https://archive.org/details/dli.osmania.3286
"ಕರ್ನಾಟಕದ ಸಂಸ್ಕೃತಿ"
================================================
ರಾಜಚರಿತವಿಶಾರದ ರಾವ್ ಸಾಹೆಬ್
ಶ್ರೀಯುತ ಸಿ.ಹಯವದನರಾಯರು
ಇವರ ಮುನ್ನುಡಿಯೊಡನೆ
ದೇವುಡು ಬರೆದುದು
ಬೆಂಗಳೂರು ಸಿಟಿ:
ಬೆಂಗಳೂರು ಪ್ರೆಸ್, ಮೈಸೂರು ರೋಡು
೧೯೩೫
KARNATAKA CULTURE
FQREWORD
BY
Rajacharitavisarada Rao Sahib
0. HAYAVADANA RAO, B.A., B.L., F.R.ECONn.S., M.L.C
Fellow of the Mysore University
WRITTEN BY
NARASIMHA SASTRY DEVUDU, 1.4.
(1. Subba Rao Research Weholar
Author & Journalist
BANGALORE CITY:
PRINTED AT THE BANGALORE PRESS, MYSORE ROAD
1935
[PRICE :
HIS HIGHNESS
SRI KRISHNARA JA WADIYAR BAHADUR, G C S I., G.B.E,
MAHARAJA OF MYSORE
ಕನ್ನಡ ನಾಡಿನ ಮಹಾಪ್ರಭುಗಳು
ಶ್ರೀಮತ್ಕೃಷ್ಣರಾಜ ಒಡೆಯರವರು
ಇವರ ಮಹಾ ಸನ್ನಿಧಾನದಲ್ಲಿ
ಗ್ರಂಥಕರ್ತೃವು ಅತ್ಯಂತ ವಿನಯದಿಂದ ಒಪ್ಪಿಸಿದ
ಪ್ರಭುಭಕ್ತಿಯ ಕಾಣಿಕೆ
FOREWORD
Mx. NARASIMHA SASTRY 121700 has done an invaluable p1ece of
work in bringing together in book form the Mysore University
Extension Lectures he delivered during 1933 at several centres
in the State on the subject vf Karnataka Culture. ‘The term
“Culture” covers a very wide ground and is coterminous with
the word “Civilization”’ in its widest sense. But Mr. Narasimha
Sastry correctly defines “Culture” as that which differentiates
man from the mere animal. It indicates the development of the
human mind and the conditions in which such development takes
place in any given locality. His more immediate object has been
to invite attention to the development of culture among the
people of Karnataka as might be learnt from their folk-songs,
tales, proverbs, conundruins, etc. Mr. Narasimha Sastry has
spared no pains to make the collection under each of these heads
both representative and typical of the people they refer to. The
methods of study pursued in regard to each of these is not only
scientific but also unexceptional from the point of view of cultural
research. ‘To one not unfamiliar with the difficulties surrounding
attempts to gather material for studies of this kind, the work
accomplished by Mr. Narasimha Sastry possesses more than
ordinary interest. Ina word, it might be said that it is highly
praiseworthy and calls for encouragement.
Mr. Narasimha Sastry in the introductory and final chapters
of his book has essayed to indicate not only what culture consists
in but also the unity that marks Aryan and Dravidian cultures.
‘Those who have studied these cultures to any intelligent extent
will doubtless endorse his view that this unity is not merely super-
ficial, as some would have it, but lies deeper, in fact, is bound up
with the very lives and beings of these peoples. In these pages
vi
of Mr. Narasimha Sastry, cultured readers of Karnataka will find
how this unity has been reached. ‘That the statement that Vedic
culture as such can be differentiated from Dravidian culture as
such is something too palpably unfounded is the suggestion
offered by Mr. Narasimha Sastry. ‘The more the two cultures
are studied with the care of a student of culture, the more his thesis
is bound to be supported, whatever the seeming dissimilarities of
their origin and development and the different environments in
which they have been reared up. The wonderful manner in
which Aryan culture has unified religion, sentiment and even
modes of thought in this country and how daily it is stil making
conquests among India’s vast population 15 brought out hy
Mr. Narasimha Sastry in a manner that ought to impress the
general reader. His simple diction, his easy flow of words, his
convincing arguments and beyond all this, his scientific attitude—
all these help to create a pre-possession in his favour. ‘To say
this is to acknowledge the simple fact that he has a point to make.
And that he has made it, few will, I think, dispute.
A volume so full of interest and so suggestive from the
wider point of view of the study of the people of Karnataka, who
have played and are still playing no insignificant part in building
up the history of India, is bound to command respectful attention.
I would commend it to all who value cultural studies as the
foundation of social well-being in this land.
C. Hayavadana Rao.
Bangalore City,
8th March 1935.
ಪೀರಿಕೆ
ಈಗ ಪುಸ್ತಕರೂಪವಾಗಿ ವಾಚಕರ ಮುಂದೆ ಇರುವ ಈ ಗ್ರಂಥವು ಕರ್ಣಾಟಕ
ಸಂಸ್ಕೃತಿ ಸೂರ್ಯನ ಒಂದು ಕಿರಣ ಮಾತ್ರ. ಕನ್ನಡ ನುಡಿಯ ಅಚ್ಚು ( Idiom),
ಕಟ್ಟು ), (Syntax), ಬಳಕೆ (usage), ಸೊಗಸು (Genius) ಮುಂತಾದವುಗಳನ್ನೂ,
ನಾಡಿನ ಕುಲ ಕುಲದ ಆಚಾರವ್ಯವಹಾರಗಳನ್ನೂ , ವೇಷ ಭೂಷಣಗಳು ಭಕ್ಷ್ಯ
ಭೋಜ್ಯಗಳು ವಿನೋದ ವಿಹಾರಗಳು ಇವುಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿ
ದಲ್ಲದೆ ಈ ಗ್ರಂಥದ ವಿಷಯವು ಪೂರ್ಣವಾಗುವುದಿಲ್ಲ. ಈ ಗ್ರಂಥವು ಅಂತಹ
ಮಹತ್ಪ್ರಯತ್ನಕ್ಕೆ ಕಾರಣವಾದರೆ ಅದೇ ನನ್ನ ಭಾಗ್ಯ. ಈ ಗ್ರಂಥದಲ್ಲಿ ಗುರುತಿಸು
ವುದಕ್ಕೆ ಹೊರಟಿರುವುದು ಸುಮಾರು ೨೦ ಶತಮಾನಗಳಿಂದ ಹರಿದುಬಂದಿರುವ,
ಈಗ ಸ್ಫುಟವಾಗಿ ನಮ್ಮ ಜನತೆಯಲ್ಲಿ ಕಂಡುಬರುತ್ತಿರುವ ಸಂಸ್ಕೃತಿಯನ್ನು ಕುರಿತು
ಎಂಬುದು ವಾಚಕರ ನೆನಪಿನಲ್ಲಿರಲಿ ಎಂದು ಪ್ರಾರ್ಥನೆ.
ಹಲವಾರು ವರ್ಷಗಳಿಂದ ಸಂಗ್ರಹಿಸಿದ ಈ ವಿಷಯಕ್ಕೆ ಒಂದು ನಿರ್ದಿಷ್ಟರೂಪವು
ಬಂದುದು ನಮ್ಮ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ " ಕರ್ಣಾಟಕ ಸಂಸ್ಕೃತಿ"ಯ
ಮೇಲೆ ೧೯೩೩ರಲ್ಲಿ ವಿಶೇಷೋಪನ್ಯಾಸಗಳನ್ನು ಮಾಡಲು ಅವಕಾಶ ದೊರೆತಾಗ.
ಉಪನ್ಯಾಸಗಳನ್ನು ಕೇಳಿದ ಮಹಾಜನರು ಅದನ್ನು ಪುಸ್ತಕ ರೂಪದಲ್ಲಿ ಅಪೇಕ್ಷಿ
ಸಿದುದೂ ವಿಶ್ವವಿದ್ಯಾನಿಲಯದವರು ಆ ಅಪೇಕ್ಷೆ ಯನ್ನು ನನಗೆ ಸೂಚಿಸಿದುದೂ
ಕಾರಣವಾಗಿ ಇದು ಗ್ರಂಥವಾಯಿತು. "ಕರ್ಣಾಟಕ ಪರಿಷತ್ಪತ್ರಿಕೆ" ಯ
೧೯೩೨೩- ೩೪ನೆಯ ವರ್ಷಗಳ ಸಂಪಾದಕ ಮಂಡಳಿಗಳ ವಿಶ್ವಾಸದಿಂದ ಲೇಖನಮಾಲೆ
ಯಾಗಿ ಪ್ರಕಟವಾಗಿ, ಈಗ ಹೊರಬಿದ್ದಿದೆ.
ಕನ್ನಡ ನಾಡಿನಲ್ಲಿ ನಡೆಯುತ್ತಿರುವ ನಾನಾ ಮುಖವಾದ ಜ್ಞಾನ ಪ್ರಸಾರಣ
ಕಾರ್ಯಗಳಿಗೆ ಆಶ್ರಯವನ್ನೂ ಪ್ರೋತ್ಸಾಹವನ್ನೂ ಸಂತತವೂ ಕರುಣಿಸುತ್ತಿರುವ
ಮಹಾಸ್ವಾಮಿಯವರು ಪರಮ ವಿಶ್ವಾಸದಿಂದ ಈ ಗ್ರಂಥವನ್ನು ಕಾಣಿಕೆಯಾಗಿ
ಒಪ್ಪಿಸಿಕೊಳ್ಳುವ ಔದಾರ್ಯವನ್ನು ಮೆರೆದಿದ್ದಾರೆ. ಅದಕ್ಕಾಗಿ ಆ ಸನ್ನಿಧಾನಕ್ಕೆ
-----
ಪರಿವಿಡಿ ೧-೫ ಕಾಣೆಯಾಗಿದೆ
-----
೫. ಹೆಂಗುಸರ ಹಾಡುಗಳು ೫೧-೮೭
ವಿವರಣೆ ವಿಭಾಗಗಳು--
೧. ಬ್ರಾಹ್ಮಣಿಯ ಹಾಡು: (ಅ) ನಿತ್ಯವರ್ಗ, (ಆ) ನೈಮಿತ್ತಿಕ
ವರ್ಗ.
೨. ಶೂದ್ರಾಣಿಯ ಹಾಡುಗಳು : (೧) ನಿತ್ಯವರ್ಗ, (೨)
ಸೈಮಿತ್ತಿಕ ವರ್ಗ, (೩) ವಿನೋದದ ಪದಗಳು.
೬. ಕಥೆಗಳು ಕಥೆಗಳ ಕಥೆ-ವಿಭಾಗಗಳು-- ೮೮- ೧೦೪
(ಅ) ನಡೆದ ಕಥೆಗಳು: (ಆ) ಪುರಾಣ ಕಥೆಗಳು: (ಇ)
ವಿನೋದದ ಕಥೆಗಳು.
೭. ಗಾದೆಗಳೂ, ಒಗಟಿಗಳೂ
ಗಾದೆಗಳ ಪ್ರಾಚೀನತೆ--ವಿವರಣೆವಿಭಾಗಗಳು--ಪರದೆೇಶದ
ಗಾದೆಗಳು.
ಒಗಟೆಗಳು--ವಿವರಣೆ--ನಮ್ಮ ಒಗಟಿಗಳು--ವೇದ ಸಾಹಿತ್ಯದ ಒಗಟೆ
ಗಳು
ಗಾದೆಗಳು--ಇತರ ದೇಶದ ಒಗಟೆಗಳೂ. ೧೦೫-೧೧೫
ಆ. ಉಪಸಂಹಾರ ೧೧೬-೧೨೨
ದ್ರಾವಿಡರ ಸಮಾಜದ ಚಿತ್ತ್ರ- ವೇದ ಯುಗದ ಆರ್ಯರ ಸಮಾಜದ
ಚಿತ್ರ--ಆರ್ಯಾಕರಣ.
೯. BIBLIOGRAPHY ೧೨೩-೧೨೪
===============================================================
ಕರ್ಣಾಟಕ ಸಂಸ್ಕೃತಿ
೧. ಪ್ರಸ್ತಾವನೆ
ಮಾನವನ ಕಾರ್ಯ ಪ್ರಪಂಚದಲ್ಲಿ ಆತನ ಮನೋವಿಕಾಸದ ಸ್ಥಿತಿಯು ಪದೇ.
ಪದೇ. ತೋರಿಬರುತ್ತದೆ. ಹಾಗೆ ತೋರಿಬರುವ ಮನೋವಿಕಾಸವನ್ನೇ ನಾವು
ಸಂಸ್ಕೃತಿಯೆನ್ನುವುದು. ಈ ಸಂಸ್ಕೃತಿಯು, ಅಥವಾ--ನಮಗೆ ಸಂಚಿತವಾದ
ಮಾತಿನಲ್ಲಿಹುಟ್ಟು ಗುಣವು, ವ್ಯಕ್ತಿ ವ್ಯಕ್ತಿಗಳಲ್ಲಿರುವಂತೆ ಕುಲ ಕುಲದಲ್ಲಿಯೂ ದೇಶ
ದೇಶದಲ್ಲಿಯೂ ಇರುತ್ತದೆ. ಹಾಗೆಯೇ, ಇದು ನಮ್ಮ ದೇಶದಲ್ಲಿಯೂ ಇದೆ. ಆ
ನಮ್ಮ ಹುಟ್ಟುಗುಣವನ್ನು, ನಮ್ಮ ದೇಶದ ಸಂಸ್ಕೃತಿಯನ್ನು ಗುರಿಯಿಟ್ಟಂತೆ ಪ್ರತಿ
ಬಿಂಬಿಸಿ ತೋರಬೇಕೆಂಬುದೇ ಈ ಲೇಖನ ಮಾಲೆಯ ಉದ್ದೇಶ.
ಈ ಲೇಖನ ಮಾಲೆಯಲ್ಲಿ, ನಮ್ಮ ಜನಾಂಗದಲ್ಲಿರುವ ನಾನಾ ಕುಲಗಳ ಅಚಾರ
ವ್ಯವಹಾರಗಳು, ಹಾಡು ಕತೆ ಗಾದೆಗಳು, ಆಟ ಪಾಟ ಊಟ ಮೊದಲಾದವು, ವಿಶೇಷ
ಪದ್ದತಿಗಳು ಇವುಗಳನ್ನೆಲ್ಲ, ಇವುಗಳಲ್ಲಿ ಅಡಗಿ ಕುಳಿತಿರುವ ಸಂಸ್ಕೃತಿಯನ್ನು ಈಚೆಗೆ
ಹಿಡಿದೆಳೆದು ಪ್ರದರ್ಶಿಸುವ ಉದ್ದೇಶದಿಂದ ವಿಮರ್ಶೆ ಮಾಡುತ್ತ, ಸಾಧ್ಯವಾದ
ಮಟ್ಟಿಗೂ ಸಾಧಾರಣವಾಗಿ ವಿವೇಚಿಸುತ್ತ ಮುಂದುವರಿಯುವೆವು. ಈ ಸಂಸ್ಕೃತಿ
ವಿಮರ್ಶೆಯ ದೃಷ್ಟಿಯಿಂದ ನಮಗೆ ನಮ್ಮ ನಾಡಿನ ಕುಲ ಕುಲಗಳೆಲ್ಲವೂ ಒಂದೇ
ಸಮನಾಗಿ ಮಾನ್ಯವಾದುವು: ಹಾರುವರೆಂದು ಹೆಚ್ಚಿಲ್ಲ, ಹೊಲೆಯರೆಂದು ಕಡೆಯಿಲ್ಲ;
ಕನ್ನಡ ನಾಡಿನಲ್ಲಿ ನೆಲೆಸಿ, ಕನ್ನಡಿಗರು ನಾವು ಎಂದು ಅಭಿಮಾನಪಡುವ ಪ್ರತಿಯೊಂದು
ಕುಲವೂ ನಮಗೆ ಮಾನ್ಯವು. ಈ ಕನ್ನಡ ಕುಲ ಕುಲಗಳ ವ್ಯಷ್ಟಿ ಸಮಷ್ಟಿ ವ್ಯವಹಾರ
ಪ್ರಪಂಚವನ್ನು ಸಂಸ್ಕೃತಿಯ ದೃಷ್ಟಿಯಿಂದ ಹುಡುಕಾಡುವುದು ಈ ಲೇಖನಗಳಲ್ಲಿ
ಮಾಡುವ ಕೆಲಸ.
ಹೀಗೆ ಒಂದು ಜನಾಂಗದ ಸಂಸ್ಕೃತಿಯನ್ನು ಕುರಿತು ವಿಮರ್ಶಿಸುವಾಗ
ಇತರರು ಈ ವಿಚಾರವಾಗಿ ಏನೇನು ಹೇಳಿರುವರೆಂಬುದನ್ನು ಗಮನಿಸುವುದು
ಆವಶ್ಯಕ. ಜನಾಂಗದ ಕುಲ ಕುಲಗಳ ಸಂಸ್ಕೃತಿಯನ್ನು ಪಾಮರ ಸಂಸ್ಕೃತಿ)
ವಾಸ್ತವ್ಯ ಸಂಸ್ಕೃತಿ, ಜನತೆಯ ಸಂಸ್ಕೃತಿಯೆಂದೂ ಕರೆಯುವುದುಂಟು. (ಇದನ್ನು
ಇಂಗ್ಲಿಷಿನಲ್ಲಿ. Folklore ಎಂದೂ, ಜರ್ಮನ್ ಭಾಷೆಯಲ್ಲಿ Kulture ಎಂದೂ
ಕರೆಯುತ್ತಾರೆ. ಇವುಗಳಲ್ಲಿ ಎರಡನೆಯದೇ ಸರಿಯೆಂದು ನಮ್ಮ ಅಭಿಪ್ರಾಯ.)
೧
------------------------------------------------------------
ಕರ್ಣಾಟಕ ಸಂಸ್ಕೃತಿ
' ಜನತೆಯ ಸಂಸ್ಕೃತಿ ಎಂದರೇನು?' ಎಂಬ ಪ್ರಶ್ನೆಗೆ ಹಲವರು ವಿದ್ವಾಂಸರು ಹಲವು
ತೆರನಾಗಿ ಉತ್ತರಕೊಟ್ಟಿದ್ದಾರೆ. ಇಂಗ್ಲಿಷಿನಲ್ಲಿರುವ ಸುಪ್ರಸಿದ್ಧವಾದ ವಿಶ್ವಕೋಶ
(Encyclopaedia, XI Edn.) ದಲ್ಲಿ "ನಾಗರಿಕ ಜನಾಂಗದ ಅಪಂಡಿತ
ಕುಲಗಳಲ್ಲಿ ಕಾಣಬರುವ ಪರಂಪರಾ ಪ್ರಾಪ್ತವಾದ ತಿಳಿವು, ಅರಿವು, ಅದೇ ಜನತೆಯ
ಸಂಸ್ಕೃತಿ " ಎಂದೂ, ಧರ್ಮ ನೀತಿ ವಿಶ್ವಕೋಶ (Encyclopadia of Religion and
Ethics)ದಲ್ಲಿ " object ಒಂದು ದೇಶದಲ್ಲಿರುವ ಕುಲಗಳ, ವ್ಯಕ್ತಿಗಳ, ಗುಂಪುಗಳ ಪದ್ಧತಿಗಳು,
ಆಚಾರಗಳು, ನಂಬಿಕೆಗಳು ಇವು ಜನತೆಯ ಸಂಸ್ಕೃತಿ; ಜನಾಂಗದ ಅಂಗೀಕೃತವಾದ
ಆಚಾರಗಳು, ಪದ್ಧತಿಗಳು, ನಂಬಿಕೆಗಳ ಇವಕ್ಕೆ ಈ ಜನತೆಯ ಸಂಸ್ಕೃತಿಯು
ವಿರುದ್ಧವಾದುದು" ಇಂದೂ ಹೇಳಿದೆ. ಆಂಡ್ರ್ಯೂಲ್ಯಾಂಗ್ ಎಂಬವರು 'ಧರ್ಮಗಳ ಆದಿ'
(Origin of Religion) ಎ೦ಬ ತಮ್ಮ ಗ್ರಂಥದಲ್ಲಿ " ಜನತೆಯ ಸಂಸ್ಕೃತಿಯೆಂದರೆ
ವೈದುಷ್ಯಾದಿಗಳಿಂದ ಬದಲಾಯಿಸದಿರುವ ಕುಲಗಳಲ್ಲಿ ಬಳಕೆಯಲ್ಲಿರುವ ಪುರಾಣಗಳು,
ಆಚಾರಗಳು, ನಂಬಿಕೆಗಳು " ಎನ್ನುತ್ತಾರೆ. ಇನ್ನೊಂದು ಗ್ರ೦ಥದಲ್ಲಿ, " ಪ್ರಾಚೀನ
ಕಾಲದವರ ಮನೋಭಾವನೆಯ ಪ್ರಕಟ ರೂಪವೇ ಈ ಜನತೆಯ ಸಂಸ್ಕೃತಿ” ಅದು
ವೈದ್ಯ, ಶಾಸ್ತ್ರ, ಮತ, ಕುಲಕಟ್ಟು ಮೊದಲಾದ ವ್ಯವಹಾರಗಳಲ್ಲಿಯಾಗಲೀ, ಬೌದ್ದಿಕ
ವಾದ ಚರಿತ್ರೆ ಕಾವ್ಯ ಮೊದಿಲಾದವುಗಳಲ್ಲಿಯಾಗಲೀ ಪ್ರಕಟವಾಗಬಹುದು.
..... ಜನತೆಯ ಸಂಸ್ಕೃತಿಯು ಅಪಂಡಿತನ ಪ್ರಪಂಜವನ್ನೆಲ್ಲ ಒಳಗೊಂಡಿದೆ,
ಅವನು, ಅವನ ಅದೃಷ್ಟ, ಅವನ ಬಾಹ್ಯಾಭ್ಯಂತರ ವ್ಯವಹಾರ, ಅವನ ಮನಃಪ್ರಪಂಚದ
ಕಲ್ಪನೆಗಳು, ಅವನ ವಿಧಿ ನಿಷೇಧಗಳು, ಅವನ ಆಟ ಪಾಟ ವಿನೋದಗಳು--ಇವು
ಗಳಲ್ಲೆಲ್ಲ ಈ ಸಂಸ್ಕೃತಿಯು ಕಂಡುಬರುವುದು " ಎಂದು ಹೇಳಿರುತ್ತಾರೆ.
ಈ ಮೇಲಿನ ಅಭಿಪ್ರಾಯಗಳಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳನ್ನೇ ಹಿಡಿದು
ನಾವೂ ನಮ್ಮ ಜನಾಂಗದ, ನಮ್ಮ ದೇಶದ, ಸಂಸ್ಕೃತಿಯನ್ನು ವಿವರಿಸಬಹುದು.
ಆದರೆ ಈ ವಿದ್ವಾ೦ಸರು ಹೇಳುವಂತೆ, ನಮ್ಮ ಜನಾಂಗದ ಅಪಂಡಿತ ವರ್ಗವನು
ಮಾತ್ರ, ನಮ್ಮ ಜನಾಂಗದ ಕೀಳು ಕುಲದವರನ್ನು ಮಾತ್ರ, ಲಕ್ಷ್ಯವಾಗಿಟ್ಟುಕೊಂಡು
ನಮ್ಮ ಸಂಸ್ಕೃತಿಯನ್ನು ಕುರಿತು ಬರೆಯಲು ಸಾಧ್ಯವಿಲ್ಲ. ಅದು ನಮ್ಮ ದೇಶದ
ಸ್ಥಿತಿ ಗತಿಗಳಿಗೆ ಒಪ್ಪುವುದಿಲ್ಲ. ಈ ದೇಶದಲ್ಲಿ ಜೈಮಿನಿ, ರಾಜಶೇಖರಗಳಂತಹ ಪ್ರೌಢ
ಗ್ರಂಥಗಳನ್ನು ಈ ಕೊನೆಯಿಂದ ಆ ಕೊನೆಯವರೆಗೆ ಕಂಠ ಪಾಠ ಮಾಡಿರುವ ನಿರಕ್ಷರ
ರಿದ್ದಾರೆ; ಚುಟಿಕೆ ಹೊಡೆಯುವಷ್ಟು ಹೊತ್ತಿನಲ್ಲಿ ಹಾಡು ಲಾವಣಿಗಳನ್ನು ಕಟ್ಟಬಲ್ಲ
ಪಾಮರರಿದ್ದಾರೆ; ಸಾವಿರಾರು ನುಡಿಯ ಹಾಡುಗಳು ಇಪ್ಪತ್ತು ಮೂವತ್ತನ್ನು
ನಿರಾಯಾಸವಾಗಿ ಚಾಚೂ ತಪ್ಪಿಲ್ಲದೆ, ಇತರ ಸಹಾಯವಿಲ್ಲದೆ ಬಾಯಲ್ಲಿ ಹೇಳುವ
'ಹೆಣ್ಣುಹೆಂಗುಸ'ರಿದ್ದಾರೆ. ಹೆಸರಾದ ಡಾಕ್ಟರುಗಳು ಕೈಬಿಟ್ಟ ವ್ಯಾಧಿಗಳನ್ನು "ಛುಟಿಕಾ
ಮಂತ್ರ ಮೂಲಿಕೆ'ಗಳಿಂದ ಗುಣಪಡಿಸಬಲ್ಲ ಅಜ್ಞರಿದ್ದಾರೆ. ಇವರೆಲ್ಲರನ್ನೂ ಒಳ
೨
------------------------------------------------------------
ಪ್ರಸ್ತಾವನೆ
ಗೊಂಡಿರುವ ಜನಾಂಗದಲ್ಲಿ ಪಂಡಿತೆ ಸಂಸ್ಕೃತಿ, ಪಾಮರ ಸಂಸ್ಕೃತಿ, ಮೇಲಿನವರ
ಸಂಸ್ಕೃತಿ, ಕೆಳಗಿನವರ ಸಂಸ್ಕೃತಿ ಎಂದು ವಿಭಾಗ ಮಾಡುವುದು ಸಾಧ್ಯವಿಲ್ಲ.
ಆದರಿಂದ ನಾವು ಸಮಷ್ಟಿಯಾಗಿ ಕರ್ಣಾಟಕ ಸಂಸ್ಕೃತಿಯನ್ನು ಕುರಿತು ಹೇಳುವೆವು.
ಇದರ ಜೊತೆಗೆ ನಮ್ಮ ನಂಬಿಕೆಗಳು, ನಮ್ಮ ಜೀವನ ಕ್ರಮ, ನಮ್ಮ ಅರಸರ
ಆಳುವಿಕೆಗಳೂ ನಮ್ಮ ಸಂಸ್ಕೃತಿಯ ಸ್ವರೂಪವನ್ನು ಒಂದಚ್ಛಿಗೆ ತಂದಿವೆ. "ಪ್ರತಿ
ಯೊಂದೂ ಆದಿಯಲ್ಲಿ ಒಂದಾಗಿದ್ದು ಬರು ಬರುತ್ತ ಹಲವಾಯಿತು ; ಎಲ್ಲವೂ ಮೇಲಿಂದ
ಇಳಿಯಿತು " ಎಂಬುದು ನಮ್ಮ ದೃಢವಾದ ನಂಬಿಕೆ. ಮತ್ತೆ ಆ ಮೇಲಕ್ಕೆ
ಹೋಗಬೇಕೆಂಬುದೇ ಉದ್ದೇಶವಾಗಿ ಅದೇ ಗುರಿಯಿಂದಲೇ ನಿರೂಪಿಸಿಕೊಂಡಿರುವ
ಕಾರ್ಯ ಕಲಾಪಗಳನ್ನುಳ್ಳ ಜೀವನ ಕ್ರಮ, ಇದರ ಜೊತೆಗೆ, ಪ್ರಜೆಗಳ ಮತ, ಜಾತಿ,
ಧರ್ಮಗಳು ತಮಗೆ ಎಷ್ಟೇ ವಿರುದ್ಧವಾಗಿದ್ದರೂ ಅವುಗಳನ್ನು ಬದಲಾಯಿಸಲು,
ತಿರಸ್ಕರಿಸಲು ಪ್ರಕಾರಾಂತರಗೊಳಿಸಲು, ಯತ್ನಿಸಲೂ ಇಷ್ಟವಿಲ್ಲದೆ, " ಸ್ವಧರ್ಮೇ
ನಿಧನಂ ಶ್ರೇಯಃ ಪರ ಧರ್ಮೋ ಭಯಾವಹಃ " ಎಂಬುದನ್ನು ತಾವೂ ನಂಬಿ, ಪ್ರಜೆ
ಗಳನ್ನೂ ನಂಬಿರೆಂದು ಉಪದೇಶ ಮಾಡುವ ರಾಜರ ಆಳುವಿಕೆ-- ಇವುಗಳಿಂದ ನಮ್ಮ
ಸಂಸ್ಕೃತಿಯು ಸ್ವಾಭಾವಿಕವಾಗಿ, ಸಹಜವಾಗಿ, ನಿರರ್ಗಳವಾಗಿ ಬೆಳೆದುಬಂದಿದೆ,
ಈ ಸಂಸ್ಕೃತಿಯನ್ನು ಪಾಶ್ಚಾತ್ಯರ ಅಳತೆಗೋಲಿನಿಂದ ಅಳೆಯುವುದೆಂತು. ಸಾಧ್ಯ?
ಅವರ ನಂಬಿಕೆ, ಜೀವನ ಕ್ರಮ, ಸರಕಾರದ ಪದ್ಧತಿಗಳು ಬೇರೆ; ಪ್ರತಿಯೊಂದೂ
ಅಡಿಯಿ೦ದ ಆರಂಭಿಸಿ ಹಜ್ಜೆ ಹಜ್ಜೆಯಾಗಿ ಮುಂದುವರಿಯುತ್ತಿದೆ ಎಂಬುದು ಅವರ
ನಂಬಿಕೆ.* ಭೋಗ ಸಾಧನಗಳನ್ನು ಬಲಿದು ಇದ್ದಷ್ಟು ದಿವಸ, ಆದಷ್ಟು ಮಟ್ಟಿಗೆ,
ಸುಖಪಟ್ಟರೆ ಮುಗಿಯಿತು ಎಂಬ ದೃಷ್ಟಿಯಿಂದ ವಿಷಯ ಸೌಖ್ಯ ಪ್ರಧಾನವಾಗಿ
ರೂಪುಗೊಂಡ ಜೀವನ ಕ್ರಮ, ಅಧಿಕಾರದಲ್ಲಿದ್ದವನು ಹೇಳುವುದಕ್ಕೆ ವಿರುದ್ಧವಾಗಿ
ರುವುದೆಲ್ಲ ತಪ್ಪೆಂಬ ಸರಕಾರದ ಕೆಳಗೆ ಬದುಕುವುದು--ಇವನ್ನುಳ್ಳವರು ಗೊತ್ತು
ಮಾಡಿದ ಅಳತೆ ಗೋಲಿನಿಂದ ನಮ್ಮ ಸಂಸ್ಕೃತಿಯನ್ನು ನಾವು ಅಳೆಯುವುದಿಲ್ಲ,
ಅಷ್ಟೇ ಅಲ್ಲ: “ಕೈಸ್ತ ಮತವೇ ಮತ" ಎಂಬ ಭಾವನೆಯಲ್ಲಿ ಹುಟ್ಟಿ ಬೆಳೆದು ಅದಲ್ಲದ
ಮಿಕ್ಕುವೆಲ್ಲವೂ ಕೀಳೆಂದು# ಬಾಯ್ಬಿಟ್ಟು ಹೇಳುವವರ ಅಳತೆ ಗೋಲಿನಿಂದ ಕ್ಸ್
ರಲ್ಲದ ನಾವೇಕೆ ಅಳೆದುಕೊಳ್ಳಬೇಕು?
ಅಲ್ಲದೆ, ನಮ್ಮ ದೇಶದಲ್ಲಿ ಜನಾಂಗದ ಮತ (State Religion) ಜನಾಂಗದ
ಆಚಾರ (State Custom) ಎಂಬುದು ಇದ್ದಂತೆ ತೋರುವುದಿಲ್ಲ. ಅದರ ಬದಲಾಗಿ
.....................
* ನಮ್ಮ ವೇದಾಂತದ ವಿವರ್ತ ವಾದ, ಸಾಂಖ್ಯದ ಪರಿಣಾಮ ವಾದ-.ಇವುಗಳಿಗೂ ಅವ ।
ಪರಿಣಾಮ ವಾದಕೂ (8೫101೬0೧07) ಇರುವ ವ್ಯತ್ಯಾಸವನ್ನು ಗಮನಿಸಿರಿ.
# See Chapter Iin "" The Evolution of the 106೩ of God” by Grant Allen
(R. P. A. Series); and compare what the author of "" The Village Gods in South
India says in the introduction thereof.
೩
------------------------------------------------------------
ಕರ್ಣಾಟಕ ಸಂಸ್ಕೃತಿ
ಬೇರೆ ಬೇರೆ ಸಂಪ್ರದಾಯಗಳಿಗೂ ರಾಜ ದೃಷ್ಟಿಯಲ್ಲಿ ಸಮಾನ ಗೌರವವು ಸಿಕ್ಕಿದೆ.
ಇದರ ಜೊತೆಗೆ ದೇಶದಲ್ಲಿ ಸಂಸ್ಕೃತಿಯ ತೆರೆಗಳು ಮೇಲೆ ಮೇಲೆದ್ದು ಈ ಕೊನೆಯಿಂದ
ಆ ಕೊನೆಗೆ ಉರುಳಿ ಹೊರಳಿ ಹೋಗಿವೆ. ಋಷಿಗಳ ತಪೋವನಗಳು, ಜೈನರ ಬಸ್ತಿಗಳು,
ಬೌದ್ಧರ ವಿಹಾರಗಳು, ಬ್ರಾಹ್ಮಣರ ದೇವಸ್ಥಾನಗಳು, ರಾಜರ ಸಭೆಗಳು, ವಿದ್ವಾಂಸರ
ಗೋಷ್ಠಿಗಳು, ದಾಸರ ಹರಿಕಥೆಗಳು, ಶರಣರ, ಸಾಧುಗಳ ತತ್ತ್ವಗಳು, ಕೊನೆಗೆ
ಭಿಕ್ಷುಕರ ಹಾಡುಗಳು ಇವೆಲ್ಲ ಸಾವಿರಾರು ಸಲ ಸಂಸ್ಕೃತಿಯ ತೆರೆಗಳನ್ನು
ಜನತೆಯ ಮೇಲೆ ಹರಿಯಿಸಿ ಹರಿಯಿಸಿ ಪ್ರಜಾವರ್ಗಕ್ಕೆ ಬೇಕಾದ ಹಾಗೆ ಸಂಸ್ಕೃತಿಯ
ಗಂಗಾ ಸ್ನಾನವನ್ನು ಮಾಡಿಸಿವೆ. ಜನಾಂಗದ ಒಂದು ಕೊನೆಯಲ್ಲಿ ಶ್ರೌತ ಸ್ಮಾರ್ತ
ಕರ್ಮಗಳನ್ನು ಶ್ರೌತ ಸ್ಮಾರ್ತ ಕರ್ಮಗಳೆಂದು, ವಿಧ್ಯುಕ್ತಗಳೆಂದು ಅರಿತು ಮಾಡುವ
ಬ್ರಾಹ್ಮಣನಿದ್ದರೆ, ಇನ್ನೊಂದು ಕೊನೆಯಲ್ಲಿ ಶ್ರುತಿ ಸ್ಮೃತಿಗಳ ಹೆಸರನ್ನೇ ಕೇಳರಿಯ
ದಿದ್ದರೂ ತದುಕ್ತ ಕರ್ಮಗಳನ್ನೇ ರೂಪಾಂತರದಲ್ಲಿ 'ಶಾಸ್ತ್ರ ಶಾಸ್ತ್ರ'ವೆಂದು
ಮಾಡುವ, ಮಾಡುತ್ತಿರುವ ಕೀಳು ಜಾತಿಯವನಿದ್ದಾನೆ. (ನಿಶ್ಚಿತಾರ್ಥವು ಕೆಳಜಾತಿ
ಯವರಲ್ಲಿ 'ವೀಳ್ಯೇದ ಶಾಸ್ತ್ರ', ಸಂಚಯನ ಸ್ಮಾನೀಯವಾಗಿ ಮಾಡುವುದು
'ಹಾಲು ತುಪ್ಪದ ' ಶಾಸ್ತ್ರ-ಇತ್ಯಾದಿ.) ಸಮಾಜದ ಪುರೋಭಾಗದಲ್ಲಿದ್ದ ಬ್ರಾಹ್ಮಣ
ನಿಂದ ಹಿಡಿದು ಕಾಡನ್ನು ಬಿಟ್ಟು ಊರಿಗೇ ಬರದಿರುವ ಕಾಡು ಕುರುಬನ ವರೆಗೆ ಇರುವ
ಕರ್ಣಾಟಕದ ನಾನಾ ಕುಲಗಳ ಆಚಾರ ವೃವಹಾರ, ಆಟ ಪಾಟ, ರೀತಿ ನೀತಿ, ನಡೆ
ನುಡಿ, ಉಡುಗೆ ತೊಡುಗೆ--ಇವುಗಳನ್ನು ಗಮನಿಸಿ ಕಣ್ಣಿಟ್ಟು ನೋಡಿದರೆ
ಸಂಸ್ಕೃತಿಯ ಏಕ ಜಾತೀಯತೆಯು ಕಾಣಬರುತ್ತದೆ. ಏಕತಾನವಿಲ್ಲ; ಆದರೆ ಏಕ
ಮುಖತೆಯಿದೆ. ಒಂದು ವೇಳೆ ನಾನಾ ಮುಖತ್ವವು ಕಂಡುಬಂದರೂ ಅದು
ಪರಶಿವನ ಪಂಚ ಮುಖಗಳಂತೆ : ಹೊರಗಣ್ಣಿನ ನೋಟಕ್ಕೆ ಬೇರೆ ಬೇರೆ; ಒಳಗಣ್ಣಿನ
ನೋಟಕ್ಕೆ ಒಂದೇ! ವ್ಯತ್ಯಾಸವಿದೆ; ಆದರೆ ಆ ವ್ಯತ್ಯಾಸವು ಹೊಯಿಸಳರ ದೇವ
ಸ್ಥಾನಕ್ಕೂ ಮಾರಿಯ ಗುಡಿಗೂ ಇರುವಂತೆ. ಎರಡೂ ದೇವತಾರಾಧನೆಗೆಂದೇ
ಕಟ್ಟಿದವು; ಒಂದರ ವೈಭವವು ಇನ್ನೊಂದರಲಿಲ್ಲ. ಆದರೆ ಎರಡೂ ಗುಡಿಗಳಲ್ಲವೇನು?
ಹಾಗೆ. ಸಜಾತೀಯತೆಯು ಹೀಗೆ ಒಡೆದು ಕಾಣುತ್ತಿರಲು, ಸಂಸ್ಕೃತಿ ವಿಮರ್ಶೆಯಲ್ಲಿ
ಯಾವ ಕುಲವನ್ನು ಬಿಡುವುದು? ಯಾವ ಕುಲವನ್ನು ಇಟ್ಟುಕೊಳ್ಳು ವುದು?
ಇಂದಿಗೂ ಕರ್ಣಾಟಕದಲ್ಲಿ ಕಂಡುಬರುವ ಪೂರ್ವ ದ್ರಾವಿಡರು (Pre-Dravi-
dians), ದ್ರಾವಿಡರು, ಆರ್ಯರು ಎಂಬ ಮೂರು ಕುಲಗಳಲ್ಲಿ, ಪೂರ್ವ ದ್ರಾವಿಡರು
ದ್ರಾವಿಡರೊಡನೆಯೂ, ದ್ರಾವಿಡರು ಆರ್ಯರೊಡನೆಯೂ ಬೆರೆದು ಹೋಗಿದ್ದಾರೆ.
ಅಲ್ಲಲ್ಲಿ ನಾಮಾವಶಿಷ್ಟವಾಗಿ ನಿಂತಿರುವವರಲ್ಲಿ ಪೂರ್ವ ದ್ರಾವಿಡರು ತಮ್ಮ ಮೊದಲಿನ
ಭಾಷೆಯನ್ನು (ಅಂತಹ ಭಾಷೆಯೊಂದು ಇದ್ದಿತೆಂಬುದರಲ್ಲಿ ನನಗೆ ನಂಬಿಕೆಯಿಲ್ಲ)
೪
-------------------------------------------------------------
ಪ್ರಸ್ತಾವನೆ
ಮರೆತು ದ್ರಾವಿಡ ಭಾಷೆಗಳನ್ನೇ ಆಡುತ್ತಿದ್ದಾರೆ.* ಅವರೂ ದ್ರಾವಿಡರೂ ವೈದಿಕ
ಸಂಸ್ಕೃತಿಗೆ ಮಾರುವೋಗಿ ನಿತ್ಯ ನೈಮಿತ್ತಿಕ ವ್ಯವಹಾರಗಳಲ್ಲಿಯೂ ವಿಶೇಷಾಚಾರ
ಸಂಪ್ರದಾಯಗಳಲ್ಲಿಯೂ ವೈದಿಕ ಸಂಸ್ಕೃತಿಯ ಚೌಕಟ್ಟನ್ನು ತೆಗೆದುಕೊಂಡು
ಅದನ್ನು ತಮ್ಮ ಸ್ಥಿತಿಗಳಿಗೆ ಅನುಸಾರವಾಗಿ ಹೊಂದಿಸಿಕೊಂಡಿದ್ದಾರೆಂಬುದನ್ನು
ನಾವು ಪುರಾಣೇತಿಹಾಸಗಳಿಂದಲೂ ನೋಡಬಹುದು.
ನಮ್ಮ ನಾಡು ಭೂಶಾಸ್ತ್ರ (Geology) ದೃಷ್ಟಿಯಿಂದ ಅತ್ಯಂತ ಪ್ರಾಚೀನ
ವಾದುದು.@ ಆದರೂ ನಮಗೆ ಅದರ ನೇರವಾದ ಇತಿಹಾಸವು ತಿಳಿದಿರುವುದು
ಸುಮಾರು ೨೨ ಶತಮಾನಗಳಿಂದ. ಅದರ ಹಿಂದಿನ ಪುರಾಣ ಯುಗದಲ್ಲಿ, ಕೃತ ತ್ರೇತಾ
ದ್ವಾಪರಗಳಲ್ಲಿ ನಮ್ಮ ನಾಡು ಪ್ರಸಿದ್ದವಾಗಿದ್ದಿತು, ತಪೋವನವಾಗಿದ್ದಿತು, ನಾಗರಿಕ
ವಾಗಿದ್ದಿತು. ಪ್ರಹ್ಲಾದನು ತೀರ್ಥ ಯಾತ್ರೆಗೆ ಬಂದಾಗ ಕಾವೇರಿಯ ತೀರದಲ್ಲಿ
ಅಜಗರನೆಂಬ ವಿಪ್ರೋತ್ತಮನನ್ನು ಕಂಡನು.$ ಪರಮ ಭಕ್ತನಾದ ಮಾರ್ಕಂಡೇಯನು
ನಮ್ಮ ನಾಡಿನವನು.+ ರಾಮಾಯಣದಲ್ಲಿ ಪ್ರಸಿದ್ದವಾದ ಕಿಷ್ಠಿಂಥೆಯು ಇದ್ದುದು
ನಮ್ಮ ಕರ್ನಾಟಕದಲ್ಲಿ. ಮೇದ ವೇದಾಂಗ ಪಾರಂಗತರಾದ ಅಗಸ್ತ್ಯ ಶರಭಂಗಾದಿ
ಗಳ ತಪೋವನಗಳಿದ್ದುದು ಇಲ್ಲಿ, ಮಹಾಭಾರತದ ಮತ್ಸ್ಯ, ತ್ರಿಗರ್ತ, ಕುಂತಳ
ದೇಶಗಳು ಈಗಿನ ನಮ್ಮ ಉತ್ತರ ದಕ್ಷಿಣ ಪಶ್ಚಿಮ ಕರ್ಣಾಟಕ%ಗಳು— ಎಂದರೆ,
ಆರ್ಯ ಸಂಸ್ಕೃತಿಯು ಪುರಾಣ ಯುಗದಲ್ಲಿಯೇ ದಕ್ಷಿಣಾ ಪಥಕ್ಕೆ ಹರಿದು ಬಂದು
ನೆಲಸಿದ್ದಿತು. ಆರ್ಯರ ಖುಷಿಗಳು, ಆರ್ಯರ ರಾಜರು ಬಂದು ಇಲ್ಲಿ ರಾಜ್ಯಗಳನ್ನು
ಕಟ್ಟಿದ್ದರು. ಅನಂತರದ ಚಾರಿತ್ರಕ ಯುಗದಲ್ಲಿ ಚಂದ್ರಗುಪ್ತ ಮೌರ್ಯನು ಜೈನ
ಮತವನ್ನು ತಂದನು. ಅವನ ಮೊಮ್ಮಗನಾದ ಅಶೋಕನಿಂದ ಈ ನಾಡಿನಲ್ಲಿ ಬೌದ್ದ
ಮತವು ಹರಡಿತು. ಈ ಎರಡು ಮತಗಳ ಪ್ರಾಬಲ್ಯದಿಂದ ಕ್ಷೀಣವಾದ ಬ್ರಾಹ್ಮಣ
ಮತವು ಮತ್ತೆ ಸುಮಾರು ೩-೪ನೆಯ ಶತಮಾನಗಳಲ್ಲಿ ತಲೆಯೆತ್ತಿತು. ಅನಂತರ
ಬ್ರಾಹ್ಮಣ ವಾಹಿನಿಯು ಉತ್ತರ ದೇಶದಿಂದ ಪದೇ ಪದೇ ಬಂದಿಳಿದಿರುವುದೂ, ಮತ್ತೆ
ಉತ್ತರದಲ್ಲಿ ಬ್ರಾಹ್ಮಮಣ್ಯವು ಖಿಲವಾದಾಗ ನಮ್ಮ ದಾಕ್ಷಿಣಾತ್ಯ ಆಚಾರ್ಯರಿಂದ ಆ
ಮತವು ಅಲ್ಲಿ ಉದ್ದಾರವಾದುದೂ ಚರಿತ್ರೆಯಲ್ಲಿ ಸ್ಪಷ್ಟವಾಗಿರುವ ವಿಷಯ. ಮತ್ತೆ
ದೀಕ್ಷಾ ಭಕ್ತಿ ಸಂಪ್ರದಾಯಗಳನ್ನು ಮುಖ್ಯವಾಗಿಟ್ಟುಕೊಂಡು ವೀರಶೈವ ಮತವೂ
ಹರಿದಾಸ ಪರಂಪರೆಯೂ ಕೃಷ್ಣೆಯಿಂದ ಭವಾನಿಯ ವರೆಗಿನ ಕನ್ನಡ ನಾಡನ್ನೆಲ್ಲ,
ತಮ್ಮ ಬೆಳಕಿನಿಂದ ಬೆಳಗಿದುದೂ ಉಂಟು. ಆದರೆ ಈ. ಹೊಸ ಬೆಳಕು ಹಳೆಯ
......................
* Vide— The Wyss (14200100 Mex Edition), Vol. I, page 138.
@ Vide— The Mysore Gazetteer (New Edition), Vol. I, page 18.
$ ಭಾಗವತ, ಏಳನೆಯ ಸ್ನಂಧ, ತ್ರಯೋ ದತಾಧ್ಯಾಂಯು, ೧ನೆಯ ತ್ಲೊ (ಕ.
+ ರಾಮಾಯಣ, ಅರಣ್ಯ ಕಾಜ ೩೦ನೆಯ ಸರ್ಗ, ಎ೭ನೆಯೆ “ತ್ಲ (ಕದ ಮೇಲಿನ ತಿಲಕ
ವ್ಯಾಖ್ಯಾನವನ್ನು ನೋಡಿರಿ.
% Vide— The Bombay Gazetteer (of North Karnataka—part 7).
೫
-------------------------------------------------------------
ಕರ್ಣಾಟಕ ಸಂಸ್ಕೃತಿ
ಬೆಳಕನ್ನು ನುಂಗಲಿಲ್ಲ; ಆ ಹಳೆಯ ಸಂಸ್ಕೃತಿಯು ಹಚ್ಚಿಟ್ಟಿದ್ದ ನಂದಾದೀಪದ
ಕುಡುವನ್ನಳಿಸಿ ತನ್ನ ಪ್ರಕಾಶದಿಂದ ಅದರ ಪ್ರಕಾಶವನ್ನು ಹೆಚ್ಚಿಸಿತು. ಈ ನಾನಾ
ತರಂಗಿಣಿಗಳಿಲ್ಲವೂ ನಾಡಿನಲ್ಲಿ ಒಂದೇ ಕಡೆಗಿಳಿದ ಒಂದೇ ಮಹಾ ನದಿಯಾಗಿ ಹರಿಯು
ತ್ತಿವೆ. ಆ ಮಹಾ ನದಿಯು ವೇದಗಳಲ್ಲಿ ಉದ್ದಮಿಸಿ ಉಪನಿಷತ್ತುಗಳಲ್ಲಿ ಪಲ್ಲವಿಸಿ
ಬೆಳೆದ ವೈದಿಕ ಸಂಸ್ಕೃತಿ. ಆದರೆ ಆ ವೈದಿಕ ಸಂಸ್ಕೃತಿಯ ಮೂಲ ರೂಪವಿದಲ್ಲ,
ಪ್ರತಿಬಿಂಬ; ಆ ಹಿಂದಿನ ಯಜ್ಞಯಾಗಾದಿ ಕರ್ಮಗಳ ನೈಷ್ಠುರ್ಯವಿಲ್ಲದಿದ್ದರೂ
ಆ ಶ್ರದ್ಧೆಯನ್ನು ಕಾಪಾಡಿಕೊಂಡಿರುವ, ಜ್ಞಾನ ಭಕ್ತಿ ಮಾರ್ಗಗಳ ಸೌಂದರ್ಯ
ವನ್ನು ಮೆರೆಯುತ್ತಿರುವ, ಶ್ರೇಯಃಪ್ರಧಾನವಾದ ವೈದಿಕ ಸಂಸ್ಕೃತಿಯಿದು.
ನಮ್ಮ ಜನತೆಯ ಕುಲ ಕುಲಾಂತರಗಳ ಆಚಾರ ಸಮಯಾದಿ ನಾನಾ ವ್ಯವಹಾರ
ಗಳಲ್ಲಿ ಈ ಸಂಸ್ಕೃತಿಯು ಹಾಸು ಹೊಕ್ಕಾಗಿ ಬೆರೆದುಹೋಗಿದೆ; ಬಹುಮಟ್ಟಿಗೆ
ಜನತೆಗೆ ಏಕ ಜಾತೀಯತೆಯನ್ನು ಸಾಧಿಸಿಕೊಟ್ಟಿದೆ ; ಕುಲಗಳ ವ್ಯಕ್ತ ಸ್ವರೂಪವನ್ನು
ಕಾಪಾಡುತ್ತ ಅದನ್ನು ದೇಶದ ಚೌಕಟ್ಟಿನಲ್ಲಿ ಇತರ ಕುಲಗಳೊಂದಿಗೆ ಬೆಸೆದಿದೆ.
ಇಂದಿಗೂ ನಮ್ಮ ಕರ್ಣಾಟಕದಲ್ಲಿ ನಾನಾ ಸಂಪ್ರದಾಯಗಳಿವೆ. ಆದರೂ
ಅವುಗಳಲ್ಲಿ ಮುಖ್ಯವಾದವು ಬ್ರಾಹ್ಮಣ ವೀರಶೈವಗಳು. ಜನತೆಯ ಒಂದು ಭಾಗವು
ಬ್ರಾಹ್ಮಣನನ್ನು ಪೌರೋಹಿತ್ಯಕ್ಕೆ ಇಟ್ಟುಕೊಂಡು ತನ್ನ ಶುಭಾಶುಭ ಕರ್ಮಗಳನ್ನು
ನೆರವೇರಿಸುವುದು. ಇನ್ನೊಂದು, ವೀರಶೈವ ಜಂಗಮರನ್ನು ಗುರುಗಳಾಗಿ ಮಡಗಿ
ಕೊಂಡು ತನ್ನ ನಿತ್ಯ ನೈಮಿತ್ತಿಕ ಕಾರ್ಯಗಳನ್ನು ಮಾಡುವುದು. ಈ ಎರಡನೆಯ
ಗುಂಪೂ ವೇದಾಧ್ಯಯನಾದಿಗಳನ್ನು ಅಂಗೀಕರಿಸಿ ಮೊದಲನೆಯ ಗುಂಪಿನ ಕಡೆ
ತಿರುಗುತ್ತಿದೆ.*
ಈ ವೈದಿಕೀಕರಣವು ಎಷ್ಟು ದೂರ ನಡೆದಿದೆಯೆಂಬುದನ್ನು ಗಮನಿಸಿ ನೋಡಿ
ದರೆ ಆಶ್ಚರ್ಯವಾಗುತ್ತದೆ. ನಮ್ಮ ದೇಶದಲ್ಲಿರುವ ಪಣಗಳು--ಹದಿನೆಂಟು ಪಣ,
ಒಂಬತ್ತು ಪಣಗಳು-- ತಮ್ಮಲ್ಲಿ ದೇಶದ ಪ್ರಜೆಯ ಬಹು ಭಾಗವನ್ನು ಒಳ
ಗೊಂಡಿವೆ.# ಬ್ರಾಹ್ಮಣರು, ಮತ್ತೆ ಕೆಲವು ಅಲ್ಪ ಸಂಖ್ಯಾತವಾದ ಕುಲಗಳು--
ಇವುಗಳನ್ನು ಬಿಟ್ಟು ಮಿಕ್ಕುವೆಲ್ಲ ಈ ಪಣದ ವ್ಯವಸ್ಥಗೆ ಒಳಪಟ್ಟಿವೆ. ಈ ಕುಲಗಳಲ್ಲಿ
ಸಾಮಾಸ್ಯವಾಗಿ ಎಲ್ಲಕ್ಕೂ ಗೋತ್ರ ಸೂತ್ರ ವ್ಯವಸ್ಥೆಯು ನೆಡೆದಿದೆ% ಜಾತಾ ಶೌಚ
* “ Generally speaking, it will be seen from this and from the glossary, that the
more a caste employs Brahmins to superintend its social and religious observances the
higher it is held in social esteem.’ — The Madras Census Report, 1901, page 129
# Mysore Gazetteer (New Edition), Vol. 1, page 178.
%ಈ ವಿಚಾರದಲ್ಲಿ ಅಭಿಪ್ರಾ ಯ ಭೇದವಿದೆ, Pide— The Mysore Census Reports,
1891 ye 1901,
೬
--------------------------------------------------------------------------
ಪ್ರಸ್ತಾವನೆ
ಮೃತಾ ಶೌಚಗಳನ್ನು ಈ ಕುಲಗಳೆಲ್ಲ ಒಪ್ಪಿವೆ ;* ಬ್ರಾಹ್ಮಣ ಸಂಸ್ಕಾರಗಳನ್ನು
ಒಂದಲ್ಲ ಒಂದು ವಿಧವಾಗಿ ಆಚರಿಸುತ್ತಿವೆ.% ಊಟ ಉಪಚಾರಗಳಲ್ಲಿ, ಹೆಣ್ಣು
ಕೊಟ್ಟು ತರುವುದರಲ್ಲಿ ಜಾತಿಯನ್ನೇ ಮುಖ್ಯವಾಗಿಟ್ಟುಕೊಂಡಿವೆ; ಪಿತೃ ಶ್ರಾದ್ಧ
ಪರ್ವ ಶ್ರ್ರಾದ್ದಗಳನ್ನು ಮಾಡುತ್ತಿವೆ.$ ಈ ಕುಲಗಳವರು ನಿತ್ಯ ನೈಮಿತ್ತಿಕಾದಿ
ವ್ರತಗಳನ್ನೂ ಹಬ್ಬ ಹುಣ್ಣಿಮೆ ಹರಿದಿನಗಳನ್ನೂ ಆಚರಿಸುತ್ತಾರೆ; ಆಥರ್ವಣದ
ಮಾರ್ಗವನ್ನು ಅನುಸರಿಸಿ ರೋಗೋಪದ್ರವ ಕಾರಕಗಳಾದ ಕ್ಷುದ್ರ ದೇವತೆಗಳನ್ನು
ನಾಮಾಂತರಗಳಿಂದ ಪೂಜಿಸುತ್ತಾರೆ; ಗೃಹ್ಯಗಳಲ್ಲಿ ಹೇಳಿರುವ ನಾಗ ಪೂಜಾದಿಗಳನ್ನು
ಮಾಡುತ್ತಾರೆ. ಹೀಗಿರುವಾಗ, ಈ ಸಂಸ್ಕೃತಿಯು ಅಗ್ನಿ ಪೂಜೆಯನ್ನು ತೊರೆದಿರುವ
ವೈದಿಕ ಸಂಸ್ಕೃತಿಯೆಂದು ಹೇಳಲು ಅಡ್ಡಿಯೇನು?
ಕುಲಾಚಾರಗಳನ್ನು ಕುರಿತು ನೋಡಿದಂತೆಯೇ ವ್ಯಕ್ತಿಗಳ ಆಚಾರ ಭಾವನೆ
ಗಳನ್ನೂ ನೋಡೋಣ. ನಮ್ಮ ದೇಶದ ಪ್ರಜೆಗಳಲ್ಲಿ ಬಹು ಭಾಗವಾದ # ಒಕ್ಕಲಿಗ
ರನ್ನು ತೆಗೆದುಕೊಳ್ಳೋಣ. ಇವರು ಚುಂಚನಗಿರಿಯ ಮಠಕ್ಕೆ ನಡೆದುಕೊಳ್ಳುವರು.
ಈ ಮಠವು ಕಾಪಾಲಿಕ ಸಂಪ್ರದಾಯಕ್ಕೆ ಸೇರಿದುದು. ಈ ಒಕ್ಕಲಿಗರ ಕುಲದಲ್ಲಿ
ಅನೇಕರು ಲಿಂಗವನ್ನು ಕಟ್ಟಿಕೊಂಡು ಪಾದೋದಕ ಪ್ರಸಾದಗಳನ್ನು ಗ್ರಹಿಸುವರು.
ಇಂತಹವರೂ ಕೂಡ ಬೆಳಗೆದ್ದು ಕೈಕಾಲು ಮುಖ ತೊಳೆದುಕೊಂಡ ಕೂಡಲೆ
ಮೂಡಲಿಗೆ ತಿರುಗಿ ನೇಸರಿಗೆ ಕೈಮುಗಿದು ಕೆಲವರು ಪ್ರದಕ್ಷಿಣ ನಮಸ್ಕಾರ
ವನ್ನೂ ಮಾಡುತ್ತಾರೆ--" ನಮ್ಮಪ್ಪ! ನೀನೇ ಗತಿ!" ಎನ್ನುತ್ತಾರೆ. ಆಗ ಅವರ
ಹೃದಯದಲ್ಲಿ, " ನಮ್ಮ ಬುದ್ಧಿಯ ವೃತ್ತಿಗಳನ್ನು ಪ್ರಚೋದಿಸುವ ಆ ಪವಿತ್ರ ದೇವನ
ಪೂಜ್ಯವಾದ ತೇಜಸ್ಸನ್ನು ಧ್ಯಾನಿಸುವೆವು" ಎಂಬ ವಿಶ್ವಾಮಿತ್ರ ಗಾಯತ್ರಿಯ
ಗಂಭೀರವಾದ ಅರ್ಥವು ಭಾಸವಾಗಿಲ್ಲ; ಆದರೆ ಆ ಅರ್ಥದ ಪರಿಚಯವು ಮಾಡಿಸುವ
ಕ್ರಿಯೆಯು ಮಾತ್ರ ನಡೆದಿದೆ. ಹಾಗೆ ಸೂಕ್ಷ್ಮವಾಗಿ ಸೂರ್ಯ ನಮಸ್ಕಾರ ಮಾಡಿ
ದವನು "ಸೂರ್ಯಯ ಆತ್ಮಾ ಜಗತಸ್ತಸ್ಥುಷತ್ಚ" ಎ೦ಬ ಶ್ರುತಿಯನ್ನರಿಯದವನು ;
..................................
* ವೀರಶೈವರು ಮಾತ್ರ ಆಚರಿಸುವುದಿಲ್ಲ.
% ಪುಂಸವನ, ಸೀಮಂತೋನ್ನಯನಗಳ ಸ್ಥಾನದಲ್ಲಿ, ಬಸಿರೊಸಗೆ, ಹೂಮುಡಿಸುವುದು, ಬಯಕೆ
ಊಟ ಮೊದಲಾದವು. ದಹನ (ಖನನ), ಸಂಚಯನ ಸ್ಥಾನೀಯವಾಗಿ ಹಾಲು ತುಪ್ಪ, ಜಾತಕರ್ಮ
ನಾಮಕರಣ ಚೌಲಗಳು, ವಿವಾಹಾಂಗವಾಗಿ ಉಪನಯನ ಸಮಾವರ್ತನಗಳು, ವಿವಾಹದಲಿ ಅಗ್ನಿ
ಯನ್ನು ಸ್ಲಾಪಿಸಿ ಮಾಡತಕ್ಕ ಹೋಮಾದಿಗಳು ವಿನಾ ಮಿಕ್ಕೆಲ್ಲ ಕರ್ಮಗಳು, ವಿವಾಹಾಂಗವಾಸ
ಗರ್ಭಾಧಾನ. ಹೀಗೆ ಸಾಮಾನ್ಯವಾಗಿ ಸರ್ವ ಸಂಸ್ಕಾರಗಳೂ ಈ ಕುಲಗಳಿಂದ ಅಂಗೀಕೃತವಾಗಿವೆ.
$ Once a year Soligas perform a feast in commemoration of their deceased
parents.— The Mysore Census Report, 1901, page 563.
# Vide — The ALysore Census Report, 1931, Section 349.
7
--------------------------------------------------------------------
ಕರ್ಣಾಟಕ ಸಂಸ್ಕೃತಿ
ಆದರೂ ಸೂರ್ಯ ವಂದನೆ ಮಾಡುತ್ತಾನೆ. ಈ ಕ್ರಿಯೆಯೂ ಗಾಯತ್ರೀ ಜಪದಲ್ಲಿ
ನಡೆಯುವ ಕ್ರಿಯೆಯೂ ಸಜಾತೀಯವಲ್ಲವೆ?*
ಇನ್ನೊಂದು ಉದಾಹರಣೆ ತೆಗೆದುಕೊಳ್ಳೋಣ: ನಮ್ಮ ಪ್ರಜೆಗಳಲ್ಲಿ ಬಲು
ಕೀಳು ಜಾತಿಯವರನ್ನು ಬಿಟ್ಟು (ಅವರಲ್ಲಿಯೂ ಶೌಚಾಚಾರಗಳುಳ್ಳವರು ಇದ್ದಾರೆ)
ಬಹು ಮಂದಿ ಕೈಕಾಲು ತೊಳೆಯದೆ ನೀರು ಕುಡಿಯುವುದಿಲ್ಲ. 'ಮೂರು ನೀರು
ತಾರಮ್ಮಿ' ಎಂದು ಇಲ್ಲಿಂದ ಕೂಗುತ್ತಿದ್ದ ಹಾಗೆಯೇ, ಒಳಗಿನಿಂದ ಹೆಂಗುಸು
ಒಂದು ಚೊಂಬು ನೀರನ್ನು ತರುತ್ತಾಳೆ, ಇವನು ಕೈಕಾಲು ತೊಳೆದುಕೊಂಡು
ಚೊಂಬು ಈಸಿಕೊಂಡು ಅದನ್ನು ಮೇಲಕ್ಕೆತ್ತಿ ಇಷ್ಟ ದೈವವನ್ನೋ ಗುರುವನ್ನೋ
ನೆನೆದು ಆಮೇಲೆ ನೀರು ಕುಡಿಯುತ್ತಾನೆ. (ಇದು ಈಗಿನ ಯುವಕರಿಗೆ ಅನ್ವಯಿಸು
ವುದಿಲ್ಲ). ಸಂಪ್ರದಾಯ ಪಾಲನದ ಈ ನಿಷ್ಠುರತೆಯನ್ನು ಶೀಲ ಸಂಪನ್ನರಾದ ವೈದಿಕರ
ಪದ್ಧತಿಯೊಡನೆ “ಹೋಲಿಸಿ ನೋಡಿರಿ; ಅಂತಹವರು ಮೈಲಿಗೆಯಲ್ಲಿ ನೀರು ಕುಡಿಯು
ವಿದಿಲ್ಲ; ಅಷ್ಟೇ ಅಲ್ಲ; ಕೈ ಕಾಲು ತೊಳೆದುಕೊಂಡು ಮಡಿಯುಟ್ಟು ಶುದ್ಧಾಚಮನ
ಮಾಡುವ ವರೆಗೂ ನೀರು ಕುಡಿಯುವುದಿಲ್ಲ. ಇಲ್ಲಿ ಬ್ರಾಹ್ಮಣರು ಮಂತ್ರಕವಾಗಿ
ಮಾಡಿದ ಆಚಮನ ಕ್ರಿಯೆಯೂ, ಅಲ್ಲಿ ರೈತನು ಅಮಂತ್ರಕವಾಗಿ ಮಾಡಿದ ಗುರು
ದೈವ ಸ್ಮರಣೆಯೊ ಒಂದೇ ಜಾತಿಯಲ್ಲವೆ?
ಪ್ರಾರಬ್ಧದ ವಿಷಯವಾಗಿ ಒಂದು ಉದಾಹರಣೆಯನ್ನು ನೋಡೋಣ:
ಲಾಭದಲ್ಲಿ ಸುಖ, ನಾಶದಲ್ಲಿ ದುಃಖ ಎಂಬುದಂತೂ ಹೇಗೆ ಹೇಗೂ ದಿಟವಷ್ಟೆ!
ಸುಖದಲ್ಲಿರುವುದಕ್ಕಿ೦ತಲೂ ದುಃಖದಲ್ಲಿರುವಾಗ ಮನುಷ್ಯನ ಸಂಸ್ಕೃತಿಯ ಸೊಬಗು
ಚೆನ್ನಾಗಿ ವ್ಯಕ್ತವಾಗುವುದು. ಅದರಿಂದ ನಾಶದ ದುಃಖವನ್ನು ವಿಚಾರಿ
ಸೋಣ. ನಮ್ಮ ದೇಶದಲ್ಲಿ ಯಾರೆ ಆಗಲಿ, ದುಃಖವನ್ನು ತನ್ನ ತನ್ನ ಕರ್ಮದ ಫಲ
ವೆಂದು, ಹಣೆಯ ಬರೆಹನೆಂದು, ತಿಳಿದಿದ್ದಾರೆಯೇ ಹೊರತು. ಅನ್ಯಥಾ ಇಲ್ಲ. ಆವೇಗ
ದಲ್ಲಿ ಆಹತವಾದ ಮನಸ್ಸು ಸಣ್ಣದಾಗಿ ತನ್ನ ದುಃಖದ ಕಾರಣವನ್ನು ಇತರರ ಮಡ
ಲಿಗೆ ಕಟ್ಟಿದರೂ, ತನ್ನ ದುಃಖಕ್ಕೆ ಇತರರು ಕಾರಣವೆಂದು ನಿಂದಿಸಿದರೂ, ಕೂಡಲೆ
ಪರೋಪದೇಶದಿಂದಲಾದರೂ ಆ ಸಣ್ಣತನವಳಿಯುತ್ತದೆ; ಮನವು ತಟ್ಟನೆ ತಿಳಿಯಾಗಿ,
"ಇದು ಹಣೆಯ ಬರೆಹ, ನಾನು ಮಾಡಿದ ಕರ್ಮ, ಬ್ರಹ್ಮ ಬರೆದ ಬರೆಹ" ಎಂದು
ಕೊಂಡು ಶಾಂತವಾಗುತ್ತದೆ. ವೇದಾಂತವನ್ನೋದಿ, ದೇಹಾತ್ಮ ವಾದವನ್ನು ನಿರಾ
ಕರಿಸಿ, ಚಿಜ್ಜಡ ವಿವೇಕದಿಂದ ಲೋಭವನ್ನಳಿಯಿಸಿ, ನಾಶದ ಉದ್ವೇಗವನ್ನು ನುಂಗು
ವಂತಹ ಚಿತ್ತ ಶಾಂತಿಯನ್ನು ಪಡೆದವರು ಮಾಡುವುದಿನ್ನೇನು ? ವಿದ್ವದ್ವರೇಣ್ಯನು
.........
* ಬ್ರಾಹ್ಮಣರು ಅಬ್ರಾಹ್ಮಣರಿಗೆ ಪೌರೋಹಿತ್ಯ ಮಾಡಿಸುವೆಡೆಗಳಲ್ಲಿ ಏದ ಮಂತ್ರಗಳನ್ನು
ಹೇಳುವುದಕ್ಕೆ ಬದಲು ಅವುಗಳ ಅರ್ಥವನ್ನು ಸಂಸ್ಕೃತದ ಶ್ಲೋಕಗಳಾಗಿ ಮಾಡಿ ಹೇಳುವುದನ್ನು
ಹೋಲಿಸಿರಿ.
೮
---------------------------------------------------------------------
ಪ್ರಸ್ತಾವನೆ
ದುಃಖಾತೀತನಾಗಿ ಶಮವನ್ನೇ ಸ್ಕಾಯಿಯಾಗಿಟ್ಟುಕೊಂಡಿದ್ದು ನಿರ್ವಿಷಣ್ಣನಾಗಿರ.
ಬಹುದು. ಅದು ಅಭ್ಯಾಸ ಬಲದಿಂದ, ಸಾಧನೆಯ ಆಧಿಕ್ಯದಿಂದ ಸಂಪಾದಿಸಿದ.
ಕೊನೆಯ ಅಂತಸ್ತಿನ ಸತ್ವಾತಿಶಯ. ಆದರೆ ಅದರ ಮೊದಲಿರುವುದೆಲ್ಲಿ? ದುಃಖೋ
ದ್ವಿಗ್ನನಾಗಿ, ದುಃಖವು ತರಂಗ ತರಂಗವಾಗಿ ಎದ್ದೆದ್ದು ಮನಸ್ಸನ್ನು ಮುಳು ಮುಳು
ಗಿಸಿದಾಗ ಆ ಒತ್ತುವ ದುಃಖವನ್ನು ಅತ್ತೊತ್ತಿ ಅದರ ಗಂಡನಾಗುವುದರಲ್ಲಿ ಅಲ್ಲವೆ?
ಅಂತಹ ಶಾಂತಿಯಲ್ಲಿ ಕೊನೊಗಾಣುವ ಮೊದಲನೆಯ ಅಂಕುರಾವಸ್ಥೆಯು " ಹಣೆಯ
ಬರೆಹ"ವೆಂದು ಸುಮ್ಮನಾಗುವುದರಲ್ಲಿ ಇಲ್ಲವೆ? *
ಈ ಮಾತನಾಡುವವರೆಲ್ಲ ಹಣೆ ಬರೆಹವೆಂಬ ನುಡಿಯಲ್ಲಿ ಅಡಕವಾಗಿರುವ ಅದ್ಭುತ
ವಿಚಾರ ಪ್ರಪಂಚವನ್ನು ಅರಿತು ಆಡುವುದಿಲ್ಲ; ನಿಜ, ಆದರೆ ಅದು ಮೇಲೆ ಹೇಳಿದಂತೆ
ಸತ್ತಾತಿಶಯದಲ್ಲಿ ಪ್ರಾಪ್ತವಾಗುವ ಉಪಶಮಾವಸ್ಥೆಯ ಅಂಕುರವಲ್ಲವೇನು?
ಉಪಶಮದ ಸಜಾತೀಯತೆ ಇಲ್ಲಿ ಇಲ್ಲವೇನು?
ಇದು ನಮ್ಮ ಕರ್ಣಾಟಕದ ಸಂಸ್ಕೃತಿಯ ಸೊಬಗು. ಇದನ್ನು ಹೇಗೆ ಇದು
ಸಾಧಿಸಿತು ಎಂಬ ವಿಚಾರಕ್ಕೆ ಆಮೇಲೆ ಕೈಯಿಕ್ಯೋಣ. ಅಂತು, ಈಗಿರುವಂತೆ ಈ
ಸಂಸ್ಕೃತಿಯು ಮೇಲಿನಿಂದ ಕೆಳಗಿನ ವರೆಗೆ ಇರುವ ಎಲ್ಲರನ್ನೂ ಒಂದೇ ಕಂಬಚ್ಞಿಗೆ.
ಹಾಕಿ ಒಂದೇ ಗುರಿಗೆ ಎಳೆಯುತ್ತದೆ. ಈ ಸಂಸ್ಕೃತಿಗೆ ಸಿಕ್ಕಿರುವವರೆಲ್ಲರೂ ಒಂದೇ
ಅಚ್ಚಿನಲ್ಲಿ ಬಿದ್ದು ಒಂದೇ ಜಾತಿಯ ತಂತಿಯಾಗುವುದಕ್ಕೆ ಸಿದ್ಧವಾಗುತ್ತಿರುವ ಒಂದೇ
ಲೋಹದ ತುಂಡುಗಳು.%
ಹಾಗಾದರೆ ಈ ಸಂಸ್ಕ್ರೃತಿಯೇನು? ಈ ಸಂಸ್ಕೃೃತಿಯೆಂದರೇನು? ಎ೦ಬ
ಪ್ರಶ್ನೆಯನ್ನು ಇಲ್ಲಿ ವಿಸ್ತಾರವಾಗಿ ಚ ಆವಶ್ಯಕ. ಸಂಸ್ಕೃತಿಯೆಂಬುದು
........................
* ಈ ಕರ್ಮ ವಿಪಾಕ ವಾದವು ನಮ್ಮ ಅವನತಿಯ ಕಾರಣವೆನ್ನುವ ಪ್ರಜ್ಞಾವಾದಿಗಳೂ ಇದ್ದಾರೆ.
ಅವರು ನಮ್ಮ ಸಾಮಾನ, ಪ್ರಜೆಗಳ ನಡೆ ನುಡಿಗಳನು ನೋಡದೆ ಹೇಳುವ ಮಾತಿದು. ಹೆಣ್ಣು ಮಕ್ಕಳು
"ಹಿಂದೆ ಮಲಿ ಗೆ ಸಂಪಗೆ ಪೂಜೆ ಮಾಡಿದ ಫಲವಾಗಿ ಈ ಸೌಭಾಗ್ಯವೆಲ್ಲ ಬಂದಿದೆ; ನಾವು ಮಾಡಲಿಲ್ಲ,
ನಮಗೆ ಬರಲಿಲ್ಲ. ಈಗಲಾದರೂ ಒಂದೆರಡು ಒಳ್ಳೆಯ ಹೂವಾದರೂ ಪೂಜೆ ಮಾಡೋಣ ; ಮುಂದ
ಕ್ಕಾದರೂ ಒಳ್ಳೆಯದಾಗಲಿ " ಎನ್ನುತ್ತಾರೆ. ಈ ಕರ್ಮ ವಿಪಾಕ ವಾದವು ಜನ್ಮಾ೦ತರವುಂಟೆಂದು
ಅಂಗೀಕರಿಸದೆ, ಮುಂದಕ್ಕೂ ಈ ಜನ್ಮಕ್ಕೂ ಗಂಟು ಹಾಕಿ ತೋರಿಸದೆ ಇದ್ದಿದ್ಧರೆ ಅಪರಾಧಿಯಾಗು.
ತಿದ್ದಿತು ನಿಜ. ಆದರೆ, ಈಗ ಅನುಭವಿಸಬೇಕಾದ ದುಃಖದಲ್ಲಿ ಶಾಂತಿಯನ್ನು ತಂದಿತ್ತು, ಮುಂದೆ
ದುಃಖ ಬರದಂತೆ ಮಾಡಿಕೊಳುವುದು ನಮ್ಮ ಕೈಯಲ್ಲಿದೆ ಎಂದು ಹೇಳುವ ಈ ವಾದದಿಂದ ಅದೇನು
ಅಪರಾಧವೊ ದೈವವೇ ಬಲ್ಲುದು.
% " There has ever been an attempt to govern the folk customs, popular faith,
image worship and public festivals by the transcendental conceptions of the divinity
of man and the transitoriness of this world. The folklore of the Hindus is nothing but
the adaptations of their metaphysical culture lore to the instincts and aptitudes of
' the man in the street,’ or obversely, the interpretation of the grosser systems of
thought and activity with the conceptions of a higher system of life-values and life-
attitudes.’
The Folk Element in Hindu Culture, by B. 10, Sarkar, page X.
೯
-----------------------------------------------------------------------------------
ಕರ್ಣಾಟಕ ಸಂಸ್ಕೃತಿ
ಮಾನವನಿಗೂ ಮೃಗಕ್ಕೂ ಇರುವ ಅಂತರವನ್ನು ತೋರಿಸಿಕೊಡುವ ಅಂತಸ್ಸತ್ತ್ವ.
ಹೊರಗಿನ ವಿಷಯಾದಿಗಳ ಸೆಳೆತಕ್ಕೆ ಸಿಕ್ಕಿದ ಇಂದ್ರಿಯಗಳ ವೃತ್ತಿಗೆ ಅಧೀನವಾಗಿ ನಡೆ
ಯುವುದು ಮೃಗ ವೃತ್ತಿಯೆಂದೂ ಜೀವನದಲ್ಲಿ ಗುರಿಯೊಂದುಂಟು ಎಂದುಕೊಂಡು
ಹೊರಗಿನ ಸೆಳೆತ ತುಳಿತಗಳನ್ನೆಲ್ಲ ತಡೆದುಕೊಂಡು ತನ್ನ ಕಾರ್ಯಗಳನ್ನೆಲ್ಲ ಆ ಗುರಿಯ
ತಡೆಗೆ ತಿರುಗಿಸಿಕೊಂಡು, ಹಚ್ಚೆ ಹಚ್ಚೆಗೂ ಆ ಗುರಿಯ ಬಳಿ ಸಾರಬೇಕು ಎಂಬ
ಉದ್ಧೇಶದಿಂದ ಬದುಕುವುದು ಮಾನವ ವೃತ್ತಿಯೆಂದೂ ಒಪ್ಪಿಕೊಂಡರೆ, ಆಗ ಆ
ಮಾನವನ ಕಾರ್ಯ ಪ್ರಪಂಚದಲ್ಲಿ ಕಾಣಬರುವ ಮನಸ್ಸಿನ ಬೆಳೆವಣಿಗೆಯನ್ನು,
ಅಥವಾ ಬೆಳೆದ ಮನಸ್ಸಿನ ಸ್ಥಿತಿಯನ್ನು ತೋರಿಸುವ ಭಾವವೇ ಸಂಸ್ಕೃತಿಯೆನ್ನ
ಬಹುದು. ಆಚಾರ ಸಂಪ್ರದಾಯಗಳಿಂದ, ದೈನಂದಿನದ ಕ್ರಿಯಾ ಕರ್ಮ ಕಲಾಪಗಳಿಂದ,
ಆಶೋತ್ತರಗಳಿಂದ, ಬಾಳಿನ ಏಳು ಬೀಳುಗಳಿಂದ, ಈ ಸಂಸ್ಕೃತಿಯ ಬಣ್ಣದಲ್ಲಿ
ಏರು ಜಾರುಗಳು ಆಗುವುದುಂಟು, ಆದರೂ ಸಂಸ್ಕೃತಿಯ ಜಾತಿಯೂ ಸ್ವಭಾ
ವವೂ ಬದಲಾಯಿಸುವುದಿಲ್ಲ.
ಹಿಂದಿನ ಒಂದು ದಂತ ಕಥೆಯನ್ನು ತೆಗೆದುಕೊಳ್ಳೋಣ: ಚೋಳರಾಜನೊಬ್ಬನು
ಒಬ್ಬ ಕವಿಗೆ ಅಪರಾಧ ಮಾಡಿ ಆತನ ಶಾಪವನ್ನು ಪಡೆದು ರಾಜ್ಯಾದಿಗಳನ್ನು ಕಳೆದು
ಕೊಂಡನು. ಸರ್ವಸ್ವವನ್ನೂ ನೀಗಿಕೊಂಡು ತಿರುಕನಾದ ಅರಸನು ಒಂದು ಇರುಳು,
ಮಳೆಯಿಂದಾದ ಕೊರಕಲಿನಲ್ಲಿ ಬಿದ್ದುಹೋದನು. ಹಾಗೆ ಬಿದ್ದು ನೊಂದ ಅರಸನು,
"ಛೇ! ಕವಳಕ್ಕೆ ಹೋದರೂ ಕೈದೀವಿಗೆ ಹಿಡಿಸಿಕೊ೦ಡಿರಬೇಕು" ಎಂದುಕೊಂಡ
ನಂತೆ! ಆ ಮಾತಿನಲ್ಲಿ ಒಡೆದು ಕಾಣುವ ಮನಸ್ಸಿನ ವಿಕಾಸವು ಸಂಸ್ಕೃತಿ. ಅವನು
ರಾಜ ಪದವಿಯನ್ನು ಅನುಭವಿಸಿದಾಗ ಅವನ ಮನಸ್ಸು ಕೆಲವು ಅನುಭವಗಳನ್ನು
ಪಡೆದಿದೆ. ಆಯಾ ಅನುಭವಗಳು ಆ ಮನಸ್ಸನ್ನು ಒಂದು ರೀತಿಯಲ್ಲಿ ಪಕ್ವ ಮಾಡಿ
ಒಂದು ತೆರನಾಗಿ ಬೆಳೆಸಿವೆ. ಹಾಗೆ ಬೆಳೆದ ಮನಸ್ಸಿನ ಆ ವಿಪಾಕವುಂಟಲ್ಲವೆ? ಅದು
ಸಂಸ್ಕೃತಿ. ಐಶ್ವರ್ಯವಂತನು ಬೇಡವೆಂದು ಬಿಟ್ಟಿದ್ದರೂ ಅವನ ಉಡುಗೆ ತೊಡುಗೆ,
ಊಟ ಉಪಚಾರ, ನಡೆ ನುಡಿಗಳಲ್ಲಿ ಕಾಣಬರುವ ಶ್ರೀಮಂತ ತನದ ವೈಭವದಂತೆ;
ಪ್ರದರ್ಶನದ ಇಷ್ಟವಿಲ್ಲದಿದ್ದರೂ ಅವನು ಮಾಡುವ ಕಾರ್ಯ ಕಲಾಪಗಳಲ್ಲೆಲ್ಲ ಕಾಣಿಸಿ
ಕೊಳ್ಳುವ ಬಲಶಾಲಿಯ ಬಲದಂತೆ; ಹಾಲಿನಲ್ಲಿರುವ ಬೆಣ್ಣೆಯಂತೆ; ಮಾನವನ
ಅಂತಃಕರಣದಲ್ಲಿದ್ದು, ಚಿತ್ತ ವೃತ್ತಿಯನ್ನೂ ಬುದ್ಧಿ ವ್ಯಾಪಾರವನ್ನೂ ರೂಪುಗೊಳಿಸುವ
ಅಂತಸ್ಸತ್ತ್ವ ಉಂಟಲ್ಲವೆ? ಅದು ಸಂಸ್ಕೃತಿ? ಇದೇ ಸಾಂಖ್ಯದ ಗುಣ, ಯೋಗಿಗಳ
ವಾಸನೆ, ಕರ್ಮಠರ ಪುಣ್ಯ, ವೇದಾಂತಿಗಳ ಕರ್ಮ ವಿಪಾಕ.
ಈ ಸಂಸ್ಕೃತಿಯು, ಕಲಿತ ವಿದ್ಯೆಯ ಪ್ರಭಾವವೆನ್ನುವುದಕ್ಕಿಂತಲೂ ಆರಗಿದ
ವಿದ್ಯೆಯ ಪರಿಣಾಮವೆನ್ನುವುದು ಸರಿ. ವ್ಯಾಸರಾಯರು ಶಿಷ್ಯರನ್ನೂ ಕನಕನನ್ನೂ
೧೦
--------------------------------------------------------------
ಪ್ರಸ್ತಾವನೆ
ಕರೆದು ದೇವರಿಗೆ ನಿವೇದನವಾಗಿದ್ದ ಬಾಳೆಯ ಹಣ್ಣು ಒಂದೊಂದನ್ನು ಕೊಟ್ಟು,
"ಯಾರೂ ಇಲ್ಲದೆಡೆ ತಿಂದು ಬನ್ನಿ " ಎಂದು ಅಪ್ಪಣೆ ಮಾಡಿದರಂತೆ! ಪಂಡಿತ ಶಿಷ್ಯರು
ಅನೇಕರು ತಮಗೆ ತೋರಿದಂತೆ ಏಕಾಂತದಲ್ಲಿ ತಿಂದು ಬಂದರು. ಕನಕನಿಗೆ ಮಾತ್ರ
ಎಲ್ಲೆಲ್ಲಿ ಹೋದರೂ ಗುರುಗಳೂ ಕೃಷ್ಣನೂ ಇದ್ದೇ ಇರುವುದು ಕಂಡುಬರುತ್ತಿದ್ದು,
ಯಾರೂ ಇಲ್ಲದ ಎಡೆಯೇ ಈ ಲೋಕದಲ್ಲಿ ಇಲ್ಲದೆ, ಆತನು ಆ ಹಣ್ಣನ್ನು ತಿನ್ನದೆ
ಹಿಂದಕ್ಕೆ ತಂದನಂತೆ! ಶಿಷ್ಯರದು ಪಾಂಡಿತ್ಯ, ಕನಕನದು ಸಂಸ್ಕೃತಿ. ಹೀಗೆ ನಡೆ
ನುಡಿಗಳಲ್ಲಿ ಸಂದು ಬಿಡದಂತೆ ಎರಡನ್ನೂ ಒಂದಾಗಿ ಬೆಸೆಯುವ ಮನಃಪರಿಣಾಮವು
ಸಂಸ್ಕೃತಿ. ವಿಚಾರವನ್ನೂ ಆಚಾರವನ್ನೂ ಬೇರೆ ಬೇರೆಯೆಂದು ವಿಭಾಗಿಸಿಡುವ
ಮನಸ್ಸಿನ,ಕಾರ್ಯವು ಸಂಸ್ಕೃತಿಯಲ್ಲ. ಆಚಾರದಲ್ಲಿ ಕಂಡುಬರುವ, ಅಂತರ್ಗತ
ವಾಗಿರುವ, ಲೀನವಾಗಿರುವ, ಅಥವಾ ಆಚಾರವಾಗಿ ಪರಿಣಮಿಸಿರುವ ವಿಚಾರವೆನ್ನಿರಿ.
"ವಿಚಾರವು ಬೀಜ, ಆಚಾರವು ಅದರ ವಿಕಾರವಾದ ವೃಕ್ಷ ವೆಂಬುವ ದೃಷ್ಟಿಯಿಂದ
ನೋಡುವಾಗ ಕಾಣುವ, ಕುಲ ಕ್ರಮಗತವಾದ, ಪರಂಪರಾ ಪ್ರಾಪ್ತವಾದ ಆಚಾರದ
ಹಿಂದಿರುವ ಮನಸ್ಸಿನ ಪಕ್ವ ಭಾವವಿದೆನ್ನಬಹುದು. ಪಾಂಡಿತ್ಯವೂ ಸಂಸ್ಕೃತಿಯೂ
ಪರಸ್ಪರೋಪಕಾರಕಗಳು; ಒಂದು, ಮಳೆಯಂತೆ ಮೇಲಿನಿಂದ ಇಳಿದುದು ;
ಇನ್ನೊಂದು, ಬುಗ್ಗೆಯಂತೆ ಒಳಗಿನಿಂದ ಚಿಮ್ಮಿ ಮೇಲಕ್ಕೆ ಬಂದುದು. ನಮ್ಮ
ಪಂಡಿತರೂ ಪೂರ್ವಾಚಾರಗಳ ಕಟ್ಟುನಿಟ್ಟು ಗಳನ್ನು ಗೌರವಿಸುವುದು ಇದಕ್ಕಾಗಿ.
ಪಂಡಿತರ ವಿಚಾರಗಳು ಆಗಾಗ ಹೊಸ ಹೊಸ ಬೆಳಕನ್ನು ಬೀರಿ, ಹಳೆಯ
ಆಚಾರಗಳನ್ನು ತಿರಸ್ಕರಿಸಿ ಸ್ವಾತಂತ್ರ್ಯ ದಾಹವನ್ನೆಬ್ಬಿಸಿವೆ. ಆದರೆ ಆ ಹೊಸ
ಬೆಳಕೂ ಸ್ಥೂಣಾ ನಿಖನನ ನ್ಯಾಯದಂತೆ, ಎಂದರೆ ಕಂಭವನ್ನು ಅಲ್ಲಾಡಿಸಿ ಅಲ್ಲಾಡಿಸಿ
ದೃಢಪಡಿಸಿದಂತೆ, ಈ ಸಂಸ್ಕೃತಿಯ ಪೋಷಣೆಗೇ ಸಹಾಕಾರಿಯಾಗಿದೆ. ಅಲ್ಲದೆ,
ಆಚಾರ ವಿಚಾರ ಸಾಮರಸ್ಯವಿದ್ದವನು ಜನತೆಯ ಮನಸ್ಸನ್ನು ಸಂಗ್ರಹಿಸಿದಂತೆ ತದ್ವಿಪ
ರೀತನಾದವನು ಹಿಡಿದಿಲ್ಲ. ನಡೆಯ ಬೆಂಬಲವಿಲ್ಲದ ನುಡಿಯ ಬೆಡಗಿಗೆ ಅಲ್ಲಲ್ಲಿ ಆಗಾಗ
ಜನವು ಸೋತಿದ್ದರೂ ಆ ಸೋಲು ಶಾಶ್ವತವಾಗಿಲ್ಲ. ಮತ್ತೆ ಮೊದಲಿನ ತನ್ನ
ಹಾದಿಗೇ ಜನತೆಯು ಹಿಂದಿರುಗಿ ಬರುತ್ತದೆ. ಆದರಿಂದ ಅಚ್ಚುಕಟ್ಟು ಕೆಟ್ಟಿಲ್ಲ, ಕೆಚ್ಚು
ಅಳಿದಿಲ್ಲ.
ಈ ಅಚ್ಚು ಕಟ್ಟನ್ನು ಕಾಯ್ದು ಬಂದುದು ಜನದ ಹೃದಯದಲ್ಲಿ ನೆಲಸಿರುವ
ಆಸ್ತಿಕ ಭಾವನೆ ಫಲವ ಕಟ್ಟು ಪಾಡುಗಳ ವ್ಯವಸ್ಥೆ, ಅರಮನೆ ಗುರುಮನೆಗಳ
ಗೌರವ ಇವುಗಳು. ಒಂದು ವೇಳೆ ಅರಮನೆ ಗುರುಮನೆಗಳ ಗೌರವವು
ಕಾರಣಾಂತರಗಳಿಂದ ಶಿಥಿಲವಾಗಿರುವುದುಂಟು; ಆದರೂ ಜನತೆಯ ಸಂಸ್ಕೃತಿಯು
ಅಳಿಯಲಿಲ್ಲ. ವ್ಯಕ್ತಿಯನ್ನು ಅವನ ಹೃದಯದ ಭಾವನೆಯೂ, ಕುಲವನ್ನು ಕುಲ
೧೧
--------------------------------------------------------------
ಕರ್ಣಾಟಕ ಸಂಸ್ಕೃತಿ
ವ್ಯವಸ್ಥೆಯೂ, ಕಾಪಾಡಿಕೊಂಡು ಬಂದಿವೆ. ಭಿನ್ನ ಭಿನ್ನ ಜಾತಿ ಮತಗಳ ಆಚಾರ್ಯರು
ಹುಟ್ಟಿ ತಮ್ಮ ಪ್ರಭಾವವನ್ನು ಪಸರಿಸಿದ್ದರೂ ಜನತೆಯು ಅವರವರ ಉಪದೇಶದಲ್ಲಿದ್ದ
ಶ್ರೇಯಸ್ಸು ಶ್ರೇಯಸ್ಸಾಧನಗಳಿಗೆ ಒಲಿದು ಅವನ್ನು ಹಿಡಿಯಿತು. ಅದರಿಂದ ಭಿನ್ನ
ಭಿನ್ನ ಜಾತಿಗಳಾಗಿದ್ದರೂ, ಹಿಡಿ ತುಂಬ ಮಾತ್ರ ಇರುವ ಜನದಲ್ಲಿ ನೂರಾರು ಜಾತಿ
ಪಂಥಗಳಾದರೂ, ಜನತೆಯ ಸಂಸ್ಕೃತಿಯ ಏಕಜಾತೀಯತೆಯು ಅಳಿಯಲಿಲ್ಲ;
ನಾಸ್ತಿಕರ ಉಪದೇಶ ನಿಲ್ಲಲಿಲ್ಲ. ನಿಂತು ನೆಲಸಿದ ಉಪದೇಶಗಳ ಗುರಿಯೆಲ್ಲವೂ
ಶ್ರೇಯಸ್ಸು. ಅದರಿಂದ ಬಂದ ಹೋದವರೆಲ್ಲರೂ ಒಬ್ಬರೊಬ್ಬರಿಗೆ ವಿಮುಖರೇ
ಆಗಿದ್ದರೂ, ಅವರೆಲ್ಲರ ಉಪದೇಶದಿಂದಲೂ ಸಂಸ್ಕೃತಿಯ ವೃಕ್ಷವು ಬೆಳೆಯುತ್ತಲೇ
ಬಂದಿತು. ಅವರೆಲ್ಲರೂ ಪರಸ್ಪರ ವಿಮುಖಗಳಾದ ಶಾಖೋಪಶಾಖೆಗಳು
ತಾವು ಬೆಳೆಯುತ್ತ ಮರವನ್ನೂ ಬೆಳಿಸುವಂತೆ ಸಂಸ್ಕೃತಿಯನ್ನು ಬೆಳೆಯಿಸುತ್ತಲೇ
ಬಂದರು. *
ಈ ಸಂಸ್ಕೃತಿಯು ತಾಳಿಂದ ತುದಿಯವರೆಗೂ ಆಸ್ತಿಕವಾದುದು; . ಧರ್ಮ,
ಕರ್ಮ, ಜೀವ, ಬ್ರಹ್ಮ, ಜನ್ಮ, ಸಂಸ್ಕಾರಗಳನ್ನು ಅಂಗೀಕರಿಸಿರುವುದು ; ಇಹದಲ್ಲಿ
ಋಣಗಳನ್ನೂ, ಪರದಲ್ಲಿ ಲೋಕಾಂತರಗಳನ್ನೂ ಒಪ್ಪಿರುವುದು; ಬಾಳು ಈಗ
ಬೇಕಾದ ಹಾಗೆ ಎದ್ದು ಬಿದ್ದರೂ ಕೊನೆಗೆ ಎಂದಾದರೊಂದು ದಿನ ಆನಂದದಲ್ಲಿ ಮುಗಿ
ಯುವುದು ಎಂಬುದನ್ನು ನಂಬಿರುವುದು. ಒಟ್ಟಿನಲ್ಲಿ, ಒಂದೇ ಮಾತಿನಲ್ಲಿ ಹೇಳ
ಬೇಕೆಂದರೆ, ಶ್ರೇಯಃ ಪ್ರೇಯೋ ವಿಭಾಗವನ್ನು ಸ್ವೀಕರಿಸಿ, ಪ್ರೇಯಕ್ಕಿಂತ ಶ್ರೇಯವು
ಹೆಚ್ಚೆಂದು ಮನೋವಾಕ್ಕಾಯಗಳಲ್ಲಿಯೂ ನಂಬಿರುವುದು ಈ ಸಂಸ್ಕೃತಿಯ
ಮುಖ್ಯ ಲಕ್ಬಣ; )ಇಲ್ಲಿ ವೈದಿಕ ಸಂಸ್ಕೃತಿಗೂ ಇದಕ್ಕೂ ಇರುವ ಪ್ರಬಲ ಸಾದೃಶ್ಯ.
ಇದಿಷ್ಟೇ ಆಗಿದ್ದರೆ ಇದರಲ್ಲೇನು ಅತಿಶಯ? ಎನ್ನಬಹುದಾಗಿದ್ದಿತು. ಆದರೆ
ವಾಸ್ತವ್ಯ ಸ್ಥಿತಿಯನ್ನು. ನೋಡಿದರೆ ಹಾಗೆನ್ನುವಂತಿಲ್ಲ. ಈಗ ಕರ್ಣಾಟಕದಲ್ಲಿರುವ
ಜನರ ನಡೆ ನುಡಿಗಳಿಗೂ ವೇದದ ಕಾಲದಲ್ಲಿದ್ದ ಜನತೆಯ ನಡೆ ನುಡಿಗಳಿಗೂ ಸಾಮ್ಯ
ವಿದೆ. ಕೆಲವೆಡೆಗಳಲ್ಲಿ ಸಾಮ್ಯವು ಪ್ರಕಟವಾಗಿ ತೋರಿಬರುತ್ತದೆ; ಕೆಲವೆಡೆ ಕೊಂಚ
ವ್ಯತ್ಯಾಸ ಹೊಂದಿದ್ದು ಅಲ್ಲಿ ಸಾಮ್ಯವನ್ನು ಹುಡುಕಬೇಕಾಗುತ್ತದೆ. ಆದರೂ ಸಾಮ್ಯ
ವಿದೆಯೆಂಬುದರಲ್ಲಿ ಮಾತ್ರ ಸಂದೇಹವಿಲ್ಲ. ಉದಾಹರಣೆಗೆ, ಸಾಮಾನ್ಯವಾಗಿ ನಮ್ಮ
ಕಣ್ಣಿಗೆ ಬೀಳದ ಮಕ್ಕಳಾಟವನ್ನು ತೆಗೆದುಕೊಳ್ಳೋಣ, ಹಿರಿಯ ಮಗುವೊಂದು
ಎಳೆಯ ಮಗುವಿನ ಕೈಯ ಹಿಡಿದುಕೊಂಡು, "ಸಾರಿಸಿ, ಗುಡಿಸಿ, ರಂಗೋಲೆ ಹಾಕಿ,
.....................
* “Southem Hinduism grows by induction, i.e., by opposing and as the result
of conscious movements against the alien cult and culture. Northern Hindu Culture
on the other hand, grows by conduction, i.e.,, by receiving and assimilating and as the
result of more or less conscious adaptation to the new ideals.’
The Folk Element in Hindu Culture, by B. K. Sarkar, page X.
೧೨
----------------------------------------------------------------
ಅಗ್ರದ ಬಾಳೆಲೆ ಹಾಕಿ, ಎಲ್ಲ ಬಡಿಸಿ, ಜೊಯ್ಯ್ ಎಂತ ತುಪ್ಪ ಸುರಿದರೆ... . ಅತ್ತೇ
ಮನೆಗೆ ಹೋಗೋ ದಾರಿಯೆಲ್ಲಿಯೆಲ್ಲಿ ಅಂತ ಓಡಿತು" ಎಂದು 'ಕಚ್ಚಗುಳಿ' ಆಡಿಸಿ,
ಆಟವನ್ನು ಮುಗಿಸುತ್ತದೆ. ಈ "ಸಾರಿಸಿ ಗುಡಿಸಿ" ಆಟದಲ್ಲಿ, ಬೆಳಗೆದ್ದು ಮನೆ ಬಾಗ್ಯ
ಲನ್ನು ಗುಡಿಸಿ ಸಾರಿಸುವ ತಾಯ ವರ್ತನವನ್ನು ಮಗುವು ಅನುಕರಿಸುತ್ತಿದೆಯೆಂದರೆ
ಸುಲಭವಾಗಿ ಒಪ್ಪುವುದು ಸಾಧ್ಯ. ಆದರೆ ಅದರಿಂದ ಆಚೆಗೆ ಹೋಗಿ, ಆ ಆಟದಲ್ಲಿ,
ಅಗ್ನಿ ಕಾರ್ಯಕ್ಕಾಗಿ ಕುಳಿತ ವಟುವು ಆಚರಿಸುವ, ನೆಲವನ್ನು ಗುಡಿಸುವುದು, ನೀರು
ಚೆಲ್ಲುವುಡು, ದರ್ಭೆಯಿಡುವುದು, ಅಗ್ನಿಯನ್ನು ಇಟ್ಟು ಪ್ರಜ್ವಾಲಿಸಿ ಜೋಯ್ ಎಂದು
ತುಪ್ಪ ಸುರಿಯುವುದು ಮೊದಲಾದ ಕರ್ಮ ಕಲಾಪವನ್ನು ನೋಡಿರೆಂದರೆ ನಂಬುವುದು
ಕಷ್ಟವಾದೀತು. ಆದರೆ, ಅದೇ ಮಗುವು ಅದೇ ಮಗುವನ್ನು ಆಡಿಸುವ ಇನ್ನೊಂದು
ಆಟವನ್ನು ನೋಡಿರಿ: "ಸ್ವಾದಿಷ್ಟಯ್ಯ ಮಾದಿಷ್ಟಯ್ಯ ಮತ್ತಿಷ್ಟು ತುಪ್ಪ ಹಾಕಯ್ಯಾ
ಹಾಕಯ್ಯಾ!" ಎಂದು ಕೆನ್ನೆಗಳನ್ನು ಹಿಡಿದು ಮಗುವನ್ನು ಹಿಂದಕ್ಕೆ ಮುಂದಕ್ಕೆ
ಜೂಗಾಡಿಸುವುದು ಉಂಟೆಲ್ಲವೆ? ಆದರಲ್ಲಿ ಹೇಳುವ ಆ " ಸ್ವಾದಿಷ್ಟಯ್ಯ
ಮಾದಿಷ್ಟಯ್ಯ" ಎಂಬುವುದು " ಸ್ಪಾದಿಷ್ಯಯಾ ಮದಿಷ್ಠಯಾ ಪವಸ್ತ ಸೋಮ
ಧಾರಯಾ' ಎಂಬುದರ ಆಭಾಸವಲ್ಲವೆ ನೋಡಿರಿ! ಹಾಗೆಯೇ, ಇದರ ಜೊತೆಗೆ
ಮಗುವನ್ನು ನಗಿಸಿ. ಆಟವನ್ನು ಮುಗಿಸುವುದರಲ್ಲಿ ಅಡಗಿರುವ ಆನಂದವೇ ಕೊನೆ
ಯೆಂಬ ತತ್ತ್ವದ ಮೈಖರಿಯನ್ನು ನೋಡಿರಿ.
ಇಷ್ಟೇ ಅಲ್ಲ; ನಮ್ಮು ಕರ್ಣಾಟಕದ ಈಗಿನ ಹೆಂಗುಸು ಗಂಡುಸರ ಉಡುಗೆ
ತೊಡುಗೆಗಳೂ ವೇದದ ಕಾಲದಲ್ಲಿದ್ದವು. ಹಳ್ಳಿಯ ಹೆಂಗುಸರು ಕಟ್ಟುವ ತುರುಬು,
ಅವರು ಸೊಪ್ಪು ಸೆದೆಗಳನ್ನು ತುರುಕಿಕೊಳ್ಳುವುದಕ್ಕಾಗಿ ಒಂದು ಮಗ್ಗುಲಾಗಿ ಕಟ್ಟುವ
ಮಡಿಲು, ಅವರುಡುವ ಸೀರೆ, ನಮ್ಮ ದೇಶದ ಗಂಡುಸರುಡುವ ಧೋತರ ದಟ್ಟಿ,
ಕಠಾರಿ ಕಚ್ಚೆ ಧೋತರ, ಬಣ್ಣದ ತಲೆಸುತ್ತು ಪಾಗುಗಳು--ಇವೆಲ್ಲವೂ ವೇದದ
ಕಾಲದವು. ' ಅಷ್ಟೇ ಅಲ್ಲ; ಹಳೆಯ ಕಾಲದ ತೊಟ್ಟಿಯ ಮನೆಗಳು, ನಮ್ಮ ಮನೆ
ಗಳಲ್ಲಿರುವ ಹಳೆಯ ಮಂಚ, ಕಾಲುಮಣೆ, ಮಣೆ, ಚಾಪೆಗಳು ಮುಂತಾದವುಗಳೆಲ್ಲ
ಸಾವಿರಾರು ವರ್ಷಗಳ ಕೆಳಗೆ ವೇದಗಳ ಕಾಲದಲ್ಲಿದ್ದ ಜನರು ಉಪಯೋಗಿಸುತ್ತಿದ್ದವು,
ನಮ್ಮ ನಡೆ ನುಡಿಗಳ ಹಿಂದಿನ ಭಾವನೆಗಳು, ಕಥೆಗಳು, ಗಾದೆಗಳು ಇವೆಲ್ಲಕ್ಕೂ
ವೇದದಲ್ಲಿರುವ ಮಾತೃಕೆಗಳನ್ನು ತೆಗದಿಡಬಹುದು ;* ಆ ಕಾರ್ಯವನ್ನು ಆಯಾ
ಸಂದರ್ಭಗಳಲ್ಲಿ ಮಾಡೋಣ.
ಇದಿಷ್ಟನ್ನೂ ವಿಮರ್ಶಿಸಿ ನಾವು ಕರ್ಣಾಟಕ ಸಂಸ್ಕೃತಿಯು ವೈದಿಕ
ಸಂಸ್ಕೃತಿಯ ರೂಪಾಂತರ, ಅಥವಾ ಪ್ರತಿಬಿಂಬವೆನ್ನುತ್ತೇವೆ. ಸಂಗೀತದಲ್ಲಿ 'ಮಾರ್ಗ,
.................
* 'ರಂಗಭೂಮಿ' ಯ ೭ನೆಯ ಸಂಪುಟದ ೬-೭ನೆಯ ಸಂಚಿಕೆಗಳಲ್ಲಿರುವ “ ಪ್ರಾಚೀನ ಕಾಲದ
ವಸ್ತ್ರ ಭೂಷಣಗಳು,” “ಪ್ರಾಚೀನ ಕಾಲದ ಆಸನಾದಿಗಳು," ಎಂಬ ಲೇಖನಗಳನ್ನು ನೋಡಿರಿ,
ಕರ್ಣಾಟಕ ಸಂಸ್ಕೃತಿ
ದೇಶಿ' ಎಂದು ಎರಡು ಸಂಪ್ರದಾಯಗಳುಂಟು. ಅದರಲ್ಲಿ ಮಾರ್ಗವು ಆದರ್ಶವಾಗಿದ್ದು
ಸರ್ವ ಸಂಪ್ರದಾಯ ಮಾತೃಕೆಯಾಗಿರುವುದು ; ದೇಶಿಯು ಆಯಾಯ ದೇಶಗಳ
ಪರಿಸ್ಥಿಗಳಿಗೆ ಅನುಗುಣವಾಗಿ ಹೊಂದಿಸಿಕೊಂಡಿರುವ ಮಾರ್ಗ, ಈ ದೃಷ್ಠಿಯಿಂದ
ವೈದಿಕ ಸಂಸ್ಕೃತಿಯು 'ಮಾರ್ಗ', ಕರ್ಣಾಟಕ ಸಂಸ್ಕೃತಿಯ 'ದೇಶಿ' ಎನ್ನಬಹುದು.
ಹೇಗಾದರೂ ಎರಡಕ್ಕೂ ಇರುವ ಆತ್ಮೀಯವಾದ ನಿಕಟ ಸಂಬಂಧವನ್ನು ಮಾತ್ರ
ಗ್ರಹಿಸದಿರುವುದು ಸಾಧ್ಯವಿಲ್ಲ.*
....................
* Cf. ‘Similar conditions of mind produce similar practices, apart from identity of
race, or borrowing ideas and manners” [Origin of Religions]. Then what about the
individuality of a race? (D.)
೧೪
-----------------------------------------------------------
II. ಗಂಡುಸರ ಹಾಡುಗಳು
ಮನುಷ್ಯನ ವ್ಯವಹಾರವೆಲ್ಲವೂ ನಡೆ ನುಡಿಗಳೆರಡರಲ್ಲಿ ಅಡಕವಾಗಿದೆ. ಆದುದ್ದ
ರಿಂದ, ಸಂಸ್ಕೃತಿ ಪರಿಶೋಧನಕ್ಕೆ ಹೊರಟಿರುವ ನಾವು ಮುಖ್ಯವಾಗಿ ಈ ನಡೆ
ನುಡಿಗಳನ್ನು ಗಮನಿಸಬೇಕು. ಅವೆರಡರಲ್ಲಿ ತಟ್ಟನೆ ನಮಗೆ ಸಿಕ್ಕುವುದು ನುಡಿ.
ಆದುದರಿಂದ ಅದನ್ನೇ ಮೊದಲು ತೆಗೆದುಕೊಳ್ಳೋಣ.
ನುಡಿಯಲ್ಲಿ ಹಾಡು, ಕಥೆ, ಒಗಟೆ, ಗಾದೆ- ಇವೆಲ್ಲವೂ ಬರುವುವು. ಕೊನೆಯ
ಮೂರರಲ್ಲಿ ಕಾಣದ ಗಂಡು ಹೆಣ್ಣು ಎಂಬ ಭೇದವು ಮೊದಲನೆಯದಾದ ಹಾಡಿನಲ್ಲಿ
ಕಂಡುಬರುವುದು: ಹೆಂಗುಸರು ಹಾಡುವ ಶೋಭಾನೆಯ ಹಾಡುಗಳು, ಆರತಿಯ
ಹಾಡುಗಳು ಮೊದಲಾದವು ಗಂಡುಸರ ಗುಂಪಿನಲ್ಲಿ ಕಂಡುಬರುವುದಿಲ್ಲ. ಗಂಡುಸರು
ಹಾಡುವ ಲಾವಣಿ ಮೊದಲಾದವು ಹೆಂಗುಸರಲ್ಲಿ ಬಳಕೆಯಲ್ಲಿಲ್ಲ. ಹೀಗಿರುವುದರಿಂದ,
ಈ ಹಾಡುಗಳನ್ನು ಕುರಿತು ಬರೆಯುವಾಗ ಆನುಕೂಲ್ಯ ಆವಶ್ಯಕತೆಗಳನ್ನು ಹಿಡಿದು
ಗಂಡುಸರ ಹಾಡು, ಹೆಂಗುಸರ ಹಾಡು ಎಂದು ವಿಭಾಗ ಮಾಡುವೆವು.
ಹೆಂಗುಸರ ಹಾಡುಗಳಲ್ಲಿರುವಂತೆಯೇ ಗಂಡುಸರ ಹಾಡುಗಳಲ್ಲಿಯೂ ಬೇಕಾ
ದಷ್ಟು ವೈವಿಧ್ಯವಿದೆ. ಅವುಗಳನ್ನು ಬೇರೆ ಬೇರೆ ದೃಷ್ಟಿ ಯಿಂದ ನಾನಾ ಜಾತಿಗಳಾಗಿ
ವಿಂಗಡಿಸಬಹುದಾದರೂ ಸದ್ಯದಲ್ಲಿ ನಾವು ಲಾವಣಿ, ವಿನೋದದ ಪದಗಳು,
ವಿಶೇಷದ ಪದಗಳು ಎಂದು ಮೂರು ಗುಂಪು ಮಾಡುವೆವು. ಮೊದಲನೆಯದು
ಸಾಮಾನ್ಯವಾಗಿ ಗರುಡಿಯ ಮನೆಯವರಲ್ಲಿ ಬಳಕೆಯಲ್ಲಿರುವ ಲಾವಣಿಗಳು
ಮೊದಲಾದವು. ಹೊತ್ತು ಕಳೆಯುವ ಉದ್ದೇಶದಿಂದ ಒಂಟಿಯಾಗಿಯೋ, ಅಥವಾ
ಗುಂಪಾಗಿಯೋ ಹೇಳುವ ಪದಗಳು; ಗಾಡಿ ಬಂಡಿಗಳವರು ನಟ್ಟಿರುಳಿನಲ್ಲಿ ಹಾದಿ
ಹಿಡಿದು ಹೋಗುತ್ತ ಎಚ್ಚರವಾಗಿರಲೆಂದು ತಾರಸ್ಥಾಯಿಯಲ್ಲಿ ಕೂಗು: ಅರ್ಥವಿರುವ,
ಅರ್ಥವಿಲ್ಲದ ಹಾಡುಗಳು ; ತುಂಡು ಪದಗಳು ; ಮನೆ ಬಾಗಿಲುಗಳಲ್ಲಿ ಕುಳಿತು
ಹಾಸ್ಯ ವಿನೋದಗಳಿಗೆಂದು ಒಬ್ಬರಿಗೊಬ್ಬರು ಹೇಳಿ ನಕ್ಕು ನಲಿಯುವ ಪದಗಳು;
' ತಂದನಾನಾ' ಪದಗಳು; ಕೋಲಾಟದ ಪದಗಳು ಇವು ನಮ್ಮ 'ವಿನೋದದ
ಪದಗಳು ' ಎಂಬ ಗುಂಪಿಗೆ ಸೇರಿದವು. ಮೂರನೆಯ ಜಾತಿಯ 'ವಿಶೇಷದ ಪದಗಳು'
ಎಂಬ ಗುಂಪಿಗೆ ಜಾತ್ರೆಯಂತಹ ವಿಶೇಷ ಸಂದರ್ಭಗಳಲ್ಲಿ ಹಾಡುವ ಜಾತ್ರೆಯ
ಪದಗಳು; ಭಕ್ತಿಯ ಆಧಿಕ್ಯದಿಂದ ಹಾಡಿರುವ ಶೈವ ವೈಷ್ಣವ ದಾಸರ ಪದಗಳು;
ಹೋಳೀ ಹಬ್ಬದ ಪದಗಳು--ಇವೆಲ್ಲವೂ ಸೇರುವುವು.*
....................
* ಗಂಡುಸರ ಹಾಡುಗಳೆಲ್ಲವೂ ಸಾಮಾನ್ಯವಾಗಿ ಲಯಪ್ರಧಾನವಾದನು. ಇವುಗಳಲ್ಲಿ ರಾಗ
ಕ್ಕಿಂತಲೂ ತಾಳಕ್ಕೆ ಗಮನವು ಹೆಚ್ಚು ; ಕೆಲವು ಸಂದರ್ಭಗಳಲ್ಲಿ ಕುಣಿತವೂ ಸೇರಿರುವುದುಂಟು. ದಾಸರ
ಪದಗಳಲ್ಲಿ ರಾಗಪ್ರ ಧಾನವಾಗಿ ಹಾಡುವುದು ಈಚೆಗೆ ಬಂದಿರಬಹುದೆಂದು ನಮ್ಮ ಅಭಿಪ್ರಾಯು.
ಬಹುವಾಸಿ ಗಮಕಿಗಳ ಪ್ರಭಾವದಿಂದ ಈ ಬದಲಾವಣೆಯಾಗಿರಬಹುದು.
೧೫
-----------------------------------------------------------
ಕರ್ಣಾಟಕ ಸಂಸ್ಕೃತಿ
(ಅ) ಲಾವಣಿಗಳು
'ಲಾವಣಿಯೆಂಬುದು ಗರಡಿಯವರು ಹಾಡುವ ಹಾಡು ' ಎಂದು ಜನ
ಸಾಮಾನ್ಯದ ಅಭಿಪ್ರಾಯ. ಇದನ್ನು ಈಗಲೂ ಲಾವಣ್ಯ ಸಂವಾದ, ಪವಾಡ
ಎಂದು ಕರೆಯುವುದೂ ಉಂಟು, ಈ ಎರಡನೆಯ ಮಾತಿನಿಂದ ಇದರ ಸ್ವರೂಪವನ್ನೂ
ಇತಿಹಾಸವನ್ನೂ ತಿಳಿಯಲು ಅವಕಾಶವಾಗುತ್ತದೆ.
ಸಂವಾದ ಗೀತಗಳು ಹೊಸವಲ್ಲ, ಅತಿ ಪ್ರಾಚೀನವಾದವು. ಇವುಗಳ ವಿಷಯ
ವಾಗಿ ಪ್ರೊಫೆಸರ್ ವಿಂಟರ್‌ನಿಟ್ಜ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ:
"ಋಗ್ವೇದದಲ್ಲಿ ಸಂವಾದ, ಆಖ್ಯಾನ, ಇತಿಹಾಸ ಎಂಬ ಹೆಸರಿನಿಂದ ಬರುವ
ಸುಮಾರು ೨೦ ಸೂಕ್ತಗಳುಂಟು........ ಈ ಸಂವಾದಗಳು ಪುರಾತನ ಕಾಲದ
'ಲಾವಣಿ ' (Ballad) ಗಳೆಂದು ನನ್ನ ಅಭಿಪ್ರಾಯ. ಇಂತಹವು ಇತರ ಪ್ರಾಚೀನ
ಸಾಹಿತ್ಯಗಳಲ್ಲಿಯೂ ಉಂಟು, ಈ ಪ್ರಾಚೀನ ಸಂವಾದಗಳಿಂದಲೇ ಮಹಾಕಾವ್ಯವೂ
ನಾಟಕವೂ ಹುಟ್ಟಿದುದು. ಇವುಗಳಲ್ಲಿ ದೃಶ್ಯದ ಅಂಶವೂ ಉಂಟು, ಶ್ರಾವೃದ ಅಂಶವೂ
ಉಂಟು. ಈ ಸಂವಾದಗಳು ಸಮಗ್ರವಾಗಿ ಪದ್ಯವಾಗಿಯೇ ಇರಬೇಕೆಂಬ ನಿಯಮ
ವಿರಲಿಲ್ಲ; ಅಲ್ಲಲ್ಲಿ ಗದ್ಯ ಬರುತ್ತಿದ್ದುದುಂಟು. ಬಹು ತರವಾಗಿ, ಅಷ್ಟು ಕಾವ್ಯದಂತೆ
ಶ್ರಾವ್ಯವಾಗಿ, ಇನ್ನಷ್ಟು ನಾಟಕದಂತೆ ದೃಶ್ಯವಾಗಿ ಇವೆ.”
“ ಮುಂದೆ ಬೌದ್ಧರ ತ್ರಿಪಿಟಿಕಗಳಲ್ಲಿಯೂ ಈ ಸಂವಾದಗಳು ಬಂದಿವೆ. ಬುದ್ದನ
ಜೀವನ ಚರಿತ್ರೆಯು ಗ್ರಂಥಸ್ಥವಾಗುವುದಕ್ಕಿಂತ ಮುಂಚೆ, ಆತನ ಜೀವನದ ಮುಖ್ಯ
ಮುಖ್ಯ ವಿಷಯಗಳು ಸಂವಾದ ರೂಪದಲ್ಲಿದ್ದುವು. ಅವು ಈಗಲೂ ಪಾಳಿಯ
' ತ್ರಿಪಿಟಿಕ 'ದಲ್ಲಿಯೂ 'ಮಹಾವಸ್ತು ', ' ಲಲಿತವಿಸ್ತರ 'ಗಳಲ್ಲಿಯೂ ದೊರೆಯುತ್ತವೆ.
'ಸುತ್ತ ನಿಪಾತ'ದಲ್ಲಿ ಇಂತಹ ಮೂರು ಸಂವಾದಗಳಿವೆ.
" ಇವುಗಳಲ್ಲಿ ಮೊದಲನೆಯದು ಬುದ್ಧನ ಜನನವಾದಾಗ ನಡೆದ ಸಂಗತಿ
ಯೊಂದನ್ನು ಚಿತ್ರಿಸುತ್ತದೆ. ಸ್ವರ್ಗನಿವಾಸಿಯಾದ ಅಸಿತನೆಂಬ ರುಷಿಯು ಸಂಭ್ರಮ
ಪಡುತ್ತಿರುವ ದೇವತೆಗಳಿಂದ ಬುದ್ಧನ ಜನನವಾಗಿರುವುದನ್ನು ತಿಳಿದು ಭೂಲೋಕಕ್ಕೆ
ಬಂದು, ದೇವಾದಿದೇವತೆಗಳೆಲ್ಲರಿಂದಲೂ ಸೇವೆಗೊಳ್ಳುತ್ತಿರುವ ಬುದ್ಧ ಶಿಶುವನ್ನು
ದರ್ಶನಮಾಡಿ ಆನಂದ ತುಂದಿಲನಾಗುತ್ತಾನೆ. 'ನನಗಂತೂ ಈ ಮಹಾತ್ಮನ ಶಿಷ್ಯ
ನಾಗುವ ಯೋಗವಿಲ್ಲ ; ನೀನಾದರೂ ಈತನ ಶಿಷ್ಕನಾಗಿ ಉದ್ಧಾರವಾಗು' ಎಂದು
ತನ್ನ ಬಂಧುವಾದ ನಾಲಕನಿಗೆ ಹೇಳಿ ಬೀಳ್ಕೊಳ್ಳುತ್ತಾನೆ. ಈ ಸಂವಾದದ ಹೆಸರು
' ನಾಲಕ ಸುತ್ತ.
' ಎರಡನೆಯ " ಪಬ್ಬಜ್ಜಾ ಸುತ್ತ'ವು ಬುದ್ಧನು ಮನೆಯನ್ನು ಬಿಟ್ಟುಹೋಗಿ
ಪ್ರವ್ರಜಿತನಾಗಿ ಮುಂದೆ ರಾಜಗೃಹದ ದೊರೆಯನ್ನು ಕಂಡ ಕಥೆಯನ್ನೂ, ಮೂರನೆಯ
' ಪಧಾನ ಸುತ್ತ'ವು ಗೌತಮನನ್ನು ಮಾರನು ಏಳು ವರುಷಗಳಷ್ಟು ದೀರ್ಥ ಕಾಲ
೧೬
------------------------------------------------------------
ಗಂಡುಸರ ಹಾಡುಗಳು
ಗೋಳುಹೊಯ್ದು ಕೊಂಡು ಕೊನೆಗೆ ಹತಾಶನಾಗಿ ಹಿಂದಿರುಗಿದ ಕಥೆಯನ್ನೂ
ಹೇಳುತ್ತವೆ."
************
" ಬೌದ್ದ ಗ್ರಂಥಗಳಲ್ಲಿ ಇತರ ಸಂಗತಿಗಳನ್ನೊಳಕೊಂಡ ಸಂವಾದಗಳೂ
ಉ೦ಟು. " ಮಜ್ಝಿಮ ನಿಕಾಯ 'ದ ತಸ್ಕರ ಅಂಗುಲಿಮಾಲನ ಕಥೆ, ಮಖಾದೇವನ
ಕಥೆ, ' ರತ್ಮಪಾಲ ಸುತ್ತ'ದ ರತ್ಮಪಾಲನ ಕಥೆ ಮೊದಲಾದವುಗಳು ಇಂತಹ ಸಂವಾದ
ಗಳಿಗೆ ಆತ್ಯುತ್ತಮ ಉದಾಹರಣೆಗಳು. ಮಾರನು ಭಿಕ್ಷುಣಿಯರಿಗೆ ದುರಾಶೆ
ತೋರಿಸಲು ಯತ್ನಿಸಿ ವಿಫಲನಾಗುವ ಕಥೆಗಳನ್ನು ಹೇಳುವ ಸಂವಾದಗಳಂತೂ
ಪ್ರಾಚೀನ ಭಾರತದ ಕಾವ್ಯ ಕಲೆಯ ಪರಮ ಶ್ರೇಷ್ಠ ರತ್ನಗಳು ಎನ್ನಬಹುದು."
" ಚಾತಕಗಳಲ್ಲೂ ' ಥೇರೀ ಗಾದೆ'ಗಳಲ್ಲೂ ಇಂತಹ ಸಂವಾದಗಳು ಅಸಂಖ್ಯಾತ
ವಾಗಿವೆ....... ಇವೆಲ್ಲವೂ ಸಂವಾದ ರೂಪವಾಗಿಯೇ ಇದ್ದು, ಕೇಳುತ್ತಿದ್ದ
ಹಾಗೆಯೇ ಅರ್ಥವಾಗುವಷ್ಟು ಸುಲಭವಾಗಿವೆ. ಒಂದು ವೇಳೆ ತಟ್ಟನೆ ಅರ್ಥವಾಗ
ದಿದ್ದರೆ ಅಲ್ಲಲ್ಲಿ ಅಷ್ಟಿಷ್ಟು ಗದ್ಯವನ್ನು ಸೇರಿಸುವುದೂ ಉಂಟು. ಸಂವಾದಗಳ
ಬೆಳೆವಣಿಗೆಯಲ್ಲಿ ಇದು ಮೊದಲನೆಯ ಹಂತ. ಸಂವಾದ ಮಧ್ಯೆದಲ್ಲಿ (ಇತರ)
ಪದ್ಯಗಳನ್ನು ಸೇರಿಸಿ ಕಥೆಯನ್ನು ಹೇಳುವುದು ಎರಡನೆಯ ಹಂತ. ಬೌದ್ಧ ಗ್ರಂಥ
ಗಳೆಲ್ಲ ಈ ಹಂತದಲ್ಲಿವೆ. ಇಲ್ಲಿಂದ ಮು೦ದಿನ ಹಂತವೇ ಪುರಾಣ, ಮಹಾ ಕಾವ್ಯಗಳು."
ಈ ಸಂದರ್ಭದಲ್ಲಿ ಪ್ರಾಚೀನ ಕಾಲದ ದ್ರಾವಿಡರಲ್ಲಿದ್ದ "ಅಗಂ, ಪುರಂ
(ಪೊರಳ್)'ಗಳನ್ನೂ ಗಮನಿಸಬೇಕಾದುದು ಆವಶ್ಯಕ. " ದ್ರಾವಿಡರು ತಮ್ಮ
ಕಾವ್ಯಗಳಲ್ಲಿ ನೀತಿ ಧರ್ಮಗಳನ್ನು ಅಷ್ಟಾಗಿ ಗಮನಿಸದೆ ಪ್ರೇಮ ಯುದ್ಧಗಳನ್ನೇ
ಹೆಚ್ಚಾಗಿ ಹಾಡಿ ಹೊಗಳುತ್ತಿದ್ದರು. ಅವೇ ಇಂದಿನ ಅಗಂ, ಪುರಂ (ಪೊರಳ್) ಗಳು"
ಮೇಲೆ ಹೇಳಿರುವ ಸಂವಾದ ಗೀತಗಳೂ ಈ "ಅಗ೦, ಪುರಂ (ಪೊರಳ್) 'ಗಳೂ ನಮ್ಮ
ಲಾವಣಿಗಳ ಆದಿಯಾಗಿರಬಹುದು.
'ಲಾವಣಿ'ಯೆಂಬ ಪದವೂ ನಮಗೆ ಹೆೊಸತಲ್ಲ. ಷಟ್ಪದೀ ಕಾವ್ಯಗಳಲ್ಲಿ ಈ ಪದವು
'ಯುದ್ದದ ಕುಣಿತ, ಸೌಂದರ್ಯ, ಕೌಶಲ್ಯ, ಪ್ರಯೋಗ ಚಾತುರ್ಯ ' ಎಂಬ
ಅರ್ಥದಲ್ಲಿ ದೊರೆಯುತ್ತದೆ. ಈಗ್ಗೆ ಸುಮಾರು ಒಂದೂವರೆ ಶತಮಾನದ ಹಿಂದೆ
ದೊಡ್ಡ ನವಾಬರ ಕಾಲದಲ್ಲಿ, 'ಭಟ್ಟರಾಜು' ಎ೦ಬ ಒಂದು ಜಾತಿಯವರು ಸೈನ್ಯದಲ್ಲಿ
ಇದ್ದಂತೆಯೂ, ಉತ್ಸಾಹ ವರ್ಧಕವಾದ ರಣ ಗೀತಗಳನ್ನು ಹಾಡಿ ಸೈನಿಕರನ್ನು
ಹುರಿದುಂಬಿಸುತ್ತಿದ್ದುದು ಇವರ ಕೆಲಸವಾಗಿದ್ದಂತೆಯೂ ತಿಳಿಯಬರುತ್ತದೆ. ಇವೆಲ್ಲ
ನ್ನೂ ಪರಿಶೀಲಿಸಿ, ನಾವು 'ಲಾವಣಿ'ಯೆಂದರೆ " ಕಳನ ಹಾಡು', " ಸೈನ್ಯ ವಾಟಿಕೆ
ಯಲ್ಲಿ ಉತ್ಸಾಹ ವಿಜೃಂಭಣಕ್ಕಾಗಿ, ವಿಜಯಾನಂದ ವಿವರ್ಧನಕ್ಕಾಗಿ ಕುಣಿಯುತ್ತ
೧೭
-----------------------------------------------------------------
ಕರ್ಣಾಟಕ ಸಂಸ್ಕೃತಿ
ಹಾಡುತ್ತಿದ್ದ ಲಯ ಪ್ರಧಾನವಾದ ರಣಗೀತಗಳು ' ಎನ್ನುತ್ತೇವೆ. ಈಗಲೂ
ಹುಬ್ಬಳ್ಳಿಯ ಕಡೆ ಈ ಲಾವಣಿಗಳನ್ನು ಹಾಡುವಾಗ ಗೆಜ್ಜೆ ಕಟ್ಟಿಕೊಂಡು ಕುಣಿಯು
ವುದೂ ಉಂಟಂರೆ. ಇದರಿಂದಲೂ, ಈ ಲಾವಣಿಗಳನ್ನು, ಹಾಡುವಾಗ ಉಪಯೋಗಿಸುವ
'ಧುಂಧುಂ' (ಡಬ್ಬು, ಕಡ) ವಾದ್ಯದ ವಾದನ ರೀತಿಯಿಂದಲೂ ಈ ಅಭಿಪ್ರಾಯಕ್ಕೆ
ಬಣ್ಣವೇರುತ್ತದೆ.*
ಈ ಜಾತಿಯ ಹಾಡುಗಳಲ್ಲಿ "ತುರಾ', "ಕಲ್ಗಿ (ಕಲ್ಕು)' ಎಂಬವು ಮುಖ್ಯವಾದ
ಪ್ರಭೇದಗಳು.% "ಲಾವಣಿ ಹಾಡುವವರು ಉಪಯೋಗಿಸುವ ಕಡದ ಮೇಲೆ ಕೆಲವರು
ಚಿನ್ನ ಬೆಳ್ಳಿಯ ಜರತಾರಿಯಲ್ಲಿ ಕಟ್ಟಿರುವ ಮುತ್ತುಗಳುಳ್ಳ ಗರಿಗಳ ಕುಚ್ಚನ್ನು
ಕಟ್ಟುವರು ; ಇನ್ನು ಕೆಲವರು ಕುದುರೆಯ ತಲೆಯ ಮೇಲೆ ಕಟ್ಟುವ ಗರಿಗಳ
ಕುಚ್ಚನ್ನು ಕಟ್ಟುವರು. ಮೊದಲನೆಯವರು ' ತುರಾ', ಏರಡನೆಯವರು 'ಕಲ್ಗಿ' "
ಎಂದು ಒಬ್ಬ ವಿದ್ವಾಂಸರ ಅಭಿಪ್ರಾಯ.$ " ಧರೆಯೊಳಗೆ ಕೇಳೋ ಷಾಹಿರಾ!
ಹಚ್ಚೈತೆ ಕಲ್ಲ ಜರತಾರಾ" ಎಂದು ಕಲ್ಗಿ ಪಂಗಡದವರು ಹಾಡಿರುವುದು ಉಂಟು ;
ಅದರಿಂದ ಈ ಅಭಿಪ್ರಾಯಕ್ಕೆ ಅಷ್ಟು ಗೌರವ ಕೊಡಲಾಗುವುದಿಲ್ಲ. ಅಲ್ಲದೆ,
ಕಲ್ಗಿಯವರು ಮಣಿಗಳು ಗರಿಗಳು ಮೊದಲಾದುವನ್ನೂ ತುರಾದವರು
ಹೂವನ್ನೂ ತಮ್ಮ ಕಡಗಳಿಗೆ ಧರಿಸುವುದು ವಾಡಿಕೆ. ತುರಾದವರು ಹೂವಿನ
ತುರಾಯನ್ನೂ ಕಲ್ಕಿಯವರು " ಶಿರಪೇಷಿ" ನಂತಹ ಕುಚ್ಚನ್ನೂ ಉಪಯೋಗಿಸು
.......................
* (ಅ) ಫಿನ್‌ಲ್ಯಾಂಡಿನಲ್ಲಿ ಫಿನ್ನಿಷ್ ಭಾಷೆಯಲ್ಲಿ ' ಕಳೇವಲ 'ವೆಂಬ ಕಾವ್ಯ ಸಂಗ್ರಹವೊಂದುಂಟು.
ಆ ದೇಶದಲ್ಲಿ ಚಳಿಗಾಲದ ದೀರ್ಘ ರಾತ್ರಿ ಗಳನ್ನು ಬೆಂಕಿಯನ್ನು ಹಾಯಿಸಿ ಕೊಳುತ್ತ ಕಳೆಯುವರು.
ಆಗಿನ ಬೇಸರವನ್ನು ನೀಗಲು ಇದರಲ್ಲಿಯ ಹಾಡುಗಳನ್ನು ಹೇಳುವರಂತೆ. ಆ ಹಾಡು ಹೇಳುವ
ರೀತಿಂಯೂ ವಿಚಿತ್ರವಾದುದು: ಬೆಂಕಿಯು ಮುಂದೆ ಕುಳಿತಿರುವವರಲ್ಲಿ ಇಬ್ಬರು ಎದ್ದು ಒಬ್ಬರ
ಕೈಯನ್ನೊಬ್ಬರು ಹಿಡಿದುಕೊಳ್ಳುವರು; ಈ ಹಾಡಿನಲ್ಲಿ (ನಮಗೆ ರಾಮಾಯಣ ಮಹಾಭಾರತಗಳಿದ್ದಂತೆ
ಇದು ಅವರಿಗೆ) ತಮಗೆ ನೆನಪಾದನ್ಟು ಸಂವಾದ ರೂಪವಾಗಿ ಹೇಳುವರು. ' ಕಳೇವಲ' ಎಂಬ ಮಾತಿಗೆ
'ವೀರಭೂವಿು ' ಎಂದು ಅರ್ಥ. See Ency. Brit., 14th Edn.
(ಆ) " An American scholar has proved from a comparison of the ballad poetry
of numerous peoples that the recitation of ballads was originally always combined with
song and dramatic dance.” Winternitz’s Some Problems of 1111111 Literature, Page 55.
(ಇ) ಲಾವಣಿಗಾರರು ಹೇಳಿಕೊಳ್ಳುವ
" ಪುಟ್ಟಿ ಇಲ್ಲಿಗೆ ತುರಾ ಕಲ್ಗಿ ಚರ್ಚೆ ತಿಳಿಯಲೋ ಷಾಹಿರ ।
ಒಟ್ಟು ಸಾವಿರದೊಂಭೈನೂರ ವರುಷಗಳ ಮೇಲ್ ಚಿಲ್ಲರಾ ॥"
ಎಂಬ ಮಾತೂ, ಇದು ಕಾಶಿಯ ಕಡೆಯಿಂದ ನಮ್ಮ ದೇಶಕ್ಕೆ ಬಂದಿತೆಂಬ ವದಂತಿಯೂ ಗಮನಿಸ
ಬೇಕಾದುವು.
% ಉತ್ತರ ಕರ್ಣಾಟಕದಲ್ಲಿ ಇವನ್ನು ಕರಡಿಯ ಹಾಡು, ಡಪ್ಪಿನ ಹಾಡು ಎಂದು ಕರೆಯುತ್ತಾರೆ.
' ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ) ಸಂಪುಟ ೮, ಪುಟ ೭೨.
$ The Indian Antiquary, Vol. XVIII, page 359, Footnote 44.
ಅವರ ಡಬ್ಬಿನ ಮೇಗ ಮುತ್ತಿನ ತುರಾ। ಜರ್ತರಾ।
...ವೈರಿಗಿ ಮಾಡ್ಯೇರ-! ಜೇರ॥ ಇಳಿತ ಕಲಿಗಿಗಿ ನೀರಾ ॥
೧೮
---------------------------------------------------------------------------
ಗಂಡುಸರ ಹಾಡುಗಳು
ವುದರಿಂದ ಇವರಿಗೆ ಈ ಹೆಸರುಗಳು ಬಂದಿವೆಯೆಂದು ಒಂದು ಅಭಿಪ್ರಾಯ.
ಬಹುತರವಾಗಿ . ತುರಾ ಕಲ್ಗಿಯ ಪ್ರಭೇದವು ನಮ್ಮ ದೇಶದ ಹದಿನೆಂಟು ಪಣ
ಒಂಬತ್ತು ಪಣಗಳಿಂದ ಆದುದಿರಬಹುದು.
ತುರಾದವರಿಗೆ ಹರಿದಾಸರು ಎಂದೂ, ಕಲ್ಗಿಯವರಿಗೆ ನಾಗೇಶರು ಎಂದೂ
ಬಿರುದುಂಟು. "ಮಝಮಾ (ಛಾವಣಿಗಾರರ ಎರಡು ಗುಂಪುಗಳೂ ಸೇರಿ
ಹಾಡುವುದಕ್ಕೆ ಕುಳಿತುಕೊಳ್ಳುವ ಸಭೆ) ಸೇರುವಾಗ ತುರಾದವರು ರಾಹುವಿರುವ
ದಿಕ್ಕಿಗೆ ಎದುರಾಗಿ ಕುಳಿತು ಕೊಳ್ಳುತ್ತಾರೆ. ಇವರು ಪುರುಷಪ್ರಾಧಾನ್ಯವನ್ನು
ಹೇಳುತ್ತ--
" ಶಕ್ತಿಗೆ ಶಕ್ತನು ಶಕ್ತಿಯ ಕೊಟ್ಟುದರಿಂದ ಶಕ್ತಿಗೆ ಶಕ್ತಿಯು ಬಂತೂ |
ಶಕ್ತನವ್ಯಕ್ತನು ಅದರಿಂ ಶಕ್ತಿನಾಮ ಹೆಚ್ಚಲ್ ಬಂತು ॥"
ಎಂದು ಹಾಡಿದರೆ, ಕಲ್ಗಿಯವರು ಅದಕ್ಕೆ ಪ್ರತಿಯಾಗಿ,
" ಸ್ಮಾಮಿ ಶಕ್ತಿಯಾಧಾರದೊಳು ಸ್ಥಿತಿ ಲಯಗಳನೆಲ್ಲಾ |
ಭೂಮಿಯೆಳಗೆ ತಾನು ಮಾಡಿ ತೋರುತಿರುವನಲ್ಲ |
ಪ್ರೇಮದಿ ಅವಳ ಅಡಿ ಪಿಡಿವರು ಮುನಿಗಳೆಲ್ಲ ॥"
ಎ೦ದು ಆರಂಭಿಸುತ್ತಾರೆ. ಆರಂಭ ಕಾಲದಲ್ಲಿ ಕಲ್ಗಿಯವರು ಶಾರದಾ ಸ್ಲುತಿಯನ್ನೂ,
ತುರಾದವರು ಗಣಪತಿ ಸ್ತೋತ್ರವನ್ನೂ ಮಾಡುತ್ತಾರೆ; ಅನಂತರದಲ್ಲಿ ಅವರು
ಗಣಪತಿ ಸ್ತೋತ್ರವನ್ನೂ ಇವರು ಶಾರದಾ ಸ್ಫೋತ್ರವನ್ನೂ ಮಾಡುತ್ತಾರೆ
ಮೊದಲಿನಿಂದ ಕೊನೆಯ ವರೆಗೂ ತುರಾದವರು ಪುರುಷನ ಹೆಚ್ಚು ಗಾರಿಕೆಯನ್ನೂ
ಕಲ್ಗಿಯವರು ಶಕ್ತಿಯ ಹೆಚ್ಚು ಗಾರಿಕೆಯನ್ನೂ ಪ್ರತಿಪಾದಿಸುತ್ತಿದ್ದರೆಂದೂ ಈಗ
ಆ ಸಂಪ್ರದಾಯವು ಶಿಥಿಲವಾಗಿದೆಯೆಂದೂ ತೋರುತ್ತದೆ.
ಈ ತುರಾ ಕಲ್ಗಿ ಪ್ರಭೇದಗಳಲ್ಲದೆ ವಿಷಯ ದೃಷ್ಟಿಯಿಂದ ಈ ಜಾತಿಯ ಹಾಡು
ಗಳಲ್ಲಿ ಐದು ತೆರಗಳಿವೆಯೆಂದು ಹೇಳಬಹುದು. ಈ ವಿಭಾಗವು ಎರಡೂ ಕಡೆಯವರ
ಸಂಗ್ರಹಗಳಲ್ಲಿರುವುದರಿಂದ ಮುಂದೆ ನಾವು ಕೊಡುವ ಉದಾಹರಣೆಗಳಲ್ಲಿ ತುರಾ
ಕಲ್ಪಿ ಭೇದವನ್ನು ಅಷ್ಟಾಗಿ ಗಮನಿಸುವುದಿಲ್ಲ. ಇದರಿಂದ ಯಾರಿಗೂ ಮನ
ನೋಯದಿರಲೆಂದು ಹಾರೈಸುತ್ತೇವೆ.
1 ನಡೆದ ಸಂಗತಿಗಳನ್ನು ಕುರಿತು ಹಾಡಿರುವ ಇತಿಹಾಸ ಲಾವಣಿ
ಗಳು ಮೊದಲನೆಯ ಜಾತಿ--ಪಿರಿಯಪಟ್ಟಣದ ಜಗಳ, ಶ್ರೀರಂಗಪಟ್ಟಣದ
ಲಾವಣಿ, ಸಂಗ್ಯನ ಲಾವಣಿ*, ಸಂಗೊಲ್ಲ ರಾಯಣ್ಣನ ದಂಗೆ% ಈ ಮೊದಲಾದುವಯ ಕೆಲವು.
.....................
* The 1101011 Antiguary, 2 1.111, ೫. 35% ff.
% The 1110211 41111607), XIV, ೫. 293 ff.
೧೯
-----------------------------------------------------------
ಕರ್ಣಾಟಕ ಸಂಸ್ಕೃತಿ
(ಈ ಜಾತಿಯಲ್ಲಿ, ಜನತೆಯ ಮನಸ್ಸನ್ನು ಹಿಡಿದು ಅಲ್ಲಾಡಿಸಿ ಸುಖದುಃಖ
ಗಳನ್ನು ತಂದಿಟ್ಟು ಅವರ ಮನಸ್ಸಿನಲ್ಲಿ ಮನೆಮಾಡಿ ನೆಲಸಿದ ವಿಷಯಗಳು ಹಾಡಿನ
ವಸ್ತುಗಳಾಗುವುವು. ಇದರಲ್ಲಿ ವೀರ ಶ್ರೇಷ್ಠರ, ನೃಪತಿ ಪುಂಗವರ ವಿಷಯಗಳನ್ನೇ
ಹಾಡಬೇಕೆಂಬ ನಿಯಮವು ಇಲ್ಲ. ಹಾಡಿನ ನಾಯಕನು ಪಿರಿಯಪಟ್ಟಣದ ಪಾಳೆಯ
ಗಾರನಂತೆ ಒಬ್ಬ ಕ್ಷುದ್ರ ಮಾಂಡಲಿಕನಿರಬಹುದು; ಆಥವಾ, ಸಂಗ್ಯನ ಲಾವಣಿಯಲ್ಲಿರು
ವಂತೆ ಒಬ್ಬ ಸಾಮಾನ್ಯ ರೈತನಾಗಿರಬಹುದು. ನಾಯಕನು ಯಾವನಾಗಿರಲಿ ಅವನ
ಕಾರ್ಯವು ಸುತ್ತಮುತ್ತಿನವರ ಮನಸ್ಸನ್ನು ಸೆರೆಹಿಡಿಯುವಷ್ಟು ದೊಡ್ಡದಾಗಿದ್ದರೆ
ಸಾಕು; ಸುತ್ತಮುತ್ತಿನವರು ಆ ವಿಷಯವನ್ನು ಹತ್ತೆಂಟು ಸಲ ಆಡುತ್ತಿದ್ದರೆ
ಸಾಕು; ಅದು ಕೂಡಲೆ ಒಂದು ಲಾವಣಿಯಾಗುತ್ತದೆ. ಹೀಗೆಯೇ, ನಮ್ಮ
ಮೈಸೂರು. ಮಹಾರಾಜರವರು ಆಚರಿಸಿದ ಕೈಲಾಸ ಯಾತ್ರೆಯ ವಿಚಾರವೂ
ಲಾವಣಿಯಾಗಿದೆ.
ಈ ಹಾಡುಗಳು ಹೀಗೆ ಹಿಂದಿನಿಂದ ಹುಟ್ಟಿ ಬಂದಿದ್ದರೂ ಈಗ ನಮಗೆ ದೊರೆತಿಲ್ಲ.
ಸಾಂಗತ್ಯವಾಗಿ ಬಂದಿರುವ ಕುಮಾರ ರಾಮನ ಕಥೆಯನ್ನು ಬಿಟ್ಟಿರೆ, ಲಾವಣಿಗಳಾಗಿ
ನಮಗೆ ದೊರೆತಿರುವುದರಲ್ಲೆಲ್ಲ ವಿಷಯ ದೃಷ್ಟಿಯಿಂದ, "ಪಿರಿಯಪಟ್ಟಿಣದ
ಲಾವಣಿ'ಯೇ ಅತಿ ಪ್ರಾಜೀನವಾದುದೆನ್ನಬೇಕು.* ಇದು ೧೬೧೫ರಲ್ಲಿ ನಡೆದ
ಪಿರಿಯ ಪಟ್ಟಣದ ವಿಜಯವನ್ನು ಕುರಿತು ಹೇಳುತ್ತದೆ... ಆದರೂ ಇದು ಆಗ
ಹಾಡಿದಂತೆಯೇ ಈಗಲೂ ಇದೆಯೆಂದು ಹೇಳಲಾಗುವುದಿಲ್ಲ. ಹಾಡುವವನು ಈ
ಹಾಡುಗಳನ್ನು ಹಿಂದಿದ್ದಂತೆಯೇ ಹಾಡಬೇಕೆಂಬ ಕಟ್ಟುನಿಟ್ಟು ಇಲ್ಲವಾದುದರಿಂದ,
ಹಾಡಬಲ್ಲ ಲಾವಣಿಕಾರನು ಹುಟ್ಟಿಕೊಂಡಂತೆಲ್ಲ ಅವೂ ಹೊಸ ಹೊಸ ರೂಪಗಳನ್ನು
ತಾಳುತ್ತವೆ. ಶ್ರೀರಂಗಪಟ್ಟಣದ ಉದಾಹರಣೆಯನ್ನು ತೆಗೆದುಕೊಂಡರೆ ಈ ವಿಷಯವು
ಸ್ಪಷ್ಟವಾಗುವುದು: . ಶ್ರೀರಂಗಪಟ್ಟಣವು ೧೭೯೯ರಲ್ಲಿ ಶತ್ರುಗಳ ಕೈವಶವಾಗಿ
ಸೂರೆಯಾಯ್ತು,. ಇದನ್ನೇ ವಸ್ತುವಾಗಿ ಮಾಡಿಕೊಂಡು ಎಷ್ಟೋ ಲಾವಣಿಗಳು
ಹುಟ್ಟಿರಬಹುದೆನ್ನುವುದಕ್ಕೆ ಸಾಕ್ಷಿಯಾಗಿ, ವಿಲ್ಕ್ಸ್ ಅವರ ಪುಸ್ತಕದಲ್ಲಿ ಒಂದು
ಉರ್ದು ಲಾವಣಿಯ ಭಾಷಾಂತರವಿದೆ. ಆದರೂ ಈಗ ನಮಗೆ ದೊರೆಯುವುದು
ಆಧುನಿಕರು ರಚಿಸಿದ ಹಾಡುಗಳೆರಡು : ಒಂದು ಸುಮಾರು ೩೦ ವರ್ಷಗಳಿಂದೀಚೆಗೆ,
ಇನ್ನೊಂದು ಹೋದ ವರ್ಷ ಬರೆದವು.+
* Rice's Mysore Gazetteer, Vol. 11, page 291.
ಈಚೆಗೆ " ಜಯುಕರ್ನಾಟಕ'ದಲ್ಲಿ ಪುರಂದರ ದಾಸರ ಲಾವಣಿಯೊಂದು ಬಂದಿದೆ.
+ “ Collectors are often asked by would-be intelligent enquirers as to the age of
some folk-song, as if the question of age were either important or relevant. Others
(sceptics) suggest that the traditional singer "" made it up himself.” The answer to
this, of course, is that quite possibly he dill to some extant “make it up himself”
although this in no way adds to, or takes away from, its scientific or artistic value. It
೨೦
--------------------------------------------------------------------
ಗಂಡುಸರ ಹಾಡುಗಳು
ಈ ಜಾತಿಗೊಂದು ಉದಾಹರಣೆಯನ್ನು ಕೊಡೋಣ:
೧. ಸಂಗ್ಯನ ಲಾವಣಿ
" ಬಡತನ ಅಂಬೋದು ಬಲು ಕಷ್ಟ | ಬಡವಗೆ ಬಂತೊ ಬಹು ಸಿಟ್ಟ !
ಸಾವಕಾರ್ರ ಸಾಲ ಕೊಡಬೇಕಾದರ ಸಂಗ್ಯಾಗೆ ಆದೀತೋ ಸಂಕಷ್ಟ ॥ ಪ॥"
ಬೈಲ ಹೊಂಗಲದಲ್ಲಿ ಸಂಗ್ಯನೆಂಬ ರೈತನು ತನ್ನ ಹೊಲವನ್ನು ಐದು ವರ್ಷದ
ವಾಯಿದೆ ಹಾಕಿ ದುರವಜಂತಿ ಚನ್ನಬಸಣ್ಣನೆಂಬ ಸಾಹುಕಾರನಿಗೆ ಆಧಾರ ಮಾಡಿ
ಕೊಟ್ಟನು. ಸಾಹುಕಾರನು ಬಲು ಒಳ್ಳೆಯವನು ; ಆದರೂ, ವಾಯಿದೆ ಮುಗಿಯುತ್ತ
ಬಂದರೂ ಸಾಲ ತೀರಲಿಲ್ಲವಾಗಿ ದಾವಾ ಮಾಡಿದನು. ಎರಡು ಕೋರ್ಟಿನಲ್ಲಿಯೂ
ಅವನ ಕಡೆಯೇ ಆಯಿತು. ಸ್ವತ್ತು ಜಪ್ತೀಗೆ ಬಂದಾಗ, ಹಿಂದೆ ಮುರಿಹಾಕಿದ್ದ
ಸಂಗ್ಯನು---"ಹೊಲದ ವಳಗ ಬಿಡಿಸಿರಿ ಪಾಲಾ, ಸರ್ವ ತಪ್ಪ ನಂದ ಆಯಿತಲ್ಲಾ | ನಿನ್ನಿಂದ
ಹೊರತ ಗತಿಯಿಲ್ಲಾ | ಬಸಲಿಂಗಣ್ಣನ ಮಾತ ಮಾರುದಿಲ್ಲ | (ಎಂದು) ಕೈಮುಗದ ಹಿಡಿದನ
ಕಾಲಾ.” ಆದರೂ ಸಾಹುಕಾರನು ಒಪ್ಪದೆ ಹೊಲವನ್ನು ಸುಫರ್ದು ಮಾಡಿಕೊಂಡನು.
ಸಂಗ್ಯನಿಗೆ ಇದರಿಂದ ಬಹಳ ಸಂಕಟವಾಯ್ತು. ಅಣ್ಣ ತಮ್ಮಂದಿರು ಸೇರಿ...
" ಮಸೆದರ 'ಕುಡುಗೋಲ ಕುಂತ |" "ಕಡುನ ಅಂತ | ಇಂದಿಗೆ ಹೋಗಲಿ ನಮ್ಮ
ತಲಿ । ಆಗುವುದು ಆಗಲಿ" ಎಂದು ಗೊತ್ತುಮಾಡಿಕೊಂಡರು.
"ಮಂಗಳಾರ ಉದಯಕ ತಾಯೆದ್ದ | ತಾಯಿ ಪದಕೆ ಹೋಗಿ ಬಿದ್ದ |
ಸಂಗ್ಯಾ ಪರಿಶ್ಯಾ (ತಮ್ಮ) ಇಬ್ಬರು ಅಂತರ ಬಸವಣ್ಣ ನಡಸು ನಮ್ಮ ಜಿದ್ದ ॥
ಕುಡುಗೋಲ ಮಸದ ಅವ ಹಿಡಿದ ಬಗಲಗ ಮುಚ್ಚಿಕೊಂಡ ತಾ ನಡದ |
ಮೂರ ತಾಸ ಹೊತ್ತೇರಿತ ಆಗ ॥"
ಚೆನ್ನಬಸಣ್ಣನ ತಮ್ಮಂದಿರು ಫಕೀರಣ್ಣ, ರಾಚಪ್ಪ ಇಬ್ಬರನ್ನೂ ತೀರಿಸಬೇಕೆಂದು
ಅವರ ಮನೆಗೆ ಹೋದರು. ಅವರು ಮನೆಯಲ್ಲಿರಲಿಲ್ಲ ; ಬದುಕಿಕೊಂಡರು. ಮುಖ್ಯ,
" ಕೊಲ್ಲವಕಿಂತ ಕಾಯುವ ಶ್ರೇಷ್ಟ । ಬಹಳ ಚೆಲೋ ಅವರ ಅದೃಷ್ಟ ॥
ಬಂದದ್ದಾಟಿ ಅಂತರ ಕಾಲಿ | ಶಿಟ್ಟ ಆದರ ತಮ್ಮ ಮನದಲ್ಲಿ ॥
ಬಸಲಿಂಗಣ್ಣನ ಮನೆಗೆ ಹೋದರೊ ತಿಳಿಯಲಿಲ್ಲ ಇಬ್ಬರ ನೆಲಿ ॥
ವೊಂಬತ್ತಾಸ ವೇಳೆದ ಮೇಲೆ ಪೂರ್ವ ಲಿಖಿತ ವದಗಿತ ಅಲ್ಲಿ ॥
ಸಂಗ್ಯಾ ಪರಿಶ್ಯಾ ಮುಜರಿ ಮಾಡಿಕ್ಯಾರ । ಹೋಗಿ ನಿಂತರೊ ಅವನ ಬಡಿಯಲಿ ॥
ಕಡದಾರು ಅಂಬುದು ಅವಗ ತಿಳಿಯಲಿಲ್ಲ | ಶಿವ ತಂದ ಹಾಕಿದ ಮ್ಯಾಲಿ ||
ಸಂಗ್ಯಾ ಮುಂಗೈಯ್ಯಂಗಿಯ ತೇಡಿಕೊಂಡ ಬಗಲನ್ನ ಕುಡುಗೋಲ ತಕ್ಕೊಂಡ ||
ನಿಂತ ನೋಡಿ ಕಡದನೊ ಅವನ ಚಂಡ | ಅದರಂತ ಕುಡುಗೋಲ ಯಳಕೊಂಡ॥
ಕಡದವನ ಹಿಂದಕ ಸರಕೊಂಡ | ವೋಡಿಹೋದನ ಪರಿಶ್ಯಾನ್ನ ಕರಕೊಂಡ ॥
ಬಸಲಿಂ ಗಣ್ಣಯೆದ್ದ ಸಂಗಟಾಗಿ ಶಿರಬಾಗಿ ॥ ಬಾಯಲಿ ಸುರಿತ ನೆತ್ತರಾ | ಹಾರಿತ ಕಬರಾ |
ಬಿದ್ದನ ಜೀವ ಹೋಗಿ | ಕುಂತಿರು ಮಂದಿ ಗಾಬ ಆಗಿ ಹೊರಗ ಹೋಗಿ ।
..................
is not the question of age or authorship that is important in a folk-song but that of
Spontaneity and beauty. . A folk-song then is always grafting the new on the old
...A folk-song is neither new nor old because it is continually taking on new
lfe: it is an individual flowering on ೩ common stem.”
Encyclopedta Britannica, 14th Edn., page 448.
೨೧
----------------------------------------------------------------
ಕರ್ಣಾಟಕ ಸಂಸ್ಕೃತಿ
ಯೆಲ್ಲರು ಅಂತರ ಹಿಡಿಹಿಡಿ ವೋಡುತಾನ ನೋಡಿ | ಕೋದ ಕುತ್ತಿಗಿ |
ಬರುಹಂತ ಮಂದಿ ಇದಿರಾಗಿ ಬದಿಗಾಗಿ ಅವನ ಹಿಡಿಯಲಿಲ್ಲ ಯಾರ್ಯಾರ ||
ಬಂದರ ಹಳಬರಾ ಆಗ ಸುದ್ಯಾಗೀ ॥
ಊರಾಗಾ ಆದೀತ ಬೊಬ್ಬಾಟ | ದಾಟಲಿಲ್ಲ ಹೊಂಗಲ ಗೇಟ ॥ "
ಕೊನೆಗೆ ಸಂಗ್ಯನನ್ನೂ ಪರಶ್ಶನನ್ನೂ ಹಿಡಿದು ವಿಚಾರಣೆಗೆ ಗುರಿ ಮಾಡಿದರು.
ತಮಗೆ ಬೇಡದ ಹೂವಿನ ರಾಮಯ್ಯನೂ ಇದರಲ್ಲಿ ಸೇರಿದ್ದಾನೆ'ಯೆಂದು ಇವರು
ಅವನನ್ನೂ ಹಿಡಿಸಿದರು. ವಿಚಾರಣೆಯಲ್ಲಿ, " ಹೂವಿನ ರಾಮನ ತಂದದ್ದ ಅನ್ಕಾಯಿ"
ಎಂದೂ, ಪರಶ್ಯನಿಗೆ "ಕರಿನೀರ" ಶಿಕ್ಷೆಯೂ ಸಂಗ್ಯನಿಗೆ ಗಲ್ಲಿನ ಸಜವೂ ಆಯಿತು.
"ಈ ಕೃತ್ಯವು ನಡೆದುದು ಆಶ್ವೀಜ ಶುದ್ಧ ಪಾಡ್ಯ ಮಂಗಳಾರ | ಸಕೆ ಸತ್ತರಾಸೆ
ಪಂಚಾ ಐಂಶಿ ರುದ್ರೊದ್ಗಾರಿ ನಾಮ ಸಂವತ್ಸರಾ ॥ " (೧೮೬೩ನೆಯ ಅಕ್ಟೋಬರ್
೧೩). ಇದನ್ನು ಹಾಡಿದವನು" ತುಕಾರಾಮನ ಶಿಷ್ಯನಾದ ಶಾಯಿರಾ ಕವಿ ಅಪ್ಪು ! " *
(ಈ ಕಥೆಯು ನಾಟಕವಾದರೆ ಎಸ್ಟು ಸೊಗಸಾಗಬಹುದು!)
ಇನ್ನೊಂದು ಉದಾಹರಣೆ ತೆಗೆದುಕೊಳ್ಳೋಣ :--
೨. ಪೆರಿಯಪಟ್ಣದ ಜಗಳ
" ಪೆರಿಯಾಪಟ್ಣದ ಜಗಳವು ಹೇಳುತೀನಿ ಕೇಳಿರಂಣ ನೀವ್ ಸಭೆಯೆಲ್ಲ ॥
ಅರಿಯದ ಹಸುಮಗ ದಳವಾಯಿ ಹೊಂಟನು ಮಾಡಲೀಕೆ ಹಲ್ಲಾ ॥ ಪ॥"
ಹರುಷದಿಂದ ಮೆರೆಯುತ್ತಿದ್ದ ದಳವಾಯಿಗೆ ಯಾರಿಗೂ ಕಪ್ಪ ಕೊಡುವನಲ್ಲದ
ವೀರರಾಜ ಭೂಪನ ಕೀರ್ತಿ ಶೌರ್ಯಗಳು ತಿಳಿದು, " ಪೆರಿಯಪಟ್ಣದ ಕಪ್ಪವ ತರಬೇಕು
ಮೈಸೂರು ಭೂಪನಿಗೆ"ಎನ್ನಿಸಿತು. ಕೂಡಲೆ ಅರಸನ ಬಳಿಗೆ ಹೋಗಿ, " ವೀಳ್ಯವ
ಕೊಡು ಯನಗೆ ಪೆರಿಯಪಟ್ಣಕೆ ಹೋಗಬೇಕು, ಮನಸೈತದರ ಮೇಗೆ" ಎಂದು ಅರಿಕೆ
ಮಾಡಿದನು. ಭೂಪನು-
" ಹಿರಿಯವರೆಲ್ಲ ಹೋಗಿ ಮಡಿದರು ಸುರರಿಗಸಾಧ್ಯವು ಪೆರಿಯಪಟ್ಣವು |
ಬರಿದೆ ಭ್ರಮೆಯ ಪಡಲಿಬೇಡಾ | ತರಳನೆ ಸಾಧ್ಯವಿಲ್ಲ ನಮಗೆ |
ಅಡಕೆಯ ತುರಿಯಂತಾಗಿ ಹೋದೀಯಾ ನಿಲ್ಲಲಾರೆ ಅವನ ಮೇಗೆ॥ "
ಎಂದನು. ಕೊನೆಗೆ ಹಠಮಾಡಲು, ಅರಸನು
" ಕರೆಸಿ ಕೊಟ್ಟನು ವೀಳ್ಯವ ಕೈಯೊಳಗೆ |
ಮುತ್ತಿನ ಹಾರ ನವರತ್ನದ ಪದಕ ಹಾಕಿದ ಕೊರಳೀಗೆ |"
" ಅತಿಹರುಷದಿಂದ ದಳವಾಯಿ ಬಂದನು. . . * * *
ಸತ್ಯವಂತೆ ಕುಲದೇವಿ ಚಾಮುಂಡಿ ಇರು ಯನ್ ಬೆನ್‌ಮೇಗೆ ।"
ಎಂದು ಮನೆದೇವರ ಪೂಜೆಮಾಡಿ ಅಪಶಕುನನಾದರೂ ದಳವಾಯಿಯು " ಚಾಮುಂಡಿ
ಗತಿಯೆನಗೇ " ಎಂದು ಧೈರ್ಯಮಾಡಿ ಹೊರಟನು.
ವೀರರಾಜ ಭೂಪನಿಗೆ ದಳವಾಯಿಯು, "ಕಪ್ಪ ಕಾಣಿಕೆ ಕೊಡು, ಅಥವಾ
ಯುದ್ಧಮಾಡು ” ಬಂದು ಪತ್ರವನ್ನು ಬರೆದನು. ಅವನು--
.........
*The Indian Antiquary, Vol. XVIII, page 359 ff.
೨೨
--------------------------------------------------------
ಗಂಡುಸರ ಹಾಡುಗಳು
"ಯಂತ ಮಾತನು ಬರದೋ ರಣ ಹೇಡಿ ನಾಚಿಕಿಲ್ಲವೇ ನಿನಗೆ |
ಮತ್ತೆ ಮದ್ದು ಗುಂಡು ಸಾಲದೆ ಹೋದರೆ ಕೊಡುತೀನಿ ನಾ ನಿನಗೆ ।
ವ್ಯರ್ಥ ಹಮ್ಮು ನೀ ಮಾಡಿ ಕೆಡಬೇಡ ಬಾರೊ ರಣಾಗ್ರದೊಳಗೆ | "
ಎಂದು ಉತ್ತರ ಬರೆದನು.
" ಸಮಸಾಟಿಯಾಗಿ ಯರಡು ಕೂಡಿತು ದಂಡು ಬೈಲಿನಾಗೆ |
ಜಮಾಯಿಸಿ ಜಗಳ ಹತ್ತಿತು ನೋಡೋ ಕರ್ನ ಪಾರ್ಥರಾಗೇ ॥
ನೇಮದಿ ಕಾದಿರುವಳು ಪೆರಿಯಪಟ್ಟದ ಮಾರಿ ಹೀಗೆ |
ನೀರಜ ಭೂಪನ ಅಗಲದೆ ಬೆನ್‌ಮೇಗೆ ।
ತಮಾಂ ದಂಡು ಉರುಳಿಹೋಯಿತು ಮೂರು ಪಟಾಲಂ ದಳವಾಯ್ ಕಡೇಗೇ ॥ "
ಆಗ ದಳವಾಯಿಯು, "ತಾನು ಮಾಡಿದ ಕಾರ್ಯವು ಹುಡುಗ ಬುದ್ದಿಯಾಯಿತು'
ಎಂದು ಚಿಂತಿಸಿ, ಮತ್ತೆ ದಂಡು ಗುಂಡು ಬೇಕೆಂದು ಮೈಸೂರರಸರಿಗೆ ಬರೆದನು.
ಅವರು, "ಭೂಪನಾದರೆ ಜೈಸಿಬಾ | ಇಲ್ಲದೆ ಹೋದರೆ ಹೆಣ್ಣಿನಂಗೇ ಒಪ್ಪವಾಗಿ
ಬಳೆಯನು ತೊಟ್ಟುಕೋ | ನಾಚಿಕಿಲ್ಲವೆ ನಿನಗೇ" ಎಂದು ಬರೆದರು. ಆಗ ಅವನು
ಪರಿ ಪರಿ ಚಿಂತೆ ಮಾಡಿ, "ಪ್ರಾಣವು ಕೊಡುವೆನು ನಾನು ವೈರಿಯ ಕೈಯೊಳಗೇ "
ಎಂದುಕೊಂಡು ಮಲಗಲು, ಚಾಮುಂಡಿಯು ಕನಸಿನಲ್ಲಿ ಬಂದು
" ಅಂಜಬೇಡ ಹೀಗೆ | ,......
ಇರುವೆನು ನಡೆ ನಾ ನಿನ್ನ ಒಂದಿಗೆ ನಾಳೆ ಜಗಳದೊಳಗೇ ।
ಭರದಿ ಹೋಗುವೆ ಮುಂದುಗದೆ ಪೆರಿಯಪಟ್ಣದೊಳಗೇ ॥
ತೂರುವೆ ಮಂಕಿನ ಬೂದಿಯ ನಾನು ಬೆಪ್ಪಿಡಿಯೋ ಹಾಗೆ |
ಕರದಿ ಮೇಲೆ ಕರಾ ಹೊಡೆದು ನಡೆದಳು ಆದಿಶಕ್ತಿ ಬೇಗೇ ॥"
ಮರು ದಿನದ ಯುದ್ದದಲ್ಲಿ ಚಾಮುಂಡಿಯು ಪೆರಿಯಪಟ್ಟದ ವುರಿಮಸಣಿಯನ್ನೂ
ವೀರಭದ್ರನನ್ನೂ ಮಾರಿ ನಡೆದು ವೀರರಾಜನಿಗೆ ಮಂಕು ಬೂದಿ ತಳೆದು, " ತೂಗುತಾಳೆ
ಮಂಕು ಬರುವ ಹಾಗೆ". ಇದರ ಫಲವಾಗಿ " ಸೂರೆ ಆಯಿತು ಪೆರಿಯಪಟ್ಣವು
ಮೈಸೂರಿನವರಿಗೆ."
ಕೊನೆಗೆ ರುಣಿವಾಸದವರು ಬಹಳ ಶ್ರಮಪಟ್ಟು ವೀರರಾಜನನ್ನು ಎಚ್ಚರಗೊಳಿಸಿದರು.
ಎಚ್ಚರವಾಗಿ ಅವನು ಎಲ್ಲವನ್ನೂ ಕಂಡು, " ಮೀರಿತು ಕಾರ್ಯ ಯತ್ನವಿಲ್ಲ"ವೆಂದು ತಿಳಿದು
ಕೊಂಡನು. ಕೊನೆಗೆ ಗಂಡ ಹೆಂಡಿರೆಲ್ಲ ಮಾತನಾಡಿಕೊಂಡು, " ಕ್ಷೀರ ಅನ್ನವ ವೂಟ ಮಾಡಿದರು
ಒಂದೆ ಎಲೆಯೊಳಗ." ಅವರನ್ನೆಲ್ಲ ತಾನೇ ಕತ್ತಿಯಿಂದ ಕೊಂದು ರಾಜನು ರಣಭೂಮಿಗೆ
ನಡೆದನು.
ಅಲ್ಲಿ ದಳವಾಯಿಯನ್ನು ಹುಡುಕಿಕೊಂಡು ಬಂದು ಅವನೊಡನೆ ಹೋರಾಟಕ್ಕೆ ನಿಂತನು.
" ಹರುಷದಿ ಚಾಮುಂಡಿ ನಡುವೆ ನಿಂತಳು ಜಗಳದಿ ಈರ್ವರಿಗೆ |
ಹಾರಿ ಹಿಡಿವಳು ಈ ರಾಜ ಭೂಪನ ಪೆಟ್ಟು ತಗಲದಾಗೇ |
ತ್ವರಿತದಿ ದಳವಾಯಿ ಪೆಟ್ಟು ಬೀಳುತಿತ್ತು, ವೀರಜ ಭೂಪನಿಗೆ । "
ಹೀಗಾಗಿ ವೀರರಾಜ ಭೂಪನು ಬಿದ್ದನು. ಅವನ ತಮ್ಮನೂ ಅಣ್ಣನಂತೆ
ಅಂತಃಪುರದವರನ್ನು ಕಡಿದು ಬಂದು ರಣಭೂಮಿಯಲ್ಲಿ ತನುವನ್ನು ತೆತ್ತನು. ಆಗ
೨೩
---------------------------------------------------------------------
ಕರ್ಣಾಟಕ ಸಂಸ್ಕೃತಿ
" ಹತ್ತಿದರಂಣ ಪೆರಿಯಪಟ್ಣದ ಕೋಟಿ ಬತೇರಿ ಮೇಗೆ |
ಕರಕರ ಕಾಗದ ಬರದಾ ಮೈಸೂರು ಭೂಪತಿಗೆ |
ಸಕ್ಕರೆ ಹಂಚಿಕೋ ನಿಮ್ಮ ಪುರದಲ್ಲಿ ಗಣಿತವಿಲ್ಲದಾಗೆ ।
ಶೇಷನ್‌ಗಿರಿ ಹರಿದಾಸರ ಪದವಿದೆ ಮೆರೆಯುತಿದೆಯಲ್ಲಾ ॥ "*
(ಈ ಹಾಡಿನಲ್ಲಿರುವ ದೈವ ಮಾನುಷ್ಯ ಸಂಬಂಧವನ್ನು ನೋಡಿರಿ: ಪೂಜೆಗೆ
ಒಲಿದು ಭಕ್ತರಿಗೋಸುಗ ಬೇಕಾದುದನ್ನು ಮಾಡುವ ದೇವತೆಗಳು, ಪ್ರಪಂಚದ
ಆಗು ಹೋಗುಗಳೆಲ್ಲ ಅವರ ಕೈಯಲ್ಲಿದೆಯೆಂದು ನಂಬಿರುವ ಮನುಷ್ಯರು--ಈ ಇಬ್ಬರ
ಸಂಬಂಧಕ್ಕನುಗುಣವಾಗಿರುವ ಫಲಾಫಲಗಳು ಇವುಗಳನ್ನು ಗಮನಿಸಿರಿ. ಹಿಂದಿನ
ಹಾಡಿನಲ್ಲಿ, ಕೊಲೆಗಾಗಿ ಹೊರಟಿರುವ ಸಂಗನು ತಾಯಿಗೂ ತನ್ನ ಗುರುದೇವನಾದ
ಬಸವಣ್ಣನಿಗೂ ನಮಸ್ಕಾರ ಮಾಡುತ್ತಾನೆ. ಸಾಹುಕಾರನು ತಮ್ಮಂದಿರು ಸಿಕ್ಕದೆ
ಹೋದಾಗ, " ಕೊಲ್ಲುವಕಿಂತ ಕಾಯುವ ಶ್ರೇಷ್ಠ, ಬಹಳ ಚೆಲೋ ಅವರ ಅದೃಷ್ಟ !"
ಕೊಲ್ಲುವುದಕ್ಕೆ ಬಂದವನು ಕೊಂದುದೂ "ಶಿವ ತಂದು ಹಾಕಿದ ಮ್ಯಾಲಿ" ಅದರಿಂದ.)
II. ಎರಡನೆಯದು ಸ್ತುತಿಯ ಲಾವಣಿಗಳು.--ಈ ಜಾತಿಯಲ್ಲಿ ಗುರು,
ಶಾರದಾ, ಗಣಪತಿ ಸ್ತೋತ್ರಗಳು ಮುಖ್ಯವಾದವು; ಇಷ್ಟ ದೇವತಾ ಕುಲ ದೇವತಾ
ಸ್ತೋತ್ರಗಳೂ ಬರುವುದುಂಟು. ನಾಟಕದಲ್ಲಿ ಪೂರ್ವ ರಂಗವೂ ಭರತ ವಾಕ್ಯವೂ
ಇದ್ದಂತೆ, 'ಮಝಮಾ' ಸೇರಿದಾಗ ಆದ್ಯಂತಗಳಲ್ಲಿ ಸ್ತೋತ್ರ, ಮಂಗಳಗಳನ್ನು
ಹಾಡುತ್ತಾರೆ. ಸಾಮಾನ್ಯವಾಗಿ ಇವೆಲ್ಲ ಈ ಜಾತಿಯ ಸಂಸ್ಕೃತ ಸ್ಕೋತ್ರ
ಗಳಿದ್ದಂತೆಯೇ ಇವೆ. ,ಒಂದೊಂದು ಕಡೆ. ಸ್ತುತಿ ಮಾಡುವಾಗ ಆ ದೇವತೆಯು
ಯಾವಾಗ ಏಕೆ ಹುಟ್ಟಿತು ಎಂಬುದನ್ನೂ ಆದರ ಪ್ರಭಾವವೆಂತಹುದು ಎಂಬುದನ್ನೂ
ವರ್ಣಿಸುವುದುಂಟು.
III. ಮೂರನೆಯದು ಸವಾಲ್ ಲಾವಣಿಗಳು--ಪ್ರಶ್ನೋತ್ತರ ರೂಪ
ವಾದವು.--ಈ ಜಾತಿಯ ಸ್ವರೂಪವನ್ನು ವಿವರಸುವುದಕ್ಕಿಂತ ಒಂದು ಉದಾಹರಣೆ
ಯನ್ನು ಕೊಡುವುದು ಉತ್ತಮ:
೩. " ಹರಹರ ಹರ ಹರ ಶಂಭು ಸದಾಶಿವ ಶಂಭು ಶಂಕರಾ ಮಹದೇವ ।
ಶಿವ ಶಿವ ಶಿವಶಿವ ಸದಾ ಭಜಿಸುವೆನು ತನ್ನ ನಂಬಿದಾ ಭಕ್ತರ ಕಾಯ್ವಾ ॥ ಪ ॥
ಕೈಲಾಸದಲಿ ಸಭೆ ಕೂಡಿತು ಇಂದ್ರ ಅಗ್ನಿ ಯಮ ನೈರುತ್ಯಾ!
ವರುಣ ವಾಯು ಕುಬೆರ ಯಿಶಾನ್ಯ ಅಷ್ಟ ದಿಕ್ಬಾಲರು ಕೂಡಿ ಸುತ್ತಾ ||
ಬ್ರಹ್ಮನು ಬಂದನು ವಿಷ್ಣುವು ಬಂದನು ಗಣಪತಿ ಬಂದನು ಕುಣಿಯುತ್ತ |
ತೆತ್ತೀಶ ಕೋಟಿ ಸುರರು ಕೂಡಿದರು ಷಣ್ಮುಖ ಸಭೆಯನು ಕೂಡಿಸುತಾ ॥
ನಾರದ ಮುನಿಗಳು ಬಂದರು ಅಲ್ಲಿಗೆ ವೀರಭದ್ರ ತಾ ನಸು ನಗುತಾ |
ಸಪ್ತ ರುಷಿಗಳು ಬಂದರು ಅಲ್ಲಿಗೆ ಆದಿಶಕ್ತಿ ತಾ ಪಾರ್ವತಾ॥
* ಇದನ್ನು ಬರೆದವರು ಯೂರೆಂಬುದು ಗೊತ್ತಿಲ್ಲ ಸ
೨೪
--------------------------------------------------------------
ಗಂಡುಸರ ಹಾಡುಗಳು
ಆದಿ ಲಕ್ಷಿ ಒಯು ಬಂದಳು ಭಾರತಿ ವೀಣೆಯ ನುಡಿಸುತ್ತಾ |
ಸರಿಗಮ ಪಧನಿಸ ಸನಿಧಪ ಮಗರಿಸ ಸಪ್ತ ತಾಳಗಳ್ ಕೂಡಿಸುತಾ ॥
ಝನನನ ನನಝಂ ಝಂ ಝಂ ಝಂ ಝಂ ಬ್ರಹ್ಮನು ತಾಳವ ಹಾಕುತಲೀ |
ಹಗಡಧಿಂ ಹಗಡಧಿಂ ತಟಿಕಿಟ ತಟಿಕಿಟ ವಿಷ್ಣು ಮೃದಂಗವ ನುಡಿಸುತಲೀ ॥
ಸರ್ವರ ಮುಂದೆ ಗೆಜ್ಜೆಯ ಕಟ್ಟಿಕೊಂಡು ಶಿವನು ಕುಣಿದ ಸಂತೋಷದಲೀ |
ಯಾರು ಮುಂದೆ ಕುಳಿತು ಮಾಡ್ಯಾರು ಷಾಹಿರಾ | ತಿಳಿದು ಹೇಳೋ ನಿನ್ನ ಮನಸಿನಲಿ !
ಯಾವ ದಿನ ಯಾವ ಗಳಿಗೆ ಷಾಹಿರಾ | ಕುಳಿತು ಮಾಡ್ಯಾರು ಯಾವ ವಾರದಲ್ಲಿ |
ಯಾವ ನಕ್ಷತ್ರದಲಿ ನಾಟ್ಯವಾಡಿದನು ಶಂಕರ ಬಹು ಸಂತೋಷದಲೀ ||
ಸವಾಲ್ ಮಾಡಿದೆ ಷಾಹಿರಾ ನಿನ್ನ ಮ್ಯಾಲೆ | ತಿಳಿದು ಹೇಳೋ ನಿನ್ನ ಮನಸಿನಲೀ* ॥"
* * * * * *
ಇದರಲ್ಲಿ ಝಡಿತಿಯೆಂಬ ಇನ್ನೊಂದು ಉಪ ಜಾತಿಯುಂಟು:-
(' ರಾಮಾಯಣದ ಸವಾಲ್ 'ನಿಂದ)
೪, "ಲಂಕದಾಗಿನ ಮನೆ ಕುಂತು ಕೇಳಿರಣ್ಣ ಲೆಕ್ಬಾ ಹೇಳುತಿನಿ ಬಹು ಟೀಕು |
ಐದು ಲಕ್ಷ್ಮ ಮಣ್ಣಿನಾ ಮನೆ ಯಿಟ್ಟಿಗೆ ಯೇಳು ಲಕ್ಷ ಕಟಕು ॥
ಒಂಭತ್ತು, ಲಕ್ಷ ಪಾಷಾಣ ಮನೆಗಳು ಕಬ್ಬಿಣದು ಆಕರ ಲಾಕಾ |
ಇಪ್ಪತ್ತು ಲಕ್ಷ ಚೊಕ್ಕ ಬೆಳ್ಳಿ ಮನೆ ಕಟ್ಟಗಾರ್ಕೆ ಬಹು ನಾಜೋಕಾ ॥
ಕೋಟಿ ಲಕ್ಷ ಕಂಚಿನ ಮನೆಗಳು ಇದರ ಹೊರ್ತು ಲೋಕದ ಬೆಳಕು (?)
ಐಸಿ ಹಜಾರ್ ಹೆಂಡರವಗೆ ಲಕ್ಷಪುತ್ರ ಅವನ ಉತ್ತರಕೆ ॥
ಲಕ್ಷಮಂದಿ ಮಕ್ಕಳನಾ | ಬ್ಯಾರೆ ಹಿಡಿದು ತೆಗಿಯೊ ಕೂನಾ ।
ಮೊಮ್ಮೊಕ್ಕಳ ಹೆಸರೇನಾ | ಬಿಚ್ಚಿಹೇಳಬೇಕು ಐವಾನಾ |
ಇಷ್ಟು ಮಂದಿ ಹೆಸರೇನಾ | ವಿವರಿಸಿ ಹೇಳೋ ಜಾಣಾ!
ಅದೆಷ್ಟು ಮಂದಿ ಸೊಸೆಯರು ರಾನಣಗೆ! ಹೋಗಬೇಕು ಷಾಹಿರಾ ಹೆಸರೇಳಿ |"
ಅದೇ ಸವಾಲಿನಿಂದ ಇನ್ನೊಂದು ಪ್ರಶ್ನೆ.--
" ತ್ರೈತಾಯುಗದಾಗೆ ರಾಮ ರಾವಣಗೆ ಕೆಡಕು ಹತ್ತಿ ಕದನ ಹುಟ್ಟಿ ।
ಅವರಿಬ್ಬರಿಗೆ ಲಡಾಯಿ ಆಗುವಾಗ ನುಡಿಯುತಿತ್ತು ಹದಿನಾಲ್ಕು ಘಂಟೆ ॥
ಒಂದು ಘಂಟಿ ಟನ್ನಂತ ನುಡಿದರೆ ರುಂಡ ಕುಣಿಯುತಾವೆ ಒಂದು ಕೋಟಿ ।
ಮೂರು ಹಗಲು ರಾತ್ರಿ ಒಂದೇ ಸಮನಾಗಿ ನುಡಿಯುತಿತ್ತು ಅಂತಾ ಘಂಟಿ॥
ದಂಡು ಯೆಷ್ಟು ಮಡಿದಿತೂ | ಘಂಟಿಯೆಷ್ಟು ಬಡಿದೀತು ಬರೆಯಾದೆ ಯೆಲೆ! ಪಟ್ಟಿ ॥
ಯಾವ ಘಂಟೆಯ ವರ್ಜ ಮಾಡಿದ ಹೇಳಿಕೊಡೋ ನೀ ಹುಚ್ಚಬಡ್ಡಿ+ ॥ "
.............
+ ಈ ಲಾವಣಿಯನ್ನು ಬರೆದವರು ತಮ್ಮ ವಿಚಾರವಾಗಿ ಹೀಗೆ ಹೇಳಿಕೊಂಡಿದ್ದಾರೆ;
"ರೋಮಕೆ ಕೋಟಿ ಲಿಂಗವು ಧರಿಸಿಹ ಬಾಲನಣ್ಣ ನಮ್ಮ ದೇವರಾ ॥
ಚಿನ್ಮೂಲಾದ್ರಯೊಳು ಮುರುಗೈ ಸ್ತಾಮಿಗಳು ಮಾಡುತಾರೆ ನಮಸ್ಕಾರಾ॥
ನಾಗೋಜ ಯಂಕೋಜಯೆಂಬೋ ಗೆಣೆಯರು ಕೂಡಿ ಸದಾ ಮಾಡುತಾರೆ ಗುರುಶಾವೆ॥. .
ಇದನು ಬರೆದವನು
" ದೊಡ ಹರಿಹರ್ ತಕ್ಕಂತ ನಗರಿ । ವಸ್ತಾದಿ ತೆಟಿ ಬೈರಿ
ಸುತ್ತ ರಾಜ್ಯಕೆ ಆಸ್ಕಾರೀ ।
ಅಂಜಿ ನಡೆಯುತಾನೆ (ಅವನ) ವೈರೀ ||
೨೫
------------------------------------------------------------------
ಕರ್ಣಾಟಕ ಸಂಸ್ಕೃತಿ
ಹಾಗೆಯೇ ಶಾಸ್ತ್ರ ವಿಷಯಗಳನ್ನು ಕೇಳುವ ಇನ್ನೊಂದು ಉಪಜಾತಿಯುಂಟು:
೫, "....... ಹೇಳೋ ಕೇಳ್ವೆ ಯಿದೊಂದು ಚುಟ್ಕಾ |
ಬುಡವು ಮೇಲೆ ಕೊನೆ ಕೆಳಗಾಗಿ ಗಿಡ ಬೆಳೆಯುತೈತೆ ಜೋಡಿ!
ಕಡೆ ಮೊದಲಿಲ್ಲದೆ ಪುಷ್ಪ ಕಾಯಿ ಹಣ್ಣು ತುಂಬಿಯಿದೆ ಕೂಡಿ ॥
ಸಡಗರದಿಂದಲಿ ಹಣ್ಣು ಕೀಳೊಕೆ ಹುಡುಗ ಬಂದ ವೋಡಿ |
ಬಿಡದೆ ಗಣೆಯೇರಿ ಬೀಳತೇಳುವನ ತೋರೂ ಸಭೆಯಲಿ॥ ಶುನಕಾ |
ಮೂರು ಚಿರಣದಾ ಪಕ್ಷಿಯು ಮರದಲಿ ಕುಂತಿರುವುದು ಯೇನು!
ಆರು ವರ್ಷದಾ ಗರಿಗಳೂ ರೆಕ್ಕೆಗೆ ಬಲ್ಲೆಯೇನೋ ನೀನು ||
ಬಾರಿ ಬಾರಿಗೂ ಹಾರುಶಲಿರುವುದು ತೋರೋ ಯಿಂದರ ಕೂನು ॥
ಹರಿ ಹರ ಬ್ರಹ್ಮಾದಿಗಳು ಕಾಣದೆ ಹುಡುಕುತಾರೆ ಯಿನ್ನು ॥
ಭರದಿ ಇದರದು ಜವಾಬೇಳೋ ನೀ ಮರಣ ಪರಿಯತನಕಾ* | "
(ಅಂತ್ಯ ಪ್ರಾಸದ ಜೊತೆಗೆ, ಚುಟ್ಕಾ, ಶುನಕಾ, ತನಕಾಗಳ ಪ್ರಾಸವನ್ನು
ನೋಡಿರಿ.)
ಸವಾಲು ಲಾವಣಿಗಳಲ್ಲಿ ಅಲ್ಲಲ್ಲಿ ವೀರ ವಾದಗಳು ಮುಂದುವರಿದು ಆಣೆಗಳನ್ನು
ಇಡುವುದೂ ಉಂಟು.
೬. (ಅ) " ಹೇಳಿದ ಮಾತನು ತಿಳಿಯದೆ ಬೊಗಳುವ ಮನುಜನಿಗೇನೂ ಅನುಭವವಿಲ್ಲಾ |
ಖೂಳ ಮನುಜನೆ ಯಾತಕೆ ಬೊಗಳುವೆ ತರವಲ್ಲಾ ನಿನಗಿದು ಗಮಕಿನ ಸೊಲ್ಲಾ ॥ "
(ಆ) "ಜಬಾಬು ಹೊರ್ತು ಡಬ್ಬು ಹಿಡಿದರೆ ತಾಯಿಮೇಗೆ ಬಿಚ್ಚದಂಗೆ ಲಾಡಿ |"
ಇದು ಹೀಗೆಯೇ ಬೆಳೆದು ಒಬ್ಬರನ್ನೊಬ್ಬರು ಚಿತ್ರ ಚಿತ್ರವಾಗಿ ಮೂದಲಿಸುತ್ತ
"ಕೇಳ್ ಪಂಡಿತಾ! ಕೇಳ್ ಪಂಡಿತಾ | ಖಂಡಿತ ಮಾತಾ |
ಕೋಪಮಾಡಿ ವೋಡಬ್ಯಾಡ ಭೂಪರೊಳಗೆ ಅಳುತಾ॥ "
ಎಂದು ಆರಂಭವಾಗಿ,
" ಸುಡುವೆನಗ್ನಿಯೊಳಗೆ | ಮುರಿದು ನಿಮ್ಮ ಪ್ರಾಣ ಹರಿವೆನು ಕ್ಷಣದೊಳಗೆ"
ಎನ್ನುವ ವರೆಗೂ ಹೋಗಿ ಆ ಬೆದರಿಕೆಯು ಕಾರ್ಯವೇ ಆಗಿ ಪರಿಣಮಿಸುವುದೂ
ಉಂಟು. ಮೂದಲೆಯು ಮೃದುವಾಗಿ ಮಿತಿ ಮೀರದಿರುವಾಗ 'ತಾನ್ ' ಎಂದೂ,
ಮಿತಿ ಮೀರಿ ಕ್ರೋಧ ಪ್ರದೀಪ್ಮವಾಗಿ ಮಾತು ಮೆರೆಯುವಾಗ 'ರಿಂದಾ' ಎಂದೂ
ಕರೆಯಸಿಕೊಳ್ಳುತ್ತದೆ.
IV. "ರಂಗು ಎಂದು ಹೆಸರಾದ ಶೃಂಗಾರ ಪದಗಳು ಇನ್ನೊಂದು
ಜಾತಿ,--ಲಾವಣಿಗಳಲ್ಲೆಲ್ಲ ಇದೇ ಬಹಳ ಸ್ವಾರಸ್ಯವಾದುದೆಂದು ಇದಕ್ಕೆ ಈ ಹೆಸರು
ಬಂದಿದೆ. ಮಿಕ್ಕು ಲಾವಣಿಗಳನ್ನು ಹೇಳುವಾಗ ಕಾಣದ ರಾಗ ವಿನ್ಯಾಸವು ಇಲ್ಲಿ
ತೋರುವುದುಂಟು. ಈ ಗುಂಪಿನಲ್ಲಿ ತೃಂಗಾರಾಂಗಗಳಾದ ಸಂಭೋಗ ವಿಪ್ರಲಂಭಗಳ
.................
* ಇದನ್ನು ಬರೆದವನು, " ಪರಿ ಪರಿ ಷಾಹಿರಾ ಸರಜ ಪೂಸಣ್ಣ."
೨೬
-----------------------------------------------------
ಗಂಡುಸರ ಹಾಡುಗಳು
ವೈಖರಿಯೆಲ್ಲವೂ ತೋರುವುದು. ಸಾಮಾನ್ಯವಾಗಿ ನಾವು ಕಾವ್ಯಗಳಲ್ಲಿ ನೋಡುವ,
ಪ್ರಾಯ ಸಮರ್ಥೆಯರಾಗಿ ಲೋಕವನ್ನರಿತಿರುವ ನಾಯಕೆಯರು, ಅವರನ್ನು ಅಡ್ಡ
ಗಟ್ಟಿ ರೂಪಾದಿಗಳಿಂದ ಒಳಿಸಿಕೊಳ್ಳುವ ನಾಯಕರು--ಇವರು ಈ ಹಾಡುಗಳಲ್ಲಿ
ಪ್ರಧಾನ ಪಾತ್ರಗಳು, ಅಲ್ಲಲ್ಲಿ ಪರಕೀಯ ನಾಯಕೆಯರನ್ನು ಸಂಗ್ರಹಿಸಿರುವ ಕಥೆಗಳೂ
ಬರುವುದುಂಟು. ಈ ರಂಗು ಲಾವಣಿಗಳು ಬಹುಶಃ ತಮಿಳಿನ ಕಡೆಯಿಂದ ಬಂದವುಗಳ
ಸಂತಾನವಿರಬಹುದು*. ನ್ಯಾಯವಾಗಿ ಈ ಗುಂಪು ನಮ್ಮ ಎರಡನೆಯ ಜಾತಿಯ
ವಿನೋದದ ಪದಗಳಲ್ಲಿ ಸೇರಬೇಕು. ಆದರೂ ಲಾವಣಿಯೆಂಬ ಹೆಸರೂ ಆ ಪಡಿಯಚ್ಚಿ
ನಲ್ಲಿಯೇ ಇರುವ ಛಂದವೂ ಇವುಗಳನ್ನು ಲಾವಣಿಗೆ ಸೇರಿಸಿವೆ.
ಇದರಲ್ಲಿರುವ ನಾನಾ ಭಂಗಿಗಳಿಗೆಲ್ಲ ಉದಾಹರಣೆಯನ್ನು ಕೊಡುವುದು ಇಲ್ಲಿ
ಸಾಧ್ಯವಿಲ್ಲವಾಗಿ ಒಂದೆರಡು ಉದಾಹರಣೆಗಳನ್ನು ಮಾತ್ರ ಕೊಡುವೆವು:
೭. " ವೈಯಾರೀ ಮಣಿ। ಸುಂದರಾ ಕಣಿ! ಪನ್ನಗಾ ವೇಣಿ! ಯನ್ನಾನೂ ನೋಡೆ ||ಪ ||
ತೋಯಜ ಗಣಿ। ಶಾರಿಕ ವಾಣಿ | ನೀರೆ ಬಿನ್ನಾಣಿ!. ...... ನೀಡೆ॥
ಕಾಯಜ ರಾಣಿ | ಪೋಲುವೆ ಹಣಿ । ಪಲ್ಲವ ಪಾಣಿ | ಕರುಣಿಸಿ ಕೂಡೆ |
ಮಾಯಕಾತಿ ಭಣಿ । ನಾರಿ ಶಿರೋಮಣಿ | ಸದ್ಗುಣ ಶ್ರೇಣಿ। ಪಂಥವ ಬಿಡೆ |
ಕೈಯ ಹರಡಿ ಮಣಿ। ಕೊರಳಿಗೆ ಕಟ್ಟಾಣಿ | ರುಳಿ ಸಂಪಣಿ | ಕೊಳ್ಳೇ ಮನ ಮಾಡೆ॥
ಹಾ ಯುವತಿಯರೊಳು ಸರಿಗಾಣೆ | ತೋಯಜ ಮುಖಿ ಕೇಳ್ ನಿನ್ನಾಣೆ!
ಹೇಯವೆಂದು ತಿಳಿಯದೆ ನಿನ್ನ | ವಾಯನರಿತು ಬೇಡಿದೆ ರನ್ನೆ |"
ತನ್ನನ್ನು ಅಡ್ಡಗಟ್ಟಿ ದವನಿಗೆ ಒಬ್ಬಳು ಬುದ್ಧಿ ಹೇಳುತ್ತಾಳೆ. ಇಬ್ಬರು ಹೇಳುವು
ದನ್ನೂ ಕೇಳೋಣ:
೮. " ಧರೆಯೊಳು ನಿನ್ನ ಪರಿ ಯಿರುವ ಸ್ತ್ರೀಯರು ಅರಸಿ ನೋಡಿದರು ಯಿಲ್ಲವಲ್ಲೆ |
ಸರಸಿಜ ನಯನವು ನಾಸಿಕ ಸಂಪಗೆ ವರಸೆ ದಂತಾ ಹುಬ್ಬು ಸ್ಮರ ಬಿಲ್ಲೆ ॥
ತರಳೆಯ ಅಡಿ ತಳಿರು ನುಣ್ಣು ದೊಡೆ ಮಿಳಗುವ ಕಳಶ ಕುಚವು ಪುಟಚಂಡಲ್ಲೆ |
ಗರ ಗರ ದೇಶವು ಹುಡುಕಿ ತಿರುಗಿದರು ಹರಿಮುಖಿ ನಿನ್ನಾ ಸಮನಿಲ್ಲವಲ್ಲೇ ॥
ತರಹರಗೊಳಿಸುವ ತನು ಧಾರೆಯನೆರೆವೆನು ಕೇಳೆಲೆ ನಿನಗಿನ್ನಾ |
ದುರುಳ ಮಾರನ ಶರ ಹತಿ ಘಾಯಕೆ ತ್ವರಿತದಿ ಅವುಷಧ ಕೊಡ ರನ್ನಾ | "
* * * *
" ತರುಣಿ ತರುವೆಸೆಂದು ಹರಿಯ ಸತಿಯ ತಂದು ಭರದಿ ರಾವಣನು ತಾ ಕೆಟ್ಟ |
ದುರುಳ ಕೀಚಕ ಮನವಿರಿಸದೆ ದ್ರೌಪದಿಯಿಂದ ಹರಣ ಕಳದುಕೊಂಡ ಭ್ರಷ್ಟ ॥
ವರ ಮುನಿ ಗೌತಮರರಸಿಗೆ ಭ್ರಮಿಸಿ ಸುರಪತಿಗೆ ಅಂಗ ಯೋನಿಯಾಯ್ತು ನಷ್ಟ |
ಗುರು ಬೃಹಸ್ಪತಾಚಾರ್ಯರರಸಿ ಮಾಡಿದಳ್ ತರಳ ಚಂದ್ರನಿಗೆ ಕಳೆ ನಷ್ಕಾ॥
ಹಿರಿಯರಿಗಾದ ಪಾಡರಿಯದೆ ಸುಮ್ಮನೆ ಮೈಮರೆತು ನಡಿಬ್ಯಾಡೋ ಸಂಪನ್ನಾ+॥|"
* Compare Pp, T. Srinivasa Iyengar’s " History of the Tamils’, Chapter 2111.
+ ಈ ಲಾವಣಿಯಲ್ಲಿ ನಾಲ್ಕು ಪಾದವು ಮುಗಿದಮೇಲೆ ಒಂದು ಪಾದವು ಅಧಿಕವಾಗಿದೆ. ಅದರ
ಜೊತೆಗೆ ಹಿಂದಲ ಪಲ್ಲವಿಯ ಎರಡನೆಯ ಪಾದವನ್ನು ಸೇರಿಸಿಕೊಂಡು ಹಾಡಿ ಸಮಪಡಿಸಿಕೊಳ್ಳಬೇಕು
೨೭
---------------------------------------------------------------------
ಕರ್ಣಾಟಕ ಸಂಸ್ಕೃತಿ
ಇದರಲ್ಲಿ...
" ಒಬ್ಬ ಸಿಪಾಯಿಯು ಹೆಂಡತಿಯ ಮಾತು ಕೇಳದೆ ಯುದ್ಧಕ್ಕೆ ಹೋಗಿ ಮೃತ
ನಾದುದು, ಅವಳು ಶೆಟ್ಟಿ ಕನಸು ಕಂಡು ಅಳುಕಿ ಗಂಡನನ್ನು ಹುಡುಕಿಕೊಂಡು
ಹೋಗಿ, ಅವನ ರುಂಡ ಮುಂಡಗಳನ್ನು ಯುದ್ದ ರಂಗದಲ್ಲಿ ಕಂಡು ಅವುಗಳನ್ನು ತಬ್ಬಿ
ಕೊಂಡು ಅತ್ತು ಹೊರಳಾಡಿದುದು"...
ಇಂತಹ ಸಾಮಾನ್ಯ ಕಥೆಯ ಹಾಡುಗಳೂ,
" ಒಬ್ಬ ವ್ಯಾಪಾರಿಯು ದೇಶಾಂತರಕ್ಕೆ ಹೋಗಿ ಬಹು ದಿನವಾದರೂ ಬರದಿರಲು,
ಅವನ ಹೆಂಡತಿಯು ಮತ್ತೊಬ್ಬನನ್ನು ಕೂಡಿಕೊಂಡು ಮಗನನ್ನು ಪಡೆದು ವ್ಯಾಪಾರ
ಮಾಡಿಕೊಂಡಿದ್ದಳು; ಅವಳ ಗಂಡನು ಕೊನೆಗೆ ಬಂದು ಹೆಂಡತಿಯನ್ನು ಗುರುತಿಸಿದನು ;
ಅವಳೂ ಅವನನ್ನು ಗುರುತಿಸಿದಳು. ಉಪಪತಿಯು " ನಿನ್ನ ಹೆಂಡತಿಯನ್ನು ನೀನು
ತೆಗೆದುಕೊ, ನನ್ನ ಮಗನನ್ನು ನನಗೆ ಕೊಟ್ಟುಬಿಡು" ಎಂದನು. ಇಬ್ಬರಿಗೂ ಜಗಳವಾಗಿ
ಕೋರ್ಟಿನ ವರೆಗೆ ಹೋಯಿತು. ಕೊನೆಗೆ ಕೋರ್ಟಿನಲ್ಲಿ ವಾದವಾಡುವಾಗ ಗಂಡನು,
" ಗೋಡದ ಹಸುವ ನಾ ತಂದು ಬಿಟ್ಟಿದ್ದೆ ಊರೊಳಗೆ ಒಂದು |
ಊರಾಗಳಾ ಹೋರಿಯು ಬಂದು ಕಟ್ಟಿತು ಗರ್ಭ ಕರುವೊಂದು॥
ಹಸುವಿನ್ಹಿಂದೆ ಕರು. ಹೋಗಬೇಕೇ | ಹೋರಿ ಹಿಂದೆ ಕರ ಹೋಗಬೇಕೆ ॥
ಎಂದು ವಿಚಿತ್ರ ವಾದ ಮಾಡುತ್ತಾನೆ"
ಎಂಬ ಇಂತಹ ವಿಚಿತ್ರ ಕಥೆಗಳ ಹಾಡುಗಳೂ ಉಂಟು.
೪. ವೇದಾಂತ ತತ್ತ್ವಗಳನ್ನೂ ಉಪನಿಷದ್ರಹಸ್ಯಗಳನ್ನೂ ಬೋಧಿಸುವ
ವೇದಾಂತದ ಲಾವಣಿಗಳು ಮತ್ತೊಂದು ಜಾತಿ,--ಈ ಶಾಖೆಯಲ್ಲಿ ಅದ್ವೈತ
ಮತ್ತು ಷಟ್‌ಸ್ಕಲ ಸಿದ್ಧಾ೦ತಗಳೇ ಹೆಚ್ಚಾಗಿರುವುದೊಂದು ವಿಶೇಷ, ದರ್ಶನ ಶಾಸ್ತ್ರ
ಗಳ ಸಾರವೆಲ್ಲವೂ ಇಲ್ಲಿ ಸಾಮಾನ್ಯ ಜನರ ಮಾತಿನಲ್ಲಿ ಹಿರಿಯ ಹೊಳೆಯಾಗಿ ಹರಿದಿದೆ,
ಧರ್ಮ ಶಾಸ್ತ್ರಗಳು, ಸಮಾಯಾಚಾರ ಧರ್ಮಗಳು, ನೀತಿಗಳು--ಎಲ್ಲವೂ ಇಲ್ಲಿವೆ.
ನೊಂದು ಸಮಾಧಾನ ಹೇಳಿಕೊಳ್ಳುವುದು
೯. " ಬಿಡು ಯಾತರ ಜಲ್ಮವು ಕೂಡಲಿಲ್ಲ ಸುಖ ಸಾರಾ |
ಪೂರ್ವದಲ್ಲಿ ಮಾಡಲಿಲ್ಲ ಶಿವ ಪೂಜೆ ಮನಸಾರಾ | "
೧೦. "ಏನು ನಡೀತೀಯೋ ಯಾಕೆ ಕೆಡುತೀಯೋ |
ಮಾನುಷ್ಯ ಜನ್ಮವನು ವ್ಯರ್ಥ ಮಾಡಿಬಿಟ್ಟೆ ಮೂರ್ಖ ॥ ಪ॥
ಹೆಂಡತಿಯ ಬದುಕನೀಗ ಸವರಿ ನೋಡಿದಂತೆ ।
ಮೊನ್ನೆ ಕಂಡ ಸಾಲಗ್ರಾಮವನ್ನೆ ಮುಟ್ಟಬಾರದೆ ತಡಹಬಾರದೆ ॥
ರಂಡೆಯರ ವಿಷಯಕಾಗಿ ಕಾಲಿಗೆರಗಿದಂತೆ |
ತತ್ತ್ವಪಂಡಿತರ ಚರಣಕೆ ನೀ ಬೀಳಬಾರದೆ ಹೊರಳಬಾರದೆ ॥
ದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದೊಲು |
ಪಿಂಡಾಂಡವ ವಿವರಿಪರಿಗೆ ಒಂದು ತುತ್ತು ನೀಡಬಾರದೆ ಮಾಡಬಾರದೆ ॥
.......
Cf. ಶುಭಾ ಸಂವಾದ. Vide Winternitz’s ‘Some Problems of Indian literature,’
page 62 ff.
೨೮
------------------------------------------------------------------------
ಗಂಡುಸರ ಹಾಡುಗಳು
ಕೊಂಡು ಸುದ್ದಿ ನಾರಿ ಕಿವಿಯ ಕಂಡಿಯೊಳು |
ಹೇಳ್ವ ತರದಿ ಅಖಂಡ ಸಾಧುಗಳೊಳು ನೆಲೆ ವುಸುರ ಬಾರದೆ ಅರುಹ ಬಾರದೆ” | ೧॥
ಗುರುವಿನ ಮಹತ್ವ್ವ
೧೧. "ಗುರು ಅಲಕ್ ನಿರಂಜನ್ ನಿರವಯ ನಿರಗುನ್ ನಿಷ್ಕಲನೆನುತೆಲ್ಲಾ |
ಪರಿ ಪರಿ ಯೋಗಾಭ್ಯಾಸ ಕರಿಸಿದ ಹರಿ ಹರರಿಗೆ ಗುರು ದೊರೆಯಲಿಲ್ಲ ॥
ಗುರು ದಿಗಂಬರ ಸ್ವರೂಪನು ಅಂತೂ ಭವ ಸಾಗರ ದಾಂಟಿಪುದು ಬಲ್ಲ |
ಗುರು ಪರಬ್ರಹ್ಮ ಪರಾತ್ಪರ ಪರಮಾತ್ಮ ಪರಂಜ್ಯೋತಿಯಾಗಿ ಮೆರೆಯುವನೆಲ್ಲಾ ॥
ನೋಡು ಗುರು ಸತ್ಯವೆ ಸಾಗರಾ ಆ ಗುರು ನಿತ್ಯ ನಿರಾಕಾರ |
ನೋಡು ಗುರು ನಿರಂಹಕಾರಾ | ಗುರು ಮೃತ್ಯುಂಜಯ ಧೀರಾ ॥
ಗುರು ಅಗಮ್ಯ ಗೋಚರ ಅಗಣಿತ ಅದ್ವಯ ಲೀಲಾಜಾಲವೆ ಮಯವಾಗಿದೆಯೆಲ್ಲಾ | "
* * * * *
೧೨. ತತ್ತ್ವ ವಿಚಾರ
" ಪಾರ್ವತಿ ಕೇಳುತಾಳೆ ಪರಮೇಶ್ವರನಿಗೆ ಕೈಯ ಮುಗಿದು ನಿಂತರ್ಧಾಂಗಿ |
ಪಿಂಡವಾಗುವ. . . . ಯೆನಗೆ ತಿಳಿಸಬೇಕು ಯಿದರ ಬಗಿ ॥
ಮುಟ್ಟಾದ ಮೂರು ದಿವಸಕೆ ಶುದ್ಧ ಪಂಚಮೀ ದಿನ ।
ಬಿಂದು ಬಿದ್ದಿತು ಕಲಾಕಾಯಿತು ಕೇಳ್ಮಾಯರ ಜನನ ॥
ಇಪ್ಪತ್ತೈದು ದಿವಸಕೆ ಆಗುತ ಬಂತು ನಾಜೋಕು ಬಹು ಸಣ್ಣ !
ಮೂರು ತಿಂಗಳಿಗೆ ಕೈ ಕಾಲ್ಬೆರಳು ನಾಲ್ಕು ತಿಂಗಳಿಗೆ ನಾಸಿಕ ಕರಣ |
ಐದು ತಿಂಗಳಿಗೆ ಅರವು ಸಮಾನ ದೇಹಕೆ ಮೂಡುತವೆ ರೋಮ ॥
ಆರು ತಿಂಗಳಿಗೆ ಆರು ಮೂರು ಒಂಭತ್ತು ದ್ವಾರಾ ಎಲ್ಲಾ ತೈಯಾರತ ॥
ಏಳುತಿಂಗಳಿಗೆ ಜ್ಞಾನ ಹುಟ್ಟಿತು ಅಲ ವುಪಕಾರ || "
* * * * *
ಉಪದೇಶ (ಜಾಣನ ಹಾಡು)
೧೩"ಜ್ಞಾನದಿಂದ ಶಿವ ಧ್ಯಾನವ ಮಾಡು | ಆ |
ಜ್ಞಾನದಿಂದ ಶಿವ ಧ್ಯಾನವ ಮಾಡು ॥ ಪ॥
ಕಾಮ ಕ್ರೋಧವ ಕಡಿಮೆಯ ಮಾಡು |
ಗರ್ವಾಂಕಾರ ಗಲೀಜು ಮಾಡು |
ಸೊಕ್ಕು ಸೊಟ್ಟನೆ ಬೂದಿಯ ಮಾಡು |
ನಿನ್ನೊಳಗೆ ನೀ ವಿಚಾರ ಮಾಡಣ್ಣಾ ಕೇಳೋ ಜಾಣಾ || ೧ ||
ಆರು ಶಾಸ್ತ್ರವ ಸಿದ್ಧಿಯ ಮಾಡು |
ಹದಿನೆಂಟು ಪುರಾಣವ ಪಾಠವ ಮಾಡು |
ಎಂಟೆಂಟು ದಿನಕೊಮ್ಮೆ ಸಂತೆಯ ಮಾಡು |
ರೊಕ್ಕ ನೋಡಿ ನೀ ವ್ಯಾಪಾರ ಮಾಡಣ್ಣಾ ಕೇಳೋ ಜಾಣಾ ।| ೨ ||
ಹುಣವಿ ಅಮಾಸಿಗೆ ಒಂದ್ಹೊತ್ತು ಮಾಡು
ಬೆಳ ಬೆಳತನಕ ಭೋಗವ ಮಾಡು |
೨೯--------------------------------------------------------------
ಕರ್ಣಾಟಕ ಸಂಸ್ಕೃತಿ
ಮುಂಜೇಲೆದ್ದು ಶಿವ ಭಜನೆಯ ಮಾಡು |
ಹಸಿದು ಬಂದವರಿಗೆ ಅನ್ನವ ನೀಡು |
ಸಿಟ್ಟು ಬಂದರೆ ನಿಧಾನ ಮಾಡಣ್ಣ್ಯಾ ಕೇಳೋ ಜಾಣ || ೩ ||
ಸರ್ಕಾರ ಕಂಡರೆ ಸಲಾಮು ಮಾಡು |
ವೈರಿಯ ಕಂಡರೆ ಧೈರ್ಯವ ಮಾಡು |
ಮನಿ ಬಿಚ್ಚಿ ಮೇಲೆ ಮಾಡಿಯ ಮಾಡು |
ಮಾಡಿಗೆ ತಕ್ಕಂತ ಮಡದಿಯ ಕೂಡಣ್ಣ್ವಾ ಕೇಳೋ ಜಾಣ ॥೪॥
ತಂದೇ ತಾಯಿಗೆ ಪೂಜೆಯ ಮಾಡು |
ಲಾ(ನಾ)ಡೀ ನೋಡೀ ವೈದ್ಯ ಮಾಡು |
ಅತ್ತೆ ಮಾವಗೆ ಮರ್ಯಾದೆ ಮಾಡು |
ಹೊತ್ತು ಮುಳುಗಿದಲಿ ವಸ್ತಿಯ ಮಾಡು |
ಕಡಕೊಳ್ಳೆಂಬುದು ಮೊಕ್ಖಾಮು ಮಾಡಣ್ಣಾ ಕೇಳೋ ಜಾಣ ॥೫॥
ಇಲ್ಲಿಗೆ, ಸಾಮಾನ್ಯವಾಗಿ ಲಾವಣಿಯ ಉಪ ಜಾತಿಗಳನ್ನು ಹೇಳಿ ಮುಗಿಸಿದಂತಾ
ಯಿತು. ದಾಸರ ಪದಗಳಲ್ಲಿ ಬರುವ, ತಾಳವನ್ನು ಮಾತ್ರ ಸೂಚಿಸಿರಾಗದ ಹೆಸರನ್ನು
ಹೇಳದೆ ಬಿಟ್ಟಿರುವ ತಾಳ ಪದಗಳೆಲ್ಲ ಈ ಜಾತಿಯವೆಂದೇ ನಮ್ಮ ಮತ. ಹೆಚ್ಚಾಗಿ
ಜನಪದ ಸಾಹಿತ್ಯವೆಲ್ಲ ಈ ಲಾವಣಿಯ ಜಾತಿಯದೇ ಆಗಿರುವುದು. ಅದರಿಂದ
ಇದರ ರಚನಾ ಕ್ರಮವನ್ನೂ ಹಾಡುವ ರೀತಿಯನ್ನೂ ಗಮನಿಸಿ ಮುಂದಿನ ವಿಚಾರ
ಗಳಿಗೆ ಹೋಗೋಣ.
ಈಗೆ ನಮಗೆ ದೊರೆತಿರುವ ಲಾವಣಿಗಳನ್ನೆಲ್ಲ ಪರೀಕ್ಷಿಸಿ ನೋಡಿದರೆ ಅವುಗಳ
ರಚನಾ ಕ್ರಮದಲ್ಲಿ ಎರಡು ರೀತಿಗಳಿದ್ದಂತೆ ಕಾಣುತ್ತದೆ: ಇವನ್ನು, ಮೊದಲನೆಯದು
ಕಾವ್ಯ ಜಾತಿ, ಎರಡನೆಯದು ಚಂಪೂ ಜಾತಿ ಎಂದು ಹೇಳಬಹುದು. ಇದರಲ್ಲಿ ಮೊದಲ
ನೆಯ ಜಾತಿಯು, ಗತಿ ಸಾರಳ್ಯವನ್ನು ಗಮನಿಸುತ್ತ, ಏಕ ನಾದದ ಶ್ರುತಿಯನ್ನೂ ಕೈಯ
ತಾಳದ ಏಕತಾಳದ ನಡೆಯನ್ನೂ ಹಿಡಿದು, ಪಾದಗಳಾಗಲೀ ಆವರ್ತಗಳಾಗಲೀ ಇಷ್ಟೇ
ಇರಬೇಕೆಂಬ ನಿಯಮವಿಲ್ಲದೆ, ಹಾಡುಗಾರನು ಬೇಕೆಂದಾಗ ಮುಂದೆ ನಡೆದು, ಬೇಡ
ವೆಂದಾಗ ನಿಲ್ಲುವ ' ಜಾತಿ'ಗಳು. ಮೇಲೆ ಕೊಟ್ಟಿರುವ ಜಾಣನ ಹಾಡು (೧೩) ಇದಕ್ಕೆ
ಒಳ್ಳೆಯ ಉದಾಹರಣೆ. ಒಂದು ಕಡೆ ಐದು ಪಾದಗಳು, ಇನ್ನೊಂದು ಕಡೆ ಏಳು
ಪಾದಗಳು ಬರುವುದೂ ಉಂಟು. ಒಂದೊಂದು ಪಾದದಲ್ಲೂ ಅರ್ಥ ಪೂರ್ಣವಾಗಿರುವುದ
ರಿಂದ ಇನ್ನೊಂದು ಪಾದವು ಬೇಕೇ ಬೇಕೆಂಬ ಆಕಾಂಕ್ಷೆಯಿಲ್ಲ. ಇಂತಹ ಜಾತಿಗಳಲ್ಲಿ
ಪಲ್ಲವಿಯೂ ಒಂದೇ ಪಾದವಾಗಿರುವುದು. ಬೇಕಾದರೆ ಅದನ್ನೇ ಪುನರಾವೃತ್ತಿ
ಮಾಡಬಹುದು. ಅದರಲ್ಲಿ ಇನ್ನೊಂದು ಜಾತಿಯಲ್ಲಿರುವಂತೆ, ನುಡಿಯು ಮುಗಿದೆಡೆಗೆ
ಪಲ್ಲವಿಯು ಹೊಂದಿಕೊಳ್ಳಬೇಕೆಂಬ ನಿಯಮವೂ ಇಲ್ಲ. ಈ ಜಾತಿಯನ್ನು ಮುಂದೆ
ಹೇಳುವ ಕೋಲಾಟಿದ ಪದಗಳಲ್ಲಿಯೂ "ತಂದಾನಾ' ಪದಗಳಲ್ಲಿಯೂ ಸ್ಪಷ್ಟವಾಗಿ
೩೦
-----------------------------------------------------------------
ಗಂಡುಸರ ಹಾಡುಗಳು
ಕಾಣಬಹುದು. ಈ ಜಾತಿಯಲ್ಲಿ ನಾಲ್ಕು ಮಾತ್ರೆ ಐದು ಮಾತ್ರೆಯ ಗಣಗಳೇ
ಪಾದವನ್ನು ಕಟ್ಟುವವು. ಒಂದೊಂದು ವೇಳೆ ಕಾಗದದ ಮೇಲೆ ಗುರ್ತಿಸಿದಾಗ ಮೂರು
ಮಾತ್ರೆಯ ಗಣಗಳಂತೆ ಕಂಡರೂ ಅವು ಬಾಯಲ್ಲಿ ಹೇಳುವಾಗ ತಪ್ಪದೆ 'ಐದು
ಮಾತ್ರೆಯ ಗಣಗಳೋ (ಸಾಮಾನ್ಯವಾಗಿ ಇವೇ ಹೆಚ್ಚು), ನಾಲ್ಕು ಮಾತ್ರೆಯ
ಗಣಗಳೋ ಆಗುತ್ತವೆ.
ಎರಡನೆಯ ಚಂಪೂ ಜಾತಿಯು ಈ ಕಾವ್ಯ ಜಾತಿಯಿಂದ ಮುಂದಕ್ಕೆ ಬೇಕಾ
ದಷ್ಟು ದೂರ ಸಾಗಿದೆ. ಆದರೂ ತನ್ನ ಮುಖ್ಯ ಲಕ್ಷಣವಾದ ಲಯವನ್ನು ಬಿಡದೆ
ಅನುಸರಿಸಿಯೇ ಇದ್ದುಕೊಂಡು ಆ ಲಯದಲ್ಲಿ ಬೇಕಾದ ವೈವಿಧ್ಯವನ್ನು ಕಲ್ಪಿಸಿ
ಕೊಂಡಿರುವುದು ಈ ಜಾತಿಯ ಗುರುತು. ಒಂದು ಉದಾಹರಣೆಯನ್ನು ತೆಗೆದು
ಕೊಂಡು ಇದನ್ನು ವಿಶದಸಡಿಸೋಣ:—-
ಇದು ಶ್ರೀರಂಗಪಟ್ಟಣದ ಲಾವಣಿಯಿಂದ ಆರಿಸಿಕೊಂಡ ತುಂಡೊಂದು :—
೧೪. " ಭೇಷಕ್ ತಮಾಷಾ ಟೈಗರ್ ನಿಶಾನಾ ಟೀಪು ಸುಲ್ತಾನನ ಬಿರುದಾಯ್ತು |
ಮಸಲತ್ ಮಾಡಿದ ಮೀರ್‌ಸಾದಕನಿಗೆ ದೇಶ ದ್ರೋಹಿಯೆಂಬ್ಹೆಸರಾಯ್ತು || ಪ ||
* * * * * *
ಚಾಲ್ ॥ ಹರಾಮಖೋರರ ಕರಾಮತ್ತರಿತನು ಟೀಪುಸುಲ್ತಾನನು ನಿಮಿಷದಲಿ |
ಅರೇ ಹಮಾರೇ ನಮ್ಮಖ್ಹರಾಮ ಕರೇಸೋ ಕಾಮ್ಮೆಂದ ಮನಸಿನಲಿ ॥
ಸ್ವರಾಜ್ಯ ರಕ್ಷಣೆಗೋಸ್ಕರ ಸುರ್ಲ್ವಾ ರಣಾಗ್ರಕ್ಹೊರಟನು ರೋಷದಲಿ ।
ಫರಂಗಿ ಸೋಲ್ಜರ್ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ ||
ಪರಂಪರೆಯ ಪರ ವಿರೋಧಿ ಪೌಜನು ಕುರೀಗಳಂದದಿ ಖಡ್ಗದಲೀ |
ಸರಾಸರೀ ಇಲ್ ಬರೆಯಲು ಸಾಗದು ತರಿದನು ಎಷ್ಟೋ ಶಿರ ಬದಲಿ ||
ಪರಾಕ್ರಮದಿ ಬಲು ಹೊರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ |
ಫರಂಗಿ ಫೌಜಿನ ತರಂಗ ನುಗ್ಗಿತು ಶ್ರಿರಂಗಧಾಮನ ಪಟ್ಣದಲಿ ॥
ಉಡಾನ್ ॥ ಅಳಿದೋದ ಮೇಲೆ ಮೈಸೂರ್ ಹುಲಿಯು ರಣದಲ್ಲಿ |
ಗಲಭೇಯು ಹತ್ತಿತೂ ಶ್ರೀರಂಗಪಟ್ಣದಲ್ಲಿ |
ಸುಲುಗೇಯ ಮಾಡಿದರು ಶತ್ರುಜನ ಪುರದಲ್ಲಿ ।
ಬಳಕಾದ ವಿವರ ಬರದೇನು ಇಲ್ಲ ಫಲವಿಲ್ಲಿ |
ಗುಲ್ ಉಡಾನ್ ॥ ಬಂದಿದ್ದವರೆಲ್ಲ ತಿಂದು ತೇಗೆ |
ಹಿಂದಿನ ರಾಜರ ಸಂತತಿಗೆ ॥
ಮುಂದಿನೊಳು ಮುಮ್ಮಡಿ ಕೃಷ್ಣoಗೆ |
ಪೊಂದಿತು ರಾಜ್ಯವು ಸಾವಿರದೇಳ್ನೂರ್ ತೊಂಭತ್ತೊಂಭತ್ರೊಳಗೇ
ಶ್ಲೋಕ ॥ ರಾಜಧಾನಿಯ ಮೈಸೂರ್ ಪಟ್ಟಣ ಮಾದರಿಯ ನವ ರೀತಿ |
ಸೋಜಿಗದ ಸಂಸ್ಥಾನವಾಗಿದೆ ಕೃಷ್ಣರಾಜರ ಕೃಪೆಯಲಿ ||
೩೧
-----------------------------------------------------------
ಕರ್ಣಾಟಕ ಸಂಸ್ಮೃತಿ
ಇಲ್ಲಿ ನಮ್ಮನುಕೂಲಕ್ಕಾಗಿ ಹಿಂದಿನ ನುಡಿಗಳ ಚಾಲ್ ಒಂದನ್ನು ತೆಗೆದು
ಕೊಳ್ಳೋಣ
ಚಾಲ್ ॥ "ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಟೀಪುಗೆ ಅರುವಾಯ್ತು, |
ಮಸಲತ್ ಮಾಡಿದ ಮೀರ್ಸಾದಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು || ”
ಈ ಜಾತಿಯು ಸಾಮಾನ್ಯವಾಗಿ ದ್ವಿಪದಿಗಳ ತಳಹದಿಯ ಮೇಲೆ ತಾಳಗಳ
ಆಧಾರದಿಂದ ಕಟ್ಟಿರುವುದೆಂಬುದು ನೋಡುತ್ತಿದ್ದ ಹಾಗೆಯೇ ತಿಳಿಯುವುದು.
ಪಲ್ಲವಿಯು ದ್ವಿಪದಿಯೆಂಬುದರಲ್ಲಿ ಕೊಂಚವೂ ಸಂದೇಹವಿಲ್ಲ. ` ಮುಂದಿನ 'ಚಾಲ್ '
ನಲ್ಲಿ ಪಲ್ಲವಿಯಂತಹ ನಾಲ್ಕು ತುಂಡುಗಳಿವೆ. ಮತ್ತೆ ಈ ಚೌಕ (ಈ ಒಟ್ಟು ಭಾಗಕ್ಕೆ
ಈ ಹೆಸರು) ದ ಕೊನೆಯಲ್ಲಿ ಬರುವ ಚಾಲ್ ಪಲ್ಲವಿಯಂತಹ ದ್ವಿಪದಿ. 'ಉಡಾನ್'
ಎಂಬುದರಲ್ಲಿ ಗಣವು ವ್ಯತ್ಯಾಸವಾಗಿದ್ದರೂ ಅದೂ ದ್ವಿಪದಿಯ ಜಾತಿಯನ್ನು
ಬಿಟ್ಟಿಲ್ಲ. ಮುಂದಿನ ಗುಲ್ ಉಡಾನ್ ನಲ್ಲಿ ಮಾತ್ರ ಹಿಂದಿನ ಕಾವ್ಯ ಜಾತಿಯ
ಸ್ವಾತಂತ್ರ್ಯವು ತಲೆದೋರಿದೆ... ಅದರ ಮುಂದಿನ ಶ್ಲೋಕವು [ಈ ಶ್ಲೋಕ ಭಾಗವು]
ಚೌಕದಲ್ಲಿದ್ದರೆ ಇರಬಹುದು, ಇಲ್ಲದಿದ್ದರೆ ಇಲ್ಲ. (ಕೆಲವರು ಈ ಶ್ಲೋಕದ ಬದಲು
'ಸಖಿ'ಯೆಂಬ ಒಂದು ತುಂಡನ್ನು ಹಾಡುತ್ತಾರೆ.) ಇದು ಏಳು ಮಾತ್ರೆಯ (೩+೪)
ಗಣಗಳಿಂದ ಆದುದು. ಅದೂ ಒಂದು ಚಾತಿಯ ದ್ವಿಪದಿ (ಭಾಮಿನಿ ಷಟ್ಪದಿಯ
೧, ೨, ೪, ೫ ಪಾದಗಳಂತೆ).
ಈ ಚೌಕವೆಲ್ಲವೂ ತಾಳ ನಿಯಮದ ಮೇಲೆ ಕಟ್ಟಿರುವ ರಚನೆ. ಸಾಮಾನ್ಯ
ವಾಗಿ ಚತುರಸ್ರ ತ್ರಿಪುಟ, ಅಥವಾ ಆದಿತಾಳವು ಇದರ ಪ್ರಧಾನ ಗತಿ. ಇದರಿಂದ
ಒಂದೊಂದು ವೇಳೆ ಛಾಪಿಗೆ ಹೋಗಿ, ಮತ್ತೆ ಹಿಂದಿರುಗಿ, ಇನ್ನೊಂದು ಸಲ ತ್ರಿಶ್ರ
ತ್ರಿಪುಟಕ್ಕೆ ನುಗ್ಗಿ ಮತ್ತೆ ಆದಿ ತಾಳಕ್ಕೆ ಬರುವುದು. ಹಾಗೆಯೇ ಪ್ರತಿಯೊಂದು
ಪಾದದ ಕೊನೆಯಲ್ಲಿಯೂ ಇರುವ ಅಪೂರ್ಣ ತಾಳವೂ ಗಮನಿಸಬೇಕಾದುದು.
ಲಾವಣಿ ಹಾಡುವನು ಉಸಿರು ಮೊಗಚಿಕೊಳ್ಳಲು ಅವಕಾಶವಿರುವುದು ಇಲ್ಲಿ;
ಸಂಸ್ಕೃತದ ಛಂದಸ್ಸಿನ ಶಾಸ್ತ್ರದ ಮಾತಿನಲ್ಲಿ ಹೇಳಬೇಕಾದರೆ ಯತಿಯಿರುವುದು ಇಲ್ಲಿ.
ಇದನ್ನು ಹಾಡುವ ಕ್ರಮವೂ ವಿಚಿತ್ರವಾದುದು. ಪಲ್ಲವಿಯನ್ನು ಹಾಡಿ,
ಅದೇ ರೀತಿಯಲ್ಲಿ ಅದರ ಮುಂದಿನ ಚಾಲ್ ಹಾಡುವುದು. ಉಡಾನ್‌ನಲ್ಲಿ ಗತ್ತು
ಬದಲಾಯಿಸಿದಂತೆ ಸ್ಥಾಯಿಯೂ ಬದಲಾವಣೆಯಾಗುವುದು. (ಇದು ಗ್ರಾಮ
ಪಲ್ಲಟವೋ? ವೇದಗಳನ್ನು ಹೇಳುವಾಗ ಹೀಗೆ ಸ್ಥಾಯಿಗಳನ್ನು ಬದಲಾಯಿಸುವ
ದುಂಟು.) ಆವರ್ತದ ಶಂಕೆಯಿಲ್ಲದೆ ಹಾಡುವ ಅನುಪಲ್ಲವಿಯಿದೆಂದರೂ ಒಪ್ಪುವುದು.
ಮುಂದೆ ಬರುವ ಗುಲ್ ಉಡಾನ್‌ನಲ್ಲಿ ತಾಳ ಬದ್ದವಾದ ಗದ್ಯವನ್ನು " ಈಷದ್ರಾಗ
ರಂಜಿತ" ವಾಗುವಂತೆ, ತಾಳವೂ ಸೃಷ್ಟಾಸ್ಪಷ್ಟವಾಗಿರುವಂತೆ ಹಾಡಿ ಕೊನಯ ಪಾದ
೩೨
---------------------------------------------------------------
ಗಂಡುಸರ ಹಾಡುಗಳು
ದಲ್ಲಿರುವ ಅಧಿಕ ಗಣಗಳನ್ನು ಯಥಾ ಸೌಕರ್ಯವಾಗಿ ಆವರ್ತ ಮಾಡಿಕೊಂಡು
ಮುಂದಿನ ಶ್ಲೋಕ, ಅಥವಾ ಸಖಿಗೆ ಬರುವುದು. ಅಲ್ಲಿ ತಾಳವು ಬದಲಾಯಿಸಿ ತ್ರಿಶ್ರ
ತ್ರಿಪುಟವಾಗುವುದು. ಇಲ್ಲಿ ಕೆಲವರು ರಾಗವನ್ನು ಬದಲಾಯಿಸುವುದೂ ಉಂಟು.
ಮುಂದೆ ಚಾಲ್ ಎಂಬುದು ಮೊದಲಿನ ಪಲ್ಲವಿಯ ಧಾಟಿಯನ್ನು ಹಿಡಿಯುವುದು.
ಇಲ್ಲಿ ಬರುವ ಚಾಲ್‌ನಲ್ಲಿ ಒಂದೇ ಒಂದು ಪಾದವಿದ್ದು ಪಲ್ಲವಿಯ ಎರಡನೆಯ
ಪಾದವು ಇಲ್ಲಿ ಪ್ರನರಾವರ್ತಿತವಾಗುವುದು.
ಹೀಗೆ ಒಂದು ಚೌಕವನ್ನು ಹಾಡಿ ಆದ ಮೇಲೆ ಹಾಡುಗಾರನು ತಾನು ಹಿಡಿ
ದಿರುವ ಕಡ, ಅಥವಾ ಡಬ್ಬಿನ ಮೇಲೆ ಒಂದೆರಡು ಆವರ್ತಗಳನ್ನು (ಯಥಾ ರುಚಿ
ಯಾಗಿ ಆದಿತಾಳ, ಅಥವಾ ಛಾಪು) ಬಾಜಿಸಿ ಮತ್ತೊಂದು ಚೌಕವನ್ನು ಆರಂಭಿಸು
ವನು. ಹೀಗೆ ಹಾಡುವವನಿಗೆ ಶಕ್ತಿ ಸಾಮರ್ಥ್ಯಗಳು ಇದ್ದ೦ತೆಲ್ಲ ರಾಗವು ಬೆಳೆಯು
ತ್ತದೆ. ಆದರೂ ಲಾವಣಿಗಳಲ್ಲಿ ತಾಳದ ಗತ್ತಿಗಿರುವ ಪ್ರಾಧಾನ್ಯವು ರಾಗದ ಗಮ್ಮುತ್ತಿ
ಗಿಲ್ಲವೆಂಬುದನ್ನು ವಾಚಕರು ನೆನಪಿನಲ್ಲಿಡಬೇಕು.
ಈ ಲಾವಣಿಯನ್ನು ಹಾಡುವ ಧಾಟಿಯನ್ನು ಜೆ. ಎಸ್. ಫ್ಲೀಟರವರು
ಇಂಡಿಯನ್ ಆಂಟಿಕ್ವೆರಿಯಲ್ಲಿ XIV, XV, XVI, 77111, XIX ನೆಯ ಸಂಪುಟ
ಗಳಲ್ಲಿ ಕೊಟ್ಟಿದ್ದಾರೆ; 'ಮ್ಯೂಸಿಕ್ ಆಫ್ ಹಿಂದೂಸ್ತಾನ್ ' ಎಂಬ ಪುಸ್ತಕದಲ್ಲಿಯೂ
(ಮೂರನೆಯ ಅಧ್ಯಾಯದಲ್ಲಿ) ಒಂದಿದೆ. ಮ|| ಶೇಷಗಿರಿರಾಯರು ರಂಗಭೂಮಿಯ
೭ನೆಯ ಸಂಪುಟದ ೬ನೆಯ ಸಂಚಿಕೆಯಲ್ಲಿಯೂ ಲಾವಣಿಯ ಧಾಟಿಯನ್ನು ಸ್ವರ
ಹಾಕಿ ಬರೆದಿದ್ದಾರೆ. ಜಿಜ್ಞಾಸುಗಳಿಗೆ ಹೋಲಿಸುವುದಕ್ಕೆ ಸ್ವಲ್ಪವಾದರೂ
ಅನುಕೂಲವಾಗಲೆಂದು ಒಬ್ಬ ಮಿತ್ರರು ಹಾಕಿಕೊಟ್ಟಿರುವ ಸ್ವರವನ್ನು ಸಾಹಿತ್ಯ
ದೊಡನೆ ಇಲ್ಲಿ ಕೊಟ್ಟಿದ್ದೇವೆ
೧. "ಪಿರಿಯಾ ಪಟ್ಣಿದ ಜಗಳವ ಹೇಳ್ತೀನಿ, ಕೇಳಿ ರಣ್ಣ ನೀವೆಲ್ಲ.... ॥
ಸಾಮಮ ಮಮಮಮ, ಮಪಪಾ, ಮಗಗರಿ, ರಿರೀಗ ಗಮಮಾ ಮಗರಿಸ ಸರಿರೀ ॥"
೨. "ಅರಿಯದ ಹಸುಮುಗ, ದಳವಾಯಿ ಹೊಂಟನು ಮಾಡಲಿಕೆ ಹಲ್ಲಾ ........ ||
ನೀನಿನಿ ನೀನಿನಿ ಸಾಸಸ ಸಾಸಸ, ಮಾಮಗ ಗರಿಸಾ.... ॥ "
ಒಂದೊಂದು ವೇಳೆ ಎರಡನೆಯ ಪಾದದ ಧಾಟಿಯಲ್ಲಿ ಮೊದಲನೆಯ ಪಾದ
ವನ್ನು ಹೇಳುವುದೂ ಉಂಟು.
ಒಟ್ಟಿನಲ್ಲಿ, ಲಾವಣಿಗಳನ್ನು ಯಮನ್, ಪೀಲು, ಪಂತು ವರಾಳಿ, ಭೈರವಿ,
ಶಂಕರಾಭರಣ, ಹನುಮ ತೋಡಿ, ಮಾಯಾ ಮಾಳವ ಗೌಳ ಮೊದಲಾದ ಪ್ರಸಿದ್ಧ
ರಾಗಗಳಲ್ಲಿ, ಸಂಪೂರ್ಣ ರಾಗ ಸಂಚಾರವಿಲ್ಲದೆ, ಅನೇಕ ವೇಳೆಗಳಲ್ಲಿ ರಾಗ ಹೋಯಿತು
೩೩
----------------------------------------------------------------------
ಕರ್ಣಾಟಕ ಸಂಸ್ಕೃತಿ
ಬಂದಿತು ಎಂಬ ಯೋಚನೆಯೂ ಇಲ್ಲದೆ, ಎರಡು ಮೂರು ಸ್ವರಗಳನ್ನು ಮುಟ್ಟದೆಯೇ
ಹಾಡುವರೆಂದು ತೋರುತ್ತದೆ. ಈ ವಿಚಾರವನ್ನು ವಿದ್ವಾಂಸರು ಪರಾಮರ್ಶಿಸ
ಬೇಕು.
ಈಗ ನಾವು ಹೇಳಿರುವ ಇದಿಷ್ಟರಿಂದಲೇ ಲಾವಣಿ ಸಾಹಿತ್ಯವು ಎಷ್ಟು ವಿಸ್ತಾರ
ವಾಗಿದೆಯೆನ್ನುವುದರ ಅರಿವಾಗಿರಬೇಕು. ಅದನ್ನು ಸ್ಥಿರಪಡಿಸುವ ಒಂದು ಮಾತು
ನಮ್ಮ ಕಿವಿಗೆ ಬಿದ್ದಿದೆ: ಮೈಸೂರು ಪಟ್ಟಣವೊಂದರಲ್ಲಿ ಒಂದೊಂದು ಗರಡಿ
ಯವರಲ್ಲಿ, ಚಾಮುಂಡಿಯ ಬೆಟ್ಟದ ಪ್ರತಿಯೊಂದು ಮೆಟ್ಟಿಲಿಗೆ (ಒಂದು ಸಾವಿರ
ಮೆಟ್ಟಿಲು) ಒಂದೊಂದು ಲಾವಣಿಯಂತೆ ಹೇಳಿದುದನ್ನು ಮತ್ತೆ ಹೇಳದೆ, ಹೇಳಲು
ಬೇಕಾಗುವಷ್ಟು ಸಾಹಿತ್ಯವಿದೆಯಂತೆ | ಒಂದು ಊರಿನಲ್ಲೇ ಇಷ್ಟು ಇದ್ದರೆ ಮಿಕ್ಕು
ಕರ್ಣಾಟಕದಲ್ಲೆಲ್ಲಾ ಇನ್ನೆಷ್ಟು ಇರಬಹುದು!
ಹಾಡುವ ರೀತಿಯೂ ಕೊಂಚ ಕೊಂಚ ಭಿನ್ನೈಸಬಹುದು. ತಿಳಿದವರೊಬ್ಬರು
ಬಳ್ಳಾರಿಯಲ್ಲಿ ಹಾಡುವ ರೀತಿ ಬೇರೆ, ಹರಿಹರದಿಂದ ಆಚೆಗೆ ಹಾಡುವ ರೀತಿ ಬೇರೆ,
ಮೈಸೂರು ಬೆಂಗಳೂರುಗಳ ರೀತಿಯೇ ಬೇರೆ" ಎಂದೊಮ್ಮೆ ಹೇಳಿದ್ದರು. ಮಂಗಳೂರಿನ
ಕಡೆಯದೂ ಬೇರೆಯದಾಗಿರಬಹುದು. ಇದರಂತೆಯೇ, ಲಾವಣಿಯ ಒಂದೊಂದು
ನುಡಿಯ ಬೇರೆ ಬೇರೆ ಅಂಗಗಳಿಗೆ ಬೇರೆ ಬೇರೆ ಹೆಸರೂ ಇರಬಹುದು. ಸಂಗ್ರಹದ
ಕಾರ್ಯವು ತೃಪ್ತಿಕರವಾಗಿ ಸಾಂಗವಾಗಿ ನಡೆಯುವ ವರೆಗೆ ಸಮಗ್ರವಾಗಿ, ಸರಿಯಾಗಿ
ಹೇಳುವುದು ಸಾಧ್ಯವಿಲ್ಲವೆಂದು ಸೂಚಿಸಿ ಮುಂದಿನ ವಿಭಾಗಗಳ ಕಡೆಗೆ ಹೋಗುವೆವು.
(ಆ) ವಿನೋದದ ಪದಗಳು
ವಿನೋದದ ಪದಗಳು ಎರಡನೆಯ ಜಾತಿಗೆ ಸೇರಿದವು. ಇವುಗಳಲ್ಲಿ ಅರ್ಥ
ವಿಲ್ಲದ ಪದಗಳು, ಜಗಳದ ಪದಗಳು, ತುಂಡು ಪದಗಳು, ಹಾಸ್ಯದ ಪದಗಳು,
ಕೋಲಾಟದ ಪದಗಳು, ತಂದನಾನಾ ಪದಗಳು ಬಂದು ಸಾಮಾನ್ಯವಾಗಿ ಆರು
ಗುಂಪುಗಳನ್ನು ವಿಂಗಡಿಸಬಹುದು. ಕೋಲಾಟದ ಪದಗಳಲ್ಲಿ ನುಡಿಗಳನ್ನೆಲ್ಲ ಒಬ್ಬರು
ಹೇಳುವರು ; ಪಲ್ಲವಿಯನ್ನು ಎಲ್ಲರೂ ಸೇರಿ ಹೇಳುವರು. ತಂದನಾನಾ ಪದಗಳ
ಲ್ಲಿಯೂ ಹೀಗೆಯೇ ಒಬ್ಬನು ಏಕನಾದ (ಕೆಲವರು ಒಂದು ತುಂಡು ವೀಣೆಯಂತಹ
ವಾದ್ಯ) ವನ್ನು ಬಾಜಿಸಿಕೊಂಡು ಅದರ ಶ್ರುತಿಗೆ ಹೊಂದಿಕೊಂಡು ತಾರಸ್ಥಾಯಿ
ಯಲ್ಲಿ ನುಡಿಯನ್ನು ಹೇಳುವನು. ಅದು ಮುಗಿದ ಮೇಲೆ ಅವನ ಹಿಮ್ಮೇಳದವರು
ತಾಳಗಳನ್ನು ಬಾಜಿಸುತ್ತ ವಾದ್ಯದ ತಂತಿಗಳನ್ನು ತಾಳಕ್ಕೆ ಸರಿಯಾಗಿ ಜಾಗ್ರತೆ
ಜಾಗ್ರತೆಯಾಗಿ ಮಿಡಿಯುತ್ತ, "ತಂದಾನ" ಎಂಬ ಒಂದೆರಡು ಅವರ್ತಗಳನ್ನುಳ್ಳ
ಪಲ್ಲವಿಯನ ನ್ಫು ಎಲ್ಲರೂ ಸೇರಿ ಹಾಡುವರು.
೩೪
----------------------------------------------------------------
ಗಂಡುಸರ ಹಾಡುಗಳು
ಲಾವಣಿಗಳ ನುಡಿಯಲ್ಲಿ ಕಾಣಿಸುವ ಬೇರೆ ಬೇರೆ ತಾಳಗಳ ಅಂಗಗಳು ಇಲ್ಲದೆ
ನುಡಿಗಳು ಏಕ ರೂಪವಾಗಿರುವುದು, ಹಾಡಿನಲ್ಲಿ ರಾಗಾಂಶವು ಅಧಿಕವಾಗಿರುವುದು,
ಕೊನೆಯಲ್ಲಿ ಏನಾದರೊಂದು ಅರ್ಥವಾಗುವ, ಆಗದ, ತುಂಡೊಂದನ್ನು ರಾಗ ಸೇರಿಸಿ
ದೀರ್ಫವಾಗಿ ರಾಗ ಎಳೆಯುವುದು, ಹಾಡುಗಳನ್ನು ಸಾಮಾನ್ಯವಾಗಿ ತಾರಸ್ಥಾಯಿ
ಯಲ್ಲಿ ಹಾಡುವುದು,--ಈ ಜಾತಿಯ ಗುರುತುಗಳು. ಈ ಅಂಶಗಳನ್ನು ಸಾಧ್ಯವಾದ
ಮಟ್ಟಿಗೆ ಉದಾಹರಣೆಗಳಿಂದ ಸ್ಪಷ್ಟಪಡಿಸೋಣ.--
I ಅರ್ಥವಿಲ್ಲದ ಹಾಡುಗಳು.
೧೫, " ಮೂರು ಲೋಕಕೆ ಶಿವ ಕಳುಹಿದನು | ಮೂರು ಕಣ್ಣಿನ ತೆಂಗಿನ ಕಾಯಿ |
ಭಕ್ತ ಜನಗಳು ಬೇಡಿಕೊಂಬುತಾರೆ ಕೃಷ್ಣನೆಂಬ ಕುಂಬಳ ಕಾಯಿ ||೧॥
ಸಪ್ಪೆ ತಿಂದರೆ ಪಥ್ಯ ಮಾಡಿದ ಹಾಗೆ ಒಳ್ಳೆದೈತೆ ಕಾರ ಮೆಣಸಿನ ಕಾಯಿ |
ಮನೆ ಹೆಂಡತಿಗೆರಡು ಮಕ್ಕಳಿದ್ದರೆ ಅದನೆಂಬರು ಜವಳಿ ಕಾಯಿ ॥೬ ||
ವರದರಾಜ ಸ್ವಾಮಿಯಿರುವ ಕಂಚಿಯೊಳಗೆ ಕಂಚೀ ಕಾಯಿ |
ನಂಜನಗೂಡು ಸಾಲುತೋಪಿನಾಗೆ ಈಶ್ವರನ ಪತ್ರೇಯ ಕಾಯಿ ॥೭॥
ಹಗಲು ಯಿರುಳೂ ಧ್ಯಾನ ಮಾಡುತಾರೆ ಮನಸಿನೊಳಗೆ ರಾಮಫಲ ಕಾಯಿ |
ಗಂಡನ ಅಂಜಿಕೆ ಮಾಡಿದಳು ಪತಿವ್ರತೆ ಸೀತಾಫಲದ ಕಾಯಿ" * || ೮॥
* * * * *
೧೬. " ರಂಗಪ್ಪ | ಜಾಜಿಯ ಹೂವ್ವ, ಬೆಳ್ಳಗೆ || ಪ ॥
ಕಾಶಿಯೆಂಬೋದು ನಗರ | |
ದೋಸೆಯೆಂಬೋದು ತಿಂಡಿ!
ಆಸೆಯೆಂಬೋದು ಹಾಳು !
ಮೀಸೆಯೆಂಬೋದು ಕೂದಲು " ॥೧॥
ಕೆಲಸದ ಜೊತೆಯಲ್ಲಿ ಹಾಡುವ ಹಾಡುಗಳೂ ಈ ಜಾತಿಗೆ ಸೇರಬೇಕು.
ಕಲ್ಲನ್ನು -ಎತ್ತುವಾಗ, ಅಥವಾ ಮೇಲಕ್ಕೆ ಸೇದಿಕೊಳ್ಳುವಾಗ, ಸಾಗಿಸುವಾಗ,
ಒಬ್ಬನು. " ಚಾಮುಂಡವ್ವಾ', "ಕಡುಬೂ ತುಪ್ಪಾ ' ಮೊದಲಾದ ಅರ್ಥವಿಲ್ಲದ
ಮಾತುಗಳನ್ನು ಹೇಳುವನು. ಮಿಕ್ಕವರೆಲ್ಲ "ಸೋಹಾ" ಎಂದು ಹೇಳಿ ಒಟ್ಟಿಗೆ
ಕೆಲಸ ಮಾಡುವರು. ಹೇಳುವುದು ಏನೇನೋ ಆಗಿದ್ದರೂ ತಾಳಕ್ಕೆ ಸರಿಯಾಗಿರುವುದು
ಮಾತ್ರ ತಪ್ಪುವುದಿಲ್ಲ. (ಸೋಹಾ -ಸ್ಟಾಹಾ ಇರಬಹುದೊ?)
II. ಜಗಳೆಗಳು.-- ಧಾನ್ಯಗಳ ಜಗಳ, ಅಡಕೆಲೆ ಜಗಳ, ಮಿಸುನಿ ಲೋಹದ
ಜಗಳ, ಮೀನಿನ ಜಗಳ ಮೊದಲಾದವು ಈ ಜಾತಿಯವು. ಕೆಲವು ಲಾವಣಿಯ
ರೂಪದಲ್ಲಿಯೂ ಇವೆ: (ಮಿಸುನಿ ಲೋಹದ ಜಗಳ). ಮೈಸೂರಿನ ಒಂದನೆಯ 'ರೀಡರಿ'
ನಲ್ಲಿರುವ " ನೀನಾರಿಗಾದೆಯೋ ಎಲೆ ಮಾನವಾ", ಶ್ರೀ ಮಂಗೇಶರಾಯರ ಪದ್ಯ
......
* 'ಕ, ಸಾ. ಪ. ಪತ್ರಿಕೆ ', ಸಂಪುಟ ೩, ಸಂಚಿಕೆ ೪, ಪುಟ ೭೦-೬೧.
೩೫
------------------------------------------------------
ಕರ್ಣಾಟಕ ಸಂಸ್ಕೃತಿ
ಪುಸ್ತಕದ (೧) ""ಬಿದಿರು"-, ಈ ಜಾತಿಯ ಹಾಡುಗಳನ್ನೆ ಲ್ಲ ಈ ಗುಂಪಿಗೇ
ಸೇರಿಸಬಹುದು.
ಧನ್ಯಗಳ ಜಗಳ
೧೭. "ಗೋಧಿ.--ಏ ಕಡಲೀ ! ನಿನ್ನ ಮಾರಿ ಸುಡಲೀ |
ನಿನ್ನ ಕಲ್ಲಾಗ್ಹಾಕಿ ಗಡ ಗಡ ಒಡಿಲೀ || ಪ ||
ಕಡಲಿ.--ಏ ಗೋಧಿ । ಯಾತಕೆ ವಾದಿ |
ತುಪ್ಪ ಇಲ್ಲದೆ ತಿಂದರೆ ಕುಕ್ಷಿಗೆ ಬಾಧಿ ॥ ಪ ॥
ನಾನು ಆಗುವೆನು ಕುದುರೆಗೆ ದಾಣಿ!
ನನ್ನ ಹುರಿದು ಒಡೆದರೆ ಆಗುವನು ಪುಟಾಣಿ |
ನನ್ನ ಹಿಡಿದು ಹಿಡಿದು ತುಂಬುವರು ಗೋಣಿ |
ನೀನೆನ್ನ ಸರಿಯೇನು ಗೋಧಿ ಗುಮ್ಮಾಣೀ ॥೧॥
ಗೋಧಿ.--ನಾನು ಆಗುವೆನು ಹೋಳೀಗಿ |
ನನ್ನ ತಿಳಿದು ಬೀಸಿದರೆ ಆಗುವೆನು ಶ್ಯಾವೀಗಿ ॥
ಪಿತೃಗಳಿಗಾಗುವೆನು ಗಾರೀಗಿ |
ನೀನೆನ್ನ ಸರಿಯೇನೆ ಹುಚ್ಚ ಹೋರೀಗಿ | "
ಗಂಡ ಹೆಂಡಿರ ಜಗಳ
೧೮. "ಹ್ಯಾಂಗೆ ಸಂಸಾರಮಾಡಲಿ |
ಈ ಮುರುವನ ಕೂಡೆ । ಈ ಮುರುವನ ಕೂಡೆ। ನಾ ನಿನ್||
ಉಡೋಕೆ ಶ್ಯಾಲೆಯಿಲ್ಲವಲ್ಲೋ.......... |*
ಈಚಲು ಚಾಪೆಯಿಲ್ಲವೇನೇ ........... * ॥೧॥
ಇಡೋಕೆ ವಾಲೆಯಿಲ್ಲವಲ್ಲೊ .,,.....|*
ಈರುಳ್ಳಿ ಹೋಳು ಯಿಲ್ಲವೇನೇ ..............* ॥ ೨॥
(ಇದನ್ನು ಹೇಳುವಾಗ ಪಲ್ಲವಿಯ ಮೊದಲನೆಯ ಪಾದವು ಸಾವಕಾಶವಾಗಿ
ನಡೆದು ಎರಡನೆಯ ಪಾದವು ಮಧ್ಯಮ ಕಾಲದಲ್ಲಿ ನಡೆಯಬೇಕು. ನುಡಿಗಳೆಲ್ಲ
ಗುಬ್ಬಚ್ಚಿಗಳ ಜಗಳದ ಹಾಗೆ ತೃತೀಯ ಕಾಲದಲ್ಲಿ ನಡೆಯಬೇಕು.)
11. ತಂದನಾನಾ ಪದಗಳು. ಹಳ್ಳಿಗರಿಗೆ ಇದು ಬಲು ಅಚ್ಚುಮೆಚ್ಚಾದ
ಪದಗಳು. ಜಗಲಿಗಳ ಮೇಲೆ, ರಾತ್ರಿಯ ಊಟವಾದ ಮೇಲೆ, ಎಲ್ಲಿಯವರು ಅಲ್ಲಿ
ನಿರಾಂತಕವಾಗಿ ಒರಗಿಕೊಂಡು ಈ 'ತಂದಾನಾ' ಪದಗಳನ್ನು ಕೇಳುತ್ತ ಕುಳಿತು
ಕೊಳ್ಳುವರು. ಹಾಡಿದವರಿಗೆ ಕಾಸು ಕಾಳು ಎಲ್ಲವೂ ಸಿಕ್ಕುವುದು. (ಇದನ್ನು
ಹಾಡುವವರ 'ದಿರಸೂ' ಬಲು ಅಂದವಾಗಿರುವುದು.)
೧೯, '"ತಂದಾನೊ ತಾನಾನಿ, ತಂದಾನೋ ತಾನಾನಿ, ತಾನು ತಂದನು ತಂದೆ!
ನಾನಿ ತಂದನು ತಾನಿ, ತಾನು ತಂದನು ತಂದೆ, ಶಿವ್ನೀಗೆ ಶರಣೆನ್ನಿ || ಪ ॥
.........................
* ಇಲ್ಲಿ ಒಂದು ಬೈಗುಳು.
೩೬
----------------------------------------------------------
ಗಂಡುಸರ ಹಾಡುಗಳು
ಕಟಿ ಕಟೀ ಕಲ್ಲೂರು ಬೆಡಗೀನ ಬೇಲೂರು, ಹಿಂದೆ ತಾವರೆಗೇರೆ ಮುಂದೆ ತಾವರೆಗೇರೆ ।
ಕಲ್ಲೇಶ ಲಿಂಗಾಗೆ ಮಲ್ಲೇಶ ಲಿಂಗಾಗೆ ಕಡ್ಗೂರು ರಾಮಪ್ಗೆ ಒಡ್ಡೆ ತೆಂಗಿನ ಕಾಯಿ ॥
ಓಟೇಯೂ ಶೆಗ್ದಾವ್ರು ಅಂದ ಚಂದಕೆ ಮೂರು ಪಟ್ಟೇಯ ತೆಗದವ್ರು |
ಪಟ್ಟಣದ ಮನಸ್ವಾಮಿ ಪಾದಾಕೆ ಬಿದ್ದವ್ರು ಅರಿತೋರಿಗೆ ಮತ್ತೆ ಮರಿತೋರಿಗೆ ದೇವ॥
ಮತಿ ಕೊಡೋ ಮಾದೇವ, ಸತಿ ಕೋಡೊ ಸಾದೇವ, ವಿದ್ಯೇವ ಕಲಿಸಯ್ಯ ಹಿರಿಯೋರ ಕೂಡೆ ।
ನೆರೆಸಿದ್ದಾ ರೊಟ್ಟೀಗೆ ಬಿದ್ದಂತೆ ಶರಣೋ" ॥೧॥
ಮೈಸೂರಿನ ಸುತ್ತುಮುತ್ತಲಿರುವ ಚಾಮಾಯೀ ನಂಜುಂಡರ ಪ್ರಣಯದ
ಹಾಡುಗಳು ಈ ಜಾತಿಯಲ್ಲಿ ಬಲು ಪಸಂದಾದವು. ಅವಕ್ಕೆ ಇದೊಂದು
ಉದಾಹರಣೆ.
೨೦. ಚಾಮುಂಡಿಯ (ಹಾಡಿನಲ್ಲಿ ಚಾಮಾಯಿ) " ಮೂಗುತಿ ಮುರಿಯಿತು,
ಮುಂಬಲ್ಲು ಸಿಡಿಯಿತು. ಉಟ್ಟಂಗೆ ಪದಕ ಬೆಂಕಿಯಲ್ಲಿ ಬೇಯಿತು "--ಇಂತಹ ಕನಸು
ಕಂಡಳು. ತಂಗಿಯಾದ ಉತ್ತನಹಳ್ಳಿ ಮಾರಿಯನ್ನು ಕರೆದು, " ನಂಜನಗೂಡಿನ ನಂಜುಂಡ
ಲಿಂಗಗೆ ಏನು ಕಷ್ಟವೋ ಕಾಣೆ, ಹೋಗಿ ನೋಡಿಬಾ" ಎಂದು ಕಳುಹಿಸಿದಳು. ಅವಳು
ನೋಡಿ ಬರುವುದಕ್ಕೆ ಹೋದನಳು " ಭಾವ ವಿಷಕಂಠನ ಕೂಡಿದಳು." ಕೊನೆಗೆ,
"ಪಟ್ಟಿದ ರಾಣಿ ಪಾರ್ವತಿ"ಗೆ ಹೆದರಿ ಊರುಬಿಟ್ಟು ಬರಲಾರದೆ, " ಬಟ್ಭಾನೆ ಮೊಗದವಳ
ಕಟ್ಟಾಣಿಯಂತಹ ಕಡು ಚೆಲ್ವೆ ಚಾಮಾಯಿಯ ಮರೆತೆನೆಂದರೆ ಮನಸಿಲ್ಲವಲ್ಲ ಹ್ಯಾಗೆ
ಮಾಡಲೊ! " ಎಂದು ತಪಿಸುತ್ತಿದ್ದ ನಂಜುಂಡನು, ಏನೋ ಉಪಾಯ ಮಾಡಿ,
" ಬೆಟ್ಟದ ರಾಣಿ ಚಾಮಾಯಿ "ಯನ್ನು ಬಂದು ಕೂಡಿದನು. ಅಲ್ಲಿ ಯೆಲ್ಲದೇವೀರಿ
(ಉತ್ತನಹಳ್ಳಿ ಮಾರಿ)ಯ ಗುಟ್ಟು ಬಯಲಾಯಿತು. ಆದರೂ ನಂಜುಂಡ ಲಿಂಗನನ್ನು
ಕೊನೆಗೆ ಕರತಂದಳಲ್ಲಾ ಎಂದು ಚಾಮಾಯಿಯು ಅವಳನ್ನು ಕ್ಷಮಿಸಿ ನಂಜುಂಡನೊಡನೆ
ಸುಖವಾಗಿದ್ದಳು."
ಈ ಹಾಡು ಸುಮಾರು ನೂರು ನುಡಿಗಳ ವರೆಗೆ ಇದೆ.
(ಇದನ್ನು ಈ ಜಾತಿಯ ಸಂಸ್ಕೃತ ಚಾಟು ಶ್ಲೋಕಗಳೊಡನೆ
ಹೋಲಿಸಿರಿ.)
IV. ಕೋಲಾಟಿದ ಪದಗಳು. ಹೆಣ್ಣು ಮಕ್ಕಳಲ್ಲಿಯೂ ಕೋಲಾಟವುಂಟು.
ಅವರು ಬಸವಣ್ಣನನ್ನು ದೀವಳಿಗೆಯ ವೇಳೆಯಲ್ಲಿ ಕೂರಿಸಿ ಆ ಬಸವಣ್ಣನ ಮುಂದೆ
ಕೋಲು ಹೊಯ್ಯುವರು. ಆದರೆ ಗಂಡುಸರ ಕೋಲಾಟಕ್ಕೆ ಆ ನಿರ್ಬಂಧವಿದ್ಧಂತೆ ಇಲ್ಲ.
ವ್ಯವಧಾನವು ಇದ್ದು ಆಸೆಯಾದಾಗಲೆಲ್ಲ ಕೋಲು ಹೊಯ್ಯುವರು. ಸುಗ್ಗಿಯಲ್ಲಿ ಕಣ
.........
* ' ಹುಟ್ಟಿದ ಹಳ್ಳಿ ಹಳ್ಳಿಯ ಹಾಡು' (ಅರ್ಚಕ ಜಿ. ರಂಗಸ್ಕಾವಿಂಯವರು), ಪ್ರಟ ೩೦.
ಈ ಹಾಡಿನ ವಿಚಾರವಾಗಿ ಇವರು ಹೇಳುವ " ಇಲ್ಲಿಯ ವರೆಗೂ (೫ ನುಡಿ) ಸುಮ್ಮನೆ ಕೋಲು
ಮತ್ತು ತಾಳ ಝಲ್ಲರಿಗಳ ಲಯಕೆ ಸರಿಯಾಗಿ "ಸದ್ದು ಮಾಡುತ್ತ ನಿಂತಲ್ಲೇ ನಿಂತಿರುವರು.
ಮುಂದಕೆ ಪದ್ಮದಂತೆ, ಚಕ್ರದಂತೆ, ಕೋಟೆಯಂತೆ, ಸೈನಿಕರಂತೆ ವ್ಯೂಹಗಳನ್ನು ರಚಿಸಿಕೊಂಡು ಒಬ್ಬರ
ಕೈಯಲ್ಲಿರುವ ಕೋಲಿಗೆ ಇನ್ನೊಬ್ಬರು ಟಕ್ಕಿ ಹೊಡೆಯುತ್ತ ಹಾಡುವರು" ಎಂಬ ಮಾತು ಗಮನಿಸ
ಬೇಕಾದುದು. ಮೈಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ' ತಂದಾನಾ' ಪದಗಳನ್ನು, ಮೇಲೆ
ಹೇಳಿರುವಂತೆ ಕುಳಿತು ಹಾಡುವುದೇ ಹೆಚ್ಚು.
೩೭
----------------------------------------------------------------------
ಕರ್ಣಾಟಕ ಸಂಸ್ಕೃತಿ
ಕಾಯುವ ಕೆಲಸ ಬಿದ್ದಾಗ, ಬೆಳುದಿಂಗಳ ರಾತ್ರಿಗಳಲ್ಲಿ, ಹೆಚ್ಚು ಎಂದು ತೋರುತ್ತದೆ.
ಈ ಕೋಲಾಟದ ಸಂದರ್ಭದಲ್ಲಿ ತಪ್ಪದೆ ಬಸವಣ್ಣನ ಹೆಸರು ಬಂದೇ ಬರುವಂತೆ ಕಾಣು
ತ್ತದೆ. ಇದೊಂದು ವಿಶೇಷ. ಈ ಕೋಲಾಟದ ಉತ್ಪತ್ತಿಯನ್ನು ಕುರಿತ ಒಂದು
ಹಾಡನ್ನು 'ಜಯಕರ್ನಾಟಕ'ವು ಪ್ರಕಟಿಸಿದೆ: (ಸಂಪುಟ ೧೦, ಸಂಚಿಕೆ ೮,
ಪುಟ ೬೧೨)
೨೧.
"ಸ್ವಾಮಾ ಹುಟ್ಟುವ ಮೊದಲೇ ಭೂಮಿ ಹುಟ್ಟುವ ಮೊದಲೆ |
ಸ್ವಾಮಿ ಮಾದೇವ ರಾಯಾ | ಹುಟ್ಟಿ ಬಂದನೋ ಕೋಲು || ೧ ||
* * * *
ಪಾತಾಳ ಜಡಿದು ಪಾರವಾಳಕ್ಕಿ ಬಂದವು ಕೋಲು ॥ ೩೦ ||
* * * *
ಸತ್ಯದಲ್ಲಿ ಚಂದನ ಗಿಡವ ಪಡೆದನು ಶ್ರೀ ಮಾದೇವ ರಾಯ |
ಬಸವನ ಕೋಡೀನ ಮೇಲೆ ಚಿಗ್ಗಾ ಸಾಕಿದವು || ೩೨ ||
ಬಸವನ ಕೋಡೀನ ಮೇಲೆ ಕಡ್ಡಿ ಏರಿಸಿದವು ಕೋಲು |
ಅದರ ಮೇಲೆ ಮೂರ್ಮೊಟ್ಟೆ ತಾವು ಹಾಕಿದವು ॥ ೩೩ ॥
ಮೊಟ್ಟೇ ಹಾಕಿದ ಮೇಲೆ ಮೊಟ್ಟೇ ಮೊಟ್ಟಿಗೆ ತಾಕಿ ।
ಜರಿದು ಬಿದ್ದು ಸ್ವಾಮಿಯ ಮೇಲೆ ಸಂಕಟ ಬಂದೀತು || ೩೪ ||
ಸ್ವಾಮಿ ಏನು ಮಾಡುತೈದಾನು ಮಾದೇವ ರಾಯಾ!
ಮೂರೆಂಬ ವರವನು ತಾ ಕೊಡುವನು ॥ ೩೫ ||
ಕರಿಯ ಮಂಡಲ ಭೂಮಿತಾಯಿ ಆಗಲೋ |
ಬಿಳಿಯ ಮಂಡಲಕ್ಕೆಂಬುದು ಆಕಾಶವಾಗಲೋ |
ಹಸರು ಮಂಡಲಕ್ಕೆಂಬುದು ಜೀವ ರಾಶಿಯ ಕೋಲು " ॥ ೩೬ |
* * * *
ಹೀಗೆ ಕೋಲು ಹುಟ್ಟಿತು. ಅನಂತರ ದೇವತೆಗಳೆಲ್ಲ ಸೇರಿ ಕೋಲಾಟವಾಡಿ
ದರು:
" ಮಾದೇವ ರಾಯಾ ಮದ್ದಲಿ ತಡೆದಾ |
ದೇವೇಂದ್ರ ರಾಯಾ ದೇಂವಟೆ ತಡೆದಾ ।
ತಾಳಾಮಣಿ ತಾಳಾ ತಡೆದಾನೂ ಕೋಲು " ॥ ೪೪ |
ಎಲ್ಲರೂ ಚಿನ್ನ, ಬೆಳ್ಳಿ, ಮುತ್ತಿನ ಕೋಲುಗಳನ್ನು ತೆಗೆದುಕೊಂಡು ಆಡಿದರು.
ಚಿನ್ನ ಬೆಳ್ಳಿಯ ಕೋಲುಗಳು ಸಿಗುರೊಡೆದವು. ಮುತ್ತಿನ ಕೋಲು ಮೂರು ತುಂಡಾ
ಯಿತು. ಆಗ, "ಈ ಆಟ ನಮಗೆ ತರವಲ್ಲ ॥ ೫೩ ॥ ದೇವತೆಗಳಿರಾ ಈ ಆಟ ಮಾನವರ
ಮಕ್ಕಳಿಗೆ ॥ ೫೪ ॥" ಎಂದು " ಸತ್ಯದಲಿ ಹಾಲು ನೆರೆಯ ಪಡೆದನು ಮಾದೇವ ರಾಯ |
ಹಾಲಕೆರೆಯಿಂದ ಮಾನವನ ಪಡೆದನು ॥ ೫೬ ॥" ಅವನನ್ನು ದೇವತೆಗಳು ಕರೆದು,
"ಚಿನ್ನದ ಮದ್ದಲಿ ನೀ ಹಿಡಿಯಬೇಕು" ಎಂದರು. ಅವನು " ಚಿನ್ನದ ಮದ್ದಲಿ ತನಗೆ
೩೮
----------------------------------------------------------------
ಗಂಡುಸರ ಹಾಡುಗಳು
ಸ್ವಾಮಿ ತರವಲ್ಲ । ದೇವತೆಗಳಿರಾ | ಹೊನ್ನೆಯ ಮದ್ದಲಿ ತನಗೆ ಕೊಡಬೇಕು " ಎಂದು
ಕೇಳಿಕೊಂ ಡನು. ಹೀಗೆಯೇ »
" ಚಿನ್ನದ ತಾಳ ತನಗೆ ತರವಲ್ಲ ದೇವತೆಗಳಿರಾ | ಕಂಚಿನ ತಾಳ ಕೊಡಬೇಕೂ ॥ ೬೭॥
ಚಿನ್ನದ ಕೋಲು ತರವಲ್ಲ ದೇವತೆಗಳಿರಾ | ಕೊಡಸೀನ ಕೋಲು ತನಗೆ ಕೊಡಬೇಕು ॥ ೬೯ ॥
ಚಿನ್ನದ ಗುಮಟೇ ತನಗೆ ತರವಲ್ಲ ದೇವತೆಗಳಿರಾ | ಮಣ್ಣಿನ ಗುಮಟಿ ತನಗೆ ಕೊಡಬೇಕು |"
ಎಂದು ಪ್ರಾರ್ಥಿಸಿದನು. ದೇವತೆಗಳು ಆಗಲೆಂದು ಹರಸಿ, ನೂರೊಂದು ಕೋಲೂ
ನೂರೊಂದು ಹಾಡೂ ಕೊಟ್ಟು ತಮ್ಮ ತಮ್ಮ ಠಾವಿಗೆ ನಡೆದರು. " ಶ್ರೀ ಮಾದೇವ
ರಾಯ ತಮ್ಮನ (ಕೋಲನ್ನು) ಮುಂದೆ ಮಾಡಿ ಕೂತಿದ್ದಾನು."
ಈ ಕೋಲಾಟದಲ್ಲಿ ಆಡುವವರು ಎರಡು ಗುಂಪಾಗಿ ಸವಾಲ್ ಜವಾಬು ನಡೆಯಿ
ಸುತ್ತ ಕೋಲು ಹೊಯ್ಯುವುದೂ ಉಂಟು.
೨೨, " ಮಾತಾಡ್ ಮಾತಾಡು ಮಲ್ಲಿಗೆ, ಶಾಮಂತೀಗೆ ಇರುವಂತಿಗೆ ಸೈಯಂತೀಗೆ ॥ ಪ॥
ಸವಾಲು.--ಒಬ್ಳೀಗೆ ನಾಕ್ಮೊಲೆ | ಒಬ್ಳೀಗೆ ಎರಡ್ಮೊಲೆ | ಒಬ್ಬೀಗೆ ಸದ್ಯಾ | ಮೊಲೆಯಿಲ್ಲ |
ಜವಾಬು. -ಗೋವೀಗೆ ನಾಕ್ಕೊಲೆ | ಆಡೀಗೆ ಎರಡ್ಮೊಲೆ | ಕೋಳೀಗೆ ಸದ್ಯಾ । ಮೊಲೆಯಿಲ್ಲ ॥ ೧ ॥
ಸವಾಲು,--ಒಬ್ಬೀಗೆ ಕಾಲ್ಕೊಟ್ಟೆ | ಒಬ್ನೀಗೆ ಕೈಕೊಟ್ಟೆ | ಒಬ್ಬೀಗೆ ಸೀರೆ ಸೆಳಕೊಟ್ಟಿ ।
ಜವಾಬು,--ಪಂಚಾಲನ್ಗೆ ಕಾಲ್ಕೊಟ್ಟೆ | ಬಳ್ಗಾರಂಗೆ ಕೈಕೊಟ್ಟೆ | ಅಗ್ಸಂಗೆ ಸೀರೆ ಸೆಳಕೊಟ್ಟೆ ॥ ೨ ||
ಇದರಲ್ಲಿರುವ ಒಗಟುಗಳು, ಅದರಲ್ಲಿ ಕಾಣುವ ಪ್ರಕಾರಾಂತರವಾದ ಅರ್ಥ,
ಅದಕ್ಕೆ ಇರುವ ನಿರ್ದುಷವಾದ ಅರ್ಥ ಇವುಗಳನ್ನೆಲ್ಲ ಹೇಳಿದರೆ ಆಗುವ ಆನಂದವನ್ನು
ಗಮನಿಸಿರಿ. ಇಂತಹವನ್ನು ಆಗಾಗ ಅಲ್ಲಲ್ಲಿಯೇ ಹುಟ್ಟಿಸಿಕೊಂಡು ಹೇಳುವರು.
V. ತುಂಡು ಪದಗಳು.--ಇವು ಅದೆಷ್ಟಿವೆಯೋ ಹೇಳಬರುವುದಿಲ್ಲ. ಯಾವ
ಯಾವ ವಿಷಯದ ಮೇಲಿವೆ ಎಂಬುದನ್ನೂ ಹೇಳಬರುವಂತಿಲ್ಲ. ಉದಾಹರಣೆಗಳು,
೨೩. "ಬೀಗನ ಮನೆಯಲಿ ತುಂಬಿದೆ ನವಣಿ ।
ಬೀಗಿತ್ತೀಗೆ ಹತ್ತಿದೆ ಹೊಸ ಹೊಸ ತಗಣಿ ॥
ಬೀಗನ ಮಗಳು ತಾ ಬಲು ಸುಗುಣಿ |
ಬೀಗಿತ್ತಿ ತಿಂತಾಳೆ ಮರ ಮರ ಸಗಣಿ ॥"
ಈ ಮೇಲಿನ ಪದ್ಯ (?)ದಲ್ಲಿ ಹೇಳಿರುವುದೆಲ್ಲ ಬೀಗರ ಮನೆಗೆ ಸಂಬಂಧಪಟ್ಟವು.
ಇದಕ್ಕೆ. ವಿರುದ್ಧವಾಗಿ ಸಂಬಂಧದ ಗಾಳಿಯೂ ಇಲ್ಲದವುಗಳನ್ನು ತೆಗೆದುಕೊಂಡು
ಸೇರಿಸಿರುವ ಪದ್ಯಗಳೂ ಉಂಟು:
.................
* "ಹುಟ್ಟಿದ ಹಳ್ಳಿ ಹಳ್ಳಿಯ ಹಾಡು "_.ಇದರಲ್ಲಿ ಈ ಕೋಲಾಟದ ಹಾಡುಗಳು ಮುವ್ವತ್ತು
ಶೇಖರವಾಗಿವೆ. ಆ ಸಂಗ್ರಹದ ಕೊನೆಯಲ್ಲಿ ಅವರು ಹೇಳುವ-- "ಮೇಲಿನ ಪದ್ಯಗಳಲ್ಲಿ ದೇವತಾ ಸ್ತುತಿ
ಗಳೂ ವೀರರ ವರ್ಣನೆಗಳೂ ಇವೆ. ಅವುಗಳನ್ನು ಕಾವ್ಯ ದೃಷ್ಟಿಯಿಂದ ಪರಿಶೇಲಿಸಿ ವಿಮರ್ತಿಸಿದರೆ
ಪಾಮರ ಸಾಹಿತ್ಯದಲ್ಲಿ ರಸ, ಶ್ಲೇಷೆ, ಅಲಂಕಾರ, ಪ್ರತಿಭಾ- ಇವುಗಳ ಪ್ರವಾಹವೇ ತೋರಿಬರ
ಬಹುದು"-- ಎ೦ಬ ಮಾತು ಸರ್ವಥಾ ಸತ್ಯವಾದುದು.
೩೯
--------------------------------------------------------------------
ಕರ್ಣಾಟಕ ಸಂಸ್ಕೃತಿ
೨೪. ""ಛಳಿ ಛಳಿ ಎಂಬುದು ನಡುಕ |
ಮಕ್ಕಳ ಕೊರಳೀಗೆ ಪದಕ ।
ಪ್ರಾಯ ಹೋದ ಮೇಲೆ ಮುದುಕ |
ಪ್ರಾಣ ಹೋದ ಮೇಲೆ ಬದುಕ || " (೧೬ನೆಯ ಹಾಡಿಗೆ ಹೋಲಿಸಿರಿ)
ಇವುಗಳನ್ನು ರಾಗವಾಗಿ ಓದಿ ಮುಗಿಸುತ್ತಿದ್ದ ಹಾಗೆಯೇ " ಟಿಂಗ್ ಟಿಯ್ಯ್"
ಎ೦ಬ ಏಕನಾದದ ತಂತಿಯ ಮೀಟನ್ನು ಸ್ಮರಿಸಿಕೊಳ್ಳಿರಿ; ಎಂತಹ ಆನಂದವಾಗು
ವುದೋ ನೋಡಿರಿ.
VL ಹಾಸ್ಯದ ಹಾಡುಗಳು.--ಈ ಜಾತಿಯಲ್ಲಿ ಅದ್ಭುತಗಳೂ ಅಸಂಬದ್ಧ
ಪ್ರಲಾಪಗಳೂ ಇರುವುದರ ಜೊತೆಗೆ ತಿಳಿ ತಿಳಿಯಾದ ಹಾಸ್ಯವೂ ಉಂಟು.
೨೫. " ಸುಳ್ಳೂ ನಮ್ಮಲ್ಲಿಲ್ಲ ಸುಳ್ಳೇ ನಮ್ಮನೆ ದೇವರು |
ಗೊದ್ದ ಗೋಡೆ ಹಾಕಿದ್ಕಂಡೆ | ಬೆಕ್ಕು ರೊಟ್ಟಿ ತಟ್ಟಿದ್ಕಂಡೆ |
ಮೆಣಸಿನ ಕಾಯಿ ಕಂಡೆನಕ್ಕ. | ಮನಸನ್ ತೋರಾವಾ ||೧||
ಕೋಳಿ ಕೋಟೆ ಗೆದ್ದದ್ಕಂಡೆ | ಹಕ್ಕಿ ಕಂಬ್ಳಿ ನೇಯೋದ್ಕಂಡೆ |
ಅವರೆ ಕಂಡೆನಕ್ಕ ಆನೆ ಗಾತ್ರವಾ " ॥ ೨॥
ನರಿಯ ಮದುವೆ
೨೬. " ನರಿ ಬಹಳ ಪರಿಯಿಂಂದ ಮದುವೆ ಮಾಡುತಾದೆ |
ಹುಲಿ ಮನೆಯೊಳಗೆ ಹೆಣ್ಣ ತೆಗೆದೀತು ॥
ಕಾಗೆ ಬಂದು ಕೂಗ್ಕಾಡಿ ಹೇಳುತದೆ । ಗೂಗೆಯ ಕೂಡೆ ಬುದ್ದಿ ಮಾತು ॥
* * * *
ಮತ್ತೆ ಪಾರಿವಾಣ ಕೋರಿಹುಳ ಚಿಕ್ಕಾಟನ ಮೇಲ್ ಸಬರ್ ಹಾಕಿ |
ಮಲೆನಾಡು ಮಲದೇಶ ತಿರುಗಿ ತಾನು ತಂದು ಕೊಟ್ಟಿತು ಸಣ್ಣ ಅಕ್ಕಿ ॥
ಹಾಳಿ ಹದ್ದು ಬಂದು ಹೋಳಿಗಿ ಮಾಡಿತು ಬಹಳ ಬಹಳ ಹೂರಣ ಹಾಕಿ ॥
ಮೀನು ಬಂದು ಖುರಬಾನ ಬಸ್ತಿತು |
* * * *
ನೊಣ ಬಂದು ಅರಸೀನ ಹಚ್ಚೀತು | ನುಶೀ ಬಂದು ಕುಂಕುಮ ಹಚ್ಚೀತು ॥|
ಬೆಕ್ಕು ಭಾಷಿಂಗ ಕಟ್ಟೀತು | ಕಟ್ಟಿರುನೆ ಕಂಕಣ ಕಟ್ಟೀತು |
ಗೊದ್ದ ಬಂದು ಎಲೆ ಹಾಕೀತು | ಇರುವೆ ಬಂದು ನೀರ ಬಡಸೀತು ॥
ಇಲಿ ಬಂದೆಲೆಯಡಿಕೆ ಕೊಟ್ಟೀತು |"
(ಇದು " ಮೂಗೂರು ಷಹರ್ ಬಜಾರ್ । ಕವಿ ಹನುಮಂತ ದೇವರ ॥" ಪದ.
ಇದು ಸಿಕ್ಕಿದುದು ಚಿತ್ರದುರ್ಗದಲ್ಲಿ. ಎಲ್ಲಿಂದ ಎಲ್ಲಿಗೆ ಹೋಗಿದೆ ನೋಡಿರಿ!)
೪೦
-----------------------------------------------------------
ಗಂಡುಸರ ಹಾಡುಗಳು
ಕೊಣವೇಗೌಡನ ಕಥೆ
೨೭. " ನಮ್ಮೂರಲ್ಲಿದ್ದ ಕೊಣವೇಗೌಡ | ಜೀನನೆಂದರೆ ಹೆಸರ್ಹೇಳಬೇಕವನ |
* * * *
ಜೋಳನಾದ್ರೇ ಬಿತ್ತೇ ಆಯು, | ಮೂರು ವರುಸ ಮಳೆಯೇ ಹೋಯ್ತು, !
ಇರುವೆ ಕಾಳ ಹೊತ್ಕೊಂಡ್ಹೋದೋ ॥ ಗೌಡನು ಇರೀಗೆ ಸಂಕಲೇ ಹಾಕಿ ।
ಕಾಳನೆಲ್ಲಾ ತೆಗೆದು ತುಂಬ್ದ ॥
ಹೊಟ್ಗಿಲfದೊರು ಕೇಳಿದರವನ | ಬಿಕ್ಸನಾದರೆ ಕೊಡಿಗಿಡಿಯಂದು ।
ಬಿಕ್ಸದೊರ್ಕೋಟೀ ತಡೀಲಾರ್ದೆ | ಕರೆದು ಹೆಂಡ್ತಿಗೇಳ್ದ ಹಿಂಗೆ ॥
" ಬಿಕ್ಸದವರು ಬಂದ್ಗಿಂದಾರು | ಬಿಕ್ಸಕಾದರೆ ಬಂದಾರೀಗ |
ಸತ್ತಂತೆ ನಾನು ಬಿದ್ಕೋತೀನಿ | ಅಳತಾ ಬಾಕ್ಲಲ್ಕುಂತಕೊ ಹೆಣ್ಣೆ |
ದಾಸಯ್ಯನಾದ್ರೆ ಬತ್ತಾನಾಗ | ಇದ್ಯಾಕಮ್ಮ ಅನ್ನುತಾನೆ ॥
ಗಂಡ ಸತ್ಹೋದ ಅಂತ ಹೇಳು | ದೇವ್ರು ಸೂತಕ್ಕೆ ಸಿಕ್ಕೇಹೋಯ್ತು,
ದಾಸಯ್ಯನಾದ್ರೆ ಓಡ್ತಾನಾಗ ॥
ಹಂಗಂತ ಕೇಳಿ ಗೌಡನು ಮಲಗ್ದ | ಸತ್ತಂಗೆ ಮೂಲೇಲಿ ಬಿದ್ಕೊಂಡ।
ಗೌಡ್ನ ಹೆಂಡ್ತೀ ಬಾಕ್ಸಲ್ ಕುಂತುಕೂಂಡು | ಅಳತಾ ಇದ್ಳು ಗೌಡ ಹೇಳ್ದಂಗೆ ॥"
(೨)
"ಕೇಳ್ ಕೇಳ್ ನನ್ನ ಕೊಣವೇಗೌಡ | ಕೊಡಗಿನ ಮಾರಿ ತಂಟಲ ಮಾರಿ |
ಗೌಡಗೆ ಬುದ್ದೀ ಕಲಿಸಾಲೆಂತ | ದಾಸಯ್ನ ವೇಸವ ಹಾಕಿಕೊಂಡು |
ತೊಳಸೀ ಮಣಿಯ ಕತ್ತಿಗೆ ಹಾಕಿ । ಕೈಲಿ ಜಾಗಟೆ ಕಂಕುಳಲ್ಶಂಕು ॥
ಹಣೇಲ್ನಾಮ ಇಟ್ಟುಕೊಂಡು | ಗೋವಿಂದ ತಿಮ್ಮಪ್ಪ ಎಂದೆನ್ನುತ್ತ |
ಗೌಡ್ನ ಹಟ್ಟೀ ಬಾಕ್ಲಿಗೆ ಬಂದ್ಲು |
ನೋಡಿದಳಲ್ಲಿ ಗೌಡ್ನ ಹೆಂಡಿ, ಅಳುತ ಬಾಕ್ಲಲ್ಕುಂತಿರೋದ ||
ಇದ್ಯಾಕಮ್ಮ ಅಳ್ತೀ ಬಂದ್ಲು! " ಗೌಡ ಸತ್ತೋದ ಕೆಟ್ಟೆ ಕಾಣಪ್ಪ |
ಹೊರೋರು ಹೆಣವ ದಿಕ್ಕಿಲ್ವಲ್ಲೋ | ನನಗೆ ಮುಂದಕೆ ದಿಕ್ಕಿಲ್ಲ ತಂದೆ ॥
ಕೆಟ್ನಲ್ಲಪ್ಪೊ ಕೆಟ್ನಲ್ಲಪ್ಪೊ |" ಅಂತ ಹೇಳೀ ಬಿಕ್ಕಿ ಬಿಕ್ಕಿ ಅತ್ಲೂ |
ಕಣ್ಣಲ್ಲಿಲ್ಲಿ ತೊಟ್ಟು ನೀರೇಯಿಲ್ಲ ॥
" ಅಯ್ಯೊ ಕೊಣವಪ್ಪ, ಸತ್ಯಾ ನೀನು | ಚಿನ್ನದಂತಾ ಮನುಸನು ನೀನು
ನಿನ್ನಂಥಾ ದಾನಗಾರ ಸತ್ತಾಮೇಲೆ | ನಮಗೆ ಹೊಟ್ಗ್ಯಾರ್ಕೊಡಾರಪ್ಪ |"
ಅಂತಾ ತುಂಬಾ ಬಗೆಲಿ ದಾಸಯ್ಯ | ತಲೆಯಾ ತಲೆಯಾ ಹೊಡೆಕೊಂಡತ್ತ ॥
" ಏಟ್ಲೊತ್ತು ಬಡಕೂಂಡ್ರು ಇದ್ದೇ ಅದೆ |! ಹೆಣವ ಹೊರೋರು ದಿಕ್ಕಿಲ್ವಂತೆ ।
ಅಂತ ಹೇಳಿ ದಾಸಯ್ಯನಾಗ | ಶಂಕು ಜಾಗಟಿ ತೆಗೆದು ಮಡಗಿ ।
ಉಟ್ಟಿದ್ಹೊದ್ಬಟ್ಟೆ ತೆಗೆದು | ಒಂದು ಕಡೀಕೆ ಗಂಟ್ಕಟ್ಬಿಟ್ಟು |
ಗೌಡನ ಮೊಕವಾ ನೋಡಾಕ್ಹೋದ ॥"
೪೧
-----------------------------------------------------------------
ಕರ್ಣಾಟಕ ಸಂಸ್ಕೃತಿ
(೩)
ಹೊರಗಡೆ ನಡೆಯೋ ಪರಸಂಗ ಕೇಳಿ | ದಾಸಯ್ಯ ಬರುವಾ ಗುರುತಾನರ್ತು |
ಗೌಡಾ ಬಿಗೀಲಿ ಉಸಿರಾ ಕಟ್ಟಿ |! ಕಣ್ಣುಡ್ಡೆ ಮೇಗ್ಕೆ ಸಿಕ್ಕಿಸಿಕೊಂಡು |
ಬಾಯ ಅಗಲಾಗಿ ತಾ ತೆರಕೊಂಡು | ಕೈಕಾಲ್ತಾನು ಮುದುರಿಕೊಂಡು |
ಸತ್ತಂಗೆ ತಾನು ಬಿದ್ಕೊಂಡಿದ್ದ ॥
ಗೌಡ್ನ ರುಣವ ತೀರ್ಲೋ ನೆವದಿ | ದಾಸಯ್ಯ ಒಂದ್ದಿಡಿ ಅಕ್ಕೆ ತಂದು |
ಮೊಕ್ದಾ ಮುಸಕಾ ಒಕ್ಕಡೀಕೆಳ್ದು | ಕಿಸಿದಿದ್ದಾಯ್ಗೇ ಅಕ್ಕೀ ತುಂಬಿ |
“ಅಯ್ಯೋ ಅಪ್ಪಾ ಸತ್ಯಾ ಗೌಡ | ನಿನ್ನಂತಾ ಗೌಡ ಹುಟ್ತಾನೇನೋ ॥"
ಅಂತಾ ಅಳ್ತಾ ಹೊರೀಕೆ ಬಂದು | ಬಿದಿರಾ ಹಿಂಡಲಲ್ಬಿದಿರಾ ತಂದು!
ಚಟ್ಟವನಾದ್ರೆ ಕಟ್ಟಿಕೊಂಡು | ಹೆಣನ ತಂದು ಅದ್ರಮೇಲಿಡುಕಿ ।
ಬಂದು ನೋಡ್ತಾನಲ್ಲಿ ಹೆಣವ ॥
ಹೆಣೀನ ಮುಸುಕ ತೆಗೆದು ನೋಡಿದ್ರೆ | ಅಕ್ಕಿ ಒಂದ್ಕಾಳಿರಲೇಯಿಲ್ಲ |
ತೆರದಿದ್ದ ಬಾಯಿ ಮುಚ್ಕೊಂಡಿತು, | ಮುದರಿದ್ದ ಕಾಲು ನೀಡ್ಕೊಂಡಿತ್ತು ॥
ಹೆದರಿದೋನ್ಹಂಗೆ ದಾಸಯ್ಯ ನೋಡಿ |
" ದೆವ್ವ ಬಂದದೆ ಹೆಣದಾ ಮ್ಯಾಲೆ | ಅದ್ನ ಈಗ ಓಡ್ಸಲೆ ಬೇಕು ॥”'
ಅಂತ ಹೇಳಿ ಬರಗುಳಾವ | ಬೆಂಕಿಲ್ದಾಕಿ ಚಂದಾಗ್ಯಾಸಿ |
ತಕೊಂಡು ಬಂದು ಹೆಣದಾ ಹತ್ರ ॥
"ಓಡೋಡ್ಲೆ ಹಾಳು ದೆನ್ವೇ ನೀನು | ಹೆಣಾನ ಯಾಕೆ ಹಿಡುಕೊಂಡಿದ್ದೀ ||?
ಅಂತ ಹೇಳಿ ಗೌಡ್ನ ಬೆನ್‌ಮೇಲೆ | ಬರಗುಳ ಎಳ್ಳ ಚೊರ ಚೊರ ಅಂತು |
ಅಯ್ಯಯ್ಯಪ್ಪಾ ಎಂದ ಗೌಡ | ಉರೀಗೆ ಬಾಯ್ಬಾಯಿ ಬಡಕೊಂಡ್ಬಿಟ್ಟ ॥
ದಾಸಯ್ಯನಾದ್ರೆ ಕಿಸಿ ಕಿಸಿ ನಗ್ತಾಸೆ |
ಗೌಡ ಹೆಂಡ್ತಿ, ಬೀದೀಲಿದ್ದೋಳು | ಒಳೀಕೆ ಬಂದು ನೋಡ್ತಾಳಲ್ಲಿ |
ಗಂಡಗೆ ಬರಗುಳ ಬಿದ್ದಿರೋದಾ |
ಜೀನ ಗಂಡ್ನ ಗತಿಯಾ ಕಂಡು | ಅಳ್ವಿನ ಜೊತ್ಗೇ ನಗುವೂ ಬಂತು |
ದಾಸಯ್ಯ ಶಂಕೂ ಜಾಗಟೆ ತಂದೂ | ಬಿಕ್ಸಾ ಹಾಕಮ್ಮ ಅಂತಂದ ॥
ಕೊಣವೇಗೌಡ್ನಿಗೆ ಈಟುಹೊತ್ಸೆ | ಬಂದಿತ್ತು ಬುದ್ಧಿ ಚನ್ನಾಗೇಯೆ |
" ಹಾಕೇ ಒಂದ್ಹಿಡಿ ಜೋಳಾ ಅವನ್ಗೆ !"ಂತ ಹೇಳ್ದ ಹೆಂಡ್ತೀಗವನು ॥
" ಸತ್ಹೋದ ಗೌಡ ಬದಕ್ಕೊಂಡವ್ನೆ | ಒಂದ್ಹಿಡಿ ಜೋಳ ನನಗೆ ಸಾಲ್ದು |
ಕೊಡೇಕು ನನಗೆ ಒಂದು ಹೇರು" | ಅಂತ ಹೇಳಿ ಹಟವಾ ಹಿಡಿದ ॥
ಕೋಪವು ಬಂತು ಗೌಡನಿಗೆ ಬಾಳಾ | ಮೊದ್ಲೇ ಬರಗುಳಾ ಬಿದ್ದ ನೋವು |
ಇದ್ದದ್ದು ತುಂಬಾ ಕೋಪ ಬಂತು | ದೊಣ್ಣೇ ತಕ್ಕೊಂಡು ಹೊಡೆಯೋಕೆ ಬಂದ॥
ದಾಸಯ್ಯನಾಗ ಹೆಂಗ್ಸಾಗಿದ್ಲು | ನೋಡಿದರವಳು ಕೊಡಗಿನ ಮಾರಿ |
ಗೌಡನು ಹೆದರಿ ಕಾಲಿಗ್ಬಿದ್ದು |" ತಾಯಾ ನನ್ನ ಕಾಪಾಡವ್ವ ॥ "
ಅಂತ ಅವಳ ಕೇಳಿಕೊಂಡು | ತನ್ನಲ್ಲಿದ್ದ ಎಲ್ಲಾವನ್ನೂ |
ತಂದು ಮಾರೀಗೆ ಬಲಿಯಾ ಕೊಟ್ಟು |
೪೨
-------------------------------------------------------------
ಗಂಡುಸರ ಹಾಡುಗಳು
ಕಾವಿಯುಟ್ಕೊಂಡು ಬೀದಿಯಲ್ಲಿ ! ಏಕ್ನಾದಾ ತಕ್ಕೊಂಡ್ಹಂಗೋಳೀಗೆ।
" ಜೀನರಾಗ್ಬೇಡ್ರಸ್ಸ ಎಂತಾ | ಹೇಳ್ತಾ ಅವನು ತಿರಗ್ತಾ ಅವ್ನೆ ॥"
ಈ ಹಾಡಿನಲ್ಲಿರುವ ಕಥೆ ಹೇಳುವ ಜೋಕು, ದೇವತೆಗಳಿಗೂ ಮನುಷ್ಯರಿಗೂ
ಇರುವ ಸಂಬಂಧ ಇವುಗಳನ್ನೂ, ವಿದ್ಯಮಾನಗಳನ್ನು ಇದ್ದಂತೆ ವರ್ಣಿಸುವ
ಸಾಮರ್ಥ್ಯವನ್ನೂ ನೋಡಿರಿ; ಪುರಂದರದಾಸರ ಕಥೆಯೊಡನೆ ಹೋಲಿಸಿರಿ.
ಇಂತಹ ಹಾಡುಗಳು ಎಷ್ಟು ಸಹಸ್ರವಿವೆಯೋ |
(ಇ) ವಿಶೇಷ ಪದಗಳು
ಇನ್ನು, ಕೊನೆಯ ವಿಭಾಗವಾದ ವಿಶೇಷ ಪದಗಳತ್ತ ತಿರುಗೋಣ. ಇವುಗಳಲ್ಲಿ
ಜಾತ್ರೆಯ ಪದಗಳು, ಶೈವ ಮತ್ತು ವೈಷ್ಣವ ದಾಸರ ಪದಗಳು, ತತ್ತ್ವಗಳು
ಎಂಬ ಮೂರು ವಿಭಾಗಗಳನ್ನು ಮಾಡುವೆವು. ಸೂಳಾದಿಗಳು ಈ ಎರಡನೆಯ
ಭಾಗದಲ್ಲಿ ಸೇರುವುವು. ಇನ್ನೂ 'ಜಾಣನ ಪದಗಳು', ' ಚಂದಮಾಮನ ಪದಗಳು'
ಎಂಬವೂ ಇವೆ. ಇವುಗಳನ್ನೂ ತತ್ತ್ವಗಳ ಜೊತೆಗೇ ಸೇರಿಸುವೆವು.
1L ೧. ಜಾತ್ರೆಯ ಪದಗಳು.
" ಜಾತ್ರೆಗೆ ಹೋಗೋಣ ಬಾ" ಎಂದು ತನ್ನ ನಲ್ಲೆಯನ್ನು ಕರೆಯುವ
ಪದಗಳೇ ಹೆಚ್ಚು . ಹಾಗೆಯೇ; ಸಂತೆಗೆ ಕರೆಯುವ ಪದಗಳೂ ಉಂಟು. ಕಾಮನ
ಪದಗಳೂ ಮಾರ್ನವಮೀ ಪದಗಳೂ ಈ ಜಾತಿಗೇ ಸೇರಿದವು.
ಜಾತ್ರೆಯ ಪದಗಳೂ ಸಂತೆಯ ಪದಗಳೂ ಸಾಮಾನ್ಯವಾಗಿ ಆಯಾ ಪ್ರಾಂತ್ಯದ
ಸುತ್ತಮುತ್ತಲಿನಲ್ಲಿ ಮಾತ್ರ ಇರುವವು. ಆದುದರಿಂದ ಅವನ್ನು ಬಿಟ್ಟು ಮುಂದಕ್ಕೆ
ಹೋಗಿ, ಈ ಜಾತ್ರೆಯ ಮತ್ತು ಸಂತೆಯ ಪದಗಳನ್ನು ಉಪಯೋಗಿಸಿಕೊಂಡು
ಅದನ್ನೇ ತತ್ತ್ವಗಳನ್ನಾಗಿ ತಿರುಗಿಸಿರುವ ಪರಿಯನ್ನು ಮಾತ್ರ ಒಂದೆರಡು
ಉದಾಹರಣೆಗಳಲ್ಲಿ ನೋಡೋಣ:
೨೮. "ಊರು ದೇವರ ಮಾಡಬೇಕಣ್ಣ । ತನ್ನೊಳಗೆ ತಾನು ॥
ಊರು ದೇವರು ಮಾಡುಯೆಂದು ಸಾರುತಿದೆ ಹಗಲು ಇರುಳು |
ದ್ವಾರಗಳೊಂಭತ್ತು, ಯೇರಿಸೀ ಭ್ರೂಮಧ್ಯದೊಳಗೆ ॥
ತರ್ಕವೆಂಬೋ ಕ್ಲೇಶ ಕುರಿಯಣ್ಣ | ಇದ ಹಿಡಿದು ತಲೆಯ ಚಂಡಾಡ ಬೇಕಣ್ಣ ||
* * * *
ತನುವೆಂಬೋ ಮೇಕೆ ಹೋತಣ್ಣ | ಅದಕ್ಕೆ ತಕ್ಕ ಜ್ಞಾನನೆಂಬೋ ಪೋತರಾಜಣ್ಣ ॥
ತಾನು ಯೆಂಬೋ ಚಾಟಿ ಹಿಡಿದು | ಹೀನ ಹೋತನ ಸೀಳಿ ಬಿಸುಟು ।
ಜ್ಞಾನ ಗುಡಿಸಲು ಸೂರೆಗೊಂಡು । ತಾನು ಬೆಳಗುವ ಜ್ಯೋತಿ ನಿಲಿಸಿ ॥"
೨೯. " ಅರ್ಥಿವುಲ್ಲಾಸದಿಂದ ನೀವು ನಾವು ಕೂಡಿ ಹೋಗೋಣ |
೪೩
-----------------------------------------------------------
ಕರ್ಣಾಟಕ ಸಂಸ್ಕೃ ಕಿ
ಬರ್ತಿರೇನ್ರಿ ಇಲ್ಲೆಯಿರ್ತಿರೇನ್ರಿ ॥ ಪ ॥
ಚಿನ್ನದೋಲೆಯನ್ನಿಟ್ಟು । ಸೀರೆ ಕುಪ್ಪುಸ ತೊಟ್ಟು ।
ಮುನ್ನಿನ ಮೂರ್ತಿಗೊಲಿವ | ಲಿಂಗನ ತೋರಿಸ್ತೀನಿ ॥ ಬರ್ತಿರೇನ್ರಿ ॥
ಆರು ಚಕ್ರದ ಗಾಡಿ | ಮೂರು ಮುಲ್ಕಿನ ತೇರು |
ಮೇಲು ಮಂಟಪದೊಳು | ದೇವದೇವನ ತೋರಿಸ್ತೀನೀ ॥ ಬರ್ತಿರೇನ್ರಿ ॥
೨. ಕಾಮನ ಪದಗಳು.
ಕಾಮನ ಕಥೆಯನ್ನು ನಾನಾ ಪರಿಯಾಗಿ ಈ ಹಾಡುಗಳು ವರ್ಣಿಸುವುವು.
ಲಾವಣಿಗಳಲ್ಲಿ ಕಂಡುಬರುವ ಜಾತಿಗಳೆಲ್ಲವೂ ಇದರಲ್ಲಿಯೂ ಕಂಡುಬರುವುವು,
ಈ ಪದಗಳನ್ನು ವೈಷ್ಣವ ಕವಿಗಳೂ ಹಾಡಿದ್ದಾರೆ. ಈ ಹಾಡುಗಳಲ್ಲಿ ಭಂಡ
ಮಾತುಗಳು ಬರುವುದುಂಟು, " ಢುಂಢು, ಅಥವಾ ಹೋಲಿಕಾ ಎಂಬ ರಾಕ್ಷಸಿಯ
ತೃಪ್ತಿಗಾಗಿ ತುಚ್ಛ ಭಾಷಣಗಳನ್ನುಚ್ಚರಿಸಬೇಕು ಎಂದು ಪುರಾಣ ಕಥೆಯಿದೆ. "
೩೦. "" ದಿಮ್ಮಿ ಸಾಲೆನ್ನಿ ರಾಮ | ದಿಮ್ಮಿ ಸಾಲೆನ್ನಿ ಕೃಷ್ಣ |
ದಿಮ್ಮಿ ಸಾಲೆನ್ನಿರೋ ಪರಬೊಮ್ಮ ನೆಂದು ಸಾರಿರೋ ॥ ಪ ॥"
ದಾಕ್ಲಾಯಣಿಯು ತಂದೆಯ ಯಜ್ಞ ಕಾಲದಲ್ಲಿ ಅಲ್ಲಿಗೆ ಹೋಗಿ ಅಲ್ಲಿ ತಂದೆ
ಯಾಡಿದ ಶಿವನಿಂದಾ ವಾಕ್ಯಗಳನ್ನು ಕೇಳಲಾರದೆ ಆ ಯಜ್ಞಾಗ್ನಿಯಲ್ಲಿಯೇ ಬಿದ್ದು
ದೇಹವನ್ನು ತ್ಯಾಗಮಾಡಿದಳು. ಇದರಿಂದ.
" ತಾರಕಾಖ್ಯ ದೈತ್ಯ ಮೃತ್ಯು ರಹಿತನಾದೆನೆಂದು |.............
ಕೆಟ್ಟ ಬುದ್ಧಿಯಿಂದ ಜನರ ಬಾಧಿಸುತ್ತಲಿದ್ದನು | "
ಕೊನೆಗೆ ದೇವತೆಗಳು ಈ ಬಾಧೆ ತಡೆಯದೆ ಬ್ರಹ್ಮನಲ್ಲಿ ಮೊರೆಯಿಟ್ಟರು. ಆಗ
ಆತನು, " ಶಿವನ ಔರಸ ಪುತ್ರನೊಬ್ಬನು ತಾರಕನನ್ನು ಗೆಲ್ಲಬಲ್ಲನು. ಶಿವನಾದರೋ
ತಪದಲ್ಲಿರುವನು. ಆ ಶಿವನು ಬಹಿರ್ಮುಖನಾಗಿ ಗಿರಿಜೆಯ ಕೈಹಿಡಿವಂತೆ ಕಾಮನು
ಮಾಡಲಿ. ಅದಾದರೆ ನಿಮ್ಮ ಕಾರ್ಯವಾಗುವುದು " ಎಂದನು. ದೇವತೆಗಳು ಅದೇ
ಪ್ರಕಾರವಾಗಿ ಕಾಮನನ್ನು ಬೃಹಸ್ಪತಿಯ ಮುಖದಿಂದ ಆ ಕಾರ್ಯಕ್ಕೆ ನಿಯೋಜಿಸಿ
ದರು. ಆತನು--
" ಕೇಳು ಪ್ರಿಯಳೆ ಶಿವನ ವನಕೆ ನಾನು ಪೋಗಿ ಬೇಗದಿಂದ |
ಮನವ ಸೆಳೆದು ಬಾಣ ಬಿಟ್ಟು ಕಳವಳಾವಗೊಳಿಸುವೆ ॥ ೧೪೯ |
* * * *
................
* ಮಾರನು ಬುದ್ಧನನ್ನು ವಿಷಯ ಪ್ರಪಂಚದ ಕಡೆಗೆ ಸೆಳೆಯಲು ಏಳು ವರ್ಷಗಳು ಶ್ರಮಪಟ್ಟು
ವಿಫಲನಾದುದನ್ನು ಕುರಿತು ವರ್ಣಿಸುವ ಲಾವಣಿಗಳು ಬೌದ್ಧ ಸಾಹಿತ್ಯದಲ್ಲಿವೆ. ಕಾಮನ ವಿಚಾರವಾಗಿ
ಋಗ್ವೇದ ಅಥರ್ವಣ ವೇದಗಳಲ್ಲಿ ಉಲ್ಲೇಖವಿದೆ. ಕ್ರಿ.ಶ್. ೪೦೦ರಲ್ಲಿ (ಭಾರತೇಯ ವಿದ್ವಾಂಸರ ಮತದಂತೆ
ಕ್ರಿಸ್ತ ಪೂರ್ವ ಒಂದನೆಯ ಶತಮಾನದಲ್ಲಿ) ಬರೆದ ತಾಬರ ಭಾಷ್ಯದಲ್ಲಿ ಈಹೋಲಿಕಾ ವೃತ್ತವು ಪ್ರಾಚ್ಯರಲ್ಲಿ
ಮಾತ್ರ ವಾಡಿಕೆಯಲ್ಲಿತು ಏಂದು ಹೇಳಿದೆ. (ಆನಂದಾತ್ರ ಮದ ಮುದ್ರಣ ಪುಟ ೨೫೦.)
ಈ ಎಲ್ಲ ವಿನಯಗಳನ್ನು ಸಮನ್ವಯ ಮಾಡಿ ಈ ಹಬ್ಬವು ಹುಟ್ಟಿದೆಯೆನ್ನಬಹುದೇ ? ಇದು
ಬೌದ್ಧರಿಂದ ತೆಗೆದುಕೊಂಡ ಹಬ್ಬವೆನ್ನುವುದಕ್ಕೆ - ದೀವಳಿಗೆಯಂತೆ - ಈ ವ್ರತ ವಿಧಾನದಲ್ಲಿ ಹೇಳಿರುವ
ಹೋಮವು ಅಡ್ಡಿಯಾಗಿದೆ.
೪೪
---------------------------------------------------------------------
ಗಂಡುಸರ ಹಾಡುಗಳು
ಆರ್ಯ ಜನರ ಮಾತ ಕೇಳಿ | ಧೈರ್ಯದಿಂದ ಪೋದರಲ್ಲಿ |
ಕಾರ್ಯ ಸಿದ್ಧಿಯನ್ನು ಪಡೆದು | ಸೂರ್ಯಗಧಿಕನಾಗುವೆ ||೧೫೨||
ನಿನ್ನ ಪಾತಿವ್ರತ್ಯದಿಂದ । ಎನ್ನ ಧೈರ್ಯ ಬಲಗಳಿಂದ ।
ಮುನ್ನ ಹರನು ಭ್ರಾಂತಿಬಿಟ್ಟು | ತನ್ನ ಸತಿಯ ಕೂಡಲಿ" ||೧೫೩||
ಎಂದು ಸತಿಯನ್ನು ಸಂತಯಿಸಿ--
" ರತ್ನಮಯ ಕಿರೀಟವಿಟ್ಟು ಜತನವಾದ ಕವಚ ತೊಟ್ಟು ।
ವೀರಮುದ್ರೆ ಇಕ್ಷುಚಾಪ ಪುಷ್ಪ ಶರವ ಪಿಡಿದನೂ ||೧೬೦||
ಮಘಮಘೀಪ ದಿವ್ಯವಾದ ಹೂವು ಪಿಡಿದು ಸುತ್ತ ಮಲ್ಲಿ |
ಯೆಂಬ ಕತ್ತಿಯೆತ್ತಿ ಕರದಿ ಪಿಡಿದುಕೊಂಡು ನಡೆದನು ||೧೬೧||
ಇರಾವಂತಿಗೆಂಬ ಚೂರಿ | ಭರದಿ ನಡುವಿನಲ್ಲಿ ಕಟ್ಟಿ |
ನಾಗಪುನ್ನಾಗವೆಂಬ ಬತ್ತಳೀಕೆ ಕಟ್ಟಿದಾ ||೧೬೨||
ವೀಳ್ಕ ರಥವನೇರಿ ಒಳ್ಳೆ | ಸುಳಿಯ ಗಾಳಿ ಮಂತ್ರಿ ಕಾಡಿ |
ಚಂದ್ರಬಿಂಬವೆಂಬ ಶ್ವೇತ ಛತ್ರದಿಂದ ಒಪ್ಪುತಾ ||೧೬೩||
* * * *
ಕಾಮ ಬಂದು ನಾಗಭೂಷಣನ ಮುಂದೆ ನಿಂತು | ||೧೮೭||
ಬಾಗಿರುವ ಬಿಲ್ಲಿನಲ್ಲಿ ಹೂವ್ವು ಬಾಣ ಬಿಟ್ಟಿನು
* * * *
ಸಾಲು ಬಾಣ ತಗಲಿ ಹರನು ಬಹಳ ನೊಂದು ಮನಸಿನಲ್ಲಿ ।
ತಪವು ವಿಘ್ನವಾಯಿತೆಂದು ಫಾಲನೇತ್ರ ತೆರೆದನು ||೧೯೪||
* * * *
ಕಣ್ಣಿನಿಂದ ಹೊರಟ ಅಗ್ನಿಜ್ಞಾಲೆಯಿಂದ ಕಾಮದೇವ ।
ಹುಣ್ಣಿಮೀಯ ದಿವಸದಲ್ಲಿ । ಕಣ್ಣು ಮಾಯವಾದನು " ||೧೯೬||
* * * *
ಆಗ ರತಿಯು ಬಂದು ಬಹುವಾಗಿ ಶೋಕಿಸಲು, ಈಶ್ವರನು ದಯಾಪರನಾಗಿ--
" ನರಕ ವೈರಿ ಕೃಷ್ಣನಲ್ಲಿ ಪುನಃ ಜನಿಸಿ ಬರುವನು ||೨೧೨||
ಬ್ರಹ್ಮ ಶಾಪದಿಂದ ನೀನು ಶಂಬರಾನ ವಶದಿ ಯಿರಲು |
ಕಂದನಾಗಿ ಬಂದು ನಿನ್ನ ಹೊಂದಿ ಸುಖವ ಪಡಿಸುವ ||೨೧೩||
* * * *
ಕಾಮದೇವನ ಹಬ್ಬವನ್ನು ದಾವ ದೇಶದಲ್ಲಿ ಮಾಡೆ |
ಕಾಲ ವರುಷ ಪೈರು ಫಲವು ಆಗುವೋದು ನಿಶ್ಚಯ ||೨೧೫||
* * * *
ಹಬ್ಬ ಮಾಡುವಂಥ ಜನರು ಬೊಬ್ಬೆಯಿಕ್ಕಿ ಬಂದು ಕೂಗಿ |
ಬಂಡು ಮಾತನಾಡಿದರು ಸುದ್ದಿಗ್ಹೋಗಲಾಗದು ||೨೧೮||
೪೫
--------------------------------------------------------------------
ಕರ್ಣಾಟಕ ಸಂಸ್ಕೃತಿ
ಬಂಡು ಭಗದ ಲಿಂಗ ಶಬ್ದವಾಡುತಾಲಿ ಹಿಂಡುಗೂಡಿ ।
ಗಂಡನುಳ್ಳ ಸತಿಯರೊಡನೆ ಕಂಡ ಮಾತನಾಡೊರು || ೨೧೯ ||
ಬಾಗಿಲಾಗೆ ನಿಂತು ಬಾಯಿ ನಾದವನ್ನು ಮಾಡಿದರು |
ನೋಯಲಾಗದಯ್ಯ ನ್ಯಾಯವರಿತ ಜನರು ಜಗದೊಳು ||೨೨೦ ||
ಬಾಯಿ ನಾದ ಬಂಡು ನುಡಿಯ ಕೇಳಿ ಬೈದ ಸತಿಯರೆಲ್ಲ ।
ಏಳು ಜನ್ಮ ಪತಿಯನಳಿದು ಶ್ವಾನ ಜನ್ಮ ಪಡೆವರು ॥ ೨೨೧ ॥
ಬಾಯಿ ನಾದ ಬಂಡು ನುಡಿಯ ಮಾಡೆ ನಾಚಿದಂಥ ಜನರು ।
ವಂಶವಳಿದು ಕಲ್ಪತನಕ ನರಕದಲ್ಲಿ ಬೀಳ್ವರು ॥ ೨೨೨ ॥
ಹೋಳಿಯಾಟ ಆಡದಿರುವ ದೇಶವೆಲ್ಲ ಕಾಡು ಸಮವು |
ಅಲ್ಲಿ ಮಳೆಯು ಜನಕೆ ಸೌಖ್ಯವಿಲ್ಲ ಯೆಂದಿಗಾಗದು ॥ ೨೨೩ ॥
* * * *
ತಿರಿದು ಹೊರೆದು ಹಬ್ಬ ಮಾಡೆ ಸುರರು ಮೆಚ್ಚಿ ಸರ್ವರೀಗು ।
ಪುರುಷ ಅರ್ಥ ನಾಲ್ಕು ಇತ್ತು ಹರಸಿ ವರವ ಕೊಡುವರು ॥ ೨೨೪ ॥
* * * *
ಜಯತು ಹರನೆ ಕಾಮದೇವ ಜಯತು ತಾರಕಾರಿ ನೀನು |
ಜಯತು ಜಯತು ಕಾಮದೇವ ದಯದೊಳೆಮ್ಮ ಪಾಲಿಸು ॥ ೨೪೨ ॥
ದಿಮ್ಮಿ ಸಾಲೆನ್ನಿ ರಾಮ | ದಿಮ್ಮಿ ಸಾಲೆನ್ನಿ ಕೃಷ್ಣ |
ದಿಮ್ಮಿ ಸಾಲೆನ್ನಿರೋ | ಪರಬೊಮ್ಮನೆಂದು ಸಾರಿರೋ | "
* * * *
ಶ್ರೀ ಮಾಧ್ವ ಗುರು ಪರಂಪರೆಯಲ್ಲಿ ಪ್ರಸಿದ್ಧರಾದ ವಾದಿರಾಜರೂ ಈ ಕಾಮನ
ಪದಗಳನ್ನು ಮಾಡಿದ್ದಾರೆ. ಅದರಲ್ಲಿಯೂ ಪಲ್ಲವಿಯು ಮೇಲಿನಂತೆಯೇ ಇದೆ.
ಅದರ ನುಡಿಗಳಿವು :-
೩೧. "ಛಳಿರು ಛಳಿರು ಘಳಿರು ಘಳಿರು ಯೆಂಬ ರಥವನೇರಿಕೊಂಡು
ರಥಕೆ ಐದು ಗಿಣಿಯ ಕಟ್ಟಿ ನಡೆದ ಕಾಮ ರಾಯನು ॥೪॥
ಶಂಭು ಲಿಂಗನೊಡನೆ ಕಾದೆ ಸಂಗರಕ್ಕೆ ಹೋಗಲಾಗ |
ನಿಂದು ಯುದ್ಧ ಮಾಡುವಾಗ ನಿಲದೆ ಉರಿದು ಹೋದನು ॥ ೫॥
* * * *
ಎತ್ತಿ ಬರುವ ವಿಘ್ನ ಗಣವ ಕತ್ತರಿಸುವ ಹೋಳಿಯೆಂಬ |
ಉತ್ತಮದ ವ್ರತವು ಜಗಕೆ ಸುತ್ತಿಕೊಂಡು ಬರುವುದು ॥
* * * *
ಯದುಕುಲೇಶ ಗೋಪ ಕೃಷ್ಣ ಚದುರೆಯರನು ವಲಿಸೆನೆಂದು |
ಮದನ ಹುಣ್ಣಿಮೆಯ ಹಬ್ಬ ಸಾದರದಿಂದ ರಚಿಸಿದ ॥
೪೬
---------------------------------------------------------------------
ಗಂಡುಸರ ಹಾಡುಗಳು
ದಿಮ್ಮಿ ಸಾಲೆನ್ನಿ ಚಿಕ್ಕ ತಮ್ಮ ಗಳಿರ ಗೊಲ್ಲತೆರ |
ಹರ್ಮ್ಯ ಪೊಕ್ಕು ಅವರ ಮುಡಿ ಪೇರ್ಮೆಯಿಂದ ಭಸ್ಮ ಸೂಸಿ ॥
ವಾದಿರಾಜಗೊಲಿದು ಬಂದು ಸೋದೆಯ ಪುರದಲಿ ನಿಂದು ।
ತೋದಿ ಹಯವದನ ಮೇಲೆ ಸರಿದು ಸೂಸಿ ಭಸ್ಮವಾ॥"*
ಇಲ್ಲಿ 'ಪಾಮರ'ರ ಪದ್ಧತಿಗಳನ್ನು ತೆಗೆದುಕೊಂಡು ಪಾರಮಾರ್ಥಿಕ ದೃಷ್ಠಿ
ಯನ್ನು ಅದರೊಳಗೆ ಹುದುಗಿಟ್ಟು ಅವರನ್ನು ಆ ಮಾರ್ಗದಿಂದ ತಮ್ಮ ಮಾರ್ಗಕ್ಕೆ
ಎಳೆದುಳೊಳ್ಳುವ ಬೆಡಗನ್ನು ನೋಡಿರಿ.
೩. ಮಾರ್ನವಮಿಯ ಪದಗಳು.
೩೨. " ಆಶ್ವಯುಜ ಶುದ್ಧ ಮಾನವಮಿ ಬರಲೆಂದು | ಶಾಶ್ವತದಿ ಹರಸಿದೆವು ಬಾಲಕರು ಬಂದು |
ಈಶ ನಿಮಗತ್ಯಧಿಕ ಸುಖವ ಕೊಡಲೆಂದು । ಲೇಸಾಗಿ ಹರಸಿದೆವು ಬಾಲಕರು ಬಂದು ॥ ೧॥
ಧನ ಕನಕ ವಸ್ತು ವಾಹನವಾಗಲೆಂದು | ಕನಕ ದಂಡಿಗೆ ಚೌರಿ ನಿಮಗಾಗಲೆಂದು |
ದಿನ ದಿನಕೆ ರಾಜಮನ್ನಣೆ ಹೆಚ್ಚಲೆಂದು | ಅನು ದಿನವು ಹರಸಿದೆವು ಬಾಲಕರು ಬಂದು ॥ ೨॥
ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು | ತಿಳಿಗೊಳಗಳುಕ್ಕಿ ತುರುಗಳು ಕರೆಯಲೆಂದು |
ನಳಿನ ಮುಖಿಯರು ಸುಪುತ್ರರ ಪಡೆಯಲೆಂದು | ಇಳೆಯೊಳಗೆ ಹರಸಿದೆವು ಬಾಲಕರು ಬಂದು ||೩||
ಹರಕೆಯನು ಕೇಳಿ ಹರುಷವ ಮಾಡಿ ನಮಗೆ | ತರಿಸಿಕೊಡಿ ಹಚ್ಚಡವ ನಮ್ಮಯ್ಯಗಳಿಗೆ |
ಬೆರಸಿ ಕೊಡಿ ಕಡಲೆಯನು ಬೆಲ್ಲವನು ನಮಗೆ | ಸರಸತಿಯ ಕರುಣವುಂಟಾಗಿರಲಿ ನಿಮಗೆ ||೪||
ಅಳಿಯನುಡುಗೊರೆಯಲ್ಲ ಮುನಿದು ಕೇಳುವರೆ | ಬಳಿಯ ಸಂಬಳವಲ್ಲ ನಿಂತು ಕೇಳುವರೆ ।
ಹಳೆ ಸಾಲವಲ್ಲ ಹಗಲಿರುಳು ಕಾಡುವರೆ | ಅಳಿ ಮನವ ಮಾಡದಿರಿ ಕೀರ್ತಿಗಳಿಸುವರೆ || ೫ ॥
ಕೊಟ್ಟಿರಿಸಿ ಕೇಳಬಂದವರಲ್ಲ ನಾವು | ಬಿಟ್ಟಿ ಬೀಡಾ ತೆಗೆಯೆನ್ನದಿರಿ ನೀವು ।
ಕಷ್ಟ ಲೋಭಿಯ ಬಳಿಗೆ ಬರಲಿಲ್ಲ ನಾವು | ಕೊಟ್ಟು ನಮಗುಡುಗೊರೆಯ ಕಳುಹಿಕೊಡಿ
ನೀವು” ॥ ೬॥
Ii. ದಾಸರ ಪದಗಳು- ಇವು ಹಿಂದೆ ಮೊದಲನೆಯ (ಲಾವಣಿ) ವಿಭಾಗ
ದಲ್ಲಿ ಬಂದ ಸ್ತುತಿಗಳ ಜಾತಿಗೇ ಸೇರಿದವು. ಇಲ್ಲಿ ಛಂದಸ್ಸು ಬೇರೆಯಾಗುವುದು.
ಮತ್ತು ಈಗ ನಮ್ಮೆಲ್ಲರಿಗೆ ಪರಿಚಿತವಾಗಿರುವ, ರಾಗವಾಗಿ ಹಾಡುವ ದಾಸರ ಪದ
ಗಳಂತೆ ಇರದೆ, ಗಂಡುಸರ ಹಾಡಿನ ಮುಖ್ಯ ಲಕ್ಷಣವಾದ, ರಾಗದ ಬೆಡಗಿಲ್ಲದ ತಾಳ
ಬದ್ಧತೆಯನ್ನು ಪಡೆದಿರುವುವು ಇವು. ರಾಗವಾಗಿ ಹಾಡುವ ದಾಸರ ಪದಗಳಲ್ಲಿರುವ
ವೈವಿಧ್ಯವೆಲ್ಲವೂ ಇಲ್ಲಿಯೂ ಇರುವುದು. ಸಂದರ್ಭಾನುಸಾರವಾಗಿ ಹಾಡಿದ ಪದಗಳು,
ಅರ್ಥವಾದಗಳು, ಸರಕಾರ ಪರಮೇಶ್ವರನನ್ನು ಅರ್ಥಿಯಾಗಿ ಪ್ರಾರ್ಥಿಸುವುದು,
.......................
* 'ಜಯಕರ್ನಾಟಕ' ಸಂಪುಟ ೯, ಸಂಚಿಕೆ ೧೨, ಪುಟ ೯೨೩ರಲ್ಲಿ ತ್ರೀ ಕೃ. ಶ. ಬೆಟಗೇರಿಯವರು
ಸಂಗ್ರಹಿಸಿದ ಹೋಳೀ ಪದವೊಂದಿದೆ. ಆದರೆ ವಿಷಯದ ದೃಷ್ಟಿಯಿಂದ ಅದು ಬೇರೇ ಜಾತಿಯೆಂದು
ಕಾಣುತ್ತದೆ.
೪೭
-----------------------------------------------------------------------
ಕರ್ಣಾಟಕ ಸಂಸ್ಕೃತಿ
ತನ್ನ ದುಃಸ್ಥಿತಿಯನ್ನು ಹಳಿದುಕೊಂಡು ವ್ಯಥಿಸುವುದು, ಇಹದ ಗೊಂದಲದಿಂದ
ವೈರಾಗ್ಯದ ರಾಜ ಮಾರ್ಗಕ್ಕೆ ತಿರುಗೆಂದು. ಮನಕ್ಕೆ ಬೋಧಿಸುವುದು--ಇವು
ಈ ಹಾಡುಗಳ ವಿಷಯಗಳು. ಸರ್ವಜ್ಞ ಪುರಂದರಾದಿಗಳಂತೆ ಎಲ್ಲೆಂದರೆ ಅಲ್ಲಿ,
ಯಾವ ಸಂದರ್ಭವೆಂದರೆ ಆ ಸಂದರ್ಭದಲ್ಲಿ ಹಾಡಿದ ಪದ್ಯಗಳಿವು,--
೩೩. " ಎನ್ನವ್ವ ಕಲ್ಲಾ ಬಿಡೆ! ಈ ಧೋತ್ರವು ಚೆನ್ನಾಗಿ ಒಗೆಯಬೇಕು || ಪ ||
ಮುನ್ನ ಮಾಡಿದ ಪಾಪ ಕರ್ಮವು ಹೋಗುವ ಹಾಗೆ |
ಚೆನ್ನ ಕೇಶವನ ಪ್ರಸಾದಕ್ಕೊದಗಬೇಕು ॥ಅ॥
ವೇದ ನೋಡಬೇಕು ಮನದೊಳಿದ್ದ | ಭೇದವ ತಿಳಿಯಬೇಕೂ ॥
ಸಾಧಾರಣೆಯಿಂದ ತಿಳಿದು ನಿಶ್ಚಯವಾಗಿ | ಕ್ರೋಧ ಕರ್ಮಗಳೆಲ್ಲ ಬಿಟ್ಟು
ಹೋಗುವ ಹಾಗೆ ॥ ೧॥
ವೆಲ್ಲಾ ಪುರಿಯ ಚೆಲುವ ಕೇಶವನ ಪ್ರಸಾದಕ್ಕೆ ।
ಆಲಸ್ಯ ಮಾಡದೆ ಕೋವೂರನು ಬಂದು ದ್ವಾರವತ್ತಿನಲಿ ನಿಂದು ॥
ನೀಲಕುಂದವ್ವ ಕಲ್ಲಾ ಬಿಟ್ಟು ಆ ಕಡೆ ಸಾರವ್ವಾ" ॥ ೨॥
(ಇದರಲ್ಲಿ ಛಂದೋ ವೈವಿಧ್ಯಗಳನ್ನು ನೋಡಿರಿ)
೩೪. " ಹರ ಹರ ಹರ ಹರಯೆನುತಲಿ ರುದ್ರಾಕ್ಷಿ | ಧರಿಸಲು ಭವಗಳ ಹರಿವುದು ರುದ್ರಾಕ್ಷಿ ॥ ಪ||
ವೀರಶೈವದಾಚಾರದ ಮುಕ್ತಿಗೆ | ದಾರಿಯ ತೋರುವ ರುದ್ರಾಕ್ಷಿ ॥
ಇನ ಶಶಿ ಹರಿಯಜ ಇಂದ್ರರು | ಸುಗುಣಾಶ್ರಯ ಮುನಿಗಳು ಧರಿಸುವ ರುದ್ರಾಕ್ಷಿ
ಪರಿ ಪರಿಯಿಂದಲಿ ಕೊರಳೊಳು ಧರಿಸಲು | ಸ್ಥಿರ ಪದವಿಯ ಕೊಡುವುದು ರುದ್ರಾಕ್ಷಿ ।
ಕರದೊಳು ಭುಜದೊಳು ಕರ್ನದಿ ಧರಿಸಲು | ಸ್ಥಿರ ಪದನಿಯ ಕೊಡುವುದು ರುದ್ರಾಕ್ಷಿ ॥ "
೩೫. " ಮಾಯೆ ಮರವದು ಹೋಗಲಿಲ್ಲ | ಅರುವಾಗಲಿಲ್ಲ |
ಮೀರದ ಉನ್ಮನಿ ಸೇರಲಿಲ್ಲ | ಹರನ ಕಾಣಲಿಲ್ಲ
ಸಾಧು ಸತ್ಪುರುಷರ ಸಂಗವಿಲ್ಲ | ನಿರ್ದ್ವಂದ್ವವಾಗಲಿಲ್ಲ |
ಮದ ಮೋಹಕೆ ಸಿಕ್ಕಿ ಬಳಲುವೆಯಲ್ಲ ಕಾಲ ಕಳೆಯುವೆಯಲ್ಲ" ॥೧॥
೩೬. " ನಾನಿತ್ರಲೆಳೆದರೆ ತಾನತ್ತೆಳೆವುದು |ಇನ್ನೇನಿನ್ನೇನು |
ಜ್ಞಾನವಿಲ್ಲದ ಕೋಣ ಸಾಧನವಾಗದು | " |
ಮುಪ್ಪುರಿಗೆಯನು ಗೂಡಿ ಮೂಗುದಾಣ ಹಾಕಿದೆ | " |
ಹಸುರು ಹುಲ್ಲನೆ ಕಂಡು ಬಿಸಲೊಳು ಮೆಯ್ಯುದು | " |
ಅಸವಲ್ಲದಾ ಕೋಣ ಕೊಸರಿಕೊಂಡೋಡಿತು | " |
ನೂರಾರು ಕೋಣದೊಳು ಮೀರಿದ ಕೋಣದು | " |
ನಮ್ಮ ಧೀರಮಂತೇಶನಿಗೆ ಮಾರಿಬಿಟ್ಟೆನು ಕೋಣ| " |
( ಕೋಣವೆಂದರೆ, ಇಲ್ಲಿ ಸಗ್ಗದ ಮನಸ್ಸು )
III. ತತ್ತ್ವಗಳು ಇದರಲ್ಲಿ ವೇದಾಂತಗಳೂ ಯೋಗ ರಹಸ್ಯಗಳೂ ಹೆಚ್ಚಾ
ಗಿವೆ. ಅನೇಕ ವೇಳೆಗಳಲ್ಲಿ ನಾವು ಯಾವ ಗ್ರಂಥಗಳಲ್ಲಿಯೂ ನೋಡಲು ಅರಿಯ
ದಂತಹ ಅನುಭವ ರಹಸ್ಯಗಳನ್ನು ಮನೆ ಮಾತಿನಲ್ಲಿ ಹೇಳಿರುವುದು ಈ ಹಾಡುಗಳ
೪೮
-------------------------------------------
ಗಂಡುಸರ ಹಾಡುಗಳು
ಗುರುತುಗಳು. ಇದರಲ್ಲಿ ವುಂಡಿಗೆಗಳು, ಚಿಟಿಕೆಗಳು, ಮುದ್ರಿಕೆಗಳು ಎಂಬ ಗುಟ್ಟಿನ
ಹಾಡುಗಳೂ ಉಂಟು,
೩೭. " ಗುರುವಿನ ಮಹಿಮೆಯ ಗುರು ಭಕ್ತರೆ ಬಲ್ಲರು ಚಂದಮಾಮಾ | ಚಂದಮಾಮಾ
ಮೂಢ ನರರೇನು ಬಲ್ಲರು ನಡುರಂಗ ಜೋಳಿಯ " | "
ಒಂಟಿಗಾತರ ಕಾಯಿ | ಆನೆಗಾತರ ಹಣ್ಣು " | "
ಕದರು ಗಾತರ ಮರ ಕುದರೆ ಗಾತರ ಹುವ್ವು " | "
ಒಂಟೆ ಗಾತರ ಕಾಯಿ ಆನೆ ಗಾತರ ಹಣ್ಣು " | "
ಕಣ್ಣಿಲ್ಲದಾತನು ಕಂಡನು ಆ ಮರ " | "
ಕೈಯಲ್ಲದಾತನು ಕೊಯ್ದನು ಆ ಹಣ್ಣು " | "
ತಳನಿಲ್ಲದ ಪುಟ್ಟೀಲಿಟ್ಬಾರು ಆ ಹಣ್ಣು " | "
ಶಿರಸಿಲ್ಲದಾತನು ಹೊತ್ತಾನು ಆ ಪುಟ್ಟಿ " | "
ಮರದಲ್ಲಿ ಮರ ಹುಟ್ಟಿ ಮರ ಮಾಯವಾಯಿತು " | "
ನಮ್ಮ ಹಳಬ ಕನ್ನಡ ದಾಸ ಹಾಕಿದ ವುಂಡಿಗೆ " | "
ಅರ್ಥವಿಲ್ಲದಾತ ಬೆಲೆ ಮಾಡಿದನು ಹಣ್ಣು " | "
ಮೂಗಿಲ್ಲದಾತನು ಮೂಸಿನೋಡಿದ ಹಣ್ಣು " | "
ನಾಲಿಗಿಲ್ಲದಾತ ರುಚಿ ನೋಡಿದನು ಹಣ್ಣು " | "
ಅಂಗಳಿಲ್ಲದಾತ ನುಂಗಿದ ಆ ಹಣ್ಣು " | "
ಜಾಣನ ಪದಗಳಿಗೆ ೧೧ನೆಯ ಉದಾಹರಣೆ ಸಾಕು.
ಈ ತತ್ತ್ವದ ಪದಗಳಲ್ಲಿ ಎಷ್ಟು ಜಾತಿಯಿವೆ? ಅವುಗಳ ನಡೆಯೆಂತಹುದು?
ವಿಷಯವೆಂತಹುದು? ಎಂಬ ಸರ್ವ ವಿಷಯಗಳನ್ನೂ ಚಿದಾನಂದರು, ಸಪ್ಪಣ್ಣನವರು,
ನಿಜಗುಣರು, ಶಾಲ್ಯದರಸರು, ಶಂಭುಲಿಂಗರು, ಮಹಲಿಂಗರು, ವಾದಿರಾಜರು,
ಜಗನ್ನಾಥದಾಸರು ಮೊದಲಾದ ಅನೇಕಾನೇಕ ಮಹನೀಯರಲ್ಲಿ ಯಾರೊಬ್ಬರ
ಹಾಡುಗಳನ್ನು ತೆಗೆದುಕೊಂಡರೂ ಸ್ಪಷ್ಟವಾಗಿ ತಿಳಿಯುವುದು. ಅದರಿಂದ ನಾವು
ವಿಸ್ತರಿಸದೆ ನಿಲ್ಲಿಸುವೆವು.
ಇದುವರೆಗೂ ನಾವು ಕೊಟ್ಟಿರುವ ಉದಾಹರಣೆಗಳಿಂದಲೇ ಈ ಗಂಡುಸರ
ಹಾಡುಗಳಲ್ಲಿ ಅಡಕವಾಗಿರುವ ಸಂಸ್ಕೃತಿಯೆ೦ತಹುದು ? ಎಷ್ಟು ಅಮೌಲ್ಯವಾದುದು ?
ಎಂಬುದು ವಾಚಕರಿಗೆ ತಿಳಿಯಬಂದಿದೆಯಾಗಿ ಆ ವಿಷಯವನ್ನು ಕುರಿತು ನಾವು
ಹೆಚ್ಚಿಗೆ ಹೇಳುವುದಿಲ್ಲ. ಮುಖ್ಯವಾಗಿ, ಈ ಹಾಡುಗಳಲ್ಲಿ ಗಮನಿಸಬೇಕಾದುದು
ಎರಡು ಅಂಶಗಳು : ಮೊದಲನೆಯದು, ಆದಷ್ಟು ಕಡಿಮೆಯ ಕಟ್ಟುಗಳನ್ನಿಟ್ಟುಕೊಂಡು,
ಸಂತೋಷವಾಗಿ, ಇತರರನ್ನು ಮೆಚ್ಚಿಸಬೇಕೆಂಬ ಆಶೆಯಿಲ್ಲದೆ ಹಾಡಿರುವ ರೀತಿ;
ಎರಡನೆಯದು ವಿಷಯ, ಮೊದಲನೆಯದನ್ನು ಗಮನಿಸುವಾಗ ಈ ಸ್ವಸಂತೋಷ
ಕ್ಕಾಗಿ ಹಾಡಿಕೊಂಡ ಹಾಡಿನ ಕಟ್ಟು,” ಪ್ರಾಸದ ಬಿಕ್ಕಟ್ಟುಗಳು, ತಾಳ
ವೈಖರಿಗಳು— ಇವು ಅನುಕರಣವೋ, ಅಥವಾ ಆಯಾ ಶಾಸ್ತ್ರಗಳ ಅಡಿಗಲ್ಲುಗಳೋ
೪೯
--------------------------------------------------------------------
ಕರ್ಣಾಟಕ ಸಂಸ್ಕೃತಿ
ಎಂಬ ವಿಚಾರದಲ್ಲಿ ಹಾಗೋ ಹೀಗೋ ಎಂಬ ಸಂದೇಹಕ್ಕೆ ಅವಕಾಶವಿದೆ. ಆದರೆ
ಎರಡನೆಯ ವಿಷಯ ವಿಚಾರದಲ್ಲಿ ಅಂತಹ ಸಂದೇಹಕ್ಕೆ ಅವಕಾಶವೇ ಇಲ್ಲವೆಂದು
ನಮ್ಮ ಮತ.
ಅಂತೂ, ಈ ಹಾಡುಗಳ ಹೊರಮೆಯ್ಯೆಂಬ ಕಣಕವೂ ಒಳಗಿನ ಮೆಯ್ಯೆಂಬ
ಪೂರಣವೂ ಎರಡೂ ಪ್ರಾಚೀನ ಕಾಲದವು ಎಂಬ ವಿಚಾರದಲ್ಲಿ ಮಾತ್ರ ಸಂದೇಹ
ಬರುವಂತಿಲ್ಲ.*
....................................
* ಈ ವಿಚಾರದಲ್ಲಿ ಸಂಶಯಪಟ್ಟವರು ತಾವೇ ವಿಮರ್ಶಿಸಿ ನೋಡಲು ಅನುಕೂಲವಾಗಿರಲೇಂದು
ಈ ನ್ಯಾಸದಲಿ ಉದಾಹರಣೆಯೂಾಗಿ ಕೊಟ್ಟೆರುವ ಹಾಡುಗಳನು (೧೨, ೧೩, ೧೮, ೨೦ ವಿನಾ), ಕೆಳಗಿನ
ಪಟ್ಟಿಯಲ್ಲಿರುವ ಮುದ್ರಿತವಾದ ಗ್ರಂಥಗಳಿಂದ ಆಯು ಕೊಂಡಿದ್ದೇವೆ:-
ಮುದ್ರಿತ ಗ್ರಂಥಗಳು. ೧. ಕಲ್ಗಿ ಲಾವಣಿ, ೨. ತುರಾ ಲಾವಣಿ (೨), ೩. ಶ್ರೀರಂಗಪಟ್ಟಣದ
ಲಾವಣಿ, ೪. ಕಾಮನ ಪದಗಳು, ೫. ಬಳ್ಳಾರಿ ತತ್ತ್ವ ೬. ಜಾತ್ರೆಯ ಪದಗಳು, ೭. ಹುಟ್ಟಿದ ಹಳ್ಳಿ
ಹಳ್ಳಿಯ ಹಾಡು, ೮. ಚಿದಾನಂದರ ವಚನಗಳು, ೯. ಸಪ್ಪಣ್ಣನವರ ವಚನಗಳು, ೧೦. ಪದ್ಮಸಾರ.
ಪತ್ರಿಕೆಗಳು. ೧: ಕರ್ಣಾಟಕ ಸಾಹಿತ್ಯ ಪರಿಷತ್ರತ್ರಿಕೆ, ಎ. ಜಯಕರ್ನಾಟಕ, ೩. ಮಕ್ಕಳ
ಪುಸ್ತಕ.
ಈ ಗ್ರಂಥಗಳ ಕರ್ತರಿಗೂ ಪತ್ರಿಕೆಗಳ ಸಂಪಾದಕರಿಗೂ ನಮ್ಮ ಕೃತಜ್ಞ ತೆಯ ವಂದನೆಗಳು,
೫೦
---------------------------------------------------------------------------
III ಹೆಂಗುಸರ ಹಾಡುಗಳು
ಹಿಂದೆ ಹೇಳಿದಂತೆ ಹೆಂಗುಸರ ಹಾಡುಗಳು ರಾಗ ಪ್ರಧಾನವಾದವು. ಇಲ್ಲಿ
ತಾಳವುಂಟು ; ಆದರೂ ಗಂಡುಸರ ಹಾಡುಗಳಲ್ಲಿರುವ ತಾಳ ವೈವಿಧ್ಯವೂ ಬಿಗಿಯೂ
ಬಿಕ್ಕುಟ್ಟೂ ಇಲ್ಲಿ ಇಲ್ಲವೆಂದರೂ ಒಪ್ಪುವುದು.* ಈ ಹಾಡುಗಳಲ್ಲಿ ಶಾರೀರದ ಇಂಪು
ಸೊಂಪುಗಳು ಮುಖ್ಯವಾದವು. ಸ್ವಭಾವ ಮಧುರವಾದ ಶಾರೀರದ ಸುಖವನ್ನು
ಬೀರಿ ರಸ ಭಾವ ತರಂಗಗಳನ್ನು ಪ್ರೇರಿಸುತ್ತ ತಾಳದ ಸುಲಭ ಗತಿಯನ್ನು ಹಿಡಿದು
ಹೆಂಗುಸರು ಇವುಗಳನ್ನು ಹಾಡುವರು.
ಹಿಂದಿನ ಹಾಡುಗಳಲ್ಲಿ ಕಾಣಬರುವ ಶೈಲಿ, ಪ್ರಾಸಾದಿಗಳೂ, ಬಂಧ ಮೊದ
ಲಾದ ಕಾವ್ಯ ಗುಣಗಳೂ ಈ ಹಾಡುಗಳಲ್ಲಿಯೂ ಕಂಡುಬಂದರೂ, ಇವು " ವಾಗ್ದೇ
ವಿಯ ಭಂಡಾರವನ್ನೊಡೆದ ಕವಿತ್ವ"ವಲ್ಲ; ಅಂತೆಯೇ, "ಪಂಡಿತರು ತಗುಳ್ದು ಬಿಚ್ಚರಿಸೆ
ಪೇಳಲೊಡರ್ಚಿದ ಪ್ರಬಂಧ”ಗಳೂ ಅಲ್ಲ. ಇವು ಪಾಮರರಿಗೋಸುಗವೇ ಬರೆದವು.
ಪಂಡಿತರೂ ಈ ಹಾಡುಗಳನ್ನು ರಚಿಸಿರುವುದುಂಟು ; ಆದರೂ ಈ ಹಾಡುಗಳು
ಯಾರಿಗಾಗಿ ವಿರಚಿತವಾದವು ಎಂಬುದನ್ನು ಅವರು ಮರೆಯುವುದಿಲ್ಲ. ಈ ಪಂಡಿತ
ಕೃತಿಗಳ ಜೊತೆಗೆ ಅನಕ್ಷರರಾದ ಹೆಂಗುಸರೂ ನಿಸರ್ಗ ಸಿದ್ದವಾದ ಕಾವ್ಯಾನಂದ ಲಹರಿ
ಯಲ್ಲಿ ಬೆರೆತು ಹಾಡಿಕೊಂಡಿರುವ "ಆವೇಶ ಕಾವ್ಯ"ಗಳೂ ಉಂಟು.
ಗಂಡುಸರ ಹಾಡುಗಳು ಸಾಮಾನ್ಯವಾಗಿ ಬ್ರಾಹ್ಮಣೇತರರಲ್ಲಿಯೇ ಇರುವುವು.
ಆದರೆ ಹೆಂಗುಸರ ಹಾಡುಗಳ ವ್ಯಾಪ್ತಿಯು ಈ ದೃಷ್ಟಿಯಿಂದ ಅತಿ ವಿಶಾಲವಾದುದು.
ವೈರಾಗ್ಯ ಸಂಪನ್ನೆಯಾದ ಬ್ಲಾಹ್ಮಣಿಯಿಂದ ಹಿಡಿದು, ಜೀವನಕ್ಕೆ ಒಂದು ಉದ್ದೇಶವೂ
ಇರಬೇಕು ಎ೦ಬುದನ್ನು ಸ್ವತಂತ್ರವಾಗಿ ಅರಿತು ಕೊಳ್ಳಲಾರದ ಕಿಕ್ಕೀಳು ಜಾತಿಯವಳ
ವರೆಗೂ ಎಲ್ಲರಲ್ಲಿಯೂ ಈ ಹಾಡುಗಳುಂಟು. ಇವುಗಳಲ್ಲಿ, ಈ ಕೊನೆಯಲ್ಲಿರುವ
ಉತ್ತಮ ವರ್ಗದವರೆಂದೆನ್ಸಿಸಿಕೊಂಡಿರುವವರ ಹಾಡುಗಳಲ್ಲಿ ಅನುಭವ ವೇದಾಂತ,
ಆಚಾರದಲ್ಲಿರುವ ಶಾಸ್ತ್ರ ಸಂಪ್ರದಾಯಗಳು, ವೈರಾಗ್ಯ ಬೋಧೆಗಳು, ಭಕ್ತಿ ಮಾರ್ಗದ
ಸದುಪದೇಶಗಳು ಇವು ಸ್ಪಷ್ಟವಾಗಿ ಕಾಣಿಸಿದರೆ, ಅತ್ತಕಡೆಯಲ್ಲಿರುವ ಕೀಳು
ಜಾತಿಯವರ ಹಾಡುಗಳಲ್ಲಿ ಇವು ಅಸ್ಪಷ್ಟವಾಗಿ ಕಾಣಿಸುವುವು.
.............
* ಕೊರವಂಜಿ ಹಾಡು, ಯಕ್ಷಗಾನ ಇವು ಗಂಡುಸರ ಹಾಡಿಗೂ ಹೆಂಗುಸರ ಹಾಡಿಗೂ ನಡುವೆ
ಇವೆ. ಇವು ಚಂಪೂ ಜಾತಿಗೆ ಸೇರಿದ ಪ್ರಬಂಧಗಳು. ಇವುಗಳಲ್ಲಿ ರಾಗ ವೈವಿಧ್ಯ ತಾಳ ವೈವಿಧ್ಯಗಳು
ಬೇಕಾದ ಹಾಗೆ ಉಂಟು. ಅಲ್ಲಲ್ಲಿ ತಾಳವನ್ನು ಹಾಕದೆ ರಾಗವನ್ನು ಮಾತ್ರ ಸೂಚಿಸಿರುವಂತೆ, ರಾಗವನ್ನು
ಹೇಳದೆ ತಾಳವನ್ನು ಮಾತ್ರ ಹೇಳಿರುವುದೂ ಉಂಟು. ಹೆಂಗುಸರು ಈ ಪ್ರಸಂಗಗಳನ್ನು ಹಾಡಿಕೊಳ್ಳು
ವಾಗ ಅವರು ಈ ” ತಾಳ ಗೀತ” ಗಳನ್ನು ಅಷ್ಟಾಗಿ ಗಮನಿಸದೆ, ಸ್ಥಾಯಿಯನ್ನು ಬದಲಾಯಿಸಿ
ಹೇಳುವರೆಂದು ತೋರುತ್ತದೆ.
೫೧
--------------------------------------------------------------------------------
ಕರ್ಣಾಟಕ ಸಂಸ್ಕೃತಿ
ಹೀಗಿರುವುದರಿಂದ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸು
ವುದಕ್ಕಾಗಿಯೂ, ಒಂದೇ ಸಂಸ್ಕೃತಿಯು ಬೇರೆ ಬೇರೆ ಮಟ್ಟಗಳಲ್ಲಿ ಹೇಗೆ ಹೇಗೆ
ಬದಲಿಸುವುದು ಎಂಬುದನ್ನು ತೋರಿಸುವುದಕ್ಕಾಗಿಯೂ ಈ ವಿಭಾಗದಲ್ಲಿ ಬ್ರಾಹ್ಮ
ಣಿಯ ಹಾಡುಗಳು, ಶೂದ್ರಾಣಿಯ ಹಾಡುಗಳು, ಎಲ್ಲೆಲ್ಲಿಯೂ ಇರುವ ಸಾಮಾನ್ಯ
ಪದಗಳು!-ಎಂದು ಮೂರು ಭಾಗಗಳನ್ನು ಮಾಡುವೆವು. ಈ ಗುಂಪಿನಲ್ಲಿಯೂ,
ಹಿಂದೆ ಹೇಳಿರುವಂತೆ," ಶಾಸ್ತ್ರದ ಹಾಡುಗಳು, ವಿನೋದದ ಹಾಡುಗಳು" ಮುಂತಾದ
ವಿಭಾಗಗಳು ಸಾಧ್ಯ. ಅಂತೆಯೇ, ಇನ್ನೂ ಬೇರೆ ಬೇರೆ ದೃಷ್ಟಿಗಳಿಂದಲೂ
ವರ್ಗೀಕರಣವು ಅಸಾಧ್ಯವಲ್ಲ.
೧. ಬ್ರಾಹ್ಮಣಿಯ ಹಾಡುಗಳು
ಬ್ರಾಹ್ಮಣಿಯ ಹಾಡುಗಳಲ್ಲಿ ನಿತ್ಯ, ನೈಮಿತ್ತಿಕ ಎಂಬ ಎರಡು ಉಪವರ್ಗ
ಗಳನ್ನು ಮಾಡಬಹುದು. ಹಾಸುಗೆಯಿಂದ ಎದ್ದೇಳುವಾಗಿನಿಂದ ಹಿಡಿದು ಮತ್ತೆ
ನಿದ್ದೆಯಲ್ಲಿ ಮೈಮರೆಯುವ ವರೆಗೂ ಹಾಡುಗಳನ್ನು ಹೇಳಿಕೊಳ್ಳುತ್ತಿರುವವರು
ಅನೇಕರನ್ನು ಕಂಡು ಬಲ್ಲವರು ಹಲವು ಮಂದಿ ಇರುವಾಗ, ಈ “ನಿತ್ಯದ ಹಾಡುಗಳು"
ಎಂದರೆ ಏನೆಂಬುದನ್ನು ವಿವರಿಸಬೇಕಾಗಿಲ್ಲ. ಒಟ್ಟಿನಲ್ಲಿ, ಉದಯ ರಾಗಗಳು, ಗುರು
ಸ್ತೋತ್ರಾದಿಗಳು, ವೇದಾಂತದ ಹಾಡುಗಳು, ಪುರಾಣದ ಹಾಡುಗಳು, ಲಾಲಿ
ಗಳು, ಜಾವಡಿಗಳು, ದಾಸರ ಪದಗಳು--ಇವಿಷ್ಟೂ ನಿತ್ಯ ವರ್ಗದಲ್ಲಿಯೇ ಬರುವುವು
ಎಂದು ಮಾತ್ರ ಹೇಳುವೆವು.
ಹಾಗೆಯೇ, ನೈಮಿತ್ತಿಕ ವರ್ಗದಲ್ಲಿ, "ಆರತಿಯೆತ್ತಿರೆ" ಹಾಡಿನಿಂದ ಹಿಡಿದು,
ಭೂಮಕ್ಕೆ ಬಡಿಸುವುದು, ಚೆಟ್ಟು ಬಡಿಯುವುದು ಮೊದಲಾದ ವಿಶೇಷ ಸಂದರ್ಭಗಳಲ್ಲಿ
ಮಾತ್ರ ಉಪಯುಕ್ತವಾಗುವವು (ಬೀಗರ ಹಾಡು ಸೇರಿ) ಬರುವುವು. ಈ ಹಾಡು
ಗಳನ್ನು ಹೇಳುವುದರಲ್ಲಿ ಪ್ರಕಟವಾಗುವ ಸ್ಮರಣ ಧಾರಣಾ ಶಕ್ತಿಗಳು ಪ್ರಬುದ್ಧ
ರನ್ನೂ ವಿಸ್ಮಯಗೊಳಿಸುವಂತಹವು.
(ಅ) ನಿತ್ಯವರ್ಗ
ಇನ್ನು, ನಿತ್ಯ ನೈಮಿತ್ತಿಕದ ಹಾಡುಗಳಿಗೆ ಉದಾಹರಣೆಗಳನ್ನು ಕೊಟ್ಟುಕೊಂಡು
ಹೋಗುತ್ತ ನಮ್ಮ ಅಭಿಪ್ರಾಯವನ್ನು ಇವು ಎಷ್ಟು ದೂರ ಸಮರ್ಥಿಸುವುವು
ಎಂಬುದನ್ನು ನೋಡೋಣ. ಈ ಹಾಡುಗಳಲ್ಲಿ ಒಂದೊಂದೂ ಸಹಸ್ರಾವಧಿಯಿರು
ವುವು ಎಂಬಂಶವನ್ನು ನೆನಪಿಗೆ ತಂದುಕೊಂಡು, ಒಂದೆರಡು ಉದಾಹರಣೆಗಳಿಂದ
ತೃಪ್ತರಾಗೋಣ,
೫೨
------------------------------------------------------------------
ಹೆಂಗುಸರ ಹಾಡುಗಳು
ಈ ಹಾಡುಗಳನ್ನು ಗಂಡುಸರ ಹಾಡಿನಂತೆ ಬಿಡಿ ಬಡಿಯಾಗಿ ನೋಡುವುದ
ಕ್ಕಿಂತಲು ಅವುಗಳನ್ನು ಆಯಾ ಪರಿಸ್ಥಿತಿಯ ನಡುವೆಯೇ ನೋಡುವುದು ಉತ್ತಮ,
ಅದರಿಂದ ನಾವು ಸಂದರ್ಭಗಳನ್ನು ಕಲ್ಪಿಸುವ ಸ್ವಾತಂತ್ರ್ಯವನ್ನು ವಹಿಸುನೆವು.
ಗೃಹಿಣಿಯು ಮುಂಜಾನೆಯೆದ್ದಿದ್ದಾಳೆ. ಮುಂಜಾವದ ಸುಖ ನಿದ್ರೆಗಿಂತಲೂ
ಮನೆಗೆಲಸದ ಆತುರವು ಬಲವೆಂದೋ, ಅಥವಾ ಸೂರ್ಯೋದಯ ಕಾಲಕ್ಕೆ ಸರಿಯಾಗಿ
ಸ್ನಾನಾದಿಗಳನ್ನು ಮುಗಿಸಿಕೊಂಡು ಸೂರ್ಯಾಘ್ಯವನ್ನು ಕೊಡಬೇಕೆಂಬ ಶಾಸ್ತ್ರ
ವಿಧಿಯನ್ನು ಪಾಲಿಸಬೇಕೆಂಬ ಶ್ರದ್ಧೆಯೋ, ಅಂತು, ಗೃಹಿಣಿಯು ಅರುಣೋದಯಕ್ಕೆ
ಮುಂಚೆ ನಿದ್ದೆ ತಿಳಿದು ಉಪ್ಪವಡಿಸಿದ್ದಾಳೆ. ಚಳಿಗೆ ಹೆದರಿಯೋ, ಜನ ಸಂಚಾರವು
ಹೆಚ್ಚಿಲ್ಲದ ಕಾಲದಲ್ಲಿ ಬೀದಿಗೆ ಬರುವುದು ಅಷ್ಟು ಸಾಧುವಲ್ಲೆಂದೋ, ಅಂತು, ಮನೆ
ಯೊಳಗೇ ಮಾಡುವ ಕಸ ಮುಸರೆಗಳನ್ನು ಮಾಡುತ್ತಿದ್ದಾಳೆ. ಆಗ, ಇನ್ನೂ ಮಕ್ಕಳು
ಮರಿಗಳೂ ಸೋಮಾರಿಗಳೂ ಕಿರು ನಿದ್ದೆಯ ಸಣ್ಣ ಕನಸಿನಲ್ಲಿ ತಣಿಯುತ್ತಿರು
ವಾಗ, ಸಣ್ಣ ದನಿಯಿಂದ ಆ ಕಾಲಕ್ಕೆ ಒಪ್ಪುವ ರಾಗದಲ್ಲಿ, ತಾನು ಎರಡು ಕುರುಕು
ಪದಗಳನ್ನು. ಹಾಡಿಕೊಳ್ಳುತ್ತಿದ್ದಾಳೆ.. ಇತರರಿಗೆ ಕೇಳಿಸಲೆಂಬ ಆಶೆಯಿಲ್ಲವಾದರೂ
ಉಪಾಂಶು ಜಪದಂತೆ ಅಕ್ಷರಗಳು ಬಾಯಲ್ಲಿಯೇ ಅಂತರ್ಧಾನವಾಗದೆ, ಹೊರಬಿದ್ದು,
ಕಿವಿಗೊಟ್ಟು ಕೇಳಿದರೆ ಕೇಳಿಸುವಷ್ಟು ಸ್ಪಷ್ಟವಾಗಿವೆ. ನಾವೂ ಕೇಳೋಣ:
೧. ಭಯ ನಿವಾರಣವು ಶ್ರೀ ಹರಿಯ ನಾಮಾ ॥ಪ॥
ಜಯ ಪಾಂಡುರಂಗ ವಿಟ್ಠಲ ನಿಮ್ಮ ನಾಮಾ || ಅ ||
ಮೊರೆಯ ಲಾಲಿಸಿ ಮುನ್ನ ಜಗವ ಸಲಹಿದ ನಾಮ |
ಕರುಣದಿಂ ದ್ರೌಪದಿಯ ಕಾಯ್ದ ನಾಮಾ ॥
ಮರುಗುತಿಹ ಧ್ರುವಗೆ ಉನ್ನತಿಯ ಮಾಡಿದ ನಾಮ |
ಪರಕೆ ಪರತತ್ತ್ವವಲ್ಲವೆ ನಿಮ್ಮ ನಾಮಾ ||೧||
ಇದರಲ್ಲಿ ಸಾಮಾನ್ಯವಾಗಿ ಸರ್ವರಿಗೂ ಪರಿಚಿತವಾಗಿರುವ
ನಾಮ ಸ್ಮರಣಾದನ್ಯೋಪಾಯಂ | ನಹಿ ಪಶ್ಯಾಮೋ ಭವ ತರಣೇ ॥
ರಾಮ ಹರೇ ಕೃಷ್ಣ ಹರೇ ರಾಮಾ | ಕೃಷ್ಣಾ ಜಗದೀಶ ಹರೇ ॥
ಎಂಬ ಅರ್ಥ ವಾದವೂ,
ಭೀಷಾsಸ್ಮಾದ್ವಾತಃ ಪವತೇ | ಭೀಷೋದೇತಿ ಸೂರ್ಯಃ ॥
ಇತ್ಯಾದಿಯಾದ ಉಪನಿಷದ್ವಾಕ್ಯದಲ್ಲಿ ಹೇಳಿರುವಂತೆ, " ಪ್ರಪಂಚದ ಕಾರ್ಯ
ನಿರ್ವಾಹಕ್ಕೆ ಕಾರಣವಾಗಿರುವ ಭಯವನ್ನು ನಿವಾರಿಸಬಲ್ಲ ಪರಮಾತ್ಮನ ಸರ್ವ
ಶಕ್ತಿಮತ್ವವೂ ವ್ಯಕ್ತವಾಗಿವೆ. ಅದರ ಜೊತೆಗೆ. ಜಗತ್ತನ್ನೇ ಸಲಹಬಲ್ಲ ಅಪಾರ ಕರುಣಾ
ನಿಧಿಯಾದ ಪರಮಾತ್ಮನು ಸುಲಭವಾಗಿ ಒಲಿಯುವನೆಂಬ ನಂಬಿಕೆಯೂ ಎಷ್ಟು
ಸ್ಪಷ್ಟವಾಗಿದೆ !
೫೩
-------------------------------------------------------------
ಕರ್ಣಾಟಕ ಸಂಸ್ಕೃತಿ
೨. ಗೋವಿಂದಾ ರಾಮ | ಗೋವಿಂದಾ ರಾಮಾ | ಗೋವಿಂದಾ ನಾರಾಯಣ |
ಗೋವರ್ಧನ ಗಿರಿಯನೆತ್ತಿದ ಗೋವಿಂದ ನಮ್ಮ ರಕ್ಷಿಸೋ ॥ ಪ ॥
ಅರ್ಥವ್ಯಾರಿಗೆ ಪುತ್ರರ್ಯಾರಿಗೆ ಮಿತ್ರ ಬಾಂಧವರಾರಿಗೆ ।
ಕರ್ತು ಯಮನೊರು ಎಳೆದು ಒಯ್ವಾಗ |
ಅರ್ಥ ಪುತ್ರರು ಕಾಯ್ವರೇ |
ಹೊತ್ತು, ಬಿದ್ದುದು ನಾಳೆಗೆ | ಗೋವಿಂದ ॥೧॥
ಮಂಚ ಬಾರದು ಮಡದಿ ಬಾರಳು |
ಕಂಚು ಕನ್ನಡಿ ಬಾರದು ॥
ಸಂಚಿತಾರ್ಥವು ಜೊತೆಗೆ ಬಾರದು ।
ಮುಂಚೆ ಮಾಡಿರೊ ಧರ್ಮವಾ ॥ ೨॥
ಇದರಲ್ಲಿ ಮೇಲಿನ ಹಾಡಿನಲ್ಲಿ ಕಂಡುಬಂದ ನಾಮ ಸ್ಮುರಣದ ಪ್ರೀತಿಯ
ಜೊತೆಗೆ ಇತ್ತಲಿಂದ ಅತ್ತಲಿಗೆ ಹೊಡೆದು ತಿರುಗಿಸುವ ಜಗನ್ಮಿಥ್ಯಾ ವಾದವೂ ಸೇರಿದೆ.
(ಎರಡನೆಯ ನುಡಿಯಲ್ಲಿ ಕಂಡುಬರುವ ಸೌಖ್ಯ ಸೌಭಾಗ್ಯ ಸೂಚಕಗಳಾದ ಶಬ್ದಗಳ
ಪ್ರಯೋಗವನ್ನು ಗಮನಿಸಿರಿ.)
೩. ಹಕ್ಕಿ ಚಿಲಪಿಲಿ ಯೆನ್ನಲಿ ರಂಗಾ |
ಕಾಕಿ ಕಾ ಕಾ ಯೆನ್ನಲಿ ಹರಿಯೇ |
ಕೋಗಿಲೆ ಸ್ವರಗೈಯಲಿ ರಾಮಾ |
ನಾಗ ಸಂಪಿಗೆಯರಳಲಿ ಕೃಷ್ಣಾ |
ಭಾನು ವುದಯವಾಗಲೀ ॥ ಪ ॥
ಎದ್ದು ಮುಖತೊಳೆ ಯೇಳು | ತಿದ್ದು ಕಸ್ತುರಿ ತಿಲಕ |
ಮುದ್ದೆ ಬೆಣ್ಣೆಯ ನಿನಗೆ ನಾನು ಕೊಡುವೆ ॥
ಹೊದ್ದಿದೆ ಕತ್ತಲು ಬೆಳಕು ಹರಿಯಲೊ ರಂಗ |
ನಿದ್ದೆ ತಿಳಿದೆದ್ದು ನೀನೆದ್ದು ಕುಂಡ್ರೈಯ್ಯ ಸ್ವಾಮೀ ||೧||
ಬಿಸಿಯ ದೋಸೆಯ ಹೊಯ್ದು | ಮೊಸರು ಗಡ್ಡೆಯ ತೆಗೆದು ।
ಹಸನಾದ ಕಲಸನ್ನ | ಹೆಸರುಬ್ಯಾಳೇ ಹುಗ್ಗಿ ॥
ಹಸುಳೆ ನಿನಗಾರೋಗಣೆಗೆ ಕೃಷ್ಣಾ ॥ ೨॥
ಈ ಹಾಡಿನಲ್ಲಿ ಅದೆಷ್ಟು ಕಾವ್ಯ ಸಂಪತ್ತಿಯಿದೆ ನೋಡಿರಿ! ಮೊದಲಿನ ನುಡಿ
ಯಂತಿರುವ ಪಲ್ಲವಿಯಲ್ಲಿ ಉದಯ ಕಾಲದ ಪ್ರಕೃತಿಯ ವರ್ಣನೆ; ಎರಡನೆಯದರಲ್ಲಿ,
ದೊಡ್ಡವರು ಮಾಡುವ ಮೊಗ ತೊಳೆದು ಹಣೆಗೆ ಹಚ್ಚಿ, ಮೊಸರು ಕಡೆಯುವ ಮನೆ
ಗೆಲಸಗಳ ಕಥನ; ಮೂರನೆಯ ಭಾಗದಲ್ಲಿ, ಹಿಂದಿನ ಕಾಲದಲ್ಲಿ ಆಢ್ಯಯರ ಮನೆಯಲ್ಲಿ
ಹುಡುಗರಿಗೆ ಬೆಳಗಿನ ಹೊತ್ತು ದೊರೆಯುತ್ತಿದ್ದ ತಿಂಡಿಯ ಪ್ರಲೋಭನ-- ಒಂದ
ಕ್ಕೊಂದು ಎಷ್ಟು ಚೆನ್ನಾಗಿ ಹೊಂದಿಕೊಂಡಿವೆ! ಗೃಹಿಣಿಯ ಪ್ರಾತಃ ಕಾರ್ಯಗಳೆಲ್ಲ
೫೪
------------------------------------------------------------
ಹೆಂಗುಸರ ಹಾಡುಗಳು
ಅದೆಷ್ಟು ಮುದ್ದಾಗಿ, ಸುಲಭವಾಗಿ, ಸ್ವತಂತ್ರವಾಗಿ ಸೇರಿಕೊಂಡು ಹಾಡಾಗಿವೆ |
ಇಲ್ಲಿ ಬಿಟ್ಟಿರುವ ಒಂದೆರಡು ಅಂಶಗಳನ್ನು ಇನ್ನೊಂದು ಹಾಡು ಸೂಚಿಸುತ್ತದೆ.
೪. ದಿನ ಮಣಿಯು ಮೈದೋರೆ ಕೃಷ್ಣನ | ಜನನಿ ಮಂಚವನಿಳಿದಳು |
ಕನಕ ಕಳಶದಿ ಮುಖವ ತೊಳೆದಳು | ತನುವ ಶೃಂಗರವಾದಳು ॥ ಕೃಷ್ಣಾ ॥
ಹೀಗೆ ಉದಯ ರಾಗಗಳನ್ನು ಹೇಳಿಕೊಳ್ಳುತ್ತ ಗೃಹಿಣಿಯು ದಿನದ ಮೊದಲ
ಜಾವವನ್ನು ಕಳೆದಿದ್ದಾಳೆ. ಆ ವೇಳೆಗೆ ನೀರು ಕಾದು ಸಿದ್ಧವಾಗಿದೆ. ಮಿಂದು
ಮಡಿಯುಟ್ಟು ಅಡಿಗೆಗೆ ಎಸರಿಟ್ಟು ಮಡಿ ನೀರು ತಂದಿದ್ದಾಳೆ. ಈ ಕಾರ್ಯಗಳನ್ನು
ಮಾಡುವಾಗ ಅಭ್ಯಾಸದ ಬಲವೇ ಸಾಲದೆ, ಮನಸ್ಸೂ ಆ ಕಾರ್ಯದಲ್ಲಿಯೇ ವ್ಯಗ್ರ
ವಾಗಿದೆ. ಅನಂತರ ಮತ್ತೆ ಕೊಂಚ ಅವಕಾಶವಾಗಿದೆ. ಆ ಅವಕಾಶದಲ್ಲಿ ತನ್ನ ನಿತ್ಯ
ಗೌರಿಯ ಪೂಜೆಯನ್ನು ಮುಗಿಸಿಕೊಳ್ಳುತ್ತಾಳೆ. ಪೂಜೆಗೆ ಮಂತ್ರಗಳಿಲ್ಲ; ಮಂತ್ರಕ್ಕೆ
ಬದಲಾಗಿ ಹಾಡು. ಶಿವ ಸತಿಯ ಪೂಜೆಯೆಂದೇನೊ ಭೈರವಿ ರಾಗ ಈ ಹಾಡಿಗೆ:-
೫. ಹಳ್ಳದಲಿ ಮೈತೊಳೆದು ಒಳ್ಳೆಯಾ ಮಡಿಯುಟ್ಟು |
ಮೆಲ್ಲನೆ ಶಿವಪೂಜೆಗಣಿಮಾಡುತ ॥
ಕಳ್ಳತನದಲಿ ಹೋಗಿ ಶಿವಗೆ ಹೆಂಡತಿಯಾದ |
ಗುಳ್ಳದಾ ಗೌರಿಗಾರತಿ ಯೆತ್ತಿರೇ ॥
ಜಯಮಂಗಳಂ ನಿತ್ಯ ಶುಭಮಂಗಳಂ ॥ ೧ ||
ನಂದಿಬಟ್ಟಲ ಹೂವು ದುಂಡುಮಲ್ಲಿಗೆ ದಂಡೆ |
ಚಂದ್ರಮನ ಬೈತಲೆಗೆ ಮುತ್ತು ತುಂಬೆ ॥
* * * *
ಆ ಮಣೀ ಸರದೋಲೆ ಆಣಿ ಮುತ್ತಿನ ಬುಗುಡಿ ।
ಲಾಮಂಚ ಪಗಡೆ ಹೂವಿನ ಸೀರೆಯೂ ॥
ಮೇಲ್ಕಟ್ಟು ಹೊಂಬಾಳೆ ಫಲಮಾವು ಫಲವಸ್ತು |
ಆನೆಯಾ ಗೌರಿಗಾರತಿ ಯೆತ್ತಿರೇ ॥
ಜಯ ಮಂಗಳಂ ನಿತ್ಯ ಶುಭ ಮಂಗಳಂ ||೩||
ಇದರಲ್ಲಿರುವ ಕಾವ್ಯ ಝರಿಯನ್ನು ನೋಡಿರಿ.
ಪೂಜೆಯು ಮುಗಿಯಿತು. ಸಾರಿಗೆ ಒಗ್ಗರಣೆಯನ್ನು ಹಾಕಿ ಅಡುಗೆಯನ್ನೆಲ್ಲ
ಓರಣವಾಗಿ ಮುಚ್ಚಿಟ್ಟಿದ್ದಾಳೆ. ಇನ್ನು, ತನ್ನ ಪತಿದೇವನು ಬಂದು ಭೋಜನ ಸೇವೆ
ಯನ್ನು ಸ್ವೀಕರಿಸಬೇಕು. ಅದುವರೆಗೆ ಇರುವ ಅವಕಾಶದಲ್ಲಿ ಆಕೆ ಸುಮ್ಮನೆ ಕುಳಿತು
ಕೊಳ್ಳುವಳೇನು? ಇಲ್ಲ; ಊಟಕ್ಕೆ ಎರಡು ಎಲೆಯನ್ನು ಹಚ್ಚುತ್ತಾಳೆ. ಕೈಯೂ
ಕಣ್ಣೂ ಎಲೆಯನ್ನು ಹಚ್ಚುವ ಕೆಲಸದಲ್ಲಿದ್ದರೆ ಬಾಯೇಕೆ ಸುಮ್ಮನಿರಬೇಕು? ಮನವೇಕೆ
ಫಲವಿಲ್ಲದ ಯೋಜನೆಯಲ್ಲಿ ಆಳಾಳಿ ಮುಳಿಗೇಳಬೇಕು? ಅದರಿಂದ, ಒಂದೆರಡು
ಹಾಡು ಮತ್ತೆ. ಆದರೀಗ ಮಡಿಯಲ್ಲಿದ್ದಾಳೆ. ಶುಚಿಯಾದ ಮೆಯ್ಯಲ್ಲಿ ಪೂಜಾದಿ
೫೫
-----------------------------------------------------------
ಕರ್ಣಾಟಕ ಸಂಸ್ಕೃತಿ
ಗಳಿಂದ ಪರಿಶುದ್ಧವಾದ ಮುನಸ್ಸು ಶುದ್ಧವಾದ ಜೀವನದ ಕೊನೆಗಾಲಕ್ಕೆ ಕೊನೆಯ
ಗುರಿಯಾಗಿ ಒದಗುವ ವೇದಾಂತದ ಹಾದಿಯನ್ನೇ ಹಿಡಿದಿದೆ. ಹೇಳಿ ಕೇಳಿ ಬಂದಿರುವ
ಹಾಡು; ನೆರಳಲ್ಲಿ ನಿಶ್ಶಂಕವಾಗಿ, ನಿಶ್ಚಿ೦ತೆಯಿಂದ ಕುಳಿತಿರುವ ಹಕ್ಕಿಯ ಕಂಠದಿಂದ
ಹೊರ ಸೂಸುವ ಮನೋಹರ ಕಾಕಲಿಯಂತೆ ಹೊರ ಹೊಮ್ಮುತ್ತದೆ. ತೃಪ್ತಿಯ
ಓಲಾಟದಲ್ಲಿರುವ ಮನಸ್ಸು ಆನಂದವನ್ನೇ ಕುರಿತು ಚಿಂತಿಸುತ್ತದೆ. ಸಂಸ್ಥಾರ
ಬಲದಿಂದ ವಿಷಯಾನಂದವನ್ನು ಮೀರಿ ಮೇಲಕ್ಕೆ ಹಾರಿದೆ. ಹಾಡು ಕಾಲಾನು
ಗುಣವಾದ ಮಧ್ಯಮಾವತಿಯಲ್ಲಿದೆ.
೬. ಬ್ರಹ್ಮಾ ನಂದದೊಳಿರುವದೆ ಚೆಂದ | ಗುರು ಕರುಣದಿಂದ || ಪ ॥
ನಾಸಿಕಾಗ್ರದಿ ದೃಷ್ಟಿಯನಿಟ್ಟು ಸುಷುಮ್ನಾದಿ | ಲೇಸಾಗಿ ಮನವನಳವಟ್ಟು |
ಈಡಾ ಪಿಂಗಳಾ ಆಕಾಶಕೇರಿಸಿಬಿಟ್ಟು | ಬ್ರಹ್ಮಾನಂದದ, ರಾಶಿಯೊಳಗೊಡಂಬಟ್ಟು |
ಸಾಸಿರ ದಳಗಳ ಕಮಲದಿ ವಾಸವಾಗಿರುವ ಶಿವನೊಳು ಬೆರೆದು ||೧||
ಆರು ಸ್ವಳಗಳನ್ನೇ ಮೀರಿ । ಉನ್ಮನಿಯೊಳು ಸೇರಿ!
ಆ ಮಹಾಲಿಂಗದ ಮೇಲೆ ಹಾರಿ |
ಚಿಜ್ಜೋತಿ ಪ್ರಭೆಯ ಮೀರಿ | ಶಾಂತಿ ಶರಧಿ ಕೈಸೇರಿ |
ಆರಾರರಿಯದ ಆನಂದವು ಇದು |
ಮೀರಿದ ರುಚಿಯನು ಮಿಗಿಲು ಸೇವಿಪರಿಗೆ ॥೨॥
ಹರಿ ಹರ ಬ್ರಹ್ಮಗಳವಲ್ಲ | ಉರುತರದಲ್ಲಿರುವ |
ಗುರುಪುತ್ರನೊಬ್ಬನೆ ಬಲ್ಲ ||
ಶಾಂತಿ ಸೈರಣೆಯಿರವ ಕಂಡವರಿಗಿದೆಲ್ಲ |
ಪರಮ ಪುರುಷ ಹರಿ ಚರಣ ಕಮಲವನು |
ಗುರಿಯ ಮಾಡಿಕೊಂಡಿರುವ ಮಹಾತ್ಮಗೆ ||೩||
ಈ ಯೋಚನೆಯ ತೀವ್ರವಾಗಿ ತನ್ನ ಸುತ್ತಿಕೊಂಡಿರುವ ಸಣ್ಣತನವೆಂಬ
ಸಂಸಾರದ ನೆನಪಾಗಿ ಇದು ಹೇಗೆ ತೀರಿ ಆ ದೊಡ್ಡತನವು ಬಂದೀತೆಂದು ಶಂಕೆಯೊಂದು
ಮೂಡಿದೆ; ಜೊತೆಯಲ್ಲಿಯೇ ಸಂಸ್ಕಾರ ಶುದ್ಧವಾದ ಮನಸ್ಸೇ ಉತ್ತರ ಕೊಡುತ್ತದೆ:
೭. (ತೋಡಿ) ಹ್ಯಾಗಾದರೂ ನಿನ್ನ ನೀನೇ ಕಂಡಲ್ಲದೆ |
ನೀಗದು ಭವ ಬಂಧ | ಪ ॥
ಹೀಗೆ ವಿಷಯ ರುಚಿ ವಾಸನಾ ಬಲದಿಂದ |
ಭೋಗಕಾಲದಿ ಚಿತ್ರದೊಳೆಣೆಗೊಂಡಾರು |
ಈಗಲೇ ಕೆಡಿಸುವುದು ಪರಮ ವಿರಾಗ ಮುಖದಿಂದಲ್ಲದಿದ್ದರೆ |
ರೋಗವೇ ಬಲಿದಂತ ತನ್ನನು ಮೂಗು ಮಾರಿಯ ಮಾಡಿಬಿಡುವುದು ||೧||
ಮನಕೆ ನಿಶ್ಚಯವಾ ಸಂಪಾದಿಪುದೈ ಈಗಲನುಭವ ಬಲದೊಳು |
ಇನಿತೊಂದು ವಿಷಯಗಳು ಕ್ಪಣಿಕವಾದುದರಿಂದ |
೫೬
-------------------------------------------------------------------
ಹೆಂಗುಸರ ಹಾಡುಗಳು
ತನಗೆ ರೋಗಗಳಿಂದ ಸುಖನಿಯೋಗಗಳಿಂದ |
ಜನರ ಕಲಹಗಳಿಂದ | ಮನದ ಸಂಕಲ್ಸಾರ್ಥ ಪೂರ್ತಿಯ |
ಅನುಗಮಿಸದಿದ್ದ ಕಾರಣ | ಮನವಿಪತ್ಪ್ರದವೆಂಬೊ ಭಾವವು |
ಇನಿತು ಕೆಡದಂದದಲಿ ಧೈರ್ಯದಿ ॥ ೨ ॥
"ನಿನ್ನ ನೀ ಕಾಣುವ" ಭಾವವು ಬಲಿತು ಇನ್ನೂ ಮುಂದೆ ಹೋಗಿದೆ. ಆ ಪರ
ವಸ್ತುವನ್ನು ಕುರಿತು ಚಿಂತಿಸುತ್ತ ಉಪನಿಷತ್ಸಾರವನ್ನು ಹಾಡಾಗಿ ಪರಿಭಾವಿಸಿ
ಕೊಳ್ಳುವಸ್ಥಿತಿಗೆ ಮನವು ಏರಿದೆ. ಆ ಧೀರ ಗಂಭೀರ ಭಾವಾನುಗುಣವಾಗಿ ಹಾಡೂ
ಶಂಕರಣಭರಣದಲ್ಲಿಯೇ ಇದೆ
೮. ಹಂಸ ನೀ ಪರಮಾತ್ಮನೆಂದು ಭಾವನೆ ಮಾಡು ಸಂಸಾರಿ ನೀನಲ್ಲ ಹಂಸಾ
ಸಂಶಯ ಮೊದಲಾದ ಅಜ್ಞಾನ ಕಾರ್ಯವ ಧ್ವಂಸಮಾಡೆಲೋ ಹಂಸಾ ||ಪ||
ಶುದ್ಧ ಬುದ್ಧ ಮುಕ್ತ ನಿತ್ಯ ಚಿದಾನಂದ ಅದ್ವಯ ರೂಪ ನೀ ಹಂಸಾ |
ಬದ್ಧ ನಾನೆಂದ ಔಿದ್ಯಾ ವಾಸನನಾಗಿ ಬಿದ್ದು ಮರೆತೆಯೋ ನೀ ಹಂಸಾ ||೧||
ಇದ್ದು ತ್ರಿಗುಣದೊಳಜ ಶಾಂಭವ ವಿಷ್ಣು ರುದ್ರನಂದದಿ ತೋರ್ಪೆ ಹಂಸಾ |
ಔಿದ್ಯೋಪಾಧಿಕನಾಗಿ ಸರ್ವೇಶನೆಂದು ಪ್ರಸಿದ್ಧನಾದವ ನೀನೆ ಹಂಸಾ ||೨||
ಅನ್ನಮಯಾದಿ ಕೋಶ ಧರ್ಮಂಗಳ ನಿನ್ನೊಳಾರೋಪಿಸಿ ಹಂಸಾ |
ಸಣ್ಣನಾದೆ ಸ್ಥೂಲನಾದೆ ನಾನೆಂದೆಂಬೆಯೋ ನಿನ್ನ ನೀ ತಿಳಿಯದೆ ಹಂಸಾ ||೩||
ಹೆಣ್ಣು* ಹೊನ್ನು ಗೃಹ ಕ್ಷೇತ್ರಕ್ಕೆ ಮಿಡುಕುತ್ತ ಸನ್ಮಾರ್ಗವನು ಬಿಟ್ಟೆ ಹಂಸಾ |
ಸುಣ್ಣ ನೀರೊಳು ಬಿದ್ದ ತೆರನಂತೆ ಕುದಿಯುವೆ ನಿನ್ನ ನೀ ತಿಳಿಯದೆ ಹಂಸಾ || ೪ ॥
ಪ್ರಾಣವು ದಾಹ ತಪನದಿಂ ತಪಿಸಲು ನಾನೇ ತನಿಪೆನೆಂಬೆ ಹಂಸಾ ।
ಹೀನ ಮನವು ಶೋಕಮೋಹನ ಹೊಂದಲು ನಾನೇ ಹೊಂದಿದೆನೆಂಬೆ ಹಂಸಾ ॥ ೫ ॥
.............
* ಇಲ್ಲಿ ಹಣ್ಣು, ಹೊನ್ನು, ಮಣ್ಣು ಎಂದು ಹೇಳಿರುವುದರಲ್ಲಿ ಒಂದು ರಹಸ್ಸವಿದೆ: ಯೋಗಿ
ಗಳು ಪ್ರಪಂಚವನ್ನೆಲ್ಲ ಕ್ರಿಯಾ ವಸ್ತು, ಕ್ರೀಡಾ ವಸ್ತು ಎಂದು ಎರಡು ಭಾಗವಾಗಿ ಹಂಚುತ್ತಾರೆ.
ತ ಯಾ ವಸ್ಸು ವು ಬ್ ನಬಖವಾಗಿದ್ದ್ + ಡಾ ವಸು, ಏನೊಡನೆ ಆಟವ ನಾಡುತ್ತ ಇರುವುದು ಪ್ರಪಂಚ;
ಆದೇ ಅಂತರ್ಮೂಖವಾಗಿ ತನ್ನ ಕಡೆಗೆ ತಾನು ತಿರುಗಕೊಳ್ಳುವುದು ಪರಮಾರ್ಥ. ಈ ಕ್ರೀಡಾ ವಸ್ತು
ಗಳಲ್ಲಿ ಆವರಣ ವಿಕ್ಷೇಪಗಳ ವ್ರಭಾವದಿಂದ ಎರಡು ಜಾತಿ. ಎರಡಕ್ಕೂ ಅಥಿಷ್ಠಾನವಾದ ದುರ್ಗ ಸ್ಥಾನ
ದಿಂದ ಮತ್ತೊಂದು ಹೀಗೆ ಮೂರು ಜಾತಿಗಳು ಹುಟ್ಟುತ್ತವೆ ಇದನ್ನೇ ದಾಸರಾಯರು, "ಆರು
ಹಿತವರು ನಿನಗೆ ಮೂರು ಮಂದಿಗಳೊಳಗೆ ನಾರಿಯೋ, ಧಾರುಣಿಯೋ, ಬಲು ಮದದ ಸಿರಿಯೋ”
ಎಂದು ಹಾಡಿದ್ದಾರೆ.
ಪ್ರಾಚೀನರು ಕ್ರೀಡಾ ವಸ್ತುಗಳಲ್ಲಿ ಪ್ರಬಲತಮವಾದುದನ್ನು ಹೆಣ್ಣು ಎಂದು ವೃವಹಾರ ಮಾಡಿರು
ವುದು ದೇಹಾತ್ಮ ವಾಜಗಳಾದ ಆಧುಸಿಕರಿಗೆ` ರುಚ ಸುವದಲ್ಲ. ಆದರೆ ಇವರೂ ಅವರಂತೆಯೇ , 'ದೇಹದಲ್ಲಿ
ದೇಹಿಯೊಬ್ಬನಿದ್ದಾನೆ; ಅವನು ವಿವಿಧ ಪಾತ್ರ ಧಾರಿಯಾಗಬಲ್ಲ. ಚತುರನಾದ ನಟನಂತೆ ಬೇರೆಬೇರೆ ದೇಹ
ಗಳನ್ನು ಧರಿಸಿ ಬರುತ್ತಾನೆ; ಒಂದು ವೇಳೆ ಹೆಣ್ಣಾದವನು ಮತ್ತೊಂದು ವೇಳೆ ಗಂಡಾಗುತ್ತಾನೆ'
ಎಂಬ್ ಜನ್ಮಾ೦ತರ ವಾದವನ್ನು ಒಪ್ಪಿಕೊಂಡರೆ ಆಗ "ಈ ಅಭಿಪಾಯವು ದುರಭಿಮಾನ (Prejudice)
ಮೂಲವೂದುದಲ್ಲ, ವಿತಿಷ್ಟ ದೇಹ ಧರ್ಮಗಳನ್ನು ಕುರಿತು ಆಡಿರುವ ಸತ್ಯವಾಕ್ಮು' ಎಂಬುದು ಅರಿವಾಗಿ
ಬೇಸರವು ನಿರ್ಮೂಲವಾಗುವುದು.
೫೭
---------------------------------------------------------------------------
ಕರ್ಣಾಟಕ ಸಂಸ್ಕೃತಿ
ದೇಹಾಂತರಕೆ ಲಿಂಗಜೀವವು ನಡೆದರೆ ಸಾವು ಕಲ್ಪಿಸಿಕೊಂಡೆ ಹಂಸಾ ॥
* * * *
ಕರ ಪಾದ ನೇತ್ರವಿಲ್ಲದೆ ಸರ್ವ ಲೋಕವು ತಿರುಗುತ್ತಲಿರುವೆ ಹಂಸಾ |
ಗುರು ರಾಮ ಬ್ರಹ್ಮನೊಳೇಕತ್ತ್ವವಾಗಲು ಪರಿಹರನಾಗೋದು ಭವ ಬಂಧ ಹಂಸಾ ||೬||
ಹೀಗೆ, ಒಳಗೆ ಹಂಸಾನುಸಂಧಾನ ಮಾಡುತ್ತಿದ್ದರೂ, "ನ ಜಾತು ತಿಷ್ಠ
ತ್ಯಕರ್ಮ ಕೃತ್" ಎಂಬ ನ್ಯಾಯದಂತೆ, ಹೊರಗೆ ಎಲೆ ಹಚ್ಚು ತ್ತಿರುವ ಈ ಪುಣ್ಯವತಿಗೆ
ಮಗು ಅಳುವುದು ಕೇಳಿಸಿದೆ. ಮಾತೃಭಾವವು ಪ್ರಬುದ್ಧವಾಗಿ (ದೇಹವಿರುವ ತನಕ
ದೇಹೇಂದ್ರಿಯ ವ್ಯಾಪಾರಗಳು ಅಳಿಯುವುದಿಲ್ಲ.) ತೊಟ್ಟಿಲಿನಲ್ಲಿರುವ ಮಗುವನ್ನು
ತೂಗಲು ಹೋಗುತ್ತಾಳೆ. ಆದರೂ, ಆ ಅದ್ವೈತಭಾವನೆಯತ್ತ ಹೊರಳಿರುವ
ಮನವು ಹೊರ ಮೊಗವಾಗಿ ಹೊರಟುಬಂದಿಲ್ಲ. ಆ ತೂಗುವ ವ್ಯಾಪಾರಕ್ಕೆ ಅನು
ಗುಣವಾದ ಆ ಹಂಸನ ತೂಗುವಿಕೆಯನ್ನೇ ನೆನೆದು, ಪುತ್ರ ಮೋಹದಲ್ಲಿರುವ
ಆ ಭದ್ರೆಯು ಹಾಡನ್ನು ಮೋಹನದಲ್ಲಿ ಆರಂಭಿಸುತ್ತಾಳೆ.
೯. ತೂಗುತಿದೆ ಹಂಸ ಸೋಹಮ್ಮೆಂದು ಸಮನಾಗಿ |
ತೂಗಿದಂದದಿ ಕಾಲ ಕರ್ಮಗಳ ನೀಗಿ || ಪ॥
(ಮೊದಲಲ್ಲಿ " ತೂಗುತಿದೆ' ಎಂದು ಕ್ರಿಯಾ ಸ್ವರೂಪವನ್ನು ನಿರ್ವಜಿಸಿ, ಮತ್ತೆ,
. ತೂಗಿದಂದದಿ' ಎಂದು ಹೇಳಿ, ಆ ಹಂಸನ ನಿಷ್ಕ್ರಿಯತ್ವವನ್ನು ಹೇಳುವ
ಚಾತುರ್ಯವನ್ನು ನೋಡಿರಿ.)
ಜಾಗರಣೆ ಸ್ವಪ್ನ ಸುಷುಪ್ತಿಗಳೆಂಬ ತೊಡರಿಲ್ಲ |
ಭೋಗ ಯೋಗ ವಿಯೋಗ ಭ್ರಾಂತಿಗಳು ಇಲ್ಲ ॥
ಮೂಕಾಂಧ ಬಧಿರ ಜಡ ಯೋಗಿ ಬಾಲಾದಿ ।
ಬೇಗೆಗಳುಕದೆ ತಾ ಸರಾಗದಿಂದೆಡೆಬಿಡದೆ ||೧||
ಚಂಡಾಲ ಶ್ವಪಚ ಶುಚಿಯಶುಚಿಯೆಂಬ ತೊಡರಿಲ್ಲ ।
ಗಂಡು ಹೆಣ್ಣೆಂಬ ಜಡ ಧರ್ಮವಿಲ್ಲ ॥
ಅಂಡಜ ಸ್ವೇದಜೋದ್ಭಿಜ್ಞಾದಿಗಳು ಮೊದಲಾದ- |
-ಖಂಡ ಮಯವಾಗಿದ್ದು ಸರ್ವ ಜೀವರೊಳು ॥ ೨॥
ಮುಟ್ಟು ಮೈಲಿಗೆಯೆಂಬ ಮರುಳಾಟ ಮುನ್ನಿಲ್ಲ |
ಕಷ್ಟ ಸುಖವೆಂಬೋ ಕಲಾಪವಿಲ್ಲ ॥
ತುಟ್ಟ ತುದಿ ಮಧ್ಯ ಮೊದಲೆಂಬೆಣೆಕೆಗಳವಡದೆ |
ದಿಟ್ಟತನದಲಿ ತಾನೆ ತನ್ಮಯನಾಗಿ ||೩||
ಉಂಬಾಗ ಉಡುವಾಗ ನಡೆದು ಸಂತೋಷಿಸುವಾಗ |
ಹಂಬಲಿಸಿ ಹಾಡಿ ಹೊಗಳುವ ಕಾಲದಿ ॥
೫೮
-------------------------------------------------------
ಹೆಂಗುಸರ ಹಾಡುಗಳು
ಜಂಭಾರಿ ಬ್ರಹ್ಮ ಪರಿಯಂತರದೊಳೀ ಪರಿಯ ।
ತುಂಬಿ ತುಳುಕಾಡಿ ಮಣಿ ಗಣ ಸೂತ್ರದಂದಲಿ ॥೪॥
ಇಷ್ಟೂ ಹೇಳಿ ಆಕೆಗೆ, ಹೇಳಿದುದನ್ನೆಲ್ಲ ಕೇಳಿ ಮತ್ತೆಯೂ, "ವ್ಯಾಮಿಶ್ರೇಣೈವ
ವಾಕ್ಯೇನ ಬುದ್ಧಿಂ ಮೋಹಯಸೀವ ಮೇ " ಎಂದ ನರನಂತೆ, ಸ್ವಭಾವ ಚಂಚಲ
ವಾದ ಮನಸ್ಸು, ' ಇದಿಷ್ಟೂ ನಿಜವೇ? ಇದೆಲ್ಲವೂ ಪ್ರಜ್ಞಾ ವಾದವಲ್ಲವೇ ?'
ಎಂದುಕೊಂಡಿತೇನೊ ? ಅದಕ್ಕೂ ಸಮಾಧಾನವಿದೆ "ಹಾಡಿನಲ್ಲಿ
ಬರಿಯ ಮಾರುತನಾಟವೆನ್ನದಿರು ಮಾನಸವೇ ! ನೀ |
ನರಿಯದಂತಹ ಚಿದ್ಘನದ ರಹಸ್ಯ ಧರ್ಮಗಳ ॥
ವಿರತಿಗತಿಶಯವಾದ ಗುರುವೇಂಕಟಾರ್ಯಕನ |
ಬಿಡದೆ ಸತ್ಯ ಜ್ಞಾನ ಪರಿಪೂರ್ಣನೆಂದು ತಿಳೀ ॥ ೫॥
(೫ರಿ೦ದ ೯ರ ವರೆಗಿನ ಹಾಡುಗಳು ಹೆಂಗುಸರೇ ಬರೆದವು. )
ಆ ವೇಳೆಗೆ ಯಜಮಾನರು ಬಂದಿದ್ದಾರೆ; ಊಟ ಉಪಚಾರಗಳು ನಡೆದಿವೆ.
ಆಕೆಗೂ ಊಟವಾಗುವ ವೇಳೆಗೆ ಸುಮಾರು ಹೊತ್ತಾಗಿದೆ. ಆಕೆಯು ಆಗಿನ
ಸಣ್ಣ ಪುಟ್ಟ ಕೆಲಸಗಳನ್ನ ಮುಗಿಸಿಕೊಂಡು ಬಂದು ನಡು ಮನೆಯಲ್ಲಿ ಕುಳಿತು
ಕೊಳ್ಳುವ ವೇಳೆಗೆ ನೆರೆ ಹೊರೆಯ ಹೆಂಗುಸರೆಲ್ಲ ಬಂದಿದ್ದಾರೆ: ಎಲ್ಲರೂ ದಿನ ದಿನದ
ಸುಖ ದುಃಖಗಳ ವಿಚಾರವನ್ನು ಅಷ್ಟಷ್ಟರಲ್ಲಿ ಮುಗಿಯಿಸಿ--ಸಂಗೀತ ಕಚೇರಿಯ
ಆರಂಭದಲ್ಲಿ ವಾದ್ಯಗಳನ್ನು ಸಿದ್ದ ಮಾಡಿಕೊಳ್ಳುವಾಗ ಕೇಳಿಬರುವ ಕರ್ಣ ಕಠೋರ
ವಾದ ಅಪಶ್ರುತಿಗಳಂತೆ ಕ್ಷಣಿಕವಾಗಿ--. ಪುರಾಣದ ಹಾಡುಗಳನ್ನು ಕೇಳುವುದಕ್ಕೆ
ಕುಳಿತುಕೊಳ್ಳುತ್ತಾರೆ. ಸೌಭಾಗ್ಯವತಿಯೊಬ್ಬಳು ಹಾಡುವುದಕ್ಕೆ ಆರಂಭಿ
ಸುತ್ತಾಳೆ.--
೧೦. ಪಾರ್ವತೀ ಕೊರವಂಜಿ *
ಶ್ರೀ ವೇಂಕಟೇಶ್ವರ, ಲಕ್ಷ್ಮೀದೇವಿ, ಗಂಗಾಧರೇಶ್ವರ, ಬಾಲ ತ್ರಿಪುರ
ಸುಂದರಿ, ವಿಘ್ನೇಶ್ವರ, ಶಾರದಾ ದೇವಿಯರನ್ನು ಭಜಿಸಿ ದೇವ ಕವಿಗಳಂ ಕೊಂಡಾಡಿ.-
ವಚನ-. . . ಪಾರ್ವತೀ ದೇವಿಯು ದಶರಥ ರಾಯನ ಅರಸಿಯಾದ ಕೌಸಲ್ಯಾ
ದೇವಿಗೆ ಪುತ್ರೋತ್ಸವದ ವಾರ್ತೆಯಂ ಪೇಳಿದ ಕೊರವಂಜಿ ಕಟ್ಟಿಳೆಯಂ ಯಕ್ಷಗಾನ
ಕಥಾ ಪ್ರಸಂಗದಿಂ ಪೇಳ್ವೆನದೆಂತೆನೆ. .
.................
* "ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಊರುಗಳಲ್ಲಿಯೂ ಕಣಿಯನ್ನು ಹೇಳುವ ಹೆಂಗುಸರು
' ಕೊರವಂಜಿ' ಎಂಬ ಹಾಡುಗಳನ್ನು ಹಾಡುತ್ತ ಬರುವುದುಂಟು. ಈ ಹಾಡುಗಳಲ್ಲಿ, ಪ್ರಾಯಶಃ
ಒಬ್ಬ ಪುರುಷನು ಸ್ತ್ರೀವೇಷವನ್ನು ಹಾಕಿಕೊಂಡು ತನ್ನ ಪ್ರಿಯೆಗೆ ಕಣಿ ಹೇಳುವ ನೆಪದಿಂದ' ಅವಳ
ಅನುರಾಗವನ್ನು ಸಂಪಾದಿಸುವ ಕಥೆಯು ಹೇಳಲ್ಪಡುತ್ತದೆ. 'ಅರ್ಜುನ ಕೊರವಂಜಿ', "ಪಾರ್ವತಿಯ
ಕೊರವಂಜಿ' ಮೊದಲಾದವು ಈ ಜಾತಿಯ ಗ್ರಂಥಗಳು. ಈ ಗ್ರಂಥಕರ್ತರು ಇಂತಹವರೆಂದು ಇನೂ
ಗೊತ್ತಾಗಿಲ್ಲ. ಆದರೆ ಗ್ರಂಥದ ಶೈಲಿಯನ್ನೂ ಪ್ರಯೋಗದ ರೀತಿಯನ್ನೂ ನೋಡಿದರೆ ಇವರು ಆಧುನಿಕ
ಕವಿಗಳೆಂದು ತೋರುತ್ತದೆ" ಎಂದು ವಿದ್ಯಾಭ್ಯಾಸದ ಇಲಾಖೆಯ ಪದ್ಯ ಸಾರದಲ್ಲಿ (ಕ್ರಿ. ೧೯೨೪: ಪ್ರಥಮ
೫೯
-------------------------------------------------
ಕರ್ಣಾಟಕ ಸಂಸ್ಕೃತಿ
* * * *
ಅವನೀಶ ದಶರಥೇಶ್ವರನರ್ತಿಯಿಂದ |
ಕೌಸಲ್ಯೆ ಸೌಮಿತ್ರಿ ಕೈಕೆಯಾರಿಂದ||
ಬಹು ಭಾಗ್ಯಯುತನಾಗಿ ವನಿತೆಯರೊಡಗೂಡಿ |
ಧರೆಯ ಪಾಲಿಸುತಿರ್ದ ಧರ್ಮ ವೃತ್ತಿಯಲಿ |
(ಹೀಗಿರುವ ಅರಸನು ಒಂದು ದಿನ, ತನಗೆ ಸಂತಾನವಿಲ್ಲವೆಂದು ತನ್ನ ಸತಿಯೊಳು
ಪೇಳಿ ಚಿಂತಿಸುತಿರ್ದನದೆಂತೆನೆ-)
ಸೊಬಗಿನ ಸೋನೆ ವರ್ಣ
ಒಪ್ಪೂವ ರಾಯರೊಳ್ ಬಂಜೆ ಯೆಂಬರು ಯೆನ್ನ |
ಪುತ್ರ ಸಂತಾನ ಯೆನಗಿಲ್ಲ ॥ ೨॥
* * * *
ಅಂತ್ಯ ಕಾಲಗಳೊದಗಿದ ಮೇಲೆ ಗತಿಯಿಲ್ಲ |
ಸಂತಾನವಿಲ್ಲದ ಬಳಿಕ ||೫||
* * * *
ತ್ಯಾಗಮನೆ-ಆಟ ತಾಳ
ನಾವು ಮುನ್ನ ಪಡೆಯಲಿಲ್ಲ ಎಲೆ ನಾರಿ |
ಬ್ರಹ್ಮಾ ಫಣೆಯೊಳಗೇನ ಬರೆದಿಹನೊ ಎಲೆ ನಾರಿ ||೧||
ಪೂರ್ವ ಜನ್ಮದಲಿನ್ನು ಎಲೆ ನಾರಿ ನಾವು |
ಯಾರ ನೋಡಿ ಕರಗಿದೆವೋ ಎಲೆ ನಾರಿ ||೩||
ತರಿದೇವೋ ದಾರೀಯ ಮರನ ಎಲೆ ನಾರಿ ನಾವು |
ತೊರೆಸಿದೆನೊ ಗಿಳಿಯ ಮರಿಯ ಎಲೆ ನಾರಿ ||೬||
ಭವ ಭವಗಳಿಂದ ಎಲೆ ನಾರೀ ನಾವು |
ಶಿವನ ಪೂಜೆ ಮಾಡಲಿಲ್ಲ ಎಲೆ ನಾರಿ ||೭||
..............
ಭಾಗ್ಯ ಪುಟ ೧) ಹೇಳಿದೆ. (These poems belong to) the class Kurifii, ie,
those that deal with the pre-nuptial love, characteristic of the hill country. Vide:
P. T. Srinivasa Iyengar’s History of thc Tamils, page 165. But his observation that—
‘“‘such poems are characterised by the fact that the Sanskirt words do not occur in
them. Moreover, the customs referred to in them are pure Tamil ones; there is no
reference at all to Aryan ideas” — does not seem to hold good in respect of the
Kannada Koravanji songs.
ಅರ್ಜುನ ಕೊರವಂಜಿ, ಕೃಷ್ಣ ಕೊರವಂಜಗಳೇನೋ ನಾಯಕನು ನಾಯಿಕೆಯ ಅನುರಾಗ
ಸಂಪಾದನಾರ್ಥವಾಗಿ ವೇಷಧಾರಿಯಾಗಿ ಹೋದ ಕಥೆಗಳನ್ನು ಹೇಳುವವೇ ಅಹುದು. ಆದರೆ, ಪಾರ್ವತಿಯ
ಕೊರವಂಜಿಯ ಕಥೆ (ಕಟ್ಲೆ ?) ಯು ಹಾಗಲ್ಲವೆಂದು, ಉದಾಹರಿಸಿರುವ ಭಾಗದಿಂದಲೇ ಸ್ಪಷ್ಟವಾಗು
ವುದು.
ಉದಾಹರಿಸಿರುವ ಹಾಡಿನಲ್ಲಿರುವ ವೈವಿಧ್ಧವನು, ನೋಡಿರಿ. ಷಟ್ಪದಿಗಳ ಖಂಡಗಳನ್ನು ತ್ರಿಪುಡೆ,
ಜಂಪೆ ಎಂಬ ತಾಳಗಳ ಹೆಸರಿನಿಂದ ವ್ಯವಹರಿಸಿರುವುದನ್ನು ಗಮಸಿಸಿರಿ.
೬೦
----------------------------------------------------
ಹೆಂಗುಸರ ಹಾಡುಗಳು
(ಎಂದು ಚಿಂತಿಸಲು) ಕೌಸಲ್ಯೆಯು
ಕಂ|| ಎನ್ನಾಳ್ದವರೇ ಕೇಳಿರಿ |
ಚೆನ್ನಾಗಿಯೆ ವಿಧಿಯು ನಮ್ಮ ಫಣೆಯೊಳು ಲಿಖಿಸೇ ॥
ಇನ್ನುಂ ಪುತ್ರರ ಪಡೆವೆವು |
ಮನ್ನಣೆಯೊಳು ಬಾಳ್ವೆವೀ ಗಲಿನ್ನೀ ಧರೆಯೊಳ್ ॥
ಎಂದು ಸಮಾಧಾನ ಹೇಳುತ್ತಿದ್ದಳು. ಆ ಸಮಯದಲ್ಲಿ ನಾರದ ಮುನೀಶ್ವರನು
ಬಂದನದೆಂತೆನೆ.-
ದ್ವಿಪದಿ ॥ ಕಟ್ಟಿದ ಜಡೆ ಸುತ್ತ ಕೈಯ್ಯಲ್ಲಿ ವೀಣೆ ।
ತೊಟ್ಟ ರುದ್ರಾಕ್ಷಿಯ ಭಸಿತ ತ್ರಿಪುಂಡ್ರ ॥
ಉಟ್ಟ ಧವಳಾಂಬರವು ಒಲೆವ ಜಪ ಸರವು |
ಮೆಟ್ಟಿ ಪಾದುಕೆ ವರ ಕೃಷ್ಣಾಜಿನವು ॥
ನೊಸಲ ಕಸ್ತೂರಿ ತಿಲಕ ಕೊರಳ ತ್ರಾವುಡವು (?)
ಸಲ್ಲಲಿತ ಕರದಲಿ ದಂಡಾಕ್ಷ ಮಾಲೆ |
ಕೆಂಜೆಡೆಯು ಸುಲಿ ಸಲ್ಲು ಕೇರಿ ಕೇರಿಯೊಳು |
ಕಂಜ ನೇತ್ರನ ನುತಿಯ ಪಾಡುತ ಬಂದ |!
ಅರಸನು ಆತನಿಗೆ ಭಕ್ತಿಯಿಂದ ಷೋಡಶೋಪಚಾರಗಳನ್ನು ಮಾಡಿದನು. ನಾರದನು
ತ್ರಿಪುಡೆ ।| ಚಿಂತೆಯಾತಕೆ ನಿನ್ನ ಗರ್ಭದಿ !
ಕಂತುವನು ಪಡೆದಾತ ಬರುವನು |
ಮುಂತೆ ರಾಮಾವತಾರದಲಿ ನಿನಗುದಯಿಸುವ ಮುದದಿ ||೧||
ವಂದು ಆಶ್ವಾಸನ ಮಾಡಿದನು. ಈ ವಿಚಾರವನ್ನು ಅರಸನು ಗುರು ಪುರೋಹಿತ
ಮಂತ್ರಿಗಳಿಗೆ ತಿಳಿಸಲು, ಅವರು-
ತ್ರಿಪುಡೆ ॥ ಪುತ್ರ ಕಾಮೇಷ್ಟ್ರೀಯ ಮಾಡಿಸು |
ಪೃಥ್ವಿಪತಿ ಕೇಳ್ ನಿನ್ನ ಜಠರದಿ |
ಅರ್ಥಿಯಿಂದಲಿ ಸುತರು ಜನಿಪರು | ಕೀರ್ತಿ ಸಂಯುತರು || ೨॥
ಎಂದು, ಅದಕ್ಕೆ ಬೇಕಾದ ಸನ್ನಾಹಾದಿಗಳನ್ನು ವಿವರಿಸಿದರು. ಅರಸನು ಅವರು
ಹೇಳಿದಂತೆ ಕಾಮೇಷ್ಟಿಯನ್ನು ಆಚರಿಸಿ ದೈವಾನುಗ್ರಹವನ್ನು ಪಡೆದನು. ಆತನ
ಹೆಂಡತಿಯರು ಗರ್ಭವತಿಯರಾದರು.
ಇತ್ತ, ಪರಮೇಶ್ವರನು ಪಾರ್ವತಿಯನ್ನು ಕರೆದು
ಏಕ ತಾಳ || ಕೊರವಂಜಿ ವೇಷದಲಿ ಧರೆಗೆ ಪೋಗುವುದು ॥೧॥
ಅರಸಿ ಕೌಸಲೆಗೆ ನೀ ಕಣಿಯ ಹೇಳುವುದು ||೨॥
ಎಂದು ಕಟ್ಟಳೆಯಂ ಮಾಡಿದನು.
೬೧
-----------------------------------------
ಕರ್ಣಾಟಕ ಸಂಸ್ಕೃತಿ
ಆಕೆಯು, 'ಅಪ್ಪಣೆ'ಯೆಂದು ಕೈಮುಗಿದು, - ವಿನಾಯಕನನ್ನು ಮಗು ಮಾಡಿ
" ಬೆನ್ನಿನೊಳ್ ಅಳವಡಿಸಿಕೊಂಡು । ಪರಮೇಶ್ವರಂಗೆ ವಂದಿಸಿ ಕಳುಹಿಸಿಕೊಂಡು "--
ಕಂದ ॥ ಸುರಗಿ ಸುರಹೊನ್ನೆ ಕೇದಿಗೆ | |
ಯಿರುವಂತಿಗೆ ಜಾಜಿ ಪುಷ್ಪ ಮಲ್ಲಿಗೆಯರಲಂ ॥
ತುರುಬಿನೊಳು ತುಂಬಿ ಮೆರೆಯುತ |
* * * *
ಹರುಷದೊಳು ಗಿರಿಜೆ ಬಂದಳು !
ಅರಸಿಯು ಕೌಂಸಲೆಗೆ ಕಣಿಯನರುಹುವೆನೆನುತಂ ॥
ಆ ಕೊರವಂಜಿ ನೀಧಿಕಾಗ್ರದೊಳ್ ಬರುತಿರ್ದಳದೆಂ ತೆನೆ.
ಸಂಗೀತ ವರ್ಣ
ನೆತ್ತ್ವಾದ ಹಲಿಗೆಯಂದದಿ ಚಿನ್ನದ ನಳಿ ತೋಳು |
ಮತ್ತೆ ಗಜದ ಮಸ್ತ ಕರವು ||೧||
ಚಿತ್ರಾದ ಪ್ರತಿಮೆಯಂದದಿ ರೂಪು ಸೊಬಗುಳ್ಳ
ಯೆತ್ರಾಣ ಕೊರವಂಜಿಯವಳೂ ||೨||
ರಂಗೂ ನೀಲದ ಬಳೆ ಮುಂಗೈಯ್ಯ ಮೂರಾರಿ |
ಶೃಂಗಾರ ನಡುವಿನೊಡ್ಯಾಣ ||೩||
ಮುತ್ತೀನ ಮುಡಿ ಮಿಸುನೀಯ ಕಂಕಾಣಗಳು |
* * * *
ಹಿಡಿದ ಕೈಯೊಳು ಹೊನ್ನ ಬೆತ್ತ, (ಎಡದಾ?) ॥
ಕಡು ಚೆಲ್ವೆ ಶಿಶುವು ಬೆನ್ನಿನೊಳಿರೆ ಕೊರವಂಜಿ |
ಮಡದಿ ಬಂದಳು ಕೇರಿವೊಳಗೆ ॥೧೧॥
ಕಸ್ತೂರಿ ಮೃಗ ಬಂದ ಬಟ್ಟೆಯೊಳಾದುದು |
ವಿಸ್ತಾರಿಸುವರಳವಲ್ಲಾ ||೧೨||
ಹೀಗೆ ಬಂದ ಕೊರವಂಜಿಯನ್ನು ಕೌಸಲ್ಯೆಯು ಕಂಡು ತನ್ನ ಕಡೆಯವರಿಂದ
ವಿಚಾರಿಸಿ, " ದಶರಥನರಸಿಗೆ ಪುತ್ರ ಸುವಾರ್ತೆಯ ಹೇಳಬಂದ" ಳೆಂದು ತಿಳಿದು,
ಅವಳನ್ನು ತನ್ನ ಸೌಂದರ್ಯ ವಿಲಾಸದ ತೊಟ್ಟಿಗೆ ಕರೆಯಿಸಿಕೊಂಡಳು. ಆ ಕೊರ
ವಂಜಿಗೆ ಪರಿಚಾರಕರ ಕೈಯಿಂದ ಉಪಚಾರಂಗಳಂ ಮಾಡಿಸಿ, ಕಣಿಯ ಕೇಳುವುದಕ್ಕೆ
ಅಲಂಕಾರ ಭೂಷಿತೆಯಾಗಿ ಬರುತಿರ್ದಳದೆಂತೆನೆ.
ಏಕ ತಾಳ
ಪರಿಮಾಳ ತೈಲವನೊತಿ, ಪನ್ನೀರು ಜಳಕ ಗೈ ದು !
ಅಗಿಲು ಕುಂಕುಮ ಗಂಧ ಅಂಗಕ್ಕೆ ಪೂಸಿ ॥೧॥
ಕಾಂಚೀ ದಾಮವನುಟ್ಟು ಕನಕ ಭೂಷಣನಿಟ್ಟು |
ವಾಂಛಲ್ಯ ಮನದೊಳಿಟ್ಟು ಒಪ್ಪಾದಿಂ ಪೊರಟೂ ॥ ೨॥
೬೨
----------------------------------------
ಹೆಂಗುಸರ ಹಾಡುಗಳು
ಬಂದು ರತ್ನ ಗದ್ದಿಗೆಯೊಳು ಮಂಡಿಸಿದಳು. ಎದುರು ಕುಳಿತಿರುವ ಕೊರವಂಜಿಯ
ರೂಪವನ್ನು ನೋಡಿ ಆಶ್ಚರ್ಯಪಟ್ಟು
ನಾನು ನಿನ್ನಂತ ರೂಪು ಕಾಣೆ ಕೊರವಂಜಿ !
ಮಂಡಾಲದೊಳು ಚೆಲ್ವೆ ಕೊರವಂಜಿ ನಿನ್ನಾ !
ಗಂಡಾ ನಿನ್ನೆಂತೋನೆ ಕೊರವಂಜಿ ॥
ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ
ನನ್ನ ಗಂಡನು |
ಭೂತ ಹಿಂಡುಗಳೊಳಗೆ ಪುಲಿಯ ಚರ್ಮವ ಪೊದ್ದು ।
ಭೂತಳವ ಚರಿಸುವನು ಬೂದಿಯನು ಪೂಸಿ ||೩||
ಕಣ್ಣ ಕೆಂಪಗೆ ಮಾಡಿ ಕರದಿ ಬುರುಡೆಯ ಪಿಡಿದು |
ತನ್ನ ತಾನರಿಯದೇ ತಾಂಡವಾಡುವನೂ
ವಿಷವ ಕೊರಳೊಳಗಿಟ್ಟು ವೀರನಂದದಿ ಬಹನು |
ಮಸೆದಲಗು ಮೂರರಿಂದ ಮಾತನಾಡಿಸುವನೂ
* * * *
ಮರಿ ಹಾವುಗಳ ಸುತ್ತಿ ಆಲದಲೆಯ ಹೆಗಲಲ್ಲಿ (?)
ಶಿರದ ಮೇಲೊಂದು ನೀರ ಕೊಡನ ಹೊತ್ತಿಹನೂ ||೮||
ಸೊಲ್ಲಿ ಸಲು ಸುಮ್ಮನೆಯೆ ಕಲ್ಗಿನಂದದಿ ಯಿರುವ |
ಬಲ್ಲವರ ಬಾಗಿಲನು ಕಾಯ್ದುಕೊಂಡಿಹನು ||೯||
ಹೀಗೆಯೇ, ವ್ಯಂಗ್ಯವಾಗಿ ತನ್ನ ತವರು, ತನ್ನ ಸವತಿ, ತನ್ನ ಮಕ್ಕಳು ಮೊದಲಾದ
ವಿಷಯಗಳನ್ನೆಲ್ಲ ಯಥಾವತ್ತಾಗಿ ವರ್ಣಿಸಿ ಹೇಳಿ, ತಾನು "" ಹರಿ ಹರ ಬ್ರಹ್ಮೇಂದ್ರ
ಸುರ ಮುನಿಗಳ ಹದಿನಾಲ್ಕು ಪರ ಲೋಕದರಿಕೆಯವಳು, ದುಂಡಿ ಕೈ ಮುಗಿದು ಕೇಳು
ಕಣಿಯಾ " ಎಂದಳು. ಆಗ --
ರಾಗ-ಭೂಪಾಳಿ, ದ್ವಿಪದ
ಮುತ್ತಿನ ಗದ್ದುಗೆ ಕೊರವಂಜಿಗಿತು, |
ರತ್ನ ಪೀಠದ ಮೇಲೆ ಕುಳಿತು ಕೌಸಲ್ಯೆ ||೧||
ಹೊನ್ನ ಮೊರದೊಳಗೊಂದು ವಕ್ಕಳ ಮುತ್ತು, |
ಕನ್ಯೆ ಬೇಗದಿ ತಾನೆ ಕಾಂತೆ ಮುಂದರಿಸೆ ||೩||
ಮನಸಿನಲಿದ್ದಂತಾ ಮಾತ ಪೇಳುವೆನು |
ನೀನೆನೆಸಿದ ನೆನೆಪೆಲ್ಲ ನೆಲೆಯಾಗಿ ||೪||
ತರುಣಿ ಯೆನ್ನ ಮಾತು ತವೆಯಮೃತ ವಾಕ್ಕು |
ಕರೆಯು ಕಾಣಿಸದು ಕೊಲ್ಲಾಪುರದಮ್ಮ ನಾಣೆ ||೫||
ಅನುಕೂಲವಾದಮೇಲಮ್ಮ ಕೇಳೆನ್ನ |
ನೆನೆಸುತ್ತಲಿರು ಎಂದು ನೇಮದೊಳಂದು ||೬||
೬೩
--------------------------------------
ಕರ್ಣಾಟಕ ಸಂಸ್ಕೃತಿ
ವಚನ ॥ ಇಂತೆಂದು ಮುತ್ತಿನ ಶಾಸೆಯಂ ಮೂರು ಗುಡ್ಡೆಯಂ ಮಾಡಿ ಪಣೆಗೆ
ಕೈಯಂ ನೆಗಪಿ ಚಿನ್ನದ ಬೆತ್ತಮಂ ಪಿಡಿದು ಚದುರೆ ಸಂತೋಷವಡೆದು ಕೊರವಂಜಿ
ಕಣಿಯ ಪೇಳುವುದಕ್ಕೆ ತನ್ನ ಇಷ್ಟ ದೇವತಾ ಪ್ರಾರ್ಥನೆಯಂ ಗೈದಳದೆಂತೆನೆ.--
ರಾಗ|ವೋ ಕೊಲ್ಲಾಪುರದಮ್ಮ ಗೋವಿಂದರಾಜ |
ಸೊಭಾನದೈಯ್ಯನ ಸೋಮೇಶ ಲಿಂಗ |
ಕೊಂಡಲಗಿರಿ ತಿಮ್ಮ ಕೋನೇಟಿ ರಾಯ 1
ಚೆಲುವ ಅಹೋಬಲ ರಾಯ ಜಾನಕೀ ರಮಣ |:
ಕಂಬದ ರಾಯನೆ ಕಕುದ್ಗಿರೀಶ ಕಲ್ಯಾಣ ಬಸವಂಣ |
ಕರುಣದ ರಂಗಾ ಕಾಮ ನಂದೀಶನೆ ಪೆಂನೋಬಳ್ಳೆಯ್ಯ |
ಹಂಪೆಯ ವಿರುಪಾಕ್ಷ ಹರನೆ ನಂಜುಂಡ ॥
ಹೀಗೆಯೇ, ನಾಲ್ಕು ದಿಕ್ಕುಗಳಲ್ಲಿಯೂ ಪ್ರಸಿದ್ಧರಾದ ದೇವಾದಿ ದೇವರನ್ನೆಲ್ಲ
ವಂದಿಸಿ, " ತನಗೆ ಸೊಲ್ಲು ಕೊಡು ಎಂದು ಬೇಡಿಕೊಂಡಳು ಸೊಬಗಿನಿಂದಾ " --
ಯಾಲ ಪದ
ಒಂದ ಲೇಸಾ ನೆನೆದೇಯಮ್ಮಾ ವನಿತೆ ನಿನ್ನ ಗರ್ಭದಲ್ಲಿ |
ಮಂದರಾ ಧರನು ಜನಿಸ್ಯಾನೆ ಕೌಸಲ್ಯಾದೇವಿ ಕಂದನಾಗೀ ವಿಷ್ಣು ರೂಪಿನಲಿ ॥೧॥
ವನ್ನೆ ರನ್ನೆ ಮೂಲೆ ನಾಲೆ ಒಂಭತ್ತಾನೆ ತಿಂಗಳೊಳಗೆ |
ಗಂಡು ಮಗ ಕಡು ಚೆಲ್ಪಾನೆ ಕೌಸಲ್ಯಾದೇವಿ !
ಚಂಡ ದೈತ್ಯರನ್ನು ಕೊಲ್ಲನೆ ॥ ೨॥
ನನ್ನ ಮಾತು ಸಟಿಯೆನ್ನ ಬೇಡ ನಿನ್ನ ಗರ್ಭಾದಲ್ಲಿ ಕೇಳು |
ಚೆಲ್ವ ರಾಮ ಜನಿಸಿ ಬರುವಾನೇ ಕೌಸಲ್ಯಾದೇವಿ |
ಚೆನ್ನಾಗಿ ಕೇಳಮ್ಮ ಕಣಿಯಾ || ೩ ||
ಎಂದು ಹೇಳಿ, " ಬ್ರಹ್ಮನೈಯ್ಯನು ಎಂತು ಮರ್ತ್ಯಕೆ ಯೆನ್ನ ಗರ್ಭದಿ ಬರುವ "
ಬಂದು ಸಂಶಯಪಟ್ಟ ಕೌಸಲೈಗೆ ದೈತ್ಯ ಭೀತರಾದ ದೇವತೆಗಳಿಗೆ ವಿಷ್ಣುವು ವರ
ಪ್ರದಾನ ಮಾಡಿರುವ ಕಥೆಯನ್ನು ಹೇಳಿ ನಂಬಿಸಿದಳು. ಕೌಸಲ್ಯೆಯು ಸಂತುಷ್ಟಾಂತ
ರಂಗಳಾಗಿದ್ದರೂ ಮಾನವ ಸ್ವಭಾವವನ್ನು ಅನುಸರಿಸಿ ಹೇಳಿದಳು --
ರಾಗ--ವರಾಳಿ
ಮಕ್ಕಳ ಪುಣ್ಯವ ಮಡದಿ ನೋಂತುದಿಲ್ಲ ಮಂದಯಾನೇ ।
ಚಿಕ್ಕ ವಯಸು ಹೋದ ಮೇಲೆ ಯೆಲ್ಲಿಯ ಮಕ್ಕಳು ಮಂದಯಾನೇ ॥೧॥
ಅಕ್ಕ ನಿನ್ನಯ ಮಾತು ಅನುಕೂಲವಾದರೆ ಮಂದಯಾನೇ ನಿನಗೆ |
ಚೊಕ್ಕ ಚಿನ್ನದುಡಿಗೆಯ ತೊಡಿಸುವೆನಮ್ಮ ಮಂದಯಾನೇ ॥ ೨॥
* * * *
ಮದನನೈಯನು ಯೆನ್ನ ಮಗನಾದುದುಂಟಾಗೆ ಮಂದಯಾನೇ |
ನಿನಗಿದುರೆದ್ದು ನಾನಿಷ್ಟ ದೈವವೆಂದು ಕಾಂಬೆನು ಮಂದಯಾನೇ ॥ ೬ ||
೬೪
--------------------------------------------------------------------
ಹೆಂಗುಸರ ಹಾಡುಗಳು
ಕೊರಚಿಯು ಮತ್ತೆ ರಾಮಾಯಣದ ಕಥೆಯನ್ನೆಲ್ಲ "ಕಂದ, ತಂದ, ಕೊಂದ,"
ಎಂಬ ಮೂರು ಮಾತಿನಲ್ಲಿ ಮುಗಿಯುವಂತೆ ಹೇಳಿ ನಂಬಿಸಿದಳು. ಇವಳಿತ್ತ ಇಂತೆಂದು
ವಿವರಂಗಳಂ ಪೇಳುತ್ತಿರಲು, ಅತ್ತ ಸಿಂಗಾಸಾನಿಯನರಸುತ್ತ ಯರುಕಲಸಿಂಗನು
ಬಂದನದೆಂತೆನೆ.--
ಯಾಲ ಪದ
ಬಲ್ಲಿ ನಾಮ ಫಣೆಯೊಳಿಟ್ಟು ಜಲ್ಲಿ ಕೊಕ್ಕರೆ ಗರಿಯ ಸುತ್ತಿ |
ಯೆಲ್ಲ ದಿಕ್ಕು ನೋಡಿ ನಗುತಲೀ ವೋ ಸಿಂಗಿಯಿನುತಾ |
ಜೊಲ್ಲು ವೀಳ್ಯವು ಸೋರುತ ಬಾಯೊಳು ॥೧॥
ಕಂಕುಳೊಳಗೆ ಒಂದು ಬುಟ್ಟಿ ಕೈಯಲ್ಲಿ ಕಪಿ ಹಾವುಗಳೂ | `
ಡೊಂಕು ನಡುನಿಗೊಂದು ಕುಡುಗೋಲು ವೋ ಸಿಂಗಿಯೆನುತಾ |
ಶಂಕೆಯಿಲ್ಲದೆ ಬಂದ ಸಿಂಗಾನು ॥ ೨ ||
ಬೆಕ್ಕು ಕಣ್ಣು ಭೇರಿ ಹೊಟ್ಟೆ ಚೆಕ್ಕೀದಂತೆ ವಾರೆ ಮೂಗು |
ಚಿಕ್ಕ ವುಳ್ಳೀ ಗಡ್ಡೆ ಮೀಸೆಯೂ ವೋ ಸಿಂಗಿಯೆನುತಾ |
ಅಕ್ಕರಿಂದ ಬಂದಾ ಸಿಂಗಾನು ||೩||
ಬಾನೆಯಂತೆ ಬಾಯಿದೆರೆಯು ಬಾಯದುಟಿ ಮೀರಿದ ಹಲ್ಲು |
ಕಾಣ ಕಡ್ಡಿಯಂತೆ ಕೈಕಾಲು ವೋ ಸಿಂಗಿಯೆನುತಾ |
ವಾರೆ ನೋಟದಿಂದ ನಗುತಾ ॥ ೪ ॥
ಹಕ್ಕಿಗಳ ಕಾಲಾ ಹುರಿಯು ಸೆಕ್ಕಿದೊಂದು ಕಂಬಳಿಯು |
ದಿಕ್ಕು ದಿಕ್ಕು ನೋಡಿ ನಗುತಾ ವೋ ಸಿಂಗಿಯೆನುತಾ |
ಚೊಕ್ಕ ಕೊರಚಿಯ ಕಾಣಿರೆನುತ ॥ ೫ ॥
ಅತ್ತಲಾ ಪಾರ್ವತಿದೇವಿಯಾದ ಕೊರವಂಜಿಯು ಕೌಸಲ್ಯಾದೇವಿಗೆ ಪುತ್ರೋತ್ಸವದ
ವಾರ್ತೆಯಂ ಪೇಳಿ ಅಪ್ಪಣೆಯಂ ಕೇಳಲು, ಕೌಸಲ್ಯಾದೇವಿ ಕೊರವಂಜಿಗೆ ಮುತ್ತು
ರತ್ನಂಗಳಂ ಬುಟ್ಟಿಯೊಳ್ತುಂಬಿ ಬುರುಕನಿಗೆ (ಮಗುವಿಗೆ) ಹಾಲು ತುಪ್ಪವನೆರೆದು
ಅನೇಕ ವಸ್ತ್ರಾಭರಣಗಳಿಂದ ಅಲಂಕರಿಸಿ ಕಳುಹಿದಳು. ಕೊರಮನೂ ಕೊರವಂಜಿಯೂ--
ಅಕ್ಕಯ್ಯ ನೋಡಿಂತಾ ಅತಿ ಚೋದ್ಯವಾದಂತಾ |
ಚಿಕ್ಕ ಪ್ರಾಯದ ಕೊರಚಿ ಚೊಕ್ಕ ರೂಪಿನವಳೂ ||೧||
ಪೂರ್ವ ಕಾಲದಿ ಬ್ರಹ್ಮ ಬರೆದಿಟ್ಟ ಲಿಖಿತ |
ಮಾರಲಾರಳವಮ್ಮ ಧಾರುಣಿಯ ಜನಕೆ || ೨ ॥
ಚಿಕ್ಕ ಪ್ರಾಯದಾ ಕೊರಚಿ ಮುಪ್ಪಿನ ಕೊರಮನಿವ |
ಅಕ್ಕಯ್ಯ ನೋಡಿರೆ ಅತಿ ಚೋದ್ಯಗಳನು ||೩||
ಎಂದು ವಿಸ್ಮಯ ಪಡುತ್ತಿರುವ ಪುರ ಜನಗಳನ್ನು ನೋಡುತ್ತ ತಮ್ಮ ಕೈಲಾಸಕ್ಕೆ ತೆರಳಿದರು.
೬೫
--------------------------------------------------------------------
ಕರ್ಣಾಟಕ ಸಂಸ್ಕೃತಿ
ಸಂಗೀತ ವರ್ಣ
ಧರೆಯೊಳಗೀ ಕೃತಿ ಕೇಳ್ದು ಹೇಳ್ದವರಿಗೆ |
ಹರ ಕೊಡುವ ಇಷ್ಟಾರ್ಥಗಳನೂ ||೧||
* * * *
ದ್ವಿಪದ || ಶೇಷಾಚಲೇಶ್ವರ ಚೆಲುವ ವೇಂಕಟಗೆ ।
ಸಾಸ್ಟಾಂಗದಿಂ ನಮಿಸಿ ಸದ್ಭಕ್ತಿಯಿಂದ ||೫||
ಮೆಳೆಯ ಕೋಟೆಯ ತಿರುಮಲ್ವೆಯ್ಯನ ಕುಮಾರ |
ಇಳೆಯೊಳು ಗೋವಿಂದ ವೇಂಕಟ ಕವಿಯು ॥ ೬ ||
ಧರೆಯೊಳಗಾಚಂದ್ರ ತಾರಾರ್ಕಮಾಗಿ |
ಸ್ಥಿರದಿಂದಲಿರುವಂತೆ ಹರಸಿ ಈ ಕೃತಿಯ ॥ ೭॥
ವಿರಚಿಸಿದನು.
ಮಂಗಳ ॥ ಗಂಗೆಯನು ಪೊತ್ತು ಶಿವಲಿಂಗ ರೂಪಾದವಗೆ |
ಹಿಂಗದೇ ಭಕ್ತರನು ಪರಿಪಾಲಿಪಗೇ ॥
ಬೆಂಗಳೂರಿನ ರಂಗಧಾಮನಾ ಮೈದುನಗೆ |
ಅಂಗನೆಯರೆಲ್ಲರಾರತಿಯ ಬೆಳಗೀರೆ ॥
ಜಯ ಮಂಗಳಂ ನಿತ್ಯ ಶುಭಮಂಗಳಂ ॥
[ಹೀಗೆಯೇ, ಯಕ್ಷಗಾನವಾಗಿ ಬರೆದಿರುವ ರಾಮಾಯಣ, ಭಾಗವತ, ಭಾರತ
ಗಳೆಲ್ಲ ಉಂಟು. ಅವುಗಳಲ್ಲಿ ಮೂಲ ಗ್ರಂಥವನ್ನು ಅನುಸರಿಸಿಹೋಗಬೇಕೆಂಬ
ನಿಯಮವನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲಿಸಿರುವಂತೆ ತೋರುವುದಿಲ್ಲ. ಮೈಸೂರು
ಓರಿಯಂಟಲ್ ಲೈಬ್ರೆರಿಯ ಅಮುದ್ರಿತ ಪುಸ್ತಕಗಳ ಪಟ್ಟಿಯನ್ನು ತೆಗೆದು ನೋಡಿದರೆ
ಈ ಯಕ್ಷಗಾನ ಸಾಹಿತ್ಯವು ಎಷ್ಟಿದೆಯೆಂಬುದು ವ್ಯಕ್ತವಾಗುವುದು. ಮತ್ತೊಮ್ಮೆ
ಈ ಯಕ್ಕೆಗಾನವನ್ನು ಕುರಿತು ಪ್ರಸ್ತಾಪಿಸಬೇಕಾಗಿರುವುದರಿಂದ ಈಗ ಇಲ್ಲಿಗೇ ಬಿಟ್ಟು
ಮಂಂದಕ್ಕೆ ಹೋಗೋಣ]
ಈ ವೇಳೆಗೆ ಎಲ್ಲರಿಗೂ ಮನೆಗೆ ಹೋಗುವ ಹೊತ್ತಾಗಿದೆ. ಆದರೂ ವಿನೋದ
ಪ್ರಿಯರು ಇಲ್ಲದೆ ಇರುವುದುಂಟೆ? ಒಬ್ಬರು ಪಸಂದು ಮಾಡಿ ಒಂದು ವಿನೋದದ
ಪದವನ್ನು ಮತ್ತೊಬ್ಬರಿಂದ ಹಾಡಿಸುತ್ತಾರೆ.
೧೧. ಇಂದು ನಮಗೆ ಏಕಾದಶಿ || ಪ॥
ತಿಂದು ಬಂದೆವು ನಲವತ್ತು ದೋಶಿ ॥ ಅ ||
೬೬
----------------------------------------------------------------
ಹೆಂಗುಸರ ಹಾಡುಗಳು
ಹದಿನೇಳು ಕೋಡಬಳೆ । ಕಡಲೇಬೇಳೆ ವುಸುಳಿ ॥
ಅದರ ಮೇಲೆ ನೆಲಗಡಲೆ | ಹೆದರಿಕಿಲ್ಲದೆ ಹೇಳ್ತೇನೆ ಕೇಳಿ ॥೧॥
ಅವಲಕ್ಕಿ ಹಾಲು ಸಕ್ಕರೆ | ಸೌತೆಕಾಯಿ ಕೋಸುಂಬರಿ ॥
ಬಾಳೆಹಣ್ಣು ಹೊಸ ಬೆಲ್ಲವು | ವುತ್ತತ್ತಿ ಮೇಲ್ ದ್ರಾಕ್ಷಿಯಂ ಕೊಬ್ಬರಿ ॥೨॥
ತಾಲಿಸಿಟ್ಟು ಉಪ್ಪಿಟ್ಟು | ಕಲಸಿದ ಮೆಂತ್ಯದ ಹಿಟ್ಟು ॥
ಚೆನ್ನಾಗಿ ಮುಗಿಸಿಟ್ಟು | ಕರಿದ ಕಡಬುಗಳು ಮೇಲೇಳೆಂಟು ॥೩॥
ನೆರೆಮನೆಯ ಒಬ್ಬಾಕೆ, " ಹೇಗಿದ್ದರೂ ಹೊತ್ತಾಯಿತು; ಆ ಆಕಳ ಹಾಡು
ಒಂದು ಹೇಳಿಬಿಡಿರಮ್ಮಾ, ಕೇಳಿ ಹೊರಟುಹೋಗೋಣ" ಎಂದು ಕೇಳುತ್ತಾಳೆ.
ಪೂರ್ಣಾವತಾರಿಯಾದ ಶ್ರೀ ಕೃಷ್ಣನ ಲೀಲಾ ಪ್ರಸಂಗವು ಯಾರಿಗೆ ಬೇಡ? ಎಲ್ಲರೂ
ಆಗಬಹುದೆನ್ನುತ್ತಾರೆ...-
(ಧಾಟಿ ಕಾವಡಿಚಂದಿನಂತೆ)
ಮುಂಜಾನೆದ್ದು ನಾನೀಗ | ಆಕಳನಾದರೆ ಹೊಡೆದು ಬಂದೆ ॥
ಅಸ್ತಾಮಾನಾವಾಯಾತು | ಆಕಳು ಕರೆಯುವ ಹೊತ್ತಾಯಾತು ॥
ಆಕಳು ಕೊಡೋ ಕೃಷ್ಣ । ನಮ್ಮಾಕಳು ಕೊಡೋ ||೧||
ಆಕಳನಾದರೆ ಕಾಣಾಲಿಲ್ಲ | ಆಕೇ ನಮಗೇ ಹೇಳಾಲಿಲ್ಲ ॥
ಸೆರಗು ಹಿಡಿದೂ ನಿಲ್ಲಿಸಿದ್ರೀಗ | ಸಾವಿರ ಆಕಳ ತಂದು ಕೊಡುವೇ ॥
ಆಕಳು ಕಾಣೇ ನಾನಿಮ್ಮಾಕಳು ಕಾಣೇ ॥ ೨॥
ಸಣ್ಣಾ ರೋಮದ ಆಕಳು ಕಾಣೋ ! ಸರದಾ ಮುತ್ತಿನ ಮಲಕೂ ಕಾಣೋ ॥
ಬೆನ್ನಲ್ಲಿ ಬಿಳುಪಿರುವುದು ಕಾಣೋ | ಬಾಲಾ ಬೀಸುತ ಬರುವುದು ಕಾಣೋ ॥
ಆಕಳು ಕೊಡೋ ಕೃಷ್ಣಾ ನಮ್ಮಾ ಕಳು ಕೊಡೋ ||೩||
ಹಳ್ಳದ್ದಂಡೆಲಿ ಮೇಯೂತಿತ್ತು | ಕಳ್ಳೀ ಮರೆಯಲಿ ನೀಂತಿತ್ತು ॥
ಕರುವನ್ನಾದರು ಉಣಿಸೂತಿತ್ತು | ಮನೆಯ ದಾರಿಯ ಹಿಡಿಯೂತಿತ್ತು ॥
ಆಕಳು ಕೊಡೋ ಕೃಷ್ಣಾ ನಮ್ಮಾಕಳು ಕೊಡೋ ॥೪॥
ಎಂಟೂ ಯೆಂಟೂ ದಿನಕೆ ರೊಕ್ಕ | ಯೆಣಿಸಿಕೊಂಡು ಹೋಗುತೀಯೆ ॥
ಗಂಟೂ ಕಳ್ಳೀ ಗೋವಿನ್ನಾ | ನೆಂಟಾರಲ್ಲಿ ಬಿಟ್ಟೂ ಬಂದ್ಯಾ ||
ಆಕಳು ಕಾಣೇ ನಾನಿಮ್ಮಾಕಳು ಕಾಣೇ ||೫ ॥
ಬೇಡಿದರಿಷ್ಟೂ ಒಲಿವೋರಿಲ್ಲ | ಕೇಳಿದರಿಷ್ಟೂ ಕೊಡುವೋರಿಲ್ಲ ॥
ನಿನ್ನ ಬಾಲನ ಕಳಿಸಿ ಕರೆಸೀಕೊ | ಇಲ್ಲ್ಯಾರನ ಬೆದರಿಸಬಂದೆನೀ ॥
ನಾಕಳು ಕಾಣೇ ನಾ ನಿಮ್ಮಾ ಕಳು ಕಾಣೇ ||೬||
ಅರಸಿಗಾದರೆ ಹೇಳೂತೇನೆ | ಅಲ್ಲಿಗೆ ನಿನ್ನ ಕರೆಸುತೇನೆ ॥
ಕದ್ದದ್ದುಂಟು ಮಾಡಿಸುತೇನೆ | ಕಪಟಾ ಬುದ್ಧಿ ಬಿಡಿಸುತೇನೆ ॥
ಆಕಳು ಕೊಡೋ ಕೃಷ್ಣಾ ನಮ್ಮಾಕಳು ಕೊಡೋ ||೭||
೬೭
-----------------------------------------------
ಕರ್ಣಾಟಕ ಸಂಸ್ಕೃತಿ
ಯಾವಾ ಅರಸಿಗೆ ಹೇಳೂತೀಯೆ | ಎಲ್ಲಿಗೆ ನನ್ನ ಕರೆಸೂತೀಯೆ ॥
ಬಾಯಾ ಮಾಡೀ ಕೊಲ್ಲಿಸುತೀಯಾ | ಮಾಯಾಗಾತೀ ಹೆಣ್ಣೇ ನೀನು ॥
ಆಕಳು ಕಾಣೇ ನಾ ನಿಮ್ಮಾಕಳು ಕಾಣೇ ||೮||
ಆಕಳು ತಂದು ಕೊಟ್ಟಾರೀಗ | ಬೇಕಾದಚ್ಚಡವನ್ನೂ ಕೊಡುವೆ ॥
ತುಪ್ಪದ್ದೀಪಾ ಹಚ್ಚೂವೇ | ಸಕ್ಕಾರೆ ತಂದೂ ಹಂಚೂನೆ |
ಆಕಳು ಕೊಡೋ ಕೃಷ್ಣಾ ನಮ್ಮಾಕಳು ಕೊಡೋ ||೯||
ಆಕೇ ಹರಿಕೇ ಹೊತ್ತೂಕೊಂಡೂ | ಆಕಳು ತಂದೂ ಮನೆಗೆ ಬಿಟ್ಟೂ ॥
ಜೋಕೇ ಎಂದೂ ಹೇಳೀ ನಡೆದ | ಪುರಂದರ ವಿಠಲಾ ರಾಯಾ ॥
ಆಕಳೂ ಬಂತೂ ಮನೆಗೆ ಆಕಳೂ ಬಂತೂ ॥೧೦॥
ಹಾಡನ್ನು ಕೇಳಿದವರೆಲ್ಲ ಅಂತರಂಗದಲ್ಲಿ ಒಮ್ಮೆ ಲೀಲಾ ಮಾನುಷ ವಿಗ್ರಹನಾದ
ಆ ಸ್ವಾಮಿಯನ್ನೂ ಅವನ ಸರ್ವ ಪ್ರಿಯವಾದ ತುಂಟತನವನ್ನೂ ನೆನೆದು ಸಂತೋಷ
ಭರಿತರಾಗಿ ಒಂದು ಗಳಿಗೆ ಮೈಮರೆತಿದ್ದಾರೆ. ಅವರಲ್ಲಿ ಯಾರೋ ಒಬ್ಬಳು
ನಿಜವಮ್ಮಾ ! ಆಕಳೂ ಬಂತೂ ಮನೆಗೆ ಆಕಳು ಬಂತೂ |
ಕಟ್ಟಿಹಾಕದಿದ್ದರೆ ಒಳಗೆ ಎಲ್ಲಾವನ್ನೂ ತೀಂತು | ಎಲ್ಲಾ ತೀಂತು ॥
" ಅದರಿಂದ, ನಡೆಯಿರಿ ಮನೆಗೆ ಹೋಗೋಣ! " ಎನ್ನುತ್ತಾಳೆ.
ಎಲ್ಲರೂ ಕೇಳಿ ಯಥಾ ರುಚಿಯಾಗಿ ನಕ್ಕು, ದೀಪ ಹೊತ್ತಿಸುವ ಹೊತ್ತಾಯಿ
ತೆಂದು ಹಣೆಗೆ ಕುಂಕುಮವಿಟ್ಟುಕೊಂಡು ಹೊರಡುತ್ತಾರೆ.
ನಮ್ಮ ಆಕೆಗೂ ಸಡಗರ: ಹಸು ಕರು ಮನೆಗೆ ಬಂದಿವೆ. ಅವುಗಳನ್ನು ಗೊತ್ತಿ,
ನಲ್ಲಿ ಕಟ್ಟಿ, ಮಡಿಯುಟ್ಟು, ದೇವರಿಗೆ ಸಂಜೆ ದೀವಿಗೆಯಿಟ್ಟು, ಅಗಸಗಿತ್ತಿಯು
ಒಗೆದು ತಂದಿರಿಸಿರುವ ಬಟ್ಟೆಗಳಿಗೆ ಮಡಿ ನೀರು ಹಾಕಿ ಹಿಂಡಿ ಒಣಗಿಹಾಕಿ ಬರುತ್ತಾಳೆ.
ಆಟವಾಡಿ ದಣಿದು ಹಸಿದು ಬಂದಿರುವ ಮಕ್ಕಳು ಕೈ ಕಾಲು ತೊಳೆದುಕೊಂಡು
ದೇವರಿಗೆ ಅಡ್ಡಬಿದ್ದು ತಾಯಿಯ ಹಾದಿಯನ್ನು ಕಾದಿದ್ದಾರೆ. ತಾಯಿಯೂ ಬಂದು
ಮಕ್ಳುಳಿಗೆ ಬಡಿಸುತ್ತಾಳೆ. ಮದುವೆಯ ಮನೆಯ ಹಾಗೆ ಸಂಭ್ರಮವಾಗಿ ಕೋಲಾ
ಹಲವಾಗಿ (ಮನೆಯೊಡತಿಯು ಪ್ರಸನ್ನೆಯಾಗಿದ್ದರೆ ಮಾತ್ರ) ಮಕ್ಕಳು ಕೇಕೆ ಹಾಕಿ
ಕೊಂಡು ಆನಂದದಿಂದ ಆಂಬಲಿಯೋ, ಪರಮಾನ್ನವೋ ಹೊಟ್ಟೆತುಂಬ ಉಂಡು
ಏಳುತ್ತವೆ.
ತಾಯಿಯು ಮಗುವನ್ನು ಮತ್ತೆ ತೊಟ್ಟಿಲಿಗೆ ಹಾಕುತ್ತಾಳೆ. ಜೋಗುಳ
ಗಳಿಗೆ ಆರಂಭವಾಗುತ್ತದೆ.
೧೨. ಹೊಳ್ಳೊಳ್ಳ ಹಾಯೀೕೕೕೕ ಹಣ್ಣು ಮೆಣಸಿನಕಾಯೀೕೕೕೕ ॥ ಪ ॥
ನಿದ್ದೆಬಾರದ ಕಣ್ಣೆ ಮದ್ದ್ಯಾಾರೆ ಬಲ್ಲವರು | ಗದ್ದೇಲಿ ಬೆಳೆದ ಗರಗಾ ॥
ಗರಗಾದ ಸೊಪ್ಪನ್ನೆ ತಂದು | ಭದ್ರೆ ಕಾಡೀಗೆ ಮಾಡಿದಾಳು ||೧||
೬೮
---------------------------------------------------------------
ಹೆಂಗುಸರ ಹಾಡುಗಳು
ಬೆಳ್ಳಿ ಬೆಳ್ಳೀ ಮುದ್ದು ಬೆಳ್ಳಿ ತಾವರೆ. ಮುದ್ದು | ಹಣ್ಣುಳ್ಳ ಮರಕೆ ಗಿಣಿ ಮುದ್ದು I
ಗಿಣಿ ಮುದ್ದು ನಮ್ಮಯ್ಯ । ನಮ್ಮನೆಗೆ ಯೆಲ್ಲ ನೀ ಮುದ್ದು ॥೨॥
ಅತ್ತು ಕಾಡುವನಲ್ಲ ರಚ್ಚೆ ಮಾಡುವನಲ್ಲ । ಲಕ್ಷಣಾವಂತ ಸಿರಿವಂತ ॥
ಸಿರಿವಂತ ನಿನ್ನಂತ | ಮಕ್ಕಳಾಡಲಿ ಮನೆ ತುಂಬ ||೩||
(ಈ ಜಾತಿಯಲ್ಲಿ, ಮಾಡುತ್ತಿರುವ ಕೆಲಸಕ್ಕೆ ಸಂಬಂಧವೇ ಇಲ್ಲದ ವಿಷಯಾಂತರ
ಗಳೂ ಬರುವುದುಂಟು.)
ಬೆಟ್ಟದಾ ತಿಮ್ಮಪ್ಪ ಬೇಲೂರು ಚೆನ್ನೀಗ | ನಾಗಮಂಗಲದ ನರಸಿಂಹ |
ಇವರು ಮೂರೂ ಮಂದಿ | ಗೀರು ಗಂಧದಲಿ ಚೆಲುವಾರು ॥ ೪॥
ಸೂಳೇಗೆ ಸುತ್ತೋಲೆ ಮಡದೀಗೆ ಮುತ್ತೋಲೆ । ಮೆಚ್ಚಿ ಬಂದವಳಿಗೆ ಬಿಚ್ಚೋಲೆ |
ಅಪ್ಪ ಅಣ್ಣಯ್ಯನ | ಪಟ್ಟದಾ ಹೆಂಡತಿಗೆ ಹರಳೋಲೆ || ೫॥
* * * * *
ಜೋಗುಳದ ಸಾಹಿತ್ಯವು ಕನ್ನಡದಲ್ಲಿ ಅಪಾರವಾಗಿದೆ. ಇದು ನೋಡುವುದಕ್ಕೆ
ತ್ರಿಪದಿಯಕಟ್ಟಿನಲ್ಲಿದ್ದರೂ, ಹಾಡುವಾಗ ಎರಡನೆಯ ಪಾದದಲ್ಲಿ ಅರೆಯಾಗಿ
ಮುರಿದು ಅರ್ಧಕ್ಕೆ ನಿಲ್ಲಿಸಿಕೊಂಡಿದ್ದು, ಮತ್ತೆ ಆ ಮುರುಕಿನ ಉತ್ತರಾರ್ಧದಿಂದ
ಎತ್ತಿ ಹಾಡುವುದರಿಂದ, ಒಂದು ಜಾತಿಯ ಚೌಪದಿಯ ಹಾಗಿದೆಯೆನ್ನಬಹುದು ;
ಅಥವಾ, ಕಟ್ಟಿನಿಂದ ತ್ರಿಪದಿ ಹಾಡುವಾಗ ಚೌಪದಿಯೆಂದರೂ ಸಲ್ಲುವುದು.
ಹಾಡುವುದರಲ್ಲಿ ಈ ಜಾತಿಗೂ ಸಾಂಗತ್ಯಕ್ಕೂ ಇರುವ ವ್ಯತ್ಯಾಸವು ಗಮನಿಸ
ಬೇಕಾದುದು.
(ಇಲ್ಲಿ ಕೊಟ್ಟಿರುವ ಐದು ಪದ್ಯಗಳೂ ಛಂದೋ ದೃಷ್ಟಿಯಿಂದ ಎಷ್ಟು ಅಸಮಾನ
ವಾಗಿವೆ !)
ಹಾಗೆಯೇ, ಈ ಜಾತಿಯಲ್ಲಿರುವ ವಿಷಯ ವೈವಿಧ್ಯವೂ ಲಕ್ಷಿಸಬೇಕಾದುದು.
ವೈದ್ಯ, ಜೋಯಿಸ, ನೀತಿ, ಸಂಪ್ರದಾಯ, ನಂಬಿಕೆ ಮೊದಲಾದ ಸರ್ವ ವಿಷಯ
ಗಳನ್ನೂ ಇಲ್ಲಿ ಕಾಣಬಹುದು. ಅಷ್ಟೇನು? ಸರ್ವಜ್ಞನ ವಚನಗಳಂತೆ ಇವೂ ಒಂದು
ವಿಶ್ವಕೋಶವೆನ್ನಬಹುದು. 'ಗರತಿಯ ಹಾಡು ' ಪ್ರಕಟವಾಗಿದೆಯಾದುದರಿ೦ದ ಈ
ವಿಷಯದಲ್ಲಿ ನಾವು ಹೆಚ್ಚಿಗೆ ಹೇಳಬೇಕಾಗಿಲ್ಲ.
ಇದೇ ಹಾಡುಗಳು ಶೂದ್ರಾಣಿಯ ರಾಗಿ ಬೀಸುವ ಹಾಡುಗಳಾಗಿವೆ. ಅಲ್ಲಿ
ಭಾಷೆಯೂ ಇನ್ನೂ ಒಂದು ಮೆಟ್ಟಿಲಿಳಿದು ಗ್ರಾಮು ಮುದ್ರೆಯನ್ನು ಸಂಪೂರ್ಣ
ವಾಗಿ ತಳೆದಿದೆ. ಆದರೂ, ಎರಡೂ ಒಂದೇ ಜಾತಿಯೆಂದು ಹೇಳಲು ನಾವು ಹಿಂದೆಗೆ
ಯುವುದಿಲ್ಲ.)
೬೯
----------------------------------------------------------
ಕರ್ಣಾಟಕ ಸಂಸ್ಕೃತಿ
ಈ ಜೋಗುಳಗಳಲ್ಲಿ 'ಲಾಲಿ' ಪದಗಳೂ 'ಜೋ ಜೋ' ಪದಗಳೂ ಉಂಟು.
ಆದರೆ ಅವು ನೈಮಿತ್ತಿಕ ವರ್ಗಕ್ಕೆ ಸೇರಿದವು ಎಂದು ನಮ್ಮ ಅಭಿಪ್ರಾಯ. ಈ ಪದ
ಗಳನ್ನು ಸಾಮಾನ್ಯವಾಗಿ ತೊಟ್ಟಿಲಿಡುವಾಗ 'ಗುಂಡಪ್ಪ'ನಿಗೇ ಹೇಳುವುದು. ಈ
ಪದಗಳು ಮೇಲೆ ಹೇಳಿದ ' ಹೊಳ್ಳೊಳ್ಳ ಹಾಯೀ' ಪದಗಳಂತೆ ಸದ್ದು ಗದ್ದಲವಿಲ್ಲದ
ಜಾತಿಯಲ್ಲವಾಗಿ, ತಟ್ಟಿ ನಿದ್ದೆ ಗೆಯ್ಯಸವಂತಹ ಶಾಂತ ಕರ್ಮಕ್ಕೆ ಸರಿಹೋಗುವುದಿಲ್ಲ
ವೆಂದು ಇವಕ್ಕೆ ಬಹಿಷ್ವಾರ ಬಿದ್ದಿರಬಹುದು. ಮಕ್ಕಳು ಕೊಂಚ ಪ್ರಬುದ್ಧರಾದ
ಮೇಲೆ, ಅರೆ ಮಾತು ಆಡುವುದು ಕಲಿತ ಮೇಲೆ, ಈ 'ಲಾಲಿ', "ಜೋ ಜೋ
ಗಳನ್ನು ಬಹುವಾಗಿ ಮೆಚ್ಚುವರು.
ಜಾಣೆಯರಾದ ಹೆಂಗುಸರು ಎಂತಹ ಹಾಡನ್ನಾದರೂ ಹೇಳಿ ಮಕ್ಕಳನ್ನು
ತಟ್ಟಿ ನಿದ್ದೆಗೆಯ್ಯಿಸಬಲ್ಲರು. ಅದರಿಂದ ನಾವಿಲ್ಲಿ ಮಾಡಿರುವ ಸಾಮಾನ್ಯ ವಿಭಾಗಕ್ಕೆ
ಚ್ಯುತಿ ಬರುವುದಿಲ್ಲ.
(ಆ) ನೈಮಿತ್ತಿಕ ವರ್ಗ
ಈ ಗುಂಪಿನಲ್ಲಿ, ವಾರದ ಹಾಡುಗಳು, ಆಶೀರ್ವಾದದ ಹಾಡುಗಳು, ಶಾಸ್ತ್ರದ
ಹಾಡುಗಳು (ಉರುಟಣೆ, ಸುವ್ವಿ, ಚೆಟ್ಟು, ಎಣ್ಣೆಯೊತ್ತುವುದು, ಬಳೆ ತೊಡಿಸುವುದು,
ಆರತಿ), ಬೀಗರ ಹಾಡುಗಳು ಇವೆಲ್ಲವೂ ಬರುವುವು. ಇದರಲ್ಲಿ ಕೊನೆಯದು,
ಗಂಡುಸರ ಹಾಡುಗಳಲ್ಲಿ ಬರುವ 'ವಿನೋದದ ಪದ'ಗಳೆಂಬ ಗುಂಪಿಗೆ ಸೇರಿದುದು;
ಉಳಿದವು ಅರ್ಥ ವಾದಗಳ ಗುಂಪಿಗೆ ಸೇರಿದವು. ಶಾಸ್ತ್ರದ ಹಾಡುಗಳು ಆಲ್ಲಿ ನಡೆ
ಯುವ ಕ್ರಿಯೆಯನ್ನು ಬಣ್ಣಿಸುವವು; ಆಶೀರ್ವಾದಗಳು ಮಂತ್ರ ಸ್ಥಾನೀಯಗಳಾದ
ಹರಕೆಗಳು. ಇವಕ್ಕೆಲ್ಲ ಒಂದೊಂದ ಉದಾಹರಣೆಯನ್ನು ಕೊಟ್ಟು ಮುಂದಕ್ಕೆ
ಹೋಗೋಣ.
(೧) ಶಾಸ್ತ್ರದ ಹಾಡುಗಳು
೧೩. ಉರಟಣೆ ಹಾಡು.
ಇದರಲ್ಲಿ, 'ನಲುಗು' ಇಡುವಾಗ ಒಂದು, ಗಂಧ ಪುಷ್ಪ ತಾಂಬೂಲಗಳನ್ನು
ಒಪ್ಪಿಸುವಾಗ ಒಂದೊಂದು, ಆರತಿಗೊಂದು--ಹೀಗೆ ಹಲವು ಹಾಡುಗಳನ್ನು ಹೇಳುವು
ದುಂಟು. ಗ್ರಂಥ ವಿಸ್ತರ ಭಯದಿಂದ ನಾವು ಒಂದರಲ್ಲಿಯೇ ತೃಪ್ತರಾಗೋಣ. —
ಭೂಪಾಳಿ|| ಉರಟಾಣೆಗೇಳೊ ಹರಿಯೆ | ಉರಗ ಶಯನ ದೊರೆಯೆ ॥ ಪ ||
ನಂದ ಗೋಪಿಕುಮಾರ | ನತ ಜಗದುದ್ಧಾರ ॥ ಅ॥
ನಂದ ನಂದನ ಸಿಂಧು ಶಯನ | ನೀ ಬಾರೈ |
ಬಂದು ರತುನ ಮಂಟಪದೊಳು ಮುದದಿಂದಲಿ ||೧||
೭೦
------------------------------------------------------------
ಹೆಂಗುಸರ ಹಾಡುಗಳು
೧೪. ಚೆಟ್ಟು ಬಡಿಯುವ ಹಾಡು.
ಪಂಕಜ ಗಂಧಿನಿಯರು ! ಕುಂಕುಮವ ಹದ ಮಾಡಿ ॥
ಶಂಕರನ ಪಟ್ಟಿದರಸಿಯನು ।
ಅರಸಿಯನು ಎಬ್ಬಿಸಿ | ಕುಂಕುಮದ ಚೆಟ್ಟ ಬಡಿದಾರು ॥ ಶೋಭಾನೆ ॥ ॥ ೧॥
೧೫. ಸುವ್ವಿ ಪದಗಳು...
ಸುವ್ವಿ ರಾಮಚಂದ್ರ ಸುವ್ವಿ | ಸುವ್ವಿ ರಾಮಭದ್ರ ಸುದ್ದಿ ॥
ಸುವ್ವಿ ರಾ-ಮಾ-ಭಿರಾಮ ಸುವ್ವಲಾಲೆ ॥ ಪ॥
ಜಾನಕೀಯ ವಿವಹವೆಂದು | ಮಾನಿನಿಯರು ನೆರೆದು ಮುದದಿ ।
ಸಾನುರಾಗದಿಂದ ಮಧುರ | ಗಾನ ಮಾಡುತ ॥
ಪೊಳೆವ ಚಂದ್ರಕಾಂತಿ ಧವಳ ಶಿಲೆಯ ಒರಳಿನಲ್ಲಿ ರತುನ |
ಗಳನು ಹಾಕಿ ಹರುಷದಿಂದ ನಳಿನ ಮುಖಿಯರು ||೧||
೧೬. ಮಡಲು ತುಂಬುವುದು.
ಸಿದ್ಧಿ ವಿನಾಯಕನ ಪಾದ ಪದ್ಮಕ್ಕೆರಗಿ |
ಮುದ್ದು ಶಾರದೇಯ ಭಜಿಸಿ ಸದ್ಗುರುವಿಗೆ ವಂದಿಸಿ ।
ಮುಕ್ತಿ ಕಾಂತೆಯ ಮಡಿಲ ತುಂಬುವ ಪದನ ।
ಪದ್ಧತಿಯ-ನು-ಕೇಳಿ ಜನರೆಲ್ಲ ॥ ಶೋಭಾನೆ ॥
೧೭. ಎಣ್ಣೆಯೊತ್ತುವುದು.
ಎಣ್ಣೆಯ ನೊತ್ತಿದರು । ಯದು ಕುಲ ತಿಲಕಗೆ ॥ ಪ ॥
ದಶರಥ ಸುತನಿಗೆ | ಧರ್ಮ ಪರಿಪಾಲನಿಗೆ ।
ನಿರ್ಮಲ ರೂಪ ಶ್ರೀ ! ರಾಮಚಂದ್ರಗೆ ॥ ಶೋಭಾನೆ | ॥೧॥
೧೮. ಆರತಿಯೆತ್ತುವುದು.
ಮಧುರೇಲಿ ಪುಟ್ಟಿ ಪಳ್ಳೀಗೆ ನಡೆತಂದು ।
ಒದೆದು ಪೂತನಿಯ ಅಸುವನೆ ಪೀರಿ ಕೊಂದೆ |
ಮುದದಿಂದಲಸುರರ ಶಿರವ ಚೆಂಡಾಡಿ |
ಅವನ ಶಿರವ ಚೆಂಡಾಡಿ |
ಚದುರಿಂದ ಗೋವಕ್ಕಳೊಡನಾಡಿ ಬೆಳದೆ ।
ಹದವರಿತಂಘ್ರಿಯ ಪದುಳದಿ ನೆನೆವರ ।
ಹೃದಯದಿ ನೆಲಸಿದ ಬುಧ ಜನ ಪ್ರಿಯನಿಗೆ ।
ಪದುಮಾದಾರಾತೀಯ ಬೆ-ಳ-ಗೀ-ರೆ. || ಶೋಭಾನೆ ॥
೬೧
“ಕರ್ನಾಟಕ ಸಂಸ್ಕೃತಿ
(೨) ಆಶೀರ್ವಾದ
೧೯. ಲೇಸಾಗಿ ಜನನಿ ಬಸುರಲಿ ಬಂದು । ಸಾಸೀರ ಬಾಲ ತೊಡಿಗೆನೆ ತೊಟ್ಟು |
ದೇಶವನಾಳುವ ಪತಿಯ ಕೈ ಹಿಡಿದು ಹೊಸ ಕೂಸು ತಂಗಮ್ಮ |
ನೀ ಸುಖಿಯಾಗಿರು ಎಂದು ಅಹಲ್ಯಾ ದೇವಿ ಹರಸೀದಳು ||೧||
ಒಡನೆ ಹುಟ್ಟಿದವರ ಒಡನಾಡು | ನೀ 1 ಹೊಕ್ಕ ಮನೆಗೆ ಹೆಸರನೆ ನಡೆಸು ।
ಹುಟ್ಟಿದ ಮನೆಗೆ ಮಾಣಿಕ್ಯವಾಗು | ಅಷ್ಟೈಶ್ವರ್ಯವು ಪುತ್ರ ಸಂತಾನವು |
ಪಡೆದು ಸಾವಿರ ಕಾಲ ಮುತ್ತೈದೆಯಾಗಿ ನೀ ಬಾಳೆಂದು ಹರಸೀದರೂ ॥
| ಶೋಭಾನೆ |: ॥ ೨॥
(೩) ವಾರದ ಹಾಡುಗಳು
ಒಂದೊಂದು ವಾರಕ್ಕೆ ಒಂದೊಂದು ಹಾಡು ಇದೆ. ಆದರೂ, ವ್ಯಾಪ್ತಿಯ
ದೃಷ್ಟಿಯಿಂದ ಮಂಗಳ ಗೌರಿಯ ಹಾಡು ಹೆಚ್ಚೆಂದು ಅದನ್ನೇ ಇಲ್ಲಿ ಉದಾಹರಣೆ
ಯಾಗಿ ಕೊಡುವೆವು. ಇದು ಒಂದು ವ್ರತದ ಕಥೆ. ವಾರದ ಹಾಡುಗಳೆಲ್ಲ ಅಷ್ಟೇ.
೨೦. ಪರಮ ಸಂತೋಷದಲಿ ಪತಿಯ ಪಾದಕ್ಕೆರಗಿ | ವರದ ಗಣಪತಿಗೆ ವಂದನೆಯ ಮಾಡಿ ॥
ಹರನರಸಿ ಮಂಗಳಾ ಗೌರಿ ದೇವಿಯ ಕಥೆಯ | ಒರೆವೆ ಬಲ್ಲಂಥ ಸಜ್ಜನರು ಕೇಳಿ ॥ ೧ |
ಜೂಜಾಡಿ ಪಾಂಡವರು ವನಕ್ಕೆ ಹೋದಾಗ, ಅವರನ್ನು ನೋಡಲು ಕೃಷ್ಣನು
ಅಲ್ಲಿಗೆ ಹೋದನು. ಅವರಿಗೆ ಮತ್ತೆ ರಾಜ್ಯ ಲಾಭವಾಗಲೆಂದು ಈ ವ್ರತವನ್ನು ಕೃಷ್ಣನು
ಅವರಿಗೆ ಉಪದೇಶಿಸಿದನು.
ಯಾರು ಮಾಡಿದರು ಈ ವ್ರತದ ಮಹಿಮೆಗಳೇನು |
ಏನು ಫಲವೆಂದು ದ್ರೌಪದಿ ಕೇಳಲು |
ನಾನು ಹೇಳುವೆ ಕೇಳು ಮುನ್ನ ಕರ್ಣಾಟ ದೇಶದೊಳಗೊಬ್ಬ ಧೊರೆಯಿರುತ್ತಿದ್ದನು ॥ ೭ ||
ಆ ಅರಸನ ಹೆಂಡತಿ ಕನಕಮಂಜುಳಿಯು ಒಂದು ದಿನ ಭಿಕ್ಷುಕ ರೂಪಿನಲ್ಲಿ
ಬಂದ ಹರನಿಗೆ ಭಿಕ್ಷವನ್ನು ಇಕ್ಕಲು ಹೋದಳು. ಅವನು ಅದನ್ನು ಚೆಲ್ಲಿ ಹೊರಟು
ಹೋದನು. ಮರುದಿನವೂ ಆ ಭಿಕ್ಷುಕನು ಬಂದನು. ಆ ದಿನವೂ ಹಾಗೆಯೇ
ಆಗಲು, ದಂಪತಿಗಳು ಕಾರಣವೇನೆಂದು ವಿಚಾರಿಸಿ, ತಮ್ಮ ಅಪುತೃತ್ವವೇ ಕಾರಣ
ವೆಂದು ತಿಳಿದು ಆ ಪಾಪವನ್ನು ಕಳೆದುಕೊಳ್ಳಲು ಅವನನ್ನೇ ಮರೆಹೊಕ್ಕರು.
ಅವನು ಹದಿನಾರು ವರ್ಷ ಮಾತ್ರ ಬದುಕುವ ಮಗನನ್ನು ಕೊಟ್ಟನು.
ಆ ಹುಡುಗನಿಗೆ ಹದಿನಾರನೆಯ ವರ್ಷವು ಸಮೀಸಿಸಲು, ಅವನನ್ನು ಸೋದರ
ಮಾವನ ಜೊತೆಯಲ್ಲಿ ಅಪಮೃತ್ಯು ನಿವಾರಣೆಯಾಗಲೆಂದು ಕಾಶಿಗೆ ಕಳುಹಿಸಿದರು.
ದಾರಿಯಲ್ಲಿ ಅವರು ಗೊಂಡಾರಣ್ಯಪುರದರಸು ಮಂಡೋರಾಯನ ಉದ್ಯಾನದಲ್ಲಿ
ನಿಂತರು. ಅಲ್ಲಿಗೆ ರಾಯನ ಮಗಳು ಸಂಗಾತಿಯರೊಡನೆ ಹೂವಿಗಾಗಿ ಬಂದಳು.
ಅವರಲ್ಲಿ
೬೨
----------------------------------------------------------
ಹೆಂಗುಸರ ಹಾಡುಗಳು
.................. ಒಬ್ಬಳು ಕೋಪಿಸಿ ।
ರಾಜ್ಯಾಧಿಪತಿಯ ಮಗಳೆಂದು ನೋಡದೆ ಅವಳು ।
ಬಹಳ ಕಷ್ಟದ ಮಾತು ನುಡಿದಳಾಗ | ॥ ೨೩||
ನುಡಿದ ಮಾತನು ಕೇಳಿ ನಗುತ ಮನದಲ್ಲಿ |
ಮಂಗಳಾ ಗೌರಿಯ ದಯವುಂಟು ಯೆನಗೆ ॥
ಮಂದ ಮತಿ ನೀ ನುಡಿದರೇನಾಯಿತೇ ಯೆನಗೆ |
ಬಂದ ಮೃತ್ಯುಗಳ ಜೈ ಸುವೆನೆಂದಳು || ೨೪ ||
ಈ ಮಾತುಗಳನ್ನು ಕೇಳಿ ಅರಸುಮಗನು, " ಮಾವಯ್ಯಾ ! ದೇವರ ದಯವಿದ್ದರೆ
ಈ ಹೆಣ್ಣನ್ನು ಮದುವೆಯಾಗಬೇಕು" ಎಂದನು. ಇವರು ಇನ್ನೂ ಅಲ್ಲಿರುವಾಗಲೇ
ಅಲ್ಲಿಗೆ ದಿಬ್ಬಣ ಬಂದಿತು. ಅವರು ಈ ಹುಡುಗನನ್ನು ನೋಡಿ, "ಇವನನ್ನು ಒಂದು
ಗಳಿಗೆ ಸಾಲ ಕೊಡುವಿರಾ?" ಎಂದು ಕೇಳಿದರು. ಅದಕ್ಕೆ ಹುಡುಗನ ಮಾವನು ನಕ್ಕು
ಹೊನ್ನು ಹಣ ಬೆಳ್ಳಿ ಭಂಗಾರ ಎರವುಂಟು |
ಕನ್ನಿಕೆಗೆ ವರನನು ಎರವ ಕೇಳುವರ |
ಕಣ್ಣಲ್ಲಿ ಕಾಣೆನು ॥
ಎಂದನು, ಆದರೂ--
ಯಾರ ಪುಜ್ಯದಲಿ ಬದುಕಿದರೆ ಸಾಕು ಮದುವೆ | ಆಗು ಹೋಗು ॥
ಎಂದು ಅಳಿಯನನ್ನು ಕಳುಹಿಸಿದನು. ಮದುವೆಯಾದ ಮೇಲೆ ವಧೂವರರಿಬ್ಬರೂ
ಮಂಗಳಾ ಗೌರಿಯ ಮುಂದೆ | ಸಂಗಾತ ಉಂಡು ಮಲಗಿದೆ |
ಚಂದ್ರಶೇಖರರಾಯ (ಅರಸು ಮಗ) ಹಸಿದೆನೆಂದು ಹೆಂಡತಿಯ ಕೂಡೆ ಹೇಳಿದ
ವಿನಯದಿ ॥
ಆಗ ಅವಳು ಬಟ್ಟಲಲ್ಲಿ ಲಡ್ಡಿಗೆ ತುಪ್ಪ ತಂದು ಕೊಟ್ಟಳು. ಊಟ ಮಾಡು
ವಾಗ ಅವನ ಉಂಗುರವು ಬಟ್ಟಲೊಳಗೆ ಬಿದ್ದಿತು. ಅವಳು ಅದನ್ನು ತೆಗೆದುಕೊಂಡು
ದೇವರ ಮನೆಯಲ್ಲಿ ಇಟ್ಟು ಮಲಗಿದಳು.
ಇಬ್ಬರೂ ಮಲಗಿರುವಾಗ ಘಟ ಸರ್ಪವೊಂದು ಮಂಚದ ಬಳಿಗೆ ಬಂದಿತು.
ರಾಜಪುತ್ರಿಯು ಮಂಗಳ ಗೌರಿಯ ಪ್ರಸಾದವನ್ನು ಅದರ ಮೇಲೆ ತಳೆಯಲು,
" ಅದರಾಯುಷ್ಠವು ಕ್ಲೀಣವಾಯಿತು", ಅವಳ ಗಂಡನು ಚಿರಾಯುವಾದನು.
ಅವಳು ಆ ಹಾವನ್ನು ಒಂದು ಕಲಶಕ್ಕೆ ಹಾಕಿ ಮುಚ್ಚಿಟ್ಟು ಮಲಗಿಕೊಂಡಳು. ರಾಜ
ಕುಮಾರನು ಉದಯಕ್ಕೆ ಮುಂಚೆ ಗುಟ್ಟಾಗಿ ಎದ್ದು ಮಾವನೊಡನೆ ಕಾಶಿಗೆ ಹೊರಟು
ಹೋದನು.
ಮರು ದಿನ ದಿಬ್ಬಣದವರು ಕೋಷ್ಟ ಹತ್ತಿದ ತಮ್ಮ ವರನನ್ನು ತಂದು ಹಸೆಯ
ಮೇಲೆ ಕುಳ್ಳಿರಿಸಲು, ರಾಜಪುತ್ರಿಯು ಮೋಸವನ್ನರಿತು ಧಿಕ್ಕರಿಸಿದಳು. ದಿಬ್ಬಣದವರು
೭೩
------------------------------------------------------------------
ಕರ್ಣಾಟಕ ಸಂಸ್ಕೃತಿ
ಮಾರು ಮಾತಾಡದೆ ಹಿಂದಿರುಗಿದರು. ಅವಳು ತಂದೆಯನ್ನೊಪ್ಪಿಸಿ ಒಂದು ಅನ್ನ ಸತ್ರ
ವನ್ನು ಸ್ಥಾಪಿಸಿ, ಅಲ್ಲಿಗೆ ಊಟಕ್ಕೆ ಬಂದವರಿಗೆಲ್ಲ ತಾನೇ ವೀಳೆಯವನ್ನು ಕೊಡು
ತ್ತಿದ್ದಳು.
ಇತ್ತ, ಭಾಗೀರಥಿಗೆ ಹೋದವರು ಆರೇಳು ತಿಂಗಳಾದ ಮೇಲೆ ಕಾವಡಿಯೊಡನೆ
ತಿರುಗಿದರು. ರಾಜಪುತ್ರಿಯು ಅವರನ್ನು ಗುರುತಿಸಿ ಅರಮನೆಗೆ ಕರೆತಂದಳು. ಎಲ್ಲರೂ
ಗುರುತೇನೆಂದು ಕೇಳಲು, ಬಟ್ಟಲಲ್ಲಿ ಬಿದ್ದ ಉಂಗುರವನ್ನು ತಂದು ತೋರಿಸಿ ನಂಬಿಸಿ
ದಳು. ಆ ದಿನದ ರಾತ್ರಿ ಕಚ್ಚಲು ಬಂದಿದ್ದ ಘಟ ಸರ್ಪವು ಇಟ್ಟಿದ್ದ ಕಲಶದಲ್ಲಿಯೇ
ಕಂಠಾಮಾಲೆಯಾಗಿದ್ದಿತು. ಅದನ್ನೇ ಕೊರಳಿಗೆ ಹಾಕಿ ಅವಳು ಚಂದ್ರಶೇಖರನನ್ನು
ವರಿಸಿದಳು.
ಕಾಲ ಕ್ರಮದಲ್ಲಿ ಮಾವನ ಅಪ್ಪಣೆ ಪಡೆದು ಚಂದ್ರಶೇಖರನು ಹೆಂಡತಿಯೊಡನೆ
ಬಂದು ಪುರವನ್ನು ಸೇರಿ ಎಲ್ಲರಿಗೂ ಸಂತೋಷವನ್ನು ಉಂಟುಮಾಡಿದನು. ಆದರಿಂದ--
ಸೃಷ್ಟಿಗೀಶ್ವರನರಸಿ ಗೌರಿಯನೆ ಪೂಜಿಸಿ | ಮುತ್ತೈದೆತನವನು ಪಡೆದಳು ॥
ಅಷ್ಟ ಐಶ್ವರ್ಯವನು ಪುತ್ರ ಸಂತಾನವನು | ಕೊಟ್ಟು ರಕ್ಟಿಪಳು ಮಂಗಳಾ ಗೌರಿಯು ॥
(ಈ ಕಥೆಯು ಎಷ್ಟು ಸುಂದರವಾದುದು! ಸದಾರಮೆಯ ನಾಟಕದ ಉತ್ತರ
ಭಾಗಕ್ಕೆ ಇದರಿಂದ ಎಷ್ಟು ಉಪಕಾರವಾಗಿದೆ!)
(೪) ಬೀಗರ ಹಾಡುಗಳು
ಬೀಗರ ಹಾಡುಗಳು ಎಲ್ಲರಿಗೂ ಪರಿಚಿತವಾದುವು. ಇವು ಗಂಡುಸರ ಹಾಡು
ಗಳಲ್ಲಿ ಬರುವ ಸವಾಲುಗಳಂತಿದ್ದು ಎದುರುಕಡೆಯವರ ದೋಷವನ್ನು--ವಾಸ್ತವ್ಯವೋ
ಕಲ್ಪಿತವೋ ಎ೦ಬ ಯೋಚನೆಯಿಲ್ಲದೆ ವಾಚಾಮಗೋಚರವಾಗಿ ಉದ್ಘಾಟಿಸಿ, ಅಲ್ಲ
ಸಲ್ಲದ ರೀತಿಯಲ್ಲಿ ನಿಂದಾ ಪ್ರಧಾನವಾಗಿ ಪ್ರವಹಿಸುವುವು. ಒಂದು ಮದುವೆಯು
ಗೊತ್ತಾದ ಕೂಡಲೆ ವಧೂವರರ ಕಡೆಯವರು ತಮ್ಮ ತಮ್ಮ "ಬೀಗರ ಹಾಡುಗಳ "
ಭಂಡಾರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವು ರಮಾರಮಿಯಾಗಿ ನಡೆಯುತ್ತಿದ್ದುದು
ಸರ್ವರಿಗೂ ವಿದಿತವಾದ ಅಂಶ, ಈಗ ಈ ವಿನೋದವು ಮದುವೆಗಳಲ್ಲಿ-_ಊಟ
ಮಾಡುವಾಗ ಶ್ಲೋಕ ಹೇಳುವ ಪದ್ದತಿಯಂತೆ--ಶಿಥಿಲವಾಗುತ್ತಿದೆ.
ಹೊಸದಾಗಿ ಸಂಬಂಧಿಗಳಾದನರು ಸರಸವಾಗಿ ನಗು ನಗುತ್ತ, ಬಯ್ದಾಡುವ
ವರೆಗೂ ಇಳಿದು, ಬಾಂಧವ್ಯವನ್ನು ನಗೆಯ ಸಿಮೆಂಟಿನಿಂದ ಭದ್ರಪಡಿಸಿಕೊಳ್ಳಲೆಂದು
ಈ ಸಂಪ್ರದಾಯವು ಬಂದಿತು ಎಂದು ಒಪ್ಪುವುದಾದರೆ, ಅಂತರ್ಧಾನವಾಗದಂತೆ
ಇದನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.
ಇವಕ್ಕೆ ಉದಾಹರಣೆಗಳು ಬೇಕಾಗಿಲ್ಲ.
೭೪
--------------------------------------------------------------
ಹೆಂಗುಸರ ಹಾಡುಗಳು
೨. ಶೂದ್ರಾಣಿಯ ಹಾಡುಗಳು
ಈ ಭಾಗದಲ್ಲಿ ಈಗಾಗಲೇ ಕೊಂಚ ಕೊಂಚವಾಗಿ ಕೆಲಸ ನಡೆದಿದೆ; ಸಂಗ್ರಹವೂ
ಇದ್ದುದರಲ್ಲಿ ಚೆನ್ನಾಗಿ ನಡೆದಿದೆ. ಅದರಿಂದ ವಿನಿಗಮಕವಾದ ಕೆಲವು ಹಾಡು
ಗಳನ್ನು ಮಾತ್ರ ಉದಾಹರಿಸಿ ಮುಂದೆ ನಡೆಯುವೆವು.
ಬ್ರಾಹ್ಮಣಿಯ ದಿನಚರ್ಯೆಯಲ್ಲಿ ಹಾಡುಗಳು ಬೆರೆದುಹೋಗಿರುವಷ್ಟು
ಶೂದ್ರಾಣಿಯ ದಿನಚರ್ಯೆಯಲ್ಲಿ ಬೆರೆದಿಲ್ಲ: ಇವಳು ಅವಳಷ್ಟು ಹಾಡುಗಳನ್ನು
ಹಾಡುವುದಿಲ್ಲ ಎಂದು ತೋರುತ್ತದೆ. ಬೆಳಗಿನ ಜಾವದಲ್ಲಿ ಮುಂಬೆಳಕಿಗೆ ಮುಂದೆ
ಬ್ರಾಹ್ಮಣಿಯ ಉದಯರಾಗ ಸ್ಕಾನದಲ್ಲಿ ರಾಗಿಬೀಸುವ ಹಾಡುಗಳು ಬರುತ್ತವೆ.
ಅಲ್ಲಿಂದ ಮುಂದೆ ಮನೆಯಲ್ಲಿ ಮತ್ತೆ ಯಾವ ಹಾಡೂ ಕೇಳಿಬರುವುದಿಲ್ಲವೆಂದರೆ
ತಪ್ಪಿಲ್ಲ. ಅವಕಾಶವಾದಾಗ, ಹಾಡು ಹೇಳುವವರು (ತಿರುಪದವರು ಸಾಮಾನ್ಯವಾಗಿ)
ದೊರೆತಾಗ, ಶೂದ್ರಾಣಿಯು ಅವಶ್ಯವಾಗಿ ಕೇಳುವುದುಂಟು ; ದವಸ ಧಾನ್ಯ
ಗಳನ್ನು ಮೊರ ಮೊರವಾಗಿ ಕೊಟ್ಟು ಹಾಡು ಹೇಳಿದವರನ್ನು ಸತ್ಕರಿಸುವುದುಂಟು.
ಆದರೆ ತಾನೇ ಹಾಡುಗಳನ್ನು ಗೊಣಗಿಕೊಳುತ್ತ ಮನೆಗೆಲಸ ಮುಂತಾದವುಗಳನ್ನು
ಮಾಡಿಕೊಂಡುಹೋಗುವುದು ಅಪರೂಪ.
ನೈಮಿತ್ತಿಕವಾಗಿ, ಕುಲದೇವರ ಹಬ್ಬಗಳು, ಮದುವೆ ಮುಂತಾದ ಶುಭ
ಕಾರ್ಯಗಳು, ನಾಟಿ ಮೊದಲಾದ ಹೊಲ ಗದ್ದೆಗಳಲ್ಲಿ ಮಾಡುವ ಕಾರ್ಯಗಳು
ಇಂತಹ ಸಂದರ್ಭಗಳಲ್ಲಿ ಹಾಡುಗಳಿವೆ, ಆದರೂ ಬ್ರಾಹ್ಮಣಿಗೆ ಇರುವ "ಹಾಡು
ಬರದಿದ್ದರೆ ಕುಂದು" ಎಂಬ ಭಾವವು ಶೂದ್ರಾಣಿಯಲ್ಲಿಲ್ಲವೆಂದುಕೊಳ್ಳಬಹುದು.
ಹಿಂದೆ ನಾವು ಸೂಚಿಸಿದಂತೆ ರಾಗಿಬೀಸುವ ಪದಗಳೂ ಬ್ರಾಹ್ಮಣಿಯ
ಜೋಗುಳದ ಪದಗಳೂ ಒಂದೇ ಜಾತಿಯವು. ಹಬ್ಬಗಳಲ್ಲಿಯೂ ಶುಭ ಕಾರ್ಯ
ಗಳಲ್ಲಿಯೂ ಬರುವ ಹಾಡುಗಳು ಸಾಮಾನ್ಯವಾಗಿ ಅದೇ ಜಾತಿಯ ಬ್ರಾಹ್ಮಣಿಯ
ಹಾಡುಗಳಂತೆಯೇ ಇನೆ. ವೈಶಿಷ್ಟ್ಯವು ಚೆನ್ನಾಗಿ ಕಾಣಿಸುವುದು ನಾಟಿ ಮುಂತಾದ
ಸಂದರ್ಭಗಳಲ್ಲಿ ಹೇಳುವ ಹಾಡುಗಳಲ್ಲಿ, ಇಲ್ಲಿಯೂ ಹಿಂದೆ ಹೇಳಿರುವಂತೆ ರಾಗಕ್ಕಿರುವ
.......
1. 'ಹಳ್ಳಿಗರ ಹಾಡುಗಳು' ಎಂಬ ಹೆಸರಿನಿಂದ ಶ್ರೀ॥ ಬೆಟಗೇರಿಯವರು ಕರ್ಣಾಟಕ ಸಾಹಿತ್ಯ
ಪರಿಷತ್ಪತ್ರಿಕೆ (ಸಂಪುಟ ೧೫, ಪುಟ ೪೫-೬೫) ಯಲ್ಲಿ ಒಂದು ವಿಸ್ತಾರವಾದ ಲೇಖನವನ್ನು ಬರೆದಿದ್ದಾರೆ.
' ಜೋಗೀ ಹಾಡಿನ ವಿಚಾರವಾಗಿ ಶ್ರೀ॥ ಮಾ. ವೆಂಕಟೇಶ ಐಯಂಗಾರ್ಯರವರೂ ಅದೇ ಪತ್ರಿಕೆಯಲ್ಲಿ '
(ಸಂಪುಟ ೯) ಬರೆದಿದ್ದಾರೆ. ಈ ವಿಷಯವಾಗಿ ಶ್ರೀ. ಪ್ರ. ನರೇಗಲ್ಲರವರು ಕರ್ಣಾಟಕ ಕಾಲೇಜ ಪತ್ರಿಕೆ
ಯಲ್ಲಿ " ವಾಸ್ತವ ಸಾಹಿತ್ಯ " ಎಂಬ ಒಂದು ಲೇಖನವನ್ನು ಬರೆದಿದ್ದಾರೆ.
2. " ಗರತಿಯ ಹಾಡು" ಎಂಬ ಸಂಗ್ರಹವು ಜಯಕರ್ನಾಟಕ ಗ್ರಂಥಮಾಲೆಯಲ್ಲಿ ಹೊರಬಿದ್ದಿದೆ;
" ಹುಟ್ಟಿದ ಹಳ್ಳಿ. ಹಳ್ಳಿಯ ಹಾಡು" ಎಂಬುದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ತಿಂಗಳು
ತಿಂಗಳಲ್ಲಿಯೂ ಜಯಕರ್ನಾಟಕ, ಮೊದಲಾದ ಮಾಸಪತ್ರಿಕೆಗಳಲ್ಲಿಯೂ ಸಂಗ್ರಹಗಳು ಬರುತ್ತಿವೆ.
೭೫
-----------------------------------------------------------------
ಕರ್ಣಾಟಕ ಸಂಸ್ಕೃತಿ
ಪ್ರಾಧಾನ್ಯವು ತಾಳಕ್ಕಿಲ್ಲ. ಇಲ್ಲಿ ರಾಗವೂ ಪಾಮರ ಸಹಜವಾದ ಪ್ರಾಕೃತ ರೀತಿ
ಯಲ್ಲಿಯೇ ಇರುತ್ತದೆ.
(ಅ) ನಿತ್ಯವರ್ಗ--ರಾಗಿ ಬೀಸುವ ಹಾಡು”
೨೧. ಕುಟ್ಟಿ ಬೀಸುವ ಹಾಡು ಯಾವಾಕಿ ಕಲಿಸ್ಕಾಳ |
ಕೃಷ್ಣನ ತಂಗಿ ಸು-ಭದ್ರಿ ಕಲಿಸ್ಕಾಳ [
ಕೃಷ್ಣನ ಮೇಲೆ ಪದಗೋಳ ॥
೨೨. ಆಕಾಶದಡವ್ಯಾಗ ಧೂಪದ ಹೊಗೆಯೆದ್ದು
ಆಯ್ತು, ಮಲ್ಲಯನ ಶಿವಪೂಜಿ | ಆಗಾಗ
ಆಕಾಶದ ಘಂಟೆ ಫಳಲೆಂದು ॥
೨೩.ಕಾಸೀಗೆ ಹೋಗಲಕ ಏಸೊಂದು ದಿನ ಬೇಕ
ತಾಸು ಹೊತ್ತಿನ ಹಾದಿ ತವರೂರ ಮನಿಯಾಗ
ಕಾಸಿ ಕುಂತಾಳ ಹಡೆದವ್ವ ॥
೨೪. ಎಂದೂ-ಬಾರದ ಸೋನಿ ಇಂದೇನು ದಯವಾದ್ರಿ |
ಬಂದೇ ಕಾಣ್ಮಾಗ್ಳೇ ಬಡಸ್ತಾನ ನೋಡಿ |
ಬಂದೇ ಕಾಣ್ಮಾಗೈೇ ಬಡಸ್ತಾನಾ ನೋಡ್ಲಾರ್ದೆ |
ಬಂದೇವು ನಿಮ್ಮಾರ ಮನೆಗೆ ॥
೨೫.ಬಂದಾ ಗುರ್ವೀಗೆ ಗಿಂಡಿಲಗ್ಗಣಿ ಕೊಟ್ಟು
ಚಿನ್ನಾದಾ ಪಾತ್ತಾರೆ ಬೆಳಗೀರ್ಸೀ ॥
ಚಿನ್ನಾದಾ ಪಾತ್ತಾರೆ ಚೆನ್ನಾಗಿ ಬೆಳಗಿರ್ಸೀ
ಬಿನ್ನಹಕೆ ನರ್ಮ್ಮಗೇ ದಯವಾಗೀ ॥
೨೬. ರಾಗೀಯು ಮುಗಿದಾವು ರಾಜಾಣಾ ಹೆಚ್ಚಾವು
ನಾನಿಡಿದ ಕೆಲಸಾ ವದಗ್ಯಾವೂ |
ನಾನಿಡಿದ ಕೆಲಸಾ ವದಗ್ಯಾವೂ ರಾಗೀಕಲ್ಲೇ
ನಾ ಕೂಗಿ ಬಿಡುತೀನಿ ಬಲದೋಳಾ ॥
ನಾನಿನ್ನ ಸೋಲಿಸೀದೆ ನಾನಿನ್ನ ನಿದ್ರೆ ಕೆಡಿಸೀದೆ ।
ನಾನಿನ್ನ ನಿದ್ದೇ ಕೆಡಿಸೀದೆ ರಾಗೀಕಲ್ಲೆ
ನಾ ತೂಗಿ ಬಿಡುತೀನಿ ಬಲದೋಳಾ ॥
ಕಲ್ಲೂ ಬಿಡ್ತೀನೆಂದು ಶಿಟ್ಕಾಕೆ ಸರಸತಿಯೆ
ಕುಕ್ಕೇಲಿ ರಾಗೀ ಬೆಳೆಯಾಲಿ |
ಕುಕ್ಕೇಲಿ ರಾಗಿ ಬೆಳೆಯಾಲೀ |
ತಕ್ಕೊಂಡು ಮತ್ತೆ ರಾತ್ರೀಗೆ ಬರುತೀನಿ ॥
...........
3. ಇಲ್ಲಿ ಕೊಟ್ಟಿರುವ ಪದಗಳಲ್ಲಿ ಮೊದಲ ಮೂರು " ಗರತಿಯ ಹಾಡು?” ಎಂಬ ಪುಸ್ತಕದಿಂದ
ಆರಿಸಿಕೊಂಡವು. ಉಳಿದವು "" ಹುಟ್ಟದ ಹಳ್ಳಿ-ಹಳ್ಳಿಯ ಹಾಡು ?' ಎಂಬ ಪುಸ್ತಕದಿಂದ ತೆಗೆದುಕೊಂಡವು.
೭೮
------------------------------------------------------------------
ಹೆಂಗುಸರ ಹಾಡುಗಳು
ಕಲ್ಲೂ ಬಿಡ್ತೀನೆಂದು ಎಲ್ಲಾರೂ ಕೇಳೀರಿ ।
ಕಲ್ಲೂ ಕಾವೇರೀ ಕಪನೀಯಾ |
ಕಲ್ಲೂ ಕಾವೇರೀ ಕಪಿನೀ ನಂಜೈಯ್ಯಾನಾ |
ಕಲ್ಬಿಟ್ಟು ಕೈಯ್ಯಾ ಮುಗಿದೇನೂ ॥
ಒಂದನೆಯದರಲ್ಲಿ ಇರುವ " ಹಳ್ಳಿಯ ರಾಗಿಬೀಸುವ ಹಾಡಿ"ನ ಆರಂಭವನ್ನು
ಗಮನಿಸಿರಿ, ಕರಿಯ ಕೃಷ್ಣನು ಗೌರ ಪಾಟಲ ವರ್ಣಗಳ ಆರ್ಯಕುಲಕ್ಕೆ ಸೇರಿದವ
ನಲ್ಲವೆಂದು ಹೇಳುವ ವಿದ್ವಾಂಸರಿದ್ದಾರೆ. ಆದುದರಿಂದ ಕೃಷ್ಣನು ಸನಾತನ
ಸಂಸ್ಕೃತಿಯ ಮೂಲಾಧಾರವಾದ ಗೀತೆಯ ಉಪದೇಶಕನು ಎಂಬ ದೃಷ್ಟಿ
ಯಿಂದ ನೋಡಿರಿ. ಎರಡನೆಯದರಲ್ಲಿರುವ ಅತಿಶಯೋಕ್ತಿಯ ಸೊಂಪದೆಂತಹುದು!
ಮೂರನೆಯದರಲ್ಲಿರುವ ಭಾವವನ್ನು " ಗಣೇಶನು ತಾಯ್ದ೦ದೆಗಳಿಗೆ ಪ್ರದಕ್ಷಿಣೆ ಮಾಡಿ,
ಭೂಮಂಡಲವನ್ನು ಸುತ್ತಿಬಂದ ಷಣ್ಮುಖನನ್ನು ಗೆದ್ದನು" ಎಂಬ ಪುರಾಣ
ಕಥೆಯೊಡನೆ ಹೋಲಿಸಿರಿ, ನಾಲ್ಕನೆಯದರಲ್ಲಿರುವ " ಒಂದ ಗುರುವಿಗೆ ಆಗ್ಗಣಿ
ಕೊಡುವ ", "ಪಾತ್ಕಾರೆ ಬೆಳಗಿರ್ಸಿ ಬಿನ್ನಹಕೆ ನಮ್ಮನ್ಗೆ ದಯವಾಗಿ " ಎಂದು
ಪ್ರಾರ್ಥಿಸುವ ಭಾವಗಳು ಅತಿಥಿಗಳನ್ನು ಅರ್ಫ್ಯ ಪಾದ್ಯಾಚಮನಗಳಿಂದ ಸತ್ಯರಿಸುವ,
ಗುರುವಿಗೆ ಭಿಕ್ಷಾ ವಂದನೆ ಮಾಡುವ ವೈದಿಕನ ಭಾವಗಳ ಸಜಾತೀಯವಲ್ಲವೆ
ಯೋಚಿಸಿರಿ. ಕೊನೆಯದರಲ್ಲಿರುವ ಹರಕೆಯು ಕಾವ್ಯಗಳ ಫಲಸ್ತುತಿ, ನಾಟಕಗಳ
ಭರತವಾಕ್ಕ- ಅವುಗಳ ಸ್ಥಾನೀಯವಲ್ಲವೆ ನೋಡಿರಿ. ಹಾಗೆಯೇ, ರಾಗಿಯ ಕಲ್ಲನ್ನು
"ನಾ ನಿನ್ನ ಸೋಲಿಸೀದೆ (ಆಯಾಸ ಪಡಿಸಿದೆ) ನಾ ನಿನ್ನ ನಿದ್ದೆ ಕೆಡಿಸೀದೆ" ಎಂದು
ಮರುಕದಿಂದ ಸಂಬೋಧಿಸುವ ಮಾತನ್ನು ಕರ್ಮಠರು ತಮ್ಮ ಉಪಕರಣಗಳನ್ನು
ಸಂಬೋಧಿಸುವ ಮಂತ್ರಗಳೊಂದಿಗೆ ಹೋಲಿಸಿರಿ.
(ಆ) ನೈಮಿತ್ತಿಕ ನರ್ಗ--(೧) ಶಾಸ್ತ್ರದ ಹಾಡುಗಳು
೨೭. ಆಶೀರ್ವಾದ (ಮದುವೆಯಲ್ಲಿ)--
ಗಿರಿಶೆಟ್ಟಿ ಗಿರಿರಾಮ । ಸರಿಗೆ ದೇವಕ್ಕ ॥
ಮಗಳು ಬರುತಾಳೆಂದು | ಕಂಚಿ ಕಾಳಂಗಿ ॥
ಕುಡಿ ನೀರ ಗಿಂಡಿ | ಪುಣ್ಯವಂತರ ಮಗಳೇ ॥
ಭಾಗ್ಯವಂತರ ಮಗಳೇ | ಬಸವಣ್ಣ ಬರುತಾನೆ ॥
ತೆಗೆ ನಿನ್ನ ಮುಸುಕು 1 ಸೋಬತ್ತು ಸೋಬಾತೆ |
ಸೋಬತ್ತು ಸೋಬಾನೆ ॥
ಕಲ್ಲು ಕಲ್ಲಾಗಿ | ಕರೆಚ್ಚನಾಗಿ !
ಭೀಮಣ್ಣನಾಗಿ | ಗುರು ರೇವಣ್ಣ ಕಟ್ಟಿದ |
ಸೇಸೆ ಸ್ಥಿರವಾಗಿರಲೀ |
ಮಹಾಲಕ್ಷ್ಮಿ ಗೌರಿ ಪಾರ್ವತಿ |
ಸರಸ್ವತಿ ಶಾಂತ ಮುತ್ತಯ್ಯನವರು |
೭೭
------------------------------------------------------
ಕರ್ಣಾಟಕ ಸಂಸ್ಕೃತಿ
ನಮ್ಮ ಗುರು ರೇವಣ್ಣ ಕಟ್ಟಿದ |
ಕಳ್ಯಾಣ ಪಟ್ಟ ಸ್ಥಿರ ಜೀವಿಯಾಗಿರಲೇ | ('ಕುರುಬರ ಚರಿತ್ರೆ 'ಯಿಂದ)
೨೮. ಚೆಟ್ಟು ಬಡಿಯುವ ಹಾಡು
ಬಾಳೆಯ ಮರದ ಕೆಳಗೆ | ಭಾವನ ಮಗಳು ಮೈನೆರೆದಳು ॥
ನಿಂಬೆಯ ಮರದ ಕೆಳಗೆ | ರಂಭೆ ಮೈನೆರೆದಳು |
ಸೋಬಾನನೇ ಸೋ ಸೋಬಾನವೆ ॥೧॥
ಮಾವಿನ ಮರದ ಕೆಳಗೆ | ಮಾವನ ಮಗಳು ಮೈನೆರೆದಳು ॥
ಚಿಗುಳಿಯ ತಂಬಿಟ್ಟಿನ ಉಂಡೆ | ಮಡಲೊಡ್ಡೆ ಪಾರ್ವತಿ ॥
ಸೋಬಾನವೇ ಸೋ ಸೋಬಾನನೆ ॥ ೨॥
೨೯, ಹೆನೆಯನಿಕ್ಕುವ ಹಾಡು
ಹೆಣ್ಣ ಚಿಕ್ಕವ್ವಾ ಹೆಣ್ಣೋರ ದೊಡ್ಡವ್ವ ಸಣ್ಣಕ್ಕೀ ಹಂಗೇ ಅವರವ್ವ |
ಗಂಡೋರ ಚಿಕ್ಕವ್ವಾ ಗಂಡೋರ ದೊಡ್ಡವ್ವ ದಪ್ಪಕ್ಕೀ ಹಂಗೇ ಅವರವ್ವ ॥
* * * *
ಸಣ್ಣಕ್ಕಿ ಹಸೆಯಾ ಚನ್ನಾಗಿ ಬರೀರಮ್ಮಾ ಚಿನ್ನಾದಾ ಗೊಂಡೇಯ
ನೆರಿಗ್ಯೋರು ವಜುರದ ಗೊಂಡೇಯ ನೆರಿಗ್ಯೋರು ||
ಚಿನ್ನಾದಾ ಗೊಂಡೇಯ ಸರಸತಿಯೆ ಚೆನ್ನಾಗಿ ತುಂಬೆ ಚೌಕಾವಾ |
ಚೌಕ ತುಂಬ್ಯಾರೆ ಕಲಕಲನೆ ನಕ್ಕಾರೆ ಅದ್ಕೆ ಮುತ್ತ ಬೆರಸ್ಯಾರೆ |
ಅದ್ಕೆ ಹೊಸ್ಮುತ್ತಾ, ಏನೆಂದು ಬೆರ್ಸ್ಯಾಳೆ ಮಾವಾನಾ ಮಗಾ ಬರಲೆಂದು |
ಮಾವಾನಾ ಮಗ ಬರಬೇಕಾವನಾ ಕೈಯ್ಯಾ ಹೂವೀನುಂಗುವವಾ ಗೆಲಬೇಕು |
ದೊಡ್ಡಕ್ಕಿ ಹಸೆಯಾ ಒಡ್ಡಾಗಿ ಬರೀರಮ್ಮ ವಜ್ರದ್ಗೊಂಡೇಯಾ ನೆರಿಗ್ಯೋರು |
ವಜ್ರದ್ಗೊಂಡೇಯಾ ನೆರಿಗೇಯಾ ಸರಸತಿಯೊ ಒಡ್ಡಾಗಿ ತುಂಬೆ ಚೌಕಾವಾ ॥
ಒಡ್ಡಾಗೀ ತುಂಬೇ ಕಲಕಲನೆ ನಾಗೂತ ಅದ್ಕೇ ಹೊಸ ಮುತ್ತಾ ಬೆರ್ಸ್ಯಾಳು |
ಅದ್ಕೇ ಹೊಸ್ಮುತ್ತಾ, ಬೆರ್ಸೂತೇನೆಂದಾಳೂ ಅತ್ರೇಯ ಮಗಾ ಬರಲೆಂದೂ ॥
ಅತ್ತೇಯಾ ಮಾಗಾ ಬಂದಾರಾವನಾ ಕೈಯ್ಯಾ ಮುತ್ತೀನುಂಗೂರಾವಾ
ಗೆಲಬೇಕು ॥
ಬಾಗಿಲಿಗಿದೀರಾಗಿ ಬರೀರಮ್ಮ ಹಸೆಗೋಳಾ ಬಾಗಿಲಲ್ಲಾವೇ ಗಿಣಿಗೋಳು |
ಬಾಗಿಲಲ್ಲಾವೆ ಗಿಣಿಗೋಳು ನಮ್ಮಾನೇ ಭಾಗ್ಯಾದಾ ನುಡಿಯಾ ನುಡಿದಾವೂ ॥
ಕಂಭಕ್ಕಿದಿರಾಗಿ ತುಂಬೀರಿ ಹಸೆಗೋಳಾ ಕಂಭದಲ್ಲಾವೇ ಅರಗೀಣೀ 1
ಕಂಭದಲ್ಲಾವೇ ಅರಗಿಣಿ ನಮ್ಮನೇ ಪುಣ್ಯಾದಾ ನುಡಿಯಾ ನುಡಿದಾವೂ ॥
(ಈ ಹಾಡಿನಲ್ಲಿರುವ ಮುಗಿದ ಪಙ್ಕ್ತಿಯ ಕೊನೆಯ ಭಾಗವು ಬರುವ ಪಙ್ಕ್ತಿ
ಯಲ್ಲಿ ಮೊದಲ ಭಾಗವಾಗಿ ಬರುವುದನ್ನೂ, ಒಂದೇ ನುಡಿಯನ್ನು ಕೊಂಚ
ಕೊಂಚ ಭೇದಗಳಿಂದ ಇನ್ನೊಂದು ನುಡಿಯಾಗಿ ಮಾಡುವುದನ್ನೂ ಗಮನಿಸಿರಿ.
೭೮
-----------------------------------------------------------
ಹೆಂಗುಸರ ಹಾಡುಗಳು
ಹಳ್ಳಿಗರ, ಅದರಲ್ಲೂ ಶೂದ್ರಾಣಿಯ, ಹಾಡುಗಳಲ್ಲಿ ಇದೊಂದು ವಿಶೇಷವೆಂದು
ತೋರುತ್ತದೆ. ಇದರಿಂದ--ಬಂದುದೇ ಬರುತ್ತಲಿರುವುದರಿಂದ--ಅನೇಕವೇಳೆ ಹಾಡಿನ
ಕೇಂದ್ರ ವಿಷಯವೇ ತಪ್ಪಿಹೋಗುವುದೂ ಉಂಟು.)
ಮೊದಲನೆಯ ಆಶೀರ್ವಾದದಲ್ಲಿರುವ “ಕಲ್ಲು ಕಲ್ಲಾಗಿ. ...ಸೇಸೆ ಸ್ಥಿರ
ವಾಗಿರಲಿ" ಎಂಬುದನ್ನು "ಅಶ್ಮೇವ ಸ್ಥಿರಾ ಭವ' ಎಂಬ ವಿವಾಹಾಂಗ ಮಂತ್ರ
ದೊಡನೆ ಹೋಲಿಸಿರಿ, ಎರಡನೆಯದರಲ್ಲಿರುವ, ಚಿಗುಳಿಯ ಉಂಡೆಯನ್ನು ಮಡಿಲು
ತುಂಬುವ ಪದ್ದತಿಯನ್ನು ಬ್ರಾಹ್ಮಣರ ಅದೇ ಪದ್ಧತಿಯೊಡನೆ ಹೋಲಿಸಿರಿ,
ಮೂರನೆಯ ದರಲ್ಲಿರುವ, “ಗಿಣಿಗೋಳು ನಮ್ಮಾನೇ ಭಾಗ್ಯಾದಾ ನುಡಿಯಾ ನುಡಿದಾವು
.... ಪುಣ್ಯಾದಾ ನುಡಿಯಾ ನುಡಿದಾವೂ" ಎಂಬುದನ್ನು ಶುಭಾಶುಭ ಕರ್ಮಗಳಲ್ಲೆಲ್ಲ
ಬರುವ ಪುಣ್ಯಾಹದಲ್ಲಿ ಬರುವ, "ಸರ್ವತೋ ನಶ್ಶಕುನೇ ಭದ್ರಮಾವದ | ವಿಶ್ವತೋ
ನಶ್ಶಕುನೇ ಪುಣ್ಯಮಾವದ" ಎ೦ಬುದರೊಡನೆ ಹೋಲಿಸಿರಿ. ಇಲ್ಲಿ, ಈ ಹಾಡುಗಳನ್ನು
ಮಾಡಿದನರಿಗೆ ಈ ಮಂತ್ರಗಳು ಗೊತ್ತಿದ್ದು ಅದರರ್ಥವನ್ನು ಸೇರಿಸಿ ಇವನ್ನು
ಬರೆದರು ಎನ್ನೋಣವೇ? ಅಥವಾ, ಆ ವಾತಾವರಣ ಪ್ರಭಾವದಿಂದ ಅದೇ ಭಾವವು
ಹಾಡುವವರ ಮನದಲ್ಲಿಯೂ ಮೂಡಿತು ಎನ್ನೋಣವೇ ?
(೨) ಇತರ ಹಾಡುಗಳು
ಹೊಲ ಗದ್ದೆ ಕಾಯುವುದು, ದನ ಕುರಿ ಮಂದೆ ಕಾಯುವುದು, ನಾಟಿ
ಕುಯ್ದು ಮೊದಲಾದ ಸಂದರ್ಭಗಳಲ್ಲಿ ವಿಶೇಷವಾಗಿ ಹೆಂಗುಸರು ಹೆಂಗುಸರೇ
ಇರುವಾಗ, ಹಾಡಿಕೊಳ್ಳುವ ಹಾಡುಗಳಿವು. ಹಾಗೆಯೇ ದೇವತಾ ಪೂಜನಾದಿ
ಳಲ್ಲಿಯೂ ಬರುವುದುಂಟು.
೩೦. ಗೀಜಗನ ಹಾಡು
ಗೀಜಗನು ಎಲ್ಲಿಯೋ ಇದ್ದು ಬಂದಿದ್ದಾನೆ. ಗೀಜಗಿತ್ತಿಗೆ ಕೋಪ ಬಂದು
ಅವನನ್ನು ಬಾಗಿಲ ಹೊರಗೆ ಯೇ ಇಟ್ಟಿದ್ದಾಳೆ. ಅವರಿಬ್ಬರಿಗೂ ಸಂವಾದ ನಡೆಯುತ್ತಿದೆ.
(ಇದನ್ನು ಬ್ರಾಹ್ಮಣಿಯ ' ಸಂವಾದ' ಹಾಡುಗಳೊಡನೆ ಹೋಲಿಸಿರಿ.)
ಇದು ಯೇನು ಗೀಜಗಾ ಮೆಯ್ಕೆಲ್ಲ ಕೆಮ್ಮಣ್ಣು |
ಯಾವ ರಾಣಿ ತಡೆದಿದ್ದಾಳೊ ಯಾವ ಸೂಳೆ ತಡೆದಿದ್ದಾಳೋ ?||
ಕೆಮ್ಮಣ್ಣು ಗುಂಡೀಲಿ ಕುಳಿತಿದ್ದು ಬಂದೇನೆ |
ನಿನ್ನಾಣೆ ಗೀಜಗಿತ್ತಿ ಕದವನ್ನು ತೆಗೆಯೋ ॥
ಇದು ಯೇನು ಗೀಜಗಾ ಮೆಯ್ಕೆಲ್ಲ ಗಮನವೋ |
ಕಸ್ತೂರಿ ಭರಣಿಯಲ್ಲಿ ಕುಂತಿದ್ದು ನಾ ಬಂದೆ ಗೀಜಗಿತ್ತಿ ॥
ಮೂಡಲಿಕೆ ನಾ ಹೋಗಿ ಮುತ್ತಿನಾ ಗೊನೆ ತಂದೆ |
ಮುದ್ದು ಮಕ್ಕಳಿಗೆ ಕೊಡುವುದಕೆ ॥
೭೯
--------------------------------------------------
ಕರ್ಣಾಟಕ ಸಂಸ್ಕೃತಿ
ಬಾಳೇಯ ಸೀಮೇಗೆ ಹೋಗಿ ನಾ ಬಾಳೇಯ ಗೊನೆ ತಂದೆ |
ಬಾಳುವ ಮಕ್ಕಳಿಗೆ ಕೊಡುವುದಕೆ ॥
ಬ್ಯಾಟಿರಾಯನ ಕಂಡು ಬೆದರಿ ಬೆಟ್ಟಾವ ಸೇರಿ |
ಸೀಗೇಯ ಒಬ್ಬೆಯಲಿ ಸಿಕ್ಕಿದ್ದು ಬಂದೆ ಕಾಣೇ ಗೀಜಗಿತ್ತಿ ॥
ಮುಂಗೋಳಿ ಕೂಗೀತು ಮುಗಿಲು ಕೆಂಪಾದೀತು |
ಧಗಧಗಾ ಸೂರ್ಯನೂ ವೈಯಾರದಿಂ ಬಂದ ॥
ಸೂಳೆಲ್ಲಿ ಬಿಟ್ಟು ಬಂದೆಯೋ ಗೀಜಗಾ |
ರಾಣೆಲ್ಲಿ ಬಿಟ್ಟು ಬಂದೆಯೋ ॥
ತಾಮರಾ ಕಮಲದಲಿ ಮಲಗಿದ್ದು ಬಂದೆ ಕಾಣೇ ।
ಗೀಜಗಿತ್ತಿ ಕುಂತಿದ್ದು ಬಂದೆ ಕಾಣೇ ॥
ಸಾವಿರಾ ಮಕ್ಕಳಿಗೆ ಮೇವು ತಂದಿದ್ದೇನೆ |
ಎದ್ದೇಳೆ ಗೀಜಗಿತ್ತಿ ಮೇವನ್ನು ಕೊಡು ಎದ್ದೇಳೆ ॥
ಹಾಸಿಗೆಯ ತುಳಿಬೇಡ ಮಂಚವಾ ಹತ್ತಬೇಡ |
ತಣಿಗೇಲಿ ಉಣಬೇಡ ಚೆಂಬಿನಲಿ ಕುಡಿಬೇಡ ॥
ಮಕ್ಕಳನು ಮುಟ್ಟಬೇಡ ಮೇವ ನೀ ಕೊಡಬೇಡ |
ಮಕ್ಕಳಾ ಗೋಳು ನೋಡೆ ಗೀಜಗಿತ್ತಿ ಮಕ್ಕಳಾ ಚಿಂತೆ ನೋಡೆ ॥
ಹುಲ್ಲುಸೀಮೆಗೆ ಹೋಗಿ ಹುಲ್ಲು ಸಾವಿರ ತಂದು |
ಕೆಳಗೊಂದು ಗೂಡು ಕಟ್ಟೀ ಗೀಜಗಾ ಮೇಲೊಂದು ಗೂಡು ಕಟ್ಟೀ ॥
ಮೇಲಿನಾ ಗೂಡಿನಲಿ ನಾನೂ ನನ್ನ ಮಕ್ಕಳೂ ಇರುವೆವು |
ಕೆಳಗಿನಾ ಗೂಡಿನಲ್ಲಿ ಒಬ್ಬನೇ ನೀನಿರು ಗೀಜಗಾ ॥
೩೧. ಯಮನ ಹಾಡು
ಮತ್ತೊಂದು ಗಳಿಗೆ ತಡಮಾಡೋ | ಜವರಾಯ |
ಮತ್ತೊಂದು ಗಳಿಗೆ ತಡಮಾಡೋ ॥ ಪ!
ಉಪ್ಪು ಸೊಪ್ಪು ನಾ ಮಾರಿ ಉಪ್ಪರೀಗೆ ಕಟ್ಟಿಸೀದೆ |
ಉಪ್ಪರೀಗೆ ಭೋಗ ಕಾಣಲಿಲ್ಲ ॥
ಹೋರೀಯ ಜಾರೀಯೆ ವಾಲೇಯ ಮಾಡಿಸೀದೆ |
ವಾಲೊಂದು ಅರಗಳಿಗೆ ಇಕ್ಕಲಿಲ್ಲ ॥
ಹಂದೀಯ ಮಾರೀದೆ ಬಂದೀಯ ಮಾಡಿಸಿದೆ |
ಹುರುಳೀಯ ಮಾರೀದೆ ಸಣಗುಂಡು ಮಾಡಿಸಿದೆ ॥
ಉದಕವ ಮಾರಿದೆ ಪದಕವ ಮಾಡಿಸಿದೆ ।
ತೊಗರೀಯ ಮಾರಿದೆ ಬುಗಡೀಯ ಮಾಡಿಸಿದೆ ॥
ಈವತ್ತು ಸಪ್ಪರ ನಾಳೆಗೆ ದಾರೆಯು ।
ಹೆಂಗೆ ಬಿಟ್ಟು ಬರಲೋ ಯಮರಾಯ ॥
೮೦
----------------------------------------------------
ಹೆಂಗುಸರ ಹಾಡುಗಳು
ಆಗುವ ಮದುವೆ ಆಗುತಾವೆ |
ಹಿಂಡೋ ಯೆಮ್ಮೆಗಳು ಹಿಂಡೂತಾವೆ ॥
ಹಾಕೋಳು ಬರುತಾಳೆ ಪುರನಾರಿ ಬರುತಾಳೆ |
ಪುರಚೆಲುವೆ ಬರುತಾಳೆ ನೀನಡೆಯೇ ಮುಂದೆ ॥
ಬೆಣಸು ಕಲ್ಲಲ್ಲಿ ಗುಂಜುತಾರೆ |
ಗಾಯಕೆ ಹೊಸ ಸುಣ್ಣ ಕಲಸಿ ಇಡುತಾರೆ ॥
ಪಾಪ ಮಾಡಿದ ಕರಮಿ ನೀನು |
ದ್ರೋಹ ಮಾಡಿದ ಕರಮಿ ನೀನು ||
ಆಗ ಮಾಡಿದ ಪಾಪವೆಲ್ಲ ಆಗ ಮಾಡಿದ ದ್ರೋಹವೆಲ್ಲ |
ಈಗ ಕಳೆಯೆಂದು ಬೆಂಕಿಕೊಂಡದಿ ಖಳೆಯುತಾರೆ |
೩೨. ಹರಿಗೋಲು ಹಾಡು, ಅಥವಾ ಗಂಗಮ್ಮನ ಹಾಡು
[' ಅಮ್ಮ'ಯೇಳುವುದಕ್ಕೆ ಗಂಗಮ್ಮ ಮಾರಮ್ಮ ಎಂಬ ಇಬ್ಬರು ಅಕ್ಕ್ ತಂಗಿ
ಯರು ಕಾರಣರಂತೆ. ಅದರಲ್ಲಿ ಗಂಗಮ್ಮನು ಮೊದಲು ಕಾಲಿಟ್ಟು ಬಂದರೆ ಅಮ್ಮ
ಯೆದ್ದವರು ಉಳಿಯುವುದು ಕಷ್ಟ; ಉಳಿದರೂ ವಿಕಾರವಾಗದೆ ಇರುವುದಿಲ್ಲ.
ಮಾರಮ್ಮನು ಮೊದಲು ಬಂದರೆ ಉಳಿಯುವುದು ನಿಶ್ಚಯ ; ವಿಕಾರವಾಗುವುದು ಅಪ
ರೂಪ--ಎಂಬ ಒಂದು: ನಂಬಿಕೆಯು ಇದೆ. ಈ ಹಾಡು ಆ ಗಂಗಮ್ಮನು ಅಷ್ಟು
ಕ್ರೂರಳಾಗುವುದಕ್ಕೆ ಕಾರಣವನ್ನು ಹೇಳುತ್ತದೆ.] ಇದನ್ನು " ಹುಟ್ಟಿದ ಹಳ್ಳಿ ಹಳ್ಳಿಯ
ಹಾಡು " ಎಂಬುದರಲ್ಲಿರುವ ದೊಡ್ಡಮ್ಮನ ಹಾಡಿನೊಡನೆ ಹೋಲಿಸಿರಿ.
ಆಚೆಕಡೆ ಹೆತ್ತೋರ ಮನೆ ಈಚೆಕಡೆ ತವರೋರು ಮನೆ ।
ನಟ್ಟನಡುವೆ ಮುತ್ತಿನ ಹರಿಗೋಲು ॥
ಆ ಹರಿಗೋಲನ್ನು ನಡೆಸುವ ಹೊನ್ನಯ್ಯನೂ ಗಂಗಮ್ಮನೂ ಸೋದರರು.
ಅವನು ಹುಟ್ಟುತ್ತಲೇ ಅಂಬಿಗರ ಮನೆಗೆ ಅವನನ್ನು ಕೊಟ್ಟುಬಿಟ್ಟುದರಿಂದ ಅವನಿಗೆ
ಗಂಗೆಯು ಸೋದರಿಯೆಂಬುದು ತಿಳಿಯದು ; ಇವಳಿಗೆ ಅದು ಗೊತ್ತು. ಒಂದು ದಿನ
ಇವಳು ಹರಿಗೋಲನ್ನು ಏರಿ ಅತ್ತ ಕಡೆಗೆ ಹೋಗಲು ಬಂದಿದ್ದಾಳೆ. ನಡುಹೊಳೆ
ಯಲ್ಲಿ ಹೊನ್ನಯ್ಯನು ಅವಳನ್ನು ಕಾಮತೃಪ್ತಿಗಾಗಿ ನಿರ್ಬಂಧಪಡಿಸುತ್ತಾನೆ--
ಮದುವಾಗಿ ಮೂರೇ ತಿಂಗಳು ಮೈನೆರೆದು ಆರೇ ತಿಂಗಳು |
ಧಾರೆ ಸೀರೆ ಉಟ್ಟರುವೆನಣ್ಣ ಧಾರೆ ಕುಬಸ ತೊಟ್ಟಿರುವೆನಣ್ಣ ॥
ಮಡುಲಕ್ಕಿ ಕಟ್ಟಿರುವೆನಣ್ಣ | ಮುಡಿಯ ಬಾಚಿಂಗ ಕಳೆಯಲಿಲ್ಲಣ್ಣಾ |
ಪಾಪಕಿನ್ನು ಗುರಿಯಾಗಬೇಡ ಒಂದು ತಾಯಿಮಕ್ಕಳೋ ॥
ಒಂದಾಗ್ಹುಟ್ಟಿದ ಒಡಹುಟ್ಟು ಕಾಣೊ ಹೊನ್ನಯ್ಯ ಕೇಳೋ |
ಅಪ್ಪ ಕೊಟ್ಟ ಒಡವೆ ಕೊಳ್ಳೊ ಅಮ್ಮ ಕೊಟ್ಟ ಬುತ್ತಿ ಕೊಳ್ಳೊ ॥
ನಾಗಪುರಿ ಬೇಸುಕೊಳ್ಳೋ ಪಾಪಾತ್ಮ ಹೊನ್ನಯ್ಯ ಕೇಳೋ
ಕಡುಚೆಲ್ವೆ ತಂದು ಮದುವೆ ಮಾಡೀನೋ ದೋಚಾತ್ಮ ಹೊನ್ನಯ್ಯ ಕೇಳೋ ॥
೮೧
--------------------------------------------------------------
ಕರ್ಣಾಟಕ ಸಂಸ್ಕೃತಿ
ಮೈಸೂರಿಗೆ ಹೊಗಬೇಕು ಚಾಮುಂಡವ್ವನ ಸೇವೆ ಮಾಡಬೇಕು |
ಹರಿಸೇವೆ ಮಾಡಬೇಕು ಹೆಣ್ಣುಸೇವೆ ಮಾಡಬೇಕು ಗಂಡುಸೇವೆ ಮಾಡಬೇಕು ॥
ಕರುಪೂರ ಬೆಳಗಬೇಕು ಹಣ್ಣುಕಾಯಿ ಕೊಡಬೇಕು |
ಅನ್ನದಾನ ಮಾಡಬೇಕು ವಸ್ತ್ರದಾನ ಮಾಡಬೇಕು ॥
(ಹೀಗೆಯೇ ಸ್ವಾಮಿ ನಂಜುಂಡಪ್ಟನಿಗೂ ತಿರುಪತಿಯ ತಿಮ್ಮಪ್ಪನಿಗೂ ವಿಧವಿಧ
ವಾದ ಸೇವೆ ಸಲ್ಲಿಸಬೇಕು.)
ಮುಟ್ಟಲುಬೇಡ ಹೊನ್ನಯ್ಯ ಅಂಟಲುಬೇಡ ಹೊನ್ನಯ್ಯ |
ಲಾಲಿಸಣ್ಣ ನನ್ನ ಮಾತು ಕರ್ಮಾವ ಕಟ್ಟಾ ಬೇಡಣ್ಣಾ |
ನೀನು ಯಾವ ತಾಯಿ ಮಗಳೊ ನಾನು ಯಾವ ತಂದೆ ಮಗನೋ |
ಇಲ್ಲಿಯೇ ಇಲ್ಲವೇ ಸ್ವಾಮಿ ಹವಳದ ಸರ ಕೊಳ್ಳೇ |
ಕೊರಳಿಗೆ ಮುತ್ತಿನ ಹಾರ ಕೊಳ್ಳೇ ॥
ಬಗ್ಗಿ ತಲ್ಲೊ ಹರಿಗೋಲು ಬಾಗಿತಲ್ಲೋ ಹರಿಗೋಲು |
ನಿಂತಿತಲ್ಲೋ ನಿನ್ನ ಹರಿಗೋಲು ಪಾಪಾತ್ಮ ಹೊನ್ನಯ್ಯ ಕೇಳೋ ॥
ಅಲ್ಲಿಗೂ ಅವನಿಗೆ ಬುದ್ಧಿ ಬರಲಿಲ್ಲ. ಹುಡುಗಿಯು ಹೆದರಿ ದ್ವೀಪಾಂತರ
ದಲ್ಲಿದ್ದ ತನ್ನ ಅಕ್ಕನನ್ನು ನೆನೆದಳು. ಅವಳು ರಾಕ್ಚಸಿಯ ರೂಪಿನಿಂದ ಬಂದು ಕಾಣಿಸಿ
ಕೊಂಡಳು.
ಒಂದು ಸೆರಗ ಕಟ್ಟಿವಳೆ ತಾಯಿ ಒಂದು ಸೆರಗ ಬಿಟ್ಟವಳೆ |
ಆಗ ಹುಡುಗಿಯು ಅಳುತ್ತಾ ಅಕ್ಕನೊಡನೆ,
ಮುತ್ತಿನಂತಾ ಮುಚ್ಚಿದ ಸೆರಗು ಹಿಡಿದು ಜಗ್ಗುತಾನೆ |
ಎಂದು ಅತ್ತುಕೊಂಡಳು. ಮಾರಿಗೂ ಅನನು ಸಗ್ಗಲಿಲ್ಲ, ಆಗ ಅವಳು ಕಪಿಲಯ್ಯನೆಂಬ
ತನ್ನ ಗಂಡನನ್ನು ಬರಮಾಡಿದಳು. ಅವನು, " ನೀನು ಬ್ರಾಹ್ಮಣರ ಮಗಳು, ನಾನು
ಮಾದಿಗರ ಮಗನು. ನಾನೂ ನೀನೂ ಕೂಡಿಕೊಂಡು ಇಲ್ವಾ ; ಬೆರಕೊಂಡೂ ಇಲ್ವಾ?
ಹಾಗೆಯೇ ಇವರು ಇರಲಿ" ಎಂದನು. ಮಾರಿಗೆ ರೇಗಿಹೋಯಿತು. (ಅದುವರೆಗೂ ಈ
ವಿಷಯವು ಅವಳಿಗೆ ತಿಳಿಯದೊ: ಏನೋ !) ಕೂಡಲೇ -
ನಾನು ಮಾರಿಯಾಗಿ ನೀನು ಕೋಣನಾಗಿ |
ನಿನ್ನ ಕಡಿದು ತಂದು ನನಗೆ ಬೊಟ್ಟಿಡಬೇಕು |
ಎಂದು ಶಾಪ ಕೊಟ್ಟು ಅವನನ್ನು ಸುಟ್ಟಳು.ಅವಳ ಅಪ್ಪಣೆಯಿಂದ ಹೊಳೆಯಲ್ಲಿ
ಆನೆಗಾತ್ರ ನೀರು ಬಂದು ಗಂಗಮ್ಮನನ್ನು ದಡಕ್ಕೆ ಹಾಕಿ ಹರಿಗೋಲನ್ನು ಕೊಚ್ಚಿ,
ಕೊಂಡುಹೋಯಿತು. ಹೊನ್ನಯ್ಯನು ಉಳಿಸೆಂದು ಕೊಂಡನು. ಗಂಗಮ್ಮನ
ಬೇಡವೆಂದರೂ ಮಾರಮ್ಮನು ತಮ್ಮನೆಂದು ಉಳಿಸಿದಳು. ಗಂಗಮ್ಮನು ಕಡಲಿಗೆ.
ಬಿದ್ದು ಗಂಗಮ್ಮನೆಂಬ ದೇವತೆಯಾದಳು.
೮೨
-----------------------------------------------------------
ಹೆಂಗುಸರ ಹಾಡುಗಳು
೩೩.ಶೆಟ್ಟರ ಹಾಡು*
ಸುವಣ್ಣ್ಯಾಲೀ | ಜಾಗಾಲೀ | ಸುವಣ್ಣಾಲೀ ॥
ಬಂದಾರು ಶೆಟ್ಟರು ಎಳೆಯೆಂತ ಸಾರಿದಾರು ॥ ಸು ॥
ಬಳೆಯೆಂದು ಸಾರಿದ ಸೊಲ್ಲ ಕೇಳಿದವಳಮ್ಮ ॥ ಸು॥
ಸಾರಿದ ಸೊಲ್ಲ ಕೇಳಿಕೊಂಡು ನಮ್ಮಟ್ಟಿಗಾದರೂ ಬನ್ನಯ್ಯ ಶೆಟ್ಟರೇ ॥ ಸು॥
ನಿಮ್ಮಟ್ಟಿ ನಾನು ಅರಿಯೆನಮ್ಮ । ನಮ್ಮ ಬಾಗಾಲು ನಾನರಿಯೆನಮ್ಮ ॥ಸು॥
ನಮ್ಮಟ್ಟಿ ಬಾಗಾಲ ಮುಂದೆ | ಮಕ್ಕಳಾಡೋ ಮಂಟಪವಯ್ಯಾ ॥ ಸು ||
ನಮ್ಮಟ್ಟಿ ಬಾಗಾಲ ಮುಂದೆ | ಮಕ್ಕಳೋಡೋ ಪಳ್ಳಿ ಚಾವಡಯ್ಯಾ ॥ ಸು॥
ನಮ್ಮಟ್ಟಿ ಬಾಗಾಲ ಮುಂದೆ | ಟಗರ ಕಾಳಗ ಮಾಡುತಾರಯ್ಯ ॥ ಸು ॥
ನಮ್ಮಟ್ಟಿ ಬಾಗಾಲ ಮುಂದೆ | ಬಟ್ಟಿ ನುಗ್ಗೆ ಮರವಯ್ಯಾ ॥ ಸು ||
ನಮ್ಮಟ್ಟಿ ಬಾಗಾಲ ಮುಂದೆ | ಕೆಂದೆಂಗಿನ ಮರವಯ್ಯಾ ॥ ಸು ||
ನಮ್ಮಟ್ಟಿ ಬಾಗಾಲ ಮುಂದೆ । ಕಿತ್ತಳೆ ವನವಯ್ಯಾ ॥ ಸು ||
ನಮ್ಮಟ್ಟಿ ಬಾಗಾಲ ಮುಂದೆ | ಹಿರಳೇಯ ಮರನಯ್ಯಾ ॥ ಸು॥
ನಮ್ಮಟ್ಟಿ ಬಾಗಾಲ ಮುಂದೆ | ಬಾಳೇಯ ಮರನಯ್ಯಾ | ಸು ॥
ಬಾಳೇಯ ಬಲಕಾಕೀ | ಹಿರಳೀಯ ವಡಕಾಕೀ ॥
ಬಂದಾರು ಶೆಟ್ಟರು ಬಂದರಯ್ಯಾ | ಬಂದರಯ್ಯಾ ॥ ಸು ||
ಈ ಸಂದರ್ಭದಲ್ಲಿ ಗೋವಿನ ಹಾಡು, ಅವಶ್ಯವಾಗಿ ಬರಬೇಕು. ಅದು ಎಲ್ಲರಿಗೂ
ತಿಳಿದಿದೆಯಾಗಿ ಇಲ್ಲಿ ಬೇಡವೆಂದು ಬಿಟ್ಟಿದ್ದೇವೆ,
ವಿನೋದದ ಹಾಡುಗಳಲ್ಲಿ ಪುರಾಣದ ಕಥೆಗಳೂ, ಪುರಾಣ ಪುರುಷರನ್ನು
ಸಾಮಾನ್ಯರಂತೆ ಚಿತ್ರಿಸುವ ಕಥೆಗಳೂ ಉಂಟು. ಒಂದರಲ್ಲಿ ರುಕ್ಮಿಣಿಯು ಕೃಷ್ಣನ
ಮಾತು ಕೇಳದಿರಲು, ಅವನು ಮಾಯದ ಚೇಳು ಕಡಿಸಿದನೆಂದು ಬರುತ್ತದೆ. ಈ
ಭಾಗದಲ್ಲಿಯೂ ಬ್ರಾಹ್ಮಣಿಯ ಪದಗಳಿಗೂ ಈ ಪದಗಳಿಗೂ ವ್ಯತ್ಯಾಸವಿದ್ದಂತೆ
ತೋರುವುದಿಲ್ಲ.
ನಾವು ಹಿಂದೆ ಉದಾಹರಿಸಿರುವ ಹಾಡುಗಳಿಂದ ಬ್ರಾಹ್ಮಣಿಯ ಅಂತಸ್ಸತ್ವವು
ವ್ಯಕ್ತವಾಗುವಷ್ಟು ಇಲ್ಲಿ ಶೂದ್ರಾಣಿಯು: ಎಂತಹವಳು ಎಂಬ ಅಂಶವು ಸ್ಫುಟ
ವಾಗಿಲ್ಲ. ಅದರಿಂದ ಹಿಂದಿನ ಲಾವಣಿಯೊಂದನ್ನು ತೆಗೆದುಕೊಂಡು ಬ್ರಾಹ್ಮಣಿ
ಯಲ್ಲದ ಆ ಕಥೆಯ ನಾಯಕಿಯ ಚಿತ್ರವನ್ನು ಅಲ್ಲಿರುವಂತೆ ಸ್ವಲ್ಪದಲ್ಲಿ ತೋರಿಸಿ
ಈ ಭಾಗವನ್ನು ಮುಗಿಸೋಣ.
೩೪, ದೀವಳಿಗೆ ಲಾವಣಿ
.....................
*. ಈ ಹಾಡು ತಗಡೂರಿನ ಖಾದಿ ಕೇಂದ್ರದ ಅಧಿಕಾರಿಗಳ ವಿಶ್ವಾಸದಿಂದ ದೊರಕಿದುದು ; ಇದನ್ನು
' ಹಳ್ಳಿಯ ಹಾಡಿ ' ನಲ್ಲಿರುವ ಶೆಟ್ಟರ ಪದಗಳೊಡಸೆಯೂ, ಹಾಗೆಯೇ 'ಪ್ರರಂದರದಾಸರ ದಾಸಯ್ಯನ ಪದ
ದೊಡನೆಯೂ ಹೋಲಿಸಿರಿ.
೮೩
----------------------------------------------------------
ಕರ್ಣಾಟಕ ಸಂಸ್ಕೃತಿ
ನಾಲ್ಕು ದಿಕ್ಕಿಗೆ ಹಬ್ಬ ಬಂದಿತು ಒಳ್ಳೇ ದೀವ ಳಿಗೆ |
ನಾಚುತ ನಲಿಯುತ ಹೆಣ್ಗಳು ಬಂದರು ತಮ್ಮ ತವರು ಮನೇಗೆ || ಪ॥
* * * *
ಮತ್ತೆ ಬರಲಿಲ್ಲ ಅವರೊಳಗೊಬ್ಬಳು ಗೌಡನ ಮಗಳಿಗೆ ॥
ಅವಳು ಹೋಗಿ ಮಗನನ್ನು ಕುರಿತು, " ನಿನ್ನ ತಂಗಿಯು ಬರಲಿಲ್ಲ; ಹೋಗಿ
ಕರೆದುಕೊಂಡು ಬಾ" ಎಂದಳು, ಅವನೂ,
ಇರುವಳೊಬ್ಬಳು ತಂಗಿ ಹೊರ್ತು ಇನ್ನಾರೂ ಯಿಲ್ಲಾ ಯೆನಗೆ |
ಹಿರಿಯನಾಗಿ ನಾನೊಬ್ಬನೆ ಹೊರ್ತು ಇನ್ಯಾರ ಆಶೆ ತಂಗೀಗೆ॥
ಕರೆಯದ್ಹೋದರೆ ಚಿಂತೆ ಮಾಡ್ಯಾಳು ತಂಗೀ ತನ್ನ ಮನದಾಗೆ |
ಎಂದುಕೊಂಡು, ಮಾಡುತ್ತಿದ್ದ ಕೆಲಸ ಬಿಟ್ಟು ಬಂದು ಬುತ್ತಿ ಕಟ್ಟಿಕೊಂಡು ತಂಗಿಯ
ಮನೆಗೆ ಹೊರಟನು.
ಹೋರಿ ತಂದು ನಿಲಿಸಿದ ಆತನು ತಡಮಾಡದೆ ಹೀಗೆ |
ಕೊರಳಿಗೆ ಸರಪಣಿ ಗೆಜ್ಜೆ ಹಣೆಪಟ್ಟಿ ಹಾಕಿದ ಹೋರೀಗೆ ॥
ವಾರೆ ಮುಂಡಾಸ ಕಾಲಾಗಿರಿಯಂಗಿ ವುಡುಗೆ ತೊಡುಗೆ ಮ್ಯಾಗೆ |
ಭಾರಿ ಧೋತ್ರವೊಂದು ಶೃಂಗಾರವಾದನು ಸೊಗಸಾಗೆ |
ಹರುಷದಿಂದ ಊಟ ಮಾಡಿ ಪಟ್ಟಾ ಕಟ್ಟಿದ ಬೆನ್ನಿನ ಮ್ಯಾಗೆ |
ಕೊರಡ ಪಿಡಿದು ಹೋರಿಯೇರಿ ಬಿಟ್ಟನು ಒಂದೇ ರಭಸಿನಾಗೇ |
ಮೂರು ಗಂಟಿಗೆ ದಾಖಲ್ ಆದನು ತಂಗಿ ವೂರಿನಾ ಒಳಗೆ ॥
ತಂಗಿಯು ಅಣ್ಣನನ್ನು ಪ್ರೀತಿಯಿಂದ ಬರಮಾಡಿಕೊಂಡು, " ನೀರು ಎರೆದಳು
ಎಣ್ಣೆ ವೊತ್ತಿ ಅಣ್ಣನಿಗೆ !' ಪರಿಪರಿ ವೂಟ ಮಾಡಿ ಸೊಗಸಾಗಿ ಬಡಿಸಿದಳು ಅಣ್ಣನಿಗೆ!”
ಅವನು ಹೋಗಿ ಮಲಗಿದನು.
ಗಂಡನು ಬರಲು, ಅವನನ್ನು "ಕರೆದು ಪಾದವ ತೊಳೆದಳು ಗಂಡಗೆ", ಊಟ
ವನ್ನು ಮಾಡಿ ತಾಂಬೂಲವನ್ನು ಸೇವಿಸುತ್ತ ಇಬ್ಬರೂ ಮಂಚದ ಮೇಲೆ ಕುಳಿತಿರಲು, -
ಕಾಂತ ಕೇಳು ಒಂದು ಮಾತು ಬಿನ್ನಹ ಮಾಡಿಕೊಂಬೆ ನಿಮಗೆ |
ಸಂತೋಷದಿಂದಲ್ಲೀ ಕಳುಹಿಸಿಕೊಟ್ಟರೆ ಹೋಗುತೇನೆ ತವರು ಮನೀಗೆ ॥
ಎಂದಳು, ಗಂಡನು,-
ಎಂತ ಮಾತನುಸುರುವೆ ಭಾವಕಿ ನಾಚಕಿಲ್ಲವೇ ನಿನಗೆ!
ಅಂತ ದಿಕ್ಕಿದ್ದರೆ ಬಾರದಿರುವರೆ ಕರೆಯಲೀಕೆ ನಿನಗೆ ॥
ಸಂತೋಷದಿಂದಲೇ ಹಬ್ಬವ ಮಾಡಿಕೊ ಏನು ಕಮ್ಮಿ ನಮ್ಮನೆಯಾಗೆ |
ಮತ್ತೆ ನೀಡು ಬಂಧು ಬಳಗಕೆ ಸರದೇಸಿ ಜೋಗಿ ದಾಸರಿಗೇ ॥
ಎಂದನು. ಆಗ ಅವಳು ತನ್ನ ಅಣ್ಣನು ಕರೆಯುವುದಕ್ಕೆ ಬಂದಿರುವುದನ್ನು ಹೇಳಲು,
ಅವನ ಸಿಟ್ಟಿಲ್ಲವೂ ಇಳಿದು, " ಚಿಂತೆಮಾಡಬೇಡ ಹೋಗಿ ಬಾ | ವಾರಿಗೆ ಸ್ತ್ರೀಯರೊಳು
೮೪
-----------------------------------------------------------------
ಹೆಂಗುಸರ ಹಾಡುಗಳು
ತೋರುವ ವಸ್ತ್ರಗಳಿಟ್ಟುಕೋ ಮೈಮೇಗೆ । ತೆಗೆದುಕೋ ಒಡವೆಪೆಟ್ಟಿಗೆ ಹೊರಗೆ ॥'
ಎಂದು ಹೇಳಿದನು. ಆಗ,-
ಸರಸಿಜಾಕ್ಷಿ ಜಡೆ ಹಾಕಿದಳು ರ್ಯಾಗಟೆ ಅದರ ಮೇಗೆ |
ಭರದಿ ಜಡೇಬಿಲ್ಲೆ ಕೇದಿಗೆ ಚೌವಲಿಕಟ್ಟು ಕುಚ್ಚು ಬಿಟ್ಟಳು ಹಣೆಮೇಗೆ ॥
ಮುಂಗುರುಳೊತ್ತಿದ ಬೈತಲಿಬಿಟ್ಟಳು ವಾರೆ ಚಂದ್ರನ್ಹಂಗೆ |
ಬೇಸ್ತರಿ ಬುಲಾಕು ನತ್ತನಿಟ್ಟಳು ನಾಸಿಕ ಸೊಗಸಾಗೇ ॥
ಕರ್ನದಿ ಬುಗುಡಿ ಚಂದ್ರಮುರಾ ವೋಲೆ ಜುಮುಕಿ ಮುತ್ತಿನ್ಹಂಗೇ |
ಕೊರಳೊಳು ಕಟ್ಯಾಳು ಚಿಂತಾಕಡ್ಡಿಕೆ ಲಾಡಿ ಜೊತೆಯಾಗೆ ॥
ಭರದಿ ಪದಕ ಮೋಹನ ಮಾಲೆ ದೊಡ್ಡ ಗುಂಡು ಬಿಟ್ಟಾಳು ಕೆಳಗೆ |
ಭರ್ಜರಿ ಕರಿಶೀರೆ ಉಟ್ಟಳು ಕುಪ್ಪಸ ತೊಟ್ಟಳು ಮೇಲೆ ॥
ಹರಿಯಂತೆ ತೋರುವ ಅರ್ಧಡಿ ಡಾಬು ಯಿಟ್ಟಾಳು ಸೊಂಟದಾಗೆ |
ಸರಸಿಜಾಕ್ಷಿಗೆ ಸೇರಿನ ಕರಡಿಗೆ ಸರಪಣಿ ಸೊಗಸಾಗೆ |
ಗಗ್ಗರಿ ಪಾಗಡೆ ನಿಲ್ಲಿಯನಿಟ್ಟಳು ನಾರಿ ಕಾಲಿನಾಗೆ ॥
ಹೀಗೆ ಸರ್ವ ಶೃಂಗಾರವಾಗಿ ನಿಂತ ಬಾಲೆಯನ್ನು ಗಂಡನು ಬರಸೆಳೆದಪ್ಟಿ,
"ರಂಭೆ! ಭಂಗಾರದ ಗೊಂಬೆ! ಯಾವಾಗ ಬರುವೆ?" ಎಂದನು. ಎಂಟು ದಿವಸದಲ್ಲಿ
ಹೊರಟುಬರುವೆನೆಂದು ಹೇಳಿ, ಲಾಡು, ಪೇಣೀ, ಗರಗೊಬ್ಬಟ್ಟು, ಕಜ್ಜಾಯ, ಕಡುಬು
ಗಳ ಬುತಿ, ಕಟ್ಟಿಕೊಂಡು ಅಣ್ಣನ ಜೊತೆಯಲ್ಲಿ ಹೊರಟಳು.
ದಾರಿಯಲ್ಲಿ ಬರುತ, ಅಣ್ಣನಿಗೆ, " ಕತ್ತನು ಕೊಯ್ದು ಗೊತ್ತಾಗದಂತೆ
ಹೊಡೆದುಹಾಕಿದರೆ ಎನಗೆ |! ಮತ್ತೆ ಸಿಕ್ಕುವುದು ಒಡವೆಯು ಸಾಕಾಗುವಂತೆ ಎನಗೇ ॥"
ಎಂದು ಒಂದು ದುರಾಶೆಯು ತಲೆದೋರಿತು. ಕೂಡಲೆ,--
ಸತ್ಯವಂತೆ ಯೆಂಬುದ ತಿಳಿಯದೆ ಹೋರಿ ಬಿಟ್ಟ ಕಾಡಿನ ಕಡೆಗೇ ।
ಯಾತಕಣ್ಣ ದಾರಿ ತಪ್ಪಿ ಹೊಡೆಯುತಿ ಹೋರಿ ಗುಡ್ಡದ ಕಡೆಗೆ?!
ಹೊಟ್ಟೆ ಬಹಳ ಹಸಿತದೆ ತಂಗಿ ನೀರುಂಟು ಹಳ್ಳದಾಗೆ ॥
ತಂದು ಕಾಡಿಗೆ ಹೆಡೆಮುರಿ ಕಟ್ಟಿದ ವಟಾವೃಕ್ಟದಾಗೆ |
ಕುಂದದೆ ಬೆನ್ನಿನ ಪಟ್ಟವ ತೆಗೆದನು ಕಡಿದನು ತಂಗಿ ಕತ್ತಿನ ಮೇಗೆ ॥
ಅದು ನಾಟದೆ ಹಾರಿಹೋಯಿತು ಕತ್ತಿ ಮಾಯದಾಗೆ |
ಸುಂದರಿ ಯಾಕೆ ಧ್ಯಾನದಿ ನಿಂತಳು ಹರಿಯ ಧ್ಯಾನದಾಗೆ ||
ಇತ್ತ ಇವನು,--
ನೋಡಿ ಕೋಪದಿ ರೌದ್ರವ ತಾಳಿದ ತನ್ನ ತಂಗಿ ಮೇಲೆ |
ಕಡಿದ ಕೈಯನು ಕೂಡಿದ ರಕ್ತವ ನೋಡಿದ ನಾಲ್ಕು ಕಡೇಗೇ ॥
ಕಡಿದ ಪಟ್ಟಾ ನಾಟದೆ ಹೋಯ್ತು ಕಾಣದೆ ಕಣ್ಣೀಗೆ |
ತಡಕಿ ನೋಡಿದ ಗುಂಡು ಬಿದ್ದಿದೆ ಅದೇ ಮಣ್ಣಿನ ಮೇಗೆ |
ದುಂಡು ಮೀಶೆ ತಿರುವಿ ಯದೆಮಂಡಿವೂರಿ ಯೆತ್ತಿದ ಹೆಗಲಮೇಗೆ ॥
೮೫
-----------------------------------------------------------
ಕರ್ಣಾಟಕ ಸಂಸ್ಕೃತಿ
ಇದನ್ನು ಗುಡ್ಡದ ಮೇಲಿನ ಶಿವ ಪಾರ್ವತಿಯರು ಕಂಡರು. ಪಾರ್ವತಿಗೆ ಆ ಅನ್ಯಾಯವು
ಸಹಿಸದೆ,
ತ್ವರಿತದಿ ಕಾಳಿಂಗನ ಮಾಡಿ ಬಿಟ್ಟಳು ಕ್ಷಣದಾಗೆ |
ಸರಸರಸರ ವಿಷವೇರಿ ಬಿದ್ದನು ಭೂಮಿಮೇಗೆ ॥
ದುರ ದುರ ದುರಾ ನೋಡುತಾನೆ ತನ್ನಯ ತಂಗೀಗೆ |
ಬಾರೆ ತಂಗಿ ಹೋಗುತಿದೆ ಪ್ರಾಣ ನೀರು ಕೊಡು ಯಿಷ್ಟು ಯನಗೆ ॥
ಆಗಲೂ ಹೆಡೆಮುರಿ ಕಟ್ಟಿಸಿಕೊಂಡಿರುವ ತಂಗಿಯು ಹರ ಹರಯೆಂದು ತಳೆಚಚ್ಚಿ
ಕೊಂಡು, "ಯಾರಾದರೂ ನನ್ನ ಕಟ್ಟು ಬಿಚ್ಚಬಾರದೆ' ಎಂದು ಅತ್ತಳು. ಮರೆಮಾಯ
ದಲ್ಲಿ ದೂತರು ಬಂದು ಬಿಚ್ಚಿದರು.
ಗಡ ಗಡ ವೋಡಿಹೋದಳು ಹಳ್ಳದ ಮಡುವೀಗೆ |
ಭಡ ಭಡ ಭಡ ನೀರು ತುಂಬಿಕೊಂಡು ಬಂದಾಳು ಗಾಬರಾಗೆ |
ಕುಡಿ ಕುಡಿ ಕುಡಿ ನೀರಂಣೈಯ ನೋಡು ಯನ್ನ ಕಡಿಗೆ ॥
ಅವನು ಆ ವೇಳೆಗೆ ಗತ ಪ್ರಾಣನಾಗಿದ್ದಾನೆ. ಆಗ ಅವಳು ಯಿನ್ನೂ ಅತ್ತಳು.
ಕಡು ಪಾಪಿ ನನಗೋಸ್ಕರ ಬಂದು ಮಡಿದೆ ನೀ ವ್ಯರ್ಥದಾಗೆ |
ವೊಡಿನೆ ವಸ್ತುಯೆಲ್ಲಾ ಕೊಡುವೆ ನಿನಗೆ ಏಳು ಹೋಗುವ ಮನೀಗೆ |
ಗಂಡ ಕೇಳಿದರೆ ಏನು ಹೇಳಲಿ ಯಾವ ಸಂತೋಷದೊಳಗೇ |
ನಿನ್ನ ಸತಿ ತಾಯ್ಗಳು ಕೇಳಿದರೆ ಯೇನ್ಹೇಳಲಿ ಅವರೀಗೆ |
ಯೆಂದು ದುಃಖ ಮಾಡುತ ಕುಂತಳು ಅಣ್ಣನ ಬಳಿಯಾಗೇ ॥
" ನನಗಾಗಿ ತಂದೆಯ ಮನೆಯು ಹಾಳಾಗಿಹೋಯಿತು. ಹಿರಿಯರ ಹೆಸರಿ
ನಲ್ಲಿ ಜ್ಯೋತಿ ಬೆಳಗುವವರು ಇನ್ನಾರು?" ಎಂದು ಬಹುವಾಗಿ ಗೋಳಿಟ್ಟು ಬೆಟ್ಟದ
ಮೇಲಿದ್ದ ಶಕ್ತಿಗುಡಿಗೆ ಹೋದಳು. ಅಲ್ಲಿ ಮಡಿಯುಟ್ಟು ಪಾರ್ವತೀ ಪರಮೇಶ್ವರರಿಗೆ
ಪ್ರಾರ್ಥಿಸಿಕೊಂಡು ಕತ್ತಿಗೆ ಗಂಡಕತ್ತರಿ ಹಾಕಿಕೊಳ್ಳಲು, ಅವರು ಪ್ರತ್ಯಕ್ಷರಾಗಿ
“ ಏನು ಬೇಕು ಕೇಳಿಕೋ " ಎಂದರು, ಅವಳು, " ನೀ ಕೊಟ್ಟ ಐಶ್ವರ್ಯ ತುಂಬಿದೆ
ಶಿವನೆ! ನನ್ನಣ್ಣನನ್ನು ಉಳಿಸಿ ಅಪಕೀರ್ತಿಯೇನೂ ಎನ್ನಮೇಲೆ ಇಲ್ಲದ್ದಾಂಗೆ ಮಾಡು.
ಬೇಡಿಕೊಂಬೆ ನಿಮಗೆ" ಎಂದು ವರ ಬೇಡಿದಳು. " ಅವನು ಪಾಪಿ " ಎಂದರೂ ಕೇಳದೆ,
ಅವಳು ಆಗಲೇಬೇಕೆನ್ನಲು ಶಿವ ಪಾರ್ವತಿಯರು ಇವಳ ಭಕ್ತಿಗೆ ಮೆಚ್ಚಿ,--
ಯಿಟ್ಟಿರಂಣ ನೀರು ಮಂತ್ರಿಸಿ ಅದೇ ಕಲ್ಲಿನ ಮೇಗೆ |
ತಟ್ಟನೆದ್ದು ಕಾಳಿಂಗನು ನುಗ್ಗಿ ಹಾರಿಹೋಯ್ತು, ಶವದ ಬಳಿಗೆ |
ಯಿಟ್ಟು ಬಾಯಿ ಕಡಿದಂಥ ಸ್ಥಳಕ್ಕೆ ಶೇದಿಕೊಂಡಿತು ವಿಷನ ಬೇಗೆ |
ಬದುಕಿದ ಅಣ್ಣನು ತನ್ನ ದುರ್ವೃತ್ತವನ್ನು ನೆನೆದು ಚಿಂತಿಸಿ, " ನಾನು
ಪಾಪ ನಿವಾರಣಕ್ಕಾಗಿ ತೀರ್ಥಯಾತ್ರೆ ಹೊರಟುಹೋಗುವೆನು. ನಾನು ಹೇಗೆ ಊರಿಗೆ
ಬರಲಿ?" ಎಂದು ಪಶ್ಚಾತ್ತಾಪಪಟ್ಟನು, ತಂಗಿಯು ಸಮಾಧಾನ ಹೇಳಿ, ನಡೆದುದನ್ನು
ತಾನು ಯಾರಿಗೂ ಹೇಳುವುದಿಲ್ಲವೆಂದು ಅಭಯ ಹೇಳಿ, ಅಣ್ಣನ ಜೊತೆಯಲ್ಲಿ ತವರು
ಮನೆಗೆ ಹೋದಳು.
೮೬
---------------------------------------------------------------------
ಹೆಂಗುಸರ ಹಾಡುಗಳು
ಎಂಟು ದಿನವಿದ್ದು ಅವಳು ಅಣ್ಣನ ಜೊತೆಯಲ್ಲಿ ತಮ್ಮ ಊರಿಗೆ ಬಂದಳು.
ಹಿಂದಿನದನ್ನು ನೆನೆದು, ಊರು ಕೊಂಚ ದೂರವಿದೆಯೆನ್ನುವಾಗ ತನ್ನ ಒಡವೆಯನ್ನೆಲ್ಲಾ
ತೆಗೆದು ಅಣ್ಣನ ಕೈಗೆ ಕೊಟ್ಟು, ನೀನಿದನ್ನು ತೆಗೆದುಕೊಂಡು ಹೋಗಿ, " ಕಳ್ಳರಿಗೆ
ಸಿಕ್ಕಿದೆವು ಎಂದು ನಾಳೆ ಊರಿನಿಂದ ಒಂದು ಕಾಗದಾ ಬರೆ" ಯೆಂದು ಹೇಳಿ
ಕಳುಹಿಸಿಬಿಟ್ಟು ತಾನು ಊರಿಗೆ ನಡೆದುಕೊಂಡು ಹೋದಳು.
ಗಂಡನು ಮನೆಯ ಬಾಗಿಲಿನಲ್ಲಿಯೇ ಹೆಂಡತಿಯನ್ನು ಕಾಯ್ದು ಕುಳಿತಿದ್ದನು.
“ ಏಕೆ ಒಬ್ಬಳೇ ಬರುತ್ತಿರುವೆ?" ಎಂದು ಕೇಳಿದ ಗಂಡನಿಗೆ, " ಅಡ್ಡಹಳ್ಳದ ಬಳಿ
ಬಂದು ಕಳ್ಳರು ಅಡ್ಡಕಟ್ಟಿ ಕೊಂಡರು ಅಣ್ಣನ ಬೆನ್ನು ಹತ್ತಿಹೋದರು. ಸಂನ್ನೆ
ಮಾಡಲು ಅಣ್ಣನ ಹೋರಿಯು ಅವನ ತಕ್ಕೊಂಡು ಹೋಯ್ತು ಅತ್ತಲಾಗೆ"
ಎಂದು ಕಣ್ಣೀರಿಟ್ಟಿಳು. " ಅಣ್ಣನೇನಾದನೋ ತಿಳಿಯದು " ಎಂದಳಲಿದ ಭಾಮಿನಿಗೆ
ಗಂಡನು, " ಭಾಮೈದನು ಬದುಕಿಬಂದರೆ ನಿನ್ನ ಹೆಸರಿನಲಿ ವೂಟ ಬಡಿಸುವೆ ಐದು
ನೂರು ಜಂಗಮರಿಗೆ" ಎಂದು ಪರಮೇಶ್ವರನಿಗೆ ಹರಸಿಕೊಂಡು ಸಮಾಧಾನ
ಹೇಳಿದನು.
ಬೆಳಕು ಹರಿಯುತ್ತಿದ್ದ ಹಾಗೆಯೇ " ಭಾಮೈದ"ನು ಸುಖವಾಗಿರುವನೆಂದು
ಕಾಗದ ಬಂದಿತು. ಗಂಡ ಹೆಂಡಿರು ಆನಂದವಾಗಿ ಹರನ ಪೂಜೆ ಮಾಡಿ ಊಟ ಬಡಿ
ಸಿದರು ಐನೂರು ಜಂಗಮರಿಗೆ.
.................
ಹಿಂದಿನಿಂದ: ಈ ಲೇಖನದಲ್ಲಿ ಬಂದಿರುವ ೩೨ನೆಯ ನಂಬರಿನ ಹರಿಗೋಲು ಹಾಡನ್ನು
' ಕರ್ಣಾಟಕದ ಗೆಜಿಟಿಯರ್ 'ನ ಪರಿಶಿಷ್ಟ ಬ. ದಲ್ಲಿ ಕೊಟ್ಟಿರುವ 'ದುರ್ಗವ ದ್ಯಾಮವ್ವರ ಕಥೆ'
ಯೊಡನೆಯೂ, “Village Gods of South India’ ದಲ್ಲಿ ಬಂದಿರುವ ಮಾರಿಯ ಕಥೆಯೊಡನೆಯೂ
ಹೋಲಿಸಿರಿ.
೮೭
-----------------------------------------------------------------
IV. ಕಥೆಗಳು
ಹಾಡುಗಳ ಪ್ರಪಂಚಕ್ಕಿಂತ ಕಥೆಗಳ ಪ್ರಪಂಚವು ದೊಡ್ಡದು. ಹಾಡು
ಕಟ್ಟುವುದಕ್ಕಿಂತ ಕಥೆ ಹೇಳುವುದು ಸುಲಭವೆಂದೋ ಹೆಚ್ಚು ಸಹಜವಾದು
ದೆಂದೋ ಅಂತೂ ಕಥೆಗಳ ಕಂತೆಯು ಹಾಡಿನ ಕಂತೆಗಿಂತ ಹಿರಿದು. ಅದರಿಂದ
ಹಾಡುಗಳನ್ನು ಹುಡುಕಬೇಕಾಗಿರುವಂತೆ ಕಥೆಗಳಿಗೆ ಹುಡುಕಬೇಕಾಗಿಲ್ಲ. ಯಾವ
ನಾದರೊಬ್ಬನು ತಾನು ಕೇಳಿರುವ ಕಥೆಗಳನ್ನಷ್ಟೇ ಬರೆದರೂ ಅದೇ ಒಂದು ಭಾರಿಯ
ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ.
ಭರತಖಂಡವೇ ಕಥೆಗಳ ಮಾತೃಭೂಮಿಯೆಂದು ಹಲವರು ವಿದ್ವಾಂಸರು
ಒಪ್ಪುತ್ತಾರೆ. ಅಲ್ಲವೆನ್ನುವವರೂ ಇದ್ದಾರೆ. ಮಾನವನು ತನ್ನ ಅನುಭವಗಳನ್ನು
ಇತರರಿಗೆ ಹೇಳಬೇಕೆಂದು ಕೊಂಡಾಗಲೇ, ಇತರರನ್ನು ಒಲಿಸಬೇಕೆಂದು ತನ್ನ ಕಷ್ಟ
ನಿಷ್ಟುರಗಳನ್ನು ಸುಖ ದುಃಖಗಳನ್ನು ರಂಗುಕೊಟ್ಟು ಹೇಳಿಕೊಳ್ಳಲು ಆರಂಭಿಸಿ
ದಾಗಲೇ ಕಥೆಗಳು ಹುಟ್ಟಿರಬೇಕು. ಅದರಿಂದ ಕಥೆಗಳು ಸ್ವತಂತ್ರವಾಗಿಯೇ
ಹುಟ್ಟಿರಬೇಕಾದರೂ, ಪ್ರತಿಯೊಬ್ಬನ ಮನಸ್ಸೂ ಅವನ ಕುಲದವರ ಮನಸ್ಸಿನಂತೆ,
ತನ್ನ ಪರಿಸ್ಥಿತಿ ಸಂಪ್ರದಾಯ ಸಂಸ್ಕೃತಿಗಳಿಗೆ ಅನುಸಾರವಾಗಿ ಪ್ರಕಟವಾಗು
ವುದರಿಂದ, ಕುಲವನ್ನು ನಾಲಗೆ ಹೇಳುವುದರಿಂದ, ಈ ಕಥಾ ವಾಹಿನಿಯ ಜಾತಿ
ಯನ್ನು ಗೊತ್ತು,ಮಾಡುವುದು ಸಾಧ್ಯ.
ಈ ವೇಳೆಗಾಗಲೇ ಕನ್ನಡದಲ್ಲಿ ಕಥಾಸರಿತ್ಸಾಗರ, ಪಂಚತಂತ್ರಗಳಂತಹ ಕಲ್ಪಿತ
ಕಥೆಗಳೂ, ಪುರಾಣ ಪುಣ್ಯ ಕಥೆಗಳಂತಹ ಅರ್ಥವಾದದ ಜಾತಿಯ ಕಥೆಗಳೂ,
' ಗೆಜೆಟಿಯರ್ 'ನಲ್ಲಿ ಬಂದಿರುವ ನಡೆದ, ನಡೆಯಿತೆಂದು ಹೇಳಿಕೊಳ್ಳುವ ಕಥೆಗಳೂ
ಅನೇಕವಾಗಿ ಪ್ರಕಟವಾಗಿವೆ. ಇವುಗಳಲ್ಲಿ ಪೆರಿಯಪಟ್ಟಣ ಜಗಳ, ಸಂಗಣ್ಣನ
ಕಥೆ ಮೊದಲಾದವು--ಲಾವಣಿಗಳಾಗಿ--ಕೊಣಪೇಗೌಡನ ಕಥೆ, ವಾರದ ಕಥೆಗಳು
—ಹಾಡುಗಳಾಗಿ— ಎರಡು ಮೂರನೆಯ ಲೇಖನಗಳಲ್ಲಿ ಪ್ರಕಟವಾಗಿವೆ. ಅದರಿಂದ
ಇದುವರೆಗೂ ಕರ್ಣಾಕರ್ಣಿಕೆಯಾಗಿ ಉಳಿದಿರುವ, 'ಗೆಜೆಟಿಯರ್ ' ಮತ್ತು ಶಾಸನ
ಗಳಲ್ಲಿರುವ ಕೆಲವು ಕಥೆಗಳನ್ನು ಮಾತ್ರ ಉದಾಹರಿಸುತ್ತೇವೆ.
ಈ ಕಥೆಗಳನ್ನು ನಾನಾವಿಧವಾಗಿ ವಿಭಾಗಿಸಲು ಸಾಧ್ಯ. ಆದರೂ ನಾವು
ನಡೆದ ಕಥೆಗಳು, ಪುರಾಣ ಕಥೆಗಳು, ವಿನೋದ ಕಥೆಗಳು ಎಂದು ಮೂರು ವಿಭಾಗ
ಮಾಡುವೆವು. ಶಾಸನಾದಿಗಳಲ್ಲಿ, ಗ್ರಂಥಾದಿಗಳಲ್ಲಿ, ನಡೆದವು ಎಂದೇ ಉಲ್ಲೇಖ
ವಿರುವ ಕಥೆಗಳು ಮೊದಲನೆಯ ಜಾತಿ, ಸ್ಕಳ ಮಾಹಾತ್ಮ್ಯೆ, ದೇವತಾ ಪ್ರಭಾವಾದಿ
೮೮
---------------------------------------------------------
ಕಥೆಗಳು
ಕಥೆಗಳು, ಎರಡನೆಯ ಜಾತಿಯ ಪುರಾಣ ಕಥೆಗಳು. ಹೊತ್ತುಕಳೆಯುವ ಉದ್ದೇಶ
ದಿಂದ ಒಬ್ಬರಿಗೊಬ್ಬರು ಹೇಳಿಕೊಳ್ಳುವ ಕಥೆಗಳು ಮೂರನೆಯ ಜಾತಿ.
(ಅ) ನಡೆದ ಕಥೆಗಳು
(೧) ಜಗಳದ ಕಥೆ
ಬ್ರಾಹ್ಮಣೇತರರು ನಾವೂ ಬ್ರಾಹ್ಮಣರೆಂದರು. ಬ್ರಾಹ್ಮಣರು ಅಲ್ಲವೆಂದರು.
ಇಬ್ಬರಿಗೂ ವ್ಯಾಜ್ಯವಾಗಿ ಅಧಿಕಾರಿಗಳವರೆಗೂ ದೂರು ಮುಟ್ಟಿತು. ಅಧಿಕಾರಿಯು
ಬುದ್ಧಿವಂತಿಕೆಯಿಂದ ವಿವಾದವನ್ನು ಪರಿಹರಿಸಿದನು.
ವಾದಿ ಪ್ರತಿವಾದಿಗಳಿಬ್ಬರನ್ನೂ ಆ ಅಧಿಕಾರಿಯು ಒಂದು ದಿನ ಕರೆಯಿಸಿದನು.
ಇಬ್ಬರೂ ಬಂದರು. ಅವರಿಬ್ಬರೂ ಹೊರಗಡೆ ಕಾದು ಕುಳಿತಿರಲು, ಆತುಂಟ ಅಧಿ
ಕಾರಿಯು “ ಬ್ರಾಹ್ಮಣರನ್ನು ಒಳಕ್ಕೆ ಕರೆ" ಎಂದು ಬಾಗಿಲಿನವನಿಗೆ ಅಪ್ಪಣೆಮಾಡಿ
ದನು. ಅವನು " ಬ್ರಾಹ್ಮಣರು ಒಳಕ್ಕೆ ಬನ್ನಿ, ಅಪ್ಪಣೆಯಾಗಿದೆ" ಎಂದು ಕೂಗಿದನು.
ಬ್ರಾಹ್ಮಣರು ಒಳಕ್ಕೆ ಬಂದರು. ಇತರರು ಒಳಕ್ಕೆ ಬರಲಿಲ್ಲ. ಅಧಿಕಾರಿಯು
ಸುಲಭವಾಗಿ ಆ ಜಗಳವನ್ನು ಹರಿಸಿದನು.
(ಈ ಸಂಗತಿಯು ನಮ್ಮೂರಿನಲ್ಲಿ ನಡೆಯಿತು, ನಮ್ಮೂರಿನಲ್ಲಿ ನಡೆಯಿತು
ಎಂದು ಹಲವರು ಹೇಳುತ್ತಾರೆ. ಹಾಗೆಯೇ ಬ್ರಾಹ್ಮಣ್ಯವನ್ನು ಅಪೇಕ್ಷಿಸಿದ ಜಾತಿಗಳೂ
ಹಲವು ಎಂದು ವದಂತಿಯುಂಟು.)
(೨) ದಿವ್ಯ ಸಾಕ್ಷ್ಯ
ಬೆಳಗಾಂ ಜಿಲ್ಲೆಯ ಕಿತ್ತೂರು ಗ್ರಾಮದಲ್ಲಿ " ವೊಂದು ಬಸವಣ್ಣನ ಸಣ್ಣ
ಹಳೆ ಗುಡಿಯು ಉಂಟು, ಈ ಗುಡಿಯಲ್ಲಿ ಗೋವೆಯ ಕದಂಬ ಅರಸರು ಸನ್
೧೧೮೮ರಲ್ಲಿ ಬರಿಸಿದ್ದೊಂದು ಲಿಪಿಯುಂಟು. ಅದರಲ್ಲಿ ಒಂದು ಭೂಮಿಯ ಸಲುವಾಗಿ
ಶಿವಶಕ್ತಿ ಕಲ್ಯಾಣಶಕ್ತಿಯೆಂಬ ಇಬ್ಬರು ಬ್ರಾಹ್ಮಣರಿಗೆ ವಾದ ಹುಟ್ಟಿದ್ದರಿಂದ
ಶಿವಶಕ್ತಿಯು ದೇಗಾವಿಯ ಮಹಾಜನ ಸಭೆಯ ಸಮಕ್ಷ ಕಾದ ರಂಟೆಯ ಕುಳವನ್ನು
ಕೈಯಲ್ಲಿ ಹಿಡಿದು ದೀವ್ಯಮಾಡಿದ ಲೇಖನಿರುತ್ತದೆ. ಶಿವಶಕ್ತಿಯ ಕೈಯು ಸುಡದಿದ್ದ
ಕಾರಣ ಅವನಿಗೆ ಭೂಮಿಯು ದೊರೀತೆಂದು ಲಿಪಿಯು ಹೇಳುತ್ತದೆ,*"
(೩) ತುರುಗಾದು ಸಗ್ಗಕೇರಿದವರು %
"ಹೊಸಗುಂದದ ಬೊಂಮರ್ಸನವರು ಕೊಡಲಿಯ ಯಿರಿದು ತುರವಕೊಂಡು. ...
ಹುಯಲ ಹರಿದು ಕಾದಿ ತಳ್ತಿರಿದು, .. .ಸರ್ಗ್ಗಪಾತ್ರರಾದರು. ಅವರ ವೂರ್ಧ್ವ
ಕ್ರಿಯೆಯ ಅವರ ಮಗ ಪಿಳ್ಳೆಯ ನಾಯ್ಕನು ಮಾಡಿ ಶ್ರೀ ಹೊನ್ನೇಸ್ವರ ದೇವರ ಸನ್ನಿಧಿ
ಯಲ್ಲಿ ಬೀರಗಲ್ಲ ನಿಲ್ಸಿ... ... ಗುರುಗಳಿಗೆ ಕಾಲತೊಳೆದು ಧಾರಾಪೂರ್ವಕವಾಗಿ
ಕೊಟ್ಟರು. ..... ಅವರ ಸಂತತಿಯನು ನಾವು ತ್ರಿಶುದ್ಧಿಯಿಂದ ನಂಬಿದವರು. "
* ಬೊಂಬಾಯಿ ಕರ್ಣಾಟಕದ ಗೆಜಿಟಯರ್?' (ವೆಂಕಟರಂಗೋ ಕಟ್ಟ), ಪುಟ ೫೦೨.
% ವೀರಗಲ್ಲು- ಶಿವಮೊಗ್ಗೆ ೬೨ನೆಯ ನಂಬರಿನ ಶಾಸನ.
೮೯
---------------------------------------------------------------
ಕರ್ಣಾಟಕ ಸಂಸ್ಕೃತಿ
(೪) ದೇವರು ಮೈತುಂಬುವುದು *
" ಸ್ವಸ್ತಿ ಶ್ರೀ ವಿಜಯಾಭ್ಯುದಯಶಾಳಿವಾಹನ ಶಕ ವರ್ಷಂಗಳು ೧೭೪೦ನೇ
ಸಂದ ವರ್ತಮಾನವವಾದ ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ೬ ಗುರುವಾರದಲ್ಲು
ಶ್ರೀಮದ್ರಾಜಾಧಿರಾಜ ಪ್ರಹುಡ ಪ್ರತಾಪ ವೀರನರಪತಿ ಕೃಷ್ಣರಾಜ ವಡೆಯರವರು
ಮೈಹಿಸೂರು ನಗರದಲ್ಲು ದಿವ್ಯ ಸಿಂಹಾಸನಾರೂಢರಾಗಿ ಪೃಥ್ವೀ ಸಾಂಬ್ರಾಜ್ಯಂ ಗೈಯ್ಯು
ತ್ತಿರಲು ಅಷ್ಟಾದಶ ಪೀಠದಲ್ಲಿ ಮುಖ್ಯ ಪೀಠಸ್ತರಾದ ಕೊಲ್ಲಾಪುರೀ ಮಹಾಲಕ್ಷ್ಮೀ
ಅಮ್ಮನವರು ವುಜನಿ ಮಹಾಕಾಳೀ ಅಮ್ಮನವರು ಸಹ ಶೀಮೇ ವಳಗೆ ಮಹೇಶ್ವರಿ
ವುಸದ್ರದಿಂದ ವಾಂತಿ ಬ್ರಾಂತಿಯಾಗಿ ಜನರು ಮೃತವಾಗುತ್ತಯಿದ್ದಲ್ಲು ಈ ವುತ್ಪಾತ
ರೋಗ ನಿವರ್ತೃರ್ಥವಾಗಿ ಈ ಕಣ್ವಪುರೀ ಕ್ಷೇತ್ರದಲ್ಲಿ ಇದ್ದಂಥಾ ನಾಲ್ಕನೇ ವರ್ನದಲ್ಲಿ
ಗಂಗಡಿಕಾರಲ್ಲಿ ಜನಿಸಿದ ಬೋಗೆಗೌಡನ ಪೌತ್ರನಾದ ಮರಿನಂಜೇಗೌಡನ ಪುತ್ರನಾದ
ಬೋಗೆಗೌಡನ ಪತ್ನಿ ತಿಮ್ಮಮ್ಮನ ಪುತ್ರಿಯಾದ ನಂಜಮ್ಮಯಂಬ ಕರ್ನಿಕೆ ಮೇಲೆ ಶ್ರೀ
ಅಮ್ಮನವರು ಆವಿರ್ಭವಿಸಿ ಬ್ರಂಹ ಕ್ಷತ್ರಿ ವೈಶ್ಯ ಶೂದ್ರ ನಾಲ್ಕು ವರ್ನದಲ್ಲು ಮನಸಾ
ಭೀಷ್ಟಗಳು ಆಗಿ ರೋಗಾದ್ಯುಪದ್ರಗಳು ಪರಿಹರವಾದ್ದರಿಂದ ಶೀಮೆಗಳ ಮೇಲೆ ಬಂದ
ಕಾಣಿಕೆಯಲ್ಲಿ ನಂಜಯನು ಯಿ ಕನ್ನಂಬಾಡಿ ಗ್ರಾಮ ಮಧ್ಯದಲ್ಲಿ ನೂತನವಾಗಿ ದೇವ
ಸ್ವಾನವನ್ನು ಕಟ್ಟಿಶಿ ಅವತಾರ ಭೇದವಾಗಿ ಭೂತಗಣಕ್ಕೆ ಅಧಿಷ್ಠಾನ ದೇವತೆಯಾದ
ಮಹಾಕಾಳಿ ಅಂಮನವರು ಮಹಾಲಕ್ಷ್ಮ್ಮೀದೇವೀ ಅಮ್ಮನವರು "ಸರಸಸ್ವತೀ ಅಮ್ಮ
ನವರು ಪರಿವಾರ ಸಮೇತವಾಗಿ ಪ್ರತಿಷ್ಠೆಮಾಡಿಸಿಯಿದೆ....... "
(೫) ದೆವ್ವಗಳ ಕಥೆಗಳು %
ಈ ಕೆಳಗಿನ ದೃಷ್ಟಾ೦ತಗಳನ್ನು ಶೋಧಕರು ಸ್ವಾನುಭವದಿಂದ
ಬರಿದಿದ್ದಾರೆ-- “೩. ಕೊಲ್ಲಾಪುರದಲ್ಲಿ ರಾಮನೆಂಬ ಪೋಲೀಸ ಶಿಪಾಯಿಯ ಹೆಂಡತಿ
ಯಾದ ಸೀತಾಯಿಂಬ ೩೫ ವರ್ಷದ ಹೆಂಗುಸು ವೊಂದುದಿನ ವೊಂದು ಕೆರೆಯ ದಂಡೆಯ
ಮೇಲೆ ಕುರುಳಿನ ಬುಟ್ಟಿಯನ್ನು ಹೊತ್ತುಕೊಂಡು ಹೋಗುವಾಗ ಜಾರಿಬಿದ್ದಳು.
ಆದರೂ ಸೀತಾನು ಲಗುಬಗಿಯಿಂದ ಯೆದ್ದು ಕುರುಳುಗಳನ್ನು ಕೂಡಿಸಿಕೊಂಡು
ತಕ್ಕೊಂಡು ಮನೆಗೆ ಹೋದಳು. ತಾನು ಬಿದ್ದದ್ದರಿಂದ ಬಹಳ ಹೆದರಿಕೆ ಬಂತೆಂದು
ಮನೆಯವರಿಗೆ ತಿಳಿಸಿದಳು. ಮುಂದೆ ನಾಲ್ಕೈದು ದಿವಸದ ಮೇಲೆ ಯಾರೋ ಬಾಗಿಲಲ್ಲಿ
ನಿಂತು ಸೀತಾ, ಸೀತಾ ಯೆಂದು ವೊದರಿದ ಹಾಗೆ ಆಕೆಗೆ ಕೇಳಿಸಿತು ; ಆದರೆ ಬಾಗಿಲಲ್ಲಿ
ನೋಡಿದರೆ ಯಾರೂ ಇದ್ದಿಲ್ಲ. ಮುಂದೆ ಮತ್ತೂ ಹಾಗೆ ಒದರಿದ ಧ್ವನಿ ಕೇಳಿಸಿತ್ತು.
ಇದೇ ಪ್ರಕಾರ ಕೆಲವು "ದಿವಸ ವೊದರುವ ಕ್ರಮ ನಡೀತು. ಒಮೊಮ್ಮೆ ಬಾಗಿಲಿನ
ಬಳಿಯಲ್ಲಿ, ಇರುವ ಸಣ್ಣ ಕಟಿಕೆಯಲ್ಲಿ ಮನುಷ್ಯನ ಮೋರೆಯ ಹಾಗೆ ಆಕೆಗೆ ಕಾಣಿಸು
ವುದು. ಅದರಿಂದ ಆಕೆ ಬಹಳ ಹೆದರಿ ಗಂಡನಿಗೆ ಮೇಲೆಮೇಲೆ ಈ ಸಂಗತಿಯನ್ನು
ಹೇಳುವಳು. ಒಂದುದಿನ ಗಂಡನು ಯೇನಿದೆ ನೋಡಬೇಕೆಂದು ಮನೆಯಲ್ಲಿ ನಿಂತನು.
ಅವನಿಗೂ ಬಾಗಿಲಿನಲ್ಲಿ ಸೀತಾ ಸೀತಾ ಯೆಂದು ವೊದರಿದ್ದು ಕೇಳಿಸಿದ್ದಲ್ಲದೆ ಕಿಟಿಕೆ
ಯಲ್ಲಿ ಮನುಷ್ಯನ ಆಕಾರವೂ ಕಾಣಿಸಿತು. ರಾಮನು ಗೋಡೆಗಳಿಗೂ ನೆಲಕ್ಕೂ
...................................
* ಕೃಷ್ಣ ರಾಜಪೇಟೆ ತಾಲ್ಲೋಕು ಕನ್ನಂಬಾಡಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಉತ್ತರ ಭಾಗದ
ಗೋಡೇಕಲ್ಲಿನಲ್ಲಿದ್ದ ಶಾಸನ.
% ಬೊಂಬಾಯಿ ಕರ್ಣಾಟಕದ ಗೆಜಿಟಿಯರ್,? ಪರಿಶಿಷ್ಟ ಬ, ಭೂತ ಬಾಧೆ.
೯೦
--------------------------------------------------------------
ಕಥೆಗಳು
ಗೋಮೂತ್ರವನ್ನು ಶಿಡಿಸಿ, ಮಂತ್ರಿಸಿದ ಬೂದಿಯನ್ನು ಮನೆಯೊಳಗೆ ಎಲ್ಲ ಕಡೆ
ಚಲ್ಲಿದನು. ಆದರೆ ಅದರಿಂದ ಉಪಯೋಗವೇನೂ ಆಗಲಿಲ್ಲ. ಸೀತಾನು ಬಸುರಿದ್ದಳು.
ಆಕೆ ಹಡಿಯುವವರೆಗೆ ಇದೇ ಪ್ರಕಾರ ವೊದರುವ ಕ್ರಮ ನಡಿದಾಗ್ಯೂ ಹಡಿದು
೧೫ ದಿವಸದ ವರೆಗೆ ಆಕೆಗೆ ಯೇನು ಬಾಧೆಯಾಗಲಿಲ್ಲ. ೧೬ನೇ ದಿವಸ ಆಕೆ
ಮೂರ್ಛಿತಳಾಗಿ ಹೊರಸಿನ ಮೇಲೆ ಹೂ, ಹೂ ಯೆಂದು ನೆರಳುತ್ತ ಬಿದ್ದುಕೊಂಡಳು;
ಕೂಸು ತಕ್ಕೊಳ್ಳುವ ಅರಿವು ಉಳಿಯಲಿಲ್ಲ, ಕೈಕಾಲುಗಳು ಶಟಿದುವು. ಔಷಧಗಳನ್ನು
ಕೊಟ್ಟು ನೋಡಿದರೆ ಅವುಗಳಿಂದ ಪ್ರಯೋಜನನೇನು ಆಗಲಿಲ್ಲ. ಕಡೆಯಲ್ಲಿ ಆಕೆಗೆ
ದೆವ್ವು ಬಿಡಿದದೆಯಂದು ಮನಗಂಡು ಆಕೆಯ ಗಂಡನು ಕೃಷ್ಣನೆಂಬ ಗೊರವ ಜಾತಿಯ
ಮಾಂತ್ರಿಕನನ್ನು ಕರಕೊಂಡು ಬಂದನು. ಆ ಗೊರವನು ಬೆಂಕಿಯನ್ನು ತರಿಸಿ ಊದು
ಹಾಕಿ, ಅದರ ಹೊಗೆಯ ಮೇಲೆ ಸೀತಾನ ಮೋರೆಯನ್ನು ಹಿಡಿದು ಮಂತ್ರವನ್ನು
ಉಚ್ಚರಿಸಲಾಗಿ ಸೀತಾನ ಮೈಯಲ್ಲಿ ದೆವ್ವಿನ ಸಂಚಾರವಾಗಿ ಅದು ಹಿಂದೂಸ್ತಾನೀ
ಭಾಷೆಯಿಂದ "ನಾನು ಹೋಗುವುದಿಲ್ಲ. ಈಕೆ ನನಗೆ ಬೇಕೆ"ಂದು ಹೇಳಿತು. ತರುವಾಯ
ಗೊರವನು ಯೆರಡು ಕಾಗದಗಳ ಮೇಲೆ ವೇತಾಳನ ಆಕೃತಿಯನ್ನು ಬರೆದು ಮಂತ್ರಿಸಿ
ಸುಟ್ಟು ಅವುಗಳ ಹೊಗೆಯನ್ನು ಸೀತಾನಿಗೆ ಕೊಡಲಾಗಿ ದೆವ್ವು ಧೈರ್ಯಗುಂದಿ ಮಾಂತ್ರಿಕ
ನಿಗೆ ಹೇಳಿದ್ದೇನೆಂದರೆ" ನೀನು ಇನ್ನು ಮಂತ್ರ ಪ್ರಯೋಗ ಮಾಡಬೇಡ. ನಾನು
ಈಕೆಯನ್ನು ಬಿಡುತ್ತೇನೆ. ನಾನು ಪರದೇಶೀ ಶಿಪಾಯಿಯು. ೨೭ನೇ ರೆಜಮೆಂಟಿ
ನಲ್ಲಿ ಇದ್ದೆನು. ಆ ರೆಜಮೆಂಟು ಬಂಡಾಯ ಮಾಡಿದಾಗ ಸರಕಾರದವರು ನನ್ನನ್ನು
ಕೊಲ್ಲಿಸಿದರು. ಈಕೆ ಕೆರೆಯ ದಂಡೆಯ ಮೇಲೆ ಹೋಗುವಾಗ ನೋಡಿ ಈಕೆಯ ಮೇಲೆ
ನನ್ನ ಇಚ್ಛೆಯಾದ್ದರಿಂದ ಈಕೆಯನ್ನು ಯೆಡನಿಸಿ ಕೆಡಹಿದೆನು. ಅಂದಿನಿಂದ ಈಕೆಯ
ಬಾಗಿಲಲ್ಲಿ ಬಂದು ವೊದರುತ್ತಿದ್ದೆನು. ಇನ್ನುಮೇಲೆ ಈಕೆಯ ಮೈಯಲ್ಲಿ ನಾನು
ನಿಲ್ಲುವುದಿಲ್ಲ, ಹೋಗುತ್ತೇನೆ. ಅನ್ನ, ಗೋಧಿರೊಟ್ಟಿ, ತುಪ್ಪ, ಬಾಳೇಹಣ್ಣು ಹಾಕಿ
ಯೆಡೆಮಾಡಿ ಈಕೆ ಬಿದ್ದ ಸ್ಥಳದಲ್ಲಿ ಇಡಿಸು. ಅಂದರೆ ಹೊರಟುಹೋಗುತ್ತೇನೆ."
ಇಷ್ಟು ಮಾತಾಡಿದ ಬಳಿಕ ಸೀತಾನು ಯೆದ್ದು ಬಾಗಿಲನ ಹೊರಗೆ ಹೋಗಿ ನೆಲಕ್ಕೆ
ತಲೆಯೂರಿದಳು. ಅದರಿಂದ ದೆವ್ವು ಹೊರಟುಹೋಗಿ ಆಕೆಗೆ ಸ್ಕ್ರೃತಿ ಬಂತು.
ತರುವಾಯ ಗೊರವನು ನಾಲ್ಕು ಲಿಂಬೇಹಣ್ಣು ತರಿಸಿ ಮಂತ್ರಿಸಿ ವೊಂದು ಸೀತಾನ
ಶೆರಗಿನಲ್ಲಿ ಕಟ್ಟಿ ಉಳಿದ ಮೂರು ಮನೆಯ ಮೂರು ಬಾಗಿಲುಗಳ ಮುಂದೆ ಹುಗಿದು
ಸೀತಾನು ಪೂರಾ ನೆಟ್ಟಗಾಗುವ ವರೆಗೆ ಶರಗಿನೊಳಗಿನ ಹಣ್ಣು ಬಿಚ್ಚಬೇಡಿರೆಂದು ಹೇಳಿ
ಹೊರಟುಹೋದನು. ರಾಮನು ದೆವ್ವು ಹೇಳಿದಂತೆ ಬಲಿಕೊಟ್ಟ ಬಳಿಕ ಸೀತಾನು
ಮೂರು ನಾಲ್ಕು ದಿನದೊಳಗಾಗಿ ನೆಟ್ಟಗಾದಳು."
ಈ ಮೇಲೆ ಉದಾಹರಿಸಿರುವ ಕಥೆಗಳಂತಹವು ನೂರಾರನ್ನು ಬಲ್ಲವರು ಅನೇಕ
ರುಂಟು. ಇವುಗಳ ಜೊತೆಗೆ ಭಕ್ಕರ ಪವಾಡಗಳು, ದೇವರ ಕಥೆಗಳು, ಅನೇಕ
ಸಹಸ ವಿವೆ.
ಈ ಕಥೆಗಳಲ್ಲಿ ನಾವು ಕಾಣುವುದೇನು? "ಬ್ರಾಹ್ಮಣೇತರರಿಗೆ ತಾವೂ
ಬ್ರಾಹ್ಮಣರಾಗಬೇಕೆಂಬ ಆಸಕ್ತಿ ಮೊದಲನೆಯದರಲ್ಲಿ. ಎರಡನೆಯದರಲ್ಲಿ ಧರ್ಮಶಾಸ್ತ್ರ
ಗಳಲ್ಲಿ ಹೇಳಿರುವ ದಿವ್ಯ ಸಾಕ್ಟ ತದ ಉದಾಹರಣೆ, ಮೂರನೆಯದರೊಡನೆ ವೇದದಲ್ಲಿ
ಹೇಳುವ ಹಸು ಬಿಡಿಸಿಕೊಂಡು ಬರುವ ಕಥೆಗಳನ್ನು ಹೋಲಿಸಿರಿ. ನಾಲ್ಕನೆಯ
೯೧
----------------------------------------------------------
ಕರ್ಣಾಟಕ ಸಂಸ್ಕೃತಿ
ಐದನೆಯ ಕಥೆಗಳಲ್ಲಿ ಕಾಣುವ, " ಮನುಷ್ಯನ ಸುತ್ತಲೂ ಉಪಕಾರಕಾರಕಗಳೂ
ಉಪದ್ರವಕಾರಕಗಳೂ ಆದ ಅದೃಷ್ಟ ಶಕ್ತಿಗಳು ಬೇಕಾದಹಾಗೆ ಇವೆ. ಅವು ಕಾಲ
ದೇಶ ವರ್ತಮಾನಕ್ಕೆ ಅನುಗುಣವಾಗಿ ವ್ಯಕ್ತವಾಗುವುವು. ಅವೂ ಮನುಷ್ಯರೂ
ಪರಸ್ಪರ ಸಂಬದ್ಧಗಳು ನಂಬುವ ಸಿದ್ಧಾಂತದ *ನಿದರ್ಶನಗಳನ್ನು ಗಮನಿಸಿರಿ.
(೬)ಫಕೀರಸ್ತಾಮಿಯ ಕಥೆ %
" ಗದಗಿನ ಬಳಿಯಿರುವ ' ಶಿರಟ್ಟಿ' ಯಲ್ಲಿ ಫಕೀರಸ್ವಾಮಿಯ ಮಠವಿರುತ್ತದೆ.
............. ಈತನ ಕಥೆಯನ್ನು ಜನರು ಹೇಳುವುದು ಹ್ಯಾಗೆಂದರೆ- ಒಬ್ಬ
ಲಿಂಗವಂತರ ಹುಡುಗನು ಶಿರಟ್ಟಿಯ ಊರ ಹೊರಗೆ ಈಗ ಮಠ ಇರುವ "ಸ್ಥಳದಲ್ಲಿ ಮರದ
ಕೆಳಗೆ ಹುಚ್ಚನಹಾಗೆ ಇರುತ್ತಿದ್ದನು: ಊರ ಮುಂದಿನ ಹಳ್ಳದ ನೀರೊಳಗೆ ಆಡುತ್ತ
ಕೂಡ್ರುವನು. ಒಂದಾನೊಂದು. ದಿವಸ ಊರೊಳಗೆ ಲಿಂಗವಂತರು ದೊಡ್ಡ ಪ್ರಯೋಜನ
ವನ್ನು ಮಾಡಿರಲಾಗಿ ದೊಡ್ಡ ದೊಡ್ಡ ಶಟ್ಟರು ಊಟಕ್ಕೆ ಕೂಡ್ರುವ ಪೂರ್ವದಲ್ಲಿ ಈ
ಹುಚ್ಚು ಹುಡುಗನು ಊಟಕ್ಕೆ ಹಾಕಿರೆಂದು ಹೋದನು. ಆದರೆ ಇವನು ಜಾತಿಭ್ರಷ್ಟ
ನಿರುತ್ತಾನೆಂದು ಹೇಳಿ ಲಿಂಗವಂತರು ಇವನನ್ನು ಹೊಡಿದು ಹೊರಗೆ ಹಾಕಿದರು.
ಹುಡುಗನು ಅಳುತಾ, ಹಳ್ಳದೊಳಗೆ ಹೋಗಿ ಕೂತನು. ತರುವಾಯ ಲಿಂಗವಂತರು
ಊಟಕ್ಕೆ ಕೂಡ್ರುವಾಗ ತಮ್ಮ ಕೊರಳಲ್ಲಿಯ ಲಿಂಗಗಳನ್ನು ನೈವೇದ್ಯ ಕೊಡಲಿಕ್ಕೆ
ತೆಗೆಯ ಹೋಗಲು ವೊಬ್ಬನ ಕೊರಳಲ್ಲಿಯೂ ಲಿಂಗವಿದ್ದಿಲ್ಲ. ಎಲ್ಲರೂ ಚಕಿತರಾದರು.
ಕಡೆಯಲ್ಲಿ ಹುಚ್ಚು ಹುಡುಗನನ್ನು ಬಡಿದು ಹೊರಗೆ ಹಾಕಿದ್ದರಿಂದ ಹೀಗಾಯಿತೆಂದು
ತಿಳಿದು ಅವರೆಲ್ಲರು ಹುಡುಗನನ್ನು ಹುಡುಕುತ್ತ ಹೊರಟರು. ಹುಡುಗನು ಹಳ್ಳ
ದೊಳಗೆ ದೊರಿದ ಬಳಿಕ ಯೆಲ್ಲರೂ. ಅವನಿಗೆ ಸಾಷ್ಟಾಂಗ ಹಾಕಿ ಮನ್ನಿಸೆಂದು ಬಹಳ
ಪರಿಯಿಂದ ಬೇಡಿಕೊಂಡರು. ಆಗ ಹುಡುಗನು ಸಂತುಷ್ಟನಾಗಿ ತಾನು ತೆಗಿದದ್ದೊಂದು
ವೊರತಿಯೊಳಗೆ ವೊಬ್ಬೊಬ್ಬನೇ ಕೈಹಾಕಿ ನಿಮ್ಮ ನಿಮ್ಮ ಲಿಂಗಗಳನ್ನು ಹುಡುಕಿಕೊಳ್ಳಿ
ರೆಂದು ಹೇಳಿದನು. ಅವರು ಹಾಗೆಮಾಡಲು ಅವರವರ ಲಿಂಗಗಳು ತಪ್ಪದೇ ಅವರವರಿಗೆ
ದೊರಿದವು."
ಈ ಕಥೆಯನ್ನು ಐತರೇಯ ಬ್ರಾಹ್ಮಣದಲ್ಲಿ ಬರುವ "ಸರಸ್ವತೀ ತೀರದಲ್ಲಿ
ಖುಷಿಗಳು ಯಾಗಮಾಡುತ್ತಿದ್ದರು. ಐಲೂಷನು ಹೋಗಿ ನನ್ನನ್ನೂ ಸೇರಿಸಿಕೊಳ್ಳಿರಿ
ಎಂದನು. ಖುಷಿಗಳು 'ನೀನು ಶೂದ್ರನು. ಹೋಗು ' ಎಂದು ನೂಕಿದರು.
ಐಲೂಷನು ಹೊರಟುಹೋದನು. ಋಷಿಗಳು ಮತ್ತೆ ಯಾಗಮಾಡಲು ಕುಳಿತಾಗ
ದೇವರುಗಳು ಇರಲಿಲ್ಲ. ಆಗ ಅವರು ಗಾಬರಿಪಟ್ಟು ಅವನನ್ನು ಹುಡು ಕೊಂಡು
...................
* ಹೀಗೆ ಪ್ರಪಂಚವೆಲ್ಲವೂ ಶಕ್ತಿಮಯವಾಗಿದೆ. 'ಪಾದೋsಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾ
ಮೃತಂ ದಿವಿ' ಕಂಡಿರುವುದೆಲ್ಲ ಕಾಲುಪಾಲು, ಕಾಣದೆ ಅಮೃತದಲ್ಲಿರುವುದು ಮುಕ್ಕಾಲುಪಾಲು" ಎಂಬ
ಮತವನ್ನು ಕೆಲವರು 'Animism’ ಎಂದು ಕರೆದು ಅದನ್ನು ಮತಗಳಲ್ಲೆಲ್ಲಾ ಬಹು ರೂಕ್ಷವಾದುದೆಂದು
ಅಭಿಪ್ರಾಯಪಡುತ್ತಾರೆ. ಆದರೆ ಉಪನಿಷನ್ಮತದ ದೃಷ್ಟಿಯಿಂದ ಅತೀಂದ್ರಯ ಪ್ರಪಂಚಜ್ಞಾನವು ಐಹಿಕ
ಜ್ಞಾನಕ್ಕಿಂತ ಉತ್ತಮವಾದುದು.
% ಕರ್ಣಾಟಕ ಗೆಜಿಟಿಯರ್,' ಪುಟ ೬೩೧: ಫಕೀರಸ್ವಾಮಿಯ ಜಾತ್ರೆಯು ವೈಶಾಖ
ಪೂರ್ಣಿಮೆಯಲ್ಲಿ ಆಗುತ್ತದೆ. ಅದರಲ್ಲಿ ೩೫,೦೦೦ ಜನ ಕೂಡುತ್ತದೆ.”
೯೨
-------------------------------------------------------------
ಕಥೆಗಳು
ಹೋಗಿ ಅವನನ್ನು ಪ್ರಸನ್ನನಾಗಿ ಮಾಡಿ ಕರೆದುಕೊಂಡು ಬಂದರು. ಆಗ ದೇವತೆ
ಗಳೂ ಬಂದರು." ಎಂಬ ಕವಷ ಐಲೂಷನ ಕಥೆಯೊಡನೆ ಹೋಲಿಸಿರಿ.
(ಐತರೇಯ ಬ್ರಾಹ್ಮಣದ ಕಥೆಯಲ್ಲಿ ತೋರಿಬರುವ ಉತ್ತಮರೆಂದುಕೊಂಡಿರು
ವವರು ತಮ್ಮ ಭಾವನೆಯಲ್ಲಿ ಕೀಳಾದವರನ್ನು ಸೇರಿಸಲು ಹಿಂದೆಗೆಯುವುದು, ತನ್ನ
ಸಿದ್ಧಿಯನ್ನು ತೋರಿಸಿದ ಮೇಲೆ ತಿರಸ್ಕೃನಾದವನನ್ನು ಪುರಸ್ಕರಿಸಿ ತಮಗೆ
ಸಮಾನನೆಂದುಕೊಳ್ಳುವುದು, ಇದಿಷ್ಟೂ ಇಲ್ಲಿಯೂ ಇದೆ. ಅಲ್ಲವೆ ?)
(೭) ಕನಕದಾಸರ ಕಥೆ
ವ್ಯಾಸರಾಯರ ಅಪ್ಪಣೆಯಿಂದ ಕನಕನು ಕೃಷ್ಣನನ್ನು ಊಟಕ್ಕೆ ಬರಹೇಳಿದನು.
ರಾಯರು ನೈವೇದ್ಯಮಾಡುತ್ತಿರುವಾಗ ದಾಸನ ಪ್ರಾರ್ಥನೆಯಂತೆ ಸ್ವಾಮಿಯು ನಾಯಾಗಿ
ಬಂದು ಆಚಾರಪರರಾದ ಶಿಷ್ಯರ ಪ್ರಹಾರಗಳನ್ನು ಲೆಕ್ಕಿಸದೆ ನುಗ್ಗಿಹೋಗಿ ಒಂದು
ಹೋಳಿಗೆಯನ್ನು ಹೊತ್ತುಕೊಂಡೇ ಹೊರಟುಹೋದನು, ಆ ಗುಟ್ಟನ್ನು ಅರಿತ ಕನಕನು
ಸ್ವಾಮಿಗಾದ ಬವಣೆಯನ್ನು ನೋಡಿ ಕನಿಕರಪಟ್ಟು ತನ್ನಿಂದ ಹೀಗಾಯಿತೆಂದು ಮರುಕ
ಪಟ್ಟು,
ಮೋಟು ಬಾಲದ ನಾಯಕರೇ | ನೀವು ಏನೇನೂಟಿಮಾಡಿದಿರಿ ॥ ಪ ॥
ಹುಗ್ಗಿ ತೊಳೆಸುವಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡಿದಿರಿ ॥
ಹುಗ್ಗಿ ತೊಳೆಸುವ ಸೌಟಲಿ ಬಡಿದರೆ ಕುಯ್ ಕುಯ್ ರಾಗ ಪಾಡಿದಿರಿ ॥ ೧ ॥
ಎಂದು ಮುಂತಾಗಿ ಹಾಡಿ, ಆತನ ಘಾಸಿಯನ್ನು ತಾನು ವಹಿಸಿದನು.
ಇದರೊಡನೆ ಪುರಂದರ ದಾಸರ " ಮುಯ್ಯುಗೆ ಮುಯ್ಯಿ ತೀರಿತು" ಎಂಬ
ಹಾಡಿನ ಹಿಂದಿರುವ ಕಥೆಯನ್ನೂ ಅಚ್ಯುತ ದಾಸರ ಕಥೆಯನ್ನೂ ಹೋಲಿಸಿರಿ.
(೮) ದೈವ ಮಾನುಷ ಸಂಬಂಧ
(೧) ಬಿಳಿಗಿರಿ ರಂಗಸ್ವಾಮಿಯು ಸೋಲಗಿತ್ತಿಗೆ ಮನಸೋತು ಅವಳನ್ನು
ಮದುವೆಮಾಡಿಕೊಂಡು ಅಲ್ಲಿಯೇ ನಿಂತನಂತೆ, ಈಗಲೂ ರಂಗಪ್ಪನು ಸೋಲಿಗರಿಗೆ
ಭಾವ.
(೨) ಮೇಲುಕೋಟೆಯ ಚಲುವರಾಯ ಸ್ವಾಮಿಯು ಬೀಬಿ ನಾಚ್ಚಿಯಾರಳನ್ನು
ಒಲಿಸಿಕೊಂಡು ಅವಳಿಗೆ ಮುಕ್ತಿಯನ್ನು ಕೊಟ್ಟನಂತೆ.
ಇಂತಹ ಕಥೆಗಳು ನಮ್ಮ ನಾಡಿನಲ್ಲ ಅದೆಷ್ಟು ಸಹಸ್ರವಿವೆಯೋ ತಿಳಿಯದು.
ಏಳನೆಯ ಎಂಟನೆಯ (೧, ೨) ಕಥೆಗಳಲ್ಲರುವ " ದೈವವು ಮನುಷ್ಯ ಲೀಲೆಯಾಡುವುದು,
ಮಾನವಿಯರಿಗೆ ಪತಿಯಾಗುವುದು ಮೊದಲಾದ ಸಂದರ್ಭಗಳು ವೈದಿಕ ಸಾಹಿತ್ಯದಲ್ಲಿ
ಅಲ್ಲದೆ ಇನ್ನೆಲ್ಲಿಯೂ ಇಲ್ಲ. ಇದು ಆ ಸಂಸ್ಕೃತಿಯ ಲಕ್ಷ್ಮಣ" ಎಂದು ನಮ್ಮ
ನ೦ಬಿಕೆ.
೯೩
----------------------------------------------------------
ಕರ್ಣಾಟಕ ಸಂಸ್ಕೃತಿ
(ಆ) ಪುರಾಣ ಕಥೆಗಳು
ಈ ಕಥೆಗಳನ್ನೂ ಜನಸಾಮಾನ್ಯರು ನಡೆದ ಕಥೆಗಳೆಂದೇ ಭಾವಿಸುತ್ತಾರೆ.
ನದಿಗಳು, ಸ್ಲೇತ್ರಗಳು, ದೇವಸ್ಥಾನಗಳು ಇವುಗಳನ್ನು ಕೇಂದ್ರೀಕರಿಸಿ ಹುಟ್ಟಿದವು
ಈ ಕಥೆಗಳು. ಈ ಕಥೆಗಳ ವಸ್ತುವಾಗಿರುವ ಅಲೌಕಿಕ ವಿಷಯಗಳನ್ನು ಹೈತುಕರು
ನಂಬುವುದಿಲ್ಲ.
(೯) ಅಗಸ್ಕ್ಯೇಶ್ವರನ ಮಾಹಾತ್ಮ್ಯ
ತಿರುಮಕೂಡ್ಲಿನ ಅಗಸ್ತ್ಯೇಶ್ವರ ಸ್ವಾಮಿಯ (ಲಿಂಗ) ತಲೆಯ ಮೇಲೆ ಒಂದು
ತೂತು ಇದೆ. ಅಲ್ಲಿ ಯಾವಾಗಲೂ ಒಂದು ಉದ್ದರಣೆ ನೀರು ಇರುತ್ತದೆ. ಆ ಲಿಂಗವು
ಶ್ರೀರಾಮ ಪ್ರತಿಷ್ಠೆಯಂತೆ. ಶ್ರೀರಾಮನು ಕಪಿಲಾ ಕಾವೇರೀ ಸಂಗಮದಲ್ಲಿ
ಶಿವಲಿಂಗ ಪ್ರತಿಷ್ಠೆ ಮಾಡಬೇಕೆಂದುಕೊಂಡನಂತೆ. ಒಂದು ಲಿಂಗವನ್ನು ತರಲು
ಹನುಮಂತನನ್ನು ನರ್ಮದೆಗೆ ಕಳುಹಿದನು. ಹನುಮಂತನು ಲಿಂಗವನ್ನು ಹುಡುಕು
ತ್ರಿದ್ದುದರಿಂದ ಬರುವುದು ಕೊಂಚ ತಡವಾಯಿತು. ಶ್ರೀರಾಮನು ಲಗ್ನದ ವೇಳೆಯು
ಮೀರುವುದೆಂದು ಮರಳಿನಲ್ಲಿ ಒಂದು ಲಿಂಗವನ್ನು ಮಾಡಿ ಅದರಲ್ಲಿಯೇ ಪ್ರಾಣಪ್ರತಿಷ್ಠ ೆ
ಮಾಡಿದನು. ಕೊಂಚ ಹೊತ್ತಿನೊಳಗಾಗಿ ಬಂದ ಹನುಮಂತನು ತನ್ನ ಪ್ರಯತ್ನವು
ವಿಫಲವಾದುದನ್ನು ಕಂಡು ನಿರಾಶನಾಗಲು ಶ್ರೀರಾಮನು 'ಆ ಲಿಂಗವನ್ನು ತೆಗೆದುಹಾಕಿ
ನೀನು ತಂದಿರುವ ಲಿಂಗವನ್ನು ಪ್ರತಿಷ್ಠಿಸು' ಎಂದನು. ಹನುಮಂತನು ಎಷ್ಟು ಪ್ರಯತ್ನ
ಪಟ್ಟರೂ ಆ ಲಿಂಗವನ್ನು ಕೀಳಲು ಆಗಲಿಲ್ಲ. ಆಗ ರೇಗಿ ಅದರ ಮೇಲೆ ಮುಷ್ಟಿಯಿಂದ
ಹೊಡೆದನು. ಆ ಘಾತದಿಂದ ಅಲ್ಲಿ ಹಳ್ಳವಾಯಿತು. ಆಗ ಹನುಮಂತನು ತನ್ನ
ತಪ್ಪನ್ನು ತಿಳಿದು ಕ್ಷಮಾಯಾಚನೆ ಮಾಡಲು ಶ್ರೀರಾಮನು ಆ ಹಳ್ಳದಲ್ಲಿ ಗಂಗೆಯು
ವಾಸವಾಗಿರುವಂತೆಯೂ, ಹನುಮಂತನು ತಂದ ಲಿಂಗವನ್ನು ದರ್ಶನಮಾಡಿದ ಹೊರತು
ಅಗಸ್ತ್ಯೇಶ್ವರ ದರ್ಶನ ಪುಣ್ಯವು ಸಾಂಗವಾಗದಂತೆಯೂ ವರವನ್ನು ಕೊಟ್ಟನು.
(೧೦) ಗರುಡನು ಬರುವುದು
(೧) ಹಿಮವದ್ಗೋಪಾಲ ಸ್ವಾಮಿಯ ಬೆಟ್ಟದಲ್ಲಿ ತೀರ್ಥಸ್ನಾನದ ದಿನ ಗರುಡನು
ಬಂದು ನೀರು ಮುಟ್ಟಿ ಹೋಗುತ್ತದೆ. ಉಳಿದ ದಿವಸಗಳಲ್ಲಿ ಅಲ್ಲಿ ಕ್ಷೇಮಕಾರಿಯ
ದರ್ಶನವಾಗುವುದಿಲ್ಲ. ಆತೀರ್ಥಸ್ನಾನದ ದಿನ ಕೊಳದ ಸುತ್ತಲೂ ಜನರಿರುತ್ತಾರೆ.
ಕೊಂಬು ಜಾಗಟಿ ಶಂಖಗಳು ಮೊಳಗುತ್ತಿರುತ್ತವೆ.
(೨) ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವದ ದಿನ ಕ್ಷೇಮಕಾರಿಯು ಬಂದು
ಸುಬ್ರಹ್ಮಣ್ಯೇಶ್ವರನ ರಥಕ್ಕೆ ಪ್ರದಕ್ಷಿಣಮಾಡಿ ಹೋಗುವುದು. ಅದುವರೆಗೂ ರಥ
ವನ್ನು ಎಳೆಯುವುದಿಲ್ಲ.
(೧೧) ಎಡತೊರೆಯ ಮಹಿಮೆ
ಎಡತೊರೆಯಲ್ಲಿರುವ ಅರ್ಕೇಶ್ವರ ಲಿಂಗವು ಸೂರ್ಯ ಪ್ರತಿಷೆಯಂತೆ. ಆ
ಸ್ವಾಮಿಯ ದರ್ಶನಮಾಡಲು ಸೂರ್ಯನು ಅಲ್ಲಿಗೆ ರಥಸಪ್ತಮಿಯ ದಿನ ಸೂರ್ಯೋ
ದಯದ ವೇಳೆಗೆ ಸರಿಯಾಗಿ ಬರುವನು. ಆ ಆಗಮನದ ಗುರುತಾಗಿ ಆ ದಿನ ಮಾತ್ರ
ಆ ವೇಳೆಯಲ್ಲಿ ಲಿಂಗದ ಮೇಲೆ ಒಂದು ಬಿಸಿಲು ಕೋಲು ಬೀಳುವುದು.
೯೪
-------------------------------------------------------------
ಕಥೆಗಳು
(೧೨) ಶಿವಗಂಗೆಯ ಮಹಿಮೆ
ಶಿವಗಂಗೆಯಲ್ಲಿ ಮಕರ ಸಂಕ್ಸಾಂತಿಯ ದಿನ ತಲಕಾವೇರಿಯಲ್ಲಿ ತುಲಾ
ಸಂಕ್ರಮಣದ ದಿನ ಗಂಗೆಯು ಬರುವಳು.
ಒಂಬತ್ತರಿಂದ ಹನ್ನೆರಡರ ವರೆಗಿನ ಕಥೆಗಳು ಪುರಾಣಗಳಲ್ಲಿ ಸೇರಿಹೋಗಿವೆ.
ಪುರಾಣಗಳಲ್ಲಿ ಸೇರದೆ ಇರುವ, ಅರ್ಥ ವಾದದಂತಹ ಕೆಲವು ಕಥೆಗಳನ್ನೂ ಉದಾ
ಹರಿಸೋಣ.
(೧೩) ನಿಂಬರಿಗಿಯ ಪ್ರಾಣದೇವರು *
(೧) ಇಲ್ಲಿಯ (ನಿಂಬರಿಗಿ) ಪ್ರಾಣದೇವರ ಗುಡಿಯು ಪ್ರಸಿದ್ಧವುಂಟು...
ಈ ಗುಡಿಯನ್ನು ಧನಾಯಿಯೆಂಬ ಕುರುಬರ ಹೆಂಗಸು ಕಟ್ಟಿಸಿದಳೆಂದು ಹೇಳುತ್ತಾರೆ.
ಧನಾಯಿಯು ತನ್ನ ಆಕಳು ವೊಂದು ಹುತ್ತಿನ ಮೇಲೆ ಮೊಲೆಯೊಳಗಿನ ಹಾಲು ಕರೆದು
ಬರಿ ಮೊಲೆಯಾಗಿ ಮನೆಗೆ ಬರುತ್ತದೆಂದು ನೋಡಿ ಆಕಳನ್ನು ಮನೆಯಲ್ಲಿ ಕಟ್ಟಿದಳು.
ಆ ರಾತ್ರಿಯಲ್ಲಿ ಆ ಹುತ್ತಿನ ಮೇಲೆ ವೊಂದು ಗುಡಿಯನ್ನು ಕಟ್ಟಿಸಿ ವೊಂಬತ್ತು ತಿಂಗಳು
ಅದರ ಬಾಗಿಲು ಇಕ್ಕಿಬಿಡೆದು ಆಕೆಗೆ ಸ್ವಸ್ನವಾಯಿತು. ಆಕೆ ಆ ಪ್ರಕಾರ ಗುಡಿ
ಯನ್ನು ಕಟ್ಟಿಸಿ ಕೆಲವು ತಿಂಗಳು ಬಾಗಿಲವನ್ನು ಇಕ್ಕಿ ಇಟ್ಟ ಬಳಿಕ ಸ್ತ್ರೀ ಸ್ವಭಾವದ
ಮೂಲಕ ವೊಂಬತ್ತು ತಿಂಗಳು ತುಂಬುವ ಪೂರ್ವದಲ್ಲಿಯೇ ಬಾಗಿಲು ತೆರಿದಳು,
ಆಗ ಗುಡಿಯೊಳಗಿನ ಮೂರ್ತಿಯು ಅರೆವಾಸಿ ಹುಟ್ಟಿತ್ತು. ಅದು ಅಷ್ಟಕ್ಕೆ ನಿಂತಿತು.
(೨) ಶೃ೦ಗೇರಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಿಂದಿನ ಗುರುಗಳೊಬ್ಬರು
ಇದ್ದಲಿನಿಂದ ವಿಘ್ನೇಶ್ವರನನ್ನು ಬರೆದರು. ಅಲ್ಲಿ ಕಲ್ಲು ಉಬ್ಬಿ ಗಣಪತಿಯ ಮೂರ್ತಿಯು
ಮೂಡಿತು. ಈಗ ಆ ಮೂರ್ತಿಗೆ ಬೇಕಾದ ಹಾಗೆ ಹರಕೆಗಳು ಸಲ್ಲುತ್ತಿವೆ.
(4) ಶ್ರೀ ವ್ಯಾಸರಾಯ ಮಠದ ಕೃಷ್ಣವಿಗ್ರಹವು ಕಾಲು ಮೇಲೆತ್ತಿಕೊಂಡು
ನಿಂತಿರುವುದಕ್ಕೆ ಹೇಳುವ ಕಥೆಯನ್ನೂ, ಉಡುಪಿಯ ಕೃಷ್ಣನ ಕಥೆಯನ್ನೂ ನೆನೆಸಿಕೊಳ್ಳಿ.
ಗುರುತಿನ ಕಥೆಗಳನ್ನೂ ವಿಧಿ ನಿಷೇಧದ ಕಥೆಗಳನ್ನೂ ಈ ಜಾತಿಯಲ್ಲಿಯೇ
ಸೇರಿಸಿ ಒಂದೆರಡು ಉದಾಹರಣೆ ಕೊಡೋಣ.
(೧೪) ಕೋಗಿಲೆಯು ಕೋಪಗೊಂಡು ಚಿಕ್ಕ ತಾಯಿಯನ್ನು ಸಂಹರಿಸಿ
ತಂತೆ. ಆಮೇಲೆ ಪಶ್ಚಾತ್ತಾಪ ಹುಟ್ಟಿ ಈಗ "ಚಿಕ್ಕವ್ವಾ" ಎಂದು ಕೂಗಿಕೊಂಡು
ಅಲೆಯುತ್ತಿದೆಯಂತೆ.%`
(೧೫) ಬೂದಿಗುಂಬಳಕಾಯಿಯ ಕಥೆ
ಅರಸಾದ ಭರತನ ಕಾಲದಲ್ಲಿ ಬೇಸಾಯಗಾರರು ಅರಮನೆಗೆ ಹೋಗಿ "ಜೀಯ್ಯಾ!
ಈ ಸಲ ಅರಮನೆಗೆ ಯಾವ ಬೆಳೆ ಒಪ್ಪಿಸಬೇಕು?" ಎಂದು ಬಹು ವಿನಯದಿಂದ
.....................................
* ಕರ್ಣಾಟಕ ಗೆಜಿಟಿಹಿಯರ್,?' ಪುಟ ೫೫೧.
% ಹೋಲಿಸಿರಿ — ಹಿಪ್ಪಿ ಹೂವಿಗಾಗಿ ಹೆತ್ತ ತಾಯಿನ ಕೊಂದು
ಮತ್ತೆ ಕೋಗಿಲ ಮರನೇರಿ ಕೂಗಿದರ
ಹೆತ್ತವ್ವ ಎಲ್ಲಿ ದೊರೆತಾಳ ॥ —ಗರತಿಯ ಹಾಡು, ಪುಟ ೭೨.
೯೫
------------------------------------------------------------------------
ಕರ್ಣಾಟಕ ಸಂಸ್ಕೃತಿ
ಕೇಳಿದರು. ಅರಸನು ಮೇಲು ಬೆಳೆಯೆಂದರೆ ಬುಡದಲ್ಲಿ ಫಲವಾಗುವ ಬೆಳೆಯನ್ನೂ
ಕೀಳು ಬೆಳೆಯೆಂದರೆ ತಲೆಯ ಮೇಲೆ ಫಲಬಿಡುವ ಬೆಳೆಯನ್ನೂ ಮಾಡುತ್ತ ರಾಜಾ
ದಾಯಕ್ಕೆ ನಾಮವಿಕ್ಕುತ್ತಾ ಬಂದರು. ಭರತನು ಶ್ರೀರಾಮನ ಪ್ರಜೆಗಳು
ನೊಂದಾರೆಂದು ಸುಮ್ಮನಿದ್ದನು. ಶ್ರೀರಾಮನು ಬರುವ ವೇಳೆಗೆ ಬೇಸಾಯಗಾರರಿಗೆ
ಬೇಕಾದಷ್ಟು ಐಶ್ವರ್ಯವು ಸೇರಿ ಅವರಿಗೆ ತಲೆತಿರುಗಿಹೋಗಿದ್ದಿತು. " ಇವರನ್ನು
'ಮಟ್ಟಾ'ಹಾಕದಿದ್ದರೆ ರಾಜ್ಕಕ್ಕೆ ಕ್ಷೇಮನಿಲ್ಲ"ವೆಂದು ಯೋಚಿಸಿ, ಅರಸನು ಅವರನ್ನು
ಕರೆಯಿಸಿ, " ಈ ಸಲ ನಾವು ಕೊಟ್ಟ ಬೀಜದ ಬೆಳೆ ಮಾಡಬೇಕು. ನೀವು ಸರಿಯಾಗಿ
ಬೆಳೆ ಮಾಡದಿದ್ದರೆ ನಾವು ಬೆಳೆದ ಫಲದ ತೂಕ ಚಿನ್ನವನ್ನು ಕೊಡಬೇಕು" ಎಂದು
ನಿಬಂಧನೆ ಮಾಡಿಕೊಂಡು, ಹುರಿದಿರುವ ಬೂದಿಗುಂಬಳದ ಬೀಜಗಳನ್ನು ಕೊಟ್ಟನು.
ಸೊಕ್ಕಿದ್ದ ಬೇಸಾಯಗಾರರು ಅದನ್ನು ಗಮನಿಸದೆ ಆ ಬೀಜಗಳನ್ನು ತಂದು ನೆಟ್ಟರು.
ಅವು ಮೊಳೆಯಲೇ ಇಲ್ಲ. ಅರಮನೆಯಲ್ಲಿ ಬಿತ್ತಿದ ಬೀಜಗಳು ಹೊರವಾಗಿ ಬೆಳೆದು
ಆಳೆತ್ತಲಾರದಷ್ಟು ಭಾರಿಯ ಕಾಯಿಗಳನ್ನು ಬಿಟ್ಟುವು. ಬೇಸಾಯಗಾರರು ಮರು
ಮಾತಾಡದೆ ಆ ಕಾಯಿಗಳ ತೂಕ ಚಿನ್ನವನ್ನು ಕೊಟ್ಟು, ಅಂದಿನಿಂದ ತಮ್ಮ ಜಾತಿಗೇ
ಮೋಸಮಾಡಿದ ಕಾಯಿಯೆಂದು ಅವರು ಬೂದಿಗುಂಬಳಕ್ಕೆ ಬಹಿಷ್ಕಾರ ಹಾಕಿದರಂತೆ.
"ಬೆಳ್ಳಿಯು ರುದ್ರನ ಕಣ್ಣೀರು. ಅದರಿಂದ ಯಜ್ಞಗಳಲ್ಲಿ ಬೆಳ್ಳಿಯನ್ನು ದಕ್ಷಿಣೆ
ಯಾಗಿ ಕೊಟ್ಟರೆ ಕಣ್ಣೀರು ಬಿಡಬೇಕಾಗುವುದು. ಅದರಿಂದ ಬೆಳ್ಳಿಯನ್ನು ದಕ್ಷಿಣೆಯಾಗಿ
ಕೊಡಕೂಡದು" ಎಂದು ಮುಂತಾದ ವಿಧಿ ನಿಷೇಧ ಬೋಧಕವಾದ ಬ್ರಾಹ್ಮಣಗಳ
ಅರ್ಥವಾದದ ಕಥೆಗಳನ್ನು ಇದರೊಡನೆ ಹೋಲಿಸಿರಿ.
(ಇ) ವಿನೋದದ ಕಥೆಗಳು
(೧೬) ಜಂತದಕ್ಕಯ್ಯನ ಕಥೆ
ಒಂದಾನೊಂದು ಪಟ್ಟಣದಲ್ಲಿ ಒಬ್ಬ ಅರಸನಿದ್ದನು. ಅವನಿಗೆ ಮಕ್ಕಳಾಗಲಿಲ್ಲ.
ಈ ಚಿಂತೆಯು ಅರಸನಿಗೂ ಅರಸಿತಿಗೂ ಬಹಳವಾಗಿ ಅವರು ದಿನೇ ದಿನೇ ಕೊರಗಿ
ಹೋದರು. ಇದನ್ನು ತಿಳಿದು ಪುರೋಹಿತನು " ಪ್ರಭು! ನಮ್ಮ ಅರಮನೆಯ ಪಟ್ಟ
ದಾನೆಯು ದೇವಾಂಶ ಸಂಭೂತವಾದುದು. ಅದಕ್ಕೆ ಹರಸಿಕೊಳ್ಳಿ, ಮಕ್ಕಳಾಗುವುದು"
ಎಂದು ಅರಿಕೆ ಮಾಡಿದನು. ಅರಸನೂ ಅರಸಿತಿಯೂ ಒಪ್ಪಿದರು.
ಮರುದಿನ ಪೂಜೆಯ ವೇಳೆಯಲ್ಲಿ ಅರಸಿತಿಯು ಪಟ್ಟಿದಾನೆಗೆ ಬೇಕಾದ ಹಾಗೆ
ಪೂಜೆಮಾಡಿ " ಪಟ್ಟದಾನೆ! ಪಟ್ಟದಾನೆ! ನನಗೊಂದು ಮಗು ಕೊಡು, ನನಗೆ ಮಗು
ವಾದರೆ ಅದನ್ನು ನಿನ್ನ ಮೇಲೆ ಕೂರಿಸಿ ಊರಸುತ್ತೂ ಮೆರವಣಿಗೆ ಮಾಡಿಸುತ್ತೇನೆ.
ಅದಕ್ಕೆ ನಿನ್ನ ಹೆಸರು ಇಡುತ್ತೇನೆ" ಎಂದು ಹರಸಿಕೊಂಡಳು. ಪಟ್ಟಿದಾನೆಯು
ಪ್ರಸನ್ನವಾಗಿ ವರ ಕೊಟ್ವಿತು.
ಬರುವ ವರ್ಷ ಅರಸಿತಿಗೆ ಒಂದು ಹೆಣ್ಣು ಮಗುವಾಯಿತು. ಆದರೆ ಅವಳಿಗೆ
ಮಗುವೊಂದನ್ನೇ ಆನೆಯ ಮೇಲೆ- ಅದರಲ್ಲೂ ಯಾರೂ ಕುಳಿತುಕೊಳ್ಳದ ಪಟ್ಟಿದಾನೆಯ
ಮೇಲೆ-ಕುಳ್ಳಿರಿಸಿ ಮೆರವಣಿಗೆ ಮಾಡುವುದಕ್ಕೆ ಹೆದರಿಕೆ. ಆದರಿಂದ ದಿನ ದಿನವೂ "ಬರುವ
ವರ್ಷ ಮೆರವಣಿಗೆ ಮಾಡಿಸುತ್ತೇನೆ ಗಜರಾಜ! ಕೋಪಮಾಡಿಕೊಳ್ಳಬೇಡ " ಎಂದು
೯೬
-----------------------------------------------------------------
ಕಥೆಗಳು
ಹೇಳುತ್ತಲೇ ಬಂದಳು. ಹೆಸರಿನದೂ ಹಾಗೆಯೇ ಆಯಿತು. "ಅರಸು ಮಕ್ಕಳಿಗೆ
ಆನೆ ಹೆಸರು ಇಡುವುದೇ ?" ಎಂದು ಯೋಚನೆಯಾಗಿ ನಾಮಕರಣವನ್ನೇ ಮಾಡಲಿಲ್ಲ.
ಮಗುವಿಗೆ ಒಂದು ವರ್ಷ ತುಂಬಿತು ; ಎರಡು ವರ್ಷವಾಯಿತು ; ಮೂರಾಯಿತು ;
ಐದಾಯಿತು ; ಎಂಟಾಯಿತು ; ಹನ್ನೆರಡೂ ತುಂಬಿತು ; ಮಗುವು ಮೈಯೂ ನೆರೆಯಿತು;
ಆದರೂ ಅರಸಿತಿಯು ಹೆದರಿಕೆಯಿಂದ ಮೆರವಣಿಗೆಯ ಪ್ರಯತ್ನವೇ ಮಾಡಲಿಲ್ಲ. ಆನೆಯು
ಕೊನೆಗೆ ಮೇವೂ ನೀರೂ ಬಿಟ್ಟುಬಿಟ್ಟಿತು. ಆಗ ಅರಸನಿಗೆ ದಿಗಿಲಾಗಿ ಕಣಿಯನ್ನು
ಕೇಳಲು, ಅವರು ಹರಕೆ ತೀರಿಸಲಿಲ್ಲವೆಂದು ಗಜರಾಜನಿಗೆ ಕೋಪ ಬಂದಿದೆಯೆಂದರು.
ಆಗ ಅರಸನಿಗೆ ಹರಕೆಯ ನೆನೆಪಾಯಿತು. ಯತ್ನವಿಲ್ಲದೆ ರಾಜರಾಣಿಯರು ಮೆರವಣಿಗೆಗೆ
ಒಪ್ಪಿದರು. ಗಜರಾಜನು ಮೇವು ಮೆಯ್ದು ನೀರು ಕುಡಿಯಿತು.
ಮರುದಿನ ಗಜರಾಜನಿಗೆ ಪೂಜೆ ಪುರಸ್ಕಾರ ಎಲ್ಲವೂ ಮಾಡಿ ಅಂಬಾರಿಯನ್ನು
ಹೂಡಿ ಅದರಲ್ಲಿ ದೊರೆಯ ಮಗಳನ್ನು ಕುಳ್ಳಿರಿಸಿ ಬಾಜಾ ಬಜಂತ್ರಿ ಸಮೇತವಾಗಿ
ಮೆರವಣಿಗೆ ಹೊರಡಿಸಿದರು. ರಾಣಿಯು "ಮಗಳು ಒಬ್ಬಳೇ ಕುಳಿತಿರುವಳಲ್ಲ ಏನು ಗತಿ!”
ಎಂದು ಕಣ್ಣೀರು ಕರೆದು ಹಂಬಲಿಸಿದಳು. "ಹಾಳು ಆನೆ ಎಷ್ಟು ಹಟ ಹಿಡಿಯಿತು"
ಏಂದು ಬಯ್ದಳು, ಆನೆಗೆ ಇದಿಷ್ಟೂ ತಿಳಿಯಿತು.
ಮೆರವಣಿಗೆಯು ಊರುಸುತ್ತಿ ಬರುವವರೆಗೂ ಆನೆಯು ಉಸಿರೆತ್ತಲಿಲ್ಲ. ಗ್ರಾಮ
ಪ್ರದಕ್ಷಿಣೆಯಾಗಿ ಮೆರವಣಿಗೆಯು ನಗರದೊಳಕ್ಕೆ ಬರಲು ಇನ್ನೇನು ತಿರುಗಬೇಕು, ಆಗ
ಆನೆಯು ಒಂದು ಸಲ ಫರ್ಜಿಸಿತು. ಆ ಘರ್ಜನೆ ಕೇಳಿ ಎಲ್ಲರೂ ಬೆಚ್ಚುಬಿದ್ದರು.
ಇನ್ನೊಂದುಸಲ ಆರ್ಭಟಿಸಲು ಎಲ್ಲಿಯನರಲ್ಲಿ ಚೆಲ್ಲಾಪಿಲ್ಲಿಯಾದರು. ರಾಜಕುಮಾರಿಯು
ಕಿಟಾರನೆ ಕಿರಿಚಿಕೊಂಡು ಅಂಬಾರಿಯಲ್ಲಿಯೇ ಮೂರ್ಛೆಹೋದಳು. ಆನೆಯು
ಅಂಬಾರಿಯನ್ನೂ ದೊರೆಮಗಳನ್ನೂ ಹೊತ್ತುಕೊಂಡು ಕಾಡಿನಕಡೆಗೆ ನುಗ್ಗಿತು.
ಕಾಡಿನಲ್ಲಿ ಅಡ್ಡವಾಗಿ ಸಿಕ್ಕಿದ ಮರಗಳನ್ನು ಮುರಿದೊಟ್ಟಿ ಆನೆಯು
ಮುಂದೋಡುತ್ತಿದೆ. ಎಷ್ಟಾಗಲಿ, ದೊರೆಯ ಮಗಳು! ಬುದ್ಧಿವಂತೆ! ಕೇಳಬೇಕೆ?
ಕೈಗೆ ಸಿಕ್ಕಿದ ಮರದ ಕೊಂಬೆಯನ್ನು ಹಿಡಿದು ಮೇಲಕ್ಕೆ ಹತ್ತಿಕೊಂಡುಬಿಟ್ಟಳು. ಆ
ಕೋಪದಲ್ಲಿ ಆನೆಗೆ ಅದು ತಿಳಿಯಲಿಲ್ಲ. ಇನ್ನಷ್ಟು ದೂರ ಹೋಗಿ ಅಂಬಾರಿಯನ್ನು
ಕೆಳಕ್ಕೆ ಕೆಡನಿ ಅದರ ಮೇಲೆ ತಾನೂ ಬಿದ್ದು ಅದನ್ನು ಚೂರು ಚೂರು ಮಾಡಿ, ತಾನೂ
ಅಲ್ಲಿಯೇ ಬಿದ್ದು ಪ್ರಾಣಬಿಟ್ಟಿತು.
ಈ ಆರ್ಭಟವನ್ನು ಕಂಡು ಬೆದರಿದ ರಾಜಪುತ್ರಿಯು ಎರಡು ಮೂರು ದಿನ
ಕೆಳಕ್ಕೇ ಇಳಿಯಲಿಲ್ಲ. ಕೊನೆಗೆ ಆನೆಯು ಸತ್ತುಹೋಗಿರುವುದು ನಿಜವೆಂದು ಆದ
ಮೇಲೆ, ಹೆಣವನ್ನು ಹದ್ದುಗಳು ಕಿತ್ತು ತಿನ್ನುವುದನ್ನು ಕಂಡಮೇಲೆ, ಕೆಳಕ್ಕಿಳಿದು ಬಂದು
ಹೊಟ್ಟೆಗೆ ಏನಾದರೂ ಸಿಕ್ಕೀತೇ ಎಂದು ಹುಡುಕಿಕೊಂಡು ಹೊರಟಳು.
ಕೊಂಚ ದೂರದಲ್ಲಿ ಕಾಡು ಕುರುಬರ ಕೊಪ್ಪಲು ಇದ್ದಿತು. ಅವರು ಇವಳ
ಕಥೆಯನ್ನು ಕೇಳಿ ಮರುಗಿ ಇವಳಿಗೆ ಬೇಕಾದ ಉಪಚಾರನೆಲ್ಲ ಮಾಡಿ ಸತ್ತ ಆನೆಯ
ದಂತ ತೆಗೆದು ಸಮಾಪದಲ್ಲಿಯೇ ಒಂದು ಮರದಮೇಲೆ ಒಂದು ಮನೆ ಕಟ್ಟಿಕೊಟ್ಟರು.
ಆ ದಂತದ ಮನೆಯಲ್ಲಿ ಇವಳು ಇದ್ದುಕೊಂಡು ಕಾಡು ಕುರುಬರು ತಂದುಕೊಟ್ಟ
೯೭
-------------------------------------------------------------
ಕರ್ಣಾಟಕ ಸಂಸ್ಕೃತಿ
ಹಣ್ಣು, ಜೇನು, ಹಾಲು, ಮೊಸರು ತಿಂದುಕೊಂಡು ಸುಖವಾಗಿದ್ದಳು. ಇವಳು
ಜಂತದ ಮನೆಯಲ್ಲಿ ಇದ್ದಳೆಂದು ಎಲ್ಲರೂ ಇವಳನ್ನು " ಜಂತದಕ್ಕಯ್ಯ! ಜಂತದಕ್ಕಯ್ಯ!”
ಎಂದು ಕರೆಯುತ್ತಿದ್ದರು.
[ಮುಂದೆ ಜಂತದಕ್ಕಯ್ಯನನ್ನು ಒಬ್ಬನು ದೊರೆಯ ಮಗನು ವರಿಸುತ್ತಾನೆ.
ಊರಿಗೆ ಕರೆಸಿಕೊಳ್ಳುವನೆಂದು ಹೇಳಿಹೋಗಿ, ಅಲ್ಲಿ ತಂದೆತಾಯಿಗಳ ಬಲವಂತದಿಂದ
ಬೇರೆ ಹೆಣ್ಣು ಮದುವೆಮಾಡಿಕೊಳ್ಳುತ್ತಾನೆ. ಒಂದು ಸಲ ಆ ಬೇಡದ ಹೆಂಡತಿಯನ್ನು
ತವರುಮನೆಗೆ ಕರೆದುಕೊಂಡು ಹೋಗುತ್ತಾ, ಕೊಪ್ಪಲಿನ ಬಳಿಯಲ್ಲಿ ನಿಲ್ಲುತ್ತಾನೆ.
ಆಗ ಜಂತದಕ್ಕಯ್ಯನು ಬುದ್ಧಿವಂತಿಕೆಯಿಂದ ತನ್ನ ಸವತಿಯನ್ನು ಗೋಳುಗುಟ್ಟಿಸಿ ಹಣ್ಣು
ಮಾಡಿ, ಗಂಡನನ್ನು ಸೇರಿ ಸುಖವಾಗಿರುತ್ತಾಳೆ.!
ಈ ಕಥೆಯನ್ನು ಐತರೇಯ ಬ್ರಾಹ್ಮಣದಲ್ಲಿ ಬರುವ ಹರಿಶ್ಚಂದ್ರನ ಕಥೆಯೊಡನೆ
ಹೋಲಿಸಿರಿ. " ಹರಿಶ್ಚಂದ್ರನು, 'ಮಗನಾದರೆ ಅವನನ್ನು ನಿನಗೆ ಪಶುಮಾಡುವೆನು'
ಬಂದು ವರುಣನಿಗೆ ಹರಕೆಹೊತ್ತು ಮಗನನ್ನು ಪಡೆದನು. ಕೊನೆಗೆ ತನಗೆ ಜಲೋ
ದರವು ಬರುವವರೆಗೂ ಹರಕೆಯ ಪೂರೈಕೆಯನ್ನು ತಡೆದು, ಆಮೇಲೂ ಆಜೇಗರ್ತನ
ಮಗನನ್ನು ಕೊಂಡುತಂದು ತನ್ನ ಮಗನ ಸ್ಥಾನದಲ್ಲಿ ಅವನನ್ನು ಪಶುವಾಗಿ ಕಂಭಕ್ಕೆ
ಬಿಗಿದನು.' ಈ ಬರಡು ಕಥೆಗಳೂ ಏಕ ಜಾತಿಯಲ್ಲವೆ ನೋಡಿರಿ!
(೧೭) ರಾಕ್ಷಸನ ಕಥೆ
ಒಬ್ಬಾನೊಬ್ಬ ರಾಜಪುತ್ರನು ಒಂದು ದಿನ ಬೇಟೆಗೆ ಹೋದನು. ಅಲ್ಲಿ
ಯಾವುದೋ ಒಂದು ಕಾಡುಮೃಗವನ್ನು ಆಟ್ಟಿಕೊಂಡು ಹೋಗಲು ಅದು ಒಂದು
ಭಾರಿಯ ಕಾಡಿನ ನಡುವೆ ಇದ್ದ ಅರಮನೆಗೆ ಓಡಿಹೋಯಿತು. ಆ ಅರಮನೆಯನ್ನು
ಕಂಡು ರಾಜಪುತ್ರನು ಆಶ್ಚರ್ಯದಿಂದ ಒಳಹೊಕ್ಕು ನೋಡುವಲ್ಲಿ ಅಲ್ಲಿ ಯಾರೂ
ಇದ್ದಹಾಗೆ ಕಾಣಲಿಲ್ಲ. ಕೂನೆಗೆ ಬಹಳ ಹುಡುಕಿದ ಮೇಲೆ ಅಂತಃಪುರದ ಒಂದು
ಮೂಲೆಯಲ್ಲಿ ಒಂದು ಚಿಕ್ಕ ಮನೆಯಲ್ಲಿ ಸುಂದರಿಯಾದವಳೊಬ್ಬಳು ಅಳುತ್ತ ಮಲಗಿರು
ವುದು ಕಾಣಿಸಿತು. ಅವಳು ಈ ರಾಜಪುತ್ರನಿಗೆ " ಇದು ರಾಕ್ಷಸನ ಅರಮನೆ.
ತನ್ನನ್ನು ಅವನು ಹೊತ್ತುಕೊಂಡು ಬಂದಿದ್ದಾನೆ. ಮದುವೆಮಾಡಿಕೊಳ್ಳೆಂದು ನಿತ್ಯವೂ
ಪೀಡಿಸುತ್ತಿದ್ದಾನೆ. ಏನೇನೋ ನೆಪಹೇಳಿ ತಾನು ತಪ್ಪಿಸಿಕೊಳ್ಳುತ್ತಿದ್ದೇನೆ"
ಎಂಬುದನ್ನು ಹೇಳಿ, " ಅವನು ಬಂದರೆ ನೀನು ಉಳಿಯುವುದು ಕಷ್ಟ. ಈಗಲೇ
ಹೊರಟುಹೋಗು " ಎಂದು ಸೂಚಿಸಿದಳು.
ರಾಜಪುತ್ರನು ಹೆದರದೆ, " ಚಿಂತೆಯಿಲ್ಲ. ನಾನು ಅವನನ್ನು ಎದುರಿಸಬಲ್ಲೆನು”
ಎಂದನು. ಅವನ ಧೈರ್ಯವನ್ನು ಕಂಡು ಮೆಚ್ಚಿದ ಅವಳು "ಹಾಗಾದರೆ ಇರು.
ನೀನು ಈ ದಿನವೇ ಯುದ್ಧಮಾಡಬೇಡ. ಇವನು ಬಹಳ ಮಾಯಾವಿ. ತನ್ನ ಜೀವ
ವೆಲ್ಲಿಟ್ವಿರುವನೋ ಕೇಳಿ ತಿಳಿದುಕೊಳ್ಳುವೆನು. ಅನಂತರ ನೀನು ಅವನೊಡನೆ ಯುದ್ಧ
ಮಾಡುವೆಯಂತೆ !" ಎಂದು ಹೇಳಿ ಅವನನ್ನು ಮುಚ್ಚಿಟ್ಟಳು.
ರಾಕ್ಷಸನು ಬಂದು ತನ್ನ ಮಾಯೆಯಿಂದ ಆಹಾರ ಪಾನೀಯಗಳನ್ನೆಲ್ಲ ತರಿಸಿ
ರಾಜಕುಮಾರಿಯನ್ನು ಊಟಕ್ಕೆ ಕರೆದನು. ಅವಳು ಎಂದಿಗಿಂತ ಹೆಚ್ಚಿನ ವೈಯಾರ
೯೮
-------------------------------------------------------------
ಕಥೆಗಳು
ವಾಡುತ್ತ, "ನೀನು ಇಲ್ಲದಿರುವಾಗ ನಾನೊಬ್ಬಳೇ ಇರಬೇಕು. ಆಗ ನಿನ್ನಮೇಲೆ
ಯಾರು ಯುದ್ಧಕ್ಕೆ ಬಂದರೊ? ಯಾರು ನಿನ್ನನ್ನು ಗೆದ್ದುಬಿಟ್ಟಿರೋ? ನೀನೇನಾದೆಯೋ
ಏಂಬ ಯೋಚನೆಯೇ ನನಗೆ!" ಎಂದು ಕಣ್ಣೀರಿಟ್ಟಳು. ಅವನು ಮೋಸಹೋಗಿ
"ಅಯ್ಕೋ ! ನನ್ನ ಚಿನ್ನ! ಒಂದಾನೊಂದು ದ್ವೀಪದಲ್ಲಿ ಒಂದು ಅರಮನೆಯಿದೆ.
ಅರಮನೆಗೆ ಬೇಕಾದಷ್ಟು ಕಾವಲಿದೆ, ಅಲ್ಲಿ ಒಂದು ನೂರು ಗಿಣಿಗಳಿವೆ. ಆ ಗಿಣಿಗಳ
ನಡುವೆ ಒಂದು ಗಿಣಿಯ ಕತ್ತಿನಲ್ಲಿ ಒಂದು ಡಬ್ಬಿಯಿದೆ. , ಆ ಡಬ್ಬಿಯಲ್ಲಿ ಐದು ಪುಟ್ಟ
ದುಂಬಿಗಳಿವೆ. ಅವುಗಳಲ್ಲಿದೆ ನನ್ನ ಪ್ರಾಣ. ಆ ಐದು ದುಂಬಿಗಳನ್ನೂ ಒಟ್ಟಿಗೆ
ಯಾರಾದರೂ ಕೊಂದರೆ, ಆಗ ನಾನು ಸಾಯುವುದು. ಅದರಿಂದ ನೀನು ಧೈರ್ಯ
ವಾಗಿರು" ಎಂದನು.
ಎರಡನೆಯ ದಿವಸ " ಆದ್ವೀಪ, ಅದೆಲ್ಲಿದೆ, ಆ ಅರಮನೆಯ ಕಾವಲಿನವರನ್ನು
ದಾಟ ಹೋಗುವುದೆಂತು? ಆ ನೂರು ಗಿಣಿಗಳಲ್ಲಿ ದಬ್ಬಿಯಿರುವ ಗಿಣಿಯನ್ನು
ಹಿಡಿವುದೆಂತು? ಹಿಡಿದರೂ ಅದರಿಂದ ಡಬ್ಬಿಯನ್ನು ತೆಗೆದುಕೊಂಡು, ಆ ಐದು ದುಂಬಿ
ಗಳನ್ನೂ ಒಟ್ಟಿಗೆ ಸಾಯಿಸುವುದೆಂತು?" ಎಂಬ ವಿಚಾರಗಳನ್ನೆಲ್ಲ ಕೇಳಿ ಕೇಳಿ ಗೊತ್ತು
ಮಾಡಿಕೊಂಡಳು.
ರಾಜಪುತ್ರನು ರಾಕ್ಷಸನ ಪ್ರಾಣಗಳನ್ನು ಇಟ್ಟುಕೊಂಡಿರುವ ದುಂಬಿಗಳನ್ನು
ಸಂಹರಿಸಲು ಹೊರಟನು. ರಾಕ್ಷಸನು ಹೇಳಿದ್ದಂತೆ ದಾರಿಯಲ್ಲಿ ಬಂದ ವಿಘ್ನಗಳನ್ನೆಲ್ಲ
ನಿವಾರಿಸಿಕೊಂಡು ಹೋಗಿ ಗಿಣಿಯನ್ನು ಹಿಡಿದು ಐದು ದುಂಬಿಗಳನ್ನೂ ಒಟ್ಟಿಗೆ
ಕೊಂದನು: ಅವನು ಅಲ್ಲಿ ಕೊಲ್ಲುತ್ತಲೂ ಇಲ್ಲಿ ರಾಕ್ಷಸನು ಕುಳಿತಿದ್ದವನು
ಮೇಲಕ್ಕೆ ಹಾರಿ ಕೆಳಗೆ ಬಿದ್ದು ಸತ್ತನು. ಕೂಡಲೆ ಮಾಯದ ಆ ಅರಮನೆಯೂ ಆ
ದ್ವೀಪವೂ ಕಾವಲುಗಾರರೂ ಗಿಣಿಗಳೂ ಎಲ್ಲವೂ ಮಾಯವಾದುವು. ರಾಜಪುತ್ರನೂ
ರಾಜಪುತ್ರಿಯೂ ಹಾರಿಬಂದು ಒಂದು ಗವಿಯಲ್ಲಿ ಬಿದ್ದರು. ಕೊನೆಗೆ ಇಬ್ಬರೂ
ಅದೃಷ್ಟವಶದಿಂದ ಆ ಗವಿಯಿಂದ ಪಾರಾಗಿ ಬಹು ಕಷ್ಟಪಟ್ಟು ತಮ್ಮ ರಾಜಧಾನಿಯನ್ನು
ಸೇರಿ ಒಬ್ಬರನ್ನೊಬ್ಬರು ಮದುವೆಯಾಗಿ ಸುಖವಾಗಿದ್ದರು.
ಇದರಲ್ಲಿ ಬರುವ ಕಾಮರೂಪಿಗಳಾದ ರಾಕ್ಷಸರು, ಅವರು ತಮ್ಮ ಜೀವವನ್ನು
ದೂರದಲ್ಲೊಂದೆಡೆ ಭದ್ರಪಡಿಸಿರುವುದು, ಕೊನೆಗೂ ಮೃತ್ಯುವಿನ ಪಾಲಾಗುವುದು,
ಇವುಗಳನ್ನು ಗಮನಿಸಿರಿ ಇದನ್ನು ಮೈರಾವಣ ಹೈರಾವಣರ ಕಥೆಯೊಡನೆ
ಹೋಲಿಸಿರಿ.
ಅಡುಗೂಲಜ್ಜಿಯ ಕಥೆಗಳೂ ಈ ಜಾತಿಗೆ ಸೇರಿದುವು. ಇವು ದಿನಕ್ಕೆಷ್ಣು
ಹುಟ್ಟುತ್ತಿವೆಯೋ ಎಷ್ಟು ಸಾಯುತ್ತಿವೆಯೋ ಅದನ್ನು ಕೂಡ ಲೆಕ್ಕಿಸುವುದು
ಸಾಧ್ಯವಿಲ್ಲ. ಇದರ ಮೇಲೆ ಅಡುಗೂಲಜ್ಜಿಯ ಕಥೆಗಳನ್ನು ಕೇಳದಿರುವರೂ
ಪ್ರಾಯಃ ಒಬ್ಬರೂ ಇಲ್ಲ. ಅದರಿಂದ ಅವುಗಳನ್ನು ಬಿಟ್ಟು ಮುಂದಕ್ಕೆ ಹೋಗೋಣ.
(೧೮) ಮಂಕುಭಟ್ಟನ ಕಥೆ
ಮಂಕುಭಟ್ಟನು ಸ್ನೇಹಿತರ ಮನೆಗೆ ಊಟಕ್ಕೆ ಹೋಗಿದ್ದನು. ಅವರ
ಮನೆಯಲ್ಲಿ ಕಡುಬು ಬಹು ರುಚಿಯಾಗಿತ್ತು. ಎರಡು ಸಲ ಕೇಳಿ ಹಾಕಿಸಿಕೊಂಡು
೯೯
------------------------------------------------------------
ಕರ್ಣಾಟಕ ಸಂಸ್ಕೃತಿ
ತಿಂದರೂ ಅವನ ಆಶೆ ತೀರಲಿಲ್ಲ. ಇರಲಿ, ಮನೆಗೆ ಹೋಗಿ ಮಾಡಿಸಿಕೊಂಡು
ತಿನ್ನುವುದು ಎಂದು ಕಡುಬು ಕಡುಬು ಎಂದು ಮನಸ್ಸಿನಲ್ಲಿಯೇ ಜಪಮಾಡಿಕೊಳ್ಳುತ್ತ
ಸುಮ್ಮನಾದನು.
ದಾರಿಯಲ್ಲಿ ಬರುತ್ತ ಸ್ನೇಹಿತರೊಡನೆ ಏನೇನೋ ಮಾತು ಕಥೆಗಳಾಡುತ್ತ
ಇವನಿಗೆ ಕಡುಬು ಎಂಬ ಹೆಸರು ಮರೆತುಹೋಯಿತು. ಅದರಂತೆಯೇ ಅದನ್ನು
ತಿನ್ನಬೇಕೆಂಬ ಆಶೆಯೂ ಬರತುಹೋಗಬಾರದಾಗಿತ್ತೆ? ಇಲ್ಲ. ಆಶೆಯು ಇನ್ನೂ ತೀವ್ರ
ವಾಯಿತು, ಬಂದು ಹೆಂಡಿತಿಯನ್ನು ಕರೆದು " ಲೇ! ಅವರ ಮನೆಯಲ್ಲಿ ಮಾಡಿದ್ದರಲ್ಲ
ಅದನ್ನು ಮಾಡೆ!” ಎನ್ನುವುದಕ್ಕೆ ಆರಂಭಿಸಿದನು. ಹೆಂಡಿತಿಗೆ ಕಕ್ಕುಬಿಕ್ಕಾಯಿತು.
" ಹೆಸರಿಲ್ಲ ಕುಲನಿಲ್ಲ ಅದನ್ನು ಮಾಡೆ ಎಂದರೆ ಏನುಮಾಡೋದು ನನ್ನ ಮೊಕಾನ"
ಎಂದುಬಿಟ್ಟಳು. ಅವನು ಕೇಳಿಕೊಂಡ; ಹೇಳಿಕೊಂಡ; ಏನು ಮಾಡಿದರೂ ಫಲವಿಲ್ಲ
ಬಿಂದಾಗುತ್ತಲೂ ಒಂದು ದೊಣ್ಣೆ ತೆಗೆದುಕೊಂಡು " ಇಕ್ಕಳಿಸಿ ಬಿಟ್ಟ.” ಹೆಂಡಿತಿಯು
ಚೆನ್ನಾಗಿ ಏಟು ತಿಂದು ಅಳುತ್ತಾ ಬಿದ್ದುಕೊಂಡಳು.
ಈ ಗದ್ದಲವು ಮಗ್ಗುಲ ಮನೆಯ ಮುದುಕಿಗೆ ಕೇಳಿಸಿ ಆಕೆಯು ಇದೇನು
ನೋಡೋಣವೆಂದು ಬಂದಳು. ಆ ವೇಳೆಗೆ ಈ ಹುಡುಗಿಯ ಮೈಯೆಲ್ಲಾ ಊದಿ
ಹೋಗಿದೆ. ಆಕೆಯು ನೋಡಿ " ಅಯ್ಯೋ ! ಪಾಪ! ಕಡುಬು ಊದಿದ ಹಾಗೆ ಊದಿ
ಹೋಗಿದೆಯಲ್ಲಪ್ಪಾ ಮೈಯೆಲ್ಲಾ !" ಎಂದು ಮರುಗಿದಳು.
ಮಂಕುಭಟ್ಟನು "ಹಾ! ಹಾ! ಅದೇ! ಅದೇ ! ನಾನು ಮಾಡು ಎಂದದ್ದು
ಕಡುಬು" ಎಂದನು.
ಹೆಂಡಿತಿಯು ಆ ನೋವಿನಲ್ಲಿಯೂ " ಪ್ರಾರಬ್ಧವೇ! ಈ ಕಡುಬಿಗೆ ಇಷ್ಟು
ಏಟು ತಿನ್ನುವುದು ನನ್ನ ಹಣೆಯಲ್ಲಿ ಬರೆದಿತ್ತು" ಎಂದುಕೊಂಡು ಎದ್ದು ಕಡುಬು
ಮಾಡಿಟ್ಟಳು, ಮಂಕುಭಟ್ಟನು ಚಪ್ಪರಿಸಿಕೊಂಡು ಮೆದ್ದನು. ಕಥೆ ಕಾಡಿಗೆ
ಹೋಯ್ತು, ನಾನು ಊರಿಗೆ ಬಂದೆ.
(೧೯) ಬೈರೆ ಕಿರಿಬೈರೆಯರ ಕಥೆ
ಬೈರೆ ಎಂಬ ತಾಯಿಯೂ ಕಿರಿಬೈರೆ ಎಂಬ ಅವಳ ಮಗಳೂ ಎಲ್ಲೋ ಒಂದೆಡೆ
ಗುಡಿಸಲು ಹಾಕಿಕೊಂಡು ಇದ್ದರು. ಕರಿಬೈರೆಗೆ ಚೆಲುವೆಯಾದ ಮಗಳಿದ್ದಳು.
ಅವಳನ್ನು ಈ ತಾಯಿ ಮಕ್ಕಳು ಬಹಳ ಪ್ರೀತಿಯಿಂದ ಕಾಪಾಡಿಕೊಂಡಿದ್ದರು. ಒಂದು
ದಿನ ಬೇಟೆಗೆಂದು ಕಾಡಿಗೆ ಹೋಗಿದ್ದ ದೊರೆಯು ಅತ್ತ ಬಂದು ಕಿರಿಬೈರೆಯ ಮಗಳ
ಚೆಲುವನ್ನು ಕಂಡು ಮೆಚ್ಚಿಕೊಂಡು ಅವಳನ್ನು ಮದುವೆಯಾದನು : ತನ್ನ ಹೊಸ
ಹೆಂಡಿತಿಯನ್ನೂ ಅವರ ತಾಯಿ ಅಜ್ಜಿಯರನ್ನೂ ಕರೆದುಕೊಂಡುಹೋಗಿ ತನ್ನ ಅರಮನೆ
ಯಲ್ಲಿಟ್ಟುಕೊಂಡನು. ಕಿರಿಬೈರೆಯ ಮಗಳು ಬಸುರಾದಳು. ಅದನ್ನು ಕಂಡು
ಬೈರೆಯು ಮಗಳನ್ನು ಕರೆದು " ಕಿರಿಬೈರೆ | ಕಿರಿಬೈರೆ | ನಮ್ಮ ಮಗಳಾದರೊ ಬಸು
ರಾಗಿದ್ದಾಳೆ. ಮಗು ಹೆತ್ತಾಗ ನಮಗೆ ಹೊತ್ತಿರುತ್ತೋ ಇರೋದೇ ಇಲ್ಲವೋ?
ಈಗಲೇ ಮಗೂಗೆ ಅಂಗೀ ಕುಲಾವೀ ಹೊಲೆದಿಡೋಣ" ಎಂದಳು. ಮಗಳು ' ಆಗಲಿ'
ಎಂದಳು. ಸರಿ, ಇಬ್ಬರೂ ಅರಸನ ದಿರಸಿದ್ದ ಮನೆಗೆ ಹೋಗಿ ಅರಸನ ಮಕಮಲ್ಲಿನ
ದಿರಸೆಲ್ಲ ಹರಿಹರಿದು ಮಗುವಿನ ಅಂಗೀ ಕುಲಾವೀ ಮಾಡಿಬಿಟ್ಟರು. ಅರಸನು ಒಂದು
೧೦೦
--------------------------------------------------------
ಕಥೆಗಳು
ದಿವಸ ಎಲ್ಲಿಯೋ ಹೋಗಬೇಕೆಂದು ಮಕಮಲ್ಲಿನ ದಿರಸಿಗೆ ಹೇಳಿಕಳುಹಿಸಿದಾಗ ಇವರ
ಕೆಲಸವು ತಿಳಿಯಿತು. ಹೋಗಲಿ ಎಂದು ಇವರನ್ನು ಬಿಡದಿಗೆ ಕಳುಹಿಸಿದನು. ಅಲ್ಲಿ
ಬೈರೆಯು ಕಿರಿಬೈರೆಯನ್ನು ಕರೆದು " ಕಿರಿಬೈರೆ | ಕಿರಿಬೈರೆ! ಮಗಳಾದರೋ ಬಸುರಾ
ಗಿದ್ದಾಳೆ, ಬಸುರೊಸಗೆಯಂತೂ ಮಾಡಲೇಬೇಕು. ಅವತ್ತಿನ ದಿನ ಹೊತ್ತಿರುತ್ತೊ
ಇರೋದಿಲ್ವೋ? ಇವತ್ತೇ ಅಡಿಗೆ ಮಾಡಿಟ್ಟುಬಿಡೋಣ" ಎಂದಳು. ಮಗಳು 'ಆಗಲಿ'
ಎಂದಳು, ಸರಿ, ಆ ಅರ್ಧರಾತಿ_ಯಲ್ಲಿಯೆ ಒಲೆ ಹತ್ತಿಸಿ ಐಸರಿಟ್ಟು ಹನ್ನೆರಡು ಪಲ್ಲ ಅಕ್ಕಿ
ಹಾಕಿ ಅನ್ನ ಬಸಿದೇಬಿಟ್ಟರು. ಈ ಗದ್ದಲದಲ್ಲಿ ಅರಸನಿಗೆ ಎಚ್ಚರವಾಗಿ ಇದೇನು ಎಂತ
ನೋಡಿದರೆ ಬೆಳಗಾಗಿಲ್ಲ ಆಗಲೇ ಹನ್ನೆರಡು ಪಲ್ಲಾ ಅಕ್ಕಿ ಅನ್ನ ಆಗಿಹೋಗಿದೆ.
ಸಾರು ಹುಳಿಗೆ ಪಾತ್ರೆಗಳು ಒಲೆಯ ಮೇಲೆ ಕೂತಿವೆ. ಅರಸನು ಸರಿ ಎಂದುಕೊಂಡು,
ಇವರು ಇಲ್ಲೂ ಇರಬಾರದು ಎಂದು ಅವರನ್ನು ಕುದುರೆ ತೊಟ್ಟಿಗೆ ಕಳುಹಿಸಿದನು.
ಅಲ್ಲಿ ಬಾಗಿಲಲ್ಲಿ ಒಂದು ಭಾರಿ ನಗಾರಿಯಿತ್ತು, ಕಿರಿಬೈರೆಯು " ಅಮ್ಮ ! ಅಮ್ಮ !
ಅದಷ್ಟು ಗಾತ್ರ ಇದೆಯಲ್ಲ ಅದೇಕೆ?” ಎಂದಳು. ಬೈರೆಯು "ಬಾ ನೋಡೋಣ
ವಂತೆ” ಎಂದು, ಇಬ್ಬರೂ ಅಲ್ಲಿಗೆ ಹೋದರು. ಹೋದವರು ಸುಮ್ಮನಿದ್ದರೆ? ಅದನ್ನು
ಮುಟ್ಟಿದರು. ಅದು ಢಂ ಎಂತು. "ಹಾ! ನಾವು ದೊರೆಗೆ ಮಗಳನ್ನು ಕೊಟ್ಟಿರೋ
ಬೀಗರು, ನಮ್ಮನ್ನು ಢಂ ಎಂತೀಯಾ?" ಎಂದು ಅದಕ್ಕೆ ಒಂದೊಂದು ಏಟು
ಕೊಟ್ಟರು. ಅದು ಇನ್ನೂ ಢಂ ಢಂ ಎಂತು. ಇವರು ಇನ್ನೂ ಹೊಡೆದರು. ದೊರೆಯು
ಆ ಸದ್ದು ಕೇಳಿ ಏನು ಆಗಿಹೋಯ್ತೊ ಅಂತ ಓಡೋಡಿ ಬಂದನು. ಯುದ್ಧಗಿದ್ದ ಆದರೆ
ಬಡಿಯೋ ಆ ನಗಾರಿಯ ಬಡಿತ ಕೇಳಿ ಸುತ್ತಮುತ್ತಲಿದ್ದವರೆಲ್ಲ ಓಡೋಡಿ ಬಂದರು.
ದೊರೆಯು ಬಂದವರಿಗೆಲ್ಲ ಉಪಚಾರಮಾಡಿ " ನಿಮ್ಮೆಲ್ಲರನ್ನೂ ನೋಡಬೇಕು ಎನ್ನಿಸಿತು.
ಅದಕ್ಕೋಸ್ಕರ ನಾನೇ ನಗಾರಿ ಬಡಿಸಿದೆ" ಎಂದು ಹೇಳಿ, ಅವರನ್ನೆಲ್ಲ ಕಳುಹಿಸಿಕೊಟ್ಟು
ಬೈರೇ ಕಿರಿಬೈರೆಯರನ್ನು ಮತ್ತೆ ಕಾಡಿನ ಗುಡಿಸಲಿಗೆ ಕಳುಹಿಸಿ, ತಾವು ಗಂಡಹೆಂಡಿರು
ಸುಖವಾಗಿದ್ದರಂತೆ. ಕಥೆ ಕಾಡಿಗೆ ಹೋಯ್ತು, ನಾನು ಊರಿಗೆ ಬಂದೆ.
(೨೦) ಕಪಿ ಹಾರಿದ ಕಥೆ
ಶ್ರೀರಾಮನು ಲಂಕೆಯಿಂದ ಬಂದ ಮೇಲೆ, ಜನಕ ಮಹಾರಾಜನಿಗೆ ಮಗಳನ್ನೂ
ಅಳಿಯನನ್ನೂ ನೋಡಬೇಕೆನ್ನಿಸಿ ಅವರನ್ನು ಬರಹೇಳಿ ಕಳುಹಿಸಿದನು. ಗಂಡಹೆಂಡಿರಿಬ್ಬರೂ
ಸಪರಿವಾರರಾಗಿ ಅಲ್ಲಿಗೆ ಹೋದರು. ಬಹು ದಿನಕ್ಕೊಮ್ಮೆ ಬಂದರೆಂದು ಜನಕ ಮಹಾ
ರಾಜನು ಬೇಕಾದ ಔತಣಮಾಡಿಸಿದನು. ಹನ್ನೆರಡು ಜಾತಿ ಗೊಜ್ಜು, ಹದಿನಾರು ಜಾತಿ
ಪಲ್ಯ, ಆರು ಜಾತಿ ಹುಳಿ, ಮೂರು ಜಾತಿ ತೊವ್ವೆ, ಐದು ಜಾತಿ ಪಾಯಿಸ, ಏಳು
ಜಾತಿ ಅನ್ನ, ಪಂಚಭಕ್ಷ್ಯ, ಪರಮಾನ್ನ, ಎಲ್ಲ ಮಾಡಿಸಿ, ಎಲ್ಲರಿಗೂ ಒಂದೇ ಸಮನಾಗಿ
ಚೌಕದೆಡೆ ಮಾಡಿಸಿ ಎಲ್ಲರನ್ನೂ ಕರೆದು ಕರೆದು ತಾನೇ ಕೈಕಾಲಿಗೆ ಬಿಸಿನೀರು ಕೊಟ್ಟು
ಕರೆದುಕೊಂಡು ಹೋಗಿ ಎಲೆ ಮುಂದೆ ಕೂಡಿಸಿದನು, ಜನಕರಾಜನ ಅರಮನೆಯ
ಊಟದ ಮನೆಯೆಂದರೆ ಕೇಳಬೇಕೆ? ಸುಗ್ರೀವ, ಜಾಂಬವಂತ, ನಳ, ನಹುಷರಿಂದ
ಹಿಡಿದು ಸಣ್ಣ ಪುಟ್ಟ ಕಪಿಗಳೆಲ್ಲರಿಗೂ ಅಲ್ಲಿಯೇ ಸ್ಥಳವಾಯಿತು. ಜನಕರಾಜನು
ಒಂದು ಕಡೆಯಿಂದ ಆಪೋಶನ ಹಾಕಿಕೊಂಡು ಬರುತ್ತಿದ್ದಾನೆ. ಅಷ್ಟರಲ್ಲಿ ಒಂದು
ವಿಚಿತ್ರ ನಡೆದುಹೋಯಿತು. ಒಂದು ಮೂಲೆಯಲ್ಲಿ ಕುಳಿತಿದ್ದ ಒಂದು ಸಣ್ಣ
ಕಪಿಯು ಅಷ್ಟ್ರಗಲದ ಎಲೆಯಲ್ಲಿ ಬಡಿಸಿರುವ ಅಡಿಗೆಯನ್ನೆಲ್ಲ ನೋಡಿ ಬೆರೆತು
ಹೋಯಿತು. ಒಂದೊಂದಾಗಿ ನೋಡಿಕೊಂಡು ಚಿಟ್ಲಕಾಯಿ (?) ಗೊಜ್ಜಿನ ಬಳಿಗೆ
೧೦೧
----------------------------------------------------------------
ಕರ್ಣಾಟಕ ಸಂಸ್ಕೃತಿ
ಬಂದು, " ಇದೇನೋ ಹೊಸ ತರಹ?” ಎಂದು ಮುಟ್ಟಿತು. ಅದು ಚೆನ್ನಾಗಿ ಹುರಿದಿತ್ತು,
ಅದರಿಂದ ಅದು ಒಡೆದು ಚಟ್ಟನೆ ಮೇಲಕ್ಕೆ ಹಾರಿತು. "ನಾನು ರಾಮ ಭಂಟ,
ಲಂಕಾ ಪಟ್ಟಣಕ್ಕೆ ಹೋಗಿ ಬಂದವನು. ನನ್ನ ಮುಂದೆ ನೀನೇ?" ಎಂದು ಅದು ತಾನೂ
ಹಾರಿತು. ಮಗ್ಗುಲಲ್ಲಿದ್ದ ಕಪಿಗೂ ಹಾಗೇ ಎನ್ನಿಸಿ ಅದು ತಾನೂ ಹಾರಿತು. ಅದನ್ನು
ನೋಡಿ ಅದರ ಮಗ್ಗುಲಲ್ಲಿದ್ದುದು, ಅದನ್ನು ನೋಡಿ ಇನ್ನೊಂದು, ಹೀಗೆ ಕಪಿ
ಗಳೆಲ್ಲವೂ ಪುಟ ಪುಟನೆ ನೆಗೆದುವು. ಸುಗ್ರೀವನೂ ನೆಗೆದ, ಹನುಮಂತನೂ ನೆಗೆದ.
ರಾಮನೂ ಸೀತೆಯೂ ಇದೇನು ಎಂದು ಕಕ್ಕುಬಿಕ್ಕಾಗಿ ನೋಡುತ್ತಿದ್ದಾರೆ. ಕೊನೆಗೆ
ವಿಚಾರಿಸಿ ಚೆನ್ನಾಯ್ತೂ ಎಂದು ತಲೆ ಬಗ್ಗಿಸಿಕೊಂಡರಂತೆ. ಕಥೆ ಕಾಡಿಗೆ ಹೋಯ್ತು,
ನಾನು ಊರಿಗೆ ಬಂದೆ.
(೨೧) ಹೆಂಟಿಗೊದ್ದನ ಕಥೆ
ಮಾರಿ ಬಂದು ಊರು ತೊಡೆದುಕೊಂಡು ಹೋದಳು. ಊರೆಲ್ಲ ಪಾಳು
ಬಿದ್ದು ಒಂದು ಹೆಂಟಿಗೊದ್ದನಿಗೆ ಆ ಹಾಳೂರು ದೊರೆತನ ಸಿಕ್ಕಿತು. ಅದು " ನಾನು
ದೊರೆ. ನಾನು ಎಲ್ಲರ ಹಾಗೆ ಹೆಂಟೆಗೊದ್ದನ್ನೇ ರಾಣಿ ಮಾಡಿಕೊಳ್ಳುವುದೇ ?" ಎಂದು
ಕೊಂಡು, ಒಂದು ಬೆಕ್ಕು, ಒಂದು ಇಲ್ಲಿ ಒಂದು ಕೊಕ್ಕರೆ, ಒಂದು ತಿಗಣೆ, ಹೀಗೆ
ನಾಲ್ವರನ್ನು ಮದುವೆಮಾಡಿಕೊಂಡಿತು. ಒಂದು ದಿನ ದೊರೆಯು ಮುತ್ತಿನ ಅಂಗಿ
ಇಕ್ಕಿ ಕೊಂಡು, ಪಚ್ಚೆ ಷರಾಯಿ ತೊಟ್ಟುಕೊಂಡು, ವಜ್ರದ ಕುಲಾವಿ ಹಾಕಿಕೊಂಡು
ಕೂಡಿದ ಸಭೆಯಲ್ಲಿ ಕುಳಿತಿದ್ದನು. “ಆಗ ಎರಡನೆಯ ಹೆಂಡಿತಿ ಇಲಿ ಸಿಂಗಾರ ಮಾಡಿ
ಕೊಂಡು ಸಂತೆಗೆ ಹೊರಟಳು. ಆಗ ದೊರೆಯು " ಬಟ್ಟ ಮುಖದ ಬಾಲೆ! ಮುತ್ತಿನಷ್ಟು
ತುರುಬು ಕಟ್ಟಿಕೊಂಡು ಎತ್ತಲಾಗಿ ಹೊರಟೆ?" ಎಂದು ಕೇಳಿದನು. ಇಲಿಗೆ ಕೋಪ
ಬಂದು “ ನಿನ್ನ ಪುರುಕಲು ಮೈಗೆ ಎಣ್ಣೆ ತರೋಕೆ ಸಂತೆಗೆ ಹೊಂಟಿದ್ದೇನೆ" ಎಂದು
ಸರಸರನೆ ಹೊರಟುಹೋದಳು. ದೊರೆಗೆ ಕೋಪಬಂದರೂ ಸಭೆ ಮುಗಿಯುವವರೆಗೂ
ಸುಮ್ಮನಿದ್ದು, ಆಮೇಲೆ ತನ್ನ ಕೊನೇ ಹೆಂಡಿತಿ ತಿಗಣೆ ಮನೆಗೆ ಹೋಗಿ " ನೋಡಿದೆಯಾ
ನೋಡಿದೆಯಾ ನನ್ನ ಕೊನೇ ರಾಣಿ! ತುಂಬಿದ ಸಭೇಲಿ ನಾನು ಕುಳಿತಿದ್ದು ಆ ನಿನ್ನ
ಸವತಿ ಇಲೀನ ಎಲ್ಲಿಗ್ಹೊರಟೆ ಎಂದು ಕೇಳಿದರೆ, ನಿನ್ನ ಪುರುಕಲು ಮೈಗೆ ಎಣ್ಣೆ
ತರೋಕೆ ಹೊರಟಿದ್ದೇನೆ ಎಂದುಬಿಟ್ಟಿಳಲ್ಲಾ !" ಎಂದನು, ಅವಳು " ಸರಿ, ನನ್ನಂದಾಳು,
ನಮ್ಮಮ್ಮ ನಂದಾಳು, ನಿನ್ನನ್ನದೆ ಬಿಟ್ಟಾಳೆ ?" ಎಂದಳು. ಕೊಕ್ಕರೆಯೂ ಹಾಗೆ:
ಎಂದಳು. ಕೊನೆಗೆ ಬಂದು ಹಿರೀ ರಾಣಿಯಲ್ಲಿ ಅತ್ತು ಗೋಳಾಡಿಕೊಂಡನು. ಅವಳು
"ಇರಲಿ, ಇಲ್ಲಿರು. ನಾನು ಅವಳಿಗೆ ಬುದ್ದಿ ಕಲಿಸುತೇನೆ" ಎಂದು ಬಿಂಕದಿಂದ ಕುಳಿತು
ಕೊಂಡಳು. ಅರಸನೂ ಅಲ್ಲಿಯೇ ಕುಳಿತುಕೊಂಡಿತು. ಆ ವೇಳೆಗೆ ಸಂತೆಯಿಂದ
ಇಲಿಯೂ ಬಂದು ಇವರೆಲ್ಲ ಕುಳಿತಿರುವ ರೀತಿಯನ್ನು ಕಂಡು ಏನೋ ಇದೆ
ಯೆಂದುಕೊಂಡು ಹಾಗೇ ಹೊರಟಳು. ಆದರೂ "ಗಂಡ, ದೊರೆ, ಕಂಡೂ ಕಾಣದ
ಹಾಗೆ ಹೋಗೋದು ಹ್ಯಾಗೆ?" ಎಂದುಕೊಂಡು, ಅತ್ತ ತಿರುಗಿ ಬಂದು ಬಲ್ಲರಿಗೂ
ನಮಸ್ಕಾರ ಮಾಡಿದಳು. ಬೆಕ್ಕು ಅದೇ ಸಮಯ ಸಾಧಿಸಿ ಅದನ್ನು ಹಿಡಿದು ನುಂಗಿ
ಕೊಂಡಿತು. ಅದಕ್ಕಾದ ಅವಸ್ಥೆ ಕೈಯನ್ನು ಕಂಡು ಮಿಕ್ಕುವಲ್ಲ ಹೇಳದೆ ಕೇಳದೆ
ಪರಾರಿಯಾದುವು. ಕಥೆ ಕಾಡಿಗೆ ಹೋಯ್ತು, ನಾನು ಊರಿಗೆ ಬಂದೆ.
(೨೨) ಕುರುಡರ ಕಥೆ
ಮೂವರು ಕುರುಡರು ಹೋಗಿ ಒಬ್ಬ ದೊರೆಯನ್ನು ಕಂಡು " ತಮಗೆ ಜೀವನಕ್ಕೆ
ಅನುಕೂಲ ಮಾಡಿಕೊಡಬೇಕು " ಎಂದು ಕೇಳಿಕೊಂಡರು. ದೊರೆಯ "ನೀವು
೧೦೨
--------------------------------------------------------------
ಕಥೆಗಳು
ಯಾರು? ನಿಮಗೆ ಏನೇನು ಬರುತ್ತದೆ?" ಎಂದು ಕೇಳಿದನು. ಮೊದಲನೆಯವನು
“ ನಾನು ಅಶ್ವಪರೀಕ್ಪೆ ಬಲ್ಲೆ " ಎಂದನು. ಎರಡನೆಯವನು " ನಾನು ರತ್ನ ಪರೀಕ್ಷಕ"
ಎಂದನು, ಮೂರನೆಯವನು " ನಾನು ಮನುಷ್ಯ ಪರೀಕ್ಷೆಯಲ್ಲಿ ಗಟ್ಟಿಗ" ಎಂದನು.
ದೊರೆಗೆ ನಂಬಿಕೆ ಬರಲಿಲ್ಲ. "ಇರಲಿ" ಎಂದು ಅವರಿಗೆ ಒಂದು ವರಹ ಸಂಬಳ
ಚತ್ರದೂಟ ಎಂದು ಗೊತ್ತುಮಾಡಿದನು. ಕುರುಡರು ಸುಖವಾಗಿದ್ದರು.
ಒಂದು ದಿನ ಒಬ್ಬ ಕುದುರೆಯ ವ್ಯಾಪಾರಿಯು ಭಾರಿಯ ಪಂಚರಂಗಿ ಕುದುರೆ
ಯೊಂದನ್ನು ಮಾರಾಟಕ್ಕೆ ತಂದನು. ಬಲು ಚೆಂದುಳ್ಳ ಕುದುರೆಯನ್ನು ಎಲ್ಲರೂ
ಮೋಹಿಸಿದರು. ಅರಮನೆಯ ಅಶ್ವಪರೀಕ್ಷಕನು "ಮಹಾಸ್ಥಾಮಿ! ಹದಿನೈದು
ಸಾವಿರ ಕೊಡಬಹುದು " ಎಂದನು. ಅರಸನ ಮಂತ್ರಿಯು ಮಾತನಾಡಿ ಹತ್ತು
ಸಾವಿರಕ್ಕೆ ಗೊತ್ತುಮಾಡಿದನು. ಇನ್ನೇನು ಹಣ ಕೊಟ್ಟುಬಿಡಬೇಕು, ಆಷ್ಟರಲ್ಲಿ
ಕುರುಡನ ನೆನಪಾಗಿ ಅವನನ್ನು ಕರೆಸಿ " ಈ ಕುದುರೆಯನ್ನು ತೆಗೆದುಕೊಳ್ಳಬಹುದೇ ?
ನೋಡು" ಎಂದನು. ಕುರುಡನು ಅದರ ಮೆಯ್ಕೆಲ್ಲಾ ಸವರಿ, " ಇದು ಕುರುಡು
ಕಾಸಿಗೆ ಕೊಟ್ಟರೂ ಬೇಡಿ. ಮಹಾಸ್ವಾಮಿ !" ಎಂದನು. ಅರಸನಿಗೆ ಆಶ್ಚರ್ಯವಾಗಿ
"ನೀನು ಹಾಗೆನ್ನಲು ಕಾರಣವೇನು?" ಎಂದು ಕೇಳಿದನು. ಕುರುಡನು "" ಸಾಕ್ಷಿ
ತೋರಿಸುತ್ತೇನೆ" ಎಂದು ಹೇಳಿ ಅದರ ಹೊಟ್ಟೆಯನ್ನು ಸವರುತ್ತಾ, ಒಂದು ಕಡೆ ಬೆರಳು
ಔಕಿದನು. ಕೂಡಲಿ ಕುದುರೆಯು ಚಂಗನೆ ಹಾರಿ ಹಿಂಗಣ್ಣು ಹೊಡೆಯಿತು.
" ನೋಡಿದಿರಾ ಮಹಾಸ್ವಾಮಿ! ಇದನ್ನು ತಮ್ಮ ಬಳಿಗೆ ಯಾರೋ ಶತ್ರುಗಳು
ಕಳುಹಿಸಿದ್ದಾರೆ" ಎಂದನು. ಕುದುರೆಯ ವ್ಯಾಪಾರಿಯನ್ನು ಹಿಡಿದು ಕಟ್ಟಿ ಹೊಡೆದು
ಬಡಿದು ಮಾಡಲು ಕುರುಡನ ಮಾತು ನಿಜವಾಯಿತು. ಕುರುಡನಿಗೆ ನಾಲ್ಕು ವರಹ
ಸಂಬಳವಾಯಿತು.
ಇನ್ನೊಂದು ಸಲ ಒಬ್ಬ ರತ್ನ ವ್ಯಾಪಾರಿಯು ಒಂದು ರತ್ನವನ್ನು ಅರಸನ
ಬಳಿಗೆ ಮಾರಾಟಕ್ಕೆ ತಂದನು. "ಅದರ ಕಾಂತಿ, ನೀರೋಟ ಕಂಡು ಎಲ್ಲರೂ ಆಶ್ಚರ್ಯ
ಪಟ್ಟುಹೋದರು. ಅರಮನೆಯ ಸರಾಫನು ಬಂದು ಪರೀಕ್ಷಿಸಿ " ಇದಕ್ಕೆ 'ಅರ್ಧ
ಲಕ್ಷ್ಮ ಕಣ್ಣು ಮುಚ್ಚಿ ಕೊಂಡು ಕೊಡಬಹುದು" ಎಂದನು. ಅರಸನಿಗೆ ಕುದುರೆಯ
ವ್ಯಾಪಾರದ ನೆನಪಾಗಿ, ಈ ಸಲವೂ ಕುರುಡನನ್ನು ಕರೆಯಿಸಿ " ಈ ರತ್ನದ ಬೆಲೆ ಕಟ್ಟು "
ಎಂದನು. ಕುರುಡನು ಅದನ್ನು ಮುಟ್ಟಿ ನೋಡುತ್ತಾ ಅಷ್ಟು ಹೊತ್ತು ಕೈಯಲ್ಲಿಟ್ಟು
ಕೊಂಡಿದ್ದು " ಸರಿ, ಕವಡೆಯೂ ಬಾಳದು ಈ ಕಲ್ಲು ಎಂದು ಎಸೆದನು. ಅರಸನು
ಆಶ್ಚರ್ಯಪಟ್ಟು " ಅದು ಹೇಗೆ?" ಎನ್ನಲು, " ಮಹಾಸ್ವಾಮಿಯವರು ಒಪ್ಪಿದರೆ
ಇದರ ಪರೀಕ್ಷೆ ತೋರಿಸುತ್ತೇನೆ" ಎಂದನು. ದೊರೆಯು ಆಗಬಹುದು ಎನ್ನಲು,
ಅದನ್ನು ಏಣಿನ ಮೇಲಿಟ್ಟು ಹೊಡೆಯಲು ಅದು ಪಳಾರನೆ ಗಾಜಿನಂತೆ ಒಡೆದು
ಹೋಯಿತು. ಅರಸನು ಮೆಚ್ಚಿಕೊಂಡು ಅವನಿಗೂ ನಾಲ್ಕು ವರಹ ಸಂಬಳ ಮಾಡಿದನು.
ಇಬ್ಬರಲ್ಲಿ ನಂಬಿಕೆ ಬರಲು, ಮೂರನೆಯ ಕುರುಡನನ್ನು ಪರೀಕ್ಷಿಸಿ ನೋಡ
ಬೇಕೆಂದು ಅರಸನಿಗೆ ಮನಸ್ಸಾಯಿತು. ಪರೀಕ್ಷೆಯಲ್ಲಿ ಅವನೂ ಗೆದ್ದನು. ಅರಸನು
ಬಲು ಮೆಚ್ಚಿಕೊಂಡು ಮೂವರಿಗೂ ಹತ್ತು ಹತ್ತು ವರಹ ಸಂಬಳ ಮಾಡಿಕೊಟ್ಟನು.
ಕುರುಡರೂ ಸುಖವಾಗಿದ್ದರು. ಕಥೆ ಕಾಡಿಗೆ ಹೋಯ್ತು, ನಾನು ಊರಿಗೆ ಬಂದೆ.
* * * *
೧೦೩
------------------------------------------------------------
ಕರ್ಣಾಟಕ ಸಂಸ್ಕೃತಿ
ಇನ್ನು ಈ ಲೇಖನವನ್ನು ಮುಗಿಸುವ ಮೊದಲು ಎರಡು ಮಾತನಾಡೋಣ.
ಈ ಕಥೆಗಳಲ್ಲಿ ಕೆಲವಕ್ಕೆ ಅಲ್ಲಲ್ಲಿಯೇ ಸೂಕ್ಷ್ಮವಾದ ಟಿಪ್ಪಣಿಗಳನ್ನು ಬರೆದಿದ್ದೇವೆ
ಯಾಗಿ ಹೆಚ್ಚು ಹೇಳಬೇಕಾಗಿಲ್ಲ. ಒಟ್ಟಿನಲ್ಲಿ ಕಥೆಗಳನ್ನು ವಿಂಗಡಿಸಿ, ಅವುಗಳಲ್ಲಿ
ಕಾಣಬರುವ ಮನೋಭಾವನೆಗಳು, ಸಿದ್ಧಾ೦ತಗಳು, ಕಾರ್ಯಜಾಲಗಳು ರೂಪು
ಗೊಳ್ಳುವ ಕ್ರಮ, --ಇವುಗಳನ್ನು ಪರಿಭಾವಿಸಿ ನೋಡಿರಿ: ಇವುಗಳಿಂದ ಸೂಚಿತ
ವಾಗುವ ಸಂಸ್ಕೃತಿಯೆಂತಹುದು ಎಂಬುದನ್ನು ವಿಚಾರಿಸಿರಿ.
-------
೧೦೪
--------------------------------------------------------
v. ಗಾದೆಗಳೂ ಒಗಟೆಗಳೂ
ಗಾದೆಗಳು
ಗಾದೆಗಳನ್ನು ಅರಿಯದವರೇ ಇಲ್ಲ; ಆದರೂ ಗಾದೆಯೆಂದರೆ ಏನು ಎಂಬುದನ್ನು
ಎಲ್ಲರೂ ಒಪ್ಪುವಂತೆ ಹೇಳುವುದು ಸಾಧ್ಯವಿಲ್ಲ. ಒಟ್ಟಿನಲ್ಲಿ, " ತಲೆತಲಾಂತರದಿಂದ
ಶೇಖರವಾಗಿರುವ ಅನುಭವವು ಯಾವನಾದರೊಬ್ಬನ "ಬಾಯಲ್ಲಿ ಮಾತಾಗಿ ಹೊರ
ಬೀಳುವುದು. ಜನತೆಯು ಆ ಮಾತಿನ ಸೊಬಗಿಗೂ ಅದರ ಹಿಂದಿರುವ ಅನುಭವಕ್ಕೂ
ಮೆಚ್ಚಿ ಅದನ್ನು ನಾಣ್ಯವಾಗಿ ಸಂಗ್ರಹಿಸುವುದು. ಜ್ಞಾತಾಜ್ಞಾತವಾಗಿ ಅದನ್ನು
ಸಾಧ್ಯವಾದಂತೆಲ್ಲ ಅವರಿವರೆನ್ನದೆ ತಿದ್ದುವರು; ಉಜ್ಜಿ ಹೊಳಪಿಕ್ಕುವರು. ಹೀಗೆ
ಸಿದ್ದವಾದ ಆ 'ಮೊಹರೆ ವಾಕ್ಯ'ವು ಗಾದೆ" ಎಂದು ಹೇಳಬಹುದು.*
ಈ ವಿಚಾರವಾಗಿ ಇನ್ನೊಬ್ಬ ವಿದ್ವಾಂಸರು ಹೀಗೆ ಹೇಳಿದ್ದಾರೆ: ಗಾದೆ
ಯೆಂದರೆ ಏನು ಎಂಬುದನ್ನು ವಿವರಿಸಲ ಆರಿಸ್ಟೋಟಿಲನ ಕಾಲದಿಂದ ಪ್ರಯತ್ನಗಳು
ನಡೆದಿದ್ದರೂ ಸಫಲವಾಗಿಲ್ಲ. ಹೇಗೆ ಹೇಗೆ ಹೇಳಿದರೂ ಅತಿವ್ಯಾಪ್ತಿ, ಅವ್ಯಾಪ್ತಿಗಳು
ತಪ್ಪುವಂತಿಲ್ಲ; ಅಲ್ಲದೆ, ಒಬ್ಬರು ಹೇಳುವುದನ್ನು ಮತ್ತೊಬ್ಬರು ಒಪ್ಪುವುದಿಲ್ಲ.
ಅರ್ಲ್ ರಸೆಲ್‌ರು 'ಅನೇಕರ ಅನುಭವ, ಒಬ್ಬನ ಬುದ್ಧಿ' ಎಂದರು. ಮತ್ತೊಬ್ಬರು
'ದೀರ್ಘಕಾಲದ ಅನುಭವದ ಘುಟಿಕೆಗಳು' ಎಂದರು. ಒಟ್ಟಿನಲ್ಲಿ, ಗಾದೆಯು
ಸಣ್ಣಗೆ, ನಾಜೋಕಾಗಿ, ಅರ್ಥವತ್ತಾಗಿ ಉಪ್ಪಿನಕಾಯಿನ ಹಾಗೆ ಇರಬೇಕು;
ನೆನೆಪಿನಲ್ಲಿ ಉಳಿಯುವಂತಿರಬೇಕು ; ನಾಣ್ಯವಾಗಿರಬೇಕು. ಜನತೆಯಂಗೀಕರಿಸಿ
ದಲ್ಲದೆ ಗಾದೆಯು ಗಾದೆಯಾಗುವುದಿಲ್ಲ. ಗಾದೆಯು ಒಬ್ಬನಿಂದಾದುದು. ನಿಜ,
ಆದರೆ ಅದನ್ನು ಮಾಡಿಸಿದ ಶಕ್ತಿಗಳು ಅನೇಕ.”%
ಗಾದೆಗಳು ಹುಟ್ಟಿದುದು ಹೇಗೆಯೆಂಬುದನ್ನು ಸ್ಪಷ್ಟವಾಗಿ ತೋರಿಸುವ
ಕಥೆಯೊಂದು ಕಥಾಸರಿತ್ಸಾಗರದಲ್ಲಿ ಬಂದಿದೆ:-
"ಹಿಂದೆ ಸ್ಥುಲಕೇಶನೆಂಬ ಮುನಿಗೆ ಮೇನಕೆಯಿಂದ ಪ್ರಮದ್ವರೆಯೆಂಬ ಮಗಳು
ಹುಟ್ಟಿದಳು. ರುರುವೆಂಬ ಮುನಿಕುಮಾರನು ಅತ್ತಿತ್ತ ತಿರುಗಿ ಅತಿಥಿಯಾಗಿ ಬಂದು
ಸ್ಥುಲಕೇಶನನ್ನು ಆಕೆಯನ್ನು ಮದುವೆಮಾಡಿಕೊಡಹೇಳಿದನು ; ತಂದೆಯು ಕೊಡಲೊಪ್ಪಿ
....................
* ವೇದ ಸಾಹಿತ್ಯದಲ್ಲಿ ಗಾಧಾ ಎಂಬವುಂಟು. ಇವು ಪದ್ಯರೂಪವಾಗಿದ್ದು, ಯಜ್ಞ, ವಿವಾಹ
ಮೊದಲಾದ ವಿಶೇಷ ಸಂದರ್ಭಗಳಲ್ಲಿ ಬರುವುವು. ಇವು ಮಂತ್ರದ ಹಾಗಿದ್ದರೂ ಮನುಷ್ಯ ಕೃತವಾದವು.
ಬೌದ್ಧ ಸಾಹಿತ್ಯದಲ್ಲಿ ಗಾಧಾ ಶಬ್ದವು ಕಥಾ ಎಂಬ ಅರ್ಥದಲ್ಲಿ ಬರುತ್ತದೆ.
% Chambers’ Encyclopedia, Vol. VIII, article : “‘Proverbs.”
೧೦೫
----------------------------------------------------------
ಕರ್ಣಾಟಕ ಸಂಸ್ಕೃತಿ
ಧಾರೆಯೆರೆಯುವಾಗ ಹಾವು ಕಚ್ಚಿ ಮದುಮಗಳು ಸತ್ತುಹೋದಳು. ಮದುಮಗನು
ಗೋಳಾಡಲು ನಿನ್ನ ಆಯುಷ್ಯದಲ್ಲಿ ಅರ್ಧವನ್ನು ಕೊಟ್ಟು ಮಡದಿಯನ್ನು: ಬದುಕಿಸಿ
ಕೊಳ್ಳೆಂದು ಆಕಾಶವಾಣಿ ನುಡಿಯಿತು. ಅದರಂತೆ ರುರುಕುಮಾರನು ತನ್ನ ಅರೆ
ಆಯುವನ್ನು ಕೊಡಲು ಪ್ರಮದ್ವರೆಯು ಬದುಕಿಕೊಂಡಳು. ತಂದೆಯು ಸಂತೋಷ
ದಿಂದ ಮಗಳನ್ನು ಮದುವೆಮಾಡಿಕೊಟ್ಟನು. ಅದುಮೊದಲು ಯಾವ ಹಾವನ್ನು
ಕಂಡರೂ ಹೆಂಡಿರನ್ನು ಕೊಂದೀತೆಂದು ಗಂಡನು ಕೊಲ್ಲುತ್ತಾ, ಬಂದನು. ಹೀಗಿರುವಲ್ಲಿ
ಹೊಡೆಯಬಂದ ಮುನಿಗೆ ಒಳ್ಳೆಯೊಂದು, "ಆಯ್ಕಾ! ಹಾರುವಾ! ಹಾವಿಗೆ
ಮುನಿದು ಒಳ್ಳೆಯನ್ನು ಕೊಲ್ಲುವೆ. ನಿನ್ನ ಹೆಂಡಿರನ್ನು ಕಚ್ಚಿದ್ದು ಹಾವು,
ಒಳ್ಳೆಯಲ್ಲ, ನಂಜಿರುವುದು ಹಾನಿಗೆ, ಒಳ್ಳೆಗಲ್ಲ' ಎಂದಿತು, ಇತ್ಯಾದಿ."*
" ಹಾವಿಗೆ ಮುನಿದು ಒಳ್ಳೆಯನ್ನು ಕೊಲ್ಲುವೆ" ಎಂಬ ಗಾದೆಗೆ ಸಂವಾದಿ
ಯಾಗಿ ನಮ್ಮಲ್ಲಿ "ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ" ಎಂಬ ಗಾದೆ
ಯುಂಟು. ಆದರೆ ಆ ಗಾದೆಯ ಹಿಂದೆ ಯಾವುದೂ ಕಥೆಯಿದ್ದಂತೆ ತೋರುವುದಿಲ್ಲ.
ಕನ್ನಡದ ಗಾದೆಯೊಂದರ ಹಿಂದಿರುವ ಕಥೆಯನ್ನೂ ನೋಡೋಣ:
" ಒಬ್ಬ ದರಿದ್ರನು ತನ್ನ ಮನೆಯಲ್ಲಿ ದಿನ ದಿನವೂ ರಾಗಿಯ ಹಿಟ್ಟನ್ನು ತಿಂದು
ತಿಂದು ಬೇಸರಗೊಂಡನು. ಅತ್ತೆಯ ಮನೆಗಾದರೂ ಹೋದರೆ ಅಲ್ಲಾದರೂ ಒಳ್ಳೆಯ
ಊಟವು ಸಿಕ್ಕೀತೆಂದು ಚಪಲಗೊಂಡು ಹೆಂಡಿತಿಯೊಡನೆ ತನ್ನ ಆಸೆಯನ್ನು ಹೇಳಿ
ಕೊಂಡನು. ಅವಳು ಆಗಬಹುದೆಂದು ದಾರಿಯ ಬುತ್ತಿಗೆಂದು ರಾಗಿಯ ರೊಟ್ಟಿ
ಯನ್ನು ಕಟ್ಟಿ ಕೊಟ್ಟಳು. ಇವನು ಅತ್ತೆಯಮನೆಗೆ ಹೋಗಲು, ಮನೆಯವರೆಲ್ಲ ಸಂಭ್ರಮ
ದಿಂದ ಉಪಚರಿಸಿ, ಬಗೆಬಗೆಯ ಅಡುಗೆಗಳನ್ನು ಮಾಡಿದರು. ಇವನು "ಈ ದಿನ
ವಾದರೂ ರಾಗಿಹಿಟ್ಟು ತಪ್ಪಿತು” ಎಂದು ಸಂತೋಷವಾಗಿ ಊಟಮಾಡುತ್ತಿರಲು
ಅತ್ತೆಯು ಶಾಮಿಗೆಯನ್ನು ತಂದು ಬಡಿಸಿದಳು. ಅಳಿಯನು ನೋಡುತ್ತಾನೆ: ಅದು
ರಾಗಿಯ ಹಿಟ್ಟಿನಿಂದ ಮಾಡಿದುದು. ಆಗ ಅವನಿಗೆ ರೇಗಿಹೋಗಿ "ಮನೆಯಲ್ಲಿದ್ದರೆ
ಲಿಂಗಾಕಾರ, ಹಾದಿ ಹಿಡಿದರೆ ಚಕ್ರಾಕಾರ, ಇಲ್ಲಿಗೂ ಬಂದೆಯ ಜಡೆಶಂಕರ'
ಎಂದನಂತೆ! "%
ಈ ಗಾದೆಗೆ ಸಂವಾದಿಯಾಗಿರುವ " ಆನೆಯಾದರೂ ಸೊಪ್ಪು ಮೇಯ್ಯುವುದು
ತಪ್ಪದು," " ರಾಮೇಶ್ವರಕ್ಕೆ ಹೋದರೂ ಶನೈಶ್ಚರ ಬಿಡದು... "ಪಾಪಿ
ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು " ಎಂಬ ಗಾದೆಗಳನ್ನೂ ಸೋಮೇಶ್ವರ
ಶತಕದಲ್ಲಿರುವ " ಪಡೆದಷ್ಟಲ್ಲದೆ ಬರ್ಪ್ಪುದೇ?" ಎಂಬ ಕವಿವಾಕ್ಕವನ್ನೂ ಹೋಲಿಸಿ
ನೋಡಿರಿ.
ಈ ಗಾದೆಗಳು ಅನುಭವದ ತಿರುಳು ಎಂಬುದನ್ನು ತೋರಿಸುವ ಗಾದೆಯೂ
ಒಂದುಂಟು, "ವೇದ ಗಾದೆಯ ಮಾತು, ಶಾಸ್ತ್ರ ತಿಳಿದವರ ಮಾತು, ಪುರಾಣ
..........................
* "ಕನ್ನಡ ಕಥಾಸರಿತ್ಸಾಗರ," ಎರಡನೆಯ ಲಂಬಕ.
% ಪಂಚತಂತ್ರ ಮೊದಲಾದ ನೀತಿಶಾಸ್ತ್ರಗಳಲ್ಲಿ ಬರುವ ಶ್ಲೋಕರೂಸವಾದ ಗಾದೆಗಳನ್ನೂ ಅವಕ್ಕೆ
ಅರ್ಥ ವಾದದಂತೆ ಬರುವ ಕಥೆಗಳನ್ನೂ ಹೋಲಿಸಿರಿ.
೧೦೬
-------------------------------------------------------------------
ಗಾದೆಗಳೂ ಒಗಟೆಗಳೂ
ಪುಂಡರ ಮಾತು" ಎಂಬ ಈ ಗಾದೆಯಲ್ಲಿ ವೇದಮಂತ್ರಗಳು ಅನುಷ್ಟಾನ ಸಾದೃಶ್ಯ
ದಿಂದ ಪಡೆಯುವ ಸಿದ್ಧಿಯನ್ನು ಕುರಿತು ಹೇಳುವ ಮಾತುಗಳು ಎಂಬುದನ್ನು, ಎಷ್ಟು
ಚೆನ್ನಾಗಿ ಚಿತ್ರಿಸಿದೆ! | ಶ್ರೀಮಂತನೊಬ್ಬನು ಯೇಸುವಿಗೆ ಒಂದು ನಾಣ್ಯವನ್ನು.
ತೋರಿಸಿ, ಗುರುವೇ! ಇದನ್ನು ಯಾರಿಗೆ ಹೊಡಲಿ?' ಎಂದು ಕೇಳಿದನಂತೆ. ಆತನು
"ನಾಣ್ಯದಮೇಲೆ ಯಾರ ಮುದ್ರೆಯಿದೆಯೋ ಅವರಿಗೆ ಅದನ್ನು ಕೊಡು " ಎಂದನಂತೆ.
ಹಾಗೆ ಆ ವೇದದ ಮಂತ್ರಗಳು. ಆಯಾ ಅನುಭವವು ಬೇಕಾದವರಿಗೆ ಮಾತ್ರ
ಬೇಕಾದವು. ಹಾಗಲ್ಲದೆ " ಕಟುಕರ ಅಂಗಡಿಯಲ್ಲಿ ಬಸವನ ಪುರಾಣ ಹೇಳು"ವುದಕ್ಕೆ
ಹೊರಟವಲ್ಲ. ಒಂದುವೇಳೆ ಹಾಗಲ್ಲದೆ " ಕುರುಡು ಹೆಣ್ಣಿಗೆ ಕುಂಟು ಗಂಡ"
ಎ೦ಬಂತೆ ಮಾಡೋಣವೆಂದು ಹೊರಟರೆ, ಅದು " ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು "
ಎಂಬಂತಾಗುವುದು. ಇದಿಷ್ಟು ವಿಸ್ತಾರವಾದ ಅನುಭವವೆಲ್ಲ "ವೇದ ಗಾದೆಯ
ಮಾತು" ಎಂಬ ಒಂದು ಗಾದೆಯಲ್ಲಿ ಪಾಕವಿಳಿದಿರುವುದು. ಹೀಗೆ ಸಂದರ್ಭೋಚಿತ
ವಾಗಿ, ವಿಸ್ತಾರವಾದ ಅನುಭವ ಪ್ರಪಂಚವೊಂದನ್ನು ಚೊಕ್ಕವಾಡ ಪುಟ್ಟ
"ಮೊಹರೆ ವಾಕ್ಯ"ಗಳಲ್ಲಿ ಗಾದೆಯು ಹೇಳುವುದು. ಆ ಗಾದೆಯು ವೇದಕ್ಕೆ
ಸಮಾನವೆಂದು ಜನತೆಯು ಅಂಗೀಕರಿಸುವುದು.
" ಬಾಳೆ ಬಗೆದುಹಾಕು ; ತೆಂಗು ತೇಲಿಹಾಕು,"* "ಜೇನು ಅಳಿದವನು ಕ್ರೈ
ನೆಕ್ಕದಿರುವನೇ?" " ಅಂಬಲಿ ಕುಡಿದವನು ಅಳಿಗೆ ಹೊತ್ತುಕೊಂಡು ಹೋದಾನೆ?"
ಮುಂತಾದ ಗಾದೆಗಳನ ನ್ನೂ ಕುರಿತು ಪರ್ಯಾಲೋಚಿಸಿರಿ.
ಇದರ ಜೊತೆಗೆ ಗಾದೆಗಳನ್ನು ಉದಾಹರಿಸುವುದಕ್ಕೋಸ್ಕರವೇ ನಡೆದುವೋ
ಎಂದು ಆಶ್ಚರ್ಯವನ್ನು ಉಂಟುಮಾಡುವಂತಹ ಸಂದರ್ಭಗಳು ಕನ್ನಡ ನಾಡಿನ
ಇತಿಹಾಸದಲ್ಲಿ ಅನೇಕವಾಗಿವೆ. " ಉಪ್ಪಿಟ್ಟವನನ್ನು ಮುಪ್ಪಿನ ತನಕ ನೆನೆ” ಎ೦ಬು
ದೊಂದು ಗಾದೆ. ನಾವು ಶಾಸನಗಳನ್ನು, ನೋಡುತ್ತ ಬಂದರೆ, ಈ ಗಾದೆಯನ್ನು
ಸಂಪೂರ್ಣವಾಗಿ ಇರಲಿ ಅದಕ್ಕಿಂತಲೂ ಹೆಚ್ಚಾಗಿ (ಸಾಧ್ಯವಾದರೆ)--ಪಾಲಿಸಿರು
ವವರೂ ಉಂಟು ಎಂಬುದು ತಿಳಿಯುವುದು.
ಹೊಯ್ಸಳ ದಂಡಾಧೀಶನಾದ ಕುಮಾರ ಲಕ್ಷ್ಮನ ಕಥೆಯನ್ನು ನೋಡೋಣ :-
" ಅರಮನೆ ತೊಟ್ಟಿಲೆ, ನೆಗಳ್ಳಾದರಮದು ಬಾಯೆಣ್ನೆ, ದಾದಿಯೆ ತನ್ನಂತಃಪುರಮೆನೆ
ನೃಪಂ ಪೊರೆದ ಮಗಂ ತದ ಲಕ್ಷ್ಮ ದಂಡಾಧೀಶಂ,
...............
* ವ್ಯವಸಾಯ ಸಂಬಂಧವಾದ ಈ ಜಾತಿಯ ಗಾದೆಗಳ ವಿಚಾರವಾಗಿ " ಮೈಸೂರು ಗೆಜೆಟಿಯರ್”?
(New Fdition, Vol. III, Chap. 11, Page 25) ಹೀಗೆ ಹೇಳಿದೆ: “The expences. of
centuries finds crystallised expression in various agricultural proverbs and sayings."
೧೦೭
--------------------------------------------------------------
ಕರ್ಣಾಟಕ ಸಂಸ್ಕೃತಿ
ಆಳರಸೆಂಬ ಭೇದಮಿನಿತಪ್ಪೊಡಮಿಲ್ಲಿವರಲ್ಲಿ ತೇಜಮುಂ |
ಲೀಲೆಯ ರಾಜ್ಯಚಿಹ್ನಮುಮನವೀರ್ವರೊಳಂ ಸಮನೆಂದುವೆಂಬಿನಂ !
ಪಾಳಿಸುವರ್ಧರಾವಳಯಮಂ ಪರಮೋತ್ಸವದಿಂದೆ ವೀರಬ |
ಲ್ಲಾಳ ನೃಪಾಳನುಂ ಕುವರ ಲಕ್ಷ್ಮ ಚಮೂಪನುಮೇಂ ಪುಣ್ಯರೋ ॥
ಧನಮುಂ ಪ್ರಾಣಮುಮೆಂಬಿನಂ ಕುವರ ಲಕ್ಷ್ಮಂ ವೀರಬಲ್ಲಾಳದೇ ।
ವನ ದಾನೋನ್ನತಿಗಂ ಜಯೋನ್ನತಿಗಮೀಯಲ್ ಪೂಣ್ದು ಮುಂದಿಟ್ಟು ರಾ ॥
ಮನ ಬೀಡಿಂಗಣುವಂ ಯಮಾತ್ಮಜನ ಬೀಡಿಂಗರ್ಜುನಂ ಚಂದ್ರಜೂ |
ಟನ ಬೀಡಿಂಗೆ ಕುಮಾರನಿರ್ಪ ತೆರದಿಂದಿರ್ದ್ದಪ್ಪನೇಂ ಧೀರನೋ ॥*
ಮುತ್ತಿನ ಪೆಂಡೆಯಂ ಮುರಹರಂ ಕನಕಾದ್ರಿಯೊಳಂದು ಶೇಷನಂ |
ಸುತ್ತಿದ ಭಂಗಿಯಿಂದಮೆಸೆದಿರ್ಪದು ಪೊನ್ನ ತೊಡರ್ ತದದ್ರಿಯಂ ॥
ಸುತ್ತಿದ ಕರ್ಣಿಕಾರ ವನಮಾಲೆವೊಲಿರ್ಪದು ಕೊಟ್ಟ ಭಾಷೆಗ |
ಚ್ಹೊತ್ತಿದ ಮಾಳ್ಕೆಯಿಂ ಕುವರ ಲಕ್ಷ್ಮ ಚಮೂಪನ ಪಾದಪದ್ಮದೊಳ್ I”
ಇಂತಹ ಲಕ್ಷ್ಮನು ಸ್ವಾಮಿಗಾಗಿ "ಗರುಡರೊಡನೆ ಬೆರೆಸಾದಂ”% ಲಕ್ಷ್ಮ
ನಂತಹ ಅಭಿಜಾತರ ಮಾತಂತಿರಲಿ. ಸಾಮಾನ್ಯರೂ ಸ್ವಾಮಿಭಕ್ತಿ ಕೃತಜ್ಞತೆಗಳನ್ನು
ಮೆರೆಯುತ್ತಿದ್ದರು ಎಂಬುದಕ್ಕೂ ಹಲವು ನಿದರ್ಶನಗಳಿವೆ. ಈಗ ಒಂದು ಉದಾಹರಿ
ಸೋಣ:
" ಸ್ವಸ್ತಿ. ನೀತಿಮಾರ್ಗ ಕೊಂಗುಣಿವರ್ಮ ಧರ್ಮಮಹಾರಾಜಾಧಿರಾಜ ಕೋವ
ಳಾಲವರ ಪುರೇಸ್ವರ ನಂದಗಿರಿನಾಥ ಶ್ರೀಮತ್ ಪೆಮ್ಮ ನಡಿಗಳ ಸ್ವರ್ಗಮೇರಿದ (?)
ಏರಿದೊಡೆ ಪೆಮ್ಮಾನಡಿಗಳ ಮನೆಮಗತ್ತಿನ್ ಅಗರಯ್ಯ ನೀತಿಮಾರ್ಗ ಪೆಮ್ಮನಡಿಗೆ
ಕಿಬ್ಬುಣ್ಣೆಯಾದಂ".#
ಗಾದೆಗಳಲ್ಲಿ ಒಂದೊಂದು ಕುಲದವರಿಗೆ ಮಾತ್ರ ಸಂಬಂಧಿಸಿದವೂ ಉಂಟು:
ಅಭ್ಯಾಸವಿಲ್ಲದ ಬ್ರಾಹ್ಮಣ ಔಪಾಸನ ಮಾಡುವುದಕ್ಕೆ ಹೋಗಿ ಗಡ್ಡ ಮಾಸೇ
ಸುಟ್ಟುಕೊಂಡ," "ಅಪ್ಪ್ಸಾಭಟ್ಟರ ಸೊಸೆಯಾಗಿ ತಿಪ್ಪಾಭಟ್ಟರ ಮಗಳಾಗಿ ಲವಣ
ಎಂದರೆ ಕಾಣೆನೇ ದೊಡ್ಡೆಮ್ಮೆ ಸಗಣಿ" ಮೊದಲಾದವು ಬ್ರಾಹ್ಮಣರಿಗೆ ಮಾತ್ರ
ಅನ್ನಯಿಸತಕ್ಕವು, "ಶಿವ ಕೊಟ್ಟಿರೂ ಶಿದ್ದಪ್ಪ ಕೊಡ," " ಬಡದೇವರ ಕಂಡರೆ
ಬಿಲ್ಲಪತ್ರೆಯೂ ಭುಸ್ಸೆಂತು" ಮೊದಲಾದವು ವೀರಶೈವರ ಸಂಬಂಧವನ್ನು ತೋರಿಸ
ತಕ್ಕವು. " ಈರುಳ್ಳಿ ಕಾರಾ ನೋಡು ಮೂದೇವೀ ಮೊಕ ನೋಡು," " ಕಬ್ಬಿನ
.......................
* ಇಲ್ಲಿ ಉದಾಹರಿಸಿರುವ ಪದ್ಯಗಳಲ್ಲಿ ಎರಡನೆಯದರ ಪೂರ್ವಾರ್ಧದಲ್ಲಿರುವ ಭಾವವನ್ನು ಗಮನಿ
ಸಿರಿ. ಇಂಡಿಯದಲ್ಲಿರುವ ದಾನ ಶಾಸನಗಳೆಲ್ಲ ಬಹುತರವಾಗಿ ಹೀಗೆಯೇ " ತನ್ನೊಡೆಯನ ಪುಣ್ಯಕೀರ್ತಿ
ಗಾಗಿ ಮಾಡಿದ ದಾನ" ಗಳನ್ನು ಉಲ್ಲೇಖಿಸುವುವು ಎಂದು ಹೇಳಿದರೆ ತಪ್ಪಿಲ್ಲ.
% ಶಾಸನ: ಬೇಲೂರು, ೧೧೨ & Mysore & Coorg from Inscriptions, Page 104.
# ಶಾಸನ, ತಿರುಮಕೂಡ್ಲು ನರಸೀಪುರ, ೯೧.
(ಕಿರ್ಗುಂಟೆಯಾಗುವುದೆಂದರೆ ಹೆಣದ ಜೊತೆಯಲ್ಲಿ ತಾನೂ ಸಮಾಧಿಮಾಡಿಸಿಕೊಳ್ಳುವುದು.)
೧೦೮
-------------------------------------------------------------------
ಗಾದೆಗಳೂ ಒಗಟೆಗಳೂ
ತೋಟದಲ್ಲಿ ಸೂಲಂಗಿ ಹುಟ್ಟಿದಂಗೆ," " ತೊಂಡೆ ಬಲಿತರೆ ತೊಡೆ ದಪ್ಪವಾದೀತೆ?"
ಮೊದಲಾದವು ಹಳ್ಳಿಗರನ್ನು ಗುರುತಿಸುವವು.
ಹಾಗೆಯೇ ಬಹುಮಟ್ಟಿಗೆ ಇತರರು ಕುಲ ಕುಲದವರನ್ನು ಕುರಿತು ಆಡಿ
ಕೊಂಡಂತೆ ಕಂಡರೂ ಆಯಾ ಕುಲದ ಮುಖ್ಯ ಲಕ್ಷಣಗಳನ್ನು ಕನ್ನಡಿಸಿದಂತೆ
ತೋರುವ ಗಾದೆಗಳೂ ಇವೆ. " ಕೋಮಟಿಗೆ ಕೊಡ ಬಣಜಿಗ ಬಿಡ" "ಹಸಿದ
ಹಾರುವನನ್ನೂ ಉಂಡ ಒಕ್ಕಲಿಗನನ್ನೂ ಕೆಣಕಬೇಡ," " ನರಕಕ್ಕೆ ಹೋದರೂ
ನಾಮಧಾರಿ ನಂಬಬೇಡ" ಮೊದಲಾದ ಗಾದೆಗಳು ಇಂತಹವು.*
ಇದರಂತೆ ಬೇರೆ ಬೇರೆ ಕಸಬುಗಳನ್ನು ಕುರಿತು ಹುಟ್ಟಿರುವ ಗಾದೆಗಳೂ ಉಂಟು.
" ಮಿಕ್ಕೆಳ್ಳು ಮೃಗತಿರೇಲಿ ಚೆಲ್ಲು,” "ಆರಿದ್ರೆ ಮಳೆಗೆ ಆಗಿರೋ ಉಕ್ಕೆ ಬಿತ್ತಿಬಿಡು,"
“ ಮರಳುಭೂಮಿಗೆ ಹಸಿದ ಮೃತ್ತಿಕೆ," " ಎರೆ ನಂಬಿದೋ ದೊರೆ ನಂಬಿದೋ,"
"ಅನೂರಾಧೆ ಬಂದರೆ ನಮ್ಮ ರಾಗಿ ನಮ್ಮದು."
ಇವೆಲ್ಲದರ ಜೊತೆಗೆ ಕಾವ್ಯರಾಶಿಯಿಂದಲೂ ಬಂದು ಸೇರಿರುವ "ಕಣ್ಬೇನೆಯ
ಕರಡಿಯವೊಲರಚುವಂ ವಾಚಕನೇ ?" (ಛಂದೋಂಬುಧಿ), "ದೊರೆಗೆ ಪಿರಿಯರು
ಮೊಳರೇ?" (ಪಂಪ ರಾಮಾಯಣ), "ಕೃತ್ತಿಮದ ವಿಷದ ಸೋಂಕಿಗೆ ಗರುಡನಳವಳಿಯೆ
ಮತ್ತೆ ರಕ್ಷೆಗೆ ಮಂತ್ರಿಸುವರಾರ್?" (ಜೈಮಿನಿ), " ಕಾಯದಲ್ಪಸುಖಕ್ಕೆ ಘನ
ನಿಶ್ಶ್ರೇಯಸವ ಕೆಡಿಸುವೆನೆ? ಯಲವದ ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲ"
(ಕನ್ನಡ ಭಾರತ), "" ತೋರಮಾಣಿಕವೆಂದು ಸಿಡಿದರೆ ಭೂರಿಕೆಂಡವಿದಾಯ್ತು,"
(ನಳಚರಿತ್ರೆ), " ತಲೆಗೆ ಹೂವ ತಹೆನಲ್ಲದೆ ಹುಲ್ಲ ತರುವೆನೇ?" (ಶಿವಶರಣರ ವಚನಗಳು)
ಮೊದಲಾದ ಗಾದೆಗಳೂ ಉಂಟು. ಹಾಗೆಯೇ "ಸಕ್ಕರೆಗುಪ್ಪಂ ಸರಿಮಾಳ್ಪರೇ?"
(ಸೋಮೇಶ್ವರಶತಕ) ಎಂಬ ಕವಿವಾಕ್ಯಗಳನ್ನು ಆಶ್ರಯಿಸಿ ಹುಟ್ಟಿದಂತೆ ತೋರುವ
"ಹಿಟ್ಟೂ ಬೂದಿಯೂ ಒಂದೇ ?" ಎಂಬ ಗಾದೆಗಳೂ ಉಂಟು,
ಅಂತೂ “ಗಾದೆಗಳ ರಾಶಿಯು ದಿನದಿನಕ್ಕೂ ಬೆಳೆಯುತ್ತಿದೆ. ಹಳೆದು
ಅಳಿದಂತೆಲ್ಲ ಹೊಸ ಹೊಸದು ಹುಟ್ಟಿಬಂದು ತುಂಬುತ್ತಲಿದೆ. ಹಾಡು ಕಥೆಗಳಂತೆ
ಹಳೆಯವೂ ಮತ್ತೆ ಹೊಸ ರೂಪದಲ್ಲಿ ಹುಟ್ಟಿ ಬರುತ್ತಲೂ ಇವೆ. “ಅಲ್ಲಿ ಬಿದ್ದು
ಇಲ್ಲಿ ಬಿದ್ದು ಮಗ ಗುಂಡುಕಲ್ಲಾದ" ಎಂಬಂತೆ ಹೋದವು ಹೋಗಿ ಬಂದವು ಬಂದು
ಈ ಭಂಡಾರವು ಮಾತ್ರ ಎಂದಿನಂತೆ ಸಮುದ್ರದಂತೆ ಅಪಾರವಾಗಿದೆ" ಬಂದು
ನಿಶ್ಶಂಕವಾಗಿ ಹೇಳಬಹುದು.%
......................
* cf. Mysore (00061100: (New Edition), Vol. I, Page 210: ‘‘Caste in Proverbs.”
% “It is obvious that the greater number of these proverbs which seem to be
common property must be of eastern birth... .Go back as far as we may, we find the
proverb, the fable and the parable working together in the Fast.’— Chambers’
Encyclopedia, Vol. VIII, article : “Proverbs.”
೧೦೯
------------------------------------------------
ಕರ್ಣಾಟಕ ಸಂಸ್ಕೃತಿ
ಪರದೇಶಗಳ ಗಾದೆಗಳು ಕೆಲವನ್ನು ಹೇಳಿ ಈ ಭಾಗವನ್ನು ಮುಗಿಸೋಣ.
ಫ್ರಾನ್‌ಸಿನ ಗಾದೆಗಳಿವು: " ಮಾಡಿರುವುದು ನೋಡಿದರೆ ಮಾಡಿದವರ್ಯಾರು ಎಂದು
ತಿಳಿಯದೆ ?" " ನಮ್ಮನ್ನು ಹೊಗಳುವರನ್ನು ಕಂಡರೆ ನಮಗೆ ಇಷ್ಟ: ನಾವು
ಹೊಗಳುವರನ ಕಂಡರೆ ನಮಗೆ ಕಷ್ಟ," “ಸೂರ್ಯನನ್ನೂ ಸಾವನ್ನೂ ಬಿಟ್ಟ
ಕಣ್ಣಿಂದ ನೋಡುವರೂ ಉಂಟೆ?” ಚೀನದ ಗಾದೆಗಳಿವು: “ಗಳಿಗೇಲಿ ಮಾಡಿದ ತಪ್ಪು
ಸಾವಿನವರೆಗೂ ಮುಪ್ಪು” "ಆನೆ ಬೇಕು ಎಂದವ ಆಡು ಹಿಡಿದಾನೆ?" "ಸಿರಿತನ
ಹೋದರೆ ಬಡತನ ಬಂದಂತೆ ಬಡತನ ಹೋದರೆ ಸಿರಿತನ ಬಂದೀತೆ ?"*
ಒಗಟೆಗಳು
ಗಾದೆಗಳಂತೆಯೇ ಒಗಟೆಗಳೂ ಸರ್ವವ್ಯಾಪಿಗಳಾಗಿವೆ. ಆದರೆ ಗಾದೆಗಳಂತೆ
ಇವು ದೈನಂದಿನ ವ್ಯವಹಾರದಲ್ಲಿ ಬೆರೆದುಹೋಗಿವೆಯೆಂದು ಹೇಳಲಾಗುವುದಿಲ್ಲ.
ಗಾದೆಗಳು ಊಟ, ಉಪಚಾರಗಳಂತೆ ಬಾಳಿನಲ್ಲಿ ಬೆರೆತಿದ್ದರೆ, ಒಗಟೆಗಳು ಆಟಗಳಂತೆ
ಜೀವನದಲ್ಲಿ ಒಂದು ಸ್ಥಾನವನ್ನು ಪಡೆದಿವೆಯೆನ್ನಬಹುದು. ಸುಖ ದುಃಖಗಳಲ್ಲೆಲ್ಲ
ಗಾದೆಗಳು ಬರುತ್ತವೆ. ಆದರೆ ಒಗೆಟೆಗಳು ಬರುವುದಕ್ಕೆ ಮನಃಪ್ರಸಾದವು ಬೇಕು.
ಹೇಳುವವನಿಗೂ ಕೇಳುವವನಿಗೂ ವಿನೋದ ಪ್ರಿಯತೆಯು, ರಸಿಕತೆಯು ಬೇಕು.
ಜೊತೆಗೆ ಪ್ರಕಟವಾಗಿರುವದನ್ನು ವಿಕಟವಾಗಿ ಮುಚ್ಚಿಟ್ಟು ಹುಡುಕಿ ನೋಡು ಎಂಬ
ಆಟವಾಡುವ ಮನೋಭಾವವು ಬೇಕು.
ಮನುಷ್ಯನ ಮನಸ್ಸು ಗಿಡದಂತೆ ಬೇರೆ ಬೇರೆ ಅವಸ್ಥೆಗಳಲ್ಲಿ ಬೇರೆಬೇರೆ
ಸಾಂಸ್ಕೃತಿಕ ಘಟ್ಟಗಳನ್ನು ತೋರುವುದುಂಟು. ಆದರೂ ಜೀವನಿಗೆ ಸಹಜವಾದ
ಚಿತ್ತೂ ಆನಂದವೂ ಎಲ್ಲಾ ಘಟ್ಟಗಳಲ್ಲಿಯೂ ಅಂಶಾಂಶವಾಗಿಯಾದರೂ ವ್ಯಕ್ತವಾಗು
ತ್ತವೆ. ಈ ಅಂಶಗಳೇ ಪೂರ್ಣವಾಗಿ ಬೆಳೆಗೊಂಡಾಗ ತಾಂತ್ರಿಕ (Mystic), ರಸಿಕ
(emotional) ಭಾವಗಳಾಗುವುವು. ಈ ಭಾವಬೀಜಗಳು ಕಾಲಕರ್ಮಗಳ ತುಯ್ಯಾಟ
ದಲ್ಲಿ ಸಿಕ್ಕಿ ಆಗಾಗ ಪ್ರಕಟವಾಗುವುವು. ಅಂತಹ ಸಂದರ್ಭದಲ್ಲಿ ಮನಸ್ಸು ಸೃಷ್ಟಿಗೈವ
ಹಂಬಲದಿಂದ ಮುಂಬರಿದು ಕಾವ್ಯಸೃಷ್ಟಿಗೆ ಕೈಯಿಕ್ಕುವುದು. ತಂತ್ರಿಯು 'ಕಣ್ಣಿಗೆ
ಕಾಣುವುದೆಲ್ಲ ಕಾಣದುದರ ಒಂದೊಂದು ಗುರುತು' ಎನ್ನುತ್ತ ಅಂತರ್ಮುಖಿಯಾಗಿ
ಒಳನುಗ್ಗಿ ರಹಸ್ಯವನ್ನು ಭೇದಿಸಲು ಯತ್ನಿಸುವನು. ರಸಿಕನು ಆ ಪ್ರಯತ್ನಗಳ
ಫಲವನ್ನು, ಒಳಗೆ ಕಂಡುದನ್ನು, ಮತ್ತೆ ಹೊರಗೆ ಹುಡುಕುತ್ತ, ಹುಡುಕುವುದನ್ನು
................
* ಹಿಂದಿನಿಂದ: “ಚೊಚ್ಚಲು ಮೊದ್ದು " ಎಂಬುದು ಇನ್ನೊಂದು ಗಾದೆ. ಇದರಂತೆ ಚೊಚ್ಚಲು ಮಗುವು
ಮೊಂಕು; ಅಷ್ಟು, ಬುದ್ಧಿವಂತಿಕೆಯುಳ್ಳದಾಗಿರುವುದಿಲ್ಲ ಎಂದು ನಮ್ಮ ನಂಬಿಕೆ. ಇದಕ್ಕೆ ನಿದರ್ಶನವಾಗಿ,
ಇದುವರೆಗೆ ದೊರೆತಿರುವ ಆಧಾರಗಳಿಂದ ಹಿರಿಯ ಮಕ್ಕಳಿಗಿಂತ ಕಿರಿಯ ಮಕ್ಕಳೇ ಹೆಚ್ಚು ಬುದ್ದಿವಂತರು
ಎಂದು ಗೊತ್ತಾಗಿದೆ. ಜೂಲಿಯಸ್ ಸೀಸರ್, ಷೇಕ್ ಪಿಯರ್, ನೆಪೋಲಿಯನ್, ನೆಲ್ಸನ್ ಜಾರ್ಜ್
ವಾಷಿಂಗ್‌ಟನ್, ಅಬ್ರಹಾಂ ಲಿಂಕನ್, ಚಾರ್ಲಸ್ ಡಾರ್ನಿನ್, ಜಿ. ಬಿ. ಷಾ, ಮಾರ್ಷಲ್ ಘೋಷ್
ಮೊದಲಾದವರೆಲ್ಲ ಕಿರಿಯ ಮಕ್ಕಳೇ!
೧೧೦
----------------------------------------------------------
ಗಾದೆಗಳೂ ಒಗಟೆಗಳೂ
ಬಾಯಲ್ಲಿ ಹೇಳುತ್ತ ಹೇಳಿ ಕೇಳಿ ನಲಿಯುತ್ತ ಬಹಿರ್ಮುಖಿಯಾಗುವನು. ಈ
ಅಂತರ್ಮುಖಿಯು ಹೊರಟೆಡೆಯೂ ಬಹಿರ್ಮೂಖಿಯು ಬಂದೆಡೆಯೂ ಒಂದೇ ಆಗಿ
ಈ ಎರಡೂ ಒಂದೆಡೆ ಸೇರಿ ಅದೇ ಒಂದು ಆಟವಾಗುವುದು. ಇಲ್ಲಿ ಅಂತರ್ಮುಖಿಯ
ಸೆಳೆತವು ಹೆಚ್ಚಾಗಿದ್ದು ಬಹಿರ್ಮುಖಿಯ ತುಯ್ಯಾಟವು ಸಾಲದಿದ್ದರೆ ಆಗ ಆದ ಶಬ್ದ
ಮಯ ಸೃಷ್ಟಿಯು 'ಒಗಟು' ಆಗುವುದು. ಹಾಗಿಲ್ಲದೆ ಬಹಿಮ್ಮುಖಿಯ ಪ್ರಭಾವವು
ಒಲವಾಗಿದ್ದು ಅಂತರ್ಮುಖಿಯು ಯಥಾಯಥಾ ಇದ್ದರೆ ಅದು ಕಾವ್ಯವಾಗುವುದು.
ಜ್ಞಾನಿಗಳ ಕಾವ್ಯವು ಮಂತ್ರೋಪನಿಷತ್ತುಗಳಾಗುವುದೂ, ಭಾವವು ಬಲಿಯದೆ
ಭಾಷೆಯು ಬಲಿತವರ ಕಾವ್ಯವು ಜನಪ್ರಿಯವಾದ ಕಾವ್ಯಗಳಾಗುವುದೂ ಹೀಗೆಯೇ!
ಒಟ್ಟಿನಲ್ಲಿ ಹುಡುಗಿಯರು ಕವಡೆಯ ಆಟಿದ ಕೊನೆಯಲ್ಲಿ ತಾವು ಗೆದ್ದ ಕವಡೆಗಳನ್ನು
ಮುಚ್ಚಿಟ್ಟು ಸೋತವರನ್ನು ಹುಡುಕಿರೆನ್ನುವಂತೆ, ಆವರಣ ವಿಕ್ಷೇಪಗಳ ಪ್ರಭಾವಕ್ಕೆ,
ಸಿಕ್ಕಿದರೂ ನಲಿಯುತ್ತಿರುವ ಮನಸ್ಸು, ಮಕ್ಕಳೊಡನೆ 'ತ್ರೋಚಿ' ಆಡುವಾಡುವ
ಹಿರಿಯರಂತೆ, ಇತರರೊಡನೆ ಒಂದು ಕಣ್ಣ್ಯಾಮುಚ್ಚಾಲೆಯನ್ನು ಆಡುವುದು. ಆ
ಕಣ್ಮ್ವಾಮುಚ್ಚಾಲೆಯ ಕಾವ್ಯಸ್ವರೂಪವೇ ' ಒಗಟೆ.'
ಹೀಗೆ ಹುಟ್ಟುವ ಈ ಒಗಟಿಗಳು “ಹಗ್ಗ ಹಾಸಿದೆ; ಕೋಣ ಮಲಗಿದೆ"
ಎಂಬಂತೆ ಬಹಳ ಸ್ಥೂಲವಾಗಿರಬಹುದು. ಒಬ್ಬನು ಕುಂಬಳ ಬಳ್ಳಿ ಯನ್ನು ಕಾಣು
ತ್ತಾನೆ. ಅದರ ಮುಗ್ಗುಲಲ್ಲಿ ಭಾರಿಯ ಕುಂಬಳವು ಕುಳಿತಿರುವುದೂ ಕಣ್ಣಿಗೆ
ಬೀಳುತ್ತದೆ. ಅವನಿಗೆ ಆಪ್ರಾಕೃತಿಕ ದೃಶ್ಯದರ್ಶನದಿಂದ ಆನಂದ ಪ್ರಾದುರ್ಭಾವವಾಗಿ
ವೃತ್ತಿಯು ಅಂತರ್ಮುಖಿಯಾಗುತ್ತದೆ. ಆದರೆ ಯೋಗವಾದುದು ಕ್ಷೇಮವಾಗು
ವುದಕ್ಕೆ ಬೇಕಾದ ಪುಣ್ಯವಿಲ್ಲದೆ ಆ ಭಾವವು, ವೃತ್ತಿಯು, ಹೊರಬಿದ್ದು ಲೀಲಾವೃತ್ತಿ
ಯಾಗುತ್ತದೆ. ಈ ವೃತ್ತಿಯು ಹೊರಬೀಳುವಾಗ ತನಗೆ ಸಿಕ್ಕಿರುವ ಆನಂದಕಂದನನ್ನು
ಹೊರಗೆ ಎಸೆಯುವುದಕ್ಕೆ, ಆ ಕಂದುಕ ಖೇಲನಕ್ಕೆ, ಮತ್ತೊಬ್ಬನನ್ನು ಆಪೇಕಿ
ಸುತ್ತದೆ. ಇದ್ದುದನ್ನು ಇದ್ದ ಹಾಗೇ ಎಸೆದರೆ ಯಾರಿಗೆ ತೃಪ್ತಿ ? ಅದರಿಂದ ಕಸವನ್ನೂ
ರಸಮಾಡುವ ವೃತ್ತಿಯನ್ನು ಅಶ್ರಯಿಸಿ ಲಕ್ಷಣಾವೃತ್ತಿಯಿಂದ ಪದಾರ್ಥಾಂತರವನ್ನು
ಆರೋಪಿಸಿ ಬಳ್ಳಿ ಯನ್ನು ಹಗ್ಗ ವಾಗಿಯೂ ಕುಂಬಳದ ಹಣ್ಣನ್ನು ಕೋಣವಾಗಿಯೂ
ಉತ್ಪ್ರೇಕ್ಷಿಸಿ ಒಂದು ಒಗಟನ್ನು ಮಾಡುತ್ತಾನೆ. ಒಗಟನ್ನು ಹೇಳಿದವನಿಗೆ ಮಾತ್ರ
ಸಂತೋಷವೆಂದಲ್ಲ, ಎದುರುಗಡೆಯವನು ಆ ಒಗಟನ್ನು ಒಡೆದು ವಾಸವ ಸ್ಥಿತಿ
ಯನ್ನು ಊಹಿಸಿ ಸತ್ಕಾರ್ಥವನ್ನು ಕಂಡು ಹಿಗ್ಗುತ್ತಾನೆ. ಹಾಗೂ ಹೀಗೂ
ಇಬ್ಬರಿಗೂ ಆನಂದವಾಗುವಂತೆ, ಕ್ರಿಯಾ ಪ್ರತಿಕ್ರಿಯೆಗಳೆರಡರಲ್ಲೂ ಆನಂದ
ಪರ್ಯವಸಾಯಿಯಾಗಿರುವ ವಿನೋದದ ಕಲ್ಪನೆಯು ಈ ಒಗಟೆಯ ಉದ್ದೇಶವು.
(ಪುಟ ೩೯, ಹಾಡು ೨೨ ನೋಡಿರಿ).
೧೧೧
------------------------------------------------------------
ಕರ್ಣಾಟಕ ಸಂಸ್ಕೃತಿ
"ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿಯ ಲಿಂಗ" ಎಂಬುದು ಇನ್ನೊಂದು ಒಗಟೆ.
ತಿನ್ನುವುದಕ್ಕೆಂದು ಮುಂದಿಟ್ಟುಕೊಂಡಿರುವ ಹಲಸಿನ ತೊಳೆಯ ಬಣ್ಣವಂತೂ
ಮನಸ್ಸನ್ನು ಉದ್ಭೋಧಗೊಳಿಸಿ ಅದಕ್ಕೆ ಚಿನ್ನದ ನೆನಪನ್ನು ತರುವುದರಲ್ಲಿ ವಿಶೇಷ
ವಿಲ್ಲ; ಆದರೆ ಅದೊಳಗಿರುವ ಬೀಜವನ್ನು ಲಿಂಗವನ್ನಾಗಿ ಉತ್ಪ್ರೇಕ್ಷಿಸುವುದು ಮಾತ್ರ
ಮೇಲಿನ ಹಂತದಲ್ಲಿರುವ ಮನಸ್ಸಿನ ಗುರುತು. ಈ ಬೆಳೆದ ಮನಸ್ಸು ಒಂದೊಂದೆಡೆ
ಒಂದೊಂದು ರೀತಿಯಾಗಿ ತನ್ನ ಪ್ರಭಾವವನ್ನು ತೋರಿಸುವುದು. ಭೋಗಿಯಲ್ಲಿದ್ದು
ಆತನು ತನ್ನ ಕಾಂತೆಯೊಡನೆ ಏಕಾಂತದಲ್ಲಿರುವಾಗ,
" ಹೊತ್ತು ಹೋಗದು ರಮಣಿ ಬರಿಯ ಮಾತುಗಳಿಂದ |
ಮತ್ತೆ ಇದರರ್ಥವನು ತಿಳಿದ್ಹೇಳೆ ರಮಣೀ ॥"
ಎನ್ನಿಸುವುದು: ಇನ್ನೊಬ್ಬ ರಮಣಿಯಲ್ಲಿದ್ದು ಆಕೆಯು ಕುಟ್ಟುವಾಗ,
ಸುವ್ವಿ ಸುವ್ವಕ್ಕ ನಾರೀ | ಸುಜ್ಞಾನದಾಪರಿ ॥ ಪ ।|
ಪೂಜೆಗೊಂಡೆಲೇ ವೈಯ್ಯಾರಿ | ಸುವ್ವಕ್ಕ್ ನಾರೀ ॥ ಅ॥
ಒಂಭತ್ತು ಬಾಗಿಲಾ ಮುಂದೆ | ಒಂದೇ ಜೋತಿಯಾ ಬೆಳಕು ॥
ನಂಬಿಕಿಲ್ಲದಾ ಒಗೆತನ ಮಾಡಿದೆನೇ ॥೧ ॥
ಒಮ್ಮಾನದಾ ಜೋಳವಾ ತಂದು | ಮುಮ್ಮಾನದಾ ಗೋಧಿಯ ಬೀಸಿ |
ಒಮ್ಮಾನದಾ(?) ರೊಟ್ಟಿಯಾ ಸುಟ್ಬೇನೆ ॥ ೨ ||
ಅಂಗ ಆಚಾರ ಬದನೇಕಾಯಿ | ಲಿಂಗ ಷಡ್ಯದಾ(? ಹೋಳನ್ನೇ ಮಾಡಿ !
ಸಂಗ ಸಮರಸ ಪೋಣೀಸಿ ಕೊಟ್ಟಿನೇ ॥ ೩ ॥
ಅಷ್ಟರೊಳಗೆ ಗಂಡ ಬಂದು | ಅಡುವ ಮಡಕೆಯನ್ನು ಒಡೆದು 1
ಹುಟ್ಟು ಮುರಿದು ಮೂಲೆಗೇ ಚಾಚಿದನೆ ॥ ೪ ॥
ಎಂದು ಅ ಸ್ಪಷ್ಟ ಲಂಗಕವಾಗಿ ಹಾಡಿಸುವುದು: ಮತ್ತೊಮ್ಮೆ ಮಹಾನುಭಾವನಾದ
ಯೋಗೀಶ್ವರನಲ್ಲಿ ಬಾಲಭಾವನನ್ನು ತಂದೊಡ್ಡಿ,
ಬಾರಕ್ಕ ನಾವಿಬ್ಬರಾಡುವ | ಯೋಗಸಾಧನವೆಂಬುದ ನೋಡುವ ॥
ಎಂಟು ದಾಳಗಳನ್ನೇ ಕಟ್ಟುವ | ಆ | ತುಂಟ ರೈತರ ಹೊರಗಟ್ಟುವಾ ॥
ಹದಿ | ನೆಂಟು ದಾಳಗಳುಳ್ಳ | ಆ! ಮಂಟಪ ಮಧ್ಯದಿ
ಕಂಟಕವಿಲ್ಲದೆ ಕವಡೆಯನಾಡುವ ॥ ೧ ॥
ನವದ್ವಾರಗಳನ್ನೇ ಬಂಧಿಸಿ । ಷಡುಚಕ್ರದಿಂದಲಿ ವಾಯುವನೇರಿಸಿ ॥
ಕೇಳಕ್ಕ ಮನವ ಭ್ರೂಮಧ್ಯದಿ ನಿಲ್ಲಿಸಿ | ಒಡೆಯ ಚಿದಾನಂದ ಗುರುವನ್ನೇ
ಸ್ಮರಿಸಿ ||
೧೧೨
---------------------------------------------------------
ಗಾದೆಗಳೂ ಒಗಟೆಗಳೂ
ಎಂದು ಸ್ಪಷ್ಟಾಸ್ಪಷ್ಟ ಲಿಂಗಕವಾಗಿ ನುಡಿಸುವುದು.*
ಜನ ಜನಾಂಗಗಳಲ್ಲಿ ಈ ಒಗಟೆಗಳಿದ್ದುವು: ಇವೆ.% ಸಂಹಿತೆಯಲ್ಲಿಯೂ
ಒಗಟೆಗಳು ಅಲ್ಲಲ್ಲಿ ಬಂದಿವೆ. ಅಷ್ಟೇ ಅಲ್ಲ; ಬ್ರಾಹ್ಮಣಗಳಲ್ಲಿ ಯಜ್ಜೀಯ ಪದಾರ್ಥ
ಗಳಲ್ಲಿ ಅಲೌಕಿಕವಾಗಿ ಅತೀಂದ್ರಿಯ ಸಾಮರ್ಥ್ಯಗಳನ್ನು ಕಂಡು ಅವುಗಳ ವಿನಿಯೋಗ
ವನ್ನು ಗೊತ್ತುಮಾಡುವ ಮನೋಭಾವವೊಂದಿದೆ. ಅದು ಇಂತಹ ಒಗಟೆಗಳನ್ನು
ಮಾಡುವ ಮನೋಭಾವದ ಮೂಲವೆಂದು ನಮ್ಮ ಭಾವನೆ. ಇತರ ದೇಶಗಳ ಒಗಟೆ
ಗಳಲ್ಲಿ "ಹಗ್ಗ ಹಾಸಿದೆ; ಕೋಣ ಮುಲಗಿದೆ" ಎಂಬ ಒಗಟೆಯಲ್ಲಿರುವ ಆಟವೊಂದು
ಕಂಡುಬಂದರೆ, ನಮ್ಮ ದೇಶದ ಒಗಳಿಗಳಲ್ಲಿ " ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿಯ ಲಿಂಗ"
ಎಂಬ ಒಗಟೆಯಲ್ಲಿರುವಂತೆ ಆಟದ ಜೊತೆಗೆ ಪಾಟವೂ ಬೆರೆದಿರುವುದು ಕಂಡುಬರುತ್ತದೆ.
ಇದು ನಮ್ಮ ಸಂಸ್ಕೃತಿಯ ಗುರುತು.
“ ಒಂದು ಮರದ ಮೇಲೆ ಎರಡು ಹಕ್ಕಿಗಳಿನೆ. ಒಂದು ರುಚಿಯಾದ ಹಣ್ಣು
ಗಳನ್ನು ತಿನ್ನುತ್ತದೆ; ಮತ್ತೊಂದು ಏನೂ ತಿನ್ನದೆ ಸುಮ್ಮನೆ ಕುಳಿತಿದೆ" ಎಂಬ
ಶ್ರುತಿಯನ್ನು. ತೆಗೆದುಕೊಳ್ಳೋಣ, ಇದು ದ್ವೈತಪರನೆಂದೂ ಅದ್ವೈತಪರವೆಂದೂ
ವಾದ ವಿವಾದಗಳು ಹೊರಟಿವೆ. ಅವಿರಲಿ. ಇದು ಎಂತಹ ಸೊಗಸಾದ ಒಗಟು!
ನಾವು ದಿನದಿನವೂ ನೋಡುವ ಚಿತ್ರವಿದು. ಆದರೆ ಇಲ್ಲಿ ಜೀವಾತ್ಮ ಪರಮಾತ್ಮರನ್ನು
ಕಾಣುವುದು ಮಾತ್ರ ನಮಗೆ ಮೀರಿದುದು. ಹಾಗಿಲ್ಲದೆ ನಾವೂ ಆ ಸಾಮ್ಯವನ್ನು
ಕಾಣಬಲ್ಲೆವಾದರೆ, ನಮ್ಮ ಮನಸ್ಸೂ ಆ ವೈಭವವನ್ನು ಸ್ಮರಿಸಬಲ್ಲುದಾದರೆ, ನಮ್ಮ
ಮನಸ್ಸೂ ಔಪನಿಷದಿಕ ಭಾವನಾ ಪರಿಪ್ಲುತ, ಅಥವಾ ಆ ಜಾತಿ ಯೆನ್ನಬಾರದೇಕೆ?
ಇನ್ನೊಂದು ಮಂತ್ರವನ್ನು ತೆಗೆದುಕೊಳ್ಳೋಣ :--" ವೃಷಭವೊಂದುಂಟು,
ಅದಕ್ಕೆ ನಾಲ್ಕು ಕೊಂಬುಗಳು, ಮೂರು ಕಾಲುಗಳು, ಎರಡು ತಲೆಗಳು, ಏಳು
................................
* ಒಗಟೆಗಳನ್ನು ಕಟ್ಟುವವರಿಲ್ಲ ಈ ಭಾವ ಪ್ರಾದುರ್ಭಾವ ಪ್ರಭಾವಗಳನ್ನು ಗಮನಿಸಿ ತಿಳಿದು ಒಗಟೆ
ಯನ್ನು ಕಟ್ಟುವರೇ ಎಂಬ ಪ್ರಶ್ನೆಯು ಇಲ್ಲಿ ಹುಟ್ಟುವುದು ಸಹಜ. ಭಾವಗಳ ಉದಯ, ಶಬಲತಾ, ಶಾಂತಿ,
ವಿನಿಯೋಗಗಳನ್ನೂ ವೃತ್ತಿಗಳ ಯಾತಾಯಾತನನ್ನು ಅರಿಯುವುದೂ ಒಂದು ವಿದ್ಯೆ. ಅದನ್ನು ಬಲ್ಲವರು
ಇದನ್ನೂ ಬಲ್ಲರು. ಕಾಮಸಂಕಲ್ಪವರ್ಜಿತವಾದ ಶುದ ಮನವು ಇದನ್ನರಿಯುವಂತೆ ತದಿ ತರವಾದ ಅಶುದ್ಧ
ಮನವು ಇದನ್ನು ಅರಿತಲಾರದು. "ಮನೋರಥ ಶತೈರ್ವ್ವತ"ವಾದ ಮನವು ಕೇಂದ್ರವನ್ನು ಬಿಟ್ಟು
ಎಲ್ಲೆಲ್ಲಿಯೋ ಅಲೆಯುತ್ತ ಬಹಿಮರ್ಮುಖವಾಗಿರುವುದು. ಬೀದಿಗಳನ್ನು ತಿರುಗಿದಾಗ ಊರು ಅಸ್ಪಷ್ಟಾಗಿ
ತೋರುವಂತೆ ಬಹಿರ್ಮುಖವಾಗಿರುವ ಮನವು ಈ ವೃತ್ತಿ ಪ್ರಪಂಚವನ್ನು ಅಷ್ಟಷ್ಬಾಗಿ ಅಲ್ಲದೆ ಅಖಂಡವಾಗಿ
ಕಾಣಲಾರದು : ಆದರೆ ಕೇಂದ್ರವನ್ನು ಹಿಡಿದಾಗ ಶಿಖಿರವೇರಿದವನು ಊರನ್ನೆಲ್ಲಾ ಕಾಣುವಂತೆ, ವೃತ್ತಿಗೆ
ಅತೀತವಾದಾಗ ಮಾತ್ರ ಅದನ್ನು ಅರಿಯುವುದು. ಅಹೋರಾತ್ರಿಗಳಲ್ಲಿ ನಡೆಯುತ್ತಿದ್ದರೂ ನಮಗೆ
ಅಜ್ಞಾತವಾಗಿರುವ ಶ್ವಾಸವು ಜ್ಞಾತವಾಗಿ ನಡೆದಾಗ ಅಜಪಾಗಾಯತ್ರಿಯಾಗುವಂತೆ ಮನೋವೃತ್ತಿಯರಿತು
ನಡೆದವನೂ ಯೋಗಿಯಾಗುವನು. ಆ ಸ್ವಾಧೀನತೆಯು ಲಭಿಸುವನರೆಗೂ ನಾವು ಪರಾಧೀನರು. ಅದು
ವರೆಗೂ ಕಾರ್ಯವು ನಮ್ಮ ಅರಿವಿಗೆ ದೊರೆವುದಲ್ಲದೆ ಕಾರಣಗಳು ದೊರೆಯವು. ಅದರಿಂದ, ನಾವು ಒಗಟೆ
ಕಟ್ಟಿದರೂ ಅದರ ಹುಟ್ಟಿಗೆ ಕಾರಣವಾದ ವೃತ್ತಿಗಳ ಆಟವನ್ನು ಕಾಣೆವು.
% cf. Encyclopaedia of Religion & Ethics, article: " Riddles."
೧೧೩
------------------------------------------------------------------------------
ಕರ್ಣಾಟಕ ಸಂಸ್ಕೃತಿ
ಕೈಗಳು. ಅದನ್ನು ಮೂರು ಹಗ್ಗಗಳಲ್ಲಿ ಕಟ್ಟಿದೆ ” ಎಂಬ ಅರ್ಥದ ಈ ಮಂತ್ರವು
ವ್ಯಾಕರಣ ಪರವೆಂದೂ ಯಜ್ಞ ಪರನೆಂದೂ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. (ಯೋಗ
ಪರವಾಗಿಯೂ ವೇದಾಂತ ಪರವಾಗಿಯೂ ಅರ್ಥಮಾಡಬಹುದಂತೆ.) ಹೀಗೆಯೇ
ಸೂತ್ರಗಳೂ ಒಗಟಾಗಿ ಕುಳಿತು, ಎತ್ತ ಎಳೆದರೆ ಅತ್ತ ಬರುತ್ತ, ಸರ್ವತೋಮುಖ
ವಾಗಿದ್ದರೂ ಸತ್ಯಾರ್ಥವನ್ನು ಬೋಧಿಸುತ್ತ ಕುಳಿತಿರುವವಲ್ಲವೆ? ಇಂತಹ ಒಗಟು:
ಮಂತ್ರಗಳನ್ನೂ ಸೂತ್ರಗಳನ್ನೂ ರಚಿಸಿದವರ ಸಂಸ್ಕೃತಿಯೂ ಕರ್ಣಾಟಕ ಸಂಸ್ಕೃ
ತಿಯೂ ಏಕಜಾತೀಯವೆಂದು ನಮ್ಮ ಮತ.
ಒಗಟೆಗಳಲ್ಲಿ ನಾನಾ ವಿಧಗಳಿವೆ. |. ಸರ್ವಜ್ಞನ ಒಗಟೆಗಳಂತೆ ಪದ್ಯಗಳಾಗಿ
ದ್ವಿಪದಿ, ತ್ರಿಪದಿ, ಚೌಪದಿಗಳಲ್ಲಿರುವ ಒಗಟೆಗಳೂ ಉಂಟ:
ದ್ವಿಪದಿ॥ ಮೊಗ್ಗರಳಿ ಹೂವಾಗಿ ಪುಷ್ಪತಾನಲ್ಲ ॥
ಹಿಗ್ಗಲಿಸಿ ನೋಡಿದರೆ ಪರಿಮಳವೆ ಇಲ್ಲ ॥ (ಕೊಡೆ)
ಹನ್ನೆರಡು ಕೊಟ್ಟಡಿ ಮೂವತ್ತು ತೊಟ್ಟಿಲು |
ಮಲಗುವರು ಮಾತ್ರ ಇಬ್ಬರೇ ಮಕ್ಕಳು ॥ (ವರ್ಷ, ತಿಂಗಳು, ದಿನ)
ತ್ರಿಪದಿ ॥ ಕಡಿದರೆ ಹಾಲು,
ಹೊಡೆದರೆ ಹಾಲು,
ಬಡಿದರೆ ಸಾವಿರ ಮಕ್ಕಳು | (ಹಲಸಿನ ಹಣ್ಣ)
ಬಿಳೀಗದ್ದೆ ಕರೀಬತ್ತ,
ಕಯ್ಯಾಗೆ ಹಾಕಬೇಕು,
ಬಾಯ್ಯಾಗೆ ತೆಗೆಯಬೇಕು ॥ (ಪುಸ್ತಕ ಬರೆಯುವುದು ಓದುವುದು)
ಬಡಗಿ ಮಾಡದ ಮನೆ,
ಬಾಚಿ ಕೆತ್ತದ ಮನೆ,
ಅಂಬರದ ನನ್ನರಮನೆ ॥ ( )
(ಇಲ್ಲಿರುವ ಛಂದೋವೈವಿಧ್ಯಗಳನ್ನು ನೋಡಿರಿ.)
ಚೌಪದಿ|| ಕಯ್ಯುಂಟು ಕಾಲಿಲ್ಲ ಸಿರವರಿದ ಮುಂಡ,
ಮೆಯ್ಯಲ್ಲಿ ನವಗಾಯ ಒಂಭತ್ತು ತುಂಡ,
ಓಡಿಬಂದೊಯ್ಯನೇ ಹೆಗಲೇರಿಕೊಂಡ,
ಕಯ್ಯಬಿಟ್ಟಿಸೆದರೆ ತಾ ಮುದುರಿಕೊಂಡ | (ಅಂಗಿ)
ಸುತ್ತುಸುತ್ತುವುದು ವಾಲೆ ತಾನಲ್ಲ,
ಚಿತ್ರ ಬರೆಯುವುದು ಕಂಟ ತಾನಲ್ಲ ;
ಪೆಟ್ಟಿಗೆಯಲಿಡಲು ಆಭರಣವಲ್ಲ,
ತಿಳಿದು ಹೇಳುವ(ವಾ) ಜಾಣಗರಿದಲ್ಲ ॥ (ಹಾವು)
೧೧೪
------------------------------------------------
ಗಾದೆಗಳೂ ಒಗಟೆಗಳೂ
ಗಾದೆಗಳಂತೆ ಇರುವ ಒಗಟೆಗಳೂ ಉಂಟು:
ಹಸುರು ಕೋಲಿಗೆ ಮುತ್ತಿನ ತುರಾಯಿ (ಈರುಳ್ಳಿ ಹೂವ್ವು).
ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ (ಮಲ್ಲಿಗೆಯ ಮೆಳೆ).
ಗಾದೆಗಳಂತೆಯೇ ಒಗಟುಗಳು ಹೊಸ ಹೊಸದಾಗಿ ಹುಟ್ಟುವುದೂ ಉಂಟು;
ಬಾಯಿಲ್ಲದ ಬಳ್ಳಿ ಬಾರಿ ಬಾರಿಗೂ ಮಾತಾಡುತ್ತದೆ (ಟೆಲಿಫೋನ್).
ಗಾಡಿ ಗಾಡಿ ಸೌದೆತಿಂದು,
ಭಂಡಿಭಂಡಿ ನೀರು ಕುಡಿದು,
ಹೊಗೆಯ ಕಾರಿ ಕೂಗಿಕೊಂಡು,
ಓಟ ಓಡುವ ಕುದುರೆ ಯಾವುದು! (ರೈಲು ಗಾಡಿ)
ಪರದೇಶಗಳ ಒಗಟೆಗಳು ಕೆಲವನ್ನು ಹೇಳಿ ಈ ಭಾಗವನ್ನು ಮುಗಿಸೋಣ ;
ನೆಲೆಗೇ ನಿಲ್ಲದೆ ಹಾರಾಡುವುದು ಯಾವುದು? (ಗಾಳಿ)
ಹೊಡೆದಾಡಿಯೂ ಗಾಸಿಯಾಗದ ವೀರರು ಯಾರು? (ಹಲ್ಲು)
ಸೆನೆಗಲ್ಲಿನ ವೋಲುಫ್‌ರವು.
ತಿಂದುಹಾಕುವ ಮೀನುಗಳ ನಡುವೆ ನಿಂತಿರುವ ನೀರನಾರು? (ನಾಲಗೆ)
ತಲೆಗೊಂದು ಟೋಪಿ ಹಾಕಿಕೊಂಡಿರುವ ಇಪ್ಪತ್ತು ಜನ ಅಣ್ಣತಮ್ಮಂದಿರು (ಬೆರಳು).
ಸಮೋಅನ್‌ರು.
ಕುದುರೆಗೆ ಮಿಂಚಿ ಓಡಿ ನೀರು ದಾಟಿದರೂ ನೆನೆಯದೆ ಇರುವವರಾರು? (ಸೂರ್ಯ)
ಒಬ್ಬ ತಂದೆಗೆ ಹನ್ನೆರಡು ಮಕ್ಕಳು (ಸಂವತ್ಸರ).
ಫ್ರಾನ್‌ಸಿನವು.
==================================================================
ಉಪಸಂಹಾರ
ಕನ್ನಡ ನುಡಿಯ ಪ್ರಪಂಚವನ್ನು, ಯಥಾವಕಾಶವಾಗಿ, ಸ್ಥಾಲೀಪುಲಾಕ
ನ್ಯಾಯಾನುಗುಣವಾಗಿ, ಪರೀಕ್ಷೆ ಮಾಡಿದುದಾಯಿತು. ವಿಶ್ವತೋಮುಖವಾಗಿ
ಪೂರ್ಣವಾದ ಇಂತಹ ಪರೀಕ್ಷೆಯು ನಡೆಯಲಿ ಎಂದು ಹಾರೈಸಿ ಈ ಲೇಖನಮಾಲೆ
ಯನ್ನು ಇಲ್ಲಿಗೆ ಮುಗಿಯಿಸುವೆವು.
ಇದರಂತೆಯೇ ನಡೆಯ ಪ್ರಪಂಚವನ್ನೂ ಭಾಗ ಭಾಗವಾಗಿ ವಿಂಗಡಿಸಿ ಹುಡುಕಿ
ನೋಡಬೇಕಾದುದೂ ಉಂಟು. ಈಗ ನಡೆದಿರುವ ಪರೀಕ್ಷೆ ಯಿಂದ ದೊರೆತಿರುವ
ಅಂಶಗಳನ್ನು ನಡೆಯಬೇಕಾದ ಪರೀಕ್ಷೆಯ ಫಲವೂ ಸಮರ್ಥಿಸುವುದು ಎಂಬ
ನಂಬಿಕೆಯು ನಮಗುಂಟು, ಆ ನಂಬಿಕೆಯು ಪಾಠಕರಿಗೂ ಹುಟ್ಟುವಂತೆ, ಆರ್ಯರ
ಕಾಲಕ್ಕೆ ಮುಂಚೆ ದ್ರಾವಿಡರ ಸಮಾಜವು ಹೇಗಿದ್ದಿತು? ವೇದಗಳ ಕಾಲದಲ್ಲಿ
ಆರ್ಯರು ಹೇಗಿದ್ದರು? ದ್ರಾವಿಡರು ಆರ್ಯ ಸಂಸ್ಕೃತಿಯನ್ನು ಸ್ವೀಕರಿಸಿದುದು
ಯಾವಾಗ? ಹೇಗೆ? ಎಂಬುದನ್ನೂ ಕುರಿತು ಎರಡು ಮಾತು ಹೇಳೋಣ.
ದ್ರಾನಿಡರು (ಪುರಾಣ ಯುಗದಲ್ಲಿ)
" ದ್ರಾವಿಡರು ಬೇಟೆಯಾಡುತ್ತ ಕಾಡಿನಿಂದ ಕಾಡಿಗೆ ಅಲೆಯುತ್ತಿದ್ದರು.
ಅವರು 'ತಾಯಿಯ ಮಕ್ಕಳು' ಎಂದು ಹೇಳಿಕೊಳ್ಳುವವರು. ತಾಯಿಯರೂ
ಅವರ ಮಕ್ಕಳೂ ಒಂದೆಡೆ ನಿಲ್ಲುವರು. ಗಂಡುಸರು ಆಹಾರವನ್ನು ಸಂಪಾದಿಸುವು
ದಕ್ಕೋಸ್ಕರ ಹೊರಟುಹೋಗುವರು. ಬೇರೆಬೇರೆ ಗುಂಪಿನ (ಕುಲದವರು)
ತರುಣ ತರುಣಿಯರು ಹಬ್ಬಗಳಲ್ಲಿ ಕೂಡಿ ಕುಣಿಯುವರು. ಆ ಸಂದರ್ಭವು ಕುಲಾಭಿ
ವೃದ್ಧಿಗೆ ಕಾರಣವಾಗುತ್ತಿದ್ದಿತು. ಹೆಂಗುಸರು ಆಗಾಗ ಕಂದಮೂಲಾದಿಗಳನ್ನು
ಸಂಗ್ರಹಿಸಿ ತರುವರು. ಈ ಹೆಂಗುಸರೇ ಆರ್ಯರ್ಷಿಗಳಿಂದ ವ್ಯವಸಾಯ ಕ್ರಮವನ್ನು
ಕಲಿತು ಆರಂಭಿಸಿದರು. ಆಗಲೂ ಆಸ್ತಿಪಾಸ್ತಿಗಳು, ಮಕ್ಕಳು ಮರಿಗಳು ಎಲ್ಲವೂ
ಕುಲದ ಸ್ವತ್ತೇ ಹೊರತು ಯಾರೊಬ್ಬರಿಗೂ ಸೇರಿದುದಲ್ಲ.”
“ ಗಂಡುಸರು ತಮ್ಮ ಮಕ್ಕಳ ವಿಚಾರವಾಗಿ ಅಷ್ಟಾಗಿ ಯೋಚಿಸುತ್ತಿರಲಿಲ್ಲ.
ಗಂಡುಸರು ಹೆಂಗುಸರೆಲ್ಲ ಕಲೆತು ಒಂದೇ ಕುಟುಂಬದವರಂತೆ ಇರುವರು. ಅವರು
ಮಾತೃದೇವರು. ಅವರಿಗೆ ತಂದೆಯ ಋಣವಷ್ಟಾಗಿ ಇಲ್ಲ.
"ಬೇಟೆಯಾಡುವ ವಯಸ್ಸು ಕಳೆದವರು ಬಂದು ಮನೆ ಬಾಗಿಲು ಮಾಡಿ
ನಿಲ್ಲುವರು. ಅಂತಹವರಿಂದ ಮಕ್ಕುಳುಮರಿಗಳು ವಿದ್ಯಾಬುದ್ಧಿಗಳನ್ನು ಕಲಿಯುವರು.
೧೧೬
--------------------------------------------------------
ಉಪಸಂಹಾರ
ಕಾಡುಮೃಗಗಳನ್ನು ಕುರಿತು, ಗಿಡಮೂಲಿಕೆಗಳನ್ನು ಕುರಿತು, ಬಿಲ್ಲು ಬಾಣಗಳನ್ನು
ಕುರಿತು, ಕುಲದ ಸಂಪ್ರದಾಯ ಪದ್ದತಿಗಳನ್ನು ತುರಿತು ಆ ಹಿರಿಯರು ಈ
ಹುಡುಗರಿಗೆ ಹೇಳುವುದೇ ಪಾಠಗಳು. ಈ ಹಿರಿಯರು ಕುಳಿತು ಈ ಕಥೆಗಳನ್ನು
ಹೇಳಿ ಕಲಿಯಬೇಕಾದುದನ್ನು ಕಲಿಸುವ ತೋಪೇ ವಿದ್ಯಾಶಾಲೆ. ಚಾವಡಿ, ಕುಲದವರ
ದೇವಗೃಹ, ಸಮಸ್ತವೂ, ಎಲ್ಲವೂ ಅಲ್ಲಿಯೇ! "*
ವೇದಯುಗದ ಆರ್ಯರು
ಆರ್ಯರ ಸಮಾಜದಲ್ಲಿ ಕುಟುಂಬಕ್ಕೆ ಪ್ರಧಾನಸ್ಥಾನ. ಕುಟುಂಬದಲ್ಲಿ ಸ್ತ್ರೀಯು
ಗೃಹೀಣಿಯಾಗಿ ಸರ್ವಾಧಿಕಾರ ಮಾಡುತ್ತಿದ್ದರೂ ಪತಿಯಪ್ಪಣೆಯನ್ನು ಪರಿಪಾಲಿ
ಒಡ ಬಹುಪತಿ ತ್ರ ವು ನಿಷಿದ್ದ ವಲ್ಲವಾದರೂ ಅಪರೂಪ, ಬಹುಪತಿತ್ವ ವಂತೂ
ಅಲ್ಲವೇ ಇಲ್ಲ. ಸ್ತ್ರೀಯರು ನೀತಿ ಧರ್ಮಪರಾಯಣೆಯರು ; ; ಮದುವೆಗೆ ಸೊದಲು
ತಂದೆಯ ಅಧೀನದಲ್ಲಿಯೂ ಮದುವೆಯಾದ ಮೇಲೆ ಗಂಡನ ಆಧೀನದಲ್ಲಿಯೂ
ಇರುವರು. ಆದರೂ ಅವರು ತಾವೊಪ್ಪಿದವನನ್ನು ಮದುವೆಯಾಗುವರು. ವಿಲೋಮ
ವಿವಾಹವು ರೂಢಿಯಲ್ಲಿರಲಿಲ್ಲ. ಕನ್ಯಾಶುಲ್ವ ವರದಕ್ಷಿಣೆಗಳೆರಡೂ ಆಚರಣೆ
ಯಲ್ಲಿದ್ದುವು. ಅಪ್ಪಿತಪ್ಪಿ ಹೆಂಗುಸು ದುರ್ಮಾರ್ಗದಲ್ಲಿ ಬಿದ್ದರೂ ಅವಳನ್ನು
ಸಮಾಜವು ಅಷ್ಟಾಗಿ ಶಿಕ್ಷಿಸುತ್ತಿರಲ್ಲ. ನಿಯೋಗ ಪದ್ಧತಿಯು ಅಲ್ಲಲ್ಲಿ ರೂಢಿ.
ಯಲ್ಲಿದ್ದಿತು. ವಿಧವಾ ವಿವಾಹವು ಅಂಗೀಕೃತವಾಗಿರಲಿಲ್ಲ.
ಪಿತಾ ಪುತ್ರ ಸಂಬಂಧವು ಮಧುರವಾಗಿದ್ದಿತು. ಕುಟುಂಬದ ಆಸ್ಲಿಯೆಲ್ಲವೂ
ತಂದೆಯದು. ಮಗನಿಗೆ ಮದುವೆಯಾಗಿ ಮಕ್ಕಳಾದರೂ ಬೇರೆ ಹೋಗಿ ಸಂಸಾರ
ಹೂಡಬೇಕೆಂಬ ನಿಯಮವಿರಲಿಲ್ಲ. ಆಪುತ್ರರು ದತ್ತು ಮಾಡಿಕೊಳ್ಳುತ್ತಿದ್ದರು. ಚರ
ಆಸ್ತಿಯು ಕುಟುಂಬದಲ್ಲಿ ಬೇರೆ ಬೇರೆಯವರಿಗೆ ಸೇರಿದ್ದರೂ ಸ್ಥಿರ ಆಸ್ತಿಯು ಮಾತ್ರ
ಯಜಮಾನನದು. ತಂದೆಯಿರುವವರೆಗೂ ಮಕ್ಕಳು ಆಸ್ತಿಯನ್ನು ಹಂಚಿಕೊಳ್ಳು
ರಲಿಲ್ಲ. ತಂದೆಯು ವೃದ್ಧನಾಗಿ ಸಂಸಾರ ನಿರ್ವಹಣಮಾಡಲು ಅಶಕ್ತನಾದರೆ
ಸಂಸಾರವನ್ನು ಹಿರಿಯ ಮಗನಿಗೆ ವಹಿಸಿಕೊಟ್ಟು ತಾನು ಹೊರಟುಹೋಗುವನು
ಜನರಲ್ಲಿ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ರೆಂಬ ನಲ್ಕು ಜಾತಿಗಳು ಮುಖ್ಯ
ವಾಗಿದ್ದುವು- ಜಾತಿಯು ಜನ್ಕದಿಂದಲೇ ಗೊತ್ತಾಗುತ್ತಿದ್ದಿತು.% ವರ್ಣಧರ್ಮ
.....................
*E, B. Haves 1210 Rule in India, Pages 12-3 ;cf. ‘Tamils 1800 Years Ayo,
Chap. IV& IX.
% “ The existence of the caste system in any form in the age of the Rigveda
has been denied by, high authority, though it has been asserted of late with
increasing insistence.’’ Cambridge History of India 1, Page 92.
Again, "there is good reason to believe that in the period of the Rigveda, the
priesthood and the nobility were heriditary....It may even be that these
distinctions are earlier than the severance of the Indo-Iranians if not as old as the
union of the Aryan People.’ /hd.,, Page 125.
೧೧೭
--------------------------------------------------------------------
ಕರ್ಣಾಟಕ ಸಂಸ್ಕೃತಿ
ಗಳಂತೆ ಆಶ್ರಮ ಧರ್ಮಗಳೂ ಸಂಸ್ಕಾರಗಳೂ ಆಚರಣೆಯಲ್ಲಿದ್ದರೂ ಅವುಗಳನ್ನು
ತಿರಸ್ಕರಿಸಿದವರೂ ಇದ್ದರು. ಅಂತಹ ವ್ರಾತರನ್ನು ಪುನಸ್ಸ೦ಸ್ಕಾರಮಾಡಿ ಅಂಗಿ
ಕರಿಸುವ ವಾಡಿಕೆಯು ಇದ್ದಿತು. " ನೂರಾರು ವರ್ಷ ಬಾಳಬೇಕು; ಹತ್ತಾರು ಜನ
ವೀರಪುತ್ರರನ್ನು ಪಡೆಯಬೇಕು; ಹಲವಾರು ಯಜ್ಞಗಳನ್ನು ಮಾಡಬೇಕು"
ಎಂಬುದು ದ್ವಿಜರ ಜೀವನದ ಮುಖ್ಯೋದ್ಧ್ದೇಶವಾಗಿದ್ದಿತು. ಬ್ರಾಹ್ಮಣ ಕ್ಷತ್ರಿಯರಲ್ಲಿ
ಅನೇಕರು ಬ್ರಹ್ಮವಾದಿಗಳು. ಸ್ತ್ರೀಯರೂ ಬ್ರಹ್ಮವಾದಿನಿಗಳಾಗಲು ಅಧಿಕಾರವಿದ್ದಿತು.
ಪ್ರೇಯಸ್ಸಿಗಿಂತ ಶ್ರೇಯಸ್ಸು ಹೆಚ್ಚು. ಅರ್ಥಕಾಮಗಳಿಗಿಂತ ಧರ್ಮವು ಮಿಗಿಲು,
ಎ೦ಬ ಭವನೆಯು ಸರ್ವತ್ರ ನೆಲಸಿದ್ದಿತು.
ಬ್ರಾಹ್ಮಣರು ನಗರವಾಸಿಗಳಾಗಿರದೆ ನೀರು ಹುಲ್ಲು ಕಟ್ಟಿಗೆಗಳು ಸಮೃದ
ವಾಗಿರುವ ಗ್ರಾಮಗಳಲ್ಲಿ, ಅಗ್ನಿ ಸೇವೆಮಾಡುತ್ತ, ಷಟ್ಕರ್ಮನಿರತರಾಗಿದ್ದರು.
ರಾಜಾಶ್ರಯವನ್ನು ಪಡೆದ "ಲೌಕಿಕ"ರು ವೈದಿಕರಿಗಿಂತ ಕೀಳು ಎಂಬ ಭಾವನೆ
ಇದ್ದಿತು. ಧರ್ಮ ವಿಚಾರಗಳಲ್ಲಿ, ಆಚಾರ ಸಂಪ್ರದಾಯಗಳಲ್ಲಿ, ಸಂದೇಹ ಬಂದಾಗ
ಸತ್ಯಕಾಮರೂ ಅಡಾಂಭಿಕರೂ ಆದ ವಿದ್ವಾಂಸರು ಪರಿಷತ್ತಾಗಿ ಸೇರಿ ವಿಮರ್ಶೆಮಾಡಿ
ಸಿದ್ಧಾ೦ತಮಾಡುವರು.
ಕ್ಷತ್ರಿಯರು ನಗರ ಪಟ್ಟಣಗಳಲ್ಲಿ 'ಜನಪದ' ಯೋಗಕ್ಷೇಮವನ್ನು ನೋಡಿ
ಕೊಳ್ಳುತ್ತ ಇರುವರು. ಸಾಮಾನ್ಯವಾಗಿ ಅರಸರೆಲ್ಲರೂ ಈ ಜಾತಿಯವರು. ಅಲ್ಲಲ್ಲಿ
ಅರಸನನ್ನು ಚುನಾವಣೆಮಾಡುವ ಪದ್ಧತಿಯಿದ್ದಿತು. ಅದರಂತೆಯೇ ತಲೆತಲಾಂತರ
ದಿಂದ ಅರಸರಾಗಿ ಬಂದವರೂ ಇದ್ದರು. ಅರಸನು ದೇಶದಲ್ಲಿ ಕುಲಾಚಾರಗಳನ್ನೂ
ನ್ಯಾಯವನ್ನೂ ಪಾಲಿಸುವನು. ಹೊರಗಿನಿಂದ ಬಂದ ಶತ್ರುಗಳ ಬಾಧೆಯನ್ನು
ನಿವಾರಿಸುವನು. ತನ್ನ ದೇಶದಲ್ಲಿ ಕಂದಾಯವಾಗಿ ಬಂದುದು, ಹೊರಗಿನ ಶತುಗಳನ್ನು
ಗೆದ್ದು ತಾನು ತಂದುದು ಈ ಎರಡೂ ಅರಸನ ಸಂಪತ್ತು.
ವೈಶ್ಯರು ಕೃಷಿ, ವಾಣಿಜ್ಯ, ಗೋರಕ್ಷಣಾದಿಗಳನ್ನು ಮಾಡುತ್ತಿದ್ದರು.
ದೇಶಾಂತರ ವ್ಯಾಪಾರವು ರೂಢಿಯಲ್ಲಿದ್ದಿತು. ಶೂದ್ರರು ಮರ, ಲೋಹ, ಮುಂತಾ
ದವುಗಳ ಕೆಲಸವನ್ನೂ ನೇಗೆ ಮುಂತಾದವುಗಳನ್ನೂ ಮಾಡುತ್ತಿದ್ದರು.
ಆರ್ಯರು ಉಪಜೀವನಕ್ಕಾಗಿ ವ್ಯವಸಾಯವನ್ನು ಹೆಚ್ಚಾಗಿ ಅವಲಂಬಿಸಿದವರು.
ಗದ್ದೆ ಹೊಲಗಳನ್ನು ನೇಗಿಲುಗಳಿಂದ ಉತ್ತು ಕಾಳನ್ನು ಬಿತ್ತಿ ಬೆಳೆಯಿಂದ ಜೀವಿ
ಸುತ್ತಿದ್ದರು. ಉಳುವುದಕ್ಕೆ ಎತ್ತುಗಳನ್ನು ಕಟ್ಟುತ್ತಿದ್ದರು. ಕುಡುಗೋಲಿನಿಂದ
ಬೆಳೆಯನ್ನು ಕೊಯ್ದು ಹೊರೆಗಳಾಗಿ ಅಡಕಿಟ್ಟು ಕಣಮಾಡಿ ಕಾಳು ತೂರುವರು.
ನೀರು ಎತ್ತುವುದೂ ನೀರು ಹಾಯಿಸಿ ಬೆಳೆಮಾಡುವುದೂ ಅವರಿಗೆ ತಿಳಿದಿದ್ದಿತು.
೧೧೮
------------------------------------------------------------
ಉಪಸಂಹಾರ
ಮನೆಯಲ್ಲಿ ಮಂದಲಿಗೆ, ಮಣೆ, ಕಾಲುಮಣೆ, ಮಂಚಗಳು ಇದ್ದುವು.
ಹಿತ್ತಾಳೆ, ತಾಮ್ರ, ಕಂಚು, ಕಬ್ಬಿಣ, ಮರ, ಕಲ್ಲು ಇವುಗಳ ಪಾತ್ರೆಗಳು ಬಳಕೆ
ಯಲ್ಲಿದ್ದುವು. ಹೆಂಗುಸರೂ ಗಂಡುಸರೂ ಎರಡು ಮೂರು ಬಟ್ಟೆಗಳನ್ನು ಉಟ್ಟು
ಹೊಡೆಯುತ್ತಿದ್ದರು. ಚಿನ್ನದ ಆಭರಣಗಳನ್ನು ಧರಿಸುತ್ತಿದ್ದರು. ಹೆಂಗುಸರು
ಜಡೆಯನ್ನು ಹೆಣೆದುಕೊಳ್ಳುವರು; ತುರುಬು ಕಟ್ಟುವರು. ಗಂಡುಸರಲ್ಲಿ ಜಟಾ
ಧಾರಿಗಳೂ ಏಕಶಿಖಿ ದ್ವಿಶಿಖಿ ತ್ರಿಶಿಖಿ ಪಂಚಶಿಖಿಗಳೂ ಇದ್ದರು. ಗಡ್ಡ ಬೆಳೆಸುವುದೂ
ವಾಡಿಕೆಯಲ್ಲಿದ್ದಿತು.
ಜನರು ಕುದುರೆ ಕಟ್ಟಿದ ರಥ, ಎತ್ತು ಕಟ್ಟಿದ ಬಂಡಿಗಳಲ್ಲಿ ತಿರುಗುವರು.
ತೊಟ್ಟಿಯ ಮನೆಗಳಲ್ಲಿ ವಾಸಿಸುವರು. ದನ, ಎಮ್ಮೆ, ಕುದುರೆ, ಕತ್ತೆ, ಕುರಿ, ಮೇಕೆ,
ನಾಯಿಗಳನ್ನು ಸಾಕುತ್ತಿದ್ದರು. ಬಲೆ ಬೀಸಿ ಸಿಂಹಗಳನ್ನು ಹಿಡಿದು, ಹಳ್ಳವನ್ನು
ತೋಡಿ ಸಾರಗಗಳನ್ನು ಕೆಡವಿ, ಹಂದಿಯ ಮೇಲೆ ನಾಯಿಗಳನ್ನು ಬಿಟ್ಟು ಬೇಟೆ
ಯಾಡುವರು. ಕಾಡೆಮ್ಮೆಗಳನ್ನು ಅಟ್ಟಿಕೊಂಡು ಹೋಗಿ ಬಾಣಗಳಿಂದ ಹೊಡೆ
ಯುವರು; ಪಳಗಿದ ಆನೆಗಳನ್ನು ಬಿಟ್ಟು ಕಾಡಾನೆಗಳನ್ನು ಹಿಡಿಯುವರು. ಪಗಡೆ,
ರಥಗಳ ಜೂಜು ಇವು ಅವರಿಗೆ ಬಹು ಪ್ರಿಯವಾದ ಆಟಗಳು.
ನಿಷ್ಕ, ಕೃಷ್ಣಲ, ಶತಮಾನ ಎಂಬ ನಾಣ್ಯಗಳಿದ್ದುವು. ಗೋವುಗಳಿಗೆ ಬಹಳ
ಮರ್ಯಾದೆ. ಜನರಿಗೆ ದಾನ ಧರ್ಮಗಳಲ್ಲಿ ಬಹು ವಿಶ್ವಾಸ. ಪುರುಷ ದೇವತೆಗಳನ್ನೂ
ಕೆಲವು ಸ್ತೀ ದೇವತೆಗಳನ್ನೂ ಬಲಿ, ದಾನ ಜಪ, ಹೋಮ, ತರ್ಪಣಗಳಿಂದ ಆರಾಧಿ
ಸುವರು. ಪಾತಕಗಳನ್ನು ಮಾಡಿದವರು ಪ್ರಾಯಶ್ಚಿತ್ತಮಾಡಿಕೊಳ್ಳುವರು ; ಅಥವಾ
ದಂಡವನ್ನು ಕೊಡುವರು. ಮಳೆಯಾಗುವುದರಿಂದ ಹಿಡಿದು ಮಕ್ಕಳಾಗುವವರೆಗೂ
ಸುಖಪ್ರಾಪ್ತಿ ದುಃಖನಿವೃತ್ತಿಗಳನ್ನೆಲ್ಲ ಹೋಮ ಹವನಗಳು, ಮಂತ್ರಗಳು ಸಾಧಿಸಿ
ಕೊಡಬಲ್ಲವೆಂಬ ನಂಬಿಕೆ ಜನರಲ್ಲಿದ್ದಿತು. ಜನ್ಮಾ೦ತರಗಳು, ಕರ್ಮಫಲಗಳು ಉಂಟೆಂದು.
ನಂಬಿದ್ದರು. ಮೃತದೇಹಗಳನ್ನು ಸುಡುವುದೂ ಹೂಳುವುದೂ ವಾಡಿಕೆಯಲ್ಲಿದ್ದಿತು.
ಜಾತಾಶೌಚ, ಮೃತಾಶೌಚ, ಶ್ರಾದ್ಧಗಳು ಆಚರಣೆಯಲ್ಲಿದ್ದುವು.*
ಆರ್ಯೀಕರಣ
“ದಖನ್, ದಕ್ಷಿಣ ಇಂಡಿಯಗಳ ಆರ್ಯಾಕರಣವು ಮೌರ್ಯ ಸಾಮ್ರಾಜ್ಯ
ಸ್ಥಾಪನಕ್ಕಿಂತ ಮುಂಚೆಯೇ ಆರಂಭವಾಗಿದ್ದಿತು."
* * * *
...............................
* ವಿಸ್ತಾರವಾಗಿ ತಿಳಿಯಬೇಕೆನ್ನುವವರು Cambridge History of 1810, I, Chapters
IV&V ಓದಬಹುದು.
೧೧೯
------------------------------------------------------
ಕರ್ಣಾಟಕ ಸಂಸ್ಕೃತಿ
" ಈ ಕಾಲವು (ಕ್ರಿ. ಪೂ. ಎಂಟನೆಯ ಶತಮಾನ) ದಕ್ಷಿಣ ಇಂಡಿಯದಲ್ಲಿ
ಆರ್ಯರ ನಾಗರಿಕತೆಯು ಬೇರೂರಿದ ಕಾಲವೆನ್ನಬಹುದು. ಉತ್ತರದಲ್ಲಾದಂತೆ
ಇಲ್ಲಿಯೂ ಹಿಂದಿನ ಕಾಲದಿಂದ ನೆಲಸಿದ್ದ ದ್ರಾವಿಡರ ಸಂಪ್ರದಾಯಾದಿಗಳು ಸಂಪೂರ್ಣ
ವಾಗಿ ಕಬಳಿತವಾಗಿ ಜೀರ್ಣವಾಗಿಹೋದುವು. ದ್ರಾವಿಡ ಭಾಷೆಗಳು ವ್ಯವಹಾರ
ಭಾಷೆಗಳಾಗಿ ನಿಂತರೂ, ಕುಲ ಕುಲದ ಲಕ್ಷಣಗಳು ಹಾಗೆಯೇ ನಿಂತಿದ್ದರೂ,
ಅಭಿವೃದ್ಧಿಗೆ ಬರುವ ಸಾಮಾಜಿಕ ರಾಜಕೀಯ ಕಾರ್ಯಕಲಾಪಗಳಿಗೆಲ್ಲ ಆರ್ಯರ
ಭಾವನೆಗಳೇ ಮೂಲಕಾರಣವಾದುವು. ಇದೆಲ್ಲದರ ಫಲವಾಗಿ ಇಂದು ದಕ್ಷಿಣ
ಇಂಡಿಯದ ಸಾಹಿತ್ಯದಲ್ಲಿ ಆಗಲಿ, ಕಲಾಪ್ರಪಂಚದಲ್ಲಿ ಆಗಲಿ, ರಾಜಕೀಯ ಚರಿತ್ರೆಯ
ಘಟನಾವಳಿಗಳಲ್ಲಿ ಆಗಲಿ ಆ ಪುರಾಣ ಕಾಲದ ಅವಶೇಷವಾಗಿ ಏನೂ ಉಳಿದಿಲ್ಲ."
"ನಮಗೆ ತಿಳಿದಿರುವಂತೆ ದಕ್ಷಿಣದ ಅತಿ ಪ್ರಾಚೀನ ಕಾಲದ ರಾಜವಂಶಗಳು
ಮಹಾಭಾರತದ ನೀರರಾದ ಆರ್ಯಕ್ಷತ್ರಿಯರ ರಾಜವಂಶದವರು. ಪುರಾಣಕಾಲದ
ದ್ರಾವಿಡರ ದೇವತೆಗಳು ಬ್ರಾಹ್ಮಣ ಹಿಂದೂ ಕುಲದಲ್ಲಿ ಸೇರಿಹೋದುವು. * * *
ನಾಗರಿಕವಾದ ದ್ರಾವಿಡ ಸಮಾಜವು ಬರುಬರುತ್ತ ಧಾರ್ಮಿಕ ಸಾಮಾಜಿಕ
ರಾಜಕೀಯ ವ್ಯವಸ್ಥೆಗಳಲ್ಲೆಲ್ಲ ಆರ್ಯರನ್ನು ಅನುಸರಿಸಿತು. ದ್ರಾವಿಡ ಕಲಾ ಶಿಲ್ಪಗಳೂ
ವೈದಿಕಾದರ್ಶಮಯವಾದುವು; ಶಿಲ್ಪಿಗಳು ಆರ್ಯಾಚಾರ್ಯ ಸಂಪ್ರದಾಯಗಳನ್ನು
ಅನುಸರಿಸಿದರು...."
"ಆರ್ಯರು ಅನೇಕ ಶತಮಾನಗಳವರೆಗೆ ಪರಂಪರಾಗತವಾದ ತಮ್ಮ
ಆಧ್ಯಾತ್ಮಿಕ ಸಂಪತ್ತಿಯು ಅನಾರ್ಯ ಸಂಪರ್ಕದಿಂದ ಕಲುಷಿತವಾಗದಂತೆ ದೂರ
ವಾಗಿದ್ದುದು ನಿಜ. ಆದರೂ ಅವರ ಧರ್ಮಶಾಸ್ತ್ಯಗಳೂ, ರಾಜ್ಯಾಂಗ ವ್ಯವಸ್ಥೆಗಳೂ,
ಧಾರ್ಮಿಕ ಭಾವನೆಗಳೂ ಪ್ರಜಾವರ್ಗದಲ್ಲಿ ಹರಡುತ್ತ ಬಂದುವು; ಆರ್ಯರಕ್ತದ
ಬಿಂದುವೊಂದೂ ಬೆರೆಯದ ಲಕ್ಲೋಪಲಕ್ಷ ಜನರ ಜೀವನದ ಹಾಸುಹೊಕ್ಕು
ಗಳಾದುವು."*
ಈ ಆರ್ಯಾಕರಣವು ಹೇಗೆ ನಡೆಯಿತು ಎಂಬುದನ್ನು ಕುರಿತು ಇನ್ನೊಂದೆಡೆ
ಹೀಗೆ ಹೇಳಿದೆ:
"ಶ್ರುತಿ ಸ್ಮೃತಿಗಳನ್ನು ಆಧಾರವಾಗಿಟ್ಟು ಕೊಳ್ಳುವುದು, ಬ್ರಾಹ್ಮಣರ
ದೇವರುಗಳನ್ನೂ ಆ ದೇವರುಗಳ ಅವತಾರಗಳನ್ನೂ ಪೂಜಿಸುವುದು, ಗೋವನ್ನು
ಗೌರವಿಸುವುದು; ಮದುವೆ ಊಟಗಳಲ್ಲಿ ಕೆಲವು ನಿಯಮಗಳನ್ನು ಅನುಸರಿಸುವುದು,
ಶುಭಾಶುಭ ಕರ್ಮಗಳನ್ನು ಬ್ರಾಹ್ಮಣಮುಖವಾಗಿ ನಡೆಸುವುದು, ಇದು
.............................
* E.B.Havel's Aryan Rule in India, Pages 127-28. cf. Ind. Ant., 1912,
P. 229 ff.
೧೨೦
-------------------------------------------------
ಉಪಸಂಹಾರ
ಬ್ರಾಹ್ಮಣ ಧರ್ಮ (Brahmanism) ವಾದರೆ, "ಇದು ಇತರರನ್ನು ಸೇರಿಸಿ
ಕೊಳ್ಳುತ್ತಿಲ್ಲ; ಬೆಳೆಯುತ್ತಿಲ್ಲ' ಎಂದು ಹೇಳುವುದು ಸರಿಯಲ್ಲ; ಅದು ತನ್ನ ಕ್ಷೇತ್ರ
ವನ್ನು ಎರಡು ವಿಧಗಳಲ್ಲಿ ಪರಿಣಾಮಕಾರಿಯಾದ ರೀತಿಗಳಲ್ಲಿ ವಿಸ್ತರಿಸುತ್ತಿದೆ."
" ಜಾತಿ ಕುಲ ಗೋತ್ರಗಳಿಲದ ಅನಾರ್ಯರನ್ನು ಗೆದ್ದುಕೊಂಡು ತಮ್ಮವರ
ನ್ನಾಗಿ ಮಾಡಿಕೊಳ್ಳುವುದು ಒಂದು ರೀತಿ. ಇದು ಈ ಅನಾರ್ಯಕುಲಗಳು ತಮಗಿಂತ
ಉತ್ತಮರಾದವರ ರೀತಿ ನೀತಿಗಳನ್ಫು ಅನುಸರಿಸುವುದರಲ್ಲಿ ಆರಂಭವಾಗುತ್ತದೆ.
ಅವರು ತಮ್ಮ ರೀತಿ ನೀತಿಗಳನ್ನೂ ಪೂಜಾಪದ್ಧತಿಗಳನ್ನೂ ಬದಲಾಯಿಸಬೇಕೆಂದು
ಯಾರೂ ಹೇಳುವುದಿಲ್ಲ. ಆದರೂ ಅವರು ತಾವಾಗಿ ಜಾಗ್ರತೆಯಾಗಿ ಹಿಂದೂ
ಪದ್ಧತಿಗಳನ್ನು ಆಚಾರ ಸಂಪ್ರದಾಯಗಳನ್ನು ಅವಲಂಬಿಸಿ ಬ್ರಾಹ್ಮಣ ಭಕ್ತರಾಗು
ವುದರಿಂದ ಅವರ ಧರ್ಮವೂ ಜೀವನವೂ ಬದಲಾಯಿಸಿಹೋಗುತ್ತವೆ. ಇದುವರೆಗೆ
ಶುಭಾಶುಭಗಳಿಗೆ ಬ್ರಾಹ್ಮಣರನ್ನು ಕರೆಯದವರು ಈಗ ಪ್ರತಿಯೊಂದಕ್ಕೂ
ಬ್ರಾಹ್ಮಣನನ್ನು ಕರೆಯುತ್ತಾರೆ, ಊಟ, ಮದುವೆ ಮೊದಲಾದ ನಿತ್ಯನೈಮಿತ್ತಿಕ
ಸಂದರ್ಭಗಳಲ್ಲೆಲ್ಲಾ ಬ್ರಾಹ್ಮಣರ ಪದ್ದತಿಗಳನ್ನು ಅನುಸರಿಸುತ್ತಾರೆ; ಬರು ಬರುತ್ತ
ಅವರದೇ ಒಂದು ಜಾತಿಯಾಗುತ್ತದೆ."
"ಮೊದಲು ದೇವಾಲಯ ಪ್ರವೇಶವು ದೊರೆಯದಿದ್ದ ಈ ಜನರಿಗೆ ಹೊಸ
ಜಾತಿಯಾದ ಮೇಲೆ ದೇವಾಲಯ ಪ್ರವೇಶವು ದೊರೆಯುತ್ತದೆ. ಮೊದಲು ಹಣ್ಣು
ಕಾಯಿ ಮಾಡಿಸಲೂ ಅವಕಾಶವಿಲ್ಲದಿದ್ದವರಿಗೆ ಈಗ ದೇವರ ದರ್ಶನವು ದೊರೆಯುತ್ತದೆ.
ಅವರು ಸುಳಿದರೆ ದೂರ ಹೋಗುತ್ತಿದ್ದ ನಿಷ್ಠಾವಂತರೂ ಅವರೊಡನೆ ಮಾತುಕಥೆಗಳ
ನ್ನಾಡುತ್ತಾರೆ. ಆ ಜಾತಿಯವರು ಈ ನಿಷ್ಠರೊಬ್ಬರನ್ನು ತಮ್ಮ ಗುರುವನ್ನಾಗಿ
ಮಾಡಿಕೊಳುತ್ತಾರೆ. ತಮ್ಮ ಕ್ಷುದ್ರ ದೇವತೆಗಳನ್ನು ಬ್ರಾಹ್ಮಣರ ದೇವತೆಗಳ
ಅವತಾರಗಳನ್ನಾಗಿ ಮಾಡಿಕೊಳ್ಳುತ್ತಾರೆ. ಈ ಗುರುವಾದವನು ಅರ್ಚಕನಿಗಿಂತ
ಮಹಾಂತನಿಗಿಂತ ನೀತಿ ಧರ್ಮಗಳಲ್ಲಿ ಉತ್ತಮನಾಗಿದ್ದು ಅವರಿಗೆ ಧರ್ಮೋಪದೇಶಾದಿ
ಗಳನ್ನು ಮಾಡುತ್ತಾನೆ. ಇವೆಲ್ಲದರಿಂದ ಆವರ ಮನಸ್ಸಿಗೆ ಉಲ್ಲಾಸವಾಗಿ ಬ್ರಾಹ್ಮಣರ
ಪರಮಭಕ್ತರಾಗಿ ಹೋಗುತ್ತಾರೆ.
"ಎರಡನೆಯ ವಿಧವು ಶರಣರಿಂದ ನಡೆಯುವುದು. ಹೊಸಹೊಸ ಶರಣರು
ಹುಟ್ಟಿಬಂದು ತಮ್ಮದೇ ಒಂದು ಪಂಥವನ್ನು ಹೊಸದಾಗಿ ಸೃಷ್ಟಿಸಿಕೊಳ್ಳುತ್ತಾರೆ.
ಈ ಶರಣರ ಉಪದೇಶಗಳನ್ನು ಕೇಳಿ ಇವರ ಮಹಿಮೆಗಳನ್ನು ನೋಡಿ, ಇವರು
ದೇವರ ಅವತಾರವೆಂದು ನಂಬಿ ಅನೇಕಾನೇಕರು ಅವರ ಶಿಷ್ಯರೂ ಭಕ್ತರೂ
ಆಗುತ್ತಾರೆ. ಈ ಶರಣರನೇಕರು ಜಾತಿ ಪಂಥಗಳನ್ನು ಗಮನಿಸುವುದೇ ಇಲ್ಲ;
ಚಂಡಾಲಾದಿ ಭೇದಗಳನ್ನೂ ಲಕ್ಷಿಸದೆ. ಉಪದೇಶಮಾಡುತ್ತಾರೆ. ಕ್ರೈಸ್ತರೋ
೧೨೧
------------------------------------------------------
ಕರ್ಣಾಟಕ ಸಂಸ್ಕೃತಿ
ಮಹಮ್ಮದೀಯರೋ ಆಗಿಹೋಗುತ್ತಿದ್ದವರನೇಕರು ಈ ಶರಣರ ಶಿಷ್ಯರಾಗುತ್ತಾರೆ.
ಈ ಚಳುವಳಿಗಳೆಲ್ಲ ಮೊದಮೊದಲು ಬ್ರಾಹ್ಮಣರಿಗೆ ವಿರೋಧವಾಗಿಯೇ ಇರುತ್ತವೆ.
ಇಂತಹ ಚಳುವಳಿಗಳೆಲ್ಲ ಬ್ರಾಹ್ಮಣ ಧರ್ಮದಿಂದ ಸಿಡಿದುಬಂದಿರುವವರಿಂದಲೇ
ಆರಂಭವಾಗಿವೆಯಾದರೂ ಎಲ್ಲವೂ ಮತ್ತೆ ಅತ್ಮಕಡೆಗೇ ತಿರುಗಿವೆ; ಅಲ್ಲಿಯೇ ಕೊನೆ
ಗಂಡಿವೆ. ಈ ಶರಣರು ಯೋಗಿಗಳೋ ಬೈರಾಗಿಗಳೋ ಆಗಿದ್ದು ಕೀಳು ಜನರ
ಮೂರ್ತಿಪೂಜೆಗಳಿಗೂ ಅಂಧ ಶ್ರದ್ಧೆಗಳಿಗೂ ಆಧ್ಯಾತ್ಮಿಕಾರ್ಥವೊಂದನ್ನು ಕಲ್ಪಿಸು
ತ್ತಾರೆ, ಆದರೆ ಈ ಶರಣರು ಬೌದ್ಧ ಜೈನರಂತೆ ಶಾಶ್ವತವಾಗಿ ಬೇರೆಯಾಗಿ ನಿಲ್ಲುವ
ಸಾಮರ್ಥ್ಯ್ಯವುಳ್ಳಂತಹ ಭಾರಿಯ ಮತಗಳನ್ನು ಮಾತ್ರ ಸ್ಥಾಪಿಸಲಾರರು. ಆ ಕೀಳು
ಜಾತಿಯ ಭಕ್ತರನ್ನು ಉದ್ದರಿಸುವುದಕ್ಕೆ, ಅವರ ಆಧ್ಯಾತ್ಮಿಕದ ಹಂಬಲವನ್ನು
ತೀರಿಸುವುದಕ್ಕೆ ಬೇಕಾದ ಕೆಲವು ಧರ್ಮಗಳನ್ನೂ ದೇವತೆಗಳನ್ನೂ ಸಂಪಾದಿಸಿಕೊಂಡು
ಈ ಹೊಸಮತಗಳು ಮತ್ತೆ ಬ್ರಾಹ್ಮಣ ಧರ್ಮದಲ್ಲಿ ಸೇರಿಹೋಗುತ್ತವೆ."*
....................
* Sir A.C. Lyall, Asiatic Studies, First Series: Religious and Social (111
Edition : 1907), Chapter V, wherein he states ‘‘Chapter V, reproduces an Essay in
which I ventured upon some dissent from certain views put forth by professor Max
Miller, in a lecture delivered in West Minister Abbey, regarding the vitality of
Brahmanism, and its classification as ೩ non-missionary religion .... All that 1
desire, with deference, to uphold is that Brahmanism is a religion by no means dead
or even moribund, but that on the contrary, members are constantly brought within
its pale, and are allowed to share more or less in its ritual.”
The quotations herein are from the same, pages 135-143.
೧೨೨
---------------------------------------------
BIBLIOGRAPHY
"ಕರ್ಣಾಟಕ ಗೆಜೆಟಿಯರ್."
"ಕುರುಬರ ಚರಿತ್ರೆ."
“ ಗರತಿಯ ಹಾಡು,"
“ ಜನತೆಯೆ ಸಂಸ್ಕೃತಿ.”
"ಶಿವಶರಣರ ವಚನಗಳು."
" ಹುಟ್ಟಿದ ಹಳ್ಳಿ -ಹಳ್ಳಿಯ ಹಾಡು."
" ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ.”
"ಜಯಕರ್ನಾಟಕ.
" ರಂಗಭೂಮಿ.”
" ಮಕ್ಕಳ ಪುಸ್ತಕ.”
Aryan Rule in India E.B. Havell.
Asiatic Studies A. Lyall.
Bombay Folklore R. E. Enthoven.
English Folklore A. R. Wright (Beno).
Cambridge History of India. I
Folk Element in Hindu Culture B. K. Sarkar.
Heart of Hinduism S. Radhakrishnan.
Hindu Customs and Manners Abbe Dubois.
Hindu Dharma Annie Besant.
History of Kannada Language R. Narasimhacharya.
History of the Tamils P. T. Sreenivasa Iyengar.
Indian Culture Thro the Ages S. V. Venkateswaran.
Keys of Power Abbot.
Mysore Wilks.
Mysore and Coorg from Inscripions B. L. Rice.
Origin of Religion A. E. Lang (R.A.P.)
Pre- Historic India, I V. Rangacharya.
Sociological History of India S. C. Sarkar.
Social and Political Life in
Vijaya-nagar Empire Saletore.
Some Problems of Ind.Literature Winternitz.
Tamils 1800 Years Ago Kanaka Sabhai.
೧೨೩
-----------------------------------------------------
The Evolution of the Idea of God Grant Allen.
The Village Gods in South India Whitehead.
Travels Buchanan.
Census Re ports (Mysore) 1901, 1911, 1921 and 1931.
Census Reports (Madras) 1901, 1911, 1921 and 1931.
District Manuals Bellary, Coimbattor and
Mangalore.
Encyclopadia Britannica Articles : Folklore, Folk-
songs, Folk-tales,
Proverbs and Riddles
Encyclopedia Chambers s do
Encyclopedia of Religion and Ethics do
Epigraphica Karnatica .. do
Gazetteer of Mysore
Indian Antiquary Section: Folklore
Ete., Etc.
----------------------------
Agenda et Corrigenda for read
Page 3 introduction introduction of
(Footnote, last line) thereof Chapter VIII, page 138
Page 122 West Minister Westminister
(Footnote, line 4)
2124-34. ಬೆಂಗಳೂರು ಸಿಟಿ ಬೆಂಗಳೂರು ಪ್ರೆಸ್ಸಿನಲ್ಲಿ ಸೂಪರಿಂಟೆಂಡೆಂಟಿರಾದ
ಟಿ. ಸುಬ್ರಹ್ಮಣ್ಯ ಅಯ್ಯರವರಿಂದ ಮುದ್ರಿಸಲ್ಪಟ್ಟತು.
===============================================================