https://archive.org/details/dli.osmania.4069/
TRANSLATION OF
SHAKESEAR'S KING LEAR
KANARESE
ಪೇಮಚ೦ದ್ರ ರಾಜವಿ ಲಾಸ್. ಷೇಕ್ಸ್ಪೀರ್ ಮಹಾಕವಿಯಿಂದ
ರಚಿಸಲ್ಪಟ್ಟ ಕಿಂಗ್ ಲೀರ್ ಎ೦ಬ
ನಾಟಕದ ಭಾಷಾಂತರ
Bangalore: PRINTED AT THE CAXTON PRISL.
1889. Paul Rights Reserved.)
PREFACE.
"KING LEAR is the single greatest achievewent in the Teutonic intellect,” Says Professor Dowden. This is the highest praise that was ever bestowed in any age upon any single work. The contrasting virtues and vices, extreme parental love and the most diabolical filial ingratitude, the very ideal of feminine virtae and the inost liorrid qualities clothed in woman's fleshı, two cases of madness one real and the other pretended, two cases of loyalty one thoroughly genuine ant the other wercenary, all these are so depicted in such inimitablo colours that this play may, in the opinion of many scholars, be called the best production by the greatest poet of the world. It is excellenres like these that induced me to afforol an opportu. nity to the Kannada people to know a little of the mind and art of that mighty genius. As I feared that any attempt ou my part either at versification or narrative style might frustrate my object, I have tried my best to keep to the original as much as possible in the form of n prose drama. However, songs more or less popular and appropriate to the occasion, and a few verses here and there have been put into the month of the Fool to enable him to answer the King's question “ Whero did you learn so many songs, sirrah?” With a view to make the story sound purely Hindu, all the characters are given lliudu names alınost appropriate to the part played by each. Two kinds of deviations were unavoidable--the one a cui scions deviation or slight alteration or substitution to suit the idiom and other requirements of the language into which the play had to be rendered, and the other an unconscious cloviation where for want of capacity I misunderstood the author.
Tre translation was begun in 1883 when a portion was published in three or four issues of the now defunct [litha bodhini, a Kanarese monthly which was being issued then from Mysore. Owing to several causes, it could not be finished
till 1893 and could not be published till now. This long delag is due, among other things, do a real diffidence on my part that I am unequal to the task.
I spared no pains to weed out all the errors as much as possible. My thanks are due to all my learned friends who beard portions of the MS. rend to them, and to Mr. K. K. Venkatasawi Iyer B. A, tutor to !Jis Highness the Second Prince of Mysore, for having taken the trouble to revise the translation with a critical eye ami ponted out i fow passages requiring some verbal alterations. It is the opinion of this gentleman combined with that of my learned and valued friend Nr. M. langacharier N, A., Piotis301, Presideucy Collegit, Madras, that encouraged mo to issue the MS. to the l'ress. I hope that those that kuow the difficulties of t:anslation will pardou me for all my faults, Some of the typographical errors were maroidable. Apart from this, I 12 solely responsible for the spelling adopted in the work.
M. S. P.
CHITALDRUG, December, 1899.
-----------------------------------------------------------------------------
TO
P. N, KRISNA MURTI ESQUIRE, B. I., C. I. E.
JAHAGIRDAR OF YALANDUR,
2
AND
COUNCILLOR,
MYSORE GOVERNMENT,
A1 T
THIS WORK IS DEDICATED WITH PERMISSION
FOR
IIIS BROAD SYMPATHIES IN THE CAUSE OF
KANNADA LANGUAGE,
BY
THE TRANSLATOR.
----------------------------------------
ಪೀಠಿಕೆ .
ಪ್ರೇಕ್‌ಸ್ಪಿರ್ ಎಂಬ ಇನ್‌ಗೀಷ್ ಮಹಾಕವಿಯಿಂದ ರಚಿಸಲ್ಪಟ್ಟಿರುವ "ಕಿನ್‌ಗ್‌ಲೀರ್”
ಎಂಬ ಮಹಾನಾಟಕವು ಈ ಕವಿ ಬರೆದ ಗ್ರಂಥಗಳಲ್ಲೆಲ್ಲಾ ಸರ್ವೊತ್ತಮವಾದ್ದು,
ಯಾವ ಇತರ ಭಾಷೆಯಲ್ಲಿ ಇಂಥಾ ಉತ್ತಮವಾದ ಗ್ರಂಥವು ರಚಿಸಲ್ಪಟ್ಟಿಲ್ಲ, ಎಂದು
ಅನೇಕಜನ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ತೋರಿಸಿರುವ ಸದ್ಗುಣ
ದುರ್ಗುಣಗಳು, ತಂದೆಗೆ ಮಕ್ಕಳಲ್ಲಿರುವ ಅತಿಯಾದ ವಾತ್ಸಲ್ಯ, ಅತಿ ಹೇಯವಾದ
ಪಿತೃದ್ರೋಹ, ಸ್ತ್ರೀಯ ರಲ್ಲಿರತಕ್ಕ ಉತ್ತಮಾಧಮ ಗುಣಗಳು, ನಿಜವಾದ ಹುಚ್ಚು
ಸುಳ್ಳು ಹುಚ್ಚು, ಅಚ್ಚ ರಾಜಭಕ್ತಿ ಆತ್ಮಾರ್ಥವಾದ ರಾಜಭಕ್ತಿ, ಇವೇ ಮೊದಲಾದ
ಗುಣದೋಷಗಳನ್ನು ವಿಚಿತ್ರವಾದ ರೀತಿಯಲ್ಲಿ ವಿವರಿಸಿರುವ ಕಾರಣ ಸರ್ವೋತ್ತಮವಾದ
ಗ್ರಂಥವೆಂದು ಅನೇಕರು ಪರಿಭಾವಿಸಿದ್ದಾರೆ. ಹೀಗೆ ಈ ನಾಟಕದಲ್ಲಿ ತೋರಿಸಿರುವ ಜಗ
ದ್ವಿಲಕ್ಷಣವಾದ ಬುದ್ಧಿಯನ್ನೂ ಕೌಶಲ್ಯವನ್ನೂ ನಮ್ಮ ಕನ್ನಡಿಗರು ತಿಳಿದುಕೊಳ್ಳಲು
ಸ್ವಲ್ಪಮಟ್ಟಿಗಾದರೂ ಅನುಕೂಲಪಡಿಸಿ ಕೊಡಬೇಕೆಂದು ನನಗೆ ಆಶೆ ಹುಟ್ಟಿತು. ಈ
ಗ್ರಂಥವನ್ನು ಕಥಾರೂಪವಾಗಿಯಾಗಲಿ ಕಾವ್ಯರೂಪವಾಗಿಯಾಗಲಿ ಕನ್ನಡಿಸಿದರೆ,
ಕವಿಯ ಆಶಯವನ್ನು ಸರಿಯಾಗಿ ಕಂಡುಹಿಡಿದು ಭಾಷಾಂತರ ಮಾಡತಕ್ಕೆ ಶಕ್ತಿ ನನಗಿ
ಲ್ಲವಾಗಿ, ಎಲ್ಲಿಯಾದರೂ ನನ್ನ ಬುದ್ದಿ ಮೋಸಹೋಗಿ ಅಪಾರ್ಥವನ್ನು ಕಲ್ಪಿಸಿಯೇನಲ್ಲಾ
ಎಂದು ಭಯಗೊಂಡು, ಸಾಧ್ಯವಾದಮಟ್ಟಿಗೂ ಮೂಲಕ್ಕೆ ಅನುಸಾರವಾಗಿರಲೆಂದು
ವಾಕ್ಯರೂಪವಾಗಿಯೇ ಈ ನಾಟಕವನ್ನು ಕನ್ನಡಿಸಿದೆ. ಆದಾಗ್ಯೂ ಸಂದರ್ಭಾನುಸಾ
ರವಾಗಿ ಎಲ್ಲಿಯೂ ಒಂದೊಂದು ಪದ ಅಥವಾ ಪದ್ಯವನ್ನು ವಿದೂಷಕನ ಬಾಯಿಯಲ್ಲಿ
ಆಡಿಸಬೇಕಾಗಿ ಬಂತು. “ ಇಷ್ಟೊಂದು ಪದ್ಯವನ್ನು ನೀನು ಎಲ್ಲಿ ಕಲಿತುಕೊಂಡೆಯೋ
ಮಗು ?” ಎಂದು ಧೊರೆಯು ಕೇಳುವ ಪ್ರಶ್ನೆ ಸಾರ್ಥಕವಾಗಿರಲೆಂದು, ಕೈಲಾದಮ
ಟ್ಟಿಗೆ ಕೆಲವು ಪದಗಳನ್ನು ಹೊಸದು ಹಾಕಬೇಕಾಯಿತು. ವಿದೂಷಕಪಾತ್ರ ಸ್ವಭಾ
ವಾನುಗುಣವಾಗಿ ಕನ್ನಡಭಾಷೆಯಲ್ಲಿ ರೂಢವಾಗಿರುವ ಕೆಲವು ಹಾಡು ಅಥವಾ ಪದಗ
ಳನ್ನು ಜಂಬುಕನು ವಕ್ರವಾಗಿಯ ಭಾವಗರ್ಭಿತವಾಗಿ ಹೇಳುವಕಾರಣ,
ಇವುಗಳನ್ನೂ ಅವನ ಬಾಯಿಯಲ್ಲಿ ಆಡಿಸದೆ. ಗ್ರಂಥವು ವಾಚಕರಿಗೆ ಕನ್ನ ಡ ಸ್ವರೂಪ
ಉಳ್ಳದ್ದಾಗಿಯೇ ಕಾಣಲೆಂದು ಪಾತ್ರಗಳಿಗೆಲ್ಲಾ ಯೋಗ್ಯತಾನುಸಾರವಾದ ನಮ್ಮ ದೇಶದ
ಹೆಸರುಗಳನ್ನೇ ಇಟ್ಟಿದೆ. ಮೂಲಕ ಈ ತರ್ಜನೆಗೂ ಎರಡು ಸಂದರ್ಭದಲ್ಲಿ
ಮಾತ್ರ ವ್ಯತ್ಯಾಸವಿದೆ : ಕನ್ನಡ ಜನರ ಮತ್ತು ಕನ್ನಡಭಾಷೆಯ ತಿಳುವಳಿಕೆ ಮತ್ತು
ರೀತಿಗೆ ಅನುಗುಣವಾಗಿರುವಂತೆ, ಇಂಗ್ಲಿ ದೇಶದಲ್ಲಿ ರೂಢವಾಗಿರತಕ್ಕೆ ಕೆಲವು ಪದಾರ್ಥ
ಗಳಿಗೆ ಮತ್ತು ಪದ್ಧತಿಗಳಿಗೆ ಈ ದೇಶದಲ್ಲಿ ಅನುರೂಪವಾಗಿರತಕ್ಕವುಗಳನ್ನು ಬರೆದು
---------------------------------------
೨
ಕಂಡಹಾಗೆ ಮಾಡಿರತಕ್ಕ ವ್ಯತ್ಯಾಸ ಬಂದು, ಮೂಲಕ್ಕೆ ನಾನು ಆಚತುರ್ಯದಿಂದ ಅಪಾ
ರ್ಥವನ್ನು ಕಲ್ಪಿಸಿಕೊಂಡು ನಾನು ಕಾಣದಹಾಗೆ ಮಾಡಿರುವ ವ್ಯತ್ಯಾಸ ಒಂದು.
ಈ ತರ್ಜಮಯು ಮೈಸೂರಲ್ಲಿ ಪ್ರಚುರವಾಗುತ್ತಿದ್ದ ಹಿತಬೋಧಿನಿ ಎಂಬ
ಮಾಸಪತ್ರಿಕೆಯಲ್ಲಿ 1885ನೇ ಇಸವಿಯಲ್ಲಿ ಮೂರು ತಿಂಗಳ ಸಂಚಿಕೆಯೊಳು ಸ್ವಲ್ಪ
ಸ್ವಲ್ಪವಾಗಿ ಅಚ್ಚಾಯಿತು. ಆದಾಗ್ಯೂ ನಾನಾ ಕಾರಣಗಳಿಂದ 1893ನೇ ಇಸವಿ
ವರಿಗೂ ಇದು ಬರೆದು ಮುಗಿಯಲಿಲ್ಲ, ಮತ್ತು ಇದುವರಿಗೂ ಅಚ್ಚು ಮಾಡಿಸಿ ಪ್ರಸಿದ್ದಿ
ಪಡಿಸಲು ಆಗಲಿಲ್ಲ. ಈ ಕಾರ್ಯವು ನನ್ನಿಂದ ಸಾಧ್ಯವಾಗಲಾರದೆಂಬ ಒಂದು ನಂಬಿಕೆ
ನನಗುಂಟಾಗಿ ಸಾವಕಾಶಕ್ಕೆ ಕಾರಣವಾಯಿತು.
ಗ್ರಂಧ ಸರಿಯಾಗಬೇಕೆಂದು ನನ್ನ ಕೈಲಾದಮಟ್ಟಿಗೂ ಯತ್ನ ಮಾಡಿದೆ. ಇದನ್ನು
ಅಲ್ಲಲ್ಲಿ ಓದಿಸಿ ಕೇಳಿ ತಿಳುವಳಿಕೆಯನ್ನು ಹೇಳಿದ್ದಕ್ಕಾಗಿ ಪಂಡಿತರಾದ ನಮ್ಮ ಅನೇಕ ಜನ
ಮಿತ್ರರಿಗೆಲ್ಲಾ ನಾನು ಕೃತಜ್ಞನಾಗಿದ್ದೇನೆ. ಮುಖ್ಯವಾಗಿ ಮೈಸೂರು ಅರಮನೆಯಲ್ಲಿ
ಯುವರಾಜರಿಗೆ ಮುಖ್ಯೋಪಾಧ್ಯಾಯರಾದ ಮ|| ರಾ|| ಕೊ. ಕಂ. ವೆಂಕಟಸಮೈಯ್ಯ ಬಿ. ಎ. ಯವರು ಇದರಲ್ಲಿರುವ ದೋಷವನ್ನು ತೋರಿಸಲು ಗ್ರಂಥವನ್ನು ಆದ್ಯಂತವಾಗಿ
ಚೆನ್ನಾಗಿ ಓದಿ ಕೆಲವು ವೃತ್ತಗಳನ್ನು ತೋರಿಸಿಕೊಟ್ಟು, ಇವರು ಮಾಡಿದ ಉಪಕೃತಿ
ಯನ್ನು ನಾನು ಮರೆಯಲಾರೆ. ಈ ಗ್ರಂಥದ .ವಿಷಯದಲ್ಲಿ ಇವರೂ ಮತ್ತೂ ಸನ್ಮಿ
ತ್ರರಾದ ಮದರಾಸ ಪ್ರೆಸಿಡೆನ್‌ಸಿ ಕಾಲೇಜ್ ಪ್ರೊಫೆಸರು ಮಳೂರು ರಂಗಾಚಾರ್ ಎಂ. ಎ.
ಇವರೂ ಪಟ್ಟಿರುವ ಒಳ್ಳೆ ಅಭಿಪ್ರಾಯವು ಪ್ರಸ್ತಕವನ್ನು ಅಚ್ಚು ಮಾಡಿಸಲು ನನಗೆ ಧೈರ್ಯ್ಯವನ್ನುಂಟುಮಾಡಿತು. ಭಾಷಾಂತರ ಮಾಡತಕ್ಕದ್ಮವನ್ನು ಬಲ್ಲ ಪುಣ್ಯಾತ್ಮರೆ
ಲ್ಲರೂ ನನ್ನ ದೋಷಗಳನ್ನು ಕ್ಷಮಿಸಬೇಕು. ಅಚ್ಚು ಮಾಡುವುದರಲ್ಲಿ ಬಿದ್ದ ಕೆಲವು ಸ್ಖಾಲಿತ್ಯ ಅನಿವಾರ್ಯವಾಯಿತು.
ಚಿತ್ರದುರ್ಗ,
ವಿಕಾರಿ ಸಂ: ಮಾರ್ಗಶಿರಮಾಸ. ಮೈ, ಸೂ., ಪು.
--------------------------------------
ಯಳಂದೂರ ಜಹಗೀರ್ ದಾರರಾ ಗಿಯೂ
ಮೈಸೂರು ಸರ್ಕಾರಕ್ಕೆ ಮಂತ್ರಾಲೋಚನ ಸಭೆಯ
ಕೌನ್‌ಸಿಲರಾಗಿಯೂ
ಇರುವ
ಪೂರ್ಣ ನ. ಕೃಷ್ಯಮೂರ್ತಿಗಳು ಬಿ. ಎಲ್., ಸಿ. ಐ. ಇ.
ಯವರ ಪ್ರಥಮಾಲೋಕನಕ್ಕಾಗಿ
ಅವರ ಅಪ್ಪಣೆ ಪಡೆದು
ಕನ್ನಡಭಾಷೆಯಲ್ಲಿ ಅವರಿಗಿರುವ ಅಭಿಮಾನಕ್ಕೋಸ್ಕರ
ಈ ಗ್ರಂಥವು ಒಪ್ಪಿಸಲ್ಪಟ್ಟಿದೆ.
------------------------------------------
ಪ್ರೇಮಚಂದ್ರರಾಜ ವಿ ಲಾಸ.
ಪಾತ್ರಗಳು ,
ಹೇಮಚಂದ್ರರಾಯನೀಲಪ್ರರೀ ಅರಸು. | ಕುಮಂತ್ರ-ದುಃಖಸರನಪ್ರಿಯಪತ್ನಿಮಗ
ಅನಂಗರಾಯ-ಮಾರದೇಶದ ಧೊರೆ, | ಕರಣ ಗುರಿಕಾರ.
ಮದ್ರಾಧೀಶ | ನಾಗವೇಣಿ-ಧೋರೆಯ ಹಿರೇಮಗಳು. ಕುಟಲ_ಧೊರೆಯು ೨ನೇ ಮಗಳ ಗಂಡ | ವಿಷಜೆ- ,, ನಡುಕಲ ಮಗಳು
ಭದ್ರನಾಥ ಧೊರೆಯ ಹಿರೇಮಗಳ ಗಂಡ. | ಇಂದುಕಲೆ- ,,, ಕಿರೀ ಮಗಳು. ನಿಷ್ಕಂಟಕ-ಸಾಮಾಜಿಕ |ರಾಹುಕ-ನಾಗವೇಣಿಯ ಹರಿಕಾರ. ದುಃಖಸಾರ_ಸಾಮಾಜಿಕ |ವಿದೂಷಕ, ಚಾಕರರು, ಇತರ ಪರಿವಾರ, ಶುಕ್ಲಚಂದ್ರ-ದುಃಖಸಾರನ ಔರಸಪತ್ರ | ಸೇನೆ ಮುಂತಾದ್ದು.
==========================================
೧. ಅಂಕ.
೧ನೇ. ಪ್ರಕರಣ.- -ಧೊರೆಯ ಅರಮನೆ.
ಪ್ರವೇಕ.. ನಿಷ್ಕಂಟಕ ದುಃಖಸಾರ, ಕುಮಂತ್ರ.
ನಿಷ್ಕಂಟಕ.--. ಧೊರೆಗೆ ಕುಟಿಲನ ಮೇಲಿರುನುದಕ್ಕಿಂತಲೂ ಭದ್ರನಾಥನ ಮೇಲೆ
ಹೆಚ್ಚಾಗಿ ಪ್ರೇಮವಿದೆ ಎಂದು ನಾನು ತಿಳಿದಿದ್ದೆ.
ದುಃಖಸಾರ.. ನಮಗೂ ಸರ್ವದಾ ಹಾಗೆಯೇ ತೋರಿತು. ಆದರೆ ಈಗ ರಾಜ್ಯ
ವನ್ನು ವಿಭಾಗ ಮಾಡಿದ್ದರಲಿಲ್ಲ, ಧೊರೆಗೆ ಗೌರವವು ಇವರಿಬ್ಬರಲ್ಲಿ ಯಾರಮೇಲೆ
ವಿಶೇಷವಾಗಿದೆಯೋ ಕಾಣಿಸಲಿಲ್ಲ; ಯಾಕೆಂದರೆ, ವಿಭಾಗವನ್ನು ಬಹಳ ನಿರ್ಣ
ಯವಾಗಿ ಮಾಡಿರುವ ಕಾರಣ, ಎಳ್ಲಷ್ಟು ವ್ಯತ್ಯಾಸವನ್ನಾದರೂ ಕಂಡುಹಿಡಿದು,
ಇಂಥಾ ಭಾಗವೇ ಹೆಚ್ಚಾದ್ದೆಮದು ಹೇಳುವುದಕ್ಕೆ ಆಗುವದಿಲ್ಲ.
ನಿಷ್ಕಂಟಕ.--ಈತ ತಮ್ಮ ಮಗನಲ್ಲವೆ, ಸ್ವಾಮಿ ?
ದುಃಖಸಾರ..-ಸ್ವಾಮಿ, ಇವನ ಪೋಪಣೆ ನನ್ನ ಆಧೀನ ; ಇವನು ನನ್ನಮಗನೆಂದು
ಒಪ್ಪಿಕೊಳ್ಳಲು ನಾನು ನಾಚಿಕೊಂಡು ನಾಚಿಕೊಂಡು, ಸೊನೆಗೆ ಮೊಂಡಿಗೆ
ಬಿದ್ದೆ; ಆದಳೆ ಇವನಿಗಿಂತಲೂ ವಯಸ್ಸಿನಲ್ಲಿ ಸ್ಫಲ್ಪ ಹಿರಿಯನಾದ ಔ ರಸ
ಪುತ್ರನು ಇದಾನೆ; ನನ್ನಲೆಕ್ಕದಲ್ಲಿ ಅವನು ಇವನ ಮಟ್ಟಗೆ ಪ್ರೇಮಪಾತ್ರನಲ್ಲ.
ಅವಿವೇಕದ ಫಲವಾಗಿ ಇವನು ಜನಿಸಿದನು. ಈ ಲೋಕದಲ್ಲಿ ಇವ ಹುಟ್ಟಿದರೆ
ಸಾಕೆಂದು ಯಾರೂ ಅಪೇಕ್ಷಿಸಲಿಲ್ಲ. ಆದರೆ ಇವನ ತಾಯಿ ಸುಂದರಿಯಾಗಿದ್ದಳು;
ಆದ ಕಾರಣ ಇವನನ್ನ ಮಗನೆಂದು ಒಪ್ಪಿಕೊಳ್ಳ ಬೇಕಾಗಿದೆ. ಕುಮಂತ್ರ,
ಪೂಜ್ಯರಾದ ಈ ಪುರುಪಶ್ರೇಷ್ಠರನ್ನು ಬಲ್ಲೆಯ?
ಕುಮಂತ್ರ- ಅಯ್ಯಾ, ಇಲ್ಲ; ಆರಿಯೆ.
ದುಃಖಸಾರ... ಇವರು ನಿಷ್ಕಂಟಕರು ; ಇವರು ಸಂಭಾವಿತರು; ನಮ್ಮ ಪರಮಾಪ್ತ
ರೆಂದು ಇತಃಪರ ತಿಳಿದುಕೊ.
ಕುಮಂತ್ರ--(ನಿಷ್ಕಂಟಕನನ್ನು ಕುರಿತು) ಸ್ಫಾಮಿಯಪಾವಸೇವೆಗೆ ಸಿದ್ಧನಾಗಿದೇನೆ.
ನಿಷ್ಕಂಟಕ್- ನೀನು ನಮ್ಮ ಅಭಿಮಾನಕ್ಕೆ ಪಾತ್ರನಾಗಬೇಕಯ್ಯ; ನಿನ್ನ ವಿಚಾರ
ವನ್ನು ವಿಶೇಷವಾಗಿ ತಿಳಿಯಲು ನಮಗೆ ಇಷ್ಟ ಉಂಟು.
ಕುಮಂತ್ರ)--ತಮ್ಮ ಅಭಿಮಾನಕ್ಕೆ ನಾನು ಪಾತ್ರನಾಗಬೇಕೆಂದು ಪ್ರಯತ್ನಿಸುತ್ತೇನೆ.
ದುಃಖಸಾರ,..- ಒಂಭತ್ತು ವರುಷದವರಿಗೂ ಇವನು ಈ ಸೀಮೆಯನ್ನೇ ಬಿಟ್ಟುಹೋ
ಗಿದ್ದ ; ಪುನಃ ಇವನು ಹೊರಟುಹೋಗಬೇಕು. ಹೋ, | ಸವಾರಿ ಬರುತ್ತಿದೆ.
[ವಂಡಿಮಾಗಧರ ಧ್ವನಿ.]
ಪ್ರವೇಶ.._-ಧೊರೆ, ಕುಬಲ, ಭೆದ್ರ)ನಾಥ, ನಾಗನೇಣಿ, ವಿಷಜೆ,
ಇಂದುಕುಲೆ ಮತ್ತು ಪರಿವಾರ.
ಧೊರೆ.. ಮಾರದೇಶಾಧೀಕರಾದ ಅನಂಗರಾಜರನ್ನೂ ಮದ್ರಾಧೀಕರನ್ನೂ ಅವರ ಮರ್ಯಾದಾನುಗುಣವಾಗಿ ಎದುರುಗೊಂಡು ಕರೆತರುವನಾಗಯ್ಯ, ದುಃಖಸಾರ.
ದುಃಖ -ಮಹಾಸ್ವಾಮಿ, ಅಪ್ಪಣೇಪ್ರಕಾರ (ದುಃಖಸಾರ ಕುಮಂತ್ರರು ಹೋಗುವರು.)
ಧೊರೆ.._ಈ ಮಧ್ಯೆ ಗೋಪ್ಯವಾದ ನಮ್ಮ ಮನೋಗತವನ್ನು ಸಕಲರಿಗೂ ತಿಳಿಯ
ಪಡಿಸುತ್ತೇನೆ. ಆ ಭೂಪಟವನ್ನು ಇತ್ತ ತನ್ಪಿ : ಇಗೋ ಇಲ್ಲಿನೋಡಿ ; ನಮ್ಮ
ರಾಜ್ಯವನ್ನು ಮೂರುಭಾಗ ಮಾಡಿದೇವೆ. ನಮ್ಮ ಮುಪ್ಪಿಗೆ ಯಾವ ಬಾಧೆಯೂ
ತಟ್ಟದಂತೆ ಸಮಸ್ತ ಕಾರ್ಯವನ್ಪೂ ತತ್ಸಂಬಂಧವಾದ ಮನೋವ್ಯಥೆಯನ್ನೂ ಪರಿ
ಹರಿಸಿಕೊಂಡು, ಸಕಲವನ್ನೂ ಕಾಯಪುಷ್ಟಿಯುಳ್ಳ ಯೌವನಶಾಲಿಗಳಿಗೆ ಒಪ್ಪಿಸಿ,
ಭಾರವಿಮುಕ್ತರಾಗಿ ಮುಕ್ತಿಯ ಕಡೆಗೆ ಜರಗಬೇಕೆಂಬುವುದೇ ನಮ್ಮ ನಿಷ್ಕೃಷ್ಟ
ವಾದ ತಾತ್ಪರ್ಯ. ಅಯ್ಯಾ ನಮ್ಮ ಕಿರೀ ಅಳಿಯನಾದ ಕುಟಲನೆ, ನಮ್ಮ ಪ್ರೇಮ
ದಲ್ಲಿ ಎಳ್ಳಷ್ಟೂ ಕಡಮೆ ಇಲ್ಲದ ಹಿರೀಅಳಿಯನಾದ ಭದ್ರನಾಥನೆ, ಮುಂದಕ್ಕೆ
----------------------------------------
6ನೇ ಪ್ರಕರಣ.] ಹೇಮೆಚಂದ್ರರಾಜ ವಿಲಾಸ. ೩
ನಿಮ್ಮಲ್ಲಿ ಪರಸ್ಪರ ವ್ಯಾಜ್ಯಗಳು ಬಾರದಂತೆ, ನಮ್ಮ ಹೆಣ್ಣುಮಕ್ಚಳಿಗೆ ನಾವು
ಕೊಡತಕ್ಕ ಬಳುವಳಿಯು ಇಂಥಾದ್ದೆಂ ದು ಸರ್ವರಿಗೂ ತಿಳಿಯ ಪಡಿಸಬೇಕೆಂಬ
ದಾಗಿ ಈಗ ಖಂಡಿತವಾದ ಉದ್ದೇಶ ಮಾಡಿದೇವೆ. ನಮ್ಮ ಕಿರೀಮಗಳ ಸ್ವಯಂವರ
ಕ್ಕಾಗಿ ಬಂದು, ಮೇಲಾಟವಾಗಿ ಅವಳಮೇಲಿನ ಅನುರಾಗದಿಂದಲೇ ನಮ್ಮ ಆಸ್ಥಾನ
ದಲ್ಲಿ ಬಹುದಿವಸದಿಂದ ಇರತಕ್ಕ ಅನಂಗರಾಜರಿಗೂ, ಮದ್ರಾಧೀಶರಿಗೂ, ಈಗ
ಸಮಾಧಾನ ಹೇಳಬೇಕಾಗಿದೆ. ಇದು ಹಾಗಿರಲಿ. ಏ ನಮ್ಮ ಪುತ್ರಿಯರಾ, ನಾವು
ಸಮಸ್ತ ಅಧಿಕಾರವನ್ನೂ ರಾಜ್ಯ ಸಂಪತ್ತನ್ನೂ ಸಕಲ ಚಿಂತೆಯನ್ನೂ ಬಿಟ್ಟು
ತಟಸ್ಥರಾಗಬೇಕೆಂದು ಇರುವಕಾರಣ, ನಿಮ್ಮಲ್ಲಿ ಯಾರಿಗೆ ನಮ್ಮ ಮೇಲೆ ವಿಶೇಷ
ವಾದ ಪ್ರೇಮ ವಿದೆ ಎಂದು ನಾವು ಹೇಳಬಹುದು ? ಹೇಳಿ ಅಮ್ಮ. ಯಾಕೆಂದರೆ,
ನಮ್ಮ ಸಹಜವಾದ ಸಂಬಂಧಕ್ಕೆ ಸದ್ಗುಣವೂ ಸೇರುವೆಡೆಯಲ್ಲಿ ಹೆಚ್ಚಾಗಿ ಅಪರಿ
ಮಿತವಾದ ನಮ್ಮ ಔದಾರ್ಯವನ್ನು ವಿನಿಯೋಗಿಸಬೇಕಾಗಿದೆ. ಜ್ಛೇಷ್ಠ ಪುತ್ರಿಯಾದ
ನಾಗವೇಣಿ, ನೀನು ಮೊದಲು ಹೇಳಮ್ಮ.
ನಾಗವೇಣಿ... ಅಪ್ಪಾಜಿ, ತಮ್ಮ ಮೇಲೆ ನನಗಿರುವ ಅಭಿಮಾನವು ಇಷ್ಟೇ ಎಂದು
ವಾಕ್ಕಿ ನಲ್ಲಿ ಗರ್ಭೀಕರಿಸಿ ಹೇಳಬಹುದಾದ್ದಕ್ಕಿಂತಲೂ ಹೆಚ್ಚಾಗಿದೆ. ನನ್ನ ಕಣ್ಣು,
ಈ ಲೋಕ, ನನ್ನ ಸ್ಪಾತಂತ್ರ್ಯ ಇವೆಲ್ಲಕ್ಕಿ ೦ತಲೂ ತಾವು ಹೆಚ್ಚು ; ಅಪೂರ್ವ
ವಾಗಿಯೂ ಅಮೋಘವಾಗಿಯೂ ಇರುವ ಪದಾರ್ಧಕ್ಕಿಂತಲೂ ಮೇಲು ;
ಆರೋಗ್ಯ, ಸಾಂದರ್ಯ, ಗಾಂಭೀರ್ಯ, ಸೌಭಾಗ್ಯವೇ ಮೊದಲಾದ ಸಕಲ ಸಂಪತ್ತಿ
ನಿಂದ ಯುಕ್ತವಾಗಿರುವ ಬಾಳಿಗಿಂತಲೂ ಅಧಿಕ; ಲೋಕದಲ್ಲಿ ಮಕ್ಕಳು
ತಂದೆಯಮೇಲೆ ಇರಿಸಿಕೊಂಡಿರುವಂಥಾ, ತಂದೆಯು ತಮ್ಮಲ್ಲಿ ಮಕ್ಕಳಿಗೆ ಇಷ್ಟು
ಮಟ್ಟಗೆ ಇದೆ ಎಂದು ತಿಳಿದಿರುವಂಧಾ ಪ್ರೇಮಕ್ಕಿ೦ತಲೂ ತಮ್ಮ ಮೇಲಿನ ಪ್ರೇಮ
ಅತಿಶಯ ; ಜಿಯ್ಯಾ, ಆ ಪ್ರೇಮವನ್ನು ಹೇಳುವದಕ್ಕೆ ಉಸಿರು ಸಾಲದು, ಮಾತಿ
ನಲ್ಲಿ ಶಕ್ತಿ ಇಲ್ಲ; ಇವೆಲ್ಲಕ್ಕಿಂತಲೂ ತಾವು ಅತ್ಯಧಿಕವಾದ ಪದಾರ್ಥ.
ಇಂದುಕಲೆ..-(ಆತ್ಮಗತ) ಇಂದುಕಲೆ ಏನ ಮಾಡಬೇಕು? ತಂದೆಯ ಮೇಲೆ ಪ್ರೇಮ
ವನ್ನಿರಿಕ್ಕೊಂಡು ಸುಮ್ಮನಿರಭೇಕಾಯಿತು.
ಥೊರೆ...--ಹಾಗಾದರೆ (ಪಟನನ್ನು ತೋರಿಸುತ್ತಾ) ಕತ್ತಲೆಯಾದ ಅರಣ್ಯಗಳಿಂದಲೂ,
ಫಲವತ್ತಾದ ಸಮಭೂಮಿಗಳಿಂದಲೂ, ಮನೋಹರವಾದ ನದಿಗಳಿಂದಲೂ, ವಿಸ್ತಾ
ರವಾದ ಹುಲ್ಲು ಗಾವಲುಗಳಿಂದಲೂ, ಕೂಡಿರುವ ಇಲ್ಲಿಂದ ಇಲ್ಲಿಯವರಿಗೆ ಇರತಕ್ಕ
ಪ್ರಾಂತ್ಯಗಳನ್ನು ನಿನಗೆ ಕೊಡುತ್ತೇನಮ್ಮ ; ನೀವು ದಂಪತಿಗಳಿಬ್ಬರೂ ಆಚಂದ್ರಾ
ರ್ಕವಾಗಿ ಪುತ್ರ ಪಾತ್ರ ಪಾರಂಪರ್ಯವಾಗಿ ಅನುಭವಿಸಿಕೊಂಡು ಬನ್ನಿ. ನಮ್ಮ
ನಡಕಲ ಮಗಳು ಏನ ಹೇಳುತ್ತಾಳೆ? ಏನಮ್ಮ ವಿಷಜೆ, ನೀನು ಏನ ಹೇಳು
ತ್ತ್ತೀಯೆ ? ಹೇಳು.
----------------------------------------
೪ ಹೇಮೆಚಂದ ರಾಜ ವಿಲಾಸ, [೧ನೇ ಅಂಕ.
ವಿಷಜೆ... ಆಪ್ಪಾಜಿ, ನಾನೂ ನಮ್ಮ ಅಕ್ಕನಂತೆಯೇ; ಆಕೆಗೆ ಕೊಟ್ಟ ಹಾಗೆಯೇ ನನಗೂ
ಅಪ್ಪಣೆಯಾಗಲಿ. ನನ್ನಹೃದಯಗತವಾಗಿರುವ ಅಭಿಮಾನದ ಸಾರವನ್ನ್ನೇ ಆಕೆ
ಹೇಳಿದಳು ; ಆದರೆ ಸೊಂಚ ಕಡಮೆಯಾಯಿತು. ನನ್ನ ಅತಿ ನಾಜೋಕಾದ
ಸ್ವಭಾವಕ್ಕೆ ಅನುಗುಣವಾಗಿರುವ ಸಕಲ ಐಹಿಕ ಭೋಗಗಳನ್ನೂ ನನ್ನಶತ್ರು
ವಾಗಿ ಭಾವಿಸಿ, ನನಗೆ ಸಮಸ್ತ ಸುಖವೂ ತಮ್ಮ ಮೇಲಿನ ಅಭಿಮಾನವೇ ಎಂದು
ಶಿಳಿದಿದೇನೆ.
ಇಂದುಕಲೆ...(ಆತ್ಮಗತ) ಅಯ್ಯೋ ! ಬಡ ಇಂದುಕಲೆ ! ಹಾ ! ಬಡ ಅನ್ನ ಕೂಡದು;
ನನ್ನವಾಗ್ವೈಭವಕ್ಕಿಂತಲೂ ತಂದೆಯ ಮೇಲಿನ ವ್ರೇಮವೆಂಬ ಐಶ್ವರ್ಯವು ಅಧಿಕ
ವಾಗಿರುವ ಕಾರಣ, ಹಾಗೆ ಹೇಳಲಾಗದು.
ಧೊರೆ...- ಹಾಗಾದರೆ ವಿಷಜೆ, ವಿಸ್ತೀರ್ಣದಲ್ಲಿಯಾಗಲಿ, ಐಶ್ವರ್ಯದಲ್ಲಿಯಾಗಲಿ, ಯಾವ
ಭಾಗದಲ್ಲಿಯೂ ನಾಗವೇಣಿಗೆ ಕೊಟ್ಟ ಪ್ರಾಂತ್ಯಕ್ಕಿಂತಲೂ ಸ್ಟಲ್ಪವೂ ಕಡಮೆ
ಇಲ್ಲದ ಈ ಒಂದು ಭಾಗವನ್ನು ನೀನು ಸಂತತಿ ಪರಂಪರೆಯಾಗಿ ಆನುಭವಿಸಿ
ಕೊಂಡು ಬಾರಮ್ಮ. ಅದು ಸರಿಹೋಯಿತು. ಏನಮ್ಮ ಇಂದುಕಲೆ, ನನ್ನ
ಸುಖಸ್ವರೂಪವೇ? ಕನಿಷ್ಠ ಪ್ರತ್ರಿಯಾದರೂ ನೀನು ಯಾರಿಗೂ ಕನಿಷ್ಠಳಲ್ಲ;
ಮದ್ರದೇಶದ ಅಥವಾ ಮಾರದೇಶದ ಸಕಲ ಸಾಭಾಗ್ಯವೂ ನಿನ್ನದಾಗಬೇಕೆಂದು
ಕಾದಿದೆಯಮ್ಮ ; ನಿಮ್ಮ ಅಕ್ಕಂದಿರಿಗೆ ಈಕೊಟ್ಟ ಭಾಗಕ್ಷಿಂತಲೂ ಸಮಸ್ತ ವಿಷಯ
ದಲ್ಲಿಯ ಸಂಪದ್ಯುಕ್ತವಾಗಿರುವ ಮತ್ತೊಂದು ಪಾಲನ್ನು ತೆಗೆದುಕೊಳ್ಳುವುದಕ್ಕೆ
ನೀನು ಏನಂತೀಯ ? ಮಾತನಾಡು.
ಇಂದುಕಲೆ-ಅಪ್ಪಾಜಿ, ಏನೂ ಇಲ್ಲ.
ಧೊರೆ.-ಏನೂ ಇಲ್ಲ !
ಇಂದು.-ಏನೂ ಇಲ್ಲ.
ಧೊರೆ.- ಏನೂ ಇಲ್ಲ ಅಂದರೆ ಏನೂ ಇಲ್ಲ. ಸರಿಯಾಗಿ ಮಾತನಾಡು.
ಇಂದು.-ತಂದೆ, ನಾನು ಬಹು ಪಾಪಿ, ದುರದೃಷ್ಟಳು ; ನನ್ನ ಹೃದಯದಲ್ಲಿ ತುಂಬಿ
ರುವುದನ್ನು ಬಾಯಿಗೆ ತಂದುಕೊಂಡು ಹೇಳಿ ವಿವರಿಸಲಾರೆ. ನಮ್ಮ ಪರಸ್ಪರ
ಸಂಬಂಧ ಎಷ್ಟರ ಮಟ್ಟಿಗೆ ಇದೆಯೋ ಅಷ್ಟು ಮಾತ್ರ ತಮ್ಮ ಮೇಲೆ ನನಗೆ
ಅಭಿಮಾನವಿದೆಯಲ್ಲದೆ, ಹೆಚ್ಚಾಗಿಯೂ ಇಲ್ಲ, ಕಡಮೆಯಾಗಿಯೂ ಇಲ್ಲ.
ಧೊರೆ.-ಏನಂದೆ ಇಂದುಕಲೆ ? ನೀನಾಡಿದ ಮಾತನ್ನು ಸರಿಮಾಡಿಕೊ ; ನಿರ್ಭಾಗ್ಯ
ಳಾದೀಯೆ.
ಇಂದು ಕಲೆ.- ಅಪ್ಪಾಜಿ, ತಾವು ನನ್ನನ್ನು ಹೆತ್ತಿರಿ, ಪೋಪಿಸಿದಿರಿ, ಪ್ರೀತಿಸಿ ಲಾಲಿಸಿದಿರಿ;
ಈ ಉಪಕಾರಕ್ಕೆ ಪ್ರತಿಯಾಗಿ ಯೋಗ್ಯಳಾಗಿದ್ದುಕೊಂಡು, ತನಗೆ ವಿಧೇಯ
---------------------------------------------------------------
೧ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ, ೫
ಳಾಗಿ, ಪ್ರೇಮಯುಕ್ಕಳಾಗಿ, ಅತ್ಯಂತ ಮರಾದೆಯಿಂದ ನಡೆಯತಕ್ಕದ್ದು ನನಗೆ
ಧರ್ಮವಾಗಿದೆ. ಹೀಗಿರುವಲ್ಲಿ, ನಮ್ಮ ಅಕ್ಕಂದಿರು ತಮ್ಮ ಮೇಲೆಯೇ ಸಮಸ್ತ
ಅನುರಾಗವನ್ನೂ ಇಟ್ಟುಕೊಂಡಿದ್ದರೆ, ಅವರಿಗೆ ಗಂಡಂದಿರು ಯಾತಕ್ಕೆ ? ನಾನು
ಮದುವೆಯಾದರೆ ತಮ್ಮ ಮೇಲೆ ನನಗಿರುವ ಪ್ರೇಮದಲ್ಲಿ ಅರ್ಧವು ನನ್ನ ಕೈ
ಹಿಡಿದ ಪುರುಷನಿಗೆ ದೈವಾನುಗ್ರಹದಿಂದ ಸೇರುವುದು, ನಮ್ಮ ಅಕ್ಕಂದಿರ ಹಾಗೆ
ತಂದೆಯಲ್ಲಿಯೇ ನನ್ನ ಪ್ರೇಮವನ್ನೆಲ್ಲಾ ಇಟ್ಟುಕೊಂಡಿರುವದಕ್ಕೋಸ್ಕರ ನಾನು
ಮದುವೆಯಾಗಲಾರೆ.
ಧೊರೆ ಈ ಮಾತು ನಿನ್ನ ಹೃದಯದಿಂದ ಬರತಕ್ಕದ್ದೋ ?
ಇಂದು.- ಹವುದು, ಅಪ್ಪಾಜಿ.
ಧೊರೆ.- ಇಷ್ಟು ಚಿಕ್ಕ ವಯಸ್ಸಾದರೂ ಇಂಥಾ ಕಾಠಿಣ್ಯ ಉಂಟೆ ?
ಇಂದು.-ಇಷ್ಟು ಚಿಕ್ಕ ವಯಸ್ಸೇನೋ ಸರಿ ; ಆದರೆ ಅಷ್ಟೂ ಅಷ್ಟೂ ನಿಶ್ಚಯ.
ಧೊರೆ - ಹಾಗೆಯೇ ಆಗಲಿ ; ನಿನ್ನ ನಿಶ್ಚಯವೇ ನಿನಗೆ ಬಳುವಳಿಯಾಗಲಿ, ನಿರ್ಮಲ
ವಾದ ಪ್ರಕಾಶದೊಡನೆ ಜಾಜ್ವಲ್ಯಮಾನನಾಗಿ ಉರಿಯುತಕ್ಕ ಆ ಸಾಕ್ಷಾತೆ ಸೂರ್ಯ
ನಾರಾಯಣ ಸಾಕ್ಷಿಯಾಗಿಯೂ, ದಿವಾರಾತ್ರಿ ಸಾಕ್ಷಿಯಾಗಿಯೂ, ನಮ್ಮ ಸೃಷ್ಟಿ
ಸ್ಥಿತಿ ಲಯಗಳಿಗೆ ಮುಖ್ಯ ಆಧಾರಭೂತಗಳಾಗಿರುವ ಆ ನವಗ್ರಹಗಳ ಸಾಕ್ಷಿ
ಯಾಗಿಯೂ, ನಾನು ನಿನಗೆ ತಂದೆಯ ಅಲ್ಲ, ನೀನು ನನಗೆ ಮಗಳೂ ಅಲ್ಲ ;
ನಮನಮಗೆ ಯಾವ ರಕ್ತ ಸಂಬಂಧವೂ ಇಲ್ಲ, ಯಾವ ಬಾಂಧವ್ಯವೂ ಇಲ್ಲ ;
ನನಗೂ ನನ್ನ ಹೃದಯಕ್ಕೂ ಇನ್ನು ಮೇಲೆ ನೀನು ಅನ್ಯಳು ; ನಿನ್ನನ್ನು ಎಂದೆಂ
ದಿಗೂ ಇನ್ನು ದೂರ ಮಾಡಿದ್ದೇನೆ. ಕಠಿಣ ಹೃದಯರಾದ ಆ ರಾಕ್ಷಸರೂ, ತಮ್ಮ
ಹೊಟ್ಟೆಯಲ್ಲಿ ಹುಟ್ಟಿದ ಶಿಶುಗಳ ಮಾಂಸವನ್ನು ತಿಂದು ತೇಗುವ ಆ ದೈತ್ಯರೂ,
ಒಂದಾನೊಂದು ಕಾಲದಲ್ಲಿ ನನ್ನ ಮಗಳನ್ನಿಸಿಕೊಂಡಿದ್ದಂಥಾ ನಿನ್ನ ಹಾಗೆ, ನನಗೆ
ಸಂಬಂಧಿಗಳಾಗಿರಲಿ ; ನನ್ನ ಕನಿಕರವನ್ನು ನೀನು ಹೊಂದುವಂತೆ ಅವರು
ಹೊಂದಲಿ ; ನನ್ನ ಸಹಾಯವನ್ನು ನೀನು ಪಡೆಯುವಂತೆಯೇ ಅವರು ಪಡೆಯಲಿ.
ನಿಷ್ಕಂಟಕ.- ಮಹಾಸ್ವಾಮಿ, -
ಧೊರೆ.-ಸುಮ್ಮನಿರು, ನಿಷ್ಕಂಟಕ, ಮಹಾ ಸಿಂಹನಿಗೂ ಆನೆಗೂ ಮಧ್ಯೆ ಬರ
ಬೇಡ ; ಇವಳಲ್ಲಿ ನನಗೆ ಅತ್ಯಂತ ಅಭಿಮಾನವಿತ್ತು. ಅಯ್ಯೋ ! ಇವಳ ಆದರ
ವುಳ್ಳ ಪೋಷಣೆಯಲ್ಲಿದ್ದುಕೊಂಡು, ಈ ಮುಪ್ಪನ್ನು ಕಳೆಯಬೇಕೆಂದಿದ್ದೆನಲ್ಲಾ !
(ಇಂದುಕಲೆಯನ್ನು ಕುರಿತು ) ನಡೆ, ಆಚೆಗೆ ನಡೆ, ನನ್ನೆದುರಿಗೆ ನಿಲ್ಲಬೇಡ.
ಇವಳಲ್ಲಿ ನನಗಿದ್ದ ಪ್ರೇಮವು ಹೋಯಿತಾದ್ದರಿಂದ, ಇನ್ನು ರುದ್ರಭೂಮಿಯಿಂ
ದಲೇ ನನಗೆ ಸಾಖ್ಯ ಉಂಟಾಗಲಿ. ಅನಂಗರಾಜರನ್ನು ಕರೆಯಿರಿ; ಯಾರಲ್ಲಿ !
------------------------------------------------------------
೬ ಹೇಮಚಂದ್ರರಾಜ ವಿಲಾಸ. [೧ನೇ ಅಂಕ.
ಮುದ್ರಾಧೀಶರನ್ನು ಕರೆಯಿರಿ, ಅಯ್ಯ ಕುಟಿಲ, ಅಯ್ಯ ಭದ್ರನಾಥ, ನನ್ನ
ಇಬ್ಬರು ಪುತ್ರಿಯರಿಗೆ ಕೊಟ್ಟ ಬಳುವಳಿಗೆ ಈ ಭಾಗವನ್ನೂ ಸೇರಿಸಿಕೊಳ್ಳಿ.
ಅವಳು ನಿಷ್ಕಾಪಟ್ಟವೇದು ಕರೆಯತಕ್ಕ ಅವಳ ಅಹಂಕಾರವು ಅವಳನ್ನು
ಮದುವೆಯಾಗಲಿ. ನನ್ನ ಅಧಿಕಾರವನ್ನೂ, ಪ್ರತಿಷ್ಠೆಯನ್ನೂ, ರಾಜಪದವಿಯನ್ನು
ಅನುಸರಿಸಿರುವ ಸಂಪತ್ತನ್ನೂ ನಿಮ್ಮಿಬ್ಬರಿಗೂ ಒಪ್ಪಿಸಿದ್ದೇವೆ. ನಾವು ನೂರು
ಜನ ಸಾಮಾಜಿಕರೊಡಗೂಡಿ ಈ ಪ್ರಕಾರ ಒಂದೊಂದು ತಿಂಗಳು ನಿಮ್ಮ
ಮನೆಯಲ್ಲಿ ಇರುತ್ತೇವೆ ; ನೀವು ಪೋಷಣೆ ಮಾಡಬೇಕು. ಆದರೆ ಧೊರೆ ಎಂಬ
ಹೆಸರನ್ನು ಮಾತ್ರ ನಾವು ಇಟ್ಟುಕೊಂಡಿದೇವೆ ; ದೇಶದ ಆಡಳತ, ಅಧಿಕಾರ,
ಸುವರ್ಣಾದಾಯ, ಇವೆಲ್ಲಾ ನಿಮಗೆ ; ಈ ಮಾತು ಖಂಡಿತವೆಂದು ತೋರಿಸು
ವುದಕ್ಕೋಸ್ಕರ, ಇಗೊ ತೆಗೆದುಕೊಳ್ಳಿ ( ತನ್ನ ಕಿರೀಟವನ್ನು ಕೊಟ್ಟು ), ಈ
ಕಿರೀಟವನ್ನು ನೀವಿಬ್ಬರೂ ವಿಭಾಗ ಮಾಡಿಕೊಳ್ಳಿ
ನಿಷ್ಕಂಟಕ.-ರಾಜಾಧಿರಾಜನೇ, ನಾನು ಯಾರನ್ನು ಅರಸೆಂದು ಮಾರ್ಯಾದೆ ಮಾಡುತ್ತಾ,
ತಂದೆ ಎಂದು ಪ್ರೀತಿಸುತ್ತಾ, ಯಜಮಾನನೆಂದು ಸಹಚರನಾಗಿರುತ್ತಾ, ನನ್ನ
ಪೋಷಕನೆಂದು ದೇವರ ಪ್ರಾರ್ಥನೆಯ ಕಾಲದಲ್ಲಿ ಜ್ಞಾಪಿಸಿಕೊಳ್ಳುತ್ತಾ ಇದ್ದೆನೋ
ಅಂಥಾ ಹೇಮಚಂದ್ರರಾಜನೇ
ಧೊರೆ.-ಬಿಲ್ಲನ್ನು ಬಗ್ಗಿಸಿ ನಾರಿಯನ್ನು ಎಳೆದಿದೇನೆ ; ಬಾಣವನ್ನು ತಪ್ಪಿಸಿಕೊಂಡು
ಹೋಗು.
ನಿಷ್ಕಂಟಕ- -ಆ ಬಾಣ ನನ್ನ ಹೃದಯಕ್ಕೆ ನಾಟಕೊಂಡಾಗ್ಯೂ ಸರಿಯೆ ; ಅದು
ನನಗೆ ತಗಲಿದರೂ ತಗಲಲಿ, ಹೇಮಚಂದ್ರ ರಾಜನಿಗೆ ಹುಚ್ಚು ಹಿಡಿದಿರೆ,
ನಿಷ್ಕಂಟಕ ಮೇರೆದಪ್ಪಿ ಮಾತನಾಡಲೇಬೇಕು, ಏನು ಮಾಡಬೇಕೆಂದು
ಇದ್ದೀಯೆ, ಮುದುಕಾ ? ಪದವಿ ಮೃಷಾಸ್ತುತಿಗೆ ವಿಹ್ವಲವಾದರೆ, ನನ್ನ ಸ್ವಾಮಿ
ಭಕ್ತಿಯು ನಿಷ್ಕಳಂಕವಾಗಿ ಮಾತನಾಡುವದಕ್ಕೆ ಹೆದರಿತೆಂದು ತಿಳಿದಿದ್ದೀಯೋ ?
ಅಧಿಕಾರ ಅವಿವೇಕಕ್ಕೆ ಬಿದ್ದರೆ, ಪ್ರಾಮಾಣಿಕತೆ ನಿಷ್ಕಾಪಟ್ಯವನ್ನೇ ವಹಿಸಬೇಕು.
ನೀನು ಮಾಡಿದ ವ್ಯವಸ್ಥೆಯನ್ನು ತೆಗೆ ; ಚೆನ್ನಾಗಿ ಪರಾಲೋಚಿಸಿ ಈ ಹಾಳ
ದುಡುಕನ್ನು ಬಿಡು ; ನಿನ್ನ ಕಿರೀ ಮಗಳಿಗೆ ನಿನ್ನ ಮೇಲಿರುವ ಪ್ರೇಮವು ಯಾರ
ಪ್ರೇಮಕ್ಕಿಂತಲೂ ಕಡಮೆಯಲ್ಲ. ಕೊಡದ ಸದ್ದು ಕಡಮೆಯಾದರೆ, ಅದು
ತುಂಬಿದ ಕೊಡವಲ್ಲದೆ ಬರೀಕೊಡವಲ್ಲ. ಈ ಮಾತಿಗೆ ನನ್ನ ಪ್ರಾಣವೇ ಹೊಣೆ.
ಧೊರೆ -ನಿಷ್ಕಂಟಕ, ಬೇಡ, ಪ್ರಾಣದಮೇಲೆ ಆಸೆ ಇದ್ದರೆ ನಿಲ್ಲಿಸು, ಸಾಕು.
ನಿಮ್ಮ -ನಿನ್ನ ಶತ್ರು ನಾಶಕ್ಕಾಗಿ ಈ ನನ್ನ ಪ್ರಾಣವನ್ನು ಒತ್ತೆ ಇಟ್ಟಿದೇನೆಯ
ಹೊರತು ಮತ್ತೆ ಏನೂ ಇಲ್ಲ ; ನಿನ್ನ ಕ್ಷೇಮವೇ ನನ್ನ ಮುಖ್ಯವಾದ ಕೋರಿಕೆ
ಯಾಗಿರುವುದರಿಂದ, ಈ ಪ್ರಾಣ ಹೋದರೂ ನಾನು ಭಯಪಡುವುದಿಲ್ಲ.
------------------------------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೭
ಧೊರೆ.-ನನ್ನೆದುರಿಗೆ ನಿಲ್ಲಬೇಡ ತೊಲಗು,
ನಿಷ್ಕಂ -ಹೇಮಚಂದ್ರರಾಜ, ಚೆನ್ನಾಗಿ ಕಣ್ಣ ಬಿಟ್ಟು ನೋಡು ; ನಿನ್ನೆದುರಿಗೇ
ನಾವಿದ್ದು ನಿನಗೆ ಮಾರ್ಗ ತೋರಿಸುತ್ತಿರುತ್ತೇನೆ.
ಧೊರೆ.ಈಗ, ಈಶ್ವರ ಸಾಕ್ಷಿಯಾಗಿಯೂ--
ನಿಷ್ಕಂ-ಈಗ, ಈಶ್ವರ ಸಾಕ್ಷಿಯಾಗಿಯೂ ನೀನು ಪ್ರಮಾಣ ಮಾಡುವುದು ಅನ್ಯಾಯ.
ಧೊರೆ-ಎಲನೀಚ, ಕೃತಘ್ನ (ಕತ್ತಿಯನ್ನು ಹರಿಯುತ್ತ,)
ಭದ್ರನಾಥ, ಮತ್ತು ಕುಟಿಲ, ಮಹಸ್ವಾಮಿ, ನಿಧಾನಿಸಬೇಕು.
ನಿಷ್ಕಂ.-ಹುಂ, ಆಗಲಿ ಧೊರೆಯೇ ! ವೈದ್ಯನನ್ನು ಕೊಲ್ಲು ; ಅವನಿಗೆ ಕೊಡುವ
ಬಹುಮಾನವನ್ನು ನಿನ್ನ ರೋಗಕ್ಕೆ ಹಾಕಿ ವೃದ್ಧಿ ಮಾಡಿಕೊ. ನೀನು ಮಾಡಿದ
ನಿಷ್ಕರ್ಷೆಯನ್ನು ಬಿಡು. ಇಲ್ಲದಿದ್ದರೆ, ನನ್ನ ಗಂಟಲಲ್ಲಿ ಕೂಗುವುದಕ್ಕೆ ಉಸಿರಿ
ರುವತನಕ, ನೀನು ಅವಿವೇಕಮಾಡಿದೆ ಎಂದು ನಾನು ಹೇಳುತ್ತಲೇ ಇರುತ್ತೇನೆ.
ಧೊರೆ.-ಕೇಳು, ಬ್ರಹ್ಮ, ನಿಮ್ಮ ರಾಜನ ಆಣೆ, ಕೇಳು: ನಾವು ಮಾಡಿದ ಸಂಕಲ್ಪಕ್ಕೆ
ಅದ್ಯಾಪಿಭಂಗ ಬಂದಿಲ್ಲ. ಅದಕ್ಕೆ ಭಂಗವನ್ನು ತರಬೇಕೆಂದು ನೀನು ಈಗ ಯತ್ನಿಸಿ
ದ್ದೀಯೆ ; ನಮ್ಮ ಪ್ರಕೃತಿಯಾಗಲಿ ನಮ್ಮ ಪದವಿಯಾಗಲಿ ಸಹಿಸುವದಕ್ಕೆ ಅಶಕ್ಯ
ವಾಗಿರುವಹಾಗೆ ನಮ್ಮ ಅಜ್ಞಾಭಂಗವನ್ನು ಮಾಡಬೇಕೆಂದು ನೀನು ದುರಹಂಕಾರ
ದಿಂದ ಉಜ್ಜುಗಿಸಿದ್ದೀಯೆ ; ಆದಕಾರಣ ನಮ್ಮ ಅಧಿಕಾರದ ಬಲವನ್ನು ಈಗ
ತೋರಿಸಬೇಕಾಗಿರುವುದರಿಂದ, ನೀನು ಮಾಡಿದ್ದಕ್ಕೆ ಫಲವನ್ನು ಹಿಡಿ ; ಯಾವ
ಬಾಧೆಯ ನಿನಗೆ ತಟ್ಟದಂತೆ ಪ್ರಯಾಣಕ್ಕೆ ಸಿದ್ಧ ಮಾಡಿಕೊಳ್ಳಲು ನಿನಗೆ ಐದು
ದಿವಸ ಗಡಬ ಕೊಟ್ಟಿದೆ. ಆರನೇ ದಿವಸ ಈ ರಾಜ್ಯವನ್ನು ಬಿಟ್ಟು ನೀನು ತೊಲಗ
ಬೇಕು ; ಹತ್ತು ದಿವಸವಾದಮೇಲೆ ತ್ಯಾಜ್ಯವಾದ ನಿನ್ನ ಶರೀರವು ಇಲ್ಲಿ ಕಾಣ
ಬಂದರೆ, ಆ ಕ್ಷಣವೇ ನಿನಗೆ ಮರಣವೆಂದು ತಿಳಿ ; ಆಚೆಗೆ ತೊಲಗು ; ಇದು
ಖಂಡಿತ.
ನಿಷ್ಕಂಟಕ --ನಿನಗೆ ಶ್ರೇಯೋಸ್ತು ; ಧೊರೆಯೇ, ನಾನು ಹೋಗುತ್ತೇನೆ. ನಿನ್ನ ಗುಣ
ಹೀಗಾದ್ದರಿಂದ ನಾನು ಇಲ್ಲಿರುವುದೇ ನನಗೆ ದೇಶಭ್ರಷ್ರ್ಟತ್ವ ; ಇಲ್ಲಿಂದ ಹೊರಟು
ಹೋಗುವುದೇ ಸ್ವಾತಂತ್ರ್ಯ, (ಇಂದು ಕಲೆಯನ್ನು ಕುರಿತು) ಅಮ್ಮ ನಾರೀಶಿ
ರೋಮಣಿ, ನಿನ್ನ ಯೋಚನೆ ಬಹಳ ಸರಿಯಾದ್ದು ; ನಿನ್ನ ಮಾತು ಬಹುಯುಕ್ತ
ವಾದ್ದು. ಕಾರುಣ್ಯನಿಧಿಯಾದ ದೇವರು ನಿನ್ನನ್ನು ಕಾಪಾಡಲಿ. (ನಾಗವೇಣಿ
ವಿಷಜೆಯರನ್ನು ಕುರಿತು) ಪ್ರೇಮಗರ್ಭಿತವಾದ ನಿಮ್ಮ ಮಾತಿನ ಫಲವು ಒಳ್ಳೆಯ
ದಾಗಿ ಪರಿಣಮಿಸಲಿ, ದೀರ್ಘವಾಗಿಯೂ ಗಂಭೀರವಾಗಿಯೂ ನೀವು ಆಡಿದ ಮಾತಿಗೆ
ನಿನ್ನ ಕೃತ್ಯ ಅನುಗುಣವಾಗಿರಲಿ, ರಾಜಪುತ್ರರಾ, ದೇವರು ನಿಮ್ಮನ್ನು ಸಂರಕ್ಷ
------------------------------------------------------------
8 ಹೇಮಚಂದ್ರರಾಜ ವಿಲಾಸ, [೧ನೇ ಅಂಕ
ಸಲಿ. ನಿಷ್ಕಂಟಕ ಮತ್ತೊಂದು ರಾಜ್ಯಕ್ಕೆ ಹೋಗಿ ತನ್ನ ಪಾಡನ್ನು ನೋಡಿ
ಕೊಳ್ಳುತ್ತಾನೆ. [ನಿಷ್ಕ್ರಮಣ, ]
(ವಾದ್ಯಧ್ವನಿ.) ಪ್ರವೇಶ.-ದುಃಖಸಾರ, ಅನಂಗರಾಜ, ಮದ್ರಾಧೀಶ, ಪರಿವಾರ.
ದುಃಖಸಾರ.-ಮಹಾಸ್ವಾಮಿ, ಅನಂಗರಾಜರೂ, ಮದ್ರಾಧೀಶರೂ ದಯಮಾಡಿದಾರೆ.
ಧೊರೆಸ್ವಾಮಿ, ಮದ್ರಾಧೀಶರೇ, ನಮ್ಮ ಮಗಳನ್ನು ವರಿಸುವುದಕ್ಕಾಗಿ ಮೇಲಾಡಿ
ಕೊಂಡು ಬಂದಂಥಾ ತಮ್ಮೊಡನೆ ಮೊದಲು ಮಾತನಾಡಬೇಕು, ಅವಳಿಗೆ ಕೊನೇ
ಪಕ್ಷ ಎಷ್ಟು ಬಳುವಳೀಕೊಟ್ಟರೆ ಅವಳನ್ನು ನೀವು ಸ್ವೀಕರಿಸುತ್ತೀರಿ, ಇಲ್ಲದಿದ್ದರೆ
ಅವಳ ಹಂಬಲನ್ನು ಬಿಡುತ್ತೀರಿ ?
ಮದ್ರಾಧೀಶ.-ಸ್ವಾಮಿ, ತಾವು ಆಕೆಗೆ ಎಷ್ಟು ಕೊಡುತ್ತೇನೆಂದು ಹೇಳಿದರೋ ಅಷ್ಮೆ
ನನಗೆ ಸಾಕು ; ಅದಕ್ಕಿಂತಲೂ ಕಡಮೆಯಾಗಿ ಸ್ವಾಮಿ ಕೊಡುವುದೇ ಇಲ್ಲ.
ಧೊರೆ.--ಗಾಂಭೀರ ನಿಧಿಗಳಾದ ಮದ್ರಾಧೀಶರೆ, ಅವಳು ಒಂದಾನೊಂದು ಕಾಲದಲ್ಲಿ
ನಮ್ಮ ಪ್ರೇಮಾಸ್ಪದಳಾಗಿದ್ದಳು. ಅದು ಆಗಿನ ಮಾತಾಯಿತು. ಈಗ ಅವಳ
ಮೌಲ್ಯ ಕಡಮೆಯಾಯಿತು. ಅಕೋ ಆ ಪದಾರ್ಧ ಅಲ್ಲಿ ನಿಂತಿದೆ. ನಮ್ಮ ಆಗ್ರ
ಹಕ್ಕೆ ಮಾತ್ರ ಸರ್ವಥಾ ಪಾತ್ರವಾಗಿರುವ ಆ ಅಲ್ಪ ಪದಾರ್ಥದಲ್ಲಿ ನಿಮ್ಮ ಅನು
ರಾಗಕ್ಕೆ ಪಾತ್ರವಾಗತಕ್ಕ ಗುಣ ಏನಾದರೂ ಇದ್ದರೆ, ಇಗೊ ಅದು ಇಲ್ಲಿದೆ ; ಅದು
ನಿಮ್ಮದೇ
ಮದ್ರಾಧೀಶ.-ಇದಕ್ಕೆ ನನಗೇನೂ ಉತ್ತರ ತೋರದು.
ಧೊರೆ.-ಇಂಥಾ ದುರ್ಗುಣಗಳಿಗೆ ತೌರಾಗಿ, ನಮ್ಮ ದೇಶಕ್ಕೆ ನೂತನವಾಗಿ ಗುರಿ
ಯಾಗಿ, ನಮ್ಮ ಶಾಪವೆಂಬ ಬಳುವಳಿಯನ್ನು ಪಡೆದು, ನಮ್ಮಿಂದ ಪ್ರಮಾಣಪುರ
ಸ್ಸರವಾಗಿ ಬಹಿಷ್ಕೃತಳಾಗಿ, ಇತ್ತ ಬಾ ಎನ್ನು ವರಿಲ್ಲದೇ ಇರತಕ್ಕ ಈ ನೀಚಳನ್ನು
ನೀವು ಸ್ವೀಕರಿಸುತ್ತೀರಾ, ತ್ಯಜಿಸುತ್ತೀರಾ ?
ಮದ್ರಾಧೀಶ-ಸ್ವಾಮಿ ಕ್ಷಮಿಸಬೇಕು ; ಇಷ್ಟು ನಿರ್ಬಂಧದಿಂದ ಆಕೆಯನ್ನು ನಾನು
ಸ್ವೀಕರಿಸುವುದಕ್ಕಾಗುವದಿಲ್ಲ.
ಧೊರೆ.--ಹಾಗಾದರೆ ಬಿಡಿ ; ನಾನು ಹೇಳಿದ ಗುಣಗಳೇ ಅವಳಿಗಿರುವ ಸಕಲ್ವೇಶ್ವರ್ಯ,
(ಅನಂಗರಾಜನನ್ನು ಕುರಿತು) ಮಹಾರಾಜರೆ, ನನ್ನ ಆಗ್ರಹಾಸ್ಪದವಾದ ಪದಾರ್ಥ
ವನ್ನು ತಮಗೆ ವಿವಾಹಮಾಡಿಕೊಟ್ಟರೆ, ತಮ್ಮಲ್ಲಿ ನನಗಿರುವ ಪ್ರೇಮಕ್ಕೆ ಕುಂದಕ
ವನ್ನು ತರುವುದು ನನಗೆ ಇಷ್ಟವಿಲ್ಲ. ಈ ತುಚ್ಛವಾದ್ದನ್ನು ತಾನು ನಿರ್ಮಿಸಿದೆ
ನೆಂದು ಒಪ್ಪಲು ವಿಧಿಯೂ ಕೂಡ ನಾಚಿಕೊಳ್ಳುವನು. ಈ ಪಾಪಿಗಿಂತಲೂ
ಬೇರೆ ಯೋಗ್ಯವಾದ ಕಡೆಗೆ ತಮ್ಮ ವ್ಯಾಮೋಹವನ್ನು ತಿರುಗಿಸುವಿರೆಂದು ನಾನು
ಬೇಡುತ್ತೇನೆ.
-------------------------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೯
ಅನಂಗರಾಜ.- ಸ್ವಾಮಿ ಇದೇನೋ ಅತ್ಯಂತ ಆಶ್ಚರ್ಯ ಜನಕವಾಗಿದೆ ; ಈಗತಾನೆ
ತಮಗೆ ಸರ್ವಶ್ರೇಷ್ಮಳಾಗಿಯ, ತಮ್ಮ ಸ್ತೋತ್ರಕ್ಕೆ ವಿಷಯಳಾಗಿಯೂ,
ತಮ್ಮ ಮುಪ್ಪಿಗೆ ಎಷ್ಟೋ ಆಪ್ಯಾಯನಳಾಗಿಯೂ, ತಮ್ಮ ಅತ್ಯಂತ ಅಭಿಮಾ
ನಕ್ಕೆ ಪಾತ್ರಳಾಗಿಯ, ಉತ್ತಮೋತ್ತಮಳಾಗಿಯೂ, ಇದ್ದ ಈಕೆಯು, ತರಂಗ
ತರಂಗವಾಗಿ ಬರುತ್ತಿದ್ದ ತಮ್ಮ ಕೃಪಾರಸವನ್ನು ಅಪಹರಿಸುವ ಮಹಾ ಆಸುರ
ಕೃತ್ಯವನ್ನು ಈ ಒಂದು ನಿಮಿಷಾರ್ಧದಲ್ಲಿ ಮಾಡಿದ್ದು ಅತ್ಯದ್ಭುತವಾಗಿದೆ. ಇಲ್ಲ,
ಆಕೆಯ ತಪ್ಪು ಮಹಾಪಾತಕ ವೆನಿಸಿಕೊಳ್ಳುವ ಮಟ್ಟಿಗೆ ಅಸಾಧಾರಣವಾದ್ದಾಗಿ
ರಬೇಕು ; ಇಲ್ಲ, ಆಕೆಯಲ್ಲಿ ತಮಗೆ ಮೊದಲಿದ್ದ ವಿಶ್ವಾಸವು ಈಗ ಕೆಟ್ಟಿರಬೇಕು.
ಆಕೆ ಅಂಥಾ ಅಪರಾಧಿ ಎಂದು ದೈವಯತ್ನ ದಿಂದೇನಾದರೂ ನಾನು ನಂಬಬೇಕೇ
ಹೊರತು ಮನುಷ್ಕ ಯತ್ನ ದಿಂದ ಬೇರೆ ಆಗುವುದಿಲ್ಲ.
ಇಂದುಕಲೆ- ಅಪ್ಪಾಜಿ, ನಾನು ಬರೆದದ್ದನ್ನು ವಾಚಾ ಹೇಳುವುದಕ್ಕೆ ಮುಂಚೆಯೇ
ಕಾರ್ಯತಃ ತೋರಿಸುವುದು ನನ್ನ ಸ್ವಭಾವ ; ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ
ಬಾಯಲ್ಲಿ ಬೆಣ್ಣೆಯಹಾಗೆ ನುಣುಪಾದ ಮಾತುಗಳನ್ನಾಡುವ ನವನೀತ ಕೌಶ
ಲವು ನನಗೆ ಬಾರದು. ನನ್ನ ಮೇಲಿದ್ದ ತಮ್ಮ ದಯೆಯನ್ನು ಅಪಹರಿಸಿದ್ದು
ಸ್ವರ್ಣಸ್ತೇಯ ಸುರಾಪಾನಾದಿ ಮಹಾಪಾತಕಗಳಲ್ಲ ; ಪ್ರಾಣಿವಧೆಯಲ್ಲ ; ಪೌತಿ
ವ್ರತಭಂಗವಲ್ಲ ; ಮತ್ತಾವ ಅಪಮಾನಕರವಾದ ಕೆಲಸವೂ ಅಲ್ಲ: ಆದರೆ ಹೀಗೆ
ಅಪಹರಿಸಿದ್ದು ಮತ್ತೆ ಯಾವದಂದರೆ: ದೀನವಾದ ಅಕ್ಷಿ, ನಮ್ರವಾದ ವದನ, ಮೃದು
ತರವಾದ ನಾಲಗೆ, ಇವುಗಳೆಲ್ಲಾ ಇಲ್ಲದೇ ಇರುವುದು. ಈ ಗುಣಗಳ ಅಭಾವದಿಂದ
ತಮ್ಮ ಪ್ರೇಮ ಹೋದಾಗ್ಯೂ ನನ್ನ ಸಂತೋಷವೂ ಐಶ್ವರವು ಮತ್ತಷ್ಟು ಹೆಚ್ಚಿ
ದವು. ಅಪ್ಪಾಜಿ, ಈ ಅರ್ಥವನ್ನು ತಾವು ಲೋಕಕ್ಕೆ ಪ್ರಕಾರಮಾಡಬೇಕು
ಧೊರೆ.- ನನಗೆ ಹೀಗೆ ದುಃಖವನ್ನುಂಟುಮಾಡುವುದಕ್ಕಿಂತಲೂ ನೀನು ಹುಟ್ಟದೇ ಇದ್ದ
ರಾಗಿತ್ತು.
ಅನಂಗರಾಜ.ಇದೇಯೋ ? ಮನಸ್ಸಿನಲ್ಲಿ ತಾನು ಮಾಡಬೇಕೆಂದಿರುವುದನ್ನು ಬಾಯಲ್ಲಿ
ಹೇಳದೇ ಇರುವ ತಾಮಸಪ್ರಕೃತಿಯೇ ಆಕೆಯು ಅಪರಾಧ ? ಸ್ವಾಮಿ, ಮದ್ರಾ
ಧೀಶರೇ, ಆಕೆಯ ವಿಷಯದಲ್ಲಿ ನೀವೇನು ಹೇಳುತ್ತೀರಿ ? ಅನುರಾಗಕ್ಕೂ ಲೌಕಿಕ
ಪ್ರಯೋಜನಕ್ಕೂ ಬಹುದೂರ ; ಅಂಥಾ ಪ್ರಯೋಜನವನ್ನು ಸಂಬಂಧಿಸಿಗೊಂಡಿ
ದ್ದರೆ, ಆ ಅನುರಾಗ ಅನುರಾಗವೇ ಅಲ್ಲ. ಆಕೆಯನ್ನು ತಾವು ಸ್ವೀಕರಿಸುತ್ತೀರಾ ?
ಆಕೆಗೆ ಆಕೆಯ ಬಳುವಳಿ,
ಮದ್ರಾ.-ಸ್ವಾಮಿ ಹೇಮಚಂದ್ರರಾಜರೆ, ಆಕೆಗಾಗಿ ಕೊಡುತ್ತೇವೆಂದು ತಾವಾಗಿ ಹೇಳಿ
ದ್ದಷ್ಟೇ ಅಪ್ಪಣೆಯಾಗಲಿ ; ನನ್ನ ರಾಣಿಯಾಗಿ ಇಂದುಕಲೆಯ ಕೈಯ್ಯನ್ನು ಹಿಡಿಯುತ್ತೇನೆ.
----------------------------------------------------------------
೧೦ ಹೇಮಚಂದ್ರರಾಜ ವಿಲಾಸ. [೧ನೇ ಅಂಕ
ಧೊರೆ.ಏನೂ ಇಲ್ಲ ; ನಾನು ಪ್ರಮಾಣಮಾಡಿದೇನೆ ; ಇದು ನಿಷ್ಕರ್ಷೆ.
ಮದ್ರಾ. (ಇಂದುಕಲೆಯನ್ನು ಕುರಿತು) ಹಾಗಾದರೆ ತಂದೆಯನ್ನು ಈ ರೀತಿಯಲ್ಲಿ
ನೀನು ಕಳೆದುಕೊಂಡೆಯಾಗಿ, ವರನನ್ನೂ ನೀನು ಕಳೆದು ಕೊಳ್ಳಬೇಕಾಯಿತು.
ಇಂದು. ಮದ್ರಾಧೀಶರು ತಣ್ಣಗಿರಲಿ ; ಅವರ ಅನುರಾಗವು ಭಾಗ್ಯಾಪೇಕ್ಷೆಯನ್ನು
ಮಾಡತಕ್ಕದ್ದಾದ್ದರಿಂದ ಅವರಿಗೆ ನಾನು ಪತ್ನಿಯಾಗಲಾರೆ.
ಅನಂಗರಾಜ.-ಇಂದುಕಲೆ, ಸೊಬಗಿನ ನಿಧಿಯೇ, ನೀನು ಬಡವಳಾದ್ದರಿಂದಲೇ
ಅತ್ಯಂತ ಐಶ್ವರ್ಯವಂತಳಾದೆ ; ಅನಾಥಳಾದ್ದರಿಂದಲೇ ಸರ್ವಶ್ರೇಷ್ಟಳಾದೆ; ತಿರಸ್ಕೃ
ತಳಾದ್ದರಿಂದಲೇ ಪೂಜ್ಯಳಾದೆ. ಇಂದುಕಲೇ, ನಿನ್ನ ನ್ನೂ ನಿನ್ನ ಸದಾಚಾರವನ್ನೂ
ನಾನು ಸ್ವೀಕರಿಸಿದೇನೆ ; ತಿರಸ್ಕೃತ ಪದಾರ್ಥವನ್ನು ನಾನು ಪುರಸ್ಕರಿಸಿದ್ದು
ನ್ಯಾಯವೆಂದು ಸಕಲರೂ ಭಾಸಿಸಲಿ. ಹಾ, ಹಾ ! ದೇವರೇ ! ಅತ್ಯಂತ ಉಪೇಕ್ಷೆ
ಯಿಂದ ತಣ್ಣಗಾಗಿ ತನು ಹಿಡಿದುಹೋಗಿದ್ದ ಈ ವಸ್ತುವಿನಲ್ಲಿ, ನನಗಿರುವ ಅನು
ರಾಗವೆಂಬ ಅಗ್ನಿಯು ಮರ್ಯಾದರೂಪವಾಗಿ ಪ್ರಜ್ವಲಿಸುತ್ತಿದೆಯಲ್ಲಾ! ಧೊರೆಯೇ,
ಬಳುವಳಿ ಯಿಲ್ಲದ ನಿನ್ನ ಮಗಳು ನನ್ನ ಭಾಗಕ್ಕೆ ಬಂದಳು ; ನನಗೂ, ನಮ್ಮವ
ರಿಗೂ, ನಮ್ಮ ಮನೋಹರವಾದ ಮಾರದೇಶಕ್ಕೂ, ರಾಣಿಯಾದಳು. ನಿಸ್ಸಾರವಾದ
ಮದ್ರದೇಶದ ಅರಸರು ಎಷ್ಟು ಜನವಾದರೂ, ಅಮೂಲ್ಯವಾದ ಈ ರಮಣೀಮ
ಣಿಯ ಬೆಲೆಗೆ ಸಮ ಬರಲಾರರು. ಇಂದುಕಲೆ, ನಿರ್ದಯರಾದ ಈ ಜನರಿಗೆ
ಕ್ಷೇಮವನ್ನು ಕೋರಿ ಈಃ ಸ್ಥಳವನ್ನು ಬಿಟ್ಟು ಉತ್ತಮವಾದ ಮತ್ತೊಂದು
ಸ್ಥಳಕ್ಕೆ ನಡೆ.
ಧೊರೆ. (ಅನಂಗ ರಾಜನನ್ನು ಕುರಿತು ಅಯ್ಯು ಅನಂಗರಾಜ, ನೀನು ಅವಳನ್ನು
ಸ್ವೀಕರಿಸಿದೀಯೆ ; ಹಾಗಾದರೆ ಅವಳು ನಿನ್ನ ವಳೇ ಆಗಲಿ, ನಮಗೆ ಇಂಥಾ ಮಗಳೇ
ಇಲ್ಲ ; ಇನ್ನೆಂದಿಗೂ ನಾನು ಅವಳ ಮುಖಾವಲೋಕನವನ್ನು ಮಾಡತಕ್ಕವರಲ್ಲ.
ಆದ್ದರಿಂದ ನಮ್ಮ ದಯೆಯಾಗಲಿ, ಪ್ರೇಮವಾಗಲಿ, ಆಶೀರ್ವಾದವಾಗಲಿ, ಯಾವುದೂ
ಇಲ್ಲದೆ ಆಚೆಗೆ ನಡೆ, ತಾವು ಬನ್ನಿ , ಮದ್ರಾಧೀಶರೆ, (ಅನಂಗರಾಜ, ಇಂದುಕಲೆ,
ವಿಷಜೆ, ನಾಗವೇಣಿ, ಇವರು ಹೊರತು ಉಳಿದವರು ಹೋಗುವರು).
ಅನಂಗ- ಇಂದುಕಲೆ, ನಿಮ್ಮ ಅಕ್ಕಂದಿರಿಗೆ ಆ ಮಂತ್ರಣವನ್ನು ಹೇಳಿ ಹೊರಡು.
ಇಂದು-ನಮ್ಮ ತಂದೆಯು ರತ್ನಗಳೇ, ಕಣ್ಣಿನಲ್ಲಿ ನೀರ ಹಾಕುತ್ತಾ ಇಂದುಕಲೆ
ನಿಮ್ಮ ಸನ್ನಿಧಿಯನ್ನು ಬಿಡುವಳು. ನೀವು ಇಂಥವರು ಎನ್ನುವುದನ್ನು ನಾನು
ಬಲ್ಲೆ, ನಾನು ನಿನ್ನ ತಂಗಿಯಾದ್ದರಿಂದ, ನಿಮ್ಮ ದೋಷಗಳು ಇಂಥವುಗಳೆಂದು
ಎಣಿಸುವುದು ನನಗೆ ಇಷ್ಮವಿಲ್ಲ. ನಮ್ಮ ತಂದೆಯನ್ನು ಸರಿಯಾಗಿ ಪೋಷಿಸಿ
ಕೊಳ್ಳಿ. ಆತನ ಮೇಲೆ ನಿಮಗೆ ಪ್ರೇಮವಿರುವುದಾಗಿ ನೀವು ನಟಿಸಿದಿರಿ. ಅಂಥಾ
-------------------------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೧೧
ಪ್ರೇಮದ ವಶಕ್ಕೆ ಆತನನ್ನು ಒಪ್ಪಿಸಿದ್ದೇನೆ. ಆದರೂ ಅಯ್ಯೋ ! ಆತನ ದಯಕ್ಕೆ
ನಾನು ಪಾತ್ರಳಾಗಿದ್ದಲ್ಲಿ ಉತ್ತಮವಾದ ಬೇರೊಂದು ಸ್ಥಳವನ್ನು ಆತನಿಗೋಸ್ಕರ
ಹುಡುಕುತ್ತಿದ್ದೆ. ನಿಮ್ಮಿಬ್ಬರಿಗೂ ಸ್ವಸ್ತ್ಯಸು.
ವಿಷಜೆ. ನಮ್ಮ ಧರ್ಮವನ್ನು ನಮಗೆ ಬೋಧಿಸ ಬೇಡ.
ನಾಗವೇಣಿ...ಅದೃಷ್ಯವು ಕೊಡತಕ್ಕ ಭಿಕ್ಷದಲ್ಲಿ ಸಂತುಷ್ಮವಾಗಿ ನಿನ್ನನ್ನು ವರಿಸಿದ
ನಿನ್ನ ನಾಥನನ್ನು ತೃಪ್ತಿ ಮಾಡುವುದರಲ್ಲಿ ನಿರತಳಾಗಿರು. ನಿನ್ನಲ್ಲಿ ವಿಧೇಯತೆ
ಕಡಮೆಯಾಯಿತು ; ತಂದೆಯಲ್ಲಿ ನಿನಗೆ ಅಭಿಮಾನ ವಿಲ್ಲದ್ದರಿಂದ ತಂದೆಯ ಅಭಿ
ಮಾನವು ನಿನಗೆ ಇಲ್ಲದೇ ಹೋದ್ದು ಸರಿಯಾಗಿದೆ.
ಇಂದು-ನಿಬಿಡವಾಗಿ ನೀಡಿರುವ ತಳತಂತ್ರದಿಂದ ಆಚ್ಛಾದಿಸಲ್ಪಟ್ಟಿರುವ ದೋಷವನ್ನು
ಕಾಲಗತಿಯು ವ್ಯಕ್ತಪಡಿಸುವುದು, ದೋಷವನ್ನು ಯಾರು ಮುಚ್ಚಿಕೊಂಡಿದಾ
ರೆಯೋ ಅವರಿಗೆ ನಾಚಿಕ್ಕೇಡಾದೀತು. ನೀವು ತಣ್ಣಗಿರಿಯಮ್ಮ.
ಅನಂಗ-ಬಾ ನನ್ನ ಇಂದುಕಲೆ (ಅನಂಗರಾಜ, ಇಂದುಕಲೆ ಹೋಗುವರು).
ನಾಗವೇಣಿ -ತಂಗಿ, ನಮ್ಮಿಬ್ಬರಿಗೆ ಸೇರಿದ ಆಸ್ತಿಯ ವಿಷಯವಾಗಿ ನಾನು ಬಹಳ
ಮಾತನಾಡಬೇಕಾಗಿದೆ. ನಮ್ಮ ತಂದೆ ಈದಿನ ರಾತ್ರೆ ಇಲ್ಲಿಂದ ಹೊರಟು
ಹೋಗುವ ಹಾಗೆ ತೋರುತ್ತಿದೆ.
ವಿಷಜೆ.- ಅದು ಖಂಡಿತ ; ಈ ತಿಂಗಳು ನಿಮ್ಮಲ್ಲಿ, ಮುಂದಿನ ತಿಂಗಳು ನಮ್ಮಲ್ಲಿ.
ನಾಗವೇಣಿ.-- ನಮ್ಮ ತಂದೆಗೆ ಮುಪ್ಪು ಬಂದು, ಬುದ್ದಿ ಚಾಂಚಲ್ಯ ಎಷ್ಟೊಂದು
ಉಂಟಾಯಿತು, ನೋಡು ; ಇದನ್ನು ನಾವು ಬಹಳವಾಗಿ ನೋಡಿದೇವೆ ; ಆತನಿಗೆ ನಮ್ಮ
ತಂಗಿಯ ಮೇಲೆ ಅತ್ಯಂತ ವಾತ್ಸಲ್ಯವಿತ್ತು. ಈಗ ಅವಳನ್ನು ಆಚೆಗೆ
ಕಳುಹಿಸಿಬಿಟ್ಟ ಸ್ವಲ್ಪ ವಿವೇಕ ಚೆನ್ನಾಗಿ ವ್ಯಕ್ತವಾಯಿತಷ್ಟೆ.
ವಿಷಜೆ.-ಇದು ಆತನ ವಯೋಧರ್ಮ: ಅರಳು ಮರಳು ಇದ್ದೇ ಇದೆ.
ನಾಗವೇಣಿ..ಅವನ ಬುದ್ದಿ ಅತ್ಯಂತ ಪ್ರಚುರವಾಗಿ ಇದ್ದ ಕಾಲದಲ್ಲಿಯೇ ದುಡುಕು;
ಇನ್ನು ಈಗ ಕೇಳುವುದೇನು ? ಪೂರ್ವದಿಂದಲೂ ಪ್ರಭಾವವಾಗಿರುವ ಅವನ ಸಹಜವಾದ
ಡಂಭ, ಆಗ್ರಹ, ಅಹಂಕಾರ, ಇವೆಲ್ಲವನ್ನೂ ನಾವು ಸಹಿಸಕೊಳ್ಳ ಬೇಕಾಗಿರುವುದಲ್ಲದೆ,
ಮುಪ್ಪಿನಿಂದ ಉಂಟಾಗಿರುವ ಒಡಕು, ಒರಟುತನ, ಚಾಪಲ್ಯ
ಇವೆಲ್ಲಕ್ಕೂ ನಾವು ಒಳಗಾಗಬೇಕಾಗಿದೆ.
ವಿಷಜೆ.-ನಿಷ್ಕಂಟಕನಿಗೆ ದೇಶ ಭಸ್ಮವನ್ನು ಉಂಟುಮಾಡಿದ ಹಾಗೆಯೇ ಆ
ಬುದ್ಧಿ ಚಾಂಚಲ್ಯದ ಫಲವು ನಮ್ಮನ್ನೂ ತಟ್ಟಬಹುದು.
------------------------------------------------------
೧೨ ಹೇಮಚಂದ್ರರಾಜ ವಿಲಾಸ. [೧ನೇ ಅಂಕ.
ನಾಗವೇಣಿ.-ಇದೂ ಅಲ್ಲದೆ ಅನಂಗರಾಜ ಹೊರಟು ಹೋಗುವಾಗ್ಗೆ ಅವನು ಮಾಡಿದ
ಬಹುಮಾನ ತಿಳಿದೇ ಇದೆ. ನಾವುನಾವು ಮಾತನಾಡಿಕೊಂಡು ನಿಷ್ಕರ್ಷೆಮಾಡಿ ಕೊಳ್ಳೋಣ.
ರಾಜ್ಯವನ್ನು ಬಿಟ್ಟು ನಮಗೆ ಸಕಲವನ್ನೂ ಒಪ್ಪಿಸಿದ್ದಾಗ್ಯೂ, ಅವನ ಚರ್ಯಗಳಿಂದ ಅಧಿಕಾರದ
ವಕ್ರತ್ವವನ್ನು ತೋರ್ಪಡಿಸುವದಾದರೆ, ನಾವು ಅದನ್ನೆಲ್ಲಾ ಸಹಿಸತಕ್ಕವರಲ್ಲ.
ವಿಷಜೆ.ಒಳ್ಳೆಯದು, ಈ ವಿಷಯವಾಗಿ ಇನ್ನೂ ಯೋಚಿಸೋಣ.
ನಾಗ.- ಏನಾದರೂ ಮಾಡಬೇಕು ; ಅದೂ ಬಿಸಿಬಿಸಿಯಲ್ಲಿಯೇ,
(ಎಲ್ಲರೂ ಹೋಗುವರು.)
೨ನೇ ಪ್ರಕರಣ -ದುಃಖಸಾರನ ಗೃಹ.
ಪ್ರವೇಶ.ಕುಮಂತ (ಒಂದು ಕಾಗದವನ್ನು ಹಿಡಿದುಕೊಂಡು.)
ಕುಮಂತ್ರ.- ಪ್ರಕೃತಿ ದೇವತೆ, ಆದಿಶಕ್ತಿ, ನೀನೇ ನನ್ನ ಮನೆದೇವರು ; ನಾನು ಬದ್ಧ
ನಾಗಿರುವುದು ನಿನ್ನ ಕಟ್ಟಲೆಗೇ, ನನ್ನ ಸಹೋದರನಿಗಿಂತ ೧೦-೧೩ ತಿಂಗಳು
ಚಿಕ್ಕವನಾಗಿದ್ದ ಮಾತ್ರದಲ್ಲಿಯೇ, ಈ ಹಾಳ ವೃದ್ಧಾಚಾರದ, ಈ ಪೂರ್ವಪದ್ಧತಿಯ
ವೇಧೆ ನನಗೆ ಏಕೆ ತಟ್ಟಬೇಕು ? ನನ್ನ ಪ್ರಯೋಜನವನ್ನು ಏಕೆ ಕೆಡಿಸಬೇಕು ?
ಏಕೆ ಜಾರಜ ? ನೈಚ್ಯಕ್ಕೆ ಕಾರಣವೇನು ? ಪತಿವ್ರತೆಯ ಪುತ್ರನಿಗಿರುವಹಾಗೆಯೇ
ನನ್ನ ಆಕಾರವೂ ಅಡಕವಾಗಿಯೂ, ನನ್ನ ರೂಪ ನಿಜವಾಗಿಯೂ, ನನ್ನ
ಮನಸ್ಸೂ ಉದಾರವಾಗಿಯೂ ಇರುವಲ್ಲಿ ? ನಮಗೆ ಯಾಕೆ ಈ ಹಾಳ ವೈಜಾತ್ಯ
ವನ್ನು ಕಲ್ಪಿಸುತ್ತಾರೆ ? ಯಾಕೆ ಈ ಅನೌರಸತ್ವ ? ಈ ಕೆಟ್ಟ ನೈಚ್ಯ ? ಈ ಹಾಳ
ನೈಚ್ಯ ? ಔರಸನಾದ ಶುಕ್ಷ ಚಂದ್ರ, ನಿನ್ನ ಆಸ್ತಿ ನನಗೆ ಬರಬೇಕು. ನಮ್ಮ
ತಂದೆಯು ವಾತ್ಸಲ್ಯವು ಔರಸನಮೇಲೆ ಹ್ಯಾಗೆ ಇದೆಯೋ ಹಾಗೆಯೇ ಜಾರಜನಾದ
ಕುಮಂತ್ರನ ಮೇಲೆಯೂ ಇದೆ. "ಔರಸ ?” ! ಅಃ ! ಒಳ್ಳೆ ಶಬ್ದ ! ಬಳ್ಳೇದು
ಔರಸ, ಈ ಲೇಖನದ ಮೂಲಕ ನನ್ನ ಕಾರ್ಯ ಕೈಗೂಡಿದರೆ, ವಿಜಾತನಾದ
ಕುಮಂತ್ರನು ಔರಸನ ತಲೆಯಮೇಲೆ ಕೂತುಕೊಳ್ಳುವುದೇ ಖಂಡಿತ. ನಾನು
ಪ್ರವರ್ಧಮಾನನಾಗುವೆನು. ದೇವರೇ, ಜಾರೆಜರ ಪಕ್ಷವಾಗಿ ನೀನಿದ್ದರೆ
ಸಾಕು, ಹೋ !
ದುಃಖಸಾಗರನ ಪ್ರವೇಶ.
ದುಃಖ.-ನಿಷ್ಕಂಟಕನಿಗೂ ಈ ಪರಿಯಲ್ಲಿ ದೇಶಭಸ್ಮವಾಯಿತು ! ಮಾರದೇಶಾ
ಧೀಶನಾದರೋ ಕೋಪದಿಂದ ಹೊರಟುಹೋದ ! ಧೊರೆಯೋ ಈ ರಾತ್ರಿಯೇ
--------------------------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೩
ಹೊರಟುಹೋದ ! ರಾಜ್ಯಪರಿತ್ಯಾಗವನ್ನು ಮಾಡಿಬಿಟ್ಟ ! ಜೀವನಾಧಾರಕ್ಕಾಗಿ
ಸ್ವಲ್ಪ ವೇತನಕ್ಕೆ ಒಪ್ಪಿಕೊಂಡ ! ಇದೆಲ್ಲಾ ಒಂದು ನಿಮಿಷದಲ್ಲಿ ಆಗಿಹೋಯಿತು !
ಮತ್ತೇನು ಕುಮಂತ್ರ ? ಏನು ವಿಶೇಷ ?
ಕುಮಂತ್ರ.-ಸ್ವಾಮಿ ಏನೂ ಇಲ್ಲ. (ಕೈಲಿದ್ದ ಕಾಗದವನ್ನು ಬಿಚಿಕೊಳ್ಳುತ್ತಾ).
ದುಃಖ.ಅದೇನು ಅಷ್ಟು ಕಾತುರನಾಗಿ ಆ ಕಾಗದವನ್ನು ಹಾಗೆ ಮರೆ ಮಾಡಿ
' ಕೊಳ್ಳುತ್ತೀಯೆ ?
ಕುಮಂತ್ರ.- ನಾನು ಯಾವ ವಿಷಯವನ್ನೂ ಅರಿಯೆ.
ದುಃಖ. ನೀನು ಓದುತ್ತಿದ್ದ ಕಾಗದ ಯಾವುದು ?
ಕುಮಂತ್ರ -- ಏನೂ ಇಲ್ಲ, ಅಪ್ಪಾಜಿ.
ದುಃಖ. ಏನೂ ಇಲ್ಲ ? ಹಾಗಾದರೆ ಅದನ್ನು ಅಷ್ಟು ಜಾಗ್ರತೆಯಾಗಿ ನೀನು ಮುಚ್ಚಿ
ಕೊಳವುದಕ್ಕೆ ನಿಮಿತ್ತವೇನು ? ಏನೂ ಇಲ್ಲವಾಗಿದ್ದರೆ ಹೀಗೆ ಔತುಕೊಳ್ಳತಕ್ಕೆ
ಸ್ವಭಾವ ಅದರಲ್ಲಿ ಇಲ್ಲ. ಎಲ್ಲಿ ನೋಡೋಣ ; ಅಲ್ಲಿ ಏನೂ ಇಲ್ಲದೆ ಇದ್ದರೆ ನನಗೆ
ಕನಡಕವೇ ಬೇಡ.
ಕುವಂತ-ಅಪ್ಪಾಜಿ, ಕ್ಷಮಿಸಬೇಕು. ಇದು ನಮ್ಮಣ್ಣಯ್ಯ ಬರೆದ ಕಾಗದ ;
ಅದನ್ನು ನಾನು ಇನ್ನೂ ಪೂರ್ತಿಯಾಗಿ ಓದಿ. ನಾನು ಓದಿರುವ ಮಟ್ಟಿಗೆ
ನೋಡಿದರೆ, ತಾವೂ ಅದನ್ನು ಓದ ತಕ್ಕದ್ದಾಗಿಲ್ಲ.
ದುಃಖ. ಆ ಕಾಗದವನ್ನು ಇಲ್ಲಿ ಕೊಡಿ.
ಕುಮಂತ್ರ. ಆವನ್ನು ಕೊಟ್ಟರೂ ನನ್ನಿಂದ ಅಪರಾಧ, ಕೊಡದೇ ಇದ್ದರೂ ಅಪ
ರಾಧ ; ಹ್ಯಾಂಗಾದರೂ ಕಷ್ಟ. ನಾನು ಅದನ್ನು ತಿಳಿದಿರುವ ಮಟ್ಟಿಗೆ ಅದರಲ್ಲಿ
ಇರತಕ್ಕ ವಿಷಯವೇನೋ ಕೆಟ್ಟದು.
ದುಃಖ ಎಲ್ಲಿ ನೋಡೋಣ, ನೋಡೋಣ.
ಕುಮಂತ್ರ. ನನ್ನ ಗುಣವನ್ನು ಪರೀಕ್ಷಿಸುವುದಕ್ಕೋಸ್ಕರ ನನಗೆ ಈ ಕಾಗದವನ್ನು
ನಮ್ಮಣ್ಣ ಬರೆದಿದ್ದರೆ ಸಾಕೆಂದು, ಆತನಮೇಲೆ ತಪ್ಪುಹೊರದೇ ಇರುವುದಕ್ಕಾಗಿ
ನಾನು ಕೋರುತ್ತೇನೆ.
ದುಃಖ- (ಕಾಗದವನ್ನು ಓದುತ್ತಾನೆ) " ಹೀಗೆ ಹಿರಿಯರ ಹಸಾದಕ್ಕೆ ಹೆಮ್ಮೈಸಿಕೊಂ
ಡಿರುವುದರಲ್ಲಿಯೇ ನಮ್ಮ ಆದುನ ಸರೋತ್ತಮವಾದ ಕಾಲ ನಮಗೆ ಜುಗು
ಪ್ಸಾಕರವಾಯಿತು. ಕೊನೆಗೆ ವಾರ್ಧಿಕ್ಯ ಬಂದು ನಮ್ಮ ಐಶ್ವರವನ್ನು ಆಸ್ವಾ
ದಿಸುವ ಶಕ್ತಿಯೇ ಇಲ್ಲದೇ ಹೋಗುವತನಕ ಅದು ನಮಗೆ ಪ್ರಾಪ್ತವಾಗುವದಿಲ್ಲ ;
------------------------------------------------------------
೧೪ ಹೇಮಚಂದ್ರರಾಜ ವಿಲಾಸ. [೧ನೇ ಅಂಕ.
ವೃದ್ದರ ಬಾಧೆಯನ್ನು ಸಹಿಸಿಕೊಂಡಿರುವದು ಹೀನವಾದ ಸೇವಾವೃತ್ತಿ, ಈ
ಬಾಧೆಯು ನಾವು ಸಹಿಸಿಕೊಂಡು ಇದ್ದಷ್ಟೂ ಹೆಚ್ಚುವುದೇ ಹೊರತು, ಅವರ
ಅಧಿಕಾರಾನುಗುಣವಾಗಿ ಹೆಚ್ಚುವುದಿಲ್ಲ. ಈ ಸಂಗತಿಯನ್ನು ಕುರಿತು ನಾನು
ಇನ್ನೂ ಮಾತನಾಡುವದಕ್ಕೆ ಅನುಕೂಲವಾಗಿರುವಂತೆ ನೀನು ಇಲ್ಲಿಗೇ ಬಾ ;
ನಾನು ಎಬ್ಬಿಸುವತನಕ ನಮ್ಮತಂದೆ ಮಲಗಿಯೇ ಇದ್ದರೆ ಅವನ ಆದಾಯದಲ್ಲಿ
ಅರ್ಧವನ್ನು ನೀನು ಅನುಭವಿಸಿಕೊಂಡು ಪ್ರೇಮಾಸ್ಪದನಾದ ನನ್ನ ತಮ್ಮನಾಗಿ
ಸುಖವಾಗಿರೆಂದು ಕೋರುವ ಶುಕ್ಲ ಚಂದ್ರ.”
ಹುಂ! ದ್ರೋಹ ಚಿಂತಾಸಂಘವೋ ! ( ನಾನು ಎಬ್ಬಿಸುವ ತನಕ ನಮ್ಮ ತಂದೆ
ಮಲಗಿದರೆ ಅವನ ಆದಾಯದಲ್ಲಿ ಅರ್ಧವನ್ನು ನೀನು ಅನುಭವಿಸುವೆ.” ಎಲೆ
ಮಗನೇ, ಶುಕ್ಲ ಚಂದ್ರ ! ಅಯ್ಯೋ ಇದನ್ನು ಬರೆಯುವುದಕ್ಕೆ ಅವನಿಗೆ ಕೈ
ಬಂತೇ ! ಇದನ್ನು ಯೋಚಿಸುವದಕ್ಕೆ ಮನಸ್ಸು ಬಂತೇ ! ಇದು ನಿನಗೆ ಯಾವಾಗ
ಬಂತು ? ಯಾರು ತಂದರು ?
ಕುಮಂತ್ರ. ಇದನ್ನು ನನಗೆ ಯಾರೂ ತಂದು ಕೊಡಲಿಲ್ಲ ; ಅದೇ ಇದರಲ್ಲಿ ನಡೆದ
ಚಮತ್ಕೃತಿ : ನನ್ನ ಏಕಾಂತ ಗೃಹದಲ್ಲಿ ಇದು ಬಿಸಾಡಿತ್ತು.
ದುಃಖ.-ಇದು ನಿಮ್ಮಣ್ಣನ ಅಕ್ಷರವೆಂದು ನೀನು ಬಲ್ಲೆ ಯಲ್ಲವೆ ?
ಕುಮಂತ್ರ - .ಅದರ ವಿಷಯ ಒಳ್ಳೆಯದಾದರೆ ಇದು ಅವನದೇ ಎಂದು ನಾನು
ಪ್ರಮಾಣವಾಗಿ ಹೇಳ ಬಲ್ಲೆ ; ಆದರೆ ಹಾಗಿಲ್ಲವಾದ್ದರಿಂದ ಆತನದಲ್ಲವೆಂದು
ಸಂತೋಷವಾಗಿ ಹೇಳುತ್ತೇನೆ.
ದುಃಖ.-ಇದು ಅವನದೇ, ಕುಮಂತ್ರ.ಅವನ ಹಸ್ತಾಕ್ಷರವೇ ಸರಿ ; ಆದರೆ, ಅವನು ಮನಃಪೂರಕವಾಗಿ
ಬರೆದದ್ದಲ್ಲ.
ದುಃಖ-ಈ ವಿಷಯವಾಗಿ ನಿನ್ನ ಮನಸ್ಸನ್ನು ಪರೀಕ್ಷಿಸಲು ಪೂರ್ವದಲ್ಲಿಯೇ ಏನಾ
ದರೂ ಯತ್ನಿಸಿದ್ದನೆ ?
ಕುಮಂತ್ರ. ಎಂದಿಗೂ ಇಲ್ಲ ಅಪ್ಪಾಜಿ ; ಆದರೆ ಮಕ್ಕಳು ವಯಸ್ತರಾಗಿ ತಂದೆಯು
ಗಳಿತವಯಸ್ಕನಾಗುತ್ತಿರುವಲ್ಲಿ, ತಂದೆಯು ಮಗನ ಪೋಷ್ಯನಾಗಿದ್ದು ಮಗನು
ಅವನ ಆಡಳತಗಳನ್ನೆಲ್ಲಾ ನೋಡಿಕೊಳ್ಳತಕ್ಕದ್ದು ಯೋಗ್ಯವಾಗಿದೆ, ಎಂದು
ನಮ್ಮಣ್ಣ ಹೇಳಿದ್ದನ್ನು ನಾನು ಆಗಾಗ್ಗೆ ಆತನಿಂದ ಕೇಳಿದೇನೆ.
ದುಃಖ.-ಎಲ ಚಂಡಾಲ, ಚಂಡಾಲ! ಅವನ ಅಭಿಪ್ರಾಯವೇ ಈ ಕಾಗದದಲ್ಲಿದೆಯಲ್ಲಾ!
ಎಲ ದ್ರೋಹಿ, ಪಾಪಿ, ಚಂಡಾಲ, ಖೂಳ, ಅದಕ್ಕಿಂತಲೂ ಕಡಮೆಯಾದವನೆ !
ಎಲ, ಹೋಗು, ಅವನನ್ನು ಹುಡುಕು ; ಹಿಡಿ, ಆ ಚಂಡಾಲನನ್ನು ; ಅವ ಎಲ್ಲಿದಾನೆ?
-------------------------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೫
ಕುಮಂತ್ರ. ನನಗೆ ಚೆನ್ನಾಗಿ ತಿಳಿಯದು ಸ್ವಾಮಿ ; ನಮ್ಮಣ್ಣನ ಅಭಿಪ್ರಾಯಕ್ಕೆ
ಇನ್ನೂ ದೃಷ್ಟಾಂತವನ್ನು ಆತನ ಮೂಲಕ ತಿಳಿಯುವತನಕ ಆತನಮೇಲಿನ
ಕೋಪವನ್ನು ಸಮಾಧಾನ ಮಾಡಿಕೊಳ್ಳುವುದು ಉತ್ತಮ. ಇದನ್ನು ಬಿಟ್ಟು,
ಆತನ ಅಭಿಪ್ರಾಯವನ್ನ ಅರಿಯದೆ ದುಡುಕಿ ಆತನಮೇಲೆ ಕಾರ್ಯಭಾಗಕ್ಕೆ ಹೊರ
ಟರೆ, ತಮ್ಮ ಮಾನಕ್ಕೂ ಕುಂದಕ ಬರುವುಮ ; ಆತನ ಮನಃ ಪೂರ್ವಕವಾದ
ವಿಧೇಯತೆಯ ಚದರಿಸಿ ಹೋಗುವುದು, ತಮ್ಮ ಪಾದದಲ್ಲಿ ನನಗಿರುವ ಪ್ರೀತಿ
ಯನ್ನು ನಿರ್ಧರಿಸಿಕೊಳ್ಳುವುದಕ್ಕೋಸ್ಕರ ನಮ್ಮಣ್ಣಯ್ಯ ಹೀಗೆ ಬರೆದಿದ್ದಾನೆ
ಹೊರತು ಮತ್ತೆ ಯಾವ ಅಪಾಯಕರವಾದ ಅಭಿಪ್ರಾಯದಿಂದಲೂ ಅಲ್ಲ ; ಈ
ಮಾತಿಗೆ ನನ್ನ ಪ್ರಾಣವೇ ಸಾಕ್ಷಿ.
ದುಃಖ.-ನಿನಗೆ ಹಾಗೆ ತೋರುವುದೋ?
ಕುಮಂತ್ರ,ಸ್ವಾಮಿ, ನಾವುನಾವು ಈ ವಿಷಯವಾಗಿ ಸಂಭವಿಸುವುದನ್ನು ನೀವು
ಕಿವಿಯಾರ ಕೇಳಿ ನಿಶ್ಚಯಿಸಿಕೊಳ್ಳುವಹಾಗೆ ತಮಗೆ ಒಂದು ಸ್ಥಳವನ್ನು ನಾನು
ತೋರಿಸುತ್ತೇನೆ, ಅದೂ ಈ ಸಾಯಂಕಾಲದೊಳಗಾಗಿ ; ಇದು ತಮ್ಮಡಿ
ಗಳಿಗೆ ಸಮ್ಮತವಿದ್ದರೆ ಆಗಬಹುದು.
ದುಃಖ.ಅವ ಅಂಥಾ ರಾಕ್ಷಸನಲ್ಲ.
ಕುಮಂತ್ರ.- ಖಂಡಿತವಾಗಿಯೂ ಅಲ್ಲ.
ದುಃಖ-ನಿಷ್ಕಲ್ಮಷವಾಗಿ ಉದಾರವಾದ ಪ್ರೇಮವನ್ನು ಅವನಲ್ಲಿಟ್ಟುಕೊಂಡಿರುವ
ಅವನ ತಂದೆಗೆ ! ಹಾ ! ಭೂಮ್ಯಂತರಿಕ್ಷಗಳೆ ! ಕುಮಂತ, ಅವನನ್ನು ಹುಡುಕು;
ಹಾಗಾದರೂ ಅವನ ಸಮೀಪಕ್ಕೆ ನನ್ನನ್ನು ಕರೆದುಕೊಂಡುಹೋಗುವಹಾಗೆ
ಮಾಡು ; ನಾನು ಕೇಳಿಕೊಳ್ಳುತ್ತೇನೆ. ಈ ಕಾರ್ಯವನ್ನು ನಿನ್ನ ಬುದ್ಧಿಗೆ
ತೋರಿದಹಾಗೆ ನಡಿಸು ; ನನ್ನ ಸರ್ವಸ್ವವೂ ಕೊಟ್ಟೇನು . ಈ ಸಂಶಯ ಪರಿಚ್ಛೇದ
ವಾದರೆ ಸಾಕು.
ಕುಮಂತ್ರ ಆತನನ್ನು ಈಗಲೇ ಹುಡುಕುತ್ತೇನೆ ; ಕಾವ್ಯವನ್ನು ಸಂದರ್ಭಾನು
ಸಾರ ಜರಗಿಸಿ, ಕೊನೆಗೆ ಸಮಸ್ತವನ್ನೂ ತಮಗೆ ಅರಿಕೆ ಮಾಡಿಕೊಳ್ಳುತ್ತೇನೆ.
ದುಃಖ-ಈ ಸೂರ್ಯೊಪರಾಗ ಚಂದ್ರೋಪರಾಗಗಳು ಶುಭವನ್ನು ಸೂಚಿಸುವುದಿಲ್ಲ ;
ಶಾಸ್ತ್ರವು ಹೀಗೆಹೀಗೆಂದು ನಿರೂಪಿಸಿದಾಗ್ಯೂ, ಕಾರ್ಯಾನಂತರ ಉಂಟಾಗತಕ್ಕ ಫಲ
ಗಳಿಂದ ಲೋಕಸ್ವಭಾವವೇ ವ್ಯತ್ಯಾಸವಾದಹಾಗೆ ಕಾಣುವುದು ; ಅನುರಾಗ
ಕಡಮೆಯಾಗುವುದು ; ಸ್ನೇಹ ಒಡೆದುಹೋಗುವುದು ; ಸಹೋದರರಿಗೆ ವಿಭಾಗ
ವಾಗುವುದು : ಪಟ್ಟಣಗಳಲ್ಲಿ ದೊಂಬಿ ; ದೇಶಗಳಲ್ಲಿ ಪರಸ್ಪರ ವಿರೋಧ;
ಅರಮನೆಗಳಲ್ಲಿಯೋ ದ್ರೋಹ ; ತಂದೆಮಕ್ಕಳಿಗೋ ಬಡಕು. ಈ ನಮ್ಮ ನೀಚ
--------------------------------------
೧೬ ಹೇಮಚಂದ್ರರಾಜ ವಿಲಾಸ, [೧ನೇ ಅಂಕ.
ಇದಕ್ಕನುಸಾರವಾಗಿದಾನೆ : ತಂದೆಯಮೇಲೆ ಮಗನಿಗೆ ವಿರೋಧ ; ಧೊರೆಗೆ
ಸ್ವಭಾವಜನ್ಯವಾದ ವಾತ್ಸಲ್ಯಹೋಯಿತು ; ಇದು ಮಕ್ಕಳ ಮೇಲೆ ತಂದೆಗೆ
ವಿರೋಧ. ನಾನು ಒಳ್ಳೇಕಾಲವನ್ನು ನೋಡಿದ್ದೇನೆ. ಇನ್ನು ಅಂಥಾಕಾಲ ಬರುವು
ದಿಲ್ಲ. ಆದರೆ ನಮಗೆ ರುದ್ರಭೂಮಿ ಸಾಮೀಪವಾದಹಾಗೆಲ್ಲಾ, ಬಹಳ ತಂತ್ರಗಳು,
ಕಾಪಟ್ಯ, ದ್ರೋಹ, ನಾಶಕ್ಕೆ ಅನುಕೂಲವಾದ ಸಮಸ್ತ ಗಲಭೆ, ಇವೆಲ್ಲಾ ಪ್ರಾಪ್ತ
ವಾಗುವವು. ಈ ನೀಚನನ್ನು ಹುಡುಕು, ಕುಮಂತ್ರ ; ನಿನಗೇನೂ ಇದರಿಂದ
ನಷ್ಟವಿಲ್ಲ ; ಜಾಗರೂಕನಾಗಿರು. ಪೂಜ್ಯನಾಗಿ ನಿಶ್ಚಯಹೃದಯನಾದ ಆ
ನಿಷ್ಕಂಟಕನಿಗೆ ದೇಶಭ್ರಷ್ಟ್ವತ್ವ ; ಅವನ ಅಪರಾಧವೋ ಸತ್ಯ ! ಇದೆಲ್ಲಾ ಏನೋ
ಆಶ್ಚರ್ಯ ! (ನಿಷ್ಕ್ರಾಂತ.)
ಕುಮ೦ತ್ರ- ಇದೇ ಈ ಪ್ರಪಂಚದ ಶುದ್ಧ ಅವಿವೇಕ; ನಮಗೆ ವಿಪತ್ತು ಸಂಭವಿಸಿ,
ಅದೂ ಬಹುಶಃ ನಮ್ಮ ನಡತೆಯಿಂದಲೇ ಪ್ರಾಪ್ತವಾಗಿರುವಾಗ, ಈ ದೋಷವನ್ನು
ಸೂರ್ಯಚಂದ್ರ ನಕ್ಷತ್ರಗಳಮೇಲೆ ಹಾಕುವರು : ಏನೋ, ನಾವು ನೀಚರಾಗಿರು
ವುದು ದೈವಾಧೀನವೆಂತಲೂ ; ವಿವೇಕ ಶೂನ್ಯರಾಗಿರುವುದು ಅಮಾನುಪಕೃತ
ವೆಂತಲೂ; ಪಾಪಿಗಳೂ, ಚೋರರೂ, ದ್ರೋಹಿಗಳೂ, ಆಗಿರುವುದು ನಕ್ಷತ್ರಗತಿಯ
ಕಾರ್ಯವೆಂತಲೂ, ಮಧ್ಯಪಾಯಿಗಳೂ, ಅಸತ್ಯಶೀಲರೂ, ವ್ಯಭಿಚಾರಿಗಳೂ
ಆಗಿರುವುದು ಗ್ರಹಗತಿಗಳ ಫಲವೆಂತಲೂ, ನಮ್ಮ ದುರ್ಗುಣಗಳಲ್ಲಾ ಈಶ ಕಲ್ಪಿತ
ವೆಂತಲೂ ! ಓಹೋ ! ಶುಕ್ಷ ಚಂದ್ರ,
ಪ್ರವೇಶ.-ಶಈಚಂದ್ರ
ಯೋಚಿಸಿದಕೂಡಲೆ ಬೇತಾಳನಹಾಗೆ ಬರುತ್ತಾನೆ ; ಅಧಮಮಾರ್ಗ ಪ್ರವರ್ತಕ
ನಾಗಿ ಖಿನ್ನತೆಯನ್ನು ನಟಿಸಿ, ಹುಚ್ಚನಹಾಗೆ ನಿಟ್ಟುಸಿರು ಬಿಡುತ್ತಿರುವುದೇ ನನ್ನ ಕಾರ್ಯ.
ಓಹೋ, ಈ ಗ್ರಹಣಗಳು ಈ ವಿಪರ್ಯಾಸ ಸೂಚಕಗಳಾಗಿವೆ, ಮ, ಸ, ಧ, ಗ, (ಹಾಡುವ
ನಂತೆ ನಟಿಸುವನು.)
ಶುಕ್ಷ್ಯಚಂದ್ರ.-ಏನು ತಮ್ಮ, ವಿಶೇಷವಾಗಿ ಚಿಂತಾತತ್ಪರನಾಗಿದ್ದೀಯೆ ?
ಕುವಂತ ಈ ಗ್ರಹಣಗಳ ಫಲವನ್ನು ತೋರಿಸುವ ಒಂದು ಕಾಲಜ್ಞಾನವನ್ನು
ನಾನು ಮೊನ್ನೆ ತಾನೆ ಓದಿದೆ ; ಅವನ್ನು ಕುರಿತು ಯೋಚಿಸುತ್ತಿದ್ದೇನೆ, ಅಣ್ಣಯ್ಯ.
ಶುಕ್ಲಚಂದ್ರ -- ಅದನ್ನೆಲ್ಲಾ ಮನಸ್ಸಿಗೆ ಹತ್ತಿಸಿ ಕೊಳ್ಳುತ್ತೀಯ ?
ಕುಮಂತ್ರ.-- ಅದರಲ್ಲಿ ಬರೆದಿರುವುದೆಲ್ಲಾ ನಮ್ಮ ದೌರ್ಭಾಗ್ಯವಶಾತು ಜರಗುವು
ದೇನೋ ಖಂಡಿತ ; ತಂದೆ ಮಕ್ಕಳಿಗೆ ವಿರೋಧ, ಮರಣ, ದುರ್ಭಿಕ, ಪೂರ್ವ
ಸ್ನೇಹಕ್ಕೆ ಭಂಗ ; ದೇಶದಲ್ಲಿ ಒಡಕು, ಧೊರೆಗೂ ಪ್ರಧಾನಿಗಳಿಗೂ ಭಯೋತ್ಪಾತ
----------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ಪಿಲಾಸ. ೧೬
ಗಳು ; ಅಕಾರಣವಾಗಿ ಪರಸ್ಪರ ಅಪನಂಬಿಕೆ, ಮಿತ್ರರಿಗೆ ದೇಶಭ್ರಷ್ಯತ್ವ, ಸೇನಾ
ಜನರ ಪಾನ ಮೊದಲಾದ ದುರಾಚಾರ, ದಂಪತಿಗಳ ವಿಯೋಗ, ಇನ್ನೂ ಏನೇನೋ
ನಾನರಿಯೆ.
ಶುಕ್ಲ.-.ನೀನು ಜ್ಯೋತಿಶಾಸ್ತ್ರ ದಲ್ಲಿ ನಿಸ್ಸಿಮನಾಗಿ ದೈವಜ್ಞ ಚಿಂತಾಮಣಿ ಎಂಬ
ಬಿರುದನ್ನು ಸಂಪಾದಿಸಿ ಎಷ್ಟು ದಿನವಾಯಿತು ?
ಕುಮಂತ್ರ.ಇದು ಹಾಗಿರಲಿ, ಅಪ್ಪಾಜಿಯನ್ನು ಯಾವಾಗ ಕಂಡಿದ್ದೆ ?
ಶುಕ್ಲ-ಯಾಕೆ, ಕಳೆದ ರಾತ್ರೆ.
ಕುಮಂತ್ರ ನೀನು ಅವರೊಡನೆ ಮಾತನಾಡಿದೆಯೋ ?
ಶುಕ್ಲ-ಒಟ್ಟಿಗೆ ಎರಡು ಘಂಟೇ ಹೊತ್ತು.
ಕುಮಂತ್ರ -..ನೀನು ಹೊರಟು ಬರುವಾಗ ಮಿತ್ರಭಾವದಲ್ಲಿಯೇ ಬಂದೆಯಷ್ಟೆ ?
ಮಾತಿನಲ್ಲಿಯಾಗಲಿ ಮುಖರಸದಲ್ಲಿಯಾಗಲಿ ಅವರ ಮನಸ್ಸಿಗೆ ಅಸಮಾಧಾನ ಉಂಟಾಗಿದೆ
ಎಂದು ಏನಾದರೂ ತೋರಿಬಂತೆ ?
ಶುಕ್ಲ-ಅದೇನೂ ಇಲ್ಲ,
ಕುಮಂತ್ರ --ಯಾವ ಭಾಗದಲ್ಲಿಯಾದಾರೂ ಅವರಿಗೆ ಕೋಪೋದ್ರೇಕವನ್ನು ಉಂಟು
ಮಾಡಿದ್ದೀಯೋ ? ಯೋಚಿಸು ; ಅವರಿಗೆ ಉಂಟಾಗಿರುವ ಅಸಮಾಧಾನ ಶಿಖಿಯು
ಸ್ವಲ್ಪ ಶಮನವಾಗುವ ತನಕ ಕೆಲವು ದಿವಸ ನೀನು ಅವರನ್ನು ಕಾಣಬೇಡ,
ನಾನು ಬೇಡಿಕೊಳ್ಳುತ್ತೇನೆ. ತತ್ಕಾಲದಲ್ಲಿ ಅವರ ಆಗ್ರಹವು ವಿಪರೀತವಾಗಿದೆ.
ನೀನು ಅವರಿಗೆ ಮುಖವನ್ನು ತೋರಿಸಿದರೆ ಅದರಿಂದ ಉಂಟಾಗುವ ಕೇಡು
ಆ ಆಗ್ರಹವನ್ನು ಎಂದಿಗೂ ಅಡಗಿಸಲಾರರು.
ಶುಕ್ಲ.-ಯಾವನೊ ನೀಚ ಹೀಗೆ ವಿರೋಧವನ್ನು ತಂದಿಟ್ಟಿದಾನೆ.
ಕುಮಂತ್ರ.- ನನಗೂ ಹಾಗೆಯೇ.ತೋರುವುದು. ಆತನ ಕೋಪ ಕಡಮೆಯಾಗುವ
ತನಕ ನೀನು ತಾಳ್ಮೆಯನ್ನು ತಂದುಕೊ ; ನಾನು ಹೇಳುವಹಾಗೆ ನನ್ನೊಡನೆ
ನಮ್ಮ ಮನೆಗೆ ಬಾ, ಅಪ್ಪಾಜಿಯು ಆಡುವ ಮಾತನ್ನೆಲ್ಲಾ ನೀನು ಚೆನ್ನಾಗಿ
ಕೇಳುವ ಹಾಗೆ ಸಂದರ್ಭವನ್ನು ಒದಗಿಸಿ ಕೊಡುವೆನು ; ದಯವಿಟ್ಟು ಹೋಗು,
ಇಗೋ, ನನ್ನ ಬಾಗಿಲ ಬೀಗದ ಕೈಯನ್ನು ಹಿಡಿ ; ನೀನು ಹೊರಕ್ಕೆ ಹೋದರೆ
ಆಯುಧಪಾಣಿಯಾಗಿ ಹೋಗು.
ಶುಕ್ಲ-ಆಯುಧಪಾಣಿಯಾಗಿಯೇ ?
ಕುಮ೦ತ್ರ.-ಅಣ್ಣಯ್ಯ ನಿನ್ನ ಕ್ಷೇಮಕ್ಕೊಸ್ಕರ ನಾನು ಹೇಳುತ್ತೇನೆ ; ಆಯುಧ
ಸಹಿತನಾಗಿ ಹೊರಡು ; ನಿನ್ನ ವಿಷಯದಲ್ಲಿ ಒಳ್ಳೆ ಅಭಿಪ್ರಾಯವೇನಾದರೂ
-------------------------------------------
೧೮ ಹೇಮಚಂದ್ರರಾಜ ವಿಲಾಸ, [೧ನೇ ಅಂಕ
ಇದ್ದರೆ, ನಾನು ಪ್ರಾಮಾಣಿಕನೆಂದು ಇನ್ನು ಮೇಲೆ ನೀನು ನಂಬಬೇಡ. ನಾನು
ಕಂಡು ಕೇಳಿದ್ದನ್ನು ಹೇಳಿದೇನೆ ; ಸೂಕ್ಷ್ಮವಾಗಿ ನೋಡುವಲ್ಲಿ ಅದರಿಂದ ಉಂಟಾಗ
ತಕ್ಕ ಭಯವೂ ಅದರ ಪರಮಿತಿಯ ಅಸದೃಶವಾಗಿದೆ ; ಹೋಗು.
ಶುಕ್ಲ -ನೀನು ಕೂಡಲೆ ವರ್ತಮಾನವನ್ನು ಕೊಡುತ್ತೀಯೊ ? (ಎಂದು ಹೊ
ಗುವನು.)
ಕುಮಂತ್ರ.--ಇದರಲ್ಲಿ ನಿನಗೆ ತಕ್ಕ ಕೆಲಸವನ್ನು ಕೊಡುತ್ತೇನೆ. ತಂದೆಯೇ ಹೇಳಿ
ದ್ದನ್ನೆಲ್ಲಾ ನಂಬತಕ್ಕವನು ; ಅಣ್ಣನೋ ಮಹಾನುಭಾವ, ಯಾರಲ್ಲಿಯೂ ಅವನಿಗೆ
ಅಪನಂಬಿಕೆ ಇಲ್ಲ ; ಅವನ ಸುಗುಣಕ್ಕೂ ಪರಪೀಡನಕ್ಕೂ ಅಷ್ಟೊಂದು ದೂರ ;
ವಿವೇಕವಿಲ್ಲದ ಅವನ ಪ್ರಾಮಾಣಿಕತೆಯು ನನಗೆ ಸ್ವಾಧೀನವಾಗಿ ನನ್ನ ಕಾರ್ಯ
ವನ್ನು ಸುಲಭವಾಗಿ ಜರಗಿಸುವುದು. ನನ್ನ ಕೆಲಸ ಕೈಗೂಡುವ ಮಾರ್ಗ ನನಗೆ
ತಿಳಿಯಿತು. ಔರಸತ್ವದಿಂದಿಲ್ಲದಿದ್ದಾಗೂ ಬುದ್ಧಿಯಿಂದಲಾದರೂ ಭಾಗ್ಯವನ್ನು
ಹೊಂದಬೇಕು. ನಾನು ಹೊಂದಿಸಿ ಮಾಡತಕ್ಕೆ ಕಾರ್ಯವೆಲ್ಲಾ ನನಗೆ ಸರಿಯಾಗಿಯೇ
ಇರುವುದು. (ನಿಷ್ಕ್ರಾಂ ತ.)
೩ನೇ ಪ್ರಕರಣ-ಭದ್ರನಾಥನ ಅರಮನೆ.
ಪ್ರವೇಶ.-ನಾಗವೇಣಿ, ಅವಳ ಮನೆವಾರ್ತೆ ರಾಹುಕ,
ನಾಗವೇಣಿ. ನಮ್ಮ ಮನುಷ್ಯನು ವಿದೂಷಕನನ್ನು ಅಟ್ಟಿಕೊಂಡದ್ದಕ್ಕೋಸ್ಕರ
ನಮ್ಮ ತಂದೆ ಅವನನ್ನು ಹೊಡೆದನೋ ?
ರಾಹುಕ--,ಹವುದು ತಾಯಿ.
ನಾಗವೇಣಿ.. ಹಗಲೂ ರಾತ್ರೆಯೂ ಇವನ ಬಾಧೆ ಇದ್ದೇ ಇದೆ ; ಪ್ರತಿಕ್ಷಣದಲ್ಲಿಯೂ
ಯಾವದಾದರೂ ಒಂದು ತಪ್ಪು ಇವನಿಗೆ ಹೊಳೆಯುತ್ತಲೇ ಇರುವುದು. ಅದರಿಂದ
ನಮಗೆ ವ್ಯಾಕುಲ ತಪುವುದೇ ಇಲ್ಲ. ನಾನು ಇದನ್ನು ಸಹಿಸಲಾರೆ : ಅವನ
ಸಾಮಾಜಿಕ ದೊಂಬಿಮಾಡುವರು. ಅವನೋ ಸ್ವಲ್ಪ ವಿಷಯಕ್ಕೆಲ್ಲಾ
ನಮ್ಮನ್ನು ಅಟ್ಟಿಕೊಳ್ಳುವನು. ಅವ ಬೇಟೆಯಾಡಿಕೊಂಡು ಬಂದಮೇಲೆ ನಾನು
ಅವನೊಡನೆ ಮಾತನಾಡುವದಿಲ್ಲ; ನನಗೆ ಶರೀರದಲ್ಲಿ ಸ್ವಸ್ಥವಿಲ್ಲವೆಂದು ಹೇಳು
ನಿನ್ನ ಕೆಲಸದಲ್ಲಿ ಏನಾದರೂ ಲೋಪಬಂದಲ್ಲಿ ನಿನ್ನ ಅಪರಾಧವೇನೂ ಇಲ್ಲ ;
ಅಂಥಾ ಪ್ರಮಾದಕ್ಕೆಲ್ಲಾ ನಾನಿದೇನೆ.
ರಾಹುಕ-ಧೊರೆಯುವರು ಬರುತ್ತಿದಾರೆ ತಾಯಿ ; ಶಬ್ದ ಕೇಳುವುದು,
(ಒಳಗೆ ಕಹಳಾಶಬ್ದ.)
---------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೯
ನಾಗವೇಣಿ- ಆಯಾಸದಿಂದ ಆಲಕ್ಷ್ಮವಾಗಿರುವವನಂತೆ ನಿನ್ನ ಮನಸ್ಸಿಗೆ ಬಂದಹಾ
ಗಿರು ; ನೀನೂ ನಿನ್ನ ಕೈ ಕೆಳಗಿನವರೂ ಸಹ ; ಇದೊಂದು ವ್ಯಾಜವಾಗಲಿ. ಇದು
ಅವನಿಗೆ ಇಷ್ಮವಿಲ್ಲದಿದ್ದರೆ ನನ್ನ ತಂಗಿಯ ಮನೆಗೆ ಹೋಗಲಿ ; ಈ ವಿಷಯದಲ್ಲಿ
ನಮ್ಮಿಬ್ಬರ ಮನಸೂ ಏಕವಾಗಿದೆ, ಯಾರು ಹೇಳಿದರೂ ಕೇಳುವ ಹಾಗಿಲ್ಲ.
ವಿವೇಕಶೂನ್ಯನಾದ ಮುದುಕ, ತಾನು ಕೊಟ್ಟುಬಿಟ್ಟ ಅಧಿಕಾರವನ್ನು ಪುನಃ ನಡಿ
ಸಬೇಕೆಂದಿದಾನೆ. ಸತ್ಯವಾಗಿಯೂ ಈ ಮುದಿಗೂಬೆಗಳಿಗೆ ಎರಡನೇ ಬಾಲ್ಯ :
ಇವರು ಅವಿವೇಕವನ್ನು ಆಚರಿಸಿದಾಗ ಸ್ತೋತ್ರವನ್ನು ಮಾಡದೆ ಶಿಕ್ಷೆಯನ್ನೇ
ಮಾಡಬೇಕು, ನಾನು ಹೇಳಿದಮಾತು ಜ್ಞಾಪಕವಿರಲಿ.
ರಾಹುಕ.-ಅಪ್ಪಣೇ ಪ್ರಕಾರ, ತಾಯಿ.
ನಾಗವೇಣಿ- ಅವನ ಸಾಮಾಜಿಕರ ವಿಷಯದಲ್ಲಿ ನೀನು ತಟಸ್ಥನಾಗಿರು ; ಅದರಿಂದ
ಏನು ಬಂದಾಗ ಸರಿಯೆ, ನಿನ್ನ ಜೊತೆಯವರಿಗೂ ಈ ಮಾತನ್ನು ಹೇಳು :
ಇದರಿಂದ ಒಂದು ಸಂದರ್ಭ ಧೊರೆತು ನಾನು ಮಾತನಾಡುವ ಹಾಗಾಗಲಿ, ನನ್ನ
ಹಾಗೆಯೇ ನಡಿಸುವಂತೆ ನನ್ನ ತಂಗಿಗೆ ಕಾಗದವನ್ನು ಬರೆಯುತ್ತೇನೆ. ಭೋಜ
ನಕ್ಕೆ ಸಿದ್ಧವಾಗಲಿ. (ಎಲ್ಲರೂ ನಿಷ್ಕ್ರಾಂತ)
೪ನೇ ಪ್ರಕರಣ -ಭದ್ರನಾಥನ ಅರಮನೆ.
ಪ್ರವೇಶ.-ನಿಷ್ಕಂಟಕ (ವೇಶವನ್ನು ಹಾಕಿಕೊಂಡು.)
ನಿಷ್ಕಂಟಕ. ನನ್ನ ಭಾಷೆಯನ್ನು ಆತ್ಮಾದಿಸಿಕೊಂಡು, ವೇಪಕ್ಕೆ ತಕ್ಕ ಭಾಷೆಯ
ನ್ನೇ ನಾನು ಸ್ವೀಕರಿಸಿದಲ್ಲಿ, ಯಾತಕ್ಕೋಸ್ಕರ ನಾನು ವಿರೂಪವನ್ನು ಮಾಡಿಕೊಂ
ಡೆನೋ ಅಂಥಾ ಕಾರ್ಯವು ಕೈಗೂಡಬಹುದು. ದೇಶಭ್ರಷ್ಟನಾದ ನಿಷ್ಕಂಟಕ,
ಎಲ್ಲಿಂದ ನಿನಗೆ ದಂಡನೆ ಪ್ರಾಪ್ತವಾಯಿತೋ ಅಂಥಾ ಸನ್ನಿಧಿಯಲ್ಲಿಯೇ ನೀನು
ಸೇವಾವೃತ್ತಿಯನ್ನು ಮಾಡುತ್ತಿದ್ದರೆ, ವಿಶೇಷವಾಗಿ ಸ್ವಾಮಿಭಕ್ತಿಯುಳ್ಳ ನೀನು
ಯಜಮಾನನ ಶುಶೂಷೆ ಮಾಡುವದರಲ್ಲಿ ಎಷ್ಟು ಶ್ರಮವನ್ನಾದರೂ ಪಟ್ಟೀಯೆ.
(ಒಳಗೆ ಕಹಳೆಯಧ್ವನಿ.)
ಪ್ರವೇಶ .ಧೊರೆ, ಸಾಮಾಜಿಕರು, ಪರಿವಾರ.
ಧೊರೆ.--ಭೋಜನಕ್ಕೆ ಸ್ವಲ್ಪವೂ ಸಾವಕಾಶವಾಗಕೂಡದು ; ನಡೆ ಸಿದ್ಧ ಮಾಡು
(ಸೇವಕ ಹೋಗುವನು), ಮತ್ತೇನು ? ನೀನು ಯಾರು ?
ನಿಷ್ಕಂಟಕ- ಮನುಷ್ಯ, ಸ್ವಾಮಿ.
------------------------------------------
೨೦ ಹೇಮಚಂದ್ರರಾಜ ವಿಲಾಸ [೧ನೇ ಅಂಕ
ಧೊರೆ.- ನಿನಗೆ ಏನು ಬರುವುದು ? ನಮ್ಮಿಂದ ಏನಾಗಬೇಕು ?
ನಿಷ್ಕಂಟಕ. ನನಗೇನು ಬರಬಹುದೆಂದು ಕಾಣುವದೋ ಅದೇ ನನಗೆ ಬರುವುದು :
ನನ್ನನ್ನೇ ನಂಬಿದವರ ಸೇವೆಯನ್ನು ಚೆನ್ನಾಗಿ ಮಾಡುವುದು, ಪ್ರಾಮಾಣಿಕನಾ
ದವನಲ್ಲಿ ಪ್ರೀತಿಯನ್ನು ಇಟ್ಟುಕೊಂಡಿರುವುದು, ಮಿತಭಾಷಿಯಾಗಿಯೂ ವಿವೇಕಿ
ಯಾಗಿಯೂ ಇರುವನೊಡನೆ ಸಂಭಾಷಣೆ ಮಾಡುವುದು, ಶಿಕ್ಷೆಗೆ ಹೆದರುವುದು,
ಅನಿವಾಹವಾದರೆ ಕದನವಾಡುವುದು, ಅಭಕ್ಷ್ಯಭೋಜನವನ್ನು ಮಾಡದೇ ಇರು
ವುದು : ಇದನ್ನೆಲ್ಲಾ ನಾನುಬಲ್ಲೆ.
ಧೊರೆ..ನೀನು ಯಾರು ?
ನಿಷ್ಕಂಟಕ ನಾನು ಬಹಳ ಸತ್ಯವಂತ, ಧೊರೆಯಹಾಗೆಯೇ ಬಡವ.
ಧೊರೆ.- ಧೊರೆತನಕ್ಕೆ ಅವನ ಸ್ಥಿತಿ ಹ್ಯಾಗೆ ಬಡತನವೋ ಹಾಗೆ ಪ್ರಜೆಯಾದ ನಿನಗೆ
ನಿನ್ನ ಸ್ಥಿತಿ ಬಡತನವಾಗಿದ್ದಲ್ಲಿ, ನೀನು ಬಡವನೇ ಸರಿ. ನಿನಗೇನು ಬೇಕು ?
ನಿಷ್ಕಂಟಕ ಸೇವಾವೃತ್ತಿ.
ಧೊರೆ.-ಯಾರ ಸೇವೆಯನ್ನು ಮಾಡುತ್ತೀಯೆ ?
ನಿಷ್ಕಂಟಕ-ತಮ್ಮದು.
ಧೊರೆ -ನೀನು ನನ್ನನ್ನು ಬಲ್ಲೆಯ ?
ನಿಷ್ಕಂಟಕ. ಇಲ್ಲ ಸ್ವಾಮಿ ; ಆದರೆ ತಮ್ಮ ಮುಖದಲ್ಲಿ ಏನೋ ಒಂದು ಕಳೆ ಇದೆ,
ಅದರಿಂದ ತಮ್ಮನ್ನು ಯಜಮಾನರೆಂದು ಕರೆದು ಬಲ್ಲೆ.
ಧೊರೆ ಅದು ಯಾವ ಕಳೆ ?
ನಿಷ್ಕಂಟಕ.ಅಧಿಕಾರ.
ಧೊರೆ-ನೀನು ಯಾವ ಕೆಲಸವನ್ನು ಮಾಡಬಲ್ಲೆ ?
ನಿಷ್ಕಂ.-ಒಳ್ಳೇ ರಹಸ್ಯವನ್ನು ನನ್ನಲ್ಲಿಯೇ ಏಕಾಂತವಾಗಿಡಬಲ್ಲೆ : ಕುದುರೆಯ
ಮೇಲೆ ಸವಾರಿ ಮಾಡಬಲ್ಲೆ ; ಓಡಬಲ್ಲೆ ; ವಿಚಿತ್ರವಾದ ಕಥೆಯನ್ನು ಹೇಳುವಾಗ
ಆ ಕಥಾಸಂದರ್ಭವನ್ನು ಕೆಡಿಸಿ ರಸವನ್ನು ಹಾಳು ಮಾಡಬಲ್ಲೆ ; ಸಾಧಾರಣವಾದ
ಸಮಾಚಾರವನ್ನು ಒರಟಾಗಿ ಹೇಳಬಲ್ಲೆ ; ಸಾಧಾರಣ ಜನರು ಯೋಗ್ಯವಾಗಿ
ರುವ ಕೆಲಸಕ್ಕೆ ನಾನು ಯೋಗ್ಯ ; ಸರ್ವದಾ ಕಾರ್ಯನಿರತನಾಗಿರುವುದೇ ನನ್ನಲ್ಲಿ
ಸರ್ವೊತ್ತಮವಾದ ಗುಣವು.
ಧೊರೆ.-ನಿನಗೆ ಎಷ್ಟು ವಯಸ್ಸು ?
ನಿಷ್ಕಂ.-ಗಾನ ಮಾಡಿದಮಾತ್ರಕ್ಕೆ ಒಬ್ಬ ಸ್ತ್ರಿಯಲ್ಲಿ ವ್ಯಾಮೋಹಪಡುವಷ್ಟು
`ಚಿಕ್ಕ ವಯಸ್ಪೂ ಅಲ್ಲ ; ಸ್ತ್ರೀಯೇ ಪರದೈವವೆಂದು ತಿಳಿದು ಅತ್ಯಂತ ಅನುರಾ
---------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೨೧
ಗವನ್ನು ಹತ್ತಿಸಿಕೊಂಡಿರುವಷ್ಟು ಅಧಿಕ ವಯನ್ನೂ ಅಲ್ಲ ; ನಲವತ್ತೆಂಟು ವರ್ಷ
ಹೊತ್ತಿದೇನೆ.
ಧೊರೆ.-ನನ್ನೊಡನೆ ಬಾ, ನನ್ನ ಸೇವಕನಾಗಿರು, ಭೋಜನವಾದ ಮೇಲೆ ನಿನ್ನಲ್ಲಿ
ನನಗೆ ಪ್ರೀತಿ ಹೀಗೆಯೇ ಇದ್ದರೆ ನೀನು ನನ್ನ ಬಿಟ್ಟು ಕದಲಕೂಡದು. ಎಡೆ
ಮಾಡಿ, ಎಡೆಮಾಡಿ ನಮ್ಮ ಹುಡುಗ ಎಲ್ಲಿ ? ವಿದೂಷಕ ಎಲ್ಲಿ ? ಹೋಗು
ವಿದೂಷಕನನ್ನು ಕರೆದುಕೊಂಡುಬಾ (ಸೇವಕ ಹೋಗುವನು.)
ಪ್ರವೇಶ.-ರಾಹುಕ.
ನೀನು, ನೀನು, ಎಲ್ಲಾ ನಮ್ಮ ಮಗಳು ?
ರಾಹುಕ.ಅಪ್ಪಣೇಪ್ರಕಾರ ಮಹಾಸ್ವಾಮಿ. (ನಿಷ್ಕ್ರಾಂತ.)
ಧೊರೆ -ಅವ ಏನೆನ್ನುತ್ತಾನೆ ? ಆ ಶುಂಠನನ್ನು ಕರೆ (ಒಬ್ಬ ಸಾಮಾಜಿಕ ಹೋಗು
ವನು) ಹೋ, ವಿದೂಷಕ ಎಲ್ಲಿ ? ಏನೋ ಲೋಕವೆಲ್ಲಾ ನಿದ್ರೆಮಾಡುವಹಾಗಿದೆ.
ಪುನಃ ಪ್ರವೇಶ. ಸಾಮಾಜಿಕ.
ಏನು ? ಆಸಂಕರಜ ಎಲ್ಲಿ ?
ಸಾಮಾಜಿಕ... ಮಹಾಸ್ವಾಮಿ, ತಮ್ಮ ಪ್ರತಿಗೆ ದೇಹದಲ್ಲಿ ಸ್ಪಸ್ಟವಿಲ್ಲವೆಂದು ಹೇಳು
ತ್ತಾನೆ.
ಧೊರೆ.-ನಾನು ಕರೆದಾಗ ಆ ಗುಲಾಮ ಯಾಕೆ ಹಿಂತಿರುಗಿ ಬರಲಿಲ್ಲ ?
ಸಾಮಾ.-ಸ್ವಾಮಿ, ತಾನು ಬರುವುದಿಲ್ಲವೆಂದು ಉದ್ದುರಟುತನದಿಂದ ಹೇಳಿದ.
ಧೋರೆ.-ಅವ ಬರುವದಿಲ್ಲ !
ಸಾಮಾ.-ಮಹಾಸ್ವಾಮಿ, ತಮ್ಮ ಪಾದಸೇವೆಯು ಎಂದಿನಂತೆ ಪ್ರೇಮಪುರಸ್ಸರವಾದ
ಮರಾದೆಯಿಂದ ನಡೆಯುವುದಿಲ್ಲವೆಂದು ನನಗೆ ತೋರುವುದು ; ಇದಕ್ಕೆ ಕಾರಣ
ವೇನೋ ಅರಿಯೆ ; ತಮ್ಮ ಆಳಿಯಂದಿರು, ತಮ್ಮ ಪ್ರತಿ, ಇವರುಗಳಿಗೆ ಹ್ಯಾಗೋ
ಹಾಗೆಯೇ ಅವರ ಪೊಷ್ಯವರ್ಗದ ಜನಗಳಿಗೂ ತಮ್ಮಡಿಗಳನ್ನು ಕಂಡರೆ
ತಾತ್ಸಾರ ಹೆಚ್ಚಾಯಿತು.
ಧೊರೆ - ಹಾ ! ನೀನು ಹಾಗೆ ಹೇಳುತ್ತೀಯಾ ?
ಸಾಮಾ.ಸ್ವಾಮಿ ನನ್ನಲ್ಲಿ ಅಪರಾಧವಿದ್ದರೆ ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇನೆ ;
ಸ್ವಾಮಿಯ ಪಾದಕ್ಕೆ ಅಪಚಾರ ಉಂಟಾಗಿರುವಾಗ್ಗೆ ನಾನು ಸುಮ್ಮನಿರುವುದು
ಧರ್ಮವಲ್ಲ,.
------------------------------------------
೨೨ ಹೇಮಚಂದ್ರರಾಜ ವಿಲಾಸ, [ನೇ ಅಂಕ
ಧೊರೆ.- ನನ್ನ ಮನಸ್ಸಿನಲ್ಲಿದ್ದ ಸಂಗತಿಯನ್ನೇ ನೀನೂ ಹೇಳಿದೆ ; ನನ್ನನ್ನು ಕಂಡರೆ
ಈಚೆಗೆ ಆಲಕ್ಷ ಹೆಚ್ಚಾಯಿತು ; ಇದು ಮನಃಪೂರ್ತಿಯಾದ ಅನಾದರವಾಗಿರ
ಲಾರದು, ವಿಶೇಷವಾದ ಮರ್ಯಾದೆ ನನಗಾಗಲಿಲ್ಲವೆಂಬ ನನ್ನ ಸಂಶಯ ಪ್ರಕೃತಿಯ
ದೋಷವೋ ಎಂದು ತಿಳಿದಿದ್ದೆ ; ಇನ್ನೂ ನೋಡೋಣ. ವಿದೂಷಕ ಎಲ್ಲಿ ? ಎರಡು
ದಿವಸದಿಂದಲೂ ಕಾಣೆ.
ಸಾಮಾ--ಸ್ವಾಮಿ, ರಾಜಪುತ್ರಿಯು ಮಾರದೇಶಕ್ಕೆ ಹೊರಟು ಹೋದಾರಭ್ಯ ವಿದೂ
ಷಕ ಬಹಳ ಕೊರಗಿ ಹೋದನು.
ಧೊರೆ.-ಅದು ಸಾಕು, ನಾನು ಚೆನ್ನಾಗಿ ಎಲ್ಲೆ, ಹೋಗು, ನಾನು ಅವಳೊಡನೆ
ಮಾತನಾಡಬೇಕೆಂದು ನನ್ನ ಮಗಳಿಗೆ ಹೇಳು.(ಚಾಕರನ ನಿಷ್ಕ್ರಾಂತ.) ನೀನು
ಹೋಗು, ವಿದೂಷಕನನ್ನು ಕರೆ. (ಇನ್ನೊಬ್ಬನ ನಿಷ್ಕ್ರಾಂತ)
ಪುನಃ ಪ್ರವೇಶ.-ರಾಹುಕ
ಓ ನೀವೋ ; ಹೀಗೆ ಬನ್ನಿ ಸ್ವಾಮಿ, ನಾನು ಯಾರು ಸ್ವಾಮಿ ?
ರಾಹುಕ.-ನನ್ನೊಡತಿಯ ತಂದೆ.
ಧೊರೆ.-" ನನ್ನೊ ಡತಿಯ ತಂದೆಯೋ” ನನ್ನೊಡೆಯನ ಗುಲಾಮ ?
ನಾಯಿ ! ಕತ್ತೆ ! ಅಂತ್ಯಜ !
ರಾಹುಕ-ಸ್ವಾಮಿ ಕ್ಷಮಿಸಬೇಕು, ನಾನು ಇದು ಯಾವುದೂ ಅಲ್ಲ.
ಧೊರೆ. ನಾನು ನೋಡಿದಹಾಗೆಯೇ ನೋಡುವುದಕ್ಕೆ ಬರುತ್ತೀಯಾ ತಲೆಹೋಕ ?
(ಅವನ ಕೆನ್ನೆ ಮೇಲೆ ಹೊಡೆಯುತ್ತಾ)
ರಾಹುಕ.- ಹೀಗೆ ಹೊಡೆದರೆ ನಾನು ಸುಮ್ಮನೆ ಕೇಳತಕ್ಕವನಲ್ಲ, ಸ್ವಾಮಿ.
ನಿಷ್ಕಂ ಒದೆಯಲ್ಪಡತಕ್ಕವನೂ ಅಲ್ಲವೋ, ಏನೆಲಾ ನೀಚ, ಚಕ್ಕಳದಾಟ
ದವನೆ ? (ಅವನನ್ನು ಒದೆಯುತ್ತಾ)
ಧೊರೆ.-ಭಾಪುರೇ ! ನೀನು ನಮ್ಮ ಸೇವಕ ಹವುದು : (ನಿಷ್ಕಂಟಕನಿಗೆ).
ನಿಷ್ಕಂ.-ಬನ್ನಿ ಸ್ವಾಮಿ, ಏಳಿ, ಆಚೆಗೆ ನಡೆಯಿರಿ; ನಿಮಗೆ ತಾರತಮ್ಯಜ್ಞಾನವನ್ನು
ಬೋಧಿಸುತ್ತೇನೆ ; ತೊಲಗಿ, ತೊಲಗಿ! ಭೂತನ ಹಾಗೆ ಮತ್ತೆ ಬಿದ್ದು ಕೊಳ್ಳ
ಬೇಕಾಗಿದ್ದರೆ ಸಾವಕಾಶಮಾಡಿ ; ತೊಲಗಿ, ನಿಮಗೆ ಬುದ್ದಿ ಇದೆಯೋ ? ಹಾಗೆ ;
ಹೊರಡಿ (ರಾಹುಕನನ್ನು ನೂಕುತ್ತಾ).
ಧೊರೆ..ಬಾರಯ್ಯಾ, ನಮ್ಮ ಮಿತ್ರನಾದ ತರುಣ ; ನನಗೆ ಬಹಳ ಸಂತೋಷವಾಯಿ
ತು.. ನೀನು ಮಾಡತಕ್ಕ ಸೇವೆಗೆ ಸಂಚಕಾರವನ್ನು ಹಿಡಿ. (ನಿಷ್ಕಂಟಕನಿಗೆ ಹಣವನ್ನು
ಕೊಡುತ್ತ).
----------------------------------------------
೪ನೇ ಪ್ರಕರಣ.] ಹೇಮಚಂದ್ರ ರಾಜ ವಿಲಾಸ, ೨೩
ಪ್ರವೇಶ-ವಿದೂಷಕ.
ವಿದೂಷಕ-ಇವನನ್ನೂ ನಾನು ವಶಮಾಡಿಕೊಳ್ಳಬೇಕು ; ಇಗೋ ನನ್ನ ಕುಲ್ಲಾವಿ.
(ತನ್ನ ಕುಲ್ಲಾವಿಯನ್ನು ಅವನಿಗೆ ಇಡುತ್ತಾ.
ಧೊರೆ - ಎಲತರುಣ, ಹ್ಯಾಗಿದ್ದೀಯೆ ?
ವಿದೂ- ಎಲೋ ನನ್ನ ಕುಲ್ಲಾವಿ ನೀನು ಹಾಕಿಕೊಳ್ಳುವುದು ಉತ್ತಮ.
ನಿಷ್ಕಂ.-ಯಾಕೆ ಜಂಬುಕ ?
ವಿದೂ..ಯಾಕೆ ? ಭಾಗ್ಯಹೀನನ ಪಕ್ಷವನ್ನು ವಹಿಸಿದ್ದಕ್ಕೆ, ಇದು ಅಂತಿರಲಿ, ಗಾಳಿ
ಬಂದಹಾಗೆ ನೀನು ತೂರಿಕೊಳ್ಳದಿದ್ದರೆ, ಜಾಗ್ರತೆಯಾಗಿ ನೀನು ಮುದುರಿಕೊಂಡು
ಬೀಳುವುದು ಖಂಡಿತ ; ಇಗೋ ನನ್ನ ಕುಲ್ಲಾವಿ ಹಿಡಿ ; ಇವನು ತನ್ನ ಇಬ್ಬರು
ಹೆಣ್ಣುಮಕ್ಕಳನ್ನೂ ದೇಶದಿಂದ ಅಟ್ಟಿಬಿಟ್ಟ, ಮೂರನೆಯವಳಿಗೆ ತನ್ನ ಇಷ್ಟಕ್ಕೆ
ವಿರೋಧವಾಗಿ ಮಹದುಪಕೃತಿಯನ್ನು ಮಾಡಿದ ; ನೀನೂ ಅವನಂತೆಯೇ ಮಾಡಿ
ದರೆ, ನನ್ನ ಕುಲ್ಲಾನಿಯನ್ನು ಇಟ್ಟುಕೊಳ್ಳುವದಕ್ಕೆ ಯೋಗ್ಯ, ಏನು ಮಾವ?
ನನಗೆ ಎರಡು ಕುಲ್ಲಾವಿಯ ಇಬ್ಬರು ಹೆಣ್ಣು ಮಕ್ಕಳೂ ಇಷ್ಟರಾಗಿತ್ತು.
ಧೊರೆ. ಯಾತಕ್ಕಯ್ಯಾ ಬಾಲಕ ?
ವಿದೂ.-ನನ್ನ ಸರ್ವಸ್ವವನ್ನೂ ಕೊಟ್ಟುಬಿಟ್ಟರೆ, ಈ ಕುಲ್ಲಾವಿಯೇ ನನಗೆ ಉಳಿ
ಯುವುದು, ನನ್ನ ತಲೆಯಮೇಲಿರುವು ದಂತೂ ಒಂದಾಯಿತಷ್ಟೆ. ನಿನ್ನ ಪುತ್ರಿ
ಯರನ್ನು ಬೇಡಿ ಇಸುಕೊಳ್ಳುವುದು ಇನ್ನೊಂದು. ಅಂತೂ ಎರಡು.
ಧೊರೆ-ಎಲ್ಲಾ, ನೋಡಿಕೋ, ಜಾಗ್ರತೆಯಾಗಿರು; ನನ್ನ ಚಾವಟಿ.
ವಿದೂ.-ನಿಶ್ಚಯವೆಂಬುವದು ಶುದ್ದ ಶ್ವಾನ, ಅದನ್ನು ಹೊಡೆದು ಹಿತ್ತಲಿಗೆ ಓಡಿಸ
ಬೇಕು ; ಅನೃತವೆಂಬ ವಿಲಾಸಿನಿ ಮಾತ್ರ ಮನೇ ಮಧ್ಯದಲ್ಲಿರುವ ಹಸೇಜಗುಲಿ
ಯಮೇಲೆ ಕುಳಿತು ನಾರಬಹುದು !
ಧೊರೆ...ನನಗೇನೋ ಆಪತ್ತು ಬಂತು.
ವಿದೂ. ಎಲಾ, ನಿನಗೆ ಒಂದು ವಾಕ್ಯವನ್ನು ಬೋಧಿಸುತ್ತೇನೆ.
ಧೊರೆ.-ಆಗಲಿ.
ವಿದೂ.--ಹಾಗಾದರೆ ಕೇಳು ಮಾವ.
ಕಂ|| ಹೆಚ್ಚುಗೆಯುಳ್ಕೊಡೆ ಸತತಂ ||
ಮೆಚ್ಚುವವೊಲು ಕಡಮೆಯೆನಿಸಿ ತೋರೆಲೆಯರಸ || ಹುಚ್ಚನರೀತಿಯೊಳಲ್ಲದೆ |
ನಿಚ್ಚಂಮಿತವಾಗಿ ಹೇಳುಕಂಡುದಕಿಂತಂ ||
----------------------------------------
೨೪ ಹೇಮಚಂದ್ರರಾಜ ವಿಲಾಸ [೧ನೇ ಅಂಕ
ಧೊರೆ.-ಇದರಲ್ಲೇನೂ ಇಲ್ಲ, ಜಂಬುಕ.
ವಿದೂ.ಹಾಗಾದರೆ, ಹಣವನ್ನು ತೆಗೆದುಕೊಳ್ಳದೇ ಮಾತನಾಡತಕ್ಕ ವಕೀಲನ ಉಸಿರಿ
ನಂತಾಯತು ; ಅದಕ್ಕಾಗಿ ನೀನು ನನಗೇನನ್ನೂ ಕೊಡಲಿಲ್ಲ. ಹೀಗೆ ಅಭಾವ
ವಾಗಿರುವುದರಿಂದ ನೀನು ಯಾವ ಉಪಯೋಗವನ್ನೂ ಹೊಂದಲಾರೆಯೋ
ಮಾವ ?
ಧೊರೆ.-ಯಾವ ಉಪಯೋಗವೂ ಇಲ್ಲಯ್ಯಾ ವಟುವೇ; ಅಭಾವವಾಗಿರುವುದರಲ್ಲಿ
ಎಲ್ಲಾ ಅಭಾವವೇ,
ವಿದೂ.-- (ವಿಷ್ಕಂಟಕನನ್ನು ಕುರಿತು). ಇವನರಾಜ್ಯದ ಆದಾಯ ಅಷ್ಟಕ್ಕೆ ಬರುವು
ದೆಂದು ಹೇಳು; ವಿದೂಷಕ ಹೇಳಿದ್ದನ್ನು ಅವ ನಂಬುವುದಿಲ್ಲ.
ಧೊರೆ.-ಬಹುಕಞ'ಯಾದ ಕೋಡಂಗಿ.
ವಿದೂ.-.ಸಿಞ'ಯಾದ ಕೋಡಂಗಿಗೂ ಕಞಯಾದ ಕೋಡಂಗಿಗೂ ಏನು ವ್ಯತ್ಯಾ
ಸ, ನೀನು ಎಲ್ಲೆ ಯಾ, ಮಗು ?
ಧೊರೆ.-ಇಲ್ಲ ನೀನು ಹೇಳಿಕೊಡಯ್ಯ.
ವಿದೂ.-ಕಂ|| ನಿನ್ನಯ ನೆಲವನು ಕೊಡುವುದು ||
ತನ್ನಯ ಮತವೆಂದು ಪೇಳ್ವ ಸಾಮಾಜಿಕನಂ ||
ಎನ್ನಯಕೆಲದಲ್ಲಿರಿಸಲು |
ನನ್ನಯ ಬಿನ್ನ ಪಪ ಕೇಳು ಧರಣೀಪತಿಯೇ ||
ಅವನ ಸ್ಥಾನದಲ್ಲಿ ನೀನು ನಿಂತುಕೊಂಡರೆ, ಕುವ ಕ್ರಮನಾಗಿ ಸಿಞ'ಯಾದ
ಕೋಡಂಗಿ ನನ್ನೆದುರಿಗೂ ಕಞ'ಯಾದ ಕೋಡಂಗಿ ನನ್ನ ಪಕ್ಕದಲ್ಲೂ ಕಾಣುವರು.
ಧೊರೆ. ನನ್ನನ್ನು ಕೋಡಂಗಿ ಎನ್ನುತ್ತೀಯಾ ?
ವಿದೂ.ನಿನ್ನ ಇತರ ಬಿರುದುಗಳನ್ನೆಲ್ಲಾ ಇತರರಿಗೆ ಕೊಟ್ಟುಬಿಟ್ಟೆ, ಇದುಮಾತ್ರ
ನಿನ್ನ ಸಂಗಡಲೇ ಹುಟ್ಟಿದ್ದು.
ನಿಷ್ಕಂ.-ಇವ ಅಷ್ಟೊಂದು ಕೋಡಂಗಿ ಅಲ್ಲ ಪ್ರಭುವೆ.
ವಿದೂ-ಖಂಡಿತವಾಗಿಯೂ ಅಲ್ಲ; ಮಂತ್ರಿಗಳೂ ಪ್ರಧಾನಿಗಳೂ ನನಗೆ ಅದನ್ನು
ಬಿಡರು. ನನ್ನ ಹೆಸರಿನಮೇಲೆ ಅದನ್ನು ನಾನು ಒಟ್ಟು ಗುತ್ತಿಗೆಗಾಗಿ ಪಡೆದು
ಕೊಂಡರೆ, ಅದರಲ್ಲಿ ತಮ್ಮದೂ ಒಂದು ಪಾಲೆಂದು ಬರುವರು. ರಾಜಸ್ತ್ರೀಯರೂ
ಕೂಡ ಕೋಡಂಗಿತನದ ಅವಿವೇಕವನ್ನು ನನಗೆ ಕೊಡರು ; ನನ್ನ ಕೈಯಿಂದ
ಕಿತ್ತುಕೊಳ್ಳುತ್ತಾರೆ. ಮಾವ, ನನಗೊಂದು ಕೋಳಿ ಮೊಟ್ಟೆಯನ್ನು ಕೊಡು.
ನಿನಗೆರಡು ಕಿರೀಟವನ್ನು ಕೊಡುತ್ತೇನೆ.
-------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ
ಧೊರೆ.- ಅವು ಎಂಥಾ ಕಿರೀಟಗಳು ?
ವಿದೂ ಯಾಕೆ, ಆ ಮೊಟ್ಟೆಯನ್ನು ಮಧ್ಯಕ್ಕೆ ಕುಯಿದು ಲೋಳಿಯನ್ನು ಆಚೆಗೆ
ಸುರಿದಮೇಲೆ ಉಳಿಯುವ ಎರಡು ಕಿರೀಟಗಳು, ನಿನ್ನ ಕಿರೀಟವನ್ನು ಸರಿಯಾಗಿ
ಎರಡು ಹೋಳುಮಾಡಿ ಆ ಹೋಳುಗಳನ್ನು ಇತರರಿಗೆ ಕೊಟ್ಟುಬಿಟ್ಟದ್ದು ತಂದೆ
ಮಕ್ಕಳಿಬ್ಬರೂ ಕುದುರೆಯನ್ನು ತಮ್ಮ ತಲೆಯಮೇಲೆ ಹೊತ್ತುಕೊಂಡ ಕೊ
ಚ್ಚೆಯಲ್ಲಿ ನಡೆದ ಸಾಮತಿಗೆ ಸರಿಯಾಯಿತು, ರತ್ನ ಖಚಿತವಾದ ಕಿರೀಟವನ್ನು
ಕೊಟ್ಟು ಬಿಟ್ಟು ಮುಖಮಲ್ಲಿನ ಕಿರೀಟವನ್ನು ಹಾಕಿಕೊಂಡೆ. ಏ.ದೂಷಕನಾದ
ನಾನು ವಿದೂಷಕನ ಹಾಗೆಯು ಈಗ ಮಾತನಾಡಿದಪಕ್ಷದಲ್ಲಿ, ಈ ನನ್ನ ಮಾತನ್ನು
ವಿದೂಷಕನ ಮಾತೆಂದು ಮೊದಲು ಅರ್ಥ ಮಾಡಿದವನ ಬೆನ್ನಿನಮೇಲೆ ಮೊದಲು
ಛಡಿಯಾಡಲಿ.
ಕಂ || ವುರವಾದದು ಬುದ್ಧಿಮತಾಂ |
ನೆರಶಿಳಿದಿಹ ಬುಧರಿಗುಂ ರಾಜೀವಕ್ಕುಂ ||
ಉರುತರ ಜಲಧರ ಶಕಲದೆ |
ಮರೆಯಾಗನಕಮಲಪ್ರಭಾಸರಗಾತ್ರಂ ||
ಧೊರೆ-- ಇಷ್ಟೊಂದು ಪದ್ಯಗಳನ್ನು ಹೇಳುವ ಅಭ್ಯಾಸ ನಿನಗೆ ಯಾವಾಗನಿಂದಲೋ
ಜಂಬುಕ ?
ವಿದೂ. ನಿನ್ನ ಹೆಣ್ಣು ಮಕ್ಕಳನ್ನು ನಿನ್ನ ತಾಯಿಗಳನ್ನಾಗಿ ಮಾಡಿಕೊಂಡಾಗಿನಿಂದ
ಕನೊ, ಮಾವ ; ಯಾಕೆಂದರೆ ನಿನ್ನ ಕೈಲಿದ್ದ ಬೆತ್ತವನ್ನು ಅವರ ಕೈಗೆ ಕೊಟ್ಟು
ನೀನು ತೊಟ್ಟಿದ್ದ ಅಂಗಿಯನ್ನು ಬಿಚ್ಚಿ ಬೆನ್ನನ್ನು ಅವರಿಗೆ ಬಡ್ಡಿದಕೂಡಲೆ,
ಅತ್ಯರವರಾವುದಕೆ ವ್ಯಥೆಗೆನಾಸಾದೆ |
ಇಂತಪ್ಪ ಧೊರೆಯು ಇತಾಪೋಲಲು |
ಸಂತೆಕೋಡಗವ, ಸರ್ವಜ್ಞ ||
ನಿನ್ನ ವಿದೂಷಕನಿಗೆ ಸುಳ್ಳ ಹೇಳುವುದನ್ನು ಕಲಿಸುವುದಕ್ಕೋಸ್ಕರ ಒಬ್ಬ ಉಪಾ
ಧ್ಯಾಯನನ್ನು ಇರಿಸು, ಮಾವ ; ಸುಳ್ಳ ಹೇಳುವುದನ್ನು ಕಲಿಯುವುದು
ನನಗೆ ಇಷ್ಮ,
ಧೊರೆ.-- ಎಲಾ, ನೀನು ಸುಳ್ಳ ಹೇಳಿದರೆ ಕಸೆಗಳಿಂದ ಕೂಡಿಸಿಯೇನು.
ವಿದೂ.ನಿನಗೂ ನಿನ್ನ ಕಣ್ಣ ಮಕ್ಕಳಿಗೂ ಏನು ಸಂಬಂಧವಿದ್ದೀತೋ ಎಂದು ನನಗೆ
ಆಶ್ಚರ್ಯವಾಗಿದೆ ; ನಿಶ್ಚಯವನ್ನು ಹೇಳಿದರೆ ಅವರು ಹೊಡಿಸುತ್ತಾರೆ ; ಸುಳ್ಳನ್ನು
ಹೇಳಿದರೆ ನೀನು ಕೊಡಿಸುತ್ತೀಯೆ ; ನಾನು ಸುಮ್ಮನೇ ಕೂತಿದ್ದರೂ ಒಂದೊಂ
ದು ಕಾಲದಲ್ಲಿ ನನ್ನನ್ನು ಹೊಡೆಯುತ್ತಾರೆ. ವಿದೂಷಕನಾಗಿರುವುದಕ್ಕಿಂತಲೂ
-----------------------------------------------------
26 ಹೇಮಚಂದ್ರರಾಜ ವಿಲಾಸ, [೧ನೇ ಅಂಕ
ಮತ್ತೇನಾದರೂ ಆಗಿ ಇದ್ದನು. ಆದರೆ ನಾನು ನೀನಾಗ ಒಲ್ಲೆ, ಮಾವ, ನಿನ್ನ
ವಿವೇಕದ ತುಂಡನ್ನು ಎರಡುಕಡೆಯಲ್ಲಿಯೂ ಹೆರೆದು ಹಾಕಿಬಿಟ್ಟೆ ; ಮಧ್ಯೆ ಏನೂ
ಉಳಿಯಲೇ ಇಲ್ಲ. ಇಗೊ ಒಂದುಕಡೇ ಹೆರೆತಬಂತು.
ಪ್ರವೇಶ.-ನಾಗವೇಣಿ.
ಧೊರೆ..ಏನಮ್ಮ ಪುತ್ರಿ ? ಯಾಕೆ ಹುಬ್ಬನ್ನು ಗಂಟಹಾಕಿಕೊಂಡು ಇದ್ದೀಯೆ ?
ಈಚೆಗೆ ಇಂಥಾ ದುಗುಡ ನಿನಗೆ ಹೆಚ್ಚಾಯಿತೆಂದು ತೋರುತ್ತಿದೆ. ಕಾರಣವೇನು ?
ವಿದೂ..ಆಕೆಯ ಆಗ್ರಹವನ್ನು ಲಕ್ಷ ಮಾಡತಕ್ಕೆ ಅಗತ್ಯ ನಿನಗಿಲ್ಲದೇ ಇರುವತನಕ
ನೀನು ಯೋಗ್ಯನಾಗಿಯೇ ಇದ್ದೆ ; ಈಗ ಅಂಕಿ ಇಲ್ಲದ ಸೊನ್ನೆ ಯಾಗಿದ್ದೀಯೆ ;
ಈಗ ನಿನಗಿಂತಲೂ ನಾನೇ ವಾಸಿ. ನಾನು ಕೋಡಂಗಿಯಾಗಿಯಾದರೂ ಇದೇನೆ ;
ನೀನು ಏನೂ ಅಲ್ಲ. (ನಾಗವೇಣಿಯನ್ನು ಕುರಿತು) ಹೌದು, ನಿಜ, ನಾನು
ಬಾಯಿಮುಚ್ಚಿಕೊಳ್ಳುತ್ತೇನೆ ; ನೀನು ಬಾಯಲ್ಲಿ ಏನೂ ಹೇಳದೇ ಇದ್ದಾಗ್ಗೂ,
ನಿನ್ನ ಮುಖವು ಹಾಗೆ ಆಜ್ಞಾಪಿಸುತ್ತಿದೆ. ಹುಂ, ಹುಂ,
ಹಿಟ್ಟಿನಮುರಕಕೂಡಾ ಇರಿಸದೆ |
ರೊಟ್ಟಯಚೂರಕೂಡಾ ಇರಿಸದೆ |
ಕೊಟ್ಟಂಗೆ ಏನೇನು ಇಲ್ಲವೈ ||
ಹರಹರಾಜಯತು ಜಯತು || (ಜೋಗೀಹಾಡಿನ ಮಟ್ಟು)
(ಧೊರೆಯನ್ನು ತೋರಿಸುತ್ತಾ) ಇದು ಅವರೇಕಾಯಿ ಸಿಪ್ಪೆ.
ನಾಗವೇಣಿ ಸ್ವಾಮಿ, ಕಟ್ಟಿಲ್ಲದ ಈ ನಿಮ್ಮ ವಿದೂಷಕಮಾತ್ರವೇ ಅಲ್ಲ, ತಮ್ಮ
ದುರಹಂಕಾರಿಗಳಾದ ಇತರ ಪರಿವಾರವೂ ಕೂಡ ಪ್ರತಿಕ್ಷಣದಲ್ಲಿಯ ತಪ್ಪನ್ನು
ಎಣಿಸುತ್ತಾ ಜಗಳಕ್ಕೆ ಕಾಲ ಕೆರೆಯುತ್ತಲೇ ಇದಾರೆ: ಗುಂಪುಗುಂಪಾಗಿ ಬಂದು
ಅಸಹ್ಯವಾದ ದೊಂಬಿಯನ್ನು ಮಾಡುತ್ತಿದಾರೆ. ಇದನ್ನು ತಮಗೆ ತಿಳಿಸಿ, ಇದಕ್ಕೆ
ಖಂಡಿತವಾದ ಪರಿಹಾರವನ್ನು ಮಾಡಿಸಬೇಕೆಂದಿದ್ದೆ; ಆದರೆ ಈಗ ನೀವು ಸಮ
ಯತಪ್ಪಿ ಆಡುವ ಮಾತಿನಿಂದಲೂ ಮಾಡುವ ಕಾರ್ಯದಿಂದಲೂ, ನೀವಾಗಿಯೇ
ಇದನ್ನು ಒಪ್ಪಿ ಪ್ರೋತ್ಸಾಹ ಮಾಡುತ್ತೀರೆಂದು ನನಗೆ ಭಯ ಉಂಟಾಗಿದೆ ; ನೀವು
ಹೀಗೆ ಮಾಡಿದಲ್ಲಿ ಅಪರಾಧವು ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳಲಾರದು, ಇದಕ್ಕೆ
ತಕ್ಕ ಪರಿಹಾರವೂ ನಿದ್ರೆ ಮಾಡುತ್ತಿರಲಾರದು. ರಾಜೃಕ್ಷೇಮಾರ್ಥವಾಗಿ ಈ ಪ್ರತೀ
ಕಾರವನ್ನು ಮಾಡುವುದರಲ್ಲಿ ತಮಗೆ ಬಾಧೆಯುಂಟಾಗಬಹುದು ; ಇಂಥಾ ಬಾಧೆ
ಯು ಇತರ ಕಾಲದಲ್ಲಿ ಲಜ್ಜಾಸ್ಪದವಾದಾಗ್ಯೂ, ಅನಿರ್ವಾಹಪಕ್ಷದಲ್ಲಿ ವಿವೇಕವಾದ
ಚರ್ಯವೆನಿಸಿಕೊಂಡೀತು.
------------------------------------------------------
4ನೇ ಪ್ರಕರಣ.] ಹೇಮಚಂದ್ರರಾಜ ಪಿಲಾಸ. 27
ವಿದೂ-- ಕಾಗೆಯ ಮರಿಯನ್ನು ಕೋಗಿಲೆಯು ಬಹುಕಾಲ ಸಾಕಿದ್ದರಿಂದ ಕೋಗಿಲೆ
ಯನ್ನು ಕಾಗೆಯ ಮರಿಯು ಕುಕ್ಕಿ ಕೊಂದಿತು : ಇದನ್ನು ನೀನು ಬಲ್ಲೆಯ,
ಮಾವ ?
ಸೂಸ್ತ್ರದ ಬೊಂಬೆ ಮಾಡಿ ತಾ !
ಸೂಸ್ತ್ರವಿಡಿದು ಕುಣಿದಾಡಿ |
ಸೂಸ್ತ್ರ ಕಿತ್ತಿತು ತಂತಿ ಮುರಿಯಿತು |
ಆಟ ಕೆಟ್ಟಿತು ನೋಟ ನಿಂತಿತು |
ಬೈಲೀಗೆ ಬೈಲಾಯಿತು, |
ಬೈಲೊಳಗೆ ವೋಡಾಡಿತು ||
ಧೊರೆ.ನೀನು ನಮ್ಮ ಮಗಳೂ ?
ನಾಗವೇಣಿ. ಇದು ಹಾಗಿರಲಿ ; ತಮ್ಮಲ್ಲಿ ವಿಶೇಷವಾಗಿರುವ ವಿವೇಕವನ್ನು ಈಗ
ತೋರಿಸಿ, ತಮ್ಮ ಸ್ವಭಾವಕ್ಕೆ ಈ ರೀತಿಯಾಗಿ ವಿಕೃತಿಯನ್ನುಂಟುಮಾಡಿರುವ
ಈ ಗುಣಗಳನ್ನು ಬಿಟ್ಟುಬಿಡಿ.
ವಿದೂ--ಗಾಡಿಯು ಕುದುರೆಯನ್ನು ಯಾವಾಗ ಎಳೆಯುವುದೆಂದು ಕತ್ತೆ ಬಲ್ಲದೆ ?
ಧೊರೆ.-- ಇಲ್ಲಿ ನನ್ನನ್ನು ಯಾರಾದರೂ ಬಲ್ಲರೆ ? ಇವ ಹೇಮಚಂದ್ರರಾಜನಲ್ಲ ; ಹೇಮ
ಚಂದ್ರ ಹೀಗೆ ನಡೆಯುತ್ತಾನೆಯೇ ? ಹೀಗೆ ಮಾತನಾಡುತ್ತಾನೆಯೇ ? ಅವನ
ಕಣ್ಣುಗಳಲ್ಲಿ ? ಇಲ್ಲ, ಆತನ ಬುದ್ದಿ ಕಡಮೆಯಾಯಿತು, ಭೇದಾಭೇದಜ್ಞಾನ ಮಂ
ಕಾಯಿತು-ಹೊ ! ಎಚ್ಚರವೆ ? ಹಾಗಲ್ಲ. ನಾನು ಯಾರು ? ಯಾರು ಹೇಳ
ಬಲ್ಲರು ?
ವಿದೂ.--ಹೇಮಚಂದ್ರನ ನೆರಳು.
ಧೊರೆ.-ಅದನ್ನು ನಾನು ತಿಳಿಯುವುದು ನನಗಿಷ್ಟ; ಯಾಕೆಂದರೆ, ನನಗೆ ಈ ರಾಜ
ಚಿನ್ಹೆ, ಜ್ಞಾನ, ಬುದ್ಧಿ ಇವುಗಳಿರುವ ಮಟ್ಟಿಗೆ ನೋಡಿದರೆ, ನನಗೆ ಹೆಣ್ಣು ಮಕ್ಕ
ಳಿದ್ದರೆಂದು ನನಗೆ ನಂಬಿಕೆ ಹುಟ್ಟಿದಲ್ಲಿ ಅದು ಸುಳ್ಳು ನಂಬಿಕೆ.
ವಿದೂ.-ಇದರಿಂದ ಅವರು ವಿಧೇಯನಾದ ತಂದೆಯನ್ನು ಮಾಡಿಕೊಳ್ಳುತ್ತಾರೆ.
ಧೊರೆ. ತಮ್ಮ ಹೆಸರೇನು, ಮಹಾ ತಾಯಿ ?
ನಾಗವೇಣಿ. ಈ ನಟನ ವಿಶಿಷ್ಟವಾದ ಆಶ್ಚರ್ಯವು ತಮ್ಮ ಇತರ ಚೇಷ್ಮೆಗೆ ಅನುಸಾ
ರವಾದ್ದು. ನನ್ನ ಅಭಿಪ್ರಾಯವನ್ನು ನೀವು ಚೆನ್ನಾಗಿ ತಿಳಿದುಕೊಳ್ಳಬೇಕೆಂದು
ಬೇಡಿಕೊಳತೇನೆ; ತಾವು ವೃದ್ಧರಾಗಿ ಪೂಜ್ಯರಾಗಿರುವುದರಿಂದ ವಿವೇಕಿಗಳಾಗಿರ
ಬೇಕು. ನೀವು ನೂರುಜನ ಸಾಮಾಜಿಕರನ್ನೂ ಪರಿವಾರವನ್ನೂ ಇರಿಸಿಕೊಂಡಿ
------------------------------------
೨೯ ಹೇಮಚಂದ್ರರಾಜ ವಿಲಾಸ. [೧ನೇ ಅಂಕ
ದೀರಿ; ಇವರೊ ಬಹು ತುಂಟರು, ಫಟಿಂಗರು, ಅವರ ದುರ್ನಡತೆಯಿಂದ ನಮ್ಮ
ಆಸ್ಥಾನವು ಕೆಟ್ಟು, ದೊಂಬಿ ಜನರ ಕಟ್ಟೆಮನೆಯ ಹಾಗೆ ಕಾಣುತ್ತಿದೆ ; ಚೆಲು
ವಾದ ನಮ್ಮ ಅರಮನೆಯು ಈ ದುಂದುಗಾರಿಕೆಯಿಂದಲೂ ಈ ಕಾಮುಕರಿಂದಲೂ
ಪಾನಗೃಹದಂತೆಯ ವೇಶ್ಯಾವಂದಿರದಂತೆಯೇ ಕಾಣುತ್ತಿದೆ. ಇದಕ್ಕೆ ಪ್ರತೀ
ಕಾರವನ್ನು ಮಾಡಬೇಕೆಂದು ಲಜ್ಜೆಯು ಹೇಳುತ್ತಿದೆ. ತಾನು ಕೇಳಿಕೊಳ್ಳತ
ಕದ್ದು ನಡೆಯದೇ ಇದ್ದಲ್ಲಿ, ಅದನ್ನು ನಡೆಯುವ ಹಾಗೆ ಮಾಡಿಕೊಳ್ಳತಕ್ಕ
ಸಾಮರ್ಥ್ಯವುಳ್ಳ ಆಕೆಯು ತಮ್ಮ ಪರಿಜನರನ್ನು ಕಡಮೆಮಾಡಬೇಕೆಂದು
ತಮ್ಮನ್ನು ಕೇಳಿಕೊಳ್ಳುತಾಳೆ ; ಉಳಿದವರು ತಮ್ಮ ವಯಸ್ಸಿಗೆ ತಕ್ಕ ವರಾ
ಗಿಯೂ ಪರಸ್ಪರ ಮರಾದೆಯನ್ನು ತಿಳಿದವರಾಗಿಯ ಇರಬೇಕು.
ಧೊರೆ ...., ಚಂಡಾಲರಾ ! ಯಾರಲ್ಲಿ, ನನ್ನ ಕುದರೆಗೆ ಚೀನ ಹಾಕಿ ; ನನ್ನ ಪರಿವಾ
ರವೆಲ್ಲಾ ಒಟ್ಟಾಗಿ ಸೇರಲಿ. ಅಧಮಾಧವಳಾದ ಜಾರಜಳೆ ! ನಿನಗೆ ನನ್ನ ಬಾಧೆ
ಬೇಡ ; ನನಗೆ ಇನ್ನೂ ಒಬ್ಬ ಮಗಳಿದ್ದಾಳೆ
ನಾಗವೇಣಿ - ನೀವೊ, ನನ್ನ ಜನರನ್ನು ಹೊಡೆಯುತ್ತೀರಿ ; ನಿಮ್ಮ ಕಡೇ ಗುಂಪಿನ
ವರೋ, ತಮಗೆ ಯಜಮಾನರಾಗಬಹುದಾದಂಥಾವರ ಕೈಯಲ್ಲಿ ಸೇವಾವೃತ್ತಿ
ಯನ್ನು ಮಾಡಿಸಿಕೊಳ್ಳುತ್ತಾರೆ.
ಪ್ರವೇಶ. ಭದ್ರ ನಾಥ,
ಧೊರೆ.-ಕಾರ್ಯ ಮಿಂಚಿಹೋದಮೇಲೆ ಪಶ್ಚಾತ್ತಾಪಪಡುವ ದುಃಖ.-- (ಭದ್ರನಾಥನೊ
ಡನೆ) ಹೊ, ಏನುಸ್ವಾಮಿ ಬಂದಿರಾ ? ಇದು ನಿಮಗಿಷ್ಟ್ಯವೆ ? ಮಾತನಾಡಿಸಾಮಿ.
ನನ್ನ ಕುದುರೆಗಳು ಸಿದ್ಧವಾಗಲಿ, ಕೃತಘ್ನ ತೆಯೇ, ಪಾಪ್ಪಾಣಹೃದಯದ ಭೂತ
ವೇ! ಮಹಾ ವಿಷವೆ ! ನೀನು ಕಾಳೊರಗನಲ್ಲಿ ಕಾಣುವುದಕ್ಕಿಂತಲೂ ಶಿಶುವಿನಲ್ಲಿ
ಅತಿಭಯಂಕರವಾಗಿ ಕಾಣುತ್ತೀಯೈ !
ಭದ್ರನಾಥ ಸ್ವಾಮಿ ನಾನು ಬೇಡಿಕೊಳ್ಳತೇನೆ, ದಯಮಾಡಿ ತಾಳ್ಮೆಯನ್ನು ತಂದು
ಕೊಳ್ಳಬೇಕು.
ಧೊರೆ.-- (ನಾಗವೇಣಿಯನ್ನು ಕುರಿತು) ಛಿ ! ಶ್ವಾನವೆ ! ನೀನು ಸುಳ್ಳನ್ನು ಬೊಗಳು
ತೀಯ ; ನನ್ನ ಪರಿವಾರದವರು ಉತ್ತಮೋತ್ತಮರಾದ ಪುರುಷರು, ಆಪೂರ್ವ
ವಾದ ಕೌಶಲ್ಯವುಳ್ಳವರು, ಸ್ವಾಮಿಕಾರ್ಯ ಧುರಂಧರರು, ತಮ್ಮ ಗೌರವವನ್ನು
ಸಕಲ ವಿಷಯದಲ್ಲಿ ಕಾಪಾಡಿಕೊಳ್ಳತಕ್ಕವರು. ಅಃ, ದೋಷಲವವೇ !
ನೀನು ಇಂದುಕಲೆಯಲ್ಲಿ ಎಷ್ಟು ವಿಕಾರವಾಗಿ ಕಾಣಿಸಿದೆ ! ಶೂಲದ ಹಾಗೆ ನನ್ನ
ಅಂಗಾಂಗಳಲ್ಲೆಲ್ಲಾ ನಾಟಿಕೊಂಡು, ಅವುಗಳಿಗೆ ಸ್ಥಾನಪಲ್ಲಟವನ್ನು ಮಾಡಿತಲ್ಲಾ !
ನನ್ನ ಹೃದಯದಲ್ಲಿದ್ದ ಪ್ರೇಮವನ್ನು ಸೆಳೆದು ಅದರ ಸ್ಥಾನಕ್ಕೆ ವಿಷವನ್ನು ಸೇರಿಸಿ
------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೨೯
ತಲ್ಲಾ' ಅಯ್ಯೋ; ಹೇಮಚಂದ್ರಾ, ಹೇಮಚಂದ್ರಾ, ಹೇಮಚಂದ್ರಾ ! (ತಲೆ
ಯನ್ನು ಬಡಿದುಕೊಳ್ಳುತ್ತಾ ನನ್ನ ಪ್ರಿಯವಾದ ವಿವೇಕವನ್ನು ಆಚೆಗೆ ಹೊರ
ಡಿಸಿ ಅವಿವೇಕವನ್ನು ಒಳಕ್ಕೆ ಹೋಗಿಸಿದ ಈ ಬಾಗಿಲನ್ನು ಹೊಡೆ. ನಮ್ಮವರು
ಹೊರಡಿ.
ಭದ್ರನಾಥ- ಮಹಾಸ್ವಾಮಿ, ತಮಗೆ ಉಂಟಾದ ಆಗ್ರಹಕ್ಕೆ ಕಾರಣವನ್ನು ಅರಿಯೆ
ನಾದ್ದರಿಂದ ನಾನು ನಿರಪರಾಧಿ.
ಧೋರೆ.-- ಇರಬಹುದು ಸ್ವಾಮಿ, ಕೇಳು, ಪ್ರಕೃತಿದೇವತೆಯೇ ಕೇಳು ; ನನ್ನ ಇಷ್ಪ
ದೇವತೆಯೇ ಕೇಳು ! ಈ ಪದಾರ್ಥವನ್ನು ಫಲಪೂರಿತವಾಗಿ ಮಾಡಬೇಕೆಂಬ
ಮನಸ್ಸು ನಿನಗಿದ್ದರೆ, ನಿನ್ನ ಕಾರೊದ್ಯೋಗವನ್ನು ನಿಲ್ಲಿಸು ; ಇವಳ ಗರ್ಭಕ್ಕೆ
ವಂಧ್ಯತ್ವವನ್ನು ಹಾಕು ; ಪಿಂಡವು ಉತ್ಪತ್ತಿಯಾಗಿ ವೃದ್ಧಿಯಾಗತಕ್ಕ ಇವಳ
ಅವಯವವು ಒಣಗಿ ಹೋಗಲಿ ; ಇವಳಿಗೆ ಗತಿಯನ್ನೂ ಘನತೆಯನ್ನೂ ಉಂಟು
ಮಾಡುವುದಕ್ಕೆ, ಇವಳ ಅಧಮಾಧಮವಾದ ಶರೀರದಲ್ಲಿ ಶಿಶುವು ಎಂದೆಂದಿಗೂ ಜನಿಸ
ದಿರಲಿ ! ಇವಳ ಗರ್ಭದಲ್ಲಿ ಶಿಶುಜನನವಾಗಲೇ ಬೇಕಾಗಿದ್ದರೆ, ಆ ಅಣುಗವು ವಿಷ
ದಲ್ಲಿ ಮಾಡಿರಲಿ, ಅದು ಸಜೀವವಾಗಿದ್ದು ನಿರಂತರವಾಗಿ ಅವಳಿಗೆ ಹೃದಯಶೂಲ
ವಾಗಿರಲಿ : ಎಳಕಾದ ಇವಳ ಲಲಾಟವು ಸುಕಿ ನಿಂದ ಮುದ್ರಿತವಾಗಲಿ : ಸಂತತ
ವಾಗಿ ಹರಿಯುವ ಕಂಣೀರು ಇವಳ ಕೆನ್ನೆಯಲ್ಲಿ ಕಾಲುವೆಯನ್ನು ಕೊರಯಲಿ !
ಇವಳ ತಾಯಿಯ ಶ್ರಮವೆಲ್ಲಾ ಹೇಳನಕ್ಕೂ ತಿರಸ್ಕಾರಕ್ಕೂ ಒಳಗಾಗಲಿ ! ಕೃತ
ಘ್ನರಾದ ಮಕ್ಕಳನ್ನು ಪಡೆಯುವುದು ಕಾಳಸರ್ಪದ ಹಲ್ಲಿಗಿಂತಲೂ ತೀಕ್ಷವಾ
ದ್ದೆಂದು ಇವಳು ತಿಳಿಯಲಿ ! ನಡೆಯಿರಿ, ನಡೆಯಿರಿ ! (ಧೊರೆಯ ನಿಷ್ಕ್ರಾಂತ.)
ಭದ್ರನಾಥ.- ಅಯ್ಯೋ, ನಮ್ಮ ಇಷ್ಟದೈವವೇ ! ಈ ವಿಪತ್ತು ಎಲ್ಲಿಂದ ಬಂತು ?
ನಾಗರ್ವೇಪಿ .ಇದರ ಕಾರಣವನ್ನು ತಿಳಿಯುವುದಕ್ಕೋಸ್ಕರ ನೀವು ವ್ಯಸನದಿಂದ ಪೀಡಿ
ತರಾಗಬೇಡಿ ; ಮುಪ್ಪಿನಿಂದ ಉಂಟಾಗತಕ್ಕೆ ಗುಣವೈಪರೀತ್ಯಕ್ಕೆ ವಿಶೇಷವಾಗಿ ಆಸ್ಪದವಿರಲಿ.
ಪ್ರವೇಶ ಧೊರೆ
ಧೊರೆ -- ಏನು ! ಒಂದು ಏಟಿಗೆ ನನ್ನ ಐವತ್ತು ಜನ ಪರಿವಾರ ! ಹದಿನೈದು ದಿವಸದ
ಒಳಗಾಗಿದೆ !
ಭದ್ರನಾಥ – ಅದೇನು ಮಹಾಸ್ವಾಮಿ ? ಅಪ್ಪಣೆಯಾಗಲಿ.
ಧೊರೆ - ನಾನು ಹೇಳುತ್ತೇನೆ. (ನಾಗವೇಣೀಕಡೆಗೆ ತಿರುಗಿ) ಇರಬೇಕೇ ಸಾಯಬೇಕೇ?
ನನ್ನ ಪಾರುಷವನ್ನ ನೀನು ಹೀಗೆ ಅಳ್ಳಾಡಿಸುವುದನ್ನು ಕಂಡು ನನಗೆ ನಾಚಿಗೆ
ಉಂಟಾಗಿದೆ. ಈ ಬಿಸಿಯಾದ ಕಂಬನಿಗಳು ನಿನ್ನ ದುಷ್ಕೃತ್ಯದಿಂದ ಬಲವಂತ
-------------------------------------------
೩೦ ಹೇಮಚಂದ್ರರಾಜ ವಿಲಾಸ, [೧ನೇ ಅಂಕ
ವಾಗಿ ಉಕ್ಕಿ ಬರುವ ಮಟ್ಟಿಗೂ ನಿನ್ನ ಯೋಗ್ಯತೆ ಹೆಚ್ಚಿತಲ್ಲಾ ಎಂದು ನಾನು
ಲಜ್ಜಿತನಾಗಿದ್ದೇನೆ. ನೀನು ನಾಶವಾಗು ; ತಂದೆಯು ಶಾಪವೆಂಬ ಹಸಿಯಾರದ
ಹುಣ್ಣು ನಿನ್ನ ಪತಿ ಇಂದ್ರಿಯದಲ್ಲಿಯೂ ವೇಧಯನ್ನುಂಟುಮಾಡಲಿ ! ವಿವೇಕ
ರಹಿತವಾದ ಮುಪ್ಪಿನ ಕಣ್ಣುಗಳೇ, ಇದರ ಕಾರಣವನ್ನು ಕುರಿತು ಗೋಳಿಡಿ ;
ನಾನು ನಿಮ್ಮನ್ನು ಕಿತ್ತು ನಿಮ್ಮಿಂದ ಸುರಿಯುವ ನೀರಿನ ಸಂಗಡಸೇರಿ ತೆಳ್ಳೆ
ಯಾದ ಮಣ್ಣನ್ನು ಹದಮಾಡುವುದಕ್ಕೋಸ್ಕರ ನಿಮ್ಮನ್ನು ಉಪಯೋಗಿಸುವೆನು.
ಅಯ್ಯೋ, ಇದು ಆತ್ಮಕ್ಕೆ ಬಂತೇ ? ಆಗಲಿ ; ನನಗೆ ಇನ್ನೂ ಒಬ್ಬ ಮಗಳಿದಾಳೆ ;
ಈಕೆ ದಯಾಳುವಾಗಿಯೂ, ನನ್ನ ಸೌಖ್ಯವನ್ನು ಅಪೇಕ್ಷಿಸತಕ್ಕವಳಾಗಿಯೂ,
ಇದಾಳೆಂದು ಖಂಡಿತವಾಗಿ ನಾನು ಬಲ್ಲೆ ; ಅವಳು ಇದನ್ನು ಕೇಳಿದರೆ, ಈ ನಿನ್ನ
ವೃಕರೂಪವನ್ನು ಅವಳ ನಖಗಳಿಂದ ತೋಡಿ ಹಾಕಿಯಾಳು. ನಾನು ತ್ಯಜಿಸಿ
ಬಿಟ್ಟೆನೆಂದು ನೀನು ತಿಳಿದಿರತಕ್ಕ ಪದವಿಯನ್ನು ನಾನು ಪ್ರನಃ ಸೀಕರಿಸುವೆನು ;
ನಾನು ಸ್ವೀಕರಿಸಿದ್ದನ್ನು ಖಂಡಿತವಾಗಿಯೂ ನೀನು ಕಂಡೀಯೋ.
(ಧೊರೆ, ನಿಷ್ಕಂಟಕ, ಪರಿವಾರ ನಿಷ್ಕ್ರಮಣ).
ನಾಗವೇಣಿ.-(ಗಂಡನ ಕಡೆಗೆ ತಿರುಗಿ) ಇದನ್ನು ನೋಡಿದಿರಾ ಸ್ವಾಮಿ !
ಭದ್ರನಾಥ.-ನಾಗವೇಣಿ, ನಿನ್ನಲ್ಲಿ ನನಗಿರುವ ಮಹಾ ಪ್ರೇಮಕ್ಕೆ ನಾನು ಅಷ್ಟೊಂದು
ಪಕ್ಷಪಾತಿಯಾಗಿ ಇರಲಾರೆ.
ನಾಗವೇಣಿ-ಅಲ್ಲಿಗೆ ಸಾಕು, ಅಲ್ಲಿಗೆ ಸಾಕು.
ಎಲಾ ರಾಹುಕ, (ವಿದೂಷಕನಕಡೆ ತಿರುಗಿ) ನೀನು ವಿದೂಷಕನಾಗಿರುವದಕ್ಕಿಂತ
ಲೂ ಹೆಚ್ಚಿನ ದೂಷಕ, ನಿನ್ನ ಯಜಮಾನನ ಹಿಂದೆಯೇ ನಡೆ.
ವಿದೂ-ಹೇಮಚಂದ ಮಾವ, ಹೇಮಚಂದ್ರ ಮಾವ ; ನಿಲ್ಲು, ವಿದೂಷಕನನ್ನೂ
ಜೊತೆಯಲಿ ಕರೆದುಕೊಂಡು ಹೋಗು. (ನಿಷ್ಕ್ರಮಣ.)
ನಾಗವೇಣಿ- ಇವನಿಗೆ ವಿವೇಕವನ್ನು ಹೇಳಿದ್ದಾಯಿತು. ನೂರುಮಂದಿ ಸಾಮಾಜಿಕ
ರುಂಟೆ ! ಇಷ್ಟೊಂದು ಜನರನ್ನು ಅವ ಇರಿಸಿಕೊಂಡಿರುವುದಕ್ಕಿಂತಲೂ ಕಳುಹಿಸಿ
ಬಿಡುವುದು ಯುಕ್ತವಾಗಿಯೂ ಕ್ಷೇಮಕರವಾಗಿಯೂ ಇದೆ. ಸ್ವಲ್ಪ ಸೀತರೂ
ಸರಿಯೆ ಕೆಮ್ಮಿದರೂ ಸರಿಯೇ, ಈ ಜನರು ಅವನ ಮುಪ್ಪನ್ನು ಸಂರಕ್ಷಿಸಿಕೊಂಡು,
ನಮಗೆ ಪ್ರಾಣಭಯವನ್ನುಂಟುಮಾಡಬಹುದು. ಎಲಾ ರಾಹುಕಾ !
ಭದ್ರನಾಥ-- ನೀನು ಇಲ್ಲದ ಭಯವನ್ನು ಹತ್ತಿಸಿಕೊಂಡಿದ್ದೀಯೆ.
ನಾಗವೇಣಿ..ಇಲ್ಲದ ಭರವಸವನ್ನು ಇಟ್ಟುಕೊಂಡಿರುವುದಕಿಂತ ಅದು ಕ್ಷೇಮಕರ.
ಅಪಾಯ ನಿವಾರಣೆ ಮಾಡಬೇಕೆಂತ ಭಯಪಡುವುದಕ್ಕಿಂತಲೂ, ನಾನು ಭಯಪಡ
ತಕ್ಕ ಅಪಾಯವನ್ನು ನಿವಾರಣ ಮಾಡಿ ಏನು. ಅವನ ಹೃದಯವನ್ನ ನಾನು
ಬಲ್ಲೆ. ಅವ ಆಡಿದ ಮಾತನ್ನು ನನ್ನ ತಂಗಿಗೆ ಬರೆದಿದ್ದೇನೆ. ಅದು ಸರಿಯಲ್ಲವೆಂದು
-----------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೩೧
ನಾನು ಹೇಳಿದಾಗ್ಯೂ, ಅವನನ್ನೂ ಅವನ ನೂರು ಜನ ಸಾಮಾಜಿಕರನ್ನೂ ಅವಳು
ಪೋಷಿಸುವಪಕ್ಷದಲ್ಲಿ, -
ಪ್ರವೇಶ -ರಾಹುಕ.
ಏನು ರಾಹುಕ ? ಆ ಕಾಗದವನ್ನು ನನ್ನ ತಂಗಿಗೆ ಬರೆದೆಯೊ ?
ರಾಹುಕ.--ಬರೆದೆ ತಾಯಿ.
ನಾಗವೇಣಿ ಕೆಲವು ಜನರನ್ನು ಕರೆದುಕೊಂಡು ಅಶ್ವಾರೂಢನಾಗಿ ಹೊರಡು. ನನ್ನ
ಮುಖ್ಯವಾದ ಭಯವನ್ನು ಅವಳಿಗೆ ಚೆನ್ನಾಗಿ ತಿಳಿಸು. ಅದನ್ನು ದೃಢೀಕರಿ
ಸುವ ಹಾಗೆ ನಿನಗೆ ತೋರಿದ ಕಾರಣಗಳನ್ನೆಲ್ಲಾ ಅದಕ್ಕೆ ಸೇರಿಸಿಕೊ, ಜಾಗ್ರತೆ
ಯಾಗಿ ಹೋಗಿ ಬಾ. (ರಾಹುಕ ನಿಷ್ಕ):)
ನಾಗವೇಣಿ.- (ಗಂಡನ ಕಡೆಗೆ ತಿರುಗಿ) ಅದಲ್ಲ ಸ್ವಾಮಿ, ಈ ನಿಮ್ಮ ಕರುಣಾಮೃತ
ವನ್ನೂ, ಈ ನಿಮ್ಮ ನಡತೆಯನ್ನೂ, ನಾನು ಧಿಕ್ಕಾರಮಾಡದೆ ಇದ್ದಾಗ್ಗೂ,
ತಮ್ಮ ಕೆಟ್ಟ ಮಾರ್ಗವಾಗಿ ತಾವು ಕೊಂಡಾಡಿಸಿಕೊಳ್ಳುವುದಕ್ಕಿಂತಲೂ ತಮ್ಮ
ವಿವೇಕಶೂನ್ಯತಯು ವಿಶೇಷ ದೋಷಾರೋಪಣೆಗೆ ತಮ್ಮನ್ನು ಗುರಿಮಾಡಿದೆ.
ಕ್ಷಮಿಸಬೇಕು.
ಭದ್ರನಾಥ.--_ನಿನಗೆ ಎಷ್ಮರ ಮಟ್ಟಿಗೆ ದೂರದೃಷ್ಟಿ ಇದೆಯೋ ಹೇಳಲಾರೆ. ನಮ್ಮ
ಸ್ಥಿತಿಯನ್ನು ಉತ್ತಮವಾಗಿ ಮಾಡಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಇದ್ದರೂ
ಕೆಟ್ಟು ಹೋಗುವುದು ವಾಡಿಕೆಯಾಗಿದೆ. ಉರಗಿಸಿ ಆರಿಸುವುದೂ ಕೆಡಿಸಿದೆಯ
ಕಂಚುಗಾರ, ಎಂದ ಹಾಗೆ ಆಗುವುದು.
ನಾಗವೇಣಿ.-- ಬಿಡಿ. ಹಾಗಾದರೆ ನಾನು.--
ಭದ್ರನಾಥ-ಒಳ್ಳೇದು ಮುಂದಿನ ಕಾರ್ಯ.
.....
೫ನೇ ಪ್ರಕರಣ-ಭದ್ರನಾಥನ ಅರಮನೆಯ ಓಲಗಶಾಲೆ.
ಪ್ರವೇಶ.- ಧೊರೆ, ನಿಷ್ಕಂಟಕ, ವಿದೂಷಕ.
ಧೊರೆ. ಈ ಕಾಗದವನ್ನು ತೆಗೆದುಕೊಂಡು ದುಃಖಸಾರ ಇರುವ ಸ್ಥಳಕ್ಕೆ ನೀನು
ಮೊದಲು ಹೋಗು. ಈ ಲೇಖನದಿಂದ ಅಗತ್ಯ ತೋರಿ ಅವಳಾಗಿ ಕೇಳುವ
ಸಂಗತಿ ಹೊರತು ನನ್ನ ಪುತ್ರಿಯಾದ ವಿಷಜೆಗೆ ನೀನು ಎಲ್ಲ ಯಾವ ವಿಷಯ
ವನ್ನೂ ಹೇಳಬೇಡ. ನಿನ್ನ ಜಾಗರೂಕತೆ ವೇಗಯುಕ್ಯವಾಗದಿದ್ದ ಪಕ್ಷಕ್ಕೆ, ನಿನ
ಗಿಂತ ಮುಂಚೆಯೇ ನಾನು ಅಲ್ಲಿ ಇರುವೆನು.
---------------------------------------------
೩೨ ಹೇಮಚಂದ್ರರಾಜ ವಿಲಾಸ. [೧ನೇ ಅಂಕ
ನಿಷ್ಕಂಟಕ, ಮಹಾಸ್ವಾಮಿ, ತಮ್ಮ ಲೇಖನವನ್ನು ಅಲ್ಲಿಗೆ ಕೊಂಡುಹೋಗಿ ತಲ
ಪಿಸುವತನಕ ನಾನು ನಿದ್ರೆಮಾಡುವುದಿಲ್ಲ. (ನಿಷ್ಕ್ರಮಣ)
ವಿದೂಷಕ..ಒಬ್ಬ ಮನುಷ್ಯನ ತಲೆ ಅವನ ಹಿಮ್ಮಡಿಯಲ್ಲಿದ್ದರೆ ಅದು ಶೋಬಳಿ
ಹೋಗುವದೆಂಬ ಭಯವಿಲ್ಲವೆ ?
ಧೊರೆ-- ಉಂಟು, ಮಗು.
ವಿದೂ ಹಾಗಿದ್ದರೆ ಚಿಂತೆ ಇಲ್ಲ ; ನಿನ್ನ ಬುದ್ದಿಗೆ ಕೆರವನ್ನು ಹಾಕಿಕೊಳ್ಳದೇ ಹೋಗ
ಲಾರೆ.
ಧೊರೆ ಹ, ಹ, ಹ !
ವಿದೂ - ನಿನ್ನ ಇನ್ನೊಬ್ಬ ಮಗಳು ಸ್ವಭಾವಕ್ಕನುಗುಣವಾದ ದಯಾರಸದಿಂದ
ಕಾಣುವಳು. ಯಾಕೆಂದರೆ ಪಟ್ಬಲುಕಾಯಿ ಹ್ಯಾಗೆ ಅರೆಮಾದಳಕಾಯಿಯನ್ನು
ಹೋಲುವುದೋ ಹಾಗೆಯೇ ಆಕೆ ಈಕೆಯನ್ನು ಹೊಲಿದಾಗ್ಯೂ, ನಾನು ಹೇಳ
ಎಲ್ಲದೇನೋ ಹೇಳ ಬಲ್ಲೆ,
ಧೊರೆ.- ಏನು, ನೀನೇನು ಹೇಳಬಲ್ಲೆ ಮಗು ?
ವಿದೂ ಬೇವಿನ ಹಂಣಿಗೆ ಹ್ಯಾಗೆ ಬೇವಿನ ಹಂಣಿನ ರುಚಿಯೇ ಇದೆಯೋ ಹಾಗೆಯೇ
ಈ ಹೆಂಣಿಗೂ ಆ ಹೆಂಣಿನ ರುಚಿಯೇ ಇದೆ. ಆ ಹಂಣು ಈ ಹೆಂಣುಗಳಲ್ಲಾ
ಸಜಾತೀಯವೇ, ಎತ್ವ ಒಂದು ವಿಶೇಷ. ಇದು ಹಾಗಿರಲಿ, ಮುಖಕ್ಕೆ ಮಧ್ಯ
ದಲ್ಲಿ ಮಗುಯಾಕಿದೆ, ನೀನು ಬಲ್ಲೆಯ ?
ಧೊರೆ.-ಅರಿಯೆ.
ವಿದೂ.ಯಾಕೆಂದರೆ, ಮೂಗಿನ ಒಂದೊಂದುಕಡೆಯಲ್ಲಿ ಒಂದೊಂದು ಕಣ್ಣಿದ್ದು,
ವಾಸನೆಯಿಂದ ಗೊತ್ತಾಗದೇ ಹೋದ್ದನ್ನು ಕಣ್ಣಾದರೂ ನೋಡಲು ಅನುಕೂಲಿಸ
ಲೆಂದು.
ಧೊರೆ --ಆಕೆಗೆ ನಾನು ಅನ್ಯಾಯವಾಡಿದೆ.
ವಿದೂ --ಶುಕ್ಕಿಜವು ತನ್ನ ಚಿಪ್ಪನ್ನು ಹಾಗೆ ಮಾಡುವುದು ಬಲ್ಲೆಯ ?
ಧೊರೆ.--ಅರಿಯೆ.
ವಿದೂ..ನಾನೂ ಅರಿಯೆ ; ಆದರೆ ಬಸವನ ಹುಳುವಿಗೆ ಅದರ ಶಂಖಯಾಕೆ ಇದೆ
ಯೋ ಅದನ್ನು ಹೇಳಬಲ್ಲೆ,
ಧೋರೆ.-ಯಾಕಿದೆ ?
ವಿದ-ಯಾಕೇ, ಅದರಲ್ಲಿ ತನ್ನ ತಲೆಯನಿಟ್ಟುಕೊಳ್ಳುವುದಕ್ಕೆ ; ಅದನ್ನು ತನ್ನ
ಹೆಮ್ಮಕ್ಕಳಿಗೆ ಕೊಟ್ಟು ಬಿಟ್ಟು ತನ್ನ ಕೊಂಬಿಗೆ ಕೊಂಚವೂ ಮರೆ ಇಲ್ಲದಂತೆ
ಮಾಡಿಕೊಳ್ಳುವುದಕ್ಕಲ್ಲ.
---------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೩೩
ಧೊರೆ - ನನ್ನ ಸಹಜವಾದ ಗುಣವನ್ನು ಮರೆತೇನು. ಇಂಥಾ ಆದ್ರ್ರ ಹೃದಯಾನಾದ
ತಂದೆಯಲ್ಲಾ! ನಮ್ಮ ಅಕ್ಷಗಳು ಸಿದ್ಧವಾಗಲಿ.
ವಿದೂ.--ನಿನ್ನ ರಾಸಭಂಗಳು ಅವುಗಳನ್ನು ತರುವುದಕ್ಕೆ ಹೋಗಿವೆ. ಇದಕ್ಕೆ ಕಾರ
ಣವೇನೆಂದರೆ, ಸಪ್ತಋವಿಗಳ ನಕ್ಷತ್ರ ಎಳೇ ನಕ್ಷತ್ರಗಳಾಗಿರುವುದೇ.
ಧೊರೆ.--ಯಾಕೆಂದರೆ ಅವು ಎಂಟಾಗಿಲ್ಲವೆಂತಲೋ ?
ವಿದೂ-- ಹೌದು ; ನೀನು ಒಳ್ಳೆ ಕೋಡಂಗಿಯಾದೀಯೆ.
ಧೊರೆ.-- ಬಲಾತ್ಕಾರವಾಗಿ ತೆಗೆದುಕೊಳ್ಳುವುದೆ ! ಏನು ಆಸುರ ಕೃತಘ್ನ ತೆ !
ವಿದೂ.-- ನೀನು ನನಗೆ .ದೂಷಕನಾಗಿದ್ದರೆ, ಮಾವ, ಅಕಾಲದಲ್ಲಿ ನೀನು ಮುದುಕ
ನಾದ್ದಕ್ಕಾಗಿ ನಿನ್ನನ್ನು ಚೆನ್ನಾಗಿ ಹೊಡೆಯಿಸುತಿದ್ದೆ.
ಧೊರೆ.-- ಅದು ಯಾಕೆ ?
ವಿದೂ-- ನಿನಗೆ ವಿವೇಕ ಬರುವುದಕ್ಕೆ ಮುಂಚೆ ಮುಪ್ಪು ಬರಕೂಡದು.
ಧೊರೆ-- ನನಗೆ ಹುಚ್ಚ, ಹುಚ್ಚು ಹಿಡಿಯದೇ ಇರಲಿ, ದಯಾಳುವಾದ ದೇವರೆ !
ಪ್ರವೇಶ.-ಒಬ್ಬ ಪ್ರತಿಹಾರಿ.
ಏನು ? ನಮ್ಮ ಕುದುರೆಗಳು ಸಿದ್ಧವಾಗಿವೆಯೋ ?
ಪ್ರತಿಹಾರಿ.--ಸಿದ್ಧವಾಗಿವೆ, ಮಹಾಸ್ವಾಮಿ.
ಧೊರೆ --ಬಾರೊ, ಮಗು. (ನಿಷ್ಕ್ರಮಣ.)
*******
೨ ನೆ ಅ೦ಕ.
೧ನೇ ಪ್ರಕರಣ.-ದುಃಖಸಾರನ ಮಂದಿರ.
ಪ್ರವೇಶ -ಕುಮಂತ್ರ, ಕರಣನ ಭೇಟಿ.
ಕುಮಂತ್ರ._ಕರಣರೆ, ತಮಗೆ ಶ್ರಯೋಸ್ತು ,
ಕರಣ.- ತಮಗೂ ಹಾಗೆಯೇ ಸ್ವಾಮಿ, ತಮ್ಮ ಯಜಮಾನರನ್ನು ಕಂಡಿದ್ದೆ ; ಕುಟ
ಲರೂ ಆತನ ಪತ್ನಿ ವಿಷಜೆಯ ಸಹಾ ಈ ದಿನ ರಾತ್ರೆ ತಮ್ಮ ಯಜಮಾನರ
ಗೃಹಕ್ಕೆ ದಯಮಾಡಿಸುವರೆಂದು ಅವರಿಗೆ ತಿಳಿಸಿದೆ.
ಕುಮ೦ತ್ರ. ಹೀಗೆ ಸಂಭವಿಸಿದ್ದು ಹ್ಯಾಗೆ ?
------------------------------------------
೩೪ ಹೇಮಚಂದ್ರರಾಜ ವಿಲಾಸ, [೨ನೇ ಅಂಕ
ಕರಣ-ನನಗೆ ತಿಳಿಯದು. ಹೊರಗೆ ಹರಡಿಕೊಂಡಿರುವ ವರ್ತಮಾನವನ್ನು ಕೇಳಿ
ಬಲ್ಲಿರಾ ? ವರ್ತಮಾನವೆಂದರೆ ಇನ್ನೂ ಪಿಸುಮಾತಿನಲ್ಲಿಯೇ ಇರತಕ್ಕ ವರ್ತ
ಮಾನ ; ಅದು ಇನ್ನೂ ಕರ್ಣಚುಂಬಿಯಾಗಿಯೇ ಇದೆ.
ಕುಮ೦ತ್ರ ).-ನಾನರಿಯೆ. ಅದೇನು ದಯವಿಟ್ಟು ಹೇಳಿ.
ಕರಣ-ಕುಟಿಲನಿಗೂ ಭದ್ರನಾಥನಿಗೂ ಆಸನ್ನವಾಗಿರುವ ಯುದ್ಧ ಪ್ರಮೇಯವನ್ನು
ನೀವು ಕೇಳಲಿಲ್ಲವೆ ?
ಕುಮಂತ್ರ.--ಒಂದು ಮಾತನ್ನೂ ಅರಿಯೆ,
ಕರಣ -ನಿಮಗೆ ಸಕಾಲದಲ್ಲಿ ಅದು ಗೋಚರವಾದೀತು. ತಮಗೆ ಕ್ಷೇಮ ಉಂಟಾ
ಗಲಿ. (ನಿಷ್ಕ್ರಮಣ).
ಕುಮಂತ್ರ.--(ಮನಸ್ಸಿನಲ್ಲಿ) ಕುಟಿಲ ಈದಿನ ರಾತ್ರೆ ಇಲ್ಲಿಗೆ ಬರುತಾನೆಯೇ ? ಉತ್ತ
ಮವಾಯಿತು ! ಉತ್ತಮೋತ್ತಮವಾಯಿತು. ಇದು ನನ್ನ ಕೆಲಸಕ್ಕೆ ತನಗೆತಾನೇ-
ಹೊಂದಿಕೆಯಾಯಿತು. ನನ್ನ ಸಹೋದರನನ್ನು ಹಿಡಿಯುವುದಕ್ಕೆ ನಮ್ಮ ತಂದೆ
ಯು ಚಾರರನ್ನು ಇಟ್ಟದಾನೆ. ಕಪ್ಪವಾದ ಬಂದು ಕಾರ್ಯವನ್ನು ಜರಗಿಸಬೇಕಾ
ಗಿದೆ, ಅದೃಷ್ಯವೂ ಜಾಗ್ರತೆಯ, ಮಿಳಿತವಾಗಿ ಕಾರವನ್ನು ನೆರವೇರಿಸಬೇಕು.
(ಪ್ರಕಾಶ) ಅಂಣೈಯ್ಯ, ಒಂದು ಮಾತು ! ಇಳಿದು ಬಾ. ಓ, ಅಂಣೈಯ್ಯಾ !
ಪ್ರವೇಶ ಶುಕ್ಷ್ಯಚಂದ್ರ.
ಅಪ್ಪಾಜಿಯು ಹೊಂಚುಹಾಕುತಿದಾರೆ. ಅಪ್ಪಾ, ಈ ಸ್ಥಳಬಿಟ್ಟು ಕೊಂಡಿ
ನೀವು ಅಪಿತುಕೊಂಡಿರುವ ಸ್ಥಳ ಗೊತ್ತಾಯಿತು. ರಾತ್ರೆಯ ಆನುಕೂಲ್ಯ ಈಗ
ದೊರೆತಿದೆ. ಕುಟಿಲರಾಜರಿಗೆ ವಿರುದ್ಧವಾಗಿ ನೀವು ಏನೂ ಹೇಳಲಿಲ್ಲವೆ ? ಅವರು
ಇಲ್ಲಿಗೆ ಬರುತಾರೆ ; ಈಗ, ಈ ರಾತೇ ಹೊತ್ತಿನಲ್ಲಿ, ಅತ್ಯವಸರದಿಂದ ; ಮೇಲೂ,
ವಿಷಜೆಯನ್ನೂ ಕರೆದುಕೊಂಡು, ಕುಟಿಲರಪರವಾಗಿ ಭದ್ರನಾಥರಿಗೆ ವಿರುದ್ಧ
ವಾದ ಮಾತುಗಳನ್ನೇನಾದರೂ ಆಡಿದಿರ ? ಯೋಚಿಸಿ.
ಶುಕ್ಕಚಂದ ).-ನಿಶ್ಚಯವಾಗಿಯೂ ಹೇಳುತ್ತೇನೆ, ಒಂದು ಮಾತನ್ನೂ ಆಡಲಿಲ್ಲ.
ಕುಮಂತ್ರ ) ಅಪ್ಪಾಜೆ ಬರುವಹಾಗಿದೆ. ನನ್ನ ಅಪರಾಧವನ್ನು ಕ್ಷಮಿಸಿ ; ನಟನೆ
ಗಾಗಿ ನಿಮ್ಮ ಮೇಲೆ ಕತ್ತಿಯನ್ನು ಹಿರಿದುಕೊಂಡಿರಬೇಕು. ನೀವೂ ಹಿರಿದು
ಹಿಡಿದುಕೊಳ್ಳಿ, ಆತ್ಮಸಂರಕ್ಷಣೆಯನ್ನು ಮಾಡಿಕೊಳ್ಳುವರಂತೆ ಕಾಣಿಸಿಕೊಳ್ಳಿ.
ಈಗ ಈ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳಿ. (ಗಟ್ಟಿಯಾಗಿ) ಅಪ್ಪಾಜಿ
ಎದುರಿಗೆ ಬನ್ನಿ, ದೀಪ ! ಇಗೊ 1 ಇಲ್ಲಿ. ಅಂಣೈಯ ಓಡಿ ಹೋ ! ದೀವಟಿಗೆ,
ದೀವಟಿಗೆ ! ಸುಖಪ್ರಯಾಣವಾಗಲಿ, (ಶುಕ್ಲಚಂದ್ರನ ನಿಷ್ಕ್ರಮಣ).
-----------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೩೫
ನನ್ನ ಅಂಗದಮೇಲೆ ಸ್ವಲ್ಪ ರಕ್ತವನ್ನು ಬರಿಸಿಕೊಂಡರೆ, ಅದು ನನ್ನ ಭಯಂ
ಕರವಾದ ಪ್ರಯತ್ನಕ್ಕೆ ಸಹಕಾರಿಯಾಗುವುದು. (ಹೀಗೆಂದು ತನ್ನ ರಟ್ಟೆಯ
ಮೇಲೆ ಗಾಯವನ್ನು ಮಾಡಿಕೊಳ್ಳುವನು).
ಮದ್ಯಪಾಯಿಗಳೂ ಮೊಂಡರೂ ಸುಮ್ಮನೆ ಆಟಕ್ಕಾಗಿ ಇದಕ್ಕಿಂತಲೂ ಹೆಚ್ಚಾ
ಗಿ ಹಿಂಸೆಮಾಡಿಕೊಳ್ಳವುದನ್ನು ನಾನು ನೋಡಿ ಬಲ್ಲೆ. (ಪ್ರಕಾಶ) ಅಪ್ಪಾಜಿ !
ಅಪ್ಪಾಜಿ ! ನಿಲ್ಲು, ನಿಲ್ಲು ! ಅಯ್ಯೋ, ದಿಕ್ಕಿಲ್ಲವೆ ?
ಪ್ರವೇಶ.-ದುಃಖಸಾರ, ದೀವಟಿಗೆಯವರು.
ದುಃಖ,-- ಕುಮಂತ, ಆ ಖೂಳ ಎಲ್ಲಿ ?
ಕುಮಂತ್ರ.ತಮ್ಮ ಕೋರವಾದ ಕತ್ತಿಯನ್ನು ಬರೆಯಿಂದ ಹಿಡಿದುಕೊಂಡು, ಇಲ್ಲಿ
ನಿಂತು ಮಂತ್ರ ಪುನಃಶ್ಚರಣೆಯನ್ನು ಮಾಡುತ್ತಾ, ಮಸಣಿಯನ್ನು ಆವಾಹನೆ
ಮಾಡುತಾ ಇಲ್ಲಿ ನಿಂತಿದ್ದರು.
ದುಃಖ.ಅವ ಎಲ್ಲಿ, ಅವ ?
ಕುಮಂತ್ರ.-ಅಪ್ಪಾಜೆ, ಇಲ್ಲಿ ಪರಾಂಬರಿಸಬೇಕು, ನನ್ನ ಮೈಮೇಲೆ ರಕ್ತಹರಿಯು
ತಿದೆ.
ದುಃಖ -ಆ ನೀಚ ಎಲೆ, ಕುಮಂತ್ರ ?
ಕುಮ೦ತ್ರ --ಈ ಕಡೆ ಓಡಿ ಹೋದರು. ಯಾವ ವಿಧದಲ್ಲಿಯಾದರೂ ತಮ್ಮನ್ನು--
ದುಃಖ-- ಓ ! ಹಾಗಾದರೆ ಅವನನ್ನು ಹಿಂದಟ್ಟಿಕೊಂಡು ಹೋಗಿ, ಹೋಗಿ,
(ನಿಷ್ಕ್ರಮಣ, ಭೃತ್ಯರು).
" ಯಾವ ವಿಧದಲ್ಲಿಯಾದರೂ ತಮ್ಮನ್ನು,” ಆ ಮೇಲೆ ಏನು ?
ಕುಮಂತ್ರ --ನಾನು ವಧೆಗೈಯ್ಯಬೇಕೆಂದು ನನಗೆ ಬಲವಂತಮಾಡಲು, ನಾನು
ಸಮ್ಮತಿಸಲಿಲ್ಲ. ಭೃತ್ಯರು ಮಹಾಪಾತಕ, ಇದಕ್ಕೆ ಮಹಾಘೋರವಾದ ನರಕ
ಪ್ರಾಪ್ತವಾಗದೇ ತಪ್ಪದು, ಎಂದು ನಾನು ಬಹು ಬಗೆಯಲ್ಲಿ ತಿಳಿಸಿದೆ ; ತಂದೆಗೂ
ಮಕ್ಕಳಿಗೂ ಇರುವ ಬಲವತ್ತರವಾದ ಅಪರಿಮಿತ ಸಂಬಂಧವನ್ನು ಹೇಳಿದೆ.
ಕೊನೆಗೆ ತನ್ನ ಅನುಚಿತವಾದ ಕಾರಕ್ಕೆ ನಾನು ಸಮ್ಮತಿಸದೆ ವಿರುದ್ಧವಾಗಿರು
ವುದನ್ನು ತಿಳಿದು, ಸಿದ್ದವಾದ ತನ್ನ ಕತ್ತಿಯನ್ನು ಅತಿಭಯಂಕರವಾಗಿ ಬೀಸಿ
ಸಹಾಯರಹಿತನಾದ ನನ್ನನ್ನೂ ನನ್ನ ಬಾಹುವನ್ನೂ ತಿವಿದನು. ತರುವಾಯ
ನನಗೆ ಅತ್ಯಾಗ್ರಹಬಂದು ನ್ಯಾಯವಾದ ಆ ಜಗಳದಲ್ಲಿ ಧೈರ್ಯ್ಯಾವಲಂಬನೆಯನ್ನು
ಮಾಡಿ, ಅವನನ್ನು ಪ್ರತಿಭಟಿಸಲು ಅನುವಾದ್ದನ್ನು ಕಂಡೋ ಅಥವಾ ನಾನು
ಮಾಡಿದ ಶಬ್ದಕ್ಕೆ ಭಯಪಟ್ಟೋ, ಅಂತು ತಟಕ್ಕನೆ ಓಡಿಹೋದನು.
------------------------------------------
೩೬ ಹೇಮಚಂದ್ರರಾಜ ವಿಲಾಸ [೨ನೇ ಅಂಕ.
ದುಃಖ.-ಅವ ಎಷ್ಟು ದೂರವಾದರೂ ಓಡಿಹೋಗಲಿ, ಅವನನ್ನು ಬೇರೆ ಹಿಡಿಯದೆ
ಬಿಡುವುದಿಲ್ಲ. ಅವಸಿದರೆ ಅವನನ್ನು ತೀರಿಸಿಕೊಳ್ಳದೇ ಬಿಡುವುದಿಲ್ಲ. ನಮ್ಮ
ಅಭಿಮಾನಶಾಲಿಗಳಾದ ನಮ್ಮ ಸ್ವಾಮಿ ಕುಟಿಲರು ಈ ರಾತ್ರೆ ಇಲ್ಲಿಗೆ ದಯಮಾ
ಡುವರು. ಕೊಲೆಪಾತಕನಾದ ಆ ಹೇಡಿಯನ್ನು ಹುಡುಕಿ ತಿಕ್ಷೆಗೆ ಯಾರು
ಗುರಿಮಾಡುತಾನೋ ಅವನು ನಮ್ಮಿಂದ ಉಪಕಾರ ಹೊಂದುವನೆಂದೂ, ಅವ
ನನ್ನು ಬೆನ್ನ ಹಾಕಿಕೊಂಡು ಔಚಿಡತಕ್ಕ ಮನುಷ್ಯನು ಮರಣದಂಡನೆಗೆ ಗುರಿ
ಯಾದಾನೆಂದೂ, ಆ ಕುಟಿಲರ ಅಧಿಕಾರಬಲದಿಂದ ಲೋಕಕ್ಕೆ ಪ್ರಕಟಪಡಿ
ಸುತೇನೆ.
ಕುಮಂತ್ರ-ಅವನ ಮನೋಗತವಾದ ಕಾರಣವನ್ನು ಮಾಡಕೂಡದೆಂದು ಅವನಿಗೆ
ಬಹುಬಗೆಯಲ್ಲಿ ಹೇಳಿ ಅವ ಅದಕ್ಕೆ ಒಪ್ಪದೆ ದುಪ್ಪ) ರಸವರ್ತನೆಗೆ ಖಂಡಿತಮಾ
ಡಿಕೊಂಡಿದ್ದದ್ದನ್ನು ಕಂಡು, ನಾನು ಕಠಿಣೋಕ್ತಿಯನ್ನಾಡಿ ಅವನನ್ನು ಹಿಡಿದು
ಕೊಡುವುದಾಗಿ ಭಯಪಡಿಸಿದೆ, ಆಗ ಅವನು ನನ್ನನ್ನು ಕುರಿತು-- "ಎಲಾ,
ವಿಭಾಗರಹಿತನಾದ ಜಾರಜನೆ, ನಿನ್ನನ್ನು ನಾನು ಪ್ರತಿಭಟಿಸಿ ನಿಂತಮಾತ್ರಕ್ಕೆ
ಜನರು ನಿನ್ನಲ್ಲಿಟ್ಟಿರಬಹುದಾದ ನಂಬಿಕೆಯ, ಆರೋಪಿಸುವ ಗುಣವೂ ನಿನ್ನ
ಮಾತಿನಲ್ಲಿ ಭರವಸೆಯನ್ನು ಹುಟ್ಟಿಸುವನೆಂದು ತಿಳಿದಿದ್ದೀಯಾ ? ಹಾಗೆ ತಿಳಿಯ
ಬೇಡ. ನಿರಾಕರಿಸಬೇಕಾದ ಇಂಥಾ ಮಾತನ್ನು ನಾನು ನಿರಾಕರಿಸಲೇ ಕರಿಸುತ್ತೇನೆ.
ನೀನು ನನ್ನ ಅಕ್ಷರವನ್ನೇ ತೋರಿಸಿದಾಗ್ಯೂ, ಅದೆಲ್ಲಾ ನಿನ್ನ ಪ್ರೇರಣೆ, ಫಿತೂರಿ,
ಕುಮ೦ತ್ರ, ಇವುಗಳಿಂದ ಉಂಟಾದ ಪಲವೆಂದು, ತಿರುಗಿಸಿ ಬಿಡುತ್ತೇನೆ. ನನ್ನ
ಮರಣದಿಂದ ಉಂಟಾಗತಕ್ಕ ಪ್ರಯೋಜನವು ನೀನು ಆಶಪಡತಕ್ಕ ಮಟ್ಟಿಗೆ ಇಲ್ಲ
ವೆಂದು ಲೋಕವು ಯೋಚಿಸುವ ಪಕ್ಷಕ್ಕೆ, ಲೋಕಕ್ಕೆ ಶೌಂರ್ಯವನ್ನು ಕಲ್ಪಿಸ
ಬೇಕಾಯಿತು,” ಹೀಗೆಂದು ಹೇಳಿದನು.
ದುಃಖ,--ಎಲ ವಜ್ರನೀಚ ! ಈ ಅಕ್ಷರ ತನ್ನ ದಲ್ಲವೆಂದು ಹೇಳಿಯಾನೆ ! ಅವ ನನಗೆ
ಹುಟ್ಟಿದವನೇ ಅಲ್ಲ. (ಒಳಗೆ ಕಹಳಾರವ).
ಕೇಳು, ರಾಜರ ಕಹಳಾರವ ! ಅವರು ಯಾಕೆ ಬರುತಾರೆ ತಿಳಿಯದು,
ಎಲ್ಲಾ ಕೋಟೇ ಬಾಗಿಲುಗಳನ್ನೂ ಹಾಕಿಸಿಬಿಡುತ್ತೇನೆ, ಆ ನೀಚ ತಪ್ಪಿಸಿಕೊಳ್ಳ
ಲಾರ. ರಾಜರು ನನಗೆ ಅಗತ್ಯವಾಗಿ ಅದನ್ನು ನಡಿಸಿಕೊಡಬೇಕು. ರಾಜ್ಯಕ್ಕೆಲ್ಲಾ
ತಿಳಿಯುವಂತೆ ಅವನ ಚಿತ್ರಪಠವನ್ನು ಎಲ್ಲಾ ಕಡೆಗೂ ಕಳುಹಿಸುತ್ತೇನೆ. ಮತ್ತು
ನನ್ನ ಆಸ್ತಿಗೆ, ಪಿತೃಭಕ್ತಿಯುಳ್ಳ ನನ್ನ ನಿಜಪುತ್ರನಾದ ನೀನೇ ಅರ್ಹನೆಂದು ಮಾಡಿ
ಬಿಡುತೇನೆ.
--------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೩೭
ಪ್ರವೇಶ.ಕುಟಿಲ, ವಿಷಜೆ, ಪರಿವಾರ.
ಕುಟಿಲ.-- ಅಯ್ಯ ಮಿತ್ರರೆ, ನಾನು ಇಲ್ಲಿಗೆ ಈಗತಾನೆ ಬಂದೆ, ಬಂದಾರಭ್ಯ ವಿಚಿತ್ರವಾದ
ಬಂದು ಸಮಾಚಾರವನ್ನು ಕೇಳುತೇನೆ.
ವಿಷಜೆ.-ಇದು ನಿಶ್ಚಯವಾಗಿದ್ದರೆ, ಅಪರಾಧಿಗೆ ಎಂಥಾ ಶಿಕ್ಷೆಯನ್ನು ಕೊಟ್ಟಾಗ್ಯೂ
ಸ್ವಲ್ಪವೇ ಇದೆ. ಸ್ವಾಮಿ, ತಮಗೆ ಕುಶಲವೆ ?
ದುಃಖ - ತಾಯೆ, ಈ ವಾರ್ಧಕ್ಯ ದಶೆಯೊಳಗೆ ನನ್ನ ಹೊಟ್ಟೆಗೆ ಬೆಂಕಿಬಿತ್ತು, ಬೆಂಕಿ
ಬಿತ್ತು.
ವಿಷಜೆ ಏನು, ನಮ್ಮ ಅಪ್ಪಾಜಿಯ ಪ್ರೇಮಪಾತ್ರ ತಮ್ಮ ಪ್ರಾಣವನ್ನು ತೆಗೆಯಲು
ದ್ಯುಕ್ತನಾದನೆ ? ನಿಮ್ಮ ಪತ್ರ, ಶುಕ್ಲಚಂದ್ರು ? .
ದುಃಖ.-ಅಮ್ಮ, ಲಜ್ಜೆಯು ಇದನ್ನು ಮರೆಮಾಚಲೆಳಸುವುದು.
ವಿಷಜೆ ನಮ್ಮ ತಂದೆಯ ದೊಂಬಿಯಸಭಿಕರಾದ ದುಷ್ಕೃರಿಗೆ ಇವನೊಬ್ಬ ಜೊತೆಗಾ
ರನಾಗಿರಲಿಲ್ಲವೆ ?
ದುಃಖ ನನಗೆ ತಿಳಿಯದು ತಾಯೆ ; ಅನ್ಯಾಯ, ಅನ್ಯಾಯ !
ಕುಮಂತ್ರ -ಹೌದು ತಾಯ, ಅವನು ಆ ಗುಂಪಿನ ಜೊತಗಾರ.
ವಿಷಜೆ - ಅವನಿಗೆ ಮನಸ್ಸು ಇಲ್ಲದಿದ್ದರೂ ಅವನ ಕಾರ್ಯೋದ್ಯೋಗವು ಆಶ್ಚರ್ಯಕರ
ವಾಗಿ ಏನೂ ಇಲ್ಲ. ಈ ವೃದ್ದರ ಆಯವನ್ನೆಲ್ಲಾ ದೋಚಿಹಾಕಿಕೊಳ್ಳುವುದ
ಕ್ಕೋಸ್ಕರ ಆತನ ವಧೆಗೆ ಅವನು ಅನುವಾಗುವಂತೆ, ಅವನನ್ನು ಎಬ್ಬಿಸಿ ಕೂರಿಸಿ
ದವರೂ ಆ ಜನರೇ, ಈ ದಿನ ಸಾಯಂಕಾಲ ನಮ್ಮ ಅಕ್ಕೈಯ್ಯನಿಂದ ಈ ವಿಷ
ಯವಾದ ಸಮಸ್ಯ ಸಂಗತಿಯೂ ಚೆನ್ನಾಗಿ ತಿಳಿದುಬಂತು. ಮತ್ತು ನಮ್ಮ
ಮನೆಯಲ್ಲಿ ಆ ಜನರು ಬಂದು ಇಳಿದುಕೊಳ ವುದಾದರೆ, ನಾನು ಮನೆಯಲ್ಲಿರ
ಕೂಡದೆಂದು ನನಗೆ ಸೂಚನೆ ಬಂತು.
ಕುಟಿಲ, ಪ್ರಿಯಳೆ, ನಾನೂ ನಮ್ಮ ಮನೆಯಲ್ಲಿ ಆ ಕಾಲದೊಳು ಇರುವುದಿಲ್ಲ.
ಬೇಕಾದರೆ ಭರವಸಕೊಡುತೇನೆ. ಕುಮಂತ, ಸುಪುತ್ರನಾದ ನೀನು ನಿನಗೆ ಅನು
ಗುಣವಾದ ನಡತೆಯನ್ನು ನಿಮ್ಮ ತಂದೆಗೆ ತೋರಿಸಿದೆ ಎಂದು ನಾನು ಕೇಳಿದೆ
ನೈಯ್ಯ
ಕುಮಂತ-ಸ್ವಾಮಿ, ಅದು ನನ್ನ ಧರ್ಮ.
ದುಃಖ..ಇವ ಆ ನೀಚನ ದುರಭಿಷಯವನ್ನು ತಿಳಿದುಕೊಂಡ ; ಅವನನ್ನು ಹಿಡಿದು
ಕೊಳ್ಳಬೇಕೆಂದು ಕೈಲಾದಮಟ್ಟಿಗೂ ಸವರಿಸುತ್ತಿರುವಾಗ ಈ ಘಾಯವಾಯಿತು,
ಸ್ವಾಮಿ, ನೋಡಿ,
------------------------------------------
೩೮ ಹೇಮಚಂದ್ರರಾಜ ವಿಲಾಸ. [೨ನೇ ಅಂಕ.
ಕುಟಿಲ,-- ಅವನನ್ನು ಅರಿಸಿಕೊಂಡು ಯಾರಾದರೂ ಹೋಗಿದಾರೆಯೆ ?
ದುಃಖ-- ಹೋಗಿದಾರೆ, ಸ್ವಾಮಿ.
ಕುಟಿಲ.--ಅವ ಮಾತ್ರ ಸಿಕ್ಕಿದರೆ, ಯಾವ ಅಪಾಯ ಭೀತಿಯೂ ಅವನಿಂದ ಹುಟ್ಟಿದ
ಹಾಗಾದೀತು. ತಮ್ಮ ಕಾರ್ಯಕ್ಕೆ ನಮ್ಮ ಅಧಿಕಾರವು ಅಧೀನವಾಗಿದ್ದಿತು. ಅಯ್ಯ
ಕುಟಿಲ, ನಿನ್ನ ಸದ್ಗುಣಗಳೂ ನಿನ್ನ ವಿಧೇಯತೆಯ ಈಗ ವಿಶೇಷವಾಗಿ ಶ್ಲಾಘ್ಯ
ವಾಗಿರುವ ಕಾರಣ, ನೀನು ನಮ್ಮ ಕಡೆಯವನಾಗಿದ್ದೀಯೆ. ನಿನ್ನಂಥಾ ನಂಬಿಕೆ
ಯುಳ್ಳವನು ನನಗೆ ಈಗ ಬಹಳ ಅಗತ್ಯವಾಗಿ ಬೇಕು. ನಮ್ಮ ರಾಜಕಾರ್ಯ
ನಿರ್ವಾಹಕ್ಕಾಗಿ ನಿನ್ನನ್ನೇ ನಾವು ಹಿಡಿಯಬೇಕು.
ಕುಮಂತ್ರ --ಸ್ವಾಮಿ, ಯಾವುದು ಏನಾದರೂ ಆಗಲಿ, ತಮ್ಮ ಸೇವೆಗೆ ಸಿದ್ಧನಾ
ಗಿದೇನೆ.
ದುಃಖ-- ಅಷ್ಟರಮಟ್ಟಿಗಾದರೆ ಸ್ವಾಮಿ, ಅವನಿಗೆ ತಾವು ಮಾಡುವ ಉಪಕಾರ
ಕ್ಕಾಗಿ ನಾನು ತಮಗೆ ಕೃತಜ್ಞನಾಗಿರುವೆನು.
ಕುಟಿಲ.-- ಯಾತಕ್ಕೊಸ್ಕರ ತಮ್ಮ ಭೇಟೇಮಾಡಿಕೊಳ್ಳಬೇಕೆಂದು ಬಂದೆವೊ ಅದನ್ನು
ತಾವು ಅರಿಯರಿ,
ವಿಷಜೆ.----ಈ ಅವೇಳೆಯಲ್ಲಿ ಹೀಗೆ ಕಾವಳ ಕವಿದುಕೊಂಡಿರುವಾಗ ತಡವರಿಸಿಕೊಂಡು
ನಾವು ಯಾತಕ್ಕೆ ಬಂದೆವೊ ಅದನ್ನು ತಾವು ಅರಿಯರಿ, ಗಂಭೀರಶಾಲಿಗಳಾದ
ದುಃಖಸಾರರೆ, ತಮ್ಮ ವಿವೇಕವನ್ನು ಉಪಯೋಗಿಸಿಕೊಳ್ಳಬೇಕಾದ ಕಾರ್ಯ
ಗೌರವ ಉಂಟು. ವೈಪನ್ನು ಹುಟ್ಟಿರುವ ಹಾಗೆ ನಮ್ಮ ತಂದೆ ನನಗೆ ಬರೆದಿದ್ದಾರೆ.
ನಮ್ಮ ಅಕ್ಕೈಯ್ಯನೂ ಅದೇ ಸಂಗತಿಗೆ ಬರೆದಿದ್ದಾರೆ. ಇದಕ್ಕೆ ನಮ್ಮ ಮನೆ
ಯಿಂದಲೇ ಉತ್ತರವನ್ನು ಬರೆಯುವುದು ಶುದ್ಧವಾಗಿಯೂ ಸರಿಯಲ್ಲವೆಂದು
ನನಗೆ ತೋರಿತು. ಅಲ್ಲಿಂದ ಬಂದ ಮುದ್ದಾಂ ಆಳುಗಳು ಇನ್ನೂ ಕಾದಿದಾರೆ ;
ಅವರನ್ನು ಕಳುಹಿಸಿಕೊಟ್ಟಿಲ್ಲ. ಸ್ವಾಮಿ ನಮ್ಮ ಆಪ್ತಮಿತ್ರರೆ, ತಮ್ಮ ಮನ
ಸ್ಪನ್ನು ಸ್ವಲ್ಪ ನಿರಾಳಮಾಡಿಕೊಂಡು ತಮ್ಮ ಮಂತ್ರಾಲೋಚನೆಯನ್ನು ನಮ್ಮ
ಕರ್ಯಕ್ಕಾಗಿ ಒದಗಿಸಿಕೊಡಬೇಕು. ಅದರ ಉಪಯೋಗ ಈಗಲೇ ಅಗತ್ಯ
ವಾಗಿದೆ.
ದುಃಖ-ನಾನು ತಮ್ಮ ಸೇವೆಗೆ ಸಿದ್ಧನಾಗಿದ್ದೇನೆ, ತಾಯೆ ಅಗತ್ಯವಾಗಿ ತಾವು ನಮ್ಮ
ಲ್ಲಿಗೆ ದಯಮಾಡಿಸಬಹುದು. (ವಾದ್ಯ-ನಿಷ್ಕ್ರಾಂತ).
........
-------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೩೯
೨ನೇ ಪ್ರಕರಣ -ದುಃಖಸಾರನ ಮಂದಿರದ ಮುಂಭಾಗ.
ಪ್ರವೇಶ. ನಿಷ್ಕಂಟಕ, ರಾಹುಕ.
ರಾಹುಕ.ನಿನಗೆ ಸುಪ್ರಭಾತವೈ. ನೀನು ಈ ಮನೆಯವನೋ ?
ನಿಷ್ಕಂಟಕ.ಹವುದು.
ರಾಹುಕ. ನಮ್ಮ ಕುದುರೆಗಳನ್ನು ಎಲ್ಲಿ ಕಟ್ಟಬೇಕು.
ನಿಷ್ಕಂಟಕ- ಆ ಜೋರೆಯಲ್ಲಿ.
ರಾಹುಕ. ನನ್ನ ಮೇಲೆ ಅಭಿಮಾನವಿದ್ದರೆ ಹೇಳಬಾರದೆ.
ನಿಷ್ಕಂಟಕ.--ನಿನ್ನ ಮೇಲೆ ಅಭಿಮಾನವಿಲ್ಲ.
ರಾಹುಕ. ಹಾಗಾದರೆ ನಿನ್ನ ಲಕ್ಷ್ಯ ನನಗೇನು ?
ನಿಷ್ಕಂಟಕ.-ನನ್ನ ಹಲ್ಲಿಗೆ ನೀನು ಸಿಕ್ಕಿದ್ದರೆ ಅಲ್ಲಿ ನನ್ನನ್ನು ಕಂಡರೆ ನಿನಗೆ ಲಕ್ಷ್ಯ
ವಿರುವಂತೆ ಮಾಡಿಕೊಳ್ಳುತಿದ್ದೆ.
ರಾಹಕ- ನೀನು ಯಾಕೆ ಹೀಗೆ ಮಾತನಾಡುತಿದೆ ? ನೀನು ಯಾರೋ ನಾನರಿಯೆ.
ನಿಷ್ಕಂಟಕ-ನಾನು ನಿನ್ನನ್ನು ಎಲ್ಲೆ ಕಣಲಾ.
ರಾಹುಕನನ್ನನ್ನು ನೀನು ಯಾರೆಂದು ಬಲ್ಲೆ ?
ನಿಷಂಟಕ-ಯಾರೆಂದೇ ? ನೀಚ, ದುಮ್ಮ, ಚಂಡಾಲ, ಮೋಸಗಾರ, ಗಂಟುಕಳ್ಳ,
ತಲೆವೊಡಕ, ಮನೆಮುರಕ, ಚಾಡಿಕೋರ, ಭಂಡ, ಅಂಜುಜಪುರಕಿ, ಕೈಲಾಗದವ,
ಹೇಡಿ, ತಿರಕ, ಖೂಳ, ನಾಯಿ, ದುರಾಚಾರಿ, ದುರ್ನೀತ, ಸಿಗ್ಗೇಡಿ, ಅಪ್ರಯೋಜಕ,
ಅವಿವೇಕಿ, ಅಜ್ಞಾನಿ, ನೀತಿಬಾಹಿರ, ಶುಂತ, ವಜ್ರಶುಂತ, ಕುಲಗೇಡಿ, ಅಲ್ಪ, ಭಂಗಿ
ಕೋರ, ಹೆಂಡಕೋರ, ಕ್ರೂರ, ಕಳ್ಳ, ಮಾತೃದ್ರೋಹಿ, ಪಿತೃದ್ರೋಹಿ, ಸ್ವಾಮಿ
ದ್ರೋಹಿ, ಗುರುದ್ರೋಹಿ, ಮಿತ್ರದ್ರೋಹಿ, ಅಯೋಗ್ಯ, ಸುಳ್ಳುಗಾರ, ಮೋಸಗಾರ,
ಭಷ್ಟ, ಅಧಮ, ಹೀಗೆಂದು ಬಲ್ಲೆ. ಈ ಬಿರುದಾವಳಿ ಒಂದೂ ನಿನ್ನವಲ್ಲವೆಂದು
ಹೇಳಿದರೆ, ಯಾರನ್ನು ನಾನು ಹಿಡಿದು 'ಒಯಕ' ಎನ್ನು ವವರಿಗೂ ಒದೆಯು
ತೇನೊ ಅಂಥವನು, ಎಂದೂ ಬಲ್ಲೆ ಕಣೆಲಾ.
ರಾಹುಕ, ಎಂಥಾ ಪಿಶಾಚದಂಥವನೊ ನೀನು ? ನೀನು ಯಾರೋ ನಾನು ಕಾಣೆ,
ನಾನು ಯಾರೋ ನೀನು ಕಾಣೆ ; ಆದರೂ ನನ್ನನ್ನು ಹೀಗೆ ಬಯ್ಯಬೇಕಾದರೆ,
ನಿಷ೦ಟಕ.ನನ್ನ ನ್ನು ಕಂಡೂಕಾಣೆನೆಂದು ಹೇಳುತೀಯೆನೆಲಾ ? ಎಂಥಾ ಭಂಡ
ಸುಳ್ಳುಗಾರನೆಲಾ ನೀನು ? ಧೊರೆಯ ಸಮೀಪದಲ್ಲಿ ನಾನು ನಿನ್ನನ್ನು ಹಿಡಿದು
ಒದ್ದು ಇನ್ನೂ ಎರಡು ದಿವಸವಾಗಲಿಲ್ಲ. ನಿಂತುಕೊ, ಖೂಳ ; ರಾತ್ರೆಯಾದರೂ
ಚಿಂತೆ ಇಲ್ಲ; ಬೆಳದಿಂಗಳಿದೆ. ಮುಖವನ್ನು ಕ್ಷೌರಕನ ಕೈಲಿಕೊಟ್ಟು ಬೆಳ್ಳಗೆ
-----------------------------------------
೪೦ ಹೇಮಚಂದ್ರರಾಜ ವಿಲಾಸ, [೨ನೇ ಅಂಕ
ಮಾಡಿಸಿಕೊಂಡು ಶಿಸ್ತು ಮಾಡಿಕೊಂಡ ಹಾಗಲ್ಲ; ಬಾ ಈಗ, ನಿನ್ನ ಕಣ್ಣ ಬೆಳ್ಳಗೆ
ಮಾಡುತ್ತೇನೆ, ಚಂಡಾಲ, ನಿಲ್ಲು. (ಕತ್ತಿಯನ್ನು ಹಿರಿಯುತಾ)
ರಾಹುಕ.ಹೋಗು, ನಿನಗೂ ನನಗೂ ಏನೂ ಸಂಬಂಧವಿಲ್ಲ.
ನಿಷ್ಕಂಟಕ.--ನಿಲ್ಲೆಲ್ಲಾ, ದ್ರೋಹಿ. ನಮ್ಮ ಧೋರೆಗೆ ವಿರುದ್ಧವಾದ ಕಾಗದಗಳನ್ನು
ತಂದು ಇದ್ದಿದೆ. ರಾಜಾಧಿರಾಜ ಅವಳ ತಂದೆ; ಆತನಮೇಲೆ ಅಗೊ ಆ ಬೊಂಬೆ
ಆಟದವಳು ಆಡುವ ಆಟವನ್ನು ಆಡುತೀಯೆ, ಏಳು, ಇಲ್ಲದಿದ್ದರೆ ನಿನ್ನ ಮೀನ
ಖಂಡವನ್ನು ಕತ್ತರಿಸಿ ಬಿಟ್ಟೇನು, ಏಳು, ನೀಚ.
ರಾಹುಕ.--ಅಯ್ಯೋ ! ಸತ್ತೆ! ದಿಕ್ಕಿಲ್ಲ.
ನಿಷ್ಕಂಟಕ.-ಬಾ, ಗುಲಾಮು, ನಿಂತುಗೊಳ್ಳಲಾ ದ್ರೋಹಿ, ತಕೊ ;
(ಅವನನ್ನು ಹೊಡೆಯುತಾ).
ರಾಹುಕ.-ಅಯ್ಯೋ ! ದಿಕ್ಕಿಲ್ಲ. ಸತ್ತೆ ! ಸತ್ತೆ !
ಪ್ರವೇಶ.-ಆಯುಧಪಾಣಿಯಾದ ಕುಮಂತ , ಕುಟಿಲ, ವಿಷಜೆ,
ದುಃಖಸಾರ, ಚಾಕರರು
ಕುಮಂತ್ರ.ಏನು, ಇದೇನು ? (ಅವರನ್ನು ಬಿಡಿಸುತ್ತಾ).
ನಿಷ್ಕಂಟಕ.--ಹಾಗೆ ನಿನಗೆ ಇಷ್ಮವಿದ್ದರೆ ನೀನೇ ಬಾರೆಲಾ, ಹೈದಾ, ನಿನ್ನನ್ನೇ
“ತುಕಡಾಮಾಡಿ ರುಚಿ ತೋರಿಸುತ್ತೇನೆ. ಬಾ, ಬಾ ಹೈದಾ, ಬಾಲವೃದೃನೆ, ಬಾ.
ದುಃಖ-ಆಯುಧ ! ಆಯುಧ ! ಇದೇನು ಇಲ್ಲಿ, ಹೋ !
ಕುಟಿಲ-- ಪ್ರಾಣದಮೇಲೆ ಇಹ್ಮವಿದ್ದರೆ ಎಲ್ಲರೂ ಸುಮ್ಮನಿರಬೇಕು. ಪುನಃ ಯಾರಾ
ದರೂ ಹೊಡೆದರೆ ಅವರಿಗೆ ತತ್‌ಕ್ಷಣವೇ ಮರಣದಂಡನೆಯಾದೀತು. ಇದೇನು ?
ವಿಷಜೆ --ನಮ್ಮ ಅಕ್ಕೈಯ್ಯನಕಡೇ ಆಳು, ಧೋರೇಕಡೇ ಆಳು, ಇಬ್ಬರೂ ಸೇರಿದ್ದಾರೆ
ಕುಟಿಲ.-ವ್ಯಾಜ್ಯವೇನು ? ಮಾತಾಡಿ.
ರಾಹು-ಸ್ವಾಮಿ, ನನಗೆ ಉಸಿರೇ ಇಲ್ಲ, ಮಾತನಾಡಲಾರೆ.
ನಿಷ್ಕಂಟಕ-ಅದೇನೂ ಆಶ್ಚರ್ಯವಲ್ಲ ಕಣೆಲಾ, ನಿನ್ನ ಪರಾಕ್ರಮವನ್ನು ಅಷ್ಟರ
ಮಟ್ಟಿಗೆ ತೋರಿಸಿಕೊಂಡೆ. ಹೇಡಿ, ಮೋಸಗಾರ, ನಿನ್ನನ್ನು ಬ್ರಹ್ಮ ನಿರ್ಮಿಸಲಿಲ್ಲ,
ಚಿಪ್ಪಿಗ ನಿರ್ಮಿಸಿದ, ಕಣೆ್ಲಾ.
ಕುಟಿಲ.-ನೀನು ವಿಚಿತ್ರ ಪುರುಷನಾಗಿದ್ದೀಯೆ ; ಚಿಪ್ಪಿಗೆ ಮನುಷ್ಯನನ್ನು ನಿರ್ಮಿ
ಸುವನೆ ?
ನಿಷ್ಕಂಟಕ.-ಹವುದು, ಚಿಪ್ಪಿಗ, ಸ್ವಾಮಿ, ಕಲ್ಲುಗೆಲಸದವನಾಗಲಿ, ಚಿತ್ರಗಾರನಾ
ಗಲಿ, ಆಯಾ ಉದ್ಯೋಗವನ್ನು ಕಲಿಯುವುದಕ್ಕೆ ಮೊದಲುವಾಡಿ ಎರಡು ಗಳಿಗೆ
--------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೪೧
ಯಾಗಿದ್ದರೂ ಸರಿಯೆ, ಅಂಥಾ ವಿದ್ಯಾರ್ಥಿ ಸಹಿತ ಇಷ್ಟು ಅವಿವೇಕವಾಗಿ ನಿರ್ಮಿ
ಸುತ್ತಿರಲಿಲ್ಲ.
ಕುಟಿಲ-ಆದರೂ, ನಿಮನಿಮಗೆ ವ್ಯಾಯಾಕೆ ಉಂಟಾಯಿತು ಹೇಳಿ.
ರಾಹುಕ ಈ ಮುದಿಘಾತುಕ, ಸ್ವಾಮಿ, ಇವನ ನರೆತ ಗಡ್ಡವನ್ನು ನೋಡಿ ಕನಿಕರ
ದಿಂದ ನಾನು ಪ್ರಾಣಸಹಿತ ಬಿಟ್ಟಂಥಾ ಈ--
ನಿಷ್ಕಂಟಕ... ಛಿ! ಮುಖದಮೇಲಿನ ಉಣ್ಣಿಯೆ, ಪ್ರಯೋಜನಕ್ಕೆ ಬಾರದ ಅಂಗವೆ!
ಸ್ವಾಮಿ, ತಮ್ಮ ಅಪ್ಪಣೆಯಾದರ, ಈ ವರಟ ಖೂಳನನ್ನು ತುಳಿದು ಗಾರೇ
ಮಾಡಿ, ಈ ಗೋಡೆಗೆ ಬಳಿಯುತ್ತೇನೆ. ನರಗೂದಲಿಗೋಸ್ಕರ ಬಿಟ್ಟೆಯಾ, ನಾಯಿ,
ಬಾಲ ಅಲ್ಲಾಳಿ ?
ಕುಟಿಲ, ಎಲಾ, ಸುಮ್ಮನಿರು, ' ವನಸಿನಂಥಾ ಗುಲಾಮು, ನಿನಗೆ ಮರ್ಯಾದೆ ತಿಳಿ
ಯದೆ ?
ನಿಷ್ಕಂಟಕ-ಹವುದು, ಬಲ್ಲೆ ಸ್ವಾಮಿ ; ಆವರ ಕೋಪಕ್ಕೆ ಮಾನ್ಯ ಉಂಟು.
ಕುಟಿಲ..ನಿನಗೇಕೆ ಕೋಪ ?
ನಿಷ್ಕಂಟಕ...ಪಾಮಾಣಿಕತೆಯಿಂದ ಅಲಂಕೃತನಾಗದ ಈ ಗುಲಾಮನು ಶಾಲಜೋ
ಡಿಯಿಂದ ಅಲಂಕೃತನಾಗಿದಾನಲ್ಲಾ ಎಂದು. ಇಂಥಾ ಹಲ್ಲು ಕಿಸಗರಾದ ಮೋಸ
ಗಾರರು ಮಹಾ ಸಂಬಂಧದ ಕಟ್ಟುಗಳನ್ನೂ ಇಲಿಗಳ ಹಗೆ ಎರಡಾಗಿ ಕಡಿದು
ಬಿಡುತ್ತಾರೆ ; ತಂತಮ್ಮ ಯಜಮಾನರ ಸ್ವಭಾವದಲ್ಲಿ ಕೋಪತಾಪಗಳು ಹ್ಯಾಗೆ
ಹ್ಯಾಗೆ ಹಚ್ಚಿದರೆ ಹಾಗೆ ಹಾಗೆ ಅದೇ ಸರಿ ಎಂದು ಸ್ತೋತ್ರಮಾಡಿ ಕುಣಿಯು
ತ್ತಾರೆ ; ಅಗ್ನಿಗೆ ಎಂಣೆಯನ್ನು ಹಾಕುವರು, ಅಲಿಕಲ್ಲಿಗೆ ತನುವನ್ನು ಹೆಚ್ಚಿ
ಸುವರು, ಉಂಟು ಎನ್ನು ವುದು, ಇಲ್ಲ ಎನ್ನು ವುದು, ಗಾಳಿಬೀಸಿದ ಹಾಗೆಲ್ಲಾ
ಕ್ಷಣೇ ಕ್ಷಣೇ ತಮ್ಮ ಸ್ವಾಮಿಯ ಮುಖರಸವನ್ನು ನೋಡಿ ತಾವೂ ಹಾಗೆಯೇ
ಮುಖವನ್ನು ಮಾಡಿಕೊಳ್ಳುತ್ತಾ, ಹೀಗಲ್ಲಾ ನೆಗೆದಾಡುತ್ತಾರೆ. ಇವರಿಗೆ ನಾಯಿ
ಗಳ ಹಾಗೆ ಹಿಂದೆ ಹೋಗುವುದು ಮಾತ್ರ ತಿಳಿಯುವುದೇ ಹೊರತು ಇನ್ನೇನೂ
ತಿಳಿಯದು. ಹತೆ, ನಿನ್ನ ಕ್ಷಯರೋಗದ ಮುಖಕ್ಕೆ ಬೆಂಕೀ ಹಾಕ ! ಹಾಸ್ಯಗಾರನ
ಮಾತನ್ನು ಕಂಡಹಾಗೆ ನನ್ನ ಮಾತಿಗೆ ಹುಸಿನಗೇ ನಗುತ್ತೀಯಾ ? ಹಂದಿಯೆ,
ನೀನು ಈಚೆಗೆ ಬರಬೇಕು, ವಞಕ್ ಎನ್ನುವಹಾಗೆ ಒದ್ದು ಕಬ್ಬಾಳದುರ್ಗಕ್ಕೆ
ಕಳುಹಿಸುತಿದ್ದೆ.
ಕುಟಿಲ..ಏನೊ ಮುದುಕ, ನಿನಗೆ, ಹುಚ್ಚೇನೋ ?
ದುಃಖ, ನಿಮಗೆ ವಿರುದ್ಧ ಹ್ಯಾಗೆ ಹುಟ್ಟಿತು ? ಹೇಳು.
ನಿಷ್ಕಂಟಕ.-ಈ ಗುಲಾಮನಿಗೂ ನನಗೂ ಇರುವ ವಿರುದ್ಧಕ್ಕಿಂತಲೂ ಹೆಚ್ಚಾದ
ವಿರುದ್ಧ ಇನ್ನೆಲ್ಲಿಯೂ ಇಲ್ಲ.
------------------------------------------
೪೨ ಹೇಮಚಂದ್ರರಾಜ ವಿಲಾಸ [೨ನೇ ಅಂಕ
ಕುಟಿಲ. ಅವನನ್ನು ಯಾಕೆ ಗುಲಾಮ ಎನ್ನುತಿಯೆ ? ಅವನ ಅಪರಾಧವೇನು ?
ನಿಷ೦ಟಕ.ಅವನ ಮುಖವನ್ನು ಕಂಡರೆ ನನಗೆ ಆಗದು.
ಕುಟಿಲ..ನನ್ನ ಮುಖ, ಅವನ ಮುಖ, ಅವಳ ಮುಖ, ಯಾವದನ್ನು ಕಂಡರೂ
ಆಗದಿರಬಹುದು, ಒಂದುವೇಳೆ.
ನಿಪ೦ಟಕ.-ನಿಷ್ಕಪಟವಾಗಿರುವುದು ನನ್ನ ಸ್ವಭಾವ ; ಈಗ ನನ್ನೆದುರಿಗೆ ನಿಂತಿ
ರುವ ದಿಂಬಗಳಿಗೆ ಕಲಶವಾಗಿರುವ ಮುಖಗಳಿಗಿಂತಲೂ ಉತ್ತಮವಾದ ಮುಖ
ಗಳನ್ನು ನನ್ನ ಕಾಲದಲ್ಲಿ ನಾನು ನೋಡಿಬಲ್ಲೆ.
ಕುಟಿಲ.--ಇವ ಯಾರೋ ಒಬ್ಬ; ಹೊಕೆಯನ್ನ ರಿಯದವನೆಂದು ಯಾರೂ ಹೊಗಳಿರ
ಬಹುದು, ಅದಕ್ಕೆ ಒರಟುತನವನ್ನು ಮೇಲೆ ಹಾಕಿಕೊಂಡು, ತನ್ನ ಸ್ವಭಾವ
ವನ್ನೇ ಬದಲಾಯಿಸಿಕೊಂಡಿದ್ದಾನೆ. ಮುಖಸ್ತುತಿಮಾಡಲಾರನಂತೆ. ಅಯ್ಯೋ
ಪಾಪ ! ಪ್ರಾಮಾಣಿಕನಾದ ನಿಷ್ಕಪಟ, ನಿಶ್ಚಲವನ್ನು ಹೇಳಲೇಬೇಕಂತೆ.
ಅದನ್ನು ಹಾಗೆ ನಿಶ್ಚಯವೆಂದು ತಿಳಿದುಕೊಳ್ಳತಕ್ಕವರು ಮಾತ್ರ ಸಂದೇಹ.
ಅಷ್ಪು ಹೊರತು ಇವ ಏನೊ ಪ್ರಾಮಾಣಿಕನಂತೆ! ಇಂಥಾ ಗುಲಾಮರನ್ನು
ನಾನು ಬಲ್ಲೆ. ಈ ನಿಷ್ಕಾಪಟ್ಯವೆಂಬ ಗುಣದಲ್ಲಿ ವಿಶೇಷವಾದ ತಂತ್ರವನ್ನೂ
ದುರಭಿಪ್ರಾಯವನ್ನೂ ಆಚ್ಛಾದಿಸಿಕೊಂಡು, ತಾವು ಮಾಡುವ ಅತಿಚಮತ್ಕಾರ
ವಾದ ಕಾರ್ಯಗಳಿಂದ ಸ್ವಾಮಿಗೆ ಮುಖೋಲ್ಲಾಸವನ್ನು ಹುಟ್ಟಿಸಿ, ಅದರಿಂದ
ಇಪ್ಪತ್ತು ಜನ ಅವಿವೇಕಿಗಳಾದ ಭೃತ್ಯರು ಉಂಟುಮಾಡುವ ಕೇಡಿಗಿಂತಲೂ
ಹೆಚ್ಚು ಕೇಡನ್ನು ಉಂಟುಮಾಡುವರು.
ನಿಷ್ಕಂಟಕ.--ಸ್ವಾಮಿ, ನಿಶ್ಚಯವಾಗಿಯ, ಪ್ರಾಮಾಣಿಕವಾಗಿಯೂ, ಮತ್ತು
ಯಾರ ಜಾಜ್ವಲ್ಯಮಾನವಾಗಿ ಉರಿಯುತಿರುವ ನಕ್ಷತ್ರದ ಪ್ರಭಾಮಾಲೆಯ ಮುಂದೆ
ಸೂರ್ಯನ ಪ್ರಕಾಶವು ಮಿಣಗುಟ್ಟುವುದೋ ಅಂಥಾ ತಮ್ಮ ಆಜ್ಞಾನುಸಾರವೂ--
ಕುಟಿಲ.-- ಇದರಿಂದ ನಿನ್ನ ಅಭಿಪ್ರಾಯವೇನು ?
ನಿಷ್ಕಂಟಕ. ತಮಗೆ ಒಪ್ಪಿಲ್ಲದೇ ಇರತಕ್ಕೆ ನನ್ನ ಭಾಷೆಯನ್ನು ಬದಲಾಯಿಸಿಕೊ
ಳ್ಳುವುದು. ನಾನು ಮುಖಸ್ತುತಿ ಮಾಡತಕ್ಕವನಲ್ಲವೆಂದು ನಾನು ಬಲ್ಲೆ. ಸಾಧಾ
ರಣವಾದ ಮಾತುಗಳನ್ನಾಡಿ ತಮಗೆ ಮೋಸಗೊಳಿಸಿದವನು ಸಾಧಾರಣ ನೀಚನಲ್ಲ.
ಆದರೆ ಅಂಥವನಾಗೆಂದು ತಾವು ನನ್ನನ್ನು ಕೇಳಿಕೊಳ್ಳುವ ಮಟ್ಟಿಗೂ ತಮ್ಮ
ಅಸಮಾಧಾನವನ್ನು ನಾನು ಸಂಪಾದಿಸಿಕೊಂಡಿದ್ದಾಗ್ಯೂ, ನಾನು ಬೇರೇ ಅಂಥಾ
ನೀಚನಾಗಲಾರೆ.
ಕುಟಿಲ, ಅವನಿಗೆ ನೀನೇನು ಮಾಡಿದೆ ?
ರಾಹುಕ-ನಾನೇನೂ ಮಾಡಲಿಲ್ಲ. ಇವನ ಚಾಡೀಮಾತನ್ನು ಕೇಳಿಕೊಂಡು ಇವನ
ಯಜಮಾನನಾದ ಧೊರೆಯು ನನ್ನನ್ನು ಹೊಡೆದರು. ಆತನ ಕೋಪವನ್ನು
-------------------------------------------
೨ನೇ'ಪ್ರಕರಣ.] ಹೇಮಚಂದ್ರರಾಜ ವಿಲಾಸ. ೪೩
ಇವನೂ ಮೆಚ್ಚಿ ಸರಿ ಎಂದು ಹೇಳುತ್ತಾ, ನನ್ನನ್ನು ಹಿಂದುಗಡೆಯಲ್ಲಿ ಒದ್ಧನು.
ಹೀಗೆ ಕೆಳಗೆ ಬೀಳಲು ಇವನು ನನಗೆ ಅವಮಾನಮಾಡಿ, ಬೈದು, ವಿಪರೀತವಾಗಿ
ಪೌರುಷವನ್ನು ಮೇಲೆಹಾಕಿಕೊಂಡು, ಅದರಿಂದ ಖ್ಯಾತಿಯನ್ನು ಸಂಪಾದಿಸಿ
ಕೊಂಡ ಮಹಾವೀರನಂತೆ ಭಾವಿಸಿಕೊಂಡು, ಕೆಳಕ್ಕೆ ಬಿದ್ದ ವನಮೇಲೆ ಪರಾಕ್ರಮ
ವನ್ನು ತೋರಿಸಿದ್ದಕ್ಕಾಗಿ ರಾಜನಿಂದ ಶ್ಲಾಘನೆಯನ್ನು ಹೊಂದಿ, ಇಂಥಾ ಮಹಾ
ಪರಾಕ್ರಮ ದಿಂದ ಉಬ್ಬಿ, ಈಗ ಪುನಃ ಇಲ್ಲಿ ನನ್ನ ಮೇಲೆ ಕತ್ತಿ ಹಿರಿದುಕೊಂಡು
ಬಂದನು.
ನಿಷ್ಕ೦ಟಕ..ಇಂಥಾ ನೀಚರಮುಂದೆ, ಈ ಹೇಡಿಗಳಮುಂದೆ, ಆ ಸಾಕ್ಷಾತ್ ಷನ್ಮು
ಖನಾದರೂ ಅಪ್ರಯೋಜಕನೇ,
ಕುಟಿಲ.--ತಕೊಂಡು ಬನ್ನಿ ಕೋಳವನ್ನ ! ಎಲಾ, ಮೂರ್ಖತನದ ಮುದಿಗೂಬೆ,
ಮುಪ್ಪಿನ ಮಹಾಪಾತಕನೆ, ನಿನಗೆ ಬುದ್ದಿಕಲಿಸಿಕೊಡುತ್ತೇನೆ, ತಾಳು.
ನಿಷ್ಕಂಟಕ.ಸ್ವಾಮಿ, ಕಲಿತುಕೊಳ್ಳುವುದಕ್ಕೆ ನನಗೆ ಬಹಳ ವಯಸ್ಸಾಗಿದೆ ; ನನ
ಗಾಗಿ ಕೊಳವನ್ನು ತರಿಸಬೇಡಿ. ನಾನು ರಾಜಭೃತ್ಯ ; ರಾಜರ ಕಾರ್ಯಕ್ಕಾಗಿಯೇ
ನನ್ನನ್ನು ಇಲ್ಲಿಗೆ ಕಳುಹಿಸಿದ್ದು, ಅವರ ಭೃತ್ಯನಿಗೆ ಕೊಳವನ್ನು ಹಾಕಿಸಿದರೆ
ನನ್ನ ಸ್ವಾಮಿಗೆ ಸ್ವಲ್ಪ ಮಯ್ಯಾದೆಯನ್ನೂ ತೋರಿಸದೆ ಅವರಮೇಲೆ ದ್ವೇಷವನ್ನು
ಸಾಧಿಸಿದ ಹಾಗಾಗುವುದು.
ಕುಟಿಲ.ಇರಲಿ, ತೆಗೆದುಕೊಂಡು ಬನ್ನಿ ರೋ, ಕೋಳವನ್ನ, ನನ್ನಾಣೆಯಾಗಿಯೂ
ಅವ ಅಲ್ಲಿ ಮಧ್ಯಾನ್ಹದವರಿಗೂ ಕೂತೇತೀರಬೇಕು.
ವಿಷಜೆ.--ಮಧ್ಯಾನ್ಹದವರಿಗೂ, ರಾತ್ರೆವರಿಗೂ, ರಾತ್ರೆ ಯೆಲ್ಲಾ.
ನಿಷ್ಕಂಟಕ.-ತಾಯಿ, ನಾನು ನಿಮ್ಮ ತಂದೆಯು ನಾಯಿಯಾಗಿದ್ದರೂ ಕೂಡ ಹೀಗೆ
ಕಾಣಕೂಡದು.
ವಿಷಜೆ-ಅವನ ಗುಲಾಮನಾದ್ದರಿಂದ, ಹೀಗೆ ಕಾಣುವುದು ಸರಿ.
ಕುಟಿಲ.---ನಮ್ಮತಿಗೆ ಹೇಳಿದಂಥಾ ಬಂದವನೇ ಇವ. ಬನ್ನಿ, ತೆಗೆದುಕೊಂಡು
ಬನ್ನಿ ಕೋಳವನ್ನ (ಕೋಳ ಬರುವುದು.)
ದುಃಖ, ಸ್ವಾಮಿ ತಾವು ಹಾಗೆ ಮಾಡಕೂಡದೆಂದು ಪ್ರಾರ್ಥಿಸುತ್ತೇನೆ. ಅವನ ಅಪ
ರಾಧವೇನೂ ವಿಶೇಷವಾದ್ದೇ ಸರಿ, ಅದಕ್ಕಾಗಿ ಮಹಾರಾಜರಾದ ಧೊರೆಗಳಲ್ಲಿ ಅವ
ನಿಗೆ ಶಿಕ್ಷೆಯಾಗುವುದು. ತಾವು ಯೋಚಿಸಿರುವ ದಂಡನೆಯು ಕಳ್ಳತನ ಮುಂತಾದ
ಪಾತಕಗಳನ್ನು ಮಾಡಿದ ನೀಚರಿಗೆ ಕೊಡತಕ್ಕ ಹೇಯವಾದ ದಂಡನೆಯಾಗಿದೆ.
ಅವರ ನೃತ್ಯವನ್ನು ಹೀಗೆ ನಿರ್ಬಂಧಿಸಿ ತನ್ಮೂಲಕ ತಮ್ಮನ್ನು ಅವಮಾನಪಡಿಸಿದ
ರಂದು ಧರೆಗಳಿಗೆ ಮನಃಖೇದ ಉಂಟಾದೀತು.
---------------------------------------------
೪೪ ಹೇಮಚಂದ್ರರಾಜ ವಿಲಾಸ, [೧ನೇ ಅಂಕ
ಕುಟಿಲ.-ಅದಕ್ಕೆ ನಾನು ಹೊಣೆ.
ವಿಷಜೆ.--ತಮ್ಮಕಡೇ ರಾದುಭಾರಿಗೆ ಹೀಗೆ ಬೈದು ಹೊಡೆದ್ದಕ್ಕಾಗಿ ನಮ್ಮಕ್ಕೈಯ್ಯ
ನಿಗೆ ಇನ್ನೂ ಹೆಚ್ಚಾಗಿ ಖೇದ ಉಂಟಾಗಬಹುದು. ಅವನ ಕೈಗೆ ಹಾಕಿ.
(ನಿಷ್ಕಂಟಕನಿಗೆ ಕೋಳ ಪ್ರಾಪ್ತಿಯಾಗುವುದು.)
ತಾವು ದಯಮಾಡಿ, ಹೋಗೋಣ. (ನಿಷ್ಕಂಟಕ, ದುಃಖಸಾರ, ಹೊರತು,
ಉಳದವರ ನಿಷ್ಕ್ರಾಂತ )
ದುಃಖ.--ಎಲೈ ಮಿತ್ರನೆ, ನಿನಗಾಗಿ ನಾನು ವ್ಯಸನಪಡುವೆನು. ಕುಟಿಲರಾಜರ ದಯ
ಹಾಗಿತ್ತು ; ಇವರ ಸ್ವಭಾವವೇನೊ ಲೋಕವೆಲ್ಲಾ ತಿಳಿದಹಾಗೆಯೇ, ಘರ್ಷಣೆ
ಯನ್ನು ತಡೆಯಲಾರದು, ಪ್ರತಿಭಟಿಸಿ ಮಾತನಾಡಲು ಅಸಾಧ್ಯ. ನಿನ್ನ ವಿಷಯ
ವನ್ನು ನಾನು ಅವರಲ್ಲಿ ಅರಿಕೇಮಾಡಿಕೊಳ್ಳುತ್ತೇನೆ.
ನಿಷ್ಕಂಟಕ..-ಸ್ವಾಮಿ, ಬೇಡಿ್, ಅರಿಕೇಮಾಡಿಕೊಳ್ಳಬೇಡಿ. ಕಾವಲು ಕಾದುಕಾದು,
ಸುತ್ತಿಸುತ್ತಿ ನನಗೆ ಸಾಕಾಗಿದೆ. ಸ್ವಲ್ಪ ಹೊತ್ತು ನಿದ್ರೆಮಾಡುತ್ತೇನೆ ; ಮಿಕ್ಕ
ಹೊತ್ತಿನಲ್ಲಿ ಸಿಳ್ಳು ಹಾಕಿಕೊಂಡಿರುತ್ತೇನೆ. ಸಜ್ಜನರಿಗೆ ದುರವಸ್ಥೆ ಪ್ರಾಪ್ತವಾಗ
ಬಹುದು. ತಮಗೆ ಸುಪ್ರಭಾತವಾಗಲಿ, ಸ್ವಾಮಿ.
ದುಃಖ ಈ ಭಾಗದಲ್ಲಿ ಕುಟಿಲರಾಜರಿಂದ ತಪ್ಪಾಯಿತು. ಇದರಿಂದ ಮನಾಸ್ತಾಪ
ಉಂಟಾಗುವುದು. - (ನಿಷ್ಕ್ರಾಂತ.)
ನಿಷ್ಕಂಟಕ. ಅಯ್ಯೋ ! ಸಜ್ಜನನಾದ ದೊರಯು, ಧರ್ಮರಾಯನಿಗೆ ರಾಜ್ಯ ಹೋಗಿ
ಅರಣ್ಯವಾಸ ಪ್ರಾಪ್ತವಾದ ಹಾಗೆ ನಿನಗೂ ಆಯಿತಲ್ಲಾ ! ದೈವಕೃಪಾರಸದಲ್ಲಿ
ಇಳೀದಮುಳುಗಿ ತೇಲುತ್ತಿದ್ದ ನೀನು ಸಾದಾರಣರಂತೆ ಕರಪೆಗೆ ಬಂದೆಯಲ್ಲಾ !
ಆಕಾಶಗತವಾದ ಬೆಳಕೆ, ಈ ಕಾಗದವನ್ನು ನಾನು ನೋಡಿಕೊಳ್ಳುವ ಹಾಗೆ
ಆಪ್ಯಾಯನವಾದ ನಿನ್ನ ಸುಪ್ರಕಾಶವನ್ನು ಈ ಭೂಮಿಯವರಿಗೂ ಪ್ರಸರಿಸು.
ಕಷ್ಟದೆಶೆವಿನಾ ಮತ್ತೆ ಯಾವುದೂ ಅಸಾಧ್ಯವಾದ ಮಹತ್ತುಗಳು ಜರಗಿದ್ದನ್ನು
ಕಾಣುವುದಿಲ್ಲ. ಇದು ಇಂದುಕಲೆಯಿಂದ ಬಂದದ್ದು ; ಹೀಗೆ ನಾನು ವೇಷವನ್ನು
ಬದಲಾಯಿಸಿಕೊಂಡಿರುವುದನ್ನು ದೇವರ ದಯದಿಂದ ಆಕೆ ಕೇಳಿದಾಳೆ ;
“ ಇಂಥಾ ಅವ್ಯವಸ್ಥೆಯಾದ ಸ್ಥಿತಿಯನ್ನು ಸರಿಮಾಡಿ, ಆದ ನಷ್ಟಕ್ಕೆ ಪ್ರತೀ
ಕಾರವನ್ನು ಮಾಡಲು ವ್ಯವಧಾನಮಾಡಿಕೊಳ್ತೇನೆ.''--ಕಾವಲು ಕಾದು
ಕಾದು ಆಯಾಸವಾಗಿದೆ. ಈ ಅಪಮಾನಕರವಾದ ಸ್ಥಿತಿಯನ್ನು ನೋಡದಹಾಗೆ
ಕಣ್ಣುಗಳಾ, ವಿಶ್ರಾಂತಿಯನ್ನು ಹೊಂದಿ. ಅದೃಷ್ಟ್ಯವೆ, ಈಗ ಹೋಗಿಬಾ ;
ಇನ್ನೊಂದು ಸಾರಿ ನಿನ್ನ ಮಂದಸ್ಮಿತದ ಕಿರಣಗಳನ್ನು ಪ್ರನರಿಸು. ನಿನ್ನ ಚಕ
ತಿರುಗುತ್ತಲೇ ಇರಲಿ. ' (ನಿದ್ರೆ ಮಾಡುವನು)
----------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೪೫
೩ನೇ ಪ್ರಕರಣ-ಕಾಡು,
ಪ್ರವೇಶ.-ಶುಕ್ಷಚಂದ್ರ.
ಶು -ನನ್ನ ಹೆಸರನ್ನು ಹಿಡಿದು ಕೂಗಿದ್ದು ನನಗೆ ಕೇಳಿಸಿತು. ಅದೃಷ್ಯವಶಾತು
ದೊರತ ಮರದ ಪೊಟರೆಯನ್ನು ಆಶ್ರೈಸಿ ಯಾರ ಕೈಗೂ ಸಿಕ್ಕದೆ ತಪ್ಪಿಸಿಕೊಂಡೆ.
ನನ್ನನ್ನು ಹಿಡಿಯುವ ವಿಷಯದಲ್ಲಿ ವಿಶೇಷವಾಗಿ ಕಾದು ಕಾದು ಅತ್ಯಧಿಕವಾದ
ಜಾಗರೂಕತೆಯನ್ನು ತೋರ್ಪಡಿಸದೇ ಇರತಕ್ಕಂಥಾ ಸ್ಥಳ ಯಾವುದೂ ಇಲ್ಲ.
ನನ್ನ ತಲೆಯನ್ನು ತಪ್ಪಿಸಿಕೊಳ್ಳುವ ಹಾಗೆ ಅನುಕೂಲವಿರುವವರಿಗೂ ಆತ್ಮ
ಸಂರಕ್ಷಣೆಯನ್ನು ನೋಡಿಕೊಳ್ಳುತ್ತೇನೆ. ದರಿದ್ರಾವಸ್ಥೆಯು ಮನುಷ್ಯ ಜನ್ಮ
ವನ್ನೂ ತಿರಸ್ಕರಿಸಿ, ತಿರ್ಯಗ್ಜಂತುಗಳ ಸ್ಥಿತಿಗೆ ತರುವಂಥಾ ಅತಿಹೇಯವಾದ, ನೀಚ
ವೇಷವನ್ನು ಹಾಕಿಕೊಳ್ಳುವುದಕ್ಕೆ ನಿಶ್ಚಯಮಾಡಿಕೊಂಡಿದ್ದೇನೆ. ಮುಖಕ್ಕೆಲ್ಲಾ
ಗಂಧವನೂ ವಿಭೂತಿಯನ್ನೂ ವಿಧವಿಧವಾಗಿ ಬರೆದುಕೊಳತೇನೆ. ಕಂಬಳಿ
ಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತೇನೆ. ತಲೆಗೂದಲಿಗೆ ಆಲದಹಾಲನ್ನೂ ಹಾಕಿ
ಅದನ್ನು ಜಟೆಬೆಳಿಸಿಕೊಳ್ಳುತ್ತೇನೆ. ಹೀಗೆ ಬರೀ ಮೈಲಿರುತ್ತಾ, ಮಳೆ ಗಾಳಿ ಬಿಸಿ
ಲುಗಳ ಹೊಡೆತಕ್ಕೆ ಎಡೆಯಾಗಿರುತೇನೆ. ಈ ದೇಶದಲ್ಲಿ ಜೋಗಿಗಳು ಇಲ್ಲವೆ ?
ಅದೇ ನನಗ ಬಂದು ಅನುಕೂಲವಾಯಿತು. ಅವರ ಹಾಗೆಯೇ ಕೂಗುತ್ತಾ,
ಹುಚ್ಯ ಪದಗಳನ್ನು ಹೇಳುತ್ತಾ, ಊರಿಂದ ಊರಿಗೂ, ಮನೆಯಿಂದ ಮನೆಗೂ,
ಹೋಗುತ್ತಾ, ಕಂಡವರನ್ನು ಬೈಯ್ಯುತ್ತಾ, ಒಂದೊಂದುಸಾರಿ ದೇವರನ್ನು ಸ್ತುತಿ
ಮಾಡುತ್ತಾ, ಮೊಂಡತನದಿಂದ ಭಿಕ್ಷವನ್ನು ಬೇಡುತ್ತಾ, ಕಂಡಪಡಖಾನೆಗೆಲ್ಲಾ
ನುಗ್ಗುತ್ತಾ, ಪೈತ್ಯವನ್ನು ಮೇಲೆ ಹಾಕಿಕೊಂಡು ಕಾಲವನ್ನು ಕಳೆಯುತ್ತೇನೆ !
ಹೆಸರು ರಾಮಜೋಗಿ ! ನಾನು ಇನ್ನು ಶುಕ್ಷ ಚಂದ್ರನಲ್ಲ.
.............
೪ನೇ ಪ್ರಕರಣ.-ದುಃಖಸಾರನ ಮನೆಯ ಮುಂದೆ ನಿಷ್ಕಂಟಕ
ಕೊಳವನ್ನು ಅನುಭವಿಸುತ್ತಾ ಇರುವನು.
ಪ್ರವೇಶ..ಧೊರೆ, ವಿದೂಷಕ, ದೊಡ್ಡ ಮನುಷ್ಯ.
ಧೊರೆ.--. ಹೀಗೆ ಮನೆಬಿಟ್ಟು ಹೊರಟುಹೋಗಿ ನನ್ನ ನೃತ್ಯನನ್ನೂ ಕಳುಹಿಸದೇ
ಇರುವುದು ಆಶ್ಚರವಾಗಿದೆ.
ದೊಡ್ಡ - ನನಗೆ ತಿಳಿದಹಾಗೆ, 'ಮುಂನಾದಿವಸರಾತ್ರೆ ಹೀಗೆ ಸ್ಥಳಬಿಟ್ಟು ಹೋಗಬೇ
ಕೆಂಬ ಯೋಚನೆಯೇ ಇರಲಿಲ್ಲ. ಅಂಥಾ ಪ್ರಸ್ತಾಪವೇ ಕಾಣೆ.
----------------------------------------------
೪೬ ಹೇಮಚಂದ್ರರಾಜ ವಿಲಾಸ. [೨ನೇ ಅಂಕ
ನಿಷ್ಕಂಟಕ.ಸ್ವಾಮಿ ತಮಗೆ ಸುಖಾಗಮನವಾಗಲಿ !
ಧೊರೆ.--ಹ ! ನಿನ್ನ ಅವಮಾನ ನಿನಗೆ ಆಟವಾಯಿತೆ ?
ನಿಷ್ಕಂಟಕ.-- ಇಲ್ಲ ಸ್ವಾಮಿ.
ವಿದೂಷಕ-ಹ! ಹ! ಅನಂತವ್ರತವಾಗಿದೆ. ಕುದುರೆಗೆ ತಲೆಗೆ ಹಗ್ಗಾ ಹಾಕಿ ಕಟ್ಟು
ವರು, ನಾಯಿಗೂ ಕರಡಿಗೂ ಕತ್ತಿಗೆ ಹಗ್ಗಾ ಹಾಕಿ ಕಟ್ಟುವರು, ಕಪಿಗೆ ಸೊಂಟಕ್ಕೆ
ಹಗ್ಗಾ ಹಾಕಿ ಕಟ್ಟುವರು, ಮನುಷ್ಯರಿಗೆ ರಟ್ಟೆಗೆ ಹಗ್ಗಾ ಹಾಕಿ ಕಟ್ಟುವರು.
ಮನುಷ್ಯನಿಗೆ ಕಾಲಿನಮೇಲೆ ವಿಶೇಷ ಅಭಿಮಾನ ಹುಟ್ಟಿದರೆ ಪಾದ ಭೂಷಣ
ವನ್ನು ಇಟ್ಟುಕೊಳ್ಳುವನು.
ಧೊರೆ ನಿನ್ನ ಯೋಗ್ಯತೆಯನ್ನರಿಯದೆ ನಿನ್ನನ್ನು ಹೀಗೆ ಇಲ್ಲಿ ತಂದು ಕೂರಿಸಿದಂ
ಥಾವ ಯಾರೈಯ್ಯ ?
ನಿಷ್ಕಂಟಕ.ಅವ ಒಬ್ಬನೇ ಅಲ್ಲ, ಅವ ಅವಳು ಇಬ್ಬರೂ : ತಮ್ಮ ಅಳಿಯ,
ಮಗಳು.
ಧೊರೆ..ಅಲ್ಲ.
ನಿಷ್ಕಂಟಕ.--ಹವುದು.
ಧೊರೆ.- ಅಲ್ಲ ಎಂದರೆ.
ನಿಷ್ಕಂಟಕ-ಹವುದು ಎಂದರೆ.
ಧೊರೆ.-ಇಲ್ಲ, ಇಲ್ಲ, ಅವರು ಹಾಗೆ ಮಾಡಲಾರರು.
ನಿಷ್ಕಂಟಕ.-ಹವುದು ಅವರು ಹಾಗೆ ಮಾಡಿದರು.
ಧೊರೆ.-ಶಿವಸತ್ಯವಾಗಿಯೂ ಹಾಗಲ್ಲ.
ನಿಷ್ಕಂಟಕ-ಭವಾನಿಸತ್ಯವಾಗಿಯೂ ಹಾಗೆಯೇ.
ಧೊರೆ. ಹೀಗೆ ಮಾಡುವುದಕ್ಕೆ ಅವರಿಗೆ ಧೈರ್ಯವಿಲ್ಲ, ಅವರು ಮಾಡಲಾರರು, ಮಾಡು
ವುದಕ್ಕೆ ಮನಸ್ಸು ಬರಲಾರದು. ಹೀಗೆ ಬೇಕೆಂದು ಮನಃಪೂರ್ತಿಯಾಗಿ ದುರ್ಮಾ
ರ್ಗಕ್ಕೆ ಪ್ರವರ್ತಿಸುವುದು ಕೊಂದು ಹಾಕಿದ್ದಕ್ಕಿಂತಲೂ ಹೆಚ್ಚಾಯಿತು. ನೀನು
ಇಂಥಾ ಶಿಕ್ಷೆಗೆ ಹ್ಯಾಗೆ ಗುರಿಯಾದೆ, ಅವರು ಹಾಗೆ ವಿಧಿಸಿದರು, ನಮ್ಮ ಕಡೆ
ಯಿಂದ ಬಂದವನಿಗೆ ಈ ಆದರ ಹ್ಯಾಗೆ ಬಂತು, ಇದೆಲ್ಲವನ್ನೂ ಕೂಡಿದಮಟ್ಟಿಗೂ
ಜಾಗ್ರತೆಯಾಗಿ ತಿಳಿಸು.
ನಿಷ್ಕಂಟಕ-ಮಹಾಸ್ವಾಮಿ, ಅವರು ಮನೆಯಲ್ಲಿದ್ದಾಗ ತಮ್ಮ ಲೇಖನವನ್ನು
ಅವರಿಗೆ ಒಪ್ಪಿಸಿ ಅವರಿಗೆ ಅಡ್ಡಬಿದ್ದು ನಾನು ಮೇಲಕ್ಕೆ ಏಳುವುದಕ್ಕೆ ಮುಂಚೆ
ಯೇ, ನಾಗವೇಣಿಯವರ ಕಡೆಯಿಂದ ತುರಗಾರೂಢನಾದ ಚಾರನೊಬ್ಬನು, ಉಸಿ
ರಿಲ್ಲದೆ ಏದುತ್ತಾ, ಬೆವರನ್ನು ಸುರಿಸಿಕೊಂಡು, ಅತಿವೇಗದಿಂದ ಬಂದನು ; ಸ್ವಲ್ಪ
--------------------------------------------
೩ನೇ ಪ್ರಕರಣ,] ಹೇಮಚಂದ್ರರಾಜವಿಲಾಸ ೪೭
ವೂ ಸುಧಾರಿಸಿಕೊಳ್ಳದೆ ತಾನು ತಂದ ಕಾಗದವನ್ನು ಕೊಟ್ಟನು, ಅದನ್ನು
ಅವರು ಓದಿದರು, ಅದರ ಅಭಿಪ್ರಾಯವನ್ನರಿತಕೂಡಲೆ, ಅಶ್ವಾರೂಢರಾಗಿ ತಮ್ಮ
ಪರಿವಾರದೊಡನೆ ಹೊರಟರು ; ಸಾವಕಾಶವಾಗಿ ತಾವು ಉತ್ತರವನ್ನು ಬರೆದು
ಕೊಡುವುದಾಗಿಯೂ, ನಾನು ಅವರ ಹಿಂದೆ ಬರುವಂತೆ ಆಜ್ಞಾಪಿಸಿದರು.
ನನ್ನನ್ನು ಅಲಕ್ಷವಾಗಿ ಕಂಡರು. ಆ ಮತ್ತೊಬ್ಬ ಚಾರನನ್ನು ಇಲ್ಲಿ ಕಂಡೆ,
ನಾನು ತೆಗೆದುಕೊಂಡು ಹೋದ ಕಾಗದಕ್ಕೆ ಅವ ತಂದ ಸಮಾಚಾರವು ವಿಷಪ್ರಾ
ಯವಾಯಿತೆಂದು ತಿಳಿದುಕೊಂಡೆ. ಮೊನ್ನೆ ತಮ್ಮ ಸಂವಿಧಾನದಲ್ಲಿ ದುರಹಂಕಾರ
ದಿಂದ ಮೆರೆದವನೇ ಆ ಚಾರ. ನನ್ನಲ್ಲಿ ವಿವೇಕಕ್ಕಿಂತಲೂ ಪೌರುಷವೇ ಹೆಚ್ಚಾಗಿ
ರುವ ಕಾರಣ, ನಾನು ಕತ್ತಿ ಹಿರಿದುಕೊಂಡು ನಿಂತು ಅವನನ್ನು ಭಯಪಡಿಸಿದೆ.
ಆಗ ಅವನು ಮನೆಕಿತ್ತು ಹೋಗುವ ಹಾಗೆ ಹೇಡಿಗೂಗನ್ನು ಕೂಗಿಕೊಂಡನು.
ಈ ಅಪರಾಧಕ್ಕೆ ಈಗ ನಾನು ಅನುಭವಿಸುವ ದಂಡನೆಯ ತಕ್ಕದ್ದೆಂದು ನಿಮ್ಮ
ಅಳಿಯನೂ ಮಗಳ ನಿಗ್ಧಸಿದರು.
ವಿದೂಷಕ.ಮಾಘದ ಹಕ್ಕಿ ಈ ಕಡೆ ಹೋದರೆ, ಹಿಮಗಾಲ ಇನ್ನೂ ಹೋಗಲಿಲ್ಲ
ವೆಂದಾಯಿತು.
ಚಿಂದಿಯಹೊದಿಯುವತಂದೆಯು |
ಕಂದನಕಡುಮೂರ್ಖನಾಗಿ ನಿಚ್ಚಂಮಾಳ್ಪಂ ||
ಎಂದುಂಜಾಳಿಗೆಯುಳ್ಳವ |
ಚಂದದಿಯಣುಗರಮುದ್ದಿನಿಪೊರೆವಂದದಿಂ ||
ಒಂದು ವರುಷವೆಲ್ಲಾ ನೀನು ಕೂತು ಒಂದು, ಎರಡು, ಮೂರು, ಎಂದು
ಎಷ್ಟು ಎಣಿಸೀಯೋ ಅಷ್ಟು ಶೋಕವನ್ನು ಇದಕ್ಕೆಲ್ಲಾ ನಿನ್ನ ಹೆಮ್ಮಕ್ಕಳಿಂದನು
ಭವಿಸೀಯೆ. ಅಯ್ಯೋ ! ಶೋಕವೆಂದೆನೊ ? ಅಲ್ಲ ಶುಲ್ಲ, ಮಾವ.
ಧೊರೆ.- ಅಯ್ಯೋ ! ಇದು ಏನು ನನ್ನನ್ನು ಬಾಧಿಸುತಿದೆ ! ಛಿ ! ಹಾಳಜಾಡವೆ, ಉಲ್ಬ
ಣಾವಸ್ಥೆಗೆ ಬರುತ್ತಿರುವ ದುಃಖವೆ ! ಇಳಿತರವಾಗು ! ಈ ಮಗಳಲ್ಲಿ ?
ನಿಷ್ಕಂಟಕ. ಇಲ್ಲಿ ಒಳಗೆ ಪತಿಯ ಸಾಪದಲ್ಲಿದಾರೆ.
ಧೊರೆ. ನನ್ನ ಹಿಂದೆ ಬರಬೇಡ, ಇಲ್ಲಿಯೇ ಇರು. ೯ನಿಷ್ಕ್ರ)
ದೊಡ್ಡ.-ನೀನು ಹೇಳಿದ್ದೆಯೋ ? ಇನ್ನೆನೂ ನಿನ್ನ ಅಪರಾಧವಿಲ್ಲವೆ ?
ನಿಷ್ಕಂಟಕ.--ಏನೂ ಇಲ್ಲ. ಇದು ಹಾಗಿರಲಿ, ಇದೇನು ಸವಾರಿಯಸಂಗಡ ಬಂದ
ಪರಿವಾರ ಸ್ವಲ್ಪವಾಗಿಯೇ ಇದೆ ?
ವಿದೂಷಕ. ಈ ಮಾತನ್ನು ಕೇಳಿದ್ದಕ್ಕಾಗಿ ನಿನಗೆ ಕೊಳಕ್ಕೆ ಹಾಕಿಸಿದ್ದರೆ, ಅಪರಾ
ಧಕ್ಕೆ ಸರಿಯಾದ ಶಿಕ್ಷೆಯಾಗುತಿತ್ತು.
--------------------------------------------
೪೮ ಹೇಮಚಂದ್ರರಾಜ ವಿಲಾಸ, [೨ನೇ ಅಂಕ
ನಿಷ್ಕಂಟಕ-ಯಾಕೈಯ್ಯ, ವಿದೂಷಕ ?
ವಿದೂಷಕ.--ಹಿಮಗಾಲದಲ್ಲಿ ಶ್ರಮಪಡಕೂಡದೆಂಬ ಸಾರವನ್ನು ನಿನಗೆ ಕಲಿಸುವುದ
ಕ್ಕಾಗಿ ನಿನ್ನನ್ನು ಇರುವೇ ಮರಕ್ಕೆ ಹಾಕುತ್ತೇನೆ. ತಮ್ಮ ಮೂಗಿನ ನೇರಕ್ಕೆ
ಹೋಗತಕ್ಕವರೆಲ್ಲರಿಗೂ ಕಂಣಿದೆ, ಕುರಡರು ಹೊರತು : ಭಾಗ್ಯಹೀನನಾಗಿ ನಾತ
ಹತ್ತಿದವನ ವಾಸನೆಯನ್ನು ತಿಳಿಯದವನು ಇಪ್ಪತ್ತಕ್ಕೆ ಒಬ್ಬನೂ ಇರುವದಿಲ್ಲ.
ಅತಿಭಾರವಾದ ಚಕ್ರ ಬೆಟ್ಟದಮೇಲಿನಿಂದ ಬರುತ್ತಿರುವಾಗ, ಅದನ್ನು ಹಿಡಕೊ
ಳ್ಳದೆ ಬಿಟ್ಟುಬಿಡಬೇಕು ; ಇಲ್ಲದೆ ಅದರ ಹಿಂದೆಯೇ ಹೋದರೆ ತಲೆ ಒಡೆದುಹೋ.
ಗುವುದು. ಬೆಟ್ಟದಮೇಲಕ್ಕೆ ಹತ್ತುತ್ತಿರುವ ದೊಡ್ಡ ಚಕ್ರವು ನಿನ್ನನ್ನು ಮೇಲಕ್ಕೆ
ಎಳೆದುಕೊಂಡು ಹೋಗಲಿ, ಬುದ್ಧಿವಂತರು ನಿನಗೆ ಬುದ್ಧಿವಾದವನ್ನು ಮಾಡಿದಾಗ,
ನಾನು ಕೊಟ್ಟ ಬುದ್ಧಿವಾದವನ್ನು ನನಗೆ ಹಿಂತಿರುಗಿ ಕೊಟ್ಟು ಆಗಬೇಕೆಂ
ದರೆ ವಿದೂಷಕನಾದ ನನ್ನ ಮಾತಿನಪ್ರಕಾರ ನಡೆಯಬೇಕಾದರೆ ದೂಷ್ಯರೇ.,
ಜಾಳಿಗೆಗೆ ಸ್ವಾಮಿಯನ್ನು ಸೇವಿಪ |
ಆಳುತಾನಾಸ್ಪಾಢ ಭೂತಿಯು |
ಮಳೆಯು ಬರೆವೋಡುವನು ನಿನ್ನನು ಸಿಡಿಲಿಗೆಡೆಮಾಡಿ ||
ಪಾಳೊಳಗೆ ಕೋಡಂಗಿ ನಿಲ್ವೆನು |
ಪೊಳವಜಾಣರು ಓಡಲೋಡಲಿ |
ಕಳವಳದಿ ವೋಡುವನೆ ಕೇಡಿಗ ; ಜಾಣ, ಕೋಡಂಗಿ |
ನಿಷ್ಕಂಟಕ.--ಇದನ್ನು ಎಲ್ಲಿ ಕಲಿತೆ ಕೋಡಂಗಿ ?
ವಿದೂಷಕ.-ಕೋಳದಲ್ಲಿ ಅಲ್ಲಿ ಕೋಡಂಗಿ,
ಪ್ರವೇಶ. ಧೊರೆ, ದುಃಖಸಾರ.
ಧೊರೆ- ನನ್ನ ಸಂಗಡ ಮಾತನಾಡುವುದಿಲ್ಲ ! ದೇಹ ಸ್ವಸ್ಥವಿಲ್ಲ ! ಆಯಾಸವಾಗಿದೆ !
ರಾತ್ರಿ ಎಲ್ಲಾ ಪ್ರಯಾಣಮಾಡಿಬಂದರು ! ಇದೆಲ್ಲಾ ಏನು ವ್ಯಾಜ್ಯಗಳು? ವಿರುದ್ಧವ ನ್ನು
ದ್ಯೋತಕವಾಡಿ ಫಲಾಯನಗೈದರ ಪ್ರತಿಬಿಂಬವಾಗಿದೆ. ಸರಿಯಾದ ಉತ್ತ
ರವನ್ನು ತೆಗೆದುಕೊಂಡು ಬಾ.
ದುಃಖ.--ಮಹಾಸ್ವಾಮಿ, ರಾಜಪ್ರತರಾದ ಕುಟಿಲರ ಬೆಂಕಿಯಂಥಾ ಸ್ವಭಾವವೇದ್ಯವೇ
ಇದೆ. ಅವರಿಗೆ ಯಾರು ಎಷ್ಟು ಹೇಳಿದಾಗ ತಮ್ಮ ಮಾರ್ಗವನ್ನೇ ಹಿಡಿಯುವ
ಅವರ ಮೂರ್ಖ ಸ್ವಭಾವವು ಸಾದಕ್ಕೆ ಗೊತ್ತೇ ಇದೆ.
ಧೊರೆ.-ಹಾಳಾಗಿ, ಮೂಳಾಗಿ, ಮಾಳವಾಗಿ, ನಾಶವಾಗಿ, ಸಾಯಬಾರದೆ ! ಬೆಂಕಿ
ಎಂದರೇನು ? ಎಂಥಾ ಸ್ವಭಾವ ? ದುಃಖಸಾರ, ದುಃಖಸಾರ, ಕುಟಿಲನನ್ನೂ ಅವನ ಹೆಂಡತಿಯನ್ನೂ ಕಂಡು ನಾನು ಮಾತನಾಡಲೇ ಬೇಕು.
-------------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೪೯
ದುಃಖ.-ಮಹಾಸ್ವಾಮಿ, ಅವರಲ್ಲಿ ಹಾಗೆಯೇ ಅರಿಕೆ ಮಾಡಿದೆ.
ಧೊರೆ.-ಅರಿಕೇಮಾಡಿದೆ ! ನಾನು ಹೇಳುವುದು ತಿಳಿಯಿತೇನೋ ?
ದುಃಖ.-- ಮಹಾಸ್ವಾಮಿ ತಿಳಿಯಿತು.
ಧೊರೆ.-- ಧೋರೆಯು ಕುಟಿಲನ ಸಂಗಡ ಮಾತನಾಡಬೇಕೆಂದು ಅಪೇಕ್ಷಿಸುತ್ತಾನೆ ;
ತಂದೆಯು ಮಗಳಸಂಗಡ ಮಾತನಾಡಬೇಕೆಂಬ ಅಭಿಲಾಷೆಯಿಂದ ಆಕೆಗೆ ಆಜ್ಞಾಪಿ
ಸುತ್ತಾನೆ. ಈ ವಿಷಯ ಅವರಿಗೆ ತಿಳಿಸಿತೆ ? ಅಯ್ಯೋ ನನ್ನ ಪ್ರಣವೇ ! ಬೆಂಕಿ
ಯಂಥಾ ಸ್ವಭಾವ ? ಬೆಂಕೀ ಸ್ವಭಾವವುಳ್ಳ ಕುಟಿಲ ? ಆ ಬಿಸಿಯಾದ ರಾಜಪುತ್ರ
ನಿಗೆ ಹೋಗಿ ಹೇಳು, ಏನೆಂದರೆ, ಹೋ ! ತಾಳು, ಇನ್ನೂ ಬೇಡ. ಆತನಿಗೆ
ದೇಹಾಲಸ್ಯವಿದ್ದರೂ ಇರಬಹುದು. ಆರೋಗ್ಯಕಾಲದಲ್ಲಿ ಮಾಡಬೇಕಾದ ಕರ್ತವ್ಯ
ಗಳನ್ನು ಅನಾರೋಗ್ಯವು ನಿರಾಕರಿಸುವುದು. ಸಹಜವಾದ ಪ್ರಕೃತಿಯು ವ್ಯತ್ಯ
ಸ್ತವನ್ನು ಹೊಂದಿ, ದೇಹಾಲಾಸ್ಯದೊಡನೆ ಮನೋವ್ಯಥೆಯ ಉಂಟಾಗಿರುವಾಗ
ನಾವು ನಾವೇ ಆಗಿರುವುದಿಲ್ಲ. ನಾನು ಇನ್ನೂ ತಾಳುತೇನೆ. ಆಲಸ್ಯವಾಗಿರುವ
ವರನ್ನೂ ರೋಗಿಷ್ಟರನ್ನೂ ಸ್ವಸ್ಥರಾಗಿರತಕ್ಕವರೆಂದು ತಿಳಿಯುವಂಥಾ ದುಡುಕಿ
ನಿಂದ ಪೀಡಿತನಾಗಿದ್ದೇನೆ. ( ನಿಷ್ಕಂಟಕನನ್ನು ನೋಡಿ) ಅಯ್ಯೋ ನಾನು ಹಾಳಾದೆ!
ಯಾಕೆ ಇವ ಇಲ್ಲಿ ಹೀಗೆ ಕೂತಿರಬೇಕು ? ಈ ಕೃತ್ಯದಿಂದ, ಗಂಡ ಹೆಂಡಿರಿಬ್ಬರೂ
ಮನೇ ಬಿಟ್ಟು ಹೊರಟುಹೋದ್ದು ಬೇಕೆಂತಲೇ ಎಂದು ನನಗೆ ತೋರುವುದು.
ನನ್ನ ಭಂಟನನ್ನು ಕಳುಹಿಸಲಿ. ನಾನು ಈಗಲೇ ಈ ಕ್ಷಣವೇ ಅವರಸಂಗಡ ಮಾ
ತನಾಡಬೇಕೆಂದು ಅಪೇಕ್ಷಿಸಿದನೆತ ರಾಜಕುಮಾರನ ಸಂಗಡಲೂ ಅವನ ಹೆಂಡತೀ
ಸಂಗಡಲೂ ಹೋಗಿ ಹೇಳು. ಅವರು ಬಂದು ನಾನು ಹೇಳುವ ಮಾತನ್ನು
ಕೇಳುವಂತೆ ಆಜ್ಞಾಪಿಸು. ಇಲ್ಲದಿದ್ದರೆ ಅವರ ಗೃಹದ ಬಾಗಿಲಲ್ಲಿ ನಿಂತು, ನಿದ್ರೆಗೆ
ಮರಣ ಉಂಟಾಗುವತನಕ ನಗರಿಯನ್ನು ಬಡಿಯುತ್ತೇನೆ.
ದುಃಖ ತಮತಮಗೆ ವಿರುದ್ಧವೇನೂ ಇಲ್ಲದೆ ಎಲ್ಲಾ ಸರಿಹೋದರೆ ಸಾಕೆಂಬುವುದು
ನನ್ನ ತಾತ್ಪರ್ಯ. (ನಿಷ್ಕ್ರಮಣ)
ಧೊರೆ.- ನನ್ನ ಹೃದಯದಲ್ಲಿ ಉಕ್ಕಿ ಉಕ್ಕಿ ಬರುತಿದೆ. ಛಿ! ಇಳಿ.
ವಿದೂಷಕ_ಕೂಗಿಕೊ, ಮಾವ, ಕೂಗಿಕೊ ; ಬೆಕ್ಕನ್ನು ತಲೆಮೇಲೆ ಕೂರಿಸಿ
ಕೊಂಡು, ಅದು ಮೇಲಿನಿಂದ ವೃಷ್ಟಿಸಿದರೆ, “ಛಿ, ಇಳಿ, ಇಳಿ,'' ಎಂದು ಕೂ
ಗಿದ ಅಡಗೂಲಜ್ಜಿಯ ಹಾಗೆ ನೀನೂ ಕೂಗಿಕೊ. ತನ್ನ ಕತ್ತೆಯಲ್ಲಿ ಅಭಿಮಾನ
ವನ್ನು ಇಟ್ಟುಕೊಂಡು, ಭತ್ತಕ್ಕೆ ತುಪ್ಪವನ್ನು ಹಾಕಿ ಕಲೆಯಿಸಿ, ಆ ಕತ್ತೆ
ತಿನ್ನಲೆಂದು ಅದರ ಮುಂದಿರಿಸಿದ ಅಗಸರವನು ಆ ಅಡಿಗೂಲಜ್ಜಿಯ ತಮ್ಮ
ಕಣೈ.
----------------------------------------------
೫೦ ಹೇಮಚಂದ್ರರಾಜ ವಿಲಾಸ. [೨ನೇ ಅಂಕ
ಪ್ರವೇಶ-ದುಃಖಸಾರ, ಕುಟಿಲ, ವಿಷಜೆ, ದೂತರು.
ಧೊರೆ.--ತಮ್ಯುಭಯರಿಗೂ ಸುಪ್ರಭಾತವಾಗಲಿ.
ಕುಟಿಲ.--ತಮಗೆ ಸುಕ್ಷೇಮವಾಗಲಿ. (ನಿಷ್ಕಂಟಕನಿಗೆ ಬಿಡುಗಡೆಯಾಗುವುದು)
ವಿಷಜೆ.--ಜಿಯ್ಯ, ತಮ್ಮ ದರ್ಶನದಿಂದ ನಾನು ಆನಂದಭರಿತಳಾದೆ.
ಧೊರೆ.-ವಿಷಜೆ, ನೀನು ಆನಂದಭರಿತಳಾಗುತೀಯೆ ಎಂದು ನಾನು ಬಲ್ಲೆ. ನಾನು
ಹಾಗೆ ತಿಳಿಯುವುದಕ್ಕೆ ಕಾರಣವನ್ನೂ ನಾನು ಬಲ್ಲೆ. ಹಾಗೆ ನೀನು ಸಂತೋಷಿ
ಯಾಗಿಲ್ಲದಿದ್ದರೆ, ಸಮಾಧಿಗತಳಾಗಿರುವ ನಿಮ್ಮ ತಾಯನ್ನು ಜಾರಿಣಿಯೆಂದು
ಭಾವಿಸಿ, ಅವಳ ಸಂಬಂಧವನ್ನು ನಾನು ತೊರೆದುಕೊಂಡೇನಲ್ಲವೆ ? (ನಿಷ್ಕಂಟ
ಕನನ್ನು ನೋಡಿ) ಏನೆ ನಿನಗೆ ಬಿಡುಗಡೆಯಾಯಿತೆ ? ಈ ವಿಷಯಕ್ಕೆ ಬೇರೆ ಕಾಲ
ಉಂಟು. ಪ್ರೇಮಾಸ್ಪದಳಾದ ವಿಷಜೆ, ನಿಮ್ಮಕ್ಕ ನೀಚಳು ; ಅತಿ ಹರಿತವಾದ
ದಂತಗಳುಳ್ಳ ನಿರ್ದಯವನ್ನು ರಣಹದ್ದಿನ ಹಾಗೆ ಇಗೋ ಇಲ್ಲಿ ನೆಟ್ಟಳು (ತನ್ನ
ಹೃದಯವನ್ನು ತೋರಿಸುತಾ) ನಿನ್ನೊಡನೆ ಮಾತನಾಡುವುದಕ್ಕೆ ಕೂಡಾ ತ್ರಾಣ
ವಿಲ್ಲ. ಅದನ್ನು ನೀನು ಬೇರೆ ನಂಬಲಾರೆ ; ಇನ್ನೆಂಥಾ ಹೇಯವಾದ ಗುಣವೋ !
ಅಯೋ, ವಿಷಜೆ !
ವಿಷಜೆ.--ಅಪ್ಪಾಜಿ, ನಿಧಾನಿಸಿಕೊಳ್ಳಿ. ನಮ್ಮಕ್ಕೈಯ್ಯನು ತನ್ನ ಕರ್ತವ್ಯವನ್ನು
ಅರಿಯಳು ಎನ್ನುವುದಕ್ಕಿಂತಲೂ, ಆಕೆಯ ನಿಜವಾದ ಯೋಗ್ಯತೆಯನ್ನು ತಾವು
ಕಡಮೆಯಾಗಿ ಅರಿತು ಇದೀರೆಂದು ನನಗೆ ತೋರುವುದು.
ಧೊರೆ.--ಹಾಗೆನ್ನುವುದಕ್ಕೆ ಕಾರಣವೇನು ?
ವಿಷಜೆ.--ನಮ್ಮಕೈಯ್ಯ ಮಾಡತಕ್ಕ ಕೆಲಸದಲ್ಲಿ ಯಾತರಲ್ಲಿ ಸ್ವಲ್ಪವಾದರೂ
ಆಕೆ ತಪ್ಪಿ ನಡೆದಳೆಂದು ನಾನು ತಿಳಿಯಲಾರೆ. ಒಂದುವೇಳೆ ತಮ್ಮ ಪರಿವಾರದ
ವರ ದೊಂಬಿಗೆ ಆಸ್ಪದವಿಲ್ಲದಂತೆ, ಏನಾದರೂ ನಮ್ಮಕ್ಕೈಯ್ಯ ಬಿಗಿಹಿಡಿದಿದ್ದರೆ
ಅವಳನ್ನು ದೋಷರಹಿತಳನ್ನಾಗಿ ಮಾಡತಕ್ಕಂಥಾ ಕಾರಣಗಳಿಗಾಗಿ ಹಾಗೆ ಮಾಡಿ
ರಬಹುದು.
ಧೊರೆ.-- ನನ್ನ ಶಾಪವೆಲ್ಲಾ ಅವಳಿಗೆ ತಟ್ಟಲಿ.
ವಿಷಜೆ.--ಸ್ವಾಮಿ, ತಮಗೆ ವಯಸ್ಸಾಯಿತು. ಇಂದ್ರಿಯವೆಲ್ಲಾ ಆದರದರ ಸೀಮೆಯ
ಕೊನೇಸರಹದ್ದಿನಲ್ಲಿದೆ. ತಮ್ಮ ಹಿತವನ್ನು ತಮಗಿಂತಲೂ ಚೆನ್ನಾಗಿ ಬಲ್ಲಂಥಾ
ವಿವೇಕಕ್ಕೆ ತಾವು ಅಧೀನರಾಗಿರಬೇಕು. ಆದ್ದರಿಂದ ನಮ್ಮ ಕೈಯ್ಯ ಇರುವ
ಕಡೆಗೆ ತಾವು ದಯಮಾಡಿಸಿ ತಮ್ಮಿಂದಾ ಆಕೆಗೆ ಬಾಧಕ ಉಂಟಾಯಿತೆಂದು ಹೇಳಿ.
ಧೊರೆ.- -ಅವಳ ಕ್ಷಮಾಪಣೆಯನ್ನು ಬೇಡಿಕೊಳ್ಳಲೆ ? ಹೀಗಿರುವುದು ಮನೆಗೆ ಎಷ್ಟು
ಲಕ್ಷಣವಾಗಿರುವುದೆ ನೀನೇ ನೋಡು : (ಅಡ್ಡಬಿದ್ದು), "ಮಗಳೆಂಬ ಮಹಾ
------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೫೧
ತಾಯಿ, ನಾನು ಮುದುಕ, ಮುಪ್ಪಿಗೆ ಬೇಕಾದ್ದೇನೂ ಇಲ್ಲ, ನಾನು ಅಡ್ಡಬಿದ್ದು
ಕೇಳಿಕೊಳ್ಳುತ್ತೇನೆ, ನನಗೆ ಅನ್ನ ವಸ್ತ್ರವನ್ನು ದಯಪಾಲಿಸಬೇಕು.” ನಾನು
ಹೀಗೆ ಮಾಡಬೇಕೊ ?
ವಿಷಜೆ.-ಇದೇನು ನಡತೆ ? ನೋಡಲಾರೆ. ಸಾಕು ; ನಮ್ಮ ಅಕ್ಕೈಯ್ಯನ ಮನೆಗೆ
ಹೊರಡಿ.
ಧೊರೆ.-(ಮೇಲಕ್ಕೆ ಎದ್ದು) ವಿಷಜೆ, ಎಂದಿಗೂ ಇಲ್ಲ. ನನ್ನ ಪರಿವಾರದಲ್ಲಿ ಅರ್ಧ
ಪರಿವಾರವನ್ನು ಕಡಮೆ ಮಾಡಿದಳು. ನನ್ನ ಮೇಲೆ ಮುಖ ಕಪ್ಪಗೆ ಮಾಡಿಕೊಂ
ಡಳು ; ಮೇಲೂ ನಾಗಸರ್ಪದ ಹಾಗೆ ಅವಳ ನಾಲಗೆಯ ಕಶೆಯಿಂದ ಈ
ಹೃದಯವನ್ನು ಪ್ರಹರಿಸಿದಳು. ಮಹಾ ನರಕಪ್ರಾಪ್ತಿಗೆ ಅರ್ಹವಾದ ಶಾಪಪರ್ವ
ತವೇ ಕೃತಘ್ನಳಾದ ಅವಳ ತಲೆಯಮೇಲೆ ಬೀಳಲಿ. ಎಲ ವಿಷದ ಗಾಳಿಯೆ,
ಇವಳ ಎಳೇ ಮೂಳೆಗಳಿಗೆ ಬಡಿದು ಅವಳನ್ನು ಅಂಗಹೀನಳನ್ನಾಗಿ ಮಾಡ
ಬಾರದೆ !
ಕುಟಿಲ.--ಛಿ !ಛಿ ! ಏನು ಸ್ವಾಮಿ !
ಧೊರೆ.- ಎಲ ಅತಿವೇಗವಾದ ಸಿಡಿಲೆ, ಕಂಣನ್ನು ಚುಚ್ಚಿ ಕುರುಡುಮಾಡತಕ್ಕೆ ನಿನ್ನ
ಅತಿ ಪ್ರಕಾಶಮಾನವಾದ ಉರಿಯನ್ನು ಅವಳ ನೀಳವಾದ ಕಂಣುಗಳಿಗೆ ಬಡಿ !
ಅತಿ ತೀಕ್ಷ್ಣವಾದ ಸೂರ್ಯನ ಕಿರಣಗಳ ಮೂಲಕ ಕೆಟ್ಟ ಜೋರೆಗಳಿಂದ ಎಳೆಯ
ಲ್ಪಟ್ಟ ಜಲಕಣಗಳನ್ನುಳ್ಳ ಮಂಜೆ, ಅವಳ ಸಾಂದರವನ್ನು ಮುಚ್ಚಿ ಮುಸುಕಿ
ಅವಳ ಅಹಂಕಾರ ಮೋಟನವನ್ನು ಮಾಡಿ ನಾಶಮಾಡು.
ವಿಷಜೆ.-- ಅಯ್ಯೋ ದೇವರೆ ! ನಿಮಗೆ ಕೋಪ ಬಂದಾಗ ನನ್ನನ್ನೂ ಹೀಗೆಯೇ ಶಪಿ
ಸುವಿರಿ.
ಧೊರೆ.-ಇಲ್ಲಮ್ಮ, ವಿಷಜಾ, ನಿನ್ನನ್ನು ನಾನು ಎಂದಿಗೂ ಶಪಿಸಲಾರೆ. ಮರುಕ
ವುಳ್ಳ ನಿನ್ನ ಸ್ವಭಾವವು ಕ್ರೌರ್ಯದ ವಶಕ್ಕೆ ನಿನ್ನನ್ನು ಒಪ್ಪಿಸಿ ಬಿಡಲಾರದು. ಅವಳ
ಕಂಣುಗಳು ಭಯಂಕರವಾಗಿವೆ ; ನಿನ್ನ ಕಂಗಳಲ್ಲಿ ಸಾಮ್ಯವಿದೆ, ಕೆಂಡತುಂ
ಬಿಲ್ಲಮ್ಮ: ನನ್ನ ಸಂತೋಷಗಳಿಗೆ ಕಾರ್ಪಣ್ಯವನ್ನು ಹುಟ್ಟಿಸಿ, ನನ್ನ ಪರಿವಾರ
ವನ್ನು ಕಡಮೆಮಾಡಿ, ನನ್ನನ್ನು ಬೈದು, ನನ್ನ ಪಡಿತರವನ್ನು ತಗ್ಗಿಸಿ, ಕೊನೆಗೆ
ನಾನು ಮನೆಗೆ ಬಾರದ ಹಾಗೆ ಬಾಗಿಲನ್ನು ಹಾಕಿ ಅಗಣಿಯನ್ನು ಛಡಾಯಿಸಿ,
ಹೀಗೆಲ್ಲಾ ಮಾಡತಕ್ಕ ಗುಣ ನಿನ್ನಲ್ಲಿಲ್ಲ. ಸಹಜವಾದ ವೃತ್ತಿಯನ್ನೂ, ಮಕ್ಕಳ
ಸಂಬಂಧ ವನ್ನೂ, ಮಯ್ಯಾದೆಯು ಫಲವನ್ನೂ, ಕೃತಜ್ಞತೆಗೆ ಸಲ್ಲಬೇಕಾದ ಸಲ್ಲಿಕೆ
ಗಳನ್ನೂ, ನೀನು ಚೆನ್ನಾಗಿ ಬಲ್ಲೆ. ನಾನು ನಿನಗೆ ಕೊಟ್ಟ ಅರ್ಧ ರಾಜ್ಯವನ್ನು
ನೀನು ಮರೆತಿಲ್ಲ.
ವಿಷಜೆ --ಸ್ವಾಮಿ ಪ್ರಕೃತಕ್ಕೆ ಎಷ್ಟು ಬೇಕೋ ಅಷ್ಟು.
----------------------------------------------
೫೨ ಹೇಮಚಂದ್ರರಾಜ ವಿಲಾಸ,. [ ೨ನೇ ಅಂಕ.
ಧೊರೆ.-ನನ್ನ ಆಳನ್ನು ಕೊಳಕ್ಕೆ ಹಾಕಿಸಿದವರು ಯಾರು ?
(ಕೊಂಬಿನ ಶಬ್ದ ವಾಗುವುದು).
ಕುಟಿಲ.-ಅದೇನು ಕೊಂಬಿನ ಶಬ್ದ ?
ವಿಷಜೆ. ನಾನು ಬಲ್ಲೆ : ನಮ್ಮ ಅಕ್ಕೈಯನ ಕಡೇದು. ಕೂಡಲೆ ತಾನು ಬರುತೇ
ನೆಂಬ ಆಕೆಯ ಕಾಗದದ ಅಭಿಪ್ರಾಯಕ್ಕೆ ಇದು ನಿದರ್ಶನವಾಗಿದೆ.
ಪ್ರವೇಶ, ರಾಹುಕ.
ವಿಷಜೆ ನಿಮ್ಮೊಡತಿ ಬಂದರೆ ?
ಧೊರೆ.-- ಈ ಗುಲಾಮನ ಸಲಭವಾಗಿ ಕಡಂಗೊಂಡ ಅಹಂಕಾರವು ಎಂಥ ಒಡತಿಯು
ಚಂಚಲವಾದ ದಯಾನಸದಲ್ಲಿ ಆವಾಸಗೊಂಡಿದೆ ! ಛಿ ! ಖೂಳ, ನನ್ನ ಕಂಣೆದು
ರಿಗೆ ನಿಲ್ಲಬೇಡ, ಆಚೆಗೆ ನಡೆ.
ಕುಟಿಲ..ಏನು ಅಪ್ಪಣೆಯಾಯಿತು ಸ್ವಾಮಿ ?
ಧೊರೆ.-ನನ್ನ ನೃತನನ್ನು ಕೊಳಕ್ಕೆ ಹಾಕಿದವರು ಯಾರು ? .ಪ್ರಜೆ ನೀನು
ಇದನ್ನು ಕಾಣೆ ಎಂದು ನನಗೆ ನಂಬಿಕೆ ಇದೆ. ಅದು ಯಾರು ಬಂದವರು ?
ಪ್ರವೇಶ.-ನಾಗವೇಣಿ.
ಧೊರೆ.-ಅಯ್ಯೋ, ಶಿವಶಿವಾ ! ವೃದ್ದರಮೇಲೆ ನಿನಗೆ ದಯವಿದ್ದರೆ, ನಿನ್ನ ಜಗದೀಶ್ವರ
ತ್ವಕ್ಕೆ ವಿಧೇಯತೆಯು ಒಪ್ಪುವುದಾಗಿದ್ದರೆ, ನೀನೇ ಅನಾದಿಯಾದ ವೃದ್ಧನಾಗಿ
ದ್ದರೆ, ನನ್ನ ಪಕ್ಷವನ್ನೇ ನಿನ್ನ ಪಕ್ಷವನ್ನಾಗಿ ತಿಳಿದುಕೊ, ಸಾಮಿ (ನಾಗವೇಣಿ
ಯನ್ನು ಕುರಿತು) ಈ ಬಿಳೀಗಡ್ಡವನ್ನು ನೋಡುವುದಕ್ಕೆ ನಾಚಿಗೆಯಾಗುವುದಿ
ಲ್ಲವೆ ? ವಿಷಜೆ, ಅವಳ ಕೈಯನ್ನು ಮುಟ್ಟುತೀಯ ?
ನಾಗವೇಣಿ--ಯಾಕೆ ಕೈಮುಟ್ಟಕೂಡದು, ಸ್ವಾಮಿ ? ನಾನು ಏನು ಅಪರಾಧವನ್ನು
ಮಾಡಿದೆ ? ಅವಿವೇಕಕ್ಕೆ ಅಪರಾಧವೆಂದು ತೋರಿದ್ದೆಲ್ಲಾ ಅಪರಾಧವಲ್ಲ ; ಮುಪ್ಪು
ಅಪರಾಧವೆಂದು ಕರೆಯತಕ್ಕದ್ದೆಲ್ಲಾ ಅಪರಾಧವಲ್ಲ.
ಧೊರೆ - ಅಯ್ಯೋ ಹೃದಯವೆ, ಏನುಬಡಿದುಕೊಳ್ಳುತ್ತೀಯೆ ? ಇನ್ನೂ ನೀನು ಒಡೆದು
ಹೋಗಲಿಲ್ಲವೆ ? ನನ್ನ ನೃತ್ಯವನ್ನು ಕೋಳಕ್ಕೆ ಯಾರು ಹಾಕಿದರು ?
ಕುಟಿಲ. ನಾನು ಅವನನ್ನು ಅದಕ್ಕೆ ಹಾಕಿಸಿದೆ ಸ್ವಾಮಿ ; ಆದರೆ ಅವ ಮಾಡಿದ
ಬಲ್ಲಡಿಗೆ ಅವನಿಗೆ ಈಗ ಆದ್ದಕ್ಕಿಂತಲೂ ಹೆಚ್ಚಾದ ಶಿಕ್ಷೆಯಾಗಬೇಕಾಗಿತ್ತು.
ಧೊರೆ.-ನೀನೆ? ನೀನು ಹಾಕಿಸಿದೆಯ ?
---------------------------------------------
೫೩
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ
ವಿಷಜೆ.--ಸ್ವಾಮಿ, ತಾವು ದುರ್ಬಲರಾಗಿದೀರಿ ; ಹಾಗೆಯೇ ಕಾಣಿಸಿಕೊಳ್ಳಿ. ನೀವು
ಹಿಂತಿರುಗಿ ಹೋಗಿ, ನಿಮ್ಮ ಒಂದು ತಿಂಗಳ ಗಡಬ ಕಳೆಯುವ ಪರ್ಯಂತ ನಮ್ಮ
ಕ್ಕೈಯ್ಯನ ಮನೆಯಲ್ಲಿದ್ದು, ತಮ್ಮ ಅರ್ಧ ಪರಿವಾರವನ್ನು ಪರಿಹರಿಸಿ ತರು
ವಾಯು ನನ್ನ ಮನೆಗೆ ಬನ್ನಿ, ಈಗ ನನ್ನ ಮನೆಯನ್ನು ಬಿಟ್ಟು ಬಂದಿದೇನೆ,
ನಿಮ್ಮ ಔತನಕ್ಕಾಗಿ ಬೇಕಾದ ಸಾಮಗ್ರಿಗಳು ಯಾವುದೂ ಇಲ್ಲ.
ಧೊರೆ.- ಅವಳ ಮನೆಗೆ ಹಿಂತಿರುಗಿ ಹೋಗಬೇಕು ? ಅರ್ಧ ಪರಿವಾರವನ್ನು ಪರಿಹರಿಸ
ಭೇಕು ? ನೆರಳಿಗೆ ಹೋಗುವುದಿಲ್ಲವೆಂದು ಪ್ರಮಾಣಮಾಡಿ, ಬೈಲಿನಲ್ಲಿ ಬೀಸುವ
ಗಾಳಿಯನ್ನಾದರೂ ಎದುರಿಸಿಯೇನು. ರಾತ್ರೆಯಲ್ಲಿ ಗೂಬೆಗಳಿಗೂ, ತೋಳಗ
ಳಿಗೂ ಜೊತೆಗಾರನಾಗಿಯಾದರೂ ಇದ್ದೇನು, ದೌರ್ಭಾಗ್ಯದ ಬಳಸುಂಟಿಯನ್ನಾ
ದರೂ ಸಹಿಸಿಯೇನು. ಅವಳ ಮನೆಗೆ ಹೋಗಲೆ? ಯಾಕೆ, ನಮ್ಮ ಕನಿಷ್ಠ ಪುತ್ರಿ
ಯನ್ನು ಬಳುವಳಿ ಇಲ್ಲದೆ ಕರೆದುಕೊಂಡು ಹೋದ ಆ ಕೋಪಿಷ್ಯನಾದ ಮಾರ
ದೇಶಾಧೀಶರನ ಸಿಂಹಾಸನದ ಮುಂದೆ ಅಡ್ಡಬಿದ್ದು, ಈ ನೀಚ ಜನ್ಮವನ್ನು ಹೊರೆ
ಯುವುದಕ್ಕಾಗಿ, ಗುಲಾಮನ ಹಾಗೆ ಜೀತವನ್ನು ಬೇಕಾದರೂ ಬೇಡಿಯೇನು.
ಅವಳ ಸಂಗಡ ಹೋಗಲೆ ? ಅದಕ್ಕಿಂತಲೂ, ಖೂಳನಾದ ಈ ಗುಲಾಮನಿಗೆ,
ಭಾರಾ ಕರುವ ಕತ್ತೆಯಾಗಿರೆಂದು ಹೇಳಿದಾಗ ಇದ್ದೇನು.
(ರಾಹುಕನನ್ನು ತೋರಿಸುತ್ತಾ).
ನಾಗವೇಣಿ ... ತಮ್ಮ ಮನಬಂದಂತೆ ಆಗಬಹುದು, ಸ್ವಾಮಿ.
ಧೊರೆ.-- ಅಮ್ಮ ಮಗಳೆ, ನನಗೆ ಹುಚ್ಚು ಹಿಡಿಸಬೇಡ. ನಿನ್ನನ್ನು ನಾನು ಬಾಧಿಸು
ವುದಿಲ್ಲ, ಮಗುವೆ. ಸುಖಿಯಾಗಿರು. ನಾವಿಬ್ಬರೂ ಇನ್ನೆಂದಿಗೂ ಸಂಧಿಸುವುದೂ
ಇಲ್ಲ, ಒಬ್ಬರನ್ನೊಬ್ಬರು ಎಂದಿಗೂ ನೋಡುವುದೂ ಇಲ್ಲ. ಇದೂ ಅಲ್ಲದೆ ನೀನು
ನನ್ನ ಮಾಂಸ, ನನ್ನ ರಕ್ತ, ನನ್ನ ಮಗಳು ; ನನ್ನ ಮಾಂಸಗತವಾಗಿರತಕ್ಕ
ರೋಗ ; ಇದನ್ನು ನನ್ನದು ಎಂದು ನಾನು ಕರೆಯದಿದ್ದರೆ ವಿಧಿ ಇಲ್ಲ: ಅದೂ
ಅಲ್ಲದಿದ್ದರೆ, ನನ್ನ ಕೆಟ್ಟ ರಕ್ತದಲ್ಲಿ ಹುಟ್ಟಿದ ಕುರು, ಹೆಡತಲೇ ಮೃತ್ಯು ಅಥವಾ
ಬಹಳವಾಗಿ ಊದಿರುವ ಬೆನ್ಫಣಿ. ನಾನು ನಿನ್ನನ್ನು ಗದರಿಸುವುದಿಲ್ಲಮ್ಮ ; ಅವ
ಮಾನ ಬಂದಾಗ ಬರಲಿ, ನಾನು ಅದನ್ನು ಬಾ ಎಂದು ಕರೆಯುವುದಿಲ್ಲ. ಬಂದು
ನಿನ್ನನ್ನು ಬಿಡಿ ಎಂದು ಸಿಡಿಲಿಗೆ ನಾನು ಆಜ್ಞೆ ಮಾಡುವುದಿಲ್ಲ ; ನಿನ್ನ ಮೇಲೆ
ದೂರನ್ನು ಆ ಯಮನಲ್ಲಿ ನಾನು ಹೇಳುವುದಿಲ್ಲ. ನಿನ್ನ ಕೈಲಾದಾಗ ಬುದ್ಧೀ
ಕಲಿತುಕೊ, ಸಾವಕಾಶವಾಗಿ ಯೋಗ್ಯಳಾಗು, ನನಗೆ ಸಹನವಿದೆಯಮ್ಮ, ನಾನೂ
ನನ್ನ ನೂರುಜನ ಪರಿವಾರವೂ ವಿಷಜೇ ಮನೆಯಲ್ಲಿರುವೆವು.
ವಿರಜೆ.-- ಹಾಗಲ್ಲ ಸ್ವಾಮಿ, ತಾವು ಇಷ್ಟು ಜಾಗ್ರತೆಯಾಗಿ ಬರುತ್ತೀರೆಂದು ನಾನು
ತಿಳಿದಿರಲಿಲ್ಲ. ತಮ್ಮ ಮಾದೆಗೆ ತಕ್ಕ ಹಾಗೆ ನಡೆದುಕೊಳ್ಳುವುದಕ್ಕೆ ನನಗೆ
--------------------------------------------
೫೫ ಹೇಮಚಂದ್ರರಾಜ ವಿಲಾಸ. {೨ನೇ ಅಂಕ
ಉಪಪತ್ತಿಸಾಲದು. ನಮ್ಮಕ್ಕೈಯ್ಯ ಹೇಳುವ ಮಾತನ್ನು ತಾವು ಚಿತ್ರದಲ್ಲಿ
ಲಾಲಿಸಿ. ತಂ ತಮ್ಮ ಆಗ್ರಹವನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳತಕ್ಕವರು
ತಮಗೆ ಮುಪ್ಪೆಂದು ತಿಳಿದು ತೃಪ್ತರಾಗಲೇಬೇಕು, ಆದ್ದರಿಂದ-- ಆದರೆ ಆಕೆ
ತನ್ನ ಕರ್ತವ್ಯವನ್ನು ಬಲ್ಲಳು.
ಧೊರೆ.-ಈ ಮಾತು ಸರಿಯೆ ?
ವಿಷಜೆ.ಸರಿ ಎನ್ನುವುದಕ್ಕೆ ನಾನು ಹೊಣೆ, ಏನು, ಐವತ್ತು ಜನ ಪರಿವಾರವೆ !
ಇದು ಸರಿಯಲ್ಲವೆ ? ಇದಕ್ಕಿಂತಲೂ ಹೆಚ್ಚಾಗಿರಿಸಿಕೊಳ್ಳಲು ಪ್ರಕೃತವೇನಿದೆ ? ಈ
ಸಂಖ್ಯೆಯಿಂದಲೇ ವೆಚ್ಚ ಬಲವಾಗಿ ಮತ್ತು ಅಪಾಯ ಸಂಭವಿಸಬಹುದೆಂಬ
ಭಯವೂ ತೋರುತ್ತಿರುವಾಗ್ಯೆ, ಇಷ್ಟುಜನದಿಂದತಾನೆ ಪ್ರಯೋಜನವೇನು ?
ಒಂದೇ ಮನೆಯಲ್ಲಿ ಎರಡು ಯಾಜಮಾನ್ಯ ಮಿತ್ರಭಾವದಲ್ಲಿ ಇರುವುದಕ್ಕೆ ಹ್ಯಾಗಾ
ದೀತು ? ಇದು ಕಷ್ಟ, ಮುಕ್ಕಾಲುಪಾಲು ಅಸಾಧ್ಯವೇ.
ನಾಗವೇಣಿ--ಸ್ವಾಮಿ ಆಕೇ ಚಾಕರರಿಂದಾಗಲಿ ನನ್ನ ಚಾಕರರಿಂದಾಗಲಿ ಯಾಕೆ
ತಮ್ಮ ಸೇವೆಯನ್ನು ಮಾಡಿಸಿಕೊಳ್ಳಕೂಡದು ?
ವಿಷಜೆ --ಯಾಕೆ ಹಾಗಾಗಬಾರದು ಸಾಮಿ ? ಅವರು ತಮ್ಮನ್ನು ಅಲಕ್ಷ್ಯವಾಗಿ
ಕಂಡರೆ ನಾವು ಅವರನ್ನು ಶಿಕ್ಷಿಸಬಹುದು. ಆದರೆ ನನ್ನ ಮನೆಗೆ ತಾವು ಬರುವು
ದಾದರೆ, ಇದರಿಂದ ನನಗೇನೋ ಅಪಾಯ ತೋರಿಬರುವುದರಿಂದ, ನಿಮ್ಮ ಸಂಗಡ
ಇಪ್ಪತ್ತೈದುಜನವನ್ನು ಕರೆದುಕೊಂಡು ಬನ್ನಿ ; ಇದಕ್ಕೆ ಹೆಚ್ಚಾಗಿ ನಾನು
ಆಸರೆಯನ್ನು ಕೊಟ್ಟು ಆತಿಥ್ಯಮಾಡಲಾರೆ.
ಧೊರೆ.-ನನ್ನ ಸರ್ವಸ್ವವನ್ನೂ ನಿಮಗೆ ಕೊಟ್ಟೆ.
ವಿಷಜೆ--ಒಳ್ಳೇ ಕೆಲಸ, ಸಕಾಲದಲ್ಲಿ ಕೊಟ್ಟಿರಿ.
ಧೊರೆ. ನಿಮ್ಮನ್ನು ನನ್ನ ಪೋಷಕರನ್ನಾಗಿ ಮಾಡಿದೆ ; ಭಂಡಾರಾಧಿಕಾರಿಗಳನ್ನಾಗಿ
ಮಾಡಿದೆ. ಈ ಅಲ್ಪ ಪರಿವಾರವು ನನ್ನ ಸಂಗಡಿರಬೇಕೆಂಬ ಒಂದು ಉಪಚಾರ
ವನ್ನು ಮಾತ್ರ ಇಟ್ಟುಕೊಂಡೆ. ಏನು ವಿಷಜೆ, ಇಪ್ಪತ್ತೈದುಜನ ಪರಿವಾರ
ದೊಡನೆ ನಿನ್ನ ಮನೆಗೆ ನಾನು ಬರಬೇಕೆ ? ಈ ಮಾತು ನೀನು ಆಡಿದೆಯ ?
ವಿಷಜೆ.-- ಇನ್ನೂ ಬಂದುಸಾರಿ ಹೇಳುತೇನೆ ಸ್ವಾಮಿ ; ಅದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿ
ಬರಕೂಡದು.
ದೊರೆ.-ನೀಚತರರಿಗೆ ಹೋಲಿಸಿದರೆ ನೀಚರು ಯೋಗ್ಯರಾಗಿ ಕಾಣುವರು. ನೀಚ
ತಮರಾಗಿಲ್ಲದಿರುವುದೇ ಅವರ ಶ್ಲಾಘನೀಯವಾದ ಗುಣವಾಗಿದೆ. (ನಾಗವೇಣಿ
ಸಂಗಡ) ನಿನ್ನ ಸಂಗಡಲೇ ಬರುತೇನಮ್ಮ. ನೀನು ಹೇಳಿದ ಐವತ್ತು ಜನ ಪರಿ
ವಾರವು ಇಪ್ಪತ್ತೈದಕ್ಕೆ ಎರಡರಷ್ಟಾಯಿತು. ಆದ್ದರಿಂದ ಅವಳ ಪ್ರೇಮಕ್ಕಿಂತಲೂ
ನಿನ್ನ ಪ್ರೇಮ ಇಮ್ಮಡಿಯಾಯಿತು.
---------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೫೫
ನಾಗವೇಣಿ.-ಸ್ವಾಮಿ ಕೇಳಿ ; ಒಂದಕ್ಕೆ ಎರಡರಷ್ಟು ಜನ ತಮ್ಮ ಹಸಾದಕ್ಕೆ
ಹಮ್ಮೈಸಿಕೊಂಡು ಸಿದ್ಧರಾಗಿರುವ ಮನೆಯಲ್ಲಿ ಇಪ್ಪತ್ತೈದಲ್ಲ, ಹತ್ತು, ಹತ್ತಲ್ಲ,
ಐದುತಾನೆ ಯಾಕೆ ?
ವಿಷಜೆ - ಒಬ್ಬನಿಂದತಾನೆ ಪ್ರಕೃತವೇನು ?
ಧೊರೆ.-ಅಯ್ಯೋ ಪ್ರಕೃತಾಪ್ರಕೃತಗಳ ಮಾತನ್ನಾಡಬೇಡ. ಗೋಪಾಳದವರಾದರೂ
ಸರಿಯೆ, ಕೆಲಸಕ್ಕೆ ಬಾರದ ಒಂದು ಪದಾರ್ಥವನ್ನು ತಮಗೆ ಪ್ರಕೃತವಿಲ್ಲದಿದ್ದಾ
ಗ್ಯೂ ಹೆಚ್ಚಾಗಿ ಇಟ್ಟುಕೊಂಡಿರುವರು, ಪ್ರಕೃತಕ್ಕೆ ಎಷ್ಟು ಬೇಕೋ ಅಷ್ಟು
ಮಾತ್ರವೇ ವದಗಿಸಿನೋಡು, ಮನುಷ್ಯನ ಬಾಳೂ ತಿರ್ಯಕ್‌ಜಂತುಗಳ ಬಾಳೂ
ಎರಡೂ ಒಂದೇಯಾಗಿರುವುದು. ಬೆಚ್ಚಗೆ ಉಡುಪನ್ನು ಹಾಕಿಕೊಳ್ಳುವುದೇ ಡಂಭ
ವಾಗಿ ತೋರಿದ ಪಕ್ಷಕ್ಕೆ, ಮೈಗೆ ಬೆಚ್ಚಗಿಲ್ಲದೆ ಡಂಭವಾಗಿ ಹಾಕಿಕೊಂಡಿರುವ
ಉಡಪು ಅವಕೃತವಾದ್ದು. ನಿಜವಾಗಿಯೂ ಬೇಕಾದ್ದೇನೆಂದರೆ-- ದೇವರೇ, ಸಹ
ನವನ್ನು ನೀಡು, ಸಹನವೇ ನನಗೆ ಬೇಕಾದ್ದು, ದೇವರ, ಭಾಗ್ಯಹೀನನಾಗಿರುವ
ಮುದುಕನಾದ ನಾನು ವ್ಯಸನದಿಂದಲೂ ವಾರ್ಧಿಕ್ಯದಿಂದಲೂ ಪೀಡಿತನಾಗಿದೇನೆ.
ಇವೆರಡರ ಬಾಧೆಯಿಂದಲೂ ಮಗ್ನನಾಗಿರುವಂತೆ ಮಾಡಿದೀರಿ. ಹೀಗೆ ತಂದೆಗೆ
ವಿರೋಧವಾದ ಹೃದಯವನ್ನೂ ಈ ಹೆಮ್ಮಕ್ಕಳಿಗೆ ಕೊಟ್ಟವರು ನೀವೇ ಆದರೆ,
ಅದನ್ನು ಸಾತ್ವಿಕನಾಗಿ ಸಹಿಸಿಕೊಂಡಿರುವಂಥಾ ಅವಿವೇಕವನ್ನು ಮಾತ್ರ ನನಗೆ
ಕೊಡಬೇಡಿ. ಗಂಭೀರವಾದ ಆಗ್ರಹ ನನ್ನನ್ನು ಸೋಕಲಿ. ಹೆಂಗಸಿನ ಆಯುಧ
ವಾದ ಕಂಬನಿಗಳ ಕರೆ ಗಂಡಸಾದ ನನ್ನ ಕೆನ್ನೆಯಮೇಲೆ ಹರಿದು ಕೆಡಿಸದಿರಲಿ.
ಎಲೆ ದಯಾರಹಿತರಾದ ಚಂಡಾಲ ಸ್ತ್ರೀಕರಾಳಿಗಳಿರಾ ; ಲೋಕವೆಲ್ಲಾ ಕಂಪಿ
ಸುವಂತೆ ನಿಮ್ಮಿಬ್ಬರಮೇಲೆಯೂ ನನ್ನ ದುಃಖವನ್ನು ತೀರಿಸಿಕೊಳ್ಳುತೇನೆ.
ಎಂಥಾ ಕೆಲಸಕೊಡುತೇನೆಂದರೆ-ಇಂಥಾದ್ದೆ ಎಂದು ಈಗ ನಾನರಿಯೆ. ಆದರೆ
ಅದರಿಂದ ಭೂಮಿಯೆಲ್ಲಾ ಭಯದಿಂದ ಗಡಗಡನೆ ನಡಗಿ ಹೋದೀತು, ನಾನು
ಅಳುತೇನೆಂದು ತಿಳಿದಿದ್ದೀರೋ ? ಇಲ್ಲ ನಾನು ಅಳುವುದಿಲ್ಲ. ಈ ಹೃದಯವು
ಒಂದು ಲಕ್ಷ ಚೂರಾಗಿ ಒಡೆದು ಹೋಗುವತನಕ ನಾನು ಅಳುವುದಿಲ್ಲ. ಎಲ್ಲಾ
ವಿದೂಷಕ, ನನಗೆ ಹುಚ್ಚು ಹಿಡಿಯುವುದಲ್ಲೊ ! (ಧೊರೆ, ದುಃಖಸಾರ,
ನಿಷ್ಕಂಟಕ, ವಿದೂಷಕನಿದ್ಧಾಂತ, ದೊಡ್ಡ ಬಿರು
ಗಾಳಿ, ಮಳೆ, ಗುಡುಗು ಸಿಡಿಲು ವಿಶೇಷವಾಯಿತು.)
ಕುಟಿಲ.--ನಾವು ಒಳಕ್ಕೆ ಹೋಗೋಣ, ಮಳೆಯ ಗಾಳಿಯೂ ವಿಪರೀತವಾಗಿದೆ.
ವಿಷಜೆ-ಈ ಮನೆ ಚಿಕ್ಕದು ; ಮುದುಕನಿಗೂ ಅವನ ಜನರಿಗೂ ಸ್ಥಳ ಸಾಲದು.
ನಾಗವೇಣಿ.-ಅದು ಅವನ ದೋಷವೆ. ತಾನಾಗಿಯೇ ಆಯಾಸವನ್ನು ಉಂಟು
ಮಾಡಿಕೊಂಡ ; ಅವನ ಅವಿವೇಕದ ರುಚಿಯನ್ನು ಅವನೋಡಲೇ ಬೇಕು.
-------------------------------------------
೫೬ ಹೇಮಚಂದ್ರರಾಜ ವಿಲಾಸ, [೨ನೇ ಅಂಕ.
ವಿಷಜೆ.-- ಅವನು ತನ್ನ ಮಟ್ಟಿಗೆ ಸಂತೋಷವಾಗಿ ನನ್ನ ಮನೆಯಲ್ಲಿ ಬಂದಿರಲಿ ;
ಇನ್ನೊಂದು ಹುಳು ಕೂಡದು.
ನಾಗವೇಣಿ.--ನಾನೂ ಹಾಗೆಯೇ ನಿಷ್ಕರ್ಷೆಮಾಡಿದ್ದೇನೆ. ದುಃಖಸಾರರೆಲ್ಲಿ ?
ಕುಟಿಲ.-- ಮುದುಕನ ಸಂಗಡ ಹೋಗಿದ್ದರು ; ಹಿಂದಕ್ಕೆ ಬಂದರು.
ಪ್ರವೇಶ.-ದುಃಖಸಾರ.
ದುಃಖ.-- ಧೊರೆಗೆ ಮಹದಾಗ್ರಹ ಬಂದಿದೆ.
ಕುಟಿಲ,ಯಾವಕಡೇ ಹೋಗುತ್ತಾರೆ ?
ದುಃಖ ಕುದುರೆಗೆ ಅಪ್ಪಣೆಯಾಯಿತು ; ಎತ್ತ ಹೋಗುವರೋ ಕಾಣೆ.
ಕುಟಿಲ ಆತನ ದಾರಿಗೆ ಆತನನ್ನು ಬಿಟ್ಟ ಬಿಡುವುದು ಉತ್ತಮ. ಬಬ್ಬರ ಮಾತನ್ನೂ
ಕೇಳುವುದಿಲ್ಲ, ತನ್ನ ದಾರಿ ಹಿಡಿದುಕೊಂಡು ತಾನೇ ಹೋಗುತ್ತಾರೆ.
ನಾಗವೇಣಿ-ಸ್ವಾಮಿ, ನಿಲ್ಲಬೇಕೆಂದು ಆತನನ್ನು ತಾವು ಕೇಳಿಕೊಳ್ಳಲೇ ಕೂಡದು.
ದುಃಖ.-ಅಯ್ಯೋ ! ರಾತ್ರೆಯಾಯಿತು ; ಪರ್ವತ ಪ್ರಾಂತ್ಯದಿಂದ ಪ್ರಚಂಡಮಾರುತವೇ
ಬೀಸುತ್ತಾ ಇದೆ. ಮುಂದಕ್ಕೆ ಅನೇಕ ಹರಿದಾರಿಗಳವರಿಗೂ ಒಂದು ಗಿಡವೂ
ಇಲ್ಲವಲ್ಲಾ !
ವಿಗ್ರಜೆ -- ಸ್ವಾಮಿ, ಸೋಚ್ಛಾಸರುಷರು ತಾವಾಗಿಯೇ ಸಂಪಾದಿಸಿಕೊಳ್ಳತಕ್ಕ ಅಪಾ
ಯವೇ ಅವರಿಗೆ ಮರದ ಉಪಾಧ್ಯಾಯರಾಗಿರಬೇಕು. ಬಾಗಿಲನ್ನು ಹಾಕಿಕೊಳ್ಳಿ .
ಆತನ ಹತ್ತರ ಬಹು ದುಪ್ಪಜನರು ಸೇರಿಕೊಂಡಿದ್ದಾರೆ. ಆತನ ಕಿವಿಯು ಹಿತ್ತಾಳೇ
ಕಿವಿಯಾದ್ದರಿಂದ, ಆತನಿಗೆ ಈ ಜನರು ಹುಟ್ಟಿಸಬಹುದಾದ ಕೋಪಕ್ಕೆ ಭಯಪಡ
ಬೇಕೆಂದು ವಿವೇಕವು ಆಜ್ಞಾಪಿಸುತ್ತಿದೆ.
ಕುಟಿಲ.-ಸ್ವಾಮಿ ಬಾಗಿಲನ್ನು ಹಾಕಿಕೊಳ್ಳಿ. ಈ ರಾತ್ರೆ ವಿಪರೀತವಾಗಿದೆ. ನಮ್ಮ
ಪ್ರಿಯಳು ಹೇಳುವ ಬುದ್ಧಿವಾದ ಸರಿಯಾದ್ದು. ಆ ಗಾಳಿಯನ್ನು ತಪ್ಪಿಸಿಕೊಂಡು
ಒಳಕ್ಕೆ ಬನ್ನಿ. (ನಿಷ್ಕ್ರಾಂತ)
......
--------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೫೭
೩ ನೇ ಅ೦ಕ.
೧ನೇ ಪ್ರಕರಣ-ಬೆಟ್ಟದ ತಪ್ಪಲು.
ವಿಪರೀತವಾದ ಗಾಳಿ, ನಿಷ್ಕಂಟಕ, ಒಬ್ಬ ದೊಡ್ಡ ಮನುಷ್ಯ;
ಇವರ ಪ್ರವೇಶ
ನಿಷ್ಕಂಟಕ.--ಈ ಮಹಾವಾಯುವಿನ ಜೊತೆಗೆ ಇನ್ಯಾರು ಅಲ್ಲಿ ಬರತಕ್ಕವರು ?
ದೊಡ್ಡ.-- ಈ ಮಹಾವಾಯುವಿನಂತೆಯೇ ವಲ್ಲಡಿಯಾಗಿ ಅತ್ಯಂತ ಸಮಾಧಾನವಾಗಿ
ರುವ ಮನಸ್ಸುಳ್ಳವನೊಬ್ಬ.
ನಿಷ್ಕಂಟಕ.--ನಾನು ನಿನ್ನ ಗುರುತನ್ನು ಬಲ್ಲೆನೈಯ್ಯ, ಧೊರೆ ಯೆಲ್ಲಿದಾರೆ ?
ದೊಡ್ಕ, ಎಲ್ಲಿದಾರೆಂದು ಹೇಳಲಿ ! ವಿಪರೀತವಾಗಿ ಬಡಿಯುತಿರುವ ಬಿರುಮಳೆ ಗಾಳಿ
ಯ ಸಂಗಡ ಸೆಣಸಾಡುತಿದಾರೆ. ಈ ಚರಾಚರ ವಸ್ತುಗಳೂ ವಿಕೃತಿ ಹೊಂದು
ವಂತೆಯಾಗಲಿ ಇಲ್ಲ ನಾಶ ಹೊಂದುವಂತೆಯಾಗಲಿ, ಭೂಮಿಯನ್ನು ಕಡಲಿಗೂ
ಕಡಲನ್ನು ಭೂಮಿಗೂ ತೂರಿಬಿಡುವಹಾಗೆ ಗಾಳಿಗೆ ಆಜ್ಞಾಪಿಸಿ ಮಾತನಾಡುತಿದಾರೆ.
ದಿಕ್ಕ ಕಾಣದೆ ಬೀಸುತ್ತಿರುವ ಚಂಡ ಮಾರುತವು, ಕೆದರಾಡಿ ಗೂರಾಡುತ್ತಿರುವ
ನರೆಗೂದಲನ್ನು ಕಿತ್ತುಗೊಳ್ಳುತಿದಾರೆ. ಒಂದಕ್ಕೊಂದು ಅತ್ತಿತ್ತ ತೀಡಾಡು
ತಿರುವ ಈ ಪ್ರಚಂಡ ಮಾರುತದ ಮತ್ತು ಈ ಮಹಾವರ್ಷಗಳ ಗಲಭೆಯನ್ನು
ತಮ್ಮ ಶರೀರ ಪ್ರಪಂಚ ಗಲಭೆಯಿಂದ ಧಿಕ್ಕರಿಸುವುದಕ್ಕೆ ತಿಣಕಾಡುತಿರುವರು.
ಮರಿಗೆ ಹಾಲಕೊಟ್ಟು ಸಾಕಾದ ಕರಡಿಯ, ಉಗ್ರ ಸಿಂಹವೂ, ಹಸಿದಿರುವ
ತೋಳವೂ, ಇಂಥವುಗಳು ಕೂಡ ಆಚೆಗೆ ತಲೆ ಹಾಕದೆ ಒಳಗೇ ಇರತಕ್ಕೆ ಈ
ವಿಪರೀತ ನಿಶಿಯಲ್ಲಿ ಪಾಗಿಲ್ಲದೆ ತಲೆಯನ್ನು ಬಿರೀ ಹುಯಿದುಕೊಂಡು ಓಡಿಹೋ
ಗುತ್ತಿದಾರೆ.
ನಿಷ್ಕಂಟಕ.--ಅವರ ಸಂಗಡ ಯಾರಿದಾರೆ ?
ದೊಡ್ಡ-ವಿದೂಷಕ ಹೊರತು ಮತ್ತೆ ಯಾರೂ ಇಲ್ಲ. ಆತನ ಹೃದಯ ಶೂಲವಾ
ಗಿರುವ ಮಹಾ ವ್ಯಸನಾಂಧಕಾರವನ್ನು ಹಾಸ್ಯರಸವೆಂಬ ಬೆಳಕಿನಿಂದ ಹೋಗ
ಲಾಡಿಸಬೇಕೆಂದು ಶ್ರಮಪಡುತಿರುವ ಅವ ಒಬ್ಬ ಸಂಗಡ ಇದಾನೆಯೇ ಹೊರತು
ಮತ್ತೆ ಯಾರೂ ಇಲ್ಲ.
ನಿಷ್ಕಂಟಕ.--ಅಯ್ಯ, ನಿನ್ನನ್ನು ನಾನು ಬಲ್ಲೆ. ಈ ನಮ್ಮ ಪರ ಪರಿಚಯದ
ಆಧಾರದಮೇಲೆ ಒಂದಾನೊಂದು ಕಾರ್ಯ ಗೌರವವನ್ನು ನೀನು ನಿರ್ವಹಿಸಬೇ
ಕೆಂದು ಕೋರುತ್ತೇನೆ. ಕುಟಿಲನಿಗೂ ಭದ್ರನಾಥನಿಗೂ ವೈಷಮ್ಯ ಹುಟ್ಟಿದೆ ;
ಆ ವೈಷಮ್ಯದ ಮುಖವು ಅವರಿಬ್ಬರ ತಂತ್ರದಿಂದ ಮುಚ್ಚಿಕೊಂಡಿದ್ದಾಗ್ಯೂ,
ಅದು ಇರುವುದೇನೊ ಖಂಡಿತ. ಇವರಿಬ್ಬರ ಸಮಾಜದಲ್ಲಿಯ ಚಾಕರರಂತೆಯೇ
----------------------------------------------
೫೮ ಹೇಮಚಂದ್ರರಾಜ ವಿಲಾಸ. [೩ನೇ ಅಂಕ
ಕಾಣಿಸಿಕೊಳ್ಳತಕ್ಕೆ ಕೆಲವು ಬೇಹುಗಾರರೂ ಗೂಢಚಾರರೂ ಇದ್ದುಕೊಂಡು
ನಮ್ಮ ಸೀಮೆಯ ಒಳಮರ್ಮಗಳನ್ನು ಮಾರದೇಶಕ್ಕೆ ಕೊಡುತ್ತಿರುವರು.
ಇಂಥಾ ಪದವಿಯಲ್ಲಿರತಕ್ಕ ಯಾರಹತ್ಯರತಾನೆ ಇಂಥಾವರು ಇರುವುದಿಲ್ಲ. ? ಈ
ಯಿಬ್ಬರು ಅಳಿಯಂದರ ಮನಃಕಷಾಯದಿಂದಲೋ ಇವರ ಪಿತೂರಿಯಿಂದಲೋ,
ಅಥವಾ ದಯಾಳುವಾದ ವೈದ್ಯರಾಜರಮಲೆ ಇವರಿಬ ರೂ ತೋರಿಸಿದ ಕಾಠಿ
ಣ್ಯದಿಂದಲೋ, ಅಥವಾ ಇವೇ ಮೇಲಿನ ಸಂಭ್ರಮವಾಗಿ ಉಳ್ಳ ಇತರರ ಹಾಸ್ಯ
ಗಳಿಂದಲೋ, ಹ್ಯಾಗೋ ತಿಳಿಯದು ; ಅಂತು ಮಾರದೇಕದಿಂದ ಒಡಕುಹುಟ್ಟ
ರುವ ನಮ್ಮ ರಾಜ್ಯಕ್ಕೇನೋ ಬಂದು ಸೇನೆ ಬಂದು ಇಳಿಯುವುದು ನಿಶ್ಚಯ.
ಆ ಮಾರದೇಶದವರು ನಮ್ಮ ಅಜಾಗರೂಕತೆಯಿಂದ ವಿವೇಕವನ್ನು ಹೊಂದಿ,
ಆಗಲೆ ನಮ್ಮ ಮುಖ್ಯವಾದ ರೇವು ಪಟ್ಟಣಗಳಲ್ಲಿ ರಹಸ್ಯವಾಗಿ ಹೆಜ್ಜೆಯನ್ನು
ಇಟ್ಟಿದಾರೆ ; ಬಹಿರಂಗವಾಗಿ ತಮ್ಮ ದಾಳಿಯನ್ನು ಹಾಕಿದ್ದಾರೆ. ಈಗ ನೀನು ಮಾಡ
ಬೇಕಾದ ಕೆಲಸವೇನೆಂದರೆ ; ನನ್ನ ಹೆಸರಿನ ಆಧಾರದಮೇಲೆ ಧೌಮ್ಯಪುರಿಯುವ
ರಿಗೆ ನೀನು ಹೋಗಿ, ಮಹಾಕ್ರೌರ್ಯಕ್ಕೂ ಹುಚ್ಚು ಬೆನ್ನು ಹಿಡಿಸತಕ್ಕ ದುಃಖಕ್ಕೂ
ಧೊರೆಯು ಗುರಿಯಾಗಿರುವುದನ್ನು ಕುರಿತು ಇದ್ದ ಸಂಗತಿ ಇದ್ದ ಹಾಗೆಯೇ ಹೇಳಿ
ದರೆ, ನೀನು ಮಾಡಿದ ಉಪಕಾರಕ್ಕೆ ಕೃತಜ್ಞರಾಗಿರತಕ್ಕವರು ಇಲ್ಲಿ ನಿನಗೆ
ದೊರೆಯುವರು. ನಾನೂ ಒಬ್ಬ, ಸದ್ವಂಶದಲ್ಲಿ ಹುಟ್ಟಿ ಬೆಳೆದವನು. ನಮ್ಮ
ಪೂರ್ವ ಪರಿಚಯದ ಭರವಸೆಯಮೇಲೆ ಈ ಕಾದ್ಯವನ್ನು ನಿನಗೆ ವಹಿಸಿದ್ದೇನೆ.
ದೊಡ್ಡ.-- ಇನ್ನೂ ನಾನು ನಿಮ್ಮ ಸಂಗಡ ಮಾತನಾಡತಕ್ಕದಿದೆ.
ನಿಷಂಟಕ.-- ಬೇಡ, ಸಾಕು, ನನ್ನ ವೇಷದಿಂದ ತೋರಿಬರುವುದಕ್ಕಿಂತಲೂ ನಾನು
ಉತ್ತಮನಾದವನೆಂದು ತಿಳಿಯುವುದಕ್ಕೋಸ್ಕರ, ಈ ಚೀಲವನ್ನು ಬಿಚ್ಚಿ ಇದರಲ್ಲಿ
ರುವುದನ್ನು ತೆಗೆದುಕೊ, ಇಂದುಕಲೆಯನ್ನು ನೀನು ನೋಡುತೀಯಷ್ಟೆ ;
ನೋಡುವುದೇನೋ ಖಂಡಿತ. ಆಕೆಯನ್ನು ಹಾಗೆ ನೋಡಿದರೆ, ಈ ಉಂಗುರ
ವನ್ನು ಆಕೆಗೆ ತೋರಿಸು, ಈಗ ನಿನ್ನ ಸಂಗಡ ಮಾತನಾಡತಕ್ಕವರು ಯಾರೆಂದು
ಇನ್ನೂ ನಿನಗೆ ಗೊತ್ತಾಗದೇ ಇದೆಯೋ ಅಂಥಾ ಇವನು ಇಂಥವನೆಂದು ಆಕೆ
ಹೇಳುವಳು. ಅಯ್ಯೋ ಈ ಹಾಳ ಬಿರುಗಾಳಿ ! ಧೊರೆಯನ್ನು ಹುಡುಕಿಕೊಂಡು
ಹೋಗುತ್ತೇನೆ.
ದೊಡ್ಡ.--ಸ್ವಾಮಿ ನಮಸ್ಕಾರ ; ಇನ್ನೇನು ಹೇಳತಕ್ಕದ್ದಿಲ್ಲವೊ ?
ನಿಷ್ಕಂಟಕ,.-- ಇನ್ನು ಕೊಂಚ ಹೇಳತಕ್ಕದ್ದಿದೆ. ಆದರೆ ಅದು ಬಹು ಮುಖ್ಯವಾದ
ವಿಷಯ, ನೀನು ಆಕಡೇ ಶ್ರಮಪಟ್ಟು ಕೊಂಡು ಹೋಗಿ ನಾನು ಈ ಕಡೇ ಹೋ
ದರೆ ಧೊರೆಯನ್ನು ಯಾರು ಮೊದಲು ಕಾಣುತಾರೆಯೋ ಅವರು ಉಳಿದವರನ್ನು
ಕೂಗಬೇಕು. (ಎಲ್ಲರೂ ಬೇರೆ ಬೇರೆ ನಿಷ್ಕ್ರಾಂತ.)
---------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೫೯
೨ನೇ ಪ್ರಕರಣ.
ತೊಪ್ಪಲಿನ ಮತ್ತೊಂದು ಕಡೆ ಬಿರುಗಾಳಿ ಬೀಸುವುದು,
ಪ್ರವೇಶ-ಧೊರೆ, ವಿಧೂಷಕ.
ಧೊರೆ.- ಎಲಗಾಳಿ, ಊದು ; ನಿನ್ನ ಕೆನ್ನೆ ಒಡೆಯುವತನಕ ಊದು ! ರೇಗೂ !
ಬೀಸು ! ಎಲ ಮಹಾವರ್ಷವೆ, ಎಲ ದೊಣೆಯೆ, ನಮ್ಮ ದೇವಾಲಯಗಳ ಗೋಪು
ರದ ಕಲಶಗಳಲ್ಲಾ ಮುಳಿಗಿಹೋಗುವತನಕ ಸರಿ ! ಮನೋವೇಗಕ್ಕೆ ಸಮಾನ
ವಾದ ವೇಗದಿಂದ ಮನುಷ್ಯನನ್ನು ದಹಿಸತಕ್ಕ ಬೆಂಕಿಯೆ, ಮಹಾ ವೃಕ್ಷರಾಜ
ನನ್ನು ಸೀಳಿಬಿಡುವ ಸಡಲಿನ ಸವಾರಿಗೆ ನಿಷಾನಿ ಆನೆಯ, ಈ ನನ್ನ ಬಿಳಿ ಗಡ್ಡ
ವನ್ನು ನೀದುಬಿಡು ! ಅಖಂಡ ಬ್ರಹ್ಮಾಂಡವನ್ನೇ ಕಂಪನಗೊಳಿಸುವ ಗುಡುಗೆ,
ಗೋಳಾಕೃತಿಯಾದ ಈ ಭೂಮಂಡಲವನ್ನು ಬಡಿದು ಚಪ್ಪಟೆಯಾಗಿ ಮಾಡಿ
ಬಿಡು, ನಿರ್ಮಾಣ ಮಾಡತಕ್ಕ ಆ ಬ್ರಹ್ಮನ ಅಚ್ಚನ್ನು ಒಡೆ ; ಕೃತಘ್ನತೆಯ
ಮೂಲವನ್ನೇ ಒಟ್ಟಿಗೆ ಹಾಳಮಾಡು ! ಅದರ ಮೊಳಕೆಯನ್ನೆ ಚಿಗಟಬಿಡು.
ವಿದೂ-ಮಾವ, ಬೈಲಿನಲ್ಲಿ ಬೀಳುವ ಮಳೇ ನೀರಿಗಿಂತಲೂ ಬೆಚ್ಚಗಿರುವ ಮನೆಯೊ
ಳಗೆ ಇಂಪಾದ ಸುಳಮಾತುಗಳ ಮಳೆಗೆ ಬಾಯಿಬಿಟ್ಟುಕೊಂಡು ಕಾದಿರುವುದು
ಉತ್ತಮ, ಮಾವ ಮನೆಗೆನಡೆ ; ಹೋಗಿ ನಿನ್ನ ಹೆಮ್ಮಕ್ಕಳಿಗೆ ಅಡ್ಡಬಿದ್ದು
ಅಶೀರ್ವಾದಮಾಡಬೇಕೆಂದು ಬೇಡಿಕೊ. ಬುದ್ಧಿವಂತರಮೇಲಾಗಲಿ ಕೊಡಂ
ಗಿಗಳ ಮೇಲಾಗಲಿ ಈ ರಾತ್ರೆಗೆ ಸ್ವಲ್ಪವೂ ಕನಿಕರವಿಲ್ಲ.
ಧೊರೆ.-ನಿನ್ನ ಹೊಟ್ಟೆತುಂಬಾ ಗುಡುಗು | ಬೆಂಕಿಯೆ, ನೀನು ಉಗುಳು ! ಮಳೆಯ,
ನೀನು ಸುರಿ ! ಮಳೆ, ಗಾಳಿ, ಗುಡುಗು, ಮಿಂಚು, ಯಾವುದೂ ನನ್ನ ಹೆಮ್ಮಕ್ಕ
ಳಲ್ಲ. ಎಲಾ ಪಂಚಭೂತಗಳಿರಾ, ದಯಾಹೀನವಾದವುಗಳಂದು ನಿಮ್ಮ ಮೇಲೆ
ನಾನು ದೋಷಾರೋಪಣೆ ಮಾಡುವುದಿಲ್ಲ. ನಾನು ನಿಮಗೆ ರಾಜ್ಯವನ್ನು ಕೊಡ
ಲಿಲ್ಲ ; ನಿಮ್ಮನ್ನು ಮಕ್ಕಳೆ ಎಂದು ಕರೆಯಲಿಲ್ಲ ; ನೀವೇನೂ ನನಗೆ ವಿಧೇಯ
ರಾಗಿರಬೇಕಾದ್ದಿಲ್ಲ. ನಿಮ್ಮ ಭಯಂಕರವಾದ ಸಂತೋಷ ಇದ್ದಂತೆ ಆಗಲಿ.
ಇಕೋ ಇಲ್ಲಿ, ದರಿದ್ರನಾಗಿ, ರೋಗಪೀಡಿತನಾಗಿ, ಬಲಹೀನನಾಗಿ, ಅತಿ ವೃದ್ಧನಾಗಿ,
ಎಲ್ಲರಿಂದಲೂ ತಿರಸ್ಕೃತನಾಗಿ ಕೊನೆಗೆ ನಿಮ್ಮ ಗುಲಾಮನಾಗಿ ಇಲ್ಲಿ ನಿಂತಿದೇನೆ.
ಆದರೂ ನೀವು ಆ ನೀಚರಾದ ಆ ಇಬ್ಬರು ಹೆಣ್ಣು ಬೋಕಿಗಳ ಸಂಗಡ ಸೇರಿ
ಹಂಣುಹಂಣು ಮುದುಕನಾದ ನನ್ನ ಶಿರಸ್ಸಿನಮೇಲೆ ನಿಮ್ಮ ಪಾರುಪ್ಪವನ್ನು
ತೋರಿಸುವಮಟ್ಟಗೆ ನೀವು ಅತಿ ದೀನರಾದ ಸಹಕಾರಿಗಳಾದೀರಲ್ಲಾ! ಅಯ್ಯೋ !
ಅಯ್ಯೋ ! ನಾಚಿಗೆಕೇಡೆ ! ಶಿವ ಶಿವಾ!
---------------------------------------------
೬೦ ಹೇಮಚಂದ್ರರಾಜ ವಿಲಾಸ. [೩ನೇ ಅಂಕ.
ವಿದೂ.-- ತನ್ನ ತಲೆಯನ್ನಿಡುವುದಕ್ಕೆ ಒಂದು ಮನೆ ಇದ್ದವನಿಗೆ ಒಂದು ಒಳ್ಳೆ
ಕುಲಾವಿ ಇದ್ದ ಹಾಗೆ.
ಹೃದಯವ ನಿಡುವೆಡೆಯೊಳೆ |
ಮುದದಿಂ ನುಂಗುಟವನಿಡುವ ಮಾನವಚತುರಂ ||
ಪಾದದ ಶೋಬಳಿ ಗುಳ್ಳಗೆ |
ಒದರ್ವಯಾತನೆಗೆ ನಿದ್ರೆ ಇಲ್ಲದೆ ಯಳುವಂ ||
ಯಾಕೆಂದರೆ ಕನ್ನಡಿಯನ್ನು ನೋಡಿ ಬಾಯನ್ನು ಸೊಟ್ಟ ಸೊಟ್ಟವಾಗಿ ಮಾಡದ
ಸುಂದರಿಯೇ ಇಲ್ಲ.
ಧೊರೆ.-ಇಲ್ಲ. ಸಹನಕ್ಕೆ ನಿಧಿಯಾಗಿರುತೇನೈ ; ಯಾವ ಮಾತನ್ನು ಅಡುವುದಿಲ್ಲ.
ಪ್ರವೇಶನಿಷ್ಕಂಟಕ.
ನಿಷಂಟಕ...ಯಾರಲ್ಲಿ ?
ವಿದೂ-ಇಲ್ಲಿ ಒಬ್ಬ ವಿವೇಕಿ ಒಬ್ಬ ಕೋಡಂಗಿ ಇಬ್ಬರಿದಾರೆ.
ನಿಷ್ಕಂಟಕ.--ಅಯ್ಯೋ ಅಪ್ಪ ಇಲ್ಲಿದ್ದೀಯ ! ನಿಶಿಯನ್ನು ಹಾರೈಸುವ ವಸ್ತುಗಳ
ಕೂಡ ಇಂಥಾ ನೀತಿಯನ್ನು ಅಪೇಕ್ಷಿಸವು. ಈ ಪ್ರಳಯಕಾಲದ ಆಟೋಪವು ನಿಶಾ
ಚರರನ್ನೂ ಭಯಪಡಿಸಿ ತಮ್ಮ ಗುಹೆಯೊಳಗೆ ಹೊಕ್ಕೊಂಡಿರುವಂತೆ ಮಾಡು
ವುದು. ನಾನು ಪ್ರಾಯಸಮರ್ಥನಾದಾಗಿನಿಂದಲೂ, ಇಂಥಾ ಸಿಡಿಲನ್ನೂ, ಈ
ಅಗ್ನಿಜ್ವಾಲೆಯನ್ನೂ, ಹೀಗೆ ಛಡಾಳಿಸಿ 'ಮೊರೆಯುವ ಮಘಾಡಂಬರವನ್ನೂ,
ಹೀಗೆ ಮೊರೆಯುತಿರುವ ಬಿರುಗಾಳಿ ಮಳಗಳನ್ನೂ ನಾನು ಕೇಳಿದ ಜ್ಞಾಪಕವೇ
ಇಲ್ಲ. ಮನುಷ್ಯ ಸ್ವಭಾವವು ಈ ಪ್ರಳಯ ರೌದ್ರವನ್ನೂ ಈ ಭಯಂಕರ
ವಾದ ಆಡಂಬರವನ್ನೂ ಸಹಿಸಲಾರದು.
ಧೊರೆ.--ಈ ಮಹಾ ಭೀತಿಯನ್ನು ನಮ್ಮ ತಲೆಯಮೇಲೆ ತೋರಿಸತಕ್ಕೆ ಆ ದೇವತೆ
ಗಳು ತಮ್ಮ ಶತ್ರುಗಳನ್ನು ಈಗ ಹುಡುಕಿಕೊಳ್ಳಲಿ. ನ್ಯಾಯದ ಕಸೆಗಳಿಂದ
ಪ್ರಹರಿಸಲ್ಪಡದಂಥಾ ರಹಸ್ಯವಾದ ಅಪರಾಧಗಳನ್ನು ಮಾಡಿದ ಎಲ ಖೂಳ, ಈಗ
ಗಡಗಡನೆ ನಡುಗು. ಎಲ ಕೊಲೆಯಿಂದ ರಕ್ತವಾಗಿರುವ ಹವೆ, ಅವಿತುಕೊ.
ಎಲ ಸುಳ್ಳು ಪ್ರಮಾಣ ಮಾಡತಕ್ಕವನೆ, ಸಜ್ಜನ ವೇಷಧಾರಿಯೆ, ನೀನು ಸ್ವಗೋ
ತ್ರಗಾಮಿ, ಮನುಷ್ಯನ ಪ್ರಾಣವನ್ನು ತೆಗೆಯಬೇಕೆಂದು ರಹಸ್ಯವಾಗಿ ಯತ್ನಿ
ಸಿದ ದ್ರೋಹಿಯೆ, ಕಸಿಯುವಹಾಗೆ ಗಡಗಡನೆ ನಡುಗು, ಗಿಕ್ಕರಿಯುವ ಪಾಪಗಳೆ,
ನಿಮ್ಮನ್ನು ಮುಚ್ಚಿಕೊಂಡಿರುವ ಮುಸುಗನ್ನು ಭೇಧಿಸಿಕೊಂಡು ಬಂದು ಈ
ಭಯಂಕರವಾದ ಈ ದೂತರ ಅನುಗ್ರಹವನ್ನು ಬೇಡಿಕೊಳ್ಳಿ. ನಾನಾದರೋ,
ನಾನು ಮಾಡುವ ಅಪರಾಧಕ್ಕಿಂತಲೂ ನನಗೆ ಮಾಡಿದ ಅಪರಾಧ ಹೆಚ್ಚಾಗಿದೆ.
-------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೬೧
ನಿಷ್ಕಂಟಕ.-ಅಯ್ಯೋ ಬರೀತಲೆಯಲ್ಲಾ, ಮಹಾಸ್ವಾಮಿ ಇಲ್ಲಿ ಸಮೀಪದಲ್ಲಿಯೇ
ಒಂದು ಗುಹೆ ಇದೆ. ಅದು ಈ ಘಾಳೀ ಹೊಡೆತಕ್ಕೆ ಸ್ವಲ್ಪ ಮರೆಯಾಗಿರುವುದು,
ಅಲ್ಲಿ ಹೋಗಿ ಮಲಗಿಕೊಳ್ಳಿ, ಅದನ್ನು ಕಟ್ಟಿರುವ ಕಲ್ಲಿಗಿಂತಲೂ ಕಾಠಿಣ್ಯದಲ್ಲಿ
ಹೆಚ್ಚಾದ ಈ ಮನೆಯೊಳಕ್ಕೆ, ತಮ್ಮನ್ನು ಆರಿಸಿಕೊಂಡು ಈಗತಾನೆ ನಾನು
ಹೋಗಲು ನನ್ನನ್ನು ಒಳಕ್ಕೆ ಬರಕೂಡದೆಂದು ಆಟಂಕಿಸಿದ, ಈ ದಯಾರಹಿತ
ವಾದ ಮನೆಯೊಳಕ್ಕೆ ಹೋಗಿ ಸ್ವಾಮಿಯ ವಿಷಯದಲ್ಲಿ ಈ ನಡತೆ ಇರಕೂಡ
ದೆಂದು ಚೀಮಾರಿ ಮಾಡುತ್ತೇನೆ.
ಧೊರೆ.-- ನನ್ನ ಬುದ್ಧಿ ಭ್ರಮಣೆಗೆ ಮೊದಲಾಯಿತು. ಬಾರೋ ಮಗು ; ಹ್ಯಾಗಿದ್ದೀಯ
ಮಗು ? ಛಳಿಯ ? ನನಗೇ ಛಳಿ, ಈ ಗುಡಿಸಿಲು ಎಲ್ಲಿದೆಯೈಯ್ಯ ? ನಮ್ಮ
ಆವಶ್ಯಕತೆಯು ಕೈಗಾರಿಕೆಯು ಬಹು ಆಶ್ಚರ್ಯವಾಗಿದೆ ; ಅದರಿಂದ ಅಲ್ಪವಾದ
ಪದಾರ್ಥವೂ ಬೆಲೆಯುಳ್ಳದ್ದಾಗುವುದು, ಬಾರೈ, ನಿನ್ನ ಗುಡಿಸಿಲಿಗೆ ಹೋಗೋಣ.
ಅಯ್ಯೋ ! ಎಲ ಮಗುವಿದೂಷಕ, ನನ್ನ ಹೃದಯದ ಒಂದು ಭಾಗವು ನಿನ್ನ
ಕಷ್ಟಕ್ಕಾಗಿ ಬಹಳ ವ್ಯಸನಪಡುವುದೈ.
ವಿದೂ - (ಹಾಡುತಾ.)
ಬುದ್ದಿ ಲವವನುಳ್ಳ ಮನುಜ |
ಮಳೆಯು ಗಾಳಿ ಬೀಸುತಿದೆ ||
ಸದ್ಯಕ್ಕೆ ಸಹಿಸಬೇಕು |
ಮಳೆಯು ನಿತ್ಯ ಹುಯ್ಯುತೀದೆ ||
ಧೊರೆ.-- ನಿಜಮಗು, ಈ ಗುಹೆಯೊಳಕ್ಕೆ ಕರೆದುಕೊಂಡು ಹೋಗು.
(ಧೊರೆ, ನಿಷ್ಕಂಟಕ, ಇವರ ನಿಷ್ಕ್ರಾಂತ)
...........
೩ನೇ ಪ್ರಕರಣ-ದುಃಖಕಾರ ಕುಮಂತರ ಪ್ರವೇಶ.
ದುಃಖ.-- ಅಯ್ಯೋ ! ಅಯ್ಯೋ ! ಕುಮಂತ ಇಂಥಾ ದಯಾ ಹೀನತ್ವ ನನಗೆ ಸರಿ
ಬೀಳದು. ಆತನಿಗೋಸ್ಕರ ನಾನು ಕನಿಕರವನ್ನು ತೋರಿಸಬೇಕೆಂದು ನಾನು
ಅವರುಗಳ ಅಪ್ಪಣೆಯನ್ನು ಕೇಳಿಕೊಂಡರೆ, ನನ್ನ ಮನೆಯನ್ನೇ ಆಕ್ರಮಿಸಿದರು;
ಆತನ ಮಾತ ಆಡಿದರೆ, ಆತನ ವಿಷಯವಾಗಿ ಏನಾದರೂ ತಮಗೆ ಅರಿಕೆ ಮಾಡಿ
ದರೆ, ಮತ್ತು ಆತನನ್ನು ಇನ್ನು ಯಾವ ವಿಧದಲ್ಲಿಯಾದರೂ ಸರಿಯೇ ಉಪಚರಿ
ಸಿದರೆ, ತಮ್ಮ ಆ ಗ್ರಹಕ್ಕೆ ನಾನು ಎಂದೆಂದಿಗೂ ಖಾತ್ರನಾಗುತ್ತೇನೆಂದು ಹೇಳಿದರು.
ಕುಮ೦ತ್ರ-ಈ ದಯಾರಹಿತೃವು ಅತ್ಯಂತ ಆಸುರವಾಗಿದೆ.
--------------------------------------------
೬೨ ಹೇಮಚಂದ ರಾಜ ವಿಲಾಸ. [೩ನೇ ಅಂಕ.
ದುಃಖ-ನೀನು ಹೋಗು ; ಒಂದು ಮಾತನ್ನೂ ಆಡಬೇಡ. ಕುಟಲನಿಗೂ ಭದ್ರನಾ
ಥನಿಗೂ ವೈಷಮ್ಮ ಹುಟ್ಟಿದೆ ; ಇದಕ್ಕಿಂತಲೂ ಕೇಡಾದ್ದು ಇನ್ನೊಂದಿದೆ. ಈ
ದಿನ ರಾತ್ರಿ ನನಗೆ ಒಂದು ಕಾಗದ ಬಂತು. ಆ ಮಾತನಾಡುವುದು ಅಪಾಯಕರ
ವಾಗಿದೆ. ನನ್ನ ಬೊಕ್ಕಸದಲ್ಲಿ ಅದನ್ನಿಟ್ಟು, ಬೀಗಹಾಕಿದ್ದೇನೆ. ಈಗ ಧೊರೆಗೆ
ಕೊಟ್ಟಿರತಕ್ಕ ಕಷ್ಟಕ್ಕೆಲ್ಲಾ ತಕ್ಕ ಪಾಶ್ಚಿತ್ತವಾಗುವುದು. ಆಗಲೇ ಕೆಲವು
ಸೇನೆ ಹೊರಟಿತು. ನಾವು ಧೋರೇ ಪಕ್ಷಕ್ಕೆ ಬಾಗಿರಬೇಕು. ಆತನನ್ನು ನಾನು
ಹುಡುಕಿಕೊಂಡು ಹೋಗಿ ಆತನ ಕಪ್ಪ ನಿವಾರಣೆಗೆ ತಕ್ಕ ಸಹಾಯವನ್ನು ರಹ
ಸ್ಯವಾಗಿ ಮಾಡುತ್ತೇನೆ. ನಾನು ಉದಾಸೀನನಾಗಿದಾನೆಂಬ ಭಾವ ರಾಜಪ್ರತ್ರನಾದ
ಕುಟಿಲನಿಗೆ ತಿಳಿಯದಹಾಗೆ ಅವರ ಸಂಗಡ ನೀನು ಮಾತುಕಥೆಯಾಡುತ್ತಾ ಓಡಾ
ಡುತಿರು. ನಾನು ಎಲ್ಲಿ ಎಂದು ಕೇಳಿದರೆ_ದೇಹಕ್ಕೆ ಅಲಸಿಗೆಯಾಗಿದೆ, ಮಲಗಿ
ದಾರೆ ಎಂದು ಹೇಳು. ನನ್ನ ಪ್ರಾಣ ಹೋದಾಗ್ಯೂ ಸರಿಯೇ. ಆದರೆ ಈಗಿನ
ಭಯದಿಂದ ಅದಕ್ಕಿಂತಲೂ ಕಡಮೆಯಾದ್ದು ಯಾವುದೂ ಹೋಗುವಹಾಗೆ ತೋರ
ಲಿಲ್ಲ ; ಆದರೂ ನನ್ನ ಸಾಮಿಯಾದ ಧೊರೆಗೆ ಕಪ್ನ ನಿವಾರಣೆಯಾಗಲೇ ಬೇಕು.
ವಿಚಿತ್ರವಾದ ಕೆಲವು ಸಂಗತಿಗಳು ನಡೆಯುತಿವೆ, ಕುತಂತ್ರ ; ನೀನು ಜಾಗ್ರತೆ
ಯಾಗಿರು. (ನಿಷ್ಕ್ರಾಂತ.)
ಕುಮಂತ್ರ.-- ಈ ಸಂಗತಿಯಲ್ಲಿಯ ಬಾಯಿ ಬಿಡಕೂಡದೆಂದು ನೀನು ನಿಯಮಿಸಿ
ದ್ದಾಗ್ಯೂ, ರಾಜಪುತ್ರರಾದ ಕುಟಿಲರಿಗೆ ನಾನು ಕೂಡಲೆ ಉಪಚಾರದ ಸಂಗತಿ
ಯನ್ನು ಹೇಳುವುದೇ ಸರಿ. ಆ ಕಾಗದದ ಸಂಗತಿಯನ್ನೂ ಆತನಿಗೆ ತಿಳಿಸು
ತ್ತೇನೆ. ಅವರ ದಯಕ್ಕೆ ಸಾತ್ರನಾಗುವುದಕ್ಕೆ ಒಳ್ಳೆ ಸಮಯ. ಇದರಿಂದ
ನಮ್ಮ ತಂದೆ ಯಾವುದನ್ನು ಕಳೆದುಕೊಳತಾನೋ ಅದು ನನಗೆ ಪ್ರಾಪ್ತವಾಗು
ವುದು. ಅದೇನೆಂದರೆ ಆತನ ಸಕಲ ಸ್ವತ್ತು, ಮುದುಕರು ಬೀಳುವಾಗ ಹುಡು
ಗರು ಏಳುತ್ತಾರೆ. (ನಿಷ್ಕ್ರಾಂತ.)
..........
೪ನೇ ಪ್ರಕರಣ. ಬೆಟ್ಟದ ತಪ್ಪಲು, ಗುಹೆ ಮುಂದೆ.
ಪ್ರವೇಶ ಧೊರೆ, ನಿಷ್ಕಂಟಕ, ವಿದೂಷಕ,
ನಿಷ್ಕಂಟಕ-ಇದೇ ಸ್ಥಳ, ಮಹಾಸ್ವಾಮಿ, ಒಳಕ್ಕೆ ದಯಮಾಡಿಸಬೇಕು, ನನ್ನೊ
ಡೆಯ, ಈ ಭಯಂಕರವಾದ ನಿತಿಯ ಕೌಲ್ಯವನ್ನು ಬೈಲಲ್ಲಿದ್ದುಕೊಂಡು
ಮನುಷ್ಯ ಸ್ವಭಾವವು ಸಹಿಸುವುದು ಕಷ್ಟ.
(ಬಿರುಗಾಳಿ ಮಳೆ ಹೊಡೆಯುವುದು.)
-------------------------------------------
8ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೬೩
ಧೊರೆ.-- ನನ್ನನ್ನು ಬಿಟ್ಟುಬಿಡು, ನನ್ನ ಗೋಜಿಗೆ ಬರಬೇಡ.
ನಿಷ್ಕಂಟಕ.--ಪ್ರಭುವೆ, ಒಳಕ್ಕೆ ದಯಮಾಡಿಸಬೇಕು.
ಧೊರೆ.--ನನ್ನ ಹೊಟ್ಟೆ ಉರಿಸುತ್ತೀಯೆ.
ನಿಷ್ಕಂಟಕ.--ನನ್ನ ಹೊಟ್ಟೆಯನ್ನಾದರೂ ಉರಿಸಿಗೊಂಡೇನು, ಎನ್ನೊ ಡನೆಯ
ಒಳಕ್ಕೆ ದಯಮಾಡಿಸಬೇಕು.
ಧೊರೆ.-ಈ ಪ್ರಚಂಡ ಮಾರುತದ ಹೊಡೆತವನ್ನು ನಮ್ಮ ಶರೀರ ತಡೆಯಲಾರದೆಂದು
ತಿಳಿದಿದೀಯೆ, ನಿನಗೆ ಹಾಗಾಗಬಹುದು. ಹೆಚ್ಚಿನ ರೋಗವು ಬಾಧಿಸುತ್ತಿರುವಾಗ್ಗೆ
ಅಲ್ಪ ರೋಗಗಳ ಯಾತನೆ ಕಾಣಿಸುವುದಿಲ್ಲ. ಅಯ್ಯ, ಹುಲಿಯನ್ನು ಕಂಡ
ರೇನೋ ನೀನು ಓಡಿಹೋಗುತಿಯೆ ; ಆದರೆ ವಿಪರೀತವಾಗಿ ಆರ್ಭಟಿಸುತ್ತಿ
ರುವ ಮಹಾ ಸಮುದ್ರವು ದಾರಿಗೆ ಅಡ್ಡಲಾಗಿ ಸಿಕ್ಕಿದರೆ ಆ ಹುಲಿಯ ಬಾಯ
ಲ್ಲಾದರೂ ಹೋಗಿ ಬಿದ್ದು ಅದನ್ನು ಎದುರಿಸಿ ಅದರ ಬಾಧೆಯನ್ನು ಸಹಿಸಿಗೊಂ
ಡೀಯೇ ಹೊರತು ಸಮುದ್ರಕ್ಕೆ ಹೋಗಿ ಬೀಳಲಾರೆಯೈ. ಮನಸ್ಸು ನಿರಾ
ತಂಕವಾಗಿದ್ದರೆ ದೇಹಸ್ಥಿತಿಯು ಅತಿ ನಾಜೋತಿಗೆ ಬರುವುದು. ಈ ನನ್ನ ಮನ
ಸ್ಸಿನಲ್ಲಿ ಹೊಡೆಯುತ್ತಿರುವ ಮಹಾ ಮಾರುತವು ಇತರ ಇಂದ್ರಿಯ ಚೇಷ್ಟೆಗಳ
ನ್ನೆಲ್ಲಾ ನಾಶಗೊಳಿಸಿ ತಾನೇ ತಾನಾಗಿ ವಿಹರಿಸುತ್ತಿರುವುದು, ಪಿತೃದೋಹ !
ಅನ್ನವನ್ನು ಕಲಿಸಿ ತುತ್ತನ್ನು ಎತ್ತಿ ಬಾಯಿಗೆ ಇರಿಸಿದ್ದಕ್ಕಾಗಿ ಈ ಕೈಯನ್ನು
ಈ ಬಾಯಿ ಕಡಿದು ತುಂಡು ಮಾಡಿದ ಹಾಗಾಯಿತಲ್ಲವೇನೈ ? ಆದರೆ ಇದಕ್ಕೆ
ತಕ್ಕ ಪ್ರಾಯಶ್ಚಿತ್ತವನ್ನು ಮಾಡಲೇ ಮಾಡುತ್ತೇನೆ ; ಇಲ್ಲ ; ಇನ್ನು ದುಃಖಪಡು
ವುದಿಲ್ಲ. ಇಂಥಾ ರಾತ್ರೆಯಲ್ಲಿ ನನ್ನನ್ನು ಹೊರಕ್ಕೆ ಅಟ್ಟಿಬಿಡುವುದೆ ! ಹುಯಿ,
ಮಳೆ ಸಹಿಸಿಕೊಳ್ಳುತ್ತೇನೆ. ಇಂಥಾ ರಾತೆ ! ಅಯ್ಯೋ ! ವಿಷಜೆ, ನಾಗವೇಣಿ !
ನಿಮ್ಮ ಹೆಸರು ಅನ್ಯಥಾ ಅನ್ಯರ್ಥವಾಗಿ ಸಾರ್ಥಕವಾಯಿತಲ್ಲಾ! ನಿಮಗೆ ಸಕಲ
ಸೌಭಾಗ್ಯವನ್ನೂ ಕೊಟ್ಟಂಥಾ ದಯಾರಸವುಳ್ಳ ನಿಮ್ಮ ಮುಪ್ಪಿನ ತಂದೆಯನ್ನು,
ಓಹೋ ಆ ದಾರಿಯಲ್ಲಿಯೇ ಹುಚ್ಚ ಎನ್ನು ವುದು ಇರತಕ್ಕದ್ದು ; ಆ ದಾರೀ
ಬಿಡೋಣ ; ಇನ್ನು ಅದು ಸಾಕು.
ನಿಷ್ಕಂಟಕ--ಮಹಾಸ್ವಾಮಿ, ಒಳಕ್ಕೆ ದಯಮಾಡಿಸಬೇಕು.
ಧೊರೆ.-ನೀನೇ ದಯಮಾಡಿ ಒಳಕ್ಕೆ ಹೋಗೈ. ನಿನ್ನ ಸೌಖ್ಯವನ್ನು ನೀನು ನೋಡಿ
ಕೊಳ್ಳಬಾರದೆ ? ಈ ಪ್ರಳದು ಮಾರುತನೂ ಈ ಕುಂಭ ದೋಣದ ಮಳೆಯೂ
ತಮಗಿಂತಲೂ ಹೆಚ್ಚಾದ ಹಿಂಸೆಯನ್ನು ನನಗೆ ಉಂಟುಮಾಡತಕ್ಕ ವಿಷಯಗಳನ್ನು
ಕುರಿತು ಯೋಚಿಸುವುದಕ್ಕೆ ಅವಕಾಶ ಕೊಡುವುದಿಲ್ಲ. ನಾನು ಒಳಕ್ಕೆ ಹೋಗು
ತ್ತೇನಪ್ಪ, (ವಿದೂಷಕನನ್ನು ಕುರಿತು) ಅಯ್ದ ಮಗು, ನೀನು ಮೊದಲು
ಒಳಕ್ಕೆ ಹೋಗಯ್ಯ, ಅಯ್ಯೋ ಗುಡಿಸಲೂ ಇಲ್ಲದ ಬಡತನವೆ-ಇಲ್ಲ, ನೀನು ಒಳಕ್ಕೆ
---------------------------------------------
೬೪ ಹೇಮಚಂದ್ರರಾಜ ವಿಲಾಸ. [೩ನೇ ಅಂಕ
ಹೋಗು, ದೇವರ ಧ್ಯಾನವನ್ನು ಮಾಡಿ ತರುವಾಯ ಮಲಗಿಕೊಳ್ಳುತೇನೆ.
(ವಿದೂಷಕ ಒಳಕ್ಕೆ ಹೋಗುವನು) ಅಯ್ಯೋ ! ಬಟ್ಟೆಗೆ ಗತಿಯಿಲ್ಲದೆ ಯಿರುವ
ನಿರ್ಭಾಗ್ಯರಾದ ದರಿದ್ರರಾ, ನಿರ್ದಯವುಳ್ಳ ಈ ಗಾಳಿ ಮಳೆಯ ಎಸಗೆಗೆ ಸಿಕ್ಕಿ ನೀವು
ಎಲ್ಲಿದ್ದರೂ ಸರಿಯೇ ಮರೆಯಿಲ್ಲದೆ ನಿಮ್ಮ ತಲೆಯ ಅನ್ನವಿಲ್ಲದ ನಿಮ್ಮ ಹೊಟ್ಟೆ
ಯೂ ಚಿಂದಿಚಿಂದಿಯಾದ ನಿಮ್ಮ ಬಟ್ಟೆಯೂ ಇಂಥಾ ಅವಾಂತರದ ದೆಸೆಯಿಂದ
ಹ್ಯಾಗೆತಾನೇ ಕಾಪಾಡಿಯಾವು ? ನಾನಾದರೋ ಈ ವಿಷಯದಲ್ಲಿ ಉದಾಸೀನನಾ
ಗಿದ್ದೆ. ಎಲ್ಲ ಡಂಭವೆ, ಔಷಧನನ್ನು ತೆಗೆದುಕೊ, ನಿರ್ಭಾಗ್ಧರು ಅನುಭವಿಸತ
ಕ್ಕದ್ದನ್ನೆಲ್ಲಾ ನೀನು ಅನುಭವಿಸಿ ನಿನಗಾಗಿ ಮಿಕ್ಕ ಐಶ್ವರ್ಯವನ್ನು ಅವರಿಗೋ
ಸ್ಕರ ಒದರಿಬಿಟ್ಟು ದೇವರು ಬಹಳ ನ್ಯಾಯವಂತನೆಂದು ತೋರ್ಪಡಿಸು,
ಶುಕ್ಷ ಚಂದ)-( ಒಳಗೆ ) ಒಂದೂವರೆ ಯಾಳುದ್ದಾ, ಒಂದೂವರೆಯಾಳು !
ಅಯ್ಯೋ, ರಾಮಜೋಗಿ ! (ನಿರೂಪಕ ಗುಹೆಯಿಂದೀಚೆಗೆ ಓಡಿಬರುವನು.)
ವಿದೂ.--ಮಾವ ಒಳಕ್ಕೆ ಬರಬೇಡ, ಇಲ್ಲಿ ಪಿಶಾಚಿ ಇದೆ. ಅಯ್ಯೋ ಇನ್ನೇನುಗತಿ !
ನಿಷ್ಕಂಟಕ.-- ನಿನ್ನ ಕೈ ಕೊಡು, ಯಾರದು ?
ವಿದೂ.--ಪಿಶಾಚಿ, ಪಿಶಾಚಿ, ತನ್ನ ಹೆಸರು ರಾಮಜೋಗಿ ಎನ್ನುವುದು.
ನಿಷ್ಕಂಟಕ-ಆ ಹುಲ್ಲಿನಲ್ಲಿ ಗೊಣಗುಟ್ಟುತಿದೀಯಲ್ಲಾ, ನೀನು ಯಾರು, ನೀನೇನು ?
ಬಾ ಈಚೆಗೆ.
ಪ್ರವೇಶ.ಕುಕ್ಷ್ಯ ಚಂದ), ಹುಚ್ಚನ ವೇಷದಲ್ಲಿ.
ಶುಕ್ಲ.--ದೂರಾ ಇರಿ, ನನ್ನ ಹಿಂದೆ ಪಿಶಾಚಿ ಬರುತಿದೆ. ಗಾಳಿ ತಣ್ಣಗೆ ಬೀಗುತಿದೆ
ಹಂ! ನಿನ್ನ ತಂಣನಾದ ಹಾಸಿಗೆಗೆ ಹೋಗಿ, ಬೆಚ್ಚಗೆ ಮಾಡಿಕೊ.
ಧೊರೆ. ನಿನಗೆ ಇದ್ದದ್ದನ್ನೆಲ್ಲಾ ನಿನ್ನ ಇಬ್ಬರು ಹೆಮ್ಮಕ್ಕಳಿಗೆ ಕೊಟ್ಟು ನೀನು
ಈ ಸ್ಥಿತಿಗೆ ಬಂದೆಯಾ ?
ಶುಕ್ಷ್ಯ-ರಾಮಜೋಗಿಗೆ ಯಾರು ಯೇನನ್ನು ಕೊಡುತ್ತಾರೆ ? ಈ ಹಾಳ ಪಿಶಾಚಿಯು
ಅವನನ್ನು ಬೆಂಕಿಯಮೇಲೆ ನಡಿಸಿ, ಉರಿಯೊಳಗೆ ನುಗ್ಗಿಸಿ, ಹೊಳೆಯಲ್ಲಿ ತಳ್ಳಿ,
ಮಡುವಿನಲ್ಲಿ ಮುಳುಗಿಸಿ, ಜೋರೇಮೇಲೆ ನಡಿಸಿ, ಚೂರಿಯನ್ನು ಅವನ ತಲೆ
ದಿಂಬಿನ ಕೆಳಗಿಟ್ಟು, ಅವನ ಆಸನದಮೇಲೆ ಮುಳ್ಳ ನೆಟ್ಟು, ಅವನ ಎಡೆಯ
ಹತ್ತರ ಪಾಷ್ರಾಣವನ್ನು ಹಾಕಿ, ಅವನ ನೆರಳನ್ನು ಕಂಡರೆ ಅವನು ಹೆದರುವ
ಹಾಗೆ ಮಾಡಿ, ಇಲ್ಲಾ ಮಾಡಿತು. ಅಯ್ಯೋ ರಾಮಜೋಗಿಗೆ ಛಳಿ, ತೋಂ !
ನಾನನ, ನಾನನ, ನಾನನನ, ಬಿರುಗಾಳಿ, ಗ್ರಹಗಳ ಕೂರದೃಷ್ಟಿ, ರೋಗ, ಯಾ
ವುದೂ ಪೀಡಿಸದಂತೆ ಮಾಡಿ, ಅಯ್ಯೋ ! ಪಿಶಾಚ ಪೀಡಿತನಾದ ರಾಮಜೋಗಿಗೆ
ಧರ್ಮಾಮಾಡಿರಪ್ಪಾ ! ಅಗೋ ಅಲ್ಲಿ ಬರುತಾ ಇದೆ, ಬಂತಾ, ಬಂತು, ಅಲ್ಲಿ, ಅಲ್ಲಿ
(ಬಿರುಗಾಳಿ ಹೊಡೆಯುವುದು.)
---------------------------------------------
೪ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ. ೬೫
ಧೊರೆ.-- ಏನು, ಇವನ ಹೆಮ್ಮಕ್ಕಳು ಇವನನ್ನು ಈ ಗತಿಗೆ ತಂದರೆ ? ನೀನೇನೂ ಉಳಿ
ಸಿಕೊಳ್ಳಲಿಲ್ಲವೆ ? ಎಲ್ಲಾ ಕೊಟ್ಟುಬಿಟ್ಟೆಯ ?
ವಿದೂ.--ಇಲ್ಲ, ಒಂದು ಕಂಬಳಿ ಮಾತ್ರ ಉಳಿಸಿಕೊಂಡ. ಇಲ್ಲದಿದ್ದರೆ ನಾವೆಲ್ಲಾ
ನಾಚಿಕೊಂಡು ಹೋಗಬೇಕಾಗುತಿತ್ತು.
ಧೊರೆ. ಈ ಬ್ರಹಾಂಡ ಕಟಾಹದಲ್ಲಿ ಜನರ ದುರ್ನಿತಿಗೆ ತಗಲಲೇಬೇಕೆಂದಿರುವ
ಮಹಾ ವಿಪತ್ತುಗಳಲ್ಲಾ ನಿನ್ನ ಹೆಮ್ಮಕ್ಕಳಿಗೆ ತಟ್ಟಬಾರದೆ !
ನಿಷ್ಕಂಟಕ.-ಸ್ವಾಮಿ ಆತನಿಗೆ ಹೆಮ್ಮಕ್ಕಳಿಲ್ಲ.
ಧೊರೆ ಕಾರುಣ್ಯ ಶೂನ್ಯರಾದ ಪುತ್ರಿಯರು ಹೊರತು ಮತ್ತೆ ಯಾರೂ ಇಂಥಾ ಹೀನ
ಸ್ಥಿತಿಗೆ ತರಲಾರರು. ಆಚೆಗೆ ತಳ್ಳಲ್ಪಟ್ಟ ತಂದೆಗಳು ತಮ್ಮ ಶರೀರದಮೇಲೆ
ಇಷ್ಟು ಕೊಂಚವಾಗಿ ಅಭಿಮಾನವನ್ನಿಟ್ಟುಕೊಂಡಿರಬೇಕೆಂಬುವುದೇ ನು ಪದ್ಧ
ತಿಯೋ ? ಒಳ್ಳೇ ಶಿಕ್ಷೆ ! ತಾಯ ಹೊಟ್ಟೆಯನ್ನು ಬಗೆದು ತಿನ್ನು ವಶಕ್ತಿ ವಿಶೇ
ಷಗಳಿಗೆ ಸಮನಾದ ಹೆಮ್ಮಕ್ಕಳನ್ನು ಸೃಷ್ಟಿಸಿದ ದೇಹವಲ್ಲವೇ ಇದು ?
ಶುಕ್ಲ.--ತಾ ಯ ಹೊ ಟೈ, ತಾ ಯ ಹೊ ಟೈ, ಹೆ ಹು ಹೆ ಹು ಹೆ ಹು ಹೆ.
ವಿದೂ-ಈ ರಾತ್ರೆ ಛಳಿಯು ನಮ್ಮೆಲ್ಲರಿಗೂ ಹುಚ್ಛ ಹಿಡಿಸುವದು.
ಶುಕ್ಲ--ಅಯ್ಯೋ, ಪಿಶಾಚಿ ಬಂತು, ಜಾಗ್ರತೆಯಾಗಿರು. ತಂದೆ ತಾಯಿಗಳು ಹೇಳಿದ
ಹಾಗೆ ಕೇಳು, ನ್ಯಾಯವಾಗಿ ನಿನ್ನ ಮಾತಿಗೆ ತಪ್ಪಬೇಡ, ಆಣೇ್ ಇಟ್ಟುಕೊಳ್ಳ
ಬೇಡ, ಅಗ್ನಿ ಸಾಕ್ಷಿಯಾಗಿ ಮದುವೆಯಾದವನ ಹೆಂಡತೀ ಸಂಗಬೇಡ, ನಿನ್ನ ಹೆಂಡ
ತಿಗೆ ಪ್ರತಿಷ್ಟೇ ಕಲಿಸಬೇಡ, ಓ ! ರಾಮಜೋಗಿಗೆ ಸೊಳಿಯಪ್ಪೋ ಸೊಳಿ !
ಧೊರೆ.-ನೀನು ಪೂರದಲ್ಲಿ ಏನಾಗಿದ್ದೆಯಾ ?
ಶುಕ್ಲ.--ಚಾಕರೀ ಆಳಾಗಿದ್ದೆ, ಅತಿಯಾಗಿ ಹೆಮ್ಮೆಪಡುತಿದ್ದೆ, ಜುಜಲುಪಿಬಿಡಿಸಿಕೊಂಡಿದದ್ದೇ
ತಲೆಗೆ ಕುಚ್ಚಬಿಟ್ಟು ವಸ್ತ್ರವನ್ನು ಸುತ್ತುತಿದ್ದೆ, ಮಾತು ಮಾತಿಗೂ ಆಣೇ
ಇಟ್ಟುಕೊಂಡು ಅದಕ್ಕೆ ತಪ್ಪುತಿದ್ದೆ, ಮಲಗುವಾಗಲೂ ಎದ್ದ ಮೇಲೆಯೂ ಮದಾಂ -
ಧನಾಗಿಯೇ ಇರುತಿದ್ದೆ, ಹೆಂಡದಲ್ಲಿ ತುಂಬಾ ಆಶೆ, ಪಗಡೆಯಲ್ಲಿ ಅತಿಪ್ರೀತಿ, ಸ್ತ್ರೀ
ವಿಷಯದಲ್ಲಿ ಮಿತಿಮೀರಿದ ಆಸಕ್ತಿ ; ಮನಸೋ ಎರಡು ಬಗೆಯುವುದು, ಕಿವಿಯೋ
ಹಿತ್ತಾಳೆ, ಕೈಯ್ಯೋ ಕೋಲೆಯಿಂದ ರಕ್ತಮಯ ; ಪಾಲುಮಾರಿಕೆಯಲ್ಲಿ ಹಂದಿ,
ಕಳ್ಳತನದಲ್ಲಿ ನರಿ, ಬೀಳಬಡಿಯುವುದರಲ್ಲಿ ಸಿಂಹ, ಹೊಟ್ಟೆ ಬಾಕತನದಲ್ಲಿ ತೋಳ,
ಹುಚ್ಚುತನದಲ್ಲಿ ನಾಯಿ, ಇದೆಲ್ಲಾ ಆಗಿದ್ದೆ. ಚಪಲವಾಗಿ ತಿರುಗುವ ಕಣ್ಣ
ಹೊಳವೂ ಪಳಪಳನೆ ತಳತಳಿಸುವ ದಂತಗಳ ಕಾಂತಿಯ ನಿನ್ನನ್ನು ಸ್ತ್ರೀ ವಶ
------------------------------------------
೬೬ ಹೇಮಚಂದ್ರರಾಜ ವಿಲಾಸ. [೩ನೇ ಅಂಕ
ಮಾಡದಿರಲಿ, ಆ ಚಂಡಾಲ ಪಿಶಾಚಿಯನ್ನು ದಿಃಕ್ಕರಿಸು, ಹ ಹ ಹ ಹ ಹಾ ಹಿ ಹಿ
ಹಿ ಹಿ ಹೀ ಹು ಹು ಹು ಹು ಹೂ. (ಬಿರುಗಾಳಿ ಬೀಸುತಿರುವುದು.)
ಧೊರೆ-ಹೀಗೆ ಬರೀಮೈಲಿದ್ದು ನಡುಗುವುದಕ್ಕಿಂತ ನೀನು ಸಮಾಧಿಯಲ್ಲಿದ್ದರೆ ಚೆನ್ನಾ
ಗಿರುತಿದ್ದೆಯೈ. ಮನುಷ್ಯ ಎನ್ನುವುದು ಇಷ್ಮೆಯೆ ? ಅವನ ಸ್ಥಿತಿಯನ್ನು
ಚೆನ್ನಾಗಿ ಯೋಚಿಸು, ನೀನು ಹುಳುವಿನಿಂದ ರೇಷ್ಮೆ ತೆಗೆದುಕೊಂಡವನಲ್ಲ,
ಮೃಗದಿಂದ ಚಕ್ಕಳಾ ತೆಗೆದುಕೊಂಡವನಲ್ಲ, ಕುರಿಯಿಂದ ತುಬಟ ತೆಗೆದುಕೊಂಡ
ವನಲ್ಲ, ಪ್ರಣುಗಿನ ಬೆಕ್ಕಿನಿಂದ ವಾಸನೆಯನ್ನು ಗ್ರಹಿಸಿದವನಲ್ಲ, ನಾವು ಮೂರು
ಜನವೂ ವಸ್ತ್ರ ದಿಂದ ಕೂಡಿದವರು, ನೀನು ಬೆರೆಕೆಯಿಲ್ಲದ ಅಪುಟ. ಬರೀ
ಮೈಲಿರತಕ್ಕ ಪುರುಷನು ನಿನಂಥಾ ಎರಡು ಕಾಲಿನ ಮೃಗವೇ ಸರಿ. ಹೋಗು.
ಆಚೆಗೆ ಹೋಗು, ಹಾಳ ಬಟ್ಟೆಯೆ ? ಬಾ, ಈ ಕಶೆಯನ್ನು ಬಿಚ್ಚು, ತನ್ನ
ಬಟ್ಟೆಯನ್ನು ಹರಿಯುತ್ತಾ)
ವಿದೂ-ಮಾವ, ಸಹಿಸಿಕೊ. ಈ ರಾತ್ರೆಯನ್ನು ಈಜ ವುದು ಕಷ್ಟ, ಇಲ್ಲಿ ನೋಡು,
ನಡೆಯುವ ಬೆಂಕಿ ಬರುತ್ತಾ ಇದೆ.
(ದುಃಖಸಾರ ಬಂದು ದೀವಟಿಗೆಯನ್ನು ಹಿಡಿದು
ಕೊಂಡು ಬರುವನು.)
ಶುಕ್ಲ-ಇದೇ ಆ ಕೆಟ್ಟ ಕೊಳ್ಳಿದೈಯ. ರಾತ್ರಿ ಎಂಟುಗಂಟೆಗೆ ಮೊದಲು ಮಾಡಿ
ಮೊದಲು ಕೋಳಿ ಕೂಗುವತನಕ.'ಕುಣಿಯುತ್ತೆ, ಪೀನಸೆ ತರುತ್ತೆ, ಉರಿಗಣ್ಣು
ಮಾಡುತ್ತೆ. ಸಿರವಾಯಿ ಮಾಡುತ್ತೆ. ಪೈರಿಗೆಲ್ಲಾ ರೋಗಾತರುತ್ತೆ.
ನಿಷ್ಕಂಟಕ-ಮಹಾಸ್ವಾಮಿ ಹ್ಯಾಗಿದೀರಿ ?
ಧೊರೆ.ಅವ ಯಾರು ?
ನಿಷ್ಪಂಟಕ.-- ಅವ ಯಾರು ಅಲ್ಲಿ ? ಏನನ್ನು ಹುಡುಕಿಕೊಂಡುಬಂದೆ ?
ದುಃಖ-ನೀವು ಯಾರು, ಅಲ್ಲಿ ? ನಿಮ್ಮ ಹೆಸರೇನು ?
ಶುಕ್ಯ-ಕಪ್ಪೆಯು ತಿನ್ನುವೆ ನಿಲಿಗಳ |
ತಪ್ಪದೆ ನುಂಗುವೆ ನನಿಶಂ ನೊಣವಂ ಮೆಲ್ಲುವೆ ||
ಕುಪ್ಪುಸ ಗಳಯದ ಚಿಟ್ಟೆಯ |
ನೂರಾರ ನಗಿವೆನಾಂ ||
ಹೋ ! ರಾಮಜೋಗಿ ಯೋ ರಾಮಜೋಗಿ !
ದುಃಖ.--ಅಯ್ಯೋ ! ಮಹಾಸ್ವಾಮಿ, ತಮಗೆ ಇದಕ್ಕಿಂತಲೂ ಉತ್ತಮವಾದ ಸಹವಾಸ
ಧೊರೆಯಲಿಲ್ಲವೆ ?
ಶುಕ್ಲ-ಬ್ರಹ್ಮನು ನೀಚನು ಪೌಂಚಾಲುತ್ತಮ, ತಿಳಿಯಿತು ನಿಮ್ಮ ಯಜ್ಞಾನಾ.
ದುಃಖ-ನಮ್ಮ ಮಕ್ಕಳೇ ನಮ್ಮ ಮೇಲೆ ಕತ್ತೀಕಟ್ಟಿದರು, ಸ್ವಾಮಿ
ಶುಕ್ಲ-ಅಯ್ಯೋ ! ರಾಮಜೋಗಿಗೆ ಸೊಳಿಯಪ್ಪೋ ಸೊಳಿ !
-------------------------------------------
೪ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ
ದುಃಖ.ಮಹಾಸ್ವಾಮಿ ನನ್ನ ಸಂಗಡ ದಯಮಾಡಿಸಬೇಕು, ನನ್ನ ಮನೆ ಬಾಗಿಲ
ನ್ನು ಹಾಕಿಕೊಂಡು ತಮ್ಮನ್ನು ಈ ದುಷ್ಯರಾತ್ರೆಯ ಕ್ರೌರ್ಯಕ್ಕೆ ವಶಮಾಡಬೇ
ಕೆಂದು ತಮ್ಮ ಪುತ್ರಿಯರು ನನಗೆ ಆಜ್ಞಾಪಿಸಿದ್ದಾಗ್ಯೂ, ಅವರ ಇಂಥಾ ಅಪ್ಪಣೆಗೆ
ವಿಧೇಯನಾಗುವುದು ನನ್ನ ಧರ್ಮವಲ್ಲ. ತಮ್ಮನ್ನು ಹುಡುಕಿಕೊಂಡು ಬಂದು
ಹಸಿದ ಹೊಟ್ಟೆಗೆ ಅನ್ನವನ್ನೂ ಕಾಸಿಗೊಳ್ಳುವುದಕ್ಕೆ ಬೆಂಕಿಯನ್ನೂ ತಂದು
ಒಂದೆಡೆಯಲ್ಲಿರಿಸಿದೇನೆ, ಏಳಬೇಕು, ಮಹಾಸ್ವಾಮಿ.
ಧೊರೆ.--.ಮೊದಲು ಈ ಭಟ್ಟಾಚಾರ್ಯನ ಸಂಗಡ ಮಾತನಾಡೋಣ. ಗುಡುಗಿಗೆ ಕಾರ
ವೇನೈ ?
ನಿಷ್ಕಂಟಕ.-ನನ್ನೊಡೆಯ, ಆತ ತಂದಿರುವುದನ್ನು ಸ್ವೀಕರಿಸಿ ; ಆ ಮನೆಯೊಳಕ್ಕೆ
ದಯಮಾಡಿಸಿ.
ಧೊರೆ.--ಈ ಮಹಾ ಪಂಡಿತನ ಸಂಗಡ ಬಂದು ಮಾತನಾಡಿಕೊಂಡು ಬರುತ್ತೇನೆ.
ನೀನು ಯಾವ ಶಾಸ್ತ್ರ ವನ್ನು ಓದಿದ್ದೀಯೆ ?
ಶುಕ್ಲ.--ಗ್ರಹೊಚ್ಛಾಟನಮಾಡತಕ್ಕ ಮಂತ್ರ ಶಾಸ್ತ್ರ ವನ್ನೂ, ಮರಣ ವಿಧ್ಯವನ್ನೂ,
ಧೊರೆ.-ರಹಸ್ಯವಾಗಿ ನಿನ್ನನ್ನು ಒಂದು ಮಾತ ಕೇಳಬೇಕು.
ನಿಷ್ಕಂಟಕ.--ಸ್ವಾಮಿ ತಾವಾದರೂ ಧೊರೆಯನ್ನು ಬಲವಂತಮಾಡಿ ಒಳಕ್ಕೆ ಕರೆದು
ಕೊಂಡು ಹೋಗಿ, ಅವರ ಬುದ್ದಿಯು ವಿಕಲ್ಪವಾಗಲು ಮೊದಲಾಯಿತು.
ದುಃಖ.-- ಆತನ ತಪ್ಪೇನು (ಬಿರುಗಾಳಿ ಬೀಸುವುದು) ಆತನ ಹೆಮ್ಮಕ್ಕಳು ಆತನ
ಮರಣವನ್ನ ಪೇಕ್ಷಿಸುವರು. ಅಯ್ಯೋ, ನಿಷ್ಕಂಟಕ ! ಚಿನ್ನದಂಥಾ ಮನುಷ್ಯ;
ಧೊರೆಗೆ ಹುಚ್ಚು ಹಿಡಿಯುತ್ತಿದೆ ಎಂದು ಅವ ಆಗಲೇ ಹೇಳಿದ ; ಅನ್ಯಾಯವಾಗಿ
ಅವನಿಗೆ ದೇಶಭ್ರಷ್ಯತ್ವ ಪ್ರಾಪ್ತವಾಯಿತು. ಅಯ್ಯ ಮಿತ್ರ, ನಿನ್ನ ಸಂಗಡ ನಿಜ
ವಾಗಿ ಹೇಳುತ್ತೇನೆ ಕೇಳು. ನನಗೂ ಮುಕ್ಕಾಲುಸಾಲು ಹುಚ್ಚು ಹಿಡಿದಿದೆ.
ನನಗೆ ಒಬ್ಬ ಮಗ ಇದ್ದ. ಈಗ ಅವನು ದೇಶಭ್ರಷ್ಟನಾಗಿ ನನ್ನ ಆಸ್ತಿಗೆ ಅನರ್ಹ
ನಾಗಿ ಹೊರಟು ಹೋಗಿಬಿಟ್ಟನು. ಮೊನ್ನೆ ಮೊನ್ನೆ, ನನ್ನ ಪ್ರಾಣವನ್ನೇ ತೆಗೆದು
ಬೇಕೆಂದು ಅವ ಯತ್ನಿಸಿದ. ಅವನಮೇಲೆ ನನಗೆ ವಿಶೇಷ ಅಭಿಮಾನವಿತ್ತು.
ಇನ್ಯಾವ ತಂದೆಯ ಮಗನಮೇಲೆ ಅಷ್ಟು ಪ್ರೇಮವನ್ನಿಟ್ಟುಕೊಂಡಿರಲಿಲ್ಲ
ವೈಯ್ಯ, ನಿಶ್ಚಯ ಹೇಳುತೇನೆ, ಈ ದುಃಖವು ನನ್ನ ಬುದ್ಧಿಯನ್ನು ಕೆಡಿಸಿಬಿ
ಟ್ಟಿತು. ಈ ರಾತ್ರೆ ಯೇನು ವಿಪರೀತವಾಗಿದೆ ! ಮಹಾಸ್ವಾಮಿ, ನಾನು ಬೇಡಿ
ಕೊಳ್ಳುತೇನೆ ; ಒಳಕ್ಕೆ ದಯಮಾಡಿಸಬೇಕು.
ಧೊರೆ-ಅಯ್ಯ ಮಹಾಪಂಡಿತರೆ, ತಮ್ಮ ಪಂಙ್ತಿಲಾಭವನ್ನು ಕೊಡಿಸಿ.
ಶುಕ್ಲ.--.ರಾಮಜೋಗಿಗೆ ಸೊಳಿಯೋ ಸೊಳಿ.
-------------------------------------------
೬೪ ಹೇಮಚಂದ್ರರಾಜ ವಿಲಾಸ. [೩ನೇ ಅಂಕ
ದುಃಖ.-ಗುಹೆಯೊಳಕ್ಕೆ ನೀನೂ ನಡೆಯೈ, ಮೈಬೆಚ್ಚಗೆ ಮಾಡಿಕೊ.
ಧೊರೆ.--ಬನ್ನಿ, ನಾವೆಲ್ಲರೂ ಒಳಕ್ಕೆ ಹೋಗೋಣ.
ನಿಷ್ಕಂಟಕ,ಈ ದಾರಿಯಲ್ಲಿ ದಯಮಾಡಿಸಬೇಕು, ನನ್ನೊಡೆಯ.
ಧೊರೆ. ನಾನು ಆತನ ಸಂಗಡ ; ನಮ್ಮ ಭಟ್ಟಾಚಾಯ್ಯನ ಸಂಗಡಲೇ ನಾನು ಇರ
ತಕ್ಕವನು.
ನಿಪ್ಯಂಟಕ-(ದುಃಖಸಾರನನ್ನು ಕುರಿತು): ಸ್ವಾಮಿ ತಾವು ಅವರನ್ನು ಸಮಾಧಾನ
ಮಾಡಿ, ಅವನನ್ನೂ ಒಳಕ್ಕೆ ಕರೆದುಕೊಂಡು ಹೋಗಲಿ.
ದುಃಖ.-- ಪ್ರಭುವೆ, ಅವನನ್ನೂ ಜೊತೆಯಲ್ಲಿ ಕರೆದುಕೊಂಡು ದಯಮಾಡಿಸ
ಬಹುದು.
ನಿಷ್ಕ೦ಟಕ.--ಬಾರೆಲಾ ನೀನೂ, ನಮ್ಮ ಸಂಗಡ ನಡೆ.
ಧೊರೆ.--ಅಯ್ಯ ನವದ್ವೀಪದ ಪೂಜ್ರರೆ, ದಯಮಾಡಿಸಿ.
ದುಃಖ.-- ಮಾತನಾಡಬೇಡ, ಸದ್ದು! ನಡೆ.
ಶುಕ್ಲ.--ಮಾತೆ ವಿಷಮಂ ಪೆತ್ತರ್ಭಕಂ ಗೂಡಲು, ಧೊರೆ ಕೊಲ್ಲಲ್ ಪರಕಾಯ್ವನೇ
ಹರಹರಾ ಶ್ರೀಚನ್ನ ಸೋಮೇಶ್ವರಾ. (ನಿಷ್ಕ್ರಮಣ.)
...............
೫ನೇ ಪ್ರಕರಣ-ದುಃಖಸಾರನ ಭವನ
ಪ್ರವೇಶ-ಕುಟಿಲ, ಕುಮಂತ್ರ
ಕುಟಿಲ.--ಅವನ ಮನೆಯನ್ನು ಬಿಟ್ಟು ಹೊರಟುಹೋಗುವುದರೊಳಗಾಗಿ ಅವನಿಗೆ
ಪ್ರತೀಕಾರವನ್ನು ಮಾಡಿಯೇ ಸಿದ್ಧ.
ಕುಮಂತ್ರ.-- ಹೀಗೆ ಸ್ವಭಾವವಾದ ಪಿತೃಭಕ್ತಿಯ ರಾಜಭಕ್ತಿಗೆ ಎಡೆಗೊಟ್ಟಿತಲ್ಲಾ!
ನನ್ನನ್ನು ಯಾರು ಯೇನೆಂದಾರೋ ಎಂಬದಾಗಿ ಭಯವುಂಟಾಗಿದೆ, ಸ್ವಾಮಿ.
ಕುಟಿಲ.--ನಿಮ್ಮಂಣನ ಮರಣವನ್ನು ನಿಮ್ಮ ತಂದೆ ಅಪೇಕ್ಷಿಸುವುದಕ್ಕೆ ನಿಮ್ಮಂಣನ
ದುರ್ಗುಣ ಒಂದೇ ಕಾರಣವಲ್ಲವೆಂದು ನನಗೆ ಈಗ ತೋರುವುದು. ನಿಮ್ಮ ತಂದೆಯ
ದುಸ್ವಾಭಾವದಿಂದ ನಿಮ್ಮಂನ ಸುಗುಣವು ಕೆಣಕಲ್ಪಟ್ಟು, ಎದರುಬಿದ್ದು, ಕಾ
ರ್ಯೋದ್ಯೋಗಕ್ಕೆ ಮೊದಲುಮಾಡಿತು.
ಕುವಂತ-ಅಯ್ಯೋ ! ನಾನು ನ್ಯಾಯವಾಗಿ ನಡೆದುಕೊಳ್ಳಬೇಕಾಗಿದೆಯಲ್ಲಾ
ಎಂದು ನಾನು ಪೇಚಾಡಬೇಕಾಗಿಬಂತಲ್ಲಾ! ನನ್ನ ಅದೃಹ್ಮ ಇನ್ನೆಂಥಾ ಕೆಟ್ಟ
ದ್ದೊ ! ಇಗೊ ಇದೇ ಅವರು ಹೇಳಿದ ಕಾಗದ, ಮಾರದೇಶಾಧೀಶನಿಗೆ ತಿಳಿದು
----------------------------------------
೫ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೬೯
ತಿಳಿದೂ ಅವರು ಅನುಕೂಲರಾಗಿದ್ದಂತೆ ಇದರಿಂದ ವ್ಯಕ್ತವಾಗುತ್ತೆ. ಅಯ್ಯೋ
ದೇವರೆ, ಇಂಥಾ ರಾಜದ್ರೋಹ ನಡೆಯದೇ ಇದ್ದರೂ ಆಗಿತ್ತು, ಇಲ್ಲಿ ಇದನ್ನು
ನಾನು ಕಾಣದೇ ಇದ್ದರೂ ಆಗಿತ್ತು.
ಕುಟಿಲ.-- ನನ್ನ ಪ್ರಿಯಳು ಇರುವ ಸ್ಥಳಕ್ಕೆ ಹೋಗೋಣ ಬಾ.
ಕುಮಂತ್ರ.-- ಈ ಕಾಗದದಲ್ಲಿ ಬರೆದಿರುವುದು ನಿಜವಾದರೆ, ತಮಗೆ ತುಂಬಾ ಕೆಲ
ಸವಿದೆ.
ಕುಟಿಲ --ನಿಜವಾಗಲಿ, ಸುಳ್ಳಾಗಲಿ, ನಿಮ್ಮ ತಂದೆಯ ಆಸ್ತಿಯೆಲ್ಲಾ ನಿನ್ನ ದಾಯಿತು ;
ನಿಮ್ಮ ತಂದೆ ಎಲ್ಲಿಧಾನೆ ಹುಡುಕು.
ಕುಮಂತ್ರ ).-- - (ಆತ್ಮಗತ) ಧೊರೆಯನ್ನು ಉಪಚರಿಸುತಾ ಅವ ಇದ್ದರೆ, ಅವನಮೇ
ಲಿನ ಸಂಶಯು ಇನ್ನೂ ಹೆಚ್ಚುವುದು. ರಾಜಭಕ್ತಿಗೂ ನನ್ನ ಹುಟ್ಟಿಗೂ ಪರ
ಸ್ಪರ ವಿರೋಧವಿದ್ದಾಗ್ಯೂ ಅಂಥಾ ರಾಜಭಕ್ತಿಯಲ್ಲಿಯೆ ಇನ್ನೂ ಒದ್ದಾಡುತೇನೆ.
ಕುಟಿಲ --ನಾನು ನಿನ್ನಲ್ಲಿ ನಂಬಿಕೆ ಇಡುತೇನೆ. ನನ್ನ ಅಭಿಮಾನವು ನಿನ್ನಲ್ಲಿ ನಿಮ್ಮ
ತಂದೆಗಿಂತಲೂ ಹೆಚ್ಚಾಗಿ ಇದ್ದೀತು. (ನಿಷ್ಕ್ರಮಣ.)
.........
ದುಃಖಸಾರನ ಭವನದ ಸಮೀಪದಲ್ಲಿರುವ ತುಡುಕೇ ಮನೆ.
ಪ್ರವೇಶ..-ದುಃಖಕಾರ, ಧೊರೆ, ನಿಮ್ಮ ಲಟಕ, ವಿದೂಷಕ ಶುಕ್ರಚಂದ್ರ
ದುಃಖಸಾರ - ಆ ಬೈಲಿಗಿಂತಲೂ ಇದು ಉತ್ತಮ. ಇದ್ದದ್ದನ್ನು ಸ್ವೀಕರಿಸಿ, ಇನ್ನೂ
ನನ್ನ ಕೈಲಾದಮಟ್ಟಗೆ ಒದಗಿಸುತ್ತೇನೆ. ಜಾಗ್ರತೆಯಾಗಿಯೇ ಬರುತ್ತೇನೆ.
ನಿಷ್ಕಂಟಕ.-- ಅವರ ಸಮಸ್ತವಾದ ಬುದ್ಧಿ ಶಕ್ತಿಯೂ ದುಡುಕಿನಲ್ಲಿ ಕೊನೆಗಂಡಿದೆ.
ತಾವು ಮಾಡಿದ ಉಪಕಾರಕ್ಕೆ ದೇವರು ತಮ್ಮನ್ನು ಕಾಪಾಡಲಿ.
(ದುಃಖಸಾರನ ನಿಷ್ಕ)
ಶುಕ್ಲ--ಅಗೋ ಮೋಹಿನಿ ನನ್ನನ್ನು ಕರೆಯುತ್ತಿದೆ. ರಾವಣನು ವೈತರಣೀ ನದಿ
ಯಲ್ಲಿ ಮೀನ ಹಿಡಿಯುತ್ತಿದ್ದನೆಂದು ಹೇಳುತ್ತಿದೆ. ಎಲೋ ಮಂಕುಗಳಾ, ಅದಕ್ಕೆ
ಹೆದರಿಕೊಳ್ಳಬೇಡಿ. ಎಚ್ಚರಿಕೆಯಾಗಿರಿ.
ವಿದೂ.--ಮಾವ, ಹುಚ್ಛ ಸಾಧಾರಣರಲ್ಲಿ ಸೇರಿದವನೇ ಗುಣಾಡ್ಯರಲ್ಲಿ ಸೇರಿದವನೆ ?
ಹೇಳು.
---------------------------------------------
೭೦ ಹೇಮಚಂದ್ರರಾಜ ವಿಲಾಸ, [೩ನೇ ಆಂಕ.
ಧೊರೆ.-ಧೊರೆ, ಧೊರೆ !
ವಿದೂ.--ಗುಣಾಡ್ಯನಾದ ಮಗ ಇರತಕ್ಕವನು ಸಾಧಾರಣ ಮನುಷ್ಯ, ಯಾಕೆಂ
ದರೆ ತಾನಾಗುವುದಕ್ಕಿಂತ ಮುಂಚಿತವಾಗಿಯೇ ಮಗ ಗುಣಾಡ್ಯನಾದ್ದನ್ನು
ಕಾಣುವ ಸಾಧಾರಣನು ಹುಚ್ಚನೇ ಸರಿ.
ಧೊರೆ.--ಒಂದು ಸಹಸ್ರ ಕುಲುವೆಗಳಿಂದ ಕಾದ ಗುಳಗಳು ಎಸ್ ಎಂದು ಬಂದು ಅವ
ರಿಗೆ ತಗಲಿ,
ಶುಕ್ಲ.-- ಅಯ್ಯೋ ಮಾಳವಾದ ದಯ್ಯಾ ನನ್ನ ಬೆನ್ನ ಕಡೀತೈತಲ್ಲೋ !
ವಿದೂ-ತೋಳನ ಸಾಧುತನ, ಕುದುರೆಯ ಆರೋಗ್ಯ, ಹುಡುಗನ ಪ್ರೀತಿ, ಸೂಳೆಯ
ಪ್ರಮಾಣ,-ಇದನ್ನೆಲ್ಲಾ ನಂಬುವವನು ಹುಚ್ಚ.
ಧೊರೆ -ಅದಾಗಲೇ ಬೇಕು, ನೆಟ್ಟಗೆ ಹೋಗಿ ಅವರನ್ನು ಹಿಡಿದು ಬಲೀ ಹಾಕುತ್ತೇನೆ
(ಕುಕ್ಲ ಚಂದ್ರನನ್ನು ಕುರಿತು) ನೀನು ಬಾರೈಯ್ಯ ಮಹಾ ಪಂಡಿತನಾದ ನ್ಯಾ
ಯಾಧಿಕಾರಿ, ಇಲ್ಲಿ ಕೂತುಗೊ ; (ವಿದೂಷಕನನ್ನು ಕುರಿತು) ನೀನು ಬಾರೈ
ಅತ್ಯಂತ ವಿವೇಕಶಾಲಿ ; ಈಗ ಬನ್ನಿರೇ, ಎಲೇ ಹೆಂಣು ನರಿಗಳಿರಾ !
ಶುಕ್ಲ.--ಅಗೊಳ್ಳಲೆ ನಿಂತವಳ ಮೋಹಿನಕ್ಕ. ಕಣ್ಣು ಬಿಟ್ಟುಕೊಂಡು ನೋಡತವಳೆ,
ನಗು ಸರಸಕ್ಕೆ ನಿಂಗೆ ಬೇರೆ ಕಂಣು ಬೇಕಾ ನೋಡಾಕೆ ? ಬಾರೌವಾ ಬಾ.
ವಿದೂ.-- ಬಾರಳು, ಬಾರಳು, ಬಾರಳು |
ದೋಣಿಯಲ್ಲೂ ತೂತೈಯ ||
ಆಡಳು ಮಾತನು, ಆಡಳು |
ಬಾರಳು, ಬಾರಳು, ಬಾರಳು ||
ಶುಕ್ಲ-ಆದೈಯ್ಯ ಕೋಗಿಲೇದ ನೀಲಿ ರಾಮಜೋಗಿನ ಕೂಗುತೈತೆ; ರಾಮಜೋಗೀ
ಹೊಟ್ಟೇಲಿ ಕೂತು ಮೂರು ಕುರೀ ಬೇಡತೈತೆ ; ಅರಚಬೇಡಲೇದೈಯ್ಯ, ನಿನ್ನ
ಹೊಟ್ಟೆಗೆ ನನ್ನ ತಾವ ಏನಿಲ್ಲ.
ನಿಷ್ಕಂಟಕ.-ಬುದ್ದಿ, ಸ್ವಸ್ಥವಾಗಿದೀರಾ ? ಯಾಕೆ ದಿಗ್ನ ವೆಯಾಗಿ ನಿಂತಿದೀರಿ ?
ಈ ಮಂಚದಮೇಲೆ ಮಲಗಿ ವಿಶ್ರಮಿಸಿಕೊಳ್ಳುತೀರಾ ?
ಧೊರೆ.-- ಮೊದಲು ಅವರ ವಿಚಾರಣೆಯಾಗಬೇಕು. ಸಾಕ್ಷಿಗಳನ್ನು ಕರೆ. (ಶುಕ್ಲ
ಚಂದ್ರನಿಗೆ) ಬಾರೈ ಬಾರೈ ನ್ಯಾಯಾಧಿಕಾರಿಯ, ಗದ್ದುಗೆಯಮೇಲೆ ಕುಳ್ಳಿರು,
(ವಿದೂಷಕನಿಗೆ) ಬಾರೈ ಆತನ ಸಮಾನಾಧಿಕಾರಿಯೆ, ಆತನ ಪಕ್ಕದಲ್ಲಿ ಭದ್ರ ಪೀಠ
ವನ್ನಲಂಕರಿಸು. (ನಿಷ್ಕಂಟಕನಿಗೆ) ನೀನೂ ಬಂದು ಆಸನವನ್ನು ಸ್ವೀಕರಿಸೈ.
ಹೊಸದಾಗಿ ನೇಮಕವಾದ ನ್ಯಾಯಾಧಿಕಾರಿಯೆ.
---------------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೭೧
ಶುಕ್ಲ.---ಯಾಕಳತೀ ಎಲೆ ಕಂದಾ, ಸುಮ್ಮನೆ ಮಲಗೊ ಗೋವಿಂದ-ಅಯ್ಯೋ !
ಕಾಲು ಕಡೀತ್ತೋ !
ಧೊರೆ.---ಇವಳನ್ನು ಮೊದಲು ಹಿಡಿಯಿರಿ ; ಇವಳೇ ನಾಗವೇಣಿ. ಇಗೋ ಇಲ್ಲಿ, ಈ
ಮಹಾ ಸಭೆಯಲ್ಲಿ ಪ್ರಮಾಣವಾಗಿ ಹೇಳುತ್ತೇನೆ. ತನ್ನ ತಂದೆಯಾದ ಆ ಬಡ
ಧೊರೆಯನ್ನು ಕಾಲಿನಿಂದ ಒದೆದಳು.
ವಿದೂಷಕ-ಈ ಕಡೆಗೆ ಬಾರಮ್ಮ ; ನಿನ್ನ ಹೆಸರು ನಾಗವೇಣಿಯೊ ?
ಧೊರೆ.--ಅಲ್ಲವೆಂದು ಹೇಳಲಾರಳು.
ವಿದೂ.-- ಅಯ್ಯೋ, ಹಾಗೆ ? ನೀನು ದ್ವಿಮುಖಿ ಎಂದು ತಿಳಿದಿದ್ದೆ.
ಧೊರೆ.--ಇಗೋ ಇಲ್ಲಿ ಇನ್ನೊಬ್ಬಳಿದಾಳೆ ; ಅವಳ ಓರೆನೋಟದಿಂದ ಆವಳ ಹೃದಯವು
ಇಂಥಾದ್ದರಲ್ಲಿ ಮಾಡಿದ್ದೆಂದು ಕಾಣಿಸುವುದು, ಓ! ಅವಳನ್ನು ನಿಲ್ಲಿಸಿ ; ಹೋಗು
ತಾಳೆ ! ಹೋ ! ಯಾರು ಅಲ್ಲಿ ? ಹಿರಕೊಳ್ಳಿ ಕತ್ತಿಯನ್ನು ; ಬೆಂಕಿ ಹಾಕ ! ಒಳ
ಲಂಚ ನಡೆದು ಹೋಯಿತು. ಎಲ ಕಳ್ಳ ನ್ಯಾಯಾಧಿಕಾರಿಯ, ಯಾಕೆ ಅವಳು
ತಪ್ಪಿಸಿಕೊಂಡು ಹೋಗುವಂತೆ ಆಸ್ಪದಕೊಟ್ಟೆ ?
ಶುಕ್ಲ.--ಶಿವ ಶಿವಾ! ಆ ಮಹಾಪ್ರಜ್ಞೆ ಹೀಗಾಯಿತೆ ! (ಆತ್ಮಗತ).
ನಿಷ್ಕಂಟಕ --ಸ್ವಾಮಿ, ತಾವು ಯಾವಾಗಲೂ ವಿಶೇಷೆ ಸಹನಉಳ್ಳವರೆಂಬ ಖ್ಯಾತಿ
ಯು ಈಗೆಲ್ಲಿ ?
ಶುಕ್ಲ.-- (ಜನಾಂಕಿತದಲ್ಲಿ) ಹಾ, ಹಾ ! ಈ ದುರವಸ್ಥೆಯನ್ನು ನೋಡಲಾರದ ನನ್ನ
ಕಣ್ಣಿನಲ್ಲಿ ನೀರುಬಂದು, ನಾನು ಹಾಕಿಕೊಂಡಿರುವ ವೇಷವನ್ನು ಕೆಡಿಸುತ್ತಿದೆ
ಯಲ್ಲಾ!
ಧೊರೆ.-ಸಂಣ ನಾಯಿ, ದೊಡ್ಡ ನಾಯಿ, ಮರಿ ನಾಯಿ, ಹುಶಿನಾಯಿಯೆಲ್ಲಾ ನನ್ನ
ನ್ನು ಕಂಡು ಬೊಗುಳುವವು.
ಶುಕ್ಲ.--ಛಿ, ಹುಚ್ಚುನಾಯಿಗೊಳಾ ಹೋಗಿ; ರಾಮಜೋಗಿ ತನ್ನ ತಲೆ ಬುರುಡೆಯ,
ನ್ನು ಸೋರೆಬುರುಡೆಹಂಗೆ ಅವುಗಳ ಮುಂದೆ ಎಸೆತವನ. ಸ ಸ ರಿ ರಿ,
ಗ ಗ, ಮ ಮ, ಪಾ ಪ, ಪಾ ಪ, ಅಯೋ, ಅಯ್ಯೋ ! ಛಿ, ನಾಯಿಗೊಳಾ ಸಂ
ತೆಗೆ ಹೋಗಿ, ಕಟುಗರ ಅಂಗಡಿಗೆ ಹೋಗಿ, ರಾಮಜೋಗಿ, ನಿನ್ನ ಜಲ್ಲಿ ಜೋ
ಳನೆಯೆಲ್ಲಾ ಬರಿದಾಯಿತಲ್ಲೊ ಬರೀದಾಯಿತು !
ಧೊರೆ.---ಹಾಗಾದರೆ, ವಿಷಜೆಯನ್ನು ಕತ್ತರಿಸಿ, ಅವಳ ಹೃದಯವೇನಾಗಿದೆ ನೋಡಲಿ.
ಈ ಹೃದಯಖಾಪ್ರಾಣವನ್ನು ಮಾಡತಕ್ಕಂಥಾ ಕಾರಣವು ಏನಾದರೂ ಉಂಟೆ
ನೋಡಿ, (ಶುಕ್ಷಚಂದ್ರನನ್ನು ಕುರಿತು) ಸ್ವಾಮಿ, ತಾವು ನಮ್ಮ ಅಧಿಕಾರಿಗಳಲ್ಲಿ
---------------------------------------------
೭೨ ಹೇಮಚಂದ್ರರಾಜ ವಿಲಾಸ. [೩ನೇ ಅಂಕ
ಒಬ್ಬರಾಗಿರಬೇಕು. ತಮ್ಮ ಉಡುಪು ಮಾತ್ರ ನನಗೆ ಸಮಾಧಾನವಿಲ್ಲ. ದಿವ್ಯ
ದುಕೂಲವೆಂದು ನೀವೆನ್ನಬಹುದು. ಆದರೂ ಬದಲಾಯಿಸಿಬಿಡಿ.
ನಿಷ್ಕಂಟಕ -ಸ್ವಾಮಿ, ತಾವು ಅಲ್ಲಿ ಮಲಗಿಕೊಂಡು ವಿಶ್ರಮಿಸಿಕೊಳ್ಳಿ.
ಧೊರೆ--ಹೆಳೇ ಸದ್ದು ಮಾಡಬೇಡಿ, ತೆರೆ ಎಳೆಯಿರಿ. ರಾತ್ರೆ ಊಟಾ ಬೆಳಗ್ಗೆ ಮಾ
ಡುತೇನೆ, ಹಾಗೆ, ಹಾಗೆ ಹಾಗೆ.
ವಿದೂ.--ರಾತ್ರೆ ನಿದ್ದೆ ಹಗಲು ಮಾಡುತ್ತೇನೆ.
...............
ದುಃಖಸಾರನ ಪ್ರವೇಶ,
ದುಃಖ, ಇತ್ತ ಬಾರೈ, ನನ್ನೊಡೆದು ಯೆಲ್ಲಿ ?
ನಿಷ್ಕಂಟಕ...ಇಲ್ಲಿದಾರೆ ಸ್ವಾಮಿ ; ಅವರನ್ನು ಮಾತಾಡಿಸಬೇಡಿ ; ಬುದ್ಧಿ ವಿಕ
ಲ್ಪವಾಗಿ ಹೋಗಿದೆ.
ದುಃಖ.--ಅಯ್ಯ ಮಿತ್ರ, ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ. ಅವರನ್ನು ಎತ್ತಿ
ಕೊ. ಅವರನ್ನು ಕೊಲ್ಲಬೇಕೆಂದು ತಂತ್ರ ನಡೆಯುತ್ತಿದೆ. ಜಗೋ ಇಲ್ಲಿ ಅಂದಳ
ಸಿದ್ಧವಾಗಿದೆ. ಅದರಲ್ಲಿ ಅವರನ್ನು ಮಲಗಿಸಿ ದೇವರೇವಿಗೆ ತೆಗಿಸಿಕೊಂಡು ಹೋ
ಗು. ಅಲ್ಲಿ ಮರಾದೆಯ ಅಭಯವೂ ಧೊರೆಯುವುದು, ನಿನ್ನ ಯಜಮಾನ
ನನ್ನು ಎತ್ತಿಕೊ. ಇನ್ನು ಅರ್ಧಗಳಿಗೆ ಸಾವಕಾಶಮಾಡಿದರೆ, ಆತನ ಪ್ರಾಣ,
ನಿನ್ನ ಪ್ರಾಣ, ನಿಮ್ಮ ಸಹಾಯಕ್ಕೆ ಬಂದವರ ಪ್ರಾಣ, ಎಲ್ಲಾ ಹೋಗುವುದು
ಖಂಡಿತ. ಕರಕೊ, ಕರಕೊ, ನೀವು ಜಾಗ್ರತೆಯಾಗಿ ಕೇವದಲ್ಲಿ ತಲಾ ತಲಪು
ವಹಾಗೆ ಮಾಡುತ್ತೇನೆ. ನನ್ನ ಹಿಂದೆ ಬಾ.
ನಿಷ್ಕಂಟಕ,--ಅತ್ಯಂತಾಯಾಸದಿಂದ ನಿದ್ರೆ ಬಂದಿದೆ. ಅಗಚಾಟಲು ಪಟ್ಟಿರುವ ಶರೀ
ರಕ್ಕೆ ಈ ವಿಶ್ರಾಂತಿ ಆಪ್ಯಾಯನಕರವಾಗಿರುವುದು. ಇದಕ್ಕೆ ಅನುಕೂಲ ದೊ
ರೆಯದೇ ಇದ್ದ ಪಕ್ಷಕ್ಕೆ, ಗುಣವಾಗುವುದು ಕಷ್ಮೆ ಸಾಧ್ಯವಾಗುತಿತ್ತು. (ವಿದೂ
ಷಕನಿಗೆ) ಬಾರೈ, ನಿನ್ನೊಡೆಯನನ್ನು ಎತ್ತಲು ಸಹಾಯಮಾಡು. ನೀನು ಹಿಂದೆ
ನಿಲ್ಲಕೂಡದು.
ದುಃಖ.--ನಡೆಯಿರಿ, ನಡೆಯಿರಿ. (ಎಲ್ಲರೂ ಹೊಗುವರು.)
ಶುಕ್ಲ.--ನಮಗಿಂತಲೂ ಉತ್ತಮರಾದವರು ನಮ್ಮ ದುಃಖವನ್ನು ಸಹಿಸುತ್ತಿರುವಾಗ್ಯೆ,
ನಮ್ಮ ದುಃಖವು ನಮ್ಮ ಶತ್ರುವೆಂದು ತೋರುವುದು ಅಪೂರ್ವ, ಒಂಟಿಯಾಗಿ
ವ್ಯಥೆಪಡತಕ್ಕವನಿಗೆ ಮನೋವ್ಯಥೆ ಬಹಳವಾಗಿದೆ. ಅನುಭವಿಸಿದ ಸುಖಗಳೆಲ್ಲಾ
ಹಿಂದೆ ನಿಂತುಬಿಡುವವು. ಇತರರೂ ಸಂಗಡ ಅಳುತಿದ್ದರೆ, ಈ ಸಹವಾಸದಿಂದ ದುಃ
ಖದ ಬೇಗ ಸ್ವಲ್ಪ ಕಡಮೆಯಾಗಿ ಸಖ್ಯವಾಗುವುದು, ಯಾವ ದುಃಖವು ನನ್ನನ್ನು
---------------------------------------------
೭ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೭೩
ಬಗ್ಗಿಸಿತೋ ಅದು ಧೊರೆಯನ್ನು ಚೆನ್ನಾಗಿ ಬೀಳುವಂತೆ ಮಾಡಿತು. ಹೀಗಿರುವಲ್ಲಿ
ನನ್ನ ವ್ಯಸನವು ಅತ್ಯಲ್ಪವಾದ್ದಾಯಿತು ; ನನ್ನ ತಂದೆ ಎಂಥವನೋ ಆತನ ಮ
ಕ್ಕಳೂ ಅಂಥವರಾದರು. ಎಲ ರಾಮಜೋಗಿ, ನಡೆ ; ಈಗ ನಡೆಯುತ್ತಿರುವ
ಸಮರ ಸನ್ನಾಹವನ್ನು ನೋಡಿಕೊ. ನಿನಗೆ ಕೆಟ್ಟತನವನ್ನು ಆರೋಪಿಸಿ
ರುವ ದುರಭಿಪ್ರಾಯವು ಸಕಾಲದಲ್ಲಿ ನಿವಾರಣೆಯಾಗಿ ನಿನಗೆ ಕ್ಷೇಮವನ್ನು೦ಟು
ಮಾಡುವಾಗ್ಗೆ ಈ ವೇಷವನ್ನು ಬಿಟ್ಟು ಮುಂದಕ್ಕೆ ಬಾ, ಈ ರಾತ್ರೆ ಇನ್ನೇನಾ
ಗುತ್ತೋ ಆಗಲಿ, ಧೊರೆ ಕ್ಷೇಮದಿಂದ ತಲೆತಪ್ಪಿಸಿಕೊಂಡು ಹೋದರಾದೀತು !
ಅವಿತುಗೊ, ಅವಿತಗೊ. (ನಿಷ್ಕ್ರಮಣ)
...........
೭ನೇ ಪ್ರಕರಣ-ದುಃಖಸಾರನ ಮಂದಿರ.
ಪ್ರವೇಶ.-ಕುಟಿಲ, ನಾಗವೇಣಿ, ವಿಷಜೆ, ಕುಮಂತ, ಭೃತ್ಯರು.
ಕುಟಿಲ. ತಮ್ಮ ಪತಿಯಾದ, ಮತ್ತು ನನ್ನ ಮಿತ್ರರಾದ ಭದ್ರನಾಥರನ್ನು ಜಾಗ್ರತೆ
ಪಡಿಸಿ, ಈ ಕಾಗದವನ್ನು ಅವರಿಗೆ ತೋರಿಸಿ, ಮಾರದೇಶದ ಸೇನೆಬಂದಿಳಿಯಿತು,
ಆ ಖೂಳನಾದ ದುಃಖಸಾರನನ್ನು ಹುಡುಕಿ. (ಭೃತ್ಯರು ಹೋಗುವರು.)
ವಿಷಜೆ.--ಕೂಡಲೆ ಅವನನ್ನು ನೇಣಹಾಕಿ.
ನಾಗ.--ಅವನ ಕಂಣುಗಳನ್ನು ಕಿತ್ತುಹಾಕಿ.
ಕುಟಿಲ-- ನನ್ನಾಗ್ರಹಕ್ಕೆ ಅವನನ್ನು ಗುರಿಮಾಡಿ ಬಿಡಿ. ಕುಮಂತ್ರ, ನಮ್ಮ ಅತ್ತಿ
ಗೆಯಜೊತೆಯಲ್ಲಿಯೇ ಇರು, ದೊಹಿಯಾದ ನಿಮ್ಮ ತಂದೇಮೇಲೆ ನಾವು
ತೀರಿಸಿಕೊಳ್ಳಲೇಬೇಕೆಂದಿರುವ ಮತ್ಸರವನ್ನು ನೀನು ನೋಡುವುದು ಸಮನಲ್ಲ.
ನೀನು ಭದ್ರನಾಥರಲ್ಲಿಗೆ ಹೋಗುತೀಯಲ್ಲವೆ, ಜಾಗ್ರತೆಯಿಂದ ಯುದ್ಧ ಸನ್ನದ್ಧ
ರಾಗುವಂತೆ ಅವರಿಗೆ ಹೇಳು, ನಾವೂ ಹಾಗೆಯೇ ಮಾಡಲು ಬದ್ಧರಾಗಿದ್ದೇವೆ.
ನಮ್ಮ ಉಕ್ಕಡದ ಕಾವಲುಗಾರರು ತೀವ್ರವಾಗಿ ನಮಗೆ ವರ್ತಮಾನವನ್ನು ತಂದು
ಅರಿಕೇ ಮಾಡಲಿ, ಅತ್ತಿಗೆ, ತಮಗೆ ಕ್ಷೇಮ ಉಂಟಾಗಲಿ. ಕುಮಂತ್ರ ರೆ, ತಮಗೂ
ಹಾಗೆಯೇ.
ಪ್ರವೇಶ.-ರಾಹುಕ.
ಏನು, ಧೊರೆಯೆಲ್ಲಿ ?
ರಾಹುಕ-ದುಃಖಸಾರರು ಇಲ್ಲಿಂದ ಧೊರೆಯನ್ನು ಸಾಗಿಸಿ ಬಿಟ್ಟರು. ಆತನನ್ನು
ಬಹಳವಾಗಿ ಹುಡುಕುತ್ತಿದ್ದ ಮುವತ್ತೈದು ಮುವ್ವತ್ತಾರು ಜನ ಸಾಮಾಜ
------------------------------------------
೭೪ ಹೇಮಚಂದ್ರರಾಜ ಪಿಲಾಸ [೩ನೇ ಅಂಕ
ಕರು ಇದಿರುಗೊಂಡು ದುಃಖಸಾರರ ಪರಿವಾರದವರೊಡನೆ ಸೇರಿಕೊಂಡು, ದೇವ
ರೇವಿನಕಡೆಗೆ ಹೋದರು ; ಅಲ್ಲಿ ಆಯುಧಪಾಣಿಗಳಾದ ಅನೇಕಜನ ಸ್ನೇಹಿತರು
ಸಹಾಯಮಾಡಲು ಸಿದ್ಧರಾಗಿದ್ದಾರೆಂದು ಕೊಚ್ಚಿ ಕೊಳ್ಳುತಾರೆ.
ಕುಟಿಲ.-- ನಿಮ್ಮ ಒಡತಿಗೆ ಕುದುರೆಗಳನ್ನು ಸಿದ್ದ ಮಾಡು.
ನಾಗ.--ಭಾವಾಜಿ, ತಾವು ಸುಕ್ಷೇಮಿಗಳಾಗಿರಿ, ತಂಗಿ, ಸುರಕ್ಷಿತಳಾಗಿರಮ್ಮ, ನಾನು
ಹೋಗಿ ಬರುತ್ತೇನೆ.
ಕುಟಿಲ--ಕುಮಂತ್ರ, ಶ್ರೇಯೋಸ್ತು, ( ನಿಷ್ಕ್ರಮಣ, ನಾಗವೇಣಿ,
ಕುಮಂತ, ರಾಹಕ)
ಆ ದ್ರೋಹಿಯಾದ ದುಃಖಸಾರನನ್ನು ಹುಡುಕಿ, ಕಳ್ಳರಿಗೆ ಕಟ್ಟುವಂತೆ
ಹಿಂಗಟ್ಟುಮುರಿಕಟ್ಟಿ ಹಿಡಿದುಕೊಂಡು ಬನ್ನಿ - (ಭೃತ್ಯರು ಹೊಗವರು.)
ನಿಮಿತ್ತ ಮಾತ್ರಕ್ಕೆ ನ್ಯಾಯ ವಿಚಾರಣೆಯ ಉಪಕರಣಗಳು ಯಾವುದೂ ಇಲ್ಲ
ದೇನೇ ಅವನಿಗೆ ಮರಣದಂಡನೆಯನ್ನು ವಿಧಿಸುವುದು ಸಮನಲ್ಲದೇ ಇದ್ದಾಗ್ಯೂ,
ಯಾವದಕ್ಕಾಗಿ ಜನರು ಆಕ್ಷೇಪಣೆಮಾತ್ರ ಮಾಡಿ ಸಹನವನ್ನು ಮಾತ್ರ ತಂದು
ಕೊಳ್ಳುವುದಕ್ಕೆ ಕೈಲಾಗದೇ ಇರುತಾರೆಯೋ ಅಂಥಾ ನಮ್ಮ ಆಗ್ರಹಕ್ಕೆ ನಮ್ಮ
ಅಧಿಕಾರ ಅಡ್ಡಿಯಾಗಕೂಡದು. ಯಾರೋ ಅಲ್ಲಿ ಬಂದವರು ? ಆ ದೋ
ಹಿಯೋ ?
ದುಃಖಸಾರನನ್ನು ಎರಡು ಮೂರು ಜನ ಹಿಡಿದು ತರುವರು.
ವಿಷಜೆ ಕೃತಘ್ನರಾದ ನರಿ ! ಅವನೆ, ಅವನೆ !
ಕುಟಿಲ.-- ಅವನ ಬಲವಾದ ತೋಳುಗಳನ್ನು ಚೆನ್ನಾಗಿ ಹಿಡಿದು ಬಂಧಿಸಿ.
ದುಃಖ-ಸ್ವಾಮಿ, ತಾಯೆ, ಹೀಗೆಂದರೇನು ? ಚೆನ್ನಾಗಿ ಯೋಚಿಸಿ, ನೀವು ನನ್ನ
ಮನೆಗೆ ಅತಿಥಿಗಳಾಗಿ ಬಂದಿದೀರಿ. ಮಿತ್ರರಾ, ನನಗೆ ಅನ್ಯಾಯಮಾಡಬೇಡಿ.
ಕುಟಿಲ.--ಅವನ ಬೆಂಡಿನಹಾಗಿರುವ ರಟ್ಟೆಯನ್ನು ಕಟ್ಟಿರೊ, ನಾನು ಹೇಳುತೇನೆ.
(ಭೃತ್ಯರು ಕಟ್ಟುವರು.)
ವಿಷಜೆ-ಗಟ್ಟಿಯಾಗಿ, ಇನ್ನೂ ಗಟ್ಟಿಯಾಗಿ, ಚಂಡಾಲ, ದ್ರೋಹಿ!
ದುಃಖ.--ನೀನು ದಯಾಹೀನಳು, ನಾನು ದ್ರೊಹಿಯಲ್ಲ.
ಕುಟಿಲ-ಅವನನ್ನು ಈ ಮಂಚದ ಕಾಲಿಗೆ ಕಟ್ಟಿ. ಎಲ ಖೂಳ, ಈಗ ತೋರಿಸು
ವುದೇನು ಎಂದರೆ,- (ವಿಷಜೆ ದುಃಖಸಾರನ ಗಡ್ಡವನ್ನು ಕೀಳುವಳು.)
ದುಃಖ.--ಶಿವ ಶಿವಾ! ನನ್ನ ಗಡ್ಡವನ್ನು ಕೀಳಬಹುದೆ ? ಇಂಥಾ ನಾಚಿಗೆಕೇಡು
ಉಂಟೆ ?
ವಿಷಜೆ.--ಈ ಗಡ್ಡ ಇಷ್ಟು ಬೆಳ್ಳಗಿದೆ ; ಆದರೂ ಇಂಥಾ ದ್ರೋಹ !
--------------------------------------------
೭ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ. ೭೫
ದುಃಖ.--ಎಲೇ ನೀಚ ಸ್ತಿ, ಹೀಗೆ ನನ್ನ ಗಡ್ಡದಿಂದ ಕಿತ್ತು ಅವಮಾನಪಡಿಸತಕ್ಕ
ಈ ಕೂದಲಿಗೆ ಪ್ರಾಣ ಬಂದು, “ಎಲೆ ಅಪರಾರಿ" ಎಂದು ನಿನ್ನನ್ನು ಕರೆದೀತು.
ನಾನು ನಿಮ್ಮ ಗೃಹಸ್ತ, ನೀವುಗಳು ನನ್ನ ಅತಿಥಿಗಳು, ನನ್ನ ಮುಖಕ್ಕೆ ನೀವು
ಪಂಜಿನಕಳ್ಳರಂತೆ ಹೀಗೆ ಅವಮಾನವನ್ನು ಮಾಡಕೂಡದು, ನೀವು ಮಾಡತಕ್ಕ
ದ್ದೇನು ?
ಕುಟಿಲ.-- ಸ್ವಲ್ಪ ದಿವಸಕ್ಕೆ ಮುಂಚೆ ಮಾರದೇಶದಿಂದ ನಿನಗೆ ಬಂದ ಕಾಗದಗಳೇನು ?
ವಿಷಜೆ ಸರಿಯಾದ ಉತ್ತರವನ್ನು ಹೇಳು ; ನಿಶ್ಚಯವೇನೋ ನಮಗೆ ಗೊತ್ತಾಗಿದೆ.
ಕುಟಿಲ.--ರಾಜ್ಯದಲ್ಲಿ ಇತ್ತೀಚೆಗೆ ಕಾಲುಹಾಕಿಕೊಂಡಿರುವ ಒಳತಂತ್ರಗಾರರ ಸಂಗಡ
ನೀನು ಸೇರಿಕೊಂಡಿರುವುದರ ಬಗೆಯೇನು ?
ವಿಷಜೆ.--ಹುಚ್ಚು ಹಿಡಿದ ಧೊರೆಯನ್ನು ನೀನು ಯಾರವಶಕ್ಕೆ ಬಿಟ್ಟು ಬಂದೆಯೊ ?
ಬೊಗುಳೋ.
ದುಃಖ.--ವಿರೋಧಿಯಲ್ಲದೆ ಉದಾಸೀನನಾದ ಒಬ್ಬ ಪುರುಷನು ಸಂಶಯಗ್ರಸ್ತನಾಗಿ
ಬರೆದ ಒಂದು ಕಾಗದ ನನ್ನಲ್ಲಿದೆ.
ಕುಟಿಲ.-- ತಂತ್ರಿ.
ವಿಷಜೆ.--ಸುಳ್ಳ.
ಕುಟಿಲ.--ಧೊರೆಯನ್ನು ಎಲ್ಲಿಗೆ ಕಳುಹಿಸಿದೆ ?
ದುಃಖ.--ದೇವರೇವಿಗೆ.
ವಿಷಜೆ.--ದೇವರೇವಿಗೆ ಯಾಕೆ ? ನಿನಗೆ ಕೂರದಂಡನೆಯಾಗಬೇಕಾಗಿದ್ದರೆ ನೀನು
ಇಂಥಾ ಕಾರವನ್ನು--
ಕುಟಿಲ.--ದೇವರೇಗೆ ಯಾಕೆ ಕಳುಹಿಸಿದ ; ಮೊದಲು ಅದಕ್ಕೆ ಉತ್ತರ ಕೊಡಲಿ.
ದುಃಖ.-- ನನ್ನನ್ನು ಕೊಳಕ್ಕೆ ಹಾಕಿದಾರೆ. ನಾನು ಧೈರ್ಯ್ಯ ಮಾಡಲೇಬೇಕು.
ವಿಷಜೆ.--ದೇವರೇವಿಗೆ ಯಾಕೆ, ಹೇಳು, ಹೇಳು.
ದುಃಖ.-- ಯಾಕೆಂದರೆ ದೀನನಾದ ಆ ವೃದ್ಧನ ಕಂಣುಗಳನ್ನು ನಿನ್ನ ಕೂರವಾದ
ಶ್ವಾನನಖಗಳಿಂದ ಕೀಳುವುದನ್ನು ನಾನು ನೋಡಲಾರದೆ ಹೋದೆ ; ಸ್ತ್ರೀಸರ್ಪ
ನಾದ ನಿಮ್ಮಕ್ಕ ತನ್ನ ವಿಷದಂತಗಳನ್ನು ಪಟ್ಟಾಭಿಷಿಕ್ತವಾದ ಆತನ ತಲೆಯ
ಮೇಲೆ ನಾಟುವುದನ್ನು ನಾನು ನೋಡಲಾರದೆ ಹೋದೆ. ಆತನ ಬೋಳದಲೆಯ
ಮೇಲೆ ಆ ಮಹಾ ಘೋರವಾದ ರಾತ್ರೆ ಹೊಡೆಯುತ್ತಿದ್ದ ಆ ಪ್ರಳಯಮಾರುತದ
ರಭಸಕ್ಕೆ ಸಮುದ್ರಸಹಿತವಾಗಿ ಸೂರ್ಯಮಂಡಲದವರಿಗೆ ಉಬ್ಬಿ ಅಲ್ಲಿನ ಬೆಂಕಿ
ಯನ್ನು ಆರಿಸುವ ಹಾಗಿತ್ತಲ್ಲಾ !ಆ ಕುಂಭದ್ರೋಣದ ಮಳೆಯು ಸುರಿಯುತಿ
ದ್ದರೂ ಅದಕ್ಕೆ ತಲೆಯನ್ನು ಒಡ್ಡಿಕೊಂಡು ಇದ್ದನಲ್ಲಾ! ಆ ಹೊತ್ತಿನಲ್ಲಿ ನಿನ್ನ
-------------------------------------------
೭೬ ಹೇಮಚಂದ್ರರಾಜ ವಿಲಾಸ [೩ನೇ ಅಂಕ.
ಮನೆಬಾಗಿಲಲ್ಲಿ ಒಂದು ತೋಳಬಂದು ಕೂಗಿದ್ದಾಗ್ಯೂ, ಅದರ ಕ್ರೌರ್ಯವನ್ನು
ಮರೆತು ಕನಿಕರದಿಂದ " ಎಲೈ, ದ್ವಾರಪಾಲಕನೆ, ಕವಾಟವನ್ನು ತೆಗೆ” ಎಂದು
ನೀನು ಹೇಳುತಿದ್ದೆ. ಅಯ್ಯೋ ಧೊರೆಯೆ, ಇದರ ಮುಂದೆ ಉಳಿದ ಕ್ರೌರ್ಯವೆಲ್ಲಾ
ಕ್ರೌರ್ಯವಲ್ಲ. ಇಂಥಾ ಹಾಳಮಕ್ಕಳಿಗೆ ತಕ್ಕ ಪ್ರಾಯಶ್ಚಿತ್ತವು ಜಾಗ್ರತೆಯಲ್ಲಿ
ಆಗುವುದನ್ನು ನಾನು ನೋಡಿಯೇನು.
ಕುಟಿಲ.--ನೀನು ಅಂಥಾದ್ದನ್ನು ಎಂದಿಗೂ ನೋಡದಂತೆ ಮಾಡುತ್ತೇನೆ. ಎಲಾ, ಮಂಚ
ವನ್ನು ಹಿಡಿದುಕೊಳ್ಳಿರೋ, ಈ ನಿನ್ನ ಹಾಳಕಂಣುಗಳ ಮೇಲೆ ಒದೆಯುತೇನೆ,
ಬಾ ಮುದಿಗೂಬೆ.
ದುಃಖ.--ಹಾ! ಹಾ! ಮುಪ್ಪಿನತನಕ ಬದುಕಬೇಕೆಂಬ ಆಶೆಯುಳ್ಳ ಮನುಷ್ಯರಾ,
ನೀವು ನನಗೆ ಸ್ವಲ್ಪ ಸಹಾಯ ಮಾಡಬಾರದೆ ! ಅಯ್ಯೋ ಕ್ರೌರ್ಯವೇ ! ಅಯ್ಯೋ
ದೇವರೇ !
ವಿಷಜೆ.--ಒಂದು ಕಂಣು ಇನ್ನೊಂದು ಕಂಣನ್ನು ಅಣಕಿಸುವುದು, ಇನ್ನೊಂದು
ಕಂಣೂ ಆಗಲಿ.
ಕುಟಿಲ.---ನೀನು ಪ್ರಾಯಶ್ಚತವಾಗುವುದನ್ನು ನೋಡಿದರೆ--
೧ನೇ ಭಂಟ ಮಹಾಸ್ವಾಮಿ ತಮ್ಮ ಕೈಯನ್ನು ನಿಲ್ಲಿಸಿ, ನನ್ನ ಬಾಲ್ಯದಿಂದಲೂ
ತಮ್ಮ ಸೇವೆಯನ್ನು ಮಾಡಿದ್ದೇನೆ. ಆದರೆ ಈಗ ತಮ್ಮ ಕೈಯನ್ನೂ ನಿಲ್ಲಿಸುವು
ದೆಂದು ಹೇಳುವುದಕ್ಕಿಂತಲೂ ವುತ್ತಮವಾದ ಸೇವೆಯನ್ನು ತಮಗೆ ನಾನು ಎಂದಿ
ಗೂ ಮಾಡಲಿಲ್ಲ.
ವಿಷಜೆ-ನೀನು ಯೆನೆಲಾ, ನಾಯಿ !
೧ನೇ ಭಂಟ..ನಿನಗೆ ಗಡ್ಡವಿದ್ದರೆ, ಈ ಜಗಳದಲ್ಲಿ ಅದನ್ನು ಕಿತ್ತು ಹಾಕಿ ಬೇರೇ
ಕೆಲಸ ಮಾಡುತಿದ್ದೆ, ಏನು ಇಂಥಾ ಘಾತುಕತನ ಉಂಟೆ ?
ಕುಟಿಲ.--ಎಲ, ಖೂಳ ! (ಇಬ್ಬರೂ ಕತ್ತಿಯನ್ನು ಹಿರಿದು ಹೊಡೆದಾಡುವರು.)
೧ನೇ ಭಂಟ. ಹಾಗಾದರೆ, ಬಾ, ಕೋಪದ ಫಲವನ್ನು ಅನುಭವಿಸು.
ವಿಷಜೆ.--ನಿನ್ನ ಕತ್ತೀ ತಾ, ಈ ಹಳ್ಳಿಕಾರ ಹೀಗೆ ಎದ್ದು ಕೂತುಕೊಳ್ಳುವುದೆ !
(ಒಂದು ಕತ್ತಿಯನ್ನು ಹಿಡಿದು ಹಿಂದುಗಡೆಯಿಂದ ಭಂಟನನ್ನು ತಿವಿಯುವಳು.)
೧ನೇ ಭಂಟಿ-ಅಯ್ಯೋ, ಸತ್ತೆನಲ್ಲಾ ! ಸ್ವಾಮಿ ತಮಗೆ ಇನ್ನೂ ಒಂದು ಕಂಣಿದೆ ;
ಇವನಿಗೆ ತಕ್ಕದ್ದಾಗುವುದನ್ನು ತಾವು ನೋಡಬಹುದು. ಓ! (ಸಾಯುತಾನೆ.)
ಕುಟಿಲ.--ಅಂಥಾದ್ದನ್ನು ಆ ಕಂಣು ಅತಿಯಾಗಿ ನೋಡೀತಲ್ಲಾ ಎಂದು ಅದನ್ನು
ಚಿಗಟಹಾಕುತ್ತೇನೆ. ಬಾ, ಬಾ, ಹಾಳ ಗುಡ್ಡೆ ! ನಿನ್ನ ಪ್ರಕಾಶ ಈಗ ಎಲ್ಲಿ ?
ದುಃಖ-ಹಾ, ದಿಕ್ಕಿಲ್ಲ: ಲೋಕವೆಲ್ಲಾ ಅಂಧಕಾರವಾಯಿತಲ್ಲಾ ! ಅಯ್ಯೋ, ಮಗು
--------------------------------------------
೭ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೭೭
ಕುಮ೦ತ್ರ, ಎಲ್ಲಿದ್ದೀಯಾ ! ಈ ಮಹಾ ಅಸುರ ಕೃತ್ಯಕ್ಕೆ ತಕ್ಕ ಪ್ರತೀಕಾರ
ಮಾಡಲು ಸಮಸ್ತ ಅಗ್ನಿಯನ್ನೂ ಜಲನಮಾಡೈಯಾ! ಶಿವಶಿವಾ !
ವಿಷಜೆ.--ಛಿ, ನಡೆ ಆಚೆಗೆ ದ್ರೋಹಿ, ನಿನ್ನ ಮೇಲೆ ದ್ವೇಷಮಾಡತಕ್ಕವನನ್ನು ಕರೆಯು
ತೀಯೆ. ನೀನು ಮಾಡಿದ ದೋಹನನ್ನು ಆತನೇ ನನಗೆ ಹೇಳಿದವನು, ಅಂಥಾ
ಸಜ್ಜನನು ನಿನ್ನಲ್ಲಿ ಕನಿಕರವನ್ನು ಕೂಡಾ ಇಟ್ಟುಕೊಂಡಿರಕೂಡದು.
ದುಃಖ.-ಅಯ್ಯೋ, ನನ್ನ ಅವಿವೇಕವೇ! ಹಾಗಾದರೆ ಶುಕ್ಷ ಚಂದ್ರನಿಗೆ ಅನ್ಯಾಯವಾ
ಯಿತು. ದೇವರೆ ನನ್ನ ಅಪರಾಧವನ್ನು ಕ್ಷಮಿಸಿ ಅವನನ್ನು ಕಾಪಾಡು.
ವಿಷಜೆ.--ಇವನನ್ನು ಬಾಗಿಲಿನಿಂದ ಆಚೆಗೆ ನೂಕಿಬಿಡಿ, ಇವ ದಾರಿಯನ್ನು ಕಂಣಿ
ನಿಂದ ನೋಡಿಕೊಂಡು ಹೋಗುವುದಕ್ಕಿಲ್ಲವಾಗಿ, ದಾರಿಯನ್ನು ಮೂಸಿನೋಡಿ
ಕೊಂಡು ಹೋಗಲಿ. (ದುಃಖಸಾರನನ್ನು ಆಚೆಗೆ ಎಳೆದುಕೊಂಡು
ಹೋಗುವರು.)
ಸ್ವಾಮಿ, ತಾವು ಹ್ಯಾಗಿದೀರಿ.
ಕುಟಿಲ.--ನನಗೆ ಗಾಯವಾಗಿದೆ, ಬಾ ಹೋಗೋಣ, ಈ ಕಂಣಿಲ್ಲದ ಚಂಡಾಲ
ನನ್ನು ಹೊರಕ್ಕೆ ತಳ್ಳಿಸಿ ಬಿಡು. ಈ ಗುಲಾಮನನ್ನು ತಿಪ್ಪೆಮೇಲಕ್ಕೆ ಎಳೆದು
ಬಿಡಿ, ರಕ್ತವೇನೋ ಸುರಿಯುತ್ತಿದೆ. ಒಳ್ಳೆ ಸಮಯದಲ್ಲಿ ಈ ಗಾಯ ಪ್ರಾಪ್ತವಾ
ಯಿತಲ್ಲಾ ! ಪ್ರಿಯಳೆ, ನನ್ನ ಕೈಯನ್ನು ಹಿಡಿದುಕೊ. (ವಿಷಜೆ ಕುಟಿಲನ
ಕೈ ಹಿಡಿದು ಕರೆದುಕೊಂಡು ಹೋಗುವಳು.)
೨ನೇ ಭಂಟ.--ಈ ಮನುಸ್ಮನಿಗೆ ಗುಣವಾದರೆ, ನಾನು ಯಾವ ಕೆಟ್ಟ ಕೆಲಸವನ್ನು
ಮಾಡುವುದಕ್ಕೆ ತಾನೆ ಹಿಂತೆಗೆದೇನು ?
೩ನೇ ಭಂಟ.--ಇವಳು ಬಹಳ ದಿವಸ ಬದುಕಿದ್ದು ತರುವಾಯ ಸತ್ತರೆ, ಹೆಂಗಸರೆ
ಲ್ಲರೂ ತಾಟಕಿಯ ಅವತಾರಗಳೇ ಅಗುವರು.
೨ನೇ ಭಂಟ.--ಈ ಮುಪ್ಪಿನ ಮಂತ್ರಿಯ ಹಿಂದೆ ಹೋಗಿ, ಬೇಕಾದಕಡೆಗೆ ಕರೆ
ದುಕೊಂಡು ಹೋಗಪ್ಪ ಎಂದು ಆ ಜೋಗಿಗಾದರೂ ಹೇಳೋಣ. ಅವನ ಹುಚ್ಚು
ಯಾತಕ್ಕೆಂದರೆ ಅದಕ್ಕೆ ಅನುಕೂಲಿಸುವುದು.
೩ನೇ ಭಂಟ.--ರಕ್ತ ಸುರಿಯುತ್ತಿರುವ ಆ ಮುದುಕನ ಮುಖಕ್ಕೆ ಸವರಲು, ಸ್ವಲ್ಪ
ಗಾಯದ ಎಂಣೆಯನ್ನು ತರುತ್ತೇನೆ. ನೀನು ನಡೆ. ಶಿವಶಿವಾ, ಮುದುಕನಿಗೆ ಈ
ಗತಿಬಂತೆ ! ದೇವರೇ ಕಾಪಾಡಬೇಕು, (ನಿಷ್ಕ್ರಮಣ.)
...............
-----------------------------------------
೭೮ ಹೇಮಚಂದ್ರರಾಜ ವಿಲಾಸ. ೪ನೇ ಅಂಕ
೪ನೇ ಅ೦ಕ.
೧ನೇ ಪ್ರಕರಣ-ತಪ್ಪಲು.
ಪ್ರವೇಶ.-ಶುಕ್ರಚಂದ್ರ.
ಶುಕ್ಲ.--.ಬಹಿರಂಗವಾಗಿ ಸ್ತೋತ್ರಮಾಡಲ್ಪಟ್ಟು ಅಂತರಂಗವಾಗಿ ಅಪರಾಧಿಯಂತೆ
ಪರಿಗಣಿಸಲ್ಪಡುವುದಕ್ಕಿಂತಲೂ, ಈ ಸ್ಥಿತಿಯಲ್ಲಿಯೇ ಇದ್ದುಕೊಂಡು, ಬಹಿರಂಗ
ವಾಗಿ ಅಪರಾಧಿಯಂತೆ ಪರಿಗಣಿಸಲ್ಪಡುವುದು ಉತ್ತಮ. ಅತ್ಯಂತ ಭಾಗ್ಯಹೀನ
ನಾಗಿರುವುದರಲ್ಲಿ, ಇನ್ನೂ ಒಳ್ಳಸ್ಥಿತಿಗೆ ಬರಬಹುದೆಂಬ ಆಸೆ ಇರುವುದೇ ಹೊರತು
ಇದ್ದದ್ದು ಕೆಟ್ಟಿತಲ್ಲಾ ಎಂಬ ಭಯವೇನೂ ಇಲ್ಲ. ಯಾವ ಸ್ಥಿತಿಯಾದರೂ
ಬದಲಾಯಿಸುವುದರಿಂದ ದುಃಖವೇ ಉಂಟಾಗುತ್ತಿದ್ದರೆ, ಅದು ಉತ್ತಮವಾದ
ಸ್ಥಿತಿಯೇ ಸರಿ. ಅತ್ಯಂತ ಹೀನಸ್ಥಿತಿಯು ಆನಂದಕ್ಕೆ ತಿರುಗಿಕೊಳ್ಳುವುದು,
ಹಾಗಾದರೆ, ನನ್ನ ಮೇಲೆ ತೀಡುತ್ತಿರುವ ವಾಯುವೇ, ನೀನೇ ನನ್ನ ಭಾಗಕ್ಕೆ
ಉತ್ತಮ ; ಅತ್ಯಂತ ಹೀನತಿಗೆ ನೀನು ತೂರಿಬಿಟ್ಟಂಥಾ ಆ ಪಾಪಿಯು ನೀನು
ಬಡಿಯುವ ಬಿರಿಸಿಗೆ ಲಕ್ಷ್ಯಮಾಡಬೇಕಾದ್ದೇನೂ ಇಲ್ಲ. ಹೊ, ಇದು ಯಾರು
ಇಲ್ಲಿ ಬರತಕ್ಕವರು. (ದುಃಖಸಾರನನ್ನು ಒಬ್ಬ ಮುದುಕ ಕೈಹಿಡಿದು, ಕರೆ
ತರುವನು) ಹ ! ನಮ್ಮ ತಂದೆಯೆ ? ಪರಿವಾರ ಸಂಪತ್ತು ಏನೂ ಇಲ್ಲದೆ ಬರು
ತಾನೆ ! ಪ್ರಪಂಚವೇ, ಪ್ರಪಂಚವೇ ಹಾಳ ಪ್ರಪಂಚವೇ ! ನಿನ್ನಲ್ಲಿರತಕ್ಕ ವಿಚಿತ್ರ
ವಾದ ಕಪ್ನಗಳಿಗಾಗಿ ನಿನ್ನಲ್ಲಿ ನಮಗೆ ದ್ವೇಷವೇ ಹೊರತು, ಮತ್ತೇನೂ ಇಲ್ಲ,
ಹಾಗಿಲ್ಲದಿದ್ದರೆ, ವಾರ್ಧಿಕ್ಯದ ಶ್ರಮವನ್ನೂ ಲಕ್ಷ್ಯಮಾಡದೆ ಎಷ್ಟು ದಿವಸವಾ
ದರೂ ಬದುಕಿರಬೇಕೆಂದು ಆಸೆ ಇರುತಿತ್ತು,
ಮುದುಕ.--ಬುದ್ದಿ, ಈ ನಾಲ್ಟಿಪ್ಪತ್ತು ವರುಷದಿಂದಲೂ ತಮ್ಮಲ್ಲಿಯ ತಮ್ಮ ತಂದೆ
ಗಳಲ್ಲಿಯೂ ಆಶ್ರಿತನಾಗಿ ಆರಂಬಮಾಡಿಕೊಂಡಿದ್ದೇನೆ.
ದುಃಖ.--ಎಲ, ಹೋಗು, ಹೋಗು, ನೀನು ಹೊರಟು ಹೋಗೈಯ ಹೊರಟು ಹೋಗು.
ನೀನು ಮಾಡತಕ್ಕ ಉಪಚಾರ ನನಗೇನೂ ಸೌಖ್ಯವನ್ನುಂಟುಮಾಡಲಾರದು;
ಅದಕ್ಕೆ ಬದಲಾಗಿ ನಿನಗೆ ಕಷ್ಟ್ಯವನ್ನು ಉಂಟುಮಾಡಿದರೂ ಮಾಡಬಹುದು.
ಮುದುಕ.--ಅಕಟ, ಬುದ್ದಿ, ತಮಗೆ ದಾರಿ ಕಾಣಿಸುವುದಿಲ್ಲವಲ್ಲಾ.
ದುಃಖ.--ನನಗೆ ದಾರಿಯೇ ಇಲ್ಲ, ಆದ್ದರಿಂದ ಇನ್ನು ಕಂಣು ಯಾತಕ್ಕೆ ? ಕಂಣು
ಕಾಣುತಿದ್ದಾಗ ಕಾಣದೇ ಎಡವಿಬಿದ್ದೆ. ನನಗಿರತಕ್ಕ ಉಪಪತ್ತಿಯೇ ನಮ್ಮಲ್ಲಿ
ಅಜಾಗರೂಕತೆಯನ್ನು ಹುಟ್ಟಿಸುವುದು, ನಮ್ಮ ಪ್ರತಿಕೂಲಗಳೇ ನಮಗೆ ಅನು
ಕೂಲವಾಗಿ ಪರಿಣಾಮ ಹೊಂದುವವು. ಹಾ, ಮಗನೆ ಶುಕ್ಷ ಚಂದ್ರಾ, ಮೋಸ
------------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೭೯
ಹೋದ ನಿನ್ನ ತಂದೆಯ ಕೋಪಕ್ಕೆ ಆಹಾರಭೂತನೆ ! ನೇತ್ರವಿಲ್ಲದಿದ್ದರೂ ಕೈ
ಯಿಂದ ನಿನ್ನನ್ನು ನಾನು ಮುಟ್ಟಿ ನೋಡುವಮಟ್ಟಿಗೆ ಬದುಕಿದ್ದರೆ, ಪುನಃ ನನಗೆ
ನೇತ್ರಗಳು ಬಂದವೆಂದು ತಿಳಿದೇನಪ್ಪಾ !
ಮುದುಕ.- -ಇದೇನು ? ಅದು ಯಾರು ಅಲ್ಲಿ ?
ಶುಕ್ಲ--(ಜನಾಂಶಿಕ) ಶಿವ ಶಿವಾ! ನನ್ನದೇ ಅತ್ಯಂತ ಹೀನವಾದ ಸ್ಥಿತಿ ಎಂದು
ಯಾರುತಾನೆ ಹೇಳುವುದಕ್ಕಾದೀತು ! ನಾನು ಇದುವರಿಗೂ ಇದ್ದ ಅವಸ್ಥೆಯೇ
ನೀಚವಾಗಿತ್ತು; ಈಗ ಅದು ನೀಚತರವಾಯಿತು.
ಮುದುಕ.--ಆ ಹುಚ್ಚ, ರಾಮಜೋಗಿಯೊ !
ಶುಕ್ಲ.--ನನ್ನ ಸ್ಥಿತಿ ಇನ್ನೂ ಕೆಡಬಹುದು. "ಹೀನಸ್ಥಿತಿ ಎನ್ನುವುದು ಇನ್ನು ಇಲ್ಲಿಗೆ
ತೀರಿತು, ಮುಂದಕ್ಕೆ ಇನ್ನೇನೂ ಇಲ್ಲ ” ಎಂದು ನಾವು ಬಾಯಲ್ಲಿ ಹೇಳುವತನಕ
ಲೂ ಕೂಡ ಆ ಹೀನಸ್ಥಿತಿ ನಿಲ್ಲುವುದಿಲ್ಲ, ಮುಂದಕ್ಕೆ ಹೋಗುತ್ತಲೇ ಇರುವುದು.
ಮುದುಕ.--ಎಲ, ಎಲ್ಲಿ ಹೋಗುತೀಯೋ?
ದುಃಖ.--ಅವಯಾರು, ತಿರುಕನೊ ?
ಮುದುಕ.-- ತಿರುಕ, ಮೇಲೆ ಹುಚ್ಚನೂ ಹವುದು.
ದುಃಖ.-- ಅವನಿಗೆ ಸ್ವಲ್ಪವಾದರೂ ಬುದ್ದಿ ಸರಿಯಾಗಿರಬೇಕು. ಇಲ್ಲದಿದ್ದರೆ ತಿರುಪೇ
ಮಾಡಲಾರ. ನಿನ್ನೆ ರಾತ್ರೆ ಬಡಿಯುತ್ತಿದ್ದ ಗಾಳಿ ಮಳಗಳಲ್ಲಿ, ಇಂಥಾ ಒಬ್ಬನನ್ನು
ಕಂಡೆ ; ಮನುಷ್ಯಜನ್ಮವು ಒಂದು ಕ್ರಿಮಿಗಿಂತಲೂ ಕಡೆ ಎಂದು ನನಗೆ ಆಗ
ತೋರಿತು. ಅವನನ್ನು ನೋಡಿದಾಗ ನನ್ನ ಮಗನ ಜ್ಞಾಪಕ ಬಂತು, ಆದರೂ
ನನ್ನ ಮನಸ್ಸು ಎಂತೋ ಅವನಲ್ಲಿ ಒಡಂಬಡಲಿಲ್ಲ. ಅಲ್ಲಿಂದ ಈಚೆಗೆ ಬಹಳ ಸಂಗತಿ
ಗಳನ್ನು ಕೇಳಿದೆ. ದುಷ್ಟಹುಡುಗರಿಗೆ ನೊಣ ಹ್ಯಾಗೊ ನಾವು ದೇವರಿಗೆ ಹಾಗಾ
ದೆವು, ಆಟಕ್ಕೆ ನಮ್ಮನ್ನು ಕೊಲ್ಲುತಾನೆ.
ಶುಕ್ಲ.--(ಜನಾಂತಿಕದಲ್ಲಿ) ಹ್ಯಾಗೆ ಮಾಡೋಣ ? ವಿದೂಷಕನ ಹಾಗೆ ದುಃಖದ
ಸಂಗಡ ಕುಚೋದ್ಯವನ್ನು ಮಾಡತಕ್ಕ ವ್ಯಾಪಾರವು ಹೀನವ್ಯಾಪಾರ ; ಇದು
ತನಗೂ ವಿರೋಧ, ಅನ್ಯರಿಗೂ ವಿರೋಧ-(ಪ್ರಕಾಶ) ಬುದ್ಧಿ, ತಣ್ಣಗಿದೀರಾ ?
ದುಃಖ.--ಯಾರು, ಆ ಬೆತ್ತಲಎರುಕನೇಯೋ ?
ಮುದುಕ-ಹವುದು, ಬುದ್ದಿ.
ದುಃಖ.--ಹಾಗಾದರೆ ನೀನು ಹೋಗಪ್ಪ, ದೇವರೇ ವಿನ ದಾರಿಯಲ್ಲಿ ಒಂದೆರಡು ಮೈಲಿ
ಮುಂದಕ್ಕೆ, ನನಗೋಸ್ಕರವೇನಾದರೂ ನೀನು ಬಂದು ನಮ್ಮನ್ನು ಕಂಡರೆ,
ಪೂರ್ವದ ಅಭಿಮಾನವನ್ನಿಟ್ಟು ಬಾ. ನೀನು ಬರುವಾಗ್ಗೆ ನಿರ್ಮಾಣದಲ್ಲಿರುವ ಈ
ಮನುಷ್ಯನು ಹೊದ್ದುಕೊಳ್ಳುವುದಕ್ಕೆ ಏನನ್ನಾದರೂ ತೆಗೆದುಕೊಂಡು ಬಾ.
ನನ್ನ ಕೈ ಹಿಡಿದು ಕರೆದುಕೊಂಡು ಹೋಗುವಹಾಗೆ ಅವನನ್ನು ನಾನು ಕೇಳಿ
ಕೊಳ್ಳುತೇನೆ.
----------------------------------------------
೮೦ ಹೇಮಚಂದ್ರರಾಜ ವಿಲಾಸ [೪ನೇ ಅಂಕ.
ಮುದುಕ-ಸ್ವಾಮಿ ಅವ ಹುಚ್ಚ.
ದುಃಖ.--_ಕುರುಡರನ್ನು ಹುಚ್ಚರು ಕರೆದುಕೊಂಡು ಹೋಗತಕ್ಕದ್ದು ಕಾಲಗತಿ.
ನಾನು ಹೇಳುವಹಾಗೆ ಮಾಡು ; ಇಲ್ಲ, ನಿನ್ನ ಮನಸ್ಸಿಗೆ ಬಂದಹಾಗೆ ಮಾಡು.
ಅಂತು, ನೀನು ಹೊರಟು ಹೋಗು.
ಮುದುಕ.-- ನನ್ನ ಹತ್ತರಿರುವುದರಲ್ಲಿ ಉತ್ತಮವಾದ ಉಡುಪನ್ನು ಈತನಿಗೆ ತಂದು
ಕೊಡುತೇನೆ. ಇದರಿಂದ ಏನು ಬಂದರೂ ಬರಲಿ. (ನಿಷ್ಕ್ರಮಣ.)
ದುಃಖ.--ಎಲಾ, ನಿರ್ವಾರಾಣದೈಯ್ಯ,--
ಶುಕ್ಲ.--.ರಾಮಜೋಗಿಗೆ ಸೊಳಿಯೋಸೋಳಿ, (ಜನಾಂತಿಕದಲ್ಲಿ ಇದಕ್ಕಿಂತಲೂ ಹೆಚ್ಚು
ನಟನೆಯನ್ನು ಇನ್ನು ಮಾಡಲಾರೆ.)
ದುಃಖ.---ಇತ್ತ ಬಾರೈ.
ಶುಕ್ಲ.-- (ಜನಾಂತಿಕದಲ್ಲಿ) ಆದರೆ ಸ್ವಲ್ಪವಾದರೂ ಮಾಡಲೇಬೇಕು, ಅಯ್ಯೋ
ಕಣ್ಣೆ, ರಕ್ತ ಸುರಿಯುತಿದೆಯಲ್ಲಾ !
ದುಃಖ-ದೇವರೇವಿಗೆ ದಾರಿಯನ್ನು ಬಲ್ಲೆಯೇನೈ?
ಶುಕ್ಲ -ಕಡಕಲು, ದೊಡ್ಡ ಬಾಗಿಲು, ಕಾಲುದಾರಿ, ಬಂಡೀದಾರಿ, ಎಲ್ಲವನ್ನೂ ಬಲ್ಲೆ.
ರಾಮಜೋಗಿಯ ಬುದ್ದಿಯೆಲ್ಲಾ ಹಾರಿಹೋಯಿತು. ಕಾಡದೈವಗಳಿವೆ, ಜೋಕೆ
ಅಪ್ಪ, ಸಜ್ಜನನ ಮಗನೆ. ಒಟ್ಟಿಗೆ ಐದು ದೈಯ್ಯಗಳು ರಾಮಜೋಗೀನ ಹಿಡಿ
ದಿವೆ: ಪ್ರೇಮಕ್ಕಾಗಿ ಮೋಹಿನಿ ; ಜಡೇಮನಿ, ಮೂಗದೈಯ್ಯ ; ಕಂಡದ್ದನ್ನು
ಸುಡೋಕೊಳ್ಳಿ ಪಿಶಾಚಿ ; ಸಿಕ್ಕಿದವರನ್ನು ಸಿಗಿಯೋ ಬ್ರಹ್ಮರಾಕ್ಷಸ, ಕಂಡವ
ರನ್ನು ಕಂಡು ಅಣಕಿಸುವ ಹುಚ್ಚು ಧೈಯ್ಯ; ಹೀಗೆ ಐದು ದೈಯ್ಯ ಹಿಡಿದವೆ,
ಬುದ್ದಿ ತಾವು ತಂಣಗಿರಿ.
ದುಃಖ.-- ದೌರ್ಭಾಗ್ಯದ ಪ್ರತಿಯೊಂದು ಪೆಟ್ಟಿಗೂ ತಲೆಯನ್ನು ಒಡ್ಡಿರುವ ಪುರುಷನೆ.
ಈ ದ್ರವ್ಯವನ್ನು ಅಂಗೀಕರಿಸು, ನನಗೆ ಕಪ್ಪಪ್ರಾಪ್ತವಾದ್ದರಿಂದ ನಿನಗೆ ಸೌಖ್ಯ
ಉಂಟಾಗುವುದು. ದೇವರು ಇನ್ನೂ ಹಾಗೆಯೇ ಮಾಡಲಿ. ಪುಷ್ಕಳವಾಗಿ
ಸೌಖ್ಯೋಪಪತ್ತಿಯನ್ನುಳ್ಳವನಾಗಿ, ಕಾಮಾಂಧನಾಗಿ, ನೀತಿಗೆ ವಿರೋಧವಾಗಿ
ನಡೆಯುತ್ತಾ, ಅದನ್ನು ತನ್ನ ಆನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಾ
ಯಾವ ಅನುಭವವೂ ಇಲ್ಲದೆ, ಆದ್ದರಿಂದಲೇ ಯಾವುದನ್ನೂ ನೋಡದೆ, ಇರತ
ಕ್ಕಂಥಾ ಮನುಷ್ಯನು ದೈವಚೈತನ್ಯದ ರಭಸವನ್ನು ಜಾಗ್ರತೆಯಾಗಿ ತಿಳಿಯಲಿ.
ಹೀಗಾದರೆ ನಮಗೆ ಎಷ್ಟು ಬೇಕೋ ಅಷ್ಟು ಉಳದು, ಹೆಚ್ಚಾದ್ದು ಇತರರಿಗೆ ಹಂಚಿ
ಹೋಗಬೇಕು, ನೀನು ದೇವರೇವನ್ನು ಬಲ್ಲೆಯಾ ?
ಶುಕ್ಲ-ಬಲ್ಲೆ ಸ್ವಾಮಿ.
----------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೮೧
ದುಃಖ.--ಅಲ್ಲಿ ಒಂದು ಬೆಟ್ಟವಿದೆ ; ಅಲ್ಲಿ ಬಂದು ಕೊಡಗಲ್ಲು ಸಮುದ್ರದ ಮೇಲು
ಗಡೆಯಲ್ಲಿ ಹಾದುಕೊಂಡಿದೆ. ಅದರಮೇಲೆ ನಿಂತು ಕೆಳಗಿನ ಮಹಾಘಾತವನ್ನು
ನೋಡಿದರೆ ತಲೆ ಗಿರ್ರೆಂದು ತಿರುಗಿ ಅತ್ಯಂತ ಭಯ ಉಂಟಾಗುವುದು. ಆ ಕೋ
ಡುಗಲ್ಲಿನ ತುದಿಯವರಿಗೂ ನನ್ನ ಕೈ ಹಿಡಿದು ಕರೆದುಕೊಂಡು ಹೋಗು ;
ನಿನಗೆ ಉಂಟಾಗಿರುವ ಕಪ್ಪವನ್ನು ನಿವಾರಣಮಾಡಿ, ವಿಶೇಷವಾಗಿ ದ್ರವ್ಯಲಾಭ
ವನ್ನು ಮಾಡಿಕೊಡುತ್ತೇನೆ. ಅಲ್ಲಿಂದ ಮುಂದಕ್ಕೆ ನೀನು ನನ್ನನ್ನು ಕರೆದು
ಕೊಂಡು ಹೋಗಬೇಕಾದ್ದಿಲ್ಲ.
ಶುಕ್ಲ.--ನಿನ್ನ ಕೈಕೊಡು, ರಾಮಜೋಗಿ ಕರೆದುಕೊಂಡು ಹೋಗುತಾನೆ.
(ನಿಷ್ಕ್ರಮಣ.)
........
೨ನೇ ಪ್ರಕರಣ-ಭದ್ರನಾಥನ ಅರಮನೆಯ ಮುಂದೆ.
ಪ್ರವೇಶ.-ನಾಗವೇಣಿ, ಕಮಂತ್ರ.
ನಾಗವೇಣಿ --ದಯಮಾಡಿಸಬೇಕು ಸ್ವಾಮಿ ; ನನ್ನ ಸಪ್ಪಗಂಡ ನನ್ನನ್ನು ಎದುರು
ಗೊಳ್ಳುವುದಕ್ಕೆ ಬರದೇ ಇರುವುದು ಆಶ್ಚರ್ಯ.
ಪ್ರವೇಷ-ರಾಹುಕ.
ನಾಗವೇಣಿ..ನಿಮ್ಮ ಯಜಮಾನ ಎಲ್ಲೈ ?
ರಾಹುಕ-ತಾಯಿ, ಒಳಗಿದಾರೆ. ಆದರೆ ಹಾಗೆ ಬದಲಾಯಿಸಿ ಹೋಗಿರುವ ಮನು
ಷ್ಯ ಇನ್ನು ಯಾರೂ ಇಲ್ಲ. ಪರದೇಶದ ಸೇನೆಯು ಬಂದಿಳಿದಿರುವುದನ್ನು ಹೇಳಿದೆ;
ಅದನ್ನು ಕೇಳಿ ಹುಸಿನಗೆ ನಕ್ಕರು. ತಾವು ದಯಮಾಡಿಸುತಾ ಇದಾರೆಂದು
ಹೇಳಿದೆ;. “ ಇನ್ನೂ ಈಡಾಯಿತು ” ಎಂದರು. ದುಃಖಸಾರ ಮಾಡಿದ ದ್ರೋಹ
ವನ್ನೂ ಅವರ ಕುಮಾರರು ಮಾಡಿದ ಉಪಕಾರವನ್ನೂ ನಾನು ತಿಳಿಸಿದಕೂಡಲೆ,
“ಛಿ , ಮದ್ಯಪಾಯಿ ತಲೆಕೆಳಗಾಗಿ ಹೇಳುತೀಯಾ ? ” ಎಂದು ನನ್ನನ್ನು ಗದರಿ
ಸಿದರು. ಯಾತರಲ್ಲಿ ಅವರಿಗೆ ಅಸಹ್ಯ ಉಂಟಾಗಬೇಕೋ ಅದರಲ್ಲಿ ಅವರಿಗೆ ಅಭಿ
ಮಾನ ; ಯಾತರಲ್ಲಿ ಅವರಿಗೆ ಅಭಿಮಾನವಿರಬೇಕೋ ಅದರಲ್ಲಿ ಅವರಿಗೆ ಆಗ್ರಹ.
ನಾಗವೇಣಿ.--(ಕುಮಂತ್ರನನ್ನು ಕುರಿತು) ಹಾಗಾದರೆ ನೀವು ಮುಂದಕ್ಕೆ ಹೋಗಿ
ಕೂಡದು. ಆತನಿಗೆ ಹೇಡಿತನದಿಂದ ಹುಟ್ಟಿದ ಭಯವಶಾತು ಕಾರಾರಂಭ
ಮೂಡಲು ಧೈರ್ಯ್ಯವಿಲ್ಲ. ಪರಾಕ್ರಮದಿಂದ ಎದುರಿಸಬೇಕಾದಂಥಾ ಯಾವ ಕೇಡೂ
ಆತನ ಮನಸ್ಸಿಗೆ ಹತ್ತುವುದಿಲ್ಲ. ನಾವು ದಾರಿಯಲ್ಲಿ ಬರುವಾಗ್ಗೆ ಪಟ್ಟ ಇಷ್ಟವು
-------------------------------------------
೮೨ ಹೇಮಚಂದ್ರರಾಜ ವಿಲಾಸ. [೪ ನೇ ಅಂಕ.
ಕಾರ್ಯದಲ್ಲಿ ಜರಗಬಹುದು. ಕುಮಂತ್ರರೆ ನಮ್ಮ ಮೈದಂದಿರ ಹತ್ತರಕ್ಕೆ
ಹೊರಡಿ ; ಅವರ ಸೈನ್ಯವೆಲ್ಲಾ ಯುದ್ಧ ಸನ್ನದ್ಧವಾಗಿ ಹೊರಡಲಿ. ನಾನು ನನ್ನ
ಗಂಡನ ಕತ್ತಿಯನ್ನು ತೆಗೆದುಕೊಂಡು ನನ್ನ ಬಳೆಯನ್ನು ಆತನಿಗೆ ತೊಡಿ
ಸಬೇಕಾಗಿದೆ. ನಂಬಿಕೆಗೆ ಯೋಗ್ಯವಾದ ಈ ಭಂಟ ನಮ್ಮಿಬ್ಬರಿಗೂ ಪರಸ್ಪರ
ಸಮಾಚಾರವನ್ನು ನಡಿಸಿಯಾನು. ನೀವು ನಿಮ್ಮ ಪ್ರಯೋಜನಕ್ಕಾಗಿ ಧೈರ್ಯ
ಮಾಡುವಪಕ್ಷದಲ್ಲಿ, ಇಲ್ಲಿಂದ ಮುಂದಕ್ಕೆ ನನ್ನ ಕಡೆಯಿಂದ ಬರುವ ವರ್ತಮಾನ
ವೆಲ್ಲಾ ನಿಮ್ಮ ಪ್ರಿಯಳಕಡೆಯಿಂದ ಬರತಕ್ಕ ವರ್ತಮಾನವೆಂದು ಜಾಗ್ರತೆಯಾಗಿ
ಆದೀತು. (ಒಂದು ಆಭರಣವನ್ನು ಕೊಟ್ಟು) ಈ ಆಭರಣವನ್ನು ಇಟ್ಟುಕೊಳ್ಳಿ,
ಮಾತುಸಾಕು, ಈ ಚುಂಬನಕ್ಕೆ ಮಾತನಾಡುವ ಮಟ್ಟಿಗೆ ಧೈರ್ಯವಿದ್ದರೆ, ನಿಮಗೆ
ಸ್ವರ್ಗಸುಖವನ್ನು ತೋರಿಸೀತು. ಪರ್ಯಾಲೋಚಿಸಿ ; ತಮಗೆ ಸುಖಪ್ರಯಾಣ
ವಾಗಲಿ.
ಕುಮಂತ್ರ..--ಆ ಮರಣಾಂತವೂ ತಮ್ಮ ಕಡೆಯವನು.
ನಾಗವೇಣಿ. ನನ್ನ ಪ್ರಿಯರಾದ ಕುಮಂತರೆ ! (ಕುಮಂತ್ರ, ನಿಷ್ಕ್ರಾಂತ.)
ಮನುಷ್ಯ ಮನುಷ್ಯರಿಗೆ ಎಷ್ಟು ವ್ಯತ್ಯಾಸವಿದೆ ! ಸ್ತ್ರೀ ಸೇವೆಯು ನಿಮಗೆ
ಸಲ್ಲತಕ್ಕದ್ದು, ಆ ಅವಿವೇಕಿಯು ನನ್ನ ಅರ್ಧಾಂಗವನ್ನು ಆಕ್ರಮಿಸಿದಾನೆ.
ರಾಹಕ-ಇಗೊ ನಮ್ಮ ಸ್ವಾಮಿ ದಯಮಾಡಿಸಿದರು. (ನಿಷ್ಕ್ರಾಂತ.)
ಪ್ರವೇಶ.-ಭದ್ರನಾಥ.
ನಾಗವೇಣಿ..ಏನು, ನಾನು ಬಂದು ಕಾಸಿಗೂ ಬೇಡದವಳಾದೆ.
ಭದ್ರ.--ಎಲೆ ನಾಗವೇಣಿ, ಈ ಮಹಾಮಾರುತ ನಿನ್ನ ಮುಖದಮೇಲೆ ಬೀಸಿ ತಂದು
ಹಾಕತಕ್ಕ ಧೂಳಿನ ಬಂದು ರೇಣುವನ್ನೂ ನೀನು ಬಾಳದವಳು. ನಿನ್ನ ಗುಣಕ್ಕೆ
ನಾನು ಭಯಪಡುತೇನೆ: ತನ್ನ ಜನ್ಮಸ್ಥಾನವನ್ನೇ ದಿಕ್ಕಾರಮಾಡಿದಂಥಾ ಸ್ವಭಾ
ವವು ಮತ್ತೆ ಯಾವ ಹದ್ದಿನಲ್ಲಿಯೂ ಇರಲಾರದು. ತನ್ನ ಮಾತೃವೃಕ್ಷದಿಂದ
ತಾನಾಗಿ ಸಿಗಿದುಬಿದ್ದು ಹಾಲನ್ನುಗುಳುವ ಶಾಖೆಯು ತಾನಾಗಿ ಒಣಗಿ ಮರಣ
ಹೋಮಕ್ಕೆ ಸಮಿತ್ತಾಗುವುದು,.
ನಾಗ.-- ಇನ್ನು ಸಾಕು. ಆಡಿದಮಾತಿನ ಅರ್ಥವು ಅವಿವೇಕ ಸೂಚಕವಾಗಿದೆ.
ಭದ್ರ.-ವಿವೇಕವೂ ಸಚ್ಚರಿತೆಯ ದುರ್ಜನರಿಗೆ ದುಪ್ಪವಾಗಿಯೇ ಕಾಣುವವು.
ಹೊಲಸಿಗೆ ಹೊಲಸಿನಲ್ಲಿಯೇ ಅಭಿರುಚಿ, ನೀನೆಂಥಾಕಾರವನ್ನು ಮಾಡಿದೆ ? ನೀವು
ಹೆಮ್ಮಕ್ಕಳಲ್ಲ, ಹೆಂಣು ಹುಲಿಗಳು, ಏನು, ಮಹಾಪಾತಕವನ್ನು ಮಾಡಿದೆ ?
ತಂದೆ, ಅತಿವೃದ್ದ, ಅತ್ಯಂತ ದಯಾರಸವುಳ್ಳವನು, ಮಹಾ ಉಗ್ರಸಿಂಹವಾದರೂ
----------------------------------------------------
೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ 83
ಆತನ ಪಾದವನ್ನು ನೆಕ್ಕುತಾ ಆತನಲ್ಲಿ ಮರಾದೆಯಿಂದ ನಿಂತುಕೊಳ್ಳುವುದು,
ಇಂಥಾ ಪುರುಷನಿಗೆ, ಅಯ್ಯೋ ಕಟುಗತನವೆ, ಅಯ್ಯೋ ಹೀನವೃತ್ತಿಯ ! ಇಂಥಾ
ಪುರುಷಶ್ರೇಷ್ಮನಿಗೆ ಹುಚ್ಚು ಹಿಡಿಸಿದೆಯಲ್ಲಾ! ನೀವುಗಳು ಹೀಗೆ ಮಾಡುತಿದ್ದರೆ
ನಮ್ಮ ತಮ್ಮೈಯ್ಯ ಸುಮ್ಮನಿದ್ದರೆ ? ಮನುಷ್ಯವರ್ಗಕ್ಕೆ ಸೇರಿ, ರಾಜಪುತ್ರ
ನೆನಿಸಿಕೊಂಡು, ಆ ಮಹಾರಾಯನಿಂದ ಅಷ್ಟೊಂದು ಪ್ರಯೋಜನವನ್ನು ಹೊಂದಿ!
ಹಾಹಾ ! ಈ ಮಹಾಪರಾಧಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಲು ಗೋಚರ
ವಾಗುವಂತೆ ದೇವರು ತನ್ನ ಕಡೆಯವರನ್ನು ಜಾಗ್ರತೆಯಾಗಿ ಕಳುಹಿಸದಿದ್ದಾಗ್ಯೂ;
ಅದು ಬಂದೇ ಬರುವುದು. ಮನುಷ್ಯವರ್ಗವು ಜಲಚರಗಳಂತೆ ಸಜಾತೀಯ
ವಾದ ಮನುಷ್ಯವರ್ಗವನ್ನೇ ಕಿತ್ತು ತಿನ್ನ ಬೇಕಾಯಿತು.
ನಾಗ -- ಎಲೋ, ಅಂಜಪರಕ ! ನಿನಗೆ ಕೆನ್ನೆ ಇರುವುದು ಪೆಟ್ಟ ತಿನ್ನುವುದಕ್ಕೆ ;
ಬುದ್ದಿ ಇರುವುದು ದುರಾಲೋಚನೆ ಮಾಡುವುದಕ್ಕೆ : ನಿನ್ನ ಕಮ್ಮ ಇಂಥಾದ್ದು
ನಿನ್ನ ಘನತೆ ಇಂಥಾದ್ದು ಎಂದು ನೋಡುವುದಕ್ಕೆ ನಿನ್ನ ತಲೆಯಲ್ಲಿ ಕಂಣೇ ಇಲ್ಲ ;
ಯಾವ ನೀಚರಿಗೆ ತಮ್ಮ ದುಸ್ಕಾರ ನಡೆಯುವುದಕ್ಕೆ ಮುಂಚೆಯೇ ಶಿಕ್ಷೆಯಾಗು
ವುದೋ ಅಂಥಾ ನೀಚರ ವಿಷಯದಲ್ಲಿ ಕನಿಕರಪಡುವವರು ಅವಿವೇಕಿಗಳನ್ನುವು
ದನ್ನು ನೀನು ಅರಿಯಲೇ ಆರಿದೆ. 'ನಿನ್ನ ಕಡೇ ಭೇರಿ ಯಲ್ಲಿ ? ಮಾರದೇಶದದಾಳೆ
ಯುದ್ಧ ಸನ್ನದ್ದವಾಗದೇ ಇರುವ ನಮ್ಮ ದೇಶದಲ್ಲಿ ಬಂದು ನೆಟ್ಟಿತು. ವೀರಭಟರ
ಕಿರೀಟದಮೇಲಿನ ಉಮಾಗರಿಯ ಅಟ್ಟಹಾಸಕ್ಕೆ ನಿನ್ನ ರಾಜ್ಯವು ಕಂಪಿಸುತಿದೆ.
ನೀನು ಧರ್ಮಬೋಧೆ ಮಾಡತಕ್ಕ ಹೇಡಿಯಾಗಿ ಕೂತುಕೊಂಡು ? “ ಅಯ್ಯೋ
ಅವ ಯಾಕೆ ಹಾಗೆಮಾಡುತಾನೆ '' ಎನ್ನು ತಿದ್ದೀಯೆ.
-ರಾಕ್ಷಸಿ, ನಿನ್ನನ್ನು ನೀನು ನೋಡಿಕೊ. ದುರ್ನಿತಿಯು ರಾಕ್ಷಸರಿಗೆ ಸಹಜ
ವಾದ್ದರಿಂದ ಅಷ್ಟೊಂದು ಭಯಂಕರವಾಗಿಲ್ಲ ; ಸ್ತ್ರೀಯಲ್ಲಿ ಅತ್ಯಂತ ಭಯಂಕರ
ವಾಗಿ ಕಾಣಿಸುವುದು.
ನಾಗ.--ಅಯ್ಯೋ, ಬಡಾಯಿಕೊರ, ವಿವೇಕಶೂನ್ಯ !
ಭದ್ರ.--ಎಲೆ ರೂಪಾಂತರದಲ್ಲಿರುವ ಮಹಾರಕ್ಕಸಿಯೆ, ನಾಚಿಗೆಕೇಡು, ನಿನ್ನ ಆಕೃತಿ
ಯನ್ನು ರಾಕ್ಷಸಾಕೃತಿಯಾಗಿ ಮಾಡಿಕೊಳ್ಳಬೇಡ. ನನ್ನ ಆಗ್ರಹಕ್ಕೆ ನನ್ನ ಕೈಗೆ
ಳನ್ನು ಅಡಿಯಾಳ ಮಾಡಿಕೊಳ್ಳುವುದು ಯೋಗ್ಯವಾಗಿದ್ದರೆ ನಿನ್ನನ್ನು ಗವಚಿ
ಮಾಂಸವನ್ನೂ ಮಳೆಯನ್ನೂ ಕಿತ್ತು ಬಗೆದುಹಾಕುವುದಕ್ಕೆ ಸಿದ್ಧನಾಗಿವೆ.
ನೀನೇನೋ ಪಿಶಾಚವೇ ಸರಿ ; ' ಆಕಾರವು ನಿನ್ನನ್ನು ಮುಚ್ಚಿಕೊಂಡಿದೆ.
ನಾಗ.--ಸಾಕು ನಿಮ್ಮ ಪೌರುಪವನ್ನು ಕಟ್ಟಿಡಿ.
-------------------------------------------------------
84 ಹೇಮಚಂದ್ರರಾಜ ವಿಲಾಸ [೬ನೇ ಅಂಕ.
ಪ್ರವೇಶ-ಚಾರ.
ಭದ್ರ.-- ಏನು ವರ್ತಮಾನವೈ ?
ಚಾರ_ಮಹಾಸ್ವಾಮಿ, ಕುಟಿಲರಾಜರು ಮೃತಿ ಹೊಂದಿದರು. ದುಃಖಸಾರರ
ಇನ್ನೊಂದು ಕಂಣನ್ನು ಕೀಳಲು ಕುಟಿಲರು ಯತ್ನಿಸೆ , ಅವರ ಭ್ರತೃನೇ ಒಬ್ಬ
ಅವರನ್ನು ಕೊಂದನು.
ಭದ್ರ-ದುಃಖಸಾರನ ಕಂಣುಗಳೇ ?
ಚಾರ.--ಕುಟಿಲರ ಒಬ್ಬ ಭೃತ್ಯನು ಅವರ ಘೋರಕೃತ್ಯವನ್ನು ಕಂಡು ಕನಿಕರದಿಂದ
ವ್ಯಸನಪಟ್ಟು, ತನ್ನ ಕತ್ತಿಯನ್ನು ಯಜಮಾನನಮೇಲೆ ಹಿರಿದು ನಿಂತನು. ಅವ
ರಿಬ್ಬರಿಗೂ ಕೈಗಟ್ಟಿದ ಕಾಳಗದಲ್ಲಿ ಭೃತ್ಯನು ಮರಣ ಹೊಂದಿದನು. ಆದರೆ
ಅಪಾಯಕರವಾದ ಒಂದು ಯೇಟನ್ನು ಹಾಕದೇ ಬೇರೆ ಅವನು ಪ್ರಾಣಬಿಡಲಿಲ್ಲ.
ಅದರ ದೆಸೆಯಿಂದ ಕುಟಿಲರೂ ತೀರಿಹೋದರು.
ಭದ್ರ--ಆಹಾ ! ದೇವರೆ, ಮೇಲೆ ನೀನೊಬ್ಬ ಸಾಕ್ಷೀಭೂತನಾಗಿದೀಯ ; ಈ ಭೂ
ಲೋಕದಲ್ಲಿ ನಡೆಯುವ ಅನ್ಯಾಯಗಳಿಗೆ ತಕ್ಕ ಶಿಕ್ಷೆಯನ್ನು ಮಾಡಿ, ನ್ಯಾಯ
ವನ್ನು ವಿಮರ್ಶೆಪಡಿಸಿ, ನಿನ್ನ ಮಹಾಶಕ್ತಿಯನ್ನು ತೋರಿಸುತೀಯ, ಎಂದು ಇದ
ರಿಂದ ಚೆನ್ನಾಗಿ ತೋರುವುದು. ಆದರೆ ಅಯ್ಯೋ, ದುಃಖಸಾರ ! ಆತನ ಇನ್ನೊಂ
ದು ಕಣ್ಣೂ ಹೋಯಿತೆ ?
ಚಾರ.--ಎರಡೂವೆ, ಎರಡೂವೆ, ಬುದ್ಧಿ, ತಾಯಿ ಈ ಕಾಗದವು ತಮ್ಮ ತಂಗಿಯ
ವರದು. ಕೂಡಲೆ ಇದಕ್ಕೆ ಉತ್ತರವನ್ನು ಅಪೇಕ್ಷಿಸುತ್ತಾರೆ.
ನಾಗವೇಣಿ.-(ಜನಾಂತಿಕ) ಒಂದು ಭಾಗದಲ್ಲಿ ನೋಡಿದರೆ ಇದು ಇಷ್ಟವೇಸರಿ.
ಆದರೆ ಅವಳು ವಿಧವೆಯಾದಳು; ನನ್ನ ಪ್ರಿಯನಾದ ಕುಮಂತ್ರ ಅವಳ ಸಮೀಪದಲ್ಲಿ
ರುವುದರಿಂದ ನನ್ನ ಮನೋರಥವೆಲ್ಲಾ ಭಗ್ನವಾಗಿ ಬಾಳು ಕೆಡುವುದು. ಇನ್ನೊಂ
ದುಭಾಗದಲ್ಲಿ ನೋಡಿದರೆ ಈ ವರ್ತಮಾನವು ಅಷ್ಟು ಅನುಕೂಲವಾಗಿಲ್ಲ. ಆದರೂ
ಇದನ್ನೂ ಓದಿ, ಉತ್ತರವನ್ನು ಕೊಡೋಣ. (ನಿಷ್ಕ್ರಾಂತ)
ಭದ್ರ.--ಆತನ ಕಂಣನ್ನು ಇವರುಗಳು ಕೀಳುವಾಗ್ಗೆ ಆತನ ಮಗ ಎಲ್ಲಿದೆ ?
ಚಾರ.--ರಾಜಪುತ್ರಿಯಾದ ತಮ್ಮ ಕುಟುಂಬದ ಸಂಗಡ ಈ ಕಡೆಗೆ ಬಂದು ಬಿಟ್ಟಿದ್ದ.
ಭದ್ರ.--ಅವ ಇರಲಿಲ್ಲ ?
ಚಾರ.--ಇಲ್ಲ ಬುದ್ದಿ. ಪುನಃ ಅವನು ಎದುರಿಗೆ ಬರುತಿದ್ದನು ; ಕಂಡಿದ್ದೆ.
ಭದ್ರ.ಈ ದುಷ್ಕಾರ್ಯವನ್ನು ಅವ ಬಲ್ಲನೋ ?
ಚಾರ.--ಸ್ವಾಮಿ, ಬಲ್ಲ, ಅವನೇ ಮುದುಕನಮೇಲೆ ದೋಷಾರೋಪಣೆಯನ್ನು
--------------------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. 85
ಮಾಡಿದವನು, ಆ ವೃದ್ಧನಿಗೆ ಹಿಂಸೆಯು ನಿರ್ಮಾಧಕವಾಗಿ ಜರುಗಲೆಂದು
ಬೇಕೆಂತಲೇ ಮನೆಯನ್ನು ಬಿಟ್ಟು ಹೊರಟುಹೋಗಿ ಬಿಟ್ಟನು.
ಭದ್ರ.--ಅಯ್ಯೋ ದುಃಖಸಾರ, ನೀನು ಧೊರೆಗೆ ಮಾಡಿದ ಉಪಕಾರಕ್ಕಾಗಿ ನಿನಗೆ
ವಂದನೆಯನ್ನು ಮಾಡಿ ನಿನ್ನ ಕಂಣನ್ನು ಕಿತ್ತವರಿಗೆ ಕೂರದಂಡನೆಯನ್ನು
ಮಾಡಲು ನಾನು ಬದುಕಿದೇನೆ, ಅಯಾ ಮಿತ್ರ, ನೀನು ಈ ಕಡೆಗೆ ಬಾ, ನೀನು
ಇನ್ನೇನ ಬಲ್ಲೆ ಹೇಳು. (ನಿಷ್ಕ್ರಮಣ.)
................
೩ನೇ ಪ್ರಕರಣ--ದೇವರೇವಿನ ಹತ್ತಿರ ಮಾರದೇಕದ ಸೇನೆಯ
ಪಾಳಯ.
ಪ್ರವೇಶ-ನಿಷ್ಕಂಟಕ, ದೊಡ್ಡ ಮನುಷ್ಯ.
ನಿಷ್ಕಂಟಕ.--ಮಾರದೇಶಾಧೀಶನು ಅಷ್ಟೊಂದು ಅಕಸ್ಮಾತ್ತಾಗಿ ಹಿಂದಕ್ಕೆ ಹೊರಟು
ಹೋಗಲು ಏನು ಕಾರಣ, ನೀನು ಬಲ್ಲೆಯಾ ?
ದೊಡ್ಯ.--ರಾಜ್ಯದಲ್ಲಿ ಕೆಲವು ಸಂಗತಿ ಹದಗೆಟ್ಟು ಹೋಗಿತ್ತು. ಅದನ್ನು ಹಾಗೆಯೇ
ಆತನು ಬಿಟ್ಟು ಬಂದಿದ್ದ. ಆತ ಬಂದ ತರುವಾಯ ಅದರ ಆಲೋಚನೆ ಇನ್ನೂ
ಸ್ವಲ್ಪ ಜರಗಿತು. ಅದರಿಂದ ರಾಜ್ಯಕ್ಕೆ ಭೀತಿಯ ಅಪಾಯವೂ ತಟ್ಟುವುದಾಗಿ
ತೋರಿದ್ದರಿಂದ ಆತನು ಅಲ್ಲಿ ಹೋಗಲೇ ಬೇಕಾಗಿಬಂತು.
ನಿಷ್ಕಂಟಕ.--ಸರ್ವಸೇನಾಪತಿಯಾಗಿ ಯಾರನ್ನು ನೇಮಕಮಾಡಿ ಹೋಗಿದಾರೆ ?
ದೊಡ್ಡ.--ಶೂರಸೇನನನ್ನು.
ನಿಷ್ಕಂಟಕ-ನಿನ್ನ ಕಾಗದಗಳೇನಾದರೂ ಆಕೆಯ ಮನಸ್ಸಿಗೆ ತಟ್ಟಿ ವ್ಯಸನವೇನಾ
ದರೂ ಪಟ್ಟಳೋ ?
ದೊಡ್ಡ.--ಹವುದು ಸ್ವಾಮಿ, ವ್ಯಸನಪಟ್ಟಳು, ಕಾಗದವನ್ನು ತೆಗೆದುಕೊಂಡು ನನ್ನೆ
ದುರಿಗೇ ಓದಿದಳು. ಆಗ ಆಕೆಯು ನುಣ್ಣಲ್ಲದಮೇಲೆ ಕಂಬನಿಗಳು ವಿಶೇಷವಾಗಿ
ಹರಿಯುತ್ತಿದ್ದವು. ಆಕೆಯು ತನ್ನ ವ್ಯಸನವನ್ನು ಜೈಸಿದ ರಾಣಿಯೋ ಎನ್ನುವ
ಹಾಗಿದ್ದಳು. ಆದರೆ ಆಕೆಯ ವ್ಯಸನವು ತಿರುಗಿಬಿದ್ದು ಆಕೆಗೆ ತಾನು ಧೊರೆ
ಯಾಗಿದೆಯೋ ಎನ್ನುವ ಹಾಗೆ ದುಸ್ಸಹವಾಗಿತ್ತು.
ನಿಷ್ಕಂಟಕ.-- ಹಾಗಾದರೆ ಆಕೆಗೆ ವ್ಯಸನ ತಟ್ಟಿತು.
ದೊಡ್ಡ. ಆದಾಗ್ಯೂ ಅದು ಅತಿಯಾಗಿಲ್ಲ. ಸಹನವೂ ವ್ಯಸನವೂ ಆಕೆಯ ಸೌಂದರ್ಯ
ವನ್ನು ಚೆನ್ನಾಗಿ ತೋರಿಸುವುದರಲ್ಲಿ ನಾನು ತಾನೆಂದು ಒಂದಕ್ಕೊಂದು ಸೆಣಸಾ
ಡುತಿದ್ದವು. ಬಿಸಿಲು ಮಳೆಗಳರಡೂ ಏಕಕಾಲದಲ್ಲಿರುವುದನ್ನು ನೀವು ನೋಡಿದೀ
-----------------------------------------------------
86 ಹೇಮಚಂದ್ರರಾಜ ವಿಲಾಸ [೪ನೇ ಅಂಕ.
ರಲ್ಲವೆ. ಆಕೆಯ ಮಂದಹಾಸವೂ ಕಂಬನಗಳೂ ಇನ್ನೂ ವಿಶೇಷವಾದ ಸೌಂದರ್ಯ
ವನ್ನು ಪ್ರಕಾಶಮಾಡಿದವು. ಆ ಸುಂದರವಾದ ತುಟಿಗಳಮೇಲೆ ಆಡುತಿದ್ದ ಸುಖ
ತರವಾದ ಮಂದಹಾಸವು ಆಕೆಯು ಕಂಣಿನಲ್ಲಿ ಬಂದಿರುವ ಅತಿಥಿಗಳನ್ನು ಅರಿ
ಯದೇ ಇದ್ದವು. ಕಣ್ಣಿನಿಂದ ಬೀಳುವ ಬಟ್ಟುಗಳು ವಜ್ರಗಳಿಗೆ ಕಟ್ಟಿದ
ಮುತ್ತಿನಸರಗಳೂ ಎನ್ನುವ ಹಾಗೆ ಕಾಣಿಸಿದವು. ಮುಖ್ಯವಾಗಿ ವ್ಯಸನವನ್ನು
ಎಲ್ಲರೂ ಹಾಗೆ ಸಹಿಸಿಕೊಂಡರೆ, ಲೋಕದಲ್ಲಿ ವ್ಯಸನವು ಎಲ್ಲರಿಗೂ ಬೇಕಾದ
ವಸ್ತುವಾಗುವುದು.
ನಿಷ್ಕಂಟಕ .--ಬಾಯಿಮಾತಿನಲ್ಲಿ ಏನನ್ನೂ ಕೇಳಲಿಲ್ಲವೆ ?
ದೊಡ್ಡ.--ಸ್ವಾಮಿ, ಒಂದೆರಡು ಸಾರಿ “ ತಂದೆಯೇ ” ಎಂದು ನಿಟ್ಟುಸಿರಬಿಟ್ಟು ಆ
ಮಾತು ತನ್ನ ಹೃದಯವನ್ನು ಒತ್ತುತಿದೆಯೋ ಎನ್ನುವ ಹಾಗೆ ಏದುತ್ತಾ ಏದುತ್ತಾ
ಎಂದಳು. ತರುವಾಯ ಅಯ್ಯೋ ಅಕ್ಕಂದಿರಾ ! ಅಕ್ಕಂದಿರಾ ! ಹೆಣುಜನ್ಮಕ್ಕೆ
ಹೀನಾಯವಾದಿರಾ ! ಅಯ್ಯೋ ನಿಷ್ಕಂಟಕನೆ, ಅಪ್ಪಾಜಿ ! ಹಾಳ ಅಕ್ಕಂದಿರಾ !
ಆ ವಿಪರೀತವಾದ ಮಳಗಾಳಿ ಹೊಡೆಯುತ್ತಿರುವಾಗಲೇ ? ಆ ಮಹಾನಿಶಿಯಲ್ಲಿಯೆ ?
ದಯಾರಸವೆನ್ನುವುದು ಇದೆ ಎಂದು ನಾನು ನಂಬುವುದಿಲ್ಲ ! ” ಹೀಗೆಲ್ಲಾ ಹೇಳಿ
ಕೊಂಡು ಆಕೆ ಪ್ರಳಾಪಿಸಿದಳು. ನೇತ್ರಕಮಲದಿಂದ ಮಕರಂದವನ್ನು ಸುರಿಸಿ
ದಳು. ಆಗೋಳಿನಲ್ಲಿ ಮೈಯೆಲ್ಲಾ ತೇವವಾಯಿತು. ಆ ಮೇಲೆ ತಾನು ಏಕಾಂ
ತವಾಗಿ ದುಃಖಪಡಲು ಹೊರಟು ಹೋದಳು.
ನಿಪ್ಪ೦ಟಕ---ಇದೆಲ್ಲಾ ಆ ಗ್ರಹಗತಿಗಳಿಂದಲೇ ಉಂಟಾಗತಕ್ಕದ್ದು. ಹಾಗಿಲ್ಲದಿದ್ದರೆ
ಪರಸ್ಪರ ಸಂಬಂಧವಿಲ್ಲದಂಥಾ ಗುಣಗಳುಳ್ಳ ಮಕ್ಕಳು ಒಂದೇ ಬಸಿರಿನಿಂದ ಹುಟ್ಟು
ವುದಿಲ್ಲ. ಅಲ್ಲಿಂದ ಈಚೆಗೆ ನೀನು ಆಕೇ ಸಂಗಡ ಮಾತನಾಡಲಿಲ್ಲವೊ ?
ದೊಡ್ಡ.--ಇಲ್ಲ ಸ್ವಾಮಿ.
ನಿಷ್ಕಂಟಕ---ಇದು ಮಾರದೇಶಾಧಿಪತಿ ಹಿಂದಕ್ಕೆ ಹೊರಟುಹೋಗುವುದಕ್ಕೆ ಮುಂ
ಚೆಯೇ, ನಡೆದದ್ದು ?
ದೊಡ್ಡ.--ಇಲ್ಲ, ಈಚೆಗೆ.
ನಿಷ್ಕಂಟಕ---ಬಹು ಕಪ್ಪಕ್ಕೆ ಗುರಿಯಾದ ಹೇಮಚಂದ್ರರಾಜರು ಈ ಪಟ್ಟಣದಲ್ಲಿ
ದಾರೆ. ಸ್ವಲ್ಪ ಜ್ಞಾನಸರಿಯಾಗಿದ್ದಾಗ ನಾವು ಇಲ್ಲಿಗೆ ಬಂದಕಾರ್ಯವನ್ನು ತಿಳಿದುಕೊ
ಳ್ಳುತ್ತಾರೆ. ಆದರೆ ಏನಾದರೂ ಆಗಲಿ ತನ್ನ ಮಗಳನ್ನು ನೋಡುವುದಿಲ್ಲವೆಂದು
ಹಠಹಿಡಿದಿದ್ದಾರೆ.
ದೊಡ್ಡ---ಯಾಕೆ ಸ್ವಾಮಿ ?
ನಿಷ್ಕಂಟಕ.--ವಿಶೇಷವಾದ ನಾಚಿಕೆಯು ಆತನನ್ನು ತಡೆಯುತ್ತಿದೆ. ಆಕೆಯನ್ನು
“ನಿರ್ದಯದಿಂದ ಕಂಡದ್ದೂ, ಬಂದು ಆಶೀರ್ವಾದ ವಚನವನ್ನು ಕೂಡ ಹೇಳದೆ
------------------------------------------------------
೪ನೇ ಪ್ರಕರಣ ] ಹೇಮಚಂದ್ರರಾಜ ವಿಲಾಸ 87
ಅನ್ಯದೇಶಕ್ಕೆ ಅಟ್ಟಬಿಟ್ಟದ್ದೂ, ಆಕೆಯಪಾಲಿನ ರಾಜ್ಯವನ್ನು ಶುನಕ ಹೃದಯರಾದ
ಆ ನೀಚ ಹೆಂಗಸರಿಗೆ ಕೊಟ್ಟದ್ದೂ, ಇದೆಲ್ಲಾ ಹೃದಯದಲ್ಲಿ ನಾಟ ಆತನನ್ನು
ಕುಕ್ಕುತಿರುವ ಕಾರಣ, ತಲೆಬಗ್ಗಿಸುವ ಲಜ್ಞೆಯು ಇಂದುಕಲೆಯನ್ನು ನೊ
ಡಲು ತಡೆಯಾಗಿದೆ.
ದೊಡ್ಡ.--ಅಯ್ಯೋ ಪಾಪ !
ನಿಷ್ಕಂಟಕ.--ಕುಟಿಲ ಭದ್ರನಾಥರ ಸೇನೆ ತೆರಳಿದ್ದನ್ನು ನೀವು ಕೇಳಲಿಲ್ಲವೆ ?
ದೊಡ್ಡ.--ತೆರಳಿತೆಂದು ವರ್ತಮಾನವಿದೆ.
ನಿಷ್ಕಂಟಕ.--ೊಳ್ಳೇದು ಸ್ವಾಮಿ. ನನ್ನೊಡೆಯನಾದ ರಾಜನ ಸಮೀಪಕ್ಕೆ ನಿಮ್ಮನ್ನು
ಕರೆದುಕೊಂಡು ಹೋಗುತ್ತೇನೆ ; ಆತನಿಗೆ ಉಪಚಾರ ಮಾಡುತ್ತಾ ಇರಿ. ೊಂದಾ
ನೊಂದು ಮಹಕಾರಕ್ಕಾಗಿ ರಹಸ್ಯವು ಸ್ವಲ್ಪ ಕಾಲ ನನ್ನನ್ನು ಅವರಿಸಿಕೊಂಡಿ
ದ್ದೀತು. ನಾನು ಇಂಥವನೆಂದು ನಿಮಗೆ ತಿಳಿದ ತರುವಾಯು ನಿಮ್ಮ ಪರಿಚಯದ
ಪ್ರಯೋಜನವನ್ನು ನನಗೆ ತಾವು ಕೊಟ್ಟದ್ದಕ್ಕಾಗಿ ವ್ಯಸನಪಡಲಾರಿರಿ. ನನ್ನ ಸಂಗಡ
ದಯಮಾಡಿ ಬನ್ನಿ, (ನಿಷ್ಕ್ರಾಂತ.)
...........
8ನೇ ಪ್ರಕರಣ-ದೇವರೇವಿನ ಹತ್ತಿರದ ಪಾಳಯ-ಒಂದು
ಗೂಡಾರದಲ್ಲಿ.
ಪ್ರವೇಶ.ಇಂದುಕಲೆ, ವೈದ್ಯ, ವೀರಭಟರು ದಾಳೆಯನ್ನು ಹಿಡಿದು
ಭೇರೀನಾದವನ್ನು ಮಾಡುತ್ತಾ ಬರುವರು.
ಇಂದು ಕಲೆ.-ಅಯ್ಯೋ ಆತನೇ ವಿಪರೀತವಾಗಿ ಘೋಷಮಾಡಿ ಅಲ್ಲೋಲಕಲ್ಲೋಲ
ವಾಗುತ್ತಿರುವ ಮಹಾಸಮುದ್ರನಂತೆ ಹುಚ್ಚಿನಿಂದ ಈಗತಾನೆ ಆರ್ಭಟಿಸುತಿದ್ದರು;
ಗಟ್ಟಿಯಾಗಿ ಕೂಗಿಕೊಂಡು ಹಾಡುತಿದ್ದರು ; ಉಗನೀಹಂಬು, ಬೂತಾಳೇಪಟ್ಟೆ,
ಕಕ್ಕೆ ಹೂ, ದಾಸವಾಳದಹೂ, ಇತರ ಕಾಡಸೊಪ್ಪು, ಮೊದಲಾದವುಗಳನ್ನೆಲ್ಲಾ
ತಲೆಗೆ ಮೈಗೆ ಕಟ್ಟಿಕೊಂಡು ಕುಣಿದಾಡುತಿದ್ದರು, ನೂರುಮಂದಿ ಹೊರಡಲಿ.
ಅಂಗೈಯಗಲದ ಸ್ಥಳವನ್ನೂ ಬಿಡದೆ ಹುಡುಕಿ"ಅವರನ್ನು ನನ್ನ ಸಮಾಸಕ್ಕೆ ಕರೆ
ತರಲಿ. (ಒಬ ಅಧಿಕಾರಿ ಹೋಗುವನು) ಆತನ ಬುದ್ಧಿಭ್ರಮಣೆ ಹೋಗಿ ಜ್ಞಾನ
ಸರಿಯಾಗುವುದಕ್ಕೆ ಮನುಷ್ಯನ ವಿವೇಕವು ಏನೇನು ಚಾತುರ್ಯವನ್ನು ತೋರಿಸ
ಬಲ್ಲದು ? ಆತನಿಗೆ ಯಾವೊನಾದರೂ ಗುಣಮಾಡಿದರೆ ನನ್ನ ಸಕಲೈಶರವೂ ಆ
ವೈದ್ಯನ ದಾಗಿದ್ದೀತು,
-----------------------------------------------------
88 ಹೇಮಚಂದ್ರರಾಜ ವಿಲಾಸ, [೪ನೇ ಅಂಕ.
ವೈದ್ಯ.-ಅದಕ್ಕೆ ಉಪಾಯವಿದೆ ತಾಯಿ. ಶರೀರ ಧರ್ಮಕ್ಕೆ ನಿದ್ರೆಯು ನಮ್ಮನ್ನು
ಕಾಪಾಡತಕ್ಕೆ ದಾರಿಯಾಗಿದೆ. ಮಹಾರಾಜರಿಗೆ ಅದು ಕಡಮೆಯಾದ್ದರಿಂದ ಹೀಗಾ
ಗಿದೆ. ಆಯಾಸವನ್ನು ಪರಿಹಾರಮಾಡಿ ನಿದ್ರೆಯನ್ನು ತರಿಸುವುದಕ್ಕೆ ಅನೇಕ
ಮೂಲಿಕೆಗಳಿವೆ. ಅವುಗಳಿಂದ ಯಾತನೆಯೆಲ್ಲಾ ಪರಿಹರವಾಗಿ ಹಾಗೆಯೇ ಕಂಣು
ಮುಚ್ಚಿ ನಿದ್ರೆ ಬರುವುದು.
ಇಂದುಕಲೆ.- -ಎಲ ಈ ಭೂಮಿಯಲ್ಲಿ ಅಡಗಿಕೊಂಡಿರುವ ಹಿತಕರವಾದ ರಹಸ್ಯಗ
ಳಿರಾ, ಯಾರೂ ಅರಿಯದ ವನೌಷಧಿಗಳಿರಾ, ನನ್ನ ಕಣ್ಣೀರು ಉಕ್ಕಿ ಬರುವಂತೆ
ನೀವೂ ಉಕ್ಕಿ ಬಂದು ಆ ಸತ್ಪುರುಷನ ಕಷ್ಟವನ್ನು ತೀವ್ರವಾಗಿ ನಿವಾರಿಸುವುದಕ್ಕೆ
ನೀವು ಸಹಕಾರಿಗಳಾಗಿರಿ. ಹುಡುಕಿ, ಆತನನ್ನು ಹುಡುಕಿ, ಇಲ್ಲದಿದ್ದರೆ ಪ್ರಾಣಧಾ
ರಣೆಗೆ ಮಾರ್ಗವನ್ನು ತೋರಿಸುವ ಆ ಪ್ರಜ್ಞೆಯು ಇಲ್ಲದೆ ಹುಚ್ಚು ವಿಪರೀತವಾಗಿ
ಪ್ರಾಣ ಎಲ್ಲಿಯಾದರೂ ಹೋದೀತು.
ಪ್ರವೇಶ.ಚಾರ.
ಚಾರ-- ಬುದ್ದಿ, ಒಸಗೆ, ನೀಲಪುರೀದಂಡು ಈ ಕಡೆಗೆ ತೆರಳಿಬರುತಿದೆ.
ಇಂದು ಕಲೆ. ಇದು ಮೊದಲೇ ತಿಳಿದಿತ್ತು. ನಾವೂ ಅವರ ಆಗಮನವನ್ನೇ ನಿರೀಕ್ಷಿ
ಸುತಾ ಸಿದ್ಧಪಡಿಸಿಕೊಂಡಿದ್ದೇವೆ. ಹಾ ! ಅಪ್ಪಾಜಿ, ನಾನು ಹೊಡರಬೇಕಾಗಿರು
ವುದು ನಿಮ್ಮ ಕೆಲಸದಮೇಲೆ, ನಿಮಗೋಸ್ಕರ ನಾನು ಸತತವಾಗಿ ದುಃಖಪಟ್ಟು
ಕಂಬನಿಗಳ ಸುರಿಸುವುದನ್ನು ಕಂಡು ಮಾರದೇಶಾಧೀಶರಾದ ನನ್ನ ಭರ್ತೃವಿಗೆ
ಕನಿಕರ ಹುಟ್ಟಿತು. ರಾಜ್ಯಲಾಭದ ದುರಾಸೆಯಿಂದ ನಮ್ಮ ಸೇನೆಗೆ ಉಮ್ಮಸ್ಸು,
ಉಂಟಾಗಿಲ್ಲ. ನಮ್ಮ ತಂದೆಯಮೇಲಿನ ಅಭಿಮಾನ, ವೃದ್ಧನಾದ ಆತನ ಹಕ್ಕು
ಇವೆರಡೇ ನಮಗೆ ಮುಖ್ಯವಾದವು. ಆತನ ಸಮಾಚಾರ ಜಾಗ್ರತೆಯಾಗಿ ತಿಳಿದು
ಆತನನ್ನು ನಾನು ಕಂಡರೆ ಆದೀತು. (ನಿಷ್ಕ್ರಮಣ.)
................
೫ನೇ ಪ್ರಕರಣ, .
ಪ್ರವೇಶ.-ವಿಷಜೆ, ರಾಹುಕ.
ವಿಷಜೆ-- ನಮ್ಮ ಭಾವಾಜಿಯವರ ಸೇನೆ ಹೊರಟತೆ ?
ರಾಹುಕ.--ಹೊರಟಿತು, ತಾಯಿ.
ವೆಷಜೆ.--ಅವರೂ ಹೊರಟರೊ ?
ರಾಹುಕ.--ಬಹಳ ಕಷ್ಟ್ಯದಿಂದ ಹೊರಟರು. ಆದರೆ ತಮ್ಮ ಅಕ್ಕೈಯ್ಯನವರ ಸರಾ
ಕ್ರಮ ಅವರ ಪರಾಕ್ರದುಕ್ಕಿಂತಲೂ ಮೇಲಾದ್ದು.
-------------------------------------------
೫ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೮೯
ವಿದಜೆ.--ಕುಮಂತರು ನಿಮ್ಮ ಯಜಮಾನರನ್ನು ಅಲ್ಲಿ ಕಂಡು ಮಾತನಾಡಿದರೋ ?
ರಾಹುಕ.--ಇಲ್ಲ ತಾಯಿ.
ವಿಷಜೆ.-- ನಮ್ಮ ಅಕ್ಕೈಯ್ಯ ಕುಮಂತರಿಗೆ ಬರೆದಿರುವ ಕಾಗದದ ಆರ್ಥವೇನು ?
ರಾಹಕ --ನಾನರಿಯೆ ತಾಯಿ.
ವಿಷಜೆ-- ಒಂದಾನೊಂದು ವಿಶೇಷಕಾರ್ಯದಮೇಲೆ ಕುಮಂತರು ಕಳುಹಿಸಲ್ಪಟ್ಟಿದ್ದಾರೆ.
ದುಃಖಸಾರನ ಕಂಣಗಳನ್ನು ಕೀಳಿಸಿದ ತರುವಾಯ, ಅವನನ್ನು ಜೀವಸಹಿತ
ವಾಗಿ ಬಿಟ್ಟು ಬಿದ್ದು ಅಜ್ಞಾನದೊಪ್ಪವಾಗಿದೆ. ಅವ ಹೋದಕಡೆಯಲ್ಲೆಲ್ಲಾ
ಅವನನ್ನು ನೋಡಿದ ಜನರು ಕನಿಕರದಿಂದ ನಮ್ಮ ಮೇಲೆ ತಿರುಗಿಬೀಳುತಿದಾರೆ.
ಅವನ ಕಷ್ಟವನ್ನು ನೋಡಿ ಸಹಿಸಲಾರದೆ ಕುರ್ಮತ್ರರು ಲೋಕವೆಲ್ಲಾ ರಾತ್ರಿ
ಪ್ರಾಯವಾಗಿರುವ ದುಃಖಸಾರನ ಪ್ರಾಣವನ್ನು ತೀರಿಸಿಬಿಟ್ಟು ಬರುವುದಕ್ಕೆ ಹೋ
ಗಿದಾರೆ. ಮೇಲೂ, ನಮ್ಮ ರತಗಳ ಬಲವನ್ನು ನೋಡಿಕೊಂಡು ಬರುವ
ಕೋರಿಕೆಯ ಅವರಿಗೆ ಉಂಟು.
ರಾಹುಕ.-- ಈ ಲೇಖನವನ್ನು ತೆಗೆದುಕೊಂಡು ಅವರು ಇರುವಕಡೆಗೇ ನಾನು
ಹೋಗಲೇಬೇಕು, ತಾಯಿ.
ವಿಷಜೆ.--ನಮ್ಮ ಸೇನೆ ನಾಳೆ ತೆರಳುವುದು. ನಮ್ಮ ಸಂಗಡಲೇ ಇರು. ದಾರಿಯಲ್ಲಿ
ಅಪಾಯ ಹೆಚ್ಚಾಗಿದೆ.
ರಾಹುಕ.-- ಇಲ್ಲ ತಾಯಿ ಆಗುವುದಿಲ್ಲ. ನಮ್ಮೊಡತಿ ಈ ಕಾರ್ಯವನ್ನು ನಾನು ನೆರ
ವೇರಿಸಿಕೊಂಡು ಬೇಗಬರಬೇಕೆಂದು ನನಗೆ ನೇಮಿಸಿದಾರೆ.
ವಿವಚೆ-- ಆಕೆ ಕುಮಂತನಿಗೆ ಕಾಗದವನ್ನು ಯಾಕೆ ಬರೆಯಬೇಕು ? ನೀನು ಬಾಯಿ
ಮಾತನ್ನು ತಂದು ಹೇಳಿದರೆ ಸಾಲದೆ ? ಏನೋ ಇದೆ, ಅದನ್ನು ನಾನು ಬಲ್ಲೆ.
ನೀನು ನಮ್ಮ ಅಭಿಮಾನಕ್ಕೆ ಪಾತ್ರನಾದವನು, ಈ ಕಾಗದದ ಮೊಹರನ್ನು
ಒಡೆದು ತೆಗೆಯುತ್ತೇನೆ.
ರಾಹುಕ.ತಾಯ ಅದಕ್ಕಿಂತಲೂ--
ವಿಷಜೆ.--ನಿಮ್ಮೊಡತಿಗೆ ತನ್ನ ಪತಿಯಲ್ಲಿ ಪ್ರೇಮವಿಲ್ಲವೆಂದು ನಾನು ಬಲ್ಲೆನೈ, ಇದು
ಖಂಡಿತ. ಮೊನ್ನೆ ಆಕೆ ಇಲ್ಲಿಗೆ ಬಂದಿದ್ದಾಗ್ಗೆ ವಿಚಿತ್ರವಾದ ವಿಲಾಸವನ್ನು ಆ
ಗಂಭೀರನಾದ ಕುಮಂತನಿಗೆ ತೋರಿಸುತ್ತಾ, ವಿಶೇಷವಾಗಿ ಮಾತನಾಡಿದಷ್ಟು
ಪ್ರಯೋಜನವನ್ನು ತೋರುವ ತನ್ನ ವೈಯ್ಯಾರದ ನೋಟವನ್ನು ಅವನ ಕಡೆಗೆ
ಬೀರುತ್ತಾ ಇದ್ದಳು. ನೀನೂ ಆಕೆಯ ಕೈತವಕ್ಕೆ ಸೇರಿದವನೇ.
ರಾಹುಕ...ನಾನೆ, ತಾಯಿ ?
ವಿಷಜೆ--ನಾನು ತಿಳಿದು ಮಾತನಾಡುದೇನೈ. ನೀನು ಅವಳ ಕಡೆಯವನೇ. ನಾನು
ಬಲ್ಲೆ. ಆದ್ದರಿಂದ ನಾನು ಒಂದು ಮಾತನ್ನು ಹೇಳುತೇನೆ ; ಅದನ್ನು ಮನ
------------------------------------------
೯೦ ಹೇಮಚಂದ ರಾಜ ವಿಲಾಸ. [೪ನೇ ಅಂಕ.
ಸ್ಸಿಗೆ ತಂದುಕೊ : ನನ್ನ ಪತಿಯಾದರೂ ತೀರಿಹೋದರು. ಕುಮಂತ್ರರೂ
ನಾನೂ ಒಳಗೆ ಮಾತನಾಡಿಕೊಂಡಿದ್ದೇವೆ. ನಿಮ್ಮೊಡತಿಗೆ ಆತನು ಅನುಕೂಲನಾ
ಗಿರುವುದಕ್ಕಿಂತಲೂ ನನಗೆ ಹೆಚ್ಚಾಗಿ ಅನುಕೂಲನಾಗಿದಾನೆ. ಇದರಿಂದ ಉಳಿದ
ದನ್ನು ನೀನು ಊಹಿಸಿಕೊಳ್ಳಬಹುದು. ಆತನನ್ನು ನೀನು ಕಂಡರೆ ದಯಮಾಡಿ
ಇದನ್ನು ಆತನಕೈಗೆ ಕೊಡು, ಈ ಸಂಗತಿಯನ್ನು ನೀನು ಆಕೆಗೆ ಹೇಳಿದಕೂಡಲೆ
ವಿವೇಕವನ್ನು ತಂದುಕೊ ಎಂದು ನೀನು ದಯವಿಟ್ಟು ಆಕೆಗೆ ತಿಳಿಸು. ನಿನಗೆ
ಒಸಗೆಯುಂಟಾಗಲಿ. ಆ ಕುರುಡದ್ರೋಹಿಯ ವಿಷಯವಾಗಿ ನೀನು ಪ್ರಸ್ತಾಪಿ
ಸಿದರೆ, ಅವನ ತಲೆಯನ್ನು ತಂದುಕೊಟ್ಟವನ ಐಶ್ವರವು ಕಟ್ಟಿ ಇಟ್ಟಿದೆ
ಎಂದು ತಿಳಿ.
ರಾಹು.--ನನಗೆ ಅವಸಿಕ್ಕಿದರೆ ಸಾಕು ತಾಯಿ. ನಾನು ಯಾರಕಡೆಯುವನು ಎನ್ನು
ವುದನ್ನು ತೋರಿಸಿಬಿಡುತ್ತೇನೆ.
ವಿಷಜೆ.--.ನಿನಗೆ ಕುಶಲವಾಗಿಲಿ. (ನಿಷ್ಕ್ರಮಣ).
..........
೬ನೇ ಪ್ರಕರಣ-ದೇವರೇವಿನ ಸಮೀಪದ ಹೊಲಗಳು.
ಪ್ರವೇಶ.-ದುಃಖಸಾರ, ಒಬ್ಬ ವಕ್ಕಲಿಗರಹಾಗೆ ವೆಪಾಹಾಕಿಕೊಂಡು
ಶುಕ್ಲಚಂದ್ರ .
ದುಃಖ.--ನಾವು ಆ ಬೆಟ್ಟದಕುಂಭೀ ಮೇಲಕ್ಕೆ ಯಾವಾಗ ಬಂದೇವೈಯ್ಯಾ?
ಶುಕ್ಲ.--ಅದರಮೇಲಕ್ಕೇ ನಾವು ಈಗ ಹತ್ತುತಾ ಇದೇವಲ್ಲವೆ. ನಾವು ಏದುತಾ
ಇದೇವೆ, ನೋಡಿ.
ದುಃಖ.--ನೆಲ ಹಳ್ಳ ದಿಣ್ಣೆ ಇಲ್ಲದೆ ಸಮಸ್ಥಳವಾಗಿರುವಹಾಗೆ ನನಗೆ ತೋರುವುದೈ.
ಶುಕ್ಲ --- ಇಲ್ಲ ಸ್ವಾಮಿ, ಬಹುಕಡಿದಾಗಿದೆ. ಕೇಳಿ, ಸಮುದ್ರ ಮೊರೆಯುವುದು.
ದುಃಖ--ನಿಜವಾಗಿಯೂ ಇಲ್ಲೈ.
ಶುಕ್ರ.--ಹಾಗಾದರೆ ನಿಮ್ಮ ಕಂಣಿನ ಯಾತನೆಯಿಂದ ನಿಮ್ಮ ಇತರ ಇಂದ್ರಿಯಗಳ
ಪೌಟವವೂ ಕಡಿಮೆಯಾಯಿತು.
ದುಃಖ--ಹಾಗಿದ್ದರೂ ಇರಬಹುದೈಯ್ಯ. ಇದು ಹಾಗಿರಲಿ. ನಿನ್ನ ಧ್ವನಿ ಯಾಕೋ
ಬದಲಾಯಿಸಿದಹಾಗೆ ತೋರುತ್ತೆ. ನೀನು ಆಡುವ ಶಬ್ದಗಳು ಸುಷ್ಟುವಾಗಿಯೂ,
ವಿಷಯಯೋಗ್ಯವಾಗಿಯೂ ಇದೆಯೆಲ್ಲಾ.
ಶುಕ್ಲ.--ಮೋಸಹೋಗಬೇಡಿ. ಉಡುಗೆಯಲ್ಲಿ ಹೊರತು ಮತ್ತೆ ಯಾತರಲ್ಲಿಯ
ನಾನು ಬದಲಾಯಿಸಿಲ್ಲ.
----------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೯೧
ದುಃಖ.--ಪೂರ್ವಕ್ಕಿಂತಲೂ ಈಗ ನೀನು ಮಾತನ್ನು ಸರಿಯಾಗಿ ಆಡುತಿಯೆ.
ಶುಕ್ಲ--ಬನ್ನಿ ಸ್ವಾಮಿ. ಇಗೊ ಇದೇ ಸ್ಥಳ. ಇಲ್ಲಿಂದ ಕೆಳಗೆ ನೋಡಿದರೆ ಎಷ್ಟು
ಭಯಂಕರವಾಗಿದೆ, ತಲೆಯೆಷ್ಟೋಂದುಸುತ್ತುತಿದೆ ! ಈ ಕೆಳಗೆ ಮಧ್ಯಮಾರ್ಗದಲ್ಲಿ
ಹಾರಾಡುವ ಗರುಡ, ಗಿಡಗ, ರಣಹದ್ದುಗಳು ಚಿಟ್ಟೆಗಿಂತಲೂ ಸಂಣವಾಗಿ ಕಾಣು
ವವು. ಕೆಳಗೆ ಅರ್ಧಬೆಟ್ಟದಲ್ಲಿ ಬೆರಕೆಸೊಪ್ಪ ಆಯಿದುಕೊಳತಾ ಇದಾನೆ ;
ಅಯ್ಯೋ ಏನು ಅಸವಲ್ಲದವೃತ್ತಿಯೋ ಅವನದು ! ಇಲ್ಲಿಂದ ಅವನನ್ನು ನೋಡಿ
ದರೆ ಅವನ ಶರೀರವೆಲ್ಲಾ ಸೇರಿ ಅವನ ತಲೇಗಾತ್ರ ಕಾಣಿಸುತ್ತಿದೆ. ಸಮುದ್ರದ
ತಡಿಯಲ್ಲಿ ತಿರುಗಾಡುತ್ತಿರುವ ಮಾನ ಹಿಡಿತಕ್ಕೆ ಬೆಸ್ತರು ಇಲಿಯಹಾಗೆ
ಕಾಣಿಸುತಾರೆ ಆ ದೂರದಲ್ಲಿ ಲಂಗರುಹಾಕಿ ಬಿಟ್ಟಿರುವ ಹಡಗು ಸಂಣ ಕೈದೋ
ಣಿಯಹಾಗೆ ಕಾಣುವುದು. ದೋಣಿದು ಸೋರೆಬುರುಡೇಹಾಗೆ ತೋರುತಾ
ಕಂಣಿಗೆಸಹಿತ ಕಾಣಿಸದೇ ಇದೆ. ವಿಶೇಷವಾಗಿ ತಡಿಯಲ್ಲಿ ಬಿದ್ದಿರುವ ಕಲ್ಲುಗಳ
ಮೇಲೆ ತೀಡಿ ಹರಿದು ಮೇಲಕ್ಕೆ ಏರುವ ತರಂಗಗಳ ಆರ್ಭಟವು ಇಲ್ಲಿಗೆ ಕೇಳು
ವುದಿಲ್ಲ. ನಾನು ಇನ್ನು ಆಕಡೇ ನೋಡಲಾರೆ, ತಲೆಸುತ್ತಿ ಕಂಣುಗತ್ತಲೆ
ಇಟ್ಟುಕೊಂಡು ಬಂದು ತಲೆಕೆಳಗಾಗಿ ಬಿದ್ದೆನಲ್ಲಾ ಎಂದು ಭಯವಾಗುತಿದೆ.
ದುಃಖ. ನೀನು ನಿಂತಿರುವ ಕಡೆ ನನ್ನನ್ನು ನಿಲ್ಲಿಸೈ.
ಶುಕೃ ಹಾಗಾದರೆ ನಿಮ್ಮ ಕೈತನ್ನಿ. ಈಗ ತುದಿಗೂ ನಿಮಗೂ ಒಂದು ಹೆಜ್ಜೆ ಬಿಟ್ಟಿದೆ.
ಪ್ರಪಂಚವನ್ನೆಲ್ಲಾ ನನಗೆ ಕೊಟ್ಟರೂ ನಾನು ಇಲ್ಲಿಂದ ಕೆಳಕ್ಕೆ ಧುಮ್ಮಿಕ್ಕಲಾರೆ.
ದುಃಖ - - ಈಗ ನನ್ನ ಕೈಯನ್ನು ಬಿಟ್ಟುಬಿಡು. ಇಗೊಳ್ಳಿ ಇನ್ನೊಂದು ಜಾಳಿಗೆ
ಇದೆ ತೆಗೆದುಕೊ, ಬಡವನಿಗೆ ವಿಶೇಷವಾದ ಒಂದು ಒಡವೆ ಅದರಲ್ಲಿದೆ. ದೇವರು
ಸಮಸ್ತ ಸಂಪತ್ತನ್ನೂ ನಿನಗೆ ಕೊಡಲಿ, ನೀನು ದೂರಾ ಹೊರಟುಹೋಗು.
ನೀನು ಹೋಗುವ ಶಬ್ದ ನನಗೆ ಕೇಳಿಸಲಿ.
ಶುಕ - ದೇವರು ತಮ್ಮನ್ನು ಕಾಪಾಡಲಿ, ಬುದ್ದಿ.
ದುಃಖ.-ಆಗ ಬಹುದೈ.
ಶುಕ್ಷ--ಈ ಲೋಕ ವ್ಯವಹಾರದಲ್ಲಿ ಈತನಿಗೆ ಉಂಟಾಗಿರತಕ್ಕ ಆಶಾಭಂಗವನ್ನು
ಕುರಿತು ನಾನು ಹುಡುಗಾಟವಾಡುತ್ತಿರುವುದು ಅದರಿಂದ ಉಂಟಾಗಿರುವ ವ್ಯಥೆ
ಯನ್ನು ಹೋಗಲಾಡಿಸುವುದಕ್ಕಾಗಿಯೇ ಹೊರತು ಬೇರೇ ಇಲ್ಲ.
ದುಃಖ -(ಬಗ್ಗಿ ನಮಸ್ಕಾರಮಾಡುತಾ) ಓ ಅಷ್ಟದಿಕ್ಪಾಲಕರಾ, ಭೂಮ್ಯಂತರಿಕ್ಷ
ಗಳಿರಾ, ವನದೇವತೆಯೆ, ನೀವು ಸಾಕ್ಷಿಯಾಗಿರಿ! ಈ ಪ್ರಪಂಚ ಇನ್ನು ನನಗೆ
ಸಾಕು ; ದೇವರೆ, ನಿನ್ನ ಸಾಕ್ಷಿಯಾಗಿ ನನ್ನ ಕಷ್ಟ್ಯವನ್ನೆಲ್ಲಾ ಪರಿಹರಿಸಿಕೊಳ್ಳು
ತೇನೆ. ಇದನ್ನು ನಾನು ಇನ್ನೂ ಸಹಿಸುವಮಟ್ಟಿಗೆ ನನಗೆ ಶಕ್ತಿ ಇದ್ದು, ಅನಿವಾ
ರ್ಯವಾದ ನಿನ್ನ ಸಂಕಲ್ಪಕ್ಕೆ ವಿರೋಧವಾಗಿ ನಡೆಯದೆ ಇದ್ದರೆ, ನನ್ನ ದುಷ್ಟಸ್ವಭಾ
--------------------------------------------
೯೨ ಹೇಮಚಂದ್ರರಾಜ ವಿಲಾಸ, [8ನೇ ಅಂಕ.
ವವು ನಾಶವಾಗಬೇಕು. ಶುಕ್ಲಚಂದ್ರ ಜೀವಂತನಾಗಿದ್ದರೆ, ದೇವರೆ ಅವನನ್ನು
ಕಾಪಾಡು, ಅಯ್ಯ ಮಿತ್ರ, ನೀನು ಶ್ರೇಯೋವಂತನಾಗಿರೈ. (ಮುಂದಕ್ಕೆ ಬೀಳು
ವನು).
ಶುಕ್ಲ-- ಸ್ವಾಮಿ, ಕ್ಷೇಮವಾಗಿರಿ. (ಜನಾಂತಿಕ) ಪ್ರಾಣವೇನೋ ತಾನಾಗಿ ಹೋದರೆ
ಸಾಕೆಂದು ಸಿದ್ದವಾಗಿದೆ; ಆದರೆ ಮನಸ್ಸಿನ ಊಹೆ ಮಾತ್ರವೇ ಪ್ರಾಣವನ್ನು ಹ್ಯಾಗೆ
ಹೋಗಲಾಡಿಸೀತೋ ನಾನರಿಯೆ, ತಾನು ಎಲ್ಲಿದೇನೆಂದು ಆತ ತಿಳಿದಾನೆಯೋ ಆ
ಸ್ಥಳದಲ್ಲಿ ಆತ ಇದ್ದದ್ದೇ ನಿಶ್ಚಯವಾಗಿದ್ದರೆ ಅಂಥಾ ಪ್ರಜ್ಞೆಯೆಲ್ಲಾ ಇದುವರಿಗೆ
ಹಾರಿಹೋಗುತಿತ್ತು. ಸತ್ತನೊ, ಇದಾನೆಯೋ ? ಹೋ, ಸ್ವಾಮಿ, ಎಲಪ್ಪಾ,
ಅಯ್ಯ ಮಿತ್ರ, ಮಾತನಾಡಿ ! ಹೀಗೆಯೇ ಹೋದರೂ ಹೋಗಬಹುದು, ಇಲ್ಲ,
ತೆಪ್ಪತ್ತುಗೊಳ್ಳುತಿದಾನೆ. ನೀವು ಯಾರು ಸ್ವಾಮಿ, ನೀವೇನು ?
ದುಃಖ –ಛಿ, ಹೋಗು ನಾನು ಸಾಯಬೇಕು.
ಶುಕ್ಲ--ಅಜ್ಜೀತಲೆ, ಕೋಳೀಸರಿ, ದೂಳು, ಇವುಗಳಲ್ಲದೆ, ನೀನು ಇನ್ನೇನಾದಾಗ್ಯೂ
ಸರಿಯೆ ಇಷ್ಟು ಎತ್ತರವಾದ ಸ್ಥಳದಿಂದ ಬಿದ್ದಿದ್ದರೆ, ಚೂರುಚೂರಾಗಿ ಹೋಗುತಿ
ದ್ದೆಯೆಲ್ಲಾ, ಆದರೂ ನಿನಗೆ ಉಸಿರು ಆಡುತಿದೆ ; ಗಟ್ಟಿಯಾಗಿದ್ದೀಯೆ ; ರಕ್ತ
ವೇನೂ ಸುರಿದಿಲ್ಲ; ಮಾತನಾಡುತೀಯೆ ; ಸ್ವಸ್ಥವಾಗಿದ್ದೀಯೆ. ಹತ್ತು ಗಣೇ
ಮರಗಳನ್ನು ಒಂದರ ತುದಿಗೆ ಬಂದು ಕಟ್ಟಿ ನಿಲ್ಲಿಸಿದರೂ, ನೀನು ಬಿದ್ದ ಎತ್ತರ
ಕ್ಕಿಂತಲೂ ಕಮ್ಮಿಯಾಗುವುದು. ನಿನ್ನ ಪ್ರಾಣವು ಮಹತ್ತಾಗಿದೆ. ಮಾತನಾಡೈ.
ದುಃಖ.--ನಾನು ನಿಜವಾಗಿಯೂ ಬಿದ್ದೆನೋ, ಬೀಳಲೇ ಇಲ್ಲವೊ ?
ಶುಕ್ಲ – ಅಗೋ ಆ ಭಯಂಕರವಾಗಿ ಕಾಣುವ ಬಿಳೀ ಕೋಡುಗಲ್ಲಿನ ಕುಂಭೀಮೇಲಿ
ನಿಂದ ಈ ಪಾತಾಳಕ್ಕೆ ಬಿದ್ದೆಯಲ್ಲೈ. ಕತ್ತೆತ್ತಿನೋಡು. ಸಿಳ್ಳನೆ ಕೂಗುತಾ
ಆ ಎತ್ತರದಮೇಲೆ ಹಾರಾಡುತ್ತಿರುವ ಗಿಣಿಗಳ ಧ್ವನಿಯು ಇಲ್ಲಿಗೆ ಕೇಳುವುದಿಲ್ಲ.
ಆ ಪಕ್ಷಿ ನಮ್ಮ ಕಂಣಿಗೆ ಕಾಣುವುದು ಕೂಡ ಇಲ್ಲವಲ್ಲಾ. ಸ್ವಲ್ಪ ಕತ್ತೆತ್ತಿ ನೋಡು.
ದುಃಖ.--ಅಯ್ಯೋ, ನೋಡುವುದಕ್ಕೆ ನನಗೆ ಕಂಣೇ ಇಲ್ಲ. ದುಃಖಕ್ಕೆ ಪ್ರಾಣ ಕಳೆದು
ಕೊಳ್ಳುವ ಪ್ರಯೋಜನ ಕೂಡ ಬೇಡವೆ ? ದುಃಖವು ಮೃತ್ಯುವಿಗೂ ಮೋಸ
ಮಾಡಿ ಅವನ ಅಹಂಕಾರ ಮೋಟನವನ್ನು ಮಾಡುತಿದೆಯೆಲ್ಲಾ ! ಇದು ಸ್ವಲ್ಪ
ಆಪ್ಯಾಯನವಾದ್ದೇ.
ಶುಕ್ಲ -ನಿನ್ನ ಕೈತಾ, ಮೇಲಕ್ಕೆ, ಹಾಗೆ ಹ್ಯಾಗಿದೆ ? ಕಾಲು ಹ್ಯಾಗಿದೆ, ನಿಂತಗೊ.
ದುಃಖ.--ಚೆನ್ನಾಗಿ, ಚೆನ್ನಾಗಿ, ಇದೆಲ್ಲಕ್ಕಿಂತಲೂ ಇನ್ನೊಂದು ಆಶ್ಚರ್ಯವಿದೆ. ಕುಂಭೀ
ಮೇಲಕ್ಕೆ ನಿನ್ನನ್ನು ಕರೆತಂದು ಬಿಟ್ಟು ಹೊರಟುಹೋಯಿತಲ್ಲಾ ಅದೇನು ?
ದುಃಖ-ಯಾರೋ ಭಾಗ್ಯಹೀನನಾದ ಒಬ್ಬ ಬಡ ಬಿಕ್ಷುಕ.
---------------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೯೩
ಶುಕ್ಲ.--.ನಾನು ಇಲ್ಲಿಗೆ ಕೆಳಗೆ ನಿಂತು ನೋಡಿದೆ. ಅವನ ಕಂಣಗಳೂ ಎರಡೂ
ಎರಡು ಸಂಚುಗಳೂ ಎನ್ನು ವಹಾಗೆ ಕಾಣಿಸಿದವು. ಅವನಿಗೆ ಸಾವಿರಮೂಗು
ಇತ್ತು. ಡೊಂಕು ಡೊಂಕಾದ ಕೊಂಬುಗಳಿದ್ದವು. ಅದು ಒಂದು ದೈವ.
ಆಗ್ಗರಿಂದ ಜೀಯ ಕಸ್ಮವನ್ನೆಲ್ಲಾ ಸಾಖ್ಯವಾಗಿ ಪರಿಣಾಮಗೊಳಿಸುವ ಆ ದೇವ
ರೇ ತಮ್ಮನ್ನು ಕಾಪಾಡಿದ.
ದಃಖ .ಈಗ ನನಗೆ ಜ್ಞಾಪಕಕ್ಕೆ ಬರುತ್ತಿದೆ. ಇನ್ನು ಮೇಲೆ ಆ ಕಕ್ಕೆ ಅಸಹ್ಯ
ಹುಟ್ಟಿ, " ಸಾಕು, ಇನ್ನು ನಾನು ಇರಲೊಲ್ಲೆ ” ಎಂದುಕೊಂಡು ತಾನಾಗಿಯೇ
ನಾಶವಾಗಿ ಹೋಗುವತನಕ ಕಪ್ಪವನ್ನು ನಾನು ಸಹಿಸಿಕೊಳ್ಳುತ್ತೇನೆ, ನೀನು
ಹೇಳಿದ ವ್ಯಕ್ತಿ ಮನುಷ್ಯನೆಂದು ನಾನು ತಿಳಿದಿದ್ದೆನಪ್ಪಾ, ಆಗಾಗ್ಯೆ “ದೈಯ್ಯ,
ದೈಯ್ಯ” ಎನ್ನುತ್ತಲೇ ಇರುತ್ತಿತ್ತು. ಆ ಸ್ಥಳಕ್ಕೆ ನನ್ನನ್ನು ಅದೇ ಕರೆದು
ಕೊಂಡು ಬಂದದ್ದು.
ಶುಕ್ಲ--ಈ ಕಾಷ್ಟವ್ಯಸನವನ್ನೆಲ್ಲಾ ಬಿಟ್ಟುಬಿಡಿ. ಮನಸ್ಸನ್ನು ನೀರಾಳವಾಗಿ
ಇಟ್ಟುಕೊಂಡಿರಿ, ಹೊ, ಇದು ಯಾರು ಇಲ್ಲಿ ಬಂದವರು ?
ಪ್ರವೇಶ-ಬಗೆಬಗೇ ಹೂಗಳನ್ನು ಮೈಗೆಲ್ಲಾ ಕಟ್ಟಿಕೊಂಡು ಧೊರೆ
ಬರುವನು.
ಶುಕ್ಲ--ಬುದ್ದಿ ಸರಿಯಾಗಿದ್ದರೆ ಮನುಷ್ಯ ಎಂದಿಗೂ ಹೀಗಾಗುತ್ತಿರಲಿಲ್ಲ.
ಧೊರೆ. ನಾನು ಜರಬುಹಾಕಿಸಿದ್ದಕ್ಕೋಸ್ಕರ ನನ್ನ ಗೋಜಿಗೆ ಅವರು ಬರುವುದಕ್ಕಿಲ್ಲ ;
ನಾನು ಧೊರೆ, ಮತ್ತೆ ಯಾರೂ ಅಲ್ಲ.
ಶುಕ್ರ-ಅಯ್ಯೋ, ಹೃದಯಶೂಲವಾದ ನೋಟವಾಗಿದೆಯಲ್ಲಾ!
ಧೊರೆ ಈ ಭಾಗದಲ್ಲಿ ಕೃತಕಕ್ಕಿಂತಲೂ ಸ್ವಭಾವವೇ ಮೇಲಾದ್ದು. ಇಗೋ
ಒಂದುತಿಂಗಳ ಸಂಬಳ ಮುಂಗಡವಾಗಿ ತೆಗೆದುಕೊಳ್ಳಿ, ಅವನನ್ನು ನೋಡು,
ಕಾಗೇ ಹೊಡೆಯುವ ಭೂತ ಬಿಲ್ಲನ್ನು ಹಿಡಿದಿರುತ್ತಲ್ಲಾ ಹಾಗೆ ಹಿಡಿದಿದ್ದಾನೆ. ನನಗೆ
ತಾ ಬಂದು ಹಣಮಟ್ಟದ ದೊಣ್ಣೆಯನ್ನು ; ಅಕೊ ನೋಡು, ನೋಡು, ಇಲಿ,
ಇಲಿ ! ತಾಳಿ ತಾಳಿ ! ಮೂರು ಮೂರು ದಿನದರೊಟ್ಟ ಬುತ್ತಿ ಸಾಕು. ಕಟ್ಟಿದೆ
ಕಾಚಾ, ಯಾರು ಬರುತಾರೆ ಬರಲಿ ; ಭೀಮನಾದರೂಸರಿ, ಗುರಾಣಿ ತನ್ನಿ.
ಭಲಾ, ಪರಾಹಾರಿತು, .ಚೆನ್ನಾಗಿಡು ಬಕಾಯಿಸಿತು. ಗುರಿ ಸರಿಯಾಗಿ, ಹೋ !
ಪರೋಲ್ ಹೇಳಿ ಮುಂದೆ ಹೋಗಿ.
ಶುಕ್ಲ--ಮಹಾದೇವ !
ಧೊರೆ. ಹಾಗಾದರೆ ನಡೆಯಿರಿ.
ದುಃಖ- -ಆ ವಿಜಾತೀಯವಾದ ಧ್ವನಿಯನ್ನು ನಾನು ಬಲ್ಲೆ.
-----------------------------------------
೯೪ ಹೇಮಚಂದ್ರರಾಜ ವಿಲಾಸ, [೪ಣೇ ಅಂಕ
ಧೊರೆ.-ಹೊ ! ನಾಗವೇಣಿಗೆ ಬಿಳೀಗ ! ನನ್ನನ್ನು ಬೇಕಾದಹಾಗೆ ಕೊಂಡಾಡಿದರು.
ನನ್ನ ಗಡ್ಡದಲ್ಲಿ ಕರೀಕೂದಲು ಹುಟ್ಟುವುದಕ್ಕೆ ಮುಂಚೆ ಬಿಳಿಕೂದಲು ಹುಟ್ಟಿ
ತೆಂದು ಹೇಳಿದರು. ನಾನು ಹವುದೆಂದರೆ ಹವುದೆಂದರು, ಅಲ್ಲವೆಂದರೆ ಅಲ್ಲವೆಂದರು.
ಹೀಗೆ ಹವುದು ಅಲ್ಲವೆನ್ನ ತಕ್ಕವರೇನೂ ಸಾಮ್ಯ ದೇವರುಗಳಲ್ಲ. ಮಳೆಬಂದು
ತೊಪ್ಪನೆ ತೊಳೆಯಿತು, ಗಾಳಿಬಂದ ಹಲ್ಲಹರೀಹುಯ್ಯುವಹಾಗೆ ಮಾಡಿತು,
ಗುಡುಗು ಶಬ್ದ ಮಾಡುತ್ತಿರುವುದನ್ನು ನನ್ನ ಮಾತಿನಪ್ರಕಾರ ನಿಲ್ಲಿಸಲಿಲ್ಲ: ನಿಲ್ಲಿಸ
ಲಿಲ್ಲ. ಆಗ ಇವರ ಯೋಗ್ಯತೆಯೆಲ್ಲಾ ತಿಳಿಯಿತು. ಬಿಡು, ಅವರು ಸರಿಯಾದ
ಮಾತಿನವರಲ್ಲ. ನನ್ನನ್ನು ಮೀರಿಸಿದ್ದು ಮತ್ತೆ ಯಾವುದೂ ಇಲ್ಲವೆಂದು ಹೇಳಿದರು.
ಇದು ಸುಳ್ಳು, ಚಳಿಗೆ ನಾನು ಎದುರಲ್ಲ ; ಅದು ನನ್ನನ್ನು ಮಾರಿಸಿದ್ದು.
ದುಃಖ.--ಆ ಧ್ವನಿಯ ರೀತಿಯನ್ನು ನಾನು ಬಲ್ಲೆ. ಧೋರೆಯವೆ ?
ಧೊರೆ-ಆಹಾ ! ಹವುದೈ, ಹೆಜ್ಜೆಹೆಜ್ಜೆಗೂ ಧೊರೆಯೇ, ನಾನು ದೃಷ್ಟಿಸಿ ನೋಡಿ
ದರೆ ಪ್ರಜೆ ಹ್ಯಾಗೆ ನಡುಗುತಿದೆ ನೋಡು, ಅವನ ಅಪರಾಧವನ್ನು ಕ್ಷಮಿಸಿ
ಪ್ರಾಣಸಹಿತ ಬಿಟ್ಟದೇನೆ. ನಿನ್ನ ವ್ಯಾಜ್ಯವೇ ? ವ್ಯಭಿಚಾರವೆ ? ಹಾಗಾದರೆ
ನಿನಗೆ ಮರಣದಂಡನೆ ಅಗತ್ಯವಿಲ್ಲ. ಏನು, ವ್ಯಭಿಚಾರಕ್ಕಾಗಿ ಮರಣ ದಂಡ
ನೆಯೆ ? ಕೂಡದು. ನನ್ನ ಹೆಮ್ಮಕ್ಕಳಿಗಿಂತಲೂ ದುಃಖಸಾರನ ವೇಶ್ಯಾಪುತ್ರ
ನಿಗೆ ಪಿತೃಭಕ್ತಿ ವಿಶೇಷವಾಗಿತ್ತು, ಕಳ್ಳ ನಗು ನಗುವ ಆಕೆಯನ್ನು ನೋಡು,
ಇಲ್ಲದ ಗುಣವನ್ನು ನಟಿಸುತ್ತಾಳೆ, ಸಂತೋಷ ಸಮಾಚಾರವನ್ನು ಎತ್ತಿದಕೂಡಲೆ
ತಲೆಯನ್ನು ಅಲ್ಲಾಡಿಸುತ್ತಾಳೆ. ಈ ಹೆಂಗಸರೂ ಸೊಂಟದಿಂದ ಮೇಲಕ್ಕೆ ದೇವ
ತೆಗಳು, ಅಲ್ಲಿಂದ ಕೆಳಕ್ಕೆ ಪಿಶಾಚಗಳು ; ಅಲ್ಲಿಂದ ಮೇಲಕ್ಕೆ ಸ್ವರ್ಗ, ಅಲ್ಲಿಂದ
ಕೆಳಕ್ಕೆ ನರಕ. ಛಿ, ಛಿ, ಛಿ, ಥು, ಥು, ಥು ! ಅಯ್ಯ ವೈದ್ಯಶ್ರೇಷ್ಮನೆ, ಒಂದು
ಪಾವುಪುಣಗ ಕೊಡೈ, ನನ್ನ ಊಹಾಶಕ್ತಿಗೆ ವಾಸನೆಯನ್ನು ಕಟ್ಟಬೇಕು. ಇಗೊ
ಅದಕ್ಕಾಗಿ ಹಣವನ್ನು ತೆಗೆದುಕೊ.
ದುಃಖ-- ಮಹಾಸ್ವಾಮಿ ಆಪೌದ ಅಪ್ಪಣೆಯಾಗಲಿ, ಅದನ್ನು ತಲೆಯಮೇಲೆ ಇರಿಸಿ
ಕೊಳ್ಳುತ್ತೇನೆ.
ಧೊರೆ.--ತಾಳು, ಅದಕ್ಕೂ ಮೊದಲು ಒರಿಸುತ್ತೇನೆ ; ಘಾತುಕತನದ ವಾಸನೆ
ಬರುತ್ತಿದೆ.
ದುಃಖ.-ಅಯ್ಯೋ ಹಾಳ ಪ್ರಕೃತಿಯೇ ! ಹೀಗೆಯೇ ಈ ಪ್ರಪಂಚವೆಲ್ಲಾ ನತಿಸಿ ಶೂನ್ಯ
ವಾಗಿ ಹೋಗುವುದು. ನನ್ನನ್ನು ಬಲ್ಲಿರಾ ?
ಧೊರೆ. ನಿನ್ನ ಕಂಣು ನನಗೆ ಚೆನ್ನಾಗಿ ಜ್ಞಾಪಕವಿದೆ. ಓರೆನೋಟಾನೋಡುತಯ್ಯಾ ?
ನಿನ್ನ ಕೈಲಾದ್ದನ್ನೆಲ್ಲಾ ಮಾಡು, ಎಲ ಕಂಣಿಲ್ಲದ ಮನ್ಮಥನೆ, ನಿನ್ನ ಮೇಲೆ ಬೇರೇ
-------------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೯೫
ನನಗೆ ಪ್ರೇಮಹುಟ್ಟುವುದಿಲ್ಲ. ಶೌರ ಪ್ರದರ್ಶಕವಾದ ಈ ಲೇಖನವನ್ನು ಓದು ;
ಅದರ ಅಕ್ಷರವನ್ನು ನೋಡು.
ದುಃಖ-- ಅಷ್ಟು ಅಕ್ಷರಗಳೂ ಅಪ್ಯೂ ಅಪ್ಪು ಸೂರ್ಯಗಳಾಗಿದ್ದಾಗ್ಯೂ ಅವುಗಳಲ್ಲಿ
ಒಂದಕ್ಷರವನ್ನೂ ನೋಡಲಾರೆ.
ಶುಕ್ಲ.-- ಇದನ್ನು ಯಾರಾದರೂ ನನಗೆ ಹೇಳಿದ್ದರೆ ನಾನು ನಂಬುತ್ತಿರಲಿಲ್ಲ. ಈಗ
ಪ್ರತ್ಯಕ್ಷವಾಗಿದೆ. ಅದನ್ನು ನೋಡಿ ನನ್ನ ಎದೆ ಒಡೆದು ಹೋಗುತ್ತಿದೆ ಯೆಲ್ಲಾ !
ಧೊರೆ.-- ಓದು.
ದುಃಖ.-- ಏನು, ಲೊಟ್ಟೆ ಬಿದ್ದು ಹೋಗಿರುವ ಕಂಣಿನಿಂದ ಓದಲೆ ?
ಧೊರೆ.--ಹೊ, ಹೋ, ನೀನೂ ನನ್ನ ಜೊತೆಗೇ ಬಂದೇಯಾ ? ನಿನ್ನ ಬುದ್ದಿಗೂ
ಕಂಣಿಲ್ಲವೆ, ನಿನ್ನ ಜಾಳಿಗೆಯಲ್ಲಿ ಹಣವಿಲ್ಲವೆ ? ನಿನ್ನ ಕಂಕಣಿಗೆ ಕಬ್ಬಿಣದ
ಕಟ್ಟುಹಾಕಿದೆ, ನಿನ್ನ ಜಾಳಿಗೆಗೆ ಜಾಡನತಂತು ಕಟ್ಟಿದೆ. ಎಲ್ಲವನ್ನೂ ನೋಡು
ತ್ತಲೇ ಇದ್ದೀಯೆ.
ದುಃಖ.--ಮನಮುಟ್ಟಿ ನೋಡುತೇನೆ.
ಧೊರೆ.-ಏನು, ನಿನಗೆ ಹುಚ್ಚೆ ? ಕಂಗಿಲ್ಲದಿದ್ದರೂ, ಈ ಪ್ರಪಂಚ ನಡೆಯುತ್ತಿರುವು
ದನ್ನು ನೋಡಬಹುದು. ನಿನ್ನ ಕಿವಿಯಿಂದ ನೋಡು. ಅಗೋ ಆ ನ್ಯಾಯಾಧಿ
ಕಾರಿಯು ಆ ಬಡಕಳ್ಳನನ್ನು ಹ್ಯಾಗೆ ಬಯ್ಯುತ್ತಿದಾನೆ ನೋಡು, ನಿನ್ನ ಕಿವಿ
ಯಾರಾ ಕೇಳು. ಇವನ ಸ್ಥಳದಲ್ಲಿ ಅವನನ್ನೂ ಅವನ ಸ್ಥಳದಲ್ಲಿ ಇವನನ್ನೂ
ಇರಿಸಿಕೋ. ಇಬ್ಬರನ್ನೂ ಕೈಲಿಹಾಕಿಕೊಂಡು ಕುಲುಕಿ ಸರಿಬೆಸಮಾಡಿ ನ್ಯಾಯಾಧಿ
ಕಾರಿ ಯಾರು ಕಳ್ಳಯಾರು ನೋಡುತೀಯಾ ? ಒಕ್ಕಲಿಗನ ನಾಯಿ ದಾಸೈಯ್ಯ
ನನ್ನು ಕಂಡರೆ ಹ್ಯಾಗೆ ಬೊಗಳುವುದು ನೋಡಿದ್ದೀಯಾ ?
ದುಃಖ, ನೋಡಿದೇನೆ ಮಹಾಸ್ವಾಮಿ.
ಧೊರೆ.ಆ ಶುಕವನ್ನು ಕಂಡು ಆ ಪಾಪಿ ಓಡಿಹೋಗುವುದನ್ನು ? ಅಗೋ ಅಲ್ಲಿ ಅಧಿ
ಕಾರದ ಪ್ರತಿರೂಪವನ್ನು ನೀನು ನೋಡಬಹುದು. ನಾಯಿಗಾದರೂ ಸರಿಯೆ
ಅಧಿಕಾರವಿದ್ದರೆ ಎಲ್ಲರೂ ಅಡಿಯಾಳಾಗಿರುವರು. ಎಲ ಕಂದಾಚಾರದವನೆ,
ನೀಚನೆ, ಘಾತುಕತನದಿಂದ ರಕ್ತವಾಗಿರುವ ನಿನ್ನ ಕೈಯನ್ನು ಅತ್ತತೆಗೆ, ಯಾಕೆ
ಆ ಬಡಹೆಂಗಸನ್ನು ಚಾಟಿಯಿಂದ ಹೊಡೆಯುತೀಯೆ ? ನೀನು ಮಾಡುವ ದುಷ್ಕಾ
ರ್ಯವನ್ನು ಸ್ವಲ್ಪ ಕಂದೆರೆದು ನೋಡು. ಆ ಕೆಲಸಕ್ಕೆ ಅವಳನ್ನು ಎಳೆದುಕೊಳ್ಳ
ಬೇಕೆಂದು ಯಾಕೆ ಹಿಂಸೆವಡುತಾ ಚಾಟಿಯಿಂದ ಪ್ರಹರಿಸುತಿದೀಯ ? ಬಡ್ಡಿ
ಸಾಹುಕಾರನು ಬಡಮೋಸಗಾರನನ್ನು ನೇಣುಹಾಕುತ್ತಾನೆ. ಚಿಂದಿಬಟ್ಟೆಯನ್ನು
ಹೊದ್ದರೆ ಹರಕುಗಳಿಂದ ಚಿಕ್ಕ ಚಿಕ್ಕ ದುರ್ಗುಣಗಳೂ ಕಾಣುವವು. ದಿವ್ಯದು
ಕೂಲಗಳು ಸಕಲವನ್ನೂ ಮುಚ್ಚುವವು. ಪಾಪಕ್ಕೆ ಚಿನ್ನದ ಮುಲಾಮು
-----------------------------------------
೯೬ ಹೇಮಚಂದ್ರರಾಜ ವಿಲಾಸ. [೫ನೇ ಅಂಕ
ಮಾಡಿದರೆ, ನ್ಯಾಯಾಧಿಕಾರದ ಮನುಚಾದ ಈಟಯ ಸಹಿತ ಅದರಮುಂದೆ
ಹಾಯದೆ ಮುರಿದು ಬೀಳುವುದು. ಅದೇ ಪಾಪಕ್ಕೆ ಚಿಂದೀ ಹೊದ್ದಿಸಿಬಿಡು,
ಮೋಟನ ಕೈ ಹುಲ್ಲು ಕಡ್ಡಿಯಾದರೂ ಅದನ್ನು ಭೇದಿಸಿಕೊಂಡು ಹೋಗುವುದು.
ಯಾರೂ ಅಪರಾಧಿಗಳಲ್ಲ, ಯಾರೂ ಅಲ್ಲೈ ಅಲ್ಲ. ನಾನು ಅವರಿಗೆ ಉಪೋದ್ಜಲ
ಮಾಡಿಕೊಡುತ್ತೇನೆ. ಅಯ್ಯ ಮಿತ್ರ, ಅಪರಾಧಿಗಳ ಬಾಯಿ ಮುಚ್ಚಿಸುವ ಅಧಿ
ಕಾರವನ್ನು ನನ್ನಿಂದ ತೆಗೆದುಬಿಡು. ಕಣ್ಣಗುಡ್ಡೆಯ ಆಕಾರವಾಗಿಮಾಡಿದ
ಗಾಜನ್ನಾ ದರೂ ಇಟ್ಟುಕೊಂಡು, ಕಾಣಿಸದೇ ಇರತಕ್ಕದ್ದೂ ಕಾಣಿಸುತ್ತಿದೆ
ಎಂದು ಕುಮಂತ್ರಿಗಳ ಹಾಗೆ ನಸು. ಇಗೋ, ಇಗೋ, ಕಚ್ಚಿತು ; ನನ್ನ ತೆಗೆ
ಯಿರಿ, ಬಲವಾಯಿತು, ಎಳಯಿರಿ, ಹೊ, ಹಾಗೆ !
ಶುಕ್ಲ.--.ವಿವೇಕ ಅವಿವೇಕ, ಜಾಣತನ ಹುಚ್ಚುತನ, ಮಿಳಿತವಾಗಿವೆ !
ಧೊರೆ.-- ನನ್ನ ಅದೃಷ್ಟಕ್ಕಾಗಿ ನಾನು ಅತ್ತರೆ, ನನ್ನ ಕಣ್ಣುಗಳನ್ನು ಕಿತ್ತುಹಾಕು,
ನಿನ್ನನ್ನು ನಾನು ಚೆನ್ನಾಗಿ ಬಲ್ಲೆ. ನಿನ್ನ ಹೆಸರು ದುಃಖಸಾರ. ನೀನು
ತಾಳ್ಮೆಯನ್ನು ತಂದುಕೊ. ನಾವು ಇಲ್ಲಿಗೆ ಅಳುತಲೇ ಬಂದೆವು. ನಾವು ಈ
ಪ್ರಪಂಚದಲ್ಲಿ ಮೊದಲು ಜನನವಾಗು ವಾಗ ಅಳುವೆವು ಎನ್ನುವುದನ್ನು ನೀನು
ಬಲ್ಲೆ, ನಿನಗೆ ಉಪದೇಶಮಾಡುತೇನೆ, ನೋಡು.
ದುಃಖ--ಅಯ್ಯೋ ದುರ್ದಿನವೆ !
ಧೊರೆ ನಾವು ಜನನವಾದಾಗ, ಇಂಥಾ ಅವಿವೇಕಿಗಳ ನಾಟ್ಯ ರಂಗಕ್ಕೆ ನಾವೂ ಬಂದೆ
ವಲ್ಲಾ ಎಂದು ಅಳುವೆವು. ಇದು ಸರಿ, ಈ ಕಿರೀಟ ಸರಿ. ಅರಳದಲ್ಲಿ ಮಾಡಿದ
ಲಾಳವನ್ನು ಕುದುರೆಗಳಿಗೆ ಕಟ್ಟಿಸುವುದು ಒಂದು ಸಮರೋಪಾಯ. ಇದನ್ನು
ನಾನು ನಡೆಯಿಸಿಬಿಡುತ್ತೇನೆ. ಅಳಿಯಂದಿರಿಗೆ ನಾನು ತಕ್ಕ ಕೆಲಸಾ ಕೊಟ್ಟ
ಕೂಡಲೆ, ಆಗ, ಕೊಲ್ಲು, ಕೊಲ್ಲು, ಹೊಡೆ, ಕೊಲ್ಲು,
ಪ್ರವೇಶ. ಗಹ ಪರಿವಾರದೊಡವೆ.
ಗ್ರಹಸ್ಥ-- -ಓಹೋ, ಇಲ್ಲಿದಾರೆ, ಅವರನ್ನು ಎತ್ತಿಕೊಳ್ಳಿ. ಸ್ವಾಮಿ, ತಮ್ಮ ಅತ್ಯಂತ
ಪ್ರಿಯಪುತ್ರಿಯಾದ,
ಧೊರೆ.---ಏನು, ಯಾರೂ ದಿಕ್ಕಿಲ್ಲವೆ ? ಕೈಸೆರೆಯೆ ? ದುಃಖಕ್ಕೆ ನಾನು ಆಟದ ಚೆಂಡಾ
ದೆನಲ್ಲಾ ! ನನ್ನನ್ನು ಸರಿಯಾಗಿ ಕಾಣಿ. ನಿಮಗೆ ಇದಕ್ಕಾಗಿ ದ್ರವ್ಯ ಧೊರೆಯು
ವುದು, ನನಗೆ ವೈದ್ಯರನ್ನು ಕೊಡಬೇಕು ; ನನ್ನ ತಲೆಯ ಸೀಳಿಹೋದಹಾಗಿದೆ.
ಗೃಹ— ತಮಗೆ ಎಲ್ಲಾ ಧೊರೆಯುವುದು.
ಧೊರೆ.--ಇನ್ಯಾರಿಗೂ ಇಲ್ಲವೆ ? ಎಲ್ಲಾ ನನಗೆಯೇ ? ಹೀಗಾಗುವ ಮನುಷ್ಯನ
ಕಣ್ಣುಗಳನ್ನು ತೋಟದ ಪುಪ್ಪ ಕುಂಡಿಕಗಳಿಗೆ ನೀರ ಹಾಕುವುದಕ್ಕೂ, ಗ್ರೀಷ್ಮ
ಕಾಲದಲ್ಲಿ ಬೀದಿಯ ಧೂಳನ್ನು ಅಡಗಿಸುವುದಕ್ಕೂ ಉಪಯೋಗಿಸಬಹುದು.
-----------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೯೭
ಗೃಹ.--ಮಹಾಸ್ವಾಮಿ,
ಧೊರೆ.--ನಾನೇನೋ ಸ್ವಯಂವರಕ್ಕೆ ಬಂದ ಬಳ್ಳ ಮದವೇ ಗಂಡಿನಹಾಗೆ ಧೈರ್ಯವಾಗಿ
ಸಾಯುತ್ತೇನೆ. ಏನೀಗ ! ಸಂತೋಷವಾಗಿ ಇರೋಣ ಬನ್ನಿ, ನಾನು
ಧೊರೆ ; ಯಜಮಾನರೆ, ತಾವು ಅದನ್ನು ತಿಳಿದುಕೊಳ್ಳಿ,
ಗೃಹ.ಮಹಾಸ್ವಾಮಿ, ತಾವು ರಾಜಾಧಿರಾಜರು, ನಾವು ತಮ್ಮ ಪಾದಸೇವಕರು,
ಧೊರೆ-- ಹೊ, ಇದರಲ್ಲಿ ಹುರುಡು ಇದೆ. ಇಲ್ಲ, ನಿಮಗೆ ಅದು ಧೊರೆಯಬೇಕಾಗಿ
ದ್ದರೆ, ಅದಕ್ಕಾಗಿ ಓಡಿಹೋಗಲೇಬೇಕು. ಸ, ಸ, ರಿ, ರಿ, (ಓಡಿಹೋಗುವನು,
ಪರಿವಾರ ಬೆನ್ನಟ್ಟುವುದು)
ಗೃಹ.-- ಅತ್ಯಲ್ಪರಾದವರಲ್ಲಿ ಯಾದರೂ ಸರಿಯೆ, ಇಂಥಾ ದುರವಸ್ಥೆ ದುಸ್ಸಹವಾಗಿರು
ವುದು, ಧೊರೆಯಲ್ಲಿ ಅದು ಹೇಳಲು ಶಕ್ಯವಲ್ಲ ! ನಿನ್ನ ಇಬ್ಬರು ಹೆಮ್ಮಕ್ಕಳು
ತಂದೆ ಮಕ್ಕಳ ಪ್ರೇಮಕ್ಕೆ ತಂದಿಟ್ಟ ಅಪವಾದವನ್ನು ಪರಿಹರಮಾಡುವುದಕ್ಕೆ
ಮತ್ತೊಬ್ಬ ಮಗಳಿದಾಳೆ.
ಶುಕ್ಲ.--ಸ್ವಾಮಿ, ತಮಗೆ ಸುಖಾಗಮನವಾಗಲಿ.
ಗೃಹ--ತಮಗೂ ತಥಾಸ್ತು, ತಮ್ಮ ಇಷ್ಟ್ಯವೇನು ?
ಶುಕ್ಲ.--ಈಗ ಸಮೀಪಿಸಿರುವ ಯುದ್ಧ ಸಮಾಚಾರವನ್ನೇನಾದರೂ ತಾವು ಕೇಳಿದಿರ?
ಗೃಹ-ಇದು ಖಂಡಿತವಾಗಿದೆ, ಮತ್ತೂ ಜನಜನಿತವಾಗಿದೆ, ಶಬ್ದವನ್ನು ಕೇಳುವು
ದಕ್ಕೆ ಶಕ್ತಿಯುಳ್ಳವರೆಲ್ಲರೂ ಇದನ್ನು ಕೇಳಿದಾರೆ.
ಶುಕ್ಲ- ಪ್ರತಿಪಕ್ಷದವರ ಸೇನೆ ಇನ್ನೂ ಎಷ್ಟು ದೂರವಿದೆ ಸ್ವಾಮಿ ? ದಯವಿಟ್ಟು
ಅಪ್ಪಣೆಯಾಗಲಿ.
ಗೃಹ.--ಸಮೀಪದಲ್ಲಿದೆ, ಮತ್ತೂ ಜಾಗ್ರತೆಯಾಗಿಯೂ ಬರುತ್ತಾ ಇದೆ. ಮುಂಗಡ
ತುಕ್ಕಡಿ ಕಾಣಿಸುವುದು ಗಳಿಗೆಯೂ ಹಣವೋ ಎನ್ನುವಹಾಗಿದೆ.
ಶುಕ್ಲ.--ಸ್ವಾಮಿ, ತಮ್ಮಿಂದ ಉಪಕೃತನಾದೆ ; ಅಷ್ಟೇ ಮತ್ತೇನೂ ಇಲ್ಲ.
ಗೃಹ.--ಒಂದಾನೊಂದು ಕಾರ್ಯ ವಿಶೇಷಕ್ಕೊಸ್ಕರ ರಾಣಿಯವರು ಇಲ್ಲಿದ್ದಾಗ್ಯೂ,
ಸೇನೆಯು ಮುಂದಕ್ಕೆ ತೆರಳಿತು.
ಶುಕ್ರ--ಸ್ವಾಮಿ, ಉಪಕೃತನಾದೆ (ಗೃಹಸ್ಥನ ನಿಷ್ಕ್ರಮಣ).
ದುಃಖ.--ದೇವರೇ, ನನ್ನ ಉಸಿರನ್ನು ನಿನ್ನಲ್ಲಿಟ್ಟುಕೊ, ನಿನ್ನ ಅಪ್ಪ ಬರುವುದಕ್ಕೆ
ಮುಂಚೆ ನಾನು ಸಾಯಬೇಕೆಂಬ ಅಲ್ಪಬುದ್ದಿಯು ನನಗೆ ಹುಟ್ಟಿದಹಾಗೆ ಮಾಡು.
ಶುಕ್ಲ--ತಾತ, ಬಹುಚೆನ್ನಾಗಿ ಪ್ರಾರ್ಥನೆಮಾಡಿದಿರಿ.
ದುಃಖ--ಸ್ವಾಮಿ, ತಾವು ಯಾರು ?
----------------------------------------------
೯೮ ಹೇಮಚಂದ್ರರಾಜ ವಿಲಾಸ, [೪ನೇ ಅಂಕ.
ಶುಕ್ಲ.-- ನಾನೊಬ್ಬ ಅತ್ಯಂತ ದರಿದ್ರ, ದೌರ್ಭಾಗ್ಯದ ಪೆಟ್ಟಿನಿಂದ ಮೆತ್ತಗಾದೆ.
ಅತ್ಯಂತ ದುಃಖದ ಚಾತುರಕ್ಕೆ ಎಡೆಯಾಗಿ ಕನಿಕರದಿಂದ ತುಂಬಿದೇನೆ. ತಮ್ಮ
ಕೈಯನ್ನು ಕೊಡಿ. ಯಾವುದಾದರೂ ಒಂದು ಸಾವಿರಕ್ಕೆ ತಮ್ಮನ್ನು ಕರೆದು
ಕೊಂಡು ಹೋಗಿಬಿಡುತ್ತೇನೆ.
ದುಃಖ.-- ಅನುಗ್ರಹೀತನಾದೆ, ದೇವರ ಹರಕೆಯ ಕೃಪೆಯ ಮೇಲೆಮೇಲೆ ಏಕ
ಕಾಲದಲ್ಲಿ ಪ್ರಾಪ್ತವಾಯಿತು.
ಪ್ರವೇಶ.-ರಾಹುಕ,
ರಾಹು.--ಹಾ ! ಸಿಕ್ಕಿತು, ಅವನತಲೆ ಸಿಕ್ಕಿತು ! ನನ್ನ ಅದೃಷ್ಟ್ಯವೇ ಅದೃಷ್ಟ್ಯ. ಕಂಣಿ
ಲ್ಲದ ನಿನ್ನ ತಲೆಯಮಾಂಸವು ಮೊದಲು ನಿರ್ಮಾಣವಾಗುವಾಗ್ಯೆ ನನ್ನ ಭಾಗೋದ
ಯಕ್ಕಾಗಿಯೇ ಆಯಿತು. ಎಲ ಮುದಿ ದೋಹಿ, ಜ್ಞಾಪಿಸಿಕೊ ; ನಿನ್ನ ತಲೆ
ಯನ್ನು ಹಾರಿಸುವ ಕತ್ತಿಯು ಬರೆಯಿಂದ ಹೊರಕ್ಕೆ ಬಂದಿದೆ.
ದುಃಖ-ಸಹಾಯಕ್ಕಾಗಿ ಬಂದ ಮಿತ್ರನಾದ ನಿನ್ನ ಕೈ ಅದಕ್ಕೆ ವಿಶೇಷ ಶಕ್ತಿಯನ್ನು
ಕೊಡಲಿ. (ಶುಕ್ಲಚಂದ್ರ ಮಧ್ಯೆಬಂದು ತಡೆಯುವನು.)
ರಾಹು.ಎಲ ಕಲ್ಲೆದೆಯುಳ್ಳ ವಕ್ಕಲಿಗನೆ, ಲೋಕಪ್ರಸಿದ್ಧನಾದ ರಾಜದ್ರೋಹಿಗೆ
ಸಹಾಯಮಾಡಬೇಕೆಂದು ನೀನು ಯಾಕೆ ಧೈರ್ಯಮಾಡುತೀಯೆ ? ಅವನ ದೌರ್ಭಾ
ಗ್ಯದ ಶಾಖವು ನಿನಗೂ ತಟ್ಟಿತು. ಇಲ್ಲಿಂದ ಹೊರಟು ಹೋಗು, ಅವನ ರಟ್ಟೆ
ಯನ್ನು ಬಿಟ್ಟುಬಿಡು.
ಶುಕ್ಲ--ಯಾಕೆ ? ಹೇಳಿದರೆಸ್ಯೆ : ಹಂಗಲ್ಲದಿದ್ದರೆ ಬಿಡೋಕಿಲ್ಲ ಬುದ್ದಿ.
ರಾಹು-ಕೈಬಿಡೊ ಗುಲಾಮ ; ಇಲ್ಲದಿದ್ದರೆ ನಿನ್ನ ತಲೇಹಾರಿ ಹೋದೀತು.
ಶುಕ್ಲ.--ಸೋಮಿ, ತಮ್ಮ ಹಾದಿಹಿಡಕಂಡು ಕೊಂಡಿ, ಬಡಬಗ್ಗರು ಹೋಕ್ಕಳ್ಳಿ,
ಬದಕ್ಕಳ್ಳಿ, ನನ್ನ ಜೀವಕೇ ವಟ್ಟಬಂದರೆ ಈಟುಜಿನ, ಈ ವಾರವಾರ ಹದಿ
ನೈದು ಜಿನತನಕಾ ಇರತಿರಲಿಲ್ಲೆಳಿ.. ಮುದುಕನ ದಂಡೆಗೇ ಬರಬೇಡಿ, ನಾಮುಂಚೆ
ಹೇಳೆತಿವಿನಿ. ಇಲ್‌ಜಿದ್ದರೆ, ನಿನ್ನ ಬುಂಡೆಗಟ್ಟಯೋ ನಂದೊಣ್ಣೆ ಗಟ್ಟಿಯೋ ನೋಡಿ
ಬಿಡುತಿವಿನಿ. ಇದ್ದದ್ದಾ ಹೇಳಿವಿನಿಬುದ್ಧಿ,
ರಾಹು.-- ಛಿ, ಆಚೆಗೆ ಹೋಗು, ತಿಪ್ಪೆಗುಡ್ಡೆ.
(ಇಬ್ಬರೂ ಕಾಳಗಾ ಕಾಯುವರು.)
ಶುಕ್ಲ.-- ಹಲ್ಲು ಮುರಿದೇನೆಲೇ, ಬತ್ತಿಯಾ ? ನಿನ್ನ ಮೀಸೇ ತಿರಿಗೆ ಹೆದರೋಕಿಲ್ಲಾ.
(ರಾಹುಕ ಬೀಳುತಾನೆ)
ರಾಹು--ಗುಲಾಮು, ನನ್ನ ಕೊಂದೆಯಲ್ಲೋ ; ಎಲ ನೀಚಾ, ಈ ಹಣಾ ತೆಗೆದುಕೊ.
-----------------------------------------------
೬ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೯೯
ನೀನು ಮುಂದೆ ಶ್ರಯೋವಂತನಾಗಿರಬೇಕಾದರೆ ನನ್ನ ಹೆಣವನ್ನು ಒಪ್ಪಾಮಾಡು.
ನನ್ನಲ್ಲಿರುವ ಕಾಗದವನ್ನು ಕೊಂಡುಹೋಗಿ ಕುತಂತ್ರರಿಗೆ ಕೊಡು, ನೀಲಪ್ರರೀ
ಸೇನೆಯವರಲ್ಲಿ ಅವರನ್ನು ಹುಡುಕು, ಹಾ, ಅಕಾಲಮರಣವೇ! ಸತ್ತೆನಲ್ಲಾ !
(ಪ್ರಾಣಬಿಡುವನು.)
ಶುಕ್ಲ--ನಿನ್ನನ್ನು ನಾನು ಬಲ್ಲೆ ಕಣಲಾ ; ನೀನು ದುಪ್ಪಾರಕ್ಕೆಲ್ಲಾ ದರ್ವಿಯಾಗಿದ್ದ
ಖೂಳ ; ಕೆಟ್ಟತನಕ್ಕೆ ಎಷ್ಟು ಬೇಕೋ ಅಷ್ಮರಮಟ್ಟಿಗೂ ನಿನ್ನೊಡತಿಯು ದುರಾ
ಚಾರಕ್ಕೆ ಸಹಕಾರಿಯಾಗಿದ್ದವ.
ದುಃಖ.--ಏನು ಅವ ಸತ್ತುಹೋದನೆ ?
ಶುಕ್ಲ.--ಜೀಯಾ, ಇಲ್ಲಿ ಕೂತುಕೊಳ್ಳಿ, ಸುದಾರಿಸಿಕೊಳ್ಳಿ. ಈ ಲಕ್ಕೋಟನ್ನು ಒಡೆದು
ನೋಡೋಣ, ಅವ ಹೇಳುವ ಕಾಗದ ನನ್ನ ಸ್ನೇಹಿತನದಾಗಿರಬಹುದು. ಇವ
ಸತ್ತು ಹೋದ. ಇವನ ವಧಕನಾಗುವುದಕ್ಕೆ ಇನ್ನು ಯಾರೂ ಇರಲಿಲ್ಲವಲ್ಲಾ
ಎಂದು ವ್ಯಸನವಾಗಿದೆ. ಆ ಕಾಗದ ನೋಡೋಣ ; ಆರಗೆ, ಬಿಡು, ನೀತಿಯೆ,
ದೋಷಾರೋಪಣೆಮಾಡಬೇಡ. ನಮ್ಮ ಶತ್ರುಗಳ ಮನಸ್ಸನ್ನು ತಿಳಿಯುವುದಕ್ಕೆ
ಅವರ ಹೃದಯವನ್ನೆ ಒಡೆದು ತೆಗೆಯುತ್ತೇವೆ ; ಹೀಗಿರುವಲ್ಲಿ, ಅವರ ಕಾಗದ
ವನ್ನು ಒಡೆದು ತೆಗೆಯುವುದು ನ್ಯಾಯವಾಗಿಯೇ ಇದೆ. (ಓದುತಾನೆ “ನಾವು
ಪರಸ್ಪರಮಾಡಿದ ಶಪಥೆ ಜ್ಞಾಪಕವಿರಲಿ, ಅವನನ್ನು ಕಡಿದುಹಾಕುವುದಕ್ಕೆ
ಸಮಯ ಅನೇಕವಾಗಿ ಧೊರೆಯುವುದು. ನಿಮ್ಮ ಮನಸ್ಸು ಒಂದು ನಿಶ್ಚಯವಾ
ಗಿದ್ದರೆ ಕಾಲವೂ ಸ್ಥಳವೂ ಅನುಕೂಲವಾಗಿ ದೊರಕಿಸಲಾದೀತು. ಅವ ಜೈಶೀಲ
ನಾಗಿ ಬಂದರೆ ಯಾವುದೂ ನಡೆಯುವುದಿಲ್ಲ. ಹಾಗಾದರೆ ನಾನು ಅವನ ಕೈಸೆರೆಗೆ
ಸಿಕ್ಕಿದೆ ; ಅವನ ಹಾಸುಗೆಯೇ ನನ್ನ ಕಾರಾಗೃಹ ; ಅದರ ಸಹ್ಯವಲ್ಲದ ಶಾಖದಿಂದ
ನನ್ನನ್ನು ಬಿಡುಗಡೆಮಾಡಿ, ತಾವುಪಟ್ಟ ಶ್ರಮ ಸಾರ್ಥಕವಾಗುವಂತೆ ಅವನ
ಸ್ಥಾನಕ್ಕೆ ತಾವು ನಿಲ್ಲಬೇಕು.
ತಮ್ಮ ಭಾರ್ಯೆ ಎಂದು ಹೇಳಲು ಮನಸ್ಸುಳ್ಳ
ತಮ್ಮ ಪ್ರೇಮಾಸ್ಪದಳಾದ ಸೇವಕಳು.
ನಾಗವೇಣಿ ?”
ಹಾ! ಮಿತಿಮರೆ ಇಲ್ಲದ ಸ್ತ್ರೀ ಮನಸ್ಸೆ ! ಸಜ್ಜನನಾದ ಆಕೆ ಗಂಡನ ಪ್ರಾಣ
ವನ್ನು ತೆಗೆದು ನನ್ನ ತಮ್ಮನನ್ನು ಅವನ ಸ್ಥಾನಕ್ಕೆ ಇಟ್ಟುಕೊಳ್ಳಬೇಕೆಂದು
ಪಿತೂರಿಯೇ ! ಎಲ ಮಹಾಘಾತುಕ, ನಿನ್ನನ್ನು ಈ ಮರಳ ಕೆದಕಿ ಹೂಳುವೆನು.
ಮರಣಕ್ಕೆ ಗುರಿಯಾಗುತ್ತಿದ್ದ ಭದ್ರನಾಥನ ದೃಷ್ಟಿಗೆ ಈ ಲೇಖನದೊಡನೆ ಹ್ಯಾಗಾ
ದರೂ ಬೀಳುತೇನೆ ; ಆತನಿಗೆ ನಿನ್ನ ಕಾರೈವನ್ನೂ ನಿನ್ನ ಮರಣವನ್ನೂ ತಿಳಿಸ
ತಕ್ಕದ್ದು ಸರಿಯಾಗಿದೆ.
-----------------------------------------
೧೦೦ ಹೇಮಚಂದ್ರರಾಜ ವಿಲಾಸ, [೪ನೇ ಅಂಕ.
ದುಃಖ--ಧೊರೆಗೆ ಹುಚ್ಚು. ನನಗೆ ಪ್ರಾಪ್ತವಾಗಿರುವ ಅತಿತೀಕ್ಷ್ಣವಾದ ಶೋಕ
ವನ್ನೂ ಲಕ್ಷ್ಯಮಾಡದೆ ಬದುಕಿದೇನಲ್ಲಾ, ನನ್ನ ಅಲ್ಪಬುದ್ದಿಯು ಮೂರ್ಖತನ
ಇನ್ನೆಂಥಾದ್ದೊ ನಾನು ಕಾಣೆ! ನನಗೂ ಬುದ್ಧಿ ವಿಕಲ್ಪವಾಗಿದ್ದರೆ ಚೆನ್ನಾಗಿತ್ತು:
ಹಾಗಾಗಿದ್ದರೆ ನನ್ನ ದುಃಖವೂ ನನ್ನ ಬುದ್ಧಿಯ ಪರಸ್ಪರ ಸಂಬಂಧವಿಲ್ಲದೆ
ಪ್ರತ್ಯೇಕವಾಗಿ, ಚಿಂತೆಯು ಇಲ್ಲದ್ದನ್ನು ಊಹಿಸಿಕೊಳ್ಳುತ್ತಾ ತನ್ನನ್ನು ತಾನು
ಮರೆಯುತಿತ್ತು. (ದೂರದಲ್ಲಿ ಭೇರೀಶಬ್ದ.)
ಶುಕ್ಲ.--ಜೀಯ, ನನ್ನ ನಮಸ್ಕಾರವನ್ನು ಸ್ವೀಕರಿಸಿ, ದೂರದಲ್ಲಿ ರಣಭೇರಿನಿನಾದ
ಕೇಳಿಬರುವ ಹಾಗೆ ತೋರುತ್ತಿದೆ. ತಮ್ಮನ್ನು ಒಬ್ಬ ಮಿತ್ರನಬಳಿಗೆ ಕರೆದು
ಕೊಂಡುಹೋಗಿ ಬಿಡುತ್ತೇನೆ ಬನ್ನಿ. (ಇಬ್ಬರೂ ಹೋಗುವರು.)
...............
೭ನೇ ಪ್ರಕರಣ
ಮಾರದೇಕದ ಪಾಳಯದಲ್ಲಿ ಒಂದು ಗೂಡಾರ. ಧೊರೆ ನಿದ್ರೆಮಾ
ಡುತಾ ಹಾಸುಗೇಮೇಲೆ ಮಲಗಿಕೊಂಡಿರುವನು. ಇ೦ಪಾದ
ಗಾನವಾಗುತ್ತಿರುವುದು, ದೊಡ್ಡ ಮನುಷ್ಯ ಮತ್ತು,
ಇತರರು ಅಂಗರಕ್ಷಕರಾಗಿರುವರು.
ಪ್ರವೇಶ-ಇಂದುಕಲೆ, ನಿಷ್ಕಂಟಕ, ವೈದ್ಯ.
ಇಂದು.-ಅಯ್ಯೋ, ಪುಣ್ಯಾತ್ಮನಾದ ನಿಷ್ಮೆಂಟಕನೆ, ನಾನು ಎಷ್ಟು ದಿವಸತಾನೆ ಬದು
ಕಿದೆ, ಏನುತಾನೆಮಾಡಿದೆ, ನಿನ್ನ ಒಳ್ಳೆತನಕ್ಕೆ ಸಮಾನವಾದ ಒಳ್ಳೆತನವನ್ನು
ತೋರಿಸಿಯೇನೆ ? ನಾನು ಎಷ್ಟು ಬದುಕಿದರೂ ಸ್ವಲ್ಪವೇ ಇದೆ, ಏನುಮಾಡಿದರೂ
ಸ್ವಲ್ಪವೇ ಇದೆ.
ನಿಷ್ಕಂ.- -ಅಷ್ಟರಮಟ್ಟಿಗೆ ಅಂಗೀಕಾರಮಾಡುವುದೇ ಪ್ರತ್ಯುಪಕಾರ ಮಾಡಿದ್ದಕ್ಕಿಂ
ತಲೂ ಹೆಚ್ಚಾಯಿತು. ನನ್ನ ಸಮಾಚಾರವೆಲ್ಲಾ ಸಾಧಾರಣವಾಗಿ ನಿಶ್ಚಯ
ವಾದ್ದು. ಇಷ್ಟೇ ಹೊರತು ಹೆಚ್ಚೂ ಇಲ್ಲ ಕಡಮೆಯೂ ಇಲ್ಲ.
ಇಂದು.-- ಸ್ವಾಮಿ, ತಾವು ಬೇರೆ ಉತ್ತಮವಾದ ಉಡುಪನ್ನು ಹಾಕಿಕೊಳ್ಳಿ. ಈ
- ಬಟ್ಟೆಗಳು ಆ ಅತ್ಯಂತ ಕಷ್ಟಕಾಲದ ಗುರುತಾಗಿವೆ. ಅವುಗಳನ್ನು ತೆಗೆದುಬಿಡಿ.
ನಿಷ್ಕಂ.--ತಾಯಿ ಕ್ಷಮಿಸಬೇಕು, ಈಗಲೇ ನಾನು ಇಂಥವನೆಂದು ತಿಳಿಯತಕ್ಕದ್ದು
ನಾನು ನೋಡಿರುವ ಸಂಕಲ್ಪಕ್ಕೆ ವಿರೋಧವಾಗುವುದು. ಸಕಾಲದಲ್ಲಿ ಮತ್ತು
ಸಂದರ್ಭಸರಿಯಾಗಿದೆ ಎಂದು ನನಗೆ ತೋರುವತನಕ ತಾವು ನನ್ನನ್ನು ಕಾಣದ
ವರ ಹಾಗೆಯೇ ಇರಬೇಕೆಂಬುವುದು ನನ್ನ ಪ್ರಾರ್ಥನೆ.
--------------------------------------------
೭ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೦೧
ಇಂದು-- ಹಾಗಾದರೆ ಹಾಗೆಯೇ ಆಗಲಿ ಸ್ವಾಮಿ. (ವೈದ್ಯನನ್ನು ಕುರಿತು) ಮಹಾ
ಸ್ವಾಮಿಗೆ ಹ್ಯಾಗಿದೆ ?
ವೈದ್ಯ-ತಾಯಿ ಇನ್ನೂ ನಿದ್ರೆಮಾಡುತಿದಾರೆ.
ಇಂದು. ಪ್ರಕೃತಿ ಎಲ್ಲಾ ವ್ಯತ್ಯಾಸ ಹೊಂದಿರುವುದನ್ನು ದೇವರೆ, ಕೃಪೆಯಿಂದ ಗುಣ
ಮಾಡು, ಮಕ್ಕಳದೆಸೆಯಿಂದ ಬುದ್ಧಿ ಕಟ್ಟಿರುವ ತಂದೆಗೆ ಇಂದ್ರಿಯ ಪೌಟವವೇ
ಒಂದಕ್ಕೊಂದಕ್ಕೆ ಸಮ್ಮೇಳನವಿಲ್ಲದೆ ಭ್ರಮೆ ಹುಟ್ಟಿದೆ ; ಇದನ್ನು ಸರಿಮಾಡು
ಸ್ವಾಮೀ !
ವೈದ್ಯ--ತಾಯಿ, ಚಿತ್ತ ಒಪ್ಪಿದರೆ, ಧೊರೆಯವರನ್ನು ಎಬ್ಬಿಸೋಣ ; ಅವರು
ಮಲಗಿಕೊಂಡು ಬಹಳ ಹೊತ್ತಾಯಿತು.
ಇಂದು-- ತಮ್ಮ ಶಾಸ್ತ್ರಜ್ಞಾನಕ್ಕೆ ವಿರೋಧವಿಲ್ಲದಂತೆ ತಮ್ಮ ಮನಸ್ಸಿಗೆ ಬಂದಹಾಗೆ
ಮಾಡಿಸಿ, ಅವರಿಗೆ ಬೇರೇ ಉಡುಪು ಹಾಕಿದೆಯೆ ?
ದೊಡ್ಕ.--ಅವರು ಗಾಢನಿದ್ರೆಯಲ್ಲಿರುವಾಗ ಅವರಿಗೆ ಹೊಸ ಉಡುಪನ್ನು ಹಾಕಿದೆವು.
ವೈದ್ಯ-ತಾಯಿ ನಾವು ಎಬ್ಬಿಸುವಾಗ ತಾವು ಸಮೀಪದಲ್ಲಿಯೇ ಇರಬೇಕು. ಅವರ
ಬುದ್ದಿಯು ಸ್ಥಿಮಿತಕ್ಕೆ ಬಂದಿರುವುದರಲ್ಲಿ ಸಂದೇಹವಿಲ್ಲ.
ಇಂದು.-- ಹಾಗೆಯೇ ಆಗಲಿ.
ವೈದ್ಯ.-- ಇನ್ನೂ ಸಮೀಪಕ್ಕೆ ದಯಮಾಡಿಸಿ, ಗಾನ ಗಟ್ಟಿಯಾಗಿ ಆಗಲಿ !
ಇಂದು.--ಜೀಯಾ, ಅಪ್ಪಾಜಿ, ಈ ಪೌದದಲ್ಲಿಟ್ಟ ನನ್ನ ನೊಸಲೇ ತಮ್ಮ ರೋಗ
ವನ್ನು ಹೋಗಲಾಡಿಸುವ ಔಷಧವಾಗಲಿ. ನಮಸ್ಕಾರಕ್ಕೆ ಅರ್ಹವಾದ ತಮ್ಮ
ವಾರ್ಧಕ್ಯದಲ್ಲಿ ನಮ್ಮ ಅಕ್ಕಂದಿರು ಮಾಡಿದ ಘಾತುಕತನದ ಯಾತನೆಯನ್ನು ಈ
ನನ್ನ ಸಾಷ್ಟಾಂಗಪ್ರಣಾಮವು ಹೋಗಲಾಡಿನಲಿ !
ನಿಷ್ಕಂ.--.ಹ, ಹ, ಪುತ್ರಿಕಾರತ್ನವೆ, ದಯಾಸಾಗರವೆ !
ಇಂದು.-- ತಾವು ಅವರ ತಂದೆಯಲ್ಲದೇ ಇದ್ದಾಗ್ಯೂ ಈ ನರೆಗೂದಲು ಅವರ ದಯಕ್ಕೆ
ಭಾಗಿಯಾಗಬೇಕಾಗಿತ್ತು. ವಿಪರೀತವಾಗಿ ಹೊಡೆಯುತ್ತಿರುವ ಪ್ರಚಂಡಮಾರು
ತನಿಗೆ ಬಿಡತಕ್ಕ ಮುಖವೇ ಇದು ? ಆ ಪ್ರಳಯಕಾಲದ ಮೇಘಾಡಂಬರಕ್ಕೆ
ಸಮಾನವಾದ ಗುಡುಗಿನ ಆರ್ಭಟಕ್ಕೂ, ಆ ಆತಿಭಯಂಕರವಾಗಿ ಛಡಾಳಿಸಿ
ಹೊಡೆಯುವ ಸಿಡಿಲಿನವೇಗಕ್ಕೂ ಒಂದು ಚೂರುಬಟ್ಟೆಯೂ ಇಲ್ಲದೆ ನಿಲ್ಲತಕ್ಕ
ತಲೆಯೇ ಇದು? ನನ್ನ ಶತ್ರುವಿನ ನಾಯಿಯು ನನ್ನನ್ನು ಬಂದು ಕಚ್ಚಿ
ದ್ದಾಗ್ಯೂ, ನಾನು ಕಾಸಿಕೊಳ್ಳುತಿದ್ದ ಬೆಂಕೀ ಸಮೀಪಕ್ಕೆ ಅದನ್ನು ಕರೆತಂದು
ನಿಲ್ಲಿಸಿಕೊಳ್ಳಬೇಕಾದಂಥಾ ರಾತ್ರಿಯಾಗಿತ್ತಲ್ಲಾ, ಅದು ! ಹಂದಿನಾಯಿಗಳೂ, ಕಾಡ
ಮೃಗಗಳ, ಹುಟ್ಟಗಳ್ಳರೂ, ಅವಿತುಕೊಂಡಿರುವ ಆ ಗುಹೆಯಲ್ಲಿರುವುದು
ತಮಗೆ ಸಂತೋಷವಾಗಿತ್ತೆ, ಅಯ್ಯ ! ಶಿವ ಶಿವಾ! ತಮ್ಮ ಬುದ್ಧಿಸಂಗದ ತಮ್ಮ
-------------------------------------------
೧೦೨ ಹೇಮಚಂದ್ರರಾಜ ವಿಲಾಸ. [೪ನೇ ಅಂಕ.
ಪ್ರಾಣವೂ ಹೋಗಿ ಎಲ್ಲವನ್ನೂ ಪರಿಸಮಾಪ್ತಿ ಮಾಡದೇ ಇದ್ದದ್ದು ಆಶ್ಚರ್ಯ, ಎಚ್ಚ
ರವಾಯಿತು ; ಮಾತನಾಡಿಸಿ.
ವೈದ್ಯ.--ತಾಯಿ ತಾವು ಮಾತನಾಡಿಸಬೇಕು ; ಅದೇ ಯೋಗ್ಯವಾದ್ದು.
ಇಂದು.--ಮಹಾಸ್ವಾಮಿ, ರಾಜಾಧಿರಾಜ, ಅಪ್ಪಾಜಿ, ತಮ್ಮ ಪಾದಸೌಖ್ಯವಾಗಿದೆಯೇ?
ಹ್ಯಾಗಿದೆ ?
ಧೊರೆ.-ಸಮಾಧಿಯಿಂದ ನನ್ನನ್ನು ತೆಗೆದು ನನಗೆ ಅನ್ಯಾಯ ಮಾಡಿದಿರಿ, ನೀನು ದೇವ
ಕರ್ನಿಕೆ; ನಾನಾದರೊ, ನನ್ನ ಕಂಣಿನನೀರು ಕಾಸಿದ ಸೀಸದಂತೆ ಸುರಿದು
ಸುಡುವಹಾಗೆ ಬೆಂಕಿಯು ಚಕ್ರಕ್ಕೆ ಕಟ್ಟಲ್ಪಟ್ಟದೇನೆ.
ಇಂದು.-- ಸ್ವಾಮಿ, ತಾವು ನನ್ನನ್ನು ಬಲ್ಲಿರಾ ?
ಧೊರೆ. ನೀನು ಪಿಶಾಚ, ನಾನು ಬಲ್ಲೆ. ನೀನು ಯಾವಾಗ ಸತ್ತದ್ದು.
ಇಂದು.-- ಇನ್ನೂ , ಇನ್ನೂ ಬುದ್ದಿ ಸ್ವಾಧೀನಕ್ಕೆ ಬರಲಿಲ್ಲ.
ವೈದ್ಯ, ಇನ್ನೂ ಚೆನ್ನಾಗಿ ಎಚ್ಚರವಾಗಿಲ್ಲ. ಅವರ ಗೋಜಿಗೆ ಯಾರೂ ಹೋಗದಂತೆ
ಸ್ವಲ್ಪ ಹೊತ್ತು ಅವರು ಹಾಗಿರಲಿ.
ಧೊರೆ. ನಾನು ಎಲ್ಲಿದೆ ? ಈಗ ಎಲ್ಲಿದ್ದೇನೆ ? ಚೆನ್ನಾಗಿ ಬೆಳಗಾಗಿದೆಯೆ ? ನನ್ನ
ಬುದ್ದಿಗೆ ಯೇನೋ ಭ್ರಮೆಯಾಗಿ ಹೋಗಿದೆ. ಇನ್ನಾರಾದರೂ ಈ ಸ್ಥಿತಿಯಲ್ಲಿ
ದ್ದರೆ ಅವರನ್ನು ನೋಡಿ ಕನಿಕರದಿಂದ ನಾನು ಪ್ರಾಣಬಿಡುತಿದ್ದೆ. ಏನು ಹೇಳ
ಬೇಕೋ ನನಗೆ ಯೇನೂ ತಿಳಿಯದು. ಈ ಕೈ ನನ್ನ ದೇ ಎಂದು ನಾನು ಬೇರೆ
ಪ್ರಮಾಣಮಾಡಲಾರೆ. ಎಲ್ಲಿನೋಡೋಣ, ಈ ಸೂಜಿ ಚುಚ್ಚುತಾ ಇರುವುದು
ನನಗೆ ತೋರುತ್ತಿದೆ. ನನ್ನ ಸ್ಥಿತಿ ಇಂಥಾದ್ದೆ ಎಂದು ನನಗೆ ಯಾರಾದರೂ ಹೇಳಿದರೆ
ಆದೀತಲ್ಲಾ !
ಇಂದು.--ನನ್ನ ನ್ನು ನೋಡಿಸ್ವಾಮಿ ; ತಮ್ಮ ಕೈಯನ್ನು ನನ್ನ ಮೇಲಿಟ್ಟು ಹರಿಸಿ,
ತಾವು ನನಗೆ ನಮಸ್ಕಾರಮಾಡಕೂಡದು.
ಧೊರೆ-ಹಾಸ್ಯಮಾಡದಿರು, ನಾನು ಬೇಡಿಕೊಳ್ಳುತೇನೆ, ನಾನು ಅತ್ಯಂತ ವಿವೇಕರಹಿ
ತನಾದ ಮುದುಕ. ತೊಂಭತ್ತರಮೇಲಾಯಿತು. ಒಂದುದಿವಸವಾದರೂ
ಇಲ್ಲ. ನಾನು ನಿರ್ವಂಚನೆಯಾಗಿ ಹೇಳುತೇನೆ : ನನ್ನ ಬುದ್ದಿ ಸರಿಯಾಗಿಲ್ಲವೊ
ಎಂದು ದಿಗಲಾಗಿದೆ, ನಿನ್ನನ್ನೂ ಈ ಮನುಷ್ಯನನ್ನೂ ಬಲ್ಲೆನೆಂದು ತೋರುತ್ತಿದೆ.
ಆದರೂ ಇನ್ನೂ ನನಗೆ ಸಂಶಯ. ಯಾಕೆಂದರೆ ಈ ಸ್ಥಳ ಯಾವುದೋ ಅದೇ
ಮುಖ್ಯವಾಗಿ ನನಗೆ ತಿಳಿಯದು, ನನಗಿರುವ ಯುಕ್ತಿಯನ್ನೆಲ್ಲಾ ವೆಚ್ಚ ಮಾಡಿ
ದರೂ ಈ ವುಡುಪು ಇಂಥಾದ್ದೆಂದು ನನಗೆ ಜ್ಞಾಪಕಕ್ಕೆ ಬರಲಿಲ್ಲ. ನಿನ್ನೆ ರಾತ್ರೆ
ನಾನು ಎಲ್ಲಿದ್ದೆನೋ ಅದೂ ನನಗೆ ತಿಳಿಯದು. ನನ್ನನ್ನು ನೋಡಿ ನಗಬೇಡಿ, ನಾನು
ಹೇಳುತೇನೆ ; ಈಕೆ ನನ್ನ ಮಗು ಇಂದುಕಲೆ ಎಂದು ತೋರುತ್ತಿದೆ.
--------------------------------------------
೭ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೧೦೩
ಇಂದು.--.ಅಪ್ಪಾಜಿ ಹವುದು, ಹವುದು.
ಧೊರೆ.-ನಿನ್ನ ಕಂಣೀರು ತೇವವಾಗಿದೆಯೇ ? ಹವುದು, ನಿಜವಾಗಿಯೂ ತೇವವಾಗಿದೆ.
ನಾನು ಕೇಳಿಕೊಳ್ಳುತ್ತೇನೆ, ಅಳಬೇಡಮ್ಮ, ನೀನು ನನಗಾಗಿ ಪ್ರವನ್ನು ಇರಿಸಿ
ದ್ದರೆ, ನಾನು ಕುಡಿಯುತ್ತೇನೆ. ನಿನಗೆ ನನ್ನ ಮೇಲೆ ಅಭಿಮಾನವಿಲ್ಲವೆಂದು ನಾನು
ಬಲ್ಲೆ, ನಿಮ್ಮ ಅಕ್ಕಂದಿರು ನನಗೆ ವಿಪರೀತವಾಗಿ ಹಿಂಸೆಮಾಡಿದರೆಂದು ಜ್ಞಾಪಕ
ವಿದೆ. ನಿನಗಾದರೆ ಸ್ವಲ್ಪವಾದರೂ ಕಾರಣ ಉಂಟು, ಅವರಿಗೆ ಏನೇನೂ ಇಲ್ಲ.
ಇಂದು.--ಯಾವ ಕಾರವುವೂ ಇಲ್ಲ, ಯಾವ ಕಾರಣವೂ ಇಲ್ಲ.
ಧೊರೆ. ನಾನು ಮಾರದೇಶದಲ್ಲಿದೇನೆಯೆ ?
ನಿಷ್ಕಂ.-- ಸ್ವಾಮಿ ತಮ್ಮ ರಾಜ್ಯದಲ್ಲಿಯೇ ಇದೀರಿ,.
ಧೊರೆ--.ನನಗೆ ಮೋಸಮಾಡಬೇಡಿ.
ವೈದ್ಯ..--ತಾಯಿ, ಮನಸ್ಸನ್ನು ಸಮಾಧಾನಕ್ಕೆ ತಂದುಕೊಳ್ಳಿ, ತಾವು ಕಂಡಹಾಗೆ
ಅವರಲ್ಲಿದ್ದ ಆ ವುಲ್ಬಣಾವಸ್ಥೆ ಹೋಯಿತು. ಹಿಂದೆ ನಡೆದುಹೋದ ವಿಷಯವನ್ನು
ಅವರಿಗೆ ಜ್ಞಾಪಿಸುವುದು ಅಪಾಯಕರವಾದ್ದು. ಒಳಕ್ಕೆ ದಯಮಾಡಿಸಬೇಕೆಂದು
ಆರಿಕೇಮಾಡಿ, ಇನ್ನೂ ಚೆನ್ನಾಗಿ ಗುಣವಾಗುವತನಕ ಅವರಿಗೆ ಯಾವ ತೊಂದರೆ
ಯನ್ನೂ ಕೊಡತಕ್ಕೆ ಅಗತ್ಯವಿಲ್ಲ.
ಇಂದು.--ಬುದ್ದಿ, ತಿರುಗಾಡಬೇಕೆಂದು ತಮಗೆ ಇಷ್ಮೆ ಉಂಟೆ ?
ಧೊರೆ.ನೀನು ಸಹಿಸಿಕೊಳ್ಳಬೇಕು. ಹಿಂದಿನದೆಲ್ಲಾ ಮರೆತು ಕ್ಷಮಿಸಬೇಕೆಂದು
ಕೇಳಿಕೊಳ್ಳುತ್ತೇನೆ, ನಾನು ಮುದುಕ, ವಿವೇಕವಿಲ್ಲದವನು.
(ಎಲ್ಲರೂ ಹೋಗುವರು, ನಿಷ್ಕಂಟಕ ಗೃಹಸ್ಯ ಉಳಿಯುವರು.)
ಗೃಹ.--ಕುಟಿಲರು ಹಾಗೆ ಸತ್ತುಹೊದ್ದು ನಿಜವೆ ?
ನಿಮ್ಮ.ನಿಜ ಸ್ವಾಮಿ, ಗೃಹ-ಅವರ ಸೇನಾಧಿಕಾರಿ ಯಾರು ?
ನಿಷ್ಕಂ.--ದುಃಖಸಾರನ ಪ್ರಿಯಪತ್ನಿ ಮಗನಾದ ಕುಮಂತ್ರನಂತೆ.
ಗೃಹ.--ದೇಶಪ್ರದ್ಮನಾದ ಆತನ ಮಗ ಶುಕ್ಲಚಂದ್ರನು ನಿಷ್ಕಂಟಕರ ಸಂಗಡ ಹೂಣ
ರಾಜ್ಯದಲ್ಲಿದಾನಂತೆ.
ನಿಷ್ಕಂ.--ವರ್ತಮಾನ ಬದಲಾಯಿಸುತ್ತಲೇ ಇರುವುದು, ಇದು ಜಾಗ್ರತೆಯಾಗಿ
ನಾವಿರಬೇಕಾದ ಕಾಲ. ಸೇನೆಯು ಸಮೀಪಕ್ಕೆ ಬರುತ್ತಿದೆ.
ಗೃಹ ಯುದ್ಧ ನಡೆದೇ ಎಲ್ಲವೂ ವ್ಯವಸ್ಥೆ ಹುಟ್ಟಬಹುದು. ತಾವು ಸುಕ್ಷೇಮಿಗಳಾಗಿ
ಸ್ವಾಮಿ. (ನಿಷ್ಕ್ರಮಣ)
----------------------------------------------
೧೦೪ ಹೇಮಚಂದ್ರರಾಜ ವಿಲಾಸ. [೫ನೇ ಅಂಕ,
ನಿಷ್ಕಂ.--ನನ್ನ ಇಚ್ಚಾಪೂರ್ತಿಯು ಈ ಹೊತ್ತಿನ ಯುದ್ಧ ಜರಗಿದಹಾಗೆ ಶುಭವಾ
ಗಿಯೋ ಅಶುಭವಾಗಿ ಜರಗುವುದು. (ನಿಷ್ಕ್ರಮಣ.)
...............
೫ ನೇ ಅ೦ಕ.
೧ನೇ ಪ್ರಕರಣ..
ದೇವರೇವಿನ ಸಮೀಪದಲ್ಲಿ ನೀಲಪುರೀಸೇನೆಯ ಪಾಳಯ.
ಪ್ರವೇಶ-ಕುಮಂತ್ರ), ವಿಷಜೆ, ದೊಡ್ಡ ಮನುಷ್ಯರು, ವೀರಭಟರು,
ರಣಭೇರಿ, ದಾಳಸಹಿತವಾಗಿ.
ಕುಮಂತ್ರ.-- (ಒಬ್ಬ ದೊಡ್ಡ ಮನುಷ್ಯನನ್ನು ಕುರಿತು) ಭದ್ರನಾಥರು ಪೂರ್ವದಲ್ಲಿ
ಮಾಡಿದ ಸಂಕಲ್ಪವನ್ನ ಈಗಲೂ ಹಿಡಿದಿದ್ದಾರೆಯೋ, ಇಲ್ಲಿ ಅವರು ಮಾಡಿಕೊಂ
ಡಿದ್ದ ನಿಶ್ಚಯವನ್ನು ಬದಲಾಯಿಸಲು ಈಚೆಗೆ ಏನಾದರೂ ಸಂದರ್ಭಧೊರೆ
ಯಿತೊ ತಿಳಿದುಕೊಳ್ಳಿ. ಅವರಲ್ಲಿ ಚಾಂಚಲ್ಯವೂ ಪರಿತಾಪವೂ ಹೆಚ್ಚಾಗಿದೆ. ಅವರ
ಖಂಡಿತವಾದ ಮನೋನಿಶ್ಚಯವೇನು ತಿಳಿದುಬನ್ನಿ,
(ದೊಡ್ಡ ಮನುಷ್ಯ ಹೋಗುವನು.)
ವಿಷಜೆ. ನಮ್ಮ ಅಕ್ಕಯ್ಯನಕಡೇ ಆ ಮನುಷ್ಯ ಖಂಡಿತವಾಗಿಯೂ ಎಲ್ಲಿಯೋ
ಅತಂತ್ರವಾಗಿ ಹೋಗಿಬಿಟ್ಟ.
ಕುಮಂತ್ರ.--.ಏನೋ ಸಂಶಯವಾಗಿದೆ.
ವಿಷಜೆ.--ಸ್ವಾಮಿ ಇನಿದಾದ ಸಮಾಜಕರೆ, ತಮ್ಮ ವಿಷಯವಾಗಿ ನಾನು ಮಾಡಬೇ
ಕಂದಿರುವ ಒಳ್ಳೆತನವನ್ನು ತಾವು ಬಲ್ಲಿರಿ. ಈಗ ಹೇಳಿ, ನಿಜವಾಗಿ ಹೇಳಿ, ನನ್ನ
ಮೇಲೆ ಆಣೆ ಇದೆ ; ನಿಜವಾಗಿ ಹೇಳಿ ; ನನ್ನ ಅಕ್ಕನಲ್ಲಿ ನಿಮಗೆ ಪ್ರೀತಿ ಇಲ್ಲವೆ?
ಕುಮ೦ತ್ರ.--ಮರ್ಯಾದ ಯುಕ್ತವಾದ ಪ್ರೀತಿಯುಂಟು.
ವಿವಜಿ-ಅನ್ಯರಿಗೆ ವರ್ಜ್ಯವಾದ ನಮ್ಮ ಭಾವನ ಹಾಸುಗೆಯನ್ನು ನೀವು ಯಾವಾ
ಗಲೂ ಮೆಟ್ಟಲಿಲ್ಲವೆ?
ಕುಮ೦ತ್ರ--ಆ ಅಭಿಪ್ರಾಯ ನಿಮ್ಮ ಮನವನ್ನು ಬಾಧಿಸುತ್ತಿದೆ.
ವಿಷಜೆ.ಆಕೆಯೂ ನೀವೂ ಏಕೀಭವಿಸಿ, ಆಕೆಯ ಹೃದಯ ಎಂದು ಎಪ್ಪರಮಟ್ಟಿಗೆ
ನಾವು ಹೇಳಬಹುದೊ ಅಷ್ಟರಮಟ್ಟಿಗೂ ಆಕೆಯ ಹೃದಯವೂ ನಿಮ್ಮ ಹೃದ
ಯವೂ ಪರಸ್ಪರ ಒಂದಾದವೆಂದು ನನಗೆ ಸಂಶಯ ಉಂಟಾಗಿದೆ.
----------------------------------------
೧ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೦೫
ಕುಮಂತ್ರ-ನನ್ನಾಣೆಯಾಗಿಯೂ ಇಲ್ಲ.
ವಿಷಜೆ-- ಆಕೆಯನ್ನು ನೋಡಿ ನಾನು ಬೇರೆ ಸಹಿಸಲಾರೆ, ಪ್ರಿಯರೆ ; ಅವಳ ಸಗಂಡ
ಸಲಿಗೆಬೇಡಿ.
ಕುಮಂತ್ರ--.ನನ್ನ ವಿಷಯದಲ್ಲಿ ನೀವು ಹಾಗೆ ಭಯಪಡಬೇಡಿ. ಹೋ, ಅವರೂ
ಅವರ ಯಜಮಾನರಾದ ಭದ್ರನಾಥರಾಯರೂ ಬಂದರು.
ಪ್ರವೇಶ-ಭದ್ರನಾಥ, ನಾಗವೇಣಿ, ವೀರಭಟರು, ಭೇರೀ ಪಟಹ
ಸಮೇತರಾಗಿ,
ನಾಗ.--ಯುದರ ಬಿಗಿ ಸಡಲಿ ನಮಗೆ ಸೋಲಾದರೂ ಆಗಲಿ, ನನಗೂ ಆತನಿಗೂ
ಇರುವ ಸಂಬಂಧದ ಬಿಗಿಯನ್ನು ಅವಳು ಸಡಲಿಸದಿದ್ದರಾದೀತು.
ಭದ್ರ,--ನಮ್ಮ ಆಪ್ತ ಶಿಖಾಮಣಿಗಳಾದ ಅತ್ತಿಗೆಯವರೆ, ನಿಮ್ಮ ದರ್ಶನವು ಆನಂದ
ಜನಕವಾಯಿತು. ಅಯ್ಯ ನನಗೆ ವರ್ತಮಾನಬಂತು. ನಮ್ಮ ರಾಜ್ಯದ ಹಿಂಸೆ
ಯನ್ನು ತಡೆಯಲಾರದೆ ತಿರುಗಿಬಿದ್ದ ಜನರನ್ನೂ ಕಟ್ಟಿಕೊಂಡು ಧೊರೆಯು
ಅವರ ಪುತ್ರಿ ಇದ್ದಲ್ಲಿಗೆ ದಯಮಾಡಿಸಿದರಂತೆ. ಎಲ್ಲಿ ನಾನು ಪ್ರಾಮಾಣಿಕನಾಗಿರ
ಲಾರೆನೋ ಅಂಥಾ ಕಡೆಯಲ್ಲಿ ಪರಾಕ್ರಮಶಾಲಿಯಾಗಿ ನಾನು ಇದುವರಿಗೂ ಇರ
ಲಿಲ್ಲ. ಈ ಕಾರ್ಯದಲ್ಲಿ ನಾನು ಉಜ್ಜುಗಿಸಿದ್ದು ಮಾರದೇಶದವರು ನಮ್ಮ ರಾಜ್ಯದ
ಮೇಲೆ ಬಂದಿದಾರೆ ಎಂದೇ ಹೊರತು, ಧೊರೆಯು ಇತರರಿಂದೊಡಗೂಡಿ ಅತ್ಯಂತ
ಯುಕ್ತವಾದ ಕಾರಣಗಳಿಗಾಗಿ ನಮ್ಮ ಮೇಲೆ ತಿರುಗಿ ಬಿದ್ದಿರುವುದಕ್ಕಾಗಿ ಅಲ್ಲ.
ಕುಮಂತ್ರ.-- ಬಹು ಚೆನ್ನಾಗಿ ಅಪ್ಪಣೆಯಾಯಿತು, ಸ್ವಾಮಿ.
ವಿಷಜೆ..ಈ ವಿಷಯದಲ್ಲಿ ಈಗ ಚರ್ಚೆ ಯಾಕೆ ?
ನಾಗ..--ಬರುವ ಶತ್ರುಗಳ ಮೇಲೆ ಒಗ್ಗಟ್ಟಾಗಿ ನಿಲ್ಲಿ. ಗೃಹ ಆದ್ರದಮಾತು ಇಲ್ಲಿ
ಯಾಕೆ ?
ಭದ್ರ.--ಅನುಭವಶಾಲಿಗಳಾದ ಚಮೂಪತಿಗಳೊಡನೆ ನಮ್ಮ ಸಮರೋದ್ಯೋಗ
ವನ್ನು ನಿಷ್ಕರ್ಷೆ ಮಾಡೋಣ.
ಕುಮಂತ್ರ,ತಮ್ಮ ಗೂಡಾರಕ್ಕೆ ಈಗಲೇ ಬರುತ್ತೇನೆ.
ವಿಷಜೆ.-ಅಕ್ಕಯ್ಯ, ತಾವೂ ನಮ್ಮ ಸಂಗಡಲೇ ಬರುತೀರ ?
ನಾಗ.--ಇಲ್ಲ.
ವಿಷಜೆ.ದಯಮಾಡಿ ನೀವೂ ನಮ್ಮ ಸಂಗಡಲೇ ಬನ್ನಿ; ಅದೇ ಅನುಕೂಲ.
ನಾಗ--(ಆತ್ಮಗತ) ಓಹೋ! ಈ ವಾಗಟೆಗೆ ಅರ್ಥವಾಯಿತು. ನಾನು ಬರುತ್ತೇನೆ.
(ಇವರು ಹೋಗುತ್ತಿರುವಾಗ, ಶುಕ್ಲಚಂದ್ರ ವೇಷ ಹಾಕಿಕೊಂಡು
ಪ್ರವೇಶಿಸುವನು.)
------------------------------------
೧೦೬ ಹೇಮಚಂದ್ರರಾಜ ವಿಲಾಸ, [೫ನೇ ಅಂಕ
ಶುಕ್ಲ.--ನನ್ನಂಥಾ ಬಡವನ ಮಾತನ್ನು ತಾವು ಯಾವಾಗಲಾದರೂ ಕೇಳುವುದು
ಉಂಟಾದರೆ, ನಾನು ಒಂದು ಮಾತು ಅರಿಕೇ ಮಾಡಬೇಕಾಗಿದೆ.
ಭದ್ರ.-- ನಾನು ನಿಮ್ಮ ಹಿಂದೆಯೇ ಬಂದು ಒದಗಿಕೊಳ್ಳುತ್ತೇನೆ, ನಡೆಯಿರಿ, ಏನೈ,
ಹೇಳು.
(ಭದ್ರನಾಥ, ಶುಕ್ಲಚಂದ್ರ, ಹೊರತು ಉಳಿದವರು
ಹೋಗುವರು.)
ಶುಕ್ಲ.--ತಾವು ಯುದ್ದವಾಡುವುದಕ್ಕೆ ಮುಂಚೆ, ಈ ಕಾಗದವನ್ನು ಒಡೆದು ನೋಡಿ
ಕೊಳ್ಳಿ, ತಮಗೆ ಜಯವಾದರೆ, ಈ ಕಾಗದವನ್ನು ತಂದವನು ಬರುವಂತೆ
ತುರಿಯನ್ನು ಹಿಡಿಸಿ. ದೀನನಾಗಿ ನಾನು ಕಾಣಿಸಿಕೊಂಡಾಗ್ಗೂ, ಅದರಲ್ಲಿ ಬರೆದಿ
ದುವುದನ್ನು ದೃಢಪಡಿಸತಕ್ಕೆ ಒಬ್ಬ ವೀರನನ್ನು ತರಬಲ್ಲೆ, ತಮಗೆ ಸೋಲಾ
ದರೆ, ತಮ್ಮ ಲೋಕ ವ್ಯವಹಾರದ ಕಾರ್ಯ ಮುಗಿದು, ಒಳತಂತ್ರ ನಿಂತು
ಹೋಗುವುದು. ತಾವು ಅದೃಷ್ಟ್ಯಶಾಲಿಯಾಗಿರಿ !
ಭದ್ರ ನಾನು ಕಾಗದವನ್ನು ಓದಿ ಮುಗಿಸುವತನಕ, ಹೋಗದೆ ನಿಲ್ಲೈ.
ಶುಕ್ಲ.--ಕೂಡದೆಂದು ನನಗೆ ಅಪ್ಪಣೆಯಾಗಿದೆ. ಪ್ರಕೃತಬಿದ್ದಾಗ ಭಟರು ಕೂಗಲಿ ;
ನಾನು ಪುನಃ ಸನ್ನಿಧಿಗೆ ಬರುತ್ತೇನೆ.
ಭದ್ರ-ಹಾಗಾದರೆ, ಹೋಗಿ ಬಾರೈ, ನೀನು ಕೊಟ್ಟ ಲೇಖನವನ್ನು ನಾನು ಓದಿ
ನೋಡಿಕೊಳ್ಳುತ್ತೇನೆ.
(ಶುಕ್ಲಚಂದ್ರನ ನಿಷ್ಕ್ರಮಣ.)
ಪ್ರವೇಶ.-ಕುಮಂತ್ರ.
ಕುಮಂತ್ರ. ಶತ್ರುಗಳ ಪಡೆಯು ಕಂಣಿಗೆ ಗೋಚರವಾಗುತಿದೆ ; ತಮ್ಮ ಸೇನೆ
ಯನ್ನು ಸಜ್ಜುಮಾಡಿಕೊಳ್ಳಬೇಕು. ಬಹು ಜಾಗರೂಕತೆಯಿಂದ ಗೊತ್ತಾಗಿ
ರುವ ಅವರ ಸೇನೆಯ ಅಡಿಯಾಳವು ಇವರಿಂದ ತಿಳಿಯುವುದು. ಈಗ ತಾವು
ಜಾಗ್ರತೆ ಮಾಡಬೇಕೆಂದು ಅರಿಕೆ.
ಭದ್ರ.-- ಕಾಲೋಚಿತವಾಗಿ ನಡೆದುಕೊಳ್ಳುವೆವು.
(ನಿಷ್ಕ್ರಾಂತ)
ಕಮಂತ್ರ.-- ಈ ಇಬ್ಬರು ಅಕ್ಕತಂಗಿಯರಲ್ಲಿಯೂ ನನಗೆ ಪ್ರೇಮವಿದೆಯೆಂದು
ನಾನು ಅವರವರಿಗೆ ಪ್ರಮಾಣಮಾಡಿಕೊಟ್ಟಿದ್ದೇನೆ, ಇವರಿಬ್ಬರಲ್ಲಿ ಒಬ್ಬರನ್ನು
ಕಂಡರೆ ಒಬ್ಬರಿಗಾಗದು ; ಪರಸ್ಪರ ಎಂಣೆ ಸಿಗೇಕಾಯಿಯಾಗಿದ್ದಾರೆ. ನಾನು
ಇಬ್ಬರಲ್ಲಿ ಯಾರನ್ನು ವರಿಸಲಿ ? ಇಬ್ಬರನ್ನೂ ವೇ ? ಒಬ್ಬರನ್ನೇ? ಇಲ್ಲಿ ಯಾರನ್ನು
-------------------------------------------
೨ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ. ೧೦೭
ಕೂಡದೆ ? ಇಬ್ಬರೂ ಬದುಕಿದ್ದರೆ ಯಾರನ್ನು ನಿರ್ವಹಿಸುವುದೂ ಕಷ್ಮವಾಗು
ವುದು. ವಿಧವೆಯನ್ನು ಸ್ವೀಕರಿಸಿದರೆ, ಅವರ ಅಕ್ಕನಿಗೆ ವಿಪರೀತ ಆಗ್ರಹ
ಉಂಟಾಗಿ ಹುಚ್ಚು ಹುಚ್ಚಾಗುವಳು ; ಇದೂ ಅಲ್ಲದೆ ಇವಳ ಗಂಡ ಬದುಕಿರುವ
ಕಾರಣ ನನ್ನ ಕಾರ್ಯ ಕೈಗೂಡುವುದು ಕಷ್ಟ, ಅವನ ಬಲದಿಂದ ಈ ಯುದ್ಧ
ವನ್ನೆನೋ ಇಡೋಣ ; ಅದಾದ ತರುವಾಯ, ಅವ ಹೋದರೆ ಸಾಕೆಂದು ಅಪೇ
ಕ್ಷಿಸತಕ್ಕವಳು ಅವನ ಉಚ್ಛಾಟಣೆಗೆ ತಕ್ಕ ಉಪಾಯವನ್ನು ಹುಡುಕಿಕೊಳ್ಳಲಿ
ಧೊರೆಗೂ ಇಂದುಕಲೆಗೂ ಇವ ತೋರಿಸಬೇಕೆಂದಿರುವ ಕಾರುಣ್ಯದ ವಿಷಯದಲ್ಲಿ
ಯುದ್ಧವಾಗಿ ಅವರು ನಮ್ಮ ಸ್ವಾಧೀನಕ್ಕೆ ಸಿಕ್ಕಿದ ತರುವಾಯ ಇವನ
ಕ್ಷಮೆಯ ಫಲವನ್ನು ಅವರು ಅನುಭವಿಸಲಾರರು, ಈಗ ಪ್ರಕೃತದಲ್ಲಿ ಚರ್ಚೆ
ಯನ್ನು ಬಿಟ್ಟು ರಾಜ್ಯವನ್ನು ಕಾಪಾಡಿಕೊಳ್ಳುವುದೇ ನನ್ನ ಕರ್ತವ್ಯವಾಗಿದೆ.
(ನಿಷ್ಕ್ರಮಣ.)
............
೨ನೇ ಪ್ರಕರಣ
ಎರಡು ಪಾಳಯಕ್ಕೂ ಮಧ್ಯೆ ಮೈದಾನ ಒಳಗೆ ಕೋಲಾಹಲ.
ಪ್ರವೇಶ-ಧೊರೆ ಇಂದು ಕಲೆ ವೀರಭಟರು-ಇವರೆಲ್ಲರೂ ಭೇರಿ ಪಟಹ
ದೊಡನೆ ಹೊರಟುಹೋಗುವರು.
ಪ್ರವೇಶ.-ಶುಕ್ಲಚಂದ್ರ, ದುಃಖಗಾರ.
ಶುಕ್ಲ.--ಅಪ್ಪಾಜಿ, ತಾವು ಈ ಒಳ್ಳೆ ಮರದ ನೆರಳ ಆತಿಥ್ಯವನ್ನು ಸ್ವೀಕರಿಸಿ ; ಧರ್ಮ
ವೃದ್ಧಿಯಾಗಲೆಂದು ದೇವರಿಗೆ ಪ್ರಾರ್ಥನೆ ಮಾಡಿ. ನಾನು ಹಿಂತಿರುಗಿ ತಮ್ಮ
ಪಾದದಬಳಿಗೆ ಬಂದರೆ, ತಮಗೆ ಆಪ್ಯಾಯನವಾದ ಸಮಾಚಾರವನ್ನು ತರುತ್ತೇನೆ.
ದುಃಖ.--ತಮ್ಮ ಕಾರ್ಯವು ನಿರ್ವಿಘ್ನವಾಗಿ ಜರಗಲಿ ಸ್ವಾಮಿ. (ಶುಕ್ಲಚಂದ್ರ ಹೋ
ಗುವನು.) ಒಳಗೆ ಕೋಲಾಹಲ, ಪುನಃ ಪ್ರವೇಶ ಶುಕ್ಲಚಂದ್ರ,
ಶುಕ್ಲ.--.ಒಡೈಯ್ಯ ಮುದುಕ, ನಡೆ ; ನಿನ್ನ ಕೈತಾ ; ಧೊರೆಗೆ ಸೋಲಾಯಿತು.
ಆತನೂ ಆತನ ಮಗಳ ಕೈಸೆರೆ ಸಿಕ್ಕಿದರು, ನಿನ್ನ ಕೈ ತಾ, ನಡೆ.
ದುಃಖ.-- ಮುಂದಕ್ಕೆ ಬೇಡವಯ್ಯ ; ಮನುಷ್ಯ ಇಲ್ಲಿಯೇ ಕೊಳಯುವುದಕ್ಕೆ
ಸಾಕು,
ಶುಕ್ಲ.---ಏನು, ಪುನಃ ದುರಾಲೋಚನೆಯ ? ಮನುಷ್ಯರು ಜನನವನ್ನು ಹ್ಯಾಗೆ
ಸಹಿಸಿಕೊಂಡರೆ ಮರಣವನ್ನೂ ಹಾಗೆಯೇ ಸಹಿಸಿಕೊಳ್ಳಬೇಕು. ಮರಣಕ್ಕೆ
ಪಕ್ಷವಾಗಿರುವುದೇ ಮುಖ್ಯವಾದ್ದು. ಬಾರೈ.
ದುಃಖ-ಅದೂ ನಿಶ್ಚಯ. (ನಿಷ್ಕ್ರಮಣ.)
------------------------------------------
೧೦೯ ಹೇಮಚಂದ್ರರಾಜ ವಿಲಾಸ. [೫ನೇ ಅಂಕ.
೩ನೇ ಪ್ರಕರಣ.
ದೇವರೇವಿನ ಸಮೀಪದಲ್ಲಿ ನೀಲಪರೀ ಸೇನೆಯ ಪಾಳಯ.
ಪ್ರವೇಶ.--.ಜಯಭೇರಿಯನ್ನು ಹಾಕಿಸಿಕೊಂಡು ಕುಮಂತ); ಧೊರೆ,
ಇಂದುಕಲೆ, ಕೈಸರೆಯಾಗಿ; ಸೇನಾಪತಿಗಳು; ವೀರಭಟರು ಮುಂತಾಗಿ,
ಕುಮಂತ್ರ.-- ಕೆಲವು ಸೇನಾಪತಿಗಳೇ ಅವರನ್ನು ಕರೆದುಕೊಂಡು ಹೋಗಿ, ಅವ
ರನ್ನು ವಿಚಾರಣೆ ಮಾಡತಕ್ಕ ಮೇಲ್ಪಟ್ಟವರ ಇಸ್ಮ ಗೊತ್ತಾಗವವರಿಗೂ ಅವರ
ಮೇಲೆ ಬಲವಾದ ಕಾವಲು ಇರಲಿ.
ಇಂದು.-ಸದ್ವೃತ್ತಿಯಲ್ಲಿದ್ದರೂ ಮಹಾ ವಿಪತ್ತು ಸಂಭವಿಸಿದ್ದು ನಮಗೇ ಮೊದಲಲ್ಲ.
ಆದರೆ ಅತ್ಯಂತ ಕಕ್ಕೆ ಗುರಿಯಾದ ಧೊರೆಯ, ನಿನಗೋಸ್ಕರ ನಾನು ದುಃಖ
ದಿಂದ ಮಗ್ನಳಾಗಿದ್ದೇನೆ. ಇಲ್ಲದಿದ್ದರೆ ನಿರ್ಭಾಗ್ಯ ಲಕ್ಷ್ಮಿಯು ಮುಖವನ್ನು
ಗಂಟುಹಾಕಿಕೊಂಡು ಇರುವುದಕ್ಕಿಂತ ಹೆಚ್ಚಾಗಿ ಮುಖವನ್ನು ಗಂಟುಹಾಕಿ
ಕೊಂಡು ನಾನು ಅಕ್ಷಮಾಡದೇ ಇದ್ದೇನು, ಇಂಥಾ ಪುತ್ರಿಯರನ್ನೂ ಇಂಥಾ
ಅಕ್ಕಂದಿರನ್ನೂ ನಾವು ನೋಡಬೇಡವೆ ?
ಧೊರೆ.--ಬೇಡ, ಬೇಡ, ಬೇಡ, ಬೇಡ ! ಬಾ, ನಾವು ಕಾರಾಗೃಹಕ್ಕೆ ಹೋಗೋಣ ;
ಅಲ್ಲಿ ಪಂಜರಸ್ಥವಾದ ಪಕ್ಷಿಯೋಪಾದಿಯಲ್ಲಿ ನಾವಿಬ್ಬರೇ ಹಾಡೋಣ, ಹರ
ಸೆಂದು ನೀನು ನನ್ನನ್ನು ಕೇಳಿಕೊಂಡಾಗ, ನಾನು ಅಡ್ಡ ಬಿದ್ದು ನಿನ್ನ ಕ್ಷಮಾಪಣೆ
ಯನ್ನು ಕೇಳಿಕೊಳ್ಳುತ್ತೇನೆ. ಹಾಗೇ ನಾವು ಅಲ್ಲಿ ವಾಸಮಾಡುತ್ತಾ, ದೇವರ
ಧ್ಯಾನಮಾಡುತ್ತಾ, ಹಾಡುತ್ತಾ, ಹಳೇ ಕಥೆಗಳನ್ನು ಹೇಳುತ್ತಾ, ಚಿತ್ರ ವಿಚಿತ್ರ
ವಾದ ಚಿಟ್ಟೆಗಳನ್ನು ನೋಡಿ ನಗುತ್ತಾ, ಆಸ್ಥಾನದ ಸಮಾಚಾರವನ್ನು ಕುರಿತು
ಬಡಜನರು ಮಾತನಾಡಿಕೊಳ್ಳುವುದನ್ನೂ ಕೇಳುತ್ತಾ, ಯಾರು ಸೋಲುತಾರೊ
ಯಾರು ಗೆಲ್ಲುತಾರೋ ಯಾರು ದಯಕ್ಕೆ ಪಾತ್ರರಾಗುತ್ತಾರೋ ಯಾರು ಆಗ್ರ
ಹಕ್ಕೆ ಪಾತ್ರರಾಗಿರುತ್ತಾರೋ ಅವರುಗಳ ಸಂಗಡ ಹರಟೇ ಬಡಿಯುತ್ತಾ, ತಾವು
ದೇವರಿಂದ ನೇಮಕವಾದ ಬೇಹುಗಾರರೋ ಎನ್ನುವಹಾಗೆ ಅನೇಕ ರಹಸ್ಯಗಳು
ನಮಗೆ ತಿಳಿಯುವುದೆಂದು ನಟಿಸುತ್ತಾ, ಶುಕ್ಷ ಪಕ್ಷ ಕೃಷ್ಣ ಪಕ್ಷಕ್ಕೆ ಗುಣದಲ್ಲಿ
ವ್ಯತ್ಯಾಸವಾಗುವ ದೊಡ್ಡವರ ಕಡೆಗುಂಪಿನ ಜನರಾಗಿರುತ್ತಾ, ಈ ಕಾರಾಗೃಹ
ದಲ್ಲಿದ್ದುಕೊಂಡು ಕಾಲಕ್ಷೇಪ ಮಾಡೋಣ.
ಕುಮ೦ತ್ರ.--ಅವರನ್ನು ಕರೆದುಕೊಂಡು ಹೋಗಿ
ಧೊರೆ.-ಅಮ್ಮ ಇಂದುಕಲಾ, ಇಂಥಾ ಆತ್ಮದಂಡನೆಗೆ ದೇವರುಸಹಿತ ಮೆಚ್ಚು
ವನು. ನೀನು ಸಿಕ್ಕಿದೆಯ ? ನಮ್ಮಿಬ್ಬರನ್ನು ಅಗಲಿಸುವುದಕ್ಕೆ ಯಾರಿಂದಲೂ
ಆಗುವುದಿಲ್ಲ. ನಿನ್ನ ಕಣ್ಣನ್ನು ಒರಿಸಿಕೊಳ್ಳಮ್ಮ, ನಾವು ದುಃಖಪಡುವಂತೆ
----------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ಪಿಲಾಸ, ೧೦೯
ಅವರು ಮಾಡುವುದಕ್ಕೆ ಮುಂಚೆ, ಹೆಮ್ಮಾರಿಯು ಅವರನ್ನು ಮಾಂಸಚರ್ಮ
ಸಹಿತವಾಗಿ ನುಂಗಿಕೊಳ್ಳುವುದು. ಮೊದಲು ಅವರನ್ನು ಅನ್ನ ವಿಲ್ಲದೆ
ಕೆಡವೋಣ ; ಬಾ.
ಧೊರೆ, ಇಂದುಕಲೆ, ಪಹರೆಯವರು, ನಿಷ್ಕ್ರಮಣ.)
ಕುಮಂತ್ರ.-- ಇತ್ತಬಾರೈ, ಸೇನಾಪತಿ; ಇಲ್ಲಿ ಕೇಳು ; (ಒಂದು ಕಾಗದವನ್ನು
ಕೊಡುತಾ) ಈ ಲೇಖನವನ್ನು ಹಿಡಿ, ಹೋಗು ಅವರ ಹಿಂದೆಯೇ ಕಾರಾಗೃಹ
ದೊಳಕ್ಕೆ ಹೋಗು. ನಿನಗೆ ಒಂದು ದರ್ಜೆ ಹೆಚ್ಚಿಸಿದ್ದೇನೆ. ಇದರಲ್ಲಿ ಹೇಳಿ
ರುವವರೆ ನೀನು ನಡೆದುಕೊಂಡರೆ, ಅಪರಿಮಿತವಾದ ಐಶ್ವರವನ್ನು ಹೊಂದು
ವುದಕ್ಕೆ ದಾರಿಯನ್ನು ಮಾಡಿಕೊಳ್ಳುತ್ತಿದೆ. ಒಂದು ಮಾತನ್ನು ನೀನು
ಮನಸ್ಸಿನಲ್ಲಿಡು, ಜನರು ಕಾಲಾನುಸಾರವಾಗಿ ನಡೆದುಕೊಳ್ಳುತ್ತಾರೆ. ಮೃದು
ಹೃದಯನಾಗಿರತಕ್ಕದ್ದು ಕತ್ತಿ ಹಿಡಿದವನಿಗೆ ತಕ್ಕದ್ದಲ್ಲ. ನೀನು ಮಾಡತಕ್ಕ
ಮಹಾಕಾರ್ಯಕ್ಕೆ ಅಡ್ಡಿಯೇನೂ ಇಲ್ಲ. ಈ ಕೆಲಸವನ್ನು ನಾನು ಮಾಡುತ್ತೇನೆ
ಎನ್ನು, ಇಲ್ಲ ಇತರ ವಿಧದಲ್ಲಿ ನೀನು ಬದುಕುವ ಮಾರ್ಗವನ್ನು ನೋಡಿಕೊ.
ಸೇನಾ.-ಬುದ್ದಿ ಅಪ್ಪಣೇಪ್ರಕಾರ ನಾನು ಮಾಡುತ್ತೇನೆ.
ಕುಮಂತ್ರ.--. ಅದರಲ್ಲಿ ಉದ್ಯುಕ್ತನಾಗು. ನೀನು ಅದನ್ನು ನೆರವೇರಿಸಿದಮೇಲೆ
ನಿನ್ನ ಅದೃಷ್ಟ ಪ್ರಕಾಶವಾಯಿತೆಂದು ತಿಳಿ. ನೋಡಿಕೊ ; ನಾನು ನಿಷ್ಕರ್ಷೆ
ಮಾಡಿರುವ ಪ್ರಕಾರವೇ ಕೂಡಲೆ ಜರುಗಿಸು.
ಸೇನಾ.--ಗಾಡಿ ಎಳೆದುಕೊಂಡು ಹೋಗಲಾರೆ, ಒಣಕಲರಾಗಿ ಮುಕ್ಕಲಾರೆ. ಇಷ್ಟು
ಹೊರತು ಪುರುಷಮಾಡತಕ್ಕ ಕೆಲಸವಾಗಿದ್ದರೆ ಅದನ್ನು ನಾನು ಮಾಡುತ್ತೇನೆ.
(ನಿಷ್ಕ್ರಮಣ.)
ಪ್ರವೇಶ.-ಭದ್ರನಾಥ ನಾಗವೇಣಿ, ವಿಷಜೆ, ವೀರಭಟರು.
ಭದ್ರ.--ಸ್ವಾಮಿ, ನಿಮ್ಮ ತಂದೆಯ ಪರಾಕ್ರಮವನ್ನು ನೀವು ಈದಿನ ತೋರಿಸಿದಿರಿ,
ಜಯಲಕ್ಷ್ಮಿಯ ಕಟಾಕ್ಷದಿಂದ ನಿಮ್ಮ ಪ್ರಯತ್ನ ಸಫಲವಾಯಿತು. ಈ ದಿನದ
ಯುದ್ಧದಲ್ಲಿ ಪ್ರತಿಕಕ್ಷಿಗಳಾಗಿದ್ದವರನ್ನು ಕೈಸೆರೆಹಿಡಿದಿರಿ. ಅವರ ಪದವಿಯೂ
ನಮ್ಮ ಕ್ಷೇಮವೂ ಎರಡೂ ಸಮನಾಗಿ ಸೇರಿ ನಿಶ್ಚಯಿಸಬಹುದಾದಂಥಾ ರೀತಿಯಲ್ಲಿ
ನಾವು ಅವರಿಗೆ ಉಪಚಾರವನ್ನು ಮಾಡಬೇಕಾಗುತಲಿದೆಯಾದಕಾರಣ, ಅವ
ರನ್ನು ನೀವು ಕರೆತರಬೇಕು.
ಕುಮಂತ್ರ.--ಸ್ವಾಮಿ, ವೃದ್ಧರಾಗಿಯ ಅತಿ ದೀನರಾಗಿಯೂ ಇರುವ ಧೊರೆಯನ್ನು
ಸ್ವಲ್ಪ ಕಟ್ಟಿನಲ್ಲಿಟ್ಟು ಕಾವಲಿನವರನ್ನು ನೇಮಿಸುವುದು ಯುಕ್ತವೆಂದು ನನಗೆ
ತೋರಿತು. ಅವರ ವಾರ್ಧಿಕ್ಯ ಸ್ಥಿತಿಯಲ್ಲಿ ಒಂದು ವಿಚಿತ್ರವಾದ ಪ್ರಭಾವವಿದೆ ;
-------------------------------------------
೧೧೦ ಹೇಮಚಂದ್ರರಾಜ ವಿಲಾಸ. [೫ನೇ ಅಂಕ.
ಅವರ ಪದವಿಯಲ್ಲಿ ಅದು ಇನ್ನೂ ಹೆಚ್ಚಾಗಿದೆ. ಅವರ ವಯಸ್ಸು ಅವರ ಪದವಿ,
ಎರಡೂ ಸೇರಿ ಅಲ್ಪಜನರ ಹೃದಯವನ್ನು ಕಿತ್ತು ಅವರಕಡೆಗೆ ಸೆಳೆದುಕೊಳ್ಳು
ವವು ; ನಮ್ಮ ಸೇನೆಯ ಭರ್ಜಿಗಳು ಅಧಿಕಾರಿಗಳಾದ ನಮ್ಮ ಕಂಣು
ಗಳನ್ನೇ ಚುಚ್ಚಲು ತಿರುಗಿಸಲ್ಪಟ್ಟವು. ರಾಣಿಯವರನ್ನೂ ಅವರ ಸಂಗ
ಡಲೇ ಕಳುಹಿಸಿದೆ. ಮೇಲೆ ಹೇಳಿದಕಾರಣವೇ ಇದಕ್ಕೂ ಸಲ್ಲುವುದು, ನಾಳೆ
ಯಾಗಲಿ, ಇಲ್ಲ ಮುಂದಕ್ಕೆ ಯಾವಾಗಾಗಲಿ ತಾವು ನ್ಯಾಯಸ್ಥಾನವನ್ನು ಏರ್ಪ
ಡಿಸುವ ಕಡೆಗೆ ಅವರು ಬರಲು ಸಿದ್ಧವಾಗಿದ್ದಾರೆ. ಈ ಹೊತ್ತಿನಲ್ಲಿ ಶ್ರಮ
ದಿಂದ ಬೆವರೂ ಘಾಯದಿಂದ ರಕ್ತ ಸುರಿಯುತ್ತಿವೆ. ಮಿತ್ರರು ಮಿತ್ರರನ್ನು
ಕಳೆದುಕೊಂಡಿದ್ದಾರೆ. ನ್ಯಾಯವಾದ ಕದನದ ವೇಗಕ್ಕೆ ಗುರಿಯಾಗಿರತಕ್ಕವರು
ಅದನ್ನು ಒಲ್ಲಡಿಯಲ್ಲಿ ರೂಪಿಸುವರು. ಇಂದುಕಲೆ ಮತ್ತು ಆಕೆಯ ತಂದೆ
ಯ ವಿಷಯವಾಗಿ ಮಾತನಾಡಬೇಕಾದರೆ ಅದಕ್ಕಿಂತಲೂ ಯೋಗ್ಯವಾದ ಬೇರೇ
ಸ್ಥಳವಾಗಬೇಕು.
ಭದ್ರ--ಅಯ್ಯ ತಾಳು, ಈ ಸಮರದಲ್ಲಿ ನೀನೂ ಒಬ್ಬ ಸಾಧಾರಣ ಮನುಷ್ಯನೇ
ಹೊರತು ನಮಗೆ ಸಮಾನಾಧಿಕಾರಿಯೆಂದು ಭಾವಿಸುವುದಿಲ್ಲ.
ವಿಷಜೆ.-- ಆತನನ್ನು ನೀವು ಭಾವಿಸತಕ್ಕ ರೀತಿಯು ನಮ್ಮ ಆತ್ಮಕ್ಕೆ ಒಳಗಾಗಿದೆ.
ಭಾವಾಜೆ, ನೀವು ಇಷ್ಟುದೂರ ಮಾತನಾಡುವುದಕ್ಕೆ ಮುಂಚೆ ನಮ್ಮ ಅಭಿಪ್ರಾ
ಯವನ್ನು ತಿಳಿದುಕೊಂಡಿದ್ದರಾಗಿತ್ತು, ಅವರು ನಮ್ಮ ಸೇನೆಗೆ ಅಧ್ಯಕ್ಷರಾಗಿ
ದ್ದರು ; ನಮಗೂ ನಮ್ಮ ಅಧಿಕಾರಕ್ಕೂ ಪ್ರತಿನಿಧಿಯಾಗಿ ನೇಮಿಸಲ್ಪಟ್ಟಿದ್ದರು.
ಹೀಗಿದ್ದದ್ದರಿಂದ ಇವರು ನಿಮಗೆ ಸಮಾನರೆಂದು ಕರೆಯುವುದಕ್ಕೆ ಸಾಕಾಗಿದೆ.
ನಾಗ.--ಅಪ್ಪು ಬಿಸಿಬಿಸಿಯಾಗಿ ಮಾತಾಡಬೇಡಿ ; ಆತನಿಗಿರುವ ಸ್ವಸಾಮರ್ಥ್ಯದಿಂ
ದಲೇ ನೀನು ಕೊಡುವ ಬಿರುದಾವಳಿಗಿಂತಲೂ ಎಷ್ಟೋ ಅಧಿಕವಾಗಿ ಪ್ರಕಾಶಿ
ಸುತ್ತಿದಾನೆ.
ವಿಷಜೆ.ನನ್ನ ಸ್ಥಾನದಲ್ಲಿ ನಿಂತು, ನನ್ನಿಂದ ಅಧಿಕಾರವನ್ನು ಹೊಂದಿ, ಅತ್ಯುತ್ತ
ಮರಿಗೆ ಸಮಾನರಾಗಿದಾರೆ.
ನಾಗ-- ನಿನ್ನ ಅಂತರಂಗದ ಪ್ರೇಮಕ್ಕೆ ಆತ ಪಾತ್ರನಾಗತಕ್ಕದ್ದು ಅವರಿಗೆ ಉತ್ತಮ.
ವಾದ ಸ್ಥಿತಿ
ವಿಷಜೆ.--ಅನೇಕವೇಳೆ ಹಾಸ್ಯಗಾರರು ಕಾಲಜ್ಞಾನಿಗಳಾಗಿ ಪರಿಣಮಿಸುವದುಂಟು.
ನಾಗ--ಓಹೋ, ಹಾಗೆ ಕಾಣಿಸಿದ ಕಂಣು ಮೂಲಗಷ್ಟೇ ಸರಿ.
ವಿಷಜೆ,-ಅಮ್ಮ, ನನಗೆ ಅಲಸಿಗೆಯಾಗಿದೆ. ಇಲ್ಲದಿದ್ದರೆ, ನನ್ನ ಹೊಟ್ಟೆಯಲ್ಲಿ ತುಂಬಿ
ಪರಿಪೂರ್ಣವಾಗಿರುವ ಅಭಿಪ್ರಾಯದಿಂದ ತಕ್ಕ ಉತ್ತರ ಕೊಡುತ್ತಾ ಇದ್ದೆ.
--------------------------------------------
೩ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ. ೧೧೧
ಸೇನಾಪತಿಗಳ, ಈ ನನ್ನ ಸೇನೆಯನ್ನೂ, ಸೆರೆಸಿಕ್ಕಿದವರನ್ನೂ, ಆಸ್ತಿಯನ್ನೂ
ನೀವು ತೆಗೆದುಕೊಂಡುಹೋಗಿ, ನನ್ನ ಕಡೆಯವರಾಗಿ ವ್ಯವಸ್ಥೆ ಮಾಡಿ. ಈ ಕೋಟೆ
ಕೊತ್ತಳ ತಮ್ಮದು, ಈ ಅರಮನೆ ತಮ್ಮದು, ಲೋಕವೆಲ್ಲಾ ಕಂಡಿರಲಿ ;
ಇವರನ್ನು ನಾನು ನಮ್ಮ ಆಡಳತಗಳನ್ನು ನಡೆಸುವುದಕ್ಕೆ ಯಜಮಾನರನ್ನಾಗಿ
ಮಾಡಿಕೊಂಡಿದ್ದೇನೆ.
ನಾಗ.-- ಅವರನ್ನು ನೀನು ಅನುಭವಿಸಬೇಕೆಂದು ಇದ್ದೀಯೊ ?
ಭದ್ರ--ಅಂಥಾ ಸ್ವಾತಂತ್ರಕ್ಕೆ ನಿನ್ನ ಇಷ್ಟ್ಯವೇನೂ ಪ್ರಕೃತವಾದ್ದಲ್ಲ.
ಕುಮಂತ್ರ.--ನಿಮ್ಮ ಇಷ್ಟವೂ ಸಹ ಪ್ರಕೃತವಾದ್ದಲ್ಲ, ದೇವರು.
ಭದ್ರ--ಪ್ರಕೃತವಾದ್ದು ಕಣೆಲಾ ಭಾರಜ.
ವಿಷಜೆ.-(ಕುಮಂತ ನನ್ನು ಕುರಿತು) ನನ್ನ ಅಧಿಕಾರವೆಲ್ಲಾ ನಿಮ್ಮದೆಂದು ಭೇರಿ
ಕಬ್ಬವಾಗಲಿ.
ಭದ್ರ-- ಇನ್ನೂ ತಡೆಯಿರಿ ; ನ್ಯಾಯವನ್ನು ಕೇಳಿ, ಎಲ ಕುಮಂತ್ರ ; ರಾಜದ್ರೋಹ
ಮಾಡಿದ್ದಕ್ಕಾಗಿ ನಿನ್ನನ್ನು ಕೈಸೆರೆ ಹಿಡಿದಿದ್ದೇನೆ. ಹೀಗೆ ನಿನ್ನನ್ನು ಆಪಾದನೆ
ಮಾಡುವುದೂ ಅಲ್ಲದೆ, (ನಾಗವೇಣಿಯನ್ನು ತೋರಿಸುತಾ) ಭಂಗಾರದ ಮುಲಾ
ಮಾಗಿರುವ ಈ ಸರ್ಪವನ್ನೂ ನಿನ್ನ ಸಂಗಡಲೇ ನಿರ್ಬಂಧಿಸಿದೇನೆ. ಅತ್ತಿಗೆ ನಿಮ್ಮ
ಮನೋಗತದ ವಿಷಯದಲ್ಲಿ, ನನ್ನ ಹೆಂಡತಿಯ ಪ್ರಯೋಜನಕ್ಕೊಸ್ಕರ ಅದು
ನಡೆಯಕೂಡದೆಂದು ನಾನು ಪ್ರತಿಭಟಿಸಬೇಕಾಗಿದೆ. ಅವರಿಬ್ಬರಿಗೂ ಒಳೊಳಗೆ
ಒಪ್ಪಂದ ನಡೆದಿದೆ.
ನಾಗ.--ಇದೊಂದು ಪರಿಹಾಸ್ಯ.
ಭದ್ರ- ಎಲ, ಕುಮಂತ, ನೀನೇನೋ ಆಯುಧಪಾಣಿಯಾದದೀಯೆ. ಕಹಳೆಯ
ಶಬ್ದ ವಾಗಲಿ ; ಪರಿಷ್ಕಾರವಾಗಿ ವ್ಯಕ್ತಪಟ್ಟಿರುವ ನಿನ್ನ ಹೀನಕೃತ್ಯವನ್ನು ಅನೇಕ
ವಾದ ನಿನ್ನ ರಾಜದ್ರೋಹವನ್ನೂ ನಿನಗೆ ತೋರಿಸಿ ತಪ್ಪನ್ನು ನಿನ್ನ ತಲೆಮೇಲೆ
ಹೊರಿಸಲು ಇನ್ನೂ ಯಾರೂ ಬರದಿದ್ದರೂ, (ಕತ್ತಿಯನ್ನು ಹಿರಿಯುತ್ತಾ),
ನಾನು ನಿನ್ನ ಮೇಲೆ ಹಾಕಿರುವ ದೋಷವು ರವೆಯಷ್ಟೂ ಕಡಮೆಯಾಗಿಲ್ಲವೆಂದು
ನನ್ನ ಕತ್ತಿಯಿಂದ ನಿನ್ನ ಹೃದಯದಮೇಲೆ ತೋರಿಸುವುದಕ್ಕೆ ಮುಂಚೆ ನಾನು
ಜಲಪ್ರಾಶನೆ ಮಾಡುವುದಿಲ್ಲ.
ವಿಷಜೆ.--ಅಯೋ ಸಂಕಟ, ಸಂಕಟ !
ನಾಗ.-(ಜನಾಂತಿಕ) ಹಾಗಿಲ್ಲದಿದ್ದರೆ ಔಷಧಗಳಲ್ಲಿ ನನಗೆ ನಂಬಿಕೆಯೇ ತಪ್ಪಿಹೋ
ದೀತು.
ಕುಮಂತ್ರ.--(ತಾನೂ ಕತ್ತಿಯನ್ನು ಹಿರಿಯುತ್ತಾ) ಒಪ್ಪಿದೆ. ನಾನು ರಾಜದ್ರೋ
ಹಿಯೆಂದು ಈ ಪ್ರಪಂಚದಲ್ಲಿ ಯಾವನು ಹೇಳುತ್ತಾನೋ ಅವನು ಸುಳ್ಳು
-----------------------------------------
೧೧೨ ಹೇಮಚಂದ್ರರಾಜ ವಿಲಾಸ. [೫ ನೇ ಅಂಕ.
ಬೊಗಳುತ್ತಾನೆ. ನಿನ್ನ ಕಹಳ ಹಿಡಿಸು. ಯಾವನು ಬರುತಾನೋ ಅವನಿಗೂ
ನಿನಗೂ ಇನ್ನೂ ಯಾರಿಗಾದರೂ ಸರಿಯೇ ಪ್ರತಿಭಟಿಸಿ ನಿಂತು ನನ್ನ ಸತ್ಯವನ್ನೂ
ನನ್ನ ಮಾನವನ್ನೂ ಕಾಪಾಡಿಕೊಳ್ಳುತೇನೆ.
ಭದ್ರ.--ಹೋ, ವಂದಿಮಾಗಧರು !
ಕುಮಂತ್ರ ಹೊ, ವಂದಿಮಾಗಧರು, ವಂದಿಮಾಗಧರು !
ಭದ್ರ.ನಿನ್ನ ಪರಾಕ್ರಮವೆಷ್ಟೋ ಅಷ್ಟನ್ನು ಮಾತ್ರ ನಂಬಿಕೊ, ನಿನ್ನ ಕೈಕೆಳಗೆ
ಅಧೀನದಲ್ಲಿದ್ದ ಸೇನೆಯು ಭಟರೆಲ್ಲಾ ನನ್ನ ಹೆಸರಿನಮೇಲೆ ನೇಮಕವಾದ್ದು; ನನ್ನ
ಹೆಸರಿನಮೇಲೆ ಅವರನ್ನು ಕೆಲಸದಿಂದ ನಿವೃತ್ತಿಸಿದ್ದು.
ವಿಷಜೆ-ಹಾ ! ನನಗೆ ಬಹಳ ಸಂಕಟ ; ಹೆಚ್ಚಾಗುತ್ತಾ ಇದೆ.
ಭದ್ರ.--.ಆಕೆಗೆ ಆಲಸ್ಯವಾಗಿದೆ, ನನ್ನ ಗೂಡಾರಕ್ಕೆ ಕರೆದುಕೊಂಡು ಹೋಗಿ (ವಿಷಜೆ
ಯನ್ನು ಕರೆದುಕೊಂಡು ಹೋಗುವರು.)
ಪ್ರವೇಶ.-ವಂದಿಮಾಗಧರು,
ಇತ್ತಬಾರೈ ಭಟ್ಟರಾಜ, -ತುರಿ ಹಿಡಿಯಿ-ಇದನ್ನು ಆಮೇಲೆ
ಓದತಕ್ಕದ್ದು.
ಸೇನಾಪತಿ-ತುರೀ ಹಿಡಿಯಲಿ ! (ತುರೀ ಶಬ್ದ ವಾಗುವುದು.)
ವಂದಿ.--(ಓದುವನು) " ದುಃಖಕಾರರ ಮಗನೆಂದೆನಿಸಿಕೊಂಡಿರುವ ಕುಮಂತ್ರನು
ಅನೇಕ ಭಾಗದಲ್ಲಿ ಪರಮ ದ್ರೋಹಿ ಎಂದು ದೃಢಪಡಿಸಿಕೊಡತಕ್ಕಂಥಾ ಗೃಹ
ಸ್ಥನು ಈ ಯುದ್ಧರಂಗದಲ್ಲಿ ಯಾರಾದರೂ ಇದ್ದರೆ, ಮೂರುಸಾರಿ ತುರೀ
ಊದಿದಕೂಡಲೆ ಎದುರಿಗೆ ಬಂದು ನಿಲ್ಲಲಿ ; ಹಾಗೆ ಬಂದವನೇ ತನ್ನ ಪಕ್ಷವನ್ನು
ಸಾಧಿಸುವುದರಲ್ಲಿ ಪರಾಕ್ರಮಶಾಲಿ.”
ಕುಮಂತ್ರ.-- ತುರೀ ಹಿಡಿಯರಿ ! (ಮೊದಲನೇ ತುರಿ.)
ವಂದಿ.--ಪುನಃ (ಎರನೇ ತುರಿ.)
ವಂದಿ.ಪುನಃ (ಮೂರನೇ ತುರಿ.)
(ಇದಕ್ಕೆ ಜವಾಬಾಗಿ ಮತ್ತೊಂದು ತುರಿ.)
ಪ್ರವೇಶ--ಶುಕ್ಕಚಂದ್ರ ಆಯುಧಪಾಣಿಯಾಗಿ, ಮುಂದೆ ತುರಿಯನ್ನು
ಹಿಡಿಸಿಕೊಳ್ಳುತಾ.
ಭದ್ರ. ಈತನ ಕಾರೈವೇನು, ತುರೀ ಹಿಡಿದಕೂಡಲೆ ಈತ ಬರುವುದಕ್ಕೆ ನಿಮಿತ್ತ
ವೇನು, ಕೇಳಿ,
-------------------------------------------
4ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ, ೧೧೩
ವಂದಿ.ಅಯ್ಯ, ನೀನು ಯಾರು ? ನಿನ್ನ ಹೆಸರೇನು ? ನಿನ್ನ ವಂಶ ಯಾವುದು ? ಕರೆ
ದಕೂಡಲೆ ಬರುವುದಕ್ಕೆ ನಿಮಿತ್ತವೇನು ?
ಶುಕ್ಲ--ಅಯ್ಯ, ಕೇಳು, ನನ್ನ ಹೆಸರು ಹೋಯಿತು, ದೈಹದ ತೀಕ್ಷ್ಮವಾದ
ಹಲ್ಲು ಅದನ್ನು ಕಡಿದು ತಿಂದು ಬಿಟ್ಟಿತೈ. ಆದಾಗ್ಯೂ ನಾನು ಯಾರಮೇಲೆ
ಕಾದಬೇಕೆಂದು ಬಂದಿದೇನೋ ಅಂಥಾ ಎದುರಾಳಿಗಿಂತಲೂ ಉತ್ತಮವಾದ ವಂಕ
ಉಳ್ಳವನು, ನಾನು,
ಭದ್ರ-ಅಂಥಾ ಎದುರಾಳಿ ಯಾರು ?
ಶುಕ್ಲ.--ದುಃಖಸಾರರ ಮಗ ಕುಮಂತ್ರನೆನ್ನಿಸಿಕೊಂಡಿರುವವನು ಯಾರು ?
ಕುಮಂತ್ರ-ಅವನೇ ಇವ ; ಅವನಿಗೆ ಏನು ಹೇಳುತೀಯೆ ?
ಶುಕ್ಲ--ನಿನ್ನ ಕತ್ತಿ ಹಿರಿದುಕೊ, ನಿನಗೆ ನಿಷ್ಕಲ್ಮಷವಾದ ಹೃದಯವಿದ್ದು ಅದಕ್ಕೆ
ನಾನು ಬೇದವನ್ನುಂಟುಮಾಡಿದರೆ, ನಿನ್ನ ಆಯುಧವಾದರೂ ನಿನ್ನನ್ನು ಕಾಪಾ
ಡುವಹಾಗೆ ನೀನು ಸಿದ್ಧನಾಗು, ಇಗೊ ನನ್ನಾ ಯುಧ, ಇದು ನನ್ನ ವೃತ್ತಿಗೂ
ನನ್ನ ಮಾನಕ್ಕೂ, ನನ್ನ ಪ್ರತಿಜ್ಞೆಗೂ ಮಾನ್ಯವಾಗಿದೆ. ನಿನ್ನ ಶಕ್ತಿ, ಯೌವ್ವನ,
ಪದವಿ, ನಿನಗಾದ ವಿಜಯ, ಹೊಸದಾಗಿ ಪ್ರಾಪ್ತವಾದ ಭಾಗ್ಯ, ನಿನ್ನ ಪರಾಕ್ರಮ,
ಇದು ಯಾವುದು ಇದ್ದರೂ ಲಕ್ಷ್ಯಮಾಡತಕ್ಕವನಲ್ಲ ; ನಾನು ನಿನ್ನನ್ನು ದ್ರೋಹಿ
ಎಂದು ಕರೆಯುವುದೇ ಸಿದ್ಧ : ದೈವ ದ್ರೋಹಿ, ಪಿತೃದ್ರೋಹಿ, ಭ್ರಾತೃದ್ರೋಹಿ,
ಗುಣಶಾಲಿಯಾದ ಈ ರಾಜಕುಮಾರನಿಗೆ ದ್ರೋಹಿ, ನಿನ್ನ ತಲೇಲಿರುವ
ಕೂದಲಿನ ಕೊನೆಯಿಂದ ಹಿಡಿದು, ನಿನ್ನ ಕಾಲು, ಕಾಲಕೆಳಗಿರುವ ಧೂಳಿನ
ವರಿಗೂ ವಿಷಭರಿತನಾದ ದ್ರೋಹಿ. ಹಾಗೆ ಅಲ್ಲ ಎಂದು ಹೇಳು, ನೀನು
ಸುಳ್ಳು ಹೇಳುತಿಯೆಂದು ಯಾವ ನಿನ್ನ ಹೃದಯಕ್ಕೆ ಶೂಲವಾಗಿರುವಂತೆ ನಾನು
ಸಾಧಿಸುತೇನೋ ಅಂಥಾ ಹೃದಯದಮೇಲೆ ನನ್ನ ಖಡ್ಗ, ಈ ಬಾಹುಬಲ, ನನ್ನ
ಪರಾಕ್ರಮ, ಇವುಗಳಲ್ಲವನ್ನೂ ಈಕ್ಷಣವೇ ತೋರಿಸುತ್ತೇನೆ.
ಕುಮಂತ್ರ-- ಅಯ್ಯ, ವಿವೇಕವಾಗಿ ವಿಚಾರಮಾಡಿದರೆ, ನಿನ್ನ ಹೆಸರೇನೆಂದು ಕೇಳ
ಬೇಕು. ಆದರೆ ನಿನ್ನ ಬಹಿರವೆಲ್ಲಾ ಲಕ್ಷಣವಾಗಿ ಪರಾಕ್ರಮವನ್ನು ಸೂಚಿ
ಸುತ್ತಾ ನಿನ್ನ ನಾಲಗೆಯು ಏನೋ ತಕ್ಕಮಟ್ಟಿಗಿರುವ ನಿನ್ನ ಕುಲವನ್ನು
ಹೇಳುತ್ತಾ ಇರುವುದಾದಕಾರಣ, ತೊಂದರೆ ಇಲ್ಲದೆ ಈ ವಿಷಯವನ್ನು ನಾನು
ಇನ್ನೂ ನಿಧಾನಿಸತಕ್ಕದ್ದು ಧರ್ಮ ; ಆದಾಗ್ಯೂ, ನೀನು ಆಡಿದ್ದನ್ನೆಲ್ಲಾ ತುಚ್ಛ
ವಾಗಿ ಕಂಡು ಧಿಕ್ಕಾರಮಾಡುವೆನು, ನನ್ನ ಮೇಲೆ ನೀನು ಹಾಕಿದ ರಾಜದ್ರೋ
ಹದ ಪಾತಕವನ್ನು ನಿನ್ನ ಮೇಲೆ ನಾನು ಚಿಮ್ಮುತ್ತೇನೆ. ಘೋರವಾದ ಅನೃತ
ದಿಂದ ನಿನ್ನ ಹೃದಯವನ್ನು ಮುಚ್ಚುತ್ತೇನೆ. ಈ ನಿನ್ನ ಹಾಳಸುಳ್ಳಾ ಮುಂದೆ
------------------------------------------
೧೧೪ ಹೇಮಚಂದ್ರರಾಜ ವಿಲಾಸ. [೫ನೇ ಅಂಕ
ಬಂದು ಸ್ವಲ್ಪ ಹೊಳೆದಹಾಗಾಯಿತೆ ಹೊರತು ನನ್ನನ್ನು ಸೋಕಲುಕೂಡ ಇಲ್ಲ.
ಆ ಅನೃತವು ಎಂದೆಂದಿಗೂ ಇರಬೇಕಾದ ಸ್ಥಳವನ್ನು ನನ್ನ ಕತ್ತಿಯ ಮೊನೆಯು
ಈ ಕ್ಷಣದಲ್ಲಿ ತೋರಿಸುವುದು, ತುರಿಯಾಗಲಿ (ತುರಿಹಿಡಿಯುವರು ; ಅವರಿ
ಬ್ಬರೂ ಕಾಳಗವಾಡುತಾರೆ, ಕುಮಂತ ಬೀಳತಾನೆ.)
ಭದ್ರ.-- ಪ್ರಾಣವನ್ನು ತೆಗೆಯದೆ ಬಿಟ್ಟುಬಿಡು, ಬಿಟ್ಟುಬಿಡು.
ನಾಗ.--ಇದೆಲ್ಲಾ ಕಾಪಟ್ಯ, ಕುಮಂತ, ಅಜ್ಞತಕುಲಗೋತ್ರನಾದ ಎದುರಾಳಿನ ದೋ
ಷಾರೋಪಣೆಗೆ ನೀನು ಉತ್ತರಕೊಡಬೇಕಾದ್ದೇನೂ ಇಲ್ಲ. ನಿನ್ನನ್ನು ಜೈಸಲಿಲ್ಲ.
ನಂಬಿಸಿ ಮೋಸಮಾಡಿದರು.
ಭದ್ರ--ಎಲೆ ತಾಟಕಿ, ನಿನ್ನ ಬಾಯಿ ಮುಚ್ಚು; ಇಲ್ಲದಿದ್ದರೆ, ಈ ಕಾಗದದಿಂದ
ಅದನ್ನು ಮುಚ್ಚಿಯೇನು, ಹಿಡಿಯಲಾ, ನಿನ್ನ ಹೆಸರಿನ ಅರ್ಥಕ್ಕಿಂತಲೂ ಹೀನ
ವಾದ ಗುಣವುಳ್ಳವನೆ, ನಿನ್ನ ದುರ್ಮಾರ್ಗದ ಚರಿತ್ರೆಯನ್ನು ನೀನೇ ಓದು.
ಎಲೆ ಹೆಂಗಸೆ, ಹರಿಯಕೂಡದು. ನೀನೂ ಈ ವಿಷಯವನ್ನು ಬಲ್ಲೆ ಎಂದು
ನನಗೆ ತೋರುವುದು. (ಕುಮಂತ್ರನಕೈಗೆ ಕಾಗದವನ್ನು ಕೊಡುವನು.)
ನಾಗ.-- ನಾನು ಕಂಡಿದ್ದರೇನು ? ರಾಜ್ಯಕ್ಕೆ ನಾನು ರಾಣಿ, ನ್ಯಾನವೆಲ್ಲಾ ನಾನೇ
ವಿಧಾಯಿಸಿದ್ದು, ನಿನಗೆ ಸಂಬಂಧವಿಲ್ಲ. ನಾನು ಮಾಡಿದ ಕೆಲಸಕ್ಕೆ ನನ್ನನು
ಮಾತನಾಡಿಸುವವರು ಯಾರಿದಾರೆ ?
ಭದ-- ಹೋ ! ಏನು ಆಸುರವಾಗಿದೆ ! ಈ ಕಾಗದದ ಸಂಗತಿಯನ್ನು ನೀನು
ಬಲ್ಲೆಯ ?
ನಾಗ--ನಾನು ಕಂಡದ್ದನ್ನು ನೀನೇನುಹೇಳುವುದು ? (ನಿಷ್ಕ್ರಮಣ.)
ಭದ್ರ,-- ಅವಳಹಿಂದೆ ಹೋಗಿ, ನಿರಾಶೆಯಾಗಿ ಹೋಗುತಾ ಇದಾಳೆ. ಸ್ಪಲ್ಪ ಹದ್ದಿ
ನಲ್ಲಿಡಿ.
ಕುಮಂತ್ರ --ನೀನು ನನ್ನಲ್ಲಿ ಆರೋಪಿಸಿದ್ದನ್ನೆಲ್ಲಾ ನಾನು ಮಾಡಿದೆ. ಅಷ್ಟೇ ಅಲ್ಲ,
ಇನ್ನೂ ಎಷ್ಮೆಪೈ ಮಾಡಿದ್ದೇನೆ. ಅದೆಲ್ಲಾ ಕಾಲಕ್ರಮೇಣ ಗೊತ್ತಾಗುವುದು,
ಅದೂ ಕಳದುಹೋಯಿತು, ನಾನೂ ಕಳೆದುಹೋಗುತ್ತೇನೆ. ಇದು ಹಾಗಿರಲಿ,
ನನ್ನನ್ನು ಈ ಗತಿಗೆ ತಂದಿಟ್ಟೆಯಲ್ಲಾ ನೀನು ಯಾರು ? ಹೇಳು. ನೀನು ಮನೆ
ತನಸ್ಥನಾದರೆ ನಿನ್ನನ್ನು ಕ್ಷಮಿಸಿಬಿಡುತೇನೆ.
ಶುಕ್ಲ.---ಧರ್ಮಗುಣವು ನಮ್ಮಿಬ್ಬರಿಗೂ ಸಮಸಮನಾಗಿರಲಿ. ಮನೆತನದಲ್ಲಿ ನಿನ
ಗಿಂತಲೂ ನಾನು ಕಡಮೆಯಾದವನಲ್ಲ. ನಾನು ನಿನಗಿಂತಲೂ ಹೆಚ್ಚಾಗಿದ್ದರೆ,
ನೀನು ನನಗೆ ಅಷ್ಟೂ ಅಷ್ಟು ಹೆಚ್ಚಾಗಿ 'ವಿಪತ್ತನ್ನು ತಂದಿಟ್ಟೆ, ನನ್ನ ಹೆಸರು
-------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೧೧೫
ಶುಕ್ಲಚಂದ್ರ : ನಿಮ್ಮ ತಂದೆಯ ಮಗ .ಲೋಕರಕ್ಷಕನಾದ ದೇವರು ಅನ್ಯಾ
ಯವನ್ನು ಸಹಿಸಲಾರ; ನಾವು ಆಟಕ್ಕೆ ಮಾಡುವ ಕೇಡೇ ನಮಗೆ ಮಾಟವಾಗು
ವಂತೆ ಮಾಡಿ ನಿಮ್ಮನ್ನು ನಾಶಮಾಡುವನು, ಹೇಯವಾದ ಯಾವ ನರಕದಲ್ಲಿ
ನಿಮ್ಮ ತಂದೆ ನಿನ್ನ ನ್ನು ಉತ್ಪತ್ತಿ ಮಾಡಿದನೊ, ಅಂಥಾ ನಿನ್ನ ಜನ್ಮಸ್ಥಾನವೇ
ಆತನ ಕಂಣಿಗೆ ಮೂಲವಾಯಿತು.
ಕುಮಂತ್ರ.-- ಸರಿಯಾಗಿ ಆಡಿದೆ ; ಇದೆಲ್ಲಾ ನಿಶ್ಚಯ, ಅದೃಷ್ಟ ಚಕ್ರವು ಪೂರ್ತಿ
ಯಾಗಿ ಬಂದು ಸುತ್ತು ಸುತ್ತಿಕೊಂಡುಬಂತು : ನಾನು ಇಲ್ಲಿ ಬಿದ್ದಿದೇನೆ.
ಭದ್ರ.--.ಅಯ್ಯ, ನಿನ್ನ ನಡೆಗೆಲ್ಲಿಯೇ ರಾಜಲಕ್ಷಣ ಗಂಭೀರವಿದ್ದ ಹಾಗೆ
ನನಗೆ ಕಾಣಿಸಿತೈಯ್ಯ, ನಾನು ನಿನ್ನನ್ನು ಆಲಿಂಗನಮಾಡಿಕೊಳ್ಳಬೇಕು.
ನಿನ್ನಲ್ಲಿಯಾಗಲಿ ನಿಮ್ಮ ತಂದೆಯಲ್ಲಿಯಾಗಲಿ ನನಗೆ ಏನಾದರೂ ದ್ವೇಷವಿದ್ದರೆ,
ಅದಕ್ಕಾಗಿ ವ್ಯಸನವು ನನ್ನ ಹೃದಯವನ್ನು ಹಿದ್ದು ಬಿಡಲಿ.
ಶುಕ್ಲ-ಗುಣಾಢರಾದ ರಾಜಪುತ್ರರೆ, ಅದನ್ನು ನಾನು ಬಲ್ಲೆ.
ಭದ್ರ.--ನೀನು ಎಲ್ಲಿ ಅವಿತುಕೊಂಡಿದ್ದೆ ? ನಿಮ್ಮ ತಂದೆಗೆ ಉಂಟಾದ ದುರ್ದಶೆ ನಿನಗೆ
ಹ್ಯಾಗೆ ಗೊತ್ತಾಯಿತು ?
ಶು -ಆಕಾಲದಲ್ಲಿ ಅವರ ಶುಶೂಷೆ ಮಾಡುವುದರಿಂದ ಗೊತ್ತಾಯಿತು, ಬುದ್ಧಿ,
ಹಾಗಾದರೆ ಒಂದು ಸಂಣ ಕಥೆಯನ್ನು ಕೇಳಬೇಕು. ಅದನ್ನು ಹೇಳುವಾಗ್ಗೆ
ನನ್ನ ಎದೆ ಒಡೆದುಹೋಗುವುದು, ನನ್ನನ್ನು ಹಿಡಿದು ಛೇದಿಸಬೇಕೆಂದು
ಕೊಟ್ಟ ಅಪ್ಪಣೆ,-ಅಯ್ಯೋ, ಈ ನಮ್ಮ ಜನ್ಮದಲ್ಲಿ ಏನು ರುಚಿ ಇದೆ ! ಒಂದು
ಸಾರಿ ತಟ್ಟನೆ ಸಾಯುವುದಕ್ಕೆ ಬದಲಾಗಿ ಕ್ಷಣೇಕ್ಷಣೇ ಮರಣಭಯವನ್ನು ಅನು
ಭವಿಸುತ್ತೇವೆ, ಹಾಗೆ ಕೊಟ್ಟ ಅಪ್ಪಣೆಯು ನನ್ನ ವೇಷವನ್ನು ಬದಲಾಯಿಸಿ
ಕೊಂಡು ಹುಚ್ಚ ಹಾಕಿಕೊಳವ ಚಿಂದಿಯನ್ನು ಹಾಕಿಕೊಂಡು, ನಾಯಿಗೂ
ಬೇಡದ ಬಾಳನ್ನು ಬಾಳುವಹಾಗೆ ನನಗೆ ಕಲಿಸಿತು. ಇಂಥಾ ಅವಸ್ಥೆಯಲ್ಲಿರು
ವಾಗ, ಹೊಸದಾಗಿ ಕಂಣು ಹೋಗಿ ರಕ್ತ ಸುರಿಯುತ್ತಾ ಇದ್ದ ನಮ್ಮ ಅಪ್ಪಾಜಿ
ಯನ್ನು ಕಂಡೆ. ಅವರಿಗೆ ಊರುಗೋಲಾದೆ; ಕೈಹಿಡಿದು ಕರೆದುಕೊಂಡು ಹೋದೆ;
ಅವರಿಗೋಸ್ಕರ ಬಿಕ್ಷೆ ಬೇಡಿದೆ ; ನಿರಾಶೆಯಾಗಿ ಹೋಗಿ ದೇಹವನ್ನು ಬಿಡಬೇಕೆಂದಿ
ದ್ದವರನ್ನು ಕಾಪಾಡಿದ್ದೆ. ಅಯ್ಯೋ ಅಪರಾಧವೆ ! ನಾನು ಇಂಥವನೆಂದು ಆಗ
ವರಿಗೆ ತೋರ್ಪಡಿಸಿಕೊಳ್ಳಲಿಲ್ಲ. ಕೊನೆಗೆ ಈಗ ಅರ್ಧಗಂಟೆಗೆ ಮುಂಚೆ ನಾನು
ಆಯುಧಪಾಣಿಯಾದೆ, ಆಗ ನಾನು ಇಂಥವನೆಂದು ಅವರಿಗೆ ತಿಳಿಸಿಕೊಂಡ, ಇಂಥಾ
ವಿಜಯವನ್ನು ಹೊಂದಬೇಕೆಂಬ ಆಶೆ ಇದ್ದಾಗ್ಯೂ ಹೊಂದುತೇನೆಂಬ ಧೈರ್ಯೈ
ವಿಲ್ಲದೆ ನನ್ನನ್ನು ಹರಿಸ ಬೇಕೆಂದು ಕೇಳಿಕೊಂಡೆ. ಮೊದಲಿನಿಂದ ಕೊನೆತನಕಲೂ
----------------------------------------------
೧೦೬ ಹೇಮಚಂದ್ರರಾಜ'ವಿಲಾಸ, [೫ನೇ ಅಂಕ,
ನಾನು ಪಟ್ಟ ಕಪ್ಪವನ್ನೂ ಅಲೆದ ಅಲೆತವನ್ನೂ ಅವರಿಗೆ ಹೇಳಿದೆ. ಆದ
ರೇನುಪ್ರಯೋಜನ ? ಅವರಿಗೆ ತಲ್ಲಣವನ್ನು ತಂದಿಟ್ಟಿ; ದುಃಖವೂ ಸಂತೋ
ಪವೂ ಎರಡೂಸೇರಿ ನಾನುತಾನೆಂದು ಅವರ ಮನಸ್ಸಿನಲ್ಲಿ ಸಣಸಾಡಲು ಆ ಎಳೆ
ದಾಟವನ್ನು ತಡೆಯಲು ಶಕ್ತಿ ಸಾಲದೆ, ಅವರ ಯದೆ ಒಡೆದುಹೋಯಿತು.
ಕುಮಂತ್ರ--ನೀನು ಹೇಳಿದ್ದನ್ನು ಕೇಳಿ ನನಗೂ ದುಃಖಬರುತ್ತಿದೆ. ಒಂದುವೇಳೆ
ಇದರಿಂದ ಒಳ್ಳೇದಾದರೂ ಆಗಬಹುದು. ಮುಂದಕ್ಕೆ ಹೇಳು, ಇನ್ನೂ ಎಷ್ಟೊ
ಹೇಳಬೇಕಾದ್ದು ಇರುವಹಾಗೆ ಕಾಣಿಸಿಕೊಳ್ಳುತ್ತೀಯ.
ಭದ್ರ.--ಇನ್ನೆಷ್ಟು ಹೇಳಿದರೂ, ಅಷ್ಟೂ ಅಷ್ಟು ದುಃಖಕರವಾಗಿದೆ; ಹೇಳಬೇಡ,
ಇದನ್ನು ಕೇಳಿ ನನ್ನ ಕಣ್ಣಿನಲ್ಲಿ ಆಗಲೇ ನೀರುಬರುತಾಇದೆ.
ಶುಕ್ಲ--ದುಃಖವನ್ನು ಸಹಿಸಲಾರದವರಿಗೆ ಇಲ್ಲಿಗೆ ಬಂದು ಘಟ್ಟ ಕಳೆಯಿತೆಂದು
ತೋರಬಹುದು. ಆದರೆ ಇನ್ನು ಸ್ವಲ್ಪ ಹೆಚ್ಚಾಗಿ ಹೇಳಿದ ಪಕ್ಷದಲ್ಲಿ ದುಃಖವು
ಉಕ್ತಿ ಮೇರೆದಪ್ಪಿ ಹೋಗುವುದು, ಹೀಗೆ ನಾನು ಗಟ್ಟಿಯಾಗಿ ಗೋಳಾಡುತಿರು
ವಾಗ, ನನ್ನ ಸಮೀಪಕ್ಕೆ ಒಬ್ಬ ಮನುಷ್ಯ ಎಂದು ನನ್ನ ದುರವಸ್ಥೆಯನ್ನು
ನೋಡಿ, ನನ್ನ ಹೀನವಾದ ಸಹವಾಸದಲ್ಲಿ ನಿಲ್ಲಲಾರದೆ ಹೋದ. ಆದರೆ ಹೀಗೆ
ದುಃಖಪಡುತಿರುವವನು ಇಂಥವನೆಂದ ತಿಳಿದಕೂಡಲೆ ಬಲವಾದ ಆತನ ಕೈಗ
ಳಿಂದ ನನ್ನ ಕತ್ತನ್ನು ಬಿಮ್ಮನೆ ಕಟ್ಟಿಕೊಂಡು ದಿಕ್ತಟಗಳೇ ಒಡೆದುಹೋಗುವ
ಹಾಗೆ ಅತ್ತು, ನಮ್ಮ ಪ್ರಾಜೆಯಮೇಲೆ ಬಿದ್ದು ಹೊರಳಾಡಿ ಗೋಳಿಡುತ್ತಾ,
ಅತ್ಯಂತ ವ್ಯಾಕುಲವನ್ನುಂಟುಮಾಡುವಂಥಾ ಮತ್ತು ಈ ಕಿವಿ ಎಂದಿಗೂ ಕೆಳ
ಬಾರದಂಥಾ ವಿಪತ್ತು ತನಗೂ ಧೊರೆಗೂ ಸಂಭವಿಸಿದ್ದನ್ನು ಹೇಳಿದನು, ಇದು
ಜ್ಞಾಪಕಕ್ಕೆ ಬಂದಹಾಗೆಲ್ಲಾ ಆತನ ದುಃಖ ಬಲವಾಯಿತು ; ಎದೆ ಒಡೆಯುತ
ಬಂತು, ಪ್ರಜ್ಞೆ ತಪ್ಪಿತು, ಆಗ ಎರಡುಸಾರಿ ತುರಿಯ ಶಬ್ದವಾಯಿತು, ಮೂರ್ಛೆ
ಹೋಗಿ ಬಿದ್ದಿದ್ದ ಆತನನ್ನು ಅಲ್ಲಿಯೇ ಬಿಟ್ಟು ಹೊರಟುಬಂದೆ.
ಭದ್ರ.-- ಆದರೆ ಆತ ಯಾರು ?
ಶುಕ್ಲ---ನಿಷ್ಕಂಟಕ ಸ್ವಾಮಿ, ದೇಶಭ್ರಷ್ಮನಾಗಿಹೋದ ನಿಷ್ಕಂಟಕ. ಈತನು
ರೂಪ ಮರಿಸಿಕೊಂಡು, ತನ್ನ ಶತ್ರುವೆನಿಸಿಕೊಂಡಿದ್ದ ಧೊರೆಯ ಹಿಂದೆ ಹಿಂದೆ
ಸುತ್ತಿ ಗುಲಾಮರಿಗೂ ಅನುಚಿತವಾದ ಸೇವೆಯನ್ನೆಲ್ಲಾ ಮಾಡಿದನು.
ಪ್ರವೇಶ-ದೊಡ್ಡ ಮನುಷ್ಯ ರಕ್ಷ ತೊಟ್ಟಿಕ್ಕುವ ಚೂರಿಯನ್ನು
ಹಿಡಿದು ತರುತಾ,
ದೊಡ್ಡ,--ಅಯ್ಯೋ! ದಿಕ್ಕಿಲ್ಲ, ದಿಕ್ಕಿಲ್ಲವೆ ! ಏನುಗತೀ ?
ಶುಕ್ರ-ಏನೈ ! ಎಂಥಾ ದಿಕ್ಕು?
----------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೧೧೭
ಭದ್ರ.-- ಮಾತನಾಡೈಯ್ಯ.
ಶುಕ್ಲ-- -ಈ ರಕ್ತವಾಗಿರುವ ಚೂರಿಗೆ ಏನರ್ಥ ?
ದೊಡ್ಡ--ಅಯ್ಯೋ, ಬಿಸಿಬಿಸಿಯಾಗಿದೆ ; ಆಕೆಯ ಹೃದಯವನ್ನು ಹೊಕ್ಕು ಈಚೆಗೆ
ಬಂತಲ್ಲಾ! ಸತ್ತುಹೋದಳಲ್ಲಾ!
ಭದ್ರ.--ಯಾರೈಯ್ಯ ಸತ್ತವರು ? ಮಾತನಾಡು.
ದೊಡ್ಡ-ತಮ್ಮ ಪತ್ನಿ, ಸ್ವಾಮಿ, ತಮ್ಮ ಪತ್ನಿ, ಆಕೆಯು ತನ್ನ ತಂಗಿಗೆ : ವಿಷಾ
ಹಾಕಿ ಕೊಂದಳು. ಆಕೆಯ ಹೀಗೆ ತಾನು ಮಾಡಿದ್ದುಂಟೆಂದು ಒಪ್ಪಿಕೊಂಡಳು.
ಕುಮಂತ್ರ - ಅವರಿಬ್ಬರಿಗೂ ನಾನು ಒಲಿಯುತೇನೆಂದು ಒಪ್ಪಿಕೊಂಡಿದ್ದೆ. ಈಗ
ನಾವು ಮೂರು ಜನವೂ ಏಕಕಾಲದಲ್ಲಿ ಸಮಾಗಮಮಾಡುವೆವು.
ಶುಕ್ಲ.--ನಿಷ್ಕಂಟಕರು ಬಂದರು.
ಭದ್ರ.-- ಸಾಯಲಿ, ಇರಲಿ, ಅವರ ಶರೀರವನ್ನು ತೆಗೆದುಕೊಂಡು ಬನ್ನಿ, ಯಾವ
ದೈವಾಜ್ಞೆಗೆ ನಾವು ಗಡಗಡನೆ ನಡುಗುವೆವೊ ಅದು ಈ ವಿಷಯದಲ್ಲಿ ನಮ್ಮಲ್ಲಿ
ಎಳ್ಳಷ್ಟು ಪರಿತಾಪವನ್ನೂ ಹುಟ್ಟಿಸಿಲ್ಲ.
(ದೊಡ್ಡ ಮನುಷ್ಯ ನಿಷ್ಕ್ರಾಂತ.)
ಪ್ರವೇಶ-ನಿಷ್ಕಂಟಕ.
ಭದ್ರ--ಇವರೇ ? ತಕ್ಕ ಮಯ್ಯಾದೆಯನ್ನು ಮಾಡುವುದಕ್ಕೆ ಕಾಲ ಸರಿಯಾಗಿ
ಲ್ಲವಲ್ಲಾ!
ನಿಷ್ಕಂಟಕ-- ನನ್ನೊಡೆಯನಾದ ಮಹಾರಾಜರಿಗೆ ಈ ರಾತ್ರೆ ಕೊನೇ ವಂದನೆಯನ್ನು
ಮಾಡಬೇಕೆಂದು ಬಂದೆ ಅವರು ಇಲ್ಲಿಲ್ಲವೆ ?
ಭದ್ರ,--ಮುಖ್ಯವಾದ ಸಂಗತಿಯನ್ನೇ ಮರೆತುಬಿಟ್ಟೆವು. ಎಲ ಕುಮಂತ್ರ, ಧೊರೆ
ಎಲ್ಲಿ ? ಇಂದುಕಲೆ ಎಲ್ಲಿ ? ಹೇಳು, ನಿಷ್ಕಂಟಕರೆ ಈ ವ್ಯಕ್ತಿಯನ್ನು
ನೋಡಿರಿರ ?
(ನಾಗವೇಣಿ ವಿಷಜೆಯರ ಶವವನ್ನು ತರುವರು.)
ನಿಷ್ಕಂಟಕ--ಹಾ ! ಹಾ! ಯಾಕೆ ಹೀಗಾಯಿತು ?
ಕಮಂತ್ರ--ಆದರೂ ಕುಮಂತ್ರನಮೇಲೆ ಅನುರಾಗವಿತ್ತು. ನನಗೋಸ್ಕರ ಒಬ್ಬಳು
ಮತ್ತೊಬ್ಬಳಿಗೆ ವಿಷಾಹಾಕಿದಳು. ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂ
ಗಳು .
ಭದ್ರ.-- ಹಾಗೆಯೇಸರಿ: ಅವರ ಮುಖವನ್ನು ಮುಚ್ಚಿ.
------------------------------------------------
೧೧೮ ಹೇಮಚಂದ್ರರಾಜ ವಿಲಾಸ. [೫ನೇ ಅಲಕ.
ಕುಮಂತ್ರ-- ನನಗೆ ಉಸಿರು ಹತ್ತಿ ಬರುತ್ತಿದೆ. ನನ್ನ ದುಸ್ವಭಾವವು ಆಸ್ಪದ
ಕೊಡದಿದ್ದಾಗ್ಯೂ, ಸ್ವಲ್ಪ ಒಳ್ಳೇದನ್ನ ಮಾಡಬೇಕೆಂದಿದ್ದೇನೆ. ಜಾಗ್ರತೆಯಾಗಿ
ಕಳುಹಿಸಿ, ಸಂಕ್ಷೇಪವಾಗಿ ಬರೆಯಿರಿ, ಕಾರಾಗೃಹಕ್ಕೆ ಧೊರೆಯು ಪ್ರಾಣವನ್ನೂ
ಇಂದುಕಲೆಯ ಪ್ರಾಣವನ್ನೂ ತೆಗೆದುಬೇಕೆಂದು ಬರೆದಿದ್ದೇನೆ. ಸಕಾಲದಲ್ಲಿ
ಹೋಗಲಿ.
ಭದ್ರ-- ಓಡು, ಓಡು, ಅಯ್ಯೋ ಓಡಿಹೋಗಯ್ಯ.
ಶುಕ್ಲ--ಸ್ಯಾಮಿಯಾರಬಳಿಗೆ ಹೋಗಲಿ ? ಯಾರು ಈ ಕೆಲಸಕ್ಕೆ ನೇಮಕವಾಗಿದ್ದಾರೆ?
ಎಲಾ, ನಿನ್ನ ಗುರುತನ್ನು ಏನಾದರೂ ಕಳುಹಿಸು.
ಕುಮ೦ತ್ರ-- , ಸರಿಯಾದ ಯೋಚನೆ. ನನ್ನ ಕತ್ತಿಯನ್ನು ತೆಗೆದುಕೊ, ಅದನ್ನು
ಕೊಂಡುಹೋಗಿ ಸೇನಾನಾಯಕನಿಗೆ ಕೊಡು.
ಭದ್ರ-- ಅಯ್ಯ ಜಾಗ್ರತೆಯಾಗಿ ಹೋಗು, ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವು
ದಕ್ಕೆ ಹೋಗುವಹಾಗೆ ಹೋಗೈ.
(ಶುಕ್ಲಚಂದ್ರ ನಿಷ್ಕ್ರಾಂತ.)
ಕುಮಂತ್ರ--ಇಂದುಕಲೆಯನ್ನು ಸೆರೆಮನೆಯಲ್ಲಿ ನೇಣುಹಾಕುವುದಕ್ಕಾಗಿ ನಿನ್ನ
ಹೆಂಡತಿಯಿಂದಲೂ ನನಿಂದಲೂ ಆಜ್ಞಪ್ತನಾಗಿದಾನೆ. ಮೇಲೂ ತನಗೆ ಉಂಟಾದ
ನಿರಾಶೆಯ ಈ ದೋಷಕ್ಕೆ ಕಾರಣವೆಂದು ತೋರಿಸುವುದಕ್ಕಾಗಿ, ತಾನೇ ಆತ್ಮ
ಹತ್ಯವನ್ನು ಮಾಡಿಕೊಂಡಳು ಎಂದು ಕಾಣುವಂತೆ ಹೀಗೆ ಆಜ್ಞಾಪಿಸಿದೇವೆ.
ಭದ್ರ.-- ದೇವರು ಆಕೆಯನ್ನು ಕಾಪಾಡಿ ಪ್ರಾಣವನ್ನು ಉಳಿಸಿದರಾದೀತಲ್ಲಾ!
ಸ್ವಲ್ಪ ಹೊತ್ತು ಇವನನ್ನು ಆಕೆಗೆ ಹೊತ್ತುಕೊಂಡುಹೋಗಿ.
(ಕುಮಂತ್ರನನ್ನು ಹೊತ್ತುಕೊಂಡುಹೋಗುವರು.)
ಪ್ರವೇಶ-- ಧೊರೆ ತನ್ನ ತೋಳಿನಮೇಲೆ ಇಂದು ಕಲೆಯ ಹೆಣವನ್ನು
ಎತ್ತಿಕೊಂಡು, ಹಿಂದೆ, ಶುಕ್ಲಚಂದ್ರ, ಸೇನಾನಾಯಕ
ಇತರ ಪರಿವಾರ.
ಧೊರೆ--ಬೊಗಳಿ, ಬೊಗಳಿ, ಬೊಗಳಿರೋ, ಬೊಗಳಿ ! ಎಲಾ, ಕಲ್ಲುಮನುಷ್ಯರಾ !
ನಿಮಗಿರುವಹಾಗೆ ನಾಲಗೆಯ ಕಣ್ಣೂ ನನಗಿದ್ದರೆ, ಈ ಬ್ರಹ್ಮಾಂಡ ಕಟಾ
ಹವೇ ಒಡೆದುಹೋಗುವಂತೆ ಅರಿಟಿಕೊಳ್ಳುತಿದ್ದೆನಲ್ಲಾ! ಹೋಗಿಬಿಟ್ಟಳು, ಸತ್ತು
ಹೋಗಿಬಿಟ್ಟಳು ! ಪ್ರಾಣ ಇರುವ ಗುರುತನ್ನೂ ಸತ್ತ ಗುರುತನ್ನೂ ನಾನು
ಬಲ್ಲೆ. ಸತ್ತು ಈ ನೆಲದಹಾಗೆ ಆಗಿಹೋದಳಲ್ಲಾ! ಒಂದು ಕನ್ನಡಿಯನ್ನು
-----------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ. ೧೧೯
ತಂದುಕೊಡಿ. ಅವಳ ಉಸುರಿನಿಂದ ಆರು ಏನಾದರೂ ಮಂಕಾದರೆ, ಆಕೆಗೆ
ಪ್ರಾಣವಿದೆ.
ನಿಷ್ಕಂಟಕ.-ಹಾ ! ಹಾ! ಇದೇ ಸಂಸಾರಸುಖದ ಫಲವೆ ?
ಶುಕ್ಲ.--ಇಲ್ಲ, ಆ ಸಂಸಾರಭಯದ ಪ್ರತಿಬಿಂಬವೆ ?
ಭದ್ರ--ಆಕಾಶವೇ ಕಸಿದುಬಿದ್ದು ಚರಾಚರ ವಸ್ತುಗಳಲ್ಲಾ ನಾಶವಾಗಲಿ !
ಧೊರೆ.--ಈ ಗರಿ ಅಲ್ಲಾಡುವುದು ; ಬದುಕಿದಾಳೆಯೊ ! ಹಾಗಾದರೆ ನನಗೆ ಪ್ರಾಪ್ತ
ವಾದ ಸಮಸ್ತ ದುಃಖವೂ ನಿವಾರಣವಾಗುವುದಕ್ಕೆ ಇದು ಒಂದು ಮಾರ್ಗವಿದೆ.
ನಿಷ್ಕಂಟಕ.- (ಬಗ್ಗಿ ನಮಸ್ಕಾರಮಾಡುತಾ) ನನ್ನೊಡೆಯ !
ಧೊರೆ.--ಆಚೆಗೆ ಹೋಗು, ದಯಮಾಡಿ ಆಚೆಗೆ ಹೋಗು.
ಶುಕ್ಲ.--ಮಹಾಸ್ವಾಮಿ, ಇವರು ಆ ಗಂಭೀರಶಾಲಿಗಳಾದ ನಿಷ್ಮೆಂಟಕರು ; ತಮ್ಮ
ಮಿತ್ರರು.
ಧೊರೆ.-ನೀವು ನಾಶವಾದಿರಿ, ಎಲ್ಲರೂ ಘಾತುಕರು, ದ್ರೋಹಿಗಳು ! ನಾನು ಅವ
ಳನ್ನು ಉಳಿಸಿಕೊಳ್ಳಬಹುದಾಗಿತ್ತು. ಅಯ್ಯೋ ಇನ್ನೆನು ? ಹೋಗಿಬಿಟ್ಟಳು !
ಇಂದುಕಲೆ, ಸ್ವಲ್ಪ ತಾಳು, ಹಾ! ಅದೇನು ನೀನು ಎಂದದ್ದು ? ಯಾವಾಗಲೂ
ಆಕೆಯ ಕಂಣು ಮೃದುವಾಗಿಯೂ ನುಡಿ ನಿಧಾನವಾಗಿಯೂ ಗಂಭೀರವಾಗಿ
ಇತ್ತು; ಸಿ ಯಲ್ಲಿ ಇದು ಎಂಥಾ ಉತ್ತಮವಾಗಿರುವ ಆಭರಣ ಪ್ರಾಯವಾದ
ಗುಣ ! ನಿನ್ನನ್ನು ನೇಣುಹಾಕುತ್ತಾ ಇದ್ದ ಘಾತುಕನನ್ನು ನಾನು ಕೊಂದೆ.
ಸೆನಾ.-ಸ್ವಾಮಿ ಹವುದು, ಅವನನ್ನು ಕೊಂದರು.
ಧೊರೆ -ಹವುದೋ ಅಲ್ಲವೋ, ಏನೆಲಾ ? ನನ್ನ ಕೂರವಾವ ವಜ್ರಾಯುಧದಿಂದ ಅವ
ರುಗಳನ್ನು ಛಂಗನೆ ಹಾರಿಸುತ್ತಾ ಇದ್ದರೂ ಒಂದು ಕಾಲವಾಯಿತು. ಈಗೇನು
ಮಾಡಿಯೇನು ? ಮುದುಕನಾದೆ. ಈ ನನ್ನ ಕಷ್ಟವೇ ನನ್ನನ್ನು ಹಾಳು
ಮಾಡಿತು. ನೀನು ಯಾರು ? ನನಗೆ ದೃಷ್ಟಿಪಾಟವ ಶ್ರೇಷ್ಮವಾಗಿಲ್ಲ : ನಾನು
ಖಂಡಿತವಾಗಿ ಹೇಳುತೇನೆ.
ನಿಷ್ಕಂಟಕ.--ಅದೃಹ್ಮವು ಯಾರಾದರೂ ಇಬ್ಬರಿಗೆ ಮೊದಲು ಸಂಪತ್ತನ್ನು ಕೊಟ್ಟು
ಆಮೇಲೆ ಆಪತ್ತಿಗೆ ಗುರಿಮಾಡಿದೆನೆಂದು ಪ್ರತಿಷ್ಟೆಯನ್ನು ಕೊಚ್ಚಿಕೊಳ್ಳುತಿದ್ದರೆ,
ಅಂಥಾ ಇಬ್ಬರಲ್ಲಿ ಒಬ್ಬನನ್ನೆದುರಿಗೆ ನಿಂತಿದಾನೆ, ಒಬ್ಬ ನಿಮ್ಮೆದುರಿಗೆ ನಿಂತಿದಾನೆ.
ಧೊರೆ.-ಈ ದೃಷ್ಟಿ ಮಂಜಾಗಿದೆ, ನೀನು ನಿಷ್ಕಂಟಕನಲ್ಲಿ ?
ನಿಷ್ಕಂಟಕ-ಬುದ್ದಿ ಅವನ ಸ್ವಾಮಿಯ ಪಾದಸೇವಕ, ಸ್ವಾಮಿಯ ಸೇವಕ
ನಾದ ಕಾಯಕ ಎಲ್ಲಿ ?
----------------------------------------
೧೨೦ ಹೇಮಚಂದ್ರರಾಜ ವಿಲಾಸ [೫ನೇ ಅಂಕ
ಧೊರೆ.-ಅವ ಒಳ್ಳಮನುಷ್ಯ, ನಾನು ಅದನ್ನು ಹೇಳಬಲ್ಲೆ, ಆವ ಚೆನ್ನಾಗಿ
ಹೊಡೆಯುವ, ಜಾಗ್ರತೆಯಾಗಿಯೂ. ಅವ ಸತ್ತು ಮಣ್ಣಾಗಿಹೋದ.
ನಿಷ್ಕಂಟಕ-ಇಲ್ಲ. ಮಹಾಸ್ವಾಮಿ ; ಆ ಮನುಷ್ಯ ನಾನೇ ?
ಧೊರೆ -ಅದು ನೆಟ್ಟಗೆ ಕಾಣುತ್ತಿದೆ.
ನಿಷ್ಕಂಟಕ ತಮಗೆ ಸಂಭವಿಸಿದ ಕಷ್ಟದೆಶೆಯ ಆರಂಭದಿಂದಲೂ ಸ್ವಾಮಿಯ
ಹೆಜ್ಜೆಯನ್ನೇ ಹಿಡಿದು ಹಿಂದೆ ತಿರುಗಿದವನು.
ದೊರೆ--_ನೀನು ಇತ ಬಾರ.
ನಿಷ್ಕಂಟಕ -ಮತ್ತೆ ಯಾರೂ ಅಲ್ಲ ಬುದ್ದಿ, ಎಲ್ಲಾರಸರಹಿತವಾಗಿ, ಅಂಧಕಾರವಾಗಿ,
ವಿಷಮಯವಾಗಿದೆ. ತಮ್ಮ ಹಿರೇಮಗಳೂ ನಡುಕಲಮುಗಳೂ ಆತ್ಮಹತ್ಯವನ್ನು
ಮಾಡಿಕೊಂಡರು. ಅವರಿಗೆ ಆಶಾಭಂಗವಾದ್ದರಿಂದ ಹೋದರು.
ಧೊರೆ..-ಹವುದು, ನಾನು ಹಾಗೆ ತಿಳಿಯುತ್ತೇನೆ.
ಭದ್ರ.-- ಅವರು ಯೇನು ಹೇಳುತ್ತಾರೋ ಅವರಿಗೆ ತಿಳಿಯದು. ನಾವು ಇಂಥವ
ರೆಂದು ಅವರಸಂಗದ ಹೇಳಿಕೊಂಡು ಉಪಯೋಗವಿಲ್ಲ.
ಶುಕ್ಲ.--ಏನೂ ಉಪಯೋಗವಿಲ್ಲ.
ಪ್ರವೇಶಸೇನಾನಾಯಕ.
ಸೇನಾ.--ಕುಮಂತ್ರರಿಗೆ ಪ್ರಾಣಹೋಯಿತು.
ಭದ್ರ.--ಇಲ್ಲಿನ ಹಗರಣಕ್ಕೆ ಅದೇನು ಅಲ್ಪವಾದ್ದು. ಸ್ವಾಮಿ, ಮಿತ್ರರಾ, ಸಭಿಕರಾ,
ನಮ್ಮ ಇಷ್ಟವನ್ನು ತಿಳಿದುಕೊಳ್ಳಿ. ಈಗಿನ ಸ್ಥಿತಿಗೆ ಯಾವ ಕಾರದಿಂದ ದುಃಖ
ಉಪಶಮನವಾಗುವುದೋ, ಆ ಕಾರ್ಯವನ್ನು ಕೈಗೊಳ್ಳತಕ್ಕದ್ದು, ನಾವಾ
ದರೋ ವೃದ್ಧರಾದ ಮಹಾರಾಜರವರಿಗೆ ನಮ್ಮ ನಿಮ್ಮ ಅಧಿಕಾರವನ್ನೂ
ಒಪ್ಪಿಸಿ, ಅವರು ಸಾರೋದ್ದಾರವಾಗಿ ಜೀವಂತರಾಗಿರುವವರಿಗೂ ನಾವು ನಿವೃತ್ತಿ
ಸುಖವನ್ನು ಹೊಂದುವವು. (ನಿಷ್ಕಂಟಕನನ್ನೂ ಶುಕ್ಲಚಂದ್ರನನ್ನೂ ಕುರಿತು)
ನೀವುಗಳು ನಿಮ್ಮ ಜಹಗೀರುಗಳನ್ನೂ ಕೊಡಗಿಗಳನ್ನೂ ಹೊಂದಬಹುದು.
ಇದರಮೇಲೆ ನೀವುಗಳು ನಿಮ್ಮ ಘನತೆಗೂ ಯೋಗ್ಯತೆಗೆ ಅನುಗುಣವಾಗಿ ವಿಶೇ
ಷವಾದ ಬಹುಮಾನಗಳನ್ನೂ ಬಿರುದುಗಳನ್ನೂ ಹೊಂದತಕ್ಕದ್ದು, ನಮ್ಮ
ಮಿಂತ್ರರೆಲ್ಲರೂ ಅವರವರ ಗುಣಾತಿಶಯಗಳು ಇದ್ದಹಾಗೆಲ್ಲಾ ಬಹುಮಾನವನ್ನು
ಆಸ್ವಾದಿಸತಕ್ಕದ್ದು ; ಶತ್ರುಗಳಲ್ಲಾ ಅವರವರ ದುರ್ನಡತೆಯ ವಿಷವನ್ನು ಪ್ರಾಶ
ನಮಾಡತಕ್ಕದ್ದು. ಹೋ, ನೊಡಿ, ನೋಡಿ!
ಧೊರೆ.-- ಹಾ, ಹಾ, ನನ್ನ ಮುಕ್ಕನಿಗೆ ನೇಣಾಯಿತು ! ಇಲ್ಲ, ಇಲ್ಲ, ಪ್ರಾಣವಿಲ್ಲ !
ನಾಯಿ, ಕುದುರೆ, ಇಳಿ ಮುಂತಾದವುಗಳಿಗೆ ಯಾಕ ಇರಬೇಕು ? ನಿನಗೆ ಯಾಕೆ
------------------------------------------
೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ, ೧೨೧
ಉಸಿರು ಇರಕೂಡದು ? ಎಂದಿಗೂ ನೀನು ಬರುವುದಿಲ್ಲ ! ಎಂದಿಗೂ ಇಲ್ಲ, ಎಂ
ದಿಗೂ ಇಲ್ಲ, ಎಂದಿಗೂ ಇಲ್ಲ, ಎಂದಿಗೂ ಇಲ್ಲ, ಎಂದೆಂದಿಗೂ ಇಲ್ಲ ! ದಯಮಾಡಿ
ಈ ಅಂಗೀಕಸೆಯನ್ನು ಬಿಚ್ಚಿ, ಅನುಗ್ರಹಿಸಲ್ಪಟ್ಟೆ ಸ್ವಾಮಿ, ಇದನ್ನು ನೋಡಿ
ದಿರಾ ? ಅವಳನ್ನು ನೋಡಿ, ನೋಡಿ, ಅವಳ ತುಟಿ, ಅಲ್ಲಿ ನೋಡಿ, ಅಲ್ಲಿ ನೋಡಿ!
(ಧೊರೆಯು ಬಿದ್ದು ಪ್ರಾಣಬಿಡುವನು.)
ಶುಕ್ಲ.--ಮೂರ್ಛೆಹೋಗಿದಾರೆ ! ಬುದ್ದಿ! ಬುದ್ದಿ!
ನಿಷ್ಕಂಟಕ.--.ಅಯ್ಯೋ ! ಹಾಳ ಎದೆಯೇ ಒಡೆದು ಹೋಗು.
ಶುಕ್ಲ.--ಮಹಾಸುಖ, ಕಂಣು ಬಿಟ್ಟು ನೋಡಿ.
ನಿಷ್ಕಂಟಕ--ಅವರ ಆತ್ಮಕ್ಕೆ ಬಾಧೆ ಮಾಡಬೇಡ ; ಸುಖವಾಗಿಬಿಡಲಿ, ಈ
ಕೆಟ್ಟ ಪ್ರಪಂಚದ ದುಃಖಕೂಪದಲ್ಲಿ ಬಿದ್ದು ಇನ್ನು ಒದ್ದಾಡಬೇಕೆಂದು ಅಪೇಕ್ಷಿ
ಸುವವನಿಗೆ ಧೊರೆ ಕಂಡರೆ ಆಗದು.
ಶುಕ್ಲ.--ಹೋಗಿಯೇ ಬಿಟ್ಟರು.
ನಿಷ್ಕಂಟಕ -- ಆಶ್ಚರ್ಯವೇನೆಂದರೆ, ಇಷ್ಟು ದಿವಸ ಅನುಭವಿಸಿಕೊಂಡಿದದ್ದು, ಪ್ರಾಣ
ವನ್ನು ಹ್ಯಾಗೋ ಅಪಹರಿಸಿ ಮುಚ್ಚಿಟ್ಟುಕೊಂಡಿದ್ದರು !
ಭದ್ರ.--ಅವರುಗಳನ್ನು ಇಲ್ಲಿಂದ ಎತ್ತಿಕೊಂಡು ಹೋಗಿ, ವರ್ತಮಾನದಲ್ಲಿ ನಮ್ಮ
ಕಾರ್ಯವು ಎಲ್ಲರೂ ದುಃಖಪಡತಕ್ಕದ್ದಾಗಿದೆ. (ನಿಷ್ಕಂಟಕನನ್ನೂ ಶುಕ್ಲಚಂದ್ರ
ನನ್ನೂ ಕುರಿತು) ಅಯ್ಯ ಪರಮಮಿತ್ರರೆ, ತಾವಿಬ್ಬರೂ ಈ ದೇಶವನ್ನು ಆಳಿ,
ರಣಮಯ ಹೆಣಮಯವಾಗಿರುವ ರಾಷ್ಟ್ರವನ್ನು ನಿಲ್ಲಿಸಿ.
ನಿದಷ್ಕಂಟಕ.--ಸ್ವಾಮಿ, ಕ್ಷಿಪ್ರದಲ್ಲಿಯೇ ನಾನು ಪ್ರಯಾಣ ಮಾಡಬೇಕು. ನನ್ನೊ
ಡೆಯು ಕರೆಯುತಾರೆ, ಒಲ್ಲೆನೆಂದು ಹೇಳಕೂಡದು.
ಭದ್ರ.--ಈಗ ನನಗೆ ಪ್ರಾಪ್ತವಾಗಿರುವ ದುಃಖದ ಭಾರಕ್ಕೆ ನಾವು ತಗ್ಗಬೇಕು.
ನಮಗೆ ತೋರಿದ್ದನ್ನು ಆಡಬೇಕು. ಇಂಥಾದ್ದನ್ನೇ ಆಡಬೇಕೆಂದು ನಿಯಾಮಕ
ವಾಗಿರುವುದನ್ನು ಆಡಲಾಗದು. ಅತಿ ವೃದ್ಧರಾದವರು ಅತ್ಯಂತ ಶೋಕವನ್ನು
ಅನುಭವಿಸಿದರು. ಚಿಕ್ಕವರಾದ ನಾವು ಅಷ್ಟು ದುಃಖವನ್ನು ಅನುಭವಿಸುವುದೂ
ಇಲ್ಲ, ಅಷ್ಟು ದಿನ ಬದುಕುವುದೂ ಇಲ್ಲ.
(ನಿಷ್ಕ್ರಮಣ ಕರಮವಾದ್ಯಗಳನ್ನು ಮಾಡಿಕೊಳ್ಳುತಾ.)
ಮ೦ ಗ ಳ