ಭಾನುವಾರ, ಮಾರ್ಚ್ 17, 2024

ಇಂಗ್ಲಿಷ್ ಗೀತೆಗಳು by Belluru Mylaraiyya Srikantaiah ಬಿ.ಎಂ.ಶ್ರೀ.

 ಅಡವಿಮರದಡಿಯಲ್ಲಿ


ಅಡವಿಮರದಡಿಯಲ್ಲಿ

ನನ್ನೊಡನೆ ಕೆಡೆದಲ್ಲಿ

ಇನಿಯ ಹಕ್ಕಿಯ ಕೊರಲ

ತನ್ನ ಕೊರಲಲಿ ತಂದು ನಲಿವನಾರೈ-

ಇತ್ತ ಬಾ, ಇತ್ತ ಬಾ. ಇತ್ತ ಬಾರೈ,

ಎತ್ತ ನೋಡಿಲ್ಲೆಲ್ಲ,

ಮತ್ತು ಹಗೆಯೊಂದಿಲ್ಲ,

ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.


ಆಸೆಬಲೆಯನು ತೊಲಗಿ, 

ಬಿಸಿಲ ಕಾಯುತ ಮಲಗಿ,

ಉಣ್ಣುವೂಟವ ಕಂಡು, 

ತಣ್ಣನೆಯೇ ತಣಿದುಂಡು ನಲಿವನಾರೈ-

ಇತ್ತ ಬಾ, ಇತ್ತ ಬಾ, ಇತ್ತ ಬಾರೈ,

ಎತ್ತ ನೋಡಿಲ್ಲೆಲ್ಲ,

ಮತ್ತೆ ಹಗೆಯೊಂದಿಲ್ಲ.

ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.


SHAKESPEARE : (1564-1616) : Under the Greenwood tree.

--------------------------


ಮುಪ್ಪು ಯೌವನ


ನರಮುಪ್ಪು ಯೌವನಕೆ

ಒಲ್ಲದೊಡನಾಟ ;

ಯೌವನವು ಸುಮ್ಮಾನ,

ಮುಪ್ಪು ಮಿಡುಕಾಟ; 

ಯೌವನವು ಸಿರಿ ಸುಗ್ಗಿ

ಮುಪ್ಪು ಬರಿ ಮಾಗಿ ;

ಯೌವನವು ಶೃಂಗಾರಿ. 

ಮುಪ್ಪು ತಲೆದೂಗಿ. .

ಯೌವನಕೆ ಚೆಲ್ಲಾಟ. 

ಮುಪ್ಪಿಗುಸಿರೆಳೆದಾಟ, 

ಹುಲ್ಲೆನಗೆ ಯೌನವು. ಹೆಳವು ಮುಪ್ಪು; 

ಯೌನದ ರಕ್ತ ಬಿಸಿ, 

ಮುಪ್ಪೆಲ್ಲ ಕುಗ್ಗು ಕುಸಿ,

ಎದೆಗಚ್ಚು ಯೌವನವು, ಪೆಚ್ಚು ಮುಪ್ಪು, 

ಎಲೆ ಮುಪ್ಪೆ ಸಾರತ್ತ, 

ಯೌವನವೆ ಬಾರಿತ್ತ, 

ಬರುವಳದೋ ಚಿಕ್ಕವಳು ನನ್ನ ಚೆಲುವೆ ;

ಮುಪ್ಪೆ, ನಡೆ, ನಡೆ, ಒಲ್ಲೆ, 

ಮುದಿಕುರುಬ, ನಿಲ್ಲಲ್ಲೆ, 

ಬಂದಳದೊ ಚಿಕ್ಕವಳು ನನ್ನ ಚೆಲುವೆ,


SHAKESPEARE: Youth & Age 

--------------------------------


ವಸಂತ 

ವಸಂತ ಬಂದ, ಋತುಗಳ ರಾಜ ತಾ ಬಂದ,

ಚಿಗುರನು ತಲದ. ಹೆಣ್ಗಳ ಕುಣಿಸುತ ನಿಂದ.

ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ.

ಕೂವೂ, ಜಗ್ ಜಗ್, ಪುವ್ವೀ. ಟೂವಿಟ್ಪವೂ !


ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,

ಇನಿಯರ ಬೇಟ; ಬನದಲ್ಷಿ ಬೆಳದಿಂಗಳೂಟ,

ಹೊಸ ಹೊಸ ನೋಟ. ಹಕ್ಕಿಗೆ ನಲಿವಿನ ಪಾಟ,

ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ ! 


ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,

ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು.

ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟೂವೂ !


ಬಂದ ವಸಂತ - ನಮ್ಮಾ

ರಾಜ ವಸಂತ !


NASH (1567-1601) : Spring

------------------------------------------------

ಹೊಳೆಕೆರೆ


ಹೊಳೆ ಬೆಳಗಿ ಜಾರುವುದು, 

ಗಿಳಿ ನೆಗೆದು ಹಾರುವುದು. _

ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು ; 

ತಿಳಿಯಾದ ಬಾನಿನಲಿ 

ಬಿಳಿಮುಗಿಲು ತೇಲುವುದು,

ಮಳೆ ಸೋತ ದಳದಲತೆ ಕದ್ದಡಗಿತು ! 


ಕರೆಯ ಹೊಲಗೆಯ ಮರದ 

ನೆರಳ ಸೊರಿಪಿನೊಳೊರಗಿ

ಕುರುಬಹಯ್ದನು ಕೊಳಲನೂದುತಿರಲು,

ಕೊರಳೆತ್ತಿ, ಮೈಮರೆತು, 

ಹರಡಿದೆಳಹಸುರಾದ

ಗುರುಕೆಯನು ಮೇಯದೆಯ ಮುರಿದೆ ಇಹುದು. 


ಎಳೆಮುದಿಯರೊಲದಾಗಿ

ಕಲೆತು ಹೊಲಗೆಯ್ಮೆಯೊಳು

ನಲಿದುಲಿವ ನಗೆಮಾತು ಕಿವಿಗೆಸೆವುದು.

ಮಲೆಯಲ್ಜಿ ಬಯಲಲ್ಜಿ

ನೆಲದಲ್ಲಿ ಜಲದಲ್ಲಿ

ತಲೆದೋರಿತಾನಲದವೆಲ್ಲೆಲ್ಲಿಯೂ !


WORDSWORTH (1770-1850) : Written in March

------------------------------------------------


ಮಳೆಬಿಲ್ಲು


ಮುಗಿಲಿನಲಿ ಮಳೆಬಿಲ್ಜ ಕಾಣತಲೆ ನಾನು

ನೆಗೆದು ಕುಣಿದಾಡುವುದು ಹೃದಯ ತಾನು !

ಅಂತೆ ಇದ್ದುದು ಮೊದಲು ಚಿಕ್ಕಲದಿನಂದು ;

ಅಂತೆ ಇಹುದೀ ಮೆರೆವ ಯೌವನದಲಿಂದು. 

ಅಂತೆ ಇರಲೆನಗಿನ್ನು ಮುಪ್ಪಿನಲಿ ಮುಂದೆ- _

ಅಂತಿರದೆ, ಸಾವು ಬರಲಂದೆ !

ಮನುಜನಿಗೆ ಮಗು ತಂದೆ-ನಾನದನು ಬಗೆದು.

ಹೊಂದಿಸಲು ಬಯಸುವೆನು ದಿನಗಳನು ತೆಗೆದು

ಒಲದಕೊಲದನು ಪ್ರಕೃತಿಭಕ್ತಿಯಲಿ ಬಿಗಿದು.

WORDSWORTH : Rainbow.

--------------------------------------


ಮುದ್ದಿನ ಕುರಿಮರಿ '


ಹಿಡಿದು ಮಂಜು ಬೀಳುತ್ತಿತ್ತು. ಚುಕ್ಕಿ "ಕಣ್ಣು ಮಿಟುಕುತಿತ್ತು ;

"ಕುಡಿಯೊ, ಕಲದ. ಕುಡಿಯೊ" ಎಂದು ನುಡಿವ ಮರಿತು ಕಿವಿಗೆ ಬಿತ್ತು;

ತಿರುಗಿ ನೋಡಲೊಬ್ಬೆಯಾಚೆ. ಒಬ್ದಳಲ್ತಿ ಹೆಣ್ಣು ಮಗಳು

ನೊರೆಯ ಬಿಳುಪು ಕುರಿಯ ಮರಿಯ ತಡವುತಿದ್ದಳು.


ಕುರಿಗಳಿಲ್ಲ ಬೇರೆ ನೆರೆಯೊಳಲ್ಲಿ ಮರಿಯದೊಲದೆ ಇತ್ತು ;

ಕೊರಳಿಗೊಂದು ಸಣ್ಣ ಹುರಿಯ ಬಿಗಿದು ಕಲ್ಗೆ ಕಟ್ಟಿ ಇತ್ತು:

ಪುಟ್ಟ ಹುಡುಗಿ ದಟ್ಟವಾದ ಹುಲ್ಲ ಮೇಲೆ ಮಂಡಿಯೂರಿ,

ಬೆಟ್ಟದಿಂದ ಬಂದ ಮರಿಗೆ ತಿಲಡಿಯಿಡುತಲಿದ್ದಳು. 


ಕಿವಿಯನಲುಗಿ, ತಲೆಯನೊಲೆದು, ಬಾಲವನ್ನು ಕುಣಿಸಿ, ನಲಿದು,

ಅವಳ ಕಯ್ಯ ತಿಂಡಿಯನ್ನು ಮುದ್ದಿನಿಂದ ಸವಿವ ಮರಿಗೆ

"ಕುಡಿಯೊ, ಕಂದ ಕುಡಿಯೊ" ಎಂದು ನುಡಿವ ದನಿಯ ಕೇಳಿದೊಡನೆ.

ಅವಳ ಹೃದಯವೆನ್ನ ಹೃದಯದಲ್ಲಿ ಕಲೆತು ಹೋಯಿತು.


ಕಣ್ಣಿಗಂದವಾದ ಮಗುವೊ. ಮುದ್ಧುಗಾರನಾದ ಮರಿಯೊ,

ಕಣ್ಣು ನೆಟ್ಟು ನೊಡುತಿದ್ದನೊಲುಮೆಯಿಂದ ಜೋಡಿ ಚೆಲುವ ;

ಕುಡಿಸಿ ಮುಗಿಸಿ ಮರಿಯ ಬಿಟ್ಟು ಹುಡುಗಿ ಮನೆಗೆ ಹೊರಟಳಾಗ,

ನಡೆಯಲಿಲ್ಲ ಹತ್ತು ಹೆಜ್ಜೆ, ಹಾಗೆ ನಿಂತುಕೊಂಡಳು. 


ತಿರುಗಿ ಮರಿಯನಕ್ಕರಿಂದ ನೋಡುವವಳ ಮೊಗವ ಬಗೆಯ 

ಮರೆಯಲಿದ್ದ ಜಾಗದಿಂದ ಕಂಡೆನವಳು ಕಾಣದಂತೆ ;

ಅಳತೆ ಮಡದಿ ನುಡಿಯ ಹೆಣೆವ ವರವ ಕೊಡಲು ವಾಣಿ ಈಗ 

ಎಳೆಯಮರಿಗೆ ಹೀಗೆ ಹಾಡದಿರಳೆ ಎಂದು ಕೊಂಡೆನು. 


"ಕೊರತೆಯೇನು ಕಲದ ನಿನಗೆ? ಹುರಿಯನೇಕೆ ತುಯ್ಯುತಿರುವೆ?

ಮರೆಯದುಣಲು ಮಲಗಲೆಲ್ಜ ನೇರ್ಪುಮಾಡಿ ಇರವೆನಲ್ಲ !

ನೆಲದ ಹುಲ್ಲು ಮೆತ್ರೆಯಲ್ದ ! ಇದಕೆ ಹಸುರೆ ಇಲ್ಲವಲ್ಲ !

ಮಲಗು, ಮರಿಯೆ, ಮಲಗು, ಕಂದ ; ನಿನಗೆ ಕೊರತೆಯಾವುದು ? 



ಏನು ನೀನು ಹುಡುಕುತಿಹುದು? ಮನಸಿಗೇನು ಬಯಕೆ ಇಹುದು?

ನೀನು ಬಲಿತು ಬೆಳೆಯುತಿರುವೆ ; ಸೊಬಗ ಹೊಮ್ಮಿ ಹೂಳೆಯುತಿರುವೆ,

ಇಲ್ಲಿ ಗರುಕೆ ಎಳೆಯ ಗರುಕೆ, ಇಲ್ಲಿ ಹೂವಿಗೆಣೆಯ ಕಾಣೆ.

ಅಲ್ಲಿ ಹಸುರು ಪಯಿರು ಬಿಸಿ, ಬಿಡದೆ ಕಿವಿಯೊಳುಲಿವುದು.


ಬಿಸಿಲು ಕಾದು ಹೊಳೆವ ಹೊತ್ತು. ನಾರುಹುರಿಯನಿತ್ತ ನೀಡು,

ಬಸಿರಿಮರದ ನೆರಳ ಸೇರಿ ತಂಪು ಮಾಡಿಕೊಳ್ಳಬಹುದು,

ಗಿರಿಯ ಬಿರಿಸು ಗಾಳಿಮಳೆಗೆ ಹೆದರಿಕೊಂಡು ನಡುಗಲೇಕೆ? .

ಗಿರಿಯ ಗಾಳಿಮಳೆಗಳಿಲ್ಷಿ ಕನಸಿನಲ್ಲಿ ಸುಳಿಯವು. 


ಮಲಗು, ಮುದ್ಧುಮರಿಯೆ, ಮಲಗು ; ಮರೆತೆಯೇನು ನಿನ್ನ ಪಾಡ ? 

ಮಲೆಯ ದೂರದಿರುಬಿನಲ್ಲಿ ಅಪ್ಪ ನಿನ್ನ ಕಲಡ ದೆಸಯೆ ?

ಹಲವು ಮಂದೆ ಮೇದುವಲ್ಷಿ, ನಿನಗೆ ನೀನೆ ಎನುವರಿಲ್ಲ.

ಕೆಲದೊಳಿರದೆ ನಿನ್ನೆ ತಾಯಿ ಬಿಟ್ಟು ನಡೆದಳೆಲ್ಲಿಯೋ. 


ತೋಳಿನಲ್ಷಿ ಎತ್ತಿಕೊಂಡ, ಮರುಕದಿಂದ ಮನೆಗೆ ತಂದ,

ಹೇಳು, ಬಂದ ಭಾಗ್ಯವುಳಿದು, ಎಲ್ಜಿ ಅಲೆಯುವಾಸೆ ಕಂದ ?

ಸಾಕುತಿಹೆನು ತಾಯಿಯಂತೆ - ಈದ ತಾಯಿ ಬೆಟ್ಟದಲ್ಲಿ

ಸಾಕಿ ಸಲಹುತಿದ್ದಳೇನು, ಇಷ್ಟು ಪ್ರೀತಿ ತೋರುತ ?


ಎರಡು ಸಾರಿ, ಹಗಲು ಹೊತ್ತು. ನನ್ನ ಪುಟ್ಟ ತೊಟ್ಪಯಲ್ಲಿ.

ತೊರೆಯ ತಿಳಿಯ ನೀರ ತಂದು, ನೀನೆ ಬಲ್ಲೆ ಕುಡಿಸುತಿರುವೆ ;

ಎರಡು ಸಾರಿ, ಮಂಜು ಬಿದ್ದು, ಹೂಲಗಳೆಲ್ಲ ನೆನೆದ ವೇಳೆ 

ಕರೆದು ಬಿಸಿಯ ನೊರೆಯ ಹಾಲು, ಹೊಸದ ತಂದು ಹೊಯ್ಯುವೆ. 


ಬೇಗ ಮಯ್ಯಿ ತುಂಬಿಕೊಂಡು, ಕಾಲು ಬಲಿತು ನೆಗೆಯ ಬಲ್ಲೆ. _

ಆಗ ನನ್ನ ಪುಟ್ಟ ಬಂಡಿ ಕಟ್ಟಿಕೊಡುವ, ಎಳೆಯುವಂತೆ. ,

ನನ್ನ ಜೊತೆಯೊಳಾಟವಾಡಿ, ಚಳಿಯ ಗಾಳಿ ಕೊರೆಯುವಾಗ.

ನನ್ನ ಬಳಿಯ ರೊಪ್ತವಾಗಿ, ಕೆಡೆಯುವಂತೆ ಬೆಚ್ಚಗೆ. 

ಮಲಗ ಒಲ್ಲದೊಲ್ಲದೇಕೊ, ಪ್ರಾಣಿ ಪಾಪ ! ಮನಸಿನೊಳಗೆ _

ಸುಳಿದು ಬಂದ ತಾಯ ನೆನಹು ತೊಳಲುತಿಹದೊ ಏನೊ ಅರಿಯೆ ; 

ನನಗೆ ತಿಳಿಯದಂತೆ ನಿನಗೆ ಪ್ರೀತಿಯಾದುದಾವುದಿಹುರೊ, -

ಕನಸಿನೊಳಗೆ ಹೊಳೆದದಾವ ನೋಟ ಪಾಟ ಸೆಳೆವುದೋ



ಗಿರಿಯ ನೆತ್ತಿ ಏನು ಹಸುರು, ಏನು ಚೆಲುವು ನೋಡಲಯ್ಯೊ !

ಬರುವುವೆಂದು ಕೇಳಿ ಬಲ್ತೆನಲ್ತಿ ಬಿರುಸುಗಾಳಿ ಮಬ್ಬು 

ಎಳೆಯ ಮಗುವಿನಂತೆ ನಗುತ ನಗುತ ನೆಗೆವ ತೊರೆಗಳಲ್ಲಿ

ಮುಳಿಸು ಬರಲಿ, ಎರೆಗೆ ಹಸಿದ ಸಿಂಹದಂತೆ ಮೊರೆವುವು. 


ಎರಗಲಾರದಿಲ್ಲಿ ಹದ್ದು, ಅದಕೆ ಬೆದರ ಕೆಲಸವಿಲ್ಲ.

ಇರುಳು ಹಗಲು ಭದ್ರವಿಲ್ಲಿ, ಹಟ್ಟಿ ಇಹುದು ಪಕ್ಕದಲ್ಲಿ. 

ಅಳುಕಿ ಏಕೆ ಅರಚಿಕೊಳುವೆ? ಹುರಿಯು ತುಯ್ಡು ಹಿಲದೆ ಬರುವೆ ?

ಮಲಗು, ಕಂದ ಬೆಳಕುಹರಿದ ಗಳಿಗೆ ಬಂದು ಕಾಣುವೆ.


ತಳುಗಿ, ತಳುಗಿ, ಹೆಜ್ಜೆಯಿಟ್ವು ಮನೆಯ ಕಡೆಗೆ ನಡೆಯುವಾಗ.

ಹಲವು ಸಾರಿಹಾಡನಿದನು ನನಗೆ ನಾನೆ ಹೇಳಿಕೊಂಡೆ ;

ಪದವನೆಲ್ಲ ಪಂಕ್ತಿ ಪಂಕ್ತಿಯಾಗಿ ಮಗುಚಿ ನೋಡುವಾಗ,

ಪದದೊಳವಳದರ್ಧ ಮಾತ್ರ ಅರ್ಧ- ನನೃದೆನಿಸಿತು.


ತಿರುಗಿ, ತಿರುಗಿ, ಪದವನಿದನು ನನಗೆ ನಾನೆ ಹೇಳಿಕೊಂಡೆ ;

ಆರೆಗೆ ಹೆಚ್ಚಿ ಹೆಣ್ಣ ಪಾಲು ಎಂದು ತೊಳಿರಿತೇಕೆ ಎನಲು,

ಅವಳ ಕಣ್ಣ ನೋಟದಿಂದ ; ಅವಳ ನುಡಿಯ ಮರುಕದಿಂದ,

ಅವಳ ಹೃದಯವೆನ್ನ, ಹೃದಯದಲ್ಲಿ ಕಲೆತು ಹೋಯಿತು.

WORDSWORTH ; The Pet Lamb 

-----------------------------

ಮುಂದುವರೆಯುವುದು....