https://archive.org/details/dli.osmania.3637
TIGHT BINDING BOOK
UNIVERSAL LIBRARY
198678
LIBRARY UNIVERSAL
Kannada Research Lectures Series No. 6
ಕರ್ಣಾಟಕದ ಪೂರ್ವಚರಿತ್ರೆ
ವ್ಯಾಖ್ಯಾತರು ಡಾ. ಎಮ್. ಎಚ್. ಕೃಷ್ಣ,
'' ಎ೦. ಎ., ದಿ ಆಟ್. (ಲಂಡನ್) ಡಾಯರೆಕ್ಟರ, ಮೈಸೂರು ಪ್ರಾಚ್ಯ ಸಂಶೋಧನೆ, ಮೈಸೂರು
ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ
೧೯೫೩
ಪ್ರಕಾಶಕರು: ೬. ಎಸ್. ಪಂಚಣಿ, ಡಾಯರೆಕ್ಟರ್, ಕನ್ನಡ ರಿಸರ್ಚ ಇನ್ಸಿಟ್ಯೂಟ್,
ಧಾರವಾಡ
ಚಳಿ ೨ ರೂಪಾಯಿ
ಮುದ್ರಕರು: ಶೇ. ಗೋ, ಕುಲಕರ್ಣಿ ಸಾಧನ ಮುದ್ರಣಾಲಯ, ಧಾರವಾಡ
ಪ್ರಸ್ತಾವನೆ ನಮ್ಮ ಆಮಂತ್ರಣದ ಮೇರೆಗೆ ಮೈಸೂರ ಪ್ರಾಚ್ಯ ಸಂಶೋಧನ ಇಲಾಖೆಯ ಡಾಯರೆಕ್ಟರರಾದ ಡಾ|| ಎಮ್. ಎಚ್. ಕೃಷ್ಣ ಎಂ. ಎ. ಡಿ. ಲಿಟ್. (ಲಂಡನ್) ಅವರುಣ - ಕರ್ನಾಟಕದ ಪೂರ್ವ ಚರಿತ್ರೆ ' ಎಂಬ ವಿಷಯವಾಗಿ ಸಂಸ್ಥೆಯ ವಾರ್ಷಿಕ ಸಂಶೋಧನೋಪನ್ಯಾಸ ಮಾಲೆಯಲ್ಲಿ ೧೯೪೩ ನೆಯ ಇಸ್ವಿಯಲ್ಲಿ ಭಾಷಣ ಮಾಡಿದರು. ಅವರು ಆಗ ಕೊಟ್ಟ ಮೂರೂ ಉಪನ್ಯಾಸಗಳನ್ನು ಈ ಪುಸ್ತಿಕೆಯಲ್ಲಿ ಪ್ರಕಟಿಸಿದೆ.
ಮೊದಲನೆಯ ವ್ಯಾಖ್ಯಾನದಲ್ಲಿ ದಖನ ಕರ್ನಾಟಕದ ಭೌಗೋಲಿಕ ರಚನೆ, ಭಾರತ ಜನಾಂಗಗಳು ಎಂಬ ವಿಷಯಗಳು ಬಂದಿವೆ.
ಎರಡನೆಯ ಉಪನ್ಯಾಸದಲ್ಲಿ ಭಾರತದ ಭಾಷೆ, ಜನಾಂಗಗಳ ಸ೦ಬ೦ಧ. ಶಿಲಾಯುಗ-ಲೋಹಯುಗ ಮುಂತಾದವುಗಳ ಕಾಲಿನಿರ್ದೇಶ, ಕರ್ನಾಟಕದ ಪೂರ್ವ ಚರಿತ್ರೆಯ ನಿವೇಶನ ಇತ್ಯಾದಿ ವಿಚಾರಿಸಿದ್ದಾರೆ.
ಮೂರನೆಯ ವ್ಯಾಖ್ಯಾನದಲ್ಲಿ ವ್ಯಾಖ್ಯಾತರು ಸ್ವತಃ ನಡೆಸಿದ ಚಂದ್ರವಳ್ಳಿ ಯ ಭೂಶೋಧನೆಯನ್ನು ಕುರಿತು ವಿವರಿಸಿದ್ದಾರೆ. ಅವರು ಹೇಳಬೇಕಾದ ಸಂಗತಿ ಗಳನ್ನು ಸರಳಶೈಲಿಯಲ್ಲಿ ಇಲ್ಲಿ ಇಟ್ಟುದರಿಂದ ಪ್ರತ್ಯೇಕವಾಗಿ ಅವುಗಳ ವಿಷಯವಾಗಿ ಬರೆಯುವ ಕಾರಣವಿಲ್ಲ.
ಪ್ರಾಚ್ಯ ಸಂಶೋಧನೆಯಲ್ಲಿ ಕನ್ನಡದಲ್ಲಿ ಬರೆದ ಗ್ರಂಥಗಳೇ ಅಪರೂಪ. ಅದರಲ್ಲಿಯೂ ಪ್ರಾಗೈತಿಹಾಸಿಕ ನಿವೇಶನಗಳ ಉತ್ಪನ್ನಗಳಿ೦ದ ಬೆಳಕಿಗೆ ಬಂದ ವಿಷಯಗಳನ್ನು ತಿಳಕೊಳ್ಳಲು ಸಾಧನಗಳೂ ಇಲ್ಲ. ಈ ಸಂದರ್ಭದಲ್ಲಿ ಡಾ. ಕೃಷ್ಣ ಅವರ ಉಪನ್ಯಾಸಗಳು ಕರ್ನಾಟಕದ ಪೂರ್ವಚರಿತ್ರೆಯನ್ನು ತಿಳಿದುಕೊಳ್ಳಲು ಬಹಳ ಉಪಕಾರಕವಾಗುವವು. ಅವುಗಳ ಜೊತೆಗೆ ಮುಂಬಯಿ, ಮದಾಸ, ಹೈದರಾಬಾದ ರಾಜ್ಯಗಳ ಕರ್ನಾಟಕ ಭಾಗಗಳ ಭೂ ಪರಿಶೋಧನೆಯಿಂದ ತಿಳಿದ ವಿಷಯಗಳನ್ನು ಶೇಖರಿಸಿ ಇಡಿಯ ಕರ್ನಾಟಕದ ಪ್ರಾಕ್” ಚರಿತ್ರೆಯನ್ನು ಗೊತ್ತು ಮಾಡಿಕೊಳ್ಳುವದು ಹೆಚ್ಚು ಉಪಯುಕ್ತವಾಗುವದು.
ಕನ್ನಡ ರಿಸರ್ಚ ಇನ್ಸಿಟ್ಯೂಟ ಆರ್.ಎಸ್.ಪಂಚಮುಖಿ
ಧಾರವಾಡ
ಡಾಯರೆಕ್ಟರ ಆಫ್ ಕನ್ನಡ ರಿಸರ್ಚ ೩------೧೯೫೩
೧ ಈ ಉಪನ್ಯಾಸಗಳು ಅಚ್ಚಾಗುವ ಪೂರ್ವದಲ್ಲಿಯೇ ಡಾ. ಕೃಷ್ಣ ಅವರು ಆಕಾಲಿಕವಾಗಿ ದಿವಂಗತರಾದರೆಂಬುದನ್ನು ತಿಳಿಸಲು ವಿಷಾದವೆನಿಸುತ್ತದೆ.
ವಿಷಯಗಳು
೧. ಕರ್ನಾಟಕದ ಜನತೆಯ ಪೂರ್ವ ಚರಿತ್ರೆ ೨. ಕರ್ನಾಟಕದ ಕುಶಲತೆಯ ಪೂರ್ವ ಚರಿತ್ರೆ ೩. ಚಂದ್ರವಳ್ಳಿಯ ಭೂಶೋಧನೆ
ಪುಟ. ೧-೧೨
>> ೧೩-೨೪ ೨, ೨೫-೩೪
೨೧
ಚಿತ್ರಗಳು ದಿ. ಡಾ. ಎಮ್. ಎಚ್. ಕೃಷ್ಣ. ೧. ಬ್ರಗಿರಿಯಲ್ಲಿಯ ಅಶೋಕನ ಧರ್ಮ ಶಾಸನ ಎದುರು ಪುಟ ೨. ಚಂದ್ರವಳ್ಳಿ ಯ ಅಗೆತ, ಚಿತ್ರದುರ್ಗ (ನಂ. ೧೬) ಆಗಿದ
ನಂತರ ಕಂಡುಬಂದ ಕಲ್ಲಿನ ಪೆಟ್ಟಿಗೆ,
ಅದೇ ಮಯೂರಶರ್ಮನ ಲೇಖವುಳ್ಳ ಬಂಡೆಗಲ್ಲು ೪. ಅದೇ ಚಂದ್ರವಳ್ಳಿಯಲ್ಲಿ ಕಲ್ಲುಬಂಡೆಯ ಮೇಲೆ ಕೊರೆಯಲ್ಪಟ್ಟ
ಮಯೂರಶರ್ಮನ ಶಾಸನ ೫. ಅದೇ ಅದೇ. ( ನಕ್ಷೆ ೬. ಅದೇ ಅದೇ (ನ ೩೬)
(ನ. ೧೬) ನಾನಾ ಆರತಿ
(ನ. ೧೬) ನಾನಾ ಆಕಾರದ ಮಣ್ಣಿನ ಪಾತ್ರೆಗಳುಳ್ಳ ಕಲ್ಲಿನ ಪೆಟ್ಟಿಗೆ.
ಅದೇ
ಕರ್ಣಾಟಕದ ಪೂರ್ವ ಚರಿತ್ರೆ
೧. ಕರ್ಣಾಟಕದ ಜನತೆಯ ಪೂರ್ವಚರಿತ್ರೆ ಭೂಗೋಳದ ರಚನೆ:- ಲ್ಯಾಟೈಲ್ ಎಂಬ ಮಹನೀಯನು ಮನುಷ್ಯನ ಚರಿತ್ರೆಯು ಆಕಾಶದಲ್ಲಿ ಹುಟ್ಟಿ ಭೂಮಿಗೆ ಇಳಿಯಬೇಕಾಗಿದೆಯೆಂದು ಹೇಳಿದ್ದಾನೆ. ಕರ್ಣಾಟಕದ ಜನರ ಪೂರ್ವ ಚರಿತ್ರೆಯನ್ನು ಬರೆಯುವಾಗ ಲೋಕದಲ್ಲಿರುವ ಮನುಷ್ಯ ಕುಲಗಳ (Races of Man } ಚರಿತ್ರೆಯ ಕೆಲವು ಅಂಶಗಳನ್ನು ನಾವು ತಿಳಿ ದಿರಬೇಕು. ಈ ವಿಷಯಗಳನ್ನು ತಿಳಿಸುವುದು ಮನುಷ್ಯ ಶಾಸ್ತ್ರವೆಂದು (Anthropo togy ) ಪಾಶ್ಚಾತ್ಯರಲ್ಲಿ ಪ್ರಸಿದ್ದವಾಗಿದೆ. ಮನುಷ್ಯನ ಪ್ರಾಚೀನತೆಯನ್ನು ಅರಿಯ ಬೇಕಾದರೆ ನಾವು ವಾಸಿಸುವ ಭೂಭಾಗದ ಸೃಷ್ಟಿ ವಿಚಾರವನ್ನು ನಾವುಗಳು ಕಲಿಯ ಬೇಕು. ಈ ಕಾರಣಗಳಿಂದ ಈ ಉಪನ್ಯಾಸದಲ್ಲಿ ಕರ್ಣಾಟಕದ ರಚನೆಯ ವಿಚಾರ ದಲ್ಲಿ ಒಂದೆರಡು ವಿಷಯಗಳನ್ನೂ ತರುವಾಯ ಮನುಷ್ಯ ಕುಲಗಳ ಉತ್ಪತ್ತಿಯ ವಿಚಾರದಲ್ಲಿ ಅವಶ್ಯಕವಾದ ನಾಲ್ಕು ಮಾತುಗಳನ್ನೂ ಹೇಳಿ, ತರುವಾಯ ಕರ್ಣಾ ಟಕದ ಜನತೆಯ ಪೂರ್ವ ಚರಿತ್ರೆಯನ್ನು ವಿಮರ್ಶಿಸಬೇಕಾಗಿದೆ |
ಅಂತರಿಕ್ಷದಲ್ಲಿ ತೇಲಾಡುವ ಅನೇಕ ಗೋಳಗಳಲ್ಲಿ ಸಣ್ಣದಾದ ಮತ್ತು ನಿರಂತರವೂ ಉರಿಯುತ್ತಿರುವ ಒಂದು ಗೋಳವು ನಗೆ ಸೂರ್ಯ ನಾಗಿ ಪರಿಣಮಿ ಸಿರುವುದೆಂದೂ, ಈ ಸೂರ್ಯನ ಸುತ್ತಲೂ ಸುತ್ತುತ್ತಿರುವ 1,ಹಗಳಲ್ಲಿ ನಮಗೆ ವಾಸಸ್ಥಾನವಾಗಿರುವ ಭೂಗೋಳವು ಒಂದೆಂದೂ ಖಗೋಳ ಶಾಸ್ತ್ರಜ್ಞರು ನಿರ್ಧರಿ ಸಿದ್ದಾರೆ. ಈ ಭೂಮಿಯು ಮೊದಲು ಬರಿಯ ವಾಯುಮಂಡಳವಾಗಿತ್ತೆಂದೂ, ಅನೇಕ ಕಾಲದ ಮೇಲೆ ಈ ವಾಯುವಿನಲ್ಲಿ ತೇಲಾಡುತ್ತಿದ ಜಲಬಿಂದುಗಳು ಒಟು, ಗೂಡಿ ಮಧ್ಯಭಾಗದಲ್ಲಿ ಜಲಗೋಳವು ಹುಟ್ಟಿತೆಂದೂ, ಈ ಜಲಗೋಳದ ಒಳ ಭಾಗದಲ್ಲಿ ಕೇಂದ್ರದ ಸುತ್ತಲೂ ಪರಮಾಣುಗಳು ಒಟ್ಟುಗೂಡಿ ಘನರೂಪದ ಗೋಳವು ಹುಟ್ಟಿತೆಂದೂ ತಿಳಿಯಬಂದಿದೆ. ಒಳಗೆ ಘನಗೋಳ, ಅದರ ಸುತ್ತ ಜಲ ಗೋಳ, ಅದರ ಹೊರಭಾಗದಲ್ಲಿ ವಾಯುಗೋಳ, ಹೀಗೆ ಮೂರು ಭಾಗವುಳ್ಳ ಈ ಭೂಗೆ.oಳವು ಸೂರನ ಸುತ್ತ ಒಂದಾವರ್ತಿ ಮುನ್ನೂರರವತ್ತೈದೂ ಕಾಲು ದಿವಸ ಗಳಲ್ಲಿ ಸುತ್ತುತ್ತದೆಂದೂ, ಇಪ್ಪತ್ತು ನಾಲ್ಕು ಗಂಟೆಗೊಂದಾವರ್ತಿ ತನ್ನ ಅಕ್ಷದ ಮೇಲೆ ತಾನೇ ಬುಗರಿಯಂತೆ ತಿರುಗುತ್ತಲೂ, ಸೂರನು ಪ್ರಯಾಣ ಮಾಡುವ ದಿಕ್ಕಿಗೆ ತಾನು ಕೂಡ ಪ್ರಯಾಣ ಮಾಡುತ್ತಲೂ ಇರುತ್ತದೆ. ಹೀಗಿರುವಲ್ಲಿ ಈಗ್ಗೆ
ಅನೇಕ ಕೋಟ ವರುಷಗಳ ಹಿಂದೆ ಭೂಮಿಯ ಘನಗೋಳದ ಒಂದು ಕಡೆಯಲ್ಲಿ ಭಾರವಾದ ಮತ್ತು ಲೋಹಾದಿಗಳಿ೦ದ ಯುಕ್ತವಾದ ಅತಿ ಘನ ಭಾಗವೊಂದು ಕೇಂದ್ರದಿಂದ ಸಡಲಿ ಘನಗೋಳವನ್ನು ಹರಿದು, ಜಲಗೋಳ, ವಾಯುಗೋಳ ಗಳನ್ನು ದೂರಿ ಭೂಮಿಯು ತನ್ನ ಅಕ್ಷಾಂಶದ ಮೇಲೆ ತಾನೇ ಸುತ್ತುವ ವೇಗದಿಂದ ಹೊರಕ್ಕೆ ಒಗೆಯಲ್ಪಟ್ಟಿತು. ಇದು ಸುಮಾರು ಭೂಮಿಯಲ್ಲಿ ಐವತ್ತರಲ್ಲೊಂದು ಪಾಲಷ್ಟಿತ್ತು. ಹೊರಕ್ಕೆ ಚಿಮ್ಮಿದ ಈ ಘನಭಾಗವು ಚದ್ರಮಂಡಲವಾಗಿ ಪರಿಣಮಿಸಿ ಭೂಮಿಯ ಸುತ್ತ ಬಳಸುತ್ತಿದೆ. ಹೀಗೆ ಚಂದ್ರಬಿಂಬವು ಭೂಮಿಯ ಬಸುರಿನಿಂದ ಹುಟ್ಟದುದರಿಂದ ಅದನ್ನು ಭೂಮಿಯ ಮಗನೆಂದು ಕೆಲವರೂ, ಜಲಗೋಳದ ಮೂಲಕ ಹಾರಿಬಂದುದರಿಂದ ಸಮುದ್ರದ ಕುಮಾರನೆಂದು ಕೆಲವರೂ ಹೇಳುವ
ವಾಡಿಕೆಯುಂಟು,
ಅಮುರಿಯ: ಭೂಮಿಯ ಉದರದಿಂದ ಚಂದ್ರನು ಜಿಗಿದ ಭಾಗವು ಡೊಗರುಬಿದ್ದು ದೊಡ್ಡ ಹಳ್ಳವಾಯಿತು ಜಲಗೋಳದ ನೀರು ಹರಿದುಬಂದು ಈ ಹಳ್ಳಕ್ಕೆ ತುಂಬಿಕೊಂಡಿತು. ಈ ದೊಡ್ಡ ಹಳ್ಳವೇ ಈಗಿನ ಪೆಸಿಫಿಕ್ ಸಾಗರ. ಪೆಸಿಫಿಕ್ ಸಾಗರದ ಕಡೆ ಎ೦ದ ಚ೦ದ್ರನು ಜಿಗಿಯಲಾಗಿ ಅದಕ್ಕೆ ಬದಲು ಭೂಮಿಯ ಹಿಂಭಾಗದಲ್ಲಿ ಈಗಿನ ಹಿಂದೂಸಾಗರ ಆಫ್ರಿಕಗಳು ಇರುವ ಕಡೆ ಗಳಲ್ಲಿ ಭೂಗೋಳವು ಉಬ್ಬಿ ನೀರಿನಿಂದ ಮೇಲಕ್ಕೆ ಎದ್ದಿತು, ಪೆಸಿಫಿಕ್ ಸಾಗರಕ್ಕೆ ನೀರು ಹರಿದು ಹೋದುದರಿಂದ ಈ ಉಬ್ಬಿದ ಭೂ ಭಾಗವು ಮತ್ತಷ್ಟು ವಿಸ್ತಾರ ವಾಗಿ ಈಗಿನ ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ ಮತ್ತು ಭಾರತದ ದಖನ್ ಪ್ರಾಂತ್ಯ ಇವುಗಳನ್ನು ಒಳಗೊಂಡ ಒಂದು ದೊಡ್ಡ ಭೂಖಂಡವಾಯಿತು. ಈ ಖಂಡಕ್ಕೆ ಭೂಗರ್ಭಶಾಸ್ತ್ರಜ್ಞರು ಲಿನುರಿಯ ಎಂಬ ಹೆಸರನ್ನಿಟ್ಟಿದ್ದಾರೆ. ಇದರ ಮೇಲೆ ಬಹು ಕಾಲಾನಂತರ ಅಳಲಿಗೂ ಕಪಿಗೂ ಮಧ್ಯರೂಪವುಳ್ಳ ಲೀಮರ್ ಎಂಬ ಶಾಖಾಮೃಗ ಗಳು ಹೇರಳವಾಗಿ ಜೀವಿಸುತ್ತಿದು ವಂತೆ, ಅನೇಕ ಕೋಟಿ ವರ್ಷಗಳ ನಂತರ ಈ ಲಿಮುರಿಯ ಖಂಡದ ಮಧ್ಯಭಾಗವು ಹಳ್ಳ ಬಿದ್ದು ತಗ್ಗಿ ಹೋಯಿತು. ಈ ತಗ್ಗಿ ನೊಳಕ್ಕೆ ಮತ್ತೆ ಜಲಗೋಳದ ನೀರು ಬಂದು ಸೇರಿ ಈಗಿನ ಹಿಂದೂ ಮಹಾಸಾಗರ ವಾಯಿತು. ಲಿವುರಿಯದ ತುದಿಗಳು ಮಾತ್ರ ಪೂರ್ವಕ್ಕೆ ಆಸ್ಟ್ರೇಲಿಯವಾಗಿಯೂ, `ಪಶ್ಚಿಮಕ್ಕೆ ಆಫ್ರಿಕವಾಗಿಯೂ, ಉತ್ತರಕ್ಕೆ ನಮ್ಮ ಕರ್ಣಾಟಕ್ಕೆ ಆಶ್ರಯ ಸ್ಥಾನ
ವಾಗಿರುವ ದಖನ್ ದಿಣ್ಣೆಯಾಗಿಯೂ ಪರಿಣಮಿಸಿದುವು.
ಭಾರತದ ಭೂಭಾಗಗಳು:- ಭೂಲಕ್ಷಣವನ್ನು ಅನುಸರಿಸಿ ನಮ್ಮ ಭಾರತ ವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಅತ್ಯಂತ ಪ್ರಾಚೀನ ವಾದುದು ದಕ್ಷಿಣದ ದಿಣ್ಣೆ, ಇದರ ತರುವಾಯ ಹುಟ್ಟಿದುದು ಹಿಮಾಚಲದಿಂದಲೂ, ಮಧ್ಯ ಏಷ್ಯದ ದಿಣ್ಣೆಯಿಂದಲೂ ಕೂಡಿದ ಪರ್ವತ ಪ್ರಾಂತ್ಯ, ಕಟ್ಟ ಕಡೆಯಲ್ಲಿ
ಹುಟ್ಟಿದ ಕಿರಿ ಯ ಕೂಸುಗಳು ಉತ್ತರ ದೇಶದ ಬಯಲು ಮತ್ತು ದ್ರಾವಿಡದ ಬಯಲು. ಇವುಗಳಲ್ಲಿ ನಮಗೆ ಪ್ರಕೃತವಾದ ದಖನ್ನಿನ ವಿವರಣೆಯನ್ನು ಮುಂದೆ ವಿಮರ್ಶಿಸುತ್ತೇನೆ.
ಹಿಮಾಚಲದ ರಚನೆ:- ದಖನ್ನಿನ ದಿಣ್ಣೆಗಳೊಡನೆ ಹೋಲಿಸಿದರೆ ಹಿಮಾಚಲ ಪ್ರಾಂತ್ಯವು ವಯಸ್ಸಿನಲ್ಲಿ ಕಿರಿಯದು, ಲಿಮುರಿಯದ ಮಧ್ಯಭಾಗವು ಸಮುದ್ರದೊಳಗೆ ಮುಳುಗಿ ಅದರ ಉತ್ತರ ಮೂಲೆಯು ದಖನ್ನಿನ ರೂಪದಲ್ಲಿ ಹಿಂದೂಸಾಗರದ ಒಂದು ದೊಡ್ಡ ದ್ವೀಪವಾಗಿ ಕಾಣಬರುತ್ತಿದ್ದ ಕಾಲದಲ್ಲಿ ಅದರ ಉತ್ತರಕ್ಕೆ ಮಹಾಸಾಗರವು ಹರಡಿಕೊಂಡಿತ್ತೇ ಹೊರತು ಆ ಕಡೆಗೆ ಭೂ ಪ್ರದೇಶವೇ ಇರಲಿಲ್ಲ. ಹೀಗೆ ಅನೇಕ ಕಾಲವಾದಮೇಲೆ ಮಧ್ಯ ಏಷ್ಯದ ದಿಣ್ಣೆಯು ಸಮುದ್ರದಿಂದ ಮೇಲಕ್ಕೆ ತಲೆ ಎತ್ತಿತು. ಆಗ ಟಿಬೆಟ್, ಪಾಮಿರ್, ತುರ್ಕಿಸ್ಥಾನ್ ಮೊದಲಾದ ಭಾಗಗಳು ನೀರಿನಿಂದ ಹೊರಗೆ ಕಾಣಬಂದುವು. ಹೀಗೆ ಉತ್ತರದ ಧರಣಿಯ ಉದ್ದರಣವು ನಡೆಯುತ್ತಿದ್ದ ಕಾಲದಲ್ಲಿ ಯಾವುದೋ ಕಾರಣದಿಂದ ಭೂಗರ್ಭದ ಘನಗೋಳವು ಸಂಕುಚಿತವಾಗಿ ಮಡಿಕೆಗಳು ಎದ್ದವು. ಈ ಮಡಿಕೆ ಗಳು ಅಮೇರಿಕದಲ್ಲಿ ಉತ್ತರದಿಂದ ದಕ್ಷಿಣಕ್ಕೆ ರಾಕೀಸ್, ಆಂಡೀಸ್ ಪರ್ವತ ಶ್ರೇಣಿಗಳಾಗಿಯೂ, ಪೂರ್ವಾರ್ಧಗೋಳದಲ್ಲಿ ಯೂರೋಪಿನ ಪಿರನೀಸ್ ಮತ್ತು ಆಲ್ಫ್, ಆಫ್ರಿಕದ ಅಟ್ಲಾಸ್, ಪಶ್ಚಿಮ ಏಷ್ಯದ ಟಾರಸ್, ಪಾಂಟಿಕ್, ಕಾಕ ಸಸ್, ಪೂರ್ವ ಏಷ್ಯದ ಯಾಬ್ಲೊ ನಾಯ, ಸ್ಟಾನೋವಾಯಮ್ ಮತ್ತು ಮಧ್ಯ ಏಷ್ಯದ ಆಲ್ಟಾಯ್, ಹಿಂದೂ ಕುಷ್ ಮತ್ತು ಹಿಮಾಚಲ ಪರ್ವತಗಳಾಗಿಯೂ ಎದ್ದು ನಿಂತುವು. ಈ ಮಡಿಕೆಗಳು ಉಭಯ ಪಕ್ಷದಲ್ಲಿಯ ಭಾರದ ಮಧ್ಯೆ ಸಿಲುಕಿ ಮೇಲು ಮೇಲಕ್ಕೆ ಏಳುತ್ತಬಂದವು. ಹಿಮಾಚಲವು ಪ್ರತಿ ವರ್ಷಕ್ಕೆ ಹಲವು ಅಡಿ ಗಳು ಈಗಲೂ ಮೇಲಕ್ಕೆ ಏಳುತ್ತಿದೆಯೆಂದು ಶಾಸ್ತ್ರಜ್ಞರು ಊಹಿಸುತ್ತಾರೆ. ಈ ಪ್ರಾಂತ್ಯವು ಸಮುದ್ರದ ಕೆಳಗೆ ಇದ್ದಾಗ ಇದರ ಮೇಲೆ ತೆವಳುತ್ತಿದ್ದ ಜಲಚರಗಳು ಸುಣ್ಣದಿಂದ ಕಟ್ಟಿದ ಲಕ್ಷೇಪಲಕ್ಷವಾದ ಗೂಡುಗಳನ್ನು ಹಿಮಾಚಲದಲ್ಲಿ ಹುಟ್ಟಿದ ನದಿಗಳು ಉರುಳಿಸಿ ನುಣ್ಣಗೆ ಮಾಡಿ ತಗ್ಗು ಭೂಮಿಗೆ ತಂದು ತಳ್ಳುತ್ತಿವೆ. ಇವುಗಳೇ ಹಿಂದುಗಳಲ್ಲಿ ಪೂಜೆಗೆ ಉಪಯುಕ್ತವಾದ ಸಾಲಿಗ್ರಾಮಗಳು,
ಉತ್ತರ ಭಾರತದ ಸೃಷ್ಟಿ: - ದಖನ್ನಿನ ದಿಣ್ಣೆಯ ಲಕ್ಷಾಂತರ ವರ್ಷ ಗಳ ವರೆಗೆ ಎದುರುಬದುರಿಗೆ ನಿಂತಿರುವ ಕಾಲದಲ್ಲಿ ಇವುಗಳ ನಡುವೆ ಹಿಂದೂ ಮಹಾಸಾಗರಕ್ಕೆ ಉತ್ತರಭಾಗವಾದ ಸಮುದ್ರವೊ೦ದು ಹರಡಿಕೊಂಡಿತ್ತು. ಈ ಸಾಗರದಲ್ಲಿ ಬಿಸಿಲಿನಿಂದ ಎಬ್ಬಿಸಲ್ಪಟ್ಟ ಹವೆಯು ಮೇಘರೂಪದಲ್ಲಿ ಹಿಮಾಚಲಕ್ಕೆ ಬಡಿದು ಸಾವಿರಾರು ಗಿರಿನಿರ್ಝರಗಳಾಗಿ ಪ್ರವಹಿಸಿ ಹಿಮಾಚಲದ ದಿಣ್ಣೆಯನ್ನು ಕರಗಿಸುತ್ತ ಬಂತು. ಈ ಹೊಳೆಗಳಿಂದ ಒಯ್ಯಲ್ಪಟ್ಟ ಮಣ್ಣು ಸಮುದ್ರದೊಳಕ್ಕೆ
ಬಿದ್ದು ನೀರನ್ನು ಹಿಮ್ಮೆಟ್ಟಿಸುತ್ತ ಬರಲು ಕಾಲಕ್ರಮದಲ್ಲಿ ಉತ್ತರ ದೇಶದ ಬಯಲು ಸೃಷ್ಟಿಯಾಯಿತು, ದಖನ್ನಿನ ಉತ್ತರಭಾಗವಾದ ಮಾಳವದ ದಿಣ್ಣೆಯಿಂದಲೂ ಮಣ್ಣು ಕೊಚ್ಚಿ ಬಂದಿತು. ಈ ಉತ್ತರ ದಕ್ಷಿಣದ ಭೂಶಿರಗಳು ಈಗಿನ ದೆಹಲಿ ಪ್ರಾಂತ್ಯದಲ್ಲಿ ಒಟ್ಟುಗೂಡಿ ಪಶ್ಚಿಮಕ್ಕೆ ಸಿಂಧೂ ತೀರ ಪ್ರಾಂತ್ಯವಾಗಿಯೂ ಪೂರ್ವಕ್ಕೆ ಗಂಗಾತೀರ ಪ್ರಾಂತ್ಯವಾಗಿ ಬೆಳೆಯುತ್ತ ಬಂದುವು. ಹೀಗೆ ಲಕ್ಷಾಂತರ ವರ್ಷಗಳು ನಡೆಯಲು ಗಂಗಾ, ಸಿಂಧೂ ಪಾತ್ರಗಳನ್ನು ಒಳಗೊಂಡ ಈಗಿನ ಉತ್ತರ ದೇಶದ ಬಯಲು ಸೃಷ್ಟಿಯಾಯಿತು, ಈ ಬಯಲಿನಲ್ಲಿ ಶಿಲಾಭಾಗವೇ ಕಾಣಬರುವು ದಿಲ್ಲ. ಎಲ್ಲವೂ ಜಲೋಧ್ಯತವಾದ ಹಾಕುಮಣ್ಣು, ಈ ಮಣ್ಣಿನ ಆಳವು ಬಹಳ ಕಡಮೆಯಾಗಿರುವೆಡೆಯಲ್ಲಿ ಆರು ನೂರು ಅಡಿಗಳಷ್ಟಾದರೂ ಇರುವುದು. ಇದರ ಮಧ್ಯದಲ್ಲಿ ಹಿಮಾಚಲದಲ್ಲಿ ಕರಗಿದ ಹಿಮದಿಂದಲೂ ಮಾಳವದಲ್ಲಿ ಬಿದ್ದ ಮಳೆ ಯಿಂದಲೂ ಹೊರಟ ನೀರು ನೂರಾರು ನದಿಗಳ ರೂಪದಲ್ಲಿ ಹರಿಹರಿದು ಸಮತಟ ಗಳ ಮಧ್ಯದಲ್ಲಿ ಮೆಲ್ಲಗೆ ಪ್ರವಹಿಸುತ್ತ ಪೂರ್ವ ಪಶ್ಚಿಮ ಸಮುದ್ರಗಳಿಗೆ ಹೋಗಿ ಸೇರುತ್ತವೆ. ನೆಲದ ಒಳಭಾಗದಲ್ಲಿ ಎಲ್ಲೆಲ್ಲಿಯೂ ನೀರು ಜಿನುಗುತ್ತದೆ. ಈ ದೊಡ್ಡ ಬಯಲಿನಲ್ಲಿ ನೀರೂ. ಮಣ್ಣೂ ಹೇರಳವಾಗಿರುವುದರಿಂದ ಸಸ್ಯಗಳೂ, ಪ್ರಾಣಿಗಳೂ, ಜನ ಕುಲಗಳೂ ನಿಬಿಡವಾಗಿ ವಾಸಿಸುತ್ತವೆ.
ದಕ್ಷಿಣದ ತೀರಗಳು:- ದಖನ್ ದಿಣ್ಣೆಯಲ್ಲಿ ಬಿದ್ದ ಮಳೆಯು ಮಣ್ಣಿನ ಕಣಗಳನ್ನು ಒಯ್ಯುತ್ತ ಪೂರ್ವ ಪಶ್ಚಿಮದ ತೀರ ಪ್ರದೇಶಗಳನ್ನು ಕಟ್ಟಿತು. ಇವುಗಳ ಗುಣಲಕ್ಷಣಗಳು ಗಂಗಾತೀರದ :ತೆಯೇ ಇವೆ. ಆದರೆ ಪಶ್ಚಿಮ ತೀರದಲ್ಲಿ ಮಣ್ಣನ್ನು ಒಯ್ಯುವ ನದಿಗಳಿಗೂ ನಿರಂತರ ಮಾರುತಗಳಿಂದ ಬಡಿದು ಎಬ್ಬಿಸಲ್ಪಟ್ಟ ಸಮುದ್ರಕ್ಕೂ ಘೋರ ಯುದ್ಧವು ಆರಂಭವಾಯಿತು. ಸ್ವಲ್ಪ ದೂರದ ಮಟ್ಟಿಗೆ ನದಿಗಳಿಗೆ ಜಯ
ವಾಗಿ ಸಮುದ್ರವು ಹಿಂದಕ್ಕೆ ತಳ್ಳಲ್ಪಟ್ಟು ಕುಮಾರೀ ಮೂಲೆಯಿಂದ ಕಾಥೇವಾಡದ ವರೆಗೂ ಹಬ್ಬಿರುವ ಕೊಂಕಣಸ್ವಾತವು ಹುಟ್ಟಿತು. ಈ ಶಿಶುವಿನ ಬೆಳವಣಿಗೆಯು ಬಲು ನಿಧಾನವಾಯ್ತು, ಪೂರ್ವ ತೀರದಲ್ಲಾದರೋ ರಾಕ್ಷಸಬಲವುಳ್ಳ ನೈರುತ್ಯ ಮಾರುತದ ಹೊಡೆತವಿಲ್ಲದಿರುವುದರಿಂದ ತಮಿಳು ಮತ್ತು ತೆಲಗು ದೇಶದ ತೀರ ಪ್ರದೇಶಗಳು ಹುಟ್ಟಿಕೊಂಡು ಕ್ರಮೇಣ ವೃದ್ಧಿಯಾದುವು.
ವಿಂಧಾದ್ರಿಯ ರಚನೆ:- ಹಿಮಾಚಲದ ದಕ್ಷಿಣಕ್ಕಿರುವ ಭಾರತದ ಕೆಳಗಡೆ ಬುಡದಲ್ಲಿ ಭೂಮಿಯ ಘನಗೋಳಕ್ಕೆ ಸಹಜವಾದ ಕಲ್ಲುಬಂಡೆಗಳ ಪದರವೊಂದು ಹರಡಿಕೊಂಡಿದೆ. ಘನಗೋಳವ್ರ ಸಂಕುಚಿತವಾದ ಕಾಲದಲ್ಲಿ ಈ ಬಂಡೆಯ ಪದ ರವು ಮೂರು ಭಾಗವಾಗಿ ಒಡೆದು ಅವುಗಳಲ್ಲಿ ವ ಈ ಮಧ್ಯ ಭಾಗವು ಉತ್ತರ ದೇಶದ ಬಯಲಿನ ಬುಡದಲ್ಲಿ ಸಾವಿರಾರು ಗಜಗಳ ಕೆಳಗೆ ಸಿಕ್ಕಿ ಹೋಗಿದೆ. ಅದರ ಮೇಲೆ ಮಣ್ಣು ಬಿದ್ದು ಎರಡು ಮೂರು ಮೈಲಿಗಳ
-
೫
-
ದಪ್ಪವಾಗಿ ಉದ್ದಕ್ಕೂ ಹರಡಿ ಸಿಂಧೂ ಗಂಗಾ ನದಿಗಳ ಬಯಲಾಗಿದೆ ಈ ಉತ್ತರದ ಬಂಡೆಯ ಪದರವು ದಖನ್ನಿನ ಬಂಡೆಯಿಂದ ಓಡೆದು ಪ್ರತ್ಯೇಕಿಸಿದಾಗ ಹುಟ್ಟಿದ ಬಿರುಕುಗಳೇ ನರ್ಮದಾ, ತಪತಿ ನದಿಗಳ ಪಾತ್ರಗಳಾಗಿಯೂ, ಈ ಪದರ ಗಳ ಸಂಘಟನದಿಂದ ಚಿಮ್ಮಿ ಎಬ್ಬಿಸಲ್ಪಟ್ಟ ಮಡಿಕೆಗಳೇ ವಿಂಧ್ಯ ಮತ್ತು ಸಾತ್ಪುರ ಪರ್ವತಗಳಾಗಿಯೂ ಪರಿಣಮಿಸಿವೆ.
ದಖನ್ ದಿಣ್ಣೆ:- ಈ ವಿಧ್ಯಾದ್ರಿಗೆ ದಕ್ಷಿಣದಲ್ಲಿ ತ್ರಿಕೋಣಾಕಾರವಾಗಿ ಹರಡಿಕೊಂಡಿರುವ ದಖನ್ ಅಥವಾ ದಕ್ಷಿಣದ ದಿಣ್ಣೆ ಸಹ್ಯಗಿರಿ ಮತ್ತು ಮಹೇಂದ್ರ ಗಿರಿಗಳ ನಡುವೆ ಉಬ್ಬೆದ್ದು ನೀಲಗಿರಿಯ ವರೆಗೂ ವ್ಯಾಪಿಸಿದೆ. ಸಹ್ಯಗಿರಿಯ ಪರ್ವತಶ್ರೇಣಿಯು ನೀಲಗಿರಿ ಯಿಂದ ದಕ್ಷಿಣ ವ್ಯಾಪಿಸಿ ಮಲಯ ಪರ್ವತದ ಮೂಲಕವಾಗಿ ಕನ್ಯಾಕುಮಾರಿ ಭೂಶಿರದ ಮೇರೆಗೂ ಚಾಚಿಕೊಂಡಿದೆ. ಹೀಗೆ ನಮ್ಮ
ಕರ್ಣಾಟಕಕ್ಕೆ ಆಧಾರಸ್ಥಾನವಾದ ದಖನ್ ದಿಣ್ಣೆಯ ಬಂಡೆಯ ಬುಡವು ಈ ಭೂಮಿಯ ಘನಗೋಳದ ಬ೦ಡೆ.1ಳ ಪದರಗಳಲ್ಲಿ ಅತ್ಯಂತ ಪ್ರಾಚೀನಭಾಗವಾಗಿದೆ ಯೆಂದು ಭೂಗರ್ಭಶಾಸ್ತ್ರಜ್ಞರು ಸಿದ್ದಾ೦ತಮ ಡಿದ್ದಾರೆ. ಕೋಟ್ಯಂತರ ವರ್ಷಗಳ ಕೆಳಗೆ ಈಗಿನ ದಖನ್ನಿನ ಮೇಲೆ ಸುಮಾರು ಆರೇಳು ಮೈಲಿಗಳ ಎತ್ತರ ಹಸಿಮಣ್ಣು ಸದರಪದರವಾಗಿ ಬಿದ್ದಿತಂತೆ. ಈ ಮಣ್ಣು ಬಿಸಿಲಿನಿಂದಲೂ, ಗಾಳಿ ಯಿಂದಲೂ ಕೆದರಿ, ಮಳೆ ಯಿಂದ ಕೊಚ್ಚಿ ಕರಗಿಹೋಯಿತು, ಕಡೆಗೆ ಈ ದಿಣ್ಣೆಯ ಪೂರ್ವ ಭಾಗ ದಲ್ಲಿ ಮತ್ತು ಆಗ್ನೆಯ ಭಾಗದಲ್ಲಿ ಬುಡದಲ್ಲಿದ್ದ ಕಲ್ಲಿನ ಬಂಡೆಗಳು ಕೂಡ ಕ್ಯಾನ ಸೀಡಿತರ ಬೆನ್ನು ಮೂಳೆಗಳಂತೆ ಕಾಣಹತ್ತಿವೆ. ಈ ದಿಣ್ಣೆಯ ಪಶ್ಚಿಮ ಮತ್ತು ಉತ್ತರಭಾಗಗಳಲ್ಲಿ ಬಹುಕಾಲದ ಕೆಳಗೆ ಅಗ್ನಿ ಪರ್ವತಗಳ ಸಾಲು ವಿಶೇಷವಾಗಿದ್ದಂತೆ ತೋರುತ್ತದೆ. ಈ ಅಗ್ನಿ ಪರ್ವತಗಳ ಮುಖಗಳೆ೦ದ ಉಗಿದುಬಂದ ಕಲ್ಲಿನ ನೀರು ಬುಡದ ಬಂಡೆಯ ಮೇಲೆ ಪದರ ಪದರವಾಗಿ ನಿಂತು ಕ್ರಮೇಣ ಘನೀಭೂತವಾಗಿ ಈಗಿನ ಸಹ್ಯ ಪರ್ವತಗಳ ರೂಪವನ್ನು ಪಡೆಯಿತು. ಇದರಿಂದಲೇ ಈ ದಖನ್ ದಿಣ್ಣೆಯ ಉತ್ತರಭಾಗದಲ್ಲಿಯ ಬೆಟ್ಟಗಳು ಒಂದರ ಮೇಲೊಂದು ಪೇರಿಸಿದ ಪರ್ವತ ಗಳಂತೆ ಕಾಣಬರುತ್ತದೆ. ಈ ಪದರ ಕಲ್ಲಿನ ಪರ್ವತಗಳ ಮೇಲೆ ಹಳೆಯ ನೀರು ಬಿದ್ದ ಹಾಗೆಲ್ಲಾ, ಬಿಸಿಲು ಬಡಿದಹಾಗೆಲ್ಲಾ ಅವು ಕರಗಿ ಹುಡಿಮಣ್ಣಾಗಿ ಮ ಮತ್ತು ಉತ್ತರ ದಖನ್ನಿನ ಬಂಡೆಯ ಮೇಲೆ ಹರಡಿಕೊಂಡುವು. ಹೀಗೆ ಅಗ್ನಿ ಪರ್ವತಗಳ ಮೂಲಕ ಹುಟ್ಟಿದ ಭೂಮಿಯೇ ದಖನ್ನಿನ ಕರೀ ಭೂಮಿ,
ಕರುನಾಡು, ಕರೀನಾಡು:- ಮೇಲೆ ಹೇಳಿದಂತೆ ಸೃಷ್ಟಿಯಾದ ದಖನ್ ಎಣ್ಣೆಯು ಸುತ್ತಮುತ್ತಲಿನ ಪ್ರದೇಶಗಳಿಗಿಂತ ದಕ್ಷಿಣದಲ್ಲಿ ಸುಮಾರು ಮೂರು ಸಾವಿರ ಅಡಿ ಎತ್ತರವೂ ಉತ್ತರದಲ್ಲಿ ಸುಮಾರು ಒಂದು ಸಾವಿರ ಅಡಿ ಎತ್ತರವೂ ಎದ್ದು ನಿಂತಿದೆ. ಸುತ್ತಮುತ್ತಲಿನ ತಮಿಳರೇ ಮೊದಲಾದ ಜನರು ಈ ಪ್ರದೇಶ
ವನ್ನು < ಕರುನಾಡು ” ಅ೦ದರೆ ಎತ್ತರವಾದ ನಾಡು ಅಥವಾ ದಿಣ್ಣೆಯ ನಾಡೆಂದು ಕರೆದರು, ಇದರಿಂದ ನಮ್ಮ ನಾಡಿಗೂ ಇದರ ಭಾಷೆಗೂ ಕನ್ನಡವೆಂಬ ಹೆಸರು ಬಂದಿತೆಂದು ಊಹಿಸಲ್ಪಟ್ಟಿದೆ. ಇದರ ಉತ್ತರ ಮತ್ತು ಪಶ್ಚಿಮದಲ್ಲಿ ಬಹುಭಾಗವು ಮೇಲೆ ಹೇಳಿದಂತೆ ಕರಿಯ ಮಣ್ಣಿನಿಂದ ತುಂಬಿರುವುದರಿಂದ ಇದಕ್ಕೆ 4 ಕಾರ್ ನಾಡ್' ಅಥವಾ “ ಕರೀನಾಡೆಂದು ಹೇಳುವುದೂ ನ್ಯಾಯವಾಗಿದೆ. ಈ 4 ಕರ್', (ನಾಡ್? ಎಂಬ ಪದಗಳ ಸಂಯೋಗದಿಂದ ಕನ್ನಡವೆಂಬ ಪದವು ಹುಟ್ಟಿತೆಂದು ಮತ್ತೆ ಕೆಲ ವರು ವಿದ್ವಾಂಸರು ಊಹಿಸುತ್ತಾರೆ. ಈ ನಮ್ಮ ಕನ್ನಡ ದೇಶವನ್ನೊಳಗೊಂಡಿರುವ ದಕ್ಷಿಣದ ದಿಣ್ಣೆಯು ಭೂಮಿಯ ಅತ್ಯಂತ ಪ್ರಾಚೀನ ಭಾಗಗಳಲ್ಲೊಂದೆಂದೂ ಮೇಲೆ ಹೇಳಿದೆ. ಇಂತಹ ಪ್ರಾಚೀನ ಭೂಭಾಗ ಕ್ಕೂ ಮನುಷ್ಯರ ಉತ್ಪತ್ತಿಗೂ, ಪ್ರಾಚೀನ ನರಕುಲಗಳಿಗೂ ಯಾವ ಬಗೆಯಾದ ಸಂಬಂಧವು ಇತ್ತೆಂಬುದನ್ನು ಈಗ ವಿವರಿಸಬೇಕಾಗಿದೆ.
ನರರೂಪದ ಉತ್ಪತ್ತಿ: ಭೂಮಿಯ ಘನಗೋಳದ ಮೇಲ್ಬಾಗದಲ್ಲಿ ಒಂದರ ಮೇಲೊಂದಾಗಿ ಕೂಡುತ್ತ ಬ೦ದ ಮಣ್ಣಿನ ಪದರಗಳಲ್ಲಿ ಈಗ್ಗೆ ಸುಮಾರು ಹತ್ತರಿಂದ ಐದು ಲಕ್ಷ ವರ್ಷಗಳ ಕೆಳಗೆ ಮೈಯೋಸೀನ್ ( Pleocene ) ಪದರವೂ, ಸುಮಾರು ಐದರಿಂದ ಎರಡು ಲಕ್ಷ ವರ್ಷಗಳ ಕೆಳಗೆ ಫೆಸ್ಟೋಸೀನ್ (Pleistocene) ಪದರವೂ ಹುಟ್ಟಿದವು. ಕ್ರಿಮಿಕೀಟಾದಿ ರೂಪದಿಂದ ಚತುಷ್ಟಾದಗಳೂ, ಚತುಷಾದಗಳಿಂದ ಪ್ಲೇಯೋಸೀನ್ ಯುಗದಲ್ಲಿ ಅಳಿಲು, ಕಸಿ ಮೊದಲಾದ ರೂಪಗಳೂ, ಹೈಸೊಸೀನ್ ಯುಗದಲ್ಲಿ ಬಾಲವಿಲ್ಲದ ಕಪಿಗಳ೦ತಿದ್ದ ವಾನರರೂಪಗಳೂ ಹುಟ್ಟ ಪ್ರಪಂಚದ ಅನೇಕ ಭಾಗ ಗಳಲ್ಲಿ ಗುಂಪುಗುಂಪಾಗಿ ಹರಡಿಕೊಂಡವು. ಈ ವಾನರ ವಂಶಗಳಲ್ಲಿ ಈಗ ಗೋರಿಲ್ಲ ಮತ್ತು ಚೆಂಪಾಗಳು ಆಫ್ರಿಕದಲ್ಲ, ಔರಾಂಗ್-ಊಟಾನ್ ಬೋಲ್ಕಿ ಯೋದಲ್ಲ, ಗಿಬ್ಬನ್ ಕುಲವು ಮಲಯ ಪಠ್ಯಾಯ ದ್ವೀಪದಲ್ಲ ಬದು ಕಿವೆ. ಆದರೆ ಪ್ಲೇಯೋಸೀನ್ ಯುಗದಲ್ಲಿ ಭೂಲೋಕದ ಅನೇಕ ಭಾಗಗಳಲ್ಲಿ ಬದುಕಿದ್ದ ಕಪಿಕುಲಗಳು ಮತ್ತು ವಾನರಕುಲಗಳು ಈಗ ಅದೃಶ್ಯವಾಗಿವೆ, ಆ ಯುಗ ದಲ್ಲಿ ಸೃಷ್ಟಿಯಾದ ಮತ್ತು ಈಚೆಗೆ ಮಳೆಯ ಮಣ್ಣಿನಿಂದ ಕೊಚ್ಚಿ ಹೊರಬಿದ್ದಿರುವ ಫೆಸ್ಟೋಸೀನ್ ಪದರವು ಭಾರತದಲ್ಲಿ ಹಿಮಾಲಯ ಪರ್ವತದ ದಕ್ಷಿಣಕ್ಕಿರುವ ಶಿವಾಲಿಕ್ ಪರ್ವತಗಳಲ್ಲಿ ಕಾಣಬರುತ್ತದೆ.ಆ ಸನ್ನಿವೇಶದಲ್ಲಿ ಪ್ಲೇಸ್ಟೋಸೀನ್ ಯುಗ ದಲ್ಲಿ ಬದುಕಿದ್ದ ಮತ್ತು ಈಗ ಅದೃಶ್ಯವಾಗಿರುವ ಅನೇಕ ವಾನರಕುಲಗಳು ಶಿವಾಲಿಕ್ ಬೆಟ್ಟಗಳಲ್ಲಿ ಬದುಕಿದ್ದುವೆಂದೂ, ಇವುಗಳಲ್ಲಿ ಶಿವಪಿಥೆಕಸ್, ಪೋಲಿಯೋಪಿಥೆಕಸ್ ಮತ್ತು ಡೈಯೊಪಿಥೆಕಸ್ ಎಂಬ ಮೂರು ಕುಲಗಳನ್ನಾದರೂ ವಿಂಗಡಿಸಬಹು ದೆಂದೂ ತಿಳಿಯಬಂದಿದೆ. ಈ ಮೂರು ಕುಳಿಗಳಲ್ಲೂ ಶಿವಪಿಥೆಕಸ್ ಎಂಬ
ಜಾತಿಯು ಇತರ ವಾನರ ಕುಲಗಳಿಗಿಂತಲೂ ಅನೇಕ ವಿಷಯಗಳಲ್ಲಿ ಮನುಷ್ಯರನ್ನು ಹೆಚ್ಚಾಗಿ ಹೋಲುತ್ತಿದ್ದಿತೆಂದು ಊಹಿಸಲ್ಪಟ್ಟಿದೆ. ಇದರಿಂದಲೇ ಮುಂದೆ ಮನುಷ್ಯ ಕುಲಗಳು ಹುಟ್ಟಿಕೊಂಡಿರಬಹುದೆಂದು ಊಹಿಸಿದರೆ ಏನೂ ಅಸಮಂಜಸವಲ್ಲ. ಆದರೆ ವಾನರರೂಪಗಳು ಭಾರತದಲ್ಲಿ ಸಿಕ್ಕಿದ್ದರೂ ವಾನರ ರೂಪಗಳಿಂದ ಉತ್ಪನ್ನ ವಾದ ವಿಕೃತರೂಪವುಳ್ಳ ಕುರೂಪವಾದ ಕುವರ ವಂಶಗಳು ಭಾರತದಲ್ಲಿ ಯಾವಾಗ ಲಾದರೂ ಬದುಕಿದ್ದುವೇ ಎಂಬ ವಿಷಯವು ಸರಿಯಾಗಿ ವಿಮರ್ಶಿತವಾಗಿಲ್ಲ. ಈ ವಿಮರ್ಶೆಯನ್ನು ನಡೆಸುವುದಕ್ಕೆ ಸಾಕಾದಷ್ಟು ಅವಕಾಶವು ಇರುವಂತೆ ತೋರುತ್ತದೆ. ಏಕೆಂದರೆ ಪುರಾಣ ಪ್ರಸಿದ್ದವಾಗಿ ಭಾರತದಲ್ಲಿ ಅನೂಚಾನವಾಗಿ ವಾಸಮಾಡಿ ಕೊಂಡು ಬಂದಿರುವ ಪ್ರಜಾವರ್ಗಗಳಲ್ಲಿ - ವಾನರ ' ಕುಲಗಳು ಪ್ರಸಿದ್ಧವಾಗಿವೆ. ಈ ಪುರಾಣ ಪ್ರಸಿದ್ಧರಾದ ವಾನರರಿಗೆ ಬಾಲವು ಇದ್ದಿತೆಂಬ ಉಕ್ತಿಯು ಕವಿಗಳ ಉತ್ತೇಕ್ಷೆಯಿಂದ ಹುಟ್ಟಿದುದಾದರೂ ಮುಂಚಾಚಿದ • ಹನು' ಅಥವಾ ಮುಸಡಿ ಯುಳ್ಳ, ಗವಿಗಳಲ್ಲಿ ವಾಸಮಾಡುವ ಶಿಲೆಗಳನ್ನೂ ವೃಕ್ಷಗಳನ್ನೂ ಆಯುಧಗಳಾಗಿ ವುಳ್ಳ ಗಂಡಹೆಂಡಿರೆಂಬ ನೀತಿಯನ್ನೂ ಸಂಸಾರವೆಂಬ ಮರ್ಯಾದೆಯನ್ನೂ ಅರಿಯದ ಪ್ರಾಚೀನ ನಿವಾಸಿಗಳ ಕುಲಗಳು ಅಲ್ಲಲ್ಲೇ ವಾಸವಾಗಿದ್ದುವೆಂಬ ಪ್ರತೀತಿಯು ಶಾಸ್ತ್ರೀಯವಾದ ವಿಷಯಾನ್ವೇಷಣಕ್ಕೆ ಅವಕಾಶವನ್ನು ಕೊಡುತ್ತದೆ. ಅದರಲ್ಲ ಈ ಕುನರರ ಕುಲಗಳು ನಮ್ಮ ದಖನ್ ಪ್ರಾಂತದ ಮಧ್ಯಭಾಗದಲ್ಲಿ ಕನ್ನಡ ನಾಡಿಗೆ ಕೇಂದ್ರವಾಗಿರತಕ್ಕ ಕಿಂಧಾನಗರದ ಸುತ್ತಲೂ ರಾಮಾಯಣದ ಕಾಲದಲ್ಲಿ ವಾಸಿ ಸುತ್ತಿದ್ದು ಎಂದು ಹೇಳಿರುವುದನ್ನು ನೋಡಿದರೆ ಈ ವಿಷಯವನ್ನು ಆ ಮೂಲಾಗ್ರ ವಾಗಿ ನೋಡಿಯೇ ಬಿಡಬೇಕೆಂಬ ಕುತೂಹಲವು ಶಾಸ್ತ್ರಜ್ಞರಲ್ಲಿ ಹುಟ್ಟುತ್ತದೆ. ಈ ಕಿಷ್ಯ-ಧೆಯ ಬೆಟ್ಟದ ಸಾಲುಗಳ ಸುತ್ತ ಮುತ್ತಿನಲ್ಲಿ ಸ್ವಾಭಾವಿಕವಾದ ಗವಿಗಳು ಅನೇಕವಾಗಿವೆ. ಈ ಗವಿಗಳಲ್ಲಿ ಹಲಕೆಲವನ್ನು ವಾಲಿಯ ಗವಿ, ಸುಗ್ರೀವನ ಗವಿ, ಹನುಮಂತನ ಗವಿ ಎಂಬುದಾಗಿ ಈಗಲೂ ತೋರಿಸುತ್ತಾರೆ. ಇನ್ನೂ ಅನೇಕ ಗವಿಗಳಲ್ಲಿ, ಚಿರತೆಗಳೋ, ಕರಡಿಗಳೊ ಸೇರಿಕೊಂಡು ಮನುಷ್ಯರು ಪ್ರವೇಶ ಮಾಡುವುದೇ ಕಷ್ಟವಾಗಿದೆ. ಇಂತಹ ಗವಿಗಳ ನೆಲದೊಳಗಿನ ಮಣ್ಣಿನ ಪದರ ಗಳನ್ನೂ, ಬಾಗಿಲಬಳಿಯ ಮಣ್ಣನ್ನೂ ಶಾಸ್ತ್ರೀಯವಾಗಿ ಅಗೆದು ಪರೀಕ್ಷಿಸಿದರೆ ಇದರ ಪ್ರಾಚೀನ ನಿವಾಸಿಗಳ ಎಲುಬುಗಳು ದೊರೆಯಬಹುದೆಂದು ಊಹಿಸಲು ಅವಕಾಶವಿದೆ. ಸ್ಪೇನ ದೇಶದ ಉತ್ತರದಲ್ಲಿಯ ಸಿರನೀಸ್ ಪರ್ವತಗಳಲ್ಲಿ ಫ್ರಾನ್ಸ್ ದೇಶದ ಡಾರ್‌ಗಾನ್ ಪ್ರಾಂತದ ಪರ್ವತಗಳ ಗುಹೆಗಳನ್ನೂ ಶಾಸ್ತ್ರಜ್ಞರು ಪರೀಕ್ಷಿಸಿ ನೋಡಿದಾಗ ಪ್ರಾಚೀನ ಕುವರ (sub-human) ವಂಶಗಳ ಅಸ್ಥಿಗಳು ಸಿಕ್ಕು ಮನು ಪ್ಯರ ಪೂರ್ವಚರಿತ್ರೆಗೆ ಅನೇಕ ಹೊಸ ವಿಷಯಗಳು ದೊರೆತವು. ಹಾಗೆ ಭಾರತದಲ್ಲಿ ಶಾಸ್ತ್ರೀಯ ಸಂಶೋಧನೆ ನಡೆಸುವುದಕ್ಕೆ ಕರ್ಣಾಟಕದ ಗವಿಗಳೂ, ವಿಂಧ್ಯಾದ್ರಿಯ
ಗವಿಗಳೂ ಬಹಳ ಉಪಯುಕ್ತವಾಗಿವೆ. ಈ ಶೋಧನೆಯು ನಡೆದ ಮೇಲೆಯೇ ಕರ್ಣಾಟಕಕ್ಕೂ, ಮನುಷ್ಯನ ಉತ್ಪತ್ತಿಗೂ, ವಾನರ ಕುವರ ವಂಶಗಳಿಗೂ ಇರುವ ಸಂಬಂಧವು ವ್ಯಕ್ತವಾದೀತು.
ಕರ್ಣಾಟಕದ ಬುಡಕಟ್ಟುಗಳು: ನಮಗೆ ಚೆನ್ನಾಗಿ ತಿಳಿದುಬಂದಿರುವ ಪೂರ್ವ ಚರಿತ್ರೆಯಲ್ಲಿ ಭರತಖಂಡದ ಮೊತ್ತಮೊದಲಿನ ನಿವಾಸಿಗಳು ಆದಿ ಆಸ್ಟ್ರೇಲಿಯಕವೆಂಬ ಬುಡಕಟ್ಟಿಗೆ ಸೇರಿರಬೇಕೆಂದು ಊಹಿಸಲ್ಪಟ್ಟಿದೆ. ಇವರು ಸ್ವಲ್ಪ ಕುಳ್ಳಾಗಿ ತೆಳ್ಳಗೆ ಸಣ್ಣ ಮೂಳೆಯುಳ್ಳ ಕಪ್ಪು ಬಣ್ಣದ ಜನರು. ಇವರ ತಲೆಬುರುಡೆಯು ಬಹಳ ಉದ್ದವಾಗಿಯೂ, ತದ್ದಾಗಿಯೂ, ಇವರ ಮುಖವು ಉದ್ದವಾಗಿಯೂ ಮೇಲ್ತುಟಿಯೊಡನೆ ಕೂಡಿದ ಮೂತಿಯು ಮುಂಚಾಚಿದುದಾಗಿಯೂ, ಹುಬ್ಬುಗಳು ಮುಂದಾಗಿ, ಕಣ್ಣುಗಳು ಹಳ್ಳಗಳೊಳಗೆ ಬಿರುನೋಟದಿಂದ ಕೂಡಿದವುಗಳಾಗಿಯೂ, ಮೈ ಯೂ ಮುಖವೂ ಸ್ವಲ್ಪವಾಗಿ ಕೂದಲುಳ್ಳವುಗಳಾಗಿಯೂ, ತಲೆಯ ಕೂದಲು ಗುಂಗುರಾಗಿಯೂ ತಕ್ಕಮಟ್ಟಿಗೆ ಉದ್ದವಾಗಿಯೂ ಇದ್ದವೆಂದು ಕಾಣಬರುತ್ತದೆ. ಇವರಲ್ಲಿ ವಯಸ್ಸು ಬಂದ ಪುರುಷರ ಎತ್ತರವು ಸರಾಸರಿ ಐದಡಿ ಎರಡು ಅಥವಾ ಮೂರಂಗುಲ ಉದ್ದವಾಗಿಯೂ, ಚರ್ಮವು ಸ್ವಲ್ಪ ಕಪ್ಪು- ಛಾಯೆಯುಳ್ಳದಾಗಿಯೂ ಇತ್ತು. ಇವರಲ್ಲಿ ಜೀವನವು ಹೆಚ್ಚಾಗಿ ಬೇಟೆ ಯಿಂದ ನಡೆಯುತ್ತಿದ್ದುದರಿಂದ ಇವರನ್ನು ನಿಷಾದರೆಂದು ಕರೆಯುವ ವಾಡಿಕೆ ಇದೆ. ಈ ಗುಂಪಿಗೆ ಸಿಂಹಳದೀಪದ ವೇಡರೂ, ಕೃಷ್ಣಾ ತೀರದ ಚಚುಗಳೂ, ಮಧ್ಯದೇಶದ ಗೋ೦ಡರೂ, ಕನ್ನಡ ನಾಡಿನಲ್ಲಿ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರೂ, ಗೋಪಾಲಸ್ವಾಮಿ ಮೊದಲಾದ ಬೆಟ್ಟಗಳ ಕಾಡು ಕುರುಬರೂ ಸೇರಿದ್ದಾರೆ. ಇವರು ಸುಮಾರು ಮೂವತ್ತು ಸಾವಿರ ವರುಷಗಳ ಹಿಂದೆಯೇ ಈ ದೇಶಗಳಲ್ಲಿ ನೆಲಸಿದ್ದಿರಬಹುದೆಂದು ಊಹಿಸಲು ಕಾರಣವಿದೆ.
ನಿಗೊ ಕುಲಗಳು:- ಈಗ್ಗೆ ಹತ್ತು, ಇಪ್ಪತ್ತು ಸಾವಿರ ವರ್ಷಗಳ ಕೆಳಗೆ ಆಫ್ರಿಕದ ನಿಗೊ ಬುಡಕಟ್ಟಿನ ( ಬುಷ್ ಮೆನ್ ' ಕುಲಕ್ಕೆ ಸಂಬಂಧಪಟ್ಟ ಕುಳ್ಳ ನಿಗೊ ಜನರು ತಮ್ಮ ಮಾತೃ ಸ್ಥಾನವನ್ನು ಬಿಟ್ಟು ದೋಣಿಗಳಲ್ಲಿ ಕುಳಿತು, ಏಷ್ಯಾ ಖಂಡದ ದಕ್ಷಿಣ ತೀರವನ್ನೇ ಆಶ್ರಯಿಸಿ ಪ್ರಯಾಣ ಮಾಡುತ್ತಾ ಪಾರ್ಶಿಸ್ಥಾನದಲ್ಲಿ ಕೆಲವು ಕಾಲವಿದ್ದು, ಮಲಯಾಳ, ಮನ್ನಾರ್ ಖಾರಿಯ ಉಭಯ ತೀರಗಳು, ಅಂದಮಾನ್ ದ್ವೀಪಗಳು, ಮಲಯ ಪದ್ಯಾಯ ದ್ವೀಪ ಇವುಗಳಲ್ಲಿ ಸಣ್ಣ ಗುಂಪು ಗಳಾಗಿ ನೆಲಸಿದರು. ಇವರಿಗೆ 'ನೀ ಗಿಟೊ' ಕುಲದವರೆಂದು ಹೆಸರು. ನಮ್ಮ ಕನ್ನಡ ನಾಡಿನಲ್ಲಿ ಈ ಕುಲಗಳಿಗೆ ಸಂಬಂಧಪಟ್ಟ ಲಕ್ಷಣಗಳಾವವೂ ಕಾಣುವುದಿಲ್ಲ. ಆದರೆ ಮತ್ತೆ ಕೆಲವು ಕಾಲದ ಮೇಲೆ ಅದೇ ನಿ ಕುಲಕ್ಕೆ ಸೇರಿದ ೯ ಫೆಸಿಫಿಕ್ ? ಅಥವಾ “ ಮೆಲನೇಷಿಯನ್ ' ಶಾಖೆಗೆ ಸೇರಿದ ಗುಂಪುಗಳು ಆಗೋಯದಿಂದ
ಭಾರತಕ್ಕೆ ಬಂದು ಆಸ್ಸಾಮಿನ 'ನಾಗರಲ್ಲಿಯ, ಬಿಹಾರಿಗೆ ದಕ್ಷಿಣದಲ್ಲಿರುವ ಕಾಡು ಜನರಲ್ಲಿಯೂ, ಮಲೆಯಾಳದ ಆನೆಮಲೆ ಬೆಟ್ಟಗಳಲ್ಲಿರುವ 'ಪಣಿಯನ್' (ಕಾಡರ್? ಎಂಬ ಜನರಲ್ಲಿಯೂ ಮಿಶ್ರಿತವಾದಂತೆ ಕಾಣಬರುತ್ತದೆ. ಈ ಜನರ ರಕ್ತ ಸಂಬಂಧವು ಕೆದರಿದ ಗುಂಗುರು ಕೂದಲನ್ನೂ ಬಹಳ ಕಪ್ಪಾದ ಚರ್ಮದ ಬಣ್ಣವನ್ನೂ, ಕಣ್ಣಿನ ನರಗಳಲ್ಲಿ ಹಳದಿಯ ಬಣ್ಣವನ್ನೂ, ಚಪ್ಪಟೆ ಮೂಗನ್ನೂ, ದಪ್ಪ ತುಟಿಯನ್ನೂ, ಮುಂಚಾಚಿದ ಮೂತಿಯನ್ನೂ ಉಳ್ಳ ಕಾಡು ಕುರುಬರಲ್ಲಿ ಕಾಣಬರುತ್ತದೆ. ಆದ್ದ , ರಿಂದ ನಿನ್ನೊಕುಲದ ಸೋ೦ಕು ಕನ್ನಡಿಗರಿಗೆ ಸ್ವಲ್ಪ ಮಾತ್ರ ಸೋ ಕಿಹೋಯಿ ತೆಂದು ಊಹಿಸಬೇಕಾಗಿದೆ.
ಮಲ ಹಿಂದಿಕರು:- ಭಾರತದ ನಿವಾಸಿಗಳಲ್ಲಿ ನೂರಕ್ಕೆ ತೊಂಭದ ರಷ್ಟು ಜನರು ಆರ್ಯರಿಗೆ ಸಂಬಂಧಪಟ್ಟ ಹಿ:ದೂ ಯೂರೋಪಿಕ ವಂಶಗಳಲ್ಲಿ ಮೂರು ಗುಂಪುಗಳಿಗೆ ಸೇರಿದ್ದಾರೆ. ಇವುಗಳಲ್ಲಿ ಅತ್ಯಂತ ಪ್ರಾಚೀನವಾದುದು ಮೂಲ ಹಿಂದಿಕ ಕುಲ, ಈ ಕುಲವನ್ನು ಸರ್ ಹರ್ಟ್ ರಿಸ್ಲಿ ಎಂಬ ವಿದ್ವಾಂಸರು ದ್ರಾವಿಡ ಕುಲವೆಂದು ಕರೆದು ಜನರ ಎಣಿಕೆಯಲ್ಲಿ ತಪ್ಪು ತಿಳಿವಳಿಕೆಗೆ ಅವಕಾಶ ವನ್ನು ಕೊಟ್ಟಿದ್ದರು. ಈಚಿನ ವಿಮರ್ಶೆಯಿಂದ ಈ ಮೂಲ ಹಿಂದಿಕರು ಆಕ್ಯರ ಬುಡಕಟ್ಟಿಗೆ ಸಂಬಂಧಿಸಿದವರೆಂದೂ, ಸುಮಾರು ಎಂಟು ಹತ್ತು ಸಾವಿರ ವರ್ಷಗಳ ಕೆಳಗೆ ಬೆಲೂಚಿಸ್ಥಾನದ ಮೂಲಕ ಈ ದೇಶಕ್ಕೆ ಬಂದು ಇಲ್ಲಿಯ ಎಲ್ಲಾ ಭಾಗ ಗಳಲ್ಲೂ ಹರಡಿಕೊಂಡು ನೆಲಸಿದರೆಂದೂ ತಿಳಿಯಬಂದಿದೆ. ಇವರ ಆಕಾರವು ಸುಮಾರು ಐದು ಅಡಿ ಐದು ಅಂಗುಲ ಎತ್ತರವುಳ್ಳುದಾಗಿಯೂ ಸ್ವಲ್ಪ ತೆಳ್ಳನೆಯ ಸಣ್ಣ ಮೂಳೆಗಳುಳ್ಳದ್ದಾಗಿಯೂ ಇತ್ತು. ಇವರ ತಲೆಯ, ಮುಖವೂ ಸ್ಪಲ್ಪ ಉದ್ದ, ಹಣೆಯು ಎತ್ತರ, ಗದ್ದವು ಹಿಂದು, ಮೂಗು ಎತ್ತರವಾಗಿ ಅಗಲಕ್ಕಿಂತಲೂ ಉದ್ದ ಹೆಚ್ಚಾಗಿತ್ತು. ಇವರ ಬಣ್ಣವು ಎಣ್ಣೆಗೆ: ಪು ಅಥವಾ ಹೊಂಬಣ್ಣ, ಇವರ ಕೂದಲು ಉದ್ದವಾಗಿಯೂ, ಮೃದುವಾಗಿಯೂ ಬಳುಕಿನಿಂದ ಕೂಡಿದುದಾಗಿಯೂ ಇತ್ತು. ಇವರ ಮುಖದ ಮೇಲೆಯೂ, ಎದೆಯ ಮೇಲೆಯೂ ವಿಶೇಷವಿಲ್ಲದೆ ಸ್ವಲ್ಪ ಮಟ್ಟಿಗೆ ಕೂದಲು ಬೆಳೆಯುತ್ತಿತ್ತು ಇವರ ಕಣ್ಣುಗಳೂ ಕೂದಲೂ ಕಪ್ಪುಬಣ್ಣದವು. ಈ ಮೂಲ ಹಿಂದಿಕರು ಭಾರತದ ಮೇಲೆಲ್ಲಾ ಹರಡಿ ಎಲ್ಲಾ ಪ್ರಾಂತ್ಯಗಳಲ್ಲಿಯೂ ಈಗಿನ ಭಾರತೀಯರಿಗೆ ಮೂಲಪುರುಷರಾದರು. ಹೆಚ್ಚು ಮಿಶ್ರಣವಾಗದೆ ಈಗಲೂ ಇವರು ಮಲೆಯಾಳ, ತಮಿಳು, ತೆಲಗು ದೇಶಗಳಲ್ಲಿಯೂ, ಬಿಹಾರ ಮತ್ತು ಹಿಂದೀ ರಾಷ್ಟ್ರಗಳಲ್ಲಿಯೂ ಶುದ್ಧ ರೂಪದಲ್ಲಿ ಕಾಣಬರುವರು. ಜನಸಂಖ್ಯೆಯಲ್ಲಿ ಇವರ ವಂಶಿಕರೇ ಮಿಕ್ಕ ಎಲ್ಲ ಕುಲಗಳಿಗಿಂತಲೂ ಹೆಚ್ಚಾಗಿ ಇರುವಂತೆ ಕಾಣಬರುತ್ತದೆ.
ಪಶ್ಚಿಮ ಹಿಂದಿಕರು:- ಮೂಲ ಹಿಂದಿಕರು ನೆಲಸಿದ ಒಂದೆರಡು ಸಾವಿರ ವರ್ಷಗಳ ತರುವಾಯ ಮಧ್ಯ ಏಷ್ಯದ ಕಡೆಯಿಂದಲೇ ಬಂದ ಆರ್ಯರಿಗೆ
ಸಂಬಂಧಪಟ್ಟ ಇನ್ನೊ೦ದು ಕುಲದ ಗುಂಪುಗಳು ಪಶ್ಚಿಮದಿಂದ ಬಂದು ಸಿಂಧೂ ದೇಶವನ್ನೂ , ಗುಜರಾತ್, ಮಹಾರಾಷ್ಟ್ರ, ಕರ್ಣಾಟಕ ಪ್ರಾಂತ್ಯಗಳನ್ನೂ ಅಲ್ಲಿಂದ ಪೂರ್ವಕ್ಕೆ ಮುಂದರಿದು ಓಡದೇಶ ಬಂಗಾಳಗಳನ್ನೂ ಆಕ್ರಮಿಸಿದರು. ಇವರು ಎತ್ತರದಲ್ಲಿಯೂ, ಬಣ್ಣದಲ್ಲಿಯೂ, ಮೂಲ ಹಿಂದಿಕರಂತೆಯೇ ಇದ್ದರೂ ಕೆಲವು ಸಣ್ಣ ವಿಚಾರಗಳಲ್ಲಿ ಅವರಿಂದ ಬೇರೆಯಾಗಿದ್ದರು, ಇವರ ತಲೆ ಬುರುಡೆಯೂ, ಮುಖವೂ ಗುಂಡು, ಮಗು ಎತ್ತರ, ಅಗಲ ಕಡಿಮೆ, ಎದೆಯ ಆಳವೂ, ಮೆಯ್ ಅಡ್ಡಗಲವೂ ದೊಡ್ಡದು, ಮೆಯ್ಯ ಮೇಲೆ ಕೂದಲು ಹೆಚ್ಚು. ಈ ದುಂಡು ತಲೆಯ ಪಶ್ಚಿಮ ಇಂಡಿಕರು ಗುಜರಾತಿನಲ್ಲಿ ಮಿಶ್ರಣವಿಲ್ಲದೆ ಶುದ್ಧ ರೂಪದಲ್ಲಿಯೇ ಕಾಣ ಬರುತ್ತಾರೆ. ಆದರೆ ಮಹಾರಾಷ್ಟ್ರ ಮತ್ತು ಕರ್ಣಾಟಕದಲ್ಲಿ. ಇವರು ( ಮೂಲ ಇಂಡಿಕ' ರೊಡನೆ ಬೆರತು ಹೋಗಿರುವರು ಕನ್ನಡಿಗರ ಜನಸಂಖ್ಯೆಯಲ್ಲಿ ಹೆಚ್ಚು ಭಾಗ ಈ ಎರಡು ಗುಂಪುಗಳ ಬೆರಕೆಯಿಂದಲೆ ಆಗಿದೆಯೆಂದು ಶಾಸ್ತ್ರಜ್ಞರು ಊಹಿ ಸುತ್ತಾರೆ.
ಉತ್ತರ ಇಂಡಿತರು:- ಪಶ್ಚಿಮ ಇಂಡಿಕರು ಬಂದ ಒಂದೆರಡು ಸಾವಿರ ವರ್ಷಗಳ ಕೆಳಗೆ ಆರ್ಯರ ಬುಡಕಟ್ಟಿಗೆ ಸಂಬಂಧಪಟ್ಟ ಮತ್ತೊಂದು ಗುಂಪಿನ ಜನರು ಮಧ್ಯ ಏಷ್ಯದ ಕಡೆಯಿಂದಲೇ ಹೊರಟು ವಾಯವ್ಯದ ಕಣಿವೆಗಳಲ್ಲಿ ದೂರಿ ಭಾರತದ ವಾಯವ್ಯ ಭಾಗಗಳಾದ ಕಾಶ್ಮೀರ, ಪಂಜಾಬ, ರಾಜಪುಟಾಣಗಳಲ್ಲಿ ನೆಲಸಿದರು, ಇವರು ರೂಪದಲ್ಲಿ ಬಹುಮಟ್ಟಿಗೆ ಮೆಡಿಟರೇನಿಯನ್ ಕಡಲಿನ ತೀರ ಪ್ರದೇಶದ ನಿವಾಸಿಗಳನ್ನು ಹೋಲುತ್ತಿದ್ದರು. ಇವರ ಆಕಾರವು ಎತ್ತರ, ಬಣ್ಣವು ಕೆಂಪೂ ಬಿಳ ಪೂ ಮಿಶ್ರವಾದ ಬಿಳಿಯ ಗೋದಿಯ ವರ್ಣ, ಇವರ ತಲೆಬುರುಡೆಯು ಉದ್ದ, ಮೂಗು ಎತ್ತರ, ಅದರ ಅಡ್ಡಗಲ ಕಡಮೆ, ಕಣ್ಣುಗಳೂ ಕೂದಲೂ ಕಪ್ಪು, ತಲೆಯ ಕೂದಲು ಮೃದುವಾಗಿಯೂ, ನೀಳವಾಗಿಯೂ, ಬಳುಕಿನಿಂದ ಕೂಡಿದು ದಾಗಿಯೂ ಇತ್ತು. ಇವರ ಹಣೆಯು ವಿಶಾಲವಾಗಿ ಸ್ಪಲ್ಪ ಹಿಂದಕ್ಕೆ ಬಗ್ಗಿ ತ್ತು. ಗದ್ದವು ಸ್ವಲ್ಪ ಮುಂಚಾಚಿತ್ತು. ಈ ಉತ್ತರ ಹಿಂದಿಕರು ವೇದಗಳ ಆರ್ಯರು ಬರುವದಕ್ಕೂ, ಸಿಂಧೂ ಸಂಸ್ಕೃತಿಯು ಬೆಳೆಯುವದಕ್ಕೂ ಹಿಂದೆಯೇ ಈಗಿನ ಪಂಜಾಬ್, ಸಿ೦ಧಿನ ಉತ್ತರ ಪಾರ್ಶ್ವ ಮೊದಲಾದ ಕಡೆಗಳಲ್ಲಿ ನೆಲಸಿದ್ದರು. ವೇದಗಳ ಆರ್ಯರೂ ಸಹ ಇದೇ ಗುಂಪಿನವರಾಗಿದ್ದಿರಬೇಕು. ಈ ಜನರು ಆ.ರ್1ರ ನಾಗರಿಕತೆಯನ್ನು ವೃದ್ಧಿ ಪಡಿಸಿಕೊಂಡು ಕ್ರಮೇಣ ಗುಂಪುಗುಂಪಾಗಿ ಹೊರಟು ಭಾರತದಲ್ಲೆಲ್ಲಾ ಆರ್ಯರ ನಾಗರಿಕತೆಯನ್ನು ಹರಡುತ್ತಾ ಅಲ್ಲಲ್ಲಿ ಹೋಗಿ ನೆಲಸಿದರು. ಇವರ ವಲಸೆಯ ಸ್ನೇಹ ರೂಪದಲ್ಲಿ ನಡೆಯಿತು. ಇವರಲ್ಲಿ
ಬ್ರಾಹ್ಮಣರು ವಿದ್ಯೆಯನ್ನೂ , ಕ್ಷತ್ರಿಯರು ರಾಜಕಾರ್ಯ ಶೌರ್ಯವನ್ನೂ, ವೈಶ್ಯರು ವ್ಯಾಪಾರ ಕುಶಲವಿದ್ಯೆಗಳನ್ನೂ, ಇತರರು ತಮತಮಗೆ ಸಂಬಂಧಪಟ್ಟ ಕೌಶಲ್ಯ
- ೧೧ -
ಗಳನ್ನು ಒಯ್ಯುತ್ತ ಪಶ್ಚಿಮ ಹಿಂದಿಕ ಮತ್ತು ಮೂಲ ಹಿಂದಿಕ ಕುಲಗಳು ನೆಲಸಿದ್ದ ಭಾಗಗಳಿಗೆ ಹೋಗಿ ಅವರ ಮಧ್ಯೆ ಸೇರಿಹೋದರು. ಕರ್ಣಾಟಕದ ಉತ್ತಮ ವರ್ಣಗಳಲ್ಲಿ ಸ್ವಲ್ಪ ಮಟ್ಟಿಗೆ ಈ ಜನರ ರಕ್ತವು ಹರಿಯುತ್ತಿದೆಯೆಂದೂ, ಕನ್ನಡಿಗರಲ್ಲಿ ಕೆಲವು ಜಾತಿಗಳು ಹೆಚ್ಚು ಕಡಿಮೆ ಈ ಕುಲಕ್ಕೆ ಸೇರಿದ್ದುವೆಂದೂ, ನೀಲಗಿರಿಯಲ್ಲಿ ಪೂರ್ವದಿಂದಲೂ ನೆಲಸಿಬಂದಿರುವ ತೊದವರೂ ಸಹ ಇದೇ ಗುಂಪಿಗೆ ಸೇರಿದವ ದೆಂದೂ ಶಾಸ್ತ್ರಜ್ಞರು ಹೇಳುತ್ತಾರೆ.
ಕರ್ಣಾಟಕರ ವಂಶ:- ಮೇಲೆ ಹೇಳಿರುವ ರೀತಿಯಲ್ಲಿ ಭಾರತದಲ್ಲಿರುವ ಎಲ್ಲಾ ಬುಡಕಟ್ಟುಗಳೂ ಕರ್ಣಾಟಕದಲ್ಲಿವೆಯೆಂದೂ ಆದರೆ ಕನ್ನ ಡಿಕರು ಹೆಚ್ಚಾಗಿ ಮೂಲ ಹಿಂದಿಕ, ಪಶ್ಚಿಮ ಹಿಂದಿಕ, ಮತ್ತು ಉತ್ತರ ಹಿಂದಿಕ ಕುಲಗಳ ಮಿಶ್ರಣ ದಿಂದ ಹುಟ್ಟಿದವರೆಂದು ಶಾಸ್ತ್ರಜ್ಞರು ಊಹಿಸಿರುವರು. ಈ ವಿಷಯದಲ್ಲಿ ನನಗೆ ತೋರುವ ಒಂದಂಶವನ್ನು ಹೇಳಲೇಬೇಕಾಗಿದೆ. ಮಿಶ್ರಿತ ವಂಶಗಳಲ್ಲಿ ವ್ಯತ್ಯಸ್ತ ರೂಪಗಳೂ, ಹೆಚ್ಚಾದ ವ್ಯತ್ಯಾಸಗಳೂ ಕಾಣಬರಬೇಕೆಂದು ಮೆಂಡಲ್ ಎಂಬ ಶಾಸ್ತ್ರಜ್ಞರು ಹೇಳಿದ್ದಾರೆ. ಈ ವ್ಯತ್ಯಾಸಗಳನ್ನು ಸೂಕ್ಷ್ಮವಾದ ಆಯುಧಗಳಿಂದ ಹಿಡಿದು ಕನ್ನಡಿಗರು ಭಿನ್ನ ವಂಶಗಳ ಮಿಶ್ರಣದಿಂದ ಹುಟ್ಟಿದವರೇ ಅಥವಾ ಹೆಚ್ಚಾಗಿ ಒಂದೇ ವಂಶಕ್ಕೆ ಸೇರಿದವರೇ ಎಂಬ ವಿಷಯವನ್ನು ಮುಂದೆ ವಿಮರ್ಶಿಸಬೇಕಾಗಿದೆ. ಆದರೆ ನನ್ನ ಅನುಭವದಲ್ಲಿ ಎರಡನೆಯ ಸಿದ್ದಾಂತವೂ ಸಾಧ್ಯವೆಂದು ತೋರುತ್ತದೆ. ಏಕೆಂದರೆ ಕನ್ನಡಿಗರ ರೂಪವನ್ನು ಸಾಮಾನ್ಯವಾಗಿ ಹೀಗೆಂದು ವರ್ಣಿಸಬಹುದು.
ಎತ್ತರ ಸರಾಸರಿ ಗಂಡಸು ೫ ೬”
೨ 1, ಹೆಂಗಸು ೫' s” ತಲೆಬುರುಡೆಯೂ ಮುಖವೂ ಹೆಚ್ಚು ಉದ್ದ ವೂ ಅಲ್ಲ, ಹೆಚ್ಚು ಗುಂಡೂ ಅಲ್ಲ ಅಂದರೆ “ಸಿಫಾಲಿಕ್ ಇಂಡೆಕ್ಸ ಸುಮಾರು ೭೯, ೮೦, ಬಣ್ಣವು ಕಂದಿದ ಗೋದಿಯ ಬಣ್ಣ. ಪ್ರಾಯಶಃ ಎಲ್ಲ ವಿಷಯಗಳಲ್ಲಿಯೂ ಮೂಲ ಹಿಂದಿಕರಿಗೂ, ಪಶ್ಚಿಮ ಹಿಂದಿಕರಿಗೂ ಮಧ್ಯಸ್ತವಾದ ರೂಪ, ಈ ರೂಪವು ಎರಡು ಕುಲಗಳ ಮಿಶ್ರಣ ದಿಂದ ಆಯಿತೆಂಬುದು ಒಂದು ಪಕ್ಷವಾದರೆ ಇನ್ನೊ೦ದು ಊಹೆಯನ್ನು ಮಾಡ ಬಹುದಾಗಿದೆ. ಏನೆಂದರೆ ಭಾರತದಲ್ಲಿರುವ ಮೂಲ ಹಿಂದಿಕ, ಪಶ್ಚಿಮ ಹಿಂದಿಕ ಮತ್ತು ಉತ್ತರ ಹಿಂದಿಕ ಕುಲಗಳು ಆದಿಯಲ್ಲಿ ಒಂದೇ ಕುಲದಿಂದ ಹೊರಟ ವಾಗಿಯೂ, ಸನ್ನಿವೇಶ, ದೇಶ, ಆಹಾರ ಮೊದಲಾದುವುಗಳ ಗುಣದಿಂದ ಇವು ಗಳು ಸ್ವಲ್ಪ ವ್ಯತ್ಯಸ್ತವಾಗಿ ಈಚೆಗೆ ಕಾಣಬರುವುದಾಗಿಯ ಏಕೆ ಇರಬಾರದು ? ಇವು ಮೂರಕ್ಕೂ ಮೂಲವಾದ ಕುಲವು ಈಗೂ ಶುದ್ಧವಾದ ರೀತಿಯಲ್ಲಿ ಕನ್ನಡ
ದೇಶ ಮೊದಲುಗೊಂಡು ಮಧ್ಯಪ್ರಾಂತ್ಯದ ಮೂಲಕ ಈಗಿನ ಹಿಂದೀ ಪ್ರಾಂತ್ಯದ ವರೆಗೂ ಹಬ್ಬಿಕೊಂಡಿದೆ. ಇದೇ ಮೂಲ ಹಿಂದಿಕ ಕುಲವಾಗಿ ಕನ್ನಡಿಗರೇ ಇದರ ಮೂಲ ರೂಪವಾಗಿ ಇರುವರೆಂದು ಏಕೆ ನಿರ್ಧರಿಸಬಾರದು ? ಈ ಸಿದ್ಧಾಂತವನ್ನು ಒಪ್ಪಿದರೆ ಕನ್ನಡಿಗರು ಸುಮಾರು ಶೇಕಡ ೯೯ ರಷ್ಟು ಆರ್ಯ ಅಥವಾ ಹಿಂದೂ ಐರೋಪ್ಯ ಬುಡಕಟ್ಟಿಗೆ ಸೇರಿದವರೆಂದೂ, ಅದರ ಶಾಖೆಯಾದ ಮೂಲ ಭಾರತ ರೂಪವನ್ನು ಬಹುಮಟ್ಟಿಗೆ ಶುದ್ದವಾಗಿ ಉಳಿಸಿಕೊಂಡು ಬಂದಿರುವರೆಂದೂ ನಾವು
ಹೇಳಬಹುದಾಗಿದೆ,
೨. ಕರ್ಣಾಟಕದ ಕುಶಲತೆಯ ಪೂರ್ವಚರಿತ್ರೆ ,
ಪೂರ್ವ ಚರಿತ್ರೆ:- ಚರಿತ್ರಕಾರರು ಚರಿತ್ರೆ, ಆದಿ ಚರಿತ್ರೆ (Proto-history) ಮತ್ತು ಪೂರ್ವ ಚರಿತ್ರೆ ( Pre-history ) ಗಳೆಂಬ ಪದಗಳನ್ನು ಉಪಯೋಗಿ ಸುತ್ತಾರೆ. ಕರ್ಣಾಟಕಕ್ಕೆ ಸಂಬಂಧಪಟ್ಟಂತೆ ಈ ಪದಗಳಿಗೆ ಹೀಗೆಂದು ಕಾಲ ನಿರ್ಣಯ ಮಾಡಬೇಕಾಗಿದೆ. ಕ್ರಿ. ಶ. ೩೧೦ ರ ಈಚೆಗೆ ಚರಿತ್ರೆ, ಕ್ರಿ. ಪೂ. ೩೦೦ ರಿಂದ ಕ್ರಿ. ಶ. ೩೦೦ ರ ವರೆಗೆ ಆದಿ ಚರಿತ್ರೆ, ಕ್ರಿ. ಪೂ. ೩೦೦ ರಿಂದ ಹಿಂದಕ್ಕೆ ಪೂರ್ವ ಚರಿತ್ರೆ. ಈ ಮೂರು ಕಾಲಗಳಲ್ಲಿ ಕರ್ಣಾಟಕದ ಕುಶಲತೆಯು ಹೇಗೆ ಅಭಿವೃದ್ಧಿ ಯಾಗಿದೆಯೆಂಬುದನ್ನು ಶಾಸ್ತ್ರದೃಷ್ಟಿಯಿಂದ ವಿಮರ್ಶಿಸಬೇಕಾಗುತ್ತದೆ. ಈ ವಿಚಾರಗಳಲ್ಲಿ ಭಾಷೆಯ ಚರಿತ್ರೆಯೂ ಒಂದು. ಇದನ್ನು ಸ್ವಲ್ಪವಾಗಿ ಜ್ಞಾಪಿಸಿ ಕೊಳ್ಳೋಣ.
ಭಾರತದ ಭಾಷೆಗಳು: ಭಾಷಾಶಾಸ್ತ್ರಜ್ಞರು ಭಾರತದ ಹಳೆಯ ಭಾಷೆ ಗಳನ್ನು ಮೂರು ಗುಂಪಾಗಿ ವಿಂಗಡಿಸಿರುವರು. ಇವುಗಳಲ್ಲಿ ಆಸ್ಟಿಕ್ ಗುಂಪಿಗೆ ಸೇರಿದ ಭಾಷೆಗಳು, ಮಧ್ಯಪ್ರಾಂತ್ಯದ ಕಾಡುಗಳಲ್ಲಿ ವಾಸ ಮಾಡುವ ಅನಾಗರಿಕರಾದ ಕೆಲವು ಕಾಡು ಜನರಲ್ಲಿ ಬಳಕೆಯಲ್ಲಿವೆ. ಈ ಭಾಷೆಗಳು ಪ್ರಾಯಃ ಪ್ರಥಮ ಭಾರ ತೀಯರಾದ ನಿಷಾದಕುಲಗಳವರು ಈ ದೇಶಕ್ಕೆ ಬಂದಾಗ ಅವರ ಕೂಡ ಬಂದು ವಾಗಿರಬೇಕು. ಕರ್ಣಾಟಕದಲ್ಲಿ ವಾಸಮಾಡುವ ನಿಷಾದ ಕುಲದ ಜನರು ಈ ಭಾಷೆಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಸುತ್ತಮುತ್ತಲಿನ ಮೂಲ ಹಿಂದಿಕ ಜನರಿಂದ ಇವರು ದ್ರಾವಿಡ ಭಾಷೆಗಳನ್ನು ಕಲಿತು ತಮ್ಮ ಮೂಲ ಭಾಷೆಯನ್ನೆ ಮರೆತಂತೆ ತೋರುತ್ತದೆ ಚನ್ನಾಗಿ ಭಾಷಾಶಾಸ್ತ್ರವನ್ನು ಕಲಿತ ವಿದ್ವಾಂಸರು ಕರ್ಣಾಟಕದ ಎಲ್ಲಾ ಭಾಷೆಗಳನ್ನೂ ಪರೀಕ್ಷಿಸಿ ನೋಡಿದಲ್ಲಿ ಈ ಪ್ರಾಚೀನ ಆಸ್ಥಿಕ ಭಾಷೆಗಳ ಕುರುಹುಗಳೇನಾದರೂ ದೊರೆಯುವವೋ ಎಂಬುದನ್ನು ನೋಡಬೇಕು. ಪ್ರಕೃತಕ್ಕೆ ಇಲ್ಲವೆಂದೇ ಊಹಿಸಿಕೊಳ್ಳಬೇಕು.
ಆರ್ಯಕ ಭಾಷೆಗಳು: ತರುವಾಯ ನಮ್ಮ ದೇಶಕ್ಕೆ ಬಂದ ಭಾಷೆಯು ಮೂಲದ್ರಾವಿಡ ಭಾಷೆ, ಈ ಮೂಲ ದ್ರಾವಿಡ ಭಾಷೆಯನ್ನು ಸುಮಾರು ಕ್ರಿ. ಪೂ. ಆರು ಸಾವಿರ ಅಥವಾ ಎಂಟು ಸಾವಿರದಲ್ಲಿ ಮೂಲಹಿಂದಿಕರು ತಮ್ಮ ಕೂಡ ತಂದದ್ದಾಗಿ ತೋರುತ್ತದೆ. ಈ ಭಾಷೆಯೂ ಯುರೋಪಿನ ಉತ್ತರದ ಫಿನ್ಲೈ೦ಡಿನಿಂದ ಮುಂಗೋಲಿಯಾ ದೇಶದ 4 ಉಗ್ರ ' ಪುರಿಯ ವರೆಗೂ ವಿಸ್ತರಿ ಸಿರುವ - ಫಿನ್ನೊ-ಉಗ್ರಿಯನ್ ' ಭಾಷೆಗಳ ಗುಂಪಿಗೆ ಸಂಬಂಧಪಟ್ಟಿದೆಯೆಂದೂ, ಆದಿಯಲ್ಲಿ ಮೂಲ ಆರ್ಯಕ ಭಾಷೆಯೊಂದಕ್ಕೆ ಇದು ಸಂಬಂಧಿಸಿದ್ದರೂ, ಇರಬಹು
ಒಂದಲ್ಲಿರುವ
ದೆಂದೂ ಊಹಿಸಲ್ಪಟ್ಟಿದೆ. ಹೀಗೆ ಬಂದ ಮೂಲ ದ್ರಾವಿಡ ಭಾಷೆಯು ಭಾರತ ದಲ್ಲೆಲ್ಲಾ ಹರಡಿಕೊಂಡಿತು, ಬೆಲೂಚಿಸ್ಥಾನದ : ಬ್ರಾ ” ಜನರು ದ್ರಾವಿಡ ಭಾಷೆಯೊಂದನ್ನು ಈಗಲೂ ಆಡುತ್ತಿರುವರು. ಇದಲ್ಲದೆ ಭಾಷಾಶಾಸ್ತ್ರ ಪ್ರವೀಣ ರಾದ ಮತ್ತು ಕಾಶ್ಮೀರದ ಜಮ್ಮು ಕಾಲೇಜಿನಲ್ಲಿ ಪ್ರೊಫೆಸರರಾದ ನನ್ನ ಮಿತ್ರರಾದ ಪ್ರೊಫೆಸರ ಸಿದ್ದೇಶ್ವರವರ್ಮರವರು ಕಾಶ್ಮೀರದ ಆಗ್ನೆಯ ಭಾಗದಲ್ಲಿ ಬೆಟ್ಟ ಗುಡ್ಡ ಗಳ ಗ್ರಾಮದಲ್ಲಿ ದ್ರಾವಿಡ ಭಾಷೆಗಳ ಉಪಯೋಗದ ಕುರುಹುಗಳು ಚರ್ಮಕಾರರೇ ಮೊದಲಾದ ಜನರಲ್ಲಿ ಉಳಿದಿರುವುದನ್ನು ಕಂಡುಹಿಡಿದಿದ್ದಾರೆ. ಇದರಿಂದ ಕಾಶ್ಮೀರ ದಲ್ಲಿಯ ಆರ್ಯರ ಆಗಮನಕ್ಕೆ ಹಿಂದೆ ದ್ರಾವಿಡ ಭಾಷೆಗಳು ಪ್ರಚಾರದಲ್ಲಿದ್ದು ವೆಂಬುದು ತಿಳಿಯಬರುತ್ತದೆ. ಕೆಲವು ಕಾಲದ ನಂತರ ಉತ್ತರ ದೇಶಕ್ಕೆ ನುಗ್ಗಿ ಬಂದ ಆರ್ಯರ ಭಾಷೆಗಳು ವಿಶೇಷ ಪ್ರಚಾರದಲ್ಲಿ ಬರಲು ದ್ರಾವಿಡ ಭಾಷೆಗಳು ಹಿಮ್ಮೆಟ್ಟು, ಕಡೆಗೆ ಈಗಿನ ದಖನ್ ಪ್ರಾಂತ್ಯದಲ್ಲಿ ಮಾತ್ರ ಉಳಕೊಂಡವು. ಈ ಭಾಷೆಗಳ ಪದಗಳ ವಿಮರ್ಶೆ ಯೆ೦ದ ನಮಗೆ ಹೀಗೆಂದು ತಿಳಿಯಬರುತ್ತದೆ. ಸುಮಾರು ಕ್ರಿ. ಪೂ. ೬೦೦ ರ ವರೆಗೆ ದ್ರಾವಿಡ ಭಾಷೆಗಳು ತಕ್ಕಮಟ್ಟಿಗೆ ಶುದ್ಧವಾಗಿಯೇ ಇದ್ದು ವು. ಆ ಕಾಲಕ್ಕೆ ಉತ್ತರದಿಂದ ಸಂಸ್ಕೃತ ಪ್ರಾಕೃತ ಭಾಷೆಗಳನ್ನಾಡುವ ಜನರ ಸಂಬಂಧ ಉಂಟಾಗಿ ಆ ಭಾಷೆಗಳ ಪದಗಳು ಹೆಚ್ಚಾಗಿ ಉಪಯೋಗಕ್ಕೆ ಬಂದುವು. ಕ್ರಿ. ಪೂ. ೩೦೦ ರಿಂದ ಕ್ರಿ. ಶ. ೩೦೧ ರ ವರೆಗೆ ಬೌದ್ಧ ಮತದ ಪ್ರಾಬಲ್ಯ ಕಾಲದಲ್ಲಿ ವಿಶೇಷವಾಗಿ ಪ್ರಾಕೃತ ಪದಗಳು ಕನ್ನಡದಲ್ಲಿ ಸೇರಿದುವು. ಸುಮಾರು ಕ್ರಿ. ಶ. ೨೦೦ ರಿಂದ ಪೌರಾಣಿಕ ಹಿಂದೂ ಮತವು ಹರಡಿ ಕನ್ನಡ ನಾಡಿನಲ್ಲಿ ಸಂಸ್ಕೃತದ ಅಭ್ಯಾಸವು ಹೆಚ್ಚಿ ವಿಶೇಷವಾಗಿ ಸಂಸ್ಕೃತ ಪದಗಳನ್ನೂ ಉಪಯೋಗಿ ಸುವ ಅಭ್ಯಾಸವು ಬಳೆಯಿತು. ಹೀಗೆ ಪ್ರಕೃತ ಸಂಸ್ಕೃತ ಪದಗಳ ಎರವಿನಿಂದ ಪರಿಪುಷ್ಟವಾದ ಕನ್ನಡ ಭಾಷೆಯು ಸುಮಾರು ಕ್ರಿಸ್ತಾಬ್ಬ ನಾಲ್ಕನೆಯ ಶತಮಾನ ದಿಂದ ಅಂದರೆ ಗಂಗ, ಕದಂಬ, ವಾಕಾಟಕರ ಕಾಲದಿಂದ ಉಪಯೋಗದಲ್ಲಿ ಬಂದಿತು.
ದ್ರಾವಿಡ ಭಾಷೆಗಳ ಒಡೆತ:- ಇದಲ್ಲದೆ ನೈಸರ್ಗಿಕ ಮತ್ತು ರಾಜಕೀಯ ಕಾರಣಗಳಿಂದ ದ್ರಾವಿಡ ಭಾಷೆಯಲ್ಲಿ ಕವಲುಗಳು ಒಡೆದು ಬೇರೆ ಬೇರೆ ಭಾಷೆಗಳು ಹುಟ್ಟಿಕೊಂಡವು. ಇದು ನಡೆದ ಕಾಲವನ್ನು ಈಗ ಕೇವಲ ಊಹೆ ಮಾತ್ರದಿಂದ ಹೇಳಬೇಕಾಗಿದೆ. ಕ್ರಿ ಪೂ. ಸು. ೩೦೦ ರರಲ್ಲಿ ತೆಲಗು ಭಾಷೆಯು ಮೊದಲು ಒಡೆದಿರಬೇಕು. ತರುವಾಯ ಕ್ರಿ. ಶ. ಅಥವಾ ಕ್ರಿ. ಪೂ. ಒಂದನೆಯ ಶತಮಾನದಲ್ಲಿ ಕನ್ನಡವೂ ತಮಿಳೂ ಬೇರೆಯಾಗಿರಬೇಕು, ಮಲೆಯಾಳವಂತೂ ಹಳೆಯ ತಮಿಳಿನಿಂದ ಸುಮಾರು ೯-೧೦ ನೆಯ ಶತಮಾನಕ್ಕೆ ಒಡೆಯಿತು. ಅನೇಕರಿಗೆ ಈ ದ್ರಾವಿಡ ಭಾಷೆಗಳಲ್ಲಿ ಕೆಲವು ತಪ್ಪು ತಿಳಿವಳಿಕೆ ಇದೆ. ತಮಿಳು
-
೧೫
-
4
ಭಾಷೆಯು ಶುದ್ದ ದ್ರಾವಿಡ ಭಾಷೆಯನ್ನು ಹೆಚ್ಚಾಗಿ ಉಳಿಸಿಕೊಂಡಿದೆಯೆಂದೂ ಆದ್ದರಿಂದ ಇತರ ದ್ರಾವಿಡ ಭಾಷೆಗಳು ತಮಿಳಿನಿಂದ ಒಡೆದ ಕವಲುಗಳೆಂದೂ ಕೆಲ ವರು ಹೇಳುವ ವಾಡಿಕೆಯುಂಟು. ಆದರೆ ಭಾಷಾಶಾಸ್ತ್ರದ ರೀತ್ಯಾ ವಿಮರ್ಶೆ ಮಾಡಿ ನೋಡಿದರೆ ಮೂಲ ದ್ರಾವಿಡ ಭಾಷೆಯ ಅನೇಕ ಕುರುಹುಗಳು ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಉಳಿದಿರುವುದಾಗಿಯೂ, ತಮಿಳಿನಲ್ಲಿ ಮಾರ್ಪಾಟಾಗಿರುವುದಾಗಿಯೂ, ಕಾಣಬರುತ್ತದೆ, ಇದರಿಂದ ತೆಲಗು, ಕನ್ನಡ, ತಮಿಳು ಮೂರೂ ಸಮನಾಗಿ ಮೂಲ ದ್ರಾವಿಡಭಾಷೆಯ ಮಕ್ಕಳಾಗಿರುವುದೇ ಹೊರತು ತಮಿಳಿನಿಂದ...ಈ ...ಭಾಷೆಗಳು ಹುಟ್ಟಿದವೆಂದು ಹೇಳಲು ಅವಕಾಶವಿಲ್ಲ. ಹೀಗೆ ಕನ್ನಡವು ಸುಮಾರು ಎರಡು ಸಾವಿರ ವರ್ಷಗಳಿಂದಲೂ ಜನರು ಆಡುತ್ತಿರುವ ಭಾಷೆ ಇದು ಒಡೆದುದು ದೇಶ ವಿಭೇದದಿಂದ, ಕರುನಾಡಿನ ಜನರಿಗೂ ತಮಿಳು ದೇಶದ ಜನರಿಗೂ ಮಧ್ಯೆ ಪೂರ್ವ ಘಟ್ಟಗಳ ಮೂಲಕ ಜನ ಸಂಚಾರವು ಬಹಳ ಹೆಚ್ಚಾಗಿಲ್ಲದುದರಿಂದಲೂ ದಖನ್ ದಿಣ್ಣೆಯು ಮೌರ್ಯ, ಶಾತವಾಹನ ಮೊದಲಾದ ಚಕ್ರಾಧಿಪತ್ಯಗಳ ಅಧೀನದಲ್ಲ, ತಮಿಳು ದೇಶವು ಚೋಳ, ಪಾಂಡ್ಯರಾಜರ ಕೈಯಲ್ಲಿ ಅನೇಕ ಶತಮಾನಗಳ ವರೆಗೆ ಇದ್ದುದರಿಂದ ದಿಣ್ಣೆಯ ದ್ರಾವಿಡರಿಗೂ ಘಟ್ಟದ ಕೆಳಗಣ ಬಯಲಿನ ದ್ರಾವಿಡ ರಿಗೂ ವ್ಯತ್ಯಾಸವು ಹುಟ್ಟಿತು. ಹೀಗೆಂದು ಭಾಷಾಶಾಸ್ತ್ರದ ಮೂಲಕ ನಮ್ಮ ಪೂರ್ವ
ಚರಿತ್ರೆಗೆ ಕೆಲವು ವಿಷಯಗಳು ತಿಳಿಯಬರುತ್ತವೆ.
ಆರ್ಯರ ಸಂಬಂಧ : -- ಆರ್ಯರಿಗೂ ಕರ್ಣಾಟಕಕ್ಕೂ ಯಾವಾಗ ಸಂಬಂಧವಾಯಿತೆಂಬುದನ್ನು ಕುರಿತು ಸರ್ ರಾಮಕೃಷ್ಣ ಭಂಡಾರರ್ ಅವರ ಊಹೆಯು ಹೀಗೆಂದು ಇತ್ತು. ಏನಂದರೆ ವೈಯಾಕರಣಿಯಾದ ಪಾಣಿನಿಯು ತನ್ನ
ಅಷ್ಟಾಧ್ಯಾಯದಲ್ಲಿ ದಕ್ಷಿಣ ದೇಶದ ವಿಚಾರದಲ್ಲಿ ತನ್ನ ಅಜ್ಞಾನವನ್ನು ತೋರ್ಪಡಿ ಸಿರುವನು. ಪಾಣಿನಿಯು ಸುಮಾರು ಕ್ರಿ. ಪೂ. ೬೦೦ ರರಲ್ಲಿ ಇದ್ದುದರಿಂದ ಆ ವೇಳೆಗೆ ಉತ್ತರ ದೇಶದ ಜನಗಳಿಗೆ ಕರ್ಣಾಟಕವನ್ನೊಳಗೊಂಡ ದಕ್ಷಿಣದೇಶದ ವಿಚಾರವು ತಿಳಿದಿರಲಿಲ್ಲ. ಆದರೆ ಸುಮಾರು ಕ್ರಿ. ಪೂ. ೩೦೦ ರರಲ್ಲಿದ್ದ ಕಾತ್ಯಾಯ ನನೂ, ಸು. ಕ್ರಿ. ಪೂ. ೧೭೦ ರಲ್ಲಿದ್ದ ಪತಂಜಲಿಯೂ ತಮ್ಮ ವ್ಯಾಕರಣ ಶಾಸ್ತ್ರದಲ್ಲಿ ದಕ್ಷಿಣದೇಶಕ್ಕೆ ಸಂಬಂಧಪಟ್ಟ ಉದಾಹರಣೆಗಳನ್ನೂ ಎತ್ತಿ ಹೇಳಿರುವರು, ಆದುದ ರಿಂದ ಸುಮಾರು ಕ್ರಿ. ಪೂ. ಆರನೆಯ ಶತಮಾನದಲ್ಲಿ ಆರ್ಯರು ಮೊದಲು ದಕ್ಷಿ ಣಕ್ಕೆ ಬಂದರೆಂದು ಸರ್ ರಾಮಕೃಷ್ಣರು ಹೇಳಿದ್ದಾರೆ. ಆದರೆ ಈ ಸಿದ್ದಾಂತವನ್ನು ನಾವು ಒಪ್ಪುವದಕ್ಕೆ ಕೆಲವು ಅಡಚಣಿಗಳಿವೆ. ರಾಮಾಯಣದ ಕಥೆಯು ಕ್ರಿ. ಪೂ. ಸುಮಾರು ೧೨೦೦ ರಲ್ಲಿ ಮಹಾಭಾರತದ ಕಥೆಯು ಕ್ರಿ. ಪೂ. ಸು. ೯೦೦ ರಲ್ಲ ನಡೆದುವೆಂದು ಪಾರ್ಜಿಟರ್ ಮೊದಲಾದ ವಿದ್ವಾಂಸರು ಹೇಳಿದ್ದಾರೆ. ಈ ವಿಚಾರ ಗಳು ನಡೆದ ಕಾಲವು ಈ ಕಾಲಗಳಿಗಿಂತಲೂ ಹಿಂದೆಯೇ ಹೊರತು ಮುಂದೆಯಲ್ಲ.
ಅಂದರೆ ರಾಮಾಯಣ ಭಾರತಗಳ ಕಾಲದಲ್ಲಿ ಕರ್ಣಾಟಕಕ್ಕೂ ಉತ್ತರ ದೇಶಕ್ಕೂ ಏನೂ ಸಂಬಂಧವಿರಲಿಲ್ಲವೇ ಎಂದು ಕೇಳಬಹುದು. ಕರ್ಣಾಟಕದಲ್ಲಿ ಕಿಂಧಾ ನಗರವೇ ಮೊದಲಾದ ಎಡೆಗಳಲ್ಲಿ ರಾಮನ ಸಂಬಂಧದ ಕಥೆಗಳು ಅನೇಕವಾಗಿವೆ. ಇನ್ನು ಕೆಲವೆಡೆಗಳಲ್ಲಿ ಮಹಾಭಾರತದ ಕಥೆಗಳೂ ಸಂಬಂಧಿಸಿವೆ. ಇವುಗಳಿಂದ ನಾವು ಊಹಿಸಬೇಕಾದುದೇನಂದರೆ ರಾಮಾಯಣ ಮಹಾಭಾರತಗಳ ಕಾಲದಿಂದಲೂ ಆರ್ಯರಿಗೂ ಕರ್ಣಾಟಕಕ್ಕೂ ಸಂಬಂಧವಿತ್ತೆ೦ದೂ ಕ್ರಿ. ಪೂ. ಸು. ೬೦೦ ರ ತರು 'ವಾಯ ಈ ಸಂಬಂಧವು ಹೆಚ್ಚಿ ಉತ್ತಮ ವರ್ಣದ ಅನೇಕ ಜನರು ಬಹುಸಂಖ್ಯೆ
ಯಲ್ಲಿ ದಕ್ಷಿಣಕ್ಕೆ ಬಂದು ನೆಲಸತೊಡಗಿದರೆಂದೂ ತಿಳಿಯಬೇಕು. ಅಂದರೆ ಪುರಾಣ ಮತ್ತು ಸಂಸ್ಕೃತ ವಾಲ್ಮೀಯ ರೀತ್ಯಾ ನೋಡಿದಲ್ಲಿ ಬ್ರಾಹ್ಮಣ ಮತ್ತು ಉಪನಿಷತ್ತು ಗಳ ಕಾಲದಿಂದಲೂ ಈ ಸಂಬಂಧವು ಇದ್ದು ಸುಮಾರು ೬ನೆಯ ಶತಮಾನದಿಂದ ಇದು ಹೆಚ್ಚಾದಂತೆ ತೋರಿಬರುತ್ತದೆ.
ಇತಿಹಾಸ ಶೋಧನೆಯ ಹೊಸ ಮಾರ್ಗಗಳು ಮೇಲೆ ಹೇಳಿದ ವಿಷಯಗಳೆಲ್ಲವೂ ಹಳೆಯ ರೀತಿಯಲ್ಲಿ ಗ್ರಂಥ, ಭಾಷೆ ಮೊದಲಾದುವನು ವಿಮರ್ಶಿಸಿ ಸಂಗ್ರಹಿಸಿದ ವಿಷಯಗಳು, ಆದರೆ ಶೋಧನೆಯ ಕ್ರಮವು ಇತ್ತೀಚೆಗೆ ಹೊಸ ಮಾರ್ಗಗಳನ್ನು ಅವಲಂಬಿಸಿದೆ. ಭೂಶೋಧನೆ ಎಂದ ಅನೇಕ ಹೊಸ ವಿಷಯಗಳು ಹೊರಸಟ್ಟು ಮನುಷ್ಯನ ಪೂರ್ವ ಚರಿತ್ರೆಗೆ ಹೊಸ ಸಾಮಗ್ರಿಗಳನ್ನು ಹಿಡಿದುಕೊಟ್ಟಿವೆ. ಈ ಹೊಸ ಮಾರ್ಗಗಳನ್ನು ಅವಲಂಬಿಸ ದಿದ್ದರೆ ಭಾರತದ ಚರಿತ್ರೆಯಾಗಲಿ, ಕರ್ಣಾಟಕದ ಚರಿತ್ರೆಯಾಗಲಿ ಶಾಸ್ತ್ರೀಯ ರೀತಿಯಲ್ಲಿ ವೃದ್ಧಿಯಾಗುವಂತಿಲ್ಲ. ಈ ಹೊಸ ಮಾರ್ಗಗಳ ದೃಷ್ಟಿಯಿಂದ ಕರ್ಣಾ ಟಕದ ಪೂರ್ವ ಚರಿತ್ರೆಯನ್ನು ವಿಮರ್ಶಿಸಿ ನೋಡೋಣ.
- ಶಿಲಾಯುಗಗಳು: -- ವಾನರ ರೂಪದಿಂದ ಮನುಷ್ಯರೂಪವು ಹುಟ್ಟು ವಾಗ ಅವನ ಮಿದುಳು ವಿಶೇಷವಾಗಿ ದೊಡ್ಡದಾಗುತ್ತಲೂ, ಅವನ ಶರೀರವು ಗೂನಿ ಲ್ಲದೆ ನೆಟ್ಟಗೆ ನಿಲ್ಲುತ್ತಲೂ, ಅವನ ಕಾಲುಗಳು ಓಡುವದಕ್ಕೆ ಸಹಾಯಕವಾಗಿ ಉದ್ದವೂ ಬಲವೂ ಆಗುತ್ತಲೂ, ಅವನ ಕೈಗಳು ಪದಾರ್ಥಗಳನ್ನು ಹಿಡಿಯುವ ದಕೂ, ಮುಟ್ಟಿ ನೋಡುವುದಕ್ಕೂ, ಎಸೆಯುವದಕ್ಕೂ ತಕ್ಕಂತೆ ಸೂಕ್ಷ್ಮ ವಾಗು ತಲೂ ಬಂದವು. ಈಗ್ಗೆ ಸುಮಾರು ಒಂದು ಲಕ್ಷ ವರ್ಷಗಳ ಹಿಂದೆಯೇ ವಿಕೃತ ರೂಪಗಳುಳ್ಳ ಕುನರರು ಗಿಡಗಳ ರೆಂಬೆಗಳನ್ನೂ ಪ್ರಾಣಿಗಳ ಎಲಬುಗಳನ್ನೂ , ಒಡೆದು ಹರಿತವಾದ ಅಥವಾ ಮೊನೆಯಾದ ಕಲ್ಲಿನ ಚೂರುಗಳನ್ನೂ ಆಯುಧಗಳಾಗಿ ಉಪ ಯೋಗಿಸಹತ್ತಿದರು. ಕಾಲಕ್ರಮೇಣ ಈ ಆಯುಧಗಳಿಗೆ ಬೇರೆ ಬೇರೆಯಾದ ಪರಿ ಪ್ಯಾರಗಳನ್ನು ಮಾಡಿ ಉಪಯುಕ್ತ ರೂಪಗಳನ್ನು ಕೊಟ್ಟು ಅವುಗಳಿಂದ ತಮ್ಮ
- ೧೬ ·
ಎ
ಏ
ಕೆಲಸಗಳನ್ನು ಸುಸೂತ್ರವಾಗಿ ನಡೆಸುತ್ತ ಬಂದವು. ಮೊತ್ತ ಮೊದಲು ಇವರಿಗೆ ಪಶು ಪಾಲನೆಯಾಗಲಿ ವ್ಯವಸಾಯವಾಗಲಿ ತಿಳಿಯವು. ಬರಿಯ ಬೇಟೆಯಿಂದ ಜೀವನ ಮಾಡುತ್ತಿದ್ದರು, ಆಹಾರವನ್ನು ಬೆಳಸುವದಕ್ಕಾಗಲಿ ಉಳಿಸಿ ಇಟ್ಟುಕೊಳ್ಳುವ ದಕ್ಕಾಗಲಿ ಇವರಿಗೆ ತಿಳಿಯದು. ಈ ರೀತಿಯಲ್ಲಿ ಇದ್ದ ಮನುಷ್ಯರ ಮೊತ್ತಮೊದ ಲಿನ ಕುಶಲತೆಗೆ ಪೂರ್ವಶಿಲಾಯುಗದ ಕುಶಲತೆಯೆಂದು ಹೆಸರು. ಇದರಲ್ಲಿ ಯೂರೋಪ್ ಖಂಡದಲ್ಲಿ ಈ ರೀತಿಯಾದ ಪ್ರಭೇದಗಳಿವೆಯೆಂದು ಪೂರ್ವ ಚರಿತ್ರ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ.
೧. ಆದಿಶಿಲೆ ( Eolith ) ಸು. ೧,೦೦,೦೦೦ ವರ್ಷಗಳ ಕೆಳಗೆ ೨. ಬೃಹಡುದರ ಶಿಲೆ ( Chellean ) ಸು. ೪೫,೨೨೦ ವರ್ಷಗಳ ಕೆಳಗೆ. ೩. ಲಘದರ ಶಿಲೆ ( Acheulean ) ಸು. ೩೫,೦೦೦ ವರ್ಷಗಳ ಕೆಳಗೆ.
ಶಲಕ ಶಿಲೆ ( Mousterean } ಸು. ೩೦,೦೦೦ ವರ್ಷಗಳ ಕೆಳಗೆ.
ಕ್ಲಪ್ತ ಶಿಲೆ ( Aurignacian ) ಸು, ೨೫, ೦೦೦ ವರ್ಷಗಳ ಕೆಳಗೆ. ೬, ಪರ್ಣಶಿಲೆ ( Solutrian ) ಸು. ೨೦,೦೦೦ ವರ್ಷಗಳ ಕೆಳಗೆ ೬ ಅಸ್ಥಿಶಿಲೆ ( Magdelinean ) ಸು. ೧೫,೦೦೦ ವರ್ಷಗಳ ಕೆಳಗೆ, ೮, ಅಲ್ಪಶಿಲೆ ( Azilian ) ಸು. ೧೨,೦೦೦ ವರ್ಷಗಳ ಕೆಳಗೆ
ಈ ಪಾಶ್ಚಾತ್ಯ ಕಾಲ ನಿಯಮಕ್ಕೂ, ಕೌಶಲ್ಯಕ್ಕೂ ಅನುಗುಣವಾಗಿಯೇ ಕರ್ಣಾಟಕದ ಪೂರ್ವ ಚರಿತ್ರೆಯು ನಡೆಯಿತೆಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಎಷ್ಟು ಮಟ್ಟಿಗೆ ಪೂರ್ವಶಿಲಾಯುಗದ ಕುರುಹುಗಳು ನಮ್ಮಲ್ಲಿ ದೊರೆಯುತ್ತ ವೆಂದು ವಿಚಾರಿಸಬೇಕಾಗಿದೆ.
ಕರ್ಣಾಟಕ ಪೂರ್ವಶಿಲಾಯುಗ :-- ಬಳ್ಳಾರಿಯ ಸಮೀಪದಲ್ಲ, ತುಮುಕೂರು ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯ ಗುಡ್ಡಗಳ ಪಕ್ಕದಲ್ಲಿ ಬೃಹದುದರ ಮತ್ತು ಲಭೂದರ ಶಿಲಾಪರಶುಗಳು ದೊರೆತಿವೆ. ಕಿಬ್ಬನಹಳ್ಳಿಯಿಂದ ಒಂದು ಪೆಟ್ಟಿಗೆ ತುಂಬ ಈ ಆಯುಧಗಳನ್ನು ಆರಿಸಿಕೊಂಡು ಬಂದವು. ಇವುಗಳನ್ನು ಪರೀಕ್ಷೆ ಮಾಡಲು ಅವು ಯೂರೋಪ್ ಖಂಡದಲ್ಲಿ ಸುಮಾರು ನಾಲ್ವತ್ತು ಸಾವಿರ ವರ್ಷಗಳ ಕೆಳಗಿನ ಆಯುಧಗಳನ್ನು ಹೋಲುತ್ತವೆ. ಅಂದರೆ ಸುಮಾರು ಅಷ್ಟು ಹಿಂದಿನ ಕಾಲದಲ್ಲಿಯೆ: ಕರ್ಣಾಟಕದಲ್ಲಿ ಕಾಡು ಮನುಷ್ಯರು ಜೀವಿಸಿದ್ದರೆಂದು ಹೇಳ ಬಹುದು. ಕಿಬ್ಬನಹಳ್ಳಿಯಲ್ಲಿಯೂ ಇನ್ನೂ ಕೆಲವೆಡೆಗಳಲ್ಲಿಯ ಶಲಕಶಿಲೆಯ ಕಾಲದ ಆಯುಧಗಳು ದೊರೆಯುತ್ತವೆ. ಆದರೆ ಕೃಷ್ಣ ಮತ್ತು ಸರ್ಣ ಶಿಲೆಗಳ ಆಯುಧಗಳೂ, ಆ ಶಿಲೆಯ ಆಯುಧಗಳೂ ಇದು ವರೆಗೂ ದೊರೆತುದಿಲ್ಲ. ಆದುದ ರಿಂದ ಆ ಕಾಡು ಮನುಷ್ಯರ ಕೌಶಲ್ಯವು ಬಹಳ ಒರಟುತರಹವಾಗಿತ್ತೆಂದು ತೋರು
-
೧.೮
–
ಇದೆ. ಪ್ರಾಯಶಃ ಇಲ್ಲಿನ ಪೂರ್ವ ನಿವಾಸಿಗಳಾದ ನಿಷಾದ ಕುಲದ ಜನರ ಕೌಶಲ್ಯವು ಈ ರೀತಿಯಾಗಿ ಇದ್ದಿರಬಹುದೆಂದು ಊಹಿಸಬಹುದು,
ಅಲ್ಪಶಿಲೆಯ ಕಾಲ. ಇತ್ತೀಚೆಗೆ ಮೈಸೂರು ಶಾಸನದ ಇಲಾಖೆಯವರು ಮಾಡಿರುವ ಭೂಶೋಧನೆಯಿಂದ ಕರ್ಣಾಟಕದಲ್ಲಿ ಸುಮಾರು ಹತ್ತು ಹನ್ನೆರಡು ಸಾವಿರ ವರ್ಷಗಳ ಕೆಳಗೆ ಅಲ್ಪಶಿಲಾಯುಗಕ್ಕೆ ಸಂಬಂಧಪಟ್ಟ ಕೌಶಲ್ಯವೊಂದು ವಿಸ್ತರಿಸಿದ್ದುದು ಗೊತ್ತಾಗಿದೆ, ಇದರ ವೈಶಿಷ್ಟ್ಯವನ್ನೂ ಅದರಿಂದ ಪೂರ್ವಚರಿತ್ರೆಗೆ ತಿಳಿದುಬರುವ ಹೊಸ ಅಂಶಗಳನ್ನೂ ಮುಂದೆ ವಿವರಿಸುತ್ತೇನೆ. ಆದರೆ ಅಲ್ಪ ಶಿಲಾ ಯುಗದ ಕಡೆಯ ಕಾಲದಲ್ಲಿ ನವಶಿಲಾಯುಗದ ಕೌಶಲ್ಯವು ಕರ್ಣಾಟಕದಲ್ಲಿ ಕಾಣ ಬಂದಿತು, ಬೆಣಚುಕಲ್ಲಿಗಿಂತಲೂ ಕರಿಯ ಕಲ್ಲು ಹೆಚ್ಚಾಗಿ ಉಪಯೋಗಕ್ಕೆ ಬಂದಿತು. ಈ ಕರಿಯ ಕಲ್ಲಿನ ಸಣ್ಣ ಗುಂಡುಗಳನ್ನು ಒಗಟಾಗಿ ಕೊಚ್ಚಿ, ಬಂಡೆಯ ಮೇಲೆ ಉಜ್ಜಿ ನಯ ಮಾಡಿ, ಹರಿತಮಾಡಿ ಬಲವಾದ ಆಯುಧಗಳನ್ನು ಉಪಯೋಗಿಸುವದಕ್ಕೆ ಜನರು ಮೊದಲು ಮಾಡಿದರು, ಮಡಕೆ, ಕುಡಿಕೆಗಳು ಆಸಯೋಗಕ್ಕೆ ಬಂದುವು, ಬಿಲ್ಲಿನಿಂದ ಬಾಣ ಪ್ರಯೋಗವಾಯ್ತು, ದನಕರು ಗಳನ್ನೂ, ಕುರಿ ಆಡುಗಳನ್ನೂ, ನಾಯಿ, ಬೆಕ್ಕುಗಳನ್ನೂ ಸಾಕಿ ಕೊಳ್ಳುವುದು ವಾಡಿ ಕೆಗೆ ಬಂತು. ಇದಕ್ಕಿಂತಲೂ ಕಾಡಿನಲ್ಲಿ ಬೆಳೆದ ಧಾನ್ಯಗಳನ್ನೂ ಮತ್ತು ಹಣ್ಣು ಗಳನ್ನೂ ಆಯ್ತು, ಕೊಯ್ದು ಉಪಯೋಗಿಸುವುದಕ್ಕೆ ಬದಲಾಗಿ ನೆಲವನ್ನು ಕಲ್ಲಿನ ಗುದ್ದಲಿಗಳಿಂದ ಅಗೆದು ಈ ಬೀಜಗಳನ್ನು ಬಿತ್ತು ವ್ಯವಸಾಯದ ಮೂಲಕ ಆಹಾರ ಸಾಮಗ್ರಿಗಳನ್ನು ಬೆಳೆಸುವುದಕ್ಕೆ ಜನರು ಮೊದಲು ಮಾಡಿದರು, ಕರ್ಣಾಟಕದ ಕುಶಲತೆಯಲ್ಲಿ ಈ ಸುಪ್ರಯತ್ನಗಳನ್ನು ನಡೆಸಿದ ಜನರು ಪ್ರಾಯಶಃ ಮೂಲ ದ್ರಾವಿಡ ಭಾಷೆಯನ್ನು ಆಡುತ್ತಿದ ಮೂಲ ಭಾರತ ಕುಲದ ಜನಾಗಿರಬೇಕೆಂದೂ, ಈ ಪ್ರಯತ್ನ ಗಳು ಸುಮಾರು ಈಗ್ಗೆ ಎಂಟು ಸಾವಿರ ವರ್ಷಗಳ ಕೆಳಗೆ ನಡೆದಿರ ಬೇಕೆಂದೂ ಊಹಿಸಲಾಗಿದೆ. ಕಾಲಕ್ರಮದಲ್ಲಿ ಈ ನವಶಿಲಾಯುಗದ ಜನರ ಕೌಶಲ್ಯವು ಮಾರ್ಪಾಟಾಗುತ್ತೆ ದೊಡ್ಡ ಕಲ್ಲುಗಳಿಂದ ಕಟ್ಟಡಗಳನ್ನು ಕಟ್ಟುವ ಬೃಹತ್ ಶಿಲಾಯುಗ ( megalithic ) ವು ಕರ್ಣಾಟಕದಲ್ಲಿ ಹರಡಿತು. ಆ ಕಾಲದಲ್ಲಿ ಜನರು ಕಟ್ಟಿದ ಪಾಂಡವರ ಗುಡಿಗಳು ಅಥವಾ ನಾರ್ಯರ ಮನೆಗಳು ಎಂದು ಕರೆಯಲ್ಪಡುವ ಕಟ್ಟಡಗಳು ಕರ್ಣಾಟಕದಲ್ಲಿ ಹೇರಳವಾಗಿ ದೊರೆಯುತ್ತವೆ. ಸಾಮಾನ್ಯವಾಗಿ ಎಲ್ಲ ಗುಡ್ಡಗಳ ಪಕ್ಕದಲ್ಲಿ ಇವುಗಳನ್ನು ನೋಡಬಹುದು. ಬಳ್ಳಾರಿಯ ಬಳಿಯಲ್ಲಿ ರಾಯಚೂರು ಚಿತ್ರದುರ್ಗ ಜಿಲ್ಲೆಯಲ್ಲಿ ಅಂದರೆ ಕರ್ಣಾಟಕದ ಮಧ್ಯದೇಶದಲ್ಲಿ ಇವು ಅಸಂಖ್ಯಾತವಾಗಿ ದೊರೆಯುತ್ತವೆ.
ತಾವುಯುಗ:- ಉತ್ತರ ದೇಶದಲ್ಲಿದ್ದಂತೆ ದಕ್ಷಿಣ ದೇಶದಲ್ಲಿಯೂ ಒಂದು ತಾಮ್ರಯುಗವು ಇತ್ತೇ ಎಂಬ ವಿಷಯದಲ್ಲಿ ಹಳೆಯ ಶಾಸ್ತ್ರಕಾರರು ಇಲ್ಲವೆಂದೇ
– ೧೯
ಉತ್ತರವನ್ನು ಕೊಡುತ್ತಿದ್ದರು. ಉತ್ತರದಲ್ಲಿಯೂ ಸಹ ಪಂಜಾಬು ಮತ್ತು ಸಿಂಧೂ ದೇಶದಲ್ಲಿ ಕ್ರಿ. ಶ. ೧೯೨೨ನೆಯ ವರ್ಷದಿಂದೀಚೆಗೆ ಭಾರತ ಸರಕಾರದ ಪ್ರಾಕ್ತನ ಶಾಖೆಯವರು ಮಾಡಿರುವ ಭೂಶೋಧನೆಯಿಂದ ಹಿಂದಿನ ಇತಿಹಾಸ ವನ್ನೇ ಕ್ರಾಂತಿಪಡಿಸುವ, ಇತಿಹಾಸ ಪ್ರಪಂಚದಲ್ಲಿ ಆಶ್ಚರ್ಯವನ್ನು ಹುಟ್ಟಿ ಸುವ ಹೊಸ ವಿಷಯಗಳು ಕಂಡುಹಿಡಿಯಲ್ಪಟ್ಟವು. ಇವುಗಳಲ್ಲಿ ಮುಖ್ಯವಾಗಿ ಮೊಹೆಂಜೊದರೊ ಎಂಬಲ್ಲಿ ನಡೆದ ಭೂಶೋಧನೆಯಿಂದ ಈ ಕೆಳಕಂಡ ಆಂಶಗಳು ತಿಳಿದು ಬಂದಿವೆ. ಏನಂದರೆ ಈಗ್ಗೆ ನಾಲ್ಕೂವರೆ ಸಾವಿರ ವರ್ಷಗಳ ಕೆಳಗೆ ಸಿಂಧೂನದಿಯ ತೀರ ಪ್ರದೇಶದಲ್ಲಿ ಅತ್ಯಂತ ಉನ್ನತವಾದ ಕೌಶಲ್ಯವುಳ್ಳ ಭಾರತೀಯ ನಾಗರಿಕತೆಯೊಂದು ಬೆಳೆದಿತ್ತು. ಆದರೆ ಜನರು ತಾಮ್ರವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು, ಕಬ್ಬಿಣದ ಆಯುಧಗಳನ್ನು ಅರಿಯರು. ಕೋಟೆಗಳಿಂದ ರಕ್ಷಿತವಾದ ಊರುಗಳನ್ನೂ, ಸೌಕರ್ಯಗಳಿಂದ ಕೂಡಿದ ಮನೆಗಳನ್ನೂ ಇಟ್ಟಿಗೆಗಳಿಂದ ಕಟ್ಟಿದ ಕೊಳಗಳು, ಭಾವಿಗಳು, ದೇವಾಲಯಗಳು, ಎತ್ತಿನ ಗಾಡಿಗಳು ಮೊದಲಾದ ಸೌಕರ್ಯಗಳನ್ನು ಹೊಂದಿದ್ದರು. ಇವರು ಚಿತ್ರ ಲಿಪಿಯನ್ನು ಅರಿತು ಮಂತ್ರಗಳನ್ನೂ, ಹೆಸರುಗಳನ್ನೂ, ಪ್ರಾಣಿಚಿತ್ರ ಯುಕ್ತವಾದ ` ಕಲ್ಲಿನ ಮುದ್ರೆಗಳಲ್ಲಿ ಕೊರೆಯುತ್ತಿದ್ದರು. ಇವರು ಮಾತೃ ದೇವಿಯನ್ನೂ, ಲಿಂಗ ವನ್ನೂ ಸಮಸ್ತ ಭೂತೇಶ್ವರನಾದ ಮತ್ತು ಯೋಗಾರೂಢನಾದ ತ್ರಿಶೂಲಧಾರಿಯಾದ ಶಿವನನ್ನೂ, ಬಸವನೇ ಮೊದಲಾದ ಪ್ರಾಣಿಗಳನ್ನೂ, ಅಶ್ವತವೇ ಮೊದಲಾದ ವೃಕ್ಷಗಳನ್ನೂ ಪೂಜಿಸುತ್ತಿದ್ದರು. ಈ ನಾಗರಿಕತೆಯು ಇರಾಣದಿಂದ ಪೂರ್ವಕ್ಕೆ, ಹಿಮಾಚಲದಿಂದ ದಕ್ಷಿಣಕ್ಕೆ ಕಾರ್ಠ ನಾಡದವರೆಗೂ ವಿಸ್ತರಿಸಿತ್ತು. ಇದಕ್ಕೆ ಭಾರ ತೀಯ ತಾತ್ಯ ಸಂಸ್ಕೃತಿಯೆಂದು ಹೆಸರು. ಇಂತಹ ಉನ್ನತವಾದ ಸಂಸ್ಕೃತಿಯ
ಕಾಥೇವಾಡದವರೆಗೂ ಪ್ರಚಾರವಾಗಿದ್ದಲ್ಲಿ ವ್ಯಾಪಾರಾದಿಗಳಿ೦ದ ಅದರೊಡನೆ ಸಂಪರ್ಕವು ಕರ್ಣಾಟಕಕ್ಕೆ ಆಗಿರಲಾರದೇ? ಈ ತಾಯುಗದವರು ಉಪಯೋfi ಸುತ್ತಿದ್ದ ಹಸರುಕಲ್ಲು ಕರ್ಣಾಟಕದ ದಕ್ಷಿಣಾಂತ್ಯದಲ್ಲಿರುವ ನೀಲಗಿರಿಯಿಂದಲೂ, ಅವರ ಒಡವೆಗಳಿಗೆ ಉಪಯುಕ್ತವಾಗಿದ್ದ ಬಂಗಾರವು ಕನ್ನಡ ದೇಶದ ವಾಯವ್ಯ ಮೂಲೆಯ ಕೋಲಾರದ ಗಣಿಳಿ೦ದಲೋ, ರಾಯಚೂರ ಜಿಲ್ಲೆಯಲ್ಲಿರುವ ಹಟ್ಟಿಯ ಗಣಿಗಳಿಂದಲೂ ಬಂದಿರಬೇಕೆಂದು ಊಹಿಸಲಾಗಿದೆ, ಹೀಗಿದ್ದ ಪಕ್ಷದಲ್ಲಿ ವ್ಯಾಪಾರ ದಿಂದ ಬಂದ ಆ ಪ್ರಾಚೀನ ಕಾಲದ ಸಾಮಗ್ರಿಗಳು ಏನಾದರೂ ಕರ್ಣಾಟಕದಲ್ಲಿ ದೊರತಿವೆಯೇ ? ಈ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಭೂಶೋಧನೆಯಿಂದಲೇ
ಸಾಧ್ಯ.
- ಲೋಹಯುಗ:- ಉತ್ತರ ದೇಶದ ಪೂರ್ವ ಚರಿತ್ರೆಯೆಂಬ ಅಂಧಕಾರದಲ್ಲಿ
ಎಲ್ಲಿಯೂ ಒಂದು ನಕ್ಷತ್ರದ ಹಾಗೆ ಮಿನುಗುತ್ತಿರುವುದು,
ಕ್ರಿ. ಪೂ. ಸು. ೨೨೫೦ಕ್ಕೆ ಇದರ ಕಥೆ ಮುಗಿಯಿತೆಂದೂ, ಅಲ್ಲಿಂದ ಮುಂದಕ್ಕೆ ಆರ್ಯರ ಆಗಮನದ ಹೊರತಾಗಿ ವರ್ಯರ ಕಾಲದ ವರೆಗೂ ಯಾವ ಸಾಕ್ಯನ ವಸ್ತುಗಳೂ ದೊರೆತಿಲ್ಲವೆಂದೂ ಇತಿಹಾಸಕಾರರು ಶೋಕಿಸುತ್ತಾರೆ. ಈ ಕಾಲದ ಕುರುಹುಗಳಿಗೆ ನಾವು ದಕ್ಷಿಣದ ಕಡೆಗೆ ತಿರುಗಿ ನೋಡಿದಲ್ಲಿ ಕರ್ಣಾಟಕದಿಂದ ಉಪಯುಕ್ತವಾದ ಉತ್ತರವು ದೊರೆಯುತ್ತದೆ. ಈಚೆಗೆ ಕರ್ಣಾಟಕದಲ್ಲಿ ನಡೆದಿರುವ ಭೂಶೋಧನೆಯಿಂದ ಶಿಲಾಯುಗದಿಂದ ಲೋಹಯುಗವು ಹೊರಟ ವಿಚಾರವೂ ಆ ಕಾಲದ ಕೌಶಲ್ಯದ ಹಲಕೆಲವು ವಿಷಯಗಳೂ ತಿಳಿಯಬರುತ್ತವೆ.
ಭೂಶೋಧನೆ:- ಇವೆಲ್ಲಕ್ಕೂ ಮುಖ್ಯವಾದ ಮಾರ್ಗವು ಭೂಶೋಧನೆ. ಇದು ಪುರಾತತ್ವ ಶಾಸ್ತ್ರಜ್ಞರ ಹೊಸದಾರಿ. ಇದರ ವಿಚಾರವನ್ನು ಸ್ವಲ್ಪ ಮಟ್ಟಿಗೆ ವಿವರಿಸುತ್ತೇನೆ. ಪ್ರಾಚೀನ ಕಾಲದ ನಗರಗಳೂ, ಗ್ರಾಮಗಳೂ, ಇತರ ಕುರುಹು ಗಳೂ ದಿಣ್ಣೆಯ ಮೇಲಿದ್ದರೆ ಬಿಸಿಲು ಮಳೆಗಾಳಿಗಳ ಹೊಡೆತದಿಂದ ಕೊಚ್ಚಿ ಹೋಗುವುದುಂಟು. ಹಾಗಿಲ್ಲದೆ ಹಳ್ಳಗಳಲ್ಲ, ಇತರ ನಿಮ್ಮ ಪ್ರದೇಶಗಳಲ್ಲಿ ಇದ್ದರೆ ದಿಣ್ಣೆಯಿಂದ ಕೊಚ್ಚಿಬಂದ ಮಣ್ಣಿನಿಂದ ಮುಚ್ಚಿ ಹೋಗುವುದುಂಟು. ಕೊಚ್ಚಿ ಹೋದ ಪದಾರ್ಥಗಳು ಸ್ವಸ್ಥಾನವನ್ನು ಬಿಟ್ಟು ನಮ್ಮ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಹೋಗು ವುವು. ಆದರೆ ಮಣ್ಣಿನಿಂದ ಮುಚ್ಚಿಹೋದ ಪದಾರ್ಥಗಳೂ ನಗರಗಳೂ ತಮ್ಮ ತಮ್ಮ ಸ್ಥಾನಗಳಲ್ಲೇ ನಿಂತು ಭೂಗತವಾಗಿರುವವು. ಇವು ಸಾಮಾನ್ಯವಾಗಿ ಭೂಮಿಯ ಮೇಲೆ ಕಾಣವು. ಶಾಸ್ತ್ರಜ್ಞರು ಇವುಗಳು ಹೂಳಿರುವ ಸ್ಥಳಗಳನ್ನು
ಕೆಲವು ಕುರುಹುಗಳಿಂದ ಕಂಡುಹಿಡಿಯುವರು. ನೆಲದ ಮೇಲೆ ಒಡೆದುಹೋದ ಬೋಕೆಗಳೊ, ಇಟ್ಟಿಗೆಯ ಚೂರುಗಳೊ ಅಥವಾ ಇತರ ವಿಧವಾದ ಮನುಷ್ಯ ಕೃತವಾದ ಪದಾರ್ಥಗಳೂ ಅಲ್ಲಲ್ಲಿ ಬಿದ್ದಿರುವುದನ್ನು ನೋಡಿ ಅವುಗಳನ್ನು ಪರೀಕ್ಷೆ ಕ್ಷಿಸುವರು, ಅವುಗಳು ನಮ್ಮ ಕಾಲದವುಗಳೇ ಆth ಆ ಸನ್ನಿವೇಶದಲ್ಲೇ ಬಿದ್ದಿರುವು ದಕ್ಕೆ ಬೇರೆ ಕಾರಣವು ಗೋಚರವಾಗದೆ ಭೂಮಿಯ ಒಳಗಣಿ೦ದಲೇ ಹೊರಬಿದ್ದ ಎಂದು ಶಾಸ್ತ್ರಜ್ಞರ ದೃಷ್ಟಿಗೆ ತೋರಿದರೆ ಆಗ ಆ ಭೂಮಿಯು ಶೋಧಿಸಲು ತಕ್ಕು ದೆಂದು ತಿಳಿಯಬೇಕು, ಈ ಶೋಧನ ಕಾರ್ಯವೂ ಕೂಡ ಮೊದಲು ಅಲ್ಲಲ್ಲಿ ತೆಗೆದ ಹಳ್ಳಗಳಿಂದಲೂ, ತರುವಾಯ ಬಚ್ಚಲುಗಳ ಮೂಲಕವು ಕಡೆಗೆ ನಿರ್ದಿಷ್ಟ ಪ್ರದೇಶದಲ್ಲಿ ಅಗೆದ ಉತ್ಪಾತಗಳಿಂದಲೂ ಮುಂದುವರಿಯುತ್ತವೆ. ಈ ಅಗೆಯುವ ಕೆಲಸವೂ ಕೂಡ ಬಹಳ ಜಾಗರೂಕತೆಯಿಂದ ನೆಲದಲ್ಲಿ ದೊರೆತ ಪದಾರ್ಥಗಳನ್ನು ಒಡೆಯದೆ ಹಾಳುಮಾಡದೆ, ಪದರ ಪದರವಾಗಿ ಮಣ್ಣನ್ನು ತೆಗೆಯುತ್ತ ನಕ್ಷೆಗಳ ಮುಖಾಂತರವೂ, ಫೋಟೋಗಳ ಮುಖಾಂತರವೂ ಪದಾರ್ಥಗಳು ದೊರೆಯುವ ಸ್ಥಳಗಳನ್ನೂ, ಅದರ ಕೂಡ ದೊರೆತ ಪದಾರ್ಥಗಳನ್ನೂ, ದೊರೆತ ರೀತಿಯನ್ನೂ ಗುರುತು ಮಾಡುತ್ತ ಪುಸ್ತಕಗಳಲ್ಲಿ ಬರೆದುಕೊಳ್ಳುತ್ತ ಶಾಸ್ತ್ರಜ್ಞರು ನಡೆಸುತ್ತಾರೆ. ಹೀಗೆ ದೊರೆತ
(us
) 802.30
Sederace Co ISO QUE
.
.
POSTSYEDY Til 1179 2 TO TCTT0ìYKITTY
1:Pty of PPEBAY YUTE99.9: TOP
X LS Y
35+Y4f3PYt5551379 WATU APNEY CY POKOK ይተጸገላጊTTYያየት፤ ህጹOጹ.ባጥ የ1
STEDYTUPA 209YYYYYY-814 22°C 2 TOHYPNI PYPTYS
????.rogyr 990kpan ITSA PYKYIA ZO':PXga por eyes ttr VYC11 I Eimta
T+<ULY8HZYHT
1:
2
3YTA1ᎪᏁr[3Ꭲ18 ሃll+ሃን ና የተሩ፣ ብረትን ብ
A
2
PIRXHIAPPOLI 171118 WUPPrezes Porta-01 5*** *7172 173X PLTER
22 P..579 OKT PINY
1
፣e1
ಪದಾರ್ಥಗಳನ್ನು ಕಾಪಾಡಿ ಪರಿಷ್ಕರಿಸಿ ಪರೀಕ್ಷಿಸಿ ಇತರ ಕಡೆಗಳಲ್ಲಿ ದೊರೆತ ಪದಾರ್ಥಗಳೊಂದಿಗೆ ಹೋಲಿಸಿ ವಿಮರ್ಶಿಸಿ ಐತಿಹಾಸಿಕ ದೃಷ್ಟಿಯಿಂದ ಅವುಗಳ ಪ್ರಯೋಜನವನ್ನು ಚರ್ಚಿಸಿ ಪ್ರಕಟಿಸುತ್ತಾರೆ. ಈ ರೀತಿಯ ಶಾಸ್ತ್ರೀಯ ಭೂ ಶೋಧನೆಯು ಕರ್ಣಾಟಕದಲ್ಲಿ ಇತ್ತೀಚೆಗೆ ಪ್ರಾರಂಭವಾಯಿತು. ಇದನ್ನು ೧೯೨೮ ರಲ್ಲಿ ಮೊದಲು ಮಾಡಿದವರು ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆಯ ಶಾಖೆ ಯವರೂ, ಮೈಸೂರು ಸರಕಾರದ ಶಾಸನ ಶಾಖೆಯವರೂ, ಇವರ ಸಹಾಯದಿಂದ ಶಾಸ್ತ್ರೀಯ ರೀತಿಯಲ್ಲಿ ಶೋಧನೆ ಮಾಡಲು ಅವಕಾಶವನ್ನು ದೊರಕಿಸಿಕೊಟ್ಟುದ ಕ್ಯಾಗಿ ಮೈಸೂರಿನ ಶ್ರೀ ಮನ್ಮಹಾರಾಜರವರಿಗೆ ನಾನು ಎಷ್ಟೊಂದು ಕೃತಜ್ಞನಾಗಿದ್ದರೂ ತೀರದು.
ಪೂರ್ವಚರಿತ್ರೆಯ ನಿವೇಶನಗಳು ನನಗೆ ಹಿಂದೆಯೇ ಭಾರತ ಸರಕಾರದ ಭೂಶೋಧನ ಶಾಖೆಯ ಸ್ಫಟ್ ಎಂಬವರು ಭಾರತವನ್ನೆಲ್ಲಾ ಸುತ್ತಿ ನೋಡಿ ಇಲ್ಲಿನ ಪ್ರಾಚೀನ ನಿವೇಶನಗಳನ್ನು ಗೊತ್ತು ಮಾಡಿ ಮದ್ರಾಸ್ ಪ್ರದರ್ಶನ ಶಾಲೆಯಿಂದ ಪ್ರಕಟವಾದ ಪುಸ್ತಕದಲ್ಲಿ ಅವುಗಳ ವಿಚಾರವನ್ನು ಸ್ವಲ್ಪಮಟ್ಟಿಗೆ ಚರ್ಚಿಸಿರುವರು. ಪ್ರಾಚೀನ ನಿವೇಶನಗಳನ್ನು ನಾನು ಹುಡುಕುತ್ತ ಬಂದ ಕಾಲದಲ್ಲಿ ಅವರ ಕಣ್ಣಿಗೆ ಬೀಳದ ಅನೇಕ ನಿವೇಶನಗಳು ನನಗೆ ದೊರೆತವು. ಇವುಗಳಲ್ಲಿ ಬಹುಭಾಗವು ಚರಿತ್ರೆಯಲ್ಲಿ ಈಗ ಪ್ರಸಿದ್ದವಾಗಿರುವ ರಾಜ್ಯಗಳ ಮತ್ತು ಊರುಗಳ ಸಂಬಂಧಿಗಳಾಗಿ ಕೆಲವು ಆದಿಚರಿತ್ರೆ ಮತ್ತು ಪೂರ್ವ ಚರಿತ್ರೆಗಳಿಗೆ ಸಂಬಂಧಪಟ್ಟ ವುಗಳ ಗಿಯ ಇವೆ. ಇವುಗಳನ್ನು ಪರೀಕ್ಷಿ ಸುತ್ರ ಭೂಶೋಧನೆಗೆ ಸರಿಯಾದ ಭೂಮಿಯು ಯಾವುದೆಂದು ನಾನು ವಿಚಾರ ಮಾಡಿದೆ. ಮತ್ತು ಇವುಗಳಲ್ಲಿ ಪೂರ್ವ ಚರಿತ್ರೆಗೆ ಸಂಬಂಧಪಟ್ಟ ಮೂರನ್ನು ಮೈಸೂರು ರಾಜ್ಯದ ಎಲ್ಲೆ ಯೊಳಗೆ ಗೊತ್ತು ಮಾಡಿದೆವು. ಇವು ಯಾವುವೆಂದರೆ :
೧. ಕೋಲಾರದ ಬಂಗಾರದ ಗಣಿಗಳ ಸಮೀಪದಲ್ಲಿರುವ ಹುನಗುಂದ
ಪಟ್ಟಣ ೨. ಚಿತ್ರದುರ್ಗದ ಪಕ್ಕದಲ್ಲಿರುವ ಚಂದ್ರವಳ್ಳಿ ಮತ್ತು
೩. ಅಶೋಕನ ಶಾಸನಗಳ ಬಳಿ ಇರುವ ಬ್ರಹ್ಮಗಿರಿ ಇವುಗಳಲ್ಲಿ ಹುನಗುಂದವು ಇನ್ನೂ ಶೋಧಿತವಾಗಿಲ್ಲ. ಬ್ರಹ್ಮಗಿರಿಯಲ್ಲಿ ಶೋಧ ನೆಯು ಆರಂಭವಾಗಿ ಅಲ್ಪ ಸ್ವಲ್ಪ ಕೆಲಸವು ಮಾತ್ರ ನಡೆದಿದೆ. ಚಂದ್ರವಳ್ಳಿಯಲ್ಲಿ ಶೋಧನ ಕಾರ್ಯವು ಚೆನ್ನಾಗಿ ನಡೆದು ಅನೇಕ ಹೊಸ ವಿಷಯಗಳು ಹೊರ ಬಿದ್ದಿವೆ. ಬ್ರಹ್ಮಗಿರಿಯ ಶೋಧನೆಯಿಂದ ದೊರೆತ ಕೆಲವು ವಿಷಯಗಳನ್ನು ಈ
ಉಪನ್ಯಾಸದಲ್ಲಿ ಹೇಳಿ ಚಂದ್ರವಳ್ಳಿಯ ಭೂಶೋಧನೆಯ ವಿಚಾರವನ್ನು ಮುಂದಿನ ಉಪನ್ಯಾಸದಲ್ಲಿ ಹೇಳಲು ಬಯಸುತ್ತೇವೆ.
ಬ್ರಹ್ಮಗಿರಿ:- ಬ್ರಹ್ಮಗಿರಿಯು ಬಳ್ಳಾರಿಯಿ: ದ ದಕ್ಷಿಣಕ್ಕೆ ಸುಮಾರು ಇಪ್ಪತ್ತೈದು ಮೈಲಿ ದೂರದಲ್ಲಿ ಮೈಸೂರು ರಾಜ್ಯದ ಉತ್ತರ ಮೂಲಿಯಲ್ಲಿ ಸೇರಿದೆ ಇದರ ಸುತ್ತುಮುತ್ತಲಿರುವ ಬೆಟ್ಟಗಳಲ್ಲಿ ಮಾರ್ಯ ಚಕ್ರವರ್ತಿಯಾದ ಅಶೋಕನ ಒಂದನೆಯ ಅಲ್ಲ ಶಿಲಾಶಾಸನದ (Minor Rock Edict No: 1) ಮೂರು ನಕಲುಗಳು ಕೆತ್ತಲ್ಪಟ್ಟಿವೆ. ಇವುಗಳಲ್ಲಿ ಅಶೋಕನ ದಕ್ಷಿಣದ ಉಪರಾಜ ಧಾನಿಯಾದ ಸುವರ್ಣಗಿರಿಯಿಂದ ದಕ್ಷಿಣಾಗ್ರ ಪ್ರಾಂತ್ಯದ ಮುಖ್ಯ ಪಟ್ಟಣವೆಂದು ತೋರುವ ಇಸಿಲ ಎಂಬಲ್ಲಿಗೆ ರಾಜಾಜ್ಞೆಯು ಬಂದುದಾಗಿ ಹೇಳಿದೆ. ಇದರಿಂದ ನಗಾರ್ಯರ ಕಾಲದ ಇಸಿಲಪುರವು ಈ ಶಾಸನಗಳ ಸಮೀಪದಲ್ಲಿಯೇ ಇರಬೇಕೆಂದು ಊಹಿಸಿ ಚೆನ್ನ ಹಗರಿ ಹೊಳೆಯ ಪಕ್ಕದಲ್ಲಿ ನಾನು ಹುಡುಕಿದೆನು. ವಿಸ್ತಾರವಾದ ಪಟ್ಟಣದ ಗುರುತುಗಳು ಅಶೋಕನ ಬ್ರಹ್ಮಗಿರಿ ಶಾಸನದ ಎರಡು ಪಕ್ಕಗಳಲ್ಲಿ ದೊರೆಯಿತು. ಈ ಪಟ್ಟಣದ ಎಲ್ಲೆಗಳನ್ನು ಗೊತ್ತ ಹಚ್ಚಿ ನೆಲದಮೇಲೆ ದೊರೆತ ಪದಾರ್ಥಗಳನ್ನು ಸಂಗ್ರಹಿಸಲು, ನನಗೆ ಗಾಬರಿಯನ್ನು ಹುಟ್ಟಿಸುವಂತೆ ವಾರ್ಯರ ಕಾಲದ ಪದಾರ್ಥಗಳ ಜೊತೆಯಲ್ಲಿ ಅದಕ್ಕಿಂತಲೂ ಪ್ರಾಚೀನವಾದ ಲೋಹ ಪದಾರ್ಥಗಳು, ಮಡಕೆ ಕುಡಿಕೆಗಳು, ಇನ್ನೂ ಹಿಂದಣ ಕಾಲಕ್ಕೆ ಸಂಬಂಧಪಟ್ಟ ನವಶಿಲಾಯುಗದ ಮತ್ತು ಅಲ್ಪ ಶಿಲಾಯುಗದ ಆಯುಧಗಳು ದೊರೆತವು. ಇವುಗಳ ನಿಜಾಂಶವನ್ನು ನಿರ್ಧರಿಸುವದಕ್ಕಾಗಿ ಹಲಕೆಲವು ಗುಂಡಿ ಗಳನ್ನು ಅಗೆಸಿ ನೋಡಿದೆನು. ಒಂದೆರಡು ಗುಂಡಿಗಳಲ್ಲಿ ಸುಮಾರು ೧೪, ೧೮ ಅಡಿಗಳ ಆಳದವರೆಗೂ ಕಡಿಸಿ ನೋಡಲಾಯಿತು. ಮಣ್ಣಿನ ಪದರುಗಳನ್ನು ನಿರ್ಧರಿಸಿ ಅವುಗಳಲ್ಲಿ ದೊರೆತ ಬೋಕೆಗಳನ್ನೂ, ಮಣಿಗಳನ್ನೂ, ಎಲುಬುಗಳನ್ನೂ, ಆಯುಧ ಗಳನ್ನೂ ಪರೀಕ್ಷಿಸಿ ನೋಡಿದೆವು. ಮತ್ತು ಆ ನಿವೇಶನದ ಸಮೀಪದಲ್ಲಿ ಕಾಣ ಬರುತ್ತಿದ್ದ ನೂರಾರು - ಮೌರ್ಯರ ಕವನ' ಗಳಲ್ಲಿ (Cromtechs) ಕೆಲವನ್ನು ಅಗೆಸಿ ನೋಡಿದೆನು. ಈ ವಿಷಯವನ್ನು ಇಲ್ಲಿ ವಿವರಿಸದೆ ಇವರ ಫಲಿತಾಂಶವನ್ನು ಮಾತ್ರ ಇಲ್ಲಿ ಸಂಕ್ಷೇಪವಾಗಿ ತಿಳಿಸುತ್ತೇನೆ.
ಫಲಿತಾಂಶಗಳು
- ೧. ಅತ್ಯಂತ ಪ್ರಾಚೀನ ಕಾಲದಲ್ಲಿ ಈಗಿನ ಕನ್ನಡ ದೇಶದಲ್ಲಿ ಅಂದರೆ ಸುಮಾರು ಈಗ್ಗೆ ೫೦,೦೦೦ ದಿಂದ ೧೫,೦೦೦ ವರ್ಷಗಳ ಕೆಳಗಿನ ವರೆಗೆ ಪೂರ್ವ ಶಿಲಾಯುಗದ ಕೌಶಲ್ಯವನ್ನುಳ್ಳ ಕಾಡುಜನರು ಕರ್ಣಾಟಕದಲ್ಲಿ ವಾಸವಾಗಿದ್ದರು.
Plate II
#
&
ತಳಿಗಳು
S
ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೧೬) : ಅಗಿದ ನಂತರ ಕಂಡುಬಂದ ಕಲ್ಲಿನ ಪೆಟ್ಟಿಗೆ, -ಪುಟ ೨೩
೨. ಕೆಲವು ಕಾಲದ ತರುವಾಯ ಅಂದರೆ ಸುಮಾರು ಹತ್ತು ಅಥವಾ ಎಂಟು ಸಾವಿರ ವರ್ಷಗಳ ಕೆಳಗೆ ಪುಟ್ಟ ಕಲ್ಲಿನ ಆಯುಧಗಳನ್ನೂ , ಕಲ್ಲಿನ ಚೂರಿ, ಸೂಜಿ, ಅ೦ಬಿನ ಅಲಗು ಮೊದಲಾದುವನ್ನು ಪ್ರಯೋಗಿಸುವ ಮತ್ತು ಯೂರೋಪ್ ಮೊದಲಾದೆಡೆಗಳಲ್ಲಿ ಇನ್ನೆಲ್ಲಿಯೂ ಕಾಣದ ಅಲ್ಪಶಿಲಾ ಕೌಶಲ್ಯವೊಂದು ಎಲ್ಲಿಂದಲೋ ಬಂದು ಇಲ್ಲಿ ಸೇರಿಕೊಂಡಿತು.
೩. ಈ ಅಲ್ಪಶಿಲಾಯುಗದಲ್ಲಿ ಜನರು ಮೊದಲು ಕಲ್ಲಿನ ಆಯುಧಗಳ ಮೊನೆಗಳನ್ನು ತಿಕ್ಕಿ ನಯಮಾಡುತ್ತಲೂ, ನಯಮಾಡಿದ ಸಣ್ಣ ಸಣ್ಣ ಆಯುಧ ಗಳನ್ನು ಉಪಯೋಗಿಸುತ್ತಲೂ ಬಂದರು. ಹೀಗಿರುವಲ್ಲಿ ನವಶಿಲಾಯುಗವು ಈಗ್ಗೆ ಸುಮಾರು ಆರೇಳು ಸಾವಿರ ವರ್ಷಗಳ ಕೆಳಗೆ ವೃದ್ಧಿಗೆ ಬಂದಿತು.
೪. ಈ ನವಶಿಲಾಯುಗದ ಕಡೆಯ ಕಾಲದಲ್ಲಿ ಎಲ್ಲಿಂದಲೋ ಅಲ್ಪ ಸ್ವಲ್ಪ ತಾವನನ್ನು ಪ ಯೋಗಿಸುವ ಪ್ರಾಯಶಃ ಹೊರಗಣಿತದ ಬಂದ ಕೌಶಲ್ಯವೊ ದು ಕರ್ಣಾಟಕದಲ್ಲಿ ಕಾಣಿಸಿಕೊಂಡಿತು.
- ೫, ಸುಮಾರು ಇದೇ ಕಾಲದಲ್ಲಿಯೇ ಅಂದರೆ ಈಗ್ಗೆ ಐದು ಸಾವಿರದಿಂದ ನಾಲ್ಕು ಸಾವಿರ ವರ್ಷಗಳ ಕೆಳಗೆ ಇತರ ದಾಕ್ಷಿಣಾತ್ಯರಂತೆ ಕನ್ನಡಿಗರು ಕಬ್ಬಿಣದ ಉಪಯೋಗವನ್ನು ಕಂಡುಹಿಡಿದರು,
೬, ಸು. ಕ್ರಿ. ಪೂ. ೨೦೦೦ ದ ವೇಳೆಗೆ ಕಬ್ಬಿಣದ ಉಪಯೋಗವು ವೃದ್ಧಿ ಯಾಗಿ ಕಲ್ಲಿನ ಸ್ಥಾನಕ್ಕೆ ಕಬ್ಬಿಣವು ಬಂದು ಕರ್ಣಾಟಕದ ಲೋಹಯುಗವು ಪ್ರಾರಂಭವಾಯಿತು. ಈ ಕಾಲದಲ್ಲಿ ಕುಂಬಾರರು ಚಕ್ರದ ಸಹಾಯದಿಂದ ಕರಿಯ' ಕೆಂಪು ಮತ್ತು ಕಂದು ಬಣ್ಣಗಳನ್ನುಳ್ಳ ಮತ್ತು ಹೊಳಪುಳ್ಳ ಮಡಕೆ ಕುಡಿಕೆ ಗಳನ್ನು ಮಾಡಹತ್ತಿದರು. ನೀರು ಕುಡಿಯುವ ಪಾತ್ರೆಗಳ ಮೇಲೆ ಬಿದಿರುಕುಕ್ಕೆ ಗಳನ್ನನುಸರಿಸಿ ಬಿಳಿಯ ಮತ್ತು ಕೆಂಪು ಚಿತ್ರಗಳಿಂದ ಚಿತ್ರಗಳನ್ನು ಬರೆದರು. ಸತ್ತವರಿಗಾಗಿ ಕೆಲ್ಲ ಚಪ್ಪಡೆಗಳಿ೦ದ ಮನೆಗಳನ್ನು ಮಾಡಿ ಅವುಗಳ ಮೇಲೆ ದೊಡ್ಡ ಮತ್ತು ದಪ್ಪ ಚಾವಣಿ ಚಪ್ಪಡಿಗಳನ್ನು ಹೇರಿ ಸುತ್ತಲೂ ಬಂಡೆಗಳಿ೦ದ ನೆಲ ಕೋಟೆಯನ್ನು ಕಟ್ಟಿ ಈಗ ವರ್ಯರ ಮನೆಗಳೆಂದು ಕರೆಯಲ್ಪಡುವ ಕಟ್ಟಡ
ಗಳನ್ನು ಮಾಡುತ್ತಿದ್ದ ರು.
೭, ಈ ಲೋಹಯುಗದ ಕೌಶಲ್ಯವು ಚೆನ್ನಾಗಿ ವೃದ್ಧಿಗೆ ಬಂದ ಕಾಲದಲ್ಲಿ ಅ೦ದರೆ ಸುಮಾರು ಕ್ರಿ. ಪೂ. ೩೦೦ ರ ವೇಳೆಗೆ ಬೌದ್ಧ ಮತವೂ ಮೌರ್ಯ ಚಕ್ರಾಧಿಪತ್ಯವೂ ಕರ್ಣಾಟಕಕ್ಕೆ ಹದುವು.
೮. ಕ್ರಿ. ಪೂ. ೩೦ ರರಿಂದ ಸುಮಾರು ೨೦೦ ರ ವರೆಗೆ ಕರ್ಣಾಟಕದ ಸ್ಥಿತಿಯು ಹೇಗಿತ್ತೆಂಬುದನ್ನು ಮೈಸೂರಿನ ಇಸಿಲ, ನೈಜಾಮೀ ಪ್ರಾಂತ್ಯದ ಮಹಾ
ಸಂಘ (Masagi) ಮೊದಲಾದ ಕಡೆಗಳಲ್ಲಿ ಭೂಶೋಧನೆಯಿಂದ ಸಂಗ್ರಹಿಸ ಬೇಕಾಗಿದೆ.
೯. ಕ್ರಿ. ಪೂ. ೨೦೦ ರ ರಿ೦ದ ೩೦೦ ರ ವರೆಗೆ ಕರ್ನಾಟಕದ ಸ್ಥಿತಿ ಹೇಗಿತ್ತೆಂಬುದನ್ನು ಬ್ರಹ್ಮಗಿರಿಯಿಂದ ನಾವು ಅರಿಯಲಾರೆವು. ಇವು ಚಂದ್ರವಳ್ಳಿಯ ಭೂಶೋಧನೆಯಿಂದ ನಮಗೆ ವ್ಯಕ್ತವಾಗುತ್ತವೆ.
೧೦, ಶಾತವಾಹನರೂ ಮೌರ್ಯರೂ ವೃದ್ದಿ ಯಾಗುವದಕ್ಕೆ ಹಿಂದೆಯೇ ಸಾವಿರಾರು ವರ್ಷಗಳ ಕಾಲ ದಖನ್ನಿನ ಲೋಹಯುಗವು ಏಳಿಗೆಯಲ್ಲಿದ್ದು ಕರ್ಣಾಟಕದಲ್ಲಿ ಅನೇಕ ಊರುಗಳೂ, ಹೆಚ್ಚಾದ ಕೌಶಲ್ಯವೂ ಹುಟ್ಟಿ ಬೆಳೆದಿದ್ದುವು. ಈ ನೂರಾರು ವರ್ಷಗಳ ಕಾಲದಲ್ಲಿ ದಕ್ಷಿಣ ದೇಶದ ಸ್ಥಿತಿಯು ಹೇಗಿತ್ತೆಂಬುದನ್ನು ಭಶೋಧನೆಯಿಂದ ಇನ್ನೂ ವಿವರವಾಗಿ ನಿರ್ಧರಿಸಬಹುದು.
೩. ಚಂದ್ರವಳ್ಳಿಯ ಭೂಶೋಧನೆ. ಚಂದ್ರವಳ್ಳಿ:- ಕರ್ಣಾಟಕದಲ್ಲಿ ಭೂಶೋಧನೆಯು ಶಾಸ್ತ್ರೀಯವಾಗಿ ನಡೆದಿರುವುದು ಚಿತ್ರದುರ್ಗದ ಸಮೀಪದಲ್ಲಿರುವ ಚಂದ್ರವಳ್ಳಿ ಕಣಿವೆಯಲ್ಲಿ. ಈ ಶೋಧನೆಯಿಂದ ನಮಗೆ ಕರ್ಣಾಟಕದ ಆದಿಚರಿತ್ರೆಯ ಕಾಲದ ಒ೦ದು ಉಪ ರಾಜಧಾನಿಯಲ್ಲಿ ಕಾಣಬರುತ್ತಿದ್ದ ಸ್ಥಿತಿಗಳೂ, ಆಗಿನ ಕೌಶಲ್ಯಕ್ಕೂ ಅದಕ್ಕೆ ಹಿಂದಿನ ಪೂರ್ವ ಚರಿತ್ರೆಯ ಕಾಲದ ಕೌಶಲ್ಯಕ್ಕೂ ಇದ್ದ ಸಂಬಂಧವೂ ತಿಳಿಯ ಬರುತ್ತವೆ. ಚಂದ್ರವಳ್ಳಿಯಲ್ಲಿ ದೊರೆತ ಪದಾರ್ಥಗಳು, ತಿಳಿದು ಬಂದ ಹೊಸ ವಿಷಯಗಳು ದಕ್ಷಿಣ ಭಾರತದ ಇತರ ಭೂಶೋಧನೆಗಳಲ್ಲಿ ದೊರೆತಿರುವ ಅಥವಾ ದೊರೆಯಬಹುದಾದ ಪದಾರ್ಥಗಳಿಗೂ ಮತ್ತು ವಿಷಯಗಳಿಗೂ ಸೂಚನೆಗಾಗಿ ಪರಿಣಮಿಸಿವೆ, ಯಾವ ಶಾಸ್ಕೃದಲ್ಲಿ ತಿಳಿದುದನ್ನು ಮೊದಲು ಅರಿತು ತರು ವಾಯ ತಿಳಿಯದುದನ್ನು ಕಂಡುಹಿಡಿಯುವದಕ್ಕೆ ಪ್ರಯತ್ನಿಸಬೇಕು. ಆದುದರಿಂದ ಕರ್ಣಾಟಕದ ಪೂರ್ವ ಚರಿತ್ರೆಗೆ ಚಂದ್ರವಳ್ಳಿಯ ಬಾಗಿಲಿನಂತೆ ಇದೆ.
ನಿವೇಶನ: - ಈಗಿನ ಚಿತ್ರದುರ್ಗವೆಂಬ ಊರಿಗೆ ಪಶ್ಚಿಮದಲ್ಲಿ ಚಿತ್ರ ವಿಚಿತ್ರ ವಾದ ಕೋಡುಗಲ್ಲುಗಳಿಂದಲೂ ಬಂಡೆಗಳಿಂದಲೂ ಕೂಡಿದ ಮತ್ತು ಕೋಟೆಯಿಂದ ಸುರಕ್ಷಿತವಾದ ಬೆಟ್ಟವೂ, ಅದರ ಪಶ್ಚಿಮಕ್ಕೆ ಚಂದ್ರವಳ್ಳಿಯೆಂಬ ಕಣಿವೆಯ ಇವೆ ಈಗ್ಗೆ ೫೦ ವರ್ಷಗಳ ಕೆಳಗೆ ಈ ಕಣಿವೆಯಲ್ಲಿ ಓಡಾಡುತ್ತಿದ್ದ ಮೆರ್ಟನ್ ಸ್ಮಿತ್ ಎಂಬ ಭೂಗರ್ಭ ಶಾಸ್ತ್ರಜ್ಞರ ಕೈಗೆ ಅಲ್ಲಿನ ಹಳ್ಳಿಗಳಲ್ಲಿ ಕೆಲವು ಸೀಸದ ನಾಣ್ಯಗಳು ದೊರೆತುವು. ಇವುಗಳನ್ನು ಪರೀಕ್ಷಿಸಿ ಲ:ಡನ್ನಿನ ಬ್ರಿಟಿಷ್ ಮರಿಯಮ್ಮಿಗೆ ಸೇರಿದ ಡಾ!! ಕ್ಯಾಪ್ಟನ್ ಎಂಬ ವಿದ್ವಾಂಸರು ಅವುಗಳು ಶಾತವಾಹನ ಚಕ್ರಾಧಿ ಪತಿಗಳ ನಾಣ್ಯಗಳೆಂದು ಗೊತ್ತು ಮಾಡಿದರು. ಈ ವಿಷಯವನ್ನು ಅರಿತು ಬ್ರಿಟಿಷ್ ಇಂಡಿಯಾ ಸರಕಾರದ ಪುರಾತತ್ವ ಶಾಖೆಯ ಅಧಿಪತಿಗಳಾಗಿದ್ದ ಸರ್ ಜಾನ್ ಮಾಗ್ನಲ್ಲರು ಅಲ್ಲಿ ಭೂಶೋಧನೆಯನ್ನು ನಡೆಸಬೇಕೆಂದು ಮೈಸೂರು ಸರಕಾರಕ್ಕೆ ಸೂಚಿಸಿದರು. ಮೈಸೂರಿನ ಶಾಸನ ಶಾಖೆಯ ಅಧ್ಯಕ್ಷರಾಗಿದ್ದ ಶ್ರೀ. ರಾ. ನರಸಿಂಹಾಚಾರ್ಯರು ಈ ಕಣಿವೆಯನ್ನು ನೋಡಿಬಂದು ಶಾಸ್ತ್ರೀಯವಾದ ಶೋಧನೆಗೆ ಅದು ಯುಕ್ತಸ್ಥಳವೆಂದು ಸರಕಾರಕ್ಕೆ ಬಿನ್ನವಿಸಿದರು. ಮೈಸೂರು ಸರಕಾರದ ಮತ್ತು ವಿಶ್ವವಿದ್ಯಾನಿಲಯದ ಅಪ್ಪಣೆಯ ಪ್ರಕಾರ ನಾನು ಈ ಸ್ಥಳವನ್ನು ೧೯೨೯ ರಲ್ಲಿ ನೋಡಿ ಬಂದು ಮಧ್ಯೆ ಮಧ್ಯೆ ಬಿಟ್ಟು ನಾಲ್ಕು ವರ್ಷಗಳಲ್ಲಿ ಸುಮಾರು ಮೂರು ನಾಲ್ಕು ತಿಂಗಳು ಕಾಲ ಶೋಧನೆ ಮಾಡಿದೆನು. ಮಾಡಿದ ಕೆಲಸವು ಅಲ್ಪವಾದರೂ ಶಾಸ್ತ್ರೀಯವಾಗಿ ನಡೆದಿರುವುದರಿಂದ ಕೆಲವು ಮುಖ್ಯವಾದ ವಿಷಯ ಗಳನ್ನು ಅನುಮಾನವಿಲ್ಲದೆ ಹೇಳಬಹುದು.
- ೨೬
ನಾನು ಮೊದಲು ಈ ಕಣಿವೆಯ ನೆಲವನ್ನು ಎಲ್ಲಾ ಭಾಗಗಳಲ್ಲೂ ನೋಡಿ ಒ೦ದು ನಕ್ಷೆಯನ್ನು ಮಾಡಿಸಿದನು. ಈ ನೆಲ ಸರೀ ಕೈಯಿಂದಲೇ ಅದರೊಳಗೆ ಅನೇಕ ಪದರುಗಳಿವೆಯೆಂದೂ, ಅವುಗಳಲ್ಲಿ ಕೆಲವು ಎರಡು ಸಾವಿರ ವರುಷಗಳ ಕೆಳಗೆ ದೀರ್ಘಕಾಲ ಬಾಳಿದ ಒಂದು ಪಟ್ಟಣಕ್ಕೆ ಸೇರಿದುವೆಂದೂ ಗೊತ್ತಾಯಿತು,
ಭೂಶೋಧನ: ನೆಲದ ಮೇಲಿನ ಕುರುಹುಗಳಿಂದ ಚಂದ್ರವಳ್ಳಿ ಪಟ್ಟಣವು ಚಿತ್ರದುರ್ಗದ ಬೆಟ್ಟ, ಕಿರುಬನ ಕಲ್ಲು ಮತ್ತು ಚೋಳ ಗುಡ್ಡಗಳ ನಡುವೆ ಸುಮಾರು ಒಂದು ಮೈಲಿ ಚದರವುಳ್ಳ ತ್ರಿಕೋಣಾಕಾರವಾದ ಕಣಿವೆಯಲ್ಲಿ ವಿಸ್ತರಿಸಿತ್ತೆಂದು ಗೊತ್ತು ಮಾಡಿದೆನು. ಈ ಸನ್ನಿವೇಶದಲ್ಲಿ ಅಲ್ಲಲ್ಲೇ ನಕ್ಷೆಯಲ್ಲಿ ಗೊತ್ತು ಮಾಡಿದ ಪ್ರಕಾರ ಹಳ್ಳಗಳನ್ನು ಕಡಿಸಲು ನೆಲದೊಳಗೆ ಸ್ವಲ್ಪ ಹೆಚ್ಚು ಕಡಿಮೆ ನಾವು ಮೊದಲೇ ಊಹಿಸಿದ್ದಂತೆ ಏಳೆ: ಟು ಬೇರೆ ಬೇರೆ ಕಾಲದ ಪದರುಗಳು ಕಂಡು ಬಂದವು. ಕಡೆಗೆ ಊರಿನ ಮಧ್ಯಭಾಗವು ಇರುವ ಸ್ಥಳವನ್ನು ಗೊತ್ತು ಮಾಡಿ ಅಲ್ಲಿ ವಿಸ್ತಾರವಾದ ಸನ್ನಿವೇಶವೊಂದನ್ನು ಗುರುತು ಮಾಡಿ ಅಲ್ಲಿಯ ಮಣ್ಣನ್ನು ಮೂರು ಮೂರು ಅ೦ಗುಲ ಆಳವಾಗಿ ಸವರುಗಳಿಗೆ ಅನುಸಾರವಾಗಿ
ನಕ್ಷೆಗಳಲ್ಲಿ ಗುರುತು ಮಾಡಿಕೊಳ್ಳುತ್ತ ಪದಾರ್ಥಗಳು ದೊರೆತಂತೆಯೆ ಅವುಗಳ ಫೋಟೋಗಳನ್ನು ತೆಗೆಯುತ್ತ ಶೇಖರಿಸಲಾರಂಭಿಸಿದೆನು ಪ್ರಾಚೀನ ಪದಾರ್ಥ ಗಳಂತೂ ಹೇರಳವಾಗಿ ಅಂದರೆ ಸುಮಾರು ಏಳೆಂಟು ಸಾವಿರಕ್ಕೆ ಮೇಲೆ ದೊರೆ ಯುತ್ತ ಬಂದವು. ಕೆಲಸಕ್ಕೆ ಸಾಕಷ್ಟು ಜನಸಹಾಯವೂ, ಧನಸಹಾಯವೂ ಇಲ್ಲದೆ ಅನೇಕ ತೊಂದರೆಗಳು ಒದಗಿದವು. ಅವುಗಳನ್ನು ಇಲ್ಲಿ ವರ್ಣಿಸಲು ಸಮಯವಲ್ಲ. ಆದರೆ ಹೇಗೋ ಆ ಪದಾರ್ಥಗಳನ್ನು ಮೈಸೂರಿಗೆ ಸಾಗಿಸಿ ಅವು ಗಳನ್ನು ಸ್ವಲ್ಪ ಮಟ್ಟಿಗೆ ಪರೀಕ್ಷಿಸಿ ಅವುಗಳಿಂದ ತಿಳಿಯಬಂದ.-ಅಂಶಗಳನ್ನು ಸಂಗ್ರಹಿಸುವುದಕ್ಕೆ ಪ್ರಯತ್ನ ಮಾಡಿರುವನು. ಇವುಗಳಲ್ಲಿ ಸು ಕ್ರಿ.ಶ. ೪ನೆಯ ಶತಮಾನದಿಂದ ಹಿಂದಕ್ಕೆ ಆದಿಚರಿತ್ರೆ (Proto-history ) ಮತ್ತು ಪೂರ್ವ ಚರಿತ್ರೆ ( Pre-history ) ಇವುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಇಲ್ಲಿ ತಿಳಿಸುವೆನು,
- ಮಯೂರಶರ್ಮನ' ಶಾಸನ : ಮೇಲಿನಿಂದ ಒಳಕ್ಕೆ ಇಳಿಯುತ್ತ ೩, ೪, ೫ ಮತ್ತು ೬ ನೆಯ ಪದರುಗಳು ಚಂದ್ರವಳ್ಳಿ ಪಟ್ಟಣಕ್ಕೆ ಸೇರಿದುವೆಂದು ಗೊತ್ತು ಮಾಡಿದೆನು ಇದರ ಕಟ್ಟ ಕಡೆಯ ಹೆಗ್ಗುರುತಿಗೆ ಬ್ಯಾಡ್ಮಿ ಭಾಷೆಯಲ್ಲಿ ಬರೆದ ಮಯೂರಶರ್ಮನ ಶಾಸನವು ದೊರೆಯಿತು. ಚಂದ್ರವಳ್ಳಿ ನಿವೇಶನದಲ್ಲಿ * ಹುಲಿಗೊಂದಿ' ಎಂಬ ಇಕ್ಕಟ್ಟಾದ ಕಣಿವೆಯ ಎಡಪಕ್ಕದ ಇಳಿಜಾರಿನಲ್ಲಿ ಹುಲಿಗೊಂದಿ ಸಿದ್ದೇಶ್ವರನ ಗುಡಿ ಎಂಬ ಭೈರವನ ದೇವಾಲಯವೊಂದಿದೆ. ಆ ಗುಡಿಯ ಬಾಗಿಲಿನ ಬಲಭಾಗದಲ್ಲಿ ಗೋಡೆಯಂತೆ ನಿಂತಿರುವ ಕಗ್ಗಲ್ಲಿನ ಬಂಡೆ
Plate III
ಕt
ಸಮಪಿ
ಪ
#
. . . . :)
;
- ಪುಟ ೨೬. ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ:-ಮಯೂರಶರ್ಮನ ಲೇಖವುಳ್ಳ ಬಂಡೆಗಲ್ಲು.
ಜ4
3
:25:
33*
.
. .
ಮ'" .
Bಡಿ
Plate V
гота Таҳтігін қстезі: Тод чу Т аала јчлее 11
ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ:- ಚಂದ್ರವಳ್ಳಿಯಲ್ಲಿ ಕಲ್ಲುಬಂಡೆಯ ಮೇಲೆ ಕೊರೆಯಲ್ಪಟ್ಟ ಮಯೂರಶರ್ಮನ ಶಾಸನ (ನಕ್ಷೆ)- ಪ್ರಓ೨೬
ಯೊಂದಿದೆ. ಅದರ ಮುಖದ ಮೇಲೆ ಸಾಮಾನ್ಯ ದೃಷ್ಟಿಗೆ ಗೋಚರವಾಗದಂತೆ ಮಳೆಗಾಳಿಗಳ ಹೊಡೆತದಿಂದ ಅಳಿಸಿ ಹೋದ ಶಾಸನವೊಂದು ಕಾಣಿಸಿತು. ಬ್ರಾಹ್ಮ ಲಿಪಿಯ ಕಟ್ಟಕಡೆಯ ರೂಪಾಂತರವಾದ ಗವಿಯ ಲಿಪಿಯಲ್ಲಿ (Cave Alphabet ಬರೆದ ಶಾಸನದ ಮೂರು ಪಂಗಿಗಳು ಈ ಬಂಡೆಯಲ್ಲಿ ಕಾಣಿಸಿದವು. ಈ ಅಕ್ಷರಗಳು ಬಳ್ಳಾರಿ ಜಿಲ್ಲೆಯ ಮಾಕದೋಣಿಯಲ್ಲಿ ಸಿಕ್ಕು ಎಪಿಗ್ರಾಫಿಯಾ ಇಂಡಿಕ ಸಂ ಪುಟ (೧೪, ಪು. ೧೫೩) ದಲ್ಲಿ ಅಚ್ಚಾಗಿರುವ ಶಾತವಾಹನರ ಇಮ್ಮಡಿ ಪುಳಿಮಾವಿಯ ಕಾಲದ ಅಕ್ಷರಗಳನ್ನು ನೆನಪಿಗೆ ತಂದುವು. ಈ ಶಾಸನವನ್ನು ಬರೆಯಿಸಿದವನು ಕದಂಬರ ಮಯೂರಶರ್ಮನೆಂದೂ, ಆ ಕಣಿವೆಯಲ್ಲಿ ಒಂದು ಕಟ್ಟೆಯನ್ನು ಕಟ್ಟಿಸಿದ ನೆಂದೂ ಇದರಿಂದ ತಿಳಿಯಬಂದಿತು. ಅಕ್ಷರಗಳ ರೂಪದಿಂದ ಶಾಸನವು ಸುಮಾರು ಕ್ರಿ.ಶ.೩ ನೆಯ ಶತಮಾನಕ್ಕೆ ಸೇರಿರಬಹುದೆಂದು ಗೊತ್ತು ಮಾಡಿದೆನು. ಮಯೂರನು ತಾನು ಯುದ್ಧ ಮಾಡಿ ಸೋಲಿಸಿದ್ದೇನೆಂದು ಹೇಳಿಕೊಳ್ಳುವ ಆಭೀರ, ಪುನ್ನಾಟ, ಪಲ್ಲವ, ಪಾರಿಯಾತ್ರಿಕ, ಮೌಖರಿ, ತ್ರೈಕೂಟ ಮೊದಲಾದ ಹೆಸರುಗಳು ಕಾಣಬಂದುವು. ನಾಲ್ಕನೆಯ ಶತಮಾನದಲ್ಲಿ ಪ್ರಸಿದ್ದಿಗೆ ಬಂದ ವಾಕಾಟಕ. ಗಂಗ, ಗುಪ್ತ ವೆ.ದಲಾದವರ ಹೆಸರೇನೂ ಕಾಣಬರಲಿಲ್ಲ. ಕದಂಬ ರಾಜ್ಯದ ನೈರುತ್ಯಕ್ಕೆ ಪುನ್ನಾಟ, ಅದರ ಉತ್ತರಕ್ಕೆ ಸುಮಾರು ಈಗಿನ ಉತ್ತರ ಕನ್ನಡ ಜಿಲ್ಲೆಗಳ ಬಳಿ ಸೇಂದ್ರಕ, ನಾಸಿಕದ ಒಳಿ ಆಭೀರ, ಸ೦ಬಯಿಯ ಉತ್ತರಕ್ಕೆ ತ್ರೈಕೂಟ, ಸೂರತ್ತಿನ ಬಳಿ ಶಕ, ಓಢ ದೇಶದ ಕಡೆ ಮೌಖರಿ ಈ ರೀತಿ ರಾಜ್ಯಗಳಿದ್ದವೆಂದು ಯಾರಾದರೂ ಊಹಿಸಬಹುದು ಈ ರಾಜ್ಯಗಳ ನಡುವೆ ಕದಂಬರ ರಾಜ್ಯವು ವಿಸ್ತರಿಸಿತ್ತೆಂದು ನಾವು ಊಹಿಸಬಹುದಾಗಿದೆ.
ನಾಣ್ಯಗಳು :- ಚಂದ್ರವಳ್ಳಿಯು ಫ್ರೆ ರಾತನ ನಾಣ್ಯಗಳಿಗೆ ಪ್ರಸಿದ್ಧವಾದ ನಿವೇಶನ, ಇಲ್ಲಿಯ ಶೋಧನೆಯಲ್ಲಿ ನೂರಾರು ನಾಣ್ಯಗಳು ಇತರ ಪದಾರ್ಥ ಗಳೊಡನೆ ತಾವು ಬಿದ್ದ ಸ್ಥಳಗಳಲ್ಲಿಯೇ ಆರಿಸಲ್ಪಟ್ಟಿವೆ. ಈ ನಾಣ್ಯಗಳ ದೇಶ, ಕಾಲ, ಕರ್ತೃತ್ವಗಳನ್ನು ಗೊತ್ತು ಮಾಡಿ, 'ಅವುಗಳ ಕೂಡ ದೊರೆತ ಪದಾರ್ಥಗಳ ಕಾಲವನ್ನು ನಿರ್ಣಯಿಸಬಹುದು. ಆದ್ದರಿಂದ ಈ ನಾಣ್ಯಗಳನ್ನು ಚೆನ್ನಾಗಿ ಪರೀಕ್ಷಿಸಿದೆನು. ಇವುಗಳನ್ನು ಸಂಕ್ಷೇಪವಾಗಿ ಈ ರೀತಿ ವಿವರಿಸಬಹುದು,
೧. ಜಾಕೋಣಾಕಾರದ ಬೆಳ್ಳಿಯ ಪುರಾಣಗಳು, ಇವುಗಳ ಮೇಲೆ
ಛಾಪಿಸಿದ ಗುರುತುಗಳು ಏಳಿಸಿ ಮಂಕಾಗಿವೆ. ಇವುಗಳು ಮಾರ್ಯ ವಂಶೀಯರ ನಾಣ್ಯಗಳೆಂದು ವಿ ಆಲೆನ್ನ ರೂ, ಕ್ರಿ. ಪೂ. ೬೦೦ರರಿಂದ ೧೦೦ರವರೆಗಿನ ಕಾಲದ ನಾಣ್ಯಗಳೆಂದು ಮಿ. ವಿನ್ಸೆಂಟ್ ಸ್ಮಿತ್ರರೂ, ವೇದಗಳ ಕಾಲದಿಂದಲೂ ಬಂದಿರುವ ಪ್ರಾಚೀನ ಭಾರತ ನಾಣ್ಯ ಗಳೆಂದು ದೇವದತ್ತ ಭಂ
~ ೨೮ -
೨. ವೃಷಭ, ವೃಕ್ಷ, ಗಿರಿ, ಸ್ವಸ್ತಿಕ, ನಂದಿಪಾದ ಮೊದಲಾದ ಚಿಹ್ನೆ
ಗಳಲ್ಲಿ ಒಂದೆರಡನ್ನು ಮಾತ್ರ ಉಳ್ಳ ಸಣ್ಣ ಸಣ್ಣ ಸೀಸದ ನಾಣ್ಯಗಳು. ೩. ವಿವಿಧವಾದ ಮಣ್ಣಿನ ಮತ್ತು ಕಲ್ಲಿನ ಮುದ್ರೆಗಳು. ಇವುಗಳಲ್ಲಿ
ಬ್ರಾಹಿಯಲ್ಲಿ ಹೀಗೆಂದು ಬರೆದಿದೆ. ಈ ಸಡಕಣ, ವಲಯಸ, ಸೆಬಸ,”
(3ಅಮರಸ ಮಗರಿಲಸ, ) ೪. ಹೊರಗೆ ದುಂಡಾಗಿ ಮಧ್ಯೆ ಚಕಾದ ರಂಧವುಳ್ಳ ಪ್ರಾಚೀನ
ಚೀಣಾದೇಶದ ಹಿತ್ತಾಳೆಯ ನಾಣ್ಯಗಳು. ಇವುಗಳನ್ನು ಕ್ರಿ. ಪೂ. ೧೩೦ ರಲ್ಲಿ ಚೀನದೇಶಕ್ಕೆ ಚಕ್ರವರ್ತಿಯಾಗಿದ್ದ ಹ್ಯಾನ್ ವಂಶದ ವೋಟ ಎಂಬ ಪ್ರಸಿದ್ದ ದೊರೆಯ ಛಾಪಿಸಿದನೆಂದು ಗೊತ್ತು ಮಾಡಲ್ಪಟ್ಟಿದೆ. ರೋಮ್ ಚಕ್ರಾಧಿಪತ್ಯವನ್ನು ಕ್ರಿ. ಪೂ. ೧ ನೆಯ ಶತಮಾನದಿಂದ ಕ್ರಿ.ಶ.೩ನೆಯ ಶತಮಾನದ ವರೆಗೆ ಆಳಿದ ಅಗಸ್ಟಸ್, ಟೈಬೀರಿಯಸ್
ಎ೦ಬವರ ಬೆಳ್ಳಿಯ ನಾಣ್ಯಗಳು, ೬, ದೊಡ್ಡ ಮತ್ತು ದಪ್ಪವಾದ ಸೀಸದ ನಾಣ್ಯಗಳು, ಇವುಗಳ ಮೇಲಿನ
ಚಿತ್ರಗಳನ್ನು ಇಲ್ಲಿ ವರ್ಣಿಸುವುದಿಲ್ಲ. ಬರೆದಿರುವ ಹೆಸರುಗಳನ್ನು ಮಾತ್ರ ಹೇಳುತ್ತೇನೆ. ಮಹಾರಠಿ ತಡಕಾರ, ' ಮಹಾರಠಿ ಸಹಾರೀತಿ ಪುತ್ರನಿಳವಾಯಕುರಸ, 2 : ಮಹಾರಠಿಸ ಸರಜಕಣಕ ಳಲಾಯಸ ಸಡಕಣ ಸಳ ಲಾಯ ಮಹಾರಠಿಸ, : ಮಹಾರಠಿ ಪುತಸ........ರಾಜೋ ಚುಟುಕುಲಾನಂದಸ, ' ರಾಜ್ಯೋಮುಳಾ ನಂದಸ,' 'ರಾಜೇ ಗೌತಮಿ ಪುತಸ ವಿಳಿವಾಯಕರಸ,? - ಸಿರಿ ಪುಳುಮಾವಿಸ, ” “ ಸಿರಿಸಾತಸ, ” “ ಸಿರಿಸಾತಕಣಿಸ, ” ಯಜ್ಞಶ್ರೀ ? “ರಾಜ್ಯೋ ಸಿರಿಚಂದ್ರಸ' ಇತ್ಯಾದಿ. ಈ ನಾಣ್ಯಗಳ ವಿಮರ್ಶೆಯಂದ ಚಂದ್ರವಳ್ಳಿಯ ಸುತ್ತಮುತ್ತಣ ಪ್ರದೇಶದ ರಾಜಕೀಯ ಚರಿತ್ರೆ
ಯನ್ನು ನಿರ್ಧರಿಸಬಹುದು. ಇದನ್ನು ಮುಂದೆ ಹೇಳುತ್ತೇನೆ. ಮಣಿಗಳು:- ಪ್ರಾಚೀನ ನಿವೇಶನಗಳಲ್ಲಿ ಶಾಸನಗಳು, ನಾಣ್ಯಗಳು ಮಾತ್ರ ವಲ್ಲದೆ ಹಳೆಯ ಮಣಿಗಳು, ಬೋಕಿಯ ಚೂರುಗಳು, ಬೇರೆ ಬೇರೆ ಲೋಹಗಳ -ಕೆಟ್ಟ ಗಳೂ, ಆಯುಧಗಳ ಚೂರುಗಳೂ, ಎಲುಬುಗಳೂ, ಕಲ್ಲು ಇಟ್ಟಿಗೆಗಳ ಕಟ್ಟಡ ಗಳೂ ದೊರೆಯುತ್ತವೆ. ಇವುಗಳ ವಿಮರ್ಶೆಂದ ಆಗಿನ ಕಾಲದ ಸ್ಥಿತಿಗತಿಗಳಿಗೆ ಸಂಬಂಧಪಟ್ಟ ಎಷ್ಟೋ ಅಂಶಗಳು ತಿಳಿಯಬರುತ್ತವೆ. ಪೂರ್ವ ಚರಿತ್ರಕಾರರು ಮಣಿಗಳ ಸಂಶೋಧನ ಕಾರ್ಯದಲ್ಲಿ ಪ್ರವೀಣರಾಗಿರಬೇಕು, ಚಂದ್ರವಳ್ಳಿಯಲ್ಲಿ
ದೊರೆತಿರುವ ಮಣಿಗಳ ಪೈಕಿ ಈ ಕೆಳ ಕಂಡವು ಕೆಲವು : ವಿಧವಿಧವಾದ ಗಾಜಿನ ಮಣಿಗಳು, ದೊಡ್ಡವು, ಚಿಕ್ಕವು, ಹಸರು, ಹಳದಿ, ನೀಲಿ, ಪಟಪಟ್ಟೆ ಮೊದಲಾದ ಬಣ್ಣದವು. ಮುತ್ತಿನ ಮಣಿಗಳು, ಎರಡು ಮೂರು ವಿಧದ ಹವಳಗಳು, ಹವಳ ಗಳನ್ನೂ ರತ್ನಗಳನ್ನೂ ಹೋಲುವ ಬಣ್ಣದ ಸುಟ್ಟ ಮಣ್ಣಿನವು, ಕರೋವಾ ಮಣಿಗಳು, ನೀಲಮಣಿ, ಪಚ್ಚೆ, ಗೋಮೇಧಿಕ, ಕೆಂಪು, ಎಲುಬು, ವಿವಿಧವಾದ ಕಲ್ಲುಗಳು. ಇವುಗಳ ರೂಪಗಳೂ ಬಗೆಬಗೆಯಾಗಿವೆ: - ಗುಂಡು, ಕೊಳವೆ. ಸೀ ಪಾಯಿ, ಅಂಜೂರ, ಪಟ್ಟಿ, ಎ೦ಟು ಮೂಲೆ, ನಕ್ಷತ್ರ, ನೆಬೀಜ ಮೊದ ಲಾದವು. ಇವುಗಳ ಪರೀಕ್ಷೆಯು ಇನ್ನೂ ನಡೆಯುತ್ತಿದೆಯಾಗಿ ಈ ಮಾತನ್ನು ಇಲ್ಲಿಗೆ ಬಿಡುತ್ತೇನೆ.
ಒಡವೆಗಳು ಅನೇಕ ವಿಧವಾದ ಒಡವೆಗಳು ದೊರೆತಿವೆ. ಇವುಗಳಲ್ಲಿ ಕೆಲವನ್ನು ಇಲ್ಲಿ ಹೇಳಬಹುದು. ಬಂಗಾರದ ಮೂಗುತಿ, ತಂತಿಯಿಂದ ಸುತ್ತಿದ ತೆಳ್ಳಗೆ ನಾಜೋ ಕಾದ ಲೋಲಾಕು, ಕೆಂಪು, ವಜ್ರ ಕೆತ್ತಿದ ಬಂಗಾರದ ಉಂಗುರಗಳು, ತಾವ ದ, ಪಂಚಲೋಹದ, ಕಬ್ಬಿಣದ ಉ೦೯೩ ರಗಳು; ಜೇಡಿಯ ಮಣ್ಣಿನಲ್ಲಿ ಮಾಡಿ ರೇಖ ಹಚ್ಚಿದ ಚ೦ದ್ರ ನಂಬರುವಗಳು, ಬಾವಲಿಗಳು- ಕರಿಯ ಬಣ್ಣದ, ಎರಡು ಮೂರು ಬಣ್ಣದ ಬಳುಕಿನ, ಚಿತ್ರ ವಿಚಿತ್ರದ, ಕರಿಯ, ಬಿಳಿಯ, ಹಸಿರೆ, ವಿವಿಧವಾದ ಗಾಜಿನ ಬಳೆಗಳು, ಶಂಖದ ಬಳೆಗಳು, ಲೋಹದ ಬಳೆಗಳು, ಹಗ್ಗದ ಬಳಳು ರ್ಪಡೆಯ ದಾಳಗಳು, ಜಿಂಕೆಯ ಕೊಂಬಿನ ಮತ್ತು ದಂತದ ವಿವಿಧ ಸಾಮಾನ, ಗಳು, ತಾಮ್ರದ ಸರಪಣಿಗಳು, ಅಲಂಕಾರದ ಮೊಹರುಗಳು ಇತ್ಯಾದಿ.
ಶಿಲ್ಪ:- ದೊಡ್ಡದಾದ ಶಿಲ್ಪ ಸಾಮಗ್ರಿಯು ಯಾವುದೂ ದೊರೆಯದಿದ್ದರೂ ಸಣ್ಣ ಸಣ್ಣ ಶಿಲ್ಪಿತ ಪದಾರ್ಥಗಳು ಅನೇಕವಾಗಿ ದೊರೆತಿವೆ. ಇವುಗಳಲ್ಲಿ ಕಲ್ಲಿ ನನ್ನ, ಸುಟ್ಟ ಮಣ್ಣಿನವು, ದಂತದವು, ಹಿತ್ತಾಳೆಯವು, ತಾಮ್ರದವು ಮೊದಲಾಗಿವೆ. ಇವುಗಳಲ್ಲಿ ಗಣೇಶ, ಭೈರವ, ದುರ್ಗಿ ಮೊದಲಾದ ದೇವರುಗಳ ಪ್ರತಿಮೆಗಳೂ ಬುದ್ಧ, ಯಕ್ಷ ಗಂಧರ್ವ ರು, ಮನುಷ್ಯರು, ಗಂಡ ಹೆಂಡಿರು, ನರ್ತಕಿಯರು, ಆನೆ, ಕುದುರೆ, ಆಕಳು, ಕುರಿ, ಕೋಳಿ ಮೊದಲಾದ ಆಕಾರಗಳೂ ದೊರೆತಿವೆ. ಶಿಲ್ಪದ ರೀತಿಯು ಬೌದ್ದರ ಕಾಲದಲ್ಲಿ ಖಾರಹುತ” ಅಮಾವತಿ ಮೊದಲಾದ ಕಡೆಗಳಲ್ಲಿ ಕಾಣಬರುವಂತೆಯೇ ಸೌಂದರ್ಯದಿಂದಲೂ ಲಾಲಿತ್ಯದಿಂದಲೂ ಕೂಡಿ ಸ್ಫೂರ್ತಿ
ಯುಕ್ತವಾಗಿ ಉತ್ತಮ ತರಗತಿಯ ಕಲಾಕೌಶಲ್ಯವನ್ನು ತೋರ್ಪಡಿಸುತ್ತದೆ.
ಆಯುಧಗಳು:- ಚಂದ್ರವಳ್ಳಿಯ ಕಾಲಕ್ಕೆ ಕಬ್ಬಿಣದ ಉಪಯೋಗವು ಸಂಪೂರ್ಣವಾಗಿ ನಡೆಯುತ್ತಿತ್ತು. ಒಂದೆರಡು ಸಮಯಗಳಲ್ಲಿ ಉಕ್ಕಿನ
ಪದಾರ್ಥಗಳೂ ದೊರೆತಿವೆ. ಆಯುಧಗಳು ಈಗಿನ ಕಾಲದಲ್ಲಿರುವಂತೆಯೇ ಕಲ್ಲು, ಹಿತ್ತಾಳೆ, ತಾಮ್ರ ಮೊದಲಾದ ಸಾಮಗ್ರಿಗಳಿಂದ ಮಾಡಲ್ಪಡುತ್ತಿದ್ದವು. ಇವು ಗಳಲ್ಲಿ ಕೆಲವನ್ನು ಇಲ್ಲಿ ಹೇಳಬಹುದು, ಈಟಿಯ ಕಬ್ಬಿಣದ ಅಲಗುಗಳು, ದೊಡ್ಡ ಕತ್ತಿ, ಸಣ್ಣ ಕತ್ತಿ, ಎರಡಲಗಿನ ಕತ್ತಿ, ಬಾಕು, ಭರ್ಜಿ, ತಾಳಪತ್ರದ ಮೇಲೆ ಬರೆಯುವ ಕಂಠ, ಕಬ್ಬಿಣದ ಬಾಣಲೆ, ಕೊಳವೆ, ಚಿಲಕ, ಕೊಂಡಿ, ವಿವಿಧವಾದ ಮೊಳೆಗಳು, ತಾಮ್ರದ ಚೊಂಬುಗಳು, ಈಳಿಗೆಯ ಮಣೆಯ ಅ೦ಗ, ತುರಿಯುವ ಅಲಗು ಮೊದಲಾದವು.
- ಮತ್ತಾತ್ರಗಳು:ಚ೦ದ್ರವಳ್ಳಿಯಲ್ಲಿ ದೊರೆತಿರವ ಮತ್ತಾತ್ರೆಗಳು ವಿವಿಧವಾಗಿಯೂ, ಅನೇಕ ಬಂಡಿಗಳಲ್ಲಿ ತುಂಬಬಹುದಾದಷ್ಟೂ ಇವೆ. ಒಡಕು ಬೋಕೆಗಳ ಪರೀ ಕೆ ಯಿಂದ ಒಡೆಯದಿದಾ ಗ ಪಾತ್ರೆಗಳು ಹೇಗಿದ ವೆಂದು ಊಹಿಸಿ
ಅವುಗಳ ಮಣ್ಣ, ಆಕಾರ, ಬಣ್ಣ, ಹೊಳಪು, ಸುಡೋಣ, ಅಲಂಕಾರ ಮೊದ ಲಾದುವನ್ನು ವಿಮರ್ಶೆ ಮಾಡಿ ಮಿಕ್ಕೆಡೆಗಳಲ್ಲಿ ಸಿಗುವ ಪದಾರ್ಥಗಳೊಡನೆ ಹೋಲಿಸಿ ಚಾರಿತ್ರಿಕ ವಿಷಯಗಳನ್ನು ಸಂಪಾದಿಸುವುದು ಪುರಾತತ್ವ ಶಾಸ್ತ್ರಜ್ಞನ ವಿಚಿತ್ರ ನಾದೊಂದು ವಿದ್ಯೆ, ಹಾಸ್ಯಗಾರರು ಇದನ್ನು ಒಡಕು ಮಡಕೆಯ' ಶಾಸ್ತ್ರವನ್ನು ವರು. ಆದರೆ ಈಜಿಷ್ಟ, ಸುಮೇರಿಯಾ ಮೊದಲಾದೆಡೆಗಳಲ್ಲಿ ಈ ಬೋ ಕೀ ಶಾಸ್ತ್ರದ ಮೂಲಕ (Ceramics) ಅಥವಾ “ ಭಗ್ನ ಮೃತ್ಪಾತ್ರಶಾಸ್ತ್ರ' ದ ಮೂಲಕ ಸರ್ ಇಂಡರ್ ಪೀವ್ರ, ಬ್ರೆಡ್, ರೈಸ್ಟರ್, ಪ್ರಾಂಕ್ ಫರ್ಟ, ಇವಾನ್ನ, ಮಾರ್ಷಲ್ ಮೊದಲಾದ ಮಹನೀಯರು ಕಂಡುಹಿಡಿದಿರುವ ಇತಿಹಾಸ ವಿಷಯಗಳನ್ನು ನೋಡಿದರೆ ನಾವು ಆಶ್ಚರ್ಯಚಕಿತರಾಗುವೆವು. ಚಂದ್ರವಳ್ಳಿಯಲ್ಲ ಈ ಪ್ರಯತ್ನ ವನ್ನು ಮಾಡಲು ನಾನು ತೊಡಗಿದೆವು. ನಮ್ಮ ಗುರುಗಳಾದ ಸೀ ಟ್ರಯವರ ದೃಷ್ಟಿಯಿಂದ ನೋಡಲು ಶಾತವಾಹನ ಕಾಲದ ಮೈ ತಾತ್ರೆಗಳ ಲಕ್ಷಣಗಳು ಹೀಗೆಂದು ಕಂಡುಬಂದುವು. ಇವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸುತ್ತೇನೆ.
೧. ಅಗಲವಾದ ಬಾಯುಳ್ಳ ಕೋಣಾಕಾರದ ಸಣ್ಣ ಬುಡದ ಕೆಂಪಿನ
ನೀರಿನ ಬಟ್ಟಲಗಳು. ಇವು ಆ ಕಾಲದಲ್ಲಿ ಭಾರತದ ವಾಯವ್ಯದಲ್ಲಿ ರುವ ತಕ್ಷಶಿಲೆ ಮೊದಲಾದೆಡೆಗಳಲ್ಲಿಯೂ ವಿಶೇಷವಾಗಿ ದೊರೆಯು ಇವೆ. ಇವು ಬಹಳ ಹೆಚ್ಚಾಗಿ ಸಿಗುವುದರಿಂದ ಕೆಲವು ಸಮಯ ದ್ರವ
ಪದಾರ್ಥಗಳನ್ನು ಕುಡಿದವರು ಇದನ್ನು ಬೀಸಾಡಿರಬಹುದು. ೨. ಗಿಂಡಿಯ ಪಾತ್ರೆಗಳು, ೩. ಮುಚ್ಚಳವಿರುವ ಪಾತ್ರೆಗಳು, ೪, ಅಗಲವಾದ ಮಡಕೆಯ ಮುಚ್ಚಳಗಳು,
Plate VI
?
ಜ್ಞ
.
.
ಪ್ರ
:
ಮಗಳು
*
*
* **
ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೩೬) - ಪುಟ ೩೦
Plate VII
jyಸ್ಥಳ.
ವ್ಯಕ್ತಿಗೆ
4.
ಅವರು
ಪದ್ಯ:
?
{X
::
: '
5
: -
ಸ
*
ಸಂಕ:
3
:{X
?
: :
:
ಸಮಯಕ್ಕೆ
ಸರಕಾರದ ಸಂದರ್ಭಗಳಿಗೆ
ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೧೬ ):ನಾನಾ ಆಕಾರದ ಮಣ್ಣಿನ ಪಾತ್ರೆಗಳು, ಕಲ್ಲಿನ ಪೆಟ್ಟಿಗೆ - ಪ್ರಟ ೩೦
Plate VIII
ಇದು
}
3
{
ಚಂದ್ರವಳ್ಳಿಯ ಅಗೆತ, ಚಿತ್ರದುರ್ಗ (ನಂ. ೩೫) - ಪುಟ ೩೧
೫. ಅನೇಕ ವಿಧ ಅಲಂಕಾರಗಳುಳ್ಳ ತಟ್ಟೆಗಳು, ಮತ್ತು ಅರಕನ ಚಟ್ಟಗಳು. ೬, ದೊಡ್ಡ ಮಡಕೆಗಳು ಮತ್ತು ಬಾನೆಗಳು. ಇವುಗಳು ಅಲುಗದಂತೆ
ಅನೇಕ ವೇಳೆ ಕೊಟಡಿಗಳ ಮೂಲೆಗಳಲ್ಲಿ ಕೆಳಭಾಗವನ್ನು ಹೂಳಿ
ಇಡುತ್ತಿದ ರು. ೭. ಶಾತವಾಹನರ ಕಾಲದ ಅನೇಕ ಮಡಕೆಗಳ ಮೇಲೆ ಒಂದು ವಿಧವಾದ
ಕೆ೦ಪು ಒಣ್ಣವನ್ನು ಬಳೆದು ಹೊಳೆಹೊಳೆಯುವಂತೆ ಮಾಡಿದ್ದಾರೆ. ಆ ಕಾಲದ ಮೃತಾತ್ರೆಗಳಿಗೆ ಈ ಹೊಳೆಯುವ ಕೆಂಪು ಬಣ್ಣವು ಹೆರುತೆ: ದು ಹೇಳಬಹುದು, ಕಟ್ಟಡಗಳು:- ಚ೦ದ್ರವಳ್ಳಿ ಯ ಕಟ್ಟಡಗಳು ಊರಿನ ಮಧ್ಯಭಾಗದಲ್ಲಿ ಇಟ್ಟಿಗೆ ಮಣ್ಣುಗಳಿಂದ ಕಟ್ಟಿದವು. ರಾಜಬೀದಿಯು ಉತ್ತರದಿಂದ ದಕ್ಷಿಣಕ್ಕೆ ಹರಿದು ಹುಲಿಗೊಂದಿಯ ಕೆರೆಯ ಕಟ್ಟೆಯ ಬಳಿ ಕೆ.ನೆಯಾಗುತ್ತಿತ್ತು, ಇದು ಸುಮಾರು ಒಂದು ಮೈಲಿಗೆ ಹೆಚ್ಚಾಗಿ ಉದ್ದವಿದ್ದಂತೆ ತೋರುತ್ತದೆ. ಇದರ ಇಕ್ಕೆಡೆಗಳಲ್ಲಿ ವೈದ್ಯ, ಅಕ್ಕಸಾಲೆ, ಕುಂಬಾರ ಮೊದಲಾದ ವಿವಿಧ ಕಲಾವಂತ ಮನೆಗಳೂ, ಅಂಗಡಿಗಳೂ ಇದ್ದವು. ಇವರು ಈ ಅಂಗಡಿಗಳ ಹಿಂಭಾಗಗಳಲ್ಲಿ ಸಂಸಾರ ಸಮೇತ ವಾಸಮಾಡುತ್ತಿದ್ದರು. ಕಟ್ಟಡಗಳ ಹಿಂದುಗಡೆ ಹಿತ್ತಲೂ, ಹಿತ್ತಲಿನಲ್ಲಿ ಅನೇಕ ಬೆಳೆ ದೊಡ್ಡ ಅಥವಾ ಸಣ್ಣ ಭಾವಿಯ ಒಂದು ಮೂಲೆ ಯಲ್ಲಿ ಗುಳಿಯ ಮೇಲೆ ಕಲ್ಲು ಹಾಸಿದ ಪಯಖಾನೆಯೂ ಇದ್ದುವು. ಕಡ ಗಳನ್ನು ಕಟ್ಟುವುದಕ್ಕೆ ಬಹಳ ಒಳ್ಳೆಯ ಮಣ್ಣಿನಲ್ಲಿ ಮಾಡಿ ಉಟ್ಟೆಯಲ್ಲಿ ಚನ್ನಾಗಿ ಸುಟ್ಟ ದೊಡ್ಡ (೧೬" x೮” • ೩” ) ಅಳತೆಯುಳ್ಳ ಇಟ್ಟಿಗೆಗಳನ್ನು ಉಪಯೋಗಿಸು ತಿದ್ದರು. ಇವಗಳನ್ನು ಒಹಳ ಜಾಣತನದಿಂದ ಕಟ್ಟುತ್ತಿದ್ದರು. ನೆಲಕ್ಕೂ ಇಟ್ಟಿಗೆ ಗಳನ್ನು ಹಾಸುತ್ತಿದ್ದರು. ಅರ್ಧ ಅಥವಾ ಒಂದು ಗಜ ಇಟ್ಟಿಗೆ ಗೋಡೆಗಳನ್ನು ಕಟ್ಟಿ, ಅವುಗಳ ಮೇಲೆ ಬಿಸಿಲಿಟ್ಟಗೆಯ ಅಥವಾ ಬರಿಯ ಮಣ್ಣಿನ ಪುಟದ ಗೋಡೆಗಳನ್ನು ಎತ್ತಿ ಇಟ್ಟಿಗೆಯ ಸುಣಪಾದಗಳ ಮೇಲೆ ಮರದ ಕಂಭಗಳನ್ನಿಟ್ಟು, ತೊಲೆಗಳನ್ನು ಹಾಕಿ, ಹಲಗೆ ಸೇರ್ವೆಯನ್ನು ಮಾಡಿ ಬಾಗು ತಲೆಯ ಕಬ್ಬಿಣದ ಮೊಳೆಗಳಿಂದ ಅವುಗಳನ್ನು ಭದ್ರಪಡಿಸುತ್ತಿದ್ದರು. ಅಲ್ಲಲ್ಲಿ ಮಹಡಿಯ ಮನೆಗಳೂ ಇದ್ದು ವು. ಒಂದು ಮನೆಯಲ್ಲಿ ರಾಜ್ಯಾಡಳಿತ ಮಾಡುವ ದೊರೆಯೊ ಅಧಿಕಾರಿಯೊ ಇದ್ದನೆಂದು ಅದರೊಳಗೆ ಸಿಗುವ ರಾಜಮುದ್ರಿಕೆಗಳಿಂದ ತಿಳಿಯಬರುತ್ತದೆ. ಈ ಕಟ್ಟಡಗಳ ಇಟ್ಟಿಗೆಯ ಭಾಗಗಳು ಮೂರು ಪದರುಗಳಾಗಿ ಸಿಕ್ಕಿರುವುದರಿಂದ ಮೂರಾವರ್ತಿ ಈ ಕಟ್ಟಡಗಳನ್ನು ಕೆಡವಿ ಕಟ್ಟಿರಬಹುದೆಂದು ಊಹಿಸಬಹುದು. ಸಾಮಾನ್ಯವಾಗಿ ಇಟ್ಟಿಗೆಯ ಕಟ್ಟಡಗಳು ಎಂಭತ್ತು ಅಥವಾ ನೂರು ವರ್ಷಗಳ ಕಾಲ ಬಾಳುತ್ತವೆ. ಆದ್ದರಿಂದ ಚಂದ್ರವಳ್ಳಿ ಯ ಇಟ್ಟಿಗೆಯ ಕಟ್ಟಡಗಳು ಮೂರು ನೂರು
ವರ್ಷಗಳ ಕಾಲ ಅಂದರೆ ಸುಮಾರು ಕ್ರಿ. ಪೂ. ೧೦೦ ರಿಂದ ಕ್ರಿ. ಶ. ೨೦೦ ರ ವರೆಗೆ ಬಾಳಿದುವೆಂದು ಊಹಿಸಬಹುದು. ಇದೇ ಚಂದ್ರವಳ್ಳಿಯ ಅತ್ಯಂತ ಉನ್ನತಿಯ ಕಾಲ.
ರಾಜಕೀಯ ಚರಿತ್ರೆ:- ಚಂದ್ರವಳ್ಳಿಯು ಯಾವ ಕಾಲದಲ್ಲಿದ್ದ ಪಟ್ಟಣ ವೆ »ದು ತಿಳಿಯಲು ನಾವು ಕುತೂಹಲ ಪಡುವುದು. ಸ್ಥಳವಂದಿಗರು ಚಂದ್ರಶೇಖರ ನೆ ಬ ರಾಯನೋ ಪುರಾಣ ಪ್ರಸಿದ್ಧನಾದ ಚಂದ್ರಹಾಸನೋ ಅಲ್ಲಿ ಆಳಿದರೆಂದೂ ಆ ಊರಿನಲ್ಲಿ ಒಂದು ಬ್ರಹ್ಮಹತ್ಯನಾಗಲು ಬ್ರಹ್ಮರಾಕ್ಷಸನು ಪಕ್ಕದ ಗುಡ್ಡದಲ್ಲಿ ಸೇರಿ ಭೂಮಿಯನ್ನು ಗುಡಗಿಸಿ ಕೋಟ ಸಿಡಿಲು ಬಡಿದಂತೆ ಶವಾಗುತ್ತಿರಲು ಊರನ್ನು ಉರಳಿಸಿ, ಬೆಂಕಿ ಹೊತ್ತಿಸಿ ಚಂದ್ರವಳ್ಳಿಯನ್ನು ನಾಶಮಾಡಿದನೆಂದು 'ಹೇಳುತ್ತಾರೆ. ಚಾರಿತ್ರಕ ದೃಷ್ಟಿಯಿಂದ ನೋಡಿದರೆ ನಗಾರ್ಯರ ಕಾಲದಲ್ಲಿ ಚಂದ್ರವಳ್ಳಿಯು ಒಂದು ಸಣ್ಣ ಊರಾಗಿತ್ತೆಂದೂ, ಸುಮಾರು ಕ್ರಿ. ಪೂ ೨೦೦ ರಲ್ಲಿ ಶಾತವಾಹನ ಚಕ್ರವರ್ತಿಗಳ ಕಾಲವು ಬಂದಾಗ ಮಹಾರಠಿಗಳೆಂಬ ಉಪ ರಾಜರು ಇಲ್ಲಿ ಆಳಲು ಮೊದಲು ಮಾಡಿದರೆಂದು ತೋರಿಬರುತ್ತದೆ. ಇವರಲ್ಲಿ ಮಹಾರಠಿ ತಡಕಾಯರನು ಸು. ಕ್ರಿ. ಪೂ. ೧೮: ರಲ್ಲಿದ್ದಿರಬಹುದು. ಏಕೆಂದರೆ ಪುಣೆಯ ಬಳಿ ಇರುವ ನಾನಾಘಾಟನ ಗುಹೆಗಳಲ್ಲಿ ಶ್ರೀ ಶಾತಕರ್ಣಿಯ ಕಾಲದ ಶಾಸನದಲ್ಲಿ ಇವನ ಹೆಸರು ಕಾಣಬಂದಿರುವುದೆಂದು ಡಾ ರಾ ಸೃನರು ಊಹಿಸಿ ದಾರೆ. ಈ ಮಹಾರಠಿಗಳು ಶಾತವಾಹನ ಚಕ್ರವರ್ತಿಗಳಿಗೆ ಅಧೀನರಾಗಿದ ರೂ ಬಹುಮಟ್ಟಿಗೆ ಅನೇಕ ತಲೆಮರೆಗಳ ವರೆಗೆ ಸ್ವಾತಂತ್ರವನ್ನು ಅನುಭವಿಸಿ, ಸ್ವಂತ ನಾಣ್ಯಗಳನ್ನು ಛಾಪಿಸಿ ದೇಶವನ್ನು ದ್ವಿಗೆ ತಂದರು. ಇದರಲ್ಲಿ ಅತ್ಯಂತ ಶಕ್ತನೂ, ಪ್ರಸಿದ್ದ ನೂ ಆದವನು ಸಡಕಣ ಕಳಲಾಯ ಎಂಬುವವನು, “ ಸಡಕಣ' ಎಂಬ ಪದದಿಂದ ಇವನು ಶಾತಕರ್ಣಿಗಳ ಸಂಬಂಧಿಯಾಗಿದ್ದಿರಬೇಕೆಂದು ಊಹಿಸಬಹುದು. ಸವಾಟರ ವಂಶಕ್ಕೆ ದೌಹಿತ್ರನಾಗಿದ್ದಿರಬಹುದು. ಇವನು ಕ್ರಿಸ್ತನು ಹುಟ್ಟಿದ ಕಾಲದಲ್ಲಿ ರೋ * ಚಕ್ರಾಧಿಪತ್ಯವನ್ನು ಆಳುತ್ತಿದ್ದ ಅಗಸ್ಟಸ್ ಸೀಸರನ ಸಮಕಾಲೀನನು, ಇವರಿಬ್ಬರ ನಾಣ್ಯಗಳೂ ಒಂದೇ ಸವರದಲ್ಲಿ ಅಕ್ಕ ಪಕ್ಕದಲ್ಲಿ ದೊರೆಯುತ್ತವೆ. ಈ ಮಹಾರಥಿಗಳ ಕಾಲವಾದ ಮೇಲೆ ಪ್ರಸಿದ್ಧ ಚಕ್ರವರ್ತಿಯಾದ ಗೌತಮಿ ಪುತ್ರ ವಿಳಿವಾಯಕರನೂ, ಅನನ ಅಕಾಲ ಮರಣದ ತರುವಾಯ ಅವನ ಮಗ ಪುಲುಮಾಯಿಯೂ ಈ ಪ್ರದೇಶವನ್ನು ಆಳಿದರು. ಆಗ್ಗೆ ರಾಜ್ಯದ ಬಿಗಿಯು ಸಡಲಿ ಅದೇ ವಂಶಕ್ಕೆ ಸೇರಿದ ಬೇರೆ ಭಾಗದ ಉಪರಾಜರು ಆಳ ತೊಡಗಿದರು. ಇವರಲ್ಲಿ ಚುಟುವಂಶದ ತಾಯಿಯ ಮಗನಾದ ಚುಟುಕುಲಾನಂದ ಶಾತಕರ್ಣಿಯ, ಮುಲವಂಶದ ತಾಯಿಯ ಮಗನಾದ ಮುಲಾನಂದನೂ ಕೆಲಕೆಲವು ಕಾಲ ಆಳಿದರು. ಕಡೆಗೆ ಕ್ರಿ. ಶ ೨ನೆಯ ಶತಮಾನದ ಉತ್ತರಾರ್ಧದಲ್ಲಿ ಅದೇ ಶಾತಕರ್ಣಿ ವಂಶಕ್ಕೆ ಸೇರಿದ ಯಜ್ಞಶ್ರೀಯು ವಿಜೃಂಭಣೆಯಿಂದ ಚಕ್ರಾಧಿ
11
ಪತ್ಯವನ್ನು ಆಳಿದನು. ಅವನ ನಂತರ ಅಪ್ರಸಿದ್ದರು ಅಥವಾ ಅನಾಮಧೆಯರು ಆದ ಹಲಕೆಲವು ದೊರೆಗಳು ಆಳಿದ ಮೇಲೆ ಕ್ರಿ. ಶ. ಮೂರನೆಯ ಶತಮಾನದ ಪೂರ್ವಾರ್ಧದಲ್ಲಿ ಶಾತವಾಹನ ವಂಶವು ಕೊನೆಗಡು ಕೆಲವು ಕಾಲಾನಂತರ ರಾಜ್ಯವು ಕದಂಬ ವಂಶದ ಮೂಲ ಪುರುಷನಾದ ಮಯೂರಶರ್ಮನ ಕೈಸೇರಿತು. ಸುಮಾರು ಈ ಕಾಲದಲ್ಲಿ ಯಾವುದೋ ಒ೦ದು ಭೂಕಂಪವಾಗಿ ಚಂದ್ರವಳ್ಳಿಯ
ನಾಶವಾಯಿತು.
ಸಾಮಾಜಿಕ ಸ್ಥಿತಿ:-- ಭೂಶೋಧನೆಯಿಂದ ರಾಜಕೀಯ ಚರಿತ್ರೆಗಿಂತಲೂ ಸಾಮಾಜಿಕ, ಆರ್ಥಿಕ ಮೊದಲಾದ ವಿಷಯಗಳಲ್ಲಿ ಹೆಚ್ಚು ಸಂಗತಿಗಳು ತಿಳಿಯ ಬರುವವು. ಈ ವಿಚಾರದಲ್ಲಿ ಒಂದೆರಡು ವಿಷಯಗಳನ್ನು ಮಾತ್ರ ಹೇಳುತ್ತೇನೆ. ಗಣೇಶ, ಭೈರವ ಮೊದಲಾದ ಪೌರಾಣಿಕ ದೇವರುಗಳ ಪೂಜೆಯೂ, ಬುದ್ಧನ ಪೂಜೆಯೂ ನಡೆಯುತ್ತಿದ್ದು ವು. ಗೋಮಾಂಸ ಭಕ್ಷಿಸುವ ನಿಮ್ಮ ಜಾತಿಯ ಜನರು ಊರಹೊರಭಾಗದಲ್ಲಿ ವಾಸಿಸುತ್ತಿದ್ದರು. ಊರಿಗೆ ಕಾರಂಜಿಯ ಮೂಲಕ ನೀರಿನ ಸರಬರಾಯಿಯಾಗುತ್ತಿದ್ದಿತು. ಚಂದ್ರವಳ್ಳಿಯ ಜನರು ಕುಶಲ ವಿದ್ಯೆಗಳಲ್ಲಿ ಪರಿಶ್ರಮಿ ಗಳಾಗಿ ಕಬ್ಬಿಣವನ್ನು ಹೇರಳವಾಗಿ ತಯಾರು ಮಾಡುತ್ತ ಕಬ್ಬಿಣದ ಪದಾರ್ಥ ಗಳನ್ನೂ, ವಿವಿಧ ಮಣಿಗಳನ್ನೂ, ಗಾಜಿನ ಬಳೆಗಳನ್ನೂ, ನೆಯ್ದ ರೇಷ್ಮೆಯೇ ಮೊದಲಾದ ಬಟ್ಟೆಗಳನ್ನೂ ತಯಾರ ಮಾಡಿ ಚೀನಾ, ರೋಮ್, ಬರ್ಮಾ, ಗಾಂಧಾರ ಮೊದಲಾದ ದೂರ ದೇಶಗಳ ಸಂಗಡ ವ್ಯಾಪಾರ ಮಾಡುತ್ತಿದ್ದರು. ಇವರು ತಯಾರಿಸಿ ಕಳುಹಿಸುತ್ತಿದ್ದ ಸಾಮಾನುಗಳ ಬೆಲೆಯಾಗಿ ಆ ದೂರ ದೇಶದ ವರ್ತಕರು ಬೆಳ್ಳಿ ಬಂಗಾರಗಳನ್ನು ನಾಣ್ಯರೂಪದಲ್ಲಿ ಕೊಡುತ್ತಿದ್ದರು. ಚಂದ್ರವಳ್ಳಿಯು ಬಹಳ ಉತ್ತಮವಾದ ಆರ್ಥಿಕ ಸಿ
ಮೌರ್ಯರ ಕಾಲ:- ಚಂದ್ರವಳ್ಳಿಯನ್ನು ವರ್ಣಿಸುವ ನೆಪದಲ್ಲಿ ಶಾತ ವಾಹನರ ಕಾಲದ ಕರ್ಣಾಟಕದಲ್ಲಿ ವೃದ್ಧಿಯಲ್ಲಿದ್ದ ಒಂದು ಪಟ್ಟಣದ ವಿದ್ಯಮಾನ ಗಳು ಹೇಗಿತ್ತೆಂದು ಮೇಲೆ ನಿರೂಪಿಸಿರುವೆನು, ಪುರಾಣಗಳಲ್ಲಿ ಹೇಳಿರುವಂತೆ ಶಾತವಾಹನ ರಾಜರ ಪಟ್ಟಿಯು ನಮಗೆ ತಿಳಿದಿದ್ದಿತು. ಅವರ ಶಾಸನಗಳ ವಿಮರ್ಶೆಯಿಂದ ದೇವದತ್ತ ಭಂಡಾರಕರರು ಆಗಿನ ಧಾರ್ಮಿಕ ಸ್ಥಿತಿಯು ಹೇಗಿ ತೆಂಬುದನ್ನು ಊಹಿಸಿ ಬರೆದರು. ಆದರೆ ಭೂಶೋಧನೆಯಿಂದ ಚಂದ್ರವಳ್ಳಿಯ ಜೀವನವು ನಮ್ಮ ಕಣ್ಣು ಮುಂದೆ ಬಂದು ನಿಂತಂತಾಗಿದೆ. ಈ ಊರು ಮೌರ್ಯರ ಕಾಲದಲ್ಲಿ ಸಣ್ಣದಾಗಿರಬೇಕೆಂದು ಊಹಿಸುವುದಕ್ಕೆ ಶಾತವಾಹನ ಪದರಗಳ ಬುಡದಲ್ಲಿ ದೊರೆತ ಬೋಕಿಯ ಚೂರುಗಳೇ ಕಾರಣ. ವರ್ಯರ ಬೋಕೆಗಳು ಒಳಭಾಗದಲ್ಲಿ ಕಪ್ಪಾಗಿ ಮಿನು ಮಿನುಗುತ್ತಿರುವ ಮೈ ಯುಳ್ಳವು. ಶಾತವಾಹನರಿಗೆ ಹಿಂದಿನ ಪದರದಲ್ಲಿ ಇವು ದೊರೆತವು. ಇನ್ನೂ ಕೆಳಗಿನ ಪದರದಲ್ಲಿ ಬಿಳಿಯ
3, 3
ಮತ್ತು ಕೆಂಪಿನ ನಕಾಶೆಗಳಿಂದ ಅಲಂಕೃತವಾಗಿರುವ ಕೆಂಪು ಮತ್ತು ಎಣ್ಣೆಗೆಂಪು ಬಣ್ಣದ ಬಟ್ಟಲುಗಳು ದೊರೆತವು. ಇವು ಮೌರ್ಯರ ಕಾಲಕ್ಕೂ ಹಿಂದಿನ ವಾಗಿರಬೇಕೆಂದು ನಾನು ಊಹಿಸಿದೆನು. ಈ ಪದರದ ಕೆಳಗೂ ಸಹ ಸಣ್ಣ ಬೋ ಕಿಯ ಚೂರುಗಳು ಕಂಡುಬಂದುದರಿಂದ ಮತ್ತಷ್ಟು ಕೆಳಕ್ಕೆ ಕಡಿಸಿ ನೋಡುವಲ್ಲಿ ಕಡೆಗೆ ಒಂದು ಪದರದಲ್ಲಿ ನವಶಿಲಾಯುಗದ ಕಾಲದಲ್ಲಿ ಉಪಯೋ
ಗಿಸುತ್ತಿದ್ದ ಉಜ್ಜಿ ನುಣುಪಾದ ಕಲ್ಲಿನ ಗುಂಡುಗಳೂ ಕೊಡಲಿಗಳೂ ದೊರೆತವು. ಇದರಿಂದ ನವಶಿಲಾಯುಗವಾದ ಬಹುಕಾಲವಾದಮೇಲೆ ಅಯೋಯುಗದ ಕಡೆಕಡೆಯಲ್ಲಿ ಚಂದ್ರವಳ್ಳಿ ಗ್ರಾಮ ಸ್ಥಾಪಿತವಾಯಿತೆಂದೂ, ಮತ್ತು ಆದಿಚರಿತ್ರೆಗೆ ಸೇರಿದ ಮೌರ್ಯ, ಶಾತವಾಹನರ ಕಾಲದಲ್ಲಿ ಬದುಕಿ ನಡೆಯಿತೆಂದೂ ತಿಳಿಯ ಬಂದಿತು,
ಬ್ರಹ್ಮಗಿರಿಯ, ಪೂರ್ವಚರಿತ್ರೆಯ ಇದಕ್ಕೆ ಪೂರ್ವಚರಿತ್ರೆಯನ್ನು ನಾವು ಅರಿಯಬೇಕಾದರೆ ಬ್ರಹ್ಮಗಿರಿಯನ್ನು ಶೋಧಿಸಬೇಕೆಂಬುದು ನನಗೆ ವ್ಯಕ್ತವಾಯಿತು, ಏಕೆಂದರೆ ಬ್ರಹ್ಮಗಿರಿಯು ವೃದ್ಧಿ ಗೊಂಡು ಮುದಿಬೀಳುವ ಕಾಲಕ್ಕೆ ಚಂದ್ರವಳ್ಳಿಯು ತಲೆಯೆತ್ತಿತು, ಬ್ರಹ್ಮಗಿರಿಯಲ್ಲಿ ಕೆಲಸವು ಇನ್ನೂ ವಿಶೇಷವಾಗಿ ಮಾಡತಕ್ಕದ್ದಿದೆ. ನಮ್ಮ ಮನಸ್ಸಿನ ಊಹೆಯಲ್ಲಿ ಕಿಬ್ಬನ ಹಳ್ಳಿಯ ಮೇಲೆ ಚಂದ್ರವಳ್ಳಿಯನ್ನಿಟ್ಟು ಅವುಗಳಲ್ಲಿ ಕಾಣಬರುವ ಹತ್ತಾರು ಪದರುಗಳನ್ನು ಪರೀಕ್ಷಿಸಿ ನೋಡಿದರೆ ಕರ್ಣಾಟಕದ ಪೂರ್ವ ಚರಿತ್ರೆಯು ನಮಗೆ ಗೋಚರವಾಗುವುದು, ಈ ಮೂರು ಉಪನ್ಯಾಸಗಳಲ್ಲೂ ನಾನು ಹೇಳಿರುವ ತಾತ್ಪರ್ಯ ಕರ್ಣಾಟಕದ ಪೂರ್ವ ಚರಿತ್ರೆಯನ್ನು ನಾನು ಕಂಡು ಹಿಡಿದೆನೆಂದಲ್ಲ, ಕಂಡುಹಿಡಿಯಬೇಕಾದರೆ ನಾವು ಅನುಸರಿಸಬೇಕಾದ ದಾರಿಯು ಹೀಗೆಂದು ತೋರಿಸಿರುವೆನು, ವೇದಾದಿಗಳಲ್ಲಿ ಕನ್ನಡ ದೇಶದ ಚರಿತ್ರೆಗಳನ್ನು ಹೇಳಿಲ್ಲ, ರಾಮಾಯಣ ಮಹಾಭಾರತಗಳಲ್ಲಿ ನಮ್ಮ ವಿಷಯವನ್ನು ಸ್ವಲ್ಪವೇ ಹೇಳಿರುವುದು. ಹೆಚ್ಚು ವಿಷಯಗಳನ್ನು ನಾವು ಎಲ್ಲಿಂದ ಹಿಡಿದು ತರಬೇಕು ? ಭೂದೇವಿಯ. ಉದರದಲ್ಲಿ ನಮ್ಮ ಮುಂದಿರ ಎಲುಬುಗಳೂ, ಅವರು ಕಟ್ಟಿದ ಕಟ್ಟಡಗಳ ಮುರುಕುಗಳೂ, ಅವರು ಬಿಸುಟ ಪದಾರ್ಥಗಳ ಚೂರುಗಳೂ ಭದ್ರವಾಗಿ ಭೂಸ್ಥಾಪಿತವಾಗಿವೆ. ಬೆಳ್ಳಿ ಬಂಗಾರಗಳನ್ನೂ, ವಜ್ರ ವೈಡೂಲ್ಯಗಳನ್ನೂ ಗಣಿಗಳಲ್ಲಿ ಅಗೆದು ತೆಗೆಯುವಂತೆ ಈ ಪದಾರ್ಥಗಳನ್ನು ಅಗೆದು, ವಿಮರ್ಶಿಸಿ ಚರಿತ್ರೆಯ ಸೋಪಾನವನ್ನು ನಾವು ಕಟ್ಟಬೇಕು, ಅಜ್ಞಾನವೆಂಬ ಮಹೋದಧಿಯನ್ನು .
ದಾಟುವುದಕ್ಕೆ ಕಟ್ಟಬೇಕಾದ ವಜ್ರ ಸೇತುವೆಗೆ ಬೇಕಾದ ಸಾಮಗ್ರಿಗಳಿಗೆ ಭೂಶೋಧ. ನೆಯು ಖನಿಯ ರೂಪವಾಗಿರುವುದು. ಇತಿಹಾಸದ ಅಜ್ಞಾನಕ್ಕೆ ಗುದ್ದಲಿಯೇ ಬೆಳಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ