ಸೋಮವಾರ, ಜೂನ್ 28, 2021

ಸಾವಿತ್ರಿ-R.S.M

https://archive.org/details/dli.osmania.4396 (along with other books)

========================================================

ಸಾವಿತ್ರಿ 

೧ ನೆಯ ಪರಿಚ್ಛೇದ 

ಸೂರ್ಯಾಸ್ತಮದ ಸಮಯ. ದಕ್ಷಿಣ ಮ೦ದಮಾರುತವು, ಮರ 

ಗಿಡಗಳ ಎಲೆಗಳನ್ನು ಅಲುಗಾಡಿಸಿತ್ತಿದೆ. ಆಗ ಚಿತ್ರಾವತಿಯ ಮರಳು 

:ದಿಣ್ಣೆಯ ಮೇಲೆ ಯುವಕರಿಬ್ಬರು ಚಿಂತಾಮಗ್ನರಾಗಿ ಕುಳಿತಿದ್ದರು. 

ಅವರು ಒಂದು ಬಾರಿ ಜಳಜಳನೆ ಹರಿಯುವ ನದೀ ಪ್ರವಾಹವನ್ನು ನೊಡು 

ವರು, ಒಮ್ಮೆ ದೃಷ್ಟಿಯನ್ನು ತಿರುಗಿಸಿ ಮನೆಗೆ ಹೊರಡುವುದಕ್ಕೆ 

ಮುಂಚೆ ನೀರನ್ನು ಕುಡಿಯುತ್ತಿದ್ದ ಗೋಗಳನ್ನು ನೋಡುವರು. ಮತ್ತೊ 

ಮ್ಮೆ   ಬಟ್ಟೆ ಒಗೆಯುತ್ತಿರುವ ಮತ್ತು ಸಂಧ್ಯಾವಂದನೆ ಮಾಡಿತ್ತಿರುವ 

ಬ್ರಾಹ್ಮಣವೃಂದವನ್ನವಲೋಕಿಸುವರು. ಮಗದೊಮ್ಮೆ ಪಾತ್ರೆಗಳನ್ನು 

ಬೆಳಗಿ ನೀರನ್ನು ತುಂಬುತ್ತಿರುವ ಹೆಂಗಸರನ್ನು ನೋಡುವರು. ಸ್ವಲ್ಪ 

ಕಾಲದಲ್ಲೇ ಗೋಗಳೂ, ಹಂಗಸರೂ, ಗಂಡಸರೂ, ಮನೆಗೆ ತೆರಳಿದರು. 

ಪಕ್ಷಿಗಳು ಗೂಡುಗಳನ್ನು ಸೇರಿದುವ, ಸೂರ್ಯನು ಮುಳುಗಿದನು. 

ಯುವಕರು ಮಾತ್ರ ಕದಲಲಿಲ್ಲ. ಕತ್ತಲೆಯು ಮುಸುಕಿತು. ಆಕಾಶದಲ್ಲಿ 

ನಕ್ಷತ್ರಗಳ ಒಂದೊಂದಾಗಿ ತಲೆದೋರಿದವು ವಕ್ರಗತಿಯಳ್ಳ ನದಿಯು 

ಅಸ್ಪಷ್ಟವಾಗಿ ತೋರಹತ್ತಿತು. ಯುವಕರು ಇನ್ನೂ ಹೊರಳಲಿಲ್ಲ ಚಿತ್ರ 

ವಿಚಿತ್ಪ್ರವಾಹವುಳ್ಳ ಆ ನದಿಗೆ ಪಾದತಾಡನವಾಯಿತು, ಕಿರುತಾರಗೆಗಳ 

ಕಾಂತಿಗಳನ್ನು ತಗ್ಗಿಸಲು ಮೋಡಗಳು ಆಕಾಶದಲ್ಲಿ ಮುಸುಳಿಲಾಂಭಿಸಿ 

ದವು, ಅಂಧಕಾರಕ್ಕೆ ಬದಲು ಹೆಮ್ಮೆಯುಂಟಾಯಿತು. ಕೆಲವುಕಾಲ 

ನಿಶ್ಸಬ್ದ ಒಡನೆಯೇ ಮರಮರವೆಂಬಶಬ್ದ ಅಗ ಮೂಕಭಾವವನ್ನು ತಳದಿದ್ಧ 

ಯುವಕರಿಬ್ಬಲ್ಲೊಬ್ಬನು ನಿಟ್ಟುಸಿರುಬಿಟ್ಟು, “ಅಯ್ಯೋ ! ಇನ್ನೂ ಇಲ್ಲಿ  

ಯೆ ಇರಬೇಕೆ? ಮನೆಗೆ ತೆರಳುವ ವಧಿಬರಹವೆಂತಿರುವುದೋ ' ಎನಲು 

ಎರಡನೆಯವನು, ನನಗೆ ಹೋಗಲಿಚ್ಛೆಯಿಲ್ಲ. ಇಲ್ಲಿಯೇ ಇರಬೇಕೆಂದಿರು

ನೆಂದನು. 

---------------------------------------

ಕಾದಂಬರಿ, ಸಂಗ್ರಹ. 

 

ಒಂದನೆಯವ.: ನಿನಗೆ ಹುಚ್ಚು, ಇಲ್ಲಿ ನಿಂತು ನಾವು ಸಾಧಿಸುವ ಕಾರ್ಯ 

ವಾವುದು ? 


ಎರಡನೆಯವ-ಮನಶ್ಶಾಂತಿಯೊಂದೇ ಸಾಕು 


ಒಂದನೆ - ಮನಶ್ಶಾಂತಿ ಇಲ್ಲಿದ್ದರೇ ಬರುವ್ರದೆಂಬುದೂ ಇನ್ನೊಂದೆಡೆ 

ಬಾರದೆಂದೂ ಎಲ್ಲಿಯ ಮಾತು? ಯಾವ ಎಡೆಯಲ್ಲಿದ್ದರೇನು? 

ಯಾವನು ವಿವೇಕಶೂನ್ಯನೋ  ಅಂಥವನಿಗೆ ಎಲ್ಲಿಯೂ ದುಃಖವೇ 

ಹೊರ್ತು ಸುಖವು ಲಭ್ಯವಾಗವುದಿಲ್ಲ. 


ಎರಡನೆ-ನಾನು, ನಿನ್ನ ಅಭಿಯಲ್ಲಿ ಅವಿವೇಕಿಯಲ್ಲವೇ ? 


ಒಂದನೆ- ಮೂರ್ಖತ್ವವನ್ನು ಬಿಡದವನಾದರೆ ವಿವೇಕಿ ಹೇಗಾಗುವೆ ? 


ಎರಡನೆ-ನಿನಗೆ, ಮೂರ್ಖತನಕ್ಕೂ, ದೃಢಮನಸ್ಸಿಗೂ ಭೇಧವೇ ತೋರ 

ದಂತೆ ಕಾಣುವುದು. ನಾನು ಈ ವಿಷಯದಲ್ಲಿ ಪ್ರವೇಶಿಸಿದುದ 

ರಿಂಲೇ ಬುದ್ಧಿಹೀನನೆಂದು ತಿಳಿದಿರುವೆ ! ಆಚಾತುರ್ಯಗಳು, 

ನಮ್ಮ ಎದುರಿನಲ್ಲಿ ನಡೆಯುತ್ತಿರುವಾಗಲೂ, ಅವುಗಳನ್ನು 

ನಿವಾರಿಸಲು ನಮಗೆ ಸಾಧ್ಯವಿರುವಾಗಲೂ, ಕೈ ಜೋಡಿಸಿ ನಿಂತಿರ 

ಬಹುದು, ಅವುಗಳನ್ನು ತಡೆದು ಒಳ್ಳೆಯದನ್ನು ಮಾಡಲುಪಕ್ರ 

ಮಿಸಿದರೆ ನಾನು ಅವಿವೇಕಿಯಾಗುವೆನು. ಅಲ್ಲವೆ ? 


ಒಂದನೆ-ನೀನು ಈಗ ನಡೆವುದನ್ನು ತಡೆಯಬಲ್ಲೆಯಾ ? ನಿನಗೆ ಆ ಶಕ್ತಿ  

ಇರುವುದೆಂದು ಎಣಿಸಿಕೊಂಡಿರುವಿಯಾ ? 


ಎರಡನೆ-ದೇವರದಯೆಯಿದ್ದರೆ ಖಂಡಿತವಾಗಿಯೂ ತಪ್ಪಿಸಬಲ್ಲೆನು, ಮತ್ತೂ 

ಮತ್ತೂ ಅನುಕೂಲಪಡಿಬಲ್ಲೆನು. 


ಒಂದನೆ-ದೇವರದಯೆಯಿದ್ದು ಆ ಕಾರ್ಯವು ನಿನ್ನ ಮುಖಾಂತರವಾಗಿ 

ಆಗಬೇಕೆಂದು ವಿಧಿಲಿಪಿಯಿದ್ದರೆ ಆದನ್ನಾರು ತಪ್ಪಿಸಲ್ಲರು ? 

ಇದಕ್ಕೇಕೆ ಚಿಂತೆ ? 


ಎರಡನೆ-ಅದರೂ ನಾವು ಕಾರ್ಯ ಸಾಧನೆಯಾಗಲು ಯತ್ನಮಾಡದಿದ್ದರೆ 

ನಮಗ ದೈವವು ಎಂದು ಸಹಾಯ ಮಾಡೀತು ? 

------------------------------------------ 

ಸಾವಿತ್ರಿ 

ಒಂದನೆ-ನಿಜ. ಅದಕ್ಕಾಗಿಯೇ ತಕ್ಕ ಪ್ರಯತ್ನ ಮಾಡಬೇಕು, ಈ ನದೀ  

ತೀರದಲ್ಲಿ ಕುಳಿತು ಚಿಂತಿಸುತಿದ್ದರೆ ನಿನ್ನ ಕಾರ್ಯವು ಅನುಕೂಲ  

ವಾಗುವುದಿಲ್ಲ. 


ಎರಡನೆ-ನಾನು ಮನೆಯಕಡೆ ಮರ್ಮ ಭೇದಿಯಾದ  ಆಲೋಚನೆ  

ಗಳುಎದರಿಗೆ ಬಂದು ನಿಲ್ಲುವುವು. 


ಒಂದನೆ-ದೃಢಮನಸ್ಸುಮಾಡಿ ಕೆಲಾವುಕಾಲ ಮನಃಕ್ಲೇಶವನ್ನುಸಹಿಸಬೇಕು. 


ಎರಡನೆ-ಅಹುದು ! ಸಹಿಸಬೇಕು ಎಷ್ಟು ಸುಲಭವಾಗಿ ಹೇಳಬಹುದು ? 

ಈರೀತಿ ಮಾತನಾಡಿದ ಬಳಿಕ ಮೆಲ್ಲ ಮೆಲ್ಲನೆ ಮಳಲು ದಿಣ್ಣೆ 

ಯನ್ನು ಬಿಟ್ಟು ನೀರಿನೊಳಗೆ ಇಳಿದರು, ಜಲವನ್ನು ದಾಟಿ ಮಾರ್ಗವನ್ನು 

ಸೇರಿದರು. ನದಿ ಊರಿಗೂ ಅರ್ಧಮೈಲಿಯಾಗಬಹುದು. ರಸ್ತೆಯ 

ಇರ್ಕಡೆಗಳಲ್ಲೂ ಬೆಳೆದಿದ್ದ ನಿಂಬೆರಸಲಾದಿವೃಕ್ಷ ಶ್ರೇಣಿಗಳು ಮೇಲು 

ಭಾಗದಲ್ಲಿ ಚಪ್ಪರಹಾಕಿದಂತ ಕೊಂಬೆಗಳನ್ನು ಹರಡಿದ್ದುವು. ದಾರಿಯನ್ನು 

ತೋರಿಸಲು ಎಂತಹ ಬೆಳಕಾಗಲಿ ಇರಲಿಲ್ಲ. ಆದರೆ ಊರ ಜನಗಳು 

ಆಗಾಗ್ಗೆ ಅದೇ ಹಾದಿಯಲ್ಲಿ ರೂಢಿಯಾಗಿ ತಿರುಗಾಡುತ್ತಿದ್ದುದರಿಂದ ಕತ್ತಲೆ 

ಯಲ್ಲು ನೆಪ್ಪಾಗಿ ಮನೆಗೆ ಸೇರುತ್ತಿದ್ದರು. 


ಎರಡನೆ-ಈಗ ನಾವು ಮಾಡುವ ಕೆಲಸವೇನು ? 


ಒಂದನೆ-ಮಾಡುವುದೇನು ? ನಮಗಿನ್ನೂ ಮೂರುತಿಂಗಳು ವಿರಾವವಿದೆ. 

ಈ ಅವಧಿಯಲ್ಲಿ ಎಷ್ಟೊಂದು ಕಾರ್ಯವನ್ನಾದರೂ ನಿರ್ವಹಿಸ 

ಬಹುದು. 


ಎರಡನೆ-ಈಗ ಇದರಲ್ಲಿ ನಾವೇ ಪ್ರವೇಶಿಸಿ ಮುಂದಾಳುಗಳಾಗಿ ನಿಲ್ಲು 

ವುದು ಅಪ್ರಯುಕ್ತವಲ್ಲವೆ ? 


ಒಂದನೆ- ನನಗೂ ಹಾಗೇ ತೋರುವುದು. ಅದರಲ್ಲೂ ಹೆಂಗಸರಗೊಡವೆಗೆ 

ಹೋಗುವುದರಲ್ಲಿ ಬಹಳ ಎಚ್ಚರಿಕೆಯಿರಬೇಕು. ನಿನ್ನ ತಂಗಿಯ 

ಸಹಾಯ ಈ ಕೆಲಸಕ್ಕೆ ಅವಶ್ಯಕ. 


ಎರಡನೆ-ನನ್ನ ತಂಗಿ ಕೃಷ್ಣವೇಣಿಯು ನಾನು ಹೇಳಿದಂತ ಕೇಳತಕ್ಕವ 

ಳಾದರೂ ಈ ಸಂಗತಿ ತಿಳಿದರೆ ಒಪ್ಪುವಳೋ ಇಲ್ಲವೋ ? 


ಒಂದನೆ-ಒಂದೆರಡು ಕಾಗದಗಳನ್ನು ಕೊಡಲಿಕ್ಕೆ ಒಪ್ಪದೇ ಏನು ? 

--------------------------------------

೪- ಕಾದಂಬರಿ ಸಂಗ್ರಹ 


ಎರಡನೆ-ಕಾಗದಗಳನ್ನು ಬರೆದವರುಂಟೆ? ನಾವು ಹಿಡಿದ ಕೆಲಸ ಜಯಾದರೆ 

ಚಿಂತೆಯಿಲ್ಲ. ಇಲ್ಲವಾದರೆ ಕೈ  ಬರಹವನ್ನು ಕೊಟ್ಟು ಮಾನ  

ಕಳೆದುಕೊಳ್ಳುವುದೆ ? 


ಒಂದನೆ-ಹಾಗಾದರೆ ಈಗಿನ ನಡೆವಳಿಕೆಯೇನು ? 


ಎರಡನೆ - ಏನು ನಡೆದರೂ ಬಾಯಿ ಮಾತಲ್ಲೇ ನಡೆಯಲಿ. 


ಒಂದನೆ-ಸರಿ, ಅಗೋ ಊರಮುಂದಿನ ಬೆಳಕು ಕಾಣುತ್ತಿದೆ. ಈಗ ಬಂದು 

ಸೇರಿದೆವಲ್ಲ. ಈಗ ಎಷ್ಟು ಹೊತ್ತಾಗಿರಬಹುದು. 


ಎರಡನೆ-ಒಂಭತ್ತು ಗಂಟೆ ಇರಬಹುದು. ಆಗೋ ತಾಲ್ಲೂಕು ಕಛೇರಿ 

ಯಲ್ಲಿ ಗಂಟೆ ಹೊಡೆಯುವುದು ಕೇಳಿಸುತ್ತಿದೆ. ನಮ್ಮ ಮನರಯ  

ವರು ಹುಡುಕಿಸುತ್ತಿವರೋ, ಏನೋ ? 


ಒಂದನೆ- ನಿಮ್ಮ ಮನೆಯಲ್ಲಿ ಹತ್ತು ಗಂಟೆಗೆ ಮುಂಚೆ ಊಟವಾಗುವುದಿಲ್ಲ  

ಆಡಿಗೆಯವನು ಕಾದಿದ್ದು ಯಾವಾಗಲಾದರೂ ಬಡಿಸುವರು. 

ನಮ್ಮ ಮನೆ ಯಲ್ಲಾದರೆ ಒಂಭತ್ತು ಗಂಟೆಗೆ ಮಲಗುವ ಸನ್ನಾಹ ! 


ಎರಡನೆ-ಅನವಶ್ಯವಾಗಿ ಒಹಳ ಹೊತ್ತು ಹೊಳೆಯ ಬಳಿಯಲ್ಲಿ ನಿಂತೆವು. 


ಒಂದನೆ-ಇನ್ನು ಆ ಮಾತುಗಳು ಸಾಕು. ಅಲ್ಲಿ ನೋಡು, ನಿಮ್ಮ ಗುರುವ  

ಬರುತ್ತಿದ್ದಾನೆ. 


ಎರಡನೆ- ಏನೋ, ಗುರುವ; ಯಜಮಾನರು ಏನು ಮಾಡುತ್ತಿದ್ದಾರೋ ?


ಗುರುವ-ಯಜಮಾನರು ದೀಪ ಹಚ್ಚೋ ಹೊತ್ತಿಗೇ ಬಂದರು. ಇಷ್ಟೊ 

ತ್ತಿದ್ದು ನಿನ್ನನ್ನು ಕರಕೊಂಡು ಬರಹೇಳಿದರು. 


ಎರಡನೆಯವನು ಗುರುವನನ್ನು ಮನೆಗೆ ಹೋಗಹೇಳಿ ಬಳಿಕ 

ಸ್ನೇಹಿತರಿಬ್ಬರೂ ಆಂಜನೇಯನ ಗುಡಿ ಎದುರಿನಲ್ಲಿ ನಿಂತು ಮಾತಾಡಿ ಬೆಳ 

ಗಾಗುತ್ತದೆ. ಪುನಃ ಸೇರಬೇಕೆಂದು ನಿರ್ಧರಿಸಿದೆರು ಇಬ್ಬರೂ ಬೇರೆ ಬೇರೆ 

ಯಾಗುವಷ್ಟರಲ್ಲಿ ಅವರು ನಿಂತಿದ್ದ ಬೀದಿಯ ಎದುರು ಸಾಲಿನ ಮೂರ 

ನೆಯ ಮನೆಯಿಂದ ಒಂದು ವ್ಯಕ್ತಿಯು ಹೊರಗೆ ಬಂತು. ಮನೆಬೆಳಕೂ 

ದೀಪದ ಬೆಳಕೂ ವ್ಯಕ್ತಿಯ ಮುಖದಮೇಲೆ ಬಿತ್ತು. ಕ್ಷಣಕಾಲದಲ್ಲಿ 

ಆ ವ್ಯಕ್ತಿಯು ಒಳಕ್ಕೆ ಹೊರಟು ಹೋಯಿತು. , ಯುವಕರಿಬ್ಬರೂ, 

“ಅವಳ, ಆವಳೇ, " ಎಂದರು. 

-----------------------------------------

ಸಾವಿತ್ರಿ ೫ 

೨ನೆಯ ಪರಿಚ್ಛೇದ. 

ವಾಚಕರೆ! ಯುವಕರೀರ್ವರೂ ಅವರವರ ಮನೆಗೆ ತೆರಳಿದ ಬಳಿಕ 

ಮುಖ್ಯವಾಗಿ ತಿಳಿಸಬೇಕಾದ ವಿಷಯವನ್ನ ತಿಳಿಸದಿದ್ದರೆ, ನಿಮಗೆ ಆಗ್ರಹ 

ಬರಬಹುದು. ನಾವು ಶೃಂಗಾರಶೇಖರರಾಗಿ ರಸಿಕರಾದ ನಾಯಕನಾಯ 

*ಜೆ.ಜ 1 ಈ 'ಥೆ ಇಲ್ಲಿ ಸಂಪಾದಿಸಲಿಲ್ಲ. ಗೋಂಡಾರಣ್ಯಗಳಲ್ಲಿ 

ಹಸಿವು ಬಾಯಾರಿಕೆಗಳನ್ನು ತಡೆದು, ಈಗಲೂ ರಾತ್ರಿಯನ್ನದೆ ಕಾಂತ  

ಕಾಂತೆಯರನ್ನ ಹುಡಿಕಿಕೊ೦ಡು ಹೋಗುವ ನಾಯಕನಾಯಕಿಯರನ್ನೂ 

ಪಡೆಯಲಿಲ್ಲ. ವೀರಾಗ್ರೇಸರರಾಗಿ ಮತ್ತಷ್ಟಗಳನ್ನು ಪ್ರಕಟಪಡಿಸುವ 

ವರನ್ನೂ ತರಲಿಲ್ಲ. ನಾವು ಸುತ್ತಲೂ ನಿತ್ಯಚರ್ಯೆಗಳಲ್ಲಿಯೂ, ನಿತ್ಯಾ 

ನುಭವಗಳಲ್ಲಿಯೂ ನೋಡುವ ಸಂಗತಿಗಳನ್ನು ಜೋಡಿಸಿಕೊಂಡು 

ಅದಕ್ಕೆ ತಕ್ಕ ಪಾತ್ರಗಳ ಮುಖಾಂತರ ಈ ಕಥೆಯನ್ನು ಬರೆಯಲುಸಲುಪಕ್ರ 

ಮಿರುವೆವು. 

 

ಇನ್ನೊಂದು ವಿಚಾರು-ನಮಗೆ ಪರಿಚಯವಿರುವ ಊರುಗಳನ್ನೇ 

ನಮ್ಮ ಶತ್ರುಗಳಿಗೆ ವಾಸಸ್ಥಾನಗಳಾಗಿ ಏರ್ಪಡಿಸಿರುವೆವು. ನಮಗೆ ತಿಳಿ 

ಯದ ಹೆಸರಗಳನ್ನು ಬರೆಯುತ್ತ, ನಾವು ನೋಡಲಾಗದ ಊರುಗಳನ್ನೂ 

ಪಟ್ಟಣಗಳನ್ನೂ ವರ್ಣಿಸುತ್ತ ಪುರಾತನಕಾಲಗಳಲ್ಲಿ ನಡೆದ ಕಾರ್ಯ 

ಗಳನ್ನು ಕುರಿತು ಚಚಿಸಲು ನನಗೆ ಇಷ್ಟವಿಲ್ಲ. ವಾಚಕರು ಬೇಸರ 

ಪಡದೆ ಶಾಂತಿಯಿಂದ ಪಠಿಸಿ ಸಂತೋಷಿಸಬೇಕು. 


ಬಾಗೇಪಲ್ಲಿ ಎಂಬುದು ಮೈಸೂರು ಸೀಮೆಯಲ್ಲಿ ಬಂದು ತಾಲ್ಲೂ 

ಕು, ಆ ತಾಲ್ಲೂಕಿಗೆ ಆ ಹೆಸರು ಬಂದುದು ಮುಖ್ಯ ಊರಾದ ಬಾಗೇಪಲ್ಲಿ 

ಯಿಂದಲೇ, ಊರು ಬಹಳ ದೊಡ್ಡದಲ್ಲ. ಸುಮಾರು ಐನೂರು ಮನೆಗಳಿರ 

ಬಹುದು. ಅತಿ ವಿಶಾಲವಾದ ರಸ್ತೆಗಳಾಗಲೀ ಅತಿ ದೊಡ್ಡ ಮನೆಗಳಾಗಲೀ 

ಇಲ್ಲ. ಆ ತಾಲ್ಲೂಕಿನ ಉದ್ಯೋಗಸ್ಥರು ಅಲ್ಲಿಯೇ ವಾಸಮಾಡುವುದ 

ರಿಂದ ಊರು ಅಚ್ಚುಮಟ್ಟಿಗಾದರೂ ಇದೆ. ಕೆಲವುವರ್ಷಗಳ ಹಿಂದೆ ಇದೊಂದು 

--------------------------------------

ಕಾದಂಬರೀ ಸಂಗ್ರಹ  

 

ಕುಗ್ರಾಮವಾಗಿತ್ತು, ಒಂದೆರಡು ಬಾಹ್ಮಣರ ಮನೆಗಳು ಕೆಲವು ಬೆಸ್ತರ 

ಗುಡಿಸಲುಗಳೂ ಇದ್ದವು. ಈಚಥಚೆಗೆ ಊರು ಅಭಿವೃದ್ಧಿ ಸ್ಥಿತಿಯನ್ನು 

ಹೊಂದುತ್ತಿರುವುದು, ಬಾಗೇಪಲ್ಲಿಯ ಸುತ್ತಲೂ ಬೆಟ್ಟ ಗುಡ್ಡಗಳು 

ಹೆಚ್ಚು, ಮಲೆನಾಡುಗಳಲ್ಲಾದರೆ ಬೆಟ್ಟಗಳಿದ್ದರೂ, ಗಂಭೀರವಾದ ಅತ್ಯು 

ನ್ನತಶ್ರೇಣಿಗಳು ತುಂಬಿರುವುವು. ಮತ್ತು ಘೋರವಾದ ಅರಣ್ಯ ಪ್ರದೇಶ 

ವನ್ನೆಲ್ಲಾ ಆಕ್ರಮಿಸಿಕ್ಕೊಂಡು ದೂ:ದೂರಗಳಲ್ಲಿ ಒಂದೊಂದು ಹಳ್ಳಿಗಳನ್ನು 

ಒಳಗೊಂಡಿರುವುದು, ಬೈಲುಸೀಮೆಯಲ್ಲಿ ಪಶ್ಚಿಮಘಟ್ಟದ ರಾಮಣೀಯ  

ತೆಯು ಬಾರದಿದ್ದರೂ ವಿಶೇಷವಾಗಿ ಕೆರೆಗಳುರುವುದರಿಂದ ಈ ಭೂಮಿಯು 

ಪೈರು ಪಚ್ಚೆಗಳಿಂದ ಕೂಡಿ, ಮನೋಹವಾಗಿರುವದು. ಅದd ಈಗ್ಗೆ 

ಅರುವರ್ಷಗಳಿಂದ ಮಳೆಯಿಲ್ಲದೆ, ಕರೆಗಳು ತು೦ಬದ್ದರಿಂದ ಕು ಡಿಯುವ 

ನೀರು ಸಿಕ್ಕುವುದೂ ಕಷ್ಟವಾಗಿದೆ. ಒಂದೊಂದು ವೇಳೆ ಹಳ್ಳಿಯ ಜನ 

ಗಳು ನೀರಿಗಾಗಿ ಒಂದು ಮೈಲಿಯವರೆಗೂ, ಮಡಿಕೆಗಳನ್ನೂ ಬಿ೦ದಿಗೆ 

ಗಳನ್ನೂ ಹೊತ್ತುಕೊಂಡು ಹೋಗುವರು. ಬಾಗೇಪಲ್ಲಿಯಲ್ಲಿಯೂ 

ಕೂಡ, ನೀರು ಸಿಕ್ಕುವುದು ಕಷ್ಟ. ನದಿಗೆ ಹೊಸನೀರು ಬಂದಾಗ 

ರೋಗಾದಿಗಳು ಬರುವುವೆಂದು ಹೆದರಿ ಜನಗಳು ಬಹಳ ದೂರದಿಂದ ಕುಡಿ 

ಯುವ ನೀರನ್ನು ತಂದುಕೊಳ್ಳುವರು. 


ಚಿತ್ರಾವತಿಯ ಬಳಿಯಲ್ಲಿ ಇಬ್ಬರು ಯುವಕರು ಮಾತನಾಡುತ್ತಲಿ 

ದ್ದರೆಂದು ಹೇಳಿರುವವು ಈ ಚಿತ್ರಾವತಿ ಹೊಳೆಯು ಬಾಗೇಪಲ್ಲಿಗೆ 

ಆರ್ಧಮೈಲಿಯ ದೂರದಲ್ಲಿ ಹರಿಯುವುದು. ಬೇಸಿಗೆಯಲ್ಲಿ ಒಂದು 

ಕಾಲುವೆಯಲ್ಲಿಯೂ, ಮಳಗಾಲದಲ್ಲಿ ಇರ್ಕಡೆಗಳಲ್ಲಿ ಉಬ್ಬಿಯೂ ಇದು 

ಪ್ರವಹಿಸುವುದು. ಈನದಿಯಿಂದ ಕೊಂಚಮಟ್ಟಿಗೆ ತೋಟಗಳನ್ನೂ, 

ಗದ್ದೆಗಳನ್ನೂ, ಬೆಳಯಿಸಿಕ್ಕೊಂಡು ಜನರು ನೆಮ್ಮದಿಯಾಗಿರುವರು, ಊರಿನ 

ಜನರು ಕುಡಿಯಲು, ಚಿತ್ರಾವತಿಯೇ ನೀರನ್ನು ಕೊಡಬೇಕು, ಚಿತ್ರಾ  

ವತಿಯಿಂದ ಬಹಳ ಪ್ರಯೋಜನವುಂಟು, ಬಟ್ಟೆಗಳನ್ನು ಒಗೆಯುವುದಕ್ಕೂ 

ಸ್ನಾನಸಂಧ್ಯಾವಂದನೆಗಳಿಗೂ, ಪಾತ್ರೆಗಳನ್ನು ಬೆಳಗುವುದಕ್ಕೆ ಬಹಳ 

---------------------------------------

ಸಾವಿತ್ರಿ ೭ 

ಸಹಾಯವಾಗಿರುವುದು, ದನಕರುಗಳು ಯಾವ ಕಾಲದಲ್ಲಿಯಾದರೂ 

ಹೋಗಿ ನೀರನ್ನು ಕುಡಿಯುವುವು. ಸಾಯಂಕಾಲದಲ್ಲಿ ಹುಡುಗರು ಆಟ 

ಪಾಟಗಳನ್ನಾಡುವರು. 


ತಾಲ್ಲೂಕು ಕಛೇರಿಯ ಮು೦ದುಗಡೆಯಲ್ಲಿ ಆಂಜನೇಯನಗುಡಿ 

ಬೀದಿಯೊಂದಿರುವುದು. ಆಂಜನೇಯನ ಗುಡಿಗೆ ಮೂರನೇಮನೆಯು ಒಬ್ಬ 

ಶಾನುಭಾಗನದು. ಶಾನುಭೋಗನಾದರೂ ಆಸ್ತಿಯು ಚೆನ್ನಾಗಿತ್ತು. 

ಭೂಸ್ಥಿತಿಯು ಬಲವಾಗಿತ್ತು. ಆತನಿಗೆ ಎರಡು ಮನೆಗಳ, ೫೦೦೦ ರೂ 

ಪಾಯಿಗಳ ಮೂಲಧನವೂ ಉಂಟು. ಈತನ ಹೆಸರು ಕೊನೇರಯ್ಯ. ಈತನ 

ವಯಸ್ಸು ಸುಮಾರು ೨೩ ವರುಷಗಳಿರಬಹುದು. ರೂಪು ಅಷ್ಟೇನು 

ಚಲುವಲ್ಲ ಕುರೂಪಿಯೂ ಅಲ್ಲ. ಆಕಾರದಲ್ಲಿ ಗಿಡ್ಡು. 


ಈ ಕೋನೇರಯ್ಯನೇ ಮನೆಗೆ ಯಜಮಾನನು. ಮನೆಯಲ್ಲಿ ಈತನ 

ಬಲತಾಯಿ ಮತ್ತು ತಂಗಿಯೊಬ್ಬಳು ಇರುವಳು. ಈ ತಂಗಿಯು ಸ್ವ೦ತ 

ತಂಗಿಯಲ್ಲ; ಬಲಶಾಯಿಯ ಮಗಳು. ಇವರಲ್ಲದೆ, ಕೋನೇರಯ್ಯನ 

ಹೆಂಡತಿ ಭಾವಮೈದಂದಿರೂ ಇರುವರು, ಹಳ್ಳಿಯಕಡೆಯಿಂದ ಬರುವ 

ಆಳುಗಳು ಮನೆಯ ಕೆಲಸಗಳನ್ನ ಮಾಡುವರು. ಆದರೆ, ಅಡಿಗೆಯ ಮನೆಯ 

ಯಜಮಾನಿಯು ಕೊನೇರಯ್ಯನ ಬಲತಾಯಿ ನಾಗಮ್ಮನಾಗಿದ್ದಳು. 

ಯಾಜಮಾನ್ಯಕ್ಕೆ ಇತರರಾರೂ ಬರಲಿಲ್ಲವಾದುದರಿಂದ ನಾಗಮ್ಮನೇ 

ವಹಿಸಬೇಕಾಯಿತು. ಇದರಿಂದ ಮನಸ್ಸಿಗೆ ಹೆಮ್ಮೆಯು ಬರಲು ಅವಕಾಶ 

ವಿರಲಿಲ್ಲ. 


ಕೋನೇರಯ್ಯನ ತಂದೆಯು ತನ್ನ ಜೀವಿತಕಾಲದಲ್ಲಿ ವಿಷಯಾಸಕ್ತ 

ನಾಗಿದ್ದನು ತನ್ನ ಮೊದಲನೇ ಹೆಂಡತಿಯು ಸಾಯುವಕಾಲದಲ್ಲಿ ೯ ವರು 

ಷದ ಮಗನಾಗಿದ್ದರೂ ಅವರ ಹಿಂದೆಮುಂದೆ ಕಲವು ಮಕ್ಕಳು ಲೋಕಾಂ 

ತರವನ್ನು ಹೊಂದಿದ್ದರೂ ಇನ್ನೊಂದು ಮದುವೆಯನ್ನು ಮಾಡಿಕ್ಕೊಂಡು 

ಸಂಸಾರಸುಖವನ್ನು ಅನುಭವಿಸಲು ಮನಸ್ಸು ಮಾಡಿದನು. ಇದಕ್ಕಾಗಿಯೇ 

ನಾಗಮ್ಮನನ್ನು ಪಾಣಿಗ್ರಹಣಮಾಡಿಕ್ಕೊಂಡು ಕೆಲವು ವರುಷಗಳ ನಂತರ 

----------------------------------------

ಕಾದಂಬರಿ ಸಂಗ್ರಹ 

ಒಂದು ಹೆಣ್ಣುಮಗುವನ್ನು ಹೊಂದಿದನು. ಆ ಹೆಣ್ಣುಮಗುವು ದೊಡ್ಡ 

ದಾಗಿ ಅದಕ್ಕೆ ತಾನು ಮದುವೆಯನ್ನು ಮಾಡುವಷ್ಟು ಪುಣ್ಯವನ್ನು ಮಾತ್ರ 

ಹೊಂದಲಿಲ್ಲ. ಆಮಗು ಸಾವಿತ್ರಿಗೆ ನಾಲ್ಕುವರುಷಗಳು ತು೦ಬುವದಕ್ಕಿಂತ 

ಮೊದಲೆ ಕೊನೇರಯ್ಯನ ತಂದೆಯು ಈಲೋಕವನ್ನು ಬಿಟ್ಟನು. ನಗಾ 

ಮ್ಮನಿಗಾದರೋ ತನ್ನ ತೌರುಮನೆಯವರಾರೂ ಇರಲಿಲ್ಲ.  ಮೈದುನನಾದ 

ಸುಬ್ಬಯ್ಯನು ಬಹಳ ಸಹಾಯಮಾಡಿ ಸ್ಥಿತಿಗತಿಗಳೆಲ್ಲವನ್ನೂ ಏರ್ಪಡಿಸಿ, 

ಎಚ್ಚರಿಕೆಯಿಂದ ಸಂಸಾರವನ್ನು ನೋಡಿಕ್ಕೊಂಡು ಬರುತ್ತಿದ್ದನು. ಸಾವಿ 

ತ್ರಿಯು ದೊಡ್ಡವಳಾಗುತ್ತ ಬಂದಳು. ಸುಬ್ಬಯ್ಯನಿಗೆ ಸಾವಿತ್ರಿಯಲ್ಲಿ 

ಬಹಳ ಆದರ, ಬಹಳ ಪ್ರೀತಿ. ಸಾವಿತ್ರಿಯೂ, ಯಾವಾಗಲೂ "ಚಿಕ್ಕ 

ಪ್ಪಾ  ಚಿಕ್ಕಪ್ಪಾ" ಎನ್ನುತ್ತೆ ಒಂದು ಘಳಿಗೆಯೂ ಬಿಟ್ಟಿರಳು. ಸಾವಿತ್ರಿಗೆ 

೯ ವರುಷಗಳು ತುಂಬಿದವು. ಆಗ ಸುಬ್ಬಯ್ಯನಿಗೆ ಊರ ಬಿಟ್ಟು ಹೊರಟು 

ಹೋಗುವ ಕೆಲಸವೊಂದು ಏರ್ಪಟ್ಟಿತು. ಕೊನೇರಯ್ಯನಿಗೆ ಶಾನುಭೋಗ 

ಕೆಲಸವನ್ನು ಮಾಡಿಸಿಕೊಟ್ಟು ತಾನು ಕೆಲವು ಕಾಲದಲ್ಲಿಯೇ ಹಿಂದಿರುಗಿ 

ಬರುವುವಾಗಿ ಹೇಳಿ ಹೊರಟುಹೋದನು. ಕೋನೇರಯ್ಯನ ಇನ್ನೊಬ್ಬ 

ಚಿಕ್ಕಪ್ಪನು ಆಗಾಗ್ಗೆ ಒಂದು ಇವರನ್ನು ವಿಚಾರಿಸಿ ಕೊಳ್ಳುತ್ತಿದ್ದನು. 

..................

 

೩ನೇ ಪರಿಚ್ಚೇದ. 

" ಸಾವಿತ್ರಿ ; ಒಳಕ್ಕೆ ಬಾರೆ ಅಯ್ಯೋ ಬೇಗ ಬಾರೆ ” 


" ಏನನ್ನು ಒಂದು ಸ್ವಲ್ಪ ಹೊತ್ತಾದರೂ ವಿರಾಮ ಬೇಡವೇ ? 


ನಾ- " ವಿರಾಮವಿರಲಿ, ಅಲ್ಲಿ ನೋಡು, ನಿನ್ನ ಅಣ್ಣನು ನಿನಗೆ ಗಂಡಿನನ್ನು  

ಕರತರುವಂತಿದೆ.  ಇಂದಿಗೆ ಮೂರು ತಿಂಗಳುಗಳಾಗಿ ಹೋದವು. 

ಹುಡಕಿದ ಕಡೆಗಳಲ್ಲೆಲ್ಲಾ ಸರಿಯಾದ ವರನು ಸಿಗಲಿಲ್ಲ. ಈಗ 

ದೊರತಂತಿದೆ " 


ಸಾ-ನನಗೆ ಮದುವೆಯ ಯೋಚನೆಯೇನೂ ಇಲ್ಲವಲ್ಲ. 

----------------------------------------

ನಾ -ನಿನಗೆ ಏಕೆ ಇದ್ದೀತು ? ಹೆಣ್ಣು ಮಕ್ಕಳನ್ನು ಪಡೆದು ಅವರಿಗೆ 

ವಯಸ್ಸು ಮೀರುತ್ತ ಬರುವುನ್ನು ನೋಡುವತಂದೆತಾ ಮಗಳಿಗಲ್ಲವೇ 

ಯೋಚನೆ ? 


ಸಾ-" ಅಹುದು-ವರನೆಂದು ಯಾವನಿದ್ದರೂ ಸರಿ, ತಂದು ಗ೦ಟ ಹಾಕಿ 

ಬಿಡುವ ಯೋಚನೆಯೆ ಹೊರತು ತಕ್ಕವನೇ, ರೂಪ ಯೌವನ 

ಗಳಲ್ಲಿಯೂ, ವಿದ್ಯಾ ಬುದ್ಧಿಗಳಲ್ಲಿಯೂ ತಕ್ಕವನೇ ಎಂದು 

ಯೋಚಿಸುವುದಿಲ್ಲ. 


ನಾ:- ಹಾಗೆ ತಿಳಿಯ ಬೇಡ, ತಮ್ಮ ಹೊಟ್ಟೆಗಳಲ್ಲಿ ಹುಟ್ಟಿದ ಮಕ್ಕಳು ಸುಖ 

ವಾಗಿ ಬಾಳಲೆಂದು ತಂದೆತಾಯಿಗಳಿಗೆ ಅಲೋಚನೆಯಿರುವುದಿಲ್ಲವೇ? 


ಸಾ - ಇರುವುದು, ನಿಜ. ಆದರೆ ನಮ್ಮ ಹಳ್ಳಿಯಲ್ಲಿ ಸುಂದರಮ್ಮನ ಮದುವೆ 

ಯಾಯಿತಲ್ಲ ವರನಿಗೆ ನಲವತ್ತು ವರ್ಷ, ವಿದ್ಯೆಯಿಲ್ಲ, ಬುದ್ದಿಯಿಲ್ಲ. 

ರುಪದಲ್ಲಂತೂ ಮನ್ಮಥನೆಸರಿ, ಅದು ಹೇಗೆ ಕೊಟ್ಟು ಮದುವೆ  

ಮಾಡಿದರು ?


ನಾ- ಬ್ರಹ್ಮ ಬರೆದದ್ದು-ಅದಕ್ಕೆ ನಾವೇನು ಮಾಡೋಣ? 


ಸಾ-ಅಂತಹ ವಿವಾಹಗಳನ್ನು ಮಾಡುವದಕ್ಕಿಂತ ನಿಮ್ಮ ಮಕ್ಕಳನ್ನು 

ಭಾವಿಗೆ ತಳ್ಳಿ ನೀವೂ ಬೀಳುವುದು ಲೇಸು. 


ನಾ-ನೀನು ಹುಚ್ಚು ಹುಡುಗಿ ತಾಳು ನಾವು ಅಡಿಗೆಯ ಮನೆಗೆ ಹೋ  

ಗೋಣ, ಅವರು ಬಂದರು. 


ಕೊನೇರಯ್ಯನೂ ರಾಮಚಂದ್ರಯ್ಯನೂ ಬಂದರು. ಮನೆಯೋಳ 

ಗಿನ ಕೋಣೆಯಲ್ಲಿ ರಾಮಚಂದಯ್ಯನನ್ನು ಕೂರಿಸಿ ತನ್ಮ ಬಲತಾಯಿಯ 

ಒಳಗೆ ಬಂದು, “ ವರನನ್ನು ಕರೆತಂದಿರುವೆನು ಬೇಗನೆ ಅಡಿಗೆಯನ್ನು 

ಮಾಡಿದರೆ ಮು೦ದಿನ ವಿಷಯಗಳನ್ನು ಆಲೋಚಿಸಬಹುದು " ಎಂದನು. 

ವರನೆಂಬ ಮಾತು ಕಿವಿಗಳಿಗೆ ಬಿತ್ತೋ ಇಲ್ಲವೋ' ಆಗಲೇ ನಾಗಮ್ಮನಿಗೆ 

ಪುಳಕಾಂಕಿತವಾಯಿತು. ಕೂಡಲೇ ಸಂಭ್ರಮದಿಂದ ಆಡಿಗೆಯನ್ನು ಮಾಡಿ 

ದಳು.  ಸ್ನಾನ ಸಂಧ್ಯಾವಂದನೆಗಳಾದನಂತರ ಊಟಕ್ಕೆ ಕಳಿತರು. ಅಳಿಯನು 

--------------------------

೧೦ ಕಾದಂಬರಿ ಸಂಗ್ರಹ, 


ಎಂತದವನೋ ಎಂದು ನಾಗಮ್ಮನಿಗೆ ಭಾವನೆಯುಂಟಾಯಿತು. ನಾಚಿಕೆಯಾ  

ಯಿತು. ಬಡಿಸಲು ಸಂಕೋಚವಾಯಿತು.  ಆದರೂ ಯತ್ನವಿಲ್ಲದೆ ಉತ್ಸಾಹಗ 

ಳೆಲ್ಲವನ್ನೂ ತಡೆದಲುಕೊಂಡು ಬಡಿಸಿದಳು, ಬಡಿಸುವಾಗ ಒಂದೆರಡ ತಡವೆ ಆ 

ಳಿಯ ನಾಗುವವನನ್ನು ನೋಡಿದಳು. ನಾಗಮ್ಮನಹೊಟ್ಟೆಯಲ್ಲಿ ಬೆಂಕಿ ಬಿತ್ತು. 


ಊಟವಾದ ನಂತರ ರಾಮಚಂದ್ರಯ್ಯನು ಕೊಠಡಿಯಲ್ಲಿ ಸ್ವಲ್ಪ 

ಮಲಗಿದನು. ಕೊನೆರಯ್ಯನಾದರೋ ತಾನು ಪಟ್ಟ ಕಷ್ಟಗಳೆಲ್ಲವನ್ನೂ 

ಬಲತಾಯಿ.ಗೆ ವಿವರಿಸುತ್ತಿದ್ದನು, ಎಲ್ಲೆಲ್ಲಿಯೋ ಹುಡುಕಿದುದಾಯಿತು. 

ಕೆಲವರಿಗೆ ಆಸ್ತಿಯಿಲ್ಲ. ಕೆಲವರಿಗೆ ವಿದ್ಯೆಯಿಲ್ಲ. ಕೆಲವರಿಗೆ ತಂದೆತಾಯಿ 

ಗಳಿಲ್ಲ. ಮತ್ತು ತಮ್ಮವರಾಗಿರುವವರಲ್ಲಿ ಗಂಡೆಂಬ ವನೊಬ್ಬನೂಯಿಲ್ಲ. 

ಕಡೆಗೆ ಈ ರಾಮಚ೦ದ್ರಯ್ಯನನ್ನು ಎಷ್ಟೋವಿಧವಾಗಿ ಬೇಡಿಕೊಂಡು, 

ನಮ್ಮ ಮನೆಯನ್ನು ಉದ್ಧಾರಮಾಡಬೇಕೆಂದು ಕೇಳಿಕೊಂಡುದಕ್ಕೆ 

ಒಪ್ಪಿರುವನು. ಮತ್ತು ರಾಮಚಂದಯ್ಯನಿಗೂ, ತನ್ನ ಚಿಕ್ಕಪ್ಪಂದಿರಿಗೂ 

ವ್ಯವಹಾರಗಳೂ ಚೆನ್ನಾಗಿಲ್ಲ. ತಾವು ಏನೂಂದು ಸಹಾಯವನ್ನು ಮಾಡ 

ದಿದ್ದರೂ ಅದಕ್ಕೆ ಆಕ್ಷೇಪಣೆ ಮಾಡುವುದರಲ್ಲಿ ನಿಸ್ಸೀಮರು ಎಂಬ 

ಅಭಿಪ್ರಾಯದಿಂದಲೇ ತನ್ನ ಇನ್ನೊಬ್ಬ ಚಿಕ್ಕಪ್ಪನಿಗೂ ಈ ಸಮಾಚಾರ 

ವನ್ನು ತಿಳಿಸಲು ಇಷ್ಟವಿಲ್ಲ, ಈಗ ಈ ವರನನ್ನು ಹೇಗಾದರೂ ಒಪ್ಪಿಪಿಸಿ 

ದರೆ ಮುಂದಕ್ಕೆ ಬಹಳ ಅಭಿವೃದ್ಧಿಯನ್ನು ಹೊಂದಬಹುದು. ಎಂಬಿವೇ 

ಮುಂತಾದ ಮಾತುಗಳನ್ನು ಹೇಳಿದನು. 


ನಾ- "ಅಪ್ಪಾ ವರನಿಗೆ ವಯಸ್ಸು ಮೀರುವುದಿಲ್ಲ : ನಮ್ಮ ಸಾವಿತ್ರಿ 

ಯನ್ನು ಇವನಿಗೆ ಕೊಡಲು ಮನಸ್ಸು ಇಲ್ಲ. " 


ಕೋ-"ಆಹದು ನಿಜ, ಆದರೆ ಏನು? ಮತ್ತು ಅಥವಾ ಮೂವತ್ತೈದು 

ವರುಷದವನಂತೆ ಕಾಣುವನು ! ಬಹಳ ಆಸ್ತಿ ಉಂಟು ! ಹಿಂದೂಪು 

ರಕ್ಕೆ ಸಮೀಪದಲ್ಲಿನ ನಾಗೋಡಿಯಲ್ಲಿರುವನು. ಮೊದಲನೆಯ ಹೆಂಡ 

ತಿಗೆ  ಮಕ್ಕಳಾರೂ ಇಲ್ಲ. ಅವಳೂ ಇಲ್ಲ. ಇದಕ್ಕಿಂತ ಮೇಲಾದ 

ವರನನ್ನು ಹುಡುಕುವುದು ಸಾಧ್ಯವಿಲ್ಲ.” 

--------------------------------------

ನಾ-ನಮ್ಮ ಸಾವಿತ್ರಿಯು ವಿದ್ಯಾವತಿ, ತಕ್ಕಮಟ್ಟಿಗೆ ತಿಳವಳಿಕೆಯುಳ್ಳ .

ವಳು ಅವಳ ಒಪ್ಪವಳೋ ಇಲ್ಲವೋ? 


ಕೋ-ಒಪ್ಪದೇ ಏನು ? ಆಭರಣಗಳು, ಹಣ, ಯಜಮಾನಿಕೆ, ಇವೆ 

ಲ್ಲವೂ ಎದುರಿನಲ್ಲಿರುವಲ್ಲಿ ಒಪ್ಪದೇ ಏನು ? ಹಟಮಾಡದೇ 

ಅವಳನ್ನು ನೀನು ಒಪ್ಪಿಸು. 


ನಾ- ಅಯ್ಯೋ ಹಣಕ್ಕೆ ಆಸೆಪಡುವಳಲ್ಲವಲ್ಲ, ಆಭರಣಗಳನ್ನು ಕಸಕ್ಕಿಂ 

ತಲೂ ಕಸವಾಗಿ ಎಣಿಸುವಳು, 


ಕೋ-ನನ್ನ ಕೈಲಾದುವನ್ನು ಮಾಡಿರುವನು. ಇನ್ನು ನಿಮ್ಮ ಚಿತ್ತ. 


ನಾ- ನಿನ್ನ ಚಿಕ್ಕಪ್ಪನಾದರೂ ಬಂದಿದ್ದರೆ ಅಲೋಚಿಸಬಹುದಾಗಿತ್ತು. ಹೋ 

ಗಿ ಮೂರು ವರುಷಗಳಾದುವು ಇನ್ನೂ ಬರಲಿಲ್ಲ ನನ್ನ ಇನ್ನೊಬ್ಬ  

ಮೈದುನನಿಗಾದರೂ ಹೇಳಿಕಳುಹಿಸೋಣವೇ ? 


ಕೋ... ಹೇಳೇನು ಕಳುಹಿಸುವುದು. ಅವನು ಬಂದರೆ ಈ ಮದುವೆಗೆ 

ವಿಘ್ನುವಲ್ಲದೆ ಮತ್ತೆ ಬೇರೆಯಿಲ್ಲ. ಈಗ ಸಾವಿತ್ರಿಗೂ ಈಸಮಾ  

ಚಾರಗಳ ಏಕೆ ತಿಳಿಯಬೇಕು ? ಮದವೆಯನ್ನು ನಿಷ್ಕರ್ಷೆಮಾಡಿ 

ಕೆಲಸಗಳಿಗೆ ಆರಂಭಿಸೋಣ, ಮುದುವೆಯಾಗುವಾಗ ತಿಳದರೇಸಾಕು.  


ಕೋನೇರಯ್ಯನು ವರನನ್ನು ಹಡುಕುವುದಕ್ಕೆ ನಿಜವಾಗಿಯೂ 

ಕಷ್ಟ ಪಡಲಿಲ್ಲ ಅತನು ತನ್ನ ತಂಗಿಗೆ ಅನುರೂಪವಾದ ವರನನ್ನು ಸಂಪಾ 

ದಿಸಬೇಕೆಂಬ ಉದ್ದವಿದ್ದಿದ್ದರೆ, ಇತರ ಕಡೆಗಳಲ್ಲಿ ತಕ್ಕವರು ಸಿಗುತ್ತಿ 

ದ್ದರು, ಆದರೆ ಕೇವಲ ದುರಭಿಪ್ರಾಯದಿಂದ ರಾಮಚಂದ್ರಯ್ಯನನ್ನು 

ತಂದನು. ಸ್ವಕಾರ್ಯವನ್ನು ಘಟಿಸಿಕೊಳ್ಳುವುದಕ್ಕಾಗಿ ಕುಯುಕ್ತಿಗ 

ಳನ್ನು ಮಾಡಿದನು, ರಾಮಚಂದ್ರಯ್ಯನಿಗೆ ಮದುವೆಯಾದುದಾದರೆ ತನ್ನ 

ತಂಗಿಯಮೂಲಕ, ಕೆಲವು ಭೂಮಿಗಳನ್ನು ಸಂಪಾದಿಸಬಹುದೆಂದು ನಿರ್ಷ್ಕ  

ಷಿ ಸಿದನು. 

 

ರಾಮಚಂದ್ರನಿಗೆ ಸುಮಾರು ನಲವತ್ತೈದು ವರ್ಷಗಳು ಆಗಲೇ 

ಕೂದಲು ನರೆಯುತ್ತ ಬಂದಿತ್ತು. ಮುಖದಲ್ಲಿ ಕಾಲವು ತನ್ನ ಚಿಹ್ನೆಗಳನ್ನೂ 

----------------------------------------

೧೨ ಕಾದಂಬರಿ ಸಂಗ್ರಹ 


ಗೆರೆಗಳನ್ನೂ ಬರೆದಿತ್ತು. ಸ್ವಲ್ಪಮಟ್ಟಿಗೆ ಗೂನು ಶರೀರ. ಕೋನೇರ 

ಯ್ಯನ ತಂದೆಯೂ, ರಾಮಚ೦ದ್ರಯ್ಯನೂ ಸ್ನೇಹಿತರಾಗಿದ್ದರು. ರಾಮ 

ಚಂದ್ರಯ್ಯನಿಗೆ ಮೊಸಲನೇ ಹೆಂಡತಯು ಗತಿಸಿದ ನಂತರ ಇನ್ನೊಂದು 

ಮದುವೆಗೆ ಬಹಳವಾಗ ಪ್ರಯತ್ನಗಳನ್ನು ಪಟ್ಟನು. ಆದರೆ ಸಾಧ್ಯವಾಗ 

ಲಿಲ್ಲ. ಈಗ ಕೋನೇರಯ್ಯನಿಗೆ ಕೆಲವು ಭೂಸ್ಥಿತಿಯನ್ನು ಕೊಡುವೆ 

ನೆಂತಲೂ, ವಧುವಿಗೆ ಸರ್ವಾಭರಣಗಳನ್ನು ಇಡುವೆನೆಂತಲೂ ಹೇಳಿ ಮೆಚ್ಚಿ 

ಸಿದನು. ಮತ್ತು ತಾನು ವಯಸ್ಸು ಮೀರುತ್ತ ಬಂದುನಾದುದರಿಂದ ಲೇವಾ 

ದೇವಿಗಳನ್ನೂ ಲೆಖ್ಖಪತ್ರಗಳನ್ನೂ ನೊಡಿಕೊಳ್ಳುವರಾರೂ ಇಲ್ಲ. 

ಭೂ ಸಾಗುವಳಿಯನ್ನೂ ನೆಟ್ಟಗೆ ತರಬೇಕು. ಇವೆಲ್ಲಕ್ಕೂ ಕೋನೇ 

ರಯ್ಯನ ಸಹಾಯುವು ಸಿಗುವುದೆಂದು ಭಾವಿಸಿದನು. ಕೋನೇರಯ್ಯನಾದರೋ 

ಆಗಾಗ್ಗೆ ಭಾವನಕೆಲಸಗಳಲ್ಲಿ ಪ್ರವೇಶಿಸುತ್ತ, ಆತನ ಭೂಸ್ಥಿತಿಯನ್ನು 

ಆಪಹರಿಸಬೇಕೆಂದು ಆಲೋಚಿಸಿದನು. ಇವರಿಬ್ಬರ ಕುಯುಕ್ತಿಗಳಿcದ 

ಅನಾಥಳಾದ ಸಾವಿತ್ರಿಗೆ ಬಹಳ ಕಷ್ಟವೊದಗಿತು. 


ಅಯ್ಯೋ ಚಂಡಾಲ ! ಪರಮಪಾತಕಿ ! ನಿಷ್ಕರುಣಿ ! ಆ ಅನಾಥದ 

ಹುಡುಗಿಯನ್ನ ನಿರಂತವಾದ ನರಕದಲ್ಲಿ ನೂಕಲು ಆಲೋಚಿಸಿರುವೆ 

ಯಲ್ಲ. ಆವಳು ನಿನಗೆ ಯಾವ ಕೆಡಕನ್ನೂ ಎಣಿಸಲಿಲ್ಲ. ಮನೋವಾ 

ಕ್ಕಾಯಗಳಿಂದ ಕನಸಿನಲ್ಲಿಯೂ "ಅಣ್ಣಾ ಅಣ್ಣಾ" ಎಂದು ಹಲುಬುತ್ತಿದ್ದ 

ದಕ್ಕೆ ತಕ್ಕ ಉಪಕಾರವನ್ನೇ ಮಾಡುವದರಲ್ಲಿರುವೆ, ನಿನಗಾಗಿಯೇ ಬೇ 

ರೊಂದು ಯಮಲೋಕವು ಸೃಷ್ಟಿಯಾಗಬೇಕು. ಆ, ಏನೂ ಅರಿಯದ 

ಬಾಲಕಿಯನ್ನು, ಪಾಲಕರಿಲ್ಲದ, ಪೋಷಕರಿಲ್ಲದ ಬಾಲೆಯನ್ನು, ನಿಷ್ಕಾರಣ 

ವಾಗಿ ನಿನ್ನ ಆಶಾ ಸಮುದ್ರಕ್ಕೆ ಬಲಿಯಾಗಿ ಒಪ್ಪಿಸಿಕೊಳ್ಲುವೆ ನೀಚ, ನಿನಗೆ  

ಕೊನೆಗಾಲವು ಎಂದಿಗೋ ?


ಮರುದಿನ ರಾಮಚಂದ್ರಯ್ಯನೇ ವರನೆಂದು ಸಾವಿತ್ರಿಗೆ ಸಮಾಚಾ 

ರವು ತಿಳಿಯಿತು. ವ್ಯಥೆಪಟ್ಟಳು, ಅತ್ತಳು. ತನ್ನ ಒಡನಾಡಿಗಳೊಂದಿಗೆ 

ಆ ದಿನವೆಲ್ಲಾ ಸೇರುವುದನ್ನು ಬಿಟ್ಟಳು. ಪಾತ್ರೆಗಳನ್ನು ಬೆಳಗಿಸಿಕೊಂಡು 

--------------------------------------- 

ಸಾವಿತ್ರಿ  ೧೩ 


ಬರುವನೆಪದಿಂದ ಚಿತ್ರಾವತಿಯಕಡೆಗೆ ಹೊರಟುಹೋದಳು  ಅದಿನಸಾಯಂ 

ಕಾಲದಲ್ಲಿ ಚಿತ್ರಾವತಿಯಲ್ಲಿ ಸ್ವಲ್ಪ ಹೆಚ್ಚು ನೀರುಹರಿಯುತ್ತಿತ್ತು. ಆ ನೀರಿಗೆ 

ತನ್ನ ಕಣ್ಣೀರನ್ನೂ ಸೇರಿಸಿದಳು. ಮರಳನ್ನು ಹಾಕಿ ಪಾತ್ರೆಗಳನ್ನು ಬಹಳ 

ಹೊತ್ತು ಬೆಳಗಿದಳು. ಕಡೆಗೆ ಮನೆಯ ಯೋಚನೆಯುಂಟಾಯಿತು. "ಹಾ ! 

ದೇವರೇ ! ನನಗೇಕೆ ಇಷ್ಟುತೊಂದರೆ, ಈ ಅಲ್ಪವಾದ ಹೃದಯಕ್ಕೆ ಇಷ್ಟೇಕೆ  

ಕ್ಲೇಶ, ನನಗೆ ಒಂದುದಾರಿಯನ್ನು ತೋರಿಸು, ಪುನಃ ಈ ಊರಿನ ಆಶೆ .

ಯನ್ನೆ ತ್ಯಜಿಸುವೆನು. ನನಗೆ ತಾಯಿಯೆಲ್ಲಿ ? ಅಣ್ಣನೆಲ್ಲಿ?  ಅಯ್ಯೋ 

ತಂದೆಯೇ!  ನನಗೆ ಬುದ್ಧಿತಿಳಿಯುವುದಕ್ಕಿಂತ ಮೊದಲೇ ಪರಲೋಕವ 

ನ್ನೈದಿದೆ. ನನ್ನ ಚಿಕ್ಕಪ್ಪನಿಗೆ ತಿಳಿಸೋಣವೆನದರೆ ಎಲ್ಲಿರುವನೋ , ಏನಾಗಿರು 

ವನೋ, ಬರೆಯುವುದೆಂತೋ' ಎಂದು ಮುರುಗಿದಳು. ಸ್ವಲ್ಪ ಹೊತ್ತು 

ಸುಮ್ಮನಿದ್ದು ಪುನಃ " ನನ್ನ ತಾಯಿಗಂತೂ, ವಿವೇಚನೆಯಿಲ್ಲ ಸ್ವತಃ 

ಮುಂದೆನಿಲ್ಲುವದಕ್ಕೂ ಧೈರ್ಯವಿಲ್ಲ-ನಮಿಗೆ ಸಹಾಯಕರಿಲ್ಲ-ನನ್ನ  

ತಾಯಿಯ ಕಡೆಯವರಾರಾದರೂ ಇದ್ದಿದ್ದರೆ, ಹೀಗೆ ಕಷ್ಟವು ಬರುತ್ತಿರ 

ಲಿಲ್ಲ-ಇನ್ನು ಮಾಡುವುದೇನು ; ನನ್ನ ಕೈಲೇನಾದೀತು ?... ಆದರೂ ಈ 

ಮದುವೆಯು ನಡೆಯಲಾರದು, ವಿಧಿಯು ನನ್ನ ಹಣೆಯಲ್ಲಿ, ಇಂತಹ 

ಕ್ರೂರವಾದ ಲಿಖಿತವನ್ನು ಬರೆದಿಲ್ಲ" ಎಂದು ಧೈರ್ಯವನ್ನು ತಂದುಕೊಂಡು 

ಕೂಡಲೇ " ನನ್ನ ಯತ್ನವೇನಿದೆ, ನಾನು ಏನು ಮಾಡಬಲ್ಲೆ ” ಎoದು 

ಕೊಂಡು ಮನೆಗೆ ಸೇರಿದಳು. 

.................

೪ನೇ ಪರಿಚ್ಛೇದ.

 

ಬಾಗೇಪಲ್ಲಿಯಲ್ಲಿ ನಾರಾಯಣಜೋಯಿಸ ನೆಂಬುವನಿದ್ದನು, 

ಜೋಯಿಸರ ವಿಷಯವಾಗಿಯಾಗಲಿ, ಜಾತಕಗಳ ವಿಷಯವಾಗಿ ಯಾಗಲಿ 

ನಮಗೆ ಹೆಚ್ಚು.ಗೊತ್ತಿಲ್ಲ. ಕೇವಲ ಧನಪಿಶಾಚಿ ಹಿಡಿದಿರವ ಜೊಯಿಸರು 

ಗಳಹತ್ತಿರ ಎಂತಹ ಕಾರ್ಯಗಳೂ ಸಾಧ್ಯವಾಗುವುವು. ಅಕಾಲಗಳಲ್ಲಿಯೂ 

--------------------------------------------

೧೪ ಕಾದಂಬರಿ ಸಂಗ್ರಹ 

 

ಒಳ್ಳೆಯ ಮುಹೂರ್ತಗಳು ಸಿಕ್ಕುವುವು. ಸರಿಬಾರದ ಜಾತಕಗಳು ಸರಿ 

ಬರುವುವು. ಅಷ್ಟಮದಲ್ಲಿ ಶನಿಯಿದ್ದಾನೆ ಚಿಂತೆಯಿಲ್ಲ. ಚಂದ್ರನೇ ಈ 

ಜಾತಕಕ್ಕೆ ಅಧಿಪನು, ಎರಡೂಸರಿ ಹೋದವು ಎನ್ನುವವರಿರುತ್ತಾರೆ, 

ಏಕಾದಶೀ, ದ್ವಾದಶೀ ತಿಥಿಗಳು ಸೋಮವಾರ, ಮಂಗಳವಾರ ಬೀಳುವು 

ದೆಂದೂ,  ವರ್ಷದಫಲಗಳು-ಚಂದ್ರನುತಾರಾಧಿಪನು , ವರುಣನು ಜಲಧಿ 

ಪನೂ, ಆದುದರಿಂದ ಬೆಳ್ಳಿಯೂ, ಭಂಗಾರವೂ ಬಹಳಾಗಿ ಬೆಲೆಯೇರುವ 

ದೆಂದೂ, ಮುಸಲ್ಮಾನ್‌ ಉದ್ಯೋಗಸ್ಥನಿಗೆ ಪಂಚಾಂಗವನ್ನು ಹೇಳಲುಪಕ್ರಮಿ 

ಸಿದ ಜೋಯಿಸನೊಬ್ಬನನ್ನು ನಾವು ಕಣ್ಣಾರೆನೋಡರಿರುವೆವು. 

 

ಪ್ರಕೃತದಲ್ಲಿ ನಾರಾಯಣಜೋಯಿಸನಿಗೆ ಆದಾಯಗಾಲ ಕೊನೇ 

ರಯ್ಯನು ಎರಡುಕಾಗದಗಳನ್ನು ಹಿಡಿದುಕೊಂಡುಬಂದು ಜೋಯಿಸನಿಗೆ 

ಕೊಟ್ಟನು. ಅವನು ಕೊಂಚಹೊತ್ತು ಜಾತಕಗಳನ್ನು ಗುಣಿಸಿನೋಡಿ 

“ಏನಪ್ಪಾ ಸರಿಬರುವಂತಿಲ್ಲ ಜಾತಕಗಳಿಗೆ ಏನೋ'-ಕೊನೇರಯ್ಯನು 

ಅಷ್ಟರಲ್ಲಿಯೇ " ಏನೋ ಸದ್ಯಕ್ಕೆ ಐದು ರೂಪಾಯಿಗಳನ್ನು ತೆಗೆದುಕೊಳ್ಳಿರಿ 

ಈಗ ಗುಣಿಸಿನೋಡಿ, ಸರಿ ಬರಬಹುದು" ಎಂದನು. ಕೂಡಲೇ ನಾರಾ 

ಯಣಜೋಯಿಸನಿಗೆ ಜ್ಞಾನೋದಯವಾಯಿತು.  “ನಿಜ , ನೀನು ಹೇಳಿದ್ದು 

ನಿಜ, ಗುಣಿಸುವುದರಲ್ಲಿ ಒಂದನ್ನು ಬಿಟ್ಟು ಬಿಟ್ಟಿದ್ದೆನು. ಸ್ವಲ್ಪ ತಾಳು "   

ಎಂದುಹೇಳಿ " ಭಲಾ, ಭಲಾ, ನಿನಗೆ ಹೋಳೆದಿದ್ದೇ ಆಶ್ಚರ್ಯವಪ್ಪ. ದಕ್ಷಿಣ  

ನಾಯಕನನ್ನು ಮರೆತಿದ್ದೆ, ಈಗ ಸರಿಹೋಯಿತು" ಕೊನೇರಯ್ಯನು 

"ಸ್ವಾಮೀ ಜೋಯಿಸರೇ, ಸರಿ ಹೋಯಿತೋ ಇಲ್ಲವೋ. ನನ್ನ 

ಮಲ ತಾಯಿಗೆ ಮಾತ್ರನ ಒಪ್ಪಿಸಬೇಕು-ಈ ನೋಟು, ನಿಮ್ಮದೆಂದನು, ಯಾವ 

ಕ್ಷಣದಲ್ಲಿ ೧೦ ರೂಪಟಯಿಗಳ ಮೇಲೆ ದೃಷ್ಟಿಯು ನಾಟಿತೋ ಜೋಯಿಸನಿಗೆ 

ಬುದ್ಧಿಯು ಇನ್ನೂ ಚುರುಕಾಯಿತು. "ಈ ವಿಚಾರವೂ ನನ್ನಲ್ಲಿರಲಿ, 

ನಾಳೆ ಬರುವೆನು-ಎರಡು ತೆಂಗಿನಕಾಯಿಗಳು ವೀಳೆಯದೆಲೆ, ಆಡಿಕೆ, 

 ೨ ರೂಪಟಯಿ ದಕ್ಷಿಣೆಯನ್ನು ತಟ್ಟಿಯಲ್ಲಿಟ್ಟು, ತಟ್ಟೆಯೊಂದಿಗೆ ಯಾರೂ 

 ೧೫-------------------------------------------------------------------

ಕೊಡದ ಮರ್ಯಾದೆ ಕೊಡಬೇಕಪ್ಪ, ಇಲ್ಲವಾದರೆ ಜಾತಕದೋಷಗಳು 

ಹೋಗುವುದಿಲ್ಲ ಎಂದನು.  


ಜೋಯಿಸನ ಮನೆಯಿಂದ ಹಿಂದಿರುಗಿ ಬರುವಾಗ, ರಾಮಚಂದ 

ಯ್ಯನು ಕೋನೇರಯ್ಯನಿಗೆ  ಎದುರುಬಿದ್ದನು. 


ರಾ-- "ಕೊನೇರಯ್ಯ, ನಾನು ಇನ್ನು ನಾಗೋಡಿಗೆ ಹೊರಡುವೆನು. 


ಕೋ-=ಹೊರಡಬಹುದು, ಜಾತಕಗಳು, ಸರಿ ಬರುವಂತಿಲ್ಲ. ಈಗತಾನೆ 

ಜೋಯಿಸರ ಮನೆಯಿಂದ ಬರುತ್ತಿದ್ದೇನೆ. 


ರಾ-- ಹಾ, ಹಾ, ಏನಂದೆ, ಜಾತಕಗಳು ಸರಿಬರುವುದಿಲ್ಲವೇ ?


ಕೋ--ಇಲ್ಲ.


ರಾ- ಜೋಯಿಸನೆಂವನೋ? 


ಕೋ--ಬಹಳ ಬುದ್ದಿವಂತ, ನನ್ನ ಮನೆಗೆ ಮೊದಲಿನಿಂದಲೂ. ಈತನೇ  

ಜೋಯಿಸನು. 


ರಾ-- ಆಮಾತಲ್ಲ, ನಮ್ಮ ಆಲೋಚನೆಗಳಿಗೊಳದಾನೆ? 


ಕೋ--ಛೀ-ಛೀ ;ಎಂತಹ ಬ್ರಾಹ್ಮಣ, ತನ್ನ ಮನಸ್ಸಿಗೆ ಜಾತಕಗಳು 

ಸರಿಬರಲಿಲ್ಲವೆಂದು ತೋರಿದರೆ, ಮಹಾರಾಜರು ಬ೦ದುಕೇಳಿದರೂ 

ಒಂದೇ ಉತ್ತರವನ್ನು ಕೊಡುವಾತನು! ಅವನು ನಿಷ್ಕಪಟಿ, ವಂಚನೆ 

ಯನ್ನು ಮಾಡುವವನಲ್ಲ, ಮತ್ತು ದುರಾಶಾಪರನಲ್ಲ.  ದೇವರೆಂದೇ  

ಬಾವಿಸಬೇಕು. 


ರಾ - ಹಾಗಾದರೆ ಈಗ ಜಾತಕಗಳನ್ನು ತೋೂರಿಸುವದೇ ಬೇd.

ಮನಸ್ಸು ದೃಢಮಾಡಿಕೊಂಡು ಮದುವೆಯನ್ನು ಮಾಡಿಬಿಡೋಣ. 


ಕೋ-ಮನೆಯಲ್ಲಿ ಒಪ್ಪುವುದಿಲ್ಲ-ಅದರಲ್ಲಿಯೂ, ನನ್ನ ಮಲತಾಯಿಯು.

ಅವಳನ್ನು ಕಂಡರೆ ನನಗೆ ಮೈಯಲ್ಲ ಉರಿಯುವುದು. ಏನೇನೋ

ಶಾಸ್ತ್ರಗಳ೦ತೆ, : ವಧೂವರರಿಗೆ ಒಪ್ಪಿರಬೇಕಂತೆ , : 


ರಾ- ಹಾಗಾದರೆ ಈಗ ನಾವು ಮಾಡುವುದೇನು. ಆಗಲೇ~, ತಿಮ್ಮಪ್ಪಯ್ಯನ

ಜಮೀನಿನ ಪಕ್ಕದ ಗದ್ದೆಯನ್ನು ನಿನ್ನ ಸ್ವಾಧೀನಮಾಡಿರುವೆನಲ್ಲಾ

೧೬------------------------------------------------------------

 

ಕೋ--ಮಾಡದಿದ್ದರೆ ಎಲ್ಲಿ ಹೋಗುವುದು? 


ರಾ--ಅಹುದು,- ಹೀಗೆ ಮದುವೆಗೆ ವಿಘ್ನಗಳು ಬರುವುದಲ್ಲಾ


ಕೋ-ಉಪಾಯದಿಂದ  ಅವುಗಳನ್ನು ದಾಟಬೇಕು. ಈಗ ಆಕೆರೆ ಕೆಳಗಿ.

ರುವ ೧೦ ಖಂಡಗದುವ ಗದ್ದೆಯನ್ನು ಏನು ಮಾಡಿರುವೆ? 


ಕೋ-ಆ ಗದ್ದೆಯ ಮಾತೇಕೆ? ನಿನಗೆ ಕೊಡುವುದನ್ನೆಲ್ಲಾ ಕೊಟ್ಟಿರುವೆನು. 

ಮದುವೆಗೆ ಮೊದಲೇ ಅವುಗಳನ್ನು ತೆಗೆದುಕೊಂಡಿರುವೆ. 


ಕೋ-ಹಾಗಲ್ಲ. ಈಗ ಈಜಾತಕಗಳು ಸರಿಹೋಗುವುವೋ ಇಲ್ಲವೋ

ಎಂಬ ಮಾತುಬರಲಿಲ್ಲ. ಈಗ ನಾರಾಯಾಣಜೋಯಿಸನ ಆಹುತಿಗೆ 

ಹಾಕಬೇಕು-ಏನಾದರೂ ಆಶೆ ತೋರಿಸಿದರಲ್ಲವೇ? 


ರಾ--ಅವನು ಒಪ್ಪುವುದಿಲ್ಲವೆಂದು ಹೇಳಿದೆಯಲ್ಲ. 


ಕೋ--ಆವಿಷಯವು ನಿನ್ನಲ್ಲಿರಲಿ. ನೀನು ಆ ೧೦ ಖಂಡುಗದ ಗದ್ದೆಯನ್ನೂ 

ಐವತ್ತು  ರೂಪಾಯಿಗಳನ್ನೂ ಕೊಟ್ಟರೆ.


ರಾ- ಇಷ್ಟೆಲ್ಲವನ್ನೂ ಕೊಡಲಿಕ್ಕಾಗದು.. ನಿನ್ನ ಸಾವಿತ್ರಿಯನ್ನು ನೀನೇ  

ಇಟ್ಟುಕೋ,, ನಾನು ಹೆಣ್ಣನ್ನು ಇನ್ನೆಲ್ಲಾದರೂ ನೋಡುವೆನು, 


ಕೋ-ನೋಡಿಕೊಳ್ಳಬಹುದು-ಕೊಡುವವರಿದ್ದರೆ, ಎಲ್ಲರೂ ಮದುವೆ

ಗಳನ್ನು ಮಾಡಿಸಿಕೊಳ್ಳಬಹುದು.


ರಾ-ನಿನ್ನಂತಹ ದಾಸೈಯರುಗಳು ಸಾವಿರಜನಗಳು ಬರುವರು, 


ಕೋ--ಬಂದರೆ ಸಾವಿತ್ರಿಯಂತಹ ಹುಡುಗಿಯನ್ನು ಕೊಡುವುದಿಲ್ಲ-

ಅವಳಿಗೆ ನಿನಗಿ೦ತ ಮೇಲಾದವರುಸಿಗುವುದಿಲ್ಲವೇ ? ಅವಳನ್ನು  

ನೋಡಿದಮಾತ್ರದಲ್ಲಿಯೇ ಯಾರದರೂ ಮುಗ್ಧರಾಗುವರು-  .

ಅವಳನ್ನು ಹೊಂದಬೇಕಾದರೂ, ಪುಣ್ಯವಿರಬೇಕಲ್ಲ. 


ರಾ~ ನೀನು ದುರಾಶೆಯಿಂದ ನನ್ನ ಗದ್ದೆಗಳೆಲ್ಲವನ್ನು ಕೇಳಿದರೆ ಕೊಟ್ಟೂ 

ಬಿಟ್ಟು, ನಾಳೆ ನಾನು ಬಿಕ್ಷಕ್ಕೆಹೊರಡಲೇನು ? 


ಕೋ-ಈಗ ನನ್ನ ಬಲತಾಯಿಯನ್ನು ಒಪ್ಪಿಸಬೇಕು-ಸಾವಿತ್ರಿಯೂ,  

ಹಟಮಾಡುತ್ತಿರುವಳು, ಜಾತಕಗಳು ಮೊದಲೇಸರಿಬಂದಿಲ್ಲ-ಇಷ್ಟು   

೧೭-------------------

ತೊಂದರೆಗಳಿರುವಲ್ಲಿ -ಒಂದು ೧೦ ಖಂಡುಗ ಗದ್ದೆಯನ್ನು ಕೊಡುವ 

ದೇನೂಹೆಚ್ಚಲ್ಲ-ನಿನಗೆ ಇನ್ನೂ ಕೆರೆಯಕೆಳಗೆ ವಿಪರೀತವಾಗಿರುವುದು,  

ಹೋಗಲಿ - ೫ ಖಂಡುಗ ಗದ್ದೆಯನ್ನೂ೫೦ ರೂಯಿಗಳನ್ನೂ 

ಕೊಡುವೆನು. 


ಕೋ-ಬೇಡ , ನೀನು ಗದ್ದೆಯನ್ನು ಮಾತ್ರಕೊಡು:, ರೂಪಾಯಿಗಳನ್ನು  

ಕೊಡಬೇd. 


ರಾ-ಹಾಗೆಯೇ  ಸರಿ.

 

ಕೋ-ಇದನ್ನು ನಾಳೆಯೇ ಏರ್ಪಾಡುಮಾಡಬೇಕು. 


ಅಷ್ಟರಲ್ಲಿ ಚಾಕರ್ಲಪಲ್ಲಿಯಿಂದ ಟಪಾಲುಗಾಡಿಯು ಬಂತು.


ರಾ--ಯಾರು ಆ ಗಾಡಿಯಲ್ಲಿ ಕುಳಿತಿರುವವರು. ಟಪಾಲನ್ನು ನೋಡಿಕೊಂಡು 

ನಾನೂ ಹೊರಟುಹೋಗುವೆನು. 


ಕೋ--ಆತನು ಸುಬೇದಾಲರ ಮಗನು. ಇನ್ನೊಬ್ಬನಾರೋ ಗೊತ್ತಿಲ್ಲ.

ಬೆಂಗಳೂರಿಂದ ಬಂದಿರಬಹುದು. 


ರಾ-- ಅದೇನು ಈಗಬಂದದ್ದು. 


ಕೋ-- ಈಗ ರಜಾ ಕಾಲವೆಂದು ತೋರುವುದು. 


“ ಓ ಹೋ, ಕೋನೇರಯನವರೆ, ಇಲ್ಲಿ ಬನ್ನಿ -ಸುಬೇದಾರರು

ಊರೊಳಗಿದಾರೆಯೇ? ಸರ್‌ಕ್ಯೂಟ್‌ ಹೋಗಿದ್ದಾರೆಯೇ? 


ಕೋ...ಊರೊಳಗಿದ್ದಾರೆ ? 

"ಇವರಾರು ಹೊಸಬರು ? 

ಕೋ--"'ಈತನು ರಾಮಚಂದ್ರಯ್ಯ, ನನ್ನ ನೆಂಟ , ನಾಗೋಡಿಯಲ್ಲಿರುವನು.

“ ಸರಿ, ಸರಿ, ನೀವುನಿಲ್ಲ-ಎಂದು ಮುಂದೆ ಹೊರಟು, ರಾಜ, ಕೋನೇ

ರಯ್ಯನ ಮುಖವನ್ನು ನೋಡಿದೆಯಾ ? 


ರಾಜ- ನೋಡಿದೆನು, ಅವನು, ಕೇಡಿಗನಾಗಿ ತೋರುವನು.  "

"ತೋರುವುದಲ್ಲ. ನಿಜವಾಗಿಯೂ ಹಾಗೆಯೇ. ಕೆಲವು ತಿಂಗಳ ಹಿಂದೆ, 

ಸರ್ ಕ್ಯೂಟಿನಲ್ಲಿರುವಾಗ ಕೈ ಕೊಟ್ಟಿರುವನು. "

೧೮----------------------------------------------------------------

೧೮ ಕಾದಂಬರೀ ಸಂಗ್ರಹ,

ರಾಜ- "ನಾನು ಇಲ್ಲಿಯೇ ಇಳಿಯುವೆನು, ”

"ಮಧ್ಯಾಹ್ನ ಮನೆಗೆ ಬರುತ್ತೇನೆ."


ಸುಬೇದಾರರ ಮನೆಗೆ ಆದಿವಸವೇ ಈ ಹೊಸವ್ಯಕ್ತಿಯು ಬಂತು~ 

" ಅಣ್ಣ ಬಂದನೆಂದು  ” ಸಣ್ಣ ಹುಡುಗ ಸರ್ವೋತ್ತಮನು ಓಡಿಬಂದನು. 

ಅವನನ್ನು ಎತ್ತಿಕೊಂಡು ಮೂರ್ತಿಯು ಒಳಗೆಹೋದನು. ಬಾಗೇಪಲ್ಲಿಯ 

ಸುಬೇದಾರರಿಗೆ ಮರುಜನ ಗಮಡುಮಕ್ಕಳೂ ಮೂರುಜನ ಹೆಣ್ಣು 

ಮಕ್ಕಳೂ ಇರುವರು. ಹಿರಿಯ ಮಗನಾದ ಮೂರ್ತಿಯ ಬೆಂಗಳೂರಿನಲ್ಲಿ 

ಬಿ. ಎ. ಗೆ ಓದುತ್ತಿರುವನು. ಈಗ ರಜಾಕಾಲವು ಪ್ರಾರಂಭವಾದುದ 

ರಿಂದ, ತಾನೂ, ಅವನ ಸ್ನೇಹಿತ ರಾಜನೂ ಬಾಗೇಪಲ್ಲಿಗೆ ಬಂದರು. ಈ 

ತನ ತಮ್ಮನು ಪೂನಾದಲ್ಲಿ ಓದುತ್ತಿರುವನು, ಸರ್ವೋತ್ತಮನೆಂಬ ಹುಡುಗ  

ನಿಗೆ ಈಗ ಈಗ ಐದುವರ್ಷಗಳು. ಹೆಣ್ಣು ಮಕ್ಕಳಲ್ಲಿ ಜಯಲಕ್ಷ್ಮಿಯೆಂಬುವಳು 

ಗಂಡನ ಮನೆಯಲ್ಲಿ ಸಂಸಾರಮಾಡಿಕೊಂಡಿರುವಳು ಕೃಷ್ಣವೇಣಿ, ವಸುಂ 

ಧರಾ ಯೆಂಬುವರು ಮನೆಯಲ್ಲಿಯೇ ಇರುವರು. ಮಧ್ಯಾಹ್ನವೆಲ್ಲಾ 

ವಿಶ್ರಮಿಸಿಕೊಂಡು ಮೂರ್ತಿಯು ಪ್ರಾುಣಮಿತ್ರನಾದ ರಾಜನ ಮನಗೆ 

ಬಂದನು. ಯಾವಾಗಲೂ, ಅವರು ಆಗಲಿರರು, ಬೆಂಗಳೂರಿನಲ್ಲಿಯೂ, 

ಊಟಕ್ಕೆ ಹೋಗುವಾಗ ಇಬ್ಬರೂ ಜತೆಯಲ್ಲಿಯೇ ಹೋಗುವರು. 

ಅನ್ಯೂನ್ಯಪ್ರೀತಿ-ಇಬ್ಬರ ಮನಸೂ ಒಂದೇ ನಿಷ್ಕಪಟಿಗಳು. ಪ್ರಪಂಚದಲ್ಲಿ 

ಇಂತಹ ಸ್ನೇಹಭಾವವಿದ್ದರೆ ದುಃಖವೆಂಬುದು ಎಲ್ಲಿಯೋ ಓಡಿಹೋಗು 

ವುದು, ರಾಜನ ಮನೆಯಲ್ಲಿ ಫಲಾಹಾರವನ್ನು ತೀರಿಸಿಕೊಂಡು, ಎಲ್ಲಿ 

ಯಾದರು ಸುತ್ತಿಕೊಂಡು ಬರೋಣವೆಂದು ಸಾಯಂಕಾಲವಾಗುತ್ತಲೇ 

ಹೊರಟರು ಊರಿನ ಹೊರಗಿನಿಂದ ತಿರುಗಿಕೊಂಡು, ನದಿಯ ಭಾಗವನ್ನು 

ಸೇರಿದರು. ಮೂರ್ತಿಯು “ ಈ ಚಿತ್ರಾವತಿಯಿಲ್ಲದಿದ್ದರೆ, ಬಾಗೇಪಲ್ಲಿಯು 

ಚೆನ್ನಾಗಿರುತ್ತಿರಲಿಲ್ಲ ” ಎಂದನು. ರಾಜನು, ನಗುತ್ತ ನದಿಗಳಿಲ್ಲದಿದ್ದರೆ 

ಯಾವಪ್ರದೇಶವೂ ಚೆನ್ನಾಗಿರುವುದಿಲ್ಲ ” ಎಂದನು, ಅಲ್ಲಿನ ಮರಳುರಾಶಿ 

ಯಮೇಲೆ ಇಬ್ಬರೂ ಕುಳಿತು, ಹರಿಯುತ್ತಿರುವ ನೀರಿನಲ್ಲಿ ಕಾಲುಗಳನ್ನು

೧೯-----------------------------

ಇಳಿಬಿಟ್ಟುಕೊಂಡು ಬಾಯಿಗೆ ಬಂದುದನ್ನು ಹಾಡುತ್ತಿದ್ದರು. ಆಗಾಗ್ಗೆ 

ನೀರಿಗೆ ಬರುವವರನ್ನು ನೋಡುತ್ತೆ ಹಾಡುವುದನ್ನು ನಿಲ್ಲಿಸುವರು. 

ಹೀಗಿರುತ್ತಿರುವ ಮೂರ್ತಿಯ ದೃಷ್ಟಿಯು ಒಂದು ಕಡೆಯಲ್ಲಿ ನಾಟಿತು.

ರಾಜನು ಏನನ್ನೋ ಹೇಳುತ್ತಿದ್ದನು. ಮಾತುಗಳಿಗೆ ಬದಲು ಕೊಡಲಿಲ್ಲ. 


ರಾ-" ನಿನ್ನ ಜ್ಞಾನವೆಲ್ಲಿದೆ ? 


ಮೂ-" ಆ ಹುಡುಗಿಯಾರು ? 


ರಾ-- ಯಾವ ಹುಡುಗಿ ? 


ಮ-ಅಗೋ ಖಾತೆಗಳನ್ನು ಬೆಳಗುತ್ತಿರುವಳಲ್ಲ, ಅವಳು.  


ರಾ--ಅವಳು ಕೋನೇರಯ್ಯನ ತಂಗಿ. 


ಮೂ-ನಾನು ಇದುವರೆಗೂ ನೋಡಿಯೇ ಇರಲಿಲ್ಲ-ಕೋನೇರಯ್ಯನಿಗೆ 

ಇಂತಹ ತಂಗಿಯೂ ಇರುವಳೇನು  ? 


ರಾ-ಇರುವಳು. ನಿನಗೆ ತಿಳಿದಿರುವುದೆಂದು ಭಾವಿಸಿದ್ದೆನು. 


ಮ-ಆದೇನು ಆಗಾಗ್ಗೆ ಕಣ್ಣೀರನ್ನಿರಿಸಿಕೊಳ್ಳವಂತಿದೆ, ಅವಳ

ಹೆಸರೇನು ?  


ರಾ-ಸಾವಿತ್ರಿ, 


ಮೂ-ಸಾವಿತ್ರಿ! 

.........

೫ನೆಯ ಪರಿಚ್ಛೇದ.

“ ಜೋಯಿಸರೇ ಇಲ್ಲಿ ಕುಳಿತುಕೊಳ್ಳಿ-ಒಳ್ಳೆಯಕ್ಕೆ ಬಂದಿರಿ”  


“ ಬಂದೆನಪ್ಪಾ, ಮನೆಯ ಮುಂದೆ ಹತ್ತಾರು ಜನಗಳು ನಿಂತಿದ್ದರು. 

ಬಿತ್ತನೆಗೆ ಕಾಲವನ್ನು ಗುಣಿಸಬೇಕು. ಮಳೆಯಾವಾಗ ಬರುವದೋ ಅದನ್ನು 

ತಿಳಿದು ಹೇಳಬೇಕು. ಇವು ಮದುವೆಗಳನ್ನು ಘಟಸಬೇಕು, ಇಷ್ಟೊಂದು 

ಕೆಲಸಗಳಿದ್ದರೂ ಮೊದಲ, ನಿನ್ನನ್ನು ನೋಡಿಹೋಗೋಣವೆಂದು ಬ೦ದೆನು. 

 ಮುಖ್ಯ, ನಿನ್ನ ತಂದೆಗಳ, ಒಹಳ ಉದಾರಿಗಳಾಗಿದ್ದರು ಇಲ್ಲಿಗೆ ಬಂದರೆ

೨೦--------------------------------------------------------------

೨೦ ಕಾದಂಬರೀ ಸಂಗ್ರಹ


ಅವರ ಸ್ಮರಣೆಯೇ ಬರುವುದು. ಕೊಡುವೆನಪ್ಪಾ! ನೀನು ನಿನ್ನ ತಂದೆಯಂ  

ತೆಯೇ ಇರುವೆ, ಬಹಳ ಸಂತೋಷ, ಬಹಳ ಸಂತೋಷ "  


ಕೋ- ಜೋಯಿಸರೆ ನನ್ನ ತಂಗಿಯು ಹುಟ್ಟಿದ್ದು ಮೂಲಾನಕ್ಷತ್ರವಂತೆ!

ಅದೇನೋ ಬೇಗನೋಡಿ, ಮದುವೆಯಾದ ಕೂಡಲೇ ಗಂಡನು 

ಳಿಯುವುದಿಲ್ಲವಂತೆ !” 


ನಾರಾ-ಛೀ, ಛಿ, ಯಾರು ಹೇಳಿದರು ? ಜಾತಕಫಲಗಳನ್ನೆಲ್ಲ ರಾತ್ರಿಯೆಲ್ಲ

ಗುಣಿಸಿ ಗುಣಿಸಿ ಸಾಕಾಯಿತು, ಒಂದು ವೇಳೆ ಮೂಲಾನಕ್ಷತ್ರ 

ವಾಗಿದ್ದರೆ ಅದಕ್ಕೆ ಪ್ರಾಯಶ್ಚಿತ್ತವುಂಟು. 


ನಾ- ಏನಪ್ಪಾ ಜೋಯಿಸರೆ ” ಎಂದು ಕಣ್ಣೀರಿಡುವಳು. 


ನರಾ- ಅಮ್ಮ ಅಳಬೇಡಿ, ಅಳಬೇಡಿ, ಮೂಲಾನಕ್ಷತ್ರವಾದರೂ 

ಚಿಂತೆಯಿಲ್ಲ, ಅದಕ್ಕೆ ಶಾಂತಿಯುಂಟು. 


ನಾ-ವರನಿಗೆ ವಯಸ್ಸು ಮೀರಿರುವುದಲ್ಲ ! 


ನಾರಾ-ಚಿಂತೆಯೇನು?ನನ್ನ ಆಯಃ ಪರಿಮಿತಿಯಲ್ಲಿ ಇಂತಹ ಜಾತಕಗಳನ್ನು 

ನೋಡಲಾರೆನೆದು ಭಾವನೆಯಾಗಿದೆ ಎಂತಹ ಜಾತಕ ! ವಧುವಿನ 

ದಕ್ಕಿಂತಲೂ ವರನದೇ ಚೆನ್ನಾಗಿದೆ ವರನದು ದೈವೀಸ್ಪಭಾವ, 

ವಧುವಿನದು ರಾಕ್ಷಸಸ್ವಭಾವ. ಇದಕ್ಕಿಂತಲೂ ಉತ್ಕೃಷ್ಟವಾದುದನ್ನು 

ನಾನು ನೋಡಿಯೇ ಇಲ್ಲ. ಆಹ, ಎಷ್ಟು ಅನ್ಯೊನ್ಯ, ಏನುಪ್ರೀತಿ, 

ಯಾವಾಗ ಒಬ್ಬರನ್ನೊಬ್ಬರು ಅಗಲದೇನೇ ಇರುವರು. 

ಬಹಳ ಚೆನ್ನಾಗಿದೆ. ಇಲ್ಲಿ ನೋಡಿ. ಎಂದು ಜಾತಕಗಳ ತಿರುಗಿಸಿ 

" ರವಿಯ ಈಗ ಗಗನದಲ್ಲಿದ್ದಾನೆ, ಈಗ ರವಿಯೇ ತಾರಾಪಥ 

ಕ್ಕೊಡೆಯನು, ಶನಿಯೇನೂ ಬರಿಯ ಕಣ್ಣಿಗೆ ಕಾಣಿಸುವುದಿಲ್ಲ. 

ಆದುದರಿಂದ ದೋಷಗಳ ಇಲ್ಲದಂತಾಯಿತು ಅಂಗಾರಕನಾದರೋ 

ಮೂರನೇಪಾದದಲ್ಲಿರುವನು, ಆಂತೂ, ಏನುದೋಷವೂ ಇಲ್ಲ. 

ನಿಮ್ಮ ಹುಡುಗಿ ಬಹಳ ಅದೃಷ್ಟವಂತೆ, ಭಾಗ್ಯವಂತೆ, ಪ್ರಣ್ಯವಂತೆ 

ಎಲ್ಲಾವಂತಗಳೂ ಅವಳೇ. ನೀನೇನೂ ಅನುಮಾನಿಸಬೇಡಿ 

೨೧---------------------------------------------------------------



ಶೀಘ್ರದಲ್ಲಿಯೇ ಮಹೂರ್ತವನ್ನು ನೋಡುವೆನು.  


ಕೋ... ಮೂಲಾನಕ್ಷತ್ರದ ದೋಷಕ್ಕೆ ಪರಿಹಾರವೇನು ? 


ನಾರಾ- - ಅದಕ್ಕೆ ಯಾವದಾದರೆಂದು ಮೂಲೆಗೆ ಅಧಿಪನಾದವನನ್ನು ತೃಪ್ತಿ  

ಗೊಳಿಸಬೇಕು. 


ಕೋ--ಯಾರನ್ನು? 


ನಾರಾ-- ನನಗೆ ತೋರುವುದೇನೆಂದರೆ ಉತ್ತರದಿಕ್ಕಿಗೆ ಒಡೆಯನಾದ ಕುಬೇ

ರನನ್ನು ತೃಪ್ತಿಗೊಳಿಸಬೇಕು 


ಕೋ-ಕುಬೇರನಿಗೆ ತೃಪ್ತಿಯಾದರೆ ದೋಷಗಳು ನಿವಾರಣೆಯಾಗುವುವೋ! 


ನಾರಾ --ನನ್ನ ಮಾತುಗಳಲ್ಲಿ ನಂಬಿಕೆಯಿಲ್ಲವೇನಪ್ಪಾ ?  


ಕೋ-- ಹಾಗಾದರೆ ಈಗಿನ ಕ್ರಮವೇನು ? 


ನಾರ.. ನೀನು ನಿನ್ನೆಯ ದಿವಸ ಹೇಳಿದಂತೆಯೂ, ನಾನು ನೆನ್ನೆ ಹೇಳಿದಂತೆಯೇ 

ಮಾಡಿ. ಜೊತೆಗೆ  ಎರಡುಸವರನಗಳನ್ನು ಇಟ್ಟರೆ ನಾನು ಮನೆ

ಯಲ್ಲಿಯೇ ಶಾಂತಿಯನ್ನು ಪಕ್ರಮಿಸುವನು.  


ನಾ--"ಜೋಯಿಸರೆ ಅಷ್ಟು ಮಟ್ಟಿಗಾದರೂ ಮಾಡಿಯಪ್ಪಾ, ನನ್ನ ಯಜ

ಮಾನವಿದ್ದಿದ್ದರೆ ” ಎಂದು ಕಣ್ಣೀರಿಡುವಳು. 


ನಾರಾ- ನಿಮ್ಮ ಯಜಮಾನರಿಗಿಂತಲೂ ಕೊನೇರಯ್ಯನೇ ಚೆನ್ನಾಗಿನಡೆಸು 

ವನಮ್ಮ, ಏನೂ ಅನುಮಾನಬೇಡ, ಈತನು ನನಗೆ ತೋರಿಸುವ 

ಮರ್ಯಾದೆಯಲ್ಲಿಯೇ ತಂದೆಗಿಂತಲೂ ಬಹಳ ಬುದ್ದಿವಂತನಾಗಿ 

ಕಾಣುವನು, ಭಲಾ, ಭಲಾ, ಇದ್ದರೆ ಇಂತಹ ಮಕ್ಕಳಿರಬೇಕು. 


ಜೋಯಿಸನು ಬಹಳ ಸಂತೋಷದಿಂದ, ಮನೆಗೆ ಹಿಂದಿರುಗಿದನು, 

ಸಂತೋಷವಲ್ಲದೇಏನು ? ಅಲ್ಪಕಾಲದಲ್ಲಿಯೇ ಹೆಚ್ಚು ಶ್ರಮವಿಲ್ಲದೆ 

೪೫-೫೦ ರೂಪಾಯಿಗಳು ಸಿಕ್ಕಿದರೆ ಎಲ್ಲರೂ ಸಂತೋಷಪಡುವರೇ 

ಜೋಯಿಸರಾದುದಕ್ಕೆ ಸಾರ್ಥಕವಾಯಿತು. 


ನಾಗಮ್ಮನಿಗೂ ಪುನಸ್ಸು ಸ್ವಲ್ಪ ತಾಳ್ಮೆಯನ್ನು ಹೊಂದಿತು. 

ಜೋಯಿಸನ ಮಾತುಗಳು ಸುಳ್ಳಾಗಲಾರವು. ಅದರಲ್ಲಿಯ ಸಾಧಾರಣ 

----------------------

೨೨ ಕಾದಂಬರಿ ಸಂಗ್ರಹ


ಜೋಯಿಸರಲ್ಲ, ಪೂರ್ಣ-ವಿದ್ಯಾವಂತ, ತಾತ ಮುತ್ತಾತಂದಿರಕಾಲದಿಂದಲೂ 

ಜೋತಿಷದಲ್ಲಿಯೇ ಬೆಳದವರು, ನಾರಾಯಣಜೋಯಿಸರೆಂದರೆ ಸುಮಾ 

ನ್ಯರೇ ? ಅವರು ನಮ್ಮ ಮನೆಗೆ ಬಂದುದೇ ಹೆಚ್ಚು. ವಧುವಿಗೂ, ವರನಿಗೂ 

ಸರಿಹೋಗಿರುವುದಂತೆ. ವರನೇನೋ ವಯಸ್ಸು ಆದವನು, ಆದರೇನು ? 

ಆದೃಷ್ಟವಿದ್ದರೆ, ಮುದುಕರಾಗುವವರೆವಿಗೂ ಒದುಕಿರುವುದಿಲ್ಲವೇ. ನಮ್ಮ 

ಸಾವಿತ್ರಿಗೆ ಮಾಂಗಲ್ಯದ ಬಲವೊಂದಿದ್ದರೆಸಾಕು. ಅಂಬಲಿಯೋ ಗಂಜೆಯೋ 

ಕುಡಿದು ಕೊಂಡು ಮಾನದಿಂದರುವಳಲ್ಲ. ಇದಕ್ಕೆ ಎಷ್ಟೋ ಪುಣ್ಯ ಮಾಡಿರ 

ಬೇಕು. ಆಳಿಯನೂ, ಅಷ್ಟೇನು ವಯಸ್ಸಾದಂತೆ ಕಾಣುವದಿಲ್ಲ. ನಾನು 

ನನ್ನ ಯಜಮಾನರನ್ನು ಮದುವೆಮಾಡಿಕೊಳ್ಳಲಿಲ್ಲವೇ ? ನಾನು ಸುಖವಾ 

ಗಿರಲಿಲ್ಲವೇ? ನಮ್ಮ ಸಾವಿತ್ರಿಯ ಮನೆಗೆ ಯಜಮಾನಿತಿಯಾಗು 

ವಳು, ಒಂದು ಗಂಡುಡುಗುವು ಬೇಗನೆ ಆಗಿಹೋದರೆ, ಆಗ ನಾನು ಎಷ್ಟು 

ಭಾಗ್ಯವಂತಯೋ? ನನ್ನ ಯಜಮಾನರಿದ್ದಿದ್ದರೆ ನೋಡಿ ಎಷ್ಟು 

ಸಂತೋಷಪಡುತ್ತಿದ್ದರೋ ? ಎಂಬಿವೇ ಮೊದಲಾದ ಭಾವನಾತರಂಗಗಳು 

ನಡೆದುಹೋಗುತ್ತಿದ್ದವು. 

..................

 

೬ನೆಯ ಪರಿಚ್ಛೇದ.

“ ಸಾವಿತ್ರಿ, ಸಾವಿತ್ರಿ, ಎಲ್ಲಿರುವೆ, ನನ್ನ ಕಣ್ಣು ಮುಂದೆ 

ಒಂದು ನಿಮಿಷಹಾತ; ಒಂದುನಿಲ್ಲು”


ಇದೇನು ಮೂರ್ತಿ, ನಿನಗೆ ಬುದ್ಧಿ ಭ್ರಮಣೆಯಾಗಿರುವುದಲ್ಲ ! 

ಈ ಚಿತ್ರಾವತಿಯ ನೀರನ್ನು ಸ್ವಲ್ಪ ಸುಖಕ್ಕೆ ಹಾಕಿಕೊ, ಇದೇಕೆ 

ಹೀಗೆಕೂಗುವೆ ಕೇಳಿದವರು ಏನನ್ನುವರು.


“ ಏನಾದರೂ ಅನ್ನಲಿ, ವಿಷಯಗಳಲ್ಲವೂ ತಿಳಿದವು ಅವಳನ್ನು 

ಆಪಾಪಿಗೆ, ಆಸ್ಥವಿರನಿಗೆ, ಆಗೂನಹೋರ, ನೆರತಗಡ್ಡದಹೇಡಿಗೆ, ಅಯ್ಯೋ,  

ನನ್ನ ಹೊಟ್ಟೆ ಯುರಿಯುವುದಲ್ಲಾ. 

೨೩--------------------

ಸಾವಿತ್ರಿ ೨೩ 


" ಇವುಗಳೆಲ್ಲವನ್ನೂ ಯಾರುತಿಳಿಸಿದರು ? 


" ಯಾರುತಿಳಿಸಿದರೇ, ಪ್ರಪಂಚವೇ ತಿಳಿಸುವುದು. ಅಂತಹ ಕಾರ್ಯ 

ಗಳನ್ನು ಮುಚ್ಚಿಡಲಾದೀತೆ, ಖೂನಿಯನ್ನು ಮರೆಮಾಚಲಾದೀತೆ.  ಹೇಳು 

ವವರಾರು ? 


" ಯಾರುಹೇಳಿದ್ದು ?


" ನನ್ನತಂಗಿ ಕೃಷ್ಣವೇಣಿ ; ಈ ಮೂರು ನಾಲ್ಕು ಅವಸಗಳಿಂದ 

ಸಾವಿತ್ರಿಯು ಶಾಲೆಗೆ ಬರುತ್ತಿಲ್ಲವಂತೆ. 


“ ಸಾವಿತ್ರಿಯನ್ನು ಯಾರಿಗೆ ಕೊಟ್ಟರೆನಿನಗೇನು ? 


ಮೂ--ನನಗೇನು ? ನಿನಗೇನು ? ೫೦ ವರುಷದ ಮುದುಗನಿಗೆ ೧೨ವರು

ಷದ ಹುಡುಗಿಯನ್ನು ಕೊಟ್ಟರಾದೀತೋ?   

ರಾ-ಚೆನ್ನಾಗಿ ಬಳದಹುಡುಗಿ, ಇನ್ನು ೫-೬ ತಿಂಗಳುಗಳಲ್ಲಿಯೇ  

ಮನೆಗೆ ಬರುವಳು-ಎಲ್ಲವೂ ಪಕ್ವಸ್ಥಿತಿಗೆ ಬಂದಿರುವಹಾಗಿದೆ. - 

ಆಕ್ಷೇಪಣೆಯೇನೂ ಕಾಣಲಿಲ್ಲ. 


ಮ-ಆಕ್ಷೇಪಣೆಯಿಲ್ಲವೋ ? ಆ ಪಲ್ಲವಾಧರಗಳನ್ನು ಆವವಳದಲತೆಗ

ಇನ್ನು, ಆಹಲ್ಲಿಲ್ಲದ ಜೋಲುದುಟಿಯಗೂಬೆಯು ಚುಂಬಿಸಿ 

ಲರ್ಹನೋ, ಚುಂಬಿಸುತ್ತಿದ್ದರೆ ನೋಡುವರೆಂತು ಸಹಿಸುವರು ? 

ಅಯ್ಯೋ ಕಳಿತಮಾಕಂದ ಫಲವನ್ನು ಪಂಡಿತನೆಂದೆನಿಸುವ ಗಿಳಿಯು

ಕಚ್ಚದೇ ಕಾಗೆಯು ಕಚ್ಚ ಬಹುದೇ ? 


ರಾ-ನಿನಗೆ ಪಿತ್ತವೇರಿದಂತಿದೆ. ಯಾರು ಚುಂಬಿಸುವರೋ, ಏನೋ,

ನಿನ್ನನ್ನು ನೋಡು, ಅಂದವರಾರು ಅನ್ನುವರಾರು? 


ಮ-ಯಾರೇನು ಅನ್ನಬೇಕು ? ರಾಹುವಿನ ಕೈಗೆ ಸಿಕ್ಕಿದ ಪೂರ್ಣಚಂದ್ರ 

ನಂತೆ ಆಪಾಪಿಗೆ ಸಿಕ್ಕಿ ಅವಳು ನರಳುವಳಲ್ಲ, ಯಾವ ಮುಖದಲ್ಲಿ 

ರಾಕಾಸುಧಾಳರಸ ತೇಜಸ್ಸಿಗಿಂತಲೂ, ಇಮ್ಮಡಿಯಾದ ತೇಜಸ್ಸೂ, 

ನೋಡಿದರೆ ಮೂಮಡಿ ಮನೋಹರತೆಯೂ ಇರುವದೋ, ಆ 

ಮುಖವನ್ನು ನೋಡಲಿಕ್ಕಾದರೂ ಪುಣ್ಯವಿರಬೇಕು, ಆ ಕದಪುಗಳ


೨೪---------------------

ಕಾದಂಬರಿ ಸ೦ಗ್ರಹ,


ಕಾಂತಿಯು ರತ್ನದರ್ಪಣವನ್ನು ಮೀರಿಸುವುದು, ಅಯ್ಯೋ, ರಾಜ, 

ರಾಜ, ಈಯೋಚನೆಯಲ್ಲಿ ನಾನು ಬದುಕಲಾರೆ. 


ರಾ--ಮೂರ್ತೀ, ನಿನಗೆ, ಯೋಚಿಸು ಎಂದು ಹೇಳಲಿಲ್ಲ. ಎಲ್ಲವನ್ನೂ 

ವಿಚಾರಿಸಿಕೊಂಡು ಕಳ್ಳತನದಲ್ಲಿ ಅವಳನ್ನು ಎರಡುಮೂರುಬಾರಿ 

ನೋಡಿ ಈಗ ಹುಚ್ಚನಂತೆ ಅಪಲಾಪಿಸುವ ನಿನಗೆ ವಿವೇಕವೆಲ್ಲಿ ? 


ಮೂ.... ನನಗೆ ವಿವೇಕವು ಬೇಡ , ಸಾವಿತ್ರಿಯು  ಬೇಕು. 


ರಾ-- ಇತರರಿಗೆ ಒಪ್ಪಿತವಾದವಳನ್ನು ಪರಸ್ತ್ರೀಯೆಂದು ಎಣಿಸಬೇಕು. 


ಮೂ.... ಇನ್ನೂ ವಿವಾಹವಾಗಿಲ್ಲ. ಅವಳು ಪರಸ್ತ್ರೀಯಂತು ಆದಾಳು ? 

ನಾನು ಅವಳೊ೦ದಿಗೆ ಮಾತನಾಡುವೆನು, ಹೇಳುವೆನು, ಬೇಡ, 

ಮುದುಕನನ್ನು ಕಟ್ಟಿಕೊಳ್ಳಬೇಡವೆಂದು. ಇನ್ನೊಂದು ತಡವೆ 

ನೋಡುವೆನು. ಅವಳ ಕೈ ಸೋಕಿದಲೆ ಸಾಕು. ಅಷ್ಟೇ ಸಾಕು. 


ರಾ.. ಇಲ್ಲಿ ನೋಡು ನೀನು ಅವಳೊcದಿಗೆ ಮಾತನಾಡುವುದು ಸಾಧ್ಯವಿಲ್ಲ. 

ಅವಳು ನಿನ್ನ ಎದುರಿಗೆ ನಿಲ್ಲುವಳೋ ? 


ಮೂ-ನಿಲ್ಲದೇ ಏನು, ನಾನೇನು ಹೆದರಿಸುವೆನೋ ತಿನ್ನುವೆನೋ ಮೊದಲಿ 

ನಲ್ಲಿಯೇ “ ನಾನು ನಿನಗೆ ತೋದರೆಯನ್ನು ಕೊಡುವುದಿಲ್ಲ. ಒಂದು 

ಮಾತನ್ನು ಕೇಳು, ಸಾವಿತ್ರೀ,  ಒಂದೇ ಮಾತನ್ನು ಕೇಳು ಎಂದು 

ಅಂಗಲಾಚಿಕೊಳ್ಳುವೆನು. 


ರಾ-ಆದರೂ ಸಾಧ್ಯವಿಲ್ಲ. ನೀನು ಸುಬೇದಾರರ ಮಗನೆಂದು ಅವಳಿಗೆ 

ಗೊತ್ತು, ನೀನು ಬರುವುದನ್ನು ನೋಡಿದರೆ ಮರೆಯಾಗುವಳು.  


ಮ-ಮರೆಯಾಗದಂತೆ ದೂರದಿಂದಲೇ ಕೇಳುವೆನು. 


ರಾ-ಯಾರಾದರೂ ನೀನು ಕೂಗಿದುದನ್ನು ಕೇಳಿದರೆ ? 


ಮ-ಕೇಳಿದರೇನು ? 


ರಾ-ನಿನಗೆ ಬುದ್ದಿಯಿಲ್ಲ. ನೀನು ಉನ್ಮಾದಸ್ಥಿತಿಯಲ್ಲಿರುವೆ. ಸ್ವಲ್ಪ ಆಲೋ 

ಚಿಸು, ನೀನು ಇದರಲ್ಲಿ ಜಯಿಸಲಾರೆ, ಬೇರೊಂದು ಉಪಾಯವನ್ನು 

ಮಾಡಬೇಕು.

೨೫-----------------------------------

ಸಾವಿತ್ರಿ, ೨೫ 


ಮ-ಉಪಾಯವೇನು ಅಪಾಯವೇನು, ಅವಳನ್ನು ಮೆಲ್ಲಗೆ ಯಾರೂ

ಇಲ್ಲದ ಕಡೆಗೆ ಒಂದು ನಿಮಿಷ ಕರತರಬೇಕು, ಕರೆದು ನಯದಿಂದ

“ ಸಾವಿತ್ರಿ ?” ಎಂದು ಹೇಳುತ್ತೆ-- 


ರಾ-ಅಹುದು, ಅವಳನ್ನು ಯಾರೂ ಇಲ್ಲದಕಡೆಗೆ ಕರತರುವುದೆಂತು ? 


ಮೂ-ಅವಳು ನಾಳೆಯದಿನ ಸಾಯಂಕಾಲದಲ್ಲಿ ಗಡಿದಂ ವೆಂಕಟರಮಣ

ಸ್ವಾಮಿಯ ದೇವಸ್ಥಾನಕ್ಕೆ ಅವಳ ತಾಯಿಯೊಂದಿಗೆ ಬರಬಹುದು 

ಆದಿನ ಅಲಂಕಾರವನ್ನು ನೋಡಲು ನಮ್ಮ ಮನೆಯವರೂ ಹೊರ 

ಡುವರು. 


ರಾ - ಅವಳು ತನ್ನ ತಾಯಿಯ ಬಳಿಯಿರುವಳಲ್ಲದೆ ನಿನ್ನ ಬಳಿಗೆ ಬರಲು 

ಕಾರಣವಿಲ್ಲವಲ್ಲ. 


ಮ-ಉಪಾಯಮಾಡಬೇಕು. 


ರಾ-ಅದೇನುಮಾಡಬೇಕು ನೀನು ಹೇಳು ನೋಡೋಣ. 


ಮೂ - ನನಗೆ ತೋರುವದಿಲ್ಲ ಒಂದುವೇಳೆ ಯಾರನ್ನೂ ಕೂಗಿದಂತೆ 

ಸಾವಿತ್ರಿ ಎಂದುಕೂಗಿ, ಅವಳು ತಿರುಗಿದಾಗ ಕೈ ಸನ್ನೆಯನ್ನು 

ಮಾಡಿದರೆ ? 


ರಾ-ಇದರಲ್ಲಿ ಎರಡು ಅಸಂಭವಗಳು. ಸಾವಿತ್ರಿಯಂದು ಕೂಗಿದಾಗ

ಅವಳೊಬ್ಬಳೇ ತಿರುಗುವಳೋ ? ಕೂಗಿದವರಾರೆಂದು ಎಲ್ಲರೂ 

ತಿರುಗುವರು; ಮತ್ತು ನೀನು ದೊಡ್ಡ ಹುಡುಗನಾಗಿದ್ದು ಕೈಸನ್ನೆ 

ಮಾಡಿದರೆ ಬರುವಳೋ ? ಅದಕ್ಕೆ ಬದಲು ತನ್ನ ತಾಯಿಯ ಸಂಗಡ

ನಿನ್ನ ಮೇಲೆ, ದೂರುಹೇಳುವಳು. 


ಮ-ಅದೂ ಒಳ್ಳೆಯದೇ ಅಲ್ಲವೇ ? ಅವಳ ತಾಯಿಗೆ ನಾನು ಸಾವಿತ್ರಿ

ಯನ್ನು ಬಹಳವಾಗಿ ಪ್ರೀತಿಸುತ್ತೇನೆಂದು ತಿಳಿಯುವುದು. 


ರಾ-ಆಹುದು ನೀನು ಪೋಕರಿಯಂದು ಊರಲ್ಲೆಲ್ಲಾ ಹೇಳಿ ಸುಬೇದಾರರ

ಮಗನು ಬೀದಿಯಲ್ಲಿ ಬರುವಾಗ ತಲೆಯನ್ನು ತಗ್ಗಿಸುವಂತೆ 

ಮಾಡುವಳು.


೨೬-----------------------


ಮೂ-ನನಗೆ ಬೇರೆ ಯೋಚನೆಯ ತೋರುವದಿಲ್ಲ. ನೀನು ಹೇಳಿ, 

ದಂತೆಯೇ , ನನ್ನಮೇಲೆ ಅಪನಿಂದೆಯನ್ನು ಹುಟ್ಟಿಸಿದರೆ ನಾನೇನು 

ಮಾಡಲಿ.

ರಾ-ಹಾಗೆ ದಾರಿಗೆ ಬಂದು ವಿವೇಕವನ್ನು ತಂದುಕೊ, ನಿನಗೇನು, ಚೆನ್ನಾಗಿ 

ಓದಿರುವೆ. ನಿನ್ನ ತಂದೆ ಉದ್ಯೋಗದಲ್ಲಿರುವರು, ನೀನು ಬಹಳ  

ಬಹಳ ಇನ್ನೊಂದು ಸಾರಿ ಹೇಳುವೆನು, ಬಹಳ ಚೆನ್ನಾಗಿರುವೆ 

ಸಾವಿತ್ರಿಗಿ೦ತಲೂ ಸೊಗಸಾಗಿರುವೆ. 


ಮೂ -ಇಲ್ಲ.  ಸಾವಿತ್ರಿಯೇ ಚೆನ್ನಾಗಿರುವಳು. ನಿ?ನು ಹತ್ತಿರದಿಂದ

ನೋಡಿಲ್ಲ. 

ರಾ--ಎಲ್ಲಾ ನೊಡಿರುವೆನು. ಸುಮಾರಾಗಿರುವಳು. ಅವಳು ಅಂತಹ ತ್ರಿಲೋಕ

ಸುಂದರಿಯೇನೂ ಅಲ್ಲ. 


ಮೂ- -ನಿನಗೆ ಅಲ್ಲ. ನನಗೆ ಅವಳ ತಿ ಲೋಕಸುಂದರಿ, ಭುವನಮೋಹಿನಿ, 

ರತಿ; ಚೆನ್ನಾಗಿಲ್ಲವಂತೆ, ಸುಮಾರಾಗಿರುವಳಂತೆ. ಎಂದಾದರೂ, 

ನಾಲ್ಕಾರು ಹುಡುಗಿಯರನ್ನು ನೋಡಿ ವ್ಯತ್ಯಾಸಗಳನ್ನು ತಿಳಿದು 

ಕೊಂಡರಲ್ಲವೇ ? ಆ ಸಾವಿತ್ರಿಯ ನಳದೊಳುಗಳ ಸಾಕು 

ಈಗೀಗಲೆ ಸಣ್ಣವಾಗಿ ಗುತ್ತವಾಗಿ ಬೆಳೆದಿರುವದನ್ನು ನೀನು ಕಾಣೆ. 

ಇನ್ನು ಕೆಲವುದಿವಸಗಳಿಗೆ ಹೇಗೆ ಆಗುವಳೂ, ಆ ನಡೆಯೊಂದೇ 

ಸಾಕು ಆ ಕಳೆಯೊಂದೆ ಸಾಕು. 


ರಾ-ರೂಪಿನಲ್ಲಿಯೇನೋ ಚೆನ್ನಾಗಿರಬಹುದು. ಅವಳಗುಣದಲ್ಲಿ ಅನುಮಾನ.  


ಮ-ಇಂತಹ ಆಕಾರದಲ್ಲಿ ಸದ್ಗುಣಗಳಲ್ಲದೆ ದುರ್ಗುಣಗಳು ವಾಸವನ್ನು 

ಮಾಡಲಾರವು, ಅವಳು ಈಗಿನ ದುಃಖವನ್ನು ಸೈರಿಸಿಕೊಂಡಿರು 

ವದನ್ನು ನೋಡಿದರೆ ಗೊತ್ತಾಗುವದಿಲ್ಲವೇ ? ಆದಿವಸ ಚಿತ್ರಾ 

ವತಿಯಲ್ಲಿ ಕಣ್ಣೀರುಬಿಡುತ್ತ ಹೇಗಿದ್ದಳು ? ಒಂದುಸಾರಿ, ಆ 

ಕಣ್ಣೀರುಹರಿದು ಕಾಲುವೆಗಳ ರೇಖೆಯಿಂದೊಪ್ಪುವ ಮೃದುಕ

೨೭------------------------

ಪೋಲಗಳನ್ನು ಚುಂಬಿಸಬೇಕೆಂದು: ಮನಸ್ಸು ಹೋಯಿತು ಅದೃಷ್ಟ 

ವಿದ್ದರೆ, ಸಾಧ್ಗವಾಗದೇ ಏನು ?


ರಾ-ಅದೃಷ್ಟವಿದ್ದರೆ, ನಾವು ಮನಸ್ಸಿನಲ್ಲಿ ಬೇಕೆಂದು ಕೋರುವುದೆಲ್ಲಾ 

ಸಿದ್ಧಿಸುವುದು. ಅದಕ್ಕೆ ಇಷ್ಟು ಆರ್ಭಟವನನ್ನೇಕೆ ಮಾಡಬೇಕು? 


ಮೂ--ನಿನಗೆ ತಾಳ್ಮೆಯಿದೆ. ನನಗೆ ಇಲ್ಲ. ಮನಸ್ಸಿನಲ್ಲಿ ಹರ್ಷವಿದ್ದರೂ 

ವ್ಯಾಕುಲವಿದ್ದರೂ ನೀನು ತೋರ್ಪಡಿಸಿಕೊಳ್ಳುವುದಿಲ್ಲ. ನನಗೆ

ಅದು ಸಾಧ್ಯವಿಲ್ಲ. ಮನಸ್ಸಿಗೆ ತೋಚಿದ್ದು ಹೊರಗೆಬರಬೇಕು. 


ರಾ - ಈಗಲೂ, ಸಾವಿತ್ರಿಯು ಬೇಕೋ, ಬುದ್ದಿ ಬಂತೋ ? 


ಮೂ--ಸಾವಿತ್ರಿಯ ಜತೆಯಲ್ಲಿಯೇ ಬುದ್ದಿಯ ಬರುವುದು. 

.........


೭ನೇ ಪರಿಚ್ಛೇದ

.......


ಸಾವಿತ್ರಿಯು ಒಂದು ಕಾಗದವನ್ನು ಬರೆದಳು. ಬರೆದುದನ್ನು 

ಎರಡು ಮೂರು ಬಾರಿ ಓದಿದಳು. ಕೆಲವು ಕಡೆಗಳಲ್ಲಿ ತಿದ್ದಿದಳು. ಕೆಲವೆಡೆ 

ಗಳಲ್ಲಿ ಹೊಡೆದು ಹಾಕಿದಳು. ಮತ್ತೆ ಕೆಲವು ಹೊಸಪಂಕ್ತಿಗಳನ್ನು ಒರೆದಳು. 

ಈ ವಿಪರೀತಗಳಿಂದ ಲಿಖಿತವು ಕೆಟ್ಟುಹೋಯಿತು. ಬೇರೊಂದು ಹಾಳೆಯಲ್ಲಿ 

ಪುನಃ ಬರೆದಳು.  ಇದರಿಂದ ಏನಾದರೂ ಮದುವೆಯು ತಪ್ಪಿದರೆ, 

ಕಾಗದವನ್ನು ಬರೆದುದಕ್ಕೂ ಸಾರ್ಥಕವಾಯಿತೆಂದಳು ” ಕಡೆಗೆ ಕಾಗದ 

ವನ್ನೆನೋ ಬರೆದಾಯಿತು. ಕೊಟ್ಟು ಕಳುಹಿಸುವ ಬಗೆ ಹೇಗೆ ಎಂದು 

ಆಲೋಚಿಸಿದಳು. ತಾನು ಟಪಾಲು ಬಳಿಹೋಗಿ ಹಾಕಲಾದೀತೆ? ಇಲ್ಲವೇ 

ಒಬ್ಬ ಹಳ್ಳಿಯವನನ್ನು ಕರೆದು ಕೊಟ್ಟರಾದಿತೋ, ತಾನು ಹೋಗುವದು; ಅದು 

ಆಗಲಾರದು ಹಳ್ಳಿಯವನನ್ನು ಕರೆದು ಅರ್ಧಾಣೆಯ ಚೀಟಿಯನ್ನು ತರಹೇ 

ಳಿದಳು. ತಂದುದಾಯಿತು. ಕಾಗದವನ್ನು ಮಡಿಸಿ, ಅದಕ್ಕೆ ಗೋ ೦ದನ್ನು 

ಅಂಟಿಸಿ, ವಿಳಾಸವನ್ನು ಬರೆದಳು. ಚೀಟಿಯನ್ನು ಹಚ್ಚಿ ಹಳ್ಳಿಯವನ 

ಕೈನಲ್ಲಿ ಕೊಟ್ಟಳು, “ ಈಗಲೇ ಹಾಕಿಬಾ ” ಎಂದು ಹೇಳಿದಳು. 


೨೮----------------------


ನಾಗಮ್ಮ--"ದೇವಸ್ಥಾನಕ್ಕೆ ಬರುವದಿಲ್ಲವೇನೇ ? 

"ನಾನು ಬರುವದಿಲ್ಲ ನೀನೇ ಹೋಗು . 


ನಾ--"ಅದೇನು ದೇವರನ್ನು ನೋಡುವದಿಲ್ಲವೇ ಏಳು, ಬಾಚಿಕೊಂಡು 

ನಿನ್ನ ಆ ಹೊಸ ಸೀರೆಯನ್ನುಟ್ಟುಕೋ, 

"ಇಲ್ಲ. ನಾನು ಬರುವದಿಲ್ಲ

ಅಷ್ಟರಲ್ಲಿಯೇ ಕೋನೇರಯ್ಯನ ಹೆಂಡತಿ-ಲಕ್ಷ್ಮಮ್ಮನು  “ಮನೆಗೆ 

ಯಾರಾದರೂ ಕಾವಲುಯಿರಬೇಕಲ್ಲ.  ಬರದೇ ಇದ್ದರೆ ಇಲ್ಲಿಯೇ ಇರಲಿ.” 


“ಆಗ ಹುದು ನಾನು ಕಾವಲಿರವೆನು, ತಾವು ದಯಮಾಡಬಹುದು "  


ಲಕ್ಷ್ಮಮ್ಮನು ತನ್ನ ಮಗುವನ್ನು ಕಂಕುಳಿನಲ್ಲಿ ಹಾಕಿಕೊಂಡು ನಾಗಮ್ಮನ  

ಜತೆಯಲ್ಲಿ ತನ್ನ ತಮ್ಮನೊಬ್ಬನನ್ನು ಕರೆದುಕೊಂಡು ಹೊರಟುಹೋದಳು.  

ಸಾವಿತ್ರಿಯ ಬೀದಿಯ ದಿಣ್ಣೆಯಮೇಲೆ ಕುಳಿತುಕೊಂಡು ಯೋಚಿಸು  

ತ್ತಿದ್ದಳು ತನ್ನ ಕಾಗದವು ಚಿಕ್ಕಪ್ಪನಿಗೆ ಯಾವಾಗ ಸೇರುವದೋ ಸೇರಿದ 

ಕೂಡಲೇ ಬರುವನೋ, ಇಲ್ಲವೋ ; ಹಳ್ಳಿಗೆ ತಲಪಲು ಕೆಲವು ದಿವಸ 

ಗಳಾಗಬಹುದು. ಕೂಡಲೇ ಬಂದರೆ, ಹೊರಟುಹೋಗಬಹುದು ನನ್ನ 

ಚಿಕ್ಕಪ್ಪನು ಒಳ್ಳೆಯವನು. ಅವನ ಮನೆಯಲ್ಲಾದರೂ ಸುಖವಾಗಿರ 

ಬಹುದು; ಹೀಗೆ ತನ್ನಲ್ಲಿಯೇ ತಾನು ಮಾತನಾಡಿಕೊಳ್ಳುತ್ತೆ ಸುಬೇದಾರರ 

ಮನೆಯವರಿಗೆ ನೀತಿ ಎರಡೆತ್ತಿನಗಾಡಿಯನ್ನು ನೋಡಿದಳು. ಜವಾನರು 

ಒಳಗೆ ಹುಲ್ಲನ್ನು ಹಾಕಿ, ಜಮಖಾನವನ್ನು ಹಾಸುತ್ತಿದ್ದರು ತನ್ನ ಸಹಪಾಠಿ 

ಕೃಷ್ಣವೇಣಿಯು ಬೀದಿಯ ಬಾಗಲಿಗೆ ಒಂದು ನಿಂತಳು, ಅವಳೂ, ಸಾವಿತ್ರಿ 

ಯನ್ನು ನೋಡಿದಳು, ಇದೇನು ಸಾವಿತ್ರಿಯು ಇಲ್ಲಿರುವಳು. ದೇವಸ 

ನಕ್ಕೆ ಬರುವದಿಲ್ಲವೇ ಕೇಳಿ ನೋಡುವನೆಂದು " ಸಾವಿತ್ರಿಯ ಬಳಿಗೆ 

ಬಂದಳು.


" ಸಾವಿತ್ರಿ, ನಿನ್ನ ತಾಯಿಯಾ, ಅತ್ತಿಗೆಯ ಹೊರಟರೋ, ಇಲ್ಲವೋ ? 

" ಹೊರಟು ಹೋದರು.

" ನೀನೇಳ ಹೋಗಲಿಲ್ಲ?

೨೯----------------------------------

ಸಾವಿತ್ರಿ, ೨೯


" ಏತಕ್ಕೆ ಹೋಗಬೇಕು ? 


" ದೇವರನ್ನು ನೋಡುವದಕ್ಕೆ, 


" ದೇವರಿದ್ದರಲ್ಲದೇ ನೊಡುವುದು. ದೇವರೇ ಇಲ್ಲದಾಗ ನೋಡುವದೇನು 

 

“ನಾನು ನಿನಗೆ ದೇವರನ್ನು ತೋರಿಸುವೆನು, ಏಳು, ಹೋಗೋಣ. ನಮ್ಮ

ಗಾಡಿಯನ್ನು ಕಟ್ಟುತ್ತಿರುವದು, ಗಾಡಿಯಲ್ಲಿಯೇ ಹೋಗೋಣ. 


" ನಾನು ಬರುವದಿಲ್ಲ, 


“ ನಿನ್ನ ಹಟವನ್ನು ಬಿಡು, ನೀನು ಈಗ ಬಾರದಿದ್ದರೆ ನಿನ್ನೊಡನೆ ನಾನು 

ಮಾತನಾಡುವದನ್ನೇ ಬಿಟ್ಟು ಬಿಡುವೆನು 


" ನನ್ನ ತಾಯಿಗೆ ಒರುವುದಿಲ್ಲವೆಂದು ಹೇಳಿರುವೆನು, 


" ನಿನ್ನ ತಾಯಿಗೆ ನಾನು ಹೇಳುವೆನು, ಬಲವಂತವಾಗಿ ಕರೆತಂದೆನೆಂದು

ನುಡಿಯುವೆನು, ಏಳು, 


“ ನನ್ನ ಹೊಸಸೀರೆಗಳೆಲ್ಲಾ ಪೆಟ್ಟಿಗೆಯಲ್ಲಿ ಸೇರಿಹೋಗಿವೆ, ಅತ್ತಿಗೆಯ ಬಳಿ 

ಬೀಗದಕೈಗಳಿರುವವು. ನಾನು ಹೇಗೆ ಬರಲಿ ?  

“ನಿನಗೆ ಹೊಸ ಶೃಂಗಾರವೂ ಬೇಡ, ಆಭರಣಗಳ ಅಲಂಕಾರವೂ 

ಬೇಡ ಇದ್ದ ಹಾಗೆ ಬಂದರೆ ದೇವರು ಮೆಚ್ಚುವನು. 


" ಹೀಗೆಯೇ ಎಂದರೆ, ನನ್ನತಾಯಿ ಯೇನಾದರೂ ಅನ್ನುವಳಮ್ಮ, 


" ಚಿಂತೆಯಿಲ್ಲ, ಬಾ,


ಸಾವಿತ್ರಿಯನ್ನು ಕರೆದುಕೊಂಡು ಕೃಷ್ಣವೇಣಿಯು ಗಾಡಿಯಬಳಿ 

ಬಂದಳು. ಸುಬೇದಾರರ ಹೆಂಡತಿಯೂ, ಸರ್ವೋತ್ತಮನೂ, ವಸುಂಧರೆಯೂ 

ಗಾಡಿಯಲ್ಲಿ ಕುಳಿತರು, ಸಾವಿತ್ರಿಯ, ಕೃಷ್ಣವೇಣಿಯೂ ಗಾಡಿಯಲ್ಲಿ 

ಕುಳಿತರು. ಸುಬೇದಾರರಹೆಂಡತಿಯು “ ತಿಮ್ಮ, ಮೂರ್ತಿರಾಯರು ಬರುವ 

ರೇನೆ ಕೇಳೋ, ಮೂರ್ತಿಯೂ ಗಾಡಿಯ ಒಳಗೆ " ಜಾಗವಿದ್ದರೆ ಬರುವೆ 

ನೆಂದು " ಹೇಳಿಕೊಂಡು ಒಂದು ಒಳಗೆ ನೋಡಿದನು, ವಿದ್ಯುಚ್ಛಕ್ತಿಯ 

ಮರಿಚಿಯೊಂದು ಹೊಡೆದಂತಾಯಿತು. ''ನೀವು ಹೊರಡಿ, ನಾನೂರಾಜನೂ, 

ನಡೆದು ಬರುತ್ತೇವೆ ” ಅಷ್ಟರಲ್ಲಿಯೇ “ ನಡೆದು ಏನು ಬರುವುದು, ಕಾಲು

೩೦------------------------------------


ಗಳು ನೋಯುವದಕ್ಕೆ, ಹೋಗುವಗಾಡಿ ಹೋಗುತ್ತೆ, ಮುಂದುಗಡೆಯಲ್ಲಿ 

ಹತ್ತಿಕೋ ” ಎಂದು ಬದಲುಬಂತು. ಇಲ್ಲ. ನೀವುಹೊರಡಿ ಎಂದನುತ್ತೆ, 

ಮನೆಯೊಳಗೆಬಂದು “ ಗುರುವಾ ” ಎಂದು ಕೂಗಿದನು. “ ಸಾಮಿ ” 

ರಾಜಪ್ಪನ್ನ ಈಗಲೇ ಕರೆದುಕೊಂಡುಬಾ, ಓಡು ” ಕೊಂಚಹೊತ್ತಿಗೆ, 

ಗುರುವನೂ, ರಾಜನೂ ಬಂದರು. “ ಇದೇನುಮೂರ್ತಿ, ಸೊಗಸುಮಾಡಿ 

ಕೊಳ್ಳುವೆ, “ ಗುಡಿಗೆಹೋಗೋಣ, ಆಗಲೇ ಗಾಡಿಯು ಹೊರಟು 

ಹೋಯಿತು ಗಾಡಿಯನ್ನು ಹಿಡಿಯಬೇಕು. ” 


ತ್ವರಿತದಿಂದ ಇಬ್ಬರೂ ನಡೆದರು ಗಡಿದಂ ವೆಂಕಟರಮಣಸ್ವಾಮಿಯ 

ದೇವಸನವು ಬಾಗೇಪಲ್ಲಿಗೆ ೧|| ಮೈಲಿಯದೂರದಲ್ಲಿದೆ ಪುರಾತನ 

ಕಾಲದಲ್ಲಿ ಕಟ್ಟಿದ ದೇವಸ್ಥಾನ, ಬಹಳ ವರುಷಗಳಿಂದ ಪೂಜೆ ಪುನಸ್ಕಾರ 

ಗಳಿಲ್ಲದೆ, ದೇವರನ್ನು ಕೇಳುವವರೇ ಇರಲಿಲ್ಲ. ಹಿಂದಿನ ಸುಬೇದಾರರಾ 

ಗಿದ್ದಿವರು, ಸರ್ಕಾರದವರಿಗೆ ಬರೆದು, ಶಿಥಿಲವಾಗಿದ್ದ ಭಾಗಗಳನ್ನು ಸರಿ 

ಪಡಿಸಿ, ವಾಹನಗಳಲ್ಲವನ್ನೂ ಪುನಃ ಹೊಸದಾಗಿ ಮಾಡಿಸಿ, ವರ್ಷವರ್ಷಕ್ಕೂ 

ಒಂದು ಜಾತ್ರೆಯನ್ನು ಏರ್ಪಡಿಸಿದರು, ಈಗ ನಿತ್ಯ ಕಟ್ಟಳ ಪೂಜೆಯೂ 

ವಿಶೇಷದಿನಗಳಲ್ಲಿ ಮೆರವಣಿಗೆಯೂ ಬರುತ್ತದೆ. ಒಬ್ಬ ಪೂಜಾರಿಯು 

ಪಕ್ಕದಲ್ಲಿನ ಹಳ್ಳಿಯಲ್ಲಿಯೇ ವಾಸಮೂಡುವನು. ಉತ್ಸವಾದಿ ದಿವಸಗಳಲ್ಲಿ, 

ಬಾಗೇಪಲ್ಲಿಯಿಂದಲೂ, ಮತ್ತು ಇತರ ಕಡೆಗಳಿಂದಲೂ, ವೈದಿಕ ಬ್ರಾಹ್ಮ 

ಣರು ಬಂದು ಸೇರುವರು. ಆಗಿನ ಕೋಲಾಹಲವು ವರ್ಣಿಸಲಸದಳವು. 

ಈಗಲೂ ಪ್ರತಿಸಂವತ್ಸರದಲ್ಲೂ ಜಾತ್ರೆಯಲ್ಲಿ ದನಗಳ ಮಾರಾಟವಾಗು 

ವುದು, ಆಗ ಸುಮಾರು ೩೦-೪೦ ಸಾವಿರ ಕಾಲ್ನಡೆಗಳು, ಸೇರುವದುಂಟು. 

ಕುಂಪಿಣಿ ಸೀಮೆಗಳಿಂದಲೂ, ವರ್ತಕರೂ, ಭಕ್ತಾದಿಗಳೂ ತಂಡೋೂಪ 

ತಂಡವಾಗಿ ನೆರೆಯುವರು. 


ಗುಡಿಗೆ ಹೆಬ್ಬಾಗಿಲು ಉತ್ತರಮುಖವಾಗಿದೆ. ಒಳಗಿನ ಪ್ರಾಕಾರದಲ್ಲಿ, 

ಎದುರಿಗೆ ಕಲ್ಯಾಣಮಂಟಪವಿರುವದು. ಕಲ್ಯಾಣಮಂಟಪದ ಕಲ್ಲುಕಂಭ 

ಗಳಲ್ಲಿ, ಸಿಂಹಗಳನ್ನೂ, ಕುದುರೆಗಳನ್ನೂ, ಆನೆಗಳನ್ನೂ ಕೆಲವು ಖುಷಿ

೩೧---------------------------------------------

ಸಾವಿತ್ರಿ, ೩೧ 


ಗಳ ಚಿತ್ರಗಳನ್ನೂ ಕೆಲವು ದೇವರಗಳ ಚಿತ್ರಗಳನ್ನೂ ಕೆತ್ತಿರುವರು. 

ಪ್ರಾಕಾರದಲ್ಲಿ ಪ್ರವೇಶಿಸುತ್ತಲೂ, ಎಡ ಬಲಭಾಗಗಳಲ್ಲಿ ಕಲ್ಲುಕಂಭ 

ಗಳನ್ನೂ ನಿಲ್ಲಿಸಿರುವರು ಈ ಕಂಭಗಳ ಮೇಲೆ, ಬಿದಿರುಬೊಂಬು, ಚಾಪೆ 

ಗಳಿ೦ದ ಉತ್ಸವಗಳಲ್ಲಿ ಚಪ್ಪರಹಾಕಲ್ಪಟ್ಟು, ಬ್ರಾಹ್ಮಣರಿಗೆ ಸಂತರ್ಪ 

ಣೆಯು ನಡೆಯುವದು. ಎಡಭಾಗದಲ್ಲಿ, ಇನ್ನೂ ಮುಂದಕ್ಕೆ ಹೋದಲ್ಲಿ, 

ಎರಡು ಕೊಠಡಿಗಳು ಮತ್ತು ಕೈಸಾಲೆಗಳಿರುವವು, ಜಾತ್ರೆಯಾಗುವಾಗ, 

ಈ ಪ್ರದೇಶವು ಸುಬೇದಾರರ ಮತ್ತು ತಾಲ್ಲೂಕಿನ ಉದ್ಯೋಗಸ್ಥರ ಬಿಡಾರ 

ವಾಗುವುದು ಒಂದು ಪ್ರದಕ್ಷಿಣೆಯನ್ನು ಬರುವಾಗ ಸುತ್ತಲಿನ ಕಟ್ಟಡವನ್ನು 

ನೋಡಬಹುದು. ಕೆಲವು ಹಳೆಯ ವಾಹನಗಳನ್ನೂ, ಮತ್ತು ಸಣ್ಣ 

ತೇರನ್ನೂ ಪಕ್ಕದಲ್ಲಿ ಬಿಟ್ಟಿರುವರು ಪೂಜಾರಿಗೆ ಅನುಕೂಲವಾದ ಮನೆ 

ಯೊಂದು ಈ ಪ್ರಾಕಾರದಲ್ಲಿಯೇ ಇದೆ. 


ಈದಿನ ಗುಡಿಯಲ್ಲಿ ತೋರಣಗಳನ್ನು ಕಟ್ಟಿ, ಇಳಗೆ ಕೆಲವೆಡೆಗಳಲ್ಲಿ 

ರಂಗವಲ್ಲಿಯನ್ನಿಟ್ಟಿರುವರು ಹಳ್ಳಿಯ ವೋಲಗವೂ ನಡೆಯುತ್ತಿತ್ತು. 

ಬಾಗೇಪಲ್ಲಿಯಿಂದ ಜನಗಳು ಮುಕ್ಕಾಲುಪಾಲು ಹೆಂಗಸರು ಮತ್ತು 

ಮಕ್ಕಳು, ಬರುತ್ತಿದ್ದರು ಬಂದ ಬಂದವರು, ಗುಡಿಯೊಳಗೆ ಹೋಗಿ, 

ಮಂಗಳಾರತಿಯನ್ನು ಮಾಡಿಸಿ, ಕಾಯಿಹೋಳುಗಳನ್ನು ಹಿಡಿದುಕೊಂಡು 

ಕಲ್ಯಾಣಮಂಟಪಕ್ಕೆ ಬರುತ್ತಿದ್ದರು ಕೆಲವರು ಪುಷ್ಪಗಳನ್ನು ತಮ್ಮ 

ಜುಟ್ಟಿನಲ್ಲಿ ಸಿಕ್ಕಿಸಿಕೊಂಡು, ವಿನೋದವಾಗಿ ಮಾತನಾಡುತ್ತಿರುವರು. 

ಬಾಗಿಲಬಳಿಯಲ್ಲಿ ಇಟ್ಟಿದ್ದ ಬಿಂದಿಗೆಯಲ್ಲಿ ತಮ್ಮ ಶಕ್ಯಾನುಸಾರ 

ಕಾಸುಗಳನ್ನು ಹಾಕುತ್ತಿದ್ದವರು ಗುಡಿಯಿಂದ ಹೊರಗೆಬರವಾಗ, 

ಪಂಚೆಗಳಿಂದ ಮುಖದಲ್ಲಿನ ಬೆವರನ್ನು ಒರೆಸಿಕೊಳ್ಳುತ್ತ, ಬೀಸಿಕೊಳ್ಳುತ್ತ 

ಇಳಿಯುವವರು, ದೇವರ ಪ್ರಸಾದವನ್ನು ತಿನ್ನಬೇಕೆಂದು ಕಲ್ಲಿನ ಮೇಲೆ, 

ಕಾಯಿ ಹೋಳುಗಳನ್ನು ಒಡೆಯುತ್ತಿದ್ದವರು. ಇವರಗಲಭೆ,ಕಲ್ಯಾಣ 

ಮಂಟಪದಲ್ಲೆಲ್ಲಾ ಚಿಪ್ಪಿನ ಚೂರುಗಳು; ಕೆಲವರು ಜಾಣೆಯರಾದ 

ಹೆಂಗಸರು, " ಕಾಯಿಗಳನ್ನು ಹಾಗೆಯೇ ಇಡಿ, ನಾಳೆ ಚಟ್ಣಿ ಮಾಡಲಿ 

ಕ್ಕಾಗುಯಾಗುವದು ” ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದರು. 

೩೨-------------------------------------

೩೨ ಕಾದಂಬರೀ ಸಂಗ್ರಹ,


ಸುಬೇದಾರರ ಮನೆಯಗಾಡಿಯು ಬಂತು. ಪಕ್ಕದಲ್ಲಿಯೇ 

ಮೂರ್ತಿಯೂ, ರಾಜನೂ ಇದ್ದರು. ಎಲ್ಲರೂ ಇಳಿದು ದೇವಸ್ಥಾನದೊಳಕ್ಕೆ 

ಬಂದರು. ಮೆಟ್ಲುಗಳನ್ನು ಹತ್ತುವಾಗ ಸೀರೆಯಕೊನೆಗೆ ಕಾಲಿನಬೆರಳು, 

ಸಿಕ್ಕಿ ಸಾವಿತ್ರಿಯು ಮುಗ್ಗರಿಸಿದಳು. ಆದರೆ, ಬೀಳಲಿಲ್ಲ ಏಟುತಗಲಿಲ್ಲ. 

" ಸನ್ನ ತಾಯಿಯು ಬಯ್ಯುವಳು ” ಎಂದು ಕೃಷ್ಣವೇಣಿಗೆ ನುಡಿದಳು 

ಬಯ್ಯುವದಿಲ್ಲ ನಡೆಯೆಂದು , ಒಳಕ್ಕೆ ಬಂದರು, ಕಲ್ಯಾಣಮಂಟಪದಲ್ಲಿ, 

ನಾಗಮ್ಮನ. ಲಕ್ಷ್ಮಮ್ಮನೂ, ಕಳಿತಿದ್ದವರು ಸಾವಿತ್ರಿಯನ್ನು, ಸುಬೇ 

ದಾರರ ಮನೆಯವರೊಡನೆ ನೋಡಿ ಬೆಚ್ಚಿಬಿದ್ದರು. “ ಸಾವಿತ್ರಿ, ಸಾವಿತ್ರಿ 

ಇಲ್ಲಿ ಬಾ, ” ಕೃಷ್ಣವೇಣಿಯ ಜತಗೆಹೋದಳು ಲಕ್ಷ್ಮಮ್ಮನು “ ಏನು? 

ಮನೆಯನ್ನು ದೊಪುಮಾಡಿಬಿಟ್ಟು ಬಂದೆಯಾ ಮನೆಯಲ್ಲಿ ಯಾರಿರುವರು? 

“ ನಿನ್ನ ತಮ್ಮನಿರುವನು ಇವರು ಬಲವಂತಮಾಡಿದರು, ಬಂದೆ " 

" ಇದೇನೇ ಹಳೆಯ ಸೀರೆಯನ್ನುಟ್ಟು ಕೊಂಡು ನಮ್ಮ ಮಾನವನ್ನು ಕಳೆಯುತ್ತಿಯೇ ? 

ಕೃಷ್ಣವೇಣಿಯು “ ಯಾವಸೀರೆಯಾದರೂ ಒಂದೇ ; ನಾವು ದೇವರದರ್ಶನ 

ವನ್ನು ಮಾಡಿಕೊಂಡು ಬರೋಣ ಬಾ ” ಎಂದು ಇಬ್ಬರೂ ಗುಡಿಯೊಳಗೆ 

ಹೊರಟುಹೋದರು, ಗುಡಿಯೊಳಗೆ ಕತ್ತಲೆ, ಮೇಲಿನ ಕಲ್ಲು ಚಪ್ಪಡಿ 

ಗಳೆಲ್ಲಾ ಕಪ್ಪಗಿದ್ದವು. ಎದುರಿಗೆ ನಿಂತಿರುವವರು ಯಾರೆಂದು ತಿಳಿಯಲೂ 

ಕೂಡಾಆಗುವುದಿಲ್ಲ. ಒಳಗಿನಿಂದ ಬರುವ ಧೂಪದಪರಿಮಳ, ಹಿಲಾಲು 

ಬತ್ತಿಗಳಿಂದ ಹೊರಡುವ ಹೊಗೆ ; ಆಗಾಗ್ಗೆ ಘಂಟಾನಾದ, ಭಕ್ತಾದಿಗಳ 

" ಸ್ವಾಮಿ, ಗೋವಿಂದ ಶ್ರೀನಿವಾಸ, ವೆಂಕಟರಮಣ ” ಎಂಬುವ ಕೂಗು 

ಗಳು, " ಕರ್ಪೂರಕೋಡಿ, ತಂಗಿನಕಾಯಿಗೆ ಗುಂಜು ತೆಗೆದಿಲ್ಲ. ಸ್ವಲ್ಪ ಒತ್ತ 

ಟ್ಟಿಗೆನಿಲ್ಲಿ” ಎಂಬ ಪೂಜಾರಿಯ ಮಾತುಗಳು, ಗಾಳಿಯು ಬರಲು ಅವಕಾಶ 

ವಿಲ್ಲದ್ದರಿಂದ, ಸೆರಗಿನಿಂದ ಬೀಸಿಕೊಳ್ಳುವವರು: ಮೇಲು ಹೊದ್ದಿಕೆಗಳಿಂದ 

ಬೀಸಿಕೊಳ್ಳುವವರು. ಅಷ್ಟರಲ್ಲಿಯೇ, ದಾರಿ, ದಾರಿ ದಾರಿಬಿಡಿ, ಎಂದು 

ಸುಬೇದಾರರ ಮನೆಯವರಿಗೆ ಜಾಗವನ್ನು ಬಿಡಿಸುವದು ಈ ಅವಾಂತರ 

ಗಳಿಂದ ಗುಡಿಯು ತುಂಬಿತ್ತು. ಸುಬೇದಾರರ ಮನೆಯವರು ಮುಂಭಾಗ


---------------------

೩೩-------------------------------------

ಸಾವಿತ್ರಿ. ೩೩ 


ದಲ್ಲಿ ಹೋಗಿ ನಿಂತರು, ಪೂಜಾರಿಯು ತೆಂಗಿನಕಾಯಿಗಳನ್ನು ಒಡೆದು 

ಕೆಲವು ಪುಷ್ಪಗಳನ್ನು ದೇವರಮೇಲೆ ಎರಚಿ, ಉದ್ದರಣೆಯಿಂದ ನೀರನ್ನು 

ಕೈಗಳಿಗೆ ಬಿಟ್ಟುಕೊಂಡು, ಕಾಯಿಗಳಿಗೂ, ಹಣ್ಣುಗಳಿಗೂ ಸ್ವಲ್ಪ ಜಿಗಿಟಿ, 

ನೀರನ್ನು ಸುತ್ತಿ, ಕೈಗಳನ್ನು ಜೋಡಿಸಿಕೊಂಡು ಏನೇನೋ ಮಂತ್ರ 

ಗಳನ್ನು ಹೇಳುತ್ತಿದ್ದನು. ಕಡೆಗೆ ಮಂಗಳಾರತಿಯೂ ಆಯಿತು ಎಲ್ಲರೂ 

ನಮಸ್ಕಾರವನ್ನು ಮಾಡಿದರು. ಸಾವಿತ್ರಿಯು, ಹರಸಿಕೊಂಡಳು, ಏನೆಂದು; 

“ಆಮದುವೆಯು ತಪ್ಪಲೆಂದು ” ಮೂರ್ತಿಯು, ಹರಸಿಕೊಂಡನು ಏನೆಂದು; 

" ಸಾವಿತ್ರಿಯು ತನಗಾಗಲೆಂದು ” ಅಕಸ್ಮಾತ್ತಾಗಿ, ಇಬ್ಬರ ದೃಷ್ಟಿಗಳೂ 

ಒಂದಾಗಿ ಸೇರಿದೆವು. ನಾಚಿಕೆಯಿಂದ ಇಬ್ಬರೂ ತಲೆಯನ್ನು ಬಗ್ಗಿಸಿದರು, 

ಪುನಃ ಏನೋ ನೆವದಿಂದ ತಲೆಯೆತ್ತಿದರು, ಪುನಃ ನೋಟಗಳು ಸೇರಿದವು 

ಸುಬೇದಾರರ ಮನೆಯವರು ಹಿಂತಿರುಗಿದರು. ಆ ಗಲಾಟೆಯಲ್ಲಿ, ಆ 

ನೂಕುನುಗ್ಗಿನಲ್ಲಿ, ಹೋಗುವದು ಸುಲಭವಲ್ಲ. ಆದರೆ ಸುಬೇದಾರರ 

ಮನೆಯವರಿಗೆ ಕಷ್ಟವಲ್ಲ. ದಾರಿಯನ್ನು ಬಿಡಿಸಾಯಿತು, ಹೋಗುವಾಗ 

ಮೂರ್ತಿಯ ಸಾವಿತ್ರಿಯ ಪಕ್ಕವಾದನು. ಸಾವಿತ್ರಿಯು ಕೃಷ್ಣವೇಣಿಯ 

ಪಕ್ಕವಾದಳು. ಸಾವಿತ್ರಿಯ ಕೈಯನ್ನು ಮೂರ್ತಿಯು ಹಿಂದಿನಿಂದ ಎಳೆದನು. 

ಸಾವಿತ್ರಿಯು ಕೃಷ್ಣವೇಣಿಯ ಕೈಯನ್ನು ಹಿಡಿದಳು.


ಗುಡಿಯಹೊರಗೆಬಂದು ಕಲ್ಯಾಣಮಂಟಪಲ್ಲಿ ಕುಳಿತರು. ನಾಗಮ್ಮನೂ 

ಲಕ್ಷ್ಮಮ್ಮನೂ ಹೊರಟುಹೋಗಿದ್ದರು. ತೆಂಗಿನ ಚಿಪ್ಪುಗಳನ್ನು ಎಸೆದರು. 

ಕೆಲವು ಕಾಯಿಗಳನ್ನು ಮುಗಿಸಿದರು. ಗಾಡಿಯನ್ನು ಕಟ್ಟಿಸಹೇಳಿ ಮನೆಗೆ 

ಬಂದುಬಿಟ್ಟರು. ಮೂರ್ತಿಯ, ರಾಜನೂ, ಒಳಕ್ಕೆ ಹೊರಟು ಹೋದರು. 

ಸಾವಿತ್ರಿಯು ತನ್ನ ಮನೆಗೆ ಬಂದಳು, ಅಲ್ಲಿ ನಾನು ಕಾಗದವನ್ನು ಟಪ್ಪಾಲಿಗೆ 

ಹಾಕೆಂದುಕೊಟ್ಟ ಹಳ್ಳಿಯವನು ನಿಂತಿದ್ದನು. "ಕಾಗದವನ್ನು ಹಾಕಿದೆಯಾ?” 

" ಸ್ವಾಮಿಗಳು ಹಾಕಿರಬಹುದು " 

" ಯಾವಸಾಮಿಗಳು " 

" ಕೋನೇರಪ್ಪನೋರು. ನಮ್ಮ ಶಾನುಭಾಗರು, ತಪ್ಪಾಲ್‌ಬಳಿನಿಂತಿದ್ದರು.


೩೪-------------------------

೩೪ ಕಾದಂಬರೀ ಸಂಗ್ರಹ


"ಕಾಗದ ಏನೋ" ಅಂಥ ಈಸುಕೊಂಡರು. ನಾನು ಬಂದುಬಿಟ್ಟೆ. 


“ ನನಗೆ ವಿಮೋಚನೆಯಲ್ಲ ” ಎಂದೆಂದು ಕೊಂಡಳು.

...

೮ನೇ ಪರಿಚ್ಛೇದ

ಕೆಲವು ದಿನಗಳನಂ 4ರ ಸಂಧಿ ಕಾಲದಲ್ಲಿ ದಿಕ್ಕು ದಿಕ್ಕುಗಳೆಲ್ಲವೂ 

ಆರುಣಪ್ರಭೆಯಿಂದ ಜಾಜ್ವಲ್ಯಮಾನವಾಗಿದ್ದುವು, ಚಿಗುರಿದ ಇಮ್ಮಾವು 

ಗಳಮೇಲೆ ಬೀಳುವಕೆನ್ನೀರಂದದಿ, ಸೂರ್ಯದೇವನಿಂದ ಬಿಸುಗದಿರುಗಳು 

ತಗ್ಗುಗಳಲ್ಲಿ ಬೆಳೆದ ಗಿಡಮರಗಳ ಮೇಲೆ ಪಸರಿಸಿದ್ದುವು. ಕೆಲವರು ಅದಿತ್ಯ:ನಿ 

ಗುಂಟಾದ ಕೋಪವಿಶೇಷದಿಂದ ಮುಖಮಂಡಲವು ಕೆಂಪೇರಿ, ಅದರ 

ಶೋಭೆಯು ಪ್ರತಿ ಬಿಂಬಿತವಾಗುವುದೆಂಬುವರು. ಮತ್ತೆ ಕೆಲವರು ಪಶ್ಚಿಮ 

ದಿಕ್ಕೆ೦ಬ ಆಂಗನೆಯಮೇಲಿನ ವ್ಯಾಮೋಹದಿಂದ ರಾಗವೇರಿದನೆಂಬುವರು. 

ಮತ್ತೆ ಕೆಲವರಾದರೋ, ಸೂರ್ಯದೇವನಿಗೂ ಪ್ರತೀಚೀಕಾಮನಿಗೂ, ಆರತಿ 

ಯನ್ನೆತ್ತಿ ಚೆಲ್ಲಿದಾಗ,  ಆರನ್ನದಟ್ಟೆಯು ಎದುರಿಗೂ ಆರತಿಯು ಸಕಲ 

ದಿಕ್ಕುಗಳಿಗೂ ಪಸರಿಸಿತಂಬವರು. ಈ ವರ್ಣ ನೆಗಳೆಲ್ಲವೂ, ಕವಿಗಳ 

ಅಸಾಧಾರಣ ಕೌಶಲ್ಯವನ್ನೂ, ಚಮತ್ಕಾರವನ್ನೂ ತೋರಿಸುವುವು. ನಾವೇ 

ನೆಂದು ವರ್ಣಿಸಲು ಸಾಧ್ಯವಿರುವದು ? ಈ ವಸಂತಕಾಲದಲ್ಲಿ, ದಕ್ಷಿಣಾ 

ನಿಲನತೀಟಕ್ಕೆ ತನುಗೊಟ್ಟು, ಇಂಪಾದ ಕೋಕಿಸ್ವ್ತರಕ್ಕೆ ಕಿವಿಗೊಟ್ಟು. 

ಸಕಲಾಭರಣಗಳನ್ನು ಕೊಟ್ಟು, ತಮ್ಮ ತಮ್ಮ ಪತಿಗಳು ಇಷ್ಟು ಹೊತ್ತಾದರೂ 

ಬರಲಿಲ್ಲವಲ್ಲಾ ಎಂಬುವ ಭಾವನೆಯಿಂದ ಆಗ್ರಹವುಂಟಾಗಿ ಕವಲ 

ಮುಖಿಯರ ಮೊಗಗಳು ಕೆಂಪೇರಲು, ಆ ಕಾಂತಿಯು ಪಲ್ಲವಾದರೆಗಳ 

ರತ್ನದರ್ರಣಗಳಿಗೆ ಸಮವಾದ ಕದಪುಗಳ ಮೇಲೆ ಬಿದ್ದು ಎಲ್ಲೆಲ್ಲಿಯೂ 

ಪ್ರತಿ ಬಿಂಬಿತವಾದುವೆಂದು ಹೇಳುವೆನು. ಯಾರು ತಮ್ಮ ತಮ್ಮ ಗೃಹಿಣಿ 

ಯರ ಮನಗಳನ್ನುನೋಯಿಸಿ, ಅವರಿಗೆ ಕೋಪವೂ ಬರುವಂತೆ ಮಾಡಿರು 

ವರೋ, ಅವರು ಬಳಿಯಲ್ಲಿ ಕೂಡಲು, ನಿಲ್ಲಲು ವ್ಯವಧಾನವಿಲ್ಲದೆ,


೩೫------------------------

ಸಾವಿತ್ರೀ ೩೫ 


ಪರಸತಾಪವನ್ನು ಶಾಂತಿಮಾಡಿಕೊಳ್ಳಲು ಹೊರಗಾಳಿಗೆ ಬರುವುದು 

ಚೋದ್ಯವಲ್ಲ. ಅಂತಹ ಭಾಮೆಯರ ಮುಖದಲ್ಲಿನ ಉಜ್ಜ್ವಲವಾದ 

ಕಾಂತಿಯು., ಪತಿಗಳ ಮುಖಗಳಲ್ಲಿಯೂ ಸ್ಪಲ್ಪ ಸ್ವಲ್ಪ ಬಂದು ಸೇರುವುದು. 

ಏಕಕಾಲದಲ್ಲಿ ಕಾಂತಾಮಣಿಗಳೆಲ್ಲರಿಗೂ ಕೋಪವುಂಟಾದರೆ, ಈ 

ಪ್ರಪಂಚದ ಸಕಲಭಾಗಗಳಿಗೂ ರಕ್ತವರ್ಣೋದ್ರೇಕನಾಗುವುದು ಸ್ವಾಭಾ 

ವಿಕವಲ್ಲವೇ ? 


ಕಮಲಕ್ಕೆ ಸೊಂಪಡಗಿತು. ಯಾವ ಪ್ರಾತಃಕಾಲದಲ್ಲಿ ರಾಜಬಲವು 

ತಗ್ಗಿತೆಂದು ಕೊರಗುತ್ತಿದ್ದ ಕುಮುದಿನಿಗೆ ಹಾಸ್ಯವನ್ನು ಗೈದಳೋ ಅದು 

ಈಗ ನೆನಪಿಗೆ ಬಂತು. ಆ ಕುಮುದಿನಿಯು ಮೆಲ್ಲ ಮೆಲ್ಲಗೆ ನಗಲಾರಂಭಿಸಿ 

ದಳು. ಆವಿರಹಿಣಿಯನ್ನು ಕುರಿತು " ಕ್ಷೇಮವೇ: ” ಎಂದಳು.: ಅಕಟಾ ? 

ಏನು ಸಂಕಟ ಪ್ರಾಪ್ತವಾಯಿತು. ತಾನು ಗಗನಮಣಿಯನ್ನು ಕಳೆದುಕೊಂಡು 

ದೊಂದು ವ್ಯಗ್ರವಾದವಳ ನಗೆಯೊ೦ದು, ಇವುಗಳೆರಡರಿಂದಲೂ ಅತಿದುಃಖ 

ವುಂಟಾಗಿ, ಮುಖವನ್ನು ಮುಚ್ಚಿಕೊಳ್ಳಲಾರಂಭಿಸಿದಳು. ಮುಂಗುರುಳು 

ಗಳು ಅಡ್ಡಲಾಗಿ ಹಾರಾಡುತ್ತಿದ್ದರೂ, ಸಡ್ಡೆ ಮಾಡದೆ, ಮನೋವೈಕಲ್ಯವು  

ವೃದ್ಧಿಯಾಗಿಲು ಪೂರ್ತಿಯಾಗಿ ವದನವನ್ನ ಮುಚ್ಚಿಕೊಂಡಳು. 


ಪಕ್ಷಿಗಳೆಲ್ಲವೂ ಚೀತ್ಕಾರವನ್ನು ಮಾಡುತ್ತ ಕಮಲಕ್ಕೆ ಬಂದ 

ಕಷ್ಟವನ್ನು ನೋಡಲಾರದೆ, ಬೇಗಬೇಗನೆ, ಗು೦ಪುಗುಂಪಾಗಿ ಮನೆಗೆ 

ತೆರಳಿದ ವು, ಮಾರುತಿಯು ಮಂದವಾದನು. ಕೆಲವುಕಾಲ ನಿಶ್ಯಬ್ದವಾಯಿತು.  

ಗಿಡಗಳಿಂದಲೂ, ಮರಗಳಿಂದಲೂ ಸದ್ದಿಲ್ಲ. ಎಲ್ಲರೂ ಕಮಲಿನಿಗೆ ಉಂಟಾದ 

ಮಹತ್ತರವಾದ ವ್ಯಸನದಿಂದ ಕುಗ್ಗಿಹೋದರು. 


ಇ೦ದಿಗೆ ಚಂದ್ರನಿಗೆ ಹದಿಮೂರನೇ ದಿವಸ ತನ್ನ ಪ್ರಾಣಕಾಂತೆಯು 

ಎಲ್ಲಿರುವಳೋ ಎಂದು ಎಲ್ಲೆಲ್ಲಿಯೂ ಹುಡುಕುವನು, ಬೆಟ್ಟ ಗುಡ್ಡಗಳ 

ತಳಗಳಲ್ಲೆಲ್ಲ ಹುಡುಕಫಲಾರಂಭಿಸಿದನು. ಸಿಗಲಿಲ್ಲ. ಎತ್ತರವಾದ ಮರಗಳ 

ಮೇಲೆ ಹುಡುಕಲಾರಂಭಿಸಿದನು ಅಲ್ಲಿಯೂ ಇರಲಿಲ್ಲ ಎಲ್ಲರ ಮನೆಯ 

ಮಹಡಿಗಳಲ್ಲಿಯೂ , ಅಂಗಳಗಳಲ್ಲಿ ಹುಡುಕಿದನು, ಅಲ್ಲಿಯೂ ಇಲ್ಲ,


೩೬------------------------------------------------------------------

೩೬ ಕಾದಂಬರಿ: ಸಂಗ್ರಹ


ಬಹಳವಾಗಿ ಚಿಂತಿಸಿದರು. ಸ್ವಲ್ಪ ಹೊತ್ತು ತಟಸ್ಥನಾದನು. ಎಲವೋ 

ಕೇಢಾಳಿ ನಿಶಾಕರ, ನಿನಗೆತಕ್ಕೆ ಪ್ರತೀಕಾರವೇ ದೊರಕಿತು. ವಿರಹಿಗಳು 

ನಿನ್ನ ಶೀತಲವಾದ ಮರೀಚಿಗಳನ್ನು ಉಷ್ಣಕಿರಣಗಳ೦ತಯೇ ಭಾವಿಸಿರು 

ವರಲ್ಲ. ಈಗ ನಿನಗೆ ನಿನ್ನ ಸತಿಯುಸಿದಿರುವಲ್ಲಿ ಎಷ್ಟು ಚಿಂತಾಕ್ರಾಂ 

ತನಾಗಿರುವೆ, ಆದರೆ ನಾವು ದಯಾಳುಗಳು, ತಾಳ್ಮೆಯನ್ನು ಬಿಡದೆ, ಹುಡುಕುವ

ನಿನಗೆ ನಿನ್ನ ಹೃದಯಪುಷ್ಪವು ಗೋಚರವಾಗುವುದು ಕಳಾನಿಧಿಯ ವ್ಯಸನ 

ವನ್ನು ಬಿಟ್ಟು ಮೇಲಕ್ಕೆದ್ದನು. ಪುನಃ ಹುಡುಕಲು ಮೊದಲು ಮಾಡಿದನ 

ಕೂಡಲೇ ಸಿಕ್ಕಿದಳು.


" ಇದೇನು, ಈ ಮೂಲೆಯಲ್ಲಿ, ಈ ತಣ್ಣಗಿರುವ ಜಲದಲ್ಲಿ 

ಇರುವೆಯಲ್ಲ ?" 


" ಅಹುದು, ನಿನ್ನವೈರಿಯ, ಅಧಿಕವಾದ ಕೋಪವನ್ನು ತೋರಿಸಲು ಂದು 

ಅವಿತುಕೊಂಡನು. 


" ಈಗ ಒಂದುಸಮಾಚಾರವುಂಟು, ಯಾರೊಡನೆಯೂ ಹೇಳಬೇಡ “ 


"ಇಲ್ಲ, ನಾನೇಕೆ ಹೇಳಲಿ ? " 


"ಇಬ್ಬರು ಒಂದು ಕಡೆಯಲ್ಲಿ ಸೇರಿರುವರು, ಅವರನ್ನು ಬಯಲಿಗೆ ತರಲು 

ಅಶಕ್ಯ " 


“ ನಾನು ಎಂದು ಸಹಾಯ ಮಾಡುವೆನು, ” 


“ ಅಯ್ಯೋ ನೀನು ಹೆಂಗಸು, ನಿನ್ನ ಕೈ ಲಾಗುವುದೇ? " 


"ನಿನ್ನನ್ನೇ ನನ್ನ ಕೈ ಕೆಳಗೆ ಹಾಕಿಕೊಂಡಿರುವೆನು. ನಾನು ಹೇಳಿದ ಹಾಗೆ 

ನೀನು ಕೇಳುವೆಯಲ್ಲ ? “ 


"ಆ ಇಬ್ಬರು, ಯಾರುಬಲ್ಲೆಯಾ ? "


"ಇಲ್ಲ."


" ಹೆಸರುಗಳನ್ನು ಹೇಳಿದರೆ ತಿಳಿದುಕೊಳ್ಳುವೆಯಾ ? " 

 

" ತಿಳಿದುಕೊಳ್ಳದೆ ಏನು ?” 


"ಹೇಳಲೇ ?"

೩೭-----------------------


"ಹೇಳು, 


" ಸರಿ ಸರಿ.  ಸರಿ , ಹೇಲಲೇ? 


"ಛೀ, ಬೇಗನೇ ಹೇಳು  


" ಇಷ್ಟೇಕೆ ಕೋಪ, ಹಾಗಾದರೆ ನೀನು ಹೇಳುವುದಿಲ್ಲ.


“ ನೀನು ಹೇಳಿದರೂ ಅದುಹೇಳುವುದಿಲ್ಲ" ಹೀಗೆಮದು ಹೇಳಿ 

ಕುಮುದಿನಿಯು ಮುಖವನ್ನು ಸ್ವಲ್ಪ ತಿರುಗಿಸಿದಳು. ಚಂದ್ರನು ಬಗ್ಗಿ 

ನೋಡಿದನು. ಇನ್ನೊಂದು ಕಡೆ ತಿರುಗಿಸಿದಳು. ಅತ್ತ ಕಡೆಯೂ ಬಗ್ಗಿ 

ನೋಡಿದನು. ಇತ್ತ ಅತ್ತ ಬೇಗನೆ ತಿರುಗಿಸಿದಳು. ಆತನೂ ಇತ್ತ ಅತ್ತ 

ಬೇಗ ಬೇಗ ನೋಡಟಿದನು. ಕುಮುದಿನಿಗೆ ಚಂದ್ರನನ್ನು ದೂರಮಾಡಲು 

ಆಗದೇ ಹೋಯಿತು.


"ನನಗೆ ನೀನು ಬೇಡ" ಎಂದಳು. 


"ಬೇಡವೋ ಸರಿ" ಎಂದು ಹೇಳಿ ಕ್ಷಮಾಕರನು ಮೋಡದ ಹಿಂದೆ 

ಮರೆಯಾದನು.  


" ಆಯೋ, ನನ್ನಪತಿಯೆಲ್ಲಿ, ಯಾರು ಕೊಂಡೊಯ್ದರು. 

ಮರೆಯಾದನಲ್ಲ. ಇನ್ನೇನಮಾಡಲಿ. ಏಳಿ, ಹೋಗಿಯೋ '  ಎಂದು 

ಮರುಗಿದಳು.  ಕೂಡಲೇ ಓಷಧೀಶರನೂ ಸ್ವಲ್ಪ ಮುಖವನ್ನು ಕಾಣಿಸಿಕೊಂಡನು. 


"ಬೇಗ ಬಾ ಕ್ಷಮಿಸು, ಬುದ್ಧಿಯಿಲ್ಲದೆ ಹೇಳಿದೆನು” ಎ೦ದಳು. 


"ಇಲ್ಲ, ನಾನುಬರುವುದಿಲ್ಲ. ಇಲ್ಲಿಯೇ ಇರುವೆನು ” ಎಂದು 

ಪುನಃ ಮರೆಯಾದೆನು. " ಅಕಟಕಟಾ ! ಪತಿಗಳ ನಾವು ಹೇಳಿದಂತೆ ಇರು 

ವರೆಂದು ಹೆಮ್ಮೆಯನ್ನು ಪಟ್ಟವರಪಾಡೆಲ್ಲಾ ಇಷ್ಟೇ ಸರಿ. ಆ ದುರಹಂಕಾರ 

ವೇಕೆ, ಆ ಬಿಗುಮಾನವೇಕೆ, ಬಾಯಿಗೆ ಬಂದಮಾತೇಕೆ , ಈಗಲಾದರೂ 

ಮುತಿಯನ್ನು ತಂದುಕೊಳ್ಳಬೇಕು. ಎಂದು ಯೋಚಿಸಿ  ತನ್ನ ಪಕ್ಕದಲ್ಲಿಯೇ 

ಹಾರಾಡುತ್ತಿದ್ದ ಕೈರವಪತ್ರವನ್ನು ಕಿತ್ತು ಆದರಲ್ಲಿ " ನನ್ನ ಅಪರಾಧವನ್ನು 

ಕ್ಷಮಿಸು, ಒಂದು ಬಾರಿಮುಖವನ್ನು ತೋರಿಸು, ನೀನಿದ್ದಾಗ ಸಂತೋಷ 

ವಾಗಿತ್ತು, ಈಗ ದುಃಖದಿಂದ ಕಪ್ಪಾಗಿಹೋಗಿರುವೆನು, ಎಂದು ಬರೆದಳು. 


೩೮----------------------

೩೮ ಕಾದಂಬರೀ ಸಂಗ್ರಹ 


ಇದನ್ನು ಕೊಟ್ಟುಕಳುಹಿಸುವ ಬಗೆ ಹೇಗೆಂದು ಯೋಚಿಸುತ್ತಿರುವಾಗ 

ಒಂದು ಚಂದ್ರಕಿರಣವು ಅಕಸ್ಮಾತ್ತಾಗಿ ಮೋಡದಿಂದ ತೂರಿಕೊಂಡು 

ಕುಮುದಿನಿಯ ಪಕ್ಕದಲ್ಲಿ ಬಿತ್ತು. ಕೂಡಲೇ ಆ ರಶ್ಮಿಗೆ ಆ ಪತ್ರವನ್ನು ಕಟ್ಟಿ 

ಆ ಗಭಸ್ತಿಯನ್ನು ಮೇಲಕ್ಕೆಬಿಟ್ಟಳು ಬಿಟ್ಟಮಾತ್ರದಲ್ಲಿಯೇ ಚಂದ್ರನೂ 

ಮೋಡಗಳನ್ನು ಬಿಟ್ಟು ನಗುತ್ತ, ನಗುತ್ತ ಎದುರಿಗೆ ಬಮದು ನಿಂತನು.

ಆಗಲೇ ಸತಿ ಪತಿಗಳು ಒಂದಾದರು. " ನೀನು ಬಹಳ ಸೊಗಸಾಗಿರುವೆ 

ಎಂದು ನೈದಿಲೆಯನ್ನು ಚುಂಬಿಸುವೆನು. ನೀನು " ಮನೋಹರನೆಂದು 

ಪ್ರತಿಯಾಗಿ ತಾನು ಮುದ್ದಿಡುವಳು. ಈ ಸರಸಕೇಳಿಯಲ್ಲಿರುವಾಗ 

ಮೆಲ್ಲನೆ ಕುಮುದಿನಿಯು-


"ನಲ್ಲ, ಆದೇನೋ, ಸಃ, ಸಾ, ಎಂದು ಹೇಳುತ್ತಿದ್ದೆಯಲ್ಲ. ಎನಲು 


"ಆ ಅ ಹ ಹ ! ಅಲ್ಲಿ ಒಂದು ಕೊಠಡಿಯಲ್ಲಿ ಸಾವಿತ್ರಿಯಿದ್ದಳು, 


" ಯಾವಕೊಠಡಿಯಲ್ಲಿ, ಯಾರ ಮನೆಯಲ್ಲಿ ? 


"ಯಾರಮನೆ, ಮಾಮಲೇದಾರರ ಮನೆಯಲ್ಲಿ ? 


" ಆಹ ! ನನಗಂತೂ ಆಶ್ಚರ್ಯ, ಅದು ಹೇಗೆ ? 


"ಹೇಗಂದರೇನು, ಮಾಮಲೇದಾರರ ಮನೆಯಲ್ಲಿ ಆರತಿಯಾಗುವದೆಂದು 

ಸಾವಿತ್ರಿಯನ್ನು ಕರೆದಿದ್ದರು. 


" ಆಮೇಲೆ, ಆಮೇಲೆ, 


" ಆಮೇಲೆ, ಮೂರ್ತಿಯು ಆವಳೊಡನೆ ಮಾತನಾಡಿದನು; 


" ಹೀಗೆ ನಡೆಯುವದನ್ನು ನಾನು ಎಲ್ಲಿಯೂ ಕೇಳಿಲ್ಲ. ನೋಡಿಯೂ 

ಇಲ್ಲ. ಸಾಕು ನಿನ್ನ ಕತೆ, ಹುಚ್ಚರೆಂದಾರು. 


“ ಅದು ಹೇಗೆ ಹುಚ್ಚು , ಕಂಡದ್ದನ್ನು ಹೇಳಿದರೆ ಹುಚ್ಚೆ. 


" ನನಗೆ ನಂಬಿಕೆಯಿಲ್ಲ. 


" ನಿಜವಾಗಿಯೂ ಮಾತನಾಡಿದರು. 


"ಏನೆಂದು.  


* ಏನೆಂದೋ ನಾನು ಕೇಳಲಿಕ್ಕಾಗಲಿಲ್ಲ


೩೯---------------

ಸಾವಿತ್ರಿ ೩೯


“ಮೂರ್ತಿಗೆ ಮಾತನಾಡಲು ಅವಕಾಶವೆಂತಾಯಿತು.


“ಅವಳ ಮೂಲಕ 


“ಯಾರ ಮೂಲಕ, ಸಾವಿತ್ರಿಯ ಮೂಲಕವೇ, ಅಯ್ಯೋ, ಅವಳೇಮೇಲೆ 

ಬಿದ್ದುಹೋದಳೇ? 


“ಇಲ್ಲ ಅವಳು ಕೃಷ್ಣವೇಣಿ


“ಅವಳೇನು ಮಾಡಿದಳು?  


“ಏನು ಮಾಡಿದಳೋ ನಾನು ಕಾಣೆ. ಮೊನ್ನೆಯದಿವಸ ನಿನಗೆ ಒಮದು ಹೊಸ 

ವಿಷಯವನ್ನು ಹೇಳಬೇಕೆಂ...................


“ಅದೇನು ನನಗೆ ಬೇಡ, ಅವಳೇನು ಮಾಡಿದಳು ಹೇಳು.


ಏನು ಮಾಡಿದರೇನು? 


“ನಲ್ಲ ಮೋಹದನಲ್ಲ. ದಯೆಯಿಟ್ಟುಹೇಳನ್ನುತ್ಲೋ, ಸ್ವಲ್ಪ ಸೆರಗನ್ನು 

ಸರಿಪಡಿಸಿಕೊಂಡಳು.

    

ಪುರುಷರ ಸ್ಥೈರ್ಯವೆಲ್ಲ ಇಷ್ಟೆ! ಕೂಡಲೆ ಹತತಿರಬಂದು ಒಂದು 

ಸಾರಿ ಚುಂಬಿಸಿ "ಹೇಳುವೆನು, ನಿನಗೆ ಹೇಲದೇಏನು? ಆದರೆ ಒಬ್ಬರಲ್ಲಿ 

ಯೂ ಹೇಳಕೂಡದು, ನನ್ನಾಣೆ" 

 

"ಖಂಡಿತವಾಗಿಯೂ ಹೇಳುವುದಿಲ್ಲ, ಬೆಳಗಾಗುವದಕ್ಕಿಂತ  

ಮೊದಲೇ ಬಾಯನ್ನು ಮುಚ್ಚಿಕೊಳ್ಳುವೆನು. ಪುನಃ ನಿನ್ನನ್ನು ನೋಡುವ 

ವರೆಗೂ ಬಾಯನ್ನು ತೆರೆಯುವುದಿಲ್ಲ" 


" ಭಲೆ, ಭಲೆ, ಒಳ್ಳೆಯ ಹೆಂಡತಿ, ನೀನು ನನಗೆ ಸಿಕ್ಕಿದ್ದು ಎಷ್ಟೋಪುಣ್ಯ. 


 * ಪುಣ್ಯವಿರಲಿ, ಸಾವಿತ್ರಿಯ ವಿಷಯವೇನು ? 


" ಕೃಷ್ಣವೇಣಿಯ ಸಹಪಾಠಿಯಲ್ಲವೇ ಸಾವಿತ್ರಿ. 


" ಆಹುದು. 


" ಸಾವಿತ್ರಿಯ ಬರುತ್ತಲೂ, ಪಕ್ಕದಲ್ಲಿ ಕೂರಿಸಿಕೊಂಡಳು. 

 ಸ್ವಲ್ಪ ಹೊತ್ತಾದನಂತರ ಇಲ್ಲಿ ಜನಗಳು ಹೆಚ್ಚು, ಆ ಕೊಠಡಿಗೆ 

ಹೋಗೋಣವೆಂದಳು. 

೪೦------------------

೪೦ ಕಾದಂಬರೀ ಸಂಗ್ರಹ


" ಆಮೇಲೆ. 


“ಆಕೊಠಡಿಗೆ, ಒಳಗಿನಿಂದಲೂ ಹೊರಗಿನಿಂದಲೂ ಬಾಗಿಲುಂಟು.


"ಸರಿ, ಸರಿ? 


"ಇಬ್ಬರೂ ಒಳಗೆ ಹೋದ ಕೊಂಚ ಹೊತ್ತಿಗೆ ಮೂರ್ತಿಯು 

ಹೊರಬಾಗಿಲನ್ನು ತಟ್ಟಿದನು. ಇವರಿಬ್ಬರೂ ಒಳಗಿರುವುದು ಹೊರಗಿರುವ 

ವವರಿಗೆ ಯಾರಿಗೂ ಗೊತ್ತಿಲ್ಲ. 


“ಭಲೇ ಸಾವಿತ್ರಿಯೇನೆಂದಳು?


“ ಸಾವಿತ್ರಿಯೇ, ಅಯ್ಯೋ, ಅಮ್ಮಾ, ಯಾರು ಬಾಗಿಲು ತಟ್ಟುವರು

ಅಲ್ಲಿಗೇನೇ ಹೋಗೊಣ ಬಾರಮ್ಮಾ ಎಂದಳು. 


“ ನಮ್ಮ ಮನೆಗೆ ಯಾರು ಅಂಥವರು ಬರುವರು ದಿಗಿಲು ಏನೆಂದಳು. 


" ಸಾವಿತ್ರಿಯು- ಕೃಷ್ಣವೇಣಿ, ನಿನ್ನ ಅಣ್ಣಂದಿರು ಬಂದು ಬಿಟ್ಟರು.

ನಾನು ಹೋಗುವೆನು ಎಂದಳು. 


"ಆಗ ಕೈಷ್ಣವೇಣಿಯು ಯಾರು? ಸ್ವಲ್ಪ ತಾಳುಎಂದು ಘಟ್ಟಿಯಾಗಿ ಕೂಗಿ 

ಹೇಳಿ, ಮೆಲ್ಲಗೆ ಸಾವಿತ್ರೀ, ನೀನು ಹೆದರಬೇಡ, ನಾನಿರುವೆನು ಒಂದು 

ಮಾತನ್ನು  ಕೇಳಿಬಿಟ್ಟು, ಆಮೇಲೆ ಹೊರಟುಹೋಗೋಣ. 


“ಅಯ್ಯೋ ನನಗೆಬೇಡ, ನನ್ನ ಕೈಕಾಲುಗಳು ಅದುರುತ್ತವೆ. 

ಚಿಂತೆಯಿಲ್ಲ, ನಾನಿರುವೆನು. ಎಂದು ಹೇಲಿ ಹೊರಬಾಗಿಲನ್ನು ತೆರೆದಳು. 

ಮೂರ್ತಿಯು, ಒಳಗೆ ಬಂದನಿ. ಸಾವಿತ್ರಿಗೆ ಮೈಯೆಲ್ಲವೂ ಬೆವರಿತು. 

  

ಚಂದ್ರ--ಏನು ಹುಂಗುಟ್ಟದ ಸುಮ್ಮನಿರುವೆ.


ಕು-" ಇಲ್ಲ, ಆದ ನಡವಳಿಕೆಯನ್ನು ಕೇಳಿ ಆಶ್ಚರ್ಯವಾಯಿತು. 


ಚಂ- ಆಶ್ಚರ್ಯವು ಇನ್ನು ಉಳಿದಿರುವುದು..


 ಕು-" ಇದೇ ಆಶ್ಚರ್ಯ. ಇನ್ನು ಉಳಿದಿರುವುದೇನು ?


:ಚಂ--”ನಿನಗೆ ಆಶ್ಚರ್ಯವಿಲ್ಲದಿದ್ದರೆ ನಾನು ಹೇಳುವುದಿಲ್ಲ. 

.......

೪೧---------------------------------------

ಮೂರ್ತಿಯು ಭಗ್ನಮನೋರಥನಾದನು. ಯಾರು ಆಗಿರಲಿ 

ತನ್ನನ್ನು ನೋಡಿದ ಮಾತ್ರದಲ್ಲಿಯೇ ಸಾವಿತ್ರಿಯು ಒಪ್ಪುವಳೆಂದೂ 

ತಾನು ಹೇಳಿದಂತೆ ಮಾಡುವಳೆ೦ದೂ ನ೦ಬಿದ್ದನೋ ಅಂತಹವನು, ಈಗ 

ಕಾಂತಿಹೀನನಾಗಿ ಮಹಡಿಯಲ್ಲಿ ಒಬ್ಬನೇ ಮಲಗಿರುವನು.  ಈ 

ಬೆಳದಿಂಗಳು, ಈ ಶೋಭಾರಶಿ, ಈ ತಂಗಾಳಿ, ಎಲ್ಲವೂ, ಅವನಿಗೆ ವಿಷ 

ಪ್ರಾಯವಾದವು. "ಅಯ್ಯೋ! ನಾನು ಎಷ್ಟು ಆತುರದಿಂದ ಅವಳೊಡನೆ 

ಮಾತನಾಡಬೇಕೆಂದಿದ್ದೆನೋ, ಎಷ್ಟು ಆತುರದಿಮದ ನಾನು ಕೊಠಡಿಯೊ 

ಳಗೆ  ಹೋದೆನೋ, ಈಗ ಅಷ್ಟು ನಿರಾಶಡಯಿಮದ ಬಂದೆನಲ್ಲಾ-ನಾನಾ  

ಡಿದ ಮಾತುಗಳಿಗೆ ಒಂದು ಮಾತು, ಒಂದನ್ನೂ ಬದಲುಕೊಡಲಿಲ್ಲ- 

ಅಯ್ಯೋ!  ಅದೃಷ್ಟವೇ. ಅವಳಿಗೆ ಆಭರಣಗಳಮೇಲೆ, ಅಪೇಕ್ಷೆಯುಂಟೇ  

ನೋ--ಅವಳಿಗೆ ವಿವೇಕದಲ್ಲಿ ಏನೆಂದು ಹೇಳಲಿ" ಎನ್ನುತ್ತ ಕೊರಗುತ್ತಿ 

ದ್ದನು. ಆಗ 


"ಸ್ವಾಮೀ, ಅಮ್ಮಾವರು ಕೂಗುತ್ತಾರೆ. ಬನ್ನಿ" ಎಂದು ಗುರುವ 

ಎಂಬುವ ಆಳು ಕರೆದನು. 


 "ಲೋ ನನಗೆ ಹಸಿವಿಲ್ಲ.ಎಮದು ಹೇಳೋಗು" ಸ್ವಲ್ಪ ಹೊ 

ತ್ತಾದಮೇಲೆ "ಸ್ವಾಮೀ ಬಂದು ಹೋಗಲೇಬೇಕಂತೆ"  


" ಇದೇನು ಗಲಾಟೆ. ಬೇಡ ವೆಂದರೆ ಕೇಳಬೇಕು. ಬರಲೇಬೇಕಂತೆ" 

ಎಂದು ಹೇಳಿಕೊಳ್ಳುತ್ತ ಸಿಡಿಮಿಡಿಗೊಂಡು ಮೂರ್ತಿಯು ಕೆಳಗೆ ಇಳಿದು 

ಬಂದನು. 


" ಏನಮ್ಮಾ  ಕೂಗಿದ್ದು?"


“ಏಕೆ, ಇಷ್ಟು ಕೋಪ, ನಿನಗೆ ಆಗಲೇ ಹಸಿವಾಗಿದ್ದರೆ, ಬಡಿಗ 

ಹೇಳಿ ಊಟಮಾಡಬಹುದಾಗಿತ್ತಲ್ಲ" 

೪೨---------------------------------------

" ಏನೋ. ನಿಮ್ಮ ಆರತಿಗಳು, ಪಾರತಿಗಳು ಹತ್ತು ಗಂಟೆಯಾದರೂ 

ಮhಯುವುದಿಲ್ಲು ಹನ್ನೊಂದುಅದರೂ ಮುಗಿಯುವುದಿಲ್ಲ, "


" ಏನೋ ಹೊತ್ತು ಆಯಿತು ಈಗ ಊಟಕ್ಕೆ ಏಳು “ 


"ನನಗೆ ಬೇಡ" 


"ಇದೇಕೆ ಹಟ ಮಾಡುತ್ತೀಯೋ? " 


" ಹಟವೇನು, ನನ್ನ ಮಾತಿಗೆ ಯಾರೂ ಬರಬೇಡಿ. " 

 

* ಊಟಮಾಡು. ಬರುವುದಿಲ್ಲ. ಇಲ್ಲಿ ನೋಡಿ, ನಿಮ್ಮ ಮಗನ ಮಾ 

ತಿಗೆ ಯಾರೂ ಬರಕೂಡದಂತೆ. ದೊಡ್ಡಮನುಷ್ಯನಂತೆ, ಭಾರೀ ಉದ್ಯೋಗ 

ಸ್ಥನಂತೆ." 


ಇದೆಲ್ಲಾ ಯಾರಮ್ಮ ಹೇಳಿದರು.?" 


"ಲೋ ಮೂರ್ತಿ, ಊಟಕ್ಕೇಳೋ" ಎಂದು: ಸುಬೇದಾರರ ಅಪ್ಪ 

ಣೆಯಾಯಿತು. 


"ಎದ್ದೆ ಬರುತ್ತೇನೆ" 

ಮೂರ್ತಿ ತಾಯಿಯಬಳಿ ವಾದಿಸುವಂತೆ ತಂದೆಯಬಳಿ ವಾದಿಸುವು 

ದಕ್ಕೆ ಧೈರ್ಯವಿರಲಿಲ್ಲ. ಊಟಕ್ಕೆ ಕುಳಿತರು. ಅಡಿಗೆಯವನು  ಬೇಕಾದ್ದು 

ಗಳನ್ನು ಬಡಿಸಿದನು. "ಸುಬ್ಬಾಚಾರ್ರೇ ನಮ್ಮ ಮೂರ್ತಿಗೆ ಮಧ್ಯಾಹ್ನ 

ದ್ದು ಉಳಿದಿದ್ದರೆ, ಹಾಕಿ" ಎಂದು ಯಜಮಾನಗಿತ್ತಿಯು ನುಡಿದಳು.

ಮೂರ್ತಿಗೂ ಮನಸ್ಸು ಸಮಾಧಾನಸ್ಥಿತಿಗೆ ಬಂತು. 

 

ಯಜಮಾನರು ನಾಳೇಬೆಳೆಗ್ಯೆ ಮಿಟ್ಟೀಮರಿಗೆ ಸ್ರರಕ್ಯೂಟ್‌ 

ಹೋಗಬೇಕು. ನೀನೂ ಬರುತ್ತೀಯಾ ಎಂದರು. 


"ಬರಬೇಕು ಎಂದರೆ ಬರುವೆನು. "


"ನೀನು ಇಲ್ಲಿ ಮಾಡುವುದೇನು? ನಿನ್ನ ಕಿರಿಯತಮ್ಮ ಸರ್ವೋತ್ತ 

ಮನಿಗೂ ಪಾಠವನ್ನು ಹೇಳಿಕೊಡುವುದಿಲ್ಲ." 


"ಮಿಟ್ಟಿಮಿರಿಗೆ ಬರುವೆಯಾ?" 


ಮೂರ್ತಿಯು ಸ್ವಲ್ಪ ಯೋಜಿಸಿದನು, ಸಾವಿತ್ರಿಯನ್ನು ನೋಡಲು 

೪೩------------------------------------------------ 

ನಿಲ್ಲೋಣವೇ ? ಇಲ್ಲ ಮಿಟ್ಟಿಮರಿಗೆ ಹೋಗೊಣವೇ ? ರಾಜನನ್ನು 

ಇನ್ನೂ ನೋಡಿಲ್ಲ ಸಾವಿತ್ರಿಯ ಬಳಿ ಯಾವುದನ್ನು ಹೇಳಲಿಲ್ಲ. 

 

" ಏನು ಜವಾಬು; ಹೊರಡುವುದಿಲ್ಲ ? : * 


"ಬರುತ್ತೇನೆ” 


ಊಟವಾಯಿತು. ಗುರುವನು ಹಾಸಿಗೆಗಳನ್ನುಹಾಸಿದನು. 

ಮೂರ್ತಿಯು " ಗರುವಾ, ನನ್ನ ಹಾಸಿಗೆಯನ್ನು ಮಹಡಿಯಮೇಲೆ 

ಹಾಕೋ " ಎಂದನು. ಮೂರ್ತಿಯ ತಾಯಿಯೂ "ಅಲ್ಲೇಕೋ ಮಂಜು 

ಸುರಿಯುವುದು? ಇನ್ನು ಬಂದುದಕ್ಕೆ ಶೀತವಾಗಲೀ ಒಳಗಯೇ ಮಲಗು" 

 

“ ಈ ಬೇಸಿಗೆಯಲ್ಲಿ ಮಂಜು ಸುರಿಯುವುದೋ ? ನನಗೆ ಬಹಳ 

ಗೊತ್ತು. - "ಲೋ ಮೇಲೆ ಹಾಕು ಹೋಗು " 


ಮಕ್ಕಳು ದೊಡ್ಡವನಾದಮೇಲೆ ತಂದೆತಾಯಿಗಳ ಮಾತನ್ನು 

ಎಲ್ಲಿ ಕೇಳುವರು ? ಈಗಿನ ಕಾಲದಲ್ಲಿ ಆದೊಂದು ಆಂಗ್ಲೇಯ ಭಾಷೆ 

ಯನ್ನು ಓದಿದುದಾದರೆ ಎಲ್ಲೂ ಇಲ್ಲದ ಅಹಂಭಾವಗಳು, ಸ್ವೇಚ್ಛಾಚಾರ 

ಗಳು, ಎಲ್ಲ ಅನಾಚಾರಗಳೂ ಜೊತೆಯಲ್ಲಿಯೇ ಬರುವುವು. 


"ಲೋ ಗುರುವಾ ನಮ್ಮ ರಜಪ್ಪನನ್ನು ಕರೆದುಕೊಂಡುಬಾ, 

ಹೋಗಿ" 


“ಏನು, ಸ್ವಾಮೀ, ಇಷ್ಟು ಹೊತ್ತಿಗೆ ಮಲಗಿರುವರೋ ಏನೋ" 


"ಹೋಗಿ ನೋಡೋ"


ಗುರುವನು ನೋಡಿಕೊಂಡು ಬಂದು "ಸ್ವಾಮೀ, ****

ಬಾಗಿಲು ತಟ್ಟಿ ತಟ್ಟಿ ಸಾಕಾಯಿತು. ಆ ಮುದುಕನು ಒಂದಕ್ಕೆ ಬಂದು 

ಕೂಗಿ ಸ್ವಾಮೀ, ಚಿಕ್ಕ ಸ್ವಾಮಿಗಳು ರಾಜಪ್ಛನ್ನು ಕರೆದುಕೊಂಡು ಬರಹೇ 

ಳಿದರು ಅಂದೆ. ಬೆಳೆಗ್ಗೆ ಅಷ್ಚು ಹೊತ್ತಾಗೆ ಕಳುಹಿಸುತ್ತೇನೆ ಈಗ 

ನಿದ್ರೆ ಬಂರೈತ, ಆ೦ದ ಸ್ವಾಮೀ" 

 

“ಹೋಗಲಿ ನೀನು ಎಲ್ಲಿ ಮಲಗುತ್ತೀಯೋ?" 


"ಸ್ವಾಮೀ, ನೀರಮನೆ ಬಾಗಲಾಗೆ ಬಿದ್ದುಕೋತೀನಿ, ಸ್ವಾಮಿ! 

೪೪------------------------------------------------------------

ಹಂಡೇಲಿ ನೀರೈತೆ ಹೊತಾರೆ ಒಲೆಗೆ ಉರಿ ಹಾಕಬೇಕು ಸುಬೇದಾರ್ರು  

ಸರ್‌ಕ್ಯೂಟು ಹೊರಡುತಾರೆ ತಾನಕ್ಕೆ ನೀರು ಕಾಯಬೇಡವಾ" 

 

“ಲೋ ಗುರುವ, ತಿಮ್ಮನಿಗೆ ಅಲ್ಲಿ ಮಲಗಿಕೋ ಅಂತ ಹೇಳಿ 

ನೀನೂ ಇಲ್ಲೇ ಬಿದ್ದುಕೋ " 

 

* ಅಪ್ಪಣೇ ಸ್ವಾಮೀ " 


ಚಂದ್ರನು ಗಗನದಲ್ಲಿ ಥಳಥಳಿಸುತ್ತ ನಿಂತಿರುವರು, ಎಲ್ಲಿಯೋ 

ಆಲ್ಲೊಂದು ಇಲ್ಲೊಂದು ನಕ್ಷತ್ರವು ಮಿಟಮಿ.ಟನೆ ಹೊಳೆಯುವುರು. 

ಮೋಡಗಳೆಲ್ಲವೂ ಆಕಾಶವೆಂಬ ರಂಗಸ್ಥಳವನ್ನು ಬಿಟ್ಟು ಎಲ್ಲಿಯೋ ಮಾ 

ಯವಾದವು. ತಣ್ಣಗೆ ಗಾಳಿಯು ಬಿಸುತ್ತ ಗಿಡದೆಲೆಗಳೆಲ್ಲಾ ತೂರುವಾಗ 

" ರೊಯ್‌" ಎನ್ನುತ್ತ ಶಬ್ಬವನ್ನು ಮಾಡುತ್ತಿತ್ತು. ಒಂದೊಂದು ತಡವೆ 

ನಾಯಿಗಳು ಬೊಗಳುವ ಸದ್ದು; ಒಂದೊಂದು ತಡವೆ ಕತ್ತೆಗಳು ಕೂ 

ಗುವ ಅರ್ಭಟ ಇನ್ನೊಂದು ತಡವೆ ಕಾಗೆಗಳ ತಟ್ಟನೆ ಎಚ್ಚತ್ತು ಕ್ರಾ, 

ಕ್ರಾ ಎಂದು ಕೂಗುವುವು. ಮೂರ್ತಿಗೆ ನಿದ್ದೆಯು ಬರಲಿಲ್ಲ. ಅನೇ 

ಕವಾದ ಆಲೋಚನೆಗಳು ತಾನು ಮೊದಲು, ನಾನು ಮೊದಲು ಎಂದು 

ಬರುತ್ತಿದ್ದುವು.  " ಈಗೇನು ಮಾಡಬೇಕು? ಆ ಮುದುಕ ರಾಮಚಂ 

ದ್ರಯ್ಯನನ್ನು ದೂರಮಾಡಬೇಕು. ಪುನಃ ಸಾವಿತ್ರಿಯನ್ನು ನೋಡಬೇಕು, 

ಅಯ್ಯೋ ಎಷ್ಟು ಚೆನ್ನಾಗಿದ್ದಳು. ಈ ಬೆಳದಿಂಗಳಿನಲ್ಲಿ ಅವಳು  ಬಂದು 

ದಾದರೆ! ಇನ್ನೊಂದು ತಡವೆ ಹೇಳುವೆನು. ಹೇಳುವಂಥದು ? ಎಲ್ಲವ 

ನ್ನೂ ಹೇಳಿರುವೆನು. ಆ ರಾಮಚಂದ್ರಯ್ಯನನ್ನು ಕಟ್ಟಿಕೊಳ್ಳ ಬೇಡ, 

ಭೂಸ್ಥಿತಿ ಯಿರುವುದೆಂದು ಬೆರೆಯಬೇಡ. ಒ೦ದುವೇಳೆ ಯಿದ್ದರೂ 

ನಿನಗೆ ಸುಖವಿಲ್ಲ. ಬೇಡ, ಬೇಡ ಎಂದು ಹೇಳಿರುವೆನು. " 


ಹೀಗೆ ಹೇಳಿಕೊಳ್ಳುತ್ತಿದ್ದಹಾಗೆಯೇ ಕಣ್ಣುಗಳು ಮಂಜಾದವು. 

ತೂಕಡಿಕೆಯು ಹತ್ತಿತು. ಆಗಾಗ್ಯೆ ತಟ್ಟನೆದ್ದು- " ಸವಿತ್ರೀ , ಬೇಡ" 

ಎನ್ನುವನು, ಏನನ್ನೋ ನೋಡಿದಂತಾಗುವುದು ಕಣ್ಣುಗಳನ್ನು ಬಿಟ್ಟು 

ನೋಡುವನು. ಪುನಃ ಆದೇ ಚಂದ್ರ -ಅದೇ ನಿರ್ಮಲವಾದ ಆಕಾಶ.

೪೫----------------------------------------------------------------


ಕಡೆಗೆ ನಿದ್ದೆಯೂ ಬಂತು. ಏಳುವುದನ್ನು ಬಿಟ್ಟನು. ಚನ್ನಾಗಿಹೊದ್ದು 

ಕೊಂಡನು. ಆ ಮುಖದಮೇಲೆ ಚಂದ್ರಕಿರಣಗಳು ಹಾಸ್ಯವನ್ನಾಡುತ್ತಿ 

ದ್ದವು.  ಚಂದ್ರುನಿಗೂ ಮನಸ್ಸು ಕರಗಿತು. ವ್ಯಸನದಿಂದ ಪಶ್ಚಿಮಾಂಬುಧಿ 

ಯಲ್ಲಿ ಮುಳುಗಿದನು. ಆಗ ಗಾಳಿಯು ಮೆಲ್ಲಗಾಯಿತು. ಸ್ವಲ್ಪಹೊತ್ತಿಗೆ 

" ಲೋ ತಿಮ್ಮ, ನಮ್ಮ ಹುಡುಗನನ್ನು ಎಬ್ಬಿಸೋ; ಗಾಡಿ ಕಟ್ಟುವಂತೆ 

ದಾಸಪ್ಪನಿಗೆ ಹೇಳು " ಎಂಬ ಸುಬೇದಾರರ ಅಪ್ಪಣೆಯಾಯಿತು. ತಿಮ್ಮನು  

ಎಬ್ಬಿಸಲಿಕ್ಕೆ ಮಹಡಿಯಮೇಲೆ ಬಂದನು ಮೂರ್ತಿಯು, "ಸಾವಿತ್ರೀ, 

ಬೇಡ, ಬೇಡ, ಎನ್ನುತ್ತೆ ಘಾಬರಿಯಿಂದೆದ್ದನು. 

...............

 

೧೦ ನೆಯ ಪರಿಚ್ಛೇದ. 

ಮಿಟ್ಟಿಮರಿ ಬಾಗೇಪಲ್ಲಿಗೆ ೨೦ ಮೈಲಿಗಳ ದೂರವಿರುವುದು. 

ತಾಲ್ಲೂಕು ಜಮಾಬಂದಿಯು ಮಿಟ್ಟೇಮರಿ ತರಫಿನ ಜನಗಳೆಲ್ಲಾ ಮಿಟ್ಟೇ 

ಮರಿಯಲ್ಲಿ ಎಂಬುವ ಸಮಾಚಾರವು ಕೆಲವು ದಿನಗಳಹಿಂದೆಯೇ ತಿಳಿ 

ದಿತ್ತು. ಸುತ್ತಮುತ್ತಲ ಹಳ್ಳಿಗಳಿಂದ ಪಟೇಲರೂ, ಶಾನುಭೋಗರೂ, 

ಲೆಖ್ಖಪತ್ರಗಳನ್ನೆಲ್ಲಾ ತೆಗೆದುಕೊಂಡುಬಂದಿರುವರು. ಸುಖದುಃಖಗಳನ್ನು 

ಹೇಲಿಕೊಳ್ಳಲು ಬಂದಿರುವರು. ಸಾಧಾರಣವಾಗಿ ಜಮಾಬಂದಿಯನ್ನು 

ನೋಡಬೇಕೆಂದು ಕುತೋಹಲದಿಂದಲೇ ಬಂದಿರುವ ರೈತರು ತುಂಬಿರುವರು. 

ಊರ ಮುಂದುಗಡೆಯಲ್ಲಿ ತೋರಣಗಲನ್ನು ಕಟ್ಟಿರುವರು. ಊರಿನಲ್ಲಿನ 

ಮುಖ್ಯಸ್ಥರೂ ಬಂದಿರುವರು. ಸುಬೇದಾರರು ೯ ಘಂಟೆಗೆ ಬರುವ 

ರೆಂದು ಹೇಳಿ ಕಳುಹಿಸಿದ್ದರು. ಇನ್ನೂ ಬರಲಿಲ್ಲಾ ಎಂದು ಮಾತ 

ನಾಡಿಕೊಳ್ಳುವರು. "ಅಗೋ ಗಾಡಿ ಬರುವುದು. ಬಿಳಿಯೆತ್ತು ಕರಿ 

ಯೆತ್ತು. ಮಾಮಲೇದಾರರಗಾಅಡಿ, ಪಟೇಲರನ್ನು ಕರೆಯೋ ಶಾನುಭೋಗ 

ರೇ ಇತ್ತ ಬನ್ನಿ- ನಮ್ಮ ಶೇಕದಾರ್ರು ಗಾಡಿ ಪಕ್ಕದಲ್ಲಿಯೇ ಬರುತ್ತಿದ್ದಾರೆ." 

ಎಂದು ಗಲಭೆ ಹತ್ತಿತು. ರುಮಾಲುಗಳನ್ನು ಸರಿಮಾಡಿಕೊಳ್ಳುವವರು 

೪೬---------------------------------------------------------------

ಕೆಲವರು, ಒಂದಕ್ಕೆ ಹೋಗಿಬರುವನೆಂಸಬುವರು ಕೆಲವರು, ಪಂ 

ಚೆಗಳನ್ನು ಬಿಗಿದು ಕಟ್ಟುವವರು ಕೆಲವರು. ಮೇಲೆ ಹೊದ್ದು ಕೊಳ್ಳುವ 

ವಸ್ತ್ರಗಳನ್ನು ಸರಿಪಡಿಸಿಕೊಳ್ಳುವವರು ಕೆಲವರು. ಈಅವಾಂತರಗಳಲ್ಲಿರು 

ವಾಗೈ "ಲೋ ತಟ್ಟೆಯೆಲ್ಲೋ ಹಿಂದುಳಿದುಹೋಯಿತು ಲೋ ಸಣ್ಣಿಗ, 

ಲೋ ತೋಟಿಗಾ,  ಓಡ್ರೋ, ಎಂದು ಪಟೇಲನು ಕೂಗಿದನು. ಅವರು 

ಓಡಿಹೋಗಿ ಒಂದು ತಟ್ಟೆಯನ್ನೂ ತಂದರು. ಗಾಡಿಯೂ ಬಂತು ಸೇರಿದ್ದ 

ಜನರೆಲ್ಲರೂ ಗಾಡಿಯ ಹಿಂಭಾಗಕ್ಕೆ ಹೋಗಿ "ದಿಂಡ ಬರುತ್ತೆ ಬುದ್ದಿ"  

ಎಂದು ಹೇಳುತ್ತ ಎರಡೆರಡು ನಿಂಬೇಹಣ್ಣುಗಳನ್ನು ಕೊಟ್ಟರು ಒಬ್ಬಾ 

ತನು ತನ್ನ 15 ವರ್ಷದ ಹುಡುಗನೊಬ್ಬನನ್ನು ಮುಂದರಿಸಿಕೊಂಡು ತಟ್ಟೆ 

ಯಲ್ಲಿ ನಾಲ್ಕು ಎಳನೀರು, ಒಂದಷ್ಟು ಕಲ್ಲು ಸಕ್ಕರೆ ಖರ್ಜೂರುಮಿಠಾಯಿಗ  

ಳನ್ನು ತಂದುಕೊಟ್ಟನು. ಶಾನುಭೋಗನು ಕೂಡಲೇ  

"ಈತನು ಭೈರರೆಡ್ಡಿ ಸಾಹುಕಾರ. ೫೦೦ ರೂಪಾಯಿ ಕಂದಾಯ 

ಕಟ್ಟುತ್ತಾನೆ"


"ಕಂದಾಯವೆಲ್ಲಾ ಕಟ್ಟಿರುವೆಯಾ ಭೈರಾರೆಡ್ಡಿ" 


"ಕಂದಾಯವೆಲ್ಲಾ ಕಟ್ಟಿರುವೆಯಾ ಭೈರಾರೆಡ್ಡಿ" 


"ಎಲ್ಲಾ ಕೊಟ್ಟಿದ್ದೇನೆ ಬುದ್ಧಿ, ಸ್ವಲ್ಪ ಬಾಕಿ ಐತೆ"


ಸು- ಏಕೆ ಬಾಕಿ ನಿಲ್ಲಿಸಿಕೊಂಡೆ? 

" ಮನೇಗೆ ಸ್ವಲ್ಪ ಅನಿವಾರ್ಯ ಆಗೋಯಿತು ನಾಳೆ ನಾಡಿದ್ಯಾಗೆ 

ಕೊಟ್ಟು ಬಿಡುತ್ತೇನೆ. ಮಾಫ್‌ ಮಾಡಬೇಕು, ಬುದ್ಧಿ"


ಸು-ಪಟೇಲನೆಲ್ಲಿ? 


ಅಯ್ಯಾ ರಾಮರೆಡ್ಡಿ , ಈಟ್ಲ್ಲರಾವಯ್ಯ ಅಪ್ಪಣವುತುಂದಿ. 


ರಾಮರೆಡ್ಡಿಯು ವಸ್ತ್ರವನ್ನು ಸರಿಮಾಡಿಕೊಂಡು ಕೈಯಲ್ಲಿ 

ಕೊಳವುದನ್ನು ಇಟ್ಟುಕೊಂಡು ಬಂದು "ಬುದ್ಧಿ" ಎಂದನು. 


ಸು-ನಾವು ಉಳಿಯುವುದೆಲ್ಲ ಎಲ್ಲಿ?

"ಬುದ್ಧಿ ಮುಸಾಫರಖಾನೆ ಇದೆ." 


ಸು- "ನೀರು ಒಳ್ಳೆಯದು ಇದೆಯೇ?"

"ಚೆನ್ನಾಗಿದೆ" 

೪೭---------------------------------------------------------

ಇಷ್ಟು ಹೊತ್ತಿಗೆ ಗಾಡಿಯು ಮುಸಾಫರಖಾನೆ ಬಳಿಬಂತು, ಸುಬೇ 

ದಾರರು ಗಾಡಿಯಿಂದಿಳಿದು ಒಳಗೆಲ್ಲಾ ನೋಡಿ "ಸರಿ, ಚನ್ನಾಗಿದೆ, ಹೊರ  

ಗೆ ಹೋಗುವುದೆಲ್ಲಿ " ಎಂದು ಕೇಳಿದರು. 

 

" ಇಲ್ಲಿ ಅಡ್ಡಕ್ಕೆ ಎಲೆಕಟ್ಟಿದೆ ಬುದ್ಧಿ" ಎಂದು ಪಕ್ಕದಲ್ಲಿ ತೋರಿಸಿ 

ದನು. ಅಲ್ಲಿ ಒಂದಂಕಣಕ್ಕೆ ಹೊಂಗೆಯ ಎಲೆಗಳಿಂದಲೂ ವಾಸಗಳಿಮದ  

ಲೂ  ಸ್ಪಲ್ಪಮರೆಮಾಡಿತ್ತು 


ಸು... ಗುಮಾಸ್ತರೆಲ್ಲಾ ಯಾವಾಗ ಬಂದರು? 


"ಸ್ವಾಮೀ, ಹತ್ತು ಗುಂಟೆಗೆ ಬಂದರು, ಎ೦ದು ಶಾನುಭೋ 

ಗರು ಉತ್ತರಕೊಟ್ಟಸು, 


"ಎಲ್ಲಿದ್ದಾರೆ ? "


"ನಮ್ಮಲ್ಲೇ ಉಳಿದಿದ್ದಾರೆ


ಸು-ಅಯ್ಯಾ ಪಟೇಲ್‌ ಹಾಲು ಮೊಸರು ಏನಾದರೂ ಇದೆಯೇನಯ್ಯಾ?  


"ಬುದ್ಧಿ ವಿಶಿಷ್ಟದೈತೆ"


ಸು.."ಸುಬ್ಬಾಚಾರ್ರೆ, ಸ್ವಲ್ಪ ನೀರುಕಾಸಿ, ಕಾಫಿ, ಉಪ್ಪಿಟ್ಟು ಮಾಡಿ,

ನಮ್ಮ ಮೂರ್ತಿಗೆ ಹಸಿವೋ ಏನೋ!"


"ನನಗೆ ಇಷ್ಟು ಬೇಗನೆ ಹಸಿವಾಗುವುದಿಲ್ಲ.


ಶಾನುಭೋಗನು ಕೂಡಲೇ ನಮ್ಮ ಮನೇಲಿ ಸಿದ್ಧವಾಗಿದೆ ಅಲ್ಲಿ 

ಗೆ ದಯಮಾಡಿಸಬೆಕು" ಎಂದನು. 


ಸು- ಸರಿ, ಸರಿ, ಶಾನುಭೊಗರಿಗೆ ಬಿಟ್ಟಿ ಪದಾರ್ಥಗಳು ಬರುತ್ತೇನೋ?


"ಇಲ್ಲ ಸ್ವಾಮಿ" ಎಂದು ಗಕ್ಕಬಕ್ಕನೆ ಶಾನುಭೊಗನು ಮುಖವನ್ನು 

ವಸ್ತ್ರದಿಂದ ಮುಚ್ಚಿಕೊಂಡನು. 


ಸು-ಶೆಕದಾರರನ್ನು ಕರೆಯೋ-ಏನು ಗುಮಡಪ್ಪನವರೇ


"ಸ್ವಾಮಿ"


ಸು-ಜಮಾಬಂದಿಯನ್ನು ಯಾವಾಗ ಪ್ರಾರಂಭ ಮಾಡೋಣ?  

೪೮-------------------------------------------------------


ಎಷ್ಟು ಗ್ರಾಮಗಳ ತನಿಖೆಯಾಗಿರೋ ವಿಚಾರಿಸಿಲ್ಲ. ವಿಚಾ 

ರಿಸಿ ಹೇಳುವೆನು" 


ಸು, ಬೇಗನೋಡಿ ಮೂರ್ತೀ! ಮುಖವನ್ನು ತೊಳೆದುಕೊಳ್ಳುವುದಿಲ್ಲವೇ? 


"ಶಾನುಭೋಗರಮನೆಯಲ್ಲಿ ತೊಳೆದುಕೊಳ್ಳುತ್ತೇನೆ " 


ಮಿಟೇಮರಿಯೆಂಬುವುದು ಒಂದು ಸಣ್ಣ ಗ್ರಾಮ. ೫೦೦ ಮನೆಗಳಿವೆ. ಅವುಗ 

ಳಲ್ಲಿಯೂ ಮಣ್ಣಿನ ಮನೆಗಳೇ ಹೆಚ್ಚು, ಕೆಲವರು: ಹಳ್ಳಿಯ ಹೆಂಚು 

ಗಳನ್ನು ಮನೆಗೆ ಹೊದ್ದಿಸಿರುವರು. ಕೆಲವರು ಸುದ್ಧೆಯ ಮಣ್ಣನ್ನು ಹಾಕಿ 

ಕೊಂಡಿರುವರು. ಮತ್ತೆ ಕೆಲವರು ಹುಲ್ಲಿನ ತಟ್ಟಿಗಳನ್ನುಹೊದ್ದಿಸಿರು  

ವರು ಮಂಗಳೂರು ಹೆಂಚಿನ ಮನೆಗಳು: ಎರಡಿವೆ. ಬೀದಿಗಳೆಲ್ಲವೂ 

ಆ ದಿನ ನಿರ್ಮಲವಾಗಿದ್ದವು. ಸುಬೇದಾರರು ಜಮಾಬಂದಿಗೆ ಬರುವ 

ರೆಂದು ಶೇಕದಾರರು ಖುದ್ದು ಬಾಕುಮಾಡಿಸಿದ್ದರು. ಶಾನುಭೋಗರ  

ಮನೆಯು ಮಠದಗಕ್ಕಗಳ್ಗರುವುದು. ಮನೆಯೇನೋ ಬಹಳ ದೊಡ್ಡದಲ್ಲ; 

ತೊಟ್ಟಿಯಮನೆ. ಮಣ್ಣಿನ ಗೊಡೆಗಳು ಹಳ್ಳಿಯ:ಹೆಂಚುಗಳು, ಪೂರ್ವ 

ಕಾಲದ ಬಾಗಲುಗಳು ಪುರಾತನಪದ್ಧತಿಗನುಸಾರವಾಗಿಯೇ ಕೆಲವು ಬಾಗಿ 

ಲುಗಳು ೪ ಅಡಿಗಳು ಮಾತ್ರವೇ ಇದ್ದುವು. ಮನೆಯನ್ನು ಪ್ವವೇಶಿ 

ಸುತ್ತಲೇ ಅಂಗಳದ ಪಕ್ಕದಲ್ಲಿ ಒಂದು ಕೊಠಡಿ. ಇ ಕೊಠಡಡಿಲ್ಲಿಯೇ 

ಜಮಖಾನವನ್ನು ಹಾಸಿ ದಿಂಬನ್ನು ಒರಗಿಸಿದ್ದರು. ಶಾನುಭೋಗನು 

ಸುಬೇದಾರರನ್ನೂ, ಮೂರ್ತಿಯನ್ನೂ ನೀರಮನೆಗೆ ಕರೆದೊಯ್ದನು. 

ನೀರಮನೆಯ ಗೊಡೆಗಳು ಕಪ್ಪಗೆ ಇದ್ದವು. ಬಾಗಿಲುಗಳೂ ಕಪ್ಪಗಿದ್ದವು. 

ಬಾಗಿಲು ಹಾಕಲು ಅವಕಾಶವಿರಲಿಲ್ಲ. ಬೆಲಕು ಬರಲು ಮೇಲಿನ ಚಿಕ್ಕ 

*********


ಕೈಕಾಲುಗಳನ್ನು ತೊಳೆದ ನಂತರ ಮುಂದಿನ ಕೊಠಡಿಗೆ ಹೋದರು. 

ಬಾಳೆಯ ಎಲೆಯಲ್ಲಿ ಉಪ್ಪಿಟ್ಟು, ಬೆಳ್ಲಿಯ ಪಂಚಪಾತ್ರೆಗಳಲ್ಲಿ, ಕಾಫಿಯೂ 

ಬಂದುವು. ಫಲಹಾರವು ಮುಗಿಯಿತು. ಶೇಕದಾರರು ಬಂದು ಸ್ವಾಮೀ, 

ಮೂವತ್ತು ಗ್ರಾಮಗಳ ತನಿಖೆಯಾಗಿದೆ. ನೀಲಸಂದ್ರದ ಶಾನುಭೋಗ,

೪೯--------------------------------------------------------

ಬರ್ಲುಗುಂಟೆಯ ಪಟೇಲ್‌ ಬರಲಿಲ್ಲ. 'ಇನ್ನೂ ಕೆಲವು ಗ್ರಾಮಗಳು ಬಾಕಿ 

ಯಿವೆ" ಎಂದನು. 


ಸು--ಊಟಮಾಡಿ ಎರಡುಗಂಟಿಗೆ ಜಮಾಬಂದಿಯನ್ನು ಆರಂಭಿಸೋಣ.,

"ಅಪ್ಪಣೆ ಸ್ವಾಮೀ  ಎಂದು ಶೇಕದಾರನು ಹಿಂದಿರುಗಿದನು. 


ಸು- ಅಯ್ಯಾ ಗುಂಡಪ್ಪನವರೇ ಇಲ್ಲಿ ಬನ್ನಿ: 

"ಸ್ವಾಮಿ!"

 

ಸು-ಇಲ್ಲಿ ಹಾರ್ಮೋನಿಯಂ, ಪಿಟೀಲು ಸಿಗುತ್ತೇನಯ್ಯಾ ? 

“ ಭೈರ್‌ರೆಡ್ಡಿ ಮನೆಯಲ್ಲಿ ಹಾರ್ಮೋನಿಯಂ ಇದೆ ಸ್ವಾಮಿ, ಪಿಟೀ

ಲು ಮಾದಯ್ಯ ಊರಲ್ಲಿ ಯಲ್ಲಿ ಇರಿಸಿ ಇದೆ ಸ್ವಾಮಿ, ಪಿಟೀ  

ಲು-ಮಾದಯ್ಯ ಊರಲ್ಲಿ ಇರುವುದೋ ವಿಚಾರಿಸುತ್ತೇನೆ." 


ಸು-ವಿಚಾರಿಸಿ!

"ಅಪ್ಪಣೆ"


ಸು-ಸುಬ್ಬಾಚಾರ್ರೇ ಇವತ್ತು ಏನು ಮಾಡುತ್ತೀರಿ/ 

 "ಸ್ವಾಮೀ ಅಪ್ಪಣೆಯಾದದ್ದು"


 ಸು-ಸಾಮಾನು ಏನು ಇದೆ?

 ಬಾಳೇಕಾಯಿ ಬಂದಿದೆ, ಪಡವಲಕಾಯಿ ಬರುತ್ತೆ. ಹಾಲೂ ಮೊ 

 ಸರುಂಟು.


ಸು- ನಾವು ತಂದಿರುವುದನ್ನು ಖರ್ಚು ಮಾೂಡಿ, ಹಾಲು ಮೊಸರು 

ವಿನಾ ಮಿಕ್ಕ ಪದಾರ್ಥಗಳನ್ನು ತೆಗೆದುಕೊಳ್ಳಬೇಡಿ, ತಂದುಕೊಟ್ಟ 

ರೆ ವಾಪಸು ಮಾಡಿ. 

"ಸ್ವಾಮೀ ! ಜಮಾಬಂದಿ ಕಾಲದಲ್ಲಿ ರೈತರು ಸರಬರಾಯಿ ಮಾ 

ಡುವ ಪದ್ಧತಿಯುಂಟು" ಎಂದು ಪಟೇಲರು ಹೇಳಿದರು.


ಸು-ಚಿಂತೆಯಿಲ್ಲ. ನಮಗೆ ಸರ್ಕಾರದವರು ಭತ್ತೆ ಕೊಡುತತ್ತಾರೆ. ಬಡ 

ರೈತರಬಳಿ ಸುಲಿಗೆ ಮಾಡುವಂತೆ ಹುಕುಂ ಇಲ್ಲ, 


" ಸ್ವಾಮೀ , ತಾವು ಸುಲಿಗೆ ಮಾಡುವುದಲ್ಲ.ನಾವು ಸಂತೋಷದಿಂದ 

ಕೊಡುತ್ತೇವೆ."

೫೦-----------------------------------------------

ಸು- ಅಯ್ಯಾ ಪಟೇಲ್, ಇಲ್ಲಿಗೆ ಜಮಾ೦ದಿಗೆ ಸುತ್ತಲಿನ ಹಳ್ಳಿ 

ಯಿoದ ಬರುವ ರೈತರಿಗೆ ಅನುಕೂಲಪಡಿಸು.


"ಅನುಕೂಲಪಡಿಸಿರುತ್ತೇನೆ."

 

 ಸು-ಸರಿ, ನಮಗೆ ನಿನ್ನ ಪದಾರ್ಥಗಳು ಬಂದಂತೆಯೇ ಆಯಿತು. 

 

(ಪಟೇಲರೂ ಮತ್ತು ಕೆಲವು ಗ್ರಾಮಸ್ಥರೂ ವಾಪಸು ಬಂದರು. )


"ಅಯ್ಯಾ ರಾಮಾರೆಡ್ಡಿ, ಸುಬೇದಾರ್ರುಲು   ಏಮಿ ಅನ್ನಿರಿ?" 


"ಸರಬರಾಯಿ ವದ್ದು ಅನ್ನಿರಿ"


"ಇದೇಮಯ್ಯಾ ಮೊದಟ ಸುಬೇದಾರ್ರುಲು ಏಮಿ ಇಚ್ಚಿನಾ  ತೀ  

ಸ್ತು ವುಂಡಿರಿ. 

 

" ಅದೇನೋ ಇಲ್ಲಿ ಬನ್ನಿ ಶಾನುಭೋಗರೇ, ಸುಬ್ಬಾಚಾರ್ರಿಗೆ 

ಎರಡು ರುಪಾಯಿಗಳನ್ನು ಕೊಟ್ಟು ನಿಮ್ಮ ಮನೆಯಿಂದ ಅದನ್ನು ಮಾತ್ರ 

ಕಳುಹಿಸೋಣ. 


'' ಬೇಷ್, ಹಾಗೆಯೇ:" 


ಸುಬ್ಬುಬಾರರಿಗೆ ಎರಡು ರೂಪಾಯಿಗಳು ಸಿಕ್ಕಿದವು ಸುಬೇದಾರರ 

ಎಲೆಯಲ್ಲಿಯೂ. ಮೂರ್ತಿಯ ಎಲೆಯಲ್ಲಿಯೂ ಎರಡೆರಡು ಚಿರೋಟಿಗಳು 

ಗಳು ಬಂದು ಬಿದ್ದವು. 


ಸು- ಸುಬ್ಬಾಚಾರ್ರೇ, ಇವು ಎಲ್ಲೀದು? 


ಸ್ವಾಮಿ, ಶಾನುಭೋಗನು ಕೊಟ್ಟು ಕಳುಹಿಸಿದ್ದು, 


ಸು-ಅಯ್ಯಾ, ಇದೆಲ್ಲ ಏಕಯ್ಯಾ ತೆಗೆದುಕೊಂಡಿರಿ. 


" ಸ್ವಾಮಿ, ಬೇಡವೆಂದು ಹೇಳಿದೆನು ಬಲವಂತವಾಗಿ ಈ ಕುಕ್ಕೆ 

ಯಲ್ಲಿ ಇಟ್ಟು ಹೋದರು " 


ಯಾವ ಕಾಲದಲ್ಲಿ ಸುಬೇದರರು ಚಿರೋಟನ್ನು ತಿಂದರೆಂದು 

ಸುಬ್ಬಾಚಾರರಿಂದ ವರ್ತಮಾನ ಬಂತೋ ಆಗಲೇ ಪಟೇಲ ಮತ್ತು ಇತ 

ರ ರೈತರಿಗೆ ಬಹಳ ಸಂತೋಷವಾಯಿತು 

ಏನು ಸುಬ್ಬಾಚಾರ್ರೆ, ಎಷ್ಚು ಹಾಕಿದಿರಿ? 

೫೧-------------------------------------------------------------------------


ಎರಡೆರಡು ತಿಂದರು. 


"ಭಲಾ ಸುಬ್ಬಾಚಾರ್ರು ಗಟ್ಟಿಗರು. ಸಾಯಂಕಾಲಕ್ಕೆ ಎರಡು 

ಹಾಕಿ. ಇನ್ನೆರಡ ರೂಪಾಯಿಗಳನ್ನು ಕೊಡುವೆವು. 


“ಅಯ್ಯಾ ರಾಮಾರೆಡ್ಡಿ, ನಮಗೆ  ಜಮಾಬಂದಿ *** ಸುಖ?


"ಆಗಲಿ ಕೊಡುತ್ತೇವೆ ತಿಳಿಯಿತಲ್ಲ"


"  ಈ ಸಾರ್ತಿ ೫ ರೂಪಾಯಿಗಳನ್ನು ಕೊಡಬೆಕು?" 


"ಆಗಲಿ ನೋಡೋಣ" 


೨ ಘಂಟೆಗೆ ಜಮಾಬಂದಿ ಜನರೆಲ್ಲರೂ ಸೇರುತ್ತಿದ್ದಾರೆ. ಗುಮಾ 

ಸ್ತರದ ಮೂಟೆಗಳನ್ನಿಟ್ಟುಕೊಂಡು ಚಾಪೆಯ ಮೇಲೆ ಕುಳಿತಿದ್ದಾರೆ 

ಇನ್ನೂ ಸುಬೇದಾರರು ಬಂದಿಲ್ಲ. ನಿಮಿಷ ನಿಮಿಷಕ್ಕೂ ಎದುರುನೋಡು  .

ತ್ತಿದ್ದಾರೆ. “ಅಗೋ ಬ೦ದರು, " ಎಲ್ಲರೂ ಎದ್ದು ನಿಂತಿರು, ಮಾಮಲೇ 

ದಾರರು ಒಂದು ಸರಿಗೆಯ ಪಂಚೆಯನ್ನು ಉಟ್ಟುಕೊಂಡು ರೇಷ್ಮೆಯ ಅಂಗಿ 

ರುಮಾಲುಗಳನ್ನು ತೊಟ್ಟುಕೊಂಡು, ಕೋಲಾರದ ಜೊಡುಗಳನ್ನು 

ಮೆಟ್ಟಿಕೊಂಡು ಬಂದರು ದಫೇದಾರನು ಬಿಲ್ಲೆಯನ್ನು ಸರಿಪಡಿಸಿಕೊಂಡು 

ವಸ್ತ್ರದಿಂದ ಮೇಜನ್ನು ಒರಿಸಿ, ಕುರ್ಚಿಯನ್ನು ಮುಂದಕ್ಕೆ ಎಳದು, ಪಕ್ಕ 

ದಲ್ಲಿ ಕ್ಕೆ ಕಟ್ಟಿಕೊಂಡು ನಿಂತನು. ಸುಬೇದಾರರು ಕೂತರು. ಸ್ವಲ್ಪ 

ಹೊತ್ತು ಸುಮ್ಮನಿದ್ದು " ದಫೇದಾರ್ , ಯಾರೋ ಬೀಡಿ ಸೇದುತ್ತಾರೆ.

ಹೊರಗೆ ಕಳುಹಿಸು. 


“ಅಪ್ಪಣೆ" ಒಬ್ಬನನ್ನು ಹೊರಗೆ ಕಳುಹಿಸಿದನು. 


ಸು-"ಶೇಕದಾರರೆಲ್ಲಿ"


" ಬುದ್ದಿ ಬಂದರು " 


" ಸ್ವಾಮಿ " 


ಸು- ಶೇಕದಾರರೇ, ನಿಮ್ಮ ಹೋಬಳಿ ಜನಗಳಿಗೆಲ್ಲಾ ಪರಸ್ಪರ ಸಹಾಯ  

ಸಂಘದ (Co operative Society) ವಿಷಯವಾಗಿ ತಿಳಿಸಿದ್ದೀರಾ, 

ಅದಕ್ಕೆ ಷೇರುಗಳನ್ನು ತೆಗೆದುಕೊಂಡಿದ್ದಾರೆಯೆ"

೫೨----------------------------------------------------------------------------- 


“ಸ್ವಾಮೀ, ತಿಳಿಸಿದ್ದೇನೆ, ಇದುವರೆಗೂ ೧೦೦ ಪೇರುಗಳು ಭರ್ತಿ 

ಯಾದವು, ” 


ಸು- ಕೋಲಾರ್ ರೈಲ್ವೆ ಡಿಬನ್ಚೂರ್ ಲೋನ್ ವಿಷಯವಾಗಿ ಏನು

ಮಾಡಿದಿರಿ."


" ಸ್ವಾಮೀ, ಜನಗಳಿಗೆ ನಂಬಿಕೆಯಿಲ್ಲ. ಒಬ್ಬರೂ, ಮುಂದಕ್ಕೆ 

ಬರುವುದಿಲ್ಲ. 


 ಸು-'' ನೀವು ಅವರಿಗೆ ತಿಳಿಸಬೇಕು,

 

"೫ ವರ್ಷಗಳಿಂದಲೂ ಮಳೆಯಿಲ್ಲದೆ ಕಂದಾಯ ಕಟ್ಟುವುದೇ ಕಷ್ಟ 

ವಾಗಿದೆ ಎನ್ನುವರು." 


ಸು -- "ಅಯ್ಯಾ ಸರ್ಕಾರದವರು ಅದನ್ನೆಲ್ಲಾ ಕೇಳುತ್ತಾರೆಯೇ ನೀವು 

ಕೆಲಸಕ್ಕೆ ಲಾಯಖ್‌ ಇಲ್ಲವೆನ್ನುವರು. ಏನಾದರೂ ಮಾಡಿ ಲೋನು 

ಗಳನ್ನು ತೆಗೆದುಕೊಒಳ್ಳುವ ಹಾಗೆ ಮಾಡಬೇಕು. 


"ಅಪ್ಪಣೆ " ಮನಸ್ಸಿನಲ್ಲಿ " ನನ್ನ ಹಣೆಯ ಬರಹ, ಮಾಡು ವುದೇ 

ನು" ಎಂದಂದುಕೊಂಡನು. 


ಸು- ಗ್ರಾಮಾಭಿವೃದ್ಧಿಗಳ ವಿಷಯವಾಗಿ ಸರ್‌ಕ್ಯುಲರ್‌ ಬಂದಿತ್ತು. ನೀವು 

ಆಗಾಗ್ಯೆ ಹಳ್ಳಿಗಳ ಜನರಿಗೆ ತಿಳಿಯುವಂತೆ ಉಪನ್ಯಾಸಗಳನ್ನು 

ಕೊಟ್ಟು ಎಚ್ಚರಿಕೆ ಕೊಡಬೇಕು.


"ಅಪ್ಪಣೆ" 


 ಸು...ಮೊದಲನೇಗ್ರಾಮ, ಯಾವುದನ್ನು ತೆಗೆದುಕೊಳ್ಳೋಣ"


ಹೋಬಳಿಗುಮಾಸ್ತೆ- "ಸ್ವಾಮಿ, ಪಾಕೇಪಲ್ಲಿ"


ಸು.. ಪಾಕೇಪಲ್ಲಿ ಶಾನುಭೋಗರು ಬಂದಿರುವರೋ "


"ಬಂದಿರುವೆನು ಸ್ವಾಮೀ ” ಎಂದು ಅಚ್ಚಪ್ಪನೆಂಬ ಬ್ರಾಹ್ಮಣನು 

ಹೇಳಿದನು, 


ಸು- ಓಹೋ ! ಅಚ್ಚಪ್ಪನವರೆ, "ಗುಮಾಸ್ತೆಯ ಕಡೆಗೆ ತಿರುಗಿ ಇವರ

ಗ್ರಾಮ ಕಡೇ ಬಿಡಿ"  ” ನಿಮಗೆ ಸ್ವಲ್ಪ ಕೆಲಸವದೆ


೫೩------------------------------------------ 


" ಅಪ್ಪಣೆ, ನಾವಿಲ್ಲಿಯೇ ಇರುವೆನು ಸ್ವಾಮಿಗಳ ಅಪ್ಪಣೆ 

ಹೋಗುವದಿಲ್ಲ 


ಸು... ಸಾಯಂಕಾಲಕ್ಕೆ  ... ಹರಿಕಥಾ. ......


ಅಪ್ಪಣೆ ಸಿದ್ಧವಾಗಿದೆ?ನೆ, ನನ್ನ ಗ್ರಾಮದ ಬಾಬತು ಈಗಲೇ

ಅಪ್ಪಣೆಯಾಗಬೇಕು.


ಸು-"ಏನು ಗುಮಾಸ್ತರೇ ಬಹಳ ಹೊತ್ತು ಹಿಡಿಯುವುದೋ"


"ಇಲ್ಲಾ ಸ್ವಾಮೀ"



ಸು-ಹಾಗಾದರೆ ಪಟೇಲನನ್ನು ಕೂಗಿ.


“ ಅಯ್ಯಾ ಪಾಪರೆಡ್ಡಿ,


" ಪಾಪರೆಡ್ಡಿ, ಪಾಪರೆಡ್ಡಿ, ಪಾಪರೆಡ್ಡಿ ” ಎಂದು ದಫೇದಾರನು ಮೂ 

ರುಸಾರ್ತಿ ಘಟ್ಟಿಯಾಗಿ ಕೂಗಿದನು. ಆಗ ನಾಲ್ವತ್ತು ವರ್ಷ ವಯಸ್ಸು

ಳ್ಳ ಒಬ್ಬನು ವಸ್ತ್ರವನ್ನು ಸರಿಪಡಿಸಿಕೊಂಡು ಬಂದು ನಿಂತು ಸುಬೇದಾರರಿಗೆ  ನಮಸ್ಕಾರವನ್ನು ಮಾಡಿದನು. 


ಸು-  ನೀನೇನಯ್ಯಾ ಪಟೇಲ್‌


"ನಾನು ಸ್ವಾಮೀ " 


ಸು- ನಿನ್ನ ಗ್ರಾಮದಲ್ಲಿ  ಎಷ್ಟಯ್ಯಾ ಬಾಕಿ"


"ಸ್ವಾಮೀ, ೫೦೦ ರೂಪಾಯಿಗಳು ಮಾತ್ರವೇ, ನೋಟಸು 

ಜಾರಿ ಮಾಡಿರುತ್ತೇನೆ. ಕೆಲವರು ಆಸಾಮಿಗಳು ಕ೦ಪಿಣೆ ಸೀ 

ಮೆಗೆ ಹೋಗಿದಾರೆ" 


ಸು- ಒಟ್ಟು ವಸೂಲಿ ಎಷ್ಟು?


"ಸ್ವಾಮೀ ೨೦೦೦ ಚಿಲ್ಲರೆ"


ಸು-- ಸರಿಯಾಗಿ ನೋಡಿ ಹೇಳಿ"..


"ಸ್ವಾಮೀ  ೨೨೪೦-೮* 


ಸು...ಏನಯ್ಯಾ ೫೦೦ .ರುಪಾಯಿಗಳನ್ನು ಬಾಕಿ, ನಿಲ್ಲಿಸಿಕೊಂಡಿದ್ದಿಯಾ ,

ಬೇವಾರ್ಸ್ ಕೆಲಸ-ಹೆಡಗುಮಾಸ್ತರೇ, ಒಂದು ನೋಟ್ ಮಾಡಿ 

ಕೊ೦ಡು ಉದಹರಣೆ ತೆಗೆದುಕೊಳ್ಳಿ.


೫೪---------------------------------------------


" ಅಯ್ಯೋ ನನಗೆ ಈ ಪಟೇಲಿಯೇ ಬೇಡವಪ್ಪ ” ಎಂದು ಮನ 

ಸ್ಸಿನಲ್ಲಿಯೇ ಅಂದುಕೊಳ್ಳುತ್ತ “ ಸ್ವಾಮಿ, ಮಾಫಿ ಮಾಡಿಸಬೇಕು. 

ಶೀಘ್ರದಲ್ಲಿಯೇ ವಸೂಲಿ ಮಾಡುತ್ತೇನೆ. 


ಸು-ಕೆರೆ ಕಾಮಗಾರಿಯು ಎಷ್ಟರಮಟ್ಟಿಗೆಯಾಗಿದೆ ?


* ಸ್ವಾಮಿ ಅರ್ಧವಾಗಿದೆ 


ಸು-ಏಕಯ್ಯಾ ಈಗಾಗಲೇ ಮುಗಿದಿರಬೇಕಲ್ಲಾ : 


* ಸ್ವಾಮಿ, ರೈತರು ತಮ್ಮ ಕೆಲಸಗಳಮೇಲೆ ಹೊರಟು ಹೋಗು

ತ್ತಾರೆ. ಕ೦ಟ್ರಾಕ್ಷು ಕೊಡಲಿಕ್ಕೆ ಎಲ್ಲರೂ ಪಾಪರ್‌ ಕುಳಗಳು 


ಸು-ಎಂಥಾ ಪಟೇಲಿ ಮಾಡುತ್ತೀಯಾ, ಕೆಲಸಕ್ಕೆ ರಾಜೀನಾಮೆಯನ್ನು

ಕೊಡು. 


ಹೋ, ಗು. “ ಸ್ಕೂಲ್ ಕಟ್ಟಡದ ವಿಷಯವಾಗಿ ತಾಕೀತು ಕೊಟ್ಟಿತ್ತು, 


"ಸ್ವಾಮಿ ಕೆಲಸವು ಪೂರ್ತಿಯಾಗಿದೆ. 


ಸು-ಶಾನುಭೋಗರೆ ನಿಮ್ಮ ದಪ್ಪರವನ್ನೆಲ್ಲಾ ಅಜಮಾಯಿಷಿ ಮಾಡಿಸಿದ್ದೀರಾ


ಹೋ ಗು. “ ಮಾಡಿರುವನು ಸಾಮಿ ; ಎಲ್ಲಾ ಪಾಸಾಗಿದೆ 



ಸು-ಏನಾದರು ಕಮ್ಮಿ ಬಾಕಿಯುಂಟೋ ?


ಹೋ ಗು. "ಇಲ್ಲ ಸ್ವಾಮೀ 


ಸು... ಅಂಗಡಿ ಕಂದಾಯ ಗಾಡಿ ಕಂದಾಯಗಳು 


* ಇಲ್ಲ ಸ್ವಾಮಿ. 


ಸು-ಇನ್ನು ಮಿಕ್ಕದ್ದು ಆಮೇಲಿರಲಿ, ಬೇರೆ ಗ್ರಾಮಕ್ಕೆ ಹೊರಡಿ. 


ಹೋ. ಗು -ನೀರಗಂಟ್ಟಪಲ್ಲಿ, 


" ನೀರಗಂಟ್ಲಪಲ್ಲಿ  ಪಟೇಲ್, ಶಾನಭೋಗ್ ಎಂದು ಮೂರು

ಸಾರ್ತಿ ದಫೇದಾರನು ಕೂಗಿದನು. ಇಬ್ಬರೂ ಬ೦ದರು. 


ಸು.-ಅಯ್ಯಾ ಪಟೇಲ್, ನಕಾಶಿ ಎಲ್ಲಿ ? 


ಸುಬೇದಾರರು ನಕಾಶಿಯನ್ನು ನೀಡಿ " ಏಕಯ್ಯಾ, ಮೊನ್ನೆ 

ಮೋಜಣಿದಾರರು ಬಂದಾಗ ಹೊಸದು ಬರಸಿಕೊಳ್ಳಲಿಲ್ಲ' ಎಂದು 

ಹೇಳುತ್ತ ಒಂದು ಕೊನೆಯಲ್ಲಿ ತಮ್ಮ ರುಜುವನ್ನು ಮಾಡಿದರು.


೫೫---------------------------


ಸು-ಬಾಕಿ ಎಷ್ಟು ?


"ಸ್ವಾಮೀ  ೩೦೦ ರೂಪಾಯಿಗಳು 


ಸು-ಏಕಯ್ಯಾ ವಸೂಲ್ ಮಾಡಲಿಲ್ಲ ?


ಹೋ, ಗು * ಸ್ವಾಮಿ, ಅದು ಈತನದೇ ಬಾಕಿ ” ( ಆದಿವಸ ಹೋ

ಬಳಿ ಗುಮಾಸ್ತರಿಗೆ  ಈ ಪಟೇಲನಿಂದ ಮರ್ಯಾದೆ ಬಂದಿರಲಿಲ್ಲ 


ಸು. ಸರಿ, ಸರಿ, ಪಟೇಲನೇ ಬಾಕಿ ನಿಲ್ಲಿಸಿ ಕೊಂಡರೆ, ರೈತರು ಹೇಗೆ

ಕೊಟ್ಟಾರು ! ಏಕಯ್ಯಾ ಬಾಕಿ ನಿಲ್ಲಿಸಿಕೊಂಡೆ ? 


" ಸ್ವಾಮಿ ಕೊಂಚ ರೆಮಿಷನ್‌ ಆಗಬೇಕು. ಇನ್ನು ಮಿಕ್ಕಿದ್ದನ್ನು

ಪೋಟಿಗೀಲಿ ತೆಗೆದುಕೊಳ್ಳಬೇಕು. 


ಸು-ಏನಯಾ ಪಟೇಲ್, ನಿನಗೆ ಫೋಟಿಗೆ ಕೊಡುವುದು, ಕಂದಾಯವನ್ನು

ಪೂರ್ತಿಯಾಗಿ ವಸೂಲ್ ಮಾಡುವದಕ್ಕೆ ಕ೦ದಾಯವನ್ನು ಬಾಕಿ 

ನಿಲ್ಲಿಸಿದರೆ, ಪೋಟಿಗೆ ಸಿಗುವದಿಲ್ಲ. ಪೊಟಿಗೆಗೆ ವಜಾ ಆಗುವು 

ದಿಲ್ಲ. ನಾಳೆಯ ದಿವಸವೇ ಹಣ ತಂದು ಕೊಡಬೇಕು.


" ಅಪ್ಪಣೆ 


ಹೋ ಗು ಸ್ವಾಮೀ ಈತನು ಅಪ್ಪಣೆಯಿಲ್ಲದೆ ರಜಾಕ್ಕೆ ಬರೆದುಕೊಳ್ಳದೆ

ಒಂದು ಪಕ್ಷ ಕುಂಪಿಣೀ ಸೀಮೆಗೆ ಹೊರಟುಹೋಗಿದ್ದನು. ಶೇಕ 

ದಾರ್ರು ರಿಪೋಟ್ಟು ಮಾಡಿದ್ದಾರೆ, 


ಸು--ಏಕಯ್ಯ ಪಟೇಲ್‌ ?


ಸ್ವಾಮೀ, ನನ್ನ ಹೆಂಡರು ಜನನವಾಗಿತ್ತು, ಆಗತ್ಯ ಹೋಗಬೇ 

ಕಾಯಿತು. ರಜಾಗೆ ಬರೇಲಿಕ್ಕೆ ಪುರಸತ್ತು ಆಗಲಿಲ್ಲ. 


ಸು-- ಪುರಸತ್ತು ಇಲ್ಲವೋ, ಇನ್ನು ಕಲೆ ಈ ರೀತಿ ಹೊರಟುಹೋದರೆ

***ಡಿಗೆ ಶಿಖರಸು ಮಾಡಲಾದೀತು. ಇವನಿಗೆ ಒಂದು ರೂಪಾಯಿ  

ಜುಲ್ಮಾನೆ ವಿಧಿಸಿದೆ. ನೋಟ್ ಮಾಡಿಕೊಳ್ಳಿ.


ಜೂಲುಪಾಳ್ಯ

...  ಜೂಲುಪಾಳ್ಯದ ಪಟೇಲು ಶಾನುಭೋಗರು ಬಂದು ನಿಂತರು 

ಇಷ್ಟರಲ್ಲಿಯೇ ಹೊರಗಡ ಗಡಬಿಡಿ ಯಾಗುತ್ತಿತ್ತು. ಏನೋ 

ನೋಡು ದಫೇದಾರ್ ಎಂದು ಅಪ್ಪಣೆಯಾಯಿತು,



-----------------------

ದಫೇದಾರನು ಹೋಗಿ ಯಾರಿಬ್ಬರನ್ನೊ ತಳ್ಳುತ್ತಿದ್ದನು. ಹೆಂಗಸು 

ಮತ್ತು ಗಂಡಸು. ಅವರು ಬಲವಂತವಾಗಿ ಮುಂದಕ್ಕೆ ಬರುತ್ತಿದ್ದರು, 

ಸುಬೇದಾರ ತಾವಬಿಡಿ ಎಂದು ಕೂಗುತ್ತಿದ್ದರು. ಇದನ್ನೆಲ್ಲ ಮಾಮಲೇ  

ದಾರರು ನೋಡಿ, ದಫೇದಾರ್‌ ಅವರನ್ನು ಇಲ್ಲಿ ಕರದುಕೊಂಡು ಬಾ! 

ಎಂದರು. (ಅವರಿಬ್ಬರೂ ಬಂದರು) 


ಸು- ಏನು ನಿಮ್ಮ ವಿಚಾರ? ಏಕೆ ಗಲಾಟೆ ಮಾಡುತಿ ದ್ರಿರಿ? 


ಸೋಮಿ, ನನ್ನೊಂದರಿಕೆ ಐತಿ, ಎಂದು ಗಂಡಸು ಹೇಳಿದನು 


ಸು- ಏನು 

 

ಸೋಮಿ, ನನ್ನೆಂಡರು ಈಗೆ ಎಂಟರ್ಷ‌ದಂಗೆ ಒಬ್ಬೊನ್ತೆಕ್ಕೊಂಡು 

ಒಂಟೆೊದಳು, ಮೊನ್ನೆ ತಿಂಗಳಾಗಿ ಪುನ ಅಂದಳು. ನಾವು 

ಸಂಸಾರ ಮಾಡಿಕೊಂಡಿದ್ವಿ. ಆಗಾಗ್ಗೆ ಯವಾರ ಆಡೋಳು 

ಮನ್ನೆ ಶುಕ್ರಾರ ಇರಬೋದು ಇಟ್ಟೊತ್ತಾಗೆ ತೂರ್ಯ ಅ 

ಗೋ ಅಲ್ಲಿ ದ್ಧ ಒಬ್ಬ ಗುಲಾಮ ನನ್ನ ಮೊಗನು ಪುಸಲಾಯಿಸಿ ವೊ 

ಡಕೊಂಡೋದ ಅವಳ ನನಗೆ ಕೊಡ್ಸಿ, ಆ ಮೊಗನಿಗೆ ಜೈಲಿಗೆ 

ಹಾಕಬೆೊಕು ಬುದ್ಧೀ. 


ಇದನ್ನು ಕೇಳುತ್ತ ಲೂ ಎಲ್ಲರಿಗೂ ನಗು ಬಂತು.

 

ಸು-ಆಗಲಿ ನಿನಗೆ ಕೆೊಡಿಸಿಕೊಡುತ್ತೈವೆ. ಇನ್ನೇನಾದರೂ ಉಂಟೊ ?

 

"ಉಂಟು ಬುದ್ಧಿ, ಮೊನ್ನೆನಾಗೆ ಕಾನುಭೋಗರು ಗಾಡಿ ಕಂದಾಯ 

ಕೊಡು ಅಂತ ತಕ್ಕೊಂಡರು ಬುದ್ಧಿಃ ನನ್ನತಾವ ಗಾಡಿ ಐತೆ. 

ಎತ್ತಿಲ್ಲ  ಎತ್ಮು ವಸರಿಬಿಟ್ಟಿವಿನಿ, ಮಾರಿಒಂದರ್ಷ ಆಗೋಯ್ತು

ಹಣ ತಳ್ಕೊಂಡವರೆ " 

 

ಸು--ಏನಯ್ಯಾ ಶಾನುಭೋಗ್‌ ? 


ಸ್ವಾಮಿ ಸುಳ್ಳು, 


ಸು-ಏನೋ ಸುಳ್ಳು ಹೇಳುತ್ತೀಯಾ, ನಿನ್ನ ಹೆಸರೇನೋ? 

"ಬುದ್ದೀ ನನ್ನೆಸರು ಚೌಡಿಗ ನಾನು ಸುಳ್ಳು ಹೇಳ್ಲಾ ಏನುಬು  

ದ್ಧೀ ತಮ್ಮ ಪಾದದಾಣಿ ತಕ್ಕೊಂಡ್ರು ಬುದ್ಧೀ-ಯಾವ ಹೊಲೆ 

ಮಾದಿಗ ನಿಮ್ಮೊಗನು ಬುದಧೀ ಸುಳು ಹೇಳೋದು

೫೭------------------------------------------------------------

ಸುಬೇದಾರನು .ನಗುತ್ತ “ ಸರಿ, ವಿಚಾರಿಸುತ್ತೇವೆ. ನೀನು ಹೊರಗಿರು " 

ಹೆಂಗಸಿನ ಕಡೆಗೆ ತಿರುಗಿಕೊಂಡು “ ನಿನ್ನದೇ'ನು ” ಎಂದರು. 


"ಬುದ್ಧೀ--ನಾನೆರಡು ವರ್ಷದಿಂದಲೂ  ಒಬ್ಬನಿಗೆ ಮಡಕೊಂಡಿದ್ದೆ  

ಮೊನ್ನೆ ಸೋಮವಾರರಂಗೆಯವಾರ ಅಡಿ ಬೇರೊಬ್ಬನ್ಗೆ ನೋಡಿ 

ಕೊಂಡೆ. ಮೊದಲವನು ಒಂದು ಮನೆ ಬಾಕಿಲಾಗೆ ಕಾಟಾಕೊಡು 

ತಾನೆ ಬುದ್ದಿ, ತಪ್ಪಿಸಬೇಕು " 


ಸುಬೇದಾರರು ನಗುತ್ತ " ಒಳ್ಳಕೇಸುಗಳು ಬರುತ್ತಲ್ಲ ಎನ್ನುತ್ತ 

“ಇಗೋ ನೀನು ಮೊದಲವನಗಿಂತ ದಿಮ್ಮಗಿರುವನನ್ನು ಇಟ್ಟಕೊ 

ನಿನಗೆ ಕಾಟತಪ್ಪುತ್ತೆ" ಎಂದು ಹೇಳಿದರು. ಅವಳಿಗೆ ಸಂತೋಷವಾಗಿ 

“ಸೈ ಬುದ್ದಿ ” ಎಂದು ಹೊರಟು ಹೋದಳು. 


ಸು-" ಅಯ್ಯಾ ಪಟೇಲ್, ತಕರಾರು ಕುಳಗಳು ನಿಮ್ಮಗ್ರಾಮದಲ್ಲಿ ಎಷ್ಟಿವೆ" 


"ಸ್ವಾಮಿ ಹನ್ನೆರಡಿವೆ " 


" ಆವರನ್ನು ಕರೆ ತಂದಿದ್ದಿಯಾ , 


"ಸ್ವಾಮಿ. ನಾಲ್ಕು ಜನರು ಬಂದಿದವರು " 


ಸು. ಅವರನ್ನು ಕರಿ.

 

ನಾಲ್ಕು ಜನರು ಬಂದು ನಿಂತರು. 


ಸು- ಏಕರಯ್ಯಾ ಬಾಕಿ ಫೈಸಲ್‌ ಮಾಡಿಲ್ಲ. 


೧ನೇ-ಸ್ವಾಮಿ, ಕೆರೆಗೆ ನೀರು ಒಂದು ನಾಕೊರ್ಷ ಆಗೋಯ್ತು. 

ಗದ್ದೆಗಳಲ್ಲಾ ಬಂಜರಾಯಿತು. ಹೆಂಗಸರಮ್ಯಾಲಿನ, ನಗಮಾರಿ ಕಂದಾಯ 

ಕಟ್ಟುತ್ತೇವೆ.


ಸು-ನೀವು ನಗಮಾರಿ ಕಟ್ಟುತ್ತೀರೋ ಮಕ್ಕಳನ್ನು ಮಾರಿ ಕಟ್ಟು 

ತ್ತೀರೋ ಸರ್ಕಾರಕ್ಕೆ ಅಗತ್ಯವಿಲ್ಲ. 


೨ನೇ-ಸ್ವಾಮಿ, ರೆಮಿಷನ್‌ಗೆ ಅಪ್ಪಣೆಯಾಗಬೇಕು. 


ಸು-ಶಾನುಭೋಗರೆ, ಇದು ಯಾವ ವರ್ಷಗಳ ಬಾಕಿ 


ಒಂಭೈನೂರರಒಂದು; ಎರಡರದು. 

೫೮-----------------------------------------------------------------


ಸು-ಅದೇಕಯ್ಯಾ ಇಷ್ಟು ವರುಷಗಳಿಂದಲೂ ರೆಮಿಷನ್‌ ಆಗಲಿಲ್ಲ 


೩ನೇ  ಸ್ವಾಮೀ, ಹಿಂದಿನ ಸುಬೇದಾರ್ರು ಬರೆದು ಹಾಕಿದರು.

ಜವಾಬೇ ಬರಲಿಲ್ಲ. 


ಹೋ.ಗು-" ಸ್ವಾಮಿ, ಕೆಲವುದಿವಸಗಳ ಹಿಂದೆ ಬರೆದಿರುತ್ತವೆ. ತಮ್ಮ 

ಕಾಲದಲ್ಲೇ ಬರದಂತೆ ಜ್ಞಾಪಕವಿದೆ. 


ಸು- ಅಹುದು, ಸಾಹೇಬರಿಗೆ ಬರೆದಿರುತ್ತೇವೆ. ಗುಮಾಸ್ತರೆ, ಈ ನಾಲ್ಕು 

ಜನಗಳ ವಿಷಯವಾಗಿ ಬರೆದುಕೊಳ್ಳಿ. ರೆಮಿಷನ್‌ ವಿಷಯವಾಗಿ 

ಪುನಃ ಬರೆಯೋಣ.


ದಫೆದಾರನು  “ ಬುದ್ದಿ, ಟಪಾಲು ಬಂತು. " ಎಂದನು 


ಸುಬೇದಾರರು ಟಪಾಲನ್ನು ತಗೆದುಕೊಂಡು ಡಿಸ್ಟ್ರಿಕ್ಟಂದು ಮೊ 

ದಲು ಒಡೆದರು. ಯಾವಾಗಲೂ, ಮೊದಲು ನೊಡುವ 

ಪದ್ಧತಿಯುಂಟು, ಒಂದು ಕಾಗದವು ಈರೀತಿಯಲ್ಲಿತ್ತು 


ಬಾಗೇಪಲ್ಲಿ ತಾಲ್ಲೂಕು ಅಮೀಲರಿಗೆ ಹುಕುಂ 

ನಿಮ್ಮ ತಾಲ್ಲೂಕು ಜೂಲುಪಾಳ್ಯದ ರೈತರ ರೆಮಿಷನ್‌ ವಿಚಾರವಾಗಿ  

ರೆವಿನ್ಯೂಕಮಿಷನ್‌ರವರಿಂದ ೭ನೇ ತಾರೀಖು ಹುಟ್ಟಿರುವ ಹುಕು೦ ಅನುಸ 

ರಿಸಿ ತಿಳಿಸುವದೇನಂದರೆ:-ಜೂಲುಪಾಳ್ಯದ ಕೆರೆ ಕಾಮಗಾರಿಯು ಅಲ್ಲಿನ  

ರೈತಾಪಿ ಜನಗಳಿ೦ರ ಮುಗಿಸಿದರೆ, ರೆಮಿಷನ್‌ ಕೊಡಲದೀತು ಇಲ್ಲವಾ  

ದರೆ ಅದಕ್ಕೆ ಮುಟ್ಟುವ ಹಣದಲ್ಲಿ ಆರ್ಧವನ್ನು ಕೊಟ್ಟರೆ, ಮಿಕ್ಕ ಅರ್ಧ 

ವನ್ನು ಸರ್ಕಾರದವರೇ ಕೊಟ್ಟು ಕೆಲಸವನ್ನು ಮಾಡಿಸುವರು, ಇದನ್ನು 

ಓದಿಕೊಂಡು “ ಆಯ್ಯಾ ನಿಮ್ಮ ರೆಮಿಷನ್‌ ವಿಚಾರವಾಗಿ ಹುಕು೦ ಬ೦ದಿದೆ, 

ಗುಮಾಸ್ತರೆ ಇವರಿಗೆ ಓದಿಹೇಳಿ !-ಓದಿರುದನ್ನು ಕೇಳಿ, ಅವರಲ್ಲಿ ಒಬ್ಬ 

ನು, “ ಸ್ವಾಮಿ ಕಾಮಗಾರಿ ಖರ್ಚಿನ ಹಣವನ್ನು ಕೊಡಬಹುದಾದಲ್ಲಿ 

ನಮ್ಮ ಕಂದಾಯವನ್ನೇ ಕೊಡಬಹುದಲ್ಲ" " ಎನಲು ಆದೇನೋ ಮೇಲಕ್ಕೆ 

ಬರೆದುಕೊಳ್ಳಿ. ” ಎಂದು ಅಪ್ಪಣೆಯಾಯಿತು. ಇನ್ನೊಬ್ಬನು, ಸ್ವಾಮೀ, 

ನವಿಗೆ ಜಮೀು ಬೇಡ, ರಾಜೀನಾಮೆ ಕೊಡುತ್ತೇವೆ. 

೫೯----------------------------------------------------------------

ಸು- ಕಂದಾಯದ ಬಾಕಿಯನ್ನು ಕಟ್ಟುಬಿಡಿ, ಇಲ್ಲವಾದರೆ ನಿಮ್ಮ 

ಸ್ವತ್ತನ್ನು ಜಪ್ತಿ ಮಾಡಲು ಸರ್ಕಾರದವರು ಹುಕುಂ ಮಾಡುವರು'' 


ಸು-ಗುಮಾಸ್ತರೇ ಕಮ್ಮಿ ಜಾಸ್ತಿ ಇದ್ದರೆ ಹೇಳಿ 


ಗು-ಏನೂ ಇಲ್ಲ. 


ಸುಬೇದಾರರು “ ಸರಿ ಮುಂದಿನ ಗ್ರಾಮಗಳನ್ನು ನಾಳೆ ನೋ  

ಡೋಣ., ಈಗ ೬ ಗಂಟೆಯಾಗಿ ಹೋಯಿತು ” ಎಂದು ಹೇಳಿ ಎದ್ದರು.  

ಮರುದಿನ ಬೆಳಿಗ್ಗೆ ೬ ಗಂಟೆಯಿಂದ ಜಮಬಂದಿಗೆ ಷುರುವಾಯಿತು.   

ಮದ್ಯಾಹ್ನ ಊಟಕ್ಕೇಳುವ ಹೊತ್ತಿಗೆ ಮುಕ್ಕಾಲುಪಾಲು ಗ್ರಾಮಗಳು 

ಆಗಿ ಹೋಗಿದ್ದವು. ಸುಬೇದಾರರು ಶೇಕದಾರರನ್ನು ಕರೆದು “ ಇನ್ನೆಷ್ಟು 

ಉಳಿದಿವೆ ? " ಎಂದು ಕೇಳಿದರು. 


ಸ್ವಾಮೀ ಇನ್ನು ೬ ಗ್ರಾಮಗಳವೆ. 


ಸು-ಪಟೇಲ್‌ ಶಾನುಭೋಗರು ಬಂದಿರುವರೋ ? 

 

“ಕೆಲವರು ಬಂದಿಲ್ಲ.” 


ಸು- ಅವರಿಗೆಲ್ಲಾ “ಪಾಲ್‌ಚೆರವು " ಮೊಕ್ಕಾಂಗೆ ಬರುವಂತ ಬರೆಯಿರಿ, 


“ ಅಪ್ಪಣೆ " 


ಯಾವಾಗ ಸಾಯಂಕಾಲ ಬಾಗೇಪಲ್ಲಿಗೆ ಹೊರಟು ಹೋಗಬೇಕೆಂ 

ದು ತಂದೆಯ ಬಾಯಿನಿಂದ ಮಾತುಗಳು, ಹೊರಟವೊ ಆಗಲೇ ಮೂರ್ತಿಗೆ  

ಬಹಳ ಸಂತೋಷವಾಯಿತು. “ ಸಾವಿತ್ರಿ ? ಓ ಸಾವಿತ್ರಿ 1 ನಿನ್ನನ್ನು 

ನೋಡುವೆನು, " ಎಂದೆಂದುಕೊಂಡನು ಸಾಮಾನುಗಳನ್ನೆಲ್ಲಾ ಪೆಟ್ಟಿಗೆಯಲ್ಲಿ 

ಹಾಕಿ ಸಾಯ೦೫೪ ೪||. ಘಂಟೆಗೆ ಹೊರಟು ೮ ಘಂಟೆಗೆ ಬಾಗೇಪಲ್ಲಿ ಸನ್ನು ಸೇರಿದರು. 

******

೧೧ ನೆಯ ಪರಿಚ್ಛ'ದ. 

ಯಾವದಿನ ಮೂರ್ತಿಯು ತನ್ನನ್ನು ಮಾತನಾಡಿಸಿದನೋ ಅಂದಿನಿಂದ 

ಸಾವಿತ್ರಿಯ ಚರ್ಯೆಗಳಲ್ಲಿ ವ್ಯತ್ಯಾಸವುಂಟಾಯಿತು. ಬಹಳ ದುಃಖ 

೬೦---------------------------------------------------------------------

ಪಟ್ಟಳು. ಏತಕ್ಕಾಗಿ? ತನ್ನನ್ನು ಮೂರ್ತಿಯು ಪ್ರೀತಿಸುವನೆಂದು ತಿಳಿ 

ದಳೋ,  ಆವನೊಡನೆ ಸರಸಸಲ್ಲಾಪಗಳನ್ನು ಮಾಡಬಹುದೆಂದು ಬಗೆದಳೋ, 

ಇಲ್ಲ ; ಖಂಡಿತವಾಗಿಯೂ ಇಲ್ಲ. ತನ್ನಲ್ಲಿ ತಾನೇ ಏನನ್ನೋ ಹೇಳಿಕೊಳ್ಳು 

ವಳು. ಯಾರೊಡನೆಯ ಮಾತಿಲ್ಲ. “ ನಾನು ಆ ಮೂರ್ತಿಯನ್ನು 

 ಹೊಂದಲು ಸಾಧ್ಯವಿಲ್ಲ, ಅಯ್ಯೋ ! ನನ್ನ ೭:ಡನಾಡಿಗಳೆಲ್ಲರಿಗಿಂತ 

ಚೆನ್ನಾಗಿ ಬಳಬೇಕೆಂದಿದ್ದೆನಲ್ಲಾ! ಬಡವನಾದರೂ ಯಾವಾತನು ಯೌವ

ನಸ್ಥನಾಗಿ ತನ್ನನ್ನು ನಂಬಿದವಳೆಂದು ಬಗೆದು, ಮನಃಪೂರ್ವಕವಾಗಿ ಪ್ರೀತಿ  

ಸುವನೋ ಅಂತಹವನು ನನ್ನಫಾಲಿಗೆ ದೇವರಲ್ಲದೆ ಮತ್ತೇನು ? ಇವರಿಗೆ 

ಲ್ಲಾ ವಯಸ್ಸಾಗಿ ಆಗಲೇ ಸಂಸಾರ ಸುಖಗಳನ್ನು ಅನುಭವಿಸಿ ನಮ್ಮ  

ಮನಸ್ಸಿನ ವ್ಯಾಪಾರಗಳನ್ನು ತಿಳಿದುಕೊಳ್ಳಲು ಸಾಮರ್ಥ್ಯವಿಲ್ಲದೆ ನಮಗೆ  

ಅತಿಯಗಿ ಕ್ಲೇಶವನ್ನುಂಯವರು. ನಮಿಗಿರುವ ಉತ್ಸಾಹ ಅದರೆ 

ಅಭಿಲಾಷೆಗಳನ್ನು ಈವಯಸ್ಸು ಮೀರಿರುವರಲ್ಲಂತು ವ್ಯಕ್ತಪಡಿಸುವರು ? 

ವ್ಯಕ್ತಪಡಿಸಿದರೂ ಆದಕ್ಕನುಸಾರವಾಗಿ ತಾವಿರುದಂದರೆ ನಮಗೆ ಯೌವ 

ನಸ್ಥರಾದರೇನು ? ಅಲ್ಲವಾದರೇನು ? ಇವರಿಗೆ ಶೃಂಗರ ಹಾವಭಾವವಿಲಾ 

ಸಗಳು ಬೇಕಾಗಿರುವುದಿಲ್ಲ, ನಮಗಾದರೋ ಯಾವಾಗಲೂ ಪತಿಸಾನ್ನಿ 

ಧ್ಯದಲ್ಲಿಯೇ ಇರಬೇಕೆಂದು ಮನಸ್ಸು ಹೋಗುವದು. ಯಾರ ಸುತಿಯು 

ಯಾವಾಗ ಪತಿ ಬರುವನೋ ಎಂದು ಎದುರುನೋಡುತ್ತಿರುವ ಯಾವ 

ಪತಿಯು ತಾನು ಮನೆಯನ್ನು ಸೇರುತ್ತಲೂ ಮೊದಲು ಸತಿಯನ್ನೀಕ್ಷಿಸಲು 

ಆತುರಪಡುವನೋ ಅಂಥವರಿಬ್ಬರೂ ಸೇರಿದರಲ್ಲದೇ ಈ ಇಹದಲ್ಲಿ ಸುಖ 

ವುಂಟು. ಹಾಗಿಲ್ಲದೆ ಮನಸ್ಸಿನಲ್ಲಿಯೇ ಕೊರಗುತ್ತ ಪತಿಯು ಬಂದರೂ 

ಉತ್ಸಾಹವಿಲ್ಲದೆ ಇಬ್ಬರ ಮನಸ್ಸುಗಳೂ ಒಂದಾಗಿರುವಲ್ಲಿ ಸಂಸಾರಸುಖ  

ವನ್ನೆಂತುಪಡೆಯುವುದು, ಎಂದುಹೇಳುತ್ತ ಕಣ್ಣೀರನ್ನೊರಸಿಕೊಳ್ಳುವಳು. " 


ಈ ದಿವಸ ಹುಣ್ಣಿಮಯ ಚಂದ್ರನು ಮೂಡಲೊಳಗೆ ಮೂಡುತ್ತಿ 

ರುವನು. ತಡೆದು ತಡೆದು ಬರಲೋ ಬೇಡವೋ ಎಂದು ಯೋಚಿಸುತ್ತಿ 

ದ್ದ ಹಾಗೆ ಏರುತ್ತಿದ್ದನು. ಮೊದಲು ಮೊದಲು ನವಜಪಾಪ್ರಸೂನಾಭ 

೬೧------------------------------------------------------------------------

ದಂತಾದನು. ಕೆಲವು ಹೊತ್ತಿಗೆ ಕನಕಕುಂಭನಂತಾದನು. ಮತ್ತೆ ಬಿಸ 

ಕಾಂಡದಂತಹಕಾಂತಿಯನ್ನು ಹೊಂದಿದನು. ಸುಧಾರೋಜೆಯಿಂದ ಸಕಲ 

ದಂಪತಿಕುಲಗಳಿಗೂ ಸುಖವನ್ನುಂಟುಮಾಡುವನು. ಎಲ್ಲಿಲ್ಲಿಯೂ ಹಾಲು 

ಚಲ್ಲಿದಂತೆ ಬೆಳದಿಂಗಳು ರಂಜಿಸುತಿತ್ತು. 

 

ಆಗ ಸಾವಿತ್ರಿಯು ಕೆಲಸಗಳನ್ನೆಲ್ಲಾ ತೀರಿಸಿಕೊಂಡು ಬೆಳದಿ೦ 

ಗಳು ಸ್ವಲ್ಪಸ್ವಲ್ಪ ಒಳಕ್ಕೆ ಬರುತ್ತಿರುವದನ್ನು ನೋಡುತ್ತ ನಿಂತಿದ್ದಳು, 

ಕೊನೇರಯ್ಯನು ತನ್ನ ಕೊಠಡಿಯಿಂದ ಹೊರಗೆ ಬಂದು ಸಾವಿ 

ವುಂಟು ತ್ರಿಯನ್ನು ನೋಡಿ "ನಿನಗೆ ಒಂದು ಕಾಗದವುಂಟು ನೆನ್ನೆಯ ದಿವ 

ಸವೇ ಕೊಡಬೇಕೆಂದಿದ್ದೆನು ಮರೆತುಹೋಯಿತು ಈಗಬೇಕೋ" 

ಎಂದನು, ಸಾವಿತ್ರಿಯು ಶರೀರದಲ್ಲಿ ನಡುಕವುಂಟಾಯಿತು " ನನಗೆ 

ಎಲ್ಲಿಂದ ಕಾಗದ ಬರಬೇಕು" ಎನಲು ನಿನ್ನ ಚಕ್ಕಿಪ್ಪನು ಬರೆದಿರು 

ವನು, ಎಂದನು, 


ಬರೆಯಲು ಕಾರಣವಿಲ್ಲವಲ್ಲ ಎಂದು ಸಾವಿತ್ರಿ ಹೇಳಲು-- 

ಕಾರಣವಿಲ್ಲವೇ ? ಇಲ್ಲವೆ? ಎಂದು ಮೂರುಬಾರಿ ಕೇಳಿದನು. 

ನಿಜವಾಗಿಯೂ ಇಲ್ಲ ಎಂದು ಉತ್ತರ ಬರಲು ಕೊನೇರಯ್ಯನು 

ಹಾಗಾದರೆ ನೀನು ಬರೆದಕಾಗದಕ್ಕೆ ಬದಲು ಹೇಗೆಬಂತು? ಎಂರನು. 

ನಾನು ಬರೆದ ಕಾಗದವು ಚಿಕ್ಕಪ್ಪನಿಗೆ ಸೇರಲೇ್ ಇಲ್ಲ. 

ಅದು ನಿನ್ನ ಬಳಿಯಲ್ಲಿಯೇ ಇರು.ವುದು ಎಂದು ಸಾವಿತ್ರಿ ಹೇಳು 

ತ್ತಲೂ ಕೋನೇರಯ್ಯನು ನನ್ನಲ್ಲಿ ಇಲ್ಲವೆಂದು ಹೇಳಲು ನಿನ್ನಲ್ಲಿಯೇ  

ಇದೆಯೆಂದು ಪ್ರತ್ಯುತ್ತರ ಬಂದಿತು. 


ಕೊ-ನಿನಗೆಷ್ಟು ಬಾಯಿ ? ನನ್ನೊಡನೆ ವಾದಿಸುವೆಯಾ ? .


ಸಾ-ನಿಜವನ್ನು ಹೇಳದವರ ನಾಲಿಗೆಯನ್ನು ಕೊಯ್ಯಬೇಕಲ್ಲವೇ ? 


ಕೊ- ಛೀ! ಪಾಪಿ ನಿನಗಾಗಿ ಊರುಗಳನ್ನೆಲ್ಲಾ ಸುತ್ತಿದುದಕ್ಕೆ ತಕ್ಕ 

ಉಪಕಾರವನ್ನೇ ಮಾಡುವೆ. 


ಸಾ- ಈಗ ನಿನಗೆ ಅಪಕಾರವನ್ನೆಣಿಸಲಿಲ್ಲ. ಚಿಕ್ಕಪ್ಪನಿಗೆ ಮದುವೆಯ  

ಸಮಾಚಾರವು ಏಕೆ ತಿಳಿಯ ಬಾರದು ? 


ಕೋ-ತಿಳಿದರೆ ಅವನು ಒಪ್ಪುವದಿಲ್ಲ 

೬೨-------------------------------------------------------------------

ಸು-ಚಿಕ್ಕಪ್ಪನೂ ನಾನೂ ಒಪ್ಪದಂತ ಮದುವೆ ಏಕಾಗಬೇಕು? 

ಕೋನೇರಯ್ಯನು ಆಗ ಕೋಪದಿಂದ ಪ್ರಯೋಜನವಿಲ್ಲ 

ಎಂದು ಯೋಚಿಸಿ 


ಕೋ- ಸಾವಿತ್ರೀ ನಾನು ನಿನಗೆ ಅಣ್ನನಲ್ಲವೇ? 


ಸಾ-ತಂಗಿಯ ಹಿತವನ್ನು ಅಣ್ಣನು ಬಯಸಬೆಕಲ್ಲವೇ?

ಈಗ ನಿನಗಾಗಿಯೇ ರಾಮಚಂದ್ರಯ್ಯನನ್ನು ಕರೆತಂದನಲ್ಲ. ಅವನು  

ನಿನಗೆ ಸಕಲಾಭರಣಳನ್ನು ಇಡುವನು,  ನೀನು ಮನೆಯಲ್ಲಿ ಯಜಮಾನಿ 

ಯಾಗುವೆ ಅತ್ತೆ ಮಾವಂದಿರ ಕಾಟವೂ ಇಲ್ಲ. ಇರುವ ಗಂಡನಿಗೆ 

ಸ್ವಲ್ಪ ಆದರವನ್ನು ತೋರಿಸಿಕೊಂಡಿದ್ದರೆ ನೀನು ಸುಖಿಯಾಗಿರುವಿ. 


ಸಾ-ಅಣ್ಣ ಈನು ಹೇಳುವ ಮಾತುಗಳನ್ನು ನಾನು ಒಪ್ಪಲಾರೆನು. ಈಗ 

ನನ್ನ ಜೊತಯವರನ್ನ ನೋಡು, ಎಲ್ಲರೂ ಹೇಗೆ ಬಾಳುತ್ತಿರುವರು 

ಅವರಿಗಿ೦ತಲೂ ಮೇಲಾಗಿ ಬದುಬೇಕೆಂದಿದ್ದೇನಲ್ಲ, ಎಂದು ಹೇಳಿ 

ಕಣ್ಣಿರು ಸುರಿಸುತ್ತಾ ಈತನನ್ನು ಮದುವೆಯಾದುದಾದರೆ, ನಾನು 

ಎಷ್ಟರಮಟ್ಟಿಗೆ ನನ್ನ ಆಶೆಗಳನ್ನು ಹೊ೦ದಿದ ಹಾಗಾಗುವುದು, ಅತ್ತೆ  

ಮಾವಂದಿರು ಇರಬೇಕು. ಅವರ ಶುಶ್ರೂಷೆಗಳನ್ನು ಮಾಡದ ಮೇಲೆ 

ನನ್ನ ಬಾಳೇಕೆ ? ನನಗೆ ಅಭರಣಗಳಲ್ಲಿ ಅಸೆಯಿಲ್ಲ ಎಂದಳು. 


ಕೋ--ಸಾವಿತ್ರಿ ಹಾಗಾದರೆ ನಿನಗೆ ರಾಮಚಂದ್ರಯ್ಯನನ್ನು ಮದುವೆ  

ಯಾಗಲು ಇಷ್ಟವಿಲ್ಲವೋ 


ಸು-ಖಂಡಿತವಾಗಿಯೂ ಇಷ್ಟವಿಲ್ಲ.

 

ಕೋನೆರಯ್ಯನಿಗೂ ಸ್ವಲ್ಪ ಮನಸ್ಸು ಕರಗಿತು ಆಗ ಸಾವಿತ್ರಿಯ 

ಮುಖವನ್ನು ನೋಡಿ ಮನನೊಂದು ಯೋಜಸತೊಡಗಿದನು ಕೂಡಲೇ 

ತನ್ನ ಸ್ವಕಾರ್ಯಗಳೂ, ಸ್ವಂತಲಾಭಗಳೂ ಹೊಳೆದವು. ಇವಳಿಂದ 

ತನಗಾಗಬೇಕಾದುದೇನೂ ಇಲ್ಲವಾದರೂ ರಾಮಚಂದ್ರಯ್ಯನು ಆಗಲೇ 

ಗದ್ದೆಯನ್ನೂ ಹೊಲವನ್ನೂ ಸ್ವಾಧೀನ ಮಾಡಿರುವನು ಆದರೆ ಇನ್ನೂ 

೬೩---------------------------------------------------------------

ಬರಬೇಕಾದುದು ಬಂದಿಲ್ಲ ಎಂದು ಯೋಚಿಸಿ ಸಾವಿತ್ರೀ ಮದು 

ವೆಯು ನಿಷ್ಕರ್ಷೆಯಾಗಿದೆ. ಒಂದೇ ಮನಸ್ಸು ಮಾಡಿ ಒಪ್ಪಿಕೋ  ಒಪ್ಪದಿ 

ದ್ದರೂ ಮದುವೆಯಂತೂನಿಲ್ಲುವುದಿಲ್ಲ. ಇನ್ನೊಂದು ವಾರಕ್ಕೆ ಲಗ್ನವಾ 

ಗುವದು. ” ಏಂದು ಹೇಳಿ ಹೊರಟು ಹೋದನು,


ಸಾವಿತ್ರಿಯ, ಹಾಸಿಗೆಯನ್ನು ಹಾಸಿ ಮಲಗಿದಳು ನಿದ್ದೆ ಬರ 

ಲಿಲ್ಲ " ಮದುವೆಯ ಕೆಲಸಗಳು ನಡೆಯುತ್ತಾ ಇವೆ, ಇನ್ನೊಂದು 

ವಾರಕ್ಕೆ ಸಂಕಲೆ ಪ್ರಾಪ್ತಿಯಾಗುವುದು. ಈತನನ್ನು ಮದುವೆಮಾಡಿಕೊಂ 

ಡರೆ ನನ್ನ ತಾಯಿಗೂ ಅಣ್ಣನಿಗೂ ಸಮಾಧಾನ. ತಾಯಿಯ  ಮನಸ್ಸನ್ನು 

ನೋಯಿಸಲು ಇಚ್ಛೆಯಿಲ್ಲ. .  ಮುದುವೆಯನ್ನು ಮಾಡಿಕೊಳ್ಳಲೇ? ನನ್ನ 

ಅದೃಷ್ಟವು ಹಾಗೆಯೆ ಇದ್ದುದಾದರೆ ನಾನು ಮಾಡುವದೇನು ? ದೃಢಚಿತ್ತ 

ದಿಂದ ಈತನೇ ಪತಿಯೆಂದು ನಂಬಲೇ  ? ಪೂರ್ವದಲ್ಲಿ ಮಹಾನುಭಾವರಾದ 

ಋಷಿಗಳನ್ನು ಸೇವಿಸಿಕೊಂಡು ಸುಕೀಲೆಯರಿರಲಿಲ್ಲವೇ? ನನಗೆ ಏನೂ 

ತೋಚುವುದಿಲ್ಲ. ಈಮನಕ್ಲೇಶವನ್ನು ಸಹಿಸಿಕೊಳ್ಳುವುದಕ್ಕಿಂತಲೂ 

ನನ್ನಆಲೊ(ಚನೆಯೇ ಒಳ್ಳೆಯದು. ಹಾಗಾದರೆ ಪ್ರಾಣವನ್ನು ಬಿಡಲೇ? 

ಹೆೇಗೆಬಿಡುವುದು ? ವಿಷವಿದ್ವರೆ ಪಾನಮಾಮಾಡುತಲಿದ್ದೆನಲ್ಲಾ | ಅದೂಯಿಲ್ಲಾ 

ಕೆರೆಯಲ್ಲಿ ಬೀಳಲೇ? ಕೆರೆಯಲ್ಲಿ ನೀರಿಲ್ಲವಲ್ಲ. ಏನುಮಾಡಲಿ? ಚಿತ್ರಾ 

ವತಿಯಲ್ಲಿನ ಬಾನಿಯಲ್ಲಿ ನೀರಿದೆ, ಅಲ್ಲಿಬೀಳುವ್ರದು ಲೇಸೆಂದು ಎದ್ದಳು, 


ಚಂದ್ರನು ಸ್ವಲ್ಪ ಮೇಲಕ್ಕೆ ಏರಿದ್ದನು. ಎಲ್ಲರೂ ಮಲಗಿ ನಿದ್ರೆ  

ಯನ್ನು ಮಾಡುತ್ತಿದ್ದಾರೆ. ನೋಡಿದಳು, ಅಷ್ಟು  ದೂರ ಒಬ್ಬಳೇ ಹೋಗ 

ಬೇಕು. ತನ್ನಿಂದ ಸಾಧ್ಯವೇ ? “ ಸಾಧ್ಯವಲ್ಲದೇ ಏನು? ಹೆದರಿಕೆಯೆಂದ 

ರೇನು? ಪ್ರಾಣದಮೆಲೆ ಆಸೆಯಿದ್ದವಳಿಗೆ ಹೆದರಿಕೆ, ನನಗೆಂಥದು ” ಮನ  

ಸ್ಥೈರ್ಯಮಾಡಿದಳು. "ನನಗೆ ಸಂಕಟವೆಲ್ಲಪೂ ಪರಿಹಾರವಾಗುವುದು.  

ನನಗೆ ಈ ಲೋಕವೆೇಬೇಡ '" ಮೆಲ್ಲಮೆಲ್ಲಗೆ ಬೀದಿಯ ಬಾಗಲನ್ನು 

ತೆರದು ಮೆಲ್ಲಗೆ ಮುಚ್ಚಿದಳು, ಎಂತಹಬೆಳದಿಂಗಳು? ಹಾಲು ಚೆಲ್ಲಿ ಹಾಲು 

ಎತ್ತ ಬಹುದು, ರಸ್ತೆಯಲ್ಲಿ ಯಾರೂ ಇರಲಿಲ್ಲ. ಮನೆಯ ಮುಂದೆ  

ಸ್ಫಲ್ಪ ನಿಂತಳು. " ಸಾಯಬಲ್ಲೆನೆ? ಆ ಮುದಿಯನನ್ನು ಮದುವೆಯಾಗು 

ವದಕ್ಕಿಂತ ಭಾವಿಯಲ್ಲಿ ಬಿ:ಳುವುದೇ ಲೇಸಲ್ಲವೇ?  ಅಹುದು ” ಅದರೆ 

೬೪---------------------

ಸಾವಿತ್ರಿ“! ಒಂದು ಚಪಲವಿದೆಯೆಲ್ಲ, ಅದೂ ಇಲ್ಲವೇ? ಅದು ಏಕೆ? 

“ ಮದುವೆಯಾದರೆ ಸ್ಥಿರಭಾವದಿಂದಾಗುವೆನು. ಒಬ್ಬರಿಗೆ ಕೈಯನ್ನು  

ಕೊಟ್ಟು ಮತ್ತೊಬ್ಬರಿಗೆ ಸೆರಗನ್ನು ಕೊಡಲಾರೆ, ಆ ಕೇಡಿಗನಾದ ಮೂರ್ತಿ  

ಯು ಮಾತನಾಡದದಿದ್ದರೆ ಮನಸ್ಸು ಏಕರೀತಿಯಾಗಿರುತ್ತಿತ್ತು, ಆದರೇನು? 

ಈಗ ಅದನ್ನು ಜ್ಞಾಪಕಕ್ಕೆ ತಂದುಕೊಳ್ಳ‌ ಕೂಡದು. ಮೂರ್ತಿ ಎಂತಹ  

ಮೂರ್ತಿ! ಅಷ್ಟು ಮಾತುಗಳನ್ನಾಡಿದಾಗ ನಾನೊಂದನ್ನೂ ಅಡಲಿಲ್ಲ. 

ಆಯ್ಯೋ ಏನೆಂದು ತಿಳಿದನೋ ? ಆ ಅದೃಷ್ಟವೂ ಉಂಟೆ ? ಇಲ್ಲ, ಅವನ 

ತಂದೆತಾಯಿಗಳು ಒಪ್ಪುವುದಿಲ್ಲ. ಅವನಿಗೆ ಆದು ತಿಳಿಯದು. ನಾನು 

ಬಲ್ಲೆ, ಆದು ಹುಚ್ಚು ಆಲೋಚನೆ ಆ ಆಶೆಯೆ ನಿರಾಶೆ. ಮತ್ತು ಈತನನ್ನು 

ಮದುವೆಯಾಗಿ ಸ್ಪಲ್ಪ ಕಷ್ಟಬಂದಾಗ ಮೂರ್ತಿಯಾಗಿದ್ದರೆ ಎಂದು ಹೊಳೆ 

ಯುವುದಲ್ಲ ! ಮದುವೆಯಾದರೂ ಸುಖವಿಲ್ಲ. ನನಗೆ ಸಾವು ಲೇಸು, 

ಎಲೈ ಯಮನೇ ನನಗೆ ದಾರಿಯನ್ನು ತೋರಿಸು" ಎಂದು ಬೇಗಏೇಗನೆ 

ರಸ್ತೆಯನ್ನು ದಾಟಿದಳು, ಒಂದೊಂದು ನಾಣಿ ಯ; ಆಣ್ಜೆಲಕಿಗಿ ರೋಗು 

ವುದು. ಒಂದೊಂದು ನಾಯಿಯು ಬಗಳುವುದು. ಒಂದೆರಡು ಕತ್ತೆಗಳು 

ದಾರಿಯಲ್ಲಿ ನಿಂತಿದ್ದವು. ನದಿಯಕಡೆಗೆ ಹೊರಟಳು, ಆ ನಡುರಾತ್ರಿ  

ಆ ಬೆಳದಿಂಗಳನಲ್ಲಿ ಸಾವಿತ್ರೀ, ನಿನಗೆ ಎಷ್ಟುಧೈರ್ಯ ? ಏಕಾಕಿನಿಯಾಗಿ, 

ಬೇಡ, ಹಿಂದಿರುಗು, ಏನು? ಹಿಂದಿರುಗದೇ ಒಂದೇರೀತಿಯಾಗಿ ಹೋಗು 

ತ್ತಿರುವೆಯಲ್ಲಾ “ ಪಿಶಾಚೆಯಿಂದೇನು ? ಭೂತದಿಂದೇನು ? ನಾನೇ ಭೂತ 

ವಾಗಿರುವೆನು " ಎನ್ಸುತೆ ನದಿಯ ಮಳಲನ್ನು ಸೇರಿದಳು. ಭಾವಿಯಕಡೆಗೆ 

ತಿರುಗಿಕೊಂಡು ಹೊರಟುಹೋದಳು 

********


೧೨ನೆಯೆ ಪರಿಚ್ಛೇದ. 


“ರಾಜ, ನನಿಗೆ ಮನಸ್ಸಿನಲ್ಲಿ ಒಂದುವಿಧಪಾದ ಭೀತಿಯುಂಟಾಗಿದೆ. ಕಾರಣ 

ವೇನೋ? 


" ಈ ಬೆಳದಿಂಗಳನ್ನು ನೋಡಿದರೆ ನನಗೆ ಮನಸ್ಸಿನಲ್ಲಿ ಒಂದುವಿಧವಾದ , 

ಪ್ರೀತಿಯುಂಟಾಗುವುದು, ಕಾರಣವೇನೋ ? 


೬೫----------------------


- " ರಾಜ, ಹಾಸ್ಯವಲ್ಲ ಇಲ್ಲಿ ಮುಟ್ಟಿನೋಡು. ನನ್ನ ಎದೆಯು ಹೇಗೆ 

ಹೊಡೆದುಕೊಳ್ಳುವದು. 


"ನಿಜ, ಅತಿಯಾಗಿ ಪ್ರೇಮವು ಬಂದರೆ ಹಾಗೆ ಆಗುವದುಂಟು. 


“ ನನಗೆ ಯಾರಲ್ಲಯೂ ಅಪೇಕ್ಷೆಯಿಲ್ಲವಲ್ಲ.


 " ಅಯ್ಯೋ ಪಾಪ, ಈಗ ಆ ಸಾವಿತ್ರಿಯೇನಾದಳೋ ? 

 

 " ಏನಾದಳೋ 

 

“ ಅವಳಮೇಲೆ ಪ್ರೀತಿಯಿಲ್ಲವೇನು ? " 

 

" ನನ್ನನ್ನು ಕೇಳಬೇಡ, ಆಗ ನನಗೆ ಈರೀತಿ ಹೆದರಿಕೆಯೇಕಾ 

ಗುತ್ತೆ ತಿಳಸು. " 


"ಸ್ವಲ್ಪ ತಾಳು, ನನಗೂ ಎದೆಯಲ್ಲಿ ದಡ್ ಎಂದು ಹೊಡೆಯಿತು 

ಇದು ಏಕೆ? " 

" ಈಗ ಎಳ್ಳುಗಂಟಿಯಾಗಿರಬಹುದು ? " 


" ೧೧ ಗಂಟೆಯಾಗಿರಬಹುದು"


"ಹಾಗಾದರೆ ಈ ಬೆಳದಿಂಗಳಿನಲ್ಲಿ ಊರು ಸುತ್ತೋಣ  ಬಾ. " 


“ ನನಗೆ ಬೇಡ" 


" ಈಗ ಸಾವಿತ್ರಿಯು ಬಳಿಯಲ್ಲಿ ಇದ್ದಿದ್ದರೆ ? " 


“ ಇದೇಕೆ,ಹೀಗೆ ಮಾತನಾಡುವೆ, ಬರುತ್ತೇನೆ., ನಡೆ.  ಇಬ್ಬರೂ 

ಮನೆಯನ್ನು ಬಿಟ್ಟು ಹೊರಟರು " 


ರಾ-. " ಈ ಎರಡು ದಿವಸಗಳಿಂದ ನೀನು, ಇಲ್ಲದ್ದು ಬಹಳ ಬೇಜಾರಾಗಿತ್ತು" 

 

ಮೂರ್ತಿಯು-“ಲೋ, ಗುರುವಾ, ಯಜಮಾನರೆದ್ದು ಬಂದು ಕೇಳಿ 

ದರೆ , ರಾಜಪ್ಪನೂ, ನಾನೂ, ಊರುನೋಡಿಕೊಂಡು  ಬಂದು ಹೊರಟ 

ರೆಂದು ಹೇಳು " ಎನ್ನುತ್ತ “ನೀನು ಏನು ಹೇಳಿದೆ ? ' ಎಂದು ರಾಜನ 

ಕಡೆಗೆ ತಿರುಗಿದರು. 


ರಾಜ.. “ ನನಗೆ ಎರಡು ದಿವಸಗಳಿಂದಲೂ ಬೇಜಾರಾಗಿತ್ತು " 


ಮೂ.. ' ನನಗೂ ಹಾಗೆಯೇ , ಮೊನ್ನೆಯ/ದಿನದಿಂದ ನನಗೆ ಈ ಪ್ರ 

ಪಂಚವೇ ಬೇಡವಾಗಿದೆ. 

೬೬-------------------------------------------------------------------

 

ರಾಜ - ಅದೇನು ? 


ಮೂ .. ಸಾವಿತಿಯು ಕೈಕೊಟ್ಟಳು, ಮಾತನಾಡಿಸದರೆ ಮಾತ 

ನಡಲಿಲ್ಲ. 

 

ರಾಜ- ಓಹೋ  ಆಗಲೇ ಮಾತನಾಡಿಬಿಟ್ಟೆಯಾ ? 


ಮೂ- " ನನ್ನ ತಂಗಿಯಸಹಾಯದಿಂದ ಮಾತನಾಡಿದೆನು, ಆದರೆ  

ಸಾರ್ಥಕವಾಗಲಿಲ್ಲ. ತಾಳು,  ಇದೇನು: ರಾಜ ನನಗೆ ಗಳಿಗೆಗೆ ಒಂದಾವರ್ತಿ 

ಢಕ್‌ ಎಂದು ಹೊಡೆಯುತ್ತದೆ. " 


ರಾ- ಅದೇನೋ ನೀನು ಏನೆಂದು ಹೇಳಿದೆ ? 


ಮೂ-ಹೇಳುವದೇನು? ಆಮುದಕನನ್ನು ಕಟ್ಟಿಕೊಳ್ಳಬೇಡವೆಂದು 


ರಾ. - ಅವಳೇನೆಂದಳು 


ಮೂ- ಒಂದನ್ನೂ ಹೇಳಲಿಲ್ಲ, 


ರಾ-, ನೀನಿನ್ನೇನ್ನು ಹೇಳಿದೆ ? 


ಮೂ- ಆಸ್ತಿಯು೦ಟೆಂದು ಬೆರಿಯಬೇಡ ಆಸ್ತಿಯು ಹೆಚ್ಚ,ಲ್ಲ  

ಸುಖವಾಗಿರಬೇಕಾದರೆ, ಬೇರೆ ಆಲೋಚನೆಯನ್ನು ಮಾಡೆಂದು 

ಹೇಳಿದೆನು 


ರಾ- ಅದಕ್ಕೇನಂದಳು ? 


ಮೂ . “ ಅದಕ್ಕೆ ಸುಮ್ಮನಿದ್ದಳು, " 


ಹಿಗೆ ಮಾತನಾಡುತ್ತ ನದಿಯಕಡಗೆ ಬಂದುಬಿಟ್ಟರು 


ರಾ- " ಮರಳು ಎಷ್ಟು ಚೆನ್ನಾಗಿದೆ ನೋಡಿದೆಯಾ ಮೂರ್ತಿ, ” 


ಮ-, “ ನನಗೆ ಈ ಭೀತಿಯು ಹೆಚ್ಚುತ್ತಲಿದೆ, ಈದಿನವೇಕೋ 

ಈರೀತಿಯಲ್ಲಾಗುವದು. ನಾನು ಒಬ್ಬೊಬ್ಬನಾಗಿ ತಿರುಗಬಾರದ ಕಡೆಗಳ 

ಲ್ಲೆಲ್ಲಾ ಹೊಗುತ್ತಿದ್ದೆನು  ಈಗ ಏನೆಂದು ಹೇಳಲಿ. " 


ರಾ-ಕಡೆಗೆ ಏನೆಂದು ಹೇಳಿದೆ ? 


ಮೂ-. “ ನನ್ನನ್ನು ಒಪ್ಪದಿಯಾ, ಸಾವಿತ್ರೀ, ನನ್ನನ್ನು ಒಪ್ಪುವ 

ದಿಲ್ಲವೇ ? ಎಂದು ಕೇಳಿದನು ಸ್ವಲ್ಪ ತಾಳು, ಅದಕ್ಕೆ ಯಾರೂ ಅಲ್ಲಿ ಹೋ 

ಗುವಂತಿದೆ 


ರಾ- ಎಲ್ಲಿ? 

೬೭------------------------------------------------------------------

ಮು- ಆಗೋ, ಅಲ್ಲಿನೋಡು. ಚನ್ನಾಗಿ ಕಾಣಿಸುವದಿಲ್ಲ 


ರಾ- ನಿಂತಿರುವುದೋ  ? ಚಲಿಸುವುದೋ! 


ಮೂ- ಚಲಿಸುವಂತಿದೆ.

 

 ರಾ-ಬೇಗ ಬಾ ನೋಡೋಣ, ಆಮೇಲೆ, ಅವಳೇನೆಂದಳು ? 

 

ಮೂ- ಮಾತನಾಡಲಿಲ್ಲ, ಸುಮ್ಮನಿದ್ದಳು. ಪಕ್ಕದಲ್ಲಿ ತಿರುಗಿದಂ 

ತಿದೆ ಬೇಗ ಬಾ. 


ರಾ-. ನೀನು ಪುನಃ ಕೇಳಲಿಲ್ಲವೇ ? 


ಮೂ- ರಾಮಚಂದ್ರಯ್ಯನನ್ನೇ ಕಟ್ಟಿಕೊಳ್ಳುವಿಯಾ ? ಎಂದೆನು 

ಆ ದೂರದಲ್ಲಿ ಕಾಣಿಸುತ್ತಿದ್ದ ವ್ಯಕ್ತಿಯಹತ್ತಿರಬಂದರು. ಕೊ೦ಚದೂರ 

ಮಾತ್ರ ಉಳಿದಿತ್ತು. ಸ್ವಲ್ಪ ಗುರ್ತಿಸಬಹುದಾಗಿತ್ತು. 


ಮೂ- ಅವಳೇನೆಂದಳು ? 


ಮ~ ಸುಮ್ಮನದ್ದಳು. 


“ ಅಮೇಲೆ " 

 

ನನಿಗೆ ಕೋಪಬಂದು ಭಾವಿಯಲ್ಲಿ ಬೀಳೆಂದು ಹೇಳಿದೆನು?"


"ಛೀ ಏಕೆ ಹೇಳಿದೆ. ಅದು ಯಾರೋನೋಡು. ಗೊತ್ತಾಯಿತೇ, 

ಓಡು, ಓಡು , ಎಂದು ಇಬ್ಬರೂ ಓಡಿದರು. ಮೂರ್ತಿಯು ಘಟ್ಟಿಯಾಗಿ, 

ಸಾವಿತ್ರಿ, ತಾಳು,ತಾಳು ಬೇಡ, ಬೇಡ ಎನ್ನುತ್ತೆ ಊರ್ಧ್ವಶ್ವಾಸದಿಂದ .  

ಹೋಗಿ ಸಾವಿತ್ರಿಯನ್ನು ಹಿಡಿದುಕೊಂಡನು, 


" ಅಯ್ಯೋ' ಈ ಭಾವಿಯಬಳಿ ಸ್ವಲ್ಪ ಹೊತ್ತಾಗಿದ್ದರೆ ಅನಾಹು 

ತವಾಗುತ್ತಿತ್ತಲ್ಲಾ, ಇದೇನು  ಆಲೋಚನೆ ಮಾಡಿದೆ. . ಎಂದನು. ಮೂ

ರ್ತಿಯು ಕೂಗಿದರಭಸಕ್ಕೆ ಸಾವಿತ್ರಿಗೆ ಮೈ ಜುಮ್ಮೆಂದು: ಜ್ಞಾನತಪ್ಪತು....... 


ಪೂರ್ಣಚಂದ್ರನಿಗೆ ಬಹು ತೇಜಸ್ಸುಂಟಾಯಿತು ಚಂದ್ರಕಾಂತಿ 

ಶಿಲೆಗಳಿಂದ ಭೂಮಿಯನ್ನು ಹೊದ್ದಿಸಿದಂತೆ ಎಲ್ಲೆಲ್ಲಿಯ್ಲೂ .ಕಾಣುವದು. 

ಈ ಚಿತ್ರಾವತಿಯ ನೀರಿನಮೇಲೆ, ಥಳಥಳನೆ ಯಾಮಿನೀನಾಥನು ನಗುತ್ತ 

ನಗುತ್ತ ಸಣ್ಣದಾದ ಆಲೆಗಳಲ್ಲಿ ಕಲೆತು ಕೊನೆಮೊದಲಿಲ್ಲದೆ ನಾಟ್ಯವನ್ನಾ 

ಡುತ್ತಿದ್ದನು. ಆ ಮರಳುರಾಶಿ, ಆ ಬಿಳಿದಾದ ಹೂಗಳನ್ನು ಹಾಸಿ 

ದಂತೆ,  ಮೃಣಾಳ ಕಾಂಡೆಗಳನ್ನು ಹರಡಿದಂತೆ ರಾಜಿಸುವ ತಿಂಗಳಸೊಬಗು 

೬೮--------------------------------------------------------------------------

 

ಎಂತಹ ಯೋಗಿಯಮನಸ್ಸನ್ನಾದರೂ ಕರಗಿಸುತ್ತಿತ್ತು ನಿರ್ಮಲವಾದ 

ಆಕಾಶದಲ್ಲಿ, ಆ ಸ್ಪಚ್ಛವಾದ ಚಮದ್ರನು ಯಾವರೀತಿಯಲ್ಲಿದ್ದನು? ಕೂಪ 

ದಲ್ಲಿನ ಪಂಡರೀಕದಂತಿದ್ದನೇ ? ಇಲ್ಲವೋ ಸಾಣೆಕಲ್ಲಿನ ಮೇಲೆ ಕಸ್ತೂ 

ರಿಯನ್ನು ಸಿಕ್ಕಿಸಿ ಇಕ್ಕಿದ ತ್ರಿ?::ಧಗ ಮುದ್ದೆಯಂತಿರುವನೇ? ಎಂತಿರು 

ವನೋ ? ಮನೋಹರನಾಗಿ ಪೂರ್ಣ ಚಂದ್ರನಾಗಿರುವನು ಅಷ್ಟೇ, ನದಿಯ 

ಎರಡು ಕಡೆಗಳಲ್ಲಿಯೂ, ನೀರು ಹರಿಯುವುದು ಗೋಚರ ವಾಗುವಪರ್ಯಂ 

ತರವೂ, ಮರಳುರಾಶಿಯು ಕಾಣುವವರೆಗೂ ನವಚಂದ್ರಿಕಾಚ್ಛವೀಚಿ 

ಗಳು ಏಳುತ್ತಿದ್ದವು.

 

ಸಾವಿತ್ರಿಯನ್ನು ಮುಲಗಿಸಿ ಚಿತ್ರಾವತಿಯು ನಿ-ರನ್ನು ಮುಖಕ್ಕೆ 

ತಟ್ಟಿ, ಕೈವಸ್ತ್ರದಿಂದ ಮೂರ್ತಿಯು ಬೀಸಲಾರಂಭಿಸಿದನು, ದಕ್ಷಿಣನಿ

ಲನು ಈ ಅವಸ್ಥೆಯನ್ನು ನೋಡಿ ಕನಿಕರದಿಂದ ತಾನೇ' ಬಿರುಸಾಗಿ ಬೀಸ 

ಲಾರಂಭಿಸಿದನು. ರಾಜನು ಒಂದು ಕಡೆಯಲ್ಲಿ ಚಿಂತಾಮಗ್ನನಾಗಿ ರಾಜನ 

ನ್ನೀಕ್ಷಿಸುತ್ತ ಕುಳಿತುಬಿಟ್ಟನು, ಸಾವಿತ್ರಿಯು ಕಣ್ಣು ಬಿಟ್ಟಳು, ತಾನೆ 

ಲ್ಲಿರುವನೆಂಬುದು ತಿಳಿಯದೆ ಮನೆಯತೊಟ್ಟಿಯೆ೦ದು ಭಾವಿಸಿದಳು. ಇಷ್ಟು 

ಬೆಳದಿಂಗಳು ತೊಟ್ಟಿಯಲ್ಲಿ ಎಲ್ಲಿ ಬರುವದು ? ತೊಟಿಯಲ್ಲಿ ಇವರಾರು ? 

ಮನಸ್ಸಿಗೆ ಭೀತಿಯುಂಟಾಯಿತು. " ಸಾವಿತ್ರೀ ಸಾವಿತ್ರೀ, ಸ್ವಲ್ಪ ಕುಳಿ 

ತುಕೋ" . "ಇದು ಯಾರುಕೂಗುವರು", ಎಂದು ಚೆನ್ನಾಗಿ ನೋಡಿದಳು. 

ಕೂಡಲೇ ನಾಚಿಕೆಯಾಯಿತು, ಎದ್ದುನಿಂತಳು ಮನೆಯ ಕಡೆಗೆ ತಿರುಗಿ 

ದಳು "ಸಾವಿತ್ರೀ ಕುಳತುಕೋ ಇದೇಕೆ? ಇಲ್ಲಿಗೆ ಬಂದೆ? ಒಂದು 

ಮಾತನಾಡು "  ಸಾವಿತ್ರಿಯು ನೀರವವಾಗಿಗಳು, ಯೋಚಿಸಿದಳು, " ಇದೇ 

ಕೆ ? ಇಲ್ಲಿರಬೇಕು ಇಷ್ಟು ಹೊತ್ತಿನರಾತ್ರಿಯಲ್ಲಿ ! 


“ಏಕೆ ಮತನಾಡುವದಿಲ್ಲ " 


ಸಾವಿತ್ರಿಯು ನಿಟ್ಟುಸಿರನ್ನು ಬಿಟ್ಟಳು 


“ ಮನಸ್ಸಿಗೆ ಏನನ್ನೂ ತಿಳಿದುಕೊಳ್ಳಬೇಡ, ನೀನು ಅದಿನದಲ್ಲಿಯೇ 

ನನಗೆ ಬದಲುಕೊಟ್ಟಿಲ್ಲ. ರಾಮಚಂದ್ರಯ್ಯನನ್ನು ಕಟ್ಟಿಕೊಂಡರೂ ನನಗೆ 

ನಿನ್ನ ಮೇಲೆ ದ್ವೇಷವಿಲ್ಲ. ನನ್ನನ್ನು ಬೇಡವೆಂದರೂ ಸಮ್ಮತವೇ " 

೬೪------------------------------------------------------------------------- 

ಸಾವಿತ್ರಿಯು, ತಟ್ಟನೆ ತಿರುಗಿನೋಡಿದಳು, ಆ ಚಂದ್ರಿಕೆಯಲ್ಲಿ 

ಸಾವಿತ್ರಿಯ ಮೊಗವು ವರ್ಣಿಸಲಸಾಧ್ಯವಾದ ಕಾಂತಿಯನ್ನು ತಾಳಿತ್ತು, 

ಅವಳ ಕಣ್ಣುಗಳೂ, ಮೂರ್ತಿಯ ಕಣ್ಣುಗಳೂ ಸೇರಿದವು. ಸಾವಿತ್ರಿಯ 

ಕಣ್ಣುಗಳಲ್ಲಿ ಒಂದೊಂದಾಗಿ ಅಶ್ರು ಬಿಂದುಗಳು ಸುರಿದವು. 


“ಸಾವಿತ್ರಿ, ನೀನು ನಾಳಿನಿಂದ ಯಾರಿಗೆ ಸೇರಿದರೂ, ಚಿಂತೆಯಿಲ್ಲ 

ಈಗ ಈ ರಾತ್ರಿ ನನ್ನೊಡನೆ ಮಾತನಾಡಬೇಕು. ಇಲ್ಲವೇ ನೀನು ಆತಿ 

ಯಾಗಿ ಸಂಕಟಪಡುವೆ. ನಿನಗೆ ಮದುವೆಯಾದಮೇಲೆ ಸುಖವಿಲ್ಲ " 

ವೆಂದನು, ಆದರೂ ಸುಮ್ಮನಿದ್ದಳು. 


ಆಗ ಮೂರ್ತಿಯು “ ನಾನು ಕೂಡಿಸಲೇ " ಎಂದು ಏಳಲು ಬೇಡ. 

ವೆಂದಳು ಹಾಗೆ ನಾನು ಬೇಡವಾದರೆ ಮನಗೆ ನೀನೂಬ್ಬಳೇ ಹೊರಡು 

ವಿಯೋ? ಎನ್ನಲು ಹೌದೆಂದು ಹೇಳಿ ಸಾವಿತ್ರಿ ಮೇಲೆ ನೋಡುತ್ತಿರಲು, 

ಮೂರ್ತಿಯು, ನೀನು ಕಠಿಣಹೃದಯೆ ಎಂದನು ಸಾವಿತ್ರಿಯು ಮಾತನಾ 

ಡಲಿಲ್ಲ. ಆಗ ಮೂರ್ತಿಯು ಸಾವಿತ್ರಿ,! ನೀನು ಮಾತನಾಡದಿದ್ದರೆ ನನ್ನೆ  

ದೆಯು ಒಡೆದುಹೋಗುವುದು. ಇoತಹ ದುಃಖವನ್ನು ಸಹಿಸುವುದಕ್ಕಿಂತ 

ಲೂ ನನಗೆ ಮರಣವೇ - ಎಂದು ಮು೦ದೆ ಮಾತನಾಡುತ್ತಿರಲು ಸಾವಿತ್ರಿಯು 

ತಟ್ಟನೆ ಮೂರ್ತಿಯ ಬಾಯನ್ನು ಮುಚ್ಚಿದಳು. ಮೂರ್ತಿಗೆ ಶರೀರದಲ್ಲಿ 

ರೋಮಾಂಚವುಂಟಾಗಿ ಮನದಲ್ಲಿ ಹರ್ಷಪಟ್ಟು ಸಾವಿತ್ರೀ ನನ್ನನ್ನು 

ಒಪ್ಪುವಿಯಾ. ಎಂದು ಕೇಳಲು ಆಕೆಯ, ಆಜ ಜಾಂತರವಲ್ಲವೇ ? 

ಎಂದು ಹೇಳಿಗಳು. 

 

ಇಲ್ಲ, ನನ್ನ ಮಾತಿಗೆ ಬದಲಿಲ್ಲ ನನ್ನನ್ನಾರು ತಡೆಯು ವವರು ? ಎಂದ 

ಮೂರ್ತಿಯಮಾತಿಗೆ, ಸಾವಿತ್ರಿಯ ತಪ್ಪು ತಿಳುವಳಿಕೆ. ನಿಮ್ಮ ತಂದೆ 

ತಾಯಿಗಳು ಸುಮ್ಮನಿದ್ದಾರೆ? ಎನ್ನಲು ಮೂರ್ತಿಯು, ಸಾವಿತ್ರಿ, ನಿನ್ನನ್ನು 

ಬಿಟ್ಟರೆ ಇನ್ನೊಬ್ಬ ಪತ್ನಿಯು ನನಗೆ ಅವಶ್ಯಕವಿಲ್ಲ. ಅದಿರಲಿ : ನಮ್ಮ ತಂದೆ 

ತಾಯಿಗಳನ್ನು ಒಪ್ಪಿಸಿದರೆ ನೀನು ಒಪ್ಪವಿಯೋ ಎನ್ನಲು, ನಾನು ಖಂಡಿತ 

ಒಪ್ಪಲಾರೆ, ಎಂದುಹೇಳೀದಳು. ಆದೇಕೆಂದು ಮೂರ್ತಿಯು ಪ್ರಶ್ನೆಮಾಡಲು 

ನಾನು, ವೃಥಾದುರಾಶೆಗಳನ್ನಿಟ್ಟುಕೊಳ್ಳಲಾರೆ. ನನಿಗೆ ತಾವು ಸಿಗತಕ್ಕವರಲ್ಲ. 

೭೦---------------------------------------------------------------------------- 

ಮೂ-ನನ್ನ ತಂದೆತಾಯಿಗಳನ್ನು ಖ ತಂಗಿಯ ಒಟ್ಟುಸುವೆನು 


ಸಾ- ಒಪ್ಪಿಸುವಿರೋ ? ಒಪ್ಪಿಸುವಿರೋ ? 


ಮೂ~ ಒಪ್ಪಿಸುವೆನು ಖಂಡಿತ ಒಡಂಬಡಿಸುವೆನು 


ಆಗ ಸಾವಿತಿಯ ದೇಹವು ಮೂರ್ತಿಯ ಮಯ್ಯನ್ನು ಸೋಕಿತು 

ವಾಚಕರೆ, ಹೇಳಲು ನಾಚಿಕೆಯಾಗುವದು ಮೂರ್ತಿಯು ಸಾವಿತ್ರಿಯನ್ನು 

ಎರಡುಮೂರು ಬಾರಿ ಚುಂಬಿಸಿ ದೃಢವಾಗಿ ಆಲಿಂಗಿಸಿದನು. ಕೂಡಲೆ 

ಜತೆಯಲ್ಲಿ ರಾ&ಸು ಬಂದಿದ್ದುದು ಜ್ಞಾಪಕಕ್ಕೆ ಬರಲು, ತಿರುಗಿ ನೋಡಿ 

ದನು. ರಾಜನು ಮರಳಿನ ಮೇಲೆ ಮಲಗಿದ್ದನು. 


ಸು- ನಾನು, ಮನೆಗೆ ಹೋಗಬೇಕು. 


ಮೂ- ಸ್ವಲ್ಪ ತಾಳು, ನನ್ನ ಪ್ರಶ್ನೆಗೆ ಉತ್ತರವನ್ನು ಕೊಡು 

ಆಮೇಲೆ ಹೋಗೋಣ.


ಸು.. ನಾನು ಮನೆಯ ಬಾಗಿಲನ್ನು ತೆರೆದು ಬoದಿರುವನು. 


ಮೂ- ಚಿಂತೆಯಿಲ್ಲ ಇರಲಿ ! 


ಸು- ಯಾರಾದರೂ ಕಳ್ಳರು ಪ್ರವೇಶಿಸಿದರೆ ? 


ಮೂ- ನಮ್ಮ ಮನೆಯಲ್ಲಿ ಜವಾನರ ಮಲಗುವರು, ಆ ಬೀದಿಯಲ್ಲಿ 

ಕಳ್ಳರು ಬರಲು ಧೈರ್ಯವಿಲ್ಲ. 


ಸಾ -. ಈಗ ಇಲ್ಲಿದ್ದು ಏನುಮಾಡಬೇಕು ? 


ಮೂ- ಮೊನ್ನೆಯ ದಿವಸ ಮಾತನಾಡಿದರೆ, ನೀನೇಕೆ ಉತ್ತರ 

ವನ್ನು ಕೊಡಲಿಲ್ಲ ? 


ಸಾ. ನನಿಗೆ ಆಗ ಹೆದರಿಕೆಯಾಗತ್ತು. 


ಮೂ- ಅಷ್ಟೊಂದು ಕೇಳಿಕೊಂಡೆನಲ್ಲ. 


ಸಾ.- ಅಹುದು, ಆಗ ನನಗೆ ಸರಿಯಾದ ಜ್ಞಾನವಿರಲಿಲ್ಲ ವಿವಿಧಾ 

ಲೋಚನೆಗಳು ಮನಸಿನಲ್ಲಿ ತುಂಬಿದ್ದುವು. 

 

ಮೂ:- ಈಗ ರಾಮಚಂದಯ್ಯನು ಎಲ್ಲಿರುವನು ? 

ಸಾ- ನಾಗೋಡಿಯಲ್ಲಿ 


ಅಲ್ಲೇನು ಕೆಲಸವೆ೦ದು ಮೂರ್ತಿಕೇಳಲು, ಮದುವೆ ಕೆಲಸ 

೭೧-----------------------------------------------------------

ವೆಂದು ಉತ್ತರ ಬಂತು. ಸರಿಸರಿ ನಡೆ ಮನೆಗೆ ಹೋಗೋಣವೆಂದು 

ಇಬ್ಬರೂ ಎದ್ದರು ದಾರಿಯಲ್ಲಿ ಮೂರ್ತಿಯು ಸಾವಿತ್ರಿ, ಕೋಪಿಸಿ 

ಕೊಳ್ಳಬೇಡೆ ನಿನಗೆ ಒಂದು ಮಾತನ್ನು ಹೇಳುವೆನು. ! ಎನ್ನಲು, ಸಾವಿತ್ರಿ 

ಯು.ಕೋಪವೇಕೆ? ಎಂದಳು.  ಹಾಗಾದರೆ, ಹತ್ತಿರ ಬಾ ಎಂದು 

ಕರೆದನು. ಹತ್ತಿರಕ್ಕೆ ಬಂದ ಸಾವಿತ್ರಿಯನ್ನು ನೋಡಿ ರಸಿಕನಾದ ಮೂ 

ರ್ತಿಯು ಮೇಲೆ ನೋಡು. ಆ ಚಂದ್ರನಲ್ಲಿ ಈಗ ಕಳಂಕವು ಕಾಣು 

ವುದೇ ? ಎಂದನು ಸಾವಿತ್ರಿ ಮೇಲೆ ನೋಡಿದಳು, ಆ ಮುಖಚಂದ್ರನ 

ಮೇಲೆ ಕುಮುದಿನೀಚಂದ್ರನು ಪೂರ್ಣವಾಗಿ ಪ್ರಸರಿಸಿ ಮೆಲ್ಲಮೆಲ್ಲಗೆ 

ತನ್ನ ಅಧರಗಳನ್ನು ಸಾವಿತ್ರಿಯ ಆಧರಗಳಿಗೊತ್ತಿ ಚುಂಬಿಸಿದನು 


ಮೂ- "ರಾಜ, ಏಳು ಹೊರಡೋಣ. 

*****

೧೩ ನೆಯ ಪರಿಚ್ಛೇದ. 

 

ಮರು ದಿನ ಪ್ರಾತಃಕಾಲದಲ್ಲಿ ಕೋನೇರಯ್ಯನು ಹಳ್ಳಿಗೆ ಹೋಗಿ 

ಬರಲು ಪ್ರಯತ್ನಪಟ್ಟನು, " ಮದುವೆಗೆ ಅನುಕೂಲವಾದವುಗಳು, ಏನಾ 

ದರೂ ಸಿಗಬಹುದು, ಒಬ್ಬೊಬ್ಬ ರೈತನಹತ್ತಿರ ಎರಡೆರಡು ಕೊಳಗೆ ಅಕ್ಕಿ 

ಯನ್ನು ತರಬೇಕು, ಹುಣಸೇಹಣ್ಣನ್ನು ಶೇಖರ ಮಾಡಬೇಕು, ಹಣಕಾ  

ಸುಗಳು ಸಿಕ್ಕಿದರೆ ಅದನ್ನೂ ತರಬೇಕು. " ಎಂದೆನುತ್ತೆ ಹೊರಟುಹೋ 

ದನು. ಹಳ್ಳಿಯು ಒಹಳ ದೂರವಿರಲಿಲ್ಲ, ಸಮೀಪದಲ್ಲಿ ೨ ಮೈಲಿದೂರ 

ದಲ್ಲಿತ್ತು. ಅಲ್ಲಿಂದ ಹಲವು ಪದಾರ್ಥಗಳನ್ನು ತೆಗಿಸಿಕೊ೦ಡು ಹಿಂತಿರುಗಿ 

ಬರುವಾಗ ೧೧ ಘಂಟೆಯಾಗಿ ಹೋಯಿತು. ಮನೆಗೆ ಬರುವಾಗ ತಪ್ಪಾಲು 

ಜವಾನನು ಒಂದು ಕಾಗದವನ್ನು ಕೈಗೆ ಕೊಟ್ಟರು “ಕ್ಲೋಸ್‌ಪೇಟೆ, 

ಕ್ಲೋಸ್‌ಪೇಟೆಯಿಂದ ಒರೆಯವವರಾರು " ಒಳಗೆ ಕಾಗದವನ್ನು ಒಡೆದು 

ನೋಡಿದನು.  ಚಿಕ್ಕಪ್ಪ ಬರೆದಕಾಗದ ಓಹೋ, ವಿಪರೀತವಾಗುವದು. 


ಲ- “ ಈಗೇನು ಮಾಡೋಣ? 


ಕೋ- ಏನು ಮಾಡುವುದೋ ದಿಕ್ಕೇ ತೋಚುವುದಿಲ್ಲ. 

೭೨------------------------------------------------------------------------ 

ನಾನು ಇದುವರೆಗೂ ಪಟ್ಟಕಷ್ಟಗಳು ವ್ಯರ್ಥವಾಗುವುವು. ಏನು ಬರೆದಿರು 

ವನೋ, ಸರಿಸರಿ. ಇನ್ನು ನಾಲ್ಕು ದಿವಸಗಳಿಗೆ ಇಲ್ಲಿಗೆ ಬರುವನಂತ, ಇನ್ನು 

ಸಾವಿತ್ರಿಯ ಮದುವೆಯು  ೬ ದಿವಸಗಳು ಉಳಿದಿದೆ ಎಂದುಕೊಳ್ಳುತ್ತ ಮನೆ 

ಯೊಳಗೆ ಬಂದು ಸಾಮಾನುಗಳನ್ನು ಹಳ್ಳಿಯವರಿಂದ ಒಳಗಿಡಿಸಿ, ಅಲೋ  

ಚಿಸಲು ಪ್ರಾರಂಭಿಸಿದನು 


ಲಕ್ಷಮ್ಮ - ಊಟಕ್ಕೇಳಿ, ಹೊತ್ತಾಯಿತಲ್ಲಾ 


ಕೋ- ಆಯ್ಯೋ ನನಗೆ ಊಟಬೇಡ, 


ಲ- ಅದೇನು ಆಂಥಾದ್ದು ? 


ಕೋ~ ನನ್ನ ಅದೃಷ್ಟಕ್ಕೇನು ಮಾಡಲಿ ? 


ಲ-ಏನಾಯಿತು ? ಏನಾಯಿತು ? 


ಕೋ- ನನ್ನ ಚಿಕ್ಕಪ್ಪನು ನಾಲ್ಕು ದಿವಸಗಳಲ್ಲಿ ಬರುವನಂತೆ. 


ಲ- ಬರಲಿ, ಬಂದರೆ ನಿಮಗೆ ಅದೃಷ್ಟವು ಕೀಳಿಯಿತೋ ? 


ಕೋ- ನಿನಗೆ ಗೊತ್ತಿಲ್ಲ, 


ಲ- ಆದೇನು ಹೇಳಿ, ನಾನೂ ಸ್ವಲ್ಪ ಕೇಳುವೆನು 


ಕೋ- ಒಂದು ಕೆಲಸಕ್ಕೆ ಕೈ ಹಾಕಿದ್ದು ಅದು ಈಗ ನಡೆಯು 

ವುದೂ ಇಲ್ಲವೋ ಅನುಮಾನ 


ಲ- ಆಯ್ಯೋ ನೀವು ಕೈ ಹಾಕಿದ್ದು ಆಗದೇಏನು 


ಕೋ- “ ಹಾಗಲ್ಲವೇ ? ನನಗೆ ನಾಗೋಡಿಯಲ್ಲಿ ಸ್ವಲ್ಪ ಜಮೀನು ಸಿಕ್ಕುವಂತೆ 

ಮಾಡಿಕಕೊಂಡದ್ದೆನು, " 


ಲ- ಈಗಲೂ ಸಿಗುವುದಿಲ್ಲವೇ ? 


ಈ ನಿನ್ನ ಚಿಕ್ಕಮಾವ ಬಂದರೆ ಸಿಗುವುದಿಲ್ಲ. ಸಾವಿತ್ರಿಯನ್ನು 

ರಾಮಚಂದ್ರಯ್ಯನಿಗೆ ಕಟ್ಟು ಮದುವೆ ಮಾಡಿದರೆ ರಾಮಚಂದಯ್ಯನು 

೨೦ ಖಂಡುಗ ಗದ್ದೆಯನ್ನು ಕೊಡುವನೆಂದು ಮಾತು. ಈಗಾಗಲೇ ಸ್ವಲ್ಪವನ್ನು 

ಕೊಟ್ಟು ಇರುವನು. 


ಲ- “ನಿಮ್ಮ ಚಿಕ್ಕಪ್ಪನು ಈ ಮದುವೆಗೆ ಒಪ್ಪಲಾರನೋ ? 


ಕೋ- “ಖಂಡಿತವಾಗಿಯೂ ಒಪ್ಪುವದಿಲ್ಲ 

೭೩----------------------------------------------------------------------- 

ಲ.." ನನಗೆ ಒಂದು ತೋರುವದು. ಮದುವೆಯನ್ನು ನಾಗೋಡಿ 

ಯಲ್ಲೇ ಮಾಡಿದರೆ, 


ಕೋ-" ಅದೂ ಸರಿ ! ನಮ್ಮ ಚಿಕ್ಕಪ್ಪನು ಇನ್ನು ನಾಲ್ಕು ದಿವಸ 

ಗಳಿಗೆ ಬರವನು, ಮದುವೆಯು ೬ ದಿವಸಗಳಿವೆ ಒಂದುವೇಳೆ ಬಂದರೆ, 

ಮದುವೆಯು ನಾಗಡಿವಲ್ಲಿ ಎಂದು ತಿಳಿಯುವುದು ಅಲ್ಲಿಗೆ ಬರುವ 

ಹೊತ್ತಿಗೆ ಮುಹೂರ್ತ ನಡೆಯುತ್ತಿರುವುದು. 

 

ಇಂತಹ ವಿಷಯಗಳಲ್ಲಿ ಹೆ೦ಗಸಿರಿಗೆ ಬಹಳ ಬೇಗ ಆಲೋಚನೆಗಳು 

ಹೊಳಯುವುವು. 


ನವ.ಗೆ ಆನುಭವದಲ್ಲಿರುವುದೇನಂದರೆ ಈ ಪ್ರಪಂಚದಲ್ಲಿ ಎಂತಹ 

ಕಾರ್ಯಗಳಾಗಬೇಕಾದರೂ ಹೆಂಗಸರೇ ಮುಕ್ಕಾಲುಪಾಲು ಕಾರಣಕರ್ತರಾ 

ಗಿರುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಕೊಡುವ ಸಲಹೆಗಳಿಂದಲೇ 

ಕಾರ್ಯಾರಂಭವಾಗುವುದು. ರಾಜಕಾರ್ಯಗಳು, ನ್ಯಾಯ.ವಿಮರ್ಶೆಗಳು, ಇತರ 

ವಿಷಯಗಳು, ಉದ್ಯೊಗಸ್ಥರ ಮನೆಗಳಲ್ಲಿ “ ಅಮ್ಮಾವರಿಗೆ " ತಿಳಿಯದೇ 

ಹೋಗುವುದಿಲ್ಲ. ಒಂದೊಂದುವೇಳ ಯಜಮಾನರ ಬಳಿಯಲ್ಲಿ ಒಳ್ಳೆಯ 

ದಾಗಬೇಕಾದರೂ “ ಅಮ್ಮಾವರ " ಶಿಫಾರಸು ಅತ್ಯಾವಶ್ಯಕ ಇವೆಲ್ಲವೂ 

ಏಕೆ? ನಮ್ಮಭಾರತಮಹಿಳೆಯರು ಸಾಧಾರಣರಲ್ಲ. “ ಧರೆಯೊಳ್‌ನಾನಾ 

ಚಮತ್ಕಾರವಂ " * ಅರಿಯಲ್ಬಲ್ಲೊಡೆ, ಮಂತ್ರಿಯಾಗು" ಎನ್ನುವಂತೆ, 

ಗೃಹಸಾಮ್ರಾಜ್ಯಕ್ಕೆ ತಕ್ಕಚಮತ್ಕಾರಗಳೆಲ್ಲವನ್ನೂ ಬಲ್ಲರು ಮತ್ತು 

ಈ ಚಮತ್ತಾರಗಳನ್ನು ಅರಿಯುವಿಕೆಯೇ ಮಂತ್ರಿ ಸ್ಥಾನಕ್ಕೆ ಪೂಜ್ಯವು. 

ಪತಿವ್ರತೆಯಾದ ಹೆಂಗಸು ತನ್ನ ಪತಿಗೆ ಸ್ವಲ್ಪವೂ ಕಳ೦ಕವನ್ನುಂಟುಮಾ 

ಡರೆ, ಆತನ ದೇಹಾರೋಗ್ಯ ಪೋಷಣೆಯಲ್ಲಿಯೂ ಆಚಾರವ್ಯವಹಾರಗಳ 

ಲ್ಲಿಯೂ, ಸಂಸಾರದಲ್ಲಿಯೂ, ತಾನೂ ಏಕೀಭವಿಸಿ ಊಟದಕಾಲದಲ್ಲಿ 

ತಾಯಿಯ೦ತೆಯೂ ಶಯನಕಾಲದಲ್ಲಿ ಬೆಲೆವೆಣ್ಣಿನಂತೆಯೂ, ಯೋಚನ 

ಕಾಲದಲ್ಲಿ ಮಂತ್ರಿಯoತೆಯೂ, ಇರಬೇಕೆಂದು ಹಿರಿಯರು ನುಡಿಯರ 

ರಲ್ಲವೇ ? ಯಾವಾಕೆಯು ಹೀಗಿರುವಳೋ ಅಂತಹವಳನ್ನು ಕುಲಸ್ತ್ರೀ 

 ರತ್ನವೆಂದು ಹೊಗಳುವರು. ಆದುದರಿಂದಲೇ ನಮ್ಮ ಸ್ತ್ರೀ ಮಂಡಲಿಯು 

೭೪-------------------------------------------------------------------------

ಗೃಹರಾಜ್ಯದಲ್ಲಿನ ಉತ್ಕೃಷ್ಟವಾದ ಮಂತ್ರಿಪದವನ್ನಲಂಕರಿಸಿ, ಮನೆಗೆ 

ಬಂದ ಸ್ವಾಮಿಯ ಮುಖಕಾಂತಿಯಿ.೦ದಲೇ ಮನೋಭಾವವನ್ನು ಕಂಡು 

ಹಿಡಿದು ಗುರುವಾದವನ್ನು ಯಾವರೀತಿ ತನ್ನ ಮನಸ್ಸಿನಲ್ಲಿದದನ್ನು, ಶಿಷ್ಯ 

ನಿಂದ, ಆಶೆಯನ್ನು ತೋರಿಸಿಯೂ, ನಯದಿಂದಲೂ, ಭಯದಿಂದಲೂ, 

ಮಾಡಿಸುವನೋ ಅದೇರೀತಿಯಲ್ಲಿ ತಾವು ಹೇಳಿದಂತೆಯೂ, ತಮ್ಮ ಹೃದ 

ಯಗಳಲ್ಲಿರುವಂತೆಯೂ, ನಮ್ಮ ಪತಿಗಳಿಂದ ಮಾಡಿಸುವರು. ಒಂದೊಂ 

ದುಸಾರಿ ಮನೋಭಾವವನ್ನು ಗ್ರಹಿಸಲು ಶಕ್ತಿಯಿಲ್ಲವಾದರೆ “ ಪೀವು ಎಂದಿ 

ನಂತಿಲ್ಲ, ಏನು ಆಲೋಚಿಸುತ್ತಿರಿ, ನನಗೆ ಹೇಳಿ, ನನಗೆ ಹೇಳದಿರವ 

ದೆಂಥದು” ಎಂಬಿವೇ ಮೊದಲಾದ ರಾಜನೀತಿಯ-ತಪ್ಪಾಯಿತು ಕ್ಷಮಿಸಿ, 

ರಾಜ್ಞಿನೀತಿಯಮಾತುಗಳಿಂದ ಮೆಚ್ಚಿಸಿ, ತದನಂತರ ತಮ್ಮ ಕಾರ್ಯಗಳನ್ನು 

ಮಾಡಿಸಿಕೊಳ್ಳುವರು. ಅಂತೂ ನಮ್ಮ ಕಾಂತಾಮಣಿಗಳು ಪ್ರವೇಶಿಸದ 

ರಾಜಕಾರ್ಯವಿಲ್ಲ. ಇವರಿಗೆ ತಿಳಿಯದ ನ್ಯಾಯವಿಮರ್ಶೆಗಳಿಲ್ಲ. ಇವರಿಗೆ 

ಗೋಚರವಾಗರ ರಾಜರಹಸ್ಯಗಳಿಲ್ಲ. ಇಷ್ಟೊಂದು ಸಾಮರ್ಥ್ಯವು ಅಬಲೆ 

ಯರಾದ, ಲತಾಂಗಿಯರಾದ ಕೋಮಲೆಯಾದ ನಮ್ಮ ಅಂಗನಾಜನಕ್ಕೆಂತು 

ಸಿದ್ಧಿಸಿತು ? ನಾವು ಬಲವಂತರೆಂರೆನಿಸಿ, ಅಜಾನುಬಾಹುಗಳ೦ದನಿಸಿ, ಉಗ್ರ 

ಪ್ರಕಾರವನ್ನು ಹೊಂದಿದವರೆನಿಸಿಯೂ, ನಮಗೆ ಆ ಪೆಣ್ಮಣಿಗಳ ಹೃದಯ 

ವನ್ನು ಭೇದಿಸಲು ಸಾಮರ್ಥ್ಯವು ಸಿದ್ದಿಸಲಿಲ್ಲವೇ ? ಯಾರಾದರೂ ಆ 

ಭ್ರೂಚಾತುರ್ಯವನ್ನೂ, ಆಕುಂಚಿತವಾದ ಕಟಾಕ್ಷವೀಕ್ಷಣವನ್ನೂ, ಮಧು, 

ರವಾಣಿಗಳನ್ನೂ, ಆ ಲಜ್ಜೆಯು ವೈಖರಿಯನ್ನೂ, ಆ ಬಿನ್ನಾಣದ ಸೊಬ 

ಗನ್ನೂ, ಅಥವ ಮೌ್ನವ್ರತಗಳನ್ನೂ, ಉಪವಾಸವ್ರತಗಳನ್ನೂ, ಕಡೆಗೆ 

ಕೂಪಾಗಾರಸ್ವೀಕಾರವನ್ನೂ, ಆಚರಿಸಬಲ್ಲರೋ ? ಅವುಗಳು ನಮ್ಮ 

ಯುವತಿಯರಿಗೆ ಸಾಧ್ಯವಾದುದರಿಂದಲೇ ಆ ಸಾಮರ್ಥ್ಯವು ಸಿದ್ಧಿಸಿತು. 


ಪ್ರಕೃತದಲ್ಲಿ ಕೋನೇರಯ್ಯನಿಗೆ ವ್ಯಸನವು ಕೊನೆಗಂಡಿತು, ತನ್ನ 

ಭಾರ್ಯೆಯು ಹೇಳಿದಂತೆಯೇ ನಾಗಡಿಯಲ್ಲಿ ಮದುವೆಯನ್ನು ಮಾಡ 

ಬೇಕು. ಒಂದುವೇಳೆ ಚಿಕ್ಕಪ್ಪನು ಒoದರೆ, ಬಾಗೇಪಲ್ಲಿಗೆ ನಾಲ್ಕನೇ 

೭೫-------------------------------------------------------------------

ದಿವಸ ಸಾಯಂಕಾಲ ಬರುವನು. ಬರುತ್ತಲೂ ನಾವಿಲ್ಲಿರುವದಿಲ್ಲ ಸ್ವಲ್ಪ 

ವಿಶ್ರಮಿಸಿಕೊoಡು ನಾಗೋಡಿಗೆ ಮಾರನೇ ದಿವಸ ಬರುವನು. ಮೂವತ್ತು 

ಮೈಲಿಗಳದೂರ, ರೈಲುಕೂಡಾಯಿಲ್ಲ. ಬರಬೇಕೆಂದರೆ ಕೊಂಚಕಾಲ 

ಹಿಡಿಯುವುದೇ ? ಆವನು ಬ೦ದರೂ ಬರುವಹೊತ್ತಿಗೆ ನಿಶ್ಚಿತಾರ್ಥವು ಆಗಿ 

ಹೋಗಿರುವುದು, ಇನ್ನೆನು ಮಾಡಲಾದೀತು. ಭಲಾ, ನನ್ನ ಹೆಂಡತಿಯ 

ಸಮಾನರುಂಟೇ: ? ಅದಕ್ಕೆ ಅಲ್ಲಿವೇ ಹೆಂಗಸರಿಗೆ ನಮಗಿಂತಲೂ ಬುದ್ದಿಯು 

ಹೆಚ್ಚೆ೦ದು ಹೇಳವುದು ಎನ್ನುತ್ತ ಹೆಂಡತಿಯನ್ನು. ಎಲೇ, ಎಲೇ, ಈಗೇ 

ನುಮಾಡಬೇಕು ಎಂದು ಕೇಳಲು ಆಕೆಯು- 


ನಾಗೋಡಿಗೆ ಕಾಗದವನ್ನು ಬರೆದು ತೋಟಿಯ ಕೈಲಿ ಕೊಟ್ಟು 

ಕಳುಹಿಸಿ ನಾಳೆಯೇ ಇಲ್ಲಿಂದ ನಾವು ಹೊರಡೋಣ ಎಂದಳು. ಹಾಗೆ 

ಯೇ ನಿಷ್ಕರ್ಷೆಯಾಯಿತು 


ಕೋನೇರಯ್ಯನು ಕೂಡಲೇ ಕಾಗದವನ್ನು ಬರೆದು ಕೊಟ್ಟು ಕಳು 

ಹಿಸಿದನು ಬಾಗೇಪಲ್ಲಿಯಲ್ಲಿ ಆನಿವಾರ್ಯವಾದುದರಿಂದ ನಾಗೋಡಿಗೇನೇ 

ಬರುವೆವು. ಬೇರೆ ಮನೆಯನ್ನು ಏರ್ಪಾಡು ಮಾಡಿರಬೇಕು ಎಂಬಿವು 

ಗಳೇ ಮುಖ್ಯಸಂಗತಿಗಳಾಗಿದ್ದುವು. ತನ್ನ ಬಲತಾಯಿಗೂ, “ನಾಗೋ 

ಡಿಯಲ್ಲಿ ಮದುವೆ, ನಾಳೆಯೇ ಅಲ್ಲಿಗೆ ಹೊರಟುಹೋಗುವುದು ” ಎಂದು 

ಹೇಳದನು 

 

ಸಾವಿತ್ರಿಯು '' ಏನು ನಾಗೋಡಿಯಲ್ಲಿ ಮದುವೆಯೆ ? ನಾಳೆಯೇ 

ಅಲ್ಲಿಗೆ ಹೊರಟು ಹೋಗುವುದೇ ? ಅಯ್ಯೋ ಇನ್ನೇನುಗತಿ ! ಇನ್ನೆರಡು 

ಮೂರು ದಿವಸಗಳ ವಿರಾಮವಾದರೂ ಇದ್ದಿದ್ದರೆ, ಅಷ್ಟರಲ್ಲೇ ಬದಲಾವಣೆ 

ಗಳಾಗುತ್ತಿತ್ತಲ್ಲ; ನೆನ್ನೆಯರಾತ್ರಿಯಲ್ಲೇನಾದರೂ ಕನಸನ್ನು ಕಂಡನೇ 

ಇಲ್ಲವೋ ನಿಜವಿರಬಹುದೆ? ನಿಜ, ಖಂಡಿತವಾಗಿಯೂ ನಿಜ, ಮಾತುಗಳು 

ಕೂಡ ಜ್ಞಾಪಕವಿರೆಯಲ್ಲ” ಅ ಮರಳುರಾಶಿ, ಆ ಬೆಳದಿಂಗಳು, ಆ ಚಿತ್ರಾ 

ವತಿ ಆ ಮೂರ್ತಿ, ಇವೆಲ್ಲವೂ ನನ್ನನ್ನು ಅಣಕಿಸುವುವೋ, ಹಾಸ್ಯ 

ಮಾಡುವುವೋ ? ಎಂದು ತೋರುತ್ತಿದೆಯಲ್ಲಾ? ಆಶೆಯೇ : ಅನ್ಯಾಯ 

೭೫------------------------------------------------------------------------


ವಾಗಿ, ಸಾಧ್ಯವಿಲ್ಲದ ಸ್ವರ್ಗವನ್ನು ಒಂದು ಬಾರಿ ತೋರಿಸಿ, ಕೆಲವುಕಾಲ 

ಕೂಡಿಸಿ, ಕಡೆಗೆ ನರಕದಲ್ಲಿ ತಳ್ಳವೆಯಾ, ಛೀ, ಛೀ, ನೀನು ಸಾಯುವ 

ವರಿಗೆ ಅಮೃತವೆಂದೆನ್ನುವರು ನನಗೆ ಕಾಲಕೂಟವಾದೆಯಾ? ಎಂದು 

ಮರುಗಿದಳು. 

******

೧೪ ನೆಯ ಪರಿಚ್ಛೇದ. 

ಮೂರ್ತಿ ಇಲ್ಲಿ ಬಾ, ನಿನ್ನೆ ರಾತ್ರಿ ನಾನೂ ನಿನ್ನ ತಂದೆಯ ಕೆಲವು 

ಮಾತುಗಳನ್ನಾಡಿದೆವು ನಿನ್ನ ಸಮ್ಮತಿಯನ್ನು ತಿಳಿಯಬೇಕೆಂದು ಆವರು 

ಹೇಳಿದರು. ಏನು ಹೇಳುವೆ ಎಂದು ಅವರು ಕೇಳಲು ಮೂರ್ತಿಯು  

ಯಾವವಿಷಯಕ್ಕೆ? ಎಂದು ಕೇಳಿದನು. ತನ್ನ ತಂಗಿಯ ಮದುವೆಯ 

ವಿಷಯವಾಗಿ ಕಾಗದ ಬಂದು ೨೦ ದಿನಗಳ ಮೇಲೆ ಆದವು ಮೇಲೆಮೇಲೆ 

ಕಾಗದಗಳು ಬರುತ್ತಾ ಇವೆ, ಜಾತಕಗಳ ಬ೦ದಿವೆ. ವರನು ಸೇಲಂ 

ಡಿಸ್ಟ್ರಿಕ್ಟಿನಲ್ಲಿದ್ದಾರಂತೆ, ಭೂಮಿಕಾಣಿಗಳು ಬಹಳವಿವೆ, ಹಿರಿಯರೆಲ್ಲಾ 

ಚೆನ್ನಾಗಿ ಬಾಳಿದವರು ವರನು ಏನೋ ಲೋವರ್‌ಸೆಕಂಡರಿ ಓದಿದ್ದಾನೆ 

ಒಂರು ಸ್ಕೂಲ್ ಮಾಸ್ಟರ್ ಕೆಲಸವಿದೆ, ಆದರೆ ತುಂಬ ಆಸ್ತಿ ಇರುವುದ 

ರಿಂದ ಆತನಿಗೆ ಕೊಡುವುದೆಂದು ಯೋಚಿಸಿರುವೆವೆನ್ನಲು ಮೂರ್ತಿಯು- 

ನನಗಿಷ್ಟವಿಲ್ಲ. ನೀವು ಮದುವೆಯನ್ನು ಮಾಡಬಹುದು ಎ೦ದನು, ಹಾಗಾ 

ದರೆ ನಿನ್ನ ಸ್ನೇಹಿತರಲ್ಲಿ ಓದಿದವರಾಗಿಯ, ಯೋಗ್ಯವಾಗಿಯೂ ಇರುವ 

ವರನನ್ನು ತೋರಿಸೆನ್ನಲು ನನಗೆ ಅಗತ್ಯವಿಲ್ಲವೆ ೦ದನು. ಹಾಗಾದರೆ ಈ 

ವರನನ್ನು ಒಪ್ಪು, ಅಥವಾ ನೀನು ಇಷ್ಟಪಟ್ಟವನು ಯಾರೆಂಬುದನ್ನು ತಿಳಿಸು, 


ಮೂರ್ತಿಯು ಕೃಷ್ಣ ವೇಳೆಗೆ ಅದು ಗೊತ್ತೆ? ಅವಳಪ್ಪಿರುವಳೇ? 

ಒಪ್ಪಿದ್ದರಾಗಲಿ, ಎನಲು ಅವಳಗೇನುಗೊತ್ತು, ಅವಳನ್ನೇನು ಕೇಳುವುದು ? 

ಅವಳಿಗೇನು ತಿಳಿಯುವುದು ? ಎಂದರು ಮೂರ್ತಿಯು ಆಮ್ಮಾ, ನಿನಗೆ 

ಕೋಪಬಂದರೂ ಬರಲಿ ಅತ್ತಕಡೆಯ ಜನಗಳಿಗೆ ನನ್ನ ಹುಡುಗಿಯರನ್ನು 

ಕೊಡಲು  ಒಪ್ಪಲಾರೆನು ಇನ್ನೂ ವಯಸhರುವುದಿಲ್ಲ. ಆಗಲೇ ದುಷ್ಟ 

೭೭------------------------------------------------------------------------- 

ಸಹವಾಸ, ಸಂಪಾದನೆಯೋ ಮೊದಲೇ ಸರಿ, ಕ೦ಡತಿಯ ನ್ನು ಸಾಕು 

ವುರೇನು ? ಹೆಣ್ಣು ಮಕ್ಕಳನ್ನು ಹರತ್ತದ್ದಕ್ಕೆ ಕಷ್ಟಗಟ್ಟು ಹುಡುಕಿ ಒಳ್ಳೆ 

ಯು, ವರವಿಗೆ ಕೊಡಬೇಕು.  “ ನಮ್ಮ ಕಡೆಯಲ್ಲಿಯೂ: ಗಂಡಿಲ್ಲ. ಇದ್ದು 

ದರಲ್ಲಿ ಇವನೇವಾಸಿ " ಎಂಬುವ ಮಾತುಗಳು ನಮ್ಮಲ್ಲಿ ಬಹಳಕಾಲದಿಂದ 

ಲೂ ಇವೆ. “ಜಾತಿಯನ್ನು.ಬಿಟ್ಟು ಜಾತಿಗೆ ಕೊಡುವುದೆಂತು, ಏನೋ 

ಇದ್ದುಕೊಂಡಿರಲಿ, ಚಿಕ್ಕಂದಿನಿಂದಲೂ ನನಗೆ ತಿಳದವನು " ಇವೆಲ್ಲವೂ 

ಕೆಲಸಕ್ಕೆ ಬಾರವು. ನನ್ನ ಮನಸಿನಲ್ಲಿದ್ದುದನ್ನು ಹೇಳಿರುವನು. 


ಅಮ್ಮ-ಹಾಗಾದರೆ ಈಗ ಯಾರ ಕೈಕಾಳುಗಳನ್ನು ಕಟ್ಟೋಣ. 


ಮೂ: .. ಯಾರದೂಬೇಡ, ನಿನಗೆ ಸಮ್ಮತವಾದರೆ ನನ್ನ ಸ್ನೇಹಿತ 

ರಾಜನಿಗೆ ಕೊಟ್ಟು ಮದುವೆನ್ನು ಮಾಡೋಣ. ಅವನು ನನಗೆ 

ಸಹಕಾರಿ ಬಹಖ ವರ್ಷಗಳಿಂದಲೂ ನಾವು ಒಬ್ಬರನ್ನೊಬ್ಬರು ತಿಳಿದವರು 

ಹುಡುಗನು ಲಕ್ಷಣವಾಗಿದ್ದಾನೆ.ಬುದ್ಧಿವಂತ. ಇದಕ್ಕಿಂತಲೂ ಏನು ? 


ಅಮ್ಮ- ಅಹುದು ಆಸ್ತಿಯಿಲ್ಲವಲ್ಲ ಅವನ ತಾಯಿಯು ಸತ್ತು 

ಹೋಗಿ ಬಹಳದಿವಸಗಳಾದವು. ಅವನತಂದೆಯು ಬೇರೆ ಮದುವೆಯನ್ನು 

ಮಾಡಿಕೊಂಡಿರುವನು . ರಾಜನ ಪಾಲಿಗೇನುಬರುವದು 


ರಾಜನು ಅವನಿಗೆ ದೌಹಿತ್ರನಲ್ಲವೇ' ? ಮುದುಕನೂ ಮುದುಕಿಯೂ 

ಇ.ವವರೆಗೂ ರಾಜನಿಗೇನು ಕಡಿಮೆ ? 


ಅ- ಅಹುದು ನಮ್ಮ ಕೃಷ್ಣವೇಣಿಗೆ ಮನೆಯಲ್ಲಿ ಸರಿಯಾದ ದಿಕ್ಕಿಲ್ಲ 

ವಲ್ಲ ಇರುವವರು ಮುದುಕ ಮುದುಕಿಯರು. 


ಮೂ. ಮುದುಕರ ಕಾಲಾನಂತರ ನಾವು ನೋಡಿಕೊಳ್ಳಬೇಕು 


ಅ - ನಿನ್ನ ಸ್ನೇಹಿತನು ಒಪ್ಪುವನೋ ? 


ಮೂ~ ಅನು ನನಗಿರಲಿ..

 

ಅ-ಹಾಗಾದರೆ ಕೇಳಿನೋಡುವೆನು, ನಾಳೆಯೋ ನಾಳಿದ್ದೋ ಸರ್ 

ಟಿನಿಂದ ವಾಪಸುಬರುವರು, ಈಗ ನಿನ್ನ ಮದುವೆಯವಿಚಾರವೇನುಹೇಳು. 


ಮೂ- ( ಎದೆಯಲ್ಲಿ ಝಗ್ ಎನ್ನಲು ) “ ಈಗ ನನಗೆ ಮದುವೆಯು 

ಆವಶ್ಯಕವಿಲ್ಲ, ನನ್ನ ಓದು ಮುಗಿಯಬೇಕು 

೭೮------------------------------------------------------------------------- 

ಅ- ಓದಿದರೆ ಓದು: ಓದಿಗೂ, ಮದುವೆಗೂ ಏನು ಸಂಬಂಧ ? 


ಮೂ- ಅದೇನು ಸಂಬಂಧವೋ, * ವಿವಾಹೋವಿದ್ಯನಾಶನಂ ” 


ಅ- ನಿನ್ನ ತಂದೆ ಓದುತ್ತಿರುವಾಗ ನಾನು ನಿನ್ನನ್ನು ಹೆತ್ತು ಮೂರು 

ತಿಂಗಳಾಗಿತ್ತು. 


ಮೂ ಆಗೆಲ್ಲಾ ಪೂರ್ವಕಾಲ ಈಗ ಆಗುವದಿಲ್ಲ 


ಅ- ಮದುವೆಯಾದರೆ ನಿನ್ನ ಹೆಂಡತಿಯು ನಮ್ಮ ಹತ್ತಿರವಿರುವಳು 

ನೀನು ಎಲ್ಲಿಯಾದ ರೂ. ಓದುತ್ತಿರಬಹುದು. 


ಮೂ- ಹಾಗಾದರೆ ನನಗೆಲ್ಲಿ ಸಂಪಾದಿಸಿರುವಿರಿ ? 


ಅ...ಮೈಸೂರಿನಲ್ಲಿ ಯಾರೋ ಉದ್ಯೋಗಸ್ಥರಂತೆ. ಅವರ ಮಗ 

ಳಿಗೆ ೧೨ವರ್ಷಗಳಂತೆ ಆ ಕನ್ಯೆ ಆಗಬಹುದೋ? 


ಮೂ. ಅಮ್ಮಾ, ದೊಡ್ಡ ಉದ್ಯೋಗಸ್ಥರ ಮನೆಗಳಿಂದ ಹೆಣ್ಣುಗಳನ್ನು 

ತಂದು ಅವರಿಗೆ ಊಳಿಗವನ್ನು ಮಾಡಲು ನನ್ನಕೈಲಾಗುವುದಿಲ್ಲ “ ನಮ್ಮ 

ಮನೆಯಲ್ಲಿ ಬೆಳಗಾಗುತ್ತಲೂ, ಟೀ, ಕಾಫಿ, ಕೋಕೋ, ಫಲಹಾರಗಳಾ 

ಗುತ್ತಿದ್ದವು. ನಿಮ್ಮ ಮನೆಯಲ್ಲಿ ಏನಿದೆ " ಎಂದರೆ ನಾನೇನು ಮಾಡುವುದು. 

ಯಾವದೊಂದು ಕೆಲಸವನ್ನು ಹೇಳಿದರೂ 'ನನಗೆ ಬಾರದು, ನನಗೆ ಮಾಡಿ 

ಅಭ್ಯಾಸವಿಲ್ಲ' ಎಂದರೆ ನಾನು ಮಾಡಲೇ ? ಕಲ್ಲೂರಕಟ್ಟೆಯಲ್ಲ;ಿ ಒಬ್ಬನು 

ಉದ್ಯೋಗಸ್ಥರಮಗಳನ್ನು ಕಟ್ಟಿಕೊಂಡು ಪಟ್ಟಪಾಡನ್ನು ನೀನು ಮರೆತೆಯಾ? 

ಅವರ ಸಹವಾಸವೇಬೇಡ. ಸದ್ಯಃ ಅವರು ನಮ್ಮ ಮಾತುಗಳನ್ನು ಕೇಳಿ 

ಕೊಂಡಿರುವದಿರಲಿ. ನೀವು ಅವರ ಚಾಕರರಾಗಿರಬೇಕು. 


ಅ- ಸರಿಯಪ್ಪಾ ಈಗ ನೀವೆಲ್ಲರೂ ಕೆಲಸಗಳನ್ನು ಮಾಡುವದಿಲ್ಲವೆ? 


ಮೂ- ಅಹುದು, ಈಗ ನೀವು ಮಾವಲೇದಾರರ ಮನೆಯವರಾದಿರಿ 

ಮೊದಲು ಏನಾಗಿದ್ದಿರಿ. ನೀವು ಕಷ್ಟ ಪಡುತ್ತಿರುವುದು ಚಿಕ್ಕಂದಿನಿಂದಲೂ 

ಬಂದುದು. 

 

ಅ-ಹಾಗಾದರೆ ನಿನಗೆಂತಹ ಹೆಂಣುಬೇಕು ? 


ಮೂ-ಅಗೋ ಎದುರುನಾನಿನಲ್ಲಿ ಮೂರನೆಯ ಮನೆಯಲ್ಲಿ ಸಾವಿ 

ತ್ರಿಯಿರುವಳ.. ಆ ದಿನ ನನ್ನ ಗಾಡಿಯಲ್ಲಿಯೇ ದೇವಸ್ಥಾನಕ್ಕೆ ಬಂದಿ 

೭೯-------------------------------------------------------------

ದ್ದವಳು  ಅವಳನ್ನು ಕೊಟ್ಟು ಮದುವೆ ಮಾಡಿ, ಇಲ್ಲವೋ ನನಗೆ ಮದು 

ವೆಯೇಬೇಡ. 


ಅ-ನಿನಗೆ ಹುಚ್ಚು, ಶಾನುಭೋಗರಮನೆಯ ಹೆಣ್ಣನ್ನು ತಂದರಾದೀತೇ  


ಮೂ-ಉದ್ಯೋಗಸ್ಥರಮನೆಯ ಹೆಂಗಸರು ಮಕ್ಕಳನ್ನ ಹೆತ್ತಂತೆಯೆ 

ಶಾನುಭೋಗನ ಹೆಂಡತಿಯೂ ಸಾವಿತ್ರಿಯನ್ನು ಹೆತ್ತಳು ವ್ಯತ್ಯಾಸವೇನು? 

 

ಅ- ನಿನಗೆ ಹುಚ್ಚು, ನಿನಗೆ ಅವರು ಮದ್ದನ್ನು ಹಾಕಿರುವರು. 

ಇಲ್ಲದಿದ್ದರೆ ನೀನು ಹೀಗೆ ಮಾತನಾಡುತ್ತಿರಲಿಲ್ಲ ಓಹೋ! ಈಗ 

ಗೊತ್ತಾಯಿತು. ನೀನು ಎಷ್ಟು ಹೊತ್ತಾದರೂ ಮನೆಗೆ ಬಾರದೆ ಕಾಲಕಾಲಕ್ಕೆ  

ಊಟವನ್ನು ಮಾಡದೆ ತಿರುಗುತ್ತಿದ್ದುದು ಇದರಿಂದಲೇ ? ಇನ್ನೇಮಾಡಲಿ 

ನಿನಗೆ ವಾಂತಿಗೆ ಕೊಡಿಸಬೇಕು. 


ಮೂ- ನನಗೆ ಏನನ್ನೂ ಕೊಡಿಬೇಡ, ನನಗೆ ಬುದ್ಧಿ ಇರುವುದು


ಅ-ಬುದ್ಧಿಯಿಲ್ಲ, ಬುದಧಿಯಿದ್ದರೆ ಅವಳನ್ನೇಕೆ ಬಯಸುವೆ?


ಮೂ-ನಾನು ಹೇಳಿದಂತೆ ಕೇಳುವಳೆಂದು 


ಆ -ನೀನು ಹೇಡಿಯಾದರೆ, ಯಾರೂ ನಿನ್ನ ಮಾತುಗಳನ್ನು ಕೇಳು 

ವುದಿಲ್ಲ   ಈಗ ನಿನ್ನ ತಂದೆ ಏನಾದರೂ ನನ್ನ ಮಾತು ಕೇಳುವರೇ ? 


ಮೂ. ಆದೇನೋ; ಮಾಡಿದರೆ ಈ ಮ.ದುವೆ, ಇಲ್ಲವಾದರೆ ನನ್ನ... 


ಆ ನಾನು ಒಪ್ಪುವದಿಲ್ಲ. ನೀನು ದಾರಿಗೆ ಬರದಿದ್ದರೆ, ನಾನು ಊಟ 

ವನ್ನೇ ಮಾಡುವದಿಲ್ಲವೆ 

-–- 

೧೫ ನೆಯ ಪರಿಚ್ಛೇದ. 

ಎತ್ತಕಡೆಯಿoದಲೂ ಮೆಘಾವfಣಕ್ಕಾರಂಭವಾಯಿತು ಈ ಹೃದ 

ಯಾಂಬರವೆಲ್ಲಾ ಕ್ಷಣಮಾತ್ರದಲ್ಲಿ ಕಪ್ಪಾಯಿತು. ಕಾದಂಬಿನಿಯೋಪಾದಿ 

ಯಲ್ಲಿ ಚಿಂತೆಯ ಮೇಲೆ ಚಿಂತೆ ಮುಸುಕಲಾರಂಭಿಸಿತು. ಒಂದೆರಡು ಆಶೆ 

ಗಳೆಂಬ ನಕ್ಷತ್ರಗಳೇನಾದರೂ ತಲೆದೋರುವುವೆಂದರೆ ಅವುಗಳ ಸುಳಿವೇ 

ಕಾಣುವುದಿಲ್ಲ ಉಗ್ರವಾದ ಬಿರುಗಾಳಿಯು ಮಧ್ಯದಲ್ಲಿ ಸಿಕ್ಕಿದ ಒಣಗಿದ 

೮೦------------------------------------------------------------------------

ತರಗೆಲೆಯಂದದಿಮೂರ್ತಿಯ ನಿರಾಧಾರನಾಗಿ ಅಲೋಚನೆಗಳ ಜತೆಯಲ್ಲಿ 

ಹಾರಾಡುತ್ತಿದ್ದನು. ಅವನಿಗೆ ಈಪ್ರಪಂಚದಲ್ಲಿ ಸುಖಪಡಲಾವವಸ್ತುವೂ 

ಇಲ್ಲವೆಂದುಕೊಂಡನು. 


ಸಾವಿತ್ರಿಯು ಹೊರಟುಹೋದಳು ತಾಯಿಯ ಮನಸ್ಸಿಗೆ ಖೇದ 

ವನ್ನುಂಟುಮಾಡಿಕೊಂಡಳು. ಏನುವಾದವದು ? ಇದೆಲ್ಲವೂ ಯಾರ 

ತಪ್ಪು, ತನ್ನ ತಪ್ಪೇ, ಅಹುದು. ತಾನು ಸಾವಿತ್ರಿಯನ್ನು ಏಕೆ ಬಯಸಬೇ 

ಕು, ಅವಳಾರನ್ನು ಮದುವೆಯಾದರೆ ತನಗೇನು, ದಾರಿಯಲ್ಲಿ ಹೋಗುವ 

ಮಾರಿಯನ್ನು ಮನೆ ಹೊಕ್ಕುಹೋಗೆಂದಹಾಗಾಯಿತು. ಮನೆಯೊಳಗೆ 

ಎಲ್ಲರೂ ವಿಷಣ್ಣವದನರಾಗಿರುವರು. ಒಂದು ಕಡೆ ತಾಯಿ ಒ೦ದು ಕಡೆ 

ಸಾವಿತ್ರಿ, ಯಾವುದನ್ನು ನೋಡುವುದು ಸಾವಿತ್ರಿಯನ್ನು ಬಿಟ್ಟು ಬಿಡಲೇ 

ನನಗೇಕೆ, ಅವಳು. ಇವರು ಯಾರನ್ನು ಮದುವೆಯಾಗೆಂದರೆ ಆಗುವೆನು 

ಆಯ್ಯೋ, ಎಂತಹ ಹುಡುಗಿ ಅನ್ಯಾಯವಾಗಿ ನಿರಂತರವಾದ ದುಃಖಸಮು 

ದ್ರದಲ್ಲಿ ಮುಳುಗುವಳು. ಅವಳ ರೂಪಂತೂ ದಿವ್ಯವಾಗಿಗೆ ಅದಿನವೋ 

ನನ್ನ ಜೀವಮಾನದಲ್ಲಿ ಅಂತಹ ದಿನವು ಸಿwವುದೆ !! ಸಿಗಲಾರದು!  ಸಿಗುವ 

ದಿಲ್ಲ! ಆ ಬೆಳದಿಂಗಳಿನಲ್ಲಿ ! ಆಯೊಂದುಮುಖದಲ್ಲದ ಕಾಂತಿವಿಶೋಷವನ್ನು 

ವರ್ಣಿಸಲಸಾಧ್ಯ ತಾವಾವಾಗಿಯೇ ನೋಡಬೇಕು ನೋಡಿದರೆ, ಆ ಪೂರ್ಣ 

ಚಂದ್ರನೆಲ್ಲಿ? ಚಂದ್ರನು ಕೇವಲುರಾತ್ರಿಗಳಲ್ಲಿ ಕೆಲವುದಿವಸಮಾತ್ರ ಮನೋ 

ಹರನಾಗಿ ಆಹ್ಲಾದವನ್ನುಂಟುಮಾಡುವನು. ಇವಳ ಮುಖಬಿಂಬಿತವಾದ 

ರೋ ಸದಾ ಪಕ್ಷಭೇದವಿಲ್ಲದೆ, ಹಗಲಿರುಳೆಂಬ ವ್ಯವಧಾನವಿಲ್ಲದೆ, ಏಕ 

ರೀತಿಯಾಗಿ ಮನಸ್ಸಿಗೆ ಸಂತೋಷವನ್ನುಂಟು ಮಾಡುತ್ತದೆ. ಆ ಉದ್ದವಾದ 

ನೀಳವಾದ ವೇಣಿ, ಎಂತಹ ಸೊಗಸು ! ಮೊನ್ನೆಯರಾತ್ರಿ ಮೈಮರೆತಿದ್ದು 

ನೀರನ್ನು ಮುಖಕ್ಕೆ ತಟ್ಟಿರಾಗ ಕೃಷ್ಣಸರ್ಪವೆಂದೇ ಬೆಚ್ಚಿಬಿದ್ದೆನಲ್ಲ. ಕd 

ಗೆ ಧೈರ್ಯಬಂತು. ಹೀಗಿರುವವಳನ್ನು ಬಿಟ್ಟು ಮಾತು ಬೇರೆ ಕೊಟ್ಟಿರುವೆ 

ನಲ್ಲಾ ಆಯೋ, ಈಗ ಆ ಮುದುಕನಿಗೆ ಅವಳನ್ನು ಒಪ್ಪಿಸಿ ಛೀ, ನಾನು 

ಸಾವಿತ್ರಿಯನ್ನು ಬಿಡಲಾರೆ, ನನಗೆ ಅವಳು ಸತಿಯಾಗಬೇಕು. ಇಲ್ಲವಾದರೆ 

ನಾನು ಬದುಕುವುದಿಲ್ಲ. 

೮೧----------------------------------------------------------------------


ಹಾಗಾದರೆ ತಾಯಿಯ ಮಾತಿಗೆ ಬದಲುತ್ತರವನ್ನೇನು ಕೊಡಲಿ ? 

ತಾಯಿಯಲ್ಲವೆ ? ಎಷ್ಟು ಕಷ್ಟಪಟ್ಟು, ಎಷ್ಟು ಆದರದಿಂದ ಸಾಕಿದಳೋ. 

ಈಗ ಆಕೆಯ ಮನಸ್ಸಿಗೆ ವ್ಯಥೆಯನ್ನುಂಟು ಮಾಡಿ, ಛೀ, ನಾನು ಪಾಪಿ! 

ನನಗೆ ಘೋರ ನರಕಪ್ರಾಪ್ತಿಯಾಗಬೇಕು ಸಾವಿತ್ರಿಯನ್ನು ಬಯಸಲೇ, 

ಸಾವಿತ್ರೀ ನೀನು ನನಗೆಬೇಡ-- ಎಂದು ಕಣ್ಣೀರು ಬಿಟ್ಟನು, ತಾಯಿಯಮಾತಿಗೆ 

ಬದಲು ಕೊಡಲಾರೆ. ಅಯ್ಯೋ ಅಕೆಯಮಾತಿಗೆ ಬದಲನ್ನು ಕೊಡಲಾರೆ, 

ಮಾತನ್ನು ಮೀರಲಾರೆ, ನಿನ್ನೆಯೆಲ್ಲಾ ಮಾತಿಲ್ಲ. ಸರಿಯಾಗಿ ಊಟವಿಲ್ಲ. 

ಒಂದೇರೀತಿಯಾಗಿ ಶೋಕಿಸುತ್ತಿರುವಳು ಎಷ್ಟು ಸಂಕಟಪಟ್ಟಿರುವಳೋ, 

ಹಡದತಾಯಿಗೆ ನಾನು ಸಂಕಟವನ್ನುಂಟು ಮಾಡಿರುವೆನಲ್ಲಾ! ನಾನು ಎಂತಹ 

ನರಾಂಧಮನು. ನನಗೆ ಈಲೋಕದಲ್ಲಿ ಸುಖವೇಬೇಡ. , ತಾಯಿಯ ಮಾ 

ತಿಗೆ ವಿರೋಧವಾಗಿ ನಡೆಯಲಿಲ್ಲವೆಂದರೆ ಸಾಕು. ಆಕೆಯನ್ನು ಈಗ ನೆನಸಿ  

ಕೊಂಡರೆ ನಾನು ಬದುಕಿರುವುದುಚಿತವಲ್ಲ. ತಾಯಿಯ ಮನಸ್ಸನ್ನು ನೋ 

ಯಿಸಿದವರುಂಟೆ ನನ್ನನ್ನು ಏನೆಂದು ಬೆಗೆದಳೋ. ಇವಳಾರು ಸಾವಿತ್ರೀ, 

ಎಷ್ಟು ದಿನದ ಪರಿಚಯ. ಒಂದುತಿಂಗಳು ಕೂಡ ಆಗಲಿಲ್ಲ. ತಾಯಿಯೋ 

ಹುಟ್ಟುವದಕ್ಕಿಂತ ಮೊದಲೇ ಹೊತ್ತಿದ್ದು, ತನಗೆ ನಿದ್ದೆಯಿಲ್ಲದಿದ್ದರೂ, ಸುಖ 

ವಿಲ್ಲದಿದ್ದರೂ ಗಣಿಸದೇ ಸಾಕಿದಳಲ್ಲ ಮೊನ್ನೆ ದಿವಸ ನಾನು ಕೋಪಿ 

ಸಿಕೊಂಡರೂ ಎಷ್ಟು ಶಾಂತಭಾವವನ್ನು ವಹಿಸಿದಳು ನಾವೆಷ್ಟು ತಪ್ಪುಗಳ 

ನ್ನುಮಾಡಿದರೂ ಕ್ಷಮಿಸುತ್ತೆ. ಭೂದೇವಿಯೋಪಾದಿಯಲ್ಲಿ ತಾಯಿಯರು 

ನಮ್ಮನ್ನು ಪಾಲಿಸುವರಲ್ಲ. ಅಂತಹವರಿಗೆ ಈಗ ಭೇದವನ್ನೆಣಿಸಿ, ಈ 

ಸಾವಿತ್ರಿಯನ್ನು ಕೈ ಹಿಡಿಯಲೇ.  ನನಗೆಬೇಡ. ಸಾವಿತ್ರಿಯ ಆಲೋಚನೆ 

ಯನ್ನು ದೂರಮಾಡುವೆನು, ತಾಯಿಯೊಂದಿದ್ದರೆ ಸಾಕು. ನನಗೆ ಇತರ 

ವಸ್ತುಗಳಾವುವೂ ಬೇಡ, ನಾವು ಜನ್ಮ ಜನ್ಮಾಂತರಗಳಲ್ಲಿಯೂ ತಾಯಿಯ 

ಋಣವನ್ನು ತೀರಿಸಲಾದೀತೆ ? ನನಗೆ ಸಾವಿತ್ರೀ, ಓ, ಸಾವಿತ್ರೀ ನೀನು 

ಬೇಡ ಬೇಡ, ನಿನ್ನನ್ನು ಇನ್ನು ಮುರಿಯುವೆನು, ಎನ್ನುತ್ತೆ ಕಣ್ಣೀರಪ್ರ 

ವಾಹವನ್ನು ಹೊರಡಿಸಿ ಮುಖವನ್ನು ತನ್ನೆರಡು ಕೈಗಳಿಂದ ಮುಚ್ಚಿ 

ಕೊಂಡನು. 

೮೨--------------------------------------------------------------------------

ಕೂಡಲೇ, ಆ ಚಿತ್ರಾವತಿಯು ತಟ್ಟನೆ ಮೇಲಕ್ಕೆದ್ದ ಹಾಗಾಯಿತು, 

ಚಂದ್ರನು ಕೋಟಿಸೂರ್ಯರಿಗಿಂತ ತೀಕ್ಷ್ಣಿವಾಗಿ ಪುನಃ ಭೂಮಿಗೆ ಬಂದಂತೆ 

ಭಾಪನೆಯಾಯಿತು. ಮರಳುರಾಸಿಯು ಬೆಟ್ಟದಷ್ಟು ಎತ್ತರವಾಗಿ ಬೆಳೆಯು 

ತ್ತಿದ್ದ ಹಾಗಾಯಿತು. ಸುತ್ತಮುತ್ತಲಿನ ಗಿಡಗಳೂ ಮರಗಳೂ ಒತ್ತೊ

ತ್ತಾಗಿ ಬಂದಂತಾದವು. ತಾನು ಚಿತ್ರಾವತಿಯ ದಡದಲ್ಲಿರುವುದಕ್ಕಿಂತ 

ಬದಲು, ಬೆಟ್ಟಗುಡ್ಡಗಳ ಸಾಲಿನಲ್ಲಿ, ಅಗಾಧವಾದ ಅರಣ್ಯದಲ್ಲಿ ಕಲ್ಲುಮು 

ಳ್ಳುಗಳಿಂದ ಕೂಡಿದಪ್ರದೇಶದಲ್ಲಿ ತಾನು ತಪ್ಪಿಸಿಕೊಳ್ಳಲು ಅವಕಾಶವಿಲ್ಲ 

ದಂತಹಪ್ರದೇಶದಲ್ಲಿ ಇರುವುದಾಗಿ ಎಣಿಸಿದನು. ಕೆಳಗೆಯಾವದೋಕೂಪ. 

ಮೇಲೆ ಎತ್ತರವಾದ ನಿಬಿಡವಾದ ಕಾಡು ಮರಗಳು ತೂರಲು: ಸಂದಿಲ್ಲ. 

ತಾನು ಒಂರು ಬಂಡೆಯಮೇಲಿರುವನು. ಮೇಲಿಂದಾರೋ ಕೂಗುವಂತೆ 

ಕೇಳಿಸುವರು, ತಿರುಗಿನೋಡಿದಾಗ ಯಾವುದೋ ಒ೦ದು ವಿಕಾರಮೂ 

ರ್ತಿಯು ನಿಂತಿರುವುದು, ಭಯವಾಗುವುದು. ಅಯ್ಯೋ ಹತ್ತಿರ ಹತ್ತಿರಕ್ಕೆ 

ಬರುವುದಲ್ಲಾ, ಎಲ್ಲಿ ಹೋಗಲಿ, ಹೇಗೆ ತಪ್ಪಿಸಿಕೊಳ್ಳಲಿ ಇನ್ನೂ ಹತ್ತಿರ 

ಬಂತು. ಕೂಪವನ್ನು ದಾಟಲೇ, ದಾಟಿಬಿಡುವೆನು. ಎನ್ನುತ್ತೆ ಕೂಪದಹತ್ತಿರ 

ಬಂದನು. ಹಿಂದಿನಿಂದ " ತಾಳು, ತಾಳು. ಬೇಡ ಬೇಡ" ಎಂದು ಕೂಗಿ 

ದಂತಾಯಿತು, ಕೂಗಿದವರಾರೆಂದು ಹಿಂದಿರುಗಿನೋಡಿದನು, ಅಭೀಷವಾದ 

ಆಕಾರಕ್ಕೆ ಬದಲು -ಆದು ಯಾರು-ನೋ.ಡಿದಂತಿರವದು ಅವಳು, ಅವಳ 

ಮುಖ, ಸಾವಿತ್ರಿಯು ಮುಖವಲ್ಲವೇ, " ಓ ಸಾವಿತ್ರಿ,” ಎನ್ನುತೆ ಹಿಂದು 

ರಿಗಿ ಬೇಗನೆ ಹತ್ತಲಾರಂಭಿಸಿದನು ಕೈಗಳಗೂ ಕಾಲುಗಳಿಗೂ ಮುಳ್ಳು 

ಗಳು ಚುಚ್ಚಿಕೊಂಡವು ಮನನೊ೦ದವನಾಗಿ ಮೇಲೆನೋಡಿರನು ಪುನಃ 

ಆ ಭೀಕರವಾದ ಮೂರ್ತಿ- ಹತ್ತಿರಕ್ಕೆ ಬರುತ್ತಲಿದೆ, ಈ ಸಾರ್ತಿ ಕೈಯನ್ನೆತ್ತಿ  

ಹೊಡೆಯುವಂತೆ ಬಂತು, ಇನ್ನುಳಿಯುವದಿಲ್ಲ ಎನ್ನುತ್ತಬೇಗನೆ ಕೂಪ 

ವನ್ನು ದಾಟಬುರಕನಾದನು ಪುನಃ “ ತಾಳು, ತಾಳು, ಬೇಡ, ಬೇಡ" 

ತಿರುಗಿ ನೋಡಿದನು, ಸಾವಿತ್ರಿಯಮುಖ. ಅಲ್ಲಿಯೇ ನಿಂತನು. ದೃಷ್ಟಿಸಿ 

೮೩---------------------------------------------------------------------- 

ನೋಡಿದನು, ನಿಶ್ಚಲವಾಗಿ ಆ ಮೂರ್ತಿಯೂ ನಿಂತಿತ್ತು. “ ಸಾವಿತ್ರೀಿ " 

ಎಂದನು ಎಳೆಗಳಲ್ಲಿನ ಮರಮರ ಶಬ್ದದಿಂದ ಬಾ, ಎಂದಹಾಗಾಯಿತು. 

ಊರ್ಧ್ವಶ್ವಾಸ ದಿಂದ ಹತ್ತಲಾಂಭಿಸಿದನು. ಪುನಃ ಮುಳ್ಳುಗಳು, ಪುನಃ 

ಆ ಭೀಕರವಾರ ಆಕಾರ. ಓಡಿಬರುವುದು. ಅದಕ್ಕೆ ಮುಳ್ಳುಗಳಿಲ್ಲ ತಾಗು 

ವದಿಲ್ಲ. ಈಗ ಆ ಕೂಪವನ್ನು ದಾಟಲೇಬೇಕು ಇಲ್ಲವಾದರೆ ಜೀವವು 

ಉಳಿಯುವದಿಲ್ಲ ಬೇಗನೆ, ಇ೪ದು ಬಂದನು ಭಾವಿಯಲ್ಲಿ ಬಿದ್ದುಹೋ 

ಗುತ್ತಿದ್ದನು " ತಾಳು, ತಾಳು, ಬೇಡ",  ಆ ಸವಿತ್ರಿಯು ಹತ್ತಿರಕ್ಕೆ ಬಂ 

ದಳು, ಬಹಳ ಹತ್ತಿರಕ್ಕೆ ಬಂದಳು.  ಒಂದು ಮಾರುದೂರದಲ್ಲಿ ನಿಂತಳು, 

ಆದರೂ ಚಂತೆಯಿಲ್ಲ. ಬಾವಿಯನ್ನು ದಾಟಬೇಕು ಎಷ್ಟಅಳವಿದೆಯೋ 

ನೋಡಿದನು. ತನ್ನ ತಾಯಿ ಮುಖವು ತೇಜಃಪುಂಗವಾಗಿ ಕಾಣಸುತ್ತಿತ್ತು. 

ಎರಡು ಕೈಗಳನ್ನೂ ಚಾಚಿ, “ಬಾ, ಮೂರ್ತಿ, ನನ್ನ ಕಂದಾ, ಬಾ" ಎಂದು 

ಕರೆಯುವಂತೆ ನಿಂತಿದ್ದಳು. ಹಿಂದುಗಡೆಯಲ್ಲಿ ಸಾವಿತ್ರಿಯು “ತಾಳು, ತಾಳು, 

ಬೇಡ ಬೇಡ " ಎನ್ನುವಂತೆ ನಿಂತಿದ್ದಳು ಇಬ್ಬರನ್ನೂ ನೋಡಿದನು ತಟ 

ಸ್ಥನಾದನು, ಮೂರ್ತಿಗೆ ಜ್ಞಾನವು ಶೂನ್ಯವಾಗುತ್ತಲಿದ್ದಹಾಗೆ ತೋರಿತು. 

ಮೈಮೇಲೆ ಎಚ್ಚರವಿಲ್ಲದಂತಾಯಿತು ಕಣ್ಣುಗಳನ್ನು ಮುಚ್ಚಿದನು. 

ಪುನಃ ಕಷ್ಟಗಳನ್ನು ಬಿಟ್ಟನು. ನಿಜವಾಗಿಯೂ ಕಣ್ಣುಗಳನ್ನು ಬಿಟ್ಟನು, 

ಎಲ್ಲವೂ ಮಾಯವಾಗಿದ್ದವು. ಅದೇಚಿತ್ರಾವತಿಯ ಬಳಿ ತಾನು ಮರಳಿನ 

ಮೇಲೆ ಕುಳತಿರುವನು, "ಇದೇನು " 

 

"ಇದೇನು ? 


" ಆದು ಯಾರು ಎಂದು ಹಿಂದಿರುಗಿನೋಡಿದರು 


“ನಾನು ರಾಜ. 


"ಅದು ಯಾವಾಗ ಬ೦ದೆ 


“ ನಾನು ಬಂದು ಬಹಳ ಹೊತ್ತಾಯಿತು, ಇಷ್ಟು ಹೋದರೂ ನೀನು 

ತಿರುಗಿ ನೋಡಲಿಲ್ಲವೇಕೆ? 


"ಏನೋ ನೋಡಲಿಲ್ಲ"

 

“ ನನ್ನಲ್ಲಿ ಮುಚ್ಚು ಮರೆಯನ್ನುಮಾಡಬೇಡ, ಇದ್ದ ಸಂಗತಿಗ  

ಳನ್ನು ಹೇಳು " 

೮೪--------------------------------------------------------------

“ಹೇಳುವುದೇನು? “ 


"ನೀನೇಕೆ ಇಲ್ಲಿರುವೆ ? 


"ಚಿತ್ರಾವತಿಯ ಒಳಗೆ ಎಲ್ಲರೂ ಬರುವಂತೆ ನಾನೂ ಬಂದೆನು " 


"ಎಲ್ಲರೂ ಹೊರಟುಹೋಗಿ ಬಹಳ ಹೊತ್ತಾಯಿತ್ತಲ್ಲ, ನೀನು

 ಏಕಾಂಗಿಯಾಗಿ ಇಲ್ಲಿ ಏಕೆ ಇರಬೇಕು ? 

 

" ಅದರಲ್ಲೇನು ? 


"ಏಳು ಹೊರಡೋಣ "


" ಇನ್ನೂ ಹೊತ್ತಿರುವದು, ನೀನೂ ಕುಳಿತುಕೋ0


 " ಈ ನದಿಯು ಹೇಗೆ ಹರಿಯವದು, ನೋಡಿದೆಯಾ? 

  

• ನೋಡಿದೆನು. ಎಷ್ಟು ಕಲ್ಮಶಗಳನ್ನು ಸಮುದ್ರಕ್ಕೆ ಸಾಗಿಸಿದರೂ 

ಇನ್ನೂ ಇದ್ದೇ ಇರುವದೆಂದು ಬೇಜಾರುಪಟ್ಟಿಕೊಂಡು ನಿಧಾನವಾಗಿ ಹರಿ 

ಯುವಂತಿದೆ." 


“ ನನಗೆ ಈ ದಿನವೇನೋ ಸಂತೋಷವಾಗಿದೆ.  


“ ಅದೇನು ? 


“ ನಿನ್ನನ್ನು ಹುಡುಕಿಕೊಂಡು ಮನೆಗೆ ಹೋಗಿ ಕೂಗಿದೆನು. 

ನಿನ್ನತಂಗಿಯ. ಹೊರಗೆ ಬಂದಳು. ಮಾತನಾಡುವಳೇನೋ ಎಂದರೆ, ತಟ್ಟನೆ 

ಒಳಗೆ ಹೊರಟುಹೋದಳು. 


“ ಅದರಲ್ಲಿ ಉತ್ಸಾಹಕ್ಕೆ ಕಾರಣವಿಲ್ಲವಲ್ಲ 


“ಇಲ್ಲ. ನಿಮ್ಮ ಗುರುವನ ಕೈಲಿ ಚಿತ್ರವತಿಯೆಡೆಗೆ ಹೋಗಂದು 

ಹೇಳಿ ಕಳುಹಿಸಿದಳು. 


“ಅದಕ್ಕೇನು ? 


“ ಅದಕ್ಕೇನೋ ನಿನ್ನದೊಂದು ಆಲೋಚನೆಯುಂಟಾಯಿತು ಆದಿ '

ರಲಿ ನಿನ್ನ ಸಾವಿತ್ರಿಯು ಹೊರಟುಹೋದ ಸಮಾಚಾರವು ತಿಳಿಯಿತೇ? 


" ತಿಳಿಯರೇ ಏನು ? ನನಗೆಲ್ಲವೂ ಗೊತ್ತು, ಈಗ ಆ ಮಾತ 

ನ್ನೆತ್ತಬೇಡ 

 

" ಆದು ಏಕೆ, ಕೆಲವುದಿವಸಗಳ ಹಿಂದೆ ಸಾವಿತ್ರಿಯ ಹೆಸರು, ನಿನಗೆ 

ನಿದ್ರಾಹಾರಗಳಾಗಿತ್ತಲ್ಲ" 

೮೫-------------------------------------------------------------------------


" ಈಗ ನಾನು ಸಾವಿತ್ರಿಯನ್ನು ಮದುವೆಯಾಗುವಸಂಭವವಿಲ್ಲ. 


“ ನಿನ್ನ ತಂದೆ ತಾಯಿ.ಗಳು ಒಪ್ಪಲಿಲ್ಲವೇನು ? 


* ತಂದೆಯ ಅಭಿಪ್ರಾಯವು ತಿಳಯಲಿಲ್ಲ, ತಾಯಖಿಗಂತೂ ಮನಸ್ಸೇ 

ಇಲ್ಲ, ನಿನ್ನೆಯದಿವಸ ಮಾತುಗಳ ಮೇಲೆ ಮಾತು ಬ೦ದ) * ನನಗೆ ಸಾವಿ 

ತ್ರಿಯನ್ನು ಕೊಟ್ಟು ಮದುವೆ ಮಾಡಿದರೆ ಮಾಡಿ, ಇಲ್ಲವಾದರೆ ನನಗೆ ಮದು 

ವೆಯೇ ಬೇಡ " ಎಂದು ಹೇಳಿದೆನು ಅದಕ್ಕೆ ನಿನ್ನೆಯಿಂದಲೂ, ಊಟ 

ವಿಲ್ಲದೆ ಮಾತಿಲ್ಲದೆ, ರೋದಿಸುತ್ತಿರ.ವಳು. ನಾನೇನು ಮಾಡಲಿ ? 


“ ಸಾವಿತ್ರಿಯ ಆಲೋಚನೆಯನ್ನು ದೂರಮಾಡು. 


“ ಮಾಡಿರುವೆನು, ಆದರೆ ರಾಜ, ಆದರೆ ಅದಿನ ಒಂದು ನಡೆದು 

ಹೋಯಿತು, ಅದು ನನ್ನ ಜನ್ಮವಿರುವವರೆಗೂ ಮರೆತುಹೋಗುವದಿಲ್ಲ. 

ಮುಂದೆ ಯಾರನ್ನು ಮದುವೆಯಾದರೂ, ಈ ವಿಷಯವು ಜ್ಞಾಪಕಕ್ಕೆ ಬಂದ 

ರೆ ಅಲ್ಲಿಯೇ ಭೂಗತವಾಗಿ ಹೋಗುವನು. 


" ಅದೇನು ಅಂಥದು 


“ ನಾಮು ಅವಳನ್ನ ಮಟ್ಟಿರುವನು, ಅಪ್ಪಿಕೊ೦ಡಿರುವೆನು. ಮಾತು 

ಕೊಟ್ಟಿರುವೆನು. 


“ ನೀನು, ಯಾವಾಗಲೂ, ಹೀಗೆಯೇ ಅಷ್ಟರಲ್ಲಿ ಆತುರವೇನಿತ್ತು. 


" ಆಗ ಖಂಡಿತವಾಗಿಯ, ವುರುವಯಾಗುವೆನೆಂದು ತಿಳಿದಿದ್ದೆ. 


" ನಿನ್ನ ತಂದೆಗೆ ಹೇಳಿನೋಡು . 


" ಈ ಮಾತುಗಳನ್ನು ತಂದಗೆಂತು ಹೇಳಲಿ, ನನಗೆ ಮದುವೆಯನ್ನು 

ಮಾಡು, ನನಗೆ ಸಾವಿತ್ರಿಯನ್ನು ಕೊಟ್ಟು ಮದುವೆಮಾಡು.' ಎಂದು 

ಹೇಳಲೇ? ಅದಕ್ಕೆ ಪ್ರತಿಯಾಗಿ ವಿಷಪಾನವನ್ನಾದರೂ ಮಾಡುವೆನು. ಅದನ್ನು 

ಮಾತ್ರ ಕೇಳಲಾರೆ. ಆದರೂ, ನನ್ನ ತಂಗಿ ಇರುವಳು ಅವಳಂದ ಈ 

ಕಾರ್ಯವು ಕೈಗೂಡಬಹುದು 


" ಸಾವಿತ್ರಿಯನ್ನೇ ಮರೆತುಬಿಡು.  


“ ಹೇಳಲಿಕ್ಕೆ ಸುಲಭ, ಒಂದು ಬಾಯಿಮಾತು. ಆದರೆ ನನ್ನ 

ಹೃದಯದಲ್ಲಿ, ಯಾವಮೂರ್ತಿಯು ಸ್ಥಿರವಾಗಿ ಆಶ್ರಯವನ್ನು ಹೊಂದಿರು 

೮೬-----------------------------------------------------------------------


ವುದೊ ಯಾವಳನ್ನು ನಾನು ಸದಾ ಬಯಸತ್ತಿರುವನೋ ಅ೦ತಹವಳನ್ನು 

ಮರೆತುಬಿಡು ಎಂದು ಹೇಳುವೆಯಲ್ಲ, ಮರೆಯಬಲ್ಲೆನೆ ಆ ವಿಗ್ರಹವನ್ನೂ - 

ಆ ಕಾಂತಿಯನ್ನೂ, ಆ ದಿನವನ್ನೂ, ಮರೆಯಬಲ್ಲೆನೆ, ಇ,ಲ್ಲ ಅದು ನನ್ನ 

ದೇಹದೊಂದಿಗೆ ನಾಶವಾಗಬೇಕಲ್ಲದೆ, ಇತರ ವಿಧಗಳಲ್ಲಿ ಹೋಗಲಾರದು" 

ಎನುತ್ತ ಕಣ್ಣಿರನ್ನು ಬಿಟ್ಟನು, 


“ನಾನು ನಿನಗೆ ಏನನ್ನು ಹೇಳಲೂ ತೋರುವುದಿಲ್ಲ. ಘೋರಸಂ 

ಕಟದಲ್ಲಿ ಬಿದ್ದಿರುವೆ. 


"ಆ ದಿನ ರಾತ್ರಿಯಲ್ಲಿ ನಿನಗೆ ಹೇಳುವದನ್ನು ಮರೆತಿದ್ದೆನು. ಸಾವಿ 

ತ್ರಿಯಿ ನನ್ನಮಾತನ್ನು ಮೀರಿಯೂ ಅದೇ ರಾಮಚಂದ್ರಯ್ಯನನ್ನು 

ಮದುವೆಯಾದ ಹಾಗೂ ಕೆಲವು ಕಾಲದ ಮೇಲೆ ತಾನು ಮಾಡಿದ್ದು ತಪ್ಪಾಯಿ 

ತೆಂದು ತಿಳಿದು ಎಲ್ಲರೂ ಬಯಸುವುದಾದ, ಲೋಕೋಪಕಾರಿಯಾದ ಅಮೃತ 

ವನ್ನು ಬಿಟ್ಟು, ಲೋಕವನ್ನುದಹಿಸುವ, ಯಾರೂ ಕೇಳಿಲೊಲ್ಲದ ಹಾಲಾ 

ಹಲವನ್ನು ಕುಡಿದೆನೆಂದು ಸಂಕಟಪಡುತ್ತಿರುವಾಗ, ಕೃಷ್ಣವೇಣಿಯೂ 

ನಾನು ಎದುರು ಹೋದಂತೆಯೂ ಆಗ ತನ್ನ ಕಷ್ಟಗಳೆಲ್ಲವನ್ನೂ ನನ್ನ 

ತಂಗಿಯೊಡನೆ ಹೇಳುತ್ತ, ಆ ದಿನ ಗುಡಿಯಲ್ಲಿ, ನಾನು ಕೈ ಎಳೆದುದನ್ನೂ, 

ತನ್ನೊಡನೆ, ಮನೆಯಲ್ಲಿ ಮಾತನಾಡಿದುದನ್ನೂ ಜ್ಞಾಪಿಸಿಕೊ೦ಡು ತಾನು ಇ

ನ್ನು ಜೀವಿಸಿರುವರು ಸಾಧ್ಯವಿಲ್ಲವೆಂದು, ಈ ಚಿಂತೆಯಲ್ಲಿಯೇ ದಗ್ಧಳಾಗಿ 

ಹೋಗುವೆನೆಂದೂ ನುಡಿದು, ತಾನು ಆ ಕಳೇಬರವನ್ನು ನೀಡಲಪೇಕ್ಷಿಸಿ, 

ಭಾವಿಯಲ್ಲಿ ಬಿಳಲುದ್ಯುಕ್ತಳಾದಾಗ, ನಾನು ಘಾಬರಿಯಿಂದ " ಸಾವಿತ್ರೀ 

ಬೇಡ, ಬೇಡ"  ಎನ್ನುತ್ತೆ ಎಚ್ಚರಿಕೆ ಯನ್ನು ಹೊಂದಿದೆನು ಅದು ಈಗ 

ಲೂ ಜ್ಞಾಪಕವಿದೆ. ಆ ದಿನರಲ್ಲಿಯೇ ನಿನ್ನನ್ನು ನೋಡಲಿಕ್ಕೂಸಹ ಆಗದೆ 

ನನ್ನತಂದೆಯೊಂದಿಗೆ ಹೊರಟುಹೋಗಬೇಕಾಯಿತು. 

 

"ಹಾಗಾದರೆ ಅವಳು ನಿನಗೆ ದಕ್ಕತಕ್ಕವಳಿಲ್ಲ. 


" ಆದರೂ ಆಶೆಯೊಂದು ಬಾಧಿಸುತ್ತಿರುವದು ಸಿಗುವಳೋ, 

ಏನೋ ಎಂಬ ಭ್ರಾಂತಿಯೊಂದು ಬಿಡಲೊಲ್ಲೆನೆಂಬುವುದು. ಈಗ 

ನೀನು ಬರುವದಕ್ಕಿಂತ ಮೊದಲು, ಅತಿದುಃಖದಿಂದ ಆಲೋಚಿಸುತ್ತಿರು 

೮೭-----------------------------------------------------------------------

ವಾಗ ನಾನೆಲ್ಲಿಯೋ ಕುಳಿತಿದ್ದಂತೆಯೂ, ವಿಕಾರವಾದ ಮುಖಗಳನ್ನುನೋ 

ಡಿದಂತೆಯೂ, ಭಾವಿಯಲ್ಲಿ ಬೀಳಲು ಹೊರಟಂತೆಯೂ, ಹಿಂದಿನಿಂದ 

ಯಾರೋ ಕೂಗಿದಮತೆಯೂ ತಫೋಚಿದವು. 


" ನನಗೆ ಇವೆಲ್ಲವೂ ಆಶ್ಚರ್ಯವನ್ನುಂಟುಮಾಡುತ್ತಿವೆ. 

ನನಗಾದರೋ ಮಹತ್ತರವಾದ ವ್ಯಥೆಯನ್ನುಂಟುಮಾಡುತ್ತಿವೆ.

******


- -: ೧೬ ನೆಯ ಪರಿಚ್ಛೇದ. --


ನಡಹಗಲಿನಲ್ಲಿ, ಸೂರ್ಯದೇವನು , ತನ್ನ ಪೂರ್ಣ ಶಕ್ತಿಯನ್ನು ವಿಶದ 

ಪಡಿಸುತ್ತಿರುವಾಗ ಈತನಿಗೆ ಹೆದರಿ ವಾಯುದೇವನು, ಎಲ್ಲಿಯೋ ಅವಿತು 

ಕೊ೦ಡಿರುವಲ್ಲಿ, ಒಂದು ಎರಡೆತ್ತಿನಭಂಡಿಯು  ನಿಧಾನವಾಗಿ ಪ್ರಯಾಣಮಾ 

ಡುಲಿತ್ತು. ಹಿಂದುಗಡೆಯಲ್ಲಿ ಒಂದು ಕ೦ಬಳಿಯನ್ನು ಕಟ್ಟಿದ್ದರು., ಮುಂದು 

ಗಡೆಯಲ್ಲಿ ಮಾತ್ರ ಬಯಲಾಗಿತ್ತು ಉರಿಯುವ ಬಿಸಿಲಿನಝಳವನ್ನು ತಾಳ 

ಲಾರದೆ ಒಳಗಿರುವ ಜನಗಳು ತಹತಹಪಡುತ್ತಿದ್ದರು. ಅಗ ಗ್ರಹಚಾರಕ್ಕೆ 

ತಕ್ಕಂತೆ ಗಾಡಿಯಚಕ್ರವು ಸ್ವಲ್ಪ ಹಳ್ಳಕ್ಕಿಳಿಯಲು  ' ಢಕ್'' ಎನ್ನುತ್ತೆ 

ಗಾಡಿಯ ಗೂಟವು ತಳೆಗೆ ತಗುಲುತ್ತಿತ್ತು ಅದನ್ನು ಸುಧಾರಿಸಿಕೊಳ್ಳುವದ 

ರೊಳಗಾಗಿ ಬೆನ್ನುಮೂಳೆಗಳು ಪುಡಿಯಾಗ:ತ್ತಿದ್ದವು ಸಾಲುದುದಕ್ಕೆ ಮು:ಖ 

ಮುಖಕ್ಕೂ ತಾಡನಗಳು ಕೆಳಗಿಳಿಯೋಣವೆಂದರೆ ಅತ್ಯುಗ್ರವಾದ ಸೂರ್ಯಾ

ತಪ ಮರಗಳ ಸಾಲೇ ಇಲ್ಲ. ಇಲ್ಲೊಂದು ಅಲ್ಲೊಂದು ಗಿಡವು ಕಾಣಿ 

ಸುವದು, ಕಲ್ಲುಬಂಡೆಳೂ, ಗುಡ್ಡಗಳೂ ಮಾತ್ರ ಹೇರಳವಾಗಿರುವವು 

ಏತನ್ಮಧ್ಯೆ ಎಲ್ಲಗೂ ಬಾಯಾರಿಕೆಗಾರಂಭವಾಯಿತು. "ಸಾವಿತ್ರೀ, 

ಆ ಲೋಟವನ್ನು ಕೊಡು"  ಲಕ್ಷಮ್ಮನು ~. ನೀರೆಲ್ಲಾ ಕುಡಿದು ಬಿಡ 

ಬೇಡಿ, ಇನ್ನು ಬಹಳ ದೂರದವರೆಗೂ ನೀರು ಸಿಗ ವದಿಲ್ಲ" ಎಂದಳು 

" ಅಯ್ಯೋ ಸಾಯಂಕಾಲವಾದೀತೆ, ತಂಗಾಳಿಯು ಬೀಸೀತೆ, ಗಿಡ ಮರ 

ಗಳು ಬಂದಾವೇ ? ಎಂದು ಎಲ್ಲರೂ ಕೋರಲಾರಂಭಿಸಿದರು. ಎತ್ತುಗಳು 

ಮೆಲ್ಲಮೆಲ್ಲಗೆ ತೂಕಡಿಸುತ್ತಾ ಗಾಡಿಯನ್ನು ಎಳೆಯುತ್ತಿದ್ದವು. ಯತ್ನವಿ 

೮೮-----------------------------------------------------------------


ಲ್ಲದೆ ಪ್ರಯಾಣಮಾಡಿದರು, ಆಗಾಗ್ಗೆ . "ಟರ್‌, ಟ‌ರ್‌, ಎತ್ತೋಗತ್ತೆತ್ತ

ಥು,” ಎಂಬುವ ಶಬ್ದವೂ ಎತ್ತುಗಳ ಕೊರಳುಗಳಲ್ಲಿನ ಕಿರುಗಂಟೆಗಳ 

ಮಣ ಮಣ ಶಬ್ದವೂ ಕಿವಿಗಳಿಗೆ ಬೇಸರಿಕೆಯನ್ನು ಹೋಗಲಾಡಿಸುತ್ತಿದ್ದವು. 

ಒಂದೊoದು ಕಲ್ಲೂ ದೂರವಾಯಿತು, ಓಹಳ ದೂರವಾಯತು ಬಹಳ 

ಕಲ್ಲುಗಳನ್ನು ಬಿಟ್ಟಹೋದರು ಸೂರ್ಯನು ಪಶ್ಚಿಮದಲ್ಲಿ ತಗ್ಗುತ್ತಿದ್ದನು. 

"ಹೊಳೆಗೆ ಇನ್ನೆಷ್ಟುದೂರವುಳಿದಿರುವದು ? ” ಎಂದು ಯಾರೋಕೇಳಿದರು. 

ಇನ್ನೊಂದು ಮೈಲಿಯುoಟು" ಎಂದು ಯಾರೋ ಬದಲು ಕೊಟ್ಟರು. 


ಸಾಯಂಕಾಲವಾಗಿಹೋಯಿತು. ಬೇಕಾದರವರು ಗಾಡಿಯನ್ನು 

ಇಳಿಯಿರಿ, ಮರಗಳ ಸಾಲುಗಳಿವೆ., ತಂಪುಹುಟ್ಟಿತು " ಎಂದು ಕೇಳಿ 

ಕೋನೇರಯ್ಯನು ಕಂಬಳಿಯನ್ನು ಬಿಚ್ಚಿ ಧುಮಕಿದನು, ಅವನಹಿಂದೆಯೇ  

ಅವನ ಭಾವಮೈದಂದರೂ ಧುಮುಕಿದರು. ಗಾಡಿಯಲ್ಲಿ ನಾಗಮ್ಮನೂ, ಸಾವಿ 

ತ್ರಿಯೂ, ಲಕ್ಷಮ್ಮನೂ ಮಗುವೂ ಉಳಿದರು ರಸ್ತೆಯು ಚನ್ನಾಗಿತ್ತು, 

ಗಾಳಿಯು ಬಿರುಸಾಗಿ ಬೀಸುತ್ತಿತ್ತು. ಸಾವಿತ್ರಿಗೂ ಇಳಿಯಲು ಚಪಲ 

ಮನಸ್ಸಿನಲ್ಲಿರುವ ವೇದನೆಯು ನಿವಾರಣೆಯಾಗಬಹುದೆಂದುಕೊಂಡಳು 

ಕೆಳಕ್ಕೆ ಇಳಿದಳು ಗಾಡಿಯಜತೆಯಲ್ಲಿ ನಿಧಾನವಾಗಿ ನಡೆದುಬರುಿತ್ತಿದ್ದಳು. 


ಮಾರುತನು ನಿಷ್ಕರುಣಿಯಾಗಿ, ನಾಚಿಕೆಯಿಲ್ಲದೆ ಸಾವಿತ್ರಿಯ 

ಅಂಗಗಳನ್ನು ನೋಡಲೆಳಸುವನು, ಒಂದೊಂದುಬಾರಿ ನಿರಿಗೆಯು ಬಿಚ್ಚಿ 

ಹೋಗುವರೆಂದು ಹೆದರಿ, ಗಟ್ಟಿಯಾಗಿ ಹಿಡಿದುಕೊಳ್ಳುವಳು. ಒಂದೊಂದು 

ಬಾರಿ, ಸೆರಗಿನಕೊನೆಗಳು ಹಾರಿಕೊಂಡು ಆಕಾಶದಲ್ಲಿ ನಿಲ್ಲುವುವು. ಮುಂ 

ದಿನ ಕೂದಲುಗಳನ್ನು ಎಷ್ಟು ಹಿಂದಕ್ಕೆ ಒತ್ತಿದರೂ ಪುನಃ ಬಂದು ಬಂದು 

ಮುಖದಮೇಲೆಲ್ಲಾ ಹಾರಾಡುವುವು ಎಲ್ಲಿಯೋ ನೋಡುತ್ತಿರುವಾಗ 

ಕಣ್ಣುಗಳಲ್ಲಿ ಧೂಳು ತುಂಬಿಕೊಳ್ಳವದು. ಕಣ್ಣುಗಳನ್ನು ಬಿಡಲಿಕ್ಕಾ 

ಗದೆ, ಗಾಳಿಗೆ ವಾರೆಯಾಗಿ, ತನ್ನನ್ನು ಬಿಡಲೊಲ್ಲದೆಂದು ಬಗೆದು-ಬೆನ್ನನ್ನು 

ತಿರುಗಿಸಿಕೊಂಡು ಕಣ್ಣುಗಳನ್ನು ಉಜ್ಜಿಕೊಳ್ಳುವಳು. ಒಂದೊಂದು ಪಕ್ಷಿ 

ಯು ಕೂಗುವದನ್ನು ಕೇಳುವಳು. ಗಿಳಿಗಳ ಗುಂಪಾಗಿ ಒಂದು ಮರದ 

ಮೇಲೆ ಕುಳಿತು ಕೂರಲೀ ಹಾರಿಹೋದವು, ಅದನ್ನೂ್ನು ನೋಡಿದಳು. 

89 ------------------------------------

ಕೋಕಿಲವು ಒಂದೊಂದು ಸಾರಿ "ಕುಹೂ" ಎನ್ನವದು. ಇದು ಇಲ್ಲಿ  

ಗೇಕೆ ಬಂತೆನ್ನುವಳು. 


ಸಾವಿತ್ರೀ, ಈಗ ನೀನು ಏನನ್ನು ಬಯಸುವೆ. ನಿನ್ನ ಹೃದಯದಲ್ಲಿ 

ದುಃಖಸಮುದ್ರವು ಉಕ್ಕಿಬರುತ್ತಿದ್ದರೂ, ಒಂದು ಆಲೋಚನೆಯಿರುವ 

ದಲ್ಲವೇ, ಅದೇನು ಅಲೋಚನೆ, ಈಗ ಈಘಳಿಗೆಯಲ್ಲಿ ಮೂರ್ತಿಯು 

ಜತೆಯಲ್ಲಿದ್ದಿದ್ದರೆ, ನಿನಗೆ ಸತ್ಯಲೋಕಪದವಿಯೇಕೆ ಎನ್ನುತ್ತಿದ್ದೆಯಲ್ಲವೆ? 

ನಿನ್ನ ವಯಸ್ಸಿಗೆ ನೀನು ಓದಿರುವಷ್ಟು ಯಾರು, ಓದಿರ.ವರು ? ಯಾರೂ 

ಓದಿರುವದಿಲ್ಲ. ನೀನು ಜೈಮಿನಿವನ್ನೂ ಓದಬಲ್ಲೆ, ಕೆಲವುವೇಳೆ ಅಲಂ 

ಕಾರಗಳನ್ನೂ ಗ್ರಹಿಸಬಲ್ಲೆ, ಯುಕ್ತವನ್ನರಿತು ಮಾತನಾಡುವೆ, ನಿನಗೆ 

ಕೆಲವು ಸಂಗತಿಗಳ ತಿಳದಿಲ್ಲವೇ ? ಯಾವಕಾರ್ಯವೂ ದೈವಾಧೀನವು. 

ದೈವಸಂಕಲ್ಪವಿಲ್ಲದೆ ಏನೂ ನಡಿಯುವುದಿಲ್ಲ, ಒಂದುವೇಳೆ ಒಬ್ಬ 

ರಿಗೆ ಕೆಡಕನ್ನು ಮಾಡಲು ಯತ್ನಿಸಿದರೆ, ಅದು ಆವರಿಗೆ ಒಳ್ಳೆಯದಾಗಿ ಪರಿ 

ಣಿಮಿಸುವುದು. ಒಳ್ಳೆಯದಾಗಲೆಂದು ಬಯಸಿದರೆ, ಹಾನಿಯಾಗುವುದು, 

ಇವಕ್ಕೆಲ್ಲಕ್ಕೂ ಯಾರುನಿಯಾಮಕರು, ಯಾರು ಕಾರಣರು; ಜಗದೊಡೆ 

ಯಲ್ಲದೆ ಇತರರಲ್ಲ. 


ನದಿಯು ಸಿಕ್ಕಿತು, ಎಲ್ಲಿಯೂ ಒಂದು ಕಾಲುವೆಯಲ್ಲಿ ನೀರುಹರಿ 

ಯುತಲಿತ್ತು. ಈ ನದಿಯನ್ನು ನೋಡಿದಳು ಆ ಮರಳನ್ನು ನೋಡಿದಳು, 

ಸುತ್ತಮುತ್ತಲಿನ ಮರಗಳನ್ನು ನೋಡಿದಳು ಸವಿಯು ದೃಷ್ಟಿಯನ್ನು 

ಮೇಲಕ್ಕೆ ತಿರುಗಿಸಿದಳು. ಆಗಲೇ ಶೂಲದಮೊನೆಯು ಎದೆಯಲ್ಲಿ ತೂರಿ ಬೆನ್ನ 

ಲ್ಲಿ ಬಂದಂತಾಯಿತು. ಅವಳ ಮನಸ್ಸಿನ ಸ್ಥಿತಿಯನ್ನು ನಾವು ಹೇಳುವುದಿಲ್ಲ. 


***** 

೧೭ ನೆ  ಪ ರಿ ಚ್ಛೇ ದ , 

ಪ್ರಭಾತಸಮಯದಲ್ಲಿ. ಸೀತಾನಿಲನು ಮೆಲ್ಲ ಮೆಲ್ಲಗೆ ಬೀಸತೊಡ 

ಗಿದನು, ಬಳಿಕ ಬಿರುಸಾಗಿ ಬೀಸತೊಡಗಿದನು. ಅಂಬುಕಣಗಳನ್ನೂ ಹಸರು 

ಹುಲ್ಲುಗಳನ್ನೂ ಕೆದರುತ್ತ, ಕೋಕಗಳಲ್ಲಿ ರಾಗವನ್ನು ಉಣ್ಮಿಸುತ್ತ, ವನ 


೯೦---------------------------------------------------------------------

ಜಗಳಗೆ ಒಯ್ಯನೆ ತೂಂಕಡಿಕೆಯನ್ನೂ ತಿಳಿಸುತ್ತ, ಬೀಸತೊಡಗಿದನು. 

ಸ್ವಲ್ಪ ಸ್ವಲ್ಪವಾಗಿ ಬಿರಿಯತ್ತಿದ್ದ ಮಲ್ಲಿಕಾದಿ ಪುಷ್ಪಗಳ ಸುವಾಸನೆಯನ್ನು 

ಕದ್ದುಕೊ೦ಡು ಓಡಿಹೋಗುತ್ತಿದ್ದನು. ಮಲ್ಲಿಕಾ:ಮಾನಿನಿಯ ಮಾನಭಂಗ 

ವನ್ನು ಮಾಡಿ, ವಿಟಭಾವದಿಂದ ವಂಚಿಸಿ, ಪಾದುರಿಯಲ್ಲಿ ನೆರತ್ತು, ಅಮೋ 

ಘವಾದ ಚಂಪಕಸೌಂದರ್ಯರಾಆಶಿಯಲ್ಲಿ ಸೇರಿಹೋದನು ಶೃಂಗರಪೂರ್ಣ 

ವಾದ ವನಿತೆಯರ ಮುಖಕಮಲಗಳನ್ನು ಚುಂಬಿಸಲು, ಸಂದು ಸಂದುಗಳ 

ಲ್ಲಿಯೂ ಹುಡುಕುವನು ಅಕಟಾ! ಮುಖಕಮಲಗಳು ತಮ್ಮ ತಮ್ಮ 

ಪತಿಗಳ ಬಾಹುಶಾಖೆಗಳಲ್ಲಿ ಸೇರಿಕೊಂಡಿರುವರು, ಆ ಮಂದಗತಿಯುಳ್ಳ 

ದಕ್ಷಿಣಾನಿಲನಿಗೆಂತು ತಿಳವುದು ಆ ಮೊಗದಾವರೆಗಳು ಸ್ಥಿರಚಿತ್ತವಿಲ್ಲದ 

ಚಾರ, ಚೋರಪ್ರಭಂಜನನಿಗೆಂತು ಸಿಕ್ಕುವುವು ತನ್ನ ಕೈಲಾಗದಿದ್ದುದ 

ರಿಂದ ಪಕ್ಷಿಕುಲವನ್ನೆಬ್ಬಿಸಿ ಕರೆಯಿಸಲಾರಭಿಸಿರನು ನಯದಿಂದ ಗೆಲ್ಲಬೇಕು 

ಉಪಾಯದಿಂದಲೇ ಕಾರ್ಯವನ್ನು ಆಗಮಾಡಿಕೊಳ್ಳಬೇಕೆಂದು ಕೋಕಿಲವನ್ನೆ 

ಬ್ಬಿಸಿ, ಚೂತಾಂಕುರಗಳನ್ನು ಬಾಯಿಗೆ ಒಡ್ಡಿ, “ ಕುಹೂ " ಸ್ವರವನ್ನು 

ಹೊರಡಿಸಿದನು. ಇದರಿಂದಲೂ ಏನೂು ಅನುಕೂಲವಾಗಲಿಲ್ಲ. ಭಯವನ್ನು 

ತೋರಿಸಬೇಕೆಂದು, ಕಾಗೆಗಳ ಗುಂಪನ್ನು ಎಬ್ಬಿಸಿ, ಕೂಗಿಸಿದಳು. ಆದರೂ 

ಅನುಕೂಲವಾಗಲಿಲ್ಲ. ಕಡೆಗೆ ತೆರೆದಿದ್ದ ಕೆಲವು ಹೊರಬಾಗಿಲುಗಳನ್ನೂ 

ತಟ್ಟಿ, ಮುರಿಯಲಾರಂಭಿಸಿದನು ಏನೆಂದುಪ್ರಯೋಜಸವೂ ಕಾಣಲಿಲ್ಲ. 

ಈ ಆರ್ಭಟಗಳನ್ನುಂಟುಮಾಡಿದುದರಿಂದ ಯುವತಿಯರು ಇನ್ನೂ ಬಿಗಿಯಾಗಿ 

ತಮ್ಮ ಎರೆಯರನ್ನು ಅಪ್ಪಿಕೊಂಡರು. 


ಪ್ರಾತಃಕಾಲ ೫ ಘಂಟೆಯಾಗಿರಬಹುದು, ಮೂರ್ತಿಯು ಉಡುಪು 

ಗಳನ್ನು ಧರಿಸಿ ರಾಜನ ಮನೆಯ ಬಾಗಿಲಿಗೆ ಬಂದು ರಾನಮಮ್ಮೆಬ್ಬಿಸಿಕೊಂಡು 

ಹೊರಟುಹೋದನು, ಮನಸ್ಸಿನಲ್ಲಿ ವೇದನೆಯಿಲ್ಲದೆ ಹರ್ಷವಾಗಿದ್ದಲ್ಲಿ, 

ಈ ಆರುಣೋದಯಕಾಲವು ಮೂರ್ತಿಗೆ ಬಹಳ ಆಹ್ಲಾದಕರವನ್ನುಂಟು 

ಮಾಡುತ್ತಿತ್ತು ಆದರೆ ಆದಿನ ಅವನಿಗೆ ಹರ್ಷವಿರಲಿಲ್ಲ. ಮುಖದಲ್ಲಿ ಒಂದು 

ಅಪೂರ್ವಭಾವವು ತಲೆದೋರಿತ್ತು. ದೂರದಲ್ಲಿ ಬೆಟ್ಟಗಳಮೇಲೆ ಮಲಗಿದ್ದ 

ಮೋಡಗಳನ್ನು ನೋಡದೆ ಹೊರಟನು. ಅಲ್ಲಲ್ಲಿಕಣಿವೆಗಳಂತೆ ಕಾಣುವ 

೯೧--------------------------------------------------------------------- 

ಪ್ರದೇಶಗಳಲ್ಲಿ ಹೊಗೆಯ೦ತೆ ಹೋಗುತ್ತಿರುವದನ್ನೂ ನೋಡ 

ಲಿಲ್ಲ. ಮೆಲ್ಲಮೆಲ್ಲಗೆ ಕಳ್ಳತನದಿಂದ ಕತ್ತಲೆಯು ಓಡಿಹೋಗುತ್ತಿರು 

ವದು, ಗೋಚರವಾಗಿಲ್ಲ. ತಟ್ಟನೆ ಪೊದರುಗಳಿಂದ ಬೆದರಿ ಓಡಿಹೋಗು 

ವಮೊಲವು ಕಣ್ಣಿಗೆ ಬೀಳಲಿಲ್ಲ ಪ್ರಾಚೀನಿತಂಬಿನಿಯ ಮೊಗವನುರಾಗ 

ದಿಂದ ರಕ್ತವರ್ಣವಾದುದನ್ನೂ ತಿಳಿದಿರಲಿಲ್ಲ. ಅಡ್ಡಡ್ಡಲಾಗಿ ಓಡುತ್ತ, ಹಾರಾ 

ಡುತ್ತಿದ್ದ ಗಿಳಿಗಳ ಜಗಳವೂ ಆರಿವಾಗಲಿಲ್ಲ. ನಡುನಡುವೆ ಪೈರುಗಳ ಮಧ್ಯ 

ದಲ್ಲಿ ನಿಂತಿದ್ದ ಒಕ್ಕಲಗಿತ್ತಿಯರೂ ಎದುರಾಗಲಿಲ್ಲ ಮತ್ತು ತಲೆಯಮೇಲೆ 

ಕುಕ್ಕೆಗಳನ್ನು ಹೊತ್ತುಕೊಂಡು ಹೋಗುವವರು ಪಕ್ಕವಾದರೂ ಮನಸ್ಸಿಗೆ 

ಬcಲಿಲ್ಲ ಒಂದೊಂದುಗಾಡಿಯೂ ಗಡಗಡನೆಬಂದರೂ ಕಿವಿಗಳಿಗೆ ಸದ್ದಾಗ 

ಲಿಲ್ಲ. ಸೂರ್ಯೋದಯವಾಗಿ ಎಳವಿಸಲು ಅಲ್ಲಲ್ಲಿ, ಬ೦ಡೆಗಳಮೇಲೂ, ನೀರಿ 

ನ ಶಾಖೆಗಳ ಮೇಲೂ, ಗಿಡ ಮರಗಳಮೇಲೂ, ಭಂಗಾರದ ವಸ್ತ್ರಗಳನ್ನು 

ಹೊದ್ದಿಸಿದಂತೆ ರಂಜಿಸುತ್ತಿರುವದೂ, ತೋರಲಿಲ್ಲ, 


ಬಾಗೇಪಲ್ಲಿಯನ್ನು ಬಿಟ್ಟು ಪೂರ್ವಾಭಿಮುಖವಾಗಿ ೫ ಮೈಲಿಗಳು 

ನಡೆದಿದ್ದರೂ ಮಾತನಾಡದೆ ಹೋಗುತ್ತಿದ್ದರು. ಕಡೆಗೆ ವೇಗವು ಕಮ್ಮಿ 

ಯಾಯಿತು. ಮೌನಧಾರಿಗಳು ಸ್ವಲ್ಪ ಬಾಯಿಗಳನ್ನು ಬಿಟ್ಟರು. 


ರಾ- ಇಷ್ಟುದೂರ ಮಾತನಾಡದೆ ಬಂದಿರುವೆವಲ್ಲ. 


ಮೂ- ಅಹುದು ನನಗೂ ಆಶ್ಚರ್ಯವಾಗಿ ತೋರುವುದು. 


ರಾ- ಈಗ ಎಲ್ಲಿಗೆ ಹೋಗೋಣ? 


ಮೂ- ಎಲ್ಲಿಯೂ ಬೇರ, ಆ ಹೊಂಗೆಯಮರದ ಕೆಳಗೆ ಹೋಗಿ 

ಕುಳಿತುಕೊಳ್ಳೋಣ. 

 

ರಸ್ತೆಗೆ ಸ್ವಲ್ಪದೂರಲ್ಲಿ ಹೊಂಗೆಯಮರವೊಂದು ಬೆಳೆದಿತ್ತು. ಮರ  

ದಕೆಳಗೆ ಮಳೆಯನೀರಿನ ಪ್ರವಾಹಗಳು ಆಗಾಗ್ಗೆ ಹರಿಯುತ್ತರಿರುವುದರಿಂದ 

ತಳದಲ್ಲವೂ ಮರಳಿನಿಂದ ಕೂಡಿತ್ತು. ಹೊoಗೆಯುಮರದಕೆಳಗೆ ಹೋಗಿ 

ನೋಡಲು ಚೊಕ್ಕಟವಾಗಿಗುರಿಸಿದ್ದು, ರತ್ನಗಂಬಳಿಯನ್ನ ಹಾಸಿದಂತಿತ್ತು. 

ನಮ್ಮ ವಾಚಕರು ಇದನ್ನು ಕೇಳಿ ಆಶ್ಚರ್ಯವನ್ನು ಹೊಂದಬಾರದು. ಹೊಂಗೆ 

ಯಹೂವೂ, ಹೊಂಗೆಯ ಎಲೆಯೂ ಕಬ್ಬಿನ ಗದ್ದೆಗೆ ಶ್ಲಾಗ್ಯವಾದ ಗೊಬ್ಬ

೯೨--------------------------------------------------------------------------

ರವಾಗುದರಿಂದ ಹಳ್ಳಿಯ ಜನರು ಆ ಹೂವುಗಳನ್ನು ಗುಡಿಸಿ, ಒಟ್ಟು ಮಾಡಿ 

ತಗೆದುಕೊoಡು: ಹೊರಟು ಹೋಗುವರು. ಈಗಲೂ ಯಾರಿಗಾದರೂ ಅಪೇ 

ಕ್ಷೆಯಿದ್ದಲ್ಲಿ ಹೊಂಗೆಯಮರಗಳು ಚಿಗುರಿ ಹೂವುಗಳನ್ನು ತಳೆದಿರುವಾಗ 

ಬಾಗೇಪಲ್ಲಿಯ ಪ್ರಾಂತ್ಯಕ್ಕೆ ಹೋಗಿ ನೋಡಬಹುದು ಯಾವ ಹೊಂಗೇ 

ಮರಗಳ ಸಾಲುಗಳು ಗುಡಿಸದೆ ಹೇಯವಾಗಿರುವುವೆಂದು ಹೇಳುವರೋ 

ನಾವು ಕೇಳಲು ಆಶೆಯುಂಟು, ಹಾಗೆ ಗುಡಿಸಿದತರುವಾಯ ಪುಷ್ಪಗಳು 

ಆಗಾಗ್ಗೆ ಕ್ಷಣಕ್ಷಣಕ್ಕೂ ಉದುರುತ್ತ ಭೂಮಿಯಮೇಲೆ ರನ್ನಗಂಬಳಿಯನ್ನು 

ಹಾಸಿರುವರೋ ಎನ್ನುವ ಭ್ರಾಂತಿಯನ್ನುಂಟುಮಾಡುವದು. ಇಂತಹ ಎಡೆ 

ಯಲ್ಲಿ ಮೂರ್ತಿಯೂ, ರಾಜನೂ ಹೋಗಿ ಕೆಲವು ಹೊಂಗೆಯ  ಎಲೆಗಳನ್ನು 

ಹಾಸಿಕೊಂಡು ಕುಳಿತರು. 


ಮೂ- ನಾನು ನಾಳೆಯ ದಿವಸವೇ, ಬೆಂಗಳೂರಿಗೆ ಹೊರಟು 

ಹೋಗುವೆನು, ಮನೆಯಲ್ಲಿ ನನಗೆ ಸುಖವಿಲ್ಲ. 

 

ರಾ-~ ಅದೇನು ಹೀಗೆ ನುಡಿಯುವೆ ಮನೆಯಲ್ಲಿ ಸುಖವಿಲ್ಲವೇ, 


ಮೂ- ನೆನ್ನೆ ದಿವಸ ರಾತ್ರಿಯಲ್ಲಿ ನನ್ನ ತಂದೆಯು ಸರ್‌ಕ್ಯೂಟಿ 

ನಿಂದ ವಾಪಸು ಬ೦ದನು, ಇಷ್ಟುಹೊತ್ತಿಗೆ ಸಮಾಚಾರಗಳು ತಿಳಿದುಹೋ 

ಗಿರುತ್ತವೆ. ನಾನು ಇನ್ನು ಮನೆಗೆಂತುಹೋಗಲಿ, ನನ್ನ ತಂದೆಯೊಂದಿಗೆ 

ಮುಖವನ್ನು ಕೊಟ್ಟು ಮಾತನಾಡಲೂ ಸಹ ಆಗುವದಿಲ್ಲ. 


ರಾ- ಆದರೂ ಬೆಂಗಳೂರಿಗೆ ಹೋದರೇನು. 

 

ಮೂ- ಮರೆಯಾಗಿದ್ದರೆ ಅದೇಸಾಕು. ಎದುರಿನಲ್ಲಿದ್ದುಕೊಂಡು 

ಮೋರೆಗಳನ್ನು ಸೊಟ್ಟಗೆ ಮಾಡಿಕೊಳ್ಳುವದಕ್ಕಿಂತಲೂ, ನಮ್ಮ ಹಿಂದಿನಲ್ಲಿ 

ಏನುನಡೆದರೂ ಚಿಂತೆಯಿಲ್ಲ. 


ರಾಜ ~ ನಾನು ನಿನ್ನ ನಡುವಳಿಕೆಯನ್ನು ಮೆಚ್ಚಲಾರೆ. ಅದುತಪ್ಪು, 

ಏನಿದ್ದರೂ ಎದುರಿಗೆ ನಡೆಯಲಿ, ಹೆದರಿಕೆಯೇನು. 


ಮೂ- ಹೆದರಿಕೆಯೇನು, ನನಗೆ ಧೈರ್ಯವಿಲ್ಲ. 

ಮೂ- ನೀನು ಹೇಡಿ. 


ಮೂ-.ಯಾವಕಾರ್ಯದಿಂದ ತಂದೆತಾಯಿಗಳು ಅತೃಪ್ತರಾಗುವರೋ  

೯೩------------------------------------------------------------------------------------------ 

ಅವರಿಗೆ ಕೋಪವು ಬರುವುದೋ, ಅಂತಹುದನ್ನು ನಾನುಮಾಡಿ, ಅವ 

ರೆದುರಿಗೆ ಹೋಗುವುದುಚಿತವೇ?  


ರಾ- “ನೀನು ಮಾಡುವ ತಪ್ಪುಗಳನ್ನೆಲ್ಲಾ ಅವರು ಮನಸ್ಸಿನಲ್ಲಿಡು 

ವುದಾದರೆ ಇದುವರಿಗೂ ನಿನ್ನ ಮೇಲೆ ಎಷ್ಟು ದೋಷಾರೋಪಣೆಗಳಾಗ 

ಬಹುದು ನಿನಗೆ ಸರಿಯಾದವಿಮೋಚನೆಯಿಲ್ಲ. ತಾಯಿತಂದೆಗಳು ಮಕ್ಕಳ 

ಹಿತಕ್ಕಾಗಿಯೇ: ಒಂದೆರಡುವೇಳೆ ದಂಡಿಸಿದುದಾದರೆ,  ಅದನ್ನು ಪ್ರತಿಕೂಲ 

ವಾಗೆಣಿಸುವುದು ಯಾವಧರ್ಮ. ನೀನು ನಿನ್ನ ತಾಯಿಯಬಳಿಯಲ್ಲಿ ಹೇಳು, 

“ ನನಗೆ ಸಾವಿತ್ರಿಯೇನೂ ಬೇಡ, ನೀವು ಯಾರನ್ನು ಮದುವೆ.ಯಾಗೆಂದರೆ 

ಅವರನ್ನು ಅಗುವನು, ತಪ್ಪೆಣಿಸಬೇಡಿ" 


ಮೂ-- “ ರಾಜ, ನನಗೆ ಇತರ ಹೆಂಗಸಿನಲ್ಲಿ ಸುಖವಿಲ್ಲ. ನನ್ನಸುಖ 

ವನು ನನ್ನ ಮಾತಾಪಿತೃಗಳು ಎಣಿಸಬೇಕಲ್ಲವೆ' ? ನಾನಲ್ಲವೇ ಮುಂದಕ್ಕೆ 

ಸಂಸಾರವನ್ನು ನಡೆಸಿಕೊ೦ಡಿರಬೇಕು. ಸಾವಿತ್ರಿಯು ಅವರೊಡನೆ ಎಷ್ಟು 

ದಿವಸಗಳು ನನ್ನನ್ನು ಬಿಟ್ಟು ಇದ್ದಳು ? 


ರಾ–“ ಅವರಿಗೂ ಈ ಆಲೋಚನೆಗಳುಂಟು ಹುಡುಗನಾದ ನಿನಗೇ 

ಇಷ್ಟು ಬುದ್ಧಿಯಿರುವಲ್ಲಿ ಅವರಿಗೆಷ್ಟಿರಬಹುದು ? 


ಮೂ-" ನನಗೆ ಸಾವಿತ್ರಿಯಹೊರತು ಬೇರೆಬೇಡ, ಬೇರೆಯಾದರೆ, 

ಅಯ್ಯೋ ನನಗೆ ದುಃಖವಲ್ಲದೆ -- 


_ರಾ... 'ಛೀ ನಿನ್ನ ಕೀಳುಮತಿಯನ್ನು ಹೇಗೆಂದು ವರ್ಣಿಸಲಿ. 

ಅವಳ ಹಿಂದುಮುಂದು ಗೊತ್ತಿಲ್ಲ. ಸದ್ಗುಣ ದುರ್ಗುಣಗಳು ತಿಳಿದಿಲ್ಲ, ಆವಳಲ್ಲಿ 

ಏನಾದರೂ ಹುಳುಕಿರುವದು ಕಂಡಿಲ್ಲ. ನೀನು ಧುಡುಕಿ ಅವಳೇ ಬೇಕೆಂದು 

ಹಟಹಿಡಿದರೆ ನೀನು ಮೂರ್ಖನು 


ಮೂ- " ನಾನು ಮೂರ್ಖನಾದರೂ ಚಿಂತೆಯಿಲ್ಲ.  


ರಾ-ಈಗಸಾವಿತ್ರಿಯು ಹೊರಟುಹೋದಳಲ್ಲ, ಅವಳಮದುವೆಯು 

ಇನ್ನುಎರಡುಮೂರು ದಿವಸಗಳು ಕೂಡ ಇರುವಹಾಗಿಲ್ಲ ನೀನು ಮಾಡುವ 

ದೇನು ? ಮಾಡಿದುದೇನು ? ನೀನು ಬೆಂಗಳೂರಿಗೆ ಹೋದರೂ ಮದು  

ವೆಯು ನಿಲ್ಲುವದಿಲ್ಲ. 

೯೪----------------------------------------------------------------------------

ಮೂ-"ಆದರೂ ನನ್ನ ತಂಗಿಯಮಾತೊಂದಿರುವದು. ಅದರ ಸಹಾ 

ಯವು ಎಂತಾಗುವದೋ ಸಾವಿತ್ರಿಯ ಚಿಕ್ಕಪ್ಪನೂ, ಈದಿನವೋ, ನಾಳೆ 

ಯೋ ಬರುವನಂತೆ, ಬಂದರೆ- 


ರಾ- ಬಂದರೇನು ? 


ಮೂ- ಕೇಳಬಹುದು 


ಕಾ- ಈಗ ಆ ಮಾತುಗಳಿರಲಿ, ಊರಿಗೆ ಹೋಗೋಣ 

 

ಮೂ - ಈಗ ನಾನು ಊರಿಗೆ ಬರುವದಿಲ್ಲ. ಇಲ್ಲಿಯೇ ಹತ್ತಿರದ 

ಹಳ್ಳಿಯಲ್ಲಿ ನಿಂತುಬಿಡುವೆನು. 


ರಾ- ಮನೆಯಲ್ಲಿ ಹೇಳದೇ ಮಾಡದೇ.. 


ಮೂ- ಇಲ್ಲಿಂದ ಹೇಳಿಕಳುಹಿಸುವುದು 


ರಾ- ಇಲ್ಲಿ ನಿಲ್ಲುವುದೆಲ್ಲಿ? ಊಟಮಾಡುವುದೆಲ್ಲಿ ? 


ಮೂ- ಅವುಗಳ ಆಲೋಚನೆಯೇಕೆ, ನಾನು ಅನುಕೂಲಮಾಡು 

ವೆನು. ರಾಜ ನನ್ನಮಾತಿರಲಿ; ನೀನೂ ಎಷ್ಟು ದಿವಸಗಳಿಂದ 

ಸ್ನೇಹಿತರು ? 


ರಾ- ಎಷ್ಟು ದಿವಸಗಳಿ೦ದಲೆಂದರೇನು, ಈಗ್ಗೆ ೬ ವರುಷಗಳಾದುವು. 


ಮೂ- ನನ್ನ ಮಾತನ್ನು ನೀನು ಎಂದೂ ಮೀರಿಲ್ಲ, ನಿನ್ನಮಾತನ್ನೂ 

ನಾನು, ಎಂದೂ ಮೀರಿಲ್ಲ 


ಆಹುದು ಅವರಿಂದೇನು ? 


ಮೂ-ನನ್ನ ತಂಗಿ ಕೃಷ್ಣವೇಣಿಯನ್ನು ನೋಡಿರುವೆಯಲ್ಲವೆ? - 


ರಾ-“ ಆಹುದು " ರಾಜನಿಗೆ ರೋಮಾಂಚವುಂಟಾಯಿತು. 


ಮೂ~ ನೀನು ಅವಳನ್ನು ಒಪ್ಪುವಿಯೋ!


ರಾ- ಇದರೇನು ಹಾಸ್ಯಮಾಡುತ್ತಿರುವಿಯೋ ಮೂರ್ತಿ, ಎಂದು ನಗುತ್ತ ..

ನುಡಿದನು. 


ಮೂ- ಹಾಸ್ಯವಲ, ನಿಜವಾಗಿಯೂ ಅವಳನ್ನು ನಿನಗೆ ಕೊಡ 

ಬೇಕೆಂದು ಮಾತುಗಳು ನಡೆದಿವೆ, ನನ್ನ ತಂದೆಯಂತೂ ನಿನ್ನನ್ನು ಚೆನ್ನಾಗಿ 

ಬಲ್ಲನು. ನನ್ನ ತಾಯಿಯ ಒಪ್ಪಿರುವಳು. 

೯೫------------------------------------------------------------------------------

ರಾಜನು ಯೋಚಿಸಿದನು, ನನ್ನ ಮುದುಕಪ್ಪನೂ, ಮುದುಕಮ್ಮ 

ನೂ, ಒಪ್ಪಬೇಕಲ್ಲ, ಅವರಿಗೇನು, ಒಪ್ಪುವರು. ನಾನು ಸರಿಮಾಡುತ್ತೇನೆ. 

ಹಾಗಾದರೆ ನಮ್ಮಿಬ್ಬರ ಮದುವೆಗಳು ಏಕಕಾಲದಲ್ಲಿ ಆಗಬಹುದು,

 

ಮ- ನನ್ನ ಸಾವಿತ್ರಿಯು ನನಗೆ ದಕ್ಕದಿದ್ದರೆ ನನ್ನಮದುವೆಯಿಲ್ಲ 


ರಾ- ಛೀ ಛೀ ಹಾಗೆನ್ನಬೇಡ, 


ಹೊಂಗೆಯ ಮರದ ನೆರಳಿನಿಂದ ಹೊರಟು ಮಾರ್ಗವನ್ನು ಏರಿದರು. 

ನೂರುಮಾರು ದೂರದಲ್ಲಿ ಒಂದು ಕಾಲು ಹಾದಿಯು ಎಡಕ್ಕೆ ತಿರುಗುವದು. 

ಅದರಲ್ಲಿ ಹೊರಟು  “ನೀರಪಲ್ಲಿ " ಯನ್ನು ಸೇರಿದರು. ಇವರು ಇನ್ನೂ 

ಹಳ್ಳಿಯೊಳಗೆ ಪ್ರವೇಶಿಸುವಲ್ಲಿಏಯೇ ಪಕ್ಕದಲ್ಲಿನ ಹುಡುಗರು ಹುಡು 

ಗಿಯರೂ, ಆಶ್ಚರ್ಯದಿಂದ ಅವರ ಉಡುಪುಗಳನ್ನು ನೋಡಲುಪಕ್ರಮಿಸಿದರು 

ಕುಕ್ಕೆಯಲ್ಲಿ ಮಣ್ಣನ್ನು ಹೊತ್ತುಕೊಂಡು ಹೋಗುತ್ತಿದ್ದ ಒಕ್ಕಲಗಿತ್ತಿಯೂಯ, 

ನಿಂತು ತಿರುಗಿ ನೋಡಿದಳು. ಕುರಿಗಳನ್ನು ಅಟ್ಟಿಕೊಂಡು ಹೋಗುತ್ತಿದ್ದ 

ಕುರುಬರ ತಟಸ್ಥರಾದರು. ಯಾರೋ ಹೊಸಬರು ಬಂದಿರುವರೆಂದು 

ಹಳ್ಳಿಯಲ್ಲಿ ವರ್ತಮಾನವು ಹರಡಿತು ಒಬ್ಬೊಬ್ಬರು "ಯಾವೂರು ಸ್ವಾಮಿ" 

ಎಂದು ಕೇಳುವರು " ನಮ್ಮೂರು ಇಲ್ಲೇ ಹತ್ತಿರದಲ್ಲೇ" ಎಂದು ಮೂರ್ತಿ 

ಯಃ ಬದಲು ಕೊಡುತ್ತಿದ್ದನು. ಹಳ್ಳಿಯಲ್ಲಿ ಒಂದು ದೊಡ್ಡ ಅಶ್ವತ್ಥ ಮರ 

ಇರುವುದು ದೊಡ್ಡಅಶ್ವತ್ಥಕಟ್ಟೆಯೂ ಉಂಟು. ಅಶ್ವತ್ಥಕಟ್ಟೆಯಮೇಲೆ  

ನಾಗರಕಲ್ಲುಗಳನ್ನು ನಿಲ್ಲಿಸಿರುವರು. ಕೆಲವು ಕಲ್ಲುಗಳಿಗೆ ಅರಿಸಿನಕುಂ 

ಕುಮ ಪೂಜೆಯೂ, ಒಂದೆರಡು ದಾಸವಾಳದ ಹೂವುಗಳ ಆರ್ಚನೆಯೂ 

ಆಗಿದ್ದವು. ಆ ಅಶ್ವತ್ಥಕಟ್ಟೆಯ ಮುಂದುಗಡೆಯಲ್ಲಿ ಮೂರ್ತಿಯೂ, ರಾಜ 

ನೂ ಕುಳಿತರು. ಮೂರ್ತಿಯು ಲೋ ಹುಡುಗ ಪಟೇಲರನ್ನು ಕರೆದುಕೊಂಡು 

ಬಾ ಮೂರುಕಾಸು ಕೊಡುತ್ತೇನೆಂದರು. ' ಹೂ' ಎನ್ನುತ್ತೆಹುಡುಗನು 

ಓಡಿಹೋದರು. ಕೊಂಚ ಹೊತ್ತಿನಲ್ಲಿಯೇ ಪಟೇಲನೂ ಬಂದನು. ಇನ್ನು 

ಸ್ವಲ್ಪ ಹೊತ್ತಿಗೆ ಹೊಲದಕಡೆಯಿಂದ ಶಾನುಭೋೂಗನೂ ಬಂದನು. 


“ಏನು ಸ್ವಾಮಿ, ಬಹಳ ದೂರ ಬಂದಿರಿ ಡಣಿವಾಗಿರಬಹುದು, 

ಊರೊಳಗೆ ಬನ್ನಿ" ಎಂದು ಪಟೇಲನು ಕರೆದನು 

೯೬--------------------------------------------------------------------------

"ಇಲ್ಲ ನಾವು ಊರಿಗೇನೆ ಹೊರಟು ಹೋಗುತ್ತೇವೆ. ಸುಮ್ಮನೆ 

ಮಾತನಾಡುತ್ತೆ ಬ೦ದುಬಿಟ್ಟೆವು ಈಗೇನು ಅಷ್ಟುಹೊತ್ತಾದಂತೆಯೂ 

ಕಾಣುವುದಿಲ್ಲ ". 


“ ನಮ್ಮ ಮನೆಯಲ್ಲಿ ಅಡುಗೆಯಾಗಿದೆ, ಊಟವನ್ನು ಮಾಡಿಕೊಂಡು ಸಾ 

ಯ೦ಕಾಲದಲ್ಲಿ ದಯಮಾಡಿಸಬೇಕು, "  ಎಂದು. ಶಾನುಭೋಗನಹೇಳಿದನು, 


* ಶಾನುಭೋಗರೆ, ಇನ್ನೊಂದುತಡವೆ ಬರುತ್ತೇವೆ. ಈಗ ಮನೆ 

ಯಲ್ಲಿ ಹೇಳಿಬಂದಿಲ್ಲ. ಯಜಮಾನರು ಕೋಪಿಸಿಕೊಳ್ಳುತ್ತಾರೆ" ಎಂದು 

ಹೇಳುತ್ತ, ಕಲ್ಲಿನಮೇಲಿನಿಂದೆದ್ದನು. ಆಷ್ಚರಲ್ಲಿಯೇ "ಸ್ವಾಮೀ ಹೋ  

ಗಕೂಡದು. ತೋಟಿಯಕೈ;ಲಿ ಸುಬೇದಾರರಿಗೆ ಹೇಳಿ ಕಳುಹಿಸುತ್ತೇವೆ. 

ನೀವು, ನಿಲ್ಲಬೇಕು, ಏನೋ.ಬಡವರ ಮನೆ ” ಎಂದು ಶಾನುಭೋಗನು 

ಉತ್ತರ ಕೊಟ್ಟನು. 


"ಶಾನುಭೋಗರೆ, ಬಡವರು ನೀವಾದರೆ, ಭಾಗ್ಯವಂತರಾರು?  

ನೀವು ಏಕೆ ತೊಂದರೆಯನ್ನುತೆಗೆದುಕೊಳ್ಳುತ್ತೀರಿ.  ಇನ್ನೆರಡು ಗಂಟೆಯೊ 

ಳಗಾಗಿ ಬಾಗೇಪಲ್ಲಿಯನ್ನು ಸೇರುತ್ತೇವೆ. " ಎಂದು ಕೆಳಕ್ಕಿಳಿದನು 


ಸ್ವಾಮಿ, ಕ್ಷಮಿಸಬೇಕು. ನೀವುಹೋದರೆ ನನಗೆ ಬಹಳ ತೊಂ 

ದರೆಯುಂಟಾಗುವುದು. 


"ಏನಪ್ಪಾ, ನಾವು ಎಲ್ಲಿಹೋದರೂ ತೊಂದರೆಯೇಹೊರತು ಜನಗ 

ಳಿಗೆ  ನೆಮ್ಮದಿಯಿಲ್ಲ. ಮೊನ್ನೆ ಜಮಾಬಂದಿಯಲ್ಲೇ ನಿಮಗೆಲ್ಲಾ- 


"ಸ್ವಾಮೀ ಇಂತಹ ಖರ್ಚುಗಳು ದಿವಸ ದಿವಸದಲ್ಲಿಯೂ ನಡೆ 

ಯುತ್ತಿರುತ್ತವೆ. ಅವುಗಳನ್ನೆಲ್ಲಾ ಎಣಿಸುವುದಕ್ಕಾದೀತೆ? 


“ ಸರಿ, ನಿಮ್ಮಿಷ್ಟವಿದ್ದಂತೆಯೇ ನಡಯಲಿ. ಇನ್ನೊಂದು ಬಾರಿ 

ಹೀಗೆ ಬರುವುದಿಲ್ಲ 


“ನೀವು ಇಲ್ಲಿಯೇ ಇದ್ದರೂ, ಸಂತೋಷ, ಸಮಗೆ ಭಾರವಿಲ್ಲ. 


* ನಿಮ್ಮ ಮನೆಗೆ ಹೊರಡೋಣ. ಅಯ್ಯಾಪಟೇಲ್, ಎರಡು 

ಎಳನೀರು ತರಿಸಯ್ಯ ಬಹಳ ಬಾಯಿರಿಯಾಗುತ್ತೆ, 


ಪಟೇಲನನ್ನು ಕರತಂದ ಹುಡುಗನಿಗೆ ಮೂರುಕಾಸು ಸಿಕ್ಕಿತು. 

****

೧೮ ನೆ ಪರಿಚ್ಛೇದ 

 

ನೀರ್ಲಪಲ್ಲಿಯ ಶಾನುಭೋಗನು ನೆಮ್ಮದಸ್ಥನು. ತನ್ನ ಗ್ರಾಮ 

ದಲ್ಲಿಯೇ ಹೊಲಗದ್ದೆ, ತೋಟಗಳು ಅಲ್ಲದೆ ಒಂದು ಒಳ್ಳೆಯಮನೆ 

ಯನ್ನೂ ಸಂಪಾದಿಸಿದ್ದನು.  ಊರಿಂದೂರಿಗೆ ಹೋಗುವ ಪ್ರಯಾಣೀಕರು 

ಈತನ ಹಳ್ಳಿಗೆ ಮಧ್ಯಾನ್ಹದಹೊತ್ತಿಗೆ ಬಂದುದಾದರೆ ಅವರನ್ನು ಊಟ ಉಪ 

ಚಾರಗಳಿಲ್ಲದೆ ಕಳುಹಿಸುತ್ತಿರಲಿಲ್ಲ. ಸಾಧಾರಣವಾಗಿ ನಾಲ್ಕು ಅಥವಾ ಐದು 

ಬ್ರಾಹ್ನಣರು ಹೊರಗಿನ ಜನರು ಊಟಕ್ಕಿರುತ್ತಿದ್ದರು. ತನಗೆ ದೇವರು 

ಕೊಟ್ಟಿರುವುದರಿಂದ ದಾನಧರ್ಮಗಳನ್ನು ಮಾಡಬೇಕಲ್ಲದೆ ಅನ್ಯಥಾ ಆಗಕೂಡ 

ದೆಂದು ಭಾವಿಸಿದ್ದನು. ಬಡವರಾದರಿಗೆ ಆಗಾಗ್ಗೆ ಸಮಾಧನೆಗಳನ್ನು 

ಮಾಡಿಸಿ ಬಟ್ಟೆಬರೆಗಳನ್ನು ಕೊಡುವನು. ಓದುಬರಹ ಬ೦ದಿರುವವರು 

ಬಂದರೆ ಅವರಿಗೆ ಮರ್ಯಾದೆಯನ್ನು ಮಾಡುವನು 


ಈತನ ಸದ್ಗುಣಗಳನ್ನು ಅಲ್ಲಿಯ ಸುತ್ತಮುತ್ತಲಿನ ಹಳ್ಳಿಯ ಜನರು 

ವಿಷೇಷವಾಗಿ ಕೊಂಡಾಡವರು.  ತನ್ನನ್ನು ಯಾರಾದರೂ ಪ್ರೊತ್ಸಾಹಿಸಿ 

ದರೂ ಒಳ್ಳೆಯಮಾತುಗಳನ್ನಾಡಿದರೂ ಹಿಗ್ಗತಕ್ಕವನಲ್ಲ,. ಮತ್ತು ದೂಷಿ 

ಸಿದರೂ ಕೋಪವನ್ನು ತಾಳತಕ್ಕವನಲ್ಲ. ಕೆಲವು ವರುಷಗಳಹಿಂದೆ ತನ್ನ 

ಹಿರಿಮಗನು ಕಾಲವಾದನು : ಆ ದುಃಖವನ್ನು ಸಹಿಸಿಕೊಂಡು ತನ್ನ ಕೈ 

ಲಾದಮಟ್ಟಿಗೂ ಬಡಹುಡುಗರಿಗೆ ವಿದ್ಯಾಬುದ್ಧಿಗಳನ್ನು ಹೇಳಿಸಲುಪಕ್ರಮಿಸಿ 

ದನು, ಈತನು ತನ್ನ ಹಣವನ್ನು ವ್ಯಯಮಾಡಿ ಕಟ್ಟಿಸಿದ ಪಾಠಶಾಲೆಯೊಂದು 

ಈಗಲೂ ನೀರ್ಲಪಲ್ಲಿಯಲ್ಲಿರುವುದು. ಕೇವಲ ತಿನ್ನುವದಕ್ಕೂ ಗತಿಯಿಲ್ಲದೆ 

ಹೀನಸ್ಥಿತಿಯಲ್ಲಿದ್ದ ಹುಡುಗರು ಯಾವಜಾತಿಯವರಾದರೂ ತನ್ನ ಕಣ್ಣಿಗೆ 

ಬಿದ್ದುದಾದರೆ ಅವರನ್ನು ಕರೆತಂದು ತಂದೆಯೋಪಾದಿಯಲ್ಲಿ ಶಾಲೆಗೆ ಸೇರಿಸಿ 

ತನ್ನ ಮನೆಯಲ್ಲಿ ಅನ್ನವನ್ನು ಹಾಕುವನು. ಅವರು ಬುದ್ದಿವಂತರಾಗಿ ಓದು 

ತ್ತ ಬಂದರೆ, ಗೊಡ್ಡ ಊರುಗಳಿಗೂ ಕಳುಹಿಸಿ, ತನಗೆ ನೆಂಟರೂ ಇಷ್ಟರೂ 

ಆದವರಲ್ಲಿ ಬಿಟ್ಟು ವೃದ್ಧಿಗೆ ತರುವನು. 

೯೮-------------------------------------------------------------------------------

ತಾನು ಪ್ರತಿದಿನದಲ್ಲೂ ಬ್ರಾಹ್ಮಮುಹೂರ್ತದಲ್ಲೆದ್ದು ಸ್ನಾನಸಂಧ್ಯಾ 

ವಂದನಾದಿ ನಿತ್ಯಕ್ರಗಳನ್ನು ತೀರಿಸಿಕೊಂಡು, ಕೆಲವುಹೊತ್ತು ಪಾರಾಯಣ 

ವನ್ನು ಮೂಡುವನು ತನ್ನ ಜಮೀನುಗಳ ಬಳಿ ಹೋಗಿ ರೈತರಿಂದ ಮaಡಿ 

ಸಬೇಕಾದ ಕೆಲಸಗಳನ್ನು ಮಾಡಿಸುತ್ತ ಆಗಾಗ್ಗೆ ತಾನೂ ಸಹಾಯಕ್ಕೊ 

ದಗುತ್ತ, ನಯದಿಂದಲೂ ಭಯದಿಂದಲೂ  ಸಾಗುವಳಿಯನ್ನು ಮಾಡಿಸುತ್ತಿ 

ದ್ದನು ತೋಟದಲ್ಲಿ ಮಾತ್ರ ತನಗೆಬೇಕಾದ ಗಿಡಗಳಿಗೆ ತಾನೇ' ನೀರನ್ನು 

ಹಾಕಿ ಬೆಳಯಿಸಿರುವನು., ಇರುವಂತಿಗೆ, ಮೊಲ್ಲೆ, ಮಲ್ಲಿಗೆ ಲತೆಗಳು ಆತ 

ನಿಗೆ ಪ್ರಿಯವಾದವು. ಇವುಗಳಲ್ಲದೆ ಗುಲಾಬಿ, ಸೇವಂತಿಗೆ, ಸಂಪಿಗೆಯಗಿಡ 

ಗಳೂ ಇದ್ದವು. ಬಾಳೆಯತೋಪು ತೆಂಗಿನತೋಪುಗಳೂ ಇದ್ದವು. ಬಾಳೆ 

ಯಗೊನೆಗಳ ತ:ದಿಯಲ್ಲಿನ ಹೂವಿನಿಂದ ಮಕರಂದವು ತೊಟ್ಟಿಕ್ಕುವದನ್ನು 

ನೋಡುತ್ತಾ ನಿಲ್ಲುವನು:. ಭ್ರಮರಗಳ ಅಗಮನವನ್ನೂ, ಅವುಗಳಝೇಂ 

ಕಾರವನ್ನೂ, ಹಾರಾಡುವಿಕೆಯನ್ನೂ, ಈಕ್ಷಿಸುತ್ತ, ಸಂತೋಷವನ್ನು 

ಹೊಂದುವನು. ಬಾಳೆಯಗಿಡಗಲಿಗೆ ಸರಿಯಾದ ಪಾತಿಗಳನ್ನು ಮಾಡಿರು 

ವರೋ, ಇಲ್ಲವೋ ಎಂಬುದನ್ನು ವಿಚಾರಿಸುವನು. ಮಧ್ಯಾನ್ಹಕಾಲಕ್ಕೆ 

ಮೊದಲೇ ಮನೆಗೆಬಂದು ಕೆಲವು ಹಳೆಯ: ಕಡತಗಳನ್ನು ನೋಡುತ್ತ, ಅಡಿಗೆ 

ಯಾಗುವವರೆವಿಗೂ ಹೊತ್ತನ್ನು ಕಳೆಯುವನು 


ಕಾನುಭೋಗನ ಹೆಸರು ನಾರಣಪ್ಪ. ಈತನ ಸಂಸಾರವು ಬಹಳ 

ದೊಡ್ಡದಲ್ಲ. ಇಬ್ಬರು ಗಂಡ ಮಕ್ಕಳರುವರು. ಇಬ್ಬರು ಹೆಂಣುಮಕ್ಕ 

ಳಿರುವರು. ಹಿರಿಯಮಗನು ಈಗ ಮೈಸೂರಿನಲ್ಲಿ ಓದುತ್ತಿರುವನು. ಹೆಣ್ಣು 

ಮಗಳೊಬ್ಬಳು ಗಂಡನಮನೆಯಲ್ಲಿ ಸಂಸಾರ ಮಾಡಿಕೊಂಡಿರುವಳು, ಈಗ 

ಮನೆಯಲ್ಲಿರುವ ಹುಡುಗನಿಗೆ ೧೦ ವರುಷಗಳು, ಮಗಳಿಗೆ ೮ ವರುತಗಳು. 

ತನ್ನ ಹೆ೦ಡತಿ, ಹೆಂಡತಿಯ) ಅಕ್ಕನೊಬ್ಬಳು, ಮತ್ತು ತನ್ನತಾಯಿ, ಇಷ್ಟು 

ಜನ ಮಾತ್ರವೇ ಈಗಿರುವರು. ಹೆಂಡತಿಯ ಅಕ್ಕನೂ, ತನ್ನತಾಯಿಯೂ 

ವಿಧವೆಯರು, 


ನಾರಣಪ್ಪನಮನೆಯು ವಿಶಾಲವಾಗಿಯೂ ಮಹಡಿಯಮನೆಯಾಗಿ 

ಯೂ ಇದೆ. ಗಾರೆಯ ಮನೆ; ಅಷ್ಟು ಹೆಚ್ಚಾಗಿ ಕಿಟಕಿಗಳನ್ನಿಟ್ಟು ಪಟ್ಟಣ 

೯೯--------------------------------------------------------------------------

ಗಳಲ್ಲಿನ ಮನೆಗಳ ಹಾಗೆ ಕಟ್ಟಿಲ್ಲದಿದ್ದರೂ, ಆ ಪ್ರಾಂತ್ಯಗಳಲ್ಲಿ ಅಂತಹ 

ಮನೆಗಳರುವದು ಆತಿವಿರಳ, ಬೀದಿಯಲ್ಲಿಯೇ ದಿಣ್ಣೆಗಳು, ಮೂರುಮೆ 

ಟ್ಲುಗಳನ್ನು ಮಾತ್ರ ಹತ್ತಬೇಕು. ಮುcದಿನ ಹಜಾರವನ್ನು ದಾಟುತ್ತಲೂ, 

ತೊಟ್ಟಿ. ಎಡಗಡೆಯಲ್ಲಯೂ, ಬಲಗಡೆಯಲ್ಲಿಯೂ ಕೊಠಡಿಗಳಿವೆ. ಎಡ 

ಗಡೆಯಿಂದ ಮಹಡಿಯ ಮೇಲಕ್ಕೆ ಹೋಗಲು , ಮಹಡಿರು ಮೆಟ್ಲುಗಳಿವೆ. ಮಹಡಿ 

ಮೇಲೆ ಎರಡು ಕೊಠಡಿಗಳುoಟು. ಒಂದು ಕೊಠಡಿಯಲ್ಲಿ ಕರಿಯಮರದ 

ಮಂಚವೂ, ನಿಲುವುಗನ್ನಡಿಗಳೂ ಒಂದು ಉಯ್ಯಾಲೆಯೂ, ಒಂದು ಬೀರೂ 

ಇದ್ದವು. ಕೆಳಗಡೆಯಲ್ಲಿ ನಡುಮನೆಗೆ ಹೋಗಲು ಒಂದು ಇಕ್ಕಟ್ಟಾದ 

ದಾರಿಯು ಸಿಗುವರು. ಇಲ್ಲಿಯೇ ಅಡಿಗೆಮನೆಯೂ, ದೇವರಮನೆಯೂ 

ನೀರಿನಮನೆಯೂ ಇರುವುವು. ಕಲ್ಲುಗಾರೆಗಳಿಂದ ಕಟ್ಟಿಸಿದ ಒಂದು ಭಾವಿ 

ಉಂಟು, ಹಿತ್ತಲಿನ ಭಾಗದಲ್ಲಿ ಕೆಲವು ಬಾಳೆಯಗಿಡಗಳಿದ್ದವು 


" ನಾರಣಪ್ಪನವರೆ, ಬಾಗೇಪಲ್ಲಿಗೆ ಹೇಳಿಕಳುಹಿಸಿ " 


" ಸ್ವಾಮಿ, ಹೇಳಿಕಳುಹಿಸಿ,ವನು, ಅವರು ಆಗಲೇ ಅರ್ಧ ದೂರ 

ಹೋಗಿರಬಹುದ. ತಾವು ಸ್ನಾನಕ್ಕೆ ಏಳಿ" 


“ ಆಗಲಿ ನಿಮ್ಮದೇವತಾರ್ಚನೆಯು ಮಗಿದಕೂಡಲೇ ಕರೆಯಿರಿ. 

ಬರುತ್ತವೆ ಈಗ ನಾವು ಕೂಡುವದಕ್ಕೆ ಜಾಗವೆಲ್ಲಿ ? 


"ಸ್ವಾಮಿ,  ಈ ಮನೆಯೇ ತಮ್ಮದಾಗಿದೆ. ಮಹಡಿಯಮೇಲಿನ 

ಕೊಠಡಿಗೆ ದಯಮಾಡಿಸಬೇಕು. ಅಲ್ಲಿ ಉಯ್ಯಾಲೆಯಲ್ಲಿ ಕುಳಿತು ತೂಗಿಕೊ 

ಳ್ಳುತ್ತಿದ್ದರೆ" 

 

*ಓಹೋ1 ಉಯ್ಯಾಲೆ, ತೂಗುಮಣೆಗಳಿದ್ದರೆ ನನಗೆ ಬಹಳ 

ಸಂತೋಷ, ” 


ಎಲ್ಲರೂ ಮಹಡಿಮೇಲಕ್ಕೆ ಬಂದರು. 

 

" ಎರದ್ರನರೆ ಏನಾದರು ಕನ್ನಡದ ಪುಸ್ತಕಗಳನ್ನಿ 

ಟ್ಟಿರುವಿರೋ 


“ ಕೆಲವು ಪುಸ್ತಕಳಗಳಿವೆ


 " “ ಏನು ಇವೆಯೋ ನೋಡೋಣ" 

  

100----------------------------- 

 

ನಾರಣಪ್ಪನು ಬೀರುವನ್ನು ತೆಗೆದು "ಹೆಚ್ಚು ಇಲ್ಲ. ಇವುಗಳಲ್ಲಿ 

ನೋಡಿ" ಎಂದನು. 

 

" ಷಡಕ್ಷರಿಯ ಶಂಬರಶಂಕರವಿಲಾಸ ನಾನು ಓದಿರುವೆನು ರಾಜ 

ಶೇಖರವಿದ್ದರೆ-.ಓ ಇಲ್ಲಿ ಇದೆಯಲ್ಲಾ , " ರಾಜಶೇಖರವನ್ನು ತೆಗೆದು 

ಕೊಂಡನಃ, “ಲೀಲಾವತಿ  ಭಿಕ್ಷಾಟನಚರಿತ್ರೆ, ಭಿಕ್ಷಾಟನಚರಿತೆಯನ್ನು 

ಬರೆದವರಾರು ಎಲ್ಲಿ, ' ಗುರುಲಿಂಗವಿಭು ' ಇದೇನು ಷಟ್ಪದೀ ಕಾವ್ಯ- 

ನನಗೆ ಬೇಡ, ಚಂಪೂಗ್ರಂಥಗಳಿದ್ದರೆ "-ಅಷ್ಟರಲ್ಲಿಯೇ  ರಾಜನು “ ನಿನಗೆ 

ಗೊತ್ತಿಲ್ಲ, ಇದು ಬಹಳ ಚೆನ್ನಾಗಿದೆ, ಓದಿನೋಡು " ಎಂದನು 


" ಹಾಗಾದರೆ ನೋಡೋಣ,  ರನ್ನನಗದಾಯುದ್ಧ, ಇದೂ ಇರಲಿ, 

ಇನ್ನು ಸಾಕು, ನಾರಣಪ್ಪನವರರೇ ನನಗೆ ಬೇಕಾದ ಪುಸ್ತಕಗಳನ್ನು ಬರೆದು 

ಕಳುಹಿಸುತ್ತೇನೆ ಓದುವದಕ್ಕೆ ಮಾತ್ರ ಕೊಡಬೆಕು, ಪುನಃ ವಾಪಸು 

ಕೊಟ್ಟುಬಿಡುವೆನು " 


“ಅದಕ್ಕೇನು ಸ್ವಾಮಿ, ಆಗಲಿ". 


“ ಸರಿ ಇನ್ನು ನಿಮ್ಮೆಕೆಲಸವನ್ನು ನೋಡಿಕೊಳ್ಳಿ." 


ಆಗ ನಾರಣಪ್ಪನ ಮಗನು ಒಂದು ತಟ್ಟೆಯಲ್ಲಿ ಸ್ವಲ್ಪ ಉಪ್ಪಿ 

ಟ್ಟನ್ನು ತಂದನು 


"ಇದೇನು ನಾರಣಪ್ಪನವರೇ, ಈಗಲೇ ಊಟವಾಗುವುದಲ್ಲ.  ” 


* ಆದರೂ ತೆಗೆದುಕೊಳ್ಳಿ. ಸ್ವಲ್ಪ ಹೊತ್ತಾಬಹುದು. ನಮ್ಮ ಮನೆ 

ಗಳಲ್ಲಿ ಒಂದು ಗಂಟೆಗೆ ಮೊದಲು ಊಟವಾಗುವುದಿಲ್ಲ 


"ನಿಮ್ಮ ಹುಡುಗನ ಹೆಸರೇನು ? " 


"ಕೃಷ್ಣಸ್ವಾಮಿ" 


ಆ ಹೆಸರು, ಕಿಟ್ಟಸ್ವಾಮಿ, ಕಿಟ್ಟಸಾಮಿ, ಕಿಟ್ಸಾಮಿ, ಕಡೆಗೆ ಸಾಮಿ 

ಎಂಬ ರೂಪಾಂತರವನ್ನು ಹೊಂದಿತ್ತು. 


ಕಿಟ್ಸಾಮಿ, ಇಲ್ಲಿ ಬಾ, ಕುಳಿತುಕೋ, ನೀನೂ ಸ್ವಲ್ಪತಿನ್ನು, 


"ನಾನು ತಿಂದಿರುವೆನು, ಇನ್ನೂ ನನ್ನತಾಯಿ ಕೊಡುವಳು: 


“ಚಿಂತೆಯಿಲ್ಲ, ನೀನು ಕುಳಿತು, ನೀನು ನಮ್ಮ ಜತೆಯಲ್ಲಿಯೇ 

ತಿನ್ನಬೇಕು. 

101 -------------------------------

ಆಗಾಗ್ಗೆ ಮೂರ್ತಿಯು ಕಿಚ್ಸಾಮಿಯ ಮುಖವನ್ನೇ ನೋಡುವನು, 

ಕಿಟ್ಸಾಮಿಯು ಬೆಪ್ಪಾಗುವನು, ತಿನ್ನುವದನ್ನು ಬಿಟ್ಟು, ಮುಖವನ್ನು ಕೆಳ 

ಗೆಮಾಡುವನು. ಉಪ್ಪಿಟ್ಟೂ ಸ್ಪಲ್ಪ ಹೊತ್ತಿಗೆ ಮುಗಿಯಿತು, 


"ಕಿಟ್ಸಾಮಿ ನೀನು, ಉಯ್ಯಾಲೆಯನ್ನಾಡುವಿಯಾ? 


"ನನಗೆ ಹೆದರಿಕೆ  “ 

ನಾವಿಬ್ಬರೂ ನಿನ್ನನ್ನು ಮಧ್ಯೆ ಕೂಡಿಸಿಕೊಳ್ಳವೆವು ಬಾ " 


ರಾಜ-"ಮೂರ್ತಿ! ರನ್ನನಗದಾಯುದ್ಧವನ್ನು ಓದಿರುವೆಯಾ? 


ಮೂ-“ ಓದಿರುವೆನು 


ರಾ-"ರಾಜಶೇಖರವನ್ನು 


ಮೂ-" ಅದನ್ನೂ ಓದಿರುವನು 


ರಾ-ಹಾಗಾದರೆ ರನ್ನನೂ, ಷಡಕ್ಷರಿಯೂ ನಿನ್ನ ಅಭಿಪ್ರಾಯದಲ್ಲಿ 

ಎಂತಹ ಕವಿಗಳು ? 


ಮೂ-" ಎಂತಹಕವಿಗಳೇನು, ಇಬ್ಬರೂ ಕವಿಚಕ್ರವರ್ತಿಗಳೇ 


ರಾ-“ಷಡಕ್ಷರಿಗೆ ಕವಿಚಕ್ರವರ್ತಿಯೆಂಬಬಿರುದನ್ನು ಯಾರುಕೊಟ್ಟರು? 


ಮೂ-" ಯಾರೇನು ಕೊಡುವರು, ನಾನು ಕೊಡುವೆನು. ಯಾರು 

ಓದಿದರೂ ಅವರು ಕೊಡುವರು, " 


ರಾ- ರನ್ನನ ಪದಗಾಂಭೀರ್ಯ ಷಡಕ್ಷರಿಯಲ್ಲಿದೆಯೇ ? 


ಮೂ- ಇಲ್ಲದೇ ಏನು ? 


ರಾ- ನನಗೆ ಕಾಣಲಿಲ್ಲ. ಷಡಕ್ಷರಿಗೆ ಸಂಸ್ಕೃತಜ್ಞಾನವುಹೆಚ್ಚು. 

ಸಂಸ್ಕೃತಪದಗಳ ಜಮಾವಣೆಯಿಂದ ಪದ್ಯದಲ್ಲಿ ಬಿಗಿಯನ್ನುಂಟುಮಾಡುವನು. 

ಅದನ್ನು ಕನ್ನಡಿಗರು ಮೆಚ್ಚುವದಿಲ್ಲ. 


ಮೂ- ರನ್ನನಿಗೂ ಸಂಸ್ಕೃತದಲ್ಲಿ ವಿಶೇಷವಾದ ಪಾಂಡಿತ್ಯವುಂಟು. 

ಆತನ ಪದ್ಯಗಳಲ್ಲಿಯೂ ಅನೇಕವಾದ ಸಂಸ್ಕೃತಪ್ರಯೋಗಗಳು ವಾಕ್ಯ 

ಗಳೂ, ಸೇರಿವೆ. ಅಜಿತಪುರಾಣದಲ್ಲಿ ಜನ್ಮಾಭಿಷೇಕದ ಪರಿಚ್ಛೇದದಲ್ಲಿ ಒಂದು 

ಸಂಸ್ಕೃತದ ಗದ್ಯವನ್ನೇ ಬರೆದಿರುವನಲ್ಲ. ಆದರೂ ಕನ್ನಡಿಗರಿಗೆ ಮೆಚ್ಚಿಗೆ 

ಇಲ್ಲವೇನು ? 

೧೦೨----------------------------------------------------------------------

ರಾ-"ಆದರೂ, ಷಡಕ್ಷರಿಯು  ತನ್ನ ಅಸಾಧಾರಣವಾದ ಪಾಂಡಿತ್ಯ 

ವನ್ನು ವಿಷದಪಡಿಸಬೇಕೆಂಬ ಆಶೆಯಿಂದಲೇ ರಾಜಶೇಖರವನ್ನು ಬರೆದಂತೆ 

ನನಗೆ ತೋರುವದು. ತನ್ನ ಗ್ರಂಥವು ಶೈಲಿಯಲ್ಲಿಯೂ, ರಸಾಲಂಕಾರ

ಗಳಲ್ಲಿಯa, ಅಗ್ರಗಣ್ಯವಾಗಲೆಂದು ಬರೆದಂತೆ ಕಾಣುವದು. ರನ್ನನಾ 

ದರೋ ತನ್ನ ಮನಸ್ಸಿನಲ್ಲಿವದು ಒಳಗೆ ನಿಲ್ಲಲು ಸಾಧ್ಯವಿಲ್ಲದೆ, ವಾಕ್ಯ 

ಗಳೂ ಪದ್ಯಗಳೂ ಹೊರಕ್ಕೆ ಹೊರಟಂತೆ ಬರೆಯುತ್ತಾನೆ. 

 

ಮೂ-." ಕಾವ್ಯಗಳನ್ನು ಬರೆಯುವವರೆಲ್ಲರೂ ತಮ್ಮ ತಮ್ಮದು 

ಉತ್ಕೃಷ್ಟವಾಗಿರಲೆಂದು ಬರೆಯುವವರಲ್ಲದೆ ಕನಿಷ್ಠವಾಗಲೆಂದು ಬರೆಯುವು 

ದಿಲ್ಲ ಅವರು ಬರೆದನಂತರ ಪಂಡಿತರು ಓದುವವರು, ಯಾವದು ಒಳ್ಳೆ 

ಯಗ್ರಂಥ ಯವದೂ ಅಲ್ಲ ಎಂದು ತೀರ್ಮಾನಿಸುವರು. 

 

ರಾ-- ಷಡಕ್ಷರಿಯನ್ನೂ, ರನ್ನನನ್ನೂ ಹೋಲಸೋಣ 


ಮೂ- ಇಬ್ಬರೂ, ಆಗ್ರೇಸರರು ತಮ್ಮ ಕಾವ್ಯಗಳಲ್ಲಿ, ಅಪ್ರತಿ 

ಮವಾದ ಕವಿತಾಶಕ್ತಿಯನ್ನೂ, ಅಪರೂಪವಾದ ವಾಕ್ಯಸಮಾಗಮವನ್ನೂ 

ತೋರಿಸಿರುತ್ತಾರೆ. 

 

ರಾ .. ರನ್ನನ, ದುರ್ಯೋಧನಪ್ರಲಾಪವನ್ನು ವರ್ಣಿಸಿರುವದನ್ನು 

ಓದಿರುವಿಯಲ್ಲ, ಅದು ಹೇಗಿರುವುದು 


ಮೂ-."ನಿಜವಾಗಿಯೂ ದುರ್ಯೋಧನನಲ್ಲಿ ನಮಗೆ ಕನಿಕರವುಂ 

ಟಾಗುವುದು.  ಸಾಧಾರಣವಾಗಿ, ದುರ್ಯೋ'ಧನನು, ಕಠಿಣಮನಸ್ಕನೆಂದೂ. 

ನೀಚನೆಂದೂ, ಪರಮ ಪಾತಕಿ ಎಂದೂ ಹೇಳೂವರು. ಅವುಗಳು ಸತ್ಯವಿರ 

ಬಹುದು ಅವುಗಳಿಂದ ನಮ್ಮ ಮನಸ್ಸು ದುರ್ಯೋಧನನ ವಿಷಯವಾಗಿ 

ಪಶ್ಚಾತ್ತಾಪವನ್ನು ಪಡಲಾರದು ಅದರೂ, ಕರ್ಣವಿಯೋಗವನ್ನು ವರ್ಣಿ 

ಸುತ್ತ ದುಃಖಿಸುವ ದುರ್ಯೋಧನನನ್ನು ಸ್ಮರಿಸಿಕೊಂಡರೆ, ಅವನೊಡನೆ, 

ನಾವು ಒಂದಾಗಿ ರೋದಿಸುವೆವು. ಸಜ್ಜನರಾಗಲೀ-ತಮ್ಮ ತಮ್ಮ ಸ್ನೇಹಿ 

ತರು, ಮತ್ತು ತಮಗೆ ಸೇರಿದವರು ಗತಸಿದಾದರೆ, ವ್ಯಸನಪಡುವದು 

ಸ್ವಾಭಾವಿಕವಲ್ಲವೆ, ಅದರಲ್ಲಿಯೂ ತನಗಾಗಿಯೇ, ಇನ್ನೊಬ್ಬನು ಯುದ್ಧ 

ದಲ್ಲಿ ಹೊಡೆದಾಡಿ, ಮರಣವನ್ನೈದಿ, , ಆ ಮಡಿದಾತನು ಬಲ್ಯಾರಭ್ಯತನ್ನ 


103--------------------------------------- 

 

ಕ್ಷೇಮಚಿಂತಕನಾಗಿದ್ದಲ್ಲಿ, ದುರ್ಜನನಾದರೂ, ರೋದಿಸುವವನಲ್ಲವೇ : ಆ 

ಕಾಲಕ್ಕೆ ತನ್ನ ದುಃಖವವನ್ನು ಹೊರಪಡಿಸತ್ತಿರುವಾಗ, ನೋಡು 

ವವರು, ಅವನ ದುರ್ಗುಣಗಳನ್ನು ಮರೆತುಬಿಡುವರು. ಈರೀತಿಯಲ್ಲಿ 

ರಸಾಸ್ವಾದನೆಯನ್ನು ಕಾವ್ಯದ ಮೂಲಕ ಮಾಡಿಸುವದು ಸಾಧಾರಂ ಕವಿ 

ಗಳಿಗೆ ಸಾಧ್ಯವಿಲ್ಲ 


"ಗದಾಯುದ್ಧಕಾಲದಲ್ಲಿ ಒಬ್ಬರೊಬ್ಬರು ಪೌರುಷವಾಕ್ಯಗಳನ್ನು 

ಅವರವರಿಗೆ ಅನುಸಾರವಾಗಿಯೇ ಬರೆದಿರುತ್ತಾನೆ. ದುರ್ಯೋಧನನ ಬಲ 

ಪೌರುಷಗಳನ್ನು ಚೆನ್ನಾಗಿ ವರ್ಣಿಸಿದ್ದಾನೆ. ತನಗೆ ಸಂಕಟವನ್ನುಂಟು ಮಾ 

ಡಿದ ಭೀಮನನ್ನು ಗದೆಯಿಂದ ಹೊಡೆಯುವಾಗಲೂ, “ ಕರಿಯನುಂಗಿ ಕಳಿಂ 

ಗನಂಸದೆದ ದರ್ಪಕ್ಕೊಂದುಗೊಳ್‌  ” “ ಮತ್ಸಹೋದರರಂಪಿಂಗನೆಕೊಂ 

ದುದಕ್ಕೆರಡುಗೊಳ್‌"- "ದುಶ್ಶಾಸನೋರುಸ್ಥಳಕ್ಷರದ್ರಸಾಂಬುವನಾರ್ದು 

ಪೀರ್ದಮುಳಿಸಿದಂ ಮೂರುಗೊಳ್‌ " ಎಂದು ನುಡಿಯುವನು. ಕೋಪ 

ಬಂದಿರುವಾಗ ನಾವೂ ಇದೇರೀತಿಯಲ್ಲಿ ನುಡಿಯುವೆವಲ್ಲವೆ, ಇದು 

ನಮ್ಮೆಲ್ಲರ ಅನುಭವಕ್ಕೂ ಬಂದಿರುವದು. ಅದನ್ನು ಪದ್ಯಮೂಲಕವಾಗಿ 

ಬರೆದಿರುವುದನ್ನು ಎಲ್ಲರೂ ಮೆಚ್ಚಬೇಕು ಮತತ್ತು ಭೀಮಸೇನನು ಈ 

ಪ್ರಹಾರಗಳ ಸಹಿಸಿಕೊಂಡು ತನ್ನ ಗಂದಾದಂಡವನ್ನು ಎತ್ತಿ "ಲಾಕ್ಷಾಗೇ 

ಹದಾಹಕ್ಕಿದು"  ಎನ್ನುವಾಗ ಗದೆಯನ್ನು ತೂಗಿಬಿಟ್ಟಂತಯೇ ಕಾಣುವದು. 

ಈ ಮೊದಲಿನ ಹೊಯ್ಯುವಿಕೆಯು, ನಿಧಾನವಾಗಿಯೂ, ತನ್ನಲ್ಲಿ ಉಕ್ಕಿ 

ಬರುತ್ತಿರುವ ಕೋಪಾತಿಶಯವನ್ನು ತಡೆಯುತ್ತ ತಾನು ಪಡೆದ ಗದೆಯ 

ಏಟುಗಳನ್ನು ಸ್ಮರಿಸಿಕೊಳ್ಳುತ್ತಾ, ಪ್ರತಿಯಾಗಿ ತನ್ನ ಪೂರ್ಣಶಕ್ತಿಯನ್ನು 

ಪ್ರಯೋಗಿಸಿ, ಗದಾಘಾತವನ್ನುಂಟುಮಾಡಿದಂತೆಯೇ ಭಾವನೆಯಾಗು 

ವದು. ಆಮೇಲೆ ಪಂಪ- 


ರಾ- “ ತಾಳು, ನೀನು ಈ ರೀತಿಯಲ್ಲಿ ಈ ದಿನವೆಲ್ಲಾ 

ಹೇಳುತ್ತಿರುವೆ ನನಗಿರುವ ಒಂದು ಆನುಮಾನಕ್ಕೆ ಬದಲು ಕೊಡು. 


ಮೂ~ ಏನು, 


ರಾ- "ಸಂಸ್ಕೃತಪದಗಳ ಜಮಾವಣೆಯಿಂದ ಪದ್ಯಗಳು ಸರಳವಾಗಿ 

ಓಡುವ ಹಾಗೆ ಮಾಡುವವರೆಲ್ಲರೂ ಕವಿಶಿಖಾಮಣಿಗಳೇ? 


104--------------------------------- 

ಮೂ- ನಿನಗೆ ಕೆಲವು ಸಂಗತಿಗಳು ತಿಳಿದಿಲ್ಲ,. ಇಗೋ ಯಾವಾ 

ತನು ತನ್ನ ಮನಸ್ಸಿನಲ್ಲಿರುವದನ್ನು ಇತರರಿಗೆ ತಿಳಿಯುವಂತೆ 'ಸುಲಭಶೈಲಿ 

ಯಲ್ಲಿಯೂ, ವ್ಯಾಕರಣ ಸಮ್ಮತವಾಗಿಯೂ, ಛಂದೋಬದ್ಧವಾಗಿಯೂ, 

ಇರುವ ವಾಕ್ಯಗಳಿ೦ದ ಬರೆಯುವನೋ, ಆತನು ಕವಿಗಳಲ್ಲಿ, ಅಗ್ರಗಣ್ಯನು 

ನಮ್ಮ ಕರ್ಣಾಟಕದಲ್ಲಿ ಸಂಸ್ಕೃತದದಗಳು ಸೇರಿಹೋಗಿವೆ, ಅವುಗಳನ್ನು 

ಎಲ್ಲರಮಾತುಗಳಲ್ಲಿಯೂ ಕೇಳಬಹುರು, ಇಂತಹ ವಾಡಿಕೆಯಾದವುಗ

ಳನ್ನು ಬೇರೆ ಮಾಡಲಾಗದು. ನಮಗೆ ಸಾಧ್ಯವಾಗಮಟ್ಟಿಗೆ ಅನಾವಶ್ಯಕ 

ವಾಗಿ ಸಂಸ್ಕೃತಮಿಶ್ರವನ್ನು ಮಾಡಬಾರದು ಕೇವಲ ಕನ್ನಡಪದಗಳ 

ಸಹಾಯದಿಂದ ಕಾವ್ಯವನ್ನು ಬರೆಯುವದೂ ಕಷ್ಟ. ಅ೦ಡಯ್ಯನೂಕೂಡ 

ತತ್ಸಮಗಳನ್ನು ತದ್ಭವಗಳಾಗಿ ಉಪಯೋಗಿಸಬೇಕಾಯಿತು. ಹೆಚ್ಚು 

ಸಂಸ್ಕೃತಪದಗಳ ಪ್ರಯೋಗವೂ ಕವಿತಾಶಕ್ತಿಗೆ ಪ್ರಾಮಾಣ್ಯವಲ್ಲ. ನಾವು 

ಒಬ್ಬ ಕವಿಯಲ್ಲಿಯೂ, ಒಂದು ಕಾವ್ಯದಲ್ಲಿಯೂ ನೋಡಬೇಕಾದುದೇನೆಂ 

ದರೆ-ಆತನು ಎಚ್ಚರಮಟ್ಟಿಗೆ ಹೊಸವಿಷಯಗಳನ್ನ ತಿಳಿಸಿರುತ್ತಾನೆ ಎಷ್ಚರ 

ಮಟ್ಟಿಗೆ ಇತರರಿಗೆ ತಾನು ಯಾವ ವರ್ಣನೆಗೂ ಬಾಧ್ಯನಲ್ಲ. ಒಂದುವೇಳೆ 

ಪೂರ್ಣಕವಿಗಳಿಂದ ಭಾವಗಳನ್ನು ತೆಗೆದುಕೊಂಡಿದ್ದಲ್ಲಿ , ತನ್ನ ಸಂದರ್ಭಗ 

ಳಿಗೆ ಯಾವರೀತಿಯಲ್ಲಿ ಅಡಕಿಸಿಕೊಂಡಿರುವನು, ಯಾವಭಾಗಗಳಲ್ಲಿ ಮೊದ 

ಲಿನದರಮಏಲೆ ಉತ್ಕೃಷ್ಟತೆಯನ್ನು ತೋರ್ಪಡಿಸಿರುವನು, ಎಂಬುವುಗಳೇ- 

ಈ ಪ್ರಮಾಣಗಳಿಂದ ರನ್ನನನ್ನೂ, ಷಡಕ್ಷರಿಯನ್ಯೂ ಹೋಲಿಸಿದರೆ ಇಬ್ಬ 

ರೂ ಸರಿಯಾಗಿ ತೂಗುವರು 


ರಾ~ ಗದಾಯುದ್ಧದ ಕಥೆಯು ಎಲ್ಲರಿಗೂ ತಿಳಿದಿತ್ತು 


ಮೂ-ತಿಳಿದ ಕಥೆಯನ್ನ ಯಾವರೀತಿಯಲ್ಲಿ ಬರೆದಿರುವನು ನೋಡು. 

ಷಡಕ್ಷರಿಯಾದರೋ ತನ್ನಚಂಪೂವ ಬಂಧಕ್ಕೆ ತನ್ನ ಕಥೆಯನ್ನೇ ಚುನಾಯಿ 

ಸಿಕೊಂಡನು. ಇದರಲ್ಲಿ ಆತನು ಪೂರ್ವಕವಿಗಳಿಗೆ ಎಳ್ಳಷ್ಟೂ ಬುದ್ಧನಲ್ಲ. 

ಆದರೆ ರನ್ನನು ಹೆಚ್ಚುಚಮತ್ಕಾರವನ್ನೂ ಹೆಚ್ಚು ಶಕ್ತಿಯನ್ನೂ ತೋರಿಸ 

ಬೇಕಾಯಿತು ಎಲ್ಲರಿಗೂ ತಿಳಿದಿದ್ದುದನ್ನು ಯಾರು ತಾನೆ ಓದುವರು.. ಕಥೆಗಾ 

ಗಿ ರನ್ನನನ್ನು ಹೊಗಳಬೇಕಾದುದಿಲ್ಲ. ಆದರೆ ಈಗ ರನ್ನನ ಕಾವ್ಯವನ್ನು 

105------------------------------------- 

ಎಷ್ಟು ಬಾರಿಓದಿದರೂ, ಪುನಃಓದಬೇಕೆಂಬ ಅಭಿಲಾಷೆಯೇಕಾಗುತ್ತದೆ ತಿಳಿಸು 


ರಾ-ಆತನು ವೀರ, ರೌದ್ರ, ಶೋಕರಸಗಳನ್ನು ವ್ಯಕ್ತಪಡಿಸುತ್ತಾನೆ. 


ಮೂ."ಮತ್ತು ದುರ್ಯ್ಯೋಧನನ ಮಾತುಗಳನ್ನಾಗಲಿ, ಅವನು ಅತ್ತು 

ದನ್ನಾಗಲೀ ವಾವಾರೂ, ನೋಡಿಲ್ಲ ಕೇಳಿಲ್ಲ. ಭೀಮನ ಕೋಪವನ್ನೂ, 

ರೋಷಾವೇಶನ್ನೂ, ಕಣ್ಣಾರೆ ಕಂಡಿಲ್ಲ. ಆದರೆ ಗಐಾಯುದ್ಧವನ್ನು ಓದು 

ವಾಗ ಎಲ್ಲವೂ ನಮ್ಮೆದಿರಿನಲ್ಲಿಯೇ ನಡೆದಂತೆ ಭಾವಿಸುವುವಲ್ಲದೇ ?" 


ಇಷ್ಟುಹೊತ್ತಿಗೆ "ದೇವರಪೂಜೆಯಾಯಿತು. ಇನ್ನು ಸ್ನಾನಕ್ಕಿಳಿ 

ಯೋಣ, ಕಿಟ್ಸಾಮಿ, ಸ್ನಾನಮಾಡೋಣವೇ


"ಮಾಡಿ, ನಮ್ಮಪ್ಪನಿಗೆ ಹೇಳಿಬರುವೆನು


"ಬೇಡ ಬೇಡ ಇಲ್ಲಿ ಬಾ 


ರಾ- “ ಕಿಟಾಮಿಯನ್ನು ನೋಡಿದರೆ ನನಗೆ ಎಲ್ಲಿಯೋ ನೋಡಿ 

ದಂತೆ ಕಾಣುವದು, 


ರಾ- "ಅಹುದು- ಸ್ವಲ್ಪಮಟ್ಟಿಗೆ, ಆವಳಮುಖದಲ್ಲವೇ, 


ಮೂ -. ನನಗೂ ಹಾಗೆಯೇ ತೋರುವರು, 


ಮೂ- ಕಿಟ್ಸಾಮಿ, .ನಮಗೆ ಬಾಗೇಪಲ್ಲಿಯಲ್ಲಿ ತಿಳಿದವರುಂಟೇ ?


ಕಿ- ನಮ್ಮಕ್ಕನೂ ನಮ್ಮಣ್ಣನೂ ಇದ್ದರು ಈಗ ನಾಗೋಡಿಗೆ 

ಹೋದರೆಂದು ತೋಟಿಯು  ಹೇಳಿದನು. 


ಮೂ- ನಿಮ್ಮಕ್ಕನ ಹೆಸರೇನು ? 


ಕಿ- ಸಾವಿತ್ರಿ. 


ಮೂ- ಸಾವಿತ್ರಿಯ ನೀನೂ ಜೊತೆಯಲ್ಲಿ ಹುಟ್ಟಿರದರೇ?  


ಕಿ- ಅಲ್ಲ. ಸಾವಿಾನು ದೊಡ್ಡಪ್ಪನಮಗಳು, - 


ನಾರಣಪ್ಪನೂ, ಮಹಡಿಯಮೇಲೆ ಬಂದು "ಸ್ನಾನಕ್ಕೆ ದಯಮಾಡಿ 

ಸಬೇಕು” ಎಂದನು, ಸ್ನಾನಕ್ಕೆ  ಇಳಿದರು, ಸ್ನಾನವಾಯಿತು. ಶಾನು 

ಭೋಗನು ಪೆಟ್ಟಿಗೆಯಿಂದ ತೆಗೆಸಿ, ಮಗುಟ ಪೀತಾಬರಗಳನ್ನು ಕೊಟ್ಟನು. 

ಉಟ್ಟುಕೊಂಡು, ಊಟಕ್ಕೆ ಕುಳಿತರು. ದೊಡ್ಡದೊಡ್ಡಮಣೆಗಳು,  ವಿಕಾ 

೧೦೬-----------------------------------------------------------------

ಲವಾದ ಬಾಳೆಯ ಆಗ್ರದೆಲೆಗಳು, ಬೆಳ್ಳಿಯ ಪಂಚಪಾತ್ರೆಗಳಲ್ಲಿ ನೀರು, 

ಉದ್ಧರಣೆ. ಇವುಗಳನ್ನು ನೋಡಿ ಮೂರ್ತಿಯು  “ ಏಸು ನಾರಣಪ್ಪ 

ನವರೇ, ಅಳಿಯನ ಮರ್ಯಾದೆ ಸಲ್ಲುವದಲ್ಲ" ಎಂದನು.

 

" ಸ್ವಾಮಿ, ನೀವು ನಮ್ಮ ಮನೆಗೆ ಅಳಿಯನಿಗಿಂತ ಹೆಚ್ಚು, ನಮಗೆ 

ಅಳಿಯನಾಗುವದೆಂದರೇನು, ಎಲ್ಲಿಗೆಲ್ಲಿಗೆ 


“ ಅದೇನು ಹಾಗೆನ್ನುತ್ತೀರಿ. 


“ ನೀವು ಉದ್ಯೋಗಸ್ಥರ ಮಕ್ಕಳು. 


“ ನೀವು ದೊಡ್ಡ ಮನುಷ್ಯರು. 


“ ನಮಗೆ ದೊಡ್ಡಮನುಷ್ಯರೆಂಬ ಹೆಸರುಬರುವದೇ. ಹೊಲ ಗದ್ದೆ 

ಗಳಲ್ಲಿ ಹಗುರಳೂ ಬೇಸಾಯಿಮಾಡಿಕೊಂಡಿರುವು. 


* ಉದ್ಯೋಗವನ್ನು ಮಾಡಿದರೇನು ?  ದೊಡ್ಡ ದೊಡ್ಡ ಪದವಿಗ 

ಳಲ್ಲಿದ್ದರೇನು ? ದುರಾಚಾರಗಳಲ್ಲಿ ಪ್ರವರ್ತಿಸುತ್ಯ ಕುಡಿಯುವದನ್ಊ 

ವ್ಯಭಿಚಾರಗಳನ್ನೂ ಆರಂಭಿಸಿ, ಅಧಿಕಾರದ ಬಲದಿಂದ ಮತ್ತರಾದಲ್ಲಿ 

ಅವರಿಗೆ ದೊಡ್ಡ ಮನುಷ್ಯರೆಂಬ ಹೆಸರು ಕೊಡಲು ನನಗೆ ಸಮ್ಮತವಿಲ್ಲ 

ಒಳ್ಳೆಯಮನಸ್ಸೂ, ಉದಾರತ್ವವೂ, ಪರಜನಹಿತಚಿಂತನೆಯೂ ಇರುವ 

ವರು, ಬಡವರಾದರೂ ದೊಡ್ಡರಮನುಷ್ಯರು ಅಲ್ಲ,  'ದೊಡ್ಡ' ಎಂದರೆ 

' ಉದ್ಯೋಗದಲ್ಲಿರುವ'  ಅರ್ಥವಲ್ಲ,  “ಭಾರಿಯಗುಣಗಳುಳ್ಳ'  ಎಂಬು 

ದು ಆರ್ಥ

 

" ಸ್ವಾಮಿ, ನನಗೆ ಇದು  ತಿಳದಿಲ್ಲ. 


" ನಿಮ್ಮಂತಹವರ ಸಹವಾಸವು ಸಿಗುವದು ಅಪರೂಪ. 


"ಏನೋ ತಮ್ಮ ಸಂತೋಷ 


ಊಟಕ್ಕೆ ೯ ಜನಗಳು ಕುಳಿತಿದ್ದರು. ಮನೆಯವರಲ್ಲದೆ ಹೊರ 

ಗಿನ ಬ್ರಾಹ್ಮಣರು ನಾಲ್ಕು ಜನರಿದ್ದರು. ಮೂರ್ತಿಯು “ಇವರಾವೂರು" 

ಎಂದನು, 


" ಸ್ವಾಮಿ, ನಾವಿಬ್ಬರೂ ಪಾಲ್ಚರುವಿನಿಂದ ಬಂದಿರುತ್ತೇವೆ. ಇವರು 

ಚೇಳೂರಿನಿಂದ ಬಂದರು. 

107------------------------------------------ 

 

"ಅಯ್ಯೋ ಪಾಪ, ಎಷ್ಟು ದೂರ, ನಿಧಾನವಾಗಿ ಊಟಮಾಡಿ 

ನಾನಿರುವೆನೆಂದು ಸಂಕೋಚಪಡಬೇಡಿ. 


“ ತಾವಿದ್ದರ ನಮಗೆ ಸಂತೋಷ ಚೆನ್ನಾಗಿ ಊಟಮಾಡುವೆವು." 


“ ನಾರಣಪ್ಪನವರೇ, ನಿಮಗೆ ಬಾಗೇರಲ್ಲಿಯಲ್ಲಿರುವ ಕೋನೇರ 

ಯ್ಯನೇನಾಗಬೇಕು ? " 


“ ಅವನು ನನ್ನ ಅಣ್ಣನಮಗ ಸ್ವಾಮಿ, ಆತನು ನನ್ನ ಮನಸ್ಸಿಗೆ 

ಬಹಳ ಕೆಟ್ಟ್ರವನಾಗಿ ಕಾಣುವನು., 


“ ಅದೇನು ? 


“ ನಮ್ಮ ಮಾತಿಲ್ಲದೆ ಹೇಳದೆ ಕೇಳದೆ ಸಾವಿತ್ರಿಯ ಮದುವೆಯನ್ನು 

ವಿಷ್ಕರ್ಷಿಸಿ, ನಾಗೋಡಿಯ ರಾಮಚಂದ್ರಯ್ಯಸಿಗೆ ಕೊಡುವದಕ್ಕೆ ಹೊರಟು 

ಹೋಗಿರುವನು " 


" ನೀವು ಇದನ್ನು ನಿಲ್ಲಿಸಿ 


' ಈಗಾಗಲೇ ನಾಗೋಡಿಯನ್ನು ಸೇರಿ ಎರಡು ಮೂರು ದಿವಸ 

ಗಳಾಗಿ ಹೋಗಿವೆ, ನನಗೂ ಮೊನ್ನೆ ತಾನೆ ತಿಳಿಯಿತು ಸುಬ್ಬಯ್ಯನು 

ನಾಳೆಯದಿವಸ ಬಾಗೇಪಲ್ಲಿಗೆ ಬರುವನೆಂದು ಕಾಗದ ಒರದಿದ್ದಾನೆ ನಾನೂ 

ಬಾಗೇಪಲ್ಲಿಗೆ ಹೊರಡುವನು 

*****, 

೧೯ ನೆಯ ಪರಿಚ್ಛೇದ. 

ನಾಳಯದಿಪಸ ೯ ಗಂಟೆಗೆ ಮದುವೆಯ ಮುಹೂರ್ತ. ರಾಮಚಂ 

ದ್ರಯ್ಯನ ಮನೆಯ ಮುಂದುಗಡೆಯಲ್ಲಿ ವಿಸ್ತಾರವಾದ ಚಪ್ಪರವನ್ನು ಹಾಕಿ 

ದ್ದಾರೆ. ತೆಂಗಿನಗರಿಗಳನ್ನು ಹೆಣದು ಅಲ್ಲಲ್ಲಿ ಜೋತುಬಿಟ್ಟಿರುವರು. 

ಬಾಳೆಯಕಂಭಗಳನ್ನು ಕಟ್ಟಿರುವರು. ಚಪ್ಪರದ ಕೆಳಭಾಗದಲ್ಲಿ ಅರಶಿನ 

ಬಣ್ಣದ ರಂಗವಲ್ಲಿಯನ್ನಿಟ್ಟು ಶೃಂಗಾರ ಮಾಡಿರುವರು. ಮನೆಯಮುಂದೆ 

ಜನಗಳ ಕೋಲಾಹಲ. ಹಳ್ಳಿಯಕಡೆಗಳಿಂದ ರಾಮಚಂದ್ರಯ್ಯಸಿಗೆ ಬೇಕಾ 

ದವರು ಹಾಲು, ಮೊಸರು, ತುಪ್ಪಗಳನ್ನು ತೆಗೆಯಿಸಿಕೊಂಡು ಬಂದಿರವರು. 

108 ---------------------------------------


ಕೆಲವರು ತರಕಾರಿಗಳನ್ನು ತಂದಿರುವರು, “ ಅಯ್ಯನವರಿಗೆ ನಾಳೆ ಮೂರ್ತ, 

ಎಲಾ ಅಪ್ಪಯ್ಯ, ನಮ್ಮ ಮನೇನಾಗಿಂದ ಬೆಲ್ಲತತ್ತಾರೋ : ತೋಟಕ್ಕೋ 

ಗಂದಟ್ಟು ತೆಂಗಿನಕಾಯಿ ಕೆಡುವಲಾ” ಎಂದು ಕೂಗಿ ಹೇಳುತ್ತಿದ್ದರು 

ಮಾವಿನೆಲೆಗಳನ್ನು ತಂದು ಪೋಣಿಸಿ ತೋರಣಗಳನ್ನು ಕಟ್ಟುತ್ತಿದ್ದರು. 

ಈದಿನ ದೇವರಸಮಾರಾಧನೆ. ಶಾಸ್ತ್ರಕ್ಕೆ ವಾಲಗವಾಗುತ್ತಿತ್ತು. ಊರು 

ಗಳಿಂದ ಬಂಡ ಹೆಂಗಸರೂ, ಗಂಡಸರೂ, ಘಳಿಗೆಗೊಂದಾವರ್ತಿ, ಬೀದಿಯ 

ಬಾಗಲಿಗೆ ಬರುವದು ಬಗ್ಗಿ ನೋಡಿಕೊಂಡು ಒಳಗೆ ಹೋಗುವದು; ಹುಡು 

ಗರ ಹಾವಳಿಯು ಕೇಳಬೇಕಾದುದಿಲ್ಲ ; ಈ ಅವಾಂತರಗಳಲ್ಲಿರುವಾಗ 

ಪುರೋಹಿತನು ಬಂದು “ ಈದಿನ ವಧೂವರರಿಗೆ ಅಭ್ಯಂಗನಸ್ನಾನವಾಗ 

ಬೇಕು, ಸಾಯಂಕಾಲ ಎದುರುಗೊ೦ಬುವದು, ನಿಶ್ಚಿತಾರ್ಥ, ಎಲ್ಲರೂ 

೭ ಘಂಟಿಗೆ ಸಿದ್ದವಾಗಿರಿ” ಎಂದು ಹೇಳಿದನು


ಈ ರಾಮಚಂದಯ್ಯನಮನೆಯೇ ಹೆಂಣಿನವರುಳಿಯುವುದಕ್ಕೆ ಬಿಡಾ 

ರವಾಗಿತ್ತು. ಗಂಡಿನವರು ಇನ್ನೊಂದು ಮನೆಯಲ್ಲಿ ಸುಮಾರು ೫೧ ಬಾರು 

ದೂರದಲ್ಲಿದ್ದರು, ಸಾರಿಸುವರು, ಗುಡಿಸುವದು, ರಂಗವಲ್ಲಿಗಳನ್ನಿಡುವದು. 

ಇವುಗಳೊಂದುಕಡೆಯಲ್ಲಿ ನಡೆಯುತಿ ದ್ದ ವು. ಆಗಲೇ ಅಡಿಗೆಯವನೂ 

ಬ್ಬನು ತಿರುmಡುತ್ತಿದ್ದನು. ಅವನ ಸಹಾಯಕ್ಕೆ ಕೆಲವು ಹೆಂಗಸರು, ವಿಧ 

ವೆಯರು, ಮುತ್ತೈದೆಯರು ಕಾಯಿಪಲ್ಯಗಳನ್ನು ಹೆಚ್ಚುತ್ತ, ಪದಾಥ 

ಗಳನ್ನು ಹವಣಿಸುತ್ತ, ಉಗ್ರಾಣದಿಂದ ಅಡಿಗೆಯ:ಮನೆಗೂ, ಆಡಿಗೆಮನೆ 

ಯಿಂದ ಉಗ್ರಾಣಕ್ಕೂ ತಾರಾಡುತ್ತಿದ್ದರು. " ಒಲೆಯನ್ನು ಹತ್ತಿಸಿ. 

ಬೇಗ ಆಡಿಗೆಯಾಗಬೇಕು. ಓ ಗೋಪಾಲಭಟ್ಟರೆ ನೋಡಿ.” ನಿಮ್ಮ ಕೆಲಸ 

ಗಳನ್ನು ಬೇಗಮಾಡಿ" ಎಂದು ಕೂಗುತ್ತಿದ್ದರು."ಬೆಂಡೆಕಾಯಿಯೆಲ್ಲೇ  

ಲಕ್ಷ್ಮೀ, ಈಳಿಗೆಮಣೆಯನ್ನು ಕೊಡು ಕಿಟ್ಟಮ್ಮ, ಈಬಾಳೆಕಾಯಿಯನ್ನು 

ಬೋಂಡಾಗೆ . ನೀನು ಹೆಚ್ಚು” ಎನ್ನುತ್ತಿದ್ದರು.. ಈ.ಬಾಳೆಎಲೇಕಟ್ಟು 

ಉಗ್ರಾಣದಲ್ಲಿಡಿ  ಈ ತರ್ಕಾರಿಕುಕ್ಕೆಯನ್ನು ತೆಗೆದುಕೊಳ್ಳಿ,ಹಾಲು ಒಡೆದು. 

ಹೋದೀತು, ಒಂದು ಕಡೆ ದೂರದಲ್ಲಿ ಮುಚ್ಚಿಡಿ' ಎಂದು ಎಚ್ಚರಿಕೆ

 ಯನ್ನು ಕೊಡುತ್ತಿದ್ದರು.


೧೦೯----------------

 

ನೀರುಮನೆಯ ಬಳಿಯಲ್ಲಿಯೂ ಭಾವಿಯ ಬಳಿಯಲ್ಲಿಯೂ ಗಲ 

ಭೆಯನ್ನು ಹೇಳಲಿಕ್ಕಾಗದು. ತೆಂಗಿಮಟ್ಟೆಗಳಿಂದಲೂ ವಾಸಗಳಿಂದಲೂ, 

ನೀರುಮನೆಯನ್ನು ಕಟ್ಟಿದ್ದರು. ಮೇಲೆಲ್ಲಾ ಹೊಗೆ, ಕೆಳಗೆಲ್ಲಾ ನೀರು, 

ಕೊಚ್ಚೆ, ಇದರಲ್ಲಿ ಅಲ್ಲಲ್ಲಿ ಪಾತ್ರೆಗಳನ್ನು ಬೆಳಗುತ್ತಿರುವದು, ಸೀರೆಗಳ 

ನ್ನು ಕಟ್ಟುತ್ತಿರುವರು,ಒಬ್ಬಿಬ್ಬರ ಜಾರುವಿಕೆ. ಇವೆಲ್ಲವೂ ಮದುವೆಯ 

ಮನೆಯ ವಿಜೃಂಭಣೆಯನ್ನು ತೋರಿಸುತ್ತಿದ್ದವು. ಭಾವಿಯಲ್ಲಿ ನೀರನ್ನು 

ಸೇದುವಸೊಬಗು, ಮಡಿಬಟ್ಟೆಗಳನ್ನು ಹಿಂಡುವರೀತಿ ಹಂಡೆಯಕೆಳಗೆ 

ಉರಿಯನ್ನು ನೂಕುವ ವೈಯಾರ, ಮನಸ್ಸಿಗೆ ಹರ್ಷವನ್ನುಂಟುಮಾಡುತ್ತಿ 

ದ್ದವು. “ ಶೀಗೇಕಾಯನ್ನು ಹಾಕಿ ಉಜ್ಜಿಕೋ ಪಕ್ಕದಲ್ಲಿದ್ದೇನೆ"- 

ನೀರುಮನೆಯಿಂದ  “ ನೀರು, ನೀರುಬೇಕು" ಎಂದು ಕೂಗುವದು ಚಿತ್ರ 

ವಾಗಿದ್ದವು ಆ ಹೊಗೆಯಲ್ಲಿ, ಆ ಸೆಕೆಯಲ್ಲಿ, ಕಣ್ಣೊಳಗೆ ಸೀಗೇಹು 

ಡಿಯು ಬಿದ್ದಿರುವಲ್ಲಿ, ಹತ್ತಿರದಲ್ಲಿ ನೀರಿಲ್ಲದೆ ಗಾಳಿಯು ಬೀಸುಕತ್ತಲೆ 

ಚಳಿಯಲ್ಲಿ ಒದರುತ್ತ, ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತ, ಆಭ್ಯಂಜವನ್ನು 

ಮಾಡಿದರಲ್ಲವೇ ಶಾಸ್ತ್ರಕ್ಕೆ ಸ್ನಾನವಾದಂತಾಗುವದು. 


“ ನಿನ್ನ ಸ್ನಾನ ಮೊದಲಾಗಲಿ, ನೀನು ಏಳೇ" ಎಂದು ಸಾವಿತ್ರಿ 

ಯನ್ನು  ನಾಗಮ್ಮ ಕೂಗಿದಳು. 


"ಅಮ್ಮ ನನಗೆ ಸ್ನಾನಬೇಡ..

 

"ಇದೇನೇ ಹೀಗೆಮಾಡುವೆ, ಬಂದವರೆದುರಿಗೆ ಮಾನವನ್ನು ತೆಗೆ 

ಯುತ್ತೀಯೇ 

 

“ ಕೇಳಿದರೆ ನಮ್ಮ ಸ್ನಾವಾಯಿತೆಂದು ಹೇಳು. 


" ಹಾಗುಂಟೆ? ಮದುವೆಯಮನೆ, ನೀನು ಮದುವೆಯಹೆಣ್ಣು, ಎಲ್ಲಿ 

ಯೂ  ಕೇಳಿಲ್ಲ, ನೋಡಿಲ್ಲ. ಏಳು"


"ನನಗೆ ಬೇಡ.


“ಇದೇನುಹಠಮಾಡುತ್ತೀಯೇ. ನಿಮ್ಮಣ್ಣನನ್ನು ಕಳುಹಿಸಲೇ. 


"ಯಾರನ್ನು ಕಳುಹಿಸದರೂ ಬೇಡ. 


"ಅಯ್ಯೋ ಯಾರಾರೋ ಬರುವರು. ನೀನು ಏಳು, ನನ್ನಮಾತ 


110--------------------------------- 


ನ್ನುಕೇಳು ಆಗೋ ಲಕ್ಷ್ಮಮ್ಮನು ಬಂದಳು. ಲಕ್ಷಮ್ಮಾ, ಸಾವಿ 

ತ್ರಿಯನ್ನು ಸ್ನಾನಕ್ಕೆ ಎಬ್ಬಿಸು. " 


ಲ - "ಅದೇಕೇ ಸಾವಿತ್ರಿ ಹೀಗೆಮಾಡುತ್ತೀಯೇ, ಏಳು, ಏಳು," 

ಎಂದು ಕೈಹಿಡಿದೆಳೆದಳು. 


ಸಾವಿತ್ರಿಯು ಕೈಯನ್ನು ಹಿಂದಕ್ಕೆಳೆದುಕೊಂಡು "ನನಗೆ ಬೇಡವೆಂ 

ದರೆ ಕೇಳಬೇಕು" 


ಲ- ನಿನಗೆ ಯಾವುದು ಬೇಕು, ಯಾವುದೂಬೇಡ ಅನ್ನುವದನ್ನು ಅನು 

Jರ ನೈವೆ.ನ್ನು ಗಳಗಳ.. 

ಶತಿ ಹ.N ನ್ನು 

ಹಿಂದೂ '.ಡ) “ ನನಗೆ ಬೇಡವಂ ರ #-ಕ... " 

ಸರಿಸಿ ನಡಿಯಬೇಕೋ, ಏಳು, ಸಾಕು"ಸಂ. > " ಎಂದು ಹೇಳಿ ಒಲವಂತವಾಗಿ 

ಕರೆದೊಯ್ದಳು. 


ಸಾವಿತ್ರಿಯ ಸ್ನಾನವಾಯಿತು, ಕೋನೇರಯ್ಯನ ಸ್ನಾನವಾಯಿತು, 

ಲಕ್ಷ್ಮಮ್ಮನದೂ ಆಯಿತು. ಇತರ ಬಂಧುಗಳಿಗೆ ಕೆಲವರಿಗೂ  ಆಯಿತು. 

ಕೊಂಚಮಟ್ಟಿಗೆ ಉಪ್ಪಿಟ್ಟೂ ರವ ಎ ಉಂಡೆಗಳೂ, ಫಲಹಾರವಾದವು. 

ಇನ್ನು ಊಟವಾಗದವರೆವಿಗೂ ಮಾಡುವದೇನೆಂದು ಕೆಲವರು ನಿದ್ದೆಯನ್ನು 

ಮಾಡಲಿಕ್ಕನುಕೂಲಪಡಿಸಿಕೊಂಡರು. ಕೆಲವರು ಹರಟೆ ಮಾತುಗಳ 

ನ್ನಾಡುವದಕ್ಕೆ ಹೊರಟುಹೋದರು ಕೋನೇರಯ್ಯನು ರಾಮಚಂದ್ರ 

ಯ್ಯನಬಳಿಗೆ ಹೊರಟುಹೋದನು, 


ಮಧ್ಯಾನ್ಹ ಸುಮಾರು ಎರಡು ಘಂಟೆಯಾಗಿರಬಹುದ.. ಅಡಿಗೆಯೂ 

ಮುಗಿಯಿತು. ದೇವತಾರ್ಚನೆಯೂ ಮುಗಿಯಿತು.  ಎಲೆಗಳನ್ನು ಹಾಕುವ  

ಸಮಾರಂಭವಾರಂಭವಾಯಿತು ನೆಂಟರು, ಇಷ್ಟರೂ, ಬರುವರು ಬರು 

ತ್ತಿದ್ದಾರೆ.  “ ಈಕಡೆಯಲ್ಲಿ ಹೆಂಗಸರಿಗೆ ಹಾಕಿ" ಎಂದು ಒಬ್ಬ ಯಜಮಾ 

ನನು ಹೇಳುತ್ತಿದ್ದನು. ಶೇಕದಾರರ ಮನೆಯವರನ್ನು ಪುನಃ ಕರೆದು 

ಬಾರೋ ಶ್ಯಾಮೂ, ಅವರಿಗಿಲ್ಲಿ ಹಾಕೋಣ, ಈ ತೊಟ್ಟಿಯ ಮೇಲುಗಡೆ 

ಯಲ್ಲಿ ಹಾಕೋಣ" ಎಂದು ಇನ್ನೊಬ್ಬರು ಹೇಳುತ್ತಿದ್ದನು  "ಸುಮಾರು 

ಎಷ್ಟು ಎಲೆಗಳುಬೀಳುತ್ತವೆ ಅದು ನೋಡಿಕೊಳ್ಳಿ. ಜಾಗವು ಸಾಲದಿದ್ದರೆ,

 ಬೀದಿಯಲ್ಲಿ ಒಂದು ಜಮಖನವನ್ನು ಕಟ್ಟಿ, ದಿಣ್ಣೆಗಳಮೇಲೆಯೂ ಎಲೆ  


111 -------------------------------------

ಗಳನ್ನು ಹಾಕೋಣವೆಂದು ಮತ್ತೊಬ್ಬ ಯಜಮಾನನು ಹೇಳುತ್ತಿದ್ದನು. 

 ಕೊಂಚ ಹೊತ್ತಿನಲ್ಲಿಯೇ ಎಲ್ಲಾ ಕಡೆಗಳಲ್ಲಿಯೂ,ಎಲೆಗಳನ್ನು ಹಾಕಿ 

 ದರು."ಲೋ, ಹುಡುಗರಾ, ನೀವೆಲ್ಲಾ ಬೀದಿಯ ದಿಣ್ಣೆಯಮೇಲಕ್ಕೆ 

ಬನ್ನಿರೋ ಎಂದು ಒಬ್ಬಯಜಮಾನನು ಕರೆದುಕೊಂಡು ಹೋದನು. 

ಎಲೆಗಳಲ್ಲಿ ಬಡಿಸಲುಪಕ್ರಮಿಸಿದರು. ಉಪ್ಪು, ಚಟ್ನಿ, ಕೋಸಂಬರಿಗಳು, 

ಪಲ್ಯಗಳು, ಕೂಟು, ಹುಳಿ, ತೊವ್ವೆ, ಪರಮಾನ್ನ, ಹಪ್ಪಳ, ಚಿತ್ರಾನ್ನ 

ಮತ್ತು ಕೆಲವರೆಲೆಗಳಲ್ಲಿ ಹೋಳಿಗೆ, ಎಲ್ಲವೂ ಕ್ರಮವಾಗಿ ಬಡಿಸಲಾ 

ಯಿತು. " ಓಹೋ, ನಮ್ಮ ಸುಬ್ಬಯ್ಯನೂ ಬಂದನು. ಈಗ ತಾನೇ ಬೆಂಗಳೂ 

ರಿಂದ, ಬಾ ಬಾ. ನಿನ್ನ ಮೂಟೆಯಲ್ಲಿಡು. 'ಸುಬ್ಬಯ್ಯ, ಸುಬ್ಬಯ್ಯ, 

ಯಾವ ಸುಬ್ಬಯ್ಯ' ಕೋನೇರಯ್ಯನಿಗೆ ಎದೆಯಲ್ಲಿ ಝಗ್‌ ಎನ್ನಲು ತಿರುಗಿ 

ನೋಡಿದನು. ಸಾವಿತ್ರಿಯ: ಕಿವಿಗೂ ೀಗದ್ದಲವು ಬಿತ್ತು: “ ಓಹೋ, 

ಚಿಕ್ಕಪ್ಪನು ಬಂದನು. ಇನ್ನೇನಃ ' ಎಂದು: ಹರ್ಷವನ್ನು ತಾಳಿದಳು; 

ಅತ್ತು -ಈ ಮದುವೆಯನ್ನು ನಿಲ್ಲಿಸುವೆಂದುಕೊಂಡಳು. ಸ್ವಲ್ಪ ಕೊಠಡಿ 

ಯಿಂದ ಬಗ್ಗಿ ನೋಡಿದಳು. ಲಕ್ಷ್ಮಮ್ಮನು ಚಿಕ್ಕಮಾವನು ಬಂದನೆಂದು 

ಸಡಗರದಿ೦ದೆದ್ದು ಮರೆಯಾಗಲಿಕ್ಕೆ ಯತ್ನಿಸಿದಳು ನಾಗಮ್ಮನಿಗೆ ಸಾವಿತ್ರಿ 

ಯಮದುವೆಗೆ ಮೈದುನನೂ ಬoದನೆಂದು ಸಂತೋಷವಾಯಿತು. ಚಿಕ್ಕಪ್ಪ 

ನಲ್ಲ ! ಚಿಕ್ಕಮಾವನಲ್ಲ! ಮೈದುನನಲ್ಲ ! ಈ ಸುಬ್ಬಯ್ಯನೇ ಬೇರೆ. 

ಆದಿನ ಬೆಳಗ್ಗೆ ಬೆಂಗಳೂರಿಂದ ಹೊರಟು ಹಿಂದೂಪುರಕ್ಕೆ ಬಂದಳಿದನು. 

ರಾಮಚಂದ್ರಯ್ಯನ ಅಕ್ಕನ ಮಗನು. ಈತನ ಹೆಸರೂ ಸುಬ್ಬಯ್ಯ. ರಾಮ 

ಚಂದ್ರಯ್ಯನ ಅಕ್ಕನೂ, ಆಕ್ಕನಮಕ್ಕಳೂ, ಭಾವನೂ ಬಂದಿಳಿದರು, 

ಕೋನೇರಯ್ಯನ ಮನಸ್ಸು ಸಮಾಧಾನಸ್ಥಿತಿಯನ್ನು ಹೊoದಿತು. ಆದ 

ರೂ ಮೊದಲಿನ ಭೀತಿಯು ಪೂರ್ತಿಯಾಗಿ ಹೋಗಲಿಲ್ಲ. ಸಾವಿತ್ರಿಯ 

ಮುನೋಭಾವವು. ವ್ಯತ್ಯಸ್ತವಾಯಿತು. ನಾಗಮ್ಮನಿಗೂ ಸಂತೋಷವು 

ಕಮ್ಮಿಯಾಯಿತು. 

 

ಊಟವೇನೋ ಮುಗಿಯಿತು. ಮುಗಿಯುವಹೊತ್ತಿಗೆ ೩|| ಘಂಟೆ 

ಯಾಗಿಹೋಯಿತು, ಇನ್ನು ಸಾಯಂಕಾಲದ ಕೆಲಸಗಳಿಗೆ ಜಾಗರೂಕ 

118------------------------------------- 

ರಾದರು. ಜಡೆಗಳನ್ನು ಹೆಣೆದುಕೊಳ್ಳುವುದು, ಹೂವುಗಳನ್ನು ಕಟ್ಟು 

ವದು, ಹೊಸಸೀರೆಗಳನ್ನು ತೆಗೆದುಟ್ಟುಕೊಳ್ಳುವುದು ಆಗಲೇ ಸಾಯoಕಾಲ 

ವಾಯಿತು. ತಟ್ಟೆಗಳಲ್ಲಿ ಅರಶಿನ ಕುಂಕುಮಗಳನ್ನೂ, ತೆಂಗಿನಕಾಯಿಗಳ 

ನ್ಕೂ ಜೋಡಿಸಿಕೊಳ್ಳುವದೂ; ಮತ್ತು ಇತರರು ಜಮಖಾನವನ್ನು ರಾಮ 

ದೇವರ ಗುಡಿಯ ಒಳಗೆ ತೆಗೆದೊಯ್ಯುವರು. ದೀಪಗಳನ್ನು ಸರಿಪಡಿಸು 

ವುದು. ಈ ಕಾರ್ಯದಲ್ಲಿರುವಾಗ ಪುರೋಹಿತರು ಬಂದು "ನಿಶ್ಚಿತಾರ್ಥವು 

ಮನೆಯಲ್ಲಿಯೇ ಆಗಲೋ, ಇಲ್ಲವೇ ಗುಡಿಯಲ್ಲಿ ಆಗಲೋ.".ಎಂದು 

ಕೇಳಿದರು, " ಎಲ್ಲವೂ ಗುಡಿಯಲ್ಲಿಯೇ ನಡಿಯಲಿ” ಎಂದು ಬದಲು 

ಬಂದು ಹಿಲಾಲುಬತ್ತಿಗಳನ್ನು ಸರಿಪಡಿಸಿಕೊಂಡರು. ಹಳ್ಳಿಯಾಳುಗಳನ್ನು 

ಸಿದ್ಧ ಪಡಿಸಿಕೊಂಡರು ಓಲಗದವರೂ ಸಿದ್ಧವಾದರು. ಸೂರ್ಯಾಸ್ತ 

ವಾಗಿಹೋಗಿ ಕತ್ತಲೆಯಾಗುತ್ತ ಬoದಿತು, ಎಲ್ಲರೂ ಬಹಳ ಗಡಿಬಿಡಿಯ 

ಲ್ಲಿದ್ದರು. ಗಂಡಿನವರು ಆಗಲೇ ಹೊರಟು ಹೋಗಿರುವರು ಬೇಗಬನ್ನಿ 

ಕಾದಿರುತ್ತಾರೆ; ಇನ್ನೂ ಆಗಬೇಕಾದ ಕೆಲಸಗಳು ಬಹಳವಿದೆ" ಎಂದು 

ಪುರೋಹಿತರು ಎಚ್ಚರಿಕೆಯನ್ನು ಕೊಡುತ್ತಿದ್ದರು. ಲಕ್ಷ್ಮ್ಮನೂ ಸಿoಗ 

ರಿಸಿಕೊಂಡು ತನ್ನ ಅಕ್ಕನಿಗು, ತಂಗಿಯರಿಗೂ ಸಿಂಗರಿಸಿದಳು, ಇವಳೇ 

ಅಲ್ಲವೇ ಬೀಗಿತ್ತಿ. “ಮನೆಯಿಂದ ಹೊರಡಿ.ಲೋ ವೊಲಗಮಾಡಿರೋ" 

ವೋಲಗವೂ ಷುರುವಾಯಿತು. " ಸಾವಿತ್ರಿಯನ್ನು ಕರೆಯಿರಿ" "ಸಾವಿತ್ರೀ, 

ಸಾವಿತ್ರೀ, ಸಾವಿತ್ರೀ, ಸಾವಿತ್ರೀ ಏನು ಇನ್ನು ಬರಲಿಲ್ಲ, ಸಾವಿತ್ರೀ ಎಂದು  

ಕೂಗುತ್ತ ಕೆಲವರು ಒಳಗೆ ಹೋದರು. °ಸಾವಿತ್ರೀ, ಸಾವಿತ್ರೀ, ಸಾವಿ 

ತ್ರೀ ” ಸಾವಿತ್ರಿಯೇ ಇಲ್ಲ. "ಸಾವಿತ್ರಿಯು ಎಲ್ಲಿ ಹೊದಳು? ಎಲ್ಲಿ 

ಅದೃಷ್ಯಳಾದಳು? 

******

 

೨೦ ನೆಯ ಪರಿಚ್ಛ'ದ 

ಯಾವದಿನದಲ್ಲಿ ಮೂರ್ತಿಯು ನೀರ್ಲಪಲ್ಲಿಯ ಗ್ರಾಮಾಭಿಮುಖ 

ವಾಗಿ ಹೊರಟುಹೊದನೋ ಆದಿನದಲ್ಲಿ ಸುಬೇದಾರರಮನೆಯಲ್ಲಿ ಕೆಲವು 

ಸಂಗತಿಗಳು ಜರುಗುತ್ತಿದ್ದವು. ಯಜಮಾನ ಯಜಮನಯರಿಗೆ ಆದ 

ಸಂಭಾಷಣೆಯಲ್ಲಿ ಮೂಖ್ಯ ವಿಷಯಗಳ ಚರ್ಚಿಸಲ್ಪಟ್ಟವು. ಮೂರ್ತಿಗೂ 

ತನಗೂ ನಡೆದ ಮಾತುಗಳನ್ನು ವಿವರ ವಿವರವಾಗಿ ಯಜಮಾನತಿಯು 

ಹೇಳುತ್ತಿದ್ದಳು. ಮಧ್ಯೆ ಮಧ್ಯೆ ತನ್ನ ಸಮ್ಮತಿಯನ್ನು ಕೊಡುತ್ತ, ಕೆಲ 

ವೆಡೆಗಳಲ್ಲಿ ಪ್ರತಿಕೂಲವಾಗಿ: ಮಾತನಾಡುತ್ತಿದ್ದಳು.  ಕೃಷ್ಣವೇಣಿಯ 

ಮದುವೆವಿಷಯವಾಗಿ ಇಬ್ಬರ ಅಭಿಪ್ರಾಯಗಳೂ ಒಂದಾದವು. 

 

"ಮೂರ್ತಿಗೆ ಆ ಶಾನುಭೋಗರ ಮನೆಯ ಹೆಣ್ಣನ್ನು ತರು 

ವದು ನನಗಿಷ್ಟವಿಲ್ಲ 

 

"ಹಾಗೆನ್ನಬೇಡ  ಕೋನೇರಯ್ಯನೇನೋ ಕೆಟ್ಟವನು. ನನ್ನ 

ಅನುಭವಕ್ಕೆ ಅದು, ಬ೦ದಿರುವದು. ದdು ಅರರೆ ಹುಡುಗಿಯ ವಿಷಯವಾಗಿ 

ಏನು ಹೇಳಲಿಕ್ಕೂ ಇಲ್ಲ ಜಾತಕಗಳನ್ನು ತೋರಿಸೋಣ "

 

" ನನಗೆ ಮನಸ್ಸಿಲ್ಲ. ಮೈಸೂರಿನಿಂದ ಬಂದ ಕಾಗದಕ್ಕೆ ಬದಲು 

ಕೊಡಿ. ಆ ಹೆಣ್ಣನ್ನೇ ನಮ್ಮ ಮೂರ್ತಿಗೆ ತರೋಣ" 

 

" ಮೂರ್ತಿಗೆ ಮೈಸೂರಿನದ ಇಚ್ಛೆ ಇಲ್ಲವೆಣಂದು ನೀನೇತಿಳಿಸಿದೆಯಲ್ಲ 


" ಅವನಿಗೇನುಗೊತ್ತು ಇನ್ನೂ ಎಳೆಯುಹುಡುಗ ಯಾರುಹೇಗೆ 

ಹೇಳಿಕೊಟ್ಟರೆ, ಹಾಗೆ ಕೇಳುವನು " 


" ನೀನು ಅವನ ತಾಯಿಯಾದುದಕ್ಕೆ ಇಷ್ಟುಮಟ್ಟಿಗೆ ಅವನಗುಣ 

ವನ್ನು ಕಂಡುಕೊಂಡಿರುವೆಯಲ್ಲ.ಾವನು ಓದಿದವನು ಮುಂದಿನ 

ವರುಷ ಬೊಂಬಾಯಿಗೆ ಹೋಗುವನು, ಆವನಿಗೆ ತಿಳುವಳಿಕೆಯಿಲ್ಲವೇ, 

ನೀನು ಹೀಳಿದಂತೆ ನಡೆದಿರಲಾದು ಮದ್ದನ್ನು ಹಾಅಕುವರೆಂದರೇನು ? 

ನಾನು ಇದನ್ನು ನಂಬುದಿಲ್ಲ. ಜಾತಕಗಳು ಸರಿಹೋದರೆ ಯಾವಹೆಣ್ಣಾ 

೧೧೪--------------------------------------------------------------------- 

ದರೇನು ? ಇನ್ನೂ ಶಾನುಭೋಗರ ಮನೆಯ ಕದರೆ ಭಯಭಕ್ತಿ 

ಗಳಿ೦ದ ಇರುವಳು, " 


" ಅವಳ ವಿಷಯವಾಗಿ ಕೃಷ್ಣವೇಣಿಯನ್ನು ಕೇಳಿನೊಡಿ.

 

" ಅವಳಗೇನು ತಿಳಯುವದು. ಆದರೂ ನೋಡೋಣ. 'ಕೃಷ್ಣ 

ವೇಣೀ ಕೃಷ್ಣವೇನೀ' "


ಕೃ~ " ಏನಪ್ಪಾ 


ಯಜಮಾನ-ಸಾವಿತ್ರಿಯು ನಿನ್ನ ಸಹಪಾಠಿಯಲ್ಲವೇ? 


ಕೃ- ಅಹುದು. 


ಯಜಮಾನ-ನೀನು ಅವಳೊಡನೆ ಮಾತನಾಡಿರುವೆಯಾ 


ಕೃ-ಅವಳೂ, ನಾನೂ ಸ್ನೇಹಿತರು, ಯಾವಾಗಲೂ ಶಾಲೆಯಲ್ಲಿ 

ಪಕ್ಕದಲ್ಲೇ ಕುಳಿತುಕಕೊಳ್ಳುವೆವು. 

 

ಯಜಮಾನ- ಹೇಗೆ ಓದುವಳು, ಬುದ್ಧಿವಂತಳೇ 

 

ಕೃ- ಅವಳ ಯಾವಾಗಲೂ ಮೊದಲಿನವಳಾಗಿಯೇ ನಿಲ್ಲುವಳು. 

ಮೊನ್ನೆಯಪರೀಕ್ಷೆಯಲ್ಲಿ ಮಾತ್ರ ಲೆಕ್ಕಗಳಲ್ಲಿ ನಾನು ಮೇಲೆಬಂದೆನು. 


ಯ, ಜ, ನ-ಆದಿರಲಿ. ಮೂರ್ತಿಯು ಸಾವಿತ್ರಿಯ ವಿಚಾರವಾಗಿ 

ನಿನ್ನೊಡನೆ ಏನಾದರೂ ಹೊಳಿರುವನೆ ? 


ಕೃ– ನಗುತ್ತೆ ಹೇಳಿರುವನು . 


ಯ ಜ. ತಿ-'' ಏನೆಂದು 


ಕೃ- " ನಿನ್ನ ಸಹಪಾಠಿಯು ಚನ್ನಾಗಿರವಳು. ನನಗೆ ಅವಳನ್ನು 

ಕೊಟ್ಟು ಮದುವೆ ಮಾಡಿದರೆ "- 


ಯ, ಜ. ತಿ. ನೋಡಿದಿರಾ, ನಾನು ಹೇಳಲಿಲ್ಲವೇ. 


ಯು, ಜ, ನ-" ಇರಲಿ, ತಾಳು. ಆಮೇಲೆ, ಆಮೇಲೆ, 

 

ಕೃ- 'ಮಾಡಿದರೆ ಸುಖವಾಗಿರಬಹುದು,  ಇವರು ಎಲ್ಲಿ೦ದ ಯಾವ  

ಹಡುಗಿಯನ್ನು ಸಂಪಾದಿಸುವರೋ, ಎಂದು ಹೇಳಿರುವನು. '

 

ಯ, ಜ. ನ-ಮೂರ್ತಿಯು ಬಯಸುವದು, ಸಾವಿತ್ರಿಗೆ ಗೊತ್ತೆ? 


ಕೃ-.ಗೊತ್ತು. 

 

115--------------------------------------- 

ಯ, ಜ- ತಿ-– ಅದು ಹೇಗೆ 


ಕೃ-ಅದು ಹೇಗೋ; ಗೊತ್ತು 


ಯ, ಜ ನ-ಇಲ್ಲಿ ಬಾ, ಹೋಗಬೇಡ, ಅವಳೇನಾದರೂ ಹೇಳಿರುವಳೇ 


ಕೈ- ಇಲ್ಲ. 


ಯ ,ಜ, ನ-ಹಾಗಾದರೆ ಹೇಗೆ ಗೊತ್ತು ? 


ಕೃ- ಅದೇನೋ ನನಗೆ ತಿಳಿಯದು ನನ್ನನ್ನು ಕೇಳಬೇಡಿ 


ಯ, ಜ, ನ-ಹಾಸ್ಯದಿಂದ ಇಲ್ಲಿ ನೋಡು , ನೀನು ಹೇಳದಿದ್ದರೆ, 

ನಿನಗೆ ಒಬ್ಬಪಟೇಲನ ಮಗನನ್ನು ತಂದು ಗಂಡನನ್ನಾಗಿ ಮಾಡುವೆನು 


ಕೃ- ನನಗೇನೂ ಅವಮಾನವಲ್ಲ ನಿನಗೆ ಪಟೇಲನ ಮಗನು 

ಅಳಿಯನಾಗುವನಲ್ಲ. 


ಯ ಜ ತಿ-. “ಅವಳೇನು ಚಿತ್ರಾಂಗಿ, ಮಾತುಗಳುನೋಡಿ ಗoಡ 

ನನ್ನು ಕುಕ್ಕೆಯಲ್ಲಿ ಕೂರಿಸಿ, ಸಂತೆಯಲ್ಲಿ ಮೂರುಕಾಸಿಗೆ ಮಾರಿ 

ಬಂದುಬಿಡುವಳು, 


ಯ, ಜ. ನ-ಅದಿರಲಿ. ಕೃಷ್ಣವೇಣಿ, ಸಾವಿತ್ರಿಯು ನಿನ್ನೊಡನೆ 

ಎಂದಾದರೂ ಈವಿಷಯವಾಗಿ ಹೇಳಿರುವಳೇ? 


ಕೃ- ಇಲ್ಲಪ್ಪ, ಮೂರ್ತಿಯೂ, ಅವಳೂ, ಆಗಲೆ ಮಾತನಾ 

ಡಿಬಿಟ್ಟಿರುವರು. 

 

ಯ, ಜ, ತಿ.- ಅಯ್ಯೋ , ಇನ್ನೆನುಗತಿ! ನನಗೆ ಗೊತ್ತು. ನಾನು 

ಹೇಳಲಿಲ್ಲವೆ, ಏನೋನಡೆದಿರಬೇಕು. ಅವರಿಗೆ ಮದ್ದನ್ನು ಹಾಕಿರಬೇಕು 

ಇಲ್ಲದಿದ್ದರೆ, ಹೀಗೇಕೆ ಮಾಡುತ್ತಿದ್ದರು. 



ಯ, ಜ, ನ- ಛೀ, ಸುಮ್ಮನಿರು, ಇದರಲ್ಲಿ ನನಗೇನೂ ಆಶ್ಚರ್ಯವು 

ತೋರುವದಿಲ್ಲ ಇನ್ನುಮೇಲೆಲ್ಲಾ ಹೀಗೆಯೇ ಆಗುವುದು, ಅವನೂ 

ಓದಿರುವನು ಅವಳೂ ಓದಿರುವಳು. ಸರಿ, ಸರಿ, ನಾನು ಜಾತಕಗಳನ್ನು 

ಕೂಡ ತರಿಸುವುದಿಲ್ಲ. ಹಾಗೆಯೇ ಮದುವೆಯನ್ನು ಮೂಡಿಬಿಡುವೆನು.  

 

ಯ ಜ ತಿ-ಎಲ್ಲಿಯಾದರೂ ಉಂಟೇ. ಆಹಾಳು ಒದಿನಿಂದ ಎಲ್ಲರೂ 

ಕೆಟ್ಟುಹೋಗಿರುವರು, ಸಾಕು. ಇನ್ನು ನಿಮ್ಮ ಮಗನನ್ನು ಇಲ್ಲಿಯೇ 


116-------------------------------------------- 


ಇಟ್ಟುಕೊಳ್ಳಿ ಬೊಂಬಾಯಿಗೆ ಹೋಗಿಬಿಟ್ಟು ಒಂದು, ಗುಜರಾತಿ ಹಡು 

ಗಿಯನ್ನು ತಂದು ಬಿಟ್ಟರೋ ನಾನೇನು ಮಾಡಲಿ 


ಯ ಜ ನ - ಅದಕ್ಕೇ ನಾನು ಹೇಳುವದೇನಂದರೆ,-ಅವನಿಗೆ ಸಾವಿ 

ತ್ರಿಯನ್ನು ಕೊಟ್ಟು ಮದುವೆಯನ್ನು ಮಾಡಿಬಿಡೋಣ. ಕೊA೧, ಗುಜರಾtರುಕು ಗಿ ಮುನ್ನುಗಳಿ, ಕರಿ ಹುಡುಗಿ ಯನ್ನಾಗಲಿ, ಅವನು ಕಟ್ಟಿಕೊಳ್ಳುವುದಿಲ್ಲ. 


ಯ, ಜ ತಿ- ನನಗೆ, ಆ ಹುಡುಗಿಯಮೆಲೆ ಛಲವಿಲ್ಲ: ಆದರೆ ಆ ಬಳ 

ಗವನ್ನು ಕಟ್ಟಿಕೊಂಡು ಏಗುವವರಾರು ? 


ಯ,ಜ, ನ-ಅವರ ಬಳಗವೆಂದರೆ ಯಾರು ಸುಬ್ಬಯ್ಯನೂ, ನಾರ 

ಣಪ್ಪನೂ ಒಳ್ಳೆಯವರು. ಒಳ್ಳೆಯವರಳ ಸಹವಾಸವನ್ನು ಮಾಡಬೇ  

ಕಲ್ಲದೆ, ಗರ್ವಿತರಾದರ ಜೊತೆಯಲ್ಲಿ ಸೇರಬಾರದು.

 

ಎ, ಜ, ತಿ-.ಇಂತಹ ನೆಂಟಸ್ತನವನ್ನು ಯಾರೂ ಮಾಡಿರಲಾರರು. 


ಎ,ಜ,ನ-"ಮಾಡಿದ್ದರೂ ನಿನಗೆ ತಿಳಿದಿರಲಾರದು. 


ಎ ಜ ತಿ-ಆಂತೂ ಜಾತಕಗಲನ್ನು ತೋರಿಸಿ. 


ಯಜಮಾನರೂ ಆಲೋಚಿಸುತ್ತೆ, ಅಗಾಗ್ಗೆ ಮುಗುಳುನಗೆಯನ್ನು 

ನಗುತ್ತೆ, 'ಕೃಷ್ಣವೇಣಿ, ಇಲ್ಲಿ ಬಾ, ಎಂದು ಕರೆದು ತಮ್ಮಕೊಠಡಿಗೆ 

ಹೊರಟರು. 

 

"ಅದು ಯಾವಾಗ ಮಾತನಾಡಿದರು. ಅದು ಹೇಗೆ ಸಂದರ್ಭವು 

ಒದಗಿತು. 

 

“ಆದಿವಸ, ಆರತಿಯೆಂದು ನಮ್ಮಮನೆಗೆ ಸಾವಿತ್ರಿಯನ್ನು ಕರೆದಿದ್ದೆವು 

ಆ ದಿನದಲ್ಲಿಯೇ.

 

"ಅದು ಹೇಗೆ. 


"ಈ ಕೊಠಡಿಯಲ್ಲಿ. 


" ಇಬ್ಬರೂ ಸೇರಲು ಕಾರಣವೆಲ್ಲಿಯದು, ಒಬ್ಬರನ್ನೊಬ್ಬರು 

ಅರಿಯರಲ್ಲ. 


" ನನ್ನೊಡನೆ, ಹೇಳಿದನು. ನಾನು ಸಾವಿತ್ರಿಯನ್ನು ಮೂರ್ತಿಗೆ 

 ಸಿಗುವಂತೆ ಮಾಡುವೆನು. 


117----------------------------------- 

 

" ನೀನು, ಅಸಾಧ್ಯಹುಡುಗಿ "- ಎಂದು ಹತ್ತರಕ್ಕೆ ಎಳೆದುಕೊಂಡು 

ಮುಂದಲೆಯನ್ನು ಸವರಿ.... “ ಅವಳು ಒಳ್ಳೆಯವಳೇ " ಎನಲು ಅಹುದು. 

ಇದುವರೆಗೂ ಅವಳು ಯಾರೊಡನೆಯೂ, ಹೆಚ್ಚು ಮಾತಾಡಿದುದನ್ನೇ 

ನಾನು ನೋಡಿಲ್ಲವೆಂದಳು. ಹೋಗಲಿ, ಅವಳು, ನಿನಗೆ ಅತ್ತಿಗೆಯಾದರೆ, 

ನಿನಗೆ ಸಮ್ಮತವೇ? ಎಂದು ಕೇಳಲು 

 

" ಸಮ್ಮತವಲ್ಲದೆ ಏನು ? ನನಗೆ ಬಹಳ ಸಂತೋಷತವೆಂದು ಹೇಳಿ 

ದಳು ಹಾಗಾದರೆ ನಿನ್ನ ಮದುವೆಯೂ, ಮೂರ್ತಿಯ  ಮದುವೆಯೂ ಜತೆ 

ಯಲ್ಲಿಯೇ ನಡೆಯುವದು, ಎಂದು ಸುಬೇದಾರರು ಹೇಳಲು ಕೃಷ್ಣವೇಣಿಯು 


ನನ್ನಮದುವೆ, ಅದೇನು ? ಎನ್ನಲು ನಿನಗೆ ಗೊತ್ತಿಲ್ಲವೆ, ನಿನಗೆ 

ನಿನ್ನ ತಾಯಿಯು ಎಲ್ಲೋ ವರನನ್ನು ಸಂಪಾದಿಸುವಳಂತೆ, ಅಥವಾ ನೀನೇ 

ಎಲ್ಲಿಯಾದರೂ ನೋಡಿ ವೆಯೋ ಎನಲು 'ಹೋ 

ಗಪ್ಪಾ' ಎಂದು ಮುಖವನ್ನು ತಿರುಗಿಸಿದಳು, ಸುಬೇದರರು- ಮೂರ್ತಿ 

ಯಸ್ನೇಹಿತರನ್ನು ನೋಡಿರುವೆಯಲ್ಲವೇ.  ಎಂದೊಡನೆಯೇ, ಕೃಷ್ಣವೇ 

ಣಿಯು ಯಾರು ? ಯಾವಾಗಲೂ ಜೊತೆಯಲ್ಲಿರವಾತನೋ ? ಇಲ್ಲಿಗೆ 

ಆಗಾಗ್ಗೆ ಬರುವನು. ಎನ್ನಲು, ಇಗೋ ಇನ್ನುಮೇಲೆ, ಅವನು ಇವನು, 

ಅನ್ನಬಾರರು : ಆವರು ಎನ್ನಬೇಕು, ನೀನು ಆವನ ಹೆಂಗತಿಯಾಗುವೆ, 

ಎಂದು ಹೇಳುತ್ತಿರುವಾಗಲೇ ಕೃಷ್ಣವೇಣಿಯು ಕೈಯನ್ನು ಬಿಡಿಸಿಕೊಂಡು 

ಓಡಿಹೋದಳು. . 

....... 


೨೧ ನೆಯ ಪರಿಚ್ಛೇದ 


ಸಾಯಂಕಾಲ ಸುಬ್ಬಯ್ಯನು, ಬಾಗೇಪಲ್ಲಿಗೆ ಬಂದನು, ಬರು 

ತ್ತಲೂ,ಕೋನೇರಯ್ಯನೂ, ಸಾವಿತ್ರಿಯೂ , ಎಲ್ಲರೂ ನಾಗೋಡಿಗೆ 

ಹೊರಟುಹೋಗಿರುವರೆಂದೂ, ಸಾವಿತ್ರಿಯ ಮದುವೆಯು ನಿಷ್ಕರ್ಷಿಸಲ್ಪಟ್ಟ 

ರುಪದೆಂದೂ ತಿಳಿದು, ಅತ್ಯಂತ ಕೋಪದಿಂದುಂಟಾದ ದುಃಖದಿಂದ ದುಃಕದಿಂದ..'ಛೀ 

ಪಾಪಿ!  ನೀನು ಇಷ್ಟು ದುಷ್ಟನೆಂದು ತಿಳಿದಿರಲಿಲ್ಲ. ನಾನು ಕಾಗದವನ್ನು 

118----------------------------------- 


ಬರದಿದ್ದರೂ ಹೊತಟುಹೋಗಿರುವೆ. ಒಂದುವೇಳೆ ಕಾಗದವು ಸೇರಲಿ 

ಲ್ಲವೇನೋ, ಅದರೂ ಮದುವೆಯು ಇಲ್ಲಿಯೇ ನಡೆಯಬೇಕಾಗಿತ್ತಲ್ಲ. 

ಗಂಡಿನಮನೆಗೆ ಕರೆದೊಯ್ಯುವುದು ಯಾವ ಸಂಪ್ರದಾಯ. ಆ ರಾಮಚಂ 

ದ್ರಯ್ಯನಿಗೆ ನೋಡುವನಂತೆ,'  ಎಂದು ಯೋಚಿಸುತ್ತೆ, 'ನಾರಣಪ್ಪನಿಗೇ 

ನಾದರೂ ತಿಳಿದಿರಬಹುದೇ, ಅವನೂ ಮದುವೆಗೆ ಹೋಗಿರುವನೋ ಏನೋ? ಇರ 

ಲಾರದು. ಆ ರಾಮಚಂದ್ರಯ್ಯನ ವಿಷಯವು ನಮಗೆಲ್ಲಾ ತಿಳದಿರುವದಲ್ಲ 

ಆ ಕೇಡಿಗನು, ಈ ಮದುವೆಯ ಸಮಾಚಾರವನ್ನು ಒಬ್ಬರಿಗೆ ತಳಿಸುವದಂ 

ದರೇನು, ತಿಳಿಸಿರಲಾರನು. ಆ ರಾಮಚಂದ್ರಯ್ಯನಿಗೆ, ಸಾವಿತ್ರಿಯನ್ನು 

ಕೊಡಲು, ಏನೋ ತಂತ್ರ ನಡೆದಿರಬೇಕು. ಈ ಮದುವೆಯ ಕಾಲದಲ್ಲಿ 

ನಾಮ ಸಂಧಿಸಿದುದಾದರೆ, ವಿಘ್ನವಾಗುವದೆಂದು ತಿಳಿದು ಹೀಗೆ ಮಾಡಿರುವ 

ನಲ್ಲವೇ' ಎಂದು ಯೋಚಿಸಿ, ಕೂಡಲೇ ನಾಗೋಡಿಗೆ ಹೊರಡಲು ಜಟ 

ಕಾಗಾಡಿಗಳ ಬಳಿಬಂದನು, ಆ ಊರಿನಲ್ಲಿ ಮೂರು ಜಟಕಾಗಾಡಿಗಳಿಗಿಂತ 

ಹೆಚ್ಚಿಲ್ಲ, ಆಗಾಗ್ಗೆ ಚಿಕ್ಕಬಳ್ಳಾಪುರದಿಂದ ಒಂದೆರಡು ಗಾಡಿಗಳು ಬರು 

ವುವು. ಬ೦ದರೂ ಪುನಃ ಶೀಘ್ರದಲ್ಲಿಯೇ ವಾಪಸು ಹೊರಟುಹೋಗು 

ವುವು. ಸುಬ್ಬಯ್ಯನು ವಿಚಾರಿಸಲು, ಯಾರೂ ಬರಲಿಕ್ಕಾಗುವದಿಲ್ಲ. ನಾಳೆ 

ಗೆ ಒಪ್ಪಿಕೊಂಡಿರುವೆವು ಎಂದರು. ಒಬ್ಬನು ಈಗತಾನೆ ಬ೦ದೆ. ಕುದು 

ರೆಬಳಲಿದೆ, ಒಂದಕ್ಕೆ ಎರಡರಷ್ಟು ಕೊಡುವೆನೆಂದರೂ ಬರಲಿಕ್ಕಾಗುವ 

ದಿಲ್ಲವೆನ್ನಲು, ಸುಬ್ಬಯ್ಯನು ಖಿನ್ನನಾಗಿ ಮನೆಗೆ ಬಂದು ಕುಳಿತನು.


ಮೂರ್ತಿರು, ರಾಜನೂ, ಆಗತಾನೆ ನೀರ್ಲಪಲ್ಲಿಯಿಂದ ಮನೆಗೆ 

ಬಂದರು, ಬರುವಾಗ ಸುಬ್ಬಯ್ಯನನ್ನು ನೋಡಿದರು, ಆದರೆ ಮಾತನ 

ಡಿಸಲಿಲ್ಲ. ಮೂರ್ತಿಯು ಕೃಷ್ಣವೇಣಿಯ ಒಳಗೆ ಹೋಗಿ ತಾನಿಲ್ಲವಾಗ 

ನಡೆದ ಸಮಾಚಾರವೇನೆಂದೂ ಈಗ ತಂದೆಯವರಲ್ಲೆಂದೂ ತಾಯಿಯ ಮನ 

ಸ್ಸೆಂತಿರುವದೆಂದೂ ನಾನು ಮನೆಯಲ್ಲಿಲ್ಲದುದಕ್ಕೆ ಏನೆಂದರೆಂದೂ ಕೇಳಲು, 

ಆಕೆಯು ಕಛೇರಿಯಿಂದ ತಂದೆಯು ಇನ್ನೂ ಬಂದಿಲ್ಲವೆಂದೂ, ತಾಯಿಯು 

ಏನೂ ಅನ್ನಲಿಲ್ಲವೆಂದೂ ಹೇಳಿದಳು. ಮೂರ್ತಿಯು, ತಂಗಿ ! ನಾನು 

ನಿನಗೆ ಹೇಳಿದುದನ್ನು ಏನುಮಾಡಿದೆ ! ಎನಲು ಈಗ ತಂದೆಯು ಬರಬಹುದು 

 

119----------------------------------------

ನೀನೇ ಕೇಳು ಎಂದಳು, ಹಾಗಾದರೆ ಇನ್ನೂ ಮಾತುಗಳು ನಡೆದಿಲ್ಲವೆ? 

ಎಂದು ಮೂರ್ತಿ ಕೇಳಲು, ನಡೆದಾದವು. ನಿನ್ನನ್ನು ಪುನಃ ಕೇಲಬೇಕೆಂ 

ದಿರುವರು ಎಂದು ಮುಖವನ್ನು ಓರೆಮಾಡಿಕೊಂಡಳು . ಮೂರ್ತಿಯು, 

ಅಯ್ಯೋ ಹಾಗಾದರೆ ಆ ಮೈಸೂರಿನ ಹುಡುಗಿಯನ್ನೇ ನಿಷ್ಕರ್ಷಿಸಿದರೋ 

ಎನಲು ನಿನಗೆ ಯಾವ ಹುಡುಗಿಯಾದರೇನು? ಎಂದು ಕೃಷ್ಣವೇಣಿ ಹೇಳಿ 

ದಳು. ಸರಿ ನಿನ್ನ ಮಾತಿಗೆ ನಾನು ಬದಲು ಕೊಡಲಾರೆ. ಅಲ್ಲಿ ಬೀದಿಯಲ್ಲಿ 

ಹೋಗುತ್ತಿರುವವರನ್ನು ನೊಡಿದೆಯಾ, ಅವನನ್ನು ನೀನು ಮದುವೆಯಾಗು 

ಎನ್ನಲು, ಆಕೆಯು ಛೀ ಛೀ, ನನಗೆ ಬೇಡ ಎಂದಳು. ಅದು ಏಕೆ? 

ಎಂದ ಮೂರ್ತಿಯ ಮಾತಿಗೆ, ನನಗೆ ಮನಸ್ಸು ಒಪ್ಪಿದವರಾಗಬೇಕು, 

ಎಂದಳು. ನನಗೂ ಹಾಗೆಯೇ ಎಂದು ಮೂರ್ತಿಯು ಅನ್ನಲು ಹಾಗಾ 

ದರೆ  ಸಾವಿತ್ರಿಯು ನಿನ್ನ ಮನಸ್ಸಿಗೆ ಒಪ್ಪಿರುವಳೋ ? ಎಂದು ಕೇಳಿದಳು. 

ಪುನಃ ಆ ಮಾತನ್ನು ಹೇಳು. ಎಂದು ನಗುತ್ತೆ ನನ್ನಮನಸ್ಸಿಗೊಪ್ಪಿರು 

ವಳು ಎಂದು ಮೂರ್ತಿ, ಆಂದನು.  ಹಾಗೆಂದು ಯಾವಾಗ ನಿನ್ನೊಡನೆ 

ಹೇಳಿದಳು ಎಂದು ಕೃಷ್ಣವೇಣಿ ಕೇಳಲು, ನಿನಗೆ ನನ್ನ ಅಭಿಪ್ರಾಯ 

ಗೊತ್ತಾಗಲಿಲ್ಲ. ನನ್ನ ಮನಸ್ಸು ಅವಳಮೇಲಿರುವುದು, ಎಂದು ಮೂರ್ತಿ 

ಹೇಳಿದ್ದಕ್ಕೆ, ಅವಳ ಮನಸ್ಸು ರಾಮಚಂದ್ರಯ್ಯನಮೇಲಿರುವುದು, ಎಂದು 

ಕೃಷ್ಟವೇಣಿ ನುಡಿದಳು. ಇಲ್ಲ, ನನ್ನ ಮೇಲೆಯೇ. ಇರುವುದು ಅದು ನನಗೆ 

ಖಂಡಿತವಾಗಿ ಗೊತ್ತು ಎಂಬುದಾಗಿ ಮೂರ್ತಿ  ಅನ್ನಲು, ಅದು ಹೇಗೆ 

ಬಲ್ಲೆ? ನೀನು ಬಿಚ್ಚಿ ಹೇಳದಿಗ್ಗೆರೆ, ನಾನೂ ಏನನ್ನೂ ಹೇಳುವುದಿಲ್ಲ.  

ಏನೋ ಹೊಸಸಂಗತಿಗಳು ಜರುಗಿರಬೇಕು, ಎನಲು, ಕೃಷ್ಣವೇಣಿ! ಆವ 

ಳೂ ನನ್ನೊಡನೆ ಮಾತನಾಡಿರುವಳು, ಬಾಯಿಬಿಟ್ಟು ಹೇಳಿರುವಳು. ತಿಳಿ 

ಯಿತೋ, ಎಂದು ಮೂರ್ತಿ ಹೇಳಲು ? ಎಲ್ಲಿ, ಯಾವಾಗ? ಎಂದು ಪ್ರನಃ 

ಪ್ರಶ್ನೆ ಹುಟ್ಟಿತು. ಅದೆಲ್ಲಾ ದೊಡ್ಡಕಥೆ,, ಅಂತೂ ನಮ್ಮಿಬ್ಬರ ಮನಸ್ಸು 

ಒಂದಾಗಿರುವುದು, ಎಂದು ಮೂರ್ತಿ ಹೇಳಿದನು. ಹಾಗಾದರೆ ನೀವಿಬ್ಬರೂ 

ದಂಪತಿಗಳು ಎಂದು ತ೦ಗಿಯ ನುಡಿಯಲು ಹಾಗಾಗಲೆಂದೇ ಕೋರು 

ವೆನು, ಎಂದು ಮೂರ್ತಿಯು  ನುಡಿದನು. ಹಾಗೆಯೇ ನಿಷ್ಕರ್ಷೆಯಾ 


೧೨೦------------------------------------------------------------------- 

 

ಗಿದೆ. ಧೈರ್ಯವಾಗಿರು ಎಂದು ಕೃಷ್ಣವೇಣಿ ಹೇಳಲು, ತಟ್ಟನೆ ತಂಗಿಯ 

ನ್ನು ಹತ್ತಿರಕ್ಕಳದುಕೊಂಡು ಕೃಷ್ಣವೇಣಿ! ಅದು ಹೇಗೆ ? ತಂದೆಯೇನೂ 

ಅನ್ನಲಿಲ್ಲವೇ ಎನಲು ಇಲ್ಲ. ನಿನ್ನ ವಿಚಾರವನ್ನು ಕೇಳಿ ತಂದೆಗೆ ನಗು 

ಬಂತು ಜಾತಕಗಳನ್ನು ಕೂಡ ನೊಡುವುದೇಬೇಡವೆಂದರು.. ಅದರಂತೆ 

ತಾಯಿಗೂ ಸಮಾಧಾನವೇ'ಸರಿ ,-ನೀನು ಇನ್ನೆಲ್ಲಾದರೂ ಹೋಗಿ ಗುಜ 

ರಾತಿ ಹುಡುಗಿಯನ್ನು ತಂದುಬಿಡುವಿಯೆಂದು ಅವಳಿಗೆ ಯೋಚನೆ. ಅಗೋ, 

ಅಪ್ಪನು ಬರುತ್ತಿರುವನು ನೀನು ನನ್ನ ಕೊಠಡಿಗೆ ಹೊರಡುವೆನು. ಎಂದು 

ಕೃಷ್ಣವೇಣಿ ಹೊರಟು ಹೋದಳು. 


ಸಬೇದಾರರರು ಬರುವಾಗ ಸುಬ್ಬಯ್ಯನನ್ನು ನೋಡಿ 

ಹತ್ತಿರಕ್ಕೆ ಕರೆದು, ಏನು ಸುಬ್ಬಯ್ಯ, ಯಾವಾಗ ಬ೦ದದ್ದು. ನೀವು 

ಬಾಗೇಪಲ್ಲಿಯನ್ನು ಬಿಟ್ಟು ಒಹಳ ದಿವಸಗಳಾಗಲಿಲ್ಲವೇ,ಎಂದು ಕೇಳಲು 

" ಆಹುದು ಸ್ವಾಮಿ, ಈಗತಾನೇ ಬಂದೆನೆಂದು ಆತನು ಹೇಳುತ್ತಲೂ, 

ಆತನನ್ನೂಕರದುಕೊ೦ಡು ಮನೆಯೊಳಗೆ ಬಂದು 'ಎಲೋ ಮೋದಿನ್‌ 

ಬೂಟ್ಸು ಬಿಚ್ಚು ಎಂದು ಹೇಳುತ್ತ ಒ೦ದು ಕುರ್ಚಯ ಮೇಲೆ ಕುಳಿ 

ತರು, ' ಸುಬ್ಬಯ್ಯ, ಮೇಲೆ ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ ಲೋ 

ಗುರುವ, ನಮ್ಮ ಮೂರ್ತಿ ಬಂದನೇನು.ಎ೦ದು ಕೇಳಲು, ಚಿಕ್ಕಸ್ವಾಮಿ 

ಗಳು ಬಂದಿದಾರೆಬುದ್ದೀ ಎಂದು ಗುರುವನು ಹೇಳದನು ಸುಬೇದಾರರು 

ಸರಿ. ಸುಬ್ಬಯ್ಯ, ನೀವು ಇಲ್ಲಿ ನಿಲ್ಲಿ, ಸ್ವಲ್ಪ ಒಳಗೆ ಹೋಗಿಬರು 

ವೆನೆನ್ನಲು ಸ್ವಾಮೀ ಕ್ಷಮಿಸಬೇಕು. ಈಗ ಅಗತ್ಯವಾಗಿ ನಾಗೋ 

ಡಿಗೆ ಹೊರಟು ಹೋಗಬೇಕು, ಎಂದು, ಸುಬ್ಬಯ್ಯನು ಹೇಳಿದನು. ಸುಬೇ 

ದಾರರು, ಸ್ವಲ್ಪ ತಾಳಿ ! ಎಂದು ಹೇಳಿ ಪುಟ್ಟಜೋಯಿಸರನ್ನು ಬರಮಾ 

ರುಪಂತ ಜವಾನನಿಗೆ ಅಪ್ಪಣೆ ಮಾಡಿ, “ ನಮ್ಮ ಮೂರ್ತಿಯನ್ನು ನೋಡಿ 

ರುವಿರೋ ? ಎಂದು ಕೇಳಲು ಸುಬ್ಬಯನು ಒಂದೆರಡು ಬಾರಿ ಬೆಂಗ 

ಳೂರಿನಲ್ಲಿ ನೋಡಿರುವೆನೆಂದನು. ಆಗ ಸುಬೇದಾರರು, ಸುಬ್ಬಯ್ಯನವರೇ? 

ಈ ಹುಡುಗರು ಮಾಡುವ ಕೆಲಸಗಳು ದೊಡ್ಡವರಿಗೆ ಪ್ರಾಣಕ್ಕೆ ಬರುತ್ತೆ 

ಅದೇನೋ ಗಲಾಟೆಯನ್ನು ಮಾಡಿಟ್ಟುಕೊಂಡಿರುವನು. ನೀವು ನಾಗೋ  

೧೨೧-----------------------------------------------------------------

ಡಿಗೆ ಹೋದರೆ-" ಎನ್ನಲು ಸುಬ್ಬಯ್ಯ- ಸ್ವಾಮೀ, ನನ್ನಿಂದಾಗಬೇಕಾದ 

ಕಾರ್ಯವಿದ್ದರೆ ತಮ್ಮ ಅಪ್ಪಣೆಯನ್ನು ಮೀರುವುದಿಲ್ಲ. ಸುಬೇ- ನಿಮ್ಮ 

ಹುಡುಗಿ, ಸಾವಿತ್ರಿಯ ಜಾತಕವು ಬೇಕಯ್ಯಾ, ಸುಬ್ಬಯ್ಯ~ ಬದಲು 

ಕೊಡಲಿಕ್ಕೆ ಏನೂ ತೋಚದೆ ದಿಗ್ಭ್ರಮೆ ಹೊಂದಿದನು, ಸುಬೇ-ಏತಕ್ಕೆ 

ಬದಲು ಕೊಡುವುದಿಲ್ಲ. ನೀವೆಲ್ಲಿಯಾದರೂ ನಿಷ್ಕರ್ಷೆ ಮಾಡಿಕೊಂಡಿ 

ದ್ದೀರಾ! ಸುಬ್ಬಯ್ಯ-ಸ್ವಾಮೀ ಕೋನೇರಯ್ಯನು ನಡೆಸಿದ ಸಂಗತಿಯು 

ತಮಗೆ ತಿಳಿದಿರbಹರು, ಸುಬೇ~ ನನಗೆ ಏನೂ ತಿಳಿದಿಲ್ಲ. ಸುಬ್ಬ - 

ಮನೆಗೆ ಬೀಗ ಹಾಕಿಕೊಂಡು ನಾಗೋಡಿಗೆ ಹೊರಟುಹೋಗಿರುವನು. 

ಸಾವಿತ್ರಿಗೆ ನಾಡಿದ್ದು ಮದುವೆಯನ್ನು ಮಾಡುವನಂತೆ. ಸುಬೇ- ನಿಮ್ಮ 

ನ್ನೊಬ್ಬರನ್ನೂ ಕೇಳದೆ ಮಾಡುವನೆ ? ಅದು ಹೇಗೆ ಗೊತ್ತು ಮಾಡಿದನು ? 

ಸುಬ್ಬ- ಎದುರಿಗೆ ಬಂದಾಗ ಕೇಳಬೇಕು. ಸುಬೇ- ಅವನು ಹುಚ್ಚು 

ಮುoಡೆ, ನೀವು ಹೋಗಿ ಸಾವಿತ್ರಿಯನ್ನು ನಾಳೆಯದಿನ ಕರದುಕೊಂಡು 

ಬನ್ನಿ, ಅವಳು ಹುಟ್ಟಿದ ಘಳಿಗೆ, ನಕ್ಷತ್ರ, ದಿನ, ಜ್ಞಾಪಕವಿದೆಯೋ " 

ಸುಬ್ಬ- ಸ್ವಲ್ಪ ಯೋಚಿಸಿ, ಬೆಳಗಿನಝಾವದಲ್ಲಿ ನಾಲ್ಕುವರೆ ಘಂಟೆಯಲ್ಲಿ 

ಹುಟ್ಟಿದ್ದು ಚೈತ್ರಶುದ್ಧದಲ್ಲಿ ಸಪ್ತಮಿಯೋ, ಅಷ್ಟಮಿಯೋ ಚೆನ್ನಾಗಿ 

ನೆನಪಿಲ್ಲ, 


ಅಷ್ಟು ಹೊತ್ತಿಗೆ ಪುಟ್ಟಜೋಯಿಸರು ಬಂದರು, “ಓ ಪುಟ್ಟ 

ಜೋಯಿಸರೆ, ಮೇಲೆಬನ್ನಿ " ಸುಬ್ಬಯ್ಯನಕಡೆಗೆ ತಿರುಗಿಕೊಂಡು ಸುಬೇ 

ದಾರರು “ ಈಗ ಸಾವಿತ್ರಿಗೆ ಎಷ್ಟು ವಯಸ್ಸು "ಸುಬ್ಬ - ಹನ್ನೆರಡು ತುಂಬಿ 

ಕೆಲವು ದಿವಸಗಳಾವವು, "ಸುಬೇ- ಜಾತಕವನ್ನು ಒರೆಯಿಸೋಣ" 


ಪುಟ್ಟ ಜೋಯಿಸರಿಗೆ ಈ ವರ್ತಮಾನ ಬಂದಕೂಡಲೇ ಜಾತಕ 

ವನ್ನು ಬರೆದರು. ಸಾವಿತ್ರಿಯ ಚಿಕ್ಕ ವಯಸ್ಸಿನಲ್ಲಿ ನಡೆದ ಕೆಲವುವಿಪಯ 

ಗಳನ್ನು ಸುಬ್ಬಯ್ಯನು ಹೇಳಿದನು. ಅದರಮೇಲೆ. ಒಂದು ಜಾತಕವನ್ನು 

ಬರೆದಿಟ್ಟು, ಮೂರ್ತಿಯುದನ್ನೂ ತರಿಸಿ, ಅದನ್ನೂ ನೋಡಿ ಸ್ವಾಮೀ, 

ಎರಡೂ ಚೆನ್ನಾಗಿ ಒಪ್ಪುವಂತೆ ಕಾಣುತ್ತೆ, ಮುಕ್ಕಾಲುಪಾಲು ಎರಡು 

ಜಾತಕಗಳು ಸರಿಯಾಗಿವೆ. ಕೆಲವು ದೋಷಗಳುಂಟು, ಆದರೆ ಅವು 

೧೨೨-------------------------------------------------------------

ಗಳು ಅಷ್ಟುಬಾಧಿಸುವುದಿಲ್ಲ. ನಾಳೆ ಇನ್ನೂಚೆನ್ನಾಗಿ ಗುಣಿಸಿ ಹೇಳುವನು. 

ಈಗ ನೋಡಿದ್ದರಲ್ಲಿ ಪ್ರಶಸ್ತವಾಗಿದೆ ಎನಲು 


ಒಳ್ಳೆಯದು, ಬೆಳಗ್ಯೆ ಸ್ವಲ್ಪಬನ್ನಿ, ಇನ್ನೆರಡುಜಾತಕಗಳನ್ನು ತೋರಿ 

ಸಬೇಕೆಂದು ಸುಬೇದಾರರು ಹೇಳಿದರು. ಅಪ್ಪಣೆ ಎಂದು ಪುಟ್ಟ ಜೋ 

ಯಿಸರು ಹೊರಟು ಹೋದರು. ಮರುದಿನ ಬೆಳಗ್ಗ ಸುಬೇದಾರು, ಸುಬ್ಬ  

ಯ್ಯನನ್ನು ಊಟಮಾಡಿಕೊಂಡು ಹೊರಡಿ ಎನ್ನಲು. ಸ್ವಾಮೀ,  ಜಟಕಾ 

ಗಾಡಿಗಳಾವವೂ ಇಲ್ಲ, ಎಲ್ಲರೂ ಒಪ್ಪಿಕೊಂಡಿರ ವೆವು ಎನ್ನುವ ರು. 

ಎಂದು ಸುಬ್ಬಯ್ಯ ಹೇಳಲು, ಅವರು ಕಳ್ಳರು- ಇಲ್ಲದಿದ್ದರೂ ಉoಟೆಂದು 

ಹೇಳುವಪದ್ದತಿ. ಎಲೋ, ದಫೇದಾರ್‌, ಜಟಕಾಗಾಡಿಯವರನ್ನು ಇಲ್ಲಿಗೆ 

ಕರೆದುಕೊಂಡು ಬಾ. ಎಂದು ಅಪ್ಪಣೆ ಮಾಡಲು  ಜಟಕಾಗಾಡಿಯವರು 

ಕೂಡಲೇ ಬಂದರು. ಒಬ್ಬಿಬ್ಬರನ್ನು ಬೆದರಿಸಿ ಒಂದು ಜಟಕಾವನ್ನು 

ಏರ್ಪಾಡು ಮಾಡಿದರು. ಇನ್ನೊಂದು ಘಂಟೆಯೊಗಾಗಿ ಹೊರಡಬೇಕು 

ಸಿದ್ದವಾಗು, ಹೋಗೆಂದು ಅಪ್ಪಣೆಯಾಯಿತು, ಜಟಕಾಗಾಡಿಯವನು 

ಬುದ್ದಿ ! ರಾಜoಡಳ್ಳಿಗೆ ಗೋಡ ಬದಲಾಯಿಸಬೇಕು, ಅಲ್ಲೇ ಖಾನಮಾಡು 

ತೇನೆ ಎಂದು ಹೇಳಿದನು. ಸುಬ್ಬಯ್ಯನವರು. ಊಟಮಾಡಿ ಪ್ರಯಾಣ 

ಹೊರಟರು. 

-~-~**---- 

೨೨ ನೆಯ ಪರಿಚ್ಛೇದ 

ಜಟಕಾಗಾಡಿಯು ನಾಗೋಡಿಯನ್ನು ಸೇರುವದಕ್ಕಿಂತ ಮೊದಲೇ 

ಸುಬ್ಬಯ್ಯನಮನಸ್ಸು ನಾಗೋಡಿಯನ್ನು ಸೇರಿದ್ದಿತು. ಕುದುರೆಯು ಎಷ್ಟು 

ವೇಗವಾಗಿ ಓಡುತ್ತಿದ್ದರೂ, ನಿಧಾನವಾಗಿ ಪ್ರಯಾಣವನ್ನು ಮಾಡುತ್ತಿದ್ದ 

ಹಾಗೆ ಭಾವನೆಯುಂಟಾಯಿತು. ಈಗ ತಾನೆ ಒಂದು ಮೈಲಿಯಾಯಿತಲ್ಲ. 

ಇನ್ನೂ ಎರಡನೇಕಲ್ಲು ಬರಲಿಲ್ಲ, ಎಂದು ತಹತಹಪಡುತ್ತಿದ್ದನು ಹೃದ 

ಹದಲ್ಲಿನ ಚಿಂತೆಯನ್ನೂ, ಶೀಘ್ರದಲ್ಲಿ ಸೇರಬೇಕೆಂಬ ಕುತೂಹಲವನ್ನೂ 

123 ..... ................................

ಸಮಾಧಾನಸ್ಥಿತಿಗೆ ತರಲು ಗಾಡಿಯಲ್ಲಿಯೇ ಮಲಗಲುಪಮಿಸಿದನು. 

ಕಣ್ಣುಗಳನ್ನು ಮುಚ್ಚಿಕೊಂಡನು. ಗಾಡಿಯು ತಾನುಹೋಗುತ್ತಿದ್ದ ದಿಕ್ಕಿಗೆ 

ಪ್ರತಿಯಾಗಿ, ಹೋಗುತ್ತಿದ್ದಹಾಗೆ ತಿಳಿದನು. ಕಣ್ಣುಗಳನ್ನು ಬಿಟ್ಟನು. 

ಪುನಃ, ಅದೇ, ಕಟಕಟನೆ ಓಡುವ ಜಟಕಾಗಾಡಿ, ಒಂದೊಂದಾಗಿ ಬಂಡೆ 

ಗಳೂ, ಕಲ್ಲುಗಳೂ ಹಿಂದೆ ಹಿಂದೆ ನಿಲ್ಲುತ್ತಿದ್ದವು. ಈ ಬೇಸರಿಕೆ 

ಯನ್ನು ನೀಗಲು ಸುಬ್ಬಯ್ಯನಿಗೆ ಸಾಧ್ಯವಾಗಿಲ್ಲ ಇನ್ನೂ ಐದು ಮೈಲಿ 

ಗಳು ಮಾತ್ರ ಬಂದಿರುವೆನು ಇನ್ನೂ ೨೫ ಮೈಲಿಗಳು ಹೋಗಬೇ 

ಕಲ್ಲ, ಎಂದು ನೊಂದುಕೊಳ್ಳುವನು, ಕೂಡಲೇ- ಒಂದೊಂದು ಮೈಲಿ 

ಯು ಹತ್ತಿರವಾಗುತ್ತಿದೆ ಎಂದು ತಾಳ್ಮೆಯನ್ನು ಹೊಂದುವನು ಓ, 

ಅರ್ಧಧೂರ ಸಾಗಿಬಂದನೆಂದು ಉತ್ಸಾಹವನ್ನು ತಾಳಿದನು ಆ ಉತ್ಸಾ 

ಹದ ಕಾರಣದಿಂದ ಹಾಡಲಿಕ್ಕಾರಂಭಿಸಿದನು ವಿಧವಿಧವಾದ ಪದ್ಯಗಳನ್ನು 

ಹಾಡಿದನು, ಕೀರ್ತನೆಗಳನ್ನು ಹಾಡಿದನು ಸಾಲದುದಕ್ಕೆ ಗಾಡಿಯವ 

ನಿಂದಲೂ ಮುಸಲ್ಮಾನ್‌ ಭಾಷೆಯಲ್ಲಿ ಹಾಡಿಸಿದನು. ಇವರಿಬ್ಬರಿಗೂ ಸಾಕಾ  

ಯಿತು. ರಾಜಂಡಹಳ್ಳಿಯ ಬಳಿಯಲ್ಲಿನಹೊಳೆಯೂ ಸಿಕ್ಕಿತು, ಹೊಳೆ 

ಯಲ್ಲಿ ಸ್ವಲ್ಪ ಇಳಿದು, ನೀರನ್ನು ಕುಡಿದು ಮರಗಳ ನೆರಳಿನಲ್ಲಿಯೇ 

ಹಳ್ಳಿಯಹತ್ತಿರ, ಹತ್ತಿರ, ನಡೆದು ಬಂದನು. ಗಾಡಿಯವನು ಕುದುರೆಯನ್ನು, 

ಬದಲಾಯಿಸುವ ನೆವದಿಂದ, ಮೊದಲಿನ ಕುದುರೆಯನ್ನು ಬಿಚ್ಚಿ, ಸಾಮಾನುಗ 

ಳನ್ನು ಒಳಗಿಟ್ಟು, ಕುದುರೆಯನ್ನು ಹಿಡಿದುಕೊಂಡು ಹೊರಟುಹೋದನು. 


ಕಾಲುಘ೦ಟೆಯಾಗಿ ಹೋಯಿತು ; ನರಲಿಲ್ಲ; ಗಾಡಿಯವನು 

ಇನ್ನೂ ಬರಲಿಲ್ಲ ಅರ್ಧಘಂಟೆ ಯಾಯಿತು ಎಷ್ಟೋ ಕೂಗಿಕೊಂ 

ಡನು, ಯಾರಾಲಬಳಿಯಲ್ಲೋ, ಹೇಳಿ ಕಳಹಿಸಿದನು; ಮನದಲ್ಲಿ ಸುಬ್ಬ .

ಯ್ಯನಿಗೆ ಕೋಪ ಭಾವವು ಉಕ್ಕಿಬರುತ್ತಲಿತ್ತು ದೂರದಲಿ ಗಾಡಿಯ 

ವನನ್ನು ನೋಡಿದನು, ನಿಧಾನವಾಗಿ, ಹೆಜ್ಜೆಯಮೇಲೆ ಹೆಜ್ಜೆಯನ್ನು 

ಹಾಕುತ್ತ ಒಂದು ಕೈಯಿಂದ ಕುದುರೆಯನ್ನು ಎಳೆಯುತ್ತ, ಇನ್ನೊಂದು 

ಕೈಯ್ಯನ್ನು ಜೇಬಿನಿಂದ ಬಾಯಿಗೂ, ಬಾಯಿನಿಂದ ಜೇಬಿಗೂ ತರುತ್ತಿ 

ದ್ದನು. ಸುಬ್ಬಯ್ಯನು ಚಪ್ಪಾಳೆಯನ್ನುತಟ್ಟಿದನು, ಕೂಗಿರನು ಅದ್ಯ 

194•••••••••• • • 

ಷ್ಟಕ್ಕೆತಕ್ಕಂತೆ ಗಾಡಿಯವನಿಗೆ ಒಬ್ಬ ಸ್ನೇಹಿತನು ಸಿಕ್ಕಿದನು ಅವನೊಡನೆ 

ಮಾತನಾಡುತ್ತ, ಮೆಲ್ಲಗೆ ಒಂದ ಬೀಡಿಯನ್ನು ಹಚ್ಚಿ ಸೇದುತ್ತ, ಅಲ್ಲಿಯೇ 

ನಿಂತುಬಿಟ್ಟರು ಸುಬ್ಬಯ್ಯನಿಗೆ ತಾಳಲಾರದಷ್ಟು ಕ್ರೋಧವು ತಲೆದೋ 

ರಿತು, ಮುಖವೆಲ್ಲವೂ ಕೆಂಪೇರಿತು , ಕೂಡಲೇ ಗಾಡಿಯವನನ್ನು ಭೂಗ 

ತ ಮಾಡಬೇಕೆಂದು ಮನಸ್ಸುಹೋಯಿತು. ಪುನಃ ಕೂಗಿಕೊಂಡನು. 

ಕುದುರೆಯನ್ನು ಎಳೆದುಕೊಂಡು ಗಾಡಿಯವನು ತರುಗಿದನು. ಹತ್ತಿರ 

ಹತ್ತಿರಕ್ಕೆ ಬಂದನು, " ಹೊತ್ತಾಗಿಹೋಯಿತು, ಬೇಗಕಟ್ಟು, ” ಎಂದು 

ಸುಬ್ಬಯ್ಯನು, ನುಡಿದನು. ತಾಳು ಸ್ವಾಮಿ, ಇನ್ನೂ ಗೊಡ ಪಾಣೀ 

ಪೀಲಿಲ್ಲ” ಎಂದು. ಬದಲು ಬಂತು. ಕೋಪಕ್ಕೆ ಇದು ತಕ್ಕ ಸಮಯವ 

ಲ್ಲವೆಂದುಕೊಂಡು, " ಇಲ್ಲಿ ನೋಡು ನಿನಗೆ  ೧ ರೂಪಾಯಿ, ಇನಾಮು 

ಕೊಡುತ್ತೇನೆ ಬೇಗನೆ ಕಟ್ಟು ” ಎಂದನು, ಕೂಡಲೇ, ಕುದುರೆಗೆ 

ಎರಡು ಚಾಟಿಯಯೇಟುಗಳು ಬಿದ್ದವು. ಕುದುರೆಯ ಓಡುತ್ತ ಓಡುತ್ತ 

ಹೊಳೆಯಬಳಿಗೆ ಹೋಗಿ ನೀರನ್ನು ಕುಡಿಯಿತು. ವಾಪಸು ಬಂದು, ಪಕ್ಕ 

ದಲ್ಲಿ ನಿಂತಿತು. ಆಗಲೇ ಸಾಮಾನುಗಳನ್ನು ಹಾಕಿ, ಗಾಡಿಯಲ್ಲಿ ಹುಲ್ಲನ್ನು 

ಸವರಿಸಿ, ಜಮಖಾನವನ್ನು ಝಾಡಿಸಿ, ಸುಬ್ಬಯ್ಯನು ಗಾಡಿಯೊಳಗೆ ಕೂ 

ತನು. ಅಷ್ಟರಲ್ಲಿ ಯಾರೂ ಪಕ್ಕದಲ್ಲಿ ಬಂದು “ ಏನು ಸುಬ್ಬಯ್ಯ, 

ಅಪರೂಪವಾಗಿ ಇತ್ತ ಬಂದಿರುವೆ, ಮನೆಗೆ ಬಂದು ಹೋಗುವದಿಲ್ಲವೇ 


“ ಸೀನಪ್ರಸವಕ್ಕೆ ಬರುತ್ತೇನೆ ಈಗ ಅಗತ್ಯವಾಗಿ ಹೊರಡಬೇಕು 


“ ಬೆಳಗ್ಗೆ ಹೊರಡಬಹುದು , 


ಸುಬ್ಬಯ್ಯನು ಸ್ವಲ್ಪಯೋಚಿಸಿದನು. ಗಾಡಿಯಿಂದಿಳಿದನು. ಕಡೆಗೆ 

" ಸೀಸಪ್ಪನವರ, ಈಗ ಒಂದು ಕಾರ್ಯಕ್ಕಾಗಿ ಹೊಗುವೆನು, ಈಗ ತಡೆ 

ಯಬೇಡಿ, ನಿಮ್ಮಲ್ಲಿಗೆ ಈ ರಾತ್ರಿಯೇ ಬರುವೆನು. " 


“ ಊಟದ ಹೊತ್ತಿಗೆ ಬಂದುಬಿಡುವಿರೋ ? 


" ಬಂದು ಬಿಡುವೆನು " " ಸಾಷ್ಟಾಂಗ " " ಸಾಷ್ಟಾಂಗ ” 


ಕುದುರೆಯು ವೇಗವಾಗಿ ಓಡಿತು. ಗಾಡಿಯು ಎ ಪುಡಿಪುಡಿ 

ಯಾಗುವದೋ ಎಂದು ಸುಬ್ಬಯ್ಯನು ಹೆದರಿದರು. ಆದರೂ, ಆ ಹೆದ 

125----------------------------------- 

ರಿಕೆಗಿಂತ ಜಾಗ್ರತೆಯಾಗಿ ಹೋಗುವೆನೆಂಬುದು ತೋರಿದುದರಿಂದ ಹರ್ಷ 

ವನ್ನು ತಾಳಿದನು. ಈ ಹರ್ಷವು ನಿಮಿಷಮಾತ್ರದಲ್ಲಿ ಮಾಯವಾಯಿತು. 

ಮನಸ್ಸಿನಲ್ಲಿ ತಾನು, ಆ ಕೂಡಲೇ ನಾಗೋಡಿಯಲ್ಲಿರಬಾರದೆ ! ಎಂದು 

ಹೊಳೆಯಿತು, ನಿಟ್ಟುಸುರನ್ನು ಬಿಟ್ಟು ಸುಬ್ಬಯ್ಯನ ಚಿತ್ತವು ಮೊದಲು 

ದೇವರನ್ನುನೆನೆಯಿತು. ಮನಸ್ಸಿನಲ್ಲಿಯೇ ವಂದಿಸಿದನು. ಸಾವಿತ್ರಿಯ 

ಮುಖವನ್ನು ಸ್ಮರಿಸಿಕೊಂಡನು. ಮೂರುವರುಷಗಳಾಗಿ ಹೋದವು 

ಹೇಗಿರುವಳA, ಈಗ ಎಷ್ಟುಸಂಕಟಪಟ್ಟಿರುವಳೋ, ಯಾವಪರಿಸ್ಥಿತಿಯ 

ಲ್ಲಿರುವಳೂ, ಆ ನಾಗಮ್ಮನಿಗoತೂ ವಿವೇಚನೆಯೇ ಇಲ್ಲ. ಚಿಕ್ಕಂದಿ 

ನಿಂದಲೂ ಸಾವಿತ್ರಿ ಎಷ್ಟು ಜಾಣ್ಣುಡಿಗಳನ್ನಾಡುತ್ತಿದ್ದಳು. ಯಾಗಾ 

ಗಲೂ, ತನ್ನ ಬಳಿಯಲ್ಲಿಯೇ ಇರುತ್ತಿದ್ದಳಲ್ಲ. ಒಂದೊಂದುಸಾರಿ, ತನ್ನ 

ಮುದ್ದಾದಮೊಗವವನ್ನೆತ್ತಿ ' ಚಿಕ್ಕಪ್ಪ, ನಾನು ಈದಿನ ಎಷ್ಟು ಓದಿರವೆನು 

ಕೇಳು ' ಎಂದು ಗೋವಿನಕಥೆಯನ್ನೆಲ್ಲವನ್ನೂ ಹೇಳುತ್ತ, ಕೆಲವೆಡೆಗಳಲ್ಲಿ 

ನಿಷ್ಠೆಯಿಂದಲಿಪೋಪೆನಲ್ಲಿಗೆ' ಎಂದರೆ ಅರ್ಥ ವೇನು ? ಎಂದು ನುಡಿಯು 

ತ್ತಿದ್ದುದನ್ನು ಜ್ಞಾಪಿಸಿಕೊಂಡನು. ಕುಣ್ಣುಗಳು ಆಗಲೇ ಅಶ್ರುಮಯ 

ವಾದವು “ ಚಿಕ್ಕಪ್ಪ, ನನಗೆ, ನೀನು ಹುಡುಕಿ, ಹುಡುಕಿ ಒಬ್ಬಾತ 

ನನ್ನು ತರಬೇಕು ” ಎನ್ನುತೆ ಬಾಲಬುದ್ಧಿಯಿಂದ “ನಾನು ಅವನೊಡನೆ 

ಮಾತನಾಡಿ, ನನಗೊಪ್ಪಿದರೆ, ಮದುವೆಯಾಗುವೆನು " ಎ೦ದು ಕೇಳಿದ್ದುದು 

ತಟ್ಟನೆ ಈಗ ನುಡಿದಂತೆ ಭಾವನೆಯಾಯಿತು, ಈಗ ತನ್ನನ್ನು ನೋಡು 

ತ್ತಲೂ, ಸಾವಿತ್ರಿಯ ಮೊದಲಿನಂತೆ ಬರುವಳೋ,, ಇಲ್ಲವೇ, ದೊಡ್ಡ 

ಹುಡುಗಿಯಾದೆನೆಂದುಹಿಂದೆ ನಿಲ್ಲುವಳೋ ಎಂದು ಅನುಮಾನವುಂಟಾಯಿತು. 

ಈಗಲೇ, ಆ ಸಾವಿತ್ರಿಯನ್ನು ಎತ್ತಿಕೊಳ್ಳಬೇಕೆಂದು, ಮನಸ್ಸು ಮುಂದಾ 

ಯಿತು. ಏನುಮಾಡಲಿ , ಈಗ ಏನಾಗಿರುವಳೋ, ಎಂತಿರುವಳೋ, 

ಬದುಕಿರುವಳೋ ಇಲ್ಲವೇ ರಾಮಚಂದ್ರಯ್ಯನೇ ಬೇಡವೆಂದು ಮಡಿದಿರು 

ವಳೋ ' ಎಂದು ದಿಗಿಲು ಹುಟ್ಟಿತು. ಇವುಗಳಿಂದ ನಾಗೋಡಿಯಬಳಿಗೆ 

ಬಂದುದು ಬೇಗತಿಳಿಯಲಿಲ್ಲ. ಗಾಡಿಯವನು, ಎಚ್ಚರಿಕೆಯನ್ನು ಕೊಟ್ಟನು. 


ನಾಗೋಡಿಯನ್ನು ಸೇರುಹೊತ್ತಿಗೆ ಸಾಯಂಕಾಲ ೬ ಘಂಟೆಯಾ 

ಗಿಹೋಯಿತು. ಗಾಡಿಯನ್ನು ಹಳ್ಳಿಯಹೊರಗೇ ನಿಲ್ಲಿಸಹೇಳಿದನು. 

126--------------------------------------- 

 

ತಾನು ಕಾಲುನಡಿಗೆಯಲ್ಲಿಯೇ  ಹೊರಟನು. ಒಬ್ಬರಿಂದ ಹೆಣ್ಣಿನವರ 

ಬಿಡಾರವನ್ನು ವಿಚಾರಿಸಿಕೊoಡನು. " ಈಗ ತಾನು ಮಾಡತಕ್ಕದ್ದೇನೆಂದು 

ಯೋಚಿಸಿದನು. ತಾನು ಹಠಾತ್ತಾಗಿ ಹೋದರೆ ತನ್ನ ಮಾತುಗಳು ನಡೆಯುಮ

ವವೋ ಇಲ್ಲವೋ. ಎಲ್ಲರೂ ಸೇರಿಕೊಂಡು ತನಗೇನನ್ನಾದರೂ ಮಾಡಿ 

ದರೂ ಮಾಡಬಹುದು. ಕೋನೇರಯ್ಯನೂ, ತನಗೆ ಪ್ರತಿಜವಾಬುಗಳನ್ನು 

ಕೊಟ್ಟು ಅವಮಾನ ಮಾಡಬಹುದು. ರಾಮಚಂದ್ರಯ್ಯನಿಗೂ ತನಗೂ 

ಮೊದಲಿನಿಂದಲೂ ಮಾತಿಲ್ಲ ತಾನೇ ಎದರಿಗೆಹೋಗಿ ಇ ಮದುವೆಯು 

ಆಗಕೂಡದರೆಂದು ನಿರ್ಬಂಧಿಸಲೇ, ಇಲ್ಲವೇ, ಯಾವ ಉಪಾಯದಿಂದ ಇದ 

ನ್ನು ನಿವಾರಣೆ ಮಾಡಬೇಕು ಎಂದು ಸ್ವಲ್ಪನಿಂತನು. ಮೆಲ್ಲಮೆಲ್ಗೆ 

ಜರುಗಿದನು. ಯೋಚಿಸುತ್ತಾ ಹೊಲಗಳಮೇಲಿಂದಲೇ ರಾಮಚಂದ್ರ 

ಯ್ಯನ ಮನೆಯಬಳಿಗೆ ಬಂದನು. ಹಳ್ಳಿಯ ಜನಗಳಲ್ಲರೂ, ಹೆಣ್ಣಿನವರ 

ಮನೆಯ ಮುಂದೆಯೂ , ರಾಮದೇವರ ಗುಡಿಯಬಳಿಯೂ ಇದದಕಾ 

ರಣ ಸುಬ್ಬಯ್ಯನು ಯಾವ ಹೆಚ್ಚು ಜನಗಳಿಗೂ ತಿಳಿಯದೆ ಇಷ್ಟುದೂರ 

ಬಂದುಬಿಟ್ಟನು, ಕಡೆಗೆ ಸುಬ್ಬಯನು, “ ಈಗಿನ ಉಪಾಯವು ಸಾಗಿದು  

ದಾದರೆ, ಇವರಿಗೆತಕ್ಕಪ್ರಾಯಕಶ್ಚಿತ್ತವೂ, ನನ್ನಕಾರ್ಯಾನುಕೂಲವೂ ಮದು 

ವೆಯ ನಿವಾರಣೆಯೂ, ಮತ್ತು ಈ ಸಂಗತಿಯನ್ನು ಕೇಳಿದವರಿಗಾನಂದವೂ 

ಉಂಟಾಗುವುದೆಂದು ಹಿಗ್ಗಿದನು, ಮೆಲ ಮೆಲ್ಲಗೆ ನಾಗದಾಳಿ ಪೊದರು  

ಗಳ ಪಕ್ಕದಲ್ಲಿಯೇ ನಿಂತು, ನಿಂತು, ಹಿಂದುಮುಂದು ನೋಡುತ್ತ. ಯಾರಿ 

ಗೂ ಕಾಣಿಸಿಕೊಳ್ಳದೆ, ಹೆಣ್ಣಿನವರ ಬಿಡಾರಮನೆ, ಹಿಂದುಗಡೆಗೆ ಸಾಗಿ 

ಹೋದನು, ಅಲ್ಲಿಬೆಳೆದಿದ್ದ ಹುಣಸೇಗಿಡಗಳ ಮರೆಯಲ್ಲಿ ನಿಂತು, ಮನಗೆ 

ಮುಂದಿನಿಂದ ರಸ್ತೆಯಲ್ಲಿ ಬರುವವರನ್ನು ನೋಡಿದನು. ಆ ಹೆಂಗಸರ, 

ಮಕ್ಕಳ, ಗಂಡಸರ ಗುಂಪುಗಳು ಹಿಂದಕ್ಕೆ ಹೋಗುವದನ್ನು, ಮುoದಕ್ಕೆ 

ಹೋಗುವದನ್ನೂ ಕಂಡನು. ಆಗ ಹಿತ್ತಲಕಡೆಯಿಂದ ಎರಡುಸವಟು, 

ಒಂದು ತಪ್ಪಲಿಯನ್ನು ಹಿಡಿದುಕೊಂಡು ಒಬ್ಬಳು ಮನೆಯೊಳಗೆ ಹೋಗು 

ವುದರಲ್ಲಿದ್ದಳು. ಸುಟ್ಟಯ್ಯನು ಚಪ್ಪಾಳೆತಟ್ಟಿದನು. ತಿಮ್ಮಿಯು ತಿರುಗಿನೋ 

ಡಿದಳು. ಕೈಸನ್ನೆಯಿಂದ ಹತ್ತಿರ ಕರೆದನು. 

೧೨೭-------------------------------------------------------------------------------- 

ತಿಮ್ಮಿ--ಏನಪ್ಪ ಕರದೀಯೇ ಸು-ನೀನು ಇಲ್ಲಿ ಏನುಕೆಲಸವನ್ನು 

ಮಾಡುತ್ತಿಯೇ ತಿ-ಮುಸರೆ ತಿಕ್ಕಿಕೊಂಡಿವ್ವಿನಿ. ಸು– ಈ ಎರಡು ರೂ 

ಪಾಯಗಳನ್ನು ತಗೆದುಕೋ,  ನಿನಗೆ ಮದುವೆಹೆಣ್ಣು ಗೊತ್ತೇನು. ತಿ-ಸಾಯಿ 

ತ್ರಮ್ಮನು ನನ್ಗಗೊತ್ತಿಲ್ವಾ  ಸರಿಬಿಡಪ್ಪಾ ಸು. -ಒಳಗೆಹೋಗಿ ಕರತರ 

ಬೇಕು ತಿ-ಅವಳ್ಭ೦ದಾಳಾ, ಸಿಂಗಾರ ಮಾಡಿಕೊಂಡ್‌ಕುಂತವಳು  ಸು - 

ಎಲ್ಲಿದಾಳೆ. ತಿ-ಕೋಣಾಗ ಸ:-ಇನ್ನೂ ಗುಡಿಗೆ ಹೋಗಿಲ್ಲ.  ಅಹುದೋ 

ಅಲ್ಲವೋ ', ತಿ-ಇನ್ನೂ ಇಲ್‌ಕಾಣಪ್ಪಾ  ಸ:-- ಸರಿ, ನೀನುಹೋಗಿ, ಅವ 

ಳಿಗೆ ಹೇಳು ನಿನ್ನ ಚಿಕ್ಕಪ್ಪ, ಸುಬ್ಬಯ್ಯನು ಬ೦ದಿರುವನು. ಹಿತ್ತಲಾ 

ಗಿದಾನೆ ' ತಿ-ನೀನೇನಪ್ಪ, ಸಾವಿತ್ರಮ್ಮನ್ಗೆಚಿಕ್ಕಪ್ಪನು ಸು ... ಹೌದು. 

ತಿ-ಒಳಕ್ಕೆ ಬರಬಾರದಾ. ಮದುವೆವೋಟ ಮಾಡಾಕಿಲ್ವಾ ಸ~ ಮಾಡು 

ತ್ತೇನೆ. ನನಗೆ ನೀರುಬೇಕು ಅವಳನ್ನು ಬೇಗ ಕಳುಹಿಸು ತಿ-ಆಗಲಿ, 

ಕಾಣಪ್ಪಾ ಎಂದು ಹೊರಟಳು. ಸು- ಇಗೋ, ಇಲ್ಲಿ , ಬಾ, ನಿನ್ನ ಹೆಸರೇನು 

ತಿ-ಎಸರಾ ತಿಮ್ಮಿ ಸು-- ತಿಮ್ಮಿ, ಜೋಕೆ, ಒಬ್ಬರಿಗೂ ತಿಳಿಯದ೦ತೆ 

ಅವಳಿಗೆ ಹೇಳು ತಿ-ಸರಿಕಾಣಪ್ಪಾ. 


ಸಾವಿತ್ರಿಯು ಆದಿನ ಕೊಠಡಿಯನ್ನು ಬಿಟ್ಟು ಕದಲಲಿಲ್ಲ. ತನ್ನ 

ತಾಯಯೂ, ಅತ್ತಿಗೆಯೂ, ಬಲವಂತದಿಂದ, ಒಂದು ಹೊಸಸೀರೆಯನ್ನು 

ಡಿಸಿ, ಕೆಲವು ಆಭರಣಗಳನ್ನು ತೊಡಿಸಿದ್ದರು. ಹಾಸಿಗೆಗಳರಾಸಿಯಲ್ಲಿ 

ಮುಖವನ್ನು ಮುಚ್ಚಿಕೊಂಡು ಮನಸ್ಸಿನಲ್ಲಿಯೇ ಕೊರಗುತ್ತಿದ್ದಳು. 

ಮುಖದಲ್ಲಿ ಮೊದಲಿನ ಕಳೆಯಿರಲಿಲ್ಲ. ಇದೇ ಶೃಂಗಾರವು ಕೆಲವು ದಿವಸ 

ಗಳ ಹಿಂದೆ ಅವಳಿಗಾದರೂ ಮಾಡಿದ್ದರೆ ನೋಡಿದವರು ಯುವಕರಾದ 

ರೂ, ವಯಸ್ಸಿನವರಾದರೂ, ಮುದುಕರದರೂ, ಮುಗ್ಧರಾಗುತ್ತಿದ್ದರು. 

ಆದರೆ ಈದಿವಸದಲ್ಲಿ, ಮುಖದಲ್ಲಿ ರಕ್ತವಿಲ್. ಬಹಳ ದಿವಸಗಳು, ಖಾಯಿ 

ಲೆಯಲ್ಲಿ ಬಿದ್ದು ನರಳುತ್ತಿರುವವರಮುಖದಂತೆ, ಕಾಣುತ್ತಿತ್ತು ತನ್ನಹಣೆ 

ಯಲ್ಲಿ ವಿಧಿಯು ಅತಿಕ್ರೂರವಾದ ಲಿಖಿತವನ್ನು ಬರೆದಿರುವನೆಂತಲೂ, 'ತನಗೆ 

ಅಲ್ಪಾಯುಸ್ಸು' ಎಂದು ಯಾರೂ ಹೇಳಲಿಲ್ಲವಂತಲೂ, ನೊಂದುಕೊ  

128 ----------------------------------

ಳ್ಳುತ್ತಿದ್ದಳು. ಆಗ ಕೊಠಡಿಗೆ ಯಾರೋ ಬರುವಸದ್ದು ಕೇಳಿಸಿತು, 

ಮುಖವನ್ನು ಎತ್ತಿದಳು ಬಾಗಿಲವರೆ ಒಂದು ಛಾಯೆಯು ನಿಂತಿತು. 

ಮುಂದಕ್ಕೆ ಬಂದು ಕತ್ತಲೆಯಲ್ಲಿ ಸೇರಿಹೋಯಿತು. ತಿ-ಅಮ್ಮಾ ಸಯಿ. 

ತ್ರಮ್ಮಾ, ಸಾವಿತ್ರಿಯು ಎದ್ದು ನಿಂತಳು ತಿ-ನಿನ್ನ ಚಿಕ್ಪ್ಪನಂತೆ ಸುಬ್ಬ 

ಯ್ಯ ಹಿತ್ತಲಾಗೆ ಬಂದವನೇ, ಕರೀತಾನೆ. ಸಾ--ಯಾವಸುಬ್ಬಯ್ಯನೇ 

ತಿ-ನಿನ್ನ ಚಿಕ್ಕಪ್ಪನಮ್ಮಾ, ಉದ್ದಾಗವನೆ. ಸಾ-ಮನಸ್ಸಿನಲ್ಲಿ, ಹೆದರಿಕೆ 

ಯೂ, ಸಂತೋಷವೂ, ಅಸೆಯ, ನಿರಾಸೆಯೂ, ಎಲ್ಲವೂ ಏಕಕಾಲದಲ್ಲಿ 

ಸಂಧಿಸಿದವು. ಯಾರಿರಬಹುದು, ಚಿಕ್ಕಪ್ಪನೇ ಬಂದಿರುವನೇ, ನೋಡು 

ವೆನು, ಎಂದು ಹೊರಟಳು. ತಿಮ್ಮೀ, ನೀನು ಇಲ್ಲೇಇರು ಬರುವೆನು .

 

ಮೆಲ್ಲಗೆ ಕಡಿಯನ್ನು ಬಿಟ್ಟು ತೊಟ್ಟಯನ್ನು ದಾಟಿ ಅಡಿಗೆಯ 

ಮನೆಯ ಪಕ್ಕದಲ್ಲಿಯೇ ಹಿತ್ತಲಿಗೆ ಬಂದುಬಿಟ್ಟಳು. ಮನೆಯವರೂ 

ಹಜಾರದಲ್ಲಿಯೂ, ಮೇಲುತೊಟ್ಟಿಯಲ್ಲಿಯೂ, ಸೀರೆಗಳನ್ನುಟ್ಟುಕೊಳ್ಳು 

ವುದರಲ್ಲಿಯೂ, ಆಭರಣಗಳನ್ನಿಟ್ಟುಕೊಳ್ಳುವುದರಲ್ಲಿಯೂ, ಇದ್ದರಾದ 

ಕಾರಣ ಸಾವಿತ್ರಿಯು ಹೊದುದನ್ನು ಯಾರೂ ನೋಡಲಿಲ್ಲ. ಹಿತ್ತಲಬಾ 

ಗಿಲು ತೆರೆದಿತ್ತು. ಗಿಡದಕೆಳಗೆ ಯಾರೋ ನಿಂತಿದ್ದ ಹಾಗೆ ತಿಳಿಯಿತು. 

ಬಾಗಿಲಬಳಿಯಲ್ಲಿ ನಿಂತುನೋಡಿದಳು. ಚಿಕ್ಕಪ್ಪನೇ ಅಹುದೆಂದು ಗೋಚ 

ಕವಾಯಿತು; ಹಿಂದೆ ನೋಡಿದಳು, ಯಾರೂ ಇರಲಿಲ್ಲ. ಇನ್ನೊಂದುಸಾರಿ 

ಮುಂದೆ ನೋಡಿದಳು ಸುಬ್ಬಯ್ಯನು ' ಸಾವಿತ್ರೀ' ಎಂದುದು ಕಿವಿಯಲ್ಲಿ 

ಬಿತ್ತು. ಓಡುತ್ತಾ, ' ಚಿಕ್ಕಪ್ಪಾ'  ಎಂದು ಕೂಗಿ, ಪ್ರಜ್ಞೆಯಿಲ್ಲದಂತೆ 

ಬಿದ್ದು ಬಿಟ್ಟಳು. ಹೆಚ್ಚುಯೇಟು ತಗಲಿಲ್ಲ. ಸುಬ್ಬಯ್ಯನು ಮೇಲಕ್ಕೆ 

ಎತ್ತಿ ಹಿಡಿದುಕೊಂಡು, ಹತ್ತಿರಕ್ಕೆ ಮೆಲ್ಲಗೆ ಎಳೆದುಕೊಂಡು “ ಸಾವಿತ್ರೀ 

ಮಗು, ಅಮ್ಮ, ಸಾವಿತ್ರಿ' ಎನ್ನುತ್ತ ಕಣ್ಣೀರುಬಿಟ್ಟನು ಕೂಡಲೇ 

ಅಲ್ಲಿನಿಲ್ಲುವದು ಸರಿಯಲ್ಲವೆಂದು ಯೋಚಿಸಿ, ಗಿಡಗಳ ಹಿಂದಿನಲ್ಲಿಯೇ 

ನಾಗದಾಳತಯ ಪೊಗರುಗಳ ಆಶ್ರಯದಲ್ಲಿಯೇ ಹೊಲವನ್ನು ದಾಟಿ, ಬೇಲಿ 

ಗಳಲ್ಲಿ ತೂರಿ ಗಾಡಿಯಬಳಿಗೆ ಬಂದುಬಿಟ್ಟಿರು. ಗಾಡಿಯಲ್ಲಿ ಸಾವಿತ್ರಿಯನ್ನು ಕೂಡಿಸಿ 

ತಾನೂ ಕುಳಿತು, ರಾಜಂಡಹಳ್ಳಿಗೆ, ಹೊಡಿಯೆಂದು ಹೇಳಿದನು. 

೧೨೯----------------------------------------------------------------------------------- 

" ಸಾ- ಚಿಕ್ಕಪ್ಪಾ , ನನಗೆ ಈ ಮದುವೆಯನ್ನು ತಪ್ಪಿಸು 

 

" ಸು- ಮಗು, ಈಗ , ನಾವು ಎಲ್ಲಿಗೆಹೋಗುತ್ತಿರುವದು ತಿಳಿ 

ದಿರುವುದೇ  ? 


" ಸಾ- ನನಗೆ ತಿಳಿದಿಲ್ಲ 


"ಸು.- ಬಾಗೇಪಲ್ಲಿಗೆ, 


" ಸಾ~ ಬಾಗೇಪಲಲೀಗೆ ? 


“ ಸು- ಅಹುದು, 



ಸಾವಿತ್ರಿಯಮನಸ್ಸಿನಲ್ಲಿ ಸಂತೋಷವು ತುಂಬುತ್ತಿತ್ತು. ಒಂದು 

ಗಳಗೆಯ ಹಿಂದೆ ತಾನಿದ್ದಸ್ಥಿತಿಯನ್ನು ಜ್ಞಾಪಿಸಿಕೊ೦ಡಳು. ಈಗ ತಾನಿ 

ರುವದನ್ನು ನೋಡಿದಳು. ಚಿಕ್ಕಪ್ಪನ ಮುಳವನ್ನು ನೋಡಿ ಕಣ್ಣೀರನ್ನು 

ಬಿಟ್ಟಳು. ಮನಸ್ಸಿನಲ್ಲಿರುವದನ್ನು ತಡೆಯಲು ಅವಳಿಂದ ಸಾಧ್ಯವಾಗಲ್ಲ. 

ಸುಬ್ಬಯ್ಯನು ಸಾವಿತ್ರಿಯ  ಮುಂದಲೆಯನ್ನು ಸವತರುತ್ತ, “ ಮಗು ಸಾವಿತ್ರಿ 

ಏತಕ್ಕೆ ಕಣ್ಣೀರುಬಿಡುವೆ ಈ71 ನಾನಿರುವನಲ್ಲ"  ಎಂದನು. 

 

" ನಿನ್ನನ್ನು ನೋಡಿಯೇ ನನಗೆ ದುಃಖಬಂತು. ನೀನು ಬಹಳ 

ಇಳಿದುಹೋಗಿರುವೆ. 

 

"ಇಳಿದೇನುಹೋಗಿಲ್ಲ. ನನಗೆ ನನ್ನಂದ ಸರಿಯಾದ ಆಹಾರವೇ 

ಇಲ್ಲ. ನಿನ್ನೆಯದಿವಸ ಬಾಗೇಪಲ್ಲಿಗೆ ಬಂದೆನು. ನಿನ್ನ ವಿಷಯವಾಗಿ ಕೇಳಿ 

ದೆನು. ಕೋನೇರಯ್ಯನ ನಡೆವಳಿಕೆಯೂ ತಿಳಿಯಿತು, ನನಗೆ ಅನ್ನವೇ 

ಇಳಿಯಲಿಲ್ಲ. 


“ ಚಿಕ್ಕಪ್ಪ, ಬಾಗೇಪಲ್ಲಿ ಯಲ್ಲಿ ಸಮಾಚಾರವೇನು ? 


"ಸಾವಿತ್ರೀ ನೀನು ಅದೃಷ್ಟವಂತೆ ನಿನ್ನನ್ನು ಚಿಕ್ಕಂದಿನಿಂದಲೂ ಕಂ 

ಡಿರುವೆನಲ್ಲ. ನಿನ್ನಲ್ಲಿರುವ ಗುಣಗಳು ನಿನ್ನ ವಿದ್ಯೆ, ನಿನ್ನನಡತೆಗಳು. ಇವೆ 

ಲ್ಲವೂ ನಿನಗೆ ಒಳ್ಳೆಯಪದವಿಯನ್ನೇ ತರುವದೆಂದು ನನಗೆ ನಂಬಿಕೆಯಿತ್ತು. 


" ಅದೇನು ಚಿಕ್ಕಪ್ಪ, ನಾನು ಅದೃಷ್ಟವಂತೆ? ಈಗ ನೀನು ಬಾರ 

ದಿದ್ದರೆ ನನ್ನ ಆಯುಸ್ಸುಪರ್ಯಂತರವೂ ಹೇಗಿರುತ್ತಿದ್ದೆನು ? 


" ಸು. ಇನ್ನು ಮುಂದಕ್ಕೆ ಹೇಗಿರತ್ತೀಯೆ ? 

130---------------------------------- 


" ಸಾ- ಹೇಗಿರುವದು, ಮೊದಲಿನಂತೆಯೇ ?


ಸು... ಈಗ ನೀನು ಸುಬೇದಾರರ ಮನೆಯಸೊಸೆ 


ಸಾವಿತ್ರಿಯ ಮನಸ್ಸಿನಲ್ಲಿ ಧಡ್‌ ಎಂದು ಹೊಡೆಯಿತು. 

"ಅದೇನು"? 


ಸು- "ಅಹುದು ನಿನ್ನನ್ನು ಮೂರ್ತಿರಾಯರಿಗೆ ಕೊಟ್ಟು ಮದು 

ವೆಯನ್ನು ಮಾಡುವಹಾಗೆ ನಿಷ್ಕರ್ಷೆಯಾಗಿದೆ. 


" ಸಾ- ಇದು ಎಲ್ಲಿಯಮಾತು? ನಮ್ಮ ಸುಬೇದಾರರ ಮನೆಗೆ 

ನಾನು ಸೊಸೆಯಾಗಿ ಹೋಗುವದೆಂದರೇನು. 


"ಸು-- ನಿಜವಾಗಿಯೂ " ಎಂದು ನಡೆದ ಪೂರ್ವವೃತ್ತಾತವನ್ನು  

ಹೇಳಿದನು.

 

"ಸಾವಿತ್ರಿ- ಹೇ ಜಗದೀಶ ! ನೀನಿರುವಲ್ಲಿ ಯಾರಿಂದ ಯಾವದೂ 

ಸಾಧ್ಯವಿಲ್ಲ. ಒಳ್ಳೆಯದಾಗಲೆಂದೆಣಿಸಿದರೆ, ಕಡಕಾಗುವುದು. ಕೆಡಕಾಗ 

ಬೇಕೆಂದು ಬಗದರೆ ತಪ್ಪಿಹೋಗುವುದು, ನಮಗೆ ನಮಗೆ ಬೇಕಾಗದ 

ವಸ್ತುಗಳು ಕೈಸೇರುವುವು. ಬೇಕೆಂಬುದು ದೂರವಾಗುವವು. ಕೆಲವು 

ವೇಳೆ ಬೇಕಾದುದೇ, ಅಪೇಕ್ಷಿಸಿದುದೇ ಸಿಗುವುದು ಯಾವದೂ ದೈವಾ 

ಧೀನ, ಅವರವರ ಯೋಗ್ಯತಾನುಸಾರವಾಗಿ ಸುಖದುಃಖಗಳು ಮಿಶ್ರವಾ 

ಗುವುವು. ನಿನ್ನ ಆಜ್ಞೆ ” ಎಂದು ಮನಸ್ಸಿನಲ್ಲಿಯೇ ವಂದಿಸಿದಳು. 


ಸಾವಿತ್ರಿಯೇ ಇಲ್ಲವೆಂದು, ತಿಳಿದಬಳಿಕ ನಾಡೋಡಿಯಲ್ಲಾದ ಗಲಭೆ 

ಯನ್ನೂ ಅವಳಿಗಾಗಿ ಎತ್ತಕಡೆಗಳಲ್ಲಿಯೂ ಹುಡುಕಿಸಿದರೂ ಇಲ್ಲದ್ದ 

ರಿಂದ ಎಲ್ಲರಬಾಯಿಗಳಲ್ಲಿಯೂ "ಸಾವಿತ್ರೀ, ಸಾವಿತ್ರೀ" ಎಂದಿರಲು 

ಸಾವಿತ್ರಿಯ ಚಿಕ್ಕಪ್ಪ ಸುಬ್ಬಯ್ಯನು ಬಂದಿದುದನ್ನು ತಿಮ್ಮಿಯು ತಿಳಿಸಿ 

ದುದನ್ನೂ ಆಗ ರಾಮಚಂದ್ರಯ್ಯನ ಮತ್ತು ಕೋನೇರಯ್ಯನ ಮನಸ್ಸಿನ 

ಸ್ಥಿತಿಗಳನ್ನೂ, ಅವಳು ಅವನೊಂದಿಗೆ ಜಟಕಾಗಾಡಿಯಲ್ಲಿಯೇ ಹಿಂದಿರುಗಿ 

ಹೋದಳೆಂಬ ಸಮಾಚಾರವು ವಿಶದವಾಗುತ್ತಲೂ, ಅಲ್ಲಿ ನಡೆದ ಕ್ರಮ 

ಗಳನ್ನೂ ನಮ್ಮ ವಾಚಕರೇ ಊಹಿಸಿಕೊಳ್ಳಲು ಬಿಟ್ಟಿರುವವು. 

......... 

• • • • 

ಉಪ ಸಂಸಾರ'. 

ಇತ್ತ ಜಾತಕಗಳು ಸರಿಯಾದುವೆಂದು ಹೇಳಬೇಕಾಗಿಲ್ಲ. ಬೆಂಗ 

ಳೂರಿನಲ್ಲಿ ತಮ್ಮ ಸ್ವಗೃಹದಲ್ಲಿಯೇ ವಿವಾಹವನ್ನು ಮಾಡಲು ನಿಶ್ಚಯಿ 

ಸಿದರು. ಲಗ್ನಪತ್ರಿಕೆಗಲನ್ನು ಅಚ್ಚುಮಾಡಿಸಿ ನೆಟರು ಇಷ್ಟರು 

ಆದವರಿಗೆ ಕೊಟ್ಟು ಕಳುಹಿಸಿದರು. ನೆನ್ನೆಯ ಮಾತುಗಳೂ, ಸೇರಿದ 

ಜನಗಳ ಗಲಭೆಯು ಹೆಚ್ಚುತ್ತಿರಲು ವೋಲಗವೂ ವಾಚನವೂ ಮೊಳ 

ಗುತ್ತಿರಲು, ಪುರೋಹಿತರ ಮಂತ್ರಗಳು ಎಲ್ಲರಕಿವಿಗಳಲ್ಲಿಯೂ ಬೀಳು 

ತ್ತಿತ್ತು. ಸಾವಿತ್ರಿಗೂ ಮೂರ್ತಿಗೂ ಕೃಷ್ಣವೇಣಿ ರಾಜನಿಗೂ ಮದು 

ವೆಯು ಸಾಂಗೋಪಾಂಗವಾಗಿ ನೆವೇರಿತು. 

 

ನಾಗವಲ್ಲಿಯ ದಿವಸಗಲಲ್ಲಿ ನಮ್ಮ ಯುವಕರಪಾಲಿಗೆ ಭೂಮಿಗೆ ಇಳಿದು 

ಬಂದ ರತಿದೇವಿಯರೋ ಎನ್ನುವಂತೆಯೂ  ಊರ್ವಶಿ, ಮೇನಕಾದಿ 

ಅಪ್ಸರಸ್ತ್ರೀಯರೋ ಎನ್ನುವಂತೆಯೂ ತೋರುತ್ತಿರಲು, ಆ ನಾಯಕರ 

ಮನಸ್ಸುಗಳಲ್ಲಿ ಉಕ್ಕುತ್ತಿದ್ದ ಆನಂದಾತಿಶಯವನ್ನು ಹೇಗೆಂದು ವರ್ಣಿಸೋಣ. 

ಕೆಲವು ಸಂದರ್ಭಗಳಲ್ಲಿ ಓರೆನೋಟಗಳಿಂದ ನೋಡುತ್ತಲೂ ನಿಷ್ಕಾರಣ 

ವಾಗಿ ಹತ್ತಿರ  ಹತ್ತಿರಕ್ಕೆ ಜರುಗುತ್ತಲೂ, ಪುರೋಹಿತರು 'ಕೈಯನ್ನು   

ಹಿಡಿಯಬೇಕು' ಎಂದಾಗ  ಆದರದಿಂದ ಹಿಡಿಯುತ್ತಲೂ ತಮ್ಮ ತಮ್ಮ 

ಕಾಂಕ್ಷೆಯನ್ನು ಸಫಲಮಾಡಿಕೊಳ್ಳುತ್ತಿದ್ದರು. 


ಕಡೆಗೆ ದೇವರಿಗೆ ನಮಸ್ಕಾವನ್ನು ವಧೂವರರು ಮಾಡಿದರು. 

ಎಲ್ಲರ ಆಶೀರ್ವಾದವನ್ನೂ ಪಡೆದು, ತಮ್ಮ ಕೊಠಡಿಗಳಿಗೆ ಹೊರಟು 

ಹೋದರು. 


ಕೊಠಡಿಯಲ್ಲಿ ರಾಜನು ಮೂರ್ತಿಯನ್ನು ಕುರಿತು " ನಾವು ಬೇಕೆಂದು 

ಕೋರುವವಸ್ತುವು ಕೈಗೂಡಿದರೆ ಸಂತೋಷವಲ್ಲವೇ" ಎಂದನು..


ಮೂರ್ತಿಯು ಅದಕ್ಕೆ " ನಾವು ಪ್ರಯತ್ನಗಳನ್ನುಪಟ್ಟು ಸಾಧಿಸಿ 

ಹೊಂದಿದಾಗಲಲ್ಲವೇ ನಿಜವಾಗ ಆನಂದವು ತಲೆದೋರುವುದು" ಎಂದು 

ಬದಲುಕೊಟ್ಟನು. 

ಸಂಪೂರ್ಣವು