್ಯಾಂದೋಲನದಲ್ಲಿ ಯಥೇಚ್ಛ ತೂಗಾಡಿ
ಆನಂದಾನುಭೂತಿಯನ್ನು ಪಡೆಯುವದು ಇವರ ಭಾಗ್ಯವೇ ಸೈ. ಗಾಳಿಯು
ಎಲ್ಲಿ ಬೀಸುತ್ತಿದ್ದರೂ, ಅದು ಹೇಗೆ ಬೀಸಿದರೂ, ಇವರಿಗೆ ಅದು ಅನು
ಕೂಲವೇ ಸರಿ. ಆದರೆ ಮಾನವೀ ಸ್ವಭಾವಕೃನುರೂಪವಾಗಿ, ಅವರ
ಅಂತರಂಗದ ವೈಭವವನ್ನು, ಪಕ್ಷಪಾತವಿಲ್ಲದೆ ಪರೀಕ್ಷೆ ಮಾಡತೊಡಗುವ
ದೊಂದೇ ತಡ, ಇವರ ಸೌಖ್ಯಸಾಗರದಲ್ಲಿಯೂ, ನಾನಾವಿಧವಾದ ತಿಮಿಂಗಿಲು,
ಬೆಟ್ಟದಂಥ ಹಡಗುಪಡೆಗಳನ್ನು ಕೂಡ ನುಂಗಿ ನೀರು ಕುಡಿಯುವಂಥ ಜಲ
ಚರಗಳು ಇರುತ್ತವೆಂಬುದನ್ನು ಕಂಡು, ಯಾರಿಗೂ ಆಶ್ಚರ್ಯವೆನಿಸದಿರದು.
ಇವರು ಅನುಭವಿಸುವ ಸೌಖ್ಯದಲ್ಲಿ ಸತ್ಯ ಭಾವನೆಯ ಸುಳುವು, ಇಲ್ಲವೆ ನಿಜನ
ವಾದ ತೃಪ್ತಿಯ ಲೇಶವು ಎಷ್ಟರ ಮಟ್ಟಿಗಿರುವದೆಂಬದು ಒಂದು ಫರ್ಲಾಂಗಿನ
ಮೇಲಿಂದ ತಿಳಿಯುವದು. ಬೇಕಾದಷ್ಟು ಮಾಟಾದ ವಿಟಗಾರನಿರವಲ್ಲವೇಕೆ,
( ಅವನು ಧಾರವಾಡ, ಠಾಣೆಯ ಚತುರರ ಆಸ್ಪತ್ರಿಗಳಲ್ಲಿ ಸೇರಿಕೊಂಡಿರ
ಬಾರದು ಮಾತ್ರ!) ಅವನನ್ನು ಅವನ ಸುಖಾನು ಭೂತಿಯ ಬಗ್ಗೆ ವಿಚಾರಿಸಲು
ಅವನೇನು ಹೇಳುವನು? ಏನೇನೋ ನೆನಪು ಮಾಡಿಕೊಂಡು ತನ್ನ ಆನಂದ
ಸಾಗರದಲ್ಲಿಯ ನೀರು ಉಪ್ಪಿನಕಟಿಯೆಂದೂ ತನ್ನ ದೋಣಿಯನ್ನು ಕದ್ದು
ಮುಚ್ಚಾಗಿ ಒಬ್ಬನೇ ಸಾಗಿಸಬೇಕಾದ್ದರಿಂದ ತನಗಾದ ಕಷ್ಟವನ್ನೂ ಹೇಳೇ
ಹೇಳುವನು ಹಾಗೂ ಈ ಸಾಖ್ಯಕ್ಕೆ ಬೆಂಕಿ ಬಿದ್ದರೂ ಅಡ್ಡಿ ಇಲ್ಲ, ತನ್ನ
ಸಮಾನಶೀಲರು ತನಗೆ ನಗದಿದ್ದ ರೆ ಸಾಕು; ತಾನು ಇನ್ನೂ ಸದ್ಗುಣಿ
ಯಾಗಲು ಹೆವಣಿಸುತ್ತಿರುವೆನೆಂದೂ ಖಂಡಿತವಾಗಿ ಹೇಳುವನು.
ದಿಲ್ಲೀ ಪಟ್ಟಣದಲ್ಲಿಯೇ ಬಸೀರಠಿಗೂ ನನಗೂ ಪರಿಚಯವಾಗಿ
ಪರಮಾನಂದವಾಯಿತು. ` ಬಸೀರನೆಂದಕ್ಕೆ ಹೈದರಾಬಾದಿನವನಾದರೂ,
೭೪ ------------------------------------------------------------------------
ಹೈದರಾಬಾದಿನ ಸ್ವೇಚ್ಛಾ ವಿಹಾರಿಗಳಾದ ಶ್ರೀಮಂತ ನವಾಬರಿಗೂ ಇವನಿಗೂ
ಇದ್ದ ಅಂತರವು ಥಟ್ಟನೆ ಹೊಳೆಯುತ್ತಿತ್ತು. ದಿಲ್ಲಿಯಲ್ಲಿದ್ದ ಇವನ ಪರಿಚಯಸ್ತ
ರಿಗೆ ಈತನ ಪೂರ್ವೇತಿಹಾಸವು ಗೊತ್ತಿತ್ತು. ಇವರಲ್ಲಿಯವನೊಬ್ಬನು, ತಾನು
ಥಿಯೇಟರ, ಸಿನಾಮೆಟೋಗ್ರಾಫಗಳಲ್ಲಿ, ನಾಚು ರಂಗುಗಳಲ್ಲಿ ಕಳೆಯತಕೃಷ್ಟು
ವೇಳೆಯನ್ನು ಕಳೆದು ಹೊತ್ತು ಕೂಡಿದಾಗ ನನಗೆ ಒಂದೆರಡು ಸಾರೆ ಈ
ಬಸೀರನ ಆಖ್ಯಾನವನ್ನು ನಿರೂಪಿಸಿದನು.
ತನ್ನ ತಂದೆಯ ನಿಧನದ ನಂತರ, ಬಸೀರನು ಅವನ ಇಡೀ ಸಂಪತ್ತಿಗೆ
ಒಡೆಯನಾ ದನು, ತೀರ ಚಿಕ್ಕವನು; ಮೇಲಾಗಿ ವಿಪುಲವಾದ ವೈಭವವು
ಕೈಯಲ್ಲಿ; ಕೇಳುವದೇನದೆ? ಧನದಿಂದ ಹುಟ್ಟತಕ್ಕಷ್ಟು ಸೌಖ್ಯವೆಲ್ಲವೂ
ಈತನದೇ. ಉಂಡುಡಲಿಕ್ಕೆ ಕೊರತೆ ಮಾಡಿ ಕೊಳ್ಳದಿದ್ದರೂ, ಸಮಯ
ಬಂದಾಗ ಅಳತೆಗೆಟ್ಟು ವೆಚ್ಛ ಮಾಡುತ್ತಿದ್ದರೂ, ಬಸೀರನು ಜನರಲ್ಲಿ ಅಪ
ಹಾಸ್ಯವಾಗುವಂತೆ ಮರ್ಯಾದೆ ಮೀರುತ್ತಿದ್ದಿಲ್ಲ. ಜನರೇನು? " ಈವೊಕ್ತು
ಬಸೀರನು ಹೀಗೆ ಮಾಡಿದನು; ಇಂದು ಇನ್ನೊಂದು ಮಾಡಿದನು; ಹೀಗೆ
ಮಾಡುವದುಚಿತವೇ? ತಂದೆಯು ಹಣವನ್ನು ಹೇಗೆ ಕೂಡಿಟ್ಟನೋ ಹೇಗೋ,
ಇನನಿಗೆ ಆ ಹಣದ ಬೆಲೆ ಎಲ್ಲಿಯದು? '', ಎಂದು ಯಾರ ಹಣದ ವ್ಯಯವು
ಹೇಗಾಗುತ್ತಿದ್ದರೂ, ತಮ್ಮ ಬಕ್ಕಣದಲ್ಲಿ ಕಾಸು ಕಪರ್ದಿಯಿಲ್ಲದಿದ್ದರೂ
ಬಾಯಲ್ಲಿ ಬಕ್ಕಳ ಮಾತಿದ್ದರೆ ಸಾಕೆಂಬ ಸಂತೋಷದಿಂದ, ಜನರು ಕಾಲ
ಕಳೆಯುತ್ತಿದ್ದರು. ಬಸೀರನು ಮಾತ್ರ, ಹಗಲಿರುಳು ಸ್ವೇಚ್ಛಾವಿಹಾರಿಯಾಗಿ
ದ್ಧನೋ ಇಲ್ಲವೋ ಅವನದವನಿಗೇ ಗೊತ್ತು. ಆದರೆ ನನ್ನ ಕಿವಿಗೆ ಬಂದ
ಸುದ್ದಿಯ ಮೇರೆಗೆ ಇವನು, ಅಲ್ಪ ಜೋಲಿ ತಿನ್ನುತ್ತಿದ್ದರೂ, ತನ್ನ ಕೀಲಿಕೈ
ಯನ್ನು ಅನ್ಯರ ಕೈ ವಶ ಮಾಡಿದ್ದಿಲ್ಲವೆಂಬುದು ಸ್ಪಷ್ಟವಾಗುತ್ತಿತ್ತು. ಇವನ
ಈಗಿನ ಆಯುಃಕ್ರಮದಲ್ಲಿ ಅತ್ಯಾಚಾರದ ಕೃತ್ಯಗಳಿಗಿಂತಲೂ ಅಗತ್ಯಾಚಾರವೇ
ಹೆಚ್ಚಾಗಿತ್ತೆಂದು. ಧಾರಾಳವಾಗಿ ಹೇಳಬಹುದಾಗಿತ್ತು. ಬಸೀರನ ಈ
ಸುವ್ಯವಸ್ಥೆಗೆ ಕಾರಣನಾದವನೆಂದರೆ, ಇವನು ಕಾಲೇಜದಲ್ಲಿದ್ದಾಗ, ಇವರಿ
ಗಿಂತಲೂ. ಮೇಲಿನವನಾದ ಪಕ್ಷಕ್ಕೂ, ಇವನೊಡನೆ ಸ್ನೇಹ ಬೆಳಿಸಿದವನೊಬ್ಬ
ಗೆಳೆಯನಿದ್ದನು. ಆದರೆ ಬಸೀರನು ಅಪೇಕ್ಷಿಸಿದ ಪ್ರಯಾಣಯಾತ್ರೆಯು
ಅರ್ಧ ಮೀರಿದಾಗಲೇ, ಆ ಸ್ನೇಹಿತನಿಗೆ ಜ್ವರ ತಗಲಿ, ಅವನು ಒಮ್ಮೆಲೆ
೭೫ ---------------------------------------------------------------------
ಗಂಗಾತಟಾಕವನ್ನು ಅವಲಂಬಿಸಬೇಕೆಂದು ಡಾಕ್ಟರರು ಹೇಳಿದರು. ಆ
ಮೇರೆಗೆ ಅವನು ತನ್ನ ಹಾದಿಯನ್ನು ಕಂಡುಕೊಳ್ಳಬೇಕಾಯಿತು. ಕೇವಲ
ಹವೆಯ ಸಂಬಂಧವಿದ್ದದರಿಂದ, ಬಸೀರನು ತನ್ನ ಕಾರ್ಯಕ್ರಮವನ್ನು ಬದಲು
ಮಾಡದೆ ಅದನ್ನು ಹಾಗೇ ಸಾಗಿಸಿದ್ದನು ಹೀಗಾಗಿ ಉಳಿದ ಪ್ರಯಾಣ
ಯಾತ್ರೆಯನ್ನು ಬಸೀರನ ತಾನೊಬ್ಬನೇ ಮಾಡಬೇಕಾಯಿತು.
ಮುಸಲ್ಮಾನರು ಎಂಥವರಾದರೂ, ಸಮಯ ಬಂದಾಗ ಸೌಖ್ಯವನ್ನು
ಸೂಡಗಟ್ಟ ಸವಿಯುವರು. ಕಾಶ್ಮೀರ ಪ್ರದೇಶವನ್ನು ಹೊಕ್ಕಕೂಡಲೆ,
ಬಸೀರನು ಅಲ್ಲಿಯ ಸೃಷ್ಟಿಸೌಂದರ್ಯಕ್ಕೆ ಭ್ರಾಂತನಾದನು. ನಿಸರ್ಗದಲ್ಲಿ
ಸೌಂದರ್ಯದ ಹೊರತು ಅನ್ಯವಿಷಯವು ಎಲ್ಲಿ ದೊರೆಯಬೇಕು? ಈ
ಸೌಂದರ್ಯವನ್ನು ಆನುಭವಿಸಬೇಕಾದರೆ, ನಮ್ಮ ಶಕ್ತಿಯಷ್ಟು ಮುಕ್ತಿಯೆಂಬ
ಲೆಕ್ಕವೇ ಸರಿ. ನಮಗೆ ಕಣ್ಣಿಲ್ಲದಿದ್ದರೆ ನಾವು ನೋಡುವದೆಂದಥದು ? ಇರಲಿ,
ಈ ಹೊಸ ಪರಿಸ್ಥಿತಿಯಲ್ಲಿ ಸೇರಿಕೊಂಡ ಕೂಡಲೆ ಬಸೀರನು, ನಿಸರ್ಗದೇವತೆಯ
ಪೂರ್ಣ ಕೈಯಾಳಾದನು. ಇಂದು ಬೇಟಿ, ನಾಳೆ ಕುದುರೆಯ ರಪಾಟೆ,
ಮಾರನೆಯ ದಿನ ಮೂರನೆಯದೊಂದಾಟವೆಂದು ಬಗೆ ಬಗೆಯ ಆಟಗಳನ್ನು
ಕಲ್ಪಿಸುತ್ತ, ಈ ಬಯಲಾಟಗಳ ಹೊಯಲು ತಿಳಿದವನಂತೆ ಕುದುರೆಯನ್ನೇರಿ
ಮೈಲು ಮೈಲು ಮೇಲಾಡಹತ್ತಿದನು. ಮತ್ತೇತರ ನೆಲೆಯನ್ನೋ ಕಿಳಿದವ
ರಾರೆಂದು ನಮ್ಮಲ್ಲಿ ಮಾತು ಮಾತಿಗೆ ಅನ್ನುತ್ತಿರುವದು ನಿಜನಿಗಲಿ, ಇಲ್ಲ
ದಿರಲಿ; ಆದರೆ ತಾ ಹತ್ತುವ ಕುದುರೆಯ ನೆಲೆಯು ಈ ನಮ್ಮ ಬಸೀರನಿಗೆ
ಮಾತ್ರ ತಿಳಿದಿದ್ದಿಲ್ಲವೆಂಬದು ನನಗೆ ಪೂರ್ಣ ಮನವರಿಕೆಯಾಯಿತು. ಬೇಟೆಯ
ಬೆನ್ನು ಹತ್ತಿ ಕುದುರೆಯನ್ನು ಬಿಟ್ಟಾಗ, ಅದು ಯಾಕೋ ಏನೋ, ಒಮ್ಮೆಲೆ
ಹಿಂಗಾಲು ಹಾರಿಸಿ, ಮುಂಗಾಲೂರಿ ಮುಗ್ಲಿ, ತಾನೂ ನೆಲಕ್ಕುರುಳಿ, ಒಡೆಯೆ
ನನ್ನೂ ಹಾರಿಸಿಬಿಟ್ಟಿತು. ಹಿಂದಿದ್ದ ಸೇವಕರು ಬಂದು, ಅರಜೀವಾಗಿದ್ದ
ಬ.ಸೀರನನ್ನು ಎತ್ತಿ ಬದಿಗಿರಿಸಿ ಒಣ ಉಪಚಾರಗಳನ್ನು ಮಾಡಹತ್ತಿದರು,
ನೀರು ಹೊಯ್ಯುವದು ಅಂತಿಂಥ ತೊಪ್ಪಲು ತಡಿಗಳನ್ನು ಕಿವಿ ಮೂಗುಗಳಲ್ಲಿ
ಹಿಂಡುವದು, ಪೆಟ್ಟು ತಗಲಿ ರಕ್ತ ಹಾಯ್ದ ಲ್ಲಿ ಕಟ್ಟುವದು; ಇವೇ ಮುಂತಾದ
ಉಸಚಾರಗಳಿಂದ ಇನನು ಎಚ್ಚರ ಹೊಂದಲಿಲ್ಲ. ಇದನ್ನು ಕಂಡು ಎಲ್ಲರೂ
ಗಾಬರಿಗೊಂಡು, ಅತ್ತಿತ್ತ ನೋಡುತ್ತಿರುವಾಗ ಸಮೀಪದಲ್ಲಿಯೇ ನೂರೆಂಟು
೭೬ ----------------------------------------------------------------------------
ಗುಡಿಸಲುಗಳಿದ್ದಂಥದೊಂದು ಹಳ್ಳಿಯು ಕಂಡಿತು... ಕೂಡಲೇ ಎಲ್ಲರೂ
ಚಾಳಿಕಟ್ಟಿ ಇವನನ್ನು ಆದರಲ್ಲಿ ಒಳ್ಳೇ ಎಚ್ಚರದಿಂದ ಹಾಕಿ, ಆ ಹಳ್ಳಿಗೆ
ಒಯ್ದರು. ಅಲ್ಲಿ ಸಾಯಂಕಾಲವಾದ್ದರಿಂದ ಹಳ್ಳಿಗರೆಲ್ಲರೂ ಕೂಡಿ, ಏನೋ
ಲಾವಣಿ ಹಾಡು ಬಾರಿಸುವದರಲ್ಲಿ ಮಗ್ನರಾಗಿ, ಆ ಹಾಡು ಬಾರಿಸುವವರ
ಮೋರೆಯನ್ನೇ ಒಳ್ಳೇ ನಿಷ್ಠೆಯಿಂದ ನೋಡುತ್ತ, ಸ್ವಲ್ಪ ಕಲಕಲಾಟವಾದ
ಕೂಡಲೆ ಎಲ್ಲರೂ ಒಮ್ಮೆಲೆ ಕೂಡಿ ಆ ಕಲಕಲಾಟವನ್ನು ನಿಲ್ಲಿಸುವದಕ್ಕೋ
ಸ್ಕರ ಮಿಗಿಲಾದ ಬೊಬ್ಬೆಯನ್ನೆಬ್ಬಿಸುತ್ತ ಕೂತಿದ್ದರು. ಇಷ್ಟರಲ್ಲಿ ಈ ಸೇವ
ಕರ ಸೇನೆಯು ಆ ಚಾಳಿಯೊಂದಿಗೆ ಅಲ್ಲಿಗೆ ಬರುತ್ತಲೆ, ಇವರೆಲ್ಲರಲ್ಲಿ, ಒಕ್ಕಲ
ತನವನ್ನವಲಂಬಿಸಿದವನಾದರೂ, ಅಲ್ಪ ಬಲ್ಲವನಂತಿದ್ದ ವೃದ್ಧನೊಬ್ಬನು
ತಟ್ಟನೆ ಎದ್ದು, ಇದೇನು ಬಂದಿತೆಂದು ಇವರು ಆ ಚಾಳಿಯನ್ನಿಟ್ಟಲ್ಲಿಗೆ
ಬಂದನು. ಇವನ ಹೆಸರು ರಹೀಮನೆಂದಿತ್ತು. ಆ ಹಳ್ಳಿಯಲ್ಲಿ ಹಿರಿಯನೆಂದರೆ
ಇವನೇ. ಅಲ್ಲಿಯ ರೈತರಲ್ಲಿ ಸಣ್ಣ ದೊಡ್ಡ ಕಲಹ ಕಂಟಕಗಳು ಒಂದು
ವೇಳೆ ಉದ್ಭವಿಸಿದರೆ, ಅವೆಲ್ಲವುಗಳು. ಇವನಿಂದಲೇ ನಿವಾರಿಸಲ್ಪಡುತ್ತಿದ್ದವು,
ಅಂತ್ಕೂ ಆ ಹಳ್ಳಿಯು ತನ್ನಷ್ಟಕ್ಕೆ ತಾನಿದ್ದು, ಅನ್ಯರ ಗೋಜಿಗೆ ಹೋಗದೆ.
ಹೆಳ್ಳಿಗರ ಹಳೇ ಮಾದರಿಯ ಸೌಖ್ಯದಲ್ಲಿ ಮುಳುಗಿ ಹೀರಿ ಈಸುತ್ತಿತ್ತು.
ಮೇಲೆ ಹೇಳಿದ ಸ್ಥಿತಿಯಲ್ಲಿ ನಮ್ಮ ಬಸೀರನನ್ನು ಅಲ್ಲಿಗೆ ತರುತ್ತಲೇ,
ರಹೀಮನು ಅಲ್ಲಿಗೆ ಧಾವಿಸ್ಸಿ ಅವನ ಅತ್ಯಾ ವಸ್ಥೆಯನ್ನು. ಕಂಡು ಕನಿಕರಬಟ್ಟು,
ಒಂದು ಕ್ಷಣವಾದರೂ ತಡಮಾಡದೆ, ತನ್ನ ಬಿಡಾರಕ್ಕೆ ಅವನನ್ನು ತರಹೇಳಿ,
ತಾನು ಮೊದಲು ಮನೆ ಮುಟ್ಟಿ , ಔಷಧೊ!ಸಚಾರಕ್ಕೆ ಹೇಗು ಸಾಹಿತ್ಯ
ಗಳನ್ನು ಕೂಡಿಸಿಟ್ಟನು. ಬ್ರಿಟಿಶ ಸಾಮ್ರಾಜ್ಯವು ಹಿಂದೂಸ್ತಾನದಲ್ಲಿ ನೆಲೆಗೊಂಡು
ಇಷ್ಟು ಕಾಲವಾಗಿದ್ದರೂ ಹಳ್ಳಿಪಳ್ಳಿಗಳಲ್ಲಿಯೂ ನಿಷ್ಠಾತರಾದ ಡಾಕ್ಟರರು
ಎಲ್ಲಿಂದ ಬರಬೇಕು? ಎಂಥ ಸಿಧಾರಿಸಿದ ರಾಷ್ಟ್ರಗಳಲ್ಲಿಯೂ ಈ ವ್ಯವಸ್ಥೆಯು
ಈ ವರೆಗೂ ಮಾಡಲ್ಪಟ್ಟಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಗೊತ್ತಿದ್ದ ' ಅಪಾಧಿಕರಿ'
ಗಳೇ, ಇಂಥ ಹಳ್ಳಿಗಳಲ್ಲಿ ' ಸಿವಿಲಸರ್ಜನ'ರ ಕಾರ್ಯವನ್ನು ನಿರ್ವಹಿಸಿ
ಕೊಳ್ಳುವದು ಪಾಶ್ಚಿ ಮಾತ್ಯ ರಾಷ್ಟ್ರಗಳ ಸಂಗತಿಯಾಯಿತು. ಆದರೆ ನಮ್ಮಲ್ಲಿ
ವೃದ್ಧ ರಹೀಮನಂಥ 'ಬುಜರೂಕ'ರಾದ ಜನರು ಕೆಲ ಕೆಲವು ಪ್ರಸಂಗಗಳಲ್ಲಿ
ತಮ್ಮ ಗಿಡಮೂಲಿಕೆಗಳ ಜ್ಞಾನದಿಂದ ಎಷ್ಟೋ ಜೀವಗಳನ್ನು ಉಳಿಸಿದ್ದು
೭೩ ------------------------------------------------------------------------
ಪ್ರಸಿದ್ಧವಿದೆ. ಇವನು ಹಳೆ ಪದ್ದೆತಿಯಂತೆ ಅಡ್ಡ ತಿಡ್ಡ ಶಸ್ತ್ರಗಳ ಕ್ರಿಯೆ
ಯನ್ನು ಬಲ್ಲವನಾಗಿದ್ದನು. ಮೆನೆಯಲ್ಲಿ ಇವನ ಹೆಂಡತಿಯೂ ತೀರಿದಂದಿ
ನಿಂದ ಇಡಿ ಸರ್ವಸ್ವನೇ ಆದ. ಕನ್ಯೆಯೊಬ್ಬಳಿದ್ದಳು, ಅವಳಿಗೂ, ಮನೆಯ
ಹಿರಿಯತನವನ್ನು ಹೊತ್ತ ಸಾಧ್ವಿ ಶಿರೋಮಣಿಗಳಿಗೆ ಗೊತ್ತಿ ರಬೇಕಾದಷ್ಟು,
ಔಷಧ ಸಸ್ಯಗಳ. ಪರಿಚಯವಿತ್ತು. ಇವಳ ಹೆಸರು ರೋಷನ್. ಹೆಸರಿಗೆ
ಅನ್ವರ್ಥಕವಾಗಿಯೇ, ಇವಳು ಮುದುಕನ ಮನೆಯ ಮುದ್ದು ದೀವಿಗೆಯಾಗಿ
ದ್ದಳು. ಬಸೀರನನ್ನು ಒಳಗೆ ತರುತ್ಕಲೇ, ತಂದೆ ಮಗಳು ಯಾವ ಆಲೋಚನೆ
ಯನ್ನೂ ಮಾಡದೆ, ಅವನ ಶುಶ್ರೂಷೆಯಲ್ಲಿ ತೊಡಗಿದರು. ರಹೀಮನು
ಒಂದೆರಡು ಕಡೆಯಿಂದ ಕಂದುಗಟ್ಟಿದ ಕೆಟ್ಟ ರಕ್ತವನ್ನು ತೆಗೆದು, ಮಗಳಿಗೆ
ಔಪಧೋಪಚಾರ ಮಾಡಹೇಳಿದನು. ಈ ರಕ್ತಸ್ರಾವದಿಂದ , ಬಸೀರನಿಗೆ
ಜ್ವರವು ಮಿತಿಮೀರಿ ಬಂದಿತು. ಆದರೂ ಪ್ರಾಣಘಾತದ ಅಂಜಿಕೆಯ
ನಿವಾರಣವಾದಂತಾಯಿತು. ಕೇವಲ ಅಪರಿಚಿತನೆಂದು, ಬಸೀರನ ಶುಶ್ರೂಷೆ
ಯಲ್ಲಿ ಈ ತಂದೆ ಮಗಳು ಎಳ್ಳಷ್ಟಾದ ರೂ ಕೊರತೆ ಮಾಡದಿದ್ದರಿಂದ,
ಬಸೀರನು ಒಂದು ವಾರದ ಅವಧಿಯಲ್ಲಿ, ತಾನು ಎಲ್ಲಿ ಇರುವೆನೆಂಬುವ
ಎಚ್ಚರವನ್ನು ತುಂಬಾ ಹೊಂದದೆ ಹೋದ ಪಕ್ಷಕ್ಕೂ, ತನಗೆ ಭಯಂಕರವಾದ
ಪೆಟ್ಟು ತಗಲಿರುವದೆಂಬದನ್ನು ಅರಿಯುವಷ್ಟು ಎಚ್ಚರಹೊಂದಿದನು, ಹೀಗೆಯೇ
ಒಂದೆರಡು ವಾರಗಳು ಕಳೆದವು ಇಷ್ಟರಲ್ಲಿ ಬಸೀರನು ಪೂರ್ಣ ಪ್ರಜ್ಞೆ
ಯುಳ್ಳವನಾಗಿ ರಹೀಮನ ಹಾಗೂ ಅವನ ಮಗಳಾದ ರೋಷನೆಯ ಸಹವಾಸ
ಸುಖವನ್ನು ಅನುಭವಿಸಲು ಸಮರ್ಥನಾದನು. ಇನ್ನೂ ಮೈಯಲ್ಲಿ ಶಕ್ತಿಯು
ಅನ್ನುವಷ್ಟು ಬಂದಿದ್ದಿಲ್ಲ.
`ರೋಷನೆಯ ಮಾತುಕಥೆಗಳಲ್ಲಿಯೂ, ಆವಳ ನಡೆನುಡಿಗಳಲ್ಲಿಯೂ
ಕಂಡುಬರುವ ಶುದ್ಧ ತಾರತಮ್ಯವನ್ನು ನೋಡಿ ಬಸೀರನಿಗೆ ಒಳ್ಳೇ ಆಶ್ಚರ್ಯ
ವಾಯಿತು. ಪರಿಸ್ಥಿತಿಯ ಮೇಲಿಂದ ನೋಡಿದರೆ, ಇಷ್ಟು ಸುವ್ಯವಸ್ಥೆಯು
ಹಳ್ಳಿಹಳ್ಳಿಗಳಲ್ಲಿ ಇರುವದು ಅಸಂಭವನೀಯವಾದದ್ದು ಎಂಬ ಅರ್ಥದ
ಉದ್ದಾಗಳನ್ನು ಬಸೀರನು ಒಂದು ದಿನ ತೆಗೆದ ಕೂಡಲೆ, ಅವಳ ತಂದೆಯು
ಅವನಿಗೆ ಹೀಗೆ ಹೇಳಿದನು: " ರೋಷನೆಗೆ, ಒಬ್ಬ ಶ್ರೀಮಂತಳ್ಕೂ
ಸದಾಚಾರಸಂಸನ್ನಳೂ ಆದ ಸ್ತ್ರೀಯಳ ದ್ವಾರಾ ಈ ಮಾದರಿಯ ಶಿಕ್ಷಣವು
೭೮ ----------------------------------------------------------------------
ಸಿಕ್ಕಿತು ಆ ಸ್ತ್ರೀಯು ನಮ್ಮ ಹಳ್ಳಿಯಲ್ಲಿಯೇ ಕೆಲಕಾಲ ಬಂದಿದ್ದಳು.
ರೋಷಣೆಯನ್ನು ಹಡೆದವಳು 'ಜನ್ನತ್' (ಸ್ವರ್ಗ)ವನ್ನು ಸೇರಿದ ದಿನವೇ,
ಈ ಕಂದಮ್ಮನನ್ನು ಅವಳು ತನ್ನ ಮನೆಗೆ ಒಯ್ದಳು. ಅವಳು ಇಲ್ಲಿ
ಇರುವವರೆಗೂ ರೋಷನೆಯನ್ನು ಕೇವಲ ತನ್ನ ಹೊಟ್ಟಿಯ ಕೂಸಿನಂತೆ
ಪರಿಪಾಲಿಸಿ, ತನ್ನಲ್ಲಿದ್ದ ಕಲಾಕೌಶಲವನ್ನು ಓದುಬರೆಯುವುದನ್ನೂ, ಇನ್ನೂ
ಎಷ್ಟೋ ವಿಷಯಸಂಗತಿಗಳನ್ನೂ, ಅವಳಿಗೆ ಕಲಿಸಿದಳು. ಅವೆಲ್ಲವನ್ನೂ
ಇಲ್ಲೇತಕ್ಕೆ ವಿವರಿಸಲಿ? ಅಂತು ಇವಳು ತನ್ನ ವಿದ್ಯೆಯ ವಿಷಯಕವಾಗಿ
ವೃಥಾಭಿಮಾನವನ್ನು ತೊಟ್ಟು ಮುಪ್ಪಿನ ತಂದೆಯನ್ನು ತಪ್ಪಿಲ್ಲದೆ ಬಿಟ್ಟು
ಹೋಗುವಷ್ಟು ಕಲ್ಲೆದೆಯವಳಿಲ್ಲಿಂಬದು ನನಗೆ ಮನಸಾ ತೋರುತ್ತದೆ.
ಹೇಗೇ ಇರಲಿ, ಇವಳನ್ನು ಇಲ್ಲಿಯೇ ಎಲ್ಲಿಯಾದರೂ ಕೊಟ್ಟು ಮದುವೆ
ಮಾಡಿ ನನ್ನ ಅಂತ್ಯದ ವರೆಗೂ ನನ್ನ ಹತ್ತರದಲ್ಲಿಯೇ ಇರುವಂತೆ ತೀವ್ರವೇ
ಮಾಡಬೇಕೆಂದು ಇಚ್ಛಿಸುತ್ತೇನೆ " ರಹೀಮನು ಮಾಡಿದ ತನ್ನ ಮಗಳ
ವರ್ಣನೆಯಕಿಂತಲ್ಕೂ ರೋಷನೆಯ ಗುಣಗಳನ್ನು ಹೆಚ್ಚೆಚ್ಚಾಗಿ ಕಂಡು
ಕೊಳ್ಳುವ ಸಂಧಿಗಳು ಬಸೀರನಿಗೆ ದಿನಾಲು ಬರಹತ್ತಿದವು. ರೋಷನೆಯು
ಸಂಗೀತ ಹಾಗೂ ಚಿತ್ರಕಲೆಗಳನ್ನು ತಕ್ಕಮಟ್ಟಿಗೆ ಬಲ್ಲಳು; ಆದರೆ ನವಾಬ
ಬಸೀರನು ನಡಯ ಒಳ್ಳೇ ಪರಿಶ್ರಮವುಳ್ಳವನು. ಅಂದಮೇಲೇನು?
ನವಾಬನು ಅವಳು ತೆಗೆದ ಯಾವುದೊಂದು ಚಿತ್ರಪಟವನ್ನು ಕಯ್ಯಲ್ಲಿ
ತಕ್ಕೊಂಡು, ಅದನ್ನು ಮಾರ್ಮಿಕತನದಿಂದ ಪರೀಕ್ಷಿಸಿ ಕೌಶಲ್ಯಕ್ಕಾಗಿ ಅವಳ
ಸ್ತುತಿಮಾಡಿದರೆ ಸಾಕು; ಅವಳಿಗೆಇದುವರೆಗೂ ಅನನುಭೂತವಾದ ಅನಂದ
ವಾಗುವದು. ತಂದೆಮಕ್ಕಳ ವೀಣಾವಾದನವು ಈಗೀಗಿಲಂತೂ ಒಳ್ಳೇ
ಇಂಪುಸಂಪಾಗಿ ಸಾಗುತ್ತಿತು. ಯಾಕಂದರೆ, ಬಸೀರನೂ ಈ ವಾದನದಲ್ಲಿ
ಉತ್ಸಾಹೆದಿಂದ ಮನಸುಹಾಕುವಷ್ಟು ಶಕ್ತಿಯನ್ನು ಪಡೆದಿದ್ದನು. ಹಳ್ಳಿಯ
ಲ್ಲೆಲ್ಲ ರಹೀಮನು ವೀಣೆಬಾರಿಸುತ್ತಾನೆಂದು ಕೇಳಿದ ಕೂಡಲೆ, ಹೆಣ್ಣೂ
ಗಂಡೂ ಕೂಡಿಯೇ ಇವನ ಸುತ್ತಲೂ ನೆರೆಯುತ್ತಿತ್ತು. ಇವನಿಗಿಂತಲೂ
ರೋಷನ್ ಸುಂದರಿಯು ಮೇಲು. ಇವರಿಬ್ಬರನ್ನೂ ನವಾಬ ಬಸೀರನು
ತಲ್ಲೀನರನ್ನಾಗಿ ಮಾಡಿಬಿಡುತ್ತಿದ್ದನು, ಆದರೆ ಈಗ, ರೋಸನ್ ಬಸೀರರೆ
ಸಂಭಾಷಣವನ್ನು ಕೇಳದವನೇ ಪಾಪಿ! ಅದೇನು ಈ ಮರ್ತ್ಯಲೋಕದ
೭೯ -----------------------------------------------------------------------
ಹಾಳುರಗಳೆಯೇ ?-- ಈ ತೆರದ ಸಂವಾದವು ಕೇವಲ ಸ್ವರ್ಗೀಯವೇ ಸರಿ.
ಕೇವಲ ಶಾಸ್ತ್ರೀಯ, ಅಭಿರುಚಿಯುಕ್ತ, ಹಾಗೂ ರಸಸೂರಿತ — ರೋಷನೆಯ
ಈ ಸದೃಶವಾದ ಮಧುರಾಲಾಪಗಳನ್ನು ಕೇಳದೆ ಬಹುದಿನವಾಗಿತ್ತು ;
ಅಜ್ಞಾನಾವೃತವಾದ ಹಳ್ಳಿಯಲ್ಲಿ ಈ ಪ್ರಕಾರದ ಜ್ಞಾನಾಮೃತಪಾನವೆಂದರೆ
ಅವಳಿಗೆ ನಿತ್ಯ ಉತ್ಸವವಿದ್ದಂತಾಯಿತು. ಮತ್ತೂ ಈ ಜ್ಞಾನಾಮೃತವು,
ಬಸೀರನಂಥವನಿಂದ - ಮೋಹಕರನ್ನೇ ಮೋಹಿಸುವಂಥವನಿಂದ --
ಸಿಗುತ್ತಿದ್ದದರಿಂದ ಅವಳ ಆನಂದಕ್ಕೆ ಪಾರಾವಾರವೇ ಇದ್ದಿಲ್ಲ. ಅವನ
ಮುಖಕಾಂತಿಯಲ್ಲಿ, ಯಾವಾಗಲೂ ಒಂದು ಬಗೆಯ ಉಲ್ಲಾಸವೃತ್ತಿಯ
ಕಳೆಯು ನೋಡುವವರಿಗೆ ಆಲ್ಲಾದಕರವಾಗಿಯೂ ಬಲು ಮನೋಜ್ಞ
ವಾಗಿಯೂ ಉಕ್ಕುತ್ತಿತ್ತು. ಹಗಲೆಲ್ಲ ಪ್ರಸನ್ನಚಿತ್ತನಾಗಿದ್ದುದರಿಂದಲೇ,
ಬೇನೆಯಿಂದ ಬಾಡಿದ ಕಪೋಲಗಳು ತುಂಬಿಕೊಳ್ಳಹತ್ತಿ, ಇವನ ವದನವೂ
ಪ್ರಸನ್ನವಾಗಿ ತೋರತೊಡಗಿತು. ಮುಖವನ್ನೆಲ್ಲ ವಿಂಗಡಿಸಿ ನೋಡುತ್ತ
ಕೂಡುವದಕ್ಕೂ ಮೊದಲೇ, ಮನುಷ್ಯನನ್ನು ಮುಗ್ಗನನ್ನಾಗಿ ಮಾಡುವಂಥ
ದೊಂದು ಅಪೂರ್ವವಾದ ತೇಜವು ಅಲ್ಲಿ ಚಮಕಿಸುತ್ತಿತ್ತು. ಸರಿ.
ರೋಷನ್ ಬಾಲೆಯೂ ಕಡಿಮೆ ಮೋಹಕಳಲ್ಲ. ನವಾಬ ಬಸೀರನೂ
ಇವಳನ್ನು ನೋಡನೋಡಿದಾಗ ನಿರ್ವಿಕಾರನಾಗಿ ಉಳಿದುಕೊಳ್ಳುವದು
ಅವನಿಗೆ ಅಸಾಧ್ಯವಾಯಿತು. ಬೇನೆಯಿಂದ ಹಾಸಿಗೆ ಹಿಡಿದಾಗ ಇವಳು
ಸಮೀಪಿಸಿದ ಕೂಡಲೆ, ಇವನ ವೃತ್ತಿಯು ಚಂಚಲವಾಗಿ, ತಾನು ಅವಳನ್ನು
ಕುರಿತು ಬೇಡಬೇಕೆಂದು ಮಾಡಿದ ವದಾರ್ಥಗಳನ್ನಾಗಲಿ, ಅವಳನ್ನು ಕೇಳಿ
ವಿಚಾರಿಸಬೇಕೆಂಬ ಸಂಗತಿಯನ್ನಾಗಲಿ ಹೇಗೋ ಮರೆತುಬಿಟ್ಟು, "ಹಾ,
ನಾನೇನು ಬೇಡಬೇಕೆಂದು ಮಾಡಿದ್ದೆ? ಇಲ್ಲ; ಯಾವದು ಒಂದಂ ಸಂಗತಿ
ಯನ್ನು ಹೇಳಬೇಕೆಂದಿದ್ದೆ. ಯಾವ ಸಂಗತಿಯದು? ಏನೋ, ನೀನೂ
ಹೇಳಲಾರಿಯಾ? ಅಹಾ, ಈ ಬೇನೆಯಿಂದ ನನಗೆ ಯಾವದೂ ನೆನಪೇ
ಉಳಿಯದಂತಾಗಿದೆ, ” ಎಂದು ತನ್ನ ವೃತ್ತಿಯು ಚದರಿಹೋದದ್ದನ್ನು
ಆ ಚದುರೆಯು ಕಂಡುಹಿಡಿಯಬಾರದೆಂದು ಏನೇನೋ ಹುಚ್ಚುಪಚ್ಚು
ಮಾತಾಡುತ್ತಿದ್ದನು. ತಾನು ವಿಕಾರವಶನಾದೆನೇನೋ ಎಂದು ವಿಚಾರ
ಮಾಡಹತ್ತಿದಾಗ, "ಛೇ! ನನ್ನಂಥ ಅಪರಿಚಿತನು ಅತ್ಯಾವಸ್ಥೆಯಲ್ಲಿದ್ದಾಗ,
೮೦-----------------------------------------------------------------------------
ಇವಳು ಮಾಡಿದ ಉಪಕಾರ ಸ್ಮರಣೆಯಾಗಿ, ಆ ಉಪಕಾರದೇವತೆಯೇ
ಎದುರಿನಲ್ಲಿ ಬಂದು ನಿಲ್ಲಲು, ಈ ರೀತಿಯಾಗುತ್ತಿರಬಹುದು' ಎಂದು ಹರಿ
ದಾಡುವ ಮನಸ್ಸಿಗೆ ಬುದ್ದಿ ಹೇಳಿ ಬಡಿದು ಭಕ್ತಿಯ ಕಲಿಸುತ್ತಿ ದ್ದನು.
ಒಮ್ಮೊಮ್ಮೆ ಅವಳ ಪರಿಸ್ಥಿತಿಗೂ ತನ್ನ 'ಇತಮಾಮಿ'ಗೂ ಇದ್ದ ಮಹದಂತರ
ವನ್ನು ನೆನಪಿಗೆ ತಂದು. ಹೆಚ್ಚಿನ ವಿಚಾರವು ತಕ್ಕದ್ದಲ್ಲನೆಂದು ಮನಸ್ಸು
ಸಮಾಧಾನಮಾಡಿಕೊಳ್ಳುತ್ತಿದ್ದನು. ಈ ಮನೋವ್ಯಾಪಾರ (ವಿಕಾರ?)ಗಳ
ಕೂಡ, ಆದ ಪೇಚಾಟದಲ್ಲಿ ಇವನಿಗೆ ಜಯವು ಸಿಗಲಿಲ್ಲ. ಪರಿಣಾಮವೇ
ನಾಯಿತು? ನೀರು ನೀರೆಂದು ಕನಕರಿಸಿ, ಜ್ವರಪೀಡಿತನು ನೀರಡಿಕೆಯನ್ನು
ಹೆಚ್ಚಿಸಿಕೊಂಡು ಬಾಯಾರಿ ಬಳಲುವಂತೆ, ಇವನು ಮನದಲ್ಲಿಯೇ ಮರುಗಿ
ಬೆಂಡಾದನು. ತಾನು ವಿಕಾರವಶವಾದದ್ದೇನೋ ನಿಜ; ಆಲೋಚಯೇನೋ
ನೀಚತರವಾದದ್ದು; ಆದ್ದರಿಂದ. ಇದರ ಪರ್ಯಾಪ್ತಿಯ ಗೋಜಿಗೆ ಬಿದ್ದರೆ
ಸುಖದಲ್ಲಿ ಪರಿಣಮಿಸದೆಂದು ಒಮ್ಮೆ ಆಲೋಚಿಸುವನು; ಆದರೆ ತಾನೇ
ಎಷ್ಟೋ ಸಾರೆ ತಿರಸ್ಕರಿಸಿದ ಶಬ್ದಧ್ವನಿಗಳಿಗೆ, ಈಗ ತಾನೇ ಜನಕನಾದ್ದ
ರಿಂದ ತಂದೆಯು ತನ್ನ ಮಗುವು ಮಾಸಿ ಮಡಿವಾಳನ ಬಾನಿಗೆ ತಕ್ಕ
ದ್ದಾಗಿದ್ದರೂ ವಾತ್ಸಲ್ಯಬಲದಿಂದ ಅದನ್ನು ಎತ್ತಿ ಮುತ್ತಿಡುವಂತೆ, ಆ ಶಬ್ದ
ಗಳನ್ನು ಮುದ್ದಿಡಹತ್ತಿದನು. ಅನ್ಯರಲ್ಲಿ ಯಾವ ಆಚರಣೆಗಳನ್ನು ಕಂಡರೆ
ಕೆಂಡಕೆಂಡಾಗುತ್ತಿದ್ದನೋ, ಅವುಗಳನ್ನೇ ಈಗ ತಾನು ಹಿಂಬಾಲಿಸ
ಬೇಕಾದ್ದರಿಂದ, ಅವುಗಳ ದಾಸಾನುದಾಸನಾದನು. ಕೊನೆಯಲ್ಲಿ ಅವನು
ತನ್ನಷ್ಟಕ್ಕೆ ಒಂದು ದೃಢನಿಶ್ಶಯ ಮಾಡಿಕೊಂಡನು. ಶಕ್ಯವಿದ್ದರೆ, (?)
ರೋಷನೆಯ ವಿಷಯಕವಾದ ವಿಚಾರವನ್ನು ಸಹ ಆದರಿಸಕೂಡದು;
ಅರ್ಥಾತ್ ಕೃತಜ್ಞತೆಯ ಬಂಧನಗಳನ್ನೂ, ಇಲ್ಲವೆ ನೀತಿಯ ನಿರ್ಬಂಧ
ಗಳನ್ನೂ ಕೂಡ ಆದರಿಸಕೂಡದು !
ರೋಷನೆ್ಯ, ನವಾಬ ಬಸೀರೆ ಬಹಾದ್ದೂರನಲ್ಲಿ ನೀತಿ ಕ್ಕತಜ್ಞತೆಗಳ
ದ್ವಿವೇಣೀ ಸಂಗಮವಾಗಿರುವದೆಂದು ತುಂಬಾ ವಿಶ್ಚಾಸವಿಟ್ಟವಳು. ಇವನು
ಆ ಪೂರ್ವಸಂಗಮವನ್ನು ಧಿಕ್ಕರಿಸಿ ಈ ತ್ರಿವೇಣಿಯ ಸಂಗಮಕ್ಕೆ ಆತುರ
ಪಟ್ಟವನೆಂದು, ಪಾಪ, ಅವಳಿಗೇನು ಗೊತ್ತು? ಈ ಸದ್ಗುಣ ವಿಶೇಷಗಳ
ಸಂಗಮಕ್ಕೆ ಬಲೆಬಿದ್ದು, ಆ ಬಾಲಾಮಣಿಯ), ನಮ್ಮ ನವಾಬನಿಗೆ
೮೧ --------------------------------------------------------------------
ತನ್ನದೊಂದು ಅಂತರಂಗದಲ್ಲಿ ಇದುವರೆಗೂ ಬಚ್ಚಿಟ್ಟು ಕಾದುಕೊಂಡಿದ್ದ,
ತನ್ನ ಮಹತ್ವವಾದ ಮನದಿಂಗಿತವನ್ನು ಹೇಳಿಬಿಟ್ಟಳು. ಮನೆಯಲ್ಲಿ ಇವಳ
ತಂದೆಯು ಇಲ್ಲದಾಗ ಇವರಿಬ್ಬರೂ ವೀಣಝಣತ್ಕಾರದಲ್ಲಿ ಮಗ್ನರಾಗಿ
" ಆ ರಾಗವನ್ನು ಮೂರ್ಛನೆಯಲ್ಲಿ ವಿಸ್ತರಿಸು, ಈ ರಾಗವನ್ನು ಇನ್ನೊಮ್ಮೆ
ನುಡಿಸು' ಎಂದು ಅನ್ನುವದರೊಳಗೆಯೇ, ಅವಳು ವೀಣಿಯ ಮೂರ್ಛನೆ
ಯನ್ನು ಹಾಗೆಯೇ ಸಾಗಿಸಿ],ಒಳ್ಳೇ ಉತ್ತೇಜಿತವಾದ ಸ್ವರದಲ್ಲಿ ತಾನು ತನ್ನ
ತಾಯಿಯ ಸ್ಮರಣಾರ್ಥವಾಗಿ ಪೋಣಿಸಿದ ಪದಮಾಲಿಕೆಯನ್ನು, ತನ್ನ ಕಂಠ
ದಿಂದ ಕಿತ್ತು ಈಡಾಡಿದಂತೆ ಮಾಡಿ, ಮೂರ್ಛನೆಯು ಸ್ವರಾಘಾತವನ್ನು
ಒಂದೊಂದೆಯಾಗಿ ಪೋಣಿಸಿಕೊಳ್ಳುವಂತೆ, ಅತ್ತಿತ್ತ ಪಸರಿಸಿ, ಬಿದ್ದು
ಬಿದ್ದಲ್ಲಿಯೇ ಮಕರಂದವನ್ನು ಬೀರುತ್ತಿರುವ ಆ ಶಬ್ದಸುಮನ ಗಳನ್ನು ಮತ್ತೆ
ಮೊದಲಿನಂತೆ ಕಂಠದಲ್ಲಿ ಧರಿಸಹತ್ತಿದಳು. ಈ ಪದದಲ್ಲಿ ಪರಲಾಲಿತ್ಯದ
ಕಿಂತ ಆತ್ಮನಿರೂಪಣವೇ ವಿಶೇಷವಿದ್ದುದರಿಂದಲ್ಯೂ ಅರ್ಥಾನುಬಂಧಕ್ಕೆ
ಸರಿಯಾಗಿ ರಾಗದ ಯೋಜನೆಯಿದ್ದುದರಿಂದಲ್ಕೂ ರಾಗವು ಕಾಲಕ್ಕನು
ರೂಪವಾಗಿ ಇದ್ದುದರಿಂದಲೂ, ಸಕಲವೂ ಸಮ್ಮಿಲಿಯವಾದಂತಾಯಿತು.
'ರಸಪೂರ್ಣ, ಪ್ರೇಮಪೂರ್ಣ, ರಾಗಾನುರಂಜನಮಯ ! ' ಎಂದೇ ಸಾಕು
ಮಾಡತಕ್ಕದ್ದು. ಹೆಚ್ಚಿನ ಕಾರ್ಯವೆಲ್ಲಿ? ಈ ಬಗೆಯ ಮನಃಸ್ಥಿತಿ ಇದ್ದಾಗ
ರೋಸನೆಯು ಅಂದದ್ದು : “ ಈ ಪದವನ್ನು ನನ್ನ ತಂದೆಯ ಹೊರತು
ಈವರೆಗೆ ಯಾರೂ ಕೇಳಿಲ್ಲ ಈವೊತ್ತು ನನಗೆ ಅದರ ನೆನಪು ಆಕಸ್ಮಿಕವಾಗಿ
ಯಾಕಾಯಿತೋ ಕೇಳಲಾರೆ. ನಾನು ಒಬ್ಬಳೇ ಇದ್ದಾಗ, ಹಾಗೂ ಅಲ್ಪ
ಸ್ವಲ್ಪ ಮನಸ್ತಾಪವಾದಾಗ ಮಾತ್ರ ಇದನ್ನು ನಾನು ವಾಡಿಕೆಯಾಗಿ ಹಾಡು
ವದುಂಟು, ಈವೊತ್ತಾದರೂ ನಾನು ಉದಾಸೀನಳಾಗಲಿಕ್ಕೆ ಕಿಂಚಿತ್
ಕಾರಣವಿದೆ. ? " "ಆ ಕಾರಣವೇನು? ಅದನ್ನು ಕೇಳೇ ತೀರುವೆನೆ'ಂದು
ಬಸೀರನು ಒಳ್ಳೇ ಅಗ್ರಹಕೊಟ್ಟನು. ಹಾಗೂ ಹೀಗೂ ತುಸು ಅನುಮಾನಿಸಿ
ದಂತೆ ಮಾಡಿ ರೋಷನೆಯೂ ಅದನ್ನು ಅವನಿಗೆ ತಿಳಿಸಿಯೇ ತೀರಿದಳು,
ಇವಳ ತಂದೆಯು ಇವಳನ್ನು ಅಲ್ಲಿಯೇ ನೆರೆಯಲ್ಲಿದ್ದವನೊಬ್ಬ ಹಣವಂತನ
ಮಗನಿಗೆ ಕೊಡಬೇಕೆಂದು ಮಾಡಿದ್ದನು. ದುಡ್ಡಿದ್ದವನ ಮಗನಾದರೂ,
ಅವನು ನಡೆನುಡಿಗಳಲ್ಲಿ, ನಟ್ಟುಕಡೆಯುವವನಿಗೂ ಕಡೆಯಾದವನು. ತನ್ನ
೮೨-----------------------------------
ಕರ್ತವ್ಯವನ್ನು ನೆನಪಿಗೆ ತಂದು, ತನ್ನ ಮೃದುಲನಾದ ಸ್ವಭಾವಕ್ಕನು
ಲಕ್ಷಿಸಿ, ಈ ಮದುವೆಯು ತನಗೆ ಬೇಡೇ ಬೇಡವೆಂದು ಅವಳು ಎಸ್ಟೋ ಪರಿ
ಯಿಂದ ತನ್ನ ತಂದೆಗೆ ಹೇಳಿದಳು. ಆದರೆ ರಹೀಮನು, ತನ್ನ ಮಾತೇ
ನಡೆಯತಕ್ಕದ್ದೆಂದು ಹಟ ಹಿಡಿದನು. ಇವಳ ಉದಾಸೀನತೆಯ ಕಾರಣ
ವಾದರೂ ಇದೇ, " ಎಲ್ಲಿ ಪ್ರೇಮದ ಸಂಭವವೇ ಇಲ್ಲ, ಅಲ್ಲಿ ಮದುವೆಯ
ಮಾತೆಲ್ಲಿ? ಅದೂ ಇಂಥವನ ಕೂಡ! ನವಾಬರೇ...' ಎಂದು ರೋಷ
ನೆಯು ಬಸೀರನನ್ನು ಕುರಿತು ತನ್ನ ಗುಟ್ಟನ್ನು ಹೇಳಿದಳು. ಈ ಸಂಧಿಯನ್ನು
ನವಾಬ ಬಸೀರನು ತಡೆಯಲಾರ. ಇದು ಅವರ ನಿಗ್ರ ಹಶಕ್ತಿ ಯನ್ನು ಮೀರಿ
ಹೋಯಿತು. ಅವನು ಅವಳ ಕೈಯನ್ನು ತಟ್ಟಿದನು; ಇಂಥ ಮದುವೆಯ
ಮಾತು ತೆಗೆಯುವದು ಕೂಡ ಮತ್ಪಾಪವೆಂದು ಹೇಳಿದನು, ಅವಳ
ಸೌಂದರ್ಯಾತಿಶಯವನ್ನು ಹೊಗಳಿದನು, ಅವಳ ಸದ್ಗುಣಗಳನ್ನು ಒಳಿತಾಗಿ
ವರ್ಣಿಸಿದನು, ಹಾಗೂ ತಾನಂತು ಅವಳನ್ನು ಪೂಜಾರ್ಹಳೆಂದು ತಿಳಿಯುತ್ತೇ
ನೆಂದು ಅಂದನು. ಇದನ್ನೆಲ್ಲ ರೋಸನ್ ಬಾಲೆಯು, ನಿಶ್ಶಂಕಿತಭಾವದಿಂದ
ಕೇಳಿದಳು. ಆದರಿಂದ ಉಂಟಾದ ಆನಂದಕ್ಕೆ ಅವಳು ಮರೆಮಾಡಿಕೊಳ್ಳ
ಬೇಕೆಂದು, ತುಸು ಲಜ್ಜಪಟ್ಟು ಸಾವರಿಸಿಕೊಂಡಳು. ಆದರೆ ಅವಳ ಯತ್ನವು
ಸಾಗಲಿಲ್ಲ... ಸಾರಂಗದ ಸುಂದರವಾದ ಕೋಡುಗಳು ಅದಕ್ಕೆ ಮುಳು
ವಾದಂತೆ ಇನಳ ಕಪೋಲದ್ವಯಗಳು ಇವಳನ್ನು ವಂಚಿಸಿದವು ಮುಚ್ಚ
ಬೇಕೆಂದು ಮಾಡಿದ ಭಾವನೆಯ ಭಾವಚಿತ್ರವು ಅಲ್ಲಿ ತಟ್ಟನೇ ಮೂಡಿ
ಹೋಯಿತು. ಕಾಣಬಾರದೆಂತ ಮಾಡಿದ್ದು ಕಂಡುಹೋಯಿತು. ಈ
ಕ್ಷಣ ವಿಶೇಷದ ಲಾಭವನ್ನು ಬಸೀರನು ಹೋಗಗೊಡಲಿಲ್ಲ. ಅವಳಲ್ಲಿ ತನಗಿದ್ದ
ಅತ್ಯುತ್ಕಟವಾದ ಆಸಕ್ತಿಯನ್ನು ಮುಂದು ಮಾಡಿ, ' ವಿವಾಹಾದಿಕ ಸಂಸ್ಕಾರ
ವಿಧಿಗಳು ಕೇವಲ ಕ್ಷುಲ್ಲಕವಾದಂಥವು; ಕಾಜಿಗಳ ಆಜ್ಞೆಗಳು ಕುಜಿನಂಥವು.
ಯಾಕಂದರೆ, ಇವೆಲ್ಲ ಮನುಷ್ಯನಿರ್ಮಿತವಾದವು; ಕೃತ್ರಿಮಗಳು; ಮೂರೂ
ಲೋಕಗಳಲ್ಲಿ ನಿರಂತರವಾಗಿ, ಅಬಾಧಿತವಾಗಿ ನಡೆಯತಕ್ಕ ಬಂಧನವೆಂದಕ್ಕೆ
ಒಂದು ಪ್ರಣಯನಿಬಂಧನವೇ ಸರಿ' ಬಹಳೇನು? ಒಂದೇ ಮಾತಿನಲ್ಲಿ
ಅವಳು ತನ್ನ ಸಂಗಡ ಬಂದು, ಪರಸ್ಪರರ ಸಹವಾಸದಲ್ಲಿ ಸುಖದಿಂದ ಕಾಲ
ಕಳೆಯತಕ್ಕದ್ದೆಂದು ಹೇಳಿಬಿಟ್ಟನು, ಇದನ್ನು ಕೇಳಿ ರೋಸನೆಗೆ ಬಾಣ
೮೩ ---------------------------------------------------------------------------
ಬಡಿದಂತಾಯಿತು, ಆಕೆಯು ಅವನನ್ನು ದೂಷಿಸಿಯೇಬಿಡುತ್ತಿದ್ದಳು.
ಆದರೆ ಆಕೆಯ ಹೃದಯವು ವಾಕ್ಪ್ರಹಾರದ ಮೇರೆಯನ್ನು ಮುಟ್ಟಿದ್ದಿಲ್ಲ.
ಮುಳುಮುಳು ಕಣ್ಣಿರು ಸುರಿಸುವದೇ ಆಕೆಯ ಕೆಲಸ.
ಇಷ್ಟರಲ್ಲಿ ರಹೀಮನು ತನ್ನ ಭಾವೀ ಆಳಿಯನನ್ನು ಕರೆದುಕೊಂಡು
ಬಂದದ್ದರಿಂದ ಎಲ್ಲವೂ ನಿಂತುಹೋಯಿತು. ರೋಷನೆಯು ಮಾಡಿದ
ವರ್ಣನೆಗೆ ಸರಿಯಾಗಿಯೆ. ಅವನು ಸುರೂಪಿಯೂ ಕಾಡುನುಡಿಯುಳ್ಳವನೂ
ಜ್ಞಾನಹೀನನೂ ಇದ್ದನು. ಹಣವೊಂದನ್ನು ಬಿಟ್ಟು, ರಹೀಮನು, ಈ
ಭಾವಿ ಜಾಮಾತನಕ್ಕಿಂತಲೂ ಎಷ್ಟೋ ಬಗೆಗಳಿಂದ ತಾನು ಮೇಲ್ತರದವ
ನಿದ್ದರೂ ಬಡವರು ಶ್ರೀಮಂತರನ್ನು ಯಾವಾಗಲೂ ಕೆಳದೃಷ್ಟಿಇಟ್ಟು ನೆಲ
ಬರೆಯುತ್ತ ನೋಡುತ್ತಿರುವಂತೆ, ತನ್ನ ಅಳಿಯನನ್ನು ನೋಡಿದ್ದನಾದ್ದರಿಂದ
ಅವನ ಕೊಂಕು ಕೊರತೆಗಳು ಇವನ ಕಣ್ಣಿಗೆ ಬಿದ್ದಿದ್ದಿಲ್ಲ. ರಹಿಮನು ತನ್ನ
ಮಗಳನ್ನು ಭೆಟ್ಟಿಗೆ ಕರದೊಯ್ದು " ಅಮ್ಮಾ ಇತ್ತೋ ನಿಮ್ಮ ಭಾವೀಪತಿ
ರಾಜರು, ಇಲ್ಲಿಯೇ ಬಂದಿದ್ದಾರೆ ಇನ್ನೇನೂ ತಡವಿಲ್ಲ. ಬಹಳಾದರೆ ಮುಂದಿನ
ವಾರದ ಕೊನೆಯಲ್ಲಿಯೇ ಲಗ್ನವಾಗಿ ಹೋಗಲಿಕ್ಕೇಬೇಕೆಂದು ನಿರ್ಣಯವಾಗಿ
ಬಿಟ್ಟಿದೆ." ಎಂದನು.
ಮರುದಿನ ಮುಂಜಾನೆ ರೋಷನೆಯು ಮೈಯಲ್ಲಿ ಸ್ವಸ್ಥವಿಲ್ಲೆಂದು
ತನ್ನ ಕೋಣೆಯನ್ನೆೇ ಹಿಡಿದಳು. ಬಸೀರನು ಈಗ ಬೇನೆಯಿಂದ ಚನ್ನಾಗಿ
ತಿಳಿದೆದ್ದಿದ್ದನು. ಅವನು ರಹೀಮನ ಕೂಡ ಹೊರಗೆ ತಿರುಗಾಡಲಿಕ್ಕೆ
ಹೋಗತಕ್ಕವನಿದ್ದನು; ಆದರೆ ಹೊರಹೊರಡುವದಕ್ಕೂ ಮುಂಚಿತವಾಗಿ;
ಅವನು ತನ್ನ ವೀಣೆಯನ್ನು ತೆಗೆದು, ಒಂದೆರಡು ಕರುಣಾರಸಪ್ರಧಾನವಾದ
ರಾಗಗಳನ್ನು ಬಾರಿಸಿದನು. ಇವೆರಡೂ ರೋಷನೆಯ ಕಿವಿ ಕೇಳಿದವು.
ಸಾಯಂಕಾಲದಲ್ಲಿ, ಆಕೆಯು ತನ್ನ ಸುಖದುಃಖಗಳನ್ನು ತಾನೇ
ಅನುಭೋಗಿಸಬೇಕಲ್ಲದೆ. ಬೇರೆ ಉಪಾಯನೇನೆಂದು ವಿಚಾರ ಮಾಡುತ್ತ
ಮಾಡುತ್ತ ಮನೆಯ ಹಿತ್ತಲ ಬಾಗಿಲಿನಿಂದ ಹೊರಬಿದ್ದಳು. ಹೋಗ
ಹೋಗುತ್ತ, ಹತ್ತರವೇ ಕೊಳ್ಳದಲ್ಲಿ ಹೆರಿಯುತ್ತಿದ್ದ ಒಂದು ಸಣ್ಣ ಜಲ
ಪ್ರವಾಹದ ದಂಡೆಯಲ್ಲಿದ್ದ ಗಿಡಗಂಟೆಗಳ ದಟ್ಟಣೆಯಲ್ಲಿ ಎಲ್ಲಿಯಾದರೂ
ಏಕಾಂತ ಸ್ಥಳವಿದ್ದರೆ ಕೆಲಹೊತ್ತು ವಿಶ್ರಾಂತಿಸಬೇಕೆಂದು, ಅಲೋಚನೆ
೮೪ ------------------------------------------------------------------------
ಮಾಡಿದಳು. : ಸಮೀಪದಲ್ಲಿಯೇ ಒಂದು ಗಿಡದ ಟೊಂಗೆಯ ಮೇಲೆ ' ಬುಲ್
ಬುಲ್' ಪಕ್ಷಿಯು ಕೂತು ತನ್ನ ನಿಯಮದಂತೆ ಶ್ರುತಿಮನೋಹರವಾದ
ಗಾನವನ್ನಾ ರಂಭಿಸಿತ್ತು. ರೋಷನೆಯು ಕೈಮೇಲೆ ಗಲ್ಲವನ್ನೂರಿಕೊಂಡು,
ನೆಲಕ್ಕುರುಳಿದ ಒಂದು ಬೊಡ್ಡೆಯ ಮೇಲೆ ಕೂತಳು. ತುಸು ಹೊತ್ತಿನ
ಮೇಲೆ ಆ ಪಕ್ಷಿಯು, ಒಮ್ಮೆಲೆ ಮನುಷ್ಯನ ಸುಳುವು ಕೇಳಿ ರೆಕ್ಕೆಗಳನ್ನು
ಫಟಫಟ ಮಾಡಿದ್ದೇ ಹಾರಿಹೋಯಿತು. ರೋಷನೆಯು ಕೂತಲ್ಲಿಂದೆದ್ದು
ನಿಂತು ಬಿಕ್ಕೆ ಬಿಕ್ಕಿ ಅಳಹತ್ತಿದಳು. ಆಕೆಯು ಹಿಂತಿರುಗಿದಳು; ಮತ್ತು
ಬಸೀರನನ್ನು ಕಂಡಳು. ಬಸೀರನ ಮೋರೆಯ ಮೇಲೆ ಮೊದಲಿನ ಬೇನೆಯ
ಕಳೆಯೇ ಮತ್ತೆ ನಿಚ್ಛ ಳವಾಗಿ ಸುರಿಯುತ್ತಿತ್ತು. ಅವಳ ಕೈಹಿಡಿದು, ಏನೋ
ಮಾತಾಡಬೇಕೆಂದವನೇ, ಬಾಯೊಳಗಿನ ಮಾತು ಅಲ್ಲಿಯೇ ಉಳಿದು, ನೆಲ
ನೋಡುತ್ತ ಸುಮ್ಮನೇ ನಿಂತುಕೊಂಡನು 'ತಮ್ಮ ಮೈಯಲ್ಲಿ ನೆಟ್ಟ
ಗಿಲ್ಲೇನು?' ಎಂದು ರೋಷನೆಯು ಕುಂದಿದ ಸ್ವರದಿಂದ ತಟ್ಟಿಸಿಕೊಳ್ಳುತ್ತ
ಕೇಳಿದಳು. " ಅಹುದು, ನನಗೆ ನಿಜವಾಗಿಯೇ ನೆಟ್ಟಿಗಿಲ್ಲ; ಆದರೆ ನನ್ನ
ವೃಥೆಯು ಮಾನಸಿಕವು. ರೋಷನೆಯು ನನ್ನನ್ನು ಈ ಬೇನೆಯಿಂದ
ನೆಟ್ಟಗೆ ಮಾಡಲಾರಳು. ನಾನು ಹತಭಾಗ್ಯನು; ಹೀಗಾಗಲಿಕ್ಕೆ ನಾನು
ಪಾತ್ರನೇ ಸರಿ; ಅತಿಥಿಸತ್ಕಾರದ ಕಟ್ಟಳೆಗಳನ್ನು ಮುರಿದು ಮೂಲೆಗೊತ್ತಿ,
ಕೃತಜ್ಞತೆಯ ಬದಲು ಕೃತಘ್ನತೆ ಯನ್ನು ತೋರಿಸಿವೆ ಪಾಪಿಯು ನಾನೇ
ಅಲ್ಲವೇ? ಕೇವಲ ಸೌಖ್ಯದಾಶೆಗಾಗಿಯೇ ಧೈರ್ಯದಿಂದ ಮನಸ್ಸಿನೊಳಗಿದ್ದ
ದ್ದನ್ನು ಬಾಯಿಬಿಚ್ಛಿ ಮಾತಾಡಿಬಿಟ್ಟೆನು. ಅದರಿಂದ, ನನ್ನನ್ನು ಜೀವದ
ಮೇಲಿನ ಗಂಡಾಂತರದೊಳಗಿಂದ ಪರಿಪರಿಯಾಗಿ ಅರೈಕೆಮಾಡಿ ಉಳಿಸಿದ,
ನನಗೆ ಅತ್ಯಂತ ಪ್ರೀಯಳಾದ, ಉಪಕಾರಕರ್ತೃಳ ಹೃದಯವನ್ನೇ
ಸೀಳಿಬಿಟ್ಟೇನೆಂಬುವ ವಿಚಾರವನ್ನು ನಾನು ಎಳ್ಳಷ್ಟಾದರೂ ಮನಸಿನಲ್ಲಿ
ತರಲಿಲ್ಲವಲ್ಲ ! ಆದರೆ ಈ ದೋಷನಿವಾರಣಾರ್ಥವಾಗಿ ಒಳ್ಳೇ ಕಠಿಣವಾದ
ಪ್ರಾಯಶ್ಚಿತ್ತವನ್ನು ಪಡೆದುಕೊಳ್ಳುವೆನು. ಕಾರಣ, ರೋಷನ್, ಈ ಕ್ಷಣವೇ
ನಾನು ನಿನ್ನನ್ನಗಲಿ ಹೋಗುವೆನು. ಹತಭಾಗ್ಯನಾಗಿ, ನನ್ನ ಭಾಗ್ಯನಗರಿಗೆ
ಹೋಗುವೆನೋ, ಎಲ್ಲಿ ಹೋಗುವೆನೋ, ಹೋಗುವೆನು. ನೀನು ಮಾತ್ರ
ಸುಖದಿಂದಿರು, ತಂದೆಯ ಮಾತು ಮೀರಿ ಕರ್ತವ್ಯಪರಾಙ್ಮುಖಳಾಗದೆ ಇದ್ದು
೮೫ -------------------------------------------------------------------------
ದರಿಂದ ನಿನಗೆ ಒಂದುಬಗೆಯ ಸಮಾಧುನನಾಗುನದು. ಪತಿಯ ದಿವ್ಯ
ವಾದ ಕರಪಾಶದಲ್ಲಿಯಂತೂ ನಿನಗೆ ಅಮಿತವಾದ ಆನಂದವಾಗಲಿ; ಒಂದು
ವೇಳ ನಿನ್ನಂಥ ಪತ್ನಿಶಿರೋಮಣಿಯ ಸಾನ್ನಿಧ್ಯದಿಂದ ನಿನ್ನ ಪತಿರಾಜನು,
ಬೃಹಸ್ಪತಿಯಾದರೂ ಆಗಬಹುದು. ಇನ್ನುನಾನು ನನ್ನ ದೇಶಕ್ಕೆತೆರಳುವೆನು-
ರೋಷನೆಯ ನಿರಂತರ ಸಹವಾಸವಲ್ಲಿ ಆಯುಷ್ಯವನ್ನೆಲ್ಲ ಮಿಗಿಲಾದ
ಸೌಖ್ಯದಲ್ಲಿಯೇ ಕಳೆಯುವೆನೇನೋ ಎಂಬ ಸ್ವಪ್ನ ಸಾಮ್ರಾಜ್ಯದಲ್ಲಿ ಕಟ್ಟದ
ಗೋಪುರಗಳೆಲ್ಲ ನನ್ನ ಸಂಗಡಲೇ ಬರಲಿ, ಈ ಸ್ವಪ್ನವನ್ನು ಮರೆಯಲಿಕ್ಕೆ
ಏನೇನು ಮಾಡಬೇಕಾಗುತ್ತದೋ ನೋಡುವ.”
ಕಣ್ಣೀರುಗಳೇ ಈತನ ನುಡಿಗಳಿಗೆ ಉತ್ತ ರವನ್ನು ಕೊಟ್ಟವು. ಅಷ್ಟರಲ್ಲಿ
ಬಸೀರನ ಆಳುಗಳು ಬಂದು, ಕುದುರೆಯ ರಥವನ್ನು, ಸಿದ್ಧಪಡಿಸ್ಕಿ ಅಲ್ಲಿಗೆ
ಹೊಡಿಸಿ ತಂದು ಹೊರಡಬೇಕಿಂದು ಸೂಚಿಸಿದರು. ಬಸೀರನು ತನ್ನ
ಕಿಸೆಯೊಳಗಿಂದ ಎರಡು ಭಾವಚಿತ್ರ ಗಳನ್ನು ಹೊರಗೆ ತೆಗೆದನು; ಅವುಗಳಲ್ಲಿಯ
ದೊಂದು ರೋಷನೆಯದು; ತಾನು ತೆಗೆದದ್ದು; ಅದನ್ನು ಒಳ್ಳೇ ಉಲ್ಲಾಸದಿಂದ
ಮುದ್ದಾಡಿ, ಕೊರಳಲ್ಲಿ ಕಟ್ಟಿಕೊಂಡು, ನಿಲುವಂಗಿಯಿಂದ ಬಚ್ಚಿ ಬಿಟ್ಟಿ ನು.
ಎರಡನೆಯದನ್ನು ಅನುವಾನಿಸುತ್ತ ಅನುಮಾನಿಸುತ್ತ ಮುಂದಕ್ಕೆ ಚಾಟಿ
ಹಿಡಿದನು. ರೋಷನ್, ಇವನ್ನು ನೀನು ಸ್ವೀಕರಿಸಿದ ಪಕ್ಷಕ್ಕೆ, ಒಂದಾ
ನೊಂದು ವಿಷವ್ಯಾಳ್ಯದಲ್ಲಿ ಅಪರಾಧಿಯಾಗಿದ್ದರೂ, ನಿನ್ನನ್ನು ನಿರಂತರವಾಗಿ
ಪೂಜಿಸತಕ್ಕವನ ನೆನಪು ನಿನಗೆ ಯಾವಾಗಲಾದರೂ ಆದೀತು. ಮೂಲ
ರೂಪವು ಕಣ್ಮರೆಯಾದನಂತರ ನೀನು ಅದನ್ನು ನೋಡೀಯಂತೆ, ಈ
ಹೃದಯದಲ್ಲಿ ಪ್ರೇಮದ ಲೇಶವು ಲೋಪವಾಗಿ, ಉಲ್ಲಾಸವೃತ್ತಿಯು
ಪುನರಪಿ ಸೇರಬಾರದೇಕೆ? ಒಳ್ಳೇದು ನಾನು ಈ ಕೃಷ್ಣ ಮುಖ.....................
ರೋಷನೆಯು ಪರವಶಳಾದಳು. ಆಕೆಯು ತೀರ ಮೈಮರೆತಳು. ಮೊದಲು
ಆಕೆಯ ಮುಖಲಕ್ಷಣವು ಬಾಡಿ ಬತ್ತಿಹೋಯಿತು; ನಂತರ ಒಮ್ಮೆಲೆ,
ಜಗ್ಗನೆ ಲಜ್ಞಾಯುಕ್ತವಾದ ರಕ್ತರಾಗಛಾಯೆಯು ಅಲ್ಲೆಲ್ಲ ಪಸರಿಸಿತು.
"ಆಯ್ ನವಾಬ ಬಸೀರ ತಾವು ಏನು... ನನಗೆ ಏನು ಮಾಡೆನ್ನುವಿರಿ?”
ಎಂದು ಆಕೆಯು ಕೇಳಿದಳು. ಇಷ್ಟು ಕಿವಿಗೆ ಬೀಳಬೀಳುತ್ತಲೆ, ಪರ
ಮೌತ್ಸುಕ್ಯದಿಂದ ನವಾಬ ಬಸೀರನು, pa ಕೈಹಿಡಿದು, "ಛೇ! ಇದೇನು,
೮೬---------------------------------------------------------------------------
ಇದೇನೆನ್ನುವಷ್ಟರಲ್ಲಿಯೇ, ಆಕೆಯನ್ನು ರಥದ ಸಮೂಪಕ್ಸೆ ತಂದು ಅವ
ಳನ್ನು ಒಳಗೆ ಕೂಡಿಸಿ ತಾನೂ ಕೂತುಬಿಟ್ಟನು. ಕೂತದ್ದೇ ತಡ, ಕುದುರೆ
ಗಳನ್ನು ಹೌಹಾರುವಂತೆ ಓಡಿಸಿ, ನಿರ್ಭಾಗ್ಯನಾದ ರಶೀಮನ ದನಕರುಗಳ
ಹಿಂಡುಗಳು ಮೇಯುತ್ತಿರುವ ದಿನ್ನೆ ಕೊಳ್ಳೆಗಳನ್ನು ದಾಟಿ, ಬೈಲು
ಸೀಮೆಯನ್ನು ಹೊಕ್ಕರು.
ಈ ಸಂಗತಿಯಿಂದ ರೋಷನೆಯ ಸದ್ವರ್ತನಕ್ಕೆ ದಾಳಿ ತಗಲಿತು
ಸರಿ; ಆದರೆ ತನ್ನ ಸಚ್ಛೀಲದ ಸದಭಿಮಾನವು ಮಾತ್ರ ಅವಳಲ್ಲಿ ಸಂಪೂರ್ಣ
ವಾಗಿ ಜಾಗ್ರತಾವಸ್ಥೆಯಲ್ಲಿತ್ತು. ಆ ಜಾಲಗಾರನು-.- ಜನ್ಮಜನ್ಮಾಂತರ
ದಲ್ಲಿಯೂ ನಿನ್ನನ್ನು ಆಗಲಲಾರೆನೆಂದು ಅಣೆ ಭಾಷೆ ಕೊಟ್ಟನು; ಹೈದರಾ
ಬಾದದ ವರೆಗೂ ನಡುವೆ ಎಲ್ಲಿಯೂ ಕ್ಷಣಮಾತ್ರ ಉಳಕೊಳ್ಳದೆ, ಒಂದೇ
ಸವನೆ ಕುದುರೆ ಬೆನ್ನು ಹತ್ತಿದವರಂತೆ ಅವಸರದಿಂದ ಸಾಗಿಸಿದ ಈ
ಪ್ರವಾಸದಲ್ಲಿ, ಅವಳನ್ನು ಮರ್ಯಾದೆಪೂರ್ವಕವಾಗಿಯೂ, ಪ್ರೀತಿಯಿಂದಲೂ
ಆಗಾಗ ವಿಚಾರಿಸಿ ಮರೆಯದೇ ಸಮಾಚಾರ ತೆಗೆದುಕೊಳ್ಳುತ್ತಿದ್ದನು.
ಅವಳಿಗೆ ತನ್ನ ಪೂರ್ವೇತಿಹಾಸಸ್ಮರಣದಿಂದಲೂ ಸದ್ಯದ ಪರಿಸ್ಥಿತಿಯ
ವಿಷಯಕವಾದ ವಿಚಾರಗಳಿಂದಲೂ, ಉಂಟಾಗುವ ಮನಸ್ತಾಪವನ್ನು ಈ
ಶಿಷ್ಟಾಚಾರಗಳು ಎಷ್ಟು ಮಾತ್ರಕ್ಕೂ ಕಡಿಮೆ ಮಾಡಲಾರದಾದವು.
ಸೌಂದರ್ಯಾತಿಶಯದ ಸಾಮರ್ಥ್ಯವು ಒತ್ತಟ್ಟಿಗೆ, ಅವಳು ಉದಾಸೀನತೆ
ಯಿಂದ ಉಸುರಿಡುವದು ಇನ್ನೊಂದೆಡೆಗೆ, ಹೀಗಾಗಿ ಇವೆರಡೂ ಸಮಸಮಾನ
ಶಕ್ತಿಗಳ ವಶಕ್ಕೆ ಸಿಕ್ಕು ಬಸೀರನು ಜರ್ಜರನಾಗಿದ್ದನು. ತನ್ನ ಮನಸ್ಸಿನ
ಬಲದಿಂದ ಬೇಕಾದ ಕಾರ್ಯವನ್ನು ಕೈಕೊಂಡೇನೆಂಬದಾಗಿ, ಅವನಿಗಿದ್ದ
ಭ್ರಾಂತಿಯು ಬಯಲಾಯಿತು. ಇನ್ನೂ ಅವನ ಹೃದಯದಲ್ಲಿ, ಪಶ್ಚಾತ್ತಾಪ,
ಕಾರುಣ್ಯ, ಹಾಗೂ ನಿರಂತರವಾದ ಪ್ರೇಮ ಇವುಗಳಿಗೆ ಸ್ಥಲಾವಕಾಶವು
ದೊರೆಯುವಂತಿತ್ತು. ಒಂದು ವೇಳೆ ಅವನ ಕಾರ್ಯೋಪಕ್ರಮಕ್ಕೆ ಅಶ್ಲೀಲ
ವಾದ ವಿರುದ್ಧಾಚರಣೆಯಿಂದ, ಇಲ್ಲವೆ ಅಭದ್ರವಚನಗಳಿಂದ ಪುಟುವು
ಸಿಕ್ಕಿದ್ದರೆ ಮಾತ್ರ ಈ ಸಾತ್ವಿಕ ಮನೋಭಾವಗಳನ್ನು ಅವನು ಬದಿಗೊತ್ತಿ
ಬಿಡುತ್ತಿದ್ದನಾದೀತು; ಆದರೆ ಈ ಶಾಂತವೃತ್ತಿಯ ಪ್ರಶಾಂತಳಾದ
ಕುಮಾರಿಕೆಯ ಶಾಪತಾಸರಹಿತವಾದೆ ಸಂತಾಪವು, ಅವನಲ್ಲಿ ಈ ಸಾತತ್ವಿಕ
೮೭----------------------------------------------------------------------
ಭಾವಗಳನ್ನು ಮತ್ತಿಷ್ಟು ಹೆಚ್ಬಿಸಿತು. ಅವಳು ತನಗುಂಟಾದ ಅನ್ಯಾಯವನ್ನು
ಬಾಯಿಬಿಚ್ಚಿ ನುಡಿಯಲೇ ಇಲ್ಲ ಒಮ್ಮೊಮ್ಮೆ ಅವಳ ಕಣ್ಣೀರುಗಳೇ ಈ
ಕಥೆಯನ್ನು ಹೇಳಬೇಕು, ಹಾಗೂ ಇವಕ್ಕೂ ಸಮಾಧಾನವೃತ್ತಿಯಲ್ಲಿದ್ದಾಗ,
ಅವಳ ವೀಣೆಯೇ, ಅವಳ ಉದಾಸೀನವಾದ ಅಂಶಃಕರುಣದಲ್ಲಿಯ
ಪ್ರವಾಹದ ಅಬ್ಬರವನ್ನು, ಮೂರ್ಛನಾತರಂಗಗಳಿಂದ ಸ್ಪಷ್ಟವಾಗಿ ಧ್ವನಿ
ಗೈಯ್ಯುತ್ತಿತ್ತು.
ಹೈದರಾಬಾದದಲ್ಲಿ ಬೇಸಿಗೆಯ ಬಿಸಿಲಿನ ತಾಪವು ಬಹಳ. ಬೇಸಿಗೆಯು
ತಲೆದೋರುತ್ತಲೇ, ಅಲ್ಲಿಯ ನವಾಬರು ಮೆಲ್ಲಮೆಲ್ಲನೆ, ತಮ್ಮ ತಮ್ಮ ಅನು
ಯಾಯಿ ಪರಿವಾರದೊಂದಿಗೆ ಕೆಲವರು ನೀಲಗಿರಿಗೆ, ಕೆಲವರು ಸಿಮ್ಲೆಗೆ, ಕೆಲ
ವರಂ ಮಹಾಬಳೇಶ್ವಕ್ಕೆ, ಇನ್ನುಳಿದವರು ಅಲ್ಲಿಯೇ ಸಮೀಪದಲ್ಲಿದ್ದ
'ಹ್ವಿಕಾರಾಬಾದ'ವೆಂಬ ರಮ್ಯವಾದ ವನೋದ್ಯಾನಗಳಿಂದ ಶೋಭಿಸುವ,
ವಸಂತಕಾಲದಲ್ಲಿ ತಂಪು ತಂಗಾಳಿಯುಳ್ಳ ಪ್ರದೇಶಕ್ಕೂ ಹೋಗುವರು. ಇಲ್ಲಿ
ಎಷ್ಟೋ ನವಾಬರು ಹನ್ನೆರಡೂ ತಿಂಗಳು ಇದ್ದರೂ ಸಾಗುವಂತೆ ಸ್ಥಿರವಾದ
ಇಮಾರತಿಗಳನ್ನೇ ಕಟ್ಟಿರುವರು. ಇದೇ ಹ್ವಿಕಾರಾಬಾದಿನಲ್ಲಿ, ನಮ್ಮ
ಬಸೀರನ 'ಬಂಗಲೆ'ಯೂ ಇತ್ತು. ಹೈದರಾಬಾದಿಗೆ ಬಂದವನೇ, ತನ್ನ
ಕೆಲಸವನ್ನು ತೀರಿಸಿಕೊಂಡು, ಹ್ವಿಕಾರಾಬಾದಿಗೆ ರೋಷನೆಯ ಸಮೇತ
ಹೊರಟು ಹೋದನು, ಅಲ್ಲಿ ನವಾಬನ ಮದುವೆಯ ಹೆಂಡತಿಗೆ ಸಲ್ಲತಕ್ಕ
ಮಾನಮರ್ಯಾದೆಗಳೆಲ್ಲವೂ, ಈಕೆಗೆ ಸಲ್ಲುವಂತೆ ನಡೆಸಿದನು; ಆಕೆಯು
ಒಂದು ವೇಳೆ ಮನಸ್ಸುಮಾಡಿದ್ದರೆ, ನವಾಬನ ಹೆಂಡತಿಗೆ ಸಲ್ಲತಕ್ಕದ್ದರ
ಕಿಂತಲೂ ಹೆಚ್ಚು "ಐಷ ಆರಾಮ'ದ ಸಾಧನಗಳು ಆಕೆಯ ಅಧೀನದಲ್ಲಿ
ದ್ವವು, ಆದಕೆ ಈ ಮಾತಿನಲ್ಲಿ ಆಕೆಯು ನವಾಬ ಬಸೀರನ ಇಚ್ಛಾನುವರ್ತಿ
ಯಾಗಲಿಲ್ಲ. ಆಕೆಗೆ ಇದ್ದ ವೈಭವವೇ ಸಾಕುಬೇಕಾಗಿತ್ತು. ಈ ವೈಭವ
ದಲ್ಲಿ ತನ್ನನ್ನು ಹೇಗಾದರೂ ಮರೆಮಾಡಿಕೊಂಡು, ತಪ್ಪಿ ಉಳಿದ ಗುಲುಬೀ
ಹೂವಿನಂತೆ ಕಾಲ ಕಳೆಯುತ್ತಿದ್ದಳು. ಆಕೆಗೆ ತನ್ನ ಸ್ಥಿತ್ಯಂತರದ ನೆನಪು
ಸಹಿಸಲಾರದು; ಅದನ್ನು ಉಪಾಯೋಪಾಯದಿಂದ ಮರೆತುಹೋಗಿರುವ
ಯೋಚನೆಯಲ್ಲಿ ಇರುತ್ತಿದ್ದಳು. ಆಕೆಯ ಸುಖದ ಆಗರವೆಂದರೆ, ಆಸೆಯ
ಪುಸ್ತಕಗಳೂ, ಅದೊಂದು ವೀಣೆಯೂ; ಅವಳ ಮನಸ್ತಾಪವನ್ನು ಕಡಿಮೆ
೮೮ -----------------------------------------------------------------------
ಮಾಡುವ, ಇಲ್ಲವೆ, ಪಶ್ಚಾತ್ತಾಪದಿಂದುಂಟಾದ ಕ್ಲೇಶಗಳ ತೀವ್ರತೆಯನ್ನು
ತಡೆಯುವ ಸಾಧನೆಗಳನ್ನೇ ಸುಖದ ಸಾಧನಗಳೆಂದು ತಿಳಿದರೆ, ಇದಷ್ಟು
ಕಾರ್ಯವು ಮಾತ್ರ ಈ ಪುಸ್ತಕ-ವೀಣೆಗಳಿಂದಾಗುತ್ತಿತ್ತು.
ರೋಷನೆಗೆ ತನ್ನ ತಂದೆಯಾದ ರಹೀಮನ ನೆನಪಾದರಂತೂ ಈ
ಸಂತಾಪದ ಾತಿರೇಕವಾಗುತ್ತಿತ್ತು. ಆ ವೃದ್ಧನಾದ ತಂದೆಯು ಇನ್ನು
ಯಾರನ್ನು ನೋಡಿ ಕಾಲಕಳೆಯಬೇಕು? ಮುಪ್ಪಿನ ಕಾಲದಲ್ಲಿ ತನಗೆ ಒದಗಿದ
ದುರ್ದ್ವೈವವನ್ನೂ ಮಗಳ ಮಾನಹಾನಿಯನ್ನೂ ನೆನೆನೆನೆಸಿ ಕಣ್ಣೀರಿನಿಂದ
ತೋಯಿಸುತ್ತ ಕೂಡುವದೊಂದೇ ಅವನ ಪಾಲಿಗಿಟ್ಟಿದ್ದಲ್ಲದೆ ಮತ್ತಿನ್ನೇನು?
ಬಸೀರನು ಈ ಮುದುಕನ ಬಗ್ಗೆ ಏನಾದರೊಂದು ವ್ಯವಸ್ಥೆಯನ್ನು ಮಾಡದೆ
ಸುಮ್ಮನೇ ಕೂಡುವಷ್ಟು ಅನುದಾರಸ್ವಭಾವದವನಲ್ಲ. ತಾನು ಮಾಡಿದ
ಗಾಯವನ್ನು ಮಾಯಿಸುವದಕ್ಕಾ ದ್ರವ್ಯಸಹಾಯನನ್ನು ಮಾಡಬೇಕೆಂದು
ಬಯಸಿದನು. ಈ ಕ್ರೂರವಾದ ರ ಲಾಭನನ್ನು ನೀಚರಾದವರು
ಮಾತ್ರ ಮಾಡಿಕೊಂಡಾರು. ಆದರೆ ಪ್ರಾಮಾಣಿಕರಾದ ಸತ್ವಶಾಲಿಗಳಿಗೆ
ಇದು ಹೆಚ್ಚಿನ ಮಾನಖಂಡನೆ. ಹಣವನ್ನು ಮುಂದು ಮಾಡಿ, ಹಿಂದೆ
ಮಾಡಿದ ಮಾನಹಾನಿಯನ್ನು ಮರೆಯೆಂದರೆ ಹೇಗೆ? ಹೇಗೇ ಇರಲಿ,
ಇವನಿಗೆ ಈ ಬಗೆಯ ಸಂಧಿಯು ಸಾಧಿಸುವ ಪ್ರಸಂಗವೇ ಬರಲಿಲ್ಲ. ತನ್ನ
ಮಗಳು ಪಲಾಯನಹೇಳಿಸಿದಳೆಂದು ಕೇಳಿದ ದಿನವೇ ಆ ಮುದುಕನು ಆ
ಹಳ್ಳಿಯನ್ನು ಬಿಟ್ಟು, ಎಲ್ಲಿಯೋ ಉತ್ತರಕ್ಕೆ ಹೋಗಿ ಸತ್ತುಹೋದನೆಂಬ
ವಾರ್ತೆಯು ಇವನಿಗೆ ಮುಟ್ಟಿತು. ಇದನ್ನು ಕೇಳಿದ ಮೇಲಂತೂ, ರೋಷನೆಯು
ಹೊಟ್ಟಿ ಬೇನೆ ಹಚ್ಚಿಕೊಂಡಳು, ಮುಂದೆ ಎಷ್ಟೋ ದಿನದ ವರೆಗೆ ಬಸೀರನು
ಎಷ್ಟುಪರಿ ಸಮಾಧಾನ ಹೇಳಿದರೂ ಹುಚ್ಚು ಹಿಡಿದಂತೆ ಮಾಡುತ್ತಿದ್ದಳು. ಈ
ದುಃಖಾಟೋಪದ ಮೊದಲನೆಯ ಕುದಿಯು ಇಳಿದ ಕೂಡಲೆ, ಅವನು
ಇವಳನ್ನು ಮುಂಬೈ ಪಟ್ಟಣಕ್ಕೆ ಕರೆದೊಯ್ದನು. ಇಲ್ಲಿ ತರತರದ ವಸ್ತು
ಒಡವೆಗಳನ್ನಾಗಲಿ, ದಿಗ್ದೇಶದ ಚಮಚಮತ್ಕಾರದ ನೋಟಗಳನ್ನಾಗಲಿ,
ಜನರನ್ನಾಗಲಿ ನೋಡಿ, ಈ ದುಃಖವು ಮರೆತುಹೋದರೆ ಸಾಕೆಂದು
ಭಾವಿಸಿದ್ದನು.
ಬಸೀರನಂಥ ಮನೋಧೈರ್ಯಗಳುಳ್ಳವನು ರೋಷನೆಯ ವ್ಯಥೆಯನ್ನು
೮೯-----------------------------------------------------------------------
ತನ್ನ ವಿಷಯವಿಚಾರಗಳಿಂದ ಇಮ್ಮಡಿಸುವನೆಂಬದು ಕಲಿಕಾಲಕ್ಕೂ ಅಸಾಧ್ಯ
ವಾದ ಮಾತು. ಒಂದಾದರೆ ಕಡಿಮೆ; ಎರಡಾದರೆ ಹೆಚ್ಚು; ಎಂಬ ನ್ಯಾಯವು
ತನ್ನ ಹಾಗೂ ರೋಷನೆಯ ನಡುವೆ ಬಂದೀತೆಂಬ ಭಯವು ಬಸೀರನಿಗೆ ಇಲ್ಲ
ದಿದ್ದರೂ, ಸದ್ಯದಲ್ಲಿ ಅವಳ ಮಾನಸಿಕ ಪರಿಸ್ಥಿತಿಯನ್ನನುಲಕ್ಷಿಸಿ, ಉಕ್ಕೇರಿ
ರಭಸದಿಂದ ತೂರಿ ತೂರಿ ಬರುತ್ತಿರುವ ತೆರೆಗಳನ್ನು, ತಟಸ್ಥವೃತ್ತಿಯನ್ನು
ತಾಳಿ, ' ಈಸು ಬಲ್ಲಣ್ಣ ತಾ' ಇಂಥ ಕಾಲದಲ್ಲಿ ' ಈಸದಿರುವುದು ಲೇಸು'
ಎಂಬ ನಾಣ್ನುಡಿ (?) ಗನುಸರಿಸಿ, ತಡವದೆ ಎದೆಗೊಟ್ಟು, ಉಪಾಯದಿಂದಲೇ
ನಿವಾರಿಸಿಕೊಳ್ಳುವಂತೆ, ಈ ಪ್ರಸಂಗದಲ್ಲಿ ರೋಷನೆಯನು ಕಿಂಚಿನ್ಮಾತ್ರವೂ
ನೋಯಿಸಬಾಗದೆಂದು ನಿಶ್ಚಯ ಮಾಡಿದನು. ಕೆಲಕಾಲತನಕ ಆಸಿಧಾರಾ
ವ್ರತವನ್ನು ಪಾಲಿಸಬೇಕೆಂಬ ನಿರ್ಧಾರ ಮಾಡಿಕೊಂಡು, ಅವಳಿಗಾಗಿ
ಮತ್ತೊಂದು ಮಂದಿರವನ್ನು ಹಿಡಿದು, ನಿಷ್ಕಾಮುಕವಾಗ ಸ್ನೇಹಕ್ಕೆ ತಕ್ಕ
ಆಚರಣೆಯನ್ನು ಅಬಾಧಿತವಾಗಿ ಇಡಲುಪಕ್ರಮಿಸಿದನು. ಆದರೆ, ಬೇನೆ
ಯೊತ್ತಟಗೆ, ಬರೆ ಇನ್ನೊಬ್ಬನಿಗಾದಂತಾಗಿ, ಅವಳ ಮನಸ್ಸಮಾಧಾನ
ರಂಜನಗಳ ಪ್ರೀತ್ಯರ್ಥವಾಗಿ ಬಸೀರನು ಮಾಡಿದ ಯತ್ನ ಸಾಯಾಸಗಳೆಲ್ಲವೂ
ನಿಷ್ಫಲವಾರವು, ಕೃತಾಪರಾಧದ ಭಯಾನಕವಾದ ಚಿತ್ರವು ಅವಳ ಕಣ್ಣ
ಮುಂದೆ ಕಟ್ಟಿದಂತಾಯಿತು. ತನ್ನ ಕರ್ಮವು ತನ್ನನ್ನು ಸುತ್ತುಕೊಂಡಿತಲ್ಲದೆ,
ತನ್ನ ತಂದೆಗೂ ಮೃತ್ಯುವಾಯಿತೆಂದು ರೋಷನೆಯುು ನಿಟ್ಟುಸಿರು ಹಾಕು
ತ್ತಿದ್ದಳು.
ಮುಂಬೈಯಲ್ಲಿ ಬಸೀರನ ಸಂಬಂಧಿಕನಾದವನೊಬ, ಲಕ್ಷ್ಮೀಪುತ್ರನಿರು
ತ್ತಿದ್ದನು. ಅವನು ತನ್ನ ಕುಟುಂಬದವರೊಂದಿಗೆ ಆಪೋಲೋ ಬಂದರದ
ಸಮೀಪವಿದ್ದಂಥ ವಿಶಾಲವಾದ ಮಂದಿರಮಾಲೆಯನ್ನೇ ಆಕ್ರಮಿಸಿ
ಮೇಲಂತಸ್ತಿನಿಂದ ಕೆಳಗಿನವರೆಗೂ ಏಳು ಗೋಪುರಗಳ ಸುತ್ತಮುತ್ತಲಿದ್ದ
ಕಟ್ಟಡವನ್ನೆಲ್ಲ, ಪರಿಚಾರಕ, ಅನುಯಾಯಿಗಳಿಂದ ತುಂಬಿಬಿಟ್ಟಿದ್ದನು.
ಸರಿಯದೆ. ಮುಂಬೈಯಲ್ಲಿ ಶ್ರೀಮಂತಿಕೆಯ ಅನುಮಾನವು ಆಳುಗಳ ಸಂಖ್ಯೆ.
ಯಿಂದಲೇ ಆಗುತ್ತಿರಬಹುದು! ಲಕ್ಷಾವಧಿಯ ಉತ್ಪನ್ನವು ವರುಷೊಂದಕ್ಕ
ಇವರ ಮನೆ ಸೇರುತ್ತಿತ್ತು. ಇಷ್ಟು ಉತ್ಪನ್ನಕ್ಕೆ ಪ್ರತಿಯಾಗಿ ಇವರು ಸಾಲಿ
ಗರ ಶೂಲಕ್ಕೆ ಆಗಾಗ ಹೊಣೆಯಾಗಬೇಕಾಗುತ್ತಿರುವದೆಂದರೆ ಈ ಮಾತು ಘನ:
೯೦ ---------------------------------------------------------------------------
ನಂತರಿಗೆ ಸಲ್ಲೀತು. ಇವನ ಗೃಹಿಣಿಯು ಕೇವಲ ಧನೋಪಭೋಗಕ್ಕಾಗಿಯೇ
ಈ ಮಂದಿರವನ್ನು ಹೊಕ್ಕದ್ದರಿಂದ ಒಂದೇ ಅಧಿಷ್ಠಾನದಲ್ಲಿ ಇಬ್ಬರ, ವಾಸ್ತ
ವ್ಯವು ಅಸಹ್ಯವಾಯಿತು. ಒಂದು, ಮನೆಗೆ ಸೇರಿಕೊಂಡ ' ನೂತನ
ಲಕ್ಷ್ಮಿ' ಯು ಗೃಹಿಣಿಯಾಗಬೇಕು, ಇಲ್ಲವಾದರೆ, ಮೊದಲಿದ್ದ ಲಕ್ಷ್ಮಿಯೆ(
ಚಿರಸ್ಥಾಯಿಯಾಗಿರಬೇಕು. ಆದರೆ, ಈ ನೂತನ ಲಕ್ಷ್ಮಿಯ ಮೋಹಕವಾದ,
ಸಜೀವ, ಚೇತನಾಸ್ವರೂಪಿಯಾದ, ಸ್ಫೂರ್ತಿದಾಯಕವಾದ, ಕೀರ್ತಿ
ಮರ್ಯಾದೆಗಳನ್ನು ಹೆಚ್ಚಿಸುವ ಶಕ್ತಿ ಮುಂತಾದ ಗುಣಸಮುಚ್ಛಯದ
ಮುಂದೆ, ಕೊಟ್ಟಲ್ಲಿ ಹೋಗಿ, ಹೇಳಿದ್ದನ್ನು ತಂದು, ಇಟ್ಟಲ್ಲಿ ಇದ್ದು, ಕೇವಲ
ನಿಶ್ಚೇತನಳಂತೆ, ಸ್ಥಿರಚಿತ್ತಳಾಗಿರಲೂ ಚಂಚಲಳೆಂಬ ಅಪವಾದಕ್ಕೆ ಗುರಿ
ಯಾಗುವ ಗುಣವಂತಿಯ ಪಾಡು ಎಲ್ಲಿ?
ಅಂತೂ ಈ ಬೇಗಮ್ ಸಾಹೇಬರು ತಮ್ಮ ಖಾನಸಾಹೇಬರನ್ನು ಕೇವಲ
ಧನವೈಭವದ ಸಲಾವಾಗಿ ಮದುವೆಯಾಗಿದ್ದರು. ಖಾನಸಾಹೇಬರು, ಈ
ವಧುವನ್ನು ತಾವು ನಿಶ್ಚಯಿಸುವದಕ್ಕೂ ಪೂರ್ವದಲ್ಲಿ, ಎಷ್ಟೋ ಜನ
ನವಾಬರು ಆವಳ ತಂದೆಯನ್ನು ವಿಚಾರಿಸಿ ಅಪಯಶ ಹೊಂದಿದ್ದರು. 'ವರ
ಪರೀಕ್ಷೆಯು ವಧುವಿನ ಸ್ವಾಧೀನವಿದೆ; ನಿಮ್ಮ ಭಾವಚಿತ್ರವನ್ನು ಅವಳಿಗೆ
ತೋರಿಸಿ ನಿಮ್ಮ ಕುಲಶೀಲದ ಐತಿಹ್ಯವನ್ನು ನಾನು ಅವಳಿಗೆ ತಿಳಿಸಿ, ಏನೆಂಬ
ದನ್ನು ಅವಳ ಇಚ್ಛಾನುಸಾರವಾಗಿ ತಮಗೆ ಅರಿಕೆ ಮಾಡುವೆನು' ಎಂದು
ಎಲ್ಲರನೂ ಸಮ್ಮತಿಸಿ ಕಳಿಸುತ್ತಿದ್ದನು. ಕಡೆಗೆ ಖಾನಸಾಹೇಬರ ಧನ
ಲಕ್ಷ್ಮಿಯು ಈ ನೂತನ ಲಕ್ಷ್ಮಿಯನ್ನು ಮನೆಗೆ ಕರೆತಂದಳು, ವೈವಾಹಿಕ
ಕಾರ್ಯಾದಿಗಳು ಯಥಾಸಾಂಗವಾಗಿ ಆದವು, ಬೇಗಮ ಸಾಹೇಬರು ಗೃಹಿ
ಣಿಯ ಪದನನ್ನು ಹೊಂದಿ ಮಂದಿರದಲ್ಲಿಯ ಅದಿಪೀಠವನ್ನು ಅಲಂಕರಿಸಿಂ
ರೆಂಬ ಸಂಗತಿಯನ್ನು ಈ ಮೇಲೆಯೇ ಹೇಳಿಯದೆ. ಹಣದ ಕೊರತೆಯು
ಎಂದಿಗೂ ಆಗಕೂಡವನ್ಬು ಉತ್ಪನ್ನವು ಧಾರೆಗಟ್ಟಿ ಬರುತ್ತಿದ್ದರೂ ಖಾನ
ಸಾಹೇಬರಿಗೆ ' ಬರಗಾಲವು' ತಪ್ಪಲಿಲ್ಲೆಂಬದೂ ಈ ಮೇಲೆ ಕಾಣಿಸಿದೆ.
ಇದೆಲ್ಲವು ಯಾತರ ಪರಿಣಾಮವೆಂಬದನ್ನು ಮಾತ್ರ ಹೇಳಲಾಗದು. ಈ
ದಂಪತಿಗಳಿಗೆ ಇಷ್ಟು ವೈಭವವು ಅಂಕಿತದಲ್ಲಿದ್ದರೂ, ಒಂದರಕ್ಷಣವೂ ಏಕಾಂತ
ವೆಂಬ ಸಂಗತಿಯು ಕನಸು ಮನಸಿನಲ್ಲಿದ್ದಿಲ್ಲ. ಸದಾ ಮೇಜವಾನಿ, ಇಲ್ಲವೆ
೯೧------------------------------------------------------------------
ಆದರ ಸಿದ್ಧತೆ; 'ಸುಲ್ತಾನ ಜಂಗ' ರ ಸ್ವಾಗತವು, ಸಲಾಬತುದ್ದೌಲರ ಆದರ
ಸತ್ಕಾರವು; ಇವೇ ಮಾದರಿಯ ಅದರೋಪಚಾರಗಳಲ್ಲಿಯೇ ಹಗಲಿರುಳುಗಳು
ಕಳೆದಾಗುತ್ತಿದ್ದು ಮನಃಸ್ವಾಸ್ಥ್ಯಕ್ಕೆ ಕಾಲಾವಕಾಶವೇ ಇರುತ್ತಿದ್ದಿಲ್ಲ.
'ಮಹಾಲ' ಮಾಲೆಯ ಮುಂದೆ: ನಾಮಾಂಕಿತವಾದ ಹಾಟೆಲ್ಲುಗಳ ಎದುರಿ
ನಲ್ಲಿ ಸಹ ನಿಲ್ಲದಷ್ಟು, ಮೋಟಾರ, ಫೇಟನ್‌ಗಳು ಯಾವಾಗಲೂ ದುಮದುವಿ
ಸುತ್ತಿದ್ದವು.
ನಮ್ಮ ಬಸೀರನು ಈ ಬಗೆಯಿಂದ ನಿರಂತರವಾಗಿ ಕಾಲ್ದೂಳಿಯಿಂದ
ಪಾವನವಾಗುತ್ತಿದ್ದ, ' ವ್ಹಿಕ್ಟೋರಿಯಾ ಟರ್ಮಿನಸ' ಸ್ಟೇಶನವನ್ನು, ಈ ಜನ
ಸಂದಟ್ಟೀಣಿಯ ಸಂದರ್ಭದಲ್ಲಿ ನಾಚಿಸುತ್ತಿದ್ದ ಮಂದಿರವನ್ನು ಯವಾಗ
ಬಿಟ್ಟುಕೊಟ್ಟ್ರೇನೆಂದು ಆಗಾಗ ನೆನೆಸುತ್ತಿದನು. ಮುಂಬೈಗೆ ಬಂದ ಒಂದೆ
ರಡು ದಿವಸಗಳಲ್ಲಿಯೇ ಈ ಬಗೆಯ ಬೇಸರಗೊಂಡನು, ಒಂದೆರಡು ತಿಂಗಳು
ಗಳಾದರೂ ಅಲ್ಲಿ ಕಳೆಯಬೇಕೆಂದು ಮಾಡಿದ ತನ್ನ ವಿಚಾರವನ್ನು ಕ್ರಮೇಣ
ಬದಲಾಯಿಸುವ ಹಂಚಿಕೆಗೆ ಬಂದನು. ಮುಂಬೈಯಲ್ಲಿ ಅಲ್ಲಲ್ಲಿ ಸುಧಾರಣಾ
ದೇವಿಯ ಸ್ಮಾರಕಗಳನ್ನು ಕಂಡು, ರೋಷನೆಯ ಸಂತಾನವು ಕಡಿಮೆಯಾದೀ
ತೆಂದು ಬಯಸಿದ್ದು ಕೇವಲ ಭ್ರಾಂತಿಮೂಲಕವಾದದ್ದೆಂದು ಅವನಿಗೆ ತಿಳಿಯ
ಹತ್ತಿತು. ಖಾನಸಾಹೇಬರಲ್ಲಿ, ತನ್ನ ಸಮಾನಸ್ಕಂಧರಗೂಡ ಮಾತುಕಥೆ
ಗಳು ನಡೆದಾಗ ಅವನಿಗೆ ಕಟ್ಟಿಹಾಕದಂತಾಗುತ್ತಿತ್ತು. ಕಾರಣವಿರಲಿ, ಇಲ್ಲ
ದಿರಲಿ, ನೂರೆಂಟು ಸಾರೆ ಕೈ ಮುಂದು ಮಾಡುವದೂ, ಚಪ್ಪಾಳಿಕ್ಕವದೂ,
ಸುಮ್ಮಸುಮ್ಮನೆ ಕೈವಸ್ತ್ರವನ್ನು ಬಾಯಿಗೆ ಹಿಡಿದಂತೆ ಮಾಡಿ ನಕ್ಕು ಸ್ವಂತ
ದಂತಗಳನ್ನಾಗಲಿ, ಕೃತ್ರಿಮವಾದವುಗಳನ್ನೂಗಲಿ, ಇಲ್ಲವೆ ಹಸ್ತಿದಂತಗಳ
ನ್ನಾಗಲಿ ತೋರಿಸುವದೂ, ಬಸೀರನಿಗೆ ಹೇಗೆ ಹೇಗೋ ಅನಿಸಿತು.
ಈ ಗರ್ಭಶ್ರೀಮಂತರ ಗರ್ಭಗುಡಿಯಲ್ಲಿ ಹುರುಳೇನೂ ಕಾಣಲಿಲ್ಲ.
ಅಲ್ಲಿ ದೇವರ ವಾಸ್ತವ್ಯದ ಕುರುಹೇ ಇದ್ದಿಲ್ಲ. ಸಂಭಾಷಣದಲ್ಲಿ ವೃಥಾವಲ್ಗನೆ,
ಅಸಂಸ್ಕೃತವಾದ ವಾಣಿ, ಅಶ್ಲೀಲ ವಿಚಾರಗಳ ಪರಮಾವಧಿ, ಈ ತ್ರಿದೋಷ
ಗಳು ಕೂಡಿ ಜ್ಞಾನವನ್ನು ಕ್ಷಣಮಾತ್ರದಲ್ಲಿ, ಯಮಸದನಕ್ಕಟ್ಟುತ್ತಿದ್ದವು.
ಪ್ರಸಿದ್ಧವಾದ ಕುಲದಲ್ಲಿ ಜನ್ಮ ಹಾಗೂ ಪ್ರಸ್ತುತಕ್ಕೆ ಉನ್ನತವಾದ ಪದಾ
ಪನ್ನತೆಗಳ ಬಿಂಕಿನಲ್ಲಿ ಮುರಿದುಬೀಳುತ್ತಿದ್ದರೂ ಈ ಕುಲಶೀಲಕ್ಕೆ ಉಚಿತ
೯೨ ------------------------------------------------------------------------------
ವಾದ ಉಚ್ಚಧ್ವೇಯಗಳನ್ನು ಇಟ್ಟುಕೊಂಡು, ನಡೆನುಡಿಗಳ ಕ್ರಮವನ್ನು
ಆಚ್ಚುಕಟ್ಟಾಗಿ ಕಂಣುಮುಂದಿಟ್ಟು ನಡೆದುಕೊಳ್ಳುವ ಮಹಾನುಭಾವನು,
ಈ ಅತಿಥಿ ಆಭ್ಯಾಗತರ, ಇಷ್ಟಮಿತ್ರರ ಪಂಗಡದಲ್ಲಿ ಯಾರೂ ತೋರಲಿಲ್ಲ.
ಈ ನೆರೆದ ಸಂತೆಯಲ್ಲಿ ಯಾರ ವಿಚಾರ ಯಾರಿಗೆ? ಕೀಳುತರದ ಸ್ಕಾರ್ಥವೇ
ಮೂಲವಾದ ಜೀವನಕ್ರಮದಲ್ಲಿ ಸ್ವಾರಸ್ಯದ, ಸೌಖ್ಯದ, ಸದ್ಗತಿ ಸಾಧನದ.
ನಾಮನಿರ್ದೇಶವಾದರೂ ಹೇಗಾಗಬೇಕು? ಈ ಜನರ ಸೌಖ್ಯವು ಹೇಗೆ
ಕೃತ್ರಿಮವೋ, ಹಾಗೆಯೇ ಇವರ ಸ್ನೇಹಸಂಬಂಧವು. ಎಂದೋ ಹಳೇ
ಮಾತು! ಮನುಷ್ಯರಿಗೂ ದೇವರಿಗೂ ಸಂಬಂಧನಿದ್ದಾಗಿನ ಸಂಗತಿ! ಧನವೇ
ದೈವತವಾಗಿರುವ ಆಧುನಿಕ ಸುಧಾರಣೆಯ ಕಾಲದ ಸುದ್ದಿ ಇದಲ್ಲ. ಇದನ್ನೆಲ್ಲ:
ಕಂಡು, ನವಾಬ ಬಸೀರನು, ತಾನು ಇನ್ನೂ ಬೇನೆಯಲ್ಲಿಯೇ ಉಳಿದಿದ್ದರೆ
ಎಷ್ನೋ ಒಳಿತಾಗುತ್ತಿತ್ತೆಂದು ಎಷ್ಟು ಸಾರೆಯಾದರೂ ನೆನೆಸಿದನು.
ರೋಷನೆಯನ್ನು ಕೆಲ ದಿನ ಅವಳಷ್ಟಕ್ಕೆ. ಬಿಟ್ಟರೆ, ಮನಸ್ತಾಪವನ್ನು ನೀಗಿ
ಮಕ್ತಿ ಮೊದಲಿನಂತೆ ಉಲ್ಲಾಸಯುಕ್ತಳಾದಾಳೆಂದು ಬಯಸಿ ಬಸೀರನು
ಅವಳ ಬೀಡಾರಕ್ಸೆ ಹೋಗುವ ಕ್ರಮವನ್ನು ಅಷ್ಟಕಷ್ಟರಲ್ಲಿಯೇ ಇಟ್ಟಿದ್ದನು.
ಆದರೆ ಈ ಖಾನಸಾಹೇಬರ ಸಹವಾಸವೆಂದರೆ, ಭೂತಗಣದ ಕೂಡ ಸ್ನೇಹ
ಬೆರಿಸಿದಂತೆ. ರೋಷನೆಯ ಸಹವಾಸಕ್ಕೂ ಇದಕ್ಕೂ ಎಷ್ಟು ಅಂತರ! ಇದನ್ನು
ಸಹಿಸಲಾರದೆ, ಈ ಖಾನರ ಸಂಗತಿಗೆ ಸಲಾಮು ಹೊಡೆದು, ರೋಷನೆಗೆ
ಹೆಚ್ಚು:ಸಂತಾಸವಾದರೂ ಆಗಲಿ, ತಾನು ಅವಳ ಸಾನ್ನಿಧ್ಯದಲ್ಲಿದ್ದು ಕೊಳ್ಳು
ವದೇ ಲೇಸೆಂದು, ನಾಲ್ಕಾರು ದಿನಗಳಲ್ಲಿಯೇ ಖಾನಸಾಹೇಬರಲ್ಲಿಂದ ತನ್ನ
ಬೀಡಾರವನ್ನು ಕಿತ್ತಿದನು ರೋಷನೆಯ ಸನ್ನಿಧಾನನೆಂದರೆ ಸಂತಪ್ತರಿಗೆ
ಜ್ಯೋತ್ಸ್ನಾವಿಹಾರವಿದ್ದಂತೆ. ಸಂತಾಪಹಾರಕನೆಂದುತಿಳಿದು ಆಶೆಯಿಂದ
ಆತುರಪಟ್ಟು ಆದರಿಸಿ, 'ನೀನೇ ಗತಿ' ಎಂದು ಮೊರೆ ಹೊಕ್ಕವರಲ್ಲಿ ಎಷ್ಟು ಜನ
ವಿಲಾಸಿಗಳನ್ನು, ಚಂದ್ರನು ತನ್ನ ಲೋಕದಲ್ಲಿ ಸ್ವಾಗತಿಸಿ — ಅವರ ಮೇಲೆ
ತನ್ನ ಲೋಕದ ಆಸ್ಥಾನಕವಿಪದವನ್ನು ದಯಪಾಲಿಸಿ -- ' ಸಾಗಲಿನ್ಸು
ನಿಮ್ಮ ಭೂಲೋಕದ ಪ್ರಣಯ. ಪ್ರತಾಪ-ದರ್ಪಣ, ಪತ್ರಿಕಾ-ಸಂದೇಶ
ಮುಂತಾದ ಕಾವ್ಯರಚಕೆಯು |’ ಎಂದು ಎಷ್ಟು ಸಾರೆ ಹೇಳಿಲ್ಲ?
ಒಂದು ಬಗೆಯ ಸಂತಾಪವಾದ ಪಕ್ಷಕ್ಕೂ ರೋಷನೆಯ ನಿರಂತರ ಸಹ:
೯೩ ---------------------------------------------------------------------------
ವಾಸದಲ್ಲಿ ಒಂದು ಪ್ರಕಾರದ ಮಾಧುರ್ಯವಿತ್ತು. ಅವಳಲ್ಲಿ ಸೂಜ್ಞತೆಯೂ
ಪ್ರೀತಿಯೂ ಪೂರ್ಣವಾಗಿ ವಾಸಿಸುತ್ತಿದ್ದವು. ತನ್ನ ಕಲ್ಯಾಣದಲ್ಲಿ
ಮನಸು ಇಟ್ಟ ಮೂರ್ತಿಯಿಂದರೆ ರೋಷನೆಯಳೇ ಎಂದು ಬಸೀರನ
ಮನವ ರಿಕೆಯಾಗಿತ್ತು . ಬಸೀರನ ಆಚರಣವು, ದಿನಂಪ್ರತಿಯಾಗಿ ಸದ್ಗುಣ
ಸಮುಚ್ಚದ ಕೇಂದ್ರಸ್ಥಾನದಿಂದ ಉಗಮಿಸಿದ ಸೌಮ್ಯ ಸೌಂಭದಂತೆ
ರೋಷನೆಗೆ ಆಲ್ಹಾದದಾಯಕವಾಗಹತ್ತಿತು. ಪರಸ್ಪರರ ಸ್ನೇಹಭಾವವು
ವೃದ್ಧಿಯಾಗತೊಡಗಿತು. ಬಸೀರನು ಉದಾಸೀನತೆಯನ್ನು ಪ್ರಕಟಿಸಿದ
ಕೂಡಲೆ,. ರೋಷನೆಯು ವೀಣೆಯನ್ನು ಕೈಯಲ್ಲಿ ತೆಗೆದುಕೊಂಡು, ಕರುಣಾ
ವ್ಯಂಜಕ ರಾಗಗಳನ್ನು ಬಿಟ್ಟು, ಮಂದಹಾಸದಿಂದ ಶೈಂಗಾರರಸವೇ
ಪ್ರಧಾನವಾದ ರಾಗಗಳನ್ನು ಲೀಲೆಯಿಂದ ನುಡಿಸಿ, ತನ್ನ ಸರಸಸಲ್ಲಾಪ
ಗಳಿಂದ ಅವನ ವ್ಯಗ್ರವಾದ ಚಿತ್ತಕ್ಕೆ ಅತ್ಯಂತವಾದ ಅಮಾಧಾನವಾಗುವಂತೆ
ಮಾಡುತ್ತಿದಳು. ಅಂತರಂಗದಲ್ಲಿಯ ಹೇತುವೆಂದರೆ, ಇನ್ನೊಬ್ಬಳ
ಕೂಡ ಬಸೀರನಿಗೂ ತಾಪಕೊಡಬಾರದೆಂಬುದು. ಹೃದಯವು ದಿನದಿನಕ್ಕೆ
ಹೆಚ್ಚೆಚ್ಚು ಕಂದಿಹೋಗುತ್ತಿದ ರೂ, ಈ ಔದಾರ್ಯಖನಿಯು, ಇದನ್ನೆಲ್ಲ
ಬಸೀರನಿಂದ ಬಚ್ಚಿಡುತ್ತಿದ್ದಳು ರೋಷನೆಯು ಈ ತಾಪಸಂಭಾರವನ್ನು
ತಾಳುವಷ್ಟು ಶಕ್ತಿಯುಳ್ಳವಳಲ್ಲ, ಆದ್ದರಿಂದ ಇವಳ ದೇಹವು ದಿನವೊಂದಕ್ಕೆ
ಕ್ಷೀಣವಾಗಹೆತ್ತಿತು. ಮನಃಶಾಂತಿಯು ನಷ್ಟವಾಯಿತು; ಗಲ್ಲಗಳು ಬಾಡಿದವು;
ಕಣ್ಣುಗಳಲ್ಲಿಯ ಕಾಂತಿಯು ಕಳೆಗುಂದಿತು. ಈ ಸ್ಥಿತಿಯನ್ನೆಲ್ಲ ನೋಡಿ
ಬಸೀರನು ಒಳ್ಳೇ ಕಳವಳಗೊಳ್ಳುತ್ತಿದ್ದನು. 'ಕಪಟಾಚರಣೆಯ ಕನಸು
ಇಲ್ಲದ, ನಿರ್ಮಲ ಹೃದಯದ, ಸುವಿನೀತಳಾದ ಸುಕುಮಾರಿಯನ್ನು, ಕೇವಲ
ಸ್ಟೇಚ್ಛಾವಿಹಾರದ ಭ್ರಾಮಕವಾದ ಕಲ್ಪನೆಗಳಿಂದ ಮೂಢನಾಗಿ, ಸ್ವಾರ್ಥ
ವನ್ನೇ ಸಾಧಿಸತೊಡಗಿ. ನೀಚನಾದ ನಿಷಯಾಂಧನಂತೆ ಆಚರಿಸಿ, ಈ ಕೇಡಿಗೆ
ಒಳಮಾಡಿದೆನಲ್ಲಾ ' ಎಂದು ತನ್ನನ್ನೂ ತನ್ನ ಕರ್ಮವನ್ನೂ ಹಳಿದುಕೊಳು
ತ್ತಿದ್ದನು. ರೋಷನೆಯು ಏಕನಿಷ್ಠೆಯಿಂದ ನನ್ನಲ್ಲಿ ಪ್ರೇಮವಿಟ್ಟದ್ದಕ್ಳಾ
ಗಿಯ್ಕೂ ನನ್ನ ಕೂಡ ಸರಲಭಾನದಿಂದ ನಡೆದುಕೊಂಡದ್ದಕ್ಕಾಗಿಯೂ, ಅವಳಿಗೆ
ಈ ಪ್ರಕಾರದ ಘೋರವಾದ ಪ್ರಾಯಶ್ಚಿತ್ತವೆ ? ಮನುಷ್ಯತ್ವದ ಮರ್ಯಾದೆ
ಮೀರಿದಂಶಾಯಿತು. ಅವಳ ಪ್ರೇಮನ್ನೆಲ್ಲ ಚದುರೆಯ ಚಲ್ಲಾಟವೆಂದು ನಾನ
೯೪ -----------------------------------------------------------------------
ಭಾವಿಸಿದ್ದೇನಾದೀತೇ ? ವಿಷಯವಾಸನಾಪೂರ್ತಿಯ ಹೊರತಾಗಿ, ಈ
ಪ್ರೇಮಸಂಬಂಧದಲ್ಲಿ -- ನನ್ನ ಪೂಜಾಸ್ಥಾನದ ಪ್ರಣಯನಿಬಂಧನದಲ್ಲಿ
ಶ್ರೇಷ್ಠತರವಾದ ಜಾಗ್ರತಿಯು ನನ್ನ ಕಣ್ಣುಗಳಿಗೆ ಹೊಳೆಯದೇ ಹೋಯಿತೆ?
ನನ್ನ ಹೃದಯವನ್ನು ಇನ್ನೊನ್ಮೆ ಬಿಚ್ಚ ನೋಡಿಕೊಳ್ಳಲಿಯಾ? ಛೆ, ಈ
ಲಾವಣ್ಯಲತಿಕೆಯ ನಾಶಕ್ಕೆ ನಾನು, ತಿಳಿದಾಗಲಿ ತಿಳಿಯದಾಗಲ್ಲಿ, ಕಾರಣ
ನಾದೆ ಸರಿ. ರೋಷನೆಯಂತೂ ದಿನದಿನಕ್ಕೆ ಕೊರಗುತ್ತ ನಡೆದಳು. ಏಕಾ
ದರೂ, ಬಸೀರನಲ್ಲಿಯ ಭಕ್ತಿ ವಿಶ್ವಾಸ ಪ್ರೇಮಗಳು ಯಥೈವ ಜಾಗ್ರತ
ವಾಗಿಯೇ ಇದ್ದವು.
ಇದೇ ತರದ ವಿವಂಚನೆಯಲ್ಲಿ ಹಾಗೂ ಹೀಗೂ ದಿನಗಳೆಯುತ್ತಿ ರುವಾಗ
ಒಂದಾನೊಂದು ದಿನ ಸಾಯಂಕಾಲದ ಸುಮಾರಕ್ಕೆ ಬಸೀರನು ರೋಷನೆಯ
ಗೂಡ ತನ್ನ ದಿವಾಣಖಾನೆಯಲ್ಲಿ ಕೂತಿದ್ದನು. ಮನಸ್ಸಿನಲ್ಲಿ ಅದೇ ಮಾತು
ಕಟೆಯುತ್ತಿದ್ದದರಿಂದ, ಒಮ್ಮೆ ವ್ಯಗ್ರ ಚಿತ್ತನಾಗಿ, ಮತ್ತೊಮ್ಮೆ ವಿಚಾರ
ಹೊಂದಿನವನಂತಾಗಿ ರೋಷನೆಯು ಬಾರಿಸುತ್ತಿದ್ದ ವೀಣೆಯನ್ನು ಕೇಳುತ್ತ
ಕೂತಿರಲು, ಹೊರಗೆ ರಾಜಬೀದಿಯ ಮೇಲೆ ಒಳ್ಳೇ ಮಧುರವಾದ ಆಲಾಪಗ
ಳೊಂದಿಗೆ ವೀಣೆಯನ್ನು ಬಾರಿಸುತ್ತಿರುವದು ಇವರಿಬ್ಬರ ಕಿವಿಯೂ ಕೇಳಿತು.
ರೋಷನೆಯು ತನ್ನ ವೀಣೆಯನ್ನು ತೆಗೆದು ಬದಿಗರಿಸಿ, ಆ ವೀಣೆಯ ವಾದನ
ವನ್ನು ಲಕ್ಷಪೂರ್ವಕವಾಗಿ ಕೇಳತೊಡಗಿದಳು. ಅಷ್ಟರಲ್ಲಿ ಕಾಶ್ಮೀರ ದೇಶಕ್ಕೆ
ಮುಖ್ಯವಾದ ಕೆಲವು ಸಂಗತಿಗಳು ಆ ವೀಣಾ ವಾದನದಲ್ಲಿ ಹೊರಡಹತ್ತಿದವು.
ಇಂಥ ವಿಷಯಗಳನ್ನು ಕಾಶ್ಮೀರಿಗಳೇ ಬಾರಿಸಬೇಕು ಹೊರತು, ಅನ್ಯರು
ಇವುಗಳನ್ನು ಕೇಳಿ ಕಲಿತಿದ್ದ ಪಕ್ಷಕ್ಕೂ ಹುಟ್ಟ ಕಾಶ್ಮೀರಿಯ ಸೊಬಗು ಅವರ
ಕೈಯಲ್ಲಿ ಇಳಿಯುವದು ಅಸಾಧ್ಯವು. ಆ ಸ್ವರಗಳನ್ನು ಕೇಳುತ್ತಲೇ
ರೋಷನೆಯ ಕಣ್ಣಿಗೆ ತಟ್ಟನ ನೀರು ತಟ್ಟಿದವು; ಅವಳು ಹಾಗೆಯೇ
ಮರೆಮಾಡಿಕೊಂಡು ಅವುಗಳನ್ನು ಒರೆಸಿಕೊಂಡಳು. ನವಾಬ ಬಸೀರನು
ಆ ' ಬೀನ'ಕಾರನನ್ನು ಒಳಗೆ ಕರೆಯೆಂದು ಒಬ್ಬ ಪರಿಚಾರಕನಿಗೆ ಅಪ್ಪಣೆ
ಮಾಡಿದನು; ಆ ಮೇರೆಗೆ ಅವನನ್ನು ಒಳಗೆ ಕರೆತಂದು, ಇವರಿಬ್ಬರೂ
ಕೂತಿದ್ದ ದಿವಾಣಖಾನೆಯ ಬಾಗಿಲಿನ ಹೊರಗೆ ಕೂಡಿಸಿದರು.
ಒಂದೆರಡು ಸಂಗತಿಗಳ ಸ್ವರಗಳನ್ನು ರಾಗಾನುರೋಧವಾಗಿ ಬಾರಿಸ್ಕಿ
೯೫ -------------------------------------------------------------------------
ತಾಲಬದ್ಧವಾದದ್ದೊಂದು ಕಾಶ್ಮೀರೀ ಪದವನ್ನು ಆ ಬೀನಕಾರನು ಬಾರಿಸ
ಹತ್ತಿದನು. ಇದೇ ಪದಕ್ಕೆ ರೋಷನೆಯು ಬಾಲ್ಯದಲ್ಲಿ ಒಳ್ಳೇ ಹರುಷದಿಂದ
ಕುಣಿದು ಕುಣಿದು ದಣಿಯದೇ ಮತ್ತು ಅದನ್ನೇ ಬಾರಿಸೆಂದು ತನ್ನ ತಂದೆಗೆ
ಸಾಕುಬೇಕು ಮಾಡುತ್ತಿದ್ದಳು. ಈ ಮಾತಿನ ಸ್ಮರಣೆಯಾಗಿ, ಆವಳ
ಕಂಣೇರುಗಳು ಒತ್ತರಿಸಿ ಬಂದವು. ಇಷ್ಟರಲ್ಲಿ ಒಮ್ಮಿಂದೊಮ್ಮೆಯೇ ಆ
ಸಂಗೀತಗಾರನ, ಆ ಪದಕ್ಕೆ ಬದಲಾಯಿಸಿ, ಹಳ್ಳಿಗಾಡಿನದೊಂದು
ಐತಿಹಾಸಿಕ ಲಾವಣಿಯನ್ನು ಬಾರಿಸಹತ್ತಿದನು. ರೋಷನೆಯು ತಾನು
ಕೂತಿದ್ದ ಸ್ಥಳವನ್ನು ಬಿಟ್ಟೆದ್ದು, ಆ ಅಪರಿಚಿತನಾದ ಬೀನಕಾರನಿದ್ದಲ್ಲಗೆ
ಭರದಿಂದ ಧಾವಿಸಿ ಹೋದಳು, ಅವನೂ ಎದ್ದು ಹಿಂದಕ್ಕೆ ಸರಿದು ತಾನು
ಮೈಮೇಲೆ ಹೊದ್ದುಕೊಂಡಿದ್ದ ರುುಗೆಯಂಥ ಉದ್ದಂಗಿಯನ್ನು ತೆಗೆದು
ಬೀಸಾಟದನು. ಅವನು ಯಾರು ?-- ಮತ್ತಿನ್ಯಾರು ? ರೋಷನೆಯ
ತಂತೆ, ವೃದ್ಧ ರಹೀಮನೇ! ಅನನನ್ನು ಬಿಗಿದಪ್ಪಿ ಕೊಳ್ಳಲಿಕ್ಕೆಂದು ಆವಳು
ಮುಂದಕ್ಕೆ ಸರಿಯುವ ಹವಣಿಕೆಯಲ್ಲಿದ್ದದ್ದನ್ನು ಕಂಡ ಕೂಡಲೇ, ರಹೀಮನು
ಕ್ಷಣಹೊತ್ತು ರೋಷನೆಯ ಸ್ಪರ್ಶ ಕೂಡ ಬೇಡನೆಂದೆನ್ನುವಂತೆ ಬದಿಗೆ
ಸರಿದುಕೊಂಡನು. ಆದರೆ ಪಿತೃವ್ಯಾಮೋಹವು ಕಡೆಗೆ ಜಯಶಾಲಿಯಾಯಿತು;
ಮನಸಿನಲ್ಲಿ ತುಂಬಿಕೊಂಡಿದ್ದ ಸಿಟ್ಟು ಅಲ್ಲಿಯೇ ತಂಣಗಾಯಿತ ಮುದುಕನು
ಏನೂ ತಿಳಿಯದಂತಾಗಿ ಕಂಣೀರು, ಸುರಿಸಹತ್ತಿದನು; ಹಾಗೂ ಬಲು
ದಿವಸಗಳಿಂದ ತಪ್ಪಿಸಿಕೊಂಡ ಮಗಳನ್ನು ಬಿಗಿದಪ್ಪಿಕೊಂಡು ಮುದ್ದಾಡಿದನು.,
ಪಿತೃಮೋಹಕ್ಕೆ ಪಾಪಶಂಕೆ ಎಲ್ಲಿಯದು ?
ನವಾಬ ಬಸೀರನು ಸಾಶ್ಚರ್ಯದಿಂದ ಇದನ್ನೆಲ್ಲ ನೋಡುತ್ತ ನಿಂತಲ್ಲಿಯೇ
ನಿಂತುಕೊಂಡಿದ್ದನು. ಅವನ ತಲೆಯಲ್ಲೆಲ್ಲ ಒಂದು ದೊಡ್ಡ ಗದ್ದಲವೇ
ತುಂಬಿದಂತಾಗಿತ್ತು,--"" ನಾನು ಇಲ್ಲಿಗೆ ಬಂದದ್ದು, ದುಷ್ಟಮಾತುಗಳನ್ನಾಡಿ
ನಿನ್ನನ್ನು ಹೀಯಾಳಿಸುವದಕ್ಕಲ್ಲ, ” ಎಂದು ರಹೀಮನು ಅಂದದ್ದು ;
“ನಾನೊಬ್ಬ ಬಡ, ಅಶಕ್ತನಾದ ಪಾಪಿಯು, ತೀರ ಮುಪ್ಪಿನವನು: ಬಾಯಿಗೆ
ಬಂದಂತೆ ಕೀಳು ನುಡಿಗಳನ್ನಾಡುವದು ನನ್ನಿಂದಾಗದು; ನಾನು ನನ್ನ
ಮಗುವನ್ನು ಹುಡುಕಿ ಕಾಣಲಿಕ್ಕೆಂದು ಬಂದವನು; ಅವಳನ್ನು ಒಮ್ಮೆ
ಮನಮುಟ್ಟಿ ಕ್ಷಮಿಸಿದರೆ, ನನ್ನ ಇಹಲೋಕದ ಯಾತ್ರೆಯನ್ನು ಮುಗಿಸಲಿಕ್ಕೆ
೯೬ ---------------------------------------------------------------------------
ನನಗೆ ಯಾನ ತೊಂದರೆಯು ಉಳಿಯುವದಿಲ್ಲೆಂದು ಸಂಕಲ್ಪ ಮಾಡಿಕೊಂಡು
ಇಷ್ಟು ಕಾಲ ಪರಿಯಂತವೂ ದೇಶದಲ್ಲೆ ಲ್ಲ. ಭ್ರಮಿಸುತ್ತಿದ್ದೆನು. ಇನ್ನು
ನಾನು ಸಾಯಲಿಕ್ಕೆ ತಕ್ಕವನಾದೆನು! ನವಾಬರೇ, ನೀವು ನಮ್ಮಲ್ಲಿ ಬಂದಾಗ
ನಾವು ಹೀಗಿದ್ದಿದ್ದಿಲ್ಲ. ನೀವು ನಮ್ಮಲ್ಲಿ ಕಾಲಿಟ್ಟಾಗ ನಾವು ಸದ್ಗುಣಿಗಳೂ,
ಸಂತೃಪ್ತಿಯುಳ್ಳವರೂ ಆಗಿದ್ದೆವು. ನಾವು ಹಕ್ಕಿಯಂತೆ ಆನಂದವೃತ್ತಿಯಿಂದ
ಅತ್ತಿತ್ತ ಹಾರಾಡಿ, ಹಾಡಿ ಬಾರಿಸಿ ಕಾಲ ಕಳೆಯುತ್ತಿದ್ದೆವು, ನಮ್ಮ ಹಳ್ಳಿಯಲ್ಲಿ
ಉದಾಸೀನತೆಯ ಛಾಯೆಯು ಕೂಡ ಬಿದ್ದಿದಿಲ್ಲ. ಇಷ್ಟಿದ್ದರೂ ನೀವು ಬಂದ
ಕೂಡಲೆ ನಾವು ನಮ್ಮ ಹಾಡು ಬಾರಿಸುವದನ್ನೂ ಆನಂದವಿಹಾರಗಳನ್ನೂ
ಬಿಟ್ಟುಕೊಟ್ಟೆವು. ನೀವು ಸಂಕಟದಲ್ಲಿದ್ದಿರಿ, ನಿಮ್ಮ ಸ್ಥತಿಿಯನ್ನು ನೋಡಿ
ನಮಗೆ ದಯೆ ಬಂದಿತು. ಅಂದಿನಿಂದ ರಹೀಮನ ಹೊಲ ತೋಟಗಳಲ್ಲಿ
ಕೊಳಲಿನ ಧ್ವನಿಯೇ ಇಲ್ಲದಂತಾಗಿದೆ. ನೀಗಲಾದಷ್ಟು ದುಃಖವು
ತಾಳಲಾಗಿನಿಂಥ. ಇತರ ವೃಥೆಗಳೂ ನನ್ನನ್ನು ಗೋರಿಗೆ ಎಳೆಯುತ್ತಿರುವವು;
ಮತ್ತೂ ನನ್ನ ನೆರೆಹೊರೆಯವರೂ ನನ್ನ ಮೇಲೆ ಬಿದ್ದು ಸಾಯುತ್ತಿದ್ದ ದರಿಂದ,
ಅವರೂ ತಮ್ಮ ಉಲ್ಲಾಸವೃತ್ತಿಯ ಮೇಲೆ ನೀರುಹಾಕಿಕೊಂಡರು.
ಇಷ್ಟಾದರೂ ಆಗಲಿ, ನಮ್ಮ ಸೌಖ್ಯ ಸಂಪತ್ತನ್ನು ಅಪಹರಿಸಿಕೊಂಡು ಬಂದರೂ
ನೀವು ಕೂಡ ಸುಖದಲ್ಲಿಲ್ಲೆಂದು ನನಗೆ ತೋರುತ್ತದೆ, ಇಲ್ಲದಿದ್ದರೆ ಇಷ್ಟು
ವೈಭವದಿಂದ ಪರಿವೇಷ್ಟಿತರಾದ ನಿಮಗೆ, ಈ ಜೋಲುಮೋರೆ ಹೇಗೆ?
ಹಾಗೂ ಈ ಹಾದೀತಪ್ಪಿದ ಹುಡಿಗೆಯು ಈ ಉಡಿಗೆ-ತೊಡಿಗೆಗಳ ಸಂಭ್ರಮ
ದಲ್ಲಿದ್ದರೂ ಈ ಅಶ್ರುಜಲಧಾರೆಗಳನ್ನು ಯಾವಾಗಲೂ ಸುರಿಸುತ್ತಿರುವಂತೆ
ನಾನು ಕಾಣುತ್ತೇನೆ. ಇದು ಹೇಗೆ?” “ಇನ್ನು ಮುಂದೆ ಆಕೆಯು ಎಂದೂ
ಹಾಗೆ ಮಾಡಲಿಕ್ಕಿಲ್ಲ. ” ಎಂದು ಬಸೀರನು ಕುತ್ತಿ ಗೆ ಬಿಗಿದು ಅಂದನು.
"ನೀನೂ ಸಂತೋಷದಲ್ಲಿರು, ನಾನೂ ಅನ್ಯಾಯದ ಮಾರ್ಗವನ್ನವಲಂಬಿಸದೆ
ಸತ್ಯಪ್ರತಿಜ್ಞನಂತೆ ವರ್ತಿಸುವೆನು ನನ್ನ ತಂದೆಯಂತಿದ್ದ ವೃದ್ಟ ಮಹಾನು
ಭಾವನೇ, ನನ್ನನ್ನು ಕ್ಷಮಿಸು; ನನ್ನ ಅಪರಾಧಗಳಿಂದ ನಿನಗೆ ಅಸಹ್ಯವಾದ
ಕೇಡನ್ನುಂಟುಮಾಡಿದೆನು; ನನ್ನ ರೋಷ ನೆಯೇ ನಿನ್ನ ಸದ್ಗುಣಾತಿಶಯವನ್ನು
ಇಷ್ಟು ಕೀಳುಬೆಲೆ ಕಟ್ಟಿದ್ದಕ್ಕಾಗಿ, ನೀನೂ ಕ್ಷಮಿಸುವಿಯೆಂದು ಬೇಡಿಕೊಳ್ಳು
ತ್ತೇನೆ. ನನ್ನ ಪರಿಸ್ಥಿತಿಗೆ ತಕ್ಕ ಸ್ತ್ರೀಯು ನಮ್ಮ ಉಚ್ಚಕುಲದಲ್ಲಿ ಹುಟ್ಟಿದವ
೯೭-------------------------------------------------------------------------
ರೆಂದೆನಿಸಿಕೊಳ್ಳುವವರಲ್ಲಿ ಸಿಕ್ಕರೂ ಸಿಕ್ಕಾಳು. ಆದರೆ ಅದೆಲ್ಲ ಆನೆ ಅಂಬ:ರಿ
ಗಳ ಪೂರ್ತೆಯೇ, ಇವರ ದ.ರ್ಗುಣಗಳನ್ನೂ, ಮೂಢವ್ಯವಹಾರಗಳನ್ನೂ
ನಾನು ಬಲ್ಲವನಿದ್ದೇನೆ; ಆದರೆ ನೆನಪಾದ ಕೂಡಲೆ ನಾನು ತಲೆತಗ್ಗಿಸ
ಬೇಕಾಗುತ್ತದೆ. ಅವರು ನಿರ್ಮಲತ್ವವನ್ನು ನಟಿಸುತ್ತಾರೆ; ಅಂತಃಕರಣ
ದಲ್ಲಿಯ ನಿರ್ಮಲತೆಯ ನಿರ್ಮೂಲನವು ಎಂದೋ ಆಗಿಹೋಗಿದೆ. ಅವರು
ಸ್ವೇಚ್ಛಾವಿಹಾರದ ಸೇವಕರು; ಆದರೂ ಆದರಲ್ಲಿಯೂ ಏಕನಿಷ್ಮರಲ್ಲ.
ಮಾನಾಭಿಮಾನಗಳ ರುಚಿಯು ಇವರಲ್ಲಿ ಬಹಳವಾಗಿದ್ದರೂ ಸದ್ಗುಣಿಗಳ
ಸದಭಿಮಾನದ ಬೆಲೆಯನ್ನು ಅರಿಯರು. ಆದರೆ, ನೀನು ಮಾತ್ರ ರೋಷನ್--
ಛೆ! ಹಳೇ ಸಂಗತಿಗಳನ್ನು ನೆನಪಿಗೆ ತಂದು ನಿನ್ನ ಆದರಕ್ಕೆ ನಾನು
ಅಪಾತ್ರನೆಂದು ಯಾಕೆ ಆನಿಸಿಕೊಳ್ಳಲಿ--ನಿನ್ನ ಬಸೀರನನ್ನು ನಿನ್ನ ಪ್ರಣಯ
ಬಂಧನದೊಳಗಿಂದ ಬಿಡಬೇಡ ಕಂಡಿಯಾ; ನಿನ್ನ ನಿಷ್ಠಾಯುಕ್ತವಾದ
ಪ್ರೇಮವು ನನ್ನ ಕೈಗನ್ನಡಿಯಾದಂತಾಯಿತು. ನನ್ನ ಸ್ವರೂಪವನ್ನು ನಾನೂ
ಪೂರಾ ಕಂಡುಕೊಂಡೆನು. ಇನ್ನೆಷ್ಟೂ ತಡವಿಲ್ಲ; ಗೃಹಿಣೀಪದವನ್ನು ನೀನು
ಈಗಲೇ ಹೊಂದುವಿ. ನನ್ನ ಆಚರಣೆಯಿಂದ ನಿನ್ನ ಮನಶ್ಶಾಂತಿಯೂ,
ನಿನ್ನ ಕಾಂತಿಯೂ ನಿನ್ನನ್ನು ಮತ್ತೆ ಆಶ್ರಯಿಸುವವು. ಇನ್ನು ಮಾತ್ರ
ಯಂತ್ರದ ಗೊಂಬೆಗಳಂತಿದ್ದ ಈ ಜನರನ್ನು ಬಿಟ್ಟುಸಾಗುವ. ನಿಮ್ಮ
ತಂದೆಯನ್ನು ಅವನ ಹಳ್ಳಿಗೆ ಕಳಿಸಿ, ಅದೇ ಮನೆಯಲ್ಲಿಯೇ ಮುಂಚಿನ
ಆನಂದಲಕ್ಷ್ಮಿಯು ಮತ್ತೆ ನಲಿದಾಡುವಂತೆ ಮಾಡುವ ನಡೆ. ನಮ್ಮ
ಸೌಖ್ಯಕ್ಕೆ ಸೀಮೆಯೇ ಇಲ್ಲದಾದೀತು. ಯಾಕಂದರೆ ನಾನು ಅದಕ್ಕೆ ತಕ್ಕವ
ನೆಂದು ತೋರಿಸಿಕೊಡುವೆನು. ಮತ್ತೆ ಅದೇ ವೀಣೆಯು, ಅದೇ ಮಧುರಾಲಾಪ
ಗಳು, ಅದೇ ಸ್ವರ್ಗೀಯ ಸಂಭಾಷಣವು | ಆದರೆ ಈಗ ಮಾತ್ರ ಕೇವಲ
ನಿರ್ಮಲೋದಕದ ಸಮ್ಮೀಲನವು |”
========================================
ಎದೆಯ ಮೇಲಿನ ಕಲ್ಲು ಇಳಿಯಿತು
ವಿಜಾಪುರದ ಬಾತಶಹರ, ಘನತೆಯ ಕಾಲದಲ್ಲಿ ನಮ್ಮ ಮನೆತನ
ವಾದರೂ ಉತ್ಕರ್ಷದಲ್ಲಿಯೇ ಇತ್ತು. ಪ್ರಸಿದ್ಧವಾದ ಆಸಾರಮಹಾಲಿನ
ಬಳಿಯಲ್ಲಿ ಹಾಳಾಗಿ ಬಿದ್ದು ಹೋಗಿರುವದೊಂದು ಮಂದಿರವೇ ನಮ್ಮ
ಪೂರ್ವಜರ ನಿವಾಸಸ್ಥಾನವಾಗಿತ್ತೆಂಬ ಬಗ್ಗೆ ನನ್ನ ಬಳಿಯಲ್ಲಿ ಕಾಗದಪತ್ರ
ಗಳಿರುವವು. ಹತ್ತೆಂಟು ಗ್ರಾಮಗಳಾದರೂ ನಮ್ಮ ಮನೆತನಕ್ಕೆ ಉಂಬಳಿ
ಯಾಗಿ ನಡಿಯುತ್ತಿದ್ದವೆಂಬ ಬಗ್ಗೆ ಕೂಡಾ ನನ್ನಲ್ಲಿ ಸನದು ಇದೆ. ಆದರೆ
ಆಂಥ ಸನದು ಕಾಗದಪತ್ರಗಳನ್ನು ತೋರಿಸಿದರೆ ಈಗ ನನಗೆ ಒಪ್ಪತ್ತಿನ
ಕೂಳು ನೀಡುವವರಾರು? ಆದರೂ ನಮ್ಮ ತಂದೆಯವರಾದ ಬಹದ್ದರೆ
ಖಾನರು ಶುದ್ಧ ಬೀಜದ ಇರಾಣೀ ಮನೆತನದವರೆಂದು ತಿಳಿದು ದಿವಾನ್ ಸರ್
ಸಾಲರ ಜಂಗ ಬಹಾದ್ದರರವರು ನಮ್ಮ ತಂದೆಯವರಿಗೆ ತಾಲೂಕದಾರೀ
ಆಧಿಕಾರವನ್ನು ಕೊಟ್ಟಿದ್ದರಾದ್ದರಿಂದ ಅವರ ಮಗನಾದ ನಾನು ಸುಖೋಪ
ಭೋಗಗಳಲ್ಲಿ ಯಥೇಷ್ಟವಾಗಿ ಮೆರೆದೆನು. ಫಾರಸೀ ಉಡದೂ ಭಾಷೆಗಳ
ಜ್ಞಾನವು ನನಗೆ ಚನ್ನಾಗಿ ಇರುವದು. ಸೇಕಸಾದೀ, ಇನಾಯತ್ ಅಲೀ,
ಕಾಫೀಖಾನ್ ಮುಂತಾದವರ ಲೇಖಗಳನ್ನು ನಾನು ಓದಿಕೊಂಡೆನು. ನಮ್ಮ
ಜಾಗೀರು ಇನಾಮುಗಳರತಿ ಮುಳುಗಿ ಹೋಗಿದ್ದರೂ ನವಾಬ್ ಎಂಬ ಬಿರುದು
ನಮ್ಮ ಮನೆತನದಲ್ಲಿ ಉಳಿದೇ ಇತ್ತು. ನನ್ನ ತಂದೆಯವರಾದ ನವಾಬ
ಬಹಾದ್ದರಖಾನರವರು ತಾಲೂಕದಾರರಾದ ಬಳಿಕ ಕೈ ಸಡಿಲುಬಿಟ್ಟು ಹಣ '
ವೆಚ್ಚಮಾಡುತ್ತಿದ್ದರಾದ್ದರಿಂದ ಆವರ ಪ್ರತಿಷ್ತೆಯು ಬೆಳೆಯಿತು. ಆವರ
ಪ್ರತಿಷ್ಠೆಯೊಡನೆ ನನ್ನ ಹೆಮ್ಮೆಯೂ ಹೆಚ್ಚಾಯಿತು.
ತಂದೆಯವರು ಇರುವಕನಕ ಎಲ್ಲವೂ ಚಂದವಾಗಿತ್ತು. ಅವರು
ಲಿಂಗಸುಗೂರ ಜಿಲ್ಲೆಯಲ್ಲಿರುವಾಗ ನಾನು ಹೈದರಾಬಾದಿನಲ್ಲಿ ದೊಡ್ಡ
ದೊಡ್ಡವರ ಸಹವಾಸದಲ್ಲಿದ್ದು ಕಾಲ ಕಳೆಯುತ್ತಿದ್ದೆನು. ಹೀಗೆ ನಾನು
ಸುಖದಲ್ಲಿ ಮೆರೆಯುತ್ತಿರುವಾಗ ತಂದೆಯವರು ಅಕಸ್ಮಾತ್ತಾಗಿ ಪರಲೋಕ
ವಾಸಿಗಳಾದರೆಂಬ ವಜ್ರಾಘಾತದಂಥ ದುರ್ವಾರ್ತೆಯು ಬಂದಿತು. ಧಾವಿಸಿ
ಲಿಂಗಸುಗೂರಿಗೆ ಹೋದೆನು. ಆಲ್ಲಿ ಏನಿದೆ? ತಂದೆಯವರ ಬಳಿಯಲ್ಲಿ
೯೯ -----------------------------------------------------------------------
ಇದ್ದು ಬಿದ್ದದ್ದನ್ನೆಲ್ಲ ನನ್ನ ಮಲತಾಯಿಯು ಎತ್ತಿ ಕೊಂಡು ಹೊರಟು
ಹೋಗಿದ್ದಳು. ಹೀನಸತ್ವನಾಗಿ ನಾನು ಹೈದರಾಬಾದಿಗೆ ಬಂದೆನು. ದೈವವು
ಪ್ರತಿಕೂಲವಾದರೆ ಎಲ್ಲವೂ ಪ್ರಕಿಕೂಲವೇ. ದಿವಾನ್ ಸಾಲರಜಂಗ ಸಾಹೇ
ಬರೂ ತೀರಿಕೊಂಡರೆಂಬ ವಾರ್ತೆ ಬಂದಿತು! ನನಗೊಂದು ಮನ್‌ಸಬದಾರಿ
ಯನ್ನು ಕೊಡುವೆನೆಂದು ದಿವಾನ್ ಸಾಹೇಬರು ಹೇಳಿದ್ದರು. ಆ ಆಶೆಯೂ
ನಷ್ಟವಾಗಿ ಹೋಯಿತು. ' ಹತ್ತುಪಾಲಿನಲ್ಲಿ ಒಂದು ದತ್ತಪಾಲು' ಎಂಬಂತೆ
ಮುಸಲ್ಮಾನೀ ಧರ್ಮಶಾಸ್ತ್ರಾನುಸಾರವಾಗಿ ನನ್ನ ತಂದೆಯವರು ಮಾಡಿದ
ಸ್ಥಾವರ ಆಸ್ತಿಯಲ್ಲಿ ನನಗೊಂದು ಪಾಲು ಬಂದಿತು. ತಂದೆಯಪರ ಉತ್ತರ
ಕ್ರಿಯೆಯ ವೆಚ್ಚವೂ ಸಾಲ ಸಂಬಂಧವೂ ಹೋಗಲಾಗಿ ನನ್ನ ಕೈಗೆ ನಾಲ್ಕೈದು
ಸಾವಿರ ರೂಪಾಯಿಗಳು ಬಂದವು.
ಸುಖದಲ್ಲಿ ಬೆಳೆದವನಾದ ನನಗೆ ಸಮೀಚೀನವಾದ ತಿನಸು ಬೇಕು.
ಅಂದವಾದ ಉಡಿಗೆತೊಡಿಗೆಗಳು ಬೇಕು; ಇರಲಿಕ್ಕೆ ಪ್ರಶಸ್ತವಾದ ಮನೆ
ಬೇಕು! ಅದರೆ ಕಟ್ಟದ ಬುತ್ತಿಯಂತಿರುವ ನಾಲ್ಕುಸಾವಿರ ರೂಪಾಯಿಗಳ
ಗಂಟಿನ ಮೇಲೆ ನನ್ನ ನಿರ್ವಾಹವು ಸಾಗುವ ಬಗೆ ತೋರಲೊಲ್ಲದು ದರಿದ್ರ
ರಲ್ಲಿಯೇ ನನ್ನ ನತರ್ವಾಹವು ಶ್ರೀಮಂತರಾದ ನನ್ನ ಸ್ನೇಹಿತರು
ನನ್ನನ್ನು ಮಾತಾಡಿಸಲೊಲ್ಲದಾದರು. ಸಯ್ಯದ ರಸೂಲ ಹಕ್ಕರೆಂಬ ಘನ
ವಂತರಾದ ಶ್ರೀಮಂತರು ತಮ್ಮ ಏಕಾಕಿನಿಯಾದ ಮಗಳನ್ನು ನವಾಬ
ಬಹದ್ದರಖಾನ್ ತಲೂಕುದಾರರ ಮಗನಾದ ನನಗೆ ಕೊಡಬೇಕೆಂದು
ಆಲೋಚನದಲ್ಲಿದ್ದರು. ಈಗ ಅವರು ಮುಂದಿದ್ದರೂ ನನ್ನನ್ನು ಮಾತಾಡಿಸ
ದಾದರು. ನಾನೆಷ್ಟು ಬಿಗಿಹಿಡಿದು ವೆಚ್ಚ ಮಾಡುತ್ತಿ ದ್ದರೂ ತಿಂಗಳಾ ನೂರಾರು
ರೂಪಾಯಿಗಳು ಹಾರಿಹೋಗಲಾರಂಭಿಸಿದವು. ಉದ್ಯೋಗವನ್ನು ಹುಡು
ಕುವ ಹವ್ಯಾಸದಲ್ಲಿ ಎಷ್ಟೋ ಹಣವು ನಿರರ್ಥಕವಾಗಿ ಹೋಯಿತು; ತಾರಾ
ಬಲ ಚೆಂದ ಬಲಗಳನ್ನು 'ಜೋಡಿಸಿಕೊಟ್ಟ ಜೋಯಿಸರಿಗೆ ರೊಕ್ಕ ಕೊಟ್ಟೆನು
ವರ್ಷೆರಡು : ವರ್ಷಗಳಲ್ಲಿ ಹಣವೆಲ್ಲ ತೀರಿ ಬರಿಗೈಯಾಯಿತು. ಉದ್ದರಿ ಕ್ಳೆಗಡ
ಗಳ ಕುತಂತ್ರಗಳಾದರೂ ಕುಗ್ಗಿಹೋದವು ! ಹೆಸರು ನೋಡಿದಿರಾ ನಾನು
ನವಾಬ ಯುಸುಫಖಾನನು, ಹಸಿವೆಗೆ ತಿನ್ನಲು ಬಿಸಿ ರೊಟ್ಟಿ ಕೂಡಾ ಸಿಕ್ಕು
ವದು ದುರ್ಲಭವಾಯಿತು! ಕೂಲಿಕುಂಬಳಿ ಮಾಡುವದು ಮರ್ಯಾದಿಗೆ
೧೦೦ ---------------------------------------------------------------------
ಸಾಲದು, ಭಿಕ್ಷೆ ಬೇಡುವೆನೆ ಆದು ಪಯಂಬರರ ಆಜ್ಞೆಗೆ ವಿರುದ್ಧವಾದ
ಮಾತು, ಅಕ್ಷರಸ್ಥನಾದ ನನ್ನ ಕುಕ್ಷಿ ತುಂಬುವ ಆಲೋಚನವೇ ಹೆಚ್ಚಿನ
ದಾಗಿಹೋಯಿತು.
ಸಂಬಳವಿಲ್ಲದಕ್ಕಾ ಆಡಿಗೆಯವನು ಓಡಿ ಹೋಗಿ ಎರಡು ದಿವಸ
ಳಾಗಿದ್ದವು. ಚೀಲಚಪ್ಪಡಿಗಳಲ್ಲಿ ಕಾಳುಕಡಿಯ ಸುಂಕ ಕೂಡಾ ಇದ್ದಿಲ್ಲ.
ಭಾಂಡಭಾಜನಗಳನ್ನು ಕೈಗೆ ಬಂದ ಹಾಗೆ ಮಾರಿ ನಾಲ್ಕಾರು ದಿನಗಳನ್ನು
ಕಳೆದೆನು. ಉಪವಾಸವೇ ಬಂದೊದಗಿತು. ಕಟಕಾದ ಅರ್ಧ ರೊಟ್ಟಿಯನ್ನು
ಒಂದು ಉರಳೇಗಡ್ಡಿಯ ಸಂಗಡ ತಿಂದು ಮೇಲೆ ಜೊಟ್ಟಿ ತುಂಬಾ ನೀರು
ಕುಡಿದು ಮುಂದೇನು ಗತಿಯೆಂದು ವ್ಯಸನಾಕುಲನಾಗಿ ಆಲೋಚಿಸುತ್ತೆ
ಬಿದ್ದುಕೊಂಡೆನು. ಅಷ್ಟರಲ್ಲಿ ಮನೆಯ ಯಜಮಾನನು ಬಂದು 'ಈಗಲೆ
ಹಿಂದಿನ ಬಾಡಿಗೆಯನ್ನೂ ಕೊಡಿರಿ, ಇಲ್ಲದಿದ್ದರೆ ಸಾಯಂಕಾಲದ ಒಳಗಾಗಿ
ಮನೆ ಬಿಡಿರಿ' ಎಂದು ಹೇಳಿಹೋದನು. ದುಃಖಾತಿರೇಕದಿಂದ ನನ್ನ ಕಣ್ಣು
ಗಳಲ್ಲಿ ಅಶ್ರುಗಳೊತ್ತಿ ಬಂದವು ನಿಟ್ಟುಸುರುಗೈದು ಹುಚ್ಚನಂತೆ ನಾನೂ ಮನೆ
ಯಲ್ಲಿ ಸುಮ್ಮನೆ ಗಳಿಗೆ ಎರಡು ಗಳಿಗೆ ಎಡೆಯಾಡಿದೆನು. ಕಡೆಗೆ ಸೇಕಸಾದಿ
ಯವರ ಗ್ರಂಥವನ್ನು ತೆಗದು ಓದುತ್ತೆ ಕುಳಿತೆನು. ಪುಟಗಳನ್ನು ತಿರಿತಿರಿವಿ
ಹಾಕುವಾಗ "ವಿಪತ್ತಿನಲ್ಲಿ ಧೈರ್ಯವನ್ನು ಅವಲಂಬಿಸಬೇಕು." ಎಂಬ
ವಾಕ್ಯವು ನನ್ನ ಕಣ್ಣಿಗೆ ಬಿದ್ದಿತು. ಸಂಗಡಲೇ ನಾನು ಪೋಷಾಕು ಮಾಡಿ
ಕೊಂಡು ದೇವರ ಹೆಸರು ನೆನೆದು ಮನೆ ಬಿಟ್ಟು ಹೊರಬಿದ್ದೆನು.
ಅನುಕೂಲತೆಯು ಸಹಸಾ ದೈವಹೆತನ ಕಣ್ಣಿಗೆ ಬಿದ್ದುದ್ದುಂಟೆ? ಸೇವೆ,
ಶಿಕ್ಷಣ, ಕೂಲಿ ಏನು ಬೇಕಾದ್ದು ಮಾಡಿ ಒಡಲಿಗೆ ಈಡು ಮಾಡಬೇಕೆಂದು
ನಿಶ್ಚಯಿಸಿ ಪೇಟೆ ಕೋಟೆಗಳಲ್ಲ ಅಡ್ಡಾಡಿದೆನು. ಕಮ್ಮಾರ ಬಡಿಗರ ಸಾಲೆ
ಗಳಲ್ಲಿ ಹೊಕ್ಕು ನೋಡಿದೆನು ಲಭ್ಯಾಂಶವೇನು ತೋರಲಿಲ್ಲ. ತಿರಿಗಿ ತಿರಿಗಿ
ದಣುಕೊಂಡೆನು. ಕಾಲು ಸೋಕು ಹೋದವು. ಹೊಟ್ಟೆ ಕೆರದಿತು. ಆಸತ್ಕೂ
ಬೇಸತ್ತೂ ಮೂಸಾ ನದಿಯ ತೀರದಲ್ಲಿಯವ ಉಪವನವನ್ನು ಹೊಕ್ಕೆನು.
ಸಾರ್ವಜನಿಕ ಹಿತಕ್ಕಾಗಿ ನಿಜಾನುಸಾಹೇಬರು ಹೇರಳವಾಗಿ ಹಣಾ ವೆಚ್ಚ
ಮಾಡಿ ನಿರ್ಮಿಸಿದೆ ಉಪವನದ ಶೋಭೆಯನ್ನು ನೋಡಿ ಕ್ಷಣ ಹೊತ್ತು ನನ್ನ
ಹಸಿವೆ ನೀರಡಿಕೆಗಳು ಹರಿದಂತಾದವು ಬಳಿಯಲ್ಲಿ ಪುಟಿಯುತ್ತಿರುವ ಕಾರಂಜಿ
೧೦೧ ---------------------------------------------------------------------------
ಯಲ್ಲಿ ಕೈಕಾಲು ತೊಳೆದುಕೊಂಡು ಅಗ್ಗಳವಾಗಿ ನೀರು ಕುಡಿದು ಪ್ರಶಸ್ತ
ವಾಗಿರುವದೊಂದು ಕಲ್ಲುಹಾಸಿಗೆಯ ಮೇಲೆ;ಕುಳಿತುಕೊಂಡೆನು. ಕ್ಷಣಹೊತ್ತು
ಆ ಉಸವನದ ಶೋಭೆಯನ್ನು ನೋಡುತ್ತೆ ಹರಿದಾಡುತ್ತಿರುವ ನನ್ನ ಮನ
ಸನ್ನು ಚಿಂತೆಯು ಭರ್ರನೆ ಅಡರಿ ಹಿಡುಕೊಂಡಿತು. ಸೂರ್ಯನು ಅಸ್ತಾ
ಚಲದ ಕೊಳ್ಳದಲ್ಲಿ ಅಡಗಿದನು. ದೈವವಂಶರು ತಮ್ಮ ಲೀಲಾವಿಲಾಸ
ಗಳನ್ನು ಮುಗಿಸಿಕೊಂಡು ಮನೆಯ ಹಾದಿಯನ್ನು ಹಿಡಿದರು. ನಾನೆಲ್ಲಿಗೆ
ಹೋಗಬೇಕು? ಬೆಳಗಾಗುವದರೊಳಗಾಗಿ ನಾನಿರುವ ಮನೆಯು ನನಗೆ ಎರ
ವಾಗತಕ್ಕದ್ದು. ಹೋದರೂ ಆ ಮನೆಯಲ್ಲಿ ತಿನ್ನಲಿಕ್ಕೆ ಕೂಳಿಲ್ಲ. ಕುಡಿಯ
ಲಿಕ್ಕೆ ನೀರಿಲ್ಲ. ಹಚ್ಚುವೆನೆಂದರೆ ದೀಪಕ್ಕೆ ಎಣ್ಣೆಯಿಲ್ಲ! ಸುಟ್ಟು ಹೋಗ
ಲೊಲ್ಲದೇಕೆ ಅಂಥ ಮನೆ! ಭಯಂಕರವಾದ ಸರ್ಪವು ಬಂದು ನನ್ನನ್ನು
ಈಗಲೆ ಕಚ್ಚಿ ಕೊಂದು ಹೋದರೆ ದೇವರು ಕೃಪೆ ಮಾಡಿದನೆಂದು ನಾನು
ನೆನೆಸಿದೆವು. ಇಲ್ಲಿಯೇ ನದಿಯಲ್ಲಿ ಆನೆಯ ಮಡುನಿದೆ. ಹಾರಿಕೊಂಡು ಈ
ವಿಪತ್ತನ್ನು ನೀಗಲೆ? ನವಾಬ ಯೂಸಫಖಾನ, ನಿನ್ನವಸ್ಥೆ ಹೀಗಾಯಿತೇ
ಎಂದು ಕ್ಷುಧಾರ್ತನಾದ ನಾನು ನಿಟ್ಟುಸುರಿಟ್ಟು, ಹಣೆ ಹಣೆ ಬಡಕೊಂಡೆನು.
ಹೀಗೆ ನಾನು ಚಿಂತಾಗ್ರಸ್ತನಾಗಿ ಕುಳಿತಿರುವ ಸಮಯದಲ್ಲಿ ಲಂಬೋದರ
ನಾದ ಫಕೀರನೋರ್ವನು ರಣಗೂದಲುಗಳನ್ನು ಬಿಟ್ಟುಕೊಂಡು ನನ್ನೆದಿರಿನಲ್ಲಿ
ಬಂದು ನಿಂತನು. ಕತ್ತಲೆಯ ಮಬ್ಬಿನಲ್ಲಿ ಭೀಕರನಾಗಿ ಕಾಣುವ ಆ ಫಕೀರ
ನನ್ನು ಕಂಡು ನಾನು ಒಳಿತಾಗಿ ಹೆದರಿ ನಿಂತೆನು. ಫಕೀರನು ನನಗೆ
ಸಲಾಮು ಮಾಡಿ " ಸರದಾರ್ ನಾನಿಷ್ಣು ಈ ಶಿಲಾತಲದಲ್ಲಿ ವಿಶ್ರಮಿಸಿ
ಕೊಳ್ಳಲೆ? ” ಎಂದು ಕೇಳಲಾಗಿ " ಈ ಕಟ್ಟಿಯನ್ನು ನಮ್ಮಪ್ಪನೇನು ಕಟ್ಟ
ಸಿಲ್ಲ. ಬೇಕಾದಷ್ಟು ಸ್ಥಳವಿದೆ ಉರಳಾಡು ” ಎಂದು ನಾನು ದುರ್ಮನನಾಗಿ
ನುಡಿದೆನು.
"ತರುಣನೆ, ನೀನು ದುಃಖಪೀಡಿತನಾಗಿರುವಂತೆ ಕಾಣುವಿ. ಕಾರಣ:
ವನ್ನು ಕೇಳಲೆ?"
ನಾನು ವಿಷಣ್ಣನಾಗಿದ್ದರೂ ಅವನ ಮಾತು ಕೇಳಿ ಖೊಳ್ಳನೆ ನಕ್ಕು
"ಏನಯ್ಯಾ. ನೀನು ಹೇಳಿ ಕೇಳಿ ಫಕೀರನು. ನನ್ನ ದುಃಖದ ಗೊಡವೆ
ನಿನಗೇಕೆ? ಸುಮ್ಮನೆ ಹೋಗಿ ನಾಲ್ಕು ಮನೆ ತಿರಿಗಿದರೆ ನಿನ್ನ ಕಂದೀಲಕ್ಕೆ
೧೦೨ -------------------------------------------------------------------------
ಎಣ್ಣೆ ಯಾದರೂ ಸಿಕ್ಕೀತು; ಇಲ್ಲದ ಉಸಾಬರಿ ಯಾವನೋ ಕೆಟ್ಟನಂತೆ! '
ಎಂದು ಬಾಯಿಪ್ರಸಾದ ಮಾಡಿದೆನು.
" ಮಗುವೆ, ಆಗಲೆ ನಿನ್ನ ಚರ್ಯೆಯನ್ನು ನೋಡಲಾಗಿ ನೀನು ಆತ್ಮ
ಹತ್ಯೆಯನ್ನು ಮಾಡಿಕೊಳ್ಳಬೇಕೆಂಬ ಘೋರತರವಾದ ವಿಚಾರದಲ್ಲಿರುವಿ
ಯೆಂಬದಾಗಿ ನನಗೆ ತೋಚಿತು. ನಿನಗೆ ಹಿತದವರು ಯಾರೂ ಇಲ್ಲವಾಗಿ
ತೋರುತ್ತದೆ. ಗತಿಗಾಣದೆ ನೀನು ಈ ನಿರ್ಜನವಾದ ಉಸವನದಲ್ಲಿ ಬಿದ್ದು
ಕೊಂಡಿರುವಿ. ನನ್ನೊಡನೆ ಬರುವಿಯಾ? ”
"ಓಹೋ! ಬಾರದೇನು? ನಿನ್ನಂಥಃ ಹುಟ್ಟ ಫಕೀರನ ಪರಿಚಯ
ವನ್ನು ಮಾಡಿಕೊಂಡಿರುವದೊಂದು ಉಳಿದಿದೆ. ಮುಂಜಾವಿನಲ್ಲಿ ಹಿಟ್ಟು
ಅಕ್ಕಿಗಳನ್ನೂ, ಮಧ್ಯಾಹ್ನದಲ್ಲಿ ಹಿಂಡಿ ರೊಟ್ಟಿಗಳನ್ನೂ, ಸಾಯಂಕಾಲದಲ್ಲಿ
ಎಣ್ಣೆ ಬತ್ತಿಗಳನ್ನೂ ಊರಲ್ಲಿ ಬೇಡಿಕೊಂಡು ತಂದು ನಿನಗೆ ಸಮರ್ಪಿಸಿ ಅದ
ರಲ್ಲಿ ನೀನು ಕೃಪೆಯಿಂದ ನನಗೆ ಕೊಟ್ಟಿದ್ದನ್ನು ತಿಂದುಕೊಂಡಿರಬೇಡವೆ?"
ಎಂದು ಅಪಹಾಸ ಮಾಡಿ ನಾನು ಕೇಳಿದೆನು.
" ಶಾಅಬ್ಬಾಸ್ ! ಕ್ಷೀಣದಶೆಯಲ್ಲಿದ್ದರೂ ನೀನು ಸೆಟೆಯಿಂದ
ಮಾತಾಡುನಿ. ಅಂದಮೇಲೆ ನೀನು ಸಾಹಸಿಯಾದ ಯುವಕನೇ ಸರಿ. ನಿನ್ನ
ಮುಖಲಕ್ಷಣವನ್ನು ನೋಡಲಾಗಿ ನೀನು ಅಕ್ಷರಸ್ಥನೂ ಚತುರನೂ ಆಗಿ
ತೋರುವಿ."
ಆ ಫಕೀರನ ತರ್ಕಸಾಮರ್ಥ್ಯವನ್ನು ಕೇಡು ನಾನು ಚಕಿತನಾಗಿ ಎದ್ದು
ನಿಂತು ಅವನಿಗೆ ಆದರದಿಂದ ಪ್ರಣಾಮಮಾಡಿ " ಸಾಂಯಿ, ವ್ಯಸನಭಾರಾ
ಕ್ರಾಂತನಾದ ನಾನು ವಿಚಾರವನ್ನರಿಯದೆ ತಮ್ಮೊಡನೆ ಉದ್ಧತನಾಗಿ
ವರ್ತಿಸಿದೆನು. ಜ್ಞಾನಿಗಳಾದ ತಾವು ನನ್ನನ್ನು ಕಂಡಾಕ್ಷಣವೇ ನನ್ನ
ನಿಜಸ್ಪಿತಿಯನ್ನು ಅರಿತುಕೊಂಡಿರಿ. ತಮ್ಮಿಂದ ನನ್ನ ದುಃಖವು ದೂರಾಗಲಿ,
ಬಿಡಲಿ, ನಾನು ತಮ್ಮ ಆಜ್ಞೆಯ ಮೇರೆಗೆ ನಡಕೊಳ್ಳಲು ಸಿದ್ಧನಾಗಿರುವೆನು?
ಎಂದು ಬೆಸಗೊಂಡೆನು.
"ಸರಿ! ಸರಿ 1! ನೀನು ನನ್ನ ಸಂಗಡ ನಡಿ. ನಿನಗೆ ಬಿಸಿಯಾದ
ಊಟವೂ ಸಮಾಧಾನದ ನಿದ್ದೆಯೂ ಅವಶ್ಯವಾಗಿ ಬೇಕಾಗಿದೆ, ಆಮೇಲೆ
ಉಳಿದ ವಿಚಾರ. ನೀನು ನನ್ನಾಜ್ಞೆಯಂತೆ ನಡಕೊಳ್ಳಲು ಒಪ್ಪಿರುವಿಯಷ್ಟೆ?*
೧೦೩ -------------------------------------------------------------------
"ತಮ್ಮ ಪಾದಸಾಕ್ಷಿಯಾಗಿ ಹೇಳುತ್ತೇನೆ; ತಮ್ಮ ಆಜ್ಞೆಗಳನ್ನು
ಅಕ್ಷರಶಃ ಪಾಲಿಸುತ್ತೇನೆ.''
" ಇಷ್ಟು ಹೇಳಿದಿ; ಸಾಕು! ಹಿಂದಿನಿಂದ ನೀನು ನನ್ನಾಜ್ಞೆಯನ್ನು
ಮೀರಿದರೂ ಚಿಂತೆಯಿಲ್ಲ. ” ಎಂದು ನುಡಿದು ಫಕೀರನು ನಕ್ಸನು.
" ಸಾಧುಗಳೆ, ನನ್ನ ಮಾತಿನಲ್ಲಿ ಅಪನಂಬಿಗೆಯನ್ಸಿಡಬೇಡಿರಿ. ತಾವು
ನನಗೆ ಎಂಥ ಘೋರತರವಾದ ಆಜ್ಞೆಯನ್ನು ವಿಧಿಸಿದರೂ ಚಿಂತೆಯಿಲ್ಲ. "
" ಒಳಿತು ಹೇಳಿದರೂ ಕೇಳುವಿ? ಕೆಟ್ಟದ್ದು ಹೇಳಿದರೂ ಕೇಳುವಿ ?"
ಎಂದು ಫಕೀರನು ತನ್ನ ಕಂದೀಲನ್ನು ನನ್ನ ಮುಖಕ್ಕೆ ಹಿಡಿದು ದಿಟ್ಟಿಸಿ
ನೋಡಿ ಕೇಳಿದನು.
" ಒಳಿತು ಹೇಳಿದರೂ ಕೇಳುವೆನು; ಕೆಟ್ಟದ್ದು ಹೇಳಿದರೂ ಹಿಂದೆ
ಮುಂದೆ ನೋಡದೆ ಅದರಂತೆ ಮಾಡುವೆನು.” ಎಂದು ಚಿಂತಿತನಾಗಿ
ಹೇಳಿದೆನು.
" ನಡೆ ನಡೆ, ಪರೀಕ್ಷೆಯ ಸಮಯವು ಬಂದಾಗ ನೋಡೋಣಂತೆ.
ಸದ್ಯಕ್ಕೆ ನೀನು ಹಸಿದಿರುನಿ. ಅರ್ಥಿಗಳಿಗೆ ಅನ್ನವನ್ನು ನೀಡುವದು ಪರತರ
ವಾದ ಧರ್ಮವಾಗಿದೆ. " ಎಂದು ಹೇಳಿ ಆ ಫಕೀರನು ನನ್ನನ್ನು ಕರಕೊಂಡು
ನಡೆದನು,
* * * *
ಫಕೀರನು ನನ್ನನ್ನು ಕರೆದುಕೊಂಡು ಭಗಶ್‌ಗೀರಭಾಗದ ಮಾರ್ಗ
ವಾಗಿ ನಡೆದನು. ಚಪಲನಾದ ಆ ಫಕೀರನನ್ನು ಹಿಂಬಾಲಿಸಿ ನಾನು
ಅರ್ಧಗಂಟಿ ನಡೆದೆ ಮೇಲೆ ಅವನು ತಟ್ಟನೆ ನಿಂತು " ತರುಣನೆ ನಿನ್ನ
ಹೆಸರೇನು? ” ಎಂದು ಕೇಳಿದನು. *
|" ನವಾಬ ಯುಸುಫಖಾನ ದೌಲತ್ ಕೋಟಾ ಬಿಜಾಪುರ '' ಎಂದು
ಹೇಳಿದೆನು.
" ನವಾಬ ಯುಸೂಫಖಾನ್, ನಾನು ನಿನ್ನನ್ನು ನಮ್ಮ ಶಹಾಸೂಫಿ
ಕಲಂದರ ಸಾಹೇಬರನರ ಅತಿಥಿ ಮಂದಿರಕ್ಕೆ ಕರೆದೊಯ್ಯುವೆನು. ಫಕೀರರ
ಸಂಸ್ಥಾನವದು. ಅಲ್ಲಿ ನೀನು ವಿಲಕ್ಷಣವಾದ ಚಮತ್ಕಾರಗಳನ್ನು ನೋಡುವಿ.
ಆದರೆ ಅದೇನು ಎಂದು ಸರ್ವಥಾ ಕೇಳತಕ್ಕದ್ದಲ್ಲ. ಆ ಮಂದಿರದಲ್ಲಿರುವ
೧೦೪ -------------------------------------------------------------------------
ವರೆಗೆ ಬಾಯಿ:ಬಿಚ್ಚಿ ಮಾತಾಡಲೇ ಕೂಡದು, ಮೌನಮಂದಿರವೆಂತಲೇ
ಅದಕ್ಕೆ ಹೆಸರು. ಅಲ್ಲಿಯ ವಸ್ತುಗಳಾದರೂ ಚಮತ್ಕಾರವಾದವುಗಳು,
ಅಲ್ಲಿಯ ವ್ಯವಸ್ಥೆಯೂ ವಿಚಿತ್ರವಾದದ್ದು. ಅತಿಥಿಯಾದ ನೀನು ಸಮಾಚೀನ
ವಾಗಿ ಭೋಜನಮಾಡತಕ್ಕದ್ದು ; ಸುಖವಾಗಿ ಮಲಗಿಕೊಳ್ಳತಕ್ಸದ್ದು.
": ಮಠದ ಸಾಂಪ್ರದಾ ಯಡಂತೆಯೇ ವರ್ತಿಸುವೆನು. ಅಲ್ಲಿಯ ನಿಯಮ
ಗಳನ್ನು ನಾನೇಕೆ ಉಲ್ಲಂಗಿಸಲಿ? ?
" ಅಚ್ಛಾ! ( ವಿಹಿತವಾಡಿದಿ) ಕಲಂದರ ಸಾಹೇಬರು ಎಂಥದಾ
ದರೂ ಒಂದು ಆಜ್ಞೆಯನ್ನು ವಿಧಿಸಿದರೆ ಅದನ್ನು ನೀನು ಮನ್ಸಿಸಿಯೇ ತೀರ
ತಕ್ಕದ್ದು. ಉಳಿದಿದ್ದೆಲ್ಲ ಪರಮ ಸುಖವೇ. ''
" ಆಜ್ಞೆಯು ಕಠೋರವಾಗಿದ್ದರೆ? ” ಎಂದೆ ನಾನು ಚಕಿತನಾಗಿ
ಕೇಳಿದೆನು.
" ದೊಡ್ಡವರು ಕಠೋರವಾದ ಆಜ್ಞೆಯನ್ನು ವಿಧಿಸುವದುಂಟೆ?
ಕದಾಚಿತ್ ವಿದಿಸಿದರೆಂದು ತಿಳಿ. ಮನ್ನಿಸಲೇಬೇಕು. ರಾಜೋಚಿತವಾದ
ಸುಖಸಾಧನಗಳನ್ನು ಅವಿಚ್ಛಿನ್ನವಾಗಿ ನೀಡುವವರು ಒಂದು ಕಠೋರವಾದ
ಆಜ್ಞೆಯನ್ನು ವಿಧಿಸಿದರೆಂದು ಕಲ್ಪಿಸಿದರೆ ಆ ಆಜ್ಞೆಯನ್ನು ಮೀರುವದೆಂದರೆ
ಅಪರಾಧವೇ ಅಲ್ಲವೆ? '' ಎಂದು. ಫಕೀರನು ಹೊಟ್ಟೆಯೊಳಗಿರ ಹರಳು
ಕರಗುವಂತೆ ನುಡಿದು ಮಂದಹಾಸಗೈದನು,
ತುಸುಹೊತ್ತು ಹೀಗೆ ಮಾತಾಡುತ್ತ ನಾವು ಮಾರ್ಗಕ್ರಮಣ ಮಾಡಿದ.
ಬಳಿಕ ಫಕೀರನು ನಿಂತು " ಯುಸುಫ ಇಕೋ ನೋಡು, ಇದೇ ನಮ್ಮ
ಮೌನಮಂದಿರವು. ನಿರ್ಬಂಧಗಳನ್ನು ನೀನು ಒಪ್ಪಿ ಕೊಂಡಿರುವಿಯಷ್ಟೆ ?"
ಎಂದು ಮತ್ತೆ ಪ್ರಶ್ನೆ ಮಾಡಿದನು. "
"ಸಾಂಯಿ ವಿಚಾರವೇಕಿ ? ನಾನು ಒಪ್ಪಿಕೊಂದಿದ್ದೇನೆ. "
" ಛೀ ಎಚ್ಚರಿಕೆ ಕಂಡಿಯಾ! ನೀನು ಮಾಡಿದ ಪ್ರತಿಜ್ಞೆಯು ನಮ್ಮ
ಕಲಂದರ ಸಾಹೇಬರವರಿಗೆ ಈಗಾಗಲೇ ಅಂತರ್ಜ್ಞಾನದಿಂದ ವಿದಿತವಾಗಿರ
ಬಹುದು. ನೀನು ನಿನ್ನ ನಡೆನುಡಿಗಳಲ್ಲಿ ತಪ್ಪಿದವನಾದರೆ ಇಲ್ಲವೆ ಆಜ್ಞಾಭಂಗ
ದೋಷಕ್ಕೆ ಪಾತ್ರನಾದರೆ ನಿನ್ನವಸ್ಥೆ ಏನಾಗುತ್ತದೋ ಹೇಳಲಾಗದು "
ಎಂದು ಫಕೀರನು ಸೂಚಿಸಿದನು.
೧೦೫ ---------------------------------------------------------------------------
" ಸ್ವಾಮೀ, ಇನ್ನು ಕೈಸಿಕ್ಕಿ ಕೊಂಡಬಳಿಕ ಹಿಂದೆಗೆದು ಕೊಳ್ಳುವ
ವಿಚಾರವೇತಕ್ಕೆ ! "
ಫಕೀರರು ಮಂದಿರದ ಮಹಾದ್ವಾರವನ್ನು ಕಟಕಟನೆ ತನ್ನ
ಕೋಲಿನಿಂದ ಬಡಿದನು. ಯಾವನೋ ಮಾತಾಡದೆ ಬಾಗಿಲವನ್ನು
ತೆಗೆದಂತಾಯಿತು. ಅಂಧತಮಸ್ಸು! ಫಕೀರನು ನನ್ನ ಕೈಹಿಡುಕೊಂಡು
ಒಳಗೆ ನಡೆದನು. ಅಲ್ಲಲ್ಲಿ ಕಂಬಗಳು ತನ್ನ ಕೈಗೆ ತಗಲಿದ್ದರಿಂದ ನಾವು
ದೊಡ್ಡದೊಂದು ಚತುಃಶಾಲೆಯಲ್ಲಿ ಬಂದಿರಬಹುದೆಂದು ತರ್ಕಿಸಿದೆನು. ಫಕೀ
ರನು ಮತ್ತೊಂದು ಬಾಗಿಲದ ಚಿಲಕವನ್ನು ತೆಗೆದು ಪಾವಟಿಗೆಗಳನ್ನೇರತೊಡ
ಗಿದನು. ನಾನಾದರೂ ಒಳ್ಳೇ ಜೋಕೆಯಿಂದ ಅವನ ಕೈಹಿಡುಕೊಂಡು
ನಡೆದೆನು. ಅಟ್ಟದ ಮೇಲೆ ಬಂದ ಬಳಿಕ ಅಹುದೋ ಅಲ್ಲವೊ ಎಂಬುವಷ್ಟು
ಮಿಣುಕುಮಿಣುಕಾದ ಬೆಳಕು ಕಂಡಿತು. "" ಆಯ್ಯೋ, ಗೂಬೆ!” ಎಂದು
ನಾನು ಚಿಟ್ಟನೆ ಚೀರಿದೆನು.
" ಹುಶ್ ಇದು ಮೌನಮಂದಿರವು. ಮಾತಾಡತಕ್ಕದ್ದಲ್ಲ. '' ಎಂದು
ಎಚ್ಚರಕೊಟ್ಟು ಫಕೀರನು ನನ್ನನ್ನು ಆ ಗೂಬೆಯ ಸಮೀಪದಲ್ಲಿ ಹಾಯಿಸಿ
ಕರೆದೊಯ್ದನು. ಪರೀಕ್ಷಿಸಿ ನೋಡಲಾಗಿ ಅದು ನಿಜವಾದ ಗೂಬೆಯಲ್ಲ;
ಗೂಬೆಯ ಆಕಾರದ ತೂಗುದೀಪವದು. ಗೂಬೆಯಾಕಾರದ ಗೊಂಬೆಯ
ಹೊಟ್ಟೆಯಲ್ಲಿ ದೀಪವಿದ್ದು ಕೆಂಪು ಕಾಜಿನ ಕಣ್ಣುಗಳೊಳಗಿಂದ ಪ್ರಕಾಶವು
ಹೊರಬೀಳುವಂತೆ ಮಾಡಿದ್ದರಿಂದ ಆ ಗೂಬೆಯ ಅಂಗವು ಪಿಂಗಳವಾಗಿಯೂ
ಆಲದ ಹಣ್ಣುಗಳಂತೆ ಅದರ ಕಣ್ಣುಗಳು ಕೆಂಪಾಗಿಯೂ ಕಾಣುತ್ತಿದ್ದವು.
ಆ ಭೀಕರವಾದ ಗೂಬೆಯನ್ನು ಕಂಡಕೂಡಲೆ ನನ್ನ ಎದೆಯಲ್ಲಿ ಧಸಕು
ಬಡಿದದ್ದರಿಂದ ಮನಸ್ಸು ವ್ಯಗ್ರವಾಗಿಹೋಗಿತ್ತು. ತುಸು ಒಳಗೆ ಹೋದ
ಬಳಿಕ "ಅಂಥವೇ ಘೂಕದೀವಿಗೆಗಳು ಹೃದಯಭೇದಕಗಳಾಗಿ ಅಲ್ಲಲ್ಲಿ
ತೋರಿದವು. ಅಟ್ಟದ ಮಧ್ಯದಲ್ಲಿ ನಿಂತುಕೊಂಡು ಫಕೀರನು ಒಂದು ಸಿಳ್ಳು
ಊದಿದನು. "ಘೂ ಘೂಕ್ ಘೂ ಘೂಕ್! " ಎಂಬ ಕರ್ಣಕಶೋರವಾದ
ಆ ಧ್ವನಿಯನ್ನು ಕೇಳಿ ನನ್ನ ಮೈಯೆಲ್ಲ ಮುಳ್ಳು ಹಿಡಿಯಿತು.
ಸಿಳ್ಳು ಕೇಳಿ ಕಾಡಿಗೆಯ ಗೊಂಬೆಯಂತೆ ಕಪ್ಪಾದ ಸಿದ್ದಿಯು ಅಲ್ಲಿಗೆ
ಬಂದು ಫಕೀರನಿಗೆ ಪ್ರಣಾಮ ಮಾಡಿ ಕೈಸನ್ನೆಯಿಂದ ಏನಾಜ್ಞೆಯೆಂದು
೧೦೬ --------------------------------------------------------------------
ಕೇಳಲಾಗಿ " ಇವರ ಸಮಾಚಾರವನ್ನು ತೆಗೆದುಕೋ '' ಎಂದು ಫಕೀರನು
ಸಿದ್ದಿಗೆ ನನ್ನನ್ನು ತೋರಿಸಿ ಕೈಸನ್ನೆಯಿಂದಲೇ ಹೇಳಿದನು. ಆ ಸಿದ್ದಿಯ
ಮೈ ಬಣ್ಣವಾವದೋ ಅಂಗಿಚಲ್ಲಣಗಳಾವವೋ ತಿಳಿಯುವಂತೆ ಇದ್ದಿಲ್ಲ.
ಎಲ್ಲವೂ ಇದ್ದಲಿಗಿಂತಲೂ ಕಪ್ಪೆ. ಅವನ ಬಿಳಿಯವಾದ ಗುಳ್ಳೆಗಣ್ಣುಗಳನ್ನು
ಮಾತ್ರ ದೀವಿಗೆಯಿಲ್ಲದಿದ್ದರೂ ಆ ಹೊಲೆಗಪ್ಪಿನಲ್ಲಿ ಕಾಣಬಹುದಾಗಿತ್ತು.
ಆ ಕೃಷ್ಣ ಕಾಯನು ಬೆರಳುಸನ್ನೆ ಮಾಡಿ ನನ್ನನ್ನು ಕರೆದೆಡೆಗೆ ನಾನು
ಹೋದೆನು. ಅಟ್ಟದಲ್ಲಿಯದೊಂದು. ಕೋಣೆಯ 'ಬಾಗಿಲಕ್ಕೆ ಬಂದು ಬೀಗ
ವನ್ನು ತೆಗೆದು ಅವನು ನನ್ನನ್ನು ಒಳಕ್ಕೆ ಕರೆದೊಯ್ದನು. ಅಗೋ |
ಕೋಣೆಯ ಮಧ್ಯದಲ್ಲಿ ದೊಡ್ಡದೊಂದು ಗೊಬೆ ದೀಪನೇ ತೂಗಾಡು
ತ್ತಿತ್ತು. ಪಾರ್ಶ್ವಗಳಲ್ಲಿ ನೋಡಿದರೂ ಕೆಂಗಣ್ಣುಗಳಿಂದ ಪ್ರಕಾಶವನ್ನುಗು
ಳುವ ಗೂಬೆಗಳು ಮಾಡಗಳಲ್ಲಿ ಕುಳಿತಿದ್ದವು. ಕೋಣೆಗಳಿಗೆ ದಟ್ಟಾಗಿ
ಸಾರಿಸಿರುವ ಬಣ್ಣವು ಕರಿದು, ಮಲಗುವ ಮಂಚವು ಕೇರುಗಪ್ಪಿನದು,
ತಿವಾಸಿಗೆ ಮಗ್ಗಲಾಸಿಗೆ ದಿಂಬಗಳೆಲ್ಲ ಕಾಗೆಯ ಪುಚ್ಚಗಳನ್ನು ಹೀಯಾಳಿಸು
ತ್ತಿದ್ದವು. ಹೂವಿನ ಹಾಸಿಗೆಯಂತೆ ಮೃದುವಾಗಿರುವ ರತ್ನಗಂಬಳಿಯನ್ನು
ನೆಲಕ್ಕೆ ಹಾಸಿದ್ದರು. ಅದಾದರೂ ಕಣ್ಣು ಬೀಜಗಳ ರಾಶಿಯಂತೆ ಕರ್ರಗೆ
ಹೊಳಿಯುತ್ತಿತ್ತು. ಬೇರೊಂದು ಬಣ್ಣವನ್ನು ನೋಡುನೆನೆಂದರೆ ಅಸಹ್ಯವಾಗಿ
ಕಾಣುವ ಸಿದ್ದಿಯ ಸುಣ್ಣ ದಂತಿರುವ ಗುಳ್ಳೆಗಣ್ಣುಗಳೂ ದುಷ್ಪ್ರೇಕ್ಷಣೀಯವಾ
ಗಿರುವ ದೀಪಘೂಕನ ಇಂಗಳೀಕದಂತಿರುವ ನಯನಜ್ಯೋತಿಯೇ ಹೊರತಾಗಿ
ಮತ್ತೊಂದು ವಸ್ತುವಿಲ್ಲ.
ಇತ ನನ್ನ ಅಂಗಿಚಲ್ಲಣಗಳನ್ನು ಕಳೆದಿಟ್ಟಕೂಡಲೆ ಆ ಸಿದ್ದಿಯು
ಮುಖಮಾರ್ಜನಕ್ಕಾಗಿ ಬಿಸಿನೀರಿನ ಗಂಗಾಳವನ್ನೂ ಸಾಬೂನು, ಒರಿಸಿ
ಕೊಳ್ಳುವ ಪಂಜೆಗಳನ್ನೂ ಬಳಿಯಲ್ಲಿಯೇ ಇರುವ ಬಚ್ಚಲಮನೆಯಲ್ಲಿ
ತಂದಿರಿಸಿದನು. ಮುಖ ತೊಳೆದು ನಾನು ಕೋಣೆಗೆ ಬರುವದರೊಳಗಾಗಿ
ಅಲ್ಲಿದ್ದ ನನ್ನ ಹಳೆ ಬಟ್ಟಿ ಗಳ ಬದಲಾಗಿ ಅಂದವಾದ ಹೊಸ ಬಟ್ಟೆಗಳನ್ನಿರಿಸಿ
ದ್ದರು. ಉದ್ದಂಗಿಯು ಉತ್ತಮತರದ ರೇಸಿಮೆಯದು; ಚಲ್ಲಣವಾದರೂ
ರೇಶಿಮೆಯದೇ; ತಲೆಗೆ ಕಲಾಬತ್ತಿನ ಟೊಪ್ಪಿಗೆ, ಅವುಗಳಿಗೆಲ್ಲ ಪುನಗು
ಜವಾಜಿಯ ಸುವಾಸನೆ; ಆದರೆ ಅವುಗಳ ಬಣ್ಣಮಾತ್ರ ಕಾಡಿಗೆಯದು.
೧೦೭ ------------------------------------------------------------------------
ಪೋಷಾಕು ಮಾಡಿಕೊಂಡು ನಾನು ನಿಂತಕೂಡಲೆ ಸಿದ್ದಿಯು ನನ್ನ ಕಾಲಲ್ಲಿ
ತಳತಳನೆ ಹೊಳೆಯುವ ಕರೀ (ಚಡಾವ) ಜೋಡುಗಳನ್ನು ಮೆಡಿಸಿದನು.
ವಿಸ್ತಾರವಾಗಿಯೂ ಪ್ರಶಸ್ತವಾಗಿಯೂ ಆಲಂಕೃತವಾಗಿಯೂ ಇರುವ
ಭೋಜನಶಾಲೆಗೆ ನಾನು ಬಂದೆನು. ಅಗಣಿಶವಾದ ಘೂಕಸಮುಚ್ಚಯದ
ರಕ್ತಾಕ್ಷಿ ಕ್ಷೇಪದಿಂದ ಭಯದ್ಯೋತಕವಾದ ವಿಲಕ್ಷಣವಾದದ್ದೊಂದು ಬೆಳಕು
ಮೂಡಿತ್ತು. ರಕ್ತಪ್ರಕಾಶವಿದ್ದರೂ ಕತ್ತಲೆಯು ಚನ್ನಾಗಿ ತೊಲಗಿ ಹೋಗಿ
ದಿಲ್ಲವಾದ್ದರಿಂದ श्येनपक्षपरिधूसरालकाः सांध्यमेधरुधिरावाससः
अंगना इव रजस्वला दिशो नो बभवरवलोकनक्षमाः ಎಂಬಂತೆ ಆ
ಮಂದಿರವೆಲ್ಲ ಅಭದ್ರವಾಗಿ ತೋರುತ್ತಿತ್ತು. ಕೆಲವರು ಸುಂದರರೂ ಕೆಲವರು
ದೃಢಾಂಗರೂ ಕೆಲವರು ವಿದ್ಯಾವರ್ಚಿಸ್ಸಿಸಿಂದ ಶೋಭಿಸುವವರೂ ಆದ
ಅನೇಕ ಜನ ಅತಿಥಿಗಳು ನನ್ನಂತೆಯೇ ಪೋಷಾಕು ಮಾಡಿಕೊಂಡು ಭೋಜ
ಕಕ್ಕೆ ಸಿದ್ಧರಾಗಿ ಬಂದಿದ್ದರು. ವಿಸ್ತಾರವಾದ ಮೇಜಿನ ಎರಡು ಬದಿಗೂ
ಇರಿಸಿರುವ ಶೂಲಿಕಾಮಯವಾದ ಕುರ್ಚಿಗಳ ಮೇಲೆ ನಾವೆಲ್ಲರೂ ಕುಳಿತೆವು.
ಸಂಗಡಲೇ ಪಂಚಪಕ್ಟಾನ್ನ ಗಳಿಂದ ತುಂಬಿದ ಹರಿವಾಣಗಳನ್ನು ಸೇವಕರು
ನಮ್ಮೆಲ್ಲರ ಮುಂದೆ ಯಥಾಕ್ರಮವಾಗಿ ಇರಿಸಿದರು. ಆದರೆ ಶಾಸೂಫಿ
ಜಳ ಸಾಹೇಬರೂ ಬರಲಿಲ್ಲ, ನನ್ನನ್ನು ಕರೆತಂದವನಾದ ಫಕೀರನೂ
ಬರಲಿಲ್ಲ. " ಬಿಸ್ಮಿಲ್ಲಾ : ಹೇಳಲಿಕ್ಕೆ ದಿಕ್ಕಿಲ್ಲದಾಯಿತೆ" ಎಂದು ನಾನು
ಯೋಚಿಸುತ್ತಿರುವಾಗ ಓರ್ವ ಸೇವಕನು ಬಂದು ಆಕಾಶದ ಕಡೆಗೆ ಬೊಟ್ಟು
ತೋರಿಸಿ ನಮ್ಮೆಲ್ಲರಿಗೂ ಪ್ರಣಾಮಮಾಡಿ ಹೊರಟುಹೋದನು. ಆ ಸೂಚನೆ
ಯಾದ ಕೂಡಲೆ ಎಲ್ಲರೂ ಭೋಜನಕ್ಕೆ ಪ್ರಾರಂಭ ಮಾಡಿದರು. ಕ್ಷುಧಾ
ಕ್ರಾಂತನಾದ ನಾನು ಗಬಗಬನೆ ನಾಲ್ಕ ಕುತ್ತು ಗಳಲ್ಲಿ, ತುಂಬಿದ ಹರಿವಾಣ
ವನ್ನು ತೆರವು ಮಾಡಿದೆನು. ಕಿಂಚಿತ್ ಕ್ಷುಧಾಶಾಂತಿಯಾದ ಬಳಿಕ ಸುತ್ತಲೂ
ಸಮಾಧಾನದ ನೋಡುವಷ್ಟು ಆವಸಾನವು ನನ್ನಲ್ಲಿ ಬಂದಿತು. ಇಪ್ಪತ್ತು
ಇಪ್ಪತ್ತೈದು ಜನ ಭೋಕ್ತಾ ಪುರುಷರು ಸಮಾಚೇನವಾದ ಭಕ್ಷ ಬೋಜ
ಗಳನ್ನುಣ್ಣುತ್ತಿರುವಾಗ ಒಂದು ವಿನೋದದ ಮಾತುಗಳಿಲ್ಲ; ಆದರೋಪಚಾರ
ಗಳ ವಾರ್ತೆಯಿಲ್ಲ. ಒಬ್ಬರ ಮುಖದಲ್ಲಿಯಾದರೂ ಉಲ್ಲಾಸದ ಚೆಹ್ನೆವಿದ್ದಿಲ್ಲ.
ಸಮಾಧಾನದ ಲಕ್ಷಣವು ಕೂಡಾ ಕಂಡುಬರಲಿಲ್ಲ. ಬಾಯಾಡಿಸುವ. ಸಪ್ಪಳ,
೧೦೮ -------------------------------------------------------------------------
ಉರವಣಿಸಿ ಬರುವ ತೇಗಿನ ಡರಿಕೆ, ಭೋಜನಪ್ರಿಯರು ಅಸ್ಥಿನಲಿಕೆಗಳನ್ನು
ಕಟಕಟನೆ ಒಡೆದು ಸುರ್ರಸುರ್ರೆಂದು ಅವುಗಳನ್ನು ಶೋಷಿಸಿಕೊಳ್ಳುತ್ತಿರುವ
ಸರಭರಾಟ, ಮುಂತಾದ ಧ್ವನಿಗಳು ಕರ್ಣಕಠೋರವಾಗಿ ತುಂಬಿಕೊಂಡಿದ್ದವೇ
ಹೊರತಾಗಿ ಸಮಾಜರಂಜನದ ಸುದ್ದಿಯೇ ಅಲ್ಲಿ ಇರಲಿಲ್ಲ. ಗೂಬೆಗಳ
ಭೀಕರವಾದ ಅಕೃತಿಗಳೂ, ಅಮಂಗಲನಾದ ಕಪ್ಪು ಬಣ್ಣದ ಸಾಮ್ರಾಜ್ಯ ವೂ,
ಬಲಾತ್ಶಾರದ ಮೌನವೂ ಒಟ್ಟುಗೂಡಿ ನನ್ನ ಮನಸ್ಸಿನಲ್ಲಿ ಅಸಮಾಧಾನ
ಉದ್ವಿತೆಗಳನ್ನು ಉಂಟುಮಾಡಿದವು. ಪಕ್ವಾನ್ನಗಳ ಸುಗಂಧವೂ, ಒಗ್ಗರಣೆ
ಗಳ ಸೌರಭದಿಂದ ಸ್ವಾದಿಷ್ಟವಾಗಿ ಕೋರುವ ವ್ಯಂಜನಸದಾರ್ಥಗಳ ಸಮೀ
ಚೀನತೆಯೂ ಲೇಹ್ಯಪೇಯಾದಿಗಳ ರುಚಿರತೆಯೂ ನನಗೆ ವ್ಯರ್ಥವಾಗಿ
ತೋರಿದವು. ಪಙ್ತಿಯು ಏಳುವ ವರೆಗೆ ಅನಿರ್ವಾಹಕ್ಕಾಗಿ ಕುಳ್ಳಿರಬೇಕಾದ್ದ
ರಿಂದ, ನಾನು ಆ ಪದಾರ್ಥದಲ್ಲಿ ಒಂದು ಬೊಟ್ಟು ಹಾಕು, ಈ ಪದಾರ್ಥವನ್ನು
ಸುಮ್ಮನೆ ಮುಟ್ಟಿ ನೋಡು, ಹೀಗೆ ಮಾಡುತ್ತೆ ಕಾಲಕಳೆದೆನು, ನನ್ನ ಬಳಿ
ಯಲ್ಲಿಯೇ ಕುಳಿತು ನನ್ನ ವ್ಯಾಪಾರಗಳನ್ನು ನಿರೀಕ್ಷಿಸುತ್ತಿರುವವನಾದ ತರುಣ
ನೋರ್ವನು ಈಷತ್ ಮಂದಹಾಸಗೈದು ನನಗೆ ಪ್ರಣಾಮ ಮಾಡಿದನು.
ಎಲ್ಲರೂ ಎದ್ದು ಕೈದೊಳೆದ ಬಳಿಕ ಸೇವಕನೊಬ್ಬನು ವೀಳ್ಯದ ತಬಕ
ವನ್ನು ತಂದು ನಮ್ಮೆಲ್ಲರಿಗೂ ತಾಂಬೂಲ ಸಮರ್ಪಣನನ್ನು ಮಾಡಿದನು.
ಮತ್ತೋರ್ವನು ತಲೆಗೊಂದೊಂದು ಅತ್ಯುತ್ತಮವಾದ ಸಿಗರೆಟ್ಟಿನ ಡಬ್ಬೆ
ಯನ್ನು ಕೊಟ್ಟತು. ತಾಂಬೂಲ ಧೂಮ್ರಪಾನಗಳಾದ ಬಳಿಕ ನಾವೆಲ್ಲರೂ
ನಮ್ಮ ನಮ್ಮ ಕೋಣೆಗೆ ಬಂದೆವು. ಮಾತುಕಥೆ ಹರಟೆ-ವಿನೋದ ನಗೆ-
ಕೆಲೆಗಳ ನಿಶಾಂತವಾದ ಅಭಾವಕ್ಕಾ ಗಿ ನನ್ನ ಹೊಟ್ಟೆಯೇ ಉಬ್ಬಿದಂತಾಯಿತು.
ಸ್ವಚ್ಛವಾದ ಸುಣ್ಣ ದ ಗೋಡೆಯುಳ್ಳ ಮನೆಯಲ್ಲಿ ಪ್ರಕಾಶವು ಅಧಿಕವಾಗಿ
ಹೊಳೆಯುವಂತೆಯೇ ಕಾಡಿಗೆಯಿಂದ ಸಾರಿಸಲ್ಪಟ್ಟಿರುವ ಆ ಮನೆಯಲ್ಲಿ
ಕತ್ತಲೆಯು ದಟ್ಟದಡಸಾಗಿರುವಂತೆ ತೋರಿತು. ವಾತಾವರಣವೆಲ್ಲ ತಮಸ್ಸಿನ
ಹುಡಿಯಿಂದ ನಿಬಿಡವಾಗಿ ಬೆರೆತಿರುವದೋ ಎಂಬಂತೆ ನನಗೆ ಭಾಸವಾದದ್ದ
ರಿಂದ ಉಸುರಾಡಿಸುವದೇ ಕಠಿಣವಾಗಿತ್ತು. ಈ ಮೌನವೇಕೆ? ಈ
ಕೃಷ್ಣ ವರ್ಣದ ತನ್ಮಯವೇಕೆ? ಈ ಗೊಗೆಗಳಲ್ಲಿ ಯಜಮಾನರಿಗೆ ಇಷ್ಟೊಂದು
ಸೇರಿಕೆಯೇಕೆ? ಮುಂತಾದ ಅನೇಕ ವಿಚಾರಗಳಲ್ಲಿ ಮುಳುಗಿ ಹಾಸಿಗೆಯಲ್ಲಿ
೧೦೯ -------------------------------------------------------------------------
ಬಿದ್ದು ಕೊಂಡೆನು., ಹಂಸತೂಲಿಕೆಯ ತಿವಾಸಿಗೆಗಳೂ ಬೆಚ್ಚ ನ ಹೊದಿಕೆಗಳೂ
ಗಂಧ ತಾಂಬೂಲಗಳೂ ಸುಭೋಜನವನ್ನುಂಡು ಮಲಗಿದವನಿಗೆ ಸುಖನಿದ್ರೆ
ಯನ್ನು ಕೊಡದಿರುವವೇ? ಆದರೆ ಅಲ್ಲಿ ಸಾರ್ವತ್ರಿಕವಾಗಿರುವ ಅಶುಭ
ದರ್ಶನಗಳಿಂದ ಸಹಸಾ ನಿದ್ದೆ ಹತ್ತಲೊಲ್ಬದು. ಕಿಂಚಿತ್ ಜಂಪುಹತ್ತಿದರೂ
ದುಃಸ್ವಪ್ನಗಳ ಸಮುಚ್ಚಯ ಎದೆಯನ್ನೊಡೆದು ನೀರುನೀರಾರಿ ಮಾಡಿತು.
ಬೆಳಗಾಯಿತು. ಅರೆಮುರುಕ ನಿದ್ರೆ ಮೂಡಿ ನಾನು ಏಳುವದರೊಳ
ಗಾಗಿ ಸ್ನಾನದ ಸಿದ್ದತೆ. ಮತ್ತೆ ಉತ್ತಮವಾದ ಹೊಸ ಪೋಷಾಕು ( ಕಪ್ಪು
ಬಣ್ಣ ವನ್ನು ಮಾತ್ರ ಮರೆಯಬೇಡಿರಿ!). ಮತ್ತೆ ಸುಗ್ರಾಸವಾದ ಉಪಾಹಾರ
ಕಾಫಿಗಳು, ಮತ್ತೆ ಸಮಾಚೀನವಾದ ಭೋಜನ. ಆದರೇನು? ಮಾತಿಲ್ಲ
ಕಥೆಗಳಿಲ್ಲ. ಪುಣ್ಯಕ್ಕೆ ಸೇವಕನೋರ್ವನು ಫಕ್ಕನೆ ಬಂದು ತೆರೆಯನ್ನು
ಸಾರ್ಚಿ ವಾಚನಾಲಯದ ಮಾರ್ಗವನ್ನು ತೋರಿಸಿದನು. ಅಹಹಾ !
ಅದೊಂದು ಮಂದಿರದಲ್ಲಿ ಮಾತ್ರ ಶುದ್ಧವಾದ ಪ್ರಕಾಶವು ತೊಳಗಿ ಬೆಳಗು
ತ್ತಿತ್ತು. ಉಳಿದೆಡೆಗಳೆಲ್ಲ ಕೃಷ್ಣ ವರ್ಣದಲ್ಲಿ ಮುಳುಗಿ ಏಳುತ್ತಿರುವದರಿಂದಲೂ
ಚಂಡಾಂಶುವಾದ ಮಾರ್ತಂಡನಿಗೆ ಆಲ್ಲಿ ಖಂಡಿತವಾಗಿ ಪ್ರತಿಬಂಧನಿರುವದ
ರಿಂದಲೂ ಹಗಲು ದೀವಟಿಗೆಗಳಿಲ್ಲದೆ ಅಲ್ಲಿ ಅಡ್ಡಾಡುವದೇ ದುಸ್ತರವಾಗಿತ್ತು.
ಇರಲಿ. ಜಗತ್ಕರ್ತನು ನಿರ್ಮಿಸಿದ ಮಹಾಜ್ಯೋತಿಯ ಪ್ರಭಾನುಪ್ರಭೆಯು
ವಾಚನಾಲಯದಲ್ಲಿ ಸಂಪೂರ್ಣವಾಗಿ ತುಂಬಿಕೊಂಡಿರುವದರಿಂದ ಅಲ್ಲಿ ಕುಳಿ
ತಿರುವಾಗ ನನ್ನ ಮನಸ್ಸಿಗೆ ಒಳ್ಳೇ ಉತ್ಸಾಹ ಬಂದಿತು. ಬಿಸಿಬಿಸಿ ಸುದ್ದಿ
ಗಳನ್ನು ಪ್ರಸರಿಸುವ ದಿನದಿನಗಳ ಪತ್ರಗಳೂ ಚಿತ್ರ ಮಯವಾಗಿಯೂ
ವರ್ಣನಾತ್ಮಕವಾಗಿಯೂ ಇರುವ ಮಾಸಪತ್ರಿಕೆಗಳೂ ಕಥೆ ಕಾದಂಬರಿ ಇತಿ
ಹಾಸ ಪುರಾಣ ಗಣಿತ ಜ್ಯೋತಿಷ ಪದಾರ್ಥವಿಜ್ಞಾನ ರಸಾಯನಶಾಸ್ತ್ರಗಳ
ಮೇಲಿನ ಸಾವಿರಾರು ನವೀನ ಗ್ರಂಥಗಳೂ ಅಲ್ಲಿ ತುಂಬಿದ್ದವು. ಕೆಲವರು
ಪ್ರಕರಣಗಳ ಶಿರೋಲೇಖಗಳನ್ನು ಮಾತ್ರ ನೋಡಿಕೊಂಡು ಪತ್ರಗಳನ್ನು
ಬಿಸಡುವರು. ಕೆಲವರು ವರ್ತಮಾನಪತ್ರಗಳ ಹೆಸರುಗಳೆನ್ನೋದಿಯೇ
ವಾಚನವನ್ನು ಮುಗಿಸಿಬಿಟ್ಟರು; ಕೆಲವರು ಓದುವವರಂತೆ ನಟಿಸಿದರು;
ಕೆಲವರು ಮನಮುಟ್ಟಿ ಓದಿದರು.
ನಿನ್ನೆ ಸಾಯಂಕಾಲದ ಭೋಜನ ನಡೆದಾಗ ನನಗೆ ಪ್ರಣಾಮ ಮಾಡಿ
೧೧೦ ------------------------------------------------------------------------
ಮಂದಹಾಸಗೈದ ತರುಣನು ಈ ದಿವಸ ವಾಚನಾಲಯದಲ್ಲಿ ನನ್ನ ಬಳಿ
ಯಲ್ಲಿಯೇ ಕುಳಿತಿದ್ದನು. ಅವನೊಂದು ವರ್ತಮಾನಪತ್ರದಲ್ಲಿಯದೊಂದು
ಪ್ರಕಟನಾ ಪತ್ರಿಕೆಯನ್ನು ನನಗೆ ತೋರಿಸಿ ಆದನ್ನೋದಲು ನನ್ನ ಕೈಯಲ್ಲಿ
ಕೊಟ್ಟನು.
ಪ್ರಕಟನೆ] ಅವಶ್ಯವಾಗಿ ಓದಿರಿ [ಪ್ರಕಟನೆ
ಅನನುಕೂಲತೆಗೆ ಈಟಾಗಬೇಡಿರಿ
ದಿಲ್ ಆರಾಮ ಮೆಹೆಲ್
( ಚದರಘಾಟ, ಹೈದರಾಬಾದ )
ಅಮಿಲ್‌ದಾರ್, ಸರದಾರ, ಅಮೀಲ ಉಮ್ರಾವ್ ನವಾಬರೇ
ಮುಂತಾದ ಮಹಮದೀ ಧರ್ಮಾನುಯಾಯಿಗಳಾದ ಘನವಂತರಿಗೆ ಉಚಿತ
ವಾದ ಉಪಹಾರ ವಿಶ್ರಾಂತಿಗಳು, ಕೀಳು ಜನರ ಸಂಪರ್ಕವಿಲ್ಲದೆ ದೊರಕು
ವಂತೆ ವ್ಯವಸ್ಥೆ ಮಾಡಿದೆ. ದಿಲ್ ಆರಾಮ ಮೆಹೆಲ್ ಅಂದರೆ ಅದೊಂದು
ರಾಜಭವನವೇ. ಕುರ್ಚಿ ಮೇಜು ಪಲಂಗ ಕೋಚ ಮುಂತಾದ ಸಾಮಾನುಗಳು
ಅನರ್ಘವಾಗಿಯೂ ಸುಖಮಯವಾಗಿಯೂ ಇರುತ್ತವೆ. ರೂಪವತಿಯರಾದ
ಪರಿಚಾರಿಕೆಯರು, ದಕ್ಷರಾದ ಜವಾನರೂ ನಮ್ಮ ಗ್ರಾಹಕರ ಮುಂದೆ
ಯಾವಾಗಲೂ ಕೈಜೋಡಿಸಿಕೊಂಡು ನಿಂತಿರುವವರು. ಬಿಲಿಯರ್ಡ, ಕಾರ್ಡ,
ಚತುರಂಗ್ಯ ಚಂಗ್‌ಕಾಂಚನ್ ಮುಂತಾದ ಆಟಗಳನ್ನಾಡಲು ಸ್ವತಂತ್ರಷಾದ
ಕ್ರೀಡಾಭವನಗಳಾವರೂ ದಿಲ್‌ಆರಾಮ್ ಮೆಹೆಲಿನಲ್ಲಿ ಇರುವವು. ದಂಪತಿ
ಗಳಿಗಾಗಿ ಏಕಾಂತ ಮಂದಿರಗಳ ವ್ಯವಸ್ಥೆಯನ್ನೂ ಮಾಡುವೆವು.
ಸಲೀಮುಲ್ಲಾಖಾನ್,
ಮಾಲಿಕ್.
ಈ ಸುಖನಿವಾಸದ ಪ್ರಕಟನವನ್ನು ಓದಿ ನಾನು ಕುತೂಹೆಲದಿಂದ ಆ
ಗೃಹಸ್ಥನ ಮೋರೆಯನ್ನು ನೋಡಿದೆನು. ಅವನು ಹೊರಗೆ ಹೋಗೋಣ
ಬನ್ನಿರೆಂದು ನನಗೆ ಸೂಚನೆ ಮಾಡಿದ ಕೂಡಲೆ ನಾನು ಅವನೊಡನೆ ನಡೆ
ದೆನು. ಮನೆಯ ಹಿಂಭಾಗದಲ್ಲಿದ್ದ ಸೋಪಾನದಿಂದ ಕೆಳಗಿಳಿದು ನಾವು ಆ
ಮಂದಿರದ ಉದ್ಯಾನಕ್ಕೆ ಬಂದೆವು, ನನ್ನ ಸಂಗಡಿಯು ಅಲ್ಲಿಯ ಕಾವಲು
ಗಾರನಿಗೆ ಸೂಚಕೆ ಕೊಟ್ಟು ನನ್ನನ್ನು ಕರಕೊಂಡು ರಾಜಮಾರ್ಗಕ್ಕೆ ಬಂದನು.
೧೧೧ ----------------------------------------------------------------------------
ಅಲ್ಲಿ ಬಂದಕೂಡಲೆ ಆ ನನ್ನ ಸ್ನೇಹಿತನು ಉಲ್ಲಾಸದಿಂದ ನಕ್ಕು " ಅಲೇಕಮ್
ಸಲಾಮ್ ದೋಸ್ತ, (ನಮಸ್ಕಾರ ಮಿತ್ರರೆ) ಇನ್ನು ನೀವು ಬೇಕಾದ ಹಾಗೆ
ನಿಮ್ಮ ನಾಲಿಗೆಯನ್ನು ಹರಿಬಿಡಿರಿ, ತಮ್ಮ ಹೆಸರೇನು?” ಎಂದು ಕೇಳಿ
ದನು. ನಾನು ನನ್ನ ಹೆಸರು ಹೇಳಿದೆನು. ಅವನ ಹೆಸರು ಸಯ್ಯದ
ಮಯನೋದ್ದೀನ ಕಾದ್ರೀ. ಕಾದ್ರಿಯು ಬಾಡಿಗೆಯ ಗಾಡಿಯನ್ನು ಹಿಡಿದು
ಅದರಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು "ದಿಲ್ ಆರಾಮ್ ಮೆಹೆಲಿ”ನ ಕಡೆಗೆ
ನಡೆದನು. ಮಾರ್ಗದಲ್ಲಿ ನಾನು ನನ್ನ ವೃತ್ತಾಂತವನ್ನು ಅವನಿಗೆ ಹೇಳಿದೆನು.
ಅವನು ತನ್ನ ಕಥೆಯನ್ನು ನನಗೆ ಹೇಳಿದನು. ಕಾದ್ರಿಯು ಗೋವೆಯ
ಪ್ರಾಂತದವನು. ಪ್ರತಿಷ್ಠಿತರಾದ ಮೋಲವೀಗಳ ಮನೆತನದವನಾದ ತನಗೆ
ಮುಸಲ್ಮಾನೀ ರಾಜ್ಯದಲ್ಲಿ ಉತ್ತರೋತ್ತರನಾಗುವದೆಂದು ನೆನೆದು
ಹೈದರಾಬಾದಕ್ಕೆ ಬಂದಿದ್ದನು. ಅಪೇಕ್ಷಿಸಿದಂತೆ ಅವನಿಗೆ ನೂರು ರೂಪಾ
ಯಿಯ ಸಂಬಳವಾಯಿತು. ನವಾಬ ಬಖ್ತ್ಯಾರಖಾನರೆಂಬ ದೊಡ್ಡ ಆಧಿ
ಕಾರಸ್ತರ ಪ್ರೀತ್ಯಾಸ್ಪದನಾಗಿದ್ದು ಅವನಿನ್ನುಉತ್ತರೋತ್ತರ ಅಭಿವೃದ್ಧಿಯನ್ನು
ಹೊಂದುವನು. ಆದರೆ ಹೈದರಾಬಾದಿನಲ್ಲಿಯ ಇಂಗ್ಲಿಷ್ ಅಧಿಕಾರಿಗೂ
ಬಖ್ತ್ಯಾರಖಾನರಿಗೂ ವೈಮನಸ್ಸು ಉಂಟಾಗಿದ್ದರಿಂದ ಆ ಅಧಿಕಾರಿಯು
ಬಖ್ತ್ಯಾರಖಾನನನ್ನು ಪಾತಾಲಕ್ಕೆ ಮೆಟ್ಟಿ ಹಾಕಬೇಕೆಂಬ ಪ್ರತಿಜ್ಞೆ ಮಾಡಿ
ದನು. ಗೋಮಾಜಿ ಕಾಪಸೆ ಘಾಳೆಪ್ಪ ಬಿನ್ನ ಧೂಳೆಪ್ಪಾ, ಬರಿಬುಟ್ಟಿ
ರಂಗಯ್ಯಾ, ಕೋಮಟಿ ಮುಂತಾದ ಧರ್ಮರಾಜ ಸದೃಶರಾದ ಸತ್ಯ
ವಾದಿಗಳು ಬಖ್ತ್ವಾರಖಾನಗ ವಿರುದ್ಧವಾಗಿ ಏನು ಬೇಕಾದ ಮಾತಿನ
ಸಾಕ್ಷಿ ನುಡಿಯಲಿಕ್ಕೆ ಸಿದ್ಧರಾದರು, ನವಾಬರು ಒಳಸಂಚು ಮಾಡಿದರೆಂಬ
ಆರೋಪವಿದ್ದರೆ ಬರಿಬುಟ್ಟಿ ರಂಗಯ್ಯನಿಗೆ ತಿಳಿಸಿಯೇ ಅವರು ಅಂಥ
ಘೋರತರವಾದ ಕರ್ಮವನ್ನು ಮಾಡಲು ಪ್ರವೃತ್ತರಾದರು. ಖಾನರವರು
ಲಂಚ ತಿಂದರೆಂಬ ಆರೋಪವಿದ್ದರೆ ಗೋಮಾಜಿಯೇ ಲಂಚ ಕೊಟ್ಟವನು,
ಘಾಳೆಪ್ಪನು ಮಧ್ಯಸ್ತಿ ಮಾಡಿದವನು; ಆದರೆ ಸಯ್ಯದ ಮೈನೋದ್ದೀನನ
ಸಾಕ್ಷಿಯು ಅವಶ್ಯವಾಗಿದ್ದದರಿಂದ ಅವನಿಗೆ ಸಾಕ್ಷಿಯಾಗೆಂದು ಸೂಚನೆ
ಬಂದಿತು. ಆದರೆ ಸಾಧುವೃತ್ತಿಯವನಾದ ಆ ಶುದ್ಧ ಬೀಜದ ಮುಸಲ್ಮಾನನು
ಸುಳ್ಳು ಸಾಕ್ಷಿ ಕೊಡಲಿಕ್ಕೆ ಎಷ್ಟುಮಾತ್ರವೂ ಒಪ್ಪಲಿಲ್ಲ. ಹಾಂ! ಹಾಂ!
೧೧೨----------------------------------------------------------------------
ಹೀಗೋ! ಮರುದಿನಸವೇ ಕಾದ್ರಿಯ ಮೇಲೊಂದು ಆರೋಪ ಬಂದಿತು.
ಅವನ ಅಧಿಕಾರವನ್ನು ಕಸುಕೊಂಡರು. ಇನ್ನು ಅವನನ್ನು ಹಿಡುಕೊಂಡು
ಹೋಗುವವರು. ಪಾಪ, ಆ ಸಯ್ಯದನು ಮಾನಹಾನಿಗೆ ಅಂಜಿ ಅತ್ಮಹತ್ಯೆ
ಯನ್ನು ಮಾಡಿಕೊಳ್ಳಬೇಕೆಂದು ಮಧ್ಯರಾತ್ರಿಯಲ್ಲೆದ್ದು ಮೂಸಾನದಿಯ
ಪೂಲಿನ ಮೇಲೆ ಬಂದು ಇನ್ನು ಪ್ರಾಣವನ್ನು ಕೊಡತಕ್ಕವನು; ಅಷ್ಟರಲ್ಲಿ ಈ
ಮೊದಲೇ ವರ್ಣಿಸಿದ ಫಕೀರನು ಅಲ್ಲಿಗೆ ಬಂದು ಕಾದ್ರಿಗೆ ತನ್ನ ಆಶ್ರಯದ
ಆಶ್ವಾಸನವನ್ನಿತ್ತು ಅವನನ್ನು ಮೌನಮಂದಿರಕ್ಕೆ ಕರತಂದಿದ್ದನು.
ನಾನೂ ಕಾದ್ರಿಯೂ ಕೂಡಿ ದಿಲ್‌ಆರಾವರ್ ಮೆಹೆಲಿಗೆ ಒಂದು
ಆರಾಮವನ್ನು ಹೊಂದಿ ಮತ್ತಿ ಮೌನಮಂದಿರಕ್ಕೆ ಬಂದೆವು. ಮೌನಮಂದಿರ
ದಲ್ಲಿಯ ಅತಿಥಿಗಳು ಎರಡು ಹೊತ್ತು ಊಟಕ್ಕೆ ತಪ್ಪಿಸಬಾರದಾಗಿತ್ತು.
ಹಗಲಿನ ಊಟಕ್ಕೆ ಇದ್ದು ಕೊಂಡು ಉಳಿದ ಸಮಯದಲ್ಲಿ ಅವರು ತಮ್ಮ
ಇಚ್ಛೆಗೆ ಬಂದಕಡೆಗೆ ಹೋಗಬಹುದಾಗಿತ್ತು. ರಾತ್ರಿಯ ಭೋಜನವನ್ನು
ತೀರಿಸಿಕೊಂಡು ಹೊರಗೆ ಹೋದವರು ಚತುರ್ಥಯಾಮದ ಒಳಗಾಗಿ ಮತ್ತೆ
ಮೌನಮಂದಿರವನ್ನು ಸೇರಿಕೊಂಡರೆ ಕೆಲಸ ತೀರಿತು. ವಿಶೇಷವಾದ ಕರ್ತವ್ಯ
ಗಳಿಂದ ಅವರು ಬದ್ದರಾಗಿದ್ದಂತೆ ತೋರಲಿಲ್ಲ,
ಮರುದಿವಸ ನಾನೊಬ್ಬನೇ ದಿಲ್ ಆರಾಮ ಮೆಹಲಿಗೆ ನಡೆದೆನು.
ಕುದುರೆ ರಥಗಳ ಅಪೇಕ್ಷೆಮಾಡದೆ ನಾನು ಬಡಿಗೆಯನ್ನು ಬೀಸುತ್ತೆ
ರಾಜಮಾರ್ಗವನ್ನು ಹಿಡಿದು ನಗರಶೋಭೆಯನ್ನು ನೋಡುತ್ತ ನಡೆದಿದ್ದೆನು.
ಸಿಗರೆಟ್ಟು ಸೇದಬೇಕೆಂದು ಜೇಬಿನಲ್ಲಿ ಕೈಹಾಕಿದೆನು, ಅಕೋ! ತೊಗಲಿನ
ದೊಂದು ಪಾಕೀಟು ನನ್ನ ಕೈಗೆ ಬಂದಿತು. ತೆಗೆದು ನೋಡುತ್ತೇನೆ,
ಅದರಲ್ಲಿ ಇಪ್ಪತ್ತು ಇಸ್ಪತ್ತು ರೂಪಾಯಿಗಳ ಐದು ನೋಟುಗಳಿದ್ದವು. "ಈ
ಹಣವೆಲ್ಲಿಯದು? '' ಎಂದು ಚಕಿತನಾಗಿ ನಾನು ಆ ಚೀಲವನ್ನು ಶೋಧಿಸಿ
ನೋಡಿದೆನು. ಅದರಲ್ಲಿ ಒಂದು ಸೂಚನಾ ಪತ್ರವಿತ್ತು. "ನಿಮ್ಮ ವೆಚ್ಚಕ್ಕಾಗಿ
ಇಷ್ಟು ಹಣವನ್ನು ನಿಮಗೆ ಕೊಟ್ಟಿದೆ. ಒಂದು ವಾರದಲ್ಲಿ ನೀವು ಇದರ
ವಿನಿಯೋಗವನ್ನು ಬೇಕಾದಹಾಗೆ ಮಾಡಬಹುದು. ಮುಂದಿನ ವಾರದಲ್ಲಿ
ಮತ್ತೆ ನೂರು ರೂಪಾಯಿಗಳು ಸಿಕ್ಕುವವು.” ಅದನ್ನು ಓದಿ ಸಮಾಧಾನವನ್ನು
ಹೊಂದಿ ನಾನು ದಿಲ್ ಆರಾಮ ಮಂದಿರಕ್ಕೆ ಬಂದೆನು. ಉಪಹಾರವಾದ
೧೧೩ ----------------------------------------------------------------------
ಬಳಿಕ ಅಲ್ಲಿಯ ವ್ಯವಸ್ಥಾಪಕರ ಬಳಿಯಲ್ಲಿ ಬಾಡಿಗೆಯ ಅಂದವಾದ ಪೋಷಾಕು
ಮಾಡಿಕೊಂಡು ದಿಲಖುಶ್‌ಬಾಗೆವೆಂಬ ರಮ್ಯವಾದ ಉದ್ಯಾನದ ಕಡೆಗೆ
ವಿಹರಿಸಲು ನಡೆದಿರುವಾಗ ನಾನೊಂದು ಹೃದ್ಯವಾದ ಸಂಗತಿಯನ್ನು
ಕಂಡೆನು.
ದಿಲ್ ಆರಾಮ ಮೆಹೆಲಿನಿಂದ ನಾನು ತುಸು ಮುಂದಕ್ಕೆ ಹೋಗು
ವಷ್ಟರಲ್ಲಿ "ಹಾಂ ಹೂಂ ಹಾಂ ಹೂಂ?” ಎಂದು ಕೂಗಿಕೊಳ್ಳುತ್ತೆ
ಬೋಯಿಗಳು ಒಂದು ಅಂದವಾದ ಮೇಣೆಯನ್ನು ಹೊತ್ತುಕೊಂಡು ನನಗೆ
ಎದಿರಾಗಿ ಬಂದರು, ಆ ಮೇಣೆಯ ಸಂಗಡ ಇಬ್ಬರು ದಾಸಿಯರಾ ಕೂಡಾ
ನಡೆದಿಕುವದರಿಂದ ಅದರಲ್ಲಿ ಶ್ರೀಮಂತಳಾಹ ಕುಲಾಂಗನೆಯಿರಬಹುದೆಂದು
ನಾನು ತರ್ಕಿಸಿದೆನು. ಅಷ್ಟರಲ್ಲಿಯೇ ನವತರುಣಿಯ ಸುಂದರವಾದ
ಕರಾಂಗುಲಿಗಳು ಮೇಣೆಯ ಬಾಗಿಲನನ್ನು ಮೆಲ್ಲನೆ ಪಿಳುಕಿಸಿ ತೆಗೆದು ಮತ್ತೆ
ಅದನ್ನು ಮುಚ್ಚಿ ಬಿಟ್ಟವು; ಕ್ಷಣಾರ್ಧವಲ್ಲ ನಿಮಿಷಾರ್ಧವಲ್ಲ, ಎವೆ ಬಡಿಯು
ವಷ್ಟು ಸಮಯದೊಳಗಾಗಿಯೇ ಆ ದಿವ್ಯಾಂಗುಲಿಗಳು ತೋರಿ ಆಡಗಿದವು.
ಕೋಲುಮಿಂಚಿನ ಪ್ರಭೆಯನ್ನು ಹಿ(ಯಾಳಿಸುವ ಆ ಸುಲಲಿತವಾದ ಅಂಗುಲಿ
ಗಳು ನನ್ನ ಹೃದಯದಲ್ಲಿ ವಜ್ರಪ್ರಹಾರವನ್ನೇ ಮಾಡಿದವು. ಮೊದಲು
ಸೌಂದಯಾತಿಶಯದ ಕಲ್ಪನೆ, ಆ ಮೇಲೆ ಪ್ರಾಪ್ತಿಯ ಅಭಿಲಾಷೆ ಕಟ್ಟಕಡೆಗೆ
ಆ ಆಭಿಲಾಷಾಜನ್ಯವಾದ ಮನೋವಿಕಾರದ ಹೊಡೆತವಷ್ಟೆ? ಆದರೆ ಆ
ಲಲಿತವಾದ ಕರಾಂಗುಲಿಗಳ ದರ್ಶನಕ್ಕೂ ಆ ಚಮತ್ಕಾರವಾದ ಪ್ರಹಾರಕ್ಕೂ
ಕಾಲಾವಧಿಯೇ ಇಲ್ಲದಿರುವಾಗ ಕಲ್ಪನೆಗೆ ಅವಕಾಶವೆಲ್ಲಿ ? ಕಲ್ಪನೆಗೆ
ಆಸ್ಪದವಿಲ್ಲದಿರುವಾಗ ನನ್ನೆದೆಗೆ ವಜ್ರಾರಘಾತದಂಥ ಪೆಟ್ಟು ಬೀಳುವದಕ್ಕೆ
ಕಾರಣವೇನು? ಇದಕ್ಕೆಯೇ "ಸ್ಮರಶರದ ಲಾಘವವು ನೊಡಿದೆ " ಎಂದು
ಕವಿಯು ಹೇಳುತ್ತಾನೆ. ಇರಲಿ. ಸ ಆ ಹೊದಿತಕ್ಕೆ ನೆಲಕ್ಕು ರುಳುವವನು,
ಹೇಗೋ ಏನೋ ತಡಕೊಂಡು ನಿಂತು ಮುಂದೆ ನನ್ನ ಹಾದಿಯನ್ನು ಹಿಡಿದು
ನಡೆದೆನು. ದಿಲಖುಶ್‌ಬಾಗ ( ಅದೊಂದು ಉದ್ಯಾನ) ದಲ್ಲಿರುವದಲೊಂದು
ರಮ್ಯವಾದ ಶಿಲಾತಲದ ಮೇಟಿ ಕುಳಿತುಕೊಂಡು ಸೃಷ್ಟಿಕರ್ತನೇ
ಆಗಿ ಆ ಮೋಹಜನಕವಾದ ಅಂಗುಲಿಗಳಿಗೆ ಒಪ್ಪುವ ಹಸ್ತವನ್ನೂ. ಹಸ್ತಕ್ಕೆ
ಒಪ್ಪುವ ಬಾಹುವನ್ನೂ ಆ ಮೇಲೆ ಸರ್ವಾಂಗಗಳನ್ನು ಕಲ್ಪನಾಸೃಷ್ಟಿಯಿಂದ
೧೧೪ ------------------------------------------------------------------------
ನಿರ್ಮಿಸಿದರೂ ನನ್ನಲ್ಲಿ ಅನುರಕ್ತವಾದ ಭಾವವನ್ನು ಆ ಚಾರುಗಾತ್ರಿಯ
ಹೃದಯದಲ್ಲಿ ತುಂಬುವದು ನನ್ನಿಂದ ಆಗಲೊಲ್ಲದು. ಅಷ್ಟರಲ್ಲಿ " ಸಲಾಂ
ನವಾಬಸಾಹೇಬ" ಎಂದು ಯಾವಳೋ ಸ್ತ್ರೀಯು ನನ್ನನ್ನು ಸಂಬೋಧಿ
ಸಿದಳು. ಅವಳು ನನ್ನ ಪರಿಚಯದವಳೇ. " ಯಾಕೆ, ಖತೀಜಾ ನೀನೇಕೆ
ಇಲ್ಲಿ? ” ಎಂದು ನಾನು ಆದರದಿಂದಲೂ ಕುತೂಹಲದಿಂದಲೂ ಕೇಳಿದೆನು.
ಹಿಂದಕ್ಕೊಮ್ಮೆ ನನಗೆ ತನ್ನ ಕನ್ನೆಯನ್ನು ಕೊಡಲಪೇಕ್ಷಿಸಿದ ರಸೂಲಹಕ್ಕ
ಸಾಹೇಬರ ಮನೆಯಲ್ಲಿ ಖಕೀಜೆಯು ದಾಸಿಯು. ವಾಚಾದತ್ತಳಾದ ನನ್ನ
ಭಾರ್ಯೆಯ ( ರಸೂಲಹೆಕ್ಕರ ಮಗಳ ) ರಹಸ್ಯದ ಸಖಿಯು. ಖತೀಜೆಯು
ಮಂದಸ್ಮಿತೆಯಾಗಿ " ಮನೆಗೊಂದಾವರ್ತಿ ಬಂದು ದರ್ಶನಲಾಭವನ್ನೂ
ಕೊಟ್ಟು ಹೋಗಬೇಕೆಂದು ಬೀಬೀ ಸಾಹೇಬರು ಬಯಸುತ್ತಾರೆ. ಈಗಲೆ
ನೀವು ನಮ್ಮ ಬಂಗಲೆಯ ಹಿಂಭಾಗದಲ್ಲಿರುವ ಉದ್ಯಾನದ ಬಾಗಿಲಕ್ಕೆ ಬನ್ನಿರಿ.
ಮುಂದೆ ತೊಂದರೆಯಿಲ್ಲದೆ ಒಳಕ್ಕೆ ಪ್ರವೇಶವಾಗುವಂತೆ ವ್ಯವಸ್ಥೆಯನ್ನು ಬೀಬಿ
ಸಾಹೇಬರು ಮಾಡಿಡುವೆವೆಂದು ಹೇಳಿದ್ದಾರೆ.” ಎಂದು ಬೆಸಗೊಂಡಳು,
" ಖತೀಜಾ, ನೂರ್‌ಉನ್ನಿಸ್ಸೆಯ ಪ್ರೇಮಲವಾದ ಹೃದಯದಲ್ಲಿ ಈ
ದುರ್ದೈವಿಯಾದ ಯುಸುಫನ ಹೆಸರಿಗೆ ಸ್ಥಲವಿದೆಯೆಂಬದನ್ನರಿತು ನಾನು
ಕೃತಾರ್ಥನಾದೆನು. ಇಂದೇನು ನಿಮಿತ್ತ ನನ್ನ ನೆನಪು?”
"ಆಗಲೆ ಬೀಬೀಸಾಹೇಬರು ಮೇಣೆಯಲ್ಲಿ ಕುಳಿಕು ಹೋಗುವಾಗ
ನೀವು ಅವರಿಗೆ ಎದಿರಾದಿರಿ. *ಇದಕ್ಕೂ ಮತ್ತಿನ್ನೆಂಥ ನಿಮಿತ್ತ ಬೇಕು?”
ಎಂದು ಖತೀಜೆಯು ವಿನೋದಗೈದು ನುಡಿದಳು.
ತಡವಿಲ್ಲದೆ ನಾನು ಹೊರಳಿನು. ಖತೀಜೆಯು ರಸೂಲಹಕ್ಕರ ಮಂದಿರ
ವನ್ನು ಮಹಾದ್ವಾರದಿಂದ ಪ್ರವೇಶಿಸಿದಳು. ನಾನು ಉದ್ಯಾನದೊಳಗಿಂದ
ಹಾದು ಬಂದೆನು. ಪ್ರಿಯತಮೆಯಾದ ನೂರ್ ಉನ್ನಿಸ್ಸೆಯು ಔತ್ಸುಕ್ಯದಿಂದ
ನನ್ನ ಮಾರ್ಗಪ್ರತೀಕ್ಷೆಯನ್ನು ಮಾಡುತ್ತೆ ಕುಳಿತಿದ್ದಳು. ಪರಸ್ಪರರ
ದರ್ಶನದಿಂದ ನಮ್ಮಿಬ್ಬರಿಗೂ ಮಿತಿಮೀರಿದ ಹರ್ಷವಾಯಿತೆಂಬದನ್ನು
ಹೇಳಲವಕಶ್ಯವಿಲ್ಲ. ಪ್ರೇಮದಿಂದ ಪರಸ್ಪರರನ್ನು ಕಣ್ಣುತುಂಬಾ ನೋಡಿ
ಕೊಂಡೆವು; ಮಂದಹಾಸಗೈದೆವು; ಹುಚ್ಚುಚ್ಚು ಮಾತಾಡಿದೆವು. ವಿರಹವ್ಯಥೆ
ಯನ್ನು ನೆನೆಸಿ ತೆಕ್ಕೆಬಿದ್ದು ಅತ್ತೆವು, ಆದರೇನು? ರಸೂಲಹಕ್ಕಸಾಹೇಬರು
೧೧೫----------------------------------------------------------------------------
ನಮ್ಮ ವಿಹಾರಕ್ಕೆ ಸಮ್ಮತಿಯನ್ನು ಕೊಡುವದೇ ಇಲ್ಲವೆಂದು ಹಟಿಹಿಡಿದರೆಂಬ
ದುಃಖಕರವಾದ ಸಂಗತಿಯನ್ನು ನೂರ್‌ಉನ್ನಿಸ್ಸೆಯು ಕಣ್ಣಲ್ಲಿ ನೀರು ತಂದು
ನನಗೆ ಹೇಳಿದಳು.
"ಪ್ಯಾರೀ (ಪ್ರಿಯೆ), ಉಪಾಯವಿಲ್ಲದ ಮಾತಿದು. ಇನ್ನು ಮುಂದೆ
ನಾನೀ ಮನೆಯಲ್ಲಿ ಕಾಲಿಡಲಾರೆನು. ಅಪ್ಪಣೆ ಕೊಡಿನ್ನು ಹೋಗುತ್ತೇನೆ.
ನೂರ್‌ಉನ್ನಿಸ್ಸಾ, ನಿನ್ನಂಥ ಸುರಾಂಗನಾಸದೃಶಳಾದ ಪ್ರಮದೆಯ ಪ್ರೇಮಕ್ಕೆ
ನಿನ್ನೀ ದಾಸನು ಪಾತ್ರನಾದ ಸಂಗತಿಯಿಂದಲೇ ಜನ್ಮದ ಸಾಫಲ್ಯವಾಯಿತು.
ಸುಹಾಸಯುತವಾದ ನಿನ್ನ ಮುಖಾರವಿಂದದ ನೆನಹಿನಿಂದಲೇ ನಾನು
ಪ್ರಾಣಧಾರಣಮಾಡಿಕೊಂಡು ಜಗತ್ತಿನಲ್ಲಿರಲು ಸಮರ್ಥನಾದೆನು.” ಎಂದು
ನುಡಿದು ನಾನಾದರೂ ಕಂಬನಿಗಳನ್ನು ಸುರಿದೆನು.
“ಪ್ರಿಯರೆ, ಅಷ್ಟು ನಿರಾಶೆಗೆ ಗುರಿಯಾಗಬೇಡಿರಿ. ಈ ನೂರಉನ್ಲಿಸ್ಸ
ಪ್ರೇಮಸರ್ವಸ್ವ ವೆಲ್ಲ ನಿಮ್ಮದೇ. ಇಂದಿಲ್ಲ ನಾಳಿಗೆ, ನಾಳಿಗಿಲ್ಲ ಇನ್ನು
ಹತ್ತುವರ್ಷಕ್ಕಾದರೂ ನಾನು ನಿಮ್ಮ ಹೆಸ ರಿಲೆ ಹಲ್ಲಿಗೆ ಹಲುಪುಡಿಯನ್ನು
ಹೆಚ್ಚಿಕೊಳ್ಳದೆ ಬಿಡುವದಿಲ್ಲ. ಅನುಕೂಲವಿದ್ದಾಗ ದರ್ಶನಲಾಭವನ್ನು
ಕೊಡುತ್ತಲೇ ಇರಬೇಕು. ನಾಳಿಗೆ ಬರುವಿರಷ್ಟೆ ?"
" ನೂರ್, ಈ ನಿನ್ನ ಅಜ್ಜೆಯನ್ನು ಉಲ್ಲಂಸಿಸಲು ನಾನು ಸಮರ್ಥನೆ?
ನಾಳಿಗೆ ಇದೇ ಸಮಯಕ್ಕೆ ಅವಶ್ಯವಾಗಿ ಬರುವೆನು” ಎಂದು ನುಡಿದು
ನಿರ್ದಯನಾದ ನಾನು ಆ ಕೋಮಲಾಂಗಿಯ ಗಾತ್ರವು ಲಟಲಟ ಎನ್ನುವ
ಹಾಗೆ ಒಳಿತಾಗಿ ಅವಳನ್ನು ಅಪ್ಪಿ ಚುಂಬಿಸಿ ಹೊರಟೆದ್ದು ಮೌನಮಂದಿರಕ್ಕೆ
ಬಂದೆನು. ಸುಮುನೋಹರವಾದ ಮಂದಿರ, ಆಲ್ಹಾದಜನಕವಾದ ಸುಪ್ರಕಾಶ,
ಪ್ರೇಮಮಯವಾದ ಸಲ್ಲಾಪ, ನಯನಾನಂದಕರವಾದ ಪ್ರಣಯಿನಿಯ
ಸುಹಾಸಗಳನ್ನು ಅನುಭವಿಸಿದವನಾದ ನಾನು ಉತ್ಸಾಹಭಂಗಕರವಾದ ಆ
ಅಂಧಂತಮಸ್ಸಿಗೆ ಬಂದಕೂಡಲೆ ನನ್ನ ಎದೆಯೊಡೆದು ನೀರಾಯಿತು.
ಸ್ವರ್ಗದಿಂದ ಒಮ್ಮೆಲೆ ಪಾತಾಲಕ್ಕೆ ಬಂದಂತಾಯಿತು. ಸಮಾಜದಲ್ಲಿರುವವ
ನಾದ ಮನುಷನಿಗ ಏಕಾಂತವಾಸವೇ ಅಪಥ್ಯವು. ಅದರಲ್ಲಿ ಕಣ್ಣು ಕಿಸುರಾದ
ಕೆಟ್ಟನೋಟ, ಉದ್ದೇಶರಹಿತವಾದ ಇರುವಿಕೆ, ಸಂಶಯ. ಮುಂತಾದವುಗಳ
ಸಮವಾಯದಿಂದ ಒಳಿತಾಗಿ ಪೀಡಿತನಾದೆನು. ಅಷ್ಟರಲ್ಲಿ ಕಾಳಪುರುಷನಾದ
೧೧೬ -------------------------------------------------------------------------
ಸಿದ್ದಿಯು ನನ್ನ ಕೈಯಲ್ಲಿ ಒಂದು ಆಜ್ಞಾಪತ್ರವನ್ನು ತಂದುಕೊಟ್ಟನು,
ಕಾರ್ಯಾಲಯಕ್ಕೆ ಬರಬೇಕೆಂದು ಅದರಲ್ಲಿ ಬರೆದಿತ್ತು. ಸಿದ್ದಿಯು ತೋರಿಸಿದ
ಮಂದಿರಕ್ಕೆ ನಾನು ಬಂದೆನು.
ಅಬ್ಬಬ್ಬೆ! ಎಂಥ ಭೀಕರವಾದ ನೋಟವದು. ಅಸ್ಥಿ ರುಂಡಮಾಲೆ,
ರಣಹದ್ದು, ಗೂಗೆ ಮಂತಾದ ಅಶುಭದರ್ಶನವಾದ ಚಿತ್ರಗಳಿಂದ ರೇಖಿತ
ಪಟಗಳು” ಅಲ್ಲಲ್ಲಿ ತೂಗಾಡುತ್ತಿದ್ದವು. ಮನೆಯ ಮೇಲ್ಕಟ್ಟು ನೆಲಗಟ್ಟು
ಗೋಡೆಗಳೆಲ್ಲ ಕರಿಮಣಿಗಳಂತೆ ಕಪ್ಪಾಗಿ ಕಾಣುತ್ತಿದ್ದವು. ನನಗಿಂತಲೂ
ಮುಂಚಿತವಾಗಿ ಅಲ್ಲಿ ನೆರೆದವರ ಮುಖಗಳಲ್ಲಿ ಪ್ರೇತಕಳೆ ಸುರಿಯುತ್ತಿತ್ತು.
"ಘೂ ಘುಕ್ ! ಘೂ ಘುಕ್! "ಎಂಬ ಅಭದ್ರವಾದ ಧ್ವನಿಯಾದ
ಕೂಡಲೆ ಉದ್ದಿಗ್ನರಾಗಿ ಕುಳಿತ ಜನರೆಲ್ಲ ಬೆದರಿ ಬೆಂಡಾಗಿ ಕುಳಿತರು.
ಗಡಿಯಾರಗಳ 'ಅಂದೋಲನಗಳ ಸಪ್ಪಳದಂತೆ ಧಕ್ಕಧಕ್ಕೆಂದು ಹಾರುತ್ತಿರುವ
ಅವರ ಎದೆಗಳ ಡವಡವಿಕೆಯು ಸ್ಪಷ್ಟವಾಗಿ ಕೇಳಬರಹತ್ತಿತು. ಅಕೋ,
ಅದೇನು? ಹಾಗಲಹಣ್ಣಿನಂತೆ ಕಾಣುವ ಮುಪ್ಪಿನ ಮನುಷ್ಯನ ಹಸ್ತವು
ತೆರೆಯಲ್ಲಿ ಹಾದು ಹೊರಬಿದ್ಡಿತು: ಆ ಹಸ್ತದಲ್ಲಿ ಇಪ್ಪತ್ತು ಇಪ್ಪತ್ತೈದು
ಕಾಗದದ ಓಲೆಗಳಿದ್ದವು. ನಾವೆಲ್ಲರೂ ಒಂದೊಂದು ಓಲೆಯನ್ನು ತೆಗೆದು
ಕೊಳ್ಳ ತಕ್ಕದದೆಂದು ಅಜ್ಞಾಪತ್ರದಲ್ಲಿ ಬರೆದಿತ್ತು. ಆಮೇರೆಗೆ ನಾವು ತೆಗೆದು
ಕೊಂಡೆವು. ಓಲೆಗಳು ಚಿಕ್ಕದೊಡ್ಡವಾಗಿದ್ದವು. ಎಲ್ಲಕ್ಕೂ ಚಿಕ್ಕ ಓಲೆಯನ್ನೂ
ಹಿರಿದುಕೊಂಡವನಾದ ದುದೈವಿಯೊಬ್ಬನು ಮಾತ್ರ ಆ ಮಂದಿರದಲ್ಲಿ
ಉಳಿದನು. ಉಳಿದತರಾದ ನಾವೆಲ್ಲರೂ ಹೊರಗೆ ಬಂದೆವು. ಹೊರಗೆ
ಬಂದವರು " ಬದುಕೆಲೆ ಜೀವವೆ "ಎಂದು ಸಮಾಧಾನದ ಉಸುರ್ಗರೆದು
ತಮ್ಮತಮ್ಮ ಕೋಣೆಗೆ ಹೋದರು. ಮೈನೋದ್ದೀನ ಕಾದ್ರಿಯು ಕಣ್ಣು ಸನ್ನೆ
ಮಾಡಿ ನನ್ನನ್ನು ಕರೆದನಾದ್ದರಿಂದ ನಾನು ಅವನೊಡನೆ ಹೊರಬಿದ್ದು ರಾಜ
ಮಾರ್ಗಕ್ಕೆ ಬಂದೆನು.
"ಕಾದ್ರಿ; ಏನು ಚಮತ್ಕಾರವಿದು? * ಎಂದು ನಾನು ಸಂಶಯಾಕುಲ
ನಾಗಿ ಕೇಳಿದೆನು.
“ ಈ ಕ್ರಮವು ಪ್ರತಿ ಶುಕ್ರವಾರವೂ ನಡೆಯುತ್ತಲಿದೆ. ಎಲ್ಲಕ್ಕೂ
ಚಿಕ್ಕದಾದ ಓಲೆಯನ್ನು ಹಿಡಿದನನನ್ನು ಅವರು ಅಲ್ಲಿ ಕುಳ್ಳಿರಿಸಿಕೊಂಡು
೧೧೭----------------------------------------------------------------------------
ಹೊರಗೆ ಬಿಡುವದಿಲ್ಲ. ಮುಂದೆ ನಾವು ಅವನನ್ನು ಕಾಣುವದೂ ಇಲ್ಲ.”
" ಅಂದರೆ! "
" ಅಂದರೇನು ? ಅವನವಸ್ಥೆ ಏನಾಗುವದೋ ತಿಳಿಯುವದಿಲ್ಲ. ”
ಎಂದು ಕಾದ್ರಿಯು ವ್ಯಸನದಿಂದ ಹೇಳಿದನು.
" ಅವರು ಅವನ ಕೊಲೆ ಮಾಡುವದಿಲ್ಲವಷ್ಟೆ?” ಎಂದು ನಾನು
ಸಾಧ್ವಸದಿಂದ ಕೇಳಿದೆನು.
"" ಕೊಲೆಯಾಗುವ ಲಕ್ಷಣವಿಲ್ಲ. ಆದರೆ ಅವನು ಹೇಗೆ ಇಲ್ಲದಂತಾಗು
ವನೋ ತಿಳಿಯುವದಿಲ್ಲ.''
" ಹಾಗಾದರೆ ನಾನು ಈ ಮನೆಯಿಂದ ಕಾಲ್ದೆಗೆದು ಓಡಿಹೋಗುವದು
ಒಳಿತಲ್ಲವೆ? * ಎಂದು ಸೂಚಿಸಿದೆನು.
""ಆದು ಮಾತ್ರ ಆಗದ ಮಾತು. ಓಡಿಹೋದವನನ್ನು ಇಲ್ಲಿಯ
ಪಾಳತಿಗಾರರು ಆಗಲೇ ಹಿಡಿತಂದು ಬಿಡುವರು. ಮುಂದೆ ಪಾಪ ಆ ಓಡಿ
ಹೋದವನನ್ನು ಇಲ್ಲಿಯ ಅಧಿಕಾರಗಳು ಬಹುಪರಿಯಾಗಿ ಬಾಧಿಸುವರು.
ಮೂರು ದಿವಸ ಕೂಳು ನೀರು ಕೊಡದಲೆ ಅವನನ್ನು ಬಾರಕೋಲಿನಿಂದ
ಒಳಿತಾಗಿ ಹೊಡೆಯುವವರು. ಹೀಗೆ ಒಂದಾನರ್ತಿ ಶಿಕ್ಷೆಗೆ ಗುರಿಯಾದವನು
ಮತ್ತೆ ಅದೇ ಅಪರಾಧವನ್ನು ಮಾಡಿದ್ದಾದರೆ ಅವನ ಕಣ್ಣು ಕಳೆಯಲಿ,
ಕೈಕಾಲು ಮುರಿಯಲಿ, ಏನಾದರೂ ಮಾಡಿ ಅವನನ್ನು ಊನನನ್ನಾಗಿ ಮಾಡಿ
ಬಿಟ್ಟು ಬಿಡುತ್ತಾರೆ.
ನಾನು ನಿರಾಶೆಯಿಂದ ಉಸುರ್ಗರೆದು " ಕಾದ್ರಿ, ಈ ವಿಚಾರ ಸಾಕು.
ದಿಲ್‌ಆರಾಮ ಮೆಹೆಲಿಗೆ ಹೋಗಿ ಈ ಖಿನ್ನತೆಯನ್ನು ಕಳಕೊಂಡು ಆರಾಮ
ವನ್ನು ಹೊಂದೋಣ ” ಎಂದು ಹೇಳಿ ನಾನು ಆ ಮಿತ್ರನನ್ನು ಕರಕೊಂಡು
ದಿಲ್‌ಆರಾಮ ಮೆಹಿಲಿಗೆ ಹೋದೆನು.
ಮರುದಿವಸ ನಾನು ಮತ್ತೆ ನನ್ನ ಪ್ರಿಯತಮೆಯಾದ ನೂರ್ ಉನ್ನಿಸ್ಸೆಯ
ಮಂದಿರಕ್ಕೆ ನಡೆದೆನು. ಆ ಸುಂದರಿಯು ಸಂಕೇತದ ಮೇರೆಗೆ ನನ್ನ ಮಾರ್ಗ
ಪ್ರತೀಕ್ಷೆ ಮಾಡುತ್ತಲೇ ಇದ್ದಳು. ನನ್ನ ಕಂಡಾಕ್ಷಣವೇ ಅವಳು ಉಲ್ಲಾಸ
ದಿಂದೆದ್ದು ಮಂದಹಾಸಗೈದು ""ಮನೋಹರಾ ಇದು ಪ್ರೇಮದ ಲಕ್ಷಣವೇ?
ಪ್ರಿಯಾ, ಸಂದರ್ಶನೋತ್ಸುಕರಾದವರು ಸಂಕೇತ ಸಮಯಕ್ಕಿಂತಲೂ
೧೧೮ ---------------------------------------------------------------------
ಎಷ್ಟೋ ಹೊತ್ತು ಮೊದಲಿಗೇ ಬಂದು ಬಾಗಿಲವನ್ನು ಕಾದುಕೊಂಡು ನಿಂತಿರ
ಬೇಕು. ನೀವು ಗಳಿಗೆ ಹೊತ್ತು ತಡಮಾಡಿ ಹೇಗೆ ಬಂದಿರಿ ಹೇಳಿರಿ!”
ಎಂದು ಬಹು ಲೀಲೆಯಿಂದ ಕೇಳಿದಳು.
“ ಪ್ರಿಯೆ: ಅಪರಾಧವಂತೂ ದೊಡ್ಡದಾಗಿದೆ. ಇದಕ್ಕೆ ಹಗಲಿರುಳು
ನಿನ್ನ ಪಾದಸೇವೆಯನ್ನು ಮಾಡಿಕೊಂಡಿರುವಂತೆ ಈ ದ್ರೋಹಿಗೆ ಶಿಕ್ಷೆಯನ್ನು
ವಿಧಿಸು, * ಎಂದು ನುಡಿದು ನಾನು ಆ ಇಂದೀವರೇಕ್ಷಣೆಯ ಪ್ರೇಮಪೂರಿತ
ವಾದ ಕಟಾಕ್ಷಗಳ ಲಾಲಿತ್ಯವನ್ನು ಔತ್ಸುಕ್ಯದಿಂದ ನೋಡುತ್ತೆ ನಿಂತೆನು.
" ಯೂಸುಫ, ಸತಿ ನನ್ನ ಪ್ರಾಣಕ್ಕಿಂತಲೂ ಪ್ರಿ ಯರಾಗಿದ್ದರೂ
ನಿಮ್ಮ ಸುಳ್ಳು ಮಾತುಗಳನ್ನು ನಾನು ಕೇಳಲಾರೆನು. ಕಥೆ ಕಾದಂಬರಿ
ಕಾವ್ಯ ನಾಟಕಗಳಲ್ಲಿ ನಾಯಕನು ನಾಯಿಕೆಯ ದಾಸನಾಗುವೆನೆಂದು ಹೇಳಿ
ಕೊಂಡು ಅವಳ ಪ್ರೇಮವನ್ನು ಅಪಹರಿಸಿದ ಬಳಿಕ ಅವನು ಆ ಮುಗ್ಧೆಯನ್ನು
ನಿಜವಾಗಿ ತೊತ್ತಿನಂತೆ ನಡಿಸಿಕೊಂಡ ಸಂಗತಿಗಳನ್ನು ನೀವು ಓದಿ ಕೇಳಿರ
ಬಹುದು, ನಿಮ್ಮ ತೊತ್ತುಗಳಾಗಿ ನಾವು ಕೂಡಾ ನಡಕೊಳ್ಳಲಿಕ್ಕೆ ಒಪ್ಪಿ
ಕೊಂಡಿರುತ್ತೀವೆ ಸರಿ. ಆದರೆ ನಿಮ್ಮ ವಚನದ ಸತ್ಯತೆಯೆಲ್ಲಿ ? "
" ಪ್ರಿಯೆ, ಪ್ರಮಾಣವನ್ನು ತೋರಿಸಿ ಈಗಲೆ ನಿನ್ನ ಬಾಯಿ ಕಟ್ಟು
ವೆನು. *
" ಅಗಲಿ.”
"ಹಡೆದ ತಾಯಿಯು ಮಗನ ಮೇಲಿ ಸುಳ್ಳು ಹುಟ್ಟಿಸಿಕೊಂಡು
ಹೇಳುವದಿಲ್ಲವಷ್ಟೆ ? ''
" ಇಲ್ಲ. ಈ ಮಾತು ಎಂದಿಗಾದೀತು?'' ಎಂದು ನೂರ್ ಉನ್ನಿ
ಸ್ಸೆಯು ನನ್ನ ಪ್ರಮಾಣವು ಸುಳ್ಳಾಗುವದೆಂಬ ನಂಬಿಗೆಯಿಂದ ಪರಿಹಾಸಗೈದು
ನುಡಿದಳು.
" ತಮ್ಮ ಮಕ್ಕಳು ಹೆಂಡರ ಗುಲಾಮ (ದಾಸ) ರಾಗಿರುವರೆಂದು ಎಲ್ಲ
ತಾಯಂದಿರು ದೂರಿಡುತ್ತಿರುವದು ನಿಜವೊ ಸಟೆಯೊ?"
ನೂರ್‌ಉನ್ನಿಸ್ಸೆಯು ಲಜ್ಜಾವನತಮುಖಿಯಾಗಿ ಉತ್ತರವನ್ನೀಯದೆ
ನಿಂತುಕೊಂಡಳು.
" ಶುಷ್ಕವಾದ ವಾದವಿದು ನೂರ್! ಈ ವಾದವನ್ನು ನಾನು ಗೆದ್ದರೂ
೧೧೯ ------------------------------------------------------------------------
ನಿನ್ನ ದಾಸನಾಗುವ ಭಾಗ್ಯವೇ ನನ್ನದಾಗಿಲ್ಲ. '
ಲಜ್ಜಾನಮ್ರವಾಗಿರುವ ಆ ಚಾರುವದನೆಯ ಮುಖವು ಈರ್ಷೆಯಿಂದ
ಉದ್ರಿಕ್ತವಾಯಿತು. ಆವಳು ನನ್ನ ಮುಖವನ್ನು ಕಡೆಗಣ್ಣಿನಿಂದ ನೋಡಿ
" ಯಾಕೆ, ನಿಮ್ಮ ಪ್ರೇಮವು ಸುಳ್ಫಾದದ್ಲೊ ? '' ಎಂದು ಕೇಳಿದಳು.
" ನನ್ನ ಪ್ರೇಮವು ನಿಜವಾದದ್ದೆಂದು ನೀನು ಸಂಪೂರ್ಣವಾಗಿ ಅರಿ
ತಿರುವಿಯಲ್ಲವೆ ಪ್ರಿಯೆ?”
" ಇರಲಿ, ಈ ವಿನೋದ ಸಾಕು. ನಿಮಗೊಂದು ಸಮಾಚಾರವನ್ನು
ಹೇಳುತ್ತೇನೆ. ತಂದೆಯವರ ಆಸ್ತಿಯಸ್ಸಿ ಒಂದು ಕಾಸು ಕೂಡಾ ನಾನು
ಬೇಡದಿದ್ದರೆ ಅವರು ನಮ್ಮ ವಿವಾಹಕ್ಕೆ ಸಮ್ಮತಿಸುವರಂತೆ. ನಿಮ್ಮ
ಅಭಿಪ್ರಾಯವೇನು?"
" ನೂರ್ ಪರಮಾವಧಿಯ ಸಂತೋಸದ ವಾರ್ತೆಯಿದು!'' ಎಂದು
ನಾನು ಒಳ್ಳೇ ಸ್ಫೂರ್ತಿಯಿಂದ ನುಡಿದೆನು.
" ನಾನಾದರೂ ಇಂದೆಯೇ ವಿವಾಹಕ್ಕೆ ಸಿದ್ದಳು. ನಿಮ್ಮಲ್ಲಿ ಧನಾಂಶ
ವಿಲ್ಲದಿದ್ದರೂ ನಿಮ್ಮೊಡನೆ ಬಡತನವನ್ನು ಸಹಿಸಿ ಸುಖಿಯಾಗಿರುವೆನು. ಆದರೆ
ನನ್ನ ಪ್ರಾಣದೊಡೆಯರು ಸಂಸಾರಯಾಕತ್ರೆಗಾಗಿ ದುಡಿಯಬೇಕಾಗುವದೆಂಬ
ಕಲ್ಪನೆಯು ಕೂಡಾ ನನಗೆ ಅಸಹ್ಯವಾಗಿದೆ. ಯುಸುಫ, ನೀವು ಇನ್ನೊಂದು
ವರ್ಷಾರುತಿಂಗಳು ಹೇಗಾದರೂ ಮಾಡಿ ವಿರಹವನ್ನು ಸಹಿಸಬಲ್ಲಿರಾದರೆ
ತಂದೆಯವರ ಮನಸ್ಸನ್ನು ತಿರುಗಿಸಬಲ್ಲೆನೆಂದು ನಂಬುತ್ತೇನೆ. ಯುಸುಫನ
ಹೆಸರೇ ಬೇಡೆಂದವರು ಈಗ ನಮ್ಮ ವಿವಾಹಕ್ಕೆ ಸಮ್ಮತಿಸಿರುನರು. ನಾಳಿಗೆ
ಅವರ ವಿಚಾರನೇನಾಗುವದೋ ಯಾರು ಬಲ್ಲರು? "
"ಸುವಿಚಾರನಿದು ಪ್ರಿಯೆ! ನೀನು ನನ್ನೊಡನೆ ದಾರಿದ್ರ್ಯದಲ್ಲಿ ಕೂಡ
ಇರಲು ಸಿದ್ಧಳಾಗಿರುವದನ್ನು ಕೇಳಿ ನಾನು ಕೃತಾರ್ಥನಾದೆನು. ಆದರೆ
ಕುಸುಮಕೋಮಲೆಖಾದ ನಿನ್ನನ್ನು ಸುಖಸಂಸತ್ತುಗಳೊಳಗಿನಿಂದ ನಾನೀ
ಗಲೆ ಎತ್ತಿಕೊಂಡು ಹೋಗಿ ದಾರಿದ್ರ್ಯದ ಗಾಣಕ್ಕೆ ಈಡುಮಾಡಲಿಚ್ಛಿಸುವ
ದಿಲ್ಲ. ವರ್ಷಾರುತಿಂಗಳೇಕೆ ಹತ್ತು ವರ್ಷಗಳವರೆಗಾದರೂ ನಾನು ವಿರಹಾಗ್ನಿ
ಯನ್ನು ನುಂಗಿಕೊಂಡಿರುನೆನು, ನಿನ್ನ ಪ್ರೇನುವೊಂದಿದ್ದರೆ ಸಾಕು
ನಾನಿನ್ನು ಉದ್ಯೋಗಿಯಾಗಿ ವಿಶ್ವಪ್ರಯತ್ನವನ್ನು ಮಾಡಿ ಧನಸಂಪಾದನ
೧೨೦ --------------------------------------------------------------------------------
ವನ್ನು ಮಾಡುನೆನು. ಅಷ್ಟರಲ್ಲಿ ನಿಮ್ಮ ತಂದೆಯವರು ನಮಗೆ ಅನುಕೂಲ
ರಾದರೆ ಒಳಿತು, ಇಲ್ಲದಿದ್ದರೂ ನಾನು ನನ್ನೀ ಪ್ರಿಯತಮೆಗೆ ದಾರಿದದ್ರ್ಯದ
ಪೀಡೆಯಾಗದಂತೆ ಸಾಧನಗಳನ್ನು ಸಂಪಾದಿಸಿಡುನೆನು. ''
" ಶಾಚಾಸ್ ! ಧೀರರಂತೆ ಮಾತಾಡಿದಿರಿ. ನನ್ನ ಪ್ರಾಣಸ್ರಿಯರಲ್ಲಿ
ಇದೊಂದು ಅವತೌಲ್ಕವಾದ ಗುಣವಿರುವದನ್ನು ಕಂಡು ನನ್ನಲ್ಲಿ ಅಭಿಮಾನವು
ಹೆಚ್ಚಿತು. ನಿಮ್ಮಂಥ ಚತುರಸ್ರ ಬುದ್ಧಿಶಾಲಿಗಳಿಗೆ ಯಾವದು ತಾನೇ
ಅಸಾಧ್ಯವು ?"
ಹೀಗೆ ಕೆಲಹೊತ್ತು ನಾನು ಪ್ರಿಯತಮೆಯೊಡನೆ ಮಾತುಕತೆಯಾಡಿ
ಪ್ರ ಸಸ್ನಮನಸ್ಸಿನವನಾಗಿ ಮತ್ತೆ ಕಾಡಿಗೆಯ ಮಡುವಿನಂತಿರುವ ನನ್ನ
ನಿವಾಸಕ್ಕೆ ಬಂದೆನು..
* * * *
ನಾಳೆ ಮತ್ತೆ ಶುಕ್ರವಾರ, ಮೊನ್ನಿನ ಶುಕ್ರವಾರದ ದಿವಸ ಆ ಚಮ
ತ್ಕಾರವಾದ ಕೈಯಿಂದ ಚಿಕ್ಕದಾದ ಕಾಗದದ ಪರಿಕೆಯನ್ನು ಸೆಳಕೊಂಡವ
ನಾದ ಅಬ್ದುಲ್ ರಹಿಮಾನನ ಅವಸ್ಥೆ ಏನಾಯಿತೋ ತಿಳಿಯಲಿಲ್ಲ. ನಾಳೆ
ಅಂಥದೇ ಚಿಕ್ಕ ಸರಿಕೆಯು ಯಾರ ದೈವಕ್ಕೆ ಬರುವದೋ ಎಂಬ ಚಿಂತೆಯು
ಮೌನಮಂದಿರದ ಅತಿಥಿವೃಂದಕ್ಕೆಲ್ಲ ತಟ್ಟಿತು, ಭೋಜನ ತೀರಿಸಿಕೊಂಡು
ನಿತ್ಯದಂತೆ ನಾವೆಲ್ಲರೂ ವಾಚನಾಲಯಕ್ಕೆ ಬಂದೆವು. ಜನರೆಲ್ಲರೂ ತಮತಮಗೆ
ಇಷ್ಟವಾದ ಪತ್ರಗಳನ್ನು ತೆಗೆದುಕೊಂಡು ಓದತೊಡಗಿದರು. "ಪಂಚ"
ಎಂಬ ವಿಚಿತ್ರವಾದ ಚಿತ್ರಗಳುಳ್ಳ ಮಾಸಪತ್ರಿಕೆಯನ್ನು ತೆಗೆದು ಚಿತ್ರಗಳನ್ನು
ನೋಡುತ್ತಿದ್ದನು. ಮೈನೋದ್ದೀನ ಕಾದ್ರಿಯು ದೊಡ್ಡದೊಂದು ಇಂಗ್ಲಿಶ್
ದೈನಿಕ ಪತ್ರವನ್ನು ತೆಗೆದುಕೊಂಡು ಓದು ಓದುತ್ತಿ ರುವಾಗಲೆ " ಆಃಹಾಃ | '
ಎಂದು ಉದ್ದಾರ ತೆಗೆದನು. ಏನು ವಿಪರೀತವೆಂದು ಎಲ್ಲರೂ ತಮ್ಮ ವಾಚನ
ವನ್ನು ಬಿಟ್ಟು ಕಾದ್ರಿಯ ಮುಖವನ್ನು ನೋಡಿದರು. ಮೈನೋದ್ದೀನನ
ಮುಖದಲ್ಲಿ ದುಃಖದ ವ್ಯಥೆಯು ವ್ಯಕ್ತವಾಗಿ ತೋರುತ್ತಿತ್ತು. ಅವನು
ಆ ಪತ್ರದಲ್ಲಿಯದೊಂದು ಲೇಖನನ್ನು ತೋರಿಸಿ ನನಗೆ ಓದೆಂದು
ಸೂಚಿಸಿದನು.
೧೨೧ ------------------------------------------------------------------------
ಭಯಂಕರವಾದ ಸಾಹಸದ ಕೃತ್ಯವು.
ಸೋದಾಗೀರಜಿಯವರ ಕೊಲೆ.
" ಇಲ್ಲಿಯ ಪ್ರಖ್ಯಾತ ಧನವಂತರಾದೆ ಗೋಸಾಯಿ ಸೋದಾಗೀರಜೀ
ಯವರು ನಿನ್ನೆ ಮಧ್ಯಾಹ್ನದಲ್ಲಿ ತಮ್ಮ ಅಂಗಡಿಯಿಂದ ಮನೆಗೆ ಬಂದರು,
ಗೋಸಾಯಿ ಮಹಾರಾಜರವರು ತಮ್ಮ ರಥದಿಂದಿಳಿದು ಮನೆಯ ತಲೆ-
ಬಾಗಿಲಕ್ಕೆ ಬರುವದರೊಳಗಾಗಿಯೇ ಆಬದುಲ್ ರಹಿಮಾನನೆಂಬ ತರುಣನು
ಪಿಸ್ತೂಲು ಹಾರಿಸಿ ಅವರ ವಧಮಾಡಿದನು. ಗುಂಡು ಎದೆಗೆ ತಾಗುವ
ದೊಂದೇ ತಡ, ಗೋಸಾಯಿಯವರು ಸತ್ತೇಬಿದ್ದರು. ಮತ್ತೊಂದು ಗುಂಡು
ಹಾರಿಸಿಕೊಂಡು ಕೊಲೆಗಾರನಾದರೂ ಅಲ್ಲಿಯೇ ಪ್ರೇತನಾಗಿ ಬಿದ್ದನು.
ಅಬದುಲ್ ರಹಿಮಾನಫ ಜೇಬಿನಲ್ಲಿ ತಾನೇಕೆ ಕೊಲೆ ಮಾಡಲೆಸಗಿದನೆಂಬ
ಉದ್ಜೇಶವುಳ್ಳ ಲೇಖವಿತ್ತು. " ಸೋದಾಗೀರನು ತಗಲಿನ ವ್ಯಾಪಾರದವನು;
ಅವನು ಹೊಲೆಬಡ್ಡಿಯನ್ನೆತ್ತಿ ಬಡಜನರ ಮನೆಮಾರುಗಳನ್ನು ಮಾರಿಸು
ವನು; ವಿಶ್ವಾಸದ ಇಡುಗಂಟುಗಳನ್ನು ನುಂಗಿ ನೀರು ಕುಡಿಯುವನು; ಖೊಟ್ಟಿ
ಕಾಗದಗಳನ್ನು ಹುಟ್ಟಿಸಿ ಎಷ್ಟೋ ಜನರ ಆಸ್ತಿಗಳನ್ನು ಎತ್ತಿ ಹಾಕಿರುವನು.
ಇವನ ಪೀಡೆಗಾಗಿ ಅನೇಕ ಜನರು ಉರುಲು ಹಾಕಿಕೊಂಡರು, ಅನೇಕರು
ವಿಷ ತಿಂದು ಸತ್ತುಹೋದರು. ಇನನೊಬ್ಬನನ್ನು ಕೊಂದರೆ ಅನೇಕರ
ಪ್ರಾಣಗಳನ್ನು ಉಳಿಸಿದ ಶ್ರೇಯಸ್ಸು ಪ್ರಾಪ್ತವಾಗುವದು. ಇತ್ಯಾದಿ
ಇತ್ಯಾದಿ.”
ಅದೇ ಪತ್ರದಲ್ಲಿ ಅಬದುಲ್‌ರಹಿಮಾನನ ಚಿತ್ರವನ್ನಾದರೂ ಕೊಟ್ಟಿ
ದ್ದರು, ಇವನೇ ಹೋದ ಶುಕ್ರವಾರ ದಿವಸ ಕಿರಿದಾದ ಕಾಗದದ ಪರಿಕೆ
ಯನ್ನು ಹಿರಿದುಕೊಂಡು ದುರವಸ್ಥೆಯನ್ನು ಹೊಂದಿದವನು. ಈ ಕೊಲೆಗೂ
ನಮ್ಮ ಮೌನಮಂದಿರದ ಸಂಸ್ಥೆಗೂ ಏನಾನಿರೂ ಸಂಬಂಧವಿರುವದೇನು?
ಹೃದಯಭೇದಕವಾದ ಕಲ್ಪನೆಯಿದು! ನನ್ನ ಮೇಲೆ ಇಂಥ ಪರ್ಯಾಯ
ಬಂದರೆ ನಾನೇನು ಮಾಡಲಿ? ದೇವರೆ, ಎಲ್ಲಿಯ ಫಕೀರನನ್ನು ತಂದು
ಹಾಕಿದಿ ನನಗೆ.
ಮರುದಿವಸವೇ ಶುಕ್ರವಾರ, ಮತ್ತೆ ನಾವೆಲ್ಲರೂ ಯಮಸದನ
ದಂತಿರುವ ಆ ಮನೆಗೆ ಹೋದೆವು. ಅದೇ ದುರ್ದರ್ಶನ, ಅದೇ ಉದ್ವಿಗ್ನತೆ,
೧೨೨ -----------------------------------------------------------------------
ಆದೇ ದುಗುದುಗಿ! ಅದೋ ಘೂಕಧ್ವನಿಯಾಯಿತು. ಅಶುಭವಾದ ಆ
ಜರಾಮೂರ್ತಿಯ ಕ್ಷೀಣವಾದ ಹಸ್ತವು ಇನ್ನೀಗಲೆ ಪ್ರಕಟವಾಗುವದೆಂದು
ನಾವೆಲ್ಲರೂ ಹೌಹಾರಿ ಕುಳಿತೆವು. ಭರ್ರನೆ ತೆರೆಯನ್ನು ಓರೆಗೆ ಮಾಡಿ ಆ
ಹಸ್ತವು ಚಾಚಿಕೊಂಡು ನಿಂತಿತು. ಹೋದ ಸಾಕಿ ಅಬದುಲ್‌ರಹಿಮಾನನು
ಎಲ್ಲರಿಗಿಂತ ಮುಂಚಿತವಾಗಿ ಕಾಗದದ ಚೀಟಿಯನ್ನು ಹಿಡಿದನಾದ್ದರಿಂದ ಈ
ಸಾರೆ ನಾನು ಹಾಗೆ ಮಾಡಬಾರದದೆಂದೆಣಿಸಿ ಹತ್ತೆಂಟು ಜನರು ಚೀಟಿಗಳನ್ನು
ತೆಗೆದುಕೊಂಡನಂತರನಾನು ಕೈ ಹಾಕಿದೆನು. ಹಣೇಬರಹ! ಬಹು ಚಿಕ್ಕ
ದಾದ ಚೀಟಿಯ ನನ್ನ ಕೈಗೆ ಸಿಕ್ಕಿತು, ಕೈಕಾಲುಗಳು ತಣ್ಣಗಾದವು. ತಲೆ
ದಿಮ್ಮೆಂದು ಹೊಡೆಯಲಾರಂಭಿಸಿತು. ಬಾಯಿ ಒಣಗಿ ಸಂಡಿಗೆಯಾಯಿತು.
ಉಶ್ಶೆಂದು ಅಲ್ಲಿಯೇ ಇಟ್ಟಿರುವ ಆರಾಮ ಕುರ್ಚಿಯಲ್ಲಿ ಬಿದ್ದು ಕೊಂಡೆನು.
ಎಲ್ಲರೂ ಹೊರಟುಹೋದರು, ಉಳಿದವರಿಗೆ ನನ್ನ ವಿಷಯವಾಗಿ ಕನಿಕರ
ಬಂದಿತೋ ಇಲ್ಲವೋ ಹೇಳಲಾರೆನು. ಸಯ್ಯದ ಮೈನೋದ್ದೀನ ಕಾದ್ರಿಯು
ಮಾತ್ರ ನನ್ನನ್ನು ನೋಡಿ ಕಣ್ಣುತುಂಬಾ ನೀರು ತಂದು ಅನಿರ್ವಾಹಕ್ಕಾಗಿ
ಹೊರಟುಹೋದನು. ಬಳಿಕ ಸೇವಕನೊಬ್ಬನು ಬಂದ್ಕು ನಿಮ್ಮನ್ನು ಶಾಸೂಫಿ
ಕಲಂದರ ಸಾಹೇಬರು ಕರೆದಿದ್ದಾರೆ. ಹೀಗೆ ದಯಮಾಡಬೆಸಕೆಂದು ಹೇಳಿ
ನನ್ನನ್ನು ಕರೆದೊಯ್ದನು,
ಕಲಂದರನು ಎಪ್ಪತ್ತೈದು ಎಂಬತ್ತು ವರ್ಷದ ಮುದುಕನು,
ಮುಕ್ಕಾಲು ಮೊಳ ಉದ್ದವಾಗಿರುವ ಅವನ ಗಡ್ಡವೂ ಮೀಸೆಯ ಜುಡುಪೂ
ಗಂಜಿಯ ಆರಿವೆಯಂತೆ ಶುಭ್ರವಾಗಿದ್ದವು ಹಾವಿನ ಕಣ್ಣಿ ನಂತಿರುವ ಅವನ
ಕಣ್ಣು ಗಳು ಶೇಜಃಪುಂಜವಾಗಿದ್ದು ದೃಷ್ಟಿಯಲ್ಲಿ ಮಂದತೆಯು ಎಷ್ಟು
ಮಾತ್ರವೂ ಇದ್ದಿಲ್ಲ. ಈಳಿಗೆಯಂತಿರುವ ಅವನ ಮೂಗು ಓಕಳಿಯಲ್ಲಿ ಎದ್ದಿ
ಇಟ್ಟಂತೆ ಕೆಂಪಗಾಗಿತ್ತು. ಶೀರವಾಗಿರುವ ಅವನ ಮೋರೆಯನ್ನೂ ತಿಳುವಾದ
ತುಟಿಗಳನ್ನೂ ಇಳಿಬಿದ್ದಿರುವ ಹುಬ್ಬುಗಳನ್ನೂ ನೋಡಲಾಗಿ, ಕಲಂದರನು
ಕಠೋರನೂ ದೀರ್ಫದ್ವೇಷಿಯೂ ಆಗಿದ್ದನೆಂಬದರಲ್ಲಿ ಸಂದೇಹವಿಲ್ಲ,
ನನ್ನನ್ನು ಕಾಣುತ್ತಲೆ ಶಾಸುಧೀ ಸಾಹೇಬರು ಮಂದಹಾಸಗೈದು
ತಲೆದೊಗಿ " ಬನ್ನಿರಿ ನವಾಬಸಾಹೇಬ, ಏನು ಸಮಾಚಾರ? ''ಎಂದು ಕೇಳಿ,
"ಯಾಕೆ, ಮುಖವೇಕೋ ಮ್ಲಾನವಾಗಿ ತೋರುತ್ತದೆ? ಸಣ್ಣ ಚೀಟಿಯನು
೧೨೩---------------------------------------------------------------------------
ಹಿಡುಕೊಂಡನರೆಲ್ಲರೂ ಏನೋ ಒಂದು ಸಂಶಯದಿಂದ ಇಂಥ ಹೀನ
ಮುಖನ್ನೆ ತಳೆದಿರುತ್ತಾ ಕೆ. ನಾವಂತೂ ಅವರ ಕುಲಶೀಲ ವಿದ್ಯಾರ್ಚನಾದಿ
ಗಳನ್ನು ನೋಡಿ ಅವರಿಗೆ ಉಚಿತವಾದ ಕೆಲಸಗಳನ್ನೇ ಹೇಳುತತ್ತೇವೆ " ಎಂದು
ನುಡಿದರು. ಉತ್ತರವನ್ನು ಕೊಡಲರಿಯದ ನಾನು ಸುಮ್ಮನೆ ನಿಂತೆನು.
ಬಳಿಕವನು ಸಾವುಕಾರರ ದುರ್ನೀತಿಯನ್ನೂ ಅವರಿಂದ ಬಡಜನರಿ
ಗುಂಬಾಗುವ ಹಾನಿಯನ್ನೂ ಕುರಿತು ಒಂದು ವ್ಯಾಖ್ಯಾನವನ್ನೇ ಕೊಟ್ಟನು.
ಕಲಂದರನು ಬುದ್ಧಿವನಂತನೂ, ವ್ಯವಹಾರಚತುರನೂ, ವಾಗ್ಮಿಯೂ ಆಗಿದ್ದ
ನೆಂದು ನಾನು ಕಂಡೆನು. ಅವನ ವ್ಯಾಖ್ಯಾನದಲ್ಲಿಯೂ ದೋಷವಿದ್ದಂತೆ
ಕಾಣಲಿಲ್ಲಾದ್ದರಿಂದ ಅವನ ಅಭಿಪ್ರಾಯ ನನಗೆ ಗ್ರಾಹ್ಯವಾಗಿ ತೋರಿತು.
ತನ್ನ ಕೋಟಿಕ್ರ ಮಗಳ ಪರಿಣಾಮವು ಯಥೇಚ್ಛಿತವಾಗಿ ನನ್ನ ಮನಸ್ಸಿನ
ಮೇಲೆ ಆಯಿತೆಂದು ಕಂಡಕೂಡಲೆ ಅವನು ನನ್ನನ್ನು ಮುಂದಕ್ಕೆ ಕರೆದು
ಕುಳ್ಳಿ ರಿಸಿಕೊಂಡು "" ತರುಣನೆ, ನೀನು ನಿಶ್ಚಯತ ಸ್ಪಭಾವನವನಾಗಿ
ತೋರುವಿ. ಕುಕರ್ಮಗಳನ್ನು ಗರ್ಹಿಸುವವನೂ ಆಗಿರುವಿಯೆಂಬದಕ್ಕೆ
ಸಂದೇಹವಿಲ್ಲ. ಮಹತ್ವದ ಪರಹಿತವನ್ನು ಸಾಧಿಸಲು ನಿನ್ನಂಥ ಸತ್ವಶಾಲಿ
ಗಳು ಸ್ವಜೀವಿತದ ಅಭಿರಾಷೆಯನ್ನಿಡಲಾರರು. ಮನೆಯಲ್ಲಿ ದೊಡ್ಡ ಸಮಾ
ರಂಭವಿರಲಿ, ಆಪ್ತರಿಷ್ಟರು ಬಂದಿರಲಿ, ಆಂಥ ಸಮಯವನ್ನು ಸಾಧಿಸಿ ಸಾವು
ಕಾರನು ನಿನ್ನ ಮರ್ಯಾದೆಯನ್ನು ತೆಗೆದುಕೊಳ್ಳುವದಕ್ಕಾಗಿ ಮನೆಯಲ್ಲಿಯ
ಕೊಡ-ಗಂಗಾಳಗಳನ್ನು, ಮಕ್ಕಳ ಮೈಮೇಲಿನ ಚಿಕ್ಕಚಿಕ್ಕ ಆಭರಣಗಳನ್ನು
ಬಲಾತ್ಕಾರದಿಂದ ಎತ್ತಕೊಂಡು ಹೋದರೆ ಆ ಅಪಮಾನವನ್ನು ನೀನು ಸಹಿ
ಸುವೆಯಾ ? ಸಾವುಕಾರರು ಸಾಲಗಾರನ ಹೆಂಡತಿಯಾದ ಗೋಷಾಸ್ತ್ರೀಯ
ಅಪಮಾನವನ್ನು ಮಾಡಿದ್ದಾದರೆ ನೀನೀನು ಮಾಡುವಿ? ನಿಮ್ಮ ತಮ್ಮನನ್ನು
ಆದರದಿಂದ ಮನೆಯಲ್ಲಿಳಿಸಿಕೊಂಡು ಏಕಾಂತದಲ್ಲಿ ವಧಮಾಡಿಸಿ, ಅವನ ಹಣ
ವನ್ನೆಲ್ಲ ಅಪಹರಿಸಿದ ನರಾಧಮನಿಗೆ ನೀನೇನು ಶಿಕ್ಷೆಯನ್ನು: ವಿಧಿಸುವಿ? ”
ಎಂದು ಹೃದಯಭೇದಕವಾದ ವಾಕ್ಸರಣಿಯಿಂದ ಅವನು ಸಾವುಕಾರರ
ಭೋರತರವಾದ ಕೃತಿಗಳ ಭಯಂಕರ ಸ್ವರೂಪವು ನನ್ನ ಕಣ್ಣಿ ಗೆ ಕಟ್ಟು
ವಂತೆ ಉದಾಹರಣಗಳನ್ನು ಕೊಟ್ಟು ವರ್ಣನೆ ಮಾಡಿದನು.
" ಕಲಂದಸಾಹೇಬ್ಯ ಇಂಥ ಅನೇಕವಾದ ದುಷ್ಕೃತ್ಯಗಳನ್ನು ಮಾಡಿ
೧೨೪ ---------------------------------------------------------------------
ಬದುಕಿರುವವನಾದೆ ಸಾವುಕಾರನನ್ನು ನೀವು ಪ್ರತ್ಯಕ್ಷವಾಗಿ ಕಂಡಿರುವಿರಾ? ''
ಎಂದು ನಾನು ಸಂಶಯಗ್ರಸ್ತನಾಗಿ ಕೇಳಿದೆನು.
"ನೋಡಿರುನೆನೆಂದರೆ! ಅವನೊಡನೆ ಸ್ನೇಹವನ್ನು ಬಳಸಿಕೊಂಡಿ
ದ್ದುದರ ಫಲಭೋಗವನ್ನು ಎರಡೆರಡು ಕೈಗಳಿಂದ ಉಂಡಿರುವೆನು. ಮಕ್ಕಾ
ಯಾತ್ರೆಗೆ ಹೋದ ಜನರಿಗೆ ಅರಬಸ್ಥಾನದಲ್ಲಿ ಉಂಟಾಗುವ ಅನೇಕವಾದ
ತೊಂದರೆಗಳ ನಿವಾರಣಾರ್ಥವಾಗಿ, ನಾನು ಇಪ್ಪತ್ತು ವರ್ಷಗಳ ವರಿಗೆ
ಅಖಂಡವಾಗಿ ದುಡಿದು ಐದು ಲಕ್ಷ ರೂಪಾಯಿಗಳನ್ನು ಕೂಡಿಸಿದ್ದೆನು. ಆ
ಹಣವನ್ನು ನನ್ನ ಸ್ನೇಹಿತನಾದ ಸಾವುಕಾರನ ಬಳಿಯಲ್ಲಿ ಇಟ್ಟಿರಲಾಗಿ ಆ
ನೀಚನು ಆ ಸತ್ಕಾರ್ಯಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲ ಅಸಹರಿಸಿಬಿಟ್ಟನು.
ನಾನು ಅವನ ಮೇಲೆ ಫಿರ್ಯಾದ ಮಾಡಿದೆನು. ಆದರೆ ನ್ಯಾಯವು ಧನ
ವಂತರಿಗೆ ಅನುಕೂಲವಾಗಿರುವದರಿಂದ ನನ್ನ ಫಿರ್ಯಾದವನ್ನು ಕಾಜಿಯು
ತೆಗೆದುಹಾಕಿ ನನಗೆಯೇ ದಂಡದ ಶಿಕ್ಷೆಯನ್ನು ವಿಧಿಸಿದನು. "
“ಆ ಸಾವುಕಾರನನ್ನು ಯಾವನಾದರೊಬ್ಬ ಸತ್ಯಪಕ್ಷಪಾತಿಯು ಅಲ್ಲಿಯೇ
ಕಡಿದು ಹಾಕಬಾರದಿತ್ತೆ! " ಎಂದು ನಾನು ಉದ್ದಾರ ತೆಗೆದೆನು.
" ತರುಣನೆ, ಕ್ಷಣಿಕವಾದ ಉದ್ರೇಕದಿಂದ ಹೀಗೆ ಮಾತನಾಡುವಿ.
ಅಂಥ ನಿಶ್ಚಯದ ವೃತ್ತಿಯುಳ್ಳವನಾದ ಸತ್ಯಪಕ್ಷಪಾತಿಯು ಲಕ್ಷ ಜನರಲ್ಲಿ
ಒಬ್ಬನಾದರೂ ಇರುವನೋ ಇಲ್ಲವೊ ಕಾಣೆನು.”
"" ಯಾಕೆ? ನಾನಿದ್ದೇನೆ! ? ಎಂಬ ಮಾತು ನನ್ನ ಬಾಯಿಲೆ ಅಕ
ಸ್ಮಾತ್ತಾಗಿ ಹಾರಿಹೋಯಿತು.
" ಹಾಗಾದರೆ ಪಯಂಬರರ ಶಪಥವನ್ನು ಮಾಡಿ ನನ್ನ ಕೈಮೇಲೆ
ಕೈಹಾಕು! * ಎಂದು ಶಾಸುಫಿ ಕಲಂದರಶಹನು ಕನ್ನ ಕೈಚಾಚಿದನು. ನಾನು
ಶಪಥವನ್ನು ಮಾಡಿ ಅವನ ಕೈಮೇಲೆ ನನ್ನ ಕೈ ಹಾಕಿದೆನು,
ಕಲಂದರನು ಸಂಗಡಲೆ ಚೀಲದಲ್ಲಿ ಹಾಕಿ ಅಂಟಿಸಿದ ಪತ್ರವನ್ನು ನನ್ನ
ಕೈಯಲ್ಲಿ ಕೊಟ್ಟು " ಇಕೋ ಯುಸುಫ, ಇದರಲ್ಲಿ ಆ ಸಾವುಕಾರನ
ಹೆಸರನ್ನೂ ಅವನ ಭಾವಚಿತ್ರವನ್ನೂ ಅವನ ವಾಸಸ್ಥಳ, ನಿತ್ಯದ ಕಾರ್ಯ
ಕ್ರಮ ಮುಂತಾದವುಗಳನ್ನೂ ನಿವರಸಿದ್ದೇನೆ. ಇಂದು ಶುಕ್ರವಾರ;
ಮುಂದಿನ ಶುಕ್ರವಾರದೊಳಗಾಗಿ ನೀನು ಅವನ ವಧದ ವರ್ತಮಾನ
೧೨೫ ----------------------------------------------------------------------
ವನ್ನು ನಮಗೆ ಮುಟ್ಟಿಸಲಿಕ್ಕೇಬೇಕು; ತಪ್ಪಬಾರದು. ತಪ್ಪಿದರೆ ಪಯಂ
ಬರರ ಶಪಥನನ್ನು ಮಾಡಿದ ಪಾಪಿಯಾದ ನಿನ್ನನ್ನು ನಾವು ಕೊಲ್ಲಿಸಿದರೆ
ದೋಷವಿಲ್ಲ. ನಮ್ಮ ಸಾಮರ್ಥ್ಯವನ್ನು ನೀನು ಬಲ್ಲೆ, ನಾಳಿನ ಶುಕ್ರವಾರ
ದಿವಸವು ಕಳೆಯುವದರೊಳಗಾಗಿ ನಿನ್ನ ವಚನವನ್ನು ನೀನು ಪಾಲಿಸದಿದ್ದರೆ
ಶನಿವಾರದ ದಿವಸವೇ ನಿನ್ನ ವಧವಾಯಿತೆಂದು ತಿಳಿ, ನೀನು ಹೈದರಾಬಾದಿ
ನಲ್ಲಿದ್ದರೇನು ದಿಲ್ಲಿಯಮೇಲಿದ್ದರೇನು, ನಾವು ಆಡಿದಂತೆ ಮಾಡಿಯೇ
ತೀರುವೆವು. "
""ಒಳ್ಳೇದು.'' ಎಂದು ನಾನು ವ್ಯಗ್ರನಾಗಿ ನುಡಿದು ಉಸುರ್ಗರೆದೆನು.
ಕಲಂದರನು ನಕ್ಕು "ಯಾಕೆ? ಆಂಜಿದಿಯೇನು ಯುಸುಫ? ಧೈರ್ಯ
ವನ್ನನಲಂಬಿಸು. ಪಯಂಬರರ ಶಪಥವನ್ನು ಮಾಡಿ ಅದನ್ನು ಮುರಿದ
ವನು ಮುಸಲ್ಮಾನನಲ್ಲ. "
"ಆಗಲಿ! ತಮ್ಮ ಆಜ್ಞೆಯಂತೆ ಮಾಡುವೆನು.” ಎಂದು ನಾನು
ಕಿಂಚಿತ್ ವಿಷಾದದಿಂದ ನುಡಿದು ನಕ್ಕೆನು.
ಇಕೊ! ಈ ಚೇಲದಲ್ಲಿ ನೂರು ಸುವರ್ಣದ ನಾಣ್ಯಗಳಿರುವವು.
ಎಂಟು ದಿವಸ ನೀನು ನಿನ್ನ ಮನಸ್ಸಿಗೆ ಬಂದಮೇರೆಗೆ ಆರಾಮದಲ್ಲಿರುವದಕ್ಕೆ
ಇದರಿಂದ ಅನುಕೂಲವಾಗುವದು. ?
ನಾನು ಹಣದ ಚೀಲವನ್ನೂ ಪತ್ರವನ್ನೂ ಎತ್ತಿಕೊಂಡು ನನ್ನ
ಕೋಣೆಗೆ ಹೊರಟೆದ್ದು ಬಂದೆನು.
ನನಗೆಲ್ಲಿಯ ಹುಚ್ಚು ತುಂಬಿತೋ, ನಾನೇಕೆ ವಚನಕೊಟ್ಟನೋ
ಎಂದು ನನ್ನನ್ನು ನಾನೇ ದೂಸಿಸುತ್ತೆ ಮಂಚದ ಮೇಲೆ ಕುಳಿತುಕೊಂಡೆನು.
" ಸಾವುಕಾರನು ನಿಜವಾಗಿ ದೋಷಿಯಾಗಿರುವನೇನು? ಇಲ್ಲವೆ ಕಲಂದರನು
ಇದನ್ನೆ ಲ್ಲ ಹಟ್ಟಿಸಿಕೊಂಡು ಹೇಳಿದನೋ? ಒಳ್ಳೇದು, ಅವನ ಹೆಸರಾದರೂ
ಏನು? * ಎಂದು ನಾನು ನನ್ನ ಕೈಯಲ್ಲಿ ಕಾಗದದ ಚೀಲವನ್ನು ಹರಿದು
ಪತ್ರವನ್ನು ಬಿಚ್ಚಿ ನೊ:ಡಿದೆನು. "4 ಸೈಯ್ಯದ ರಸೂಲಹಕ್ಕ |" ಯಾಕೀ
ರುಮ್ಮನೆ ಕಾದ ನನ್ನ ಎದೆಯ ಮೆಲೆ ಒಳಿತಾಗಿ ಹಣೆದಂತಾಯಿತು.
ಸಯ್ಯದ ರಸೂಲಹೆಕ್ಕ ಕಂಡರೆ ಪ್ರತ್ಯಕ್ಷ ತನ್ನ ಪ್ರಿ ಪ್ರಿಯತಮೆಯ ಜನಕರು.
ಅವರ 'ವಧವನ್ನು ಕು ಮಾಡಬೇಕೆ ? ಸೋ ಈ ಚಿತ್ರವು ನನ್ನ
೧೨೬ ಸಂಪೂರ್ಣ-ಕಥೆಗಳು
ಭವಿಷ್ಯತ್ ಶ್ವಶುರರದೇ! "ತೋಬಾ ತೋಬಾ! ಎಂಥ ಅವಿಚಾರಿಯಾದ
ಮೂರ್ಖನು ನಾನು! ಇವರನ್ನು ಕೊಂದರೆ ನಾನು ನನ್ನ ಪ್ರಿಯತಮೆಗೆ
ಎರವಾದೆನು. ಕೊಬ್ಲದಿದ್ದರೆ ಕಲಂದರನು ನನ್ನನ್ನೇ ಕೊಲ್ಲಿಸುವನು.
ನಾನೇ ಘೋರತರವಾದ ಕೃತ್ಯವನ್ನು ಮಾಡುವದಕ್ಕಿಂತ ಕೊಲ್ಲಿಸಿಕೊಂಡು
ಸಾಯುವದೇ ಒಳ್ಳೇದು. ನಿಷ್ಕಾರಣವಾಗಿ ಕೊಲೆಯನ್ನು ಮಾಡಿದ ಪಾಪಿಯೂ
ಪ್ರಿಯತಮೆಗೆ ಎರವಾದವನೂ ಆಗಿ ನಾನು ಜೀವಿಸಿ ಮಾಡುವದಾದರೂ
ಏನು? ಆಗಲಿ, ನಾನು ಸಾಯುವದೇ ನಿಶ್ಚಯ. ಹಾಗಾದಮೇಲೆ ಇನ್ನೆಂಟುದಿನ
ನೂರಉನ್ನಿಸ್ಸೆಯ ಮುಖವನ್ನು ಅವಲೋಕಿಸುತ್ತಲೂ ಅವಳಾಡುವ
ವಿನೋದದ ನುಡಿಗಳನ್ನು ಕೇಳುತ್ತಲೂ ಕಾಲಕಳೆಯುವನು. ಮುಂದೆ
ಆದದ್ದಾಗಲಿ!” ಎಂದು ನಿಶ್ಚಯಿಸಿಕೊಂಡು ಆ ವೇತಾಳಮಂದಿರವನ್ನು
ಬಿಟ್ಟುಕೊಟ್ಟು ನಾನು ಹೊರಬಿದ್ದು ನಡೆದೆನು.
ದಿಲ್‌ಆರಾಮ ಮೆಹೆಲಿನಲ್ಲಿ ನಮ್ಮ ಪ್ರಸ್ಥಾನವು. ಮಲಗುವದು
ಕೂಡುವದು ಊಟ ಉಪಚಾರಗಳೆಲ್ಲ ಆ ಮೆಹೆಲಿನಲ್ಲಿ ಸಮೀಚೀನವಾಗಿ
ನಡೆದವು, ನಿತ್ಯದಲ್ಲಿಯೂ ಗಳಿಗೆ ಎರಡು ಗಳಿಗೆ ನೂರ್‌ಉನ್ನಿಸ್ಸೆಯೊಡನೆ
ವಿನೋದದ ಹರಟೆಗಳು ಮನಸ್ಸಿಗೆ ಆಹ್ಲಾದವನ್ನೀಯುತ್ತಿದ್ದವು.
ಶುಕ್ರವಾರದವರೆಗೆ ನಾನು ಸಾಧಾರಣವಾಗಿ ಸಮಾಧಾನವೃತ್ತಿಯವನೇ
ಆಗಿದ್ದೆನೆಂದು ಹೇಳಬಹುದು. ಮರಣಕ್ಕೆ ಹೆದರಿದ್ದೆನೆ? ನೂರ್
ಉನ್ನಿಸ್ಸೆಯ ಸಲೀಲವಾದ ಪ್ರೇಮಸಲ್ಲಾ ಪಗಳನ್ನು ಕೇಳುಕೇಳುತ್ತಿರುವಾಗಲೆ
ನನಗೆ ಮರಣ ಬಂದರೆ ಅದೇ ನನಗೆ ಅಮೃತತ್ವವೆಂದು ಭಾವಿಸಿ
ಕೊಂಡಿದ್ದೆನು. ಆದರೆ ಅನೀತಿಯ ಕೃತ್ಯವನ್ನು ಮಾಡದಿದ್ದ ಕಾರಣಕ್ಕಾಗಿ
ನಾನು ನಿಷ್ಕಾರಣವಾಗಿ ವಧೆಗೀಡಾಗುವೆನೆಂಬ ಚಿಂತೆಯು ನನ್ನ ಎದೆಯಲ್ಲಿ
ಆ ದಿವಸ ಹೆಚ್ಚಾಗಿ ಕಟೆಯಲಾರಂಭಿಸಿತ್ತು. ಆ ದಿವಸ ( ಶುಕ್ರವಾರ)
ನಾನು ಆ ಮನಮೋಹಿನಿಯ ಮನೆಗೆ ಹೋದಾಗ " ಯುಸುಫ, ನೀನು ನಾಳೆ
ಯಾವಾಗ ಬರುವಿ?” ಎಂದು ಕೇಳಿದರೆ ಏನು ಹೇಳಲಿ? ನನ್ನ ಚಿಂತಾ
ಕ್ರಾಂಶವಾದ ಮುಖವನ್ನು ನೋಡಿ " ಪ್ರಿಯನೆ ನಿನಗೇನಾಗಿದೆ?'' ಎಂದು
ಆ ಪ್ರೇಮಲೆಯು ನನ್ನನ್ನು ಕುರಿತು ಪ್ರಶ್ನಮಾಡಿದರೆ ಉತ್ತರವೇನು?
ಸುಳ್ಳೇ ಹೇಳಬೇಕಲ್ಲವೆ ? ಸುಳ್ಳು ಹೇಳಿ ಆ ನನ್ನ ಮನೋಹರೆಯ ಆಶಾಭಂಗ
೧೨೭ -----------------------------------------------------------------------
ನನ್ನು ಮಾಡಿ ಪಾಪಿಯಾದ ನಾನು ಸಾಯುವಾಗ ಮತ್ತೆ ಹೆಚ್ಚಿನ ಪಾಪವನ್ನು
ಕಟ್ಟಿಕೊಳ್ಳ ಲಿಯಾ? ಇವೇ ಮುಂತಾದ ಅನೇಕವಾದ ವಿಚಾರಗಳಿಂದ ನಾನು
ಆ ದಿವಸ ತ್ರಸ್ತನಾಗಿಹೋದೆನು. ಅವೇ ನಿಚಾರಗಳ ಪರಿಭ್ರಮಣದಿಂದ
`ನನ್ನ ಚಿತ್ತವೇ ಭ್ರಾಂತವಾದಂತಾಯಿತು. ಮನೆಬಿಟ್ಟು ಹೊರಗೆ ಹೋಗ
ಬೇಕೆಂದು ಹೊರಟೆನು. ಯಾವ ಮಾರ್ಗದಿಂದ ಹೋರ ಮಾರ್ಗದಲ್ಲಿ
ಯಾರನ್ನು ಕಂಡೆನೊ ಗೊತ್ತೇ ಇಲ್ಲ. ಉಂಡಿದ್ದೆನೋ ? ನೆನಪಿಲ್ಲ. ಊರು
ಸುತ್ತಾಡಿ ಸುತ್ತಾಡಿ ನೀರಡಿಕೆಯಾದ ಅರಿಕೆ ಮಾತ್ರ ಆಯಿತು. ಸಾರ್ವ
ಜನಿಕ ಜಲಯಂತ್ರದಲ್ಲಿ ನೀರು ಕುಡಿದು ತಲೆ ತೊಳಕೊಂಡ ಬಳಿಕ, ನುನಾರು
ಎಲ್ಲಿರುನೆನೆಂಬ ತಿಳುವಳಿಕೆಯಾಯಿ:ತು. ನೆಟ್ಟನೆ ದಿಲ್‌ಆರಾಮ ಮೆಹೆಲಿಗೆ
ಬಂದು ಬಿದ್ದು ಕೊಂಡೆನು.
ಸಂಜೆಗೆ ನೂರ್ ಉನ್ಸಿಸ್ಸೆಯ ಸಂಕೇತದ ಮೇರೆಗೆ ಅವಳ ಮಂದಿರಕ್ಕೆ
ಹೋದೆನು. ಮುದಾಸ್ವಿತೆಯಾದ ಆ ಮದಯೌವನೆಯು ಮೃದುಹಾಸವನ್ನು
ಬೀರುತ್ತೆ ನನಗೆ ಸ್ವಾಗತವನ್ನಿತ್ತಳು. ಅನಿರ್ನಾಹಕ್ಕಾಗಿ ನಾನು ಮುಖದಲ್ಲಿ
ಸುಳ್ಳುನಗೆಯನ್ನು ತಳೆದು ದಿಂಬಕ್ಕೆ ಆತುಕೊಂಡು ಕುಳಿತೆನು
“ಯುಸುಫ, ಪ್ರಿಯ ಯುಸುಫ, ಇಂದು ನಾನು ನಿಮಗೊಂದು'
ಸಂತೋಷದ ಸುದ್ದಿಯನ್ನು ಹೇಳುವೆನು. ” ಎಂದು ನೂರ್‌ಉನ್ನಿಸೆಯು
ಬಹು ಮೋಹ ಬರುವಂತೆ ಮಂದಹಾಸಗೈದು ನುಡಿದಳು.
" ಇನ್ನೆಲ್ಲಿಯ ಸಂತೋಷದ ಸುದ್ದಿ ನೂರ್?” ಎಂದು ನಾನು ಆ
ಸುವದನೆಯ ಮುಖದಲ್ಲಿ ಉಕ್ಕುತ್ತಿರುವ ಪ್ರೇಮರಸವು ಬತ್ತಿ ಹೋಗುವಂತೆ
ರಸಭಂಗಕಾರಕವಾದ ಉತ್ತರವನ್ನಿತ್ತೆನು.
" ನಾನೆಂಥ ಶುಭವಾರ್ಶೆಯನ್ನು ಹೇಳಬಂದೆ! ನೀನೆಂಥ ಅಭದ್ರವಾದ
ಮಾತನ್ನಾಡಿದಿರಿ !" ಎಂದು ನನ್ನನ್ನು ತುಸು ಜರಿದು ನುಡಿದಳು.
ಚಟ್ಟನೆ ಭ್ರಾಂತಿಯಿಂದೆಚ್ಚತ್ತು " ಕ್ಷಮಿಸು ಪ್ರಿಯೆ! ಚಿಂತೆಯ ಭರದಲ್ಲಿ
ನಾನೇನು ಮಾತಡಿದೆನೋ ಎಚ್ಚರವಿಲ್ಲ. ಎಂಥ ಶುಭವಾರ್ತೆಯದು? *
ಎಂದು ಕೇಳಿದೆನು.
" ಈಗಾದರೂ ಎಚ್ಚರವಿದೆಯೋ ? "
" ಹೇಳು ಹೇಳು; ಮನಸ್ಸು ಕೊಟ್ಟು ಕೇಳುವೆನು. ”
೧೨೮ ------------------------------------------------------------------
" ಹೇಳಲಿಯಾ? ಆರು ತಿಂಗಳವರೆಗೆ ನೀವು ನಮ್ಮ ತಂದೆಯವರ
ಕೈಕೆಳಗಿದ್ದು ಕೊಂಡು ನೀವು ಉದ್ಯೋಗದಕ್ಷರೂ ಧನದ ಸದುಪಯೋಗವನ್ನು
ಮಾಡಬಲ್ಲವರೂ ಎಂಬದರ ನಿದರ್ಶನವನ್ನು ಮಾಡಿ ಕೊಟ್ಟರೆ ನೂರ್
ಉನ್ನಿಸ್ಸೆಯು ನವಾಬ ಯುಸುಫಖಾನರ ಬೇಗಮ್ಮಳಾಗತಕ್ಕವಳು" ಎಂದು
ನುಡಿದು ಬಲವತ್ತ ರವಾದ ನಾಚಿಕೆಯಿಂದ ನೂರ್ ಉನ್ನಿಸ್ಸೆಯು ತಲೆಬಾಗಿಸಿ
ಕೊಂಡು ನಿಂತು ಮಂದಹಾಸಗೈದಳು.
ನನ್ನ ಎದೆ ಝಲ್ ಎಂದಿತು. ಈ ಸುವಾರ್ತೆಯು ನನ್ನ ಮರಣದ
ದುಃಖವನ್ನು ಇಮ್ಮಡಿಯಾಗಿ ಮಾಡುವದಕ್ಕಾಗಿ ಬಂದಿತೆ! ಅವಳಿಗಿನ್ನೇನು
ಹೇಳಲಿ? "" ನೂರ್! ನೂರ್!! ನಿನ್ನ ನಿರ್ಮಲವಾದ” ಪ್ರೇಮಕ್ಕೆ ಈ
ನೀಚನಾದ ಯುಸುಫನು ಸರ್ವಥಾ ಯೋಗ್ಯನಲ್ಲ. ಪ್ರಿಯೆ, ನಾನು
ನಿಂದ್ಯನು, ನಾನು ಪಾಪಿಯು | ”
" ಅಂದರೆ ! ಹುಚ್ಚುಗಿಚ್ಛು ಹಿಡಿಯಿತೇನು ನಿಮಗೆ? ಹೀಗೇಕೆ
ಮಾತಾಡುವಿರಿ?” ಎಂದು ಆ ಮುಗ್ಧೆಯು ಕಣ್ಣಿಗೆ ನೀರು ತಂದು ಕೇಳಿದಳು.
" ಹುಚ್ಚು ಹಿಡಿದಿದ್ದರೆ ಒಳಿತೇ ಆಗುತ್ತಿತ್ತು. ಪ್ರಿಯೆ, ಸುಚರಿತೆ
ಯಾದ ನೀನು ಈ ಪಾಪಿಯಲ್ಲಿ ಪ್ರೇಮವನ್ನಿಡುವದು ಉಚಿತವಲ್ಲ. "
ನೂರ್ ಉನ್ನಿಸ್ಸೆಯು ನನ್ನನ್ನು ಭರದಿಂದಪ್ಪಿಕೊಂಡು " ಯುಸುಫ,
ನೀನೀಗಲೇ ವ್ಯಕ್ತ ಪಡಿಸಿದ ವಿಚಾರವು ಪಾಪಿಯ ಹೃದಯದಲ್ಲಿ ಹುಟ್ಟುವ
ದುಂಟೆ? ಪ್ರಿಯಾ, ನಿಮಗೇತರದೋ ಚಿಂತೆಯಾಗಿದೆ ಹೇಳುವದಿಲ್ಲವೆ ? "
ಎಂದು ಗದ್ದದಕಂಠೆಯಾಗಿ ನುಡಿದು ತನ್ನ ಕಣ್ಣೀರಿನಿಂದ ಮೈದೊಳೆದಳು.
ಹೇಳಬಹುದಾದ ಚಿಂತೆಯೆ? ಹೃದಯರಮಣಿಯಾದ ಆ ಪ್ರೇಮ
ಲೆಯೂ, ಹಾಗೆ ಆಲ್ಬರೆದು ಕೇಳುಕ್ತಿರುವಾಗ ಚಿಂತೆಯ ಕಾರಣವನ್ನು
ಬಚ್ಚಿಟ್ಟು ಕೊಳ್ಳುವದಾದರೂ ಹೇಗೆ? ಹೇಳಿದರೆ ಆ ಭೀರುವಿನ ಅವಸ್ಥೆ
ಏನಾಗುವದೋ ಯಾರು ಬಲ್ಲರು? ಇಂಥ ವಿಚಾರಗಳಿಂದ ನಿರ್ನಿಣ್ಣ ನಾಗಿ
ದೀನಸ್ವರದಿಂದ ಪ್ರಿಯೆ, ಬಲವತ್ತರವಾದ ಚಿಂತೆಯು ನನ್ನ ಎದೆಯನ್ನು
ಕೊರೆಯುತ್ತಿರುವದು ನಿಜ: ಆದರೆ ಆ ಚಿಂತೆಯ ಮೂಲವನ್ನು ನಿನಗೆ
ಹೇಳುವಂತಿಲ್ಲ. ದಯಮಾಡಿ ಆಗ್ರಹ ಮಾಡಬೇಡ ಕಂಡಿಯಾ ! '' ಎಂದು
ಕೇಳಿಕೊಂಡಿನು.
೧೨೯ -----------------------------------------------------------------------
" ಇಂದೆಯೇ ಅಂಥ ಅಗಾಧವಾದ ಚಿಂತೆಯೆಲ್ಲಿಂದ ಬಂದಿತು?”
ಎಂದು ನೂರ್‌ಉನ್ನಿಸ್ಸೆಯು ನನ್ನ ಮುಖವನ್ನು ದಿಟ್ಟಿಸಿ ನೋಡುತ್ತೆ
ಕೇಳಿದಳು.
" ನಾಳೆ ಹೇಳಿದರೆ ಆದೀತೆ? ಇಂದು ಹೇಳಲು ನನ್ನ ಮನಸ್ಸು
ಒಪ್ಪಲೊಲ್ಲದು, ಅಷ್ಟು ಕೃಪೆಮಾಡು. ”
" ಆಗಲಿ, ನಾಳೆ ಮೂರನೆಯ ಪ್ರಹರಕ್ಕೆ ಸರಿಯಾಗಿ ಬಂದು ಏನಿದ್ದ
ಸಮಾಚಾರವನ್ನು ಹೇಳಲೇಬೇಕು. ಜನಸಹಾಯ, ಧನಸಹಾಯಗಳು
ಬೇಕಾಗಿದ್ದರೆ ನಾನು ಒದಗಿಸಿಕೊಡುವೆನು. ಮತ್ತೇನಾದರೂ ಆಲೋಚನ
ವಿದ್ದರೆ ನಾವೀರ್ವರೂ ಕೂಡಿ ಆಲೋಚಿಸಬಹುದಲ್ಲವೆ? ಮೀರಿದ ಪ್ರಸಂಗಕ್ಕೆ
ದೇವರಿದ್ದಾನೆ. "
ನಾನು ಒಪ್ಪಿಕೊಂಡ ಬಳಿಕ ನನ್ನ ಪ್ರಿಯತಮೆಯು ಉಪಹಾರ
ಪಾನೀಯಗಳನ್ನು ತರಿಸಿ, ತೆಗೆದುಕೊಳ್ಳಬೇಕೆಂದು ಆಗ್ರಹಪೂರ್ವಕವಾಗಿ
ಹೇಳಿದ್ದರಿಂದ ನಾನು ಅವುಗಳನ್ನು ಸ್ವೀಕರಿಸಿದೆನು. ಆ ರುಚಿಕವಾದ
ಉಪಹಾರವೂ ನೂರ್‌ಉನ್ನಿಸ್ಸೆಯ ಮೋಹಜಕನವಾದ ಸವಿಮಾತುಗಳೂ
ನನ್ನ ಚಿಂತೆಯನ್ನು ಕಿಂಚಿತ್ ಹಿಂದಕ್ಕೆ ದೂಡಿದ್ದರಿಂದ ನಾನೀರ್ವರೂ
ಕೆಲಹೊತ್ತು ಮಾತುಕತೆಯಾಡಿದೆವು. ವಿಚಾರದಲ್ಲಿಯೇ ತೊಳಲುತ್ತಿದ್ದವ
ನಾದ ನನಗೆ ಆ ಸಮಯದಲ್ಲಿ ಒಂದು ಚಮತ್ಕಾಠವಾದ ವಿಚಾರವು
ತೋರಿತು. ಸಂಗಡಲೆ ನಾನು ಪ್ರಿಯಳ ಅಪ್ಪಣೆಯನ್ನು ತೆಗೆದುಕೊಂಡು
ಹೊರಗೆ ಬಂದೆನು.
" ಮನುಷ್ನಸಿಗೆ ದೊಡ್ಡ ಭೀತಿಯೆಂದರೆ ಮರಣದ್ದೇ ಅಲ್ಲವೆ? ಹಂಗು
ಹರಿದ ಮೇಲೆ ನಿಂಗನ ಪರಿವಯೆಲ್ಲಿಯದು? ಕಲಂದರಶಹನ ಹುಚ್ಚುತನದ
ವಿಚಾರಗಳನ್ನೂ ಅವನ ಘೋರತರವಾದ ಕೃತಿಗಳನ್ನೂ ಸರಕಾರಕ್ಕೆ ತಿಳಿಸಿ
ಅವನ ಸಂಸ್ಕೆಯನ್ನೇ ಮುರಿದು ಚಿಪ್ಪಾಡೆಯಾಗಿ ಮಾಡಿದರೆ ಹೇಗೆ? ಈ
ಕೆಲಸವನ್ನು ನಾನು ಈ ಮೊದಲೇ ಮಾಡಬೇಕಾಗಿತ್ತು. ಈಗ ಪ್ರಹರ
ರಾತ್ರಿಯಾಗಿ ಹೋಯಿತು. ಯಾವ ಅಧಿಕಾರಿಯನ್ನು ಹೇಗೆ ಕಾಣಲಿ?
ಬೆಳಗಾಗುವದರಲ್ಲಿ ನನ್ನಿಂದ ರಸೂಲಹಕ್ಕರ ವಧವಾಗದಿದ್ದರೆ ಸೂರ್ಯೋ
ದಯಕ್ಕೆಯೇ ಕಲಂದರನ ಕೈಕೆಳಗಿನ ಕೊಲೆಗಡಕರು ನನ್ನವಸ್ಥೆಯನ್ನು
೧೩೦---------------------------------------------------------------------------
ಏನು ಮಾಡುವರೋ ! ಆದೆದ್ದು ಆಗಲಿ, ನಾನೀಗಲೇ ರಸೂಲಹಕ್ಕರ
ಬಳಿಗೆ ಹೋಗಿ ಅವರು ತಮ್ಮು ಪ್ರೇಮದ ಕುಮಾರಿಯನ್ನು ನನಗೆ ಕೊಡ
ರೊಪ್ಪುವರೋ ಹೇಗೆಂದು ಕೇಳುವೆನು. ಒಪ್ಪಿದರೆ ಇಂದು ರಾತ್ರಿ ಅವರ
ಬಳಿಯಲ್ಲಿಯೇ ಇದ್ದು ನಾಳಿಗೆ ಅವರ ಮುಖಾಂತರವಾಗಿಯೇ ಕಲಂದರನನ್ನು
ಸರಕಾರಕ್ಕೆ ಎಳಿಸುವೆನು. ಅವರು ನೂರ್ ಉನ್ನಿಸ್ಸೆಯನ್ನು ನನಗೆ ಕೊಡಲು
ಒಪ್ಪದೆ ಇದ್ದರೆ ನನಗೆ ಮರಣವೇ ಸುಖನಲ್ಲವೆ ? ಆ ಮೇಲೆ ಕಲಂದರನ
ಬಳಿಗೆ ಹೋಗಿ ಅವನು ಹೇಳಿದ ಕೆಲಸವು ನನ್ನಿಂದಾಗದೆಂದು ತಿಳಿಸಿ
ಬಿಡುವೆನು. ಮುಂದೆ ದೇವರಿಚ್ಛೆ ಇದ್ದಂತೆ ಆಗಲಿ,” ಹೀಗೆ ನಿಶ್ಚಯಿಸಿಕೊಂಡು
ನಾನು ನೆಟ್ಟನೆ ರಸೂಲಪಕ್ಕರ ವಿಶ್ರಾಮಮಂದಿರಕ್ಕೆ ಹೋದೆನು.
ಗಂಭೀರವೃತ್ತಿಯವರಾದ ಆ ವೃದ್ಧ ಶ್ರೀಮಂತರು ಕಣ್ಣಿಗೆ ಸುಲೋ
ಚನ (ಚಾಳೀಸ) ಗಳಸನನಿಟ್ಟುಕೊಂಡು ಸುಪ್ರಕಾಶವಾದ ದೀಪದ ಬೆಳಕಿನಲ್ಲಿ
ತಮ್ಮ ಲೆಕ್ಕದ ಪುಸ್ತಕಗಳನ್ನು ನಿರೀಕ್ಷಿಸುತ್ತೆ ಕುಳಿತಿದ್ದರು. ನನ್ನನ್ನು ಕಂಡ
ಕೂಡಲೆ " ಯುಸುಫ?!” ಎಂದು ಉದ್ಗಾರ ತೆಗೆದು ನನ್ನನ್ನು ದಿಟ್ಟಿಸಿ
ನೋಡಿದರು. ಶುಭ್ರವಾದ ಗಡ್ಡ-ಮೀಸೆಗಳಿಂದ ಆಚ್ಛಾದಿತವಾದ ಅವರ
ದೊಡ್ಡ ಮೋರೆಯೂ ಕನ್ನಡಿಕೆಗಳಲ್ಲಿ ಹೆಚ್ಚಾಗಿ ಹೊಳೆಯುತ್ತಿ ರುವ ಅವರ
ತೀಕ್ಷ್ಣವಾದ ಕಣ್ಣುಗಳೂ ನನ್ನ ಎದೆಯಲ್ಲಿ ಭಿಃತಿಯನ್ನೇ ಹೊಗಿಸಿದವು.
ಕಡೆಯು ಮಾತನ್ನೇ ಕೇಳಲಿಕ್ಕೆ ಬಂದವನಾದ ನಾನು ಧೈರ್ಯವನ್ನವಲಂಬಿಸಿ
ಅವರಿಗೆ ಪ್ರಣಾಮ ಮಾಡಿ " ಏನಪ್ಪಣೆ?” ಎಂದು ಕೇಳಿದೆನು.
"ಯುಸುಫ ಇಷ್ಟು ರಾತ್ರಿಯಲ್ಲಿ ನೀನೇಕೆ ಬಂದಿ?”
" ಕೆಲವೊಂದು ಉದ್ದೇಶದಿಂದ ಈ ಸನ್ನಿಧಾನಕ್ಕೆ ಬಂದೆನು. ಅಪ್ಪಣೆ
ಯಾದರೆ ನಿವೇದಿಸುವೆನು ?' ಎಂದು ನಾನು ವಿನಯದಿಂದ ಬೆಸಗೊಂಡೆನು,
" ನನ್ನ ಅಭಿಪ್ರಾಯವನ್ನು ಕೇಳಿಕೊಳ್ಳಲಿಕ್ಕೆ ನೀನಾರು?” ಎಂದು
ರಸೂಲಹಕ್ಕ ಸಾಹೇಬರು ನಿಷ್ಠುರರಾಗಿ ಕೇಳಿದರು.
ನನ್ನ ಎದೆಯೊಡೆದು ನೀರಾಯಿತು. ಆದರೂ ಊದುವ ಶಂಖವನ್ನು
ಊದಿಬಿಡಬೇಕೆಂದು ನೆನಿಸಿ " ಮೆಹೆರ್ಬಾನ್, ಕ್ಷಮಿಸಬೇಕು. ತಾವು ನನ್ನ
ವಿನಂತಿಯನ್ನು ಮನ್ನಿ ಸಿದರೆ ಮಾತ್ರ ನಾನು ಜೀವಿಸತಕ್ಕವನು. ಇಲ್ಲದಿದ್ದರೆ
ಇದೇ ತಮ್ಮ ಕಡೆಯ ದರ್ಶನ!'' ಎಂದು ನಾನು ಉಪಕ್ರಮಿಸಿದೆನು.
೧೩೧----------------------------------------------------------------------------
"" ಅಂದರೆ ?
" ನೂರ್ ಉನ್ನಿಸ್ಸೆಯನ್ನು ತಾವು ನನಗೆ ಕೊಡಬೇಕೆಂದು ನನ್ನ ಹಿರಿ
ಯರಿದ್ದಾಗ ಆಲೋಚಿಸಿದ್ದಿರಷ್ಟೆ? ಈಗ ಆ ವಿಚಾರವು ತಮಗೆ ಇಷ್ಟವೊ 2
" ಮೂರ್ಖನಿರುವಿ ನೀನು | ಸುಮ್ಮನೆ ಹೊರಗೆ ನಡೆ!” ಎಂದು
ರಸೂಲಹಕ್ಕರು ನಿರ್ದಯರಾಗಿ ನುಡಿದು ಬಾಗಿಲದ ಕಡೆಗೆ ಕೈಮಾಡಿ
ತೋರಿಸಿದರು.
" ಇದು ನನಗೆ ಮರಣದ ಶಿಕ್ಷೆ! ದಯಮಾಡಿ ಹಾಗೆ ನಿಷ್ಕುರರಾಗ
ಬೇಡಿರಿ. ನೂರ್‌ಉನ್ನಿಸ್ಸೆಯು ನನ್ನಲ್ಲಿ ಆಸಕ್ಕವಾದ ಪ್ರೇಮವುಳ್ಳವಳಾಗಿ
ದ್ದಾಳೆ '' ಎಂದು ನಾನು ಕೈಜೋಡಿಸಿ ಕೇಳಿದೆನು.
" ನಿರ್ಲಜ್ಜನಾದ ಪೋರನೆ, ನನಗೆ ತಿಳಿಯದಂತೆ ನೀನು ನನ್ನ ಅಂತಃ
ಪುರದಲ್ಲಿ ಸೇರಿ ಕುಚೋದ್ಯವನ್ನು ಮಾಡುತ್ತಿರುವ ಸಂಗತಿಯನ್ನು ನನಗೆ
ಹೇಳಬಂದಿರುವಿಯಾ? ನಡೆ ದುರಾತ್ಮನೆ! ನೀನಿಲ್ಲಿ ನಿಲ್ಲಬೇಡ” ಎಂದು ಆ
ಮುದುಕನು ತಟ್ಟನೆ ಎದ್ದು ಕೈಯಲ್ಲಿ ಬಂದೂಕವನ್ನೆ ತೆಗೆದುಕೊಂಡನು.
ಬಖ್ತಯಾರ ಅಲ್ಲಾ: ! ಎಂದು ಚಿಂತಿಸಿದವನೇ ನಾನು ಆ ಸ್ಥಳವನ್ನು
ಬಿಟ್ಟು ಹೊರಹೊರಟು ಬಂದೆನು,
" ಇನ್ನು ಬನ್ನಿರಿ ಶಾಸೂಫಿ ಕಲಂದರ ಗುರುಗಳೆ! ಈ ಯಸುಫನ
ಕುತ್ಸಿತವಾದ ಕಲೇವರವನ್ನು ಕಟ್ಟಿಕೊಂಡು ಹಾಳುಬಾವಿಯಲ್ಲಿ ಬೀಳಿರಿ 1?
ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ನಾನು ದಿಲ್‌ಆರಾಮ ಮೆಹೆಲಿಗೆ
ಬಂದು ಮಲಗಿಕೊಂಡೆನು. ನಿದ್ದೆಯೆಲ್ಲಿ? ಹೊರಳಾಡುತ್ತಲೂ ಹುಚ್ಚನ
ಹಾಗೆ ದಿಗ್ಗನೆ ಎದ್ದು ಕೂಡುತ್ತಲೂ ಮತ್ತೆ ಹಾಸಿಗೆಯ ಮೇಲೆ ದೇಹವನ್ನು
ತೂರಿಕೊಳ್ಳುತ್ತಲೂ ಮಲಗುವ ಮಂಚದ ಕೀಲುಗಳನ್ನೆಲ್ಲ ಸಡಿಲಿಸಿದೆನು.
ಒಮ್ಮೊಮ್ಮೆ ಆ ಭಯಂಕರವಾದ ಘೂಕಮಂದಿರದ ನೆನಪು ಒಮ್ಮೊಮ್ಮೆ
ಬಾಲ್ಯದ ಸುಖಸಮಯದ ಸ್ಮರಣೆ, ಕಲಂದರನ ದುರ್ವ್ಯಾಪಾರಗಳ ಅಸಹ್ಯತೆ,
ಮಧ್ಯೆ ಮಧ್ಯೆ ಅಂಧಕಾರದಲ್ಲಿ ಪ್ರಕಾಶಿಸುವ ತಾರಾಜ್ಕೋತಿಯಂತೆ ಜಗ್ಗನೆ
ಹೊಳೆಯುವ ನೂರಉನ್ಸಿಸ್ಸೆಯ ಸೌಂದರ್ಯದ ಸೌಭಾಗ್ಯ ಮುಂತಾದ ನೋಟ
ಗಳಿಂದಲೂ ವಿಚಾರಗಳಿಂದಲೂ ಸಂವೃತ್ತವಾದ ನನ್ನಮನಸ್ಸು ಪರಿಸ್ಥಿತಿಯನ್ನು
ಮರೆತುಬಿಟ್ಟಿತು. ಬೆಳ್ಳನೆ ಬೆಳಗಾದ ಮೇಲೆಯೇ ನಾನೆಲ್ಲಿ ಇರುವೆನೆಂಬ ಪ್ರಜ್ಞೆ
೧೩೨ --------------------------------------------------------------------------
ನನಗೆ ಬಂದಿತು. ""ಇನ್ನೇತಕ್ಕೆ ತಡ! ಸತ್ತು ಸ್ವ ರ್ಗವನ್ನಾದರೂ ಕೂಡಬೇಕು,
ಇದ್ದು ಮನುಷ್ಯರನ್ನಾದರೂ ಕೂಡಬೇಕು. ಇದ್ದು ಮನುಷ್ಯರನ್ನು ಕೂಡುವ
ಆಶೆಯಂತೂ ಕಡಿದೇ ಹೋಯಿತು, ಸತ್ತು ಸ್ವರ್ಗವನ್ನು ಕೂಡುವದೇ ಇನ್ನು
ಗತ್ಯಂತರವು. ನಡೆ. ಯುಸುಫ! " ಎಂದು ನನ್ನಷ್ಟಕ್ಕೆ ನಾನಂದುಕೊಂಡು
ಮೌನಮಂದಿರದ ಮಾರ್ಗವನ್ನು ಹಿಡಿದೆನು. ಈ ಲೋಕವೇ ನನ್ನದಲ್ಲವಾದ
ಮೇಲೆ ಅದನ್ನು ಕಣ್ಣೆತ್ತಿ ನೋಡಲೇಕೆ? -ಅತ್ಮಿತ್ತ ಮುಖ ತಿರುವದೆ ನೆಲ
ನೋಡುತ್ತೆ ನಾನು ನನ್ನ ಹಾದಿಯನ್ನು ಹಿಡಿದೆನು. ಪರಿಚಯದ ಮಾರ್ಗ
ವಾದ್ದರಿಂದ ಹಾದಿಯನ್ನು ತಪ್ಪದೆ ಕಲಂದರಶಹನ ಮೌನಮಂದಿರಕ್ಕೆ ಬಂದು
ಮುಟ್ಟಿದೆನು. ಚಿಂತೆ ಭೀತಿಗಳೆರಡೂ ಸತ್ತು ಹೋಗಿದ್ದರಿಂದ ನಾನು ಕಿಂಚಿತ್ತಾ
ದರೂ ಸಂಕೋಚಗೊಳ್ಳದೆ ನೆಟ್ಟ ನೆ ಕಲಂದರನೆದುರಿನಲ್ಲಿ ಬಂದು ನಿಂತೆನು.
ನನ್ನನ್ನು ಕಂಡಾಕ್ಷಣವೆ "ಓ! ಶಾಬ್ಬಾಸ್!! ನವಾಬ ಯುಸುಫ,
ನಿನ್ನಂಥ ಧೂರ್ತನಾದ ಪುರುಷನನ್ನು ನಾನು ಕಾಣಲೇ ಇಲ್ಲ! ಎಂಥ ಚಮ
ತ್ಕಾರವಾದ ರೀತಿಯಿಂದ ನೀನು ಕಾರ್ಯವನ್ನು ಸಾಧಿಸಿಬಟ್ಟಿ ! ರಸೂಲ
ಹಕ್ಕ ನು ರಕ್ತಾಶಯವು ಬತ್ತಿ ಸಾಯುವನೆಂದು ಯಾರಾದರೂ ಕನಸು ಮನ
ಸಿನಲ್ಲಿ ಕಂಡಿದ್ದರೆ ?" ಎಂದು ಕಲಂದರನು ಸಂತೋಷದ ಉದ್ರೇಕದಿಂದ
ನುಡಿದನು.
" ಸಯ್ಯದ ರಸೂಲಹಕ್ಕರು ಹೀಗೆ ಅಕಸ್ಮಾತ್ತಾಗಿ ತೀರಿಕೊಂಡರೆ?
ನಿನ್ನೆ ರಾತ್ರಿಯ ಮೊದಲನೆಯ ಜಾವದಲ್ಲಿ ಅವರು ಒಳ್ಳೇ ಹುರುಪಿನಲ್ಲಿರುವ
ದನ್ನು ನಾನು ಕಣ್ಣಾರೆ ಕಂಡು ಬಂದೆನು!” ಎಂದು ನಾಸು ಆಶ್ಚರ್ಯ
ಚಕಿತನಾಗಿ ನುಡಿದೆನು. "
" ವಾಃ ವಾ! ಮೋಸಗಾರನೆ, ನನ್ನನ್ನು ಕೂಡಾ ವಂಚಿಸಬೇಕೆನ್ನುವಿ
ಯಲ್ಲನೆ ? ಇಲ್ಲಿ ನೋಡು, " ತಾಜ್ ಇ ಅಖ್ಬಾರ್' ಎಂಬ ದೈನಿಕ ಪತ್ರದಲ್ಲಿ
ರಸೂಲಹಕ್ಕನ ಮರಣದ ವಾರ್ತೆ ಇತ್ಥತಂಭೂತವಾಗಿ ವರ್ಣಿಸಲ್ಪಟ್ಟಿದೆ. "
ಎಂದು ಈ ಕಲಂದರನು ಆ ವರ್ತಮಾನಪತ್ರವನ್ನು ನನ್ನ ಮೋರೆಯ
ಮೇಲೆ ತೂರಿದನು.
ನೋಡುತ್ತೇನೆ, ಸಯ್ಯದ ರಸೂಲಹಕ್ಕರ ಮರಣದ ವರ್ತಮಾನವೇ
ಅದರಲ್ಲಿ!
೧೩೩--------------------------------------------------------------------------
" ಬೆದರಬೇಡ ಯುಸುಫ! ನೀನು ನನ್ನ ಹೇಳಿಕೆಯ ಮೇರೆಗೆ
ಕಾರ್ಯವನ್ನು ನಿರ್ವಹಿಸಿರುವಿ. ನೀನು ನಮ್ಮ ಖುಣದಿಂದ ಮುಕ್ತನಾದಿ.
ನಾವಿನ್ನು ನಿನಗೆ ಯಾವ ಬಗೆಯ ತೊಂದರೆಯನ್ನೂ ಕೊಡುವದಿಲ್ಲ.?'
ನನಗಾದರೂ ಕಲಂದರನ ಕಾಟ ತಪ್ಪಿದರೆ ಸಾಕಾಗಿತ್ತು. ನಾನೇ
ರಸೂಲಹಕ್ಕರನ್ನು ಕೊಂದಿರುವೆನೆಂದು ಕಲಂದರನ ನಂಬಿಗೆಯಾದರೂ ಆಗಿ
ರಲೊಲ್ಲದೇಕೆಂದು ನೆನೆದು ನಾನು ನನ್ನ ಮೇಲಿನ ದೋಷಾರೋಪಣವನ್ನು
ನಿರಾಕರಿಸುವ ಗೋಜಿಗೆ ಹೋಗಲಿಲ್ಲ. ನಾನಂತೂ ದೇವರ ಸಾಕ್ಷಿಯಾಗಿ
ನಿರ್ದೋಷಿಯೇ. ರಕ್ತಾಶಯವು ಬತ್ತಿದ್ದರಿಂದ ರಸೂಲಹಕ್ಕರು ತೀರಿಕೊಂಡ
ಕೆಂದು ರಾಜವೈದ್ಯರು ಅಭಿಪ್ರಾಯವನ್ನು ಪಟ್ಚಿರುವರೆಂದು ತಾಜ್ ಇ
ಆಖ್ಬಾರ್‌ದೆಲ್ಲಿ ಸ್ಪಷ್ಟವಾಗಿ ಬರೆದಿದೆ. ಆರ್ಥಾತ್ ಜನಾಪವಾದವೂ ನನ್ನ
ಮೇಲೆ ಬರುವಂತಿಲ್ಲ. ನನ್ನ ಎದೆಯ ಮೇಲಿನ ಕಲ್ಲು ಇಳಿದಂತಾಗಿ ನಾನು
ಸಮಾಧಾನದ ಉಸುರ್ಗರೆದೆನು.
" ಇನ್ನೇನು ಯುಸುಫಖಾನ್, ನೀವು ಮುಕ್ತರಾದಿರಿ, ಇಂದಿನಿಂದ
ನೀವು ಸ್ವೇಚ್ಛೆಯಿಂದ ಈ ಮಂದಿರವನ್ನು ಬಿಟ್ಟು ಹೋಗಲು ಅಡ್ಡೀ ಇಲ್ಲ.
ಸದ್ಯಕ್ಕೆ ಬೇರೆ ಕಡೆಗೆ ಹೋಗಿರಲು ನಿಮಗೆ ಅನನುಕೂಲತೆಯಿದ್ದರೆ ನೀವು
ಇಲ್ಲಿ ಇರುವದಕ್ಕೆ ನಾನು ಬೇಡೆನ್ನುವದಿಲ್ಲ. ಈ ನಮ್ಮ ಮೌನಸುಂದಿರವು
ನಿಮ್ಮದೇ ಎಂದು ತಿಳಿಯಿರಿ. ವೆಚ್ಚ ಕೈ ಹಣ ಬೇಕಾದರೆ ಇದೇ ಇಲ್ಲಿ ಹಣ
ವಿದೆ, ತಕ್ಕೊಳ್ಳಿರಿ ? ಎಂದು ಕಲಂದರನು ಪ್ರಸನ್ನನಾಗಿ ನುಡಿದನು.
" ವಲೀದ್ (ಹಿರಿಯಕೆ), ರಸೂಲಹಕ್ಕರ ಮರಣದ ಸಂಬಂಧದಲ್ಲಿ
ನೀವು ನನ್ನ ಹೆಸರು ತೆಗೆದುಕೊಳ್ಳುವದಿಲ್ಲವಷ್ಟೆ? ” ಎಂದು ನಾನು ಅರ್ಥಿ
ಯಾಗಿ ಕೇಳಿಕೊಂಡೆಕು.
" ತೋಬಾ, ತೋಬಾ | ಎಲ್ಲಿಯ ಮಾತೇ? ನಾನು ಸದ್ಧೇತುವಿ
ಗಾಗಿ ನಿನ್ನ ಕೈಯಿಂದ ಆ ಕೆಲಸವನ್ನು ಮಾಡಿಸಿದೆನು. ನಾನು ನಿನ್ನ ಹೆಸರು
ಸರ್ವಥಾ ತೆಗೆದುಕೊಳ್ಳುವದಿಲ್ಲ. ವಿಶ್ರಬ್ಧನಾಗಿರು. ನನ್ನ ಆಶ್ರಮದ ಶಪಥ
ಮಾಡಿ ಹೇಳುತ್ತೇನೆ.?
ಚಿಂತೆಯು ನಿರ್ಮೂಲನಾಗಿ ಅಳಿದುಹೋಯಿತು. ನಾನು ಎದ್ದು
ನಿಂತು ಕಲಂದರನಿಗೆ ಪ್ರಣಾಮ ಮಾಡಿ ಹೋಗಲು ಅಪ್ಪಣೆ ಕೇಳಿಕೊಂಡು
೧೩೪ ----------------------------------------------------------------------------
ಅಲ್ಲಿಂದ ಹೊರಟೇಬಿಟ್ಟಿನು. ನೂರ್‌ಉನ್ನಿಸ್ಸೆಯ ಕಡೆಗೆ ನನ್ನ ಮನಸ್ಸು
ನನ್ನನ್ನು ಎಳೆಯುತ್ತಿತ್ತು. ಪಾಪ, ಆ ನವತರುಣಿಯು ಪಿತೃವಿಯೋಗದ
ದುಃಖದಿಂದ ಗೋಳಿಟ್ಟು ಅಳುತ್ತಿ ರುವಳೆಂಬ ವ್ಯಸನದಿಂದ ನಾನು ಅವಳ
ಮಂದಿರಕ್ಕೆ ಧಾವಿಸಿಬಂದೆನು.
ನನ್ನನ್ನು ಕಂಡಾಕ್ಷಣವೇ ಆ ಸುಂದರಿಯು ಭೋರಿಟ್ಟು ಅತ್ತಳು.
ಪಾಪ! ಅವಳಿಗೆ ಆಪ್ತರಿಲ್ಲ; ಇಷ್ಟರಿಲ್ಲ. ಆಶ್ರಯಿಸಿಕೊಂಡಿರುವ ದೊಡ್ಡ
ಮರವೇ ಆ ಕೋಮಲೆಯ ಮೈಮೇಲೆ ಕಡುಕೊಂಡು ಬಿದ್ದಿತ್ತು.
" ಯುಸುಫ! ಯುಸುಫ! ನೀನೇ ನನಗಿನ್ನು ಆಧಾರನು. ನೀನೇ
ಆಪ್ತನು, ನೀನೇ ಇಷ್ಟನು. ಇನ್ನು ಮೇಲಾದರೂ ನೀನು ನನ್ನನ್ನು ಅಗಲಿ
ಹೋಗುವ ವಿಚಾರವನ್ನು ಮಾಡುವದಿಲ್ಲವಷ್ಟೇ ?"ಎಂದು ಆ ನನ್ನ ಪ್ರಾಣ
ಕಾಂತೆಯು ಅಶ್ರುಪೂರ್ಣಾಕುಲೇಕ್ಷಣೆಯಾಗಿ ನುಡಿದದ್ದನ್ನು ಕೇಳಿ ನನ್ನ
ಎದೆಯು ಕರಗಿ ನೀರಾಯಿತು. ನಾನು ಆ ಚಾರುಗಾತ್ರಿಯನ್ನು ಭರದಿಂದಪ್ಪಿ
ಕೊಂಡು ಅವಳ ಸೇವೆಯಲ್ಲಿಯೇ ಯಾವಜ್ಞೀವವಾಗಿ ಇರುವೆನೆಂದು
ಆಶ್ವಾಸನವನ್ನಿತ್ತೆನು. `
ಸಯ್ಯದ ರಸೂಲಹಕ್ಕರ ಉತ್ತರಕ್ರಿಯಾದಿಗಳು ಅವರ ಸಂಪತ್ತಿಗೆ
ಅನುರೂಪವಾಗಿ ಜರಗಿದವು. ಅವರ ಮನೆಯ ಮುಖ್ಯ ಗುಮಾಸ್ತನೂ
ಮನೆತನದ ವಕೀಲನಾದ ಗುಲಾಮಹುಶೇನ ಬಿಲ್ಗ್ರಾಮೀ ಎಂಬ ಪ್ರಮಿತ
ನಾದ ಸದ್ಗೃಹಸ್ಥನೂ ಕೂಡಿ ರಸೂಲಹಕ್ಕರ ಆಸ್ತಿಯ ವ್ಯವಸ್ಥೆಯನ್ನು
ಮಾಡಿ ನೂರ್ ಉನ್ನಿಸ್ಸೆಯ ಸ್ವಾಧೀನ ಮಾಡಿದರು.
ನಾನೂ ನೂರ್‌ಉನ್ನಿಸ್ಸೆಯೂ ದಂಪತಿಗಳಾದೆವು. ರಸೂಲಹಕೃರ
ಅಪರಿಮಿತವಾದ ಸಂಪತ್ತಿಗೆ ನಾವೀರ್ವರೇ ಒಡೆಯರು, ನಾನು ಆಕ್ಷರಸ್ತನಣ
ಅಧೀತನೂ ಶ್ರೀಮಂತನೂ ಆಗಿರುವದನ್ನು ನೋಡಿ ಹೈದ್ರಾಬಾದ ಸರಕಾರ
ದವರು ನನಗೆ ತಮ್ಮಲ್ಲಿಯ ನವಾಬ ಎಂಬ ಬಿರುದನ್ನು ಕೊಟ್ಟರು. ವಿಜಾ
ಪುರದ ಶುಷ್ಕವಾದ ನವಾಬ ಪದವೀಧರನಾದ ನಾನು ಈಗ ಅನ್ವರ್ಥಕನಾದ
ನವಾಬನಾಗಿರುನೆನು. ನಾನಿನ್ನು ಹೀಗೆ ಸಹಿ ಮಾಡುವೆನು.
ನವಾಬ ನೂರಮಹನ್ಮುದ ಯುಸುಫಖಾನ ಬಹಾದ್ದೂರ,
========================================
೧೩೫---------------------------------------------------------------------------
ದುರ್ಮತಿಯ ದುರ್ವಿಲಾಸ
ರಮಣೀಯವಾದ ವನೋದ್ದೇಶದ ಮಧ್ಯದಲ್ಲಿ ಮೆರೆಯುತ್ತಿರುವ
ಸರೋವರದಲ್ಲಿ ಪ್ರಫುಲ್ಲಿತವಾದ ಕಮಲಗಳು ಕಂಗೊಳಿಸದಿದ್ದರೆ, ಆ ಸರೋ
ವರಕ್ಕೂ ಶೋಭೆಯಿಲ್ಲ; ಆ ವನೋದ್ದೇಶದ ರಮಣೀಯತಿಯಾದರೂ
ಎಂಥದು ? ಪ್ರಫುಲ್ಲಿತವಾದ ಕಮಲಗಳ ಆಂತರಂಗದಲ್ಲಿರುವ ಸೂಕ್ಷ್ಮವಾದ
ಗುಣಗಳು (ಎಸಳುಗಳು) ಮಕರಂದಮಯವಾದ ಪರಾಗವನ್ನು ಆದರದಿಂದ
ಸೂಸುತ್ತಿರಲು ಅಂಥ ಆನೋದ ಸರ್ವಸ್ವವನ್ನು ಯಥೇಚ್ಛವಾಗಿ ಸೇವಿಸ
ಲಿಕ್ಕೂ ಆ ಕಮಲಗಳ ಸೌಂದರ್ಯವನ್ನು ಕಂಡು ಅಕ್ಕರತೆಯನ್ನು
ಪಡಲಿಕ್ಕೂ ಯೋಗ್ಯವಾದ ರಾಜಹಂಸಗಳಿರದಿದ್ದರೆ ಆ ಕಮಲಿನೀಸಮುಚ್ಚಯ
ಯದ ಜೀವಿತದ ಸಾರ್ಥಕ್ಯವಾದರೂ ಯಾವದು? ವ್ರಣೋದ್ಘಾಟನಮಾಡಿ
ಕೃತಕೃತ್ಯತೆಯನ್ನು ಹೊಂದುವ ಕಾಗೆಗೆ ಆ ಕಮಲಿನಿಯ ಸೌಂದರ್ಯದ
ಬೆಲೆಯೇನು? ಅದರ ಗುಣಾಮೋದದ ಜ್ಞಾನವೇನು? ದುರ್ಮಾಂಸದ
ಭ್ರಾಂತಿಗಾಗಿ ಕಮಲಕ್ಕೆ ಬಂದ ಕಾಗೆಯು, ಅದನ್ನು ಚರಚರಕೆ ಹರಿ
ದೊಗೆದು ಕುತ್ಸಿತವಾದ ಬೇರೊಂದು ವಸ್ತುವಿನ ಕಡೆಗೆ ಹಾರಿಹೋಗುವದೇ
ಸರಿ,
ಸತ್ಯುಲಜೆಯೂ, ಹೃದಯಂಗಮೆಯಾದ ರೂಪವತಿಯೂ, ಮನೋಜ್ಞ
ಳಾದ ಗುಣಯುತೆಯೂ ಆದ ರಮಣೀಮಣಿಗೆ ಅನುರೂಪನಾದ ಪತಿಯು
ದೊರಕದಿದ್ದರೆ ಆ ಮಾನಿನಿಯ ಜೀವಿತವು ವ್ಯರ್ಥವಾಗಿ ಹೋಗುವದಿಲ್ಲವೆ?
ಗುಣದೋಷಗಳ ಮಾನದಿಂದೆ ಮನುಷ್ಯನು ಸುಖದುಃಖಗಳನ್ನು ಸೇವಿಸುವ
ನೆಂಬ ತತ್ವವು ಅಬಲೆಯರಿಗೆ ಹತ್ತುವದಿಲ್ಲವಲ್ಲೆ 1? ದೈವದುರ್ವಿಪಾಕದಿಂದ,
ಅಧಮನಾದವನ ಪತ್ನಿಯಾದ ಕುಲಾಂಗನೆಯ ಗುಣೋತ್ಕರ್ಷವು ಅವಳಿಗೆ
ಸುಖದ ತಿಲಾಂಶನನ್ನುದರೂ ಕೊಡಲಾರದು. ಉದ್ಯೋಗ, ಯತ್ನ, ಆತ್ಮ
ಪ್ರಭಾವಗಳಿಂದೇನು ಫಲ? ನಾರಿಯರ ಸುಖ ದುಃಖದಲ್ಲಂತೂ ದೈವವೇ
ಸುಖದುಃಖಗಳ ಕಾರಣವೆಂದು ಹೇಳಬೇಕಾಗಿದೆ. " ದೈವಂ ಪ್ರಧಾನಮಿತಿ
ಕಾಪುರುಷಾ ವದಂಶಿ" ಎಂದು ಹೆಮ್ಮೆಯ ಮಾತು ಹೇಳುವ ಕವಿಯು ಈ
೧೩೬------------------------------------------------------------------------
ಪ್ರಸಂಗದಲ್ಲಿ ತನ್ನ ಬಾಯಿ ಹೊಲಕೊಂಡು ಕುಳ್ಳಿರತಕ್ಕದ್ದು.
ಚಂದ್ರವಂಶಸಂಭವನೂ ಮಹಾಕ್ಷತ್ರಿಯರಾದ ರಜಪೂತರಲ್ಲಿ ಶ್ರೇಷ್ಠನೂ
ಆದ ಚಿತೂರದ ಮಹಾರಾಣಾ ಪೃಥುರಾಜನ ಗುಣಸಂಪನ್ನೆಯಾದ
ತಂಗಿಯನ್ನು ಶಿರೋಹಿಯ ರಾಜನಿಗೆ ಕೊಟ್ಟಿತ್ತು. ಶಿರೋಹಿಯ ರಾಜನು
ರೂಪಸಂಪನ್ನನೂ ತರುಣನೂ ಸಕಲ ಸಂಸತ್ತುಗಳಿಂದ ತುಂಬಿದ
ಸಂಸ್ಥಾನದ ಅಧಿಪತಿಯೂ ಆಗಿದ್ದು, ನಮ್ಮ ರಾಜಕನ್ನೆಗೆ ಅನೇಕಾಂಶಗಳಲ್ಲಿ
ಅನುರೂಪನಾದ ಪತಿಯೇ ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ನೋಡು
ವವರಿಗೆ ಬಿಟ್ಟವು ನುಣ್ಣಗಾಗಿ ಕಂಡರೂ ಅದರಲ್ಲಿ ಸಂಚರಿಸುವವರ ಮೈಕೈ
ಗಳು ಅಲ್ಲಿ ಬೆಳೆದಿರುವ ಕಂಟಕಗಳಿಂದ ತರೆಯುತ್ತಿರುವ ಪರಮ ಸುಖವನ್ನು
ಯಾರಿಗೆ ಹೇಳಬಹುದು ?
ಸಂಸಾರದ ಹೊಸ ಭರತಿಯಲ್ಲಿ ಕಮಲಾದೇವಿಗೆ ವಿಶೇಷವಾದ ಅನಿ
ಷ್ಟವು ತೋರಿಬರಲಿಲ್ಲ. ಮೊದಲು ಮೊದಲು ತನ್ನ ಸತಿಯು, ಅರಸಿಕನೊ
ವಿದ್ಯಾನಿಹೀನಹೂ ಎಂಬದಷ್ಟೇ ಅವಳು ಕಂಡು, ತುಸು ವಿಷಾದವನ್ನು
ತಾಳಿದ್ದಳು.
ತರುಣನಾದ ತನ್ನ ಪತಿಯ ಅರಸಿಕಕೆಯನ್ನು ಹೇಗಾದರೂ ಹೋಗ
ಲಾಡಿಸುವೆನೆಂದೂ, ಅವನ ಹೊಟ್ಟಿ ಯಲ್ಲಿ ಆದಷ್ಟು ಮಟ್ಟಿಗೆ ವಿದ್ಯಾಮೃತ
ವನ್ನು ಪ್ರಯತ್ನಪೂರ್ವಕವಾಗಿ ಸುರಿಯುವೆನೆಂದೂ ಆ ಚತುರೆಯು ಹವಣಿಸು
ತ್ತಿದ್ದಳು. "ಸದ್ಯಃ ಫಲಂತಿ ಗೀತಾನಿ' ಎಂಬ ನಾಣ್ನುಡಿಯನ್ನು ನೆನೆದು, ಆ
ಹಿತೈಷಿಣಿಯಾದ ಸತಿಯು, ತನ್ನ ಸತಿಯ ಛಂದಾನುಸಾರವಾಗಿ, ಮಂಜ.ಲ
ಗೀತವಾದನಗಳಿಂದ ಅವನ ಮನೋರಂಜನವನ್ನು ಮಾಡಿ ನೋಡಿದಳು.
ವಿನಯ, ಆದರ, ಶೃಂಗಾರಚೇಷ್ಟೆಗಳಿಂದ ಅವನ ಮನವೊಲಿಸುವ ಯತ್ನವನ್ನು
ಅವಳು ಮಾಡಿದಳು. ಆದರೇನು? “ಸುಭಾಷಿತೇನ ಗೀತೇನ ಯುವತೀನಾಂ ಚ
ಲೀಲಯಾ| ಯಸ್ಯ ನ ದ್ರವತೇ ಚಿತ್ತಂ ಸವೈ ಮೂರ್ಯೊsಥವಾ ಪಶುಃ"
ಎಂಬಂತೆ ಆ ವಿದ್ಯಾವಿಹೀನನಾದ ಪಶುವಿಗೆ ಇದೆಲ್ಲ ನಿರರ್ಥಕವಾಗಿ ಕಂಡಿತು.
ವೃದ್ಧರಾದ ತಂದೆತಾಯಿಗಳ ಹೊಟ್ಟೆಯಲ್ಲಿ ಹುಟ್ಚಿದವನಾದ ಶಿರೋಹಿ
ರಾಜನು ಮಿತಿಮೀರಿದ ಅಚ್ಛೆಯಿಂದ ಬೆಳೆದವನಾದ್ದರಿಂದ ಅವನು ಸ್ವಚ್ಛಂದ
ವೃತ್ತಿಯವನೂ, ಸೋಮಾರಿಯೂ, ವೃಥಾಭಿಮಾನಿಯೂ ಆಗಿರುವದಲ್ಲದೆ,
೧೩೭ -----------------------------------------------------------------------
ಚಿಕ್ಕಂದಿನಲ್ಲಿಯೇ ಅವನಲ್ಲಿ ವಿಷಯವಾಸನೆಯ ಬೀಜವು ನೆಲೆಗೊಂಡಿತ್ತು.
ಇಂಥ ವಿಚಾರದ ಉತ್ಸುದಕರಾದ ನೀಚರೂ ದುರ್ಜನರೂ ಆದವರೇ ಅವನ
ಸಂಗಡಿಗಳಾಗಿದ್ದರು. ಪರಿಚಾರಕರೇ ಆ ರಾಜನ ಸ್ನೇಹಿತರಾಗಿ ಅವನಿಗೆ ಆಫು
ಸೇವನದ ವ್ಯಸನವನ್ನು ತಗಲಿಸಿದ್ದರು. ಸ್ತ್ರೀಮರ್ಯಾದೆಯನ್ನು ಧಿಕ್ಕರಿಸಿ
ಜಗತ್ತಿಗೆ ವಿಷೋಪಮರಾಗಿ ನಿಂತ, ವಿಶ್ವಯೋಷಿತೆಯರ ಅಶ್ಲೀಲವಾದ
ವಿಲಾಸಚೇಷ್ಟಿತಗಳಿಗೆ ಮನಸೋತವನಾದ ಆ ಅರಸು, ವಿದ್ಯಾನಿಭೂಷಿತ
ಳಾದ ಕಮಲಾದೇವಿಯ ಮರ್ಯಾದೆಯ ನಡೆನುಡಿಗಳು ಸ್ವಾರಸ್ಯವಿಹೀನ
ವಾದದ್ದವೆಂದು ಹೇಳಿ ಆ ಸೀಮಂತಿನಿಯನ್ನು ಆದರಿಸದಾದನು.
ಪತಿಯು ತನ್ನಲ್ಲಿ ತೋರಿಸುವ ಅನಾದರನನ್ನು ಕುಲಾಂಗನೆಯಾದ
ಕಮಲಾದೇವಿಯು ಹೇಗಾದರೂ ಮಾಡಿ ನುಂಗಿಕೊಂಡಿದ್ದಳು. ತನ್ನ
ಹಿತವನ್ನು ಒತ್ತಿಟು ಪತಿಗಾಹರೂ ಹಿತವಾಗಲೆಂದು ಚಿಂತಿಸಿ, ಆ ಪತಿವ್ರತಾ
ಮಣಿಯು, ತನ್ನ ಜೀವನಿತೇಶ್ವರನು ಆಚರಿಸುತ್ತಿರುವ ದುರಾಚರಣಗಳನ್ನು
ತಡೆಯಬೇಕೆಂದು ವಿನಂತಿಯ ರೂಪದಿಂದ ಆಗಾಗ್ಗೆ ಬೋಧವನ್ನು ಮಾಡಿ
ನೋಡಿದಳು. ಆದರೇನು? " ಬೋರ್ಕಲ್ಲ ಮೇಲೆ ಮಳೆಗರೆಯಲಾ ಕಲ್ಲು
ನೀರ್ಕುಡಿಯಬಹುದೇ? " ರಾಜನು ಆ ಬೋಧಾಮೃತವನ್ನು ಕಿವಿಯಲ್ಲಿ
ಕೂಡ ಹಾಕಿಕೊಳ್ಳದೆ ಹಾಗೇ ಹೋಗುವನು. ತಾನು ಬಡಿಸಿದ ಸುರುಚಿರ
ವಾದ ಪಕ್ವಾನ್ನವನ್ನು ಯಾವನಾದರೊಬ್ಬ ರುಚಿಗೇಡಿಯು ಚಲ್ಲಿದರೆ ಚತುರೆಗೆ
ಮಿತಿಮೀರಿದ ವ್ಯಸನವಾಗುತ್ತಿರಲು, ಕಮಲಾದೇವಿಯು ಭಕ್ತಿಯಿಂದ ನೀಡಿದ
ಅಮೌಲ್ಕವಾದ ಬೋಧಾಮೃತವನ್ನು ತಿಳಿಗೇಡಿಯಾದ ರಾಜನು ಧಿಕ್ಕರಿಸಿದ್ದು
ನೋಡಿ, ಆ ಕೋಮಲಹೃದಯಳಿಗೆ ಎಷ್ಟು, ವ್ಯಸನವಾಗಿರಬಹುದೆಂಬದನ್ನು
ನನ್ನ ಭಗಿನೀವರ್ಗವು ತಾನೇ ಊಹಿಸಿಕೊಳ್ಳಲಿ. ಮೊದಲು ಮೊದಲು, ಈ
ಉಪದೇಶಗಳು ಸೋಕ್ಷಮೋಕ್ಷಗಳ ಇರಿಕಿಗೆ ಸಿಕ್ಕದೆ, ಪುಣ್ಗಕ್ಕೆ ಹಾಗೆಯೇ
ದಾಟಿಕೊಂಡು ಪಾರಾಗಿ ಹೋದವು. ಬರಬರುತ್ತ "" ಪರ್ಜನ್ಯಾಸ್ತ್ರಕ್ಕೆ
ವಾಯ್ವಸ್ತ್ರವೆಂಬಂತೆ ಬೋಧಾಮೃತವರ್ಷಣವು ವಾಕ್ಪ್ರಹಾರದಿಂದೆ
ವಾತಾಹತವಾಗಿ ಹೋಗಲಾರಂಭಿಸಿತು.
ಮಾನಿನಿಗೆ ಮಾನಭಂಗಕ್ಕಿಂತಲೂ ಮತ್ತೊಂದು ಮರಣವಿಲ್ಲಷ್ಪೇ?
ಆದರೂ ಸಾಧ್ವಿಯಾದ ಕಮಲಾದೇವಿಯು ತನ್ನ ಪ್ರಖರತರವಾದ ದುಃಖ
೧೩೮ -------------------------------------------------------------------------
ವನ್ನು ಕಣ್ಣೀರಿನಿಂದ ನೊಂದಿಸಿಕೊಂಡಿರುವಳೋ ಎಂಬಂತೆ ಏಕಾಂತದಲ್ಲಿ
ಕುಳಿತು; ರಾಜನು ತನ್ನ ಕಾಲಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವದನ್ನು
ನೆನೆದು, ಮನಸೋಕ್ತವಾಗಿ ಅಳುವಳು. "ಪತಿದೈವನೆಂದರಿ' ವ ಪರಮಾರ್ಥದ
ಮಾತಿಗೆ ಪ್ರೇನುದ ಸಹಾಯವಿಲ್ಲದೆ ಹೋದರೆ, ಅಬಲೆಯರು ಸೆಳವಿಗೆ
ಇದಿರಾಗಿ ಈಸುವದಾದರೂ ಎಲ್ಲಿಯವರೆಗೆ? ನಿರುತ್ಸಾಹ ನಿರಾಶೆಗಳೆಂಬ
ವಜ್ರಾಫಾತಗಳಿಂದ ಆ ಕೋಮಲಾಂಗಿಯ ಎದೆಯೊಡೆದು ನೀರಾಗಿ
ಹೋಯಿತು. ದೈವಹತಳಾದ ಆ ರಾಜನಂದಿನಿಯು, ಹೃದ್ರೋಗದಿಂದ ದಿನ
ವೊಂದಕ್ಕೆ ನವೆಯುತ್ತ ನಡೆದಳು. ಆಹಾರವಿಹಾರ, ವಸ್ತ್ರಾಲಂಕಾರಗಳಲ್ಲಿ
ಅವಳಿಗೆ ಅಭಿರುಚಿಯಿರಲಿಲ್ಲ. ದೇವರೇ ಗತಿಯೆಂದು, ಆ ಪ್ರಾಣಿಯು ಪಂಜರ
ದೊಳಗಿನ ಹಕ್ಕಿಯಂತೆ ಅಹರ್ನಿಶಿಗಳಲ್ಲಿ ತನ್ನ ಶುದ್ಧಾಂತವನ್ನು ಹಿಡುಕೊಂಡು
ಕುಳಿತಳು.
ಇಷ್ಟರಿಂದಲೇ ಆಗಲಿಲ್ಲ. ದುರ್ವಿಚಾರ-ದಷ್ಟನಾದ ರಾಜನು, ತನ್ನ
ಹೆಂಡತಿಯ ದುರ್ದೆಶೆಯನ್ನು ಕಂಡು ಕನಿಕರಪಡದಲೇ, ಅವಳು ಬೇಕಾಗಿ
ಬೇನೆಯ ಸೋಗು ಹಾಕಿಕೊಂಡಿರುವಳೆಂದೂ, ಈ ರೀತಿಯಾಗಿ ತನ್ನನ್ನು
ಅಂಜಿಕೆಯಲ್ಲಿ ಇಡಲೆಸಗುವಳೆಂದೂ ಕಲ್ಪಿಸಿಕೊಂಡು, ಇಂಥ ಉದ್ದತೆಯನ್ನು
ಅವಶ್ಯವಾಗಿ ನಿಗ್ರಹಿಸತಕ್ಕದ್ದೆಂದು ಚಿಂತಿಸಿದನು. " ದಿಟ್ಟಿಸಿ ನೋಡಿದರೆ
ಮನೆಯ ಹೆಂಡತಿ ಕುರುಡೆ" ಎಂಬಂತೆ ದೋಷೈಕ ದೃಷ್ಟಿಯಿಂದ
ನೋಡುವವನಿಗೆ ದೋಷಗಳನ್ನು ಹೊರತುಪಡಿಸಿ ಮತ್ತಿನ್ನೇನಾದರೂ
ಕಾಣುವದುಂಟೇ ?
ವಿಷಣ್ಣ ಹೃದಯಳಾದ ಕಮಲಾದೇವಿಯು ವಿಶೇಷವಾಗಿ ಮಾತನಾಡ
ದಿದ್ದರೆ, ಇವಳು ತಾನು ಚಿತೂರಿನ ಮಹಾರಾಣರ ಮಗಳೆಂಬ ಗರ್ವದಿಂದ
ಹೀಗೆ ಬಿಗಿದುಕೊಂಡಿರುವಳೆಂದು ನೆನೆದು, ಅವಳ ಗಂಡನು ಕರಕರನೆ ಹಲ್ಲು
ತಿನ್ನುವನು. ಆನ್ನೋದಕಗಳನ್ನು ಬೇಕಾಗಿ ತೊರೆದು ಈ ಹೊಯ್ಮಾಲೆಯು
ತನಗೆ ಅಪಕೀರ್ತಿಯನ್ನು ಕೊಡಬೇಕೆನ್ನುವಳೆಂದು ಹೇಳಿ, ಆ ದುರ್ಮತಿಯು
ಅವಳನ್ನು ಬಿರಿಗಣ್ಣಿನಿಂದ ನೋಡುವನು. ಅರಮನೆಯಲ್ಲಿ ಯಾವನಾದರೂ
ಒಂದು ತಪ್ಪ ಮಾಡಿದ್ದರೆ, ಅದಕ್ಕೆ ಪಾಪ, ರಾಣಿಯೆ ಹೊಣೆಯು. ಹೀಗೆ
ಸುಖಾಭಾವದ ದಿವಸಗಳು ಹೋಗಿ ನಿಜವಾದ ದುಃಖಾನುಭೂತಿಯ
೧೩೯ ------------------------------------------------------------------------
ದಿವಸಗಳು ಬಂದೊದಗಿದವು.
ನಿರಂತರವಾದ ದುರ್ಭಾಪಣಗಳ ಮಳೆಗಾಲಕ್ಕೆ ಪ್ರಾರಂಭವಾಗಿ
ನಡುನಡುವೆ. ಪಾದಾಘಾತಗಳೆಂಬ ವಿದ್ಯುತ್ಪಾತಗಳೂ ಆಗುತ್ತಿದ್ದವು.
ತೊತ್ತಿಗೆ ಮರ್ಯಾದೆ ಇರಬಹುದು; ಆ ಅರಮನೆಯಲ್ಲಿ ರಾಣಿಗೆ ಮರ್ಯಾದೆ
ಇರಲಿಲ್ಲ. ಸೇವಕರು ಕೂಡ ರಾಣಿಯೊಡನೆ ಉದ್ದಾಮರಾಗಿ ವರ್ತಿಸಿದರು.
ಕೇಳುವರಾರು? ತನ್ನ ಮಾನರಕ್ಷಕನೇ ತನಗೆ ಪ್ರತಿಕೂಲನಾಗಿರಲು,
ಅನ್ಯರಿಗೆ ಆಡಿ ಫಲವೇನು? “ಗಂಡ ಹೆಂಡಿರ ಅತ್ಯುಗ್ರದೆ ಶಿಕ್ಷಿಸಲ್”
ಕಾಯುವವರಾರು? ಆದರೂ 'ಪತಿಕುಲೇ ಮಮದಾಸ್ಯಮವಿ ಕ್ಷಮಂ '
ಎಂದು ತಿಳಿದು ಆ ಪತಿವ್ರತೆಯು ಎಲ್ಲ ಪ್ರಕಾರದ ದುಃಖಗಳಿಗೆ ತಲೆಗೊಟ್ಟು
ನಿಂತಳು. ಆದರೂ ಆ ಮಾನಿನಿಯ ನಿಶ್ಚಯವು ದೃಢವಾಗಿದ್ದರೂ ಅವಳ
ದೇಹವು ಕುಸುಮಮಾಲೆಯಂತೆ ಮೃದುತರವಾದದ್ದಲ್ಲೇ ? ಪ್ರತಾರಣೆ
ಪ್ರಹಾರಗಳಿಗೆ ಅದು ಈಡಾಗುವದು ಹೇಗೆ?
ಒಂದು ದಿನ ಪ್ರಹರ ರಾತ್ರಿಯಾದ ಒಳಿಕ ರಾಜನು ಅಫೀಮದ
ಮದಾವೇಶದಿಂದ ಪರವಶನಾಗಿ ಜೋಲಿ ಹೊಡೆಯುತ್ತ ತನ್ನ ಹೆಂಡತಿಯ
ಮಹಾಲಿನ ಕಡೆಗೆ ನಡೆದಿದ್ದನು. ತಲೆಯ ರುಮಾಲು ನೆಲಕ್ಕೆ ಅಲೆಯುತ್ತಿತ್ತು.
ಹೊದ್ದು ಕೊಂಡಿದ್ದ ಸೆಲ್ಲೆಯು ಎಲ್ಲಿಯೋ ಬಿದ್ದು ಹೋಗಿತ್ತು. ಒಂದು
ಕಾಲಿನಲ್ಲಿ ಪಾದರಕ್ಷೆ, ಮತ್ತೊಂದು ಬರಿಗಾಲು. ಇಂಥ ಸೊಬಗಿನಿಂದ ರಾಜರು
ನಡೆದಿದ್ದರು. ಪರಿಚಿತವಾದ ಅರಮನೆಯು ಅವರ ಆರಕ್ತವಾದ ನೇತ್ರಗಳಿಗೆ
ವಿಚಿತ್ರವಾಗಿ ತೋರುತ್ತಿತ್ತು. ತನ್ನ ಚಪಲವಾದ ನಾಲಿಗೆಯನ್ನು ಯಾರು
ಬಲಾತ್ಕಾರದಿಂದ ಬಿಗಿಯುತ್ತಿರುವರೆಂದು ಅವನು ಆಗಾಗ್ಗೆ ಅಂತರಿಕ್ಷದಲ್ಲಿ
ಗುಪ್ತರಾಗಿ ಸಂಚರಿಸುತ್ತಿರುವ ಯಕ್ಷ ಯಕ್ಷಿಣಿಯರನ್ನು ಕೇಳುತ್ತಿದ್ದನು.
ಕಾಲುಜಾರಿ ಬಿದ್ದಾಗ, ತನ್ನ ಮನೋರಮೆಯಾದ ವೇಶ್ಯಾಂಗನೆಯು
ವಿನೋದಕ್ಕಾಗಿ ತನ್ನನ್ನು ನೂಕಿದಳೆಂಬ ಉಲ್ಲಾಸದಿಂದ ಅವನು ಗಹಗಹಿಸಿ
ನಗುವನು. ಈ ವಿಲಾಸದಿಂದ ಬಂದ ರಾಜನು ತನ್ನ ಅರ್ಧಾಂಗಿಯಾದ
ಕಮಲಾದೇವಿಯನ್ನು ಕಂಡು ಚಪ್ಪಾಳೆ ಹೊಡೆದು ನಕ್ಕು "ಪ್ರಿಯೆ, ಹೀಗೇಕೆ
ನೋಡುವಿ? ಹುಚ್ಚೀ, ನಾನು ಅಫೀಮು ತಿಂದಿರುವೆನೆಂದು ನೀನು ತಿಳಿದಿರುವಿ
ಯೇನು? ಅಫೀವಟ ತಿಂದವರು ಹುಚ್ಚರಂತೆ ಆಚರಿಸುತ್ತಾರೆ. ನನ್ನ
೧೪೦ -----------------------------------------------------------------------
ಬುದ್ಧಿಯು ಹೇಗೆ ವಿಶದವಾಗಿರುವದು ನೋಡು! ನೀನು ನನಗೆ ಗಾಯನದಲ್ಲಿ
ಆಭಿರುಚಿ ಇಲ್ಲವೆಂದು ಹೇಳುತ್ತಿದ್ದೆಯಲ್ಲ. ಈಗ ಹಾಡಲಿಯಾ? ಸಾ-ರೇ-
ಗ-ಮಾ-ಅಯ್ಯೋ | ನನ್ನ ನಾಲಿಗೆಗೆ ಏನಾಗಿದೆ? ಹಾಂ, ನಾನಿನ್ನೂ ಔಷಧ
ವನ್ನು ತೆಗೆದುಕೊಂಡಿಲ್ಲ'' ಎಂದು ಹೇಳಿ ತನ್ನ ಜೇಬಿನಲ್ಲಿಯ ಅಫುನಿನ
ಕರಡಿಗೆಯನ್ನು ನೋಡಿಕೊಂಡನು; ಅದು ಅಲ್ಲಿ ಇದ್ದಿಲ್ಲ.
""ರಾಣೀಸಾಹೇಬ, ನೀವು ನನ್ನ ಔಷಧದ ಕರಡಿಗೆಯನ್ನು ನೋಡಿರು
ವಿರೇನು? '' ಎಂದು ಅವನು ಕಮಲಾದೇವಿಯನ್ನು ಗುಕ್ಕುತ್ತೆ ಕೇಳಿದನು.
ಕಮಲಾದೇವಿಯು ಪತಿಯ ವಿಪರೀತವಾದ ಸಮಾಚಾರವನ್ನು ನೋಡಿ
ವ್ಯಸಸದಿಂದೆ ನಕ್ಕು " ಮಹಾರಾಜರು ಅದನ್ನು ನನ್ನ ಕಡೆಗೆ ಕೊಟ್ಟೇ ಇಲ್ಲ”
ಎಂದು ನುಡಿದು ಅಧೋಮುಖಿಯಾಗಿ ನಿಂತು ಉಸುರ್ಗರೆದಳು.
ಪ್ರಿಯೆ, ಇದು ವಿನೋದದ ಸಮಯವಲ್ಲ, ನನ್ನ ಕರಡಿಗೆಯನ್ನು
ನನಗೆ ಕೊಡು.”
"ನಾನದನ್ನು ಕಂಡೇ ಇಲ್ಲ! ಎಲ್ಲಿಂದ ಕೊಡಲಿ?”
"ನೀನು ತೆಗೆದುಕೊಳ್ಳದಿದ್ದರೆ ನಿಮ್ಮಪ್ಪ ತೆಗೆದುಕೊಂಡಿದ್ದಾನು !
ಕರಡಿಗೆ ಎಲ್ಲಿ ಹೋಗಬೇಕು?”
" ಹಾಗಂದರೇನು, ನಮ್ಮ ಹಿರಿಯರ ಸುತ್ತೇಕೆ? ಅವರದೇನು
ತಪ್ಪು"
" ಅವರದೇನು ತಪ್ಪೆ |! ನಿನ್ನಂಥ ಗುಣಹೀನೆಯಾದ ಮಗಳನ್ನು
ಹಡೆದದ್ದೇ ತಪ್ಪು.
" ನಿಮ್ಮ ದಾಸಿಯಾದ ನಾನು ಗುಣಹೀನೆಯಾದರೂ ಒಂದೇ
ಗುಣವತಿಯಾದರೂ ಒಂಬೇ, ಆದರೆ ನನ್ನ ಮಾತಾಪಿತೃಗಳು ಜಗದೇಕವೀರ
ರಾದ ಪುತ್ರರನ್ನು ಹಡೆದಿರುವರೆಂಬದು ರಾಜರು ಮರೆಯಲಾಗದು. "
ರಾಜನು ಮುಚ್ಚಲಿಕ್ಕೆ ಬರದಿರುವ ತನ್ಪ ಕಣ್ಣುಗಳನ್ನು ಮತ್ತಿಷ್ಟು
ತೆರೆದು, ಕ್ರೋಧಾವೇಶದಿಂದ " ಏನಂದಿ? ನಿನ್ನ ಅಣ್ಣಂದಿರು ಜಗದೇಕ
ವೀರರೆ ? ಹಾಗಾದರೆ ನಾನು ಹೇಡಿಯಂದಂತಾಯಿತಲ್ಲ. " ಮೀಸೆಗೆ ಹುರಿ
ಯಿಕ್ಕಿ " ಕೈಯಲ್ಲಿ ಬಳೆ ಇಟ್ಟವಳೇ, ಜಗದೇಕವೀರರ ತಂಗಿಯಾದ ನಿನಗೆ
ನನ್ನ ಪರಾಕ್ರಮವನ್ನು ತೋರಿಸಿಯೇ ಬಿಡುವೆನು ಬಾ! '' ಎಂದವನೇ ಆ
೧೪೧ ------------------------------------------------------------------------
ನರಾಧಮನು ಅರಗಿಳಿಗೆ ಎರಗುವ ಹದ್ದಿನಂತೆ ಆ ಕಮಲವದನೆಯ ಮೈ
ಮೇಲೆ ಏರಿಹೋಗಿ ಅವಳನ್ನು ಯಥೇಷ್ಟವಾಗಿ ಬಡುಕೊಂಡನು.
ಕಮಲಾದೇವಿಯು ಪತಿಯ ಕಾಲಿಗೆ ಬಿದ್ದು, ತಾನು ಏನಾದರೂ ವಿಪ
ರೀತ ಮಾಡಿದ್ದರೆ ದಯಮಾಡಿ ಕ್ಷಮಿಸಬೇಕೆಂದು ಎಷ್ಟು ಆಲ್ಬರೆದ ಹೇಳಿ
ಕೊಂಡರೂ, ಆ ಮದೋನ್ಮತ್ತನಿಗೆ ಕನಿಕರ ಬರಲಿಲ್ಲ. ಹೊಡೆತಕ್ಕೆ ಅವಳ
ಕೋಮಲವಾದ ಮುಖಾಂಭೋಜವು ಕೆಂಪುಕೆಂಜಗವಾಯಿತು. ಆ ಕಠೋ
ರನು ಅವಳ ತುರುಬು ಹಿಡಿದು ದರದರ ಎಳೆಯುವಾಗ ಅವಳ ಕೋಮಲ
ವಾದ ತನುವೆಲ್ಲ ತರೆದುಹೋಯಿತು. ಮೂಗು ಬಿಚ್ಚಿ, ಅವಳುಟ್ಟ ದುಕೂಲ
ವೆಲ್ಲ ರಾಮಾರಕ್ತವಾಯಿತು. ಆದರೂ ತನ್ನ ಅವಸ್ಥೆಯು ಸೇವಕರ ಕಣ್ಣಿಗೆ
ಬೀಳಬಾರದೆಂದು ಆ ಸುಶೀಲೆಯು ಬಾಯಿಬಿಚ್ಛಿ ಮಾತಾಡಲಿಲ್ಲ. ಕಡೆಗೆ, ಆ
ಅವಿಚಾರಿಯಾದ ಗಂಡನೇ ತನ್ನ ಕರಡಿಗೆಯನ್ನು ಹುಡುಕುವದಕ್ಕಾಗಿ ತಾನು
ಬಂದ ಹಾದೀ ಹಿಡಿದು ಮರಳಿ ಹೋದನು.
ಕಮಲಾದೇವಿಗೆ ಹೀಗೆ ಷೋಡಶೋಪಚಾರ ಪೂಜೆಯಾದದ್ದು ಇದೇ
ಮೊದಲನೆಯದಲ್ಲ. ಅದರೂ ಈ ಸಾರೆ ಅವಳು ಬಹಳೇ ನಿರ್ನಿಣ್ಣಳಾದಳು.
ಆ ರಾತ್ರಿ ಅವಳು ತನ್ನ ತಂದೆತಾಯಿಗಳನ್ನು ನೆನಿಸಿ ಕೂಸಿನಂತೆ ಅತ್ತಳು.
ಪರಾಕ್ರಮದಲ್ಲಿ ಅರ್ಜುನನಿಗೆ ಸಮಾನನೂ, ರೂಪದಲ್ಲಿ ಮನ್ಮಥನಿಗೆ ಸಮಾ
ನನೂ, ಐಶ್ವರ್ಯವಂತನೂ, ಸಕಲ ವೀರರಲ್ಲಿ ಅಗ್ರಗಣ್ಯನೂ ಆದ ತನ್ನ
ಪೃಥುರಾಜ ಅಣ್ಣನು ಅತ್ತಿಗೆಯಾದ ತಾರಾದೇವಿಯೊಡನೆ ಪ್ರೇಮದಿಂದೆ
ವರ್ತಿಸುತ್ತಿರುವದನ್ನು ನೆನೆದು, ನನ್ನ ಗತಿ ಹೀಗಾಯಿತೇ ಎಂದು ಹೇಳಿ
ದೈವವನ್ನು ಶಾಪಿಸಿದಳು. " ಸೌಭಾಗ್ಯವತಿಯಾದ ತಾರಾಡೇವಿ ನಿತ್ಯದಲ್ಲಿಯೂ
ನಿನ್ನ ನಾಮಸ್ಮರಣವನ್ನು ಮಾಡಿದರೆ, ನಿನ್ನ ಸೌಖ್ಯದ ಶತಾಂಶವನ್ನಾದರೂ
ಕಾಣುವೆನೆ?” ಎಂದು ಆಶೆಗೈದು ಕಮಲಾದೇವಿಯು ಉದ್ಗಾರ ತೆಗೆದಳು.
ಪ್ರಾತಹಕಾಲದಲೆದ್ದು ಹಾಸಿಗೆಯನ್ನು ಬಿಟ್ಟೀಳಬೇಕೆಂದು ಕಮಲಾ
ದೇವಿಯು ಪ್ರಯತ್ನಿಸಿದರೂ ಅವಳಿಂದ ಎದ್ದು ನಿಲ್ಲುವದಾಗಲೊಲ್ಲದು.
ಕಾಲು ಒಳೆದು; ಬಾತುಹೋಗಿತ್ತು. ಮೈಯೆಲ್ಲ ಹುಣ್ಣುಹುಣ್ಣಾಗಿತ್ತು.
ದಾಸಿಯರು ರಟ್ಟೆಯಲ್ಲಿ ಕೈಹಾಕಿ ಹಾಗೂ ಹೀಗೂ ಕಮಲಾದೇವಿಯನ್ನು
ಎತ್ತಿ ಅವಳ ಮುಖಪ್ರಕ್ಷಾಲನವನ್ನು ಮಾಡಿಸಿ ಕುಳ್ಳಿರಿಸಿದರು. ಇನ್ನುಮಾತ್ರ
೧೪೨ --------------------------------------------------------------------------
ಕಮಲಾದೇವಿಯ ಮನಸ್ಸಿನಲ್ಲಿಯ ಉದಾತ್ತವಾದ ವಿಚಾರಗಳೆಲ್ಲ ಹಿಂದುಳಿ
ದವು. ಇನ್ನು ತಾನು ಜನನಿಂದೆಗೆ ಪಾತ್ರಳಾದರೂ ಚಿಂತೆಯಿಲ್ಲ, ನಾಲ್ಕುದಿನ
ಸುಸೂತ್ರವಾಗಿ ಅಣ್ಣನ ಮನೆಯಲ್ಲಿ ಇದ್ದು ಕೊಂಡಿರಬೇಕೆಂದು ಯೋಚಿಸಿ,
ಆ ಅಧೀರೆಯು ದುಃಖದ ಭರದಲ್ಲಿ ತನ್ನ ಅಣ್ಣನಿಗೊಂದು ಪತ್ರ ಬರೆದಳು.
ತನ್ನ ದುಃಖವೆಂಥದು, ಅದರ ಪ್ರತೀಕಾರಕ್ಕಾಗಿ ತಾನು ಯೋಚಿಸುವ
ಆದ್ಭುತವಾದ ಯಂತ್ರದ ಮಹಾತ್ಮ್ಯವೆಂಥದೆಂಬದು ಮಾತ್ರ ಆ ಹೆಣ್ಣುಮಗ
ಳಿಗೆ ತಿಳಿಯಲಿಲ್ಲ.
ರಜಪೂತರೇ ಮೊದಲು ಕ್ಞಾತ್ರತೇಜಸ್ಸಿನಿಂದ ಉಕ್ಕುವವರು. ಅವರಲ್ಲಿ
ಮೇವಾಡದ ರಾಜವಂಶಜಾತರೆಂದರೆ ವೀರಾಗ್ರಗಣ್ಯರು. ಬಾಬರ ಬಾದಶಹ
ನಿಗೆ ಸಾಕುಬೇಕಾಗಿ ಮಾಡಿ ಕೊಟ್ಟ ಸಂಗರಾಜನ ಸಮಾನರಾದ ವೀರರು
ಇಡೀ ಭರತಖಂಡದಲ್ಲಿ ಸಿಕ್ಕುವದು ದುರ್ಲಭ. ಅಂಥ ಸಂಗರಾಜನೇ ತನ್ನ
ಅಣ್ಣನಾದ ಪೃಥುರಾಜನೆಂಬ ಸೂರ್ಯನ ಮುಂದೆ ಹೊನ್ನೇಹುಳವಾಗಿ
ತೋರಿರಲು, ಪುರುಷಸಿಂಹನಾದ ಪೃಥುರಾಜನ ಮಹಾತ್ಮ್ಯದ ವರ್ಣನೆ
ಯನ್ನು ಎಷ್ಟು ಬಣ್ಣಿಸಿದರೂ ಸಾಲದು,
ಪರಮೋದಾರನೂ, ದಯಾಸಿಂಧುವೂ, ಮಹಾವೀರನೂ ಆದ ಪೃಥು
ರಾಜನು ಹಿಂದೆಮಂದೆ ನೋಡದೆ ಒಂದೇ ಮಾರ್ಗದಿಂದ ನಡೆಯುವವನು.
ಪ್ರಜಾವತ್ಸಲನಾದ ಆ ಮಹಾನುಭಾವನಿಗೆ ಭಗನೀವಾತ್ಸಲ್ಯವೆಷ್ಟಿರಬಹುದು
ನೋಡಿರಿ!
ಈ ನರಪುಂಗವನು, ಆದಿಶಕ್ತಿಯಂತೆ ಜಾಜ್ವಲ್ಯಮಾನಳಾದ ತನ್ನ
ಆರ್ಧಾಂಗಿಯೊಡನೆ ಉಪವನದಲ್ಲಿ ಸ್ವೇಚ್ಚಯಿಂದ ವಿಹಾರಮಾಡುತ್ತಿ ರವಾಗ,
ರಾವುತನೊಬ್ಬನು ಅವರಿದ್ದಲ್ಲಿಗೆ ಬಂದು ನೆಲಮುಟ್ಟ ಪ್ರಣಾಮಮಾಡಿ,
ಪೃಥುರಾಜನ ಪಾದಗಳ ಬಳಿಯಲ್ಲಿ ಒಂದು ಪತ್ರವನ್ನು ಇರಿಸಿದನು.
" ಇಪ್ಸರಸಿಂಂಗ ಶಿರೋಹಿಯಿಂದ ನೀನು ಯಾವಾಗ ಬಂದಿ?
ರಾಜರೂ ಧನಿಯ ಕ್ಷೇಮದಿಂದಿರುವರಷ್ಟೇ? ಇಷ್ಟೇಕೆ ಆತುರನಾಗಿ
ಕಾಣುವಿ?'' ಎಂದು ಪೃಥುರಾಜನು ಕೇಳಿದವನೇ ಪ್ರತ್ಯುತ್ತರದ ಮಾರ್ಗ
ಪ್ರತೀಕ್ಷೆ ಮಾಡದಲೆ, ಪತ್ರವನ್ನೊಡಿದು ಓದಲಾರಂಭಿಸಿದನು. ರಾಜನು
ಪತ್ರವನ್ನು ಆರ್ಧ ಓದಿದ್ದಿಲ್ಲ, ಅಷ್ಟರಲ್ಲಿಯೇ ಅವನ ಗಂಭೀರವಾದ ಮುಖವು
೧೪೩ ----------------------------------------------------------------------------
ಚಿಂತಾಕ್ರಾಂತವಾದಂತೆ ಕಂಡಿತು. ಮತ್ತೊ೦ದು ಕ್ಷಣದಲ್ಲಿ ಅವನ ವಿಶಾಲ
ವಾದ ಕಣ್ಣುಗಳೊಳಗಿಂದ ಕ್ರೋಧಾಗ್ನಿಯ ಕಿಡಿಗಳು ಉದುರಲಾರಂಭಿಸಿ
ದವು. ದಟ್ಟವಾಗಿರುವ ಅವನ ಮೀಸೆಗಳು ತಟ್ಟನೆ ಜಿಗಿದುನಿಂತವು. ಸಂತಾಪ
ದಿಂದ ಕುದಿಯುವ ಆ ರಿಪುಭಯಂಕರನ ದೋರ್ದಂಡಗಳು ಸ್ಫುರಿಸಿದವು.
ಭೀಮವಿಕ್ರಮನಾದ ತನ್ನ ಪತಿರಾಯನ ಮನೋವೃತ್ತಿಯನ್ನು" ಕಂಡು,
ತಾರಾದೇವಿಯಂಥ ವೀರಪತ್ನಿಯು ಕೂಡ ಇದೇನೋ ಅನರ್ಥವಿದೆ ಎಂದು
ನೆನೆದು ವಿಸ್ಮಯಾಕುಲಳಾಗಿ,. ಪತಿಯನ್ನು ಮಾತಾಡಿಸಲು ಧೈರ್ಯಸಾಲದೆ
ಮಿಕಿನಿಕಿ ನೋಡುತ್ತೆ ಸುಮ್ಮನೇ ನಿಂತಿದ್ದಳು.
ಓದುವದಾದ ಬಳಿಕ ಆ ಮೃಗೇಂದ್ರನು, ತನ್ನ ವಜ್ರದಂಷ್ಟ್ರಗಳನ್ನು
ಕರಕರನೇ ತಿಂದು ಒಳಿತಾಗಿ ಗರ್ಜಿಸಿ " ಥೂ: ಅಧಮಾ, ನರಪಶೊ! ನನ್ನ
ಕ್ರೋಧಾಗ್ನಿಯನ್ನು ಪ್ರಜ್ವಲಿಸಿ ಇನ್ನು ಜೀವಿಸುವಿಯಾ?'' ಎಂದು ಉದ್ಗಾರ
ತೆಗೆದನು.
ತಾರಾದೇವಿಯು ಅಂಜಂಜುತ್ತೆ " ಏನು ಸಮಾಚಾರವದು??'
ಎಂದು ಕೇಳಿದಳು.
" ದೇವಿ, ಈ ಪತ್ರವನ್ನೋದು. ನಿನ್ನ ನಾದಿನಿಯ ಅವಸ್ಥೆ ಏನಾಗಿದೆ
ನೋಡು !?' ಎಂದು ಹೇಳಿ ಪೃಥುರಾಜನು ಆ ಪತ್ರವನ್ನು ತನ್ನ ವೀರ
ಪತ್ನಿಯ ಸ್ವಾಧೀನ ಮಾಡಿದನು.
ರಣರಂಗದಲ್ಲಿ ಉನ್ಮತ್ತನಾದ ಗಜೇಂದ್ರನ ಸೊಂಡೆಯನ್ನು ಲೀಲೆ
ಯಿಂದ ಒಂದೇ ಹೊಡೆತಕ್ಕೆ ಖಂಡಿಸಿದ ಆ ಥೈರ್ಯಶಾಲಿನಿಯು, ಆ ಪತ್ರವ
ನ್ನೇದಿದಾಕ್ಷಣವೇ ಪಳಪಳನೇ ಕಣ್ಣೀರು ಸುರಿಸಿದಳು. ಕ್ರೋಧಾವೇಶಕ್ಕಾಗಿ
ಅವಳ ಾದರೋಷ್ಟವು ಅದರಿತು. ಕಮಲದಂತೆ ಕಮನೀಯವಾಗಿರುವ
ಅವಳ ಮುಖವು ಕೆಂಡಕೆಂಡದಂತಾಗಿ ತೋರಿತು.
ಮೇವಾಡ ದೇಶದ ಮಹಾರಾಜರ ಪ್ರಿಯ ಭಗಿನಿಗೆ ಇಂಥ ಅಪ
ಮಾನವೇ? ಕಮಲಃದೇವಿ, ನಿನ್ನಂಥ ಗುಣನುಣಿಯನ್ನು ತನ್ನ ಪ್ರಾಣ
ಪದಕನೆಂದರಿತು ಪ್ರೇಮದಿಂದ ಶಿರಸಾವಹಿಸುವದನ್ನು ಬಿಟ್ಟು, ಶಿರೋಹಿ
ರಾಜನು ಹೀಗೆ ನಿನ್ನೊಡನೆ ಕಟಕನಂತೆ ವರ್ತಿಸಿದನೇ? ಎಂದು ಉದ್ಗಾರ
ತೆಗೆದು ಅಶ್ರುಪೂರ್ಣಾಂಬಕಳಾದ ತಾರಾದೇವಿಯು, ತನ್ನ ಪತಿರಾಜನನ್ನು
೧೪೪ -----------------------------------------------------------------------------
ಕುರಿತು " ಮಹಾರಾಜ, ನಾಳೆ ಸಾಯಂಕಾಲದೊಳಗಾಗಿ ನನ್ನ ಕಮಲಾ
ದೇವಿಯನ್ನು ನನ್ನ ಬಾಹುಪಾಶದಲ್ಲಿ ತಂದಿರಿಸದಿದ್ದರೆ, ನಾನು ಜೀವವ
ನ್ನಿಡಲಿಕ್ಕಿಲ್ಲ * ಎಂದು ಆವೇಶದಿಂದ ಹೇಳಿದಳು.
ಅದೇ ಮಧ್ಯರಾತ್ರಿಯಾಗಿತ್ತು. ನಿತ್ಯದಂತೆ ಶಿರೋಹಿ ರಾಜನು ಆಫು
ತಿಂದು, ತನ್ನ ಹೆಂಡತಿಯೊಡನೆ ವ್ಯಾಜ್ಯವಾಡಿ, ಅದೇ ತನ್ನ ಮಂಚದಮೇಲೆ
ಬಿದ್ದು ಕೊಂಡಿದ್ದನು. ಅಫೀಮಿನ ಮದ ಹಾಗೂ ನಿದ್ರೆಗಳ ಸಂಯೋಗದ
ಚಮತ್ಕಾರವಾದ ಭಾವನೆಯೊಂದಿಗೆ ಅನನು ದೇಹದ ಎಚ್ಚರವನ್ನು ಮರೆಯ
ಲಾರಂಭಿಸಿದ್ದನು. ಮಧ್ಯರಾತ್ರಿಯಲ್ಲಿ ನಿಶಾದೇವಿಯು ತನ್ನ ಮೋಹಿನೀ
ಮಂತ್ರದ ಪ್ರಭಾವದಿಂದ ಸಕಲ ಚರಾಚರ ವಸ್ತುಗಳನ್ನು ನಿಶ್ಚೇಷ್ಟಿತವಾಗಿ
ಮಾಡಿ, ತಾನು ನಿಶ್ಕಂಕೆಯಿಂದ ರಮಣನಾದ ಚಂದ್ರಮನೊಡನೆ ಯಥೇಚ್ಛ
ವಾಗಿ ಆಲಿಂಗನ ಸುಖವನ್ನನುಭನಿಸುತ್ತಿದ್ದಳು. ಅಂಥ ಸಮಯದಲ್ಲಿ,
ಆಜಾನುಬಾಹುವಾದ ಸತ್ವಶಾಲಿಯೋರ್ವನು ಅರಮನೆಯ ಉಪ್ಸರಿಗೆಯನ್ನು
ನೂಲೇಣಿಗಳಿಂದ ಸರಸರನೆ ಏರಿ ಮೇಲಕ್ಕೆ ಹೋದನು. ಆರಮನೆಯ
ವಿಚಿತ್ರವಾದ ಗೋಪುರದಂತೆ ಭವ್ಯವಾಗಿ ಕಾಣುವ ಆ ಮಹಾಪುರುಷನು
ನೆಟ್ಟಗೆ ರಾಜರು ವ.ಲಗಿದ ಮಂದಿರದ ಬಾಗಿಲಕ್ಕೆ ಬಂದವನೇ, ಅದನ್ನು
ಒಳಿತಾಗಿ ಝಾಡಿಸಿ ಒದ್ದನು. ವಜ್ರಾಘಾತದಂತೆ ಪ್ರಖರವಾದ ಆ ಹೊಡೆ
ತಕ್ಕೆ ಬಾಗಿಲನು ಸೀಳಿಬಿದ್ದೆದ್ದಲ್ಲದೆ, ಆ ಸಪ್ಫಳದ ಕಡಾಟವನ್ನು ಕೇಳಿ
ದವರೆಲ್ಲರ ಎದೆಯು ಕೂಡ ಒಡೆದು ಹೋಯಿತು.
ಕಮಲಾದೇವಿಯು. ಭಯಗ್ರಸ್ತಳಾಗಿ ನೋಡುತ್ತಾಳೆ, ಮಂದರ
ಪರ್ವತದಂತೆ ಬಂಧುರವಾದ ಆಕಾರವುಳ್ಳ ತನ್ನ ಅಣ್ಣನಾದ ಪೃಥುರಾಜನ
ಉನ್ನತವಾದ ಮೂರ್ತಿಯನ್ನು ಕಂಡು, ಇಂಥ ಸಮಯದಲ್ಲಿ ಚಿೂರಿನಲ್ಲಿರ
ತಕ್ಕವನಾದ ತನ್ನ ಅಣ್ಣನು ತನ್ನ ರಂಗಮಹಾಲಿನಲ್ಲಿ ಹೀಗೆಂತು ಅಕಸ್ಮಾ
ತ್ತಾಗಿ ಬಂದನೆಂದು ಯೋಚಿಸುತ್ತ ಚಕಿತಳಾಗಿ ಆ ಉಗ್ರಸ್ವರೂಪಿಯನ್ನು
ಮಾತಾಡಿಸಲರಿಯದೆ ನಿಶ್ಚಲಳಾಗಿ ನಿಂತಳು. ಬಾಗಿಲವು ಮುರಿದ ಕಡಾಟದ
ಸಪ್ಪಳಕ್ಕೆ ಶಿಕೋಹಿ ರಾಜನ ಮದನೆಲ್ಲ ಝರ್ರನೇ ಇಳಿದು, ಇದೇನು
ಸಮಾಚಾರವೆಂದು ಅವನೂ ಕಣ್ಣೆರೆದು ನೋಡಿದನು. ಅಬ್ಬಬ್ಬ ! ಯಮ
ಸ್ವರೂಪಿಯಾದ ಪೃಥುರಾಜನು ಕ್ರೋಧಾವಿಷ್ಟನಾಗಿ ಬಿಚ್ಚುಗತ್ತಿಯನ್ನೆತ್ತಿ
೧೪೫ ----------------------------------------------------------------------
ಕೊಂಡು ಇದಿರಿನಲ್ಲಿಯೇ ನಿಂತಿದ್ದೆನು ! ಇದೇನು ಸ್ವಪ್ನವೋ ಮತಿಭ್ರಮವೋ
ಶಿರೋಹಿರಾಜನಿಗೆ ತಿಳಿಯಲೊಲ್ಲದಾಯಿತು. ಶಸ್ತ್ರವನ್ನೊಗೆದು ನಿಶ್ಚಿಂತ
ನಾಗಿ ಮಲಗಿಕೊಂಡಿರುವ ಪೃಥುರಾಜನ ಶಾಂತಮೂರ್ತಿಯನ್ನು ಕಂಡೇ
ಹೆದರುವ ಆ ಬಡ ಶಿರೋಹಿ ರಾಜನು ಶಸ್ತ್ರಪಾಣಿ ಯಾದ ಆ ಯಮದೇವ
ರನ್ನು ಹಾಗೆ ಅಕಸ್ಮಾತ್ತಾಗಿ ಕಂಡು ಎಷ್ಟು ಭಯಗ್ರಸ್ತನಾಗಿದ್ದನೆಂಬ
ದನ್ನು, ಕೈಸೆಟಸಿ ಕಣ್ಣುಬಾಯಿಗಳನ್ನು ಒಳಿತಾಗಿ ತೆರೆದುಕೂಂಡು ಹೌಹಾರಿ
ನಿಂತಿರುವ ಶಿರೋಹಿರಾಜನ ಸ್ಥಿತಿಯೇ ತಾನಾಗಿ ಹೇಳುತ್ತಿತ್ತು.
"ರಾಣಾ, ಈ ನಿನ್ನ ಹೆಂಡತಿಯು ಯಾರ ತಂಗಿ ಎಂಬದನ್ನು
ಮರೆತು, ನಿರಪರಾಧಿಯಾದ ಅವಳೊಡನೆ ಕ್ರೂರತನದಿಂದ ವರ್ತಿಸುವಿಯಾ?”
ಎಂದು ಪೃಥುರಾಜನು ಕಾಲಮೇಘದಂತೆ ಗದ್ದರಿಸಿ ಕೇಳಿದನು.
ಇದು ಸ್ವಪ್ನವಲ್ಲ ನಿಜವಾಗಿ ಪೃಥುರಾಜನೇ ಬಂದಿರುವನೆಂಬದನ್ನರಿತ
ಕೂಡಲೆ ಶಿರೋಹಿರಾಜನ ಕೈಕಾಲುಗಳೇ ತಣ್ಣಗಾದವು. ಚಳಿಯಿಂದ ಸೇಡು
ಹಿಡಿದವರಂತೆ ಅನನು ಗದಗದನೇ ನಡುಗಿದನು.
" ಮಹಾರಾಣಾಜೀ, ಈ ಅಧುಮಹಿಂದ ಸರ್ವಥಾ ತಪ್ಪುಯಿತು !"
ಎಂದು ಹಲ್ಲುಗಟಗರೆಯುತ್ತ ನುಡಿದು, ಭಯಗ್ರಸ್ತನಾದ ರಾಜನು:
ಪೃಥುರಾಜನ ಮುಂದೆ ಸಾಷ್ಟ್ರಾಂಗವೆರಗಿದನು.
“ನೀಚಾ | ಇಷ್ಟರಿಂದಲೇ ನಿನಗೆ ಕ್ಷಮೆ ದೊರೆಯಲಾರದು. ಎದ್ದು
ನಿಲ್ಲು ಹೇಳುತ್ತೇನೆ! "
" ಆಜ್ಞೆ '' ಎಂದು ಆ ಜಂಬುಕನು ಬೊಗಸೆಯನ್ನೊಡ್ಡಿ ಕೊಂಡು:
ಕೈಕಾಲು ನಡುಗಿಸುತ್ತ ನಿಂತನು.
" ಇಕೋ, ಇಲ್ಲಿ ನಿನ್ನ ಅರ್ಧಾಂಗಿಯ ಪಾದರಕ್ಷೆಗಳಿವೆ. ಅವುಗಳನ್ನು
ನೀನು ತಲೆಯ ಮೇಲೆ ಹೊತ್ತುಕೊಂಡು ನಿನ್ನ ರಾಣಿಯ ಪಾದಗಳಿಗೆ
ನಮಸ್ಕರಿಸಿದೆಯಾದರೆ ಮಾತ್ರ ನೀನು ಜೀವದಿಂದುಳಿಯುವಿ. ಇಲ್ಲವಾದರೆ
ಐದು ನಿಮಿಷಗಳಲ್ಲಿ ನಿನ್ನ ಶಿರಸ್ಸನ್ನು ಧಡದಿಂದ ಇಳಿಸಿಕೊಡುವೆನು;
ಗೊತ್ತಿರಲಿ!” ಎಂದು ಪೃಥುರಾಜನು ನುಡಿದು ಝಗಝಗಿಸುವ ತನ್ನ
ಖಡ್ಗವನ್ನು ರಭಸದಿಂದ ನೆವರಿ ಹಿಡಿದನು
ಮಮತಾಳುವಾದ ತನ್ನ ಅಣ್ಣನು ಮನೆಯಲ್ಲಿ ಯಾವಾಗಲೂ ಪ್ರಸನ್ನ
೧೪೬ -----------------------------------------------------------------------------
ಮುಖನುಗಿರುವದನ್ನು ನೋಡುತ್ತಿರುವ ಕಮಲಾದೇನಿಯು ಅವನಿಷ್ಟು
ಉಗ್ರಮೂರ್ತಿಯಾಗುವನೆಂಬದನ್ನು ಕನಸಿನಲ್ಲಿ ಕೂಡ ನೆನಿಸಿದ್ದಿಲ್ಲ. ಪೃಥು
ರಾಜನನ್ನು ಮಾತಾಡಿಸುವೆನೆಂದರೆ ಅವಳಿಗೆ ಬಾಯಿಬರಲೊಲ್ಲದು. ನಡೆದು
ಮುಂದಕ್ಕೆ ಬರುವೆನೆಂದರೆ ಅವಳ ಕಾಲುಗಳೇ ಏಳಲೊಲ್ಲವು. ಅಷ್ಟರಲ್ಲಿ
ಮೇಷಹೃದಯನಾದ ಶಿರೋಹಿರಾಜನು ಜೀವಕ್ಕೆ ಅ೦ಜಿ ಅಯ್ಯೋ, ಕ್ಷಮಿಸಿ
ಸಿರಿ! ಮಹರಾಣಾಜೀ, ತನ್ಮು ಆಜ್ಞೆಯಂತೆ ಈಗಲೇ ಮಾಡಿತಿೀರುವೆನು"
ಎಂದು ನುಡಿದವನೇ ಆ ಹೇಡಿಯು ತನ್ನ ಹೆಂಡತಿಯ ಪಾದರಕ್ಷೆಗಳನ್ನು
ತಲೆಯ ಮೇಲೆ ಹೊತ್ತು ಕೊಂಡು, ಅವಳಿಗೆ ಪ್ರಣಾಮ ಮಾಡಿದನು.
ಪಾಪ ! ಭಯಗ್ರಸ್ಮನಾದ ತನ್ನ ಬೀಗನು ಜೀವದ ಆಸೆಗಾಗಿ ಮಾಡಿದ
ಈ ಪ್ರಕಾರದ ಕೃತಿಯನ್ನು ನೋಡಿ, ಪೃಥುರಾಜನಿಗೆ ಅತಿಶಯವಾದ
ವಿಷಾದವಾಯಿತು. ಅವನು ಆದರದಿಂದ ಶಿರೋಹಿರಾಜನನ್ನು ಅಪ್ಪಿಕೊಂಡು
ಕಣ್ಣಿಗೆ ನೀರುತಂದು ""ರಾಣಾಜೀ ಆವೇಶದ ಭರದಲ್ಲಿ ನನ್ನಿಂದ ಅನುಚಿತ
ವಾಯಿತು. ನೀವು ಎಷ್ಟಾದರೂ ನನ್ನ ಭಗಿನಿಯು ಪತಿಗಳು. ಇಂಥಕ್ಕತ್ಯ
ವನ್ನು ನಿನ್ಮು ಕೈಯಿಂದ ಮಾಡಿಸಿದ್ದು ನನ್ನಡೊಂದು ದೊಡ್ಡ ತಪ್ಪೇ ಸರಿ
ದಯಮಾಡಿ ನನ್ನನ್ನು ಕ್ಷಮಿಸಿರಿ '' ಎಂದು ಬೇಡಿಕೊಂಡನು.
ಹೇಡಿಯ ರಟ್ಟಿಗಳಲ್ಲಿ ದಂಡಿಸುವ ತ್ರಾಣವಿಲ್ಲದಿದ್ದರೂ ಅನನ ಹೊಟ್ಟೆ
ಯಲ್ಲಿ ದೀರ್ಥದ್ವೇಷಕ್ಕೆ ಬೇಕಾದಷ್ಟು ಅವಕಾಶವಿರುವದುಂಟು, ಶಿರೋಹಿ
ರಾಜನು ಶುದ್ಧಾಂತಃಕರಣದಿಂದ ಕ್ಷಮೆಯನ್ನು ನೀಡಲಿಲ್ಲ. ತೋರಿಕೆಯಲ್ಲಿ
ಅವನು " ಏನು ಚಿಂತೆಯಿಲ್ಲ? ಎಂದು ಹೇಳಿ, ನಡೆದುಹೋದದ್ದನ್ನೆಲ್ಲ
ಮರೆತುಬಿಟ್ಟಿವನಂತೆ ನಟಿಸಿ ಪೃಥುರಾಜನೊಡನೆ ಯಥೇಷ್ಟವಾಗಿ ಮಾತಾ
ಡುತ್ತ ಕುಳಿತನು.
ತನ್ನ ಬೀಗರೂ ಮೇವಾಡದ ಮಹಾರಾಣಾಜಿಯವರೂ ಆದ ಪೃಥು
ರಾಜರು ಬಂದಿರುವರೆಂದು ಹೇಳಿ, ಶಿರೋಹಿರಾಜನು ಮರುದಿವಸ ಸಂಭ್ರ
ಮದ ಭೋಜನ ಮಾಡಿಸಿದನು. ಭೋಜನೋತ್ತರವಾಗಿ ನೃತ್ಯಗಾಯನ
ಗಳಾದ ಬಳಿಕ ಪೃಥುರಾಜನು, ತನ್ನ ಭಗಿನೀಪತಿಯ ಅನುಜ್ಞೆಯನ್ನು ತೆಗೆದು
ಕೊಂಡು ಚಿತೂರಿಗೆ ಹೊರಟನು. ಆಗ ಶಿರೋಹಿರಾಜನು ಒಳ್ಳೇ ನಮ್ರತೆ
ಯಿಂದ ಪೃಥುರಾಜನ ಕಾಲ್ಗೆರಗಿ " ಮಹಾರಾಣಾಜೀ, ಹೋಗಿಬರುವವ
೧೪೭---------------------------------------------------------------------
ರಾಗಿರಿ, ಮಿಠಾಯಿಯ ಕರಡಿಗೆಯನ್ನು ದಯಮಾಡಿ ಸ್ವೀಕರಿಸಿರಿ.
ಶಿರೋಹಿಯ ಮಿಠಾಯಿಯೆಂದರೆ ಹೆಸರಾದದ್ದು. ಮಾರ್ಗದಲ್ಲಿ ನೀರಡಿಕೆ
ಯಾದಾಗ ಈ ಮಿಠಾಯಿಯನ್ನು ಮಹಾರಾಣುಜಿಯನರು ತುಸುತಿಂದು
ನೀರು ಕುಡಿದರೆ ಈ ಶಿರೋಹಿರಾಜನು ಕೃತಕೃತ್ಯನಾಗುವನು ” ಎಂದು
ಪ್ರಾರ್ಮಿಸಿ ಆ ಕರಡಿಗೆಯನ್ನು ಪೃಥುರಾಜನ ಸ್ವಾಧೀನಮಾಡಿದನು.
ಜಡಮತಿಯಾದ ವಿಧಾತನೇ, ಕ್ಷುದ್ರತನುವಾದ ಸರ್ಪನಲ್ಲಿ ವಿಷವನ್ನೂ
ಕ್ಷುದ್ರತರನಾದ ಹೇಡಿಯ ಹೃದಯದಲ್ಲಿ ದುರ್ಧರವಾದ ಮತ್ಸರವನ್ನೂ
ತುಂಬಿ ನೀನು ಜಗತ್ತಿನಲ್ಲಿ ಎಷ್ಟಾದರೂ ಅನರ್ಥಗಳನ್ನು ಉಂಟುಮಾಡುವಿ !
ಸೂಕ್ಷ್ಮಜಂತುವಾದ ಇರುವೆಯು ಗಜೇಂದ್ರನ ಸೊಂಡೆಯಲ್ಲಿ ಸೇರಿ ಆ
ಮಹಾಸತ್ವನ ಮರಣಕ್ಕೆ ಕಾರಣವಾಗಬೇಕೆಂದರೆ ಎಂಥ ಅನರ್ಥವಿದು |
ವಿಷಪುಂಜನಾದ ಶಿರೋಹಿರಾಜನು, ನಿರ್ವಲಾಂತಃಕರಣದವನಾದ ಪೃಥು
ರಾಜನ ಕೋರಿಕೆಯ ಮೇರೆಗೆ ಕ್ಷಮೆಯನ್ನು ಕೊಡದಲೆ, ಅವನನ್ನು ಕೊಲ್ಲುವ
ಆಲೋಚನವನ್ನು ಬಗೆದನೇ? ವಿಷಯಾಂಧನಾದ ಶಿರೋಹಿಯೇ, ಕವಡೆಯ
ಬೆಲೆಯ ನಿನ್ನ ಮರ್ಯಾದೆಯೇನು, ಅದಕ್ಕಾಗಿ ನೀನೆಂಥ ಘೋರತರವಾದ
ಘಾತವನ್ನು ಮಾಡಿದಿ!
ಆ ಭಯಂಕರವಾದ ಕರಂಡದಲ್ಲಿದ್ದ ಮಿಠಾಯಿಯು ವಿಷಮಯ
ವಾಗಿತ್ತು. ಶಿರೋಹಿರಾಜನೆಂಬ ಕಾಳಸರ್ಪನು ತನ್ನ ಮತ್ಸರವೆಂಬ ವಿಷವನ್ನು
ಆ ಮಿಠಾಯಿಯಲ್ಲಿ ಕಾರಿಕೊಂಡಿದ್ದನು. ಕುಕಲ್ಪನಾರಹಿತನಾದ ಪೃಥುರಾಜ
ನಿಗೆ ತಾನು ತೆಗೆದುಕೊಂಡ ಕರಡಿಗೆಯಲ್ಲಿ ತನ್ನ ಮೃತ್ಯುವಿರುವದೆಂದು ತಿಳಿಯ
ಲಿಲ್ಲ. ಮಧ್ಯಾ ಹ್ನದ ಬಿಸಿಲಿನಿಂದ ತ್ರಸ್ತನಾದ ಆ ಮಹಾರಾಜನು ಮಾರ್ಗದಲ್ಲಿ
ಹರಿಯುವ ನಿರ್ಮಲವಾದದ್ದೊಂದು ಜಲಪ್ರವಾಹವನ್ನು ಕಂಡು, ಅಲ್ಲಿಳಿದು,
ಕರಂಡದಲ್ಲಿಯ ಮಿಠಾಯಿಯನ್ನು ಸೇವಿಸಿ, ಯಥೇಚ್ಛವಾಗಿ ಜಲಪಾನವನ್ನು
ಮಾಡಿದನು,
ಆಯಿತು! ತತ್‌ಕ್ಷಣನೇ ಆ ಘೋರತವಾದ ವಿಷವು ಕ್ಷತ್ರಿಯಾಲಂ
ಕಾರನಾದ ಪುರುಷಸಿಂಹನ ಸರ್ವಾಂಗಗಳಲ್ಲೆಲ್ಲ ಭೇದಿಸಲಾರಂಭಿಸಿತು.
ತನ್ನ ಮರಣವೇ ಬಂದಿತೆಂದು ತಿಳಿದು ಪೃಥುರಾಜನು ಕುದುರೆಯನ್ನೇರಿ
ಕೊಂಡು ಧಾವಿಸಿ ಚಿತೂರಿನ ಅಗಸೆಯ ಬಾಗಿಲಲ್ಲಿ ಬರುವಷ್ಟರಲ್ಲಿಯೇ
೧೪೮ -----------------------------------------------------------------------
ಅವನೆ ಅಂತರೆಂಗದಲ್ಲಿರುವ ಮಹಾಜ್ಯೋತಿಯು ನಿರ್ವಾಣವನ್ನು ಹೊಂದಿತು!
ರಣಧುರಂಧರನ್ಕೂ ವಿಜಯಲಕ್ಷ್ಮಿಯ ಪ್ರೀತಿಯ ನಿಧಾನನೂ,
ಔದಾರ್ಯಾದಿ ಗುಣಸಂಪತ್ತಿಗೆ ತವರಮನೆಯೂ ಆಗಿರುವ ಮಹಾರಾಣಾ
ಪೃಥುರಾಜನು, ಹೀಗೆ ಅಕಾಲದಲ್ಲಿ ಮೃತ್ಯುವಶನಾಗದಿದ್ದರೆ ಭರತಖಂಡದ
ಇತಿಹಾಸವೇ ಬದಲಾಗಿಹೋಗುತ್ತಿತ್ತು ! ಉಪಾಯವಿಲ್ಲ. ಭಾರತೀಮಾಕೆ,
ನೀನು ತಿಳಿದವಳು. ನೀನಿನ್ನು ವೇದಾಂತದ ಮಾರ್ಗವನ್ನ ವಲಂಬಿಸಿ ಪರಮಾರ್ಥ
ವನ್ನು ಪಡೆಯಬೇಕು !
===========================================
೧೪೯-----------------------------------------------------------------------
'ರಾಖೀ' ಬಂಧನ ಬಂಧುತ್ವವು
ನಿಬಿಡವಾದ ಅರಣ್ಯದಲ್ಲಿ ಸಿಂಹ ಶಾರ್ದೂಲಗಳೆರಡು ಭಯಂಕರವಾಗಿ
ಗರ್ಜಿಸುತ್ತೆ ಕೆಣಕಿ ಯುದ್ಧವನ್ನು ಮಾಡುತ್ತಿರುವದನ್ನು ದೂರದಲ್ಲಿ ಕುಳಿತು
ನೋಡುವದು ರಮ್ಯವೇ ಸರಿ. "ಯುದ್ಧಸ್ಯ ಕಥಾ ರಮ್ಯಾ. " ಒಂದನ್ನೊಂದು
ಬಿರಿಗಣ್ಣಿನಿಂದ ನೋಡುವದೂ, 'ಹೋಂ' ಎಂದು ಕೂಗುತ್ತೆ ಪಂಜರಗ
ಳನ್ನೆತ್ತಿ ನೆಲಕ್ಕೆ ಅಪ್ಪಳಿಸುವದೂ, ಘಟಸರ್ಪಗಳಂತೆ ಭವ್ಯವಾಗಿ ಕಾಣುವ
ಬಾಲಗಳನ್ನು ಎಡೆಬಿಡದೆ ಉದ್ರೇಕದಿಂದ ಬೀಸುತ್ತಿರುವದೂ, ಅಡರ್ ಅಡರ್
ಎಂದು ಒಂದನ್ನೊಂದು ಅಡರಿಕೊಂಡು ಕಡಿಯುವದೂ ನಮಗೆ ವಿನೋದವೇ.
ಇಂಥ ಯುದ್ಧದಲ್ಲಿ ಸಿಂಹವು ಸೋತರೂ ಚಿಂತೆಯಿಲ್ಲ; ಶಾರ್ದೂಲವು
ಸೋತರೂ ಚಿಂತೆಯಿಲ್ಲ ಸತ್ವ ಶಾಲಿಯು ಸೋತರೂ ನಾವು ಅಭಿನಂದಿ
ಸುತ್ತೇನೆ, ಗೆದ್ದರೂ ಅಭಿನಂಯತ್ತೇವೆ. ಆದರೆ ಕ್ರೂರವಾದ ಹುಲಿಯು
ಬಡ. ಹುಲ್ಲೆಯನ್ನು ನಿರ್ದಯವಾಗಿ ಮುರಕೊಂಡು ನುಂಗುತ್ತಿರುವದನ್ನು
ಕಂಡರೆ ನಮ್ಮಲ್ಲಿ ಕನಿಕರವುಂಟಾಗಿ, ನಾವು ಆ ನಿಘೃಣನಾದ ವ್ಯಾಫ್ರನನ್ನೇ
ನಿಂದಿಸುತ್ತೇವಲ್ಲದೆ, ಪಾಪ, ಸತ್ತು ಹೋದ ಹುಲ್ಲೆಯು ಸೋತಿತೆಂದು ಅದನ್ನು
ಅವಮಾನಿಸುವದಿಲ್ಲ!
ಧೂರ್ತನೂ ಸಾಹಸಿಯೂ ಪರಾಕ್ರಮಿಯೂ ಆದ ಸುಲ್ತಾನ ಬಾಬ
ರನು ತನಗೆ ಸಮಾನನಾದ ವೀರನೆಂದು ತಿಳಿದು ಸಮರಸಿಂಹನಾದ ಮೇವಾಡದ
ರಾಣಾ ಸಂಗರಾಜನು ಒಳ್ಳೇ ಉತ್ಸಾಹದಿಂದಲೂ ಶೌರ್ಯದಿಂದಲೂ ಆ
ತಾರ್ತರನೊಡನೆ ಸಮರಾಂಗಣದಲ್ಲಿ ಪ್ರಚಂಡವಾದ ಸಂಗ್ರಾಮವನ್ನು ಮಾಡಿ
ದನು. ಸಮಾನರಾದ ವೀರರು ಕಾದುತ್ತಿದ್ದರೆ ಕಾದುವವರಿಗೂ ಸ್ಫೂರ್ತಿಯ,
ಅವರ ಮಹಾತ್ಮ್ಯವನ್ನು ಕೊಂಡಾಡುವ ಇತಿಹಾಸಕರ್ತರಿಗೂ ಉತ್ತೇಜನವು.
ಯುದ್ಧದಲ್ಲಿ ಸೋಲು ಗೆಲವು ದೈವಾಧೀನವಾದ ಮಾತು. ಆದರೆ ಮನೆ
ಮುರುಕನಾದ ಸ್ವಾಮಿದ್ರೋಹಿಯೋರ್ವನು ಶತ್ರುಗಳಿಗೆ ಆನುಕೂಲನಾಗಿ
ತನ್ನ ರಾಜನ ಗೋಣು ಮುರಿದನೆಂದು ಕೇಳಿದರೆ ಮಾತ್ರ ಕೇಳುವವರಿಗೆ
ತ್ವೇಷವುಂಟಾಗಿ ಅವರು ವಿಜಯಿಯನ್ನು ಸರ್ವಥಾ ಅಭಿನಂದಿಸುವದಿಲ್ಲ,
ಓರ್ವ ದ್ರೋಹಿಯೇ ಸಂಗರಾಜನ ಅಪಜಯಕ್ಕೆ ಕಾರಣನಾದನೆಂದು
೧೫೦ ------------------------------------------------------------------------------
ಪ್ರಾಮಾಣ್ಯರಾದ ಕೆಲಜನ ಇತಿಹಾಸಕಾರರ ಅಭಿಪ್ರಾಯವಿರುವದು. ಬಾಬರ
ನಿಗೆ ತಾನು ಶಿಕರಿಯ ಯುದ್ಧದಲ್ಲಿ ಜಯಶಾಲಿಯೆಂದೆನ್ನಿಸಿಕೊಂಡಷ್ಟೇ
ಸಾಕಾಗಿ ಹೋಯಿತು. ಮು೦ದವನು ಸಂಗರಾಜನ ಹೆಸರನ್ನು ತೆಗೆಯಲಿಲ್ಲ;
ಮೇವಾಡದ ಸೀಮೆಯಲ್ಲಿಯೂ ನಿಲ್ಲಲಿಲ್ಲ.
ಸಂಗರಾಜನು ವೀರಸ್ವರ್ಗವನ್ನು ಹೊಂದಿದ ಬಳಿಕ ಅವನ ಹೆಂಡರು
'ತನ್ನ ಮಗನಿಗೆ ರಾಜ್ಯವಾಗಲಿ ತನ್ನ ಮಗನಿಗೆ ರಾಜ್ಯವಾಗಲಿ' ಎಂದೆಣಿಸಿ
ಅನೇಕವಾದ ಕುಚೋದ್ಯಗಳನ್ನು ಮಾಡಿದರು. ಸಂಗರಾಜನು ಒಳ್ಳೇ ಸಾಹಸ
ದಿಂದ ಗೆದ್ದುಕೊಂಡಿದ್ದ ರಣದಂಬೂರ ಎಂಬ ಮಹತ್ವದ ಕೋಟೆಯನ್ನು
ಬಾಬರನಿಗೆ ಕೊಡಮಾಡಿ ತನ್ನ ಮಗನ ಮೇಲೆ ಅನುಗ್ರಹವಿರಬೇಕೆಂದು ಓರ್ವ
ರಾಣಿಯು ಹೇಳಿಕೊಂಡಳು ಪೃಥುರಾಣಾಜಿಯು ತನ್ನ ಶತ್ರುವಾದ ಮುಝ
ಪರಖಾನನನ್ನು ಕೊಂದು ಅವನ ಕಡಿದ ರುಂಡದ ಮೇಲಿದ್ದ ಮುಕುಟವನ್ನು
ವಿಜಯಚಿಹ್ನನೆಂದು ಕಾದಿಟ್ಟುಕೊಂಡಿದ್ದನು. ಅದನ್ನು ಮತ್ತೋರ್ವಳು
ಬಾದಶಹನಿಗೆ ಕೊಟ್ಟು ತನ್ನ ಮಗನಿಗೆ ಸಿಂಹಾಸನವಾಗತಕ್ಕದ್ದೆಂದು ಪ್ರಾರ್ಥಿಸಿ
ದಳು. ಬಹುಜನ ಹೆಂಡರಿರುವ ಪರಿಣಾಮವೇ ಕೆಟ್ಟದ್ದು. ಹೆಂಡರಿಗೂ
ಸುಖವಿಲ್ಲ, ಮಾಡಿಕೊಂಡವನಿಗೂ ಸುಖವಿಲ್ಲೆಂದು ಅವನು ಹೊಡಿಬಡಿಯದಲೆ
ತಾನಾಗಿ ಒಪ್ಪಿ ಕೊಳ್ಳುವದುಂಟು.
ಹಿರಿಯ ಹೆಂಡರು ಹೀಗೆ ಮಾಡುತ್ತಾರೆ ಬಾ ಎಂದು, ಚಿಕ್ಕವಳಾದ
ಕರ್ಣಾವತಿದೇವಿಯು ತಾನೊಂದು ಉಪಾಯವನ್ನು ಮಾಡಿ ನೋಡಿದಳು.
" ರಾಖೀಬಂಧನ” ನೆಂದು ಅವಳೊಂದು ರತ್ನಖಚಿತವಾದ ಕಂಕಣವನ್ನು
ಹೂಮಾಯುನನಿಗೆ ಕಳಿಸಿದಳು. ಮಹಾ ಅಭಿಮಾನಿಯಾದ ರಜಪೂತ
ರಾಜಕುಲವಧುವೂ, ಮಹಾರಾಣಾ ಸಂಗ್ರಾಮಸಿಂಹನ ಪ್ರೀತಿಯ ರಾಣಿಯೂ
ಆದ ಕರ್ಣಾವತಿಯು ತನ್ನ ಬಂಧುತ್ವವನ್ನು ಬಯಿಸಿ ಆರ್ತಳಾಗಿ ತನಗೆ
ರಾಖೀ ಕಂಕಣವನ್ನು ಕಳಿಸಿದ್ದನ್ನು ಕಂಡು ದಿಲ್ಲಿಯ ಚಕ್ರವರ್ತಿಯಾದ
ಹೂಮಾಯುನನಿಗೆ ಪರಮ ಸಂತೋಷವಾಯಿತು. ಆ ರಾಣಿಯ ಕೃತಿಯಿಂದ
ತನಗೆ ದೊಡ್ಡದೊಂದು ಪದವಿಯೇ ಬಂದಿತೆಂಬ ಅಭಿಮಾನದ ಉದ್ರೇಕ
ದಿಂದ ಅವನು ಆ ಕಂಕಣವನ್ನು ತಲೆಯ ಮೇಲಿಟ್ಟುಕೊಂಡು ಕುಣಿದನು.
ನಿಮ್ಮ ಬಂಧುತ್ವನನ್ನು ನಾನು ಅಂಗೀಕರಿಸಿದೆನೆಂದು ಸೂಚಿಸುವದಕ್ಕಾಗಿ
೧೫೧ ----------------------------------------------------------------------------
ಅವನೊಂದು ಮುತ್ತಿನ ಸರವನ್ನು ರಾಣಿಗೆ ಪ್ರತಿಯಾಗಿ ಕಳಿಸಿದನು. ಹೀಗೆ
ಪ್ರತಿಯಾಗಿ ಕಳಿಸಿದ ವಸ್ತುವಿಗೆ " ಕಚಲಿ” ಎಂಬ ಹೆಸರು.
ರಜಪುತಸ್ಥಾನದೊಳಗೆ ವಸಂತಕಾಲದಲ್ಲಿ ರಾಖೀಬಂಧನ ಮಹೋ
ತ್ಸವವಾಗುತ್ತದೆ. ಆ ಉತ್ಸವದ ದಿವಸ ಪುರುಷ ಪುರುಷರು ಅನೋನ್ಯರ
ಬಂಧುಭಾವವನ್ನು ಬಯಿಸಿ ರಾಖೀಬಂಧನವನ್ನು ಮಾಡಿಕೊಳ್ಳುತ್ತಿರುವದು
ಆಶ್ಚರ್ಯದ ಮಾತಲ್ಲ. ಪ್ರೌಡೆ ತರುಣಿಯರೂ ವಿಧವೆ ಅವಿವಾಹಿತೆಯರೂ
ವೀರ ಜನರ ಬಂದುತ್ವನನ್ನು ಬಯಿಸಿ ಅವರಿಗೆ ರಾಖೀ ಕಂಕಣನನ್ನು
ಸಂಕೋಚವಿಲ್ಲದೆ ಕಳಿಸುತ್ತಾರೆ. (ಇದು ಕೇವಲ ರೇಶಿಮೆಯ ದಾರ ಮಾತ್ರ
ವಾಗಲೀ, ರತ್ನಖಡಿತವಾದ ಪೋಚೆಯಾಗಲೀ ಇರಬಹುದು.) ಸಂಕಟ
ಸಮಯವವಿದ್ದಾಗಾಗಲಿ ಇನ್ನೂ ಬೇರೆ ಆಪರಿಹಾರ್ಯವಾದ ಕಾರಣವಿದ್ದಾ
ಗಾಗಲಿ ಅಬಲೆಯರು ತಮ್ಮ ಸಂರಕ್ಸಣಕ್ಕಾಗಿ ಇಂಥ ರಾಖೀ ಕಂಕಣವನ್ನು
ಕೊಟ್ಟು ವೀರರನ್ನು ತಮ್ಮ ಧರ್ಮಬಂಧುಗಳನನ್ನಾಗಿ ಮಾಡಿಕೊಳ್ಳುವದು
ಅಲ್ಲಿ ರೂಢಿಯಾಗಿದೆ. ಪ್ರಣಯಿಗಳಾಗಲ್ಲಿ ಕಾಮಪರವಶರಾಗಲಿ ಇಂಥ
ಗೋಜಿಗೆ ಹೋಗುವದಿಲ್ಲ. ಪ್ರಿಯನನ್ನು ಬಂಧುವನ್ನುಗಿ ಯಾವ ಚತುರೆಯು
ಮಾಡಿಕೊಳ್ಳುವಳು? ಆದ್ದರಿಂದ ಪುರುಷನಿಗೆ ರಾಖೀ ಕಂಕಣವನ್ನು
ನಾರಿಯು ಕಳಿಸಿದರೆ. ಅದು ದೋಷವೆಂದೆನಿಸುವದಿಲ್ಲ. ರಾಖಿಯನ್ನು
ಸ್ವೀಕರಿಸಿದ ಪುರುಷನು ತಾನು ಆ ಅಬಲೆಯ ಧರ್ಮಬಂಧುವಾದೆನೆಂದು
ಸೂಚಿಸುವದಕ್ಕಾಗಿ ಅವನು ಆವಳಿಗೆ "ಕಚಲೀ'' ಎಂಬದೊಂದು ಕಂಕಣ
ವನ್ನು ಕೊಡುತ್ತಾನೆ. ಈ ಕಂಕಣವಾದರೂ ಹತ್ತಿಯ ದಾರವಾಗಲೀ
ಮುತ್ತಿನ ಹಾರವಾಗಲೀ ಇರಬಹುದು. ಪದಾರ್ಥದ ಬೆಲೆಯಲ್ಲಿ ಮಹತ್ವವಿಲ್ಲ;
ರಾಣಿಯಾದವಳು ವಜ್ರದ ಕಂಕಣವನ್ನು ಕೊಟ್ಟರೆ ಬಡವನಾದನನು ಒಂದು
ನೂಲಿನ ಎಳೆ ಕಳಿಸಿದರೂ ಆಯಿತು,
ಈ ಸಾಂಪ್ರದಾಯವು ಹೇಗೆ ಹುಟ್ಟಿತಿಂಯ ಹೇಳಲಿಕ್ಕೆ ಬರುವದಿಲ್ಲ.
ಕಂಕಣವನ್ನು ಸ್ವೀಕರಿಸಿದ ವೀರನು ಮಾನಿನಿಯರ ಮಾನರಕ್ಷಣಕ್ಕಾಗಿ ತನ್ನ
ಪ್ರಾಣವನ್ನು ಕೊಡಲಿಕ್ಕೆ ಕೂಡಾ ಹಿಂದೆಮುಂದೆ ನೋಡುವವನಲ್ಲ.
ಆದರೆ ಮೈಮೇಲೆ ಗಂಡಾಂತರವನ್ನು ತಂದುಕೊಂಡು ಮಾನಿನಿಯ ರಕ್ಷಣ
ವನ್ನು ಮಾಡಿಬಂದ ವಿಜಯಿಗೆ ಪ್ರತಿಫಲವಾಗಿ ಆ ಲಲನೆಯ ಪ್ರೆಮಕಟಾಕ್ಷ
೧೫೨ -----------------------------------------------------------------------
ವಾಗಲಿ ಎಳೆನಗೆಯಿಂದ ಕೂಡಿದ ಒಂದು ಸವಿಮಾತಾಗಲಿ ದೊರಕುವಂತಿಲ್ಲ
ಕಂಡಿರಾ! ಆ ಕನ್ನೆಯು ಅವನ ಕಣ್ಣಿ ಗೆ ಕೂಡ ಬಿದ್ದವಳಲ್ಲ |
ಅವಳು ಅವನ ಧರ್ಮಭಗಿನಿ ಯಾಗಿರಲಿಲ್ಲವೆ ? ಯುರೋಪದಲ್ಲಿ ಇಂಥ
ವೀರನಿಗೆ ಆ ಕಾಮಿನಿಯೊಡನೆ ನಗೆಯಾಡಿ ಕೆಲಿಯಲಿಕ್ಕೆ ಅಡ್ಡೀ ಇಲ್ಲ; ಆ
ವಿಲಾಸಿನಿಯ ಹಸ್ತವನ್ನು ಚುಂಬಿಸಿದರೂ ಬೇಡೆನ್ನುವವರಿಲ್ಲ; ಆದರೆ
ರಜಪೂತ ವೀರನಿಗೆ ತಾನೋರ್ವ ಮಾನಿನಿಯ ಧರ್ಮಬಂಧುವಾದೆನೆಂಬ
ಅಭಿಮಾನವೊಂದೇ ಸಾಕು.
ಇಂಥ ಬಂಧುಭಾವದ ಮಹತ್ವವೂ ಅದರ ಸ್ವಾರಸ್ಯವೂ ದಿಲ್ಲಿಯ
ತರುಣ ಚಕ್ರವರ್ತಿಯಾದ ಹುಮಾಯುನನಿಗೆ ತಿಳಿದಿತ್ತಾದ್ದರಿಂದ ಅವನು
ಒಳ್ಳೇ ಆದರದಿಂದ ಕರ್ಣಾವತೀ ರಾಣಿಯ ರಾಖಿಯನ್ನು ಸ್ವೀಕರಿಸಿ ನಿಷ್ಕಪಟ
ವಾದ ಬಂಧುಭಾವದಿಂದ ಅವನು ಅವಳಿಗೆ " ಕಚಲಿ" ಯನ್ನು ಸಮರ್ಪಿಸಿ
ದ್ದನು. ವಿಮಲಶರವಾಗಿಯೂ ವಿಶ್ವಾಸ -ನ್ಯಾಸವಾಗಿಯೂ ವಿನೂತನ
ವಾಗಿಯೂ ಇರುವ ಈ ರಜಪೂತಾನಿಯರ ರೂಢಿಯನ್ನು ಕಂಡು
ಹೂಮಾಯುನನ ಮನಸ್ಸಿನಲ್ಲಿ ಒಂದು ಪ್ರಕಾರದ ಗೌರವವುಂಟಾಯಿತು.
ಮೇವಾಡದ ಮಹಾರಾಣಿಯು ತನ್ನ ಧರ್ಮಭಗಿನಿಯೂ, ಅವಳ ಮಗನಾದ
ಉದಯಸಿಂಸನು ತನ್ನ ಸೋದರಳಿಯನಾದನೆಂದು ನಂಬಿ ಆ ಚಕ್ಕವರ್ತಿಯು
ಅಭಿಮಾನವನ್ನು ತಾಳಿ ತನ್ನ ಕೈಲಾದಮಟ್ಟಿಗೆ ಅವರಿಗೆ ಸಹಾಯ ಮಾಡುವೆ
ನೆಂದು ಅವನು ಅಭಿನಯವಚನನ್ನಿತ್ತನು,
ಮುಂದೆ ಕೆಲವು ವರ್ಷಗಳಾದನಂತರ ಸಂಗರಾಜನ ಎರಡನೆಯೆ ಮಗ
ನಾದ ರಾಣಾ ವಿಕ್ರಮಜಿತ್ ಸಿಂಹನಿಗೂ, ಗುಜರಾಥದ ಸುಲ್ತಾನನಾದ ಬಹ
ದ್ದೂರಖಾನನಿಗೂ ಭಯಂಕರವಾದ ವ್ಯಾಜ್ಯವೆಸಗಿತು. ವಿಕ್ರಮಜಿತ್ತನು
ಉಡಾಳನಂತೆ ಆಚರಿಸಿ ಕೋಳಿಯ ಜೂಜು, ಟಗರಜೂಜು ಕುಸ್ತಿಯ ಆಟ
ಮುಂಶಾದ ಕೀಳುತರದ ವಿನೋದಗಳಲ್ಲಿ ಕಾಲಕಳೆಯುತ್ತಿದ್ದನಾದ್ದರಿಂದ
ಪ್ರತಿಷ್ಠಿತರಾದ ಠಾಕುರರು ಅವನ ಸಮಾಪಕ್ಕೆ ಬರದಾದರು. ಆದರೆ ವಿಕ್ರ ಮ
ಜಿತ್ತನು ಹೇಡಿಯಲ್ಲ ಅವನು ಯುದ್ಧದ ಕಲೆಯನ್ನು ತಕ್ಕ ಮಟ್ಟಿಗೆ ಬಲ್ಲನು.
ಮುಸಲ್ಮಾನರು ಕಾಳಗದಲ್ಲಿ ಗುಂಡು ಮದ್ದುಗಳನ್ನು 'ಉಪಯೋಗಿಸುವದನ್ನು
ನೋಡಿ ವಿಕ್ರಮಜಿತ್ತನು ತನ್ನ ಸೈನ್ಯ ದಲ್ಲಿ “ಗುಂಡುಮದ್ದಿನ ಪ್ರಚಾರವನ್ನು
೧೫೩ ---------------------------------------------------------------------------
ತರಬೇಕೆಂದು ಆಲೋಚಿಸಿದನು. ತೋಪು ತುಬಾಕಿಗೆ$'ನ್ನು ಹಾರಿಸುವವರು
ಕಾಲಾಳುಗಳು. ಆದರೆ ರಜಪೂತರು ಕುದುರೆಗಳನ್ನೇರಿ ಕೊಂಡು ಭಾಲೆ'
ಗಳಿಂದ ಹೊಡದಾಡಿ ಯುದ್ಧ ಮಾಡುವಡು ವೀರರಿಗೆ ಉಚಿತವಾದದ್ದೆಂಬ
ಅಭಿಮಾನದಿಂದ ಕಾಲಾಳುಗಳನ್ನು ಕೀಳರೆಂದು ತಿಳಿಯುತ್ತಿದ್ದರು. ಗುಂಡು
ಮದ್ದುಗಳನ್ನು ಅವರು ಮುಟ್ಟದಾದರು. ಅದಕ್ಕಾಗಿ ವಿಕ್ರಮಜಿತ್ತನು ಹೊರ
ಗಿನ ಕಾಲಾಳುಗಳನ್ನು ತಂದು ಅವರಿಗೆ ಗುಂಡುಮದ್ದುಗಳ ಉಪಯೋಗವನ್ನು
ಕಲಿಸಿದನು. ಆದ್ದರಿಂದ ಮನೆತನಸ್ಥರಾದ ರಜಪೂತರು ರಾಜನಿಗೆ ಅನುಕೂಲ
ರಾದವರಾಗಲಿಲ್ಲ. ಹೊರಗಿನವರಂತೂ ಕೂಲಿಯವರು! ಹೀಗೆ ವಿಕ್ರಮ
ಜಿತ್ತನ ಸೈನ್ಯದಲ್ಲಿ ಇಬ್ಬಣವಾದ ಸಂಡು ನೋಡಿ ಬಹದ್ದೂರಖಾನನು ಅವ
ನೊಡನೆ ಕಾಲು ಕೆದರಿ ಯುದ್ಧಕ್ಕೆ ಬಂದನು. ಸಂಗರಾಜನ ಅಣ್ಣನಾದ
ಪೃಥ್ವೀರಾಜನು ಬಹದ್ದರಖಾನನ ಹಿರಿಯನಾದ ಮುರುುಫರನ ತಲೆ ಕಡಿದ
ಸೇಡು ತೀರಿಸಿಕೊಳ್ಳುವೆನೆಂದು ಬಹದ್ದರಖಾನನು ವಿಕ್ರನುಜಿತ್ತ ನೊಡನೆ
ಸಾಹಸದಿಂದ ಕಾದಿ ಲೋಇಬಾ ಎಂಬಲ್ಲಿ ಅವನನ್ನು ಸಂಪೂರ್ಣವಾಗಿ
ಸೋಲಿಸಿ ಕಡೆಗೆ ಪ್ರತ್ಯಕ್ಷ ಚಿತೂರ ಕೋಟಿಗೆ ಮುತ್ತಿಗೆ ಹಾಕಿದನು.
ಚಿತೂರ ಪಟ್ಟಣ, ಮೇವಾಡದ ರಾಣಾ, ಎಂಬೀ ಎರಡು ಹೆಸರುಗಳಲ್ಲಿ
ಮಂತ್ರಸಾಮರ್ಥ್ಯವೇ ಇತ್ತು. ಸಕಲರಾದ ರಜಪೂತರಿಗೂ ಚಿತೂರಿನ ಅಭಿ
ಮಾನ. ಮೇವಾಡದ ರಾಣಾಜೀಯವರ ಮನೆತನವಂತೂ ಕ್ಷಾತ್ರವಿದ್ಯೆಯ
ಗುರುಸ್ಥಾನವು. ಬಹದ್ದೂರಖಾನನು ಚಿತೂರಿಗೆ ಮುತ್ತಿಗೆ ಹಾಕಿ ಅದನ್ನು
ಜೇರಿಗೆ ತರುವನೆಂಬ ಭೀತಿಯಿಂದ ರಜಪೂತರೆಲ್ಲರೂ ಅಂತರಂಗದಲ್ಲಿರುವ
ವಿರೋಧಗಳನ್ನೂ ಅನಾಸ್ಥೆಯನ್ನೂ ಬಿಟ್ಟುಕೊಟ್ಟು ಚಿತೂರಿನ ಸಂರಕ್ಷಣಕ್ಕೆ
ಟೊಂಕ ಕಟ್ಟಿಕೊಂಡು ನಿಂತರು. ಆದರೆ ಊರು ಇದ್ದಲ್ಲಿ ಹೊಲೆಗೇರಿ ಇರು
ವದಷ್ಟೆ? ಆಮೇರೆಗೆ ಅಭಿಮಾನಶೂನ್ಯರಾದ ಮಂಡೂ ಸಂಸ್ಥಾನದವರು
ಬಹದ್ದೂರಖಾನನ ಪಕ್ಷವನ್ನು ಕಟ್ಟಿಕೊಂಡು ಚಿತೂರಿನ ಮೇಲೆ ಸಾಗಿಬಂದರು.
ಬಾಬರನ ಯುದ್ಧಗಳಲ್ಲಿ ಜೇರಿಗೆ ಬಂದ ಮೇವಾಡ ಸಂಸ್ಥಾನವು ಇನ್ನೂ
ನಿರ್ಬಲವಾದ ಸ್ಥಿತಿಯಲ್ಲಿಯೇ ಇತ್ತು. ವಿಕ್ರಮಜಿತ್ತನು ಕರತಂದ ಕೂಲಿಯ
ತೋಪು ತುಬಾಕಿಯವರು ಸಾಹಸದಿಂದ ಯುದ್ಧ ಮಾಡುವವರಲ್ಲ. ಬಲಾ
ಬಲಿಕೆ ನೋಡಿದರೆ ಮೇವಾಡಕ್ಕೆ ಅಪಜಯವೇ ಎಂದು ವಿಚಾರಶಾಲಿಗಳು
೧೫೪ --------------------------------------------------------------------------
ತರ್ಕ ಕಟ್ಟಿದ್ದರು.
ಬಹದ್ದೂರಖಾನನ ತೋಫಖಾನೆಯವರು ಕೋಟೆಯ 'ಬೀಕಾ' ಎಂಬ
ಬಂಡೆಯ ಬುಡದಲ್ಲಿ ಸಾಲು ಸುರಂಗಗಳನ್ನಿಟ್ಟು ಎಡೆಬಿಡದೆ ಹಾರಿಸಿದರು.
ಆ ಭಯಂಕರವಾದ ಪ್ರಯೋಗದಿಂದೆದ್ದ ಪ್ರಚಂಡವಾದ ಆಘಾತಕ್ಕೆ ದಿಙ್ಮಂ
ಡಲಗಳೆಲ್ಲ ಗದ್ದರಿಸಿಹೋದುವು. ಕೋಟಿಯ ಭಾಗವು ಒಡೆದು ಚಿಪ್ಪಾಡೆ
ಯಾಗಿ ಐವತ್ತು ಮೊಳ ಅಗಲವಾದ ದೊಡ್ಡ ಡೊಗರೇ ಬಿದ್ದಿತು.
ಮುಸಲ್ಮಾನರು ಉದ್ರೇಕದಿಂದ ಇನ್ನು ಕೋಟೆಯಲ್ಲಿ ಪ್ರವೇಶಮಾಡ
ತಕ್ಕವರು. ಆದರೆ ರಾವನುರ್ಗಾನೆಂಬ ವೃದ್ಧನಾದ ಮಹಾವೀರನ ಕೈಕೆಳ
ಗಿದ್ದ ಚಂದಾವತ್ ಜಾತಿಯ ರಜಪೂತ ಸೈನಿಕರು ಒಳ್ಳೇ ಪರಾಕ್ರಮವನ್ನು
ಮಾಡಿ ಏರಿ ಬರುವ ಶತ್ರುಗಳನ್ನು ಅನೇಕಾವರ್ತಿ ಹೊಡೆದು ಕೆಡವಿ ಹಿಂದಟ್ಟಿ
ದರು. ಜವಾಹೀರಬಾಯಿ ಎಂಬ ಸಂಗರಾಜನ ರಾಣಿಯೋರ್ವಳು ಸೈನಿಕ
ರಿಗೆ ಉತ್ಸಾಹ ಬರಲೆಂದು ತಾನೇ ಶಸ್ತ್ರಪಾಣಿಯಾಗಿ ಕುದುರೆಯನ್ನೇರಿ
ಕೊಂಡು ಕೋಟಿಯ ಒಡಕವನ್ನು ಧೈರ್ಯದಿಂದ ಕಾಪಾಡುತ್ತ
ಮೃತಳಾದಳು.
ಮುಕುಟಧಾರಿಯಾದ ಮೇವಾಡದ ರಾಜನನ್ನು ರಣದೇವತೆಗೆ ಬಲಿ
ಯಾಗಿ ಕೊಟ್ಟರೆ ಚಿತೂರ ಕೋಟೆಯು ಉಳಿಯುವದೆಂದು ರಜಪೂತರ
ತಿಳುವಳಿಕೆ. ರಾಣಾ ವಿಕ್ರಮಜಿತ್ತನಿಗೂ 'ಬುಂದಿ'ಯ ಯುವರಾಜನಾದ
ಸೂರಜಮಲ್ಲನಿಗೂ ನೆಟ್ಟಗಿಲ್ಲದಿದ್ದರೂ ಚಿತೂರಿನ ಅಭಿಮಾನಿಯಾದ ಸೂರಜ
ಮಲ್ಲನು ತನ್ನ ಚಿಕ್ಕ ಮಗನನ್ನು ಬಲಿ ಕೊಡಲಿಕ್ಕೆ ಸಿದ್ಧನಾದನು.
ವಾಘಜಿ ರಾಜಕುಮಾರನಿಗೆ ಆ ದಿವಸ ಚಿತೂರಿನ ರಾಣಾಜಿಯ ರಾಜಚಿಹ್ನ
ಗಳನ್ನು ಸಮರ್ಪಿಸಿದರು. ಛತ್ರಚಾಮರಗಳನ್ನು ಅವನ ತಲೆಯ ಮೇಲೆ
ಹಿಡಿದರು. ಮುಕುಟ ವಿಭೂಹಿತನಾದ ತನ್ನ ಮಗನನ್ನು ಸೂರಜಮಲ್ಲನು
ಅಪ್ಪಿಕೊಂಡು ಕಣ್ಣಿಗೆ ನೀರು ತಂದು "ಮಗುವೇ, ಇಂದು ನಿನ್ನಿಂದ ಚಿತೂರ
ಕೋಟೆಯೂ, ರಜಪೂತರ ಮಾನವೂ ಉಳಿಯಬೇಕಾಗಿದೆ. ಕ್ಷತ್ರಿಯರಿಗೆ
ಉಚಿತವಾದ ರೀತಿಯಿಂದ ನೀನು ರಣದಲ್ಲಿ ಮಡಿದು ವೀರಸ್ವರ್ಗವನ್ನು
ಹೊಂದತಕ್ಕದ್ದು ಕಂಡಿಯಾ” ಎಂದನು.
ವಾಘಜಿಯು ಆ ದುರ್ಧರವಾದ ಪ್ರಸಂಗಕ್ಕೂ ಮರಣಕ್ಕೂ ಎಳ್ಳಷ್ಟ್ರಾ
೧೫೫ -----------------------------------------------------------------
ದರೂ ಹೆದರದೆ ಆನಂದದಿಂದ ನಕ್ಕು " ಬಾಬಾಜಿ, ಸಕಲರಾದ ಕ್ಷತ್ರಿಯ
ರಲ್ಲಿ ನಾನೇ ಧನ್ಯನು. ಮೇವಾಡದ ರಾಣಾ ಎಂಬ ಉದಗ್ರವಾದ ಬಿರುದು
ಮೂರು ಮುಕ್ಕಾಲು ಗಳಿಗೆಯಾದರೂ ದೊರಕಬೇಕಾದರೆ ವೀರನು, ಅನೇಕ
ಜನ್ಮಗಳಲ್ಲಿ ಕ್ಷತ್ರಿಯನಾಗಿ ಹುಟ್ಟಿ ಪರಾಕ್ರಮವನ್ನು ಮಾಡಿ ರಣದಲ್ಲಿ ಮಡಿ
ದರೂ ಸಾಲದು. ನನಗಿಂದು 'ಮೇವಾಡದ ರಾಣಾ' ಎಂಬ ಬಿರುದು ಬಂದಿತು.
ಇದಿರಿನಲ್ಲಿಯೇ ವೀರಸ್ವರ್ಗವು ನನ್ನನ್ನು ಕರೆಯುತ್ತಲಿದೆ.” ಎಂದು ನುಡಿದ
ವನೇ ಆ ಪ್ರತಾಪಶಾಲಿಯು ತನ್ನ ಕುದುರೆಯನ್ನು ಶತ್ರುಸೇನೆಯಲ್ಲಿ ಹಾರಿಸಿ
ಬರ್ಚಿಯಿಂದ ಹತ್ತೆಂಟು ಮುಸಲ್ಮಾನರನ್ಸಿರಿದು ಕೊಂದು ತಾನೂ ಸ್ವರ್ಗ
ವಾಸಿಯಾದನು 'ಸಾಧು ವಾಘಜೀ, ಪರಮಾತ್ಮನು ನಿನ್ನ ಬೆನ್ನು ಚಪ್ಪರಿಸಿ
ಆನಂದದಿಂದ ನಿನ್ನನ್ನು ಸಂಭಾವಿಸಲಿ! ನಿನ್ನ ಹೆಸರು ತೆಗೆದುಕೊಂಡು
ಯುದ್ಧ ಕೈ ಹೊರಟ ವೀರನಿಗೆ ಅಖಂಡವಾದ ವಿಜಯವಾಗಲಿ!' ಎಂದು ಎಲ್ಲ
ವೀರರು ಧ್ವನಿಗೈದರು.
ಏನು ಮಾಡಿದರೂ ರಜಪೂತರ ಸೈನ್ಯ ಕಡಿಮೆ. ಮೇಕೆದಪ್ಪಿ ಬರುವ
ವಾರಿಧಿಯ ತೆರೆಗಳಂತೆ ಶತ್ರುಗಳು ಲಗ್ಗೆ ಹೊಡೆದು ಕೋಟೆಯಲ್ಲಿ ಸೇರುವ
ದಕ್ಕೆ ವಿಲಕ್ಷಣವಾದ ಸಾಹಸವನ್ನು ಮಾಡಲಾರಂಭಿಸಿದರು. ಚಿಹ್ನವು
ನೆಟ್ಟಿಗಿಲ್ಲವೆಂದು ತಿಳಿದ ಕೂಡಲೆ ರಜಪೂತರು ತಮ್ಮ ಅಂತಿಮವಾದ ಉಪಾಯ
ವನ್ನು ಯೋಜಿಸುವದನ್ನೇ ನಿಶ್ಚಯ ಮಾಡಿದರು. ಬುಂದೀ, ಸೋನಿಗಡಾ,
ಝಾಲೋಡ, ಅಬೂ ಮುಂತಾದ ಸಂಸ್ಕ್ರಾನಾಧಿಪತಿಗಳೂ ಅವರ ಅನು
ಯಾಯಿಗಳೂ ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡು ಗುಳಿಗೆ ಗುಳಿಗೆ
ಅಫೀಮವನ್ನು ಸೇವಿಸಿ, ಕತ್ತಿ-ಢಾಲು, ಬರ್ಚಿ-ಭಾಲೆ ಮುಂತಾದ ಶಸ್ತ್ರಾಸ್ತ್ರ
ಗಳನ್ನು ತೆಗೆದುಕೊಂಡು "ಹರಹರ ಮಹಾದೇವ! ಜಯ್ ಬಜರಂಗ!
ಬಪ್ಪಾಮೋರ್ಯಾಕೆ ಜಯ್ |' ಎಂದು ಉದ್ರಿಕ್ತವಾದ ಸಿಂಹಗಣದಂತೆ
ಭಯಂಕರವಾಗಿ ಗರ್ಜಿಸಿ ವೀರಸ್ವರ್ಗದ ಹಾದೀ ಹಿಡಿದರು. ಹೀಗೆ ಕೇಸರೀ
ಬಣ್ಣದ ಪೋಷಾಕು ತೊಟ್ಟು ಯುದ್ಧಕ್ಕೆ ಹೊರಟ ರಜಪೂತರು ವಿಜಯಿ
ಯಾಗಿಯೇ ಮರಳಿ ಬರತಕ್ಕವರು ಹೊರತಾಗಿ ಅಪಜಯವನ್ನು
ಹೊಂದಿ ಅವರು ಕುತ್ಸಿತವಾದ ಕಲೇವರಗಳನ್ನು ಧರಿಸಿ ಬದುಕು
ವವರಲ್ಲ.
೧೫೬ ----------------------------------------------------------------------------
ಏಕಾಂಶವಿಧ್ವಂಸಿಷು ತದ್ವಿಧಾನಾಂ
ನಿಂಡೇಷ್ವನಾಸ್ಥಾ ಖಲು ಭೌತಿಕೇಷು ॥
ಈ ಭಯಂಕರವಾದ ಕೇಸರೀ ಸಮುದ್ರಕ್ಕೂ ಮುಸಲ್ಮಾನರ ಅಸಂಖ್ಯ
ವಾದ ಸೇನಾಸಮದಾಯಕ್ಕೂ ಘೊರತರವಾದ ಸಂಗ್ರಾಮವೆಸಗಿತು. ಪ್ರಹರ
ದೀಡುಪ್ರಹರದೊಳಗಾಗಿಯೇ ರಜಪೂತ ವೀರರು ಮುಸಲ ಹೆಣಗಳ
ಗುಡ್ಡಗಳನ್ನೊಟ್ಟಿ ತಾವೂ ಒಬ್ಬರಿಲ್ಲದಂತೆ ಮಡಿದು ಪ್ರತಿಜ್ಞಾ ಪೂರ್ತಿಯನ್ನು
ಮಾಡಿ ವೀರಸ್ವರ್ಗದ ಮಾತ್ಗವನ್ನು ನಡೆದರು.
ಈ ಭಯಂಕರವಾದ ಯುದ್ಧವು ನಡೆದಾಗ ಸಂಗರಾಜನ ರಾಣಿಯಾದ
ಕರ್ಣಾವತೀ ದೇವಿಯು ಚಿತೂರ ಕೋಟೆಯ ಎತ್ತರವಾದ ಪ್ರದೇಶದಲ್ಲಿ
ನಿಂತು ಹುಬ್ಬಿನ ಮೇಲೆ ಕೈಯಿಕ್ಕಿ ಚಿಂತಾಕ್ರಾಂತಳಾಗಿ ಪೂರ್ವದ ಹಾದಿ
ಯನ್ನು ದಿಟ್ಟಸಿ ನೋಡುತ್ತಿದ್ದಳು. ' ರಾಖೀಬಂಧನ 'ದಿಂದ ತನ್ನ ಬಂಧು
ವಾಗಿದ್ದ ಹೂಮಾಯುನನಿಗೆ ಈ ಪ್ರಸಂಗದಲ್ಲಿ ತನಗೆ ಸಹಾಯ ಮಾಡ
ಬೇಕೆಂದು ಆ ಆವಳು ಹೇಳಿಕಳಿಸಿದ್ದಳು. ಹಾದೀ ನೋಡಿ ನೋಡಿ ಕರ್ಣಾವತಿಯು
ಬೇಸತ್ತಳು. ಹೂಮಾಯಾನನು ಬರಲಿಲ್ಲ. ತನ್ನ ಸೈನ್ಯ ದವರು ಉದ್ರೇಕ
ದಿಂದ ಯುದ್ಧ ಮಾಡುತ್ತಿರುವಾಗ, ಜಯದ ಚಿಹ್ನ ತೋರಿದಾಗ ಅವಳು
ಆಶಾಬದ್ಧಳಾಗಿ ದೇವರಿಗೆ ಬೇಡಿಕೊಳ್ಳುತ್ತಿದ್ದಳು. ಕಡೆಗೆ ಅಪಜಯದ
ಲಕ್ಷಣವೇ ಕಂಡಿಕು. ಹೂಮಾಯೂನನಂತೂ ಬರಲೇ ಇಲ್ಲ. "ಇನ್ನೇತರ
ಹಂಲ! ಕಾಲೀಮಾತೆಯೇ, ಆನೇಕರಾದ ವೀರಪತ್ನಿಯರನ್ನು ಏಕಕಾಲಕ್ಕೆ
ಸ್ವಾಹಾ ಮಾಡಿ ನಿನ್ನ ದುಷ್ಪೂರವಾದ ಹೊಟ್ಟಿಯನ್ನು ತುಂಬಿಕೊಳ್ಳು ಬಾ,
' ಜೊಹೋರ 'ವನ್ನು ಸಿದ್ಧಮಾಡಿ ಇಟ್ಟಿದ್ದೇನೆ " ಎಂದು ನುಡಿದವಳೇ
ಆ ರಾಣಿಯು ಮುರಣಕ್ಕೆ ಸಿದ್ಧಳಾಗಿ ಜೆ ಜೊಹೋರದ ಕಡೆಗೆ ನಡೆದಳು.
ರಜಪೂಕ ಪುರುಷರು ಕೇಸರೀ ಬಣ್ಣದ ಪೋಷಾಕು ಮಾಡಿ
ಕೊಂಡು ರಣರಂಗದಲ್ಲಿ ಮಡಿದು ವೀರಸ್ವರ್ಗದ ಮಾರ್ಗವನ್ನು ಹಿಡಿಯು
ವಾಗ, ರಜಪೂತ ಸ್ತ್ರೀಯರಾದರೂ ಇಹಲೋಕದ ಬಂಧನಗಳನ್ನೆಲ್ಲ ಹರಿ
ದೊಗೆದು ಜೊಹೋರದ ದ್ವಾರಾ ತಮ್ಮ ನಶ್ವರವಾದ ದೇಹಗಳನ್ನು ಸುಟ್ಟು
ಹಾಕಿ ವೀರಸ್ವರ್ಗದಲ್ಲಿದ್ದ ತಮ್ಮ ಪತಿಗಳು ಅಪ್ಸರೆಯರ ಪಾಲಾಗಬಾರ
ದೆಂದು ಮುಂಚಿತವಾಗಿಯೇ ಸ್ವರ್ಗದಲ್ಲಿದ್ದು ಕೊಂಡು ಪತಿಗಳ ಸ್ವಾಗತವನ್ನು
೧೫೭ ----------------------------------------------------------------------------
ಮಾಡಲಿಕ್ಕೆ ಸಿದ್ಧರಾದರು.
ಜೊಹೋರವೆಂದರೆ ಒಂದು ಪ್ರಕಾರದ ಭವ್ಯವಾದ ಲಾಕ್ಷಾಗೃಹವೇ,
ಈ ಮನೆಯಲ್ಲಿ ಆರಗು, ರಾಳ, ಕಪ್ಪುರ, ಸಣಬು, ಚಂದನಕಟ್ಟಿಗೆ, ಎಣ್ಣೆ
ಮುಂತಾದ ಜ್ವಾಲಾಗ್ರಾಹಿಯಾದ ವಸ್ತುಗಳನ್ನು ಹೇರಳವಾಗಿ ಒಟ್ಟುತ್ತಿ
ದ್ದರು. ರಾಜಕುಲವಧುಗಳೂ, ಇಚ್ಛಾವತಿಯರಾದ ಬೀರೆ ಅನೇಕ ಜನ
ರಜಪೂತಾನಿಯರೂ ನೂತನವಾದ ವಸ್ತ್ರಗಳನ್ನುಟ್ಟು ಕೊಂಡು ಸೌಭಾಗ್ಯಾ
ಲಂಕಾರಗಳನ್ನು ಧರಿಸಿ, ಬಾಗಿಣ ದಾನಧರ್ಮಗಳನ್ನು ಕೊಟ್ಟು ಆಪ್ತರಿಷ್ಟ
ರಿಗೆ ಹೇಳಿಕೇಳಿದ ಬಳಿಕ ಜೊಹೋರ ಗೃಹಕ್ಕೆ ಬಲವಂದು ನಮಸ್ಕರಿಸಿ
ಮಂಗಲವಾದ್ಯದ ಧ್ವನಿಯಾಗುತ್ತಿರಲು ಒಳಹೊಗುತ್ತಿದ್ದರು. ಬ್ರಾಹ್ಮಣರು
ವೇದಘೋಷ ಮಾಡುತ್ತೆ ಆ ಗೃಹಕ್ಕೆ ಅಗ್ನಿಸಂಸ್ಥಾರವನ್ನು ಮಾಡುತ್ತಿದ್ದರು.
ನಿಮಿಷದಲ್ಲಿಯೇ ಗಗನಮಂಡಲವನ್ನಡರುವಂಥ ಮಹಾಜ್ವಾಲೆಯು ಫಕ್ಕನೆ
ಎದ್ದು ಆ ಸುಮಂಗಲೆಯರ ಪವಿತ್ರವಾದ ತನುಗಳನ್ನು ಅಗ್ನಿನಾರಾಯಣನ
ಸ್ವಾಧೀನ ಮಾಡಿಬಿಡುತ್ತಿತ್ತು.
ಕರ್ಣಾವತೀ ದೇವಿಯೂ ಅವಳ ಪರಿವಾರದವರೂ ಸ್ವರ್ಗಕ್ಕೆ ಹೊರಟು
ಹೋದರು. ಸತೀಜನರ ಆ ವಿಲಕ್ಷ್ಮಣವಾದ ಚಿತೆಯು ಇನ್ನೂ ಆರಿದ್ದಿಲ್ಲ.
ಅಷ್ಟರಲ್ಲಿಯೇ ಅಕೋ, ಹೂಮಾಯುನನು ಪ್ರಚಂಡವಾದ ಸೇನೆಯೊಡನೆ
ಚಿತೂರಿನ ಕೋಟಿಯ ಮುಂದೆ ಬಂದು ನಿಂತನು. ಓಹೊ! ಎಂಥ
ಭಯಂಕರವಾದ ನೋಟವನದು! 'ಬೀಕಾ' ಬಂಡೆಯ ಕೆಳಗಿನ ಪ್ರದೇಶದಲ್ಲೆಲ್ಲ
ಎತ್ತ ನೋಡಿದತ್ತ ಮಡಿದುಹೋದ ವೀರರ ಗೂಡುಗಳೇ ಕಾಣುತ್ತಿದ್ದವು.
ಆ ವೀರರ ದೇಹದಲ್ಲಿಯ ಒಂದೊಂದು ರಕ್ತದ ಹನಿಯು ಒಂದೊಂದು
ಅನರ್ಫವಾದ ಮಾಣಿಕ್ಯದಕಿಂಕಲೂ ಹೆಚ್ಚಿನದಾದ ಬೆಲೆಯುಳ್ಳದ್ದಲ್ಲವೆ? ಅಂಥ
ರಕ್ತದ ದೊಡ್ಡ ಪ್ರವಾಹವೇ ಹರಿದುಹೋಗಿತ್ತು. ಹಾನಿಯ ಇಯತ್ತೆಯ
ಕಲ್ಪನೆಯಾಗಬಲ್ಲದೆ? ಭೂದೇವಿ, ಇಂಥ ರತ್ನಪ್ರವಾಹವನ್ನು ನುಂಗಿಯೇ
ನೀನು ' ಬಹುರತ್ನಾ ವಸುಂಧರಾ ' ಎಂಬ ಹೆಸರನ್ನಾಂತಿಯಾ?
ಹೂಮಾಯುನನು ಈ ಅನರ್ಥವನ್ನು ಕಂಡು ನೆಲಕ್ಕೆ ಬಿದ್ದನು.
" ಬಯಿರಾಮ ! ಬಯಿರಾಮ! ಅಲ್ಲಿ ಕೋಡಿದಿಯ್ಕಾ ರಜಪೂತ ವೀರರು
ಕೇಸರೀ ಪೋಷಾಕು ಮಾಡಿಕೊಂಡು ಹೇಗೆ ಪ್ರೇತರಾಗಿ ಬಿದ್ದಿದ್ಞಾರೆ! ಚಿತೂರಿ
೧೫೮-----------------------------------------------------------------------
ನಲ್ಲಿ ಪ್ರೌಢರಾದ ಕ್ಷತ್ರಿಯನೊಬ್ಬನೂ ಉಳಿದಿಲ್ಲ ಕಂಡಿಯಾ! 'ಜೊಹೋರ'
ದಲ್ಲಿ ರಾಜವಧುಗಳ ಗಡಣವೆಲ್ಲ ಮಡಿದಹೋಗಿದೆ! ಆಯ್ಯೋ ಧೂಮವೆ!
ಮಹಾರಾಣೀ ಕರ್ಣಾವತಿ, ನನ್ನ ಧರ್ಮುಭಗಿನಿಯೆ, ಈ ಧೂಮಸೋಪಾನ
ವನ್ನೇರಿ ನೀನು ಸ್ವರ್ಗದ ಮಾರ್ಗವನ್ನು ಹಿಡಿದಿಯಾ! " ಎಂದು ಎದೆಎದೆ
ಬಡಕೊಂಡು ಅತ್ತುನು.
ಮಂತ್ರಿ ಶ್ರೇಷ್ಠನಾದ ಆ ಬಯಿರಾಮಖಾನನಿಗಾದರೂ ಅಲ್ಲಿಯ
ಹೃದಯದ್ರಾವಕವಾದ ನೋಟವನ್ನು ನೋಡಿ ಮಿತಿಮೀರಿದ ದುಃಖ
ವಾಯಿತು. ಆ ಭಯಂಕರವಾದ ಯುದ್ಧದಲ್ಲಿ ಬಯಿರಾಮಖಾನನ ಅಂಗ
ವಿದ್ದಿಲ್ಲಾದ್ದರಿಂದ ಆ ಪ್ರೇತಸಮುದಾಯವನ್ನೂ ದುಷ್ಬ್ರೇಕ್ಷಣೀಯವಾಗಿರುವ
ಆ ರಕ್ತಸ್ರಾವವನ್ನೂ ಕಂಡು ಸತ್ಯಶೀಲನಾದ ಆ ಮುಸಲ್ಮಾನನ ಮೈತುಂಬ
ಮುಳ್ಳೆದ್ದಿತು ಅವನು ಗದ್ಗದಕಂಠನಾಗಿ ನುಡಿದದ್ದು ; "" ಹುಜೂರ
ಭಗವದಿಚ್ಛೆಗೆ ಇನ್ನೇನು ಮಾಡತಕ್ಕದ್ದು? ಕರ್ಣಾವತೀ ನುಹಾರಾಣಿಯವರ
ಸಂದೇಶವು ಒಂದೇ ದಿನ ಮುಂಚಿತವಾಗಿ ಸರಕಾರದ ಚರಣಗಳಿಗೆ ತಲ್ಪಿದ್ದಾ
ಗಿದ್ದರೆ, ಈ ಅನರ್ಥವೆಲ್ಲಿ ಸಂಭವಿಸುತ್ತಿತ್ತು? ಬಹದ್ದೂರಖಾನನಂಥ ಜಂಬುಕನು
ಸಂಗ್ರಾಮಧುರಂಧರರಾದ ಈ ರಜಪೂತಸಿಂಹರ ಪ್ರೇತಗಳನ್ನು ತುಳಿಯು
ತ್ತಿದ್ದನೆಂತು? ಸಾರ್ವಭೌಮರು ತಮ್ಮಿಂದಾದಷ್ಟು ಸಾಹಸಮಾಡಿ ಇಲ್ಲಿಗೆ
ದಯಮಾಡಿದರು. ಇನ್ನು ಮನುಷ್ಯ ಯತ್ನಕ್ಕೆ ಮೀರಿದ ಮಾತಿಗೆ ಮಿಡುಕಿ
ಫಲವೇನು?"
"ಖಾನಸಾಹೇಬ, ಸುಖಪ್ರಿಯನಾದ ನಾನು ಯಥಾವಕಾಶವಾಗಿ
ಪ್ರಯಾಣ ಮಾಡದೆ ಧಾವಿಸಿ ಬಂದಿದ್ದರೆ ಈ ಅನರ್ಥಗಳು ಸರ್ವಥಾ
ಸಂಭವಿಸುತ್ತಿದ್ವಿಲ್ಲ. ನಾನು ನನ್ನ ಧರ್ಮಭಗಿನಿಯನ್ನು ದುಃಖದಿಂದ ಪಾರು
ಮಾಡಿದ್ದರೆ ಆದಳು ನನ್ನಮೇಲೆ ಮುತ್ತಿನ ನಿವಾಳೆಯನ್ನು ಚಲ್ಲಿ ಅಕ್ಕರದಿಂದ
ನನ್ನನ್ನು ಸಂಭಾವಿಸುತ್ತಿದ್ದಿಲ್ಲವೆ? ದುರ್ಭಾಗ್ಯನಾದ ನನಗಷ್ಟು ಪುಣ್ಯವೆಲ್ಲಿ?
ಪ್ರಿಯೆ ಭಗಿನಿ, ನೀನು ಅಖಂಡವಾಗಿ ನನ್ನ ಮಾರ್ಗವನ್ನು ನೋಡಿ ನೋಡಿ
ದಣಿದು ನಿರಾಶೆಯ ವೇದನೆಯಿಂದ ಅಧಮನಾದ ನಾನು ಕೊಟ್ಟಿರುವ
ಕಚಲೀ ಬಂಧನವನ್ನು ಸಿಟ್ಟಿನಿಂದ ಉರಿಯಲ್ಲಿ ಹರಿದೊಗೆದು ಆಮೇಲೆ ನಿನ್ನಾ
ಪವಿತ್ರವಾದ ದೇಹವನ್ನು ಆಗ್ನಿಗೆ ಸಮರ್ಪಿಸಿದಿಯಲ್ಲವೆ? * ಎಂದು ಹೂಮಾ
೧ಜ೯ ------------------------------------------------------------------
ಯುನ ಬಾದಶಹೆನು ದುಃಖಾತಿರೇಕದಿಂದ ಮೂರ್ಛಿತನಾಗಿ ಬಿದ್ದನು.
ಕೆಲಹೊತ್ತಿನ ಮೇಲೆ ಎಚ್ಚತ್ತವನಾದ ಹೂಮಾಯುನನು ಮೃಗರಾಜ
ನಂತೆ ಕಡಕಡನೆ ಗರ್ಜಿಸಿ, ಬಹದ್ದರಖಾನನೆಲ್ಲಿ ಇದ್ದರೂ ಬೆನ್ನಟ್ಟಿ ಅವನ
ಬಲವನ್ನು ಮುರಿದುಮುಟ್ವಿಗೆಯಾಗಿ ಮಾಡಿ ಮೇವಾಡದೆಲ್ಲಿ ಅವನ ಅಪವಿತ್ರ
ವಾದ ನೆಳಲು ಬೀಳದಂತೆ ಮಾಡುವೆನೆಂದು ಪ್ರತಿಜ್ಞೆ ಮಾಡಿದನು. ಪ್ರಚಂಡ
ವಾದ ಸೇನೆಯ ನಾಯಕನಾಗಿರುವ ಆ ಮಹಾಪರಾಕ್ರಮಿಗೆ ಬಹದ್ದರಖಾನ
ನಂಥ ಅಲ್ಬನ ಶಾಸನವನ್ನು ಮಾಡುವದು ಮೀರಿದ ಮಾತೆ? ಹೂಮಾಯು
ನನ ಪ್ರತಿಜ್ಞೆಯನ್ನು ಕೇಳಿಯೇ ಭಯತ್ರಸ್ತನಾದ ಬಹದ್ದರನು ಚಿತೂರಿನ
ಪ್ರಾಂತವನ್ನು ಬಿಟ್ಟುಕೊಟ್ಟು ಓಡಿ ಹೋದವನು, ತಿರುಗಿ ಚಿತೂರಿನ ದಿಕ್ಕಿನ
ಕಡೆಗೆ ಕಣ್ಣೆತ್ತಿಯಾದರೂ ನೋಡಲಿಲ್ಲ.
ಆದರೂ ಹೂಮಾಯುನನ ಮನಸ್ಸಿನಲ್ಲಿ ಸೇರಿದ ದುಃಖದ ಶಲ್ಯವು
ಅವನು ಸಾಯುವವರೆಗೂ ಹಾಗೆಯೇ ಉಳಿದಿತು. ಸತ್ಯಶೀಲರ ಹೃದಯವೇ
ಅಂಥ ಕೋಮಲವಾದದ್ದು. ಹೂಮಾಯುನನಂಥ ಸದಯಾಂತಃಕರಣ
ದವನಾದ ಭೂಪತಿಯು ಇನ್ನೊಬ್ಬನಿಲ್ಲ.
=========================================
೧೬೦------------------------------------------------------------
ಅನರ್ಥ ನಿವಾರಣವು
ಗ್ರಂಥಾಂತರ್ಗತವಾದದ್ದೆ೦ತಲೂ, ವದಂತ್ಯಾತ್ಮಕವಾದದ್ಜೆ೦ತಲೂ ಇತಿ
ಹಾಸದಲ್ಲಿ ಎರಡು ಪಕ್ರಕಾರಗಳುಂಟು, ರಾಜಾಜ್ಞೆಯಿಂದ ಇತಿಹಾಸವನ್ನು
ಬರೆಯುವವರು ತಮಗೆ ಇಷ್ಟವಿಲ್ಲದ ಅನೇಕ ಸಂಗತಿಗಳ ನ್ನು ತೆಗೆದೊಗೆದರು.
ಆ ಸಂಗತಿಗಳು ಮಹೆತ್ವವಾನಿದ್ದವಾದ್ದರಿಂದ ವದಂತಿಯ ಮುಖಾಂತರವಾಗಿ
ಇಂದಿಗೂ ನಮ್ಮ ಕಿವಿಗೆ ಬೀಳುತ್ತಿರುವವು. ಬರೆದಿಟ್ಟ ಇತಿಹಾಸಗಳಲ್ಲಿಯ
ಸಂಗತಿಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ ಔದ್ಯೋಗಿಕ ಸಂಗತಿ
ಗಳನ್ನು ವ್ಯಕ್ತಪಡಿಸುತ್ತಿರುವಂತೆಯೇ ವದಂತ್ಯಾತ್ಮಕವಾದ ಇತಿಹಾಸ
ವಾದರೂ ಅವೇ ಮಹತ್ವವಾದ ಸಂಗತಿಗಳ ಆದರ್ಶವಾಗಿರುಕ್ಕೆದೆಂಬದರಲ್ಲಿ
ಸಂದೇಹವಿಲ್ಲ.
ವದಂತಿಗಾದರೂ ಲೇಖನದ ಆಧಾರವಿಲ್ಲವೆಂತಲ್ಲ. ಆದರೆ ಅದನ್ನು ಬರೆ
ದಿಟ್ಟವರು ಕೇವಲ ಲೇಖನಾಭಿರುಚಿಗಾಗಿ ಬರೆದರೇ ಹೊರತಾಗಿ ಅದು ಇತಿ
ಹಾಸಕಾರರ ಅಧಿಕಾರವನ್ನು ಸೆಳಕೊಳ್ಳಲಿಲ್ಲ. ಇಂಥ ಲೇಖಗಳು ಹಳ್ಳಿಪಳ್ಳಿ
ಗಳಲ್ಲಿಯ ಜಹಾಗೀರದಾರರ ಮನೆಯಲ್ಲಿಯೂ ಚತುರರಾದ ಲಾವಣಿಗಾರರ
ಮನೆಯಲ್ಲಿಯೂ ಸಿಕ್ಕುವದುಂಟು, ಇಂಥದೊಂದು ಗ್ರಂಥಭಾಂಡಾರವು
ನಮಗೆ ಅನಾಯಾಸವಾಗಿ ಪ್ರಾಪ್ರವಾದ್ದರಿಂದ ಅದರಲ್ಲಿಯ ಅವತರಣಿಕೆ
ಗಳನ್ನು ನಮ್ಮ ವಾಚಕರ ಮನೋರಂಜನಾರ್ಥವಾಗಿ ನಾವು ಸಮಯ ದೊರೆ
ತಾಗ ಕೊಡುವೆವು. ಆದರೆ ಈ ಭಂಂಡಾರವು ನಿಮಗೆಲ್ಲಿಂದ ದೊರಕಿತು?
ಆದರಲ್ಲಿ ಕಂಡುಬರುವ ಸಂಗತಿಗಳ ಸತ್ಯತೆಯ ಬಗ್ಗೆ ಪ್ರಮಾಣವೇನು?
ಎಂದು ವಾಚಕರು ನಮಗೆ ಪ್ರಶ್ನೆ ಮಾಡಿದರೆ ನಾವು ಹೇಳಲೊಪ್ಪುವದಿಲ್ಲ.
ಯಾಕೆಂದರೆ ಆ ಭಾಂಡಾರವು ನಮಗೆ ಗುಪ್ತದಾನವಾಗಿದೆ.
x x x
ಹದಿನೆಂಟನೆಯ ಶತಮಾನದ ಮಧ್ಯೆ ಕಾಲವೆಂದರೆ, ದಕ್ಷಿಣದಲ್ಲಿಯ
ಅಸ್ವಸ್ಥತೆಯ ಸುಗ್ಗಿಯ ಕಾಲವಾಗಿತ್ತು. ಆ ಕಾಲಕ್ಕೆ ನಿಜಾಮ ಉಲ್ಮುಲ್ಕ,
ಪುಣೆಯ ಬಾಜೀರಾವ ಸಾಹೇಬರ ನಡುವೆ ನಿರಂತರವಾದ ಯುದ್ಧ; ಇಂಗ್ಲಿಶ,
ಫ್ರೆಂಚ ಜನರಿಗೂ ಅಸಾಧ್ಯವಾದ ವೈರ, ಇದಲ್ಲದೆ ಅಲ್ಲಲ್ಲಿ ಚಿಕ್ಕ ದೊಡ್ಡ
೧೬೧ --------------------------------------------------------------
ಪಾಳ್ಯಗಾರರೂ, ಜಹಾಗೀರದಾರ ದೇಸಾಯರೂ, ತನ್ಮುತಮ್ಮೊಳಗೆ ಬುದ್ಧಿ
ಗೆಟ್ಟು ಹೋರಾಡಿ ನಿರರ್ಥಕವಾಗಿ ದಣುಕೊಳ್ಳುತ್ತಿದ್ದರು
ಪ್ರಬಲರಾದ ರಾಜರ ಮಧ್ಯೆದೇಶದ ಸ್ಥಿತಿಯೇ ಹೀಗಿರಲು, ಶತ್ರು
ಗಳಾಗಿ ಹೋರಾಡುತ್ತಿರುವ ರಾಜರೀರ್ವರ ಸೀಮಾಂತರದಲ್ಲಿ ಕಂಡುಬರುವ
ಅವ್ಯವಸ್ಥೆ ಯನ್ನೇನೆಂದು ಹೇಳೋಣ ? ಮಳೆಗಾಲದಲ್ಲಿ ಉಕ್ಕೇರಿ ಹೆರಿಯುವ
ಮಹಾನದಿಗಳ ಸಂಗಮಸ್ಥಾನದಲ್ಲಿ, ಈ ನದಿಯ ಪ್ರವಾಹದ ಮರ್ಯಾದೆ
ಯಾವದೋ, ಆ ನದಿಯ ಪ್ರವಾಹದ ಮರ್ಯಾದೆ ಯಾವದೋ ಎಂಬ
ಸಂದೇಹವುಂಟೂಗುವಂತೆ, ಆ ಕಾಲದಲ್ಲಿ ನಿಜಾಮಸಾಹೇಬರ ರಾಜ್ಯದ
ಮರ್ಯಾದಿಯೂ ಪೇಶ್ವೆಯಪರ ಸೀಮೆಯ ಮರ್ಯಾದೆಯೂ ನಿಶ್ಚಿತವಾಗದೆ
ಇದ್ದವು.
ಈ ಸೀಮಾದ್ವಯದ ಮಧ್ಯದಲ್ಲಿ ಅನೇಕ ಜನ ಬಂಡುಗಾರರೂ, ಸುಲಿಗೆ
ಗಾರರೂ ನಿರಂಕುಶರಾಗಿ ವಾಸಮಾಡಿಕೊಂಡಿದ್ದರು. ಮಹಾರಾಷ್ಟ್ರರ ರಾಜ್ಯ
ದಲ್ಲಿ ಹಾವಳಿಯನ್ನು ಮಾಡಿ ಬಂದವರು ನಿಜಾಮರ ರಾಜ್ಯದಲ್ಲಿ ಸೇರಿಕೊಳ್ಳು
ವರು; ನಿಜಾಮರ ರಾಜ್ಯದಲ್ಲಿ ಕೊಳ್ಳೆಮಾಡಿ ಬಂದವರು ಮಹಾರಾಷ್ಟ್ರದ
ಸೀಮೆಯಲ್ಲಿ ಅಡಗಿಕೊಳ್ಳುವರು. ಸಾಹಸಿಗಳಾದ ಬಂಡುಗಾರರು ತನ್ನು
ತಮ್ಮ ಬಲದಿಂದ ತಾವೇ ಜಾಗೀದಾರ ದೇಸಾಯರಾದರು. ಅಂಥವರಿಗೆ
ಉಂಬಳಿ ಹಾಕಿಕೊಡುವ ರಾಜನೇತಕ್ಕೆ ಬೇಕು? बलं यस्य स्थलं तस्थ
ಇಂಥ ಸಂದುಸೂಧಿಸಿ ನಂತರ ಮುಖ್ಯಸ್ಥನಾದ ಭೀಮಬಹದ್ದರ
ನೆಂಬ ಬ್ರಾಹ್ಮಣನು ನಿಜಾಮರ ಸೀಮೆಯು ಐದು ಹಳ್ಳಿಗಳನ್ನೂ,
ಪೇತ್ವೆಯವರ ಐದು ಹಳ್ಳಿಗಳನ್ನೂ ಆಕ್ರಮಿಸಿಕೊಂಡು ಕುಳಿತು ತಾನೊಬ್ಬ
ದೊಡ್ಡ ದೇಸಾಯಿಯೆಂದು ಹೊಗಳಿಸಿಕೊಳ್ಳಲಾರಂಭಿಸಿದನು. ಈ ಹಳ್ಳಿಗಳು
ತಮ್ಮವೇ ಎಂದು ನಿಜಾಮ ಸರಕಾರದವರಿಗೂ ನಿಶ್ಚಯವಾಗಿ ಹೇಳೆಲಿಕ್ಕೆ
ಬರಲೊಲ್ಲದು. ಮಹಾರಾಷ್ಟ್ರ ರ ಬಳಿಯಲ್ಲಿಯೂ ಸಪ್ರಮಾಣವಾ
ಆಧಾರವಿದ್ದಿ ಲ್ಲ. ನೀನಾರೆಂದು ಮಹಾರಾಷ್ಟ್ರರು ಭೀಮಬಹದ್ದರನನ್ನು
ಕೇಳಿದರೆ ನಾನು ನಿಜಾಮರ ಆಧಿಪತ್ಯಕ್ಕೆ ಒಳಗಾದವನೆಂದು ಅವನು
ದಿಟ್ಟನಾಗಿ ಹೇಳುವನು! ನಿಜಾಮ ಸರಕಾರದವರು ಕೇಳಿದರೆ ಭೀಮ
ಬಹದ್ದರನು ಮಹಾರಾಸ್ಟ್ರರ ಕೈಕೆಳಗಿನವನು ! ಯುದ್ಧದ ಮೂಲಕವಾಗಿ
೧೬೨ -----------------------------------------------------------------------------
ಮಹಾರಾಷ್ಟ್ರರಿಗೂ ನಿಜಾಮರಿಗೂ ಕೂಡಿಯೇ ಭೀಮಬಹದ್ದೂರನ
ಸಮಾಚಾರವನ್ನು ತೆಗೆದುಕೊಳ್ಳಲು ಅವಕಾಶವಿರಲಿಲ್ಲ. ಅವನು ಬೇರು
ಬಿಟ್ಟನು. ಮುಂದೆ ಉದಗೀರದ ಕಾಳಗದಲ್ಲಿ ಭೀಮಬಹದ್ದರನು
ಮಹಾರಾಷ್ಟ್ರರ ಪ ಪಕ್ಷದಲ್ಲಿ ಸೇರಿ ಪರಾಕ್ರ ಮವನ್ನು ಮಾಡಿ ತೋರಿಸಿದ್ದ
ರಿಂದ ಪೇಶವೆ ನಾನಾಸಾಹೇಬರು ಆ ಪುಂಡಗಾರನ ಹಣೆಗೆ ದಂಡೆಯನ್ನು
ಕಟ್ಟ ಅವನಿಗೆ 'ದೇಸಾಯಿ' ಎಂಬ ಪದವಿಯನ್ನು ಕೊಟ್ಟಿದ್ದಲ್ಲದೆ ಆ ಮಾತಿಗೆ
ನಿಜಾಮರಿಮದಲೂ ಒಪ್ಪಿಗೆಯನ್ನು ಕೊಡಿಸಿದರು.
ಭೀಮಬಹದ್ದರನ ಮಗನಾದ ರಘುವೀರನೆಂಬ ನವತರುಣನು ತಂದೆ
ಗಿಂತಲೂ ಒಂದು ತೂಕ ಹೆಚ್ಚಾದ ಪರಾಕ್ರಮಿಯೂ, ಸಾಹಸಿಯೂ
ಆಗಿರುವದಲ್ಲದೆ ಆ ಕಾಲದಲ್ಲಿ ಸಿಕ್ಕುವಷ್ಟು ವಿದ್ಯೆಯನ್ನಾದರೂ ಆನನು
ಸಂಪಾದಿಸಿದ್ದನು. ರಘುವೀರನು ವಿದ್ಯಾವ್ಯಾಸಂಗಕ್ಕಾಗಿ ಪುಣೆಯಲ್ಲಿ ಇದ್ದಿರು
ವಾಗ ಅನನ ದೇಹದಾರ್ಥ್ಯವನ್ನೂ ದಾಂಡಪಟ್ಟಾ ಕುಸ್ತಿ ಮುಂತಾದ
ಆಟಗಳಲ್ಲಿ ಕಂಡುಬರುವ ಅವನ ಜಾಣತನವಕ್ನೂ, ಬೇಟೆಯಲ್ಲಾಗಲಿ,
ಕುದುರೆಯನ್ನು ಆರ್ಭಟೆಯಿಂದ ಓಡಿಸುವದರಲ್ಲಾಗಲಿ, ಗುರಿಯಿಟ್ಟು ಗುಂಡು
ಹಾರಿಸುವದರಲ್ಲಾಗಲಿ, ಅವನು ತೋರಿಸಿದ ಕೌಶಲ್ಯವನ್ನೂ ಕಂಡು ಪೇಶವೆ
ಕುಲದೀಪಕನಾದ ಪ್ರತ್ಯಕ್ಷ ಸದಾಶಿವರಾವ ಭಾವೂಸಾಹೇಬನೇ ಯುದ್ಧ ಶಿಕ್ಷಣ
ದಲ್ಲಿ ಅವನನ್ನು ತನ್ನ ಸಹಾಧ್ಯಾಯಿಯನ್ನಾಗಿ ಮಾಡಿಕೊಂಡಿದ್ದನು ಎರಡು
ಮೂರು ವರುಷ ಯುದ್ಧಶಿಕ್ಷಣವನ್ನು ಹೊಂದಿ ಆ ಕಲೆಯಲ್ಲಿ ಪ್ರವೀಣ
ನಾಗಿಯೂ, ಶ್ರೀಮಂತರ ಕೃಪಾಪಾತ್ರನಾಗಿಯೂ ರಘುವೀರನು ತನ್ನ
ತಂದೆಯ ಬಳಿಗೆ ಬಂದು ವಿವಾಹಿತನಾಗಿ ಸಂಸಾರಸುಖನನ್ನು ಅನುಭವಿಸುಕ್ತೆ
ಇದ್ದುಕೊಂಡನು.
ರಘುವೀರನ ಹೆಂಡತಿಯಾದ ಇಂದುವದನೆಯು ಯಥಾರ್ಥವಾಗಿ
ಇಂದುವದನೆಯೇ ಆಗಿದ್ದಳು. ಸರ್ವಾಂಗಸುಂದರಿಯಾದ ಆ ನವಯವತಿಯು
ಶ್ರೀಮಂತರ ಮಗಳೂ ಶ್ರೀಮಂತರ ಸೊಸೆಯೂ ಆಗಿರುವದರಿಂದ
ಸುಖದಿಂದ ಬೆಳೆದು ಅತಿಮನೋಜ್ದಳಾಗಿ ಕಾಣುತ್ತಿದ್ದಳು. ಇಂದುವದನೆಯು
ಚತುರೆಯೂ, ವಿನೀತೆಯೂ, ಸುಶಿಕ್ಷಿತಳೂ ಆಗಿದ್ದು ಸತಿಯಲ್ಲಿ ನಿಶ್ಚಲವಾದ
ಪ್ರೇಮವುಳ್ಳವಳಾಗಿದ್ದಳು. ರತಿಮದನರಂತೆ ಒಪ್ಪುತ್ತಿರುವ ಆ ದಂಪತಿಗಳಿಗೆ
೧೬೩ --------------------------------------------------------------------
ಸಂಸಾರದ ಯಾವ ಬಗೆಯ ಚಿಂತೆಯೂ ಇಲ್ಲದ್ದರಿಂದ ಅವರು ಪರಸ್ಪರರ
ಸಮಾಗಮದಲ್ಲಿ ಯಾವಾಗಲೂ ಆನಂದದಿಂದ ಕಾಲಕಳೆಯುತ್ತಿದ್ದರು.
ರಘುವೀರನು ತನ್ನ ದೇಸಗತಿಯ ಹಳ್ಳಿಗಳಲ್ಲಿ ಜನರ ಸ್ಥಿತಿಯು
ಹೇಗಿರುವದೆಂಬದನ್ನು ಅರಿತುಕೊಳ್ಳುವದಕ್ಕಾಗಿ ಮೂರು ನಾಲ್ಕು ದಿನ ತಿರು
ಗಾಡಿ ಬರಬೇಕೆಂದು ಒಂದಾವರ್ತಿ ಹೋಗಿದ್ದನು. ಕಾರ್ಯವವಿಶೇಷಕ್ಕಾಗಿ
ಅವನಿಗೆ ಗ್ರಾಮಗಳಲ್ಲಿ ನಾಲ್ಕಾರು ದಿವಸ ಹೆಚ್ಚಾಗಿ ನಿಲ್ಲಬೇಕಾಯಿತು.
ಎಲ್ಲ ಹಳ್ಳಿಗಳ ಸಮಾಚಾರವನ್ನೆಲ್ಲ ಅರಿತುಕೊಂಡು ಹತ್ತು ಹನ್ನೆರಡು
ದಿವಸಗಳ ನಂತರ ಅವನು ಮನೆಗೆ ಬಂದನು, ಸ್ನಾನಭೋಜನಾದಿಗಳನ್ನು
ತೀರಿಸಿಕೊಂಡು ಅವನು ತನ್ನ ವಿಶ್ರಾಂತಿಗೃಹಕ್ಕೆ ಬಂದು ನೋಡುತ್ತಾನೆ:
ಅಲ್ಲಿ ಅವನ ಪ್ರಿಯತಮೆಯಾದ ಇಂದುವದನೆಯು ವ್ಯಸನಾಕುಲಳಾಗಿ
ಮಂಚದ ಮೇಲೆ ಮಲಗಿಕೊಂಡಿದ್ದಳು. ರಘುವೀರನು ಪ್ರೇಮದಿಂದ
ಅವಳ ಮೈಮೇಲೆ ಕೈಯಾಡಿಸಿ ಏನು ಸಮಾಚಾರವೆಂದು ಕೇಳಿದನು.
ಇಂದುವದನೆಯು ತನ್ನ ಪ್ರಾಣಕಾಂತನನ್ನು ಭರದಿಂದ ಅಪ್ಪಿ ಕೊಂಡು ದುಃಖಿ
ದುಃಖಿಸಿ ಅತ್ತಳು. ರಘುವೀರನ ಎದೆಯಲ್ಲಿ ಅಲಗಿಕ್ಕಿ ತಿರುವಿದಂತಾಯಿತು.
ದುಃಖಾರ್ತೆಯಾದ ತನ್ನರಮಣಿಯನ್ನು ಅವನು ಒಳಿತಾಗಿ ಬಿಗಿದಪ್ಪಿಕೊಂಡು
ಕಣ್ಣೀರಿನಿಂದ ಬಸಿಯುತ್ತಿರುವ ಅವಳ ಗಲ್ಲಗಳನ್ನು ಅನೇಕಾವರ್ತಿ ಚುಂಬಿಸಿ
ಮತ್ತೆ ದುಃಖದ ಕಾಠಣವನ್ನು ಕೇಳಿದನು.
`ಇಂದುವದನೆಯು ತನ್ನ ಪ್ರಾಣಕಾಂತನ ವಿಶಾಲವಾದ ವಕ್ಷಸ್ಥಳದಲ್ಲಿ
ಅಡಗಿಕೊಳ್ಳಲೆಸಗಿರುವಳೋ ಎಂಬಂತೆ ಅವನನ್ನು ಮತ್ತಿಷ್ಟು ಬಿಗಿದಪ್ಪಿ
ಕೊಂಡು " ನನ್ನ ಮುತ್ತೈದೆತನದ ನಿಧಾನರೆ, ಈ ಸುಖಮಯವಾದ
ಗಾಢಾಲಿಂಗನದಲ್ಲಿರುವಾಗಲೇ ನನ್ನ ಪ್ರಾಣೋತ್ಕ್ರಮಣವಾದರೆ ಗೆದ್ದಂತಾ
ಗುವದು!” ಎಂದು ಮತ್ತೆ ಅಶ್ರುಗಳನ್ನು ತಳೆದು ನುಡಿದಳು.
ರಘುವೀರನು ತನ್ನ ಸೆಲ್ಲೆಯಿಂದ ಆ ಪದ್ಮನಯನೆಯ ಕಣ್ಣುಗಳ
ನ್ನೊರಿಸಿ, ಅವಳ ಸುಮನೋಹರವಾದ ಗದ್ದವನ್ನು ಹಿಡಿದು, ಒಳ್ಳೇ ಆದರ
ಯುಕ್ತವಾದ ವಾಣಿಯಿಂದೆ "ನನ್ನ ಜೀವಿತಾಧಾರೆ, ಈ ದಿವಸ ನಿನಗೇ
ನಾಗಿದೆ ? ನೀನೇನಾದರೂ ದುರ್ವಾರ್ತೆಯನ್ನು ಕೇಳಿರುವಿಯೋ, ಮನೆ
ಯಲ್ಲಿ ಯಾರಾದರೂ ಅಪಶಬ್ಧಗಳೀದ ನಿನ್ನ ಮನಸ್ಸು ನೋಯಿಸಿರುವರೋ,
೧೬೪ ------------------------------------------------------------------
ಆದದ್ದಾದೆರೊ ಏನು? ಆನಂದಾಶ್ರುಗಳ ಉಗಮವಾಗಿರುನ ನಿನ್ನೀ ಪದ್ಮ
ನಯನಗಳಲ್ಲಿ ದುಃಖಾಶ್ರುಗಳೆಲ್ಲಿಂದ ಬಂದವು? ” ಎಂದು ಕೇಳಿದನು.
ಇಂದುವದನೆಯು ತನ್ನ ಬಾಹುಬಂಧನಗಳನ್ನು ಸಡಿಲು ಮಾಡದೆ
ಪ್ರಿಯನ ವಿಶಾಲವಾದ ಎದೆಯ ಮೇಲೆ ತನ್ನ ಸುಲಲಿತವಾದ ಮುಖಾರವಿಂದ
ವನ್ನಿಟ್ಟು "" ಈ ಮನೆಯಲ್ಲಿ ನನಗೆ ದುರುತ್ತರಗಳನ್ನಾಡುವವರಾರು? ಆದರೆ
ನಾರಿಯರ ಜನ್ಮವೇ ಕೆಟ್ಟಿದ್ದು. ಅವರು ಅನುಭವಿಸುತ್ತಿರುವ ಸುಖವು ಕೇವಲ
ಅಸ್ಥಿರವಾದದ್ದು. ಅದಕ್ಕಾಗಿ ಈಗಲೇ ಪ್ರಾಣಕಾಂತರ ಪ್ರೆಮಯುತವಾದ
ದೃಢಾಲಿಂಗರದ ಸುಖವನ್ನ ಅನುಭವಿಸುತ್ತೆ ನಾನು ಜೀವವನ್ನು ಬಿಡುವಂತೆ
ಮಾಡೆಂದು ದೇವರಿಗೆ ಬೇಡಿಕೊಳ್ಳುತ್ತೇನೆ? ಎಂದು ಬಹು ಮೆಲ್ಲನೆ
ನುಡಿದಳು.
ರಘುವೀರನು ತನ್ನ ಅರ್ಧಾಂಗಿಯನ್ನೆತ್ತಿ ಬಳಿಯಲ್ಲಿ ಕುಳ್ಳಿರಿಸಿಕೊಂಡು,
ಅವಳ ಹೆಗಲ ಮೇಲೆ ಪ್ರೇಮದಿಂದ ಕೈಹಾಕಿ " ಇಂದುವದನೆ, ಹುಚ್ಚು
ಹಿಡಿದಿರುವದದೇನು ನಿನಗೆ? ಹೀಗೇಕೆ. ಮಾತಾಡುವಿ?'' ಎಂದು ನಗುತ್ತೆ
ಕೇಳಿದನು.
ಸದಯಾಂತಃಕರಣೆಯಾದ ಆ ಪದುಮಾಕ್ಷಿಯು ಮತ್ತೆ ಕಣ್ಣಿಗೆ ನೀರು
ತಂದು ಹೇಳಲುಪಕ್ರಮಿಸಿದ್ದೇನಂದರೆ: "ನನ್ನ ಪ್ರಿಯಸಖಿಯಾದ ನೆರೆಮನೆಯ
ಪದ್ಮಾವತಿಯ ಗಂಡನು ತೀರಿಕೊಂಡು ನಿನ್ನೆಗೆ ಹತ್ತುದಿನಗಳಾದವು.
ಏನು ಹೇಳಲಿ ನಾನು! ನಿನ್ನೆಯೇ ಕ್ರೂರರಾದ ಬ್ರಾಹ್ಮಣರೂ, ರಕ್ಕಸಿಯ
ರಾದ ವಿಧವೆಯರೂ ಕೂಡಿ ಗೌರಿಯಂಥ ನನ್ನ ಸಖಿಯ ಕೇಶವಪನವನ್ನು
ಮಾಡಿಸಿದರು. ಅಯ್ಯೋ! ನನ್ನ ಪದ್ಮಾವತಿಯ ಸೂಕ್ಷ್ಮವಾದ ನೀಲಾಳಕಗಳ
ಸೊಬಗೇ ! ಹೆರಳುಬಂಗಾರವನ್ನು ಹಾಕಿಕೊಂಡು ನಿಂತಿರುವ ಆ ನನ್ನ
ಸಖಿಯ .ಶೋಭೆಯು ಅಪ್ಪರೆಯರಿಗೂ ಬಾರದು! ಪತಿಯನ್ನು ಕಳಕೊಂಡ
ಘೋರತರವಾದ ದುಃಖದಲ್ಲಿದ್ದ' ಆ ಅಬಲೆಯನ್ನು ಬಲಾತ್ಕಾರದಿಂದ ಹಿಡಿದು
ಹಾಗೆ ಅಭದ್ರವಾದ ಕೃತ್ಯವನ್ನು ಮಾಡಿದರೆ | "'
" ಪಾಪ ! ಬಹಳ ಕೆಟ್ಟಿದ್ದಾಯಿತು 1 ಎಂದು ಇಂದುವದನೆಯ
ಪತಿಯು ನುಡಿದನು.
" ಕೆಟ್ಟದ್ದೆಂದರೆ ಆಷ್ಟಿಷ್ಟೆ? ಪದ್ಮಾವತಿಯ ರೂಪವೂ, ಅವಳ
೧೬೫ ---------------------------------------------------------------------
ತಾರುಣ್ಯವೂ, ಅವಳ ಸೌಭಾಗ್ಯವೂ ಹೀಗೆ ಒಮ್ಮಿಂದೊನ್ಮು ನಷ್ಟವಾದವಲ್ಲೆ?
ವನದೇವತೆಯಂಕೆ ಒಯ್ಯಾರದಿಂದ ಸುಳಿದಾಡುವ ಪದ್ಮಾವತಿಯು ಈಗ
ಮೋಟಮರದಂತೆ ಅಮಂಗಲೆಯಾಗಿ ನಿಂತಿರುವಳು. ಅವಳ ಕಂಕಣಗಳ
ನ್ನೊಡೆದು, ಕಂಚುಠವನ್ನು ಕಸುಕೊಂಡ್ಕು ಸ್ಮಶಾನದಲ್ಲಿ ಕುಳ್ಳಿರಿಸಿ ಅವಳ
ತಲೆಯನ್ನು... ...? ಎಂದು ನುಡಿಯುತ್ತೆ ಇಂದುವದನೆಯು ಧಡಕ್ಕನೆ
ನೆಲಕ್ಕೆ ಉರುಳಿದಳು.
ದುಃಖಸಂಮೂರ್ಛ್ಥಿತೆಯಾದ ತನ್ನ ಪ್ರಿಯತಮೆಯನ್ನು ರಘುವೀರನು
ಲಗುಬಗೆಯಿಂದೆತ್ತಿ ಕೊಂಡು ತೊಡೆಯಮೇಲೆ ಕುಳ್ಳಿರಿಸಿ ಬೀಸಣಿಕೆಯಿಂದ
ಅವಳಿಗೆ ಗಾಳಿಹಾಕಿದನು. ಇಂದುವದನೆಯೂ ತನ್ನ ಮುಖವನ್ನು
ಪ್ರಾಣಕಾಂತನ ಹೆಗಲಮೇಲಿಟ್ಟು ಕೊಂಡು ನಿಟ್ಟುಸುರು ಹಾಕಿದಳು.
“ ಪ್ರಿಯೆ, ಪದ್ಮಾವತಿಯ ಮೇಲೆ ದೇವರೇ ಮುನಿದಿರುವಾಗ ನೀನು
ವ್ಯರ್ಥವಾಗಿ ಶೋಕಮಾಡಿದರೆ ಏನಾಗುವದು? ಗತಭರ್ತೃಕೆಯರಾದ
ಬ್ರಾಹ್ಮಣಿಯರೆಲ್ಲರ ಹೆಣೇಬರಹವೇ ಹೀಗಿರುವದು. ಅದಕ್ಕೆ ಉಪಾಯ
ವೇನು?”
" ಪಾಪ, ಆ ಭಾಗ್ಯ ಹೀನೆಯರ ರೂಪವನ್ನು ಕೆಡಿಸುವದರಿಂದೇನು
ಪ್ರಯೋಜನ? ಮೃತನಾದಪತಿಗೆ ಅದರಿಂದ ಸುಖವೆ? ಕರುಣಾನಿಧಿ
ಯಾದ ಪರಮಾತ್ಮನಿಗೆ ಸಂತೋಷವೆ? ದುಃಖಭರಾರ್ತಳಾದ ಆ ಸತಿಗೆ
ಸಮಾಧಾನವೆ? ” ಎಂದು ಗಂಡನ ಮುಖವನ್ನು ನೋಡುತ್ತೆ ಬಟ್ಟು ಎಣಿಸಿ
ಎಣಿಸಿ ಇಂದುನದನೆಯು ಕೇಳಿದಳು.
" ಹಾಗಲ್ಲ; ಪತಿಯ ಮರಣದನಂತರ ವಿಧವೆಯರು ಉತ್‌ಶೃಂಖಲ
ರಾಗಿ ನಡಕೊಳ್ಳಬಾರದೆಂದು ಹಿರಿಯರು ಹೀಗೆ ನಿಧಿಸಿರುವರು. ”
"" ರಾಮ ! ರಾಮ! ರಾಮ! ಈ ಅಭದ್ರವಾದ ನುಡಿಯನ್ನು
ಕಿವಿಯಿಂದ ಕೇಳಲಸವಲ್ಲ. ಪತಿಗಳಿರುವಾಗಲೇ ಕೆಟ್ಟ ನಡತೆಯನ್ನು ಕಲಿ
ತಿರುವ ಹೆಂಗಸರು ಮುಂದಾದರೂ ದುರ್ಮಾರ್ಗಿಗಳಾಗುವರೆಂಬ ಭೀತಿಯು.
ನಿರ್ಮಲಾಚರಣದವರಾದ ನಾರಿಯರಿಗೆ ಇಂಥ ಗೋಳು ಯಾಕೆ?” ಎಂದು
ನುಡಿದು ಆ ಸತಿಯು ಕಿವಿಯ ಮೇಲೆ ಕೈಯಿಟ್ಟುಕೊಂಡಳು.
" ಪ್ರಿಯೇ ನೀನಿನ್ನೆನ್ಟು ಚಿಂತಿಸಿದರೂ ಪದ್ಮಾವತಿಯ ದುಃಖವು
೧೬೬ -------------------------------------------------------------------
ಹೋಗಬಲ್ಲದೆ? ಅನ್ಯರ ದುಃಖವನ್ನು ಕಟ್ಟಿಕೊಂಡು ನಾವು ಹೆಚ್ಚಾ ಗಿ ದುಃಖಿ
ಸುತ್ತಿರುವದು ಮೂರ್ಖತನವೇ। "
" ಪತಿರಾಜರೆ, ಸ್ತ್ರೀಯರ ದುಃಖಗಳನ್ನು ನೀವೇನು ಬಲ್ಲಿರಿ? ಪದ್ಮಾ
ವತಿಯಂಥ ದುಃಖವು ಪುರುಷರಿಗೆ ಒದಗಿದ್ದರೆ ತಿಳಿಯುತ್ತಿತ್ತು!”
ನಮಗೊದಗಿದ ವಿಪತ್ತುಗಳನ್ನೇ ನಾವು ಬರುಬರುತ್ತೆ ಮರೆತುಬಿಟ್ಟು
ಇದ್ದದ್ದರಲ್ಲಿಯೇ ಸುಖ ಹೆಚ್ಚಿಕೊಂಡಿರುತ್ತೇವೆ. ಇಂದುವದನೆಯು ಪರ
ದುಃಖವನ್ನು ಕಂಡು ತಾನು ಹಚ್ಚಿಕೊಂಡಿರುವ ವ್ಯಸನವನ್ನು ಕೆಲಕಾಲದಲ್ಲಿ
ಮರೆತು ಮತ್ತೆ ತನ್ನ ಮನೋರಮಣನೊಡನೆ ಲೀಲಾವಿಲಾಸಗಳನ್ನು
ಮಾಡುತ್ತೆ ಆನಂದದಿಂದ ಇದ್ದಳೆಂಬದನ್ನು ಅನುಭವಿಕರಾದ ವಾಚಕರಿಗೆ
ನಾವು ಹೇಳಬೇಕಾಗಿಲ್ಲ.
ಮುಂದೆ ಕೆಲವು ದಿವಸಗಳಲ್ಲಿ ಪುಣೆಯಿಂದ ಒಬ್ಬ ರಾಹುತನು ರಘು
ವೀರನಿಗೆ ಸದಾಶಿನ ಭಾವೂಸಾಹೇಬರ ಪತ್ರವನ್ನು ತಂದುಕೊಟ್ಟನು. ಅದರ
ಸಾರಾಂಶವನ್ನು ಕನ್ನಡದಲ್ಲಿ ಕೊಡುತ್ತೇನೆ
“ ಪ್ರಿಯ ವಯಸ್ಯನಾದ ರಘುವೀರನೇ, ಮಹಾರಾಷ್ಟ್ರರ ಸತ್ವಪರೀ
ಕ್ಷೆಯ ಕಾಲವು ಬಂದೊದಗಿದೆ. ನಮ್ಮ ಅಣ್ಣಂದಿರಾದ ರಘುನಾಥರಾಯರು
ಅಟಕಿನ ಬಳಿಯಲ್ಲಿ ಅಹಮ್ಮದಶಾ ಅಬ್ದಾಲಿಯನ್ನು ಸೋಲಿಸಿದ ವೃತ್ತಾಂತವು
ನಿನಗೆ ಗೊತ್ತೇ ಇರುವದು. ಈಗ ಆ ದುರಾಣಿಯು ಪ್ರಚಂಡವಾದ ಸೈನ್ಯ
ವನ್ನು ಕಟ್ಟಿಕೊಂಡು ಮುಯ್ಯಕ್ಕೆ ಮುಯ್ಯವನ್ನು ತೀರಿಸಿಕೊಳ್ಳಲು ಬರುವವ
ನಾಗಿದ್ದಾನೆ. ಈ ಪ್ರಸಂಗದಲ್ಲಿ ನಮ್ಮ ಮಹಾರಾಷ್ಟ್ರ ಸರದಾರರೆಲ್ಲರೂ
ಒಕ್ಕಟ್ಟಾಗಿ ಆ ದುರಾಣಿಯನ್ನು ಹೊಡೆದು ಹಿಂದಟ್ಟುವದು ಅವಶ್ಯವಾದ
ಕರ್ತವೃವಾಗಿರಲು, ನಮ್ಮಲ್ಲಿಯೇ ಕೆಲಜನ ಅಭಿಮಾನಶೂನ್ಯರು ಒಡಕು
ಹುಟ್ಟಿಸಿ ಕರ್ತವ್ಯಪರಾಙ್ಮುಖರಾಗಿರುವರು. ಕರ್ನಾಟಕದ ಜನರು ಅಸಾ
ಧಾರಣರಾದ ಶೂರರೂ, ಏಕಮಾರ್ಗಿಗಳೂ ಆಗಿರುವರೆಂಬದನ್ನು ವೀರಾಗ್ರೇ
ಸರರಾದ ನನ್ನ ಕಕ್ಕಂದಿರಾದ ಬಾಜೀರಾವ ಸಾಹೇಬರು ಮನಗಂಡಿದ್ದರು.
ನನ್ನ ಅಭಿಪ್ರಾಯವಾದರೂ ಹಾಗೆಯೇ ಇರುವದೆಂಬದು ನನ್ನ ಪ್ರಿಯಮಿತ್ರ
ನಾದ ನೀನು ಕಂಡುಕೊಂಡಿರುವಿ. ರಾಘೋಬಾದಾದಾ ಸಾಹೇಬರು ಪೂರ್ವ
ವೆಂದರೆ ತಾನು ಪಶ್ಚಿಮವೆಂದೇತೀರುತ್ತಾರೆ, ಹೋಳಕರನು ನನ್ನ ಅಭಿಪ್ರಾಯಕ್ಕೆ
೧೬೭ ------------------------------------------------------------------------
ಮೂಗುಮುರಿಯುತ್ತಾನೆ. ಈ ಪ್ರಸಂಗದಲ್ಲಿ ನಿನ್ನಂಥ ಶೂರ ಸರದಾರರ
ಸಹಾಯ್ಯವು ನನಗೆ ಅವಶ್ಯವಾಗಿ ಬೇಕಾಗಿರುವದು, ಮುಂದಿನ ತಿಂಗಳದ
ಇದೇ ಮತಿಯ ದಿವಸ ನಾವು ಅಹಮ್ಮದಶಹನ ಮೇಲೆ ದಂಡೆತ್ತಿ ಹೋಗತ್ತಕ್ಕ
ವರು. ಅದಕ್ಕಾಗಿ ನೀನು ಮಸಿ ಇದಿಗೆಂಟನೆಯ ದಿವಸ ಅಲ್ಲಿಂದ ಹೊರಟು
ಶುದ್ಧ ಚತುರ್ದಶಿಯ ಒಳಗಾಗಿ ಇಲ್ಲಿಗೆ ಬರಲೇಬೇಕು. ರಘುವೀರರಾವ,
ಇಂದಿನಿಂದ ನಿಮ್ಮನ್ನು ಐದು ಸಾವಿರ ಕುದುರೆಗಳ ಮೇಲಿನ ಸರದಾರರನ್ನಾಗಿ |
ಶ್ರೀಮಂತರು ನಿಯಮಿಸಿರುತ್ತಾರೆ. ಬಂದ ರಾವುತನ ಸಂಗಡ ನಿಮ್ಮ ಸರ
ದಾರೀ ಪೋಷಾಕು ಕಳಿಸಿರುತ್ತದೆ ಸ್ವೀಕರಿಸಬೇಕು. ರಾಜಶ್ರೀ ಭೀಮ
ಬಹದ್ದರರವರಿಗೆ ನನ್ನ ನಮಸ್ಕಾರಗಳನ್ನು ಹೇಳಬೇಕು.”
ರಘುವೀರನಿಗೆ ಶಸ್ತ್ರವನ್ನು ಯಾವಾಗ ಹಿಡಿಯುವೆನೋ ಎಂಬಂತಾ
ಗಿಶ್ತು. ಭಾವೂಸಾಹೇಬರ ಪತ್ರವನ್ನೊದಿದಾಕ್ಷವೇ ಅವನಲ್ಲಿ ವಿಲಕ್ಷಣ
ವಾದ ಸ್ಫೂರ್ತಿ ತುಂಬಿ ರಘುವೀರನು ಎದ್ದು ನಿಂತು ಸಡ್ಡು ಹೊಡೆದನು.
ತನ್ನ ಮಗನನ್ನು ಕುರುಕ್ಷೇತ್ರಕ್ಕೆ ಹೋಗಿ ಯುದ್ಧಮಾಡತಕ್ಕವನೆಂಬ ಅಭಿ
ಮಾನದಿಂದ ವೃದ್ಧ ವೀರನಾದ ಭೀಮಬಹದ್ದರನ ಬಿಳಿಮೀಸೆಗಳು ಸೆಟೆದು
ನಿಂತವು. ಸರದಾರರ ಸೊಬಗಿನ ಉಡುಗೆ ತೊಡಿಗೆಗಳನ್ನು ಮಾಡಿಕೊಂಡು
ಬಂಗಾರದ ಹಿಡಿಕೆಯ ಖಡ್ಗನನ್ನು ಹಿಡಿದುಕೊಂಡು ನಿಂತಿರುವ ತನ್ನ ಪತಿ
ರಾಯನ ಸುಂದರವಾದ ಮೂರ್ತಿಯನ್ನು ಕಂಡು ಹಿಗ್ಗಿ ಇಂದುವದನೆಯು
ಪ್ರೇಮದಿಂದ ದೃಷ್ಟಿತೆಗೆದಳು.
ಯುದ್ಧಕ್ಕೆ ಹೊರಟವನಾನ ತನ್ನ ಮಗನು ಸುರಕ್ಷಿತವಾಗಿ ಮನೆಗೆ
ಬರಲೆಂದು ಭೀಮಬಹದ್ದರನು ಗ್ರಾಮದೇವತೆಗಳಿಗೆ ಮಹಾಪೂಜೆಯನ್ನು
ಮಾಡಿಸಿದನು; ಅರಮನೆಯಲ್ಲಿ ಬ್ರಾಹ್ಮಣರ ವೇದಘೋಷವನ್ನು ಮಾಡಿಸಿ
ಅವರಿಗೆ ಸುವರ್ಣ ದಕ್ಷಿಣೆಯನ್ನು ಕೊಟ್ಟನು; ಊರವರಿಗೆಲ್ಲ ಉಲುಪೆ
(ಭೋಜನ ಸಾಹಿತ್ಯ) ಕೊಟ್ಟು ಮಿಷ್ಟಾನ್ನ ಭೋಜನ ಮಾಡಹೇಳಿದನು.
ಕರ್ನಾಟಕದಲ್ಲಿ ಹೆಸರಾದ ಒಂದು ಸಾವಿರ ಜನ ಭಟರನ್ನು ಕರಕೊಂಡು'
ರಘುವೀರನು ನಾಳೆ ಬೆಳಗ್ಗೆ ಪುಣೇ ಪಟ್ಟಣಕ್ಕೆ ಪಯಣಮಾಡುವದನ್ನು
ಗೊತ್ತುಪಡಿಸಿ ಸರ್ವಸಿದ್ದತೆಯನ್ನು ಮಾಡಿಟ್ಟುಕೊಂಡನು.
ಇಂದುವದನೆಯು ಅಂದಿನ ರಾತ್ರಿ ದಿವ್ಯಾಂಬರಗಳನ್ನು ಧರಿಸಿ
೧೬೮ ----------------------------------------------------------------------
ಸರ್ವಾಭರಣಭೂಹಿತೆಯಾಗಿ ಪ್ರಾಣಕಾಂತನ ಶಯನಮಂದಿರಕ್ಕೆ ಬಂದಳು.
ರಘುವೀರನು ಅವಳನ್ನು ಅಕ್ಕರತೆಯಿಂದ ತೆಕ್ಕೆಪಿಡಿದು ಚುಂಬಿಸಿ ತನ್ನ ಬಳಿ
ಯಲ್ಲಿ ಕುಳ್ಳಿರಿಸಿಕೊಂಡನು. ಆ ಪತಿವ್ರತೆಯ ಕಣ್ಣಲ್ಲಿ ನೀರು ತಂದು ತನ್ನ
ಪತಿಯನ್ನು. ಕುರಿತು, " ನೀವು ಅಸಾಧಾರಣ ವೀರರು, ಯುದ್ಧ ಕಲೆ
ಯಲ್ಲಿ ಪ್ರವೀಣರು, ಎಂಥ ದುರ್ಧರವಾದ ಸಂಗ್ರಾಮಕ್ಕೂ ನಿರ್ಭೀತರಾಗಿ
ಎದೆಗೊಟ್ಟು ನಿಲ್ಲಲು ಸಮರ್ಥರು, ಸರಿ. ಆದರೆ ಹೆಂಗರುಳು ನನ್ನದು!
ಯುದ್ಧದಲ್ಲಿ ಮೈತುಂಬ ಕಣ್ಣಿಟ್ಟುಕೊಂಡು ಕಾದಬೇಕೆಂದು ಇಷ್ಟೆಯೇ ಬೇಡಿ
ಕೊಳ್ಳುತ್ತೇನೆ. ಯುದ್ಧದಂಥ ಮಹತ್ಕಾರ್ಯಕ್ಕೆ ನನ್ನ ಪ್ರಾಣಕಾಂತರು
ಉತ್ಸಾಹದಿಮದ ಹೊರಟಿರಲು ನಾನು ಆ ಕಾರ್ಯಕ್ಕೆ ಅಡ್ಡಾಗಿ ಬರಬೇಕೆಂದು
ಈ ಮಾತುಗಳನ್ನಾಡಿದೆನೆಂದು ತಾವು ಸರ್ವಥಾ ತಿಳಿಯಲಾಗದು, ಪ್ರಾಣ
ಕಾಂತರಿಗೆ ಪ್ರಿಯವಾದದ್ದು ನನಗಾದರೂ ಪ್ರಿಯವೇ ಅಲ್ಲವೆ?” ಎಂದು
ಅವಳು ಮಂದಹಾಸವನ್ನು ತಳೆದು ನುಡಿದರೂ ಮತ್ತವಳ ಕಣ್ಣುಗಳಲ್ಲಿ
ಅಶ್ರುಬಿಂದುಗಳೊತ್ತಿ ಬಂದವು.
" ಭಾಮಿನಿ, ಕರ್ತವ್ಯವನ್ನರಿತವಳೂ ಪ್ರೇಮಪೂರಿತಳೂ ಆದ ನಿನ್ನ
ಅಶ್ರುಗಳೂ, ಉದಾತ್ತವಾದ ವಿಚಾರಗಳೂ ಎರಡೂ ನಿನಗೆ ಸಹಜವಾದವು
ಗಳೇ. ಆದರೆ ಕರ್ತವ್ಯದ ಮುಂದೆ ಪ್ರೇಮವನ್ನು ನಾವು ಸರ್ವಥಾ ಮರೆತು
ಬಿಡಬೇಕಾಗುವದು. ಈ ಪ್ರಸಂಗದಲ್ಲಿ ನೀನು ನಿನ್ನ ಅಶ್ರುಗಳನ್ನು ತಡೆದು
ಹಾಸ್ಯಮುಖಿಯಾಗಿ ನನಗೆ ಹೋಗಲು ಅಪ್ಪಣೆ ಕೊಡಬೇಕು ಕಂಡಿಯಾ.
ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿ ಬಂದಮೇಲೆ ಇಲ್ಲಿ ಪುನಃ ನಾವು
ಪ್ರೇಮದ. ಹೊರತಾಗಿ ಮತ್ತೊಂದು ವಿಚಾರವನ್ನು ಮಾಡತಕ್ಕದ್ದಿರುವದಿಲ್ಲ.”
" ಕಾಂತರೆ ನನ್ನ ಕಣ್ಣೀರುಗಳನ್ನು ಲಕ್ಷಿಸಬೇಡಿರಿ, ಸ್ತ್ರೀಯರ ಕಣ್ಣು
ಗಳಲ್ಲಿ ಭಾಗೀರಥಿಯು ವಾಸಮಡಿಕೊಂಡೇ ಇರುವಳು, ನಾನು ನಿಶ್ಚಲ
ವಾದ ಮನಸ್ಸಿನಿಂದ ತಮಗೆ ಯುದ್ಧಕ್ಕೆ ಹೋಗಲು ಅಪ್ಪಣೆ ಕೊಟ್ಟೇಕೊಡು
ತ್ತೇನೆ. ಯಾಕೆಂದರೆ ಪಾತಿವ್ರತ್ಯದಲ್ಲಿ ಏನಾದರರೂ ಸಾಮರ್ಥ್ಯವಿದ್ದರೆ ಅದು
ನನ್ನ ಮಂಗಲಸೂತ್ರವನ್ನು ಕಾಪಾಡದೆ ಇರದು!'' ಎಂದು ನುಡಿದು ಇಂದು
ವದನೆಯು ಮುಖವನ್ನು ದುರ್ನಿವಾರ ಅಶ್ರುಬಿಂದುಗಳನ್ನು ಒರಸಿ
ಕೊಂಡಳು.
೧೬೯ --------------------------------------------------------------------------
ಹೀಗೆ ಆ ದಂಪತಿಗಳು ಆ ರಾತ್ರಿ ಬಹಳಹೊತ್ತಿನವರೆಗೆ ಮಾತಾಡುತ್ತ
ಕುಳಿತೇ ಇದ್ದರು.
x x x
ಪಾಣಿಪತ್ತದ ಯುಗ್ಧದ ವೃತ್ತಾಂತವು ಪ್ರಸಿದ್ಧವಾದ ಅನೇಕ ಇತಿ
ಹಾಸ ಗ್ರಂಥಗಳಲ್ಲಿ ಮಹತ್ವವಾದ ಸ್ಥಾನವನ್ನು ಹೊಂದಿರುವದರಿಂದ ಅದೆರ
ವರ್ಣನೆಯನ್ನು ನಾವು ಇಲ್ಲಿ ಮಾಡಿ ವೃರ್ಥವಾಗಿ ದಣುಕೊಳ್ಳುವದೇಕೆ?
ಅದೂರದರ್ಶಿಯೂ ಅಹಂಕಾರಿಯೂ ಆದ ದಾದಾಸಾಹೇಬನು ತಮ್ಮನಾದ
ಭಾವೂಸಾಹೇಬನೊಡನೆ ನಿರರ್ಥಕವಾಗಿ ಕಲಹ ಮಾಡಿ ಅಂಥ ಪ್ರಸಂಗದಲ್ಲಿ
ಯುದ್ಧದಿಂದ ಹಿಂದುಳಿದನು. ಅವನ ಪಕ್ಷಪಾತಿಯಾದ ಹೋಳಕರ ಮಲ್ಲಾ
ರಿಯು ರಣರಂಗದಿಂದ ಮೈದೆಗೆದನು. ದಿಲ್ಲೀ ಬಾದಶಶನ ಉಪ್ಪು ಉಂಡ
ಕೃತಘ್ನರು ತಮ್ಮ ಸಾಮ್ರಾಜ್ಯಕ್ಕೆ ಉಂಟಾಗುವ ಹಾನಿಯನ್ನು ಲೆಕ್ಕಿಸದೆ,
ಯುದ್ಧದಲ್ಲಿ ಭಾವೂಸಾಹೇಬನಿಗೆ ಅನುಕೂಲರಾದವರಂತೆ ವರ್ತಿಸುತ್ತಿದ್ದರೂ
ಒಳಗಿಂದೊಳಗೆ ಅಬ್ದಾಲಿಗೆ ಅನುಕೂಲರಾಗಿದ್ದರು.
ಹೀಗೆ ಅನನುಕೂಲವಾಗಿರುವ ಪರಿಸ್ಥಿತಿಯಲ್ಲಿದ್ದರೂ ಪುರುಷಸಿಂಹನಾದ
ಭಾವೂಸಾಹೇಬನು ಅಭಿಮನ್ಯುವಿನ ಪರಾಕ್ರಮದಿಂದ ಯುದ್ಧ ಮಾಡಿದನು.
ಭಾವೂಸಾಹೇಬನ ಬಲಗೈಯುತಿದ್ದ ರಘುವೀರನ ಸಾಹಸದ ಕರ್ಮವಾದರೂ
ಕೊಂಡಾಡುವಂತಿತ್ತು. ಪೇಶ್ವರ ಗೋಲಂದಾಜನಾದ ಇಬ್ರಾಹಿಮ ಗಾರ
ಡಿಯ ಭಯಂಕರವಾದ ತೋಫಿನ ಕಿಚ್ಚಿನಿಂದಲೂ ಮರಾಠಾ ರಾವುತರ ತೀಕ್ಷ್ಣ
ವೇಧಿಗಳಾದ ಬರ್ಚಿಗಳಿಂದಲೂ ಕರ್ನಾಟಕದ ವೀರರು ಆರಳು ಹುರಿದಂತೆ
ಎಡೆಬಿಡದೆ ಹೊಡೆಯುತ್ತಿರುವ ಗುಂಡುಗಳ ಸುರಿಮಳೆಯಿಂದಲೂ ಅಹಮ್ಮದ
ಶಹನ ಸೇನೆಯು ವಾತಾಹತವಾದ ನೌಕಾಸನುದಾಯದಂತೆ ದಿಕ್ಕೆಟ್ಟು ಓಡ
ಲಾರಂಭಿಸಿತು. ಆದರೆ ದೈವದ ಮುಂದೆ ಮನುಷ್ಯರ ಯತ್ನಗಳು ಎಲ್ಲಿಗೆ
ಮುಟ್ಟುವವು? ಅಕೋ, ಅಂತದ್ರೋಹಿಯೊಬ್ಬನು ತನ್ನ ಸ್ವಾಮಿಯಾದ
ವಿಶ್ವಾಸರಾಯನ ಮೇಲೆ ಗುಂಡು ಹಾರಿಸಿ ಅವನನ್ನು ಕೊಂದುಬಿಟ್ಟನು.
ವಿಕ್ರಾಂತನಾದ ಭಾವೂಸಾಹೇಬನು ಆನೆಯಿಂದಿಳಿದು ತೇಜಿಯನ್ನೇರಿ ಬರ್ಜಿ
ಯನ್ನು ಚುಚ್ಚುತ್ತೆ ಶತ್ರುಸೇನೆಯಲ್ಲಿ ಹೊಕ್ಕು ಆಡಗಿದವನು ತಿರುಗಿ ಕಾಣಲೇ
ಇಲ್ಲ. ರಘುವೀರನ ದೆಂಡನೆಲ್ಲಿಯೋ, ರುಂಡವೆಲ್ಲಿಯೋ 1 ಅವನ ಶಲೆಯ
೧೭೦ ----------------------------------------------------------------------
ಮೇಲಿನ ಮಂದೀಲವು ಮಾತ್ರ ಭಾವೂಸಾಹೇಬನ ಶವದ ಸಮೀಪದಲ್ಲಿ
ಬಿದ್ದದ್ದು ಕಂಡಿತು. ಆ ವೀರನಾದರೂ ಸಂಗ್ರಾಮದಲ್ಲಿ ಮಡಿದಿರಲೇಬೇಕು.
ರಘುವೀರನ ಮಂದೀಲವು ಬಿದ್ದಿರು ಸ್ಥಳದಲ್ಲಿ ರುಂಡವಿಲ್ಲದ ದೇಹವೊಂದು
ಬಿದ್ದಿತ್ತು. ಅದು ರಘುವೀರನದೇ ಎಂದು ಅನೇಕರು ನಿಶ್ಚಿತವಾಗಿ ಹೇಳಿದರು.
ರಘುವೀರನ ಮರಣದ ದುರ್ಧರವಾದ ದುರ್ವಾರ್ಶೆಯನ್ನು ಕೇಳಿ
ಪುತ್ರಶೋಕದ ಸಂತಾಪದಿಂದ ವೃದ್ಧ ಭೀಮಬಹದ್ದರನು ಕುಳಿತಲ್ಲಿಯೇ
ಪ್ರಾಣಬಿಟ್ಟನು, ತನ್ನ ಜೀವಿತೇಶ್ವರನು ಮಡಿದು ಹೋದ ವರ್ತಮಾನನನ್ನು
ಕೇಳಿ ಕೋಮಲೆಯಾದ ಇಂದುವದನೆಗೆ ಎಷ್ಟು. ದುಃಖವಾಯಿತೆಂಬದನ್ನು.
ನಮ್ಮ ವಾಚಕರು ಊಹಿಸಬಲ್ಲರು. ಅವಳು ಹೊಡಕೊಂಡು ಬಡಕೊಂಡು
ಮರುಮರುಗಿ ಬೆಂಡಾದಳು. ಅದೆಲ್ಲ ಆರಣ್ಯರೋದನವೇ ಆಯಿತು, ಅವಳ
ತಂದೆಯಾದ ರಾಜಾ ವೆಂಕಟರಾಯನು ಅಲ್ಲಿಗೆ ಬಂದು ಮಗಳನ್ನು ತನ್ನ
ಊರಿಗೆ ಕರಕೊಂಡು ಹೋದನು.
ಈ ಸಂಗತಿಯಾದ ಬಳಿಕ ಮೂರು ನಾಲ್ಕು ತಿಂಗಳಿಗೆ ಪುಣೆಯ
ಸರದಾರನ ವೇಷನನ್ನು ತೊಟ್ಟ ರಾವುತನೊಬ್ಬನು ಭೀಮಬಹದ್ದರನ
ಅರಮನೆಯ ಮುಂದೆ ಬಂದಿಳಿದನು. ಅರಮನೆಗೆ ಬೀಗ ಹಾಕಿತ್ತು. ರಾಜಾ
ವೆಂಕಟರಾಯರ ಜವಾನನೊಬ್ಬನು ಬಾಗಿಲ ಕಾಯುತ್ತ ಬಿದ್ದು ಕೊಂಡಿದ್ದನು.
ಸರದಾರನು ಮನೆಯವರ ಸಮಾಚಾರವನ್ನು ಕೇಳಲಾಗಿ ಭೀಮಬಹದ್ದರರು
ಪುತ್ರಶೋಕದಿಂದ ತೀರಿಕೊಂಡರೆಂದೂ ಶೋಕಾಕುಲರಾದ ಇಂದುವದನಾ
ಬಾಯಿಯವರನ್ನು ರಾಜಾ ವೆಂಕಟರಾಯರು ತಮ್ಮ ಊರಿಗೆ ಕರಕೊಂಡು
ಹೋಗಿರುವರೆಂದೂ ಆ ಜವಾನನು ಹೇಳಿದನು. ಹೃದಯದ್ರಾವಕವಾದ
ಆ ವೃತ್ತಾಂತವನ್ನು ಕೇಳಿ ಸರದಾರನಿಗೆ ಅತಿಶಯವಾದ ದುಃಖವಾಯಿತು
ಅವನು ಅನ್ನ ನೀರೆನ್ನದೆ ಹಾಗೆಯೆ ತನ್ನ ಕುದುರೆಯನ್ನು ರಾಜಾ ವೆಂಕಟ
ರಾಯರ ಊರಿಗೆ ಹೊಡೆದನು. ಅಲ್ಲಿಯಾದರೇನು? ರಾಜಾ ವೆಂಕಟ
ರಾಯರು ಸಪರಿವಾರವಾಗಿ ತಿರುಪತಿಯ ಯಾತ್ರೆಗೆ:ಹೊರಟುಹೋಗಿ ನಾಲ್ಕು
ದಿವಸಗಳಾಗಿದ್ದವು.
ಸರದಾರನು ಆವೇಶದಿಂದ ವೆಂಕಟಗಿರಿಯ ಮಾರ್ಗವಾಗಿ ಹೊರಟು
ನಡೆದನು. ಅವನು ಯಾರೋ, ಅವನ ಕೆಲಸನೇನೋ ಯಾರು ಬಲ್ಲರು?
೧೭೧ -------------------------------------------------------------------------
ಸ್ನಾನಪಾನಾದಿಗಳನ್ನಾಗಲಿ ನಿಶ್ರಾಂತಿ ನಿದ್ರೆಗಳನ್ನಾಗಲಿ ಲೆಕ್ಕಿಸದೆ ಮಾರ್ಗ
ಕ್ರಮಣ ಮಾಡಿ ಅವನು, ವೆಂಕಟಗಿರಿಯ ಬಳಿಯಲ್ಲಿದ್ದ ಕಪಿಲತೀರ್ಥಕ್ಕೆ
ಬಂದನು. ರಾಜಾ ವೆಂಕಟರಾಯರಾದರೂ ಅದೇ ದಿನ ಪ್ರಾತಃಕಾಲದಲ್ಲಿ
ಕಪಿಲತೀರ್ಥಕೈ ಬಂದಿದ್ದರು. ಅಲ್ಲೊಂದು ವಿಲಕ್ಷಣವಾದ ಅನರ್ಥವೇ ನಡೆ
ದಿತ್ತು. ಅನೇಕ ಜನ ನಾರಿಯರು ಮುಕ್ಕರಿದು ಗೋಳಿಟ್ಟು ಅಳುತ್ತಿದ್ದರು.
ಪ್ರೌಢರಾದ ಪುರುಷರೆಲ್ಲರೂ ದುಃಖನಿರ್ಭರದಿಂದ ಮುಖಗಳನ್ನು ಸೆಲ್ಲೆ
ಯಿಂದ ಮುಚ್ಚಿಕೊಂಡು ಒತ್ತಿ ಬರುತ್ತಿರುವ ಕಣ್ಣೀರುಗಳನನ್ನು ಅನ್ಯರಿಗೆ
ಕಾಣಗೊಡದಂತೆ ಒಳಗಿಂದೊಳಿಗೆಯೇ . ಒರೆಸಿಕೊಳ್ಳುತ್ತಿದ್ದರು. ಅರ್ಭಕ
ಅರ್ಭಕಿಯರು ತಮಗೇನು ವ್ಯಸನವಾಯಿತೆಂಬದನ್ನರಿಯದೆ ದೊಡ್ಡ ದನಿ
ತೆಗೆದು ಆಕ್ರೋಶ ಮಾಡಹತ್ತಿದರು.
ಇಷ್ಟೆಲ್ಲ ಅನರ್ಥಕ್ಕೆ ಕಾರಣವಾದರೂ ಏನು? ಅಕೊ,. ಅಲ್ಲಿ ನೋಡಿರಿ:
ಚಿನ್ನದ ಗೌರಿಯಂತೆ ಚಲುವೆಯೂ ಕೋಮಲಾಂಗಿಯೂ ನವತರುಣಿಯೂ
ಆದ ಓರ್ವ ಭಾಗ್ಯ ಹೀನೆಯಾದ ಸಿ ಸ್ತ್ರೀಯನ್ನು ನಿಷ್ಕರುಣೆಯರಾದ ನಾಲ್ಕು
ಜನ ಮುದಿ ವಿತಂತುಗಳು ನೀರಲ್ಲಿ ಸಚೈಲವಾಗಿ ಮುಳುಗಿಸಿ ಹಿಡಿದಿದ್ದಾರೆ.
ಕಟುಕನಂತಿರುವ ಡೊಳ್ಳು ಹೊಟ್ಟಯ ಪ್ರರೋಹಿತನೋರ್ವನು ಎಡಗೈಯಲ್ಲಿ
ಅಶುಭಸೂಚಕ ಧರ್ಬಗಳನ್ನು ಹಿಡಕೊಂಡು ಬಲಗೈ ಯಲ್ಲಿದ್ದ ತನ್ನ ಶಾಲಿ
ಯಿಂದ ಆ ತಪಸ್ತಿನಿಯಾದ ತರುಣಿಯ ಕೈಯೊಳಗಿನ ಸೌಭಾಗ್ಯಾಲಂಕಾರ
ವಾಗಿದ್ದ ಬಳೆಗಳನ್ನು ಪಳಪಳನೆ ಒಡೆದನು. ಅಯ್ಯೊ! ಕೊರಳುಕೊಯ್ಯುವದ
ಕ್ಕಿಂತಲೂ ಘೋರತರವಾದ ಈ ವಿಧಾನವನ್ನು ಅನುಭವಿಸಲಾರದೆ ಸುತ್ತಲೂ
ನೆರೆದವರ ಮುಖವನ್ನು ನೋಡುತ್ತೆ ತರುಣಿಯು ಹಲುಬಿ ಹಂಬಲಿಸಿ
ಕಣ್ಣೀರು ಸುರಿಸುತ್ತ ತನ್ನನ್ನು ಬಿಡಿಸಿರೆನ್ನುತ್ತಲೂ ತಾನು ಸರೋವರದಲ್ಲಿ
ಮುಳುಗಿ ಪ್ರಾಣಕೊಡುತ್ತೇನೆನ್ನುತ್ತಲೂ ಒಳಿತಾಗಿ ಆಕ್ರಂದಿಸುತ್ತಿದ್ದಳು.
ಆದರೆ ಕೇಳುವವರಾರು ? ಅಧರ್ಮವಾದ ಧರ್ಮಶಾಸ್ತ್ರದ ಬಂಧನಕ್ಕೊಳ
ಗಾದ ಆ ಅಬಲೆಯ ಆಸ್ತರೆಲ್ಲರೂ ಆ ಧರ್ಮಶಾಸ್ತ್ರವನ್ನು ಮನಸಾ
ಹಳಿದುಕೊಳ್ಳುತ್ತಿದ್ದರೂ ಅದರ ವ್ಯಾಪಾರಗಳನ್ನು ತಡೆಯಲಾರದೆ ಕಣ್ಣೀರು
ಸುರಿಸುತ್ತ ಸುಳ್ಳು ಸಮಾಧಾನವನ್ನು ಹೇಳಿದರೇ ಹೊರತಾಗಿ, ಬೆಕ್ಕಿನಕೈಯಲ್ಲಿ
ಸಿಕ್ಕ ಅಕಂಯಂತಕಿರುವ ಆ ಚಿಕ್ಕಮಗುವನ್ನು ಯಾರೂ ಬಿಡಿಸಿಕೊಳ್ಳಲಿಲ್ಲ.
೧೭೨ ------------------------------------------------------------------------
ನಾವಿಕನು ಬಾಯಲ್ಲಿ ಹೊಗೆಸೊಪ್ಪು ಹಿಡಿದು ಪಿಚಿವಿಚಿ ಉಗುಳುತ್ತ
ತಡವಾದದ್ದನ್ನು ಸಹಿಸಲಾರದೆ ನಿಂತಿದ್ದನು. ಪುರೋಹಿತನು ಆ ದುಃಖಾರ್ತೆ
ಯಾದ ತರುಣಿಯ ಕೈಯಲ್ಲಿ ಎಳ್ಳು ದರ್ಭೆಗಳನ್ನು ಕೊಡಹೋಗಿ ಗಂಡನ
ಹೆಸರಿಲೆ ನೀರು ಬಿಡೆಂದು ಹೇಳುತ್ತಿದ್ದನು.
ಇಂದುವದನೆಯು ( ಆ ದುಖಾರ್ತೆಯಾದ ತರುಣಿಯು ಇಂದು
ವದನೆಯೇ ) ಪುರೋಹಿತನ ಕರ್ಣಕಟುವಾದ ಮಾತುಗಳನ್ನು ಲೆಕ್ಕಿಸದಲೆ
ಮುಗಿಲಿಗೆ ಕೈಯೆಕ್ಕಿ ಕಲ್ಮರಗಳು ಕರಗುವಂತೆ ಆಕ್ರೋಶಿಸಿ “ ಮಂಗಳಗೌರಿ,
ಪವಿವ್ರತಾಶಿರೋಮಣಿಯಾದ ಸಾವಿತ್ರಿ, ನೀವು ನನ್ನ ಪಾಲಗೆ ಕಲ್ಲಾದಿರಾ?
ಸಕಲಾಂತರ್ಯಾಮಿಯಾದ. ಪರಮಾತ್ಮಾ, ನಾನು ಆಕಲಂಕಿತೆಯಾದ
ಪತಿವ್ರತೆಯೆಂಬದನ್ನು ಅರಿತಿದ್ದರೂ ಇಂಥ ಪ್ರಸಂಗವನ್ನು ತಂದೆಯಾ?
ಪಾತಿವ್ರತ್ಯದಲ್ಲಿ ಏನಾದರೂ ಸಾಮರ್ಥ್ಯವಿದ್ದರೆ ನನ್ನ ಪ್ರಾಣಕಾಂತರು
ಸುಖರೂಪವಾಗಿ ಬರಲೇಬೇಕೆಂದು ಪತಿವ್ರತೆಯಾದ ನಾನು ಉಸುರಿದ
ಮಾತು ಸುಳ್ಳಾಯಿತೆ?'' ಎಂದು ನುಡಿದವಳೇ ಎದೆ ಎಜೆ ಬಡಕೊಂಡು
ಕೊಯ್ದೆಳೆಯ ಬಳ್ಳಿಯಂತೆ ನೆಲಕ್ಕೆ ಬಿದ್ದಳು,
ಅಷ್ಟರಲ್ಲಿ ವೀರಶ್ರೀಯುತನಾದ ತರುಣನೋರ್ವನು ಇದೇನನರ್ಥ
ವೆಂದು ಧಾವಿಸಿ ಬಂದ್ಳು ಆ ಶೋಕಸಂಭ್ರತರಾದ ಜನರ ಗದ್ದಲದಲ್ಲಿ
ಒಳನುಗ್ಗಿ ಬಂದು ನಿಂತನು. ಇಂದುವದನೆಯು ಚಕಿತಳಾಗಿ ನೋಡು
ತ್ತಾಳೆ: ಬಂದವನು ತನ್ನ ಪ್ರಾಣಕಾಂತನೇ! ತತ್‌ಕ್ಷಣವೇ ಅವಳ ಮೈಯಲ್ಲಿ
ವಿಲಕ್ಷಣವಾದ ಸ್ಫೂರ್ತಿ ಬಂದದ್ದರಿಂದ ವಿದ್ಯುತ್ತಿನಂತೆ ಭರದಿಂದ ಹಾರಿ
ಬಂದು ಜನಮರ್ಯಾದೆ ಲಜ್ಜೆಗಳನ್ನು ಲೆಕ್ಕಿಸದೆ ರಘುವೀರನ ಕೊರಳಿಗೆ
ತನ್ನ ಬಾಹುಪಾಶಗಳನ್ನು ನೀಡಿ ಅವನನ್ನು ಬಿಗಿದಪ್ಪಿಕೊಂಡು ಭೋರೆಂದು
ಅತ್ತಳು. ವಿಸ್ಮಯಾಕುಲನಾದ ರಘುವೀರಿಗೆ ಏನೂ ತೋಚಲೊಲ್ಲದು,
ದೇವದಾರುವಿನಂತೆ ನಿಶ್ಚಲವಾಗಿ ನಿಂತುಕೊಂಡನು. ದುಃಖಾರ್ತರಾದ ಆಪ್ತ
ವರ್ಗದವರೆಲ್ಲರೂ ರಘುವೀರನನ್ನು ಕಂಡಾಕ್ಟಣನೇ ಆನಂದಾತಿರೇಕಕ್ಕಾಗಿ
ಮೂಢರಂತೆ ತಟಸ್ಥರಾಗಿ ನಿಂತುಕೊಂಡರು. ಘನಾಂಧಕಾರದಲ್ಲಿ ತೊಳಲು
ತ್ತಿರುವವರು ಒಮ್ಮೆಲೆ ಮಹಾಜ್ಯೋತಿಯನ್ನು ಕಂಡು ದೈದೀಪ್ಯಮಾನರಾಗಿ
ಹೋಗುವದಿಲ್ಲವೆ ?
======================================
೧೭೩------------------------------------------------------------------------
ಶಿಲ್ಪಿಗನೆ ಶಿಲಾಮೂರ್ತಿ
"ಮಗುವೇ, ನೀನು ಒಳ್ಳೇ ಚತಕುರನಾದ ಶಿಲ್ಪಿಯು. "ಸ್ಟಾಮಿಗಳು
ಸಾನಂದದಿಂದ ಅಂದರು: "ಹಾಗೂ ನೀನು ಕುಲೀನನೂ, ನಿರ್ಮಲಾಂತಃ
ಕರಣಿಯು ಇರುವಿ. ಕಾರಣ, ನೀನೇ ಈ ನಮ್ಮ ತ್ರಿಪುರಸುಂದರಿಯ ಮೂರ್ತಿ
ಯನ್ನು ಮಾಡು. ಸದಾ ಕಲ್ಯಾಣವನ್ನೂ ಆಶೀರ್ವಾದಗಳನ್ನೂ ಬೀರುವಂಥ
ಮೂರ್ತಿಯು ನಿನ್ಸಿಂದಲೇ ಘಟಿಸತಕ್ಕದ್ದು. ಇದಕ್ಕಾಗಿ ನಿನಗೆ ಬೇಕಾದಷ್ಟು
ಕಾಲಾವಕಾಶವೂ ಸಾಕಷ್ಟು ಹಣದ ಸಹಾಯವೂ ನಮ್ಮಿಂದ ಸಿಕ್ಕೇಸಿಗು
ವವು. ಮನಮುಟ್ಟಿ ಕೆಲಸ ಮಾಡಿ ನಮ್ಮ ಇಚ್ಛೆ ಯನ್ನು ಪೂರೈಸು ಈ
ಮಹೆತ್ಕಾರ್ಯವೇ ನಿನಗೆ ಮೋಕ್ಷಸಾಥನವಾಗುವದು. ಇದನ್ನು ನೀನು
ನಾಳಿನ ದಸರೆಯ ಹಬ್ಬಕ್ಕೂ ಹದಿನೈದು ದಿನಗಳ ಮಂಚಿತವಾಗಿ ಮುಗಿಸ
ಬೇಕು. ದೇವರ ದಯವಿದ್ದರೆ ನವರಾತ್ರಿಯ ಆರಂಭದ ದಿನವೇ ನಾವು
ಮೂರ್ತಿಪ್ರತಿಷ್ಠಾಪನೆಯನ್ನು' ಮಾಡೇವಂತೆ. ನಿನ್ನ ಕೈಮುಟ್ಟಿದರೆ ಸಾಕು;
ಈ ಮೂರ್ತಿಯು ಶ್ರಿಲೋಕಪೂಜ್ಯವಾಗುವದೆಂದು ನಮ್ಮ ಲ್ಲರ ವಿಶ್ವಾಸವಿದೆ”
ದರ್ಶನಮಾತ್ರನೇ ಭಕ್ತರ ಅಭೀಷ್ಟವನ್ನು ತಡೆಯದೆ ಕೊಡುವಳೆಂಬುತೆಯೇ
ಕಾಣಬೇಕು ಕಂಡಿಯಾ? "
ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯರೆಂದೂ ವೇದವಿದ್ಯಾ
ಪಾರಂಗತರೆಂದೂ ಮಹಾನ್ ತಪೋನಿಧಿಗಳೆಂದೂ ಯೋಗಿಗಳೆಂದೂ
ಮಾಧವಾಚಾರ್ಯರನ್ನು ಅರಿಯದವರು ಈ ಭರತಖಂಡದಲ್ಲಿ ಯಾರೂ ಇರಲಿ
ಕ್ಕಿಲ್ಲ. ಇವರಿಗೆ ವಿದ್ಯಾರಣ್ಯರೆಂಬ ಅನ್ವರ್ಥಕ ನಾಮವಾದರೊ ಬಂದಿದ್ದು,
ಲೋಕದಲ್ಲಿ ಇದೇ ಹೆಸರಿನಿಂದ ಇವರು ಪ್ರಸಿದ್ಧಿಯನ್ನು ಹೊಂದಿದ್ದಾರೆ. ಇದೇ
ವಿದ್ಯಾರಣ್ಯ ಸ್ವಾಮಿಗಳು, ಆಧಿಕಾರಯುಕ್ತವಾದ ವಾಣಿಯಿಂದ ಮೇಲೆ ಬರೆ
ದಂತೆ ಮೂರ್ತಿಯನ್ನು ಸಿದ್ಧಪಡಿಸತಕ್ಕದ್ದೆಂದು ಇದು ಬ್ರಹ್ಮಚಾರಿಯಾದ ಮಾಧವಾ
ನಂದನನ್ನು ಕುರಿತು ಆಜ್ಞಾಪಿಸಿದರು. ಮಾಧವಾನಂದನೂ ಸ್ವಾ ಮಿಗಳ
ಆಜ್ಞೆಗೆ ತಲೆವಾಗಿ ಸುಮ್ಮನೆ ನಿಂತನು. ಮಠದ ಮುಖ್ಯ ಭಾಗವಾದ ಶ್ರಿಶಾರದಾ
ಪೀಠದ ಹತ್ತಿರವೇ ಅವರಿಬ್ಬರು ಮೂತುಮಾತಾಡುತ್ತ ಬಂದರು, ಮಠದಲ್ಲಿ
ಎಲ್ಲಿ ನೋಡಿದರೂ ವೇದಘೋಷವು ಭಕ್ತಿ-ಪ್ರೇಮಪೂರ್ನಕವಾಗಿ ನಡೆದಿತ್ತು.
೧೭೪ ----------------------------------------------------------------------------------
ಭಿನ್ನ ಭಿನ್ನ ಶಾಸ್ತ್ರಗಳಲ್ಲಿ ಪಾರಂಗತರೂ ಬ್ರಹ್ಮನಿಷ್ಠರೂ ಆದೆ ಗುರುಗಳ ಪಾಠ
ಪ್ರವಚನಗಳನ್ನು ಚಿತ್ತಕೊಟ್ಟು ಕೇಳುವ ಬ್ರಹ್ಮಚಾರಿಗಳ ವೃಂದಗಳನ್ನೂ:
ಬ್ರಹ್ಮಚಿಂತನೆಯನ್ನು ಮಾಡುತ್ತ ತದ್ಧ್ಯಾನನಿಮಗ್ನರಾಗಿ ಅಲ್ಲಲ್ಲಿ ಅಚಲ
ರಾಗಿ ಕುಳಿತಿದ್ದ ಚತುರ್ಥಾಶ್ರಮಿಗಳ ಸಮೂಹವನ್ನೂ ಕಂಡರೆ, ಸೃಷ್ಟಿಕರ್ತನ
ದೈವೀ ಸಂಪತ್ತಿನ ವೈಭವಸಾಗರವೆಲ್ಲವೂ ಈ ಧರ್ಮಪೀಠದಲ್ಲಿಯೇ ವಾಸಿಸು
ವಂತೆ ಕಾಣುತ್ತಿತ್ತು. ವೇದವೇದಾಂಗಗಳ ಚರ್ಚೆಯಲ್ಲಿಯೇ ಎಲ್ಲರೂ ನಿರತ
ರಾದ್ದರಿಂದ ಧರ್ಮಜಾಗೃತಿಯ ಕಾರ್ಯದ ಉಗಮವು ಇದೇ ಪೀಠದಿಂದಲೇ
ಎಂಬದಾಗಿ ಮೇಲೆಯೇ ತೋರುತ್ತಿತ್ತು. ಜಗಚ್ಛಾಲಕನಾದ ಪರಮಾತ್ಮನಲ್ಲಿ
ದೃಢವಿಶ್ವಾಸವೂ, ಆತನು ಯಾವಾಗಲೂ ನ್ಯಾಯನಿರತರನ್ನು ಸಂರಕ್ಷಿಸು
ತ್ತಿರುವನೆಂಬದರಲ್ಲಿ ಅಚಲವಾದ ನಿಷ್ಠೆಯೂ ಯಾವದಾದರೊಂದು ರಾಷ್ಟ್ರದ
ಅಭ್ಯುದಯಕ್ಕೆ ಕಾರಣಗಳು, ಈ ಅನಾದ್ಯನಂತವಾದ ತತ್ವವು ಮೂರ್ತಿ
ಮಂತ ಧರ್ಮವೇ ಆಗಿದ್ದ ಆ ವಿದ್ಯಾರಣ್ಣರ ಮಠದಲ್ಲಿ ಅವಿಚ್ಛಿನ್ನವಾಗಿ ಹಬ್ಬಿ
ಕೊಂಡಿತ್ತು. ಈ ಮಠಾಧಿಪತಿಗಳ ನಿರ್ಮಲಾಚರಣೆ, ತಾವು ಸಂಸ್ಥಾಪಿಸುವ
ಧರ್ಮಕ್ಕೆ ದೈನ್ಯಾವಸ್ಥೆಯು ' ಯಾವಚ್ಚಂದ್ರ ದಿವಾಕರೌ' 'ಬರಲಾರದೆಂಬದ
ರಲ್ಲಿ ಧರ್ಮಗುರುಗಳಿಗಿದ್ದ ದೃಢವಿಶ್ವಾಸ, ಈಶಪ್ರೇರಿತವಾದ ಸ್ಫೂರ್ತಿಯೇ
ಮೂರ್ತಿಮಾತ್ರವಾಗಿ ಈ ಕಾರ್ಯವನ್ನು ಕೈಕೊಂಡಿರುವದೇನೋ ಎಂಬಂತೆ
ಈ ಧರ್ಮಗುರುಗಳಲ್ಲಿದ್ದ ಕಾರ್ಯಕ್ಷಮತೆ ಮುಂತಾದ ಅನೇಕ, ಸ್ವರ್ಗೀಯ
ಗುಣಗಳ ಏಕತ್ರವಾದ ಶಕ್ತಿ ಸಮುಚ್ಚಯವೇ ಈ ಧರ್ಮಜಾಗೃತಿಯ ಕಾಲಕ್ಕೆ,
ಲೋಕದಲ್ಲಿ ಇಂದ್ರಿಯಗಳ ಅಂಧವಾದ ಅನಿಯಂತ್ರಿತ ವ್ಯಾಪಾರಗಳಿಗೆ ಬಲ
ವಾದ ನಿರ್ಬಂಧನವೇ ಆದಂತಾಗಿತ್ತು. ಅಂದಮೇಲೆ ಆಗಿನ ಮಠಾಧಿಪತಿ
ಗಳಿಗೂ ಧರ್ಮಸಂಸ್ಥಾಪಕರಿಗೂ ಇನ್ನುಳಿದ ಅನುಯಾಯಿಗಳಿಗೂ ಭಾವೀ
ಕಾಲದ ಅಸ್ಪೃಹಣೀಯವಾದ ಪರಿಸ್ಥಿತಿಯ ಕಲ್ಪನೆಯೂ ಆಗದಿರುವದು
ಸಹಜವಾದದ್ದು. ತಾವು ಶ್ರಮಪಟ್ಟು ಸಿದ್ಧಪಡಿಸಿದ ಶಾಂತಮೂರ್ತಿಗಳೆಲ್ಲವೂ
ಕಾಲವಶಾತ್ ನೆಲಸಮವಾಗಿ ಪೂರ್ವವೈಭವದ ಜರ್ಜರವಾದ ಕುರುಹು
ಗಳೆಂಬದಾಗಿ ಮಾತ್ರ ಬೊಟ್ಟುಮಾಡಿ ತೋರಿಸಲ್ಪಟ್ಟಾವೆಂಬದಾಗಿಯೂ, ಈ
ಮೂರ್ತಿಗಳು ಹೊಂದುವ ನಿಕೃಷ್ಟಾವಸ್ಥೆಗಿಂತಲೂ ಇವೆಲ್ಲವುಗಳಿಗೂ ಮೂಲಾ
ಧಾರವಾದ ಸನಾತನತತ್ವಗಳಿಗೂ ಗ್ಲಾನಿಯ ಕಾಲವು ಎಂದಾದರೊಮ್ಮೆ
೧೭೫ ------------------------------------------------------------------------
ಬಂದೀತೆಂಬದೂ ಅವರ ದೂರದೃಷ್ಟಿಪಥದಲ್ಲಿ ಅವರಿಗೆ ಕಾಣಲಿಲ್ಲ.
"" ಬ್ರಹ್ಮಚಾರಿಯ, ಆಶ್ರಮಕ್ಕೆ ಅತ್ಯವಶ್ಯಕವಾಗಿದ್ದ ನಿತ್ಯನಿಯಮ
ಗಳನ್ನು ತೀರಿಸಿಕೊಂಡು" ಸ್ವಾಮಿಗಳು ಮುಂದೆ ಅಂದದ್ದು: " ಉಳಿದ ವೇಳೆ
ಎಲ್ಲ ನಿನ್ನದೇ. ಈ ಕಾರ್ಯದಲ್ಲಿ ನಿನಗೆ ಯಾವ ಆತಂಕವೂ ಬಾರದಂತೆ
ನಾವು ಎಚ್ಚರಪಡುವೆವು. ನಿನಗೆ ಹೇಳಿದ ಕೆಲಸಕ್ಕೆ ಕೇವಲ ಏಕಾಗ್ರತೆಯೂ
ಈಶಪ್ರೇರಣೆಯೂ ಇದ್ದರೆಯೇ ಮುಂದಿನ ಮಾತು, ಮಗುವೇ, ಎಲ್ಲ
ಕಾರ್ಯಗಳು ಈಶಪ್ರೇರಣೆಯಿಂದಲೇ ಆಗುತ್ತವೆ. ನಮ್ಮ ಉಚ್ಚತಮವಾದ
ವಿಚಾರಗಳಿಗೆಲ್ಲ ಅವನೇ ಉಗಮಸ್ಥಾನನು. ನಾವು ಯಾವ ಬಗೆಯ ಕರ್ತೃತ್ವದ
ಅಭಿಮಾನವನ್ನೂ ಪಡಲಾರೆವು. ಪ್ರತಿಮೆಯನ್ನು ಮಾಡುವಾಗ ಆ ಪ್ರತಿ
ಮೆಯ ಅಭಿಮಾನದೇವತೆಯೇ ಶಿಲ್ಪಿಗನ ಹಸ್ತಕಾಶಲ್ಯಕ್ಕೆ ಮಾರ್ಗದರ್ಶಕ
ಳಾಗಿ ತನ್ನ ಮೂರ್ತಿಯನ್ನು ತಾನೇ ಪೂರ್ಣತ್ವಕ್ಕೆ ತಂದುಕೊಳ್ಳಬೇಕು.
ಇದೇ ಸರಿಯಾದದ್ದಲ್ಲವೇ? ನಾನಂದದ್ದು ಕೇಳಿದಿಯಾ? ಅದೆಲ್ಲ
ತಿಳಿಯಿತೆ ? ”
ಮಾಧವಾನಂದನು ಈವರೆಗೂ ಮೂಕವೃತ್ತಿಯಿಂದ ತಲೆಬಾಗಿಸಿ
ನಿಂತನು, ಈಗ ತಲೆ ಮೇಲಕೆತ್ತಿದನು. ಅವನು ಈಗ ಪ್ರಾಯದವನಲ್ಲ.
ಪ್ರಾಯವು ಅವನನ್ನು ಒಳ್ಳೇ ಅವಸರದಿಂದ ದಾಟಿಹೋಗಿತ್ತು. ಅವನು
ವಯಾತೀತನಂತೆ ಕಾಣುತ್ತಿದ್ದನು, ಮುಖವು ಬತ್ತಿದಂತಾಗಿ ದುಃಖಕ್ಲೇಶ
ಗಳ ಚಿಹ್ನೆಗಳು ಅಲ್ಲಿ ಬೇಕಾದಂತೆ ನಿಚ್ಛಳಾಗಿ ಕಾಣುತ್ತಿದ್ದವು. ಅವನ
ನೇತ್ರಗಳಷ್ಟು ಮಾತ್ರ ಒಳಪಟ್ಟಿದ್ದರೂ ತೇಜಃಪುಂಜವಾಗಿದ್ದವು. ಉತ್ಸಾಹ
ಶಕ್ತಿಯ ಅಪರಿಮಿತವಾದ ನಿರೋಧದಿಂದ ಅದರ ಜ್ವಾಲೆಗಳು ಭೂನಿವಿಷ್ಟ
ಅಗ್ನಿಕಣಗಳಂತೆ ಅಲ್ಲಿಯೇ ಅಂತರ್ಧಾನ ಹೊಂದುವ ಹಾಗೆ ಕಾಣುತ್ತಿದ್ದವು.
ಅವನ ಜೀವನಶಕ್ತಿಯೇ ಬಲಹೀನವಾಗಿತ್ತು. ಕಣ್ಣುಗಳಲ್ಲಿ ಮಾತ್ರ ಅಸ್ಥಿರ
ವಾದ ಜೀವನಶಕ್ತಿಯು ಪ್ರಕಾಶಿಸುತ್ತಿತ್ಮು.
" ಸ್ವಾಮಿಗಳು ಅನುಗ್ರಹಿಸಿದ್ದೆಲ್ಲ ಕೇಳಿಕೊಂಡೆನು. ಎಲ್ಲವೂ ಅವಗತ
ವಾಯಿತು'' ಅವನು ವಿನೀತನಾಗಿ ನುಡಿದನು: "" ಆದರೆ ನನಗಿಂತಲೂ
ಶ್ರೇಷ್ಠನಾದ ಶಿಲ್ಲಿಗನನ್ನು ನೋಡಬಾರದೆ? ಈ ಪವಿತ್ರಕಾರ್ಯಕ್ಕೆ ನಾನು
ಪಾತ್ರನಲ್ಲ. "
೧೭೬ ------------------------------------------------------------------
ಸ್ವಾಮಿಗಳು ಅವನ ಭುಜದ ಮೇಲೆ ಮಮತೆಯಿಂದ ಕೈ ಇಟ್ಟರು.
"ನಮ್ಮಲ್ಲಿ ನಿನಗಿಂತ ಶ್ರೇಷ್ಠರಾರು ? ನಿನ್ನ ಬುದ್ಧಿ ವೈಭವದ ಪ್ರಕಾಶವು ಈ
ತುಂಗಭದ್ರಾನದಿಯ ದಂಡೆಯನ್ನು ಆಲಂಕರಿಸುವ ಭವ್ಯವಾದ ಎಲ್ಲ ಮಂದಿರ
ಗಳಲ್ಲಿ ಸರ್ವತ್ರ ಕಂಗೊಳಿಸುತ್ತದೆ. ನಿನ್ನಿಂದ ನಾವು ನಿಜವಾಗಿಯೇ ಉಪ
ಕೃತರಾಗಿರುವೆವು. ಇಲ್ಲದಿದ್ದರೆ, ಇಲ್ಲಿ ದೃಗ್ಲೋಚರವಾಗುವ ಸೌಂದರ್ಯ
ಮೂರ್ತಿಗಳೆಲ್ಲ ಯಾರ ದ್ವಾರ ಪರಿಪೂರ್ಣವಾಗುತ್ತಿದ್ದವು ? ಇದನ್ನೆಲ್ಲ ನಾವು
ಬಲ್ಲೆವು. ಆದರೆ ಬಾಲಕಾ, ಈ ಶಾಲೀನಕೆಯು ನಿನಗೆ ತಕ್ಕದ್ದೇ ಸರಿ,
ಈ ಗುಣವು ನನ್ಮೆಲ್ಲರಲ್ಲಿಯೂ ಇದ್ದಷ್ಟು ಒಳಿತು. ಆತ್ಮವಿಚಾರ ಮಾಡ
ಲಾಗಿ ತಾನೊಂದು ಕಾರ್ಯಕ್ಕೆ ಆಪಾತ್ರನೆಂದು ಪ್ರತಿಯೊಬ್ಬನು ಹೇಳಬಹು
ದಾದ ಮಾತು. ಆದರೆ ಈ ನಿನ್ನ ಗುಣವು ಕೇವಲ ಪ್ರಾಸಾದಿಕವಿದ್ದು, ಈಶ
ಪ್ರೇರಿತವಾದದ್ದು, ಇದರಲ್ಲಿ ಪಾತ್ರಾಪಾತ್ರತೆಯ ವಿಚಾರವು ನಮಗೂ ನಿಮಗೂ
ಕರ್ತವ್ಯವಾದದ್ದಲ್ಲ ಪರಮೇಶನ ಪವಿತ್ರೇಚ್ಛೆಯನ್ನು ನಾವೆಂತು ಶಂಕಿಸ
ಬಹುದು? ಈಶನ ಕೃಪಾಪ್ರಸಾದ ಮಾತ್ರವಾಗಿ ನಿನಗೆ ಪ್ರಾಪ್ತವಾದ ಈ
ಪ್ರಾಸಾದಿಕ ಗುಣವನ್ನು ನೀನು ಜಗತ್ತಿನಲ್ಲಿ ಅತಿ ಮಹತ್ವವಾದ ಕಾರ್ಯ
ಗಳಲ್ಲಿ ಯೋಜಿಸಲೇಬೇಕು. ಇದಕ್ಕೂ ಹೆಚ್ಚಿಗೆ ಇನ್ನೇನು ಹೇಳಲಿ? ನೀನು
ಈ ಕಾರ್ಯಕ್ಕೆ ಒಪ್ಪಿ ಕೊಂಡಂಶಾಯಿತು ಹಾಗಾದರೆ? ”
" ಶ್ರೀಗಳವರ ಆಜ್ಞಾನುಸರವಾಗಿ ನಾನು ವರ್ತಿಸತಕೃದ್ದೇ ಸರಿ?
ಎಂದು ಬ್ರಹ್ಮಚಾರಿಯ ನುಡಿದನು; "" ಆದರೂ, ಅಭಿನನ ಮೂರ್ತಿಯ
ಕಲ್ಪನೆಯು ಸಹ ಕನಸುಮನಸಿನಲ್ಲಿಯೂ ಕಾಣದಂಥ ನಾನು ಈ ಮೂರ್ತಿ
ಯನ್ನು ಹೇಗೆ ಮಾಡೇನೆಂಬದೊಂದೇ ಕಷ್ಟ. ಆದರೆ ಶ್ರೀಗಳವರ ಹಾಗೂ
ಬ್ರಹ್ಮಬಾಂಧವರ ಇಚ್ಛೆಯ ಮೇರೆಗೆ ನನ್ನ ಬುದ್ಧಿಶಕ್ತಿಯನ್ನಿದ್ದಷ್ಟು ಪರಾ
ಕಾಷ್ಟವಾಗಿ ಇದರಲ್ಲಿ ಉಪಯೋಗಿಸುವೆನು. ''
" ನಿನ್ನ ಪರಾಕಾಷ್ಟ್ರವೇ ನಮಗೂ ಇಷ್ಟವಾದದ್ದು? ಎಂದು ಶ್ರೀಗಳ
ವರು ಅಂದದ್ದು " ನಿನ್ನ ಸ್ವೇಚ್ಛೆಯಿಂದಲೇ, ನೀನು ಎಲ್ಲರಿಗಿಂತಲೂ
ಹೆಚ್ಚಿನ ಕಡುತರವಾದ ನಿಯಮಗಳನ್ನು ಪಾಲಿಸುತ್ತಿರುವೆ. ಮಿತಾಹಾರ
ಉಪವಾಸಗಳಿಂದ ಮಿತಿಮೀರಿದ ದೇಹದಂಡನೆಯನ್ನು ಬಹಳ ಕಠೋರವಾಗಿ
ಆಚರಿಸುವಿ, ನಿದ್ರೆ ಮುಂತಾದ ಅಗತ್ಯವಾದ ವಿಶ್ರಾಂತಿಗಳಲ್ಲಿ ನಿನ್ನ ಲಕ್ಷವು
೧೭೭ ---------------------------------------------------------------------
ಯತ್ಕಿಂಚಿತ್ತಾದರೂ ಇಲ್ಲ. ಆದರೆ ಇನ್ನು ಮುದೆಯಥೋಚಿತವಾಗಿ ಆಹಾರ
ತೆಗೆದುಕೊಂಡು ಸ್ವಲ್ಪು ಹೆಚ್ಚು ವಿಶ್ರಾಂತಿಯನ್ನು ಹೊಂದು. ಇಲ್ಲದಿದ್ದರೆ,
ಮಾಧವಾ, ಚೇತನಾಶಕ್ತಿಯು ಪ್ರಕೋಪಿಸಿ ದೇಹದಾರ್ಢ್ಯವನ್ನು ಕುಂದಿಸು
ವದು. ಇದರಿಂದ ಬುದ್ಧಿ ವಿಕಾಸಕ್ಟೂ ಮನಶ್ಶಾಂತಿಗೂ ಹಾನಿಯುಂಟಾಗು
ವದು. ಸಮಾಧಾನವೂ ಸ್ವೇಚ್ಛಾವಿಹಾರವೂ ಕಲಾಭಿಜ್ಞರಿಗೆ ಅತ್ಯವಶ್ಯ
ವಾದಂಥವು. ನಾವು ನಿನಗೆ ಇವೆರಡನ್ನೂ ಯಥಾಕ್ರಮವಾಗಿ ಕೊಡದೆ
ನಿನ್ನ ಮನಸೋಚಿತವಾಗಿ ವರ್ತಿಸು ಎಂತಲೇ ಹೇಳುತ್ತೇವೆ. ಸ್ವಾಭಾವಿಕ
ನಿರ್ಬಂಧಗಳನ್ನು ಮನ್ಸಿಸುವದು ನಿನ್ನ ಹಿತಕ್ಕಾಗಿಯೇ. ಆದ್ದರಿಂದ ಅವನ್ನೆಲ್ಲ
ಪಾಲಿಸಲಿಕ್ಕೇಬೇಕೆಂದು ನಾವೇನು ಬೇರೆ ಹೇಳಬೇಕಾಗಿಲ್ಲ. ನಿನಗೆ ಅವಕಾಶ
ವಿದ್ದಂತೆ ಆನಂದದಿಂದ ಕೆಲಸ ಮಾಡು, ಮತ್ತೂ ನಿನ್ನ ಏಕಾಂತಸ್ಥಾನದಲ್ಲಿ
ನಿನ್ನ ಏಕಾಗ್ರತೆಯ ಭಂಗವು ಯಾರಿಂದಲೂ ಆಗಕೂಡದೆಂದು ನಾವು ಎಲ್ಲ
ಬ್ರಹ್ಮವೃಂದಕ್ಕೂ ಅಜ್ಜಾಪಿಸುತ್ತೇವೆ ನೀನೇ ನೀನು, ನಿನ್ನ ಕಾರ್ಯವೇ
ಕಾರ್ಯವು ''ಎಂದು ಹೇಳಿ ಕೃಪಾಭಾವದಿಂದ ಗೋಣುಹಾಕಿ, ಆಕಾಶವನ್ನು
ನಿರೀಕ್ಷಿಸಿ ಮಠದ ಆವಾರದೊಳಗಿಂದ ಸ್ತಂಭಸ್ತಂಭಗಳನ್ನು ದಾಟುದಾಟುತ್ತ
ಆ ಭವ್ಯವಾದ ಮೂರ್ತಿಯು ಎಲ್ಲಿಯೋ ಕಾಣಿಸದಾಯಿತು.
ಬ್ರಹ್ಮಚಾರ್ಯತ್ತ ಮನಾದ ಮಾಧವಾನಂದನು ಶ್ರೀಗಳನ್ನು ನಿಂತ
ಲ್ಲಿಂದಲೇ ಕ್ಷಣ ಹೊತ್ತು ನೋಡುತ್ತ ನಿಂತುಕೊಂಡನು. ಅಲ್ಲಿಂದ ಉದ್ವೇಗ
ದಿಂದ ಒಂದು ದೀರ್ಫನಿಃಶ್ವಾಸವನ್ನು ತೆಗೆದನು... ಅನಂತರ ಮಠದೊಳ
ಗಿಂದ ಹೊರಬಿದ್ದು ಆಸಮಂತಾದ್ಭಾಗದಲ್ಲಿಯ ನೂರಾರು ಶಾಲೆಗಳಲ್ಲಿ
ಆತೀವ ಏಕಾಂತಸ್ಥಾನದಲ್ಲಿದ್ದಂಥದೊಂದನ್ನು ಹೊಕ್ಕನು. ನಿರಾಶಾ-ಮನ
ಸ್ತಾಪಗಳಿಂದ ಜರ್ಜರನಾದವನು ದೀಹದ ಪರಿವೆಯಿಲ್ಲದಿ ತನ್ನ ಪರಮ
ಸ್ನೇಹಿತನ ಪಾದಕ್ಕೆ ತನ್ನನ್ನು ತೂರಿಕೊಳ್ಳುವಂತೆ ಒಳಗಿದ್ದ ವಿರೂಪಾಕ್ಷನ
ಮೂರ್ತಿಯ ಪದತಲದಲ್ಲಿ ಸಾಷ್ಟಾಂಗ ಬಿದ್ದು ಕೊಂಡನು.
"ದೇವಾ! ದಯಾಸಾಗರಾ ! ಶರಣಾಗತವತ್ಸಲಾ-
पापोऽहं पापकर्माहं पापात्मा पापसंभवः
त्राहि मां कृपया देव शरणागतवत्सल || "
ಎಂದು ಬಿದ್ದಲ್ಲಿಯೇ ಅಶ್ರು ಜಲಧಾರೆಗಳಿಂದ ಮೂರ್ತಿಯ ಪದತಲದ
೧೭೮ -----------------------------------------------------------------
ಭೂಮಿಯನ್ನೆಲ್ಲ ಅಭಿಷೇಚಿಸುತ್ತ ಬಾಯಲ್ಲಿಯೇ ಸ್ತುತಿಮಾಡಹೆತ್ತಿದನು.
"ದೇವಾ, ನಾನು ಘೋರಕರ್ಮಿಯು ! ನನ್ನಿಂದ ಇಂಥ ಪವಿತ್ರಕಾರ್ಯವು
ಹೇಗೆ ನೆರವೇರುವಮ ? ಈ ಕಾರ್ಯಕ್ಕೆ ಶ್ರೀಗಳು ನನ್ನಂಥ ಮಹತ್ಪಾಪಿ
ಯನ್ನೇ ಯಾಕೆ ಯೋಚಿಸಿದರು? ನನ್ನ ಕರ್ಮಗಳ ಭಾರವು ನಾನು ಹೊರ
ಲಾರದಷ್ಟು ಆಗಿದೆ. ತ್ರಾಹಿ! ತ್ರಾಹಿ! ನನ್ನಲ್ಲಿ ಜ್ಞಾನಜ್ಯೋತಿಯನ್ನು
ಪ್ರದೀಪಿಸಿ ಈ ಅಂಧಕಾರವನ್ನೆಲ್ಲ ಅಳಿದುಬಿಡು! ಸಕಲ ಆತ್ಮೋದ್ಧಾರಕ
ನಾದ ಪರಮೇಶ್ವರನೆ, ನಾನೊಬ್ಬ ಪಾಪಿಯೇ ನಿನಗೆ ಭಾರವಾದೆನೆ? ನಾನು
ಮಾಡಿದ ಕರ್ಮವು ನನ್ನ ಕಣ್ಣೆದುರಿಗೆ 'ಥೈ ಥೈ' ಎಂದು ಸದಾಕಾಲವೂ
ಕುಣಿಯುತ್ತದಲ್ಲ! ಈ ನಿರಂತರ ಯಾತನಾ ಭೋಗವು ಹೇಗೆ ಹೋಗ
ಬೇಕು? ನಾನು ನಿರ್ಮಲನು ಆಗುವ ಬಗೆ ಯಾವದು? ಪವಿತ್ರಾತ್ಮರಿಗೆ
ಮಾತ್ರ ಪವಿತ್ರಕಾರ್ಯವು ಸಲ್ಲುವದಲ್ಲದೆ, ನನ್ನಂಥ ಪಾಪಾತ್ಮನು ಪವಿತ್ರಾ
ತ್ಮರ, ಪವಿತ್ರ ಕಾರ್ಯದ, ಪವಿತ್ರನಾಮದ ನೆರಳಿಗಾದರೂ ನಿಲ್ಲಲಿಕ್ಕೆ
ಯೋಗ್ಯನೇ? ಪ್ರಭೋ, ಜ್ಯೋತಿರ್ಲಿಂಗಶ್ರೇಷ್ಠಾ, ವಿರೂಪಾಕ್ಷಾ,
ಪಾಹಿ ಪಾಹಿ!”.
ಜ್ಯೋತಿಲಿಂಗದ ಜಾಜ್ವಲ್ಯವಾದ ಪ್ರಭಾಮಂಡಲದ ದೈದೀಪ್ಯಮಾನ
ನಾದ ಶಕ್ತಿಯ ಸಾನ್ನಿಧ್ಯವು ತೀರ ಸಮೀಪನಿದ್ದುದರಿಂದಲೋ ಹೇಗೋ,
ಮಾಧವಾನಂದನು ತನ್ನ ಎರಡೂ ಕೈಗಳಿಂದ ಮೋರೆ ಮುಚ್ಚಿಕೊಂಡವನು,
ಕೈಗಳನ್ನು ಅತ್ತಿತ್ತ ಅಲ್ಲಾಡಿಸದೆ, ಮತ್ತೆ ಮತ್ತೆ ಗಟ್ಟಿಯಾಗಿ ಮೋರೆಯನ್ನು
ಮರೆಮಾಡಿಕೊಳ್ಳ ಹತ್ತಿದನು. ಸರ್ವಾಂಗಕ್ಕೆ ಆಸಂಖ್ಯ ಯಾತನೆಗಳಾಗುತ್ತಿ
ದ್ವಂತೆ ಪ್ರತಿಯೊಂದು ಅವಯವವು, ಇನ್ನೊಂದರ ಎಚ್ಚರಿಲ್ಲದೆ, ಆಚೆಯಿಂದ
ಈಚೆಗೂ, ಈಚೆಯಿಂದಾಚೆಗೂ ಪೆಟ್ಟುಗಾಯದ ಅರಿವು ಇಲ್ಲದೆ ಒಗೆದಾಡ
ಹತ್ತಿತು. ದೇಹದ ಸ್ಥಿತಿಯು ಹೀಗಿದ್ದಾಗ ಮಾಧವನ ಮನಸ್ತಾಪಕ್ಕೆ ಏನೆನ್ನ
ಬೇಕು? ಅವರಲ್ಲಿ ವಿಚಾರಾತಿರೇಕವುಂಟಾಗಿ ಆ ತುಮುಲಯುದ್ದದಲ್ಲಿ
ವಿಚಾರಗಳ ಕ್ರಾಂತಿಕಾರಕಪಕ್ಷವೇ ಜಯಶಾಲಿಯಾಗುವಂತೆ ಕ್ಷಣಕ್ಷಣಕ್ಕೆ
ತೋರಹತ್ತಿತು. ತನ್ನ ವಿಚಾರಗಳೇ ತನಗೆ ಮುಳುವಾಗಿ, ಕ್ಷಣಶಃ ಸಹಸ್ರಾ
ವಧಿ ತೀಕ್ಷ್ಣವಾದ ಬಾಣಗಳಿಂದ ಮಾಧವನ ಹೃದಯವು ಛಿನ್ನವಿಚ್ಛಿನ್ನವಾಗು
ವಂತೆ ವಿದೀರ್ಣವಾಗುತ್ತಿದ್ದಾಗ ಇಂಥ ಮನೋಧರ್ಮವುಳ್ಳ ದೇಹವನ್ನು
೧೭೯ ------------------------------------------------------------------
ನಿರ್ಮಿಸಿ ಪರಮಾತ್ಮನಿಗೆ ಏನು ಫಲವು! ಎಂದು ಉದ್ಗಾರ ತೆಗೆಯುವದೇ
ಹೊರತು, ಈ ಶಾಪವನ್ನು ನೋಡಲು ಕೇಳಲು, ಇಲ್ಲವೆ ನಮ್ಮಂಥವರು ಬಣ್ಣಿ
ಸಲು ಆಗದ್ದು ಗತಕಾಲದ ಸ್ಮರಣವೆಲ್ಲ ಅವನೆದುರಿಗೆ ನಿಂತುಕೊಂಡಿತು.
ಇಂದಿನ ತನಕ ಈ ಗತಕಾಲದ ನೆನಪು ಇವನಿಗೆ ಆಗಾಗ ಆಗುತ್ತಿತ್ತು. ಆದ
ಸರತಿಗೊಮ್ಮೆ ತಲೆ ಭಣಭಣನೆಂದು ಅವನು ತೀರ ಭ್ರಮಿಷ್ಟನಂತಾಗುತ್ತಿದ್ದನು.
ಈ ಸಾರೆಗಂತೂ ಮಾಧವನು ಮತಿವಿಭ್ರಮದ ಮಹಾದ್ವಾರದಲ್ಲಿಯೇ ಕುಳಿ
ತನು. ತಾನು ಚಿಕ್ಕವನಿದ್ದಾಗಲೂ ಬುದ್ಧಿಗಲಿತ ಮೇಲೂ ಕುಂಭಕೋಣಂ
ದಲ್ಲಿಯ ತನ್ನ ಚರಿತ್ರವೆಲ್ಲವೂ ಅವನಿಗೆ ನೆನಪಾಯಿತು. ತಕ್ಕಮಟ್ಟಿಗೆ ವೇದಾ
ಭ್ಯಾಸವಾದ ನಂತರ ಶಿಲ್ಪಕಲಾಕೌಶಲ್ಯಾಭಿರುಚಿಯು ಹುಟ್ಟಿದ್ದರಿಂದ ಮಾಧ
ವನು ದಕ್ಷಿಣದ ಆ ಕಾಲೀನರಲ್ಲಿಯೇ ಮೇಲಾದ ಶಿಲ್ಪಿಗರ ಹತ್ತಿರ, ಶಿಲ್ಪಶಾಸ್ತ್ರ
ವನ್ನಭ್ಯಾಸ ಮಾಡಹತ್ತಿದನು. ತನ್ನ ಜೊತೆಗಾರರಲ್ಲಿ ಎಲ್ಲರಿಗೂ ಮೇಲಾದ
ಶಿಲ್ಪಿಗನೆಂದು ಕೆಲವು ದಿನಗಳಲ್ಲಿಯೇ ಇವನು ಹೆಸರಾದನು. ನಿರ್ಜೀವ
ಶಿಲೆಯಲ್ಲಿ ಹಸ್ತ ಸಂಜೀವಿನಿಯಿಂದ ಜೀವಕಳೆಯನ್ನು ತುಂಬಿ, ಇವನು ನಿರ್ಮಿ
ಸಿದ ಮೂರ್ತಿಗಳೆಲ್ಲವೂ ವಿಶ್ವಕರ್ಮನ ಸೃಷ್ಟಿಯೇ ಎಂದು ಮಾಧವನ ಗುರು
ಗಳು ಅವನನ್ನು ಸ್ತುತಿಪರವಾಗಿ ಬೆನ್ನು ಚಪ್ಪರಿಸಿ ಸಮಯಬಂದಾಗ
ಅಮೋಘವಾದ ಪಾರಿತೋಷಕಗಳನ್ನು ಕೊಟ್ಟು ಅವನನ್ನು ಹೇಗೆ ಸಂಭಾವಿ
ಸುತ್ತಿದ್ದರು. ಇದನ್ನು ಕಂಡು ಕಲಾಬಾಂಧವರೆಲ್ಲರೂ ಃಏಗೆ ಆಶ್ಚರ್ಯ
ಭರಿತರಾಗುತ್ತಿದ್ದರು. ಈ ಹಸ್ತಕಲಾ ನೈಪುಣ್ಯವು ಕೇವಲ ಸ್ವರ್ಗೀಯ-
ಕೃಪಾಮೂಲವಲ್ಲದೆ, ಮಾನವದತ್ತ ವಿದ್ಯೆಯಲ್ಲವೆಂದು ಆಗಾಗ ತನ್ನ ಸಹಾ
ಧ್ಯಾಯಿಗಳು ತನ್ವನ್ನು ವಿಶ್ವಕರ್ಮನೆಂದು ಹೇಗೆ ಕರೆಯುತ್ತಿದ್ದರು.. ಈ
ಮೇರೆಗೆ ಶಿಲ್ಪ ವಿದ್ಯಾಪಾರಂಗತನಾಗಿ ಸಂಸಾರ ಯಾತ್ರೆಯನ್ನು ಸೇರಬೇಕೆ
ನ್ನುವ ಹವಣಿಕೆಯಲ್ಲಿದ್ದವನು ಅಷ್ಟರಲ್ಲಿಯೇ ಆಕಸ್ಮಾತ್ತಾದ ಅಂತಃಸ್ಫೂರ್ತಿ
ಯಿಂದ ಪರಮಾರ್ಥಪ್ರಾಪ್ತಿಯ ಮಾರ್ಗವು ಒಳ್ಳೆಯದೆಂದು, ತಾಯಿತಂದೆ,
ಆಪ್ತರಿಷ್ಟರು, ಅಣ್ಣ ತಮ್ಮಂದಿರು ಮುಂತಾದ ಸಂಬಂಧಿಕರನ್ನೂ, ಇಹ
ಲೋಕದ ಸೌಖ್ಯಕ್ಕೆ ಅಸಾಮಾನ್ಯವಾದ ಧನಸಂಪತ್ತನ್ನು ಅಮೋಘವಾಗಿ
ಪ್ರಾಪ್ತ ಮಾಡಿಕೊಡುವಂಥ ತನ್ನ ಕಲಾಕೌಶಲ್ಯವನ್ನೂ. ಧಿಕ್ಕರಿಸಿ, ಆಂದಿ
ನಿಂದ ಧರ್ಮಕಾರ್ಯಕ್ಕೆ ದೇಹಾರ್ಪಣ ಮಾಡಿಕೊಂಡ ವಿದ್ಯಾರಣ್ಯರ ಮಠಕ್ಕೆ
೧೮೦ -----------------------------------------------------------------------
ಬಂದು ಅವರಿಂದಲೂ ಅನುಗೃಹೀತನಾಗಿ, ಕಷ್ಟ ಯೋಗಸಾಧನಗಳು,
ತಪಸ್ಸಾಧನೆ, ವೇದವೇದಾಂಗಗಳ ಅಭ್ಯಾಸ ಮುಂತಾದವುಗಳಲ್ಲಿ ಧರ್ಮ
ಗುರುಗಳ ನಿಯಮಾನುಸಾರವಾಗಿ ಧರ್ಮಕಾರ್ಯೈಕದಕ್ಷನಾಗಿ, ಪರಮಾ
ರ್ಥಕ್ಕೆ ತಾನು ತನ್ನನ್ನು ಅರ್ಪಿಸಿಕೊಂಡದ್ದರಿಂದ ಮಾಧವಾನಂದನೆಂಬ
ಸ್ಪೃಹಣೀಯವಾದ, ಧರ್ಮ ಬಿರುದನ್ನು ಶ್ರೀಗಳವರು ' ಇದು ನಿನ್ನ ನಿರ್ಮ
ಲಾಚರಣೆಯ, ಸದುದ್ಯಮದ ಕಾರ್ಯದಕ್ಷತೆಯ, ನಿರ್ಮಲಾಂತಃಕರಣದ,
ಮೇಲಾಗಿ, ಶಿಲ್ಪವಿದ್ಯಾವಿಶಾರದತ್ವದ, ಪ್ರತಿಫಲನೆಂದು ತಿಳಿಯತಕ್ಕದ್ದು
ಕಂಡಿಯಾ' ಎಂದು ಹೇಗೆ ಅನುಗ್ರಹಿಸಿದರು. ವಿಜಯನಗರಕ್ಕೆ ಬಂದ
ಕೆಲವು ದಿನಗಳ ನಂತರವೇ ಅಲ್ಲಲ್ಲಿ ಮೂರ್ತಿಸ್ಥಾಪನೆಯ ಕಾರ್ಯವು ಜಾಗ್ರತೆ
ಯಿಂದ ಸಾಗಹತ್ತಿದ್ದರಿಂದ, ತನ್ನ ಶಿಲ್ಪಕಲಾಜ್ಞಾನವು ಲೋಕಕ್ಕೆ ಎಷ್ಟು
ಫಲ ಉಳ್ಳದ್ದಾಯಿತು; ಈ ಮೂರ್ತಿನಿರ್ಮಾಣ ಕಾರ್ಯದಲ್ಲಿ ತಾನೆಷ್ಟು
ವ್ರೇಮದಿಂದಲ್ಕೂ ಸದ್ಭಕ್ತಿಭಾವದಿಂದಲೂ ಮನಸು ಹಾಕುತ್ತಿದ್ದನು; ಅದ
ರಿಂದ ತನ್ನ ಕಯ್ಯಿಂದಾದ ಮೂರ್ತಿಗಳೆಲ್ಲ ಬರೇ ಸಚ್ಛಿದಾನಂದ ಸ್ವರೂಪವೇ
ಅಲ್ಲಿ ಯಾವತ್ಕಾಲವೂ ನಲಿದಾಡುತ್ತಿರುವದೇನೋ ಎಂಬಂತೆ ಹೇಗೆ ಕಂಗೊಳಿ
ಸುತ್ತಿರುವಂಥವಾದವು ಎಂಬದೂ, ಧರ್ಮಕಾರ್ಯಪ್ರವೃತ್ತನಾಗದೆ, ಲೌಕಿಕ
ಮಾರ್ಗವನ್ನು ತಾನು ಅವಲಂಬಿಸಿದ್ದರೆ, ಈ ಪರತರಾನಂದವು ತನಗೆ ಸಿಗುವ
ಸಂಧಿಯನ್ನು ತಾನು ಹೇಗೆ ತಪ್ಪಿಸಿಕೊಳ್ಳುತ್ತಿದ್ದನೆಂದೂ, ಇವಿಷ್ಟೇ ಏಕೆ?
ಇನ್ನೂ ಎಷ್ಟೋ ಸಂಗಕಿಗಳು ಇವನಿಗೆ ಒಂದರ ಹಿಂದೊಂದು ನೆನಪಾದವು.
ವಸ್ತುಸ್ಥಿತಿಯನ್ನವಲೋಕಿಸಿದರೆ ಅಲೌಕಿಕ ಕೀರ್ತಿಯನ್ನು ಸಂಪಾದಿಸುತ್ತಿ
ದ್ದನೆಂಬದು ಶ್ರೀಗಳವರಿಗೂ ಚನ್ನಾಗಿ ಗೊತ್ತಾಗಿತ್ತು. ಆದರೂ ತನ್ನ ಸದ್ಯಃ
ಸ್ಥಿತಿಯನ್ನು ಕೇವಲ ಸಂತೋಷದಿಂದ ಹೊಂದಿಕೊಂಡವನಾದ್ದರಿಂದಲೂ,
ನಿತ್ಯಕರ್ಮಗಳನ್ನು ಒಳ್ಳೇ ನಿಷ್ಠೆಯಿಂದ ಲಕ್ಷಿಸುತ್ತಿರುವವನಾದ್ದರಿಂದಲೂ,
ಶ್ರೀಗಳ ಮಮತೆಯು ಎಲ್ಲರಿಗಿಂತ ಅವನ ಮೇಲೆ ಹೆಚ್ಚಿಗಿತ್ತು. ಚಿರಕಾಲ
ವಾಗಿ ಉಳಿಯತಕ್ಕವಾದ್ದರಿಂದ ಈ ಅಸಾಮಾನ್ಯವಾದ ಮೂರ್ತಿನಿರ್ಮಾಣ
ಕಾರ್ಯವನ್ನು, ಆದುದರಿಂದಲೇ, ಆ ಮಾಧವಾನಂದನಿಗೆ ಹೇಳುತ್ತಿದ್ದರು.
ತನ್ನ ಕಲೆಯಲ್ಲಿ ಅವನು ಅಸಹಾಯಶೂರನಾದ್ದರಿಂದ ವಿಜಯನಗರದಲ್ಲಿ
೧೮೧ -------------------------------------------------------------------------
ಎಷ್ಟೋ ಸುರುಚಿರವಾದ ಮೂರ್ತಿಗಳ ಸಂಸ್ಥಾಪನೆಯಾಗಿ ಎಷ್ಟೋ ಸದ್ಭಕ್ತರ
ಇಚ್ಛಾಪೂರ್ತಿಯಾಯಿತು. ಹೀಗೆಯೇ ಎಲ್ಲ ಕಡೆಯಲ್ಲೂ ಸಮಾಧಾನ
ಸಮೃದ್ಧಿ ಇದ್ದಾಗ ಅಕಸ್ಮಾತ್ತಾಗಿ, ಮಾಧವಾನಂದನ ಸತ್ವಪರೀಕ್ಷೆಯ ಕಾಲವು
ಬಂದೊದಗಿತು. ಈ ಸತ್ವಪರೀಕ್ಷೆಯಲ್ಲಿ ಬ್ರಹ್ಮಚಾರಿಯು ಮೈಗೆ ಭಸ್ಮಾವಲೇಪ
ನದ ಬದಲು ಅಶುದ್ಧ ಮೃತ್ತಿಕೆಯನ್ನು ಹಚ್ಚಿಕೊಳ್ಳಬೇಕಾಯಿತು. ಮಾಧ
ವಾನಂದನ ಕಾಲುಜಾರಿತೇನು ? ಅದು ಸಂಭವಿಸಿದ್ದು ಹೇಗೆ:
ಬೌದ್ಧ ಧರ್ಮದ ಪ್ರಸಾರವು ದೇಶದೇಶಗಳಲ್ಲಿ ಉಂಟಾಗಬೇಕಾದರೆ,
ಮತಸ್ಥಾಪಕರು ಅಲ್ಲಲ್ಲಿ ಮಠಗಳನ್ನು ಸ್ಪಾಪಿಸಿ ವಿದ್ಯಾವಿಶಾರದರಾದ ಉಪ
ದೇಶಕರನ್ನು ಪರದೇಶಗಳಿಗೂ ಕಳುಹಿ ತನ್ಮು ಮಠದ ತತ್ವಗಳನ್ನು ಚೀನ,
ಜಪಾನ ಮುಂತಾದ ಪೌರ್ವಾತ್ಯ ದೇಶಗಳ್ಳಿಯೂ ಹಬ್ಬಿಸಿ, ತಮ್ಮ ಕಾರ್ಯಕ್ಕೆ
ಚಿರಸ್ವರೂಪವನ್ನು ಕೊಟ್ಟಿದ್ದು ಇಂದು ಹೊಸದಾಗಿ ಹೇಳಬೇಕಾಗಿಲ್ಲ. ಇರಲಿ
ಈ ಬೌದ್ಧ ಧರ್ಮದ ಕ್ರಮವನ್ನು ಆನುಕರಿಸಿ ಅನಂತರದಲ್ಲಿ ಸ್ಥಾಪಿತವಾದ
ಬೇರೆ ಧರ್ಮ ಸಂಸ್ಥಾಪಕರ ಜಾಗ್ರತಿಯ ಕಾರ್ಯನಿರತರಾದ ಭಗವತ್ಪ್ರೇರಿತ
ಭಾರತಭುಷಣರೂ, ತಮ್ಮ ಮತಸಂಸ್ಥಾಪನೆಗಾಗಿ ಎಲ್ಲ ಕಡೆಗೂ ಉಪದೇಶಕ
ರನ್ನು ಕಳುಹಿಸುವ ಪರಿಪಾಠವನ್ನು ಇಡುತ್ತಿದ್ದರು. ಇದೇ ಮೇರೆಗೆ ಶಾರದಾ
ಪೀಠವನ್ನಲಂಕರಿಸಿದ ನಮ್ಮ ವಿದ್ಯಾರಣ್ಯ ಸ್ವಾಮಿಗಳವರೂ, ತಮ್ಮ ಬ್ರಹ್ಮ
ಚಾರಿವೃಂದಕ್ಕೆ ಅವರ ಯೋಗ್ಯತಾನುಸುರವಾಗಿ, ಈ ಭುತದಯಾಕಾರ್ಯ
ವನ್ನೂ ಧರ್ಮತತ್ವನಿವೇದನದ ಮಹತ್ಕಾರ್ಯವನ್ನೂ ಒಪ್ಪಿಸಿಕೊಟ್ಟಿ
ದ್ದರು. 'ಶ್ರೀಗಳ ಆಜ್ಞಾನುಸಾರವಾಗಿ ವಿಜಯನಗರದ ಸುತ್ತು ಮುತ್ತಲಿನ
ಹಳ್ಳಿಪಟ್ಟಣಗಳಲ್ಲಿ, ಮಠಕ್ಕೆ ಸೇರಿಕೊಂಡ ಬ್ರಹ್ಮಚಾರಿಗಳು ಕ್ರಮಕ್ರಮವಾಗಿ
ತಮ್ಮ ಸರತಿ ಬಂದಂತೆ ಹೋಗಿ ಉಪದೇಶ ಮಾಡಿ, ಬಡಬಗ್ಗರ ದೀನ- ಪತಿ
ತರ ಸುಖದುಃಖಗಳನ್ನು ಕೇಳಿಕೊಂಡು, ದುಃಖಗಳನ್ನು ಕಡಿಮೆ ಮಾಡಿ
ಕೊಳ್ಳುವದಕ್ಕೂ ಯೋಜಿಸತಕ್ಕ ಉಪಾಯಗಳನ್ನು ತಿಳಿದು ಹೇಳಿ, ಜಗತ್ತಿ
ನಲ್ಲಿ ಸುಖದುಃಖಗಳು ಸಮವಾಗಿಯೇ ಬರತಕ್ಕಂಥವೆಂದೂ, ಆತ್ಮೋನ್ನತಿ
ಯಾಗದ ಹೊರತು, ಬ್ರಹ್ಮಸಾಕ್ಷಾತ್ಕಾರವೂ ತದ್ವಿನಾ ಮನಶ್ಶಾಂತಿಯೂ ಆಗ
ಲಾರದೆಂದೂ ಹೇಳಿ, ವೇದಾಂತ ಮಾರ್ಗವನ್ನು ಆಗಾಗ ಬೋಧಿಸುತ್ತ ಬರು
ತ್ತಿದ್ದರು.
೧೮೨ -----------------------------------------------
ಈ ಪರಮಾರ್ಥ ಕಾರ್ಯದುದ್ದಿಶ್ಶ ಮಾಧವಾನಂದನು ವಾರದಲ್ಲಿ ಎರಡು
ಸಾರಿ ನೆರೆಹಳ್ಳಿಗಳಿಗೆ ಹೋಗಿ ಬರಬೇಕಾಗುತ್ತಿತ್ತು. ಹೀನದೀನರ ದುಃಖ
ಮೋಚನೆಯ ಕಾರ್ಯವು ಇವನಿಂದ ಆಗುತ್ತಿದ್ದಷ್ಟು ಆದರದಿಂದ ಶಾರದಾ
ಮಠದ ಬ್ರಹ್ಮಚಾರಿಗಳಲ್ಲಿ ಯಾರಿಂದಲೂ ಅಗುತ್ತಿದ್ದಿಲ್ಲ. ಆದುದರಿಂದ ಇವನ
ಆಗಮನದ ಮಾರ್ಗಪ್ರತೀಕ್ಷೆ ಮಾಡುತ್ತ, ನೆರೆಯಲ್ಲಿದ್ದ ಸುಬ್ರಹ್ಮಣ್ಯ
ವೆಂಬ ಹಳ್ಳಿಯಲ್ಲೂ ಅದರ ಸುತ್ತಮುತ್ತಲಿನ ಹತ್ತೆಂಟು ಗ್ರಾಮಗಳಲ್ಲಿಯೂ,
ಜನರು ಗುಂಪುಗುಂಪಂಗಿ ಮಾಧವಾನಂದನು ಬರತಕ್ಕ ವಾರಕ್ಕೆ, ತಪ್ಪದೆ
ನಿಲ್ಲುತ್ತಿದ್ದರು. ಮಾಧನಾನಂದನ ಮಧುರೋಕ್ತಿಯೆಂದರೆಯೇ ಸಂತಾಪ
ಹಾರಕವಾದ ಅಮೃತ ಬಿಂದುಗಳೆಂದು ಎಲ್ಲರೂ ಭಾವಿಸುತ್ತಿದ್ದರು. ಮಾಧವಾ
ನಂದನ ಬೋಧಾಮೃತಕ್ಕೆ ಆಬಾಲವೃದ್ಧರಿಲ್ಲರೂ ಆತುರರಾಗಿ ಇರುತ್ತಿದ್ದರು.
ಮಾಧವನ ವಿನಯವಿಶ್ವಾಸಾನ್ವಿತನಾದ ಉಕ್ತಿಗಳೆಂದರೆ ನಿಗೂಢವಾದ
ಬ್ರಹ್ಮ ಜ್ಞಾನದ ಗಂಭೀರ ನಿನಾದವೇ ಎಂದು ಎಲ್ಲರೂ ಭಾವಿಸಿಕೊಂಡು, ಈ
ಬ್ರಹ್ಮಚಾರಿಯ ತೇಜಃಪುಂಜವಾದ ಮೂರ್ತಿಯನ್ನು ಮರೆಯಲಾಗದೆ, ಅವನ
ಮನೋಬಲ- ತಪೋಬಲಗಳನ್ನು ನೆನೆಯುತ್ತಲಿರುವಂಥ ಅನೇಕ ಭಾವಿಕ
ರನ್ನು ಆಲ್ಲಲ್ಲಿ ಕಂಡುಕೊಳ್ಳಬಹುದಾಗಿತ್ತು. ಆದರೆ, ಮನೋಬಲ ತಪೋ
ಬಲಗಳೆಲ್ಲವೂ ಸಂಪಾದಿಸಿಕೊಳ್ಳಲಿಕ್ಕೆ ಬರುವಂಥವಾದ್ದರಿಂದ, ಅವಕ್ಕೆ ಕಾಲ
ಪರಿಸ್ಥಿತ್ಯನುರೂಪವಾಗಿಯೂ, ಮಾನವೀಶರೀರ ಗುಣಧರ್ಮಗಳಿಗನುಸಾರ
ವಾಗಿಯೂ ನಷ್ಟಕಾಲವು ಒಂದಿಲ್ಲೊಂದು ದಿನ, ಒಮ್ಮಿಲ್ಲೊಮ್ಮೆ, ಬಂದೊದ
ಗುವದು ಸಾಧಾರಣತಃ ನಿಶ್ಚಿತವಾದದ್ದು, ಬೋಧಾಮೃತವನ್ನು ಬೀರುವಂಥ
ರಾಜರ್ಷಿಗಳಾದ ಸತ್ಯವೃತರು ಕೂಡ ವಿದ್ಯುಲ್ಲೇಖಾ ದರ್ಶನ ಮಾತ್ರವೇ,
ಅಧರಾಮೃತನನ್ನು ಹೀರಲು ಆತುರಪಟ್ಟು ಆನೇಕ ಜನ್ಮಸಂಚಿತವಾದ
ತಫೋಧನವನ್ನು ಕ್ಷಣಮಾತ್ರದಲ್ಲಿ ಸಮುದ್ರಾರ್ಪಣ ಮಾಡಿದ ಉದಾಹರಣೆ
ಗಳು ಅನಾದಿಕಾಲದಿಂದಲೂ ನಡೆಯುತ್ತ ಬಂದಿರುತ್ತವೆ, ವಯೋಮಾನ
ಪರತ್ವದಿಂದ ಮಾನವನು, ಈ ' ಮೋಹಾಬ್ಧಿಯೊಳ್ ಮುಳುಗಿಹೆನಯ್ಯೋ '
ಎಂದು ಅನುರಾಗಪರವಶನಾಗಿ ರಾಗರಂಜನೆಯಿಂದ ತನಗೆ ಬಂದ ಭೋಗ
ದಲ್ಲಿ ತೂಗುತ್ತ, ಕೊನೆಯಲ್ಲಿ ತ್ಯಾಗವೃತ್ತಿಯನ್ನನುಸರಿಸುವದೇನು ಆಶ್ಚರ್ಯ
ವಲ್ಲ. ಮಾಧನನು ಬ್ರಹ್ಮಚಾರಿಯಾದರೂ ಬಿಡದು, ಮಧುಸೂದನನು
೧೮೩ ---------------------------------------------------------
ಮಾರಪಿತನಾದರೂ ಕೇಳದು. ಇರಲಿ. ಇದೇ ಪ್ರಕಾರ ಧರ್ಮೋಪದೇಶ
ಕ್ಕಾಗಿ ಹೋದ ಕಾಲಕ್ಕೊಮ್ಮೆ, ಮಾನವರಿಗೆ ಬಿಟ್ಟೂಬಿಡಡೆ ಬೆನ್ನುಹೆತ್ತಿರುವ
ದೈವದ ಆಘಾತವು ಮಾಧವನ ಮೇಲೂ ಬಿತ್ತು. ಆ ಅಘಾತವೆಂದರೆಯೇ
ಪ್ರಣಯಾಘಾತವು! ನೋಟಕ್ಕೆ ನೋಟಕ, ಸ್ಪರ್ಶಕ್ಕೆ ಸ್ಪರ್ಶ ! ಮಾರನ ಲೀಲಾ
ರಂಭವೆಂದರೆ, ಮಾರಪಿತನ ಪ್ರಾಪ್ತಿಯ ಲಾಲಸೆಯ ಸಮಾಸ್ತಿಯೇ ಅಲ್ಲವೆ?
ಈ ಪ್ರಣಯಾಘಾತಕ್ಕೆ ಕಾರಣವೆಂದರೆ, ಒಬ್ಬ ನಿಮೂಧೆಯಾದ,
ನಿರಪರಾಧಿಯಾದ, ವಿಶ್ವಾಸಮೂರ್ತಿಯಾದ ವಿಲೋಲೇಕ್ಷಣಳಾದ ಬಾಲೆಯು.
ಇದೊಂದು ವನಕುಸುಮವು. ಕೇವಲ ಅನಧೀತಳು. ಯಾವದನ್ನೂ ಅರಿ
ಯದ ಅಜ್ಞಾನಿಯು. ಅಸಹಾಯಳಾಗಿದ್ದುದರಿಂದೆ ಮನೆಯಲ್ಲಿದ್ದ ತನ್ನ
ಮುತ್ತಮ್ಮನ ಸೇವಾಶುಶ್ರೂಷೆಯಲ್ಲಿಯೇ ಸದಾ ನಿರತಳಾಗಿದ್ದು ಮನೆಯ
ಲ್ಲಿಯ ನ್ಯೂನಕೊರತೆಗಳನ್ನು ತಾಳ್ಮೆಯಿಂದ ತಡೆದುಕೊಂಡು ಮಾತಾಮಹಳ
ಸೇವೆಯೇ ಪರಮ ಧರ್ಮವೆಂದು ತಂಬಾ ನಂಬಿ ತಾವಿದ್ದ ಮನೆಯನ್ನು
ಮುನಿಗಳ ಆಶ್ರಮದಂತೆ ನಿರ್ಮಲವಾಗಿಟ್ಟು ಕೊಂಡಿದ್ದಳು. ಈ ಸುಕು
ಮಾರಿಯು ಇಷ್ಟು ಕಷ್ಟಕ್ಲೇಶಗಳನ್ನು ಅನುಭೋಗಿಸುತಿರುವದನ್ನು ಕಂಡು
ಮಾಧನಾನಂದನು ಆಗಾಗ ಬಲು ಕನಿಕರಬಡುತ್ತಿದ್ದನು. ಅವಳು ಬೇಡ
ಬೇಡೆಂದರೂ ಮಠದಿಂದ ಸಿಗುತ್ತಿರುವ ಸಹಾಯವನ್ನೆಲ್ಲವನ್ನೂ ಪೂರೈಸಿ
ಮಾತುಕಥೆಗಳಿಂದ ಆ ಬಾಲೆಯನ್ನು ಸಂತೋಷಗೊಳಿಸುತ್ತಿದ್ದನು. ಶಮ್ಮ
ಮನೆಗೆ ಬಂದ ಮಾಧವನು ಮರಳಿ ಮನೆಗೆ ಹೋಗುವಾಗ ಸೌದಾಮಿನಿಯು
ಅವನನ್ನು ಕಳುಹುವದಕ್ಕಾಗಿ ತುಂಗಭದ್ರಾ ತೀರದ ವರೆಗೂ ಹೋಗುತ್ತಿ
ದಳು. ಮಾಧವನು ಒಮ್ಮೆು ಬಂದನು; ಮತ್ತೊಮ್ಮೆ; ; ಇನ್ನೂ ಒಮ್ಮೆ; ಹೀಗೆ
ನಾಲ್ಕೆಂಟು ಸಾರೆ ಬರುಹೋಗುವದರೊಳಗಾಗಿ ನವಕುಮಾರಿಕೆಯರಿಗೆ
ಸ್ವಾಭಾವಿಕವಾದ ಭೀರುಗುಣವು ಅವಳಲ್ಲಿ ದಿನದಿನಕ್ಕೆ ಕಡಿಮೆಯಾಗಹತ್ತಿ ತು.
ವಿಶ್ವಾಸದಿಂದಲೂ, ಏನೂ ಆರಿಯದವಳಾದ್ದರಿಂದಲೂ ನಿರ್ಭೀತಳಾಗಿ
ಮಾಧವನನ್ನು ಎಂದಿನಂತೆ ಆವೊತ್ತು ನದೀ ತಟಾಕದವರೆಗೆ ಕಳುಹುತ್ತ,
ಮೆಲ್ಲಗೆ ಮಾತುಕತೆಗಳನ್ನಾಡುತ್ತ ತಟಾಕದ ಸಮೀಪವೇತಕರುಸಂತಾನಗಳು
ತುಸು ದಟ್ಟಾಗಿ ಬೆಳೆದಂಥ ಸ್ಥಳಕ್ಕೆ ಅವರಿಬ್ಬರೂ ಬಂದರು. 'ಒಳ್ಳೇದುಹೋಗಿ
ಬರುವರಾಗಿರಿ' ಎಂದು ಅಂದವಳೇ ಅವಳು ಹಿಂತಿಗುವಷ್ಟರಲ್ಲಿ,
೧೮೪------------------------------------------------------------
ಮಾಧವನಲ್ಲಿ ಮಾನನೀ ಗುಣಧರ್ಮಗಳ ವಿಕಾರವು ಅಕಸ್ಮಾತ್ತಾಗಿ
ಉಂಟಾಗಿ, ಮನೋವಿಕಾರದ ಅನಿವಾರ್ಯವಾದ ಉತ್ತೇಜನದಿಂದ
ಮಾಧವನು ಅವಳನ್ನು ಬಾಹುಪಾಶದಲ್ಲಿ ಬಿಗಿದಪ್ಪಿದನು. ಪರಸ್ಪರರ ಓಷ್ಮಗಳ
ಮಿಲನವಾಯಿತು. ಚಿರಸಂಸ್ಮರಣೀಯವಾದ ಪ್ರಥಮ ಚುಂಬನ ಸಂಸತ್ತಿನ
ಲಾಭವಾದ ಕೂಡಲೇ, ಅವನಿಗೆ ಅನನುಭೂತಪೂರ್ವವಾದ ಪರತರಾ
ನಂದವು ಫಕ್ಕನೆ ಲಭಿಸಿದಂತಾಗಿ, ಈ ಪರಮಾವಧಿಯ ಸೌಖ್ಯಸಾಗರದಲ್ಲಿಯೇ,
ವ್ರತ ಉಸವಾಸ ನೇಮಧರ್ಮಾದಿಗಳಲ್ಲಿ ಇಲ್ಲವೆ ಏಕಾಂತದಲ್ಲಿಯ ಈಶ್ವರ
ಚಿಂತನೆಯಲ್ಲಿ ಸಹಸಾ ಸಿಗಲಾರದಂಥ ಮೋಕ್ಷಾನಂದಪ್ರಾಪ್ತಿ ಇರುವ
ದೆಂಬಂತೆ ತೋರಿ, ಅವನು "अत्रैव मोक्षः '' ಎಂತ ಏಕಕಾಲಕ್ಕೆ ಉಚ್ಛರಿ
ಸಿದನು. ವಿದ್ಯಾವಿಶಾರದನೇ ಅವನು !
ಇದೇ ದಿನ ಮೊದಲ್ಗೊಂಡು ಏಕಾಂತ ಸಮಾಗಮಗಳಿಗೆ ಆರಂಭ
ವಾಯಿತು. ಆನಂದ-ಭೀತಿಗಳಿಂದ ಕೂಡಿದ ಸಂಯೋಗಗಳಿವು. ಮಾಧವನು
ವ್ರತಸ್ಥ ಬ್ರಹ್ಮಚಾರಿಯೂ, ವೇದವಿಶಾರದನ್ಕೂ ವಿದ್ಯಾರಣ್ಯರ ಪರಮ ಪ್ರೀತಿ
ಪಾತ್ರನೂ ಈಗ ಪರಮೋತ್ಸಾಹಪೂರ್ಣನಾದ ಕಾಮುಕನೂ ಇಂದ್ರಿಯ
ಚೇಷ್ಟಾಂಕಿತನೂ, ಸಕಲ ಚಿತ್ತ ಸ್ವಾತಂತ್ರ್ಯರಹಿತನೂ, ಕಾಮಾಂಧನೂ
ಆದನು. ಸಚ್ಚಿದಾನಂದ ಸ್ವರೂಪದಲ್ಲಿ ಸದಾಕಾಲವೂ ತಲ್ಲೀನನಾದವನು,
ಈ ನಿಷಿದ್ಧವಾದ, ಶಾಸ್ತ್ರಕ್ಕೆ ಅಸಮ್ಮತವಾದ, ವಿವೇಕದಿಂದ ನಿರ್ಬಂಧಿಸ
ಲ್ಪಟ್ಟ ಪ್ರಣಯಾಹುತಿಗೆ ತನ್ನನ್ನು ಅರ್ಪಿಸಿಕೊಂಡನು. ಸುಕುಮಾರಿ
ಯಾದ ಸೌದಾಮಿನಿಯೇನು? ಎಷ್ಟೆಂದರೂ ಇವರ ಪ್ರಣಯಾಲಾಸಕ್ಕೆ,
ಮುದ್ದುಮುದ್ದು ನುಡಿಗಳಿಗೆ ಮರುಳಾಗಿ, ಹಗಲಿರುಳು ಮಾಧವನ ಪ್ರೇಮವು
ತನ್ನಲ್ಲಿ ಚಿರಕಾಲವೂ ಇರುವಂತೆ ಕರುಣಿಸೆಂದು ಕರುಣಾಳುವಾದ ಕಾರುಣ್ಯ
ಮೂರ್ತಿಯನ್ನು ಪ್ರಾರ್ಥಿಸುತ್ತಿದ್ದಳು. ಮಾಧವನ ಪ್ರೇಮವೊಂದಿದ್ದರೆ
ಮುಗಿಲಿಗೆ ಕೈಹಚ್ಚುವೆನೆಂಬ ಬಯಲುಭ್ರಾಂಶಿಗೊಳಗಾಗಿ, ನಿಷ್ಠಾಪೂರ್ವಕ
ವಾಗಿ ಮಾಧವನನ್ನೇ ಮನಸಾ ಪೂಜಿಸುತ್ತಿದ್ದಳು ಈ ನಿಷಿದ್ಧ ಪ್ರೇಮ-
ಜನ್ಯವಾದ ಸರಸಕಾವ್ಯವು ಅಲ್ಪಕಾಲದಲ್ಲಿಯೇ ಲಯಹೊಂದಿತು. ಸ್ವಪ್ನ
ಸಾಮ್ರಾಜ್ಯವನ್ನು ನೆಲಕ್ಕುರುಳಿಸಲಿಕ್ಕೆ ಸುಳಿಗಾಳಿಗಳು ಸಾಕು, ಕ್ಲಣಾರ್ಥ
ದಲ್ಲಿ ಎಲ್ಲ ವೈಭವವೂ ನಾಮಶೇಷವಾಗುವದರಲ್ಲಿ ಸಂದೇಹವಿಲ್ಲ. ಸಹಜ
೧೮೫ ----------------------------------------------------------------------
ಪ್ರಾಪ್ತವಾದ ಸಹಚಾರಿಣಿಯಳ ಸಹವಾಸವು ಮಾಧವನಿಗೆ ಬಹಳ ದಿನ
ಬೇಕಾಗಲಿಲ್ಲ. ಅಲ್ಪಕಾಲದಲ್ಲಿಯೇ ಈ ಕೋಮಲವಾದ ಬಾಹುಪಾಶಗಳಿಂದ
ಬೇಕಿಯಾಗಲಿಚ್ಛಿಸಿದ. 'ಕೋಮಲವಾದರೇನು, ಕಠೋರವಿದ್ದರೇನು?
ಪಾಶವೆಲ್ಲವೂ ಪಾಶವೇ! ಹಾಗೂ ಪ್ರಸ್ತುತದ ಪಾಶದಲ್ಲಿ ತಾನೇ ಹೋಗಿ
ಸಿಕ್ಕಿಕೊಂಡದ್ದು!' ಮುಂತಾದ ವಿಚಾರಗಳ ಮಾಧವನ ಮನಸ್ಸಿನಲ್ಲಿ ಬಂದು,
ತನ್ನ ಶಾಸ್ತ್ರವಿರುದ್ಧವಾದ ಆಚರಣೆಯು ಗಂಡಾಂತರವುಳ್ಳದ್ದೆಂದು ಇಷ್ಟು
ತಡವಾಗಿಯಾದರೂ ಮನಗಂಡನು. ಸುಕುಮಾರಿಯಾದ ಸೌದಾಮಿನಿಯ
ಮನಶ್ಶಾಂತಿಯತಿಂತಲೂ ಅವಳ ಭಾವೀ ಸೌಖ್ಯದಕಿಂತಲೂ ಸದ್ಯಕ್ಕೆ ತನ್ನ
ಸಂರಕ್ಷಣೆಯನ್ನು ತಾನು ಮಾಡಿಕೊಳ್ಳುವದೀ ಆದ್ಯಕರ್ತವ್ಯವೆಂದು ವಿಜಾ
ರಾಂತ್ಯದಲ್ಲಿ ನಿರ್ಣಯಿಸಿಕೊಂಡನು. ತಾನು ಜಯಿಸಿ ಜರಿಯಲೆಸಗಿದವಳ
ಜಾಲವು ಇನ್ನು ಥರವಲ್ಲವೆಂದ್ಕೂ 'सवनाशे समुत्पन्ने अध त्यजात पाडतः'
ಎಂಬ ಉಕ್ತಿಯನ್ನು ನೆನಪಿಗೆ ತಂದುಕೊಂಡು, ಇಬ್ಬರೂ ಜನನಿಂದೆಗೂ
ಜನಾಪವಾದಕ್ಕೂ ಹೊಣೆಯಾಗಬೇಕಾದಾಗ, ಸ್ವಸಂರಕ್ಷ್ಮಣವೇ ಪರಮ
ಧರ್ಮವೆಂದು ಪುನರ್ವಿಚಾರದಲ್ಲಿಯೂ ನಿಶ್ಚಯಿಸಿದನು. ಮಾಧವನ
ವೃತ್ತಿಯು ಇತ್ತಿತ್ತಲಾಗಿ ಕ್ಷುಬ್ಬವಾಗುತ್ತ ನಡೆದದ್ದು ಸೌದಾಮಿನಿಯು
ತಿಳಿದು 'ಹೀಗೇಕೆಂದು' ಕೇಳಿದ ಕ್ಷಣವೇ ' ಏನ್ನು ಮುಂದೆ ನಮ್ಮಿಬ್ಬರ
ಭೆಟ್ಟಯೇ ಬೇಡ. ಇದೇ ಕಡೆಯ ಮಾತು. ಎಂದು ಒಳ್ಳೇ ಸಿಟ್ಟಿನಿಂದ
ತಾಪ ತಾಳಲಾರದೆ ಉತ್ತರ ಕೊಟ್ಟನು.
"ನಿನ್ನ ಸಹವಾಸ ಪಾಶದಲ್ಲಿ ನಾನು ಬಂದು ಹೇಗೆ ಬಿದ್ದೆನೋ ದೇವರೇ
ಬಲ್ಲ! ಹೀಗೆ ಮಾಡಿದ್ದು ನನ್ನ ಕೈಯಿಂದ ಮಹದಸರಾಧವಾಯಿತು
ಮಹೆತ್ಪಾನ ಕೃತ್ಯವನ್ನಾಚರಿಸಿದೆನು. ಇದಕ್ಕಾಗಿ ನಾನು ಇನ್ನು ಮೇಲೆ
ವ್ರತ ಉಸವಾಸಾದಿಗಳಿಂದಲೂ, ನಿಯಮ ಧರ್ಮಾದಿಗಳಿಂದಲೂ ದೇಹ
ದಂಡನೆಯನ್ನು ಮಾಡಲಿಕ್ಕೇಬೇಕು. ಆಯ್ಯೋ, ನೀನೇ ನನ್ನನ್ನು ಹಾಳು
ಮಾಡಿದಿ ಕಂಡಿಯಾ! ನಾನೇನು ಮಾಡಿದ್ದೆ? ನೀನೇ. ಈ ನಿನ್ನ
ನಸುನಗೆಯೂ, ಈ ನಿನ್ನ ಅರ್ಥ ಪೂರ್ಣವಾದ ನೋಟವೂ-- ನೀನೇ ನನ್ನನ್ನು
ನಿರ್ಮಲತೆಯಿಂದಲೂ, ಪೌರುಷದಿಂದಲೂ ಜಗ್ಗಿ ಈಡಾಡಿದಿ! ಈ ತಪ್ಪು
ನಿನ್ನದೋ ನನ್ನದೋ ಎಂಬದಕ್ಕೆ ದೇವರೇ ಸಾಕ್ಷಿ! ನಿಜವಾಗಿಯೇ ನಿನ್ನ
೧೮೬ ------------------------------------------------------------------------
ಸಲುವಾಗಿ ಪ್ರಾಣಗಳನ್ನಾದರೂ ಕೊಡುತ್ತಿದ್ದೆ! ಆದರೆ ಉಪಾಯವೇನಿದೆ?*
ತುಸು ಮಮತೆಯ ಆವಿರ್ಭಾವವನ್ನು ತಾಳಿ ಮಾಧವನು ಮತ್ತೆ ಅಂದದ್ದು;
"ಮೋಹದ ಮೂರ್ತಿಯೇ, ಇನ್ನು ನನ್ನ ಕೈಮೀರಿತು, ನನ್ನ ಅಸರಾಧಗ
ಳೇನಾದರೂ ಇದ್ದರೆ ಅವನ್ನೆಲ್ಲ ಕ್ಷಮಿಸು ಹಾಗೂ ನನ್ನನ್ನು ಸ್ಮರಣ
ಪಥದಾಚೆಗೆ ದೂಡಿಬಿಡು. ನನ್ನ ನೆನಪು ಎಳ್ಳಷ್ಟೂ ಮಾಡಬೇಡ. ನೀನು
ಇನ್ನೂ ನವತರುಣಿಯು, ತೀರ ಚಿಕ್ಕವಳು, ನಿನಗೇನು? ಇನ್ನು
ಮುಂದಾದರೂ ನೀನು ಸುಖವನ್ನು ಕಾಣುವಿ ''
ಇಷ್ಟು ಹೇಳಿದವನೇ ಮಾಧವನು ತಾನೊಂದು ಒಳ್ಳೇ ಕಾರ್ಯವನ್ನು
ವಿವೇಕದಿಂದಲೂ ಜಾಣತನದಿಂದಲೂ ಪಾರುಗಾಣಿಸಿದೆನೆಂಬ ತಿಳುವಳಿಕೆ
ಯಿಂದ ಸಹೃದಯಳಾದ ಸೌದಾಮಿನಿಯ ಹೃದಯವನ್ನೇ ತನ್ನ ಶಬ್ದ ಶೂಲ
ಗಳೆಲ್ಲ ವಿದೀರ್ಣ ಮಾಡುತ್ತಿರುವವೆಂಬದನ್ನರಿಯದೆ, ತನ್ನ ದೃಢನಿಶ್ವಯ
ವನ್ನು ಕಂಡು ಸೌದಾಮಿನಿಯು ಇನ್ನು ಅಶ್ರುಧಾರೆಗಳ ಮಳೆಯನ್ನೇ ಕರೆ
ಯುವಳೇನೋ ನೋಡಬೇಕೆಂಬ ಹವಣಿಕೆಯಲ್ಲಿ ತುಸು ಹೊತ್ತು ತಡೆದನು.
ಯಾಕೆಂದರೆ ಅದೃಷ್ಟಪೂರ್ವವಾದ ಆಶಾಭಂಗವು ಎಂಥವರನ್ನಾದರೂ ಎದೆ
ಯೊಡಿಸುತ್ತದೆ. ಅಂದ ಮೇಲೆ ಅನುಭವಹೀನಳಾದ ಅಬಲೆಯದೇನು ಕಥೆ?
ಆದರೆ ಸೌದಾಮಿನಿಯು ಅಶ್ರುಧಾರೆಗಳನ್ನು ಸುರಿಸಲಿಲ್ಲ. ದುಃಖಕ್ಷೇಶ
ಗಳ ಅಂಕುರವು ತನ್ನಲ್ಲಿ ಮೊಳೆತಿದೆ ಎಂಬುದನ್ನೂ ಯಾವ ಬಗೆಯಿಂದಲೂ
ತೋರಿಸಲಿಲ್ಲ. ವಿಲಕ್ಷ್ಮಣವಾದ ತೇಜಸ್ಸುಳ್ಳೆ ತನ್ನ ನೇತ್ರದ್ವಯಗಳನ್ನು
ಮೇಲಕ್ಕೆತ್ತಿ ಮಾಧವನನ್ನು ಪ್ರಣಯ ಪೂಜಾಭಾವದಿಂದ ಒಮ್ಮೆ ನಿರೀಕ್ಷಿ
ಸಿದ್ದೇ ಮಾತ್ರ--ಅವನ ಉತ್ತರೀಯವನ್ನು ಆದರದಿಂದ ಮೇಲಕ್ಕೆತ್ತಿ ಅದನ್ನು
ಚುಂಬಿಸಿ ಮತ್ತೊಮ್ಮೆ ಕ್ಷಮಾ-ದಯಾ-ಕ್ಲೇಶಪೂರಿತವಾದ ನಯನಗಳಿಂದ
ಒಂದೇ ಒಂದು ಸಾರೆ ಅವನನ್ನು ನೋಡಿ ಗಕ್ಕನೆ ತಿರುಗಿ ತನ್ನ ಹಾದೀ
ಹಿಡಿದಳು.
" ಸೌದಾಮಿನೀ, ನಿಲ್ಲು, ಹಾಗೆಯೇ ಹೊರಟಯಾ, ಒಂದು ಮಾತು
ಸಹ ಆಡದೆ?” ಇದಕ್ಕೆ ಅವಳ ಉತ್ತರವೇ ಇಲ್ಲ. ಮಾನವನ ಮರುಳು
ಮಾತಿಗೆ ಕಿವಿಗೊಡನೆ ಧ್ಯಾನೈಕಳಾದ ವನದೇವತೆಯೇ ತನ್ನ ಸುರುಚಿರವಾದ
ಚಾರುತೆಯನ್ನು ಕ್ಷುದ್ರರ ದೃಷ್ಟಿಗೆ ಹಾಕಬಾರದೆಂಬ ದೃಢನಿಶ್ಚಯದಿಂದ
೧೮೭ -----------------------------------------------------------------------
ನಿಬಿಡವಾದ ವನದಲ್ಲಿ ಅದೃಶ್ಯಳಾಗುವಂತೆ, ಸೌದಾಮಿನಿಯು "ಹಾ' ಎನ್ನುವಷ್ಟ
ರಲ್ಲಿ ಆ ತರುಸಂತಾನದ ಸಂದಟ್ಟಣಿಯಲ್ಲಿ ಸೇರಿಕೊಂಡು ಕಾಣದಾದಳು.
ಮುಂದೆ ಹೆಜ್ಜೆಯಿಟ್ಟಿವಳು ಹಿಂದಿರುಗಿ ಒಂದು ನೋಟವನ್ನಾದರೂ ಚಲ್ಲಲಿಲ್ಲ.
ಅವನು ಅವಳನ್ನು ಮತ್ತೆ ಕಾಣಲೇ ಇಲ್ಲ. ಆದರೆ ಅದೇ ವಾರದಲ್ಲಿ
ತನ್ನ ಸರತಿಯಂತೆ ಉಪಪದೇಶಾರ್ಥವಾಗಿ ಆ ಹಳ್ಳಿಗೆ ಹೋದಾಗ ಆಶ್ರಮ
ಪಥಕ್ಕೆ ಮೇಖಲಾಕಾರವಾಗಿ ಹರಿಯುವ ತುಂಗಭದ್ರೆಯ ಶುಭ್ರಸಲಿಲದ
ಮಡುವಿನಲ್ಲಿ ಮುಳುಗಿ ಗಲಗುಬೆತ್ತಗಳ ಕಂಟಿಯಲ್ಲಿ ಸೌದಾಮಿನಿಯ ಶವವು
ಸಿಕ್ಕಿರುವದೆಂಬ ವಾರ್ತೆಯನ್ನು ಅವನು ಕೇಳಿದನು. ಸೌದಾಮಿನಿಯ
ಮುತ್ತಮ್ಮನು ಇನ್ನೂ ಅವಳ ಹಾದಿಯನ್ನು ನೋಡುತ್ತ ಕೂತವಳು ಅಲ್ಲಿಯೇ
" ಸಾದಾಮಿನಿಯು ಇನ್ನೂ ಬರಲಿಲ್ಲ, ಯಾಕಾದೀತು? ? ಎಂದು ಕನಿಕರಿ
ಸುತ್ತ ಕೂತೇ ಇದ್ದಳು. ಕಡೆಗೆ ನೀರಿನಿಂದ ಡಬಡಬ ಎನ್ನುವಂಥ, ಹಾಗೂ
ಕಯ್ಯಲ್ಲಿ ಪ್ರಾಣಾಂತ್ಯಕಾಲಕ್ಕೆ ಗಲಗಿನ ದಂಟನ್ನು ಕಯ್ಯಾಸರೆಯಾಗಿ ಹಿಡಿದು
ಕೊಂಡಂಥ ಸೌದಾನಿನಿಯ ಶವವನ್ನು ದಂಡೆಗೆ ತಂದಿರಿಸಿರುವರೆಂದು ಆ
ಮುದುಕಿಗೆ ಹೇಳಿದರೂ ಕೂಡ, ಅವಳು ಛೇ, ಸತ್ತವಳು ನನ್ನ ಸೌದಾಮಿನಿ
ಯಾಗಿರಲಿಕ್ಕಿಲ್ಲ. ಮಾಧವಾನಂದರನ್ನು ಮಠಕ್ಕೆ ಕಳುಹಿಸಿ ಅವಳು ಈಗಲೇ
ತಿರುಗಿ ಬರುತ್ತಾಳೆ, ನೋಡಿರಿ ಬೇಕಾದರೆ! ಈ ವೃದ್ಧಾಪ್ಯದಲ್ಲಿ ನನ್ನನ್ನು
" ಕೂಳು, ಕೂಳು, ನೀರು, ನೀರು' ಎನಿಸಿ ಕೊಲ್ಲುವಸ್ತು ದೇವರು
ದಯಾರಹಿತನೇ? ನಾನೆಂದೂ ಒಪ್ಪೆನು. ನನಗೆ ಆಧಾರವೆಂತ ಬೇಕಾಗಿ
ಇಟ್ಟವಳನ್ನು ವಿರೂಪಾಕ್ಷನು ಹೇಳಕೇಳಡೆ ಹೇಗೆ ಒಯ್ಯುವನು?
ನೀವೆಲ್ಲ ಮೋಜು ಮಾಡಬೇಕೆನ್ನುವಿರಿ; ಆದರೆ ದೇವರ ಮನೆಯಲ್ಲಿ ಈ
ಮೋಜಾಟದ ಗಜಿಬಿಜಿ ಇಲ್ಲ ಕಂಡಿರಾ. ನೀನೇನು ಹೇಳುವಿರಿ ಹೋಗಿರಿ,
ನಿಮ್ಮ ನಿಮ್ಮ ಮನೆಯ ಹಾದೀ ಹಿಡಿದು. ನನ್ನ ಕಂದಮ್ಮನು ಇದೇ
ಬಂದು ನನಗೆ ಉಣಿಸಿ ಹಾಸಿಗೆ ಮಾಡಿಕೊಡುವಳಂತೆ. ಬಂದಿಯಾ ಸೌದಾ
ಮಿನೀ? ಬಾರಮ್ಮಾ, ಯಾಕೊ ಹಸಿವಾಗಿದೆ. ಎಂದೂ ಹೀಗೆ ತಡಮಾಡು
ವಾಕಿಯಲ್ಲ; ಇಂದೇ ಯಾಕೆ ಹೀಗೆ ಮಾಡಿದಿ?” ಎಂದು ಒಂದೇ ಉಸಿರಿ
ನಿಂದ ಒದರಿ ಒದರಿ, ಮುದುಕಿಯು ಕೂತಲ್ಲಿಯೇ ನೆಲಕ್ಕೆ ಒರಗಿದಳು.
ಇಷ್ಟರಲ್ಲಿ ಮಾಧನನು ಅಲ್ಲಿಗೆ ಬಂದು ಮುದುಕಿಯನ್ನು ಎಬ್ಬಿಸಿ, ಆದ
೧೮೮ ------------------------------------------------------------------
ಮಾತಿಗೆ ಉಪಾಯವಿಲ್ಲವೆಂದೂ, ಶ್ರೀಹರಿಯ ಚಿತ್ತಕ್ಕೆ ಬಂದದ್ದೇ ನಿಜವೆಂದೂ,
ಅಪಾರವಾದ ಜಗತ್ತಿನಲ್ಲಿ ಸೌಖ್ಯದು:ಖಗಳ ಕಲ್ಪನೆಗಳು ಭ್ರಾಂತಿಮೂಲಕ
ವಾದಂಧವೆಂದೂ ಹೇಳಿ, ಅವಳ ಸಮಾಧಾನ ಮಾಡತೊಡಗಿದನು. ಇವನ
ವೇದಾಂತವನ್ನೆಲ್ಲ ಮುದುಕೆಯು ಕಿವಿಯಲ್ಲಿ ಹಾಕಿಕೊಳ್ಳದೆ "ಈಗ ಬರುತ್ತಾಳೆ,
ಕೂಡಿರಿ. ; ಮತ್ತೆಲ್ಲಿ ತಪ್ಪಿಸಿಕೊಂಡಳೋ ಏನೋ!' ಎಂದು ಕನವರಿಸುತ್ತ
ಬಿದ್ದಲ್ಲಿಯೇ ಬಿದ್ದಳು, ಮಮತಾವಿಮೂಢೆಯು ! ಮಾಡುವಳೇನು?
ವಿವೇಕವು ಕೃತಕರ್ಮಕ್ಕಾಗಿ ವೇದಾಂತವಿದನಾದ ಮಾಧವನನ್ನು ಕ್ಷಣ
ಕ್ಷಣಕ್ಕೂ ಕಾಡಿಸುತ್ತಿತ್ತು. ವೇದಾಂತದ ವಿಚಾರಗಳು ಬಾಯಿಂದ ಹೊರ
ಬೀಳುತ್ತಿದ್ದವು ಮಾತ್ರ. ಶಬ್ದ ಶಬ್ದಕ್ಕೂ "ಛೀ, ಸ್ತ್ರಿಘಾತಕಾ' ಎಂಬ
ಸ್ವರವೇ ಅವನಿಗೆ ಕೇಳಬರುತ್ತಿತ್ತು. ಬಹಿರಂಗದಲ್ಲಿ ಈ ಸಂಗತಿಯು ಅನ್ಯ
ರಿಗೆ ತಿಳಿಯುವದಂತೂ ಇಲ್ಲೇ ಇಲ್ಲ. ಆದರೆ ಜನರೇನು ಬಲ್ಲರು ಒಳ
ಗಾಗೋ ಕೃತ್ಯವ ?' ಆಂತರಂಗದಲ್ಲಾಗುವ ಸಹಸ್ರಾವಧಿ ಯಾತನೆಗಳನ್ನು
ಮಾಧವನು ಹೇಗೋ ತಡೆದುಕೊಂಡು ಮೇಲೆ ಮೇಲೆ ಏನೂ ಅರಿಯದವ
ನಂತೆ ತಿರುಗಾಡುತ್ತಿದ್ದನು. ಉದಾಸೀನತೆಯಾಗಲಿ, ಪ್ರಫುಲ್ಲಚಿತ್ತವಾಗಲಿ,
ನಗೆಯ ಮಾತಾಗಲಿ, ಹೊಗೆಯ ಮಾತಾಗಲಿ, ಸುಖಪರಿಣಾಮವುಳ್ಳ ಸಂಗತಿ
ಯಿರಲಿ, ದುಃಖಪಯಃ ವಸಾಯಿಯಾದಂಥದೇ ಆಗಲಿ, ಹೇಗಿದ್ದರೂ ಅವೆ
ಲ್ಲವೂ ಸ್ಮರಣಪಥವನ್ನು ಹೊಂದುವಂತೆ ಈ ಚಿಕ್ಕ ಬಾಲೆಯ ದುರ್ಮರಣದ
ದುಃಖಪೂರ್ಣವಾದ ಕಥೆಯನ್ನು ಎಲ್ಲರೂ ಮರೆತುಬಿಟ್ಟರು, ಜಲದೇವತೆಗೆ
ಬಲಿಯಾಗಿ ಬಿದ್ದ ಬಾಲೆಯ ಪ್ರಣಯೇಂಧನಕ್ಕೆ ಆಹುತಿಯಾದವಳೆಂದು
ಯಾರಿಗೂ ಗೊತ್ತಿದ್ದಿಲ್ಲ. ಬೇಕಾದಷ್ಟು ಅಸಂಬದ್ಧ ವಿಚಾರಗಳಿಂದ ತುಂಬಿ
ದಂಥವನಾದರೂ ಈ ಕೃತ್ಯಕ್ಕೆ ಆದಿಕಾರಣನು ಮಾಧವನೆಂತ ಕಲಿಕಾಲಕ್ಕೂ
ಹೇಳದಂತಿತ್ಕು. ಯಾಕೆಂದರೆ ಮಾಧವನಂಥ ಪವಿತ್ರಾಚರಣವುಳ್ಳವನೂ
ನಿರ್ಮ ಲಾಂತಃಕರಣನೂ, ಸಹೃದಯನೂ ಇಡೀ ಮಠಸ್ಥಬ್ರಹ್ಮಚಾರಿವೃಂದ
ದಲ್ಲಿಯೇ ಯಾರೂ ಇಲ್ಲವೆಂದು ಎಲ್ಲರಿಗೂ ಗೊತ್ತಿತ್ತು. ಆದುದರಿಂದಲೇ
ಮಾಧವನ ಸಹಚಾರಿಗಳಾದ ಬ್ರಹ್ಮಚಾರಿಗಳೆಲ್ಲರೂ ಇವನನ್ನು ಸ್ವರ್ಗೀಯ
ಶಿಲ್ಪಿಗನೆಂತಲೂ, ವಿಶ್ವಕರ್ಮನೆಂದೂ ಆಗಾಗ ಕರೆಯುತ್ತಿದ್ದಿಲ್ಲವೆ"? ಅಂದ
ಮೇಲೆ ಈ ಕೃತ್ಯಕ್ಕೆ ಅವನೇ ಮೂಲನೆಂಬದನ್ನು ಮನಸ್ಸಿನಲ್ಲಿಯಾದರೂ
೧೮೯ -------------------------------------------------------------------------
ತಂದುಕೊಳ್ಳುವ ಧೈರ್ಯವಾರಿಗೆ? ಈ ಮಾತಿಗೆ ಎಷ್ಟೋ ವರುಷಗಳು
ಕಳೆದಾದವು. ಮಾಧವನ ಪಾಪವು ಇದುವರೆಗೂ ಮುಚ್ಚಿಹೋಗಿತ್ತು.
ಏಕಾಂತವಾಸದಲ್ಲಿ ಮಾತ್ರ ಮೃತಬಾಲೆಯ ಕಡೆಯ ನೋಟವು ಇವನಿಗೆ ನೆನ
ಪಾಗಿ ದೈವಿಕ ಭೀತಿಯೇ ಎದುರಿನಲ್ಲಿ ನಿಂತಂತಾಗಿ ಮೈತುಂಬ ಬೆವರೊಡೆ
ಯುತ್ತಿತ್ತು. ಇತ್ತಿತ್ತ್ಮಲಾಗಂತೂ ಅವಳ ನೆನಪು ನಿಂತನಿಂತಲ್ಲಿ ಕೂತಕೂಕಲ್ಲಿ
ಆಗಹತ್ತಿ, ಮನಶ್ಶಾಂತಿಯೇ ಇಲ್ಲದಂತಾಗಿ ಮಾಧವನು ಭ್ರಮಿಷ್ಠನಂತಾಗಿ
ದ್ದನು. ಅವಳ ವಿಲೋಲವಾದ ನೇತ್ರಗಳ ಸ್ಮರಣೆಯೇ ಮಾಧವನಿಗೆ
ಯಾಕಾಗಬೇಕೆಂಬುದಕ್ಕೆ ವಿಶೇಷವಾದ ಕಾರಣವೇನೂ ಇದ್ದಿಲ್ಲ. ಅವಳ
ಮೃದುಹಾಸವೇ ಇವನಿಗೇಕೆ ಕಣ್ಣೆದುರಿನಲ್ಲಿ ಕಟ್ಟಿದಂತಿರಬೇಕೆಂಬದೆಕ್ಕೂ
ಹೇಳುವಂಥ ಕಾರಣವಿದ್ದಿಲ್ಲ. ಆದೇನೆ ಇರಲಿ, ಸೌದಾಮಿನಿಯ ಸ್ಮರಣೆ
ಯನ್ನು ಮಾಧವನು ಮಾಡದೆ ಇರಲಾರದಾದನು. ಇದೇ ಪ್ರಕಾರ ಎಡೆಬಿಡದೆ
ಕ್ಷ್ಮಣಶಃ ಅವಳ ಸ್ಮರಣೆಯಿಂದ ಮನಸ್ಸಿನಲ್ಲಿ ಪಶ್ಚಾತ್ತಾಪಾತಿರೇಕವುಂಟಾಗಿ,
ಕ್ಷಣಿಕ ಸುಖಕ್ಕಾಗಿ, ಜನ್ಮಜನ್ಮ ದಲ್ಲಿಯೂ ತೀರದಂಥ ಘೋರಕರ್ಮವು
ತನ್ನಿಂದ ಘಟಿಸಿತೆಂಬ ದೃಢಭೀತಿಯು ಭಾನನೆಯು ಅವನನ್ನು ಬಾಧಿಸುತ್ತಿ
ದ್ದುದರಿಂದಲೇ, ಮಾಧವನು ತಾನಾಗಿ ವಿದ್ಯಾರಣ್ಯರಿಗೆ ತಾನು ಈ ಮೂರ್ತಿ
ನಿರ್ಮಾಣ ಕಾರ್ಯಕ್ಕೆ ಎಷ್ಟೂ ಅಪಾತ್ರನೆಂದು ಹೇಳಿಕೊಳ್ಳಲಿಲ್ಲವೆ ?
ಕೃತಪಾಪದ ಭಾರವು ಅಂತರ್ಗತವಾಗಿ ಮಾಧವನನ್ನು ನುಸಿನುಗ್ಗು
ತ್ತಿತ್ತು. ವ್ರತನೇಮಾದಿಗಳನ್ನು ತಾನೆಷ್ಟು ಸರಿಯಿಂದ ಆಚರಿಸಿದರೂ, ಜನ
ರಲ್ಲಿ ಎಷ್ಟೇ ಆಚಾರವಂತನೆಂದು ಹೆಸರುವಾಸಿಯಾಗಿದ್ದು ಕೊಂಡಿದ್ದರೂ,
ಸರ್ವಸಾಕ್ಷಿಯಾದ ಪರಮೇಶ್ವರನ ಎದುರಿನಲ್ಲಿ ತಾನೊಬ್ಬ ಡಾಂಭಿಕನಲ್ಲದೆ
ಮತ್ತಿನ್ನೇನೆ೦ಬುದು ಅವನ ಮನಸ್ಸಿನಲ್ಲಿ ನಿರಂತರವಾಗಿ ಕಟಿಯುತ್ತಿತ್ತು. ಪರಿ
ಪರಿಯಿಂದ ಜೀವರನ್ನು ಪ್ರಾರ್ಥಿಸಿ ನೋಡಿದರೂ ಕಂಠಗತಪ್ರಾಣವಾಗುವ
ವರೆಗೆ ಉಪವಾಸಗಳನ್ನಾಚರಿಸಿದರೂ ಮನಶ್ಶಾಂತಿಯೆಂದರೆ ಎಂಥದೆಂಬದು
ಮಾಧವನಿಗೆ ಗೊತ್ತಾಗಲೊಲ್ಲದು. ಪಾಪಕ್ಷಾಲನವು ಧೂಪದೀಪ ನೈವೇದ್ಯ
ಮಂಗಳಾರತಿಗಳಿಂದಾಗುತ್ತದೆಂಬ ತಿಳುವಳಿಕೆ ಇದ್ದವರು ನಮ್ಮ ಮಾಧವ
ನನ್ನು ಬೇಕಾದರೆ ಮಾತಾಡಿಸಿ ನೋಡಬೇಕು. ತನ್ನ ಅನುಭವಾಮೃತವನ್ನು
ಹಂಚಿಕೊಟ್ಟರೂ ಕೊಟ್ಟಾನು, ಏನು ಮಾಡಿದರೂ ಮನಸ್ತಾಪವು ಕಿಂಚಿ
೧೯೦ ---------------------------------------------------------------------------
ತ್ತಾದರೂ ಕಡಿಮೆಯಾಗಲಿಲ್ಲ ಈಗಲಾದರೂ ಸ್ವಾಮಿಗಳ ಆಜ್ಞಾನುಸಾರ
ವಾಗಿ ಮೂರ್ತಿನಿರ್ಮಾಣಕಾರ್ಯಕ್ಕೆ ಒಪ್ಪಿಕೊಂಡು ಬಂದವನು, ವಿರೂ
ಪಾಕ್ಷನ ಪದತಲದಲ್ಲಿ ಹೊರಳಾಡುತ್ತ 'ಪಾಹಿ ಪಾಹಿ? ಎಂದು ಮೊರೆಯಿಡುವ
ದನ್ನು ನೀವು ಕಂಡೇ ಇರುವಿರಿ. ಪ್ರಾರ್ಥನಾ ಪಶ್ಚಾತ್ತಾಪಗಳ ಪರಮಾವಧಿ
ಯಾದರೂ ವಿರೂಪಾಕ್ಷನಿಂದ ಸಮಾಧಾನಕರವಾದ ಪ್ರತ್ಕುತ್ತರವು ದೊರೆಯ
ದಿದ್ದುದರಿಂದ ಸಂತಾಪಹಾರಕನಾದ ಹರನ ಹಾರೈಕೆಯ ಆಶೆ ತೊರೆದು,
ಸಾಷ್ಟಾಂಗಹಾಕಿದವನು ಚಟ್ಟನೆ ಎದ್ದು ನಿಂತನು. 'ದೈವಾಧೀನಂ ಜಗತ್ಸರ್ವಂ'
ಎಂದೇನೇನೋ ಅನ್ನುತ್ತ ಬೇಕಾದ್ದಾದರೂ ಸ್ವಾಮಿಗಳ ಆಜ್ಞಾನುಸಾರವಾಗ
ನಡೆದುಕೊಳ್ಳಲೇಬೇಕು; ತಾನು ಒಪ್ಪಿಕೊಂಡ ಮೇರೆಗೆ ತ್ರಿಪುರಸುಂದರಿಯ
ಮೂರ್ತಿಯನ್ನು ನಿರ್ಮಿಸಲೇಬೇಕೆಂಬ ನಿಶ್ಚಯವನ್ನು ಮಾಡಿಕೊಂಡನು.
ಇದೊಂದು ಕೃತಾಪರಾಧಕ್ಕೆ ತಕ್ಕ ಶಿಕ್ಷೆಯೆಂದೇ ಕೈಕೊಳ್ಳತಕ್ಕದ್ದು; ಅಲ್ಲದೆ
ಅಭಿಮಾನದ ಇಲ್ಲವೆ ಆನಂದದ ಲವಲೇಶವಾದರೂ ಇದರಲ್ಲಿಲ್ಲ. ಎಂಬೀ
ಬಗೆಯ ಕಲ್ಪನೆಯಿಂದಲೇ ಈ ಕಾರ್ಯವನ್ನು ಕೈಕೊಳ್ಳಲು ಅವನು ತತ್ಪರ
ನಾದನು, ಕಲಾನಿಪುಣರು ತಾವು ಮಾಡಬೇಕೆನ್ನುವ ಕಾರ್ಯದಲ್ಲಿ ವಿಚಾ
ರಕ್ಕೂ, ಹಸ್ತ ಕೌಶಲ್ಯಕ್ಕೂ ಪ್ರೇರ್ಯ ಪ್ರೇರಕ ಸಂಬಂಧವನ್ನು ಕಲ್ಪಿಸು
ತ್ತಾರೆ. ಕಲ್ಪನೆಯ ಹೇಳಿಕೆಯಂತೆ ಹಸ್ತ ಕೌಶಲ್ಯವು ಕೇಳತಕ್ಕದ್ದು. ಇವೆರಡ
ರಲ್ಲಿಯೂ ಈ ಸಂಬಂಧವನ್ನು ಕಾದಿಡಲಿಕ್ಕೆ ಅಂಗೀಕೃತ ಕಾರ್ಯದಲ್ಲಿ ನಿಜ
ವಾದ ಪ್ರೇಮಾಭಿಮಾನವು ಇರಬೇಕಾಗುತ್ತದೆ. ನಮ್ಮ ಮಾಧವನಲ್ಲಿ ಈ
ಉತ್ಸಾಹಶಕ್ತ್ವಿಯು ಎಂದೋ ಅಳಿದುಹೋಗಿತ್ತು. ಇರಲಿ. ಮೂರ್ತಿಯನ್ನು
ಪ್ರತಿಷ್ಠಾಪಿಸುವ ಸ್ಥಳದ ಅಳತೆಯನ್ನೂ, ಗರ್ಭದಲ್ಲಿಯ ಅವಾರದ
ಅಳತೆಯನ್ನೂ ಲಕ್ಷಪೂರ್ವಕವಾಗಿ ತೆಗೆದುಕೊಂಡು ಅವನು ಆ
ಸ್ಥಳದಲ್ಲಿ ಯುಕ್ತವಾದಂಥ ಪ್ರಭಾವಳಿಯನ್ನೂ, ಪೀಠವನ್ನೂ ಕಟ್ಟಿಗೆಯಿಂದ
ಮಾಡಿಕೊಂಡನು. ಪೀಠಪ್ರಭಾವಳಿಯ ಆಳತೆ ಅನುಮಾನದಿಂದ
ಮೂರ್ತಿಯು ಯಾವ ನಿಲ್ವಿಕೆಯನ್ನು ತೊಟ್ಟು ಕೊಳ್ಳ ಬೇಕಾದೀತೆಂಬದನ್ನು
ಮನಸ್ಸಿನಲ್ಲಿಯೇ ತರ್ಕಿಸಲು ಸುಲಭವಾಗುವದೆಂಬದಕ್ಕಾಗಿ, ಈ ಕಟ್ಟನ್ನು
ಆಳತೆಬದ್ದವಾಗಿ ಮೊದಲೇ ಮಾಡಿದನು. ಈ ಪೀಠಪ್ರಭಾವಳಿಯ ಎದುರಿನಲ್ಲಿ
ಕುಳಿತು, ಮಧ್ಯದಲ್ಲಿಯ ಗರ್ಭವನ್ನು ಚನ್ನಾಗಿ ಲಕ್ಷಿಸಿಕೊಂಡನಂತರ,
೧೯೭ -------------------------------------------------------------------------
ಮೂರ್ತಿಯು ಪೂರ್ಣಾಕೃತಿಯಾಗಿರತಕ್ಕದ್ದೆಂದು ಗೊತ್ತು ಪಡಿಸಿದನು.
ಕೂಡಲೆ, ಇದ್ದಲಿಯ ಚೂರಿನಿಂದ ಕಾಗದದ ಮೇಲೆ, ಈ ಕಲ್ಪನೆಗೆ ತಕ್ಕ
ಆಕೃತಿಯನ್ನೂ, ಅದಕ್ಕೆ ಒಪ್ಪುವಂಥ ಮುಖದ ಭಾವರೇಖೆಗಳನ್ನೂ
ತೆಗೆಯ ತೊಡಗಿದನು. ಆದರೆ ಅವನ ಕಲ್ಪನಾಸದೃಶವಾದ ಆಕಾರವೂ
ಅದಕ್ಕೆ ತಕ್ಕ ಮುಖವೂ ಏನು ಮಾಡಿದರೂ ಭಾವರೇಖೆಗಳಲ್ಲ ಮನಸು
ತೃಪ್ತಿಯಾಗುವಂತೆ ಇಳಿಯಲೊಲ್ಲವು.
" ಛೇ ದಿವ್ಯವಸ್ತುಗಳನ್ನರಿತುಕೊಳ್ಳುವ ಕಾರ್ಯವು ನನ್ನದಲ್ಲವೇ
ಅಲ್ಲ! * ಅವನು ಕೊನೆಯಲ್ಲಿ ಬೇಸತ್ತು ಅಂದನು: ಆ ನನ್ನ ಪಾಪಕೃತ್ಯ
ದಿಂದ ನನ್ನ ಲ್ಲಿ ಮೊದಲಿದ್ದ ದಿವ್ಯ ಸ್ಫೂರ್ತಿಯ ಸೆಲೆಯೇ ಕಡಿದುಹೋಯಿತು.
ಯಃಕಶ್ಚಿತಳಾದ ಅಬಲೆಯ ನೇತ್ರ ಕಟಾಕ್ಷಜಾಲಕ್ಕೆ ಬಲಿಬಿದ್ದ ನಿರ್ಬಲವಾದ
ಆತ್ಮವೇ, ನಿನಗೆ ಧಿಕ್ಕಾರವಿರಲಿ! ಅವಳು ನನ್ನನ್ನು ಹಾಗೆ ನೋಡದೆ
ಇದ್ದರೆ! ಅವಳ ಮೃದುಹಾಸವು ಇಷ್ಟು ಮೋಹೆಭರಿತವಿರದಿದ್ದರೆ !
ಒಂದು ವೇಳೆ ಅವಳು ನನ್ನ ಪ್ರಬಲೇಚ್ಛೆಗೆ ಅನುಕೂಲಳಾಗದಿದ್ದರೆ, ಅವಳು
ತಾನೂ ಪವಿತ್ರಳಾಗಿ ಉಳಿಯುತ್ತಿಳು; ನನ್ನನ್ನೂ ಅಧಃಪಾತಕ್ಕೆ
ಮೆಟ್ಟುತ್ತಿದ್ದಿಲ್ಲ. "
" ಆ ಸ್ತ್ರೀಯೇ ನನ್ನನ್ನು ಕೆಡಿಸಿದಳು; ಇಲ್ಲದಿದ್ದರೆ ನನ್ನಂಥವನು
ಎಂದಾದರೂ ಕೆಡಬಹುದೆ? ” ಎಂಬ ಯುಕ್ತಿವಾದವನ್ನೇ ಮಾಧವನು
ಆಶ್ರಯಿಸಿದನು. ಇದುವರೆಗೂ ಇದೇ ಆಧಾರನನ್ನೇ ಎಲ್ಲರೂ ಅನಲಂಬಿ
ಸುತ್ತ ಬಂದದ್ದರಿಂದ ಮಾಧವನಾದರೂ ಹೊಸ ಯುಕ್ತಿಯನ್ನು ಎಲ್ಲಿಂದ
ತರಬೇಕು? ಕಲ್ಪಾಂತ್ಯದವರೆಗೂ ದಯಾರಹಿತವಾದ ಸ್ವಾರ್ಥಸಾಧನೈಕ
ತತ್ಪರರಾದ ಜನರು ಇದೇ ಯುಕ್ತಿವಾದವನ್ನೇ ಆಶ್ರಯಿ:ಸುವರೆಂಬದು
ನಿಜವು. ಪಾಪ ! ಅಪರಾಧ ಒಬ್ಬರದು; ಶಿಕ್ಷೆ ಇನ್ನೊಬ್ಬರಿಗೆ! ಇದರಲ್ಲಿ
ಜಗನ್ನಿಯಂತನ ನ್ಯಾಯಕ್ಕೆ ನಿಮಮವಿಲ್ಲವೊ, ಇಲ್ಲವೆ, ಕ್ಷುದ್ರಮಾನವರ
ಮೂಢತನಕ್ಕೆ ಮರ್ಯಾದೆ ಇಲ್ಲವೊ?
'ಕಾರ್ಯಾರಂಭ'ದ ಮೊದಲನೆಯ ದಿನದ ಮಧ್ಯಾಹ್ನ ಮೀರಿ
ಹೋದರೂ ಮಾಧವನು, ತಾನು ಶುಭ್ರಪತ್ರದ ಮೇಲೆ ಕೃಷ್ಣರೇಖೆಗಳನ್ನು
ಗಜಿಬಿಜಿಯಾಗಿ ತೆಗೆದ ಆಕಾರಸ ದೃಶವನ್ನೊಮ್ಮೆ ಎದುರಿನಲ್ಲಿದ್ದ ಪ್ರಭಾ
೧೯೨-----------------------------------------------------------------------
ವಳಿಯನ್ನು ಇನ್ನೊಮ್ಮೆ, ಹೀಗೆ ನೋಡಿ ನೋಡಿ ಬೇಸತ್ತು ಬೇಲೀಹೊಕ್ಕನು,
ಸಂಧ್ಯಾಕಾಲವು ಸಮಿಪಿಸಿತು. ಶಿಲ್ಪಶಾಲೆಯ ಜಾಳಿಗೆಯುಳ್ಳ ವಾತಾಯನ
ದೊಳಗಿಂದ, ಪಶ್ಚಿಮ ದಿಙ್ಮಂಡಲವು, ಇಂದ್ರನೀಲಮಣಿಯ ಮೇಖಲೆಯಲ್ಲಿ
ಪದ್ಮರಾಗವು ಕರಗಿಹೋಗುತ್ತಿ ರುವಂತೆ ಕಂಗೊಳಿಸುತ್ತಿ ರುವದನ್ನು ಕಂಡನು.
ಆ ಕಾಂತಿಯುಕ್ತವಾದ ಛಾಯಭವಿಯು ಇವನ ಕಣ್ಣಮೇಲೆ ಬಿದ್ದು ಕಣ್ಣು
ಗಳು ಕುಕ್ಕಹತ್ತಿದವು. ಅವುಗಳನ್ನು ಒಂದು ಕ್ಷಣಹೊತ್ತು ಒಂದು ಕೈ
ಯಿಂದ ಮರೆಮಾಡಿಕೊಂಡನು. ಅನಂತರ ಕೈಮರೆಮಾಡಿ ಸೂರ್ಯಾಸ್ತ
ವನ್ನು ಲಕ್ಷಿಸದೆ, ತಾನು ನಿಲ್ಲಿಸಿದ ಕಟ್ಚಿಗೆಯ ಪೀಠಪ್ರಭಾವಳಿಯನ್ನು ದಿಟ್ಟಿಸಿ
ನೋಡಿದನು. ನೋಡುತ್ತಲೇ ಭೀತಿ ಸೌಖ್ಯಗಳ ಸಂಭ್ರಮದಿಂದ ಗಂಟಲು
ಹಿಡಿಸದೆ ಒದರಿ ಅದರೆದುರಿನಲ್ಲಿ ಸಾಷ್ಟಾಂಗವೆರಗಿದನು. ಯಾಕೆಂದರೆ, ಅವನ
ಪುರೋಭಾಗದಲ್ಲಿದ್ದ ಪ್ರಭಾವಳಿಯು ಈಗ ಬರಿದಾಗಿದ್ದಿಲ್ಲ, ಅಕೋ, ಅದ
ರಲ್ಲಿ ಒಂದು ಮೂರ್ತಿಯು ಸ್ಥಿತವಾಗಿತ್ತು! ಮನೋಹರವಾದ ರೂಪವೂ,
ಕಾಂತಿಯುತವಾಗಿಯೂ ಸೌಂದರ್ಯಾತಿಶಯದಿಂದ ಸಂಪೂರ್ಣವಾಗಿಯೂ
ದಿವ್ಯವಾದ ಪ್ರಭೆಯಿಂದೊಡಗೂಡಿದ ಮುಖಚಂದ್ರವು ಈ ಮರ್ತ್ಯರಾದವ
ರಲ್ಲಿ ಇನ್ನೆಲ್ಲಿ ದೃಗ್ಗೋಚರವಾಗಬೇಕು? ಈ ತೇಜೋರಾಶಿಯನ್ನು ನೋಡ
ಲಾಗದೆ, ಭಯಭೀತಿಯಿಂದ ಬಾಯಿ ತೆರೆಯದಷ್ಟು ಗಾಬರಿಗೊಂಡು ಮಾಧ
ವನು ತತ್‌ಕ್ಷಣವೇ ಮತ್ತಿ ಸಾಷ್ಟ್ರುಂಗ ಬಿದ್ದನು. ಕಣ್ಣು ಮೇಲೆತ್ತಿ ಆ
ಮಾಯಾಮೂರ್ತಿಯನ್ನು ನೋಡಲು, ಆ ಮೂರ್ತಿಯು ತನ್ನ ನಕ್ಷತ್ರೋಪಮ
ವಾದ ನೇತ್ರಗಳಿಂದ ದೈನಿಕ-ದಯಾ-ಪ್ರೇಮವನ್ನು ಬೀರುತ್ತ ತನ್ನನ್ನೇ
ನೋಡುತ್ತಿರುವದೆಂಬಂತೆ ಮಾಧವನಿಗೆ ತೋರಿತು. ಸಾಯಂಕಾಲದ ಸಂಧ್ಯಾ
ರಾಗವು ಮುಳುಗಿ, ಈಗ ನಸುಗತ್ತಲೆಯಾಗಹತ್ತಿತ್ತು. ಆ ಶಿಲ್ಪಶಾಲೆಯಲ್ಲಿ
ಎತ್ತ ನೋಡಿದತ್ತ ಸ್ವರ್ಗೀಯ ಜ್ಯೋತಿರ್ಮಾಲೆಯೇ ಇಳಿದುಬಂದಂತೆ
ಯಾಗಿ, ಈ ಜ್ಯೋತಿಗಳೆಲ್ಲವೂ ಪೀಠಪ್ರಭಾವಳಿಯ ಮೇಲಿನ ಮೂರ್ತಿಯ
ಸುತ್ತಲೂ ವರ್ತುಲಾಕಾಶವಾಗಿ ಪ್ರಕಾಶಿಸುವಂತೆ ಕಂಡಿತು. ಮಧ್ಯವರ್ತಿ
ಯಾದ ಆ ಆನಂದಮೂರ್ತಿಯು ಅಂಶರ್ಹಿತವಾದ ಜ್ಯೋತಿಯಿಂದ ಪ್ರಕಾ
ಶಿತವಾದ ಕಮಲದಂತೆ ಶೋಭಿಸುತ್ತಿತ್ತು. ಈಗ ಮಾಧವನು ಮೂಢನಂತೆ
ಕೈಯಾಡಿಸಿ ತನ್ನ ಚಿತ್ರಲೇಖನದ ಸಾಹಿತ್ಯಗಳನ್ನು ಹುಡುಕಹತ್ತಿದನು. ಗದ
೧೯೩ --------------------------------------------------------------------------
ಗದ ನಡುಗುತ್ತಲೇ ಅವನು ತನ್ನ ಎದುರಿನಲ್ಲಿರುವ ಮನೋಜ್ಞವಾದ ಸ್ವಪ್ಪ
ಗತಳಾದ ಭುವನೈಕ ಸುಂದರಿಯ ಮನೋಹರಾಕೃತಿಯನ್ನು ರೇಖಿಸಲು
ಉದ್ಯುಕ್ತನಾದನು. ಆದರೆ, ಸೂರ್ಯಾಸ್ತ ಸಮಯದ ಪ್ರಶಾಂತವಾದ
ಪ್ರಭೆಯು ಕ್ರಮೇಣ ಇಲ್ಲದಂತಾಗಿ, ಕತ್ತಲೆಯು ಕವಿಯಹತ್ತಿತು. ಕತ್ತಲೆಯು
ದೃಶ್ಯಪದಾರ್ಥಗಳ ಮೇಲೆ ಸಪ್ಪಳಿಲ್ಲನೆ ಸಾವಧಾನವಾಗಿ ತನ್ನ ಆವರಣವನ್ನು
ಪರಿಸುತ್ತಿ ರುವಾಗಲೇ, ಆ ದಯಾಮೂರ್ತಿಯು ಅದೃಶ್ಯವಾಗಿತ್ತು.
ಈ ಮೂರ್ತಿಯ ಸಂದರ್ಶನದಿಂದ ತನಗೆ ಆನಂದಾತಿಶಯವಾಯಿತೋ,
ಇಲ್ಲವೆ ಇಲ್ಲದ ಸಂಕಟಾಗಮವಾಯಿತೋ ಎಂಬದನ್ನರಿಯದಷ್ಟು ಅವನು
ಮತಿಹೀನನಾದನು... ಸಾಯಂಪೂಜೆಯ ಘಂಟಾನಾದವು ಕೇಳಿಸುತ್ತಲೆ,
ಮಾಧವನು ಕಯ್ಯೊಳಗಿನ ಕೆಲಸವನ್ನು ಬಿಟ್ಟು ನಿತ್ಯ ನಿಯಮಕ್ಕನುಸಾರವಾಗಿ
ಪೂಜಾಕಾಲಕ್ಕೆ ಸನ್ನಧಿಯಲ್ಲಿರುವಂತೆ ವಿಧಿಸಿದ ಗುರುಗಳ ಆಜ್ಞೆಯ ಮೇರೆಗೆ
ಮಠಕ್ಕೆ ಹೋಗುವದಕ್ಕೆಂದು ಸಾಷ್ಟಾಂಗ ಹಾಕಿದವನು ಎದ್ದು ನಿಂತನು.
ಗಾಢನಿದ್ರೆಯೊಳಗಿಂದ ಬಡಿದೆಬ್ಬಿಸಿದವನಂತೆ ಎದ್ದು ಮಾಧವನು ಸಾವಕಾಶ
ವಾಗಿ ಹೆಜ್ಜೆಗಳನ್ನು ಎಣಿಸಿ ಇಡುತ್ತ, ವಿಚಾರದಲ್ಲಿ ಮಗ್ನನಾಗಿ ಬರುತ್ತಿರುವ
ದನ್ನು ಕಂಡು, ಅಲ್ಲಿ ಘಡಘಡನೆ ಮಂತ್ರೋಚ್ಚಾರ ನಡಿಸುತ್ತ ನಿಂತುಕೊಂಡ
ಬ್ರಹ್ಮಚಾರಿ ಬಾಂಧವರೆಲ್ಲರೂ, ತಮ್ಮ ತಮ್ಮೊಳಗೆ ಸಾರ್ಥವಾದ ದೃಷ್ಟಿಕ್ಷೇಪ
ಗಳನ್ನು ಮಾಡುತ್ತ ಭವ 66 ನೋಡಿದಿರಾ, ಕಾರ್ಯಪರಾಯಣನಾದ
ಗಳನ್ನು ಮಾಡುತ್ತ ಅಂದದ್ದು: "ನೊಡಿದಿರಾ, ಕಾರ್ಯಪರಾಯಣನಾದ ಮಾಧವನು ದೈವಿಕ ಸ್ಫೂರ್ತಿಯಿಂದ ಮುಖಲಕ್ಷಣವು ಹೇಗೆ ಉಕ್ಕೇರಿ
ಬರುತ್ತಿದೆ! ಅಂತಃಸ್ಪೂರ್ತಿಯ ಮಾತೇ ಬೇರೆ! "
“ಮರುದಿನ ಪ್ರಭಾತವು ಪ್ರಭಾಮಂಡಲಾಧಿಪನ ಉದಯಕ್ಕೆ ತಕ್ಕಂತೆ
ಮನೋಹರವಾಗಿಯೂ ಸೋಜ್ವಲವಾಗಿಯೂ ತೋರಿತು. ದಿನಮಣಿಯು
ಮೇಲಕ್ಕೇರುತ್ತ ಬರುತ್ತಿರುವಷ್ಟರಲ್ಲಿ ಮಾಧವನು ತನ್ನ ಶಿಲ್ಪಶಾಲೆಯಲ್ಲಿ
ಮೂರ್ತಿರಚನಾಕಾರ್ಯದಲ್ಲಿ ತೊಡಗಿ ಎಷ್ಟೋ ಹೊತ್ತಾಗಿತ್ತು. ಕಾರ್ಯ
ವನ್ನು ತೀವ್ರವಾಗಿ ಮುಗಿಸಿಬಿಡಬೇಕೆಂಬ ಆತುರತೆಯಿಂದ ಮಾಧವನು
ಕಾರ್ಯಾಲಯವನ್ನು ಪ್ರವೇಶಿಸಿದ ಕೂಡಲೆ, ಮೊದಲನೆಯ ದಿನ ಪ್ರಯತ್ನಿ
ಸಿದ ರೇಖಾ-ಪಟವನ್ನು ಕೈಯಲ್ಲಿ ತೆಗೆದುಕೊಂಡು ತನ್ನ ಮಾಯಾ
ಮೂರ್ತಿಯ ಆಕಾರಸಾದೃಶ್ಯವು ಹೇಗಾಗಿರುವದೆಂಬದನ್ನು ನೋಡುತ್ತಾನೆ-
೧೯೪ ----------------------------------------------------------------------
ಅಲ್ಲೇನಿದೆ? ಆ ಸೂಚನಾರೇಖೆಗಳಿಂದ ಮುಂಡೆ ಯಾವ ಕಾರ್ಯವೂ
ಆಗದಂತಿದ್ದುದರಿಂದ ಆ ಪಟವನ್ನು ನಿರಾಶೆಯಿಂದ ಅಲ್ಲಿಯೇ ದೂಡಿಬಿಟ್ಟನು.
ಸೂರ್ಯಕಿರಣಗಳು ಪಟಿಕೆಗಳೊಳಗಿಂದ ಒಳಗಿನ ಶಿಲಾತಲದ ಮೇಲೆ ಬೀಳು
ತಿದ್ದವು. ಮಾಧನನು ತನ್ನ ಆಸನದಲ್ಲಿಯೇ ಕುಳಿತು ಚಿತ್ರ-ಲೇಖನ-
ಸಾಹಿತ್ಯ ಗಳನ್ನೆಲ್ಲ ಬದಿಗಿರಿಸಿಕೊಂಡು, ಮೆಲ್ಲಗೆ, ಅಧೈರ್ಯದಿಂದ ಎದುರಿ
ನಲ್ಲಿದ್ದ ಪ್ರಭಾವಳಿಯನ್ನು ನೋಡಬೇಕೆಂದು ಕಣ್ಣುಗಳನ್ನು ಮೇಲಕ್ಕೆತ್ತಿ
ದನು; ”ಹೊದಲನೆಯ ದಿನ ಅದೀ ಪ್ರಭಾವಳಿಯ ಮೇಲೆಯೇ. ತನ್ನ ಕಲ್ಲ ನಾ
ಸಂಜಾತವಾದ ಮೂರ್ತಿಯು ದೃಗ್ಲೋಚರವಾಯಿತೆಂಬದು ಅವನಿಗೆ ಹೇಗೋ
ನೆನಪಾಯಿತು. ಅವನು ಉಸುರಾಡಿಸಲರಿಯದೆ ಅತ್ತಿತ್ತ ಅಗಳಾಡಲಾರದೇ
ಕೂತಲ್ಲಿಯೇ ಕೂತನು. ಯಾಕೆ? ಯಾಕೆಂದಕ್ಕೆ ಅದೇ ಪೀಠದ ಮೇಲೆಯೇ
ಮತ್ತೆ ಅದೇ ಮೂರ್ತಿಯು ಸ್ಲಿತವಾಗಿತ್ತು. ಸೂರ್ಯಕಿರಣಗಳಿಂದ ಅತಿ
ಧವಲಿತವಾದ ಮೇಘಗಳಿಗಿಂತಲೂ ಧವಲತರವಾದ ಕಾಂತಿಯಿಂದ, ಆಜ್ಞಾ
ಮಾತ್ರ ಕಾರ್ಯತತ್ಪರವಾಗಿ ನಿಂತುಕೊಂಡು, ಎರಡೂ ಕೈಗಳನ್ನು ಅಭೀಷ್ಟ
ಪ್ರದಾಯಕವಾದ ದೇವತೆಯು ತನ್ನ ವರದ ಹಸ್ತಗಳನ್ನು ಮುಂದೆ ಮಾಡಿ
ಸ್ಥಿತವಾದಂತೆ ನಿಂತುಕೊಂಡ ಮೂರ್ತಿಯದು! ಈ ಸಾರೆ ಮಾತ್ರ ಮಾಧ
ವನು ಸಾಷ್ಟಾಂಗವೆರಗಲಿಲ್ಲ. ಇದೇನೋ ತನ್ನ ಮನಃಕಲ್ಪನೆಯ ಇಲ್ಲವೆ
ದೃಷ್ಟಿಭ್ರಮದ ಚಮತ್ಕಾರವಾದ ಸೃಷ್ಟಿಯೆಂದು ತಿಳುಕೊಂಡು, ಎದುರಿನಲ್ಲಿ
ಮೇಲೆ ಹೇಳಿದ ಬಗೆಯಿಂದ ನಿಂತುಕೊಂಡಂಥ ಮೂರ್ತಿಯನ್ನು ತಾನು
ಉಪಯೋಗಿಸಿಕೊಳ್ಳದೆ ಬಿಡಬಾರದೆಂದು ಎಣಿಸಿದನು.
" ನಇದು ನನ್ನ. ಸೃಷ್ಟಿಯೇ ಸರಿ !" ಅವನಂದನು: "ನನ್ನ ಕಲ್ಪನಾ
ಸಂಜನಿತವಾದ ಮೂರ್ತಿಯೇ ಇದು; ಹಾಗೂ ಶ್ರೀಗಳವರು ನನಗೆ ಅಜ್ಞಾಪಿ
ಸಿದ ಮೇರೆಗೆ ನಾನವನ್ನು' ಮಾಡಬೇಕೆನ್ನುವ ಉತ್ಕಟೇಚ್ಛಾಬಲದಿಂದಲೇ ಈ
ಮೂರ್ತಿಯು ನನಗೆ ಪ್ರತ್ಯಕ್ಷವಾದದ್ದು. ಆದ್ದರಿಂದ ಪ್ರಕಾಶವಿರುವಾಗಲೇ
ಈ ಕಾರ್ಯವನ್ನು .ತೀರಿಸಿಕೊಳ್ಳುನೆನು....” ಈ ಮಕ್ಯವನ್ನು ಅವನು ಅರ್ಧ
ನುಡಿದನು. "" ಅಂಧಕಾರವು ಪಸರಿಸುತ್ತಿರಲು ಯಾವನೂ ಕೆಲಸ ಮಾಡ
ಲಾರನು! " ಎಂದು ಅವನು ವಾಕ್ಯಪೂರ್ತಿಯನ್ನು ಮಾಡತಕ್ಕದ್ದಿತ್ತು.
ಚಿತ್ರಲೇಖನಕ್ರಮವು ಮಾಧವನಿಗೆ ಪೂರ್ವವಯಸ್ಸಿನಲ್ಲಿ ಸಾಧಿಸಿ
೧೯೫ --------------------------------------------------------------------------
ದಂತೆ ಈ ಸಮಯದಲ್ಲಾದರೂ ಅವ್ಯಾಹತವಾಗಿ ಸಾಧಿಸಹತ್ತಿತು. ಆದರೆ
ಅವನಲ್ಲಿ ಪೂರ್ವದ ಕೌಶಲ್ಯವೂ ನೈಪುಣ್ಯವೂ ಪುನರಪಿ ಜಾಗ್ರತವಾದವು,
ಪ್ರಭಾಮಯವಾದ ಪೀಠಪ್ರಭಾವಳಿಯ ಮೇಲೆ ಸಾಕ್ಲಾತ್ಕಾರವಾದ ಆ
ಸ್ವರ್ಗೀಯ ಮೂರ್ತಿಯ ಆಕಾರ ರೇಖೆಗಳನ್ನೆಲ್ಲ ಅವನು ಸಮಮಾಡಿ
ಕೊಂಡನು. ಆದರೆ ಆ ಸುರಲೋಕಸುಂದರಿಯ ಮುಖಸೌಂದರ್ಯವನ್ನು
ರೇಖಿಸಲು ಕೈ ಹಾಕುತ್ತಲೇ, ಆ ಕಲ್ಪನೆಯನ್ನು ಮನನಮಾಡಹತ್ತಿದಾಕ್ಷಣವೇ
ಅವನ ಕೈಗಳು ನಡುಗಹತ್ತಿದವು. ಅವನು ಮತ್ತೆ ಮತ್ತೆ ನೋಡಿ, ಯತ್ನಿಸಿ
ದನು. ಅವನ ಎದೆಯೊಡೆದು ನೀರಾಯಿತು, ಯಾಕೆ? ಆ ನೇತ್ರದ್ವಯಗಳನ್ನು
ಅವನು ಎಲ್ಲಿಯೋ ನೋಡಿದ್ದನೇನು ? ಆ ಬಾಲಿಶವಾದ ನಸುನಗೆಯು ಅವನೆ
ಪರಿಚಯದ್ದೇನು? ಸರ್ವಾಂಗವು ಕಂಪಿಸಹತ್ತಿ ಗದ್ದದ ಸ್ವರದಿಂದ:
" ಕರುಣಾಲಯಾ, ನನ್ನನ್ನು ಪರಿಪಾಲಿಸು. ಈ ಕಾರ್ಯವು ಮುಗಿ
ಯುವ ಮಟ್ಟಿಗಾದರೂ ನನ್ನನ್ನು ಮರುಳುಗೊಳಿಸಬೇಡ, ಇದೇನು
ಕರುಣಾಳುಗಳು ಈ ಪರಿಯಾಗಿ ಪತಿತರನ್ನು ಶಿಕ್ಷಿಸುವದುಂಟೆ ? ಮೃತಪಟ್ಟ
ವರು ಪುನರ್ಜೀವಿಗಳಾಗಿ ಪೂರ್ವದೇಹದಿಂದಲೇ ಪುನಶ್ಚ ಬರುವದುಂಟೆ ?
ಇದನ್ನಾರು ನಂಬುವರು? ಆದರೆ ನನ್ನದೇನು ಕಥೆ? ಸಾಕ್ಸಾತ್ ಕಂಡೆ
ನಲ್ಲ!” ಎಂದು ಅಂದು ಮಾಧವನು ದಿಂಗುಬಡಿದಂತೆ ಕೂತುಕೊಂಡನು.
ದಿಟ್ಟಿಸಿ ಆ ಮೂರ್ತಿಯನ್ನು ನೋಡಿದ ಅವನ ಕಣ್ಣುಗಳು ಕಂಬನಿ
ಗಳನ್ನು ತಟ್ಟನೆ ಉದುರಿಸಲರಿಯದೆ, ಅಲ್ಲಿಯೇ ತಟ್ಟಿಸಿ ಬಿಗಿದುಕೊಂಡಿದ್ದರಿಂದ
ಅವು ನೋಯಿಸಹತ್ತಿದವು. ಆ ಮೂರ್ತಿಯು ತೇಜಸ್ಸಿನೋಪಾದಿಯಲ್ಲಿ ಮೌನ
ವುಳ್ಳದ್ದಾಗಿದ್ದರೂ ಸಾಕಲ್ಯವಾಗಿ ಮಾಧುರ್ಯ ಸಹಿಷ್ಣುತೆಗಳ ವ್ಯಂಜಕ
ವಾಗಿತ್ತೆಂಬದರಲ್ಲಿ ಸಂದೇಹವಿಲ್ಲ. ಪುರೋಭಾಗದಲ್ಲಿದ್ದ ಆ ಮೂರ್ತಿಯು
ಅತ್ತಿತ್ತ ಆಗಳಾಡದೆ ಸ್ತಬ್ಬವಾಗಿ ನಿಶ್ಚಲವಾದ ಲೇಖನಾಧಾರ-ಪ್ರತಿಮೆ
ಯಂತೆ ತನ್ನ ಅಭ್ಯಾಸಕ್ಕೂ ತಾದೃಶವಾದ ರೂಪನಿರ್ಮಾಣಕಾರ್ಯಕ್ಕೂ,
ಅನುಕೂಲಿಸುವಂತೆ ಸ್ಥಿತವಾದದ್ದನ್ನುಕಂಡು ಸರ್ವಭಕ್ಷಕನಾದ ವ್ರಕನೇ
ಸ್ವಾಹಾಕಾರಕ್ಕೆ ಸಿದ್ಧನಾಗಿರುವನೇನೋ ಎಂಬಂತೆ, ಉತ್ಕಟವಾದ ಕಾರ್ಯಾ
ತುರತೆಯು ಪ್ರಕ್ಷುಬ್ದವಾಗಿ ತನ್ನ ಉತ್ಸಾಹಶಕ್ತಿಗಳನ್ನೆ ದಹಿಸುವದೆಂಬ ಎಚ್ಚರಿ
ಲ್ಲದೆ, ಅವನು ಕಯ್ಯಲ್ಲಿದ್ದ ಕೆಲಸವನ್ನು, ಲಗುಬಗೆಯಿಂದ ಮಾಡಹತ್ತಿದನು.
೧೯೬ ----------------------------------------------------------------------------
ಪ್ರತಿದಿನವೂ ಎಡೆಬಿಡದೆ, ಶಯನಾಶನಗಳಿಗೂ ಸಮಯ ಕೊಡದೆ,
ತನ್ನ ಆಶ್ರಮಕ್ಕೆ ತಕ್ಕ ನಿತ್ಯಕರ್ಮಗಳಲ್ಲಿ ಕಳೆಯಬೇಕಾದ ಕಾಲವನ್ನು ಇಡೀ
ಆಯುಷ್ಯದಲ್ಲಿ ಇದೇ ಮೊದಲನೆಯ ಸಾರೆ ಲೆಕ್ಕಿಸದೆ, ಮಾಧವನು ತನ್ನ
ಕಾರ್ಯದ ಬೆನ್ನುಹತ್ತಿದನು, ಪ್ರತಿದಿನವೂ ಚಮತ್ಕಾರವಾದ ನಿಷ್ಠೆಯಿಂದ
ಆ ಮೂರ್ತಿಯು ಅವನ ಎದುರಿನಲ್ಲಿದ್ದ ಪೀಠಪ್ರಭಾವಳಿಯ ಮೇಲೆ ನಿಶ್ಚಲ
ವಾಗಿ ತಪ್ಪದೆ ಸ್ಥಿತವಾಗುತ್ತಿತ್ತು. ಇದೊಂದು ತನ್ನ ದೃಷ್ಟಿವಿಭ್ರಮಜನ್ಯ
ವಾದಂಥದು, ಇಲ್ಲವೆ, ಆತ್ಮಕಲ್ಪನಾ ಸೃಷ್ಟಿಯೇ ಎಂದು ತಿಳಿದುಕೊಂಡು
ಅವನು ಆ ಮೂರ್ತಿಯ ಅಕೃತಿಯನ್ನೇ ದಿನಾಲೂ ತನ್ನ ಪಟದ ಮೇಲೆ
ಇಳಿಸಹತ್ತಿದರು. ಏನೇ ಇರಲಿ, ತನಗೆ ನಿರ್ಮಾಣ-ಧ್ಯೇಯವಾದ
ಮೂರ್ತಿಯ ಪ್ರತಿರೂಪವೇ ಪ್ರತ್ಯಕ್ಷವಿರುವದೆಂದರಿತು, ತನ್ನ ರೇಖನ
ಕಾರ್ಯವು ಮುಗಿದ ಕೂಡಲೆ ತದನುರೂಪವಾದ ಆಕೃತಿಯನ್ನು ಅವನು
ಮೃತ್ತಿಕೆಯಿ:೦ದ ಮಾಡಹತ್ತಿದನು. ಇದೇ ಕ್ರಮವು, ಮೆಲ್ಲಗಾದರೂ ನಿಚ್ಚ
ಳಾಗಿ ಸಾಗುತ್ತ ಹೋಗಿ, ಅವನ ಕೈಗಳಲ್ಲಿ ಆ ಮೂರ್ತಿಯು ದಿನದಿನಕ್ಕೆ ವೃದ್ಧಿ
ಹೊಂದುತ್ತ ಸೌಂದರ್ಯ-ಸಂಪೂರ್ಣತೆಯನ್ನು ಸಮೀಪಿಸಿತು. ಈಗಲಾದರೂ
ಆ ಮೂರ್ತಿಯು ಅವನ ಸಾನ್ನಿಧ್ಯವನ್ನು ತಪ್ಪಿಸಲಿಲ್ಲ. ತನ್ನ ಸದೃಶಾಕೃತಿಯ
ಬೆಳವಣಿಗೆಯನ್ನು ಸುಮನೋಹರವಾದ ನಯನಗಳ ನಿಶ್ಚಲವಾದ ದೃಷ್ಟಿ
ಯಿಂದ ಏಕೋಭಾವಪೂರ್ವಕವಾಗಿ ನೋಡುತ್ತಲಿರುವನೋ ಎಂಬಂತೆ
ಅದು ಅಲ್ಲಿಯೇ ನಿಂತುಕೊಂಡಿತ್ತು.
ಇದೇ ಮೇರೆಗೆ ಒಂದು ತಿಂಗಳು ಹೊರಟುಹೋಯಿತು. ಶಿಲ್ಪಶಾಲೆ
ಯಲ್ಲಿಯ ಆ ಪೀಠಸ್ಥ ಮೂರ್ತಿಯು ಮಾಧವನ ಜೀವಿತಸರ್ವಸ್ವವೇ ಆಗಿ
ಅವನಲ್ಲಿಯೂ ಅವನ ಕ್ರಿಯೆಯಲ್ಲಿಯೂ ತಾದಾತ್ಮ್ಯವನ್ನು ಹೊಂದಿತು; ಬರ
ಬರುತ್ತ ಈ ತೇಜೋಮಯ ಸಾನ್ನಿಧ್ಯದ ಶಕ್ತಿಯನ್ನಾಶ್ರಯಿಸದೆ ಮಾಧವನಿಗೆ
ಯಾವ ಸತ್ಕಾರ್ಯದಲ್ಲೂ ಪ್ರೇರಣೆಯಾಗದೆಂಡು ಅನಿಸಹತ್ತಿತು.
ಗ್ರೀಷ್ಮವು ನೀಗಿ, ವರ್ಷಾಗಮವಾಯಿತು, ಗ್ರೀಷ್ಮಖುತುವಿನಲ್ಲಿ
ಪ್ರಮುದಿತವಾದ, ತರುಲತೆಗಳೆಲ್ಲವು ಈ ವರ್ಷಾಕಾಲದ ಅತಿವೃಷ್ಟಿಯ
ಆಘಾತಕ್ಕೆ ತಲೆಬಾಗಿ ನಿಂತವು. ಮಠದ ಸುತ್ತಲೂ ಹಾಸಿದ ಹಸರು ರತ್ನ
ಗಂಬಳಯಂತಿದ್ದ ತೃಣಾಚ್ಛಾದಿಶ ಭೂಮಿಯು ಪ್ರಸ್ತುತಕ್ಕೆ ಜಲಮಯ
೧೯೭ ------------------------------------------------------------------------
ವಾಗಿದ್ದು ದರಿಂದೆ ಕಾಲಿಡಲಿಕ್ಕೂ ಅಪ್ರಶಸ್ತವಾಗಿಶ್ತು. ನಡನಡುವೆ ತೀಕ್ಷ್ಣ
ವಾದ ಚಳಿಗಾಳಿಗಳು ಬೀಸುತಿ ದವು. ತುಂಗಭದ್ರಾ ತೀರವು ಮೊದಲೇ ಶೀತ
ಕರವು. ಮಾಧವನ ಶಿಲ್ಪ ಶಾಲೆಯೆಲ್ಲವೂ ಬಹಿರ್ಭಾಗದಲ್ಲಿಯ ಮಳೆಗಾಳಿಗಳ
ಮಿತಿಮೀರಿದ ಹೊಡತಗಳ ಪರಿಣಾಮದಿಂದ ತಂಪಾಗಿ ತೇವೇರಿತ್ತು.
ಒಮ್ಮೊಮ್ಮೆಯಂತೂ ಆ ಮೃತ್ತಿಕೆಯಲ್ಲಿ ಇಷ್ಟವಾದ ಮೂರ್ತಿಯನ್ನು ಘಟ
ಸುತ್ತಿರುವಾಗ ಈ ತೀಕ್ಷ್ಣವಾದ ಚಳಿಗಾ ಳಿಗಳಿಂದ ನಡುಗು ಹುಟ್ಟಿ ಮಾಧವ
ನಿಗೆ ಪ್ರಾಣಾಂತ ಶ್ರಮವಾಗುತ್ತಿತ್ತು. ಆದರೂ ಆ ಸ್ವರ್ಗೀಯ ಮೂರ್ತಿಯು,
ಎಂದಿನಂತೆ ಏಕಪ್ರಕಾರವಾಗಿ ತಾನು ನಿಂತುಕೊಳ್ಳುವ ಸ್ಥಾನದಿಂದ ಉಷ್ಣ
ತಾತಿರಿಕ್ತವಾದ ದಿವ್ಯಪ್ರಕಾಶವನ್ನು ಕೊಡುತ್ತಲಿತ್ತಾದ್ದರಿಂದ, ಮಾಧವನ
ದೇಹಸ್ವಾಸ್ಥ್ಯಕ್ಕೆ ಚಿಂತೆಗೊಂಡು ಗುರುಗಳು ಸ್ಥಲಾಂತರವನ್ನು ಸೂಚಿ
ಸಿದರೂ ಿವನು ಪ್ರಾಣಗಳನ್ನೇ ಬಿಟ್ಟಾನೇ ಹೊರತು ಆ ಸ ಳವನ್ನು ಬಿಡ
ದಂತಾದನು.
" ನೀನು ಒಪ್ಪಿಕೊಂಡ ಕಾರ್ಯವು ಹೇಗೆ ಸಾಗಿದೆಂಬದನ್ನು ವಿಚಾರಿ
ಸಲು ನಾವು ಅಪೇಶ್ವಿಸುವದಿಲ್ಲ ಕಂಡಿಯಾ? '' ಎಂದು ಶ್ರಿ (ಗಳವರು ಮಾಧ
ವಾನಂದನನ್ನು ದಯಾರ್ದ್ರ ದೃಷ್ಟಿಯಿಂದ ನೋಡಿ ಮುಂದೆ ಮಾತಾಡಿದ್ದು:
ನೀನಾಗಿಯೇ. ಬಂದು, ಕಾರ್ಯಸಮಾಪ್ತಿಯಾಯಿತೆಂದು ಹೇಳಿ, ಅದನ್ನು
ನೋಡುವದಕ್ಕಾಗಿ ನಮ್ಮನ್ನು ಆಮಂತ್ರಿಸಿದಹೊರತು ನಾವು ನಿನ್ನಮೂರ್ತಿಯ
ಹೆಸರೇ ತೆಗೆಯಲಿಕ್ಕಿಲ್ಲ. ಆದರೆ, ಏನೋ ಮಾಧವಾ, ನೀನು ದುಃಖೋ
ದ್ರೇಗಕ್ಕೆ ಒಳಗಾದಂತೆ ಕಾಣುತ್ತೀಯಲ್ಲ? ಇದೊಂದೇ ಕಾರ್ಯದಲ್ಲಿ ನೀನು
ಹೀಗಾದದ್ದು. ಕೇವಲ ಅಸ್ಥಿ ಪಂಜರವು ! ಇದೇನು, ಆಕಾರ ಮಾತ್ರ
ಮಾಧವನದು! ವತ್ಸಾ, ಹೀಗೆ ಮಾಡಬೇಡ; ನಿನ್ನ ದೇಹಾರೋಗ್ಯವನ್ನು
ಎಚ್ಚರಿಕೆಯಿಂದ ಕಾಪಾಡಿಕೊಂಡು ವಿಪುಲವಾದ ವಿಶ್ರಾಂತಿಯನ್ನು
ತೆಗೆದುಕೋ. ಅಥವಾ ಕೆಲಕಾಲದವರೆಗೆ ಕೆಲಸವನ್ನಾದರೂ ನಿಲ್ಲಿಸಿಬಿಡು.
ಬೇಕಾದರೆ, ಇದಷ್ಟು ನಮ್ಮ ಪ್ರಾರ್ಥನೆಯೆಂದು ತಿಳಿದುಕೋ. "
"ಛೆ, ಛೆ, ನಾನೀ ಕೆಲಸವನ್ನು ಎಷ್ಟೂ ಬಿಡಲಾರೆ; ಬಿಟ್ಟರೆ ಪ್ರಾಣ
ಗಳನ್ನೇ ಬಿಡಬೇಕಾದೀತು!”ಎಂದು ಮಾಧವನು ನಡುನೆಯೇ ಸ್ವಾಮಿಗಳ
ನುಡಿಯನ್ನು ಅಡ್ಡ ಕಟ್ಟಿ ದನು. "ನಾನು ನೆಟ್ಟಿಗಿದ್ದೇನೆ, ನನಗೇನಾಗಿದೆ?
೧೯೮ -----------------------------------------------------------------------
ಸರ್ವತ್ರ ಸ್ವಾಸ್ವವಿದೆ. ನನ್ನ ಬಗ್ಗೆ ಶ್ರೀಗಳವರು ತಿಲಮಾತ್ರವೂ ಚಿಂತಿಸ
ಬಾರದು. ನನ್ನ ಕಾರ್ಯವೊಂದು ಮುಗಿಯಲಿ, ಇಲ್ಲದಿದ್ದರೆ, ಆ
ಮೂರ್ತಿಯು..." ಇಷ್ಟರಲ್ಲಿ ಮಾಧವನು ಒಂದು ವಿಲಕ್ಷಣವಾದ ಒಂದು
ಬಗೆಯ ನಗೆಯನ್ನು-- ಗಾಬರಿಗೊಂಡವನಂಥ ನಗೆಯನ್ನು-- ತೋರಿ
"ಸರಿ, ನನ್ನ ಮೂರ್ತಿಯು ನನ್ನನ್ನಗಲಿ ದೊರಾದೀತು!”
ಶ್ರೀಗಳವರು ಇವನ ಬಗೆಯನ್ನು ಕಂಡು ತೊಂದರೆಪಟ್ಟರು, ಮುಂದೆ
ಅವನಿಗೆ ಬುದ್ಧಿ ಹೇಳುವ ಗೋಜಿಗೆ ಬೀಳದೆ ಅವರು ಹಾಗೆಯೇ ಮುಂದಕ್ಕೆ
ಸಾಗಿದರು. ಆದರೆ ಬ್ರಹ್ಮಚಾರಿಗಳೂ, ಗುರುಗಳೂ ತಮ್ಮ "ವಿಶ್ವಕರ್ಮ
ನಾದ ಮಾಧವನಿಗೆ ಯಾವುದೋ ಒಂದು ವಿಲಕ್ಷಣವಾದ ಮತಣಾಂತಿಕ
ವ್ಯಾಧಿಯು ಬೆನ್ನುಹತ್ತಿರುವದೆಂದು ತಿಳಿದು ಬಹಳ ಕ್ಲೇಶಪಟ್ಟರು.
ಮಾಧವನು ತಮಗೆ ತಿಳಿಸದಿದ್ದರೂ ಅವನಿಗೆ ಇಂಥ ವ್ಯಥೆಯುಂಟೆಂಬುದಕ್ಕೆ
ಎಲ್ಲರೂ ಸಮ್ಮತಿಸಿದರು.
ಮುಂದೆ ಕೆಲವು ದಿನಗಳೆದನಂತರ ಮಾಧವನು ವಾಸಿಯಾಗುತ್ತೆ
ನಡೆದಂತೆ ಕಂಡನು; ಅವನಲ್ಲಿ ದುಃಖಕ್ಲೇಶಗಳ ಚಿನ್ಹಗಳು ಕಡಿಮೆಯಾಗಿ
ದ್ದವು. ಮೃತ್ತಿಕಾಮೂರ್ತಿಯನ್ನು ಮುಗಿಸಿಕೊಂಡು ಅವನು ಅದನ್ನು
ಕಲ್ಲಿನಲ್ಲಿ ಕೊರೆಯಹತ್ತಿದನು. ಈ ಬಗೆಯ ಕಠಿಣವಾದ ಕೆಲಸದಲ್ಲಿ ಅವನು
ಕೇವಲ. ನಿಷ್ಣಾತನಿದ್ದುದರಿಂದ, ಇದಕ್ಕೆ ಅಗತ್ಯವಾದ ಶಾರೀರಿಕ ಶ್ರಮದಿಂದ
ಅವನಿಗೆ ಒಳಿತೆನಿಸಿ ಅವನು ಮೊದಲಿನಂತೆ ಚಪಲನೂ, ಉತ್ಸಾಹಪೂರ್ಣನೂ
ಆದನು. ಮುಂಜಾವಿನಿಂದ ಸಂಜೆಯವರೆಗೂ ಅವನು ಏಕಾಸನನಾಗಿ
ಏಕಮನಸ್ಸಿನಿಂದ ತನ್ನ ಕಾರ್ಯ ನಡೆಯಿಸಿದನು. ಹಾಗೂ ಮುಂಜಾವಿನಿಂದ
ಸಂಜೆಯವರೆಗೂ ಆ ಪ್ರಭಾಮಯವಾದ ಮೂರ್ತಿಯು ಸೂರ್ಯಕಿರಣ
ಗಳಿಗೂ ಮೀರಿದ ತನ್ನ ಕಿರಣಜಾಲಗಳಿಂದ ಆ ಸ್ಥಾನವಿಶೇಷವನ್ನು ಪ್ರಕಾಶ
ಪೂರ್ಣವಾಗಿ ಭೂಷಿಸಿಯೇ ಭೂಷಿಸುತ್ತಿತ್ತು. ಮುಂಜಾವಿನಿಂದ ಸಂಜೆಯ
ವರೆಗೂ, ಅವನು ಸುತ್ತಿಗೆಯಿಂದ ಆ ಕಠಿಣವಾದ ಕಲ್ಲಿನ ಮೇಲೆ ಪೆಟ್ಟು
ಹಾಕುವದನ್ನೂ ಸಮಯ ಬಂದಾಗ ಅದರಲ್ಲಿ ಉಳಿಯಿಂದ ಕೆಚ್ಚುವದನ್ನೂ, ತನ್ನ ಮನೋಜ್ಞವಾದ ಮೂರ್ತಿಯ ಸುಲಕ್ಷಣಗಳು ಪೂರ್ಣವಾಗಿ ಅಲ್ಲಿ
ಇಳಿಯುವತನಕ ಉಳಿಯ ಮೇಲೆ ಉಳಿಹಾಕಿ ಅದನ್ನು ಸರಿಮಾಡುತ್ತಿರುವ
೧೯೯-----------------------------------------------------------------------
ದನ್ನೂ ಆ ಸುರಲೋಕದ ಸುಂದರವಾದ ಮಾಯಾಮೂರ್ತಿಯು ತನ್ನ
ಸುರುಚಿರವಾದ, ಗೂಢವಾದ ಸುಲೋಚನಗಳಿಂದ ಅವಲೋಕಿಸುತ್ತಲಿತ್ತೇ
ಇತ್ತು.
ಮೂರ್ತಿಯು ಸಿದ್ಧವಾಗುವ ಕೊನೆಯ ದಿನಸನು ಬಂದೊದ
ಗಿತು. ಆ ದಿವಸ ಅವನು ತನ್ನ ಎಲ್ಲ ಬುದ್ಧಿ ವೈಭವವನ್ನೂ ಉತ್ಸಾಹ
ಶಕ್ತಿಯನ್ನೂ ಮೂರ್ತಿಯನ್ನು ನ್ಯೂನರಹಿತವಾಗಿಯೂ ಸಂಪೂರ್ಣ ಲಕ್ಷಣ
ಯುಕ್ತವಾಗಿಯೂ ಮಾಡುವದಕ್ಕೆ ಬೇಕಾಗುವ ಕೊನೆಕೊನೆಯ ಸೂಕ್ಷ್ಮ
ವಾದ ಕೆಲಸದಲ್ಲಿ ವಿನಿಯೋಗಿಸಿದನು. ಈ ಕೆಲಸನನ್ನು ಮಾಡುತ್ತಿರುವಾಗ
ಅವನು ಪ್ರತಿಕ್ಷಣ, ಆ ಮಾಯಾನಿರ್ಮಿತವಾದ ರೇಖಾಧಾರ ಪ್ರತಿಮೆಯ
ಸುಕುಮಾರವಾದ ಅವಯವಗಳನ್ನೂ, ಚಾರುನೇತ್ರಗಳನ್ನೂ, ದಿವ್ಯ ನಗೆ
ಯನ್ನೂ ತನ್ನ ಮೂರ್ತಿಯ ಅನುಕ್ರಮವಾದ ಅಂಗಗಳ ಕೂಡ ಪರೀಕ್ಷಿಸಿ
ನೋಡುತ್ತಿದ್ದನು. ತನ್ನ ಪ್ರತಿಕೃತಿಯು ನಿಷ್ಠಾತನಾದ ಶಿಲ್ಪಿಗನ ಕೃತಿಗೆ
ಸರಿಯಾಗಿದೆಂದು ಅವನ ಮನವರಿಕೆಯಾಯಿತು. ಕೈ ಕೊಂಡ ಕಾರ್ಯವು
ಮುಗಿದು, ಇಂದಿಗೆ ನಾನು ಕೃತಕೃತ್ಯನಾದೆನೆಂದು ಅವನಿಗೆ ಅನಿಸಿತು. ತನ್ನ
ಆಯುಧಗಳನ್ನೆಲ್ಲ ನೆಲಕ್ಕುರುಳಿಸಿ ಕೂಡಲೆ ಸಾಷ್ಟಾಂಗವೆರಗಿ, ತನ್ನ ಎರಡೂ
ಕೈಗಳನ್ನು ' ದೇವರೇ ನನ್ನನ್ನು ಕಾಯ್ದುಕೊಳ್ಳು' ಎನ್ನುವಂಕೆ ಮುಂಚಾಚಿ
ದನು. ಯಾಕೆಂದರೆ, ಇನ್ನು ಮುಂದೆ ತನ್ನನ್ನು ತಾನೇ ಮೋಸಗೊಳಿಸಿ
ಕೊಳ್ಳುವ ಪ್ರಯತ್ನದ ಅವಶ್ಯಕತೆಯು ಅವನಿಗೆ ಇರಲಿಲ್ಲ. ತಾನು ಕಲ್ಲಿನಲ್ಲಿ
ಘಟಸಿದ ಮನೋಹರವಾದ ಮುಖವೂ ಒಳ್ಳೇ ಕುಶಲತೆಯಿಂದ ಕೆತ್ತಿದ
ಮಧುರವಾದ ಓಷ್ಕಗಳೂ ಪುಲಕಾಂಕಿತ ಮೃದುಲವಾದ ಕಪೋಲಗಳೂ
ಮನೋಜ್ಞವಾದ ಅಧೋದೃಸ್ಟಿಯೂ ಮುಂತಾದವು ತನಗೆ ದೃಷ್ಟಪೂರ್ವ
ವಾದಂಥವಲ್ಲವೆಂಬ ಅಸತ್ಯವಾದ ಪರಿಣಾಮವನ್ನು ತನ್ನ ದೋಷಪೂರ್ಣ
ವಾದ ಅಂತಃಕರಣದ ಮೇಲೆ ಇನ್ನು ಮುಂದೆ ಮಾಡಿಕೊಳ್ಳಲು ಅವನು
ಇಚ್ಛಿಸಲಿಲ್ಲ. ಆ ಮುಖವು, ಆ ಓಷ್ಠಗಳು, ಆ ಕಪೋಲಗಳು, ಆ ನೇತ್ರಗಳು
ಅವನಿಗೆ ಪೂರ್ಣ ಪರಿಚಯವುಳ್ಳವು. ಬಹಿರಂಗದಲ್ಲಿ ಅದು ದಿವ್ಯದೇವತೆಯ
ಆಥವಾ ಮಾಧವನ ಕಲ್ಪನಾದೃಷ್ಟಿಯ ಮೂರ್ತಿಯ ಮುಖವಾಗಿದ್ದರೂ,
ನಿಜವಾಗಿ ಅದು ಮಾಧವನನ್ನು ಪ್ರನಾಯಾತಿರೇಕದಿಂದ ಪ್ರೀತಿಸಿದ ಹಾಗೂ
೨೦೦ ---------------------------------------------------------------------
ತನ್ನ ಜೀವಿತ ಸರ್ವಸ್ವವನ್ನೇ ಅವನಿಗೆ ಅರ್ಪಿಸಿ ಮೃತಪಟ್ಟ ಬಾಲಿಕೆಯ ಮುಖ
ವದು! " ನನ್ನ ಆತ್ಮದೇವತೆಯೇ! ” ಮಾಧವಾನಂದನು ಮುಂದೆ ನುಡಿ
ದದ್ದು: " ನನ್ನ ಸ್ವಪ್ನಸೃಷ್ಟಿಯ ಅಧಿದೇವತೆಯೇ ! ನನ್ನ ಕಾರ್ಯದ
ಕ್ರಿಯಾಶಕ್ತಿಯೇ! ನನ್ನ ಕೂಡ ಮಾತಾಡು! ದಯವಿಟ್ಟು ಮಾತಾಡು!
ಹಾಗೂ ನೀನು ಇಲ್ಲಿ ಯಾಕೆ ಬಂದಿರುವಿ ಎಂಬದನ್ನು ಹೇಳು! ಇಂಥ
ತಾಳ್ಮೆಯನ್ನು ತಾಳಿ ಇಷ್ಟು ದೀರ್ಥಕಾಲದ ವರೆಗೆ ಇಲ್ಲಿ ನಿಂತುಕೊಂಡಿರುವಿ
ಏಕೆ? ನಿಷ್ಠುರನಾದ ನಾನು, ಯಾವ ಲಲನಾನಮಣಿಯ ಕೋಮಲವಾದ
ಹೃದಯವನ್ನು ನಿದೀರ್ಣ ಮಾಡಿದೆನೋ ಆ ಪವಿತ್ರ ಆತ್ಮಳ ಸುರಲೋಕದ
ಪ್ರಕೃತಿಯೇ! ನನ್ನ ಸಮಾಗಮವನ್ನು ಯಾಕೆ ಇಚ್ಛಿಸುವಿ? ಹೇಳು
ಹೇಳು!"
ಆಬಳಿಕ ಕ್ಷಣಹೊತ್ತು ಸರ್ವತ್ರ ದಲ್ಲಿಯೂ ನಿಃಶಬ್ದ ವಾಯಿತು. ಪಶ್ಚಾ
ತ್ತಾಪಗಳ ಮರ್ಮಭೇದಕವಾದ ತಾಡನಗಳಿಂದ ವಿವ್ಹಲನಾದ ಮಾಧವನಿಗೆ
ಈ ಕ್ಷಣವು ಯುಗದಂತೆ ಭಾಸಿಸಿತು. ಅನಂತರ ಗೀರ್ವಾಣರ ಗೀತಕ್ಕೆ
ಆಧಾರವಾದ ವೀಣೆಯ ಮಂಜುಲ ಸ್ವರದಗಿಂತಲೂ ಮಂಜುಲತರವಾದ ಸ್ವರ
ದಲ್ಲಿ ಪ್ರತ್ಯುತ್ತರವು ಬಂದಿತು: "ಯಾಕೆಂದರೆ, ಕೇವಲ ಪ್ರೇಮಕ್ಕಾಗಿ!”
ಈ ಶಬ್ದವು ಅವನ ಕಿವಿಗೆ ಬಿದ್ದ ಕೂಡಲೆ, ಅವನ ಶರೀರವೆಲ್ಲವೂ
ರೋಮಾಂಚಿತವಾಯಿತು. ಭೀತಿ-ಆನಂದಗಳಿಂದ ಕೂಡಿದವನಾಗಿ, ಅವನು
ತನ್ನ ದೃಷ್ಟಿಯನ್ನು ಮೇಲಕ್ಕೆತ್ತಲು, ಆಕಾಶದಂತೆ ನೀಲವರ್ಣವುಳ್ಳ ಆ ದಿವ್ಯ
ನೇತ್ರಗಳ ತೇಜವು ಅವನಿಗೆ ದೃಗ್ಲೋಚರವಾಯಿತು.
"-ಯಾಾಕೆಂದರೆ, ನಾನು ನಿನ್ನನ್ನು ಪ್ರೀತಿಸುತ್ತೇನೆ!” ಆ ವಾಣಿಯು
ಮತ್ತೆ ನುಡಿದದ್ದು :
" ಯಾಕೆಂದರೆ, ನಾನು ನಿನ್ನನ್ನು ಯಾವಾಗಲೂ ಪ್ರೀತಿಸಿದ್ದೇನೆ !"
ಮಾಧವನ ಕರ್ಣಪುಟದಲ್ಲಿ ಈ ಶಬ್ದಗಳು ಬಿದ್ದವು, ಆದಕ್ಕೆ ಅವು
ಗಳಲ್ಲಿ ಅವನಿಗೆ ವಿಶ್ವಾಸ ಹುಟ್ಟುವದು ಸುಲಭಸಾಧ್ಯವಾಗಿದ್ದಿಲ್ಲ.
" ನಾನು ಭ್ರಮಿಷ್ಠನಾಗಿರುವದೇ ಸತ್ಯ! ಅಥವಾ. ಇದೆಲ್ಲ ಕೇವಲ
ಸ್ವಪ್ನ! " ಎಂದು ಅವನು ಕಂಪಿತವಾದ ಸ್ವರದಿಂದ ಅಂದನು. "ಈ ದೈವೀ-
ಚಮತ್ಯಾರವು ಸೌದಾಮಿನಿಯೇ EE: ಮಾತಾಡುತ್ತದಲ್ಲ! ''
೨೦೧ ----------------------------------------------------------------------
" ಪ್ರೇಮ ವೆಂಬದೇ ದೈವೀ ಚಮತ್ಕಾರವು !” ಆ ವಾಣಿಯು ಮತ್ತೆ
ನುಡಿಯಿತು: " ಪ್ರೇಮಕ್ಕೆ ಮರಣವಿಲ್ಲ ಪ್ರೇಮವು ಅಮರವಾದದ್ದು.
ಹಾ, ಪ್ರಿಯನೇ! ನಿನ್ನ ವ್ರತಭಂಗವೇನು ದೇವರ ದೃಷ್ಟಿಯಿಂದ ಪಾಪಕರ
ವಲ್ಲ. ನಿನ್ನ ಪಾಪದ ಮೂಲವೆಂದರೆ, ನೀನು ಒಂದು ಮಾನವೀ ಹೃದಯ
ವನ್ನೇ ನಾಶಪಡಿಸಿದಿ. ಒಂದು ಮಾನವೀ ಜೀವಿತವನ್ನೇ ಹಾಳು ಮಾಡಿದಿ!
ಆ ಹೃದಯವು ನಿನ್ನಲ್ಲಿ ಸಂಪೂರ್ಣ ವಿಶ್ವಾಸವನ್ನಿಟ್ಟಿತ್ತು, ಆ ಜೀವಿತವು
ತನ್ನ ಸರ್ವಸ್ವವನ್ನೇ ನಿನಗೆ ಅರ್ಪಣ ಮಾಡಿತ್ತು! "
ನಿರ್ಭಾಗ್ಯನಾದ ಆ ಬ್ರಹ್ಮಚಾರಿಯು ನಿರಾಶೆಯಿಂದ ತೀರ ನಿರ್ಗಲಿತ
ನಾದನು. " ವಿಧಿಸು, ಬೇಕಾದ ಶಿಕ್ಷೆಯನ್ನು ವಿಧಿಸು! * ಅವನು ಉಚ್ಚ
ಸ್ವರದಿಂದ ಅಂದನು; " ಎಲ್ಲೆ. ಸಾಕ್ಸಾತ್ ಸುರಲೋಕಸುಂದರಿಯೇ,
ನನ್ನ ಮೇಲೆ ಅಶನಿಪಾತವೃಷ್ಟಿಯನ್ನೇ ಮಾಡು. ನಿನ್ನ ಮಧುರೇಕ್ಷಣಗಳ
ಒಂದೇ ಒಂದು ಕಟಾಕ್ಷದಿಂದ. ಈ ಶರೀರವನ್ನು ಛಿನ್ನಭಿನ್ನವಾಗಿ ಮಾಡಿಬಿಡು.
ಇವನನ್ನು ಜೀವದಿಂದಿಡಬೇಡ! ಕದಾಚಿತ್ ಈ ಶುಭದಿನದ ವಿಸ್ಮರಣೆಯು
ಇವರಿಗಾದೀತು. "
ಆ ಮೂರ್ತಿಯಲ್ಲಿ ಚಲನವಲನವುಂಟಾಯಿತು. ಎರಡೂ ಕ್ಕೆ ಗಳನ್ನು
ಮೇಲಕ್ಕೆತ್ತಿ ಅತಿ ಮೃದುಲವಾದ ಸ್ವರದಿಂದ ಅದೇ ವಾಣಿಯು ಮತ್ತೆ ನುಡಿ
ದದ್ದು : " ಪ್ರೇಮವು ಪ್ರತೀಕಾರವನ್ನರಿಯದು. ಪ್ರಿಯನೆ, ನಿನ್ನ ಆಪರಾಧ
ಗಳೆಲ್ಲ ಕ್ಪಮಿಸಲ್ಪಟ್ಟಿವೆ. ಮರ್ತ್ಯಂಗೆ ಎಂದೂ ಗೊತ್ತಾಗದಂಥ ಈ ನಮ್ಮ
ಆನಂದದ ಕಥೆಯ ಹೊರತು ಎಲ್ಲವೂ ಮುಗಿಯಿತು. ನಮ್ಮ ಆನಂದವು
ಅನಾದ್ಯನಂತವಾದದ್ದು. ನಾನು ಮರಣಹೊಂದಿ ನನ್ನ ಆಯುಷ್ಯವನ್ನೆಲ್ಲ
ನಿನಗೇ ಕೊಟ್ಟಿದ್ದೇನೆ ಮತ್ತು ನನ್ನ ಆತ್ಮವನ್ನು ನೀನು ನೋಯಿಸಿದ್ದಕ್ಕಾಗಿ
ದೇವರು ನಿನ್ನನ್ನು ಕ್ಷಮಿಸಿ, ನಿನಗೆ ಶಾಂತಿಯನ್ನೀಯುವನೆಂದು ನಾನು ಹೇಳು
ತ್ತೇನೆ. ಪ್ರಿಯನೆ, ನಿನ್ನ ಕಾರ್ಯಸಮಾಫಪ್ತಿಯಾಯಿತು ! "
ಆ ಪ್ರಕಾಶಮಯವಾದ ಮೂರ್ತಿಯು ಮೆಲ್ಲಗೆ ಮೇಲಕ್ಕೇರಹತ್ತಿತು.
ಮೇಲಕ್ಕೇರುತ್ತೇರುತ್ತ ಮೇಘಮಂಡಲದಲ್ಲಿ ಅದೃಶ್ಯವಾಯಿತು. ಆ ಪೀಠ
ಪ್ರಭಾವಳಿಯು ಈಗ ಬರಿದಾಯಿತು. ಅಲ್ಲಿಯ ವೈಭವ ಮೂರ್ತಿಯು ಇಲ್ಲ
ದಂತಾಗಿತ್ತು.
೨೦೨ ----------------------------------------------------------------------------
ಅಂದಿನ ರಾತ್ರಿ ಮಾಧವನು ಮಂತ್ರಪುಷ್ಪಕ್ಕೆ ಬಾರದಿದ್ದುದರಿಂದ
ಬ್ರಹ್ಮಬಾಂಧನರೆಲ್ಲರೂ ಸ್ವಾಮಿಗಳ ಅಪ್ಪಣೆಯನ್ನು ತಕ್ಕೊಂಡು ಮಾಧವ
ನನ್ನು ಶೋಧಿಸಿ ಅವನ ಸಮಾಚಾರ ಕೇಳಿಕೊಳ್ಳುವದಕ್ಕಾಗಿ ಅವನ ಶಿಲ್ಪ
ಶಾಲೆಗೆ ಬಂದರು. ಸ್ವಾಮಿಗಳೂ ತಾವಾಗಿ ಅವರ ಸಂಗಡ ದಯಪಾಲಿಸಿ
ದರು. ಮತ್ತು ಕ್ಷೀಣವಾದ ಚಂದ್ರಪ್ರಕಾಶದಲ್ಲಿ ತಮ್ಮ 'ವಿಶ್ವಕರ್ಮ'ನಾದ
ಮಾಧವನು ಆ ಪೀಠಪ್ರಭಾವಳಿಯ ಪದತಲದಲ್ಲಿ ನಿಶ್ಚೇಷ್ಟನಾಗಿ ಬಿದ್ದು
ಕೊಂಡದ್ದು ಕಂಡರು. ಸಮೀಪದಲ್ಲಿಯೇ ಸಂಪೂರ್ಣವಾಗಿ ಸಿದ್ದ ಪಡಿಸಿದ
ಮೂರ್ತಿಯೊಂದು ನಿಲ್ಲಿಸಲ್ಪಟ್ಟಿತ್ತು. ಅಂಥ ಮನೋಜ್ಞವಾದ ಮೂರ್ತಿಯನ್ನು
ಅವರು ಎಲ್ಲಿಯೂ ನೋಡಿದ್ದಿಲ್ಲ. ಅವರೆಲ್ಲರೂ ಆಶ್ಚರ್ಯಭರಿತರಾಗಿ ಕನಿಕರ
ದಿಂದ ಮಾಧವನ ನಿಶ್ಚೇಷ್ಟವಾದ ದೇಹವನ್ನು ಮತ್ತೊಂದೆಡೆಗೆ ಒಯ್ದರು. ಅಲ್ಲಿ
ಮೂರು ನಾಲ್ಕು ತಾಸುಗಳ ತನಕ ಉಪಚಾರಗಳಿಂದ ಅವನ ಆರೈಕೆ ಮಾಡಿ
ದರು. ಮಾಧವನು ನಿದ್ರೆ ತಿಳಿದೆದ್ದವನಂತೆ ಮೆಲ್ಲಗೆ ಎದ್ದು ಕೂತು ತಾನೆಲ್ಲಿ
ಬಂದಿರುನೆನೆಂಬದನ್ನು ನೋಡಿಕೊಳ್ಳಹತ್ತಿದನು ಸ್ವಾಮಿಗಳನ್ನು ಕಂಡ
ಕೂಡಲೆ ಸಾಷ್ಟಾಂಗವೆರಗುವ ಪ್ರಯತ್ನ ಮಾಡಲು, ಸ್ವಾಮಿಗಳು ಅವನನ್ನು
ತಡೆದು, “ ಮಾಧವಾ ಎಂಥ ವಿಲಕ್ಷಣವಾದ ಕಾಶಲ್ಯವಯ್ಯಾ ನಿನ್ನದು!
ಎಂಥ ದಿವ್ಯವಾದ ಮೂರ್ತಿಯನ್ನು ನಿರ್ಮಿಸಿರುವಿಯೋ !" ಎಂದು ಅನ್ನು
ವಷ್ಟರಲ್ಲಿಯೇ ಮಾಧವನು ಅವರನ್ನು ಕುರಿತು " ಅದನ್ನು ದೇವರೇ
ನಿರ್ಮಿಸಿರುವನು! ನಾನೆಷ್ಟರವನು! ” ಎಂದು ಆಂದನು. ಮಾಧವನು
ಹೆಚ್ಚಿನ ಸ್ತುತಿಪರವಾದ ನುಡಿಗಳಿಗೆ ಕಿವಿಗೊಡಲಾರದನನಂಕೆ ಬೇಸರಿಕೆ
ಯನ್ನು ತೋರಿಸಲು, ಸ್ವಾಮಿಗಳು ಅವನ ಇಷ್ಟವಿದ್ದಂತೆ ಎಲ್ಲರೂ ನಡೆದು
ಕೊಳ್ಳಬೇಕೆಂತಲೂ ಅವನನ್ನು ಸಂಭಾಷಣದಿಂದ ಮನರಂಜಿಸಬೇಕೆಂತಲೂ
ಶಿಷ್ಯವರ್ಗಕ್ಕೆ ಹೇಳಿದರು ಸ್ವಾಮಿಗಳು ಇಂಥ ಮೂರ್ತಿಯನ್ನು ತಾವು
ಎಂದೂ ಕಂಡಿದ್ದಿಲ್ಲವೆಂಬದನ್ನು ಮನಸ್ಸಿನಲ್ಲಿಯೇ ಆಗಾಗ ನೆನಿಸುತ್ತಿದ್ದರು.
ಮಾಧವನಂತೂ ತೀರ ಸೋತುಹೋಗಿದ್ದನು. ಮೂರ್ತಿಯನ್ನು ಯಾರಾ
ದರೂ ಹೆಚ್ಚಾಗಿ ಸ್ತುತಿಸಿ " ಎಂಥ ಕೌಶಲ್ಯವಿದು !” ಎಂತ ಅನ್ನುತ್ತಲೇ,
"ಅದನ್ನು ದೇವರೇ ನಿರ್ಮಿಸಿರುವನು! ನಾನೆಷ್ಟರವನು !" ಎಂಬದಾಗಿ
ಅವನು ತಪ್ಪದೇ ಉತ್ತರ ಕೊಡುತ್ತಿದ್ದನು.
೨೦೩--------------------------------------------------------------------------
ಹೀಗೆಯೇ ಅತ್ತಿತ್ತ ಅಗಳಾಡಲು ಕೂಡ ಶಕ್ತಿಯಿಲ್ಲದೆ ಮಾಧವನು
ಎಷ್ಟೋ ದಿನಗಳ ವರೆಗೆ ಬಿದ್ದಲ್ಲಿಯೇ ಬಿದ್ದು ಕೊಂಡಿದ್ದನು. ಕಡೆಗೆ ನವ
ರಾತ್ರಿಯ ಉತ್ಸವಾರಂಭದ ದಿವಸವು ತೀರ ಸಮಿಪಿಸಿತು. ಎಲ್ಲಿ ನೋಡಿ
ದಲ್ಲಿ ತ್ರಿಪುರಸುಂದರಿಯ ಮೂರ್ತಿಪ್ರತಿಷ್ಠಾಪನಾಕಾರ್ಯದ ವಿಚಾರವೇ
ವಿಚಾರವು. ಪ್ರತಿಯೊಬ್ಬನು ತನ್ನ ಕಾರ್ಯವನ್ನು ಒಳ್ಳೇ ಉತ್ಸಾಹದಿಂದ
ಮಾಡುತ್ತಿದ್ದನು. ಇದನ್ನೆಲ್ಲ ಬಿದ್ದಲ್ಲಿಂದಲೇ ನೋಡುತ್ತ ಮಾಧವನು
ತಾನು ಎಷ್ಟು ನಿಶ್ಶಕ್ತನಾಗಿದ್ದರೂ, ಎಷ್ಟೇ ಹತಬಲನಾಗಿದ್ದರೂ ಮೂರ್ತಿ
ಪ್ರತಿಷ್ಠಾಪನೆಯ ದಿವಸ ದೇವಾಲಯದಲ್ಲಿ ತಾನು ದೇವಿಯ ಮೂರ್ತಿಯ
ಎದುರಿಗೆ ಬಂದು ನಿಂತೇ ನಿಂತುಕೊಳ್ಳುವೆನೆಂದು ನಿಶ್ಚಯಪೂರ್ವಕವಾಗಿ
ಹೇಳುತ್ತಿದ್ದನು.
ಮೂರ್ತಿಪ್ರತಿಷ್ಠಾಪನೆಯ ಮಹತ್ಕಾರ್ಯದ ಸುಮುಂಗಲಕರವಾದ
ಸುದಿವಸವು ಒಮ್ಮೆ ಬೆಳಗಿತು. ಮಾಧವನು ಇಬ್ಬರು ಬ್ರಹ್ಮಬಾಂಧವರ
ಹೆಗಲ ಮೇಲೆ ಕಯ್ಯೂರಿಕೊಂಡು ಹೇಗೋ ದೇವಾಲಯಕ್ಕೆ ನಡೆತಂದನು.
ಮಂತ್ರಘೋಷಕ್ಕೆ ಪ್ರಾರಂಭವಾಯಿತು. ದೇವತಾ: ಸಾನ್ಲಿಧ್ಯ-ವೈಭವಪೂರ್ಣ
ವಾದ ಆ ಮೂರ್ತಿಯು ಎದುರಿನಲ್ಲಿ ಪೀಠಪ್ರಭಾವಳಿಯ ಮೇಲೆ ಕಲ್ಯಾಣಾ
ಶೀರ್ವಾದಗಳನ್ನೇ ಬೀರುತ್ತಿರುವಂತೆ, ಎರಡೂ ಹಸ್ತಗಳನ್ನು ಮುಂದೆ ಮಾಡಿ
ಕೊಂಡು ಸ್ಥಿತವಾಗಿತ್ತು. ಮೂರ್ತಿಯು ಮಾಧವನ ಹಸ್ತಕೌಶಲ್ಯದಿಂದ
ಮೊದಲೇ ಸುರುಚಿರವಾದದ್ದು; ಅದರಲ್ಲಿ ಈಗಿನ ಮಂತ್ರಾವ್ಹಾನದಿಂದ
ದೇವತೆಯು ಎದ್ದು ಬರುವಳೇನೋ ಎಂಬಂತೆ ತೋರಹತ್ತಿತು. ಮಾಧವನು
ನಿಸ್ತೇಜನೂ, ನಿರ್ಬಲನೂ, ನಿರುತ್ಸಾಹಿಯೂ ಆಗಿದ್ದನಾದ್ದರಿಂದ ಅವನ
ಜೊತೆಗಾರರಿಲ್ಲರೂ ಅವನ ಪ್ರಕೃತಿಯ ವಿಷಯಕ್ಕೆ ಸಚಿಂತರಾಗಿದ್ದರು.
ಯಾವಾಗಲೂ ಯಾವದೋ ಒಂದು ದುಃಖಪೂರ್ಣವಾದ ಸಂಗತಿಯೇ ಅವನ
ತಲೆಯಲ್ಲಿ ಚಕ್ರವತ್ ಭ್ರಮಿಸುತ್ತಿರುವದೆಂಬಂತೆ ಅವನ ಮುಖವು ಬಾಡಿ
ಬತ್ತಿ ಹೋಗಿ ಅವನ ವಿಶಾಲವಾದ ಆರಕ್ತ ನೇತ್ರಗಳೂ ಇದನ್ನೇ ಸೂಚಿಸುತ್ತಿ
ದ್ಹವು. ಮಾಧವನು ಯಾವದೋ ಒಂದು ವಿಲಕ್ಷಣವಾದ ದೈವೀಚಮತ್ಕಾರದ
ವಿಚಾರದಲ್ಲಿಯೇ ಭ್ರಮೆಗೊಂಡಂತೆ ಕಾಣುತ್ತಿರುವನೆಂದು ಎಲ್ಲರೂ ಅವನನ್ನು
ಒಳ್ಳೇ ಎಚ್ಚರದಿಂದ ಕಾದುಕೊಂಡಿದ್ದರು. ಮಂತ್ರಘೋಷದ ಸುಶ್ರಾವ್ಯ
೨೦೪ -----------------------------------------------------------------------------
ವಾದ ನಿನಾದವು ದೇವಾಲಯದಲ್ಲೆಲ್ಲ ಪ್ರತಿಧ್ವನಿಯನ್ನು ಹೊಂದಿ ಸಮುದ್ರದ
ತೆರೆಗಳಂತೆ ಹೊಯ್ದಾಡುತ್ತಿತ್ತು. ಇಷ್ಟೆಲ್ಲ ಸಂಭ್ರವವು ನಡೆದಾಗ ಮಾಧ
ವನು ತಾನೊಂದು ಉಚ್ಛ ಶಿಖರಸ್ಥನಾಗಿ ಭೂಲೋಕದ ಸೃಷ್ಟವದಾರ್ಥಗಳನ್ನು
ಅವಲೋಕಿಸುತ್ತಿರುವವನಂತೆ ತನ್ನ ಸುತ್ತಲೂ ಇದ್ದ ವಸ್ತುಗಳೆಲ್ಲ ಕೇವಲ
ಅಸ್ಥಿರವೆಂಬುದಾಗಿಯೂ, ವಸ್ತುಗಳಲ್ಲಿ ಜನರು ತೊರುತ್ತಿರುವ ಆ ಭ್ರಾಮಕ
ವಾದ ಆಸ್ಥೆಗಾಗಿಯೂ ಮನಸ್ಸಿನಲ್ಲಿಯೇ ಅಶ್ವರ್ಯಪಡುತ್ತಿದ್ದನು. ಆದರೆ
ತನ್ನ ಎದುರಿನಲ್ಲಿ ಮೂರ್ತಿಯೊಂದು ಮಾತ್ರ ಸ್ಥಿರವಾದದ್ದೆಂದು ಅವನು
ಭಾವಿಸಿ, ತದೇಕಧ್ಯಾನನಾಗಿದ್ದನು. ಕೊನೆಯಲ್ಲಿ ಎಲ್ಲವೂ ಸಾಗ್ರವಾಗಿ
ಸಾಗಿ, ಮಂತ್ರಪುಷ್ಪದ ಸಮಾರಂಭದ ಕಾಲವು ಸಮೀಪಿಸಿತು. ದೇವಾಲಯ
ದಲ್ಲಿ ಘಂಟೆಗಳು ಓಂ, ಓಂ, ಓಂ, ಎಂತ ಗಂಭೀರವಾದ ಧ್ವನಿಗಯ್ಯ ಹೆಕ್ತಿದವು.
ಸರ್ವತ್ರವೂ 'ಓಂ' ಎಂಬ ಶಬ್ದವೇ ತುಂಬಿಕೊಂಡಿತು. ಬ್ರಹ್ಮವೃಂದವೆಲ್ಲ
ಒಂದೇ ಸ್ವರದಿಂದ ' ಓಂ शांतिः शांतिः शांतिः' ಎಂತ ಪ್ರತಿಷ್ಠಾಪನೆಯ
ಕಾರ್ಯವನ್ನು ಮುಗಿಸುತ್ತಿರಲು ಮಾಧವನು ಅಕಸ್ಮಾತ್ತಾಗಿ ಮೇಲಕ್ಕೆ
ನೋಡುತ್ತಲೇ ವಿದುತ್ಪ್ರಕಾಶವೇ ಅವನ ಕಣ್ಣೆದುರಿನಲ್ಲಿ ಕಟ್ಟಿದಂತಾಯಿತು.
ಈ ವಿದ್ಯುದಾಘಾತದಿಂದ ಮಾಧನನು ಚಟ್ಟನೆ ಎದ್ದು ನಿಂತನು ಎದುರಿನಲ್ಲಿ
ಪ್ರತಿಷ್ಠಾಪಿತವಾದ ತ್ರಿಪುರಸುಂದರಿಯ ಮೂರ್ತಿಗೂ ಇವರಿಗೂ ಮಧ್ಯದಲ್ಲಿ
ಅಂತರಿಕ್ಷದೊಳಗೆ ಇವನ ಮಾಯಾಮೂರ್ತಿಯು, ದಿನಮಣಿಯ ಪ್ರಕಾಶ
ವನ್ನೇ ಮೀರಿದ ಪ್ರಭೆಯನ್ನು ತಾಳಿ ನಿಂತಿತ್ತು. ತಾನು ಅನ್ಯಾಯದಿಂದ
ಘಾತಿಸಿದ ಕುಮಾರಿಕೆಯ ಮುಖನೇ ಅದು! ಇವನ ಸ್ಪೂರ್ತಿಜನ್ಯವಾದ
ಮೂರ್ತಿಯೇ ಅದು! ಹಾಗೂ ಇವನು ಕೆತ್ತಿದ ಮೂರ್ತಿಯು ಅಧಿದೇವ
ತೆಯೇ ಅದು! ಆ ನೀಲವರ್ಣದ ನೇತ್ರಗಳಲ್ಲಿಯ ಕೋಮಲ ಭಾವವು
ಅವರ್ಣನೀಯವು. ಆ ನಸುನಗೆಯಲ್ಲಿಯ ಮಾಧುರ್ಯವಂತೂ ತೀರ
ಅಲೌಕಿಕವು. ' ಪ್ರಿಯನೆ, ಬಾ, ಬಾ' ಎಂದು ಕರೆಯುತ್ತಿರುವಂತೆ ಮುಂದೆ
ಮಾಡಿದ ಆ ಕೈಗಳಲ್ಲಿ ಸ್ವರ್ಗೀಯ ಸ್ವಾಗತಾಚಾರವೇ ಸೂಸಿ ತೋರುತ್ತಿತ್ತು.
"ಪ್ರಿಯೆಳೇ, ಪ್ರಿಯಳೇ, " ಮಾಧವನು ಗಟ್ಟಿಯಾಗಿ ಕೂಗಿ
ದನು. ಕಂಠದಲ್ಲಿಯೇ ಪ್ರಾಣವು ಸ್ಥಿತವಾದಂತಾಗಿ, ಉಸಲುಗಟ್ಟಿ ಹೆಜ್ಜೆ
ಮುಂದೆ ಇಟ್ಟಿವನೇ ಮುಂಜೋಲಿಯಾಗಿ ನೆಲಕ್ಕುರುಳಿದನು. ಮಂತ್ರ
೨೦೫ ---------------------------------------------------------------------
ಘೋಷವು ನಿಂತುಹೋಯಿತು. ಮೂರ್ತಿಯ ಸಮ್ಮುಖದಲ್ಲಿ ದಂಡಧಾರಿ
ಗಳಾಗಿ ನಿಂತಿದ್ದ ವಿದ್ಯಾರಣ್ಯ ನಿಂತಲ್ಲಿಯೇ ಚಕಿತರಾಗಿ ನಿಂಶರು, ಬ್ರಹ್ಮ
ವೃಂದವೆಲ್ಲವೂ ಭಯಚಕಿತವಾಗಿ ಉದ್ವೇಗದಿಂದ, ಕಾಷ್ಟವತ್ ಬಿದ್ದಿದ್ದ
ಮಾಧವನ ಸುತ್ತಲೂ ನೆರೆಯಿತು. ನೋಡುತ್ತಾರೆ, ಎಲ್ಲವೂ ಮುಗಿದಿತ್ತು !
ಮಾಧವನು ಗತಪ್ರಾಣನಾಗಿದ್ದನು, ವಿದ್ಯಾರಣ್ಯರು ಪ್ರೀತಿಯ ಶಿಷೃನಿಗಾಗಿ
ಕಣ್ಣೀರುದುರಿಸಿದರು, ಸೂರ್ಯನು ಅಂದಿನ ದಿನ ಅಭ್ರಾಚ್ಛಾದಿತನಾದನು.
==========================================
೨೦೬-----------------------------------------------------------------
ಪ್ರೇಮ- ವಿಜಯ
ಸಕಲಸಾಮಂತ ಮಂಡಲಾಧೀಶ್ವರನಾದ ಶ್ರೀ ಸತ್ಯಾಶ್ರಯ ಪುಲಿಕೇಶಿ
ಸಾರ್ವಭೌಮನು ದರ್ಪದಿಂದಲೂ, ನ್ಯಾಯದಿಂದಲೂ ಪ್ರೇಮಪದಿಂದಲೂ
ರಾಜ್ಯಪರಿಪಾಲನವನ್ನು ಮಾಡುತ್ತಿರುವಾಗ ನಿರಾತಂಕಳಾದ ಭೂದೇವಿಯು
ಸಂತೋಷಭರಿತಳಾಗಿ ಲೋಕದ ಜನರ ವಾಂಛಾಪೂರ್ತಿಯಾಗುವಷ್ಟು
ಧನಧಾನ್ಯ ಗಳನ್ನೀಯುವವಳಾಗಿದ್ದಳು. ಸಿದ್ದಿಮಂತರಾದ ತಾಪಸೋತ್ತಮರು
ಆ ಮಹಾರಾಜನ ಕಾಲದಲ್ಲಿ "एहि पर्जन्य" ಎಂದು ಕೂಗಿದಾಕ್ಷಣವೇ ಎಲ್ಲ
ಕಡೆಯಲ್ಲಿ ಬಹುವೃಷ್ಠಿಯಾಗುತ್ತಿತ್ತು.. ಕೃಷಿಕರ್ಮೋನ್ನತಿ, ವ್ಯಾಪಾರವೃದ್ಧಿ,
ಶಿಲ್ಪಕಲಾವಿಜ್ಞಾನ, ವಿದ್ಯೋಪಾರ್ಜನಗಳ ಮೂಲಕವಾಗಿ ವಾತಾಪೀ
ಪುರವರಾಧೀಶ್ವರನ ಸಾಮ್ರಾಜ್ಯದಲ್ಲಿ ಸಕಲಸಂಸತ್ತುಗಳು ಸಮುದ್ರದ ತೆರೆ
ಗಳಂತೆ ಅಲ್ಲೋಲಕಲ್ಲೋಲವಾಗಿ ಹೊಯ್ದಾಡುತ್ತಿದ್ದವು.
ಮೊದಲೇ ಕರ್ನಾಟಕವು ಫಲಪ್ರದವಾಗಿಯೂ ರಮಣೀಯವಾಗಿಯೂ
ಆರೋಗ್ಯದ ನಿಧಾನವಾಗಿಯೂ ಇರುವ ದೇಶವು. ಇಂಥ ದೇಶದ ಮಧ್ಯದಲ್ಲಿ
"ಚಂಡವಿಕ್ರಮನುರು ತ್ರಿರೋಕದ ಗಂಡ”ನಾದ ಪುಲಿಕೇಶಿ ಸಾರ್ವಭೌಮನ
ರಾಜಧಾನಿಯು. ರಾಜನಾಡುವ ಭಾಷೆಯು ಕನ್ನಡವು. ಆ ಜಗದೇಕಮಲ್ಲನ
ವಿಜಯದ್ವಜವನ್ನು ಭೂಮಂಡಲದಲ್ಲೆಲ್ಲ ಮೆರಿಸಿಕೊಂಡು ಬಂದ ಕಲಿಗಳೆಲ್ಲ
ಕನ್ನಡಿಗರೇ. ಬಂಗಾರದ ನಾಣ್ಯಗಳನ್ನು ಎಣಿಸಲಾರದೆ ಸೇರುಗಳಿಂದ
ಅಳೆದು ದಣಿಯುವವರಾದ ಬಣಜಿಗರೆಲ್ಲ ಕರ್ನಾಟಕಸ್ಥರೇ, ಇಂಥ ನಾಡಿನ
ವಿಭವೈಶ್ವರ್ಯರಗಳ ವರ್ಣನೆಯನ್ನು ಕಾಣದವರಾದ ನಾವು ಈ ಕಾಲದಲ್ಲಿ
ಮಾಡುವುದೆಂತು ?
ನದಿನಿರ್ಝರಗಳಿಂದಲೂ, ಕೆರೆಕಾಲುವೆಗಳಿಂದಲೂ ಆ ಕಾಲದ
ಕರ್ನಾಟಕವು ಜಲಮಯವಾಗಿರುವದರಿಂದ ಅಲ್ಲಲ್ಲಿ ಮನೋಹರವಾದ
ಪುಷ್ಸೋದ್ಯಾನಗಳು, ಅಮೃತೋಸಮವಾದ ಹಣ್ಣುಗಳಿಂದ ಬಾಗಿದ ತೋಟ
ಗಳೂ, ಫಲಪೈರುಗಳಿಂದ ನಲಿದಾಡುವ ಹೊಲಗಳೂ, ಎಲ್ಲಿ ನೋಡಿದೊಡಲ್ಲಿ
ಕಂಗೊಳಿಸುತ್ತಿದ್ದವು, ಇಂಥ ಸುಲಲಿತವಾದ ಕರ್ನಾಟಕದ ಮಧ್ಯದಲ್ಲಿ
೨೦೭ --------------------------------------------------------------------------
ಹರಿಯುತ್ತಿರುವ ಮಧುವಾಹಿನೀ ನದೀತೀರದ ಪ್ರದೇಶದ ಶೋಭೆಯಂತೂ
ಮಿತಿಮೀರಿ ಹೋದದ್ದು. ಮಧುವಾಹಿನೀ ನದಿಯ ವಾಡಿಕೆಯ ಹೆಸರು
ಬೇರೆಯಾಗಿದೆ. ನಾವು ಆ ಹೆಸರನ್ನೊಡೆದರೆ ಆ ನದೀತೀರದ ನಿವಾಸಿಗಳೆಲ್ಲ
ನಮ್ಮೀ ಚಿಕ್ಕ ಕಾದಂಬರಿಯಲ್ಲಿ ಹೇಳಿದ ಅನೇಕ ಸ್ಥಾನಗಳ ಶೋಧಮಾಡುವೆ
ವೆಂದು ಹೇಳಿ ವ್ಯರ್ಥವಾಗಿ ದುಣುಕೊಳ್ಳುವರಿಂಬ ಚಿಂತೆಗಾಗಿ ಆ ನದಿಗೆ
ನಾವು " ಮಧುವಾಹಿನೀ" ಎಂಬ ಹೊಸ ಹೆಸರನ್ನಿಟ್ಟಿದ್ದೇವೆ. ಈ ನದಿಯೂ
ಮನೋಹರವಾದ ಮನೋದ್ದೇಶಗಳಲ್ಲಿಯೂ, ಸುಲಲಿತವಾದ ಪುಲಿನ
ಗಳಲ್ಲಿಯೂ, ನಲಿದಾಡುವ ಹೊಲಗಳಲ್ಲಿಯೂ ಹರಿಯುತ್ತಿರಲು, ಮಂದಗಮನೆ
ಯಾದ ಸುಂದರಿಯೋರ್ವಳು ಒಯ್ಯಾರದಿಂದ ನಡೆದಿರಲು ಮಾರ್ಗದೆಡಬಲ
ದಲ್ಲಿ ತಟಸ್ಥರಾಗಿ ನಿಂತು ನೋಡುತ್ತರುವ ವಿಟಪುರುಷರಂತೆ ಆ ನದೀತೀರದ
ವಿಟಿಪಿಗಳು ಕಂಗೊಳಿಸುತ್ತಿದ್ದವು.
ಸ್ವಾದುಭಾವಳ್ಕೂ ವಿನೀತೆಯೂ, ಮಂದಗಮನೆಯೂ, ರುಚಿರೆಯೂ
ಆದ ಮಾನಿನಿಯು ಮುನಿದರೆ ಬಲವಂತನೂ ಕಠೋರನೂ ಆಗಿದ್ದ ಕ್ಷಿತಿಧೃತನು
ಕೂಡ ಅವಳಿಗೆ ವಿರೋಧಿಯಾಗಿ ನಿಲ್ಲಬಲ್ಲನೆ? ಮಧುವಾಹಿನಿಯು ತನ್ನ
ಅಮೃತೋಪಮವಾದ ಜಲಪ್ರವಾಹದಿಂದ ಲೋಕದ ತೃಷ್ಲೆಯನ್ನು ಪರಿಹರಿ
ಸುತ್ತೆ ನಡೆದಿರುವಾಗ ಅವಳ ನೀತಿಗೆ ಎಡರಾಗಬೇಕೆಂದು ದುರ್ವರ್ತನನಾದ
ಪರ್ವತನೋರ್ವನು ಅಡ್ಡಾಗಿಬರಲು ಆ ಚಂಡಿಯು ಪ್ರಚಂಡವಾದ ವೇಗ
ದಿಂದ ಆ ಕಠೋರನ ಜಠರವನ್ನು ಇಬ್ಬಗೆಯಾಗಿ ಸೀಳಿ ಕ್ರೋಧಾವೇಶದಿಂದ
ಧೋಧೋ ಎಂದು ಭೋಂಟು, ತಡಸಲವಾಗಿ ಬೀಳುತ್ತಿರುವಳು. ಆ
ಪರ್ವತಕ್ಕೆ ಗ್ರಾಮ್ಯರು ಕೋಳೆಯ ಗುಡ್ಡವೆಂದೂ, ಸಂಸ್ಕೃತಾಭಿಮಾನಿಗಳು
ಕುಕ್ಕುಟಾದ್ರಿಯೆಂದೂ ಕರೆಯುನರು.
ಕುಕ್ಕುಟಾದ್ರಿಯ ಬಳಿಯಲ್ಲಿ ನದಿಯ ಉತ್ತರ ತೀರದಲ್ಲಿ ಎರಳೇಕಲ್ಲು
ಎಂಬ ಗ್ರಾಮವು ಬಹು ಸುರಮ್ಯವಾಗಿ ತೋರುತ್ತಿತ್ತು. ಒಂದೆಡೆಯಲ್ಲಿ
ಮರಹೆಮ್ಮರ ಗಿಡಗಂಟಿಗಳಿಂದ ಹಸಿರುಮುರಿಯುವ ಪರ್ವತದಿಂದಲೂ,
ಮತ್ತೊಂದೆಡೆಯಲ್ಲಿ ನದಿಯ ಪ್ರಪಾತಪ್ರವಾಹಗಳ ಅದ್ಭುತವಾದ ನೋಟ
ದಿಂದಲೂ, ಉಳಿದೆಡೆಯಲ್ಲಿ " ಬೆಳೆಯಿಂದ ತುಂಬಿರ್ದ” ಹೊಲಗಳಿಂದಲೂ
ಮೆರೆಯುವ ಎರಳೇಕಲ್ಲು ಗ್ರಾಮದಲ್ಲಿ ಮನೆಮಾಡಿಕೊಂಡಿರಬೇಕೆಂದು
೨೦೮ ----------------------------------------------------------------------
ರಸಿಕರಾದವರು ಬಯಸುತ್ತಿದ್ದರು. ನದಿಯ ಪ್ರವಾಹದ ಮೇಲಡೆಗೆ ಎರಡು
ಹರದಾರಿ ಹೋದಬಳಿಕ ಆ ನದಿಯ ದಕ್ಷಿಣತೀರದಲ್ಲಿ ಹೇಮದುರ್ಗವೆಂಬ
ಚಿಕ್ಕಪಟ್ಟಣವಿದ್ದು ಅದಕ್ಕೆ ಬಹು ಭದ್ರವಾದದ್ದೊಂದು ಕೋಟೆಯೂ
ಇತ್ತು.
ಹೇಮದುರ್ಗದ ಕೋಟಿಯು ನದಿಯ ದಂಡೆಯಿಂದ ತುಸು ಆಂತರದ
ಮೇಲಿದ್ದರೂ ಕೋಟೆಗೂ ನದಿಗೂ ಮಧ್ಯದಲ್ಲಿರುವ ಸ್ಥಳದಲ್ಲಿ ವಿಸ್ತೀರ್ಣ
ವಾದದ್ದೂ, ಬಹು ರಮಣೀಯವಾದದ್ದೂ ಒಂದು ಉದ್ಯಾನವಿತ್ತು. ಒತ್ತ
ಟ್ವಿಗೆ ಅಂಬರತಲವನ್ನು ಅಡ್ಡಗಟ್ಟಿದ ಕೋಟೆಯ ಕೃಷ್ಣವರ್ಣದ ಉನ್ನ
ತಿಯೂ ಮಧ್ಯದಲ್ಲಿ ಚಿತ್ರಮಯವಾದ ಫಲಪುಷ್ಪಗಳನ್ನು ತಳೆದ ತರು
ಸಂತಾನದಿಂದ ಶೋಭಿಸುವ ತೋಟವೂ, ಈಚೆಗೆ ಸುಧಾಸೌಂದರ್ಯವನ್ನು
ತಳೆದ ಸುಲಲಿತವಾದ ನದಿಯ ಪ್ರವಾಹವೂ ಕೂಡಿ ಆ ಸ್ಥಳವು ದೇವ
ದೇವಾಂಗನೆಯರ ಲೀಲಾವಿಲಾಸಕ್ಕೆ ಉಚಿತವಾದ ರಂಗಸ್ಥಳವೇ ಆಗಿತ್ತೆಂದು
ಹೇಳಬಹುದು,
ಪ್ರಹರ ರಾತ್ರಿಯಾಗಿತ್ತು. ಆಗಲಾ ಉಪವನದೊಳಗಿಂದ ಪರಾಕ್ರಮ
ಶಾಲಿಯಾದ ತರುಣನೋರ್ವನು ಲಗಬಗೆಯಿಂದ ಹೆಜ್ಜೆಗಳನ್ನಿಕ್ಕುತ್ತೆ
ತೋಟದದೊಳಗಿಂದ ನದಿಯ ಘಾಟಿಗೆ ಬಂದು “ಬಾಲಾ ! " ಎಂದು
ಕೂಗಿದನು, ಬಾಲನು ಘಾಟಿನ ಒಂದು ಮಗ್ಗ ಲಲ್ಲಿ ಹಗುರಾದ ನಾವೆೆ
ಯೊಂದನ್ನು ನಿಲ್ಲಿಸಿಕೊಂಡು ನಿಂತಿದ್ದನು. ಹರಕು. ಅಂಗಿಯಲ್ಲಿ ಸುವ್ಯಕ್ತವಾಗಿ
ತೋರುವ ತನ್ನ ಬಂಧುರವಾದ ಬಾಹುಗಳನ್ನೆತ್ತಿ ಬಾಲನು ತನ್ನ ಒಡೆಯನಿಗೆ
ಪ್ರಣಾಮಮಾಡಿ "ದೇವರೂ, ನಾವೆ ಸಿದ್ಧವಾಗಿದೆ ಎಂದು ಹೇಳಿದನು.
ಸ್ವಾಮಿಸೇವಕರೀರ್ವರೂ ನಾವೆಯಲ್ಲಿ ಕುಳಿತು ಕೋಳಿಯ ಗುಡ್ಡದ
ದಿಕ್ಕಿಗೆ ಅದನ್ನು ತೆಗೆದುಕೊಂಡು ನಡೆದರು, ಈರ್ವರೂ ಬಲಿಷ್ಟರಾದ
ಹುಟ್ಟಿನವರಾಗಿದ್ದರಿಂದಲೂ, ಅವರ ಮಾರ್ಗವು ನದಿಯ ಪ್ರವಾಹದ
ಗುಂಟ ಇರುವದರಿಂದಲೂ ಆ ನಾವೆಯು ಜಲರೂಪವಾದ ರಾಜಮಾರ್ಗದಲ್ಲಿ
ಆರ್ಭಟೆಯಿಂದ ಓಡುತ್ತಿರುವ ಅದ್ದುತವಾದ ತುರಂಗಮದಂತೆ ಕಂಡಿತು,
ಧಾವಿಸುವ ನಾನೆಗೆ ಟುಮುಟುಮುನೆ ಬಡಿಯುತ್ತಿರುವ ಜಲತರಂಗ
ಗಳ ಇನಿದಾದ ಧ್ವನಿಯ ತಾಲಕ್ಕೆ ಸರಿಯಾಗಿ, ವಿಲಾಸಿಯಾದ ಶಶಿದೇವನು
೨೦೯ -----------------------------------------------------------------------------
ಆ ತರಂಗಿಣಿಯ ರಂಗಭೂಮಿಯಲ್ಲಿ ಅರ್ಥಿಯಿಂದ ನರ್ತಿಸುತ್ತಿದ್ದನು. ಪತಿಯ
ಲೀಲಾವಿಲಾಸವನ್ನು ಕಂಡು ಕೌಮುದಿಯು ಮುಗುಳ್‌ನಗೆ ನಗುತ್ತಿದ್ದಳು.
ಪರಸ್ಪರರ ಪ್ರೇಮಪಾಶದಲ್ಲಿದ್ದು ಮೈಮರೆದು ನಿಂತಿರುವ ತರುಲತೆಗಳಗೆ
ವ್ಯತ್ಯಾಸವಾಗಕೂಡದೆಂದು ನೆನಿಸಿ ಸುಳಿಗಾಳಿರಾಯನು ಉಪವನದೆಡೆಯಿಂದ
ಹೊರಬಿದ್ದು ಬಂದು ನಮ್ಮ ನೌಕಾವಿಹಾರಿಯ ಬೆನ್ನು ಹತ್ತಿ ಮೆಲ್ಲನೆ ನಡೆ
ದಿದ್ದನು. ಇಂಥ ಪ್ರಶಾಂತವಾದ ನಿಶಾಸಮಯದಲ್ಲಿ ಆ ನಾವಿಕರು ಆರ್ಭಟೆ
ಯಿಂದ ಕಡಿಯುತ್ತಿರುವ ಹುಟ್ಟುಗಳ ಸಪ್ಪಳದ ಹೊರತಾಗಿ ಬೇರೊಂದು
ಧ್ವನಿಯೇ ಇಲ್ಲ. ಎಸೆದ ಬಾಣದಂತೆ ವೇಗದಿಂದ ಹೋಗುತ್ತಿರುವ ನಾವೆಯು
ಅರ್ಧ ಗಳಿಗೆಯಲ್ಲಿ ಎರಡು ಹರದಾರಿಯಷ್ಟು ಮಾರ್ಗಕ್ರಮಣವನ್ನು
ಮಾಡಿತು.
ಮಧುವಾಹಿನಿಯು ಭೂಧರನನ್ನು ಭೇದಿಸಿ ಗರ್ವದಿಂದ ಮರ್ಮರಿಸು
ತ್ತಿರುವ ಘೋರವಾದ ಸಪ್ಪಳವು ತೀರ ಸಮಾಸದಲ್ಲಿಯೇ ಆಗುತ್ತಿರುವಂತೆ
ಕೇಳಬಂದಿತು, ಆಗ ಬಾಲನು ತನ್ನ ಒಡೆಯನನ್ನು ಕುರಿತು "" ಹೊಳೆಯ
ಸೆಳವು ಹೆಚ್ಚಾಯಿತು. ನಡು ಹೊಳೆಯನ್ನು ಬಿಟ್ಟು ಎಡಕ್ಕೆ ಹುಟ್ಟುಕಡಿ
ಯಿರಿ. ಆಲಸ್ಯ ಮಾಡಿದರೆ ಈ ಹೊಳೆಯವ್ವನು ನಮ್ಮನ್ನು ಮುರಿದೊಯ್ದು
ತಡಸಲಕ್ಕೆ ಹಾಕುವಳು " ಎಂದು ಸೂಚಿಸಿದವನೇ ನಾವೆಯು ನೀರು ಬಿಟ್ಟು
ಅಂತರಿಕ್ಷದಲ್ಲಿ ಹಾರುತ್ತಿರುವಂತೆ ಜಾಣ್ಮೆಯಿಂದಲೂ, ಹುರುಪಿನಿಂದಲೂ
ಬಾಲನು ಹುಟ್ಟುಕಡಿಯಲಾರಂಭಿಸಿದನು. ಯಜಮಾನ ಸೇವಕರೀರ್ವರ
ಸಾಹಸದಿಂದ ನಾವೆಯು ಸಂಗಡಲೆ ನಿಯಮಿತವಾದ ಸ್ಥಾನಕ್ಕೆ ಬಂದು
ಮುಟ್ಟಿತು.
ಬಾಲನು ನಾವೆಯನ್ನು ಕಟ್ಟಿ ನಿಲ್ಲಿಸುವದರ ಮುಂಚಿತವಾಗಿಯೇ
ತರುಣನಾದ ಅವನ ಯಜಮಾನನು ನಾನೆಯಿಂದ ಕೆಳಕ್ಕೆ ಹಾರಿಕೊಂಡು
ಸಿಳ್ಳು ಹಾಕುತ್ತೆ ಬಳಿಯಲ್ಲಿಯೇ ಇರುವ ಬೆಟ್ಟವನ್ನೇರಲಾರಂಭಿಸಿದನು.
ಕವಳಿ, ಕಾಡುಮಲ್ಲಿಗೆ, ಶಿರಸಲ, ಹೊಡೆಜಾಲಿ, ವನಸಂಪಿಗೆ, ಬಕುಲ
ಮುಂತಾದ ಪುಷ್ಪಗಳ ಸುಗಂಧದಿಂದ ತುಂಬಿದ ಆ ಬೆಟ್ಟವು ಗಂಧಮಾದನದ
ಒಂದು ಶಾಖೆ ತಾನೆಂಬಂತೆ ಮನಂಗೊಳಿಸಿತು. ಈ ಹೂಗಂಪಿನ ಸೊಂಪನ್ನು
ಅನುಲಕ್ಷಿಸದೆ ಆ ತರುಣನು ಲಗಬಗೆಯಿಂದ ಬೆಟ್ಟಿವನ್ನೇರುತ್ತೆ ಅದರ ತುಟ್ಟ
೨೧೦--------------------------------------------------------------------------
ತುದಿಗೆ ಬಂದನು. ತುದಿಯಾಚಿಗೆ ಬೆಟ್ಟದ ಇಳುಕಲವೇ ಇಲ್ಲ. ಅಲ್ಲಿಂ
ದೊಮ್ಮೆಲೆ ಕೆಳಗೆ ಪಾತಾಳವೇ, ಸೃಷ್ಟಿರಚಿತವಾದ ಆ ಬೆಟ್ಟದ ಗೋಡೆಯು
ಸುಮಾರು ಹತ್ತು ಮಾರು ಆಳವಾದೀತು. ಬೆಟ್ಟದ ಮೇಲಿನ ನೀರು ಹರಿದು
ಹೋಗುವ ಕೊರಕಲದ ಮಾರ್ಗವಾಗಿ ಹೋದರೆ ರೂಢಿ ಇದ್ದವರು ಬೆಟ್ಟ
ದಿಂದ ಕೆಳಗಿಳಿಯ ಬಹುದಾಗಿತ್ತು. ಆ ಸ್ಥಳಕ್ಕೆ ಪರಿಚಯದವನಾಗಿದ್ದದ್ದ
ರಿಂದ ಆ ತರುಣನು ಪ್ರಯಾಸವಿಲ್ಲದೆ ಕೊರೆಯ ಮಾರ್ಗವಾಗಿ ಇಳಿದು
ಹೋದನು. ಕೆಳಗೆ ಸಮತಲವಾಗಿಯೂ, ವಿಸ್ತಾರವಾಗಿಯೂ ಇರುವ
ದೊಂದು ರಮಣೀಯವಾದ ಉದ್ಯಾನವಿತ್ತು. ಒಂದೆಡೆಗೆ ಗಜಶ್ರೇಣಿಯಂತೆ
ಭವ್ಯವಾಗಿ ತೋರುವ ಬೆಟ್ಟವು ಉತ್ತರ ದಕ್ಷಿಣವಾಗಿ ನಿಂತಿರುವುದು. ಬೆಟ್ಟಿದ
ದಕ್ಷಿಣ ತುದಿಯಲ್ಲಿರುವ ತಡಸಲವು ಮುಂದಕ್ಕೆ ಪ್ರವಾಹವಾಗಿ ಪಶ್ಚಿಮ
ಪೂರ್ವವಾಗಿ ಹರಿದು ನಮ್ಮ ಉದ್ಯಾನ ದಕ್ಷಿಣ ಮರ್ಯಾದೆಯಾಗಿತ್ತು.
ಈ ಉದ್ಯಾನದ ಉತ್ತರ ಮರ್ಯಾದೆಗೆ ಹೊಂದಿ ಎರಳೇಕಲ್ಲು ಎಂಬ ಅಂದದ
ಹಳ್ಳಿಯಿತ್ತು.
ತರುಣನು ಬೆಟ್ಟವನ್ನಿಳಿದು ಉಪವನದಲ್ಲಿ ಬಂದವನೇ ಸಂಕೇತದ
ಚಿಹ್ನೆಗಳನ್ನು ಹುಡುಕಲಾರಂಭಿಸಿದನು. ತನ್ನ ಸೊಬಗನ್ನು ನೋಡೆಂದು
ವನಶ್ರೀಯು ಅವನೆದುರಿನಲ್ಲಿ ಬಂದು ನಿಂತಿದ್ದರೂ ಅತ್ತ ಕಡೆಗೆ ಅವನ ಲಕ್ಷ್ಮ
ವಿಲ್ಲ. ಅಲ್ಲಿ ನೋಡಿರಿ; ಸೋಪಾನದ ಬಳಿಯಲ್ಲಿ ಬನ್ನಿಯ ಕೊಂಬೆಯೊಂ
ದಕ್ಕೆ ನವಮಾಲತಿಯ ಮಂಜರಿಗಳನ್ನುಚುಚ್ಚಿ ಇಟ್ಟಿದ್ದರು. ತರುಣನು
ಅದನ್ನೆತ್ತಿಕೊಂಡು " ನವಮಾಲತಿಯ ಮಂಟಪಕ್ಕೆ ಬನ್ನಿ " ಎಂದು ನಿನ್ನ
ಒಡತಿಯು ಸೂಚಿಸಿರುವಳೆ? ” ಎಂದು ಕೇಳಿದಂತೆ ಮಾಡಿ ಅತ್ತ ನಡೆದನು.
ಸ್ವಚ್ಛವಾದ ಬೆಳದಿಂಗಳಿನಿಂದ ಆ ಉಸವನನೆಲ್ಲ ಬೆಳಗಿ ತೋರುತ್ತಿತ್ತು.
ಎಳೆದಳಿರು ಕುಡಿಮುಗುಳುಗಳಿಂದ ನಲಿದಾಡುವ ಹೊಸಮಲ್ಲಿಗೆಯ ಹಂದರ
ದಲ್ಲಿ ಹಾಕಿದ ಕರೀಕಲ್ಲಿನ ನುಣುಪಾದ ಹಲಿಗೆಯ ಮೇಲೆ ಕುಳಿತುಕೊಂಡು
ಯಾವಳೋ ಪೊಸಜವ್ವನೆಯು ಬಲು ಇಂಪಾದ ಧ್ವ ನಿಯಿಂದ ಮೆಲ್ಲನೆ
ಹಾಡುತ್ತಿದ್ದಳು.
" ಕೌಮಿನಿಯೊಳ್ ಕಾಂತಾ, ಪರಿಹಾಸನೇನೋ?' ಎಂದು ಪದವನ್ನು
ಆ ಕೋಕಿಲವಾಣಿಯು ಖಮಾಜ ರಾಗದಲ್ಲಿ ಹಾಡುತ್ತಿರುವದನ್ನು ಕೇಳಿ.
೨೧೧ -------------------------------------------------------------------
ನಮ್ಮ ತರುಣನು ಹೆಜ್ಜೆಗಳ ಸಪ್ಸಳವಾಗದಂಕೆ ಮೆಲ್ಲಡಿಗಳನ್ನಿಕ್ಕುತ್ತೆ ಆ
ತರುಣಿಯ ಹಿಂಭಾಗದಲ್ಲಿ ಬಂದ:ನಿಂತ್ರು ಮೆಲ್ಲನೆ ಅವಳ ಗಲ್ಲವನ್ನು
ಮುಟ್ಟಿದನು. ಸ್ಪರ್ಶಮಾತ್ರದಿಂದಲೇ ಬಂದವನು ತನ್ನ ಮನೋರಮಣನೇ
ಎಂದು ತಿಳುಕೊಂಡು ಆ ರಮಣಿಯು ಪ್ರಿಯನು ಮಾಡಿದ ಚೇಷ್ಟೆಗೆ ತಕ್ಕ
ಶಾಸನವನ್ನು ಮಾಡಬೇಕೆಂದು ಅವನನನ್ನು ಪುಲಕಕಂಟಕಿತವಾದ ತನ್ನ
ಬಾಹುಲತೆಗಳಿಂದ ಒಳಿತಾಗಿ ಬಿಗಿದಳು.
ಅಷ್ಟರಲ್ಲಿ ಹತ್ತೆಂಟು ಜನ ಆಳುಗಳು ಭಯಂಕರವಾಗಿ ಕೇಕೆ ಹೊಡೆ
ಯುತ್ತ ನೆಲ ಅದರುವಂತೆ ರಭಸದಿಂದ ಓಡುತ್ತೆ ಈ ಪ್ರಣಯಿಗಳಿದ್ದೆಡೆಗೆ
ಸಾಗಿ ಬಂದರು. ಆ ಗದ್ದಲವನ್ನು ಕೇಳಿ ಕೋಮಲೆಯಾದ ಆ ತರುಣಿಯು
ಭಯದಿಂದ ಗದಗದನೆ ನಡುಗುತ್ತೆ ಪ್ರಿಯನನ್ನು ಮತ್ತೆ ಭರದಿಂದ ಅಪ್ಸಿ
" ಕಾಂತರೆ. ಇದೇನೋ ಅನರ್ಥವಿದೆ; ನಾನಿನ್ನು ಹೇಗೆ ಮಾಡಲಿ?''
ಎಂದು ಆರ್ತೆಯಾಗಿ ನುಡಿದು ಕಣ್ಣೀರು ಸುರಿಸಿದಳು.
"ಪದ್ಮಿನಿ ಇಷ್ಟೇಕೆ ಕಾತರಳಾಗಿರುನಿ? ನಾನಿರಲು ನಿನಗೇತರ ಭಯ?”
" ದಂತಿವರ್ಮರಾಜ, ವಿಕ್ರಮಶಾಲಿಗಳಾದ ತಮ್ಮೀ ವಿಜಯಹಸ್ತದಲ್ಲಿ ,
ಶಸ್ತ್ರವಿದ್ದರೆ ನನಗೆ ಭೀತಿಯೇ ಇದ್ದಿಲ್ಲ '' ಎಂದಾ ರಮಣಿಯು ನುಡಿಯು
ವಷ್ಟರಲ್ಲಿಯೇ ಉನ್ಮತ್ತರಾದ ಆ ಜನರ ಮೇಳೆಯು ಅಲ್ಲಿಗೆ ಬಂದುಬಿಟ್ಟಿತು.
ದಂತಿವರ್ಮನು ಭರದಿಂದಲೊಂದು ಬಕುಲನೃಕ್ಷದ ಕೊಂಬೆಯನ್ನು
ಮುರಿದುಕೊಂಡು ತನ್ನ ಮೈಮೇಲೇರಿ ಬಂದ ದುರಾತ್ಮನನ್ನು ಒಳಿತಾಗಿ ತಳಿ
ಸಿದನು. ಆ ಘೋರತರವಾದ ಪ್ರಹಾರಕ್ಕೆ ಶತ್ರುವಿನ ಟೊಂಕವೂ, ಬಕುಲಡ
ಕೊಂಬೆಯೂ ಕೂಡಿಯೇ ಮುರಿದುಹೋದವು. ಕೈಯಲ್ಲಿಯ ಕೊಂಬೆಯು
ಎರಡು ತುಂಡಾಗಿ ಮುರಿದುಹೋದದ್ದರಿಂದಲೂ, ಆತತಾಯಿಗಳು
ಬಹುಜನರಾಗಿರುವದರಿಂದಲೂ ದಂತಿವರ್ಮನು ಉಪಾಯವಿಲ್ಲದ್ದಕ್ಕಾಗಿ
ತನಗುಳಿದ ಒಂದೇ ಮಾರ್ಗವಾಗಿದ್ದ ತಡಸಲದ ಹಾದೀಹಿಡಿದು ಓಡಿದನು.
ದುರಾತ್ಮರ. ಮೇಳೆಯ ನಾಯಕನಾಗಿದ್ದವನು ಪದ್ಮಿನಿಯ ಅಣ್ಣನಾದ
ಜಕ್ಕರಾಯನೇ ಆಗಿದ್ದನು. ಅವನನ್ನು ಕಂಡು ಪದ್ಮಿನಿಯು " ಆಣ್ಣಾ,
ಇದೇನು ಅನರ್ಥವನ್ನು ನಡೆಸಿರುವಿ ನೀನು? '' ಎಂದು ಕೇಳಿದಳು.
" ನಿರ್ಲಜ್ಜಳೆ, ಇದೇನೆಂದು ನನ್ನನ್ನೇ ಕೇಳುವಿಯಾ? ನಮಗೆ ಶತ್ರು
೨೧೨---------------------------------------------------------------------
ವಾದ ಆ ನರ:ಧಮನೊಡನೆ ಪಾಪಕರ್ಮವನ್ನು ಮಾಡಲು ಇಂಥ ರಾತ್ರಿ
ಯಲ್ಲಿ ನೀನಿಲ್ಲಿಗೆ ಬಂದಿಯಲ್ಲವೆ ? "
" ಆಣ್ಣಾ, ತಿಳಿದು ಮಾತಾಡು. ಪುಲಿಕೇಶಿ ಚಕ್ರವರ್ತಿಗಳ ಕುಲದಲ್ಲಿ
ಹುಟ್ಟಿದವರೂ, ಮಹಾ ಪರಾಕ್ರಮಶಾಲಿಗಳೂ ಆದ ದಂತಿವರ್ನ್ಮರಾಜರ
ಅರ್ಧಾಂಗಿಯಾಗುವದು ಆರಸುಮಗಳಿಗೆ ಕೂಡ ಭೂಷಣವೇ. ನನ್ನಾಣೆ
ಯಾಗಿದೆ! ಅವರ ಜೀವಕ್ಕೆ ನೀನು ಅಪಾಯ ಮಾಡಿದಿಯಾದಕೆ ನನ್ನನ್ನು
ಕೊಂದು ತಿಂದಿರುವಿ!?' ಎಂದು ಆಂಗಲಾಚಿ ಬೇಡಿಕೊಳ್ಳುತ್ತಿ ರುವ ತಂಗಿ
ಯನ್ನು ನಿರ್ದಯನಾದ ಜಕ್ಕರಾಯನು ದೂಡಿ ತಾನೂ ದಂತಿವರ್ಮನ
ಬೆನ್ನಟ್ಟಿ ನಡೆದನು.
ಅಟ್ಟಿ ಬರುವ ದುಷ್ಟರನ್ನು ದಂತಿವರ್ಮನು ಹಿಡಿಗಲ್ಲುಗಳಿಂದ
ಎಸೆಯುತ್ತಲೂ, ದುಂಡೆಗಳಿಂದ ಹೇರುತ್ತಲೂ ತನ್ನ ಆತ್ಮರಕ್ಷಣವನ್ನು
ತುಸುಹೊತ್ತು `ಮಾಡಿದನು. ಹೇಡಿಗಳಂತೆ ಹಿಂದುಳಿದ ತನ್ನ ಆಳುಗಳನ್ನು
ಜಕ್ಕರಾಯನು ಧಿಕ್ಕರಿಸಿ ಅವರನ್ನು ದೂಡಿಕೊಂಡು ದಂತವರ್ಮನ ಮೇಲೆ
ಬಂದನು. ಪಾಪ, ದಂತಿವರ್ಮನಿಗೆ ಓಡಲು ಆಸ್ಪದವೇ ಉಳಿಯಲಿಲ್ಲ.
ಬಲಕ್ಕೆ ಎತ್ತರವಾದ ಪರ್ವತವು. ಎದಿರಿನಲ್ಲಿಯೇ ಅಗಾಧವಾದ ನದಿಯ
ತಡಸಲದ ಕೊಳ್ಳವು. ಉಳಿದ ಕಡೆಗೆಲ್ಲ ಶಶ್ರುಗಳು.ಇನ್ನು ಮಾಡುವದೇನು?
ಆ ಸಾಹಸಿಯು ಹಿಂದೆ ಮುಂದೆ ನೋಡದೆ ನೆಲೆಯಿಲ್ಲದೆ ಬೀಳುತ್ತಿರುವ
ತಡಸಲದ ಮಡುನಿನಲ್ಲಿ ಧುಡಮ್ಮನೆ ಹಾರಿಕೊಂಡನು. |
ಅಂಥ ಭಯಂಕರವಾದ ಹೆಮ್ಮಡುವಿನಲ್ಲಿ ಬಿದ್ದ ಮನುಷ್ಯನು ಬದುಕಿ
ಉಳಿಯುವದೆಂತು? ದಂತಿವರ್ಮನು ಮಡುವಿನಲ್ಲಿ ಹಾರಿಕೊಂಡು ಸತ್ತನೆಂದು
ಕಂಡು ಅವನ ವೈರಿಗಳಿಗೆ ಪರಮಾವಧಿಯ ಸಂತೋಷವಾಗಿ ಅವರು
ಉಬ್ಬಿನಿಂದ ಕೂಗುತ್ತಲೂ, ಕೇಕೆಹೊಡೆಯುತ್ತಲೂ ಮರಳಿ ಬಂದರು, ಆ
ದುರ್ವಾರ್ತೆಯನ್ನು ಕೇಳಿ ಪದ್ಮಿನಿಯ ಎದೆಗೆ ಕಲ್ಲು ಬಡಿದಂತಾಯಿತು.
ಅರ್ಧಗಳಿಗೆ ಮುಂಚೆ ತನ್ನ ಬಾಹುಪಾಶದಲ್ಲಿದ್ದ ಪ್ರಿಯನು ಹೀಗೆ
ಒಮ್ಮಿಂದೊಮ್ಮೆ ಮೃತ್ಯುಮುಖದಲ್ಲಿ ಬಿದ್ದದ್ದು ಕೇಳಿ ಆ ಕೋಮಲೆಯು
ಕಳವಳಗೊಂಡು ಥರಥರನೆ ನಡುಗುತ್ತೆ ಮೈಮರೆದು ನೆಲಕೈ ಬಿದ್ದಳು,
* * * *
೨೧೩----------------------------------------------------------------
ಪದ್ಮಿನಿಯ ತಂದೆಯು ಸೈನ್ಯ ದಲ್ಲಿ ಒಬ್ಬ ಅಧಿಕಾರಿಯಾಗಿದ್ದನು.
ಅವನ ರೂಪವತಿಯಾದ ತಂಗಿಯನ್ನು ಬಿಷ್ಪ ನಾಯಕನೆಂಬ ಒಬ್ಬ ಸೇನಾಪತಿಗೆ
ಕೊಟ್ಟದ್ದರಿಂದ ಪದ್ಮಿನಿಯ ಅಣ್ಣನಾದ ಚಿಕ್ಕರಾಯನ ದೈವ ತೆರೆದೆಂತಾಗಿತ್ತು.
ಸಾರ್ವಭೌಮನ ಬಲಗೈಯಂತಿದ್ದ ಬಿಷ್ಟನಾಯಕನ ಅನುಗ್ರ ಹದಿಂದ
ಜಕ್ಕರಾಯನಿಗೆ ಎರಳೆಕಲ್ಲು ಗ್ರಾಮವು ಉಂಬಳಿಯಾಗಿ ಸಿಕ್ಕಿತು. ತಂದೆಯ
ತರುವಾಯ ಸೈನ್ಯದಲ್ಲಿ ಅವನೂ ಒಂದು ಅಧಿಕಾರವನ್ನು ಹೊಂದಿದ್ದನು.
ಹೀಗೆ ಸಂಪತ್ತು ಬಂದದ್ದರಿಂದಲೂ ಸೇನಾಪತಿಯು ತನಗೆ ಆಪ್ತನಾಗಿರುವದ
ರಿಂದಲೂ ಜಕ್ಕರಾಯನಿಗೆ ಮಿತಿಮೀರಿದ ಅಹಂಕಾರವೇರಿ ಅವನು ಕಂಡ
ಕಂಡವರೊಡರೆ ಉನ್ಮತ್ತನಾಗಿ ವರ್ತಿಸುತ್ತಿದ್ದನು. ಹೇಮದುರ್ಗ ಪ್ರಾಂತದ
ಅಧಿಪತಿಯಾಗಿದ್ದ ದಂತಿವರ್ಮನಂತೂ ತನ್ನ ವೈರಿಯೆಂದು ಜಕ್ಕರಾಯನು
ತಿಳುಕೊಂಡಿದ್ದನು. ಪುಲಿಕೇಶಿ ಮಹಾರಾಯನು ಪಾಂಡ್ಯರಾಜನ ಮೇಲೆ
ಅಭಿಯೋಗಮಾಡಿದಾಗ ಮದುರೆಯ ಯುದ್ಧದಲ್ಲಿ ಜಕ್ಕರಾಯನು ಶಶ್ರುಗಳ
ಕೈಗೆ ಸಿಕ್ಕು ಪೇಚಾಡುತ್ತಿದ್ದನು. ದಂತಿವರ್ಮನು ಅವನವಸ್ಥೆಯನ್ನು ಕಂಡು
ಧಾವಿಸಿಬಂದು ಸಾಹಸದಿಂದ ಅವನನ್ನು ಬದುಕಿಸಿಕೊಂಡಿದ್ದನು. ಇದರಿಂದ
ಜಕ್ಕನ ಮಾನ ಹೋಯಿತಂತೆ! ಮೂರ್ಖನಿಗೆ ತಲೆಯೊಡೆದವನೂ ಒಂದೇ,
ಔಷಧಿ ಹಚ್ಚಿದವನೂ ಒಂದೇ!
ಪದ್ಮಿನಿಯು ಸುಲಕ್ಷಣಯುತಳಾದ ರೂಪವತಿಯೂ ಚತುರೆಯೂ
ಆಗಿರುವದಲ್ಲದೆ ಆ ಪ್ರಾಂತದಲ್ಲಿ ಸಂಚರಿಸುತ್ತಿದ್ದ ಕಾಮಂದಕಿಯೆಂಬ ಬುದ್ಧ
ಸನ್ಯಾಸಿನಿಯ ಬಳಿಯಲ್ಲಿ ಚನ್ನಾಗಿ ವಿದ್ಯೆ ಕಲಿತಿದ್ದಳು. ಇಂಥ ಸ್ತ್ರೀರತ್ನದ
ಪ್ರಾಪ್ತಿಗಾಗಿ ಅನೇಕಜನ ಶ್ರೀಮಂತರೂ, ಅಧಿಕಾರಸಂಪನ್ನರೂ ವೀರಾಗ್ರೇ
ಸರರೂ ಹನಣಿಸುತ್ತಿರುವಂತೆಯೇ ಪದ್ಮಿನಿಯಮಾದರೂ ಕ್ಷಾತ್ರ ತೇಜಸ್ಸಿನಿಂದೊ
ಪ್ಫುವ ನವತರುಣನೋರ್ವನು ತನಗೆ ಪತಿಯಾಗಬೇಕೆಂದು ಬಯಸಿದ್ದಾದರೂ
ವಿಹಿತನೇ, ಮದುರೆಯ ಯುದ್ಧದಲ್ಲಿ ಪರಾಕ್ರಮನನ್ನು ಮಾಡಿದ ವೀರಾಗ್ರೇ
ಸರರಲ್ಲಿ ಕುಮಾರ ದಂತಿವರ್ಮನೋರ್ವನಾಗಿದ್ದು ಅವನು ಮಾಡಿದ
ಪರಾಕ್ರಮಗಳು ಬಹು ವಿಚಿತ್ರವಾದವುಗಳೆಂದು ಪ್ರತ್ಯಕ್ಷ ಸೇನಾಪತಿಯಾದ
ಬಿಸ್ಟನಾಯಕನು ವರ್ಣಿಸಿದ್ದನ್ನು ಪದ್ಮಿನಿಯ ಅವನ ಮನೆಯಲ್ಲಿದ್ದಾಗ
ಕೇಳಿದ್ದಳು. ದಂತಿವರ್ಮನು ಒಳ್ಳೇ ರೂಪವಂತನೆಂದೂ ಖ್ಯಾತಿಯಿತ್ತು.
೨೧೪ ----------------------------------------------------------------------
ಪ್ರಸಂಗವಶಾತ್ ಆ ತರುಣವೀರನು ಒಂದು ದಿವಸ ಬಿಷ್ಟನಾಯಕನ ಮನೆಯ
ಭೋಜನಸಮಾರಂಭಕ್ಕೆ ಬಂದಾಗ ಪದ್ಮಿನಿಯು ಅವನನ್ನು ನೋಡಿ
ಮೋಹಿತಳಾಗಿ ಇವನೇ ದಂತಿವರ್ಮನಿರಬಹುದೇನೆಂದು ಯೋಚಿಸುತ್ತೆ
ನಿಂತಿದ್ದಳು. ಆಗ ಪದ್ಮಿನಿಯ ಸೋದರತ್ತೆಯು ಅವಳ ಮನೋಗತವನ್ನರಿತು
" ಪದ್ಮಿನಿ, ಕುಮಾರ ದಂತಿವರ್ಮರೆಂಥವರಿರುವರೆಂದು ನೀನು ಕೇಳುತ್ತಿದ್ದಿ
ಯಲ್ಲ, ಅವರೇ ಇವರು! ? ಎಂದು ಸಾಭಿಪ್ರಾಯವಾದ ನಗೆ ನಕ್ಕಳು.
ಇವನೇ ದಂತಿವರ್ಮನೆಂದರಿತ ಕೂಡಲೆ ಪದ್ಮಿನಿಯು ಪ್ರೇಮಪರವಶ
ಳಾಗಿಹೋದಳು.
" ಕಣ್ಣು ಮನ ನಾಲಿಗೆಯು ತನ್ನವೆಂದೆನಬೇಡ " ಎಂದು ಹೇಳಿದ
ಕವಿಯ ಹೆಸರು ಸರ್ವಜ್ಞನಲ್ಲನೆ? ಲಜ್ಜಾವನತನುಖಿಯಾದ ಪದ್ಮಿನಿಯು
ಮತ್ತೊಮ್ಮೆ ತನ್ನ ಮನೋರಮಣನ ದಿವ್ಯವಾದ ಮುಖವನ್ನು ನೋಡುನೆ
ನೆಂದರೆ ಇವಳ ಕಣ್ಣುಗಳು ಮೇಲಕ್ಕೆ ಎತ್ತಲೊಲ್ಲವು. ದುರ್ಲಲಿತವಾದ
ಅವಳ ಮನಸ್ಸು ಎಷ್ಟು ಮಾಡಿದರೂ ಅವಳ ಸ್ವಾಧೀನವಾಗಲೊಲ್ಲದು.
ಅತ್ತೆಯು ನುಡಿದ ಮಾತಿಗೆ ಪ್ರತ್ಯುತ್ತರವನ್ನು ಕೊಡುವೆನೆಂದರೆ ನಾಲಿಗೆ
ಹೊರಳಲಿಲ್ಲ. ಎಂತೋ ಏನೋ ಅವರೀರ್ವರ ಮನೋಭಿಪ್ರಾಯಗಳು
ಸಂಗಡಲೆ ಪರಸ್ಪರರಿಗೆ ವಿದಿತವಾದವೆಂದು ನಮಗೆ ತಿಳಿದಿದೆ. ತಂತಿಗಳುಳ್ಳ
ದ್ದಾಗಲಿ ತಂತಿಯಿಲ್ಲದ್ದಾಗಲಿ, ಸಂದೇಶವಾಹಿನಿಯಾದ ವಿದ್ಯುತ್‌ಶಕ್ತಿಯ
ಶೋಧವು ಒಂದು ಸಾವಿರ ವರುಷಗಳ ಪೂರ್ವದಲ್ಲಿ ಆಗಿದ್ದಿಲ್ಲವಷ್ಟೆ ?
ಈ ಪ್ರಣಯಿಗಳ ಪ್ರೇಮವು ಮೆಲ್ಲಮೆಲ್ಲನೆ ಬೆಳೆದು ದೃಢವಾಯಿತು.
ಪದ್ಮಿನಿಯ ಧ್ಯಾನವು ದಂತಿವರ್ಮನಲ್ಲಿ, ಅವನ ಧ್ಯಾನವೆಲ್ಲ ಆ ಸುಕುಮಾರಿ
ಯಲ್ಲಿ. ಮನೋಗತವಾದ ಪದ್ಮಿನಿಯ ದಿವ್ಯಮೂರ್ತಿಯ ಸನ್ನಿಧಾನದಲ್ಲಿ
ದೆಂತಿನರ್ಮನು ತನ್ನ ನಿಜವಾದ ದೇಹದ ಧ್ಯಾನವನ್ನು ಮರೆತುಬಿಡುವನು.
ಪದ್ಮಿನಿಯ ಮನಸ್ಸಿನ ಸ್ಥಿತಿಯಾದರೂ ಹಾಗೆಯೇ ಆಗಿತ್ತು.
ತನ್ನ ತಂಗಿಯ ಪ್ರೇಮವು ದಂತಿವರ್ಮನಲ್ಲಿ ಆಸಕ್ತವಾಗಿರುವ ಸಮಾ
ಚಾರವನ್ನರಿತು ಜಕ್ಕರಾಯನು ಅವಳನ್ನು ಸೇನಾಪಕಿಯ ಮನೆಗೆ ಕಳಿಸ
ದಂತಾದನು. ಇದುವರೆಗೆ ಕಟಾಕ್ಷ, ಮಂದಹಾಸ, ಆನ್ಕೋಕ್ತಿಗಳಿಂದ
ಸಂವರ್ಧಿಕವಾದ ಪ್ರೇಮವು ಇನ್ನುಮೇಲೆ ಪ್ರಬಂಧಾತ್ಮಕವಾದ ಪತ್ರವ್ಯವ
೨೧೫ -------------------------------------------------------------------------
ಹಾರದ ಮಾರ್ಗವಾಗಿ ವ್ಯವಹರಿಸಿತು. ಈ ಪತ್ರ ವ್ಯವಹಾರದ ಸಂಕೇತ
ವನ್ನದರೂ ಜಕ್ಕರಾಯೆನು ಕಳವಿನಿಂದ ಅರಿತುಕೊಂಡು ಹಿಂದಿನ
ಅಧ್ಯಾಯದಲ್ಲಿ ಹೇಳಿದ ಮೇರೆಗೆ ದಂತಿವರ್ಮನನ್ನು ಇಕ್ಕಟ್ಟಿನಲ್ಲಿ ಹಿಡಿದು
ಅವನನ್ನು ಘಾತಿಸಿದನು.
ದಂತಿವರ್ಮನ ವಧೆಯ ಪಾಪವು ಜಕ್ಕನ ಎದೆಯಲ್ಲಿ ಯಾವಾಗಲೂ
ಕಟಿಯುತ್ತಿತ್ತು. ಹಗಲುರಾತ್ರಿ ಅವನ ಜೀವಕ್ಕೆ ಸಮಾಧಾನವಿರಲಿಲ್ಲ. ಕನಸಿ
ನಲ್ಲಿ ಎಚ್ಚರಿಕೆಯಲ್ಲಿ, ಉಣ್ಣುವಾಗ ತಿನ್ನುವಾಗ ದಂತಿವರ್ಮನ ರೂಪವು
ಅವನ ಮುಂದೆ ನಿಂತಂತಾಗುತ್ತಿತ್ತು. ಒಂದು ರಾತ್ರಿ ನಿದ್ದೆ ಗೇಡಿಯಾಗಿ
ಬೇಸತ್ತು ಅವನು ತೋಟಕ್ಕೆ ಬಂದನು. ಅಕೋ ಅವನೊಂದು ಚಮ
ತ್ಯಾರವನ್ನು ಕಂಡನು. ಗಿಡದ ಕೊಂಬೆಗಳ ಮಧ್ಯದಲ್ಲಿ, ವರ್ತುಲಾಕಾರವಾಗಿ
ಕಾಣುವ ದೀಪಮಾಲಿಕೆಯ ಮಧ್ಯದಲ್ಲಿ ಅವನೊಬ್ಬ ತೇಜಸ್ವಿಯಾದ ಪುರು
ಷನ ಭವ್ಯ ವಾದ ಮ:ಖವನ್ನು ಕಂಡನು. ಯಾರವರು? ನಿರೀಕ್ರಿಸಿ ನೋಡ
ಲಾಗಿ ಾದು ದಂತಿವರ್ಮನ ಹಸಿತಮುಖವೇ ಆಗಿ ಕಂಡಿತು. ಜಕ್ಕರಾಯನ
ಎದೆಯಲ್ಲಿ ಆಣೇಕಲ್ಲು ಸುರಿದಂತಾಯಿತು. ಅಂಜಿ ಸತ್ತವನಾಗಿ ಎಡವುತ್ತೆ
ಮುಗ್ಗುತ್ತೆ ಅವನು ಮನೆಕಡೆಗೆ ಓಡಿದನು. ಸೇವಕರು ಏನೆಂದು ಕೇಳಿದರೆ
ಹೇಳಲಿಕ್ಕೆ ಬಾಯಿ ಬರಲೊಲ್ಲದು. ಮೈ ಕಾಯ್ದು ಕೆಂಡವಾಗಿತ್ತು.
ಮಾರನೆಯ ದಿವಸ ರಾತ್ರಿ ಎದೆಗಾರನೆಂದೆನಿಸಿಕೊಳ್ಳುವವನಾದ ಜಕ್ಕ
ರಾಯನ ಸೇವಕನೋರ್ವನು ತೋಟಕ್ಕೆ ಬಂದು ದಂತಿವರ್ಮನ ಭೂತದ
ಸಮಾಚಾರ ತೆಗೆದುಕೊಳ್ಳಲು ಸಿದ್ಧನಾಗಿ ಅಡ್ಡಾಡುತ್ತಿದ್ದನು. ತುಸು ಹೊತ್ತಿ
ನಲ್ಲಿ ಅವನಿಗೂ ಒಂದು ಅದ್ಭುತವು ಕಂಡಿತು. ಸಾರಂಗದಂಥ ಕೋಡು
ಗಳುಳ್ಳ ಭವ್ಯವಾದ ಕರಿಗುದುರೆಯನ್ನೇರಿಕೊಂಡು ಒಬ್ಬ ರಾವುತನು ಆ ಸೇವಕ
ನಿಗೆ ಇದಿರಾಗಿ ಧಾವಿಸುತ್ತೆ ಬರುತ್ತಿದ್ದನು. ಕುದುರೆಯ ಕೋಡುಗಳ ತುದಿ
ಗಳಲ್ಲಿಯೂ, ರಾವುತನ ಭಾಲೆಯ ತುದಿಯಲ್ಲಿಯೂ ಜ್ವಾಲೆಗಳು ಹೊರಡುತ್ತಿ
ದ್ದವು, ಚಮತತ್ಶಾರವಾದ ವೇಷವನ್ನು ಧರಿಸಿದ ಆ ರಾವುತನು ಭಾಲೆಯನ್ನು
ನವರಿ ತನ್ನ ಮೈಮೇಲೇರಿ ಸಮೀಪಕ್ಕೆ ಬಂದದ್ದು ಕಂಡು ಆ ಎದೆಗಾರನಾದ
ಸೇವಕನ ಎದೆಯೊಡೆದು ನೀರಾಗಿ ಅವನು ನಿಂತಲ್ಲಿಯೇ ನೆಲಕ್ಕುರುಳಿ ನಿಶ್ಚೇ
ಷ್ಟಿತನಾಗಿ ಬಿದ್ದನು.
೨೧೬ ----------------------------------------------------------------------------
ಹೀಗೆ ನಿತ್ಯದಲ್ಲಿಯೂ ಒಬ್ಬನೊಂದು ಮತ್ತೊಬ್ಬನು ಮತ್ತೊಂದು
ಪ್ರಕಾರವನ್ನು ಕಂಡು, ದಂತಿವರ್ಮನು ಮೃತನಾಗಿ ಭೂತನೇ ಆಗಿರುವ
ನೆಂದು ನಿಶ್ಚಯಿಸಿ, ಸಂಜೆಯಾಗುತ್ತಲೇ ಆ ತೋಟಕ್ಕೆ ಬೆಕ್ಕಿನ ಪಿಳ್ಳೆ ಕೂಡ
ಹೋಗದಂತಂಯಿತು.
ತನ್ನ ಪ್ರಿಯತಮನ ವಿಯೋಗನಾದದ್ದು ನೆನಿಸಿ ಪದ್ಮಿನಿಯು ಮನಸ್ಸಿ
ನಲ್ಲಿಯೇ ಹಲುಹಲುಬಿ ಮರುಗಿದಳು. ತನಗೇನಾಗಿದೆ ಎಂಬದನ್ನು ಆ ತಪ
ಸ್ವಿನಿಯು ಯಾರಿಗೆ ಏನೆಂದು ಹೇಳುವಳು ? ದಂತಿವರ್ಮನು ಹಾರಿಕೊಂಡ
ಮಡುವಿನ ದಂಡೆಯ ಮೇಲೆ ಹೋಗಿ ಅವಳು ಹುಚ್ಚಿಯಂತೆ ಒಮ್ಮೆ
ನೋಡುತ್ತೆ ನಿಲ್ಲುವಳು. ನದಿಯ ದಂಡೆಯ ಮೇಲೆ ಎಲ್ಲಾದರೂ ತನ್ನ
ಮನೋರಮಣನು ವಿಹರಿಸುತ್ತಿರುವನೋ ಎಂದು ಆ ಮುಗ್ಧೆಯು ಆಶಾಬದ್ಧೆ
ಯಾಗಿ ಮತ್ತೊಮ್ಮ ನೋಡುವಳು,
ಹೀಗೆಯೇ ಹೃದಯ ಶೂನ್ಯಳಾಗಿ ಪದ್ಮಿನಿಯು ಒಂದು ದಿನ ತಡಸಲದ
ದಂಡೆಯ ಮೇಲೆ ನಿಂತು ನೋಡುತ್ತಿರುವಾಗ ನದಿಯ ಆಚೆಯ ದಂಡೆಯ
ಮೇಲೆ ಧ್ನಾನಸ್ಥನಾಗಿ ಕುಳಿತಿರುವ ವೃದ್ಧನಾದ ಯೋಗೀಶ್ವರನನ್ನು ಕಂಡಳು.
"ಶೀತೋಷ್ಣ, ಸುಖದುಃಖಗಳ ಭೇದಗಳನ್ನು ಲೆಕ್ಕಿಸದೆ ಆ ಮಹಾತ್ಮನು
ನಿಶ್ಚಿಂತನಾಗಿರುವದರಿಂದಲೇ ಆ ವೃದ್ಧನಾದವನ ದೇಹವು ಜರಾಮರಣಗಳಿ
ಗೊಳಗಾಗದೆ ತೇಜಃಪುಂಜವಾಗಿಯೂ ಬಂಧುರವಾಗಿಯೂ ಕಂಡಿತು. "ಅವ
ನಂಥ ಮನೋನಿಗ್ರಹವು ನನ್ನಲ್ಲಿ ಇದ್ದದ್ದಾಗಿದ್ದರೆ ನನಗೀ ವ್ಯಸನನೆಲ್ಲಿ
ತಟ್ಟುತ್ತಿತ್ತು ?" ಎಂದು ಅವಳು ಚಿಂತಿಸಿದಳು. ತುಸು ವಿಚಾರ ಮಾಡಿ
" ಛೇಃ! ಪ್ರಾಣನಾಥನನ್ನು ಮರೆಯುವಂಥ ಮನೋನಿಗ್ರಹವು ನನಗೆ
ಬೇಡವೇ ಬೇಡ. ಪುರುಷನು ನಿಷ್ಠುರನೆಂದೇ ಇಂಥ ಘೋರತರವಾದ
ತಪಸ್ಸನ್ನಾಗಲಿ ರಣಾಂಗಣದಲ್ಲಿ ಹಿಂಸೆಯನ್ನಾಗಲಿ ಮಾಡಲು ಅಂಜುವದಿಲ್ಲ,
ಪ್ರೇಮಕ್ಕೆ ನಿರಂತರವಾದ ವಾಸವಾಗಿರುವ ನಮ್ಮ ಹೃದಯದಿಂದ ಅದನ್ನು
ನಾವು ದೂಡಿದರೆ, ಪಾಪ, ಅದೆಲ್ಲಿಗೆ ಹೋಗಬೇಕು? ಆದೇ ಪ್ರೇಮವೇ
ಕೋಮಲೆಯರಾದ ನಮ್ಮ ಎಡೆಯನ್ನು ಸುಟ್ಟುಹಾಕುವದೆನ್ನುವಿರಾ ?
ಆದರೂ ಇರಲಿ!” ಎಂದು ವಿಚಾರಗೈಯುತ್ತೆ ಆ ಬಾಲೆಯು ಸುಯ್ಯನೆ
ಸುಯ್ದು ಕಂಬನಿಗರೆದಳು.
೨೧೭ --------------------------------------------------------------------------
ಮುಂದೆ ನಾಲ್ಕಾರು ದಿವಸಗಳಲ್ಲಿ ಆ ತೋಟದಲ್ಲಿ ಒಂದು ಚಮತ್ಕಾರ
ವಾಯಿತು. ಒಣಗಿದ ಮಲ್ಲಿಗೆಯು ಗಾಳಿಗೆ ಹಾರಿಹೋಗುತ್ತಿ ರುವಂತೆ
ಯಾವಳೋ ಬಾಲೆಯು ಎಚ್ಚರದಪ್ಪಿ ಓಡುತ್ತಿರುವಳು. ಹಿಡಿಯಿರಿ !
ದುಃಖಸಂತಪ್ತೆಯಾದ ಪದ್ಮಿನಿಯು ಪ್ರಾಣ ಕೊಡಲು ತಡಸಲಕ್ಕೆ ಓಡುತ್ತಿರು
ವಳು, ಯಾರಾದರೂ ಪಂಡಿತ ಭಾಂಡಾರಕರರನ್ನಾದರೂ ಬೇಗನೆ ಕರೆಯಿರಿ.
एतदनुसरणं नाम तदति निष्फलं ಎಂದವಳಿಗೆ ಬುದ್ಧಿಯನ್ನಾದರೂ
ಹೇಳಲಿ. ಅವರ ಅವತಾರವಿನ್ನೂ ಆಗಿಲ್ಲವೆಂದಿರಾ? ಉಪಾಯವಿಲ್ಲ.
ಅಲಂಕಾರರಹಿತೆಯೂ, ಏಕಸಸನೆಯೂ, ಉನ್ಮತ್ತರ ಮುಖಲಕ್ಷಣ
ವುಳ್ಳವಳೂ ಆದ ಪದ್ಮಿನಿಯು ಹಿಂದೆಮುಂದೆ ನೋಡದೆ ರಭಸದಿಂದೆ ಓಡುತ್ತೆ
ತಡಸಲದ ಕಡೆಯೊಂಡೆಯ ಬಳಿಗೆ ಬಂದು ಗಕ್ಕನೆ ನಿಂತಳು. ತನ್ನ ಸೀರೆ
ಯನ್ನು ಚೆನ್ನಾಗಿ ಬಿಗಿದುಟ್ಟು ಕೊಂಡು ಅವಳಿಸ್ನು ನೀರಿನಲ್ಲಿ ಹಾರುವವಳು;
ಅಷ್ಟರಲ್ಲಿ ಆ ಯೋಗೀಶ್ವರನು ಎಲ್ಲಿದ್ದನೋ ತಟ್ಟನೆ ಬಂದು ಅವಳ
ಕೈಯನ್ನು ಗಟ್ಟಿಯಾಗಿ ಹಿಡಿದನು. ಉಗ್ರ ತಪಸ್ವಿಯಾದ ಆ ಯೋಗಿಯನ್ನು
ಕಂಡು ಪದ್ಮಿನಿಯು ಗಲಿತನಿಶ್ಚಯಳಾಗಿ ಮೂಢೆಯಂತೆ ನಿಂತುಕೊಂಡಳು.
*ಆವಿಚಾರಿಯಾದ ತರುಣಿಯೇ, ನೀನಿದನ್ನೇನು ಮಾಡುತ್ತಿದ್ದಿ? 3
ಎಂದು ತಪಸ್ವಿಯು ಪದ್ಮಿನಿಯನ್ನು ಜರಿದು ಕೇಳಿದನು.
" ಸ್ವಾಮಿನ್, ನೀವು ತ್ರಿಕಾಲಜ್ಞರಾಗಿದ್ದರೆ ದಂತಿವರ್ಮರು ಜೀವಂತ
ರಾಗಿರುವರೋ, ಮೃತರಾಗಿರುವರೋ ಹೇಳಿರಿ. "
"ದಂತಿವರ್ಮನಾರೋ, ಅವನ ಸಮಾಚಾರವೇನೊಃ ನಾನರಿಯೆನು”
ಎಂದು ಯೋಗೀಶ್ಮರನು ಉತ್ತ ರಕೊಟ್ಟನು.
" ಹಾಗಾದರೆ ನನ್ನ ಕೈಬಿಟ್ಟು ದೂರ ನಿಲ್ಲಿರಿ. ನನ್ನ ಪ್ರಿಯತಮ
ನೊಡನೆ ಪರಲೋಕದಲ್ಲಿ ವಿವಾಹ ಮಾಡಿಕೊಳ್ಳಲು ಹೊರಟಿದ್ದೇನೆ,? ಎಂದು
ಆ ಮಾನಿನಿಯು ತನ್ನ ಕೈಬಿಡಿಸಿಕೊಳ್ಳಲು ಯತ್ನಿಸಿದಳು.
"ಸಾಧ್ವಿ ಇಂಥ ಅವಿಚಾರವನ್ನು ಮಾಡಬೇಡ ಕಂಡಿಯಾ. ನಿನ್ನಂಥ
ನಿಶ್ಚಲವಾದ ಪ್ರೇಮವುಳ್ಳವಳೂ, ದೃಢನಿಶ್ಚಯದನಳೂ, ಶುಚಿವ್ರತೆಯೂ
ಆದ ಮಾನಿನಿಯು ಹೀಗೆ ವ್ಯರ್ಥವಾಗಿ ಸತ್ತುಹೋಗಬೇಕೆಂದು ದೇವರು ನಿನ್ನ
ನಿರ್ಮಾಣವನ್ನು ಮಾಡಲಿಲ್ಲ. ನೀನೊಬ್ಬ ವೀರಶಿರೋಮಣಿಯ ಪತ್ನಿ
೨೧೮ --------------------------------------------------------------------------
ಯಾಗಿಯೂ, ಶುಚಿವ್ರತೆಯಾಗಿಯೂ ಇದ್ದುಕೊಂಡು ಈ ಜಗತ್ತಿನಲ್ಲಿ ಮಿಕು
ಳಿದ ನಾರಿಯರಿಗೆ ಸನ್ಮಾರ್ಗದರ್ಶಕಳಾಗು.”
" ಸಾಧುಗಳೇ, ನಾನು ನನ್ನ ಗೃಹ್ಯ ಸಂಸ್ಕಾರಗಳನ್ನು ಕುರಿತು ಆಲೋ
ಚಿಸಲು ನಿಮ್ಮೆಡೆಗೆ ಬಂದವಳಲ್ಲ, ಕೈಬಿಡಿರಿ. "
" ಹುಚ್ಚಿ, ಜನರು ಆತ್ಮಘಾತದಂಥ ಪಾತಕವನ್ನು ಮಾಡುತ್ತಿರುವ
ದನ್ನು ನೋಡಲು ನಾನು ಸಾಧುವಾಗಿ ಸಂಚರಿಸುವದಿಲ್ಲ” ಎಂದವನೇ ಆ
ಸಾಧುವು ಪದ್ಮಿನಿಯನ್ನು ನದಿಯ ದಂಡೆಯಿಂದ ಜಗ್ಗಿಕೊಂಡು ದೂರತ್ತ
ಕರತಂದನು.
ಪದ್ಮಿನಿಯು ದುಃಖಾತಿರೇಕದಿಂದ ದೊಡ್ಡ ದನಿತೆಗೆದು ಅತ್ತಳು
ಅವಳ ಸ್ಥಿತಿಯನ್ನು ಕಂಡು ಸಾಧುವಿಗಾದರೂ ಪರಮಾವಧಿಯ ವ್ಯಸನ
ವಾಯಿತು.
“ತರುಣಿ, ಆ ನಿನ್ನ ದಂತಿವರ್ಮನಾರು? ಅವನು ಮೃತನಾದನೆಂದು
ಊಹಿಸಲು ನಿನಗೇನು ಕಾರಣವಾಯಿತು? ಇಂದು ನೀನು ಇಂಥ ಸಾಹಸದ
ಕರ್ಮವನ್ನು ಮಾಡಲೇಕೆ ಪ್ರವರ್ತಿಸಿದೆ? "
ಪದ್ಮಿನಿಯು ಆ ಯೋಗೀಶ್ವರನ ಮುಂದೆ ತನ್ನ ಅಂತರ್ಗತವನ್ನು
ಬಚ್ಚಿಟ್ಟುಕೊಳ್ಳದೆ ದಂತಿವರ್ಮನು ಮಡುವಿನಲ್ಲಿ ಧುಮಕಿಕೊಂಡ ವರೆಗೆ
ನಡೆದ ಎಲ್ಲ ಸಂಗತಿಗಳನ್ನು ನಿವೇದಿಸಿ ತನ್ನ ಅಣ್ಣನು ನನ್ನನ್ನು ಮತ್ತೊರ್ವ
ತರುಣನಿಗೆ ಮದುವೆ ಮಾಡಿಕೊಡಲು ಹವಣಿಸಿದ್ದರಿಂದ ತನಗೆ ಪ್ರಾಣ
ಕೊಡುವ ಪ್ರಸಂಗವು ಬಂದಿರುವದೇದು ಹೇಳಿ ಮತ್ತೆ ಅತ್ತಳು.
" ಬಾಲೆ, ಸಮಾಧಾನವನ್ನು ತಾಳು. ನಿನ್ನ ಅಣ್ಣನು ಆರಿಸಿ ತೆಗೆದ
ವರನು ಹೇಗಿರುವನು? ”
" ಸ್ವಾಮಿ ಅವನು ಪ್ರತ್ಯಕ್ಷ ಇಂದ್ರನಾಗಿದ್ದರೂ ನನಗೇನು? ಗತಿಸಿ
ಹೋದ ನನ್ನ ಪ್ರಿಯನ ಪ್ರೇಮದ ಸಂಗತಿಗಳನ್ನು ನೆನೆದು ಜೀವಕ್ಕೆ ಸಮಾ
ಧಾನವನ್ನು ಹಚ್ಚಿಕೊಂಡಿರಬೇಕೆಂದರೆ ಅದು ಕೂಡ ನನ್ನ ಪಾಲಿಗೆ ಇಲ್ಲ
ವಾಗುವ ಪ್ರಸಂಗವು ಬಂದೊದಗಿದೆ. ?'
“ ನಿನ್ನ ಪ್ರಿಯನು ನಿಶ್ಚಯವಾಗಿ ಮೃತನೇ ಆದನೆಂದು ನೀನು ಹೇಗೆ
ನಂಬಿದೆ? ಅವನ ಪ್ರೇತವನ್ನು ಯಾರಾದರೂ ಕಂಡಿರುವರೋ??
೨೧೯----------------------------------------------------------------------
" ಇಲ್ಲ. ಆದರೆ ಅವರು ಬದುಕಿದ್ದಾಗಿದ್ದರೆ ಸಕಲ ಸಂಪತ್ತುಗಳಿಂದ
ತುಂಬಿದ ತಮ್ಮ ಮನೆಗೇಕೆ ಬರಲಿಲ್ಲ. ಅವರು ಮಡುವಿನಲ್ಲಿ ಬಿದ್ದದ್ದಕ್ಕೆ
ಇಂದಿಗೆರಡು ತಿಂಗಳಾದವು " ಎಂದು ಪದ್ಮಿನಿಯು ಕಣ್ಣೀರು ಸುರಿಸುತ್ತೆ
ನುಡಿದಳು.
" ಇಷ್ಟರಿಂದಲೇ ದಂತಿವರ್ಮನು ಮೃತನಾದನೆಂದು ತಿಳಿಯ ಕೂಡ
ದೆಂಬದಾಗಿ ಧರ್ಮಶಾಸ್ತ್ರಗಳು ಹೇಳುತ್ತವೆ. ಹೀಗೆ ನಷ್ಟಾದವರ ಮಾರ್ಗ
ಪ್ರತೀಕ್ಷೆಯನ್ನು ಹನ್ನೆರಡು ವರ್ಷಗಳ ವರೆಗೆ ಮಾಡತಕ್ಕದ್ದು.”
" ಇಲ್ಲದ ಆಸೆಯನ್ನು ನನ್ನ ಹೊಟ್ಟೆಯಲ್ಲಿ ಹಾಕಬೇಡಿ.”
" ಇರಲಿ, ನೀನಿನ್ನು ಆತ್ಮಘಾತದಂಥ ಅವಿಚಾರದ ಕೆಲಸ ಮಾಡ
ಬೇಡ. ನಾನು ಸೇನಾಪತಿ ಬಿಷ್ಟನಾಯಕರ ಬಳಿಗೆ ಹೋಗಿ ನಿನ್ನ ಸಮ್ಮತಿ
ಯಿಲ್ಲದೆ ನಿನ್ನ ವಿವಾಹದ ಗೋಜಿಗೆ ಹೋಗತಕ್ಕದ್ದ ಲ್ಲವೆಂದು ಜಕ್ಕರಾಯನಿಗೆ
ಆಜ್ಞೆ ಮಾಡಿಸುತ್ತೇನೆ. ಯೋಚಿಸಬೇಡ. ಕೂಡಿದಾಗ ನಾನು ಇದೇ ಸಮ
ಯಕ್ಕೆ ಇದೇ ಸ್ವಳದಲ್ಲಿ ಬಂದು ನಿನ್ನ ಸಮಾಚಾರವನ್ನು ತೆಗೆದುಕೊಳ್ಳುವೆನು "
ಎಂದು ಹೇಳಿ ಯೋಗಿಯು ಹೊರಟುಹೋದನು.
* * * *
ತನ್ನ ತಂಗಿಯ ಮದುವೆಯನ್ನು ಅವಳ ಒಪ್ಪಿಗೆಯಿಲ್ಲದೆ ಮಾಡಲಾಗ :
ದೆಂದು ದಳವಾಯಿ ಬಿಷ್ಟನಾಯಕರು ಆಜ್ಞೆಗೈದದ್ದನ್ನು ಅರಿತು ಜಕ್ಕನಿಗೆ
ವಿಸ್ಮಯವಾಯಿತು. ಸೇನಾಪತಿಗಳಿಗೆಯಾರು ಹೇಳಿದರು? ಒಬ್ಬ ಯೋಗಿಯು
ಸೇನಾಪತಿಗಳ ಬಳಿಗೆ ಬಂದು ಸೂಚಿಸಿದ ಮೇರೆಗೆ ಬಿಷ್ಟನಾಯಕನು
ತನ್ನನ್ನು ಹೀಗೆ ನಿರ್ಬಂಧಿಸಿದನೆಂಬ ಸಂಗತಿಯನ್ನು ಕೇಳಿ ಜಕ್ಕರಾಯನು
ಆ ಯೋಗಿ ಯಾರೆಂಬದರ ಬಗ್ಗೆ ಶೋಧ ಮಾಡಲಾರಂಭಿಸಿದನು.
ನಿತ್ಯದಲ್ಲಿಯೂ ರಾತ್ರಿ ತಮ್ಮ ತೋಟಕ್ಕೆ ಒಬ್ಬ ಬೈರಾಗಿಯು ಬರು
ತ್ತಿರುವ ಸಂಗತಿಯ ಶೋಧವಾಯಿತು. ಪದ್ಮಿನಿಯು ಆ ಜೋಗಿಯ ಸಂದ
ರ್ಶನಕ್ಕಾಗಿ ದಿನಾಲು ತೋಟಕ್ಕೆ ಹೋಗುತ್ತಿರುವಳೆಂದೂ ಒಬ್ಬ ಪಾಳತಿ
ಗಾರನು ಕಂಡುಹಿಡಿದನು. ಹೀಗೆ ಅಪ್ರಶಸ್ತವಾದ ಸಮಯಲ್ಲಿ ತನ್ನ ತಂಗಿಯು
ಪರಪುರುಷನಾದ ಯೋಗಿಯ ಜೊತೆಯಲ್ಲಿ ಮಾತುಕಥೆಗಳನ್ನಾಡುವದನು
ಕೇಳಿಯೂ, ಅದೇ ಜೋಗಿಯೇ ಪದ್ಮಿನಿಯ ವಿವಾಹಕ್ಕೆ ಎಡರು ತರಲು
೨೨೦ --------------------------------------------------------------------
ಕಾರಣನಾಗಿರಬಹುದೆಂದು ತರ್ಕಿಸಿಯ್ಕೂ ಜಕ್ಕರಾಯನು ಈರ್ಷೆ ಮತ್ಸರ
ಕ್ರೋಧಗಳಿಗೆ ವಶನಾಗಿ ಆ ತಾಪಸಾಧಮನನ್ನು ಸಂಹರಿಸುವೆನೆಂದು
ನಿಶ್ಚಯಿಸಿದನು.
ಪದ್ಮಿನಿಯು ಒಂದು ದಿನ ರಾತ್ರಿ ಉದ್ಯಾನದ ಕಡೆಗೆ ನಡೆದಾಗ ಅವಳ
ಬೆನ್ನು ಮೇಲೆಯೇ ನಾಲ್ಕು ಜನ ಶಸ್ತ್ರಪಾಣಿಗಳು ಆದೇ ಉದ್ಯಾನದ ಕಡೆಗೆ
ನಡೆದಿರುವರೆಂದರಿತು, ಅವಳು ಚಪಲಗತಿಯಿಂದ ಬಂದು ಯೋಗೀಶ್ವರನಿಗೆ
ಅಪಘಾತವಿದೆಯೆಂದು ಸೂಚಿಸಿದಳು. ಸಂಗಡಲೆ ಯೋಗಿಯು ಎಲ್ಲಿಯೋ
ಹೋಗಿ ಖಡ್ಗ ಕವಚ (ಢಾಲು) ಶೂಲಗಳನ್ನು ತೆಗೆದುಕೊಂಡು ಬಂದು
ಅತ್ಮಸಂರಕ್ಷಣಕ್ಕಾಗಿಯೂ; ಅವಶ್ಯವಿದ್ದರೆ ಪದ್ಮಿನಿಯ ಸಂರಕ್ಷಣಕ್ಕಾಗಯೂ
ಸಜ್ಜನಾಗಿ ನಿಂತುಕೂಂಡನು.
“ ಸ್ವಾಮಿನ್, ಈ ಶಸ್ತ್ರಕವಚಗೆಳು ನಿಮಗೆ ಸಿಕ್ಕಿದ್ದರೂ ಇವುಗಳನ್ನು
ಉಪಯೋಗಿಸುವ ಜಾಣತನವು ನಿಮಗೆ ಬಾರದು. ನೀವು ಸುಮ್ಮನೆ ಇಲ್ಲಿಂದ
ಓಡಿಹೋಗುವದೇ ಲೇಸು. ನಮ್ಮ ಅಣ್ಣನಾದ ಜಕ್ಕನಾಯಕನು ಘೋರ
ಕರ್ಮನಾದ ವೀರನು. ಅವನಲ್ಲಿ ದಯಾಮಾಯೆಗಳಿಗೆ ಅವಕಾಶವಿಲ್ಲ, ನಿಮ್ಮ
ಜಟಾಭಸ್ಮಗಳನ್ನಾದರೂ ಅವನು ಲೆಕ್ಕಿಸುವವನಲ್ಲ'' ಎಂದು ಪದ್ಮಿನಿಯು
ಹೇಳುವಷ್ಟರಲ್ಲಿಯೇ ಜಕ್ಕರಾಯನೂ, ನಾಲ್ಕಾರು ಜನ ಅನುಯಾಯಿಗಳೂ
ಅಲ್ಲಿಗೆ ಆರ್ಭಟೆಯಿಂದ ಬಂದರು. ಪದ್ಮಿನಿಯು ಅಲ್ಲಿಯೇ ಒಂದು ಗಿಡದ
ಮರೆಗೆ ನಿಂತುಕೊಂಡಳು. ಯೋಗಿಯು ತನ್ನ ಪ್ರಚಂಡವಾದ ಶೂಲವನ್ನು
ತೆಗೆದುಕೊಂಡು ಪ್ರತ್ಯಕ್ಷ ಧೂರ್ಜಟಿಯಂತೆ ರೌದ್ರವಾದ ಆವೇಶದಿಂದ ನಿಂತಿ
ದ್ದನು. ಯೋಗಿಯು ಹೀಗೆ ಯುದ್ಧಕ್ಕೆ ಸನ್ನದ್ಧನಾಗಿ ನಿಂತಿರುವನ್ನು ಕಂಡು
ಆ ಆತತಾಯಿಗಳೆಲ್ಲರೂ ಅಪಹಾಸದಿಂದ ಖೊಳ್ಳಖೊಳ್ಳಫೆ ನಕ್ಕು ಸುತ್ತುಗಟ್ಟಿ
ಅವನ ಮೈಮೇಲೆ ಏರಿಹೋದರು.
ತಾಪಸನು ಸಂಗಡಲೆ ತನ್ನ ಶೂಲದಂಡವನ್ನು ತನ್ನ ಮೈಸುತ್ತ ಗರ
ಗರನೆ ತಿರುವುತ್ತ ಶತ್ರುಗಳ ಹೊಡೆತಗಳನ್ನು ಬಹು ಚಮತ್ಕಾರವಾದ ರೀತಿ
ಯಿಂದ ನಿವಾರಿಸಿದ್ ಲ್ಲದೆ, ಆಗಾಗ್ಗೆ ಆ ಶೂಲಾಗ್ರದಿಂದ ಒಬ್ಬೊಬ್ಬರನ್ನು
ಗಾಯವಾಗುವಂತೆ ತಿವಿಯುತ್ತಿದ್ದನು. ಶತ್ರುಗಳು ಸಾಹಸಿಗಳಾದ ಭಟ
ರಾಗಿದ್ದರೂ ಅವರ ಆಟವೇನೂ ಸಾಗದೆಹೋಗಿ ಪ್ರಕಿಯಾಗಿ ಅವರಿಗೇ
೨೨೧ ------------------------------------------------------------------------------
ಭಯಂಕರವಾದ ಘಾಯಗಳಾಗುತ್ತಿ ರುವದನ್ನು ಕಂಡು ಜಕ್ಕರಾಯನು
ಉದ್ರೇಕದಿಂದ ಬೊಬ್ಬಿರಿದು " ಭಟರೆ, ಈ ಕೈಯು ದಂತಿವರ್ಮನದೇ !
ಮತ್ತೊಬ್ಬನದಲ್ಲ. ಅನಾಯಾಸವಾಗಿ ವೈರಿಯು ಕೈಯಲ್ಲಿ ಸಿಕ್ಕಿರುವನು;
ಜೀವದ ಹಂಗುತೊರೆದು ಇವನನ್ನು ಏರೇರಿ ಗಟ್ಟಸಿರ!” ಎಮದು ಹೇಳಿದ
ವನೇ ತಾನೂ ತನ್ನ ಬರ್ಜಿಯನ್ನು ತೆಗೆದುಕೊಂಡು ಅದನ್ನು ಮಂಡಲಾಕಾರ
ವಾಗಿ ತಿರುವುತ್ತೆ ದಂತಿವರ್ಮನ ಮೈ ಮೇಲೇರಿ ಹೋದನು. ದಂತಿವರ್ಮ
ನೆಂಬ ಹೆಸರು ಕೇಳಿದ ಕೂಡಲೆ ಗಾಯತಳೆದ ಭಟಿರೆಲ್ಲರೂ ಅಂಜಿ ಹಿಂದಕ್ಕೆ
ಸರಿದುಕೊಂಡರು.
ಜಕ್ಕರಾಯನೂ ದೆಂತಿವರ್ಮನೂ ಅರ್ಧಗಳಿಗೆಯತನಕ ಒಳ್ಳೇ ಆರ್ಭಟೆ
ಯಿಂದಲೂ ಈರ್ಷೆಯಿಂದಲೂ ಕಾದಿದರು. ಅವರೀರ್ವರ ಬರ್ಚಿಗಳ ಗಣಿಗಳು ರಭಸ
ದಿಂದ ಗರಗರನೆ ಮಂಡಲಾಕಾರವಾಗಿ ತಿರುಗುತ್ತಲು ದೃಷ್ಟಿಭ್ರಮಕ್ಕಾಗಿ
ನೂರಾರು ಕೋಲುಗಳು ಗಿಮಿಗಿವಿ ತಿರುಗುತ್ತಿರುವಂತೆ ಕಂಡವು. ಖಡ
ಖಡಲ್ಲೆನೆ , ಠಣಠಣಲ್ಲೆನೆ ಒಂದಕ್ಕೊಂದು ಬರ್ಚಿಗಳು ಅಪ್ಪಳಿಸಿ ಸಪ್ಪಳಾಗುತ್ತಿ
ರಲು, ಕಮ್ಮಾರನ ಆದ್ದುಗಾಣಿಯ ಮೇಲೆ ಸಂತತವಾಗಿ ಬೀಳುವ ಸುತ್ತಿಗೆಗಳ
ಹೊಡೆತಗಳು ಸಪ್ಪಗಾಗಿ ಕಂಡವು. ಜಕ್ಕರಾಯನು ರೋಷಾವೇಶದಿಂದ
“ನೀಜಾ ರಾಜಕುಲಾಂಗಾರಾ, ಮುಗ್ಧೆಯಾದ ಕುಲವಧುವನ್ನು ವಂಚಿಸಿ ನೀನು
ಮಾಡಿದ ಪಾತಕದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳು ! " ಎಂದು ನುಡಿದು
ತನ್ನ ಬರ್ಚಿಯಿಂದ ದಂತಿವರ್ಮನನ್ನು ತಿವಿಯಹೋದನು. ಆವೇಶದ ಆ ಹೊಡೆ
ತವು ತಪ್ಪಿದ್ದರಿಂದ ಜಕ್ಕನು ಜೋಲಿತಪ್ಪಿ ಫಕ್ಕಫೆ ನೆಲಕ್ಕೆ ಬಿದ್ದನು. ದಂತಿ
ವರ್ಮನು ಜಕ್ಕನ ಬರ್ಚಿಯನ್ನು ಲಗುಬಗೆಯಿಂದ ಸೆಳೆದುಕೊಂಡು ಚೇಷ್ಟೆ
ಯಿಂದ ನಕ್ಕು " ಚಕ್ಸರಾಯ ನೀನು ರಾಜಕುಲಸಂಭವನಿಗೆ ತಲೆವಾಗಿ
ಸಾಷ್ಟಾಂಗವೆರಗಿದ್ದು ಕಂಡು ನಾನು ನಿನ್ನನ್ನು ಕ್ಷಮಿಸಿದ್ದೇನೆ ಎಂದು
ನುಡಿದನು.
" ದಂತಿವರ್ಮ, ಧರ್ಮಯುದ್ಧ ವನ್ನು ಮಾಡುವದಿದ್ದರೆ,, ಆ ಕೋಲು
ಗಳನ್ನೊಗೆದು ಖಡ್ಗವನ್ನು ಹಿರಿ! " ಚೇಷ್ಟೆಯ ಮಾತಾಡಿದರೆ ಪೌರುಷ
ವಾಗಲಿಲ್ಲ! " ಎಂದು ನುಡಿಮ ಜಕ್ಕರಾಯನು ತನ್ನ ಖಡ್ಗ ನ್ನು ಹಿರಿದನು,
" ಅಡ್ಡಿಯಿಲ್ಲ! ಆದರೆ ಜಕ್ಕರಾಯ, ನೀನು ಕ್ರೋಧವಶನಾಗಿ ಕಂಪಿ
೨೨೨ --------------------------------------------------------------------------
ಸುತ್ತಿರುವಿ. ಈ ಯುದ್ಧದಲ್ಲಿಯಾದರೂ ನಿನಗೆ ಆಪಜಯವೇ. ಖಡ್ಗವನ್ನು
ಹಿರಿಯಲೆ ? ” ಎಂದು ದಂತಿವರ್ಮನು ತನ್ನ ಕತ್ತಿಯನ್ನು ಒರೆಯಿಂದ
ಹಿರಿದನು.
ತುಸುಹೊತ್ತು ಖಡ್ಗಗಳ ಯುದ್ಧವಾಗುವಷ್ಟರಲ್ಲಿ ಜಕ್ಕರಾಯನ ತೊಡೆಗೆ
ಗಾಯವಾದ್ದರಿಂದ ಅವನು ಮತ್ತೆ ಬಿದ್ದನು. ದಂತಿವರ್ಮನು ಅವನ ಎದೆಯ
ಮೇಲೆ ಕಾಲುಮೆಟ್ಟಿ " ನೀಚಾ, ಕೃತಘ್ನಾ, ಜೀವದಾನವನ್ನು ಬೇಡುವ
ದಿದ್ದರೆ ಬೇಡಿಕೋ. ವಿಷಪುಂಜವಾದ ನಿನ್ನ ಎದೆಯ ರಕ್ತದಿಂದ ಭೂಮಿ
ಯನ್ನು ದೂಹಿಸಲಾರೆನು ! " ಎಂದು ಗದ್ದರಿಸಿ ನುಡಿದನು.
ಅಷ್ಟರಲ್ಲಿ ಪದ್ಮಿನಿಯು ಓಡಿಬಂದು ಶನ್ಮ ಪ್ರಿಯನಿಗೆ ಕೈಜೋಡಿಸಿ,
" ದಂತಿವರ್ಮರಾಜ, ದಾಸಿಯಾದ ನಾನು ಈ ಚರಣಗಳ ಪ್ರೇಮಕ್ಕೆ ಪಾತ್ರ
ಳಾಗಿದ್ದದ್ದು ನಿಜವಾಗಿದ್ದರೆ ಪ್ರಾಣದಾನವನ್ನು ಬೇಡುವಂಥ ಅಪಮಾನ
ಕರವಾದ ಸಮಯವನ್ನು ಅಣ್ಣನಾದ ಜಕ್ಕರಾಯನೊಡನೆ ಮಾಡಬೇಡಿರಿ ?'
ಎಂದು ಬೇಡಿಕೊಂಡಳು.
ದಂತಿವರ್ಮನು ಮಂದಹಾಸದಿಂದ "ಪ್ರಿಯೆ, ನಿನ್ನ ಇಚ್ಛೆಯೇ
ಪ್ರಮಾಣವು ಎಂದು ನುಡಿದು ಜಕ್ಕನ ಎದೆಯ ಮೇಲಿನ ಕಾಲು ತೆಗೆದು
ಹಿಂದಕ್ಕೆ ಸರಿದುನಿಂತನು.
ಜಕ್ಕರಾಯನು ಎದ್ದು ನಿಂತು ತನ್ನ ತಂಗಿಯನ್ನು ಕುರಿತು " ಹೊಲತಿ,
ಈ ನೀಚನಿಗೆ ನೀನು ಪ್ರಿಯಳೆ?'' ಎಂದು ಉದ್ಗಾರ ತೆಗೆದು ಕುಂಟುತ್ತ
ಲಿದ್ದರೂ ತನ್ನ ಖಡ್ಗವನ್ನೈತ್ತಿ ಪದ್ಮಿನಿಯನ್ನು ಹೊಡೆಯ ಹೋಗುವಷ್ಟರಲ್ಲಿ ಆ
ಖಡ್ಗವು ದಂತಿವರ್ವನ ಖಡ್ಗದ ಹೊಡತಕ್ಕೆ ಮೇಲಕ್ಕೆ ಹಾರಿಹೋಗಿ ದೂರ
ದಲ್ಲಿ ಬಿದ್ದಿತು. ಜಕ್ಕರಾಯನು ಮೋರೆ ತಿರುವಿಕೊಂಡು ಹೊರಟು
ಹೋದನು.
ತನ್ನ ಪ್ರಾಣಕಾಂತನು ಬದುಕಿ ಉಳಿದದ್ದನ್ನು ಕಂಡು ಪದ್ಮಿನಿಯ
ಹೃದಯದಲ್ಲಿ ಆಶ್ಚರ್ಯ, ಪ್ರೇಮ, ಆನಂದಾದಿ ವಿಕಾರಗಳು ಉಕ್ಕೇರಿ
ಬಂದವು. ಅವಳು ಸಾಶಂಕಳಾಗಿದ್ದರೂ ಆ ಬೈರಾಗಿಯನ್ನು ಅಪ್ಪಿ
ಕೊಂಡಳು. ದಂತಿವರ್ಮನು ತನ್ನ ಜಡೆಗಡ್ಡಗಳನ್ನು ಹರಿದೊಗೆದು ಪದ್ಮಿ
ನಿಯ ಸಂಶಯವನ್ನು ದೂರಮಾಡಿ ತಾನವಳನ್ನು ಮತ್ತೆ ಅಪ್ಪಿ ಕೊಂಡನು.
೨೨೩ -----------------------------------------------------------------------
ಅಣ್ಣನ ಮನೆಯಲ್ಲಿರುವದು ಪದ್ಮಿನಿಗೆ ಕ್ಲೇಮಕರವಾದದ್ದಲ್ಲವೆಂದೆಣಿಸಿ
ದಂತಿವರ್ಮನು ಅವಳನ್ನು ಸೇನಾಪತಿಯ ಮನೆಗೆ ಕಳಿಸುವ ವ್ಯವಸ್ಥೆಯನ್ನು
ಮಾಡಿ ತಾನು ತನ್ನ ಪಟ್ಟಣವಾದ ಹೇಮದುರ್ಗಕ್ಕೆ ಬಂದುಬಿಟ್ಟನು. ಇವೆಲ್ಲ
ಸಂಗತಿಗಳನ್ನು ಬೆಳಿಸಿ ಹೇಳುವದು ಅವಶ್ಯವಾಗಿ ಕೋರಲಿಲ್ಲವಾದ್ದರಿಂದ ಈ
ಕಥಾಭಾಗಕ್ಕೆ ನಾವು ಅತಿ ಸಂಕ್ಷೇಪ ರೂಪತನ್ನು ಕೊಟ್ಟಿರುತ್ತೇವೆ.
* * * *
ಶಶ್ರುದಲ್ಲಣನಾದ ಪುಲಿಕೇಶಿ ಮಹಾರಾಯನು ನರ್ಮದಾ ಶೀರದ
ಉತ್ತರ ಪ್ರಾಂತಗಳನ್ನು ಜಯಿಸುವ ಆಲೋಚನೆಗಾಗಿ ಮಂತ್ರಿ ಸೇನಾ
ನಾಯಕರನ್ನೂ, ಪಾಳ್ಯ ಉಳ್ಸಡದವರನ್ನೂ, ಆಪ್ತರಿಸ್ಟರನ್ನೂ ಬರಮಾಡಿ
ಕೊಂಡು ತನ್ನ ರಾಜಧಾನಿಯಲ್ಲಿ ಮಹಾಸಭೆಯನ್ನು ಕೂಡಿಸಿದ್ದನು.. ಅಸಂಖ್ಯ
ವಾದ ಮಹಾತ್ಮರಿಂದ ಪುಲಿಕೇಶಿಯ ವಿಸ್ತೀರ್ಣವಾದ ಸಭಾಮಂದಿರ
ಬಿಗಿದು ಹೋಗಿತ್ತು. ಮಣಿಹೇಮಮಯವಾದ ಮಹಾ ಸಿಂಹಾಸನದಲ್ಲಿ
ವಿರಾಜಮಾನನಾಗಿದ್ದ ಶ್ರೀ ಸಶ್ಯಾಶ್ರಯ ಪುಲಿಕೇಶಿ ಸಾರ್ವಭೌಮನು ತಾರಾ
ಗಣಾನ್ವಿತವಾದ ಗಗನಮಂಡಲದಲ್ಲಿ ಮೆರೆಯುವ ಮಹೇಂದ್ರನಂತೆ ಕಂಗೊಳಿ
ಸುತ್ತಿದ್ದನು. ಮಹಾವೀರರಾದ ಸೇನಾಪತಿಗಳೂ ಅತಿರಥಿ ಮಹಾರಥಿಗಳೂ
ದರಗಂಡ ವೀರರೂ, ಉದ್ರಿಕ್ತರಾದ ಕ್ಷತ್ರಿಯ ತರುಣರೂ ಸ್ಫೂರ್ತಿಯ
ಭಾಷಣಗಳನ್ನು ಮಾಡಿ, ಧಾರಾತೀರ್ಥದಲ್ಲಿ ದೇಹತ್ಯಾಗ ಮಾಡಿ ವೀರಸ್ವರ್ಗ
ವನ್ನಾಗಲಿ, ವಿಜಯಿಗಳೆಂದೆನ್ನಿಸಿಕೊಂಡು ಶತ್ರುಗಳ ರಾಜ್ಯವನ್ನಾಗಲಿ
ಆಕ್ರಮಿಸುವೆವಲ್ಲದೆ, ರಣಭೂಮಿಗೆ ಬೆನ್ನು ಕೊಡುವದಿಲ್ಲವೆಂದು ಅವರೆಲ್ಲರೂ
ಸಿಂಹಾಸನವನ್ನು ಮುಟ್ಟಿ ಪ್ರತಿಜ್ಞೆ ಮಾಡಿದರು. ಆಗಲಾ ನೃಪಸಾರ್ವ
ಭೌಮನು ನೆರೆದ ವೀರಮಂಡಲವನ್ನು ಚತುರೋಕ್ತಿಗಳಿಂದ ಸಂಭಾವಿಸಿ,
ಯುದ್ಧಕ್ಕೆ ಸನ್ನದ್ಧರಾಗತಕ್ಕ ಸೈನಿಕ ಸೇನಾನಾಯಕರಿಗೆಲ್ಲ ಶಸ್ತ್ರಾಸ್ತ್ರ ವಸ್ತ್ರ
ಪ್ರಾವರಣಗಳನ್ನೂ, ಅವಶ್ಯನಾದಷ್ಟು ಹಣವನ್ನೂ ಸಲ್ಲಿಸತಕ್ಕದ್ದೆಂದು
ಕೋಶಾಧಿಪತಿಗಳಿಗೆ ಆಜ್ಞಾಪಿಸಿ, ಇನ್ನು ಗಾನವಾದನ ಗಂಧತಾಂಬೂಲಗಳಾಗ
ಲೆಂದು ಸೂಚಿಸಿದನು.
ಅಷ್ಟರಲ್ಲಿ ಯಾರೋ "ದೂರು ದೂರು!” ಎಂದು ಕೂಗಿದರು,
ಸಭಾಕಾರ್ಯದರ್ಶಿಯಾದ ರಾಜಪುರುಷನೊಬ್ಬನು ಆ ದೂರಿಡುವವನ
೨.೨೪ -----------------------------------------------------------------------
ಶೋಧಮಾಡಿ ಅವನನ್ನು ತಂದು ಸಿಂಹಾಸನದ ಮುಂದೆ ನಿಲ್ಲಿಸಿದನು.
"ಯಾರವರು! ಜಕ್ಕರಾಯ, ನಿನ್ನದೇನು ಆಭಿಯೋಗ
( ಫಿರ್ಯಾದ)” ಎಂದು ಉಲ್ಲಾಸವೃತ್ತಿಯವನಾದ ಆ ನೃಪೇಶ್ವರನು ಬೆಸ
ಗೊಂಡನು.
ರಾಜಾಧಿರಾಜರೆ, ಈ ಸಿಂಹಾಸನದ ಪ್ರೀತ್ಯಾಸ್ಪದನಾದ, ದಂತಿ
ವರ್ಮನು ನನ್ನ ಅಂತಃಪುರದ ಮರ್ಯಾದೆಯ ಭಂಗ ಮಾಡಲೆಸಗಿದನು. ”
": ಜಕ್ಕರಾಯ, ಚಾಲುಕ್ಯವಂಶಸಂಭವರಾದ ಕುಮಾರ ದಂಕಿವರ್ಮರ
ಹೆಸರು ತೆಗೆದುಕೊಳ್ಳುವದಾದರೆ ಬಹುನಚನದಿ:ದಲೇ ನೀನು ತೆಗೆದುಕೊಳ್ಳ
ಬೇಕಾಗಿತ್ತು. ಇರಲಿ, ನಮ್ಮ ಶಾಸನದಂಡವು ಪುತ್ರಮಿತ್ರರನ್ನು ಕೂಡಾ
ಲೆಕ್ಕಿಸದೆಂದು ತಿಳಿದುಕೋ. ದಂತಿವರ್ಮರು ಯಾರೊಡನೆ ಸಂಕೇತವನ್ನು
ಮಾಡಿದರು? ಆ ರಮಣಿಯು ವಿವಾಹಿತಳೋ ಕನ್ಯೆಯೋ " ಎಂದು
ಪುಲಿಕೇಶಿಯು ಕೇಳಿದನು.
“ ಅವಳು ವಿವಾಹಿತಳಲ್ಲ ಕನ್ನೆಯು. *
“ ಅಪರಾಧದ ಭಾರವು ಅರ್ಧಕರೆ ಕಡಿಮೆಯಾಯಿತು! ದಂತಿವರ್ಮರ
ಅತಿಕ್ರಮಣಕ್ಕೆ ಆ ಕನ್ಯಾಮಣಿಯ ಸಮ್ಮತಿಯೋ 7” ಎಂಬ. ಆ ನರೇಂ
ದ್ರನು ಮಂದಹಾಸವನ್ನು ತಳೆದು ಕೇಳಿದನು.
" ಅಪ್ರೌಢೆಯಾದ ಬಾಲೆಯ ಸಮ್ಮತಿಯು ನಿರರ್ಥಕವಾದದ್ ಲ್ಲವೆ
ಪ್ರಭೋ?” ಎಂದು ಜಕ್ಸರಾಯನು ಎದೆಗುಂದಿದವನಾಗಿ ನುಡಿದನು.
" ಆ ವಿಲಾಸಿನಿಯು ನಿನಗೇನಾಗಬೇಕು?
“ ದೇವರು, ಅವಳು ಪ್ರತ್ಯಕ್ಷ ನನ್ನ ತಂಗಿಯು. ಚಾಲುಕ್ಯ ಕುಲ
ಸಂಭವನಾದರೂ ಸಾಮಾನ್ಯ ಜನರ ಗೃಹಭೇದವನ್ನು ಮಾಡಲಿಕ್ಕೆ ಅವನಿಗೆ
ಬಾರದಷ್ಟೆ ? "
" ಜಕ್ಕರಾಯ, ರಾಜನೀತಿಯನ್ನು ಚನ್ನಾಗಿ ತಿಳಿಸಿಕೊಟ್ಟಿ. .
ಅದಿರಲಿ, ನಿನ್ನ ತಂಗಿಯು ಪರಮಸುಂದರಿಯೂ, ಚತುರೆಯೂ, ಕಲಿತವಳೂ
ಆಗಿರುವಳೆಂದು ನಾವು ಕೇಳಿದ್ದೇವೆ. ''
" ಅಹುದು ಜೀಯಾ! * ಎಂದು ಜಕ್ಕರಾಯನು ಪ್ರಣಾಮಮಾಡಿ
ಉತ್ತರಕೊಟ್ಟನು.
೨೨೫ ----------------------------------------------------------------------
“ ಹಾಗಿದ್ದರೆ ವಿದುಷಿಯೂ, ಚತುರೆಯೂ ಆಗಿದ್ದ ನಿನ್ನ ತಂಗಿಯು
ಕೂಡ ಈ ಸಂಬಂಧದಲ್ಲಿ ಅಪರಾಧಿಯೇ ಆಗಿರುವಳು. ರಾಜವಂಶಸಂಭವ
ರಾದ ಕುಮಾರ ದಂತಿವರ್ಮರಿಗೆ ನಮ್ಮ ಸಮ್ಮತಿಯಿಲ್ಲದೆ ವಿವಾಹ ಮಾಡಿ
ಕೊಳ್ಳಲು ಅಧಿಕಾರವಿಲ್ಲ. ಇಂಥ ಪರತಂತ್ರರಾಗಿದ್ದ ಆ ತರುಣ ಕುಮಾರ
ರನ್ನು ಆ ನಿನ್ನ ಚತುರೆಯಾದ ತಂಗಿಯು ತನ್ನ ಸೌಂದರ್ಯದ ಲಾವಣ್ಯ
ದಿಂದಲೂ, ತನ್ನ ಕಟಾಕ್ಷಪ್ರೆಕ್ಷಣದಿಂದಲ್ಕೂ ಮೃದುಹಾಸದಿಂದಲೂ,
ವಿಭ್ರಮಗೊಳಿಸಿ ನಮ್ಮ ಶಾಸನದಿಂದ ಅವರನ್ನು ಪರಾಙ್ಮುಖರನ್ನಾಗಿ ಮಾಡಿ
ದಳು?” ಎಂದು ನುಡಿದು ಪುಲಿಕೇಶಿ ಮಹಾರಾಯನು ಯಥೇಷ್ಟವಾಗಿ
ನಕ್ಕನು.
ಯಥಾ ರಾಜಾ ತಥಾ ಪ್ರಜಾ! ಚಕ್ರವರ್ತಿಯ ಮಾತಿಗೆ ಸಭೆಯೇ
ನಕ್ಕಿತು. ಪಾಪ, ಜಕ್ಕರಾಯನಿಗೆ ಅಪ್ರತಿಷ್ಠೆಯಾದಂತಾಗಿ ಅಳುಮೋರೆ
ಮಾಡಿಕೊಂಡು ನಿಂತನು. ಅವನ ಅವಸ್ಥೆಯನ್ನು ಕಂಡು ಪುಲಿಕೇಶಿಯು
ಗಂಭೀರವೃತ್ತಿಯನ್ನು ತಾಳಿ ಅಂದದ್ದು ; “ ಜಕ್ಕರಾಯ್ಕ ಇದುವರೆಗೆ
ನಾವು ಆಡಿದ್ದು ಕೇವಲವಾದ ಪರಿಹಾಸೋಕ್ತಿಯಲ್ಲದೆ ಯಥಾರ್ಥವಲ್ಲ.
ದಂತಿವರ್ಮರು ಅಪರಾಧಿಗಳೇ ಎಂದು ನಿರ್ಣಯವಾದ ಪಕ್ಷದಲ್ಲಿ ಅವರನ್ನು
ನಾವು ದಂಡಿಸದೆ ಬಿಡೆವು ಆದರೆ ಈಗಲೆ ಇಲ್ಲಿ ನೆರೆದ ವೀರರೆಲ್ಲರು ಪ್ರತಿಜ್ಞೆ
ಮಾಡಿದ್ದು ನೀನು ಕೇಳಿದಿಯಷ್ಟೆ. ಹೀಗೆ ಉಗ್ರವಾದ ಪ್ರತಿಜ್ಞೆಯನ್ನು
ಮಾಡಿ ಯುದ್ಧಕ್ಕೆ ಹೊರಟ ವೀರರ ಅಪರಾಧಗಳ ವಿಚಾರಣೆಯು ಯುದ್ಧ
ಮುಗಿಯುವವರೆಗೆ ಆಗಕೂಡದೆಂದು ನಮ್ಮ ನಿಶ್ಚಿತವಾದ ನಿಯಮವು.
ಸಾರ್ವಭೌಮರಾದ ನಾವೂ, ಸಾಮಾನ್ಯನಾದ ಕ್ಷತ್ರಿಯ ವೀರನೂ ಸಮರಾಂ
ಗಣದಲ್ಲಿ ಭುಜಕ್ಕೆ ಭುಜ ಕೊಟ್ಟು ಮರಣನ ಭೀತಿಯನ್ನು ಬದಿಗೊತ್ತಿ ಶತ್ರು
ಗಳೊಡನೆ ಘೋರವಾದ ಸಂಗ್ರಾಮವನ್ನು ಮಾಡುತ್ತಿರಲು ನಾನೆಲ್ಲರೂ
ಬಂಧುಗಳೇ ಅಲ್ಲವೆ? ಒಂದೇ ಪಙ್ತಿಯಲ್ಲಿ ಕಾಡುಕೂಳು ತಿಂದು ಒಂದೇ
ಭೂಪ್ರದೇಶದಲ್ಲಿ ಇರುಳುಗಳೆದು ಒಂದೇ ಹೇತುವಿಗಾಗಿ ನಾವು ವ್ರತಸ್ಥರಾಗಿ
ಕಾದುತ್ತಿರಲು ನಮ್ಮಲ್ಲಿ ಶಾಸನಾರ್ಹನಾರು ಶಾಸಕನಾರು? ನಾವು ವಿಜಯಿ
ಗಳಾಗಿ ಮರಳಿ ರಾಜಧಾನಿಗೆ ಬಂದಬಳಿಕೇ ರಾಜನು ರಾಜನು, ಪ್ರಜರು
ಪ್ರಜರು. ಯುದ್ಧವು ಮುಗಿದ ಬಳಿಕ ಅಪರಾಧಿಯು ಪ್ರತ್ಯಕ್ಷ ನನ್ನ ಮಗ
೨೨೬ -----------------------------------------------------------------
ನಿದ್ದರೂ ಅವನು ನನ್ನವನಲ್ಲ ಇನ್ನೀ ಮಾತು ಸಾಕು ಈವೊತ್ತಿನ
ಸಮಾರಂಭದಲ್ಲಿ ವಿಷಾದ ಬೇಡ.
* * * *
ಕರ್ನಾಟಕದ ಪಟುಭಟರ' ಸೆೇನಾಸಮುದ್ರವು ನರ್ಮದೆಯ ಉಕ್ತ ರ
ಪ್ರದೇಶದಲ್ಲಿ ಹೊಕ್ಕು ಶತ್ರು ಸೇನೆಯನ್ನು ಸಂಹರಿಸುತ್ತಲೂ ಗಿರಿದುರ್ಗಗಳನ್ನು
ಕೈಸೇರಿಸಿಕೊಳ್ಳುತ್ತಲೂ ಅವ್ಯಾಹತವಾಗಿ ನಡೆದಿತ್ತು. ಪುಲಿಕೇಶಿಯೆಂದರೆ
ಪುಲಿಕೇಶಿಯೇ! ಸಮರಾಂಗಣಕ್ಕೆ ಸಿಂಹನು! ಸಿಂಹವು ಹಿಂದಿರುಗು
ವದೂ ಅಲ್ಲ, ಅದರ ಪಾತ್ರರು ಕಟ್ಟಿ ಬದುಕಿದವರೂ ಇಲ್ಲ. ಹೀಗೆ
ಅಪಜಯನೆಂಬ ತಿಮಿರವನ್ನು ಶತ್ರುಮಂಡಲದೊಡನೆ ಅಟ್ಟಿ ಓಡಿಸುತ್ತಲೂ,
ವಿಜಯಪ್ಭಭೆಯನ್ನು ತಾನು ಹೋದಹೊದಲ್ಲಿ ಪ್ರಸರಿಸುತ್ತಲೂ ಪುಲಿಕೇಶಿ
ಯೆಂಬ ಭಾಸ್ಕರನು ನಡೆದಿದ್ದನು. ಆರಾಯನ ದಿಗ್ವಿಜಯಿಯಾದ ಸೈನ್ಯವು
ಮುಂದೆ ಕೆಲವು ದಿವಸಗಳಲ್ಲಿ ಒಂದು ಪರ್ವತಮಯವಾದ ಪ್ರ ದೇಶಕ್ಕೆ
ಬಂದಿತು. ಗಗನಮಂಡಲವನ್ನು ಭೇದಿಸುವಂಥ ಉತ್ತುಂಗವಾದ ಶಿಖರಗ
ಳಿಂದಲೂ, ಪಾತಾಳವನ್ನು ಕಂಡಿರುವ ಆಗಾಧವಾದ ಕಂದರದರಿಗಳಿಂದಲೂ
ಆ ಪ್ರದೇಶವು ವಿಚಿತ್ರವಾಗಿಯೂ, ದುರ್ಗಮವಾಗಿಯೂ ತೋರಿತು. ಅತ್ಯು
ನ್ನತವಾದ ಒಂದು ಪರ್ವತಾಗ್ರದಲ್ಲಿ ಭದ್ರವಾಗಿ ಕಟ್ಟಿದ್ಡೊಂದು ಪ್ರಚಂಡ
ವಾದ ಕೋಟೆಯಿತ್ತು. ಆ ಬಿಕ್ಸಟ್ಟಿನ ಸ್ಥಳದಲ್ಲಿ ಅಂಥ ಕೋಟಿಯನ್ನು
ಮನುಷ್ಯನೇ ಕಟ್ಟಿದರೋ, ವಿಶ್ವಕರ್ಮನು ಅಂತರಿಕ್ಷ ದಲ್ಲಿ ಒಂದು ಅತ್ಯದ್ಬುತ
ವಾದ ಕೋಟೆಯನ್ನು ಕಟ್ಟಿ ಅದನ್ನು ಮೆಲ್ಲನೆ ಆ ಗಿರಿಶಿಖರದ ಮೇಲೆ ಇಳಿಸಿ
ಟ್ವನೋ ಹೇಳಲಾಗದು. ಗಗನಾಂತರದಲ್ಲಿಯ ಘನವಾದ ಮೇಘಮಂಡಲ
ದಂತೆ ಕಾಣುವ 'ಆ ಮಹತ್ತರವಾದ ಕೋಟೆಯಲ್ಲಿದ್ದ ಮಗಧರಾಜ
ಸೇನೆಯು ಪುಲಿಕೇಶಿ ಮಹಾರಾಯನ ಮಾರ್ಗನಿರೋಧ ಮಾಡಲು
ಸನ್ನದ್ಧವಾಗಿತು,.
ಪುಲಿಕೇಶಿಯ ಸೈನ ವು ಆ ಅಸಾಧ್ಯವಾದ ದುರ್ಗಕ್ಕೆ ಮುತ್ತಿಗೆ ಹಾಕಿ
ಕೊಂಡು ಕುಳಿತಿತು. ಆದರೆ ಅದನ್ನು ಭೇದಿಸುವೆಂತು? ಒಳಗಿನವರಿ
ಗಾದರೂ ತಮ್ಮ ಸುತ್ತಲೂ ನೆರೆದಿರುವ. ಸೇನಾಸಮುದ್ರವನ್ನು `ಕಂಡು ಬಲ
ವತ್ತರವಾದ ಭೀತಿಯಾಯಿತು. ವಾತಃಪಿುರದ ಸೇನೆಯು. ಮಗಧರಾಜನ
೨೨೭-----------------------------------------------------------------------
ಆ ಉಗ್ರದುರ್ಗವೆಂಬ ಕೋಟೆಯನ್ನೇರಲು ಎಷ್ಟು ಪ್ರಯತ್ನಮಾರಿದರೂ
ಸಾಧಿಸಲೊಲ್ಲದು. ಆಗ ಪುಲಿಕೇಶಿಯು ವಿಶಿಷ್ಟರಾದ ಧೈರ್ಯಶಾಲಿಗಳನ್ನು
ಕರೆಸಿಕೊಂಡು “ಮೂರು ದಿವಸಗಳಲ್ಲಿ ಕೋಟೆಯನ್ನೇರಿ ಅದನ್ನ
ವಶಮಾಡಿಕೊಳ್ಳಬೇಕು, ಇದಕ್ಕೇನು ಯೋಚನೆ?" ಎಂದು ಕೇಳಿದನು.
ದಂತಿವರ್ಮನು ಮುಂದಾಗಿ ಬಂದು ಪ್ರಭುವಿಗೆ ನಮಸ್ಕರಿಸಿ “ಇಂದಿಗೆ
ಮೂರನೆಯ ದಿವಸ ರಾತ್ರಿಯಲ್ಲಿ ಮಹಾರಾಜರ ಧ್ವಜವನ್ನು ಕೋಟೆಯ
ಮೂಡಣ ಕೊತ್ತಲದ ಮೇಲೆ ಊರುನೆನು” ಎಂದು ಹೇಳಿ ವೀಳ್ಯವನ್ನೆತ್ತಿ
ದನು. ಪುಲಿಕೇಶಿಯ ಮನಸ್ಸಿಗೆ ಇಮ್ಮಡಿಯಾದ ಉತ್ಸಾಹ ಬಂದಿತು.
ಸಂಗಡಲೆ ಅನನು ಕೋಟೆಯಲ್ಲಿರುವ ಶಶ್ರುಸೇನಾಪತಿಗೆ " ಮೂರು ದಿವಸ
ಗಳಲ್ಲಿ ನೀನು ಶರಣಾಗತನಾಗದಿದ್ದರೆ ಪುಲಿಕೇಶಿಯ ಧ್ವಜವು ನಿನ್ನ
ಕೋಟಿಯ ಮೇಲೆ ಬಲಾತ್ಕಾರದಿಂದ ಮೆರೆಯುವದು, ” ಎಂದು ಹೇಳಿ
ಕಳಿಸಿದನು. ಅದಕ್ಕಾ ಸೇನಾಪತಿಯು ಪ್ರತ್ಯುತ್ತರವಾಗಿ ಹೇಳಿಕಳಿಸಿದ್ದೇ
ನಂದರೆ; " ಆಕಾಶದಲ್ಲಿ ಗರುಡನಂತೆ ಹಾರಾಡಲು ಪುಲಿಕೇಶಿ ಸಾರ್ವ
ಭೌಮರಿಗೆ ಪಕ್ಕಗಳಿದ್ದರೆ ಅವರು ನಮ್ಮ ಕೋಟಿಗೆ ಯಥೇಚ್ಛವಾಗಿ ಬರ
ಬಹುದು. ನಮ್ಮ ಕೋಟೆಯ ಗೋಡೆಯನ್ನು ಯಾವನಾದರೊಬ್ಬ ಕರ್ನಾ
ಟಕದ ಸಾಹೆಸಿಯು ಸ್ಪರ್ಶ ಮಾಡಿದನಾದರೆ ನಾನು ಶಸ್ತ್ರವನ್ನಿಟ್ಟು ಶರ
ಣಾಗತನಾಗುವೆನು. "
ಯುಕ್ತಿವಂತರಾದ ಗಿರಿಸಂಚಾರಕರೂ, ಜೀವದ ಪರಿವೆಯಿ.ಲ್ಲದ
ಸಾಹಸಿಗಳೂ, ಯಂತ್ರಕಲಾನಿಪುಣರಾದ ಶಿಲ್ಪಿಗಳೂ ಪರಮಾವಧಿ
ಪ್ರಯತ್ನಗಳನ್ನು ಮಾಡಿ ಸೋತುಹೋದರು. ಮೂರನೆಯ ದಿವಸದ
ರಾತ್ರಿಯು ಪ್ರಾಪ್ತವಾಯಿತು. " ದಂತಿವರ್ಮನನ್ನು ಹಿಡಿತನ್ನಿರಿ. ಅವ
ವಚನವು ಎಲ್ಲಿರುವದೋ ಕೇಳೋಣ!” ಎಂದು ರಾಯನು ಉದ್ವಿಗ್ನನಾಗಿ
ಕೇಳಿದನು. ಆದರೆ ದಂತಿವರ್ಮನ ತುಬ್ಬು ಹತ್ತಲಿಲ್ಲ.
ವಾಚಕರೆ, ಉಗ್ರದುರ್ಗದ ವಿಚಿತ್ರವಾದ ನೋಟಿನನ್ನು ನಿಮಗೆ
ತೋರಿಸುತ್ತೇವೆ ಬನ್ನಿರಿ. ಇದು ಅಮಾವಾಸ್ಯೆಯ ರಾತ್ರಿಯಾದರೂ ಕಲ್ಪನಾ
ತ್ಮಕನಾದ ಈ ಉಪನೇತ್ರಗಳನ್ನು ಇಟ್ಟುಕೊಳ್ಳಿರಿ, ಅಂದರೆ ನಿನುಗೆಲ್ಲವೂ
ಚನ್ನಾಗಿ ಕಾಣುವದು,
೨೨೮ --------------------------------------------------------------------------
ಅಲ್ಲಿ ಖಟ್ಟ ಖಟ್ಟನೆ ಸಪ್ಪಳವೇನಾಗುವದು ? ನೋಡಿರಿ ಪರ್ವತದ
ಬಂಡೆಗಳ ಸಂದಿನಲ್ಲಿ ಕಬ್ಬಿಣದ ಗೂಟಗಳನ್ನು ಯಾವನೋ ಜಡೆಯುತ್ತಿರು
ವನು. ಹೀಗೆ ಪರ್ವತದ ತಳದಿಂದ ಮೂರು ಮೂರು ಮೂರು ಮೊಳಕ್ಕೊಂದು
ಗೂಟವನ್ನು ಜಡೆದು ಅದರ ಮೇಲೆ ತಾನು ನಿಂತುಕೊಂಡು ಮತ್ತೊಂದು
ಗೂಟವನ್ನು ಜಡಿದು ಮತ್ತೆ ಏರುತ್ತ ಬಂದಿರುವದಲ್ಲದೆ ಆ ಗಟ್ಟಿಗನು ಒಂದು
ನೂಲೇಣಿಯನ್ನಾದರೂ ತೆಗೆದುಕೊಂಡಿರುವನು. ಈ ಮುಂದಾಳಿನ ಸಹಾಯ
ಕ್ಕಾಗಿ ಅವನ ಸಂಗಡಲೇ ಮತ್ತೊಬ್ಬ ಸಾಹಸಿಯಾದರೂ ಬೆಟ್ಟವನ್ನೇರುತ್ತಿ
ದ್ಹನು, ಅವರೀರ್ವರು ಸ್ಥಿರಚಿತ್ತರಾಗಿಯೂ, ಸಾವಕಾಶವಾಗಿಯೂ, ಒಳ್ಳೇ
ಚಾತುರ್ಯದಿಂದಲೂ ಸರ್ಪಗಳು ಗೋಡೆಗಳನ್ನೇರುವಂತೆ ಅವರು ಅತ್ಯುನ್ನತ
ವಾದ ಶಿಲೋಚ್ಚಯವನ್ನೇರುತ್ತಿದ್ದರು. ನೆಲಬಿಟ್ಟು ನೂರಾರು ಮೊಳ
ಮೇಲಕ್ಕೀರಿದ್ದರೂ ಆ ಧೈರ್ಯಶಾಲಿಗಳ ಕೈಕಾಲುಗಳು ತತ್ತರಿಸಾಡಲಿಲ್ಲ.
ಅದೋ, ಅವರು ಕೋಟಿಯ ಗೋಡೆಯ ಬುಡಕ್ಕೆ ಬಂದರು. ಅಲ್ಲಿ ಅವರಿಗೆ
ನಿಲ್ಲಲಿಕ್ಕೆ ಯೋಗ್ಯವಾದ ಸ್ಥಳ ದೊರಕಿತು. ತಾವು ತಂದಿದ್ದ ನೂಲೇಣಿಯ
ಒಂದು ತುದಿಯನ್ನು ಅಲ್ಲಿ ಬೆಳೆದಿರುವದೊಂದು ವೃಕ್ಸಕ್ಸೆ ದೃಢವಾಗಿ ಕಟ್ಟಿ
ಸೂಚನೆ ಮಾಡಿದ ಕೂಡಲೆ ಬೆಟ್ಟದ ಕೆಳಬದಿಯಲ್ಲಿದ್ದ ನೂರಾರು ಜನ
ಭಟರು ಆ ಏಣಿಗಳನ್ನೇರಿ ಕೋಟಿಯ ಗೋಡೆಯ ಬಳಿಗೆ ಬಂದರು. ಸಪ್ತ
ಪಾತಾಳದಂತೆ ನೆಲೆಯಿಲ್ಲದಿರುವ ಗೋಡೆಯಂಥ ಬೆಟ್ಟವನ್ನೇರಿ ಬಂದ ಸತ್ವ
ಶಾಲಿಗಳಿಗೆ ಕೋಟೆಯ ಗೋಡೆಯನ್ನೇರಿ ಹೋಗುವದು ಹೆಚ್ಚಿನ ಮಾತೆ?
ತಾವಿದ್ದ ಸ್ಥಳಿವು ಶತ್ರುಗಳಿಗೆ ಅಸಾಧ್ಯವೆಂದೂ, ರಾತ್ರಿಯ ಸಮಯದ
ಲ್ಲಂತೂ ಯಾತರ ಚಿಂತೆಯಿಲ್ಲವೆಂದೂ ನಂಬಿ ಕೋಟೆಯೊಳಗಿನನರು ನಿಶ್ಚಿಂತ
ರಾಗಿ ಸುರಾದೇವಿಯ ಪ್ರಸಾದವನ್ನು ತೆಗೆದು ಗಾಢವಾದ ನಿದ್ರೆಯಲ್ಲಿದ್ದರು.
ಆಂದು ಅಮಾವಾಸ್ಯೆಯಾದ್ದರಿಂದ ಅವರೆಲ್ಲರೂ ತಮ್ಮ ಶಸ್ತ್ರಾಸ್ತ್ರಗಳನ್ನು
ಪೂಜೆ ಮಾಡಿ ಆಯುಧಾಗಾರದಲ್ಲಿ ಇಟ್ಟಿದ್ದರು. ಪುಲಿಕೇಶಿಯ ದೈವವೇ
ದೊಡ್ಡದು. ಅವನಿಗೆಲ್ಲ ಸಂಗತಿಗಳು ಅನುಕೂಲವಾಗಿರತಕ್ಕವೇ ಸರಿ.
ದಂತಿವರ್ಮನೂ (ಗುಡ್ಡದಲ್ಲಿ ಗೂಟಗಳನ್ನು ಜಡೆಯುತ್ತ ಮೇಲೇರಿ
ಹೋದ ಅಗ್ರೇಸರನು ದಂತಿವರ್ಮನೇ ) ಅವನ ಅನುಯಾಯಿಗಳೂ ಜಾಗ್ರತೆ
ಯಿಂದ ಶತ್ರುಗಳ ಆಯುಧಾಗಾರವನ್ನು ಸ್ವಾಧೀನಕ್ಕೆ ತೆಗೆದುಕೊಂಡು
೨೨೯-------------------------------------------------------------------
ತಮಗೆ ಬೇಕಾದಷ್ಟು ಆಯುಧಗಳನ್ನು ಇಟ್ಟುಕೊಂಡು ಉಳಿದವುಗಳನ್ನು
ಸೂಡು ಕಟ್ಟಿ ಕಟ್ಟಿ ಗುಡ್ಡದ ಕೆಳಗೆ ಉರುಳಿಸಿದರು.
ಈ ಗದ್ದಲವನ್ನುಕೇಳಿ ಕೋಟಿಯೊಳಗಿನವರು ಎಚ್ಚತ್ತು ಘಾತವಾ
ಯಿತೆಂದು ಕೂಗಾಟವನ್ನೆಬ್ಬಿಸಿ ಆಯುಧಾಗಾರದ ಕಡೆಗೆ ಓಡುತ್ತೆ ಬಂದರು.
ಅದು ಶಸ್ತ್ರ ಸಾಣಿಗಳಾದ. ಶತ್ರುಗಳ ಸ್ವಾಧೀನವಾಗಿತ್ತು. ಆಯುಧಗಳನ್ನು
ತೊಟ್ಟವರಿಗೂ ಬರಿಗೈಯವರಿಗೂ ಕುಡಗೋಲು ಕುಂಬಳಕಾಯಿಗಳ ಹೊಡೆ
ದಾಟದಂತೆ ಕದನವೆಸಗಿ ಕೋಟೆಯವರಲ್ಲಿ ಬಲು ಮಂದಿ ಸತ್ತು ಹೋಯಿತು,
ದಂತಿವರ್ಮನ ಸೂಚನೆಯ ಮೇರೆಗೆ ಅವನ ಅನುಯಾಯಿಗಳು ಕೋಟೆಯ
ಆಗಸೇಬಾಗಿಲವನ್ನು ತೆರೆದಿಟ್ಟರು. ವಾಘ್ರನಟ್ಟಿದ ಹುಲ್ಲೆಗಳಂತೆ ಬೆದರಿದವ
ರಾದ ದುರ್ಗವಾಸಿಗಳು ಅಗಸೆ ತೆಕೆದಿಟ್ಟದ್ದು ಕಂಡು ಮತ್ತೊಂದು ವಿಚಾರ
ಮಾಡದೆ ಹೊರಬಿದ್ದು ಓಡಿದರು, ಪರ್ವತದ ಹೊದರಿನಲ್ಲಿ 'ಗುಪ್ತವಾಗಿರುವ
ವಿಸ್ತಾರವಾದ ಸೋಪಾನದಿಂದ ಅವರೆಲ್ಲರು ಇಳಿದು ನಡೆದಿರುವದನ್ನು
ನಿರೀಕ್ಷಿಸಿ ದಂತಿವರ್ಮನು ರಹಸ್ಯ ತಿಳಿದವನಾಗಿ ಸಂತೋಷದಿಂದ ನಕ್ಕನು.
ಬಳಿಕ ದಂತಿವರ್ಮನು ಸಾವಕಾಶವಾಗಿ ಪುಲಿಕೇಶಿ ಸಾರ್ವಭೌಮನ
ವಿಜಯಧ್ವಜನನ್ನು ದುರ್ಗದ ಮಹಾದ್ವಾರದ ಮೇಲ್ಭಾಗದಲ್ಲಿ ನಿಲ್ಲಿಸಿ ಅದು
ಕೆಳಗಿನವರಿಗೆ ಸ್ಪಷ್ಟವಾಗಿ ಕಾಣುವಂತೆ ಅದರ ಸುತ್ತಲೂ ಅನೇಕವಾದ
ದೀವಟಿಗೆಗಳನ್ನು ಹಚ್ಚಿಸಿದನು. ಆನೇಕ ಜ್ಯೋತಿಗಳಿಂದ ಪ್ರಕಾಶಿತವಾದ
ತನ್ನ ವಿಜಯಧ್ವಜವು ದುರ್ಗದ ಮೇಲೆ ವಿರಾಜಿಸುತ್ತಿರುವದನ್ನು ಕಂಡು
ಪುಲಿಕೇಶಿಗೆ ಮಿತಿಮೀರಿದ ಹರುಷವಾಯಿಕು. ಆಟದ ಗೊಂಬೆಯು ಕೈಯಲ್ಲಿ
ಸಿಕ್ಕಿರಲು ಅತ್ಯಾನಂದವನ್ನು ಹೊಂದಿದ ಮಗುವಿನಂತೆ ಭುವನೈಕಮಲ್ಲನು
ಆರ್ಭಟೆಯಿಂದ ಕುಣಿದಾಡಿದನು. ಗಗನಮಂಡಲದಲ್ಲಿ ಮೆರೆಯುತ್ತಿರುವ
ತಮ್ಮ ಧ್ವಜವನ್ನು ಕಂಡು ಸೈನ್ಯದವರೆಲ್ಲರೂ ಕರತಲಧ್ವನಿಗೈದು ಉದ್ರೇಕದ
ಜಯ ಫೆೋಷವನ್ನು ಮಾಡಿದರು.
ಮರುದಿವಸ. ಪ್ರಾತಃಕಾಲದಲ್ಲಿಯೇ ರಾಜಾಧಿರಾಜನಾದ ಪುಲಿಕೇಶಿ
ಸಾರ್ವಭೌಮನು ದಂತಿವರ್ವನ ಸಂಭಾವನೆಗಾಗಿ ದೊಡ್ಡ ಸಭೆ ಕೂಡಿಸಿ
ದನು. ಆ ಚಿಕ್ಕ ವೀರನ ಸಾಹಸವನ್ನೂ, ಧೈರ್ಯವನ್ನೂ, ಕಲ್ಪನಾಶಕ್ತಿ
ಯನ್ನೂ ಪ್ರಮುಖರೆಲ್ಲರೂ ಬಹುಪರಿಯಾಗಿ ಕೊಂಡಾಡಿದನು. ಬಳಿಕ:
೨೩೦ ---------------------------------------------------------------------------
ಸರಮೋದಾರನೂ, ಗುಣಪಕ್ಷಪಾತಿಯೂ ಆದ ಸಾರ್ವಭೌಮನು ಎದ್ದು
ಬಂದು ದಂತಿವರ್ಮನನ್ನು ಬಿಗಿದಪ್ಪಿಕೊಂಡು ಅವನನ್ನು ತನ್ನ ಅರ್ಧಾಸನ
ದಲ್ಲಿ ಕುಳ್ಳಿರಿಸಿಕೊಂಡು " ದಂತಿವರ್ಮ, ನಿಮಗಿನ್ನು ಹೆಚ್ಚಿನ ಸಂಭಾವನೆ
ಯನ್ನು ನಾವಿನ್ಸೆಂತು ಮಾಡೋಣ?” ಎಂದು ನುಡಿದು ಆನಂದಾಶ್ರುಗಳನ್ನು
ಸುರಿದನು.
ಶತ್ರುಗಳ ಪರಾಭವವನ್ನು ಮಾಡಿ ವಾತಾಪೀ ಪುರವರಾಧೀಶ್ವರನು
ತನ್ನ ರಾಜಧಾನಿಗೆ ಬಂದಬಳಿಕ ಬಿಷ್ಟಪ್ಪನಾಯಕನು ತನ್ನ ಹೆಂಡತಿಯನ್ನೂ,
ಪದ್ಮಿನಿಯನ್ನೂ ಕುಳ್ಳಿರಿಸಿಕೊಂಡು ದಂತಿವರ್ಮನ ಪರಾಕ್ರಮದ ವರ್ಣನೆ
ಯನ್ನು ಬಹುಪರಿಯಾಗಿ ಮಾಡಿ ಆ ತರುಣನು ರಾಜರಿಗೆ ಪರಮ ಪ್ರೀತ್ಯಾ
ಸ್ಪದನಾಗಿರುವನೆಂದು ಹೇಳಿದನು. ಸೇನಾಪತಿಯ ಅರ್ಧಾಂಗಿಯು ಕೌತುಕ
ಪಟ್ಟು ಕೇಳಿ ದಂತಿವರ್ಮನನ್ನು ಕೊಂಡಾಡಿದಳು. ಪದ್ಮಿನಿಯ ಹೃದಯ
ದಲ್ಲಿ ಆನಂದವೂ, ಪ್ರೇಮವೂ ಉಕ್ಕೇರಿಬಂದದ್ದರಿಂದ ಅವಳ ಮನೋಹರ
ವಾದ ಮುಖವು ಪ್ರಪುಲ್ಲಿತವಾಗಿ ತೋರಿತು. ಆದರೆ ಲಜ್ಞಾವನತಮುಖಿ
ಯಾದ ಆ ಪ್ರೇಮಲೆಯ ಮುಖದಿಂದ ಮಾತ್ರ ಉದ್ದಾರಗಳೇನೂ
ಹೊರಡಲಿಲ್ಲ.
ದಂತಿವರ್ಮನ ಬಂಧುರವಾದ ಗಾತ್ರವೂ, ಅವನ ಸೆಟಿಯ ನಿಲ್ವಿ
ಕೆಯೂ, ಅವನ ಮನೋಹರವಾದ ಮುಖವೂ, ಆ ಮುಖದಲ್ಲಿ ತೋರುವ
ಎಳೆನಗೆಯೂ, ಪದ್ಮಿನಿಯ ಕಣ್ಣಿಗೆ ಕಟ್ಟಿದಂತಾಯಿತು. ತನ್ನ ಪ್ರಾಣೇಶ್ವರನ
ಸಾಹಸಕ್ಕೆ ಯಶಸ್ಸು ಕೊಟ್ಟು ಅವನನ್ನು ಸುರಕ್ಷಿತವಾಗಿ ತಂದು ಮುಟ್ಟಿ ಸಿದ್ದ
ಕ್ಕಾಗಿ ಅವಳು ದೇವರನ್ನು ಬಹುಪರಿಯಾಗಿ ಕೊಂಡಾಡಿ ಅನೇಕವಾದ ಹರಿಕೆ
ಗಳನ್ನು ಹೊತ್ತಳು. ನನ್ನ ರಮಣನ ಮುಖವನ್ನು ಬೇಗನೆ ಕಂಡೆನಾದರೆ
ಸತ್ಯನಾರಾಯಣದ ಪೂಜೆ. ಮಾಡಿಸುವೆನೆಂದಲು. ಅವನು ನನ್ನ ಪಾಣಿ
ಗ್ರಹಣ ಮಾಡಿದರೆ ನನ್ನ ಮೈಮೇಲಿನ ಅಲಂಕಾರಗಳನ್ನೆಲ್ಲ ಬ್ರಾಹ್ಮಣ
ಸುವಾಸಿನಿಯರಿಗೆ ದಾನ ಮಾಡುವೆನೆಂದಳು.
ಬಿಷ್ಟನಾಯಕನು ತನ್ನ ಹೆಂಡತಿಯ ಸೂಚನೆಯ ಮೇರೆಗೆ ದಂತಿವರ್ಮ
ನನ್ನು ತನ್ನ ಮನೆಗೆ ಭೋಜನ ಸಮಾರಂಭಕ್ಕಾಗಿ ಕರಿಸಿದನ್ನು ಆಗ
ಪದ್ಮಿನಿಯ ಉಬ್ಬನ್ನು ವರ್ಣಿಸುವವರಾರು? ಸೊಬಗಿನ ಉಡುಗೆತೊಡಿಗೆ
೨೩೧ -------------------------------------------------------------
ಗಳನ್ನು ಮಾಡಿಕೊಂಡು ಅಲಂಕಾರ ಪುಸ್ಪಗಳಿಂದ ಭೂಷಿತೆಯಾಗಿ ಮನೆ
ತುಂಬ ಓಡಾಡಿದಳು.
ಅವಳನ್ನು ಕಂಡು ಬಿಷ್ಟನಾಯಕನು ವಿನೋದದಿಂದ
ನುಡಿದದ್ದು : " ಪದ್ಮಿನಿ, ನೀನು ಈ ದಿವಸ ಬೇಕಾದಷ್ಟು ಉಬ್ಬಿನಿಂದ
ಓಡಾಡಿದರೂ ನಾಳೆ ರಾಜಸಭೆಯಲ್ಲಿ ನಿನ್ನ ಮೇಲಣ ಆರೋಪನ ವಿಚಾರವಾ
ಗುವದು. ಆಗ ನಿನ್ನ ಒಯ್ಯಾರದ ಬಣ್ಣವೆಲ್ಗ ತಿಳಿಯುವದು!”
" ನನ್ನ ಮೇಲೆ ಏಕರ ಆರೋಪ?” ಎಂದು ತುಸು ದರ್ಪದಿಂದಲ್ಕೂ
ತುಸು ಒಯ್ಯಾರದಿಂದಲೂ ಪದ್ಮಿನಿಯು ಕೇಳಿದಳು.
ಆಗ ಪನದ್ಮಿನಿಯ ಸೋದರತ್ತೆಯು ಮಂದಹಾಸದಿಂದ ಮುಂದೆ
ಬಂದು; ಆ ಪದ್ಮಿನಿ, ನೀನು ಮಹಾರಾಜ ಅನುಮತಿಯಿಲ್ಲದೆ ದಂತಿ
ವರ್ಮರನ್ನು ಮೋಹಗೊಳಿಸಿ ಅವರನ್ನು ಅಪಹರಿಸಬೇಕೆಂದು ಮಾಡಿದ
ಪ್ರಯತ್ನವೇ ಅಪರಾಧವೆಂದು ಮಹಾರಾಜರೇ ತಾವಾಗಿ ನಿನ್ನ ಅಣ್ಣನ
ಮುಂದೆ ಹೇಳಿರುವರು. ಅದಕ್ಕೆ ನೀನೇನು ಉತ್ತರ ಕೊಡುವಿ?'' ಎಂದು
ಉಪನ್ಯಾಸ ಮಾಡಿದ ಕೂಡಲೆ ಎಲ್ಲರೂ ನಕ್ಕರು,
ಮರುದಿವಸ ಪುಲಿಕೇಶಿ ಸಾರ್ವಭೌಮನ ಸಭಾಮಂದಿರದಲ್ಲಿ ರಾಜ್ಯದ
ಲ್ಲಿಯ ಸಕಲ ಮಹೆನೀಯರೆಲ್ಲರೂ ನೆರೆದಿದ್ದರು. ಸಾರ್ವಭೌಮನು ಆ
ದಿವಸ ಉಲ್ಲಾಸ ವೃತ್ತಿಯವನಾಗಿದ್ದನು ಆವನು ಮಂದಹಾಸದಿಂದ
"ಯಾಕೆ ಜಕ್ಕರಾಯ್ಕ ದಂತಿವರ್ಮರ ಅಪರಾಧದ ವಿಷಯವಾಗಿ ವಿಚಾರಣೆ
ಯಾಗಬೇಕೋ ? ” ಎಂದು ಕೇಳಿದನು.
"" ದೇವರೂ, ನನ್ನ ತಂಗಿಯೂ, ಸೋದರತ್ತೆ ಸೋದರಮಾವಂದಿರೂ
ಕೂಡಿಯೇ ಪ್ರತಿವಾದಿಗಳಾದ ದಂತಿವರ್ಮರಿಗೆ ಅನುಕೂಲರಾಗಿರಲ್ಕು, ಈ
ವಿಚಾರಣೆಯ ಕೆಲಸವನ್ನು ನಡೆಸಿದರೂ ಫಲವೇನು? "
" ನಿನಗೆ ಬಿಟ್ಟರೂ ನಮಗೆ ಬಿಡದ. ಕರ್ಮವು” ಎಂದು
ಪುಲಿಕೇಶಿಯು ಜಕ್ಕರಾಯನಿಗೆ ಹೇಳಿ ದೆಂತಿವರ್ಮನನ್ನು ಕುರಿತು "ದಂತಿ
ವರ್ಮರಾಜ, ನೀವು ಆ ಅಬಲೆಯಾದ ಪದ್ಮಿನಿಯ ಹೃದಯವನ್ನು ಮೋಸ
ದಿಂದ ಕದ್ದದ್ದು ನಿಜವೊ? * ಎಂದು ಕೇಳಿದನು.
ದಂತಿವರ್ಮನು ಸುಮ್ಮನಿದ್ದನು.
೨೩೨ -------------------------------------------------------------------------
" ಮೌನವು ಒಪ್ಪಿಗೆಯ ತೂಕವೇ ಸರಿ. '' ಎಂದು ರಾಯನು ನುಡಿದು
" ಪದ್ಮಿನಿ ಎಲ್ಲಿ? '' ಎಂದು ಕೇಳಿದನು.
ಪದ್ಮಿನಿಯು ಸಭೆಗೆ ಬಂದಿರಲಿಲ್ಲ. ಆರೋಪಕ್ಕೆ ಪ್ರತ್ಯುತ್ತರ ಕೊಡಲು
ಪದ್ಮಿನಿಯು ಬರಲಿಲ್ಲಾದ್ದರಿಂದ ಅವಳು ತಪ್ಪುಗಾರತಿಯೆಂದು ಸಿದ್ಧವಾ
ಯಿತು. “ಸೇನಾಪತಿ ಬಿಷ್ಟನಾಯಕರೆ, ಈ ಅಪರಾಧಿಗಳೀರ್ವರನ್ನು ವಿವಾಹ
ಬಂಧನದಿಂದ ಬಿಗಿದುಹಾಕಿಬಿಡಿರಿ ಒಂದು ತಿಂಗಳವರೆಗೆ ಇವರೀರ್ವರು
ನಮ್ಮ ರಾಜಧಾನಿಯ ಸೀಮಾಂತರವನ್ನು ದಾಟಕೂಡದೆಂದೂ, ಮಿಷ್ಟಾನ್ನದ
ಹೊರತು ಮತ್ತೊಂದು ಕೂಳು ಇವರು ತಿನ್ನಲಾಗದೆಂದೂ ನಾವು ಶಾಸನ
ವನ್ನು ವಿಧಿಸಿದ್ದೇವೆ " ಎಂದು ಪುಲಿಕೇಶಿಯು ಪರಮ ಸಂತುಷ್ಟನಾಗಿ
ನುಡಿದು ನಕ್ಕನು.
===========================================