ಮಂಗಳವಾರ, ಜೂನ್ 22, 2021

ನನ್ನಸಂಸಾರ-ಸಿ. ವೆಂಕಟರಮಣಶಾಸ್ತ್ರಿ

 https://archive.org/details/dlihttps://archive.org/details/dli.osmania.4196 


UNIVERSAL LIBRARY 

OL 

200254 

LIBRARY 

UNIVERSAL 

ಕಾದಂಬರೀ ಸಂಗ್ರಹ'. 

ಸುಲಭ ಶೈಲಿಯಿಂದ ನೀತಿಗ್ರಂಥವನ್ನು ಪ್ರಕಟಿಸುವ 


ಕನ್ನಡ ಮಾಸಪತ್ರಿಕೆ. 

ಚತುರ್ಥ ಸಂಪುಟ: 

ಇದರಲ್ಲಿ ಮೂರು ಉತ್ತಮ ಗ್ರಂಥಗಳಿರುವುವು. 

Edited by 

C Venkataramana Sastry. 

ರಾಯಲ್ ಪ್ರೆಸ್‌ನಲ್ಲಿ ಮುದ್ರಿಸಲ್ಪಟ್ಟಿತು 

----

1915 -16

ಬೆಲೆ. ೧-೮-೦ 


PRINTED BY B. V. Narasimha Iyengar, 

AT THE ROYAL PRESS, 

MYSORE. 

-------------------------------------------

ಕಾದಂಬರೀಸಂಗ್ರಹ ಗ್ರಂಥಮಾಲಾ ನಂ.25, 

ನನ್ನ ಸಂಸಾರ. 

 

ಸಿ. ವೆಂಕಟರಮಣಶಾಸ್ತ್ರಿ  


ರಾಯಲ್ ಪ್ರಿಂಟಿಂಗ್ ಪ್ರೆಸ್‌, 

ಮೈಸೂರು. 

1915. 


Price 5 Annas. 

------------------------------------------------- 

ಪೀಠಿಕೆ. 

ಇದೊಂದು ಸಂಸಾರಚಿತ್ರವನ್ನು ವಿವರಿಸುವ ವಿವರಿಸುವ ಕಾದಂಬರಿ. ಹಿಂದೂ ಸಂಸಾರ 

ದಲ್ಲಿ ಸಂಭವಿಸುವ ಅನೇಕ ಗೃಹಚ್ಛಿದ್ರಗಳ ವಿಚಾರವು ಈ ಗ್ರಂಥದಲ್ಲಿ ವಿವರಿಸಲ್ಪ 

ಟ್ಟಿದೆ ಮತ್ತು ಸಮಯಾನುಸಾರವಾಗಿ ಸ್ತ್ರೀಯರು ತಿಳಿದಿರಬೇಕಾದ ಅನೇಕ ಧರ್ಮ ನೀತಿಗಳೂ 

ಇಲ್ಲಿ ಅತಕವಾಗಿದೆ. ಗ್ರಾಹಕ ಮಹಾಶಯರು ನನ್ನ ಇತರ ಗ್ರಂಥ 

ಗಳಂತೆ ಇದನ್ನ ಆದರಿಸಬೇಕಾಗಿ ಪ್ರಾರ್ಥನೆ 

ಸಜ್ಜನಸೇವಕ . 

ವೆಂಕಟರಮಣಶಾಸ್ತ್ರಿ. 

-----------------------------------------------

ನನ್ನ ಸಂಸಾರ 

ನಾನು ರಂಗಪುರದಲ್ಲಿ ಹುಟ್ಟಿದನು. ನಮ್ಮ ಪೂರ್ವಿಕರು ಶ್ರೋತ್ರಿಯರೆಂದು 

ಕೇಳಿ ಬಲ್ಲೆನು, ಆರು ಬಹು ದಿನದ ಮಾತು. ಸುಮಾರು ನೂರಾರು ವರ್ಷ ಕಳೆದು 

ಹೋಗಿರ ಬಹುದು. ಈಗಿನ ಸ್ಥಿತಿಯಲ್ಲಿ ಅದನ್ನು ಇಲ್ಲಿಂದ ಹೇಳಿದರೆ ಸಾಕಾಗಿದೆ. 

ನಾನು ಈಗಿನ ಹುಡುಗಿ, ನನಗೆ ಅದೆಲ್ಲಾ ತಿಳಿಯದು. ನನಗೆ ತಿಳಿಯುವಷ್ಟನ್ನು ಮಾತ್ರ 

ನಮ್ಮ  ಸೋದರಿಯರಿಗೆ ವಂಚನೆಯಿಲ್ಲದೆ ಹೇಳಿಬಿಡುವೆನು. ನನ್ನ ಹೆಸರು ಮಹಾಲಕ್ಷ್ಮಿ. 

ನಮ್ಮ ತಂದೆ ವಿಷ್ಣು ಮಿತ್ರರೆಂದು ನಾಮಧೇಯವು, ನಮ್ಮ ಪಿತಾಮಹರು 

ಕೃಷ್ಣಮಿತ್ರರೆಂದು   ಪ್ರಸಿದ್ಧರಾದರು. ನಮ್ಮ ಮುತ್ತಾತಂದರ ಕಾಲದಲ್ಲಿ ನಮ್ಮ 

ಮನೆಯಲ್ಲಿ ಸರ್ವದಾ ಐಶ್ವರ್ಯ ಲಕ್ಷ್ಮಿಯು ತಾಂಡವ ವಾಡುತ್ತಿದ್ದಳಂತೆ? ಆ ಕಾಲ 

ದಲ್ಲಿ ಮನೆಯಲ್ಲಿ ಬಹುಮಂದಿ ಶಿಷ್ಯರು ಪಾಠಪ್ರವಚನ ಮಾಡುತ್ತಾ ನಮ್ಮ ಮನೆ  

ಯಲ್ಲೇ ವಾಸಮಾಡಿಕೊಂಡಿದ್ದರಂತೆ? ಕರಾವುಗಳು ಬಹಳವಾಗಿದ್ದುವಂತೆ?  ಧಾನ್ಯದ    

ರಾಶಿಯು ಯಾವಾಗ ನೋಡಿದರೂ ಮೂಲೆಮೂಲೆಯಲ್ಲಿ ಸುರಿದಿರುತ್ತ ಇದ್ದುದಂತೆ?    

ಅತಿಥಿ ಅಭ್ಯಾಗತರ ಸೇವೆಯೂ ವೇದಾಧ್ಯನ ಘೋಷವೂ ಅಗ್ನಿಹೋತ್ರ್ಯಾದಿಗಳ   

ಸಮರಭವೂ ನಮ್ಮ ಮನೆಯ ಶಾಂತಿಯನ್ನುವಿಷೇಷತಃ ಅಭಿವೃದ್ಧಿ ಪಡಿಸುತ್ತಿದ್ದ   

ವಂತೆ ! ಈಗಣ ಕಾಲದಲ್ಲಿ ನಾನೆಲ್ಲಿಯೂ ಇದನ್ನು ನೋಡಿದವಳೇ ಅಲ್ಲ. ಈಗಲೂ   

ಅಂತಹ ಪುಣ್ಯವಂತರು ಅಲ್ಲಲ್ಲಿಯೇ ಇರುವುರೆಂದು ಕೇಳುತ್ತೇನೆ-ಅಂತಹ ಮಹಾತ್ಮನಿಗೆ 

ಸಹಸ್ರಶಃ ನಮಸ್ಕಾರ ಮಾಡುತ್ತೇನೆ, 


ಈಗ ನಮ್ಮ ಮನೆಯಲ್ಲಿ ಆ ಭಾಗವು ಇಲ್ಲ. ಆ ಐಶ್ವರ್ಯಕಲ್ಷ್ಮಿಯ, ನಾನು   

ಜನ್ಮಿಸುವದಕ್ಕಿಂತ ಐವತ್ತು ವರ್ಷಗಳ ಹಿಂದೆಯೇ ನನ್ನ ಮನೆಯನ್ನು ಬಿಟ್ಟು ಪ್ರಯಾ    

ಣಮಾಡಿ ಬಿಟ್ಟಳಂತೆ ! ನಮ್ಮ ತಾತ ಕೃಷ್ಣ ಮಿತ್ರರು ಬಡವರಾದಾಗ್ಯೂ, ಅವರಲ್ಲಿ   

ಪೂರ್ವಿಕರ ಸದ್ಗುಣಗಳು ರಾರಾಜಿಸುತ್ತಿದ್ದುವು. ನಾನು ಚಿಕ್ಕ ಮಗುವಾಗಿದ್ದಾಗ,   

ಅವರುಸಾಯಂಕಾಲದಹೊತ್ತು ನನ್ನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ಶ್ಲೋಕ    

ಗಳನ್ನು ಹೇಳಿಕೊಡುತ್ತಿದ್ದರು. ಆಗಾಗ್ಗೆ ಅವರು ತಮ್ಮ ಪೂರ್ವಿಕರ ಮಹಿಮೆಯನ್ನೂ   

------------------------------------------

ಅಗಣ ವೈಭವವನ್ನೂ ಅಟ್ಟಹಾಸವನ್ನೂ ನನ್ನೊಡನೆ ಕಥಾರೂಪವಾಗಿ ಹೇಳಿಕೊಡುತ್ತಾ   

ಕಣ್ಣಿನಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಾನು ಆಗ, ಅಜ್ಜಯ್ಯ ! ನೀನೇಕೆ    

ಅಳಿತ್ತೀಯಪ್ಪಾ! ನಿನಗೇನಾದೂ ತಿಂಡಿಕೊಡಲೇ ? ಎಂದು ಹೇಳಿ ಕೂಡಲೇ   

ನಮ್ಮ ಅಜ್ಜಿಯ ಬಳಿಗೆ ಹೋಗಿ, ಅಜ್ಜಿ! ಅಜ್ಜಯ್ಯನು ಆಳುತ್ತಿದ್ದಾನೆ ! ಪಾಪ!   

ಅವನಿಗೇನಾದರೂ ತಿಂಡಿ ಇದ್ದರೆ ಕೊಡೆ, ಎಂದು ಪೀಡಿಸಿ ಒಂದಿಷ್ಟು ಹುರಿಟ್ಟನ್ನೋ, 

ಅರಳನ್ನೋ, ಅವಲಕ್ಕಿಯನ್ನೋ ಈಸಿತಂದು ಅವನ ಮಡುಲಿಗೆ ಕಟ್ಟಿ, ಅಜ್ಜಯ್ಯ! ಅಳಬೇ   

ಡಪ್ಪ! ಇದನ್ನು ತಿನ್ನು. ಎ೦ದುಹೇಳಿಬಿಡುತ್ತಿದ್ದೆನು . ನನ್ನ ಈ ವಿಚಿತ್ರವಾದ ಆಟ 

ವನ್ನು ನೋಡಿ ಮನೆಯಲ್ಲರೂ ನಗುತ್ತಿದ್ದರಲ್ಲದೆ ನನ್ನನ್ನು ವಿಶೇಷವಾಗಿ ಮುದ್ದಿ  

ಸುತ್ತಲೂ  ಇದ್ದರು. ಅಜ್ಜಯ್ಯನಾದರೋ ಕಥೆಯನ್ನು ಅಷ್ಟಕ್ಕೆ ಸಾಕುಮಾಡಿ ನನ್ನ 

ಆಟಕ್ಕಾಗಿ ಸಂತೋಷಿಸಿ, ನನ್ನನ್ನು ಮುದ್ದಿಸಿ ಪುನಃ ಬಾಯಿ ಪಾಠ ಹೇಳಿಕೊಡುವುದಕ್ಕೆ 

ಆರಂಭಿಸುತ್ತಿದ್ದನು. ನಾನೂಬೇಜಾರಾಗುವದುಗೆ ಹೇಳಿಸಿಕೊಳ್ಳುತ್ತ ಇಷ್ಟು ಬೇಜಾರಾದ 

ಮೇಲೆ ಅಜ್ಜಯ್ಯನನ್ನು ಲಕ್ಷಿಸದೆ ಅಡಿಗೆ ಮನೆಯ ಕಡೆ ಓಡಿಹೋಗಿ ನನ್ನ ಅಮ್ಮನನ್ನು 

ಹಿಂಸೆ ಮಾಡಲಾರಂಭಿಸಿ ಏನಾದರೂ ಹಟದಿಂದ ಚಂಡಿಹಿಡಿದು ಅಳುತ್ತಿದ್ದೆನು. 


ಆಗ ನಮ್ಮ ಮನೆಯಲ್ಲಿ ಮಗುವು ನಾನೇ.  ನನ್ನನ್ನು ಎತ್ತಿಕೊಳ್ಳುವದಕ್ಕೆ 

ಯಾರಾದ:ಬ್ಬರು ಸಿದ್ದವಾಗಿಯೇ ಇರುತ್ತಿದ್ದರು. ನಮ್ಮ ಅಪ್ಪನಂತೂ ನನ್ನನ್ನು 

ದಿನದಿನಲ್ಲೂ ಬೆಳಗ್ಗೆ ಎಂಟುಗಂಟೆಗೆ ಎತ್ತಿಕೊಂಡುಹೋಗಿ ನಮ್ಮ ಊರಿನಲ್ಲಿನ   

ಪ್ರಸಿದ್ಧವಾದ ಅಪ್ಪಯ್ಯನ ಹೋಟಲಿನಲ್ಲಿ ಒಂದು ರವೆ ದೋಸೆಯನ್ನೂ ಅರ್ಧ ಲೋಟ   

ಕಾಪಿಯನ್ನು ಕೊಡಿಸುತ್ತಿದ್ದನು. ಇದಲ್ಲದೆ ನನ್ನನ್ನು ಯಾರು ಎತ್ತಿಕೊಂಡಾಗ್ಯೂ   

ಏನಾದರೂ ಒಂದಿಷ್ಟು ರುಚಿಯಾದ ತಿಂಡಿಯನ್ನು ತಿನ್ನಿಸುತ್ತಿದ್ದರು. ನಾನಂತೂ   

ತಂಗಳನ್ನು ತಿಂದವಳೇಅಲ್ಲ. ಈ ರೀತಿ ಮೇಲೆಮೇಲೆ ನಾನು ತಿಡಿ ತಿಂದುಬಿಡು  

ತ್ತಿದ್ದುದರಿಂದ ಬೆಳಗೆದ್ದರೆ ನನಗೆ ಅಜೀರ್ಣವೂ, ಜ್ವರವೂ,  ಆಮಶಂಕೆಯೂ, ಭೇದಿಯೂ 

ಪ್ರಾಪ್ತವಾಗಿ ಬದುಕುವುದೇ ಕಷ್ಟವಾಗಿ ಹೋಗುತ್ತಿತ್ತು, ಅಂತಹ ಸಮಯದಲ್ಲೆಲ್ಲಾ 

ನಮ್ಮ ತಾಯಿಯು ನನಗೆ ಚಿಟಿಕಿ ಹಾಕಬೇಕೆಂದು ಮುಷ್ಟರಮಾಡಿ  (ಎಕ್ಕಡರ ಬಾರನ್ನು 

ಬೆಂಕಿಯಲ್ಲಿ ಚೆನ್ನಾಗಿ ಕಾಯಿಸಿ ಹುಬ್ಬುಗಳ ನಡುವೆ, ತಲೆಗಳ ಎರಡುಕ್ಕ, ಇನ್ನೆ 

ಲ್ಲಾದರೂ ಒಂದೆರಡು ಕಡೆ ರಕ್ಷೆಯನ್ನು ಹಾಕುವುದಕ್ಕೆ ಚಿಟಕಿಎದು ಹೆಸರು.) 

ಈ ಚಿಟಿಕಿ ಚಿಕೆತ್ಸೆಯನ್ನು ತಪ್ಪದೆ ಮಾಡುತ್ತಿದ್ದರು, ಹೀಗೆ ಪದೇ ಪದೇ ಪ್ರಾಪ್ತ 

ವಾಗುತ್ತಿದ್ದುದರಿಂದ ನನಗೆ ಔಷದಸೇವನ ಚಿಟಕಿಚಿಕಿತ್ಸೆ,   ಇವುಗಳ ಪ್ರಯೋಗದಿಂದ 

ಕ್ರಮಕ್ರಮವಾಗಿ ನಿಶ್ಶಕ್ತಿಯಾಗುತ್ತ ಬಂದಿತ್ತಲ್ಲದೆ ನಾನು ನಿತ್ಯ ರೋಗಿಯಾಗಿ ನರಳು 

---------------------------------------------

ನನ್ನ ಸಂಸಾರ                                    ೩ 

ತ್ತಲೇ ಇದ್ದೆನು. ಹೀಗೆಯೇ ನನಗೆ ಏಂಟುವರ್ಷ ಕಳೆದು ಹೋಯಿತು. ಇಷ್ಟು 

ಹೊತ್ತಿಗೆ ನನಗೆ ಸ್ವಬುದ್ದಿಯು ಸ್ವಲ್ಪಸ್ವಲ್ಪವಾಗಿ ತಿಳಿಯುತ್ತ ಬಂತು. ನಮ್ಮ ತಾತನು 

ನನ್ನನ್ನು ವಿದ್ಯಾಭ್ಯಾಸಕ್ಕಾಗಿ ಪಾಠಶಾಲೆಗೆ ಒರಡು ವರ್ಷಕಾಲಕಳುಹಿಸುತ್ತಿದ್ದರು. 

ಹತ್ತು ವರ್ಷ ತುಂಬದೊಡನೆಯೇ ನನ್ನನ್ನು ಆ ಪಾಠಶಾಲೆಯಿಂದ ತಪ್ಪಿಸಿಬಿಟ್ಟರು. 

ಇಷ್ಟು ಹೊತ್ತಿಗೆಯಾಗಿ ನಮ್ಮ ಗೃಹಕೃತ್ಯದಲ್ಲಿ ಅನೇಕ ಸಂಕಟಗಳು ಪ್ರಾಪ್ತವಾ 

ದುವು. ಮೊದಲು ನಮ್ಮ ಅಜ್ಜಿ ಹೋಗಿಬಿಟ್ಟಳು. ಆಹಾರ ಎರಡು ತಿಂಗಳ ಮೇಲೆ 

ನಮ್ಮ ಸೋದರತ್ತೆಯೊಬ್ಬಳು ಗತಿಸಿಹೋದರು. ಇದು ಆದ ಆರುತಿ:ಗಳಿಗೆ ನನ್ನ 

ಚಿಕ್ಕಪ್ಪನೂ ಅದು ಕಳೆದ ಎಂಟು ತಿಂಗಳಿಗೆ ನನ್ನ ದೊಡ್ಡಪ್ಪನೂ ಪರಲೋಕಕ್ಕೆ 

ಪ್ರಯಾಣ ಬೆಳಸಿಬಿಟ್ಟರು. ಈ ಸಮಯದಲ್ಲಿ ನಮ್ಮ ತಾತನಿಗೆ ಎಷ್ಟು ಮಟ್ಟಿನ 

ಮನಶ್ಶಾಂತಿ ಯಿರಬಹುದೋ ವಾಚಕರೇ ಊಹಿಸಿ ನೋಡಬೇಕು. ಸತ್ತವರಿಗೆ 

ಕರ್ಮಾಂತರಗಳನ್ನು ಮಾಡಿ ನಮ್ಮ ತಾನು ಚೇತರಿಸಿಕೊಳ್ಳುವ ಹೊತ್ತಿಗೆ ಎರಡುವ 

ರ್ಷಕಾಲ ಕಳೆದುಹೋಯಿತು. ಮನಸ್ಸಂತಾಪದಿಂದಲೂ, ದಾರಿದ್ರ್ಯದಿಂದಲೂ, 

ಅವಶ್ಯಕವಾಗಿ ಆಗಬೇ:ಕಾಗಿದ್ದ ಕೆಲಸಗಳಿಗಾಗಿ ವಿಶೇಷ ಸಾಲಮಾಡಿದುದರಿಂದ 

ನಮ್ಮ ತಾತನು ಕೊರಗಿ ಆರ್ಥವಾಗಿ ಹೋದನು. 


ಈಗ ನಮ್ಮ ಮನೆಯಲ್ಲುಳಿದವರು, ನಾನು, ನಮ್ಮ ತಂದೆ, ನನ್ನ ತಾಯಿ, 

ನಮ್ಮ ತಾತ, ಈ ನಾಲ್ಕು ಮಂದಿ ಮಾತ್ರ. ಈ ಮಧ್ಯದಲ್ಲಿ ನಮ್ಮ ತಾಯಿಯು ನನ್ನ 

ಹಿಂದೆ ಎರಡು ಮೂರು ಮಕ್ಕಳನ್ನು ಪ್ರಸವಿಸಿ, ಅವು ಒಂದೊಂದು ವರ್ಷ ಜೀವಿಸಿದ್ದು 

ಮೃತವಾಗಿ ಹೋಗಿರುವ ಈ ಕಾರಣಗಳಿಂದ ನನ್ನ ತಂದೆಗೂ ತಾತನಿಗೂ ವಿಶೇಷ 

ದುಃಖಪ್ರಾಪ್ತಿಯಾದುದಲ್ಲದೆ ಕ್ರಮವಾಗಿ ವೈರಾಗ್ಯವು ತಲೆದೋರಲಾರಂಭಿಸಿತು. ಆ 

ಸಮಯದಲ್ಲಿ ನಮ್ಮ ತಾತನು ಕೋರ್ಟಿನಲ್ಲಿ ಹನ್ನೆರಡು ರೂಪಾಯಿ ತಲುಬುಳ್ಳ 

ಒಂದು ನೌಕರಿಯಲ್ಲಿದ್ದನು. ನಮ್ಮ ತಂದೆಗೂ ಹದಿನೈದು ರೂಪಾಯಿ ತಲುಬುಳ್ಳ ಒಂದು 

ಹುದ್ದೆ ಇದ್ದಿತು. ನಮ್ಮ ತಂದೆಗೆ ಬರುತ್ತಿದ್ದುದು ಹದಿನೈದು ರೂಪಾಯಿಗಳಾದರೂ ಅವರ 

ತಿಂಗಳುಗಟ್ಲೆ ವೆಚ್ಚ ಮೂವತ್ತು ರೂಪಾಯಿಗಳಿಗೆ ಮೀರಿ ಹೋಗುತ್ತಿತ್ತು. ಇವುಗ  

ಳಲ್ಲಿ ಮುಕ್ಕಾಲು ಪಾಲು ಹಣವು ಅವರ ಉಡುಪಿಗೂ ತಿಂಡಿಗೂ ಖರ್ಚಾಗುತ್ತಿತ್ತು. 

ಉಳಿದ ಕಾಲುಪಾಲು ಹಣವನ್ನು ಅವರು ಮನೆಗೆ ಗೃಹಕೃತ್ಯಕ್ಕೆಂದು ನಾಲ್ಕು ತಿಂಗಳಿ 

ಗೊಮ್ಮ ಯಾವಾಗಲೋ ಒಂದು ಬಾರಿ ತಂದು ಕೊಡುತ್ತಿದ್ದರು. 


ಈ ಕಾರಣದಿಂದ ಕುಟುಂಬ ರಕ್ಷಣಭಾರವು ನಮ್ಮ ತಾತನ ತಲೆಯ ಮೇಲೆಯೇ 

ವಿಶೇಷವಾಗಿ ಬೀಳುತ್ತಿತ್ತು. ನಮ್ಮ ತಂದೆಯು ಇಷ್ಟು ದುಂದುವೆಚ್ಚವನ್ನು ಮಾಡುತ್ತಿ  

----------------------------------------------

ಕಾದಂಬರಿ ಸಂಗ್ರಹ 

 

ದ್ದರೂ ನಮ್ಮ ತಾತನು ಒಂದುದಿನವಾದರೂ ಅವರನ್ನು ಗದರಿಸಿಕೊಳ್ಳುತಲಿರಲಿಲ್ಲ. ಏಕಂ  

ದರೆ ಅವರು ಸಂಸಾರದಲ್ಲಿ ಬಲು ನೊಂದುಹೋಗಿದ್ದರು ಈ ಒಬ್ಬ ಮಗನಿಗಾಗಿ 

ಪ್ರಾಣವನ್ನಿಟ್ಟುಕೊಂಡಿದ್ದರು. ಆದುದರಿಂದ, ಅವನು ಹೇಗೆ ಬೇಕಾದರೂ ಇದ್ದುಕೊ 

ಳ್ಳಲಿ ! ಜೀವದೊರಸೆ ಇದ್ದರೆ ಸಾಕೆಂದು ಹೇಳಿಬಿಡುತ್ತಿದ್ದರು. ನಮ್ಮ ತಾಯಿಗೆ ಪಿತ್ರಾ 

ರ್ಜಿತವಾದ ನಾಲ್ಕು ಎಕರೆ ತರೀಜಮೀನಿನಲ್ಲಿ ನಾಲ್ವತ್ತು ಖಂಡುಗ ಭತ್ತವು ಬರುತ್ತಿ  

ದ್ದುದರಿಂದ ನಮ್ಮ ಸಂಸಾರ ನಿರ್ವಹಣಕ್ಕಾಗಿ ಅಷ್ಟೇನೂ ಶ್ರಮಪಡಬೇಕಾದ ಅಗತ್ಯ 

ವಿರಲಿಲ್ಲ. ನಮ್ಮ ತಾತನಿಗೆ ಸಾಲಗಾರರ ಬಾಧೆ ಹೆಚ್ಚಾದುದರಿಂದ ತಮ್ಮ ಪೂರ್ವಪಿತೃ 

ಗಳಿಂದಾರ್ಜಿಸಲ್ಪಟ್ಟ ಭೂಧನದಲ್ಲಿ ಎರಡು ಎಕರೆಗಳನ್ನು ಮಾರಿ ಸಾಲವನ್ನು ತೀರಿಸಿ  

ಬಿಟ್ಟರು. ಸಾಲತೀರಿದ ಮೇಲೆ ನಮ್ಮ ತಾತನಿಗೆ ನನಗೆ ಒಂದು ಬಗೆಯರ ತಾ೦ತಿ 

ಯುಂಟಾಯಿತು.  ಇದು ನಡೆಡ ಕಾಲದಲ್ಲಿ ನಮ್ಮ ತಾತನಿಗೆ ಐವತ್ತು ವರ್ಷವ  

ಯಸ್ಸು. ನಮ್ಮ ತಾತ ದಿನೇದಿನೆ ವೈರಾಗ್ಯವು ಹೆಚ್ಚುತ್ತ ಬರಲು ತಮ್ಮ ಉದ್ಯೋ   

ಗಕಾಲದಲ್ಲಿ  ಕಷ್ಟ ಸಮಯಗಳನ್ನೆಲ್ಲಾ ಸಾಧು ಸತ್ಪುರುಷ ಸಂಭಾಷನಾದಿಗಳಿo 

ದಲೂ ಈಶ್ವರ ನಾಮಸ್ಮರಣೆಯಿಂದ ನೂಕುತ್ತಿದ್ದರು. ಕೇವಲರಸಿಕರಾದ ನಮ್ಮ 

ತಂದೆಯವರಿಗೆ ನಮ್ಮ ತಾತನ ಈನಡಿವಳಿಕೆ ಸರಿದೋರಲಿಲ್ಲ. ನಿಷ್ಕಾರಣವಾಗಿ ನಮ್ಮ 

ತಾತನನ್ನು ಏನಾದರೊಂದು ನೆವದಿಂದ ಜಗಳಕ್ಕೆ ಕರೆಯುತ್ತಲೇ ಇದ್ದರು. ನಮ್ಮ 

ತಾತ ಒಂದುನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ತಮಗೆ ಬಂದ ಸಂಬಳವನ್ನು ಮಗನವ  

ಶಕ್ಕೆ ಕೊಟ್ಟು ಬಿಟ್ಟು ತಾವು ಅಡಿಗೆಯಾಗುವಹೊತ್ತಿಗೆ ಸ್ನಾನಾನ್ಹಿಕ, ದೇವತಾ  

ರ್ಚನೆ  ವೈಶ್ವದೇವಗಳನ್ನು ಭಕ್ತಿಯಿಂದ ಆಚರಿಸಿ ಎಲ್ಲರೊಡನೆ ತಾವು ಭೋಜನಮಾಡಿ 

ಪುನಃ ತಮ್ಮ ವ್ಯಾಸಂಗದಲ್ಲಿ ನಿರತರಾಗುತ್ತಿದ್ದರು. ಈ ಮಧ್ಯದಲ್ಲಿ ನಮ್ಮ ತಾಯಿಯು 

ಗರ್ಭಿಣಿಯಾಗಿ, ಏಕಾದಶಮಾಸ ಸಂಪೂರ್ಣವಾದ ಒಳ ಒಂದು ಗಂಡುಕೂಸನ್ನು 

ಪ್ರಸುವಿದ್ದರು. ಆ ಮಗುವಿಗೆ ಈಗ ಒಂದು ವರ್ಷ ತುಂಬುತ್ತಿದ್ದಾಗ್ಯೂ ನಮ್ಮ 

ತಾಯಿಗೆ ಬಾಣಂತಿತನ ಮಾತ್ರ ಪೂರ್ಣವಾಗಿರಲಿಲ್ಲ. ಮನೆಯಲ್ಲಿ ಮಾಡುವ 

ರಾರೂದಿಕ್ಕಿಲ್ಲದ್ದರಿಂದ ಸಮಸ್ತ ಗೃಹಕೃತ್ಯವನ್ನು ನಾನೇ ನಡಿಸಿಕೊಂಡು ಹೋಗಬೇ 

ಕಾಗಿ ಬಂದಿತು. ಮನೆಯಲ್ಲಿ ಅನ್ನಕ್ಕೆ ಇಷ್ಟು ಕಷ್ಟವಾದುದನ್ನೂ ಗೃಹಕೃತ್ವದ ತೊಂದ 

ರೆಯನ್ನೂ ನೋಡಿ ನನ್ನ ತಾತನು ಬೇರೆ ಒಂದು ಕಡೆಯಲ್ಲಿ ಊಟ ಮಾಡುತ್ತಿದ್ದರು. 

ನಮ್ಮ ತಂದೆಯಂತೂ ಮನೆಗೆ ಬರುತ್ತಿರಲಿಲ್ಲ. ನಮ್ಮ ತಾತನು ಆಗಾಗ್ಗೆ ಗೃಹಕೃತ್ಯಕ್ಕೆ  

ಬೇಕಾಗುವ ಸಾಮಾನುಗಳನ್ನು ತಂದು ಹಾಕುತ್ತ ಮನೆ ಜೋಗಕ್ಷೇಮವನ್ನು ವಿಚಾರಿಸಿ 

ಕೊಂಡು ಹೋಗುತ್ತಾ ಇದ್ದರು. ನಾನಾದರೋ ಗೊಣಗುಟ್ಟಿ ಕೊಂಡು, ಮೂಗಿಗೆ ಕವಡೆ 

-----------------------------------------------

ನನ್ನ ಸಂಸಾರ

ಕಟ್ಟಿಕೊಡು ದುಡಿದ ಎತ್ತಿನಂತೆ ದುಡಿಯುತ್ತಿದ್ದೆನು. ನಮ್ಮ ತಾಯಿಗೆ ದೇಹಸ್ಥಿತಿಯೇ  

ಸರಿಯಾಗಿರಲಿಲ್ಲ. ಈ ಕಾರಣದಿಂದ ನನ್ನ ತಾಯಿಯನ್ನು ನನ್ನ ಮಾತಾಮಹನು ತಮ್ಮ 

ಊರಾದ "ಸರ್ವಂಸಗಾಗ್ರಾಮ " ಕ್ಕೆ ಕರೆದುಕೊಂಡು ಹೋದನು. ಅಲ್ಲಿಗೆ ಹೊದ  

2-3 ತಿಂಗಳಲ್ಲೇ ನನ್ನ ತಾಯಿಗೆ ಸಂಪೂರ್ಣವಾಗಿ ಆರೋಗವುಂಟಾಯಿತು. ಇಷ್ಟು 

ಹೊತ್ತಿಗೆ ಸರಿಯಾಗಿ ನಾನು ಖಾಯಿಲೆ ಬಿದ್ದುಕೊಂಡೆನು. ನನಗೆ ವಾಸಿಯಾಗುವುದೂ 

ಆರುತಿಂಗಳು ಹಿಡಿಯಿತು. ಈ ವಿಧವಾದ ನಿತ್ಯರೋಗದಿಂದ ನಾನು ದಿನೇದಿನೇ ಕಂಗೆಟ್ಟು 

ಕೃಶಳಾಗುತ್ತೆ ಬಂದೆನು.

 

ವಾಚಕರೇ ! ಇನ್ನು ನಾನು ಈ ರಗಳೆಗಳನ್ನೇ ಮುಂದೆಯೂ ಬರೆಯುತ್ತ 

ಹೋದರೆ ನಿಮಗೆ ಬಹುವಾಗಿ ಬೇಸರವುಂಟಾಗಬಹುದು. ಆದುದರಿಂದ ನನ್ನ 

ವಿವಾಹಕ್ಕಾಗಿ ನಡೆದ ಪ್ರಯತ್ನಗಳನ್ನು ಸ್ವಲ್ಪ ಪ್ರಸ್ತಾಪಿಸುವೆನು.

 

ನನಗೆ ಈಗ ಹನ್ನೆರಡು ವರ್ಷತುಂಬಿದ ಮೇಲೆ ಆರು ತಿಂಗಳು ಕಳೆದು ಹೋಗಿ 

ದ್ದಿತು. ನಮ್ಮ ಹಿಂದೂ ಸಮಾಜದಲ್ಲಿ ಅದರಲ್ಲೂ ಬ್ರಾಂಹ್ಮಣವೃಂದದಲ್ಲಿ, ಹೆಣ್ಣು 

ಮಕ್ಕಳಿಗೆ ಎಂಟು ವರ್ಷಕ್ಕೆ ಸರಿಯಾಗಿ ವಿವಾಹಮಾಡದಿದ್ದರೆ ಅಂತಹ ಕನ್ಯಾ ಪಿತನು 

ಕಂಡವರ ಬಾಯಿಗೆ ಬೀಳಬೇಕಾದವರೆಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ. 

ಇದಿರಲಿ. ಈಗಣ ಕಾಲದಲ್ಲಿ ಪುರುಷ ಸಂಖ್ಯೆಗಿಂತಲೂ ಸ್ತ್ರೀಸಂಖ್ಯೆಯು ನಾಲ್ಕರಷ್ಟು 

ಹೆಚ್ಚಾಗುತ್ತಾ ಬಂದಿದೆ ಅದರಲ್ಲೂ, ನಮ್ಮ ಬ್ರಾಹ್ಮಣ ವೃಂದದಲ್ಲಿ ವಿವಾಹಕ್ಕೆ ನೆರೆ 

ದಿರುವ ಕನ್ಯಾಸಂಖ್ಯೆ ಅತ್ಯಧಿಕ. ಈ ಕನ್ಯೆಯರಿಗೆಲ್ಲಾ ಅನುರೂಪರೂ, ಶ್ರೇಷ್ಟರೂ ಆದ, 

ಪತಿಗಳು ದೊರೆವು ತುಂಬಾ ಅಸಂಭವ. ಭಾಗ್ಯವಂತರ ಮನೆ ಮಕ್ಕಳ ಗತಿಯೇ 

ಹೀಗಾದಮೇಲೆ ಗರ್ಭದರಿದ್ರರಾದವರ ಮನೆಯ ಹೆಣ್ಣುಗಳನ್ನು ಕೇಳುವರಾರು ? 

ಅವರ ಮನೆಯ ಕಡೆ ಸುಳಿವುದೂ ಸಹ ಇಲ್ಲ. ಈ ವಿಧವಾರ ವರಾಭಾವದಿಂದಲೇ 

ವೃದ್ದ ವಿವಾಹವು ವಿಶೇಷತಃ ಜಾರಿಯಲ್ಲಿ ಬರಲು ಕಾರಣವಾಯಿತು. ಸರಿಯಾದ 

ವರನು ಸಿಕ್ಕಲಿಲ್ಲವಲ್ಲಾ, ಎಂಬ ಚಿಂತೆಯಿಂದಲೂ, ಹುಡುಗಿಯು ಎಲ್ಲಿ ಬೇಗ ದೊಡ್ಡ 

ವಳಾಗಿಬಿಡುವಳೋ ಎಂಬ ಭಯದಿಂದಲೂ, ಯಾವನಾದರೂ ಒಬ್ಬ ಪ್ರರುಷಮಾತ್ರನು 

ಸಿಕ್ಕಿದರೆ ಸಾಕೆಂದು ಹೀನವರನಿಗೋ ವೃದ್ದವರನಿಗೋ ಕನ್ನೆಯರನ್ನು ಕೊಟ್ಟು ಮದುವೆ 

ಮಾಡುವದು ಪ್ರಚಾರಕ್ಕೆ ಬರಬೇಕಾಯಿತು. ಉಪಪನ್ನ ರಾದವರ, ಯೋಗ್ಯ ರಾದವರ, 

ವಿದ್ಯಾವಂತರ ಮನೆಗೆ ಹೋಗೋಣವೆಂದರೆ ಅವರ ಜಂಭವು ಆ ಸಮಯದಲ್ಲಿ ವಿವರಿಸ 

ಲಸದಳ, ಒಂದು ಸಾವಿರವೋ--ಎರಡು ಸಾವಿರವೋ ವರದಕ್ಷಣೆಯನ್ನು ಕೊಟ್ಟರೆ ತಾವು 

ತಮ್ಮ ಹುಡುಗನಿಗೆ ತಂದುಕೊಳ್ಳುವೆಂದೂ ಇಲ್ಲವಾದರೆ ಆ ಮಾತೇ ಬೇಡ 

----------------------------------------

ಕಾಂಬರಿ ಸಂಗ್ರಹ 


ವೆಂದೂ ಖಂಡಿತವಾಗಿ ಹೇಳುವರು. ಇಂತಹ ಹೊಟ್ಟೆತುಂಬದವರ ಮನೆಗೆ ಅಷ್ಟು 

ಹಣಕೊಟ್ಟು ಕನ್ಯಾದಾನ ಮಾಡುವಯೋಗ್ಯತೆ ಇದ್ದವರು ಮಾಡುತ್ತಾರೆ. ರಿಕ್ತ ರಾದವರು 

ಮರುಮಾತಾಡದೆ ಬೇರೆ ಕಡೆ ಮಗಳಿಗೆ ವರರನ್ನು ಹುಡುಕಿ-ಪ್ರಾಪ್ತ ವಯಸ್ಕಳಾಗುವ 

ವರೆಗೂ-ಹುಡುಕಿಹುಡುಕಿ ಕೊನೆಗೆ ಬೇಸತ್ತು ಯಾವನಾದರೊಬ್ಬನು ಸಿಕ್ಕಿ ನನ್ನ ಮಗ 

ಳಿಗೆ ಮದುವೆಯಾದರೆ ಸಾಕೆಂದು ಎಂಥವನೋ ಒಬ್ಬನಿಗೆ ಕೊಟ್ಟು ಮದುವೆಮಾಡಿ 

ಬಿಡುವರು. ಇಂತಹ ತೊಂದರೆಗಳು ಯಾವಾಗ ಪರಿಹಾರವಾಗುವುವೋ ಬಡವರಾದ 

ಕನ್ಯಾಪಿತೃಗಳು ಅದೆಂದು ದುಃಖಸಾಗರದಿಂದ ಸಮುತ್ತೀರ್ಣರಾಗುವರೋ--ವರದಕ್ಷಿಣೆ 

ಯೆಂಬ ದುರಾಶಾಪಿಶಾಚವು ಅದೆಂದು ನಾಶವಾಗಿ ಹೋಗುವುದೋ--ಪ್ರಪಂಚ 

ವೆಲ್ಲವೂ ಅನುರೂಪರಾದ ಭಾರ್ಯಾಭರ್ತರಿಂದಕೂಡಿ ಯಾವಾಗ ಕಂಗೊಳಿಸುವುದೋ, 

ಉಹಿಸಿ ಹೇಳಬಲ್ಲವರಾರು? ಆದು ಸದ್ಯಃ ಅಸಂಭವವೆಂದೇ ತೋರುವುದು.  


ನನಗೆ ವರವನ್ನು ಹುಡುಕುವ ತೊಂದರೆಯನ್ನು ನಮ್ಮ ತಂದೆಯವರು ವಿಶೇಷ 

ವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ ನಮ್ಮ ತಾತನವರಂತೂ ನನಗೆ ಎಂಟು 

ವರ್ಷ ತುಂಬಿದಾಗಿನಿಂದಲೂ ಅದೇ ಪ್ರಯತ್ನದಲ್ಲಿ ಇದ್ದರು. ಈ ವಿಚಾರವನ್ನು ನಮ್ಮ ತಂದೆ 

ಯಸಂಗಡವೂ ಆಲೋಚಿಸಿ ನಮ್ಮ ಬಂಧುಗಳಲ್ಲಿ ಯೋಗ್ಯವಾದ ವರಗಳೆಲ್ಲೆಲ್ಲಿರುವು 

ವೆಂಬುದನ್ನೂ ವಿಚಾರಿಸಿವಿಚಾರಿಸಿ ಅಲ್ಲಿಗೆಲ್ಲಾ ಒಂದೊಂದು ಕಾಗದವನ್ನು ಬರೆದು 

ಹಾಕಿ ಜಾತಕಗಳ ತರಿಸಿಕೊಳ್ಳುತ್ತಿದ್ದರು. ಹೀಗೆ ತರಿಸಿಕೊಂಡ ಜಾತಕಗಳು ಮೂವ 

ತ್ತೊಂಬತ್ತು.  ಈಗಲೂ ನಮ್ಮ ತಂದೆಯಬಳಿಯಲ್ಲಿದೆ    ಇವುಗಳಲ್ಲಿಗೆ ಹತ್ತುಜಾತಕ 

ಗಳಿಗೆ ನಕ್ಷತ್ರಾನುಕೂಲವಾದರೋ ಬಹಳ ಚೆನ್ನಾಗಿತ್ತಂತೆ? ಅವರುಗಳಿಗೆ ಲಗ್ನ ವಿಚಾರ 

ದಲ್ಲಿ ಕಾಗದ ಬರೆಯಲು ಅವರು ಅವರು ಅಂಗೀಕಾರ ಸೂಚಕ ಪತ್ರಗಳನ್ನೇ ಬರೆದು 

ಬಿಟ್ಟರು. ಇಷ್ಟೇ ಅಲ್ಲದೆ ದ್ವಿತೀಯ ತೃತೀಯ ಸಂಬಂಧದ ೧೦-೫ 

ಮೊದಲುಗೊಂಡು ೧೫ ರವರೆಗೂ ವಯಸ್ಸನ್ನು ಕಮ್ಮಿ ಮಾಡಿಕೊಂಡು ಜಾತಕವನ್ನು 

ತಯಾರಿಸಿ ತಮ್ಮ ದೇಹವನ್ನು ನವಯುವಕರೆಂದು ತಿಳಿಯುವಂತೆ ಮುಖಾದಿಗಳನ್ನು 

ಶೃಂಗರಿಕೊಂಡು ಬಂದು ಕನ್ಯೆಯನ್ನು ಕೊಡಿರೆಂದು ಕೇಳುತ್ತಿದ್ದರು. 


ನನ್ನ ತಾತನವರಿಗೆ ನನ್ನ ಭವಿಷ್ಯತ್ಸು ವಿಷಯದಲ್ಲಿ ತುಂಬಾ ಯೊಚನೆಯಿ 

ದ್ದುದರಂದ ಹೇಗಾದರೂಮಾಡಿ ನನ್ನನ್ನು ಉಪಪನ್ನರ ಮತ್ತು, ಕುಲೀನರ ವಂಶದಲ್ಲಿ 

ಹುಟ್ಟಿದ ಪೂರ್ಣವಯಸ್ಕನೂ ಸುಗುಣಿಯೂ ವಿದ್ಯಾವಂತನೂ ಅದ ವರನಿಗೇ ಕೊಟ್ಟು 

ಮದುವೆ ಮಾಡಬೇಕೆಂದು ದೃಡಸಂಕಲ್ಪ ಮಾಡಿ ಬಿಟ್ಟಿದ್ದರು. ನಮ್ಮ ತಾತನವರ ಅಭಿಲಾ 

ಷೆಯು ನೆರವೇರುವುದು ಮುಕ್ಕಾಲುಪಾಲು ಅನುಮಾನವೇ ಆಗಿದ್ದರೂ ಅವರ ಮನೋ 

------------------------------------------------ 


ಧಾರ್ಢವೇ ಅವರ ಸಂಕಲ್ಪವನ್ನು ಸಫಲವನ್ನಾಗಿ ಮಾಡಿತು. ಆದರೆ ಅದು ನೆರವೇರಲು  

ಬಹುಕಾಲ ವಿಳಂಬವಾಯಿತು. 


ಈಗ ನನಗೆ ಹದಿನಾಲ್ಕು ವರ್ಷವು ತುಂಬುತ್ತ ಬಂದಿದೆ. ಈಗ ನನ್ನನ್ನು ವಿಶೇಷ 

ವಾಗಿ ಮನೆಬಿಟ್ಟು ಹೊರಕ್ಕೆ ಕಳುಸುತ್ತಲೆ ಇರಲಿಲ್ಲ. ನನಗೂ ಮನೆ ಹೊರಗೆ ಹೊರಗೆ ಹೊರ   

ಡುವದಕ್ಕೆ ತುಂಬಾನಾಚಿಕೆ. ಅಕಸ್ಮಾತ್ತಾಗಿ ಎಂದಾದರೊಂದು ದಿನ ಯಾರಮನೆಗಾದರೂ 

ಆರ್ತಿಯಕ್ಷತೆಗಳಿಗೆ ಹೋದರೆ ಊರ ಹೆಂಗಸರೆಲ್ಲರೂ ನನ್ನ ಮದುವೆಯ ಸುದ್ದಿಯನ್ನೇ 

ಆಡುವರು, ಇನ್ನು ಕೆಲವರು ನನ್ನನ್ನು ಬೆರಳಿನಿಂದ ನಿರ್ದೆಶಿಸುತ್ತಾ ಈ ಹುಡುಗಿಗೆ 

ಇನ್ನೂ ಹದಿನಾಲ್ಕು ವರ್ಷ ತುಂಬುತ್ತಿದ್ದರೂ ಮದುವೆಮಾಡದೆ ನಿಲ್ಲಿಸಿಕೊಂಡಿದ್ದಾರೆ. 

ಏನು ಧೈರ್ಯವಪ್ಪ." ಅಂದುಕೊಳ್ಳುವರು. ನನಗಂತೂ ನನ್ನ ಜತೆಹುಡುಗಿಯರನ್ನು 

ನೋಡಿದಾಗ ಎಷ್ಟು ಅವಮಾನಮಾನವಾಗುತ್ತಿತ್ತೊ ಅದನ್ನು ಹೇಳಲಾರೆ. ಅದನ್ನು ನನ್ನಂತೆ 

14 ವರ್ಷವಾದರೂ ಮದುವೆಯಾಗದ ತಂಗಿಯರು ಊಹಿಸಿಕೊಳ್ಳಬಹುದು.

--- II   ---

 

ನಮ್ಮರಿಗೆ ನಾಲ್ಕು ಗಾವುದ ದೂರದಲ್ಲಿ ಹರಪುರವೆಂಬ  ಗ್ರಾಮವೊಂದಿದೆ. 

ಅಲ್ಲಿಯ ಸ್ಥಳನಿವಾಸಿಗಳು ತು೦ಬಾದೊಡ್ಡ ಮನುಷ್ಯರೂ ವೈದೇಕರೂ ಆದ ನೀಲ 

ಕಂಠಶಾಸ್ತ್ರಿಗಳೆಂಬುವರಿಗೆ ಈಗ ಎಪ್ಪತ್ತೈದು ವಯಸ್ಸು. ಅವರಂತ ಪ್ರಸಿದ್ದ ಪಂಡಿತರು 

ಪ್ರಪಂಚದಲ್ಲೇ ಇಲ್ಲವೆಂದು ಹೆಸರಾಗಿತ್ತು. ಇದರ ಪ್ರಸಿದ್ಧಿಯನ್ನು ಕೇಳಿ ಶ್ರೀನಗರದ 

ದೊರೆಯಾದ ಶ್ರೀಪತಿರಾಜನು ಇವರನ್ನು  ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ತನ್ನ 

ಆಸ್ಥಾನದಲ್ಲಿ ಅಮಗೆ ಧರ್ಮಾಧಕಾರಪದವಿಯನ್ನು ದಯಪಾಲಿಸಿದನು.  ನೀಲಕಂಠಶಾಸ್ತ್ರಿ 

ಗಳು ಒಳ್ಳೆಯ ಉಪಪನ್ನರಾದಾಗ್ಯೂ ರಾಜಾಜ್ಞೆಯನ್ನು ಮೀರಲಾರದೆ ಶ್ರೀನಗರದಲ್ಲೇ 

ವಾಸಮಾಡಬೇಕಾಗಿಬಂತು. ಇವರಿಗೆ ಸಂಸಾರದ ಬಹಳ ದುಃಖಗಳು ಪ್ರಾಪ್ತವಾಗಿ 

ದ್ದುವು. ಮೂವರು ಗಂಡು ಮಕ್ಕಳು ೧೫-೨೦-೪೫ ವರ್ಷಗಳು ಬದುಕಿ ಮೃತರಾಗಿ 

ಹೋಗಿದ್ದರು. ಈಗ ಇವರ ಸಂಸಾರದಲ್ಲಿ ನಾಲ್ವತ್ತು ವರ್ಷದ ಸೊಸೆಯೊಬ್ಬರೂ; ಇಬ್ಬರು 

ಪೌತ್ರರೂ (ಮಗನಮಕ್ಕಳೂ) ಇರುವರು. ಇನ್ನೂ ಇದಲ್ಲದೆ  ಕೆಲವುಮಂದಿ ಹೆಣ್ಣು 

ಮಕ್ಕಳು ಪತಿಗೃಹದಲ್ಲಿ ಸುಖವಾಗಿರುವರು. ಇವರ ಎರಡನೆಯ ಮೊಮ್ಮಕ್ಕಳು 

ಇಪ್ಪತ್ತೊಂದು ವರ್ಷ ವಯಸ್ಸುಳ್ಳ ವಾಸುದೇವಶಾಸ್ತ್ರಿಗಳೆ೦ಬುವರಿಗೆ ಇದೇ ಸಮಯ 

ದಲ್ಲಿಯೇ ದುರದೃಷ್ಟದಿಂದ ಪತ್ನಿ ನಿಯೋಗವಾರ ದಂದು ನಮ್ಮ ತಾತನಿಗೆ ತಿಳಿದು 

ಬಂದಿತು. ನಮ್ಮ ತಾತನವರ ತಂದೆಯೂ ನೀಲಕಂಠಶಾಸ್ತ್ರಿಗಳ ತಂದೆಯೂ ಬೀಗಬೀಗ 

ರಂತೆ ! ಈ ಪೂರ್ವಬಾಂಧವ್ಯವನ್ನು ಯೋಚಿಸಿ ನಮ್ಮ ತಾತನವರು ಅವರ ಮನೆಗೆ 

------------------------------------------------

ಕಾದಂಬರಿ ಸಂಗ್ರಹ 


ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು 

ತುಂಬಾ ಪ್ರಸಿದ್ದಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು 

ಲಕ್ಷ್ಯಮಾಡಲಿಲ್ಲ. ಹರಪುರದ ಜಮೀನ್ ದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ 

ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ 

ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು 

ದೇವಶಾಸ್ತ್ರಿಗಳ ಜಾತಕವನ್ನು ತರಿಸಿನೋಡಿದರು. ದಾಂಪತ್ಯಾನುಕೂಲವು ಬಹಳ ಅನು 

ಕೂಲವಾಗಿದ್ದಿತು, ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ 

ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವದೋ ಇಲ್ಲವೋ 

ಎಂದು ಅವರು ಈ ಲಗ್ನವು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ 

ಮಡತೊಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ ಮನೆತನದ 

ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ 

ಅವರು ಹೆಣ್ಣು ಕೊಡುವೆವೆಂದು ಹೇಳುವಾಗಲೇ ಉದಾಸೀನಮಾಡಿದರೆ ಮುಂದೆ 

ಅವರ ಮನಸ್ಸು ಹೇಗೆ ಬದಲಾಯಿಸುವದೋ, ಆದುದುಂದ ಈ ಲಗ್ನವನ್ನು 

ಮಾಘಾದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕ 

ಗಳಿಗೆ ಹೇಳಿ ಕಳುಹಿಸಿದರು. "ರೋಗಿ ಬಯಸಿದುದು ಹಾಲನ್ನ, ವೈದ್ಯ ಹೇಳಿದುದೂ 

ಹಾಲನ್ನ '' ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು. 


ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನೀವಿಯೋಗವಾದುದು ಸೌಮ್ಯ ಸಂ||ದ 

ವೈಶಾಖಶುದ್ಧ ಸಪ್ತಮಿ ಸೋಮವಾರದದಿನ. ವಿನಾಯಕ ಶಾಸ್ತ್ರಿಗಳ ಮಗಳನ್ನು 

ಕೊಟ್ಟು ಲಗ್ನ ಬೆಳೆಸಲೇರ್ಪಾಡಾದುದು ಶ್ರಾವಣ ಶುದ್ಧ ದಶಮಿಯದಿನ. ಬೀಗರಿಬ್ಬರೂ 

ಒಳ್ಳೆಯ ಉಪಪನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ 

ಇದ್ದುದು. ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ 

ಇದ್ದಳು. ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ:ವಿವಾಹವೆಂದು ಹೇಳುವುದ 

ಕ್ಕಾಗುತ್ತಿರಲಿಲ್ಲ. ಒಬ್ಬರು ಒಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚ 

ವನ್ನೇ ಮಾಡಿದರು. ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲ ವಿವಾಹಾಗ್ನಿ 

ಯನ್ನೇ ಧಾರ್ಯಾಗ್ನಿಯನ್ನಾಗಿ ಇಡಿಸಿ ಒಂದು ದರ್ಶಸ್ಥಾಲೀಪಾಕವನ್ನೂ ಒಂದು 

ಪೌರ್ಣಮಾಸೀಸ್ಥಾಲೀಪಾಕವನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾ 

ಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಪತ್ತಿನವರಿಗೂ ನಡೆಯಿತು. 

ಅಷ್ಟು ಹೊತ್ತಿಗೆ ಹರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ 

-------------------------------------------- 

ನನ್ನ ಸಂಸಾರ ೯ 

ಹಾಗೆಯೇ ಪ್ಳೇಗಿನಿಂದ ಒಬ್ಬೊಬ್ಬರು ಸಾಯುವದಕ್ಕೂ ಆರಂಭವಾಗಿತ್ತು. ವಿನಾ 

ಯಕಶಾಸ್ತ್ರಿಗಳು ಪ್ರೇಗಿಗೆ ಹೆದುರಿ ಭಾದ್ರಪದ ಶುದ್ಧ ಬಿದಿಗೆದಿನ ಸಾಯಂಕಾಲ ಹರಪು 

ರಕ್ಕೆ ಆರುಮೈಲಿ ದೂರದಲ್ಲಿದ್ದ ತಮ್ಮ ಗ್ರಾಮವಾದ ಕ್ಷೀರಪುರಕ್ಕೆ ಪ್ರಯಾಣಮಾಡಿ 

ಕೊಂಡು ಹೊರಟುಹೋದರು. ಇವರು ಪ್ರಯಾಣಮಾಡುವುದಕ್ಕೆ ಮೂರುದಿನಮುಂ 

ಚೆಯೇ ಮದುವೆಯಾದ ಮನೆಯಲ್ಲಿ ಎರಡು ಇಲಿಗಳು ಸತ್ತುಹೋಗಿದ್ದವು. ಆದುದ 

ರಿಂದಲೇ ಅವರು ಅಷ್ಟು ತ್ವರೆಯಾಗಿಯೇ ಊರು ಬಿಟ್ಟು ಹೋದರು. ಭಾದ್ರಪದ ಶುದ್ಧ 

ತದಿಗೆ ಚೌತಿ ಇವೆರಡುದಿನವೂ ಊರಿನಲ್ಲೆಲ್ಲರ ಮನೆಯಲ್ಲೂ ಗೌರಿ-ಗಣೇಶ ಹಬ್ಬದ 

ಸಮಾರಂಭ, ಗಣಪತಿಯನ್ನು ಕೂರಿಸಿದ ಮೇಲೆ ವಿಘ್ನೇಶ್ವರನಿಗೆ ಮಂಗಳಾರತಿ ಮಾಡಿ 

ಬಿಟ್ಟ ಹೊರತು ಮನೆಬಿಟ್ಟು ಹೋಗುವಹಾಗಿಲ್ಲ. ಊರಿನಲ್ಲಾದರೋ ಪ್ಳೇಗು ದಿನೇ 

ದಿನೇ ಹೆಚ್ಚುತ್ತ ಬಂದು ಬ್ರಾಹ್ಮಣಕೇರಿಯಲ್ಲೇ ದಿನವೊಂದಕ್ಕೆ ಎರಡು ಮೂರು ಹೆಣ 

ಗಳು ಹೋಗಲಾರಂಭವಾಯಿತು. ಜನಗಳಿಗೆ ಬಹು ಗಾಬರಿಯಾದ್ದರಿಂದ ಎಲ್ಲರೂ 

ಊರ ಹೊರಗೆ ಎರಡು ಮೈಲಿ ದೂರದಲ್ಲಿ ಮಟ್ಟೇ ಜೋಪಡಿಗಳನ್ನು ಕಟ್ಟಿಕೊಂಡು 

ಅಲ್ಲಿಗೆ ವಾಸಕ್ಕೆ ಹೊರಟುಹೋದರು. ಭಾದ್ರಪದ ಶುದ್ಧ ದಶಮಿಹೊತ್ತಿಗೆಊರೆಲ್ಲವೂ 

ಖಾಲಿಯಾದುವು, ನೀಲಕಂಠಶಾಸ್ತ್ರಿಗಳ ಮನೆಯವರೂ ತಮ್ಮ ಮನೆಗೆ ಬೀಗ ಹಾಕಿ 

ಕೊಂಡು ಗುಡಿಸಲಿಗೇ ವಾಸಕ್ಕೆ ಹೊರಟುಹೋದರು.  


ವಿನಾಯಕ ಶಾಸ್ತ್ರಿಗಳ ಮನೆಯವರು ಕ್ಷೀರಪ್ರರಕ್ಕೆ ಪ್ರಯಾಣ ಮಾಡಿದ 

ವಿಷಯವನ್ನು ಹಿಂದೆಯೇ ಬರೆದಿದೆಯಷ್ಟೆ? ಅವರು ಅಲ್ಲಿಗೆ ಹೋದ ಮೇಲೆ ಒಂದು 

ತಿಂಗಳಮಗೆ ಕ್ಷೇಮವಾಗಿಯೇ ಇದ್ದರು. ಇಷ್ಟು ಹೊತ್ತಿಗೆ ನವರಾತ್ರಿ ಹಬ್ಬ ಬಂದಿದ್ದಿತು. 

ನವರಾತ್ರಿ ಪಾಡ್ಯದದಿನ ರಾತ್ರಿಯೇ ವಿನಾಯಕ ಶಾಸ್ತ್ರಿಗಳು ಒಕ್ಕಲಿದ್ದ ಮನೆಯಲ್ಲಿ 

ಒಂದು ಇಲಿ ಸತ್ತುಹೋಯಿತು. ಮನೆಯವರಿಗೆ ಇದನ್ನು ನೋಡಿ ಬಹುಗಾಬರಿಯಾಗಿ 

ಹೋಯಿತು. ಮಾರನೇ ದಿನವೇ ಬೇರೊಂದು ಮನೆಗೆ ವಾಸಕ್ಕೂ ಹೊರಟು ಹೋದರು. 

ಅದೇ ದಿನ ಸಾಯಂಕಾಲ ಐದು ಗಂಟೆ ಸಮಯದಲ್ಲಿ ಹೊಸ ಮದವಣಗಿತ್ತಿ 

ಲಕ್ಷ್ಮೀದೇವಮ್ಮನಿಗೆ ಜ್ವರವೂ ತಲೆನೋವೂ ಕಾಣಿಸಿ ಕೊಂಡಿತು. ಮನೆಯವರ ಹೆದರಿ 

ಕೆಯನ್ನು ಕೇಳಬೇಕೆ ? ವಿನಾಯಕ ಶಾಸ್ತ್ರಿಗಳು ಪೂರ್ವಭಾವಿಯಾಗಿಯೇ ಪ್ಳೇಗಿನ 

ಔಷಧಗಳನ್ನು ಬೇಕಾದಹಾಗೆ ತರಿಸಿಟ್ಟು ಕೊಂಡಿದ್ದರು. ಅದನ್ನೆಲ್ಲಾ ಜ್ವರ ಬಂದ ಹುಡು 

ಗಿಗೆ ಕೊಟ್ಟುದಾಯಿತು. ಮಾರನೇದಿನ ಲಕ್ಷ್ಮಿದೇವಮ್ಮನಿಗೆ ಕಂಕುಳು ಸಂದಿಯಲ್ಲಿ 

ಎರಡು ಗೆಡ್ಡೆಗಳು ಕಾಣಿಸಿಕೊಂಡವು. ಆ ಗ್ರಾಮದವರು ಇದನ್ನು ತಿಳಿದು ಒಟ್ಟು 

ಗೂಡಿ ಒಂದು ಕ್ಷಣವೂ ತಮ್ಮೂರಿನಲ್ಲಿರಲಾಗದೆಂದು ವಿನಾಯಕ ಶಾಸ್ತ್ರಿಗಳ ಮನೆಯ 

----------------------------------------------

10 ಕಾದಂಬರಿ: ಸಂಗ್ರಹ 


ವರನ್ನು ಸ್ನೇಗು ತಗಲಿದ ಹುಡುಗಿಯೊಡನೆ ಬಲವಂತವಾಗಿ ಊರು ಬಿಟ್ಟು ಹೊರ 

ಡಿಸಿ ಬಿಟ್ಟರು. ಅವರು ಧೈರ್ಯವನ್ನು ಹೊಂದಿ ಕ್ಷೀರಪುರಕ್ಕೆ ಮೂರು ಮೈಲಿ 

ದೂರದಲ್ಲಿದ್ದ ನಾಗಪುರಕ್ಕೆ ತಮ್ಮನೆಂಟರೊಬ್ಬರ ಮನೆಗೆಹೋಗೋಣವೆಂದುಹೊರಟರು. 

ನಾಗಪುರಕ್ಕೂ ಬಂದದ್ದಾಯಿತು. ಇವರು ಅಲ್ಲಿಗೆ ಹೋದುದು ಮಹಾನವಮಿಯ 

ದಿನ ಮಧ್ಯಾಹ್ನ ನಾಲ್ಕು ಘಂಟೆ ಸಮಯ. ಇವರು ಬಂದ ವಿಷಯವನ್ನು ಎಷ್ಟೋ 

ಗುಟ್ಟಿನಲ್ಲಿಟ್ಟಿರಬೇಕೆಂದು ಮಾಡಿ ಕೊಂಡಿದ್ದಾಗ್ಯೂ ಸಾಯಂಕಾಲ ೮ ಘಂಟೆಯೊಳಗಾಗಿ 

ಊಗೆಲ್ಲವೂ ಈ ಸುದ್ದಿ ತಿಳಿದೇ- ಹೋಯಿತು. ಮೊದಲು ವಿನಾಯಕ ಶಾಸ್ತ್ರಿಗಳು 

ಇಳಿದುಕೊಳ್ಳಲಿಕ್ಕೆ ತಕ್ಕ ಸ್ಥಳವೇ ದೊರೆಯಲಿಲ್ಲ, ಹೇಗೋ ಕಷ್ಟಪಟ್ಟು ಸಾಯಂಕಾಲ 

ಏಳುಗಂಟೆ ಹೊತ್ತಿಗೆ ಬಂಧುವೊಬ್ಬನ ಮನೆಯ ಬೀದಿ ಬಾಗಲಲ್ಲಿ ರೋಗಿಯನ್ನು ಮಲಗಿ 

ಸಿಕೊಂಡು ತಾವೂ ಕುತಕೊಂಡರು. ೯ ಘಂಟೆ ಹೊತ್ತಿಗೆ ಇವರಿಳಿದಿದ್ದ ಮನೆ ಬಾಗ 

ಲಿಗೆ ದೊಣ್ಣೆಗಳನ್ನು ಹಿಡಿದುಕೊಂಡು ಒಂದು ಭಯಂಕರವಾದ ಮನುಷ್ಯರ ಗುಂಪು 

ಬಂದಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಗಳಹುವುದಕ್ಕಾರಂಭಿಸಿದರು. ಹತ್ತು 

ಘಂಟಿಯೊಗಾಗಿ ಈ ಊರನ್ನು ಒಟ್ಟು ರೋಗಿಯನ್ನು ಹೊರಕ್ಕೆ ತೆಗೆದುಕೊಂಡು 

ಹೋದರೆ ಸರಿ. ಇಲ್ಲವಾದರೆ ಒಳ ಅನರ್ಥವಾಗುವುದೆಂದು ಗುಂಪಿಗೆ ಗುಂಪೇ ಕೂಗ 

ತೊಡಗಿತು. ವಿನಾಯಕ ಶಾಸ್ತ್ರಿಗಳ ಮನೆಯವರ ಮನಸ್ಸು ಈಗ ಹೇಗಿದೆಯೆಂಬುದು 

ಅನುಭವದುನಹ ಗೊತ್ತಾಗಲಾರದಾದ್ದರಿಂದ ಅದನ್ನು ಹೇಳುವುದಿಲ್ಲ. ಅಂತು ವಿನಾಯಕ 

ಶಾಸ್ತ್ರಿಗಳು ಆ ಊರ ಬಿಟ್ಟು ಹೊರರಲೇಬೇಕಾಯಿತು. ಅವರ ಕಷ್ಟ ಜಗದೀಶ್ವರನೊ 

ಬ್ಬಬಲ್ಲ. ಅವರಿಗೆ ಏನೂ ತೋರದೆ ಹಣೆಯಲ್ಲಿ ಬರೆದಂತಾಗಲೆಂದು ಯೋಚಿಸಿ ಸ್ವಸ್ಥ

 ಳವಾದ ಹರಪುರಕ್ಕೆ ಪ್ರಯಾಣ ಮಾಡಲು ನಿಷ್ಕರ್ಷಿಸಿದರು. ರಾತ್ರಿ ಹನ್ನೆರಡು ಗಂಟೆ 

 ಹೊತ್ತಿಗೆ ವಿನಾಯಕ ಶಾಸ್ತ್ರಿಗಳು ಎರಡು ಬಂಡಿಗಳನ್ನು ಹೊಡಿಸಿಕೊಂಡು ಬಂದು ಅದ 

 ರಲ್ಲೊಂದರಲ್ಲಿ ರೋಗಿಯನ್ನೂ ಸಮೀಪದಲ್ಲಿ ತಮ್ಮ ತಾಯಿಯನ್ನೂ ಕುಳ್ಳಿರಿಸಿ 

 ಇನ್ನೊಂದರಲ್ಲಿ ಕಡಮೆಯ ವರೆಲ್ಲರೂ ಕು?ಳು ಪ್ರಯಾಣ ಮಾಡಿದರು. 

 

ಗಾಡಿಯು ಮೆಲ್ಲ ಮೆಲ್ಲನೆ ಹೋಗುತ್ತಿತ್ತು. ರೋಗಿಯ ಸಂಕಟವೂ ಆರ್ತ 

ನಾದವೂ ಕ್ಷಣೇಕ್ಷಣೇ ಹೆಚ್ಚುತ್ತಿತ್ತು, ಈ ಭಯಂಕರ ಘಟನೆಯನ್ನು ನೋಡಿದವರ 

ಎದೆಯ ಒಡೆದು ಹೋಗುವಂತಿತ್ತು. ನಾಗಪುರಕ್ಕೂ ಹರಪುರಕ್ಕೂ ಹತ್ತು ಮೈಲು 

ದೂರ, ವಿಜಯದಶಮಿಯದಿನ ಬೆಳಗಿನಝಾವ ನಾಲ್ಕು ಗಂಟೆ ಸಮಯದಲ್ಲಿ ಈ ಪ್ರಯಾ 

ಣಿಕರ ಬಂಡಿಗಳು ನಾಗಪುರ ಹರಪುರಗಳ ಮಧ್ಯ ದಾರಿಯಲ್ಲಿರುವ ಒಂದು ಕೆರೆಯ 

ಏರಿಯ ಮೇಲೆ ಬರುತ್ತಿದ್ದಾಗ ಲಕ್ಷ್ಮಿ ದೇವಿಯು ಈ ಭೂಲೋಕವನ್ನು ಬಿಟ್ಟು 

----------------------------------------------

ನನ್ನ ಸಂಸಾರ 11 

ಪ್ರಯಾಣಮಾಡಿದಳು. ವಿನಾಯಕ ಶಾಸ್ತ್ರಿಗಳು ಗಡಿಯ ಮೇಲೆಯೇ ಮೂರ್ಛಿತರಾಗಿ 

ಬಿಟ್ಟರು. ರೋಗಿಯು ಮೃತಳಾದಸ್ಥಳಕ್ಕೂ ಹರಪ್ರರದ ಸ್ಮಶಾನ ಭೂಮಿಗೂ ಮೂರು 

ಮೈಲಿದೂರವಿತ್ತು. ಬೆಳಗ್ಗೆ ಆರುಗಂಟೆಗೆ ವಿನಾಯಕ ಶಾಸ್ತ್ರಿಗಳ ಮನೆಯವರೆಲ್ಲರೂ 

ಸ್ಮಶಾನದಲ್ಲಿ ಬಂದಿಳಿದು ನಡೆದ ವರ್ತಮನವನ್ನು ನೀಲಕಂಠಶಾಸ್ತ್ರಿಗಳ ಮನೆಗೆ ಹೇಳಿ 

ಕಳುಹಿಸಿದರು. ನೀಲಕಂಠ ಶಾಸ್ತ್ರಿಗಳು ಆಗ ಊರಲ್ಲಿರಲಿಲ್ಲ. ಅವಶ್ಯವಾಗಿ ಸ್ಮಶಾನಕ್ಕೆ 

ಹೋಗಬೇಕಾದವರು ಹೋಗಿದ್ದುದೂ ಆಯಿತು. ಅಲ್ಲಿ ಲಕ್ಷ್ಮಿದೇವಿಯ ದೇಹವನ್ನು 

ಸಂಸ್ಕಾರಮಾಡಿ ಎಲ್ಲರೂ ಹಿಂತಿರುಗಿ ಮನೆಗೆ ಬಂದುದೂ ಆಯಿತು. ಅಂತು ಎರಡು 

ತಿಂಗಳು ಕಳೆವುದರೊಳಗಾಗಿ ಇಷ್ಟು ಕಥೆ ಕದುಹೋಯಿತು. 


ನಾನೇನೋ ಮದುವೆ ವಿಷಯವನ್ನು ಬರೆಯ ತೊಡಗಿ ಮಧ್ಯದಲ್ಲಿ ಇಂತಹ 

ಅಮಂಗಳವನ್ನು ಬರೆದುದಕ್ಕಾಗಿ ಪಾಠಕಿಯರು ನನ್ನ ಮೇಲೆ ಆಗ್ರಹಪಡಬಹುದು. 

ಆದರೆ ನಡೆದವಿಷಯವೆಲ್ಲವನ್ನೂ ಬರೆದು ಬಿಡಬೇಕಾಗಿರುವುದರಿಂದ ಎಲ್ಲರೂ ನನ್ನನ್ನು 

ಮನ್ನಿಸಬೇಕು. ಈ ಪ್ರಪಂಚದಲ್ಲಿ ಮಂಗಳಾಮಂಗಳಗಳು ಬರುವುದೂ ಗೊತ್ತಿಲ್ಲ. 

ಹೋಗುವುದೂ ಗೊತ್ತಿಲ್ಲ. ಇದೆಲ್ಲಾ ನಾಟಕವಾಡಿದ ಪಗೆ, ನಾವು ರಾತ್ರಿ ಹೊತ್ತು 

ಮಲಗಿಕೊಂಡು ಕನಸನ್ನು ಕಂಡು ಹೇಗೋ ಅದರಂತೆಯೇ ಈ ಲೋಕದ ಸುಖ 

ದುಃಖಗಳು. 


III 

ನನಗೆ ಹದಿನಾಲ್ಕು ವರ್ಷ ತಂಬುವುದಕ್ಕೆ ಇನ್ನು ಆರೇ ತಿಂಗಳು ಉಳಿದಿತ್ತು. 

ನಮ್ಮ ತಾತನಂತೂ ನನಗೆ ಮದುವೆ ಮಾಡದೆ ತಾನೆಲ್ಲ ಸತ್ತುಹೋಗುವೆನೋ ಎಂದು 

ಕೊರಗಿಕೊರಗಿ ಕೃಶನಾಗಿದ್ದನು. ಕೊನೆಗೆ ನೀಲಕಂಠಶಾಸ್ತ್ರಿಗಳಿಗೂ ನಮ್ಮ ತಾತನ 

ನಮಗೂ ಪತ್ರ ವ್ಯವಹಾರ ಬೆತದ ಮೇಲೆ ನೀಲಕಂಠಶಾಸ್ತ್ರಿಗಳು ದಯವಿಟ್ಟು ನಮ್ಮ 

ಮನೆ ಸಂಬಂಧಮಾಡುವುದಕ್ಕೆ ಒಪ್ಪಿಕೊಂಡರು. ನಮ್ಮ ತಾತನ ಸಂತೋಷವು ವಿವರಿ 

ಲಸದಳ. 


ಮನ ಬಹುಳ ಬಿದಿಗೆ ದಿನ ನನಗೆ ಮದುವೆಯಾಯಿತು. ಮದುವೆಗಾಗಿ ಬಂ 

ದಿದ್ದ ಬೀಗರು ಹರಪುರಕ್ಕೆ ಪ್ರಯಾಣ ಬೆಳೆಸಿದರು. ಅವರು ಪ್ರಯಾಣಮಾಡುವಾಗ 

ನಮ್ಮ ತಾತನು ನೀಲಕಂಠಶಾಸ್ತ್ರಿಗಳನ್ನು ಕುರಿತು " ಸ್ವಾಮಿ ! ತಾವು ದೊಡ್ಡ ಮನ 

ಸ್ಸು ಮಾಡಿ ನನ್ನನ್ನು ಕನ್ಯಾದಾಯದಿಂದಉದ್ಧಾರಮಾಡಿದುದಕ್ಕಾಗಿ ನಾನು ತಮಗೆ 

ಜೀವಾವಧಿ ಕೃತಜ್ಞನಾಗಿದ್ದೇನೆ. ನನ್ನ ಮನಸ್ಸಿನಲ್ಲಿ ಪೂರ್ವವಯಸ್ಕನೂ, ಸತ್ಕುಲ 

ಪ್ರಸೂತನೂ, ವಿದ್ಯಾವ:ತನೂ ಆದ ವರನಿಗೆ ಹುಡುಗಿಯನ್ನು ಕೊಡಬೇಕೆಂಬ ಆಶೆ 

-------------------------------------------

12 ಕಾದಂಬರಿ ಸಂಗ್ರಹ 


ಬಹಳವಾಗಿತ್ತು. ಅದನ್ನು ತಾವು ಸಾಫಲ್ಯಗೊಳಿಸಿದಿರಿ. ಇನ್ನು ನಾನು ಕೃತಾರ್ಥನಾ 

ದೆನು. ತಾವು ನಾಲ್ಕಾರು ತಿಂಗಳು ಬಿಟ್ಟು ಕೊಂಡು ಹುಡುಗಿಯನ್ನು ನಿಮ್ಮ ಮನೆಗೆ 

ಕರೆದುಕೊಂಡು ಹೋಗಿ ನಿಮ್ಮ ಮನೆ ಆಚಾರ ವ್ಯವಹಾರ ಪದ್ಧತಿ, ಮಾನಮರ್ಯಾದೆ 

ಗಳನ್ನು ಕಲಿಸಿಕೊಡಿ, ಈ ಹುಡಿಗಿಯನ್ನು ಪ್ರೀತಿಯಿಂದ ಸಾಕಿರುವೆನು. ನನ್ನ ಮಗನು 

ವಿವೇಕಶಾಲಿಯಾಗಿ ಮಗಳಿಗೆ ಬುದ್ಧಿವಾದ ಹೇಳಿಕೊಡುವಷ್ಟು ಗುಣವಂತನಲ್ಲ. ನೀವು 

ನಮ್ಮನ್ನು ಮುಂದೆ ಯಾವ ವಿಧದಲ್ಲಿಯೂ ಆಕ್ಷೇಪಣೆ ಮಾಡದಿರಬೇಕಾದರೆ ನಿಮ್ಮ 

ಮನೆಯಲ್ಲಿಟ್ಟುಕೊಂಡು ನಿಮ್ಮ ಮನೆಸಂಪ್ರದಾಯಗಳನ್ನು ಹೇಳಿಕೊಡಬೇಕು.” 

ಎಂದು ಹೇಳಿ ಅವರನ್ನು ಪ್ರಯಾಣಮಾಡಿಸಿ ಕಳುಹಿಸಿಕೊಟ್ಟನು. 


ನನಗೆ ಮದುವೆಯಾದ ಆರುತಿಂಗಳಿಗೆ ನಮ್ಮ ತಾತನು ಇಹಲೋಕವನ್ನು 

ತ್ಯಜಿಸಿ ಪರಲೋಕಕ್ಕೆ ಪ್ರಯಾಣಮಾಡಿದರು. ನಮ್ಮ ತಂದೆಯು ತಾತನ ಉತ್ತರಕ್ರಿಯೆ 

ಗಳನ್ನು ಮಾಡುವುದಕ್ಕಾಗಿ ಇನ್ನೂರು ರೂಪಾಯಿ ಸಾಲಮಾಡಬೇಕಾಯಿತು. ಎಲ್ಲಾ 

ಮುಗಿದಮೇಲೆ ನನ್ನನ್ನು ನಮ್ಮ ತಂದೆಯು ಕೆಲವು ದಿನಗಳ ಮಟ್ಟಿಗೆ ಪತಿಗೃಹಕ್ಕೆ 

ಕಳುಹಿಸಿಕೊಟ್ಟರು. 


ನಾನಿನ್ನೂ ಅರಿಯದ ಹುಡುಗಿ ಪರಗೃಹದಲ್ಲಿದ್ದವಳಲ್ಲ. ಮೊದಮೊದಲು 

ನನಗೆ ಪತಿಗೃಹಕ್ಕೆ ಬಂದಾಗ ಏನೋ ಒಂದು ವಿಧವಾಗಿ ಕಣ್ಣ ಕಟ್ಟಿದಂತಾಗಿತ್ತು. 

ತಂದೆ ತಾಯಿಗಳನ್ನು ನಾನೆಂದೂ ಬಿಟ್ಟಿದ್ದವಳಲ್ಲ, ಅದಲ್ಲದೆ ನಾನು ಪತಿಗೃಹಕ್ಕೆ 

ಬಂದಮೇಲೆ ಅಲ್ಲಿನ ನಡವಳಿಕೆ ಆಚಾರ, ಸಂಪ್ರದಾಯಗಳನ್ನು ನಮ್ಮ ಅತ್ತೆಯೂ 

ನಮ್ಮ ಅಕ್ಕನೂ(ಓರಗಿತ್ತಿ) ನನಗೆ ಬೋಧಿಸುತ್ತಿದ್ದರು. 


ನಮ್ಮ ಬ್ರಾಹ್ಮಣವೃಂದದಲ್ಲಿ ಹೆಂಡತಿ ದೊಡ್ಡವಳಾಗಿ ಗಂಡನ ಮನೆಗೆ 

ಹೋಗುವ ವರೆವಿಗೂ ಗಂಡಹೆಂಡರು ಮಾತನಾಡುವುದೆಂದರೆ ಬಹು ಸಂಕೋಚವೂ 

ಅಪಹಾಸ್ಯವೂ ವಾಮಾನಿಕೆಯ ಆದ ಪದ್ಧತಿಯಂತೆ, ಈ ಪದ್ದತಿಯು ಪೂರ್ವಕಾಲ 

ದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತು. ಆಗಣಕಾಲದಲ್ಲಿ ಒಂದೆರಡು ಮಕ್ಕಳಾದ 

ಮೇಲೂ ಹೆಂಡತಿಯಾದವಳು, ಗಂಡನೊಡನೆ ಧೈರ್ಯದಿಂದ ಬಹಿರಂಗದಲ್ಲಿ ಮಾತನಾ 

ಡುವುದಕ್ಕೆ ಹೆದರಿಕೊಳ್ಳುತ್ತಿದ್ದಳು. ಅದರಲ್ಲೂ ಅತ್ತೆ, ಮಾವ, ಭಾವ, ಅತ್ತಿಗೆ, ನಾದಿನಿ 

ಯದಿರಿಗೆ, ಗಂಡನ ಸಂಗಡ ಮಾತಾಡುವುದೆಂದರೆ ಬಹುಕಷ್ಟ ತರವಾದ ಸಂಗತಿಯೇ ಸರಿ. 

ಒಂದುವೇಳೆ ಪ್ರತ್ಯಕ್ಷವಾಗಿ ಮಾತನಾಡಿಬಿಟ್ಟಳೆಂದರೆ, ಆ ವಿಚಾರವು ಮಾರನೆಯದಿನವೇ 

ಊರಲ್ಲೆಲ್ಲಾ ಹರಡಿ ಹೋಗುತ್ತಿದ್ದುದಲ್ಲದೆ, ಅಂತಹವಳಿಗೆ ಗಂಡುಬೀರಿಯೆಂಬ ಬಿರಿದು 

ಸಹ ಬಂದು ಬಿಡುತ್ತಿದ್ದಿತು. 

----------------------------------------

ನನ್ನ ಸಂಸಾರ ೧೩  

ನೀಲಕಂಠಶಾಸ್ತ್ರಿಗಳ ಕಿರೀಮೊಮ್ಮಕ್ಕಳಾದ ವಾಸುದೇವಶಾ. . ... ...... 

ಆಹಾ ! ಮರೆತುಬಿಟ್ಟೆನು, ಏನೋಜ್ಞಾನದಿಂದ ನನ್ನ ಸ್ವಾಮಿಯ ಹೆಸರನ್ನು ಬಾಯಿಂದ 

ಮರೆತು ಹೇಳುಬಿಡುತ್ತಿದ್ದೆನು. ವಾಚಕಿಯರು ದಯವಿಟ್ಟು ಕ್ಷಮಿಸಬೇಕು. ಈಗ ಈ 

ಗ್ರಂಥದಲ್ಲಿ ಇನ್ನು ಮುಂದೆ ನನ್ನ ಜೀವಿತಸರ್ವಸ್ವರಾದ ಸ್ವಾಮಿಯವರ ಹೆಸರನ್ನು 

ಆಗಾಗ್ಗೆ ಉಚ್ಚರಿಸ ಬೇಕಾಗುತ್ತದೆ. ಆದುದರಿಂದ ಅವರಿಗೆ ಯಾವ ಹೆಸರಿಟ್ಟು ಕರೆಯ 

ಬೇಕೋ ತಿಳಿಯದು ನೀವಾದರೂ ಐದು ಮಂದಿ ಮುತ್ತೈದೆಯರು ಸೇರಿ ನನಗೆ ಈ ವಿಷ 

ಯದಲ್ಲಿ ಬುದ್ದಿವಾದವನ್ನು ಹೇಳಿಕೊಡಬೇಕು, ನಾ ನಿನ್ನ ಮಾತನ್ನು ಮೀರುವವ 

ಳಲ್ಲ. ಲೋಕನ್ಯಾಯದಂತೆ ನಾನು ವರ್ತಿಸುವವಳೇ ವಿನಹ ಅನ್ಯಥಾ ಇಲ್ಲ. "ನಮ್ಮ ! 

ಮನೆಯವರೆಂದು ಕರೆಯಲೆ? ಅಥವಾ ಪ್ರಾಣನಾಯಕ ; ಪ್ರಾಣಪ್ರಿಯ ! ಪ್ರಿಯನಾಥ 

ಪ್ರಾಣಕಾಂತ ! ಮುಂತಾದ ಯಾವುದಾದರೊಂದು ಹೆಸರಿನಿಂದ ಕೂಗಲೆ ? ಅಥವಾ 

My Dear Husband ಎಂದು ಕರೆಯುತ್ತಾ ಬರಲೇ? ಉಹು-ಇದಾವುದೂ 

ಸರಿಯಲ್ಲ. ಏನೆಂದು ಕರೆದರೂ ಆಕ್ಷೇಪಣೆ ಮೂಡುವವರು ಮೂಡಿಯೇಮಾಡುತ್ತಾರೆ. 

ಆದುದರಿಂದ ನಮ್ಮ ಸೋದರಿಮಣಿಯರು ಈಗ ವರ್ತಿಸುತ್ತಿರುವಂತೆ ನಾನೂಸಹ 

ನಮ್ಮ ಯಜಮಾನರೆಂದು ಸಂಬೋಧಿಸುತ್ತಾ ಬರುವೆನು. ಇದರಲ್ಲೇನೂ ದೋಷ 

ವಿರುವಂತೆ ತೋರದು. 


ಒಂದುದಿನ ನನ್ನ ಯಜಮಾನರು ನನ್ನನ್ನು ತಮ್ಮ ಚಿಕ್ಕ ಮನೆಗೆ ಕರೆದು 

ನನ್ನೆರಡು ಕೈಗಳನ್ನೂ ಹಿಡಿದುಕೊಂಡು ನನ್ನ ಗಲ್ಲವನ್ನು ಮುದ್ದಿಟ್ಟು,ಪ್ರಿಯಳೆ! ಈಗ 

ನೀನು ನನ್ನ ಸಂಗಡ ಮಾತನಾಡಲು ನಾಚಿಕೆ ಪಡಬೇಡ; ನೀನು ಪುಸ್ತಕಗಳನ್ನೋದು 

ವುದನ್ನು ಬಲ್ಲೆಯಾ? ಎಂದು ಕೇಳಿದರು. ನನ್ನನ್ನು ಅವರು ಮುಟ್ಟುತ್ತಲೇ ನನಗೆ 

ಮೈಯೆಲ್ಲಾ ನಡುಗಿಹೋಯಿತು. ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕೆಂದು 

ಪ್ರಯತ್ನ ಪಟ್ಟೆನು. ಆದರೆ ಆ--ಹಾಳು ನಾಚಿಕೆಯೊಂದು ಅಡ್ಡವಾಗಿ ಬಂದು ನನ್ನನ್ನು 

ಮಾತನಾಡಗೊಡಿಸದೆ ಹೋಯಿತು. ಅರ್ಧ ಗಂಟೆವರಿಗೆ ನಮ್ಮ ಯಜಮಾನರು 

ನನ್ನನ್ನು ವಿವಿಧವಾಗಿ ಕೇಳಿದರೂ ನಾನು ಯಾವಮಾತನ್ನಾಡಲೂ ಶಕ್ತಳಾಗಲಿಲ್ಲ. 

ಕೊನೆಗೆ ಅವರಿಗೆ ಬೇಸರವಾಗಿ ನನ್ನನ್ನು ಬಿಟ್ಟು ಬಿಟ್ಟು, ಇಂತಹ ಮೂಢತನವನ್ನು 

ನೀನು ಇನ್ನು ಮೇಲೆ ಬಿಟ್ಟು ನನ್ನೊಡನೆ ಸರಿಯಾಗಿ ಮಾತನಾಡದಿದ್ದರೆ ನನಗೆ ಬಹು 

ಕೋಪ ಬರುವುದೆಂದು ಹೇಳಿಬಿಟ್ಟರು. ಅವರು ನನ್ನ ಕೈಬಿಟ್ಟೊಡನೆಯೇ ನಾನು ಆ ಸ್ಥಳ 

ವನ್ನು ಬಿಟ್ಟು ಒಳಕ್ಕೆ ಹೊರಟು ಹೋದೆನು. ಒಳಕ್ಕೆ ಹೋದ ಮೇಲೆ ನನ್ನನ್ನು ನಾನೇ 

ನಿಂದಿಸಿಕೊಳ್ಳ ಬೇಕಾಯಿತು. ನನ್ನನ್ನು ಯಜಮಾನರು ಆದರದಿಂದ ಮಾತನಾಡಿಸಿದರೂ 

-----------------------------------------------

14 ಕಾದಂಬರಿ ಸಂಗ್ರಹ 


ನಾನು ಮಾತನಾಡದೆ ಹೋದೆನಲ್ಲಾ ! ಎಂಬ ವ್ಯಥೆಯು ನನ್ನ ಮನಸ್ಸನ್ನು ವ್ಯಗ್ರ 

ಮಾಡಿಬಿಟ್ಟಿತು. ಇನ್ನೆಂದಾದರೂ ಮಾತಾಡಿಸಿದರೆ ಮಾತನಾಡಿಬಿಡುವೆನೆಂದು ನಿರ್ಧರಿಸಿ 

ಕೊಂಡೆನು. ಆದರೆ ಪುನಃ ನನ್ನ ಮುಗ್ನ ವಯಸ್ಸಿನಲ್ಲಿ ಅಂತಹ ಸಂಭವವೇ ಉಂಟಾಗ 

ಲಿಲ್ಲ. ಇಷ್ಟರಲ್ಲೇ ನನ್ನ ತಂದೆಯು ಬಂದು ನನ್ನನ್ನು ರಂಗಪುರಕ್ಕೆ ಕರೆದು ಕೊಂಡು 

ಹೊರಟು ಹೋದರು. 


ನಾನು ಮದುವೆಯಾದ ಮೇಲೆ ನಾಲ್ಕು ತಿಂಗಳು ಪತಿಗೃಹಕ್ಕೆ ಹೋಗಿದ್ದೆನು. 

ನನ್ನ ತಂದೆಯ ಪತಿಗೃಹದಿಂದ ನನ್ನನ್ನು ರಂಗಪುರಕ್ಕೆ ಕರೆದುಕೊಂಡು ಬಂದ ಆರುತಿಂ 

ಗಳಿಗೇ ನಾನು ದೊಡ್ಡವಳಾದೆನು. ಆಗ ನನಗೆ ಹದಿನೈದು ವರ್ಷ ತುಂಬಿ ಮೇಲೆ ಆರು 

ತಿಂಗಳಾಗಿದ್ದಿತು. ನಾನು ದೊಡ್ಡವಳಾದ ಹದಿನಾರು ದಿನದೊಳಗಾಗಿ ಋತುಶಾಂತಿ 

ಯನ್ನು ಮಾಡಿಕೊಡಲು ನನ್ನ ತಂದೆಗೆ ಸಾಕಾದಷ್ಟು ಅನುಕೂಲವಿರಲಿಲ್ಲ. ಆದುದ 

ರಿಂದ ಹರಪ್ರರಕ್ಕೆ ಬರದ ಕಾಗದದಲ್ಲಿ ಕಾಲವಿಳಂಬವನ್ನು ಸೂಚಿಸುವ ಅಭಿಪ್ರಾಯ 

ವನ್ನು ತೋರಿಸಿ ಪತ್ರವನ್ನು ಬರೆದು ಹಾಕಿದರು. 


ನಮ್ಮ ತಾತನವರಾದ ನೀಲಕಂಠಶಾಸ್ತ್ರಿಗಳು ನಮ್ಮ ತಂದೆಯ ಕಾಗದವ 

ನ್ನೋದಿ ಕೋಪಗೊಂಡರು. ಋತು ಶಾಂತಿಯನ್ನು ಸಾವಕಾಶವಾಗಿಡಲು ಅವರಿಗೆ ಮನ 

ಸ್ಸಿರಲಿಲ್ಲ. ನಮ್ಮ ತಂದೆಯ ಪತ್ರಕ್ಕೆ ಬದುಲಾಗಿ ಅವರು. "ನಿಮ್ಮ ಕಾಗದವನ್ನು

 ನೋಡಿ ಸಂತೋಷವಾಯಿತು. ತಾವು ಈ ಕಾಗದ ಕಂಡೊಡನೆಯೇ ಸಕುಟುಂಬರಾಗಿ 

 ಹುಡುಗಿಯನ್ನೂ ಕರೆದುಕೊಂಡು ಇಲ್ಲಿ ಬರಬೇಕು. ಲಗ್ನವನ್ನು ಹದಿನಾರು ದಿನ 

 ದೊಳಗೇ ನಿಷ್ಕರ್ಷೆ ಮಾಡಿಸುತ್ತೇವೆ,'' ಎಂದು ಬರೆದು ಕಳುಹಿಸಿದರು. ನಮ್ಮ 

 ತಂದೆಗೆ ಆ ಕಾಗದವನ್ನು ನೋಡಿ ತುಂಬಾಯೊಜನೆಗೆ ಪ್ರಾರಂಭವಾಯಿತು, ಪುನಃ, 

" ನಾನು ಬಡವನಾದರೂ ಚಿಂತೆಯಿಲ್ಲ. ತಾವು ಸರ್ವರೊಡನೆ ರಂಗಪುರಕ್ಕೆ ದಯ 

ಮಾಡಿ ಅಗ್ನವನ್ನು ಬೆಳಸಿಕೊಂಡು ಹೋಗಬಹುದು" ಎಂದು ಪುನಃ ನಮ್ಮ ತಂದೆಯು 

ಹರಪುರಕ್ಕೆ ಪತ್ರವನ್ನು ಬರದು, ಸಾಹುಕಾರರಲ್ಲಿ ನೂರು ರೂಪಾಯಿ ಸಾಲಮಾಡಿ 

ನಿಷೇಕಲಗ್ನಕ್ಕೆ ತಕ್ಕ ಸಾಹಿತ್ಯಗಳನ್ನು ಅಣಿಮಾಡಿಕೊಂಡರು. 


ನಿರ್ದಿಷ್ಟ ದಿನಕ್ಕೆ ಸುಯಾಗಿ ಎಲ್ಲರೂ ರಂಗಪುರಕ್ಕೆ ಬಂದರು. ನಿಷೇಕದ ದಿವಸ 

ಹಗಲು ಹವನ ಹೋಮಾದಿಗಳೆಲ್ಲವೂ ಬೆಳೆದುವು, ಹಸೆಯ ಮೇಲೆ ಕುಳಿತು ಕೊಳ್ಳು 

ವಾಗ ನನಗೆ ಬಹುಕಡೆ ಎರವಲಾಗಿ ತಂದ ಅಸಂಖ್ಯಾತವಾದ ವಿಧ ವಿಧ ಆಭರಣಗಳನ್ನು 

ಅಲಂಕಾರ ಮಾಡಿದರು. ನನಗೆ ಒಡವೆಗಳ ಭಾರವನ್ನು ಹೊರುವುದು ಬಹು ಕಷ್ಟವಾಗಿ 

ಹೋಯಿತು. ಆದರೆ ಆ ಕಷ್ಟವೂ ಹೆಂಗಸುಗೆ ಅದೊಂದು ವಿಧವಾದ ಆನಂದವೇ ಸರಿ.  

-----------------------------------------------

ನನ್ನ ಸಂಸಾರ 15. 

ಆದಿನ ಎರಡು ಬಾರಿ ಆರತಕ್ಷತೆಗಳಾದುವು. ರಾತ್ರಿ ಹನ್ನೆರಡು ಘಂಟೆಗೆ ನಾನು ನನ್ನ 

ಸ್ವಾಮಿಯೊಡನೆ ಶಯನಗ್ರಹಕ್ಕೆ ಪ್ರವೇಶ ಮಾಡಿದನು. ಅಲ್ಲಿಗೆ ಪ್ರವೇಶ ಮಾಡಿದ 

ಎರಡು ಗಳಿಗೆಯವರಿಗೂ ಫಲದಾನವೇ ಮುಂತಾದ ಶಾಸ್ತ್ರಗಳು ನಡೆಯುತ್ತಿದ್ದುವು. 

ಪುರೋಹಿತರು ಬಂದು ನಾಲ್ಕಾರು ವೇದಋಕ್ಕುಗಳನ್ನು ನಮ್ಮ ಯಜಮಾನಂದ ಹೇಳಿಸಿ 

ಹೊರಟು ಹೋದರು. ಶಯನ ಗೃಹಕ್ಕೆ ಪ್ರವೇಶಿಸಿದ್ದ ಸುವಾಸಿನಿಯರು ಯಥಾಯಥ 

ವಾಗಿ ಹೊರಟು ಹೋದರು. ಈಗ ಶಯನ ಗೃಹದಲ್ಲಿ ನಾನೂ ನನ್ನ ಸ್ವಾಮಿಯ ವಿನಹ 

ಇತರರಾರೂ ಇರಲಿಲ್ಲ. 


ನಮ್ಮ ಯಜಮಾನರು ನನ್ನನ್ನು ಆದಿನ ಆದರ ಪೂರ್ವಕವಾಗಿ ಕುಶಲಪ್ರಶ್ನೆ 

ಯನ್ನು ಮಾಡಿದರು. ನಾನೂ ಬಳುಸಂಕೋಚದಿಂದ ಅವರ ಪ್ರಶ್ನೆಗಳಿಗೆ ಉತ್ತರಕೊ 

ಟ್ಟೆನು, ನಮ್ಮ ಯಜಮಾನರು ಸತೀ ಧರ್ಮವನ್ನು ಕುರಿತು ಬಹುಹೊತ್ತಿನವರಿಗೆ ಉಪ 

ನ್ಯಾಸ ಮಾಡಿದರು. ಅವರ ನೀತಿಗಳನ್ನು ಕೇಳಿ ನನಗೂ ಬಹಳ ಸಂತೋಷವಾಯಿತು. 

ಅವರ ಉಪನ್ಯಾಸದಿಂದ ತಿಳಿದು ಬಂದುದೇನಂದರೆ; --- ಗೃಹಿಣಿಯಾದವಳಿಗೆ, ಪತಿವಿ 

ನಹ ಬೇರೆ ದೇವಲ್ಲ, ಬೇರೇವ್ರತವಿಲ್ಲ. ಬೇರೆ ಉಪವಾಸಗಳಿಲ್ಲ. ಪ್ರತ್ಯೇಕವಾದ 

ತೀರ್ಥಯಾತ್ರೆಗಳಿಲ್ಲ. ಇತರವಾದ ಪುಣ್ಯಕ್ಷೇತ್ರಗಳೂ ಇಲ್ಲ. ಪತಿಗಿಂತಲೂ ಸ್ವರ್ಗ 

ಸುಖವಿಲ್ಲ; ಹೀಗೆಯೇ ಮಾತನಾಡುತ್ತಿದ್ದಾಗಲೇ ಬೆಳಗಿನಝಾವದ ಕೋಳಿಯು 

ಕೂಗಿಬಿಟ್ಟಿತು. 


ಗೃಹಿಣಿಯರಾದ ಸೋದುಯರಿರಾ: ಈ ದಿನ ನಾನು ಎಷ್ಟು ಆನಂದದಿಂದಿರು 

ವೆನೆಂಬುದನ್ನು ಅನುಭವಿಗಳಾದ ನೀವೇ ಊಹಿಸಿಕೊಳ್ಳಬೇಕಲ್ಲದೆ ಅದನ್ನು ಮಾತಿನಿಂದ 

ಹೇಳಲಾಗುವುದಿಲ್ಲ. ಯಾವ ರಮಣಿಯು, ಪತಿಯ ಆದರಕ್ಕೆ ಪಾತ್ರಳಾಗಿ, ಪತಿಯೇ 

ಸರ್ವಸ್ವವೆಂದು ನಂಬಿ ಪತಿದೇವನನ್ನು ಅನವರತವೂ ಎಡೆಬಿಡದೆ ಪತಿಭಕ್ತಿಪರಾಯಣ 

ಳಾಗಿರುವಳೋ ಅಂತಹ ರಮಣಿಯಸುಖದ ಮುಂದೆ ಇತರ ವಿಧವಾದ ಪ್ರಾಪಂಚಿಕ 

ಸುಖಗಳನ್ನು ತೃಣದಂತೆ ಭಾವಿಸಬೇಕು. 


IV 

ಪ್ರಸ್ತವಾದಮೇಲೆ ಹದಿನೈದು ದಿನ ನಾನು ತೌರುಮನೆಯಲ್ಲಿಯೇ ಇದ್ದೆನು. 

ಇನ್ನೆಷ್ಟು ದಿನ ತಾನೇ ಹೆಣ್ಣು ಮಕ್ಕಳು ತೌರುಮನೆಯಲ್ಲಿರುವುದಕ್ಕಾದೀತು ? ಹೆಣ್ಣು 

ಮಕ್ಕಳು ಹುಟ್ಟುವುದು ಪರರ ಮನೆಯಲ್ಲಿರುವುದಕ್ಕಾಗಿಯೇ. ಗಂಡನ ಮನೆಗೆ 

ಹೋದಮೇಲೂ ಹೆಣ್ಣು ಮಕ್ಕಳಿಗೆ ತೌರುಮನೆಯ ಆಶೆಯಿದ್ದೇ ಇರುತ್ತದೆ. ಅದಕ್ಕಾ 

ಗಿಯೇ ಗಂಡನ ಮನೆಯಲ್ಲಿ ಸಂಸಾರಮಾಡುತ್ತಿರುವ ಹೆಣ್ಣುಮಕ್ಕಳನ್ನು ತಂದೆತಾಯಿ 

--------------------------------------------- 

16 ಕಾದಂಬರಿ ಸಂಗ್ರಹ 


ಗಳು ಆಗಾಗ್ಗೆ ಕರೆದುಕೊಂಡು ಹೋಗುತ್ತಲೇ ಇರುತ್ತಾರೆ. ಆದರೆ ಇನ್ನೊಂದು 

ವಿಶೇಷವುಂಟು; ಯಾರಿಗಾದರೂ ಆಗಲಿ, ತನ್ನ ಮಗಳನ್ನು ಒಬ್ಬನಿಗೆ ಕೊಟ್ಟ ಮೇಲೆ 

ಮಗಳೂ ಅಳಿಯನೂ ತಮ್ಮ ಮನೆಯಲ್ಲಿಯೇ ಇರಬೇಕೆಂಬ ಆಶೆ ಅವರಿಗೆ ಬಹಳವಾ 

ಗಿ ಇದ್ದೇ ಇರುತ್ತದೆ. ಮತ್ತು ಇದರಲ್ಲೂ ಧನಿಕರಾದವರಿಗಂತೂ ಈ ವಿಧವಾದ 

ಆಶೆಯು ಖಂಡಿತವಾಗಿ ಇದ್ದೇ ಇರುತ್ತದೆ. ಈ ಕಾರಣದಿಂದ ಮಗಳ ಮೇಲೆ ತಂದೆತಾ 

ಯಿಗಳ ಪ್ರೀತಿಯು ಎಷ್ಟಿರಬಹುದೆಂಬುದನ್ನು ನಮ್ಮ ವಾಚಕರು ತಮ್ಮ ತಮ್ಮ ಹೃದ 

ಯದಲ್ಲಿ ಭಾವಿಸಿಕೊಳ್ಳಲಿ? ಆದರೇನು ? ಈಶ್ವರನಿಯಾಮಕವನ್ನು ತಪ್ಪಿಸುವದಕ್ಕೆ 

ಆರಕೈಲೂ ಸಾಗಲಾರದು. ತಂದೆತಾಯಿಗಳಿಗೆ ಮಕ್ಕಳ ಮೇಲೆ ಅದೆಷ್ಟು ಪ್ರೀತಿ 

ಇದ್ದಾಗ್ಯೂ ಗೃಹಿಣಿಯಾಗಲರ್ಹಳಾದ ಮಗಳನ್ನು ಎಂದಾದರೊಂದುದಿನ ಪತಿಗೃಹಕ್ಕೆ 

ಕಳುಹಿಸಿಯೇ ಬಿಡಬೇಕಲ್ಲವೆ ? ಚಿಕ್ಕಂದಿನಿಂದ ಸಾಕಿದ ಮಗಳನ್ನು ತಮ್ಮ ಮನೆಯಿಂದ 

ಶಾಶ್ವತವಾಗಿ ಸತಿಗೃಹವಾಸಕ್ಕೆಂದು ಪ್ರಯಾಣಮಾಡಿ ಕಳುಹಿಸುವ ಸಮಯದಲ್ಲಿ 

ಮಾತಾಪಿತೃಗಳಿಗೆ ಎಷ್ಟು ವ್ಯಸನವಾಗಬಹುದು ? ಅದರೆ ಅವರು ಆಗಣಸ್ಥಿತಿಯಲ್ಲಿ 

ವ್ಯಸನಪಡುವುದು ಸರಿಯಾದುದಲ್ಲ. ಮಗಳೂ ಅಳಿಯನೂ ಅನ್ನೋನ್ಯವಾಗಿ ಸುಖ 

ದಿಂದಿರಲೆಂದೂ ಸತ್ಸಂತಿಯ ಅವರಿಗೆ ಪ್ರಾಪ್ತವಾಗಿ ಆಯುರಾರೋಗ್ಯೈಶ್ವರ್ಯಾದಿ 

ಗಳಿಂದ ಅವರು ಚಿರಕಾಲ ಜೀವಿಸಬೇಕೆಂದೂ ಹರಸಿ ಮಗಳಿಗೆ, ಸತೀಧರ್ಮಗಳನ್ನುಪ 

ದೇಶಿಸಿ ಕಳುಹಿಸಿಕೊಡುವುದು ಅವರ ಮುಖ್ಯ ಕರ್ತವ್ಯ. ಆದರೆ ಹೆಣ್ಣು ಮಗಳು 

ಪ್ರಯಾಣಮಾಡಿಕೊಂಡು ಪತಿಗೃಹಕ್ಕೆ ಹೋಗುವಾಗ ತಂದೆತಾಯಿಗಳು ಪಡುವ 

ವ್ಯಸನವು ಎಂತಹ ವ್ಯಸನವೆಂಬುದನ್ನು ಆಲೋಚಿಸೋಣ. ನಮಗೆ ರುಃಖಕಾಲದಲ್ಲಾ 

ಗಲೀ ವಿಶೇಷ ಸಂತೋಷಕಾಲದಲ್ಲಾಗಲೀ ಸ್ವಭಾವವಾಗಿ ಕಣ್ಣೀರು ಸುರಿವುದು ಸ್ವಭಾ 

ವವಷ್ಟೆ. ದುಃಖದಿಂದ ಸುರಿವ ಕಣ್ಣೀರಿಗೆ ಶೋಕಬಾಷ್ಪವೆಂದೂ ಆನಂದದಿಂದ ಸುರಿವ 

ಕಣ್ಣೀರಿಗೆ ಆನಂದಬಾಷ್ಪವೆಂದೂ ಹೆಸರು ಕೊಡಲ್ಪಟ್ಟಿರುವುದು. ಮಗಳನ್ನು ಕಳುಹಿ 

ಸುವಾಗ ಸುರಿವ ಕಣ್ಣೀರು ಎರಡು ವಿಧವಾದ ಬಾಷ್ಪಗಳಿಗೂ ಸಂಬಂಧಿಸಲ್ಪಟ್ಟುದು. 

ಮಗಳನ್ನು ಕಳುಹಿಸಬೇಕಲ್ಲಾ, ಎಂಬ ವ್ಯಸನವೂ; ನನ್ನ ಮಗಳು ಇನ್ನು ಮುಂದೆ 

ಪತಿಯೊಡನೆ ಸಂಸಾರ ಮಾಡಿಕೊಂಡು ಸುಖಿಸುವಳಲ್ಲಾ ಎಂಬ ಸಂತೋಷವೂ ಮಿಳಿತ 

ವಾಗುವುದರಿಂದ ಆಗಣಕಾಲದ ಚಿಂತೆಯು ಅಪರಿಮಿತವಾದುದೇಸರಿ. 

 

ನಮ್ಮ ತಂದೆತಾಯಿಗಳು ನನ್ನನ್ನು ಹರಪುರಕ್ಕೆ ಕರೆದುಕೊಂಡು ಬಂದು ಪತಿ 

ಗೃಹದಲ್ಲಿ ಬಿಟ್ಟು ವಿಹಿತವಾದ ನೀತಿಗಳನ್ನುಪದೇಶಿಸಿ ರಂಗಪುರಕ್ಕೆ ಪ್ರಯಾಣಮಾಡಿ 

ದರು. ಇಂದು ನನಗೆ ಬಹು ದುಃಖವಾಯಿತು. ನಮ್ಮ ತಾಯಿತಂದೆಗಳನ್ನು ನಾನೊಂದು 

------------------------------------------------

ನನ್ನ ಸಂಸಾರ 17 

ದಿನವೂ ಬಿಡಲಾರದಿದ್ದವಳು ಇಂದು ಅವರನ್ನು ಅಗಲಿರಬೇಕಾಗಿ ಬಂದಿತು. ಆದರೆ 

ಆ ನನ್ನ ದುಃಖವು ಬಹು ಕ್ಷಣಿಕವಾದುದಾಗಿದ್ದಿತು. ನಮ್ಮ ಯಜಮಾನರು ನನಗೆ 

ಎಷ್ಟೋ ಸಮಾಧಾನಗಳನ್ನು ಹೇಳಿ ನನ್ನ ವ್ಯಸನವನ್ನು ಕಮ್ಮಿ ಮಾಡಿದರು. ನಾನು 

ಕ್ರಮವಾಗಿ ಮನೆಗೆಲಸಗಳನ್ನು ಮಾಡುತ್ತಾ, ಮನೆಯವರೆಲ್ಲರಿಂದಲೂ ಒಳ್ಳೆಯವ 

ಳೆಂದು ಹೇಳಿಸಿಕೊಳ್ಳುತ್ತಿದ್ದೆನು. ನನಗೆ ಪತಿಗೃಹದಲ್ಲಿ ವಾಸಮಾಡುವದೂ ಅಲ್ಲಿ 

ಕಷ್ಟಪಟ್ಟು ಗೃಹಕಾರ್ಯಗಳನ್ನು ಚಟುವಟಿಕೆಯಿಂದ ಮಾಡುವುದೂ ಸ್ವರ್ಗಸುಖಕ್ಕೆ 

ಸಮಾನವಾದ ಸುಖವೇ ಸರಿ. ನಮ್ಮ ಮನೆಯಲ್ಲಿ ಈಗ ನಮ್ಮ ಅಮ್ಮನವರೂ ನಮ್ಮ 

ಭಾವನವರೂ (ಯಜಮಾನರ ಅಣ್ಣಂದಿರು) ನಮ್ಮ ಅಕ್ಕ (ಭಾವನವರ ಕುಟುಂಬ) 

ಮತ್ತು ಅವರ ಮಕ್ಕಳು, ನಮ್ಮ ತಾತನವರು, (ಇನ್ನು ಮೇಲೆ ನಮ್ಮ ತಾತನವರೆಂದರೆ 

ನೀಲಕಂಠಶಾಸ್ತ್ರಿಗಳು) ನಾವಿಬ್ಬರು, ಇಷ್ಟು ಮಂದಿ ಇದೇವೆ. ನಾನೇ ನಮ್ಮ ಅತ್ತೆಗೆ 

ಕಿರೀಸೊಸೆಯಾದ್ದರಿಂದ ಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದುದರಿಂದಲೂ ನನ್ನನ್ನು 

ಕಂಡರೆ ಅವರಿಗೆ ದಿನೇದಿನೆ: ಪ್ರೀತಿಯು ಹೆಚ್ಚುತ್ತಿತ್ತು. ಕಡಮೆಯವರೂ ನನ್ನ ವಿಷಯ 

ದಲ್ಲಿ ಎಷ್ಟೋ ಪ್ರೀತಿಯನ್ನಿಟ್ಟು ಕೊಂಡಿದ್ದರು. ನಾನು ಪ್ರತಿದಿನವೂ ಬೆಳಗಿನ ಐದು 

ಘಂಟೆಗೇ ಎದ್ದು ಕಸ, ಮುಸರೆ, ಉಪಕರಣಗಳ ಕೆಲಸಗಳನ್ನು ಏಳು ಘಂಟೆಯೊಳ 

ಗಾಗಿ ಮಾಡಿಕೊಂಡು ಆ ಮೇಲೆ ಊಟದ ಎಲೆಯನ್ನು ಹಚ್ಚುತ್ತ ಕುಳಿತುಕೊಳ್ಳು 

ವೆನು. ಮಧ್ಯಾಹ್ನ ಊಟವಾದ ನಂತರ ಎಲೆ ಎತ್ತಿ ಗೋಮಯವನ್ನು ಹಚ್ಚಿ ನಮ್ಮ 

ಅತ್ತೆಯವರೊಡನೆ ಕೊಳಕ್ಕೆ ಹೋಗಿ ಸೀನೀರನ್ನು ತುಂಬಿಕೊಂಡು ಮನೆಗೆ ಬರುವೆನು. 

ಬಳಿಕ ಒಂದೆರಡು ಘಳಿಗೆ ವಿಶ್ರಮಿಸಿಕೊಂಡ ಬಳಿಕ ನಮ್ಮ ಯಜಮಾನರು ನನಗೆ 

ಯಾವುದಾದರೂ ಪುಸ್ತಕವನ್ನು ತಂದು ಕೊಟ್ಟು ಒಂದೆರಡು ಪಾತಗಳನ್ನು ಹೇಳಿ 

ಕೊಡುವರು. ಸಾಯಂಕಾಲವಾದ ನಂತರ ದೇವರ ಮನೆಗೆ ದೀಪವನ್ನು ಹತ್ತಿಸಿ 

ದೇವರ ಸ್ತೋತ್ರಗಳನ್ನು ಹೇಳುತ್ತಿದ್ದು ಮನೆಯವರಿಗೆಲ್ಲರಿಗೂ ಊಟವಾದ ನಂತರ 

ನಾನೂ ಊಟಮಾಡಿ ರಾತ್ರಿ ಹತ್ತು ಘಂಟೆಯಾದ ಬಳಿಕ ಮಲಗುತ್ತಿದ್ದೆನು. ರಾತ್ರಿ 

ಮಲಗುವುದಕ್ಕೆ ಮುಂಚೆ ನಮ್ಮ ಯಜಮಾನರು ಯಾವುದಾದರೂ ಅಪೂರ್ವವಾದ, 

ಸತೀಧರ್ಮ ಬೋಧಕವಾದ ಉಪಾಖ್ಯಾನಗಳನ್ನು ಓದಿ ಹೇಳುತ್ತಿದ್ದರು. ನಾವು 

ಬಳಿಕ ದೈವಭಕ್ತಿಯುತವಾದ ನಿರ್ಮಲ ಮನಸ್ಸಿನಿಂದ ನಿದ್ದೆ ಮಾಡುವೆವು. 


ಈ ರೀತಿಯಾಗಿ ನಾವು ಸುಖದಿಂದ ಆರು ತಿಂಗಳುಕಾಲ ಅನ್ಯೋನ್ಯವಾಗಿ 

ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದೆವು. ಇಷ್ಟು ಹೊತ್ತಿಗೆ ನಾನು ಅಂತರ್ವತ್ನಿ 

ಗರ್ಭಿಣಿಯಾಗಿರುವೆನೆಂಬ ವಿಷಯವು ನಮ್ಮ ತಾಯಿತಂದೆಗಳಿಗೆ ತಿಳಿದು ಅವರು ನನ್ನನ್ನು 

-----------------------------------------------

18 ಕಾದಂಬರಿ: ಸಂಗ್ರಹ 


ಕರೆವುದಕ್ಕೆ ಬಂದರು. ಲೋಕಾಚಾರಕ್ರಮವಾಗಿ ನಮ್ಮ ತಾತನವರೂ, ನನ್ನನ್ನು 

ತೌರುಮನೆಗೆ ಪ್ರಯಾಣಮಾಡಿಸಿ ಕಳುಹಿಸಿಕೊಟ್ಟರು. ನನಗೇನೋ ತೌರುಮನೆಗೆ 

ಹೋಗುವೆನೆಂಬ ಸಂತೋಷವು ಪೂರ್ಣವಾಗಿದ್ದಿತಾದರೂ ಸತಿದೇವನನ್ನು ಅಗಲಿ ಇರ 

ಬೇಕಾಗುವುದಲ್ಲಾ, ಎಂಬ ಚಿಂತೆಯೊಂದು ನನ್ನ ಮನಸ್ಸಿನಲ್ಲಿ ಸ್ಥಾನಮಾಡಿಕೊಂಡಿ 

ದ್ದಿತು. ಇದಕ್ಕಾಗಿ ನಾನು ನನ್ನ ಸ್ವಾಮಿಯನ್ನು ರಂಗಪುರಕ್ಕೆ ಬಂದಿರಬೇಕೆಂದು 

ಪ್ರಾರ್ಥಿಸಿಕೊಂಡೆನು. ಅವರು ಅದಕ್ಕೆ ಒಪ್ಪಲಿಲ್ಲ. ಆಗಿಂದಾಗ್ಗೆ ರಂಗಪುರಕ್ಕೆ ಬರು 

ತ್ತಿರುವೆನೆಂದು ಅವರು ಹೇಳಿದ ಮೇಲೆ ನನಗೆ ಮನಸ್ಸಮಾಧಾನವಾಯಿತು. ನಾನು 

ಸಂತೋಷದಿಂದ ತೌರುಮನೆಗೆ ಪ್ರಯಾಣಮಾಡಿದೆನು. ಅಲ್ಲಿ ನನ್ನ ತಾಯಿತಂದೆಗಳು 

ನನ್ನನ್ನು ಬಹು ಪ್ರೀತಿಯಿಂದ ಆದರಿಸುತ್ತಲೂ ನಾನು ಕೇಳಿದ್ದನ್ನು ತಂದುಕೊಡು 

ತ್ತಲೂ ಇದ್ದರು. ಬಳೆ ತೊಡಿಸುವುದು, ಅಕ್ಷತೆ, ಸೀಮಂತ ಮುಂತಾದ ಕಲಾಸಗಳು 

ವಿಹಿತವಾಗಿ ನೆರವೇರಿದುವು. ಎಂಟು ತಿಂಗಳು ತುಂಬುತ್ತಿದ್ದ ಹಾಗೆಯೇ ನನಗೆ ಸುಂದರ 

ವಾದ ಒಂದು ಗಂಡು ಮಗುವು ಜನಿಸಿತು. ನಮ್ಮ ತಂದೆತಾಯಿಗಳ ಆನಂದಕ್ಕೆ 

ಪಾರವೇ ಇಲ್ಲ. ನನಗೋಸ್ಕರ-ನನ್ನ ಸುಖಕ್ಕೋಸ್ಕರ-ನನ್ನ ಆರೋಗ್ಯಕ್ಕೋಸ್ಕರ 

ನೂರಾರು ರೂಪಾಯಿಗಳನ್ನು ವೆಚ್ಚ ಮಾಡಿದರು. ಈ ಶಿಶುಜನನವಿಚಾರವನ್ನು ಹರ 

ಪುರಕ್ಕೆ ತಿಳಿಸಿದಮೇಲೆ ಅಲ್ಲಿ ನಮ್ಮ ಮನೆಯವರು ತುಂಬಾ ಸಂತೋಷಪಟ್ಟು 

ಕೊಂಡರು. ಮತ್ತು ಬಯ ದ್ರವ್ಯ ವ್ಯಯದಿಂದ, ಜಾತಕರ್ಮ ನಾಮಕರಣಾದಿಗಳು 

ನೆರವೇರಿಸಲ್ಪಟ್ಟುವು. ಆದರೆ ಮಗುವ ಎರಡು ಮೂರು ದಿನ ಹಾಲನ್ನೇ ಕುಡಿಯಲಿಲ್ಲ. 

ಮನೆಯವರು ಬಹು ಗಾಬರಿಪಟ್ಟು ಏನೇನೋ ಔಷಧಿಗಳನ್ನೂ, ಸುವಾಸಿನೀ ಪ್ರಾರ್ಥನೆ 

ಯನ್ನೂ ಮಾಡಿದ ಮೇಲೆ ಮಗುವು ಸ್ವಚ್ಛವಾಗಿ ಆಡಿಕೊಂಡಿದ್ದಿತು. 


ನಾನು ಬಾಣಂತಿಯಾಗಿದ್ದಾಗ ನನ್ನ ತೌರುಮನೆಯಲ್ಲಿ ಅನೇಕ ಅನರ್ಥಗಳು 

ನಡೆದುಹೋದುವು. ಏನೆಂದರೆ ನಾನು ಎರಡು ತಿಂಗಳ ಬಾಣಂತಿಯಾಗಿದ್ದಾಗ ನನಗೆ 

ಜ್ವರಛಳಿಗಳು ಬರುವುದಕ್ಕೆ ಆರಂಭವಾಗಿ ಅನ್ನವೇ ಸೇರದೆ ಸುಸ್ತಾಗಿ ಮಲಗಿಬಿಡು 

ತ್ತಿದ್ದೆನು. ಮಗುವಿಗೂ ಆಗಿಂದಾಗ್ಗೆ ಆಲಸ್ಯವಾಗುತ್ತಲೇ ಇತ್ತು. ಮಗುವಿಗೆ ಆಲಸ್ಯ 

ವಾದಾಗಲೆಲ್ಲಾ ನನ್ನ ತಾಯಿಯು ಚಿಟಿಕಿಯನ್ನು ಹಾಕುತ್ತಿದ್ದರು. ನನಗೆ ಬಾಣಂತಿ 

ಯಲ್ಲಿ ಪ್ರಾಪ್ತವಾಗುತ್ತಿದ್ದ ಕಾಯಿಲೆಗಳನ್ನು ನೋಡಿ ಮೂಢರಾದ ನಮ್ಮ ತಂದೆ 

ತಾಯಿಗಳು ಇದು ದೈವದ ಕಾಟವೆಂದೂ ಸವತಿಯರು ಈ ರೀತಿ ಕಾಡುತ್ತಿದಾರೆಂದೂ 

ನಿರ್ಧರಿಸಿಬಿಟ್ಟರು. ಇವರ ಈ ಊಹೆಯು ನನಗೆ ಬಹು ಕಷ್ಟಕ್ಕೆ ಕಾರಣವಾಯಿತು. 

ಬೆಳಗೆದ್ದರೆ, ಆ ಮಂತ್ರವಾದಿ, ಈ ಮಂತ್ರವಾದಿ, ಈ ಔಷದ ಆ ವೈದ್ಯ, ಈ ದೇವರ 

------------------------------------------- 

ನನ್ನ ಸಂಸಾರ 19 

ಹರಿಕೆ, ಮುತ್ತೈದೆಯ ಪ್ರಾರ್ಥನೆ, ಇತ್ಯಾದಿ ಹಗರಣಗಳಿಂದ ನನಗೆ ದಿಕ್ಕೇ ತೋಚದೆ 

ಹೋಯಿತು. ನನಗೆ ದಿನೇದಿನೇ ನಿಶ್ಯಕ್ತಿಯೇ ಹೆಚ್ಚುತ್ತ ಬಂತು, ಮಗುವಿನ ವಿಷಯ 

ವಂತೂ ಹೇಳಲಶಕ್ಯ. ಈ ರೀತಿಯಾದ ಕಟಪಟೆಯಿಂದ ನನ್ನ ಬಾಣಂತನವು ಬೇಗ 

ಮುಗಿಯಲೇ ಇಲ್ಲ. ಮೂರನೇ ತಿಂಗಳಲ್ಲಿ, ಐದನೇ ತಿಂಗಳಲ್ಲಿ, ಏಳನೇ ತಿಂಗಳಲ್ಲಿ, 

ಕಳುಹಿಸಿಕೊಡಬೇಕೆಂದು ಹರಪುರದಿಂದ ಕಾಗದ ಬರುತ್ತಲೇ ಇತ್ತು. ಏಳು ತಿಂಗಳಾ 

ಗುವವರೆಗೂ ನನ್ನ ಬಾಣಂತನವೂ ಮುಗಿಯಲಿಲ್ಲ. ಹರಪುರಕ್ಕೂ ಹೋಗಲಿಲ್ಲ. 

ನನ್ನ ಔಷಧಪಥ್ಯಗಳಿಗಾಗಿ ನಮ್ಮ ತಂದೆಗೆ ಬಹಳ ದ್ರವ್ಯವು ವ್ಯಯವಾಯಿತು. ಸಾಲ 

ದುದಕ್ಕೆ ಇದೇ ಸಮಯದಲ್ಲಿ ನಮ್ಮ ತಂದೆಯು ನೋಡುತ್ತಿದ್ದ ಕೆಲಸವೂ ತಪ್ಪಿ 

ಹೋಯಿತು. ಈಗ ನಮ್ಮ ತಂದೆತಾಯಿಗಳಿಗೆ ಜೀವನಕ್ಕೆ ಬಹು ತೊಂದರೆಯೂ 

ಪ್ರಾಪ್ತವಾಯಿತು. ಅವರ ಕಷ್ಟವನ್ನು ನೋಡಲಾರದೆ ನನ್ನ ವಶಕ್ಕೆ ನಮ್ಮ ಮನೆಯ 

ವರು ಕೊಟ್ಟಿದ್ದ ಕೆಲವು ರೂಪಾಯಿಗಳನ್ನು ಕೊಟ್ಟು ಅವರ ತೊಂದರೆಯನ್ನು ತಪ್ಪಿಸ 

ಬೇಕಾಯಿತು. ಅಲ್ಲದೆ ನಮ್ಮ ತಂದೆಗೆ ಆಗ ಅನುಕೂಲವಿರಲಿಲ್ಲವಾದ್ದರಿಂದ ಮಗು 

ವಿಗೆ ನಾನೇ ಒಂದೆರಡು ಒಡವೆಗಳನ್ನು ನಮ್ಮ ಯಜಮಾನರ ಹಣದಿಂದಲೇ ಮಾಡಿಸಿ 

ಇಟ್ಟೆನು. ಇಂತಹ ಕಷ್ಟಕಾಲವು ನಮ್ಮ ತಂದೆಗೆ ಸಂಭವಿಸಿದ್ದಾಗ್ಯೂ ನಮ್ಮ ತಾಯಿಯು 

ಮಾತ್ರ ಕಷ್ಟದಲ್ಲಿ ಸಹಾಯವಾಗಲೆಂದು ಐವತ್ತೈದು ರೂಪಾಯಿಗಳನ್ನು ಯಾರಿಗೂ 

ಕಾಣದಂತೆ ಇಟ್ಟುಕೊಂಡಿದ್ದರು. ನನ್ನನ್ನು ಒಂಭತ್ತನೇ ತಿಂಗಳಲ್ಲಿ ನಮ್ಮ ಯಜಮಾ 

ನರೇ ಬಂದು ನಮ್ಮ ತಂದೆತಾಯಿಗಳನ್ನು ನನ್ನೊಡನೆ ಒಟ್ಟಿಗೆ ಹರಪುರಕ್ಕೆ ಕರೆದು 

ಕೊಂಡುಹೋದರು. ಹರಪುರಕ್ಕೆ ಬಂದಮೇಲೆ ನಮ್ಮ ತಾಯಿಯು ತಮ್ಮ ವಶದಲ್ಲಿದ್ದ 

ಐವತ್ತೈದು ರೂಪಾಯಿಗಳನ್ನು " ಯಾರಿಗೂ ತಿಳಿಯದಂತೆ ನಿನ್ನ ವಶದಲ್ಲಿಟ್ಟು 

ಕೊಂಡಿರು" ಎಂದು ಹೇಳಿ ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಬಹು ಗೂಢವಾಗಿ 

ನನ್ನ ಪೆಟ್ಟಿಗೆಯಲ್ಲಿಟ್ಟು ಕೊಂಡೆನು. 


ಶ್ರೀನಗರವು ಸುಪ್ರಸಿದ್ದವಾದ ಪಟ್ಟಣ. ಈ ಪಟ್ಟಣದ ಸೌಂದರ್ಯವು ಪ್ರೇಕ್ಷ 

ಕರ ಕಣ್ಮನಗಳನ್ನು ಮುಗ್ಧಮಾಡುತ್ತಿರುವುದು. ಈ ಊರಿನ ಸುತ್ತಳತೆಯು ಹತ್ತು 

ಮೈಲಿಯಾಗುವುದು. ಊರಿನ ಮಧ್ಯದಲ್ಲಿ ವಿಸ್ತಾರವಾದ ಧೂಮಶಕಟಮಂದಿರ 

(ರೈಲ್ವೆಸ್ಟರ್ಷ ) ವೊಂದುಂಟು. ಹರಪುರದಲ್ಲಿ ಬೆಳಗಿನ ಏಳು ಘಂಟೆಗೆ ಧೂಮಶಕಟವ 

ನ್ನೇರಿದರೆ ಹತ್ತು ಘಂಟೆ ಹೊತ್ತಿಗೆ ಶ್ರೀನಗರಕ್ಕೆ ತಲಪಬಹುದು. ಶ್ರೀನಗರದಲ್ಲಿ ಇಳಿ 

ಯದೆ ಮುಂದಕ್ಕೆ ಪ್ರಯಾಣಮಾಡಿದರೆ ಹನ್ನೆರಡು ಘಂಟೆಗೆ ರಂಗಪುರಿಗೆ ಹೋಗ 

------------------------------------------

20 ಕಾದಂಬರಿ ಸಂಗ್ರಹ 


ಬಹುದು. ಈ ವಿಧವಾದ ಪ್ರಯಾಣಸೌಕರ್ಯವನ್ನು ಕಲ್ಪಿಸಿರುವವರು ಚಿರಸ್ಮರಣೀ 

ಯರೇ ಸರಿ. ಈ ಧೂಮಶಕಟವು ನಮ್ಮ ದೇಶಕ್ಕೆ ಬರುವುದಕ್ಕೆ ಮುನ್ನ ನಮ್ಮ 

ದೇಶೀಯರ ಪ್ರಯಾಣಸ್ಥಿತಿಗಳು ಅತ್ಯಂತ ಕಷ್ಟಕರಗಳಾಗಿದ್ದುವು. ಒಂದೂರಿನಿಂದ 

ಇನ್ನೊಂದೂರಿಗೆ ಹೋಗಬೇಕಾದರೆ ಮಾರ್ಗಗಳೇ ಸರಿಯಾಗಿರಲಿಲ್ಲ. ಒಂದೊಂದು 

ಗಾಡಿಗೆ ಎಷ್ಟೋ ಬಾಡಿಗೆಯನ್ನು ಕೊಡಬೇಕಾಗುತ್ತಿದ್ದಿತು. ಇಷ್ಟು ಕಷ್ಟದಿಂದ 

ಪ್ರಯಾಣಮಾಡಿಕೊಂಡು ಹೋಗುವಾಗ ಮಧ್ಯಮಾರ್ಗದಲ್ಲಿ ಕಳ್ಳಕಾಕರ ಭೀತಿ 

ಬೇರೆ. ಮತ್ತು ವಿಶೇಷವಾದ ಪದಾರ್ಥಗಳನ್ನು ದೂರ ದೇಶಕ್ಕೆ ಸಾಗಿಸುವುದಕ್ಕೆ ಆಗು 

ತ್ತಲೇ ಇರಲಿಲ್ಲ. ಈ ಕಾರಣದಿಂದ ಅಲ್ಲಲ್ಲಿ ಬೆಳೆದ ಧಾನ್ಯಾದಿಗಳು ಅಲ್ಲಲ್ಲಿಯೇ 

ಉಳಿದುಕೊಳ್ಳುತ್ತಿದ್ದುವಲ್ಲದೆ ನಮಗೆ ಆವಶ್ಯಕವಾಗಿ ಬೇಕಾಗುವ, ದೂರದೇಶದಲ್ಲಿ 

ದೊರೆವ ಪದಾರ್ಥಗಳು ನಮಗೆ ದೊರಿಯುವುದು ಕಷ್ಟವಾಗಿದ್ದಿತು. ಮತ್ತು ದೂರ 

ದೇಶದೊಡನೆ ಆಗ ವ್ಯಾಪಾರವೆಂಬುದು ಶಶವಿಷಾಣ ಪ್ರಾಯವಾಗಿದ್ದಿತು. ಕ್ಷಾಮಡಾ 

ವುರಾದಿಗಳು ದೇಶದಲ್ಲಿ ಪ್ರಾಪ್ತವಾದಾಗ ಆಗಣಕಾಲದ ಕಷ್ಟವನ್ನು ವರ್ಣಿಸತೀರದು. 

ಜನರಿಗೆ ಯಾವ ವಿಧದಲ್ಲಿಯೂ ಸರಿಯಾದ ಅನುಕೂಲ್ಯಗಳಿರಲಿಲ್ಲ. ಅಂಚೆಮನೆ 

ಬಂದಮೇಲೂ ಗಾಡಿಯ ರಸ್ತೆ ಬಂದಮೇಲೆಯೂ ಮೇಲೆ ವಿವರಿಸಿದ ಕಷ್ಟಗಳು ಸ್ವಲ್ಪ 

ಮಟ್ಟಿಗೆ ಕಮ್ಮಿಯಾದುವು. ಸರ್ವತ್ರವಿಸ್ತೃತಗತಿಯುಳ್ಳ ಈ ಧೂಮಶಕಟವು ಬಂದ 

ಮೇಲಂತೂ ದೇಶಕ್ಕೆ ಎಷ್ಟೋ ಸುಖವುಂಟಾಯಿತು. ದೇಶದ ಮೇಲೆ ವ್ಯಾಪಾರಾದಿ 

ಗಳು ವಿಶೇಷವಾಗಿ ಅಭಿವೃದ್ಧಿಯಾದುವು. ವಾಚಕರೆ ! ಪ್ರಪಂಚದ ಎಲ್ಲಾ ಕಡೆ 

ಯಲ್ಲೂ ದೊರೆಯಬಹುದಾದ ಸಮಸ್ತ ವಿಧವಾದ ಪದಾರ್ಥಗಳೂ ಒಂದೇ ಊರಿನಲ್ಲಿ 

ಯಾವಕಾಲದಲ್ಲಿಯೂ ಸಿಕ್ಕ ಬಹುದಾದ ಚಮತ್ಕಾರವು ಧೂಮಶಕಟದ ಮಹಿಮೆ 

ಯಲ್ಲವೆ ! ಆಸೇತ ಹಿಮಾಚಲಪರ್ಯಂತವಾಗಿ ಪ್ರಸರಿಸಿರತಕ್ಕ ಹಳ್ಳಿ-ನಗರಗಳಲ್ಲೆಲ್ಲೆ 

ಲ್ಲಿಯೂ ಒಂದೇ ವಿಧವಾಗಿ ಪದಾರ್ಥಗಳ ಧಾರಣೆಯು ಮಾರ್ಪಟ್ಟಿರುವುದು ಹೊಗೇ 

ಗಾಡಿಯ ಪ್ರಚಾರದಿಂದಲೇ ಅಲ್ಲವೆ ? ಮೈಲಿಯೊಂದಕ್ಕೆ ಎರಡೇ ಕಾಸಿನಂತೆ ದೇಶದ 

ಯಾವ ಕಡೆಯಲ್ಲಿ ಸುತ್ತುವುದಕ್ಕೂ ಅನುಕೂಲವನ್ನುಂಟುಮಾಡಿರುವುದು ರೈಲೇ 

ಅಲ್ಲವೆ ? ಯಾವನಾದರೂ ಪೂರ್ವಕಾಲದಲ್ಲಿ ಕಾಶೀ ಯಾತ್ರೆ ಮಾಡುವುದೆಂದರೆ ಅವನು 

ಪರಲೋಕಕ್ಕೆ ಹೋದಂತೆಯೇ ಸರಿ. ಏಕೆಂದರೆ ಯಾತ್ರಿಕರು ಕಾಲುನಡಗೆಯಲ್ಲಿ 

ವರ್ಷಾಂತರಕಾಲ ಕಷ್ಟ ಪಟ್ಟು ಕಾಶಿಗೆ ಸೇರಬೇಕಾಗಿದ್ದಿತು. ಮಾರ್ಗಮಧ್ಯದಲ್ಲಿ 

ಎಷ್ಟೋ ಭಯಂಕರವಾದ ದುಃಖಗಳಿದ್ದುವು. ಇಂತಹ ದುರ್ಗಮವಾದ ಕ್ಷೇತ್ರ 

ಪ್ರಯಾಣದಿಂದ ಹಿಂತಿರುಗುವುದು ಎಷ್ಟು ಹಿಂಸೆಯ ವಿಚಾರವಿರಬಹುದು. ಇಂಥಾ 

----------------------------------------------

ನನ್ನ ಸಂಸಾರ 21 

ಅವರ್ಣನೀಯ ವ್ಯಥೆಗಳನ್ನು ತಪ್ಪಿಸಿ ಸ್ವಲ್ಪವೇ ವೆಚ್ಚದಿಂದ ಒಂದೇ ಒಂದು ತಿಂಗಳೊ 

ಳಗಾಗಿ ಮಹಾಯಾತ್ರೆಗಳನ್ನು ಮಾಡಿಸಿ ಜನರನ್ನು ಪ್ರತಿಕ್ಷಣವೂ ಮುಕ್ಕ್ಯಂಗನಾ 

ಲಿಂಗನ ಸುಖಕ್ಕೆ ಭಾಗಿಗಳನ್ನಾಗಿ ಮಾಡುತ್ತಿರುವುದಾವುದು? ರೈಲುಗಾಡಿಯಲ್ಲವೋ ? 

ಇಂತಹ ರೈಲುಗಾಡಿಯನ್ನು ಕಂಡುಹಿಡಿದು ಲೋಕೋಪಕಾರಮಾಡಿದಂತಹ ಮಹಾ 

ತ್ಮನ ಬುದ್ಧಿಶಕ್ತಿಯು ಎಷ್ಟಿರಬಹುದು ? ಅರ್ಥಸಾಧನೆಗೆ ಮೂಲ ಮಂತ್ರದಂತಿರುವ 

ಧೂಮಶಕಟನಿರ್ಮಾಣ ಕ್ರಮವನ್ನು ಕುರಿತು ನಮ್ಮ ಸೋದರರು ವಿಮರ್ಶೆ ಮಾಡಲಿ ! 

ಇದರಂತೆಯೇ ಜಲಪಾತಗಳ ಮೂಲಕ ವಿದ್ಯುಚ್ಛಕ್ತಿಯನ್ನಾಕರ್ಷಿಸಿ ಹೊಗೆ ಹೊರಡ 

ದಿರುವ, ಎಣ್ಣೆಯನ್ನು ತುಂಬುವ ಮತ್ತು ಬತ್ತಿಯನ್ನಿಡುವ ಶ್ರಮವನ್ನು ಹೊಂದದೆ, 

ಒಬ್ಬರು ಹತ್ತಿಸಬೇಕೆಂಬ ತೊಂದರೆಯನ್ನುಂಟುಮಾಡದಿರುವ ದೀಪಗಳನ್ನು ನೋಡಿದರೆ 

ಬುದ್ದಿಗೆ ಎಂತಹ ಶಕ್ತಿ ಇದೆಯೆಂಬುದು ಎಲ್ಲರಿಗೂ ಗೊತ್ತಾಗುವುದಲ್ಲವೆ ? ಇಂತಹ 

ಸರ್ವೋತ್ತಮವಾಗ ಬುದ್ದಿಯನ್ನು ಪರಮಾತ್ಮನು ಸಮಸ್ತ ಮನುಷ್ಯರಿಗೂ ದಯಪಾಲಿ 

ಸಿರುವಾಗ ಅಂತಹ ಬುದ್ದಿಯಿಂದ ಎಷ್ಟು ಲೋಕೋಪಕಾರಮಾಡಬಹುದೆಂಬುದು 

ಸರ್ವರ ಗಮನಕ್ಕೂ ಬರಲಿ. ಅಸಂಖ್ಯ ಜನಸಂಖ್ಯೆಯುಳ್ಳ ಈ ಭೂಲೋಕದಲ್ಲಿ 

ಕೋಟಿಗೊಬ್ಬ ಮನುಷ್ಯನ ಬುದ್ದಿಯಾದರೂ, ರೈಲ್ವೆ, ವಿದ್ಯುಚ್ಛಕ್ತಿ ಮುಂತಾದ 

ನಿರ್ಮಾಣಕ್ರಮವನ್ನು ಹೊಸಹೊಸ ರೀತಿಯಿಂದ ವಿಧವಿಧ ವಸ್ತು ಜಾತದಿಂದ ಕಂಡು 

ಹಿಡಿವ ಶಕ್ತಿಯನ್ನು ಹೊಂದಿದುದಾದರೆ ಲೋಕದ ಪುಣ್ಯಕ್ಕೆ ಎಣೆಯೇ ಇಲ್ಲ. 


ಇಂತಹ ಸಮಸ್ತ ಕಲಾ ಕೌಶಲ್ಯದಿಂದ ಶ್ರೀನಗರವು ತುಂಬಲ್ಪಟ್ಟಿತು. 

ಅಲ್ಲದೆ ಇದು ರಾಜಧಾನಿ. ಮನೋಹರವಾದೀ ಪಟ್ಟಣದ ಮಧ್ಯಭಾಗದಲ್ಲಿ ಇಂದ್ರನ 

ಅರಮನೆಯನ್ನು ಮೀರಿಸುವ ಅರಮನೆಯೊಂದಿರುವುದು. ಚಂದ್ರಕಾಂತ ಶಿಲಾನಿರ್ಮಿತ 

ವಾದೀ ಅರಮನೆಯ ಮಹಾದ್ವಾರದ ಮುಂದುಗಡೆ ಒಂದು ಕ್ಷಣ ಯಾವನಾದರೂ 

ನಿಂತು ನೋಡಿದರೆ ಆ ಮನುಷ್ಯನ ಮನಸ್ಸಿನಲ್ಲಿ ಎಷ್ಟು ಯೋಚನೆಗಳಿದ್ದರೂ ಅವೆಲ್ಲವೂ 

ಮಲಿನವಾಗಿ ಅರಮನೆಯ ಸೌಂದರ್ಯವನ್ನು ಕುರಿತು ಯೋಚಿಸಲಾರಂಭವಾಗುವುದು. 

ಚಂದ್ರಕಾಂತ ಶಿಲೆಯಲ್ಲಿ ಕೆತ್ತಲ್ಪಟ್ಟು ಸುಂದರವಾಗಿ ಬಿಡಿಸಿ ನಿರ್ಮಿಸಿರುವ ವಿಧ ವಿಧ 

ದೇವ ಮೂರ್ತಿಗಳು ಮನಸ್ಸನ್ನು ಅಪಹಾರ ಮಾಡುವುವು. ಅರಮನೆಯ ಹೊರ ಸೊಬಗೇ 

ಇಂತಿರುವಲ್ಲಿ ಒಳಗಣ ವೈಭವವನ್ನು ಏನು ಹೇಳೊಣ, ಸುವರ್ಣ ಮಯಸ್ತಂಭಗ 

ಳಿಂದಲೂ ರತ್ನಮಯಕುಟ್ಟಮಗಳಿಂದಲೂ ವಿವಿಧ ಚಿತ್ರಗಳನ್ನೊಳಗೊಂಡಿರುವ ಮಹಾ 

ರಜತಮಯ ಭಿತ್ತಿಗಳಿಂದಲೂ, ಎಲ್ಲೆಲ್ಲಿ ನೋಡಿದರೂ ರತ್ನ ವೈಡೂರ್ಯ ಮರಕತ ವಿಕಾ 

ರಗಳಾದ ಪ್ರಾಂತಗಳೇ ಕಂಗೊಳಿಸುವ ಆಸ್ಥಾನವೂ, ಇದಕ್ಕಿಂತ ಶತಾಧಿಕ ಪ್ರಕಾಶಗ  

-----------------------------------------------

೨೨ ಕಾದಂಬರಿ ಸಂಗ್ರಹ 


ಳುಳ್ಳ ಅಂತಃಪುರಗಳಿಂದಲೂ, ಕಿರುಮನೆಗಳಿಂದಲೂ ಕೂಡಿದ ವಿಲಾಸ ಭವನಗಳೂ, 

ಶಿಲ್ಪಿಯ ಕಲಾನೈಪುಣ್ಯವನ್ನು ಚೆನ್ನಾಗಿ ವ್ಯಕ್ತಪಡಿಸುತ್ತಿದ್ದುವು. ಅರಮನೆಯ ಮುಂಗಡೆ 

ವಿವಿಧ ಫಲ ಪೂಷ್ಪದ್ರುಮಗಳಿಂ ಕಂಗೊಳಿಸುವ ಉದ್ಯಾನವನವೊಂದುಂಟು. ಇಂತಹ 

ಅರಮನೆಯ ಸುತ್ತಲೂ ದುರ್ಭೇದ್ಯವಾದ ಕೋಟೆಯಿರುವುದು. ಕೋಟೆಯ ಸುತ್ತಲೂ 

ಇರುವ ಪ್ರಾಂತಗಳಲ್ಲೆಲ್ಲಾ ಅಂಗಡಿಬೀದಿಗಳು, ಬ್ರಾಹ್ಮಣರ ಅಗ್ರಹಾರಗಳೂ, ಅಗ್ರಹಾ 

ರಗಳಿಗೆ ದೂರವಾಗಿ ಇತರ ಜಾತಿಯವರ ಬೀದಿಗಳೂ ಇರುವುವು. ಅಲ್ಲದೆ ಧನಿಕರನೇಕರ 

ವಿಲಾಸ ಭವನಗಳೂ ಮಹೋನ್ನತ ಹರ್ಮ್ಯಗಳಿ೦ ವಿರಾಜಿತವಾದ ಮಂದಿರಗಳೂ ಈ 

ಪಟ್ಟಣದಲ್ಲಿ ಅಸಂಖ್ಯಾಕವಾಗಿ ರಾರಾಜಿಸುತ್ತಿರುವುವು. 


ಇಂತಹ ನಗರದಲ್ಲಿ ವಾಸಮಾಡಲು ಆರಿಗೆ ತಾನೆ ಇಷ್ಟವಿರದು? ಯಾರು 

ತಾನೇ ಈ ನಗರದ ಸೌಂದರ್ಯಕ್ಕೆ ಬೆರಗಾಗದಿದ್ದಾರು? ಯಾರಿಗೆತಾನೇ ವಿಲಾಸಗಳಲ್ಲಿ 

ಅಭಿಲಾಷೆಯಿಲ್ಲ? ಸರ್ವಸಂಗಪರಿತ್ಯಾಗ ಮಾಡಿದ ವಿರಾಗಿಯೇ ಈ ವಿಧವಾದ ವಿಲಾಸಗ 

ಳಿಗೆ ಸೋತುಬಿಡುವನೆಂದ ಮೇಲೆ ಅಜಿತೇಂದ್ರಿಯರಾದವರ ಪಾಡು ಹೇಗಿರಬಹುದು? 

"ಏಕೋವಾಸಃ ಸತ್ಯನೇವಾ ವನೇವಾ. '' 


ನಮ್ಮ ತಂದೆ ತಾಯಿಗಳು ನಮರಿನಲ್ಲಿ (ಹರಪುರದಲ್ಲಿ) ಒಂದೆರಡು ತಿಂಗ 

ಳಿದ್ದು ರಂಗಪುರಕ್ಕೆ ಪ್ರಯಾಣ ಮಾಡಿದರು. ಅವರು ಹರಪುರದಲ್ಲಿದ್ದಾಗಲೇ ನಮ್ಮ 

ಮನೆಯಲ್ಲಿ ಕೊಂಚ ಕೊಂಚ ಗೃಹ ಕಲಹಗಳಿಗೆ ಅಂಕುರವಾಗಿದ್ದಿತು. ನನ್ನ ತಂದೆ 

ತಾಯಿಗಳು ಪ್ರಯಾಣ ಮಾಡಿದಮೇಲೆ ಆ ಅಂಕುರವು ಸಣ್ಣ ಸಸಿಯಾಗಿ ಪರಿಣಮಿಸಿತು. 

(ನನ್ನ ಓರಗಿತ್ತಿಯನ್ನು ಇನ್ನು ಮೇಲೆ ಅಕ್ಕನೆಂದು ಸಂಬೋಧಿಸುತ್ತಾ ಬರುವೆನು.) ನನ್ನ 

ಅಕ್ಕನಿಗೆ ಎರಡು ಗಂಡುಮಕ್ಕಳುಗಳಿವೆ. ನನ್ನ ಮಗುವಿಗೂ ಈಗ ಹತ್ತು ತಿಂಗಳಾಗಿದೆ 

ಯೆಂಬುದು ನಮ್ಮ ಸೋದರಿಯರಿಗೆ ತಿಳಿದೇ ಇದೆ. ನಮ್ಮ ಅಮ್ಮನವರು ನಮ್ಮ ತಾತನ 

ವರ ಸಹಾಯಕ್ಕಾಗಿ ಅವರ ಜತೆಯಲ್ಲೇ ಯಾವಾಗಲೂ ಇರಬೇಕಾಗಿದ್ದುದರಿಂದಲೂ, 

ತಾತನವರು ನಿಯತವಾಗಿ ಶ್ರೀ ನಗರದಲ್ಲಿ ವಾಸಮಾಡಬೇಕಾಗಿದ್ದುದರಿಂದಲೂ, 

ಇದುವರಿಗೆ ನಮ್ಮ ಅಕ್ಕನು ಒಬ್ಬಂಟಿಗರಾಗಿದ್ದುದರಿಂದಲೂ, ನಮ್ಮ ಅತ್ತಮ್ಮನವರು 

ಶ್ರೀ ನಗರದಲ್ಲೂ ನಮ್ಮ ಅಕ್ಕನು ಹರಪುರದಲ್ಲೂ, ವಸಿಸುತ್ತಾ ಆಗಿಂದಾಗ್ಗೆ ಇಬ್ಬರೂ 

ಒಂದೊಂದು ಕಾಲದಲ್ಲಿ ಒಂದೇ ಕಡೆಯಲ್ಲೇ ಇರುತ್ತಲೂ ಇದ್ದರು. ನಮ್ಮ ತಾತನವರು 

ಆಗಿಂದಾಗ್ಗೆ ಶ್ರೀ ನಗರದಿಂದ ಹರಪುರಕ್ಕೆ ಬರಬೇಕಾಗುತ್ತಿದ್ದುದರಿಂದ ಸಂಸಾರ 

ಸ್ಥಿತಿಯು ಹೀಗೆಯೇ ಇತ್ತು. 

----------------------------------------------

ನನ್ನ ಸಂಸಾರ ೨೩ 

ನಮ್ಮ ತಾತನವರಿಗೆ ಶ್ರೀ ನಗರದಲ್ಲಿ ಈಗ ಐವತ್ತು ರೂಪಾಯಿ ತಲಬು ಬರು 

ತಿತ್ತು. ನಮ್ಮ ಭಾವನವರಿಗೆ ಹರಪುರದಲ್ಲಿ ಮೂವತ್ತು ರೂಪಾಯಿಗಳು ತಲಬುಳ್ಳ 

ಪ್ರಧಾನೋಪಾಧ್ಯಾಯರ ಕೆಲಸವಿದ್ದಿತು. ನಮ್ಮ ಯಜಮಾನರಿಗೆ ಹತ್ತು ರೂಪಾಯಿ 

ಗಳುಳ್ಳ ಸಣ್ಣ ನೌಕರಿಯೊಂದಿದ್ದಿತು. ನಾನೂ ನನ್ನ ಅಕ್ಕನೂ ಹರಪುರದಲ್ಲಿ ಸಂಸಾರ 

ಮಾಡುತ್ತಿದ್ದಾಗ ಒಬ್ಬರಮರ್ಜಿ ಇನ್ನೊಬ್ಬಳಿಗೆ ಸರಿಬೀಳುತ್ತಿರಲಿಲ್ಲ. ಆಹಾರ ವ್ಯವ 

ಹಾರಗಳಲ್ಲೂ ಶಿಶು ಪೋಷಣಾದಿ ಕಾರ್ಯಗಳಲ್ಲೂ ನಮ್ಮ ಅಕ್ಕನು ವಿಶೇಷ ಪಕ್ಷ 

ಪಾತ ಮಾಡುತಿದ್ದರು. ನಾನು ಕಿರೀ ಸೊಸೆಯಾದ್ದರಿಂದ ಅಷ್ಟು ಸ್ವಾತಂತ್ರವಿ 

ಲ್ಲದ್ದರಿಂದಲೂ ನನ್ನ ಅಕ್ಕನು ಹೇಳಿದಂತೆ ಕೇಳುತಿದ್ದೆನು. ಆದರೆ ಒಂದೆರಡು ವಿಚಾರ 

ಗಳು ತಿಳಿದಮೇಲೆ ನನಗೆ ನನ್ನ ಅಕ್ಕನಮೇಲೆ ವಿಶೇಷ ಸ್ಪರ್ಧೆಯುಂಟಾಯಿತು. ಕೆಲಸ 

ಬೊಗಸೆಗಳನ್ನು ನಾನೇ ಮಾಡಲೆಂಬ ಅಭಿಪ್ರಾಯದಿಂದ ನನ್ನ ಅಕ್ಕನು ಕೆಲವುದಿನ ಕೆಲ 

ಸಗಳನ್ನು ನನ್ನ ಪಾಲಿಗೆ ಬಿಟ್ಟು ತಾವು ಅಡಿಗೆ ಕೆಲಸವನ್ನು ಇಟ್ಟು ಕೊಂಡರು. ಅದರಂತೆ 

ನಾನೂ ನಡೆಯುತ್ತಿದ್ದನು. ಆದರೊಂದು ದಿನ ನಾನು ಉಪಕರಣವನ್ನು ತೊಳೆದು ಒಳ 

ಗಿಡುವುದಕ್ಕೆಂದು ಬಂದೆನು. ಆಗ ಅಕ್ಕನವರು ಮಕ್ಕಳಿಗೆ ಹಾಲು ಕಾಸಿ ಕೆಳಗಿಳಿಸುತ್ತಿ 

ದ್ದರು. ನಾನು ನನ್ನ ಮಗುವಿಗೆ ಹಾಲು ಹಾಕಬೇಕೆಂದು ಆಗಲೇ ಹಾಲನ್ನು ಕೇಳಿದೆನು. 

ಒಂದು ಪಂಚಪಾತ್ರೆಯಲ್ಲಿದ್ದ ಹಾಲನ್ನು ಅಕ್ಕನು ನನ್ನ ವಶಕ್ಕೆ ಕೊಟ್ಟರು. ಅದನ್ನು 

ತೆಗೆದು ಕೊಂಡು ನೋಡಲು ತುಂಬಾ ನೀರು ಬೆರಸಿದ್ದಂತೆ ತೋರಿತು. ಬಳಿಕ ನಾನು 

ಅದನ್ನು ಅವರಿಗೇ ಕೊಟ್ಟು ಬೇರೆ ಪಾತ್ರೆಯಲ್ಲಿದ್ದ ಹಾಲನ್ನು ಕೊಡಬೇಕೆಂದು ಕೇಳಿ 

ದೆನು, ಅವರಿಗೆ ಅಷ್ಟಕ್ಕೇ ಕೋಪ ಬಂದು ಹಾಲಿನ ಪಾತ್ರೆಯನ್ನು ಎಸೆದು ಬಿಟ್ಟರು. 

ಅದನ್ನು ನೋಡಿ ನನಗೆ ಬಹು ದುಃಖವಾಯಿತು. ಅಂದಿನಿಂದ ಅವರು ನಾನು ಮಾಡತಕ್ಕ 

ಕೆಲಸಗಳಲ್ಲಿ ಏನಾದರೊಂದು ತಪ್ಪನ್ನು ಕಂಡು ಹಿಡಿಯುತ್ತಲೇ ಬಂದರು. ನಾನು ಸಹಿ 

ಸುವ ವರೆಗೂ ಸಹಿಸುತ್ತಿದ್ದೆನು. ಕ್ರಮೇಣ ನನಗೆ ಸಹನೆಯು ಕಮ್ಮಿಯಾಗುತ್ತ 

ಬಂದಿತು. ನಮ್ಮ ಅಕ್ಕನವರ ಈ ವರ್ತನಗಳನ್ನು ನಾನು ನಮ್ಮ ಯಜಮಾನರೊ 

ಡನೆ ಏಕಾಂತದಲ್ಲೊಂದು ದಿನ ಹೇಳಿದೆನು. ಅವರು ಅದನ್ನು ಗಮನಿಸದೆ ನನ್ನನ್ನೇ ಬೈದು 

ಹಿರಿಯರು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕೆಂದು ಅಂದುಬಿಟ್ಟರು. ನನಗೆ ಅದನ್ನು 

ಕೇಳಿ ಆಕಾಶವೇ ಬಿದ್ದು ಹೋದಂತಾಯಿತು. ಇದೇರೀತಿ ಇನ್ನು ಮುಂದೆ ಪಕ್ಷಪಾತ 

ಗಳೂ ಅಂತಃ ಕಲಹಗಳೂ ಹೆಚ್ಚುತ್ತ ಹೋದುವು. ಇದು ನಮ್ಮ ಯಜಮಾನರಿಗೆ ತಿಳಿದು 

ಕೆಲವು ತಿಂಗಳು ರಜವನ್ನು ಪಡೆದು ಶ್ರೀ ನಗರಕ್ಕೆ ಹೊರಟು ಹೋದರು. ಅವರ 

ಮನಸ್ಸಿನಲ್ಲಿ ಹರಪುರವನ್ನು ಬಿಟ್ಟು ಶ್ರೀ ನಗರದಲ್ಲೇ ಇದ್ದರೆ ಸಂಸಾರದಲ್ಲಿ 

----------------------------------------------

24 ಕಾದಂಬರೀ ಸಂಗ್ರಹ 


ಕಲಹಗಳು ಹುಟ್ಟಲಾರದೆಂದು ಅಭಿಪ್ರಾಯವಿದ್ದುದರಿಂದ ಅದಕ್ಕಾಗಿಯೇ 

ಶ್ರೀನಗರಕ್ಕೆ ಹೊರಟು ಹೋದರು. 


ಈಗ ಹರಪುರದಲ್ಲಿ ನಾನು ನನ್ನ ಅಕ್ಕ ಅವರ ಸಂಸಾರ, ನಮ್ಮ ಭಾವನವರು 

ಇಷ್ಟು ಮಂದಿ ಉಳಿದುಕೊಂಡೆವು. ನಮ್ಮ ಭಾವನವರು ಒಳ್ಳೆ ಸರಳ ಹೃದಯರು. 

ಅಲ್ಲದೆ ತುಂಬಾ ಸಾಧುಗಳು. ಒಬ್ಬರನ್ನು ಒಂದು ದಿನ ಗದರಿಸಿ ಕೊಳ್ಳುವವ 

ರಲ್ಲ. ಇಂತಹ ಸುಗುಣಿಗಳಾದ ಭಾವನವರಿಗೆ ನನ್ನ ಮತ್ತು ಅಕ್ಕನ ಅಂತಃಕಲಹಗಳು 

ತಿಳಿಯದೆ ಹೋಗಲಿಲ್ಲ. ಚಾಡಿಕೋರರು ಹೇಳಿದ ಮಾತನ್ನು ಕೇಳಿ ಅದರಂತೆ ನಡೆಯುವ 

ಹುಚ್ಚು ನಮ್ಮ ಭಾವನವರಲ್ಲಿ ಇಲ್ಲದ್ದರಿಂದಲೇ ನನ್ನ ಮೇಲೆ ನನ್ನ ಅಕ್ಕನು ವಿಧ ವಿಧ 

ವಾಗಿ ಹೇಳಿದ ದೂರುಗಳನ್ನು ಅವರು ಮನಸ್ಸಿಗೆ ನಿಜವೆಂದು ತಿಳಿದುಕೊಳ್ಳಲಿಲ್ಲ. ನಮ್ಮ 

ಭಾವನವರಿಗೆ ನಮ್ಮ ಯಜಮಾನರನ್ನು ಕಂಡರೆ ತುಂಬಾ ಪ್ರೀತಿ ಇದ್ದಿತು. ಅಲ್ಲದೆ 

ಅವರಿಗೆ ಚಿಕ್ಕಂದಿನಲ್ಲೇ ಎರಡು ವಿವಾಹವಾಗಿ ಅದು ಕೈ ಸೇರದೆ ಹೋಗಿ ಇಂತಹ ಕಷ್ಟ 

ವುಂಟಾಯಿತಲ್ಲಾ ಎಂಬ ಯೋಚನೆಯು ನಮ್ಮ ಭಾವನವರ ಮನಸ್ಸಿಗೆ ಹೊಳೆದಾಗ 

ಎಷ್ಟೋ ಕನಿಕರವುಂಟಾಗುತ್ತಿತ್ತು. ಅದೇ ಕನಿಕರವೇ ನಾದಿನಿಯಾದ ನನ್ನ ಮೇಲೂ ಇದ್ದಿ 

ತೆಂದುಹೇಳಿದರೆ ಅತಿಶಯೋಕ್ತಿಯಾಗಲಾರದು. ನನ್ನ ಅಕ್ಕನು ಗೃಹಕೃತ್ಯದಲ್ಲಿ ತುಂಬಾ 

ಪಳಗಿದವರು. ಪತಿಸೇವೆಯಲ್ಲಿ ಬಾದ್ಧಾದರರು. ಒಂದು ದಿನವೂ ಭಾವನವರ ಮನಸ್ಸಿಗೆ 

ಆಯಾಸವಾಗದಂತೆ ನಡೆದು ಕೊಳ್ಳುತ್ತಿದ್ದರು. ಶಿಶುವೊಷಣೆಯಲ್ಲಿ ಅಕ್ಕನವರಿಗಿರುವ 

ಷ್ಟು ಅನುಭವವು ನನಗೆ ಇರಲಿಲ್ಲ. ಅಲ್ಲದೆ ಅಕ್ಕನು ಒಳ್ಳೆಯ ನೀತಿಪರರಾಗಿದ್ದರು. 

ಇಂತಹ ಸುಗುಣಿಗಳಾದ ಅಕ್ಕನವರು ನನ್ನ ಮೇಲೆ ಅವಿಶ್ವಾಸಿಗಳಾದುದು ನನ್ನ ದುರ್ದೈ 

ವವೋ ಅಥವಾ ನಾನು ಈ ಮನೆಗೆ ಪ್ರವೇಶ ಮಾಡಿದ ವೇಳೆಯ ಫಲವೋ ಹೇಳುವುದ 

ಕ್ಕಾಗುವುದಿಲ್ಲ. 


VI 

ನಮ್ಮ ಯಜಮಾನರು ಶ್ರೀನಗರಕ್ಕೆ ಹೊರಟುಹೋಗಿ ಎರಡು ತಿಂಗಳಾದರೂ 

ಅವರಯೋಗಕ್ಷೇಮವೇ ತಿಳಿಯಲಿಲ್ಲ. ಎರಡು ತಿಂಗಳು ಕಳೆದ ಮೇಲೆ ಅವರೊಂದು 

ಕಾಗದವನ್ನು ಬರೆದರು. ಆ ಕಾಗದದಿಂದ ನಮ್ಮ ಯಜಮಾನರಿಗೆ ಶ್ರೀನಗರದಲ್ಲೇ 

25 ರೂಪಾಯಿ ತಲಬುಳ್ಳ ಒಂದು ಶಾಲೋಪಾಧ್ಯಾಯರ ಕೆಲಸವಾಗಿದೆಯೆಂದು ತಿಳಿದು 

ಬಂದಿತು. ನಮ್ಮ ಯಜಮಾನರು ಶ್ರೀನಗರಕ್ಕೆ ಪ್ರಯಾಣ ಮಾಡಿದ ಮೇಲೆ ನಾನೂ 

ಅಕ್ಕನೂ ಸರಿ ಹೋಗಿಸಿಕೊಂಡು ಅನ್ನೋನ್ಯವಾಗಿ ಗೃಹಕಾರ್ಯಗಳನ್ನು ನಡೆಸಿ 

ಕೊಂಡು ಹೋಗುತ್ತಿದ್ದವು. ನಮ್ಮ ಮನೆಗೆ ಕಾಗದಬಂದ ೪ ದಿನದೊಳಗಾಗಿ ನಮ್ಮ 

----------------------------------------------

ನನ್ನ ಸಂಸಾರ 25 

ಯಜಮಾನರು ಹರಪುರಕ್ಕೆ ಬಂದು ನನ್ನನ್ನೂ ಜತೆಯಲ್ಲಿ ಕರೆದುಕೊಂಡು ಶ್ರೀನಗರಕ್ಕೆ 

ಪ್ರಯಾಣ ಮಾಡಿದರು. 


ಶ್ರೀನಗರದಲ್ಲಿ ನಮಗೆ ಸ್ವಂತಮನೆಯಿರುವ ವಿಷಯವು ಪಾಠಕಿಯರಿಗೆ ತಿಳಿದೇ 

ಇದೆ. ನಾವು ನಮ್ಮ ಮನೆಯಲ್ಲೇ ಇದ್ದುಕೊಂಡಿದ್ದೆವು. ನಮ್ಮ ಯಜಮಾನರು 

ಶ್ರೀನಗರದಲ್ಲಿರುವ ವಿಷಯದಲ್ಲಿ 'ನಮ್ಮ ತಾತನವರಿಗೆ ಅಭಿಪ್ರಾಯವಿರಲಿಲ್ಲ. ಆದರೂ 

ಹಠವಾದಿಗಳಾದ ನಮ್ಮ ಯಜಮಾನರು ತಾತನವರ ಮಾತನ್ನು ಅನಾದರಿಸಿ ಶ್ರೀನಗ 

ರದಲ್ಲೇ ಇದ್ದು ಬಿಟ್ಟರು. ನಮ್ಮ ಮನೆಯವರು ಈರೀತಿಮಾಡಿದುದು ಮುಂದೆ ಬಹು 

ಅನರ್ಥಕ್ಕೆ ಮೂಲವಾಯಿತು. 


ನಾವು ಶ್ರೀನಗರದಲ್ಲಿ ಒಂದು ವರ್ಷ ಕಾಲವನ್ನು ನೂಕಿದೆವು. ಅಷ್ಟರಲ್ಲಿ 

ನಮ್ಮ ಭಾವನವರಿಗೆ ಹರಪುರದಿಂದ ಶ್ರೀನಗರಕ್ಕೆ ವರ್ಗವಾಗಿ ಎಪ್ಪತ್ತು ರೂಪಾಯಿ 

ತಲಬುಳ್ಳ ಶಾಲಾಪರೀಕ್ಷಕರ (Schools' Assistant Inspector) ಅಧಿಕಾರವು 

ಪ್ರಾಪ್ತವಾಯಿತು. ಈ ವರ್ತಮಾನವನ್ನು ಕೇಳಿ ನಮ್ಮ ಮನೆಯವರೆಲ್ಲರಿಗೂ ತುಂಬಾ 

ಸಂತೋಷವುಂಟಾಯಿತು. ನನಗೂ ಸಹ ಇನ್ನು ಮೇಲೆ ಎಲ್ಲರೂ ಒಟ್ಟಿಗೆ ಇರಬಹು 

ದೆಂಬ ಆನಂದವು ಮಿತಿಮೀರಿ ಹೋಯಿತು. ಆದರೆ ನಮ್ಮೀ ಆನಂದವು ಮುಂದೆ 

ಕ್ರಮವಾಗಿ ಶಿಥಿಲವಾಗುತ್ತ ಬಂದಿತು. 


ಭಾವನವರೂ ಸಂಸಾರದೊಡನೆ ಶ್ರೀನಗರಕ್ಕೆ ಬಂದು ಕೆಲಸದ ಮೇಲೆ ದಾಖ 

ಲಾದರು. ಇದೇ ಸಮಯದಲ್ಲಿ ನಮ್ಮ ಅತ್ತಮ್ಮನವರೂ, ತಾತನವರೂ, ಕಾಶೀಯಾ 

ತ್ರಾದಿ ಮಹಾಯಾತ್ರೆಗೆ ಹೊರಡಬೇಕೆಂದು ಸಂಕಲ್ಪಿಸಿ ಅದರಂತೆ ಪ್ರಯಾಣಮಾಡಿ 

ದರು. ಈಗ ಮನೆಯಲ್ಲಿ ನಮ್ಮ ಮತ್ತು ಅಕ್ಕನ ಸಂಸಾರ ಮಾತ್ರವೇ ಇದೆ. 


ಮಾತೃ ಭೂಮಿಯಾದ ಹರಪುರದಲ್ಲಿ ಈಗ ಯಾರೂ ಇಲ್ಲ. ತಾತನವರಂತೂ 

ನಮ್ಮ ಯಜಮಾನರನ್ನು ಹರಪುರಕ್ಕೆ ಹೋಗುವ ವಿಷಯದಲ್ಲಿ ಎಷ್ಟೋ ಪ್ರೋತ್ಸಾಹಿ 

ಸಿದರು. ಅವರು ಲಕ್ಷಿಸಲಿಲ್ಲ. ಭಾವನವರು, ತಮ್ಮನನ್ನು ಕುರಿತು, ಹರಪುರಕ್ಕೆ 

ಹೋಗಿ ಯಾರಾದರೊಬ್ಬರು ಅಲ್ಲಿ ವಾಸಿಸದಿದ್ದರೆ ಮನೆ, ಭೂಮಿಗಳು ನೋಡುವವರಿ 

ಲ್ಲದಂತಾಗುತ್ತದೆ ಯಾದುದರಿಂದ ಅಲ್ಲಿ ಹೋಗಿರುವದು ಒಳ್ಳೆಯದೆಂದೂ ನಾವುಗಳು 

ಎಲ್ಲರೂ ಇಲ್ಲಿಯೇ ಇದ್ದು ಬಿಟ್ಟರೆ ಸ್ಥಳದಲ್ಲಿ ತುಂಬಾ ನಷ್ಟ ವುಂಟೆಂದೂ ಮುಂತಾಗಿ 

ನಮ್ಮ ಯಜಮಾನರೊಡನೆ ನೀತಿಯನ್ನು ಹೇಳಿದರು, ಭಾವನವರ ಪೂರ್ವಾಪರವಿವೇ 

ಚನೆಯುಳ್ಳವರು, ಅಲ್ಲದೆ ದೇಶಭಾಷೆಯಲ್ಲಿ ಪದವೀಧರರಾಗಿ, ಪಂಡಿತರೆನಿಸಿ ಕೊಂಡಿ 

ದ್ದರು. ಯುಕ್ತಾ ಯುಕ್ತ ವಿವೇಚನಾಜ್ಞಾನವು..ಅವರಿಗೆ ಸಂಪೂರ್ಣವಾಗಿದ್ದಿತು. 

----------------------------------------------

26 ಕಾದಂಬರೀ ಸಂಗ್ರಹ 


ಇಂತಹ ಅಂಣಂದಿರು ಎಷ್ಟೋ ವಿಧದಲ್ಲಿ ನೀತಿ ಹೇಳಿದಾಗ್ಯೂ ನಮ್ಮ ಯಜಮಾನರು 

ತಮ್ಮ ಹಟವನ್ನು ಬಿಡಲೇ ಇಲ್ಲ. ಇಷ್ಟಾದಮೇಲೆ ಭಾವನವರು ಅವರವರು ಮನಸ್ಸು 

ಬಂದಂತೆ ಅವರವರು ಇದ್ದು ಕೊಳ್ಳಲಿ; ಎಂದು ಹೇಳಿ ಸುಮ್ಮನಾಗಿಬಿಟ್ಟರು. 


ಅಕ್ಕನವರು ಶ್ರೀ ನಗರಕ್ಕೆ ಬಂದಮೇಲೆ ಒಳ್ಳೆಯ ಬಟ್ಟೆಗಳನ್ನು ಮಕ್ಕ 

ಳಿಗೆ ತೆಗೆಯುತ್ತಲೂ ತಾವು ಒಳ್ಳೆಯ ಸೀರೆಗಳನ್ನು ಟ್ಟುಕೊಳ್ಳುತ್ತಲೂ ಇದ್ದುದನ್ನು 

ನೋಡಿ ನಾನು ಅದರಂತೆ-ಅದಕ್ಕಿಂತಲೂ ಹೆಚ್ಚಾಗಿರಬೇಕೆಂದು ಯೋಚಿಸಿ ನಮ್ಮ 

ಯಜಮಾನರನ್ನು ಕೇಳಿಕೊಂಡೆನು. ನಾನು ಹೇಳಿದ ವೆಚ್ಚವು ನೂರು ರೂಪಾಯಿಗಳು 

ಮೀರಿದ ವ್ಯಯವಾಗಿದ್ದುದುಂದ ಅವರು ಅದನ್ನು ಮೊದಲು ಲಕ್ಷಿಸಲಿಲ್ಲ. ನಾನಾದರೂ 

ಅಷ್ಟಕ್ಕೆ ಸುಮ್ಮನಾಗದೆ, ನಮ್ಮ ಯಜಮಾನರನ್ನು ವಿಶೇಷವಾಗಿ ತೊಂದರೆ ಪಡಿಸು 

ವದು ಸರಿಯಲ್ಲವೆಂಬ ಧರ್ಮವನ್ನೂ ಗಣನೆಗೆ ತಾರದೆ ಮತ್ತು ಮತ್ತು ಮನಸ್ಸಿಗೆ 

ಬೇಸರವಾಗುವಂತೆ ಎರಡು ಮೂರು ಬಾರಿ ಯಜಮಾನರನ್ನು ಕೇಳಿ ಬಿಟ್ಟೆನು. ಈ 

ನನ್ನ ವರ್ತನದಿಂದ ಯಜಮಾನುಗೆ ಕೋಪಬಂದಿರಬಹುದು. ಆದರೆ ಅವರ ಸ್ವಭಾವವು 

ನನಗೆ ತಿಳಿಯಲಿಲ್ಲ. ಆದರೂ ಬಹು ಸಹನೆಯಿಂದ ಸುಮ್ಮನೆ ಇರುತ್ತಿದ್ದರು. ಅಂತೂ 

ನನ್ನ ಅಭಿಲಾಷೆಯು ನೆರವೇರಲಿಲ್ಲ. ನನಗೆ ದಿನೇದಿನೇ ಕಂಡಕಂಡ ಶ್ರೀಮಂತರ ಮನೆ 

ಹೆಂಗಸರನ್ನು ನೋಡಿದಾಗಲೆಲ್ಲಾ ಅವರ ಉಡುಪು, ಆಭರಣಗಳ ವಿಚಾರದಲ್ಲಿ ಹುರುಡು 

ಹತ್ತಿ ಅದಕ್ಕಿಂತಲೂ ಹೆಚ್ಚಾಗಿದ್ದು ಬಿಡಬೇಕೆಂಬ ಹುಚ್ಚು ಹೆಚ್ಚಾಗಿ ಹೋಯಿತು. 

ನನ್ನ ಮನಸ್ಸಮಾಧಾನ ಮಾಡಬೇಕಾಗಿದ್ದರೆ ಸುಮಾರು ಎರಡು ಸಾವಿರ ರೂಪಾಯಿ 

ಗಳನ್ನು ನಮ್ಮ ಯಜಮಾನರು ವೆಚ್ಚ ಮಾಡಬೇಕಾಗಿತ್ತು. ನನ್ನ ಮನಸ್ಸಿನಲ್ಲಾದರೋ, 

ಈ ಕೆಲಸವು ನಮ್ಮ ಯಜಮಾನರಿಂದ ಆಗುವದೇ, ಇಲ್ಲವೇ ಎಂಬ ಭಾವನೆಯು 

ಸಕೃದಾವರ್ತಿಯಾದರೂ ಸ್ಪುರಿಸದೆ ಹೋದುದು. ನಮ್ಮ ಯಜಮಾನರು ನಾನು 

ಹುರುಡಿನಸೀರೆ, ಒಡವೆಗಳ ಪ್ರಸ್ತಾಪವನ್ನೆತ್ತಿದಾಗಲೆಲ್ಲಾ ಎಷ್ಟೋ ವಿಧವಾಗಿ ನೀತಿ 

ಯನ್ನು ಹೇಳುತ್ತಿದ್ದರು. ಈ ಸೀರೆ, ಒಡವೆ ಮುಂತಾದ ಪದಾರ್ಥಗಳೆಲ್ಲವೂ ಮನ 

ಸ್ಸನ್ನು ಹಾಳುಮಾಡುತಕ್ಕುದಾಗಿಯೂ ಬುದ್ಧಿಯನ್ನು ಕೆಡಿಸಿತಕ್ಕುದಾಗಿಯೂ, 

ನಾಶವಾಗತಕ್ಕೆ ಸ್ವಭಾವವುಳುದಾಗಿಯೂ ಇರುವುದು. ಆದುದರಿಂದ ಸುಶೀಲೆಯಾದ 

ಹೆಂಗಸು ತುಚ್ಛವಾದ ಈ ಒಡವೆಗಳಿಗೆ ಆಶಿಸದೆ, ತನಗೆ ಅಮೂಲ್ಯಾಭರಣದಂತಿರುವ 

ಪತಿದೇವನ ಪ್ರಸಾದವನ್ನು ನಿರೀಕ್ಷಿಸುವುದೇ ಅವಳಿಗೆ ದೊಡ್ಡ ಒಡವೆಯೆಂದು ಎಷ್ಟೋ 

ನೀತಿಯನ್ನು ಹೇಳಿದರು. ನನಗೆ ಆಗ ಯಾವದೈವವು ಹಿಡಿದಿತ್ತೋ ತಿಳಿಯದು. ನಮ್ಮ 

ಯಜಮಾನರು ಹೇಳಿದ ನೀತಿಯೊಂದೂ ನನ್ನ ಮನಸ್ಸಿಗೆ ಹಿಡಿಯಲೇ ಇಲ್ಲ. ಹೇಳಿ 

----------------------------------------------

ನನ್ನ ಸಂಸಾರ 27 

ಹೇಳಿ ಬೇಜಾರಾಗಿ ನಮ್ಮ ಯಜಮಾನರು ನನ್ನ ವಿಷಯದಲ್ಲಿ ಬಹಳ ಅಸಮಾಧಾ 

ನವನ್ನು ಪ್ರದರ್ಶಿಸುತ್ತೆ ಬಂದರು. ಆಗಲೂ ನಾನು ಅವರ ಮನಸ್ಸಿಗೆ ಬಹು ಕ್ಷೋಭೆಯ 

ನ್ನುಂಟುಮಾಡುವುದನ್ನು ಬಿಡಲಿಲ್ಲ. ನನಗೆ ಆಗ ಏನೋ ಅಜ್ಞಾನವು ಕವಿದುಕೊಂಡು 

ನನ್ನ ಪತಿಯು ನನ್ನನ್ನು ಎಷ್ಟು ತಿರಸ್ಕರಿಸಿದರೂ ಅದನ್ನು ಲಕ್ಷಿಸದೆ ಪ್ರತಿಭಟಿಸುವಂ 

ತಹ ಮೌರ್ಖ್ಯವು ಪ್ರಾಪ್ತವಾಗಿದ್ದಿತು. 


ನನ್ನ ಹುಚ್ಚಾಟವನ್ನು ಕಂಡು ನನ್ನ ಅಕ್ಕ-ಭಾವ ಮುಂತಾದವರಿಗೆಲ್ಲಾ 

ಒಂದು ವಿಧವಾದ ಹಾಸ್ಯಕ್ಕೆ ಕಾರಣವಾಯಿತು. ನನ್ನ ಅಕ್ಕನ ಮನೆಯಲ್ಲಿ ಹೇಗೆಹೇಗೆ 

ವರ್ತಿಸುವರೋ ನಾನು ಹುರುಡಿನಂತೆ ಅವರ ಕೆಲಸಗಳನ್ನು ಅನುಕರಣಮಾಡತೊಡ 

ಗಿದೆನು. ಈ ನನ್ನ ಆಟವನ್ನು ನೋಡಿ ಅಕ್ಕನಿಗೆ ಕೋಪಬಂದಿತು. ಅವರು ನನಗೆಷ್ಟೋ 

ನೀತಿಯನ್ನುಪದೇಶಿಸಿದರು. ನನಗೆ ಒಂದೂ ಹಿಡಿಯಲೇ ಇಲ್ಲ. ಕ್ರಮ ಕ್ರಮವಾಗಿ 

ನನ್ನ ಅಕ್ಕನು ನನಗೆ ನೀತಿ ಹೇಳುವುದನ್ನು ಬಿಟ್ಟು ಬಿಟ್ಟರು. ಮತ್ತು ನನ್ನನ್ನು ಲಕ್ಷಿಸದೆ 

ಸಮಸ್ತವಾದ ಮನೆಗೆಲಸಗಳನ್ನೂ ತಾವೇ ನಿರ್ವಹಿಸುತ್ತ ಬಂದರು. ತಮ್ಮ ಮಗುವಿಗೆ 

ನೀರು ಹಾಕಬೇಕಾಗಿರಲಿ ತಾವೇ ಎರದು ಕೊಳ್ಳಬೇಕಾಗಲೀ ಯಾವುದಕ್ಕೂ ನನ್ನನ್ನು 

ಲಕ್ಷಿಸದೆ ಇನ್ನಾರಾದರೂ ಹೆಂಗಸರನ್ನು ಕರೆದು ಅವರ ಕೈಲಿಮಾಡಿಸುತ್ತಾ ಬಂದರು. 

ನನಗೆ ವಿಶೇಷ ಕೋಪಬಂದು ಕೆಲಸ ಮಾಡುವುದನ್ನು ಬಿಟ್ಟೇಬಿಟ್ಟು, ಕಸೂತಿ ಹಾಕುವ 

ದಕ್ಕೆ ಆರಂಭಮಾಡಿದೆನು, ನಮ್ಮ ಯಜಮಾನರೂ ನನಗೆ ಹೀಗಿರುವುದು ಸರಿಯಲ್ಲ 

ವೆಂದು ವಿಧವಿಧವಾಗಿ ಬೋಧಿಸಿದರು. ನನಗೆ ಯಾವುದೂ ಮನಸ್ಸಿಗೆರುಚಿಸಲಿಲ್ಲ. 

ನಾನು ಈರೀತಿ ಮಂಕುಹಿಡಿದವಳಂತೆ ಆದುದನ್ನು ಕಂಡು ಮನೆಯವರೆಲ್ಲರೂ ನನ್ನ 

ವಿಷಯದಲ್ಲಿ ಬಹುವಾಗಿ ಅಸಮಾಧಾನಪಟ್ಟುಕೊಳ್ಳುತ್ತಿದ್ದರು. ಹೀಗೆಯೇ ಮೂರು 

ತಿಂಗಳಾಯಿತು. 


ಅತ್ತಮ್ಮನವರೂ ತಾತನವರೂ ಯಾತ್ರೆಯನ್ನು ಮುಗಿಸಿಕೊಂಡು ಊರಿಗೆ 

ಬಂದರು. ಮನೆಗೆ ಬಂದಮೇಲೆ ನಾವು ಓರಗಿತ್ತಿಯರಿಬ್ಬರೂ ಇರುವ ಸ್ಥಿತಿಯನ್ನು 

ಕಣ್ಣಾರ ನೋಡಿ ಕ್ರಮವಾದ ಸ್ಥಿತಿಯಲ್ಲಿರಬೇಕೆಂದು ಆಕ್ಷೇಪಿಸಲಾರಂಭಿಸಿದರು. 

ನಮ್ಮಿಬ್ಬರಿಗೂ ಗಂಡಂದಿರ ಬಲವಿರುವಾಗ ನಾವು ಅತ್ತೆಯ ಮಾತನ್ನೇಕೆ ಗಣಿಸಬೇಕೆಂಬ 

ಭಾವನೆಯು ಉತ್ಪನ್ನವಾದುದು. ಈ ಭಾವನೆಯು ನನ್ನ ಅಕ್ಕನ ಮನಸ್ಸಿನಲ್ಲಿದ್ದಿತೋ 

ಇಲ್ಲವೋ ನನಗೆ ತಿಳಿಯದು. ಇತರರ ವಿಷಯದಲ್ಲಿ ಸ್ವತಂತ್ರವಾಗಿ ಮಾತನಾಡುವಷ್ಟು 

ಶಕ್ತಿಯು ನನಗಿಲ್ಲ. ನಮ್ಮ ಅತ್ತೆಯು ನಮ್ಮ ವರ್ತನಗಳನ್ನು ಒಂದೆರಡು ತಿಂಗಳು 

ಕಾಲ ನೋಡಿದರು. ಹತೋಟಿಗೆ ಬರುವಂತೆ ತೋರಲಿಲ್ಲ. ಇನ್ನು ಹೀಗೆಯೇ ಒಟ್ಟಿಗೆ 

--------------------------------------------

28 ಕಾದಂಬರೀ ಸಂಗ್ರಹ 


ಒಂದೇ ಸಂಸಾರದಲ್ಲಿ ಎಲ್ಲರೂ ಇದ್ದರೆ ಪರಸ್ಪರ ವೈಷಮ್ಯಕ್ಕೆ ಕಾರಣವಾದೀತೆಂದು 

ಎಲ್ಲರಿಗೂ ಗೊತ್ತಾಯಿತು. ನಮ್ಮ ಯಜಮಾನರು ಹಿರಿಯರ ಮಾತನ್ನು ಮೀರದೆ 

ಹರಪುರಕ್ಕೆ ಹೊರಟು ಹೋಗಿದ್ದರೆ ಈ ವಿಧವಾದ ಅವಾಂತರಗಳಾಗುತ್ತಿರಲಿಲ್ಲ. ಹಾಗೆ 

ಮಾಡದಿದ್ದುದು ಬಹು ಅನರ್ಥಕ್ಕೆ ಮೂಲವಾಯಿತು. 


ಸಂಸಾರದಗುಟ್ಟು, ವ್ಯಾಧಿರಟ್ಟು, ಎಂಬ ಲೋಕೋಕ್ತಿಯಂತೆ ತಮ್ಮ ತಮ್ಮ 

ಸಂಸಾರ ಸ್ಥಿತಿಯನ್ನು ಇತರರಿಗೆ ಹೇಳುವುದು ಅವಿವೇಕವಾದ ಕೆಲಸವೆಂಬ ವಿಷಯವು 

ನನಗೆ ಗೊತ್ತಿದೆ. ಆದರೆ ನಾನು ನಮ್ಮ ಸಂಸಾರದ ರಹಸ್ಯವನ್ನು ಬಹಿರಂಗ ಪಡಿಸುವು 

ದಕ್ಕಾಗಿ ಈ ಕಥೆಯನ್ನು ಬರೆಯುತ್ತಿಲ್ಲ. ಕಿಂತು-ಲೋಕದಲ್ಲಿ ಇಂತಹ ಅಂತಃಕಲಹ 

ಗುಳುಳ್ಳ ಸಂಸಾರಗಳು ಅನೇಕವಾಗಿರುವುವೆಂಬುದನ್ನು ತೋರ್ಪಡಿಸುವುದಕ್ಕಾಗಿಯೂ 

ಭರತಖಂಡದಲ್ಲೆಲ್ಲೆಲ್ಲಿಯೂ ಸಮಸ್ತ ಸಂಸಾರವೂ ಶಾಂತಿಯಿಂದ ವರ್ತಿಸುವಂತೆ ಈ 

ಕಥೆಯಿಂದ ಸಾಧ್ಯವಾದೀತೇ ಎಂಬ ಮಾದರಿಯನ್ನು ತಿಳುವುದಕ್ಕಾಗಿಯೂ ವಿಷಯಗಳು 

ಪ್ರತಿಪಾದಿಸಲ್ಪಟ್ಟಿವೆ. ಮತ್ತು ನನ್ನಂತಹ ಹುರುಡುಮಾಡುವಂತಹ ತರುಣಿಯರು ಎಷ್ಟೋ 

ಮಂದಿ ಈ ಲೋಕದಲ್ಲಿ ಇರುವರೆಂಬುದನ್ನು ಅನೇಕ ತರುಣಿಯರು ತಮ್ಮ ತಮ್ಮ ಪತಿಗ 

ಳನ್ನು ತಮ್ಮ ಆಜ್ಞೆಗೆ ಅಧೀನರನ್ನಾಗಿ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿರುವರೆಂಬುದ 

ನ್ನೂ , ಅದರಂತೆಯೇ ಪತ್ನಿ ಯರಿಗೆ ಸ್ವಾಧೀನರಾಗಿ ನಡೆಯುತ್ತಿರುವ ಅನೇಕ ಮನುಜರು 

ಈ ದೇಶದಲ್ಲಿ ವಿಶೇಷವಾಗಿರುವರೆಂಬುದನ್ನೂ ನಾನು ಕೇಳಿ, ನೋಡಿಬಲ್ಲೆನು, ಅಂದರೆ 

ಹೆಂಡತಿಯರ ಮಾತನ್ನು ಗಂಡಂದಿರು ಕೇಳಲೇ ಬಾರದೆಂಬುದು ನನ್ನ ತಾತ್ಪರ್ಯವಲ್ಲ. 

ನೀರಕ್ಷೀರ ನ್ಯಾಯದಂತೆ ಅನ್ನೋನ್ಯವಾಗಿ ಯುಕ್ತಿ ಯುಕ್ತವಾದ ವಿಷಯಗಳನ್ನು 

ಒಬ್ಬರಿಗೊಬ್ಬರು ಹೇಳಿ ಕೊಡುತ್ತಾ ಪುಣ್ಯವಂತರೆನಿಸಿಕೊಂಡು ಲೋಕಕ್ಕೆ ಮಾದರಿ 

ಯಾದ ದಂಪತಿಗಳಾಗಿ ಎಲ್ಲರೂ ಪರಿಣಮಿಸಬೇಕೆಂಬುದೇ ನನ್ನ ಕುತೂಹಲ. 

ನನ್ನಿ ಅಭಿಪ್ರಾಯವನ್ನು ಅನುಮೋದಿಸುವವರು ಅನುಮೋದಿಸಲಿ. ಎಲ್ಲರಿಗೂ ಬುದ್ದಿ ಹೇಳಿ 

ಕಲಿಸುವುದಕ್ಕೆ ನನ್ನಿಂದ ಸಾಧ್ಯವಿಲ್ಲ. 


VII 

ನಮ್ಮ ಸಂಸಾರವು ವಿಷಮವಾಗಿಯೇ ನಡೆಯುತ್ತಿತ್ತು. ಹೀಗೆಯೇ ಕೆಲವು 

ದಿನಗಳು ಕಳೆದು ಹೋದವು. ನಮ್ಮ ಯಜಮಾನರು ಹರಪುರಕ್ಕೆ ಹೊರಡುವ ಯೋಚ 

ನೆಯನ್ನು ಮಾಡಲೇ ಇಲ್ಲ. ಅದೇನು ದೈವಮಾಯಯೋ; ನಮ್ಮ ಗೃಹಕೃತ್ಯದಲ್ಲಿ ಅನಿ 

ರ್ವಚನೀಯವಾದೊಂದು ವಿಷಲತೆಯು ಹಬ್ಬಿ ವ್ಯಾಪಿಸುತ್ತ ಬಂದಿತು, ಲತೆಯು ಇನ್ನೂ 

ಚೆನ್ನಾಗಿಬಲಿತು ಹಬ್ಬಿರಲಿಲ್ಲ. ಅಷ್ಟರಲ್ಲೇ ನಾವು ಆಲತೆಯನ್ನು ಕಿತ್ತು ನಿರ್ಮೂಲ 

-----------------------------------------------

ನನ್ನ ಸಂಸಾರ 29 

ಮಾಡಿಬಿಟ್ಟೆವು. ಆ ವಿಷಲತೆಯ ಜತೆಯಲ್ಲೇ ನನಗೆ ಪ್ರಾಪ್ತವಾಗಿದ್ದ ಹುರುಡು, 

ಅಜ್ಞಾನ, ಮೌಖವೆಂಬ ಶತ್ರುತ್ರಯಗಳೂ ನಾಶವಾಗಿ ಹೋದುವು. ವಿಷಲತೆಯು 

ನಾಶವಾದ ಬಗೆಯನ್ನೂ, ಶತ್ರುತಯನಿರ್ಮೂಲನದ್ವಾರಾಶಾಂತಿಸ್ನಾಪನೆಯಾದ 

ವಿಷಯವನ್ನೂ, ಈಗ ವಿಸ್ತಾರವಾಗಿ ವರ್ಣಿಸುತ್ತೇನೆ. ಪಾತಕಿಯರು ಪಠಿಸಬೇಕು. 


ನಮ್ಮ ಭಾವನವರಿಗೆ 75 ರೂ || ತಲಬು ಬರುವುದೆಂಬುದನ್ನು ಹಿಂದೆಯೇ ತಿಳಿಸಿದೆ 

ಯಷ್ಟೆ ? ಮನೆಯ ವೆಚ್ಚಕ್ಕೆ ಮೂವತ್ತು ರೂಪಾಯಿಗಳು ಖರ್ಚಾದರೂ ಕಡಮೆ 

45 ರೂಪಾಯಿಗಳು ಪ್ರತಿತಿಂಗಳೂಮಿಗುತ್ತಿತ್ತು. ನಮ್ಮ ಭಾವನವರು ಹಣವನ್ನು 

ಸೇವಿಂಗ್ಸ್ ಬ್ಯಾಂಕಿನಲ್ಲಾಗಲೀ ಇತರ ವಿಧವಾದ ಬಡ್ಡಿಗಾಗಲೀ ಕೊಡುತ್ತಿರಲಿಲ್ಲ. ಈ 

ಕಾರಣದಿಂದ ಸಿಲುಕಾಗಿ ಉಳಿವ ಮೊಬಲಗನ್ನು ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿ 

ಕೊಂಡು ಅದರ ಬೀಗದಕಯ್ಯನ್ನು ಹೆಂಡತಿ (ನಮ್ಮ ಅಕ್ಕ)ಗೆ ಮಾತ್ರ ತಿಳಿಯುವಂತೆ 

ರಹಸ್ಯವಾದೊಂದು ಪ್ರದೇಶದಲ್ಲಿ ಇಡುತ್ತಿದ್ದರಂತೆ ? ಮತ್ತು ವಿಶೇಷವಾಗಿ ಹಣವೇ 

ನಾದರೂ ಖರ್ಚಾಗಬೇಕಾಗಿದ್ದರೆ ನಮ್ಮ ಅಕ್ಕನಾಗಲೀ ಭಾವನವರಾಗಲೀ ಪೆಟ್ಟಿಗೆ 

ಬಾಗಿಲು ತೆರೆದು ಆವಶ್ಯಕವಾದಷ್ಟು ಹಣವನ್ನು ತೆಗೆದುಕೊಂಡು ಅದನ್ನು ಲೆಕ್ಕಕ್ಕೆ 

ಬರೆದುಕೊಂಡು ಬೀಗದಕಯ್ಯನ್ನು ನಿರ್ದಿಷ್ಟ ಸ್ಥಾನದಲ್ಲಿ ಇರಿಸುತ್ತಿದ್ದರಂತೆ ? ಮತ್ತು 

ಆ ಪೆಟ್ಟಿಗೆಯನ್ನು ಇರಿಸಿರುವ ಚಿಕ್ಕ ಮನೆಯಲ್ಲಿ ಯಾವಾಗಲೂ ಯಾರಾದರೊಬ್ಬರು 

ನಮ್ಮ ಅಕ್ಕನ ಕಡೆಯವರಾಗಿ ಇರುತ್ತಲೇ ಇದ್ದರು. ಯಾರೂ ಇಲ್ಲದವೇಳೆಯಲ್ಲಿ 

ಚಿಕ್ಕ ಮನೆಗೆ ಬೀಗ ಹಾಕಿಕೊಂಡು ಹೋಗುವ ಪದ್ದತಿಯನ್ನಿಟ್ಟು ಕೊಂಡಿದ್ದರು. ಈ 

ಕಾರಣದಿಂದ ನಮ್ಮ ಅಕ್ಕ, ಭಾವ, ಅವರಕಡೆ ಹುಡುಗರು ವಿನಾ ಇತರರು ಅವರ 

ಕೊಠಡಿಗೆ ಪ್ರವೇಶಮಾಡಲಸಾಧ್ಯವಾಗಿದ್ದುದರಿಂದ ಅವರ ಒಟ್ಟಿ, ಒಡವೆ, ಹಣಗಳು 

ಸುರಕ್ಷಿತವಾಗಿಯೇ ಇರುತ್ತಿದ್ದವು. ಇಂತಿರಲು ನನ್ನ ಅಕ್ಕನ ಮಗುವಿಗೆ ವರುಷ 

ದಹೆಚ್ಚಿನದಿನವು ಬಂದಿತು. ಆದಿನ 40-500 ಮಂದಿಗೆ ಊಟಕ್ಕೆ ಹೇಳಿ ದಿವ್ಯವಾದ 

ಸಂತರ್ಪಣೆಯನ್ನು ಮಾಡಿಸಿದರು. ಈ ಉತ್ಸವಕ್ಕಾಗಿ ಸುಮಾರು ಅವರು ಐವತ್ತು ರೂ 

ಪಾಯಿಗಳ ಮೇಲೆಯೇ ವೆಚ್ಚವನ್ನು ಮಾಡಿದರು. ಆದಿನವೆಲ್ಲಾ ನಾನೂ ಅಕ್ಕನೂ 

ಬಂದವರ ಯೋಗಕ್ಷೇಮವನ್ನು ತೆಗೆದುಕೊಂಡು ಅವರನ್ನು ಆದರಿಸುವ ಸಡಗರದಲ್ಲೇ 

ಇದ್ದು ಬಿಟ್ಟೆವು. ಹಬ್ಬದ ದಿನ ರಾತ್ರಿ ಮಕ್ಕಳನ್ನು ಹಸೆಯ ಮೇಲೆ ಕೂರಿಸಿ ಆರತಿಯ 

ಕ್ಷತೆಯನ್ನು ಅಟ್ಟಹಾಸದಿಂದ ಮಾಡಿದರು. 


ಆದಿನವೂ ಕಳೆಯಿತು. ಕಾಲಕ್ಕೆ ಮಾತ್ರ ಅಹಂಕಾರವಿಲ್ಲ. ಸೋಮಾರಿತನವಿ 

ಲ್ಲದೆ ತನ್ನ ಕೆಲಸವನ್ನು ಅವಿಚ್ಛಿನ್ನವಾಗಿ ಮಾಡಿಕೊಂಡು ಹೋಗುತ್ತಿರುವುದು. ಕಾಲ 

-----------------------------------------------

30 ಕಾದಂಬರೀ ಸಂಗ್ರಹ 


ವೆಂಬುದು ಕಣ್ಣಿಗೆ ಕಾಣುವ ಪದಾರ್ಥವಲ್ಲ. ಒಬ್ಬರ ಕೈಗೆ ಸಿಕ್ಕ ತಕ್ಕುದೂ ಅಲ್ಲ. 

ಆದರೆ ಒಂದುದಿನ ಕಳೆದುಹೋದರೂ ಆ ಕಾಲವು ಇನ್ನೆಂದಿಗೂ ಬರಲಾರದು. ಕಾಲದ 

ಯೋಗ್ಯತೆಯನ್ನೂ ಅದರ ಬೆಲೆಯನ್ನೂ ಕಂಡುಹಿಡಿಯಲಾರಿಗೂ ಸಾಧ್ಯವಿಲ್ಲ. "ವ್ಯರ್ಥ 

ವಾಗಿ ಕಾಲಹರಣ ಮಾಡಬಾರದು.” ಎಂದು ಪ್ರಸಿದ್ಧವಾದ ನೀತಿವಚನವು ಸರ್ವರಿಂ 

ದಲೂ ವಿಚಾರಿಸಲ್ಪಡಬೇಕು. ಮತ್ತು ಏನುಮಾಡಿದರೂ ಹೊತ್ತೇ ಹೋಗದು. ಎಂಬ 

ಜಡವಾಕ್ಯವು ಬಹು ಅನರ್ಥಕಾರಿಯಾದುದೆಂಬುದನ್ನು, ಉದ್ಯೋಗಶೀಲರೂ, ಒಳ್ಳೆಯ 

ವಿದ್ಯಾರ್ಥಿಗಳೂ, ಜಾಣರೂ, ಬಲ್ಲರು. ಅದರ ಅರ್ಧವನ್ನು ಈ ಮೂವರಿಂದ ಎಲ್ಲರೂ 

ತಿಳಿದುಕೊಳ್ಳಲಿ. ! 


ಹುಟ್ಟಿದ ಹಬ್ಬವಾಗಿ ಈಗಲೇ ಎರಡುದಿನವಾಗಿ ಹೋಯಿತು. ಮೂರನೆಯ ದಿನ 

ಬೆಳಿಗ್ಗೆ ಹತ್ತು ಗಂಟೆಯ ಸಮಯದಲ್ಲಿ ನಾನು ನಮ್ಮ ಯಜಮಾನರಿಗೆ ನೀರನ್ನು 

ಎರೆಯು ತಿದ್ದೆನು. ಅಮ್ಮನವರು ಅಡಿಗೆ ಮಾಡುತ್ತಿದ್ದರು. ತಾತನವರು ಬೀದಿಬಾಗಿಲಿನಲ್ಲಿ 

ಕುಳಿತು ಗ್ರಂಥವನ್ನು ನೋಡುತ್ತಿದ್ದರು. ಅಕ್ಕನೂ ಭಾವನವರೂ ಅವರ ಚಿಕ್ಕ ಮನೆ ಯಲ್ಲಿ 

ಕುಳಿತು ತಮ್ಮ ಪೆಟ್ಟಿಗೆಯಲ್ಲಿದ್ದ ಹಣವನ್ನು ಲೆಖ್ಖಮಾಡಿ ಅದರ ಪರಿಶೀಲನೆ 

ಯಲ್ಲಿದ್ದರು. ಹೀಗೆ ಒಂದೆರಡು ಘಳಿಗೆ ಕಳೆದುಹೋಯಿತು. ಇದ್ದಕ್ಕಿದ್ದ ಹಾಗೆಯೇ 

ನಮ್ಮ ಮನೆಯಲ್ಲಿ ಬಹು ಗಲಭೆಗೆ ಕಾರಣವಾಯಿತು. ನಮ್ಮ ತಾತನವರೂ ಅಕ್ಕನ 

ವರೂ ಭಾವನವರೂ ಮಹತ್ತಾದ ಆಲೋಚನೆಯಲ್ಲಿ ಮುಳುಗಿ ಹೋಗಿದ್ದರು. ನಾನು 

ಬಚ್ಚಲಮನೆಯಲ್ಲಿ ನೀರನ್ನು ಕಾಯಿಸುತ್ತಿದ್ದೆನು. ಆಗ ನಮ್ಮ ಯಜಮಾನರು ನನ್ನ 

ಬಳಿಗೆ, ಅತಿವೇಗದಿಂದ ಬಂದು, ಈಗ ನಡೆದ ವಿಷಯವನ್ನು ಕೇಳಿದೆಯಾ ? ನಮ್ಮ 

ಅಣ್ಣನವರ ಪೆಟ್ಟಿಗೆಯಲ್ಲಿದ್ದ ಇನ್ನೂರು ರೂಪಾಯಿಗಳಲ್ಲಿ 50-60 ರೂಪಾಯಿಗಳು 

ಮಾಯವಾಗಿದೆಯಂತೆ ? ಎಲ್ಲರೂ ಬಹು ಯೋಚನಾಕ್ರಾಂತರಾಗಿದ್ದಾರೆ. ಇನ್ನು ಈ 

ಅಪವಾದವು ನನ್ನ ಮೇಲೆಲ್ಲಾದರೂ ಬರುವುದೋ ಎಂದು ಭಯಪಡುತ್ತಿದ್ದೇನೆ ಎಂದು 

ಹೇಳಿದರು. ನಾನು ಅದನ್ನು ಕೇಳಿ, ನೀವು ವ್ಯರ್ಥವಾಗಿ ಇಲ್ಲದ ಚಿಂತೆಯನ್ನು ಮನಸ್ಸಿಗೆ 

ಹತ್ತಿಸಿಕೊಳ್ಳಲೇಕೆ ? ಅವರಚಿಕ್ಕ ಮನೆಯಲ್ಲಿ ಅದರಲ್ಲೂ ಅವರ ಪೆಟ್ಟಿಗೆಯಲ್ಲಿದ್ದ 

ಹಣವು ಹೋಗುವುದಾದರೂ ಹೇಗೆ ? ಅವರೇ ಎಲ್ಲೊ ಗಂಡ ಹೆಂಡರಪೈಕಿ ಒಬ್ಬರು 

ಬಳಸಿಕೊಂಡು ಮರತಿರಬೇಕು. ಹೊರಗಿನವರು ಕದ್ದಿದ್ದರೆ 60 ರೂಪಾಯಿಗಳನ್ನು ತೆಗೆ 

ದುಕೊಂಡು ಕಡಮೆಯದನ್ನು ಬಿಟ್ಟು ಹೋಗುವುದೆಂದರೇನು ? ಇದೆಲ್ಲವೂ ವಿಸ್ಕೃತಿ 

ಯಿಂದುಂಟಾಗಿರಬಹುದೆಂದು ಹೇಳಿ ಅವರನ್ನು ಸಮಾಧಾನ ಪಡಿಸಿದೆನು. ಆದರೂ ಅವ 

ರಿಗೆ ಮನಶ್ಯಾಂತಿಯುಂಟಾಗಲಿಲ್ಲ. ಹಾಗೆಯೇ ಸ್ನಾನಾಹ್ನಿಕಗಳನ್ನು ಮಾಡಿಕೊ 

-----------------------------------------------

ನನ್ನ ಸಂಸಾರ 31 

ಳ್ಳುತ್ತ ಕುಳಿತಿದ್ದರು. ನಾನುಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ 

ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು 

ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ. ಹೀಗೆಯೇ ಹನ್ನೆರಡು ಗಂಟೆಯ ಹೊಡೆ 

ಯಿತು. 


ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು. ನಮ್ಮ ಅಕ್ಕನವರು 

ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ ಹೋಗಿ ಹಣದ ವಿಷಯದಲ್ಲಿ 

ಶಾಸ್ತ್ರವನ್ನು ಕೇಳಿದರಂತೆ ? ಆಜೋಯಿಸರೂ ಲೆಖ್ಖಹಾಕಿ, ಹಣವು ನಿಮ್ಮ ಮನೆಯಲ್ಲೇ 

ಇದೆ. ಇನ್ನು ಮೂರು ಗಂಟೆ ಕಾಲದೊಳಗಾಗಿ ಸಿಕ್ಕಿದರೆ ಸಿಕ್ಕ ಬಹುದು. ಇಲ್ಲವಾ 

ದರೆ ಅದು ಸ್ಥಳವನ್ನು ಬಿಟ್ಟು ಕದಲಿ ಹೋದೀತು. ಎಂದು ಹೇಳಿದರಂತೆ ! ನಮ್ಮ 

ಅಕ್ಕನವರು ಕೂಡಲೆ ಬಂದು ಭಾವನವರೊಡನೆ, ಶಾಸ್ತ್ರದ ವಿಚಾರವನ್ನು ಹೇಳಿ 

ಈಗಲೇ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿದರೆ ಹಣವು ಸಿಕ್ಕಿ ಬಿಡುತ್ತದೆ. 

ಎಂದು ಉಲ್ಲಾಸದಿಂದ ಹೇಳಿದರು. ಸಾಧಾರಣವಾಗಿ ಎಲ್ಲರ ಪೆಟ್ಟಿಗೆಯಲ್ಲೂ 

ಅವರವರು ಹಣವನ್ನಿಟ್ಟುಕೊಂಡಿರಬಹುದೆಂದು ಅವರಿಗೆ ತಿಳಿದಿದ್ದರೂ ಮನೆಯವ 

ರೆಲ್ಲರ ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ ಹಣ 

ವಿದ್ದರೆ ಅದು ತಮ್ಮದೇ ಎಂದೂ ಗಂಡನೊಡನೆ ಖಂಡಿತವಾಗಿ ಹೇಳಿದರು. ಹೆಂಡತಿ 

ಯಮಾತನ್ನು ಮೀರದೆ, ನಮ್ಮ ಭಾವನವರು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲರ 

ಪೆಟ್ಟಿಗೆಯನ್ನೂ ಶೋಧಿಸುವ ಕಾರ್ಯಕ್ಕೆ ಕೈಯಿಟ್ಟರು. ಎಲ್ಲರ ಪೆಟ್ಟಿಗೆಯೆಂದರೆ 

ಯಾರದು ? ನನ್ನದು, ತಾತನವರದು. ನಮ್ಮ ಯಜಮಾನರದು. ತಾತನವರ ಪೆಟ್ಟಿಗೆ 

ಯನ್ನು ಶೋಧಿಸುವ ಧೈರ್ಯವು ಆರಿಗೂ ಇಲ್ಲ ಅತ್ತಮ್ಮನವರಲ್ಲಿ ಪೆಟ್ಟಿಗೆಯೇ 

ಇರಲಿಲ್ಲ. ನಮ್ಮ ಯಜಮಾನರ ಪೆಟ್ಟಿಗೆಯಲ್ಲಿ ಎರಡಾಣೆ ಚಿಲ್ಲರೆ ಮಾತ್ರವೇ 

ಇದ್ದಿತು. ಉಳಿದುದು ನನ್ನ ಪೆಟ್ಟಿಗೆ, ನನ್ನ ಪೆಟ್ಟಿಗೆಯನ್ನು ಶೋಧನೆಗೆ ಕಳುಹಬೇ 

ಕಾಯಿತು. ನಮ್ಮ ತಾಯಿಯು ಗುಟ್ಟಾಗಿ ಕೊಟ್ಟಿದ್ದ 55 ರೂಪಾಯಿಗಳನ್ನೂ 

ನನ್ನಲ್ಲಿ ಚಿಲ್ಲರೆಯಾಗಿದ್ದ 5-6 ರೂಪಾಯಿಗಳ ನಾಣ್ಯವನ್ನೂ ನಮ್ಮ ಯಜಮಾ 

ನರಿಗೂ ಸಹಾ ತಿಳಿಸಿದಂತೆ ನಾನು ನನ್ನ ಪೆಟ್ಟಿಗೆಯ ಒಂದು ಭರಣಿಯಲ್ಲಿಟ್ಟಿದ್ದೆನು. 

ಪೆಚ್ಚಳಾದ ನಾನು ಆ ಭರಣಿಯು ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು 

ನನ್ನಲ್ಲಿ ಗುಟ್ಟಾಗಿ ಹಣವನ್ನು ಕೊಟ್ಟಿರುವ ವಿಷಯವೂ ಎಲ್ಲರಿಗೂ ಎಲ್ಲಿ ತಿಳಿದು 

ಬಿಡುವುದೋ ಎಂಬ ಹೆದರಿಕೆಯಿಂದ, ನನ್ನಲ್ಲಿದ್ದ ಭರಣಿಯನ್ನು ಈಚೆಗೆ ತೆಗೆದಿಟ್ಟು 

ಕೊಂಡು ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು. ನಾನು ಪೆಟ್ಟಿಗೆಯ ಬೀಗ 

---------------------------------------------

32 ಕಾದಂಬರೀ ಸಂಗ್ರಹ 


ವನ್ನು ತೆರೆದು ಹಣದ ಭರಣಿಯನ್ನು ಬಚ್ಚಿಟ್ಟುದನ್ನು ನಮ್ಮ ಭಾವನವರು ನೋಡುತ್ತಲೇ 

ಇದ್ದರು. ಬರೀ ಪೆಟ್ಟಿಗೆಯಲ್ಲಿ ಹಣವಿದ್ದೀತೆ ? ನಮ್ಮ ಭಾವನವರು ಬಲವಂತದಿಂದ  

ನಮ್ಮ ಚಿಕ್ಕ ಮನೆಗೆ ಪ್ರವೇಶಿಸಿ ಅನುಮಾನದಿಂದ ನನ್ನ ಭರಣಿಯನ್ನು ತೆಗೆದುಕೊಂಡು  

ಅದರ ಮುಚ್ಚಳವನ್ನು ತೆರೆದು ಅದರಲ್ಲಿ ಹಣವಿರುವುದನ್ನು ನೋಡಿ ಆ ಭರಣಿಯನ್ನು   

ಹಾಗೆಯೇ ತಂದು ಮನೆಯವರೆಲ್ಲರಿದಿರಿಗೂ ಸುರಿದುಬಿಟ್ಟರು. 


ನನಗೆ ತಲೆ ತಿರುಗಿಹೋಯಿತು. ಮೈ ನಡಗಿಬಿಟ್ಟಿತು. ದಿಕ್ಕೇ ತೋಚದೆ 

ಹೋದುದು. ಮನೆಯವರೆಲ್ಲರೂ ನನ್ನ ವಿಷಯದಲ್ಲಿ ಬಹು ತಿರಸ್ಕಾರಭಾವವನ್ನು  

ಪ್ರದರ್ಶಿಸಲಾರಂಭಿಸಿದರು. ಆ ಹಣವನ್ನು ಸುರಿವುತ್ತಿದ್ದಾಗ ನಾನು ಅಳುತ್ತಾ ಬಂದು   

"ಇದು ನಮ್ಮ ತಾಯಿಯು ಗುಟ್ಟಾಗಿ ನನ್ನ ವಶಕ್ಕೆ ಕೊಟ್ಟಿದ್ದ ಹಣವು, ಇದನ್ನು   

ನಾನಾರಿಗೂ ತಿಳಿಸದಂತೆ ನನ್ನ ಬಳಿಯಲ್ಲಿಟ್ಟು ಕೊಂಡಿದ್ದೆನು. ಅದನ್ನು ನನಗೇ ಕೊಡಿಸ 

ಬೇಕೆಂದು '' ಬಹು ದೈನ್ಯದಿಂದ ಬೇಡಿಕೊಂಡೆನು. ಆದರೆ ನನ್ನ ಮಾತನ್ನು ಆಗ ಕೇಳು     

ವವರಾರು ? ನನ್ನಲ್ಲಿ ಹಣವಿದ್ದ ವಿಚಾರವು ಆರಿಗೂ ತಿಳಿದಿರಲಿಲ್ಲ. ನಾನು ಆರಿಗೂ    

ತಿಳಿಸಿಯೂ ಇರಲಿಲ್ಲ. ನಮ್ಮ ಯಜಮಾನರು ನನ್ನ ವಶಕ್ಕೆ ಹಣವಾವುದನ್ನೂ ಕೊಡು   

ತ್ತಿರಲಿಲ್ಲವಾದುದರಿಂದಲೂ, ನಮ್ಮ ತಾಯಿತಂದೆಗಳು ಬಹಳ ರಿಕ್ತದೆಶೆಯಲ್ಲಿರುವ   

ರೆಂಬುದು ಎಲ್ಲರಿಗೂ ತಿಳಿದಿದ್ದುದರಿಂದಲೂ ನನ್ನಲ್ಲಿದ್ದ 55 ರೂಪಾಯಿಗಳೂ ಮತ್ತು  

ಚಿಲ್ಲರೆ ದುಡ್ಡುಗಳೂ ಕಳುವಿನ ಮಾಲೆಂದೂ, ನಮ್ಮ ಭಾವನವರ ಪೆಟ್ಟಿಗೆಯಲ್ಲಿ   

ಇಲ್ಲದೆಹೋದ ಹಣವು ಇದೇ ಸರಿಯೆಂದೂ, ನಾನೇ ಅವರ ಪೆಟ್ಟಿಗೆ ಬೀಗವನ್ನು ಕಳ್ಳ  

ತನದಿಂದ ತರೆದು ಈ ಹಣವನ್ನು ಕದ್ದವಳೆಂದೂ ಮನೆಯವರೆಲ್ಲರೂ ನಿರ್ಧರಿಸಿದರು.  

ಹೀಗೆ ನಿರ್ಧರಿಸುವುದಕ್ಕೆ ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿರಲಿಲ್ಲ. ನಾನು,  

ನಮ್ಮ ತಾಯಿಯ ಹಣವೆಂದು ಹೇಳುವುದು ಅನೃತವೂ, ಅಪಲಾಪವೂ, ಆದ ಸಂಗತಿ   

ಯೆಂದು ಎಲ್ಲರೂ ತಿಳಿದು ಕೊಂಡರು. 


ನಮ್ಮ ತಾಯಿಯು ನನ್ನಲ್ಲಿ ಇಷ್ಟು ಹಣವನ್ನು ಕೊಟ್ಟಿರುವ ವಿಷಯವನ್ನು ನಾನು   

ನಮ್ಮ ಯಜಮಾನರಿಗೆ ಯಾವಾಗಲೂ ತಿಳಿಸಿರಲಿಲ್ಲ. ಮತ್ತು ಅವರು ಹಿಂದೆ    

ಒಂದೆರಡುವೇಳೆ ಯಾವುದೋ ಒಂದೆರಡು ಸಮಯಗಳಲ್ಲಿ, “ ನಿನ್ನಲ್ಲಿ ಹಣವೇನಾ   

ದರೂ ಇದ್ದರೆ ಹದಿನೈದು ರೂಪಾಯಿಗಳನ್ನು ಕೊಟ್ಟಿರು” ಎಂದು ಕೇಳಿದ್ದರು. 

ಹೀಗೆ ಅವರು ಕೇಳಲು, ಹೆಣ್ಣು ಮಕ್ಕಳಿಗೆ ತಾಯಿತಂದೆಗಳು ಏನಾದರೂ ಕೊಂಚ   

ದುಡ್ಡನ್ನು ಕೊಡುವ ಪದ್ಧತಿ ಲೋಕರೂಢಿಯಾದುದರಿಂದಲೂ ಮದುವೆ, ಆರತಿ,  

ಓದಿಸುವುದು, ಮುಂತಾದ ಸಮಯಗಳಲ್ಲಿ ಹೆಣ್ಣು ಮಕ್ಕಳಿಗೆ ಬಂದ ರೂಪಾಯಿ 

------------------------------------------- 

ನನ್ನ ಸಂಸಾರ 33 

ಗಳನ್ನು ಗಂಡನ ಮನೆಗೆ ಹೋಗುವಾಗ ಅವರ ವಶಕ್ಕೆ ಕೊಡುವ ರೂಢಿ ಇರುವುದ  

ರಿಂದಲೂ ಈ ಊಹೆಯಿಂದ ನನ್ನನ್ನು ಯಜಮಾನರು ಹಣವನ್ನು ಕೇಳಿದರು. ಆ 

ಸಮಯಗಳಲ್ಲಿ ನಾನು ನನ್ನಲ್ಲಿ ಹಣವೆಲ್ಲಿಂದ ಬರಬೇಕು ? ಎಂದು ಉತ್ತರವನ್ನು 

ಹೇಳಿಬಿಟ್ಟೆನು. ಅವರು ಸುಮ್ಮನಾಗಿ ಬಿಟ್ಟಿದ್ದರು. ಹೀಗಿರುವಲ್ಲಿ ನನ್ನ ಪೆಟ್ಟಿಗೆಯಲ್ಲಿ 

ಈಗ 66 ರೂಪಾಯಿಗಳಿರುವುದೂ ಮತ್ತು ಭಾವನವರ ಪೆಟ್ಟಿಗೆಯಲ್ಲಿ 60 ರೂಪಾಯಿ 

ಗಳು ಮಾಯವಾಗಿರುವುದೂ ಪೆಟ್ಟಿಗೆಯನ್ನು ಶೋಧಿಸಬೇಕೆಂದು ಹೇಳಿದಾಗ ನಾನು 

ಹಣದ ಭರಣಿಯನ್ನು ಮುಚ್ಚಿಟ್ಟು ಕೊಂಡು ಬರೀಪೆಟ್ಟಿಗೆಯನ್ನು ಕಳುಹಿಸಿದುದೂ, 

ತದುತ್ತರಕ್ಷಣದಲ್ಲಿಯೇ ನನ್ನ ಹಣದ ಭರಣಿಯು ಈಚಿಗೆಬಂದು ಎಲ್ಲರಿದಿರಿಗೂ ಹಣವು 

ಸುರಿಯಲ್ಪಟ್ಟು ದೂ, ಇತ್ಯಾದಿ ವಿಷಯಗಳು ನಾನು ಕದ್ದವಳೆಂದು ತೋರ್ಪಡಿಸಲು 

ಸಾಕ್ಷೀಭೂತವಾಗಿದ್ದುವು. ಇಂತಹ ಮಹದಪರಾಧವು ನನ್ನಿಂದ ಮಾಡಲ್ಪಟ್ಟಿತೆಂದು 

ತಿಳಿದಮೇಲೆ ನಮ್ಮ ಯಜಮಾನರ ಮನಸ್ಸಿನಲ್ಲಿ ಇಂತಹ ಭಾವವು ಉತ್ಪನ್ನವಾಗಿರ 

ಬಹುದು ? ಅಲ್ಲದೆ ನಾನು ಅವರನ್ನು ಆಗಿಂದಾಗ್ಗೆ, ಒಡವೆ, ಸೀರೆಗಳಿಗಾಗಿ ಬಹುವಾಗಿ 

ಪೀಡಿಸುತ್ತಿದ್ದುದನ್ನು ಅವರು ಸ್ಮರಿಸಿಕೊಂಡು, ಬಹು ತೆರನಾಗಿ ನಾನು ಹಣವನ್ನು  

ಧಾರ್ಷ್ಟದಿಂದ ಕದ್ದಿರಬಹುದೆಂದೇ ನಿರ್ಧರಿಸಿ, ಇಂತಹ ಕುಲಗೇಡಿಯಾದ ಹೆಂಡತಿ 

ಇದ್ದರೇನು ? ಸತ್ತರೇನು ? ಎಂದು ಮನಸಾ ಚಿಂತಿಸಿ, ಸಿಂಹವು ಘರ್ಜಿಸುವಂತೆ, 

ಆಹ್ನಿಕಮಾಡುತ್ತಿದ್ದ ಸ್ಥಳದಿಂದೆದ್ದು ನನ್ನ ಬಳಿಗೆ ಬಂದು, ಥು ! ದುಷ್ಟಳೆ ; ನಮ್ಮ 

ಕುಲಕ್ಕೂ ನಮ್ಮ ಮರ್ಯಾದೆಗೂ ನನಗೆ ಕಳಂಕವನ್ನು ತಂದೆಯಾ ! ನೀನು 

ಈ ಕ್ಷಣ ನಾಶವಾಗಿ ಹೋಗು, ಎಂದು ಆರ್ಭಟಿಸಿ ತಮ್ಮ ವಾಮಪಾದದಿಂದ 

ನನ್ನನ್ನು ಬಲವಾಗಿ ತಾಡನಮಾಡಿಬಿಟ್ಟರು. ನಾನು ಆಕ್ಷಣವೇಅಚೇತನಳಾಗಿ 

ಬಿದ್ದು ಬಿಟ್ಟೆನು. 


ನಾನು ಬಿದ್ದುದನ್ನು ನೋಡಿ ಮನೆಯವರೆಲ್ಲರೂ ಗಾಬರಿಯಾಗಿ ನನ್ನ ಹತ್ತಿರ 

ಬಂದು ನನ್ನ ಸ್ಥಿತಿಯನ್ನು ನೋಡಿ ನನ್ನನ್ನು ಪಚರಿಸ ತೊಡಗಿದರು. ಮತ್ತು ನಮ್ಮ 

ಯಜಮಾನರು ನನ್ನ ಬಳಿಗೆ ಬಂದು ಎಲ್ಲರನ್ನೂ ತಡೆದು ಪುನಃ ನನ್ನನ್ನು ಹೊಡೆದು ಇಹ 

ಲೋಕಚ್ಚುತಳನ್ನಾಗಿ ಮಾಡಿಬಿಡಬೇಕೆಂದು ನಿರ್ಧರಿಸಿದರು. ಆದರೆ ಅವರಾಲೋಚನೆ 

ಯನ್ನು ನಮ್ಮ ಮನೆಯವರು ಸಾಗಗೊಡಲಿಲ್ಲ. ಕೋಪದಲ್ಲಿ ಕುಯ್ದ ಮಗುಶಾಂತಿ 

ಯಲ್ಲಿ ಹತ್ತೀತೇ ??” ಆದುದರಿಂದ ಈ ಹಣವನ್ನು ಅವಳ ತಾಯಿಯು ಇವಳ ವಶಕ್ಕೆ 

ಕೊಟ್ಟಿದ್ದುದು ನಿಜವೇ ಎಂಬುದನ್ನು ತಿಳಿದಬಳಿಕ ನೀನು ಮುಂದಿನ ಕೆಲಸವನ್ನು ಮಾಡ 

ಬಹುದೆಂದು ನಮ್ಮ ಯಜಮಾನರೊಡನೆ ಎಲ್ಲರೂ ಹೇಳಿದರು. ಇಷ್ಟಾದಮೇಲೆ ಅವರು 

-----------------------------------------------

34 ಕಾದಂಬರಿ ಸಂಗ್ರಹ 


ತಮ್ಮ ಕೆಲಸಕ್ಕೆ ಹೊರಟುಹೋದರು. ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ 

ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು 

ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು 

ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ 

ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ 

ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿ 

ಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ 

ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿ 

ಟ್ಟೆನು. ನಮ್ಮ ಯಜಮಾನರು ಎದ್ದು ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ 

ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?” ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ 

ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ 

ಸಿಕೊಂಡೆನು. 


ಜೀವನಸರ್ವಸ ! 

ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ 

ವಾಗಿರುವುದು ಸರಿಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪ 

ರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗ 

ಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು 

ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ 

ಆರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ 

ಆರತಿಗೆ ಹಾಕಿದ್ದ  ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ 

ಕೆಲವು ಚಿಲ್ಲರೆಗಳು, ಇನ್ನೂ ಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು 

ನನ್ನ ವಶದಲ್ಲಿಟ್ಟು ಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡು 

ವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ 

ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು 

ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು 

ಸಂತೋಷವಾಗಿತ್ತು, ಹಣವನ್ನು ಇಟ್ಟು ಕೊಂಡಿರುವವರು ಬಹು ದೊಡ್ಡ ಮನುಷ್ಯ 

ರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. 

ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ 

---------------------------------------------

ನನ್ನ ಸಂಸಾರ 35 

ಯಾವಾಗಲೂ ಹೇಳಲಿಲ್ಲ. ಹಾಗೆ ಹೇಳಿದ್ದರೆ ಈದಿನ ನನಗೆ ಇಂತಹ ಅವಸ್ಥೆಯೂ 

ಉಂಟಾಗುತ್ತಿರಲಿಲ್ಲ. ಮತ್ತು ಮುಂದೆ ಇಂತಹ ಅನರ್ಥವುಂಟಾಗುವುದೆಂದು ನನಗೆ 

ತಿಳಿದೂ ಇರಲಿಲ್ಲ. ಈ ಕಾರಣದಿಂದ ನಾನು ತಮ್ಮಲ್ಲಿ ದೊಡ್ಡ ಅಪರಾಧಮಾಡಿದಂತಾ 

ಯಿತು. ಯಾವ ಹೆಂಗಸು ಪತಿಗೆ ವಂಚನೆಮಾಡಿ ಅವನ ಅಪ್ಪಣೆಯಿಲ್ಲದೆ, ಅವನಿಗೆ 

ತಿಳಿಯದಂತೆ, ಇಂತಹ ಸ್ವಾತಂತ್ರವನ್ನು ವಹಿಸುವಳೋ ಅವಳಿಗೆ ಇದೇ ವಿಧವಾದ 

ಗತಿಯಾಗುವುದೆಂಬುದಕ್ಕೆ ನಾನೇ ದೃಷ್ಟಾಂತಸ್ವರೂಪಳಾಗಿ ಪರಿಣಮಿಸಿದೆನು, ಮತ್ತು 

ತಾಯಿತಂದೆಗಳು ಹೆಣ್ಣು ಮಕ್ಕಳಿಗೆ, ಪತಿಗೆ ಪರತಂತ್ರಳಾಗಿ ಅವನ ಆಜ್ಞಾಧೀನಳಾಗಿ 

ಅನುವರ್ತಿಸಬೇಕೆಂದೂ ಅವನಿಗೆ ತಿಳಿಸದಂತೆ ಯಾವ ಕೆಲಸವನ್ನೂ ಮಾಡಬಾರದೆಂದೂ 

ಆತನ ಮನಸ್ಸಿಗೆ ಅಹಿತವಾಗುವ ಕೆಲಸವನ್ನು ಮಾಡಬಾರದೆಂದೂ ವಸ್ತ್ರಾಭರಣಗಳ 

ವಿಷಯದಲ್ಲಿ ಆತನನ್ನು ಬಲಾತ್ಕರಿಸಿ ಆತನ ಮನಸ್ಸಿಗೆ ಆಯಾಸವನ್ನುಂಟುಮಾಡಬಾರ 

ದೆಂದೂ ಮುಂತಾದ ವಿಹಿತವಾದ ಸ್ತ್ರೀಧರ್ಮಗಳನ್ನು ಕಲಿಸುವುದನ್ನು ಬಿಟ್ಟು ತದ್ವಿಪ 

ರೀತವಾದ ಧರ್ಮಗಳನ್ನು ಬೋಧಿಸಿದರೆ ಅಂತಹ ಮಾತಾಪಿತೃಗಳು, ಕುಲನಾಶಕ 

ರೆಂದೂ, ಮಕ್ಕಳನ್ನು ಹಾಳುಮಾಡಿದವರೆಂದೂ, ಲೋಕಾಪವಾದ ಪಾತ್ರರೆಂದೂ, 

ಹೇಳಿಕೊಳ್ಳುವರು. ನಮ್ಮ ತಾಯಿತಂದೆಗಳು ನನಗೆ ಸರಿಯಾದ ವಿವೇಕವನ್ನು ಹೇಳದೆ 

ಇದ್ದುದೇ ನನ್ನ ದುರವಸ್ಥೆಗೆ ಕಾರಣ ಮತ್ತು ನಾನು ಅವರ ಬೋಧನಾರಹಿತಳಾಗಿ 

ನಿಮ್ಮ ಬೋಧನೆಯನ್ನು ಗೌರವಿಸದೆ, ನಿಮ್ಮನ್ನು ಆಯಾಸಪಡಿಸುತ್ತಾ ಬಂದುದು, 

ನಮ್ಮ ತಂದೆತಾಯಿಗಳ ತಪ್ಪಲ್ಲದೆ ನನ್ನ ತಪ್ಪಲ್ಲ. ನಾನಿಂದು ಪತಿದ್ರೋಹಿಯೆಂದೂ, 

ವಂಚಕಳೆಂದೂ, ದುಷ್ಟಳೆಂದೂ, ತಸ್ಕರಿಯೆಂದೂ ಅಪವಾದವನ್ನು ಹೊರಬೇಕಾಗಿ 

ಬಂದಿದೆ. ನಾನು ಇಂತಹ ಅಪವಾದವನ್ನು ಧರಿಸಿ ಜೀವಿಸಿದ್ದರೂ ಒಂದೇ, ಮೃತ 

ಳಾದರೂ ಒಂದೇ ಆದರೆ ನಾನು ಮರಣಕ್ಕೆ ಹೆದರುವವಳಲ್ಲ. ಅಪವಾದಕ್ಕೆ ಹೆದರು 

ವವಳು. ನಾನು ನಿರಪರಾಧಿನಿಯೆಂಬುದನ್ನು ಈಗ ನಾನು ಮಾತ್ರ ಬಲ್ಲೆ. ಆ ವಿಧ 

ವಾದ ನಿರಪರಾಧಿತ್ವವು ನನಗೊಬ್ಬಳಿಗೆ ತಿಳಿದರೆ ಸಾಲದು. ನಾನು ನಿರಪರಾಧಿನಿ 

ಯೆಂದು ಲೋಕಕ್ಕವಿದಿತವಾದರೆ ಆಗ ನಾನು ಜೀವಿಸಿದ್ದರೂ, ಅಥವಾ ಮೃತಳಾದರೂ 

ಸಾರ್ಥಕ. ಆದುದರಿಂದ ನೀವು ಈ ವಿಷಯವನ್ನು ಪರ್ಯಾಲೋಚಿಸಬೇಕು. ಹೆಂಡತಿ 

ಯೊಬ್ಬಳು ಅಪವಾದಗ್ರಸ್ತಳಾದರೆ ಅದು ಗಂಡನಿಗೂ ಖಂಡಿತವಾಗಿ ಸಂಬಂಧಿಸಿಯೇ 

ಸಂಬಂಧಿಸುವುದು. ಅಂತಹ ಹೆಂಡತಿಯ ಮೂಲಕ ಗಂಡನಾದವನಿಗೆ ಇಹಲೋಕ 

ದಲ್ಲಾಗಲೀ ಪರಲೋಕದಲ್ಲಾಗಲೀ ಶಾಂತಿಯಿಲ್ಲವು. ನಿಮ್ಮಿಂದ ನಾನು ಹತಳಾದರೆ 

ನಾನು ಪುಣ್ಯವತಿಯೇ ಸರಿ, ಆದರೆ ಸಧ್ಯ ನಾನು ಮರಣವನ್ನು ಬಯಸುತ್ತಿಲ್ಲ, 

----------------------------------------------

36 ಕಾದಂಬರಿ ಸಂಗ್ರಹ 


ನನ್ನ ತಾಯಿಯ ಹಣವು ಹೋದರೂ ಚಿಂತೆಯಿಲ್ಲ. ನೀವು ಒಮ್ಮೆ ರಂಗಪುರಕ್ಕೆ 

ಹೋಗಿ ಈ ವಿಷಯವನ್ನು ನಮ್ಮ ತಾಯಿಯ ಸಂಗಡ ವಿಚಾರಿಸಿರಿ. ನಮ್ಮ ತಾಯಿಯು 

ಇದರೊಡನೆ ಒಂದು ಕಂಠಾಭರಣವನ್ನು ಗುಪ್ತವಾಗಿ ಕೊಟ್ಟರು. ಬಳಿಕ ಅವರು 

" ನಾನು ಹಣವನ್ನಾಗಲೀ ಒಡವೆಯನ್ನಾಗಲೀ ಕೊಟ್ಟವಳಲ್ಲವೆಂದು ಹೇಳಿದರೆ 

ನನ್ನನ್ನು ತಾವು ಬೇಕಾದಹಾಗೆ ಶಿಕ್ಷಿಸಬಹುದು. ನೀವು ರಂಗಪುರಕ್ಕೆ ಹೋಗಿ ನಮ್ಮ 

ತಾಯಿಯವರನ್ನು ಕುರಿತು ಈ ವಿಷಯವನ್ನು ಹೇಗೆ ಕೇಳಬೇಕೋ ಹಾಗೆ ಪ್ರಶ್ನೆ ಮಾಡಿ 

ನಿಮ್ಮ ನಂಬಿಕೆಯನ್ನು ಸ್ಥಿರಮಾಡಿಕೊಳ್ಳಿರಿ, ಇದರಲ್ಲಿ 56 ರೂಪಾಯಿಗಳು ಮಾತ್ರ 

ನಮ್ಮ ತಾಯಿಯದು. ಮುಖ್ಯವಾಗಿ ನಾನು ಇದುವರೆಗೂ ಪಾದಸನ್ನಿಧಿಯಲ್ಲಿ 

ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ನಿಮ್ಮ ಉತ್ತರ ಬಂದಮೇಲೆ ಮಾಡಿ 

ಕೊಳ್ಳುವೆನು ಎಂದು ವಿಧವಿಧವಾಗಿ ಪ್ರಾರ್ಥಿಸಿಕೊಂಡೆನು. 


ನಾನೆಷ್ಟು ವಿಧವಾಗಿ ಬೇಡಿಕೊಳ್ಳುತ್ತಿದ್ದರೂ ಯಜಮಾನರಿಗೆ ಆದಿನವೆಲ್ಲಾ 

ಸ್ವಲ್ಪವೂ ಮನಶ್ಯಾಂತಿಯಿಲ್ಲದೆ ಹೋಯಿತು. ನನ್ನನ್ನು ಆದಿನ ಅವರು ಪದೇಪದೇ 

ಬೆತ್ತಗಳಿಂದ ಹೊಡೆಯುತ್ತಲೂ ತಿರಸ್ಕಾರ ಪೂರ್ವಕವಾದ ಬೈಗಳನ್ನು ಬೈಯುತ್ತಲೂ 

ನನ್ನ ಮುಖವನ್ನು ನೋಡಿ ಹಣಹಣೆ ಚಚ್ಚಿಕೊಳ್ಳುತ್ತಲೂ ಇದ್ದರು. ರಾತ್ರಿ ಒಂಭ 

ತ್ತುಗಂಟೆಯಾಯಿತು. ಎಲೆಯ ಮುಂದೆ ಕುಳಿತು ಯಜಮಾನರು ತುತ್ತನ್ನೆತ್ತಿದರು.  

ಒಂದೆರಡು ತುತ್ತನ್ನು ತಿನ್ನುವುದರೊಳಗಾಗಿ ನಾನು ಅವರ ಮುಂದೆ ಹೋದೆನು. 

ಅಯ್ಯೋ ! ತಿಳಿಗೇಡಿಯೇ, ನನ್ನನ್ನು ಹಾಳುಮಾಡಿದೆಯಾ, ನನ್ನ ಸುಖಕ್ಕೆ ಮುಳ್ಳನ್ನೇ 

ತಂದೊಡ್ಡಿದೆಯಾ ! ಎಂದು ಹೇಳಿ ಎಲೆಯನ್ನು ಬಿಟ್ಟಿದ್ದು ಕೈತೊಳೆದುಕೊಂಡು ಮನೆ 

ಯವರಾರಿಗೂ ಹೇಳದೆ ಮನೆಯನ್ನು ಬಿಟ್ಟು ಎಲ್ಲಿಗೋ ಹೊರಟುಹೋದರು. 


ನನಗೂ ಆದಿನ ಅನ್ನವೇ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ. ಪತಿಗೆ 

ವಂಚನೆಮಾಡಿ ಅವರಿಗೆ ತಿಳಿಸದೆ ಹಣವನ್ನಿಟ್ಟುಕೊಂಡಿದ್ದುದು ಇಷ್ಟು ಅನರ್ಥಕ್ಕೆ 

ಗುರಿಯಾಯಿತೆ ! ಈ ಹಾಳುಹಣದಿಂದ ಇಂತಹ ಭಯಂಕರ ಸಂಘಟನೆಯು ಸಂಭವಿ 

ಸಿತೇ ಎಂದು ಹೇಳುತ್ತಾ ಹಣವನ್ನು ಕುರಿತು ಇಂತು ವಿವರಿಸತೊಡಗಿದೆನು, ಎಲೆ 

ಹಣವೆ! ನೀನೇ ಮನುಷ್ಯನ ಜೀವಿತಸಾರವೆಂದು ಹೇಳುವ ಪಕ್ಷದಲ್ಲಿ ನಿನಗೆ ಇಹಪರ 

ಸೌಖ್ಯವನ್ನುಂಟುಮಾಡುವ ಶಕ್ತಿ ಇರಬೇಕು. ನಿನ್ನ ಅನುಗ್ರಹವಿಲ್ಲದಿದ್ದರೆ ಮನುಷ್ಯನ 

ಜನ್ಮವೇವ್ಯರ್ಥ, ಇಹಲೋಕದಲ್ಲಿ ಸುಖವನ್ನು ಪಡೆಯಬೇಕಾದರೆ ನೀನೇ ಸಹಾಯ 

ಮಾಡಬೇಕು. ಪರೋಪಕಾರ, ದಾನ, ಧರ್ಮಗಳ ಮೂಲಕ ಪರಲೋಕವನ್ನು 

ಹೊಂದುವುದಕ್ಕೂ ನಿನ್ನ ಸಾನ್ನಿಧ್ಯವು ಇರಬೇಕು. ಆದರೆ ನಿನ್ನಿಂದ ಎಷ್ಟು ಪ್ರಯೋಜ 

-----------------------------------------------

ನನ್ನ ಸಂಸಾರ 37 

ನಗಳಿರುವುವೋ ಅಷ್ಟು ಕೆಡಕುಗಳೂ ಇರುವವು. ಇದು ದೈವೇಚ್ಛೆಗೆ ಅಧೀನವಾದುದು. 

ಹೇಗೆಂದರೆ ಪ್ರಜೆಗಳನ್ನು ಪರಿಪಾಲಿಸುವ ಸರಕಾರವು ಲೋಕಕ್ಕೆ ಎಷ್ಟು ಹಿತವನ್ನಾಚ 

ರಿಸುವುದೇ ದುಷ್ಟರ ವಿಷಯದಲ್ಲೂ ಅದು ಅಷ್ಟು ಕಾಲಿನ್ಯವನ್ನು ತೋರಿಸಲೇಬೇಕ 

ಲ್ಲವೆ? ಜಗತ್ತಿಗೆಲ್ಲಾ ಪರಮ ಪ್ರಯೋಜನವಾಗುವಂತೆ ವರ್ತಿಸುವ ಮಳೆಯಲ್ಲಿ, 

ಸಿಡಿಲು, ಮಿಂಚು, ಗುಡುಗು, ಮುಂತಾದುವುಗಳು ಭಯಂಕರಗಳಾಗಿವೆ. ಆರೋಗ್ಯ  

ದಾಯಕನಾದ ಸೂರ್ಯನೇ ತನ್ನ ತಾಪದಿಂದ ಲೋಕವನ್ನೆಲ್ಲಾ ಪರಿತಪಿಸುವಂತೆ 

ಮಾಡುವನು. ಇದರಂತೆ ಹಣವು ನಮ್ಮ ಅನೇಕ ಕಾರ್ಯಗಳಿಗೆ ಫಲಕಾರಿಯಾಗಿ 

ಪರಿಣಮಿಸಿದರೂ ಮನುಷ್ಯನನ್ನು ನಾನಾವಿಧಗಳಾದ ಕಷ್ಟಗಳಿಗೆ ಗುರಿಮಾಡುವುದರಲ್ಲಿ 

ಆವ ಸಂದೇಹವೂ ಇಲ್ಲವೆಂಬುದನ್ನು ಯಾವಾಗಲೂ ಮರೆಯಲಾಗದು. ಪದಾರ್ಥಗ 

ಳರುಚಿಗಿಂತಲೂ ಧನರುಚಿಯು ಮಾನವರಿಗೆ ಬಲು ಇಂಪಾಗಿರುವುದು, ಒಬ್ಬನಲ್ಲಿ 

8-10 ರೂಪಾಯಿಗಳಿದ್ದರೆ ಅದು ಮುಗಿವ ವರೆಗೂ ಅವನು ಎಷ್ಟೊರಾಜಭೋಗ 

ಗಳನ್ನ ಪೇಕ್ಷಿಸ ಬಹುದು. ತನ್ನ ಸೇವೆಗೆ ಒಬ್ಬನನ್ನು ನೇಮಿಸ ಬಹುದು. ಒಬ್ಬ 

ಉಪಾಧ್ಯಾಯನನ್ನು ' ಪಾಠಹೇಳುವುದಕ್ಕೆ ಇಟ್ಟು ಕೊಳ್ಳಬಹುದು. ರುಚಿರುಚಿಯಾದ 

ಆಹಾರವನ್ನು ಬಯಸಬಹುದು. ಅಲ್ಪಧನದಿಂದಲೇ ಇಂತಹ ರಾಜಸುಖವನ್ನು ಪ್ರೇರಿ 

ರಿಸುವ ಧನವು ಹೆಚ್ಚು ಹೆಚ್ಚಾಗಿ ಬೆಳೆದಷ್ಟೂ ಎಷ್ಟೋ ಭಾವನೆಗಳನ್ನೂ ದುರಾಶೆಗೆ 

ಇನ್ನೂ ಮನಸ್ಸಿನಲ್ಲಿ ಉತ್ಪತ್ತಿ ಮಾಡಬಹುದಲ್ಲವೆ! ಹಣದೊಡನೆ ಗುಣವೂ ಬೆಳೆದರೆ 

ಅದರಿಂದ ನಮಗೆ ಸುಖಉಂಟಾಗುವುದು. ಈಗ ವಿಚಾರಮಾಡಿದರೆ ಐಶ್ವರ್ಯವಂತರು 

ಬಹಳ ಕಡಮೆಯಾಗಿಯೂ ಬಡವರು ಹೆಚ್ಚಾಗಿಯೂ ಇರುವಂತೆ ತೋರುವದು. 

ಅನೇಕ ಧನಿಕರು ಬಡವರನ್ನು ತಿರಸ್ಕರಿಸುತ್ತಾ, ಮರಳಿಮರಳಿ ದ್ರವ್ಯ ಸಂಗ್ರಹದಲ್ಲೇ 

ಅಭಿಲಾಷೆಯುಳ್ಳವರಾಗಿ, ತುಂಬಾ ಅನ್ಯಾಯವನ್ನು ಮಾಡುತ್ತಿರುವರು. ಬಡವರು 

ಜೀವನಕ್ಕೆ ಯತ್ನವಿಲ್ಲದೆ ಧನಸಂಪಾದನೆಗಾಗಿ ನ್ಯಾಯವನ್ನುಲ್ಲಂಘಿಸಬೇಕಾಗಿದೆ. 

ಅಂತೂ ಇಂತೂ ಈ ಹಣದ ಮಹಿಮೆಯಿಂದ ಪ್ರಪಂಚದಲ್ಲಿ ನ್ಯಾಯ ಪ್ರಚಾರಕ್ಕೆ 

ಅವಕಾಶವು ಕಮ್ಮಿಯಾಗುತ್ತ ಬಂದಿದೆ. 


ದ್ರವ್ಯದೇವಿಯ ಅನುಗ್ರಹವನ್ನು ಸಂಪಾದಿಸುವುದಕ್ಕಾಗಿ ಬಹು ಜನರು ಮಹಾ 

ಲಕ್ಷ್ಮಿ ವ್ರತವನ್ನು ಕಯ್ಗೊಂಡು ಆಕೆಯನ್ನು ವಿಧ ವಿಧವಾಗಿ ಅರ್ಚಿಸಿ ಅನೇಕ ವಿಧ 

ವಾಗಿ ಸ್ತೋತ್ರ ಮಾಡುವರು. ಅಂತಹ ಸ್ತೋತ್ರಜಾಲದಮೂಲಕ ಧನದೇವತೆಯನ್ನು 

ಪ್ರಸನ್ನಗೊಳಿಸುವ ಕವಿತಾ ಪ್ರೌಢಿಮೆಯು ನನ್ನಲ್ಲಿಲ್ಲ. ಆದುದರಿಂದ ನಮಗೆ ಹೊಗ 

ಳುವ ಭಟರೆಂಬ ಹೆಸರು ಬರಲಾರದು. ಆದರೆ ಆ ಧನಲಕ್ಷ್ಮಿಯು ನಮ್ಮನ್ನು ಅನುಗ್ರಹ 

----------------------------------------------

38 ಕಾದಂಬರಿ ಸಂಗ್ರಹ 


ಮಾಡದಿದ್ದರೂ ನಮ್ಮ ಮೇಲೆ ಕೋಪಿಸಿಕೊಳ್ಳದಿರಲೆಂದು ಭಾವಿಸಿ ಸ್ತೋತ್ರ ಪಾಠಾ 

ಭ್ಯಾಸ ಮಾಡಲುಪಕ್ರಮಿಸಿರುವೆವು. 


"ಎಲೌ, ಮಾನುಷ ಫಲವರ್ಧಿನಿ ! ನಿನಗೆ ಬೇಗ ಬೇಗ ನಮಸ್ಕರಿಸುವವು. ಅದ 

ರಿಂದಲೇ ನಿನು ತಡೆಯಿಲ್ಲದೆ ನಮ್ಮ ಬೊಕ್ಕಸದಲ್ಲಿ ಕುಣಿದಾಡು, ದಡ್ಡನಿಗೂ ದೊಡ್ಡ 

ದಾದ ಫಲವನ್ನು ಕೊಡುವ ದುಡ್ಡು ದೇವರೇ! ನಿನಗಿಂತಲೂ ದೊಡ್ಡದಾದ ದೇವರಿಲ್ಲವೇ 

ಇಲ್ಲ ! ಹೇ ಸರ್ವತೋಮುಖಿ ! ಸರಕಾರದ ಕೆಲಸಕ್ಕೆ ಸೇರಿದರೂ ಭೂಮಿಯ ವ್ಯವ 

ಸಾಯವನ್ನು ಮಾಡುತ್ತಿದ್ದರೂ ಕೈಗಾರಿಕೆಯನ್ನು ಕೈಗೊಂಡರೂ ವ್ಯಾಪಾರ ಮಾಡ 

ಲಾರಂಭಿಸಿದರೂ ಎಲ್ಲಾ ಕಡೆಯಲ್ಲೂ ನೀನು ಮುಖವನ್ನು ತೋರಿಸಿದ ಹೊರತು ನಿರ್ವಾ  

ಹವೇ ಇಲ್ಲ. ಎಲೌ ಧನದೇವತೆಯೇ ! ನಿನ್ನನ್ನು ಅಂಧಕಾರಾವೃತರಾಗಿಯೇ ಪೂಜಿಸು 

ವೆವು, ಏಕೆಂದರೆ ಎಚ್ಚರದಿಂದ ನಮ್ಮ ಹಣವು ಸದ್ವಿನಿಯೋಗದಲ್ಲಿ ನಿಂತರೆ ನಾವು ರಿಕ್ತ 

ಹಸ್ತರಾಗಿ ಜನರ ಅವಹೇಳನಕ್ಕೆ ಗುರಿಯಾಗುವವು. ಹೇ ತಿರಸ್ಕಾರ ವಿಮುಖಿ ! ನಿನ್ನನ್ನು 

ತಿರಸ್ಕರಿಸಿದುದರಿಂದಲೇ ಬಲಿ-ಹರಿಶ್ಚಂದ್ರ-ಕರ್ಣ-ಧರ್ಮಾದಿಗಳು ತಾವೇ ನಷ್ಟ ಪಟ್ಟರು. 

ಹೇ ? ಉಲ್ಲಾಸಿನೀ, " ಷರಟಿನ ” ಜೇಬಿನಲ್ಲಿ ಎರಡು ರೂಪಾಯಿಗಳು ಇದ್ದ ಮಾತ್ರ 

ದಿಂದಲೇ ಅಲ್ಲಾಡಿಸುವ ಉಲ್ಲಾಸವನ್ನು ಕೊಡುವ ಶಕ್ತಿಯು ನಿನ್ನದೇ ಆಗಿರುವುದು. 

ಹೇ ! ಮಂದಗಾಮಿನಿ ! ಅತ್ಯಾಶೆಯಿಂದ ನಿನ್ನನ್ಯಾಶಿಸುವವರ ಬಳಿಗೆ ಬರಲು ನೀನೇಕೆ 

ಮಂದಳಾದೆ? ಹೇ ಶೀಘ್ರಗಾಮಿನಿ !! ಒಬ್ಬರ ಬಳಿಯಿಂದ ಮತ್ತೊಬ್ಬರ ಬಳಿಗೆ 

ಅನ್ಯಾಯದಿಂದ, ವಿವೇಚನೆಯಿಲ್ಲದೆ ಹೋಗಿ ಸೇರಲು ನಿನ್ನ ನಡಿಗೆಯು ಎಷ್ಟು ಚುರು 

ಕಾಗಿರುವುದು. ಎಲೌ ಸರ್ವವ್ಯಾಪಿನಿಯೇ ! ಭೂಮಿಯಮೇಲೆ ಧನಾದಿರೂಪದಿಂದಲೂ 

ಒಳಗಡೆ ಲೋಹಾದಿರೂಪದಿಂದಲೂ ಹರಡಿರುವ ನಿನ್ನ ವ್ಯಾಪಕತೆಯು ಸರ್ವೋತ್ಕೃಷ್ಟ 

ವಾಗಿರುವುದು. ಈ ಅಜ್ಞಾನತಿಮಿರಬಹುಳಪಕ್ಷೆಯೆ ! ಅವಿವೇಕಿಯಾದ ಧನಿಕನಲ್ಲಿ 

ಎಂತಹ ಅಂಧಕಾರವನ್ನು ಅನುಗ್ರಹಿಸುವೆ ? ಹೇ ಸರ್ವಸಮದೃಷ್ಟಿಯುಳ್ಳವಳೆ ! 

ಹಾಲುಮಾರುವವಳಲ್ಲಿಯೂ ಹೆಂಡಮಾರುವವನಲ್ಲಿಯೂ ನೀನು ಎಂತಹ ಸರ್ವಸಮತ್ವ 

ವನ್ನು ವ್ಯಕ್ತಗೊಳಿಸುತ್ತಿರುವೆಯೆಂಬುದು ಪರಮಾಶ್ಚರ್ಯಕರವಾಗಿರುವುದು, ಹೇ! ದಾರಿ 

ದ್ರಾಂಬುಧಿತರಣೆ ! ಭವರೋಗಭಿಷಜೆ ! ಪ್ರಾಣದಾಯಿನಿ !! ಪ್ರಾಣಾಪಹಾರಿಣಿ !! 

ಪ್ರತಿಷ್ಠಾ ಪ್ರದಾಯಿನಿ !! ಮಹಾಪರಾಧಗೋಪನೆ!! ಪೌರುಷಪ್ರಕಾಶೆ !! ಜನ ವಶೀಕರೆ!! 

ಮಿಥ್ಯಾ ಸ್ತುತಿ: ಫಲಪ್ರದಾಯಿನಿ !! ಅಜ್ಞಾನಾಂಧಕಾರ ಕೂಪಪತನ ಸಾಹಾಯೈ!! 

ಸೈತರ ದೈವಜ್ಞಾನವಿನಾಶಿನೀ !! ಅನ್ಯಾಯಾರ್ಜಿತಜನಪಕ್ಷಪಾತೆ !! ಜಯ! ವಿಜಯ!! 

ನಿನ್ನ ಅದ್ಭುತ ಮಹಿಮೆಯನ್ನಾರು ವರ್ಣಿಸಲಾಪರು. ಹೇ ನ್ಯಾಯೋಲ್ಲಂಘನ ಶಿಕ್ಷಣ 

-----------------------------------------------

ನನ್ನ ಸಂಸಾರ 39 

ವಿಪಕ್ಷಣ ಚತುರೆ !! ವಿವೇಚನಾವಿರಹಿತಜನ ಗೌರವಪ್ರದಾಯಿನಿ !!  ಕೊಲೆಗಾರರು 

ನಿಷ್ಕಲ್ಮಷರಾಗುವುದು ನಿನ್ನಿಂದಲೇ ! ಬಡವರು ಹಣವನ್ನು ಇಟ್ಟು ಕೊಂಡಿದ್ದರೆ ಕಳ್ಳ 

ರೆಂದು ಸಮರ್ಥಮಾಡುವ ವಿವೇಕವು ನಿನ್ನ ಮಹಿಮೆಯೇ ! ರಾಜಚರಿತೆಗಳು ಮಿಥ್ಯಾ 

ಸ್ತುತಿಯಿಂದ ತುಂಬುವುದು ನಿನ್ನಿಂದಲೇ ! ಒಬ್ಬನು ಮತ್ತೊಬ್ಬನಿಗೆ ಪರಲೋಕಯಾತ್ರೆ 

ಯನ್ನು ಮಾಡಿಸುವುದು ನಿನ್ನಿಂದಲೇ ! ಸುಳ್ಳಾದ ಸಾಕ್ಷ್ಯಗಳಿಗೆ ನಿಜ ಸ್ಥಾಪನೆ 

ಯಾಗುವುದೂ ನಿನ್ನಿಂದಲೇ ! ಅಣ್ಣ ತಮ್ಮಂದಿರನ್ನೂ ಹೆಂಡತಿಮಕ್ಕಳನ್ನೂ ಮಾತಾ 

ಪಿತೃಗಳನ್ನೂ ತೊರೆಸಿಬಿಡುವ ಮಹಿಮೆಯೂ ನಿನ್ನದೇ ! ಓರಗಿತ್ತಿಯರನ್ನು ಓಡಿಸಿಬಿಡು 

ವವನೂ ನೀನೇ! ಲಂಚ ಮುಂತಾದವುಗಳ ರೂಪದಿಂದ ಎಷ್ಟೋ ಜನರ ಮನೆಯನ್ನು 

ಹಾಳುಮಾಡಿದಾಗ್ಯೂ ಕೆಲವರಿಗಾದರೂ ಉಪಕಾರಮಾಡುತ್ತಿರುವ ನಿನ್ನ ಕಾರುಣ್ಯವು 

ಅನ್ಯಾದೃಶವಾದುದು. ದಿಟವನ್ನು ಸಟೆಯನ್ನಾಗಿಯೂ ಸಟೆಯನ್ನು ದಿಟವನ್ನಾಗಿಯೂ 

ಕನಿಷ್ಕನನ್ನು ಜ್ಯೇಷ್ಠನನ್ನಾಗಿಯೂ, ಜ್ಯೇಷ್ಠನನ್ನು ಕನಿಷ್ಟನನ್ನಾಗಿದ್ದು ಉತ್ತಮ 

ಜಾತಿಯನ್ನು ನೀಚಜಾತಿಯನ್ನಾಗಿಯೂ ನೀಚಜಾತಿಯನ್ನು ಉತ್ತಮಜಾತಿಯ 

ನ್ನಾಗಿಯ ಮಾಡುವ ನಿನ್ನ ಶಕ್ತಿಯು ಅನ್ಯಾದೃಶವಾದುದು. ಈ ಅಮೃತಕವಚ 

ಶೋಭಿತಪಿಪಾಶಯೆ ! ಮಲಿನೀಕೃತ ಮಹಾಶಯೆ ! ಜಡೀಕೃತದೃಡಾಶಯೆ! ಅಧರೀಕೃತ 

ಬುಧಾಶಯ ! ನಿಷ್ಪಂದೀಕೃತ ಭಾವಾಶಯೆ ! ತೃಣೀಕೃತ ಗುಣಾಶಯ ! ಯಾವ 

ಉತ್ತಮ ಗುಣವಂತನನ್ನು ನೀನು ಮಲಿನನನ್ನಾಗಿ ಮಾಡಲಿಲ್ಲ ? ಯಾವ ಸತಿಯ 

ಸತೀತ್ವವನ್ನು ಅವಮಾನಗೊಳಿಸಲಿಲ್ಲ? ನಿಶ್ಚಯಮನಸ್ಕಳಾದ ಯಾವ ಸತ್ಯವತಿಯನ್ನು 

ಕಳ್ಳಳನ್ನಾಗಿ ಮಾಡಲು ಪ್ರಯತ್ನಿಸಲಿಲ್ಲ? ಯಾವ ಯಾವ ಅನ್ಯಾಯಗಳು ಬೇಕಾ 

ದರೂ ಎಲ್ಲವುಗಳಿಗೂ ಸಹಾಯಮಾಡಲು ಬದ್ದ ಕಂಕಣಳಾದ ನಿನ್ನ ವಿಶುದ್ದ ಮಂತ್ರಿತ್ವ 

ವನ್ನು ಎಷ್ಟೆಂದು ಹೊಗಳಲಾಗುವುದು. ಅಲ್ಪಜ್ಞಳಾದ ನನಗೆ ನಿನ್ನನ್ನಂತು ಹೊಗಳ 

ಬೇಕೋ ಅದು ತಿಳಿಯದು, ಇಷ್ಟವಿದ್ದರೆ ಮೇಲಣ ಸ್ತುತಿಯನ್ನು ಸ್ವೀಕರಿಸು. ಇಲ್ಲ 

ವಾದರೆ ಪಾಠಕರ ಪತನಕ್ಕೇ ಬಿಟ್ಟು ಬಿಡು. ನಿನ್ನಿಂದಲೇ ಎಲ್ಲವೂ ಆಗಬಹುದೆಂಬ 

ಭಾವನೆಯಿದ್ದರೂ ಇತರ ಸಹಾಯವಿಲ್ಲದ ನಿನ್ನ ನುಗ್ರಹವು ಪ್ರಯೋಜನವಿಲ್ಲವೆಂಬ 

 ಭಾವನೆಯಿಂದ ನಿನ್ನ ಸ್ತುತಿಯನ್ನು ಇಷ್ಟಕ್ಕೇ ಸಾಕುಮಾಡಿರುವೆನು. 

(ವಿವೇಕಮಂಜರಿ.) 


ಹೀಗೆ ಹಣವನ್ನು ಹೊಗಳುತ್ತಿರುವಾಗಲೇ ನನಗೆ ನಿದ್ದೆ ಬಂದುಬಿಟ್ಟಿತು. ನಿದ್ದೆ 

ಯೂ ಚೆನ್ನಾಗಿ ಬಂದಿತು. ಲೋಕದಲ್ಲಿ, ಹೊಸದಾಗಿ ಏನಾದರೊಂದು ಕೆಟ್ಟ ಕೆಲಸ 

ಮಾಡಿದವರಿಗೂ, ಅವಮಾನವಾದವನಿಗೂ, ದುಃಖಪ್ರಾಪ್ತಿಯಾದವನಿಗೂ, ಪ್ರಯತ್ನ 

----------------------------------------------

40 ಕಾದಂಬರಿ ಸಂಗ್ರಹ  


ವಿಲ್ಲದೆ ಅತ್ಯಂತ ಸಂತೋಷವೊದಗಿದವನಿಗೂ, ವಾಂಛಿತಫಲವು ಕೈಗೂಡುವದು ಸ್ವಲ್ಪ 

ದಿವಸವಿದೆ ಎಂದು ಯೋಚಿಸುವವನಿಗೂ, ಮದುವೆ, ನಿಷೇಕ, ಪರೀಕ್ಷಾ ಫಲಿತಾಂಶ, 

ಸೆರೆಮನೆಯ ಬಿಡುಗಡೆ, ಮುಂತಾದವು ಹತ್ತಿರದಲ್ಲಿದ್ದವನಿಗೂ, ರೋಗಿಗೂ, ನಿದ್ದೆಯು 

ಹತ್ತುವುದಿಲ್ಲ. ನನಗೆ ಯಾವ ಯೋಚನೆಯೂ ಇಲ್ಲದ್ದರಿಂದ ನಿದ್ದೆಯು ಚೆನ್ನಾಗಿ 

ಹತ್ತಿತು. ನಿದ್ದೆ ಹತ್ತಿದಾಗ ನಿದ್ದೆಯ ಮಧ್ಯದಲ್ಲಿ ಹಗಲು ನಡದ ಹಣದ ವಿಚಾರ 

ಗಳು ಕನಸಿನರೂಪವಾಗಿ ಭಾಸಿಸುತ್ತಿದ್ದುವು. 


VIII 

ಬೆಳಗಾಯಿತು. “ಉದ್ಯೋಗಿಗಳು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾದರು. 

ನಮ್ಮ ಅಮ್ಮನವರೂ, ನಮ್ಮ ತಾತನೂ ಅದೇದಿನ ಆವಶ್ಯಕವಾದ ಕೆಲವು ಗೃಹಕೃ 

ತ್ಯಗಳಿಗಾಗಿ ಹರಪುರಕ್ಕೆ ಪ್ರಯಾಣಮಾಡಿದರು. ಆದಿನ ಮನೆಯಲ್ಲಿ ನಾನೂ, ಅಕ್ಕ, 

ಭಾವ ಇಷ್ಟು ಮಂದಿಮಾತ್ರವೇ ಇದ್ದೆವು. ನನ್ನನ್ನು ಆದಿನ ಯಾರೂ ಮಾತನಾಡಿಸ 

ಲಿಲ್ಲ. ಮಧ್ಯಾಹ್ನವಾಯಿತು, ಎಲ್ಲರಿಗೂ ಊಟವಾಯಿತು. ನಾನೂ ಹೇಗೋ ಊಟ 

ಮಾಡಿದೆನು. ಮದ್ಯಾಹ್ನ ಮೂರುಗಂಟೆಯ ಸಮಯದಲ್ಲಿ ಅಂಚೆಯ ಜವಾನನು 

ಬಂದು ನನ್ನ ಹೆಸರಿಗೊಂದು, ನಮ್ಮ ಭಾವನವರ ಹೆಸರಿಗೊಂದು ಈ ರೀತಿ ಎರಡು 

ಕವರುಗಳನ್ನು ಕೊಟ್ಟು ಹೊರಟುಹೋದನು. ಅವೆರಡು ತಂತಿಯ ಮೂಲಕ ಬಂದ 

ಕವರುಗಳಾಗಿದ್ದುವು. ಟಪಾಲಿನ ಮುದ್ರೆಯು ಇರಲಿಲ್ಲ. ಒಡೆದು ನೋಡಲು ರಂಗ 

ಪುರದಿಂದ ನಮ್ಮ ಯಜಮಾನರಕಡೆಯಿಂದ ಬಂದ ತಂತೀವರ್ತಮಾನವೆಂದು ತಿಳಿದು 

ಬಂದಿತು. ಅವೆರಡಕ್ಕೂ ಏನು ವಿಚಾರವಿರುವುದೆಂಬುದನ್ನು ತಿಳಿಯಲು ನಮ್ಮ ಪಾಠ 

ಕರು ಕುತೂಹಲಿಗಳಾಗಿರುವುದರಿಂದ ಅದನ್ನು ಒಂದೊಂದಾಗಿ ಈ ಕೆಳಗೆ ಬರೆ 

ಯುವೆನು. 


ನಮ್ಮ ಭಾವನವರಿಗೆ ಬಂದವರ್ತಮಾನ. 

ನಾನು ನಿನ್ನೆ ರಾತ್ರಿ ಇಲ್ಲಿಗೆ ಬಂದು ಸ್ನೇಹಿತರೊಬ್ಬರ ಮನೆಯಲ್ಲಿ ಮಲಗಿದ್ದೆನು. 

ಬೆಳಗಾದಮೇಲೂ ನಮ್ಮ ಮಾವನವರ ಮನೆಗೆ ಹೋಗಲಿಲ್ಲ. ಅವರ ಮನೆಗೆ ಊಟಕ್ಕೆ 

ಹೋಗಲು ನನಗೆ ಇಷ್ಟವಿಲ್ಲದೆ ಸರ್ಕಾರದ ಛತ್ರದಲ್ಲಿ ಊಟಮಾಡಿಕೊಂಡು ಬಳಿಕ 

ನಮ್ಮ ಮಾವನವರ ಮನೆಗೆ ಹೋಗಿ ಒಂದೆರಡುಗಳಿಗೆ ಯಾವ ಯಾವುದೋ ಮಾತನ್ನಾ 

ಡುತ್ತ ಕುಳಿತಿದ್ದೆನು. ಆಗ ಅತ್ತಮ್ಮನವರು ನಡುಮನೆಯಲ್ಲಿ ಊಟದೆಲೆಯನ್ನು ಹಚ್ಚುತ 

ಕುಳಿತಿದ್ದರು. ಎಷ್ಟು ಹೊತ್ತಾದರೂ ಈಚಿಗೆಬರಲಿಲ್ಲ. ಒಂದೆರಡು ಗಳಿಗೆಯಾದನಂತರ 

ನಾನೇ ನಡುಮನೆಗೆ ಹೋಗಿ, ಅತ್ತಮ್ಮನವರನ್ನು ನಿರ್ದೆಶಿಸಿ : ನೀವು ನಿಮ್ಮ ಮಗಳಿಗೆ 

----------------------------------------------

ನನ್ನ ಸಂಸಾರ 41 

 

ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು 

ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ 

ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ  ಹೊಂದಿದರೆಂದು 

ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ 

ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, 

ಏನೂ ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು. 

ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು ಅಂಜು ಅಂಜುತ್ತ 

ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಆಡುವಿನ ಅಡ್ಡಿಕೆಯನ್ನೂ 

ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ 

ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ 

ನಿನ್ನೆ ನಿಮ್ಮ ಸೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ 

ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. 

ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ 

ತಿಯು ಹೇಳಿದ ಮಾತು ನಿಜವಾಗಿರುತ್ತದೆ. ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು 

 ಉತ್ತರವಾದಿಗಳಲ್ಲ. ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು. 

ರಂಗಪುರಿ, ಇತಿ ವಿಜ್ಞಾಪನಾ. 

16-1-17. H. V. SASTRY. 

----

ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ. 

ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ಚಯಿ 

ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ 

ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ 

ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ ಒಂದು 

ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ 

ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ, ಅವರು ಸಂತೋಷದಿಂದ ಹಣವನ್ನು 

ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ 

ಈ ವಿಷಯವನ್ನು ಹೇಳದೆ ಗೋಷ್ಠಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾವ 

------------------------------------------------

42 ಕಾದಂಬರಿ ಸಂಗ್ರಹ 


ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿ 

ತನವನ್ನೂ, ಹುರುಡನ್ನೂ, ಮೌಗ್ದ್ಯಯವನ್ನೂ, ಪರಿತ್ಯಜಿಸು. ನಾನು ನಾಳೆಯದಿನ 

ಸಾಯಂಕಾಲ ಅಲ್ಲಿಗೆ ಬರುತ್ತೇನೆ. 

ರಂಗಪುರಿ, ಇತ್ಯಾಶಿಷಃ 

16-1-17. H, V, SASTRY. 

----

ಕಾಗದವನ್ನು ನೋಡಿ ನನಗೆ ಒಹು ಸಂತೋಷವಾಯಿತು. ಮತ್ತು ನಾನು 

ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ 

ತಕ್ಕ ಪ್ರಾಯಶ್ಚಿತ್ತಕ್ಕಾಗಿ "ಉದ್ಯಂಧನೆಂವಾ ವಿಷಭಕ್ಷಣಂವಾ ಕೃತ್ಯಾನುಷ್ಠೆ.” 

ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ 

ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ, ನಾನು ನನ್ನಲ್ಲಿದ್ದ ಹಣದ 

ವಿಷಯವನ್ನು ನನ್ನ ಯಜಮಾನುಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯ 

ವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ 

ಮೇಲೆ ನಾನು ಹರ್ಷಾಕ್ರಾಂತಳೇನೋ ಆದೆನು. ಆದರೆ ಕಿಂಚಿತ್ಕಾಲ ನನ್ನ ಯಜಮಾ 

ನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ ನಾನು ಇನ್ನು ಬದುಕಿ ಏನು 

ಪ್ರಯೋಜನ. ಆದುದುಂದ ಹೇಗಾದರೂ ಈ ಪ್ರಾರ್ಥಿನ ದೇಹವನ್ನು ಸಂಹಭೂತ 

ಗಳಲ್ಲಿ ಐಕ್ಯ ಮಾಡುವುದೇ ಸುಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು 

ಅವರ ಪಾದತಲದಲ್ಲಿ ಸಮರ್ಪಿಸಿ, ಜಪ ಮಾಡಬೇಕೆಂದು ನಿಶ್ಚಯಿಸಿಕೊಂಡೆನು. 

ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊ 

ಡನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಥ 

ವಾಗಲಿಲ್ಲ. ಆದರೂ ಕಷ್ಟದಿಂದಲೂಹಿಸಿನೋಡು, ಅಪರಾಧಿಯಾದ ಹೆಂಡತಿಯ 

ಗುಣವನ್ನು ಮುಚ್ಚಿಡುವುದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವ 

ನವರು ತಮ್ಮನ ವಿಷಯದಲ್ಲಿ ನಿಷ್ಕರ್ಷಿಸಿರುವರೆಂದು ತಿಳಿದು ಬಂದಿತು. ಏನಾದರೂ 

ಆಗಲಿ, ಹೇಗಾದರೂ ಹೋಗಲಿ, ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ. 

ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ 

ಮುಖ್ಯವಾಗಿ ಬೇಕಾದುದು. 


ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇ 

ಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ  

--------------------------------------------

ನನ್ನ ಸಂಸಾರ 43 

ಸ್ಸಿನಲ್ಲಿ ಹರ್ಷಾಶ್ವರ್ಯ ವ್ಯಸನಗಳು ಸಂಮಿಳಿತವಾಗಿದ್ದುವು. ನಾನು ನಮ್ಮ ಯಜ 

ಮಾನರನ್ನು ಬಹು ವಿಧವಾಗಿ ಪ್ರಾರ್ಥಿಸಿದನು. ಪತಿಗೆ ವಂಚನೆಮಾಡಿ ಆತನ ಮನಸ್ಸಿಗೆ 

ಬೇಸರ ಪಡಿಸಿದವಳು ಬದುಕಿರುವುದಕ್ಕಿಂತಲೂ ಸಾಯುವುದುಮೇಲೆಂದು ಅವರೊಡನೆ 

ಹೇಳಿ ಮಗುವನ್ನು ಎರಡುಬಾರಿ ಮುದ್ದಿಸಿ ನಮ್ಮ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿ 

ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವಿಷಯವನ್ನು ಅವರೊಡನೆ ವಿಜ್ಞಾಪಿಸಿಕೊಂಡೆನು. 

ಆಗ ಯಜಮಾನರು ಚಕಿತರಾಗಿ ನನ್ನನ್ನೇ ದಿಟ್ಟಿಸಿನೋಡುತ್ತಾ ನನ್ನೆರಡು ಕೈಗಳನ್ನೂ 

ಹಿಡಿದೆಳೆದು ತಮ್ಮ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ಇಂತು ಉಪದೇಶಿಸಲಾರಂಭಿಸಿದರು. 


ಮುಗ್ಧೆ ! 

ನಿನಗಿನ್ನೂ ಪ್ರಾಪಂಚಿಕ ವ್ಯವಹಾರಜ್ಞಾನವೂ ಗೃಹಿಣಿಯ ವೃತ್ತವೂ ಚೆನ್ನಾಗಿ 

ತಿಳಿದಿಲ್ಲ. ಈಗ ನಮ್ಮ ಮನೆಯಲ್ಲಿ ಸಂಘಟಿಸಿರುವ ಹಣದ ವಿಷಯವು ನಿನ್ನನ್ನು 

ಒಳ್ಳೆಯ ಗೃಹಿಣಿಯನ್ನಾಗಿ ಮಾಡಲು ನಡೆದಂತೆಯೇ ಭಾವಿಸುತ್ತೇನೆ. ನಿನ್ನ ಮನ ಸ

್ಸಿನಲ್ಲಿ, ನನ್ನ ಹಣವೂ ಹೋಗಿ ನಿಷ್ಕಾರಣಾಪವಾದಕ್ಕೂ ಪಾತ್ರಳಾಗಬೇಕಾಗಿ ಬಂದಿ 

ತಲ್ಲಾ ಎಂಬ ಯೋಚನೆಯು ಪ್ರಬಲವಾಗಿರಬಹುದು. ಹಣ ಹೋದರೆ ಹೋಗಲಿ. ಅದ 

ಕ್ಕಾಗಿ ನೀನು ಚಿಂತಿಸಬೇಡ, ನಿಮ್ಮ ತಾಯಿಯನ್ನು ಕೇಳಿದಾಗಲೇ ನೀನು ನಿರಪರಾಧಿನಿ 

ಯೆಂದು ನನಗೆ ಗೊತ್ತಾದುದು. ಇಷ್ಟು ಅನರ್ಥಗಳಿಗೂ ಮೂಲಕಾರಣರು ನಿಮ್ಮ 

ತಾಯಿ ತಂದೆಗಳೆಂದು ಭಾವಿಸಿಕೊ. ನಿಮ್ಮ ತಾಯಿಯು ನಿನ್ನಲ್ಲಿ ಹಣವನ್ನು ಕೊಡು 

ವಾಗ ನಿಮ್ಮ ಯಜಮಾನರಿಗೆ ಈ ವಿಷಯವನ್ನು ತಿಳಿಸಬೇಕೆಂದು ಹೇಳದೆ ಇದ್ದುದು 

ಅವರ ಮುಖ್ಯ ತಪ್ಪು. ನಿನಗಾದರೂ ಮೌಗ್ಧ್ಯವುಂಟಾಗಿ ಆ ವಿಚಾರವನ್ನು ನನ್ನೊಡನೆ 

ತಿಸದಿದ್ದುದು ನಿನ್ನ ತಂಪು ನಮ್ಮ ಮನೆಯಲ್ಲಿ ಹಣ ಹೋಯಿತೆಂದು ಚರ್ಚಿಸಿದ್ದಾಗ 

ಲಾಗಲೀ ಪೆಟ್ಟಿಗೆಗಳನ್ನು ಶೋಧಿಸಬೇಕೆಂಬ ವಿಚಾರ ಬಂದಾಗಲಾಗಲೇ ನೀನು ಈ ವಿಷ 

ಯವನ್ನು ಯಾರೊಡನೆಯೂ ಹೇಳದೇಹೋದೆ. ಹೀಗೆ ಹೇಳದಿರುವುದರ ಕಾರಣವನ್ನು 

ನಾನುಬಲ್ಲೆ. ನಿನ್ನ ಭೀರುಸ್ವಭಾವವೂ, ಮಾತೃರಹಸ್ಯೋಪದೇಶಮಂತ್ರವೂ, ಅವಿವೇ 

ಕವೂ ಸಿನಗೆ ಆಗ ಅಜ್ಞಾನವನ್ನು ತಂದಿಟ್ಟಿತು. ಲೋಕದಲ್ಲಿ ತಂದೆ ತಾಯಿಗಳು 

ಹೆಣ್ಣುಮಕ್ಕಳಿಗೆ, ಪತಿಸೇವಾ ಧರ್ಮವನ್ನು ತಿಳಿಯಿಸದೆ, ಆತನ ಮನಸ್ಸನ್ನು ಪ್ರಸನ್ನ ವಾ 

ಗಿರುವಂತೆ ಇಡಲು ತಕ್ಕಂತೆ ಉಪದೇಶಿಸದೆ ನಿನ್ನ ತಂದೆತಾಯಿಗಳಂತೆ ಇಂತಹ ಮನೆ 

ಹಾಳು ರಹಸ್ಯಗಳನ್ನೂ ಮಕ್ಕಳುಗಳಿಗೆ ಹಠಮಾರಿತನವನ್ನೂ ಒಡವೆಗಾಗಿ ಗಂಡನನ್ನು 

ಪೀಡಿಸಬೇಕೆಂಬುದನ್ನು, ಇನ್ನೊಬ್ಬರನ್ನು ನೋಡಿ ಹುರುಡು ಹತ್ತಬೇಕೆಂಬುದನ್ನು ಉಪ 

ದೇಶಿಸಿದರೆ ಲೋಕದಲ್ಲಿ ಯಾವ ಸಂಸಾರವೂ ನೆಟ್ಟಗಾಗಲಾರದು. ತನ್ನ ಮನೆಗೆ ತಾನೇ  

------------------------------------------------

44 ಕಾದಂಬರಿ ಸಂಗ್ರಹ 


ಬೆಂಕಿ ಹಚ್ಚಿಕೊಂಡು ಜ್ವಾಲೆಯು ಸರ್ವತ್ರವ್ಯಾಪಿಸಿದಾಗ ಪಶ್ಚಾತ್ತಾಪ ಪಡುವರಂತೆ 

ನಿನ್ನ ತಾಯಿಯ ಸ್ಥಿತಿಯಾಯಿತು. ನೀನು ಇದನ್ನೆಲ್ಲಾ ಮನಸ್ಸಿನಲ್ಲಿ ಚೆನ್ನಾಗಿ ಆಲೋ 

ಚಿಸು. ಇನ್ನು ಮುಂದಾದರೂ ನಿನ್ನ ಎಚ್ಚರಿಕೆಯಲ್ಲಿ ನೀನಿರು, ನೀನು ಈಗ ಕಳೆದುಕೊಂಡ 

ಹಣವು ನೀತಿಬೋಧೆಗಾಗಿ ಗುರುಗಳಿಗೆ ಕೊಟ್ಟ ದಕ್ಷಿಣೆಯೆಂದು ತಿಳಿದುಕೊ, ಈಗ 

ಹಣ ಹೋದ ವಿಚಾರವು ನಡೆಯದಿದ್ದರೆ ಇಷ್ಟು ಸಂಘಟನೆಗಳು ಉಂಟಾಗುತ್ತಿರಲಿಲ್ಲ. 

ನಿನಗೆ ಚೆನ್ನಾಗಿ ಬುದ್ದಿಯೂ ಬರುತ್ತಿರಲಿಲ್ಲ. ನಿನ್ನ ತಂದೆ ತಾಯಿಗಳ ಹಿತೋಪದೇಶವು 

ಹೀಗೆಯೇ ಬೆಳೆದು ನಮ್ಮಿಬ್ಬರನ್ನೂ ಬಹುಕಷ್ಟಕ್ಕೆ ಗುರಿಮಾಡುತ್ತಿದ್ದಿತು. ಈಗ ನಾನು 

ಮಾಡಿದ ಉಪದೇಶವೂ ನಿನಗೆ ಲಭಿಸುತ್ತಿರಲಿಲ್ಲ. ಪ್ರಿಯೆ ! ಭಾವಿಸು ! ಚೆನ್ನಾಗಿ 

ಯೋಚಿಸು. ! ಈಗ ನಿನಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಅಪಮಾನವು ನಿನ್ನ ಭವಿಷ್ಯ 

ತ್ಸುಖಾಭಿವೃದ್ಧಿಗೆ ಹೌದೋ ಅಲ್ಲವೋ ಹೇಳು. ಇನ್ನೂ ಕೇಳು, ಲೋಕದಲ್ಲಿ ಕೆಲವು 

ಮಂದಿ ಮೂರ್ಖಸ್ತ್ರೀಯರು ತಮ್ಮ ಗಂಡಂದಿರನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ 

ಉಪಾಯವನ್ನು ಹುಡುಕುತ್ತಾರೆ. ಇಂತಹ ಸ್ತ್ರೀಯರಿಗೆ ತಕ್ಕ ಉಪದೇಶಕರೂ ಸಿಕ್ಕು 

ತ್ತಾರೆ. ಪಂಚಾಕ್ಷರೀಪುರಶ್ಚರಣೆ, ತಾಯತೀ, ಭಸ್ಮವೇ, ಮುಂತಾದ ಔಷಧಪ್ರ 

ಯೋಗ, ಹಸುರು ಹಾಕುವುದು, ಇಂತಹ ಕಪಟಮಾಯಾ ವಿದ್ಯೆಯನ್ನು ಆ ಉಪದೇಶ 

ಕರಾದ-ಮೋಸಗಾರರಾದ-ನೀಚಸ್ತ್ರೀಯರು ಮುಗ್ಗೆಯರಾದ ಹೆಣ್ಣು ಮಕ್ಕಳಿಗೆ ಕಲಿಸಿ 

ಬಿಡುತ್ತಾರೆ. ಇದರಿಂದ ಶ್ರಮಪಟ್ಟು ಸಂಪಾದಿಸಿದ ದ್ರವ್ಯವು ವ್ಯಯವಾಗಿ ಆ ದುಷ್ಟ 

ಹೆಂಗಸರ ದುರ್ಬೋಧನೆಯಿಂದ ಆ ಸ್ತ್ರೀಯರ ಮರ್ಯಾದೆಯ ಉಳಿಯುವುದಿಲ್ಲ. 

ಸ್ತ್ರೀಯರು ಇವರ ಹೇಳಿಕೆಯಂತೆ ಅನೇಕ ಅಧರ್ಮದ ಕೆಲಸಗಳನ್ನು ಮಾಡಿ ಜನರಲ್ಲಿ  

ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಫಲಿತಾರ್ಥವು ಇಷ್ಟರಿಂದಲೇ ಕೊನೆ 

ಗಾಣುವುದಿಲ್ಲ. ಈ ಮೋಸಗಾರರು ತಮ್ಮ ಮಾತು, ನಿಜವೆಂದು ತೋರ್ಪಡಿಸಿಕೊಳ್ಳ 

ಲಿಕ್ಕಾಗಿ, ಈ ಔಷಧವನ್ನು ಇಂತಹ ವೇಳೆಯಲ್ಲಿ ಈ ವಿಧದಲ್ಲಿ ನಿನ್ನ ಗಂಡನಿಗೆ ಏನಾ 

ದರೂ ರುಚಿಯಾದ ತಿಂಡಿಯಲ್ಲಿ ಬೆರಸಿಕೊಡು, ಇದರಿಂದ ನೀನು ಹೇಳಿದಂತೆ ಅವನು 

ನಡೆಯುತ್ತಾನೆಂದು ಹೇಳಿ, ಏನೋ ಒಂದು, ಕಲ್ಲೋ, ಮಣ್ಣ, ಬೂದಿಯೋ, ಹಸರು 

ಸಪ್ಪೋ ಏನಾದರೊಂದನ್ನು ಕೊಟ್ಟುಬಿಡುತ್ತಾರೆ. ಬುದ್ಧಿಹೀನರಾದ ಹೆಂಗಸರು 

ಆ ಉಪದೇಶಕ್ಕೆ ಮರುಳಾಗಿ ಆ ಔಷಧಗಳನ್ನು ತಮ್ಮ ಗಂಡಂದಿರಿಗೆ ಯಾವಾಗಲಾ 

ದರೂತಿನ್ನಿಸಿಬಿಡುತ್ತಾರೆ. ಆ ಔಷಧಗಳ ಸ್ವಭಾವವನ್ನು ಪರೀಕ್ಷಿಸುವಷ್ಟು ಬುದ್ಧಿ 

ಇವರಿಗಿರುವುದಿಲ್ಲ. ಇವುಗಳಲ್ಲಿ, ತಾಮ್ರ, ಪಾದರಸ, ಪಾಷಾಣ, ಮುಂತಾದ ಅಪಕ್ವ 

ಭಸ್ಮಗಳೂ ಅಪಾಯಕರಗಳಾದ-ಬುದ್ದಿಯನ್ನು ಕೆಡಿಸಿಬಿಡುವ-ದೀರ್ಘರೋಗಿಗಳ 

-------------------------------------------

ನನ್ನ ಸಂಸಾರ 45 

ನ್ನಾಗಿ ಮಾಡುವ ಹಸುರು ರಸಗಳೂ ಸೇರಿರುತ್ತವೆ. ಈ ಔಷಧಗಳು ಹೊಟ್ಟೆಗೆ ಹೋದ 

ಸ್ವಲ್ಪ ಕಾಲದಲ್ಲಿ ಪ್ರಾಣವನ್ನು ಸಹ ಹಾಳುಮೂಡಿಬಿಡುತ್ತವೆ. ಬುದ್ದಿಯಿಲ್ಲದ ಹೆಂಗ 

ಸರು ಆಮೋಸಗಾರರ ಸುಳ್ಳು ಮಾತುಗಳನ್ನು ನಂಬಿ ಗಂಡಂದಿರನ್ನು ವಶಮಾಡಿಕೊ 

ಳ್ಳಬೇಕೆಂದು ಇಂತಹ ಅಪಾಯಕರಗಳಾದ ಪದಾರ್ಥಗಳನ್ನು ಅವರ ಹೊಟ್ಟೆಗೆ ಹಾಕಿ 

ಪ್ರಾಣಭಯವನ್ನುಂಟು ಮಾಡುತ್ತಾರೆ. ಇದಕ್ಕಾಗಿ-ಗಂಡನ --- ಸ್ವಾಧೀನಕ್ಕಾಗಿ--- 

ಯಾವ ಮಂತ್ರತಂತ್ರಗಳೂ ಇಲ್ಲ. ಇಂತಹ ನಡತೆಗಳು ಎಂದಾದರೊಂದುದಿನ 

ಗಂಡಂದಿಗೆ ತಿಳಿಯದೆ ಹೋಗದು. ಆಗ ಹೆಂಡತಿಯರ ಮೇಲಿನ ಅಭಿಮಾನವು ಅವ 

ರಿಗೆ ಸುತರಾಂ ತಪ್ಪಿಯೂ ಹೋಗುತ್ತದೆ. 


ಗಂಡನನ್ನು ಉಪಾಯದಿಂದ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ಚಮ 

ತ್ಕಾರಗಳಿವೆ. ಅದನ್ನು ಹೇಳುವೆನು ಕೇಳು. ಹೆಂಡತಿಯ ನಡತೆ ಗಂಡನ ಮನಸ್ಸಿಗೆ 

ಒಪ್ಪು ವಂತಿರಬೇಕು. ಗಂಡನಿಗೆ ಅಪಿತವಾದುದನ್ನೆ೦ದಿಗೂ ಮಾಡಬಾರದು. ಅವರೆ 

ದುರಿಗೆ ಗಟ್ಟಿಯಾಗಿ ಮಾತನಾಡಬಾರದು. ಅವರ ಮನಸ್ಸಿಗೆ ಆಯಾಸವನ್ನುಂಟುಮಾ 

ಡಬಾರದು, ಅವರನ್ನು ಎಂದಿಗೂ ನಿರಾಕರಿಸಬಾರದು. ಎಷ್ಟು ಕಷ್ಟ ಬಂದರೂ ಧರ್ಮ 

ಮಾರ್ಗವನ್ನತಿಕ್ರಮಿಸಬಾರದು. ಗಂಡನು ಯಾವ ಸಮಯದಲ್ಲಿ ಏನು ಕೆಲಸವನ್ನು 

ಹೇಳುತ್ತಾನೋ ಅದನ್ನು ತಕ್ಷಣವೇ ಆತನಿಗೆ ತೃಪ್ತಿಕರವಾಗುವಂತೆ ಮಾಡಬೇಕು. ಈ 

ಕೆಲಸವನ್ನು ನಾನು ಮಾಡೆನೆಂದಾಗಲೀ ನನಗೆ ಬೇಜಾರಾಗುವುದಾಗಲೀ ಹೇಳಬಾ 

ರದು. ಆಕೆಲಸವು ತಮ್ಮಿಂದಾಗದ ಪಕ್ಷದಲ್ಲಿ ನಮ್ರತೆಯಿಂದ ಅದರ ಕಾರಣವನ್ನು 

ಅವರಿಗೆ ತಿಳಿಯಪಡಿಸಬೇಕು. ಅವರೊಡನೆ ಯಾವ ವಿಧವಾದ ಸುಳ್ಳನ್ನು ಹೇಳಬಾ 

ರದು. ಅವರೆದುರಿಗೆ ಇತರರ ನಿಂದೆಯನ್ನು ಇತರರೆದುರಿಗೆ ಅವರ ನಿಂದೆಯನ್ನು ಸರ್ವ 

ಥಾಮಾಡಬಾರದು. ನಿಷ್ಕಾರಣವಾಗಿ ಕೋಪಿಸಿಕೊಂಡು ಅವರೆದುರಿಗೆ ಬಾಯಿಗೆ 

ಬಂದಂತೆ ಮಾತಾಡಬಾರದು. ಅವರನ್ನು ಎಂದಿಗೂ ಮೋಸಗೊಳಿಸ ಬಾರದು. ಅವರು 

ಮಾಡುವ ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡಬಾರದು. ಯಾವ ಕೆಲಸದಲ್ಲಾಗಲೀ 

ತಮ್ಮದು ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು. ಅವರಲ್ಲಿ ತಪ್ಪಿ 

ದ್ದರೆ ಅದಕ್ಕೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಅದನ್ನು ಅವರಿಗೆ ತಿಳಿಸಬೇಕು. 

ತಮ್ಮಿಂದ ಆದಷ್ಟು ಪ್ರೀತಿಯಿಂದ ಅವರ ಸೇವೆಮಾಡಬೇಕು. 

 

ಒಳ್ಳೆ ಸೀರೆಗಳನ್ನು ಟ್ಟು ಕೊಂಡು ಒಡವೆಗಳನ್ನಿಟ್ಟುಕೊಂಡು ಪತಿಗಳನ್ನು 

ಮೋಹಗೊಳಿಸುವ ಪ್ರಯತ್ನವನ್ನೆಂದಿಗೂ ಮಾಡಬಾರದು. ನಿಮ್ಮ ಮನಸ್ಸು ಒಳ್ಳೆಯ 

ದಾಗಿದ್ದರೆ ಅದರಿಂದಲೇ ಅವರ ಮನಸ್ಸು ನಿಮ್ಮ ಕಡೆಗೆ ತಿರುಗುತ್ತದೆ. ನಿಮ್ಮ ಸದ್ಗು 

-------------------------------------------- 

46 ಕಾದಂಬರೀ ಸಂಗ್ರಹ 


ಣಗಳಿಂದ ನೀವು ಪ್ರತಿಯನ್ನು ಮೋಹಗೊಳಿಸಬೇಕು. ಅವರಿಗೆ ಯಾವ ವಿಷಯದ 

ಲ್ಲಿಯೂ ನೀವು ವಂಚನೆಯನ್ನು ಮಾಡಬಾರದು. ಪತಿಗೆ ಸಮನಾದ ಸ್ನೇಹಿತನು ಈ 

ಜಗತ್ತಿನಲ್ಲಿ ಯಾರೂ ಇಲ್ಲ. ಆತನು ಗುರುವಿನಂತೆ ಸನ್ಮಾರ್ಗವನ್ನು ತೋರಿಸುತ್ತಾನೆ. 

ತಂದೆಯಂತೆ ಹಿತವನ್ನುಂಟುಮಾಡುತ್ತಾನೆ. ತಾಯಿಯಂತೆ ಪ್ರೀತಿಸುತ್ತಾನೆ. ದೇವ 

ರಂತೆ ಪೂಜ್ಯನಾಗಿ ನಿಮ್ಮ ಪ್ರಾಣಕ್ಕಿಂತಲೂ ಪ್ರಿಯನಾಗಿರುತ್ತಾನೆ. ಇಂತಹ ಅದ್ವಿ 

ತೀಯನಾದ ಸ್ನೇಹಿತನನ್ನೇ ನೀವು ವಂಚಿಸಿದ ಪಕ್ಷದಲ್ಲಿ ನಿಮಗೆ ಇನ್ನೇತರಿಂದ ಸುಖ 

ವುಂಟಾದೀತು ? ಪತಿಯನ್ನು ವಂಚಿಸುವ ಹೆಂಗಸು ಎಂತಹ ಅಕೃತ್ಯ ಮಾಡಲಿಕ್ಕೂ 

ಹಿಂತೆಗೆಯಳು. ಆದ್ದರಿಂದ ಗೃಹಿಣಿಯಾದವಳು ಪತಿಯ ಸಂಗಡ ನಿರ್ವಂಚನೆಯಿಂದ 

ನಡೆದುಕೊಳ್ಳಬೇಕು. ನಿಮ್ಮ ಪತಿಗಳಿಗೆ ಅಹಿತವಾದ ಕೆಲಸದಿಂದ ನಿಮಗೆಷ್ಟೆಲಾಭವಿ 

ದ್ದಾಗ್ಯೂ ನೀವು ಅದನ್ನು ಮಾಡಬಾರದು. ನಿಮ್ಮ ಪತಿಯು ನಿಮ್ಮಲ್ಲಿ ಹೇಳಿರುವ 

ಗುಟ್ಟಿನ ಮಾತುಗಳನ್ನು ಇತರರ ಸಂಗಡ ಹೇಳಬಾರದು. ಏಕಾಂತದಲ್ಲಿ ಪತಿಯು 

ನಿಮ್ಮ ವಿಷಯದಲ್ಲಿ ಸಣ್ಣ ಮಾತನ್ನಾಡಿದ್ದರೆ ಅದನ್ನು ಹೊರಪಡಿಸಬಾರದು. ಈ 

ಪ್ರಕಾರ ಯಾವ ಹೆಂಗಸು ಆಚರಣೆಯಲ್ಲಿಟ್ಟಿರುವಳೋ ಅವಳಿಗೆ ಯಾರಲ್ಲಿಯೂ 

ವಿರೋಧವುಂಟಾಗುವುದಿಲ್ಲ. ಚಾಡಿಮಾತನ್ನು ಹೆಂಗಸು ಕಲಿಯಬಾರದು. ಕ್ಷುದ್ರ 

ಹೇಳುವವರಾರೂ ನಂಬುವುದಿಲ್ಲ. ನಿಮ್ಮ ವಿಷಯದಲ್ಲಿ ನಿಷ್ಕಾರಣವಾಗಿ ಯಾರಾ 

ದರೂ ಅಪವಾದವನ್ನು ಹೊರಿಸಿದರೆ ಅದನ್ನು ಕೇಳಿಕೊಂಡು ಸುಮ್ಮನಿದ್ದು ನಿಮ್ಮ 

ಆಚರಣೆಯನ್ನು ನಿರ್ಮಲವನ್ನಾಗಿ ಮಾಡಿಕೊಂಡು ಸಮಾಧಾನದಿಂದಿರಬೇಕು. ಈ 

ಅಪವಾದವು ಸುಳ್ಳೆಂಬುದು ಕಾಲಕ್ರಮೇಣ ಎಲ್ಲರಿಗೂ ತಿಳಿದು ಆ ಅಪವಾದವನ್ನು 

ಹೊರಿಸಿದವರ ಮುಖಭಂಗವಾಗದೆ ಇರುವುದಿಲ್ಲ. ನಿಮ್ಮ ಗಂಡಂದಿರನ್ನು ಯಾರಾ 

ದರೂ ದೂಷಣೆ ಮಾಡಿದರೆ ಅದಕ್ಕಾಗಿ ಅವರಸಂಗಡ ವಿವಾದಮಾಡಬಾರದು. ಆ ಅಪ 

ವಾದವು ನಿಜವಾಗಿದ್ದ ಪಕ್ಷದಲ್ಲಿ ಅವನ್ನು ನಿವಾರಿಸುವ ಪ್ರಯತ್ನ ಮಾಡಬೇಕು. 

ನಿಮ್ಮ ಗಂಡಂದಿಗೆ ನೀವು ಎಲ್ಲ ಕೆಲಸದಲ್ಲಿ ಯ. ಆದಷ್ಟು ಸಹಾಯ ಮಾಡಬೇಕು. 

ಮನೆಯಕೆಲಸಗಳನ್ನು ಪಾಲುಮಾರಿಕೆ ಇಲ್ಲದೆ ಕಾಲಕಾಲಕ್ಕೆ ಸರಿಯಾಗಿ 

ಮಾಡುತ್ತಾ ನಿಮ್ಮ ಗಂಡಂದಿರನ್ನು ಸಂತೋಷಗೊಳಿಸಬೇಕು. ಯಜಮಾನರು ಹೊರ 

ಗಿನಿಂದ ಮನೆಗೆ ಬಂದಾಗ ಅವರೊಡನೆ ಕೆಲಸಕ್ಕೆ ಬಾರದ ಮಾತುಗಳನ್ನಾಡಿ ಕಾಲಕಳೆ 

ಯಬಾರದು. ನಿಮ್ಮ ಗಂಡಂದಿರ ಸಂಗಡ ಮಾತನಾಡುವಾಗ ಹೆಚ್ಚು ಹರಟೆಯನ್ನು 

ಬಿಟ್ಟು, ನೀತಿ, ಜ್ಞಾನ, ಧರ್ಮ ವಿಚಾರವಾಗಿ ಚರ್ಚೆಮಾಡಬೇಕು. ಸಂಸಾರಕ್ಕೆ ಬೇಕಾ 

ದವಿಷಯಗಳನ್ನು ಕಾಲವನು ತಿಳಿಸಬೇಕು. ಗಂಡನಮನಸ್ಸು ಖಿನ್ನವಾಗಿದ್ದರೆ ಒಳ್ಳೆ 

----------------------------------------------

ನನ್ನ ಸಂಸಾರ 47 

ಯಮಾತನ್ನಾಡಿ ಸಮಾಧಾನಪಡಿಸಬೇಕು. ವಿಪತ್ತು ಬಂದಾಗ ನಿಮ್ಮ ಪತಿಯು ಯಾವ 

ಸ್ಥಿತಿಯಲ್ಲಿರುವನೋ ನೀವೂ ಅದೇ ಸ್ಥಿತಿಯಲ್ಲಿರಬೇಕು. ಯಾವಾಗಲೂ ಅಸಮಾ 

ಧಾನಪಡಬಾರದು. ಅತ್ತೆ, ವಾರಗಿತ್ತಿ, ಅತ್ತಿಗೆನಾದಿನಿಯರು ಕೂರವಾಗಿ ಮಾತನಾ 

ಡಿದರೆ ಸಹಿಸಿಕೊಂಡಿರಬೇಕು. ಅವರು ಇನ್ನು ಮುಂದೆ ಅಂತಹಕ್ರೌರ್ಯವನ್ನು 

ತಾವಾಗಿಯೇ ಬಿಡುವಂತೆ ನಿಮ್ಮ ಸಮಾಧಾನಸದ್ದುಣಗಳಿಂದ ಏರ್ಪಡಿಸಿಕೊಳ್ಳಬೇಕು. 

ಗಂಡನಸ್ಥಿತಿಯು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಗಂಡನಿಗೆ ಐಶ್ವರ್ಯವಿರಲಿ ಬಡತನ 

ವಿರಲಿ ಅದನ್ನು ಹೆಂಡತಿಯ ಅನುಭವಿಸಬೇಕು. ತಂದೆಯಾದವನು ದೊರೆಯಾಗಿ 

ದ್ದಾಗ್ಯೂ ಆತನ ಪದವಿಗೆ ಸ್ತ್ರೀಯು ಎಂದೂ ಅಧಿಕಾರಿಯಾಗಲಾರಳು. ತನ್ನ ಗಂಡನ 

ಮಾನವನ್ನು ಕಾಪಾಡಿ ಆತನಿರುವ ಸ್ಥಿತಿಯಲ್ಲೇ ತಾನೂ ಇರಬೇಕು. ಮೇಲೆಕಂಡ 

ಸುಗುಣಗಳಿಂದ ಕೂಡಿದ ಸ್ತ್ರೀಯೇ ಈ ಲೋಕದಲ್ಲಿ ಮಾನ್ಯಳಾಗಿಯೂ, ಪೂಜ್ಯಳಾ 

ಗಿಯ, ಪ್ರಾತಃಸ್ಮರಣೀಯಳಾಗಿಯೂ ಇರುತ್ತಾಳೆ. ಇದೇ ಗುಣದಿಂದ ಕೂಡಿದ್ದು 

ದರಿಂದಲೇ ಅಲ್ಲವೆ, ಸೀತೆ, ಸಾವಿತ್ರಿ, ದಮಯಂತಿ, ಸತ್ಯವತಿ, ಲೋಪಾಮುದ್ರೆ, 

ಮುಂತಾದ ಕುಲಸ್ತ್ರೀಯರ ಹೆಸರು ಈ ಭರತಖಂಡದ ಎಲ್ಲಾ ಕಡೆಯಲ್ಲೂ ಸುವ 

ರ್ಣಾಕ್ಷರಗಳಿಂದ ಕೆತ್ತಲ್ಪಟ್ಟು ರಾರಾಜಿಸುತಲವೆ-ಇವರು ಪರಮ ಪತಿವ್ರತೆಯರಾಗಿ 

ಪತಿಭಕ್ತರಾಗಿ ಅವರಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಕೊಂಡಿದ್ದುದರಿಂದಲೇ ಅಲ್ಲವೆ, 

ಅವರ ಕೀರ್ತಿಗಳು ದಶದಿಕ್ಕುಗಳಲ್ಲಿಯೂ ಹರಡಿಕೊಂಡಿವೆ. ಇತರ ವಿಷಯಗಳಲ್ಲಿ 

ನಮ್ಮೀ ಭರತಖಂಡವು ಉಳಿದ ದೇಶಗಳಿಗಿಂತ ಹಿಂದೆ ಬಿದ್ದಿದ್ದಾಗ್ಯೂ, ಸೀತೆ, ಸಾವಿ 

ತ್ರಿಯೇ ಮುಂತಾದ ಮಹಾಮಹಾ ಪತಿವ್ರತೆಯರ ಸರ್ತಿ ವಿಷಯದಲ್ಲಿ ಇದಕ್ಕೆ 

ಸಮಾನವಾದ ದೇಶ ಮತ್ತೊಂದಿಲ್ಲ, ತಮ್ಮ ಜನರ ಯೋಗ್ಯತೆಯನ್ನು ಅಭಿವೃ 

ದ್ಧಿ ಪಡಿಸಲಪೇಕ್ಷೆಯುಳ್ಳ ಸ್ತ್ರೀಯರು ಮೇಲೆ ಹೇಳಿದ ಪವಿತ್ರನಡತೆಗಳು ಮರಳಿ ಉಜ್ಜೀ 

ವಿತವಾಗುವಂತೆ ನಡೆದುಕೊಳ್ಳಬೇಕು. ಇದನ್ನು ಕೇಳಿದ ಪ್ರತಿಯೊಬ್ಬ ಹೆಂಗಸೂ 

ಇದೇ ವಿಧದಲ್ಲಿ ನಡೆವುದಾದರೆ ಈ ಗ್ರಂಥಲೇಖನವು ಸಾರ್ಥಕವಾಗುವುದು. 


ಸೋದರಿಯರೇ ! ಇಷ್ಟು ಉಪದೇಶವನ್ನು ಮಾಡಿ ನಮ್ಮ ಯಜಮಾನರು, 

ಇನ್ನು ಮುಂದೆ ನಿನ್ನಿಷ್ಟದಂತೆ ಮಾಡೆಂದು ಹೇಳಿ ನನ್ನ ಕೈಬಿಟ್ಟು ಬಿಟ್ಟು ಸುಮ್ಮನಾ 

ದರು. ಅವರ ಉಪದೇಶವನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಬಹುವಾಗಿ 

ಸಂತೋಷವಾಯಿತು. ಹರ್ಷಾಶ್ರುಗಳು ಕಣ್ಣಿನಿಂದುದುರಿದುವು. ಕೂಡಲೆ ಪತಿಚರ 

ಣಗಳಲ್ಲಿ ನನ್ನ ಶಿರಸ್ಸನ್ನಿಟ್ಟು, ದೇವ! ಕ್ಷಮಿಸು, ಇದುವರಿಗೆ ನಾನು ಮೂಢತನದಿಂದ 

ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸು ಇಂದು ನಿಮ್ಮ ಉಪದೇಶದಿಂದ ನಾನು ಪುನರು 

-----------------------------------------------

೪೮ ಕಾದಂಬರಿ ಸಂಗ್ರಹ 


ಜೀವಿತಳಾದೆನು. ಹಣದ ಆಶೆಯನ್ನೂ, ಹುರುಡನ್ನೂ, ಹಟಮಾರಿತನವನ್ನೂ ಸತ್ಯ 

ವಾಗಿಬಿಟ್ಟೆನು. ಇನ್ನು ಮುಂದೆ ಇದೇ ವಿಧವಾಗಿ ನನ್ನನ್ನು ಎಚ್ಚರಗೊಳಿಸುತ್ತಾ 

ನನ್ನನ್ನು ಕಾಪಾಡಬೇಕು. ನನ್ನ ಜನ್ಮಾಂತರ ಸುಕೃತಪರಿಪಾಕದಿಂದ ತಮಗೆ ನಾನು 

ಪತ್ನಿ ಯಗಿರುವೆನು. ನನ್ನ ಜೀವನವು ಧನ್ಯ ! ನಾನು ಸುಖಿ! ನಿಮ್ಮ ಉಪದೇಶವನ್ನು 

ನಾನು ಮರೆವುದಿಲ್ಲ. ನಾನೂ ಆಚರಿಸುತ್ತಾ ನನ್ನ ಸೋದರಿಯರಲ್ಲೂ ಈ ಉಪದೇ 

ಶವನ್ನು ಹರಡುವೆನೆಂದು ಹೇಳಿ ನನ್ನ ಸ್ವಾಮಿಗೆ ನಮಸ್ಕರಿಸಿದೆನು. ಅಷ್ಟರಲ್ಲೇ ನಮ್ಮ 

ಯಜಮಾನರನ್ನು ಯಾರೋ ಹೊರಗೆ ಕೂಗಿದದರಿಂದ ಅವರು ಹೊರಟುಹೋದರು. 

ಪದೇ ಪದೇ ಅವರ ಉಪದೇಶವನ್ನು ಧ್ಯಾನಿಸುತ್ತಾ ನಾನು ನನ್ನ ಹಿಂದಿನ ಯೋಚನಗ 

ಳನ್ನು ಬಿಟ್ಟು ಮನೆಗೆಲಸಕ್ಕೆ ಹೊರಟುಹೋದೆನು. 


ಪಾಠಕಿಯರೆ! ಈ ಅಧ್ಯಾಯದಲ್ಲಿ ವಿಷವು ಪರೀಕ್ಷಿಸಲ್ಪಟ್ಟಿರುವುದು, 

ವಿಷಕ ಅಮೃತಕ್ಕೂ ಭೇದವು ರ್ತೊರಿಸಲ್ಪಟ್ಟಿರುವುದು. ನೀವು ಪುನಃಪುನಃ ಈ 

ಅಧ್ಯಾಯವನ್ನು ಮಥನಮಾಡಿ, ಭರತಭೂಮಾತೆಯು ಪತಿವ್ರತೆಯರಿಂದ ತುಂಬ 

ಲ್ಪಟ್ಟು ಪರಿಶುದ್ಧಳಾಗಿ ಬೆಳಗಲಿ ! 


IX 

ನಮ್ಮ ಯಜಮಾನರು ನನಗೆ ಸ್ತ್ರೀಧರ್ಮಗಳನ್ನು ಉಪದೇಶ ಮಾಡಿದ ದಿನ 

ಮಧ್ಯಾಹ್ನ ನಾಲ್ಕು ವರೆ ಗಂಟೆ ಸಮಯದಲ್ಲಿ ನಮ್ಮ ಭಾವನವರಿಗೂ ನಮ್ಮ ಮನೆಯವ 

ಗೂ (ಅಣ್ಣ ತಮ್ಮಂದಿಗೆ) ಈ ಕೆಳಗೆ ಕಂಡಂತೆ ಸಂಭಾಷಣೆ ನಡೆಯಿತು. 


ಅಣ್ಣ-ವಾಸುದೇವ ! ನೀನು ನಿನ್ನೆಯದಿನ ರಂಗಪುರದಿಂದ ಕಳುಹಿಸಿದ ತಂತಿಯು 

ತಲಪಿತು. ನೀನು ನಿಮ್ಮ ಅತ್ತೆಯನ್ನು ನೋಡಿದ್ದೆಯೋ ? 


ತಮ್ಮ -ಹೌದು, ನೋಡಿದ್ದೆನು. ಹಣದ ವಿಚಾರವನ್ನು ಕೇಳಿದೆನು ! 


ಅಣ್ಣ ಏನೆಂದು ಕೇಳಿದೆ ! ಅವರೇನು ಹೇಳಿದರು ? 


ತಮ್ಮ-ನಿಮ್ಮ ಮಗಳಲ್ಲಿ ಏನು ಪದಾರ್ಥವನ್ನು ಕೊಟ್ಟಿರುವಿರಿ ಎಂದು ಕೇಳಿದುದಕ್ಕೆ 

ಒಂದು ಅಡ್ಡಿಕೆ, ಐವತ್ತು ರೂಪಾಯಿಗಳನ್ನು ಕೊಟ್ಟಿರುವೆನೆಂದು ಹೇಳಿದರು. 


ಅಣ್ಣ-ಈ ಮಾತು ನಿಜವೋ ? ನಿಜವಾಗಿಯೂ ಅವರು ಹಾಗೆ ಹೇಳಿದರೋ ? 


ತಮ್ಮ ನಿಜವಾಗಿಯೂ ಹೀಗೆಯೇ ಹೇಳಿದರು, ಇದರಲ್ಲಿ ಸಂದೇಹ ಪಡಲು 

ಕಾರಣವೇನಿರುವುದು ? 


ಅಣ್ಣ-ಆದಿನ ನಡೆದ ಹಣದ ವಿಚಾರದಲ್ಲಿ ಏನಂದು ಇತ್ಯರ್ಥವಾಯಿತು. ದೋಷಿಗ 

ಳಾರೆಂಬುದನ್ನು ಬಲ್ಲೆಯೋ ? 

------------------------------------------

ನನ್ನ ಸಂಸಾರ 49 

1  

ತಮ್ಮ-ಅಹುದು, ಚೆನ್ನಾಗಿಬಲ್ಲೆನು. ಸೌಭಾಗ್ಯವತಿಯೇ ಹಣವನ್ನು ತೆಗೆದುಕೊ೦ 

ಡಿರುವಳೆಂಬುದಕ್ಕೆ ಸಾಕಾದಷ್ಟು ಪ್ರಮಾಣಗಳೂ ತೋರಿಬಂದುವು. (ಪ್ರತ್ಯ 

ಕ್ಷವಾದರೂ ಪ್ರಮಾಣಿಸಿ ನೋಡಬೇಕಲ್ಲವೆ ? ) 


ಅಣ್ಣ-ಕೈ ಹುಣ್ಣಿಗೆ ಕನ್ನಡಿ ಏಕೆ ? ಎಂಬಂತೆ ನಮ್ಮ ಮನೆಯಲ್ಲಿ ಸಾಕಾದಷ್ಟು 

ಪ್ರಮೇಯಗಳಿಂದ ನಿನ್ನ ಹೆಂಡತಿಯು ವ್ಯಾಪಾರ ಮಾಡಿದುದು ಖಚಿತ 

ವಾಗಿ ತೋರಿದರೂ ನೀನು ಈ ವಿಧವಾದ ಸುಳ್ಳು ಹೇಳಿ ದೋಷಿಯಾದ ಹೆಂಡ 

ತಿಯನ್ನು ನಿರ್ದೋಷಿಯೆಂದು ಹೇಗೆ ಹೇಳಿಕೊಳ್ಳುವೆ ? 


ತಮ್ಮ-( ಕೋಧಕಂಪಿತ ಸ್ವರದಿಂದ) ಏನೇನು ? ನನ್ನ ಹೆಂಡತಿ-ಹಣವನ್ನು ಕದ್ದಳೆಂದು 

ಪುನಃ ಹೇಳುವಿರಾ ? ನನ್ನ ಹೆಂಡತಿಯು, ಈ ಹಣವು ನಮ್ಮ ತಾಯಿಯಿಂದ ನನಗೆ 

ಕೊಡಲ್ಪಟ್ಟಿತು. ಎಂದು ಹೇಳಿದ ಮಾತಿನ ನಿಶ್ವಯಾಂಶವನ್ನು ತಿಳಿ 

ಯಲು ನಾನು ರಂಗಪುರಕ್ಕೆ ಹೋಗಿದ್ದು ದೂ ಅಲ್ಲಿ ನಡೆದ ವರ್ತಮಾನವನ್ನು 

ನಿನ್ನೆಯದಿನವೇ ತಂತಿಯ ಮೂಲಕ ತಿಳಿಸಿದುದನ್ನೂ ನೀವು ಈಗಲೇ ಮರೆತಂತೆ 

ತೋರುತ್ತದೆ. 


ಅಣ್ಣ-ಏಕಾದೀತು ? ಇದೆಲ್ಲಾ ಸುಳ್ಳು ! ಇಂದ್ರಜಾಲ ! ನಿನ್ನ ಹೆಂಡತಿಯ ತಪ್ಪನ್ನು  

ಮುಚ್ಚಬೇಕೆಂದು ನೀವೆಲ್ಲಾ ಗುಂಪುಗೂಡಿ ಆಲೋಚನೆಮಾಡಿ ಈ ಆಟವನ್ನು 

ಹೂಡಿರುವಂತೆ ತೋರುತ್ತದೆ. ನಾನೇನು ನಿಮ್ಮ ಮಾತನ್ನು ನಂಬುವಷ್ಟು 

ಹೇಡಿಯಲ್ಲ. ನಿನಗೇಕೆ ಹೀಗೆ ಬುದ್ದಿ ಬದಲಾಗಿ ಹೋಯಿತು. ಹೇಳು. 


ತಮ್ಮ-(ಅನಿರ್ವಾಹವಾಗಿ ಬಂದ ಕೋಪವನ್ನು ಕಷ್ಟದಿಂದ ತಡೆದು) ಅಣ್ಣನವರೇ !  

ತಡೆದು ಮಾತನಾಡಿ, ನಿದಾನವಾಗಿ ಆಲೋಚಿಸಿರಿ. ನಾನು ನಿಮ್ಮ ಮಾತಿಗೆ ಮೀರಿ 

ಮರ್ಯಾದೋಲ್ಲಂಘನನ್ನು ಮಾಡಬೇಕಾದ ಸಮಯವು ಪ್ರಾಪ್ತವಾ 

ದಂತಿದೆ. ದೋಷಿಯಾಗಿದ್ದಾಗ್ಯೂ ಹೆಂಡಂತಿಯನ್ನು ನಿರ್ದೋಷಿಯೆನ್ನುವುದಕ್ಕೆ 

ನಾನೇನೂ ಷಂಡನಲ್ಲ. ನಿಮ್ಮೊಡನೆ ಸುಳ್ಳು ಹೇಳಿ ನಾನೇನೂ ದ್ರವ್ಯಾಪಹಾರ 

ಮಾಡುವುದಕ್ಕೆ ಬಂದಿಲ್ಲ. ಸಾವಿರ ಮಾತಿನಿಂದೇನು ? ಲೋಕವನ್ನು ಮೆಚ್ಚಿಸಿ 

ನನಗಾಗಬೇಕಾದುದು ತಾನೇ ಏನಿರುವದು ? ಪ್ರಾಮಾಣಿಕತನವೂ ಧರ್ಮವೂ 

ನಮ್ಮಲ್ಲಿರುವುದಾದರೆ ಸರ್ವವ್ಯಾಪಿಯಾದ ಪರಮಾತ್ಮನು ಮೆಚ್ಚಿಯೇ 

ಮೆಚ್ಚುವನು, ಅಧರ್ಮದಿಂದ ಲೋಕವೆಲ್ಲಾ ಮೆಚ್ಚಬೇಕೆಂಬ ಆಶೆನನಗಿಲ್ಲ. 

ನನ್ನ ಹೆಂಡತಿಯಿಂದ ನೀವು ಪೂರ್ವಾಪರ ವಿವೇಚನೆ ಇಲ್ಲದೆ ಸ್ವೀಕರಿಸಿರುವ 

ಹಣವನ್ನು ತಾವು ಹಿಂದಕ್ಕೆ ಕೊಡಬೇಕೆಂದಿಲ್ಲ. ಅವಳು ನನ್ನೊಡನೆ 

----------------------------------------

೫೦ ಕಾದಂಬರಿ ಸಂಗ್ರಹ 


ದ್ರವ್ಯದ ವಿಚಾರವನ್ನು ಹೇಳದೆ ಗುಟ್ಟನಿಂದಿದ್ದುದಕ್ಕೆ ಇದೇ ದಂಡ ದ್ರವ್ಯ 

ವೆಂದು ಭಾವಿಸಿದ್ದೇನೆ. ಆದರೆ ನಮ್ಮ ಅತ್ತೆಯ ಮಾತು ಸುಳ್ಳೆಂದೂ, ನಾನು 

ವ್ಯಾಜದಿಂದ ಹೆಂಡತಿಯ ದೋಷವನ್ನು ಮುಚ್ಚುವವನೆಂದೂ ಇರುವ ನಿಮ್ಮ 

ಭಾವವನ್ನು ಹೃದಯದಿಂದ ಈಚಿಗೆ ಕಿತ್ತು ಬಿಸುಡಿರಿ. ಧರ್ಮವು ಜಯಿಸುವುದೆಂ 

ಬುದನ್ನೂ ತಾವು ಆಲೋಚಿಸಿರಿ. ಅನ್ಯಾಯದಿಂದ ಐಶ್ವರ್ಯದ ಮೇಲೆ ಐಶ್ವ 

ರ್ಯವನ್ನು ಕೂಡಿಸಿ ನಿಜವನ್ನೂ ಪರೋಪಕಾರವನ್ನೂ ಮರೆಮಾಚುವ ಸ್ಥಿತಿಗೆ 

ಧಿಕ್ಕಾರವಿರಲಿ ! ಪರಹಿಂಸಾರೂಪದಿಂದಗಳಿಸಿದ ಹಣದಿಂದ ಅಪಾಯವು 

ಎಂದೆಂದಿಗೂ ತಪ್ಪದಿರುವುದರಿಂದ ಅದಕ್ಕೆ ಧಿಕ್ಕಾರವಿರಲಿ ! ಅನ್ಯಾಯಾರ್ಜನೆ 

ಯನ್ನು ಧಿಕ್ !ಧಿಕ್ !!! ನ್ಯಾಯಮಾರ್ಗದಿಂದ ಸಂತೋಷವಾಗಿ ಎಷ್ಟು 

ಅನುಭವಿಸಿದರೆ ಅಷ್ಟೇ ಸಾಕಾಗಿರುವುದು. 


ಅಣ್ಣ-ನಿನ್ನ ನೀತಿ ಧರಗಳನ್ನೆಲ್ಲಾ ದೂರದಲ್ಲಿ ಕಟ್ಟಿಡು, ನೀನು ಏನು ಹೇಳಿದರೂ 

ನನಗೆ ಈವಿಷಯದಲ್ಲಿ ಸಂಶಯವು ದೂರವಾಗದು. 


ತಮ್ಮ- (ನಿಟ್ಟುಸಿರುಬಿಟ್ಟು) ಪುಜ್ಯಭ್ರಾತೃಗಳೆ! ಇಂದಿನವರೆಗೂ ನಾವಿಬ್ಬರೂ  

ಕ್ಷೀರೋದಕನ್ಯಾಯದಂತೆ ಒಟ್ಟು ಗೂಡಿದ್ದೆವು. ನಿರ್ಮಲವಾದ ಆಕಾಶಕ್ಕೆ 

ಮೋಡಮುಸುಕಿ ಮಸಕಾದಂತೆ ನಮ್ಮ ನಿಮ್ಮ ಬುದ್ದಿಗಳು ಪತ್ನಿಯರಪಾರ 

ಮಾರ್ಥಿಕಬೋಧೆಗಳಿಂದ ಇಂತು ಪರಿಣಮಿಸಿದುವು. ಲೋಕದಲ್ಲಿ ಅಣ್ಣ 

ತಮ್ಮಂದಿರಾಗಿ ಹುಟ್ಟಿದಮೇಲೆ ರಾಮಲಕ್ಷ್ಮಣರಂತೆ ಪೂಜಪೂಜಕ 

ಭಾವದಿಂದ ಅನುವರ್ತಿಸುವ ಸೋದರರು ಈಕಾಲದಲ್ಲಿ ಅತಿವಿರಳ ! ನಿಮ್ಮ 

ವಿಷಯದಲ್ಲಿ ನನಗಿರುವ ಪೂಜ್ಯಭಾವವು ನನ್ನ ಮರಣಾವಧಿ ತಪ್ಪು 

ವುದಲ್ಲ ಎಂದು ತಾವು ನಿಜವಾಗಿ ಭಾವಿಸಬೇಕು. ಪ್ರಕೃತಿಸಂಸರ್ಗದಿಂದ 

ಶುದ್ಧವಾದ ಪರಮಾತ್ಮ ವಸ್ತುವಿಗೆ ಸಂಸಾರಾದಿವ್ಯವಹಾರಜ್ಞಾನಮ ಉತ್ಪನ್ನ 

ವಾಗುವಂತೆ ನಿಷ್ಕಲ್ಮಷಹೃದಯರಾದ ತಾವು ಇಂದು ಪ್ರಕೃತ್ಯಧೀನ 

ರಾಗಿ ಇಂತು ನನ್ನ ವಿಷಯದಲ್ಲೂ ನನ್ನ ಹೆಂಡತಿಯ ವಿಷಯದಲ್ಲೂ 

ಸಂಶಯಪಡುತ್ತಿರುವಿರಿ, ಚಿಂತೆಯಿಲ್ಲ. ನಿಮ್ಮೀಸಂದೇಹವು ಎಂದಾದರೊಂದು 

ದಿನ ಪರಿಹಾರವಾಗದೆ ಇರುವುದಿಲ್ಲ. ಇದುವರಿಗೂ ನಾವಿಬ್ಬರೂ ಒಂದು 

ಗೂಡಿದ್ದಂತೆ ಇನ್ನು ಮೇಲೂ ಇರಬೇಕಾದರೆ-- ಪ್ರೀತಿಭಕ್ತಿಗಳೂ ಪೂರ್ವ 

ದಂತೆಯೇ ರಾರಾಜಿಸಬೇಕಾಗಿದ್ದರೆ-- ನಾವು ಏಕ ಗೃಹಕೃತ್ಯದಲ್ಲಿ 

ರುವುದು ಸರಿಬಾರದು. ಈ ವಿಧವಾಗಿ ಸಂಸಾರದಲ್ಲಿ ವಿವಾಂಕುರವು ಉತ್ಪನ್ನ  

--------------------------------------------

ನನ್ನ ಸಂಸಾರ 51 

ವಾಗಿರುವುದಕ್ಕೆ ಓರಗಿತ್ತಿಯರಿಬ್ಬರ ಅನ್ನೋನ್ಯಾಸಹನಗಳೇ ವಿನಾ ಬೇರೆ 

ಕಾರಣವಿರದು. ಇದನ್ನು ಹೀಗೆಯೇ ಸರಿಮಾಡಿಕೊಂಡು ನಾವು ಒಂದೇ 

ಸಂಸಾರದಲ್ಲಿದ್ದು ಬಿಟ್ಟರೆ ಇತೋಷ್ಯಧಿಕವಾದ ದ್ವೇಷಾಸೂಯೆಗಳು ನಮ್ಮಿಬ್ಬ 

ರಿಗೂ ಉಂಟಾಗಿ ಅನರ್ಥವುಂಟಾಗಲು ಕಾರಣವಾಗಬಹುದಾದುದರಿಂದ, 

ನಾನು ಈ ದಿನ ಈ ಸಂಸಾರದಲ್ಲಿ ಹುಟ್ಟಿದ ಈ ವಿಷಬೀಜನ್ನು ನಾಶಮಾಡು 

ವುದಕ್ಕಾಗಿ ಬೇರೆ ಕಡೆಗೆ ಹೊರಟುಹೋಗುತ್ತೇನೆ. ನಮ್ಮಿಬ್ಬರ ಪ್ರೀತಿಗಳು 

ಪೂರ್ವದಂತೆಯೇ ಇರಲಿ, ನಮ್ಮ ಸಂಸಾರದಲ್ಲಿ ಶಾಂತಿಯುನೆಲಸಲಿ. 


ಅಣ್ಣ-(ಎಲ್ಲವನ್ನೂ ನಿದಾನವಾಗಿ ಕೇಳಿ ತಲೆದೂಗುತ್ತಾ) ನಿನ್ನ ಮನಸ್ಸು ಬಂದಂತೆ 

ಮಾಡುವುದರಲ್ಲಿ ಆರ ಆತಂಕವೂ ಇಲ್ಲ. 


ಈ ರೀತಿ ಸಂಭಾಷಣೆಗಳು ನಡದಬಳಿಕ ನಮ್ಮ ಭಾವನವರು ತಮ್ಮ ಚಿಕ್ಕ ಮನೆಗೆ 

ಹೊರಟು ಹೋದರು. ನಮ್ಮ ಯಜಮಾನರೂ ಕೂಡಲೆ ತಾವೂ ಹೊರಕ್ಕೆ ಹೋಗಿ ಒಂದು 

ಗಾಡಿಯನ್ನು ಮಾಡಿಕೊಂಡು ಸ್ವಲ್ಪಹೊತ್ತಿನಲ್ಲೇ ನಮ್ಮ ಮನೆಯ ತಲೆಬಾಗಿಲಿನಲ್ಲಿ 

ತಂದು ನಿಲ್ಲಿಸಿದರು. ಮಿತವಾಗಿ ಗೃಹಕೃತ್ಯಕ್ಕೆ ಬೇಕಾಗುವ ಪಾತ್ರೆಪದಾರ್ಥಗಳನ್ನು 

ಗಾಡಿಯಲ್ಲಿರಿಸಿ ನನ್ನನ್ನು ಬಂದು ಕುಳಿತುಕೊಳ್ಳುವಂತೆ ಹೇಳಿದರು. ಮೇಲಿನ ಸಂಭಾಷ 

ಣೆಗಳನ್ನೂ ಈ ವಿಧವಾದ ಪರಿವರ್ತನವನ್ನೂ ನೋಡಿ ನಾನು ವಿಸ್ಮಯದಿಂದ ತಲೆದೂ 

ಗುತ್ತ, ಭಾವನವರಿಗೂ, ಅಕ್ಕನಮಗೂ ನಮಸ್ಕರಿಸಿ ಗಾಡಿಯಮೇಲೆ ಹೋಗಿ ಕುಳಿತು 

ಕೊಂಡೆನು. ನಮ್ಮ ಯಜಮಾನರೂ ಅಂತೆಯೇ ಅಣ್ಣ ಅತ್ತಿಗೆಯರುಗಳಿಗೆ ನಮಸ್ಕರಿಸಿ  

ಗಾಡಿಯಮೇಲೆ ಕುಳಿತು ಬಂಡಿಯನ್ನು ರಂಗಪುರಕ್ಕೆ ಹೊಡೆಯುವಂತೆ ಹೇಳಿದರು. 

ರಂಗವುರಕ್ಕೆ, ಎಂಬ ಮಾತನ್ನು ಕೇಳಿ ನನಗೆ ಬಹು ಹರ್ಷಾಶ್ವರ್ಯಗಳುಂಟಾಗಿ ಇದೇನು? 

ಈಗ ರಂಗಪುರಕ್ಕೆ ಏಕೆ ಹೋಗಬೇಕೆಂದು ಕೇಳಿದನು. ಅದಕ್ಕೆ ಅವರು, ನಿಮ್ಮ ತಾಯಿ 

ಯವರನ್ನು ಮೊನ್ನೆ ನೋಡಲಿಕ್ಕೆ ಹೋಗಿದ್ದಾಗ ಅವರು ನವಮಾಸಗರ್ಭವತಿಯರೆಂದೂ 

ಅನನ್ಯಸಹಾಯರಾಗಿರುವರೆಂದೂ ತಿಳಿದು ನಾನು ನನ್ನಿಂದ ಸಹಾಯವೇನಾಗಬೇಕೆಂದು 

ಕೇಳಲು ನಮ್ಮ ಸೌ || ಮಹಾಲಕ್ಷ್ಮಿಯನ್ನು ಮೂರು ತಿಂಗಳುಮಟ್ಟಿಗೆ ಕಳುಹಿಸಿಕೊಟ್ಟಿ 

ದ್ದರೆ ಬಹಳ ಉಪಕಾರವಾಗುವುದೆಂದು ಹೇಳಿದ್ದರು. ನಾನು ಅದಕ್ಕೆ, ನೋಡೋಣ-- 

ಎಂದು ಹೇಳಿ ಬಂದಿದ್ದೆನು. ಅವರ ಸಹಾಯಾರ್ಥವಾಗಿಯೂ ನಿನ್ನ ಮನಸ್ಸಮಾಧಾನ 

ಕ್ಕಾಗಿಯೂ ನಿನ್ನನ್ನು ಈಗ ರಂಗಪುರಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು 

ಹೇಳಲು ನನಗೆ ಆಗ ಪರಮಾವಧಿಸಂತೋಷವುಂಟಾಯಿತು. ನನ್ನ ತಾಯಿಯನ್ನು ನೋಡಿ 

ನಾನು ವರ್ಷವಾಗಿ ಹೋಗಿದ್ದಿತು. ಇಂದು ನಾನು ತಂದೆತಾಯಿಗಳನ್ನು ನೋಡುವ  

---------------------------------------------

52 ಕಾದಂಬರಿ? ಸಂಗ್ರಹ 

 

ವಿಷಯವನ್ನು ತಿಳಿದುಕೊಂಡಮೇಲೆ ನನ್ನ ಮನಸ್ಸಿನಲ್ಲಿ ಆದ ಆನಂದವು ಇಷ್ಟೇ ಎಂದು 

ಹೇಳಲಾರೆನು. ತೌರುಮನೆಗೆ ಹೋಗಲಾಶೆಯುಳ್ಳ ಹೆಣ್ಣು ಮಕ್ಕಳೇ ಈ ಆನಂದವನ್ನು 

ಮನನ ಮಾಡಬಹುದು. 


ಮೂರುಗಂಟೆ ಕಾಲದೊಳಗಾಗಿ ಅಂದರೆ ರಾತ್ರಿಎಂಟುಗಂಟೆ ಸಮಯದಲ್ಲಿ 

ಬಂಡಿಯು ರಂಗಪುರದಲ್ಲಿ ನಮ್ಮ ತೌರುಮನೆಯ ಹತ್ತಿರ ಬಂದುನಿಂತಿತು. ನಾನೂ 

ಗಾಡಿಯಿಂದಿಳಿದು ಒಳಕ್ಕೆ ಹೋದೆನು. ನನ್ನ ತಾಯಿಯು ನನ್ನನ್ನು ತಬ್ಬಿಕೊಂಡು ಗಟ್ಟಿ 

ಯಾಗಿ ಅತ್ತು ಬಿಟ್ಟರು. ವೃಥಾನವಾದಕ್ಕೆ ಪಾತ್ರಳಾಗಿ ನಮ್ಮ ತಾಯಿಯು ಕೊಟ್ಟ 

ಹಣವನ್ನೂ ಹಾಳುಮಾಡಿಕೊಂಡುದಕ್ಕಾಗಿ ನಾನು ನನ್ನ ತಾಯಿಯನ್ನೇ ಸ್ವಲ್ಪನಿಂದೆ 

ಮಾಡಿದೆನು. ತಾಯಿಯ ಬಹು ಪಶ್ಚಾತ್ತಾಪ ಪಟ್ಟು ತಮ್ಮ ಅವಿವೇಕಕ್ಕಾಗಿ ವಿವಾದ 

ಗೊಂಡರು. ನಮ್ಮ ಯಜಮಾನರು ನನ್ನನ್ನು ಅಲ್ಲಿ ಒಟ್ಟು ಮಾರನೆಯದಿನ ಬೆಳಿಗ್ಗೆರೈಲಿ 

ನಲ್ಲಿ ಶ್ರೀ ನಗರಕ್ಕೆ ಪ್ರಯಾಣ ಮಾಡಿದರು. 


ನಾನು ತೌರುಮನೆಗೆ ಒಂದು ಈಗಾಗಲೇ 8-10 ದಿನಗಳು ಕಳೆದು ಹೋದುವು. 

ಈ 8-10 ದಿವಸಗಳವರೆಗೆ ನನ್ನ ಸ್ವಾಮಿಯ ವೃತ್ತಾಂತವೇ ತಿಳಿಯದೆ ನನಗೆ ಬಹುಚಿಂ 

ತೆಯುಂಟಾಗಿದ್ದಿತು. ಅಷ್ಟರಲ್ಲೇ ಅಂಚೆಯವನು ಬಂದು 1 ಪುಸ್ತಕದಭಾಂಗಿಯನ್ನೂ 

1 ಕವರನ್ನೂ ನನಗೆ ಕೊಟ್ಟು ಹೊರಟು ಹೋದರು. ಅಂಚೆಯು ಮುದ್ರೆಯು ಹರಪುರ 

ದ್ದಾಗಿದ್ದಿತು. ನಾನು ಆತುರದಿಂದ  ಪತ್ರವನ್ನು ಬಿಚ್ಚಿ ಓದಿನೋಡಿದೆನು. 


ಕುಶಲಂ, ಹರಪುರ. 

ಆಶಿರ್ವಾದಗಳು. ಮಕರಸಂಕ್ರಮಣ. 


ನಾನು ಇಲ್ಲಿಗೆ ಬಂದು ನಾಲ್ಕು ದಿನವಾಯಿತು. ಶ್ರೀನಗರದಲ್ಲಿ ನಾನೊಬ್ಬನೇ 

ಇರಲು ಬಯ ತೊಂದರೆಯಾದುದುಂದ, ಹೊಟಿಲಿನಲ್ಲಿ ಊಟಮಾಡಬೇಕಾಗಿ ಬಂದು 

ದರಿಂದಲೂ ವಾಸಕ್ಕೆ ಸರಿಯಾದ ಮನೆಯು ದೊರೆಯದೆಯೋದುದುಂದೆಯೂ ಮೂರು 

ತಿಂಗಳಕಾಲ ಶಾಲೆಗೆ ರಜವನ್ನು ತೆಗೆದುಕೊಂಡು ಇಲ್ಲಿಗೆ ಬಂದೆನು. ಇಲ್ಲಿ ನಾನೂ 

ಮಾತೋಶ್ರೀಯವರೂ ಸುಖವಾಗಿದ್ದೇವೆ. ಇನ್ನೆರಡು ತಿಂಗಳು ಬಿಟ್ಟು ಕೊಂಡು ಶ್ರೀನ 

ಗರಕ್ಕೆ ಹೋಗಿ ಅನುಕೂಲವಾದ ಮನೆಯೊಂದನ್ನು ಗೊತ್ತು ಮಾಡಿ ಬಳಿಕ ನಿನ್ನನ್ನು 

ಕರೆಯಿಸಿಕೊಳ್ಳುವೆನು. ಇದೇ ದಿನವೇ ನಿನ್ನ ಹೆಸರಿಗೆ " ಸತೀಹಿತಬೋಧಿನಿ"  

" ಪಾತಿವ್ರತ್ಯ” "ಸ್ತ್ರೀಧರ್ಮನೀತಿ"  " ಸಾದ್ವೀಪಿತಸೂಚಿನಿ" ಎಂಬ ನಾಲ್ಕು 

ಪುಸ್ತಕಗಳನ್ನು ಭಾಂಗಿಮಾಡಿ ಕಳುಹಿಸಿರುವೆನು, ಪುಸ್ತಕಗಳನ್ನು ಚೆನ್ನಾಗಿ ಓದು 

ವದಲ್ಲದೆ ನಿನ್ನ ಸಮಯವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸುತ್ತಿರಬೇಕು. 

---------------------------------------------

ನನ್ನ ಸಂಸಾರ 53 

ನಿಮ್ಮ ತಾಯಿಯು ಪೂರ್ವಕಾಲದ ಹಳೇನಡತೆಯುಳ್ಳವರು. ಅವರಿಗೆ ಸಮಯ 

ದಲ್ಲಿ ತಕ್ಕಸಲಹೆಗಳನ್ನು ಹೇಳಿಕೊಡುತ್ತಾ ಗೃಹಕೃತ್ಯದಲ್ಲಿ ಮಿತವ್ಯಯಿಗಳಾಗಿ 

ರುವಂತೆ ಹೇಳುವುದು. ಹಿಂದಿನ ಸ್ಮರಣೆಗಳನ್ನು ನೆನೆದು ಜಾಗರೂಕಳಾಗಿರು. 

ಚಿ|| ಮಗುವಿನ ಆರೋಗ್ಯ ವಿಷಯದಲ್ಲಿ ಬಹು ಎಚ್ಚರವನ್ನು ವಹಿಸು. ನಿನ್ನ ಕ್ಷೇಮ 

ಲಾಭಕ್ಕೆ ಪತ್ರಬರಿ. ಇತ್ಯಾಶಿಷಃ

ಕಾಗದವನ್ನು ಓದಿಯಾದಮೇಲೆ ಪ್ರಸ್ತಕಗಳನ್ನು ಒಂದೊಂದಾಗಿ ಓದಿ 

ನೋಡಿದೆನು. ಈ ನಾಲ್ಕು ಗ್ರಂಧಗಳೂ ಗೃಹಿಣಿಯಾದವಳ ನಿತ್ಯಪಠನಕ್ಕೆ ಯೋಗ್ಯ 

ವಾದುದೆಂದು ತಿಳಿದು ಬಂದುದುಂದ ನಾನು ಅದನ್ನು ಪುನಃ ಪುನಃ ಓದುತ್ತಾ ತದುಕ್ತ 

ಧರ್ಮಗಳನ್ನು ಮನನಮಾಡುತ್ತಾ ನನ್ನ ಸ್ವಾಮಿ.ತದನ್ನೇ ಮನಸ್ಸಿನಲ್ಲಿ ಸದಾ ಚಿಂತಿ 

ಸುತ್ತಾ ಸಮಯದೊರೆತಾಗ ನನ್ನ ಒಡನಾಡಿಯರಿಗೂ ತಕ್ಕ ಧರ್ಮನೀತಿಗಳನ್ನು 

ಹೇಳುತ್ತಾ ನಿಲಗಳೆಯುತ್ತಿದ್ದೆನು. ನನ್ನ ತಾಯಿಯ ನಾನು ಬಂದ ಇಪ್ಪತ್ತು ದಿನ 

ಗಳಿಗೆ ಗಂಡುಮಗುವನ್ನು ಹೆತ್ತರು. ಈ ವಿಚಾರವನ್ನು ಕುರಿತು ಹರಪುರಕ್ಕೆ ಕಾಗದ 

ವನ್ನು ಬರೆದುದೂ ಆಯಿತು. 


X

ನಾನು ರಂಗಪುರದಲ್ಲಿ ಒಂದು ತಿಂಗಳುಕಾಲವನ್ನು ಕಳೆದೆನು. ಹರಪುರದಿಂದ 

ನಮ್ಮ ಯಜಮಾನರು ಈ ಅವಧಿಯಲ್ಲಿ ರಂಗಪುರಕ್ಕೆ ಬಂದಾರೆಂದು ನಿರೀಕ್ಷಿಸಿದೆನು. 

ಬರಲಿಲ್ಲ. ಒಂದು ತಿಂಗಳು ಕಳೆದಮೇಲೆ ಶ್ರೀ ನಗರದಲ್ಲಿ ನಡೆದ ವಿಚಿತ್ರವೃತ್ತಾಂತವೊಂ 

ದನ್ನು ನಮ್ಮ ಯಜಮಾನರು ಪತ್ರಮುಖೇನ ವಿಸ್ತಾರವಾಗಿ ನನಗೆ ತಿಳಿಸಿದರು. ಆ ಪತ್ರದ 

ಮುಖ್ಯ ಸಾರಾಂಶವು ಈ ಕೆಳಗೆ ಬರೆಯಲ್ಪಡುತ್ತದೆ. 


ಶ್ರೀ ನಗರದ ನಮ್ಮ ಮನೆಯಲ್ಲಿ ಹತ್ತು ವರ್ಷಕಾಲದಿಂದ ಒಬ್ಬಳು ಕಪಟಿಯಾದ 

ಮುದುಕಿಯಿದ್ದಳು. ಇವಳು ನಮ್ಮ ಬಂಧುಗಳಲ್ಲೊಬ್ಬರ ಮನೆಯವಳಾಗಿದ್ದುದರಿಂ 

ದಲೂ ಅವಳಿಗೆ ಯಾರೂ ದಿಕ್ಕಿಲ್ಲದ್ದರಿಂದ ನಮ್ಮ ಮನೆಯಲ್ಲೇ ಬಂದು ಸೇರಿಕೊಂ 

ಡಿದ್ದಳು. ಇವಳಿಂದ ಒಂದೊಂದು ಕಾಲದಲ್ಲಿ ನಮಗೆ ಅನೇಕ ಸಹಾಯವಿದ್ದುದರಿಂದ 

ನಮ್ಮ ತಾತನವರು ಅವಳನ್ನು ಮನೆಯಲ್ಲಿರಲು ಸ್ವಾತಂತ್ರ್ಯವನ್ನು ಕೊಟ್ಟಿದ್ದರು. 

ಆ ಮುದುಕಿಯ ನಡತ ವಿಚಿತ್ರವಾದುದು. ಅವಳಿಗೆ ಒಬ್ಬರಮೇಲೆ ಇನ್ನೊಬ್ಬರ ಚಾಡಿ 

ಯನ್ನು ಹೇಳಿ ಪರದೂಷಣೆ ಯನ್ನು ಮಾಡಿ ಆದವರಿಗೆ ತಂದಿಕ್ಕಿ ತಮಾಷೆ ನೋಡುವು 

ದರಲ್ಲಿ ಬಹು ಕುತೂಹಲ. ಅಲ್ಲದೆ ಪ್ರಪಂಚದ ಎಲ್ಲಾ ವೃತ್ತಾಂತವೂ ಇವಳಿಗೆ ಬಲು 

ಬೇಗ ತಿಳಿಯುತ್ತಿದ್ದುದರಿಂದ ಇವಳು ಒಂದು ದೈನಂದಿನ ಪತ್ರಿಕೆಯಂತೆ ಪ್ರಸಿದ್ಧಳಾಗಿ 

---------------------------------------------

54 ಕಾದಂಬರಿ ಸಂಗ್ರಹ 


ದ್ದಳು. ಆದರೆ ನಮ್ಮ ಮನೆಯಲ್ಲಿ ಮಾತ್ರ ನಿಸ್ಪೃಹಳಂತೆ ತೋರ್ಪಡಿಸಿ ಕೊಳ್ಳುತಿದ್ದಳು. 

ಇವಳನ್ನು ಕಂಡರೆ ನಮ್ಮ ಅಕ್ಕನಮಗೆ ಬಹುಪ್ರೀತಿ ಗುಟ್ಟಾಗಿ ಅವಳ ಕೈಲಿ ದುಡ್ಡು 

ಕೊಟ್ಟು ಆಗಾಗ್ಗೆ ತಮಗೆ ಬೇಕಾದ ತಿಂಡಿಯನ್ನು ಮಾಡಿಸಿಕೊಳ್ಳುತ್ತಿದ್ದರು. ಆ ಮುದು 

ಕಿಯ ಅಣ್ಣನ ಭಾವಮೈದುನ ಮಗ 10 ವರ್ಷ ವಯಸ್ಸುಳ್ಳ ಚಂಡಕೇಶವನೆಂಬ ಒಬ್ಬ 

ಹುಡುಗನು ಅನಾಥನಾಗಿ ಬಂದು ಈ ಮುದುಕಿಯ ಮನೆಯಲ್ಲಿ ಸೇರಿಕೊಂಡಿದ್ದನು. 

ಅವನ ವಿದ್ಯಾಭ್ಯಾಸದ ವಿಚಾರವನ್ನು ಈ ಮುದುಕಿಯು ವಹಿಸಿಕೊಂಡಿದ್ದಳು. ಈ 

ಹುಡುಗನು ನಮ್ಮ ಮನೆ ಮಕ್ಕಳೊಡನೆ ಸೇರಿಕೊಂಡು ಆಟವನ್ನು ಆಡುತ್ತಿದ್ದನು. ಅಲ್ಲದೆ 

ನಮ್ಮ ಅಕ್ಕನು ತಮ್ಮ ಚಿಕ್ಕ ಮನೆಯ ಕಾವಲಿಗೆ ತಾವು ಮನೆಯಲ್ಲಿಲ್ಲದಾಗ ಈ ಹುಡು 

ಗನನ್ನು ನೇಮಿಸುತ್ತಿದ್ದರು. ಹುಡುಗನೂ ನಂಬಿಕೆಯಾಗಿಯೇ ಇದ್ದನು. ಮುದುಕಿಯು 

ಆ ಹುಡುಗನನ್ನು ಒಳ್ಳೆಯ ಶಿಕ್ಷೆಯಲ್ಲಿಟ್ಟುಕೊಂಡಿದ್ದಳು. ನಮ್ಮ ಮನೆಯಲ್ಲಿ ಹಣ 

ಹೋಗಿ ನನ್ನ ಮೇಲೆ ಕಳ್ಳತನವು ಆರೋಪಿತವಾದಾಗ ಆ ಮುದುಕಿಯೂ ಆ ಹುಡು 

ಗನೂ ಅಲ್ಲಿಯೇ ಇದ್ದರು. ನಮ್ಮ ಮನೆಯಲ್ಲಿ ಆಗ ನಡೆದ ವೃತ್ತಾಂತವೆಲ್ಲಾ ಆ ಮುದು 

ಕಿಗೆ ಚೆನ್ನಾಗಿ ಗೊತ್ತಾಗಿ ಅವಳು ಅದೇ ಸಮಯವೆಂದು ನನ್ನ ಮೇಲೆ ಅನೇಕಕ್ಷುದ್ರ 

ಗಳನ್ನು ಹೇಳಿಬಿಟ್ಟಿದ್ದಳು. ಇದೇ ಕಾರಣದಿಂದಲೇ ನಮ್ಮ ಭಾವನವರು ನಮ್ಮ ಯಜಮಾ 

ನರ ಮಾತನ್ನು ನಂಬದೆ ತಿರಸ್ಕರಿಸಿ ಮಾತನಾಡಿದ್ದರು. ನಾವು ಆ ಮನೆಯನ್ನು ಬಿಟ್ಟು 

ಹೊರಟುಬಂದಮೇಲೆ ಇಪ್ಪತ್ತು ದಿನಗಳು ಕಳೆದಿದ್ದಿತು. ಆಗೊಂದು ದಿನ ನಮ್ಮ ಭಾವನ 

ವರ ಅಂಗಜೇಬಿನಲ್ಲಿ ಮಧ್ಯಾಹ್ನ ನಾಲ್ಕು ಗಂಟೆಯಲ್ಲಿಟ್ಟಿದ್ದ ಹತ್ತು ಪಾವಲಿಗಳಲ್ಲಿ ನಾಲ್ಕು ಪಾ 

ವಲಿಗಳು ಕಮ್ಮಿಯಾಗಿದ್ದುವಂತೆ ? ಅವರು ಸಾಯಂಕಾಲ ಎಂಟುಗಂಟೆಗೆ 

ಮನೆಗೆ ಬಂದು ಏನೋ ಖರ್ಚಿಗಾಗಿ ಜೇಬಿನಲ್ಲಿದ್ದ ದುಡ್ಡನ್ನು ನೋಡಲು ನಾಲ್ಕು ಪಾ 

ವಲಿಗಳು ಇರಲಿಲ್ಲವಂತೆ ! ಮನೆಯಲ್ಲಿ ಯಾರನ್ನು ಕೇಳಿದರೂ ನನಗೆ ಗೊತ್ತಿಲ್ಲ, 

ತಮಗೆ ಗೊತ್ತಿಲ್ಲವೆಂದು ಹೇಳಿ ಬಿಟ್ಟರು. ನಮ್ಮ ಭಾವನವರಿಗೆ ಯಾರಮೇಲೆ ಸಂದೇಹ 

ಪಡಲಿಕ್ಕೂ ಕಾರಣವಿಲ್ಲದ್ದರಿಂದ ಮನೆಯಲ್ಲೆಲ್ಲರೂ ನಂಬಿಕೆಗೆ ಅರ್ಹರೆಂದು 

ತಿಳಿದಿದ್ದುದರಿಂದಲೂ ಸುಮ್ಮನಾಗಿಬಿಟ್ಟು ಕೈಕಾಲು ತೊಳೆದುಕೊಂಡು ಸಂಧ್ಯಾವಂದನೆ 

ಗಾಗಿ ಬೀದಿಜಗಲಿಯ ಮೇಲೆ ಹೋಗಿ ಕುಳಿತು ಕೊಂಡರು. ಆಗ ನಡುಬೀದಿಯಲ್ಲಿ 

ಆಡಿಕೊಂಡು ಬರುತ್ತಿದ್ದ ನಮ್ಮ ಮನೆಯ ಚಂಡಕೇಶವನೂ ಮಗ್ಗುಲುಮನೆ ನಾರಾಯಣ 

ನೆಂಬ 11 ವರ್ಷದ ಹುಡುಗನೂ ಈ ಕೆಳಗೆ ಕಂಡಂತೆ ಸಂಭಾಷಿಸುತ್ತಿದ್ದರು. 


ನಾರಾಯಣ- ಎಲೋ ! ಕೇಶವ, ನೀನು ಈ ದಿನ ಹೋಟಲಿನಲ್ಲಿ ಕೊಡಿಸಿದ ತಿಂಡಿ 

ಬಹುರುಚಿಯಾಗಿತ್ತು ಕಣೋ, ಅದರಲ್ಲೂ ಬಾಳೆಕಾಯಿಸಕೊಡವಂತೂ ತುಂಬಾ 

ಚೆನ್ನಾಗಿತ್ತು. 

---------------------------------------------- 

ನನ್ನ ಸಂಸಾರ 55 

ಚಂಡಕೇಶವ-ಲೋ, ನಾರಾಯಣ, ನಾಳೆಯ ದಿನವೂ ನನ್ನ ಜತೇಲಿ ಬರುತ್ತೀ 

ಯೇನೋ, ಶ್ಯಾಮಮೂರ್ತಿ, ಕೋದಂಡರಾಮ ಇವರನ್ನೂ ಕರೆದುಕೊಂಡು 

ಬಾ, ನನ್ನ ಹತ್ತಿರ ಮರು ಪಾವಲಿಇದೆ. ನಿಮಗೆಲ್ಲಾ ನಾಳೆಯೂ ತುಂಬಾ 

ತಿಂಡಿ ಕೊಡಿಸುತ್ತೇನೆ. 


ನಾರಾಯಣ-ಲೋ, ನಿನಗೆ ದುಡ್ಡಲ್ಲಿತ್ತೋ, ನಿಮ್ಮಜ್ಜಿ ಕಂಡರೆ ಬಯ್ಯುವದಿಲ್ಲ 

ವೇನೋ ನಾನು ಬರುವುದಿಲ್ಲವಪ್ಪಾ, ನಮ್ಮ ಮನೆಯವರು ಬಯ್ಯುತ್ತಾರೆ. 


ಚಂಡ-ದುಡ್ಡೆ ! ದುಡ್ಡಿಗೇನೊ, ನನ್ನ ಹತ್ತಿರ ಎಷ್ಟೋ ರೂಪಾಯಿ ಇದೆ. ಅದ 

ನ್ನೆಲ್ಲಾ ಒಂದು ಕಡೆ ಗುಟ್ಟಾಗಿಟ್ಟಿದ್ದೇನೆ. ಇನ್ನು ನಾಲೈದು ದಿನ ಕಳೆದ 

ಮೇಲೆ ಅದರಲ್ಲಿ ಒಂದೊಂದಾಗಿ ತೆಗೆದುಕೊಂಡು ತಿಂಡಿಯನ್ನು ತಿನ್ನುತ್ತೇನೆ. 

ನಿನಗೇಕೆ ಹೆದರಿಕೆಯೋ, ನನ್ನ ಜತೇಲಿಸುಮ್ಮನೆಬಾರೋ! 


ನಾರಾಯಣ-ಹಾಗೇನೋ !ಹಾಗಾದರೆ ನೀನು ಜಾಣ, ಆಗಲಪ್ಪಾ, ಶ್ಯಾಮೂ, 

ಕೋದಂಡ ಇವರನ್ನು ನಾಳೆ ಕರತರುತ್ತೇನೆ. 


ಚಂಡ-ನಾನು ಮನೆಗೆ ಹೋಗುತ್ತೇನಪ್ಪಾ, ನಮ್ಮ ಅಜ್ಜಿ ಬಯ್ಯುತ್ತಾಳೆ. ನನ್ನ 

ಹತ್ತಿರ ಒಂಭತ್ತು ಕಾಸಿದೆ. ಇದನ್ನು ತೆಗೆದುಕೊಂಡು ನಿನ್ನ ಹತ್ತಿರ ಇಟ್ಟಿರು. 

ನಾಳೆ ತಿಂಡಿತಿನ್ನುವಾಗ ಕೊಡುವಿಯಂತೆ. 


ಈರೀತಿ ಆ ಹುಡುಗರು ಮಾತನಾಡಿಕೊಂಡು ತಮ್ಮ ತಮ್ಮ ಮನೆಗಳಿಗೆ ಬಂದು 

ಬಿಟ್ಟರು. ನಮ್ಮ ಭಾವನವರು ಆ ಹುಡುಗರ ಮಾತನ್ನು ಕೇಳುತ್ತಾ ಆಶ್ಚರ್ಯಪಟ್ಟು 

ತಮ್ಮ ಜೇಬಿನಲ್ಲಿದ್ದ 4 ಪಾವಲಿಗಳನ್ನು ಈ ಚಂಡಕೇಶವನೇ ತೆಗೆದುಕೊಂಡಿರಬಹು 

ದೆಂದು ಊಹಿಸಿದರು. ಹಾಗೆಯೇ ಅವನು ತನ್ನಲ್ಲಿ ತುಂಬಾ ರೂಪಾಯಿಗಳಿವೆ-ಎಂದು 

ಹೇಳಿದಾಗ ಅವರಿಗೆ ದಿಗ್ಭ್ರಮೆಯುಂಟಾಯಿತು. ಇದರ ನಿಜಸ್ಥಿತಿಯನ್ನು ಪರೀಕ್ಷಿಸ 

ಬೇಕೆಂದು ಅವರು ಸಂಧ್ಯಾವಂದನೆಯಾದ ಬಳಿಕ ಗುಟ್ಟಾಗಿ ಚಂಡಕೇಶವನನ್ನು ಕರೆದು 

ಉಪಾಯದಿಂದ ಮಗು ! ನಿನ್ನ ಹತ್ತಿರ ದುಡೇನಾದರೂ ಇದ್ದರೆಕೊಡು. ನಾಳೆ 

ಕೊಡುತ್ತೇನೆಂದು ಕೇಳಿದರು. ಅವನು ಇಲ್ಲ, ನನ್ನಲ್ಲಿ ದುಡ್ಡೆಲ್ಲಿರುತ್ತದೆ. ಎಂದನು. 

ಎಲೋ ? ನೀನು ನಾರಾಯಣನ ಸಂಗಡ ಹೇಳುತ್ತಿರಲಿಲ್ಲವೇನೋ : ಆ ಮೂರು 

ಪಾವಲಿಯನ್ನು ನೀನು ನನಗೆ ತಂದುಕೊಟ್ಟರೆ ನಿನಗೆ 1ಪಾವಲಿಯನ್ನು ಇನಾಮಾಗಿ 

ಕೊಡುತ್ತೇನೆಂದು ಹೇಳಿದರು. ಅದಕ್ಕೆ ಅವನು, ನನ್ನ ಜೇಬಿನಲ್ಲಿ ನೋಡುತ್ತೇನೆ 

ಇದ್ದರೆ ಕೊಡುತ್ತೇನೆಂದು ದಿಗಿಲಿನಿಂದ ಹೇಳಿದನು. ಅವನ ಭಯವನ್ನು ನೋಡಿ 

ನಮ್ಮ ಭಾವನವರಿಗೆ ನಿಸ್ಸಂದೇಹವಾಗಿ ಅವನನ್ನು ಬಿಟ್ಟು ಬಿಟ್ಟರು. ಆ ಹುಡುಗನು 

---------------------------------------------

56 ಕಾದಂಬರಿ ಸಂಗ್ರಹ  


ಒಳಕ್ಕೆ ಹೋಗಿ ಹೆಚ್ಚಾಗಿ ನಿಂತುಕೊಂಡನು. ಅವರಜ್ಜಿಯು ಇವನ ಸ್ಥಿತಿಯನ್ನು 

ನೋಡಿ ಇದೇಕೆ ! ಹೀಗಿರುವೆಯೆಂದು ಕೇಳಿದರು. ಉತ್ತರಹೊರಡಲಿಲ್ಲ. ಅಷ್ಟರಲ್ಲಿ 

ನಮ್ಮ ಭಾವನವರು ಹೋಗಿ ಮುದುಕಿಯೊಡನೆ, ನಡೆದವೃತ್ತಾಂತವನ್ನೂ ಹುಡು 

ಗರಿಬ್ಬರ ಸಂಭಾಷಣೆಯನ್ನೂ ತಿಳಿಸಿದರು. ಅದರ ಮೇಲೆ ಚಂಡಕೇಶವನ ಜೇಬನ್ನು 

ಶೋಧಿಸಲು ಮೂರುಪಾವಲಿಗಳು ಸಿಕ್ಕಿದುವು. ಅದನ್ನು ನೋಡಿ ಮುದುಕಿಯು 

ಆಹುಡುಗನನ್ನು ಹೊಡೆದು ಬಡೆದು ವಿಪರೀತವಾಗಿ ಶಿಕ್ಷಿಸಿಬಿಟ್ಟರು. ತುಂಬಾ 

ರೂಪಾಯಿಗಳಿವೆಯೆಂದು ನಾರಾಯಣನಸಂಗಡ ಹೇಳಿದೆಯಲ್ಲಾ, ಇಲ್ಲಿ ಕೊಡು 

ಅದನ್ನು ಕೊಟ್ಟರೆ ನಿನಗೆ ಎರಡು ರೂಪಾಯಿ ಇನಾಮು ಕೊಡುವೆನೆಂದು ನಮ್ಮ 

ಭಾವನವರು ಹೇಳಲು ಆಹುಡುಗನು ಅಳುತ್ತಾ, ಇಲ್ಲ! ನನ್ನಲ್ಲಿಲ್ಲ ಎಂದು ಹೇಳಿದನು. 

ಅವನನ್ನು ಎಲ್ಲರೂ ತುಂಬಾನೆದರಿಸಿ, ನೀನು ಹೇಳದಿದ್ದರೆ ನಿನ್ನನ್ನು ಪೋಲೀಸಿಗೆ 

ಕೊಟ್ಟು ಬಿಡುತ್ತೇನೆಂದು ಹೇಳಿದರು. ಆಹುಡುಗನು ಬಹು ಕಷ್ಟದಿಂದ ಹಿತ್ತಲಿಗೆ ಹೋಗಿ 

ಗೋಡೆಯಪಕ್ಕದಲ್ಲಿ ಒಂದು ಸ್ಥಳದಲ್ಲಿ ಬಗೆದು ಅಳುತ್ತಾ ನಿಂತುಕೊಂಡನು. ಎಲ್ಲರೂ 

ಹೋಗಿ ಆ ಸ್ಥಳದಲ್ಲಿ ನೋಡಲು ಮಣ್ಣು ಹಿಡಿಯಲಾರಂಭವಾಗಿದ್ದ ಬೆಳ್ಳಿಯ ರೂಪಾ 

ಗಳು ಕಾಣಬಂದುವು. ಭಾವನವರು ಅದನ್ನು ತೆಗೆದು ಎಣಿಸಲು ಅರವತ್ತೆರಡು 

ರೂಪಾಯಿಗಳಿದ್ದು, ಇಷ್ಟು ಹಣ ನಿನಗೆಲ್ಲಿ ಸಿಕ್ಕಿತೆಂದು ಕೇಳಲು ಅವನು ನಡುಗುತ್ತಾ 

ತನ್ನ ಅಜ್ಜಿಯನ್ನು ತೋರಿಸಿದನು. ಅದರ ಅರ್ಥವೇನೆಂದು ಎಲ್ಲರೂ ಕೇಳಲು, ನಾನು 

ಈಗ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೈಗೆ ಸಿಕ್ಕಿದ 

ಷ್ಟನ್ನು ತಂದು ನನ್ನ ಅಜ್ಜಿಯ ಕೈಗೆ ಕೊಡಲು ಅವಳು ಅದನ್ನು ನನ್ನೆದುರಾಗಿ ಇಲ್ಲಿ 

ಹೂಳಿಟ್ಟಳೆಂದು ಹೇಳಿದನು. ಪಾಠಕರೆ ! ಈಗ ಮುದುಕಿಯ ಮುಖವನ್ನು ಒಮ್ಮೆ 

ದೃಷ್ಟಿಸಿ ನೋಡಿ. ಗುಟ್ಟು ಬಯಲಾಯಿತು. ಇನ್ನೊಂದು ಕ್ಷಣವೂ ತಮ್ಮ ಮನೆಯ 

ಲ್ಲಿರಲಾಗದೆಂದು ಮುದುಕಿಯನ್ನು ಆ ಹುಡುಗನೊಡನೆ ಹೊರಕ್ಕೆ ಕಳುಹಿಸಿಬಿಟ್ಟರು. 

ಈ ರೀತಿಯಾಗಿ ಶ್ರೀ ನಗರದಲ್ಲಿ ಕಳ್ಳತನ ಪತ್ತೆಯಾಯಿತು. 


ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಹಿಂದೆ ಕಳುವಾದುದು ಐವತ್ತೈದು ರೂಪಾ 

ಯಿಗಳೆಂದೂ ನಿರ್ಧರವಾಯಿತಂತೆ ! ಮುದುಕಿಯು ಆಹುಡುಗನೊಡನೆ ಮನೆಬಿಟ್ಟು 

ಹೊರಟು ಹೋದಮೇಲೆ ಮನೆಯವರೆಲ್ಲರೂ ಮಾತನಾಡಿಕೊಂಡು ನನ್ನನ್ನೂ ನಮ್ಮ 

ಯಜಮ್ರನರನ್ನೂ ಪುನಃ ಹಿಂತಿರುಗಿ ಮನೆಗೆ ಬರುವಂತೆ ಎಷ್ಟೋ ಉಪಚಾರವನ್ನು 

ಹೇಳಿದರು. ನಾನು ತಸ್ಕರಿಯಲ್ಲವೆಂದು ಆಗ ನಮ್ಮ ಮನೆಯವರಿಗೆ ಗೊತ್ತಾಗಿ 

ನನ್ನ ವಿಷಯದಲ್ಲಿ ಹಿಂದೆ ನಡೆಸಿದ ನಡವಳಿಕೆಗಾಗಿ ಬಹು ಪಶ್ಚಾತ್ತಾಪ ಪಟ್ಟರಂತೆ! 

------------------------------------------------ 

ನನ್ನ ಸಂಸಾರ 57 

ಈರೀತಿಯಾಗಿ ಸಮಸ್ತ ವೃತ್ತಾಂತವೂ ನನಗೆ ಪತ್ರಮೂಲಕವಾಗಿ ತಿಳಿದು 

ಬಂದಿತು-ಹೀಗೆಯೇ ಇನ್ನೂ ಒಂದು ತಿಂಗಳು ಕಳೆದಿತ್ತು. ನಮ್ಮ ಯಜಮಾನರಿಗೆ 

ಅಷ್ಟು ಹೊತ್ತಿಗೆ ರಜವು ಮುಗಿದುದರಿಂದ ನನ್ನನ್ನು ಕರೆದು ಕೊಂಡು ಹೋಗಲು 

ರಂಗಪುರಕ್ಕೆ ಬಂದರು. 


ನಾವು ರಂಗಪುರದಿಂದ ಶ್ರೀನಗರಕ್ಕೆ ಬಂದು ನಮ್ಮ ಯಜಮಾನರು ಹೊಸ 

ದಾಗಿ ಹತ್ತು ರೂಪಾಯಿ ಬಾಡಿಗೆಗೆ ಮಾಡಿದ್ದ ಒಂದು ದಿವ್ಯ ಗೃಹದಲ್ಲಿ ಸಂಸಾರ 

ಮಾಡಲಾರಂಭಿಸಿದೆವು. ಅದೇ ತಿಂಗಳಲ್ಲೇ ನಮ್ಮ ಯಜಮಾನರಿಗೆ 15ರೂಪಾಯಿ 

ಸಂಬಳ ಹೆಚ್ಚಾಯಿತು. ನಮ್ಮ ಭಾವನವರಿಗೂ 100ರೂಪಾಯಿಗಳು ಆತಿಂಗಳಿಂದ 

ಬರಲಾರಂಭವಾಯಿತು. ಇನ್ನೊಂದು ತಿಂಗಳಿಗೆ ನಮ್ಮ ಭಾವನವರ ಮಗು ವಿದ್ಯಾಮೂ 

ರ್ತಿಗೆ ಉಪನಯನವೂ ನಮ್ಮ ಹುಡುಗಿ (ಸಪತ್ನಿ ಪುತ್ರಿ) ಸೀತಾಲಕ್ಷ್ಮಿಗೆ ವಿವಾಹ 

ಲಗ್ನವೂ ಹರಪುರದಲ್ಲಿ ಬೆಳೆಯಲು ನಿಷ್ಕರ್ಷೆ ಯಾಗಿರುವುದು. ನಾವೆಲ್ಲರೂ ಅಲ್ಲಿಗೆ ಹೋಗ 

ಬೇಕಾಗಿದೆ. ಇಂದೀಗಲೇ ನಮ್ಮ ಸಂಸಾರವು ಶಾಂತಿ ಗೃಹದಂತೆ ರಾರಾಜಿಸು 

ತ್ತಲಿದೆ. ವಿಷಬೀಜವೂ ವಿಷಲತೆಯ ಧ್ವಂಸವಾಗಿ ಸರ್ವತ್ರ ಅಮೃತ ವರ್ಷಣವು ವರ್ಷಿ 

ಸುತಲಿದೆ. ನಾನು ಪತಿಯ ಬೋಧೆಗಳನ್ನು ಮನನಮಾಡುತ್ತಾ ಪತಿಸೇವೆಯನ್ನು ತೃಪ್ತಿ 

ಕರವಾಗಿ ಮಾಡಲು ಆರಂಭಮಾಡಿರುವೆನು, ಸೋದರಿಯರೇ! ವುನಃ ನಮ್ಮ ಸಂಸಾರ 

ದಲ್ಲಿ ಅಶಾಂತಿ ಯುಂಟಾಗಲು ಕಾರಣವೇನೂ ಇರದು. ನನ್ನೀ ಸಂಸಾರಸ್ಥಿತಿಯನ್ನು 

ನೋಡಿ-ಓದಿ, ಸರೂ ಗೃಹಚ್ಚಿದ್ರಗಳನ್ನು ಕಳೆದು ಸುಖಿಗಳಾಗಲೆಂದೂ, ನಮ್ಮ ಭಾರತ 

ಭೂಮಾತೆಯು ಸದ್ಗೃಹಿಣಿಯರಿಂದ ಕೂಡಿ ಚಿರಕಾಲ ರಾರಾಜಿಸಲೆಂದೂ ಮಂಗಳ 

ಪರಂಪರೆಗಳು ಗೃಹಗೃಹದಲ್ಲೂ ವೃದ್ಧಿ ಯಾಗಲೆಂದೂ ಅನನ್ಯ ಭಾವದಿಂದ ಪರಮಾ 

ತ್ಮನನ್ನು ಧ್ಯಾನಿಸಿ ವಿಶ್ರಾಂತಿ ಹೊಂದುವನು. ಸಮಯ ಬಂದಾಗ ಪುನಃ ನಿಮ್ಮ ಸಂದ 

ರ್ಶನವನ್ನು ತೆಗೆದುಕೊಳ್ಳಲು ಅಡ್ಡಿಯಿಲ್ಲ. 

ನಮ್ಮ ಭಗಿನೀಪರ್ಗಕ್ಕೆ ಶುಭವಾಗಲಿ !!! 

ಸಂಪೂರ್ಣ, 

Printed by B. V. Narasimha Iyengar, at the 

ROYAL PRINTING PRESS, MYSORE. 

==============================================

ನೂತನ ವತ್ಸರಾರಂಭ. 


ಪೋಷಕಮಹಾಶಯ! ನಿಮ್ಮ ಅಮೋಘ ಸಹಾಯ ಸಂಪತ್ತಿಯಿಂದ ಸಂಗ್ರಹಶಿಶುವು 

ಚತುರ್ಥ ವರ್ಷದಲ್ಲಿ ಕಾಲನ್ನಿಟ್ಟಿರುವುದು. ಕಳೆದಮೂರುವರ್ಷಕಾಲ ಸಂಗ್ರಹವು 

ಅನೇಕ ಕಷ್ಟದಿಂದ ಪ್ರಚುರವಾದುದು ಸರಿಯಷ್ಟೆ! ಮುಂದೆ ಈ ಪತ್ರಿಕೆಯು ನಿರಾಯಾಸ 

ವಾಗಿ ಹೊರಡುವಂತೆಯೂ, ಕಾಲಕ್ಕೆ ಸರಿಯಾಗಿ ಪ್ರಚುರವಾಗುವಂತೆಯೂ, ಗ್ರಾಹಕ 

ಸಂಖ್ಯೆಯು ಅಭಿವೃದ್ಧಿಯಾಗಿ ಸಂಗ್ರಹಕ್ಕೆ ಮಂಗಳ ಪುಂಟಾಗುವಂತೆಯ ನೀವೆಲ್ಲರೂ 

ಅನುಗ್ರಹಿಸುವದಲ್ಲದೆ ಸ್ವಹಸ್ತ ಪರಹಸ್ತಗಳಿಂದ ಉದಾರಾಶ್ರಯಕೊಟ್ಟು ಕಾಪಾಡ 

ಬೇಕಾಗಿ ಪ್ರಾರ್ಥಿಸುತ್ತೇನೆ 

ಸಂಗ ಹ ಪತ್ರಕರ್ತ. 

------

ಲಲಿತೆಯ ಪಾತಿವ್ರತ್ಯ ರಕ್ಷಣೆ . 


ಹೊಸೂರಿನ ಆಚೆ ಸುಮರು ಅರ್ಧಮೈಲಿ ದೂರದಲ್ಲಿದ್ದ ಒಂದು ಮೈದಾನ 

ದಲ್ಲಿ ಸಣ್ಣದೊಂದು ಗುಡಿಸಲಿದ್ದಿತು. ಒಂದು ದಿನ ಬೆಳಿಗ್ಗೆ ಹತ್ತು ಗಂಟೆಯಲ್ಲಿ ಒಬ್ಬ 

ಭಿಕ್ಷುಕನು ಆ ಗುಡಿಸಲಿನ ಬಾಗಿಲಿನಲ್ಲಿ ನಿಂತು ತನ್ನ ಕೈಯಲ್ಲಿದ್ದ ಕಬ್ಬಿಣದ ಝಾಲರಿ 

ಯನ್ನು ಸದ್ದು ಮಾಡಿದನು. ಒಳಗಿನಿಂದ ಯುವತಿಯೊಬ್ಬಳು ಭಿಕ್ಷವನ್ನು ತಂದು 

ಹಾಕಿದಳು, ಯುವತಿಗೆ ಹದಿನೆಂಟು ವರ್ಷ ವಯಸ್ಸು. ಸ್ವಭಾವವಾಗಿ ಆಕೆಯು 

ಸುಂದರಿಯಾಗಿದ್ದಳು. ಆಕೆಯ ಹೆಸರು ಲಲಿತಾಂಬ. ಲಲಿತೆಯು ಭಿಕ್ಷವನ್ನು ಹಾಕು 

ತ್ತಿದ್ದಾಗ ಆ ಭಿಕ್ಷುಕನು ಪಾಪಪೂರಿತವಾದ ಕ್ರೂರದೃಷ್ಟಿಯಿಂದ ಆ ಸುಂದರಿಯನ್ನು 

ನೋಡತೊಡಗಿದನು. ಈತನ ಸ್ಥಿತಿಯನ್ನು ನೋಡಿ ಲಲಿತೆಯು ಹೆದರಿ ಬೇಗ ಭಿಕ್ಷ 

ವನ್ನು ಹಾಕಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ಭಿಕ್ಷುಕನು 

ಹೊಸೂರಿನ ಕಡೆಗೆ ಹೊರಟುಹೋದನು. ಆದರೆ ಅವನ ಮನಸ್ಸು ಈಗ ಮೊದಲಿನಂತಿರ 

ಲಿಲ್ಲ. ಊರ ಹೊರಗಿನ ನೆರೆಯಿಲ್ಲದ ಗುಡಿಸಲನ್ನೂ ಅಲ್ಲಿರುವ ಅಸದೃಶರೂಪರಾಶಿ 

ಯನ್ನೂ ನೋಡಿ ಅವನ ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯು ಉತ್ಪನ್ನ 

ವಾಯಿತು. ಹಾವು ಕಡಿದವನ ದೇಹದಲ್ಲಿ ವಿಷವೇರುವಂತೆ ಆ ಪಾಪಿಯ ಹೃದಯ 

ದಲ್ಲಿ ಜನಿಸಿದ ಆ ದುರಾಲೋಚನೆಯು ಒಂದು ಕ್ಷಣದೊಳಗಾಗಿ ಅವನನ್ನು ಆಕ್ರಮ 

ಣಮಾಡಿ ಅವನನ್ನು ಶಾಸಿಸತೊಡಗಿತು. 


ಅವನು ಹೊಸೂರಿಗೆ ಬಂದು ಬಹು ಚಮತ್ಕಾರದಿಂದ ಆ ಗುಡಿಸಲಿಗೆ ಸಂಬಂಧ 

ಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಂಡನು. ಅಷ್ಟರಲ್ಲೇ ಸಾಯಂಕಾಲವಾ 

ಯಿತು. ಕತ್ತಲೆಯಾದ ಮೇಲೆ ಪೂರ್ವೋಕ್ತವಾದಾ ಗುಡಿಸಲಿನಲ್ಲಿ ವಾಸಿಸುತಿ ದ

---------------------------------------------

ಲಲಿತೆಯು ಎರಡು ವರ್ಷದ ತನ್ನ ಮಗುವನ್ನು ಎತ್ತಿಕೊಂಡು ಬೀದಿಯ ಬಾಗಿಲಿಗೆ 

ಬಂದಳು. ಜಗಲಿಯ ಮೇಲೆ ಯಾರೋ ಮಲಗಿರುವಂತೆ ತೋರಿತು. ವಿಚಾರಿಸಿ ನೋಡ ಲು ಆ ವ್ಯಕ್ತಿಯು ಬೆಳಿಗ್ಗೆ ಬಂದಿದ್ದ ಭಿಕ್ಷುಕನೆಂದು ತಿಳಿದುಬಂದಿತು. ಲಲಿತೆಗೆ ಸಂಶ ಯವುಂಟಾಯಿತು. ಆಗ ಆ ಭಿಕ್ಷುಕನು ಮೃದುಸ್ವರದಿಂದ, (ತಾಯಿ ! ಮುಂದಿನೂ ರಿಗೆ ಹೋಗಲು ಕತ್ತಲಾದುದರಿಂದ ಈ ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆ ಮುಂದಕ್ಕೆ ಹೋಗುವೆನು” ಎಂದು ಹೇಳಲು ಲಲಿತೆಯು ಧೈರ್ಯಗೊಂಡು ಒಳಕ್ಕೆ ಹೋದಳು. ಆ ದಿನ ಮನೆಯಲ್ಲಿ ಲಲಿತೆಯೊಬ್ಬಳೇ ಇದ್ದಳು. ಆಕೆಯ ಪತಿಯು ಪರಸ್ಥಳಕ್ಕೆ ಹೋಗಿದ್ದುದರಿಂದಲೂ ಆತನು ಮಾರನೆ ದಿನ ಬೆಳಿಗ್ಗೆ ಬರುವ ವಾಯಿದೆ ಇದ್ದುದರಿಂದ ಲೂ ಏಕಾಂಗಿಯಾಗಿ ಆ ರಾತ್ರಿ ಲಲಿತೆಯು ಆ ಗುಡಿಸಲಿನಲ್ಲಿರುವುದು ದುಸ್ತರವಾಗಿ ಹೋಯಿತು. ಕಾರ್ಯಾಂತರಗಳಿಂದ ಆಕೆಯ ಪತಿಯು ಅವಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗಬೇಕಾಗಿ ಬಂದಿದ್ದಿತು. ಲಲಿತೆಯು ಆಗ ಏನು ಮಾಡಬಲ್ಲಳು ? ತನ್ನ ಪತಿ ಯನ್ನೇ ಧ್ಯಾನಿಸುತ್ತಾ ಊಟವನ್ನು ಮಾಡಿ ಕೈತೊಳೆದುಕೊಂಡು ಒಳಗೆ ಹೋದಳು. ಹೋಗುವಾಗ ಭಿಕ್ಷುಕನು ಜಗಲಿಯ ಮೇಲೆ ಮಲಗಿರಲಿಲ್ಲ. ಲಲಿತೆಯು ಒಳಕ್ಕೆ ಹೋಗಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಕೂಡಲೆ ಹಾಸಿಗೆಯನ್ನು ಹಾಸಿ ಮಲಗಲು ಸನ್ನಾಹಮಾಡುತ್ತಿದ್ದಾಗ ಆ ಗುಡಿಸಲಿನ ಮೂಲೆಯೊಂದರಲ್ಲಿ ಯಾರೋ ಕೆಮ್ಮಿದಂತೆ ಕೇಳಿಸಿತು. ದೀಪದಲ್ಲಿ ಎಣ್ಣೆ ಮುಗಿದು ಆರಿಹೋಗುವ ಸ್ಥಿತಿಯಲ್ಲಿ ದ್ವಿತು. ಆ ಸಣ್ಣ ಉರಿಯಲ್ಲೇ ಆ ಮೂಲೆಯನ್ನು ದೃಷ್ಟಿಸಿ ನೋಡಲು ಅಲ್ಲಿ ಒಬ್ಬ ಪುರುಷ ವ್ಯಕ್ತಿಯು ನಿಂತಿದ್ದಂತೆ ಬೋಧೆಯಾಯಿತು. ಮತ್ತು ಆ ವ್ಯಕ್ತಿಯು ತನ್ನ ಕಡೆಗೇ ನಡೆದು ಬರುತ್ತಿರುವುದನ್ನು ಲಲಿತೆಯು ನೋಡಿದಳು. ಆಕೆಯ ದೇಹವು ಗಡಗಡನೆ ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರಡದು. ಆಗ ಆ ಕಳ್ಳ ಭಿಕ್ಷು ಕನು, “ ನೀನು ಕೂಗಿಕೊಂಡರೆ ನಿನ್ನ ಪ್ರಾಣವನ್ನು ಕಳೆದುಬಿಡುವೆನು.” ಎಂದು ಆಕೆ ಯನ್ನು ಬೆದರಿಸಿದನು, ತನ್ನ ಮನೆಯಲ್ಲಿರುವ ಸರ್ವಸ್ವವನ್ನೂ ನಿನಗೆ ಒಪ್ಪಿಸುವೆನೆಂದು ಲಲಿತೆಯು ಅವನನ್ನು ಪ್ರಾರ್ಥಿಸಿದಳು. ಆಗ ಅವನು, ನಾನು ಹಣದಾಸೆಯಿಂದ ಇಲ್ಲಿಗೆ ಬರಲಿಲ್ಲ. ನಿನ್ನಲ್ಲಿ ಮೋಹಿತನಾಗಿ ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಗೆ ದೇಹದಮೇಲೆ ಸ್ಮತಿಯೇ ತಪ್ಪಿತು. ಆದರೂ ಅವಳು ಆಗ ಧೈರ್ಯಮಾಡಿ ಅಯ್ಯ! ನನ್ನ ಮಗುವನ್ನು ಬಹಿರ್ಭೂಮಿಗೆ ಕರೆದುಕೊಂಡು ಹೋಗಿದ್ದು ಬಂದು ನಿನ್ನ ಮಾತನ್ನು ನಡೆಯಿಸುವೆನೆಂದು ಹೇಳಿದಳು, ಆ ಚಂಡಾಲನು ಅದಕ್ಕೊಪ್ಪದೆ ತಾನೇ ಮಗುವನ್ನು ಕರೆದುಕೊಂಡು ಹೋಗಿಬರುವೆನೆಂದು ಹೇಳಲು ಲಲಿತೆಯು ಉಪಾ ಯಂತರವನ್ನು ಕಾಣದೆ ಮಗುವನ್ನು ಮುದ್ದಿಸಿ ಆ ಪಾಪಿಯ ಕೈಗೆ ಕೊಟ್ಟಳು. ಅವನು ಹೊರಗೆ ಕಾಲಿಟ್ರೊಡನೆಯೇ ಲಲಿತೆಯು ಬಾಗಿಲನ್ನು ಬಂಧಿಸಿ ಬಿಟ್ಟಳು. ಭಿಕ್ಷುಕನು, 

---------------------------------------------

ವಾಗಿ ಹೆದರಿಸಿದನು, ನಿಶ್ಯಬ್ಬ, ಅವನು ಮಿತಿ ಮೀರಿದ ಕೊಪದಿಂದ ಆಗುಡಿಸಲಿಗೆ ಬೆಂಕಿ ಹಚ್ಚು ವೆನೆಂದೂ ಮಗುವನ್ನು ಸಂಹರಿಸಿ ಬಿಡುವೆನೆಂದೂ ಬೊಗಳಿದನು. ಆ ಕಟುಕನಿಗೆ ಆಗ ಕನಿಕರ ವೆಳ್ಳಷ್ಟೂ ಇರಲಿಲ್ಲ. ಆಹಾ! ಕಾಮಾಂಧರು ತಮ್ಮ ಕಾರ್ಯನಿರ್ವಾಹಕ್ಕೆ ಏನು ಬೇಕಾದರೂಮಾಡುವರಲ್ಲವೆ ? ಏನಾದರೂ ಲಲಿತೆಯು ಮಾತನಾಡಲೇ ಇಲ್ಲ. ಆ ಕಟುಕನು ಬಹುಕೋಪದಿಂದ ಆಮಗುವಿನತಲೆಯನ್ನು ಕದಕ್ಕೆ ಹೊಡೆದನು, ಮಗುವು ಕಿಟ್ಟನೆ ಕಿರುಚ ತೊಡಗಿತು. ಆಮಗುವು ಅಳುವಿನಲ್ಲೂ ಮುದ್ದು ಮುದ್ದಾಗಿ ಅಮ್ಮ, ಅಮ್ಮ, ಎಂದು ಕೂಗುತ್ತಿತ್ತು. ಆದರೂ ಬಾಗಿಲು ತೆರೆಯಲ್ಪಡಲಿಲ್ಲ. ಲಲಿತೆಯು ಎಂತಹ ಕನ ಹೃದಯಳಿರಬಹುದು; ಸ್ತ್ರೀಯರು ಆವದುಃಖವನ್ನಾದರೂ ಸಹಿಸಬಲ್ಲರು. ತಮ್ಮ ಮಕ್ಕಳು ತಮ್ಮದಿಗೆ ಆರ್ತನಾದ ಮಾಡುತ್ತಿದ್ದರೆ ನೋಡಿ ಸಹಿಸಲಾರರು. ಲಲಿ ತೆಯು ಮಗುವನ್ನು ಅವನ ಕೈಗೆ ಕೊಟ್ಟಾಗಲೇ ಯಮನ ವಶಮಾಡಿದಂತೆ ಭಾವಿಸಿ ದ್ದಳು. ಭಿಕ್ಷುಕನು ಕೊನೆಗೆ ಆ ಮಗುವನ್ನು ವೇಗವಾಗಿ ಬೀದಿಗೆ ಎಸೆದು ಆ ಮನೆಗೆ ಕನ್ನವನ್ನಿಕ್ಕಲು ಪ್ರಯತ್ನಿಸಿ ಒಂದು ಕಡೆ ಗೋಡೆಯನ್ನು ಹೊಡೆದು ಆ ರಂಧ್ರದಿಂದ ತನ್ನ ತಲೆಯನ್ನು ಒಳಕ್ಕೆ ನುಗ್ಗಿಸಿದನು. ಇದನ್ನು ಲಲಿತೆಯು ನೋಡಿ ತನ್ನ ಮನೆ ಯಲ್ಲಿದ್ದ ಮತ್ತು ಕತ್ತಿಯಿಂದ ಆ ಕಳ್ಳನ ತಲೆಗೆ ಬಲವಾಗಿ ಹೊಡೆದಳು. ಅವನ ತಲೆ ಯೊಡೆದು ರಕ್ತ ಸುರಿಯುತ್ತಿದ್ದಾಗಲೇ ಅವನ ಕಾಲನ್ನು ಒಂದು ಸರ್ಪವು ಕಚ್ಚಿತು. ಅರ್ಧ ಗಳಿಗೆಯೊಳಗಾಗಿ ಕಳ್ಳಭಿಕ್ಷುಕನು ಲೋಕಾಂತರವನ್ನೆ ದಿದನು. ಲಲಿತೆಯು ಬಾಗಿಲು ತೆರೆಯದೆ ಒಳಗೇ ಇದ್ದಳು. ಬೆಳಗಾಯಿತು. ಲಲಿತೆಯ ಗಂಡನು ಬಂದನು. ಗುಡಿಸಲಿಗೆ ಹತ್ತು ಮಾರು ದೂರದಲ್ಲಿ ಮಗುವು ಭೀಕರಾವಸ್ಥೆಯಲ್ಲಿ ಬಿದ್ದಿರುವುದನ್ನೂ ಗುಡಿಸಲಿನ ಹೊರಗೆ ಭಿಕ್ಷುಕನು ಸತ್ತಿರುವುದನ್ನೂ ನೋಡಿದನು. ಬಾಗಿಲು ತೆರೆಯಲ್ಪಟ್ಟಿ ರಲಿಲ್ಲ. ಕೂಗಿದರೂ ನಿರುತ್ತರ. ಕೂಡಲೆ ಹೊಸೂರಿನಿಂದ ಪೊಲೀಸಿನವರನ್ನು ಕರದು ಕೊಂಡು ಬಂದು ಗುಡಿಸಲು ಬಾಗಿಲನ್ನೊಡೆಸಿ ಒಳಹೊಕ್ಕನು. ಲಲಿತೆಯು ಮೂರ್ಛಿತ ಳಾಗಿ ಬಿದ್ದಿದಾಳೆ. ಅವಳನ್ನು ಉಪಚರಿಸಿ ಮೇಲಕ್ಕೆಬ್ಬಿಸಿ ಜ್ಞಾನೋದಯವಾದಮೇಲೆ ಕೇಳಲು ನಡೆದ ವೃತ್ತಾಂತವು ತಿಳಿದುಬಂದಿತು. ಮಗುವನ್ನು ವೈದ್ಯರಿಗೆ ತೋರಿಸಲು ಸತ್ತಿರಲಿಲ್ಲವೆಂದು ತಿಳಿಯಿತು. ಮಗುವಿನ ಪ್ರಾಣವು ಉಳಿದುದಕ್ಕಾಗಿ ಎಲ್ಲರೂ ಸಂತೋಷಿಸಿದರು. ಲಲಿತೆಯ ಈ ಪಾತಿವ್ರತ್ಯ ರಕ್ಷಣೆಯ ವಿಚಾರವು ಊರಿಗೆಲ್ಲಾ ತಿಳಿದು ಜನರೆಲ್ಲರೂ ಆಕೆಯನ್ನು ಹೊಗಳಿದರು.

=================================================


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ