ಶುಕ್ರವಾರ, ಸೆಪ್ಟೆಂಬರ್ 17, 2021

ವಿಲಾಸಿನಿ-ಎನ್‌.ನಾರಣಪ್ಪ

PDF available at  https://archive.org/details/dli.osmania.4396 (contains this book and other books)

 * ವಿ ಲಾ ಸಿ ನಿ."

ಪ್ರಥಮಗುಚ್ಛ 

ಪ್ರಭಾತದ ಆಗಮನವನ್ನು ಸೂಚಿಸುತ್ತ ತಂಗಾಳಿಯು 

ಎಲ್ಲೆಲ್ಲಿಯ ಸುಳಿಯಲಾರಂಭಿಸಿತು: ಆಪ್ಯಾಯ ' 

ಮಾನವಾದ ಆ ಮಂರಮಾರುತದ ಮೃದುಸ್ಪರ್ಶ 

ದಿಂದ ಪೂರ್ವದಿಗ್ವನಿತೆಯು  ಹರ್ಷಿತಳಾದಳು. ಅವಳ ಆನಂದವನ್ನು 

ನೋಡಿ ಸಹಿಸಲಾರದೆ ನಿಶೆಯು ಮೆಲ್ಲ ಮೆಲ್ಲನೆ ಹಿಂಜರಿಯಲಾರಂಭಿಸಿದಳು ! 

ಪಕ್ಷಿ ಸಂಕುಲಗಳ ಕಲಕಲ ರವವು ದಿಕ್ತಟಗಳಲ್ಲಿ ಪ್ರತಿಧ್ವನಿತವಾಗಲಾರಂ 

ಸಿತು ! ಪ್ರಭಾತದ ಈ ಸಮಾರಂಭವನ್ನು ಕಂಡು ನಿದ್ರಾಲತಾಂಗಿಯು 

ಭಯವಿಹ್ವಲಳಾದಳು ! ತನಗಿನ್ನು ಜಯಕಾಲವು ದುರ್ಲಭವೆಂದು

ಕೊ೦ಡಳು ! ಕ್ಷಣಕ್ಷಣಕ್ಕೂ ಕಳೆಗುಂದಿ ಕಣ್ಮರೆಯಾಗುತ್ತಿದ್ದ ನಕ್ಷತ್ರ 

ಗಳ ಸ್ಥಿತಿಯನ್ನು ನೋಡಿದಳು. ಆ ತೇಜೋಹೀನನಾದ ತರಾಕಾತನ 

ಸ್ಥಿತಿಯನ್ನು ನೋಡಿ ಬೆರಗಾದಳು ! ತಾನಿನ್ನುರುವುದು ಆಯುಕ್ತವೆಂದು 

ಕೊಂಡು ತನ್ನ ಆಲಿಂಗನದಿಂದ ಸುಖಿಸುತ್ತಿದ್ದವರನ್ನು ನಿಧಾನವಾಗಿ ತ್ಯಜಿಸ 

ಲಾರಂಭಿಸಿ ಸ್ವಲ್ಪ ಕಾಲದಲ್ಲಿಯೇ ಮರೆಯಾದಳು, ನಿದ್ರಾಲತಾಂಗಿಯು   

ತನ್ನನ್ನು ದೂರೀಕರಿಸಿದ ಮೇಲೆ ಹಾಸುಗೆಗಳಿಂದೇನು ಪ್ರಯೋಜನ  

ವೆಂದುಕೊಂಡು ಸರ್ವರೂ ಏಳಲಾರಂಭಿಸಿದರು. ಎದ್ದು ತತ್ಕಾಲ ಕರ್ಮೋ 

ತ್ಸುಕರಾಗಿದ್ದರು. ಆಗ ಕರೀಕಲ್ ಪಟ್ಟಣದ ಇನ್‌ಸ್ಪೆಕ್ಟರ್' ತಾ೦ದೋಣಿ 

ರಾಯರು ಪ್ರಾತರ್ವಿಧಿಗಳನ್ನು ಪೂರ್ತಿಗೊಳಿಸಿ, ಉಡುಪಗಳನ್ನು ಧರಿಸಿ 

ಹೊರಗೆ ಹೊರಡಲುದ್ಯುಕರದರು ಅಷ್ಟರಲ್ಲಿಯೇ, “ ಸ್ವಾಮಿ: ! ಸ್ವಾಮಿ !! 

ಸರ್ವನಾಶವಾಗಿ ಹೋಗಿದೆ!! ಆಯ್ಯೋ ! ಬನ್ನಿ !! ಬೇಗದಯಮಾಡಿ !!! " 

ಎಂದು ಕಾತರದಿಂದ ಕೂಗುತ್ತ ಬಹು ಆತುರದಿಂದ ಓಡಿಯೋಂದು 

2-------------------------------

ಒಬ್ಬ ವ್ಯಕ್ತಿಯ ಭಯದಿಂದ ಗಡಗಡ ನಡುಗುತ್ತೆ ನಿಂತನು. ವ್ಯಕ್ತಿಗೆ 

ಪೂರ್ಣಪ್ರಜ್ಞೆಯು ಇದ್ದಂತಿರಲಿಲ್ಲ. :ಬಾಯಿಯಲ್ಲಿ ಮಾತುಗಳೇ ಸ್ಪಷ್ಟ 

ವಾಗಿ ಹೊರಡುತ್ತಿರಲಿಲ್ಲ !! * ಆಯೋ ! ಖೂಣೀ !! ಸ್ವಾಮೀ! ಖೂನಿ   

ನಡೆದು ಹೋಗಿದೆ !! ಸತ್ತರು !! ಹಾಳಾಯಿತು!"  ಎಂದು ಭಾವಭರಿ   

ತವಾಗಿ ಅವನಾಡಿತ್ತಿದ್ದ ಮಾತಗಳಿಂದ ಇನ್‌ಸ್ಪೆಕ್ಟರಿಗೆ ಕೇವಲ ಭ್ರಾಂತಿ   

ಯುಂಟಾಗಿಹೋಯಿತು. ವಸ್ತುತಃ ಸ್ವಲ್ಪಕಾಲ ವ್ಯಾಕುಲಿತರಾದರು. 

ಇನ್‌ಸ್ಪೆಕ್ಟರ್‌:--ಅಯ್ಯಾ! ಸ್ವಲ್ಪ ಸಮಾಧಾನಮಾಡಿಕೊಳ್ಳಯ್ಯಾ ಏನಾ  

ಯಿತು? ಖೂನಿಯೆ?  ಯಾರಿಗೆ ಸರ್ವನಾಶವಾಯಿತು? ಸ್ವಲ್ಪಸ್ವಲ್ಪ 

ವಾಗಿ ತಿಳಿಯುವಂತೆ ಹೇಳು. ಎಂದು ಹೇಳಿದರು.

ವ್ಯಕ್ತಿ:--"ಅಯ್ಯೋ ನಾನೇನು ಹೇಳಲಿ?  ಎಲ್ಲಾ ಹಾಳಾಯಿತು. 

ಮನೆಯೆಲ್ಲಾ ರಕ್ತಮಯ ನೋಡಿದರೆ ನಿಮಗೇ ತಿಳಿಯುವುದು 

ಖೂನಿ ! ದರೋಡೆ !! ಕಳವು!!! ಎಲ್ಲಾ ಆಗಿದೆ! ನಮ್ಮ ಶಂಭುದತ್ತನ 

ಮನೆಯು ಈ ದಿನ ಹಾಳಾಗಿದೆ!" ಎಂದು ವ್ಯಸನದಿಂದ ಹೇಳಿ ನಿಟ್ಟುಸಿ   

ರನ್ನು ಬಿಟ್ಟನು. ಶಂಭುದತ್ತನ ಮನೆ! ಖೂನಿ, ದರೋಡೆ ಕಳವು ! "

ಎಂಬ ಮಾತನ್ನು ಕೇಳಿ ಇನ್‌ಸ್ಪೆಕ್ಟರು ಸ್ವಲ್ಪವೂ  ತಡಮಾಡದೆ  

ಅವನನ್ನು ಕರೆದುಕೊಂಡು ಶಂಭುದತ್ತನ ಗೃಹಾಭಿಮುಖವಾಗಿ ಹೊರಟರು. 

ಆ ಬೀದಿಯಲ್ಲಿ ಅನೇಕ ಜನರು ನೆರೆದಿದ್ದರು. ಎಲ್ಲರೂ ಊರ್ಧ್ವ 

ಮುಖರಾಗಿ, ಗೃಹದ ಕಡೆಯೇ ದೃಷ್ಟಿಸುತ್ತಾ ಅಲ್ಲಲ್ಲೆ ಪಿಸುಮಾತುಗಳ  

ನ್ನಾಡಿಕೊಳ್ಳುತ್ತಿದ್ದರು. ಎಲ್ಲೆಲ್ಲಿಯೂ ಅರ್ಥ ಗರ್ಭಿತವಾದ ಹಾಹಾಕಾರ 

"ಖೂನಿ! ಖೂನಿ!! ಅಯ್ಯೋ ! ಪಾಪಿಗಳೇ!!  ಸಾತ್ವಿಕನೂ,  ದಯಾಪ  

ರನೂ ಆದ ಈತನನ್ನು ಆವ ನರಾಧಮನು ಕೊಂದುಹಾಕಲು ಆ ಚಂಡಾಲ  

ನಿಗೆ ಮನಸ್ಸು. ಹೇಗೆಬಂದಿತು ? ನಿನಗೆ ತಕ್ಕ ಶಿಕ್ಷೆಯು ಆಗದಿರುವುದೆ? "   

ಎಂದು ಮೊದಲಾಗಿ ಕೋಪೋದ್ರೇಕದಿಂದ ನುತಿಸುತ್ತಿದ್ದರು. ಪೋಲೀ  

ಸಿನವರು ಬರುತ್ತಿದ್ದುದನ್ನು ಕ೦ಡು ಅನೇಕ ಜನರು "ತಮಗೇನು   

ಸಂಭವಿಸ:ವುಗೊ ? ಎಂದು ಕೊಂಡು ತಲೇತಪ್ಪಿಸಿಕೊಳ್ಲಲು ಅಲ್ಲಲ್ಇ ಮನೆ   

ಗಲಲ್ಲೂ ಸಂದುಗಳಲ್ಲೂ, ನುಸಿಯುತ್ತಿದ್ದರು! ಕೇವಲ ಮನೋದೌ  

ರ್ಬಲ್ಯ!! ಇನ್ನು ಕೆಲವರು,  " ಏನಾದರೇನು ? ಮನಸ್ಸಿನಲ್ಲಿ ಅಳಕಿಟ್ಟುಕೊಂಡಿದ್ದರೆ   

೩-------------------------------------------------------------------------------- 

ಸರಿ !"  ಎಂದುಕೊಂಡು ಧೈರ್ಯದಿಂದ ಇನ್‌ಸ್ಪೆಕ್ಟರನ್ನು ಹಿಂಬಾ    

ಲಿಸಿದರು.  

ಮನೆಯನ್ನು ಪ್ರವೇಶಿಸಿದರು. ಎಲ್ಲೆಲ್ಲಿಯೂ ಕತ್ತಲೆ ಹೃದಯ 

ಭೇದಕವಾದ ನಿಶ್ಶಬ್ದತೆ !  ಎಲ್ಲಾ ಬಾಗಿಲುಗಲನ್ನೂ ಗವಾಕ್ಷಗಳನ್ನೂ,  

ಇನ್‌ಸ್ಪೆಕ್ಟರ್ ಸಾಹೇಬರು ಬೆಳಕು ಗಾಳಿಗಳ ಪ್ರವೇಶಕ್ಕಾಗಿ ತೆರೆಯಿಸಿ    

ದರು. ಅಲ್ಲಲ್ಲಿ ತೊಟ್ಟಿದ್ದ ರಕ್ತದ ಕಲೆಗಲನ್ನು ನೋಡುತ್ತ ಇನ್‌ಸೈಕ್ಟರ್‌:-

ಸಾಹೇಬರು ಆಳುಗಳಿಂದ ತೋರಿಸಲ್ಪಟ್ಟ ಒಂದು ಕೋನೆಯನ್ನು ಪ್ರವೇ 

ಶಿಸಿದರು ! ಅದೆಂತಹ ಘೋರವಾದ ದೃಶ್ಯ!! ಎಮತಹ ಭೀಷಣ ಪರಿ  

ಣಾಮ!!! ರಕ್ತವು ಹರಿದು ನಿಂತಿದೆ! ಕೋಣೆಯೆಲ್ಲಾ ರಕ್ತಮಯ!!!   

ಇನ್‌ಸ್ಪೆಕ್ಟರು ತನಹರಿಸಲಾರದೆ ಹೋದರು! ವಸ್ತುತಃ ಹೃತ್ಕಂಪನ 

ವಾಯಿತು! ಇನ್‌ಸ್ಪೆಕ್ತರೇ, ಏಕೆ ಆರುತಾನೆ ಅಮತಹ ದೃಶ್ಯವನ್ನು   

ನೊಡಿ ನಡುಗುವರು? ಏನಾದೇನು? ಆರು ಹೆದರಿದರೇನು? ಆರು   

**ರೇನು? ಎಷ್ಟು ಹೊತ್ತುತಾನೆ ಇನ್‌ಸ್ಪೆಕ್ತರ್ ಸಾಹೇಬರು ಹೆದರ 

ಲಾಗದು. ಇನ್‌ಸ್ಪೆಕ್ಟರು ಮನೆಯನ್ನೆಲ್ಲಾ ಚೆನ್ನಾಗಿ ಹುಡುಕಿ ನೋಡಿ 

ದರು. ಸುಟ್ಟುಹೋಗಿದ್ದ  ಅನೇಕಪದಾರ್ಥಗಳು ದಿಕ್ಕುದಿಕ್ಕುಗಳಲ್ಲಿ  

ಬಿದ್ದುಹೋಗಿದ್ದವು. ಒಂದೆರಡು ಪೆಟ್ಟಿಗೆಗಳ ಬೀಗಗಳು ತೆರೆಯಲ್ಪ   

ಟ್ಟಿದ್ದವು!!   **** ಮುರಿಯಲ್ಪಟ್ಟಿರಲಿಲ್ಲ!!! ಇವೆಲ್ಲವನ್ನೂ ನೋಡಿ  

ಸ್ಥಳಮಹಜನರನ್ನು ಬರೆದರು. ಮನೆಗೆ ಸರಯಾದ ಕಾವಲನ್ನು ಸ್ಥಾಪಿಸಿ   

ದರು. ವಿಚಾರಮಾಡಲು ಬೇಕಾದ ಜನಗಳನ್ನೆಲ್ಲಾ ಕರೆದುಕೊಂಡು  

ಆಫೀಸಿಗೆ ಹೋದರು. ಆಫೀಸಿನಲ್ಲಿ ಇನ್‌ಸ್ಪೆಕ್ಟರು ಎಲ್ಲರ ಹೇಳಿಕೆ   

ಗಳನ್ನೂ ಕೇಳಿದರು. ತದನಂತರ ಮನೆಗೆಹೋಗಿ ಸ್ನಾನಭೋಜನಾದಿ  

ಗಳನ್ನು ಪೂರಯಿಸಿ ವಿಶ್ರಾಂತಿಗೋಸುಗ ಕುಳಿತುಕೊಂಡನು. ಹಾಗೆಯೆ   

ಆ ಭಯಂಕರ ಕೃತ್ಯದ ವಿಷಯವಾಗಿ ಆಲೊಚಿಸಲಾರಮಬಿಸಿದನು. ನಡೆದ   

ಸಂಗತಿಗಲನ್ನೆಲ್ಲಾ ಒಂದುಸಲ ಜ್ಞಾಪಕಕ್ಕೆ ತಂದರು. "ಈದಿನ ರಾತ್ರೆ   

ಮನೆಯಲ್ಲೆಲ್ಲರೂ ಇದ್ದರು. ಮರುದಿನ ಬೆಳಗ್ಗೆ ಒಬ್ಬರೂ ಇರಲಿಲ್ಲ! ಮನೆ  

ಯೆಲ್ಲಾ ರಕ್ತಮಯ!! ದೊಡ್ಡ ಕಳವು!!! ಇಷ್ಟಲ್ಲದೆ ಮತ್ತಿ   

ನ್ನೇನು ತಿಳಿಯಲಿಲ್ಲ. ತದನಂತರ ಈ ರೀತಿ ತರ್ಕಿಸಲಾರಂಭಿಸಿ 

೪----------------------------------------------------------------

ದರು !! “ ಈಗ ಆ ಭಯಂಕರ, ರಕ್ತ ಪ್ರವಾಹವು ಇರುವ ಕೋಣೆ 

ಯಲ್ಲಿ ಮಲಗುತ್ತಿದ್ದವರು ಮಾರ್ವಾಡಿಗಳು, ಅದೇ ಸ್ಥಳದಲ್ಲಿ ಈ ಘೋರ 

ದೃಶ್ಯ ! ಆದುದರಿಂದ ಮೃತರು ಅವರೇ ಎಂದೂಹಿಸಲು ಅಡ್ಡಿಯೇನು ?  

ಆಗಲಿ, ಅವರು ಮೃತರಾಗಿರುವರು. ಶಂಭುದ ತ್ಯಾದಿಗಳಲ್ಲಿ ?  

ಒಂದುವೇಳೆ ಅವರಿವರೆಲ್ಲರೂ ಒಟ್ಟಿಗೆ ಖನಾಗಿರಬಹುದೆ? 

ಆದಲ್ಲಿಯ ಮಾತು ? ಅವರು ಮಲಗಿದ್ದ ಸ್ಥಳದಲ್ಲಿ ಅವವಿಧವಾದ ಅನು 

ಮಾನಾಸ್ಪದವಾದ ಕುರುಹುಗಳು ತೋರುವುದಿಲ್ಲ. ಆದುದರಿಂದ ಕೊಲೆ 

ಗಾರರು ಅವರೆಲ್ಲರನ್ನೂ ಈ ಕೋಣೆಯಲ್ಲಿ ಸೇರಿಸಿ ಕತ್ತರಿಸಿರಬಹು 

ದೆಂದು ಯೋಚಿಸೋಣವೇ?  ಛೇ! ಛೇ !! ಅದು ಕೇವಲ ಅಸಂಭವವ. 

ಕೊಲ್ಲಲು ಬಂದವರು ಎಲ್ಲಿದ್ದವರನ್ನು ಅಲ್ಲಲ್ಲಿಯೇ ಕೊಂದು ಕೈಗೆ 

ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವುದನ್ನು ಬಿಟ್ಟು ಅಂತಹ ವಿಪರೀತ 

ವನ್ನು ಆಚರಿಸುವರೆಂದು ಸ್ವಲ್ಪ ವಿವೇಕವಾದರೂ ಇದ್ದವನು ಎಂದಿಗೂ 

ಆಲೋಚಿಸಲಾರ ! ಶಂಭುದತ್ತಾದಿಗಳನ್ನು ಅವರಿದ್ದಲ್ಲಿ ಕೊಂದಿಲ್ಲ 

ಅಲ್ಲಿಂದಿಲ್ಲಿಗೆ ತಂದಿಲ್ಲ ! ಮನೆಯಲ್ಲಿದ್ದವರ ಸುಳಿವಿಲ್ಲ ! ಏನಾರರೆಂದು 

ಯೋಜಿಸಲು ಸಾಧ್ಯವಲ್ಲ ! ಆದುದರಿಂದ ಇದರ ಪರಿಣಾಮವೇನಾಗು 

ವುದೋ ದೇವರೇ ಬಲ್ಲನಲ್ಲದೆ ನನ್ನಿಂದ ಯೋಚಿಸಿಲು ಸಾಧ್ಯವಲ್ಲ 

ಆದಂತಿರಲಿ ! ಈಗ ಮೃತರು ಮಾರ್ವಾಡಿಗಳೇ ಸರಿಯೆಂದು ಹೇಳುವು 

ದಾದರೆ ಪರಸ್ಥಳೀಕರಾದ ಇವರನ್ನು ಕೊಲ್ಲಲು ಬಂದವರಾರು ? ಸಾಮಾ 

ನ್ಯವಾಗಿ ಇಂತಹ ಖೂನಿಗಳಿಗೆ ಪೂರ್ವದ್ವೇಷ, ದಾಯಾದಿಮತ್ಸರ, ದ್ರವ್ಯಾ 

ಪೇಕ್ಷೆ, ಅಥವ ಸುಂದರಿಯರ ಸೌ೦ದರ್ಯವಾದರೂ ಕಾರಣವಾಗಿರ 

ಬೇಕು. ಒಂದುವೇಳೆ ಮೃತನು ಶಂಭದತ್ತನಾಗಿದ್ದ ಪಕ್ಷದಲ್ಲಿ ಮೇಲಿನ 

ಮರಣದ ಕಾರಣಗಳಲ್ಲಿ ಎರಡು ಮೂರು ಅವನಲ್ಲಿ ಇತ್ತು. ಪಾಪ? ಈ 

ಬಡಪಾಯಗಳುರ ಮಾರ್ವಾಡಿಗಳು ಅನ್ಯದೇಶೀಯರು ! ಅವರು ಇಲ್ಲಿಗೆ 

ಹೊಸದಾಗಿ ಬಂದಿದ್ದುದರಿಂದ ಇವರಿಗೆ ಇಲ್ಲಿ ಪೂರ್ವದೈವಗಳಿರಲು 

ಕಾರಣವಿಲ್ಲ. ದಾಯಾದಿಗಳಿದ್ದರೆ ಇಲ್ಲಿಗೆ ಬಂದು ಅವರನ್ನು ಕೊಲ್ಲುವ 

ಅವಶ್ಯಕತಯು ಏನು ? ಸ್ತ್ರೀಯರ ತಂಟೆಯಂತೂ ಇಲ್ಲವೇ ಇಲ್ಲ ! 

ಬಾಕಿ ಉಳದುದು ದ್ರುವ್ಯವೊಂರು, ಅದೂ ಕೂಡ ಕಂಭರತನ ಉತ್ತಮ 

೫--------------------------------------------------------------------------------- 

ರಕ್ಷಣೆಯಲ್ಲಿದ್ದರಿಂದ ಮತ್ತೀನ್ನೇನು ತಾನೆ  ಯೋಚಿಸಲಾಗುವುದು?  

ದರೋಡೆಕಾರರು ಇವರನ್ನು ಶಂಭುದತ್ತಾದಿಗಳಿರಬಹುದೆಂದು  ಕೊಂದು 

ಮನೆಯಲ್ಲಿ ದ್ರವ್ಯಾಪಹರಣದಲ್ಲಿರುವಾಗ ಒಳಗೆ ಇದ್ದ ಶಂಭುದತ್ತಾದಿಗಳು 

ಕಂಡು ಭೀತರಾಗಿ ಎಲ್ಲಿಯಾದರೂ ತಲೆತಪ್ಪಿಸಿಕೊಳ್ಳಲು :ಹೋಗಿರ  

ಬಹುದೆಂದು .................................................. . . . ರಿಂದ ಈ ಕೃತ್ಯ ನಡೆಯಿ 

ತೆಂದು ಯೋಚಿಸೋನವೆಂದರೆ  ಪ್ರತ್ಯಾಹರಣ ವೊಂದಲ್ಲದೆ ಮೃತ 

ಪಟ್ಟಿರುವವರ ಹಣ ಸಹ ಕದಿಯಲ್ಪಟ್ಟಿರುವುದರಲ್ಲಿ ಏನೋ ಒಂದತಿಶಯ 

ವಾದ ಆಂಶವು ಇರಬೇಕಲ್ಲದೆ ಸಾಮಾನ್ಯ ಕೆಲಸವೆಂದು ತೋರುವುದಿಲ್ಲ!

ಪ್ರತ್ಯಹರಣ ರೀತಿಯೂ   ಸಹ ಚಮತ್ಕಾರವಾಗಿರುವುದಲ್ಲದೆ ಉದಾ 

ಸೀನವಾಗಿರುವಂತೆ ಕಾಣುವುದಿಲ್ಲ! ಪೆಟ್ಟಿಗೆಗಳು ಸರಿಯಾದ ಬೀಗದ  

ಕೈಗಳಿಂದಲೇ ತೆಗೆಯಲ್ಪಟ್ಟಿರುವುದಲ್ಲದೆ ಸ್ವಲ್ಪವೂ ಬಲಪ್ರಯೋಗದ ಚಿಹ್ನೆ 

ಯಿಲ್ಲದಿರುವುದರಿಂದ ಯಾವನೋ ಒಬ್ಬ ಮನೆಯ ಆಡಳಿತವನ್ನು ಬಲ್ಲ 

ವನು ಈ ಕಾರ್ಯದಲ್ಲಿ ಪ್ರವರ್ತಿಸಿರಬೇಕು! ಎಂದು ಮೊದಲಾಗಿ ಸ್ವಲ್ಪ 

ಕಾಲ  ಆಲೋಚಿಸುತ್ತಿದ್ದವರು.  “ ಒಂದು ವೇಳೆ--ದ್ರವ್ಯಾಶೆಯು ಕೆಟ್ಟದ್ದು ?  

ಆದ್ರವ್ಯವನ್ನು  ಸಾಗಿಸದೇ ಬಿಟ್ಟಿರುವುದು ? ಅದೇನು ಸಾಮಾನ್ಯವೇ? 

ಈ ಶಂಭುದತ್ತನೇ ಅವರು ತನ್ನಲ್ಲಿಟ್ಟಿದ್ದ ದುಡ್ಡನ್ನು ದಕ್ಕಿಸಿಕೊಳ್ಳ 

ಬೇಕೆಂದು  ಅವರನ್ನು ಕೊಲ್ಲಿಸಿರಬಹ ದೇ ” ಛೆ! ಛೇ! ತನ್ನಾಶ್ರಯವನ್ನು 

..................ನಂಬಿದವರನ್ನು ಮೋಸದಿಂದ ಕೊಲ್ಲಿಸುವಷ್ಟು ನೀಚನಾಗುವನೆ ? 

...............................................................................ಅಸಾಧಾರಣ! ಏನಾದರೇನು?

.......................................................ಯಾರಾದರೂ ಕೊಂದಿರಲಿ? ಈ ಮೃತದೇಹ  

ಗಳನ್ನು ಮರೆಮಾಡಿರುವುದರಲ್ಲಿ ಏನೋ ಒಂದು ವಿಶೇಷ ತಂತ್ರವು ಇರ 

ಬೇಕು. ಬರೀ ಹೋಗಿಬರುವುದರಲ್ಲಿ ಕಾಲಹರಣ ಮಾಡುವುದಕ್ಕಿಂತಲೂ .

ಸರಿಯಾದ ಜನರನ್ನಿಟ್ಟು ಕೊಂಚ ಸಾಹಸಮಾಡಿ ಇದರ ಗುಟ್ಟನ್ನು ಬಟ 

ಬಯಲಿಗೆ ತರಲೇಬೇಕು! ಎಂದು ದೃಡಸಂಕಲ್ಪವನ್ನು ತಳೆದು. ಸಂಕಲ್ಪ 

ಸಿದ್ಧಿಯನ್ನು ಪಡೆಯಲು ಸಾಹೇಬರ ಭೇಟಿಗಾಗಿ ಹೊರಟರು, 

********************

6----------------------------------

ದ್ವಿತೀಯ ಗುಚ್ಛ, 

ಇಷ್ಟು ಮಾತ್ರಕ್ಕೇ ನಾನು ವ್ಯಸನದಿಂದ ಪರಿಪೀಡಿತ 

ಳಾಗಲೆ ? ವೃಥಾ ವ್ಯಸನಪಡುವುದರಿಂದ ಆಗುವುದು 

ತಾನೆ ಏನು ? ಸಕಲವೂ ಭಗವದಧೀನ ? ನಮ್ಮ 

ಪೇಕ್ಷೆಯ೦ತೆ ಅವುದು ತಾನೆ ಸಂಘಟಿಸುವುದು ? ಹಾಗೆ ಸಂಘಟಿಸುವಂತಿ   

ದ್ದರೆ ಇವು ನಾವು ಭೂಸುರರೇ ಆಗುತ್ತಿದ್ದೆವಲ್ಲದೆ ಆರನ್ನಾದರೂ ಲಕ್ಷೀ  

ಕರಿಸುತ್ತಿದ್ದೆವೆ? ಈಗಲೆ ನಾವಿಷ್ಟು ಅಹಂಕಾರ ಮೂರ್ಛಿತರಾಗಿ   

ರುವೆವಲ್ಲ! ಅನ್ಯಾಯವಾಗಿ ಮತಿಹೀನೆಯರಾದ ಅನೆಕ ಸ್ತ್ರೀಯರು  

ನ್ಯಾಯವಾಗಿ ಆಚರಿಸಬೇಕಾದ ಸಾಧುಸತೀತ್ವ ಧರ್ಮವನ್ನು ಸಂತ್ಯಜಿಸಿ,  

ನಿರ್ಲಜ್ಜಿತರೂ ದುರಭಿಮಾನಿಗಳೂ, ಸ್ವೇಚ್ಛಾವಿಹಾರಿಗಳೂ ಆಗಿ ತಾವು   

ಮಹದೈಶ್ವರ್ಯವಂತರ ಮನೆಯಲ್ಲಿ ಜನಿಸಿದವರೆಂತಲೂ, ತಾವು ಅಸಮಾನ 

ರಾದ ರಮಣೀಮಣಿಗಳೆಂತಲೂ, ಮಾತಾಪಿತೃಗಳಿಂದ  ಅರಗಿಳಿಗಳಂತೆ 

ಕೇವಲ ಕೋಮಲ ಪುಷ್ಪಗಳಂತೆ ಪೋಷಿಸಲ್ಪಟ್ಟು, ಅಲುಗಾಡುವುದರಿಂದ 

ಉಂಟಾಗುವ ಆಯಾಸವನ್ನು ಸಹಾ ಸಹಿಸದಂತಹ ತಾವು ಅಯೋಗ್ಯ 

ಪುರುಷ ಪಶುಗಳ ಕೈಹಿಡಿದುದರಿಂದ ದುಃಖಸಾಗರದಲ್ಲಿ ನಿಮಗ್ನರಾಗುವ 

ದುರವಸ್ಥೆಯು ಬಂದೊದಗಿತೆಂತಲೂ, ಪ್ರತ್ಯಹವೂ ............................

ಅದೂ ಅಲ್ಲದೆ, ಸಕಲ ಶ್ರಮಗಳಿಗೂ ತಲೆಯೊಡ್ಡಿಕೊಂಡು ತಮ್ಮ ಔನ್ನ 

ತ್ಯವನ್ನೇ ಹಾರಯಿಸುವ ಪುರುಷರನ್ನು ಅಡಿಗಡಿಗೂ ಚಿತ್ರತರವಾಗಿ ಹಿಂಸಿ 

ಸುತ್ತೆ ಕೇವಲ ಧೂರ್ತೆಯರಾಗಿ ಪ್ರವರ್ತಿಸುವರು. ನಾದಿನಿಯರಾಗಿ 

ಆಕ್ರೋಶ ಪ್ರಸಾದ! ಅತ್ತೆಯರಮೇಲೆ ಬಲವತ್ತರವಾದ ಅಧಿಕಾರ! 

ಸೊಸೆಯರಾದರೋ ಕಸಕ್ಕಿಂತ ಕಡೆಗೆ ವಾರಗಿತ್ತಿಯರು ಊರುಸೇರುವುದೆ

ಕಷ್ಪ ಗಂಡನ ಪ್ರಾಣವನ್ನಾದರೋ ಹಿಂಡುತ್ತ ಸಂಸಾರ ಸಾಗರಕ್ಕೆ ಚಂಡ ಮಾರುತಪ್ರಾಯರಾಗಿ ಸರ್ವಸುಖಗಳಿಗೂ ವಿಪಸಂಕಾಶರಾಗಿ, ನಿರಂತರ ದೂಷಿತೆಯರಾಗಿ, ಅಂತ್ಯಕಾಲದಲ್ಲಿ  ಅನಾಥರಿಗೊದಗುವ ದುಃಖಕ್ಕಿಂತಲೂ

7---------------------------------------

ಶತಶಃ ಅಧಿಕವಾದ ದುಃಖಕ್ಕೆ ಭಾಜನರಾಗುವರು ! ಇಂತಲ್ಲದೆ, ಸಂಪತ್ 

ಸಮೃದ್ಧಿಯಿದ್ದರೂ ಅಹಂಕಾರಗ್ರಸ್ತರಾಗದೆ, ತೌರುಮನೆಯ ಸರ್ವಸ್ವವನ್ನೂ 

ಅವರಪೇಕ್ಷೆಗೆ ವಿರೋಧವಾಗಿ ಸ್ವೀಕರಿಸಲನರ್ಹವಾದುದೆಂದು ಭಾವಿಸಿ 

ಹುಟ್ಟಿದಮನೆಗೆ ಹೆಚ್ಚಿಗೆಯನ್ನು ಬಯಿಸುತ್ತ, ಸೇರಿದಕಡೆಯಲ್ಲಿ ಸರ್ವೋ 

ತ್ವಮರೆನಿಸಿಕೊಂಡು, ಅಪಾರವಾದ ಈ ಸಂಸಾರ ಸಾಗರಕ್ಕೆ ಅತ್ಯುತ್ತಮ 

ವಾದವೆಗಳ೦ತೆ ಘನಗಾ೦ಭೀರ್ಯದಿಂದ ಸ್ವಧರ್ಮಗಳನ್ನು ಪರಿಪಾಲಿಸಿ 

ಕೊಂಡು ಸುಖಸಂತೋಷಗಳಿಗೆ ಆಧಾರಭೂತರಾಗಿ ಸತ್ಪಥದಲ್ಲಿ ಮುಂದು 

ವರಿಯುವ ಚಿರಸ್ಮರಣೀಯರಾಗಿರುವಂತಹ ಸುಗುಣಮಣಿಗಳಾದ ರಮಣೀ 

ಕುಲರತ್ನಗಳಂತೆ ನಡೆಯಲು ನಾನೂ ಆಶಿಸಿದೆನು. ಈಗಲೂ ಆಶಿಸು 

ವೆನು. ನಾನು ಕೊಡಗುಸೀಮೆಯ ಉನ್ನತಪ್ರದೇಶದಲ್ಲಿ ಜನಿಸಿದೆನು. 

ಆದರೂ ಕೂಡ ತೌರುರಿನಮೇಲ್ಮೆಗೆ ಅಹಂಕಾರಪಡದೆ, ಕರ್ನಾಟಕ 

ಮಂಡಲೇಶ್ವರನ ಸನ್ನಿಧ್ಯವನ್ನು ಹೊಂದಲಾಶಿಸಿ, ಗಂಭೀರ, ಭಾವದಿಂದ 

ಮಹಿಶೂರಸೀಮೆಯಲ್ಲಿ ಪ್ರವಹಿಸುತ್ತ ನನ್ನ ಸಹವಾಸವನ್ನು ಬಯಸಿ 

ಬಂದ ಕಪಿನೀ, ಹೇಮಾವತಿಯರೇ ಮೊದಲಾದವರ ಜತೆಗೊ೦ಡು, 

ಅಲ್ಲಲ್ಲಿ ನಿಂತು ತಮ್ಮನ್ನು ಕಾಪಾಡಬೇಕೆಂದು ಪ್ರಾರ್ಥಿಸುವಂತಿರುವ ಅಣೇ 

ಕಟ್ಟುಗಳ ಸಮೀಪದಲ್ಲಿ ಸ್ವಲ್ಪಕಾಲನಿಂತು ಶಾಕೋಪಶಾಖೆಗಳ ಕಾಲುವೆ (

ಗಳಿಂದ ಮಹಿಶೂರದೇಶದ ಅನೇಕ ಭಾಗಗಳನ್ನು ಫಲಪ್ರದಳಾಗುವಂತೆ 

ನೀರಾವರಿಯಾಗಿ ಮಾಡಿ, ಆ ದೇಶದವರವರ ಜೀವನೋಪಾಯವನ್ನು ಕಲ್ಪಿಸಿ 

ದೆನು. ಅವರೂಕೂಡ ಒಡೆಯನ ಅಡಿದಾವರೆಗಳನ್ನು ಆಲಂಗಿಸುವ ಅದೃಷ್ಟ 

ವಿಲ್ಲದೆ ನನ್ನ ಪೂರ್ವಾರ್ಜಿತಕ್ಕೆ ಅದೇನು ತಾನೆ ಮಾಡಬಲ್ಲರು ? ನನ್ನ 

ಪತಿಯ ಮೇಲೆ ಕೋಪಿಸಿಕೊಳ್ಳಲೆ ? ಛಿ! ಅದೆಲ್ಲಿಯ ಮಾತು.!! ಆರ 

ಪಾದ ಸ್ಪರ್ಶವು ನಮಗೆ ಪರಮ ಪಾವವವಾಗುವುದೆಂದೂ, ಆವ ಪ್ರೀತಿಯು 

ನಮಗೆ ಮಹಾ ವಜ್ರಕವಚದಂತಹ ಅಭೇಧ್ಯವಾದ, ಅಮೋಘ ರಕ್ಷೆ 

ಯೆಂದೂ ಭಾವಿಸುವೆವೋ, ಅಂತಹ ಪತಿಯ ಪ್ರೀತಿಯು ನಮಗೆ ದೊರೆ 

ಯದಿದ್ದ ಮಾತ್ರಕ್ಕೆ ಆತನ ಮೇಲೆ ಕೋಪಿಸಿ ಕೊಳ್ಳುವುದು ಸ್ತ್ರೀ ಕುಲ 

ಧರ್ಮವೇ ? ಛೇ ! ಅದೆಂದಿಗೂ ಅಲ್ಲ ನಾವು ಸುಕೃತ ಶಾಲಿಗಳಲ್ಲವಾದುದ 

ರಿಂದಲೇ ನಾವು ವಂಚಿತರಾಗುವುದು.

8---------------------------------

ದುರದೃಷ್ಟದ, ಹೇಯವಾದ, ನನ್ನೀ ಸುಟ್ಟ ಮೋರೆಯನ್ನೆತ್ತಿಕೊಂಡು 

ನಾನು ಹೇಗೆತಾನೆ ತಿರುಗಲಿ ? ಒಡೆಯನ ಪ್ರೀತಿಗೆ ಪಾತ್ರಳಾಗಲಿಲ್ಲ 

ಅವರ ಪಾದಸ್ಪರ್ಶನಸುಖವನ್ನನುಭವಿಸುವ ಅದೃಷ್ಟವೂ ಇಲ್ಲದೆ 

ಹೋಯಿತು ? ಮಾಡುವುದೇನು ? ಇನ್ನುಮೇಲೆ ಹೀಗಿರಬಾರದೆಂತಲೂ, 

ನಿರರ್ಥಕವಾದ ಈ ಜನ್ಮವು ಸಾಕೆಂತಲೂ, ನಿರ್ಧರಿಸಿ, ಶಿವನಸಮುದ್ರದ 

ಸಮೀಪದಲ್ಲಿ ಅಯ್ವತ್ತು ಆಳುಗಳ ಪ್ರಮಾಣಕ್ಕಧಿಕವಾಗಿ ಉನ್ನತ .

ವಾಗಿರುವ ಪ್ರದೇಶದಿಂದ ಹಾರಿಬಿಟ್ಟೆನು. "ಆದರೇನು ? ನನ್ನಪೇಕ್ಷೆಯು 

ಈಡೇರಿತೇ? ನನಗೆ ಸಮಾಧಾನವನ್ನು ಹೇಳುವವರಾರು?" ಎಂದಾ  

ಲೋಚಿಸಿ, ನನ್ನ ಕೋರಿಕೆಯು ಈಡೇರುವಂತೆ ಪ್ರಾರ್ಥಿಸುವೆನೆಂದು 

ಸಮುದ್ರರಾಜನನ್ನು ಸಮೀಪಿಸಿತ್ತಿದ್ದೆನು. ಅಷ್ಟರಲ್ಲಿಯೇ, ಶ್ರೀರಂಗ 

ಪಟ್ಟಣದಲ್ಲಿಯೂ, ಶಿವನಸಮುದ್ರಲ್ಲಿಯೂ, ನನಗೆ ದರುಶನವನ್ನು ದಯ 

ಪಾಲಿಸಿದ ಪರಮಪಾವನಮೂರ್ತಿಯಾದ ಶ್ರೀ ರಂಗನಾಥನು ಪುನಃ 

ದರ್ಶನವನ್ನು ದಯಪಾಲಿಸಿದನು. ಆ ದೀನದಯಾಪರನಾದ ಶ್ರೀರಂಗನಾ 

ಥನ ಸಂದರ್ಶನದಿಂದ ವ್ಯಾಕುಲಭಾವವನ್ನು ದೂರೀಕರಿಸಿ ಮುಂದುವರಿಯು 

ತ್ತಿರಲು, ನನ್ನೊಡನಾಡಿದುದು ನನ್ನ ಜೊತೆಯಲ್ಲಿರಲಾರದೆ ನಾಗಪಟ್ಟಣ 

ವನ್ನು ನೋಡಬೆಕೆಂದು ಹೊರಟರಲ್ಲದೆ ನನ್ನ ಅಮೋಘವಾದ 

"ಕಾವೇರಿ"ಯೆಂಬ ಅಂಕಿತನಾಮವೂ ಕೂಡಬೇಕೆಂದು ಹೋರಾಡಿ 

ದೆನು. ಪ್ರಪಂಚವೇ ಬೇಡದ ನನಗೆ ನನ್ನ ಈ ಹೆಸರಿನಿಂದತಾನೆ ಆಗು 

ವುದೇನೆಂದು ಆಲೋಚಿಸಿ, ನನ್ನ ಹೆಸರನ್ನೇ ಅವರಿಗೆ ಕೊಟ್ಟು ಕೊಲ್ಲಡೆ

ವೆಂಬ ಹೆಸರಿನಿಂದ ಹೊರಟೆನು, ಇದಕ್ಕೋಸುಗ ನಾನೇಕೆ ವ್ಯಸನಪಡಲಿ? 

ಎಂದು ಆಲೋಚಿಸುತ್ತಾ ಸ್ವಲ್ಪದೂರದಲ್ಲಿರುವ ಸಮುದ್ರರಾಜನನ್ನು ಸೇರಲು 

ನಿಧಾನವಾಗಿ ಪ್ರವಹಿಸುತ್ತಿರುವಳೋ ಎನ್ನುವಂತೆ ಹರಿಯುತ್ತಲಿರುವ 

ಕೊಲ್ಲಡೆ ನದಿಯ ಪಾರ್ಶ್ವದಲ್ಲಿದ್ದ ಮರಳ ನೆರಳಲ್ಲಿ ಮೂವರು ಪ್ರಯಾಣೀ 

ಕರು ಮಾರ್ಗಾಯಾಸವನ್ನು ಪರಿಹರಿಸಿಕೊಳ್ಳುವವರಂತೆ ಮಾತನಾ 

ಡುತ್ತ ಕುಳಿತಿದ್ದರು,

ಅವರಲ್ಲೊಬ್ಬ:- "ನೀನು ಹೇಳಿದಂತೆ ಅವನು ಹೊರಟಿದ್ದರ ಈ 

ಹೊತ್ತಿಗೆಲ್ಲಾ ಬಂದೇ ಇಬೇಕಾಗಿತ್ತಲ್ಲ ; ನಾವು ಬಂದು ಸ್ಪಲ್ಪ ಹೊತ್ತಾ 

೯------------------------------------

ಯಿತೇ? ನನಗೆ ತಿಳಿದ ಮಟ್ಟಿಗೆ ಇಲ್ಲಿಗೆ ಬರಬೇಕಾದರೆ ಇದೊಂದಲ್ಲದೆ 

ಮತ್ತಿನ್ನಾವ ಮಾರ್ಗವೂ ಇರುವಂತಿಲ್ಲ!" 

ಇನ್ನೊಬ್ಬ:-ಹೊರಟನೋ ಇಲ್ಲವೊ! ಹೊರಡಬೇಕೆಂದು 

ಪ್ರಯತ್ನಪಟ್ಟವರು ಎಷ್ಟೋ ವೇಳೆ ನಿಂತುಹೋಗುವುದಿಲ್ಲ ? ಅಲ್ಲದೆ 

ಅವನೇನು ಹೇಳಿದನೋ ನೀನೇನು ಕೇಳಿದೆಯೋ! ಹೊರಡೆಬೇಕೆಂದು 

ಮಾತನಾಡುತ್ತಿದ್ದುದನ್ನು ಕೇಳಿ ನೀನು ಬಂದನಂತರ ಅವನು ಮತ್ತೆಲ್ಲಿ  

ಗಾದರೂ ಹೋಗಿದ್ದನೋ? ಅಥವಾ ಪ್ರಯಾಣವನ್ನೇ ನಿಲ್ಲಿಸಿದನೆೊ ? 

ಮಾಡುವುದೇನು?

ಮಾರನೆಯ:- ಹೌದಯ್ಯಾ ! ನಾವೆಲ್ಲ ಸುಳು. ತಟವಟವನ್ನು 

ಮಾಡುವವರು. ಮೋಸಗಾರರು! ಸಿದ್ಧವಾಗಿ ನಿಂತಿದ್ದ ಗಾಡಿಯನು ನನ್ನ್ನ 

ಆ ಕಣ್ಣುಗಳಿಂದಲೇ ನೋಡಿಕೊಂಡು ಬಂದಿರುವವನು !ನಾನು ! ನನ್ನ 

ಕಣ್ಣುಗಳೇನು) ಸುಳ್ಳು ಕಣ್ಣುಗಳೇ? ಸುಮ್ಮನೆ ಕೂತುಕೊಂಡು ನೀವು ಹೇಗೆಲ್ಲಾ  

ಹೇಳುವುದಾದರೆ ಹೇಳುವುದೇನಿದೆ? ಹೀಗಂತಿದ್ದರೆ  ನನ್ನನ್ನೇಕೆ  

ಕಳುಹಿದಿರಿ? ನೀವೇ ಹೋಗಬಹುದಾಗಿತ್ತಲ್ಲ ! ಇದರಲ್ಲೆಲ್ಲಾ ಏನಯ್ಯಾ  

ಹಿಂದೂ ಮುಂದೂ? 

ಮೊದಲನೆಯವನು ಇವನಿಗೆ ಸವಾಧಾನವನ್ನು ಹೇಳುತ್ತ. “ಹೊರ 

ಟಿದ್ದರೆ ಬಂದೇಬರುತ್ತಾನೆ. ದೂರದಪ್ರಯಾಣವಾದ್ದರಿಂದ ಸ್ವಲ್ಪ ಹೊತ್ತಾ  

ದರೂ ಆಗುವುದು. ಇನ್ನೂ ಸ್ವಲ್ಪಹೊತ್ತು ಕಾದು ನೋಡೋಣ. ಇಷ್ಟು 

ಹೊತ್ರೇ ಕಾದಿದ್ದಾಯಿತು. ಇನ್ನು ಸ್ವಲ್ಪಹೊತ್ತು ಕಾಯಬಾರದೆ?"

ಎಂದು ಹೇಳಿ ವಿವಿಧ ವಿಷಯಗಳನ್ನು ಕುರಿತು ಮಾತನಾಡುತ್ತ ಕುಳಿತು 

ಕೊಂಡಿರುವಾಗ ದೂರದಲ್ಲಿ ಬರುತ್ತಿದ್ದ ಒಂದು ಗಾಡಿಯನ್ನು ನೋಡಿ, 

“ ಅಗೋ! ಯಾವುದೋ ಒಂದು ಗಾಡಿ ಬರುತ್ತಿದೆ! ಅವನೆ ಬರುತ್ತಿ 

ದ್ದರೂ ಇರಬಹುದು!” ಎಂದು ಹೇಳಿದನು. ಮೂರು ಜನರೂ ಎದ್ದು 

ನೋಡಿದರು. "ಇದೇ ನಾನು ಹೇಳಿದ ಗಾಡಿ. ಈವಾಗಲಾದರೂ ನಂಬಿಗೆ 

ಯಾಯಿತೊ ? * ವಂದು ಗಾಡಿಯನ್ನು ನೋಡಿಕೊಂಡು ಬಂದಿದ್ದ ಆ 

ವ್ಯಕ್ತಿಯು ಹೇಳಲು, ಎಲ್ಲರೂ ನದಿಯ ಸಮೀಪಕ್ಕೆ ಹೋದರು, 

10---------------------------------------

ಗಾಡಿಯು ನದಿಯ ಸವಿಸಾಪದಲ್ಲ್ಲಿ ಬಂದು ನಿಂತಿತು. ಗಾಡಿ 

ಯಿಂದೊಬ್ಬ ತರುಣನು ಇಳಿದನು. “ಆಚ ದಡಕ್ಕೆ ಹೋಗಲು ದೋಣಿ 

ಗಳುಂಟೆ ? * ಎಂದು ವಿಚಾರಿಖ ಸಮಿಸಾಪದಲ್ಲಿದ್ದ ಒಂದು ದೋಣಿಯನ್ನು 

ಗೊತ್ತು ಮಾಡಿ ಅದರಲ್ಲಿ ಕುಳಿತುಕೊಂಡನು. ಅವನ ಆಗಮನವನ್ನೇ 

ನಿರೀಕ್ಷಿಸುತ್ತಿದ್ದ ಆ ಪ್ರಯಾಣಿಕರು ಅವನಿಗೆ ಸವಿನಯವಾಗಿ ವಂದನೆ 

ಯನ್ನು ಮಾಡಿ "" ನಮ್ಮನ್ನೂ ಕೂಡ ದೋಣಿಯಲ್ಲಿ ಕೂಡಿಸಿಕೆೊಂಡು  

ಹೋಗಬೇಕು! ನಮ ಲಿ ದುಡ್ಡು ಕಮ್ಮಿ ಯಾಗಿದೆಯಾದು ದರಿಂದ ಬಕರಳ 

ಹೊತ್ತಿನಿಂದಲೂ ತಮ್ಮಂತಹ ಉದಾರಿಗಳಾದ ಪ್ರಯಾಣಿಕರ ಆಗಮನವನ್ನೇ 

ಎದುರು ನೋಡುತ್ತಿದ್ದೆವು. ಅನುಗ್ರಹಿಸಬೇಕು.! " ಎಂದು ನಮ್ರಭಾವ 

ಬಂದ ಹೇಳಿದರು, ಉನವಾರ ಹೃದಯನಾದ ಆ ತರುಣನು ಇವರ ವಿನಯಕ್ಕೆ ‌ 

ಸಂತೋಷಿಯ ಅವರನ್ನು. ದೋಣಿಯಲ್ಲಿ ಕೂಡಿಸಿಕೊಂಡನು.  

ದೋಣಿಯು ಹೊರಟಿತು. ಬರಬರುತ್ತ ಪ್ರೆ)ವಾಹದ ವೇಗವು 

ಅಧಿಕವಾಯಿತು. ಪ್ರವಾಹದ ಮಧ್ಯಭಾಗವನ್ನು ಸೇರಿತ್ತಿರಲು, ತರಂಗಗಳ 

ತಾಡನದಿಂದಲೂ ಪ್ರವಾಹದ ಪ್ರಾಬಲೃದಿಂದಲೂ ವಹಿತ್ರವು ಬಹಳವಾಗಿ 

ಅಲ್ಲಾಡೆಲಾರಂಭಿಸಿತು ದೋಣಿಯು ಸ್ಫಲ್ಪ ಹಳೆಯದಾಗಿದ್ರಿತು, ನೀರು 

ಪ್ರವೇಶಿಸುವುದೇನೋ ವಂದು ವಿಲ್ಲರೂ ಭಯಪಡಲಾಸಂಭಿಸಿದರು.  

ವಸ್ತುತಃ ನೀರು ಪ್ರವೇಶಿಸಲಾರಂಭಿಸಿಯೇ ಬಿಟ್ಟಿತು, ದೋಣಿಯ ವಿಶೇಷ 

ವಾದ ಅಲುಗಾಟಿದಿಂದಲೂ, ಸ್ಪಲ್ಪ ಸ್ವಲ್ಪವಾಗಿ ನೀರು ದೊ೯ಣಿಯಲ್ಲಿ ಪ್ರವೇಶಿ 

ಸುತ್ತಿದ್ದು ದರಿಂದಲೂ, ಅಪಾಯವು ಸಂಭನವಿಸಬಹುದೆಂದು ಪ್ರಯಾಣೀಕರು 

ಮತ್ತಷ್ಟು ಭಯಗೊಂಡೆರು. ಭಯಾರ್ಶರಾಗಿ ನದಿಯಲ್ಲಿ ಹಾರಿ ಸಾಹಸ 

ದಿಂದ ಈಜೆಕೊಂಡಾದರೂ ತಡಿಯನ್ನ್ದು ಸೇರಬೇಕೆಂದು ಪ್ರ)ಯತ್ತಿಸು  

ತ್ತಿದ್ದರು, ಅಂಬಿಗನು ಇವರನ್ನು ನೋಡಿ, “ ಭಯಪಡಬೇಡಿ. ಭಯಪಡು  

ವುದರಿಂದೇನು ಫಲ? ಇದಕ್ಕಿಂತಲೂ ಅತಿಶಯವಾಗಿ, ಮಹಾವೆೇಗದಿಂದ 

ಹರಿಯುತ್ತಿರುವ ರ್ಪೂಪ್ರ/ವಾಹದಲ್ಲಿಯೂ ಕೂಡ ಲೇಶಮಾತ್ರವಾದರೂ 

ಭಯವಿಲ್ಲದೆ ದೋಣಿಗಳನ್ನು ಸುರಕ್ಷಿತಮಾಗಿ ಸಾಗಿಸುತ್ತೇವೆ ' ಇದೆೊಂದತಿ 

ಶಯವೆ ? ಸುಮ್ಮನೆ ಅಲುಗಾಡದೆ ಕುಳಿತುಕೊಳ್ಳರಿ].. “ ಎಂದು ಧೈರ್ಯ- 

ವನ್ನು ಹೇಳುತ್ತ ದೋಣಿಯನ್ನು ನಡೆಯಿ.ಸುತ್ತಿದ್ದನು. ಸ್ಟಲ್ಪ ಕಾಲ 

ವಿಲಾಸಿಸಿ ೧೧ ------------------------------------------------------------------------

ಹಾಗೆಯೇ ನೆಡೆಯಿಸುತ್ತಿದ್ದನು ತದನಂತರ ಅತ್ತಿತ್ತ ಸಂಶಯಾಕುಲ 

ನಾದವನಂತೆ. ನೆೋಡಲಾರುಭಿಸಿದನು. ಹಠಾತ್ತಾಗಿ,  “ಇನ್ನೇನು ಗತಿ! 

ಅಯ್ಯೋ! ಕೆಟ್ಟೆವು '! ಹಾಳಾದೆವು? ಎಂದು ಕೂಗುತ್ತ ನದಿಯಲ್ಲಿ ಅಂಬಿ 

ಗನೆ ಹಾರಿಬಿಟ್ಟನು; ತಕ್ಷಣವೆ ದೋಣಿಯು ಮಗುಚಿಕೆೊಂಡಿತು! ಪ್ರಯಾ 

ಣಿಕರು ನದಿಯ ಪಾಲಾದರು.! ನದಿಯು ಒಂದೇ ರೀತಿಯಲ್ಲಿ ಹರಿಯುತ್ತಲೇ 

ಇದ್ದಿತು. 

-----------------

ತೃತೀಯ ಗುಚ್ಛ. 

ಯಾರು ಅತಿಪ್ರೀತಿಯಿಂದ ಪ್ರವೇಶಿಸಲೆಳಸುತ್ತಿದ್ದರೋ ಅಂತ 

ಹವರೇ ಜುಗುಪ್ಸಾನ್ವಿತವಾದ ಭಯದಿಂದ ಹಿಂಜರಿಯು 

ವಂತೆ ಆಗಿಸುತ್ತಿದ್ದ ಜನವಾಸರಹಿತವಾದ ಆ ಗೃಹದ-ಆ 

ಶಂಭುದತ್ತನ ಗೃಹದ ಸಮೀಪದಲ್ಲಿ ಒಂದು ವ್ಯಕ್ತಿಯು ತಿರುಗಾಡುತ್ತಿತ್ತು. 

ಆ ವ್ಯಕ್ತಿಯು ಮನೆಯ ಪೃತಿಯೊಂದು ಬಾಗಿಲು ಕಿಟಿಕಿಯನ್ನೂ ತದೇ 

ಕಾಮತ್ತ ಚಿತ್ತದಿಂದ ನೋಡುತ್ತ ಹಠಾತ್ತಾಗಿ ಗೃಹವನ್ನು ಪ್ರವೇಕಿ 

ಸಿತು. ಒಳಗೆ ಪ್ರತಿಯೊಂದು ಸ್ಥಳವನ್ರೂ ಆ ಮೂಲಾಗ)ವಾಗಿ ಪರೀಕ್ಷಿ 

ಸಿದ ಮೇಲೆ ಏನೋ ಒಂದು ಚಿಹ್ನೆಯನ್ನನುಸರಿಬ ಮುಂದುವರಿಯುತ್ತಿ 

ದ್ದಂತೆ. ಬೋಧೆಯಾಗುತ್ತಿತ್ತು, ಹಾಗೆಯೇ ಹೋಗುತ್ತ ಮನೆಯ 

ಮತ್ತೊಂದು ದ್ವಾರದ ಮಾರ್ಗವಾಗಿ ಆ ವೃತ್ತ ಯು ಹೊರಹೊರಟತು. 

ಆ ವ್ಯಕ್ತಿ ಯು ತದೇಕದೃಷ್ಟಿಯಿಂದ ನೋಡುತ್ತ ಹೋಗುತ್ತಿ ರಲು, 

ಆ ಬಾಗಿಲಿಗೆ ಹತ್ತಾರು ಮಾರುಗಳ ದೂರದಲ್ಲಿ ಆರೋ ಕೆಲವು ಜನರು 

ತಿರುಗಾಡಿದ್ಚುದರಿಂದುಂಟಾದ ಗುರುತುಗಳು ದೃಷ್ಟ್ರಿಗೋಚರವಾದುವು. 

ಇಸ್ಟು ಸ್ಟಲ್ಪರೂರ ಹೋಗಿ ನೋಡಲಾಗಿ ಆ ಗುರುತುಗಳು ಸಾನ್ದ್ರ  

ವಾಗಿಯೂ, ಎತ್ತರವಾಗಿಯೂ ಬೆಳದಿದ್ದ ಹುಲ್ಲಿನಲಿ ಅದ್ದಕೃವಾಗಿಹೋಗಿ 

ದ್ವವು, ಆದರೂ ಆವ್ಯತ್ತಿಯು ಅಷ್ಪಕ್ಕೇಬಿಟ್ಟು ಹಿಂದಿರುಗದೆ ಆ ಪ್ರದೇಶ 

ವನ್ನೆಲ್ಲಾ ಬಹು ಜಾಗರೂಕತೆಯಿಂದ ಪರೀಕ್ಷಿಸಲು ಆ ಹುಲ್ಲಿನಮಧ್ಯದಲ್ಲಿ 

೧೨  -----------------------------------------------------

ಒಂದೆರಡುಕಡೆ ರಕ್ತದ ಕಲೆಗಳು ಕಂಡುಬಂದವು! ಆ ವ್ಯಕ್ಲಿಯ 

ಮುಖವು ಸ್ಪಲ್ಪ ವಿಕಸಿತವಾಯಿತು! ಹಾಗೆಯೇ ಸ್ಫಲ್ಪಕಾಲ ಏನೋ 

ಆಲೋಚಿಸಿ ಮುದುವರಿಯಿತು ! ಅದು ಏನೋ ಒಂದು ದೃಢಪ್ರತಿಜ್ಞೆ  

ಯನ್ನು ಮಾಡಿದಂತೆ ಬೋಧೆಯಾಗುತ್ತಿತ್ತು. 

ಮನೆಯ ಹಿಂದುಗಡೆಯಲ್ಲೊಂದುಕಡೆ ಕೆಲವು ವೃಕ್ಷಗಳು ಬಹಳ  

ದಟ್ಟವಾಗಿ ಬೆಳೆದಿದ್ದುವು. ಸಾನ್ದ್ರವಾದ ಆಮರಗಳ ಗುಂಪಿನಕಡೆಗೆ 

ಆ ವ್ಯಕ್ತಿಯು ಸುತ್ತಿಕೊಂಡು ಬಂದಿತು. ದಾರಿಯಲ್ಲಿ ರಕ್ತದಿಂದ ತೋಯಿದು  

ಹೋಗಿದ್ದ ಒಂದು ಕಾಗದವು ಬಿದ್ದಿತ್ತು  ಆ ಕಾಗದವನ್ನೆತ್ತಿಕೊಂಡು ಆ 

ವ್ಯಕ್ತಿಯು ಮುಂದೆ ಹೋಗಲು ಹೊಸದಾಗಿ ನೆಡಲ್ಪಟ್ಟಿದ್ದೊಂದು ಗಿಡವು 

ಕಂಡುಬಂದಿತು.  ಆ ಗಿಡವನ್ನೂ ಹೊಸದಾಗಿ ಅಗೆಯಲ್ಪಟ್ಟಿದ್ದ ಅದರ 

ಪಾತೆಯನ್ನು ನೋಡಿ ಆ ವ್ಯಕ್ತಿಯು ವ್ಯಕ್ತಿಗೆ ಏನನ್ನು ಸಂದೇಹವು ಬಂದಿ 

ರಿಸಿದಂತೆ ಬೋಧೆಯಾಗುತ್ತಿತ್ತು. ಆ ವ್ಯಕ್ತಿಯು ಆ ಪಾತಿಯನ್ನೇ ಬಹಳ 

ಹೊತ್ತುನೊಡಿ, ಆ ತೋಟವನ್ನು ಬಿಟ್ಟು ಬೇಗಬೆಗಮೆ ನಡೆಯಲಾರಂಭಿ 

ಸಿತು!  ಪಾಠಕರಿಗೆ ಅವನಾರೆಂಬುದನ್ನು ವಿವರಿಸಲೋಸುಗ ನಾವೂ ಅವನನ್ನು 

ಹಿಂಬಾಲಿಸಬೆಕಾಯಿತು ! ಇಗೋ ! ಹೊರಟೆವು. !! ಸ್ವಲ್ಪ ಸಮಾಧಾನ 

ವಿದ್ದರೆ ಅವನಾರೆಂಬುದನ್ನು ತಿಳಿಯಬಹುದು ! ಅಗೊ ನೋಡಿ ಅವನು 

ಇನ್‌ಸ್ಪೆಕ್ಟರ ಮನೆಯಕಡೆ ಹೋಗುತ್ತಿದ್ದಾನೆ ! ಅವನಾರೋ ಪೋಲಿಸಿನ 

ವನೇ  ಇರಬೇಕು!' ಅಗೋ, ಅವನು ಇ ನ್‌ಸ್ಪೆಕ್ಟರ ಮನೆಯನ್ನು ಪ್ರವೇ 

ಶಿಸಿದನು !!! 

ಇನ್‌ಸ್ಪೆಕ್ಟರು ಆಗ ಎಲ್ಲಿಗೋ ಹೊರಡಲುದ್ಯುಕ್ತರಾಗಿದ್ದರು. 

ಬಂದ ವ್ಯಕ್ತಿಯನು ಮೋಡಿದರು ತಕ್ಷಣವೇ ತಮ್ಮ ಕಾರ್ಯವನ್ನು ಪೂರ್ತಿ 

ಗೊಳಿಸಿ ವ್ಕ್ತಿಯ ಸಮೀಪಕ್ಕೆ ಶೀಘ್ರವಾಗಿ ಹೋದರು. ವ್ಯಕ್ತಿ ಯಾರು? - 

" ಗುಪ್ಪ ಪೋಲೀಸಿ"ನವರಲ್ಲಿ ಆಗ್ರಗಣ್ಯನೆಂದು ಪ್ರಖ್ಯಾತನಾಗಿದ್ದ ಆ ಕಾಳೀ 

ಚರಣನೇ ! ಸಮುಚಿತ ಮರ್ಯಾದೆಯೆಂದ ಕಾಳೀಚರಣನನ್ನು ಕೂಡಿಸಿ  

ತಾವೂ ಕುಳಿತುಕೊಂಡರು. 

ಕಾಳೀಚರಣನು ಇನ್ನೂ ತರು:ಣ, ಇಪ್ಪತತ್ತೆರಡು ಇಪ್ಪತ್ತ ಮೂರು 

ವರ್ಷ ವಯಸ್ಸಿರಬಹುದು, ಅಂಗದಾರ್ಥ್ಯವು ಮುಖಭಾವದಿಂದಲೆ ವ್ಯಕ್ತ ‌ 

೧೩-------------------------------------------------------------------------------- 

ವಾಗುವುದು. ವಿಸ್ತಾ ರವಾದ ಲಲಾಟ ಕಾಂತಿಯುಕ್ತವಾದ ನೇತ್ರಗಳು 

ಮನುಷ್ಯನ ಹೃದಯಕುಹರವನ್ನು ಪ್ರವೇಶಿಸಿ ಅವನ ವ.ನೋಗತವಸ್ಸು 

ಅದೆಲ್ಲ ತೆಗಿದ್ದರೂ ಆಕರ್ಷಸಿ ಬಹಿರಂಗಕ್ಕೆ ತರುವುವೋ ಎಂಬಂತೆ ಪ್ರಕಾ 

ಶಿಸುವುವು.. 'ಮುಖಭಾವರಲ್ಲಿ ಚಾತುರ್ಯಾತಿಶಯವು ಪ್ರಸ್ಫುಟವಾಗಿ ವ್ಯಕ್ತ 

ವಾಗುವುದು. ತೇಜಃಪುಂಜಪಾದ, ಸುಂದರವಾದ ಮುಖ! ಸಮುಚಿತ 

ವಾದ ಅಂಗಸೌಷ್ಟವ!! 

ಕಾಳೀಚರಣನು ತನ್ನ ಉದ್ಯೋಗದಲ್ಲಿ ಪ್ರವರ್ತಿಸಿದಮೇಲೆ 

ಅತ್ಯಲ್ಪ ಕಾಲದಲ್ಲಿಯೇ ಪ್ರಸಿದ್ಧರಾದ ಪತ್ತೇ ದಾರರಲ್ಲಿ ಅಗ್ರ ಗಣ್ಯನೆನಿಸಿ  

ಕೊಂಡನು. ದೀರ್ಘದರ್ಶಿಯೂ, ಚಮತ್ಕಾರಿಯೂ ಆಗಿದ್ದನಲ್ಲದೆ, ಮಹಾ 

ದ್ವಿಪತ್ತಿನಲ್ಲಿ ಸಿಕ್ಳಿಕೊಂಡರೂಕೂಡ ಸ್ಪಲ್ಪವೂ ಧೈರ್ಯಗೆಡದೆ ಮನೋ 

ಸ್ಥೈರ್ಯದಿಂದ ಕೃತಕಾರ್ಯನಾಗದೆ ಹಿಂದಿರುಗುತಿ ರಲಿಲ್ಲ, ಹೆಚ್ಚು 

ಹೇಳುವುದರಿಂದೇನು ? ಕಾಳೀಚರಣನು ಅಸಾಧಾರಣನಾದ ಪತ್ತೆೇದಾರ! 

ಪ್ರಸಿದ್ಧ ನಾದ ಕಾಳೀಚರಣನೆ ತವು ಸಹಾ ಸಹಾಯಾರ್ಥವಾಗಿ ಬಂದುದ  

ರಿಂದ ಇನ್‌ಸ್ಪೆಕ್ಚರಿಗೆ ಬಹುಸಂತೋಷವಾಯಿತು! ಆನಂದಕ್ಕೆ ಪಾಲವೇ 

ಇರವಿಲ್ಲ!! ಆತನನ್ನು ಅತ್ಯಾದರದಿಂದ ಮಾತನಾಡಿಸಿ, ನಡೆದ ಸಂಘಟನೆ 

ಗಳನ್ನೆಲ್ಲ, ಸಾದ್ಯಂತವಾಗಿ ವಿವರಿಸಿದರು. 

ಇನ್‌ಸ್ಪೆಕ್ಟರ ಅಭಿಪ್ರಾಯವನ್ನು ಕೇಳಿ, ಕಾಳೀಚರಣನು "ಕೊಲೆ 

ಯೇನೋ ನಡೆದಿರಬಹುದು, ಆದರೆ ಆ ಕೊಠಡಿಯಲ್ಲಿವ  ರಕ್ತದ 

ಗುರುತಿನಿಂದ ಖೂನಿಯು ಅದೇ ಸ್ಪಳದಲ್ಲಿ ನಡಯಿತೆಂದಾಗಲಿ, ಆ ರಕ್ತವು 

ಮೃತಕಲೇವರದಿಂದ ಹೊರಸೂಸಿದ್ದೆಂದಾಗಲೀ ಹೇಳುವುದಕ್ಕೆ ಸಾಕಾದಷ್ಟು  

ಕಾರಣಗಳು ಗೊತ್ತಾಗಿಲ್ಲ ! ಮೃ ತರಾದರೆಂದು ಈಗಲೆ ನಿರ್ಧರಿಸಲಸಾಧ್ಯ 

ವಾದುದರಿಂದ ಕಲೇವರವನ್ನು ಮೊದಲು ಹುಡುಕಿ ನೋಡೋಣ"

ಎಂದು ಹೇಳಿದುದಕ್ಕೆ ಇನ್‌ಸ್ಪೆಕ್ಟರು ಸಮ್ಮತಿಸಿದರು. ಬೇಕಾದರೆ ಜನ 

ರನ್ನ ಜತೆಯಲ್ಲಿ ಕರೆದುಕೊಂಡು ಶಂಭುದತ್ತನ ಗೃಹಾಭಿಮುಖರಾಗಿ 

ಈರ್ವರೂ ಹೊರಟರು. 

ಕಾಳೀಚರಣನು ಅವರನ್ನು ತಾನು ಮೊದಲು ನೋಡಿದ್ದ ಆ ಮರ 

ಗಳ ಸಮೀಪಕ್ಕೆ ಕರೆದು ಕೊಂಡು ಹೋದನು ಅಲ್ಲಿ ಅವನ ಅಪೇಕ್ಷೆಯ 

೧೪-----------------------------------------------------------------------

ಪ್ರಕಾರ ಆ ಗಿಡವನ್ನು ಕಿತ್ತು ಹೊಸದಾಗಿ ಆಗೆಯಲ್ಪಹಿದ್ದ ಪಾತಿಯ 

ಮಣ್ಣನ್ನು ತೆಗೆಯಲಾರಂಭಿಸದರು. ಒಂದೆರಡಡಿ ಆಳದವರೆಗೆ ಅಗೆದು 

ಮಣ್ಣನ್ನು ತೆಗೆಯುವಷ್ಟರಲ್ಲಿಯೇ ಅಗೆಯುತ್ತಿದ್ದವರು ಹಮ್ಮಯಿಸಿ 

ನಿಂತುಬಿಟ್ಟ ರು! ಶವಗಳು ಸಿಕ್ಕಿದುವು. ಉಪಾಯದಿಂದ ಅವುಗಳನ್ನು 

ಮೇಲಕ್ಕೆಳೆದರು.ದೃಶ್ಯವು ಬಹ ಭಯಾನಕವಾಗಿತ್ತು. ಭಯದೊಂದಿಗೆ 

ಕೆಲವರಿಗೆ ಆಶ್ಚರ್ಯವನ್ನೂ ಉಂಟುಮಾಡುತ್ತಿತ್ತು. ಶಿರಸ್ಸಿಲ್ಲದ ಶವ 

ಗಳು! ತಲೆಗಳಿಗಾಗಿ ಬಹಳ ಹುಡುತಿದರು. ಪ್ರಯತ್ನಗಳೆಲ್ಲವೂ ನಿಷ್ಪಲ 

ವಾದುವು. ಎಲ್ಲರೂ ವಿಷಣ್ಣದನರಾದರು. ವಸ್ತ್ರಗಳೆಲ್ಲವೂ ರಕ್ತ ಮ 

ಯವೂ ಮೃತ್ತಿಕಾಮಯವೂ ಅಗಿದ್ದುವು! ಆ ಉಡುಪುಗಳನ್ನು ನೋಡಿ 

ಮೃತರು ಮಾರ್ವಾಡಿಗಳೇ ಇರಬೇಕೆಂದು ಎಲ್ಲರೂ ಅಭಿಪ್ರಾಯಪಟ್ಟರು.. 

ತದನುಗುಣವಾಗಿ ಎಲ್ಲರೂ ವ.ಸನಪಟ್ಟ ರು, 

ತಲೆಗಳಿಗಾಗಿ ಹುಡುಳಕುತ್ತಿದ್ದವರಲ್ಲೊಬ್ಬನು ಮಣ್ಣಿನಲ್ಲಿ ಸಿಕ್ಕಿದ 

ಒಂದುಂಗುರವನ್ನು ತಂದುಕೊಟ್ಟನು. ಅಮೋಘವಾದ ಆ ಉಂಗುರದ 

ಮೇಲಿದ್ದ “ಶ” ಎಂಬಕ್ಷರದ ಗುರುತಿನಿಂದಲೂ, ಆದನು ನೋಡಿದ್ದ 

ಅನೇಕ ಜನರು ಏಕವಾಕ್ಕದಿಂದ ಹೇಳಿದ ಸಾಕ್ಷಿಯಿಂದಲೂ, ಾದು ಶಂಭು 

ದತ್ತನದೇ ಎಂದು ನಿರ್ಧರಿಸಲ್ಪಟ್ಟ ತು. ಏನು ವಿಪರೀತ ಸಂಘಟನೆ ! ಆ  

ಅಮೋಘವಾದ ಕಂಭುದತ್ತನ ಉಂಗುರವು.  ಅಲ್ಲಿಗೆ ಹೇಗೆ ಬಂದಿತು? 

ಎಲ್ಲರೂ ಆಲೋಜಿಸಲಾರಂಭಿಸಿದರು. ಊಹೆಗಳು ನಾನಾಮಾರ್ಗಗಳಲ್ಲಿ 

ಪ್ರವಹಿಸಲಾರಂಭಿಸಿದುವು. ಕೊನೆಗೆ ಆ ಕೃತ್ಯದಲ್ಲಿ ಶಂಭುದತ್ತನ್ನು ಸೇರಿ 

ಯೇ ಇರಬೇಕೆಂತಲೂ ಹಾಗಿಲ್ಲದಿದ್ದರೆ ಆ ಉಂಗುರವು ಆಲ್ಲಿರುವುದ 

ಕ್ಕಾಗಲಿ, ಆಥವಾ ಆ ಗೃಹದಲ್ಲಿದ್ದ ಮಾರ್ವಾಡಿಗಳನ್ನು ಇತರರು ಕೊಲ್ಲು 

ವುದಕ್ಕಾಗಲಿ ಸಂಭವವಿಲ್ಲವೆಂದು ನಿರ್ಧರಿಸಿದರು. ಆದರೆ ಕಾಳೀಚರಣನು  

ಏನನ್ನೂ ಹೇಳಲಿಲ್ಲ! ಆ ಶವಗಳನ್ನು ಚೆನ್ನಾಗಿ ಪರೀಕ್ಷಿಸಿದನು. ಅತನ 

ಮುಖಗಲ್ಲಿ ಈಷದಸಮಾಧಾನವು ವ್ಯಕ್ತವಾಯಿತು ! ಅವುಗಳನ್ನು ಡಾಕ್ಟರ 

ಪರೀಕ್ಷೆಗೆ (Post Mortem Examination) ಯ ಸಲವಾಗಿ ಕಳಿಹಿಸಿ  

ಕೊಟ್ಟು ಇನ್‌ಸ್ಪೆಕ್ಟರೊಂದಿಗೆ ಅವರ ಮನೆಗೆ ಹೊರಟುಹೋದನು. 

೧೫--------------------------------------------------------------------------------

ಇನ್‌ಸ್ಪೆಕ್ಟರು " ಹಾಳೀಚರಣ ಮಹಾಕಯರೆ, ಈ ದಿನ ನೀವು 

ಮಾಡಿದ ಕೆಲಸವು ಕೇವಲ ಅಸಾಧಾರಣವೇಸರಿ! ನೀವು ಆ ಸಳವನ್ನು 

ಕಂಡು.ಹಿಡಿದುದು ಹೇಗೆ? ಆದೇನು ಯೋಚತನಾಶಕ್ತ್ಕಿಯೊ ! ನೀವು 

ಇಷ್ಟು ಸ್ಫಲ್ಪಕಾಲದಲ್ಲಿ ಪತ್ತೇಮಾಡಿದ ಆ ಶವಗಳನ್ನು ನಾನು ನಿಜವಾ 

ಗಿಯೂ ಕಂಡು ಹಿಡಿಯುತ್ತಿದ್ದೆನೋ ಇಲ್ಲವೋ ನನಗೇ ಅನುಮಾನ 

ವಾಗಿದೆ! ಮುಖ್ಯ ನಿಮ್ಮ ಈ ದಿನದ ಸಾಹಸದಿಂದ ಮೃತರ ನೆಲೆಯೊಂದು ತಿಳಿ 

ದಂತಾಯಿತು. ಈ ದಿನದ ಸಾಕ್ಷಿಗಳಿಂದ ಖೂನಿಮಾಡಿದವರನ್ನು ಪತ್ತೆ ಮಾಡ 

ಬಹುದು. ಅಂತೂ ಕೇಸಿನಸ್ಥಿತಿಯು ಒಂದು ಮುಖವಾಯಿತು!! " ಎಂದು 

ಹೇಳಿದರು, ಳಾಳಿಟೀಟರಣಾನು ತಲೆಯನ್ನಲ್ಲಾಡಿಸಿ, “ ಈ ದಿನ ನಾನು ಮಾಡಿದ 

ಕೆಲಸವು ನನಗ ಸಮರ್ಪಳವಾಗಲಿಲ್ಲ ! ಖೂನಿಮಾಡಿದವರನ್ನು ಪತ್ತೇಮಾಡ 

ಬಹುದೆಂದು ಹೆೀಳಿದಿರಲ್ಲ ! ಅದು ಹೇಗೆ ? ಎಂದು ಕೇಳಿದನು. ಇನ್‌ಸ್ಪೆ 

ಕ್ಟರು, “ಸ್ವಾಮಿ. ನನ್ನಭಿಪ್ರಾ;ಯಗಳಿವು ಈ ಕೃತ್ಯದಲ್ಲಿ ಯಾರೋ 

ಒಬ್ಬ ಗುರುತುಕಂಡವನಿರಬೇಕೆಂದು ಮೊದಲೇ ಹೇಳಿರುವೆನಷ್ಟೆ! ಈಗ 

ನೋಡಿದರೆ, ಮೃತರು ಆ ಮಾರ್ವಾಡಿಗಳೆಂದು ವ್ಯಕ್ವವಾಗಿರುತ್ತೆ. ಮನೆ 

ಯಲ್ಲಿದ್ದ ಶಂಭುದತ್ತಾದಿಗಳಾರೂ ಇಲ್ಲ: ಏನು ಯೋಜಿಸಬಹುದು ? 

ತತ್ರಾಪಿ ಮಣ್ಣಿನಲ್ಲಿ ಕಂಭ,ದತ್ತನ ಉಂಗುರವು ಸಿಕ್ಕಿರುತ್ತೆ ! ಶಂಭುದ 

ತ್ತಾದಿಗಳ. ಮೃತರಾಗಿ ರುವರೆಂದು ಹೇಳಲು ಸಾಧ್ಯವಲ್ಲವೆಂದು ಹೇಳು 

ತೀರಿ [. ಅಲ್ಲದೆ, ಆ ಮಾರ್ವಾಡಿಗಳು ತಮ್ಮ ದ್ರವ್ಯವನ್ನೆ ಲ್ಲ ಶಂಭು 

ದತ್ತನ ವಶದಲ್ಲಿಟ್ಟಿರುವರು, ಪ್ರಪಂಚದಲ್ಲಿ ದ್ರವ್ಯಶೆಯು ಜುಹಳ ಕೆಟ್ಟುದು! 

ಅದರಿಂದ ಎಂತಹ ಘೋರಕೃತ್ಯಗಳುತಾನೆ ಸಡೆಯದಿರುವುವು? ಆಲ್ಲದೆ, 

ಆವರ ಮರಣದಿಂದ ಶಂಭುದತ್ತನಿಗಲ್ಲದೆ ಇತರರಿಗೆ ಅದಾಯವೆಂಬುದು 

ಲೇಶವೂ ಇಲ್ಲ! ಆದುದರಿಂದ ಅನ್ಯರು ಇದರಲ್ಲಿ ಕೈಯೊಡ್ಡಿರಲಾರರು !! 

ಏನಾದರೂ ಮಾಡಿ ಶಂಭುದತ್ತನನ್ನು ನಾವು ಹಿಡಿಯಲೇಬೇಕು !" ಎಂದು 

ಹೇಳಿದರು. ಕಾಳೀಚರಣನು  ಏನೊಂದುತ್ತರವನ್ನೂ ಕೊಡಲಿಲ್ಲ! 

ಇನ್‌ಸ್ಪೆಕ್ಟರ :ಅಪ್ಪಣೆಯನ್ನು ಪಡೆದು ಸ್ವಸ್ಥನಕ್ಕೆ ಹೋರಟುಹೋದನು. 

-----೦೦೦------

೧೬---------------------------------------------------------------------------

ಚತುರ್ಥ ಗುಚ್ಚ. 

ದೇವೇಶವರರಸಿಗೆ ಸುಮಾರು ನಾಲ್ವತ್ತೈದು ವರ್ಷ 

ವಯಸ್ಸಾಗಿದ್ದಿತು, ಅವನು ಸಾತ್ವಕನೂ, ನಿಷ್ಟ ಪ 

ಟುವೂ ಪಂಪಭೀರುವೂ, ಎಂದು ಎಲ್ಲರಿಂದಲೂ 

ಸನ್ಮಾನಿಸಲ್ಪಡುತ್ತಿದ್ದನು. ಅವನು ಬಹುಕಾಲದಿಮದಲೂ ಶಂಭುದ ೧1 

ನಂಬಿಗೆಯುಳ್ಳ ಗುಮಾಸ್ತನಾಗದ್ದನು. ವಸ್ತುತಃ, ಅವನಿಗೆ ಶಂಭುದತ್ತನ 

ಗೃಹದಲ್ಲಿ ಸರ್ವಸ್ವಾತಂತ್ರ್ಯ ! ಶಂಭುದತ್ತನ ಸೆೇವಕನೆಂಬುವುದು ನಾಮ 

ಮಾತ್ರ! ಸೇವಕನಾದರೂ ಆತನೇ ಸರ್ವಾಧಿಕಾರಿಯಾಗಿದ್ದನು. ! ಶಂಭು  

ದತ್ತನ ಸರ್ವಸ್ವವೂ ಈತನಿಗೆ ಅಧೀನ!  ಸರ್ವಸ್ವವೇನು, ಶಂಭುದತ್ತನೇ 

ಅತನಾಜ್ಞೆಗಳಿಗೊಳಗಾಗದಿರುತ್ತಿರಲಿಲ್ಲ !! ಸರ್ವರಿಗೂ ಅತನಲ್ಲಿ ಮನಃ 

ಪೂರ್ವಕವಾದ ಪ್ರೀತಿ ಇದ್ದಿತು 1 ಆತನೂ ಜೂಹ ಅವರೆಲ್ಲರನ್ನೂ ನಿಸ್ಪ್ರೃ 

ಹತೆಯಿಂದ ಪ್ರೀತಿಸುತ್ತಿದ್ದನು. ತತ್ರಾಪಿ, ಮಾತಾಪಿತೃವಿಹೀನೆಯಾದ  

ವಿಜಯಿನಿಯನ್ನು ತನ್ನ ಮಗಳೆಂದೇ ಭಾವಿಸಿಕೊಂಡಿದ್ದನು. 

ಈ ದಿನ ದೇವೇಶವರದನು ಕೇವಲ ಚಿಂತಾಕ್ರಾಂತ ಶವಗಳ'ನ್ನು 

ಪರೀಕ್ಷಿಸಿ ಡಾಕ್ಟರ ಪರೀಕ್ಷೆಯ ಸುಲವಾಗಿ ಅವುಗಳನ್ನು ಕಳುಹಿಸಿ 

ಕೊಟ್ಟು ಕಾಳೀಚರಣನೆೇ ಮೊದಲಾದವರು ಹೊರಟು ಹೋದಮೇಲೆ  

ದೇವೇಶನು ಮನೆಯಸ್ಸು ಪ್ರವೇಶಿಸಿ ಬಂದು ಕೊಠಡಿಯಲ್ಲಿ ಆಲೋಚಿ  

ಸುತ್ತ ಕುಳಿತನು, ಅಕಸ್ಮಾತ್‌ ಆರೊ ಬಂದಂತಾಯಿತು! ಹಿಂಂದಿರುಗಿ  

ನೊಡುವಷ್ಟರಲಿಯೇ ಬಂದಿದ್ದ ವ್ಯಕತಿಯು ಅವನನ್ನು ಸಮೀಪಿಸಿ 

"ದೇವೇಶರೆ” ಎಂದು ಕರೆದನು. ಬಂದ ವಕ್ತಿಯು ಕಾಳಿೀಚರಣನು. 

ದೇವೇಶನಿಗೆ ದಿಗ್ಭ್ರಮೆಯಾಗಿ ಹೊಯಿತು! ತನಗೇನು ವಿಪತ್ತು 

ಸಂಭವಿಸುವುದೋ ಎಂದು ಕಳವಳಗೊಂಡನು! ಕೇವಲ ನೀರದನೆಂ 

ದನು !!.. ಅಂತಹ ಸಂದರ್ಭದಲ್ಲ್ಲಿ ಆರಿಗೆತಾನೇ ಹಾಗಾಗದು? ಹುಲು 

ಮಾನನ ಮೇಲೆ ಗುರುತರವಾದ ಅನುಮಾನ! ತಾನಾದರೊ ಗೃಹದಲ್ಲಿ 

೧೭-------------------------------------------------------------------------

ಸರ್ವತಂತ್ರಸ್ವತಂತ್ರ !! ಹಾಗಿರುವಲ್ಲಿ ಪೋಲೀಸಿನವರು ತನ್ನನ್ನು 

ಹುಡುಕಿಕೊಂಡು ಬಂದರೆ ಹೆದರದಿರುವನೇ ? 

ಕಾಳೀಚರಣನು `` ಸ್ಪಾಮಿ! ತಾವು ಈರೀತಿ ಭಯಪಟ್ಟರೆ 

ಪ್ರಯೋಜನವೇನೂ ಇಲ್ಲ ! ನಡೆದಿರುವ ಸಂಗತಿಗಳು ಎಂದಿಗಾದರೂ 

ಹೊರಬೀಳಲೇಬೇಕು !! ಇದುವರೆಗೂ ನಡೆದಿರುವ ಸಂಘಟನೆಗಳಲ್ಲಿ 

ನಿಮಗೆ ತಿಳಿದಿರುವುದೆಲ್ಲವನ್ನೂ ಮರೆಮಾಚದೆ ಹೇಳುವುದು ನಿಮ್ಮ 

ಕರ್ತವ್ಯ ! ಶಂಭುದತ್ತನು ಈ ಕಾರ್ಯದಲ್ಲಿ ಸೇರಿರುವನೆಂದು ಹೇಳುವುದಕ್ಕೆ 

ಸಾಕ್ಷಿಗಳು ದೊರಕಿರುತ್ತವೆ. ಅತನ ಮನೆಯಲ್ಲಿ ನೀವು ಸರ್ವಾಧಿ 

ಕಾರಿಗಳು ! ನಿಮ್ಮ ತಿಳುವಳಿಕೆಗೆ ಬರದೆ ಅವಕೆಲಸವೂ ನಡೆಯು ವಂತಿಲ್ಲ 

ಸತ್ಯಕ್ಕೆ ಎಂದಿಗೂ ಮೊಸವಿಲ್ಲವಾದುದರಿಂದ ನನ್ನ ಪ್ರಶ್ನೆಗಳಿಗೆ ಸರಿಯಾದ 

ಉತ್ತರಗಳನ್ನು ಕೊಡಿ” ವಂದು ಹೇಳಿದನು. ಈ ಮಾತುಗಳನ್ನು 

ಹೇಳದ ದೇವೇಶನಿಗೆ ಬಹು ಭೀತಿಯುಂಟಾಯಿತು ! ಕಾಳೀಚರಣನು 

ಅವನನ್ನು ಮೇಲಿದ ಮೆಃಲೆ ಸಮಾಧಾನದಿಂದ ಪ್ರಶ್ನಿಸಿದನು, ಆ ಪ್ರಶ್ನೆಗೂ 

ಉತ್ತರವೇಬರಲಿಲ್ಲ ! ಹಾಳೀಚರಣನು, " ಸ್ಪಾಮೀ! ತಾವು ಹೇಳದ 

ರಂತೂ ಸರಿಯೇ |! ನಾವು ಹೇಳಸುವವಿಧದಲ್ಲಿ ಹೇಳಿಸುವೆವು. ಹೇಗಾ 

ದರೂ ಕೊಲೆಪಾತಕರನ್ರು ಶಿಕ್ಷೆಗೆ ಗುರಿಮಾಡದೆ ಖಂಡಿತವಾಗಿಯೂ  

ಬಿಡುವದಿಲ್ಲ ! ಇನ್ನು ನಿಮ್ಮ ಪರಿಣಾಮವು ನೆಟ್ಟಿಗಾಗುವುದಿಲ್ಲ ! " 

ಎಂದು ಹೇಳಿ, ಸ್ವಲ್ಪ ಕೋಪವುಳ್ಳವನಂತೆ ನಟಿಸಿದನು. ದೇವೇಶನಿಗೆ 

ಬಹುಕಷ್ಪವಾಯಿತು! " ನನ್ನನ್ನೇನು ಕೇಳುವನೋ ! ನಾನೇನು 

ಹೇಳಲಿ ? ನನ್ನಹೇಳಿಕೆಯಿಂದ ಶಂಭುದತ್ತನಮೇಲಿನ ಅಪವಾದವು 

ಯಾವಸ್ಥಿತಿಗೆ ಬರುವದೊ€ ! ನನಗೇನು ತೊಂದರೆಯುಂಟಾಗುವದೋ !

ಅಲ್ಲದೆ ನನ್ನು ಮಾತುಗಳನ್ನು ಪರಿಶೀಶಿಸುವವರಾರು ? ನಾನು ಶಂಭು 

ದತ್ತನ ಪಕ್ಷಪಾತಿಯೆಂದೇ ಹೇಳುವರಲ್ಲದೆ ನನ್ನ ಮಾತಿಗೆ ಬೆಲೆಯನ್ನು 

ಕಟ್ಟುವರೇ ? ಪ್ರಪಂಚದಲ್ಲಿ ಚಂಚಲಳಾದ ಲಕ್ಷ್ಮಿಯ ಸಹವಾಸ ಕೆಟ್ಟುದು. 

ಧನವೆಲ್ಲವೂ ನನ್ನ ಅಧೀನದಲ್ಲೆ ಇದ್ದುದರಿಂದ ನನಗೇನಾಗುವುದೋ ? 

ಏಕೆಂದರೆ ಅದು ನನ್ನಧೀನದಲ್ಲಿದ್ದುದನ್ನು ಎಲ್ಲ ರೂ ಬಲ್ಲರು ಅಲ್ಲದೆ  

ಈಗಿನ ಕಾಲದಲ್ಲಿ ಅಪರಾಧಿಯು ಸಿಗದಿದ್ದರೆ ನಿರಪರಾಧಿಯನ್ನಾದರೂ 

೧೮----------------------------------------------------------------------

ತಪ್ಪಿಗೆ ಗುರಿಮಾಡಿ ಈ ಜನರು ಸ್ಫಪೌರುಪವನ್ನು ಕೊಚ್ಚಿಕೊಳ್ಳುವರು [ 

ಇಲ್ಲದುದರ ಉತ್ಪ್ರನ್ನ್ನ ಇಲ್ಲವೆ ಇದ್ದುದರ ಉತ್ಪನ್ನವನ್ನಾದರೂ ಮಾಡಿ 

ಕಾಸನ್ನು ಸಂಪಾದಿಸುವುದೇ ಇವರ ಕೆಲಸ ! ಎಂದು ಮೊರಲಾಗಿ ಆಲೋ 

ಚಿಸಿ "ಮನಸ್ಸಾಕ್ಷಿಯು ನಿರ್ಮಲ ವಾಗಿದ್ದರೆ ಸರಿ ! ನಿಜಸ್ಥಿತಿಯನ್ನೇ  

ಹೇಳಿಬಿಡುವೆನು * ಎಂದು ನಿರ್ಧರಿಸಿ " ಆಗಬಹುದು ! ತಮ್ಮ ಪ್ರಶ್ನೆಗಳಿಗೆ  

ನನಗೆ ತಿಳದಮಟ್ಟಿಗೂ ಸಮಂಜಸವಾದ ಉತ್ಸರಗಳನ್ನೇ ಕೊಡುವೆನು "  

ಎಂದು ಹೇಳಿದನು. 

ಕಾಳೀಚರಣನು ಅನೇಕ ಪ್ರಶ್ನೆಗಳನ್ನು ಹಾಕಿದನು, ಪ್ರತಿಯೊಂ 

ದಕ್ಕೂ ಸಮಂಜಸವಾದ ಉತ್ತರವೇ: ದೊರಕಿತು. ಅದರೂ ಶಂಭುದತ್ತನಿ  

ಗುಂಟಾದ ಅಪವಾದವನಾಗಲೀ ಅವನು  ಜೇವಂತನೋ ಮೃತನೋ ಎಂದು 

ನಿರ್ಧರಿಸುವುದಕ್ಕಾಗಲೀ ಸಾಕಾದಷ್ಟು ಕಾರಣಗಳೇನೂ ಗೊತ್ತಾಗಲಿಲ್ಲ ! 

ಆದರೂ ಮನೆಯ ಆಡಳಿತಗಳನ್ನು ಚೆನ್ನಾಗಿ ಒಲ್ಲವರಾರೋ ಆ ಕಾರ್ಯ  

ದಲ್ಲಿ ಸೇರಿರಬೇಕೆಂದೂ, ಶಂಭುದತ್ತನಿಗೆ ಎಲ್ಲೆಲ್ಲಿಯೂ ಮಿತ್ರರಲ್ಲದೆ  

ಶತ್ರುಗಳಿಲ್ಲವೆಂದೂ, ಶಂಕರೀ ದುರ್ಗದ ಪ್ರೇಮಚಂದ್ರನು ಮಾತ್ರ ಶಂಭು 

ದತ್ತ ನಿಂದ ನಿರಾಕರಿಸಲ್ಪಟ್ಟು ಆ ವಿಲಾಸಿನಿಯು ತನ್ನನ್ನಲ್ಲದೆ ಅನ್ಯರನ್ನು . 

ಪ್ರೀತಿಸುವ ಸಂಭವವಿಲ್ಲವೆಂದು ನಂಬಿ ಶಂಭುದತ್ತನ ಮರಣವನ್ನೇ ಹಾರ  

ಯಿಸುತ್ತಿದ್ದನೆಂದೂ, ತನ್ನ ಸಂವಾದ ಪರೀಕ್ಷೆಯಿಂದ ತಿಳಿದುಕೊಂಡನು.  

ಕಾಳೀಚರಣನು, “ ಸ್ವಾಮೀ ! ಭಯಪಡಬೇಡಿ! ತಮ್ಮ ತೊಂದರೆಗೆ 

ಯಾರೂ ಬರದಂತೆ ಏರ್ಪಾಡುಗಳನ್ನು ಮಾಡಿರುತ್ತೇನೆ, ಅದರೆ ಅವಶ್ಕಕ  

ವಾದರೆ ತಾವು ಬರಬೇಕಾಗುತ್ತದೆ. ಮಾನು ನಿಮ್ಮೊಂದಿಗೆ ಮಾತನಾಡಿದು  

ದನ್ನು ಎಂದಿಗೂ ಬಹಿರಂಗಕ್ಕೆ ತರಬೇಡಿ" ಎಂದು ಹೇಳಿ ಡಾಕ್ಟರನ್ನು  

ನೋಡಲು ಹೊರಟು ಹೋದನು, 

ಡಾಕ್ಕವರು ಶವಗಳನ್ನ ಪರೀಕ್ಷಿಸಿದ್ದರು, ಕಾಳೀಚರಣನು ಹೋದ 

ಕೂಡಲೆ ಸಮಸ್ತ ಸಂಗತಿಗಳನ್ನೂ ತಿಳುಹಿಸಿ " ಇದು ಕೇವಲ ವಿಚಿತ್ರ)

ತರವಾದ ಖೂನಿಯಾಗಿದೆ ಹೈಡ್ರೋಯಾನಿಕ್‌ ಅಸಿಡ್‌ (Hydrscyanic.- 

acid ) ಎಂಬ ಪ್ರಬಲವಾದ ವಿಷದಿಂದ ಮೊದಲು ಮರಣ ವುಂಟಾಗಿದೆ. 

ಅನಂತರ ರುಂಡಮುಂಡಗಳನ್ನು ಬೇರ್ಪಡಿಸಿರುವರು. ಅಲ್ಲದೆ, ಕವ 

೧೯ ------------------------------------------------------------------------------------

ಗಳಲ್ಲಿಯೂ, ಅವುಗಳ ಬಟ್ಟೆಗಳಲ್ಲಿಯೂ ಇರುವ ಕಲೆಗಳು ಆ ದೇಹ 

ಗಳಿಂದಲೇ ಹೊರಟ ರಕ್ತದಿಂದುಟಾಗಿಲ್ಲ? " ಎಂದು ಹೇಳಿದರು, ಪಾಠಕ 

ಮಹಾಕಯರು ಕಾಳೀಚರಣನಿಗೆ ಮಹದಾಶ್ಚರ್ಯವಾಯಿತೆಂದು ಊಹಿಸು 

ವರೇನೋ ! ವಸ್ತುತಃ ಕಾಳೀಚರಣನಿಗೆ ಸ್ನಲ್ಪವೂ ಆಶ್ಚರ್ಯವಾಗಲಿಲ್ಲ. 

ಆವದಿನ ಆ ರಕ್ವಪ್ರವಾಹದ ಭೀಕರವಾದ ಕೊಠಡಿಯನ್ನು ನೊ೯ಡಿದ್ದನೊ 

ಆ ದಿನವೇ ಅವನಭಿಪ್ರಾಯವು ಇತರರಿಗಿದ್ದಂತಿರಲಿಲ್ಲ, ಡಾಕ್ಟ‌ರರು ಹೇಳಿದ 

ಸಂಗತಿಗಳನ್ನು ಕೇಳಿ ಕಾಳೀಚರಣನ್ನು ತನ್ನ ಊಹಾದೃಷ್ಟಿಗೆ ಸುಲಭ 

ವಾಗಿ ಗೋಚರವಾಗದ ಆವುದೋ ಒಂದು ತಂತ್ರಜಾಲವು ಹರಡಲ್ಪಟ್ಟಿರ 

ಬೇಕೆಂತಲೂ ಸಂಘಟಿಸಿದ್ದ ಘಟನಾವಳಿಯ ಸಾಮಾನ್ಯವಾದುದಲ್ಲ 

ವೆಂತಲೂ ನಿರ್ಧರಿಸಿಕೊಂಡನು ಡಾಕ್ಚರೊಂದಿಗೆ ವಿಶೇಷವಾಗಿ ಏನೂ 

ಮಾತನಾಡದೆ ಆವರ ಅಪ್ಪಣೆಯನ್ನು ಪಡೆದು ತನ್ನು ಮನೆಗೆ ಹೊರಟನು. 

ಕಾಳೀಚರಣಸ ಉತ್ಸಾಹವು ಹೆಚ್ಚಾಯಿತಲ್ಲದೆ ಸ್ವಲ್ಪವಾದರೂ ಕಡಮೆ 

ಯಾಗಲಿಲ್ಲ ! 

ಗೃಹಾಭಿಮುಖವಾಗಿಯೇ ಹೋಗುತ್ತಿ ದ್ದ ಕಾಳೀಚರಣನು 

ಹುಠಾತ್ತಾಗಿ ನಿಂತುಬಿಟ್ಟನು ! ಕ್ಷಣಮಾತ್ರ  ಏನನ್ನೋ ಆಲೋಚಿದನು. 

ಮುಂದುವರಿಯದೆ ಹಿಂದಿರುಗಿ ಇನ್ಸ್ಪೆಕ್ಟರ ಮನೆಯಕಡೆ ಹೊರಟನು. 

ಸ್ವಲ್ಪಕಾಲದಲ್ಲಿಯೇ ಇನ್ಸ್ಪೆಕ್ಟರ ಮನೆಯನ್ನು ಸೇರಿದನು. ಬಾಗಿಲಿನ 

ಸಮೀಪದಲ್ಲಿದ್ದ ಒಬ್ಬ ಸೇವಕನು ಇನ್‌ಸ್ಪೆಕ್ಟರು ಅರೊಂದಿಗೋ ಮಾತ 

ನಾಡುತ್ತಿರುವರೆಂದುಹೇಳಿದನು ಇ ಸ್ರತ್ಛೃರ' ಸಾಹೇಬರ ಕೊಠಡಿಯ 

ಗೃಹದ ಒಂದು ಪಾರ್ಶ್ಶದಲ್ಲಿ ಡ್ಜ್ದು ದರಿಂದ ಕಾಳಿೀತರಣನು ಆ ಸೊವಳನಿಗೆ 

ಆ ಚು ಆ 4ೊರಡಿಯನ್ನು ಸಮಿ*ಏಿಬ ಗೊಡೆಯನ್ನೋೊರಗಿ 

ಕೊಂಡು ಹೊರ?ನಿಂದಲೆ ಒಳಗಿನವರಾಡುತ್ತಿದ್ದ ಮಾತುಗಳನ್ನು ಬ್ರೋ ಛ್‌ 

ಲಾರಂಭಿಬದನು, ಸಂಭಾಷಣೆಯಂತಲೂ ವ್ಯಕ್ತಿಗಳ ಸ್ಫರಗಳಿಂದಲೂ 

ಮಾತನಾಡುತ್ತಿದ್ದವರು ರ೯ಸ್ಸೆಕ್ಟ್ಯರ" ಮತ್ತು ಭುಜಂಗನೆಂದು ತಿಳಿದು 

ಹೊಂಡನು. ಭುಚಂಗನಾರೆಂಬುದನ್ನು ಪಾಠಕರು ಅವರೀರ್ವರ ಸಂಬಾ 

ಷಣೆಯಿಂದಲೇ ಅರಿಯೆ?ವರು. 

೨೦ ------------------------------------------------------------------------

ಭುಜಂಗ:--" ಸ್ವಾಮಿ ! ಹೇಗೆ ಹೇಳುವುದಕ್ಕಾಗುವುದು ? ಶಂಭು  

ದತ್ತನೇನೋ ಸಾತ್ವಿಕನೇ 1 ಆದರೆ ಶರಚ್ಛಂದ್ರರ ಅಸ್ತಿಯೊಂದು ಸಿಕ್ಕಿದ್ದ 

ರಿಂದತಾನೆ ಆತನು ಶ್ರೀಮಂತನಾದುದು? ಆ ಹುಡುಗಿ-ವಿಜಯಿನಿಯನ್ನು

ಮನೆಯಲ್ಲಿಟ್ಟುಕೊಂಡು ಕಾಪಾಡುವ ನೆಪದಿಂದಲೇ ಅವಳಿಗೆ ಬರತಕ್ಕ  

ಅದಾಯೆದಲ್ಲಿ ಎಷ್ಟು ಮರೆಮಾಚಿದನೊ ಕಂಡವರಾರು ? ದ್ರವ್ಯಾ 

ಶೆಯು ಕೆಟ್ಟದ್ದು ! ಈಗ ತಾವೇ ಆಲೋಚೆಸೋವಾಗಲಿ! ಆತನ 

ಮನೆಯಲ್ಲಿದ್ದವರನ್ನು ಇತರರು ಕೊಲ್ಲುವುದೇನು ಸುಲಭಸಾಧ್ಯವೇ ? 

ಒಂದುವೇಳೆ ಎಲ್ಲರೂ ಖೂನಾಗಿದ್ದರೆ ಮನೆಯವರಿಗೆಲ್ಲಾ ಒಂದೇ ಗತಿ 

ಬಂತೆಂದು ಹೇಳ ಬಹೆದಾಗಿದ್ದಿತು. ಅವರಾರೂ ಸತ್ತ ಕುರುಹೂ ಕಾಣು 

ವುದಿಲ್ಲ ! ಬದುಕರುವುದೂ ಗೊತ್ತಿಲ್ಲ! ಮುಖ್ಯವಾಗಿ ಆ ವಿಜಯಿನಿಯು 

ನನಗೆ ಬಂಧುವು. ಅವಳೊಬ್ಬಳಿಂದ ಶರಚ್ಛಂದ್ರರ ವಂಶವು ಬೆಳೆಯ 

ಬೆಳಕಾಗಿರುತ್ತೆ. ಅವಳಪಾಡೇನಾಗಿರುವುದೋ ಎಂಬುದೆ ನನಗೆ ವ್ಯಸನ 

ಸ್ವಾಮಿ!!"

ಇನ್‌ಸ್ಪೆಕ್ಚರು :-  ನನಗೂ ತುಂಬಾಸಂದೇಹ! ಆದರೆ ನಮ್ಮ 

ಕಾಳೀಶರಣನು ಈ ವಿಚಾರದಲ್ಲಿ ತನ್ನಭಿಪ್ರಾಯವನ್ನು ಸ್ವಲ್ಪವೂ 

ಹೊರತಂದಿಲ್ಲ ! ಏನೇನೋ ಕೆಲಸಗಳನ್ನು ಮಾಡುತ್ತಿರುವನು; ಇದರ 

ಒಳಸಂಗತಿಯನ್ಸು ಕಂಡುಹಿಡಿಯ ಬೇಕಾದರೆ ವಸ್ಸುತಃ ಅವನೊಬ್ಬನೇ 

ಸಮರ್ಥನಲ್ಲದೆ ಇನ್ನಾರಿಂದಲೂ ಆಗಲಾರದು ! ನನಗಂತೂ ಕೇವಲ 

ಭ್ರಾಂತಿಯಾಗಿದೆ! ಏವಂಚ ಇದರ ರೂಢಮೂಲವನ್ನು ಕಂಡುಹಿಡಿದು 

ಮಾಡಬೇಕಾದುದನ್ನು ಅವನೇ ನೋಡಿಕೊಳ್ಳಲಿ!  ಸರ್ವಭಾರವನ್ನು ಅವ 

ನಿಗೇ ವಹಿಸಿ ಬಿಟ್ಟಿರುತ್ತೇನೆ 1 ಆತನ ಬುದ್ಧಿ, ಶಕ್ತಿ, ಸಾಹಸ, ಚಮ 

ತ್ಕಾರಗಳು ಸಾಮಾನ್ಯವೇ ? ಇದುವರಿವಿಗೂ ಅವನು ಪ್ರವೇಶಿಸಿದ  

ಕೇಸುಗಳ ನಿಜಸ್ಥಿತಿಯನ್ನು ಹೊರತಂದು ಅಪರಾಧಿಗಳ ನೆಲೆಯನ್ನರಿತು 

ಶಿಕ್ಷಿಸದೆ ಬಿಟ್ಟಿಲ್ಲ!” ಬಂದು ಮೊದಲಾಗಿ ಹೇಳುತ್ತಿರಲು ಭುಜಂ 

ಗನು “ಸರಿ! ನಿಸ್ಸೀಮ |! ಗಟ್ಟಿಗ !!! ಅವನೆಂದಿಗೂ ಈ ಘೋರಕೃತ್ಯದ 

ಗುಟ್ಟನ್ನು ಬಹಿಂರಂಗಕ್ಕೆ ತರದೇ ಬಿಡುವುದಿಲ್ಲ " ಎಂದನು, ಕಾಳೀ  

ಚರಣನು ಬಹುಕಾಲ ಅಲ್ಲಿ ನಿಲ್ಲಲಿಲ್ಲ. ಎಲ್ಲಿಗೋ ಹೊರಟುಹೋದನು, 

------

೨೧---------------------------------------

ಪಂಚಮ ಗುಚ್ಛ. 

ದಾರುಣವಾದ ಬಿಸಲಿನ ತಾಪವನ್ನು ಸಹಿಸಲಾರದೆ. 

ಸರ್ವ ಪ್ರ್ರ/ಣಿಗಳೂ ನೆಳಲನ್ನ್ನು ಕಂಡೆಡೆಯಲ್ಲೆಲ್ಲಾ 

ವಿಶ್ರಮಿಸಿಕೊಳು ಶ್ರಿ ತ್ಲಿದ್ಧುವು. ಅತಿ ವ್ಹದ್ದನಾದ 

ಒಬ್ಬ ಬ್ರಾಹ್ಮಣನು ಬಿಸರಿನ ತಾಪವನ್ನು ಸಹಿಸಲಾರದೆ, ಕಂಗೆಟ್ಟು 

ಅಡಿಗಡಿಗೂ ನಿಟ್ಟುಸಿರುಗಳನ್ನು ಬಿಡುತ್ತ, ಶಕರೀದುರ್ಗದ ರಾಜ 

ಬೀದಿಯಲ್ಲಿ ನಿಧಾನವಾಗಿ ಹೋಗುತ್ತಿದ್ದನು. ಬರಬರುತ್ತ ಆಯಾಸವು 

ಹೆಚ್ಚಿತು. ವೃದ್ಧನಿಗೆ ಇನ್ನು ಮುಂದೆ ನಡೆಯುವುದು ಕಷ್ಟಸಾಧ್ಯ 

ವಾಯಿತು! ಸಮೀಪದಲ್ಲಿ, ದಟ್ಟಿವಾಗಿಯೂ, ಕೋಮಲವಾಗಿಯೂ , 

ಬೆಳೆದಿದ್ದ ಒಂದು ಮರವನ್ನು ನೋಡಿ, ಆದರ ಸಮೀಪವನ್ನೈದಿದನು. 

ಆ ಮರದ ತಂಪಾದ ನೆಳಲನ್ನು ಸೇರಿ, ತನ್ನ್ನ ಗಂಟಿನ್ನು ಸಮೀಪದಲ್ಲಿಟ್ಟು 

ಕೊಂಡು ವಿಶ್ರಮಿಸಿಕೊಳ್ಳುತ್ತಿದ್ದನು. ಹಾಗೆಯೇ ನಿದ್ರಿಸಲಾರಂಭಿಸಿದನು. 

ಎಚ್ಚತ್ತು ನೋಡುವಾಗ್ಗೆ ಸೂರ್ಯಾಸ್ತಮಾನವಾಗುತ್ತಿತ್ತು ! ಬೆಚ್ಚು 

ಬಿದ್ದವನಂತೆದ್ದು , " ಆದರೇನು ಈ ಸ್ಥಳದಲ್ಲಿ ನನ್ನ ಪರಿಜೆತರಾರೂ ಇಲ್ಲ ! 

ನಾನೆಲ್ಲಿಗೆ ಹೋಗಬೇಕು ? ಏನು ಮಾಡಲಿ ? ರಾತ್ರೆ;ಯನ್ನು ಕಳೆಯು 

ವುದು ಹೇಗೆ! ದೇವ! ನೀನೇ ಗತಿಯೋ ?” ಎಂದು ನಾನಾವಿಧವಾಗಿ 

ಗೊಣಗುಟ್ಟಲಾರಂಭಿಸಿದನು. 

ಪ್ರಬಲನಾದ ದಿನಮಣಿಯು ಮರೆಯಾದುದನ್ನು ಕಂಡು “ ಕಬ್ಬಣವು 

ಕಾದವೇಳೆಯಲ್ಲಿಯೇ ಬಡಿಯಬೇಕು” ಎಂಬ ಸಾಮತಿಯನ್ನು ಆನಸುಸರಿ 

ಸಿರುವುದೋ ಎಂಬಂತೆ ಕತ್ತಲೆಯು, ಎಲ್ಲಲ್ಲಿಯೂ ಆವರಿಸುತ್ತಲಿತು,. 

ಜನರೆಲ್ಲರೂ ತಂತಮ್ಮ ಮನೆಗಳಿಗೆ ಹೋಗುತ್ತಿದ್ಧರು ಪಾಪ! ಆ ವೃದ್ಧನು 

ಮಾತ್ರ ಬಹು ವ್ಯಸನಾಕ್ರಾಂತನಾಗಿದ್ದನು! ಹಾಗೆಯೇ ಸ್ವಲ್ಪಹೊತ್ತು 

ಆಲೋಚಿಸಿ, ಅಲ್ಲಿಂದೆದ್ದು. ಸಮೀಖದಲಿ ಕಾಣಿಸುತ್ತಿದ್ದ ಒಂದು 

ಮನೆಯಹತ್ತಿರಕ್ಕೆ ಹೋದನು, 

೨೨ -------------------------------------------------------------------------

ಆ ಗೃಹದ ದ್ವಾರದೇಶವನ್ನು ಸೇರಿ ಮನೆಯದಾರದೆಂದು ವಿಚಾರಿಸಲು, 

ಒಬ, ಕೆಲಸಗಾರನು "ಸ್ವಾಮಿ! ಮೆನೆಯ ಯಜಮಾನರು. ಊರಲ್ಲಿಲ್ಲ. 

ನೀವ್ಯಾರು ? ನಿಮ್ಮೂರ್ಯಾವದು ? " ಎಂದುಕೇಳಿದಸು, 

ವೃದ್ಧ:- " ಮಹರಾಯ, ನಾನು ಬಹುದೂರದೇಶಸ್ಥನು. ಈ 

ಮನೆಯವರಾರ ಪರಿಚಯವೂ ನನಗಿಲ್ಲ. ಆದರೂ, ರಾತ್ರೀಕಾಲವಾದುದ 

ರಿಂದ, ಮಲಗಲಿಕ್ಕೆ ಸ್ನಲ್ಪ ಸ್ಥಳ ಕೊಟ್ಟರೆ ಬಹಳ ಪುಣ್ಯಬರುತ್ತೆ? 

ಕೆಲಸ:- "ಆಗಲಿ ಸ್ಪಾಮಿ ! ನಮ್ಮ ಯಜಮಾನನೊಬ್ಬನು ಇದ್ದಾನೆ 

ಅವನನ್ನು ಕೇಳಿ ಬರುತ್ತೇನೆ" ಎಂದು ಹೇಳಿ, ಯಜಮಾನನ ಅಪ್ಪಣೆ

ಯನ್ನು ಪಡೆದುಕೊಂಡು ಬಂದನು, ವೃದ್ಧನನ್ನು ಒಳಗೆಕರೆಸಿ ಕೊಂಡು 

ಹೋಗಿ ಹಜಾರದಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಹೊರಟು ಹೋದನು.  

ಸ್ವಲ್ಪ ಕಾಲದಲ್ಲಿಯೇ ಅಲ್ಲಿನ ಆಳುಗಳಲ್ಲಿ ಪ್ರಮುಖವಾಗಿದ್ದ 

ವನೊಬ್ಬನು ಬಂದು, ಬಹು ಆದರದಿಂದ, “ ಸಾಮಿ ಭೋಜನಕ್ಕೇ  

ನಾದರೂ ಮಾಡಿಕೊಳ್ಳಿ ಮನೆಯವರಿದ್ದಿದ್ದರೆ, ಎಲ್ಲಾ ಅನುಕೂಲವಾಗಿರುತ್ತಿತ್ತು 

ಎಂದು ಹೇಳಲು, " ಅಯ್ಯಾ ನನಗೇನೂ ಬೇಕಾಗಿಲ್ಲ. ಸಮೀಪದಲ್ಲೆಲ್ಲಿ

ಯಾದರೂ ಒಂದು ಕೊಳವಸ್ಟು ತೋರಿಸಿದರೆ. ನಾನು ಸಮ್ಮ ಸಂಧ್ಯಾ 

ಕರ್ಮಗಳನ್ನು ಮಾಡಿಕೊಂಡು ಬಂದು ಬಿಡುತ್ತೇನೆ." ಎಂದು ಹೇಳಿದನು. ಸಳ  

ಆ ಜವಾನನು ಸಮೀಪದಲ್ಲಿದ್ದ ಒಂದು ಕೊಳಕ್ಕೆ ಕರೆದುಕೊಂಡು  

ಹೊಗಲು ಒಬ್ಬನನ್ನ ಜತೆ ಮಾಡಿ ಕಳುಹಿದನು. ವೃದ್ಧನು ಕೊಳಕ್ಕೆ 

ಹೋಗಿ ಸಂಧ್ಯಾವಿಧಿಗಳನ್ನು ತೀರಿಸಿಕೊಂಡು ಬಂದನು. ಸೇವಕರೆಲ್ಲರೂ 

ಭೋಜನವನ್ನು ತೀರಿಸಿಕೊಂಡು. ಬಂದು, ವೃದ್ಧನೊಡನೆ ದೇಶವಿದೇಶದ 

ಸಮಾಚಾರಗಳನ್ನು ಕುರಿತು ನಾನಾವಿಧವಾಗಿ ಮಾತನಡುತ್ತ ಕಾಲವನ್ನು 

ಕಳೆಯುತ್ತಲಿದ್ದನು. 

ಮಾತಿನ ಸಂದರ್ಭದಲ್ಲಿ ವೃದ್ಧನು ಆಗಿನ ಕಾಲದ ಬಾಲಕ ಬಾಲಕೀ 

ಯರು ಹಿರಿಯರನ್ನು ಲಕ್ಷ್ಯಕ್ಕೆ ತರದೆ  ಸ್ವಾತಂತ್ರ್ಯದಿಂದ ವರ್ತಿಸಿ ವಿಪತ್ತಿ  

ಗೊಳಗಾಗುತ್ತಿದ್ದುದನ್ನೂ, ಮತ್ತು ಬೇರೆಬೇರೆ ಸಂಗತಿಗಳನ್ನೆಲ್ಲಾ ತಿಳುಹಿದನು. 

ಇವನೊಡನೆ ಮಾತನಾಡುತ್ತಿದ್ದ ಆ ಆಳಿಗೆ ಏನೂ ತೋಚದಂತಾಯಿತು ! 

೨೩-------------------------------------------------------

ಸುಮ್ಮನೆಕುಳಿತುಕೊಂಡು ಬಹಳ ಹೊತ್ತು ಆಲೋಸುತ್ತಿದ್ದನು !!

ಉಕ್ಕಿಬರುವ ವ್ಯಸನವನ್ನು ತಡೆಯಲಾರದವನಂತೆ ಅಳಲಾರಂಭಿಸಿದನು !!! 

ಆಳುಗಳೆಲ್ಲರೂ ಭಯ ಚಕಿತರತಿಗಿ ತಮ್ಮ ಯಜಮಾನನನ್ನು ಸಮಾಧಾನ 

ಮಾಡುತ್ತ, ಆ ವೃದ್ಧನನ್ನು ನೊಃಡಿ "ಅಯ್ಯೋ, ನಮ್ಮ ಪ್ರೇಮಚಂದ್ರ 

ರೇನಾದರೊ *ಎಂದು ಹಂಬಲಿಸುತ್ತಿದ್ದರು. ವೃದ್ದನು ಎಲ್ಲರಿಗೂ ಸಮಾಧಾನ 

ವನ್ನು ಹೇಳಿದನು. ಸಮಾಚಾರವನ್ನು ತಿಳಿಯ ಲೋಸುಗ ಬಹು ಯುಕ್ತಿ ‌ 

ಯುಕ್ತವಾದ ಮಾತುಗಳನ್ನಾಡಿ, ಆ ಮನೆಯ ಯಜಮಾನನಾದ ಪ್ರೇಮ 

ಚಂದ್ರನು ಆತುಲೈಶ್ವಯರ್ಯವಂತನೆಂತಲೂ ಅವನ ತಂದೆಯು ಆಕಸ್ಮಿಕ 

ವಾದ ಮರಣಕ್ಕೆ ಗುರಿಯಾದನೆಂತಲೂ ; ತಂದೆಯ ಮರಣದಂದುಂಟಾದ 

ಅಧಿಕವ್ಯಸಸವನ್ನು ವಿಸ್ಮೃತಿಗೆ ತರುವುದಕ್ಕಾಗಿ ಕರಿಕಲ್ಲಿನಲ್ಲಿ ವಸಿಸು 

ತ್ತಿದ್ದಾಗ ವಿಲಾಸಿನಿಯಲ್ಲಿ  ಅನುರಕ್ತನಾಗಿದ್ದುದನ್ನು ಶಂಭುದತ್ತನು ತಿಳಿದು 

ಅವನನ್ನು ತನ್ನ ಮನೆಗೆ ಸೇರಗೊಡಿಸಲಿಲ್ಲವೆಂತಲೂ, ಪ್ರೇಮಚಂದ್ರನು 

ಪುನಃ ಶಂಕರೀದುರ್ಗಕ್ಕೆ ಬಂದು ಸುಖವಾಗಿದ್ದರೂ,  ವಿಲಾಸಿನಿಯನ್ನು  

ಮರೆಯದೆ ಅವಳನ್ನು ಮದುವೆ ಮಾಡಿಕೊಳ್ಳಲೇಬೇಕೆಂದು ನಿರ್ಧರಿಸಿ ಪತ್ರ 

ವ್ಯವಹಾರವನ್ನು ಮಾಡುತ್ತಿದ್ದನೆಂತಲೂ, ಬಂದು ವಾರದ ಕೆಳಗೆ, ವಿಲಾ 

ಸಿನಿಯು ಒಂದುದಿನ ಒಂದು ಕಾಗದವನ್ನು ಬರೆದು ಗುಪ್ತವಾಗಿ ಕಳು 

ಹಿದ್ಧಳೆಂಲೂ ಮತ್ತು ಮರುದಿನವೇ ಹೋದ ಪ್ರೇವಃಚಂದ್ರನು 

ಅದುವರೆವಿಗೂ ಬಂದಿರಲಿಲ್ಲವೆಂತಲೂ ವೃದ್ಧನು ತಿಳಿದು ಕೊಂಡನು. 

ಪುನಃ ಆ ಸೇವಕನು ಆ ನೀವು ಹೇಳುವುದನ್ನು ನೋಡಿದರೆ, ಶಂಭು  

ದತ್ತನು ಏನು ಮಾಡಿ ಬಿಟ್ಟನೋ ಎಂದು ಯೋಚನೆಯಾಗಿದೆ! ಇನ್ನೇನು 

ಮಾಡಲಿ ! ಪ್ರೇಮ.ಚಂದ್ರರ ಸಮಾಚಾರವು ತಿಳಿ ಯುವುದು ತಾನೆ ಹೇಗೆ!” 

ಎಂದು ತಹತಹಪಡಲಾರಂಭಿಸಿದನು. ವೃದ್ಧನು ಅವನನ್ನು ಸಂತೈಸಿದನು. 

ರಾತ್ರಿ ಬಹಳ ಹೊತ್ತಾಗಿದ್ದುದರಿಂದ ಎಲ್ಲರೂ ತಂತಮ್ಮ ಸ್ಥಳಕ್ಕೆ  

ಹೋಗಿ ಮಲಗಿಕೊಂಡರು. ವೃದ್ಧನೂ ಸ್ವಲ್ಪಕಾಲ ಮಲಗಿದ್ದನು, 

ಮಧ್ಯರಾತ್ರಿಯಾಗುತ್ತಾ ಬಂದಿತು. ರಜನಿಯ ತನ್ನ ಸತ್ವಾತಿಶಯದಿಂದ 

ಮೆರೆಯುತ್ತರಲು, ಪ್ರಪಂಚದಲ್ಲಿ ಶಾಂತತೆಯೇ ಮೂರ್ತಿ ಭವಿಸಿದ್ದಂತೆ 

ಭಾಸವಾಗುತ್ತಿತ್ಲು. ನಿದ್ರಾದೇವಿಯ ಸರ್ವಾಧಿಕಾರವು ಎಲ್ಲೆಲ್ಲಿಯೂ 

೨೪ ---------------------------------------------

ನಿರಂಕುಕವಾಗಿತ್ತು . ಆಂತಹ ಕಾಲದಲ್ಲಿ ಶಾಂತತೆಯ ಸುಖಾನುಭವವನ್ನು 

ಹೊಂದದಿರುವುದಾವುದು? ಜಾರೆಚೋರಾದಿ ದುರಾಂತಾರಿಗಳೂ, ಗಂಭೀರ 

ಕಾರ್ಯತತ್ಪರರೂ, ವಿನಾ ಮತ್ತಾರು ತಾನೆ ಆ ಸಮಯದಲ್ಲಿ ಹೊರ 

ಹೊರಡುವರು. 

ಎಲ್ಲರೂ ಕೇವಲ ನಿದ್ರಾಭಿಭೂತರಾಗಿರಲು ನಮ್ಮ ವೃದ್ಧನು 

ಮೆಲ್ಲನೆ ಬಿದ್ದನು, ಸುತ್ತಲೂ ನೋಡಿದನು. ಬಾಗಿಲ ಸಮಾಪಕ್ಕೆ 

ಹೋದನು. ತನ್ನು ಕಟಿಪ್ರದೇಶದಲ್ಲಿದ್ದ ಬೀಗದ ಕೈಗಳ ಸರವನ್ನು ತೆಗೆ 

ದನು ! ನಿಶ್ಕಬ್ಬವಾಗಿ ಬಾಗಿಲನ್ನ್ಟೂ ತೆಗೆದುಕೊಂಡು ಒಳಹೊಕ್ಕನು. 

ಇದೇನು ಆ ಶುದ್ಧ ಸಾತ್ವಿಕನಂತೆ ತೋರುತ್ತಿದ್ದ ವೃದ್ಧ 

ಬ್ರಾಹ್ಮಣನು ತಸ್ಕರನಾಗಿರುವಂತಿರುವುನಲ್ಲಾ ಚೋರಾಗ್ರೇಸರನೆ ನೀನು 

ಸಭ್ಯನೊಂದು ಮೊಸಹೋಗಿ ಇದುವರೆಗೂ ನಿನ್ನಲ್ಲಿ ಅವರಿಗುಂಟಾಗಿರುವ 

ಭಕ್ತಿವಿಶ್ವಾಸಕ್ಕೆ ಇದೀಗ ಪರಿಣಾವಃ! ಈಗ ತಾನೆಃ--ನಾಲ್ಕಾರು ಘಳಿಗೆ 

ಗಳ. ಹಿಂದೆ, ಆರಸ್ಥಿತಿಯನ್ನು ನೋಡಿದರೆ ಮನವು ಮರುಗುವಂತಿದ್ದಿತೋ  

ಅದೇ ಆ ಮನುಷ್ಯನು ಈಗ ಮಾಡುತ್ತಿರುವ ಕೃತ್ಯವನ್ನು ನೋಡಿದರೆ,  

ಈ ಪ್ರಪಂಚದಲ್ಲಿ ನಂಬಿಕೆಯಂಬುದೆಲ್ಲಿದೆ ? ಅರನ್ನು ನಂಬುವುದು ? 

ಕಾಲಗತಿಯ ವಿಚಿತ್ರ ವ್ಯಾಪಾರದಿಂದ ಏನೇನಾಗುವುದೋ ಬಲ್ಲವರಾರು ? 

ಆ ಕಳ್ಳವೃದ್ಧನು ಕೊಠಡಿಯೊಳಗೆ ಪ್ರವೇಶಿಸಿಯೇ ಬಿಟ್ಟನು. 

ಕಳ್ಳನೊಂದಿಗೆ ಒಂದು ದೀಪವೂ ಇತ್ತು. ಅದರ ಸಹಾಯದಿಂದ 

ಮನೆಯ ಎಲ್ಲಾ ಭಾಗಗಳನ್ನೂ ಹುಡುಕುತ್ತಾ ಇದ್ದನು. ಅದರೂ ಏನ 

ನ್ನೂ ತೆಗೆದು ಕೊಂಡಂತೆ ಕಾಣಲಿಲ್ಲ. ಏಕೆ? ಏನೂ ಸಿಗಲಿಲ್ಲವೆ? 

ಮಹದೈಶ್ವರ್ಯವಂತನ ಮನೆಗೆ ನುಗ್ಗಿ ಏನೂ ಸಿಗಲಿಲ್ಲವೆ? ಛೆ! ಛೆ!! 

ಇದೇನು ಆಶ್ಚರ್ಯವಾಗಿದೆ!!! ಅವನನ್ನು ಅಡ್ಡಿ ಪಡಿಸವನರೇ ಇಲ್ಲದೆ 

ಇರುವಲ್ಲಿ ಕೈಗೆ ಸಿಕ್ಕಿದುದನ್ನು ಎತ್ತಿಕೊಂಡು ಹೊಗುವುದನ್ನು 

ಬಿಟ್ಟು ಏನೇನೊ ನೋಡುತಾ, ಸುಮ್ಮನೆ ತಿರುಗುತ್ತಿ ರುವನು! ಇವನೇನು 

ಕಳ್ಳನೋ? ಕಪಟಸಂಧಿವಿಗ್ರಹಿಯೋ! ಅಥವಾ ಹುಚ್ಚನೋ? ಏನು ? 

ಆರಾದರೂ ಆಗಲಿ, ಅಂತು ಆತನು ಏನನ್ನೂ ಅಪಹರಿಸಿಲ್ಲ. ಹಾಗಾದರೆ 

ವೃಥಾ ಗೃಹವನ್ನು ಪ್ರವೇಶಿಸಿದುದೇಕೆ? ಏತಕ್ತಾದರೂ ಅಗಲಿ, ಮನೆಯ 

೨೫------------------------------------------------------------------------

ಲ್ಲೆಲ್ಲಾ ಹುಡುಕಿದನು, ಕಟ್ಟಕಡೆಗೊಂದು ಕಾಗದ , ,ಕಟ್ಟನ್ನು ತೆಗೆದು 

ಕೊಂಡು ನೋಡಲಾರಂಭಿಬದನು. ಅದರಲ್ಲೊಂದು ಕಾಗದವನ್ನು ಕಂಡು 

ವಿಸ್ಮಯಾವಿಷ್ಪನಾದಂತಾಗಿ ಅದನ್ನು ಓದಲಾರಂಭಿಸಿದನು. 

ಕಾಗದ :-- 

“ ಮಿತ್ರಮಹಾಶಯರಾದ ಪ್ರೇಮಚಂದ್ರರ ಸನ್ನಿಧಿಯಲ್ಲಿ ಅನಾಥ 

ಭುಜಂಗನ ವಿಜ್ಞಾಪನೆಗಳು, 

ತಮ್ಮಿದಲ್ಲದೆ ಅನ್ಯಥಾ ಈ ದೀನನ ಉದ್ಧಾರವಾಗುವುದು ಕೇವಲ 

ಅಸಂಭವವೆಂಬುದು ತಿಳಿದ ಅಂಶವೇ ಆಗಿರುತ್ತದೆ. ವಿಜಯಿನಿಯು ವಿಲಾ . 

ಸಿನಿಯ ಮಾತಿಗೆ ಪ್ರತಿಯಾಡುವುದಿಲ್ಲವಾಗಿ ತಾವು ನನ್ನನ್ನು ಉದಾರ 

ಮಾಡಬೇಕು. ದೇವೇಶರ ಸಾಮರ್ಥ್ಯವು ಏನೂ ನಡೆಯಲಿಲ್ಲ. ಆದರೂ 

ಸಮಯವನ್ನರಿತು ಸಹಾಯ ಮಾಡುವುದಾಗಿ ಹೇಳಿರುತ್ತಾರೆ, ಅಂತೂ 

ಅನಾಥನನ್ನು ಕೈ ಹಿಡಿದು ಉದ್ಭರಿಸುವ ಸರ್ವಭಾರವೂ ತಮ್ಮದಾಗಿರುತ್ತ ದೆ, 

ತಾವು ಕರಿಕಲ್‌'ಗೆ ಯಾವಾಗ ಬರುತ್ತಿ (ರಿ, ತಿಳುಹಿಸಬೇಕು. 

ಅನಾಥ ಭುಜಹಂಗನ ಕಾಗದವನ್ನು ನೋಡಿ, ಕಳ್ಳ ಮುದುಕನು 

ಬಹಳ ಹೊತ್ತು ಆಲೋಜಿಸುತ್ತಿದ್ದಂತೆ ತೋರುತ್ತಿತ್ತು. ಅಷ್ಟರಲ್ಲಿಯೇ 

ಮುದುಕನು ಚಕಿತನಾಗಿ ತಕ್ಷಣವೇ ಹೊರಗೆ ಬಂದು ಸುತ್ತ ಲೂ ನೋಡಿ 

ದನು. ಮನೆಯ ಗೋಡೆಯನ್ನೇ ಆಶ್ರಯಿಸಿಕೆೊಂಡು ಮನೆಯ ಹಿಂಬಾಗಕ್ಕೆ  

ಹೋಗಿ ಕೈದೋಟದಲ್ಲಿ ನುಗ್ಗಿ ಎಲ್ಲಿಯೋ ಮಾಯವಾದನು. 

........

ಷಷ್ಟ ಗುಚ್ಛ

ಕಾದಂಬಿನಿಯ ಕಲಾಲೇಶವೂ ಇಲ್ಲದೆ ಶುಭ, ವಾದ ಘನ  

ನೀಲವರ್ಣದಿಂದ ವಿರಾಚಸುತ್ತಿದ್ದ ಜ್ಯೋತ್ಸ್ನಾಮಯ  

ವಾದ ಆಕಾಕದಲ್ಲಿ ಕಾಂತಿಯುಕ್ತವಾಗಿ ಥಳಥಳಸುತ್ತಿದ್ದ 

ಅಗಣಿತ ಉಡುಗಣಗಳ ತೇಜೋರಾಶಿಯು ಅನಂದವನ್ನು ಬೀರುತ್ತಿತ್ತು, 1 

೨೬------------------------------------------------------------------------------

ಹೃದಂಗಮವಾದ ಸರ್ವತ್ರ; ಶಾಂತತೆಯನ್ನು ತಳೆದಿದ್ದ ವತ್ತು ನಿಶ್ಕಬ್ಬ 

ಮಯವಾದ ಆ ರಜನಿಯ ಗಂಭೀರವಾದ ಸಾರ್ವಭೌಮತ್ವದ ಸಮಾರಂಭ 

ಸಮಯದಲ್ಲಿ ಸಾಲುಸಾಲಾಗಿ ಹಬ್ಬಿದ್ದ ಪರ್ವತಶ್ರೇಣಿಯ ದುರ್ಗಮವಾದ 

ಆ ಕಣಿವೆಯಲ್ಲಿ ದಟ್ಟವಾಗಿ ಬೆಳೆದಿದ್ದ ಮರಗಳ ಆ ಗುಂಪಿನ್ಲಿ ಏಕಾಂಗಿ 

ಯಾದ ಒಂದು ವ್ಯಕ್ತಿಯು ಸಂಚರಿಸುತಲಿತ್ತು !! ಕತ್ತಲೆಯು ಹೆಚ್ಚು  

ಹೆಚ್ಚಾಗುತ್ತಿದರೂ, ಈ ವ್ಯಕ್ತಿಯೇನೋ ಭಯಗೊಂಡಂತೆ ತೋರುತ್ತಿರ  

ಲಿಲ್ಲ. ಸಮೀಪದ ಮರಗಳ ಮರೆಯಲ್ಲಿ ಬೇರೊಂದು ವೃತ್ತಿಯು ಈ 

ವ್ಯಕ್ತಿಯನ್ನೇ ಅನುಸರಿಸಿಕೊಂಡು ಬರುತ್ತಿದ್ದಂತೆ ಬೋಧೆಯಾಗುತ್ತಿತ್ತು.  

ಆ ಕತ್ತಲೆಯಲ್ಲಿ ಅಂತಹ ಘೋರಾಟವಿಯಮಧ್ಯದಲ್ಲಿ ನಿರ್ಭಯವಾಗಿ 

ಒಂದನ್ನೊಂದೆಡಬಿಡದೆ ಸಂಚರಿಸುತ್ತಿರುವ ಈ ವ್ಯಕ್ತಿಗಳನ್ಸು ನೋ‌ಡಿದರೆ 

ಭೂತಪ್ರೇತಗಳನ್ನುವುದರಲ್ಲಿ ಅಡ್ಡಯೇನು? ಒಂದು ವೇಳೆ ಭೂತಗಳಲ್ಲ 

ದಿದ್ದರೆ ಅತಿ ಧೈರ್ಯಶಾಲಿಗಳಾದರೂ ಇರಬಹುದೆಂದು ಹೇಳೋಣವೆ? ಆದೆ 

ಲ್ಲಿಯ ಮಾತು!  ಎಂತಹ ಧೈರ್ಯಶಾಲಿಯಾದರೂ ಅತಿ ದುರ್ಗಮವಾದ ಆ 

ಕಾಡಿನಲ್ಲಿ ಅಂತಹ ಕಾಲದಲ್ಲಿ ಏಕಾಂಗಿಯಾಗಿ ತಿರುಗುವುದು ಆಸಂಭವ 

ವಲ್ಲವೆ? ಆದುದರಿಂದ ಭೂತಗಳ ಚೇಷ್ಟೆಯೇ ಎಂದೇಕೆ ಹೇಳಬಾರದು ? 

ಹಾಗೆಂದರೆ ನೂತನ ನಾಗರೀಕತೆಯು ನಗಲಾರದೆ ! ಭೂತಗಳ ಚೇಷ್ಟೆಯೂ 

ಅಲ್ಲ . ಎಂತಹ ಧೈರ್ಯಶಾಲಿಗಳಾದರೂ ಈ ರೀತಿ ಸಂಚರಿಸುವ ಸಂಭವವೂ 

ಇಲ್ಲ. ಅಂದಮೇಲೆ ಹುಚ್ಚರಿರಬಹುದೆ? ಹುಚ್ಚನೇ ಆಗಿದ್ದರೆ ಈ ರೀತಿ 

ಯಲ್ಲಿ ಅಸುಸರಿಸಿಕೊಂಡೇ ಬರುತ್ತಿರುವುದು ಆಶ್ಚರ್ಯಕರವಲ್ಲವೆ? ಆಥವಾ 

ಓಂದು ವ್ಯಕ್ತಿಯು ಹುಚ್ಚನಿದ್ದು, ಇನೊಂದು ವ್ಯಕ್ತಿಯು ಅವನನ್ನು ಹಿಡಿ 

ಯೆಲಿತ್ನಿಸಿ ಬರುತ್ತಿರಬಹುದೆ ? ಹೇಗಾದರೂ ಇರಲಿ ನಾವೇನೋ ಇವ 

ನನ್ನು, ಹುಚ್ಚನೆಂದೇ ಆರಿಯುತ್ತೇವೆ.  

ಹೋಗಹೋಗುತ್ತ ಹುಚ್ಚನು ಆ ದಾರಿಯನ್ನು ಸಹಾ ಬಿಟ್ಟು 

ಮರಗಳ ಗುಂಪಿನಲ್ಲಿ ನುಗ್ಗಿದನು ! ಹಾಗೆಯೇ ಕುಣಿ:ಯಲಾರೇಭಿಸಿದನು ! !  

ಕುಣಿಕುಣಿಯುತ್ತ ಹೋಗಿ ಒಂದು ಇಕ್ಕಟ್ಟಾದ ಸ್ಥಳವನ್ನು ಸೇರಿದನು ! 

ಅಲ್ಲೊಂದು ಮರದ ಕೆಳಗೆ ಕುಳಿತುಕೊಂಡು ನಗಲಾರಂಭಿಸಿದನು! ನಗು 

ತ್ತಿದ್ದವನು ಹಾಗೆಯೇ ಮಲಗಿಯೇ ಬಿಟ್ಟನು. 

೨೭-------------------------------------------------------------------

ಇವನನ್ನೇ ಅನುಸರಿಸಿಕೊಂಡು ಬರುತ್ತ ದ್ದ ವ್ಯಕ್ತಿ ಯು, ಈ ಆಟ 

ಗಳನ್ನೆಲ್ಲ ನೋಡಿ, ಇವನಿಗೇನೊ ಹುಚ್ಚು ತಲೆಗೇರಿದಂತಿದೆ ಎಂದಂದು  

ಕೊಂಡು ಮಾಯವಾದನು.

ಸ್ಫೃಲ್ಪ ಹೊತ್ತಿನಲ್ಲಿಯೇ ಹುಚ್ಚನು ಎದ್ದನು. ಎದ್ದವನು, ಮರ 

ಗಳ ಸಂದುಗಳಲ್ಲಿ ಅತಿಜಾಗ್ರತೆಯಾಗಿ ಓಡಲಾರಂಭಿಸಿದನು. ಹುಚ್ಚನ 

ಲಕ್ಷಣವು ಮಿತಿಮೀರಿದಂತಿದೆ. ಆದರೆ ಮಾಡುವುದೇನು? ಆವನೇನೋ  

ಓಡುತ್ತಲೇ ಇದ್ದಾನೆ ; ಕೈಗೆ ಬೇರೆ ಸಿಗುವ ಸಂಭವವು ತೋರುವುದಿಲ್ಲ 

ಓಡುತ್ತಿದ್ದ ಹುಚ್ಚನು ಹಠಾತ್ತಾಗಿ ನಿಂತುಬಿಟ್ಟನು ನಿಧಾನವಾಗಿಯೂ  

ನಿಶಬ್ದವಾಗಿಯೂ, ಮುಂದುವರಿದು, ಸಮೀಪದಲ್ಲಿ ಮರಗಳ ಮರೆಯಲ್ಲಿ  

ಮಾತನಾಡುತ್ತಿದ್ದ ಕೆಲವು ಜನರನ್ನು ಕಂಡನು ಅವರಲ್ಲೊಬ್ಬನು - 

ಆ ಸೂಳೆಮಗನಾದನೇನಾದನೋ? ಎನ್ನುವಷ್ಪರಲ್ಲಿಯೇ, ಓಡಿಬರುತ್ತಿದ್ದವ 

ನೊಬ್ಬನು ಇವರನ್ನು ಸಮೀಪಿಸಿ,- ಇವನು ಅವನಲ್ಲ. ಯಾವನೆೋ 

ಒಬ್ಬ ಹುಚ್ಚಡಿಕ ! 1 ಇವನೊಂದಿಗೆ ಅನ್ಯಾಯವಾಗಿ ಕಾಡಲ್ಲೆಲ್ಲ ಅಲೆದಾ 

ಡಿದ್ದಾಯಿತು ! ಎಂದು ಹೇಳಿದನು. 

ಇನ್ನೊಬ್ಬ-- ಆಯ್ಯೋ, ಬೆಪ್ಪ ನನ್ನ ಮಗನೇ! ಹಾಕದ ! ನಿನಗೆ 

ಗಶೀ ಹಾಕದ ! ಆ ಸೂಳೇಮಗನು ತಾಯಿಗ್ಗಂಡನೆಂದು ನಾನು ನಿನಗೆ 

ಮೊದಲೇ ಹೇಳಿರಲಿಲ್ಲವೇ ? ಇದೇಯೊ ನಿನ್ನ ಬುದ್ದಿ ? 

ಬೇರೊಬ್ಬ - ಲೋ! ಈಗಲೆ ಹೋಗಿ ತಿರ್ಗ ನೋಡೊ ! ಅವ 

ನೇನಾದರೂ ಸಿಕ್ಕಿದರೆ, ಅವನು ಹುಚ್ಚ ನಾದರೂ ಆಗಲಿ, ಯಾರಾದರೂ 

ಆಗಲಿ, ಮಿಸಿಕಾಡದಂತೆ ಫೈಸಲ್‌ ಮಾಡಿಬಿಡು. ಅವನ ಕೈಗೆ ನೀನೆಲ್ಲಾ 

ದರೂ ಸಿಕ್ಕಿಯೆ! ಜೋಕೆ! ಎಂದು ಹೇಳಿ ಕಳುಹಿಸಿದನು. 

ಈ ಮಾತುಗಳನ್ನು ಕೇಳುತ್ತಿದ್ದ ಹುಚ್ಚನು ಸಲ್ಪ ಹಿಂಜರಿದು, 

ದಟ್ಟವಾಗಿ ಬೆಳೆದಿದ್ದ ಗಿಡಗಳ ಪಕ್ಕದಲಿ ಮಲಗಿಕೊಂಡೆನು ಹುಚ್ಚ  

ನನ್ನು ಪುನಃ ಹುಡುಕುವುದಕ್ಕೋಸ್ಕರ ಹೋಗುತ್ತಿದ್ದವನು, ಅದೇಮಾರ್ಗ  

ದಲ್ಲಿ ಬರುತ್ತಲಿರಲು, ಒಂದೆರಡು ಹೆಜ್ಜೆ ಮುಂದುವರಿಯುವುದರಲ್ಲಿಯೆ,  

ಹುಚ್ಚನು ಹಾರಿ, ಬಲವಾದ ಹಿಡಿತದಿಂದ ಅವನು ಅಲ್ಲಾಡಲವಕಾಶವಿಲ್ಲ 

ದಂತೆ ಹಿಡಿದು ಕೆಡವಿಕೊಂಡನು. ಅನನಲ್ಲಿದ್ದ ಆಯುಧಗಳನ್ನು ತಿತ್ನು 

೨೮ ----------------------------------------------------------------

ಕೊಂಡು ಅವನ ಕೈಕಾಲುಗಳನ್ನು ಕಟ್ಟ ಮರಗಳ ಮೊರೆಯಲ್ಲಿ ಮಾತ 

ನಾಡುತ್ತ ಕುಳಿತಿದ್ದವರನ್ನು ಹಿಡಿಯಲು ಹೊರಟನು. ಹೋಗಿ ನೋಡು 

ವಲ್ಲಿ ಅಲ್ಲ್ಯಾರೂ ಇರಲಿಲ್ಲ! ಸ್ವಲ್ಪಕಾಲ ಅಲ್ಲೆ ಲ್ಲಾ ಹುಡುಕ್ಕಿ ಪುನಃ 

ತಾನು ಮೊದಲೊಬ್ಬ ನನ್ನು ಕಟ್ಟಿಹಾಕಿದ ಸ್ಥಳಕ್ಕೆ ಬಂದು ನೋಡಿದನು, 

ಅಲ್ಲಿ ಅವನೂ ಇರಲಿಲ್ಲ !! ಸ್ಥಳ ವ್ಯತ್ಯಾಸವೇನಾದರೂ ಅಗಿರಟಹುದೆಂದಾ 

ಲೋಚನ ಆ ಕಡೆಯಲ್ಲೆೇ ಹುಡುಕುತ್ತಿರಲು, ಮರಗಳ ಸಂದಿನಲ್ಲಿ ಒಬ್ಬನು 

ಓಡಿ ಹೋಗುತಿದ್ದುದನ್ನು ಕಂಡು ತಾನೂ ಆ ಕಡೆಯೇ ಓಡಲಾರಂಭಿಸಿ  

ದನು. ಇಬ್ಬರೂ ಈ ರೀತಿಯಲ್ಲಿ ಓಡುತ್ತ ಕಾಡಿನ ಮಧ್ಯದಲ್ಲಿದ್ದೊಂದು 

ಜಲಾಶಯವನ್ನು ಸಮೀಪಿಸಿದರು. ಮುಂದುಗಡೆಯಲಲ್ಲೋಡುತ್ತಿದ್ದವನು 

ಕಾಣಿಸದಂತಾದನು ! ಕೂಡಲೆ " ಧಡೀರ್‌ " ಏಂಭ ಶಬ್ದವು ಕಳ ಬಂದಿತು ! 

“ಮುಂದೆ ಹೋಗುತ್ತಿದ್ದವನು ನೀರಿನಲ್ಲಿ ಬಿದು ಬಿಟ್ಟನು. ಆವರೀತಿಯ 

ಲ್ಲಾದರೂ ಅವನನ್ನು ಹಿಡಿಯಲೇ ಬೇಕು" ಎಂದುಕೊಂಡು ಹುಚ್ಚನು 

ಕೆರೆಯ ಸಮಾಪಕ್ಕೆ ಬಂದು, " ಅವನು ಒಂದು ತಡವೆ ಮೇಲಕ್ಕೆದ್ಧುದನ್ನು 

ಕಂಡ ಕೂಡಲೆ ಹಿಡಿಯಬೇಕು. " ಎಂದು ಆಲೋಚಿಸಿಕೊಂಡು, ಈಜು 

ವುದಕ್ಕೆ ಸಿದ್ಧನಾಗಿ ನೀರಿನಲ್ಲಿ ಸಲ್ಪ ದೂರ ಇಳಿದು, ನೀರಿನ ಕಡೆಯೇ 

ನೋಡುತ್ತಾ ನಿಂತಿದ್ದನು. ಸ್ಫಲ್ಪ ದೂರದಲ್ಲಿ " ಅಯ್ಯೋ ! ಹುಚ್ಚ !! 

ನಿನ್ನಂತಹ ಜಾಣಹುಚ್ಚರಿಗೆ ಔಷಧವು ನಮ್ಮಲ್ಲಿಲ್ಲದಿದ್ದರೆ ಪ್ರೇಮಚಂದ್ರನ  

ಶಿಷ್ಯರಾಗುತ್ತಿದ್ದೆವೇ ? ನಿನ್ನ ಹುಚ್ಚಿನ ಪರಿಣಾಮವು ಈ ದುರ್ಮರಣದಲ್ಲಿ 

ಪರಿಯವಸಾಸನವಾಗಬೇಕೆ ! ಹುಚ್ಚಾ ! ನೀಸಾಯಿ ! ಎಂದು ಹೇಳುತ್ತ 

ಆರೊ ಬಂದೂಕನ್ನು ಹಾರಿಸಿದರು. ಬಂದೂಕದ "ಢುಂ" ಏಂದು ಶಬ್ದ  

ವನ್ನೂ. ಹ.ಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ “ಧಡೀರ್‌” ವಿಂಟ 

ಕಬ್ಬವು ಅನುಸರಿಸಿತು. 

ಹುಚ್ಚನು ನೀರಿನಲ್ಲಿ ಬಿದ್ದುದರಿಂದುಂಟಾದ ಶಬ್ದವನ್ನು ಇಳಿದ 

ಕೂಡಲೆ "ಬಿದ್ದಾ ಸೂಳೆಮಗ" ಎಂದು ಹೇಳುತ್ತ ನಾಲ್ಕು ಜನರೋಡಿ  

ಬಂದರು. ಅಲ್ಲೆಲ್ಲಾ ಹುಡುಕಿ, "ಗುಂಡಿನೇಟಿನಿಂರುಂಟಾದ ಸಂಕಟದಿಂದ 

ಒದ್ದಾಡುತ್ತಿದ್ದ ಈ ತಾಯಿಗ್ಗಂಡನ ಶವವು ಕೆಳಗೆ ಬದಿಯಲ್ಲೆಲ್ಲೋ 

ಸೇರಿಕೊಂಡಿರಬಹುದು" ಎಂದಂದುಕೊಂಡು ತಮ್ಮ ಒಟ್ಟೆ ಬರೆಗಳನ್ನು 

೨೯---------------------------------------------------------------------------- 

ತೆಗೆದಿಟ್ಟು  ನೀರಿನಲ್ಲಿ ಮುಳುಮಳುಗಿ ಹುಚ್ಚನನ್ನು ಹುಡುಕುತ್ತಿದ್ದರು. 

ನೀರಿನ ಸುತ್ತಲೂ ಜೆೊಂಡು ಒಹಳ ದಟ್ಟವಾಗಿ ಬೆಳೆದಿದ್ದುದರಿಂದ, ಅದರ 

ಮಧ್ಯದಲ್ಲಿ ಅವಿತುಕೊಂಡು ಇವರ ಕೆಲಸಗಳನ್ನೇ ನೋಡುತ್ತಿದ್ದ 

ಹುಚ್ಚನನ್ನು ಆ ಜನರು ಕಾಣಲಿಲ್ಲ.! ಈ ಹುಚ್ಚನು ಈಜುವುದರಲ್ಲಿ 

ಬಹು ಸಮರ್ಥನಾಗಿದ್ದನು. ಆದುದರಿಂದಲೇ ಬಂದೂಕಿನ ಕೀಲಿನ ಶಬ್ದ

ವನ್ನು ಕೇಳಿದ ಕೂಡಲೇ ನೀರಿನಲ್ಲಿ ಬಿದ್ದು ನೀರಿನೊಳಗೇ ಈಜುತ್ತ 

ಹೋಗಿ, ಆ ಹುಲ್ಲಿನ ಮಧ್ಯದಲ್ಲಿ ನಿಂತುಕೊಂಡು ಸಮಯ ನಿರೀಕ್ಷಣೆ 

ಯಲ್ಲಿದ್ದು, ಆ ಮೋಸಗಾರರು ತನ್ನನ್ನು ಹುಡುಕುವದರಲ್ಲಿಯೇ ಆಸಕ್ತ 

ರಾಗಿರಲು, ಶಬ್ದವಿಲ್ಲದೆ ಬಂದು ಅವರ ಬಟ್ಟೆಯನ್ನು ಎತ್ತಿಕೊಂಡು 

ಹೋದನು.  ತನ್ನ ನೆನೆದುಹೋಗಿದ್ದ ಬಟ್ಟೆಯನ್ನು ತೆಗೆದು ಬೇರೆ ಉಡು

ಪನ್ನು ಧರಿಸಿ ಸಮೀಪದಲ್ಲಿದ್ದ ಮರಗಳ ಮಧ್ಯೆ ಮರೆಯಾದನು.  

ನೀರಿನಲ್ಲಿ ಬಹಳ ಹೊತ್ತು ಹುಡುಕಿ ಬೇಸರಪಟ್ಟು, "ಏನೂ 

ಸಿಕ್ಕಲೊಇಲ್ಲಪ್ಪ! ಸತ್ತನೋ ಇಲ್ಲವೋ ಬೊಡ್ಡಿಮಗ! ಪಕ್ಕ ತಾಯಿಗ್ಗಂಡ" 

ಎಂದುಕೊಂಡು, " ಸತ್ತಿದ್ದರೆ ಈಗಲಲ್ಲದಿದ್ದರೆ ನಾಳೆಯಾದರೂ, ಹೆಣ 

ತೇಲಿಯೇ ತೇಲುತ್ತೆ, ನಡೀರೋ!" ಎಂದು ಹೇಳುತ್ತ ನೀರಿನಿಂದೀಚೆಗೆ 

ಬಂದರು. ತಾವಲ್ಲಿಟ್ಟಿದ್ದ ಬಟ್ಟಿಎಬರೆಗಳಾವುವೂ ಇರಲಿಲ್ಲ! ವಿಸ್ಮಯವಿಷ್ಟ 

ರಾಗಿ, " ಆ ಬೋಳೀಮಗನು ಸಾಯಲಿಲ್ಲ! ನಾವಿನ್ನು ಇಲ್ಲಿರುವುದು ಸರಿ 

ಯಲ್ಲ! ! ಎಂದು ಭಯದಿಂದ ಹೇಳುತ್ತ ಓಡಲಾರಂಭಿಸಿದರು.   

ಮರೆಯಾಗಿ ನಿಂತುಕೊಂಡಿದ್ದ ಹುಚ್ಚನು ಅವರು ಓಡಿಹೋದು 

ದನ್ನುಕಂಡು, ಅವರನ್ನು ಹೀಬಾಲಿಸಿದನು. ಸ್ವಲ್ಪ ದೂರ ಹೋಗಿ ಆ 

ಮೊಸಗಾರರು ಸಮೀಪದಲ್ಲಿದ್ದೊಂದು  ಮುರುಕು ಮನೆಯನ್ನು ಹೊಕ್ಕರು.  

ಅವರಲ್ಲೊಬ್ಬನು, "ನೋಡಿದಿಯೋ ! ನಾನು ಮೊದಲಿನಿಂದಲೂ ಬಡ 

ಕೊಳ್ಳುತ್ತಿದ್ದರೂ ಕೂಡ ಹುಚ್ಚನೆಂದು ಬಿಟ್ಟು ಬಿಟ್ಟು ನೀನೀಪಾಡನ್ನು 

ತಂದೆ ! "  ಇನ್ನೊಬ್ಬ, "ಲೋ, ಅವನಿನ್ನೆಂತ  ಬೊಡ್ಡಿ ಮಗನೋ ! ನಾವು 

ನಾಲ್ಕು ಜನರಿದ್ದರೂ, ನಮ್ಮನ್ನು.......................... ರುವಾಗಲೇ ಬಟ್ಟೆ

೩೦--------------------------------------------------------------------------

ಳನ್ಸೆಲಾ ಹೊತ್ತುಕೊಂಡು ಹೋಗಿರುವನಲ್ಲ ! ಆ ನನ್ನ ಮಗ ದೆವ್ವನೇ 

ಅಗಿರಬೇಕು"  

ಬೇರೊಬ್ಬ:- " ಅದಕ್ಕೇ ಕಣೊ ಭುಜಂಗ ಇವನು ಸಾಮಾನ್ಯ 

ದವನಲ್ಲವೆಂತ ಹೇಳುತ್ತಾ ಇರೋದು!" ವಂದು ಹೇಳಿ ಮುಂದೆ ಸಾಗು 

ವಷ್ಟರಲ್ಲಿಯೇ ಇನ್ನೊಬ್ಬನು, "ಲೋ ! ಅದೆಲ್ಲ ಇರಳಿ; ಈವಾಗ ಬಟ್ಟೆ 

ಗೇನುಮಾಡೋಣ ? ಬಟ್ಟೆಯನೆಲ್ಲಾ ಹೊತ್ತುಕೊಂಡು ಹೋಗಿದ್ದಾನೆ! 

ಎಂದನ್ನುವಷ್ಪರಲ್ಲಿಯೇ "ನನ್ನೊಂದಿಗೆ ಬಂದರೆ ನಿಮ್ಮ ಬಟ್ಟೆಗಳನ್ನು 

ಕೊಡುತೇನೆ “ ಎಂದು ಹೇಳುತ್ತ ಹುಚ್ಚನು ಒಳಗೆ ನುಗ್ಗಿದನು. ತಕ್ಷಣ  

ದಲ್ಲಿಯೇ ಅವರೆಲ್ಲರು ಓಡಿಹೋಗಲು ಪ್ರಯತ್ನಸುತ್ತ್ರದನ್ನು ಕಂಡು. 

“ ಅಲುಗಾಡಿದರೆ ಮರಣವು ತಪ್ಪಲಾರದು, ನಿಷ್ಕರುಣದಿಂದ ಕೊಂದು 

ಬಿಡುವೆನು.” ಎಂದು ಹುಚ್ಚನು ಘರ್ಜಿಸಿದನು. ಎಲ್ಲರೂ ನಿರುಪಾಯ 

ರಾದರು.  ಹುಚ್ಚನು ಅವರೆಲ್ಲರನ್ನೂ ಕಟ್ಟಿ ಕೆಡವಿ, ಅಲ್ಲಿದ್ದ ಕೋಣೆಗ 

ಳನ್ನು ಪರೀಕ್ಷಿಸಲು ಹೋದನು. ಏನೂ ಸಿಗಲಿಲ್ಲ. ಮ)ನೆಯೆಲ್ಲವನ್ನೂ . 

ಹುಡುಕಿ " ಇಲ್ಲಿನ್ನೇನು ತಾನೆ ಇದ್ದೀತು?" ಎಂದುಕೊಳ್ಳುತ್ತ ತಾನು 

ಬಂದಿಗಳನ್ನಿರಿಸಿದ್ದ ಸ್ಥಳಕ್ಕೆ ಬಂದು ನೋಡಲು, ಹುಚ್ಚನನ್ನು ಆಶ್ಚರ್ಯ  

ಪಿಶಾಚವು ಹಿಡಿದಲ್ಲಾಡಿಸಲಾರಂಭಿಸಿತು! ತನ್ನಿಂದ ಬಂಧಿಸಲ್ಪಟ್ಟವರಾರೂ  

ಇಲ್ಲ! ಹಿಡಿದು ಕಟ್ಟಿ ಒಳಗೆ ಹೋಗಿ ನೋಡಿಕೊಂಡುಬರುವಷ್ಟು ಅಲ್ಪ 

ಕಾಲದಲ್ಲಿಯೇ ಬಂದಿಗಳು ಮಾಯವಾಗಿರುವುದನ್ನು ನೋಡಿದರೆ ಆಶ್ಚರ್ಯ 

ಪಡದವರಾರು? "ನಾನು ಎಷ್ಟು ಬಲವಾಗಿ ಕಟ್ಟಿದ್ಧರೂ ಕೂಡ ತಪ್ಪಿಸಿ  

ಕೊಂಡು ಹೋಗಿರುವರಲ್ಲ ! ಇದೇನು ಇಂದ್ರಜಾಲವೋ! ಸ್ವಪ್ನವೋ ! 

ಮಾಯವೋ !ಇನ್ನೆಷ್ಟುತಡವೆ ನನ್ನನ್ನ್ನು ಈ ರೀತಿ ವಂಚಿಸಿ ತಪ್ಪಿಸಿ 

ಕೊಂಡು ಹೋಗಬಲ್ಲಿರಿ ? ನನ್ನ ನಿಮ, ಬಲಾಬಲಗಳು ಒಂದಲ್ಲದಿದ್ದರಿ 

ನ್ನೊಂದು ವೇಳೆಯಲ್ಲಾದರೂ ಹೊರಬೀಳಲಾರವೆ? " ಎಂದಂದು 

ಕೊಳ್ಳುತ್ತ ಹುಚ್ಚನು ಅಲ್ಲಿಂದ ಹೊರಟನು, ಈ ಹುಚ್ಚನೇ ನಮ್ಮ ಧೀರ 

ಪತ್ತೇದಾರನಾದ ಕಾಳೀಚರಣ! 

...............

೩೧------------------------------------------------------------------------

ಸಪ್ತಮ ಗುಚ್ಛ 

ಡಾಕ್ಟರು ಬರೆದಿದ್ದ ಕಾಗದವನ್ನೋದಿ ತಾಂದೋಣಿ  

ರಾಯರು ಈ ವಿಧವಾಗಿ ಆಲೋಚಿಸಲಾರಂಭಿಸಿ  

ದರು:-" ಶಂಭುದತ್ತನು ಮೊದಲು ಮಾರ್ವಾಡಿ 

ಗಳಗೆ ವಿಷಪ್ರಯೋಗವನ್ನು ಮಾಡಿರುತ್ತಾನೆ. ಆದನ್ನಾವ ವಿಧವಲ್ಲಾದರೂ 

ಮರೆಮಾಚಿಸಬೇಕೆಂದು ಶಂಭುದತ್ತನು ಈ ಸಂಘಟನೆಯನ್ನುಕಲ್ಪಿಸಿರ 

ಬಹುದು. ಆರೋ ನುಗ್ಗಿ ಇಷ್ಟು ವಿಘಾತವನ್ನುಂಟುಮಾಡಿರಬಹುದೆಂದು  

ಜನರೆಲ್ಲರೂ ಪಶ್ಚಾತ್ತಾಪಪಡುವ ಸಮಯವನ್ನು ನಿರೀಕ್ಷಿಸಿಕಕೊಂಡಿದ್ದು 

ಆ ಸಮಯವು ಬಂದೊದಗಿದ ತಕ್ಷಣವೆ ಸ್ವಗೃವನ್ನು ಪ್ರವೇಶಿಸಿ ಏನಾ 

ದರೊಂದುಪಾಯವನ್ನು ಕಲ್ಪಿಸಿ ದೂರನ್ನು ದೂರೀಕರಿಸಬೇಕೆಂದು ಆಲೋ 

ಚಿಸಿ ಶಂಭುದತ್ನು ಕಣ್ಮರೆಯಾಗಿರಬಹುದು. ಸರಿ! ಆ ಕೋಣೆಯಲ್ಲಿ 

ಖೂನಿಯು ನಡೆದಿದೆ  ಎಂದು ಹೇಳಲು, ಸಾಕಷ್ಟು ಕಾರಣಗಳಿಲ್ಲ  

ವೆಂತಲೂ, ಆ ರಕ್ತವು ಉದ್ದೇಶಪೂರ್ವಕವಾಗಿ ತಂದು ಚಲ್ಲಿದುದೇ ಇರ 

ಬೇಕೆಂತಲೂ, ಕಾಳೀಚರಣನು ಸೂಚಿಸಿದ ಅಭಿಪ್ರಾಯವು ಈಗ ನಿಜ 

ವೆಂದು ವ್ಯಕ್ತವಾಗುತ್ತಿರುವುದು. ಅಹಹ !   ಅವನದದೆಂತಹ ಮೇಧಾಶಕ್ತಿ !! 

ಹೀಗಿಲ್ಲದಿದ್ದರೆ ಅವನು ಪ್ರವೇಶಿಸಿದುದರಲ್ಲಿ ಕೃತಕಾರ್ಯನಾಗಿಯೇ ಹಿಂದಿ 

ರುಗುವುದರೆಂದರೇನು ಸಾಮಾನ್ಯವೇ ?" ಎಂದು ಮೊದಲಾಗಿ ಅಲೋಚಿಸಿ,   

 ಕಾಳೀಚರಣನು ಈಗ ಕೇವಲ ಆಶ್ಚರ್ಯನಲ್ಲ! ಇದೇಕಿರಬಹುದು? ಅವ 

ನೇನು ಮಾಡುತ್ತಿರುವನು! ಎಲ್ಲಿರುವನು! ಎಂಬಂಶವನ್ನು ಊಹಿಸಲೂ 

ಕೂಡ ಸಾಧ್ಯವಿಲ್ಲವಲ್ಲ!" ಎಂದು ಆಲೋಚಿಸುತ್ತಿರುವಷ್ಟರಲ್ಲಿಯೇ 

ಕಾಳೀಚರಣನು ಅಲ್ಲಿಗೆ ಬಂದನು. 

ಇನ್‌ಸ್ಪೆಕ್ಟರು:- " ಮಹಾಶಯರೆ, ಇದೇನಿಷ್ಟು ಅಪರೂಪ? ಸಧ್ಯಕ್ಕೆ 

ಕೇಸಿನ ಅವಸ್ಥೆಯು ಯಾವಸ್ಥಿತಿಗೆ ಬಂದಿರುವುದು ?  ನಿಮ್ಮೀ ಸಾಹಸಕ್ಕೆ 

ಅಪರಾಧಿಯು ಸಿಕ್ಕುವ ಭರವಸೆಯು ಇರುವಂತೆ ತೋರುತ್ತಿದೆ ! ಏನು? 

೩೨------------------------------------------------------------------------

ಯಾರೋ? ಎಂದು ಕಾಳೀಚರಣನನ್ನು ಪ್ರಶ್ನಿಸಲು, ಕಾಳೀಚರಣನು 

ಅಪರಾಧಿ ಯಾರು? ತಮಗೇನಾದರೂ ಸಊಚನೆ, ಗುರುತುಗಳು ಗೊತ್ತಾ 

ಗಿರುವವೇನು? ಎಂದಂದನು.

ಇನ್‌:- ನನಗೆ ಮತ್ತಿನ್ಯಾವಸೂಚನೆಯ ತಿಳಿದು ಬಂದಿಲ್ಲ. 

ಏನಿದ್ದರೂ ಈ ಕೇಸಿನ ಪರಿಣಾಮವು ನಿಮ್ಮಿಂದ ಆಗಬೇಕಲ್ಲದೆ ಅನ್ಯಥಾ 

ಕಾಣುವುದಿಲ್ಲ. ಏವಂಚ ನನಗೇನೋ ಶಂಭುವನ ಮೇಲೆ ಸಂಪೂರ್ಣ 

ಸಂದೇಹವೇ ?

ಕಾಳೀ:-"ಹೇಗಾದರೂ ಇರಲಿ, ನಾನು ಮಾಡುವ ಪ್ರಯತ್ನ 

ವನ್ನೂ ಮಾಡಿ ನೋಡಿದಲ್ಲದೆ ಆದ ಮೇಲೂ ಅನುಮಾನಕರವಾಗಿ ತಪ್ಪನ್ನು 

ಹೊರಿಸಲಾರನು. ಎಂದು ಹೇಳಿ, ತಾನು ಅದುವರೆವಿಗೂ ನಡಿಸಿದ್ದುದೆಲ್ಲವನ್ನೂ 

ತಿಳುಹಿಸಿದನು. ಇನ್‌ಸ್ಪೆಕ್ಟರು ಸಂಗತಿಗಳನ್ನು ತಿಳಿದು ಪರಮಾಶ್ಚರ್ಯ 

ಭರಿತರಾದರಲ್ಲದೆ "ಏನು ಪತ್ತೇದಾರರೆ ! ಕೇಸಿನ ಸ್ಥಿತಿಯು ಹೇಗೆ 

ತಿರುಗಿತು ! ನೋಡಿದಿರ, ಬಹುಚಮತ್ಕಾರ ! ಅಹಹ !! ಪರಮಾಶ್ಚರ್ಯ 

ಕರವಾದ ಈ ಸಂಗತಿಗಳ ನಿಜಸ್ಥಿತಿಯೆಂತಿರುವುದು ! ಅಪರಾಧಿಯಾರು ? 

ನಾವು ತಪ್ಪಿಗೆ ಗುರಿಮಾಡಿದುದಾರನ್ನು ; ತುಚ್ಚ ವಾದ, ಅಸ್ಥಿರವಾದ ಈ 

ಸ್ತ್ರೀವ್ಯಾಮೋಹವು ಇಂತಹ ಭಯಂಕರವ್ಯಾಪಾರದಲ್ಲಿ ಪರಿಣಮಿಸ 

ಬಹುದೇ ? ಕಾಲಗತಿ ! ಕೇವಲ ! ಅಶಕ್ತರಾದ ಈ ಮನ.ಜಮಾತ್ರದವರೇ 

ಇಂತಹ ಕಾರ್ಯಗಳಲ್ಲಿ ಈರೀತಿಯ ಕಪಟತಂತ್ರಗಳನ್ನು ಹರಡಿ 

ಹಲವರನ್ನು ಹಿಂಸೆಗೆ ಒಳಗಾಗಿಸಲು ಸಮರ್ಥವಾಗಿರುವರೆಂದಮೇಲೆ ಕಾಲ 

ಗತಿಯ ವಿಚಿತ್ರವ್ಯಾಪಾರ ಸಾಮರ್ಥ್ಯವೇನು ಸಾಮಾನ್ಯವೇ ? ಕೇವಲ 

ಅವರ್ಣನೀಯ ! ಎಲ್ಲವೂ ಭಗವದಧೀನ !! ಅರೇನ. ತಾನೆ ಮಾಡಲಾಪರು ? 

ಮಹಾಶಯರೇ ಹೆಚ್ಚಿಗೆ ಹೇಳುವುದೇನು ? ಮು:ಖ್ಯವಾಗಿ ತಮ್ಮ ಶಕ್ತಿಯೂ 

ಸಾಹಸವೂ, ಚಟುವಟಿಕೆಯೂ, ಅಸಾಧಾರಣವಾದವುಗಳು!  ಇಂತಹ 

ಅತಿಶಯವಾದ ನಿಮ್ಮ ಸಾಹಸದಿಂದಲೆ ಈಗೀಗ ಅಪರಾಧಿಯಾರೆಂಬುದನ್ನು 

ಸರಿಯಾಗಿ ಯೋಚಿಸಿ ನೋಡಬಹುದಾದ ಸಂದರ್ಭಗಳೊದಗಿರುವುವು. 

ಇನ್ನು ಮುಂದಿನಮಾರ್ಗವೇನು ? ಎಂದು ಕೇಳಲು, ಕಾಳೀಚರಣನು, 

" ಹೇಳುವೆನು-ಸದ್ಯ ದೇವೇಶನಿಂದ ತಿಳಿಯಬೇಕಾದ ಅಂಶಗಳು ಕೆಲವಿರು

೩೩----------------------------------------------------------

ವುದರಿಂದ ಅಲ್ಲಿಗೆ ಹೋಗಿ ಬರೋಣ" ಎಂದು ಹೇಳಿ ದೇವೇಶನ ಮನೆಗೆ 

ಹೊರಟನು. ಇನ್‌ಸ್ಪೆಕ್ಟರೂ ಅವನೊಂದಿಗೆ ಹೋದರು. 

ಕಾಳೀಚರಣನೊಡನೆ ಇನ್‌ಸ್ಪೆಕತಟರು ಬಂದುದನ್ನು ನೋಡಿ ದೇವೇ 

ಶನು ಬಹಳ ಭಯಗೊಂಡನು. ಕಾಳೀಚರಣನು, "ಸ್ವಾಮೀ! ತಾವು 

ನಿರ್ಭ‌ಯರಾಗಿರುವುದು. ತಾವು ನನಗೆ ತಿಳಿಹಿಸಿದ ಸಮಾಚಾರಗಳಿಂದ 

ನನಗೆ ಬಹಳ ಮಟ್ಟಿಗೆ ಸಹಾಯವಾಯಿತು ಪುನಃ ತಮಗೆ ಶ್ರಮಕೊಡು 

ವುದಕ್ಕಾಗಿ ಕ್ಷಮಿಸಬೇಕು. ಪ್ರೇಮಚಂದ್ರ ಮತ್ತು ಭುಜಂಗರಾಯ 

ಇವರಿಬ್ಬರ ವಿಷಯವಾಗಿ ತಮ್ಮಿಂದ ಸ್ವಲ್ಪ ತಿಳಿಯಬೇಕಾಗಿದೆ ."  ಎಂದು  

ಹೇಳಲು ದೇವೇಶನು "ಅಪ್ಪಣೆ" ಎಂದಂದನು. 

ದೇವೇಶ:- "ಪ್ರಣಯವೆಂಬುದು ಪ್ರಬಲತರವಾದದ್ದು ! ಆದರೂ 

ಪ್ರೇಮಚಂದ್ರನು ವಿಲಾಸಿನಿಗಾಗಿ ಶಂಭುದತ್ತನ್ನು ಕೊಲ್ಲುವಷ್ಟು ನೀವ 

ನೆಂದು ನಾನು ಹೇಳಲಾರೆ. ವಿಲಾಸಿನಿಯು ಎಂದಿಗಾದರೂ ಸಮ್ಮ 

ತಿಸುವಳೇ" 

ಕಾಳೀಚರಣ:- "ವಿಲಾಸಿನಿಗೆ ಏನೊಂದನ್ನೂ ತಿಳಿಸದೆ ಅವಳನ್ನು 

ಪ್ರಥಮನು ಶಂಭುದತ್ತನಿಗೆ ತಿಳಿಯದಹಾಗೆ ಅವಳ ಸಮ್ಮತಪೂರ್ವಕ 

ವಾಗಿಯೇ ಕರೆದುಕೊಂಡುಹೋಗಿ ಉತ್ತರಕ್ಷಣದಲ್ಲಿಯೇ ಈ ಕೆಲಸವನ್ನೇಕೆ 

ನಡೆಯಿಸಿರಬಾರದು?"

ದೇವೇಶ:- "ನಾನು ಬಹು ದಿನಗಳಿಮದಲೂ ಆತನ ನಡತೆಯನ್ನು

ಬಲ್ಲೆನಾದುದರಿಂದ ಇಂತಹ ನೀಚ ಕಾರ್ಯದಲ್ಲಿ ಅವನು ಪ್ರವೇಶಿಸ 

ಲಾರನೆಂದು ಹೇಳಬಲ್ಲೆ ವಿನಾ ಬೇರೊಂದನ್ನು ಹೇಳಲಾರೆ."

ಕಾಳೀಚರಣ:- " ಈ ಭುಜಂಗರಾಯನಿಗೂ ಪ್ರೇಮಚಂದ್ರನಿಗೂ 

ಸಂಬಂಧವೇನಾದರೂ ಇರಬಹುದೆ? "

ದೇವೇಶ:- "ಕಾಣಲಿಲ್ಲ"

೩೪----------------------------------------------------

ಕಾಳೀ:-"ಶಂಭುದತ್ತನಿಗೊ? "

ದೇವೇ: - "ಇಲ್ಲ” 

ಕಾಳೀ ;- “ ಹಾಗಾದರೆ ಅವನು ಶಂಭುದತ್ತನ ಮನೆಯಲ್ಲಿ ಅಷ್ಟು 

ಸಲಿಗೆಯಿಂದ ಹೇಗಿರುವನು?” 

ದೇವೇಶ; ಅವನು ಆ ವಿಜಯಿನಿಗೆ ಬಂಧುವು ಆದುದರಿಂದಲೇ 

ಅವನು ಶಂಭುದತ್ತನ ಮನೆಗೆ ಬಂದು ಹೋಗುತ್ತಾ ಇನ್ನನು. ಮತ್ತು  

ಏನಾವರೂ ಮಾಡಿ ವಿಜಯಿನಿಯನ್ನುು ತಾನು ಮದಿವೆ ಮಾಡಿಕೊಂಡರೆ 

ಶರಚ್ಛಂದ್ರರ ಆಸ್ತಿಯು ತನಗೆ ಸಿಗುವದೆಂಬ ಆಶೆಯೊಂದು ! 

ಕಾಳೀ:-ಅವನ ನಡತೆಯ ವಿಷಯದಲ್ಲಿ ತಮ್ಮಭಿಪ್ರಾಯವೇನು ?

ದೇವೇ; ಆ ವಿಷಯದಲ್ಲಿ ನಾನೇನೂ ಹೇಳಲಾದೆ! ಜನರಿ 

ಗೇನೋ ಅವನ ವಿಷಯದಲ್ಲಿ ಅಷ್ಟು ಒಳ್ಳೆ ಅಭಿಪ್ರಾಯವಿಲ್ಲ ! ಸ್ಟಲ್ಪ  

ದುರ್ಮಾರ್ಗಾವಲಂಬಿಯೆ ! 

ಕಾಳೀ:- ಸ್ವಾಮೀ 1 ಈಗ ಮೃತರಾಗಿರುವರು ಮಾರ್ವಾಡಿ 

ಗಳೇ ಆದರೆ ಅವರ ಖೂನಿಗೆ ಶಂಭುದತ್ತನು ಸಂಬಂಧಿಸಿರಲಾರನೆಂದು 

ಹೇಳುವುದಕ್ಕೆ ಸಾಕ್ಷ್ಯಗಳೇನು ? 

ದೇವೇ; ಅತನ ಸದ್ಗುಣಗಳಿಂದಲೂ, ಅತನಿಗೆ ಆವವಿಧದಲ್ಲಿಯೂ 

ದೇವರು ಕಡಿಮೆಮಾಡಿಲ್ಲವಾದುದರಿಂದಲೂ, ಆತನು ಇಂತಹ ಕೇಲಸ 

ವನ್ನು ಮಾಡಿಸಲಾರನೆಂದು ಹೇಳಬಲ್ಲೆ. ಆ ಮಾರ್ವಾಡಿಗಳನ್ನು ಕೊಲ್ಲು 

ವುದರಿಂದ ಏನಾದರೂ ಆದಾಯವು ಬರುವ ಹಾಗಿದ್ದರೂ ಅವನು 

ಅಂತಹ ಕೆಲಸವನ್ನು ಮಾಡಿರಬಹುದೆಂದು ಹೇಳುವುದೂ ಕಷ್ಟ 

ಕಾಳೀ;- ಆ ಮಾರ್ವಾಡಿಗಳು ವ್ಯಾಪಾರಕ್ಕಾಗಿ ತಂದ ದ್ರವ್ಯವು  

ಆರಲ್ಲಿದ್ದಿತು? 

ದೇವೇ;- ಅದು ಶಂಭುದತ್ತನವಶದಲ್ಲಿಯೇ ಇದ್ದಿತು ಆದರೆ 

ಅದು ಕಳುವಾಗಿರಲಿಲ್ಲ ! 

ಕಾಳೀ:- ಪೆಟ್ಟಿಗೆಗಳನ್ನೆಲ್ಲಾ ಸರಿಯಾದ ಬೀಗದ ಕೈಗಳಿಂದಲೇ 

ತೆಗೆದಿರುವರು ! ಕಳ್ಳರು ರೂ ಹೊರಗಿನವರೆಯೋ ? 

೩೫------------------------------------------------

ದೇವೇಶನಿಂದ ಪ್ರತ್ಯುತ್ತರವು ಹೊರಡಲಿಲ್ಲ! ಕಾಳೀಚರಣನ 

ತೀಕ್ಷ್ಣ ದೃಷ್ಟಿಯು ದೇವೇಶನ ಸರ್ವಾಂಗಗಳನ್ನೂ ಪರಿಶೋಧಿಸಿತು !! 

ಕಾಳೀ; ಸ್ವಾಮೀ, ಒಂದುವೇಳೆ, ಈಗ ಮೃತನಾಗಿರುವವರು 

ಶಂಭುದತ್ತಾದಿಗಳೇ: ಆಗಿದ್ದರೆ ಅವರ ಮರಣದಿಂದ ಅನುಕೂಲ ಪ್ರತಿ 

ಕೂಲಗಳಾರಿಗುಂಟಾಗಬಹುದು ? 

ದೇವೇ;-. ಅತನ ಮರಣದಿಂದ ಆತನ ಮುಖೇನ ವ್ಯಾಪಾರವನ್ನು 

ನಡೆಯಿಸುತ್ತಿದ್ದವರಿಗೂ, ಆತನನ್ನ ನಂಬಿಕೊಂಡಿದ್ದ ನಮಗೂ, ಸ್ಟುಲ್ಭು 

ತೊಂದರೆಯಾಗುತ್ತದೆ ಸ್ವತ್ತೆಲ್ಲವೂ ಆ ಹುಡುಗಿಯರ ಪಾಲಿಗೆ 

ಹೊಗುತ್ತೆ. ಒಂದುವೇಳೆ, ವಿಜಯಿನಿಯು. ಅನಾಥೆಯಾದುದರಿಂದ 

ಅವಳ ಬಂಧುವಾದ ಭುಜಂಗನನ್ನ್ಹು ರಕ್ಷಕನನ್ನಾಗಿ ಮಾಡಿಕೊಂಡರೆ 

ಶರಚ್ಛಂದ್ರರ ಆಸ್ತಿಯು ಅವನ ಅಧೀನಕ್ಕೆ ಹೋಗುವುದು, ಶಂಭು  

ದತ್ತನ ಆಸ್ತಿಯು ವಿಲಾಸಿನಿಯ ಪಾಲಾಗಿ ತದನಂತರ ಅವಳ ಪತಿಯ 

ಪಾಲಿಗೆ ಹೋಗುವುದು. ಅಂದರೆ, ವಿಲಾಸಿನಿಯು ಪ್ರೇಮಚಂದ್ರನನ್ನು 

ಮದುವೆಯಾದರೆ ಅವಳ ಆಸ್ತಿಯಲ್ಲವೂ ಆವನ ವಶಕೆ ಒಳಗಾಗುವುದು 

ಕಾಳೀ:- ಅವರೂ ಮೃತರಾಗೆದ್ದರೆ? 

ದೇವೇ;-ಅವರೂ ಮೃತರಾಗಿದ್ದರೆ, ಶರಚ್ಛಂದ್ರರ ಆಸ್ತಿಗೆ  

ದೌಹಿತ್ಛ ಸಂತತಿಯವನಾದ ಭುಜಂಗನು ಬಾಧ್ಯನಾಗುವನು, ಶಂಭುದತ್ತನ  

ಆಸ್ತಿಗೆ ಇನ್ನಾರೂ ಬಾಧ್ಯರಿಲ್ಲ, ಸಿಕ್ಕಿದವರಪಾಲಾಗಿ ಸರ್ಕಾರಕ್ಕೆ  

ಸ್ವಲ್ಪ ಸೇರಿಹೋಗಬಹುದು, 

ಕಾಳೀಚರಣನು ಸ್ವಲ್ಪಕಾಲ ಆಲೋಜಿಸಿ. ವಿಜಯಿನಿ, ವಿಲಾಸಿನಿ

ಶಂಭುದತ್ತ ಇವರೆಲ್ಲರೂ ಮೃತರಾಗಿದ್ದರೆ ಭುಜಂಗನಿಗೆ ಸ್ವಲ್ಪಆಸ್ತಿ  

ಸಿಗಬಹುದು. ಶಂಭುದತ್ತ ಗೃಹಕೃತ್ಯಕ್ಕೆ ಅಧಿಕಾರಿಗಳಾದ ತಮಗೆ 

ಸ್ವಲ್ಪ ಸಿಗಬಹುದಲ್ಲವೇ?  ಎಂದು ಕೇಳಿದನು. ದೇವೇಶನು ಚಕಿತ 

ನಾದನು | ಭ್ರಾಂತನಾಗಿ ಕಾಳೀಚರಣನನ್ನೇ ನೋಡುತ್ತಾ ನಿರುತ್ತರ  

ನಾಗಿ, ಕುಳಿತುಕೊಂಡು ಬಿಟ್ಟನು !! ಆತನ ಸ್ಥಿತಿಯನ್ನು ನೋಡಿ 

ಕಸಾಳೀಚರಣನಸು ಸಮಾಧಾನ ವಾಕ್ಯಗಳನ್ನು ಹೇಳಿ ತಾವೇನೂ ಭಯ 

೩೬------------------------------------------------

ಪಡಬೇಕಾದುದಿಲ್ಲ ! ಸುಮ್ಮನೆ. ಹಾಗೆ ಹೇಳಿದೆನು.! ಎಂದು ಹೇಳಿ, 

ಅವರ ಅಪ್ಪಣೆಯನ್ನು ಪಡೆದು ಅಲ್ಲಿಂದ ಹೊರಟನು. 

ಇನ್‌ಸ್ಪೆಕ್ಟರು, "ಪತ್ತೇದಾರರ ನಡತೆಯು ನನಗೆ ಮಹದಾಶ್ಚರ್ಯ 

ವನ್ನುಂಟು ಮಾಡುತ್ತಿರುವುದು. ಇನ್‌ಸ್ಪೆಕ್ಟರ್‌ ಸಾಹೇಬರು ಆಶ್ಚರ್ಯ  

ಪಡುವುದರಲ್ಲಿ ಬಹು ನಿಪುಣರೆಂದು ತೋರುವುದು ! ಮಾಡಬೇಕಾದ 

ಕೆಲಸಗಳು ಪೂರ್ತಿಯಾಗಿದ್ದರೆ ನನ್ನ ಪೂರ್ವ ಪ್ರಶ್ನೆಗೆ ಉತ್ತರವು 

ಬರಬಹುದು " ಎಂದೆಂದನು. 

ಕಾಳೀಚರಣನು ಸ್ವಾಮೀ ! ಇತ್ತ ಒಳಸಂಚು ಹೀಗೆಯೇ ಸರಿ 

ಎಂದು ಹೇಳಲು ಸಾಧ್ಯವಿಲ್ಲವಾದರೂ ಪ್ರಕೃತ ಹೀಗೆಯೇ ಊಹಿಸಬಹುದು.

ಪ್ರಣಯಪಾಶದಿಂದ ಅನೇಕ ಅನರ್ಥಗಳು ನಡೆಯುವುವು. ಪ್ರೇಮ 

ಚಂದ್ರನು ಹೇಗಾದರೂ ವಿಲಾಸಿನಿಯನ್ನು ಹೋಂದಬೇಕೆಂದು ಪ್ರಯತ್ನ ಪಟ್ಟಿರುತ್ತಾನೆ. ಈ ಭುಜಂಗರಾಯನೂಕೂಡಿ ಹೇಗಾದರೂ ಶರಚ್ಛಂ 

ದ್ರರ ಆಸ್ತಿಗೆ ಅಧಿಕಾರಿಯಾಗಬೇಕೆಂದು ಧೃಡಪ್ರತಿಜ್ಞನಾಗಿರುವನು.  

ಆದುದರಿಂದ ಅವರು ಶಂಭುದತ್ತಾದಿಗಳನ್ನು ಪ್ರಾಯಶಃ ಕೊಂದಿಲ್ಲ! ಮರೆಯಲ್ಲಿರಿಸಿ ಈ ವಿಧವಾದ ಸಮಾಚಾರವನ್ನು ಆರೋಪಿಸಿ, ಇದ 

ರಿಂದ ತಮಗೆ ಆವವಿಧವಾದ ತೊಂದರೆಯೂ ಆಗದಂತೆ ತೋರಿದರೆ ಅವ 

ನನ್ನು ಕೊಲ್ಲುವುದೇ ಪ್ರಾಯಶಃ ಅವರ ಉದ್ದೇಶ ! ಒಂದುವೇಳೆ 

ತೊಂದರೆ ಬರುವುದಾದರೆ ಶಂಭುದತ್ತನನ್ನು ಬಿಟ್ಟು, ಅವನು ಮಾರ್ವಾಡಿ 

ಗಳನ್ನು ಕೊಲ್ಲಿಸಿ ಎಲ್ಲಿಯೋ ತಲೆತಪ್ಪಿಸಿಕೊಂಡಿದ್ದಂತೆ  ತೋರ್ಪಡಿಸಿ, 

ತಾವು ಬಹು ನಿಸ್ಪೃಹರಂತೆ ನಟಿಸಬೇಕೆಂಬುದೇ ಅವರ ಉದ್ಧೇಶ !!

ಅದುದರಿಂದ ನೀನು ಇನ್ನೂ ಸ್ವಲ್ಪ ಕಾಲ ಈ ಮರ್ಮವನ್ನು ಆರಿ 

ಯದವರಂತೆಯೇ ಕೆಲಸಮಾಡಬೇಕು. ಭುಜಂಗನ ಮೇಲೆ ಸಾಕಾ 

ದಷ್ಟು ದೃಷ್ಟಿಯನ್ನಿಟ್ಟಿರಬೇಕು ಎಂದು ಹೇಳಿದನು. ಇನ್‌ಸ್ಪೆಕ್ಟರು "ಸರಿ 

ಹಾಗೆಯೇ ಇರಬಹುದು. ನೀವೆನನ್ನು ಮಾಡೆಂದುಹೇಳಿದರೂ ನಾನ 

ದನ್ನು ಮಾಡುವೆನು. ಏಕೆಂದರೆ ನೀವು ಅನುಚಿತವಾದದ್ದನ್ನು ಎಂದಿಗೂ 

ಹೇಳುವುದಿಲ್ಲ. ಇದರ ಗುಟ್ಟನ್ನು ಪತ್ತೇಮಾಡುವ ಭಾರವು ತಮ್ಮ 

೩೭ ---------------------------------------------------

ಮೇಲಿದೆ !! " ಎಂದು ಹೇಳಿದರು, ಕಾಳೀಚರಣನು ಅವರಪ್ಪಣೆಯನ್ನು 

ಪಡೆದು ಎಲ್ಲಿಗೊ ಹೊರಟು ಹೋದನು, 

...........

ಅಷ್ಟಮ ಗುಚ್ಛ

ಆ ಖೂನಿಯ ಸಮಾಚಾರವು ಕರಿಕಲ್‌ ಪಟ್ಟಣದಲ್ಲಿ `ನಾನಾ 

ರೂಪಗಳನ್ನು ತಳೆದಿದ್ದಿತು! ಆರಾರನ್ನು ಎಲ್ಲಿನೋಡಿ 

ದರೂ "ದ್ರವ್ಯಾಶೆಯು' ಇನ್ನೆಂತಹ ಪ್ರಬಲವಾದುದು! 

ಆಂತಹ ಶಂಭುದತ್ತನೂಕೂಡ ತಮ್ಮಾಶ್ರಯವನ್ನೇ ನಂಬಿಕೊಂಡಿದ್ದ 

ಆ ಮಾರ್ವಾಡಿಗಳನ್ನು ಕೊಲ್ಲಿಸಿದನೆಂದರೆ ಹೇಳುವುದುತಾನೆ ಇನ್ನೇನಿದೆ? " 

ಎಂದು ಮಾತನಾಡಿಕೊಳ್ಳುತ್ತಿದ್ದರು !! ಕಾಳೀಚರಣನು ಮುಂದೇನು 

ಮಾಡಬೇಕೆಂದು. ಪ್ರಗಾಢವಾದ ಅಲೋಚನಾಪರಂಪರೆಗಳಲ್ಲಿ ಸ್ವಲ್ಪ 

ಕಾಲ ಮಗ್ನನಾಗಿದ್ದನು. ಇನ್‌ಸ್ಪೆಕ್ಟರ್‌ ತಾಂದೋಣಿರಾಯರಾದರೋ 

ಎಲ್ಲಾಕೆಲಸಗಳನ್ನೂ ಕಾಳೀಚರಣನಿಗೆ ಸಮರ್ಪಿಸಿ ನಿಶ್ಚಿಂತರಾಗಿದ್ದರು. 

ಇದೆಲ್ಲವನ್ನೂ ನೋಡಿ ದಿನೇಶನು ಉದ್ಯಿಗ್ನಚಿತ್ತನಾಗಿ ಆಲೋಚಿಸ 

ಲಾರಂಭಿಸಿದನು:- " ಇದೇನು ವಿಪರೀತ! ಮಾನವರು ರಾಕ್ಷಸರಾಗುತ್ತ 

ಒಂದರಲ್ಲ |! ಪ್ರಪಂಚವು ಈ ವಿಧವಾದ ತಾವ ಅನ್ಯಥಾ ವೃತ್ತಿಯಲ್ಲಿ ಪ್ರವರ್ತಿಸ 

ಬಹುದೆ!!! ನಾನು ಬ್ರತಿ ದಿವಸವೂ ಸಾದರದಿಂದ ಸೂಚಿಸುವ ಸನ್ಮಾರ್ಗ” 

ಗಳಲ್ಲಿ ಪ್ರವರ್ತಿಸುವ ಸುಮತಿಯು ಈ ಮಾಸವರಿಗಿಲ್ಲದೇ ಹೋಯಿತೆ ? 

ಪ್ರತಿಯೊಬ್ಬ ಮಾನವನೂ ತನ್ನ ನಿಯಮಿತ ಕಾರ್ಯದಲ್ಲಿ ತತ್ಪರನಾಗಿ 

ಕರ್ತವ್ಯಾನುಷ್ಠಾನದಿಂದ ಉತ್ತಮ ಗತಿಯನ್ನೇಕೆ ಆರ್ಜಿಸಬಾರದು ? 

ಪ್ರತಿಯೊಬ್ಬನೂ ಅವನವನ ಕೆಲಸವನ್ನು ನಿಃಸ್ಪೃಹತೆಯಿಂದ ಆಚರಿಸ 

ಲೆಂದೂ, ತನಗೇನು ಕಪ್ಪವು ಬಂದೊದಗಿದರೂ ವಿಧಾತನವಿಧಿಯನ್ನ್ಲು 

ಎಂದೆಂದಿಗೂ ಮೀರದಿರಲೆಂದೂ, ತಾನೆಷ್ಟು ಕಪ್ಪಪಡಬೇಕಾಗಿ ಬಂದರೂ 

೩೮----------------------------------------------------

ಸಹಿಸಿಕೊಂಡು ಪರರ ಸಂಕಷ್ಟ ನಿವಾರಣೆಯಲ್ಲಿ ನಿರತನಾಗಿರುವ ಸುಗುಣಿಗೆ 

ಪ್ರಥಮತಃ ಪ್ರಬಲತರವಾದ ಕಷ್ಟಗಳು ಬಂದೊದಗಿದರೂ ಕಾಲಕ್ರಮೇಣ  

ದುರಂತರವಾದ ಆ ಕಪ್ಪ ಪರಂಪರೆಗಳೆಲ್ಲವೂ ನಿರಂತರ ಸುಖದಾಯಕ 

ಗಳಾಗಿ ಪರಿಣಮಿಸುವುವೆಂತಲೂ, ನನ್ನ ನಡತೆಯಿಂದಲೇ ವ್ಯಕ್ತಪಡಿಸುತ್ತಿ 

ರುವೆನಲ್ಲ ! ಇದಕ್ಕಾಗಿಯೇ ಅಲ್ಲವೆ ನನಗೆ ಲೋಕಬಾಧಕನೆಂಬ ಅಭಿ 

ಧಾನವು ನಿಯೋಗಿಸಲ್ಪಟ್ಟಿರುವುದು? ಹೀಗೆ ಪ್ರತ್ಯಕ್ಷ ಪ್ರಮಾಣವಾಗಿ 

ರುವ ಸಕಲ ಲೋಕವ್ಯವಹಾರಗಳನ್ನೂ ತೊರೆಯುವ ಈ ಮಾನವ ಕೀಟ  

ಗಳಿಗೇನು ಮಾಡಲಿ? ಈಗಲೆ ನನ್ನೀ ಪ್ರಜ್ವಲಿಸುವ ಕಿರಣ ಸಮೂಹದಿಂದ 

ಪಾಪಿಗಳೆಲ್ಲರನ್ನೂ ಭಸ್ಮೀಭುತರನ್ನಾಗಿಸಿ ಬಿಡಲೆ? ಎಮದಂದುಕೊಂಡು 

ಅತ್ಯುಕ್ತಾಗ್ರಹಯುಕ್ತನಾದನು. 

ಮತ್ತೆ ಹಾಗೆಯೇ ಸ್ವಲ್ಪ ಕಾಲ ಆಲೋಚಿಸಿ ಈ 

ಅತ್ಯಲ್ಪರ ವಿನಾಶಕ್ಕಾಗಿ ನನ್ನೀ ಪವಿತ್ರಕಿರಣ ರಾಜಿಗಳನ್ನು ವಿನಿಯೋ 

ಸಲೆ? ಇವೆಂತು ತಾನೆ ಅಪವಿತ್ರರನ್ನು ಸ್ಪರ್ಶಿಸಲು ಸಮ್ಮತಿಸುವುವು? 

ಈ ಪಾಪಿಗಳ ಸಲವಾಗಿ ನನ್ನ್ನ ಈ ಪವಿತ್ರ ಕಿರಣರಾಜಿಗಳನ್ನು ಆಪವಿತ್ರ  

ಗೊಳಿಸಲಾರೆ ? ಈ ಪಾಷಂಡರ ಪಾಪಕಾರ್ಯವನ್ನು ಸಾನೆಕರ ನೋಡಲಿ? 

ಪಾಪಕ್ಕೆ ತಕ್ಷ ಫಲವನ್ನು ಅವರನುಭನಿಸಿಯೇ ತೀರಬೇಕು ! ಛೆ !! ನನ  

ಗಿದರ ಗೊಡವೆಯೇ ಬೇಡ!!! ಎಂದಂದುಕೊಳ್ಳುತ್ತ ಅಸಮಾಧಾನದಿಂದ 

ವಿಷಣ್ಣವದನನಾಗಿ ಪಶ್ಚಿಮದಕ್ತಟಾಭಿಮುಖವಾಗಿ ಹೋಗುತ್ತಿದ್ದನು, 

ಅಸಮಾಧಾನದಿಂದ ಕಳೆಗುಂದಿ ಬರುತ್ತಿದ್ದ ಭಾಸ್ಕರನನ್ನು ನೊಡಿ 

ಪಶ್ಚಿಮದಿಗಂಗನೆಯು ಬೆಚ್ಚುಬಿದ್ದು "ಇದೇಕೆ ! ದಿನೇಶನು ಹೀಗಿರುವೇ ? 

ಇವನ ವ್ಯಸನಕ್ಕೆ ಈಕಾರಣವೇನು ? ಬೇಡ ಬೇಡವೆಂದರೂ ಹೇಳದೇ  ನಭ         

ವಾದೀ ಲೋಕಯಾತ್ರೆಯಲ್ಲಿ ತೊಡಗಿ ಎಡಬಿಡದೆ ತೊಳಗಿ ಬಳಲಿತ್ತಿರುವ 

ಈ ದಿನೇಶನ ಪರಿತಾಪವನ್ನು ಕಂಡು ನನ್ನೆದೆಯೊಡೆಯುತ್ತಿರುವುದಲ್ಲಾ! 

ಹಾ! ಜಗಚ್ಚಕ್ಷು, ನೀನೇಕೆ. ಇಂತು ಬಾಡಿನ ಮುಖದಿಂದಿರುವೆ? ಅದಾ 

ರಿಂದ ನಿನಗೀ ಮನೋವೈಕ್ಲವ್ಯ ?" ಎಂದು ಮೊದಲಾಗಿ ಅಂದುಕೊಳ್ಳುತ್ತ 

ರಾಗಾನ್ವಿತಳಾದಳು. ದಿನೇಶನ ಮ್ಲಾನಮುಖವನ್ನು ನೋಡಿದ 

ಹಾಗೆಲ್ಲಾ ಆ ದಿಗಂಗನೆಯ ವ್ಯಸನವು ಹೆಚ್ಚು ಹೆಚ್ಚಿತು, ಕ್ರಮವಾಗಿ 

೩೯----------------------------------------------------

ಕೋಪವು ಕಾಲಿಡಲಾರಂಭಿಸಿತು. ಸುಪತ್ನಿಯ ಸುಹೃದಯವು ಕಾಂತನ 

ಕಷ್ಟಗಳನ್ನು ಕಂಡು ಕಳವಳಿಸದಿದುವುದೆ? " ಲೋಕಹಿತಕ್ಕಾಗಿ ತನ್ನ 

ಸುಖವನ್ನೂ ಕೂಡ ತ್ಯಜಿಸಿ, ಸ್ವಲ್ಪವಾದರೂ ವಿಶ್ರಾಂತಿಯನ್ನಸೇಕ್ಷಿಸದೆ, 

ಎಂತಹ ಕಷ್ಟಗಳು ಬಂದೊದಗಿದರೂ ಲಕ್ಷೀಕರಿಸದೆ ಅವುಗಳನ್ನು 

ಸಹಿಸಿಕೊಂಡು, ಪರರ ಕ್ಷೇಮಾಭ್ಯದಯವೇ ತನ್ನದೆಂದು ನಂಬಿ, ಈ 

ಸವಿಸ್ತಾರವಾದ ಗಗನಪ್ರಾಂಗಣದಲ್ಲಿ ತಿರುಗುತ್ತ ಆಹಿತತಮವನ್ನು ಅಳಿ 

ಸುತ್ತಿರುವ ಈ ಭಾಸ್ಕರನಿಗೆ ಅಸಮಾಧಾನವು ಹೇಗಾಯಿತು ? ಅದನ್ನುಂಟು 

ಮಾಡಿದವರಾರಿರಬಹುದು? ಧಿಕ್ ‌! ಅವರೆಂತಹ ಕೃತಘ್ನರೋ!! ಎಂತಹ  

ಪಾಪಿಗಳೋ!!! ಪಾಷಂಡರೊ" !!ಎಂದಾಲೊಚಿಸಿದಳು, 

ಕೋಪವು ಕೈಮೀರಿತು! ಮುಖವು ಕೆಂಪೇರಿತು !! ದಿನೇಶನು ದೂರ 

ದಿಂದಲೆ ಪಶ್ಚಿಮ ದಿಗಂಗನೆಂದು ಕೋಪಭರಿತವಾದ ವದನವನ್ನು ನೋಡಿ 

ವ್ಯಾಕುಲಿತನಾದನು. ಆಯಾಸದಿಂದಲೂ, ಜಿಗುಪ್ಸೆಯಿಂದಲೂ ಕೆಂಪೇರಿದ್ದ 

ಮುಖವು ಮತ್ತಷ್ಟು ಕೆಂಪೆೇರಿತು! ಪ್ರಿಯಪತ್ನಿಯ ಸಮಾಪಕ್ಕೆ ಹೋಗಿ, 

"ಪ್ರಿಯೆ ! ಇದೇಕಿಷ್ಟು ಕೋಪ ? ಆರೇನುಮಾಡಿದರು ಹೇಳಬಾರದೆ ? 

ಸಾಕುಬಿಡು ! ಅಹ !! ಈ ಕೋಪವು  ಈ ಕೋಮಲವದನದಲಿ 

ಮತ್ತಷ್ಟು ಸೊಬಗನ್ನು.. ಸಂಗ್ರಹಿಸುತ್ತಿರುವುದಲ್ಲ !!! ಎಂದು 

ಹೇಳುತ್ತೆ ಆ ದಿಗಂಗನೆಯ ಮುದ್ದಾದ ಮುಖವನ್ಫು ಮೃದುಮೃದುವಾಗಿ 

ಚುಂಬಿಸಿ " ಸಾಕಪ್ಪಾ! ಈ ಹೆಂಗಸರ ಸಹವಾಸ ಸಾಕುಕ!! ಒಂದು 

ಕಡೇ ಈ ರೂಪ !ಒಂದು ಕಡೆ ಪ್ರತ್ಯಹವೂ ಇವರನ್ನು ಸಮಾಧಾನ 

ಪಡಿಸುವ ಕೆಲಸ !! ಏನುಹೇಳಲೊ  !!! ಇವರನ್ನು ಸಮಾಧಾನಪಡಿ  

ಸುವುರಲ್ಲಿಯೇ ಮುಪ್ಪಾಗುವುದಲ್ಲದೆ ಇವರದೆಶೆಯಿಂದ ಉಳಿಗಾಲ 

ಬೇರೆಇಲ್ಲ" ಎಂದಂದು ಧೀರ್ಘವಾದ ನಿಶ್ವಾಸವನ್ನು ಬಿಟ್ಟು, “ ವಿಧಾತನ 

ವಿಚಿತ್ರ ಸೃಷ್ಟಿಯಲ್ಲಿ ಈ ಸ್ತ್ರೀಯರ ಸೃಷ್ಟಿಯೇ ಬಹು ಅತಿಶಯವಾದುದು. 

ಬ್ರಹ್ಮನ ಬ್ರಹ್ಮಾಸ್ತ್ರಗಳೇ ಈ ಸ್ತ್ರೀಯರೆಂದು ತೋರುವುದು. ಪಾದ 

ರಸವು ಚಾಮೀಕವನ್ನು ಅಕರ್ಷಿಸಿ ಅದರ ರೋಗವನ್ನೇ ಹೇಗೆ ಮಾರ್ಪಾ  

ಗಿಸುಪುದೋ ಹಾಗೆ ಈ ಸ್ತ್ರೀಯರು ಪ್ರರುಷರನ್ನು ಆಕರ್ಷಿಸಿ ಅವರ 

ಸ್ವಾತಂತ್ರ್ಯವನ್ನೇ ನಶಿಸುವರು! ವ್ಲಾಮೋಹವು ಎಷ್ಟು ಪ್ರಬಲವಾಗಿರು 

೪೦-----------------------------------------------------------------------------

ವುದು ! ! ಪ್ರಪಂಚವು ಮದಾಂಧವಾಗಿ ಇಂತಹ ಪ್ರ)ಬಲೆಯರಿಗೂ ಕೂಡ 

ಅಬಲೆಯರೆಂದು ಅಭಿಧಾನವನ್ನು ಅರ್ಪಿಸುವುದಲ್ಲ !! ಏನಾಶರ್ಯ | ; 

ಎಂದು ಮಂದಹಾಸದಿಂದ ಹೇಳಿದನು, 

ಈ ಮಾತುಗಳನ್ನು ಕೇಳಿದ ಪಶ್ಚಿಮದಿಗಂಗನೆಯು ಪತಿಯನ್ನು 

ಬಿರುಗಣ್ಣುಗಳಿಂದ ನೋಡುತ್ತ. ಅರನ್ನು ನೋಡಿದರೂ ಎಲ್ಲದಕ್ಕೂ 

ಸ್ತ್ರೀಯರನ್ನೆ ದೂಷಿಸುತ್ತಾ ಪ್ರತಿಯೊಂದಕ್ಕೂ ಅವರೇ ಕಾರಣರೆಂದು 

ಹೇಳಲು, ಅವರು ಮಾಡಿರುವುದೇನು ? ಮಾಡುವುದು ತಾನೇ ಏನು ? 

ಪತಿಯೇ ತಮ್ಮ ಪ್ರಾಣಸರ್ವಸ್ವವೆಂದು ದೃಢವಾಗಿ ನಂಬಿ ಆತನೇನಂದರೂ 

ಅವರು ಸಹಿಸಿಕೊಂಡಿರುವುದರಿಂದತಾನೆ ನಿಮ್ಮೀ ಖಡ್ಗಪ್ರಹಾರಕ್ಕ್ಯಿಂತಲೂ 

ಕಠಿಣವಾದ ವಾಕ್ಪ್ರಹಾರವು ? ಪುರುಷರು ಮನೋದಾರ್ಥ್ಥ್ಯವಿಲ್ಲದೆ 

ಚಾಂಚಲ್ಯ ಸಾಗರದಲ್ಲಿ ನಿಮಗ್ನರಾಗಿರುವುದರಿಂದ ತಾನೆ ಸ್ತ್ರೀಯರು ಪ್ರಬ 

ಲರು ?” ಎಂದು ಹೇಳಿ ಹಿಂಜರಿಯಲುದ್ಯುಕ್ತಳಾದಳು. ಹಾಸ್ಯೊನ್ಮುಖ 

ನಾಗಿದ್ದ ದಿನೇಶನು ಪ್ರಿಯೆಯನ್ನು ಸವಿನಯವಾಗಿ ತಡೆದು ನಿಲ್ಲಿಸಿ "ಪ್ರಿಯೆ! 

ಇಂತಹ ವಿಪರೀತವಾದ ವಾಗಾಡಾಂಬರದಿಂದಲೇ ಅಲ್ಲವೆ ನೀವು ನಿಮ್ಮ  

ಹಠವನ್ನು ಸಾಧಿಸುವುದು? ನಿಮ್ಮ ವಾಕ್ಸರಣಿಯಲ್ಲಿ ಸ್ಫಲ್ಪವಾದರೂ 

ಕಾರುಣ್ಯವುಂಟೇ? ಛೆ! ಅಂತಹ ವಿವೇಚನಾಶಕ್ತಿಯು ನಿಮಗೆಲ್ಲಿರುವುರು ? 

ನೀವು ಕೇವಲ ಮೂರ್ಖರು ! * ಬಂದುಹೇಳಿದನು, ದಿನೇಶನ ವಚನ 

ವನ್ನು ಒಮ್ಮೆ ನೋಡಿ ದಿಗಂಗನೆಯು “ ಅಹುದು ! ನಾವು ಮೂರ್ಖ  

ರಾದರೆ ನಿಮ್ಮಂತಹ ನಿಷ್ಕಳಂಕರಾದ ಸಾಧುಗಳು ನಮ್ಮ ಸಹವಾಸವನ್ನೇ   

ಕಾಶಿಸಬೇಕು?  ನಮ್ಮಂತಹ ಮೂರ್ಖರದೆಶೆಯಿಂದ ನಿಮ್ಮಂರಹ ಸಾಧು 

ಗಳು ಅವರ್ಣನೀಯವಾದ ಕಷ್ಟಪರಂಪರೆಗಳಿಗೊಳಗಾಗ ಬೇಕಾ 

ವುದಲ್ಲವೆ ? ಇನ್ನು ಮೆಲೆ ನಮ್ಮ ಸಹವಾಸವನ್ನೇ ಬಿಟ್ಟುಬಿಡಿ!" 

ಎಂದೆನ್ನಲು ದಿನೇಶನು "ನಾವೇನು ತಾನೇ ಮಾಡಬಲ್ಲೆವು ? ಭೇಧ್ಯವಲ್ಲದೆ, 

ವಿದ್ಯುಚ್ಛಕ್ತಿಗಿಂತಲೂ ಅತ್ಯಧಿಕವಾದ ಮಹದಾಕರ್ಷಣಶಕ್ತಿಯುಳ್ಳ ಆ 

ಪ್ರೀತಿಪಾಶವನ್ನು ನಾವು ಹೇಗೆತಾನೆ ಉಲ್ಲಂಘಿಸಬಲ್ಲೆವು? ಆ ಪ್ರೀತಿಯ 

ಪ್ರಾ)ಬಲ್ಯದಿಂದ ನೀವು ಕುಣಿದರೂ ನಾವು ನರ್ತಿಸಬೇಕು, ನೀವು ಹೆ'ಗೆ 

ಮಾಡಿದರೂ ನಾವು ಹಾಗೆಯೇ ಮಾಡಬೇಕು. ಈಷದಪಿ ಸಮಾಧಾನವನ್ನು 

೪೧ ----------------------------------------------------------------------------

ಸಂಪಾದಿಸಬೇಕಾದರೂ ಅನ್ಯಥಾ ಮಾರ್ಗವೇ ನಮಗಿಲ್ಲ ! ಎಂದು ಹೇಳಿ  

ದನು. ಪಶ್ಚಿಮದಿಗಂಗನೆಯ ಮೊಗದಲ್ಲಿ ಸ್ಟಲ್ಪನಗುವು ತಲೆದೋರಿತು. 

ಮತ್ತೊಮ್ಮೆ ದಿನೇಶನಮೇಲೆ ತನ್ನ ಚಂಚಲಕಟಾಕ್ಷವನ್ನು ಬೀರಿ, 

" ನಮ್ಮನ್ನು ಪ್ರೀತಿಸಬೇಕೆಂದು ನಾವೇನು ಕೇಳಿಕೊಂಡೆವೆ? ಇಲ್ಲದ 

ವ್ಯಾಮೋಹಕ್ಕೆ ಪರವಶರಾಗಿ ಮಾಡಬಾರದುದನ್ನುು ಮಾಡಿದರೆ ಆಗಬಾರ 

ದುದಾಗದಿರುವುದೇ ? ಆದಾದರೋ ಎಂತಹ ಪ್ರೀತಿ! ಅದೇನು ಪ್ರೀತಿಯೋ 

ಪ್ರೇತವೋ ? ಅದೇನು ಸಾರವತ್ತಾದ ಪ್ರೀತಿಯೆ? ಆ ಪ್ರೀತಿಯು  

ಅಗ್ಗಿಸಾಕ್ಷಿಯಾಗಿ ಕೈಹಿಡಿದ ಸತಿಯನ್ನು ಕೂಡ ತೃಣವಲ್ಲಘುವಾಗೆ 

ಣಿಸುವುದು ! ಆ ಪ್ರೀತಿಯು ಪರಸ್ತ್ರೀಯರಲ್ಲಿ ಏಕೆ, ವಾರಾಂಗನೆಯರಲ್ಲಿ 

ಅನುರಕ್ತವಾಗಿ ಧರ್ಮಪತ್ನಿಯನ್ನೂ ಪರಿತ್ಯಜೆಸುವುದು ! ಇಂತಹ ದುರಾ 

ಚಾರವು ಪ್ರೀತಿಯಲ್ಲವೆ ? ಚಪಲೆಯರ ಚಂಚಲಕಟಾಕ್ಷಕ್ಕೆ  ಮರು 

ಳಾಗಿ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅಗ..... ದುಷ್ಕಾರ್ಯ 

ಗಳನ್ನು ಕೂಡ ಮಾಡಿ, ಕೆಟ್ಟು, ಬೀದಿಗೆ ಬಂದು ಮುಖವನ್ನು ತೋರಿ 

ಸಲೂಕೂಡ ಧೈರ್ಯವಿಲ್ಲದೆ ಮೂಲೆ ಮೂಲೆಗಳಲ್ಲವತುಕೊಳ್ಳುವುದ  

ದೊಂದುತರಹಾ ಪ್ರೀತಿಯೋ ? ಅದೇನು ಪ್ರೀತಿಯೋ ಅಥವಾ ಅತ್ಯಧಿಕ 

ವಾಗಿ ಸಂಗ್ರಹದ ದುರಾಶಾಪಿಶಾಶಿಯೋ:? ಎಂದು ಹೇಳುತ್ತಿ ರಲು, 

ಇವರ ಸರಸಕಲಹವನ್ನ್ನು ಕೇಳಲೋಸುಗವೇ ಎಂಬಂತೆ ಅಲ್ಲಲ್ಲಿ 

ನಕ್ಸತ್ರಗಳು ಥಳಥಳಿಸಲಾರಂಭಿಸಿದುದು.  ದಿನೇಶನು ಕಣ್ಮರೆಯಾದನು.  

ತತ್ಸಮಯದಲ್ಲಿ ಕಾಳೀಚರಣನು ಹೀಗೆ ಆಲೋಚಿಸುತ್ತಿ ದ್ಭನು. 

“ ಪ್ರಪಂಚದ ಪ್ರಾಕೃತಿಕ ಸೌಂದರ್ಯವು ಎಷ್ಪು ರಷ್ಯುವಾಗಿದೆ ; ಪ್ರಾಪಂ 

ಚಿಕ್ ವ್ಯವಹಾರವೂ ಇಷ್ಟೇ ರಮ್ಯವಾಗಿದ್ದಿದ್ದರೆ ಇದೇ ಈ ಪ್ರಪಂಚವು 

ಹೇಗಿರುತ್ತಿತ್ತೋ! ಆದರೆ ಅದು ಹಾಗಾಗುವ ಸಂಭವವಿಲ್ಲ !! ಅದಕ್ಕೆ 

ಬಹು ವ್ಯಕ್ತವಾಗಿರುವ ಹಾರಣಗಳಿವೆ! ಆದರೆ ಪ್ರಕೃತದಲ್ಲಿ ಆ ವಿಷಯವು 

ನನಗೆ ಸಂಬಂಧಿಸಿರುವುದಲ್ಲ ! 

ಈಗ ನಡೆದಿರುವ ವಿದ್ಯಮಾನಗಳಲ್ಲಿ ಸಂಬಂಧಿಸಿರುವವರು ಮಾರ್ವಾ 

ಡಿಗಳೂ, ಶಂಭುದತ್ತ, ದೇವೇಶ, ಪ್ರೇಮಚಂದ್ರ ಮತ್ತು ಭುಜಂಗ,   

ಇವರಲ್ಲದೆ ಮತ್ತಿನ್ನಾರೂ ತೋರುವುದಿಲ್ಲ. ಅವರಪೈಕಿ ಆ ಮಾರ್ವಾಡಿ 

೪೨ -------------------------------------------------------------------------

ಗಳು ಮತು ಶಂಬುದತ್ತ ಇವರನ್ನು ಗಣನೆಗೆ ಪ್ರಕೃತದಲ್ಲಿ ತರದೇ 

ಇರಬಹುದು, : ಇನ್ನುಳಿದವರಲ್ಲಿ ದೇವೇಶ, ಪ್ರೇಮಚಂದ್ರ, ಭುಜಂಗ 

ಇವರು  ಪ್ರತಿಪಕ್ಷದವರಾಗಿದ್ದರೂ ಇರಬಹುದು ಆದರೆ ಅವರನ್ನು 

ಚನ್ನಾಗಿ ಪರೀಕ್ಷಿಸಬೇಕು ದೇವೇಶನು ಕೇವಲ ಸಾತ್ವಿಕ ಬ್ರಾಹ್ಮಣ 

ನೆಂದು ಲೋಕಾನುವಾದವಿದೆ. ಪ್ರೇಮಚಂದ್ರನು ವಿಲಾಸಿನಿಯಲ್ಲಿ ಅನು 

ರಕ್ತನಾಗಿರುವನು,  ಅವನಿಲ್ಲಿ ದುರ್ಗುಣಗಳಾವುವೂ ಇರುವಂತಿಲ್ಲ. 

ಭುಜಂಗನು ಮಾತ್ರ ಕೇವಲ ದುರಾಚಾರಿಯೆಂದೇ ತೋರುವುದು. 

ಆದುದರಿಂದ ಪ್ರಥಮತಃ ಭುಜಂಗನನ್ನು ಪರೀಕ್ಷೆಗೀಡಾಗಿಸಬೇಕು [ 

ಹೀಗೆ ನಿರ್ಧರಿಸಿ ಕಾಳೀಚರಣನು ಅಲ್ಲಿಂದೆದ್ದು ಎಲ್ಲಿಗೋ ಹೋದನು. 

......

ನವಮ ಗುಚ್ಛ 

ಪಾಠಕ ಮಹಾಶಯರು ಭುಜಂಗನ ವಿಷಯದಲ್ಲಿ 

ಹೆಚ್ಚಿಗೆ ಸಂಗತಿಗಳನ್ನು ತೀಳಿಯಲಪೇಕ್ಷಿಸುವರೇನೋ ! 

ಆದರೆ ಪ್ರಕೃತದಲ್ಲಿ ನಮ್ಮ ಲೇಖಣಿಯು ಎಲ್ಲಾ 

ಸಂಗತಿಗಳನ್ನೂ ವಿವರಿಸಲಾರದು ! ಕೆಲವು ಸಂಗತಿಗಳನ್ನು ಮಾತ್ರ ಈಗ 

ಬರೆದು ಉಳದುವನ್ನುು ಸಂದರ್ಭವು ದೊರೆತಾಗ ಯಥೋಚಿತವಾಗಿ 

ವರ್ಣಿಸುವುದು. 

ಭುಜಂಗನು ವಿಜಯಿಸಿಯ ಸೋದರತ್ತೆಯ ಮಗ, ದುರದೃಷ್ಟವಶಾಶ್‌ 

ಅನಾಥ! ಪ್ರಿತ್ರಾರ್ಜಿತವಾಗೊದ್ದ ಅಲ್ಪಸ್ವಲ್ಪ ಅಸ್ಥಿಯನ್ನು ದುಸ್ಸಹವಾಸ 

ದಿಂದುಂಟಾದ ದುರಾಶೆಯಿಂದ ತೃಣವಲ್ಲುಘುವಾಗೆಣಿಸಿ ಮನಸ್ಸಿಗೆ ತೋರಿದ 

ಹಾಗೆ ವೆಚ್ಚಮಾಡಿದನು, ತದನಂತರ ವಿಜಯಿನಿಯ ಮೂಲಕ ಶರ 

ಚ್ಛಂದ್ರರ ಆಸ್ತಿಗೆ ಹಕ್ಕುದಾರನಾಗಬೇಕೆಂಬುದೇ ಅವನ ಮುಖ್ಯ 

ಆಕಾಂಕ್ಷೆಯಾಯಿತು, 

೪೩------------------------------------------------------------------ 

೪೩ 

'ಭುಜಂಗನು 'ಆ ಪಟ್ಟಣದ ಆವುದೋ ಒಂದು `ವ್ಯಕ್ತಪದೇಶ 

ದಲ್ಲಿದ್ದ ಒಂದು ಮನೆಯಲ್ಲಿ ' ವಾಸಿಸುತ್ತಿದ್ದನು. ಅವನು 

ಇನ್ನೇನು ತಾನೆ ಮಾಡಬಲ್ಲ ? ಪಾಪ. ! ಜೀವನವನ್ನು ಜರುಗಿಸುವುದೇ 

ಕೇವಲ ಕಷ್ಟಸಾಧ್ಯವಾಗಿದ್ದಿತು, ಅವನಂದಿಗೆ ಅದಾವಳೂ ಒಬ್ಬ 

ವೃದ್ಧೆಯು ವಾಸಿಸುತ್ತಿದ್ದಳು. 

ಸಾಯಾಹ್ನದಲ್ಲಿ ಏಳುಘಂಟೆಯ ಸಮಯವಾಯಿತು, ಒಂದು 

ಹಣತೆಯ ದೀಪವು ತನ್ನ ಅಲ್ಪಪ್ರಭೆಯಿಂದ ಆ ಕುಟೀರವನ್ನು ಬೆಳ 

ಗುತ್ತಿದ್ದಿತು.  ಅದಾವುದೋ ಒಂದು ವ್ಯಕ್ತಿಯು ಆ ಕುಟೀರವನ್ನು ಅತ್ಯಾ 

ತುರದಿಂದ ಪ್ರವೇಶಿಸಿ ಆ ವೃದ್ಧೆಯನ್ನು ನೋಡಿ ! ಅಮ್ಮಾ ! ನಿಮ್ಮ 

ಭುಜಂಗನಲ್ಲಿ ? ಇನ್ನೂ ಬರಲಿಲ್ಲವೇ ? ಎಲ್ಲಿರುವನೋ ! ಅಯ್ಯೋ ! 

ನಾನೇನುಮಾಡಲಿ ! ಉಳಿಗಾಲವಿಲ್ಲ ! ಭುಜಂಗನೀಗೆನಗೆಲ್ಲಿ ಸಿಕ್ಕುವನೋ ! 

ಎಂದು ಮೊದಲಾಗಿ ವ್ಯಾಕುಲತಯನ್ನು ವ್ಯಕ್ತಪಡಿಸುತ್ತ ಕಂಪಿತಸ್ಸರ 

ದಿಂದ ಹೇಳಿದನು, ವೃದ್ದೆಯು ಬಹು ಭೀತಳಾಗಿ ! ಅಯ್ಯೋ! ಅದೇನು 

ಸಂಗತಿ ? ಏನಾಯಿತೋ ! ನನ್ನೊಂದಿಗೆ ಹೇಳಿದರೆ ಅವನು ಬಂದ ಕೂಡಲೆ 

ಹೇಳುವೆನು, ಏನಿದ್ದರೂ ಮರೆಮಾಚದೆ ಹೇಳು ! ! ಎಂದು ಹೇಳಿ 

ದಳು.. ಅವ್ಯಕ್ತಿಯು ವ್ಯಾಕುಲಭಾವವನ್ನು ತೋರ್ಪಡಿಸುತ್ತ ! ಅಮ್ಮಾ 

ನಾನೇನು ಹೇಳಲಿ, ಇನ್ನೊಂದರಘಳಿಗೆಯಲ್ಲಿ ಏನಾಗುವುದೋ ಏನೋ ! 

ದೊಡ್ಡ ಆಸತ್ತು ! ಮಾನಪ್ರಾಣಗಳು ಉಳಿಯುವರೇ ಕೇವಲ ಕಷ್ಟ !! 

ಎಂದು ಹೇಳುತ್ತಾ ಸ್ವಲ್ಪ ಮುಂದುವರಿದು ಆ ವೃದ್ದೆ ಯ ಕಿವಿಯಲ್ಲಿ 

ಏನನ್ನೋ ಪಿಸುಗುಟ್ಟಿದನು. ವೃದ್ಧೆಯು ಭಯಾಕುಲಳಾದಳು ! ಹತಾಶ 

ಳಾದವಳಂತೆ ಕೈಯಾಡಡಿಸಿ ಅವನ. ವದನೆಯಾಗಿ ತದೇಕದೃಷ್ಟಿಯಿಂದ 

ನೆಲವನ್ನು ವೀಕ್ಷಿಸುತ್ತ, : ಅಯ್ಯೋ ಮುಂದೇನು ಗತಿಯಪ್ಪಾ ! ! ಎಂದು' 

ಹೇಳಿ ಅತ್ಯಧಿಕವಾದ ದುಃಖವನ್ನು ಸ್ತಂಭಿಸಲಾರದೆ ಸ್ವಾದದೆ ಮೆಲ್ಲ ಮೆಲ್ಲನೆ 

ಆಳುತ್ತ ನಿರಾಶಳಾದವಳ೦ತೆ ಕುಳಿತುಬಿಟ್ಟಳು, ಆ ವ್ಯಕ್ತಿಯು ಸಮನ್ತತಃ 

ನೋಡಿ! ಅಮ್ಮಾ ! ಈ ರೋದನದಿಂದೇನು ಪ್ರಯೋಜನವಿಲ್ಲ. ನಡೆದುದು 

ನಡೆದುಹೋಯಿತು. ಪ್ರಕೃತದಲ್ಲಿ ಏನನ್ನೂ ಅರಿಯದವರಂತೆ ನಾವು 

ನಟಿಸಬೇಕು. ಮೊದಲು ಅವನನ್ನಲ್ಲಿದ್ದರೂ ಹುಡುಕಿ ಅವನು ತಲೆ 

೪೪-----------------------------------------------------------

ತಸಿಕೊಳ್ಳುವಂತೆ ಮಾಡಬೇಕು. ಇಲ್ಲದೇಹೋದರೆ ಎಂದಿಗೂ ಉಳಿ 

ಗಾಲವಿಲ್ಲ" ಈಗ ನೀವು ಸಮಾಧಾನಪಡಿಸಿಕೊಳ್ಳಿ. ಒಂದುವೇಳೆ ಅವಳ 

ಮನೆಯಲ್ಲೇನಾದರೂ ಇದ್ದರೂ ಇರಬಹುದು. ಅಲ್ಲಿಗೆ ಈಗಲೇ 

ಹೋಗಿ ನೋಡಿಕೊಂಡು ಬರುತ್ತೇನೆ. ! ಎಂದು ಹೇಳಿ ಹೊರಟು 

ಹೋದನು. 

ಆ ವೃದ್ದೆಯು “ ಅವಳ ” ಎಂಬ ಶಬ್ದವನ್ನು ಕೇಳಿದ ಕೂಡಲೆ 

ಸಹಸಾ ತಲೆಯನ್ನೆತ್ತಿ " ಅಯ್ಯೋ ! ಆ ಹಾಳಾದ ಸುಟ್ಟಮೋರೆಯ 

ಚಂಡಾಲಮುಂಡೆಯಿಂದಲ್ಲವೆ ಈ ದುರ್ಗತಿಯು ಬಂದುದು ! ! ಅವನಾಸ್ತಿ. 

ಯನ್ನೆಲ್ಲಾ ದೋಚಿಕೊಂಡಳು ! ಮೂರುಕಾಸೂ ಇಲ್ಲಿಗೆ ಹೋಯಿತು ! 

ಹೊಟ್ಟೆಗಿಲ್ಲದೆ ಸಾಯುತ್ತಿದ್ದೆವು. ! ! ಆ ಮಹಾರಾಯನು ನಮ್ಮ ತೊಂದೆರೆ 

ಗಳನ್ನು ನೋಡಲಾರದೆ: ಒಂದಪೂರ್ವವಾದ ವಿಶ್ವಾಸದಿಂದ ನನಗೆ 

ಸಹಾಯಮಾಡಿದನು, ಆ ನೀಚರಾಕ್ಷಸಿಯು ಅದಕ್ಕೂ ಕಾಯ್ದು 

ಕೊಂಡಿದ್ದಳು. ಎಂದು ಅದಾರನ್ನೋ.ಬಯ್ಯುತ್ತ ಕುಟೀರದ ಬಾಗಿ 

ಲನ್ನು ಮುಚ್ಚಿಕೊಂಡಳು. 

ಸ್ವಲ್ಪಕಾಲದಲ್ಲಿಯೇ ಭುಜಂಗನು ಮನೆಗೆ ಬಂದನು. ವೃದ್ದೆಯು 

ಭೀತಳಾಗಿ ಕುಳಿತಿರುವದನ್ನು ನೋಡಿ ಚಕಿತನಾಗಿ ಕಾರ್ಯವನ್ನು ವಿಚಾ 

ರಿಸಿ ಸಂಗತಿಯನ್ನರಿಡನು. ಹಾಗೆಯೇ ಆಲೋಚಿಸಿ ನೋಡಿದನು. 

ತಲೆದೂಗಿ "ಇರಲಿರಲಿ ! ” ಎಂದಂದುಕೊಂಡು, " ಈಗಲೆ ಬಂದೆ ! ”"ಎಂದು 

ಮುದುಕಿಗೆ ಹೇಳಿ ಹೊರಟುಹೋದನು. 

ಭುಂಜಂಗನು ತಕ್ಷಣವೇ ತನ್ನ ಪ್ರಿಯೆಯ ಸುಂದರ ಮಂದಿರ 

ವನ್ನು ಸೇರಿದನು. ಅಲ್ಲಾವ ವಿಶೇಷ ವಿಷಯವೂ ಗೊತ್ತಾಗಲಿಲ್ಲ. ಆಗ 

ತನ್ನಲ್ಲಿ ತಾನು ಹೀಗೆ ಹೇಳಿಕೊಂಡನು:- 

ಎಲೆಲ ! ಕಾಳಿಚರಣ ! ! ಇದೆಲ್ಲವೂ ನಿನ್ನ ಚೇಷ್ಟೆಯಲ್ಲದೆ 

ಮತ್ತಿನ್ನೇನೂ ಅಲ್ಲ ! ಆಗಲಾಗಲಿ 1 ? ತಕ್ಕ ಪ್ರತಿಫಲವು ಲಭಿಸದಿರ 

ಲಾರದು. ಈ ದಿವಸ ನೀನಿಲ್ಲಿಗೆ ಬಾ ! ಪರಿಣಾಮವೇನಾಗುವುದೋ 

ನೋಡುವೆ ! ! ಇದೇ ನಿನ್ನ ಅತ್ಯುದ್ಯಮದ ಅಂತ್ಯಕಾಲ ! ! ! 

೪೫-----------------------------------------------------------

ತನ್ನ ನಾಯಕಿಯಲ್ಲಿ ಕೆಲವು ಸಂಗತಿಗಳನ್ನು ತಿಳುಹಿಸಿ, ಕಾರ್ಯವು 

ಕೈಗೂಡುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲದೆ ಅತ್ಯಾನಂದದಿಂದ ಹೊರಟು 

ಹೋದನು. ಉತ್ಸಾಹಪರವಶನಾಗಿದ್ದ , ಭುಜಂಗನಿಗೆ ಮತ್ತಿನ್ನೇನೂ 

ಗೊತ್ತಾಗಲಿಲ್ಲ ! ಸಹಜವೆ ! : ಹಿಡಿ”ದ ಕೆಲಸದಲ್ಲಿ ಕೃತಕಾರ್ಯರಾಗುವ 

ಸಂಭವವಿದ್ದರೆ ಪರಿಣಾಮದ ಫಲವೊಂದಿಲ್ಲದೆ ಮತ್ತಿನ್ನೇನು ತಾನೆ ಹೃದ್ಗೋ 

ಚರವಾಗಲಾಪುದು. 

ಭುಜಂಗನು ಭೋಜನೋತ್ತರಕ್ಷಣವೇ ಅತ್ಯಲ್ಪ ವಿಶ್ರಾಂತಿಯನ್ನು 

ಕೂಡ ಅಪೇಕ್ಷಿಸದೆ ಆ ಜಿತ್ರತರಕಟೀರದಿಂದ ಹೊರಹೊರಟನು. ತನ 

ಗೆದುರಾಗಿ ಆರೋ ಬರುತ್ತಿದ್ದಂತೆ ಭಾಸವಾಗಲು ಸ್ವಲ್ಪ ಭಯಚಕಿತ 

ನಾದನು ; ಆದರೂ ಹಿಂದೆಗೆಯದೆ ನಾಲ್ಕಾರು ಹೆಜ್ಜೆ ಮುಂದಿಡುವಷ್ಟರಲ್ಲಿಯೇ 

ಇನ್‌ಸ್ಪೆಕ್ಟರು “ ಆದಾರು ? ಭುಜಂಗರಾಯರೇನು ” ಎಂದು ಪ್ರಶ್ನಿಸಲು,

 “ ಸ್ವಾಮಿ ಏನಪ್ಪಣೆ ? ” ಎಂದು ಭುಜಂಗನು ಹೇಳುತ್ತ ಇನ್‌ಸ್ಪೆಕ್ಟರ 

ಸಮೀಪವನ್ನೈದಿದನು. ಇನ್‌ಸ್ಪೆಕ್ಟರು ಅವನೊಂದಿಗೆ ಮಾತನಾಡುತ್ತ 

ಎಲ್ಲಿಗೋ? ಕರೆದುಕೊಂಡು ಹೋದರು. ಅಯ್ಯೋ ! ಪಾಪ ! : ಭುಜಂಗ 

ನಿಗೆ ಆಶಾಭಂಗಕ್ಕೆ ಆರಂಭವೋ ಏನೋ ! ಏನು ಮಾಡುವುದು ? ಅನಿ 

ವಾರ್ಯವಾದ ಸಂಭವ 

ಅವರೀರ್ವರೂ ಮಾತನಾಡ.ಜೋಗುತ್ತಿರಲು, ಬಹು ಭೀತ 

ನಾಗಿ ಓಡಿದೋಡಿ ಬರುತ್ತಿದ್ದ ಪೋಲೀಸ್‌ ಕಾನ್‌ಸ್ಟೇಬಲ್ಲನೊಬ್ಬನು 

ಖೈದಿಯು ತಪ್ಪಿಸಿಕೊಂಡು ಓಡಿಹೋಗಿಬಿಟ್ಟನು ಇನ್ನೇನು ಗತಿ ? " 

ಎಂದು ಹೇಳಿದನು. ಇನ್‌ಸ್ಪೆಕ್ಟರು ಸಮೀಪದಲ್ಲಿದ್ದ ಭುಜಂಗನನ್ನು ನೋಡಿ, 

ಭುಜಂಗರಾಯರೆ ! ಇದೇನೋ  ವಿಷದಿ೦ತ ಒ೦ದೊ೦.ಗಿತಲ್ಲ !! ಬನ್ನಿ ! 

ಬೇಗಬನ್ನಿ !!! ಎಂದಂದು ಬೇಗ ಬೇಗ ಠಾಣೆಯ ಕಡೆ ಹೊರಟರು. 

ಭುಜಂಗನು ರ್ಇಸ್ಪೆಕ್ಟರ ಮಾತನ್ನು ಮೀರಲಾರ !; ಹೋಗೋಣವೆಂದರೆ 

ತಾನು ಏರ್ಪಡಿಸಿದ್ದ ಸಂಚಿನ ಪರಿಣಾಮವನ್ನು ಪರೀಕ್ಷಿಸಬೇಕೆಂಬ 

ಕುತೂಹಲ !! ಏನಾದರೇನು ? ಕೇವಲ ಚಂಚಲವಾದ ಜಗುಪ್ಸಾನ್ವಿತ 

ವಾದ ಮನಸ್ಸಿನಿಂದ ಇನ್‌ಸ್ಪೆಕ್ಟರನ್ನು ಹಿಂಬಾಲಿಸಿದನು.

೪6------------------------------------- 

ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ “ ಕಳ್ಳ ! ಕಳ್ಳ!! ತಪ್ಪಿಸಿ 

ಕೊಂಡು ಓಡಿಹೋಗುತ್ತಾನೆ ! !? " ಎಂಬ ಕೂಗನ್ನು ಕೇಳಿ ಇನ್‌ಸ್ಪೆ 

ಕ್ಟರು  ಆರು ಆಶ್ಚರ್ಯಚಕಿತರಾಗಿ ಸುತ್ತಲೂ ನೋಡುತ್ತಿರುವಷ್ಟರಲ್ಲಿಯೇ 

ಅವರೆದುರಾಗಿಯೇ ಬಹು ವೇಗವಾಗಿ ಬೈಸಿಕಲ್ಲಿನ ಮೇಲೆ ಬರುತ್ತಿದ್ದವ 

ನೊಬ್ಬನನ್ನು ಕಂಡರು. ಅವನನ್ನು ತಡೆದು ನಿಲ್ಲಿಸಬೇಕೆಂದು ಇನ್‌ಸ್ಪೆಕ್ಟರು 

ಒಂದೆರಡು ಹೆಜ್ಜೆ ಮುಂದಿಟ್ಟರು. " ಢಂ ” ಎಂದು ಶಬ್ದವಾಯಿತು ! ಇನ್‌ಸ್ಪೆ 

ಕ್ಟರು ಕೆಳಗೆ ಬಿದ್ದೇ ಬಿಟ್ಟರು ! ! ಮಿಂಚಿನ ವೇಗಕ್ಕೆ ಇಮ್ಮಿಗಿಲೋ 

ಎಂಬಂತೆ ಬೈಸಿಕಲ್ ಮುಂದೆ ಹೋಗಿಬಿಟ್ಟಿತು ! ! ! 

ಈ ಗಲಭೆಯಲ್ಲಿ ಬೈಸಿಕಲ್ಲು ಆವಕಡೆ ಹೋಯಿತೆಂಬುದನ್ನು ಸಹ 

ಭುಜಂಗನು ಅರಿಯಲಿಲ್ಲ. ಸ್ವಲ್ಪ ಕಾಲದಲ್ಲಿಯೇ ಆ ಬೈಸಿಕಲ್ಲಿನ 

ಮೇಲೆ ಹೋದವನು ಒಂದು ನಿರ್ಜನಪ್ರದೇಶವನ್ನು ಸೇರಿ ಬೈಸಿಕಲ್ಲನ್ನು 

ಸಮೀಪದಲ್ಲಿದ್ದ ಒಂದು ಕೂಪದಲ್ಲಿ ಬಿಸುಟು ಒಬ್ಬ “ ದೊಡ್ಡ ಮನುಷ್ಯ 

ನಂತೆ ಉತ್ತಮವಾದ ಉಡುಪುಗಳನ್ನು ಧರಿಸಿ ಪುನಃ ಪಟ್ಟಣವನ್ನು 

ಪ್ರವೇಶಿಸಿದನು. 

ಆ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಜನರು ಮಲಗಿಯೂ, 

ಮಲಗುತ್ತಲೂ ಇದ್ದರು. ಆ ಮನುಷ್ಯನು ಎಲ್ಲೆಲ್ಲಿ ಬಾಗಿಲುಗಳು 

ಮುಚ್ಚಲ್ಪಟ್ಟಿರುವುದನ್ನು ನೋಡಿ ನಿರಾಶನಾಗಿ ತನಗಿನ್ನೆಲ್ಲಿ ಆಶ್ರಯವು 

ಸಿಗಬಹುದೆಂದು ಆಲೋಚಿಸುತ್ತ ಆವೇಳೆಯಲ್ಲಿ ತಾನಾರೀತಿ ತಿರುಗುತ್ತಿರು 

ವುದರಿಂದ ಮತ್ತೆಲ್ಲಿ ಪೊಲೀಸಿನವರಿಗೆ ಸಿಗುವೆನೋ ಎಂಬ ಭೀತಿಯಿಂದಲೋ 

ಏನೋ ಮೆಲ್ಲನೆ ಸಂದುಗೊಂದುಗಳಲ್ಲಿಯೇ ಮುಂದುವರಿಯುತ್ತಿರಲು 

ಒಂದು ಮನೆಯ ಬಾಗಿಲು ಸಂಪೂರ್ಣವಾಗಿ ತೆರೆಯಲ್ಪಟ್ಟು, ಒಮ್ಮೆ ತರು 

ಣಿಯು ಆರ ಆಗಮನವನ್ನೂ ನಿರೀಕ್ಷಿಸುತ್ತ, ಬಾಗಿಲಿನ ಸಮೀಪದಲ್ಲಿಯೇ 

ನಿಂತಿದ್ದುದನ್ನು ನೋಡಿ, “ ಇದಾರಗೃಹವಿರಬಹುದು ? ರೀತಿಯನ್ನು 

ನೋಡಿದರೆ ವೇಶ್ಯಾಗೃಹವೆಂದು ತೋರುವುದು ! ವಾಸ್ತವಿಕವಾಗಿಯ ಹಾಗೆ 

ಇದ್ದರೆನಾವಿಂದಿಗೆ ಬದುಕಿದೆ !” ಎಂದಂದುಕೊಂಡು ಸಂತೋಷದಿಂದ ಮುಂದೆ 

ಮುಂದೆ ಹೋಗಿ, " ಇದಾರಮನೆ "ಎಂದು ಪ್ರಶ್ನಿಸಿದನು. ಆ ತರು 

ಣಿಯು ಮುಂದೆ ಬಂದು ಮ೦ದಹಾಸದಿಂದ, “ ಇದು ತಮ್ಮಂತಹ ಉದಾರಿ

೪೭----------------------------------------------------------ನ

ಗಳ ಪಾದಸೇವೆಯಿಂದ ಜೀವಿಸುವ ಬಡ,-” ಎಂದಂದು ತಲೆವಾಗಿ 

ಚಂಚಲಕಟಾಕ್ಷದಿಂದ ನೋಡುತ್ತ ಎಳನಗುವಿನ ಸುಳಿವಿಂದ ಸರಸ ಚಮ 

ತ್ಕಾರವಾಗಿ, “ ದಯಮಾಡಿಸಬೇಕು ” ಎಂದು ಹಸ್ತಲಾಘವವನ್ನಿತ್ತು 

ಒಳಗೆ ಕರೆದುಕೊಂಡು ಹೋದಳು. 

ಪಾಠಕರಿಗೆ ಇವಳಾರೆಂದು ಗೊತ್ತಿರಬಹುದೆ ? ಹಾಗಿಲ್ಲದಿದ್ದರೆ ಇವಳೇ 

ನಮ್ಮ ಭುಜಂಗನ ಮನೋಹರಳು ! ಇವಳು ಅವನ ಅಪೇಕದ್ಷೆ 

ಯಂತೆ ಆ ದಿನ ನಡೆಯುಬಹುದಾಗಿದ್ದ ವಿಚಿತ್ರ ವ್ಯಾಪಾರಕ್ಕಾಗಿ ಕಾಳೀ 

ಚರಣನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದುದರಿಂದಲೇ ಈತನಿಗೆ ಅವಳ 

ಸಹವಾಸವು ಘಟಿಸನುಕೂಲಿಸಿತೇ ವಿನಹ ಇಲ್ಲದಿದ್ದರೆ ಏನಾಗುತ್ತಿತೋ ! 

ಅವನು ಒಳಗೆ ಬಂದ ಕೂಡಲೆ ಮತ್ಯಾವ ಮಾತನ್ನೂ ಆಡದೆ ಜೇಬಿ 

ನಿಂದ ಎರಡುನೂರು ರೂಪಾಯಿನ ನೋಟುಗಳನ್ನು ತೆಗೆದು, ಆ ವಾರಾಂ 

ಗನೆಯ ಕಯ್ಯಲ್ಲಿಟ್ಟು ಬಹು ನಮ್ರತೆಯಿಂದ ಅವಳೆರಡು ಹಸ್ತಗಳನ್ನೂ 

ಹಿಡಿದುಕೊಂಡು “ ನಾರಿ, ನಾನು ಹೇಳುವ ಪ್ರಶ್ನೆಗೆ ಸರಿಯಾದ ಉತ್ತರ 

ವನ್ನು ಹೇಳಿ ನನ್ನ ಮನಸ್ಸಿನ ಭೀತಿ ಯನ್ನು ಸ್ವಲ್ಪ ಸಮಾಧಾನಗೊಳಿಸು. 

ನಾನು ಮತ್ತಿನ್ನಾವ ಸುಖಕ್ಕಾಗಿ ನಿನ್ನಾಶಯವನ್ನರಸಿ ಬರಲಿಲ್ಲ. 

ಈಗ ನನ್ನ ಪ್ರಾಣವು ಅತ್ಯಂತ ಘೋರಘಟನಾವಳಿಯಲ್ಲಿ ಸಿಲುಕಿದೆ ! 

ನನ್ನನ್ನುದ್ಧರಿಸು !! ಆಜನ್ಮ ಪಲ್ಯಂತರವೂ ನಿನ್ನನ್ನು ನನ್ನ ಮನೋದೈವ 

ವಾಗಿ ಪೂಜಿಸುವೆನಲ್ಲದೆ ನಾಡಾಡಿ ಯ ವೇಶೈಯೆಂದು ಭಾವಿಸುವುದಿಲ್ಲ! 

ಎಂದು ಕಾತರತೆಯಿಂದ ಕೇಳಿ ಕೊಳತಿರಲು ಅವಳು ಆತನ ದೀನವೃತಿ' 

ಯನ್ನೂ ಕೈಯಲ್ಲಿರುವ ನೋಟುಗಳನ್ನ ನೋಡಿ, “ ಏನು ? ನನ್ನಿಂದೇ 

ನಾಗಬೇಕು ? ನನ್ನ ಕೈಯಲ್ಲಾಗುವ ಮಟ್ಟಿಗೂ ಸಹಾಯಮಾಡುವನು.” 

ಎಂದು ಹೇಳಿದಳು. ಅವನು ಭೀತಿಯಿಂದ ನಡುಗುತ್ತ “ ನನ್ನನ್ನು 

ಮೊದಲು ಆವುದಾದರೆ೦ದು ಗುಪ್ತ ಸ್ಥಳದಲ್ಲಿರಿಸು ! ” ಎಂದಂದು ಅಂಗ 

ಲಾಚಿಕೊಳ್ಳುತ್ತಿರಲು, ಆವಾರಾಂಗನೆಯು ಅವನಿಗೆ ಧೈರ್ಯವನ್ನು ಹೇಳುತ್ತ 

ಬೇರೊಂದು ಜೆಕ್ಕ ಕೊಠಡಿಗೆ ಕರೆದುಕೊಂಡು ಹೋದಳು. 

ಅವನು ಸ್ವಲ್ಪ ಧೈರ್ಯವನ್ನು ತಳೆದು ತರುಣಿ ! ಇಲ್ಲಿಗಾರಾ 

ದರೂ ಪೋಲೀಸಿನವರು ಬರಬಹುದೆ ? ಆ ಪಿಶಾಚಸ್ವರೂಪನಾದ ಕಾಳೀ 

೪೮--------------------------------------

ಚರಣನ ದೃಷ್ಟಿಗೆ ಬೀಳದಂತೆ ನನ್ನನ್ನು ಕಾಪಾಡಿ ಕಳುಹಿಸಲು ನಿನ್ನಿಂದ 

ಸಾಧ್ಯವೆ ? ಎಂದು ಕೇಳಲು ಅವಳು ಅದೇಕೆ ? - ಪೋಲಿಸಿನವರಿಗೂ 

ಕಾಳೀಚರನಿಗೂ ತಾವಿಷ್ಟು ಭಯಬೀಳುವುದು ? 

ವ್ಯಕ್ತಿ... ಅಯ್ಯೋ ! ನಾವೇನು ಹೇಳಲಿ ?  ಆ ಕಾಳಿಚರಣನು 

ನನ್ನನ್ನು ಹಿಡಿದು ಲಾಕಪ್ಪಿನಲ್ಲಿ ಹಾಕಿ ಬಿಟ್ಟು ! ಅಯ್ಯೋ ಆ ಹಿಂಸೆ 

ಯನ್ನು ನೆನೆಸಿಕೊಂಡರೆ..ಆ ಕಾಳೀಚರಣನು ನನ್ನ ಕೈಗೆ ಸಿಕ್ಕಿದರೆ, ಹಲಸಿನ 

ಕಾಯನ್ನು ಕೊಚ್ಚುವಂತೆ ಕೊಚ್ಚಿಬಿಡಬೇಕೆಂದಾಗುತ್ತೆ ಎಂದನ್ನು 

ವಷ್ಟರಲ್ಲಿಯೇ ಅವಳು, ನಿಮ್ಮನ್ನವನ್ನು ಹಿಡಿದು ಲಾಕಪ್ಪು ಮಾಡಲು 

ಕಾರಣವೇನು ? 

ವ್ಯಕ್ತಿ:- ಹೇಳಿಬಿಡಲೋ ? ಇಗೋ ನಿಜವನ್ನು ಹೇಳಿಬಿಡು 

ತ್ತೇನೆ ! ನಾನು ನಿನ್ನೊಂದಿಗೆ ಸುಳ್ಳಾಡಲಾರೆ ! ನನ್ನನ್ನು ಕಾಪಾಡುವ 

ಭಾರ ನಿನ್ನದಾಗಿದೆ. ನೀನೇನು ಬೇಕಾದರೂ ಮಾಡು ! ನಾನು ವಿಲಾಸಿ 

ನಿಯ ಅಪಹರಣಕಾರಿಗಳ ಗುಂಪಿನವನು ! ನನ್ನ ಯಜಮಾನನು 

ಇನ್ನೊಬ್ಬನಿಗೆ ಅಯು ನೂರು ರೂಪಾಯಿಗಳನ್ನು ವೆಚ್ಚಕ್ಕೆ ಕೊಟ್ಟು 

ಇಲ್ಲಿನ ಸಂಗತಿಗಳನ್ನೂ ಪೋಲೀಸಿನವರ ಸನ್ನಾಹವನ್ನೂ ತಿಳಿದುಕೊಂಡು 

ಬರುವಂತೆ ನನ್ನನ್ನು ಕಳುಹಿಸಿದನು. ಈ ಕಾಳೀಚರಣನು ಹೇಗೋ 

ನನ್ನನ್ನು ಕಂಡುಹಿಡಿದು ಲಾಕಪ್ಪುಮಾಡಿದನು, ಸಾಹಸದಿಂದ ತಪ್ಪಿಸಿ 

ಕಂಡು ಬರುತ್ತಿರಲು ದಾರಿಯಲ್ಲಿ ಇನ್‌ಸ್ಪೆಕ್ಟರೂ ಭುಜಂಗನೂ ಸಹ 

ನನ್ನನ್ನು ಹಿಡಿಯುವ ಪ್ರಯತ್ನ ಮಾಡುತ್ತಿರುವನು.ನಾನು ಇನ್‌ಸ್ಪೆಕ್ಟ್ರನ್ನು 

ರಿವಾಲ್ವರಿಂದ ಸುಟ್ಟು ತಪ್ಪಿಸಿಕೊಂಡು ಬಂದ.ನಿನ್ನಾಶ್ರಯದಲ್ಲಿ ಬಿದ್ದಿರು 

ತ್ತೇನೆ. ನನ್ನನ್ನು ಸುರಕ್ಷಿತವಾಗಿ ಕಾಪಾಡುವಭಾರ ನಿನ್ನದು ಎಂದು 

ಹೇಳಿದನು. 

ಅವಳು ಸ್ವಲ್ಪ ಕಾಲ ಆಲೋಚಿಸಿ, ಭುಜಂಗರಾಯನು ನಿಮ್ಮನ್ನು ಬಿಟ್ಟು 

ಬಿಟ್ಟನೇ ? ಎಂದು ಕೇಳಲು ಅವನು ಅವಳ ಮುಖವನ್ನು 

ನೋಡುತ್ತಲೂ ಮುಖವನ್ನು ತಗ್ಗಿಸುತ್ತಲೂ, ನಿಟ್ಟುಸುರುಗಳನ್ನು 

ಬಿಡುತ್ತಲೂ ಹೆಚ್ಚಿಗೆ ಮಾತನಾಡಲು ಅಸಮ್ಮತಿಯನ್ನು ಸೂಚಿಸಿದನು. 

ಇವನ ರೀತಿಯನ್ನು ನೋಡಿ ಆ ವಾರಾಂಗನೆಯು ನಿಮಗೂ ಭುಜಂಗ 

೪೯ ---------------------------------------------------------------

೪೯----------------------------------------------------

ನಿಗೂ, ಪರಸ್ಪರ ಪರಿಚಯವಿರಬಹುದೆಂದು ತೋರುತ್ತದೆ ! ಅದಕ್ಕಾಗಿ ನೀವು ಹೆದಬಬೇಡಿ. ನಾನೂ ನಿಮ್ಮ ಗಳೆಂದೇ ತಿಳಿದು ಆವಸಂಗತಿ ಯಿದ್ದರೂ ನಿರ್ಭಯವಾಗಿ ನನ್ನೊಂದಿಗೆ ತಿಳುಹಿಸಿ ! ” ಎಂದಳು. 

ವ್ಯಕ್ತಿ:- ನಿವೇನು ಬೇಕಾದರೂ ಮಾಡಿ ! ನಾನೆಲ್ಲವನ್ನು 

ನಿಮ್ಮೊಂದಿಗೆ ಹೇಳಿಬಿಡುವೆನು, ನನ್ನ ಭುಜಂಗನನ್ನೂ ಸಹ ಬಿಟ್ಟು 

ಕೊಡದೆ ಕಾಪಾಡಿದರೆ ನಮ್ಮ ಯಜಮಾನನಿಂದ ನಿಮಗೆ ಉತ್ತಮ ಬಹು 

ಮಾನವನ್ನು ಕೊಡಿಸುವೆನು. ಭುಜಂಗು ನನಗೆ ಪರಿಚಿತನು ಮಾತ್ರವೇ 

ಅಲ್ಲ ! ಅವನೇ ನಮ್ಮ ಎರಡನೆಯ ಯಜಮಾನನು !! ” 

ಅವಳು;- ಹಾಗಾದರೆ ನೀವು ದುಡ್ಡು ತಂದುದಾರಿಗೆ ? ” 

ವ್ಯಕ್ತಿ:- ಅವರಿಗೇನೆ " 

ಅವಳು;-"ಈಗ ದುಡ್ಡೆಲ್ಲಿ: ? ಅವರಿಗೆ ಕೊಟ್ಟರೇನು ! ” 

ವ್ಯಕ್ತಿ:- " ಇಲ್ಲ ನಾನೀಅವಸ್ಥೆಯಲ್ಲಿ ಸಿಕ್ಕಿರುವಾಗ ದುಡ್ಡನ್ನು 

ಹೇಗೆಕೊಡಲಿ ? " 

ಅವಳು :- ಹಾಗದರೆ ಇವರನ್ನು ಇಲ್ಲಿಗೆ ಕರೆಯಿಸಲೋ ? 

ಎಂದುದನ್ನು ಹೇಳಿ, ಅವನು ಮಹದಾಶ್ಚರ್ಯದಿಂದ, “ ಏನು ? ಅವರಿ 

ಲ್ಲಿಗೆ ಬರುವರೇ ? ಹಾಗಾದರೆ ನೀವು ಅವರ”- ಎಂದಂದು ಅವಳ 

ಮುಖವನ್ನು ನೋಡಲು, ಅವಳು ನಸುನಗುತ್ತ, “ ಹೌದು ! ನೀವೇನೂ 

ಭಯಪಣಬೆ ಜರಿ. ಇದು ನಿಮ್ಮ ಮನೆ ? ಈ ದಾಸಿಯು ನಿಮಗೆ ಬೇಕಾದ 

ಸೇವೆಗೆ ಸಿದ್ಧಳಾಗಿರುತ್ತಾಳೆ ! ”  ಎಂದನ್ನಲು, ಅವನು ಬಹಳ ಸಂತೋ 

ಷಿಸಿ, “ ನಾನು ಭಾಗ್ಯಶಾಲಿಯೇನು!  ನನಗಾ: ಬ್ರಹ್ಮೇತಿಯ ಭಯವಿಲ್ಲ ! 

ಅವನಲ್ಲಿದ್ದರೆ ಅವನಂತಹ ಹತ್ತುಜನ ಕಾಳೀಚರಣರಿಗೂ ನಾನು ಹೆದರು 

ವಂತಿಲ್ಲ ! ಎಂದವ: ಜೇಬಿನಿಂದ ಮತ್ತೆ ಮುನ್ನೂರು ರೂಪಾಯಿ 

ಗಳ ನೋಟನ್ನು ತೆಗದು ಜವಳ ಕೈಯಲ್ಲಿಟ್ಟು, "ಈಗ ನೋಡುವ 

ಸಂಭವ ಬಿದ್ದರೆ ಸರಿ ; ಇಲ್ಲದಿದ್ದರೆ ಭುಜಂಗರಾಯರು ಇಲ್ಲಿಗೆ ಬಂದಾಗ 

ಯಜಮಾನರು ಕಳುಹಿಸಿ ಕೊಟ್ಟಿರುತ್ತಾರೆಂದು ಕೊಟ್ಟುಬಿಡುತ್ತೀರಾ ? 

ಇನ್ನೊಂದು ಸಂಗತಿಯನ್ನು ಕೇಳಬೇಕೆಂದಿರುತ್ತೇನೆ ಕೇಳಲೇ ? "ಎಂದನು : 

೫೦-----------------------------------------------

ಅವಳು;- “ ಆಡಿ ! ಅದಕ್ಕಡ್ಡಿಯೇನು ? ತಾವು ಸರ್ವಸ್ವತಂತ್ರ 

ರೆಂದು ಮೊದಲೇ ಹೇಳಿದೆನಲ್ಲ ! "

ವ್ಯಕ್ತಿ;- ಈ ದಿವಸ ಕಾಳಿಚರಣನು ಇಲ್ಲಿಗೆ ಬರುವ ಸಂಭವ 

ವಿದೆಯೆಂದೂ ಹಾಗೆ ಬಂದರೆ ಅವನನ್ನು ಹಿಡಿದು ನಿರ್ನಾಮಮಾಡಲು 

ಪ್ರಯತ್ನಗಳು ಏರ್ಪಟ್ಟಿರುವುವೆಂದೂ ಕೇಳಿದೆನು, ದಿಟವೇ ? " 

ಅವಳು;- ಹೌದು ! ಎಲ್ಲವೂ ಸಿದ್ದವಾಗಿದೆ ! ಅವನು ಮಾತ್ರ 

ಬರಲಿಲ್ಲ !!" 

ವ್ಯಕ್ತಿ;- ನಮ್ಮವರಾರಾದರೂ ಬಂದಿರುವರೋ ? ” 

ವೇಶೈ;-“ಹೌದು ! ನಿಮ್ಮ ಮನ್ನ್ನೂ ಮತ್ತು ಖದ್ದುಸ್‌, ಇಬ್ಬರೂ 

ಬಂದಿರುತ್ತಾರೆ ! "

ವ್ಯಕ್ತಿ:- “ ಅವರಲ್ಲಿರುವರು ? ” 

ವೇಶ್ಯೆ;- "ಇಲ್ಲೇ ಇರುವರು. ತಾವೇನಾದರೂ ಅವರನ್ನು ಕಾಣ 

ಬೇಕಾಗಿರುವುದೆ ? ” 

ವ್ಯಕ್ತಿ:- ಹೌದು ! " ಮುಂದೆ ಒದಗಬಹುದಾಗಿರುವ ಗಲಭೆಗೆ 

ಮುಂಚೆಯೇ ನಾನು ಅವರೊಂದಿಗೆ ಮಾತನಾಡಿದರೆ ಚೆನ್ನಾಗಿತ್ತು ! "

ವೇಶ್ಯೆ:- “ ಅಗತ್ಯವಾಗಿ ಆಗಲಿ ! ” ಎಂದಂದು ಅವರಿದ್ದ ಸ್ಥಳಕ್ಕೆ 

ಕರೆದುಕೊಂಡು ಹೋಗಲು ಪ್ರಯತ್ನಿಸಲು, “ ಓಹೋ ! ಏನಾಮನೆಯ 

ಲ್ಲಿಯೋ ಅವರಿರುವದು ? ನಾನೇ ಮಾತನಾಡಿಕೊಂಡು ಬರುತ್ತೇನೆ, 

ಆ ಪಿಶಾಚಿ ಈಗ ಬಂದರೂ ಬರಬಹುದು. " ಎಂದು ಹೇಳಿದನು. ವೇಶೈಯು 

“ ಸರಿ ! ಹಾಗಾದರೆ ನಾನು ಆ ಕಲಸವನ್ನು ನಾನು ನೋಡಿಕೊಳ್ಳುತ್ತೇನೆ !!"  

ಎಂದು ಹೇಳಿ, ಅವನನ್ನು ಅಲ್ಲಿಯೇಬಿಟ್ಟು, ಬೀದಿಯ ಕಡೆ ಒ೦ದಳು. 

ಆ ವೇಳೆಗೆ ಆರೋ ತನ್ನ ಮನೆಯ ಕಡೆ ಬರುತ್ತಿರುವದನ್ನು ಕಂಡು, ಕಾಳೀ 

ಚರನೇ ಇರಬಹುದೆಂದು ಆ ವೇಶ್ಯೆಯು ಅತಿ ಸಂಭ್ರಮದಿಂದಿರಲು, 

ಅವಳನ್ನು ಸಮೀಪಿಸಿದ ವ್ಯಕ್ತಿಯ ಠಾಣೆಯಜಮಾನನಾಗಿದ್ದನು ! ವೇಶ್ಯೆಯು 

ಅವನನ್ನು ಕಂಡು ಭೀತಳಾದಳು. ಒಳಗೆ ಹೋಗಬೇಕೆಂದು ಆಲೋ 

ಚಿಸಿದಳು, ಆದರೂ ಸ್ವಲ್ಪ ಧೈರ್ಯಗೊಂಡು ಅವನನ್ನು ವಿಸ್ಮಯದಿಂದ 

ಮಾತನಾಡಿಸಿದಳು. ಜಮಾದಾರನು ಅರಳದ ಕಣ್ಣುಳ್ಳವನಾಗಿ ಸ್ವಲ್ಪ

೫೧ ------------------------------------------------------------------

ಘಟ್ಟಿಯಾಗಿ " ಇಷ್ಟು ಹೊತ್ತಿನವರಿಗೆ ಆರಿಗಾಗಿ ಕಾಯ್ದುಕೊಂಡಿರುವಿ ! 

ಇಷ್ಟು ಹೊತ್ತಿನಮೇಲೆ ಇಲ್ಲಿಗೆ ಬರಬೇಕಾದರೆ ಆರಾದರೂ ಪೋಕರಿ 

ಗಳಲ್ಲದೆ ಸಂಭಾವಿತರು ಬರುವಂತಿಲ್ಲ ! ಈಗ ಒಳೆಗಾರಾರಿರುತ್ತಾರೆ ? 

ಈಗತಾನೆ ಇನ್‌ಸ್ಪೆಕ್ಟರನ್ನು ಬಂದೂಕಿನಿಂದ ಹೊಡದ ಅಪರಾಧಿಯೊಬ್ಬನು 

ನಿನ್ನ ಮನೆಗೆ ಬಂದಂತ ವರ್ತಮಾನವನ್ನು ತಿಳಿದು ಬಂದಿರುತ್ತೇನೆ. 

ಈಗ ಅವನೆಲ್ಲಿ ? ತೋರಿಸು ! ! ! ಎಂದು ಆಜ್ಞಾಪಿಸಲು, ಆ ವೇಶ್ಯೆಯು 

ಬಹು ಭೀತಳಾಗಿ ಗಡಗಡನೆ ನಡುಗುತ್ತ, “ ಅಯ್ಯೋ ಆರೂ ಬರಲಿಲ್ಲ; 

ಆರೂ ಇಲ್ಲದಿರುವುದರಿಂದಲೇ ಪದ್ದತಿಯ ಮೇರೆ ಇದುರುನೋಡು 

ತ್ತೇನೆ " ಎಂದು ಮೊದಲಾಗಿ ಅಂಗಲಾಚಿಕೊಳ್ಳಲು, ಜಮಾದಾರನ್ನು 

ಅವಳ ಮಾತಿಗೆ ಮರುಗದೆ, ಸಂಜ್ಞೆಮಾಡಲು, ನಾಲ್ಕಾರು ಜನ ಪೋಲೀಸಿ 

ನವರು ಬಂದು ಸೇರಿದರು. ಜಮಾದಾರನು ಮನೆಯಿಂದ ಹೊರಹೊರ 

ಡಲು ಆರಿಗೂ ಅವಕಾಶವನ್ನು ಕೊಡಕೂಡದೆಂದು ಪೋಲಿಸಿನವರಿಗೆ ಆಜ್ಞೆ 

ಯನ್ನಿತ್ತು, ತಾನು ಮನೆಯ ಒಳಗೆ ಹೋದನು. ಈ ಗಲಭೆಯನ್ನು 

ಕಂಡು ಮನ್ನೂ ಖುದ್ದುಸ್' ಮತ್ತು ಆ ವ್ಯಕ್ತಿಯು ಇವರೆಲ್ಲರೂ ತಪ್ಪಿಸಿ 

ಕೊಳ್ಳಲು ಪ್ರಯತ್ನಿಸುವುದನ್ನು ಕಂಡು ಪೋಲಿಸಿನವರು ಮೇಲ್ಬಿದ್ದು 

ಹಿಡಿಯುವಷ್ಟರಲ್ಲಿಯೇ, ಆ ಪರಿಚಿತನು ತನ್ನೆದುರಾಳಿಯನ್ನು ಪಿಸ್ತೂಲಿ 

ನಿಂದ ಹೊಡೆದು ತಪ್ಪಿಸಿಕೊಂಡೇ ಬಿಟ್ಟನು. 

................

ದಶಮ ಗುಚ್ಛ. 

ಮರುದಿನ ವಿಚಾರಣೆಯಲ್ಲಿ ಮನ್ನೂ ಒಬ್ಬ 

ಪ್ರಯಾಣಸ್ಥನಾಗಿ ಆ ಊರಿಗೆ ಬಂದಿದ್ದವನು, ತನ್ನ 

ಆಳು ಖುದಿಸನೊಂದಿಗೆ ಅವಳ ಮನೆಯಲ್ಲಿಳಿ 

ದಿದ್ದೆನೆಂತಲೂ, ಹಿಂದಿನ ರಾತೆಯ ಗಲಭೆಯಲ್ಲಿ ತಾನು ಹೆದರಿ ಓಡಿ 

೫೨----------------------------------------------------------------

ಹೋಗಬೇಕೆಂದಿದ್ದ ಸಮಯದಲ್ಲಿ ಸಂದೇಹದಿಂದ ಪೊಲೀಸಿನವರು, 

ಹಿಡಿದರಲ್ಲದೆ, ಅವರು ಆವವಿಧವಾದ ಅಪರಾಧಿ ಅಲ್ಲವೆಂದೂ, 

ಅಪರಾಧಿಯು ಮತೊಂದು ಖೂನಿಯನ್ನು ಮಾಡಿ ಓಡಿಹೋದಂನೆಂದೂ, 

ವ್ಯಕ್ತವಾದುದರಿಂದ ಅವರೀರ್ವರನ್ನೂ ಪೋಲೀಸಿನವನು ಬಿಟ್ಟು ಬಿಟ್ಟರು 

ಅವರೀರ್ವರೂ ಬಹು ಸಂತೋಷದಿಂದ ಹೋಗುತ್ತಿರಲು, 

ಮನ್ನುವು "ಲೋ !  ನೋಡ್ದೋ ? ಹೇಗಿದೆ ? ಈ ದಿವಸ ನಮ್ಮದೃಷ್ಟವೇ 

ಅದೃಷ್ಟ ! ಸದ್ಯ ಆ ಮಹರಾಯ ಓಡಿಹೋಗುವಾಗ ಅವನ ಉಡುಪು 

ಗಳನ್ನು ಬಿಸುಟು ಹೋದದ್ದರಿಂದ ಈ ದಿನ ನಮ್ಮ ಪರಿಣಾಮವು ನೆಟ್ಟ 

ಗಾಯಿತು. ಸಾಲದುದಕ್ಕೆ ಜೇಬಿನಲ್ಲಿ ಇನ್ನೂ ಹತ್ತು ರೂಪಾಯಿ 

ಗಳು ಇದ್ದೇ ಇವೆ. ಆದುದರಿಂದ ನಾವು ಇಗಲೇ ಓಡಿಹೋಗದೆ 

ಸಾಯಂಕಾಲದ ವರೆಗೂ ಅಲ್ಲಿಯೇ ಇದ್ದು ನಮ್ಮ ವಿಚಾರದಲ್ಲಿ ಆರಿಗೂ 

ಯಾವವಿಧವಾದ ಅನುಮಾನವೂ ತೋರದಹಾಗೆ ರಾತ್ರೆ ಹೊರಟುಹೋಗಿ 

ಬಿಡೋಣ ! ” ಎಂದೆಂದು ಮಾತನಾಡಿಕೊಳ್ಳುತ್ತ ಒಂದು ಹೋಟಲನ್ನು 

ಪ್ರವೇಶಿಸಿದನು. 

ಸಾಯಂಕಾಲ ಆವರೀರ್ವರೂ ಹೋಟೆಲಿಂದ ಹೊರಟರು 

ಹೋಗುತ್ತಾ ದಾರಿಯಲ್ಲಿದ್ದುದೊಂದು ಹೆಂಡಗಂಗಡಿಯನ್ನು ಹೊಕ್ಕು, 

ಮಹವಾನಂದದಿಂದ ಯಥೇಚ್ಚವಾಗಿ ಕುಡಿದು ಮುಂದುವರಿದು ಆವರೀರ್ವ 

ರಲ್ಲಿ ಮುನ್ನುವು ವಿಶೇಷವಾಗಿ ಕುಡಿದಿದ್ದನಾದದರಿಂದ ಸ್ವಲ್ಪ ಹೊತ್ತಿ 

ನಲ್ಲಿಯೇ ಸುರಾದೇವಿಯು ಅತಿತೀವವಾದ ಪ್ರೌಢಿಮೆಯಿಂದ ಅಧಿ 

ಕಾರವನ್ನು ಮಾಡತೊಡಗಿದಳು, ಇವರೀರ್ವರೂ ಹೀಗೆಯೇ 'ಪ್ರಮ 

ತ್ತರಾಗಿ ಹೋಗುತ್ತಿರಲು, ಅವುದೋಗೊ ಬೇರೊಂದು ವ್ಯಕ್ತಿಯು ಬಂದು 

ಅವರ ಜೊತೆಯಾಯಿತು. 

ಹೊಸದಾಗಿ ಬಂದ ವ್ಯಕಿಯು .ಮೊದಲಿನವರಿಬ್ಬರು ಒಬ್ಬೊಬ್ಬ 

ರೊ೦ದೊದು ಕಡೆ ಮನಸ್ವಿಯಾಗಿ ಮಾತನಾಡಿಕೊಳ್ಳುತ್ತಾ ಪ್ರಜ್ಞೆ 

ಯಿಲ್ಲದೆ ಹೋಗುತ್ತಿರುವದನ್ನು ನೋಡಿ ಸಮಯಾನ್ವೇಷಿಯಾಗಿದ್ದು, 

ಬಹು ಸಾಂದ್ರವಾಗಿ ಬೆಳೆದಿದ್ದ ಮರಗಳಗುಂಪಿನಲ್ಲಿ ಪ್ರಜ್ಞಾಹೀನವಾಗಿದ್ದ ಮನ್ನು 

೫೩----------------------------------------------------------- ..

ವನ್ನು ಹಿಡಿದು ಸಮೀಪದ ಮರಗಳ ಗುಂಪಿನಲ್ಲಿ ಬೇರೇಕಡೆ ತೆಗೆದು 

ಕೊಂಡು ಹೋಗಿ ಉರುಳಿಸಿ ಇನ್ನೊಬ್ಬನನ್ನು ಹಿಡಿಯಲು ಹೋಗ 

ಬೇಕೆಂದಿರುವಷ್ಟರಲ್ಲಿ ಆ ಕಡೆ ಮತ್ತು ಬರುತ್ತಿದ್ದಂತೆ ಕಂಡುಬರಲು, 

ನಿಬಿಡವಾಗಿದ್ದ ಪೊದೆಗಳ ಮರೆಯಲ್ಲಿ ಅವಿತುಕೊಂಡನು. 

ಆ ಕಡೆ ಎರಡು ವ್ಯಕ್ತಿಗಳು ಬರುತ್ತಿದ್ದುವು. ಆ ವ್ಯಕ್ತಿಗಳು 

ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದು ಮನಸ್ವಿಯಾಗಿ ಮಾತನಾಡಿಕೊಳ್ತಿದ್ದ 

ಮನ್ನುವನ್ನು ಕಂಡು ಭಯಚಕಿತರಾದರು. ಅವನು ಮಾತನಾಡುವುದನ್ನು 

ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು, ಪ್ರಯತ್ನವು ನಿಷ್ಫಲವಾಯಿತು. 

ಅವನನ್ನು ಹಾಗೆಯೇ ಬಿಟ್ಟು ಹೋಗುವುದಾದರೆ ಜ್ಞಾನಾಶೂನ್ಯವಾದುದ 

ರಿಂದ ಏನೇನು ಮಾತನಾಡುವನೋ ? ಆದುದರಿಂದ ಅವನನ್ನು ಅಲ್ಲಿಂದ 

ಸಾಗಿಸಿಕೊಂಡು ಹೋಗುವುದೇ ಮೇಲೆಂದು ಆಲೋಚಿಸಿ ಇಬ್ಬರೂ ಅವನನ್ನು 

ಸಾಹಸದಿಂದ ಎತ್ತಿಕೊಂಡು ಹೊರಟರು. 

ಪೊದೆಗಳ ಮರೆಯಲ್ಲಿದ್ದ ವ್ಯಕ್ತಿಯು ಅವರನ್ನೇ ಹಿಂಬಾಲಿಸಿತು. 

ಹತ್ತಹತ್ತಿರ ಎರಡು ಮೈಲಿಗಳಷ್ಟು ದೂರ ಹೋಗಿ ಸಮೀಪದಲ್ಲಿ 

ನೋಟಕರ ದೃಷ್ಟಿಗೆ ಭಯಂಕರ ಕಾನನವೆಂದು ವ್ಯಕ್ತವಾಗುತ್ತಿದ್ದ ಗಿಡ 

ಮರ ಪೊದೆಗಳ ಮಧ್ಯದಲ್ಲಿದ್ದ ಒಂದು ಮುರುಕು ಮನೆಯನ್ನು ಮನೆಯನ್ನು ಪ್ರವೇ 

ಶಿಸಿ ಮನ್ನುವನ್ನು ಒಂದು ಕಡೆ ಮಲಗಿಸಿದರು. 

ಆವರಿಬ್ಬನು, “ ಸಾಕಪ್ಪಾ ! ಈ ಹೆಣಚಾಕರಿ : ಧೈರ್ಯವಾಗಿ 

ಕಣ್ಣೆಳಕಿನ ಹೊತ್ತಿನಲ್ಲಿ ಸ್ವಲ್ಪ ದೂರ ತಿರುಗಾಡಿಕೊಂಡು ಬರೋಣ 

ವೆಂದರೂ ಮಾರ್ಗವಿಲ್ಲ ! ! ಹೆಜ್ಜೆ ಹೆಜ್ಜೆಗೂ ಭಯ ! ! ! ಸಾಲದುದಕ್ಕೆ 

ಇದೊಂದವಸ್ಥೆ ! ಸಕಪ್ಪಾ !! ನಮ್ಮಪ್ಪನಾಣೆಗೂ, ಭಗವತ್ಸಾಕ್ಷಿಯಾ 

ಗಿಯೂ, ಈ ವೇಳೆಗೆ ಈ ತೊಂದರೆಯಿಂದ ಕಳೆದು ಉಳಿದರೆ ಈ ಕೆಟ್ಟ 

ಕೆಲಸಕ್ಕಿಂತಲೂ ಕಷ್ಟ ಪಟ್ಟು ಕೂಲಿಯಿಂದ ಹೊಟ್ಟೆಪಾಡು ನೋಡಿಕೊಳ್ಳು 

ವುದು ಸಹಸ್ರಪಾಲು ಮೇಲಪ್ಪ ! ” ಎಂದಂದನದನು. 

ಎರಡನೆಯವನು :- "ಅಹಹ ! ಎಂತಹ ಧೀರ ! ! ಏನು ವಿವೇಚನಾ 

ಶಕ್ತಿ ! ನಿನ್ನಂತಹ ಕೆಲವರನ್ನು ಇಟ್ಟುಕೊಂಡು ಕಾರ್ಯಾರಂಭ ಮಾಡಿ 

ದರೆ ಸಮಯದಲ್ಲಿ ಒಳ್ಳೆ ಸಹಾಯ ಮಾಡುತ್ತಿರಿ ” ಎ೦ದಂದನು. 

೫೪------------------------------------------------------

ಈ ಮಾತುಗಳನ್ನು ಕೇಳಿ ಮೊದಲನೆಯವನಿಗೆ ಸ್ವಲ್ಪ ಸಿಟ್ಟು 

ಬಂದಂತೆ ತೋರುತ್ತಿದೆ ! ಅವನು “ ಹೌದಯ್ಯಾ ! ಹೌದು ! ! ನನ್ನಂತಹ 

ಅಂಜುಬುರುಕರಿಂದ ಏನಾಗುವುದು ? ನಿನ್ನಂತಹ ಧೀರರ, ಇಂತಹ ಅಸಾ 

ಧಾರಣ ಸಾಮರ್ಥ್ಯವುಳ್ಳವರು~ ಎಂದಂದು ಮನುವಿನ ಕಡೆ ಕೈ ತೋರಿಸಿ 

“ ಇದ್ದರೆ ಸಾಕು ! ಎಂತಹ ಆಗಬಾರದ ಕಲಸವಾದರೂ ಅತ್ಯಲ್ಪ ಕಾಲದಲ್ಲಿ 

ಪೂರ್ತಿಯಾಗುತ್ತೆ. ಹೀಗೆ ಮನಸ್ಸಿಯಾಗಿ ಕುಡಿದು ಹುಚ್ಚು ಹುಚ್ಚಾಗಿ 

ಬೊಗಳುತ್ತಿರುವಾಗ ಕಾಳೀಚರಣನಂತಹವನೇನಾದರೂ ಕಂಡು ಇಂತಹ 

ವಿಚಿತಮೃಗವು ಅವನ ಬಲೆಯಲ್ಲಿ ಬಿದ್ದರೆ ಆಗದರ ಪರಿಣಾಮವು ಬಹಳ 

ನೆಟ್ಟಗಾಗುತ್ತೆ. ನಾನೇನಯ್ಯಾ ಕೈಯಲ್ಲಾಗದವನು ! ” ಎಂದಂದನು. 

ಎರಡನೆಯವನು :- "ಹೌದಪ್ಪಾ ! ಏನು ಮಾಡೋದಕ್ಕಾಗ್ತದೆ ? 

ಎಲ್ಲವೂ ಅಭ್ಯಾಸ ! ಕುಡಿದು ಪ್ರಜ್ಞೆಯಿಲ್ಲದೆ ಬಿದ್ದ ಕಾಲದಲ್ಲಿ ವಿವೇಚನಾ 

ಶಕ್ತಿಯಿರುವುದುಂಟೇನು ? ಸದ್ಯಕ್ಕೆ ಇವನೊಬ್ಬನದೆ ನಮ್ಮ ಗುಂಪಿ 

ನಲ್ಲಿನ್ನಾರಪ್ಪ ಇಂತಹ ಕುಡಿಕರು, ಇವನನ್ನು ಅನೇಕ ವೇಳೆ ಗುಂಪಿ 

ನಿಂದ ಹೊರಡಿಸಬೇಕೆಂದು ಎಷ್ಟೋ ಪ್ರಯತ್ನ ಮಾಡಿದೆವು. ಒಂದೊಂದು 

ವೇಳೆ ಈ ಕುಡಿತದ ಮಹತ್ವದಿಂದ ಅನೇಕ ಕೆಲಸಗಳು ಕೆಟ್ಟು ಹಾಳಾ 

ಗಿವೆ. ಎಂತೆಂತಹ ಗುಟ್ಟುಗಳ ಬಯಲಾಗಿವೆ ! ಇಷ್ಟಾದರೂ ಮುಂಡೇ 

ಮಗನ ಎದೆ ಕಲ್ಲಿಗಿಂತಲೂ ಗಟ್ಟಿ ನೋಡಯ್ಯಾ ! ಎಂತಹ ಕೆಲಸಕ್ಕಾದರೂ 

ಎದೆ ಚಾಚಿಕೊಂಡು ನಿಲ್ಲುತ್ತಾನಲ್ಲದೆ ಹಿಂದೆಗೆಯುವುದಿಲ್ಲ !! ಅದಕ್ಕಾ 

ಗಿಯೇ ನಮ್ಮ ಯಜಮಾನನೂ ಕೂಡ ಇವನನ್ನು ಬಿಡುವ ವಿಷಯದಲ್ಲಿ 

ಹಿಂದೆಗೆಯುವುದು , ” 

ಮೊದಲನೆಯವನು :- ಮುಂಡೇಗಂಧ ಧೈರ್ಯಶಾಲಿಯೇನೋ 

ಹೌದು ! ಅವರನ್ನು ಹಿಡುಕೊಂಡು ಬರೋದಿವಸ ನೋಡ್ಡಿಯ ? ಎಂತಹ 

ಸಾಹಸ ಮಾಡ್ಡ ! ಆ ಹುಡುಗಿಯರನ್ನು ಎರಡು ಸಣ್ಣ ಕೂಸುಗಳನ್ನು 

ತಂದಂತೆ ತಂದನಲ್ಲ ! ಏನು ಮಾಡೋದು ! ಅನೇಕ ಚಿತ್ತಾರಗಳನ್ನು 

ಒಂದು ಮಸಿ ನುಂಗಿತು ಎಂಬ ಗಾದೆಯಂತೆ ಈ ಕುಡಿತ ವೊಂದಿಲ್ಲದಿದ್ದಿ 

ದ್ದರೆ ಎಲ್ಲವೂ ನೆಟ್ಟಗಿರುತ್ತಿತ್ತು.

೫೫-----------------------------------------------------

ಎರಡನೆಯವನು ;- ಅದಕ್ಕೇನು ಮಾಡುವುದು ? ನಮ್ಮ ಕೈಯ 

ಲ್ಲಾದಷ್ಟೂ ಎಚ್ಚರಿಕೆಯಿಂದ ನೋಡುತ್ತಿರಬೇಕು. ನಮ್ಮ ಅದೃಷ್ಟವಶಾತ್ 

ಇವನು ಈ ದಿವಸ ಕಾಡಿನಲ್ಲಿ ಬಂದು ಬಿದ್ದು ನಮ್ಮ ಕೈಗೆ ಸಿಕ್ಕಿದ್ದರಿಂದ 

ಸರಿಹೋಯಿತು. ಮುಂಡೇಗಂಡ ಕುಡಿಯೋದಂದ್ರೇ ಗೊತ್ತು ಗುರಿಯೇ 

ಬೇಡವೆ ? ಕೈಯಲ್ಲಿಟ್ಟು ದುಡ್ಡಿರುವುದೂ ಅಷ್ಟಕ್ಕೂ ಕುಡಿಯುವುದ 

ಲ್ಲದೆ ಬೇರೆ ಯೋಚನೆಯೇ ಇಲ್ಲ ! ಒಂದು ವೇಳೆ ಊರೊಳಗೇ ಬಿದ್ದು 

ಬಿಟ್ಟಿದ್ದರೋ ! 

” ಮೊದಲನಯವನು -" ನನಗೇನೂ ಈಗಲೂ ಅನುಮಾನವೆ ? 

ಈ ಕುಡಿತದ ಸಂಭ್ರಮದಲ್ಲಿ ಯಾರಾರೊಂದಿಗೆ ಏನೇನು ಹೇಳಿರುವನೋ ! 

ಏನೋ ! ! ಅಲ್ಲಿ ಎಷ್ಟು ಹೊತ್ತಿನತನಕ ಹೀಗೆ ಹರಟುತ್ತಲೇ ಇದ್ದನೋ !” 

ಎರಡನೆಯವನು;- “ ಸರಿ ! ಸರಿ !! ನಿನಗಾವಾಗಲೂ ಇಲ್ಲದ 

ಹೆದರಿಕೆಯೆ! ಅವನೇನು ತೀರ ಕೆಲಸಕ್ಬರದವನೆಂದು ತಿಳಿದುಕೊಂಡೆಯೋ? 

ಪ್ರಜ್ಞೆಯಿಲ್ಲದ ವೇಳೆಯಲ್ಲಿ ನಾನು ಹೇಳಲಾರೆ ! ಸರಿಯಾಗಿದ್ದಾಗ ಅವ 

ನಿಂದೇನಾದರೂ ಒಂದು ಸಂಗತಿಯನ್ನು ತಿಳಿಯಲು ಬ್ರಹ್ಮನಿಂದ ಸಾಧ್ಯವೇ? 

ಈ ದುರ್ವಿದ್ಯದಲ್ಲಿ ಬಹಳ ಚನ್ನಾಗಿ ತಯಾರಾದವನು ! ಅವನಂಗಾಂಗ 

ಗಳನ್ನೆಲ್ಲಾ ಕತ್ತರಿಸಿದರೂ ಕೂಡ “ ಇಲ್ಲ ” ಎಂಬುದೊಂದಲ್ಲದೆ ಬೇರೆ 

ಮಾತು ಅವನ ಬಾಯಿಯಿಂದ ಎಂದಿಗಾದರೂ ಹೊರಡಲ್ಪಟ್ಟಿತೆಂದು 

ಭಾವಿಸವಿಯೋ ? ಆದರೆ-ಕುಡಿದಹೊತ್ತಿನಲ್ಲಿ ಮಾತ್ರ,-ಈ ದಿವಸ ನನ 

ಗಾವ ವಿಧವಾದ ಅನುಮಾನವೂ ಇಲ್ಲ ! ಈ ಹೊತ್ತಿನಲ್ಲಿ ಈ ಕಾಡಿ 

ನೊಳಗೆ ಪ್ರವೇಶಿಸಲು ಯಾವಪಿಶಾಚತಾನೆ ಪ್ರಯತ್ನ ಪಟ್ಟಿತು ? ತತಾಪಿ 

ಮನುಷ್ಯರು ಆಯುಃಪರಿಮಿತಿ ಸಮೀಪಿಸಿದ್ದರೇ ಇಲ್ಲಿಗೆ ಬರಬೇಕು ! 

ಮೊದಲನೆಯವನು-ನೀನೇನೋ ಹಾಗೆ ತಿಳಿದುಕೊಂಡಿರಬಹುದು. 

ಆ ಸಹಸ್ರ ಪಿಶಾಚಿಗಳಿಗಿಂತ ಶತಾಧಿಕನಾದ, ಏಕೇ, ಆಮೃತ್ಯುಸ್ವ 

ರೂಪನಾದ ಕಾಳೀಚರಣನು ಏತಕ್ಕಾದರೂ ಹಿಂಜರಿಯುವನೆಂದು ಭಾವಿ 

ಸಿರುವಿಯೋ ? ಮೇಲಿಂದಮೇಲೆ ಭುಜಂಗನು ಇವನ ಸಾಹಸವಿಚಾರ 

ಗಳಲ್ಲಿ ಎಚ್ಚರಿಸುತ್ತಿರುವನಲ್ಲದೆ ಈಗ ನಾಲ್ಕು ದಿವಸಗಳ ಕೆಳಗೆ ಆ 

ಕೆರೆಯ ಸಮೀಪದಲ್ಲಿ ಅವನು ಮಾಡಿದ ಹಾವಳಿಯನ್ನೇ ಮರಿಯುವು.

೫೬------------------------------------------------------------------------

ದಕ್ಕಿಲ್ಲ ! ಈಗಾಗಲೆ ಇಲ್ಲಿಗಾರು ಬರುವರೆಂದು ಹೇಳುವಿಯಲ್ಲ ! ಆ 

ಕಾಳೀಚರಣನಿಗಿಂತ ಹೆಚ್ಚಿನ ಕಳ್ಳನಿಲ್ಲ. ಕರಮೃಗವಿಲ್ಲ, ಎಂತಹ 

ಕೊಲೆಗಾರರಲ್ಲಿ ಯ ಅಂತಹ ಧೈರ್ಯವಿಲ್ಲ ! ಪಿಶಾಚಿಯೂ ಇಲ್ಲ ! 

ಬ್ರಹ್ಮರಾಕ್ಷಸನೂ ಇಲ್ಲ !! ಅವನು ಎಲ್ಲದಕ್ಕೂ ಮೀರಿದ ಅಂತ್ಯಕಾಲದ 

ಮಾರಿ !! ” ಎಂದು ಹೇಳುವಷ್ಟರಲ್ಲಿಯೇ ಹೊರಗೆ ಆರೋ ಬಾಗಿಲನ್ನು 

ತಟ್ಟಿದಂತೆ ಶಬ್ದವಾಯಿತು. ಈ ವ್ಯಕ್ತಿಯು ಭಯಭ್ರಾಂತರಾಗಿ 

ಅತ್ತಿತ್ತ ನೋಡುವಷ್ಟರಲ್ಲಿ “ ನಿನ್ನೆ ರಾತ್ರಿ ಊರೊಳಕ್ಕೆ ಹೋಗಿದ್ದ 

ವರ ದೆಶೆಯಿಂದ ನಾವು ಕೆಟ್ಟೆವು ! ಗುಟ್ಟೆಲ್ಲಾ ಹೊರಬಿದ್ದಿತು ಯಜ 

ಮಾನನು ಪೋಲೀಸಿನವರ ವಶವಾದನು, ಎಲ್ಲೆಲ್ಲಿಯೂ ಪೊಲೀಸಿನವರು 

ತುಂಬಿಬಿಟ್ಟಿರುತ್ತಾರೆ ! ಇಗೋ ನಾನು ಹೊರಟೆ !! ಜೀವದಮೇಲೆ ಆಸೆ 

ಇದ್ದರೆ ಮೊದಲು ನಿಮ್ಮ ಬಾಳನ್ನು ನೋಡಿಕೊಳ್ಳಿರಿ ! ” ಎಂದು ಗಾಬರಿ 

ಯಿಂದ ಆರೋ ಹೇಳಿ ಓಡಿಹೋದಂತಾಗಲು, ಅವರು ಗಾಬರಿಯಿಂದ 

ಓಡಿಹೋಗಬೇಕೆಂದು ಬಾಗಿಲನ್ನು ತೆರೆದು ಹುಷಾರ್ ! ಒಂದು ಹೆಜ್ಜೆ 

ಮುಂದಕ್ಕೆ ಇಟ್ಟರೂ ಕೊಂದು ಬಿಡುವೆನು !! ಅಲ್ಲಾಡಿಸಿದರೂ ಸಹ 

ಮರಣವು ಸಿದ್ಧ ! ! ! ಜೋಕೆ ! ? ಎಂದು ಉಚ್ಚಸ್ವರದಿಂದ ಹೇಳುತ್ತ 

ತಕ್ಷಣವೇ ಒಂದು ವ್ಯಕ್ತಿಯ ಬಾಗಿಲಲ್ಲಿ ಅಡ್ಡವಾಗಿ ನಿಂತಿತು. 

ವ್ಯಕ್ತಿಯು ಆಯುಧಪಾಣಿ ! ಅವರೀರ್ವರೂ ಹೆದರಿ ಚೈತನ್ಯಶೂನ್ಯ 

ರಾಗಿಬಿಟ್ಟರು ! ! ಆ ವ್ಯಕ್ತಿಯು ಆರರು “ ನಲ್ಲಿ " ಗಳುಳ್ಳ ಪಿಸ್ತೂಲು 

ಗಳೆರಡನ್ನು ಕೈಗಳಲ್ಲಿ ಹಿಡಿದು ಇಬ್ಬರಿಗೂ ಗುರಿಯಿಟ್ಟು “ ಈಗೇನು ? 

ಕಾಳೀಚರಣಂದು ಪಿಶಾಚನೂ ಬ್ರಹ್ಮರಾಕ್ಷಸನೋ ಮಾರಿಯೋ ಅಥವ 

ಇವೆಲ್ಲಕ್ಕೂ ಮೀರಿದ ಅನಾಮಧೇಯನೋ ? ಇಲ್ಲವೇ: ಪಾತಕಿಗಳ 

ಘಾತಕನೋ? ಏನು?” ಎಂದು ಹೇಳುತ್ತಾ ಅವರ ಹತ್ತಿರಕ್ಕೆ ಹೋದನು ! 

ಅವರೀರ್ವರೂ. ಉಪಾಯರಹಿತನಾಗಿ ಆ ವೇಳೆಯಲ್ಲಿ ತಾವವನಧೀನ 

ರಾಗುವದಲ್ಲದೆ ಅನ್ಯಥಾ ಮಾರ್ಗವೇ ಇಲ್ಲ ಎಂದು ತಿಳಿದು ಕೈಗಳನ್ನು 

ಚಾಚಿಕೊಂಡು ಮುಖವಡಿಯಾಗಿ ನೆಲದ ಮೇಲೆ ಮಲಗಿಬಿಟ್ಟರು ! 

ಕಾಳಿಚವಣನು ಅವರಿಗೆ ಅತ್ತಲಿತ್ತಲಲುಗಲೂ ಸಹ ಅವಕಾಶ 

ವನ್ನಿಯದೆ ಅವರಿಗೆ ಕೈಕೋಳಗಳನ್ನು ತೊಡಿಸಿ, ಕಾಲುಗಳನ್ನು 

೫೭---------------------------------------------------------------

ಬಂಧಿಸುವಷ್ಟರಲ್ಲಿಯೇ, ಸುರಾದೇವಿಯ ಅನುಗ್ರಹವು ಸ್ವಲ್ಪ ಕಡಿಮೆ 

ಯಾಗಿ ಅಲ್ಲಿ ನಡೆಯುತ್ತಿದ್ದುದನ್ನೆಲ್ಲಾ ನೋಡುತ್ತಲೇ ಮಲಗಿದ್ದ 

ಮನ್ನು ವು ಆದು ತನಗೆ ಸರಿಯಾದ ಸಮಯವೆಂದೆಣಿಸಿ ಕಾಳೀಚರಣನ 

ಮೇಲೆ ನೆಗೆದನು ಕಾಳೀಚರಣನು ಆಶ್ಚರ್ಯಚಕಿತನಾಗಿ ಸ್ವಲ್ಪ ಓರ 

ಯಾಗಲು, ಮನ್ನುವು ಗುರಿತಪ್ಪಿ ಕಾಳೀಕರಣನ ಮೇಲೆ ಬೀಳದೆ ಬಂಧಿ 

ಸಲ್ಪಟ್ಟವರಲ್ಲೊಬ್ಬನ ಮೇಲೆ ಬಿದ್ದನು, ಆ ಪೆಟ್ಟಿಗೆ ಬಂದಿಯು ಚೀತ್ಕರಿ 

ಸಿದನು. 

ಮನ್ನುವು ಏಳುವುದಕ್ಕೆ ಕೂಡ ಅವಕಾಶ ಕೊಡದಂತೆ ಕಾಳೀ 

ಚರನು ಅವನ ಮೇಲೆ ಬಿದ್ದು ಅವನನ್ನು ಹಿಡಿದನು. ಮನ್ನೂ ಕಾಳೀ

ಚರಣರೀರ್ವರೂ ಪರಸ್ಪರ ಬಲಪ್ರಯೋಗದಿಂದ ಹೋರಾಡಿದರು. 

ಆದರೂ ಕಾಳೀಚರಣನ ಹಿಡಿತದಿಂದ ತಪ್ಪಿಸಿಕೊಳ್ಳಲು ಮನ್ನುವಿಗೆ 

ಸಾಧ್ಯವಾಗಲಿಲ್ಲ  ಮನ್ನುವು ಎಂದಾದರೂ ತನ್ನೆದುರಾಳಿಯನ್ನು ಕೊಲ್ಲ 

ಬೇಕೆಂದು ತನ್ನುಡಿಯಲ್ಲಿದ್ದ ಚೂರಿಯಮ್ಮ ಕಾಳೀಚರಣನ ಹೃದಯದಲ್ಲಿ 

ಹುದುಗಿಸಲು ಯತ್ನಿಸಿದನು. 

ಕಾಳಿಚರಣನು ಇವನ ಮನೋಗವನ್ನು ಅರಿತು, ಬಹು ಚಮ 

ತ್ಕಾರದಿಂದ ಆ ಚೂರಿಯನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ 

ಹಿಡಿದುಕೊಂಡನು. ಕಾಳೀಚರಣನ ಬಾಯಿಯಿಂದ ಆ ಚೂರಿಯನ್ನು 

ಕಿತ್ತು ಕೊಳ್ಳಲು, ಮನ್ನುವು ಒಹುಸಾಹಸ ಮಾಡಿದನು, ಆದರೇನು ? 

ಸಾಧ್ಯವಾಗಲಿಲ್ಲ ! ಆ ಚೂರಿಯನ್ನ ಮನ್ನುವಿನ ಕೈಯಿಂದ ಸೆಳೆದು 

ಕೊಳ್ಳಲು, ಕಾಳೀಚರಣನು ಮಾಡಿದ ಸಾಹಸವೂ ನಿಷ್ಪಲವಾಯಿತು !! 

ಈ ಎಳದಾಟದಲ್ಲಿ ಕಾಳೀಚರಣನ ಬಾಯಿ ತುಟಿಗಳಲ್ಲಿ ಬಹಳ ಘಾಯ 

ವಾಗಿ ರಕ್ತವು ಸುರಿಯುತ್ತಿದ್ದರೂ ಹಿಡಿತವನ್ನು ಮಾತ್ರ ಬಿಡಲಿಲ್ಲ ! 

ಮನ್ನುವು ಮತ್ತೊಂದುಸಲ ತನ್ನ ಸಾಹಸವನ್ನೆಲ್ಲಾ ಪ್ರಯೋಗಿಸಿ ಆ 

ಚೂರಿಯನ್ನು ಎಳೆಯಲು ಕಾಳೀಚರಣನು ಆಚೂರಿಯನ್ನು ಬಿಟ್ಟು ಒಹು 

ಲಾಘವಚಮತ್ಕಾರದಿಂದ ಅವನನ್ನು ಮೇಲಕ್ಕೆತ್ತಿ ನೆಲದಲ್ಲಿ ಕುಕ್ಕಿದನು ! 

ಆ ವೇಳೆಯಲ್ಲಿ ಮನುವಿನ ಹಸ್ತಸಾಧೀನ ತಪ್ಪಿ ಅವನ ಕೈಯಲ್ಲಿದ್ದ 

ಚೂರಿಯು ಅವನ ಹೃದಯದಲ್ಲಿಯೇ ನಾಟಿತು ಕಿರಿಚಿಕೊಳ್ಳುತ್ತ 

೫೮------------------------------------------------------------------------------------

ನೆಲದಲ್ಲಿ ಬಿದ್ದು ಬಿಟ್ಟನು. ಆ ಸಮಯದಲ್ಲಿ ವಿದ್ಯುದಾಘಾತದಂತೆ ಬಂದು 

ಮುಷ್ಪಿ ಪಹಾರವು ಕಾಳಚರಂನ ತಲೆಗೆ ಸಂದಿತು !! ಕಾಳೀಚರಣನು 

ತರಹರಿಸಲಾರದೆ ಭೂಗತನಾದನು 

.......

ಏಕಾದಶ ಗುಚ್ಛ. - -- 

ಕಾಳೀಚರಣನಿಗೆ ಪ್ರಜ್ಞೆಯುಂಟಾಯಿತು. ಆದ  

ರೇನು ? ಸಹಾಯ ರಹಿತವಾಗಿ ಕೈ ಕಾಲು ಬಂಧಿ  

ಸಲ್ಪಟ್ಟವನಾಗಿ ಬಿದ್ದಿರುವ ಆ ಕಾಳೀಚರಣಣನಿಗೆ 

ಏನುತಾನೆ ಮಾಡಲು ಸಾಧ್ಯ ? ಪ್ರಜ್ಞೆಯುಂಟಾದಾಗ ತನ್ನ ಆ 

ಶೋಚನೀಯವಾದ ದುಃಸ್ಥಿತಿಗೆ ಏನಾದರೂ ಒಂದು ಪ್ರತೀಕಾರವನ್ನು 

ಸಹ ಮಾಡಿಕೊಳ್ಳಲನುಕೂಲವಿಲ್ಲದಂತೆ ಅವನ ವಿರೋಧಿಗಳು ಅಲ್ಲಿಯೇ 

ಮಾತನಾಡುತ್ತ ಕುಳಿತಿರುವದನ್ನು ನೋಡಿದನು ! ಆಗ ತಾನು ಪ್ರಜ್ಞಾ 

ಹೀನನಂತೆ ಇನ್ನೂ ಸ್ವಲ್ಪ ಕಾಲ ಬಿದ್ದಿದ್ದು ಅವರ ಸಂಭಾಪಣೆಯ 

ಸಂಗತಿಗಳನ್ನು ತಿಳಿದು ಮುಂದೆ ತನ್ನ ಸಾಹಸವನ್ನೆಲ್ಲಾ ಪ್ರಯೋಗಿಸ 

ಲನುಕೂಲವು ದೊರೆತರೆ ಆ ರೀತಿಯಲ್ಲಿ ಆಚರಿಸಲು ಸ್ಥಿರಚಿತ್ತನಾಗಿ 

ಹಾಗೆಯೇ ಬಿದ್ದುಕೊಂಡು ಪ್ರಜ್ಞಾಹೀನನಂತೆ ನಟಿಸುತ್ತಿದ್ದನು. 

ಕಾಳೀಚರನು ಬಿದ್ದಿದ್ದ ಮುರುಕುಮನೆಯಲ್ಲಿಯೇ ಸ್ಪಲ್ಪ 

ಕಾಲಕ್ಕೆ ಹಿಂದೆ ಅವನೊಂದಿಗೆ ಹೋರಾಡಿ ಗತರ್ಪಣ ವಾಗಿ ಬಿಟ್ಟಿದ್ದ ಮನ್ನು 

ವಿನ ಶವದ ಸಮೀಪದಲ್ಲಿ ಮೂರು ವ್ಯಕ್ತಿಗಳು ಕುಳಿತಿದ್ದವು. ಅವರ 

ಲ್ಲೀರ್ವರು ಕಾಳೀಚರಣನಿಂದ ಬಂಧಿಸಲ್ಪಟ್ಟಿದ್ದವರು, ಮತ್ತೊಬ್ಬನು 

ನೂತನ ! ಆ ನೂತನ ವ್ಯಕ್ತಿಯು, “ ಇಂದಿಗೆ ನಮ್ಮ ಕೆಲಸವು ಬಹಳ 

ಮಟ್ಟಿಗೆ ಸಾಧ್ಯವಾಯಿತು ” ಆರ ಭಯದಿಂದ ನನ್ನ ಪ್ರಾಣವು ಪ್ರತಿ 

ಕ್ಷಣದಲ್ಲಿಯ ಪರಿತಪಿಸುತ್ತಿತ್ತೋ ಆ ಕಾಳೀಚರಣನ ಪ್ರಾಣವು 

ಇಂದು ನಮ್ಮಧೀನ ! ನಾನು ಇನ್ನಾರಿಗೂ ಭಯಪಡುವಂತಿಲ್ಲ !! ನನ್ನನ್ನು

೫೯ ---------------------------------------------------------------------------

ಇನ್ನೀ ಜನ್ಮದಲ್ಲಿ ಭಯಪಡಿಸುವ ಧೀರನು; ಏಕೆ ಪಿಶಾಚೆಯು ಇವನೊಬ್ಬ 

ನಲ್ಲದೆ ಇನ್ನಾವನೂ ಜನ್ಮವನ್ನು ಹೊಂದಿಯೂಇಲ್ಲ, ಇನ್ನು ಮುಂದೆ 

ಜನಿಸುವ ಸಂಭವವೂ ಇಲ್ಲ !!! ಇನ್ನು ಅವನೊಬ್ಬನನ್ನು ಯಮಪುರಿಗೆ 

ಕಳುಹಿಸಿಬಿಟ್ಟೆನೆಂದರೆ ಈ ಅಪಾರವಾದ ಐಶ್ವರ್ಯಕ್ಕೆ ಸರ್ವಾಧಿಕಾರಿಯಾಗಿ 

ಕಳಂಕಕಲುಷಿತವಾದ ಈ ಹೆಸರನ್ನೇ ಪರಿತ್ಯಜಿಸಿ ಸರ್ವೋತ್ತಮವಾದ 

ಹೆಸರಿನಿಂದ ಮಹದೈಶ್ವರ್ಯವಂತನೆಂದೆನ್ನಿಸಿಕೊಳ್ಳತ, ನಿಮ್ಮೆಲ್ಲರಿಗೂ ನಿಮ್ಮ 

ನಿಮ್ಮ ಸಾಹಸಕ್ಕೆ ತಕ್ಕ ಪ್ರತಿಫಲವನ್ನು ಕೊಟ್ಟು ಯಾವಜ್ಜೀವವೂ ಸುಖ 

ವಾದ ಸಂಸಾರದಲ್ಲಿರಲು ಆಶಿಸುತ್ತಿದ್ದಂತೆಯೆ ಏರ್ಪಡಿಸಿಕೊಳ್ಳುತ್ತೆನೆ. 

ಎಂದಂದನು. 

ಇನ್ನೊಬ್ಬ ;- ಸರಿ ! ಈ ಮಧ್ಯೆ ಆ ಹುಡುಗಿಯರ ಗತಿ ? 

ಮೋದಲಿನವ್ಯಕ್ತಿ ನಕ್ಕು  " ಸರಿ ! ವಿಜಯಿನಿಯ ಗತಿ ಗೊತ್ತೇ ಇದೆ 

ನಾವು ಮಾಡತಕ್ಕೆ ಪ್ರಯತ್ನಗಳನ್ನೆಲ್ಲಾ ಮಾಡಿ ನೋಡುವುದು. ಅನಂತರ 

ವಿಷಯಸುಖ ! ಇಲ್ಲದಿದ್ದರೆ ವಿಷಪಯೋಗ ? ” 

ಇನ್ನೊಬ್ಬ:- ಸಂಗತಿಯನ್ನೆಲ್ಲ ತಿಳಿದಂತಾಯಿತು. ಮುಂದೆ ಮಾಡು 

ವದೇನು ? ” 

ಎರಡನೆಯವನು;-..: ಮುಂದಿನ್ನೇನು? ಗೊತ್ತೇ ಇದೆ ? ನಮ್ಮನ್ನಾವಾ 

ಗಲೂ ಭಯಪಡಿಸುತ್ತಿದ್ದ ಈ ಪತ್ತೇದಾರ ಪಿಶಾಚಿಯ ನಿರ್ನಾಮದ 

ಕೆಲಸ ಮೊದಲು !! ಅನಂತರ ಮುಂದೇನು ಬೇಕೊ ನೋಡೋಣ ! ”

 ನೂತನ:- “ಈ ಪತ್ತೇದಾರನ ಮಾತಿರಲಿ ! ನಮ್ಮ ಗುಂಪಿನವ 

 ರೆಲ್ಲರನ್ನೂ ಸೇರಿಸಿ, ಎಲ್ಲರನ್ನೂ ಭಯಗೊಳಿಸುತ್ತಿದ್ದ ಇವನಿಗೆ ಅವ 

 ರೆಲ್ಲರ ಸಮ ಕ್ಷಮದಲ್ಲಿ ಸಜೀವಸಮಾಧಿ ! ಸದ್ಯಕ್ಕೆ ದೇವೇಶನಿಗೆ ಒಂದು 

 ಕಾಗದವನ್ನು ಬರಿಯಬೇಕು. ಅದು ಅಗತ್ಯವಾದ ಕೆಲಸ ! ! ” ಎಲಾಷಿ 

 ಹೇಳಿ, ಕಾಗದವನ್ನು ಬರೆದು ಅವರಿಬ್ಬರಲ್ಲೊಬ್ಬನ ಕೈಯಲ್ಲಿ ಕೊಟ್ಟು 

 ಕಳುಹಿಸಿ ಮತ್ತೊಬ್ಬನಿಗೆ ತಮ್ಮ ಜನರೆಲ್ಲರಿಗೂ ಕಾಳೀಚರಣರ ಸಿಕ್ಕಿ 

 ರುವ ಮತ್ತು ಅವನ ಸಜೀವ ಸಮಾಧಿಯ ಸಂಗತಿಯನ್ನು ತಿಳುಹಿಸುವಂತೆ

 ಹೇಳಿ ಕಳುಹಿಸಿ, ಬಾಗಿಲನ್ನು ಹಾಕಿಕೊಂಡು ತಾನೂ ಹೊರಟುಹೋದಟ್ಟು, 

೬೦------------------------------------------------------------------------------

ಅವರೆಲ್ಲರೂ ಹೋದ ಮೇಲೆ ಕಾಳೀಚರನ್ನು ತಾನು ಕಟ್ಟನ್ನು 

ಕೀಳಲು ಪ್ರಯತ್ನಪಟ್ಟು ನೋಡಿದನು. ಸಾಧ್ಯವಾಗಲಿಲ್ಲ ! ಕಾಲವಿಳಂಬಕ್ಕೆ 

ಅವಕಾಶವಿಲ್ಲ ! ! ತನ್ನಿಂದಾಗಬೇಕಾದ ಕೆಲಸಕ್ಕಾದರೂ ಮಿತಿಯಿಲ್ಲ !! 

ಆಗೇನು ಮಾಡುವುದು ? ಮೇಲಿಂದ ಮೇಲೆ ಸಾಹಸ ಮಾಡಿ ನೋಡಿದನು ! 

ಸಾಹಸವೆಲ್ಲವೂ ಕೇವಲ ನಿರರ್ಥಕ ! ನಿಷ್ಪಲ ! ! ಕಾಳೀಚರಣನು ತಾನೆಂತು 

ಬಿಡಿಸಿಕೊಳ್ಳುವುದು ? ತನ್ನ ಮುಂದಿನ ಪರಿಣಾಮವೇನು ? ಎಂದು ಮೊದ 

ಲಾಗಿ ಆಲೋಚಿಸುತ್ತಿರಲು, “ ಅವನು ಸಹಾಯರಹಿತನಾಗಿ ಬಿದ್ದುಕೊಂಡು 

ಏನು ಮಾಡುತ್ತಿರುವನು ? ಈ ಬಂಧನದಿಂದ ಹೇಗೆ ಮುಕ್ತನಾಗುವನು ? " 

ಎಂದುಕೊಂಡು ನೋಡಲು ಕುತೂಹಂಯುಕ್ತನಾಗಿರುವನೋ ಎಂಬಂತೆ 

ಕುಮುದಬಾಂಧವನು ಪೂರ್ವಾದ್ರಿಯನ್ನಡರಿಸುತ್ತಲೂ ನೋಡತೊಡಗಿ 

ದನು ! ಚಂದ್ರನ ಅಂದವಾದ ಮುಖದಿಂದ ಹೊರಸೂಸುತ್ತಿದ್ದ ಸ್ಪಚ್ಛತರ 

ಮರೀಚೆಗಳು ಅವನಿಯನ್ನು ಅಂದವಾಗಿ ಅಲಂಕರಿಸುತ್ತಿದ್ದುವು. ಆನಂದ 

ದಾಯಕವಾದ ಆ ಅಮೃತಕಿರಣಗಳು ಆ ಮುರುಕು ಮನೆಯನ್ನಾವರಿಸಿ 

ಅಲ್ಲಿದ್ದ ಸಂದುಗಳ ಮಾರ್ಗವಾಗಿ ಮನೆಯೊಳಗೂ ಪ್ರವೇಶಿಸಿದವು. 

ರಾರಾಜಿಸುತ್ತಿರುವ ರಜನೀಪತಿಯನ್ನು ಕಂಡು, ಕಾಳೀಚರಣಸಿಗೆ 

ಮನಸ್ಸಿನಲ್ಲಿ ಒಂದು ವಿಧವಾದ ಅನಿರ್ವಚನೀಯವಾದ ಆನಂದವು ಅಂಕುರಿಸಿ 

ಪುನಃ ಆ ಬಂಧನದಿಂದ ವಿಮುಕ್ತನಾಗಲು ಪ್ರಯತ್ನಿಸಿದನು ! ಸಮೀಪ 

ದಲ್ಲಿಯೇ ಗತಪ್ರಾಣವಾಗಿ ಬಿದ್ದಿದ್ದ ಮನ್ನುವನ್ನು ಕಂಡನು. ಆಗ ಒಂದು 

ಉಪಾವು ತಲೆದೋರಿತು ! ಸಹಸಾ ಆ ಶವದ ಕಡೆಗೆ ಉರುಳಿಕೊಂಡು 

ಹೋದನು ! ! ಶವದ ಮೇಲೆ ಮುಖವನ್ನಿಟ್ಟು ಹುಡುಕಿದನು ! ! ! ಅವನ ನಂದಕ್ಕೆ ಮಿತಿಯಿಲ್ಲದಂತಾಯಿತು ! ಅದೇಕೆ ? ಮನ್ನುವಿನ ಹೃದಯದಲ್ಲಿ 

ನಾಟಿಕೊಂಡಿದ್ದ ಚೂರಿಯು ಹಾಗೆಯೇ ಇದ್ದಿತು ! ! ಅವನಿಗೆ ಬೇಕಾಗಿ 

ದ್ದುದೂ, ಅದೆ ! ! ! ಅದನ್ನು ಹಲ್ಲುಗಳಿಂದ ಕಚ್ಚಿ, ಸೆಳೆದುಕೊಂಡು ಕಾಲಿಗೆ 

ಕಟ್ಟಿದ್ದ ಹಗ್ಗವನ್ನು ಕತ್ತರಿಸಲುಪಕ್ರಮಿಸಿದನು ! ಸ್ವಲ್ಪ ಕಾಲದಲ್ಲಿಯೇ 

ಕತ್ತರಿಸಿದನು. ಕಾಲುಗಳ ಬಂಧನವು ನಿವೃತ್ತಿಯಾಯಿತು ! ! ! ಕೈಯಲ್ಲಿ 

ದ್ದ್ಚುವು ಕಬ್ಬಿಣದ ಕೊಳಗಳು ! ಅವುಗಳ ಮೇಲೆ ಚೂರಿಯ ಸಾಹಸವೆ? 

ಚೂರಿಯನ್ನು ಒಗೆದನು. ಅದಕ್ಕೂ ಒಂದುಪಾಯವು ತಲೆದೋರಲು

೬೧----------------------------------------------------------------------

ಮೇಲಕ್ಕದ್ದು ಮನೆಯ ಎಲ್ಲಾ ಭಾಗಗಳನ್ನೂ ಹುಡುಕುತ್ತ ಬಂದನು. 

ಅಲ್ಲಲ್ಲಿ ಮೊಳೆಗಳು ಗೋಡೆಗಳಿಗೆ ನಾವಿದ್ದಿದ್ದುದನ್ನು ಕಂಡು ಅವುಗಳಿಂದೆಂ 

ತಾದರೂ ತನ್ನ ಕೈಗಳಲ್ಲಿದ್ದ ಕೊಳಗಳನ್ನು ತೆಗೆದು ಕೊಳ್ಳಬೇಕೆಂದಂದು 

ಕೊಂಡು ಒಹು ಸಾಹಸದಿಂದ ಕೈಗಳನ್ನು ಮುಂದಕ್ಕೆ ತಿರುಗಿಸಿ 

ಕೊಂಡು ಆ ಕೋಳಗಳ ಬೀಗದ ತೂತನ್ನು ಮಳೆಗೆ ಸಿಗಿಸಿ ಅದರ 

ಕೀಲು (Spring) ಮಳೆಯು ಆಣೆಗೆ ತಗಲಿಕೊಳ್ಳುವವರೆಗೂ ಮೆಲ್ಲನೆ ಅಲು 

ಗಾಡಿಸಿ, ಅದು ತಗಲಿಕೊಳ್ಳಲು, ಬಲವಾಗಿ ಎಳದನು, ಬೀಗವು ತೆರೆ 

ಯಿತು ! ಬಂದು ಕೈ ಯಿ ಬಿಡುವಾಯಿತು !! ಉಪಾಯವಾಗಿ ಆ ಕೋಳ 

ವನ್ನು ತೆಗೆದು ಕೊಂಡು ನಿರಾಯುಧನಾಗಿದ್ದುದರಿಂದ ಮನೆಯಲ್ಲೇನಾ ದರೋ ಸಿಗಬಹುದೆಂದಂದುಕೊಂಡು ಮನೆಯಲ್ಲಿ ಹುಡುಕಿದನು, ಏನೂ 

ಸಿಗದಿರಲು ತನ್ನನ್ನು ಬಂಧವಿಮು ನನ್ನಾಗ ಗೊಳಿಸಿದ ಆ ಚೂರಿಯನ್ನು 

ಪ್ರೀತಿಯಿಂದಲೋ ಅಥವಾ ಆವುದಾದರೊಂದು ಆಯುಧವು ತನ್ನಲ್ಲಿರಬೇ 

ಕೆಂದೋ ತೆಗೆದುಕೊಂಡು ಬಾಗಿಲಸಮೀಪಕ್ಕೆ ಹೋದನು. ಅಷ್ಟರಲ್ಲಿಯೆ, 

ಕಾಳೀಚರಣನು ಸಿಕ್ಕಿಬಿದ್ದಿರುವನೆಂಬ ವರ್ತಮಾನವನ್ನು ಕೇಳಿದ ಆ 

ಗುಂಪಿನ ಜನಗಳ್ಯಾರೋ ಬಹುಸಂತೋಷದಿಂದ ಮಾತನಾಡಿಕೊಳ್ಳುತ್ತ 

ಬರುತ್ತಿರುವಂತೆ ಭಾಸವಾಗಲು, "ಇದೀಗ ಸುಸಮಯವೆ ! ಇನ್ನು ಸ್ವಲ್ಪ 

ಮುಂಚೆಯೆ ಅವರು ಬಂದಿದ್ದರೆ ನನ್ನ ಗತಿಯೇನಾಗುತ್ತಿತೋ ! ಎಂದಂದು 

ಕೊಂಡು, ಕಾಳೀಚರಣನು ಆಗ ತಾನು ತಪ್ಪಿಸಿಕೊಂಡು ಹೊರಗಾಗುವ 

ಮಾರ್ಗವನ್ನು ಆಲೋಚಿಸುತ್ತಿದ್ದನು. ಅಷ್ಟರಲ್ಲಿಯೇ, ಬಾಗಿಲು ತೆರೆ 

ಯಲ್ಪಟ್ಟಿತು. ಕಾಳೀಚರಣನು ಬಾಗಿಲಿನ ಹಿಂಭಾಗದಲ್ಲಿ ಓರೆಯಾಗಿ 

ನಿಂತುಕೊಂಡನು, ಅವರು ಬಾಗಿಲನ್ನು ತೆಗೆದುಕೊಂಡು ಒಳಗೆ ಪ್ರವೇ 

ಶಿಸಿದರು. ತತ್ ಕ್ಷಣವೆ ಕಾಳೀಚರಣನು ಅದೇ ಬಾಗಿಲಿನ ಮೂಲಕ 

ಹೊರಗಾಗಿ ಬಾಗಿಲನು ಮುಚ್ಚಿಕೊಂಡನು. 

ಕಾಳೀಚರಣನು ಸುರಕ್ಷಿತವಾಗಿ ಹೊರಗೆ ಬಂದವನು ತಲೆತಪ್ಪಿಸಿ 

ಕೊಂಡು ಹೊರಟ ಹೋಗದೆ, ಆ ಬಾಗಿಲಿನ ಸಮೀಪದಲ್ಲಿಯೇ ನಿಂತು 

ಕೊಂಡನು. ಅದೆಂತಹ ಭಯ ಲೇಶವೂ ಇಲ್ಲದ, ಹಿಡಿದ ಕೆಲಸವನ್ನು ಸಾಧಿ 

ಸಲು ಏನೆಡರು ಬಂದರೂ ಹಿಮ್ಮೆಟ್ಟಿದ ಸಾಹಸವೊ ! ಅತ್ಯಲ್ಪ ಕಾಲಕ್ಕೆ 

೬೨-----------------------------------------------------------------------------------

ಮುಂಚೆ ಅದೇ ಸ್ಥಳದಲ್ಲಿ ಮೃತ್ಯುವಕನಾಗಿ ಬಿದ್ದಿದ್ದ ಕಾಳೀಚರಣನು 

ಅಂತಹ ಸವರಾತ್ರೆಯಲ್ಲಿ, ಭಯಂಕರ ಕಾನನದಲ್ಲಿ, ಶತ್ರುಸಮೂಹದಿಂದ 

ಆವೃತನೂ ಆಗಿರುವುದಲ್ಲದೆ, ಕೇವಲ ಸಮೀಪಗತರಾಗಿರುವ ಮೂರು 

ಜನರಿಗೆ ಏಕಾಂಗಿಯ ನಿರಾಯುಧನೂ ಆಗಿರುವ ತಾನು ಎದುರಾಗಲು 

ಹೊಂಚುಕಾಯುತ್ತಿರುವನಲ್ಲ ! ಪಾಣಾಪಾಯವೆಂಬುದು ಇವನಿಗೇನು 

ತೃಣವಲ್ಲಘುವೊ ? 

ಒಳಗೆ ದೀಪವನ್ನು ಹಚ್ಚಿಕೊಂಡು ನೋಳಲಾಗಿ, ಅಲ್ಲಿ ಅವರಿಗೆ 

ಮನ್ನುವಿನ ಕಲೇವರವೂ ಮತ್ತು ರಕ್ತಪ್ರವಾಹದ ಭಯಂಕರ ದೃಶ್ಯ 

ವಲ್ಲದೆ ಅವರ ಅಪೇಕ್ಷಿತ ವ್ಯಕ್ತಿಯು ಅಲ್ಲಿರಲಿಲ್ಲ. ಅವರಾಶೆಯು ನಿರಾಶೆ 

ಯಾಯಿತು ! ಭಯಾಶ್ಚರ್ಯಭರಿತರಾಗಿ, “ ಅಯ್ಯೋ ! ಪಿಶಾಚಿರಂಡೇ 

ಮಗನೇ !! ಕೈಕಾಲುಗಳನ್ನು ಕಟ್ಟಿ ಕೆಡವಿದ್ದರೂ ನೀನು ತಪ್ಪಿಸಿಕೊಂಡಿ 

ದ್ದೆಂತು ? ನಿನಗೇನಾದರೂ ಇಂದ ಜಲಾದಿ ಮಾಯಾವಿದ್ಯೆಗಳು ಬರುವುವೋ 

ಅಥವಾ ನಾವು ಸ್ವಾವಸ್ಥೆಯಲ್ಲಿರುವೆವೋ ! ಇಲ್ಲ ನೀನು ಪಕ್ಕಾ ತಾಯಿ 

ಗ್ಗಂಡನು !! ನಿನ್ನನ್ನು ಕೈಗೆ ಸಿಕ್ಕಿದ ಸಮಯದಲ್ಲಿ ಇಲ್ಲದೆ ಬಿಟ್ಟವರೆ 

ದಡ್ಡರು ! ” ಎಂದು ಹೇಳಿಕೊಳ್ಳುತ್ತಿರುವಷ್ಟರಲ್ಲಿಯೆ, “ ನಿಮ್ಮ ಮೃತ್ಯುವು 

ನಿಮ್ಮಿಂದ ಕೊಲ್ಲಲ್ಪಡುವುದೆಂದಾದರೂ ಉಂಟೆ ? ” ಎಂದು ಆರ ಹೇಳಿ 

ದಂತೆ ಅವರಿಗೆ ಕೇಳಿಬರಲು, ಅವರು ಮೊದಲಿಗಿಂತ ಶತಶಃ ಅಧಿಕ 

ವಾಗಿ ಭಯವಿಹ್ವಲರಾಗಿ, " ಅಯ್ಯೋ ! ಅವನಿಲ್ಲಿಯೆ ಇರುವಂತಿದೆ ! 

ಮುಂದೇನುಗತಿ !! ” ಎಂದಂದುಕೊಂಡು ಓಡಿ ಹೋಗಲು ಸಿದ್ಧರಾದರು ! 

ಕಾಳೀಚರನು ಬಾಗಿಲಿನಿಂದ ನಾತಿದೂರ ಸರಿದು ಕೆಲವು ಕಲ್ಲು 

ಗಳನ್ನಾಗಿಸಿಕೊಂಡು, ಬಾಗಿಲಿನ ಕಡೆಗೆ ನೋಡುತ್ತ ನಿಂತುಕೊಂಡಿ 

ದ್ದನು. ಗುರಿಯಿಟ್ಟ ಹೊಡೆಯುವುದರಲ್ಲಿ ಬಹು ಅಭ್ಯಾಸವಿತ್ತು. ಅವರು 

ಒಳಗಿನಿಂದ ಬಾಗಿಲನ್ನು ತೆರೆದ ಕೂಡಲೆ ಶಿಲಾವರ್ಷವಾದಂತೆ ಹತ್ತೆಂಟು 

ಕಲ್ಲುಗಳು "ಸುಯ್" ಗುಟ್ಟುತ್ತ ಬಹು ರಭಸದಿಂದ ಬಂದುವು ! ಆ 

ಮೂವರಲ್ಲಿ ಮುಂದಿದ್ದ ಇರ್ವರಿಗೆ ಪೂರಾ ಪೆಟ್ಟು ಬಿದ್ದು ತರಹರಿಸಲಾಗದೆ 

ಕೆಳಗೆ ಬಿದ್ದರು ಇನ್ನೊಬ್ಬನು ಓಡಲಾರಂಭಿಸಿದನು. ಕಾಳೀಚರಣನು 

ಆ ಓಡುತ್ತಿರುವವನನ್ನು ಬೆನ್ನಟ್ಟುವುದೆ ಉತ್ತಮವೆಂದು ಭಾವಿಸಿ ಅವನನ್ನು 

ಹಿಂಬಾಲಿಸಿದನು.

೬೩-------------------------------------------------------------------------

ಹೀಗೆಯೆ ಅವರಿರ್ವರೂ ಅತ್ಯಲ್ಪ ಕಾಲದಲ್ಲಿ ನಾಲ್ಕಾರು ಮೈಲಿಗ 

ಳಷ್ಟು ದೂರ ಓಡಿದರು. ಮುಂದೆ ಓಡತ್ತಿದ್ದವನಿಗೆ ಸೋಲುಂಟಾಗಿ 

ಅವನ ಓಟದ ವೇಗವು ಕಡಿಮೆಯಾಯಿ:ತು. ಕಾಳೀಚರಣನು ಶ್ರಮ 

ಸಹಿಷ್ಟು ವೂ, ಅಭ್ಯಾಸಬಲವುಳ್ಳವನೂ, ಆದುದರಿಂದ ಎಷ್ಟು ದೂರ ಬೇಕಾ 

ದರೂ ಓಡಲು ಶಕ್ತನಾಗಿದ್ದನು ! ಆದರೂ , ಬಹುದೂರವೇನೂ ಓಡುವ 

ಸಂಭವವು ಉಂಟಾಗಲಿಲ್ಲ. ಮುಂದೋಡುತ್ತಿದ್ದವನು ಸೋತು ನೆಲದ 

ಮೇಲೆ ಬಿದ್ದು ಬಿಟ್ಟನು. 

ಕಾಳೀಚರಣನು ಅವನನ್ನು ಸಮೀಪಿಸಿದಾಗ ಅವನಿಗೆ ಮಾತನಾ 

ಡಲೂ ಕೂಡ ಶಕ್ತಿಯಿಲ್ಲದಷ್ಟು ಆಯಾಸವಾಗಿ, ಕೇವಲ ನಿತ್ರಾಣನಾಗಿ 

ಬಿದ್ದೊದ್ದಾಡುತ್ತಿದ್ದನು. ಎದುರಾಳಿಯ ವಿಶ್ರಾಂತಿಗೆ ಸ್ವಲ್ಪ ಅವಕಾಶ 

ವನ್ನಿತ್ತು ತಾನೂ ಸ್ವಲ್ಪ ಉಪಚರಿಸಿದನು. ಅವನಿಗೆ ಸ್ವಲ್ಪ ಸಮಾಧಾನ 

ವಾದಮೇಲೆ ಭಯೋತ್ಪಾತವನ್ನುಂಟುಮಾಡಿ ತಾನು ಕೇಳುವ ಪ್ರಶ್ನೆಗಳಿಗೆ 

ಸಮಂಜಸವಾದ ಉತ್ತರಗಳನ್ನಿತ್ತು ಆ ಕೇಸಿನ ಸಕಲ ಸಂಗತಿಗಳನ್ನೂ 

ತಿಳುಹಿಸಿದರೆ ಅವನಿಗೆ ಅವನಿಧವಾದ ಶಿಕ್ಷೆಯ ಆಗುವುದಿಲ್ಲ ಎಂದು ಹೇಳಿ, 

ಅವನಿಗೆ ಅನೇಕ ಪ್ರಶ್ನೆಗಳನ್ನು ಹಾಕಿದನು, ಕಾಳೀಚರಣನೆಷ್ಟು ಪ್ರಯತ್ನ 

ಮಾಡಿದರೂ, ಅವಸಿಂದ, “ ನಮ್ಮ ಗುಂಪಿಗೆ ಒಬ್ಬ ಯಜಮಾನನಿರುವನು ” 

ನಾವೆಲ್ಲರೂ ಅವನನ್ನು ದಣಿಯೆಂದು ಕರೆಯುವೆವಲ್ಲದೆ ನಮಗೆ ಅವನ 

ಹೆಸರು ಗೊತ್ತಿಲ್ಲ ! ನಾವೆಲ್ಲರೂ ಅಲ್ಲಿ ಕಾಲಹರಣಮಾಡುತಿದ್ದು, 

ದಿನಕೊಂದ ಸಲ ಅವನೆಗೆ ಬಂದು ಒಬ್ಬಿಬ್ಬರು ಕಲೆತು ಸಂಗತಿಯನ್ನು 

ತಿಳಿದುಕೊಂಡು ಹೋಗುವುದಲ್ಲದೆ, ಮಜವಾನನು ಎಲ್ಲಿಯವನೆಂಬುದು 

ಕೂಡ ಗೊತ್ತಿಲ್ಲ ! ನಮ್ಮ ಗುಂಪಿನವರಲ್ಲಿ ಸತ್ತು ಹೋದ ಮನ್ನು ಎಂಬವನೆ 

ಬಹುಶೂರ; ನಿಮಗೆ ಇನ್ನೊಬ್ಬ ಜವಾನನಿರುವನು. ಅವನು ಊರೊಳಗೇ 

ಇದ್ದು ಕೊಂಡು, ಅಲ್ಲಿನ ಸಂಗತಿಗಳನ್ನು ತಿಳಿಸುತ್ತಾ ಬಂದಂತೆ ಇಲ್ಲಿ ತಕ್ಕ 

ಏರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ ! ಹುಡುಗಿಯರಿಗೆ ಸುರಕ್ಷಿತ 

ರಾಗಿ ಇರುತ್ತಾರೆ ಆದರೆ ಎಲ್ಲಿರುತ್ತಾರೆಯೋ ಗೊತ್ತಿಲ್ಲ !! ಎಂದು 

ತಿಳಿದು ಬಂದಿತ್ತಲ್ಲದೆ ಹೆಚ್ಚಿನ ಸಂಗತಿಗಳು ಹೊರಹೊರಡಲಿಲ್ಲ. 

ವೃಥಾ ಕಾಲಹರಣದಿಂದ ಪ್ರಯೋಜನವಿಲ್ಲವೆಂದಂದುಕೊ೦ಡು, ಕಾಳೀ 

ಚರಣಣನು ಅವನನ್ನು ಬಂದಿಯಾಗಿ ಕರೆದುಕೊಂಡು ಹೊರಟು ಹೋದನು. 

..........

೬೪--------------------------------------------------------------------------------------

ದ್ವಾದಶ ಗುಚ್ಛ,

ನಿರ್ನಿಮಿತ್ತವಾಗಿ ಒಬ್ಬರ ಮನೆಗೊಬ್ಬರು ಯಾರುತಾನೆ ಬರು 

ವರು ? ವೃಥಾ ಯಾರೂ ಬರುವುದಿಲ್ಲ ! ಅದರಲ್ಲಿಯೂ 

ಇಷ್ಟು ಜಾಗ್ರತೆ !! ಬೆಳಗಾಗುತ್ತಲೆ ! ಎದ್ದವರಂತೆಯೆ  

ಬರಬೇಕಾದರೆ ಏನಾದರೊಂದು ಅಗತ್ಯವಾದ ಕೆಲಸವಿದ್ದೇ ಇರಬೇಕು ! 

ತತ್ರಾ ಪಿ, ಈ ಪೋಲಿಸ್ ಇನ್‌ಸ್ಪೆಕ್ಟರ್‌ ಇಷ್ಪು ಜಾಗ್ರತೆ ನನ್ನ ಮನೆಗೆ 

ಬರಬೇಕಾದರೆ, ಏನೋ-ಅಂತೂ ಗ್ರಹಚಾರಕಾಲ ! ಸ್ಥಿತಿಯು ಚನ್ನಾ 

ಗಿಲ್ಲ !! " ಎಂದಂದುಕೊಳ್ಳುತ್ತಾ ಕ್ಷಣಕ್ಷಣಕ್ಕೂ ತೀಕ್ಷ್ಣದೃಷ್ಟಿಯಿಂದ 

ಇನ್‌ಸ್ಪೆಕ್ಟರಕಡೆ ನೋಡುತ್ತ, " ಇವರಾವುದೋ ಒಂದು ಕುತಂತ್ರ 

ಸಾಧನೆಗೋಸ್ಕರ ಬಂದಿರಬೇಕಲ್ಲದೆ ಅನ್ಯಥಾ ಇಲ್ಲ" ಎಂದೂ ” ಇದರಿಂದ 

ನನಗೆ ಇನ್ನೇನು ಅನಿಷ್ಟ ಸಂಘಟನೆಯಾಗುವುದೋ ! ಏನಾದರೂ ಆಗಲಿ !! 

ದೈವೇಚ್ಛೆ ! ಕಾಲಗತಿ !! ನಾನೇನು ತಾನೆ ಮಾಡಬಲ್ಲೆ !!! ಪುರಾಕೃತವನ್ನು 

ಮೀರುವುದೆಂದರೆ ತ್ರಿಪುರಹರನಿಗೂ ಸಾಧ್ಯವಲ್ಲ ! ಇದರಲ್ಲಿ ನನ್ನ ಯತ್ನ 

ವೇನು ? ವಿಷ್ವವಿಧಾತನ ವಿಚಿತ್ರ ಮಹಿಮೆ ಹೇಗೆ ಪ್ರವರ್ತಿಸುವುದೋ ! ” 

ಎಂದು ಮೊದಲಾಗಿ ಆಲೋಚಿಸುತ್ತ ತನ್ನ ಮನಸ್ಸಿನ ಭೀತಿಯನ್ನು 

ತೋರ್ಪಡಿಸದೆ, ನಷ್ಟಾಶಂಕನಾದವನಂತೆ ಹಸನ್ಮುಖಿಯಾಗಿ ದೇವೇಶನು 

ಇನ್‌ಸ್ಪೆಕ್ಷರೊಂದಿಗೆ ಮಾತನಾಡುತ್ತಿದ್ದನು. ಇನ್‌ಸ್ಪೆಕ್ಟರು ಎಷ್ಟು ಹೊತ್ತಾ

 ದರೂ ಕಾಲೋಚಿತವಾದ ವಾದವಿವಾದಗಳಿಂದ ಹೊತ್ತು ಕಳೆಯುತ್ತ ಕುಳಿತು 

 ಕೊಂಡೇಇದ್ದುದನ್ನು ನೋಡಿ, ದೇವೇಶನಿಗೆ “ ಇದರಂತ್ಯವು ಹೇಗಾಗು 

 ವುದೋ ! ” ಎಂಬ ಕುತೂಹಲವು ಬೇರೂರಿತು. 

ಎಂಟುಘಂಟೆಯ ಸಮಯವಾಗಿರಬಹುದು, ಆಗ ಟಪಾಲು ಇಲಾ 

ಖೆಯ ಕರ್ಮಚಾರನೊಬ್ಬನು ದೇವೇಶನ ಹಸ್ತದಲ್ಲೊಂದು ಪತ್ರವನ್ನಿ 

ತ್ತನು. ದೇವೇಶನು ಪತ್ರದ ಸಂಗತಿಯನ್ನು ನೋಡಿಕೊಂಡನು. ಮನ 

ಸ್ಸಿನಲ್ಲಿ ಭೀತಿಯು ದೃಢಮೂಲವಾಗಲಾರಂಭಿಸಿತು. ಮುಖವು ವಿವರ್ಣ 

ವಾಯಿತು ! ಆ ಕಾಗದವನ್ನು ಹಾಗೆಯೇ ಮುಚ್ಚಿ ಮತ್ತಾರಿಗೂ ಸಿಕ್ಕ

೬೫-------------------------------------------------------------------------

ದಂತೆ ಸುಡಬೇಕೆಂದು ನಿರ್ಧರಿಸಿದನು. ಅಷ್ಟರಲ್ಲಿಯೆ ೪೯ಸ್ಪೆಕರು ದೇವೇ 

ಶನ ಕಡೆ ನೋಡಿ, “ ಏನು ಸ್ವಾಮಿ ? ಕಾಗದವನ್ನು ನೋಡಿ ಬಹು ಭೀತ 

ರಾದಂತಿದೆ ! ಸಂದರ್ಭವೇನು? ಏಕೆ ? ಗೋಪ್ಯವೋ ? ನನ್ನೊಂದಿಗೆ ಹೇಳ 

ಬಹುದಾಗಿದ್ದರೆ ಹೇಳಿ ! ” ಎಂದು ಹೇಳುತ್ಯ ಉತ್ಸಷ್ಟರಾಗುವಷ್ಟರಲ್ಲಿಯೇ 

ದೇವೇಶನು ಆ ಕಾಗದದ ಸಂಗತಿಯು ಇನ್‌ಸ್ಪೆಕ್ಟರಿಗೆ ತಿಳಿದರೆ ನನ್ನ ಪರಿ 

ಣಾಮವು ನೆಟ್ಟಗಾಗಲಾರದೆಂದು ತಿಳಿದು, ಎಂತಾದರೂ ಅದು ಜನರ ಕೈಗೆ 

ಸಿಕ್ಕದಿರುವಂತೆ ಮಾಡಬೇಕೆಂಮ ನಿರ್ಧರಿಸಿ ; “ ಏನಾದರೇನು ? ನನ್ನ ಗ್ರಹ 

ಚಾರ ! ಅದರ ಗೊಡವೆ ತಮಗೇಕೆ ? ” ಎಂದಂದು ಸರಕ್ಕನೆ ಹಿಜರಿದನು. 

ಇನ್‌ಸ್ಪೆಕ್ಟರು, “ ಏ ಕಳ್ಳ ಮುದುಕ  !! ಜೋಕೆ ! ಯಾರೊಂದಿಗೆ ಮಾತ 

ನಾಡುತ್ತಿರುವೆ ಗೊತ್ತಿದೆಯೋ ?    ಅ ಕಾಗದಕ್ಕಾಗಿಯೇ ನಾನಿದುವರೆಗೆ ಕುಳಿ 

ತ್ತಿದ್ದುದು, ಕಾಗವನ್ನು ಕೊಡುವೆಯೋ ಇಲ್ಲವೊ ? ಎಂದು ಘರ್ಜಿ 

ಸುತ್ತ ಎದ್ದು ಕಾಗದವನ್ನು ಕಿತ್ತುಕೊಳ್ಳಲು ಹೋಗಲು, “ ಏನಿರಯಾ ! 

ಇದೇನು ಬಲಾತ್ಕಾರ ? ಪರರ ಮನೆಯ ಗೃಹಕೃತ್ಯದ ಕಾಗದಗಳನ್ನೆಲ್ಲ 

ಪೊಲೀಸಿನವರ ಹೆದರಿಕೆಗಾಗಿ ಕೊಟ್ಟುಬಿಡಬೆಕೋ ? ನಾನು ಕೊಡುವುದೇ 

ಇಲ್ಲ ! ಏನು ಮಾಡಿವಿರೋ ಮಾಡಿ ! ' ಎಂದು ಕಂಪಿತಸ್ವರದಿಂದ 

ಹೇಳುತ್ತ ಕಾಗದವನ್ನು ಹರಿದು ಬಾಯಿಯಲ್ಲಿ ಹಾಕಿಕೊಳ್ಳಲು ಹೋಗಲು, 

ಇನ್‌ಸ್ಪೆಕ್ಟರು ಕೋಪೋದ್ದಿಪ್ತನಾಗಿ ದೇವೇಶನಿಗೆ ಬಲವಾದೊಂದು 

ಗುದ್ದನ್ನು ಕೊಟ್ಟರು. ದೇವೇಶನು ತಡೆಯಲಾರದೆ ಬಿದ್ದು  ಬಿಟ್ಟನು. 

ಇನ್‌ಸ್ಪೆಕ್ಟರು, ಕಾಗದದ ಚೂರುಗಳನ್ನು ತೆಗೆದುಕೊಂಡು, ದೇವೇಶನ 

ಮೇಲೆ ಸರಿಯಾದ ಕಾವಲನ್ನಿರಿಸಿ ಕಾಳೀಚರಂನನ್ನು ನೋಡಲು ಹೃಷ್ಟ 

ಚಿತ್ತರಾಗಿ ಹೊರಟುಹೋದರು. 

ಕಾಳೀಚರಣನಿಗೆ ಹಿಂದೆ ಎರಡು ಮೂರು ರಾತ್ರೆಗಳಿಂದ ನಿದ್ರೆಯಿಲ್ಲದಿ 

ದ್ದುದರಿಂದ, ಅವನ ಆ ಉದ್ಯಮಕಾರ್ಯಗಳಿಗುಂಟಾದ ಆಯಾಸದಿಂ 

ದಲೂ, ಮನ್ನುನುವಿನೊಂದಿಗೆ ಹೋರಾಡಿದಾಗ ಆcಟಾದ ಚೂರಿಯ ಗಾಯ 

ಗಳ ಬಾಧೆಯಿಂದಲೂ, ಅವನು ನಿಶಾಂತನಾಗಲು ಮನೆಂದಲ್ಲಿಯೇ ಇದ್ದನು. 

ಆದರೇನು ? ವಿಶ್ರಮಿಸಿ ಕೊಂಡನೆ ? ಸ್ವಭಾವತಃ ವಿಶ್ರಾಂತಿಯನ್ನಪೇಕ್ಷಿಸು 

ವವನಲ್ಲ. ಒಂದುವೇಳ ಅಪೇಕ್ಷಿಸಿದರೂ ಅದು ಒದಗುವ ಸಂಭವವೂ 

೬೬--------------------------------------------------------------------------

ಇರಲಿಲ್ಲ ! ತಾವೆಷ್ಟು ಸಂಕಷ್ಟದಲ್ಲಿದ್ದರೂ ತಾವುದ್ದೇಶಿಸಿದ ಕಾರ್ಯದಲ್ಲಿ 

ಕೃತಕೃತ್ಯರಾಗುವವರೆಗೂ, ಸ್ವಸ್ಥಚಿತ್ತರಾಗಿ ಆರುತಾನೆ ಇರುವರು ? 

ತಾತ್ರಾಪಿ ಕಾಳೀಚರಣನಿಗೆ ಅಂತಹ ಚಿತ್ತ ಶಾಂತಿಯು ಪ್ರಕೃತ್ಯಾ ದುರ್ಲಭ ! 

ಆಗವನು ನಾನಾ ವಿಧವಾಗಿ ಆಲೋಚಿಸುತ್ತಿದ್ದನು. ಆಲೋಚನಾ ತರಂಗ 

ಗಳ ಹೊಡೆತದಿಂದ ಒಂದೊಂದು ಬಾರಿ, ಅವನಿಗಾವುದೂ ಅಸಾಧ್ಯವಲ್ಲ 

ವೆಂಬುದಾಗಿ, ಏನಾದರೂ ಸರಿಯೆ, ಆಗಲೆ ಹೊರಟು, ವಿರೋಧಿಗಳನ್ನೆಲ್ಲಿ 

ದ್ದರೂ ಹುಡುಕಿ ತರುವವರೆಗೂ ಹಿಂದಿರುಗಬಾರದೆಂಬ ಪ್ರತಿಜ್ಞೆಯು 

ರೂಢಮಲವಾಗಿದ್ದುದರಿಂದ, ವಿಶ್ರಾಂತಿಯನ್ನು ವಿಷಪಾಯವಾಗಿ ಎಣಿಸು 

ತ್ತಿದ್ದನು, ಆಗ ಅವನು, " ಇಷ್ಟಾದರೂ, ಕೃತ್ಯಕ್ಕೆ ಆಧಾರಭೂತವಾಗರು 

ವುದು ಏನು ? ಈ ಗುಂಪಿಗೆ ಯಜಮಾನನಾರು ? ಹುಡುಗಿಯರು ಜೀವಂ 

ತೆಯರೇ, ಅಥವಾ ಮೃತರೆ ? ಇವುಗಳ ಸರಿಯಾದ ಸ್ಥಿತಿಯು ಇನ್ನೂ ಪೂರ್ಣ 

ವಾಗಿ ವ್ಯಕ್ತವಾಗಲಿಲ್ಲವಲ್ಲ ! ” ಎಂದು ಮೊದಲಾಗಿ ಚಿಂತಿಸುತ್ತಿರುವಷ್ಪ 

ರಲ್ಲಿದಯೆ, ಇನ್‌ಸ್ಪೆಕ್ಟರು, “ ಮಹಾಶಯರೆ ! ” ಎಂದಂದು ಒಳಗೆ ಪ್ರವೇಶಿಸಿ 

ದರು 

ಕಾಳೀಚರಣನು ಎದ್ದು, “ ದಯಮಾಡಬೇಕು ! ರಾಯರು 

ಹೋಗಿದ್ದ ಸಮಾಚಾರವೇನು ಅನುಕೂಲವೋ ಪ್ರತಿಕೂಲವೊ ? ಎಂದು 

ಪ್ರಶ್ನಿಸಲು, ರಾಯರು ಮನಸ್ಸಿನಲ್ಲಿದ್ದ ಆತುರತೆಯ ಉದ್ಯೋಗದಿಂದ ಆವ 

ಮಾತನ್ನೂ ಹೇಳಲು ಆಗದೆ ಮೊದಲು ಕೈಯಲ್ಲಿದ್ದ ಕಾಗದದ ಚೂರು 

ಗಳನ್ನು ಕೊಟ್ಟರು. ಕಾಳೀಚರಣನು ಕಾಗದದ ಚೂರುಗಳನ್ನೆಲ್ಲ ಸರಿ 

ಯಾಗಿ, ವಾಕ್ಯ ರಚನೆಯಾಗುವಂತೆ, ಸೇರಿಸಿ ಓದಿನೋಡಿದನು. ಆಶ್ಚರ್ಯ 

ಚಕಿತನಾದನು ! ಆಶ್ಚರ್ಯದೊಂದಿಗೆ ಈಷದಾಕ್ರೋಶವೂ ತಲೆದೋರಿತು 

ಆ ಕಾಗದದ ಸಂಗತಿಯನ್ನೂ, ಹಿಂದಿನ ಪುಟನಾವಳಿಯನ್ನೂ ಕ.ರಿತು ಸಮಾ 

ಲೋಚಿಸಿ, ಹಾಗೆಯೆ ತಲೆದೂಗಿ, “ ಇರಲಿರಲಿ ! ನೀವು ಅಸಮಾನ ಸಾಹ 

ಸಿಗಳ ಸರಿ !! ಇದುವರೆಗೆ ಈ ಕಾ೪ಚರಣನೊಂದಿಗೆ ಹೋರಾಡಿದವರಲ್ಲಿ 

ನೀವೇ ಸಾಹಸಿಗಳು ! ಚತುರರು ! ಆದರೆ, ದುರ್ಮಾರ್ಗದ ಚಾತುರ್ಯಕ್ಕೆ 

ದುಷ್ಫಲವೇ ಫಲವೆಂಬುದನ್ನು ಚನ್ನಾಗಿ ತಿಳಿದಿರಿ ! ಇಷ್ಟರಮಟ್ಟಿಗೆ ಕಾಳೀ 

ಚರಣನನ್ನು ಮೋಸಪಡಿಸಲೆಳಸಿದವರಲ್ಲಿ ನೀವೇ ಅಗ್ರಗಣ್ಯರು ! ಆದ 

೬೭------------------------------------------

ರೇನು ? ಪರಸ್ಪರ ಸಾಹಸವು ಪರಿಣಾಮದಲ್ಲಿ ತಾನೆ ಗೊತ್ತಾಗುವುದು ! 

ಹಿಡಿದ ಕಾರ್ಯದಲ್ಲಿ ಕೃತಕೃತ್ಯನಾಗದಿರುವ ಅಪಮಾನಕ್ಕಿಂತಲೂ ಹೇಯ 

ವಾದುದು ಮತ್ತಾವುದೂ ಇಲ್ಲವೆಂದು ಈ ಕಾಳೀಚರನು ಭಾವಿಸುವನು. 

ಸಮಯವು ಸಂಧಿಸಿದಾಗ ಎಲ್ಲವೂ ಸುಸೂತ್ರವೆ ! ” ಎಂದಂದುಕೊಂಡು, 

" ರಾಯರೆ, ವೃಥಾ ಕಾಲಹರಣದಿಂದ ಪ್ರಯೋಜನವಿಲ್ಲ. ಈ ಪಾಷಂಡ 

ರನ್ನು ಹಿಡಿದು ಶಿಕ್ಷಿಸುವವರೆಗೂ ನಾನು ಸ್ಪಸ್ಥ ಚಿತ್ತನಾಗಲಾರೆನು, ಇವ 

ರುಗಳನ್ನು ಸಜೀವವಾಗಿ ಹಿಡಿದು ತರಬೇಕು, ಇಲ್ಲವೆ ಅವರಿಂದ 

ನಾನು ಮೃತನಾಗಬೇಕು, ಹಾಗಿಲ್ಲದಿದ್ದರೆ ಈ ಪತ್ತೆದಾರಿಯ ಕೆಲಸವೂ, 

ನನ್ನ ಜೀವಿತವೂ, ನಿರರ್ಥಕವಲ್ಲವೆ ? ” ಎಂದಂದು, “ ಚಿಂತೆಯಿಲ್ಲ. ಅವ 

ಗೇನೇನು ಕುತಂತ್ರಗಳನ್ನು ಮಾಡುವರೋ ಮಾಡಲಿ, ನೀವು ಮಾತ್ರ 

ಬಹಳ ಎಚ್ಚರಿಕೆಯಿಂದಿರಬೇಕು. ಆವುದನ್ನೂ ಸತ್ಯವೆಂದು ನಂಬಿ 

ಕಾರ್ಯದಲ್ಲಿ ದುಡುಕಬೇಡಿ. ಆದರೂ ತಿಳಿದುಬಂದ ಸಮಾಚಾರಗಳಿಗೆ 

ತಕ್ಕ ಹಾಗೆ ಕಾರ್ಯವನ್ನು ನೆರವೇರಿಸಿಕೊಳ್ಳುವವರಂತಿರಬೇಕು. ಈಗ 

ಈ ಕಾಗದದ ಮರ್ಮವು ಎಷ್ಟರಮಟ್ಟಿಗಿರುವುದೆಂದು ಹುಡುಕಲು ಪ್ರಯ 

ತ್ನಪಡಬೇಡಿ. ದೇವೇಶನನ್ನು ಖೈದಿನಲ್ಲಿಡಿಸಿ, ಭುಜಂಗನಲ್ಲಿ ಬಾಹ್ಯತಃ 

ಅತಿಪ್ರೀತಿಯನ್ನು ತೋರಿಸುತ್ತ ಅವನ ಮೇಲೆ ಬಹು ಲಕ್ಷ್ಯವನ್ನಿಟ್ಟು 

ನೋಡಿಕೊಳ್ಳುತ್ತಿರಿ. ಈ ದಿನ ನಾನು ನಿಮ್ಮಧೀನದಲ್ಲಿಟ್ಟ ಖೈದಿಗೆ ತಪ್ಪಿ 

ಸಿಕೊಂಡು ಹೋಗಲು ಅವಕಾಶ ಕೊಟ್ಟು ಅವನು ಹೊರಟುಹೋಗುವಂತೆ 

ಮಾಡಿ. ಈ ವೇಳೆ ಅವರು ನನ್ನ ಹಿಡಿತದಿಂದ ತಪ್ಪಿಸಿಕೊಳ್ಳಲಾರರು, ” 

ಎಂದು ಹೇಳಿ ಅವರನ್ನು ಕಳುಹಿಸಿದನು, 

ಇನ್‌ಸ್ಪೆಕ್ಟರು ಮನೆಗೆ ಹೋಗುತ್ತ, “ ಇದೆಂತಹಕೃತ್ಯ! ಒಂದೊಂದು 

ವೇಳೆ ತಿಳಿದು ಬರುವ ವರ್ತಮಾನಗಳಲ್ಲಿ ಒಬ್ಬೊಬ್ಬ ಹೊಸ ಹೊಸ ಅಪ 

ರಾಧಿ !! ಇದರ ಗುಟ್ಟು ಹೀಗೇ ಸರಿಯೆಂದು ನಿರ್ಧರಿಸುವುದೆಂತು ? ಇದಾ 

ವುದೂ ನಿಜವಲ್ಲದೆ ಈ ತಂತ್ರವನ್ನು ನಡೆಸುತ್ತಿರುವ ಬೇರೊಬ್ಬ ಸೂತ್ರ 

ಧಾರನು ಇರುವ ಪಕ್ಷದಲ್ಲಿ ಅವನ ಸಾಹಸವನ್ನೆಷ್ಟೆಂದು ಹೇಳೋಣ” ಅನ 

ನೇನು ಸಾಮಾನ್ಯ ಕಳ್ಳನೆ ? ಸುಪ್ರಸಿದ್ಧ ಸಾಹಸಿಯಾದ ಕಾಳೀಚರನಿಗೇ 

ಇಷ್ಟು ತೊಂದರೆ ಕೊಡುವ ಈ ಜನರಿಗೆ ಈ ಬಡ ಪೊಲೀಸಿನವರು ಈಡೆ ? 

೬೮-----------------------------------------------------------------------------------

ಏನಾದರಾಗಲಿ ಕಾಳೀಚರಣನು ಹೇಳಿದಂತೆ ನಡೆದರೆ ಸರಿ ಅಲ್ಲದೆ ನನಗೆ 

ಬೇರೆ ಏನೂ ತೊಚುವುದಿಲ್ಲ” ಎಂದಂದುಕೊಂಡು ಮನೆಯನ್ನು ಸೇರಿ 

ದರು 

ಆ ದಿವಸ ಕಾಳೀಚರಣನು ತೋರಿಸಬಹುದಾದ ಸಾಹಸ ಚಮತ್ಕಾ 

ರಗಳನ್ನು ನೋಡದಿದ್ದ ಮೇಲೆ ಏನು ಪ್ರಯೋಜನವೆಂದಂದುಕೊ೦ಡು, 

" ಇಂತಹ ಸಂಭ್ರಮದಲ್ಲಿ ನನ್ನ ಪ್ರಿಯೆಯು ಇನ್ನೆಷ್ಟು ಸಂತೋಷಪಡುವಳೋ ! 

ಆದುದರಿಂದ ಅವಳಿಗೂ ಸಹ ಸಂಗತಿಯನ್ನು ತಿಳುಹಿಸಿ ನಾವೀರ್ವರೂ 

ಈ ದಿನ ಅವನ ಸಾಹಸವನ್ನು ನೋಡಬೇಕು ಎ೦ದಂದುಕೊಂಡು ಸಂಗ 

ತಿಯನ್ನು ಪ್ರಿಯೆಗೆ ತಿಳುಹಿಸಲೋಸುಗವೋ, ಏನೋ ಎಂಬುವಂತೆ ದಿನೇ 

ಶನು ಪಶ್ಚಿಮಾಭಿಮುಖನಾದನು. 

..............

ತ್ರಯೋದಶ ಗುಚ್ಛ 

ಮನಸಿಗೆ ಮಾಧುರ್ಯವನ್ನೂಶರೀರಕ್ಕೆ ಸೌಕ 

ರ್ಯವನ್ನೂ ಆವುದು ಅನುಗ್ರಹಿಸುವುದೋ 

ಅಂತಹ ಆ ವಿಶ್ರಾಂತಿಯನ್ನಪೇಕ್ಷಿಸಿದವರಾರು ? 

ನಿಯಮಿತಕಾಲಗಳಲ್ಲಿ ಗಂಭೀರವಾದ ವಿಶ್ರಾಂತಿಯನ್ನನು ಭವಿಸುವುದು 

ಮಾನವರ ಅಭ್ಯುದಯಕ್ಕೆ ಅವಶ್ಯಕವಾದುದಲ್ಲವೆ ? ಜೀವನದ ದ್ಥಿತ್ಯಂತರ 

ಗಳಲ್ಲಿ ಈ ವಿಶಾ೧ತಿ ವ ಸ್ವಭಾವವೂ ಅಂತೆಯೆ ! ಅದರ ಪರಿಮಿತಿಯೂ, 

ಅವನವನ ಮನಃಪ್ರವರ್ತನೆಗೂ., ಮತ್ತು ಆಯಾಯ ಸಂದರ್ಭಗಳಿಗೂ, 

ತಕ್ಕ ಹಾಗೆ ಮಾರ್ಪಾಗುವುದು. ಆರುತಮ್ಮುದ್ಯಮ ಕಾರ್ಯಗಳಲ್ಲಿ ಅತೀ 

೬೯------------------------------------------------------------------------ 

ಮೇಧಾಶಕ್ತಿಯನ್ನು ಪ್ರಾಮುಖ್ಯವಾಗಿರಿಸಿಕೊಂಡಿರುವರೋ, ಅವರಿಗೆ 

ಶಾರೀರಕಕ್ರಮವೇ ವಿಶ್ರಾಂತಿ, ಆರಿಗೆ ಅತ್ಯಂತ ಶಾರೀರಕಶ್ರಮವೇ 

ಮುಖ್ಯ ಸಾಧನವಾಗಿರುತ್ತದೆ, ಅವರಿಗೆ ಗಾಢನಿದ್ರೆಯ ವಿಶಾ೦ತಿ. 

ದರಿದ್ರರಿಗೂ, ಜುಗುಪ್ಸಾನ್ವಿತರಿಗೂ, ದುಃಖಿಗಳಿಗೂ, ದುರ್ವ್ಯಸನಿಗಳಿಗೂ, 

ಸಂತೋಷ ಮತ್ತು ಶಾಂತತೆಯೆ ವಿಶ್ರಾಂತಿ,ಪ್ರಾಯಶಃ ಕ್ಷಣಭಂಗುರ 

ಗಳಾದ ಪ್ರಾಪಂಚಿಕ ಸುಖಸಂತೋಷಗಳಲ್ಲಿ ನಿಮಗ್ನರಾಗಿ ದುರಹಂಕಾರ 

ದಿಂದ ಮೆರೆಯುವ ಪ್ರಮತ್ತರಿಗೆ ಒಂದೊಂದು ವೇಳೆ ವ್ಯಸನವೇ ವಿಶ್ರಾಂತಿ 

ಕರವಾಗಿರುತ್ತವೆಯಾದರೂ, ಆ ವಿಶಾ೦ತಿಯನ್ನು ಕೇವಲ ತಾತ್ಕಾಲಿಕ ಸಮಾ 

ಧಾನವೆಂದು ಕರೆಯುವುದೇ ಉಚಿತವಾಗಿರುವಂತಿದೆ. ಇಂತಹ ಈ 

ಅಮೋಘವಾದ ವಿಶ್ರಾಂತಿಯೆಂಬುದು ಕಾಲಾನುಗುಣವಾದ ರೂಪಾಂತರ 

ವನ್ನು ಹೊಂದಿ ಸಕಲಪ್ರಾಣಿಗಳಿಗೂ, ತನ್ನನುಭವವನ್ನೀಯಲು ಸಿದ್ದವಾಗಿ 

ದ್ದರೂ ಕೂಡ ಈ ನಶ್ವರವಾದ ಪ್ರಪಂಚದಲ್ಲಿ ಶಾಶ್ವತವಲ್ಲದಿದ್ದರೂ, 

ಕ್ಷಣಕಾಲವಾದರೂ ಶಾಂತಿ ಸುಖರೂಪವಾದ ಈ ಅದರ ಕುರುಹನ್ನೆ ಅರಿ 

ಯದ ಒಂದೇ ಒಂದು ವರ್ಗವಿರುವುದು, ವಾಚಕರ ಅವರಾರು ? ಇಂತಹ 

ಅಮೋಘವಾದ ವಿಶ್ರಾಂತಿಯಿಂದ ದೂರೀಕರಿಸಲ್ಪಟ್ಟವರಾರು ? ಅವರೇ, 

ಈ ಪ್ರಪಂಚದಲ್ಲಿ, ತಮ್ಮ ಜೀವನ ಕಾಲವನ್ನೆಲ್ಲ ಭಯಂಕರ ಪಾಪಕೃತ್ಯ 

ಗಳಲ್ಲಿ ವಿನಿಯೋಗಿಸುವ ದುಷ್ಟರು ! ಅವರಿಗೆ ಆವವಿಧವಾದ ವಿಶ್ರಾಂತಿಯೂ 

ದುರ್ಲಭವೆ!! ಅವರೆಂದೆಂದಿಗೂ ವಿಶಾ೦ತರೂ ಅಲ್ಲ, ವಿಕ್ರಾಂತರೂ ಅಲ್ಲ !! 

ದಿನೇಶನಾದ ಅಬ್ಜಬಾಂಧವನು ಕಾಲಿಕಕರ್ಮಚರಣೆಯನ್ನು 

ಪೂರ್ತಿಗೊಳಿಸಿದ ಮೇಲೆ ಸರ್ವಪ್ರಾಣಿಗಳೂ ಆ ವಿಶಾ೦ತಿಸುಖವನ್ನು 

ಅನುಭವಿಸುವುದು ಅತ್ಯವಶ್ಯಕವೆಂದೂ, ತಾನೂ ಕೂಡ ತನ್ನೀ ಲೋಕ 

ಯಾತ್ರೆಯು ಪೂರ್ತಿಯಾದುದರಿಂದ ವಿಶಾ೧ತನಾಗಲೋಸುಗ ಕೂಗುತ್ತಿರು 

ವನೆಂದೂ, ಹೇಳುತ್ತಿರುವನೋ ಎಂಬಂತೆ ಪಶ್ಚಿಮದಿಕ್ತ್ಕಟಾಭಿಮುಖನಾದನು. 

ಸರ್ವಪಾಣಿಗಳೂ ತಮ್ಮ ತಮ್ಮ ನಿವಾಸಾಭಿಮುಖವಾಗಿ ಹೋಗುತ್ತಿದ್ದುವು. 

ಆವುದೋ ಒಬ್ಬ ವ್ಯಕ್ತಿಯು ಮಾತ್ರ ಜನಭರಿತವಾದ ಊರನ್ನು ಬಿಟ್ಟು 

ಸಮೀಪದಲ್ಲಿದ್ದ ಅರಣ್ಯವನ್ನು ಪ್ರವೇಶಿಸುತ್ತಿದ್ದನು.

೭೦----------------------------------------------------------------------------

ಆ ಕಾಡಿನಲ್ಲಿ ಅಲ್ಲಲ್ಲಿ ಚಿಕ್ಕಚಿಕ್ಕ ಸೀಳುದಾರಿಗಳಿದ್ದರೂ, ಹೆಚ್ಚಿಗೆ 

ಜನಸಂಚಾರ ವಿಲ್ಲದಿದ್ದುದರಿಂದ ಅಪರಿಚಿತರಿಗೆ ಅವುಗಳ ಕುರುಹು ಕೂಡ 

ಸಿಗುವಂತಿರಲಿಲ್ಲ. ಸಾಲದುದಕ್ಕೆ, ಮಹೋನ್ನತವಾಗಿ ಬೆಳೆದಿದ್ದ ಮರಗಳ 

ಶಾಖೋಪಶಾಖೆಗಳು ಬಹು ಸ್ನಿಗ್ಧವಾಗಿ ಬೆಳೆದು ಬಂದಕ್ಕೊಂದು ನೇಯ 

ಲ್ಪಟ್ಟವುಗಳಂತೆ ಸೇರಿಹೋಗಿ, ಎಲ್ಲೆಲ್ಲಿಯ ಕಾರ್ಗತ್ತಲೆಯು ಮುಚ್ಚಿ 

ಕೊಂಡು ಪ್ರಕೃತಿಯ ನಿರ್ಮುಕ್ತವಾದ ಭಯಂಕರ ರೂಪವು ಆವರಿಸಿತ್ತು. 

ಉನ್ನತವಾದ ಬಿದಿರು ಮೆಳೆಗಳು ! ದಟ್ಟವಾದ ಪೊದೆಗಳು !! ಉನ್ನತವಾದ 

ವೃಕ್ಷಶ್ರೇಣಿಗಳು !!! ಇವುಗಳ ಸಂಸರ್ಗದಿಂದ ನಿಬಿಡೀಕೃತವಾಗಿದ್ದ ಆ 

ಕಾನನದ ಹೃದಯ ಪ್ರಾಂತದಲ್ಲಿ, ಅಂತಹ ಅವೇಳೆಯ ಕತ್ತಲೆಯಲ್ಲಿ, ಅಪ 

ರಿಚಿತರಿಗೆ ಸಂಚಾರವು ಕೇವಲ ಅಸಾಧ್ಯವೆಂದು ಬೋಧೆಯಾಗುತ್ತಿದ್ದಿತು. 

ಆ ವ್ಯಕ್ತಿಯು ಸ್ವಲ್ಪವೂ ಹಿಂಜರಿಯದೆ ಹಿಂದುಮುಂದು ಸಹ 

ನೋಡದೆ, ನಿರ್ಭಯವಾಗಿ ಆ ಹೊತ್ತಿನಲ್ಲಿ, ಆ ಕಾಡಿನಲ್ಲಿ ಹೋಗುರು 

ವುದನ್ನು ನೋಡಿದರೆ ಅವನಿಗೆ ಆ ಪ್ರದೇಶದ ಪೂರ್ಣಾನುಭವವು ಇದ್ದಂತಿ 

ರುವುದು. ಅದಾವುದೋ ಮತ್ತೊಂದು ವ್ಯಕ್ತಿಯು ಈ ವ್ಯಕ್ತಿಯನ್ನೇ 

ಅನುಸರಿಸಿಕೊಂಡು ಬರುತ್ತಿದ್ದಂತೆ ಬೋಧೆಯಾಗುತ್ತಿದ್ದಿತು. 

ಈ ವ್ಯಕ್ತಿಗಳು ಹೀಗೆಯೇ ಸ್ವಲ್ಪ ದೂರ ಹೋಗಿ, ಮುಂದೆಮುಂದೆ 

ಹೋಗುತ್ತಿದ್ದ ವ್ಯಕ್ತಿಯು ಒಂದು ಪೊದೆಯ ಸಮೀಪದಲ್ಲಿ ನಿಂತು, ಸಂಕೇತ 

ಧ್ವನಿಯನ್ನು ಮಾಡಿದನು. ಇದಕ್ಕೆ ಪ್ರತ್ಯುತ್ತರವು ನಾತಿದೂರದಿಂದಲೆ 

ಬಂದಿತು. ಆ ವ್ಯಕ್ತಿಗಳೀರ್ವರು ಉತ್ತರವು ಬಂದಕಡೆಗೆ ಹೊರಟರು. 

ಹಿಂದಿದ್ದ ವ್ಯಕ್ತಿಯು ಮುಂದೆ ಹೋಗುತ್ತಿದ್ದ ವ್ಯಕ್ತಿಯ ಕಡೆ ಹಾರಿ, ಹಿಡಿದು 

ಕೆಡವಿ, ತನ್ನ ಜೇಬಿನಲ್ಲಿದ್ದ ಒಂದು ಸೀಸೆಯನ್ನು ತೆಗೆದು, ಅದರಲ್ಲಿದ್ದ 

ದ್ರವದ ಒಂದೆರಡು ಬಿಂದುಗಳನ್ನು ಒಂದು ಬಟ್ಟೆಯ ತುಂಡಿಗೆ ಹಾಕಿ, 

ಅವನ ನಾಸಿಕಕ್ಕೆ ಅದನ್ನು ಕಟ್ಟಿದನು. ಆ ವ್ಯಕ್ತಿಯು ಒಂದೆರಡು ನಿಮಿಷ 

ಗಳಲ್ಲಿಯೆ ಚೈತನ್ಯಹೀನನಾದನು, ಆ ವ್ಯಕ್ತಿಯ ಉಡುಪುಗಳನ್ನು ತೆಗೆದು 

ತಾನು ಧರಿಸಿಕೊ೦ಡು, ಅವನನ್ನು ಒಂದು ಮರೆಯಾದ ಸ್ಥಳದಲ್ಲಿ ಮಲಗಿಸಿ, 

ಆ ವ್ಯಕ್ತಿಯು ಪುನಃ ಮೊದಲಾದಂತೆಯ ಸಂಕೇತವನ್ನು ಮಾಡಿದನು. 

೭೧-----------------------------------------------------------------------------

ಪ್ರತ್ಯುತ್ತರವು ದೊರೆಯಿತು, ಪ್ರತ್ಯುತ್ತರವು ಎಂದ ಕಡೆಗೆ ಹೋಗಿ 

ನೋಡಲು, ಅಲ್ಲಿ ಒಂದು ತೋಪಿನ ಮಧ್ಯದಲ್ಲಿದ್ದ ಒಂದು ಚಿಕ್ಕ ಗುಡಿ 

ಸಿಲಿನ ಮುಂಭಾಗದಲ್ಲಿ, ಒಬ್ಬ ವ್ಯಕ್ತಿಯು ನಿಂತಿದ್ದನು. ಆ ವ್ಯಕ್ತಿಯೆ 

ತಾನು ಕೊಟ್ಟ ಸಂಕೇತಕ್ಕೆ ಪ್ರತ್ಯುತ್ತರವನ್ನು ಕೊಟ್ಟವನಿರಬಹುದೆಂದು 

ಆಲೋಚಿಸಿ, ಸಮೀಪಕ್ಕೆ ಹೋಗಿ, “ ಅವನಿಗೆ ಹೆಂಗಯ್ತಪ್ಪಾ ? ನನ್ಪಾ 

ಡಂತು ನಾಯ್ಪಾಡು ಬಿಡು ! ಆ ಬೋಡೀಮಗ ನನ್ನ ಹಿಡ್ಕೊಂಡು ಹೋಗಿ 

ಪಡಬಾರದ ಶ್ರಮಪಡಿಸಿ ಬಿಟ್ಟನಪ್ಪ ! ನಾನು ಜೀವದಿಂದ ಉಳಿದು ಬಂದಿದ್ದೇ 

ಭಾಳ ಕಷ್ಟಾ ಆಗೋಯಿತು ? ” ಎಂದು ಹೇಳಿದ ಇವನ ಮಾತನ್ನು ಕೇಳಿ 

ಆ ವ್ಯಕ್ತಿಯು, " ಲೋ ಅಂಗಾದ್ರೆ ನೀನು ಪೋಲೀಸ್ನವ್ನಿಗೆ ಸಿಕ್ಬಿಟ್ಟಿದ್ದೆ ? 

ನಾವು ಇವತ್ತೆಲ್ಲ ನೀನೆಲ್ಲೋ ಯದ್ರಕೊ೦ಡು ಓಡೋಗ್ಲಿಟ್ಟಿದ್ದೀ ಅಂತ 

ತಿಳಂಡಿದ್ದು ಕಣೋ ! ನೀನು ಪೋಲೀಸ್ನವರಿಂದ ಅದ್ಯಂಗ್ತಪ್ಪಿಸ್ಕೊಂ 

ಡ್ಬಂದೆ ? ” ಎಂದಂದನು. 

ಬಂದ ವ್ಯಕ್ತಿಯು :- ಅವರಿಗೆ ಪೂರಾ ಚಕ್ಕರ್ ಕೊಟ್ಟು ಬಂದೆ ! 

ಸದ್ಯ, ಇವತ್ತು ಇಲ್ಲಿ ಹೊಸದಾಗಿ ನಡೆದಿರುವ ಸಮಾಚಾರದೇನು ? ನಮ್ಮ 

ಯಜಮಾನ ಎಲ್ಲವ್ರೆ ? ಈಗ ಊರೊಳ್ಗೆ ಇನ್ನೊಂದ್ಸಮಾಚಾರ 

ನಡ್ದಿದೆ" 

 ನಿಂತಿದ್ದ ವ್ಯಕ್ತಿ ; ಅದೇನೋ ಸಮಾಚಾರ ?  ಬಂದಿದ್ದ ವ್ಯಕ್ತಿ :- 

 ಆ ಇನ್‌ಸ್ಪೆಕ್ಷರವ್ನನಲ್ಲೋ, ಅವನು ಆ ದೇವೇಶನ ಮನೆಗೆ ಹೋಗಿದ್ರಂತೆ. 

 ಅವನ ಮನೇಲಿ ಒಂದು ಕಾಗದ ಸಿಕ್ಕಿತಂತೆ ! ಆ ಕಾಗದ್ದಲ್ಲಿ ಅವನೂ ಮತ್ತು 

 ಇನ್ಯಾರೋ ಸೇರಿಕೊಂಡು ಏನೇನೋ ಮಾಡಿರುವಂತೆ ” ಗೊತ್ತಾಯಿ 

 ತಂತೆ ? ಅದಕ್ಕಾಗಿ ಅವನನ್ನು ಲಾಕಪ್ಪಿನಲ್ಲಿ ಹಾಕಿರುವದಂತೆ ಅ೦ಗೇ ನಾನು 

 ವರ್ತ್ಮಾನ ಕೇಳಿದ್ದರಲ್ಲಿ ಭುಜಂಗನ ಮೇಲೆ ಒಬ್ಬನಿಗೂ ಅನುಮಾನ 

 ಇಲ್ಲ ! ” ಎಂದು ಹೇಳಲು, ಆ ವ್ಯಕ್ತಿಯು ಬಹು ಆಶ್ಚರ್ಯಭರಿತನಾಗಿ, 

 ಎಲ್ಲಾ ಏನೇನೋ ಆಗ್ತಾ ಇದಪ್ಪ ! ಯಜಮಾನನಿಗೆ ತಿಳಿಸೋಣ ” ಎಂದು 

 ಹೇಳಿ, ಇರ್ವರೂ ಅಲ್ಲಿಂದ ಹೊರಟರು.

೭೨-------------------------------------------------------------------------

ಹೋಗುತ್ತ, ದಾರಿಯಲ್ಲಿ, ಅವರವರಿಗೆ ನಡೆದ ಸಂಭಾಷಣೆಯಿಂದ 

ಅವರ ಗುಂಪಿನಲ್ಲಿ ನಾಲ್ಕು ಜನರು ಮಾತ್ರ ಇರುವಂತೆಯೂ, ಕಾಳಿಚರ 

ಣನು ಮೇಲಿಂದಮೇಲೆ “ ಆ ಕಾಡಿಗೆ ” ಹೊಕ್ಕು ಅವರನ್ನು ಬಹಳವಾಗಿ 

ತೊಂದರೆಗೊಳಗಾಗಿಸುತ್ತಿದ್ದುದರಿಂದ, ಅವರುಗಳು ರೂಪಾಂತರವನ್ನು 

ಕಲ್ಪಿಸಿ, ಊರನ್ನು ಸೇರಿ, ಊರೊಳಗೆ ಇದ್ದುಕೊಂಡು, ಮುಂದಿನ 

ಕಾರ್ಯಗಳನ್ನು ಸಾಧಿಸಲೇರ್ಪಡಿಸಿದ್ದರೆಂತಲೂ ತಿಳಿದುಬಂದಿತಲ್ಲದೆ, 

ವಿಜಯಿನಿಯು ಭುಜಂಗನನ್ನು ಮದುವೆಯಾಗಲೊಪ್ಪುವುದಾದರೆ, ಅವರೀರ್ವ 

ರಿಗೂ, ಗಂಧರ್ವ ವಿವಾಹದಂತೆ ಮಾಡಿ ಒಂದೆರಡು ದಿವಸಗಳ ಪರ್ಯಂತರ 

ಅವರೀರ್ವರನ್ನೂ ಒಂದು ಕಡೆ ಇಟ್ಟು ಬಿಟ್ಟರೆ, ಯೋಗ್ಯರ ಮನೆಯ ಹುಡುಗಿ 

ಯಾದ ಅವಳು ಪಾತಿವ್ರತ್ಯಕ್ಕೂ, ಮರ್ಯಾದೆಗೂ, ಅಂಜಿಕೊಂಡು, 

ಭುಜಂಗನನ್ನೆ ಎಲ್ಲರ ಸಮಕ್ಷಮದಲ್ಲಿಯೆ ವಿವಾಹಮಾಡಿಕೊಳ್ಳಬಹು 

ದಾದುದರಿಂದ ಹಾಗೆ ಮಾಡಬೇಕೆಂತಲೂ ಇಲ್ಲವಾದರೆ ಅವಳನ್ನು ಯಮ 

ಪುರಿಗೆ ಕಳುಹಿಸಬೇಕೆಂದು ನಿರ್ಧರಿಸಿರುವರೆಂತಲೂ, ತಿಳಿಯಬಂದಿತು, 

ಇರ್ವರೂ ಒಂದು ಗವಿಯಂತಿದ್ದ ಸ್ಥಳವನ್ನು ಸೇರಿದರು. ಅದರ ಬಾಗಿಲಿನ 

ಹೊರವಳಯದಲ್ಲಿ ಇಬ್ಬರು ಮಲಗಿದ್ದರು. ಅವರು ನಿದ್ರಾವಶರಾಗುವುದನ್ನು 

ಕಂಡು, ಈ ಎರಡು ವ್ಯಕ್ತಿಗಳ ಪೈಕಿ ಒಬ್ಬನು, ಇನ್ನೊಬ್ಬನನ್ನು ಕೈ 

ಹಿಡಿದು ಸ್ವಲ್ಪ ಹಿಂದಕ್ಕೆಳದನು. ಅವನು “ ಏಕೆ ಎಳೆಯುತ್ತಿ ? ” ಎಂದಂದು 

ಹಿಂದಕ್ಕೆ ತಿರುಗುವಷ್ಟರಲ್ಲಿಯೇ ಆ ವ್ಯಕ್ತಿಯು ತನ್ನ ಕೈಯ್ಯಲ್ಲಿದ್ದ ಪಿಸ್ತೂ 

ಲನ್ನು ಮುಖಕ್ಕೆ ಹಿಡಿದು, “ ಉಸರಾಡಿದರೆ ಬದುಕಲಾರೆ ! ” ಎಂದು 

ಮೆಲ್ಲನೆ ಹೇಳಿದನು, ಆ ವ್ಯಕ್ತಿಯು ಹೆದರಿ, ಅವನು ಹೇಳಿದಂತೆಯೆ 

ತನ್ನ ಕೈಕಾಲುಗಳನ್ನು ಬೆನ್ನಿನ ಕಡೆಗೆ ನೀಡಿ ಮುಖವಡಿಯಾಗಿ ಮಲಗಿ 

ಕೊಂಡನು. ಈ ವ್ಯಕ್ತಿಯು ಅವನ ಕೈಕಾಲುಗಳನ್ನು ಕಟ್ಟಿ, ಮಲಗಿದ್ದವ 

ರಿಬ್ಬರನ್ನೊಬ್ಬನಿಗೆ “ ಪ್ರಜ್ಞಾನಾಶಕ ದ್ರವ (Chloro Form)ವನ್ನು ಉಪ 

ಯೋಗಿಸಿ ಮತ್ತೊಬ್ಬನ ಸಮೀಪಕ್ಕೆ ಹೋಗಿ ಹೊಡೆದೆಬ್ಬಿಸಿದನು. ಅವನು 

ಗಾಬರಿಯಿಂದ ಮೇಲಕ್ಕೇಳುವಷ್ಟರಲ್ಲಿಯೆ ಅವನಿಗೆ ಪಿಸ್ತೂಲನ್ನು ತೋರಿಸಿ 

"ಈಗ ನಿನಗೆ ಬೇವದಮೇಲಿನ ಆಶೆಯಿದ್ದರೆ ನನಗೆ ಸರಿಯಾದ ಪ್ರತ್ಯುತ್ತರ " 

೭೩-------------------------------------------------------------------------

ವನ್ನು ಕೊಡು, ಕೊಡದಿದ್ದರೆ, ಇಗೋ, ಕೊಂದುಬಿಡುವೆನು !'' ಎಂದಂದು ಹೆದರಿಸಿ 

ದನು, ಅವನು ಹೆದು, “ ಸ್ವಾಮೀ, ನಾನೊಬ್ಬ ದಾರಿಕಾರನು, ನೀವೇನು ಬೇಕಾ 

ದರೂ ಮಾಡಿ ! ನನಗೊಂದೂ ಗೊತ್ತಿಲ್ಲ! ” ಎಂದು ಹೇಳಿದನು. ಆ ಮತ್ತೊಬ್ಬ 

ವ್ಯಕ್ತಿಯು ವೃಥಾ ಕಾಲವನ್ನು ಕಳೆಯುವುದು ಉಚಿತವಲ್ಲವೆಂದಂದು ಕೊಂಡು, ಆ 

ಮೂವರನ್ನೂ ಹಿಡಿದು ಒಟ್ಟಾಗಿ ಬಿಗಿದು, ಒಂದು ಗೋಪ್ಯವಾದ ಸ್ಥಳದಲ್ಲುರುಳಿಸಿ 

ದನು, ಅವರನ್ನು " ಜಫ್ತಿ' ಮಾಡಿದಾಗ ದೀಪದಕಡ್ಡಿಗಳೂ, ಒಂದು ಬೀಗದ ಕೈಯಿ, 

ಇವುಗಳು ದೊರೆತವು. ಆ ವ್ಯಕ್ತಿಯು ಅವರನ್ನಲ್ಲಿ ಬಿಟ್ಟು ಬಿಟ್ಟು, ತನ್ನ ಕೈ ಲಾಂದ್ರ 

ವನ್ನು ಹಚ್ಚಿಕೊಂಡು, ಗವಿಯನ್ನು ಶೋಧನೆಮಾಡಲಾರಂಭಿಸಿದನು. ಆ ಗವಿಯ 

ಮುಂದುಗಡೆ ಸ್ವಲ್ಪ ಹಜಾರದಂತೆ ಇತ್ತು. ಆ ಹಜಾರದಿಂದ ಒಳಗೆ ಹೋಗಲು, 

ಒಂದು ಬಾಗಲಿದ್ದು ಅವೆಲ್ಲವೂ, ಕಾಡುಗಲ್ಲುಗಳವುಗಳಾಗಿದ್ದುದರಿಂದ ಆ ಬಾಗಿ 

ಲನ್ನು ತೆಗೆಯುವ ವಿಧಾನವು ಗೊತ್ತಾಗದೆ ಆ ವ್ಯಕ್ತಿಯು ಸಿಕ್ಕಿದ ಕಲ್ಲುಗಳನ್ನೆಲ್ಲ 

ನೂಕಿ ನೂಕಿ ನೋಡುತ್ತಿದ್ದನು. ಹೀಗೆ ಪರೀಕ್ಷಿಸುತ್ತಿರುವಾಗ ಬಾಗಿಲಿನ ಸಮೀಪದ 

ಲ್ಲಿದ್ದ ಒಂದು ಚಿಕ್ಕ ಕಲ್ಲು ಅಲುಗಾಡುತ್ತಿದ್ದುದನ್ನು ಕಂಡು, ಆ ಕಲ್ಲನ್ನು ಕಿತ್ತು 

ಹಾಕಿದನು, ಅದರಿಂದುಂಟಾದ ಸಂದಿನಲ್ಲಿ ತನ್ನ ಕೈ ಲಾಂದ್ರವನ್ನು ಹಿಡಿದು ನೋಡಿ 

ದನು, ಅದು ಒಳಗೆ ಒಟ್ಟು ವಿಸ್ತಾರವಾಗಿದ್ದಂತೆ ಬೋಧೆಯಾಯಿತು. ಆ ಕ೦ಡಿ 

ಯಲ್ಲಿ ಕೈಯನ್ನು ಹಾಕಿ, ಕೈಗೆ ಸಿಕ್ಕಬಹುವಾಗಿದ್ದುದನ್ನೆಲ್ಲ ಪರೀಕ್ಷಿಸಿ ನೋಡುತ್ತಿ 

ರಲು, ಒಳಗೆ ಒಂದು ಸರಪಣಿಯು ಸಿಕ್ಕಲು ಅದನ್ನು ಹಿಡಿದು ಎಳೆದನು, ಒಂದು 

ದೊಡ್ಡ ಕಲ್ಲು ತಕ್ಷಣವೇ ಓರೆಯಾಯಿತು. ಕೂಡಲೆ ಆ ವ್ಯಕ್ತಿಯು ಒಳಗೆ ನುಗ್ಗಿ 

ನೋಡಿದನು, ಒಳಗೆ ಹೃದ್ಭೇದಕವಾದ ಅಂಧಕಾರವು ವ್ಯಾಪ್ತವಾಗಿದ್ದುದರಿಂದ ಏನೂ 

ಕಾಣಿಸುತ್ತಿರಲಿಲ್ಲ. ಆದರೂ ತನ್ನ ಕೈ ಲಾಂದ್ರದಿಂದ ಸ್ಥಳವನ್ನು ಹೆಜ್ಜೆ ಹೆಜ್ಜೆಗೂ 

ಪರೀಕ್ಷಿಸುತ್ತ ಆ ಗವಿಯ ನಾನಾ ಭಾಗಗಳನ್ನು ನೋಡಿದನು. ಒಂದು ಕಡೆಯ 

ಲ್ಲಿದ್ದ ಒಂದು ಮುರುಕು ಪೆಟ್ಟಿಗೆಯಲ್ಲಿ ಒಂದೆರಡು ರಿವಾಲ್ವರುಗಳೂ, ಕೆಲವು ತೋಟಾ 

ಗಳೂ, ಕೆಲವು ಕಾಗದಗಳೂ ಇದ್ದುವು. ಆ ವ್ಯಕ್ತಿಯು ಅವೆಲ್ಲವನ್ನೂ ತೆಗೆದು 

ಕೊಂಡು, ಆ ಕಾಗದಗಳನ್ನು ನೋಡುತ್ತಿರಲು, ಅವುಗಳಲ್ಲೊಂದು ಕಾಗದದಲ್ಲಿ ಹೀಗೆ 

ಬರೆಯಲ್ಪಟ್ಟಿದ್ದಿತು. 

" ಇಲ್ಲಿ ಕಾಳೀಚರಣನೊಬ್ಬನಲ್ಲದೆ ಮತ್ತಾರೂ ನನ್ನ ಮೇಲೆ ಅನುಮಾನಪಡು 

ವಂತಿಲ್ಲ. ಪ್ರೇಮಚಂದ್ರನ ವಿಚಾರವಾಗಿ ಕಾಳೀಚರಣನು ಶಂಕರೀದುರ್ಗಕ್ಕೆ ಹೋಗಿ 

ರುತ್ತಾನೆ ಎಚ್ಚರಿಕೆ ! ಇತಿ, ಭುಜಂಗ "

೭೪---------------------------------------------------------------------------------------

ಹಾಗೆಯೇ ನೋಡುವಾಗ ಆ ದಿವಸವೇ ಬರೆಯಲ್ಪಟ್ಟಿದ್ದ ಮತ್ತೊಂದು 

ಪತ್ರವು ಸಿಕ್ಕಿತು ಅದರಲ್ಲಿ :- 

" ನೀವು ಮಾಡಿದ ತಂತ್ರಕ್ಕೆ ಕಾಳೀಕರಣ ಮತ್ತು ತಾಂದೋಣಿರಾಯರು, 

ಮೋಸ ಹೋಗಿ ದೇವೇಶನನ್ನು ಸೆರೆಯಲ್ಲಿಟ್ಟಿರುವರು. ನಿಮ್ಮ ಸಾಮರ್ಥ್ಯವು ಅಸಾಧಾರ 

ಣವಾದುದು, ನಿಮ್ಮ ಪ್ರಭಾವದಿಂದ ಈಗ ನನ್ನನ್ನು ಮಾತನಾಡಿಸುವವರೇ ಇಲ್ಲ ! 

ನೀವು ಹೇಳಿ ಕಳಿಸಿದಂತೆ ನಿಮಗೆ ವಾಸಕ್ಕೆ ತಕ್ಕ ಮನೆಯನ್ನು ನೋಡಿರುತ್ತೇನೆ, ಈ 

ದಿವಸ ರಾತ್ರೆಯೇ ಮನೆಗೆ ಬಂದು ಮನೆಯನ್ನು ಸೇರತಕ್ಕದ್ದು. 

ಇತಿ, ಭುಜಂಗ" 

ಎಂದು ಬರೆಯಲ್ಪಟ್ಟಿದ್ದಿತು. 

ಇವುಗಳನ್ನು ನೋಡಿ, "ಎಲ! ಎಲ! ಭುಜಂಗ, ನೀನೂ, ನಿನ್ನ ಸಹಪಾಠಿ 

ಯೂ ಗಟ್ಟಿಗರೆಂದೂ, ನಿಮ್ಮ ಮೋಸಕ್ಕೆ ಎಲ್ಲರೂ ಸಿಕ್ಕಿಕೊಂಡು ನಿನ್ನನ್ನು ಮಾತ 

ನಾಡಿಸುವವರೇ ಇಲ್ಲವೆಂದೂ ತಿಳಿದುಕೊಂಡಿರುವೆಯಾ ? ಆವಾಗಲೂ ನಿನ್ನ ಮೇಲೆ 

ಕಣ್ಣನ್ನಿಟ್ಟುಕೊಂಡು, ಬೇಕೆಂತಲೇ ನಿನ್ನ ಸ್ನ ರೀತಿಯಲ್ಲಾಡಲು ಬಿಟ್ಟುಕೊಂಡಿರುವ 

ಕಾಳೀಕರಣನ ಬಲೆಯಲ್ಲಿ ನೀನು ಬಿದ್ದಿರುವೆಯೋ ಅಥವಾ ಕಾಳೀಚರಣನು ಮೋಸ 

ಹೋಗಿರುವನೋ ? ನಿಜಸ್ಥಿತಿಯು ಅತ್ಯಲ್ಪ ಕಾಲದಲ್ಲಿಯೇ ಹೊರಬೀಳುವುದು ! ” 

ಎಂದಂದುಕೊಳ್ಳುವಷ್ಟರಲ್ಲಿಯೇ ಹೊರಗಡೆಯಾರೋ ಮಾತನಾಡುತ್ತಿದ್ದಂತೆ ಬೋಧೆ 

ಯಾಗಲು, ಆ ವ್ಯಕ್ತಿಯು,-ಅಂದರೆ, ಸ್ವಯಂ ಕಾಳೇಚರಣನೆಂದು ಹೇಳುವುದು 

ಪ್ರಕೃತದಲ್ಲಿ ಅತ್ಯುಕ್ತಿಯೆ ;-ಹೊರಗಡೆಯಿಂದ ನೋಡುವವರಿಗೆ ತಾನು ಸರಿಯಾಗಿ 

ಕಾಣುವಂತೆ ದೀಪವನ್ನಿರಿಸಿ, ತಾನು ಮತ್ತೊಂದು ಮೂಲೆಯಲ್ಲಿ ನಿಂತುಕೊಂಡನು. 

ಹೊರಗಡೆಯಲ್ಲಿದ್ದವರು ಆ ದೀಪದ ಬೆಳಕನ್ನು ಕಂಡು, ' ಈ ವೇಳೆ ನಾವು 

ನಾಲ್ಕು ಜನರೂ ಒಟ್ಟಾಗಿ ನುಗ್ಗಿ, ಅವನನ್ನು ಹಿಡಿಯಬೇಕು. ನಮ್ಮಲ್ಲಿ ರಿವಾಲ್ವರು 

ಗಳಿದ್ದಿದ್ದರೆ ಅವನನ್ನು ಇಲ್ಲಿಂದಲೇ ಹೊಡೆದುಬಿಡಬಹುದಾಗಿತ್ತು. ಗ್ರಹಚಾರವಶಾತ್‌ 

ಅವೂಕೂಡ ಒಳಗೆ ಸಿಕ್ಕಿಹೋಗಿವೆ ! ಏನಾದರೂ ಆಗಲಿ ! ಪ್ರಾಣಭಯಕ್ಕೆ ಹಿಂಜರಿ 

ಯದೆ ನುಗ್ಗಿಯೇ ಬಿಡಬೇಕು ! ಈ ಗವಿಗೆ ಇನ್ನೊಂದು ಬಾಗಿಲಿರುವುದು ಅವನಿಗೆ 

ಗೊತ್ತಿಲ್ಲದಿರುವುದರಿಂದ ಎರಡು ಬಾಗಿಲುಗಳಿಂದಲೂ ಒಳಗೆ ನುಗ್ಗಿ ಅವನನ್ನು ಹಿಡಿ 

ಯೋಣ !” ಎಂದು ಮಾತನಾಡಿಕೊಂಡು ಹಾಗೆಯೆ ಇರ್ಕಡೆಗಳಿಂದಲೂ ಅವರು 

ಒಳಗೆ ನುಗ್ಗಿದರು.

...............

೭೫-----------------------------------------------------------------------------

ಚತುರ್ದಶಗುಚ್ಛ, 

ನಾಲ್ಕು ಜನರ ಒಳಗೆ ನುಗ್ಗಿದರು. ಒಂದು ಮೂಲೆಯಲ್ಲಿ ಕುಳಿತಿದ್ದ ಕಾಳೀ 

ಚರಣಣನು ಮತ್ತೊಂದು ಕಡೆಯಿಂದ ಕೇಳಿಬರುವಂತೆ, " ಈ ಕತ್ತಲೆಮನೆಯಲ್ಲಿ 

ನಿಮ್ಮೊಂದಿಗೆ ಇನ್ನು ನಾಲ್ಕು ಜನರು ಸೇರಿದರೂ ನನ್ನನ್ನು ಹಿಡಿಯಲಾರಿರಿ. ಈಗ 

ನಿಮ್ಮ ಪ್ರಾಣವು ನನ್ನ ಧೀನದಲ್ಲಿದೆ! ” ಎಂದಂದನು. 

ಈ ಮಾತನ್ನು ಕೇಳಿ ಅವರು ಶಬ್ದವಾದಂತೆ ಕೇಳಿಬಂದಕಡೆಗೆ ನುಗ್ಗಲು ಕಾಳೀ 

ಚರಣಣನು ಬಾರ್‌ಮಾಡದೇ ಇದ್ದ ರಿವಾಲ್ವರೊಂದನ್ನು ಜೋರಾಗಿ ಅವರ ಕಡೆಗೆ ಎಸೆ 

ದನು, ಅದು ಒಬ್ಬನ ತಲೆಗೆ ತಗುಲಿತು. ಅವನು " ಅಯ್ಯೋ! ಸತ್ತೆ! ಸೂಳೇಮಗ 

ಪುನಃ ಕಲ್ಲಿನಿಂದ ಹೊಡೆದ!! ” ಎಂದು ಕಿರಿಚಿಕೊಳ್ಳುತ್ತ ನೆಲದಮೇಲೆ ಬಿದ್ದನು. 

ಉಳಿದ ಮರು ಜನರು, 11 ಕಾಳೀಚರಣ! ನೀನು ಈ ದಿವಸ ಈ ಗವಿಯಿಂದ ನಿನ್ನೀ 

ಪ್ರಾಣಸಹಿತನಾಗಿ ಹೋಗಲಾರೆ! ಅಷ್ಟರೊಳಗಾಗಿ ನೀನೇನೇನು ಅನಾಹುತಗಳನ್ನು 

ಮಾಡಬೇಕೆಂದಿರುವೆಯೋ ಮಾಡಿಬಿಡು! " ಎಂದಂದು ಒಂದೊಂದು ಬಾಗಿಲಿನ ಸಮೀ 

ಪದಲ್ಲಿ ಒಬ್ಬೊಬ್ಬನು ನಿಂತುಕೊಂಡು ಕಾಳೀಚರಣನು ಹೊರಗೆ ಹೋಗದಂತೆ ನೋಡಿ 

ಕೊಳ್ಳಬೇಕೆಂತಲೂ ಮತ್ತೊಬ್ಬನು ಒಳಗೆಲ್ಲಾ ಹುಡುಕಬೇಕೆಂತಲೂ ನಿಶ್ಚಯಿಸಿ 

ಹಾಗೆಯೇ ಮಾಡಲಾರಂಭಿಸಿದರು. 

ಕಾಳೀಚರಣನಿಗೆ ಇವರ ಉಪಾಯದಿಂದ ಬಹು ಸಂತೋಷವಾಯಿತು. ಬಹು 

ಜಾಗರೂಕತೆಯಿಂದ, ಹುಡುಕಿಕೊಂಡು ಬರುತ್ತಿರುವವನನ್ನು ಪ್ರಥಮತಃ ಹಿಡಿಯಬೇ 

ಕೆಂದಿದ್ದನು. ಆ ವ್ಯಕ್ತಿಯು ದೀಪವನ್ನು ತೆಗೆದುಕೊಳ್ಳಲು ಹೋಗುತ್ತಿರುವುದನ್ನು 

ಕಂಡು ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ದೀಪಕ್ಕೆ ಹೊಡೆಯಲು ದೀಪವು ಕೆಳಗೆ 

ಬಿದ್ದು ಒಡೆದು ಹೋಯಿತು! ಕಾಳೀಕರಣನು ತತ್‌ಕ್ಷಣವೇ ಆ ವ್ಯಕ್ತಿಯ ಕಡೆಗೆ ಹಾರಿ 

ಅವನನ್ನು ಒಂದೇ ಹಿಡಿತದಿಂದ ಉಸಿರಾಡದಂತೆ ಹಿಡಿದು ಅವನಿಗೆ "ಪ್ರಜ್ಞಾನಾಶಕದ್ರವ 

(Chloroform) ವನ್ನು ಉಪಯೋಗಿಸಿದನಲ್ಲದೆ ವಿಕಾರಸ್ವರದಿಂದ ಅಯ್ಯೋ! ಸತ್ತೆ ! 

ಹೊಡದೇಬಿಟ್ಟ!! ಎಂದು ಕೂಗಿಕೊಂಡನು. ಉಭಯದ್ವಾರಗಳಲ್ಲಿಯೂ ಇದ್ದವರು ಈ 

ಕೂಗನ್ನು ಕೇಳಿ ತಮ್ಮ ಕಡೆಯವರೀರ್ವರೂ ಕಾಳೀಚರಣನಿಗೆ ತುತ್ತಾದುದರಿಂದ ಕಾವಲಿ 

ರುವುದನುಚಿತವೆಂದಂದುಕೊಂಡು ಪಲಾಯನಸೂಕ್ತವನ್ನು ಪಠಿಸಲಾರಂಭಿಸಿದರು. ಆಗ ಕಾಳೀಚರಣನು ಅವರನ್ನು ಆ ರೀತಿಯಲ್ಲಿ ಓಡಾಡಿಸುವುದು ಅಯುಕ್ತವೆಂದಂದು

೭೬-------------------------------------------------------------------------------

ಕೊಂಡು ಅವರೀಶ್ವರಲ್ಲೊಲ್ವನನ್ನು ಹಿಂಬಾಲಿಸಿದನು. ಆ ವ್ಯಕ್ತಿಯು ಬಹು ವೇಗ 

ವಾಗಿ ಓಡುತ್ತಿದ್ದುದರಿಂದಲೂ, ಕಾರ್ಗತ್ತಲೆಯಲ್ಲಿ ಅವನು ಸುಲಭವಾಗಿ ತಪ್ಪಿಸಿಕೊ 

ಳ್ಳಲು ಸಂಭವವಿದ್ದುದರಿಂದಲೂ ಕಾಳೀಚರಣನು ಉಪಾಯರಹಿತನಾಗಿ ತನ್ನ ಪಿಸ್ತೂ 

ಲಿನಿಂದ ಅವನನ್ನು ಹೊಡೆದು ಕೆಡವಿದನು. 

ಕಾಳೀಚರಣನು, ಬಿದ್ದ ವ್ಯಕ್ತಿಯ ಸಮೀಪಕ್ಕೆ ಹೋಗಿ, ಅವನನ್ನು ನೋಡಿ 

ಅವನು ತನಗೆ ಕೇವಲ ನೂತನ ವ್ಯಕ್ತಿಯಾಗಿ ಕಂಡುಬಂದುದರಿಂದ ಆಶ್ಚರ್ಯಚಕಿತ 

ನಾಗಿ, " ನೀನಾರು ?” ಎಂದು ಕೇಳಿದನು. ವ್ಯಕ್ತಿಯು ಇವನ ಮುಖವನ್ನು 

ನೋಡಿ ಜುಗುಪ್ಪೆಯಿಂದಲೂ, ಸಂಕಷ್ಟದಿಂದಲೂ, ಸ್ತಬ್ಧನಾಗಿ ಆವಮಾತನ್ನೂ ಆಡದೆ 

ಇದ್ದನು, ಅವನನ್ನು ಸ್ವಲ್ಪ ಉಪಚರಿಸಿ, "ನೀನಾರು ? ಖಂಡಿತವಾಗಿ ಹೇಳು, ಇನ್ನ 

ತ್ಯಲ್ಪಕಾಲದಲ್ಲಿಯೇ ನೀನೀ ನಶ್ವರವಾದ ದೇಹವನ್ನು ಬಿಟ್ಟು ಹೊರಡುವವನಾಗಿರುವೆ, 

ನೀನೇ ಮೃತನಾದ ಮೇಲೆ ಮತ್ತಾರು ಕೆಟ್ಟರೂ, ಬದುಕಿದರೂ ಕೂಡ ನಿನಗೇನು 

ತಾನೆ ಆಗಬಲ್ಲದು ?” ಎಂದು ಮೊದಲಾಗಿ ಅನೇಕ ಸಾಂತ್ವ ವಚನಗಳಿಂದ ಅವನನ್ನು 

ಸಮಾಧಾನಗೊಳಿಸಲು, ಆ ವ್ಯಕ್ತಿಯು ಸ್ವಲ್ಪ ವ್ಯಧಿತನಾಗಿ, "ನಾನಾವ ವಿಧವಾದ ತಪ್ಪನ್ನೂ 

ಮಾಡಿದವನಲ್ಲ. ನಾನಿ ಪಾಷಂಡರ ಪಾದಸೇವೆಯಲ್ಲಿ ಸಿಲುಕಿ ಹೀಗಾದೆ !'' 

ಎಂದಂದು ಕಂಬನಿ ಗರೆಯಲಾರಂಭಿಸಿದನು. ಅವನ ಸ್ಥಿತಿಯನ್ನು ಕಂಡು ಅವನನ್ನು ಅತಿಶ 

ಯವಾದ ಮಾತುಗಳಿಂದ ಹೊಗಳಿ ನಿಜಸ್ಥಿತಿಯನ್ನು ಹೊರಪಡಿಸಬೇಕೆಂಬ ಅಪೇಕ್ಷೆಯು 

ಉಂಟಾಗುವಂತೆಸಗಿದುದರಿಂದ ಅವನು ಸಂಕ್ಷೇಪವಾಗಿ, ಆ ಗುಂಪಿಗೆ ಯಜಮಾನನಾಗಿ 

ಅಂತಹ ತಂತ್ರಗಳನ್ನೂ, ಭಯಂಕರ ಕೃತ್ಯಗಳನ್ನೂ , ನಡೆಯಿಸುತ್ತಿದ್ದವನು ಪುರಂದರ 

ನೆಂಬುವವನೆಂತಲೂ, ಅವನೂ ಭುಜಂಗನೂ ಸೇರಿ ಪ್ರೇಮಚಂದ್ರ, ಶಂಭುದತ್ತ ಮತ್ತು 

ಶರಶ್ಚಂದ್ರರ ಆಸ್ತಿಗಳನ್ನೆಲ್ಲ ಅಪಹರಿಸಲು ಅಷ್ಟೆಲ್ಲ ಮಾಡಿದರೆಂತಲೂ ಅವರ ಕಪಟ 

ತಂತ್ರಗಳಿಗೆ ಸಿಲುಕಿ ಅವರೊಂದಿಗೆ ಕಾವೇರಿ ನದಿಯನ್ನು ದಾಟುತ್ತಿದ್ದಾಗ ಅವರು 

ಮೋಸದಿಂದ ದೋಣಿಯನ್ನು ಮುಳುಗಿಸಿ ಪ್ರೇಮಚಂದ್ರನನ್ನು ಮುಳಿಗಿಸಿದರೆಂತಲೂ,

ಶರಚ್ಚಂದ್ರನು ಅವರಲ್ಲಿ ಕೈಸೆರೆಯಾಗಿರುವನೆಂತಲೂ ; ತಮ್ಮ ಪ್ರಯತ್ನಗಳಾವುವೂ ನಡೆ 

.........................ರಿಂದ ಭುಜಂಗನು ವಿಜಯಿನಿಯನ್ನೂ, ಪುರಂದರನು ವಿಲಾಸಿನಿಯನ್ನೂ, 

.............................ದಿಂದಲಾದರೂ ಅಪರಿಶುದ್ಧರನ್ನಾಗಿಸಿ ಬಿಟ್ಟರೆ ಸತ್ಕುಲ ಪ್ರಸೂತರಾದ 

........................................ಕ್ಕೂ, ಮರ್ಯಾದೆಗೂ ಹೆದರಿ ಕೃತ್ಯಗಳಲ್ಲಿ ಮರೆಮಾಚಿಸಿ ಅವ 

.......................ಮದುವೆಯಾದರೂ, ಆಗಬಹುದೆಂದು ಆಲೋಚಿಸಿ,  ಅವರನ್ನು ಊರೊ 

.....................................ಲ್ಲಿ ಗೋಪ್ಯವಾಗಿ ಇರಿಸಿರುವರೆಂತಲೂ, ತಿಳಿಸಿದನಲ್ಲದೆ ಪುರಂದ 

೭೭------------------------------------------------------------------------------------------

ರನ ಆಜ್ಞಾನುಸಾರವಾಗಿ ಪಟ್ಟಣದಲ್ಲಿದ್ದು ತನಗೆ ತಿಳಿದ ಸಂಗತಿಗಳನ್ನು ತನ್ನವರಿಗೆ 

ತಿಳಿಸುತ್ತ ತಾನು ಗೂಢಚಾರನಾಗಿದ್ದೆನೆಂತಲೂ ತಿಳಿಸಿದನು. ಪ್ರಾಣೋತ್ಕ್ರಮಣ 

ಕಾಲವು ಸಮೀಪಿಸಲು ಸ್ವಲ್ಪಕಾಲ ನೀರವನಾಗಿದ್ದು, ಮತ್ತೊಂದು ತಡವೆ ಕಣ್ಣೆರದು 

ನೋಡಿ, “ ತಾವು ಅಸಹಾಯ ಶೂರರಾದ ಕಾಳೀಚರಣರೇ ಬರಬಹುದೆಂದು ನಾನು 

ಭಾವಿಸುವೆನು, ಅದು ಸರಿಯೆ ?” ಎಂದು ಕೇಳಿದನು. 

ಕಾಳೀಚರಣ- ಹೌದು ! ನನ್ನಿಂದೇನಾಗಬೇಕಾಗಿದ್ದರೂ ಧಾರಾಳವಾಗಿ 

ಹೇಳಬಹುದು !” 

ವ್ಯಕ್ತಿ ನನ್ನ ದೊಂದೇ ವಿಜ್ಞಾಪನೆ, ಈ ಅಂತ್ಯಕಾಲದ, ಮರಣೋನ್ಮುಖಿಯಾ 

ಗಿರುವ ನನ್ನ ವಿಜ್ಞಾಪನೆಯನ್ನು ಖಂಡಿತವಾಗಿಯೂ ನಡೆಯಿಸಬೇಕು.” 

ಕಾಳೀಚರಣ- "ಆಗಬಯದು.” 

ವ್ಯಕ್ತಿ -- ಇವರ ತಂತ್ರಗಳಿಂದ ಮೋಸಹೋಗಿ ಸಾತ್ವಿಕ ಶಿರೋಮಣಿಯಾದ 

ದೇವೇಶನ ಮೇಲೆ ತಾವು ಹೊರಿಸಿರುವ ತಪ್ಪು ಕೇವಲ ಅನೃತ ! ಅದರಿಂದ ಆತನನ್ನು 

ಉದ್ಧರಿಸಬೇಕು. ಈ ಪುರದರನೆಂಬುವನು ಬಹು ತಂತ್ರಿಯಾದುದರಿಂದ ತಮ್ಮ 

ಕೈಯಿಂದ ತಪ್ಪಿಸಿಕೊಂಡರೂ ತಪ್ಪಿಸಿಕೊಳ್ಳಬಹುದು. ಆದರೂ ಬಾಧ್ಯರಿಲ್ಲದೆ ಸರ್ಕಾ 

ರದವರ ಅಧೀನದಲ್ಲಿರುವ ಪ್ರೇಮಚಂದ್ರನ ಆಸ್ತಿಯನ್ನು ಈ ಪುರಂದರನು ದಾಯಾದಿ 

ಯಾದುದರಿಂದ ಸ್ವಾಧೀನಪಡಿಸಿಕೊಳ್ಳಲು ಬರಬಹುದು. ಅದಕ್ಕಾಗಿಯೇ ಈ ಕೃತ್ಯ 

ಗಳನ್ನೆಲ್ಲ ಅವನಾಚರಿಸಿರುವುದು. ಆಗಲಾದರೂ, ಅವನನ್ನು ಹಿಡಿದು ಶಿಕ್ಷಿಸಬೇಕು!"  

ಎಂದೂ ತನ್ನ ಹೆಸರು ಗಂಗಾರಾಮನೆಂದೂ ಹೇಳಿ ಹಾಗೆಯೇ ಗತಪ್ರಾಣನಾದನು. 

ಕಾಳೀಚರಣನು ತಾನು ಮುಂದೆಸಗಬೇಕಾಗಿದ್ದ ಕೆಲಸವು ಬಹಳವಾಗಿದ್ದುದ 

ರಿಂದ ಕೂಡಲೆ ನಗರಕ್ಕೆ ಹೊರಟು ಭುಜಂಗನ ಮನೆಗೆ ಹೋದೆನು. 

ಆಗ ರಾತ್ರಿ ಒಂದು ಗಂಟೆಯ ಮೇಲಾಗಿದ್ದಿತು. ಬಾಗಿಲನ್ನು ತಟ್ಟಿದನು.  

ಭುಜಂಗನೆ ಇಂದಿಗೆ ಒಬ್ಬ ವೃದ್ಧೆಯು ವಹಿಸುತ್ತಿದ್ದಳೆಂಬುದನ್ನು ನಮ್ಮ ಪಾಠಕಮಹಾ 

ಶಯರು ಮರೆತಿರಲಿಕ್ಕಿಲ್ಲ. ಆ ಮುದುಕಿಯು ಅಷ್ಟು ಹೊತ್ತಿನಲ್ಲಿ ಕದವನ್ನು ತಟ್ಟು 

ವರಾರೆಂದು ಬೇಸರದಿಂದ, " ಏನು ಹಾಳ ಕೆಲಸವೋ ! ಈ ಮುಂಡೇ ಮಕ್ಕಳಿಗೆ 

ಹೊತ್ತಿಲ್ಲಾ, ಗೊತ್ತಿಲ್ಲಾ ! ಇವರಿಗೆ ಜವಾಬುಹೇಳುವುರಲ್ಲಿಯೇ ನನ್ನ ಪರ್ಯವ 

ಸಾನವಾಯಿತು !' ಎಂದು ಗೊಣಗುಟ್ಟಿಕೊಳ್ಳುತ್ತ ಒಂದು, "ಯಾರೋ ?” 

ಎಂದಂದಳು. ಕಾಳೀಚರಣನು, "ಅಜ್ಜೀ ! ನಾನು ಗಂಗಾರಾಮ್ ! ಗೊತ್ತಿಲ್ಲವೆ ?

೭೮------------------------------------------------------------------------------

ರಾಯರು ಮನೆಯಲ್ಲಿದ್ದಾರೋ ?” ಎಂದು ಗಂಗಾರಾಮಿನ ಸ್ವರವನ್ನೇ ಅನುಕರಿಸಿ 

ಕೇಳಲು ಮುದುಕಿಯು, " ಯಾರು ಗಂಗೂವೇ ? ಏನು ಸಮಾಚಾರ! ಇಷ್ಟು ಹೊತ್ತಿ 

ನಲ್ಲಿ ಏಕೆ ಬಂದೆ ? ” ಎಂದು ಕೇಳಿದಳು. 

ಕಾಳೀಚರಣ-- "ಯಜಮಾನರು ರಾಯರನ್ನು ಕರಕೊಂಡು ಬರಹೇಳಿದರು.” 

ಮುದುಕ--ಿ" ಅಯ್ಯೋ ಏನಾ ರಾಯನೋ ! ಏನುಗೊಳೋ ! ಯಾರೋ 

ಒಬ್ಬ ಅವನಿಗೆ ಗುರುತಾದವರಂತೆ, ಅವರು ಈ ಊರಿಗೆ ಬಂದಿದ್ದಾರಂತೆ, ನಿನ್ನೆ ದಿವಸ 

ದಿಂದ ಊಟಾ ತಿಂಡಿಯೆಲ್ಲಾ ಅಲ್ಲಿಯೇ ಕಣಪ್ಪ ! ಮನೆಗೆಕೂಡ ಬರುವುದಿಲ್ಲ ! ” 

ಕಾಳೀಚರಣ---" ಆ ಮನೆಗೆ ಹೋದರೆ ಈಗ ಸಿಗಬಹುದೇನು ? ಅದೆಲ್ಲಿದೆ ?” 

ಮುದುಕಿ--- "ಅದೆಲ್ಲೋ ಅಪ್ಪ ನನಗೆ ಗೊತ್ತಿಲ್ಲ! ” ಎಂದು ಹೇಳಿದಳು.  

ಕಾಳೇಶರಣನು ಮನೆಯನ್ನು ಪತ್ತೆಮಾಡಲು ತಾನು ಉಪಯೋಗಿಸಿದ ಉಪಾಯವು 

ನಿಷ್ಪಲವಾದುದರಿಂದ ಹಿಂದಿರುಗಿದನು. ಆದರೇನು ನಿರಾಶನೆ ? ಇಲ್ಲ ! ಕೂಡಲೆ  

"ಸಂಭಾಷಣಯಂತ್ರ” (telephone) ದ (C ಎಕ್ಸ್ಂಜ್‌ ಆಫೀಸಿ'' ಗೆ ಹೋಗಿ, 

ನಗರದ ಎಲ್ಲಾ ಪೊಲೀಸ್ ಸ್ಟೇಷನ್ನು ಗಳಿಗೂ, ಆಯಾಯ ಸ್ಟೇಷಕ ಸರಹದ್ದುಗಳಲ್ಲಿ 

ಜನಾವಾಸರಹಿತವಾದ ಮತ್ತು ಒಂದೆರಡು ದಿವಸಗಳಿಂದೀಚೆಗೆ ಹೊಸಬರು ವಾಸಕ್ಕೆ 

ಉಪಯೋಗಿಸುತ್ತಿರುವ ಮನೆಗಳನ್ನು ತಿಳಿಸಬೇಕೆಂತಲೂ, ಅವರವರ ಅಧೀನದಲ್ಲಿರುವ 

ಗೂಢಚಾರರನ್ನು ಕೂಡಲೆ ಇನ್‌ಸ್ಪೆಕ್ಟರ ಮನೆಗೆ ಕಳುಹಿಸಬೇಕೆಂತಲೂ, ಯಂತ್ರದ 

ಮೂಲಕ ತಿಳಿಸಿ ಇನ್‌ಸ್ಪೆಕ್ಟರ್ ತಾಂದೋಣಿರಾಯರ ಮನೆಗೆ ಹೋದನು. 

ಅಪ್ಪಣೆಯ ಪ್ರಕಾರ ಬಂದ ಗೂಢಚಾರರಿಗೆ ಮಾಡಬೇಕಾದ ಕೆಲಸವನ್ನು 

ತಿಳಿಸಿ ತಕ್ಕ ಪೊಲೀಸಿನವರನ್ನು ಕರೆದುಕೊಂಡು ನಗರದ ಹೊರವಳಯದಲ್ಲಿದ್ದ ಆ ಅರ 

ಣ್ಯಕ್ಕೆ ಹೋಗಿ ಗವಿಯಲ್ಲಿ ಬಂಧಿತರಾಗಿದ್ದ ಜನರನ್ನು ಹಿಡಿದುಕೊಂಡು ಪ್ರಭಾತಕಾ 

ಲಕ್ಕೆ ಮುಂಚಿತವಾಗಿಯೇ ಕಳೀಕರಣನು ಊರನ್ನು ಸೇರಿದನು. ಆ ವೇಳೆಗೆ ಗೂಢ 

ಚಾರರು ಕಾಳೇಚರಣನು ಹೇಳಿದಂತೆ ಎಲ್ಲವನ್ನೂ ಸಿದ್ಧಗೊಳಿಸಿಕೊಂಡು ಬಂದಿದ್ದರು. 

ಕಾಳೀಚರಣನು ಸಂಗತಿಗಳೆಲ್ಲವನ್ನೂ ತಿಳಿದುಕೊಂಡು ಬುಡಬುಡುಕಿಯವನಂತೆ ಉಡು 

ಪುಗಳನ್ನು ಧರಿಸಿ, ಗೂಢಚಾರರಿಂದ ತಿಳುಹಿಸಲ್ಪಟ್ಟಿದ್ದ ಒಂದು ಮನೆಗೆ ಸೂರ್ಯೋ 

ದಯ ಸಮಯದಲ್ಲಿ ಹೋದನು. 

ಆ ಮನೆಯು ಆ ಊರಿನಲ್ಲಿ ಜನರು ಅತ್ಯಂತ ವಿರಳವಾಗಿದ್ದ ಒಂದು ಪ್ರದೇಶ 

ದಲ್ಲಿದ್ದಿತು, ಅದು ಬಹಳ ದೊಡ್ಡದು, ಅದರ ಕೆಲವು ಭಾಗಗಳು ಆಗತಾನೆ ಸರಿಪಡಿಸಲ್ಪ

೭೯---------------------------------------------------------------------------------------

ಟ್ಟಿದ್ದುವು. ಭುಜಂಗನು ಮನೆಯಿಂದ ಹೊರಹೊರಟನು, ಕಡಲೆ ವೇಷಧಾರಿಯಾಗಿದ್ದ 

ಕಾಳೀಚರಣನು ತನ್ನ ವಾದ್ಯವನ್ನು ಧ್ವನಿಮಾಡಿ "ಜಯ ಜಯ!!”ಎಂದು ಹೊಗ 

ಳಿದನು, ಭುಜಂಗನಿಗೆ ಇಂತಹ ಜನಗಳ ಮಾತಿನಲ್ಲಿ ಹೆಚ್ಚಾಗಿ ನಂಬುಗೆಯಾಗಿದ್ದುದ 

ರಿಂದ, "ಏ! ಹಕ್ಕಿನರಸಯ್ಯ! ಈ ದಿವಸ ಹಕ್ಕಿ ಹೇಳಿದ ವಿಶೇಷ ವಾರ್ತೆಯೇನಾದರೂ 

ಉಂಟೋ? ” ಎಂದು ಕೇಳಿದನು. 

ಕಾಳೀಚರಣ:-(ಬುಡುಬುಡುಕೆಯನ್ನು ಬಹು ರಭಸದಿಂದ ಧ್ವನಿಗೆಯು 

"ಸ್ವಾಮಿಗೆ ಜಯವುಂಟು! ಹೆಣ್ಣಿನದೆಶೆಯಿಂದ ಹೇರಳವಾಗಿ ಹೊನ್ನು ಕೈಸೇರುವುದು, 

ಹೆಣ್ಣಿನ್ನು ಸ್ವಾಧೀನವಾಗಲಿಲ್ಲವೆಂದು ಸಂಕೋಚ, ಭಯಕಾಲವು ಕಳೆಯಿತು! 

ಜಯಕಾಲವು ಸಮೀಪಿಸಿತು!! ” ಎಂದಂದು, ಮತ್ತೊಮ್ಮೆ ವಾದ್ಯದ ವಿಚಿತ್ರವಾದ 

ಧ್ವನಿಯನ್ನು ವ್ಯಕ್ತಗೊಳಿಸಿ, " ಸ್ವಾಮಿಗೆ ಜಯವಾಗುತ್ತದೆ! ನರಸನ ಮಾತು 

ಎಂದಿಗೂ ಸುಳ್ಳಲ್ಲ!! ಸ್ವಾಮಿ ಸುಮ್ಮನಿರಕೂಡದು. ನರಸನು ವಂಶಪಾರಂಪರೆಯಾಗಿ 

ಬಂದಿರುವ ಗೀರ್ವಾಣಭಾಷೆಯ ಮಹಿಮೆಯಿಂದ ಹಕ್ಕಿ ಹೇಳಿದ್ದೆಲ್ಲವನ್ನೂ ತಿಳಿದು 

ಕೊಂಡು ಬಂದಿರುವನು. ದಿಟವಾದರೆ ದಿಟವೆನ್ನ ಬೇಕು ! ಸಟೆಯಾದರೆ ಸಟೆಯೆನ್ನ ಬೇಕು. 

ಸ್ವಾಮಿಯು ಒಂದು ದೊಡ್ಡ ಇನಾಮು ಕೊಡಬೇಕು. ನರಸನು ನಾಡಾಡಿಯವನಲ್ಲ 

ಹೇಳಿದ ಮಾತೆಂದೂ ಸುಳ್ಳಾಗುವುದಲ್ಲ. ಸ್ವಾಮಿಯ ಸಮಾಚಾರವನ್ನು ಇಂತಹ 

ಬಹಿರಂಗಸ್ಥಳದಲ್ಲಿ ಹೇಳತಕ್ಕದ್ದಲ್ಲ. ” ಎಂದಂದು ಮತ್ತೊರ್ಮೆ ವಾದ್ಯರವವನ್ನು 

ಮಾಡಿ " ಇನಾಮು ಬರಬೇಕು ಸ್ವಾಮೀ !” ಎಂದಂದನು. 

ಭುಜಂಗನಿಗೆ ಆಶೆಯು ಹೆಚ್ಚಾಯಿತು, ಬುಡುಬುಡುಕೆಯವನನ್ನು ಕೇಳಕೇಳುತ್ತ 

ಹೋದ ಹಾಗೆಲ್ಲ ಅವನು ತನ್ನ ವಾಗ್ವೈಖರಿಯಿಂದ ಭುಜಂಗನಿಗೆ ಮತ್ತಷ್ಟು ಆಶೆಯು 

ಹೆಚ್ಚಾಗುವಂತೆ ಮಾಡಿದನು, ಭುಜಂಗನು ಇವನಿಂದೆಲ್ಲಾ ಸಂಗತಿಗಳನ್ನೂ ತಿಳಿದು 

ಕೊಳ್ಳಬೇಕೆಂದೆಣಿಸಿ, “ ನರಸ ! ಇದು ನಮ್ಮ ಮನೆಯಲ್ಲ ! ನಮ್ಮ ಮನೆಗೆ ಹೋಗೋಣ 

ಬಾ ! ನಿನ್ನ ಹಕ್ಕಿಯು ಹೇಳಿದುದನ್ನೆಲ್ಲ ಹೇಳುವಿಯಂತೆ !! ” ಎಂದಂದನು. ನರಸನು ಪುನಃ 

ಬುಡುಬುಡುಕೆಯನ್ನು ಚೆನ್ನಾಗಿ ಬಾರಿಸಿ, - " ಪರಾಕು ಸ್ವಾಮೀ ! ಜಯವಾಗಲಿ 

ಸ್ವಾಮಿ !! ಬುದ್ದಿಯವರಿಗೆ ಈ ಮನೆಯಲ್ಲಿ ಸರ್ವಸ್ವತಂತ್ರವುಂಟು. ದೇವರ ಜೀವವಾದ 

ಅಮ್ಮನವರು ಇಲ್ಲೇ ಉಂಟು !! ಈ ಹೊತ್ತು ದೇವರು ಕೃಪೆಮಾಡಿಯಾನು !!! ಲಕ್ಷ್ಮೀ 

ಕಟಾಕ್ಷ ಒದಗೀತು ! ಬುದ್ದಿಯವರಿಗೆ ಸಂತೋಷವಾದೀತು !! ನರಸನ ಮಾತು 

ಸುಳ್ಳಲ್ಲ ! ” ಎಂದು ಹೇಳಲು, ಭುಜಂಗನಿಗೆ ಆಶೆಯು ಮಿತಿಮೀರಿತು. L

.............

೮೦-----------------------------------------------------------------------------------------------

ಪಂಚದಶಗುಚ್ಛ. 

ಕಾಳೀಚರಣನು ಬುಡುಬುಡುಕಿಯವನ ವೇಷದಿಂದ ತಾನು ಸಾಧಿಸಬೇಕೆಂದಿದ್ದ 

ಉದ್ಯಮವನ್ನು ಚೆನ್ನಾಗಿ ಸಾಧಿಸಿದನು. ಭುಜಂಗನು ಸಂಪೂರ್ಣವಾಗಿ ಕಾಳೀಚರಣನ 

ಬಲೆಯಲ್ಲಿ ಬಿದ್ದನು. ಅಷ್ಟೇ ಏಕೆ ? ಅವನು ಈ ಬುಡುಬುಡುಕಿಯವನ ಮಾತಿನಂತೆ 

ನಡೆಯಲು ಈಷದಪಿ ಹಿಂಜರಿಯುತ್ತಿರಲಿಲ್ಲ. ಇನ್ನು ವಿಷಪಾನವನ್ನು ಮಾಡೆಂದು 

ಹೇಳಿದ್ದರೆ ಅದನ್ನು ಕೂಡ ಮಾಡಲು ಸಿದ್ದನಾಗಿದ್ದನು. ಈ ಸಂದರ್ಭವನ್ನರಿತು, 

ಕಾಳೀಚರಣನು ತನ್ನ ವಾಕ್ಚಾತುರ್ಯದಿಂದ ಅವನನ್ನು ಕೇವಲ ಮುಗ್ಧನಾಗುವಂತೆ 

ಮಾಡಿದನಲ್ಲದೆ ಅವನ ಪರಮಗುರುವಾದ ಪುರಂದರನು ಕೇವಲ ನಟನೆಯ ಮನುಷ್ಯ 

ನೆಂದೂ, ಅವನು ಕೇವಲ ತನ್ನ ಸ್ವಾರ್ಥಕ್ಕಾಗಿ ಆ ರೀತಿ ನಂಬಿಕೆಯನ್ನು ಹುಟ್ಟಿಸಿ, 

ಕಾರ್ಯವು ಕೈಗೂಡಿದ ಮೇಲೆ ಎಲ್ಲರಿಗೂ ಮೋಸಮಾಡುವನೆಂದೂ, ಏನಾದರೂ 

ಮಾಡಿ ಅವನಧೀನದಿಂದ ಆ ದಿವಸವೇ ಹುಡುಗಿಯರನ್ನು ಹೊರತರಬೇಕೆಂದೂ, ಹೇಳಿ 

ದನು. ಅವನ ಮಾತಿನಲ್ಲಿ ಭುಜಂಗನಿಗೆ ನಂಬುಗೆಯು ಉಂಟಾಗಿದ್ದುದರಿಂದ ಅವನು ಹೇಳಿ 

ದುದು ನಿಜವೆಂದು ನಂಬಿ ಆ ಮನೆಯಿಂದ ಹೆಂಗಸರನ್ನು ಹೇಗೆ ಬೇರೊಂದು ಮನೆಗೆ 

ಕರೆದುಕೊಂಡು ಹೋಗಬೇಕೆಂದು ಆಲೋಚಿಸಲಾರಂಭಿಸಿದನು, ಕಾಳಿಚರ 

ಣನು ಆ ದಿನ ಸಾಯಂಕಾಲ ತಾನು ಬದು ಕೈಲಾ) ದ ಸಹಾಯವನ) ಮಾಡು 

ವುದಾಗಿ ಹೇಳಿ ಭುಜಂಗನ ಆಸೆಯನ್ನು ಪಡೆದು ಅಲ್ಲಿಂದ ಹೊರಟುಹೋದನು. 

ಭುಜಂಗನು,-ಕಾಳೀಕರಣನ ಹೇಳಿಕೆಗೆ ಮರುಳಾಗಿದ್ದವನು;-.-ನರಸನು ಆಡಿದ ಮಾತಿ 

ನಪ್ರಕಾರ ತನ್ನ ಸಹಾಯಕ್ಕಾಗಿ ಸಾಯಂಕಾಲ ಬರಬಹುದೆಂದೂ, ಆ ದಿವಸ ಪುರಂದರ 

ನನ್ನೂ ಹುಡುಗಿಯರನ್ನೂ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದೂ ನಿಶ್ಚಯಿಸಿ 

ಕೊಂಡನು, ಹಾಗೆಯೆ, ಆ ಮನೆಯಲ್ಲಿ ಪುರಂದರನನ್ನು ಬೆನ್ನು ಬಿಡದಂತೆ ಕಾಯ್ದನು. 

ಅಷ್ಟರಲ್ಲಿ ಕಾಳೀಚರಣನು ಆ ಮನೆಯ ಯಜಮಾನನನ್ನು ಪತ್ತೇಮಾಡಿಸಿ ಕರೆಯಿಸಿ 

ಕೊಂಡು ಅವನಿಂದಾಗಬೇಕಾದ ಕೆಲಸಗಳೆಲ್ಲ ವನ್ನೂ ತಿಳಿಯಿಸಿ, ಅವನೊಂದಿಗೆ ಒಬ್ಬ 

ಮನುಷ್ಯನನ್ನು ಕಳುಹಿಸಿಕೊಟ್ಟನು. ಅವರಿಬ್ಬರೂ ಪುರಂದರಾದಿಗಳಿದ್ದ ಮನೆಗೆ 

ಹೋದರು. 

ಮನೆಯಲ್ಲಿದ್ದ ಪುರಂದರ ಮತ್ತು ಭುಬoಗ, ಇವರಿರ್ವರ್ ಅವರನ್ನು ಉಚಿತ 

ವಾಗಿ ಸತ್ಕರಿಸಿ " ಬಂದ ಕಾರ್ಯವೇನು ?” ಎಂದು ಕೇಳಿದರು, ಮನೆಯ ಯಜಮಾ 

ನನು " ಸ್ವಾಮಿ ! ಈ ಮನೆಯ ಅಂತರ್ಗೃಹದಲ್ಲಿ ನಮಗೆ ಸ್ವಲ್ಪ ಕೆಲಸವಿದೆ ಒಂದು 

ಕಾಲುಗಂಟೇಮಟ್ಟಿಗೆ ನಮ್ಮನ್ನಲ್ಲಿ ಬಿಡಬೇಕು !” ಎಂದಂದನು. 

೮೧-----------------------------------------------------------------------------------------

ಭುಜಂಗ-- ಸ್ವಾಮಿ ! ಮಾಫ್‌ಮಾಡಬೇಕು ! ಅಲ್ಲಿ ನಾವು ಬಹಳ ಸಾಮಾ 

ನುಗಳನ್ನು ತುಂಬಿರುವೆವು. ನಮಗೆ ಒಂದು ದಿನ ಪುರುಸತ್ತು ಕೊಟ್ಟರೆ ಬಿಡುವು 

ಮಾಡಿಸಿ ಕೊಡುತ್ತೇನಲ್ಲದೆ ಈಗ ಖಂಡಿತವಾಗಿಯೂ ಆಗುವುದಿಲ್ಲ !” 

ಯಜಮಾನ- ಸ್ವಾಮೀ ದಯವಿಟ್ಟು ಹಾಗೆ ಮಾಡಬೇಡಿ. ದಯವಿಟ್ಟು 

ಈಗಲೇ ಅಪ್ಪಣೆಕೊಡಬೇಕು. ಬೇಕಾದರೆ ತಾವೂ ನಮ್ಮ ಜತೆಯಲ್ಲೇ ಇರಿ, ನಿಮ್ಮ 

ಸಾಮಾನೊಂದನ್ನೂ ಮುಟ್ಟುವುದಿಲ್ಲ! ಬಹು ಅಗತ್ಯವಾಗಿದೆ. ಸ್ವಾಮಿ! ಅದರಲ್ಲಿ 

ಮುಚ್ಚು ಮರೆಯೇನು ಸ್ವಾಮಿ! ನಿಜವಾದ ಸಂಗತಿಯನ್ನು ಹೇಳಿಬಿಡುತ್ತೇನೆ ಕೇಳಿ-- 

ಇವರಿದ್ದಾರಲ್ಲಾ,--'' ಎಂದಂದು ತನ್ನ ಜತೆಯಲ್ಲಿದ್ದವನನ್ನು ತೋರಿಸಿ, “ ಇವರ 

ತಂದೆಯವರು ಪೆನ್‌ಷನ್‌ ಕಲೆಕ್ಟರು, ಈಗ ಎರಡು ವರ್ಷಗಳ ಹಿಂದೆ ಈ ಮನೆಯ 

ಲ್ಲವರಿದ್ದರು, ಆ ಕಾಲದಲ್ಲಿ ಈತನ ತಾಯಿಯು ಸ್ವಲ್ಪ ದ್ರವ್ಯವನ್ನು ಭೂಸ್ಥಾಪನೆ 

ಮಾಡಿದರು. ಎಲ್ಲಿ ? ಆ ಅಂತರ್ಗೃಹದಲ್ಲೊಂದು ಕಡೆ ! ಈಗ, ಈತನ ಮೇಲೆ ಐದು 

ಸಾವಿರ ರೂಪಾಯಿಗೆ ಒಂದು ದಾವಾ ಡಿಕ್ಕಿಯಾಗಿರುತ್ತೆ. ಈ ದಿವಸ ಕೋರ್ಟಿನ 

ಕಾಲಕ್ಕೆ ಸರಿಯಾಗಿ ಡಿಕ್ಕಿ ಮೊಬಲಗನ್ನು ಹಾಜರ್‌ ಮಾಡಬೇಕು.” 

ಪುರಂದರ- "ಸ್ವಾಮಿ, ಇದಕ್ಕಾಗಿ ಇಷ್ಟು ವ್ಯಥೆಯೇಕೆ ? ಆ ರೂಪಾಯಿ 

ಗಳನ್ನು ನಾನು ಕೊಟ್ಟಿರುತ್ತೇನೆ. ಅನಂತರ ನೀವು ನಿಮ್ಮ ಭೂಗತ ದ್ರವ್ಯವನ್ನು 

ತೆಗೆದುಕೊಡಬಹುದು.” 

ಮನೆಯ ಯಜಮಾನನು ಅದಕ್ಕೆ ಪ್ರತ್ಯುತ್ತರವನ್ನು ಹೇಳಲು ಏನೂ ತೋರದೆ 

ಜತೆಯಲ್ಲಿದ್ದವನ ಮುಖವನ್ನು ನೋಡಿದನು. ಅವನು ಈತನ ಅಭಿಪ್ರಾಯವನ್ನರಿತು 

" ಅದೆಲ್ಲಿಯ ಮಾತು ಸ್ವಾಮಿ ! ಎಷ್ಟಿರುವುದೋ ಏನೋ ! ನಮ್ಮ ದುಡ್ಡನ್ನು ನಾವು 

ಉಪಯೋಗಿಸೋಣ ! ” ಎಂದಂದನು. 

ಪುರಂದರನಿಗೆ ಸ್ವಲ್ಪ ಕೋಪವುಂಟಾಯಿತು. " ನೀವು ನಮಗೆ ತೊಂದರೆ 

ಕೊಡುವುದಕ್ಕಾಗಿ ಬಂದಿರುವಂತೆ ತೋರುತ್ತದೆ. ನೀವು ಏನು ಬೇಕಾದರೂ ಮಾಡಿ 

ಕೊಳ್ಳಿ, ನಾನು ಖಂಡಿತವಾಗಿಯೂ ಒಳಗೆ ಬಿಡುವುದಿಲ್ಲ!” ಎಂದು ಸ್ವಲ್ಪ ಆಕ್ರೋಶ 

ದಿಂದ ಹೇಳಿದನು. 

ಮನೆಯ ಯಜಮಾನನು, "ನಾವು ನಿಜಸ್ಥಿತಿಯನ್ನು ಹೇಳಿರುವುದರಿಂದ 

ನಿಮ್ಮ ನಂಬಿಕೆ ನಮಗೇನು ? ಖಂಡಿತವಾಗಿಯೂ ಈ ಹೊತ್ತು ತೆಗೆದುಕೊಂಡೇ 

ಹೋಗಬೇಕು. ನಮ್ಮ ದ್ರವ್ಯವನ್ನು ಈಗಲೇ ತೆಗೆದುಕೊಂಡು ಹೋಗಬೇಕು. ಅವಕಾಶ 

೮೨------------------------------------------------------------------------------------

ಕೊಟ್ಟರೆ ಕೊಡಿ, ಇಲ್ಲವೆ ನನ್ನ ಮನೆಯನ್ನು ಬಿಡಿ. ಈಗಲೆ ಬಿಟ್ಟು ಹೊರಡಿ. 

ನನ್ನ ವಸ್ತುವನ್ನು ನಾನು ತೆಗೆದುಕೊಳ್ಳಬೇಕೆಂದರೆ ಅಡ್ಡಿ ಮಾಡುವುದು ಯಾವ ನ್ಯಾಯ? 

ಘೋಷಾ ಹೆಂಗಸರಿರುವರೆ ? ನೀವೇನು ಮುಸಲ್ಮಾನರೇ ? ಆ ಕೋಣೆಯಲ್ಲೇನಾ 

ದರೂ ಖೂನಿ ಮಾಡಿದ್ದೀರ ? ನಿಮ್ಮ ಪದಾರ್ಥಕ್ಕೆ ಈಷದಪಿ ಬಾಧಕವಿಲ್ಲದಂತೆ 

ನಮ್ಮ ಕೆಲಸವನ್ನು ಮಾಡಿಕೊಳ್ಳುವೆವೆಂದರೆ ಅಡ್ಡಿ ಪಡಿಸಲು ನೀವಾರನ್ನಾದರೂ ಅಲ್ಲಿ 

ಬಚ್ಚಿಟ್ಟಿರುವಿರ ? ಏನಿದೆ ? ಅದೇನು ಬಿಡುವಿರೋ ಇಲ್ಲವೋ ? ” ಎಂದು ಕೇಳಲು 

ಪುರಂದರನಿಗೆ ಅತ್ಯುಗ್ರವಾದ ಕೋಪವುಂಟಾಯಿತು. ಮಹದಾಶದಿಂದ, ನಾವೆಂ 

ತಹವರಾದರೇನು ? ಒಳಗೆ ಹೋಗಲು ಬಿಡುವುದಿಲ್ಲ. ನ್ಯಾಯವಾಗಿ ಹೊರಗೆ 

ಹೋಗುವುದಾದರೆ ಹೋಗಿ, ಇಲ್ಲವಾದರೆ ಕತ್ತು ಹಿಡಿದು ತಳ್ಳಿಸಿಬಿಡುವೆವು.” ಎಂದು 

ಹೇಳಿದನು. ಯಜಮಾನನಿಗೆ ಕೋಪವು ಮಿತಿಮೀರಿತು. “ ಏನಿರಯಾ ! ನೀವೇನೊ 

ಸಂಭಾವಿತರೆಂದು ಮನೆಯನ್ನು ಕೊಟ್ಟಿದ್ದಾಯಿತು. ಸರಿ ! ಸರಿ ! ಒಳ್ಳೇ ದೊಡ್ಡಸ್ತಿಗೆ! 

ನಮ್ಮ ಮನೆಯಿಂದ ನಮ್ಮನ್ನೆ ಕತ್ತು ಹಿಡಿದು ತಳ್ಳಿಸೋದು” ಎಂದು ಹೇಳುತ್ತ 

ಹೊರಗೆ ಬಂದರು. ಆ ವೇಳೆಗೆ ತಾಂದೋಣಿರಾಯರು ಆಕಡೆ ಹೋಗುತ್ತಿರಲು, ಆ 

ಯಜಮಾನನು ಇನ್‌ಸ್ಪೆಕ್ಟರ್ ಸಾಹೇಬರನ್ನು ಕರೆದು, “ ರಾಯರೆ! ಈತನ ಧೂರ್ತತೆ 

ಯನ್ನು ನೋಡಿರಿ !” ಎಂದಂದು ನಡೆದ ಸಂಗತಿಯನ್ನೆಲ್ಲ ಹೇಳಲು, ಇನ್‌ಸ್ಪೆಕ್ಟರು 

ಸಮಾಧಾನವನ್ನು ಹೇಳುವುದಕ್ಕೋಸುಗ ಮನೆಯನ್ನು ಪ್ರವೇಶಿಸಿದರು. 

ಭುಜಂಗನೂ, ಪುರಂದರನೂ, ಇನ್‌ಸ್ಪೆಕ್ಟರನ್ನು ನೋಡಿ ಕೇವಲ ವಿಷಣ್ಣವದನ 

ರಾದರು. ಪುರಂದರನು ಇನ್‌ಸ್ಪೆಕ್ಟರನ್ನು ನೋಡಿ, “ ತಾವಿಲ್ಲಿಗೆ ಬಂದುದೇಕೆ ?" 

ಎಂದು ಪ್ರಶ್ನಿಸಿದನು. ಇನ್‌ಸ್ಪೆಕ್ಟರು, " ಇಲ್ಲೇ ಹೋಗುತ್ತಿದ್ದನು. ಇವರು ಕರೆದ 

ರಾದುದರಿಂದ ಸುಮ್ಮನೆ ನೋಡಬೇಕೆಂದು ಬಂದೆ ? ?” ಎಂದಂದರು. ಪುರಂದರನು 

ಮನೆಯ ಯಜಮಾನನ್ನು ನೋಡಿ, “ ಸ್ವಾಮಿ, ತಮ್ಮ ಮನೆಗೆ ವಾಸಕ್ಕೆ ಬಂದುದು 

ನನ್ನ ತಪ್ಪು. ಏನಾದರಾಗಲಿ! ನಿಮ್ಮೊಂದಿಗೆ ಮಾತೇನು ? ನಿಮ್ಮ ದುಡ್ಡನಿದ್ದರೂ 

ಕಿತ್ತುಕೊಂಡು ಹೋಗುವಿರಂತೆ ? ಸ್ವಲ್ಪ ತಾಳಿ,'' ಎಂದು ಹೇಳಿ ಒಳಗೆ ಹೋದನು. 

ಮತ್ತೆ ಹಿಂದಿರುಗಲೇ ಇಲ್ಲ! 

ಸ್ವಲ್ಪ ಕಾಲ ಕಾಯ್ದು ಇಸ್ಪಕ್ಟರ್ ಸಾಹೇಬರು, " ಅವರೆಲ್ಲ ಸರಿಪಡಿಸಿ 

ಕೊಡುವರು, ಅದಕ್ಕೆ ಅವರಿನ್ನೂ ಬರಲಿಲ್ಲವಯ್ಯಾ, ನಿಮ್ಮ ಕೆಲಸಮಾಡಿಕೊಂಡು 

ಹೋಗಿ !” ಎಂದಂದು ಮೇಲಕ್ಕೇಳುವಷ್ಟರಲ್ಲಿಯೇ, ಒಳಗೆ 'ಢಂ' ಎಂದು ಬಂದೂ 

೮೩----------------------------------------------------------------------------------------

ಕಿನ ಶಬ್ದವಾಯಿತು. ಶಬ್ದವನ್ನನುಸರಿಸಿ ಎಲ್ಲರೂ ಒಳಗೆ ನುಗ್ಗಿದರು. ಆ ವೇಳೆಗೆ 

ಕಾಳೀಚರಣನು ಬಹು ರಭಸದಿಂದ ತನ್ನ ಸಾಹಸವನ್ನೆಲ್ಲ ಪ್ರಯೋಗಿಸಿ ಒಂದು ಬಾಗಿ 

ಲನ್ನು ಒದೆಯುತ್ತಿದ್ದುದನ್ನು ನೋಡಿದರು. ಕೂಡಲೆ ಎಲ್ಲರೂ ಅಲ್ಲಿಗೆ ಓಡಿಹೋಗಿ, 

"ಇದೇನು” ಎಂದು ಕೇಳಲು, "ವಿಜಯಿನಿ ವಿಲಾಸಿನಿಯರ ಅಪಹಾರಕನಾದ ಪುರಂದ 

ರನು ಈ ಮನೆಯಲ್ಲಿದ್ದನು. ಅವನು ನನ್ನ ಮೇಲೆ ಬೀಳಲು ಬರಲು, ಅವನನ್ನು ಜೀವ 

ಸಹಿತನಾಗಿ ಹಿಡಿಯಬೇಕೆಂಬ ಆಶೆಯಿಂದ ಅವನ ಕೈಯಲ್ಲಿದ್ದ ಪಿಸ್ತೂಲನ್ನು ನೆಲಕ್ಕೆ 

ಕೆಡವಿದೆ. ತತ್‌ಕ್ಷಣವೆ ಅವನು ಈ ಕೊಠಡಿಯಲ್ಲಿ ಸೇರಿಕೊಂಡನು ! ” ಎಂದು ಹೇಳಿ 

ದನು, ಎಲ್ಲರೂ ಸೇರಿ ಆ ಬಾಗಿಲನ್ನು ಮುರಿದು, ಒಳಹೊಕ್ಕರು. ಪುರಂದರನು 

ಅಲ್ಲಿರಲಿಲ್ಲ ! ಕಾಳೀಕರಣನು ಕೇವಲ ಜುಗುಪ್ಪಾನ್ವಿತನಾದನು ! ಕೈಗೆ ಸಿಕ್ಕಿದ್ದ 

ವನು ತಪ್ಪಿಸಿಕೊಂಡುದಕ್ಕಾಗಿ ಸ್ವಲ್ಪ ವ್ಯಸನಪಟ್ಟನು. ಆದರೇನು ? ಕೇವಲ ವ್ಯಸನ 

ದಲ್ಲಿಯೇ ಕೂಡುವ ಸ್ವಭಾವದವನೇ ? ಅಲ್ಲ! ಕಾಚರಣನಿಗೆ ಆ ಸ್ವಭಾವವಿರಲಿಲ್ಲ! 

ಉತ್ತರಕ್ಷಣದಲ್ಲಿಯೇ ಪುರಂದರನು ತಪ್ಪಿಸಿಕೊಂಡು ಹೋದ ಮಾರ್ಗವನ್ನು ಕಂಡು 

ಹಿಡಿದು, ಅವನನ್ನು ಹುಡುಕಲು, ಹೊರಗೆ ಹೋದನು. ನಾತಿದೂರದಲ್ಲಿ ಬಿದ್ದು 

ನರಳುತಿದ್ದ ಒಬ್ಬನನ್ನು ಕಂಡು," ಅವನಾರು ? ” ಎಂದು ವಿಚಾರಿಸಲು, ಅವನು, 

ಬೈಸಿಕಲ್ಲಿನಮೇಲೆ ಆಕಡೆ ಹೋಗುತ್ತಿರಲು, ಆರೋ ಒಬ್ಬನು ಅವನನ್ನು ಬೈಸಿಕಲ್ಲಿನಿಂದ 

ತಳ್ಳಿ, ಅದರ ಮೇಲೆ ಕುಳಿತುಕೊಂಡು ಹೊರಟುಹೋದನೆಂದು ಹೇಳಿದನು. ಅದು 

ಪುರಂದರನ ಕೆಲಸವೇ ಇರಬಹುದೆಂದು ಕಾಳೀಚರಣನು ಆಲೋಚಿಸಿ, ತಾನೊಂದು 

ಬೈಸಿಕಲ್ಲನ್ನು ಹತ್ತಿ ಪುರಂದರನು ಹೋದ ಮಾರ್ಗವನ್ನೇ ಅನುಸರಿಸಿ ಬಹು ವೇಗವಾಗಿ 

ಹೋದನು, ಇನ್‌ಸ್ಪೆಕ್ಟರು ಭುಜಂಗನನ್ನು ಕರೆದುಕೊಂಡು ಹೊರಟು ಹೋಗಿ, ಆ 

ಮನೆಗೆ ತಕ್ಕ ಕಾವಲನ್ನು ಏರ್ಪಡಿಸಿದರು. 

............

೮೪----------------------------------------------

ಷೋಡಶಗುಚ್ಚ. 

ಪಾಠಕಮಹಾಶರಿಗೆ ಭುಜಂಗನ ವಿಚಿತ್ರವಾದ ಕುಟೀರವನ್ನು ಒಮ್ಮೆ ತೋರಿಸಿ 

ಬಿಟ್ಟಿರುತ್ತೇವೆ. ಇಂದು, ಭುಜಂಗನು ತನ್ನಾ ಕುಟೀರದ ಒಂದು ಮೂಲೆಯಲ್ಲಿ ಕುಳಿ 

ತುಕೊಂಡು ಚಿಂತಾಕ್ರಾಂತನಾಗಿರುವನು. ವಿಷಯವೇನಿರಬಹುದು ? ಕಾಳೀಚರಣನು 

ಬುಡುಬುಡುಕಿಯವನಂತೆ ವೇಷವನ್ನು ಧರಿಸಿ, ಭುಜಂಗನ ಅತ್ಯದ್ಭುತ ಭವಿಷ್ಯತ್ತನ್ನು 

ಅರ್ಥಾಂತರವಾಗಿ ಬೋಧಿಸಿದ್ದನಾದುದರಿಂದ ಅವನು ಅದನ್ನು ಕುರಿತೇ ಆಲೋಚಿಸುತ್ತಿ 

ರಬಹುದು ! ನರಸನು ಹೇಳಿದ ಒಂದೊಂದು ಶಬ್ದವೂ ಜ್ಞಾಪಕಕ್ಕೆ ಬರುತ್ತಿದ್ದಿತು. ಆ 

ದಿವಸ ನಡದ ಆ ವಿಚಿತ್ರ ವ್ಯಾಪಾರವು ಅವನನ್ನು ಅಸ್ಪಷ್ಟವಾದ ಸ್ಥಿತಿಗೆ ಗುರಿಮಾಡಿ 

ದ್ದಿತು. ಒಮ್ಮೊಮ್ಮೆ " ನರಸನ ಮಾತಿನ ಮಹಿಮೆಯು ಅತ್ಯದ್ಭುತವಾಗಿರುವಂತಿದೆ ! 

ಅಂತು, ಆ ದಿವಸ ಕಾಳೀಚರಣ, ಪುರಂದರ, ಇವರಿಬ್ಬರಲ್ಲಿ ಯಾರಾದರೊಬ್ಬರು 

ಸತ್ತರೆ ನನ್ನ ಸುಕೃತಕ್ಕೆ ಎಣೆಯುಂಟೆ ? ಒಂದುವೇಳೆ ಪುರಂದರನೇನಾದರೂ ಸಿಕ್ಕಿ 

ಬಿದ್ದರೇ !-- ಛೇ !! ಅದೆಲ್ಲಿಯ ಮಾತು : ಅವನೇನು ಸಾಮಾನ್ಯನೆ ? ಇಂತಹ ಮನೆ 

ಯಲ್ಲಿ ಕೈಗೆ ಸಿಕ್ಕಿದವನು ಎಷ್ಟು ಸಾಹಸ ಮಾಡಿ ತಪ್ಪಿಸಿಕೊಂಡಿರುತ್ತಾನೆ ! ಹೇಗೆ 

ಪರಾರಿ !! ಇಂತಹವನು ಕಾಡಿನಲ್ಲಿ ಬಿದ್ದ ಮೇಲೆ ಕಾಳೀಚರಣನ ಕೈಗೆ ಸಿಕ್ಕುವುದುಂಟೆ ! 

ಇಲ್ಲ !! ಕೇವಲ ಅಸಂಬದ್ಧ ಪ್ರಲಾಪ !!! ನರಸನು ಹೇಳಿದಂತೆ ಏನೊ, ಎಲ್ಲವೂ ನಡೆ 

ಯುವ ಹಾಗೇ ಕಾಣುತ್ತದೆ ! ಆದ್ದರಿಂದ ಅವನ ಮಾತಿನಂತೆ ಈ ದಿವಸ ಕಾಳೀಚರ 

ಣನು ಪುರಂದರನಿಂದ ಸತ್ತರೂ ಸಾಯಬಹುದು. ಆದುದರಿಂದ ಆ ವಿಜಯಿನಿ ವಿಲಾಸಿನಿ 

ಯರನ್ನು ಅಲ್ಲಿಂದ ಹೊರತೆಗೆದು, ನನ್ನಧೀನದಲ್ಲಿಟ್ಟುಕೊಂಡು, ಏನಾದರೂ ಸಾಹಸ 

ಮಾಡಿ, ಇಬ್ಬರೂ ನನ್ನ ವಶರಾಗುವಂತೆ ಮಾಡಿಕೊಂಡೆನೆಂದರೇ, ಅಗಣಿತದ್ರವ್ಯವೆ 

ಲ್ಲವೂ ನನ್ನಧೀನವಾಗುವುದು” ಎಂದು ಮೊದಲಾಗಿ ಆಲೋಚಿಸುತ್ತಿದ್ದನು, “ ನರಸನು 

ಬರುವ ಸಮಯವಾಯಿತು !” ಎಂದಂದುಕೊಳ್ಳುತ್ತಿದ್ದನು. 

ಕಾಳೀಚರಣನು ಬೇರೇ ವೇಷವನ್ನು ಧರಿಸಿ, ಭುಜಂಗನ ಮನೆಗೆ ಬಂದನು. 

ಭುಜಂಗನು ನರಸನ ಧ್ಯಾನದಲ್ಲಿಯೇ ಇದ್ದನಾದುದರಿಂದ, " ನರಸಯ್ಯಾ ! ನೀನೋ ?” 

ಎಂದಂದನು. ಕಾಳೀಚರಣನು, " ಸ್ವಾಮಿಗೆ ಜಯಕಾಲ ! ಬೇಗ ಹೊರಡಬೇಕು !” 

ಎಂದು ಹೇಳಲು, ಭುಜಂಗನು, ನರಸಯ್ಯಾ ! ಆ ಮನೆಯ ಸುತ್ತಲೂ, ಪೊಲೀಸಿನ 

ವರು ಕಾವಲಿರುತ್ತಾರಲ್ಲ! ಆ ಮನೆಯೊಳಕ್ಕೆ ನಾವು ಹೋಗುವುದೆಂತು ? ಆ ಹುಡುಗಿ

೮೫---------------------------------------------------------------------------------------

ವಿಲಾಸಿನಿ ಯರನ್ನು ನಾವು ಕರೆತರುವುದೆಂತು ? ಏನೋ ನಿನ್ನ ಮಾತಿನಲ್ಲಿ ನನಗೆ ಬಹಳ ಭಯ 

ವುಂಟಾಗಿದೆಯಪ್ಪ !” ಎಂದಂದನು. 

ನರಸನು-(ಅರಳಿದ ಕಣ್ಣುಗಳುಳ್ಳವನಾಗಿ) ಏನು ಸ್ವಾಮೀ ! ನಾನೇನು 

ನಾಡಾಡಿಯೊ ? ಹಕ್ಕಿ ಮಾತನ್ನು ಪಾದದಲ್ಲಿ ಅರಿಕೆ ಮಾಡಿರುತ್ತೇನೆ ಸ್ವಾಮೀ ! ಅದು 

ಸುಳ್ಳೆಂದರೆ ಪರಪಂಚವೇ ಸುಳ್ಳು ಸ್ವಾಮೀ !! ಅದೇಕೆ ಸ್ವಾಮೀ, ನನ್ನ ಸಾಹಸ 

ಈಗ ತೋರಿಸುತ್ತೇನೆ ಬನ್ನಿ, ಪೊಲೀಸಿನವರಲ್ಲದಿದ್ದರೆ ದೇವತೆಗಳಿರಲಿ, ಏನು ಸ್ವಾಮೀ! 

ನನ್ನ ಮಾತು ಸುಳ್ಳೋ ಈಗ ನಿಮ್ಮ ಪರಮ ಸತ್ರುವೊಬ್ಬನು ನಿಮಗೆಲ್ಲಾ ದಣಿಯಾಗಿ 

ದ್ದವನೊಬ್ಬನನ್ನು ಬೆನ್ನಾಡಿಕೊಂಡು ಹೋಗಿಲ್ಲ ವೋ ? ಈಗ ನೋಡಿ, ಅವರು ಒಬ್ಬರಿ 

ಗೊಬ್ಬರೂ ಹೊಡೆದಾಡಿ ಇಬ್ಬರೂ ಸತ್ತಿರುತ್ತಾರೆ ! ಬೆಳಕು ಹರಿಯುವುದರಲ್ಲಿ ನೋಡಿ 

ಸ್ವಾಮಿ ! ನನ್ನ ಮಾತು ಸುಳೋ ನಿಜವೋ ಗೊತ್ತಾಗುತ್ತದೆ. ಬುದ್ದಿಯವರು ಮಾತು 

ಕೊಟ್ಟ ಪರ್ಕಾರ ಬಂದೆ ! ಈಗೇನು ಹೋಗಲೋ ಬುದ್ದಿ ?” 

ಭುಜಂಗ- ನರಸಯ್ಯಾ, ಬೇಡ ! ಹಾಗಲ್ಲ !! ಈವಾಗ ಅವರನ್ನು ಕರೆದು 

ಕೊಂಡು ಬರುವದಕ್ಕಾಗುತ್ತದೆಯೋ ?'' 

ನರಸ- "ಆದರ ಯೋಚನೆ ನಿಮಗ್ಯಾಕೆ ಸ್ವಾಮೀ ! ನನ್ನ ಜತೆಯಲ್ಲಿ ಬನ್ನೀ !ನ

ನನ್ನ ವಿದ್ಯ ತೋರಿಸುತ್ತೇನೆ !! ” ಎಂದು ಹೇಳಲು, ಭುಜಂಗನು ಹೊರಟನು. 

ಕಾಳೇಚರಣನು ಭುಜಂಗನನ್ನು ಸಮೀಪದಲ್ಲಿದ್ದ ಒಂದು ಬನ್ನಿಮರದ ಹತ್ತಿ 

ರಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆ ಮರವನ್ನು ಪೂಜಿಸಿ, ಏನೋ ಮಹಾ ಮಂತ್ರ 

ವನ್ನು ಉದ್ಯೋಷಿಸುವಂತೆ ನಟಿಸಿ, ಭುಜಂಗನ ಹಣೆಗೆ ಸ್ವಲ್ಪ ಕುಂಕುಮವನ್ನಿಟ್ಟು 

ತಾನೂ ಸ್ವಲ್ಪ ಇಟ್ಟು ಕೊಂಡು, ಅವನ ಕೈಯ್ಯಲ್ಲೊಂದು ಪಿಸ್ತೂಲನ್ನು ಕೊಟ್ಟು 

"ಸ್ವಾಮಿ ! ದಯಮಾಡಬೇಕು ! ಬುದ್ದಿಯವರನ್ನು ಈಗ ಯಾರಾದರೂ ಕಂಡು 

ಮಾತನಾಡಿಸಿದ್ದೇ ಆದರೆ ಈ ಪಿಸ್ತೂಲಿನಿಂದ ನರಸನನ್ನು ಸುಟ್ಟು ಬಿಡಿ. ನರಸನ 

ಯೋಗ್ಯತೆಯು ಇದರಲ್ಲಿಯೆ ಗೊತ್ತಾಗುತ್ತದೆ. ಎಂದು ಹೇಳಲು ಇವನ ಮಾತಿನಲ್ಲಿ 

ಬಹಳ ನಂಬುಗೆಯನ್ನಿಟ್ಟಿದ್ದ ಭುಜಂಗನು ಅವನು ಹೇಳಿದುದನ್ನು ಕೇಳಿ, ಆ ಕುಂಕುಮ 

ದಲ್ಲೇನೊ ಗುಣಾತಿಶಯವಿರಬಹುದೆಂದಂದುಕೊಂಡು ಅವನ ಜತೆಯಲ್ಲಿ ಮುಂದು 

ವರಿದನು. 

ಇರ್ವರೂ ವಿಜಯಿನಿ ವಿಲಾಸಿನಿಯರಿಗೆ ಗೋಪ್ಯಾಶ್ರಯವನ್ನಿತ್ತಿದ್ದ, ಆ ಮನೆಯ 

ಸಮೀಪಕ್ಕೆ ಹೋದರು. ಮೊದಲೇ ಕಾಳೀಚರಣನಿಂದ ಎಚ್ಚರಗೊಳಿಸಲ್ಪಟ್ಟಿದ್ದ ಪೊಲೀ

೮೬---------------------------------------------------------------------------------------

ಸಿನವರು ಇವರನ್ನು ಕಂಡರೂ ಕಾಣದವರಂತೆ ನಟಿಸಲು, ಭುಜಂಗನು ಮಹದಾನಂದ 

ದಿಂದ ಮನೆಯನ್ನು ಪ್ರವೇಶಿಸಿದನು. 

ಕಾಳೀಚರಣನು, “ ಸ್ವಾಮಿ ! ತಮ್ಮ ಕೆಲಸವು ಕೈಗೂಡಿತೆಂಬುವುದಕ್ಕೆ ಇನ್ನಾವ 

ಅಭ್ಯಂತರವೂ ಇಲ್ಲ. ಈವಾಗ ನನಗೆ ಹತ್ತು ಸಾವಿರ ರೂಪಾಯಿ ಇನಾಮ್ ಕೊಡ 

ಬೇಕು, ಇಲ್ಲವಾದರೆ ಕೊಡುವುದಾಗಿ ಕಾಗದ ಬರದು ಕೊಡಬೇಕು. ಇಲ್ಲವಾದರೆ 

ನನ್ನ ಮಂತ್ರದ ಕುಂಕುಮವನ್ನೂ ಕೊಡುವುದಿಲ್ಲ, ಹುಡುಗಿಯರನ್ನು ಕರೆದುಕೊಂಡು 

ಹೋಗುವುದಕ್ಕೂ ಬಿಡುವುದಿಲ್ಲ !” ಎಂದಂದನು. ಭುಜಂಗನಿಗೆ ಏನು ಮಾಡಲೂ 

ತೋಚದೆ ಹೋಯಿತು. 

ಎಷ್ಟು ಆಲೋಚಿಸಿ ನೋಡಿದರೂ ಕಾಗದ ಬರೆದು ಕೊಡಬೇಕು. ಇಲ್ಲವೆ 

ದ್ರವ್ಯವನ್ನು ಕೊಡಬೇಕು, ಇಲ್ಲವಾದರೆ ಮಾರ್ಗ ವಿಲ್ಲವೆಂಬುದು ದೃಢವಾಯಿತು. 

ಕಟ್ಟಕಡೆಗೆ ದುರುಳರಿಗೆ ಸ್ವಾಭಾವಿಕವಾಗಿ ಇಂತಹ ಅನೇಕ ಸಂದರ್ಭಗಳಲ್ಲಿ ತೋರಿಬ 

ರುವ ಉಪಾಯವೊಂದು ಆಗಲೆ ಹೊಳೆಯಿತು ಅದೇನು ? ತನ್ನೆ ದುರಾಳಿಯನ್ನು ಗತ 

ಪ್ರಾಣನನ್ನಾಗಿಸುವುದೆ ! ಭುಜಂಗನು ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ಕಾಳೀಚರಣನ 

ಕಡೆಗೆ ಹಾರಿಸಿಯೇಬಿಟ್ಟನು. ಕಾಳೀಕರಣನು ತತ್‌ಕ್ಷಣವೆ ಬಿದ್ದು ಬಿಟ್ಟನು. ಭುಜಂಗನು 

ತಾನು ಕೃತಕೃತ್ಯನಾದೆನೆಂದಂದುಕೊಂಡು ಮಹದಾನಂದದಿ:ದ ಕಾಳೀಕರಣನ ಜೇಬಿನ 

ಇದ್ದ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕೆಂದು ಕೈ ನೀಡಿದನು. ಕಾಳೀಚರ 

ಣನು ತತಕ್ಷಣವೆ ಅವನನ್ನು ಎಳೆದು ನೆಲಕ್ಕೆ ಬೀಳಿಸಿ, " ಭುಜಂಗ | ಹಕ್ಕಿ ನರಸನ 

ಸಾಮರ್ಥ್ಯವನ್ನು ನೋಡಿದಿಯೊ ! ” ಎಂದಂದು ತನ್ನ ಸ್ವಾಭಾವಿಕವಾದ ಸ್ವರದಿಂದ 

ಮಾತನಾಡಲು, ಭುಜಂಗನು ತಾನು ಕಾಳೀಚರಣನ ಬಲೆಯಲ್ಲಿ ಬಿದ್ದಿದ್ದೇನೆಂದೂ, ತನ 

ಗಿನ್ನು ಉಳಿಗಾಲವಿಲ್ಲವೆಂದೂ ತಿಳಿದು ಭಯಭ್ರಾಂತನಾಗಿ ಮತ್ತಾವ ಸಾಹಸಕ್ಕೂ 

ಪ್ರಯತ್ನ ಪಡದೆ ಸುಮ್ಮನಾಗಿಬಿಟ್ಟನು. ಕಾಳೀಕರಣನ ಸಂಕೇತವನ್ನು ಅರಿತು ಪೊಲೀಸಿ 

ನವರು ಅಲ್ಲಿಗೆ ಬಂದು, ಭುಜಂಗನನ್ನು ಖೈದಿಯಾಗಿ ಕರೆದುಕೊಂಡು ಹೋದರು. 

ಕಾಳೀಚರಣನು, ಭುಜಂಗನಿಗೆ ತಾನು ಕೊಟ್ಟಿದ್ದ ಪಿಸ್ತೂಲನ್ನು ತೆಗೆದುಕೊಂಡು, ಅದ 

ರಲ್ಲಿದ್ದ ಹುಸಿಮದ್ದನ್ನು ತೆಗೆದು ತನ್ನ ಧೀನದಲ್ಲಿಟ್ಟು ಕೊಂಡು ಮುಂದಿನ ಕಾರ್ಯದಲ್ಲಿ 

ಉದ್ಯುಕ್ತನಾದನು. 

ಆ ಗೃಹದ ಎಲ್ಲಾ ಭಾಗಗಳನ್ನೂ ಪರೀಕ್ಷಿಸಿದನು. ಒಂದು ಕಡೆಯಲ್ಲಿ ಮೊದ  

ಲಿದ್ದ ಬಾಗಿಲನ್ನು ಕಿತ್ತು ಆ ಸ್ಥಳದಲ್ಲಿ ಗೋಡೆಯು ಹಾಕಲ್ಪಟ್ಟಿದ್ದಂತಿತ್ತು. ಆ

೮೭-------------------------------------------------------------------------------------------

ಕೋಣೆಗೆ ಮತ್ತೆಲ್ಲಿ ಬಾಗಿಲನ್ನು ಇಟ್ಟಿರುವರೋ ಎಂದು ಹುಡುಕುತ್ತ, ಒಂದು ಕಡೆ 

ಕಾರ್ಗತ್ತಲೆಯು ಕವಿದು ಬೆಳಕಿನ ಲೇಶವೂ ಇಲ್ಲದ ಒಂದು ಭಾಗಕ್ಕೆ ಬಂದನು. 

ಅಲ್ಲೊಂದು ಚಿಕ್ಕ ಬಾಗಿಲಿದ್ದಿತು. ಆ ಬಾಗಿಲನ್ನು ತೆಗೆದುಕೊಂಡು, ಒಳಹೊಗಲು 

ಅದೊಂದು ಚಿಕ್ಕ ಕೊಠಡಿಯಾಗಿದ್ದಿತು. ಅದರಲ್ಲೂ ಕತ್ತಲೆಯು ತುಂಬಿದ್ದಿತು. ಶಖೆ 

ಯಾದರೊ ದುಸ್ಸಹ ! 

ಅಲ್ಲಿ ತನ್ನ ಕೈಲಾಂದ್ರದ ಬೆಳಕಿನಿಂದ ಕೋಣೆಯನ್ನೆಲ್ಲ ಹ.ಡುಕಲು, ಒಂದು 

ಕಡೆ ಒಂದು ಚಿಕ್ಕ ಬಾಗಿಲುಳ್ಳ ಗೂಡಿದ್ದಿತು. ಆ ಗೂಡಿಗೆ ಬಹು ಬಲವಾದ 

ಬೀಗವು ಹಾಕಲ್ಪಟ್ಟಿದ್ದಿತು. ಅಲ್ಲೇನೊ ಅತಿಶಯವಾದುದಿರಬಹುದೆಂದಂದುಕೊಂಡು 

ಆ ಬಾಗಿಲನ್ನು ತೆಗೆದು ನೋಡಲು ಅದು ಗೂಡಾಗಿರಲಿಲ್ಲ. ಆದುದರಿಂದ ಆಶ್ಚರ್ಯ 

ಭರಿತನಾಗಿ ಆ ಗೂಡಿನೊಳಗಿನಿಂದ ಹೋಗಿ ನೋಡಿದನು, ನಾತಿದೂರದಲ್ಲಿ ಆರೋ 

ಮಾತನಾಡುತ್ತಿದ್ದಂತೆ ಅಸ್ಪಷ್ಟವಾಗಿ ಕೇಳಿಬರುತ್ತಿತ್ತು. ಮುಂದುವರಿದು ನೋಡಿದನು. 

ಬರಬರುತ್ತ ಮಾತು ಬಹು ಸ್ಪಷ್ಟವಾಗಿ ಕೇಳಿಸಿತ್ತು, ಮಾತನಾಡುತ್ತಿದ್ದವರು ಸ್ತ್ರೀಯ 

ರೆಂದು ಅವರ ಸ್ವರದಿಂದಲೇ ವ್ಯಕ್ತವಾಯಿತು. ಒಬ್ಬಳು-- ಅಯ್ಯೋ ! ನಮ್ಮ ಹಣೆ 

ಯಲ್ಲೇನು ಬರೆದಿರುವುದೊ ! ನಾನು ಕಣ್ಣನ್ನು ಮುಚ್ಚಿದೆನೆಂದರೆ ಪ್ರೇಮಚಂದ್ರನು 

ಬಹು ದೀನನಾಗಿ ನನ್ನ ಸಮೀಪದಲ್ಲಿ ನಿಂತು ' ಅಯ್ಯೋ ! ನನ್ನನ್ನು ಕೈಬಿಡುವೆಯಾ ? ' 

ಎಂದು ಕೇಳುವಂತೆಯೂ, ಒಂದೊಂದುವೇಳೆ, ಆಲಿಂಗಿಸಲಾಶಿಸುವನಂತೆ ನೀಡಿದ ಹಸ್ತ 

ಗಳುಳ್ಳವನಾಗಿ ಸಮಾಸವರ್ತಿಯಾಗುತ್ತಲೂ, ಅಷ್ಟರಲ್ಲಿ ಭೀತನಾಗಿ ಹಿಂಜರಿಯುವ 

ನಂತೆಯೂ ಸ್ವಪ್ನವಾಗುವುದು. ಅದೇನೋ ! ಅವನ ಮುಖವನ್ನು ಕಂಡರೆ ಸಾಕೆಂದು 

ಹಂಬಲಿಸುತ್ತಿರುವ ನನಗೆ ಒಂದು ದಿನವಾದರೂ ಅವನು ಮುಖವನ್ನು ತೋರಿಸಲಿಲ್ಲ ! ', 

ಎಂದಂದಳು. 

ಮತ್ತೊಬ್ಬಳು- "ನನಗೆ ನಿನ್ನೆಯ ದಿವಸದಿಂದ ಈಚೆಗೆ ಈ ವಿಚಾರದಲ್ಲಿ 

ಮೊದಲಿದ್ದಂತೆ ಅಭಿಪ್ರಾಯವಿಲ್ಲ. ಏನೋ ಒಂದು ದುರಭಿಸಂಧಿ ಇರುವಂತೆ 

ತೋರುತ್ತದೆ.” 

ಮೊದಲನೆಯವಳು ಅದೇನು ? ಭುಜಂಗನೇನಾದರೂ ನಮ್ಮನ್ನು ಈರೀತಿ 

ಮೋಸಗೊಳಿಸಿ ನಮ್ಮನ್ನು ಕೆಡಿಸಲು ಯತ್ನಿಸಿರಬಹುದೆ ?” ಎಂದಂದಳು, ಈ ಮಾತನ್ನು ಕೇಳಿ ಎರಡನೆಯವಳು ಕ್ಷಣಕಾಲ ಆಲೋಚಿಸಿ " ನನಗಂತೂ ಕೇವಲ ಸಂದೇ 

ಹವೆ ! ನಾವು ಮನೆಯಿಂದ ಅಗಲಿಸಲ್ಪಟ್ಟ ಲಾಗಾಯಿತು ಇಲ್ಲಿಗೆ ಬರುವ ಪ್ರತಿಯೊ

೮೮------------------------------------------------------------------

ಬ್ಬನೂ ಭುಜಂಗನ ಗುಣರೂಪಗಳನ್ನು ವರ್ಣನೆ ಮಾಡುತ್ತಲೂ ನಾನು ಅವನನ್ನು 

ವರಿಸಬೇಕೆಂಬುದು ಪ್ರೇಮಚಂದ್ರನ ಅಭಿಪ್ರಾಯವೆಂತಲೂ ಹೇಳುತ್ತಿರುವರು. ಇದ 

ರಿಂದ ಭುಜಂಗನ ಮೇಲೆ ನನಗೆ ತುಂಬಾ ಅನುಮಾನವೆ ! ಅಲ್ಲದೆ ಅವನಿಗೆ 

ದ್ರವ್ಯಾಶೆಯು ಬಹಳ !!" ಎಂದು ಹೇಳಿ ಮುಂದೆ ಸಾಗುವಷ್ಟರಲ್ಲಿಯೆ "ಹೌದು ! 

ನನಗೆ ಬೇಕಾಗಿರುವುದೇ ಅಷ್ಟು ! ಈಗೇನು ಮದುವೆಯಾಗುವಿಯೋ ಇಲ್ಲವೆ 

ಯಮಪುರಿಗೆ ಹೋಗಲು ಸಿದ್ದವಾಗಿರುವೆಯೋ ಹೇಳು ! ' ಎಂದು ಕಾಳೀಚರ 

ಣನು ವಿಕಾರಸ್ವರದಿಂದ ಹೊರಗಿನಿಂದಲೆ ಕೂಗಿದನು. ಸಂಭಾಷಣೆಯು ನಿಂತುಹೋ 

ಯಿತು! ಕಾಳೀಚರಣನು " ಬಾಗಿಲು ತೆರೆಯಿರಿ ” ಎಂದು ಕೂಗಿದನು. ಪ್ರತ್ಯುತ್ತರ 

ವೇನೂ ಬರಲಿಲ್ಲ ! ಅವರು ಬಹಳ ಹೆದರಿರಬಹುದೆಂದು ಊಹಿಸಿಕೊಂಡು ಬಹು ಸಾಹ 

ಸದಿಂದ ಆ ಬಾಗಿಲನ್ನು ಒಡೆದು ಒಳಗೆ ನುಗ್ಗಿದನು, ವಿಜಯಿನಿಯು ರೇಗಿ, " ಭುಜಂಗ 

ನಿಲ್ಲು !! ನೀನು ನಮ್ಮ ಕುಲದಲ್ಲಿ ಹುಟ್ಟಬಾರದಾಗಿತ್ತು ! ನನ್ನ ಗೊಡವೆಯು ಬೇಡ 

ವೆಂದು ಹೇಳಿದರೂ ಕೂಡ ಇಲ್ಲದ ತಂತ್ರವನ್ನು ಕಲ್ಪಿಸಿ ನಮ್ಮನ್ನು ಈರೀತಿ ಮೋಸ 

ಗೊಳಿರರುವೆ !! ಈಗಲೂ ನಿನಗಿದು ಯೋಗ್ಯವಲ್ಲ ! ನಮ್ಮನ್ನು ಕಳುಹಿಸಿಬಿಡು. ಹೀಗೆ 

ಮಾಡುವುದರಿಂದ ಹೆದರಿ ನಾನು ನಿನ್ನನ್ನು ಮದುವೆಯಾಗುವೆನೆಂದು ಎಂದಿಗೂ ನಂಬ 

ಬೇಡ ! ” ಎಂದು ಹೇಳಿದಳು. 

ಕಾಳೀಚರಣನು-(ನಕ್ಕು) : ವಿಜಯಿನಿ ! ಈ ಪೌರುಷವನ್ನು ಇನ್ನು ಕಟ್ಟಿ 

ಬಿಡು !! ಹೇಗೂ ನನ್ನ ಕೈಯ್ಯಲ್ಲಿ ಸಿಕ್ಕಿರುವೆ !!! ಸರಿಯಾದ ಮಾರ್ಗದಲ್ಲಿ ನನ್ನನ್ನು 

ಪತಿಯನ್ನಾಗಿ ವರಿಸುವುದಾದರೆ ವರಿಸು. ಇಲ್ಲವಾದರೆ ನಿನ್ನ ಸತೀತ್ವವನ್ನು ಹಾಳುಮಾ 

ಡುವೆನು. ಈ ದಿವಸ ಆವುದಾದರೊಂದು ಖಂಡಿತವಾಗಬೇಕೆಂದೇ ನಾನಿಲ್ಲಿಗೆ ಬಂದಿ 

ರುವುದು ? 

ವಿಜಯಿನಿ - "ನೀನು ಹಾಳಾಗು ! ದುರ್ಭಾಷೆಯನ್ನಾಡುವ ನಿನ್ನೀ ನಾಲಿ 

ಗೆಯು ಹಾಳಾಗಲಿ, ಅಬಲೆಯರೂ, ಸಹಾಯರಹಿತರೂ, ಎಂದು ನಿನ್ನ ಪರಾಕ್ರಮ 

ವನ್ನು ತೋರಿಸಲೆಳಿಸುವಿಯೇನೋ, ಅದೆಂದಿಗೂ ನಡೆಯುವುದಿಲ್ಲ. ನೀನು ಒಂದು 

ಹೆಜ್ಜೆ ಮುಂದಕ್ಕಿಡುವದಾದರೂ ನಾಲಿಗೆಯನ್ನು ಕಿತ್ತುಕೊಂಡು ಪ್ರಾಣವನ್ನು ಬಿಡು 

ವೆನೇ ಹೊರತು ನಿನ್ನ ಕೈಗೆ ಬೀಳುವುದಿಲ್ಲ.” ಎಂದು ಹೇಳುತ್ತ ಕೈಯನ್ನು ಎತ್ತು 

ವುದರೊಳಗಾಗಿಯೆ ಕಾಳೀಚರಣನು ಮಿಂಚಿನಂತೆ ಮುಂದುವರಿದು, 11 ವಿಜಯಿನಿ ! 

ನಾನಾರು ? ಭುಜಂಗನ ಸ್ವಪ್ನದಲ್ಲಿರುವ ನಿನಗೆ ಎಲ್ಲರೂ ಭುಜಂಗನಂತೆ ತೋರಿಬರ

೮೯-------------------------------------------------------------

ಬಹುದಲ್ಲವೆ?'' ಎಂದು ಕೇಳಲು ವಿಜಯಿನಿಯು ಮುಖವನ್ನೆತ್ತಿ ನೋಡಿದಳು, 

ಭೀತಿಯೂ, ನಾಚುಗೆಯ, ವಿಜಯಿನಿಯನ್ನಾ ಕ್ರಮಿಸಿದುವು. " ಮಹನೀಯರೆ ! 

ಸರ್ವಾಪರಾಧ !! ಕ್ಷಮಿಸಬೇಕು! ” ಎಂದು ಹೇಳುತ್ತ ಲಜ್ಜೆಯಿಂದ ಅಧೋಮುಖಿ 

ಯಾಗಿ ನಿಂತುಕೊಂಡಳು. 

............

ಸಪ್ತದಶಗುಚ್ಛ. 

ಪಾಠಕಮಹಾಶಯಗೆ ಮು:ದೇನು ನಡೆದಿತೋ ಎಂದು ತಿಳಿವ ಕುತೂಹಲ 

ವಿರಬಹುದು. ಅಂತಹ ಸಂಭವವೇನೂ ಇರಲಿಲ್ಲ. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಯಿತು. 

ಅವರ ಪ್ರಮುಖನು ಮಾತ್ರ ಸಿಗಲೇ ಇಲ್ಲ ! ಅಸಮಾನನಾದ ಕಾಳೀಚರಣನ ಸಾಹಸ 

ದಿಂದ ಪ್ರೇಮಚಂದ್ರ, ದೇವೇಶ, ಶಂಭುದತ್ಯಾದಿಗಳ ನಿರ್ದೋಷತೆಯು ಎಲ್ಲೆಲ್ಲಿಯೂ 

ವ್ಯಕ್ತವಾಯಿತು. ಇನ್‌ಸ್ಪೆಕ್ಟರ್ ತಾಂದೋಣಿ ರಾಯರು ಅವಕಾಶವು ಒದಗಿಬಂದಾ 

ಗಲೆಲ್ಲಾ, "ಕಾಳೀಚರಣನು ಕೇವಲ ಅವತಾರಪುರುಷನೆಂದರೂ ಕೂಡ ಸಾಲದಾಗಿದೆ ! 

ಈತನ ಧೈರ್ಯವೇನೂ ! ಶಕ್ತಿಯೇನೂ ! ಸಾಹಸವೇನೂ ! ಎಲ್ಲವೂ ಅಸಾಧಾರಣ !! 

ಅತ್ಯದ್ಭುತ !!!" ಎಂದಂದುಕೊಳ್ಳುತ್ತ ಅತಿಶಯವಾದ ಆಶ್ಚರ್ಯದ ಆನಂದವನ್ನನು 

ಭವಿಸುತ್ತಿದ್ದರು. 

ಕಾಳೀಚರಣನು, ತಾನೆಷ್ಟು ಸಾಹಸ ಮಾಡಿದರೂ ಕರಗತನಾಗಿದ್ದ ಆ ಕ್ರೂರಿಯು 

ತಪ್ಪಿಸಿಕೊಂಡು ಬಿಟ್ಟನು, ಪ್ರಮುಖನಾದವನನ್ನು ಹಿಡಿದು ಶಿಕ್ಷಿಸುವ ಪರ್ಯ೦ತರವೂ 

ತಾನು ಕೃತಕೃತ್ಯನಲ್ಲ, ಅಲ್ಲದೆ ಅವನು ಕೇವಲ ವಂಚನಾಗ್ರೇಸರನಾದುದರಿಂದ 

ಅಂತ್ಯದವರೆಗೂ ಅವನ ಕ್ರೂರಕೃತ್ಯಗಳನ್ನು ಪದೇಪದೇ ಬಹಿರಂಗಪಡಿಸದೇ ಬಿಡುವವ 

ನಲ್ಲ. ಅವನಿಲ್ಲದಿದ್ದರೆ ಈ ಬಡಪಾಯಿಗಳು ಏನು ಮಾಡಲು ತಾನೇ ಶಕ್ತರಾಗಿದ್ದರು ! 

ಎಂತಾದರೂ ಅವನನ್ನು ಹಿಡಿಯಲೇಬೇಕು. ಹಾಗಲ್ಲದಿದ್ದರೆ ತನ್ನ ಶ್ರಮವೆಲ್ಲವೂ 

ಕೇವಲ ನಿರರ್ಥಕ ! ಎಂದಂದುಕೊಳ್ಳುತ್ತಿದ್ದನು. 

ಒಂದುದಿನ ಕಾಳೀಚರಣನೂ, ತಾಂದೋಣಿರಾಯರೂ, ಮಾತನಾಡುತ್ತ ಕುಳಿ 

ತಿದ್ದರು. ಆಗ, ಟಪಾಲಾಫೀಸಿನ ಕರ್ಮಚಾರಿಯೊಬ್ಬನು ಕಾಳೀಕರಣನಿಗೆ ಒಂದು 

ಕಾಗದವನ್ನು ತಂದು ಕೊಟ್ಟನು. ಕಾಳೀಕರಣನು ಕಾಗದವನ್ನು ತೆರೆದು ಓದಿದನು, 

ಕಾಗದದಲ್ಲಿ:-- 

೯೦---------------------------------------------------------------

"ಅಸಹಾಯ ಶೂರರ ಪದಾರವಿಂದದಲ್ಲಿ, 

ಈ ನಿರ್ಭಾಗ್ಯನು ಆವುದೋ ಒಂದು ಕಾಲದಲ್ಲಿ ಸಾಹಸಿಯ ಸಹಪಾಠಿಯಾ 

ಗಿದ್ದನು, ಒಂದೊಂದುವೇಳೆ ಅತಿಶಯ ಚಮತ್ಕಾರದಿಂದ ಚಾತುರ್ಯ ಪ್ರದರ್ಶನೆಯನ್ನೂ 

ಮಾಡುತ್ತಿದ್ದನು. ಇದೇ ನಿರ್ಭಾಗ್ಯನು ಅದನ್ನು ಜ್ಞಾಪಕಕ್ಕೆ ತರಲು ಪ್ರಯತ್ನ ಪಡ 

ಬೇಕೆಂದರೂ ಸಂಕುಚಿತನಾಗುವನು, ತಮ್ಮ ಸಾಹಸವನ್ನು ನಾನು ಬಲ್ಲೆ ! ನನ್ನಾಟವು 

ತಮ್ಮ ಮುಂದೆ ನಡೆಯಲಾರದೆಂದು ತಿಳಿದುಕೊಂಡೂ ಇದ್ದೆ. ಆದರೇನು ? ಸಮಯ 

ದೊರೆತಾಗ ಸಾಹಸವನ್ನು ಪಯೋಗಿಸಬೇಕೆಂಬ ಆಶೆಯು ಆರನ್ನು ತಾನೆ ಪರಿಪೀಡಿಸ 

ದಿರುವುದು ? ಕೇವಲ ದುರ್ದೈವದ ಕರ್ಮವಿಪಾಕ ! ನನ್ನ ತಿಶಯತಾತರ್ಯಸಾಹ 

ಸಾದಿಗಳೆಲ್ಲವೂ ತೇಜೋಮಯನಾದ ಭಾಸ್ಕರನ ದಿವ್ಯ ಕಿರಣರಾದೆಯಿಂದ ಕರಗಲ್ಪ 

ಡುವ ಮಂಜಿನಂತೆ ಮಾಯವಾದುವು ! ಯಾವದಿನ ಆವ ಮುಖವನ್ನು ಗೃಹಾಂತ 

ರಾಳದಲ್ಲಿ ಕಂಡೆನೋ ಅಂದೇ ನಾನು ಕರಗತನಾದೆನೆಂದು ಭಾವಿಸಿದೆನು. ಆವ 

ಮುಖವು ಒಂದು ಕಾಲದಲ್ಲಿ ತಮ್ಮಿಂದ ಆದರಿಸಲ್ಪಡುತ್ತಿದ್ದಿತೋ ಅದೇ ಆ ಮುಖವೇ 

ಈಗ ಅತಿಶಯವಾದ ಪಾಪರಾಶಿಯಿಂದ ಪರಿಪೂರ್ಣವಾಗಿ ಹೇಯವೂ, ಅತಿ ಭಯಂ 

ಕರವೂ ಆಗಿರುವುದು ! ಒಂದುವೇಳೆ ಪರಮ ಮಿತ್ರರಾಗಿದ್ದವರು ಈಗ ಪರಸ್ಪರ 

ವಿರುದ್ಧ ಭಾವದಲ್ಲಿ ನಿಂತೆವು ! ಜಯಾಪೇಕ್ಷೆಯಿಂದ ಪರಸ್ಪರ ಅತಿ ಭಯಂಕರವಾದ 

ದ್ವಂದ್ವ ಯುದ್ಧವನ್ನು ಮಾಡಿದೆವು. ಆದರೇನು ? ಕರ್ಮಕ್ಕೆ ತಕ್ಕ ಫಲ !! ದೈವ 

ವ್ಯಾಪಾರವು ಅತಿಶಯವಾದುದು ! ಒಂದು ಪಕ್ಷದಲ್ಲಿ ಸದ್ದರ್ಮವೂ, ಇನ್ನೊಂದು 

ಪಕ್ಷದಲ್ಲಿ ಪರಹಿಂಸಾರೂಪವಾದ ಪಾಪವೂ, ಬೆಂಬಲವಾಗಿ ನಿಂತವು. ಅಧರ್ಮಕ್ಕೆ 

ಆಗಬೇಕಾದುದು ಆಯಿತು. ಪಾಪಶೇಷದಿಂದ, ಕ್ರೂರಕೃತ್ಯಗಳಿಂದಲೂ, ಅಧೋ 

ಗತಿಗಿಳಿಯುತ್ತಿರುವ ನಾನು, ಪೂರ್ವಾರ್ಜಿತ ಸುಕೃತಸಾಮರ್ಥ್ಯದಿಂದ ಪ್ರಸಿದ್ಧರಾಗು 

ತ್ತಿರುವ ನಿಮ್ಮ ಉತ್ತಮ ಗುಣವನ್ನು ಆದೆಂದಿಗೂ ದ್ವೇಷಿಸುವವನಲ್ಲ. ಪೂರ್ವಾ 

ರ್ಜಿತ ಸುಕೃತದಿಂದ ನೀವು ಹೇಗೆ ಉನ್ನತಪದವಿಯನ್ನು ಪಡೆಯುತ್ತಿರುವಿರೋ 

ಹಾಗೆಯೇ ನಾನು ಚತುರೋಪಾಯಗಳಿಂದ ಸಾಧಿಸಬೇಕೆಂದಿದ್ದ ಸುಖ ಜೀವನಕ್ಕೆ ನೀವು 

ಅಡ್ಡಿಯಾದುದಕ್ಕೆ ಮಾತ್ರ ನಿಮ್ಮನ್ನು ಬಹಳವಾಗಿ ದ್ವೇಷಿಸುವೆನು. ಅದಕ್ಕೆ ಮಿತಿ 

ಯುಂಟಿ ? ಗಣನಾತೀತವಾದ ಆಶೆಗಳು ! ಮಿತಿಮೀರಿದ ದ್ವೇಷ !! ಅದಕ್ಕೇನಂತಾನೆ 

ಮಾಡಬಲ್ಲೆ ? ಪ್ರತೀಕಾರವನ್ನೆ ಸಗಬೇಕೆಂಬ ಆತೆ ! ಆದರೂ, ಕೇವಲ ಚೈತಸ್ಯ ಶೂನ್ಯ !! 

ನಿಮ್ಮನ್ನು ಜಯಿಸುವ ಭರವಸೆಯು ನನಗುಳಿಯಲಿಲ್ಲ !!! ಹಿಂಸಿಸಬೇಕೆಂಬ ವಾಂಛೆಯು 

ನನ್ನನ್ನು ಬಿಡಲಿಲ್ಲ ! ಅದಕ್ಕೆ ನಾನೇನು ಮಾಡುವೆನು ? ಇಗೋ ! ಸಾಯುವೆನು !!

೯೧-------------------------------------------------------------

ಪಿಶಾಚನಾಗಿಯಾದರೂ ನಿನ್ನ ಮೇಲೆ ಸೇಡನ್ನು ತೀರಿಸಿಕೊಳ್ಳುವೆನು !!! ನೀನು ನನ್ನನ್ನು 

ಹಿಡಿಯಲೇ ಬೇಕೆಂದೂ, ನಾನು ನಿನ್ನ ಕೈಗೆ ಸಿಕ್ಕಲೇಬಾರದೆಂದೂ, ಪರಸ್ಪರ ಬದ್ಧ 

ಕಂಕಣರಾಗಿರುವೆವು. ನಿನ್ನ ಪ್ರಯತ್ನವು ವಿಫಲವಲ್ಲ ! ನನಗೆ ದೈವಸಹಾಯವಿಲ್ಲ !! 

ನಿನ್ನ ಕೈಯಲ್ಲಿ ಬೀಳುವುದಕ್ಕಿಂತಲೂ, ಯಮಕಿಂಕರರ ಕರಗತವಾಗುವುದು ನನಗೆ 

ಅಧಿಕ ಸುಖಕರವಾಗಿ ಕಂಡಿತು. ಹಾಗೆಯೇ ನಿಶ್ಚಯಿಸಿದೆನು ! ಸ್ವೇಚ್ಛಾಮರಣವನ್ನೇ 

ಹೊಂದುವನು. ಆವ ಮನೆಯಲ್ಲಿ ನನಗೆ ಬಲಭುಜದಂತಿದ್ದ ಮನ್ನುವು ನಿನ್ನೊಂದಿಗೆ 

ಹೋರಾಡಿ ಗತಪ್ರಾಣನಾದನೋ, ಎಲ್ಲಿ ನೀನು ಬಂದಿಯಾಗಿದ್ದು ಅತಿ ಸಾಹಸದಿಂದ 

ತಪ್ಪಿಸಿ ಕೊಂಡೆಯೋ, ಅಲ್ಲಿ ಈ ನಿನ್ನ ನಿರ್ಭಾಗ್ಯ ಸಹಾಧ್ಯಾಯಿಯ ಮೃತ ಕಳೇ 

ಬರವನ್ನು ನೋಡು ! 

      ಇತಿ 

ನಿರ್ಭಾಗ್ಯ ಪುರಂದರ. 

ಕಾಗದವನ್ನು ನೋಡಿ ಕಾಳಿ: ಶರಣನು ಸ್ವಲ್ಪ ಕಾಲ ಆಲೋಚಿಸಿದನು. ಹೀಗೆ 

ಮಾತನಾಡದೆ ಕಾಳೀಚರಣನು ಕುಳಿತಿದ್ದುದನ್ನು ಇನ್‌ಸ್ಪೆಕ್ಟರು ಕಂಡು, " ಇದೇನು ?"  

ಎಂದು ಪ್ರಶ್ನಿಸಿದರು. ಕಾಳೀಚರಣನು, ನನ್ನ ಯೋಚನೆಯು ಸರಿಯಾದ ಮಾರ್ಗ 

ದಲ್ಲಿ ಓಡುತ್ತಿರುವುದಾದರೆ, ಇದೊಂದು ಅತಿಶಯ ಗಂಭೀರ ಚಾತುರ್ಯ !?? 

ಎಂದಂದು " ರಾಯರೆ ! ಅಗತ್ಯವಾದ ಕೆಲಸವಾಗಿ ಕಾಣುತ್ತದೆ ! ಸ್ವಲ್ಪ ಕಾಲದಲ್ಲಿಯೆ 

ಬಂದು ತಮ್ಮನ್ನು ನೋಡುವೆನು.” ಎಂದು ಹೇಳಿ ಅಲ್ಲಿಂದ ಹೊರಟೇಬಿಟ್ಟನು.

ಕಾಳೀಚರಣನು ಹೋದುದನ್ನು ನೋಡಿ ಇನ್‌ಸ್ಪೆಕ್ಟರು, “ ಇದೆಂತಹ ಕೆಲಸ! 

ಯಾವಾಗನೋಡಿದರೂ, ಎಂತಹ ಕಾರ್ಯಬಿದ್ದರೂ, ಏಕಾಂಗಿಯಾಗಿಯೇ ನುಗ್ಗುತ್ತಿರು 

ವನಲ್ಲ ! ಇದೆಂತಹ ಧೈರ್ಯ !! ಈತನಿಗೆ ಪ್ರಾಣಭಯವೆಂಬುದು ಲೇಶಮಾತ್ರ 

ವಾದರೂ ಇಲ್ಲ ! ಆ ಕಾಗದದಲ್ಲಿದ್ದ ಸಂಗತಿಯನ್ನು ಕೂಡ ಹೇಳದೆ ಹೊರಟು 

ಹೋದನಲ್ಲಾ ! ಆಗಲಿ !!” ಎಂದಂದುಕೊಂಡು, ಕಾಳೀಕರಣನು ಹೋದ ಮಾರ್ಗ 

ವನ್ನೇ ಅನುಸರಿಸಿ ಹೋದರು. 

ಇಬ್ಬರೂ ನಿರ್ದಿಷ್ಟ ಸ್ಥಾನವನ್ನು ಸೇರಿದರು. ದೃಶ್ಯವು ಹೃದ್ಭೇದಕವಾಗಿತ್ತು. 

ಕಾಳೀಕರಣನು ಚಕಿತನಾದನು. ಇನ್‌ಸ್ಪೆಕ್ಟರ ಸ್ಥಿತಿಯಾದರೋ ಕೇವಲ ಸ್ತಂಭೀಭೂತ? 

ಸ್ವಲ್ಪ ಕಾಲ ಹಾಗೆಯೇ ನಿಂತಿದ್ದರು.” ಅಹಹ ! ಎಂತಹ ಭಯಂಕರ ಪರಿಣಾಮ !!

೯೨-------------------------------------------------------------

ಏನಾಗಿರಬಹುದು ??” ಎಂದು ಇಸ್ಪೆಕ್ಟರು ಕಾಳೀಚರಣನನ್ನು ಪ್ರಶ್ನಿಸಿದರು. ಕಾಳೀ 

ಚರಣಣನು, ಸರಿಯಾಗಿ ವಿಚಾರಮಾಡಿ ಸಂಗತಿಗಳನ್ನು ಹೀಗೆಯೇ ಸರಿಯೆಂದು ನಿರ್ಧ 

ರಿಸಿಕೊಳ್ಳದೆ ಹೇಳುವುದು ಹೇಗೆ ?” ಎಂದು ಹೇಳಲು ಇನ್‌ಸ್ಪೆಕ್ಟರು ." ನಾನು ಈ 

ರೀತಿಯಲ್ಲಿ ಆಲೋಚಿಸುವೆನು, ಏನೆಂದರೆ, ನಿಮ್ಮಿಂದ ಈ ತಂತ್ರಗಳೆಲ್ಲವೂ ಬಟ್ಟ ಬಯ 

ಲಾದುದನ್ನು ನೋಡಿ ತಮ್ಮ ಕೈಗೆ ಅವನು ಸಿಕ್ಕಿ ಬಿದ್ದು ಈ ತಪ್ಪಿತಕ್ಕಾಗಿ ಘೋರವಾದ 

ಹಿಂಸೆಯನ್ನು ಅನುಭವಿಸಬೇಕಾಗಿ ಬರುತ್ತೆ ಯಾದುದರಿಂದಲೂ, ತನ್ನ ಕಡೆಯವರೆ 

ಲ್ಲರೂ ಸಿಕ್ಕಿ ತಾನು ಒಬ್ಬಂಟಿಗನಾದುದರಿಂದಲೂ, ಆ ಸೂತ್ರಧಾರನು ಈ ರೀತಿಯಲ್ಲಿ 

ಪ್ರಾಣವನ್ನು ಬಿಟ್ಟಿರಬಹುದು !” ಎಂದು ಹೇಳಿದರು. ಕಾಳೀಚರಣನು ಸ್ವಲ್ಪಕಾಲ 

ಆಲೋಚಿಸಿ, " ಇದ್ದರೂ ಇರಬಹುದು ! ಒಂದುವೇಳೆ, ನಮಗೆ ಅವನು ಮೃತನಾದಂತೆ 

ನಂಬುಗೆಯನ್ನು ಹುಟ್ಟಿಸಿ ಮತ್ತೇನಾದರೂ ಮೋಸಗಾರಿಕೆಯನ್ನು ಮಾಡಲು ಹೀಗೆ 

ನಿರ್ಮಿಸಿರಬಹುದು ! ಅತಏವ ಈ ಮರಣದ ವಿಚಾರವು ನಂಬುಗೆಗರ್ಹವಾದುದಲ್ಲ 

ವೆಂದು ನನಗೆ ತೋರುತ್ತದೆ, ಏನಾದರೇನು ? ಅವನವನ ಕರ್ತ ವ್ಯದಲ್ಲಿ " ಅವನವನು ಜಾಗರೂಕತೆಯಿಂದಿರುವುದು ಮಾನವನ ಕರ್ತವ್ಯ ! ಎಂದು ಹೇಳಿ ಹಿಂದಿರುಗಿದನು ! 

ಪಾಠಕಮಹಾಶಯರಿಗೆ ನಿಜಸ್ಥಿತಿಯನ್ನು ತಿಳಿಯಲು ಬಹು ಕುತೂಹಲವಿರು 

ವುದೇನೋ ! ಹಾಗಿದ್ದರೆ ನಾವಿಷ್ಟು ಮಾತ್ರ ತಿಳುಹಿಸಬಲ್ಲೆವೆ, ಏನೆಂದರೆ ವಸ್ತುತಃ 

ಪುರಂದರನು ಸಿಗಲೇ ಇಲ್ಲ ! 

.............

ಸ ಮಾ ಪ್ತ