ಶುಕ್ರವಾರ, ನವೆಂಬರ್ 27, 2020

ತಾವರೆಕೆರೆ by ಕೈ ಲಾ ಸ೦

 TIGHT BINDING BOOK 

UNIVERSAL 

LIBRARY 

198 

178 

LIBRARY 

UNIVERSAL 

ತಾವರೆಕೆರೆ 

ಕೈ ಲಾ ಸ೦ 

ಪ್ರಕಾಶಕರು : ಮಾಧವ ಸನ್ಸ್, ಬೆಂಗಳೂರು, 

ಮೊದಲು ಮುದ್ರಿಸಿದ್ದು: ಕತೆಗಾರ ಮಾಸಪತ್ರಿಕೆ. 

ಎರಡನೆಯ ಪ್ರಕಟಣೆ 

೧೯೩೫ 

ತಿದ್ದಿದ ಮೂರನೆಯ ಹೊಸ ಮುದ್ರಣ ಆಶ್ವಯುಜ ಶುದ್ಧ ದ್ವಿತೀಯ ಸ್ವಭಾನುಸಂವತ್ಸರ 

Ist October 1943 

ತಿದ್ದಿದ ನಾಲ್ಕನೆಯ ಹೊಸಮುದ್ರಣ 

೧೯೪೫. 

COPY RIGHT Staging, Translating Filming all 

other rights reserved For permission to stage, 

apply to the Publishers with royalty oF 

Rupees Twenty F್or each performance 

ಬೆಲೆ ಎಂಟಾಣೆ 

----------------------------------------

ತಾ ವ ರೆ ಕೆರೆ 

ನಮ್ಮೂರು ತಾವರೆಕೆರೆ. “ ಹೆಸರು ರಂಗಣ್ಣ, ಮುಸುಡಿ ಮಂಗಣ್ಣ ” 

ಅಂದ್ಹಾಗಲ್ಲ ನಮ್ಮೂರು ; ಕೆರೆಯಿದೆ. ಮೆಟ್ಲುಗ್ಳು ಮುರ್ದು ಕಟ್ಟೆಗಳು 

ಕುಸಿದಿದ್ರೂನೂವೆ, ಕೆರೆಯಿಧೆ. ಇನ್ನೀರೋ ! ಕಮಲಕ್ಕೆ “ ಪಂಕೇರುಹ ” 

ಅಂತ ಹೆಸರಿಟ್ಟ ಪ್ರಾಣಿ, ನಮ್ಮ ಕೆರೆ ನೀರ ನೋಡೇ ಇಟ್ಟಿರಬೇಕು. ಬಿಳೀ 

ಭೂತಾನ ಕೆರೇಲಿ ಅದ್ದಿದ ಗೃಹಸ್ಥ, ಒಗೆದ ಧೋತ್ರಾನ ನೋಡಿ ವಾನ 

ಪ್ರಸ್ಥಕ್ಕೆ ಸೂಚನೇಂತ ಕಂಡ್ಕೊಳ್ಳೋ ಅಷ್ಟು ಕೆಂಪೇರುತ್ತೆ ಬಗ್ಗಡದ ಬಣ್ಣ, 

ಬಟ್ಟೇಗೆ ! 


ಇನ್ನು ..“ ತಾವ್ರೇ ”ನೂ ಸುಳ್ಳಲ್ಲ...ದಡದಿಂದ ದಡದವರಿಗೂ ಧಂಡ್ಯಾಗಿ 

ಹರಡಿವೆ, ದಂಟುಗ್ಳು....ತಾವ್ರೆದಂಟುಗ್ಳು. ಈ ಜೋಕೇಂತ ಇಳ್ದ ಇಸುಮು 

ಗಳು.... ಈ ಜೋತ್ಮರ್ತು .... ಮುಳುಗೋದ್ ಥಟ್ಟನೆ ಕಲ್ತು.... ಇನ್ನೂ ಈಚೆಗೆ 

ಬರ್ತಿಧಾರೆ ! 


ಹಾಸನ ಡಿಸ್ಟಿಕ್ಟು ಹೇಳ್ಬೇಕೇ ನಾನು, ಕೇಳ್ಬೇಕೇ ನೀವು ! ಯಥಾ 

ಪ್ರಕಾರ ಕೆರೆಕಟ್ಟೆ ಮೇಲೆ ಗುಡಿ, ಜಕಣಾಚಾರಿನೋ ಡಕಣಾಚಾರಿ 

ಕಡತದ್ದು, ಹೊರ್ಗೂ .ಒಳ್ಗೂ, ಗೋಪ್ರ ' ಧ್ವಜಸ್ಥಂಭದಿಂದ ಗರ್ಭಗುಡಿ 

ಪ್ರತಿಮೆ ಸಹಿತ, ಮತ್ಯಥಾಪ್ರಕಾರ ದೇವು, ಶ್ರೀಕೃಷ್ಣ....ಕಡೆದವನ ಧೈಯ. 

ಇನ್ನೂ ಯಥಾಪ್ರಕಾರ ವೇಣುಗೋಪಾಲಮೂರ್ತಿ, ಮತ್ತಿನ್ನೂ ಯಥಾಪ್ರಕಾರ 

ಮೈಸೂರು ಚರಿತ್ರೆಯ ಆರ್ಭಟದ ಭರಾಟೆ ಗಲಾಟೇಲಿ ಭಿನ್ನ ಮೂರ್ತಿ 

ಭೀಭತ್ಯುವಿನ ಸಾರಥಿ....ಮೂಗಿಲ್ಲದ ಮೂರ್ತಿ. ಆದ್ರೇನು.... ಮುಕುಂದನ 

ಭಕ್ತರು.... ಮುರಳೀಧರ ಬಾಸ್ಕೋದು ಮೂಂಗಿಂದಲ್ಲ ' ಬಾಯಿಂದ ' 

------------------------------------------

2 ತಾವರೆಕೆರೆ


ಅಂಬೋದ್ನ ಮರ್ತೋ ಏನೋ ಕಾಣೆ..... ಮುಖ್ಯ ಪೂಜೆಯಿಲ್ಲ, ಪುನಸ್ಕಾ 

ರ್ವಿಲ್ಲ ಪರಮಾತ್ಮನಿಗೆ: ಈ ಗುಡಿ, ಕೆರೆಯ ಈಚೆ ಕಟ್ಟೆಮೇಲೆ: 


ಎದುರ್ ' ಕಟ್ಟೆಮೇಲೆ ಇನ್ನೊಂದ್ಗುಡಿ, ಕಾಳಮ್ಮಂದು ! ಜಾಣೆ 

ಚಾಮುಂಡಿ ! ಕೃಷ್ಣ ರಾಮ ಇತ್ಯಾದಿಗಳಿಗಿಂತ ಮುಂಚೇನೇವೇಯೇ ಇದ್ದ ಆದಿ 

ಶಕ್ತಿಯಾದ್ರೂನೂವೆ, ಈ ಗಂಡ್ಸು ದೇವರುಗಳ ಜೊತೇಲಿ ನಮ್ದೇಶ್ದಲ್ಲಿ  

ವಿಗ್ರಹವಾಗಿ ಹುಟ್ಟಿ ಮೂಗು ಮೈಯಿ ಕೈಕಾಲು ಮುರಿಸ್ಕೊಳೊ ಅಪಾಯಾನ 

ಅರ್ತು ಮುಜ್ರಾಯಿ ಇಲಾಖೆ ಏರ್ಪಾಡಾದ ನಂತರವೇ ಊದ್ಭವಿಸಿದ್ದು: 

ಹೆಂಗಸಿನ ಬುದ್ಧೀನೇ ಬುದ್ಧಿ: ಆದ್ರೇನು.... ಗಂಡಸರು ತುಂಬಿದೂರು. 

ಈಕೆಗೂ ಪೂಜೇ ಇಲ್ಲ ! 


ಊರಲ್ಲಿ ಪ್ಲೇಗೋ ಕಾಲ್ರಾನೋ ಸಿಡುಬೋ....ಇಲ್ಲ ಎಲ್ಲಾನೂವೋ 

ಎದ್ದು ಬೀದಿ ಬೀದಿಗೂ ಹತ್ತಿಪ್ಪತ್ತು ಹೆಣಗಳು ಹೊರಳಾಡಿದ ಪಕ್ಷಕ್ಕೇ 

ಸೇವೇಯೇ ....ಅಭಿಷೇಕ, ಅಲಂಕಾಠ ಅರ್ಚನೆ, ಆರಧ್ನೆ, ನ್ಗೆ ! ಭಕ್ತರ 

ದರ್ಶನ ಆಕೇಗೆ ! ಅದುವಠಿಗೂ ಬೆಳಿಗ್ಗೆಲ್ಲಾ ದನ ಕುಠಿ ಕಾಯೋ ಹುಡು 

ಗರಿಗೆ ಬೀಡಿ ಸೇದೋಕೂ, ಮಧ್ಯಾಹ್ನವೆಲ್ಲಾ ಪರೇಲ ರಂಗ್‌ ಆಡೋ 

ಊರಿನ್ಪಟಿಂಗರಿಗೂ; ಸಾಯಂಕಾಲವೆಲ್ಲಾ ಒಬ್ಬರ ಪುರಾತನ ಚರಿತ್ರೆ ಒಬ್ಬರ್ಗೆ 

ಚೇರ್ಕೊಳ್ತಾ ಪರಸ್ಪರ ಪ್ರಶಂಸೇಂಚೋಸಂದೀಲಿ ಸ್ವಯಂ ಪೂಜೇಂಚೊ ಸಮಾ 

ರದ್ನೇನ ಸಲ್ಲಿಸ್ಕೊಳ್ಳೋ ಊರಿನ ಮುದಿಗೊಡ್ಡುಗಳಿಗೂ ಸ್ಥಾನ-ಆಸ್ತಾನ... 

ಆಶ್ರಮ... ಠಿಕಾಣಿ.... ಕಾಳಮ್ಮನ್ಗುಡಿ: ಮುದಿಗೊಡ್ಡುಗಳೂಂತ ಮರ್ಯಾದೆ 

ಯಿಲ್ದೆ ಹೇಳಿದ್ದು ನನ್ನ ಮತಿ ಮೈ ಮರೆತ ತಪ್ಪು. ಇಲ್ಲಿ ಸಂಧ್ಯಾಕಾಲ 

ಸೇರೂ ಇಸಮುಗಳು ಐದೇ ಆದ್ರೂನೂವೆ, ಪಂಚಪ್ರಾಣಗಳು ತಾವ್ರೇಕೆರೆಗೆ. 

ಪಂಚಾಯಿತಿದಾರರು ! ಶಾನುಭೋಗ ಸುಬ್ಬಾ ಭಟ್ಟರು ಶೇಕ್ದಾರ್ ಶಾಮಣ್ಣ; 

ಬೆಲ್ಲದ ಕಂಟ್ರಾಕ್ಟ್ ಗಡF್ಖಾನ್ ಚಿಲ್ರೆ ಅಗ್ಡಿ ಆದಿಂಊರ್ತಿಶೆಟ್ಟ್ರು, 

ಗ್ರಾಮದ ಗೌಡ  ದೊಡ್ಹಟ್ಟಿ ಬೋರೇಗೌಡ. 


ಮಧ್ಯಾಹ್ನ ಭಟ್ಟ್ರಮನೇಮೇಲೆ ಪ್ರಜ್ವಲಿಸಿ, ಶಾಮಣ್ಣೋರ ಹೊಲ 

ಹಾಸಿ, ಖಾನ್ ಸಾಹೇಬ್ರ ಕಬ್ಬಿನ ಆಲೆ ಮೀರಿ, ಶೆಟ್ಟ್ರ ವೀಳೆ ಬಳ್ಳಿಗಳ್ನ ::: 

----------------------------------

ತಾವರೆಕೆರೆ ೩ 


ಬೆಳಗಿ.... ಗೌಡನ ಗದ್ದೆ ಅಂಚಿನಲ್ಲಿ ಮುಳುಗಬೇಕೂಂಬದ್ನ ಸೂರ್ಯನಿಗೆ 

ಜ್ಞಾಪಿಸೋಕೆ....ದಿನ ತಪ್ಪದೇ...ಒಂದೊಂದು ಸಾಯಂಕಾಲಾನೂ ಸೇರೋದು 

ಸಂಪ್ರದಾಯ...ಈ ಪಂಚಪ್ರಚಂಡರು ಕಾಳಮ್ಮನ ಗುಡೀಲಿ !-- ಭಟ್ಟ್ರು ! 

ಶಾನುಭೋಗ ಸುಬ್ಬಾಭಟ್ಟ್ರು, ದೊಡ್ಡ ಮನೆತನ ಹಿಂದಿನ್ಕಾಲ್ದಲ್ಲಿ ! ಸಧ್ಯ 

"ಮನೆ "  "ಮಾರ್ಟ್ಗೇಜು" ಶೆಟ್ಟ್ರಿಗೆ ಆದಿಮೂರ್ತಿ ಶೆಟ್ಟ್ರಿಗೆ!  "ತನ " 

ಬಡತನ ! ಆದ್ರೇನೂ ...ರಕ್ತ ....ರಕ್ತಾನೇವೇಯೇ !....ಜನಿವಾರ ಜನಿವಾರ 

ನೇವೇಯೇ ! ಈತ್ನ ಹಿರಿಯರ ಕಾಲ್ದಲ್ಲಿ ಮನೆಬಾಗಿಲು ಧನ ಧಾನ್ಯ ಇತ್ಯಾದಿ

ಸಂಪತ್ತಿನಿಂದ ಊರನ್ನೆಲ್ಲಾ ಕಿರುಬೆಟ್ಟಿನ್ಮೇಲೆ ಬಂಗರದ ಹಾಗೆ ಯಾವರೀತ್ಯಾ 

ತಿರುಗಿಸ್ತಿದ್ರೋ --ಹಿರಿಯರ ಯಾವಬಾಬ್ತೂ ಇಲ್ದಿದ್ರೂನೂವೆ--ಅವರಿಂದ 

ಮೈಯೆಲ್ಲಾ ತುಳಿಕ್ತಿರೋ ರಕ್ತದ ಪ್ರಭಾವದಿಂದ್ಲೂ... ತನ್ನ ಉಢಾಫಿ 

ಪ್ರಯೋಗದಿಂದ್ಲೂ ... ತನ್ನಾಲಿಗೆ ತುದೀಲಿ ಊರು ಊರನ್ನೇ. ತತ್ತದೇವರೀತ್ಯಾ 

ತಿರ್ರಂತ ತಿರುಗಿಸೋ ಅಪರೂಪವಸ್ತು, ಭಟ್ಟ್ರು, ಸುಬ್ಬಾಭಟ್ಟ್ರು ! ಯಾರೇನು 

ಹೇಳಿದ್ರೂ ಕೊನೇಮಾತು ಈತನದೆ: ಉದಾಹರಣೆಗೆ ಹೇಳ್ತೇನೆ,  ಒಂದು 

ಕಥೆ...


ಒ೦ದು ಸಾಯಂಕಾಲ ಶೆಟ್ಟ್ರು ಎತ್ತಿದ್ರು ಮಾತು. "ನಿನ್ನ ವೀಳೆದೆಲೆ 

ತೋಟದಲ್ಲಿ ಸಿಕ್ಕಿದ ನಿಧಿ- ನಾನು ನನ್ನ ದುಡ್ಡಿನಲ್ಲಿ ಕೊಂಡುಕೊಂಡ ವೀಳೇದೆಲೆ 

ತೋಟದಲ್ಲಿ ಸಿಕ್ಕಿದ ನಿಧಿ:--ತೋಟ ಕೊಂಡುಕೊಂಡಮೇಲೆ ತೋಟದಲ್ಲಿ 

ನಾನು ತೋಡಿದ ಭಾವೀಲಿ ಸಿಕ್ಕಿದ ನೀರು ನಂದು ಹೇಗೋ ಹಾಗೇನೇನೇ 

ನಾನು ತೋಡಿದಕಡೆ ಸಿಕ್ಕಿದ ನಿಧೀನೂ ನನ್ದೇನೇಯೇ ! " ಅಂದ್ರು. 


ಭಟ್ಟ್ರು-ನಿಜ ಶೆಟ್ಟ್ರೆ, ಆದ್ರೆ ಸರಕಾರಾಂಬೋದು ಒಂದು ಇದೆ, 

ನಮ್ಮ್ನಮಗೆ ಸಿಕ್ಕಿದ ಬಾಬ್ತುಗಳಿಗೆಲ್ಲಾ ಸಭಾಗಿ ! 


ಶೆಟ್ಟ್ರು-ಮಂಚಿ ಸರ್ಕಾರಮಯ್ಯಾ  ನೂವು ಚೆಪ್ಪೇದಿ !.... ಕಾದಯ್ಯಾ,  

ತೋಟಾನ್ಕಿ ಡಬ್ಬಿಚ್ಚಿಡೀಕಾಕ ಯಾಡಾದಿ ಯಾಡಾದಿಕೀನೀ ಇಚ್ಚೇಲೇದಾ 

ಕಂದಾಯಮು, ನೇನು? ದಾಟ್ಲೋನೇ ತೀರ್ಪೋಯ ಸರ್ಕಾರ ಋಣಮು! 

ನಾ ತೋಟಮುಲೋ ನೇನು ಕೊಟ್ಟಿಚ್ಚಿನ ಬಾವಿತೋ ಚಿಕ್ಕಿನ ನೀಳ್ಳು ಏ

------------------------------------------ 

ತಾವರೆಕೆರೆ 


ಐಕಟ್ಟು ನಾದ್ನಾದೊ, ನೇನು ಕೊಟ್ಟಿನಗುಂತ್ಲೊ ಚಿಕ್ಕಿನ್ನಿಧೀನೂ ಅದೇ 

ಐಕಟ್ಟು ನಾದ್ನಾದೆ! ಸರ್ಕಾರು ಎಕ್ಕಡ ಒಚ್ಚೆ ? 


ಭಟ್ಟು- ಶೆಟ್ಟ್ರೇ, ನಿಧಿ ನಿಮಗೆ ಸಿಕ್ಕಿದ್ರೂ ಒಂದ್ವೇಳೆ.... ಮರೀಬೇಡಿ 

ಇಧೆ ಸರ್ಕಾರದ ಸನ್ನಿಧಿ! ಹೇಳ್ತೇನೆ ಕೇಳಿ ಚಿಕ್ಕದೊಂದು ಕಥೆ,' ಅಂತ 

ಪ್ರಾರಂಭಿಸಿದರು. 


ಭಟ್ಟರ ಕಥೆ. 


ಶೆಟ್ಟ್ರೇ ! ನೀವೂ ನಮ್ಮೂರಿಗೆ ಹೊಸಬ್ರು.. ನೆನ್ನೆ ಮೊನ್ನೆ ಬಂದವ್ರು. 

ನಮ್ಮೂರಿಗ್ಬಂದು ಈಗ್ತಾನೆ ಹತ್ತ್ಹನ್ನೆರಡು ವರ್ಷ. ನಾನು ಹೇಳೋ ಕಥೆ 

ಈಗ ಸರಾಸರಿ ನಲವತ್ತೈದು ವರ್ಷಕ್ಕೆ ಮುಂಚೆ ನಡೆದದ್ದು. ಈಗ 

ಹುಡುಗೀರ ಸೂಲು ಇದೆಯಲ್ಲ, ಮುನಿಸಿಪಲ್ ಸ್ಕೂಲು ! ಇದು ಆ ಕಾಲದಲ್ಲಿ 

ಮೂರಂತಸ್ತು ಮನೆ....ಗಂಧದ ಕಾಶೀಪತಯ್ಯಂದು, ಮಹಾಪ್ರಾಣಿ ಆತ. 

ಭಿಕ್ಷಾನ್ನ ಎತ್ತಿ ಹೊಟ್ಟೆ ಹೊರ್ಕೊಂಡು ಓಡಾಡುತ್ತಿದ್ದ ಬ್ರಹ್ಮಚಾರಿ.... 

ಮೈಸೂರು ಅತ್ಯಡೆಯೆಲ್ಲಾ ತಿರುಗಿ, ವ್ಯಾಪಾರಕ್ಕೆ ಷುರುಮಾಡಿ, ಸಾಂಬ್ರಾಣಿ 

ಕಡ್ಡಿ, ಬಿಲ್ಲೆ, ಕಸ್ತೂರಿಮಾತ್ರೆ ಇತ್ಯಾದಿಗಳು ಮಾರ್ತಾ ಮಾರ್ತಾ ಕೊನೆಗೆ 

ಮದರಾಸು ಬೊಂಬಾಯಿಗೆಲ್ಲಾ ಕಸ್ತೂರಿ ಗಂಧ ಸಪ್ಪ್ಳೈ ಮಾಡೋದು, 

ಹೀಗೆಲ್ಲಾ ವ್ಯಾಪಾರ ಹಬ್ಬಿ~-ಅನನ್ಭಿಕ್ಷಾನ್ನ ಬೇಡುತ್ತಿದ್ದ ಮನೆಗಳಲ್ಲೇ 

ಒಂದನ್ಕೊಂಡ್ಕೊಂಡು ಅದರ್ಮೇಲೆ ಎರಡುಪ್ಪರಿಗೆ ಕಟ್ಟಿ... 


ಶೆಟ್ಟ್ರು--ಆಯ್ತೆ ಯೇಮಿ....ಊರ್ಮುಂದ್ರ ಇಪ್ಪುಡು ಉಂಡೆ ಕಾಶಿಪತಿ 

ಛತ್ರಮು ....? 


ಭಟ್ಟು-ಹೌದು ಆತನದೇ ಧರ್ಮ, ಅಲ್ಲ್ದೇ  ಊರೊಳಗಿರೋ 

ಶ್ರೀಕಂಠನ ಗುಡೀಗೆ ಧ್ವಜಸ್ತಂಭ, ಚಿನ್ನದ ಕಲಶ, ಬೆಳ್ಳಿ ವಾಹನ, ಪಾರ್ವತೀ 

ಪರಮೇಶ್ವರರಿಗೆ ಚಿನ್ನದ ಕಿರೀಟಗಳು, ಎಲ್ಲಾ ಆತನ ಧರ್ಮ. ಅದೇನು 

ಲೀಲೇನೋ ಪರಮಾತ್ಮನ್ದು, ಬಡಪಾಯಿಗೆ ಗುಡಿಸಲು ತುಂಬ ಮಕ್ಕಳು ! 

ಹಣಗಾರನಿಗೆ ಎಳ್ಳು ನೀರು ಬಿಟ್ಟು ಒಂದ್ಹಿಡಿ ಪಿಂಡ ಇಡೋಕೆ ಒಂದು ಮಗು 

--------------------------------------

ಭಟ್ಟರ ಕಥೆ ೫ 


ಇಲ್ಲ.... ಈತನ ಹಣೇಬರರವೂ ಹಾಗೆ ಇದ್ದಕ್ಕಿದ್ದ ಹಾಗೆ ನೆನ್ನೆ ನೆಗಡಿ, ಈವತ್ತು 

ಛಳಿಜ್ವರ, ನಾಳೆ ಚಟ್ಟ, ಹೀಗೆ ತೀರ್ಹೋದ ! ಇನ್ನು ಮಕ್ಕಳಿಲ್ಲದ ಆ ವಿತಂತು, 

ಅವಳ ತಮ್ಮನ ಸಮೇತ ಬಾಚ್ಕೊಳ್ಳೋರೊಕ್ಕ ಒಡ್ವೇನೆಲ್ಲಾ ಬಾಚ್ಕೊಂಡು 

ಬಾಕಿ ಮನೆ ಭೂಮಿ ಇತ್ಯಾದಿಗಳ್ನ ಧರ್ಮಕ್ಕೇMತ ಬಿಟ್ಬಿಟ್ಟು ಹೊರಟು 

ಹೋದಳು. ಮನೆ ಪಕ್ಕದಲ್ಲಿ ಈಗ ಬಯಲು.... ಆಗ................ 


.ಗಡF್ಖಾನ್--ಓ ಬೊಮ್ಮನ್‌ಕಾ....ಹೋಟಲ್ ಪುಟ್ಟಮ್ಮಾಕಿ, 

ಮಟ್ಟೀಕಫರ್ಬೀ ಜಮೀನ್ಭೀ ! ಬಡಾ ತಕರಾರ್ ಒ ಅಮ್ಮ, ಆ ಜಮೀನ್ಗೆ 

ಕೇಳ್ದೆ, ಗನ್ನ ಜಾಮಾಯಿಸಿ....ಗೂಡ್ ಬನಾಯ್ಸೋಕೆ ಜಾಗ ಹೋನ ಕರ್ಕೆ. 

ಬಿಲ್ಕೂಲ್ – ಬಿಕರಿಗೂ ಕೊಡಾಕೆಯಿಲ್ಲ ಭಾಡೇಗೂ ಕೊಡಾಕೆಯಿಲ್ಲ 

"ಖಾಲಿ ಜಮೀನ್‌  ! ನನ್ಗರ ಬೇಕು ! ” ಅಂತ ಖಾಲಿ ಜಮೀನ್‌ ಇಟ್ಕೊಂಡಿ 

ಧಾಳೆ ! ನನ್ಗೆತಾಜೂಬ್‌  ! ಅಕೇಲ ಇದ್ದಾದ ಆ ಹೆಂಗ್ಸು, ಮಟ್ಟೀ ಘರ್ಮೆ. 

ಹೋಟೆಲ್‌ ದೋಸೆ ಬೇಪಾರ್ದಲ್ಲಿ ... ಕ್ಯಾ ಓ ಬೊಮ್ಮಿ ಕ್ಕು ಆ ಪದ್ಸು ಕಮಾ 

ಯಿಂಗೀ.... ಕ್ಯಾಂಓz'೦ದgI ಗುZರಾತೀ !.... ನnF್ge ತಾಜೂಬ್‌ ! 


ಭಟ್ಟ್ರು - ಸಾಹೇಬ್ರೇ ! ಬ್ರಾಹ್ಮಣರ ಸೂಕ್ಷ್ಮ ನಿಮಗಿನ್ನೂ ಗೊತ್ತಿಲ್ಲ. 

ನಿಮ್ಮಗಳ ಸಾಮ್ತಿ....* ' ಬೊಮ್ಮನ್‌ಖಾಕೆ ಮರಾೈ'೦ಬೋದೇ ಅಸ್ಥಿಭಾರ. 

ಆಕೆ ಮಾಡ್ತಿರೋ ದೋಸೆ ವ್ಯಾಪಾರದ ಗುಟ್ಟಗೆ ' ಮೆಂತ್ಯದ ದೊಸೆ 

ಪುಟ್ಟಮ್ಮ' ಅಂತ ಹೊಸೂರಿಂದ ಹರಿಹರ, ಕೋಲಾರದಿಂದ ಕೊಳ್ಳೇಗಾಲದ 

ವರೆಗೂ.... ಹರಡಿರೋ ಪ್ರಾಂತಗಳ ಅಂಚೂನೂ, ಬೆಲ್ಲದ ಕಂಟ್ರಾಕ್ಟ್ ಗಡಫ್‌ 

ಖಾನ್ ಸಾಬರ ಹೆಸ್ರು ಸೋಕೋದಿಲ್ಲ. 'ನೋಡಿ ; ಯಾವತ್ತು 

ಬೇಕಾದ್ರೂ ಹೋಗ್ನೋಡಿ. ಬೆಳಿಗ್ಗೆ ಅರು ಘಂಟೆಗೆ ಸುರುವಾದ ಮೆಂತ್ಯದ 

ದೋಸೆ ಕೊತ್ತಂಬರೀಚೆಟ್ನಿ ವ್ಯಾಪಾರ ಎಂಟೂವರೆಘಂಟೇಲೆ ಮುಗಿದು 

ಇನ್ಮಧ್ಯಾಹ್ನ ಅದೇ ದೋಸೇ ಅತೀ ಚೆಟ್ನಿ, ಮೂರು ಘಂಟಲದ ಐದು 

ಘಂಟೆ ಒಳ್ಗೆ ತೀರಿದ್ರೂನೂವೆ ಖರ್ಚೆಲ್ಲಾ ಚಾತ ಬಾಕಿ ದಿನದಿನಕ್ಕೆ ಕಮ್ಮಿ 

ಯಿಲ್ದೆ ಮೂರು ರೂಪಾಯಿ ಆದ್ರು ಗಿಟ್ಟಿ, ತಿಂಗಳಿಗೆ ನಮ್ಮ ತಾಲ್ಲೂಕು 

ಮಾಮಾತ್ರ ನೂರು ರೂಪಾಯಿ ಸಂಬಳಕ್ಕಿಂತ ಇವತ್ತೂ ಅರವತ್ತೊ 

ಎಪ್ಪತ್ತೊ ಸಂಸಾದಿಸ್ತಿದಾಳೆ, ಆ ವಿತಂತು-ತನ್ಖರ್ಚೋ - ಮನೆ ತನ್ನ್ದೆ  

---------------------------

ತಾವರೆಕೆರೆ


ಅಕ್ಕಿ, ಅವರ ತಾತ ಇಟ್ಹೋದ ಗದ್ದೆ !.... ಇನ್ನ್ಹೀಗೇ ಕೂಡಿಹಾಕೋರೋ  

ದುಡ್ಡು !.... ಮಕ್ಕಳಿಲ್ಲ ಮರಿಯಿಲ್ಲ:. 


ಬೋರೇಗೌಡ-ಎಲ್ಲಾ ಅವ್ರಜ್ಜ್ರಂಗೆ ಈಕೇನೂವೇ ಈ ಜಪುಣ 

ಗಾರ್ಕೇಲೇಯೇ ಜೈಲಿಗೆ ಹೋದದ್ದು, ಆವಯ್ಯ ಆ ಮುದುಕಯ್ಯ ! 

ನನಿಗೊತ್ತು ಕತೆ. ಶೆಟ್ಟ್ರಿಗೂ ಸಾಬ್ರಿಗೂ ಗೊತ್ತಿಲ್ಲ: ಯೇಳಿ; ಪುಟ್ಟಮ್ಮನ ಅಜ್ಜ 

.... ಊರ್ನ ಕೊಂಡ್ಕೋಳ್ಳೋ ದುಡ್ಡು ಇಟ್ಕೊಂಡೂವೆ... ಮತ್ತೆ... ನಿತ್ಯತೆ 

ನೀವೇಳಿದ್ರೇನೇವೇಯೆ ಚಂದ. 


ಭಟ್ಟ್ರು-ಬೋರಣ್ಣೋರು ಹೇಳ್ಹಾಗೇ ಶೆಟ್ಟ್ರೇ ! ಪುಟ್ಟಮ್ಮನ ಅಜ್ಜ 

.... ನಮ್ಸಾಹೇಬ್ರು ಕಬ್ಬಿನಾಲೆ ಕಟ್ಟೋಕೆ ಬೆಲೆಗೋ ಚಾಣಕೆಕೋ ಕೇಳಿ ಇಲ್ಲ 

ಅನ್ನಿಸ್ಕೊಂಡ ಜಮೀನಿನ ಮೇಲೆ ಆಗ ಇದ್ಡ ಮನೇಲಿ ನಿಧಿ ಸಿಕ್ಕಿದ ಗಲಾ 

ಟೇಲಿ ಸರ್ಕಾರ್‌ದ್‌ ಸನ್ನಿಧೀಲಿ ಸಿಕ್ಕೊಂಡು ಒದ್ದಾಡಿದ.::: ಲೇವಾದೇವಿ 

ಸುಬ್ಬಣ್ಣನ ಚರಿತ್ರೆ, ಹೇಳ್ತಿರೋದು ನಾನು. ನನಗೆ ಆಗ ಹನ್ನೆರಡು 

ಹದ್ಮೂರು ವಯಸ್ಸು. ಮನೆ ಬಾಕಿಲು ಪರಿಸ್ಥಿತಿ ಈಗ ಇದ್ದಾಗ್ಹಲ್ಲ... 

ಜಮಖರ್ಚಿನ ಲಕ್ಕ ಇಟ್ಟ ಪ್ರಾಣಿಗಳಲ್ಲ; ನಮ್ಮಪ್ಪ, ನಮ್ತಾತ...: ಇರ್ಲಿ.  

ಒಟ್ನಲ್ಲಿ ಕುಟುಂಬದ ಜೋರ್ನಲ್ಲಿ ....ಜವಾಬ್ದಾರಿಯಿತಲ್ದೆ-ಸಾಹೇಬ್ರ ಭಾಷೇಲಿ 

'ಅzಾದ್‌ ' ಆಗಿ ಓಡಾಡ್ತಿದ್ದೆ ಊರೆಲ್ಲಾ! ಕಾಶಿಗೂ ರಾಮೇಶ್ವರಕ್ಕೂ ದಾರಿ 

ಯಲ್ಲ ನಮ್ಮೂರು ! ಬೈರಾಗಿಗಳು ಗೋಸಾಯಿಗಳು ಕಂಡುಬರೋದು ವಿರಳ 

ನಮ್ಮೂರ್ನಲ್ಲಿ ! ಆದ್ರೆ ಒಂದಿನ, ಈ ಎದುರ್‌‌ ಕಟ್ಟೇಮೇಲೆ ಆ ಮೂಗು 

ಮುರಿದ ಗೋಪಾಲಸ್ವಾಮಿಗುಡಿ ಮುಂದೆ ಕೂತಿದಾನೆ, ಒಬ್ಬ ಬೈರಾಗಿ ! ಆಗ 

ಮೆಟ್ಲು ಭದ್ರ.  ನೀರು ನಿರ್ಮಲ. ಕೆರೆ ತುಂಬಿ ಸ್ನಾನಪಾನಕ್ಕೂ, 

ಮುತ್ತೈದೆಯರ ಪೂಜೆ ಪುನಸ್ಕಾರಕ್ಕೂ ಬೀಡಿಘಾಟು ತುಂಬಿದ ಈ ದೇವಿ 

ಗುಡೀನೂ ಶುಭ್ರವಾಗಿದ್ದು... ನೂರಾರು ಜನ ಓಡಾಡ್ತಿದ್ಧ ಪ್ರಾಂತ್ಯ ಇದು; ಆಗ. 

ಒಂದು ದಿನ ಪ್ರಾತಃಕಾಲ ಸೋರೆಬುರುಡೆಗಳು ಕಟ್ಕೊಂಡು ಇಳ್ದು ಈಜಿ ಹೊರ 

ಗ್ಬಂದು ಬಟ್ಟೇ ಹಿಂಡ್ತ ತಿರುಗಿದ್ವಿ. ನಾನು ನನ್ನ ಜೊತೇಲಿದ್ದ ನಾಲ್ಕೈದು 

ಹುಡುಗರು ! ತಿರುಗಿದ್ವಿ ! ಎದುರ ಕಟ್ಟೇ ಕಡೆ ಕೂತಿದಾನೆ ಪ್ರಭು! ಮೊಳದೆತ್ರ 

----------------------------------------- 

ಭಟ್ಟರಕಥೆ ೭  


ಜಟೆ ಮಂಡೇಮೇಲೆ ; ಬತ್ಲೆ ಮೆಯ್ಯಿ ! ಮೈಯೆಲ್ಲಾ ವಿಭೂತಿ, ಬೆಳ್ಳ 

ಗೊದು ಲಂಗೋಟಿ : ತೊಡೇ ಮೇಲೆ ದೊಡ್ಡದೊಂದು ಉಂಗ್ರದ ಸಮೇತ 

ಉಕ್ಕಿನ ಸಲಾಕೆ.: ಕಣ್ಣುಗಳು ಮುಚ್ಕೊಂಡು...ಅವನ ದೊಡ್ಡ ಗಂಟಲಿನಲ್ಲಿ 

ಒಂದೇ ಮಂತ್ರ....ಈಗ್ಲು ಜ್ಞಾಪಕ ಬರುತ್ತೆ.... 'ಆಲಕ್ ನಿರಂಜನ್ ! ಭಂಡಾರ ! 

ಭರ್ಪೂರ್‌ ! ಕಾಲ್ಕಂಟಕದೂರ್‌ ! ಜೈ ಸೀತಾರಾಮ್ ನಾರಾಯಣ ಭಗವಾನ್ ! ' 

ಅನ್ನೋದೂ ಎಠಡು ಕೈಯಿಂದ ಅದೇನ್ಹೇಳ್ತೀರ ಸಾಹೇಬ್ರೆ.... ಗಾಂಜ.... ಘಟಗಿ ಚಾಟು ? 

ಭಂಗಿ ಬಾಬ್ತು?  


ಗಡF್್ಖಾನ್‌-ಗೊಡಾಹ್ಕ್‌....? 


ಭಟ್ಟ್ರು-ಹೂ.... ಅದ್ನ, ' ಉಫ್ !! ಅಂತ ಸೇದೋದು, ತಿರುಗೂ 

' ಆಲಕ್ ನಿರಂಜನ್'-- ಇತ್ಯಾದಿ ; ಆಶ್ಚರ್ಯ ನಮಗೆಲ್ಲಾ ! ಹೀಗೆ ನಾಲ್ಕೈದು 

ದಿನ ಊರೆಲ್ಲಾ ನೋಡಿ, ಊರೊಳಕ್ಹೊರ್ಟ ಆ ಗೋಸಾಯಿ. ಮಕ್ಕಳಿಗೆ 

ವಿಭೂತಿ ಕೊಟ್ಟು ಬೇದಿ ಇತ್ಯಾದಿ ನಿಲ್ಸೋದು ; ಇನ್ನು ತಾಯ್ತಿ...: ಯಂತ್ರ 

ಈ ಬಾಬ್ತುಗಳು, ದೆವ್ವ ಓಡ್ಸೋಕೆ, ಪಿಶಾಚಿ ಬಿಡ್ಸೋಕೆ, ಅಲ್ದೆ ಚೇಳಿನ್ಮಂತ್ರ 

ಇತ್ಯಾದಿಗ್ಳು, ಹೀಗೆಲ್ಲಾ ಊರ್ಗೆ ನಾಲ್ಕೈದು ದಿನದಲ್ಲಿ ಮಾಡಿತ...: ನೂರಾರು  

ಉಪಕಾರಗಳ್ನ, ಮಾಡಿದ್ರೂನೂವೆ, ಒಂದ್ಬಿಡಿಗಾಸು ಮುಟ್ಟದಹಾಗೆ, ಬಂದದ್ದ್ನ 

ತಂದೋರ್ಮೂತಿಮೇಲೆ ಎಸೀತಿದ್ದ ಈ ಬೈರಾಗಿ, ಥಟ್ಟನೆ ಒಂದು ದಿನ ಗಂಧದ 

ಕಾಶೀಪತಯ್ಯನ ಮನೆ ಎದುರಿಗೆ ನಿಂತು; ಆತ್ನೂ ಆತ್ನ ಹೆಂಡ್ತೀನೂ ಊರ್ಬಿಟ್ಟು 

ಮೈಸೂರಿಗ್ಹೋಗಿರೋ ವರ್ತಮಾನನ ಮನೆಕಾವಲುಗಾರ, ತುರುಕ್ಭಾಷೆ ತಿಳಿದ 

ಜಟ್ಟಿ ರಂಗಯ್ಯನ ಮುಖಾಂತ್ರ ತಿಳಿದು:... ಅದ್ರ ಪಕ್ಕದಮನೆ, ಈಗಿನ ಖಾಲಿ 

ಜಮೀನ್ ಮೇಲೆ ಆಗ ಇದ್ದ ಮಗ್ಗಲುಮನೆ, ಲೇವಾ ದೇವಿ ಸುಬ್ಬಣ್ಣನ ಮನೆ 

ಜಗಲೀಲಿ ಕೂತು.... ನಾನ್ಹೇಳಿದ್ಹಾಗೆ.... ದುಡ್ಡಿದನ್ಮೇಲೆ ಆಶೆ “ ಇದುವರ್ಗೂ 

ಇಲ್ದಿದ್ದೋನು..... ಊರ್ಗೆಲ್;ಅ ಜಿಪುಣ ಅನ್ಸ್ಕೊಂಡ ಸುಬ್ಬಣ್ಣನ್ನ ರಾಮೇಶ್ವರಕ್ಕೆ 

ರೈಲು ಚಾರ್ಜು ಕೇಳ್ದ.... ಮನೆಯಾತ್ನೋ:... ಸಾವಿರಾಂತರ ರೂಪಾಯಿ:.. 

ಬ್ಯಾಂಕುಗಳ ಮೇಲೇನೂ ನಂಬ್ಕೆ ಯಿಲ್ದೆ ಮನೇಲೇ ಇಟ್ಕೊಂಡು ಒಂದು ಬಿಡಿ 

ಕಾಸು ಖರ್ಚು ಮಾಡೋಕೆ ಹಿಂಜರೀತ ಕಾಸಿಗೆ ಕಾಸು ಕೂಡ್ಹಾಕ್ತಿದ್ದ ಲೋಭಿ ... 

ಬೀದೀಲ್ಹೋಗೋ ಬೈರಾಗೀಗೆ ರಾಮೇಶ್ವರದ ರೈಲ್ ಛಾರ್ಜ್‌ ಕೊಟ್ಟಾನ್ಯೇ ? 

---------------------------------------------

ತಾವರೆಕೆರೆ 

 

' ನಾಸ್ತಿ ! ಹೊರಟು ಹೋಗು' ಅಂದ. ಅದಕ್ಕೆ ಗೋಸಾಯಿ ಹಿಂದೀ ಭಾಷೇಲಿ 

' ದುಡ್ಡಿಲ್ದಿದ್ರೆ ಬೇಡ. ದಾಹಕ್ಕೆ ಒಂದಿಷ್ಟು ನೀರು ಆದ್ರೂ ಕೊಡು' ಅಂದ. 

ಬ್ರಾಹ್ಮಣರ ಮನೆ, ಪಾತ್ರೆ, ಕಂಡೋರು, ಕಾಣ್ದೋರ ಕೈಲಿ ಇಡೋದಿಲ್ಲ, 

ಅಂದ.ದ್ದಕ್ಕೆ ಬಲಗೈ.ಚಾಚಿ, ' ಈ ಅಂಗೈ ತುಂಬ ನೀರಿಟ್ರೆ ಸಾಕು, ಇದೂ 

ಇಲ್ಲ ಅಂದ್ಯೋ....ನಾಳೆ .ಯಮ ನರಕಕ್ಕೆ ಎಳೆದು ಕಾಸಿದ ಸೀಸ ನಿನ್ಗಂಟಲ್ಗೆ 

ಸುರ್ಯೋ ಶಾಪಾನ ಈಗ್ಲೋ ಕೊಡ್ಲೋ ಅಂದ. ಜಗ್ಲೀಲಿ ಕೂತಿಧಾನೆ ಬೈರಾಗಿ. 

ಬೀದೀಲಿ ನಿಂತು ನೋಡ್ತಿಧೇವೆ ನಾವೆಲ್ಲಾ. ಗೋಸಾಯಿ  ಬೆದರ್‌ಕೇಗೆ 

ಬೆಚ್ಚ್ಬಿದ್ದು ಒಳಗ್ಹೋಗಿ ಒಂದ್ಪಂಚ್ಪಾತ್ರೆ ನೀರ್ತಂದು ಮುಂದೆ ಚಾಚಿದ 

ಆ ಗೋಸಾಯಿ: ಬಲ ಬದಿಯಲ್ಲಿ ಒಂದ್ನಾಲೈದ್ಬೊಟ್ಟು ನೀರು 

ಬಗ್ಸೋಷ್ಟ್ರಲ್ಲೇ 'ನಿಲ್ಸು ಬಸ್‌ ಬಸ್ !? ... ಎಂದು ಎದ್ದು ನಿಂತು ಹರಡ್ತಾನೆ 

ಅಂಗೈನ ! ಆ ನಾಲ್ಕೈದ್ಬೊಟ್ಟು ನೀರು, ಪಾದರಸ ಎಗರ್ದ್ಹಾಗೆ ಎಗುರ್ತ್ವಾ 

ಅವನ ಅಲ್ಲಾಡದ ಅಂಗೈಲಿ !  ಆ ನೀರು ಎಗರಿದಾಗೆಲ್ಲಾ ಹೆಜ್ಜೆಯಿಡ್ತಾ ಮನೆ 

ಒಳಕ್ಕ್ನೊಕ್ಕ ಬೈರಾಗಿ ಕಣ್ಣು ಮುಚ್ಕೊಂಡು, ಮೈಮೇಲೆ ಬಂದೋನ್ನ ಹಾಗೆ 

ತುರುಕ್ನಲ್ಲೇನೋ ಗೊಬಗುಟಕೂತಾ ಸುಬ್ಬಣ್ಣನ ಮನೆ ಕೋಣೆಯೆಲ್ಲಾ 

ಬೋನ್ನಲ್ಲಿ ಹುಲಿ ಓಡಾಡೋಹಾಗೆ ಸುತ್ತಾಡ್ತಿದ್ದ. ತುರುಕ್ಭಾಷೆ ತಿಳಿಯದ 

ಸುಬ್ಬಣ್ಣ ಕಾಶೀಪತಯ್ಯನ ಮನೆ ಕಾವಲುಗಾರ ಜಟ್ಟೀವ್ರ ಹುಡ್ಗ ರಂಗಯ್ಯನ್ನ 

ಕರೆದು "ಅವನ್ಹೇಳ್ತಾನೆ ಕೇಳಿ ಹೇಳು' ಅನ್ನುತ್ಲೂ... ಅ ಗೋಸಾಯಿ, 

ರಂಗಯ್ಯನ್ನ ಒಳಗೆ ಎಳಕೊಂಡು ಬಾಗಿಲು ಹಾಕಿದ. ಈ ಕಥೆ ರಂಗಯ್ಯ 

ಆಮೇಲೆ ಅಮಲ್ದಾರ ಕೋರ್ಟ್ನಲ್ಲಿ ಕೈಫೀತ್‌ ಕೊಟ್ಟ ಅಸ್ತಿಭಾರದ ಮೇಲೇನೇ 

ಹೊರಗ್ಬಿತ್ತು  ಊರ್ಗೆಲ್ಲಾರ್ಗು ರೆಕಾರ್ಡುಗಳು. ಈಗ್ಲೂ ತಾಲ್ಲೂಕು ಆಫೀಸಿನ ಕಡತ 

ಗಳಲ್ಲಿ  ತಯಾರಾಗ್ಬಿನ್ನಿನ ತನಿಖೇಗೆ- ಇನ್‌ ಮಕಾನ್‌ ಮೇಚಾಂದಿ, ಸುನ್ನ, 

ಹೀರಾ... ಕುಲ್‌ ನಿಧಿ ಹೈ,  ಪೂಜಾ ಕರ್ಕೆ ನಿಕಾಲ್ನೇಕ ಉಮ್ಮೀದ್‌ ಹೈ. 

ಮೋಕ ಪಡ್ತೇಹಿ ನಿಕಾಲ್ನೆಕ ತಾನೀ ಖಾತ್‌ ಭೀ ತಾಖತ್‌ ಭೀ ಹೈ ಮುಝೆ; 

ಮಕಾನ್‌ ಕಾ ಮಾಲೀಕ್‌ ಆದ ಆದ ಹಿಸ್ಸೇಕು ಮುಂಜೂರ್‌ ಹೋತೇಹೀ... 

ಪೂಜ ವಗೈರೆ ಚಿಲ್ಲರ್‌ ಖರ್ಚ್‌ ಛೋಡ್ತೇಹಿ.... ನಿಧಿ ನಿಕಾಲ್ನೇಕೇಲಿಯೆ 

ಗೈರತ್‌ ಮುಝೆ ಹೈ. ಮಗರ್‌ ಗರಜ್‌ ಎ ಬೊಮ್ಮನ್ಕು ಹೈ, ನಹಿ ತಲಾಷ್‌   

ಕರೀಯೆ" ಅಂದ ಸಮಾಚಾರ ಸುಬ್ಬಣ್ಣನ ಕಿವೀಗೆ ಬೀಳೊತ್ಲೂನೇ.... 

------------------------------------

ಭಟ್ಟರಕಥೆ 


ರಂಗಯ್ಯನ ಮೂಲಕ ಆ ನಿಧಿ ಆ ಮುಂದಿನ್ನೋಣೇಲೇಯೇ ಎಲ್ಲೋ 

ಹೂತಿರೋ ಸಮಾಚಾರ ಮಂಡೇಗ್ಹತ್ತಿ.... ನಿಧಿ ಹುಡ್ಕೊ ಗಲಾಟೇಲಿ ನೆಲ 

ಎಲ್ಲಾ ಅಗಿಯೊ ಅಪಾಯ ಒಂದ್ಕಡೆ...ಅಗೋದ್ರ ನಷ್ಟ ಒಂದ್ಕಡೆ...ಅಲ್ದೆ 

ಅಗ್ದು ಸಿಕ್ಕಬಹುದಾದ ಗೋಸಾಯಿ ಹೇಳಿರೋ ಬೆಳ್ಳಿ, ಚಿನ್ನ, ರತ್ನಗಳ ಲಾಭ 

ಒಂದ್ಕಡೆ, ಎದ್ರೆದುರ್ಗೆ ತೂಗ್ತಾ ಪೇಚಾಡಿ ಕೊನೇಗೆ ಪೂಜೆ ಪುನಸ್ಕಾರದ 

ಖರ್ಚು...ಅಂದಾಜು ಹಾಕಿದ ಐದು ರೂಪಾಯಿ ಸಮೇತ....ಅಗೆದ ನೆಲಾನೆಲ್ಲಾ 

ತಿರುಗಿ ತುಂಬಿ ಸರಿಮಾಡೋ ಖರ್ಚು....ತಿಂಗಳಿಗೆ ಏಳು ರೂಪಾಯಿ ಸಂಪಾ 

ದ್ನೇಲಿ ಬದುಕಿರೋ ರಂಗಯ್ಯಂದೂ....ನಿಧಿ ಸಿಕ್ಕಿದ ಪಕ್ಷಕ್ಕೆ ರೂಪಾಯ್ಲಿ 

ಎಂಟಾಣೆ ತನ್ದೂ, ಆರಾಣೆ ಗೋಸಾಯೀದೂ ಎರಡಾಣೆ ರಂಗಯ್ಯಂದೂಂತ 

ಕ್ಲಿಪ್ತಿಸ್ಕೊಂಡು....ಸುಬ್ಬಣ್ಣನೇ ಹನ್ನೆರಡಾಣೆ ಸ್ಟಾಂಪು ಹಚ್ಚಿದ ಕಾಗದದಮೇಲೆ 

ಇಷ್ಟೆಲ್ಲಾ ಬರೆದು....ಅಕ್ಕಪಕ್ಕದ ಮನೆ ಓದ್ಬರಹ ತಿಳಿಯದ ಇಬ್ರು ದನ 

ಕಾಯೊ ಕೆಲಸ್ದವ್ರ ಹೆಬ್ಬೆಟ್ಟು ಗುರು ಸಾಕ್ಷಿ ಹಾಕ್ಕೊಂಡು.... ಪ್ರಾರಂಭ.... 

ಮಾರನೆದಿನ ಶುಕ್ರವಾರದಿಂದ ನಿಧಿ ಬೇಟೆಗೆ !! 


ನೆಲವೆಲ್ಲಾ ನಾಲ್ಕಡಿ ಅಗೆದದ್ದಾಯಿತು....ಅಟ್ಟ ಸೂರು ಕಿತ್ತದ್ದಲ್ಲೆ ಹೆಂಚು 

ಹೆಂಚು ಬಿಡ್ಸಿ ಬಿಚ್ಚಿ ನೋಡಿದ್ದಾಯಿತು. ಒಟ್ನಲ್ಲಿ ಏಳು ದಿವಸದ ಕೆಲ್ಸದ 

ಫಲ ಪೂಜ್ಯ, ಸುಬ್ಬಣ್ಣ ಷುರು ರಂಗಯ್ಯನ ಮೇಲೆ ರೇಗೋಕೆ. ಗೋಸಾ 

ಯೀನೋ - “ ಹೈ : " ಕಹ್ತಾಹೂಂ, ಹೈ! ಯೇಹೀಖಾನೆಯೇಚ್ ಹೈ ! 

ಭೂಮೀಭಿ ಖಾಲಿ ! ಆಕಾಶ್ ಭಿ ಖಾಲಿ, ತಾಹಂಭಿ, ಹೈ ಇಸ್ಖೋಲೀಮೇಚ್ 

ಹೈ ನಿಧಿ” ಅನ್ನೋಕೆ ಸುರು ! ಇನ್ನು ಸುಬ್ಬಣ್ಣನೋ " ಹಿರಣ್ಯಕಶಿಪು 

ಸಾವ್ತಪ್ಪಿಸಿಕೊಳ್ಳೋಕೆ ಬ್ರಹ್ಮನ ಹತ್ತಿರ ವರ ಬೇಡ್ದ್ಹಾಗೆ ಆಕಾಶದಲ್ಲೂ ಇಲ್ಲ, 

ಭೂಮೀಲೂ ಇಲ್ಲ, ರಾತ್ರೀಲೂ ಇಲ್ಲ, ಹಗಲೂ ಇಲ್ಲ, ಒಳಗೂ ಇಲ್ಲ, ಹೊರಗೂ 

ಇಲ್ಲ” ಅಂತ ತೀರ್ಮಾನಿಸಿ ಸೂರನ್ನು ಸೋರೋ ಹಾಗೆ ಮಾಡಿ ನೆಲವನ್ನೆಲ್ಲಾ 

ಅಗೆದು.... 'ನನ್ನ್ಗತಿ ಯೇನು'೦ತ ಸುಬ್ಬಣ್ಣ. ' ತಡೀರಿ ಸ್ವಾಮಿ ಬೈರಾಗಿ 

ಬೆಪ್ಪಲ್ಲ! ತಿಳಿದ ಮನುಷ್ಯ !.....ಸ್ವಲ್ಪ ಸುಧಾರ್ಸ್ಕೊಳ್ಳ್ರೀ '೦ತ ರಂಗಯ್ಯ.... 

ಅಷ್ಟ್ರಲ್ಲೇ ಗೋಸಾಯಿ ' ನಿಧೀತೋ ಹೈ ! ಜಮಾನ್ ಬಗೈರ್, ಆಕಾಷ್ ಬಗೈರ್‌, 

ಯಹೀ ಖೋಲೀಮೇ ರಹ್ ನಾತೊ....ಆ೦೦ !....ದಿನಾರ್‌ಮೆ ರಹ್ನ!' ಅಂದು 

--------------------------------------------

೧೦      ತಾವರೆಕರೆ 


ನಾಲ್ಕು ಗೋಡೆಗಳಲ್ಲಿ ಒಂದೊಂದನ್ನೂ ನೆಲದಿಂದ ಸೂರಿನವರಿಗೂ ಏಣಿ 

ಸಹಾಯ ಇಟ್ಗೊಂಡು ಮುಷ್ಟೀಲಿ ಗುದ್ದುತಾ ಬಂದೂಬಂದೂ ಒಂದೊಂದು 

ಗೋಡೇಲೂ ಇದುವರಿಗೂ ' ಢಕ್ !' ' ಢಕ್ಕ್ !' ಅನ್ನಿದ್ದ ಮುಷ್ಟಿ ಹೊಡೆತ 

ಒಂದ್ಕಡೇಲಿ ಮಟ್ಗೆ ' ಢಂಗ್ !' ' ಢಂಗ್ !!' ಅನ್ನುತ್ಲೂವೆ....ಉಸ್ರು 

ನಿಂತ್ಹೋಯ್ತು ಸುಬ್ಬಣ್ಣನಿಗೆ, ಗೋಸಾಯಿಯೋ, ಕರೀಮಾಸೆ, ಕರಿದಾಡಿ 

ಮಧ್ಯೆ, ತುಟಿಗಳು ಬಿಚ್ಚಿ ಬೆಳ್ಳಂ ಬೆಳ್ಗೆ ಬೆಳಗ್ತಿರೊ ಹಲ್ಲು ವರಸೇನ ಕಿರೀತ.... 

'ಯೆಹಹೈ !....ಅಭಿ ಲಾವ್ ಲೋಹೇಕ ಸಲಾಕ್, ಅವ್ರ್‌ ಪಾನಿ!' ಅಂದ ! 

ಇನ್ನೇನು ಕಬ್ಬಿಣದ ಗಡಾರಿ, ಹಂಡೆ ತುಂಬ ನೀರು, ಒದಗಿಸ್ಟ ಸುಬ್ಬಣ್ಣ. 

ಜಟ್ಟಿರಂಗಣ್ಣ ಗೋಸಾಯಿ ಇಬ್ರೂವೆ ಒಬ್ಬರಿಗೊಬ್ರು ಸರ್ದಿ ಬದ್ಲಾಯಿಸ್ತಾ 

ಸರಾಸರಿ ಎರಡಡಿಯಾದ್ರೂ ಇದ್ದ ಗೋಡೇನ ಕೈ ಸೋ ಲೋ ವರ್ಗೂ 

ಕೊರ್ಯೋದು; ಸುಬ್ಬಣ್ಣ ನೀರೆರಚೋದು, ಹೀಗ್ಮಾಡಿ ಗಡಾರಿ ಕಬ್ಬಿಣ 

ಆ ಇಟ್ಗೆ ಗೋಡೆ ಕಾಸಿ ಲೋಹ  ಲೋಹಾನ ತಾಕಿದ 'ಠಂಗ್ !' ಅಂಬೊ ಶಬ್ದ 

ಕೇಳ್ತೋ ಇಲ್ವೊ....ಸುಬ್ಬಣ್ಣ ಮೂರ್ಛೆ ಬಿದ್ದದ್ದು ಆಶ್ಚರ್ಯವಲ್ಲ !! 


ಮಧ್ಯರಾತ್ರಿ ! ಕೋಣೇಲೊಂದೇ ದೀಪ! ಗೋಸಾಯಿ ಅರಶಿನಾನೂ 

ನೀರೂ ಕಲ್ಸಿಟ್ಟ ಮಹಾಲಿಂಗದ ಮುಂದೆ ತುಪ್ಪದಲ್ಲಿ ಉರೀತಿರೋ ನೀರಾಂಜನ 

ಒಂದೇ ದೀಪ, ರಂಗಯ್ಯ ರಂಡೆನೀರ ಸುಬ್ಬಣ್ಣನ ಮುಖಕ್ಕೆರಚಿ ಆತನ್ನ 

ಕೊಡವಿ ಕುಕ್ಕರಿಸಿ, ಬಳಿಕವನೂ ಚೇತರಿಸಿಕೊಂಡು ಕಣ್ಣು ಬಿಡೋಹೊತ್ತಿಗೆ 

ಸರಿಯಾಗಿ, ಗೋಸಾಯಿ ಗೋಡೆ ತೂತ್ನ ವಿಸ್ತರಿಸಿ ಗೋಡೆ ಒಳಗೆ ಕೈಬಿಟ್ಟು, 

ಬೆಳ್ಳಿ ತಟ್ಟೆಗಳು, ಚೊಂಬುಗಳು, ಪಂಚ್ಚಾಗು, ಪನ್ನೀರ್‌ದಾನಿಗ್ಳು.... ಚಿನ್ನ 

ದಲ್ಲಿ ಬಳೆ, ಢಾಬು, ವಂಕಿ, ಬಾಜಿಬಂದು, ಜೋಮಾಲೆ, ಕಾಸಿನ್ಸರ ಇವುಗಳೆಲ್ಲಾ 

ಒಂದು ಗುಂಪ್ಮಾಡಿ ಇನ್ನು ಇವುಗಳ ಮುಂದೆ ಕೆಂಪು ಪಚ್ಚೆ ಪದಕ, ಸೀಮೆ 

ಕಮಲದ ಬೆಂಡೋಲೆ, ಕಡಕು, ಮೂಗ್ತಿ, ಬೇಸರಿ, ನಾಗಮುರಿ, ಈ ಬಾಬು 

ಗಳ್ನೂ ಪರ್ಸಿ...." ಅಭಿ ಖಲಾಸ್ ನಿಧಿ, ಅಭಿ ಅಂದಾಜ್ ತೋಲ್ಕೆ ಮೇರ 

ಹಿಸ್ಸ ದೇ ದೇವ್, ಮುಝೆ ರಾಮೇಶ್ವರಂ ಜಾನೆ ದೇವ್ ” ಅಂದ. ಚೇತರಿ 

ಸ್ಕೊಂಡು ಸುಬ್ಬಣ್ಣ, ಸಿಕ್ಕಿದ ನಿಧಿಲಿ ಒಂದೊಂದು ಅಸ್ಬಾಬನ್ನೂ ಪರೀಕ್ಷಿಸಿ 

ಕೈಯ್ಯಲ್ಲಿ ಎತ್ತಿ ತೂಗಿ ಅಂದಾಜು ಹಾಕ್ತಾ....“ ಈ ಒಡವೆಗಳ ಒಪ್ಪಂದದ 

---------------------------------------

ಭಟ್ಟರಕಥೆ ೧೧ 


ಪ್ರಕಾರ ಹಿಸ್ಸೆ ಹಾಕಿ ಈಗೀಗ್ಲೇ ಹಂಚ್ಕೊಳ್ಳೋದು ಅಸಾಧ್ಯ ; ರಂಗಯಾ ! 

ನಾನ್ಹೇಳ್ದೇ೦ತ ಹೇಳಿ ಅಕ್ಸಾಲೆ ವೆಂಕಣ್ಣಾಚಾರಿನ ಕರ್ಕೊಂಬಾ. ಹೊತ್ಮೀ 

ರಿದ್ದ್ರೂನೂವೆ....ತುರುತ್‌ ಕೆಲಸ. ಇಪ್ಪತ್ತು ರೂಪಾಯಿ ಗಿಟ್ಟೋ ಅವಕಾಶ. 

ವರಗಲ್ಲು ತಕ್ಕಡಿ ಸರ್ವಾನ್ನೂ ಎತ್ಕಂಬಾಂ"ತ ರಂಗಯ್ಯನ್ನ ಸಾಗ್ಸಿ....ಆ ಸಿಕ್ಕಿ 

ದ್ನಿಧೀಮೇಲೆ ನಿಗ ತಪ್ದೇನೇ, ಹೊರಗ್ಹೋಗಿ ಒಳಗ್ತಂದ ಒಂದು ಚಿಪ್ಪು 

ಬಾಳೆ ಹಣ್ಣ್ನೂ, ಪಂಚಪಾತ್ರೆ ಹಾಲನ್ನೂ ಗೋಸಾಯಿ ಮುಂದಿಟ್ಟು....ಆತ 

ಫಲಾಹಾರ ಮಾಡಿ ಸಾಬ್ರು ಹೇಳಿದ “ ಗೊಡಾಹ್ಕ್ 'ನ ಅರಿಶಿನದ ಲಿಂಗದ 

ಮುಂದೆ ಬೆಳಗೋ ದೀಪ್ದಲ್ಲಿ ಹಚ್ಕೊಂಡು ಎರಡು ಮೂರು ದಮ್ಮು ಸೇದೋ 

ಷ್ಟ್ರಲ್ಲೇ ಅಕ್ಸಾಲೆ ಸಮೇತ ರಂಗಯ್ಯನೂ ಬಂದು... ಸರ್ವ ಪರೀಕ್ಷೇನೂ ಮಾಡಿ 

ಒಟ್ನಲ್ಲಿ ಒಡವೆ ಪಾತ್ರೆಗಳು ಎಲ್ಲಾ ಸೇರಿ ಸರಾಸರಿ ಮತ್ತು ಸಾವಿರ ರೂಪಾಯಿ 

ಅಂತ ಅಂದಾಜು ಹಾಕಿ ಬಂದ ಶ್ರಮಕ್ಕೆ ಆ ಲಿಂಗದ ಎದುರ್ಗೆ " ಸತ್ರೂ 

ಈ ಸಮಾಚಾರಾನ ಹೊರಗ್ಯಾಕೋದಿಲ್ಲಾಂತ ಶಪಥಮಾಡಿ ಸುಬ್ಬಣ್ಣನ 

ಕೈಯಿಂದ ಇಪ್ಪತ್ತು ರೂಪಾಯಿ ಇಸ್ಕೊಂಡು ಅವನು ಹೊರಟುಹೋದದ್ದೂ.... 

ಅವನು ಹೋದ್ಮೇಲೆ....ಇವುಗಳೆಲ್ಲಾ ದುಡ್ಡಾಗಿ ಮಾರೋಕೆ ಒದಗುವ 

ಅನಾನುಕೂಲಗಳ ಸುಬ್ಬಣ್ಣ ಯೋಚಿಸಿ ಮನೆ ಒಳಗ್ಹೋಗಿ ಕಬ್ಬಿಣದ ಪೆಟ್ಟಿಗೆ 

ಯಿಂದ ಐದು ಸಾವಿರ ರೂಪಾಯಿ ನಗದು ತಂದು ರಂಗೈನ ಕೈಲಿ ಸಾವಿರಾನೂ, 

ಗೋಸಾಯಿ ಕೈಲಿ ನಾಲ್ಕು ಸಾವಿರಾನೂ ಇಟ್ಟು ಒಪ್ಪಂದದ್‌ ಪ್ರಕಾರ ಅವರ್ನ 

ಒಪ್ಸಿ, ರಂಗಯ್ಯನಿಗೆ “ ನಾನೂ ನನ್ನ ಹೆಂಡ್ತೀನೂ ನಾಳೆ ಮನೆ ಬಾಗಿಲು 

ಹಾಕ್ಕೊಂಡು ನಿಧಿ ಸಮೇತ ದೂರ ದೇಶದಲ್ಲಿ ಬಂಡವಾಳಾನ ಬಿಕ್ರಿ ಮಾಡ್ಕೊ 

ಳ್ಳೋಕೆ ಬೆಳಕು ಹರಿಯೋಕೆ ಮುಂಚೇನೇನೇ ಹೊರಟುಬಿಟ್ಟಿರ್ತೇವೆ. ಕೇಳಿ 

ದೋರಿಗೆ.... ನಮ್ಮಾವನ್ಗೆ ಖಾಯಿಲೇಂತ ವರ್ತಮಾನ ಬಂದು ನಾವು 

ಹೊರಟ್ಟಿ ' ಅಂತ ಊರಿಗೆಲ್ಲಾ ಹೇಳೋದು ನಿನ್ನ ಭಾರಾ”ಂತ- ಹೀಗೆ ಹೊರ 

ಟದ್ದು ಲೇವಾದೇವಿ ಸುಬ್ಬಣ್ಣ, ಹೆಂಡ್ತಿ ಸಿಕ್ಕಿದ್ನಿಧಿ-ಸಮೇತ ಬೊಂಬಾಯಿಗೆ, 

ಹತ್ತಲ್ಲ. ಹದಿನಾಲ್ಕು ಸಾವಿರ ರೂಪಾಯ್ಗೆ ನಿಧೀನ ನಿಧಾನವಾಗಿ ಅಲ್ಲೀಯಿಲ್ಲಿ 

ನೋಡೀ ನೋಡೀ ಬಿಕ್ರಿ ಮಾಡಿದ್ದು ಬೊಂಬಾಯ್ಲಿ. ಅಷ್ಟು ದುಡ್ನೂ 

ಇಟ್ಕೊಂಡು....ಊರ್ಬ್ಬಿಟ್ಟು ಹೋಗಿ ಮೂರು ತಿಂಗಳು ಆದ್ಮೇಲೆ ಬಂದು ರೈಲು 

ಗಾಡಿಯಿಂದ ಬುಳ್ಳಾಪುರದ ಸ್ಟೇಷನ್ನಲ್ಲಿ ಇಳಿಯಿತ್ಲೂವೆ....ತಯಾರು !!... 

--------------------------------------------

೧೨ 

ತೋಡಾಸಮೇತ ಇನ್‌ಸ್ಪೆಕ್ಟ್ರು !! ಇನ್ನೇನು ಹಾರ್ಬೇಡಿಗಳು ಹಾಕಿ....ಮೈ 

ಮೇಲಿದ್ದ ಬಟ್ಟೆ, ಜೊತೇಲಿದ್ದ ಪೆಟ್ಟಗೆ ಎಲ್ಲಾ ಜಫ್ರಿಮಾಡಿ....ಸಿಕ್ಕಿದ 

ಹದಿಮೂರು ಸಾವಿರದ ಒಂಬೈನೂರು ಚಿಲ್ರೆ ನಗದ್ನ ಪ್ಲಾಟ್ ಫಾರಂನಲ್ಲೇ 

ಪಂಚಾಯಿತರೆದುರಿಗೆ ಮಹಜರ್ ಮಾಡಿ ಪೋಲೀಸ್ ಸ್ಟೇಷನ್ನ ಕರೆದುಕೊಂಡು 

ಹೋಗ್ತಿದ್ದಾಗ ಸುಬ್ಬಣ್ಣ.....* ಈ ದುಡ್ಡು ನನಗ್ಸಿಕ್ಕಿದ್ದು....ನಿಧಿ ಮೂಲ್ಯ 

ಸ್ವಾಮಿ ! ನಿಧಿಮೂಲ್ಕ !” ಅಂದದ್ದಕ್ಕೆ ಆ ಪೋಲೀಸ್ ರ್ಇಸ್ಪೆಕ್ಟ್ರು “ ನಿಧಿಯಿರ್ಲಿ  

ಸುಬ್ಬಣ್ಣೂರೆ ಸಧ್ಯ ನೀವ್ ಸೇರೋದು ಸರ್ಕಾರದ್ ಸನ್ನಿಧಿ” ಅಂತಂದು.... 

ಸೇರಿಸ್ದ ಲಾಕಪ್ಪಿಗೆ, ದಂಪತಿಗಳ್ನ ! 


ಅದೇ ನಾನ್ಹೇಳಿದ್ದು ಶೆಟ್ಟಿ , ಅದೆ. ನಿಧಿ ನಿಮ್ದಾದ್ರೂನೂವೇ, ನಿಧೀ 

ಸಿಕ್ಕಿದ ನಿಲಯ ನಿಮಾದೂವೇ, ಸರ್ಕಾರಂಬೋ ಸನ್ನಿಧಿ, ಸಭಾಗಿ, ಸದಾ 

ಕಾದಿರುತ್ತೇಂತ ! 


ಶೆಟ್ಟ್ರು-ಇಂಕಾ ಮಂದಟ್ಕಾಲೇದು ಮೀರು ಚಪ್ಪೇದಿ, ಲೇವಾದೇವೀ 

ಸುಬ್ಬಣ್ಣುಡು ವಾಣಿ ಇಂಟಂಟ ಗೋಡಲೋ ಚಿಕ್ಕಿನ್ನಿಧಿ ವಾಡು ಅಂಮ್ಕೊಂಟೆ.... 

ಪೋಲೀಸ್ ವಾಳ್ಳು ದೇವಿಕಿರಾವಲಾಂಟ ? 


ಭಟ್ಟ್ರು-- "ದೇನಿಕೀ"೦ತೀರ ಶೆಟ್ಟ್ರೆ ? ದೇನ್ಕೀಂದ್ರೆ-ಸುಬ್ಬಣ್ಣನಿಗೆ 

ತಿಳಿಯದ ಅಂಶಗಳು ಎಷ್ಟೋ ಇದ್ಬಿಟ್ವು. ಮೊಟ್ಟಮೊದಲು ಆ ಗೋಸಾಯಿ,.... 

ದೇಶವೆಲ್ಲಾ ತಿರುಗಿ ಪಂಚಭಾಷೇನೂ ಕಲಿತು, ಕೊಂಚ ದಿನ ಗಂಧದ ಕಾಶಿ 

ಪತಯ್ಯನ ಮನೇಲಿ ಅಡಿಗೆ ಮಾಡಿಕೊಂಡಿದ್ದು, ಬರ್ತಫ್ ಆದದ್ದು ಗೊತ್ತಿಲ್ಲ 

ಸುಬ್ಬಣ್ಣನಿಗೆ....ಅಲ್ದೆ ಗಂಧದ ಕಾಶಿಪತಯ್ಯ ಹೆಂಡ್ತಿ ಸಮೇತ ಊರ್ಬಿಟ್ಟು 

ಹೋಗಿದ್ದಾಗ ಕಾವಲುಗಾರ ಜಟ್ಟಿ ರಂಗಯ್ಯ, ಮನೆ, ಪಾತ್ರೆ, ಒಡವೆಗಳು 

ಇಟ್ಟು ಚಬ್ ಸಲಾಕಿ ಬೀಗ(Chubb'slock) ಹಾಕಿದ ಗೋಡೆ ಅಲ್ಮಾರೇನ 

ಅತ್ಕಡೆಯಿಂದ್ಲೆ ಒಡೆದು ಮಾಲ್ನ ಕದ್ದು ಬಿಕ್ರಿ ಮಾಡಿ ನಿಭಾಯಿಸ್ಕೊಳ್ಳೋ 

ಅ ನಾ ನು ಕೂ ಲ ಗ ಳ ನ್ಯೂ ಅಪಾಯಗಳನ್ನೂ ಗ್ರಹಿಸಿ....ಪರಿಚಾರಕನಿಗೆ 

ಗೋಸಾಯಿ ವೇಷ ಹಾಕಿ....ಅಲಮಾರೆಯ ಇತ್ಕಡೆಯಿಂದ ಸುಬ್ಬಣ್ಣನ 

ಸಹಾಯದಿಂದ ಕನ್ನ ಹಾಕಿ....ಮಾಲುಗಳ್ನ ಬಿಕ್ರಿಮಾಡೋ ಜವಾಬ್ದಾರಿ 

---------------------------------------

ಶೆಟ್ಟರಕಥೆ ೧೩ 

 

ಆವನ್ತಲೇಗೆ ಕಟ್ಟಿ....ನಗದ್ನ ಕೈಗೆ ಹಾಕ್ಕೊಂಡು....ಒಟ್ನಲ್ಲಿ ಇವರಿಬ್ರೂ.... 

ದೆಹಲಿ, ಕಾಶಿ, ಕಡೆ ಪರಾರಿಯಾಗಿ.... ಪೋಲೀಸ್ ಕೈಗೆ ಸಿಕ್ಕೊ ಅಷ್ಟು 

ಹೊತ್ತಿಗೇ....ಸುಬ್ಬಣ್ಣ ಸರ್ಕಾರ ಹೇರಿಸಿದ ಆತಿಥ್ಯದ ಮೂರು ವರ್ಷದಲ್ಲಿ.... 

ಎರಡು ವರ್ಷ ಅನುಭವಿಸಿ ಬಿಟ್ಟಿದ್ದ. ಯಾಕ್ಹೇಳ್ತೇನೇ! ನನ್ನ ಮನೆ, ನನ್ನ 

ಹೊಲ, ನನ್ನ ಗದ್ದೆ, ನನ್ನ ನಿಧೀಂತ ನಾವು ನಾವುಗಳು ಎಷ್ಟು ನಿರ್ಧರಿ 

ಸ್ಕೊಂಡ್ರೂನೂ, ಶೆಟ್ಟ್ರೇ, ಈ ಹಾಳು ಸರ್ಕಾರ ತೋಡಾ ಸಮೇತ ತಯಾರಿ 

ತನ್ನ ಹಿಸ್ಸೆಗೆ ! 

=======================================

ಸಮಶ್ಪೋಯಿನ ದಂಬ್ಡಿ 

ಸೇರಿದೆ ಗೋಷ್ಠಿ-ಕಾಳಮ್ಮನ ಗುಡೀಲಿ. ದೊಡ್ಡ್ಹಟ್ಟಿ ಬೋರೇಗೌಡ 

ಎಕ್ಕಡ ಹೊರಗಿಟ್ಟು ಒಳಗ್ಬರ್ತ ಗುಡಿ ಹೊಸಲ್ದಾಟಿ ಒಳಗೆ ಹೆಜ್ಜೆ ಇಡತ್ಲೂವೆ, 

ಪಾದದ ಹೆಬ್ಬೆಟ್ಟು ಚಿಮ್ಮಿ ಎದುರು ಗೋಡೆವರೂ, ಈ ಚಂಗ್ ! ಚಂಗ್ ! 

ಚಂಗ್ !” ಅಂತ ಶಬ್ದ ಮಾಡ್ತಾ ಎದುರ್ಗೊಡೆ ಸೇರಿ ನಿಂತ ಬಿಡಿಕಾಸ್ನ, ಬೆಲ್ಲದ 

ಕಂಟ್ರಾಕ್ಟರು ಗಡF್್ಖಾನ್ ಸಾಹೇಬರು ಬಗ್ಗಿ ಎತ್ತಿ, “ ಅರೇರೇರೇ ಏ ಕಾಸ್ 

ಕಹಾಂ ಆಯಾ ಯಹಾಂ” ಅನ್ನುತ್ಲೂವೆ, ಭಟ್ಟ್ರು, “ ಕಹಾಂ ಏನೂ, 

ಯಹಾಂ ಏನೂ : ಮಧ್ಯಾಹ್ನವೆಲ್ಲಾ ಪರೇಲಾಡ್ಡ ಪಟಂಗ್ರು ಜೂಜಿನ್ಗಲಾಟೇಲಿ 

ಬಿಟ್ಟಿಟ್ಹೋದ ಬಿಡಿಗಾಸು ! ಶೇಕಡಾರ್ ಶಾಮಣ್ಣರ ಕೈಗೇ ಕೊಡಿ. 

ನಮ್ಮೈವರ ಹೆಸ್ರು ಹೇಳಿ....ನಮಗ್ಸಿಕ್ಕಿದ ಈ ನಿಧೀನ.... ಸರ್ಕಾರೀಗೆ ಹಿಸ್ಟೆ 

ಕೊಡದೆ ಊರೊಳಗಿನ ಶ್ರೀಕಂಠೇಶ್ವರನಿಗೆ ಮಂಗ್ಳಾರ್ತಿಲ್ಹಾಕ್ಲೀ,” ಅಂದ್ರು. 

" ಅಚ್ಛ ! ಹೋನೆದೇವ್ ” ಅಂತ ಖಾನ್ ಸಾಹೇಬ್ರು ಶಾಮಣ್ಣರ ಕೈಗೆ 

ಕೊಡೊ ಬಿಡಿಗಾಸ್ನ ಶೆಟ್ಟ್ರು ಕಸ್ಕೊಂಡು, “ ಮಂಗ್ಳಾರ್ತಿಕಿ ವೇಸ್ವಾರಾ ! 

ಐತೆ ಇಕ್ಕಡೀಯಂಡ, ಅದೀ....ಮಂಚಿಕಾಸೂ ” ಅಂತ ಕಿಸೆಯಿಂದ ಮತ್ತೊಂದು 

--------------------------------------------

೧೪ ತಾವರೆಕೆರೆ 


ಬಿಡಿಕಾಸ್ನ ಶಾಮಣ್ಣರ ಕೈಯಲ್ಲಿಟ್ಟು, “ದೀನಿ ವೇಯಂಡ ಮಂಗ್ಳಾ 

ರ್ತಿಲೋ, ಸಮಶಿಪೋಯಿನ ಕಾಸೂ ! ದೇವುಣಿಕೀ.... ಪರವಾಲೇದೂ ! 

ಕಣ್ಳುನ್ನಾವಾ ಚೂಶೇಕೀ ! ಲೇಕಾ....ಕೊನೇ ಧಾನ್ಕೇಮಿ....ಅಂಗಡೀಕೆ 

ಪೋತಾಡಾ ? ಮಂಚಿ ಕಾಸೂಂಟಿ.... ಮನಕಿ ಉಪಯೋಗವು....ಶ್ರೀಕಂಠು 

ಣಿಕಿ ಕಾಸು ಎಟ್ಲುಂಟೇ ಯೇಮಿ ?....ಜಗವಂತ ವಾಣಿದೇ ಕದಾ ? ” ಅಂದ್ರು. 


ಭಟ್ಟ್ರು- ಶೆಟ್ಟ್ರೇ ! ಒಳ್ಳೆ ಕಾಸಿಗೆ ಸವಕಲು ಕಾಸು ನೀವು ಕೊಟ್ಟ 

ದ್ದಾಶ್ಚರ್ಯವಲ್ಲಾ ! ಸವಕಲು ಕಾಸು ನಿಮ್ಹತ್ರ ತಯಾರಾಗಿದ್ದದ್ದು ಆಶ್ಚರ್ಯ ! 


ಶೆಟ್ಟ್ರು-- ಮೀಕಶ್ಚರ್ಯವೇನೋ...? ಮಾವಾಳಕು ಲೇದೂ ! 

ಮಾಕುಟುಂಬಮಂತಾ ಮುಂದರಿಕಿ ವಚ್ಚಿಂದಿ, ಒಕ್ಕೇ ಒಕ್ಕ ಸಮಶಿಪೊಯ್ಯನ 

ದಮ್ ಬ್ಡಿನಿಂಚೇ ! ನೇನು ಈ ಊರ್ಲೋ, ಮೀ ಎದ್ರುಗಾನೆ, ಅಂಗ್ಡೀ, ಇಲ್ಲೂ, 

ವಾಕ್ಲು, ತೋಟಮು ಕಾಕ, ಇಂಟಾಡಿದಿ ಪೈನ ಉಂಡೇ ಸೊಮ್ಲು, ದೀನಿಕಂತ 

ಅಸ್ತಿಭಾರಮು, ಮೇಮು ನಾಚಿನ್ನ ದಾಂಟ್ಲೊ ತಿರುಪತೀಕಿ ವೆಂಗಟರಮಣ 

ಸ್ವಾಮಿ ದರ್ಶನಾನ್ಕಿ ಪೋಯಿನಪ್ಪುಡು, ಮಾಯಕ್ಕ ಚೇತ್ಲೋ ಒಕ್ಕ ಸಮ 

ಶ್ಪೋಯಿನ್ದ೦ಬ್ಡಿ ಉಂಡೆನೋ, ಇಪ್ಪುಡು ಈ ಮಂಚಿಸ್ಥಿತೀಲೋ 

ಉನ್ಮಾನು ನೇನು ! 


ಗೌಡ ---ಎಂಗಾದಾತು ಶೆಟ್ಟ್ರೇ ? 


ಶಾಮಣ್ಣ- ಶೆಟ್ಟ್ರು ಹೇಳೋದು, ಸವಕಲು ಕಾಸಿಂದ್ಲೇ ಅವರ ಸಂಸಾರ 

ವೆಲ್ಲಾ ಇಷ್ಟ್ರಮಟ್ಟಿಗೆ ಮುಂದಕ್ಕೆ ಬಂದಿದ್ರ ಅಸ್ತಿಭಾರಾಂತ ; ಚಿಕ್ಕಂದ್ನಲ್ಲಿ ಶೆಟ್ಟ್ರು 

ಅವರ ಕುಟುಂಬಸಮೇತ ತಿರುಪತಿಗೆ ಯಾತ್ರೆ ಹೋಗಿದ್ದಾಗ ಅವರಕ್ಕಾವ್ರ 

ಕೈಲಿ ಒಂದು ಸವಕಲುದಮ್ಡಿ ಇದ್ದಿದ್ರಿಂದಲೇ, ಶೆಟ್ಟ್ರಿಗೆ ನಮ್ಮೂರ್ಲಿರೋ ಮನೆ, 

ಬಾಕಿಲು, ದನ, ಕರು, ಅಂಗಡಿ, ತೋಟ, ಈ ಸಂಪತ್ತುಗ್ಳೆಲ್ಲಾ ಲಭಿಸಿದ್ದೂಂತ 

ವಾದಿಸ್ತಾರೆ. 


ಗಡF್್ ಖಾನ್-ವಾರೆ! ಯಾರ್ !....ಏಕ್ ಸವಕಲ್ದಮ್ಡಿ ಬುನಿಯಾದ್ಪೆ 

ಬಂದೇಸೋಕ್ಯಾ....ನಿಮ್ದೂಗೆ....ಈಗೆ ಇರೋ....ಮನೇ ತೋಟ....ಯೆಲ್ಲಾ... 

-------------------------------------------  

ಶೆಟ್ಟರ ಕಥೆ ೧೫ 


ಭಟ್ಟ್ರು-ಸ್ವಲ್ಪ ಸುಧಾರಿಸ್ಕೊಳ್ಳಿ ಸಾಬ್ರೇ....ಶೆಟ್ಟ್ರು ತಾವೇ ಹೇಳ್ತಾರೇ.... 

ಅವರಕ್ಕಾವ್ರ ಕೈಲಿ, ತಿರುಪತಿ ವೆಂಕಟರಮಣಸ್ವಾಮಿ ಸನ್ನಿಧೀಲಿ, ಸಮಕಲು 

ಕಾಸು....ಅದೇನ್ಕಥೇ ಶೆಟ್ಟ್ರೇ.....ಕೇಳ್ಬಹುದೇ....? 


ಶೆಟ್ಟ್ರು....ಅಡಕ್ಕಂಡ ಏಮೀ....ಅದಗಂಡ...ಏನೇವಾಳ್ಳು ಉಂಡೇಟಪ್ಡು 

ಚೆಪ್ಪೇದಾನ್ಕೇಮಿ ಅಭ್ಯಂತರವು ನಾಕೀ ! ಪೆದ್ದ ಕಥ.... ಐತೇನೂ ಚೆಪ್ತಾನು.... 

ಕೂಚೋಂಡ ! 


ಎಲ್ಲರೂ ಕುಳಿತುಕೊಂಡು ಆರಾಮವಾಗಿ ಕೇಳುವರು. 


ಶೆಟ್ಟ್ರ ಕಥೆ 


ಚಪ್ಪಿತ್ನೇ....ತಿರುಪತೀಕಿ ಪೋಯಿಂಟ್ಮಿ ಅನಿ! ಮಾಅಯ್ಯ, ನೇನು 

ಒಕ್ಕೇ ಕೊಡ್ಕು, ಮಾಯಕ್ಕ ಒಕ್ಕೇ ಕೂತ್ರು ; ಮಾಯಮ್ಮ ಪೊಯ್ಯಿ, ಶಾನಾ 

ದಿನಾಲು ಐಯ್ಯಿಂಡ....ಮಂಗ್ಳಾರ್ರೀಕಿ ನಿಲ್ಸ್ಕೋನುಂಡಾಮು.... ಪೂಜಾರಿ 

ಕುಡಿಚೈತೊಟ್ಟು, ಎದುರು ವರಸಲೋ....ಒಕ್ಕ ಮುಶಿಲಾಯನ, ಆಡ್ಡಿ, ಒಕ್ಕ 

ಚಿನ್ನೊಡು - ಅಂದ್ರೂ ಮಾವಾಳ್ಳ . ಆ ಚಿನ್ನೋಡು, “ಮಂಗ್ಳಾರ್ತಿಲೋ 

ವಿಡಿಕಾಸುಂಟೇ ವೇಯಯ್ಯಾ ”....ಅನೆ, ಮುಶಿಲಾಯನ, ತಿತ್ತಿ ವಿಪ್ಪಿ, 

ವಿಡಿಗಾಸ್ಲು ಬೈಟತೀಶಿ, ಕರ್ಪೂರ್ಮು ಕಾಲ್ತುಂದೇ ತಟ್ಲೋ ವೇಸೇಲೋಪಲ್ನೇ, 

ಮಾಯಕ್ಕ....ಮಂಚಿಕಾಸ್ಯೆ ತೇ....ಇಕ್ಕಡೀಯಂಡ.....ಮಂಗ್ಳಾರ್ತೀಕೀ ಸಮಿಶಿ 

ಪೋಯಿನ ದಂಮ್ಮಡೀ ನಾದಗ್ರಂದೀ....ನೇನಿಸ್ತಾ” ಅನಿ ಚಪ್ತೂನೇ, ಸವತಿ 

ಪೋಯಿನ ಒಕ್ಕಾಸು ಆ ಮಶಿಲಿವಾಣಿ ಚೇತ್ಲೋ ಪೆಟ್ಟೇದಾನ್ಕಿ ಪೋಯಿನ 

ಚೈನಿ, ಆ ಮುಶಿಲಾಮೆ ಬಿಗುವ್ವುಗ ಪಟ್ಕೋನಿ...."ಉಷಾರು ಅಂಟೇ.... 

ಇದಿ! ವಿಂಟೂಉಂಡಾರಾ ! ಎವ್ವರಿಂಟಿ ಪಡ್ಸೋ ಗೊತ್ಲೇದೂ .....ಅಯ್ತೆ 

ಇಟ್ಟುಂಡವಲ.... ಮನಿಂಟಿ ಕೊಡಾಲು ! ವಿಚಾರಿಚ್ಚಂಡ ” ಅನಿ ಮೊಗುಣ್ಣಿ 

ಮಾತೊಟ್ಟು ದಬ್ಬಿ, “ ದಾಮ್ಮಾ ಮಾಟಾಡ್ದ್ವು ದಾ” ಅನಿ, ಈಡ್ಚ್ಕೋನೇ 

ಮಾಯಕ್ನಿ, ಇಂಕೇಮಿ ಆ ಮುಶಿಲನಾಡು ವಚ್ಚಿ ಮಾಯಯ್ಯನಿ ಪ್ರಾಕಾ 

ರಾನಿಕಿ ತೋಡುಕೊನಿಪೋಯಿ, ಇದ್ರೂ, “ ಪಿಸಿಪಿಸಿಪಿಸಿಪಿಸೀ ” ಅನಿ ಅದೇಮಿ 

-------------------------------------------

೧೬           ತಾವರೆಕೆರೆ 

 

ಮಾಟ್ಳಾಡ್ಕೊನಿರೋ....ಛತ್ರಮು ಮೇಮು ಚೇರಿತಿಮೊ ಲೇದೋ.... 

ಮಾಯಪ್ಪ....ಚೆಪ್ಪೇ- "ಆದಿಮೂರ್ತೀ ! ಮೀ ಅಕ್ಕಕು ರೇಪು ತಿರುಪತಿ 

ಲೋನೇ ಪೆಂಡ್ಳೀರಾ ! ವೆಂಕಟರಮಣಸ್ವಾಮೀ ಮಹಿಮನೇ ಮಹಿಮ! ಇದು 

ವರ್ಕ್ಕು ಅಲ್ಲುಡ್ನಿ, ವೆದ್ಕಿ ವೆದ್ಕಿ ಚಿಕ್ಕಕಾ ಚೈಚೈ ಪಿಸುಕ್ಕೊನಿ, ಕಂಡ್ಳು 

ಕಂಡ್ಳು ವಿಡಿಸ್ಕೋನಿ ಉಂಡಿನ ನನ್ನೀ ತಿರುಪತೀಕೆ ತೆಪ್ಪಿಚ್ಕೋನೀ.... ಮನ 

ಆಂಡಾಳುಕಿ ಮಂಗ್ಳಾರ್ತಿಲೋ ಸಮಶಿನಕಾಸು ವೇಶೇ ಬುದ್ದಿ ನಿಚ್ಚಿ ದಾನ್ನಿ 

ಚೂಶಿ ಕೋಡಾಲುಗಾ ಚೇಸ್ಕೋವಲಾ ಅನಿ ಮನೈ ಕಟ್ಟೇ ದರ್ಶನಾನ್ಕಿ 

ವಚ್ಚಿವುಂಡೇ ಬಲರಾಮಶೆಟ್ಟಿಗಾರು ಭಾರ್ಯ ತಲಕಾಯ್ಲೋ ಬುದ್ದಿ ಪುಟ್ಟಿಂಚಿ.... 

ರೇಪು ತೆಲ್ವಾರೇ ಬ್ರಾಹ್ಮಣ್ಣಿ ಪಿಲ್ಪಿಂಚಿ....ತನ ಸನ್ನಿಧಾನಮುಲೋನೇ 

ಲಗ್ನಮು ಚೇಪಿಚ್ಚೇ, ವೆಂಕಟರಮಣಸ್ವಾಮಿ ಮಹಿಮನೇ ಮಹಿಮ ! " 

ಅನಿಯೆ, ಇಂಕೇಮಿ ? ಪೆಂಡ್ಲು ಜರುಗೆ....ಸಾಂಗೋಪಾಂಗಮುಗ! ಲಗ್ನಾನಿಕಿ 

ಒಚ್ಚಿನ ಬ್ರಾಹ್ಮಣಲಂತಾ ಏಮಿ ಘಾಟೀ ಅಂಟಾರು !....ಭೂರಿದಕ್ಷಿಣ ಇಚ್ಚೇ 

ತಪ್ಪುಡು, ಮಾ ಊರಿನಿಂಚೀ ತೆಚ್ಚಿನ ಸಮಶಿಪೋಯಿನ ಕಾಸುಲ್ಲೋ 

ಒಕ್ಕಟಿಕೂಡ ಖರ್ಚು ಕಾಲೇದು. ಮಾಂಗಲ್ಯಧಾರಣಮು ಐಯ್ನೋ 

ಲೇದೋ, ಪ್ರಾರಂಭಮಾಯ ಜಗಡಾಲು ; ಮೊದಟ ಜಗಡಮು....ಮಾಯಪ್ಡೂ 

ಬಲರಾಮಶೆಟ್ಟಿವಾಳ್ಳೂ ಮೇಳವು ನಾಯಿಂಚಿನ ವಾದ್ಯಗಾರುಡುಪೈನ ನಕ್ಕ್ಲೈ 

ಕಟ್ಟು ಎಗಿರ್ರಿ ! ಗಲಾಟಪೈನ ಗಲಾಟ ! " ಮೇಳಮುನಾಡು  'ಇದಿ ನ್ಯಾಯಮಾ 

ಶ್ರೀರಾಮಚಂದ್ರ' ಅನೇ ಕೃತಿ ನಾಯಿಂಚಿಂದಿ ಅಮಂಗಳಕರವು....ವಾಧ್ಯಮು  

ವಾಳ್ಳ ಕೂಲಿ ಇಚ್ಚಲೇದೂ,” ಅನಿ ಚಪ್ಪಿ. ಆ ಜಗಡಮು ನಿಲಿಪಿಚ್ಚೇದಾನಕಿ 

ಭಗೀರಥ ಪ್ರಯತ್ನ ಮಾಯ. ಆ ಗಲಾಟ ನಿಲಿಚಿನೋ ಲೇದೋ, ಬಲರಾಮ 

ಶೆಟ್ಳು...ಬ್ರಾಹ್ಮಣ್ನಿ " ಲಗ್ನ ಮು ಸಮಾಪ್ತ ಮಾಯ್ನ. ” ಅನಿ ಅಡಿಗಿ ಆತಡು 

" ಐಫೋಯ” ಅನಿ ಚಿಪ್ಪಿನೋ ಲೇದೋ .... ಎಗಿರೆ .... ಒಕ್ಕೇ ಎಗ್ಗ್ರು 

ದೂಲಾನ್ಕಿ ! ಚಪ್ತಾರು ಮಾಯಪ್ಪಣ್ಣಿ ಚೂಶೀ....* ಗೆಲಿಸ್ತಿನಿರಾ ವೆಧವಾ 

ಗೆಲಿಸ್ತಿನೀ .... ಎಕ್ಕಡ ವೆದಕಿನಾನೂ ಚಿಕ್ಕ ಕುಂಡಾ ಉಂಡಿನ ಕೋಡಾಲು 

ಇ ಕ ಡ ಚಿ ಕ್ಕೆ ! . ಚೂಡ್ರಾ ! ನಿ ಆಲ್ಲುಡೂ ಕ೦ಟ್ಳೇ ಲೇನಿ 

ಅಂಧುಡು !!! ” ಅನಿಯೆ, ಮಾಅಯ್ಯ ಸಕಾಪಕಾ ಅನಿ ನವ್ವಿ ಸಂಬಂಧಿ 

ಕಿನ್ನ ಇಂಕಾ ಪೈಕಿ ಎಗಿರೀ, “ಯವರಿರಾ ವೆಧವಾ ಅಂಟಾವು, ಡಬ್ಬಲ್ 

-------------------------------------------

೧೬ ಶೆಟ್ಟರ ಕಥೆ 


ವೆಧವಾ !....ಸೋಲಿಪೋಯಿನ ಬಡ್ತಿ ನೀದೀ....ನೂವು ಗೆಲತಿ ಮುಂಡುಮೋಚಿ 

ತಿವೀ ! ಇಕ್ಕಡ ಚೂಡೂ....ಗೆಲಿಶಿನದಿ ಉಂಡನೀ !! ” ಅನಿ ಚಪ್ಪ್ತೂ, 

ಮಾಯಕ್ಕ ತಲಪೈನ ಚೆಯ್ಯಿಪೆಟ್ಟಿ ಎತ್ತತಾಡೂ ಚೆಯ್ಯಿ ! ವೆಂಟಿಕಲಂತ ಒಕ್ಕೇ 

ಗಂಟ್ಲ ಒಚ್ಚಿಡ್ಚ ಚೇತ್ಲೋ !! ನಾಟಕಂವಾಂಡ್ಲು ಆಡವಾಂಡ್ಳ  ಪಾರ್ಟಿಕಿ 

ತಲಕು ಪೆಟ್ಕೋನೇ ಟೊ ಪನ್ನೂ ! ! ! ಮಾಯಕ್ಕಕಿ ಇಟ್ಟನಪ್ಡ್ನಿಂಚಿ 

ವೆಂಟಕಲೇ ಲೇವು !! ಇಂಕೇಮಿ....ಮೋಸಾನಿಕಿ ಮೋಸವು ! ಠಕ್ಕಾನ್ಕಿಠಿಕ್ಕಿ ! 

ಎವರ್ನಿ ಎವರು ತಿಟ್ಟೇದಿ ?.... 


ಅಪ್ಪುಡಿನಿಂಚಿ ಅಲ್ಲುಣ್ಣಿ ಚೈಪಟ್ಟಿ ಒಕ್ಕೂಕ ಆಸ್ಪತ್ರಕೂ ಒಕ್ಕೊಕ 

ವೈದ್ಯುಡ ದಗ್ಗಿರಾನೂ ಪಿಲಿಚಿಕೊನಿಪೋಯಿ ಎಂತೋ ಡಚ್ಚು ಖರ್ಚುಚೇರ 

ಮಾಯಪ್ಪ, ಅಯ್ತೇಯೇಮಿ! ವಾಡು ಚಚ್ಚಿ, ಅಲ್ಲುಡು ಚಚ್ಚೇವರ್ಕು 

ಧೃತರಾಚ್ಟ್ರುಡೇ, ಮಾಭಾವ ! 


ಇದಿಕಾಕ ಮಾಯಕ್ಕಕಿ, ದಾನಿ ಅತ್ತೆಮ್ಮ , ತಲಕಾಯಿಕಿ....ಕೇಶರಂಜ 

ನ್ನೇಮಿ, ಜಬಗುಸುಮೇಮಿ....ಭೂಮಿಲೋ ಉಂಡಿನದಿ ಲೇನ್ದಿ, ತೈಲಮ್ಲೂ, 

ನೂನ್ಲೂ ತಲಕಾಯಿಕಿ ರುಬ್ಬೀ ರುಬ್ಬೀ, ಬುರುಡಪೈನ ಚಮ್ಡ ಎಗರ್ತೂ 

ಒಚ್ಛಿನೇ ಕಾಕ, ವಾಸನಕಿ ಒಕವೆಂಟಿಕನು ಲೇದು ....ಏಮಿ ರುಬ್ಬತೇ ಏಮಿ ....

ಇಸುಕುಲೋ ಪಾತಿ ಕಟ್ಟಿ, ಗೊಬ್ರಮು ವೇಸಿ, ವಿತ್ತ್ನಾಲು ವಿತ್ತಿ, ಎಂತ 

ನೀಳ್ಳು ವೇಸ್ತೇ ಏಮಿ ? ಅಟ್ಲನೇ ಮೊಗಡು ಉಂಡಿನಾನೂ, ಗೊಂತಲೋ 

ಮಾಂಗಲ್ಯಮಂಡಿನಾನೂ ಟೋಫನ್ ಲೋಪಲ್ಲೋ - ಬೋಡಿ, ಮಾಯಕ್ಕ ! 

ಪರಮಾತ್ಮುಣಿ ಲೀಲನೇ ಲೀಲ! ಕಂಡ್ಲು ಲೇನಿ ಕೊಡುಕ್‌ಕೀ, ಕಂಡ್ಲು 

ರಾವಲಾ ಅನಿ ತಿರುಪತೀಕಿ ವಾಂಡ್ಳು ಯಾತ್ರ ಚೇಸಿಂದೇಮೋ ಸರೇ !... 

ಅಯ್ಕೆ ಮೇಮು ... ಆಡವಾಂಡ್ಲು ತಿರುಪತಿಕಿ ಪೋಯಿ ತಲಕಾಯಿ 

ಬೋಡಿಚ್ಕೋನೇದಿ ಕದ್ದೂ ! ಅಯ್ಕೆ ಮೇಮು ... ವೆಂಟಕಲು ಲೋಕ 

ಬೋಡಿಗ ಉಂಡಿನ ಮಾಯಕ್ಕ ತಲಕಾಯ್ಲೋ, ವೆಂಟಕಲು ಪೆರುಗುವಲಾ 

ಅನಿ, ತಿರುಪತೀಕಿ ಪೋಯಿಂದಿ ಆಶ್ಚರ್ಯಮೂ ! ... ಲೇದೂ ... ಅಲ್ಲಣಿಕೀ 

ಕಂಡ್ಳೂ ರಾಕ, ಅಕ್ಕಕಿ ವೆಂಟಕಲೂ ಪೆರುಗಕ , ಇದ್ದರಿಕೂ ಗಂಟೇಶಿನ ಪರ 

ಮಾತ್ಮುಣಿ ಲೀಲನೇ ಲೀಲ ! 

--------------------------------------

೧೮ ತಾವರೆಕೆರೆ 


ಇಟ್ಲ ಮೋಸಮುಪೋಯಿನ ದುಃಖಮುಲೋನೇ ಚಚ್ಚಿ ಪೋಯಿರಿ 

ಮಾತಂಡ್ರಿನೂ, ಮಾಯಕ್ಕ ಮಾಮಾ, ಅತ್ತ, ಭಾವಕಿ ಉಂಡಿನ ಆಸ್ತಿ 

ಪಾಸ್ತಿ ಚೂಸ್ಕೋನೇಕಿ ನೇನುಕಾಕ ವೇರೆವ್ವರೂ ಈರು. ಮಾಭಾವಕಿ 

ಲೇನಿಕಂಡ್ಳೂ ನೇನೆ, ಮಾಯಕ್ಕರೆ ಲೇನಿ ವೆಂಟಿಕಲೂ ನೇನೇ ! ಮೆಲ್ಲಮೆಲ್ಲಗೆ 

ಭಾವಣಿ ಆಸ್ತೀ ಅಂತ ಚೇತ್ಕಿ ತೀಸ್ಕೋನಿ, ವಾಣಿ ವ್ಯಾಪಾರಮಂತ ನೀನೇ 

ಜರಿಗಿಸ್ತ ವಸ್ತಿ, ವಾಡು, ಚಚ್ಚೇಟಪ್ಪುಡು.... ಚಚ್ಚೇಕಿ ಇಷ್ಟಮು ಲೇಕ 

ಉಂಡಿನ ವಾಣ್ಣ್ನಿ ನೋಟ್ಲೋ....ನರಕನು ತಪ್ಪಿಚ್ಚಿಕೋನೇ ದಾನ್ಕಿ.... 

“ನಾರಾಯಣ ” ಅನಿ, ಉಚ್ಚಾರಣ ಚೇಪಿಚ್ಚೇದೇ ಪೆದ್ದ ಪನಿ ಅಯ್ಪೋಯ ! 

ಮಾಭಾವ ಪಂಡುಕೋ ಉನ್ನಾಡು...." ಅಯ್ಯೋ! ಪೋತಾನೇ ! ಒಕ್ಕ 

ಬಿಡ್ಡನೂ ನಾಕಡುಪುಲೋ ಪಟ್ಟಕ ಪೋತಾನೇ ! ಈ ವೆಂಟಿಕಲು ಲೇನಿ 

ಬೋಡಿನಿ ಪೆಂಡ್ಳಾಡಿನಪ್ಪುಡು....ಮೇಳಮುವಾಡು.... “ಇದಿ ನ್ಯಾಯಮಾ ” 

ವಾಂಚ್ಛೇ ಅಪ್ಪುಡೇ ಗೊತ್ತು.... ಇಟ್ಟ್ಲೌತಾನೂ ” ಅನಿ ಭಾವ ಒಕ್ಕತಟ್ಟು.- 


ಅಕ್ಕ ! .... “ ಮೀರು ಚೆಪ್ಪಿನಾಯಕಟ್ಟೇ ಕಂಡ್ಳುಲೇನಿವಾಣ್ಣಿ ಚೈ 

ಪಟ್ಟಿನ ಪಾಡು ವಿಧಿ ಗೊತ್ತುಂಡ್ಕೋನೇ ವಾಡು ವಾಯಿಂಚಿಂದಿ ಆ ಕೃತಿ " 

ಅನಿ ಮಾಯಕ್ಕೆ ಒಗತಟ್ಟು. ಈ ಇದ್ರ ಜಗಡಮು ಸಮಾಧಾನವು ಚೇಸೇ 

ಲೋಪಲ, ಅಕ್ಕಸಕ್ಕಮುವಾಳ್ಳು ವಚ್ಚಿ ಹಜಾರಮಲೋ ನಿಲುಚುಕೊನಿ, 

ನನ್ನು ಪಿಲಚಿ, “ ಬಲರಾಮ ಶೆಟ್ಟಿವಾಳ್ಳ ಕೊಡುಕಿಕಿ .... ಒಳ್ಳೋ ಇಟ್ಲ 

ಉಂದೇ ?....ವೈದ್ಯುಡ್ನಿ ಪಿಲಿಪಿಚ್ಚಿ ಮಂದು ಇಸ್ಪಿಚ್ಚಕೂF್ದಾ "..ಅನಿ ನನ್ನ 

ದಬಾಯಿಂಟ್ರಿ, ನೇನೇಮಿ ಚೆಪ್ಪುದು? ಕಂಡ್ಲು ಲೇನಿ ರೋಗಿ ಉಂಟೇ 

ಯೋಮಿ, ಪೋತೇಯೇಮಿ ! ಉಂಡಿನ ಆಸ್ತಿನಿ ಅನುಭವಿಂಚೇಕೇ ನೆತ್ತಿಲೋ 

ಎಪ್ಪುಡು ರಾಯಲೇದೋ, ಇಂಕ ಬದುಕಿ ಏಮಿ ! ನಚ್ಚಿನವಾಳ್ಕಂತ.... 

" ವೈದ್ಯುಡು ವಚ್ಚಿ ಚೇಸೇದೇಮುಂದೀ ! ನಾರಾಯಣುನಿ ಪೈನ ಭಾರವು 

ವೇಶಿನಾಮು ! ವಾಣಿ ಇಷ್ಟಮೆಷ್ಟ್ಲನೋ ಅಟ್ಲೌತಿಂದಿ ! ಗಲಾಟ ಚೇಯಕ 

ಪೋಯಿರಾಂಡ ! ” ಅನಿ ತರಿಮಿತಿನಿ ಅಂದ್ರನೂ. 

 

ಇಂಕೇಮಿ, ಭಾವಕಂತ್ಯಕಾಲವು ! ಪೋತಾ ಉಂಡಾಡು ! ಮಾಯಕ್ಕೆ 

' ಪೋತಾರೇ, ನೋಟ್ರೋ ' ನಾರಾಯಣಾ' ಅನಿ ಚೆಷ್ಟೇಗಾನಾ ಸದ್ಗತೀ,” 

--------------------------------------

ಶೆಟ್ಟಿ ರಕಥೆ ೧೯ 


ಅನಿಂದಿ ವಿನಿ ಮಾಭಾವ, ' ಚಪ್ತೇ ಚಚ್ಚಿ ಪೋತಾನೋ ಏನೋ' ಅನೇ 

ಭಯಮಲೋ ಚಪ್ಪಡು ! ದಾನಿಕೊಕ್ಕ ಸೂತ್ರವು ಚೇಸ್ತ್ನಿ, ಟೆಂಕಾಯಿ 

ನಿಂಚಿ ಒಕ್ಕ ಅಂತ ಪಿಂಜು ಪೀಕ್ಕೋನಿ ಭಾವಚೇತ್ಲೋ ಪೆಟ್ಟಿ, ಇಂಕೊಗ 

ಚೇತ್ಲೋ ಒಕ್ಕ ಆಣ ಪೆಟ್ಟಿ, “ ಭಾವಾ, ನೀಕಿ ಜ್ಞಾನಮು ತಪ್ಪಿಂದಾ, ಲೇದಾ, 

ಚೂಸ್ತಾಮು ! ” ಈ ಚೇತ್ಲೋ ಏಮುಂದಿ ? ” ಅಂಟ್ನಿ, “ ನಾರು ಅನ್ಯೆ. 

“ಆ ಚೇತ್ಲೋ ? ” ಅಂಟ್ನಿ, “ ಆಣ” ಅನ್ಯೆ-ರೊಂದು ಚೇತ್ಲೂ ಜೋಡಿಚ್ಚಿ 

....“ ರೊಂಡೂ ಚೇರ್ಚಿ ಚಪ್ಪು, ಚೂಸ್ತಾಮು ! ” ಅಂಟ್ನಿ, “ ನಾರು ಆಣ !

 ಅಯ್ಯಯ್ಯೋ ! ನಾರಾಯಣ ಅನ್ನಿಡಿಸ್ತ್ನೆ ....ಇಂಕ ಐಪೋಯ ! ” ಅನಿಂದೆ, 

 ಪಾಪಮು.... ಪ್ರಾಣಮು ಪೋಯ... ಮಾ ಬಾವ್ಕಿ. 

 

ಇಂಕೇಮಿ ಚೇಸೇದಂತಾ ಚೇಸಿ, ಆ ಊರ್ಲೋ ಉಂಡಿನ ಆಸ್ತೀ 

ಪಾಸ್ತಿಲಂತ ಅಮ್ಮಿ ರೊಕ್ಕಮು ಚೇಸ್ಕೋನಿ, ಅಕ್ಕ ಚೊತ್ಲೋ ಈ ಊರಿಕಿ 

ವೆಳ್ಳೇದಾನಿಕಿ ಎಕ್ಕಿಂಡಾಮು ರೈಲು ! ಅಪ್ಪುಡು ಕೂಡ ಊರವಾಂಡ್ಲು 

ವಿಡುವಲೇ ನನ್ನು ! ಅಡಿಗ್ಗೇ ಅಡಿಗಿರಿ ! “ ಏಮೋ, ಇಟ್ಟ ಐಪೋಯ ! 

ಆಯ್ತೇನೂ ಒಕ್ಕ ವೈದ್ಯುಡುಗಾನಾ ತಮ ಭಾವುನಿ ಚೂಶುಂಟೇ.... ! ” ಅನಿ. 


ದಾಂಟ್ಲೋನೇ ನೇನು...." ಮೇಮೇಮಿ ಚೇಸೇದಿ ?....ನಾರಾಯಣುಡು 

ಪೈನ ಭಾರಮು ಮೇಮು ವೇಸ್ತೆ....ಭಾವುನಿ ಭಾರಾನ್ನಿ ನಾರಾಯಣುಡು 

ನಲುಗರು ಪೈನ ವೇಶಿಡಿಚ ! ” ಅನಿ ಚಪ್ಪಿ, ಮಾಯಕ್ಕ್ನಿ ತೋಡ್ಕೋನಿ ಮೀ 

ಊರುಕೊಚ್ಚಿ, ವ್ಯಾಪಾರಮು ಷುರುಚೇಸಿ, ಸದಿ ಏಂಡ್ಲುಕು ಪೈನನೇ 

ಆಯ ! 


ಯಾಲ ಚಪ್ತಾನೂಂ....ಟೇ....ದೇವುಡುಗಾನಾ ದಯಪೆಟ್ತೇ, ಸವಶಿ 

ಪೊಯ್ಯಿನ ದಂಬ್ಡಿಲೋ ಉಂಡೇ ಮಹಿಮ ಸವರನ್‌....ಸವರನ್‌ಲೋನೂ 

ಲೇದೂ....ಅನೇದಾನಕಿ.... ! 


ಅಕ್ಕಡ ಚೂಡಂಡ ! ಸೂರ್ಯುಡು ಮುಳುಗುತೂ ಉನ್ನಾಡೂ ! 

ಗಿರಾಕಿ ಕಾಲಮು ! ಕುರ್ರೋಡು ಒಕ್ಕಡೇ, ಊರೋಳ್ಳು ಘಾತುಕಲು !

 ಪೋದಾಮು....ರಾಂಡಾ ! 

.... 

=======================================

೨೦ ತಾವರೆಕೆರೆ 


ಮು ದ್ದೂ ಇಲ್ಲ ಕ ದ್ದೂ 

 

ಪಾಡ್ಯಾನೋ ಬಿದಿಗೇನೋ ಶುಕ್ಲಪಕ್ಷ - ಶೆಟ್ಟ್ರ ಕೊರತೆ ಕಾಳಮ್ಮನ 

ಗುಡೀಲಿ, ಗೋಷ್ಟಿ ಮುಂದೆ ! ಶೇಕ್ದಾರ್ ಶಾಮಣ್ಣ ( ಬೇಡ, ಬೇಡ ! ”೦ತ 

ಎಷ್ಟು ಬಡುಕೊಂಡೂ... ದೂಲ, ವಾಸ್ಕಾಲು, ಕಿಟ್ಕಿಗ್ಳು ಎಲ್ಲಾ 

ಸಾಗ್ವಾನಿ, ಗೋಡೆಗ್ಳು ಭದ್ರ....ಸೂರೆಲ್ಲಾ ಮಂಗ್ಳೂರು ಹೆಂಚು, ನೆಲವೆಲ್ಲಾ 

ಕಡಪಕಲ್ಲು ; ಆದ್ರೂ ನಾಲ್ಕು ಸಾವಿರ ರೂಪಾಯಿ ಬಾಳೋ ಮನೆ, ಎರಡು 

ಸಾವ್ರಕ್ಕೆ ಸಿಕ್ಕೋವಾಗ ಯಾಕೆ ಬಿಡಬೇಕು ?....ದೆವ್ವ ಪಿಶಾಚೀಲಿ ನನಗ್ನಂಬ್ಕೆ 

ಇಲ್ಲಾ '....ಂತ ಮುಷ್ಕರ ಹಿಡ್ದು ಶಿವಲಿಂಗಪ್ಪನ ಮನೇನ ಕೊಂಡ್ಕೊಂಡ 

ಶೆಟ್ಟ್ರಿಗೆ –.....ಆ ಹೊತ್ನಿಂದ ಈ ಹೊತ್ತಿನ್ವರಿಗೂ ಒಂದೇ ಗೋಳು ! 

ಅಸಲು ಇರ್ಲಿ, ಬಡ್ಡಿ ಕೂಡ ಹುಟ್ಟಲಿಲ್ಲ, ಬಾಡ್ಗೇ ಮೂಲ್ಕ !.... ಇನ್ನು 

ರಿಪೇರಿ, ಸುಣ್ಣ, ಮುನಿಸಿಪಲ್ ತೆರಿಗೆ, ಹೀಗೆ ಕೈ ಕಚ್ಚಿದ್ದದ್ದು ಅಷ್ಟಿಷ್ಟಲ್ಲ ! 

ಬಾಡಿಗೆಗೆ ಬಂದೋರು....ಶುಕ್ಲಪಕ್ಷವೆಲ್ಲಾ ಸಾವಧಾನವಾಗಿ ಇದ್ದು....ಕೃಷ್ಣ 

ಪಕ್ಷ ಹುಟ್ಟುತ್ಲೂ ಮೊದಲು ಗೊಣಗುಟ್ಟೋಕೆ ಪ್ರಾರಂಭ ಮಾಡಿ.....ಕ್ರಮೇಣ 

ಗದರಿ....ಕೊನೇಗೆ ಅಮಾವಾಸ್ಯೆ ರಾತ್ರಿಗೆ, ಮನೇಲಿದ್ದೋರೆಲ್ಲಾ ಹುಚ್ಚು 

ಹಿಡಿದೋರಹಾಗೆ ನಡುರಾತ್ರೀಲೇ ಕಿರಿಲಿಕೊಂಡು ಬೀದಿಗೆ ಬಂದು, ಅಕ್ಕಪಕ್ಕ 

ದೋರ ಆಶ್ರಯದಲ್ಲಿ ಉಳಿದ ರಾತ್ರಿ ಕಳೆದು, ಮಾರನೇ ಬೆಳಿಗ್ಗ್ಯೆ...ಮನೆ.... 

ಬೀಗದ ಕೈ....ಬಾಡ್ಗೆ ಸಮೇತ....ಶೆಟ್ಟರಿಗೆ ಒಪ್ಪ್ಸೋದು : ಶೆಟ್ಟ್ರು, ಬೀಗದಕ್ಕೆ 

ಸ್ವೀಕರಿಸಿ, ಮನೆಬಿಟ್ಟು ಹೋಗೋರಕೈಲಿ, " ಅಯ್ಯಂದಿ ಅಯ್ಪೋಯ ... 

ಪೊಯ್ಯೆವಾಳ್ಳು ಪೊಯ್ಯೆಪೋತಾರು ತಾಮು. ಅಯ್ತೆ, ನಾಕಡುಪುಮೀದ 

ಕೊಟ್ಟೊದ್ದಂಡ....ದೇನಿಕಿ ಇಲ್ಲು ವಿಡಿಚಿ ಪೋತಾರೋ ಚಪ್ಪೊದ್ದಂಡ ಯವ್ವರಿ 

ತೋನೂ ! ”೦ತ ಶಪಥ ತಕೊಳೋದೂ : ಇನ್ನು ಮೂರೋ ಆರೋ 

ತಿಂಗಳು ಮನೆ ಬಾಡ್ಗೆ ಇಲ್ಲೇ ಖಾಲಿ ಬೀಳೋದು...ಮತ್ತೆ ತಿರುಗಿ ಯಥಾ 

ಪ್ರಕಾರ, ... ನಾನು ಹೇಳಿದ್ದಾಗೆ ಶುಕ್ಲಪಕ್ಷ ; ಪಾಡ್ಯಾನೋ ಬಿದಿಗೇನೋ. 

---------------------------------------- 

ಶೆಟ್ಟರಕಥೆ ೨೧

 

ಶೆಟ್ಟ್ರು-ಕಾದಂಡೀ ! ದೆಯ್ಯಾಲೂ ಪಿಶಾಚಲೂ, ಉಂಡ್ನಿ ಲೋಕ 

ಪೋನಿ ! ರೊಂಡುವೆಯ್ಯಿ ರೂಪಾಯು ಇಚ್ಚಿ ಕೊನಿನ ಇಂಟ್ಲೋ ಬಾಡಿಗಕಿ 

ಉಂಡೇವಾಳ್ಳನಿ....ವಾಂಡ್ಳು....."ಚೂಸ್ತಿಮಾ” ಅನಿ ಚೆಪ್ಪೇ ದೆಯ್ಯಾಲು .. 

.... ಚೇತ್ಲೋ ಕೊಟ್ಟಿನಾ ?.... ಕಾಳ್ಳತೋ ತನ್ನಿನಾ ? ... ಕೊರಿಕಿನಾ ?.... 

ಚಂಪಿನಾ ? ದೆಯ್ಯಾಲು ತಮಂತಕು ತಾಮು ಉಂಡಿನ, ವೀಳ್ಳು ವೀ೦ಡ್ಳಂ 

ತಕು ಬಾಡಿಗಿಸ್ತಾ ಉಂಡರಾದಾ ? ಪಿರಿಕಿಲು ಅಂಟೇ ಮೇವು ! ಬೆಲ್ಲಂ 

ಸಾಬು ! ! ದೀನೈ ಮಮ್ಮುಲ್ನಿ .....ಹಿಂದೂಲ್ನಿ ಪಿರಿಕಿಲೂ ಅನೇದಿ.... ಮೀರಂತ. 


- `ಶಾಮಣ್ಣ.-ಒಳ್ಳೆ ವಾದ ಶೆಟ್ಟ್ರೇ  ನಿಮ್ದು ! ಕೈಯಿಂದ್ದೂ ಹೊಡೀದೆ, 

ಕಾಲಿಂದ್ದೂ ಒದೀದೆ, ಯಾರೂ ಕೊಲ್ದೆ, ಇದ್ರೂನೂವೆ ದೆವ್ವ .. ಮಲಗಿರೋ 

ವಾಗ ಬಾಗಿಲ ತಾಪಾಳಾನ ಆಡ್ಸಿಯೋ...ಕಂಚಿನ ಚೊಂಬ್ನ ಉರಳಿಸ್ಯೋ ... 

ಎಬ್ಸಿ....ಎದ್ದೋನು ದೀಪ ಹಚ್ಕೊಂಡು ಸುತ್ತಮುತ್ತ ನೋಡೋವಾಗ.... 

ನಡುರಾತ್ರೀಲಿ....ಕಾಲಿಗೆ ಗೆಜ್ಜೆ ಕಟ್ಕೊಂಡು “ ಝಲ್ ಝುಲ್ ” ಅಂತ 

ಹೆಜ್ಜೆಗ್ಳಿಡ್ತಾ ಹಜಾರದಾಚೆ ತಾಪಾಳು ಹಾಕಿದ ಮುಂದಿನ ಬಾಗಿಲು ತೂರಿ 

ಕೊಂಡು ಹೋದ್ಹಾಗೆ ಒಬ್ಬ ಹೆಂಗ್ಸು ನಡುರಾತ್ರೆ ಅಮಾವಾಸ್ಸೇಲಿ ಕಂಡು 

ಬಂದ್ರೇ.... ನಿಮಗೆ ಹೇಗಿರುತ್ತೆ ? .... ಅದೇ....ಬೇಡ ಬೇಡಾಂತ ನಾನು 

ಬಡುಕೊಂಡ್ರೂವೆ ಹುಚ್ಚು ಹಠ ಹಿಡ್ಡು ನೀವು ಕೊಂಡ್ಕೊಂಡ ಮನೇಲಿರೋ.... 

ಐಬು ! 


ಶೆಟ್ಟ್ರು...ಅಬ್ಬಬ್ಬಾ ! ದೇವ್ಡೇಗತಿ ! ಅಟ್ಟಲ್ನಾ....ಗೆಜ್ಜುಲು ಕಟ್ಕೋನಿ 

ಕುಲ್ಕೇ ಆಡುದೆಯ್ಯಮಾ ಉಂಡೇದಿ ...ಆ ಯಿಂಟ್ಳೋ ? .. ಅಯ್ತೆ....ಬೆಲ್ಲಂ 

ಸಾಬೂ !! ನೀ ಐಕಟ್ಟು ಯಿನುಪುಗುಂಡಿಗ ಬಾಡಿಗಕಿ ಉಂಟೇ ಅಮಾಷ್‌ 

ಅಮಾಷ್ಕೂ ರೆಯ್ಯಿರೆಯ್ಯ೦ತ ಒಕ್ಕ ಕಾಸಿವ್ವಕ ತಾಫ ಚೂಡವಚ್ಚನು 

ಕಾದ ! .... ಇಂಕ....ಪಾಡುತುಂದಾ ಆ ಆಡಿದಿ ?... 


ಶಾಮಣ್ಣ -ಇಷ್ಟು ಮಾತೇಕೆ ... ಇನ್ನೂ ಸಪ್ತಮೀ ಚಂದ್ರ ಕಾಣೋ 

ವರಿಗೂ ಅದೇ ಗಲಾಟೆ ಆ ಮನೇಲಿ. ಬೇಕಾದ್ರೆ ಶೆಟ್ಟ್ರೇ ! .. ಈ ಹೊತ್ತು 

ರಾತ್ರೆ ಅಲ್ಲೇ ಮಲಕ್ಕೊಂಡು ತನಿಖೆ ಮಾಡಿ ! 

-------------------------------------

೨೨ ತಾವರೆಕೆರೆ 


ಶೆಟ್ಟ್ರು ... ತಿರುಪತಿ ವೆಂಗಟ್ರಮಣಾ ಅಂಟಿ. ನಾಕ್ಕೇಲ ಈ ಪೀಕಲಾ 

ಟಮು. ನೇನು ಆ ಪಾಡಿಲ್ಲು ಕೊನಿಂದಿ ಬಾಡಿಗಕು ಇಚ್ಛಿ.....ಬದ್ದೇದಾನ್ಕೇ 

ಕಾಕ....ನೇನುಂಡಿ ಅಕ್ಕದ ಚಚ್ಚೇದಾನ್ಕಿ ಕಾದು ! ಅದಿ ಉಂಡನೀ !... 

ಐಯ್ತೆ .... ಮೀಕ೦ದರಿಕೂ .. ದೆಯ್ಯಾಲೂ.... ಅಂಟೆ ನಂಬಿಕನಾ ?... ಬೆಲ್ಲಂ 

ಸಾಬ್ಲೂ! ತಾಮು ಚಪ್ಪಂಡ ! 


ಗದF್್ಖಾನ್ - ದೆವ್ವ ! ....ಪೈತಾನ್ ! ....ಅಯ್ಯೋ ಬಿ ಲ್ ಐಯ್ತೆ 

....ಹಮೇಭಿ ನಮ್ದೂಗೇಲೂ ತುಮ್ಮೆಭೀ ನಿಮ್ದೂಗೇಲೂ ... ಐಯ್ತೆ..

 ಏಕ್ ಛೋಟಾ ಕಾನಿ ಬೋಲ್ತಾಹೂಂ ಕೇಳೇಕೆ ಬೇಕೂ ನೀವು... 

.... 

ಸಾಬರ ಕಥೆ. 


( ಭಟ್ಟರಿಗೆ) ಸ್ವಾಮಿ ! ಪುಟ್ಟಮಲ್ಲ ಜಾನ್‌ತಿ ನಹೀ ಆಪ್ ?... ನಾನು 

ಗನ್ನ ಜಮಾಯ್ಕೆ ಬೆಲ್ಲ ಕಮಾಯ್ಸಿು ಬೇಪಾರ್, ಇಸ್ಮೆ. ಸೊಬ್‌ ನನ್ಗೆ 

ದಳ್ಳಾಳ್‌ ಥ...ದಳ್ಳಾಳ್‌ ಇದ್ದ ಪುಟ್ಟಮಲ್ಲಪ್ಪ.... ಅವನ್ಗೆ ಜೊರು ಔವ್ರ್‌ 

ಚೋಟ ಬಚ್ಛ ಮಗ ಇದ್ದ, ' ಮುದ್ದು' ಹೆಸ್ರು, ಹುಡ್ಗಾಗೆ ಹೆಸ್ಸ್ರು; 

ದೇಖಿಯೇ ? ...ಹರ್ ಏಕ್ ಆಮಾಷ್ಕೆ ರಾತ್ ಪುಟ್ಮಲ್ಮಾಕೆ ಝೋಪ್ಡಿ ಮುಂದೆ 

ಹುಣ್ಸೇ ಜಾಡ್ಕೇ ಕೊಂಬೆ ಮೇಲೆ ಕೂತೊ೦ಡಿ, " ಮುದ್ದು ! ಮುದ್ದು ! 

ಮುದ್ದು "  ಅಯ್ಸ ರಾತ್ ಸೊಬ್ ಅಲ್ದಾಯ್ಸಿತಿತ್ತು.... ಏಕ್ ಬಡಾ ಗುಗ್ಗು ! 

....ಕ್ಯಾ ಬೋಲ್ತಿ ಕನಡೀಮೆ ಸಾಮೀ ? 


ಭಟ್ಟ್ರು... ಪುಟ್ಟ ಮಲ್ಲಪ್ಪನ ಮನೆ ಮುಂದಿನ ಹುಣಿಸೇಮರದ ಕೊಂಬೇಲಿ 

ಕೂತ್ಕೊಂದು ಅಮಾವಾಸ್ಯೆ ರಾತ್ರಿಯೆಲ್ಲಾ ಪುಟ್ಮಲ್ಲಪ್ಪನ ಮಗ ಕೈಕೂಸು 

... ಅವ್ರ ಹೆಸರ್ನ “ ಮುದ್ದು ! ಮುದ್ದು ! ಮುದ್ದೂ! ” ೦ತ ರಾತ್ರಿಯೆಲ್ಲಾ 

ಕಿರುತ್ತಿತ್ತು ಒಂದ್ಗೂಬೆ .. ದೊಡ್ಡ ಗೂಬೆ... ಅಲ್ವೇ ಸಾಬ್ರೆ ? 


ಶೆಟ್ಟ್ರು--ಮುಂದಟ್ಟಾಯ.... ಚೆಪ್ಪಂಡ ಸಾಬ್ಲು .. ಈ ಶನಿ ದೆಯ್ಯಮುಲ 

ಮಾಟ ದೇನಿಕೊಚ್ಚಿನೋ ಆ ವೆಂಗಟರಮಣುಡಿಕೆ ವೆಲುಗು ! 

-----------------------------------------

ಸಾಬರ ಕಥೆ ೨೬  


ಗಡF್ಖಾನ್..... ಜೀ ಹಾಂ ! ಹಮಾರಾಮೇ ಗುಗ್ಗು .. ಗೂಬೆ... 

ಮೌತ್ಕೆ .. ಸತ್ತ ಹೋಗೂದೂಗೆ ... ನಿಷಾನಿ....ಗುರ್ತು ಆಯ್ತೆ. ಪುಟ್ಟ ಮಲ್ಲಪ್ಪ 

ಓ . ಬಿ ಚಾರಿ.. ಬೆದರ್ಕೊ೦ಡಿ ನನ್ಗೆ ಕೇಳ್ತಾನೆ ಗುಗ್ಗು ಅಲ್ಲಾಯಿಸ್ತದ್ಕೆ 

ಮತ್ಲಬ್ ! ನಾನು ಖಾಜಿಸಾಬ್‌ಗೆ ಕೇಳ್ದೆ, ಓ ಬೋಲ್ತಾಯ್ .... 'ಗುಗ್ಗು.... 

ಕಬ್ರಸ್ತಾನ್ಮೆ .... ಮಸಾಣ್ದಲ್ಲಿ ಮುರ್ದ ಹೆಣ ತಣ... ತಿಂದು ಬದ್ಕೋ ಜಾನ್ವಾರ್‌, 

ಕೋಹಿ ಕೊಹಿ, ಯಾರು ಯಾರ ತಿನ್ನೋಕೆ ಬೇಕು ಅವರ್ಗೆ ಸಾಯೋಕೆ 

ಅವ್ವಲ್ ಖಬರ್ ಕಾಡಾಕೆ ಹೇಳ್ತೈತೆ ! ಪುಟ್ಟಮಲ್ಲಾಕ ಬೇಟಾಕು ಖಾನೇಕ 

ಇರಾದ ಹೈ - -ಪುಟ್ಟಾಗೆ ಹೇಳು .. “ ಕುಚ್ ಅZಾಬ್.... ಚೀಸ ಕಫ್ಡದಲ್ಲಿ 

ಲಪಟ್ಕೇ - ಸುತ್ಕೊಂಡಿ .. ಘರ್ಮೆ ಎಲ್ರೂ ' ಮುದ್ದು ಮರ್ಗ ಯಾ!' 

ಮುದ್ದು ಮರ್ಗಯಾ ' ! ಅಂತ ಅಳ್ಕೊಂಡಿ ಕಪ್ಡಾಮೆ, ಲಪ್ಟೇಸ ಚೀಸ್ 

ಮಸಾಣ್ಗೆ ತಕ್ಕಂಡ್ಹೋಗಿ ಮಟ್ಟಿಮೇ ಮಿಲಾಯ್ಸಿ ಆಗಯಾತೋ.... ಹೋ 

ಗಯಾ ಗುಗ್ಗುಕಾ ಗಲಾಟಾ "..... ಕರ್ಕ, ಮೈ ಖಾಜೀ ಮಾತು, ಪುಟ್ಟ 

ಮಲ್ಲಾಗೆ ಪೌಂಛಾಯ್ಸಿ... ಉನೇಭಿ ವೈಯ್ಸಾಚ್ ಕಿಯಾ, ಫಜಲ್ ಉಟ್ಕೇ 

ಎದ್ದು ಎಲ್ರೂ “ಮುದ್ದು ಸತ್ತ! ಮುದ್ದು ಸತ್ತ ! ” ಅಯ್ಸ ಅಲ್ದಾಯಸ್ತಾ.... 

ಏಕ್ . ಕ್ಯಾ ಬೋಲ್ತೀ ತುಮಾರನೇ ? .. ಹಾಂ ! ಸೋರೆಕಾಯಿ ಲೇಕೇ.... 

ರುಮಾಲ್ ಮೇ ಲಪಟ್ಕೆ ಬಾಪ್‌, ಮಾ .. ಮನೆ ಎಲ್ರೂವೆ... ರೋತೇರೋತೇ 

ಮಸಾಣ್ಗೆ ಹೋಗಿ ಕಪ್ಡೇ ಸಾತ್ ಸೋರೇಕಾಯಿ ಮಟ್ಟಿ ಮಾಡ್ಬಿಟ್ಟೀ ಫಿರ್ 

ಆಗಯೇ ... ಬಂದ್ದಿಟ್ಟು ಮನೇಗೆ. ಆವತ್ತು ರಾತ್‌ನಿಂದ ಬಹೀಂಚ್ ಗುಗ್ಗೂ 

....ಅದೆ ಗೂಬೆ ...ಅದೇ ಹುಣ್ಸೆ ಝಾಡ್ಮೆ ಕೂತ್ಕೊಂಡಿ " ಮುದ್ದು. ಇಲ್ಲ ! 

ಕದ್ದೂ ! -- ಮುದ್ದು ಇಲ್ಲಾ, ಕದ್ದೂ ! ” ಅಯ್ಸಾ ಅಲ್ದಾಯ. ಔರ್‌ 

ಪುಟ್ಟಮಲ್ಲಪ್ಪಾ “ ಕ್ಯಾ ಭೇಜಾು ! ಕ್ಯಾ ದಿಮಾಕ್ ಜೀ ಗುಗ್ಗೂಕು ! 

ಮುದ್ದೂಕು ಕದ್ದೂ ಬದ್ಲೆೇಸೋ ಹಿಕ್ಮತ್‌ ಸಮಜ್‌ಲಿಯಾನಾ ! ಕ್ಯಾ ಅಜಬ್ 

ಗುಗ್ಗೂ ! ” ಕರ್ಕೆ ಓ ಬೀಚಾರಿ ಘಾಬ್ರ ಹೋಕೆ, ಕಾಮ್ ಛೋಡ್ಕೆ ಜೋರು 

ಬಚ್ಚೇಕೆ ಸಾತ್' ಗಾಮ್ ಛೋಡ್ಡಿಯಾ, ಮೈ ತೋ ಹೈರಾನ್ ಹೂಂ ... ಈ 

ಗುಗ್ಗೂಗೆ ಕೈಸಾಮಾಲುಂ ಹುವಾ ? .... "ಮುದ್ದು ನಹಿ, ಕದ್ದೂ ” ೦ತ 

.... ದೆವ್ವ ಷೈತಾನ್ ಹೇಳಿ ಇರ್ಬೇಕು. 

------------------------------------------

೨೪ ತಾವರೆಕರೆ 


ಬೋರ- -ಇದೇನ್ಸಾಬ್ರೇ ! ಮಸ್ಕರಿಗೇನ ಹೇಳಿದ್ದು ಕತೆ !.... ದೆವ್ವ

.....ಪಿಶಾಚಿ... ಮೋಹಿನಿ..... ಮುನೀಶ್ವರ .... ಯಾವಾಗಲಾರೂ ಕೇಳಿವ್ವ್ರಾ ? 

ಕಂಡಿವ್ವ್ರಾ ? 


ಗಡF್ಖಾನ್‌-ಇಲ್ಲ ಬೋರಣ್ಣ !...ಕಭಿ ನೋಡಿದ್ದಿಲ್ಲಾ ದೆವ್ವ. ನನ್ಗೆ 

ಕಾಣಿಸ್ದಿದ್ರೇಭೀ ದೆವ್ವ ಇಲ್ಲಾನೇ ಇಲ್ಲಾ ಕರ್ಕೆ ಮೈ ಕೈಸ ಭಾಯೀಸ್ 

ಕರೂಂಗ! 


ಬೋರೆ -ಕೇಳಿ ಸಾಬ್ರೇ - ಶೆಟ್ಟ್ರೇ ನೀವೂನೂವೆ ಕೇಳಿ ಭಟ್ಟಿಗೂ 

ರಾಮಣ್ಣೂರಿಗೂ ಓಟೋಟು ತಿಳಿದಿರಬೈದು ಆದ್ರೂ ... 


ಭಟ್ಟ್ರು    )

) - --ಹೇಳಿ ಬೋರಣ್ಣೋರೆ ಹೇಳಿ. 

ಶಾಮಣ್ಣ ) 


ಶೆಟ್ಟ್ರು -. ಇದೇಮಿ ! ವಿಪರೀತಮೈಪೋಯ! ಚಪ್ಪಂಡ ಗೌಡವಾಳ್ಳೂ ! 

ನಾಕೇ....ಮಿ ಅಭ್ಯಂತರಮು ಲೇದು! ವಿನೇವಾಳು ಉಂಡೇವರ್ಕೂ ಚಪ್ಪೇ 

ವಾಳ್ಳೂ ಚಪ್ತಾನೇ ಉಂಡೋಚ್ಚುನು. ಆಯ್ತೆ ದೆಯ್ಯ ಮೈತೇ ಏಮಿ ! ಆಡದಿ 

ಆಡ್ದೇ ! ---ಇಲ್ಲು ಬಾಡಿಗಕಿ ತೀಸ್ಕೋವುಂಡೇ ಮೊಗವಾಡು .... ಆಡು 

ದಯ್ಯಾನಿ ಬೆದರಿ ಇಲ್ಲಿಡಿಚಿ ಪೊಯ್ಯೇದಿ ಮೊಗತನಮಾ ? ಅದೀನು....ಕಾಳ್ಳಿಕಿ 

ಗೆಜ್ಜಲು ಕಟ್ಕೋನಿ ಕುಲುಕೀ ಕುಲುಕೀ ತಾಫ ಚೇನೇ ಆದದೆಯ್ಯಮು 

ಉಂದೇ ಇಲ್ಲಿಕಿ ಡಬ್ಬಲ್ ಬಾಡಿಗ ಇವ್ವಲಾ ನನ್ನಿ ಅಡಿಗಿತೆ ! ..  


- ಬೋರಣ್ಣ.... ಶೆಟ್ಟ್ರೆ ! ನೀವೇಳೋ ಅಂಗೆ, ಅಮಾಸೆ ಇಂದ ಏಳು ರಾತ್ರೆ 

ಕಾಲಿಗೆ ಗೆಜೆ ಕಟ್ಕೊಂಡು ಯೆಂಗ್ಸು ಕುಣಿಯೋದು ನೋಡಾಕೆ, ಬಾಡ್ಗೆ 

ಕೊಟ್ಟೋಂಡು ನಿಮ್ಮನೇಲಿರಬೌದು! ....ಆದ್ರೆ ನಿಮ್ಮನೆ ದೆವ್ವ ಅಂಗಲ್ಲ. ಆ 

ನಾಯಕ್ಸಾನಿ ಕುಣೀತಿರೋವಾಗ, ಕತ್ತು ಕುಯ್ದೋಗಿ ... ಕುಡುಗೋಲಿಂದ 

ಕಟಾಯಿಸ್ದಂಗೆ ಬಿರ್ಕೊಂಡು....ರಕ್ತೆ ಮೈಯೆಲ್ಲಾ ಸುರೀತ....ಮೊಕ ಎಲ್ಲಾ 

ನಸ್ನಗ್ತಾ....ತಾಫೆ ಕಟ್ಟೋದು ಒಂದು ಚೆಂದ ! .... 

----------------------------------------

ಸಾಬರ ಕಥೆ ೨೫ 


ಶೆಟ್ಟ್ರು -... ಏಮಿ ! ಗೊಂತುಕೊಶಿ ಫೋಯಿ ರಕ್ತಮು ಕಾರುತುಂಟುಂದ 

ಕುಲುಕೇಟಪ್ಡೂ.... 


ಬೋರಣ್ಣ .... ಆದ್ರೂನೂವೆ ಐಬಿಲ್ಲ ...ಅಪಾಯ ಇಲ್ಲಾ.... ಮನೇಲಿ 

ದ್ದೋರ್ಗೆ .. ಏಟು ಬೆದರಿದ್ರೂವೆ ... ಇದುವರೆಗೂ ಒಂದು ಜೀವ ಸಾಯ್ಲಿಲ್ಲಾ  

ಶಿವಲಿಂಗಪ್ಪನ ಮನೇಲಿ ! . ಈಗ ನಿಮ್ಮನೇಲಿ ಶೆಟ್ಟ್ರೆ. ಈ ದೆವ್ವದ ಚರಿತ್ರೆ 

ನಮಗೆ ಗೊತ್ತು ಅಳಬರಿಗೆ, ಇವಳು ಊರಿಗೆ ಬಂದಾಗ....ನಲವತ್ತು ವರ್ಷದ 

ಮಾತು ನಾನಾಡ್ತಿರೋದು. ನಾನು ಪ್ರಾಯದ ಉಡ್ಗ, ಚಿಕ್ಕ ನಿಂಗಪ್ಪನ ಮನೆ 

ಮದುವೇಗೇ ಕರ್ಸಿದ್ದು.....ಅವಳ್ನ.... ಕಂಚಿ ಕಡೆಯಿಂದ ಅವಳು ಬಂದದ್ದು ಗೊತ್ತು ಊರ್ಗೆಲ್ಲಾ. ಓದದ್ದು ಗೊತ್ತಿಲ್ಲಾ. ನಿಂಗಪ್ಪನ್ಗೂ ಕಾಯಿಷ್ಷು ! ಬೀಗ.... 

ಕಾಪೀ ತೋಟದ ಕೆಂಚಪ್ಪನಿಗೂ ಕಾಯಿಷ್ಷು. ಇದ್ದಕ್ಕಿದ್ದಂಗೆ ಗುಮ್ಮು 

ನಾಯಕ್ಸಾನಿ. ಯೆಣಾನೂ ಸಿಕ್ಕಿಲ್ಲ ಇಲ್ಲಿ....ಕಂಪ್ಲೇಂಟೂ ಇಲ್ಲ. ಮದರಾಸು 

ಕಡೇಯಿಂದ ತಿಳಿದೂನೂವೆ ಕಯ್ಯಾಡಿಸಾಕಾಗ್ದೆ ಕಣ್ಣು ಕಣ್ಣು ಬಿಡ್ತಿತ್ತು 

ಪೋಲೀಸು. ಆದ್ರೆ ಊರ್ಗೆಲ್ಲಾ ಗೊತ್ತು. ಲಕ್ಷಾಂತರ ರೂಪಾಯಿನ ಆಸ್ತೀನ 

ಕಳ್ಕೊಂಡು ಅರಾಜಾದ ಮನೆ ... ನಿಮ್ಮ ಪಾಲಿಗೆ ಬಂತು ಶೆಟ್ಟ್ರೆ ! ಇನ್ನು ಕಾಪಿ  

ತೋಟ್ದೋನೋ ! ಮನೆ ಬಾಕ್ಲು ಮಕ್ಕಳು ಮರಿ ತೋಟದ ಸಮೇತ 

ಮಣ್ಣಾಗೋದ ! ಆದ್ರೆ ಈ ಉಡ್ಗಿ ಅಮಾಸೆ ಬರುತ್ಲು, ಕತ್ತಿಂದ ರಕ್ತ ಸುರಸ್ತಾ 

...ಎಜ್ಜಾಬು...* ಝಲ್ ! ಝಲ್ ! ”ಂತ ತಾಫಾ ಕಟ್ತಾ ಇವತ್ತಿಗೂವೆ....! 


ಶೆಟ್ಟ್ರು .. ಚಾಲೂಂಟಿ.... ಗೌಡವಾಳ್ಳು ! ಚಾಲೂಂಟಿ ! .... ಐತೇನೂ 

ಇಂಟ್ಲೋ ಉಂಡೇವಾಳ್ಳಿಕಿ ಅಪಾಯನ ಯೋಮಾನ ಚೇಸಿನ....ಆ ದೆವ್ವಮು ? 

....ಸಾಬುಲು ಚೆಪ್ಪಿನ ಗೂಬ ಪುಟ್ಟಮಲ್ಲಪ್ಪನಿ ಬಿಡ್ಡೆ....ಕೊಡಕು.... 

ಮುದ್ರನಿ... ಕೊಡುಕುನಿ ಕೋರಿಕಿನಾ ? ಒಟ್ಟ್ಲೋ ಚೆಪ್ತಾನು .... 

ದೆಯಾಲು ದೇನಿಕಿ ಭೂಮಿಲೊ....ಉಂಡಿವೋ ದೇವುಣಿಕೇ ವೆಲುಗು.... 

ಅಯ್ತೇ ದೆಯ್ಯಾಲ್ನಿಂಚೀ ಯೆವ್ವರಿಕೂ ಏಟು ಪಡಲೇದು ಕದಾ ! ದೆಯ್ಯ 

ಮುಂಡೇ ಯಿಂಟ್ಲೋ ಉಂಡಿನವಾಳ್ಳು ಬೆದರಿ ಉಂಡಾರೆ ಕಾಕ-ಎವ್ವರೈನ  ಚಚ್ಚರ....ಇದಿವರ್ಕೂ ? 

-------------------------------------------

೨೬ ತಾವರೆಕೆರೆ 


ಬೋರಣ್ಣ - ಯಾಕ್ಸೆಟ್ಟ್ರೇ ? ದೆವ್ವ ಇರೋ ಮನೇಲಿ ಒಬ್ರಾನಾ 

ಸತ್ತಿದಾರಾಂತಲ್ವೇ ಕೇಳೋದು ನೀವು! ಒಂದಲ್ಲ, ಎರಡಲ್ಲ, ಅತ್ತಲ್ಲ, 

ಇಪ್ಪತ್ತಲ್ಲಾ ತಿಳಿದು ಮಾತಾಡ್ತಿವ್ನಿ!. ಮೂವತ್ತೊಂಬತ್ತು ಜೀವ ತಿಂದ 

ಮನೆ ನಮ್ಮೂರೊಳ್ಗೇ ಅಯ್ತೆ !! ನನ್ನ ಪ್ರಾಯದಲ್ಲಿ.... “ ಸುಂಕದಕಟ್ಟೆ” ೦ತ 

ಯೆಸ್ರು ಮನೇಗೆ ; ಒತ್ತು ಮುಳುಗುತ್ಲೂ ಆ ಬೀದಿ ಬೀದೀನೆ ತಿರುಗಾಡಾಕೆ 

ಬೆದರ್ತಿದ್ರು ಗಂಡಸ್ರು ! ...ಈಗ್ಲೂವೆ ಮನೆ ಆಳು ಬಿದ್ದಿದ್ರೂವೆ.... ಧರಣಯ್ಯನ 

ಓಣೀಲಿ ಕಾಲಿಕ್ಕೂರು ಇಲ್ಲ ನಮ್ಮೂರ್ಲಿ! 


ಶೆಟ್ಟ್ರು ... ಏಮಿ ! ಸುಂಕಂಕಟ್ಟನಾ ! ಊರು ಲೋಪ್ಲಾ! ಅದೆಟ್ಲಯ್ಯಾ ! 

ಅದೇಮಿ ಸುಂಕಮು ! ? 


ಬೋರಣ್ಣ.. ಜೀವಾನೇ ಸುಂಕ, ದರಣಯ್ಯನೋರೂಂತ ಇದ್ರು ಶೆಟ್ಟ್ರೆ 

.... ನಲವತ್ತು ವರ್ಷದ ಯಿಂದೆ.... ದೊಡ್ಡ ಮನೆತನ....ಈಗ ಅವರ ಎಸರಿಗೆ ಆ 

ಆಳುಬಿದ್ದ ಮನೆ ಓಣಿ ಅಷ್ಟೇ ಬಾಕಿ ! ಆ ಮನೇಲಿ ಜನಗ್ಳು ತಂಗಿದ 

ಒಂದೊಂದು ರಾತ್ರೀನೂ ಒಂದೆಣ....ಇಂಗೆ ಮುವ್ವತ್ತೊಂಬತ್ತು ಜೀವ ತಿಂದೈತೆ 

ಆ ಆಳುಮನೆ. ಅಷ್ಟೇ ಸುಂಕದ ಕಟ್ಟೇ೦ತೆಸ್ರು ಮನೇಗೆ, ಯೇಳ್ತೇನೆ ಕೇಳಿ.... 


ಶೆಟ್ಟ್ರು-- “ಏನುವಲಾ ಅನಿ ನಾಕೂ ಆಶ ಗೌಡವಾಳ್ಳು, ಅಯ್ತೆ 

ಪೊದ್ದು ಮುಣುಗಿ ಶ್ವಾನಾ ಸೇಪಾಯ ಅಮಾವಾಸ್ಯೆ ದಿನಮು. ಚೀಗಟ. 

ಅಂಗಡ್ಲೋ ಪಿಲ್ಲವಾಡು ಒಕ್ಕಡೇ ಇಂಟ್ಳೋನೂ ಅದೀನೂ ಏಕಾಂಗಿಕಾಕ 

ಇಕ್ಕಡಂತ ಕಟ್ಟ ಮೆಟ್ಟಲು ಅಂತೇಮಿ ಭದ್ರಮು ಕಾದು, , ತಮ ಕಥ.... 

ಮುಪ್ಪೈತೊಂಬಿದ ಜೀವಾ ಭಕ್ಷಣಂ ಚೇಸಿನ ದೆಯ್ಯಾಲು ಕಥ...ಎಲು 

ಗುಲೋ ನಿನುವಲನೇಗಾಕ.... ಇಪ್ಪುಡು .... ಇಂತಪೊದ್ಲೋ ! ... ಕಾವಲಿಶಿ 

ಉಂಟೆ....ವೀಂಡ್ಳಂತಾ ವಿನನಿ....ನೇನು ಪೋತಾನು ....ಮೀಕೇಮಾನಾ ಭಯ 

ಮುಂಟೇ .... ಉಂಟೇಯೇಮಿ .... ಲೇಕಪೋತೇಯೇಮಿ .... ಚೇರೇ ವಸ್ತಿಮಿ .... 

ಮಳ್ಳಿ ಚೇರೇ ಪೋಯಿ ಇಳ್ಳು ಚೇರುತಾಮು....ಬೆದರುವೊದ್ದಂಡ !....ಜೀವಾಲು 

ತಿನೇ ದೆಯ್ಯಮುನಿ ಕಥ ರೇಪು ವಿಂಟಾಮು. ನನ್ನು ಪಟ್ಕೋನಿ ರಾಂಡಾ,”.... 

ಎನ್ನುತ್ತಾ ಗಡಗಡನೆ ನಡುಗುತ್ತಿರುವ ಎರಡು ಬಾಹುಗಳಿಂದಲೂ 

---------------------------------------------

ಬೋರೇಗೌಡನ ಕಥೆ ೨೭ 


ಸಾಬ್ರನ್ನೂ ಗೌಡರ್ನೂ ಒಂದ್ಕಡೇ, ಭಟ್ಟರ್ನೂ ಶಾಮನ್ನೋರ್ನೂ ಮತ್ತೊಂದು 

ಕಡೇ ಭದ್ರವಾಗಿ ಅಪ್ಪಿಕೊಂಡು....ಅವರ ಮಾತುಕತೆಗಳಿಗೆ, - “ ನಿಲ್ಪಿಚ್ಚಂಡ 

ಅಂಟೆ ! ಇಕ್ಕಡ ಯಾಲ ಮಾಟ್ಲು! ಮೊಬ್ಬುಲೋ ನನ್ನ ವಿಡುವಕ ಪಟ್ಕೋನಿ.... 

ಚರುವುದಾಟಿ..... ಊರುಲೋಪಲ ಮಾಲಟ್ಲಾಡಿಕೊಂಟಾಮು " -- ಎನ್ನುತಾ 

ಕಾರ್ತವೀರ್ಯಾರ್ಜುನನಂತೆ ಮಿಕ್ಕವರ್ನೆಲ್ಲಾ ಅಪ್ಪಿಕೊಂಡು ಅವರ ಸಹಾಯ 

ದಿಂದ ನಡುಗ್ತಿರೋ ತನ್ನ ಕೈಕಾಲುಗಳ್ನ ನೆಟ್ಟಗಿಡ್ತಾ ನಿಧಾನವಾಗಿ ಮನೆಕಡೆ 

ನಿಷ್ಕ್ರಮಿಸಿದ್ರು. 

........

ಸುಂ ಕ ದ ಕ ಟ್ಟೆ 


ಯಥಾ ಪ್ರಕಾರವಲ್ಲ ! ನಾಟಕದವರು ನಾಚಿಕೆ ಪಡಬೇಕು ! ಅಂಥ ಸೀನು 

ಕಾಳಮ್ಮನ ಗುಡಿ ಮುಂದೆ ! 


ಶೆಟ್ಟ್ರು- ದ್ಯೂತಮಾಡುಂಡಾರು ದುಡ್ಡು ಪೆಟ್ಟ ! ನಳಮಹಾರಾಜು 

ರಾಜ್ಯಂ ಪೋಗೊಟ್ಟುಕೊನಿಂದುಂಡ್ನೇ .... ಪಾಂಡವುಲು, ಒಕ್ಕರ್ನೊಕ್ಕರೂ 

ಪೆಂಡ್ಲಾಮ್ನೂ ಮರವಕ ಅನ್ಯಾಯಮೈಯ್ಯಂದೀ ಉಂಡ್ನಿ. ಆಕಾಲಮುಲೋ 

ಸರ್ಕಾರಾ? ಪೋಲೀಸಾ ? ಅಡುಗೇವಾಳ್ಳೆವರು ವಿನೇವಾಳ್ಳೆವರು ! ಇಪ್ಪಡು, 

ಸರ್ಕಾರ ದಬ್ಬು ಮಿಂಗ್ಕೋನಿ ಮೀರು ಉಂಡಿನಾನೂ (ಪೋಲೀಸ್ ಕಾನ್ 

ಸ್ಟೇಬಲ್ ಪುಳ್ಳಯ್ಯನಿಗೆ) ಊರು ಪಟಂಗುಲಂತ ಪರೇಲ ಆಡ್ತೂ, ದೇವೀ 

ಗುಂಡೊ, ಪಾಡಯ್ಯೇದಿ ಚೂಸ್ತಾ ಉಂಡೇದಾನ್ಕಾ ಪೋಲೀಸ್ಸು ಉಂಡೇದಿ ? 

ಮೀರು.... ಮಾರಾಜ್ಲುಡ್ರಸ್ಸು ವೇಸ್ಕೋನಿ ?” 


ಪುಳ್ಳಯ್ಯ- ಅಲ್ಲ್ರೀ ಶೆಟ್ಟ್ರೇ.... ಯಾಸೆಕ್ಷನ್ ಮೇಲೆ ಅರೆಸ್ಟ್‌ 

ಮಾಡೋದು ನಾನು ? ಪಾಳುಬಿದ್ದ ಗುಡಿ. ಹೇಳುವರಿಲ್ಲ ಕೇಳುವರಿಲ್ಲ 

ಐದ್ದತ್ತು ಜನ....ಪಟಂಗರೇ ಆಗ್ಲೀ ಪ್ರಭುಗ್ಳೇ ಆಗ್ಲಿ....ಇಸ್ಪೀಟು ಆಡ್ತಿದ್ರೆ.... 

ನಾನು....? ? 

-----------------------------------------

೨೮ ತಾವರೆಕೆರೆ  

ಶೆಟ್ಟ್ರು-ಸರಿಪೋಯ ! ದಾನ್ಕೇ ಕಾನ್‌ಸ್ಟೇಬ್ಲು, ಕಾನ್‌ಸ್ಟೆಬ್ಲೇ ! 

ಇನ್‌ಸ್ಪೆಕ್ಟ್ರುಲು ರ್ಇಸ್ಪೆಕ್ಟ್ರಲೇ ! ಒಕ್ಕ ಕುಕ್ಕಕಿಂದ ನೂರು ಗೊರ್ರಲು ಕುರ 

ಬೋಡು ಪೆಟ್ಟೀ ಐಕಟ್ಟು....ಒಕ್ಕ ಇನ್‌ಸ್ಪೆಕ್ಟರ್‌ ಕಿಂದ .... ಮಿಮ್ಮಲ್ನಂತ 

ಪೆಟ್ಟುಂಡೇದಿ ಸರ್ಕಾರು ” ಎಂದು ಹೇಳುತ್ಲೂವೆ ಪುಳ್ಳಯ್ಯನು ರೇಗಿ ಸೋಟಾ 

ವನ್ನು ಬೀಸುತ್ತ ಗುಡಿಯನ್ನು ನುಗ್ಗಲು ದೇವೀ ಸನ್ನಿಧಾನದಲ್ಲಿ ಜಪಾನ್ 

* ಇಮಿಟೇಷನ್ ೮೦೮ ” ಕಟ್ಟನ್ನು ಹಂಚಿಕೊಂಡು ಮುಂದಿರುವ ಆದಿಶಕ್ತಿ 

ಯನ್ನು ತಿರಸ್ಕರಿಸಿ ಈಗಿನೀಚೆಗೆ ನಿನ್ನೆ ಮೊನ್ನೆ ಹುಟ್ಟಿದ, ಕೇವಲ ಮಹಾ 

ಲಕ್ಷ್ಮಿಯ ದಯೆ ಹಾರೈಸುತ್ತಾ ಒದ್ದಾಡುತ್ತಿದ್ದ, ಪಟಿಂಗರು, ಕೈಲಿದ್ದ 

ಎಲೆಗಳನ್ನು ಎಸೆದು.... ಹಿಮ್ಮಡಿ ಕಚ್ಚಿ ಬರುತ್ತಿರುವ ಪುಳ್ಳಯ್ಯನ ಸೋಟಾ 

ಏಟುಗಳನ್ನು ತಪ್ಪಿಸಿಕೊಂಡು ತಿನ್ನುತ್ತಿರುವ ಕಾಲಿಗೆ ತಮಗಿಲ್ಲದ ಬುದ್ದಿ 

ಯನ್ನು ಉಪದೇಶಿಸುತ್ತ ಕಂಬಿ ಕೀಳುತ್ತಲೂ....ಏಕಾಂಗಿಯಾಗಿದ್ದ ದೇವಿಯ 

ಗುಡಿಯನ್ನು ನೆಟ್ಟು ಪ್ರವೇಶಿಸಿ ಗೋಷ್ಠಿಯನ್ನು ಪೂರೈಸಲು ಮಿಕ್ಕ ನಾಲ್ವರು 

ಬರುವಷ್ಟರಲ್ಲಿ, ದಿವಾಕರನು ಖಾನ್ ಸಾಹೇಬ ಅಲೆಯನ್ನು ಹಾಸಿ ಆಗ ತಾನೆ ಶಾಮಣ್ಣನವರ ಗದ್ದೆಯನ್ನು ಬೆಳಗುತ್ತಿದ್ದನು. 


ಭಟ್ಟ್ರು-ಇದೇನು ಶೆಟ್ಟ್ರೇ, ಇನ್ನೂ ಐದು ಘಂಟೆಯಿಲ್ಲ ; ನೋಡಿದ್ವಿ 

ಪುಳ್ಳಯ್ಯ ಪಟಂಗರ್ನ ಅಟ್ಕೊಂಬರ್ತ್ತಿದ್ದದ್ದು ? ಸಾಹೇಬ್ರು ಆಲೇನೂ ಬಿಟ್ಟು..... ಶೇಕ್ಷಾರ್ರು ಆಫೀಸ್‌ನೂ ಬಿಟ್ಟು ನನ್ನೂ ಬೋರಣ್ಣೋರ್ನೂ .... ನಮ್ಮೆಲ್ಲರನ್ನೂ 

ಸಂಪ್ರದಾಯ ತಪ್ಪಿ ಇಷ್ಟು ಹೊತ್ಗೇನೇವೇ....ಸೇರೋಹಾಗೆ........? 


ಶೆಟ್ಟ್ರು.. ಯೇಮೀಲೇಗೂ, ನೆನ್ನ ಮುಪ್ಪೈತೊಂಬಿದಿ ಜೀವಾಲು 

ಮಿಂಗಿನ ದೆಯ್ಯಮು ಉಂಡೇ ಧರಣಯ್ಯಗಾರಿ ಯಿಲ್ಲು, ಪಾಡಯ್ಕೆಪೊಯಿನಿಲ್ಲು 

....ಕಥ ಚಪ್ಪಾನು ಅನೆ ಗೌಡ್ಲು.... ವಿನೇದಿ ವಿನುವಲಾ....ಅಯ್ತೆ ನೆನ್ನೈಕಟ್ಟು 

ಮಬ್ಬುಲೋ ಲೇಕ .... ಎಲುಗುಲೋನೇ ಏನಿ ಎಲುಗುಲೋನೆ ಇಂಟಕಿ 

ಫೋಯೆದಿ ಮಂಚದೀನಿ ಪಿಲ್ಬಂದಿ ಮಿಮ್ಮಲ್ನಂತ. ಯವರೇಮಿ ಚಪ್ತೇನೂ ಪ್ರಾಣಭಯವು .... ತಜ್ಜನ್ಮಮು .... ಮನುಷಿಕಿ .... ಕಾದಾ ಗೌಡೋಳ್ಳು ! ? 

ಚಪ್ಪಂಡ ಕಥ. 

-------------------------------------------

ಬೋರೇಗೌಡನ ಕಥೆ ೨೯ 


ಬೋರೇಗೌಡನ ಕಥೆ 

ನಾನೇಳ್ದಂಗೇ....ಬಟ್ರಿಗೆ ಓಟೇ ಓಟು ಗೊತ್ತು. ಚಿಕ್ಕ ಐದ ಆಗ. 

ಶಾಮಣ್ಣೂರೂ ನಾನೂ ಪ್ರಾಯದ ಉಡುಗರು, ಸಾಬ್ರೆ ; ಈಗ ಕುಗ್ಗವ್ರೆ 

ಶಾಮಣ್ಣೂರು, ಆಗ್ನೋಡಿರ್ಬೇಕ್ರಾ ಅವರ ಜಿಸುಮು. ಉಕ್ಕು ಜಾತಿ 

ಕಾಲುಕೈಯ್ಯ ಗರ್ದನ್ನು, ಒಂದೇ ಗಲ್ಡಿ ನಾವಿಬ್ರೂ. ಕಲೀಫ್ ಪೀರ್ ಪಾಚಂದು. 

ಧರಣಯ್ಯನೋರ್ದುರು ಎದುರು ಗಲ್ಡಿ, ಎಲ್ಡು ಗಲ್ಡೀನೂ ನನ್ನು ಕಲೀಫರ್ನ 

ಬುಡ್ರು. ಖಸಾಬ್ ಮುರ್ತುಜಾಲಿ ಅವಂದೊಂದುಗಲ್ಡಿ ಮುಸಲ್ಮಾನರ್ದು. 

ಇಜೀದಶಮಿ ದಿನ ನೋಡ್ಬೇಕ್ರ ದೊಡ್ಬಳೇ ಕುಸ್ತಿ, ನಲವತ್ತೆಂಟು ಜೋಡಿ 

ತೀರಿದ್ಮೇಲೇನೇವೇಯೇ ಮನೇಗ್ಬರೋದು, ವರ್ಸಾ ವರ್ಸಾನೂ “ ಆದತ್ತು. 

ಗಲ್ಡಿ ಗಲ್ಡೀಗೂ ದುಸ್ನನಿ ಯೇಟಿದ್ರೂನೂವೇ....ದೋಸ್ತಿನೂ ಇತ್ತು. ಈ 

ಮೂರು ಗಲಡಿ ಲೂವೆ ಕಿಲಾಡಿ ದರಣಯ್ಯನೋರ ಗಲ್ಡಿ ಕಲೀಫ ಫೇಕ್ 

ರಂಗಯ್ಯ, ರುಸ್ತುಂ, ಕುಸ್ತಿ ಆಗ್ಲಿ ಈ ಜೋದಾಗ್ಲಿ ಪಟ್ಟವರ್ಸೆ ಆಗ್ಲಿ....ಅವನ್ನ 

ಮೀರಿಸ್ದೋರು ಉಟ್ಲಿಲ್ಲ ಇನ್ನುಟ್ಟಾಕಿಲ್ಲ. ಬಾರುದ್ದ ಕೋಲು ಕೈಲಿ ಇದ್ಬಿಟ್ರೆಗಾನ 

ಉರೆಲ್ಲಾ ಕಲ್ಲುಗಳು ಬೀರ್ತಿರ್ಲಿ ಒಂದ್ಕಲ್ತಾಗ್ದೆ ನಿಭಾಯಿಸ್ಕೊಳ್ಳೋನು .... 

ರುಸ್ತುಂ, ಆದ್ರೆ ದುಡ್ಕೋದು ಅವನ ಐಬು. ಮೈನೂ, ಗುಂಡ್ಗೆನೂ, ಉಕ್ಕು, 

ಸಿಂಮದಂಗೆ, ಭತ್ತದ್ತೋಡ ತೊಟ್ಕೊಂಡು ಕಾಲ್ಗೆ, ಉಲಿಯಾಸ ಕಟ್ಟೌನೆ 

ಮೂರು ಗಲ್ಡಿ ಮುಂದೂನೂ, ಕುರಿಮರಿಗಳ್ನ ಬುಟ್ರೇ ಅಂಗಂಗೆ ಬಾಯಾಗೆ 

ಕಚ್ಕೊಂಡು ಭಿರ್ಕಾಯಿಸ್ತಿದ್ದ.... ಫೇಕ್ ರಂಗಯ್ಯ ! 


ಗಡF್ಖಾನ್-ಹಾಂ ಬೋರಣ್ಣಾ, ಬಕ್ರಿಯೋಂಕೂ : ದಾತೋಮೆ 

ಚಾಕ್ ಲೇಕೇ ನನ್ದು ಬಚ್ಪನ್ ಮೆ ದೇಖ್ಯಾ ಹೂಂ ! ಥೇ ರುಸ್ತುಮೋ ಉನ್  

ದಿನೋಮೇ...ಈವಾಗ ಹಂಗೆ ಯಾರೂ ಬೋರಣ್ಣಾ ?! 


ಬೋರಣ್ಣ - ಈಗಲಾ ! ? ಅಂಚೀಕಡ್ಡಿ ಅಂಗೆ ಜಿಸ್ಮು ಇರೋ 

ಒಣಕಲ್ನನ್ಮಕ್ಳೆಲಾ ಉಸ್ತಾದುಗಳು .. ಈ ಬೈಸ್ಕಲ್ಲೂ ಬಂದೂಕೂ ಬಂದ 

ಕಾಲ್ದಲ್ಲಿ....ಆದರಿದ್ಕೇಳ್ರ....ಜುಮಾರತ್ತು.... F್ತ್ಯ; ನಮ್ಗಲ್ಡೀಲಿ ಮುರ್ತು

ಜಾಲೀನೂ ಇದ್ದ....ರಂಗಯ್ಯನೂ ಇದ್ದ. ಷಕ್ಕರ್ ಫಾತ್ಯಾ ಕೊಡಿಸಿ ಒರಗ್ಬಂದು 

----------------------------------------

೩೦ ತಾವರೆಕೆರೆ 


.....ಕೂತ್ವಿ. “ ಇದ್ಯಾಕಿಂಗೇ ”? ಅಂದ ರಂಗಯ್ಯ, ಪೀರ್ಪಾಚಾ “ ನಮ್ಗಲ್ಡೀಲಿ 

ಆಡತ್ತು ; ಜುಮ್ಮಾರತ್ ಫಾತ್ಯಾ ತೀರ್ಸ್ಕೊಂಡು ದೀಪ ಆರ್ಸಿ ಒರಕ್ಬಂದು ಬಾಕ್ಲಾಕ್ಕೊಂಡು ಕೂತ್ಕಳ್ಳೋದು. ಗಲ್ಡಿಒಳ್ಗೆ ಅನುಮ ಭೀಮ ಇಬ್ಬ್ರು 

ಲಡತ್ ಸದ್ದು ಕೇಳ್ತೈತೆ” ಅಂದ. ಯೇಳ್ತಾನೇವೇ ಒಳ್ಗೆ ಗರದನ್ಮೇಲೆ ಕಂಚಿ, 

ತೊಡೆಮೇಲ್‌ಕೈ, ಬುಜಕ್ಬುಜ, ಲಗಾಯ್ಸ್ಕೊಂಡು ದೊಡ್ಜೋಡಿ ಕುಷ್ತಿ 

ಅಗೋ ಸದ್ದು ಆಗ್ತಾ ಅಯ್ತೆ! ಒಳ್ಗೆ ! ನಂಬ್ಕೆಯಿಲ್ಲ ರಂಗಯ್ಯನ್ಗೆ, “ ಇದು 

ಸುಳ್ಳು ! ಏನೋ ಇಕ್ಮತ್ತು... ಸಾಬೀತಾಗ್ಬೇಕು ಈಗ !” ಅನ್ಕೊಂಡು ಒಂದೇ 

ಗುದ್ದು....ಬೀಗ ಸಲಾಕಿ ಸಮೇತ ಬೂಪ ತಿರುಗ್ಸಿ ಎಸ್ದು ಒಳಕ್ನುಗ್ದ! ಬೆದ 

ರ್ಕೊಂಡು ನಿಟ್ಟುಸ್ರು ಬುಡ್ತಾ ಕೂತ್ಕಂಡಿದ್ದ ನಮ್ಕಿವೀಗೆ ಕೇಳ್ಬಂತು ಒಂದೆಳ್ದು 

ನಿಮಿಸ್ದಲ್ಲಿ ಒಂದ್ಕಿರ್ಲು.....ರಂಗಯ್ಯಂದು “ ಅಯ್ಯೋ ” ಅಂತ. ಬೆಂಕಿ ಕಡ್ಡಿ  

ಗೀಚ್ಕೊಂಡು ಒಳೆಕ್ನುಗ್ಗಿದ್ವಿ. ದೀಪ ಅಚ್ಚಿದ್ವಿ. ಸುತ್ಮುತ್ತ ನೋಡಿದ್ರೇನೋ 

ಯಾವಾಗ್ಲೂ ಯಂಗೋ ಅಂಗೇ ! ಮಲ್ಕಂಬ ಇದ್ಕಡೇನೇವೇ. ಅಕಾಡ 

ಲಾಲ್ ಮಟ್ಟೀ ತುಂಬ ಬಾರ್ ಬಾರ್ ಅಗ್ಲ ಎಜ್ಜೆಗ್ಳು ಅನುಮಂತಂದು 

ಬೀಮ್ಸೇನಂದು. ಅಲ್ದೆ ಅವರಿಬ್ರೂ ಮೆಟ್ಟಿದ ಕಡೆಯೆಲ್ಲಾ ಬಿದ್ದ ಅಳ್ಗಗ್ಳು . 

ಆದ್ರೆ ಯಾವ ಜುಮ್ಮಾರತ್ತೂ ಇಲ್ಲದ್ದು ಒಂದು, ನಮ್ಗಲ್ಢೀಲಿ, ಗೋತ ಆಕ್ದ 

ಸಾದ್ನೆ ಮೂಲೇಲಿ, ಯೆಣ ! ರಂಗಯ್ನೆಣ ! ಬಾಯ್ತುಂಬ ರಕ್ತ ! ಎದೆ 

ಎಲುಬೆಲ್ಲಾ ಚೂರ್ಚೂರು ! ಅಂಗಾತ ಬಿದ್ದವ್ನೆ ಅವನ್ಮೇಲೆ ಬೆಟ್ಟ ಬಿದಿದ್ದ್ರೆ, 

ಎಂಗೋ.... ಅಂಗೆ ! ಇನ್ಯಾರೇನು ಮಾಡೋದು ! ಪೋಲೀಸ್ ಬಂದ್ರೆ ಯೇನು 

ಡಾಕ್ಟ್ರು ಬಂದ್ರೆ ಏನು ! ಗಲ್ಡೀ ಗಲ್ಡೀಲ್ಲೀನೆ! ಸಾಕ್ಷಿಗಳು ಒರ್ಗೆ, ಒಳಕ್ನುಗ್ದೋನು 

ಯೆಣ ! ಗಿಲ್ಡೀಲಿ ಯಾರೂ ಇಲ್ಲ ! ಮುಚ್ಕೊಂಡೊಯ್ತು. ಆದ್ರೆ ದರಣ 

ಯ್ನೋರು: ತನ್ನ ಗಲ್ಡಿ ಕಲೀನ ನಮ್ಗಲ್ಡೀಲಿ ಸತ್ತಾಂಬೊ ಸೇಡು ಇಟ್ಗೊಂಡು 

....ಕೇಸಾಕ್ದ್ರು ನಮ್ಮೆಲೆಲ್ಲಾ, ಊರೆಲ್ಲಾ ಅವರ್ಕಡೆ.. ಆದ್ರೆ ಕಚೇರೀಲಿ 

ಕುಲಾಸೆ ನಾವೆಲ್ಲಾ. ಆದ್ರೂನೂವೆ ಮೂವತ್ತೊಂಬತ್ದಿನ ಲಾಕಾಪ್ ನಲ್ಲಿದ್ವಿ 

ನಮ್ಗಲ್ಡಿಯೋರೂ ಕಸಾಬ್ ಮುರ್ತಿಜಾಲಿ ಗಲ್ಡಿಯವ್ರೂ. ಒಟ್ಮುವ್ವತ್ತೊಂಬ 

ತ್ಜನ ಮನೆ ಮಕ್ಳೂ ಮರೀ ಬುಟ್ಟು.....ಒಬ್ಬನ್ ಸಾವ್ಗೆ ಮೂವತ್ತೊಂಬತ್ಜನ 

ಗಲ್ಗೋಗ್ತೇವೊ ಅಂಬೋ ಎದರ್ಕೆಲಿ ನಡು ಬಿದ್ದಿದ್ವಿ ಲಾಕಪ್ ನಲ್ಲಿ. 

ಊರೂರೇ ದರಣಯ್ಯನ ಕಾಲಿಗ್ಬಿದ್ದು ಬೇಡ್ಕೊಂಡ್ರೂವೆ ಕೇಳವಲ್ಲ ದುಡ್ಡು 

-----------------------------------------

ಬೋರೇಗೌಡನಕಥೆ ೩೧

 

ನೀರು ಸುರಿದಂಗೆ ಸುರಿದು.... ಮದರಾಸ್ ಕಡೆಯಿಂದ ಲಾಯಿಗಳ್ ತರ್ಸಿ.... 

“ನನ್ನಲ್ಡಿ ಫೇಕ್ ರಂಗಯ್ಯ ಸತ್ತದ್ದಕ್ಕೆ ನಿಮ್ಮಿಬ್ರ ಗಲ್ಡೀನೆಲ್ಲಾ ಗಲ್ಲಿಗೆ 

ಸಾಗಸ್ದಿದ್ರೆ ಗಂಡ್ಸಲ್ಲಾ ನಾನೂ ”೦ತ ನೀರು ಸುರಿದಂಗೆ ದುಡ್ಡ್ಸುರ್ದು ನಡಸ್ದ 

ಮೊಕದ್ದಮೆ. ದೇವ್ರು ಏಟು ಐಶ್ವರ್ಯ ಕೊಟ್ರೂ....ಮಕ್ಳುಮರ್ಯೋನು 

....ತನ್ನಂಗೇ ಮಕ್ಳು ಮರಿ ಇರೊ ಗರೀಬರಮೇಲೆ ರೋಷ ಕಟ್ಬಾರ್ದು ! 

ದೇವರ್ ದಯ....ನಮಗ್ನಾಕೆ ಸಾಕ್ಷಿ....ಸೆಷನ್ ಕೋರ್ಟ್ನಲ್ಲಿ, ಕಾಲಿಗಲ್ಡಿ..... 

ಒರಗ್ನಾವು. ಒಳಕ್ನುಗ್ದೋನೊಬ್ಬ ! .... ಯಣಾನ ಅಜ್ಮಾಷಿಮಾಡ್ದ ಪರಂಗಿ 

ಡಾಕ್ಟ್ರು.... ನೂರ್ವನ ಮೇಲ್ಬಿದ್ದಿದ್ರೂ ಇಂಗ್ಮುರ್ಯಾಕಿಲ್ಲ ಈಟು ಗಟ್ಟಾಗಿದ್ದ 

ಮನಸ್ಸನಜಾತಿ ಎಲ್ಬುಗ್ಳು' ೦ತ ಕೈಪೀತು....ಇನ್ನೇನು ಕುಲಾಸೆ ನಾವೆಲ್ರೂವೆ. 

ಅವತ್ತಿಂದ ಅದೇನ್ಪಿಶಾಚಿ ಯಿಡೀತೊ ದರಣಯ್ಯನ್ನ, ಅವನ್ಮನೆತನಾನೆ 

ಮಣ್ಣು. ನೆನ್ನೆ ಯೇಳ್ದಂಗೆ ಆ ಓಣಿ, ಆ ಅರ್ದಮುರ್ದ ಸುಂಕದಕಟ್ಟೆ..... 

ಮೂವತ್' ನಲವತ್‌ ಜನ ಅಗ್ಲೂ ರಾತ್ರಿ ಎರಡೊತ್ತೂನೂವೆ ಒಟ್ಟೆ ತುಂಬ 

ಉಂಡು ಕೈತೊಳಿತಿದ್ದ ಆ ಮನೆ ಯೇಳ್ದೆ ಅಲ್ದೆ, ಮೂವತ್ತೊಂಬತ್ ಜೀವ 

ಓದ ಆ ಮನೆ, ಈಟೆ ಬಾಕಿ. 


ಶೆಟ್ಟ್ರು - ಅಯ್ತೆ ಯೇಮಿ.... ಮುಪ್ಪೈತ್ತೊಮ್ಮಿದಿ ಜೀವಾಲು ಫಡ್ಚಾನಾ 

....ಆ ಯಿಂಟ್ಲೋ ? 


ಬೋರಣ್ಣ- ಹೂಂ, ಅದೇ ಕತೆ ಯೇಳೊದು ನಾನು. 


ಶೆಟ್ಟ್ರು--ಯೇಮಿ ಒಕಿಂಟ್ಲೋ ಮುಪ್ಪೈತ್ತೊಮ್ಮಿದಿ ವೀನಿಗಿಲಾ ! 

ದೇವುಡೇ ಗತಿ ! ಗೌಡ್ಲು, ಚಪ್ಪೇದೈತೆ.... ವೇತ್ರ ಚಪ್ಪಂಡ.... ಕಥ. 


ಬೋರಣ್ಣ ...ಮೂವತ್ತೆಂಟೆಣಗ್ಳು ಬಿದಿ ದ್ದು ಕೇಳಿವ್ನಿ ....ಮನೆಯಿಂದೊ 

ರ್ಗೊರ್ಟು ಅಮಲ್ಲಾರ್ರು ಪಂಚಾಯ್ತಿಯಿಟ್ಟು ತನ್ಕೆ ಮಾಡಿ ಮಸಾಣಕ್ಕೋ 

ಮಣ್ಣಿಗೋ ಸಾಗ್ಸಿದ್ದು ನೋಡಿವ್ನಿ. ನನ್ಗೆ ಖುದ್ದಾಗಿ ತಿಳ್ದು ಓದ ಮೂವ 

ತೊಂಬತ್ನೇ ಜೀವದ್ಕತೆ ಯೇಳ್ತಿರೋದು ಈಗ. ಇಲ್ಲಿರೋ ಈ ನಮ್ಮ 

ಸಾಮಣ್ಣೋರು ಒಬ್ರೇ ಸಾಕ್ಸಿ.... ಒಂದ್ರಾತ್ರಿ ನಮ್ಮಣ್ಣೆದ್ರುಗೇನೇ ಒಂಜೀವ 

ಓದ ನನ್ನತೇಗೆ. 

-----------------------------------------

೩೨ ತಾವರೆಕೆರೆ 


ಫೇಕ್ ರಂಗಯ್ಯ ಸತ್ತು ಒಂದ್ವಾರ್ದೊಳ್ಗೆ.... ನಾವೆಲ್ಲಾ ಲಾಕಪ್ ನಲ್ಲೇ 

ಇದ್ವಿ .... ದರಣಯ್ಯನ ತಮ್ಮನ ಮದುವೆ ಆದ ರಾತ್ರಿ ಮನಿಕ್ಕೊಂಡವ್ರೆ 

ನೂರಾರ್ ಜನ. ಬೆಳಿಗ್ಗೆ ಏಳೊತ್ಲೂ ಮದವಣಿಗ-ಮದವಣಿಗಿತ್ತಿ, ಬೀಗ 

ಬೀಗೀರು ಆರು ಜನ ಒಟ್ನಲ್ಲಿ ಯೆಣಗ್ಳು ಬೆಳಕರೀತ್ಲೂವೆ! ಅಪ್ನೂ , 

ಅಮ್ಮ್ನೂ , ತಮ್ಮ್ನೂ , ಒಸೆಂಡ್ತೀನೂ, ಅವಳಪ್ನೂ, ಅಮ್ನೂ, ಮಸಾಣಕ್ಕೆ 

ಸಾಗಿಸ್ತಿದ್ದಾಗ್ಲೆ ..... ಶ್ರೀಕಂಟದೇವ್ರ ಪೂಜಾರಿ ಬಡ್ಕೊಂಡ ! " ಮನೆ ಬುಟ್ಟುಡು 

ಆ ಮನೇಲಿ ಒಂದ್ರಾತ್ರಿ ಇರಾರ್ದು” ೦ತ, ದರಣಯ್ಯನಟ ಕೇಳ್ಲಿಲ್ಲ. ಮಾರನೆ 

ಬೆಳಿಗ್ಗೆ ಎಂಡ್ತೀನೂ ಮಗನೂ.... ಒಬ್ನೆ ಮಗ....ವಾಂತಿ ಬೇದೀಲಿ ಫಡ್ಚ. 

ಮನೆ ಬಿಟ್ಟ ಆಮೇಲೆ, ಅಂಗೋ ಇಂಗೋ ಮುವ್ವತ್ತೇಳ್ಜನ ಒಟ್ಟು ತಿಂದದ್ದು 

ಬಲಿ ಆ ಮನೇಲಿ ಇದ್ದ ಭೂತ, ಆಟೋತ್ಗೆ ದರಣಯ್ಯನೂ ಇಲ್ಲ; ಮನೆ 

ಯೋದೂ ಇಲ್ಲ. ಅವರ ದಾಯಾದಿ ಚನ್ರಾಯ್ ಪಟ್ನ ! ವಾರಸ್‌ದಾರ.... 

ಮನೆ ಮಾರಾಕೋಗಿ ಕೊಂಡ್ಕೊಳ್ಳೋರ್ಯಾರೂ ಯಿಲ್ದೆ ಮನೇನ್ಕೀಳಸ್ಬೇ 

ಕೂಂದ. ಅವನಿದ್ದದ್ದು ಊರು ಮುಂದಿನ ಗಂಧದ ಕಾಶಿಸತಯ್ಯನ ಛತ್ರ. 

ಛತ್ರದ ಕಾವಲುಗಾರ ಏಳಿದ್ಕಥೆನೆಲ್ಲಾ ನಂಬ್ಲಾರ್ದೆ ನನ್ನೂ, ಕಸಾಬ್ ಮುರ್ತಿ 

ಜಾಲೀನ್ನೂ ಇಲ್ಲಿರೋ ಸೇಕ್ದಾರ್ ಶಾಮಣ್ಣಾವರ್ನೂ ಕರಸ್ಥ, ಓದ್ವಿ. ಮನೆ 

ಕತ್ಯೆಲ್ಲಾ ಏಳಿದ್ವಿ. ಆದ್ರೇನು ? ದರಣಯ್ಯನ ರಕ್ತ....ಅಟ ! ನಂಕತೆ ನಂಬ್ಲಿಲ್ಲ ! 

“ ನಿನ್ಮನೇಗೆ ಸುಂಕದ ಕಟ್ಟೆಂತ ಯೆಸ್ತು. ರಾತ್ರಿ ತಂಗಿದ್ರೆ ಒಂಜೀವನಾದ್ರು 

ತಿನ್ನೊ ದೆವ್ವ ಇರೋ ಮನೇ ” ೦ತ ಏಟೇಳಿದ್ರೂ ಕೇಳ್ವಲ್ಲ. "ದೇವ್ರ ಮುಂದೆ 

ದೆವ್ವಾನೆ ? ” ೦ತ ಅಂದು “ ಈವತ್ತು ರಾತ್ರಿ ಆ ಮನೇಲೇ ಮನೀಗ್ಕೋಳ್ಳೋ 

ದ್ನಾನು.... ನೀವು ಮ‌ರ್‌ ದುಗಳಾದ್ರೆ ಮೂವ್ರೂ ಬನ್ನಿ ! ನೋಡೇಬಿಡೋಣ 

ಈ ದೆವ್ವದ ಜೂರತ್ನ !” ಅಂತ ಶಾಲೊಡ್ಕೊಂಡು ಒಂದೈಲಿ ಒಂದಿಂಬು, 

ಇನ್ನೊಂದೈಲಿ ಒಂದು ಲಾಟಿಂಗು ಇಡ್ಕೊಂಡು ಬಂದೇಬುಟ್ಟ ಬೂಪ ! 

ಈಗ್ಯಾವೇನ್ಮಾಡೋದು ? ಓದ್ರಾಳಾಗೋಗ್ಲೀಂತನ್ಕೊಂಡು ನಮ್ಮಟ್ಗೆ 

ಬಂದ್ಭುಟ್ಟೋ ಊರ್ಗೆಲ್ಲಾ ಪಿರ್ಕಿ ಪಟ್ಟ ಚನ್ನರಾಯಪಟ್ಟಣದೋನ್ಕೈಲಿ ? 

ಯಿಲ್ಲಾ ಈ ಉಚ್ಚನ್ ಜೊತೆಗೆ ನಾವೂ ಓದ್ವೋ.... ನಮ್ಮಲ್ಲೊಬ್ರು ಯೆಣ 

ಅಂಬೋದು ಗುಂಡ್ಗೆ ಯೇಳ್ತದೆ. ಆದ್ರೆ ಮಾಡೋದೇನು ? ಮರದ್‌ಗಳು 

ನಾವ್ಮೂರು ಚನ್ರಾಯಪಟ್ನಕ್ಕಾ ಬುಟ್ಕೊಡೋದು ನಂಬುಳ್ಳಾಪುರದ ಗೈರತ್ನ ! 

--------------------------------------------

ಬೋರೇಗೌಡನ ಕಥೆ ೩೩ 


ಒಂಟ್ವಿ ಅವಯ್ಯನ್ ಜೊತೇಲಿ ! ಆ ಆಳ್‌ ಮನೇಗೆ ಓಗ್ತಿದ್ದಾಗ್ಲೇನೇವೇಯೇ 

ಸಾಮಣ್ಣೋರು ಏಳಿದ್ರು. ಎಂಗೋ ಬಯ, ನಿಗ ತಪ್ಪಿ ನಿದ್ದೆ ಮಾಡಿದ್ರೇನೇವೇ 

ಅಪಾಯ, ಎಂಗಾದ್ರೂವೇ ಅಲ್ಕಚ್ಕೊಂದು ಚಾಗರ್ಣೆ ಮಾಡ್ಕೊಂಡಿದ್ದಿಟ್ರೆ  

ಮೈಯಿಲ್ಲದೆವ್ವ ನಮ್ಮನ್ನೇನ್ಮಾಡೀತು. ಒಂದಿಪ್ಪೇಸ್ ಕಟ್ಟು ಇಟ್ಕೊಂಡು.... 

ಪಟ್ಟ್ನಾಟ್ವೋ ಇಪ್ಪತ್ತೆಂಟೋ ಆಡ್ತ ರಾತ್ರಿ ಕಳೆದ್ಬಿಡೋಣ ಅಂತೇಳಿದಕ್ಸರಿ 

ಯಾಗಿ ಇಸ್ಪೇಟಾಡ್ತಾ ಕೂತಿದ್ದೀವಿ ನಾನೂ ಮನೆಆತ್ನೂ ಜೊತೆ, ನಮ್ಮದ್ರು 

ಮುರ್ತಿಜಾಲಿ ಸಾಮಣ್ಣೋರು, ಎಲು ಕರಿ ಕಪ್‌ಸೆಟ್‌ ಆಯಿತು ಅವರ್ಗೆ, 

“ಇದೇನೋ ? ಕಾಸಿಲ್ದಾಟ ! ಜೋರಿಲ್ಲ” ೦ತ ಮನೆಯಾತ ಜೋಬಿಂದ 

ನಲವತ್ತು ರೂಪಾಯೆತ್ತಿ.... ನಾವು ಅತ್ಯತ್ತೂಪಾಯಿ ಅಂಚ್ಕೊಂಡು ತಿರ್ಗಾ 

ಷುರು ದುಡ್ಡಿಗಾಡಾಕೆ. ಆಡ್ತಾ ಆಡ್ತಾ ಇದ್ವಿ....ಗೆಪ್ತಿ ಐತಾ ಸಾಮಣ್ಣೋರೇ.... 

ಮುರ್ತಿಜಾಲಿ ತಲೆದೂಗ್ತ ಆಕಳಸ್ತ ಅವನ್ಮುಂದಿದ್ರೂಪಾಯಿಗಳೂ ನಮ್ಕಡೆ 

ತಳ್ಳಿ “ ನೀವಾಡ್ಕೊಳ್ಳಿ..... ಅಲ್ಲಾಹೊ ! ಅಲ್ಲಾಹೊ ” ಂತಾನೆ ಬಿದ್ಕೊಂಡು 

ನಿದ್ದೆ. ತಿರ್ಗೂನೂವೆ ಸಾಬಿದುಡ್ನ ಮೂವೂ ಅಂಚ್ಕೊಂಡು ಆಡ್ತಿದ್ದೀವಿ....

ಸಾಮಣ್ಣೋರು ಆಕ್ತಿದ್ದ ಒಂದೊಂದೆಲೇಗೂ ಆಕಳ್ತ “ರಾಗ್ವಾ! ರಾಗ್ವಾ! ” 

೦ತ ಬಾಯ್ಗೆ ಚುಟ್ಕೆ ಒಪ್ಪಿಸ್ತಾ...." ದಿನವೆಲ್ಲಾ ಬಿಸುಲಿನಲ್ಲಿ ತಿರುಗ್ದೆ.... ನಿದ್ದೆ .... 

ನೀವ್ನೀವೇ ನೂರೆಂಟು ಆಡ್ಕೊಳ್ಳಿ” cತ ಗೊಣಗುಟ್ತ ಬಿದ್ಗೊಂಡು, ನಾನು, 

ಕಟ್ಟು ಕಲ್ಸಿ ಕಟ್ ಮಾಡಿಸ್ಕೊಂಡು ನನ್ಗೂ ಮನೆಯಾತನ್ಗೂ ಅಂಜ್ತಿರೊ 

ನನ್ನ್ ಬೆಳ್ಳು -- ಭುಜಾನೂ ಸೋತ್ ಬೀಳ್ತಿದ್ದನ್ನ .... ನನ್ತಲೆ ನಿದ್ರೇಲಿ 

ತೂಗೋದ್ನ.... ನೋಡ್ದ ಅವಯ್ಯ....' ಇದೇನ್ರಿ ದೆವ್ವ ಇರೋ ಮನೆ ಅಂದ್ರಿ 

....ನನ್ಜೊತೇಲಿ ಬಂದ ನಿಮ್ಮೂವ್ರಲ್ಲಿ ಇಬ್ರೂ ನಿದ್ದೆವೋಗಿ? ನೀವೂನೂ ತಲೆ 

ತೂಗ್ತಿರೋದು .... ಇದೇನು ನನ್ನ ಬೆದರ್ಸೋಕೆ ಅಂತ ಮಾತಾಡ್ಕೊಂಡು 

ಮಾಡ್ತೀರೋ ತಮಾಸೇನಾ' ? ಅಂದ. ನನಗ್ಯಾಕೊ ಕಣ್ಣು ಒಂದ್ಕಡೆ 

ಕಬ್ಣ ಕಡ್ಣಂಗೆ ಇಳೀತಿದೆ ನಿದ್ದೆ ಬಾರ. “ ಅಲ್ಲಾ ಸ್ವಾಮಿ ಸತ್ವಾಗೂನೂ ನಿದ್ದೆ. 

ದೀಪ ಇಳಿಸಿ ಮನಿಕ್ಕೊಳ್ಳಿ ನಮ್ಮಂಗೇನೆ ” ಅನ್ಕೊಂಡು ಕಾಲುಗ್ಳು ಚಾಚ್ದೆ ; 

ಆವಯ್ಯನ್ಮುಕ ಕಣ್ಣುಗ್ಳು, ಕತ್ಲೆ ಕಂಡ ಕೂಸಿನ್ಮುಕದಂತೆ ಆಗಿ....ಕೈ ನಡಗ್ತ 

ನಾಲ್ಗೆ ತೊದಲ್ತ.....“ ಅಯ್ಯೋ....ಗೌಡ ! ನಿಮ್ನಿಮ್ಮಲ್ಲಿ ಇದೇನೋ ಪಿತೂರಿ ! 

ದೆವ್ಯಾಂತೀರಾ ಮನೇಲಿ ಹತ್ತ್ಮುವ್ವತ್ತು ಹೆಣಗ್ಳು, ಬಿದ್ವು ಅ೦ತೀರ ನಡ್ರಾತ್ರೀಲಿ 

---------------------------------------

೩೪ ತಾವರೆಕೆರೆ 

 

ನಂಜೊತೇಲಿ ಬಂದ್ನೀವು ನಿದ್ರೆ ಅಂತ ನಟ್ಸಿ ಬೆದರ್ಸೊಕ್ನೋಡ್ತೀರಾ ನನ್ನ! .

............... ಬೆದ್ರೋನಲ್ಲ ನಾನು ! ” ಅನ್ಕೊಂಡು ಒಂದು ಸಿಗರೇಟು ಜೇಬಿ 

ನಿಂದ ತೆಗೆದು ಬಾಯಾಗಿಟ್ಕೊಂಡು ಒಂದ್ಬೆಂಕೀ ಕಡ್ಡಿ ಗೀಚಿ ನಸ್ನಗ್ತ 

ನನ್ನೋಡ್ದ .... ಕಡ್ಡೀನ ಸಿಗ್ರೇಟ್ಗೆ ಅಚ್ತಿದ್ದಾಗ್ಲೇನೇನೇ ಅಜಾರ್ದಲ್ಲಿ ಒಳ್ಳೆ 

ಕಂಚಿನ್‌ ಸರಪ್ಣಿ ಕದಲಸ್ದಂಗೆ ಸದ್ದು ಆಗತ್ಲೂವೇ ನನ್ಕೈಕಾಲುಗ್ಳು, ನಡುಗ್ತ 

“ ದೇವ್ರೇ ! ಶ್ರೀ೦ಟಾ ! ಇದೇನ್ಬಂತೂ ! ಕಾಪಾಡಪ್ಪಾ ! ನನ್ತಂದೇ ! ” 

ಅಂತ್ಕಿರಲ್ದೆ ನನ್ಬೆದರ್ಕೇಲಿ, ಅವಯ್ನೋ ತಟ್ನೆದ್ದು....... ದೀಪಾನ್ಕೈಲಿತ್ಕೊಂಡು 

........* ಕತ್ಲೇಲಿ ಸಾಯ್ರಿ....... ಮೂರು ಪ್ರಾಣಿಗ್ಳು ನಿದ್ದೆಲಿ ಬಿದ್ದಿರೋವಾಗ 

ನಾನೊಬ್ನೇ: ಇಲ್ಲಿರೋದು ಆನಿ” ಅನ್ಕೊಂಡು....ದೀಪದ್ಸಮೇತ........ಏಳಾಕೆ 

ಮರ್ತೆ ; ಮನೆಮಾಡಿ ಮೇಲ್ನ ದಿವಾನ್ಕಾನೇಲಿ ಕೂತಿದ್ವು ನಾವು - ಏಳ್ದಂಗೇ 

ದೀಪದ್ಸಮೇತ ಕಿರುಬ ಅಟ್ಟಿದ ಕಡಬಂತೆ ಬಡಬಡಾಂತ ಮಾಡಿ ಮರದ್ಮೆಟ್ಲು 

ಇಳ್ದೋದ ! ಕೋಣೇನೂ ಕತ್ಲೆ, ನಾನೂ ಸುಸ್ತು, ಅಂಗೇ ಬಿದ್ಗೊಂಡು, 

ಕಣ್ಣು ಬಿಟ್ಟಾಗ ಬೆಳಕರ್ದು ಏಟೋ ಒತ್ತಾಗಿತ್ತು. ಸಾಬಿ ಒಂದ್ಕಡೆ, ಇವಯ್ಯ 

ಒಂದ್ಕಡೆ ಇನ್ನೂ ಗೊರ್ಕೆ! ಇಬ್ಬರ್ನೂ ಜಿಗ್ಟಿ ಎಬ್ಬಸ್ಥೆ, ಒಬ್ಬರೊಬ್ರು ನೋಡಿ 

ನಕ್ವಿ, ಸಾಬ “ ಅಂಗಾದ್ರೆ ಯಾರೂ ಸಾಯ್ಲಿಲ್ಲ ನಾವು ” ? ಅಂದ. ಅಟ್ಟ್ರಲ್ಲೆ 

ಶೇಕ್ದಾರ "ಮನೆಯಾತ ಎಲ್ಲಿ ? ” ಅಂದ್ರು. ನಾನು “ ರಾತ್ರೀನೇ ಯಾರೋ 

ಸರ್ಪಣಿ ಆಡಿಸ್ತ೦ಗ ಕೇಳ್ಬರೂತ್ಲೂ ಎದರ್ಕೊಂಡು ದೀಪಾನೂ ಎತ್ತೊಂದು 

ಕಿತ್ಕೊಂಡ ಆವಯ್ಯ.... ಛತ್ರಕ್ಕೇ ! ”೦ದೆ. ಶಾಮಣ್ಣೋರು.... ಆಗಾದ್ರೆ.... 

ಈ ಆಳ್ಮನೇಗೆ ಒಂದ್ರಾತ್ರಿಯಾದ್ರೂ “ ಸುಂಕ ” ಕೊಡದೆ ಕಳೆದ್ವಲ್ಲ ಅಂದದ್ಸಂ 

ತೋಷ ! ” ಅಂದ್ರು. ನಾವೂನೂ ಒಪ್ಪಿ ಎದ್ದು ಇಳಿದು ಬಂದ್ವಿ ಮೆಟ್ಲ ಕೆಳಗೆ 

ಕೊನೇಮೆಟ್ಲು ಮೆಟ್ಟೋ ಅಷ್ಟ್ಹೊತ್ಗೆ ಕಂಬ್ದಂಗೆ ನೆಟ್ಗೊಂಡು ಮೂರ್ಜನಾನೂ 

ಕಂಡ್ವಿ : ಕೈಲಿದ್ದ....ದೀಪ ಒಂದ್ಕಡೆ ಮುರಿದ್ಬಿದ್ದು ತಾನೂ ಕುತ್ಗೆ ಮುರ್ಕೊಂಡು ಬಿದ್ಕೊಂಡಿದ್ದ ಮನೆಯಾತ್ಮ ಯಣಾನಾವ ! 


ಶೆಟ್ಟ್ರು - ಅಯ್ಯೋ ಯೇಮಿ.... ? 


ಬೋರಣ್ಣ - ಯೋಮಿಯೇನು ಶೆಟ್ಟ್ರೇ....ಕೊನೆಗೂ ಆ ಮನೇಗೆ ಸುಂಕ 

ವಸೂಲೆ ಆಯ್ತು !! 

--------------------------------------- 

ಶಾಮಣ್ಣನಕಥೆ ೩೫  

ಶಾ ಮಿ ಯ  ಸೇ ಡು 

ಗೋಷ್ಠಿ ಗುಡಿ ಸಮಾಸಿದೆ. ಎಕ್ಕದ ಜೋಡುಗಳೂ ಇದುವರಿಗೂ 

ಮೆಟ್ಟು ಮುಂದೆ ಬಿಚ್ಚಿಟ್ಟು ಗುಡಿಯೊಳಕ್ಕೆ ಕಾಲಿಡೋ ಪದ್ಧತಿ, ಈ 

ಹೊತ್ತ್ಮಟ್ಗೇ ಈ ಪಂಚ ಪ್ರಾಜ್ಞರಿಗೆ ತಪ್ಪಬೇಕಾಗಿ ಬಂತು. 


ಮೆಟ್ಟು ಸುತ್ತ ಹತ್ತಡಿವರೆಗೂ ಚೊಕ್ಕಟವಾಗಿ ಗುಡಿಸಿ, ಸಾರಿಸಿ 

ರಂಗೋಲೆಯಿಟ್ಟು ಕೆಮ್ಮಣ್ಣಿನ ಚೌಕಟ್ಟು ಹಾಕಿದ್ದೇ ಅಲ್ದೆ ಇನ್ನು ಮೆಟ್ಟ್ಲುಗಳ 

ಅತ್ತಿತ್ಕಡೆ ರಂಗೋಲೆ, ಇನ್ನು ಹಿಸ್ಲೋ, ಅರಿಸಿನದಲ್ಲಿ ತೊಳೆದು ಮಧ್ಯದಲ್ಲಿ 

ರಂಗೋಲೆ ಪದ್ಮ! 


ಶೆಟ್ಟ್ರು-- ಇದೇವಿ ಇದುವರ್ಗೂ ಪಾದುಪಡಿ ಉಂಡಿನ ಕಾಳಮ್ಕು 

ಈಪದ್ದೇಮಿ ವೊಚ್ಛ ಭಾಗ್ಯಮು ? ಸಾಬ್ರು ಇಕ್ಕಡೆ ಉಂಡಂಡ, ಲೋಪುನ 

ಪೋಯಿ ಚೂಸಿ ಚಪ್ತಾ ! ” ಎನ್ನುತ್ತಾ ಒಳಹೊಕ್ಕು ಮುತ್ತಿರುಗಿ “ಬಾಧಕಂ 

ಲೇದು ರಾವೊಚ್ಚನು ಸಾಬ್ಲು, ಮೀರಂತಾನೂ ಆಟ್ಲ್ನೆ. ಇಪ್ಪಿಪ್ಡೇ ಯೆವ್ರೋ 

ಬೀಡೀಲು ತಾಗಿ ಪೋಯಿನ ಘಾಟು ಇಂಕ ಉಂದಿ.” ಎಲ್ಲರೂ ಒಳಹೊಕ್ಕು 

ನೋಡುತ್ತಲು....ಒಂದು ಹೊಸ ಅರಳೆಪೇಟೆ ರೌಕೇಕಣವನ್ನು ನಡುವಿಗೆ 

ಸುತ್ತಿ ಹಣೆಗೆ ಹರಿದ್ರ ಕುಂಕುಮಗಳನ್ನು ಬಳಿದು ಶಾವಂತಿಗೆ ಹುವ್ವಿನ ಹಾರ 

ವೊಂದನ್ನು ಕೊರಳಿಗೆ ಹಾಕಿ ಅಮ್ಮನನ್ನು ಅಲಂಕರಿಸಿದ್ದ ಅಮೃತಾಕಾಕ್ಷಿಯನ್ನು 

ಕಂಡು ಬೆಚ್ಚಿ ಬಿದ್ದವರಲ್ಲಿ.... 


ಖಾನ್ ಸಾಹೇಬ್ರು.. ಆಜ್ ಕ್ಯಾ ಕಾಳಮ್ಮ ಬಡಾ ಖದರ್ಮೆ ಹೈ ? 

ಹರ್ರೋಸ್‌ ಬಚ್ಚ್ಯೋಂಕೆ ಮೋಘಕ್ ನಂಗಾ ಥೀಸೋ ಅಮ್ಮಾಕು ಕೊಯ್ ಕೀ 

ಲಂಗ ಪೇವನಾಕೆ ಫೂಲೋ೦ಕುಂಕುಂಭಿ ರಖೀಂ! ಆಜ್ ಕ್ಯಾ ಖ್ಹುದ್ಬಹೈ 

ಅಮ್ಮಾಕೆ ?.... ಹಬ್ಬ ಇದಾದೆ ?.... 

------------------------------------------ 

೩೬ ತಾವರೆಕೆರೆ 


ಶಾಮಣ್ಣ-- ಹಬ್ಬವೇನೂ ಇಲ್ಲ ಈ ಹೊತ್ತು. ಯಾರೋ ಪಾಪ 

ಹೆಂಗ್ಸು ಮಗೂಗೆ ಸಿಡುಬೋ ಗಿಡುಬೋ ಎದ್ದಿರಬಹುದೂ ! ಎಂದೂ ಮರೆತ ಮಹಾಕಾಳಿ ಇಂದು ಜ್ಞಾಪಕ ಬಂದು ಅಲಂಕಾರಮಾಡಿ ಹೋಗಿರಬೇಕು. 


ಶೆಟ್ಟ್ರು -ಕಾದಾಮರಿ ! ಸಂಕಟಮು ವೊಚ್ಛೇತಪ್ಡೇ ವೆಂಕಟರಮಣಾ 

ಅನ್ನೇದಿ ಮೇಮಂತ, ಸಂಸಾರಮುಲೋ ಸಮಸ್ತಮೂ ಸಲೀಸ್ಗ ಸಲ್ಲುತುಂಡೇ 

ವರಿಕೂ ದೇವುಡು ಯಾಲ! ಎವ್ವುರು ಯಾಲ! ಮನುಷ್ಯರು ಚೈಮೀರಿ 

ಪೋಯಿನಪ್ಪಡೇಕಾದ ದೇವುಡುರಾವಲ ! ಒಳ್ಳು, ಬಾಗುಂಡೇವರ್ಕು ವೈದ್ಯುಡ್ನಿ 

ಸಿಲಿಪಿಸ್ತಾರಾ ! ಯೆಮ್ಸಾಬ್ಲು? 


ಗಡF್ಖಾನ್- ಬರೋಬರ್‌ ಶೆಟ್ಟಿ ನೀನು ಹೇಳಿದ್ದೇ ಠೀಕ್. ಆದ್ರೆ 

ಮೈ ಕೈ ದಿಮಾಕ್ ಜೂರತ್ ಗೈರತ್ ಗರಸ್ ಇರೋ ಮರದ್ ಕೈಲಿ ಆಗದ್‌ 

ಕೆಲ್ಸ.... ಪತ್ತರ್‌ನಲ್ಲಿ ಬನಾಯಿಸ್ದ ಸನಂಕೈಲಿ ಅಗ್ತೈತೆ ಕ್ಯಾ ? ಕ್ಯಾ ಸಾಮೀ 

ಆಪ್ ಬೋಲಿಯೆ ! ಖುದಾಕೆ ಖುದರತ್ ಹೋನಾಚ್ ಹೋನ ! ಅಲ್ಲಾಕೆ 

ಕುಮ್ಮಕ್ ಬಗೈರ್, ಕುಚ್ ನಹಿ ಕರ್ ಸಕ್ತಾಯ್ ಆದ್ಮಿ! ತಾಹಂಭೀ ಸಾಮಿ, 

ಅಯ್ಸ ಪತ್ಥರ್‌ ಕೆ ಸನಮ್ಕು ಪೂಜ ಕರ್ನೇಮೆ ಕುಚ್ ಮತ್ಲಬ್‌ ಹೈ ಕ್ಯಾ ? 

ಇಲಂ ಹೈ ಕ್ಯಾ? ಇನ್ಸಾಫ್ ಹೈ ಕ್ಯಾ ? ಇಮಾನ್ ಹೈ ಕ್ಯಾ.... ಮೈ ತೊ 

ಹೈರಾನ್ ಹೂಂ! ಬೆಯಿಜ್ಜತ್ಸೆ ನಹಿ ಮೈ ಪೂಛ್ಛ್ನೇಕ ಸಾಮಿ, ಆಪ್ಸೆ 

ಸಮಜ್ನೇಕೇಲಿಯೇ !  


ಭಟ್ಟ್ರು-- ನೀವ್ ಕೇಳೋ ಪ್ರಶ್ನೆ ಸಾಬ್ರೆ ಹೊಸ್ದಲ್ಲ. ಸಾವಿರಾರು 

ಜನಗ್ಳು ಕೇಳಿದ ಪ್ರಶ್ನೆ. ಅದಕ್ಕೆ ತಕ್ಕ ಉತ್ತರ ಇದೆ ! ಆದ್ರೆ ಆ ಕೇಳೋ, 

ಸಾವಿರ ಜನಗ್ಳ ಸಾವಿರ ಪ್ರಶ್ನೆಗಳ ಸಾವಿರ ರೂಪಗಳಿಗೆ ಸರಿಯಾಗಿ ಉತ್ತರಕ್ಕೂ 

ಸಾವಿರ ರೂಪಗಳು. ಆದ್ರೆ ಒಟ್ನಲ್ಲಿ ಪ್ರಶ್ನೇನ್ನೂ ಉತ್ತರಾನ್ನೂ ಒಂದೇ 

ರೂಪಕ್ಕೆ ಇಡಿಸಿಕೊಳ್ಳೋಕೆ ಮುಂಚೆ....ಒಂದು ಅಸ್ತಿಭಾರ ಬೇಕು.... ಪ್ರಶ್ನೆ 

ಕೇಳೋನೂ ಉತ್ತರ ಹೇಳೋನೂ....ಆಸ್ತಿಕರಾಗಿರಬೇಕು. 

 

ಶೆಟ್ಟ್ರು... - ಯೇಮಿ ? ಆಸ್ತಿ ಉಂಡವಲ್ನಾ? ಅಯ್ತೆ ಪೇದನಾಳ್ಳ ಗತಿ 

ಯೇಮಿ ? ಮಂಚಿ ಲೆಕ್ಕಾಚಾರನಯ್ಯಾ ನೀದಿ ! ಆಸ್ತಿ ಉಂಡೇವಾಳ್ಳು ದಾನ್ನಿ 

----------------------------------------

ಶಾಮಣ್ಣನಕಥೆ ೩೭ 

 

ಅನುಭವಿಂಚೇ ಗಲಾಟ್ಲೋ ಉಂಡುಗ....ಪ್ಯಾದವಾಳ್ಳ ಗತಿಯೇಮಿ ಅಂಟಿ. 

ಪೇದವಾಳ್ಳಕೇ ಕದಾ ಪುಟ್ಟೇದಿ ಪರಮಾತ್ಮುಡು ಯುಗಯುಗಾನ್ಕೂ ? 


ಭಟ್ಟ್ರು-ಎಗರಾಡ್ಬೇಡಿ ಶೆಟ್ರೆ, ಶಾಂತಿ ತಗೊಳ್ಳಿ, ಆಸ್ತಿಕರು ಅಂದರೆ 

ಹಣವಂತರಲ್ಲ. ' ಆಸ್ತಿ' ಅಂದ್ರೆ.. 


ಶೆಟ್ಟ್ರು-ಗೊತ್ತು ಬಾಗ್ಗೊತ್ತು ಎನಕಲು ! ಅಯ್ತೆ ಎಮಕಲು 

ಎಕ್ಕಡಯ್ಯ ಒಚ್ಛೆ ಇಕ್ಕಡ ? 


ಶಾಮಣ್ಣ - ಎಮಕೆಗಲ್ರೀ! ಭಟ್ರು ಹೇಳೋದ್ನ ಕೇಳಿ, ಕಿವಿಗೊಟ್ಟು 

ಕೇಳಿ. 


ಭಟ್ಟ್ರು. 'ಆಸ್ತಿ' ಅಂದ್ರೆ ದೇವ್ರಂತ ಒಂದು ಪ್ರಾಣಿಯಿಧೆ ಅಂತ 

ನಂಬೋವೆಲ್ಲಾ ಆಸ್ತಿಕರು ! “ ನನಗೆ ದುಡ್ಡು ಕಾಸು ಗದ್ದೆ ತೋಟ ಬೇಕಾ 

ದಷ್ಟಿವೆ! ನನಗ್ಯಾರಿಂದ್ದೂ ಏನೂ ಆಗಬೇಕಾದ್ದಿಲ್ಲಾ ”೦ತ ಉಬ್ಬಿ ! ಐಹಿಕ 

ನಶ್ವರ ...ಈ ಹೊತ್ತಿದ್ದು, ನಾಳೆ ಐಶ್ವರ್ಯವನ್ನ ಬಿಟ್ಟು ನಾನೋ ನನ್ನ ಬಿಟ್ಟು  

ಐಶ್ವರ್ಯಾನೋ ಹೋಗ್ಗೇಕಾಗುತ್ತೆ” ಎಂಬೋದ್ನ ... ತಿಳಿದೇನೂ .. ತನ್ನೂ 

ತನ್ಸುಖಕ್ಕೆ ಒದಗಿರೊ ಐಶ್ವರ್ಯಾನ್ನೂ ಸೃಷ್ಟಿಸಿ ಸುಡೋ ದೇವ್ರು ಒಬ್ನಿದಾನೆ 

ಅಂಬೋದ್ನ ನಂಬ್ದೇನೂ ಇರೋವ್ರೆಲ್ಲಾ ನಾಸ್ತಿಕರು. ಈಗ “ ಅಲ್ಲಾ” ನಲ್ಲಿ 

ನಂಬಿಕೆಯಿರೋ ಸಾಬರು, ಪರಮಾತ್ಮನಲ್ಲಿ ನಂಬಿರೋ ನಾವು, ಯೆಲ್ಲ 

ಆಸ್ತಿಕರು. ನಾಸ್ತಿಕರ ಮಾತು ನಮಗ್ಯಾಕೆ. 


ಸಾಬ್ರು-ಮಾಫ್ ಕರೀಯೆ ನಾವು ಎಲ್ಲ ಒಂದೇ ಅಲ್ಲ. ನಮ್ಮ 

ಅಲ್ಲಾಗೂ ನಿಮ್ಮ ರಾಮ, ಕಿಷ್ಣಾಗೇನೂ ಫರಕ್ ಇದ್ದಾರೆ. ನಮ್ಮ 

ಅಲ್ಲಾಗೆ ಜಿಸಂ ಇಲ್ಲ. ಮೈಯಿ ಕಣ್ಣು ಮೂಗು ಇಲ್ಲ, ನಿಮ್ರಾಮ ಕಿಷನ್ಗೆ 

ನಾಲ್ಕು ಕಾಲು ಎಂಟುತಲೆ ಇಪ್ಪತ್ತು ಕೈ . .. ... ಅಯ್ಸ ಖೇಡೇವಾಲೂಂಕು 

ಡಾರ್ರಾನೇಕೇಲಿಯೆ....... ಬೊಮ್ಮ್ನೋಂಕೆ ಹಿಕ್ಮತ್... 


ಭಟ್ಕು.... ಅನ್ಯಾಯ ಸಾಬ್ರೆ ! ನೀವ್ಹೇದು ಶುದ್ಧ ಅನಾಯ. 

ನಿಮ್ದೇವರ ಹಾಗೇನೇನೇ ನಮ್ಮ ದೇವ್ರೂವೇ, ಕೈಯಿಲ್ಲ ಕಣ್ಣಿಲ ಕಾಲಿಲ್ಲ .. 

-------------------------------------

೩೮ ತಾವರೆಕೆಗೆ  


ಕೆಟ್ಟ್ರು....ಅದೆಟ್ಲಯ್ಯಾ ? ಸಾಬುಲು ಚೆಪ್ಪೇದಿ ಸರಿಕದಾ. ಬ್ರಹ್ಮುಣಿಕಿ 

ನಾಲುಗು ತಲಕಾಯಲು ಲೇವಾ ? ವಿಷ್ಣುಡಿಕಿ ನಾಲುಗು ಚೆಯ್ಯಲು ಕಾದಾ ? 

ರಾವಣುಡಿಕಿ ಪದಿ.... ಉಂಡ್ನಿ ; ವಾಡು ರಾಕ್ಷಸುಡು ..... ....ಕುಮಾರುನಿಕಿ.... 

ಸಾಬ್ಲೂ ಮೀ ಸಹವಾಸಮುಲೋ ಮನದೇವತುಲಪೈನ ಮರ್ಯಾದನೇ 

ಪೋತುಂದಿ.... ಕೊಮಾರಸ್ವಾಮಿ ದೇವಡುಗಾರಿಕಿ ಆರು ತಲಕಾಯಿ - ವದನ 

ಮುಲು ಕಾದಾ ? ಇದಂತ ಮಮ್ಮಲ್ನಿ ಬೆದರಿಚ್ಚೇದಾನ್ಕೇ ಕಾದಾ .... 

ಏರ್ಪಾಡಯ್ಯಂದಿ ? 


ಭಟ್ಟ್ರು ....ಅದೇ ಸೂಕ್ಷ್ಮ ಶೆಟ್ರೆ ನಮ್ಮ್ಸೂಕ್ಷ್ಮ ಏರ್ಪಾಡೂಂದ್ರಲ್ಲ ... 

ಅದೇ ಅಸ್ತಿಭಾರ ನಮ್ಮ ಮುವತ್ತಮೂರುಕೋಟಿ ದೇವತೆಗಳಲ್ಲಿ ಒಬ್ಬೊಬ್ಬ 

ರಿಗೂ ಮೈಯ್ಯ ಕಣ್ಣು ಕಾಲು ಈ ಬಾಬುಗಳೆಲ್ಲ ಸಿಡುಬಿಗೆ ಕಾಳಿ, ದುಡ್ಡಿಗೆ 

ಲಕ್ಷ್ಮಿ, ಪ್ಯಾಸು ಮಾಡೋಕೆ ಸರಸ್ವತಿ, ಭಾವಿ ನೀರು ಬಿತ್ತಿದ್ರೆ ಗಂಗಾಧರ, 

ಹೀಗೆ ಡಿಪಾರ್ಟ್‌ಮೆಂಟ್ ಡ್ಯೂಟಿ ಹೇರ್ಸಿದ್ದೆಲ್ಲಾ ಏರ್ಪಾಟು ಆದ್ರೂನೂವೆ... 

ಈ ಮನುಷ್ಯ ರೂಪ ಧರಿಸಿರೋ ದೇವತೆಗಳಿಗೆ ಮನುಷ್ಯನೇ ಹುಟ್ಟೋಕೆ 

ಮುಂಚೆ ನೀವು ಹೇಳಿದ ವಿಕಾರ ಆಕಾರಗ್ಳು ಇಲ್ಲ. ದೊಡ್ಡ ದೊಡ್ಡ ಪರ್ವತ 

ಗಳ ಸೃಷ್ಟಿಸಿದ ದೇವ್ರು ಮೈಲುದ್ದ ಕೈಕಾಲು ಇಟ್ಕೊಂಡ ಧಾಂಡಿಗನೂ ಅಲ್ಲ... 

ಚೀಮೆ ಚಿಗಟಾನ ಸೃಷ್ಟಿಸಿದ ಅದೇ ದೇವ್ರು ಕ್ರಿಮೀನೂ ಅಲ್ಲ. ಮನುಷ್ಯನಿಗೆ 

ಆಸೆಯೆಂಬೋದು ತಜ್ಜನ್ಮ. ತಪ್ಪು ನೈವೇನೂ -ಅವನ ಜನ್ಮಕ್ಕೆ ಕಾರಣ ! 

ಈ ಆಶೇನ ತೀರಿಸಿದ ಪರಮಾತ್ಮನ ತನ್ನಿಷ್ಟದ ಪ್ರಕಾರ ತನ್ನಲ್ಲಿ ತಾನೆ 

ನಿರೂಪಿಕೊಳ್ತಾನೆ. ವ್ಯಕ್ತಿ ತನಗೆ ಬಣ್ಣ ಬಳಿಯೋಕೋ ಕಲ್ಲು ಕೆತ್ತೊಕೋ 

ಬಾಯಿಂದ ಹೇಳೋಕೋ ಹಾಡೋಕೋ ತಿಳಿದ ಪ್ರಕಾರ ಒಂದು ಚಿತ್ರ 

ಒಂದು ಪ್ರತಿಮೆ ಒಂದು ಭಾಷಣ ಒಂದು ಗೀತೆ ಇವುಗಳಿಂದ ಚಿತ್ರಿಸ್ಕೊಳ್ತಾನೆ 

ತನ್ನ ಧೈಯದ ಜ್ಞಾಪಕಕ್ಕೆ, ಸಾಬ್ರು ಅಲ್ಲಾಗೆ ರೂಪವಿಲ್ಲಾಂತ ಎಷ್ಟು 

ವಾದಿಸಿದ್ರೂ ... ಕಣ್ಮುಕ್ಕೊಂಡು ಅಲ್ಲಾನ ಅವರು ಧ್ಯಾನಿಸಿದ್ರೆ ಮುಖಮೋರೆ 

ಯಿಲ್ದಿದ್ರೂ.... ಒಂದು ದೊಡ್ಡ ಬೆಳಕಿನ ಹಾಗಾದ್ರೂ ಕಂಡೇ ಬರುತ್ತೆ ಅವರು 

ಮುಚ್ಚಿದ ಕಣ್ಣಿಗೆ. ಆದರೆ ಮಕ್ಕಳು ಬೆದರಿದ್ರೆ 'ಅಪ್ಪಾ !' ' ಅಮ್ಮಾ! '೦ತ 

ತಂದೆ ತಾಯಿಗ್ಳ ಹತ್ತಿರ ಓಡಿಬಂದ ಹಾಗಾಗ್ಲಿ ತನ್ಮಗೂಂತ ಆಡಿಸ್ತಿದ್ದ ಗೊಂಬೆ 

------------------------------------------

ಶಾಮಣ್ಣನ ಕಥೆ ೩೯ 


ಶಾಮಣ್ಣನ ಕಥೆ 

ಮುರಿದ್ರೆ - 'ಅಮ್ಮಾ! ಮುರಿದ ಗೊಂಬೇನ ಸರಿಮಾಡ್ಕೊಡು' ಅಂತ ತಾಯಿ 

ಹತ್ತ್ರ ಓಡ್ಬಂದ ಹಾಗೆ.... ಈ ಹೊತ್ತು ಮಗು ಸಿಡುಬೆದ್ದು ನರಳೋದನ್ನ 

ನೋಡಿ...." ಅಮ್ಮಾ! ಮಹಾಕಾಳಿ! ... .....ನನಗಿರೋದು ಒಂದು ಕುಪ್ಪಸದ 

ಖಣ ನನ್ನ ಕೈಲಾಗೋ ಅಲಂಕಾರ ಇಷ್ಟೆ. ಇಷ್ಟ್ರಲ್ಲೇ ಸಂತೋಷಪಟ್ಟು 

ನನ್ನ ಮಗೂನ ಸರಿಮಾಡ್ಕೊಡೂ'ಂತ ಯಾವ್ಹೆಂಗ್ಸೋ ಈ ಹೊತ್ತಿನಲಂಕಾರ 

ಅಮ್ಮನಿಗೆ ಮಾಡಿ ನೋಡಿದ್ರಲ್ಲಿ ಅರ್ಥವಿಲ್ಲ, ನಾಯವಿಲ್ಲ, ಸಾಬ್ರೆ....ಆದ್ರೂ 

ನಂಬಿಕೆ ಯಿದೆ. ಆಶೆ ಇದೆ. ಮಮತೆ ಇದೆ. ನೀನು ಧ್ಯಾನಿಸೋ ಅಲ್ಲಾಗೆ 

ಕೈಕಾಲಿಲ್ಸಿದ್ರೂನೂವೆ....ಆತ ರಹಂ ಅಂತೀರಲ್ಲ, ಆ ಕನಿಕರ ಮಮತೆ, ಆತ 

ಇಟ್ಟಿರೊ ನಿಮಗೆ ಕೈಕಾಲಿಧೆ, ಅಲ್ವೇ ? ಕಣ್ಣುಗಳ, ಇವೇ ಅಲ್ವೇ ? ಹೀಗೇ 

ಸಾಬ್ರೇ ತನಗಿಷ್ಟವಿದ್ಧ ಪದಾರ್ಥವನ್ನು ತನ್ನಿಷ್ಟದ ಪ್ರಕಾರೇನೆ ರಚಿಸ್ಕೋಳ್ಳೋ 

ಅಭ್ಯಾಸ ಮುನುಷ್ಯನಿಗೆ ತತ್ಸ್ವಭಾವ. ಆದ್ದರಿಂದ ಪ್ರತಿಮೆಗಳು ಬರೀಕಲ್ಲು 

ಮಣ್ಣಾದ್ರೂನೂವೆ ಅವುಗಳಿಗಿರೋ ಯೋಗ್ಯತೆ ಅವುಗಳ್ನ ಪೂಜೆಮಾಡೋ  

ಭಕ್ತನ ಯೋಗ್ಯತೆನೇ ಅಲ್ದೆ.... ಬರೀ ಕಲ್ಲಿಗೆ ನಮಗಿಲ್ಲದ ಬುದ್ಧೀನೂ, 

ಶಕ್ತೀನೂ, ಏನೂ ಇಲ್ಲ. 


ಶೆಟ್ಟ್ರು.. ಅಯ್ತೆ ಯೇಮಿ, ದೇವುಂಡ್ಲಂತ.... ಮೇಮ್ಮೇಮೇ ಚೇಸ್ಕೋನಿಂ 

ದೇವುಂಡ್ಲಾ, ಏಂ ಬೋರಣ್ಣಾ ಅಂತಾ ವಿನಿ ಊರ್ಕುಂಡಾವೇ ? 


ಬೋರಣ್ಣ-- ಅಲ್ಲ ಸೆಟ್ಟಿ ಗುಡಿ ಮನಸರೇ ಕಟ್ಟಿದ್ದು. ಯಿಗ್ರಾನೂ ಕಲ್ಲು 

ಕುಟಿಗ ಕಡೆದದ್ದು. ಆದ್ರೂನೂವೆ....ಕಡೆದ ಕಲ್ಗೊಂಬೇನ, ದೇವ್ರೂಂತ 

ಅತ್ತ್ಜನಗಳ ನಂಬ್ಕೆ ಮೇಲೆ ಇರೋದು ಜೀವಾಳ ! 


ಶಾಮಣ್ಣ -- -ಗುಡೀಂತ ಕಟ್ಟಿ ಒಂದು, ಪ್ರತಿಮೇನ ಸ್ಥಾಪ್ಸಿ ಸಾವಿರಾರುಜನ 

ಸಾವಿರಾರು ವರ್ಷಗಳಿ೦ದ ಆ ಪ್ರತಿಮೇನ ಪೂಜೆಮಾಡ್ತ ಬರ್ತಿರೋದ್ರ ಸರಿ 

ತಪ್ನ ವಾದಿಸ್ತಿದೀರಲ್ಲಾ ನೀವು. ಚಿಕ್ಕದೊಂದು ಚಾಮುಂಡೇಶ್ವರಿ ವಿಗ್ರಹ 

ಅತ್ಕಡೆ ಯಿತ್ತಡೆ ಬೆಳ್ಳೀಲಿ ಮಾಡಿದ ಗಣೇಶ ಪಾರ್ವತಿ ಈಶ್ವರ ರಾಮಕೃಷ್ಣರು 

ಕೆಳಗೆ ಲಕ್ಷ್ಮೀ ಸರಸ್ವತಿ ಇವೆಲ್ಲಕ್ಕೂ ಮೇಲೆ ಇಂಗ್ಲಿಷ್ ಮೋಜ ಹಾಕ್ಕೊಂದು 

ಬಣ್ಣದ ಕಾಲ್ಚೀಲ ಬಣ್ಣದ ಷರಟು ಬಣ್ಣದ ಅರ್ಧ ಸರಾಯಿ ತಲೆ ಕ್ರಾಪು 

---------------------------------------

೪೦ ತಾವರೆಕೆರೆ 


ಬಾಯಲ್ಲಿ ಒಂದು ಸಿಗರೇಟು ಇಟ್ಕುಂಡಿರೊ, ಒಬ್ಬ ಈ ಕಾಲದ ಮನುಷ್ಯನ 

ತಸ್ಬೀರ್ನ ನಾನು ಹೇಳಿದ ಪ್ರತಿಮೆಗಳ ಮೇಲೆ ತಗಲುಹಾಕಿ ಹಗಲೂ ರಾತ್ರಿ 

ಅಲ್ಲ್ದೆ ಒಂದೊಂದು ಪುಣ್ಯ ದಿವಸಾನೂ ಮೊದಲು ಆ ತಸ್ಬೀರಿಗೆ ಪೂಜೆ ಮಂಗ 

ಳಾರತಿಯಾಗಿ ಆ ಮೇಲೆನೇವೇ ಕೆಳಗಿರೋ ದೇವರುಗಳ್ಗೆ ಮರ್ಯಾದೆ 

ಈಗಿನವರ್ಗೂ ಆಗ್ತಿದೆ ; ನಮ್ನೆಂಟ್ರಲ್ಲಿ ಒಬ್ಬರ ಮನೇಲಿ, ಅಂದ್ರೆ ನಂಬೀರ 

ನೀವುಗ್ಳು ? 


ಶೆಟ್ಟು--ಯೋಮಿ ? ದೇವುಂದ್ಲು ಪ್ರತಿಮೆ ಪೆಟ್ಟಿ ದಾನ್ನ್ಲ ಪೈನ  ಮೋಜಾ 

ವೇಸ್ಕೋನಿ ಕ್ರಾಪು ಚೇಸ್ಕೋನಿನ ಮನುಷ್ಯನಿ ತಸ್ಬೀರಿನಿ ಪೂಜ ಚೇಸೇದಾ ? 

ಅದೀನೂ ಬ್ರಾಹ್ಮಣಲು ಇಂಟ್ಲೋನಾ ! ಪಾತಕಮಯ್ಯಾ, ಮಹಾಪಾತಕಮು ; 

ಕುಲಕುಲಮೇ ಕಾಲಿಪೋವನು. ಇಂಟಾಡಿದಿ ತಾಲಿ ತಾಲೀನೆ ಪೀಕಿಪೋವುನು. 


ಶಾಮಣ್ಣ .. ಅದೇ ನಂಬ್ಕೆ ಅನ್ನೋದು. ಈ ಮನೆ ಇಂಟಾಡಿದೀ 

ಅಂದ್ರಲ್ಲಾ ಆಕೆಗೆ ಇಷ್ಟು ದೇವರುಗಳು ಇದ್ರೂವೆ ತಾಲಿ ಕಿತ್ತ್ಹೋಗ್ತಿದ್ದ 

ಅಪಾಯಾನ ತಪ್ಸಿ ಮಾಂಗಲ್ಯ ರಕ್ಷಿಸಿದ ಅವನು, ಅವನ ರೂಪ ವೇಷ ಹೇಗಿದ್ರೂ 

ನೂವೆ ಸತ್ಯ ಸತ್ಯವಾನನ ಪ್ರಾಣಗಳು ತಿರುಗಿ ಕೊಟ್ಟ ಯಮನ ರೂಪ ಎಷ್ಟು ಘೋರವಾಗಿದ್ರೂ ಆತ್ನೇ ತನ್ನ ಸರ್ವ ಸ್ವಾಂತ ಸಾವಿತ್ರಿ ನಂಬಿದಹಾಗೆ.... ಈಕೇನೂ 

ಆ ತಸ್ಬೀರ್ನ ನಂಬ್ಕೆ ಯಿಟ್ಟಿರೋದು ಆಶ್ಚರ್ಯವೇ ? ತಪ್ಪೆ ? ಯೇನ್ಸಾಬ್ರೆ. 


ಖಾನ್ ಸಾಬ್ - ಯೇತೊ ಮೊಹಬತ್ ಕೀ ಬಾತ್ ಹೈ....ಉಲ್ 

ಸತ್ ಕೀ....ಭರವಸ್ ಕೀ ಬಾತ್ ಹೈ.... ಹೇಳಿ ಹೇಳಿ....ಕಾನಿ ಹೇಳಿ ! 


ಶೆಟ್ಟ್ರು-- ಕಥನಾ ?.... ಚಪ್ಪಂಡ.... ಯಮಧರ್ಮುಡು ಎಕ್ಕಡ ! ಮೀರು 

ಚಪ್ಪೆ ಕ್ರಾಪ್ ಚೇಸ್ಕೋನಿ ಮೋಜವೇಸ್ಕೋನಿ ಸಿಗರೇಟ್ ಕಾಲ್ಚೇ ಚಿನ್ನೋಡು 

ತಸ್ಪೀರು ಎಕ್ಕಡ....ವಾಣಿಕಿ ಪೂಜಾಂಟೆ ಯೇಮಿ....ನಾಕೇಮಿ ಮಂದಟ್ಕಾ 

ಲೇದು ! ಅಯ್ಯೋ ಚಪ್ಪಂಡ ! ಕಥ, ಒಕ್ಕೇಮಾಟ ! ನನ್ನ ಮೊನ್ನ 

ಐಕಟ್ಟು ರಕ್ತಂ ಕಾರ ದಯ್ಯಾಲು ಈ ಕಥಲೋ ಒಚ್ಛೇದೈತೆ .... ನಾಕೇಮಿ 

ಭಯಂ ಲೇದು.....ಅಯ್ತೇನೂ ನಿನ್ನ ರೆಯ್ಯಿ ಒಕ್ಕ ಕಲಗಂಟಿನಿ! ಗೊಂತ 

---------------------------------------------

ರಾಮಣ್ಣನ ಕಥೆ ೪೧ 

 

ಕೋಸ್ಕೋನಿ ರಕ್ತಮುಕಾರ್ತು ಗೆಜ್ಜಲು ಕಟ್ಟಿನ ಕಾಳ್ತೋ ಕುಲುಕ್ತಾ ನಾ ಬಾದ 

ಗಿಲ್ಲುಲೋ ಕುಲ್ಕೆ ಆದ್ದಿ ಸಾಬ್ಲು ಜನ ಚಪ್ಪಿನ ಗೂಬಪೈನ ನಿಲ್ಚ್ಕೊನಿ....ಮುದ್ದೂ 

ಕದ್ದೂ.....ಅನಿ ಪಲ್ಲವಿ ಪಾಡ್ತಾ ಒಕಗೋಸಾಯಿವೆನಕ * ನಿಧಿನಿಧಿ” ಅನಿ 

ತಾಳಂ ವೇಸ್ತ ಮಾಯಿಂಟಿಕೊಚ್ಚಿ.....ನಡು ರಾತ್ರಿಲೊ ' ಓಟ್ಲ್‌ ಪುಟ್ಟಮ್ಮ 

ಅಂಗಡಿನಿಂಚಿ ಮೆಂತ್ಯಾಲು ದೋಸ ಕೊತ್ಮಿರಿ ಚಟ್ನಿ ಇಪ್ಪೇ ತಪ್ಪಿಸ್ತಾವ, 

ಲೇಕಾಪೋತೆ ನೀ ಗೊಂತ ಪಿಸುಕುತ್ನಾ ?' ಅನಿ ನನ್ನು ದಬಾಯಿಂಚಿನ 

ಐಕಟ್ಟು ಕಲಲೋ ಚೂಸಿ....ಕಿರ್ಲಿ ಮಾಯಿಂಟಾಡಿದಿ, ಮಾಪಿಲ್ಲೋಡು..... 

ಬಳ್ಳಾರಿ ಬೋಯಿಲು ಅಂದ್ರೂ ಒಚ್ಚಿನಮೀಟ್ನ ನಾಕಿ ಗಾಬರಿ ಪೋಯ.... 

ಇಂಕಮೀಟ ಗುಡ್ಲೋ ದಯ್ಯಾಲ, ಕಥ ವಿನ್ರಾದು ಅನಿ ಮನಸು ಗಟ್ಚೇಸ್ಕೂಂಟ್ನಿ. 

ನೇಮೇಮಿ ಪಿರಕಿ ಕಾದು. ಆಯ್ತೇನೂ ನಡುರಾತ್ರೀಲೋ, ರಕ್ತಮು ಕಾರ್ತಾ 

ಮುದ್ದೂ ಕದ್ದೂ ಅನಿ ಗೂಬಪೈನ ಎಕ್ಕೋನಿ ವೆನಕೋಗ ಬೈರಾಗಿ ನಿಧಿನಿಧೀನಿ  

ತಾಳಮು ವೇಸ್ತಾ ನಿದ್ರಲೋ ಒಸ್ತ ಒಕ್ಕಾಡಿದಿ.... ಯಿನವು ಗುಂಡಿಗ ಉಂಡಿನ 

ಮೊಗವಾಡುಕೂ....? ಶಾಮಣ್ಣಗಾರು ಈ ಮೀ ಕಥಲೋ ದಯಾಲು 

ಗಿಯ್ಯಾಲು ಯೇೆಮನ... ? 


ಶಾನುಣ್ಣ -ಬೆದ್ರಬೇಡಿ ಶೆಟ್ರೆ. ದೆವ್ವ ಪಿಶಾಚಿ ಯೋನೂ. ಇಲ್ಲ 

ನನ್ಕಥೇಲಿ ಕೇಳಿ. 


ಶಾಮಣ್ಣನ ಕಥೆ 


ಬಹಳ ದಿನದ ಮಾತಲ್ಲ. ಈಗೀಗ ಐದು ವರ್ಷದ ಮಾತು ಕ್ಯಾತ್ಸಂದ್ರ 

ಅಂತ ಕೇಳಿರಬಹುದು. ತುಮಕೂರು ಡಿಸ್ಟ್ರಿಕ್ಟು. ಅಲ್ಲಿ ಕೊಟ್ಟೆ ನನ್ನ 

ತಂಗೀನ, ಆಸ್ತಿ ಪಾಸ್ತಿ ತಕ್ಕಮಟ್ಟಿಗೆ ಇಡಿ ಅಳಿಯನಿಗೆ ಒಬ್ಬನೇ ಮಗ 

ತಂದೆಯಿಲ್ಲ; ತಾಯಿ ಹೆಸರಲ್ಲಿ ತಕ್ಕಮಟ್ಟಿಗೆ ನಗದು ಇಟ್ಟ್ಬಿಟ್ಟು ಹೋದ 

ತಂದೆ, ಅಳಿಯನ ಚಿಕ್ಕಂದ್ನಲ್ಲಿ. ಸಂಬಂಧ ಒದಗಿದ್ದು ಬಲು ಅದೃಷ್ಟ ನನಗೂ 

ನನ್ತಂಗೀಗೂ. ಅಳಿಯ ಮೈಮುಖ ಬಣ್ಣ ಗುಣ ಅಚ್ಚ್ಕಟ್ಟು....ಅಲ್ದೆ ಮಗು 

ಹಾಗೆ ಸ್ವಭಾವ. ಇನ್ನು ತಾಯೀನೋ ಹೆಣ್ಣು ಹೆತ್ತೋಳಲ್ಲ....ಸೊಸೆ ಅಂದ್ರೆ 

ಪ್ರಾಣ .... ಮದುವೆ ಯಿರಲಿ, ಪ್ರಸವಿರಲಿ, ಅದಲ್ಲ ಕಥೆ. ತಂಗಿ ಆರು ತಿಂಗಳ 

---------------------------------------- 

೪೨ ತಾವರೆಕೆರೆ 


ಗರ್ಭಿಣಿ. ತವರು ಮನೆಗೆ ಪ್ರಸವಕ್ಕೆ ಕರೆತರೋಕೆ ಹೋಗಿದ್ವಿ ನಾನೂ 

ನಮ್ಮಮ್ಮ ಕ್ಯಾತ್ಸಂದ್ರಕ್ಕೆ. ಇಳಿದದಿನ ಸುಬ್ರಾಯನಷಷ್ಟಿ, ಮೊದಲೇ 

ಹೇಳಿದ್ದೇನೆ ಮನೆಮಠ ಹೊಲ ಗದ್ದೆ ತೋಟ ಮಗನಿಗಿದ್ರೂನೂವೆ....ನನ್ನ 

ತಂಗಿ ಅತ್ತೆಗೆ ನಗದು ಇಟ್ಟ್ಹೋಗಿದ್ದ ಗಂಡಾಂತ .... ದೇವ್ರು ದಿಂಡು, ವ್ರತ- 

ನಿಯಮ ಯಾತ್ರೆ ಇತ್ಯಾದಿಗ್ಳಲ್ಲಿ ನಂಬೈ ಆ ಚಿನ್ನದಂಥ ಹೆಂಗಸಿಗೆ, “ ಮಗನಿಗೆ 

ಬೇಕಾದಷ್ಟಿದೆ! ನಾನು ಇಡಬೇಕಾದ್ದೇನೂ ಇಲ್ಲ ! ಇವರಿಟ್ಟ ದ್ರವ್ಯಾನ 

ಸದುಪಯೋಗಮಾಡಿ .... ಇವರ್ನ ಸೇರೋ ಬಗೆ ಹುಡುಕ್ತೇನೆ ” ಅಂಬೊ 

ಅಭಿಪ್ರಾಯಾನ ಮುಂದಿಡ್ಕೊಂಡು ಕಾಶಿವಿಶ್ವೇಶ್ವರನ ದರ್ಶನವಾಯಿತು, ಕಂಚಿ 

ಕಾಮಾಕ್ಷಿ ದರ್ಶನವಾಯಿತು! ರಾಮೇಶ್ವರದಲ್ಲಿ ರಾಮಪ್ರತಿಷ್ಟಿಸಿದ ಸಹಸ್ರ 

ಲಿಂಗಕ್ಕೂ ಸಹಸ್ರ ರೂಪಾಯಿಗಳ ಅರ್ಚನೆ ಆಯಿತು. ಅಲ್ಲ್ದೆ ಮಧುರೆ, 

ದ್ವಾರಕಿ, ಹರಿದ್ವಾರ, ಗಯ ಈ ಬಾಬ್ತುಗಳೂ ಆಯ್ತು, ಇನ್ನಿದೆಲ್ಲಾ ಹೊತ್ತು 

ಚಿನ್ನದಲ್ಲಿ ನಾಗಸರ್ಪ ಮಾಡಿ ಬ್ರಾಹ್ಮಣನಿಗೆ ದಾನ ಮಾಡಿದ್ದಾಯಿತು. ನಾನು 

ಹೇಳಿದಹಾಗೆ, ನಾನೂ ನನ್ನಮ್ನು ನಮ್ಮ ತಂಗೀನ ಪ್ರಸವಕ್ಕೆ ಕರೆತರೋಕೆ 

ಹೋದದ್ದು. ಏತನ್ಮಧ್ಯೆ ಇನ್ನೊಂದು ಉಪಕಥೆ. ನನ್ನ ಹೆಸರು ಶಾಮಣ್ಣ. 

ಮೆಟ್ರಿಕ್ ಲೇರ್ನವರೆಗೂ ಹೈಸ್ಕೂಲ್ನಲ್ಲಿ ಓದುತ್ತಿದ್ದ ನಾನು ತಂದೆ ಕಣ್ಣು 

ಮುಚ್ಕ್ಚೋತ್ಲು ಸ್ಕೂಲುಬಿಟ್ಟು ನನ್ನ ಜೀವನೋಪಾಯಾನ ನೋಡ್ಕೋ 

ಳ್ಳೋಕೆ ಹಳ್ಳಿಗೆ ಹಿಂತಿರುಗಿ ಬಂದೆ. ಸ್ಕೂಲಿನಲ್ಲಿದ್ದಾಗ ನನ್ನ ಹೆಸರು .ಟಿ ಎ. 

ಶಾಮಣ್ಣ. ಟಿ. ತಾವರೆಕೆರೆ, ಎ. ನನ್ನ ತಂದೆ ಹೆಸ್ರು ಅಶ್ವತ್ಥ. ಸ್ಕೂಲಿನಲ್ಲಿ ನನ್ನ 

ಪಕ್ಕದಲ್ಲಿ ಇನ್ನೊಬ್ಬ ಶಾಮಣ್ಣ. ಅವನೂ ಟಿ, ನೆ ತರೀಕೆರೆ, ಮಲ್ನಾಡುಕಡೆ. 

ಭಾಗ್ಯವಂತರ ಹುಡುಗ ; ಕಾಫಿ ಎಸ್ಟೇಟು ಇತ್ಯಾದಿ. ಬಿ. ಎ. ನೂ ಪ್ಯಾಸ್ 

ಮಾಡಿ ಅಗ್ರಿಕಲ್ಬರ್‌ ಅಂತಾರಲ್ಲ ವ್ಯವಸಾಯದ ಇಲಾಖೆ, ಆ ಬಾಬತ್ ನಲ್ಲಿ 

ಕೆಲ್ಸ ಕಲ್ತ್ಕೊಂಡು ತಿರುಗಿ ಹಳ್ಳಿಗೆ ಬಂದು ಧಾನ್ಯ ಸಸ್ಯಾದಿಗುಳು ಕಾಫಿ ಉತ್ಪತ್ತಿ 

ಇತ್ಯಾದಿಗ್ಳು ತನಗೂ ತನ್ನ ಸುತ್ತಮುತ್ತ ಇರುವವರಿಗೂ ಒಂದಕ್ಕೆರಡು 

ಉತ್ಪತ್ತಿ ಮಾಡಿಸ್ತಾ ಇದಾನೆ. ಈಗ ತಹಲ್‌ವರಿಗೂ ಸ್ಕೂಲಿನಲ್ಲಿ ಇಬ್ರೂ 

ಶಾಮಿ, ಇಬ್ಬ್ರೂ ಹತ್ತತ್ತ್ರಲೇ ಕೂತ್ಕೊಳ್ಳೋದು, ಅಲ್ದೆ ಭಾಗ್ಯವಂತನ 

ಬಡಾಯಿ ಅವನಿಗಿಲ್ಲ. ಬಡತನದ ಬೆದರಿಕೆ ನನಗಿಲ್ಲ ಹೀಗೋಹಾಗೋ 

ನಮ್ಮಿಬ್ಬ್ರಿಗೂ ಅದು ಹೇಳೋಕೆ ಅಸಾಧ್ಯ ... ಅನ್ನೋನ್ಯ, ಸ್ನೇಹ ಅಂತ 

-------------------------------------- 

೪೩ ಶಾಮಣ್ಣನ ಕಥೆ 

 

ಅಂತೇನೇ ಹೊರ್ತು ಇವೆಲ್ಲಾನ್ನೂ ಮೀರಿಸಿದ ಒಂದು ಬಾಂಧವ್ಯ ನಮಗೆ. 

ಕಥೆ ಯಾಕೆ ಬೆಳಸಬೇಕು. ಮೆಟ್ರಿಕ್ ಲೇರ್ಷ ಮುಂಚೇನೇನೇ ಮನೆಗೆ ಬಂದು 

ಸೇರಿದೆ ನಾನು. ಶಾಮಿನೊ ಹಾಸನದಿಂದ ಬೆಂಗಳೂರು, ಬೆಂಗಳೂರಿಂದ 

ಮದರಾಸು. ಅಲ್ಲಿ ಬಿ.ಎ. ಆಗುತ್ತ್ಲೂ ಯಥಾಸ್ನಾನಂ ಪುನಃ ಬೆಂಗಳೂರು, 

ಹೆಬ್ಬಾಳ, ಆಮೇಲೆ ತನ್ನೂರು ತರೀಕೆರೆ. ಅವನಾಯಿತು ಅನನ ಕಾಫಿ 

ಎಸ್ಟೇಟು ಆಯಿತು. ಆದ್ರೂನೂವೇ ನೋಡಿ ! ಅನ್ನೋನ್ಯ ಸ್ನೇಹ ಇವುಗಳ್ನ 

ಮೀರಿಸಿದ್ದೇ ಬಾಂಧವ್ಯ. ನಮ್ಮ ಬಾಲ್ಯ ಸ್ನೇಹಕ್ಕೆ ಸೂಚನೆ ಹೇಳ್ತೇನೆ. ಆಗಿಂದ 

ತಿಂಗಳು ತಿಂಗಳೂ ಬಿಡದೆ ಕಾಗದಗಳು ಬದಲಾಯಿಸ್ಕೊಳ್ತಾ ಈಗಿನವರಿಗೂ 

ಬೆಳೆಸ್ತಿದೇವೆ. ಆದ್ರೆ ಈಗ ಹೇಳೋ ಕಥೆ ಈಗಿಂದೀಚಿನದು. ಕ್ಯಾತ್ಸಂದ್ರದಲ್ಲಿ 

ನಾನೂ ನಮ್ಮಮ್ಮ ಆರು ತಿಂಗಳು ಗರ್ಭಿಣಿಯಾದ ನನ್ನ ತಂಗೀನ ಪ್ರಸವಕ್ಕೆ 

ಕರೆತರೋಕೆ ಹೋದದ್ದು ಸುಬ್ರಾಯನಷಷ್ಠೀ ದಿನ, ಅಂತಲ್ವೇ ಪ್ರಾರಂಭಿಸಿದ್ದು 

ನನ್ನ ಕಥೆ ? 


ತಕ್ಕಮಟ್ಟಿಗೆ ದೊಡ್ಡ ಹಳ್ಳಿ ಕ್ಯಾತ್ಸಂದ್ರ, ಬೀಗ್ತಿಮನೆ ಊರಿಗೆಲ್ಲಾ 

ದೊಡ್ಡದು. ಅವತ್ತಿನ ಖರ್ಚು .... ಪೂಜೆ ಪುನಸ್ಕಾರ ಗೋದಾನ ಭೂರಿ  

ಸಂತರ್ಪಣೆ ಅಲ್ದೆ ಈ ಗಾಂಧಿ ಮಹಾತ್ಮರ ಗಲಾಟೇಲಿ ಹೊಲಗೇರಿ ಮಾದಿಗ 

ಕೇರಿ ಇಲ್ಲೆಲ್ಲಾ ಊಟ, ಅ ಊರ ಗುಡೀಲಿ ಅಭಿಷೇಕ, ಸಹಸ್ರಾರ್ಚನೆ, 

ಏತನ್ಮಧ್ಯೆ ಮನೇ ಪುರೋತನಿಗೆ ಸುಬ್ರಾಯನ ಸ್ವರ್ಣ ಪ್ರತಿಮೆ ದಾನ .... 

ಅಲ್ದೆ ಮುತೈದೆಯರಿಗೆ ಕಿರಿಗೆ ಕಣ ದಾನಗ್ಳು, ನಮ್ಮ ತಾಯಿಗೆ ನಾರ್ಮಡಿ, 

ನನಗೆ ಜರ್ತಾರಿ ಅಂಚು ಧೋತ್ರ, ನಲ್ಲಿ .... ಯಾಕೆ ಹೇಳ್ತೇನೆ ಅಂದ್ರೆ ೨ ಸಹಸ್ರ 

ಶ್ವೇತಗಳಾದ್ರೂ ಮುಟ್ಟಿರ್ಬೇಕು ಆ ಮುದುಕಿ ಕೈಯಿಂದ ಖರ್ಚು. ನಾನು 

ಹೇಳೋ ಕಥೆ ದಿನವೆಲ್ಲಾ ಆದ ಗಲಾಟ ವರ್ಣನೆ ಅಲ್ಲಾ; ಆ ದಿನ ರಾತ್ರಿ 

ಒಂಭತ್ತು ಘಟ ಸರಾಸರಿ ಪ್ರಾರಂಭವಾದದ್ದು .... ನಿಮ್ನಿಮ್ಮಲ್ಲಿ ಪೂಜೆಯ 

ತಪ್ಪು ನೆಪ್ಪು ವಾದದ ಮಧ್ಯೆ ನಾನು ನುಗ್ಗಿ ಹೇಳಿದ ತಸ್ಬೀರಿನ ಪೂಜೆಯ 

ಕಥೆಯ ಪ್ರಕರ್ಣ. ಹೇಳಿದ ಹಾಗೆ ಒಂಭತ್ತು ಘಂಟೆ ಸರಾಸರಿ. ಗಂಡಸರಿಗೆಲ್ಲಾ 

ಊಟ ಆಗ್ಹೋಗಿತ್ತು. ಮುಂದಿನ ಕೋಣೇಲಿ .... ಎಲೆಯೆಲ್ಲಾ ಎತ್ತಿಹಾಕಿ 

ಗೋಮು ಹಚ್ಚಿ ಕೈ ತೊಳಕೊಂಡು ಆಗ್ತಾನೆ ಹೆ೦ಗಸ್ರು ... ಪರಿಚಾರಕರಿಲ್ಲ, 

ಮನೆ, ಮನೇವು, ನೆಂಟ್ರು, ನೆರೆಹೊರೇವ್ರು .... ಹೆಂಗಸ್ರೇ ಕೆಲ್ಸ ; ಹೇಳಿದ 

-----------------------------------------

೪೪ ತಾವರೆಕೆರೆ


ಹಾಗೆ, ಗಂಡಸ್ರೂಟದ ಗಲಾಟೆಯೆಲ್ಲಾ ತೀರಿ ಆಗ್ತಾನೆ ತಮ್ಮ ಊಟಗಳ್ಗೆ 

ಏರ್ಪಾಡು ಹಿಂದಿನ ಅಂಗಳದಲ್ಲಿ ಮಾಡ್ತಿರೋ ಗಜಗುಜಿ. ಮಾವ ಅಂದ್ರೆ 

ನಾನು, ಅಳಿಯ, ಆತನ ಸೋದರಮಾವ, ಇನ್ನಿಬ್ಬರು ಮೂವರು ನೆಂಟ್ರು, 

ಜಗಲಿಗೆ ಬಂದು ಕೂತು ತಾಂಬೂಲ ಅಗೀತಿದ್ದೇವೆ. ಕಗ್ಗತ್ತ್ಲೆ. ಗುಡಿ ಶಿಖರದ 

ಮೇಲಿನ ಲಾಂದ್ರದ ಬೆಳಕು ಇದ್ದ ಕತ್ತ್ಲೇನ ಇನ್ನೂ ಕಪ್ಪಾಗಿ ತಿದ್‌ತಿದೆ. 

ಜಗಲಿ ಗೋಡೆ ಗೂಡ್ನಲ್ಲಿ ಇಟ್ಟಿದ್ದ ಒಂದು ಹಣತೆ ಬೆಳಕಿನಲ್ಲೇ ನಮ್ಮ ನಮ್ಮ 

ಸಂಭಾಷಣೆ, ಮೊದಲು ಮಾತು ಎತ್ತಿದ್ದು ಪುರೋಹಿತರು ; ಸುಬ್ರಾಯ್ನ ಷಷ್ಠಿ 

ವ್ರತಾ ಹೇಳಿ ಬಾಗಿನದನಮೇತ ಹೊರಟುಹೋದ ಕಥೆ. ಆಮೇಲೆ ಮಾತಿನ 

ಮೇಲೆ ಮಾತು ಬಂದು, ಕಂಡ ಹಾವೂ, ಕಾಣದ ಹಾವೂ, ಕಡಿದ ಹಾವೂ, 

ಕಡಿಯದ ಹಾವೂ, ಮಲಯಾಳೀ ಮಂತ್ರ, ಬೇವಿನ ಸೊಪ್ಪು ಬೀಸಿ ವಿಷ 

ಇಳಿಸೋದು, ಹೀಗೆ ತಾವುಗಳ ಕಥೇಗೆ ಪ್ರಾರಂಭ. ಏತನ್ಮಧ್ಯೆ ಒಬ್ಬ 

ಹುಡುಗ, ಬಲು ಚಟುವಟಿಕೆ, ದೂರದ ಸಂಬಂಧ ಅಳಿಯನಿಗೆ ; ಹೇಳಿದ...  

ಅವರ ಇಸ್ಕೂಲ್‌ನಲ್ಲಿ ಎರಡು ಮೂರು ದಿನಕ್ಕೆ ಹಿಂದೆ ಕ್ಲಾಸುಗ್ಳು ಜರಿಗ್ತಿರೋ 

ವಾಗ್ಲೇನೇವೇ ಒಂದು ನಾಗರ ಹಾವು ಕಂಡ್ಬಂದು ಹುಡುಗರು ಬೆದರಿ, 

ಎದುರು ಬಂಗ್ಲೇಲಿದ್ದ ಮಿಷನರಿ ದೊರೆ ಬಂದೂಕ್ ಸಮೇತ ಬಂದು ಆ ಹಾವ್ನ 

ಕೊಂದ ಅನ್ನುತ್ಲೂವೆ.... ' ಶಾಂತಂ ಪಾಪಂ ! ಶಾಂತಂ ಪಾಪು! ಕೃಷ್ಣ ಕೃಷ್ಣ!' 

ಅಂದ ನನ್ನ ಅಳಿಯನ ಸೋದರಮಾವ, 'ಯಾಕ್ರೀ' ಅಂದದ್ದಕ್ಕೆ.... 

' ಹಾವಾಗ್ಲಿ ಹಸುಮಗುವಾಗ್ಲೀ .... 'ಹಿಂಸೇ ಹಿಂಸೇನೆ' ಅಂದ ಆತ. ನನಗೆ 

ಶಾಮಿ ಜ್ಞಾಪಕ ಬಂತು. ಪಕಪಕನೆ ನಕ್ಕೆ. ' ಇದೇನ್ನಗೂ' ಂತ ಕೇಳಿದ್ದಕ್ಕೆ 

ನಾನ್ಹೇಳಿದ್ದು : “ ಹಿಂಸೆ ಅಂದ್ರಲ್ಲಾ, ಹಾವಿರಬೇಕಾದ್ದು ಅದರ ಹುತ್ತದಲ್ಲಿ. 

ತಿಳುವಳಿಕೆ ಅದಕ್ಕಿಲ್ಲದ ಪಕ್ಷಕ್ಕೆ ಹುತ್ತ ಬಿಟ್ಟು ಹೊರಕ್ಬಂದು ಹತ್ತು ನೂರು 

ಹುಡುಗ್ರು ಓಡಾಡೋ ಸ್ಕೂಲಿಗೆ ಬಂದು ವಿಷದ ಹಲ್ಲು ಇಟ್ಕೊಂಡು ಹೆದರ್ಸೊ 

ಪ್ರಾಣೀನ ಕೊಲ್ಲೋದು ಹಿಂಸೆ ಅಲ್ಲ. ಆದ್ರೆ ಅದರ ಜನ್ಮಕ್ಕೂ ಮೋಕ್ಷ. 

ಹುಡುಗರ ಹೆದರಿಕೆಗೂ ಮೋಕ್ಷ ಪಾಪ ಎಲ್ಲೀದು ? ” ಅಂದದ್ದಲ್ದೆ “ ಆ 

ಮಿಷನೆರಿ ದೊರೆಯೇನೊ ಬಂದೂಕಿನಿಂದ ನೋವಿಲ್ದೆ ಒಂದೇ ಗುಂಡಿನಲ್ಲಿ 

ಕೊಂದ ಆ ಹಾವ್ನ ! ನಮ್ಮ ಶಾಮೀಗಾನ ಇದ್ದಿದ್ದಿದ್ರೆ ಆ ಹಾವ್ನ ಹೇಗಾದ್ರು 

ಜೀವಸಮೇತ ಹಿಡ್ಡು ನರನರ ಕಿತ್ತು ಕೊನೆಗೂ ಕೊಲ್ಲೋಕೆ ಹಿಂಜರಿದು

-------------------------------------------- 

ಶಾಮಣ್ಣನ ಕಥೆ ೪೫

 

ಕೊಲ್ತಿದ್ದ, ಮುಖ್ಯ ನಮ್ಮ ಶಾಮೀಗೆ ನಾಗರಹಾವಿನ ಮೇಲಿರೋ ಸೇಡು 

ಈ ಮಿಷನರಿ ಸಾಬ್ಗೆ ಇಲ್ಲದಿದ್ದದ್ದು ಆ ಹಾವಿನ ಪುಣ್ಯ” ೦ತ ಹೇಳಿ ನಮ್ಮ 

ಶಾಮಿ ಚರಿತ್ರೆ ಹೇಳೋಕೆ ಪ್ರಾರಂಭಿಸ್ತಿದ್ದೆ. ಅಷ್ಟಲ್ಲೆ ಅಳಿಯ ದಿನವೆಲ್ಲಾ 

ಓಡಾಡಿ ದಣಿದು ಹೊಟ್ಟೆ ತುಂಬಾನು ತಿಂದು .... ಆಕಳಿಸೋ ಬಾಯಿಗೆ 

“ರಾಘವಾ ! ರಾಘವಾ ! ”೦ತ ಚಿಟಿಕಗಳು ಒಪ್ಪಿಸ್ತ.... ನೀವೆಲ್ಲ ಮಾತಾಡ್ಕೋ 

ಳ್ತಿರಿ, ನನಗೆ ನಿದ್ದೆ ಬರುತ್ತೆ, ಹೋಗಿ ಬಿದ್ಗೋತೇನೆ” ಅನ್ಕೊಂಡು ಒಳಕ್ಕೆ 

ಹೋದ. ನಾನೊ ಹಾವಿನ್ಮೇಲೆ ಸೇಡಿಟ್ಟಿರೋ ನಮ್ಮ ಶಾಮಿ ಯಾರು, ಏನು, 

ಎತ್ತ, ಅಂಬೋದ್ದೆಲ್ಲಾ ವಿವರಿಸ್ತಿದ್ದೇನೆ. ನಿಶ್ಯಬ್ದವಾಗಿ ತಿರಿಗಿ ತೆರಿಯ್ತು 

ಅಳಯ ಆಗ್ತಾನೆ ಮುಚ್ಕೊಂಡೋಗಿದ್ದ ಬೀದೀ ಬಾಗಿಲು! ತಿರುತ್ತೇನೆ! ನನ್ನ 

ತಂಗಿ ಬಾಯ್ಬಿಡ್ದೇನೆ ಬಲಗೈಯಿಂದ ಬಾ, ಬಾಂತ ಸೌಂಜ್ಞೆ ಮಾಡ್ತಿದಾಳೆ. 

ಅರ್ಥವಾಗದೆ ಜಗಲಿದ್ದೋರಿಗೆ “ ಬಂದೆ ” ೦ತ ಹೇಳಿ ಜಗಲಿ ಇಳಿದು 

ತೆಗೆದ ಬಾಗಿಲು ಹಾಸಿ ಒಳಗೆ ಹೋದ್ನೋ ಇಲ್ವೋ.... ನನ್ನಂಗಿ ಕುತ್ಗೇನ 

ಎರಡು ತೋಳುಗಳಿಂದ ಬಿಗಿದು, ಮುಖಾನ ನನ್ನೆದೇಮೇಲಿಟ್ಟು “ ಅಣ್ಣಾ ! 

ಬಂತಲ್ಲಾ ಕೇಡು ನನ್ನ ತಾಳೀಗೆ ಇನ್ನೇನ್ಗತಿ ! ” ಅನ್ನುತ್ತ ತನ್ನ ಭಾರಾನೆಲ್ಲಾ 

ನನ್ನ ಮೇಲೆ ಹಾಕಿ ಗೋಳಾಡ್ತಿದಾಳೆ ! ಒಂದೂ ಅರ್ಥವಾಗಲಿಲ್ಲ ನನಗೆ 

ಮೈಗೇನಾದ್ರು ಬಂದೆ .... ತಾಳೀಗಪಾಯ ಎಲ್ಲೀದು? ಒಂದೂ ತೋಚಲಿಲ್ಲ 

ಮೆಲ್ಲಗೆ ಅವಳ ತಲೆ ಸವರ್ತ “ ಇದೇನ್ಕೆಂಚು” .... ಅನ್ನತ್ಲುಮೆಲ್ಲಗಣ್ಣ 

ಮೆಲ್ಲಗೆ ಮಾತಾಡು ನಿನ್ನ ಧ್ವನಿಗಾನ ಎತ್ತಿದ್ಯೋ .... ನಾನು ಕೆಟ್ಟ ಹಾಗೆ ! ” 

ಎಂದು ಅಂದು ನನ್ನ ಎಳಕೊಂಡುಹೋಗಿ .... ಮೊದ್ದೇ ಹೇಳಿದ್ದಲ್ಲಾ ಮುಂದಿ 

ನ್ಕೋಣೆ ಗಂಡಸ್ರು ಊಟಮಾಡಿದ್ದು .... ಅಂತ ಅದ್ರ ಪಕ್ಕದಲ್ಲಿ ಒಂದು ಕೋಣೆ : ಅಲ್ಲಿಯೇ ನನ್ನ ತಂಗಿ ಮೆಲ್ಲಗೆ ಎಳಕೊಂಡು ಹೋಗಿ ಹೊಸಲಿಂದ ಹತ್ತ್ಹೆಜ್ಜೆ 

ಈಚೇನೆ ನಿಲ್ಲಿಸಿ “ ಅಲ್ನೋಡಣ್ಣ ! ಇನ್ನೇನ್ಗತಿ ! ನನ್ನ ಗತಿ ! ನನ್ನ ತಾಳಿ 

ಗತಿ ! ನನ್ನ ಹೊಟ್ಟೇಲಿರೋ ಮಗುವಿನ ಗತಿ ! ” ಅಂತ ಬಿಕ್ಕಿ ಬಿಕ್ಕಿ ಬರುವ 

ಅಳುವನ್ನು ನುಂಗುತ್ತಾ ಎರಡು ತೋಳಿಂದ್ಲೂ ನನ್ನ ಕುತ್ಗೇನ ಬಿಮ್ಮನೆ 

ಬಿಗಿದು ನಮ್ಮೇಲೆ ಬಿದ್ಗೊಂಡ ನನ್ತಂಗೀನ ಎಡಗೈಯಿಂದ ಹಿಡಕೊಂಡು 

ತಿರುಗ್ತೇನೆ ಅವಳು ತೋರಿಸಿದಕಡೆ ನೋಡೋಕೆ, ನನಗೀಗೂ ಆಶ್ಚರ್ಯ! 

ನಾನು ಆಗ ನೋಡಿದ್ನ ನೋಡುತ್ಲೂವೆ ನನ್ನ ಮೇಲೆ ಒರಕ್ಕೊಂಡಿದ್ದ ತಂಗಿ

----------------------------------------------------------------

೪೬ ತಾವರೆಕೆರೆ 

 

ಸಮೇತ ನಾನು ಹೇಗೆ ಮೂರ್ಛೆ ಬೀಳ್ದೆ ನೆಟ್ಕೊಡು ನಿಂತಿದ್ದೇಂಬೋದು 

ಈಗ್ಲೂ ನನಗಾಶ್ಚರ್ಯ! ಕೋಣೆ ಕತ್ಲೇಂತ್ಲೇ ಹೇಳ್ಬೇಕು! ಇರೋ ಬೆಳ್ಕು  ಪುಟ್ಟದೊಂದು ನೀರಾಂಜನ, ಎದರು ಗೋಡೇಲಿ ಚಿನ್ನದ ಚಿಕ್ಕದೊಂದು 

ಚಾಮುಂಡಿ ಅಕ್ಕ ಪಕ್ಕದಲ್ಲಿ ರಾಮ, ಕೃಷ್ಣ, ಪಾರ್ವತಿ ಪರಮೇಶ್ವರರು, ಕೆಳಗೆ ಸರಸ್ವತಿ ಲಕ್ಷ್ಮಿ, ಎಲ್ಲಾ ಬೆಳ್ಳಿ ! ಫಳಫಳಾಂತ ಪ್ರಜ್ವಲಿಸ್ತಿವೆ! ಇವುಗಳ ಕಡೆ 

ಅರ್ಧ ಕತ್ಲೇಲಿ ಬಿಡ್ಕೊಂಡಿದಾನೆ, ಅಳಿಯ, ನಿದ್ದೆ, ಸ್ವಲ್ಪ ಗೊರಕೆ. ಇವನ್ತ 

ಲೇಗೂ ಪ್ರತಿಮೆಗಳು ಹಾಕಿರೋ ಗೋಡೆಗೂ ಒಂದಡಿ ಕೂಡ ಇಲ್ಲ. ಆ ಒಂದಡೀಲೆಯಾದ್ರು ಎತ್ತೊಂದು ಹೆಡೇನ ಒಂದ್ಕರೀ ನಾಗ್ರ ಹಾವು ಹಿಂದಿರೊ ಗೋಡೆಗೂ ಮುಂದಿರೊ ಅಳಿಯನ ಮುಖಕ್ಕೂ ಆಡಿಸ್ತಿದೆ. ಅದ್ರ ಕಣುಗ್ಳು 

ಆ ಒಂದು ನೀಲಾಂಜನದ ಬೆಳಕಲ್ಲಿ .... ಚಾಮುಂಡಿ ಚಿನ್ನದ ಪ್ರತಿಮೇಗಿನ್ನ ಜಾಸ್ತಿ ಜ್ವಾಲೆ ಕಾರ್ತಿದೆ ! ನನ್ಗತಿಯೇನು ! ಹೆಣದ್ಹಾಗೆ ನನ್ಮೇಲೆ ಒರಗ್ಕೊಂ 

ಡಿರೋ ನನ್ನ ತಂಗಿ ಗತಿಯೇನು ! ಹೆಡೆ ತೂಗ್ತ ಇರೋ ಆ ನಾಗರಹಾವ್ಗೆ 

ಮುಖ ಬಿಚ್ಕೊಂಡು ಒಂದೂ ತಿಳಿಯದೆ ಮಗುವಿನ ಹಾಗೆ ನಿದ್ದೆ ಮಾಡ್ತಿದ್ದ 

ಅಳಿಯನ ಗತಿಯೇನು ? ಯಾವ ದೇವರ್ನ ಕೂಗೋದು ? ದೇವು ಗೆಲ್ಲಾ 

ಚಿನ್ನದಲ್ಲು ಬೆಳ್ಳೀಲೂ ಅಲ್ಲೇ ಇದಾರೆ .... ಆ ಹಾವಿನ ಪಕ್ಕದಲ್ಲೇ ! ಜಗ 

ಲೀಲೋ ಮಾತುಗಳ ಗಲಾಟೆ. ಹಿಂದಿನ ಹಜಾರ ಹೆಂಗಸ್ರ ಗಜಗುಜಿ. 

ಇಲ್ಲೋ ನಾನು ನನ್ತಂಗಿ, ನಮ್ಮೆದ್ರುಗೆ ಕೋಣೇಲಿ ಹೆಡೆಬೀಸ್ತಿರೋ ನಾಗ 

ಸರ್ಪ, ಅಳಿಯ. ಒಂದೂ ತೋಚ್ದೆ ನನ್ನ ಬೆರರ್ಕೇಲಿ .... ಆ ಹಾಳು 

ನೋಟಾನೂ ನೋಡ್ಲಾರ್ದೆ ಕಣ್ಣು ಮುಚೊಂಡು ನನ್ನ ತಂಗೀನ ತಬ್ಕೊಂಡೆ. 

ಎಷ್ಟು ನಿಮಿಷಗಳು, ಎಷ್ಟು ಘಳಿಗೆಗಳು, ಇಲ್ಲ ಎಷ್ಟು ವರುಷಗಳು ಹಾಗೆ ನಿಂತಿದ್ದೆವೋ ನಾನೂ ನನ್ನ ತಂಗೀನೂ, ಈಗೂ ನನಗೊತ್ತಿಲ್ಲ. ಒಂದು 

ಬೆಲ್ಲು ಅಲ್ದೆ “ ಶಾಮೀ ” ಶಾಮೀಂತ ನನ್ಹೆಸ್ರು ಬೀದಿಯಿಂದ ಯಾರ್ದೋ 

ಕೂಗು ಕೇಳ್ಬಂದು ಬಿಚ್ತೇನೆ ನನ್ಗಣ್ಣು, ಅದೇ ಸೀನು ಎದ್ರುಗೆ ! ಅದೇ ಕೋಣೆ. 

ಅದೇ ನೀರಾಂಜನದ ಬೆಳಕ್ನಲ್ಲಿ. ಅದೇ ಚಿನ್ನ ಬೆಳ್ಳಿ ಪ್ರತಿಮೆಗಳು, ಅದೇ 

ಹೆಡೆಯೆತ್ತಿದ ಸರ್ಪ, ಅದೇ ಅಳಿಯನ್ಮುಖ. ಆದೊಂದು ವ್ಯತ್ಯಾಸ. ಬೀದಿ 

ಯಿಂದ ಬೈಸ್ಕಲ್ ಘಂಟೆ ಬಾರಿಸ್ತ “ ಶಾಖಾ ಶಾಮಾಂತ ಕಿರು ಧ್ವನಿ 

ನಮ್ಕಾಮೀದು”.... ಅಂತ ತಿಳಯತ್ಲೂವೆ..... ಈ ಎದ್ದು ಕೋಣೇನೇ

-------------------------------------------------------------

ಶಾಮಣ್ಣನ ಕಥೆ ೪೭ 


ಮರ್ತು ಕೆಂಚನ ಅರ್ಧ ಎಳ್ಕೊಂಡು ಅರ್ಧ ಎತ್ಕೊಂದು ಬೀದಿ ಬಾಕಿಲು 

ಹೊಸಲು ಸೇರಿ “ ಶಾಮೀ ! ಶಾಮೀ ! ಇಲ್ಲೇ ಇಧೇನೆ ಮೆಲ್ಲಗೆ ಬಾ ! ಬೇಗ 

ಬಾ ! ” ಅಂದ ಜ್ಞಾಪಕ. ಅವನು ಈ ಕತ್ಲೇಲಿ ಒಂದು ಎಲೆಕ್ಟ್ರಿಕ್ ಟಾರ್ಚಿನ 

ಬೆಳಕನ್ನು ಬಾಕಲಿಗೆ ತಿರುಗಿಸಿ ನನ್ನ ಮುಖದಲ್ಲಿ ಕಂಡ ಹೆದರಿಕೇನೂ ನನ್ನ 

ಮೇಲೆ ಮೂರ್ಛ ಬಿದ್ದು ಒರಗಿದ್ದ ನನ್ನ ತಂಗೀನ್ನೂ ನೋಡಿ ನೆಟ್ಟಗೆ ಬಂದು 

“ ಏನು ಶಾಮೀ ಇದು ? ” ಅಂದದ್ದು ಜ್ಞಾಪಕ. “ ನಿಶ್ಯಬ್ದವಾಗಿ ಒಳಗ್ಬಾ ” 

ಅಂದು ಅವನ ಕೈ ಹಿಡ್ಕೊಂಡು ಒಳಗೆ ಕರೆದೆ. ಕೋಣೇಲಿ ಇರೋ ಸ್ಥಿತಿ 

ತೋರಿಸಿ.... - ನಮ್ಮಳಿಯ ಶಾಮಿ!' ಅನ್ನುತ್ಲೂವೆ .... ಅದೇನು ಗಂಡ್ಸು! 

ಒಂದು ಕ್ಷಣದಲ್ಲಿ ತಿಳುಕೊಂಡ ಸನ್ನಿವೇಶದ ಜೀವಾಳಾನ. ಟಾರ್ಚ್ನ 

ಆರಿಸ್ದ. ಹಿಂದಿನ ಬಾಕಿಲು ತೆಗೆದು “ ನಿನ್ನ ತಂಗೀನ ಹೆಂಗಸ್ರ ಹತ್ತಿರ ಒಪ್ಸಿ 

.... ಹೇಳೇ ಬಿಡು. ' ಹಾವು ' ! ನೀವೇನಾದ್ರು ಗಲಾಟೆ ಮಾಡ್ಡೆ ಇದ್ರೂ 

ಅಪಾಯವೇನೂ ಇಲ್ಲ. ನಿಮ್ಮಗಳ ಕಿರಾಟ ಕೇಳಿ ಹಾವು ರೇಗಿತೋ ಗಂಡಸ 

ರಿಗೆ ಹಾನಿ, ಅಂಬೋದ್ನ ಹೇಳ್ಬಿಟ್ಟು ಬೇಗ ಬಾ !” ಅಂದ. ಇವನು ಹೇಳಿದ್ನ 

ಬೀಗ್ ತಿಗೆ ಹೇಳಿ ತಂಗೀನೊಪ್ಸಿ ಬಂದೆ. ' ಹಿಂದಿನ ಬಾಕಿಲ ಹಾಕು' ಅಂದ 

ಶಾಮಿ. ' ಬೀದೀ ಬಾಕಿಲು ಹಾಕು ' ಅಂದ ಎರಡೂಬಿಗಿದೆ. ನಾವು ಊಟ 

ಮಾಡಿ ಗೋಡೇಗೇ ವಾಲಿಸಿದ ಮಣೆಗ್ನಲ್ಲಿ ಒಂದನ್ನೆತ್ಕೊಂಡು, ರಬ್ಬರ್ 

ಬೂಡ್ಸು ಹಾಕ್ಕೊಂಡಿದ್ದದ್ದು, ನಿಶ್ಯಬ್ದವಾಗಿ ಕೋಣೇನ ಸಮೀಪ್ಸಿ --- ಈಗ 

ನನ್ನೆದ್ರುಗೆ ಆಗ್ತಾ ಇರೋ ಹಾಗೆ ಇದೇ ಥಟ್ಟನೆ ಟಾರ್ಚಿನ ಸ್ವಿಚ್ ಮಾಡಿ 

ಮಣೇನ ಗುರಾಣಿ ಹಾಗೆ ಮುಂದಕ್ಕೆ ಹಿಡುಕೊಂಡು ಟಾರ್ಚಿನ ಬೆಳಕ್ನ 

ಹಾವಿನ ಮುಖಕ್ಕೆ ಹಿಡೀತ ' ಹುಸ್ ಹುಶ್ ' ಅನ್ನುತ್ಲೂವೆ ಶಾಮಿ, ನಿಂತಿ 

ದಾನೆ ಇವನು, ಸರಾಸರಿ ಇವನೆತ್ರ ಎದ್ಹಾಗಿತ್ತು ಆ ಹಾವು ! " ಫಟ್ ” ಅಂತ 

ಶಾಮೀ ಕಡೆ ಹೊಡೆದ ಜ್ಞಾಪಕ. ಆ ಪೆಟ್ಟು ಶಾಮೀ ಕೈಲಿದ್ದ ಮಣೆಗೆ ತಗು 

ಲಿದ್ದು ಜ್ಞಾಪಕ ! ಮತ್ತಿರುಗಿ ಹೊಡೆಯೋಕೆ ಆ ಹಾವು ಹೆಡೇನ ಹಿಂದಕ್ಕೆ 

ಬೀಸೋವಾಗ ತಾಕಿದ ಗೋಡೆ ಬಿಡೋಷ್ಟ್ರಲ್ಲೇ ಒಂದೇ ಹಾರು ಖಾಮೀ ಹಾರಿ 

ಆ ಗೋಡೆ ಸಮೇತ ಆ ಹಾವ್ನ ಮಣೆಯಿಂದ ಅದುಮ್‌ಕೊಂಡ, ಅರ್ಧಡಿ 

ಕೂಡ ಇಲ್ಲ ಮಣೇ ಮೇಲೆ ಹಾವಿನ ಹೆಡೆ. ಮಿಕ್ಕದ್ದೆಲ್ಲಾ ಅಮಕ್ಕೊಂಡಿದ್ದಾನೆ ಗೋಡೇಗೆ ಮಣೆಯಿಂದ ಶಾಮಿ, ಕೆಳಗೆ ಬಾಕಿ ಒದ್ದಾಡಿದೆ ಹಾವಿನ ಬಾಲ.

------------------------------------------------------------- 

೪೮ ತಾವರೆಕೆರೆ 


ಮಲಗಿದ್ದ ಅಳಿಯನ್ನ ಒಂದೇ ಒದೆ ಒದ್ದು ಎಬ್ಸಿ, ತಲೆ ತಿರುಗಿಸ್ದ, “ ಶಾಮೀ, ಎಳಕೊಂಡು ಹೋಗು ಇವನ್ನ ! ಹೊರಗ್ಬಿಟ್ಬಿಟ್ಟು ಮನೇಲಿರೋ ದೀಪಾನೆಲ್ಲಾ ತಂದ್ಬಿಡು, ಅಳಿಯಂದಿರ ಪ್ರಾಣಗಳ ಮೇಲೆ ಆಸೆ ಬಿದ್ದಿರೋ ಈ ಹಾವ್ಜಾತೀನ 

ಜೀವ ಸಹಿತ ಬಿಡಬಾರು. ಒಂದು ಗಳು ಒಂದ್ಹತ್ತಡಿ ನೂಲುಹಗ್ಗ ” ಅಂದ. 

ಬೆಚ್ಚಿದ್ದು ಎದ್ದ ಅಳಿಯ ಸುತ್ತಮುತ್ತ ನೋಡೋಕೆ ಮುಂಚೆ ಹೊರಗೆಳ 

ಕೊಂಡು ಹೋಗಿ ಜೀವ ಸಹಿತ ನನ್ನ ತಂಗೀ ಕಾಲಿಗೆ ಕೆಡವಿ, ಶಾಮೀ 

ಹೇಳಿದ ಹಾಗೆ ಎರಡು ಸೀಮೆಯೆಣ್ಣೆ ದೀಪಗ್ಳು, ನೂಲು ಹಗ್ಗ, ಒಂದು ಗಳು 

ತಂದಿಟ್ಟೆ. ಇನ್ನು ಆ ಹಾವ್ನ .... ಸುಮಾರು ಆರಡಿಯಾದ್ರೂ .... ಇದ್ದಿರ 

ಬೇಕು. ಗೋಡೇಗೆ ಮಣೇ ಸಮೇತ ಅದುಮಿಕೊಂಡಿದ್ದಾನೆ ಶಾಮಿ. ಈ 

ಗಳೂನ ಮಣೇಗೆ ಸರಿಯಾಗಿ ಮಧ್ಯದಲ್ಲಿಟ್ಟು ಆ ಹಾವೂ ಮಣೇನೂ 

ಗಳೂನ ಗೋಡೆಗೆ ಕಾಲಿಂದ ಅದುಮಿಕೊಂಡು ಎರಡುಕೈಯಿಂದ ನೂಲೇಣೀನ 

ಸುತ್ತ್ಹಾಕಿ ಸುತ್ತ್ಹಾಕೀ ಅದ್ಹೇಗೆ ಬಿಗಿದ್ನೋ .... ಎದ್ರುಗೇ ನಿಂತಿದ್ದ ನನಗೆ ಅರ್ಥವೇಆಗ್ಲಿಲ್ಲ. 'ಆ ಕೊನೇ ಹಿಡುಕೋ ಹುಷಾರೂ' ಂತ ಗಳುವಿನ ಒಂದು 

ಕೊನೆ ನನ್ನ ಕೈಲಿ ಕೊಟ್ಟದ್ದು ಜ್ಞಾಪಕ, ಇನ್ನೊಂದ್ ಕೊನೆ ಅವನೆತ್ಕೊಂ 

ಡದ್ದು ಜ್ಞಾಪಕ, ಮಣೇಗೂ ಗಳಗೂ ನೂಲೇಣಿ ಹಾಗೆ ಬಿಗಿದು ಒದ್ದಾ 

ಡ್ತಿರೋ ನಾಗರಹಾನ್ನ ಅವನಿಷ್ಟದ ಪ್ರಕಾರ ಹೊಡ್ಕೊಂಡ್ಹೋದ್ವಿ, ಹಿತ್ತಲ 

ತೋಟಕ್ಕೆ ಇಳಿಸಿದ್ವಿ. ಆಗ್ಲಾದ್ರೂ ಕಲ್ಲೊ ಮಣ್ಣೆನೋ ತಗೊಂಡು ಚಚ್ಚಿ 

ಕೊಲ್ಬಾರ್ದಾಗಿತ್ತೇ ಆ ಹಾವ್ನ ! ಉಹುಂ! ಶಾಮಿಯ 'ಸೇಡು'ತೀರ್ಬೆಕಲ್ಲ. 

ಜೋಬಿಂದ ಒಂದು ಪೆನ್‌ನೈಫ್ ತೆಗೆದು ಅಲ್ಲೇ ಇದ್ದ ಹುಣಸೇ ಮರದಲ್ಲಿ 

ನಾಲ್ಕಾರು ಛಡಿಗಳು ಕತ್ತರಿಸಿಕೊಂಡು ಮಣೇನ ನೆಲದ್ಕಡೆ ಕಟ್ಟಿದ. ಹಾವು 

ಮೇಲ್ಗಡೆ .... ಹೊಡೆದಾ ಹೊಡೆದಾ ಹೊಡೆದಾ ನೋಡೀ ಆ ಹಾವ್ನ ! ಆ 

ನಾಲ್ಕು ಛಡಿಗಳು, ಕಿತ್ತು ಕಡ್ಡಿಯಾಗೊವರೂ ಹೊಡೆದಾ ................ 

'ಸಾಯಿ ಸಾಯಿ .... ಆದ್ರೆ ನಮ್ಮನೇಲಿ ಈಗ್ಯೂ ನರುಳೋ ಹಾಗೆ ನೊಂದೂ 

ನೊಂದೂ ಸಾಯಿ ! ನೀನಲ್ವೇ ಕಡಿದಿದ್ದು ? ನೀನಲ್ದಿದ್ರೇನೂ ನಿಮ್ಮಪ್ಪ, 

ನಿಮ್ಮಣ್ಣ ನಿಮ್ಮನ್ನು ಕಡಿದಿರಬಹುದು. ನಿನ್ನೀ ಹಾಳು ಹಾವಿನ ಜಾತೀ 

ಜಾತೀನೆ ನಿರ್ಮೂಲವಾಗೋವರಿಗೂ ನನ್ನ ಮುಯ್ಯಿ ತೀರೋದಿಲ್ಲ” ಅಂತ 

ಆ ಹಾ ಹೊಡೆದೂ ಹೊಡೆದೂ, “ ಒಂದೆಂಟ್ಹತ್ತು ಸೌದೆ ಒಂದು ಸೀಸೆ 

--------------------------------------------------------------

ಶಾಮಣ್ಣನ ಕಥೆ ೪೯  


ಸೀಮೆಯೆಣ್ಣೆ ತಾ ”ಅಂದ. ಒಂದೂ ತೋಚ್ದೆ, ಅವನು ಕೇಳಿದ್ದ ತಂದಿಡುತ್ಲು 

ಮಣೇಗೆ ಕಟ್ಟಿ ಇವನ ಹೊಡೆತದಲ್ಲಿ ಒಂದೊಂದು ನಾನು ಕಿತ್ತು ರಕ್ತದಲ್ಲಿ 

ತೊಯ್ದ್ರೂ ಇನ್ನೂ ಬುಸುಗುತ್ತಿರೋ ಹಾವಿನ್ಮೇಲೆ ಸೌದೇನ ಪೇರ್ಸಿ ಸೀಮೆ 

ಯೆಣ್ಣೆನೂ ಸುರು ಜೋಬಿಂದ ಬೆಂಕಿಪೆಟ್ಟಿಗೆ ತೆಗೆದು ಕಡ್ಡಿಗೀಚಿ, ಸೌದೇ 

ಗಿಟ್ಟು, ಅದೇ ಉರೀಲಿ ಒಂದು ಸಿಗರೇಟ್ನ ಹತ್ತಿಸ್ಕೊಂಡು ಸೇದ್ದಾ ನಿಂತಿದಾನೆ 

ಶಾಮಿ. ಹಿಂದೆಲ್ಲ ಮನೆವ್ರು. ಒಂದಡೆ ಅಳಿಯನ್ನ ಅಪಾಯದಿಂದ ಹತ್ತಿದ 

ಬೆದರ್ಕೆ ಇನ್ನೂ ಹೋಗ್ಲಿಲ್ಲ. ಅವನ ಬದುಕಿ ಬಂದ ಸಂತೋಷ ಇನ್ನೂ 

ಹತ್ತಿಲ್ಲ ಮನಸ್ಗೆ. ಇನ್ನೊಂದು ಕಡೆ ಅಳಿಯನ್ನ ಬದುಕಿಸ್ದ ಶಾಮೀಮೇಲಿನ 

ಮಮತೆ. ಅವನು ಕೈಗೆ ಸಿಕ್ಕಿದ ಹಾವ್ಗೆ ಮಾಡ್ತಿರೋ ಚಿತ್ರ ಹಿಂಸೆಯ ಅಸಹ್ಯ 

ದಲ್ಲಿ ಕೊಚ್ಕೊಂಡೇ ಹೋಯ್ತು ! ಎಲ್ಲ ನೋಡ್ತಿದಾರೆ. ಬೀಗಿತಿ ಮಟ್ಟ್ಗೂ 

ಮುಂದಕ್ಕೆ ಬಂದು “ ಇದೇನ್ಮಗು ? ನಾವು ಇವತ್ತು ಇದ್ದ ವಿಪತ್ತಿನ ಪರಿಹರಿ 

ಸೋಕೆ ಪರಮಾತ್ಮನೇ ಕಳುಹಿಸಿದ್ದಿರಬೇಕು ನಿನ್ನ, ನಮ್ಮ ಪಿತೃಗಳಿಗೆ 

ಪಿಂಡಕ್ಕೆ ದಾರಿ ನನಗೊಬ್ನೇ ಮಗ, ಅವನ್ನೂ ಅಪಮೃತ್ಯು ಬಾಯಿಂದ 

ತಪ್ಪಿಸ್ದೆ. ನನ್ನ ಸೊಸೆ ಮಗಳಿಗಿಂತ ಜಾಸ್ತಿ ನನಗೆ, ನಿನ್ನ ಸ್ನೇಹಿತನ ತಂಗಿ! 

ಅವಳ ಮಾಂಗಲ್ಯಾನೂ ರಕ್ಷಿಸ್ದೆ. ಆದರೂ ಇದಕ್ಕೆಲ್ಲಾ ಕಾರಣ ಆ ಹಾವು : 

ಅರಿಯದ ಜಂತು. ಏನೋ ನಮ್ಮ ಭಕ್ತಿ ಸುಬ್ರಾಯನ ಷಷ್ಠಿ ದಿನ ಪರೀಕ್ಷೆ 

ಸೋಕೇ ಆ ಹಾವ್ನ ಕಳಿಸಿ, ರಕ್ಷಿಸೋಕೆ ನಿನ್ನೂ ಕಳುಹಿಸಿದ ದೇವ್ರು. 

ಈ ಅನ್ಯಾಯ ಹಿಂಸೇನ ಒಪ್ಪ್ಯಾನೇ ? ಹಾವಾಗ್ಲಿ ಹುಲಿಯಾಗ್ಲಿ .... ದುಷ್ಟ ಮೃಗ 

ಗಳ ಕೊಲ್ಲೋದು ಪಾಪವಲ್ಲ. ಜೀವಸಹಿತ ಹೀಗೆ ದಹಿಸೋ ದೇವ್ರೂ 

ಪ್ಪ್ಯಾನೇ ಮಗು ? ಅನ್ನುತ್ಲೂ ನಮ್ಮ ಶಾಮಿ ಕಣ್ಣುಗ್ಳು ಕಿಡಿ ಹಾರಿಸ್ತಾ 

“ ಈ ಹಿಂಸೆ ಒಪ್ಪ್ಯಾನೇ ಅಂತೀರಾ ದೇವ್ರು ? ಹಮ್ಮಯ್ಯ ! ಇದಕ್ಕಿಂತ 

ಅನ್ಯಾಯ ಹಿಂಸೆ ನನಗೂ ನನ್ನ ತಂಗಿಗೂ ನಮ್ಮನೇಗೆಲ್ಲಾ ತಂದಿಟ್ಟು 

ನಗ್ತಿದ್ದ ದೇವ್ರು ಈ ಹಿಂಸೆಗೇನೂ ಹೇಸೆ ಪಡೋಹಾಗಿಲ್ಲ! ” ಅಂತಾ ಶಾಮಿ 

ಎರಡು ಕೈಯಿಂದಲೂ ಮುಖವನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳ್ತ  ಕೊತ್ತೊಂಬಿಟ್ಟ. ಬೀಗ್ತಿ ಚಿನ್ನದಂಥ ಹೆಂಗ್ಸು, ಚಿನ್ನದಂಥ ಹೃದಯ, 

ಹೇಗಿದ್ರೂ ಹೊತ್ತ್ಹೊಟೈ ಹೆತ್ತ್ಹೊಟ್ಟೆ, ಧಾಂಡಿಗನಾದ ಗಂಡ್ಸು ನನಗೆ 

ತಿಳಿಯದ ವಿಷಯ ಎಷ್ಟು ಮಂದಟ್ಟಾಯಿತೋ ಕಾಣೆ ಆಕೆಯ ಮನಸ್ಸಿಗೆ ;

--------------------------------------------------------------- 

೫೦ ತಾವರೆಕೆರೆ 


ಶಾಮೀ ಹತ್ತಿರ ತಾನೂ ಕುಳಿತು, " ಮಗೂ, ನೀನೇನು ಮಾಡಿದ್ರೂ ನಾವು 

ಬೇಡ ಅನ್ನೊಹಾಗಿಲ್ಲ. ನೀನು ಯೂರೂಂಬೋದು ನನಗಿನ್ನೂ ಗೊತ್ತಿಲ್ಲ. 

ಆದ್ರೂ ಹೋಗೇಬಿಟ್ಟಿದ್ದ ನಮ್ಮ ಹುಡಗ ನಿನ್ನಿಂದ ಬದುಕಿದ. ನೀನು 

ಯಾರಾದ್ರೂ, ನಮ್ಮನೇಗೆ, ನನ್ನ ಭಾಗಕ್ಕೆ ದೇವು. ಆದರೂ ಈ ಹಾವಿನ 

ಮೇಲೆ ನಿನಗಿರೋ ಛಲಾನ ಗಮನಿಸಿದ್ರೆ .... ನಿಮ್ಮನೇಲಿ ಏನೋ ಅನಾಹುತ 

.... ಶಾಮಿ ಮುಖಾನ ಸವರ್ತ “ ಹೇಳು ಮಗು .... ದುಃಖಾಂಬೋದು 

ಮನಸ್ನಲ್ಲೇ ಇಟ್ಕೊಂಡ್ರೆ ಹೃದಯಾನ ತಿಂದುಬಿಡುತ್ತೆ. ಇಷ್ಟ್ರಿಗೆ ಹೇಳ್ಕೊಂಡ್ರೆ 

.... ಕಮ್ಮಿ ಆಗುತ್ತೆ ದುಃಖ ! ಹೇಳು ಮಗು ! ” ಅನ್ನುತ್ಲೂ ಶಾಮಿ 'ಹೇಳೋ ದೇನಿದೆಯಮ್ಮಾ! ನಾನೂ ನನ್ತಂಗಿ ಅವಳಿಜವ್ಳಿ. ನನ್ನ ಚಿಕ್ಕ ವಯಸ್ಸಿನಲ್ಲೇ 

ತಂದೇ ತಾಯಿನ ಕಳಕೊಂದ್ವಿ. ನಮ್ಮಿಬ್ಬರ ತಮ್ಮಕ್ಕಳಾಗೆ ಎತ್ತಿ ಆಡ್ಸಿ 

ಬೆಳಸಿ ಮುಂದಕ್ಕೆ ತಂದೊವ್ರು ನಮ್ಮ ಸೋದರತ್ತೆನೂ ಆಕೆ ಗಂಡ್ನೂವೆ. 

ನಮ್ತಂದೆ ಬಿಚ್ಚಿಟ್ಟು ಹೋದ ಭೂವಿ ಕಾಣೀನೂ ತಮ್ಮಾಸ್ತಿಗಿಂತ ಹುಷಾರಾಗಿ ನೋಡ್ಕೊಳ್ತ ತನಗೆ ಮಕ್ಕಳಿಲ್ದಿದ್ರೂವೆ ನನ್ನೂ ನನ್ನಂಗಿನ್ನೂ ತಮ್ಮಕ್ಕಳ 

ಹಾಗೆ ಬೆಳಸಿದ್ರೂಮ್ಮಾ, ನಾನು ನಿಮ್ಮ ಶಾಮಿ ಜೊತೇಲಿ ಓದ್ತಿದೆ 

ಹೈಸ್ಕೂಲ್ನಲ್ಲಿ. ಆಗ ವರ ನಿಶ್ಚಯ ಆದ್ದು ನನ್ತಂಗೀಗೆ. ಜಹಗೀರ್ದಾರ್ರ 

ಮಗ, ಮೈಯಿ ಮುಖ, ಬುದ್ದಿ, ಗುಣ ಚಿನ್ನದಹಾಗೆ. ನಮ್ಮ ಮಾವನ 

ಸಂತೋಷಕ್ಕೆ ಎಣೆಯೇ ಇಲ್ಲ. ಸಾವಿರಾರು ರೂಪಾಯಿ ಖರ್ಚು ಮದುವೇಗೆ. ಬೀಗರಿಗೂ ಬೀಗರಿಗೂ ಪೋಟಾಪೋಟಿ ಖರ್ಚು. ಮದುವೇನೂ ಆಯ್ತು. ನಾಗೋಲೀದಿನಾಮ್ಮಾ : ನಮ್ಮ ಬಂಗಲೇ ಎದುರು ಬಂಗಲೇಲಿ ವರ 

ಇಳದಿದ್ದದ್ದು. ಕೊನೇ ಉರಟಣೆ ಒಂದಾಗಬೇಕು ನಮ್ಮನೇಲೀಂತ ಆಸೆ 

ನಮ್ಮ ಸೋದರತ್ತೆಗೆ, ಸಾಯಂಕಾಲ ನಮ್ಮನೇ ಹೆಂಗಸೆಲ್ಲಾ ವಾದ್ಯದ್ಸಮೇತ 

ಕರೆತಂದು ಅಳಿಯನ್ನ, ನಮ್ಮ ಬಂಗ್ಲೆ ಸೇರಿ ಮೆಟ್ಟು ಮೇಲೆ ಕಾಲಿಡ್ತಿದಾನೆ 

ಅಳಿಯ “ ಹಯ್ಯೋ, ಎಡಗಾಲು ಮೊದಲು ಇಡಬೇಡಿ ” ಂತ ಒಬ್ಬ ಮುದಿ 

ಮುತ್ತೈದೆ ಹೇಳುತ್ತಿದ್ದ ಹಾಗೇನೇನೇ ಆ ಮೆಟ್ಲಂಚಿನ ಮೇಲೆ ಎಡಗಾಲಿಟ್ಟು 

ಬಿಟ್ಟ--ನನ್ನ ಭಾವ ಮೆಟ್ಲಂಚಿನ ಪಕ್ಕ ಗುಲಾಬಿ ಗಿಡಗಳ ಪೊದರು. 

ಅಳಿಯ ಕಾಲಿಟ್ಟಿದ್ದು ನೋಡಿದೆ. ಇಟ್ಟಕಾಲ್ನ ರೋಜಾ ಪೊದರಿಂದ ಒಂದು 

ಹಾವಿನ ಹೆಡೆ ಕುಕ್ಕಿ ಕಣ್ಮರೆಯಾದು ನೋಡ್ದೆ, ಹಯ್ಯೋ೦ತ ಬೀಳಿದ್ದ

------------------------------------------------------------- 

ಶಾಮಣ್ಣನ ಕಥೆ ೫೧ 


ಭಾವನ್ನ ಹಿಡುಕೊಂಡ್ವಿ, ಇನ್ನೇನು ಡಾಕ್ಟ್ರು ಬಂದದ್ದಾಯಿತು, ಮಂತ್ರವಾದಿ ಗಳಾಯ್ತು, ಏನಾದ್ರೆ ಏನು ? ಬೆಳಕು ಹರಿಯೋಕೆ ಮುಂಚೆ ತಾಳಿ ಕಟ್ಟೋವ್ಳು 

ನನ್ನಂಗಿ, ಐದು ದಿನದ ಹೆಂಡ್ತಿ, ಹುಡ್ಕಿದೀನಿ ಹುಡ್ತಿದೀನಿ ನೋಡೀಮ್ಮಾ 

ಆ ತೋಟವೆಲ್ಲಾ; ನನ್ನ ಅವಳಿಜವಳಿ ತಂಗಿ ಜನ್ಮಾನ್ನೇ ನುಂಗಿದ ಆ ಹಾವ್ನ; 

ಸಿಕ್ಕಿಲ್ಲ; ಈ ದುಃಖದಲ್ಲೇ ಕೊರಗೀ ಕೊರಗೀ ಸತ್ತು ನಮ್ಮ ಸೋದರತ್ತೇನೂ 

ಮಾವ್ನು ! ನಮಗಿನ್ಯಾರೂ ದಿಕ್ಕಿಲ್ಲ. ಧನ ಧಾನ್ಯ ಎಷ್ಟಿದ್ರೂನೂವೆ ನನಗೆ 

ನನ್ತಂಗಿ, ನನ್ನಂಗೀಗೆ ನಾನು ; ಅದೇಮ್ಮಾ ನಮ್ಮ ಭಾವನ್ನ ಕೊಂದ ಹಾವಿಗೆ 

ನಾವಾಗ್ಲಿ ನಮ್ಮ ಭಾವನಾಗ್ಲಿ ಒಂದು ಪಾಪವೂ ಮಾಡಲಿಲ್ಲವಲ್ಲವಾ? 

ಆದ್ರು..... ಏನೋಮ್ಮಾ ಆ ಹಾವು ಜಾತೀಂದ್ರೆ..... ಪ್ರಾಣಸಹಿತ ಬಿಡೋಕೆ 

ನನ್ನಿಂದ ಆಗದು ....” ! 


ಯಾಕೆ ಹೇಳ್ತೇನೆ ಗುಡಿಕಟ್ಟಿ, ವಿಗ್ರಹಾನ್ನ ಬ್ರಾಹ್ಮಣರು ಪ್ರತಿಷ್ಠಿಸಿ, 

ವರ್ಷ ವರ್ಷಾನೂ ಪೂಜೇ ಆಗ್ತಿರೋ ಕಲ್ಲುಗೊಂಬೇನ ಪೂಜೆ ಮಾಡೋದು 

ಸರಿಯೇ ತಪ್ಪೇಂತ ವಾದಿಸ್ತಿದೀರಲ್ಲ ನೀವೆಲ್ಲಾ! ಇಂಗ್ಲೀಷ್ ಮೋಜ ಹಾಕ್ಕೊಂಡು ಬಣ್ಣದ ಕಾಲ್ಚೀಲ, ಬಣ್ಣದ ಷರಟು, ಕ್ರಾಪ್ ತಲೆ, ಬಾಯಲ್ಲಿ ಸಿಗರೇಟು, - 

ನಮ್ಮ ಶಾಮಿ ಮದರಾಸ್‌ನಲ್ಲಿ ಫುಟ್ಬಾಲ್ ಆಡ್ತಿದ್ದಾಗ ತೆಗೆದು ನನಗೊಂದು 

ಕಾಪಿ ಕಳಿಸಿದ ಫೋಟೋ, ಅದ್ನ ಕಟ್ಟ್ಹಾಕ್ಸಿ ಅದೇ ಕೋಣೇಲಿ ಅದೇ 

ಚಿನ್ನ ಬೆಳ್ಳಿ ಚಾಮುಂಡಿ ಪ್ರಕೃತಿಗಳ ತಲೆ ಮೇಲೆ ತಗುಲ ಹಾಕಿದ ತಸ್ಬೀರ್ನ 

ನನ್ನ ತಂಗೀನೂ ಭಾವೂ ಪೂಜೆ ಮಾಡೋದು ತಪ್ಪೇ ನೆಪ್ಪೇಬೋದ್ನ 

ನಾನ್ನಿಷ್ಕರ್ಷಿಸಲಾರೆ. ಒಂದು ವೇಳೆ ನೀವುಗಳು ................! 


ಶೆಟ್ಟು-ಮಂಚಿ ಮಾಟಾಂಟೆ ! ತಪ್ಪೆಕ್ಕಡವಚ್ಚೆ ? ರಾಮುಡೇಮಿ, 

ಕೃಷ್ಣುಡೇಮಿ, ಪೆದ್ದ ಪೆದ್ದ ಯುಗಮುಲೋ ವಚ್ಚಿನ ಪೆದ್ದೌತಾರಮುಲು ಸೇದ 

ವಾಳ್ಳ ರಕ್ಷಣಾನಿಕಿ ಪರಮಾತ್ಮುಡು ಪೆದ್ದೌತಾರಮು ಎತ್ತಿನ ಐಕಟ್ಟು. ಈ ಚಿನ್ನ ಯುಗಯುಲೋ ಕಲಿಯುಗದಲೋ ಚಿನ್ನ ಚಿನ್ನ ಔತಾರವುಲು ಎನ್ನಿಯೋ 

ಎತ್ತುತಾಡು. ಮೋಜ ವೇಸ್ಕೊಂಟೆ ಯೇಮಿ, ಸಿಗರೇಟು ತಾಗ್ತೆ ಯೇಮಿ ? 

ಪದಿ ಜನಾಲ್ನಿ ಬದುಕಿಂಚ್ತೆ.... ಪರಮಾತ್ಮಡುನಿ ಔತಾರವು ರೂಪೂ ಎಟ್ಟುಂಟೆ 

ಯೇಮಿ ; ಪರಮಾತ್ಮುಡು ಎತ್ತಿನ ಪಂದಿರೂಪಮು ಎಟ್ಲುಂಡಿನ ಯೇಮಿ

-----------------------------------------------------------------

೫೨ ತಾವರೆಕೆರೆ 


ಭೂದೇವಿನಿ ಬದುಕಿಂಚ ಲೇದಾ ? ಈ ಕಲಿಯುಗಮುಲೋ ಚಿನ್ನ ಚಿನ್ನ 

ಔತಾರನ್ನು ಎನ್ನಿಯೋ ಎತ್ತುತಾನೇ ಉಂಟಾಡು ದೇವುಡು-ಲೇಕಪೋತೆ 

ವಾನ ಕೂರ್ಚೇದೇನ್ಕಿ ? ಎನಮು ಪೋತ ಸಲ್ಲಗ ಉಂಡೇದಾನ್ಕ ? ಕಾದು, ನ್ಯಾಲ 

ತಡ್ಚಿ ಪೈರು ಪಂಡಿ ಪದಿಜನಾಲ ಕಡುಪು ನಿಂತೇದಾನ್ಕಿ, ಪೆದ್ದ್ವಾಳ್ಳು .... 

ಮೀರು ಚೆಪ್ಪಿತ್ರೇ ಶಾಮಣ್ಣವಾಳ್ಳ ಕಥ .... ಅಟುವಂಟಿ ಪದಿ ಔತಾರಮುಲು 

ಇಪ್ಪುಡು ಕೂಡಾ ಉಂಡುಟ್ಲೇ ವಾನ ಕೂರ್ಚೇದಿ. ಗುಡ್ಲೋ ರಾಯ್ತೋ 

ಚೇಸ್ತೇ ಯೇಮೀ ಇಂಡ್ಲುಲೋ ತಸ್ಬೀರು ಪೆಟ್ಟ್ತೇಯೇಮಿ ....!? 


ಶಾಮಣ್ಣ (ಗುಡಿಯ ಬಾಕಿಲನ್ನು ಇಣಿಕಿ ಹೊರಗೆ ನೋಡಿ) ಇಕೋ 

ಶಾಮಿ ಬಂದ .... 


ಶೆಟ್ಟು-- ಇದೇಮಿದಿ ! ಈ ಎಲ್ಲಕಾಯಾ....? ಬೀ. ಯೆ. ಪ್ಯಾಸ್ಚೇಸಿ 

ಪಾಮುನಿ ಚಂಪಿಂದಿ ....!? 


ಶಾಮಣ್ಣ -- ಬೆಚ್ಚು ಬೀಳೋಡಿ ! ಇವನವನಲ್ಲ .... (ಘಟ್ಟಿಯಾಗಿ) 

ಮೆಲ್ಲಗೋ ಶಾಮಿ, ಮುರಿದ ಮೆಟ್ಲು .... ಜಾರಿಬಿದ್ದು ಮೊಣಕಾಲು ಮುರ 

ಕೊಂಡೀಯ ! ಮೆಲ್ಲಗೆ ಬಾ (ಎದ್ದು ನಿಂತು) ಈ ಶಾಮೀ ಆ ಶಾಮೀ ಅಲ್ಲ. 

ನನ್ನ ಸೋದರಳಿಯ. ನನ್ನ ತಂಗಿಯ ಮಗ ! ಆಗ ಗರ್ಭದಲ್ಲಿದ್ದ ! ಆ 

ಶಾಮೀ ಹಾಗೇ ಆಗ್ಬೇಕೂಂತ ಆಶೆ ಇಟ್ಕಂಡು ಶಾಮಿ ಹೆಸರ್ನ ನಮ್ಮ 

ಭಾವ್ನೂ ನನ್ತಂಗೀನೂ ಇವನಿಗಿಟ್ಟದ್ದು. ನಮ್ಮೂರಿಗೆ ಬಂದಿಧಾರೆ ಇಬ್ರೂ ! 

ಎಳೀಬೇಡ್ವೋ ! ಎಳೀಬೇಡೋ ! ಬಂದೆ! ಬರ್ತೀರಾ ? ಎಲ್ಲ್ರೂ 

ಹೋಗೋಣವೇ? 

---------- 

ಆರ್. ಕೃಷ್ಣ ಶೆಟ್ಟಿ, ಪ್ರಿಂಟರ್, ಶ್ರೀ ಶಾರದಾ ಎಲೆಕ್ಟಿಕ್ ಪ್ರೆಸ್, ಮೈಸೂರು,

================================================






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ