ಶನಿವಾರ, ಏಪ್ರಿಲ್ 10, 2021

ರಜನೀ -ಬಿ. ವೆಂಕಟಾಚಾರ್ಯ

 https://archive.org/details/dli.osmania.4189

UNIVERSAL LIBRARY 

52 

LIBRARY UNIVERSAL 

NARASIMHARAJA WADIYAR SERIES 

ರಜನೀ 

ಎರಡನೆಯ ಸ೦ಕರಣ , 

All Rights Reserved 

[ಕ್ರಯ 12 ಆಣೆ] 

ಬಿ. ವೆಂಕಟಾಚಾರ್ಯ, 

PRINTED & PUBLISHED BY B. V. Narasimhaiyengar, 

AT THE ROYAL PRESS, MYSORE-1918. 

------------------------------------------------

 

ಶ್ರೀ 

|| ಶ್ರೀಯೈನಮಃ||" 

ರಜನೀ. 

ಮೊದಲನೆಯ ಭಾಗ. 

ರಜನಿಯ ಹೇಳಿಕೆ. ಪ್ರಥಮ ಪರಿಚ್ಛೇದ. 

ನಿಮ್ಮಗಳ ಸುಖದುಃಖಗಳಿಗೆ ಸರಿಯಾಗಿ ನನ್ನ ಸುಖದುಃಖಗಳು ಪರಿಮಿತ 

ವಾಗುವುದಿಲ್ಲ. ನೀವು ಬೇರೆ, ನಾನು ಬೇರೆ, ಪರಸ್ಪರ ಭಿನ್ನ ಪ್ರಕೃತಿಯುಳ್ಳವರು. 

ನನ್ನ ಸುಖದಲ್ಲಿ ನೀವು ಸುಖಿಗಳಾಗುವ ಸಂಭವವಿಲ್ಲ. ನನ್ನ ದುಃಖಗಳನ್ನು ನೀವು 

ಅರಿಯಲಾರಿರಿ. ನಾನು ಒಂದು ಅಲ್ಪವಾದ ಯಧಿಕಾ ಪುಷ್ಪದ ಗಂಧದಿಂದ ಸುಖಿ 

ಯಾಗುವೆನು, ಷೋಡಶಕಳಾಯುಕ್ತನಾದ ಚಂದ್ರನು ಸಹಸ್ರನಕ್ಷತ್ರಮಂಡಲಮಧ್ಯಸ್ಥ 

ನಾಗಿ ನನ್ನ ಕಣ್ಣುಗಳಿದುರಿಗೆ ಬಂದು ನಿಂತು ಪ್ರಜ್ವಲಿಸುವನಾದರೂ ಕೂಡ ನಾನು 

ಸುಖಿಯಾಗಲಾರೆನು, ನೀವು ಮನವಿಟ್ಟು ಈ ನನ್ನ ಕಥೆಯನ್ನು ಹೇಗೆತಾನೇ ಕೇಳು 

ವಿರಿ ? ನನಗೆ ಹುಟ್ಟಿದ ಮೊದಲು ಕಣ್ಣುಗಳು ಕಾಣಿಸದು. 


ಯಾವಪ್ರಕಾರತಾನೇ ತಿಳಿಯುವಿರಿ ? ಇನ್ನು ಜೀವನವಾದರೋ ದೃಷ್ಟಿಮಯ 

ವಾದುದು, ನನ್ನ ಜೀವನವು ಅಂಧಕಾರಮಯ. ಆದರೆ ದುಃಖವಿಷಯವೇನೆಂದರೆ-- 

ನಾನು ಇದನ್ನು ಅಂಧಕಾರವೆಂದು ತಿಳಿದಿಲ್ಲ. ನನ್ನ ಈ ಅಂಧನಯನಗಳಿಗೆ ಅದೇ 

ಬೆಳಕಾಗಿದೆ ! ನಿಮ್ಮಗಳ ಬೆಳಕು ಎಂಬುದು ಎಂತಹುದೋ ಅದನ್ನು ನಾನರಿಯೆ ! 

----------------------------------------

2 ಪ್ರಥಮ ಪರಿಚ್ಛೇದ  


ಆದುದರಿಂದ ನನಗೆ ಸುಖವೇ ಇಲ್ಲವೆಂದು ಹೇಳುವಿಲೊ ? ಹಾಗಲ್ಲ. ಸುಖ 

ದುಃಖಗಳೆರಡೂ ನಿಮಗೂ ನನಗೂ ಸಹ ಪ್ರಾಯಃ ಸಮಾನವಾಗಿರುವುವು, ನೀವು 

ರೂಪವನ್ನು ನೋಡಿ ಸುಖಿಗಳಾಗುತ್ತೀರಿ. ನಾನು ಶಬ್ದವನ್ನು ಕೇಳಿ ಸುಖಿಯಾಗುತ್ತೇನೆ. 

ಈಗ ನೋಡಿ, ಈ ಚಿಕ್ಕದಾದ ಯಧಿಕಾಪುಷ್ಪಗಳ ತೊಟ್ಟು ಎಷ್ಟು ಸೂಕ್ಷ್ಮ 

ವಾಗಿದೆ; ಮತ್ತು ನಾನು ಕೈಯಲ್ಲಿ ಹಿಡಿದಿರುವ ಸಚಯ ಅಗ್ರಭಾಗವು ಮತ್ತೆತಷ್ಟು 

ಸೂಕ್ಷ್ಮವಾಗಿದೆ ! ನಾನು ಈ ಸೂಜಿಯ ಕೊನೆಯಿಂದ ಸಣ್ಣಗಾದ ಆ ಹೂಗಳ 

ತೊಟ್ಟುಗಳಲ್ಲಿ ರಂಧ್ರವನ್ನು ಮಾಡಿ ಪುಷ್ಪಮಾಲೆಯನ್ನು ಮಾಡುತ್ತೇನೆ, ನಾನು 

ಚಿಕ್ಕವಯಸ್ಸಿನಿಂದ ಭ್ರಷ್ಟ ಮಾಲೆಯನ್ನೇ ಮಾಡುತ್ತಲಿದ್ದೇನೆ. ನಾನು ಮಾಡಿದ 

ಹೂಮಾಲೆಗಳನ್ನು ಧರಿಸಿಕೊಂಡವರು ಯಾರೂ ಯಾವಾಗಲೂ ಕಣ್ಣಿಲ್ಲದ ವ್ಯಕ್ತಿಯು 

ಪೋಣಿಸಿದಮಾಲೆಯೆಂದು ಹೇಳಿಲ್ಲ. 


ನಾನು ಯಾವಾಗಲೂ ಹೂಮಾಲೆಗಳನ್ನೇ ಪೋಣಿಸುತಲಿದ್ದೆನು. ಬಲೀ 

ಗಂಜಿನ ಊರು ಮುಂದುಗಡೆ ನಮ್ಮ ತಂದೆಗೆ ಒಂದು ಪುಷೋದ್ಯಾನವಿರುವುದು. 

ಅದರಿಂದಲೇ ಅವನಿಗೆ ಜೀವನವು ನಡೆಯುತಲಿತ್ತು, ಫಾಲ್ಕುಣಮಾಸದಲ್ಲಿ ಹೂ ಬಿಡು 

ವುದಕ್ಕೆ ಪ್ರಾರಂಭವಾದ ಮೊದಲ್ಗೊಂಡು ತೋಟದಿಂದ ನಿಶ್ಯವೂ ಹೂ ತಂದುಕೊಡು 

ವನು. ನಾನದನ್ನು ಮಾಲೆಯಾಗಿ ಪೋಣಿಸಿ ಸಿದ್ಧಪಡಿಸುವೆನು, ತಂದೆಯು ಅದನ್ನು 

ತೆಗೆದುಕೊಂಡು ಹೋಗಿ ಕಲಕತ್ತಾ ನಗರದ ಬೀದಿಗಳಲ್ಲಿ ಅಲ್ಲಲ್ಲಿ ಮಾರುವನು. ನಮ್ಮ 

ಶಾಯಿಯು ಮನೆಯ ಕೆಲಸವನ್ನು ಮಾಡುವಳು. ಅವಕಾಶವಿದ್ದರೆ ತಂದೆತಾಯಿಗಳಿ 

ಬೃರೂ ಮಾಲೆಗಳನ್ನು ಕಟ್ಟುವುದಕ್ಕೆ ನನಗೆ ಸಹಾಯಮಾಡುವರು. 


ಪ್ರತೃಗಳ ಸ್ಪರ್ಶವು ಬಹಳ ಸುಂದರವಾದುದು. ಧರಿಸುವುದಕ್ಕೂ ಬಹಳ 

ಸುಂದರವೆಂತಲೇ ತಿಳಿಯುತ್ತೇನೆ. ಘ್ರಾಣಕ್ಕೆ ಸುಂದರವಾದದೇ ಹೌದು. ಆದರೆ 

ಹೂ ಕಟ್ಟಿ ಮಾರುವುದರಿಂದಲೇ ಸಂಸಾರವು ನಡೆಯುವುದಿಲ್ಲ. ಅನ್ನದ ವೃಕ್ಷಕ್ಕೆ 

ಹೂ ಇಲ್ಲ. ಆದುದರಿಂದ ತಂದೆಯು ದರಿದ್ರನಾಗಿಯೇ ಇದ್ದನು. ಮಿರಜಾಪುರದಲ್ಲಿ 

 ಒಂದು ಸಾಮಾನ್ಯವಾದ ಹೆಂಚಿನ ಮನೆಯಲ್ಲಿ ನಾವು ವಾಸಮಾಡುತಲಿದ್ದೆವು. ಆ 

 ಮನೆಯಲ್ಲೊಂದುಕಡೆ ಹೂ ಹರಡಿ ಆರಿಸಿ ರಾಶಿಮಾಡಿಕೊಂಡು ಮಾಲೆಯಲೆಯಾಗಿ 

 ಪೋಣಿಸಿ ಕಟ್ಟುತ್ತಿದ್ದೆನು, ತಂದೆಯು ಹೊರಗೆ ಹೊರಟುಹೋಗುತ್ತಲೇ ನನ್ನ ಆಶೆಯ 

 ಪ್ರಭಾತಕ್ಕೆ ಸರಿಯಾಗಿ ಮೊಗ್ಗುಗಳು ಅರಳಿದವೆಂದು ಭಾವಿಸಿಕೊಂಡು ಹಾಡುತ 

 ಲಿರುವೆನು, 

 --------------------------------------------------------

ರಜನಿ 3

ಸಖಕಿಂಬ್ರವೀಮಿ ಚಿತ್ರ ಂ| 

ನಿಶೇವಗತವಮೇದ್ಯ ! 

ಆಶಾಹರ್ಮುಖಸಮಯ | 

ಶ್ಚಿತ್ರಾಃಕಲಿಕಾವಿಕಾಸಯತಿ || ಎಂದು - 


ರಾಮರಾಮ ! ಇದುವರೆಗೂ ನಾನು ಹೇಗಸೋ ಗಂಡಸೋ ಗೊತ್ತಾಗಿ 

ತಿಳಿಸಲಿಲ್ಲ. ಹಾಗಾದರೆ, ನಾನು ಯಾರೆಂದು ತಿಳಿಯದವರಿಗೆ ಹೇಳದಿರುವುದೇ 

ಒಳ್ಳೇದು, ನಾನು ಈಗ ಹೇಳುವುದಿಲ್ಲ.  


ಗಂಡಸೇ ಆಗಲಿ, ಹೆಂಗಸೇ ಆಗಲಿ, ಕುರುಡರಿಗೆ ವಿವಾಹವಾಗುವುದು ಬಹು 

ಕಷ್ಟ, ನಾನು ಕುರುಡಳೆಂದು ನನಗೆ ಮದುವೆಯಾಗಲಿಲ್ಲ. ಹಾಗಾಗದಿರುವುದು 

ದೌರ್ಭಾಗ್ಯವೋ ಸೌಭಾಗ್ಯವೋ ಕಣ್ಣು ಇಲ್ಲದವರೇ ತಿಳಿಯುವರು. ಅನೇಕ ಅಪಾಂ 

ಗರಂಗರಂಗಿಣಿಯರು ನನ್ನ ಚಿರಕೌಮಾಧ್ಯದ ಕಥೆಯನ್ನು ಕೇಳಿ, ಆಯೊ ! ನಾನೂ 

ಕುರುಗಳಾಗದೇ ಹೋದೆನಲ್ಲಾ ಎಂದು ಹೇಳಿದ್ದಾರೆ. 


ಮದುವೆಯು ಆಗಲಿಲ್ಲ. ಅದರಿಂದ ನನಗೆ ದುಃಖದಿರಲಿಲ್ಲ. ನಾನು ಸ್ವಯಂವರೆ 

ಯಾಗಿದ್ದೆನು. ಒಂದುದಿನ ತಂದೆಯಹತ್ಯರ ಕುಳಿತುಕೊಂಡು ಕಲಕತಪಟ್ಟಣದ 

ವರ್ಣನೆಯನ್ನು ಕೇಳುತ್ತಿದ್ದೆನು, ಮಾ ನ್ಯೂಮೆಂಟ್” (Nion1ment) ಎಂಬುದು 

ಅದ್ಭುತವಾದುದೆಂತಲೂ, ಅತಿ ಉನ್ನತವಾಗಿ ಅಚಲವಾಗಿ ಚಂಡಮಾರುತಕ್ಕೂ ಅಲು 

ಗದೆ ಕಂಠದಲ್ಲಿ ಸರಪಣಿ ಇದೆಯೆಂದು ಕೇಳಿ, ಯಾರೋ ಮಹಾದೊಡ್ಡ ಬಾಬುವಾಗಿರ 

ಬಹುದೆಂದು ತಿಳಿದೆನು, ಮನಸ್ಸಿನಲ್ಲಿಯೇ ಆ ಮಾನ್ಯುಮೆಂಟನ್ನು (ಜಯಧ್ವಜವನ್ನು) 

 ವಿವಾಹಮಾಡಿಕೊಂಡುಬಿಟ್ಟೆನು. ನನ್ನ ಸ್ವಾಮಿಗಿಂತ ಮತ್ತು ದೊಡ್ಡವರು ? 

 ನಾನು ಮಾನ್ಯುಮೆಂಟಿನ ಮಹಿಷಿಯಾದೆನು. 

  

ಕೇವಲ ಒಂದೇ ವಿವಾಹವಲ್ಲ. ನಾನು ಮಾನ್ಯುಮೆಂಟನ್ನು ಮದುವೆಮಾಡಿ 

ಕೊಂಡಾಗ ನನಗೆ ಹದಿನೈದು ವರುಷ ವಯಸ್ಸು. ಹದಿನೇಳನೆಯ ವರುಷದಲ್ಲಿ (ಹೇಳು 

ವುದಕ್ಕೆ ನಾಚಿಕೆಯಾಗುತ್ತದೆ.) ಸುಮಂಗಲಿಯಾಗಿದ್ದಾಗಲೇ ಮತ್ತೊಂದು ವಿವಾಹವು 

ಗಂಟುಬಿದ್ದಿತು. ನಮ್ಮ ಮನೆಯ ನೆರೆಯಲ್ಲಿ ಕಾಳೀಕರಣವಸುವೆಂಬ ಒಬ್ಬ ಕಾಯ 

ಸ್ಥನು ವಾಸವಾಗಿದ್ದನು. ಅವನಿಗೆ ಚೀನಾಬಜಾರನಲ್ಲಿ ಒಂದು ಕಾರಖಾನೆಯವನಿದ್ದನು. 

ಅವನೂ ಕಾಯಸ್ಥನು. ನಾನೂ ಕಾಯಸ್ಥಳು, ಆದುದುಂದ ನನಗೆ ಅವರಿಗೆ ಒಳಿಕೆ 

ಇತ್ತು. ಕಾಳಿಚರಣವಸುವಿಗೆ ನಾಲ್ಕು ವರುಷದ ಒಂದು ಗಂಡುಮಗುವಿತ್ತು, ಮಗು 

ವಿನ ಹೆಸರು ವಾಮಾಚರಣ, ವಾಮಾಚರಣನು ಯಾವಾಗ ಬಂದು ನಮ್ಮ ಮನೆ 

--------------------------------------------------

4 ಪ್ರಥಮ ಪರಿಚ್ಛೇದ 


ಯಲ್ಲಿ ಆಡಿಕೊಂಡಿರುವನು. ಒಂದುದಿನ ನಮ್ಮ ಮನೆಯ ಮುಂದುಗಡೆ ಮದುವೆಗೆ 

ವರನನ್ನು ಬಾಣಬಿರಸುಗಳ ಸಮೇತವಾಗಿ ದಿಬ್ಬಣದವರು ಮಂದಗಾಮಿಯಾದ ಚಂಡ 

ಮಾರುತದಂತ ಮೆರವಣಿಗೆ ಮಾಡಿಸಿಕೊಂಡು ಹೋಗುತಲಿದ್ದರು. ಅದನ್ನು ನೋಡಿ 

ವಾಮಚರಣಣನು ಇದುಯಾರು ? ಎಂದು ಕೇಳಿದನು. 


ನಾನು ಅವನು ವರನೆಂದು ಹೇಳಿದೆ. ವಾಮಚರಣನು ನಾನೂ ವರನಾಗುತ್ತೆ 

ನೆಂದು ಆಳುವುದಕ್ಕೆ ತೊಡಗಿದನು. 


ಅವನನ್ನು ಸಮಾಧಾನಪಡಿಸುವುದಕ್ಕಾಗದೆ ಹೋಗಿ, ನೀನು ನನಗೆ ವರವಾಗು 

ಎಂದು ಹೇಳಿ ಕೈಯಲ್ಲಿ ಒಂದು ಮಿಠಾಯಿನ ಚೂರನ್ನು ಕೊಟ್ಟು, ಹೇಗೆ ನೀನು ನನ್ನ 

ವರನಾಗುವೆಯೆಂದು ಕೇಳಲಾಗಿ ಮಗುವು ರೋದನವನ್ನು ನಿಲ್ಲಿಸಿ, ಆಗುತ್ತೇನೆಂದು 

ಹೇಳಿದನು.

 

ಮಿಠಾಯಿ ಪೂರೈಸಿ, ಮಗುವು ಸ್ವಲ್ಪಹೊತ್ತಿನ ಮೇಲೆ ವರನು ಏನುಮಾಡ 

ಬೇಕೆ ? ಎಂದು ಕೇಳಿತು, ಮಗುವಿಗೆ ವರನು ಯಾವಾಗಲೂ ಮಿಠಾಯಿ ಯನ್ನು ತಿನ್ನು 

ತ್ತಲೇ ಇರಬೇಕೆಂದು ನಂಬಿಗೆ ಹುಟ್ಟಿ  ಒಂದು ಪೂರೈಸಿದ ಮೇಲೆ ಮತ್ತೊಂದನ್ನು 

ಪ್ರಾರಂಭಿಸಬೇಕೆಂದು ಆ ಪ್ರಶ್ನೆಯನ್ನು ಕೇಳಿದಹಾಗೆ ತೋರುತ್ತದೆ. ಅದರ ಭಾವ 

ವನ್ನು ತಿಳಿದು, ವರನು ಹೂವನ್ನು ಆರಿಸಿ ಕೊಡುತ್ತಾನೆಂದು ಹೇಳಿದೆನು. ವಾಮಾಚ 

ರಣನು ಸ್ವಾಮಿಯ ಕರ್ತವ್ಯಾ ಕರ್ತವ್ಯವನ್ನು ತಿಳಿದುಕೊಂಡವನಾಗಿ ಹೂಗಳನ್ನು ಆರಿಸಿ 

ನನಗೆ ಕೊಡಲಾರಂಭಿಸಿದನು. ಅದು ಮೊದಲು ನಾನು ಅವನನ್ನು ವರನೆಂದು ಕರೆ 

ಯುತ್ತೇನೆ, ಅವನು ನನಗೆ ಹೂಗಳನ್ನು ಆರಿಸಿ ಕೊಡುತಲಿದ್ದನು. 


ನನಗೆ ಹೀಗೆ ಎರಡು ವಿವಾಹ, ಈಗಿನಕಾಲದ ಜಟಿಲೆ ಕುಟಿಲೆಯರನ್ನು * ನಾನು 

ಸಾದ್ವಿಯಾದ ಪತಿವ್ರತೆಯೆಂದು ಹೇಳಿಕೊಳ್ಳಬಹುದೇ ಇಲ್ಲವೇ ಎಂದು ಕೇಳುತ್ತೇನೆ -- 

ದಯವಿಟ್ಟು ಹೇಳಿ. 

..........

* ಜಟಿಲಾ.....ಒಬ್ಬ ಋಷಿಪತ್ನಿ, ಇವಳಿಗೆ ಏಳು ಗಂಡದಿರು, ಮಹಾಭಾರತದಲ್ಲಿ, ಶ್ರೂಯತೆ 

ಹಿಪುರಾಣೇಪಿ ಜಟಿಲಾನಾಮಗೇ ತಮೀ | ಋಷೀಧ್ಯಾಸಿತವತೀ ಸಪ್ತಧರ್ಮ ಭೃತಾಂಬರಾ || ಎಂದು 

ಉಕ್ತವಾಗಿದೆ. 

ಕುಟಿಲಾ, ರಾಧಿಕಾರ್ತೃ ಭಗಿನಿ, ರಾಧಿಕೆಯ ನಾದಿನಿ, ಶಬ ಕಲ್ಪದ್ರುಮ, ಎರಡನೆಯ ಸಂಪುಟ 

೧೩೭ ನೇ ಪುಠ 

-----------------------------------------------------------

ಎರಡನೆಯ ಪರಿಚ್ಛೇದ. 


ದೊಡ್ಡವರ ಮನೆಗೆ ಹೂವನ್ನು ಒದಗಿಸಿ ಕೊಡುವುದು ಬಹು ಕಷ್ಟ, ಹಿಂದಿನ 

ಕಾಲದಲ್ಲಿ ಅನೇಕ ಪುಷ್ಪಮಾಲಿನಿಯರು ರಾಜವಾಡೆಗೆ ಪುಷ್ಪಸರಬರಾಯಿ ಮಾಡುವು 

ದರಲ್ಲಿ ಸ್ಮಶಾನಕ್ಕೆ ಹೋಗಿಬಿಟ್ಟಿದ್ದಾರೆ, ಆದರೆ ಈಗ ಆ ಕಾಲವು ಹೋಯಿತು. ಆದರ 

ಕಷ್ಟ ತಪ್ಪಿಲ್ಲ. 

 

ತಂದೆಯು ' ಹೂವು ಬೇಕೆ ಹೂವು '' ಎದು ಕೂಗಿಕೊಂಡು ರಸಿಳಮಹಲಗ 

ಳಲ್ಲಿ ಹೋಗಿ ಮಾರುತಲಿದ್ದನು, ತಾಯಿಯು ಒಂದೆರಡ ಅರಸಿಕರ ಮನೆಗಳಿಗೆ 

ಕೊಂಡುಹೋಗಿ ಕೊಡುತಿದ್ದಳು. ಆ ಮನೆಗಳಲ್ಲಿ ರಾಮದಾಸ ಸದಯನ ಮನೆ 

ಮುಖ್ಯವಾದುದು. ರಾಮಸದಯ ಮಿತ್ರನು ನಾಲ್ಕೂವರೆ ಸ್ವಭಾವದವನು. ಹುಡುಗ 

ರದು ಒ೦ದು, ಸ್ವಂತದ್ದು ನಾಲ್ಕು, ಅವನಿಗೆ ಒಂದೂವರೆ ಗೃಹಣೀ-ಒಬ್ಬಳು 

ಅರ್ಧಗೃಹಣಿ, ಅವಳು ಯಾವಾಗಲೂ ಕಾಯಿಲೆ ಮತ್ತು ವಯಸಾದವಳು, ಅವಳ 

ಹೆಸರು ಭುವನೇಶ್ವರೀ, ಅವಳ ಉಬ್ಬಸದಿಂವ ಗಂಟಿನಲ್ಲಿ ಶಬ್ದ ಮಾಡುತ್ತಿರುವುದು 

ಕೇಳಿದರೆ ಆ ಹೆಸರಿಗೆ ಅರ್ಹಳಾಗಿ ತೋರಲಿಲ್ಲ, ಬೇಕಾದರೆ ರಾಮಣಿ, ಅಂದರೆ, 

ರಾಮದಾಸನ ಕುತ್ತಿಗೆಗೆ ಗಂಟ ಬಿದ್ದವಳೆಂದು ಹೆಸರು ಇಡಬಹುದು. 

 

ಮತ್ತೊಬ್ಬ ಪೂರ್ಣವಾದ ಒಂದು ಗೃಹಿಣಿಯಾದವಳ ಹೆಸರು, ಲವಂಗಲತೆ 

ಯೆಂದು ಹೇಳುತ್ತಿದ್ದರು. ಆದರೆ ಅವಳ ತಂದೆಯು ಲಲಿತಲವಂಗತೆಯೆಂದು ಹೆಸರಿಟ್ಟಿ 

ದ್ದನು. ರಾಮಸದಯನು  ಹೆಚ್ಚು ಮಮತೆಯಿಂದ ಲಲಿತಾ-ಲವಂಗಲತಾ--- ಪರಿಶೀಲನ 

ಕೋಮಲ-ಮಲಯ:-ಸಮೀರೆ ! ಎಂದು ಕರೆಯುವನು, ರಾಮಸದಯನು ಸ್ವಲ್ಪ 

ವಯಸ್ಕಾರವನು ಲಲಿತವಂಗತಿಯು ಯೌವನಸ್ಥಳು ಹದಿನೇಳು ವರುಷ ವಯಸ್ಸು, 

ಚಿಕ್ಕ ಹೆಂಡತಿ, ಆದರಕ್ಕೆ ಆದರಣಿಯಾಗಿಯೂ, ಗೌರವಕ್ಕೆ  ಗೌರವಣಿಯಾಗಿಯೂ, 

ಮಾನಕ್ಕೆ ಮನನಿಯಾಗಿ ನಯನಗಳಿಗೆ ಮಣಿವ್ವರಾಪಳಾಗಿಯೂ, ಪೂರಾ 

ಹದಿನಾರಾಣೆ ಗೃಹಿಣಿಯಾಗಿದ್ದಳಲ್ಲದೆ, ರಾ.ಮಸದಯನ ಪೆಟ್ಟಿಗೆಗೆ ಬೀಗದಕ್ಕೆ ಸ್ವರೂಪ 

ವಾಗಿಯೂ ಹಾಸಿಗೆಗೆ ಮಗ್ಗಲಹಾಸಿಗೆ ಸ್ವರೂಪಳಾಗಿಯೂ, ವೀಳಯದೆಲೆಗೆ ಸುಣ್ಣ 

ಸ್ವರೂಪಳಾಗಿಯೂ, ಗ್ಲಾಸಿಗೆ ಬಲವ್ವರೂಪಳಾಗಿಯೂ ಇದ್ದಳು.  ಅವಳು ರಾಮಸದ 

ಯನ ಜ್ವರಕ್ಕೆ ಕೈಯಿರ್ನೈ (Quinine) ಸ್ವರೂಪವಾಗಿ , ಕೆಮ್ಮಲಿಗೆ ಇಪಿಕಾ* 

...... 

* ಇಪಿಕಾ-ಆಸ್ಪತ್ರೆಯಲ್ಲಿ ಮೈಲಿಗೆ ಕೊಡುವ ಔಷಧ, 

---------------------------------------------

ಎರಡನೆಯ ಪರಿಚ್ಛೇದ 

 

ಸ್ವರೂಪವಾಗಿಯೂ ವಾಯುವಿಗೆ ಫ್ಯಾನಿಲ್ ಸ್ವರೂಪವಾಗಿಯೂ , ಅವನ ಆರೋಗ್ಯದಲ್ಲಿ 

ಸೂರ್ಯಸ್ವರೂಪಳಾಗಿಯೂ ಇದ್ದಳು. 


ಕಣ್ಣುಗಳು ಇಲ್ಲ. ಲಲಿತಲವಂಗತೆಯನ್ನು ನಾನು ಯಾವಾಗಲೂ ನೋಡಿಲ್ಲ. 

ಆದರೆ ಅವಳು ಸುರೂತಿಯೆಂದು ಕೇಳಿದ್ದೇನೆ. ರೂಪ ಹೋಗಲಿ ಒಳ್ಳೆ ಗುಣವಂತ 

ಳೆಂತಲೂ ಕೇಳಿದ್ದೇನೆ, ಲವಂಗತೆಯು ವಾಸ್ತವಿಕವಾಗಿ ಗುಣವತೀ, ಗೃಹಕಾರ್ಯ  

ದಲ್ಲಿ ನಿಪುಣಳು, ದಾನದಲ್ಲಿ ಮುಕ್ತ ಹಸ್ತಳು, ಹೃದಯದಲ್ಲಿ ಸರಳತೆ ಮಾತಿನಲ್ಲಿ 

ಮಾತ್ರ ವಿಷಮಯ. ಅವಳ ಎಲ್ಲಾ ಗುಣಗಳಿಗಿಂತಲೂ ಹೆಚ್ಚಾದುದು ಏನೆಂದರೆ; 

ಆ ವಯಸ್ಸಾದ ಗಂಡಸಲ್ಲಿ ಅತ್ಯಂತವಾದ ಪತಿಭಕ್ಕಳು, ಯಾವ ಯೌವನಸ್ಥಳೂ 

ಕೂಡ ಎಂತಹ ಯುವಕನಾದ ಸೌಂದರ್ಯನಾದ ಸ್ವಾಮಿಯಲ್ಲಿಯ ಅಷ್ಟು ಭಕ್ತಿಯು 

ಳ್ಳವಳಾಗಿರಳು. ಅವನ ಉಪಚಾರಗಳನ್ನೆಲ್ಲ ಸ್ವಂತವಾಗಿ ಮಾಡುವಳು. ಗಂಡನು 

ಆಂಚು ಇಲ್ಲದ ಧೋತ್ರವನ್ನು ಟ್ಟುಕೊಂಡರೆ ಅದನ್ನು ಕೂಡದೆಂದು ಹೇಳಿ ಭಾರಿ 

ಧೋತ್ರಗಳನ್ನು ಆಗಸನಿಗೆ ಹಾಕಿ, ತಾನೇ  ಸ್ವಂತವಾಗಿ ಒಗೆದು ಅದನ್ನುಟ್ಟು ಕೊಳ್ಳ 

ಬೇಕೆಂದು ಉಟ್ಟುಕೊಳ್ಳುವ ಹಾಗೆ ಮಾಡಿ, ಆ ಅ೦ಚಿಲ್ಲದ ವಸ್ತ್ರಗಳನ್ನು ದರಿದ್ರರಾ 

ದವರಿಗೆ ಕೊಟ್ಟು ಬಿಡುವಳು, ಬಲವಂತದಿ:ದ ಸುಗಂಧವಾದ ಅತ್ತರುಗಳನ್ನು ಹಚ್ಚು 

ವಳು, ಗಂಡನ ಸುಲೋಚನಗಳನ್ನು ಅವನಿಗೆ ತಿಳಿಯದೆ ತೆಗೆದುಕೊಂಡು ಒಡೆದುಹಾ ಕ

ಿಬಿಟ್ಟು ಅದರ ಭಂಗಾರದ ಕಟ್ಟುಗಳನ್ನು ಯಾರಿಗಾದರೂ ಮದುವೆಗೆ ಕೊಟ್ಟುಬಿಡು 

ವಳು. ಯಾವಾಗಲೂ ಅವನ ಸುಖಕ್ಕೆ ಅನುಕೂಲಳಾಗಿದ್ದಳು. 


ಲವಂಗತೆಯು ನಮ್ಮಲ್ಲಿ ಹೂವನ್ನು ತೆಗೆದುಕೊಳ್ಳುವಳು, ನಾಲ್ಕಾಣೆ 

ಬಾಳುವ ಹೂವನ್ನು ತೆಗೆದುಕೊಂಡು ಎರಡು ರೂಪಾಯಿ ಕೊಡುವಳು, ಏತಕ್ಕೆ೦ದರೆ, 

ನಾನು ಕಣ್ಣಿಲ್ಲದವಳಾಗಿದ್ದೆ. ನನಗೆ ಉಪಕಾರವಾಗಲೆಂದು ಕೊಡುವಳು. ಆದರೆ 

ಹೂವನ್ನು ಕೈಗೆ ಕೊಟ್ಟ ಕೂಡಲೇ ಇಂತಹ ಕೆಟ್ಟ ಮಾಲೆ ಗಳನ್ನು ಏತಕ್ಕೆ ತಂದೆ 

ಎಂದು ಗದರಿಸಿಕೊಳ್ಳುವಳು. ದುಡ್ಡು ಕೊಡುವಾಗ ಮಾತ್ರ ಬೇಕೆಂದು ಆರು ಕಾಸಿನ ಬಿಲ್ಲೆಗ 

ಳೊಂದಿಗೆ ರೂಪಾಯಿಗಳನ್ನು ಕೊಟ್ಟುಬಿಡುವಳು.. ರೂಪಾಯಿ ಹಿಂದಕ್ಕೆ ಕೊಡು 

ವುದಕ್ಕೆ ಹೋದರೆ ಅದು ತನ್ನ ದಲ್ಲವೆಂದು ಹೇಳಿಬಿಡುವಳು. ಇನ್ನೊಂದುತಡವೆ ಒತ್ತಿ 

ಹೇಳಿದರೆ ಬೈದು ಓಡಿಸಿಬಿಡುವಳು. ಅವಳನ್ನು ಧರ್ಮಿಷ್ಟಳೆಂದು ಹೊಗಳಿದರೆ ಹೊಡಿ 

ಯುವುದಕ್ಕೆ ಬರುವಳು ವಾಸ್ತವವಾಗಿ ರಾಮಸದಯನ ಮನೆ ಇಲ್ಲದಿದ್ದರೆ ನಮ್ಮ 

ಕಾಲಕ್ಷೇಪ ನಡೆಯುವುದು ಬಹು ಕಷ್ಟವಾಗುತಲಿತ್ತು. ಆದರೂ ನಮ್ಮ ತಾಯಿಯು 

ಅವಳಿಂದ ಹೆಚ್ಚು ತೆಗೆದುಕೊಳ್ಳುತ್ತಿರಲಿಲ್ಲ. ನಮಗೆ ಕಾಲಕ್ಷೇಪವಾದರೆ ಅದರಿಂದ 

-------------------------------------------

ರಜನಿ ೭ 

ಸಂತುಷ್ಟರಾಗುತಲಿದ್ದೆವು. ಲವಂಗತೆಯು ನಮ್ಮಲ್ಲಿ ಗೂಡೆಗೂಡೆ ಹೂವನ್ನು ತೆಗೆದು 

ಕೊಂಡು ರಾಮಸದಯನ ಹಾಸಿಗೆಯ ಮೇಲೆಲ್ಲಾ ಹಾಸುವಳು, ಗಂಡಹೆಂಡಿ 

ರಿಬ್ಬರೂ ಪರಸ್ಪರ ಮನಸ್ಸು ಒಂದಾಗಿ ಕನ್ನಡಿಯಹಾಗೆ ಒಬ್ಬರ ಮನಸ್ಸನ್ನು ಒಬ್ಬರು 

ಸುಲಭವಾಗಿ ತಿಳಿಯುಲಿದ್ದರು. 


ಲವಂತೆಯು ಇಷ್ಟು ದುಡ್ಡು ಕೊಡುತ್ತಿದ್ದರೆ ದೊಡ್ಡವರ ಮನೆಗೆ ಹೂ 

ವನ್ನು ಕೊಡಬೇಕಾದರೆ ಕಷ್ಟವೇತಕ್ಕೆ? ಹಾಗಾದರೆ ಕೇಳಿ ಹೇಳುತ್ತೇನೆ. 

 

ಒಂದುದಿನ ನನ್ನ ತಾಯಿಗೆ ಜ್ವರ ಬಂದಿತ್ತು. ಅಂತಃಪುರಕ್ಕೆ ನನ್ನ ತಂದೆಯು 

ಹೋಗಕೂಡದು ; ಲವಂಗಲತೆಗೆ ನನ್ನ ಹೊರ್ತು ಬೇರೆಜನರು ಕೂತೆಗೆದುಕೊಂಡು 

ಹೋಗಿ ಕೊಡುವವರು ಇಲ್ಲ. ನಾನೇ ಲವಂಗಲತೆಗೋಸ್ಕರ ಹೂವನ್ನು ತೆಗೆದು 

ಕೊಂಡು ಹೊರಟೆ. ಆ೦ಧಳೇ ಹೌದು. ಅದು ಹೇಗಾದರೂ ಆಗಲಿ; ಕಲಿಕತ್ತೆಯಲ್ಲಿ 

ರಸ್ತೆಗಳೆಲ್ಲ ನನ್ನ ನಖದರ್ಪಣದಲ್ಲಿತ್ತು. ಕೈಯಲ್ಲಿ ಕೋಲನ್ನು ಹಿಡಿದುಕೊಂಡು 

ಸರ್ವತ್ರ ಹೋಗಬಲ್ಲವಳಾಗಿದ್ದೆನು. ಯಾವಾಗಲೂ ಭಂಡಿ ಮತ್ತು ಕುದುರೆಯ 

ಕಾಲಿಗೆ ಸಿಕ್ಕಲಿಲ್ಲ. ಅನೇಕ ತಡವೆ ಪಾದಚಾರಿಗಳು ಮೈಮೇಲೆ ಬೀಳುವರು. ಅವರು 

ಇವಳು ಅಂಧಯುವತಿಯೆಂದು ಹಾದಿಬಿಡದೆ, ಎಲೆ! ನೋಡಿಕೊಂಡು ಬರಕೂಡದೆ, 

ಕುರಡಿಯೆ ? ಎಂದಂದುಕೊಳ್ಳುವರು, ನಾನು " ಉಭಯತಃ '' ಎಂದಂದುಕೊಳ್ಳು 

ತ್ರಿದ್ದೆನು. 


- ಹೂವನ್ನು ತೆಗೆದುಕೊಂಡು ಲವಂಗತೆಯ ಬಳಿಗೆ ಹೋದೆ, ಲವಂಗಲತೆಯು 

ನೋಡಿ, ಏನೇ ಕುರುಡಿ ! ಪುನಃ ಹೂವು ತೆಗೆದುಕೊಂಡು ಸಾಯುತ್ತ ಬೀಳುತ್ತ 

ಬಂದಿಯಾ ? ಎಂದಳು. ಕುರುಡಿಯೆಂದು ಹೇಳಿದರೆ ನನಗೆ ಮೈಯೆಲ್ಲಾ ಉರಿಯುತ 

ಲಿತ್ತು, ನಾನು ಅದಕ್ಕೆ ಸರಿಯಾದ ಉತ್ತರವನ್ನು ಕೊಡುತಲಿದ್ದೆ. ಅಷ್ಟರೊಳಗೆ ಇದ್ದ 

ಕ್ಕಿದ್ದ ಹಾಗೆ ಯಾರೋ ಬರುವ ಶಬ್ದವು ಕೇಳಿಸಿತು. ಯಾರೇ ಬಂದರು. ಬಂದ 

ವರು, ಇದು ಯಾರು ? ಚಿಕ್ಕಮ್ಮ ! ಎಂದು ಕೇಳಿದರು. ಚಿಕ್ಕಮ್ಮ ! ಎಂದು ಕರೆಯ 

ಬೇಕಾದರೆ ಯಾರು ಇರಬೇಕು ? ರಾಮಸದಯನ ಮಗ, ರಾಮಸದಯನ ಯಾವ 

ಮಗ ! ದೊಡ್ಡ ಮಗನ ಧ್ವನಿಯನ್ನು ಒಂದುದಿನ ಕೇಳಿದ್ದೆನು, ಅದು ಅಷ್ಟು ಅಮೃತ 

ಮಯವಾಗಿರಲಿಲ್ಲ. ಹೀಗೆ ಕರ್ಣವಿವರವನ್ನು ತುಂಬಿ ಸುಖವುಂಟಾಗುತ್ತಿರಲಿಲ್ಲ. 

ಇವನು ಚಿಕ್ಕ ಬಾಬುವಾಗಿರಬೇಕೆಂದು ತಿಳೆದುಕೊಂಡೆನು. 

 

ಚಿಕ್ಕಮ್ಮನು ಈಸಲ ಮೃದುವಾದ ಕಂಠದಿಂದ, ಅವಳು ಕುರುಡ ಹೂವಾಡ 

ಗಿತ್ತಿಯೆಂದು ಹೇಳಿದಳು, 

----------------------------------------------

ಎರಡನೆಯ ಸದ 


ನಾನು, ಹೂವಾಡಗಿತ್ತಿಯಾಗದೆ ದೊಡ್ಡವರ ಮನೆಯ ಹೆಂಗಸಾದೇನೆ ? ಎಂದು 

ಹೇಳಿದೆ. 


ಲವಂಗಲತೆಯು, ಏತಕೆ?  ಹೂವಾಡಗಿತ್ತಿಯಾದ ಮಾತ್ರಕ್ಕೆ ದೊಡ್ಡಮನೇ 

ಹೆಂಗಸಾಗಬಾರದೇನು ? ಎಂದಳು. 


ಚಿಕ್ಕ ಬಾಬುವು ಆ ಪ್ರತಿಭನಾಗಿ, ಆಗಕೂಡದೇತಕ್ಕೆ ? ಇವಳು ದೊಡ್ಡವರ 

ಮನೆಯ ಹೆಂಗಸಾಗಿಯೇ. ಕಾಣುತ್ತಾಳೆ. ಎತಕ್ಕೆ ಅಂಧಳಾದಳು ? ಎಂದನು. 


ಲವಂಗ... ಅವಳು ಜನ್ಮಾಂಧಳು.


ಚಿಕ್ಕಬಾಬು...ನೊಡಲಿ ? 


ಚಿಕ್ಕಬಾಬುವು ವಿದ್ಯಾವಂತನಾಗಿದ್ದನು. ಇತರ ವಿದ್ಯೆಗಳೊಂದಿಗೆ ದುಡ್ಡನ್ನು 

ಸಂಪಾದಿಸುವ ಆಶೆಯಿಲ್ಲದೆ ವೈದ್ಯಶಾಸ್ತ್ರವನ್ನು ಕಲಿತಿದ್ದನು, ಜನರು ಶಚೀಂದ್ರಬಾ 

ಬುವು (ಅದೇ ಚಿಕ್ಕಬಾಬುವಿನ ಹೆಸರು)  ದರಿದ್ರರಿಗೆ ದುಡ್ಡು ಇಲ್ಲದೆ ಚಿಕಿತ್ಸೆ ಮಾಡು 

ವುದಕ್ಕಾಗಿಯೇ ವೈದ್ಯಶಾಸ್ತ್ರವನ್ನು ಕಲಿತನೆಂದು ಹೇಳುತ್ತಿದ್ದರು. ನೊಡಲೇ ? ಎಂದು 

ಹೇಳಿ ಹತ್ತಿರ ಬಂದು ಸ್ವಲ್ಪ ಎದ್ದು ನಿಲ್ಲುವಿಯೇನಮ್ಮ ? ಎಂದನು. 


ನಾನು ಗಾಬರಿಪಟ್ಟು ಎದದು ನೀಂತೆನು. 


ಚಿಕ್ಕ ಬಾಬು - ನನ್ನ ಕಡೆ ನೋಡು. 


ನೋಡುವದೆಲ್ಲಿ ? ನನ್ನ ಪಿಂಡ ! 


ಚಿಕ್ಕೆ ಬಾಬು--ನನ್ನ ಕಡೆಗೆ ಕಣ್ಣು ತಿರುಗಿಸು? 

 

ಕುರುಡ ಕಣ್ಣಗಳಿಂದ ಶಬ್ದಭೇದಿಯಾದ ಬಾಣವನ್ನು ಬೀರಿದೆನು. ಚಿಕ್ಕ 

ಬಾಬು ಹೇಳಿಗಾಗೆ ಸರಿಯಾಗಲಿಲ್ಲ. ಅವನು ನನ್ನ ಗಲ್ಲವನ್ನು ಹಿಡಿದು ಮುಖ 

ವನ್ನು ತಿರುಗಿಸಿದನು. 


ಡಾಕ್ಟರೀಕೆಲಸಕ್ಕೆ ಬೆಂಕಿ ಹಾಕಿ ಸುಟ್ಟರು ! ಆ ಚುಬುಕಸ್ಪರ್ಶದಿಂದ ನನಗೆ 

ಪ್ರಾಣವೇ ಹೋದಹಾಗಾಯಿತು. 


ಆ ಸ್ಪರ್ಶವು ಪುಷ್ಟಮಯವಾಗಿದ್ದಿತು. ಆ ಸ್ಪರ್ಶದಲ್ಲಿ ಯಧಿಕಾ ಮಲ್ಲಿಕಾ 

ಜಾಜೈಕಾಮಿನಿ ಗುಲಾಬಿ ಮುಂತಾದ ಎಲ್ಲಾ ಪುಷ್ಪಗಳ ವಾಸನೆಯನ್ನು ಘಾಣ 

ಮಾಡಿದೆನು. ನನ್ನ ಅಕ್ಕಪಕ್ಕದಲ್ಲಿಯೂ ತಲೆಯ ಮೇಲೂ ಹೂವು, ನನ್ನ ಉಡುಪೆಲ್ಲ 

ಹೂವು. ನನ್ನ ಹೃದಯದಲ್ಲಿ ಹೂವಿನ ರಾಶಿ .ಬಿದ್ದಹಾಗೆ ಬೋಧೆಯಾಯಿತು, 

ಆಹಾ ! ಏನು ಹೇಳಲಿ ! ಯಾವ ವಿಧಾತನು ಈ ಕುಸುಮ ನಯವಾದ ಸ್ಪರ್ಶವನ್ನು 

ಕಲ್ಪಿಸಿದನೋ ! ಮೊದಲೇ ಕುರುಡಿಯ ಸುಖದುಗಳನ್ನು ನೀವು ಅರಿಯಲಾರಿರಿ 

-----------------------------------------

ಎರಡನೆಯ ಪರಿಚ್ಛೇದ ೯ 


ಯೆಂದು ಹೇಳಿದ್ದೆನಷ್ಟೆ. ಆಹಾ ! ಆ ನವನೀತದಂತಿರುವ ಆ ಸುಕುಮಾರವಾದ 

ಪುಷ್ಟ ಗಂಧಮಯವಾದ ವೀಣಾಧ್ವನಿಯಹಾಗಿದ್ದ ಸ್ಪರ್ಶ ! ವೀಣಾಧ್ವನಿಯಹಾಗಿ 

ರುವ ಸ್ಪರ್ಶವೆಂಬುದನ್ನ ಕಣ್ಣುಳ್ಳವರು ತಾನೇ ಅರಿಯುವರು ? ನನ್ನ ಸುಖದುಃಖ 

ಗಳು ನನಗೇ ಇದ್ದುಕೊಳ್ಳಲಿ. ಆ ಸ್ಪರ್ಶವು ಜ್ಞಾಪಕಕ್ಕೆ ಬಂದಾಗ ಎಷ್ಟು ವೀಣಾ 

ಧ್ವನಿಯು ಕಿವಿಯಲ್ಲಿ ಕೇಳುತ್ತೀನೋ ಅದನ್ನು ವಿಲೋಲಕಟಾಕ್ಷ ಕುಶಲಿನಿಯರಾದ 

ನಿಮ್ಮ ಮನಸ್ಸಿಗೆ ಗೋಚರವಾಗಬಲ್ಲದೆ ? 


ಚಿಕ್ಕಬಾಬು- ಇಲ್ಲ - ಈ ಕುರುಡು ಹೋಗತಕ್ಕದ್ದಲ್ಲ. 

ನನಗೆ ಆದನ್ನು ಕೇಳಿ ನಿದ್ರೆಹೋಯಿತು. 


ಲವಂಗ- ಅದು ಹೋಗದಿರಲಿ. ರೂಪಾಯಿ ಖರ್ಚುಮಾಡಿಗರ ಕರುಡಿಗೆ 

ಮದುವೆಯಾಗಲಾರದೆ ?


ಲವಂಗ-ಿಲ್ಲ. ದುಡ್ಡು ಖರ್ಚುಮಾಡಿದರೆ ಆಗುತ್ತೆ. 

 

ಚಿಕ್ಕ ಬಾಬು- ನೀನು ಅವಳ ಮದುವೆಗೆ ದುಡ್ಡು ಕೊಡುವೆಯಾ ? 


ಲವಂಗಲತೆಯು ಕೋಪಗೊಂಡು ಅಂತಹ ಹುಡುಗನನ್ನು ನಾನೆಲ್ಲಿಯ 

ಕಾಣೆ ! ನನಗೆ ದುಡ್ಡು ಇಟ್ಟುಕೊಳ್ಳುವುದಕ್ಕೆ ಸ್ಥಳವೆಲ್ಲಿದೆ ?  ಒಳ್ಳೆಯದು ಮದುವೆ 

ಆಗುವವರು ಯಾರು? ಮೊದಲು ಅದನ್ನು ಹೇಳು. ನಾನು ಹೆಂಗಸು, ನನಗೆ 

ಗೊತ್ತಿಲ್ಲ. ಮದುವೆಯಾಗುವವರು ಯಾರು? ಎಂದಳು. 


ಚಿಕ್ಕಬಾಬುವು ಚಿಕ್ಕಮ್ಮನನ್ನು ಚೆನ್ನಾಗಿ ಬಲ್ಲವನಾಗಿದ್ದನು. ಅವನೂ 

ನಕ್ಕು, ಹಾಗಾದರೆ, ಒಮ್ಮೆ ! ನೀನು ದುಡ್ಡು ಇಡು, ನಾನು ಮದುವೆ ಮಾಡಿಕೊಳ್ಳು ತ್ತೇ 

ನೆಂದನು. 


ನಾನು ಮನಸ್ಸಿನಲ್ಲಿ ಲವಂಗಲತೆಯನ್ನು ಅವಳು ಹಾಳದಳೆಂದು ಬೈದುಕೊಂಡು 

ಆ ಸ್ಥಳದಿಂದ ಎದ್ದು ಹೊರಟು ಹೋದೆನು. 


ಆದುದರಿಂದಲೇ: ದೊಡ್ಡವರ ಮನೆಗೆ ಹೂ ಸಬರಾಯಿಮಾಡುವುದು ಕಷ್ಟ 

ಮತ್ತು ಹೆಚ್ಚು ಜವಾಬುದಾರಿಯೆಂದು ಮೊದಲೇಹೇಳಿದೆ. 


ಎಲೈ ಬಸುಮೂರ್ತಿಮಯಳಾದ ವಸುಂಧರೆ ! ನೀನು ನೋಡುವುದು ಹೇಗೆ ? 

ನೀನು ಧರಿಸಿರುವ ಅಸಂಖ್ಯವಾದ ಅಚಿಂತನೀಯವಾದ ಶಕ್ತಿಗಳನ್ನೆಲ್ಲಾ ನೋಡುವುದು 

ಹೇಗೆ ? ಜನರು ಯಾವ್ಯಾವದನ್ನು ಸುಂದರವಾದುದೆಂದು ಹೇಳುತ್ತಾರೋ ಅದನ್ನೆಲ್ಲಾ

 ಹೇಗೆ ನೋಡುತ್ತಿ ? ನಿನ್ನ ಹೃದಯದಲ್ಲಿ ಅಸಂಖ್ಯವಾದ ಬಹು ಪ್ರಕೃತಿಶಿಷ್ಟವಾದ 

----------------------------------------------- 

10 ರಜನೀ 


ಜೀವಜಂತುಗಳು ವಿಚರಣ ಮಾಡುತ್ತದೆ; ಅವುಗಳನ್ನೆಲ್ಲ ಹೇಗೆ ನೋಡುತ್ತಿ ? 

ತಾಯೆ ! ನಿನ್ನ ಹೃದಯದಲ್ಲಿ ಸಾರಭೂತವಾದ ಪುರುಷಜಾತಿ, ಅದನ್ನು ಹೇಗೆ 

ನೋಡುತ್ತಿ ? ಹೇಳೆ ? ಆ ಪುರುಷಜಾತಿಯಲ್ಲಿಯೂ ಯಾರ ಕರಸ್ಪರ್ಶವು ಇಷ್ಟು ಸುಖ 

ಕರವಾದುದೋ ಅದನ್ನು ಹೇಗೆ ನೋಡುತ್ತಿ ? ತಿಳಿಯ ಹೇಳೆ, ತಾಯಿ !..ಹೇಳೆ ! 

ನೋಡುವುದನ್ನು ಹೇಗೆ ತೋರಿಸುತ್ತಿ ? ನೋಡುವದೆಂದರೇನು ? ನೋಡುವುದು ಹೇಗೆ 

ಇದೆ ? ನೋಡಿದರೆ ಯಾವರೀತಿ ಸುಖವುಂಟಾಗುತ್ತದೆ ? ಒಂದು ಮುಹೂರ್ತಪರ್ಯಂತ 

ವಾದರೂ ಈ ಸುಖಮಯವಾದ ಸ್ಪರ್ಶವನ್ನು ನಾನು ನೋಡಲಾರೆನೆ ? ತೋರಿಸೆ, 

ತಾಯಿ ! ಹೊರಗಿನ ಕಣ್ಣು ನಿಮೀಲಿತವಾಗಿ ಹೋಗಿದೆ. ಅದು ಹಾಗಿದ್ದರೂ ಇರಲಿ, 

ತಾಯಿ !-ನನ್ನ ಹೃದಯಮಧ್ಯದಲ್ಲಿರುವ ಕಣ್ಣನ್ನು ವಿಕಸಿತವಾಗಿ ಮಾಡು. ನಾನು 

ಒಂದುಸಲ ಏಕಾಂತದೊಳಗೆ ಏಕಾಂತವಾಗಿ ಔತುಕೊಂಡು ನನ್ನಾಶೆಯು ದಣಿಯು 

ವಷ್ಟು ರೂಪವನ್ನು ನೋಡಿ ಈ ನಾರೀ ಜನ್ಮವನ್ನು ಸಾರ್ಧಕಮಾಡಿ ಕೊಳ್ಳುತ್ತೇನೆ.  

ಎಲ್ಲರೂ ನೋಡುತ್ತಾರೆ. ನಾನೇತಕ್ಕೆ ನೋಡಬಾರದು ? ನೋಡುವುದು ಮಾತ್ರ- 

ಅದರಿಂದ ಯಾರಿಗೂ ಕೇಡಿಲ್ಲ. ಯಾರಿಗೂ ಕಷ್ಟವಿಲ್ಲ. ಯಾರಿಗೂ ಪಾಪವಿಲ್ಲ. 

ಎಲ್ಲರೂ ಇಚ್ಛಾ ಮಾತ್ರದಿಂದ ನೋಡುತ್ತಾರೆ. ನಾನು ಯಾವ ದೋಷ ಮಾಡಿದೆ, 

ಯಾವಾಗಲೂ ನೋಡಕೂಡದೆ ? 


ಇಲ್ಲ ! ಇಲ್ಲ ! ಅದೃಷ್ಟವಿಲ್ಲ. ಹೃದಯದಲ್ಲಿ ಹುಡುಕಿ ನೋಡಿದೆ, 

ಕೇವಲ ಶಬ್ದ ಸ್ಪರ್ಶಮಾತ್ರ, 'ಇನ್ನೇನೂ ಇಲ್ಲ. 


ನನ್ನ ಹೃದಯವನ್ನು ವಿದೀರ್ಣಮಾಡಿಕೊಂಡು ನೋಡುವುದನ್ನು, ಅಂದರೆ, 

ರೂಪವನ್ನು ನೋಡುವುದನ್ನು ಯಾರೂ ತೋರಿಸರೆ ? ಎಂಬ ಧ್ವನಿಯು ಎದ್ದಿತು. 

ಯಾರೂ ತಿಳಿಯಹೇಳಲಿಲ್ಲ, ಯಾರೂ ಕುರುಡನ ದುಃಖವನ್ನು ಅರಿಯಲಾರರು. 

.....

ಮೂರನೆಯ ಪರಿಚ್ಛೇದ. 

ಅದು ಮೊದಲು ನಾನು ನಿತ್ಯವೂ ರಾಮಸದಯನ ಮಿತ್ರನ ಮನೆಗೆ ಹೂವನ್ನು 

ಕೊಡುವುದಕ್ಕೆ ಹೋಗುತಲಿದ್ದೆ, ಏತಕ್ಕೆ ಹೋಗುತಲಿದ್ದೆನೋ ಅರಿಯೆನು. ಕಣ್ಣು 

ಇಲ್ಲದವಳಿಗೆ ಈ ಪ್ರಯತ್ನವೇತಕ್ಕೆ ? ಅವಳು ನೋಡಳು, ಕೇವಲ ಮಾತಿನ ಶಬ್ದವನ್ನು 

ಕೇಳುವ ಭರವಸೆಮಾತ್ರ, ಶಚೀಂದ್ರಬಾಬು ತಾನೇ ಏತಕ್ಕೆ ಬಂದು ನನ್ನ ಸಂಗಡ ಮಾತ 

------------------------------------------------

ಮೂರನೆಯ ಪರಿಚ್ಛೇದ 11 

 

ನಾಡುವನು ? ಅವನು ಇರುವುದು ಮುಂದಿನ ಸದರಮಹಲಿನಲ್ಲಿ, ನಾನು ಹೋಗುವುದು 

ಅಂತಃಪುರಕ್ಕೆ ; ಅವನಿಗೆ ಹೆಂಡತಿ ಇದ್ದಿದ್ದರೆ ಆಗಲಾದರೂ ಅವನು ಅಂತಃಪುರಕ್ಕೆ 

ಬರುವ ಸಂಭವವಿತ್ತು; ಅದೂ ಇಲ್ಲ. ಅವನ ಹೆಂಡತಿಯು ಒಂದು ವರುಷಕ್ಕೆ 

ಮುಂಚೆ ಸತ್ತು ಹೋದಳು, ಪುನಃ ವಿವಾಹಮಾಡಿಕೊಳ್ಳಲಿಲ್ಲ. ಆದುದರಿಂದ ಅವನು 

ಬರುವ ಭರವಸೆಯಿಲ್ಲ. ಯಾವಾಗಲಾದರು ಕೆಲಸಬಿದ್ದಾಗ ತಾಯಿಯಹತ್ತಿರ ಬರು 

ವನು, ನಾನು ಹೂವನ್ನು ತೆಗೆದುಕೊಂಡು ಹೋದ ಸಮಯಕ್ಕೆ ಸರಿಯಾಗಿ ಅವನೂ 

ಬರುವ ಸಂಭವವೇನು ? ಕೇವಲ ಒಂದು ಶಬ್ಬವನ್ನು ಮಾತ್ರ ಕೇಳುವ ಆಶೆ, ಅದೂ 

ಕೂಡ ಸರಿಯಾಗಿ ಸಫಲವುಳ್ಳದ್ದಾಗತಕ್ಕದ್ದಲ್ಲ, ಆದರೂ ಕುರುಡಳು ಪ್ರತ್ಯಹವೂ 

ಹೂವನ್ನು ತೆಗೆದುಕೊಂಡು ಹೋಗುತ್ತಿದ್ದಳು, ಯಾವ ದುರಾಶೆಗೆ ಹಾಗೆ ಮಾಡುತ್ತಿ 

ದ್ದಳೋ ನಾನರಿಯೆ. ನಿತ್ಯವೂ ನಿರಾಶಳಾಗಿ ಮನೆಗೆ ಹಿಂದಿರುಗಿ ಬರುವಾಗ ಏತಕ್ಕೆ 

ಹೋದೆನೋ ಎಂದು ಯೋಚಿಸಿ ಇನ್ನು ಮೇಲೆ ಬರಬಾರದೆಂದು ಮನಸ್ಸಿನಲ್ಲಿ ಖಂಡಿತ 

ಮಾಡಿಕೊಳ್ಳುತಿದ್ದೆನು. ಪ್ರತ್ಯಹವೂ ಈ ಸಂಕಲ್ಪವು ವ್ಯರ್ಥವಾಗುತ್ತಿತ್ತು, ನಿತ್ಯವೂ 

ಪುನಃ ಹೋಗುತಲಿದ್ದೆ, ಯಾರೋ ಸುಮ್ಮನೆ ಕೈ ಹಿಡಿದು ಕರೆ ತುಕೊಂಡು ಹೋಗಲ್ಪ 

ಟ್ಟವಳಹಾಗೆ ಹೋಗುತ್ತಿದ್ದೆ. ಪುನಃ ನಿರಾಶೆಯಿಂದ ಹಿಂದಿರ ಗಿ ಬರವುದು, ಪುನಃ 

ಹೋಗಕೂಡದೆಂದು ಪ್ರತಿಜ್ಞೆ. ಪುನಃ ಹೋಗುತಲಿದ್ದೆನು ; ಹೀಗೆ ಕಾಲಹರಣ 

ಮಾಡುತಲಿದ್ದೆನು. 

 

ಮನಸ್ಸಿನಲ್ಲಿ ಏತಕ್ಕೆ ಹೋಗಬೇಕೆಂದು ಯೋಚಿಸುತ್ತಲಿದ್ದೆನು, ಹೆಂಗಸರು ಪುರು 

ಷರ ರೂಪವನ್ನು ನೋಡಿ ಮುಗ್ಧರಾಗಿ ಅವರಲ್ಲಿ ಅನುರಾಗವುಳ್ಳವರಾಗುತ್ತಾರೆಂದು 

ಕೇಳಿದ್ದೆನು, ನಾನು ಕಣ್ಣು ಕಾಣದವಳು, ಯಾರರೂಪವನ್ನು ನೋಡಿದ್ದೇನೆ ? 

ಹಾಗಿಲ್ಲದಿದ್ದರೆ ಏತಕ್ಕೆ ಹೋಗಬೇಕು ? ಮಾತು ಕೇಳಬೇಕೆ೦ತಲೆ ? ಯಾವರಮಣಿಯೇ 

ಆಗಲಿ ಯಾವಾಗಲೂ ಕೇವಲ ಮಾತಿನ ಶಬ್ದವನ್ನು ಕೇಳಿ ಉನ್ಮತ್ತಳಾಗಿದ್ದಾಳೆಂದು 

ಯಾರು ಯಾವಾಗ ಕೇಳಿದ್ದಾಳೆ ? ನಾನು ಒಬ್ಬಳು ಮಾತ್ರ ಹಾಗಾದೆನೆ ? ಅದು 

ಸಂಭವ ಹೇಗೆ ? ಹಾಗೆ ಆಗಿದ್ದರೆ ವಾದ್ಯಗಳನ್ನು ಕೇಳಿ ವಾದಕನ ಮನೆಗೆ ಹೋಗು 

ವುದಿಲ್ಲವೇತಕ್ಕೆ ?  ಸಿತಾರು ವೀಣೆ, ಸಾರಂಗ ಇತ್ಯಾದಿ ವಾದ್ಯಗಳಿಗಿಂತ ಶಚೀಂದ್ರನ 

ಕಂಠವು ಸುಸ್ವರವಾದುದೋ ? ಅದು ಸುಳ್ಳು. 


ಹಾಗಾದರೆ ಆ ಸ್ಪರ್ಶವೆ ? ನಾನು ಹಗಲೂ ರಾತ್ರಿ ಕುಸುಮರಾಶಿಯಲ್ಲಿಯೇ 

ಇದ್ದೇನೆ, ಹಾಸಿಕೊಂಡು ಕೂಡ ಮಲಗಿದ್ದೇನೆ. ಆಗಾಗ್ಗೆ ಹೃದಯದಲ್ಲಿ ಔಚಿ 

ಕೊಂಡು ತಿರುಗಾಡುತ್ತೇನೆ. ಇದಕ್ಕಿಂತಲೂ ಆ ಸ್ಪರ್ಶವು ಕೋಮಲವಾದುದೆ ? 

----------------------------------------

೧೨ ರಜನೀ 

 

ಅದಿರಲಾರದು, ಹಾಗಾದರೆ ಯಾವದು ? ಈ ಕುರುಡಿಗೆ ಅದು ಯಾವುದೆಂಬುದನ್ನು 

ಯಾರು ತಿಳಿಯಹೇಳಬಲ್ಲರು ? 


ನಿಮಗೇ ತಿಳಿಯದು, ಇತರರಿಗೆ ತಿಳಿಯಹೇಳುವಿರಿ ಹೇಗೆ ? ನಿಮಗೆ ಕಣ್ಣುಗ 

ಳಿವೆ, ರೂಪವನ್ನು ನೋಡುತ್ತೀರಿ ; ತಿಳಿದುಕೊಳ್ಳುತ್ತೀರಿ ; ನಾನು ತಿಳಿದಿರುವುದು 

ಏನೆಂದರೆ, ರೂಪವೆಂಬುದು ನೋಡುವವನ ಮಾನಸಿಕವಿಕಾರಮಾತ್ರವಾಗಿದೆ. ಶಬ್ದವೂ 

ಮಾನಸಿಕವಿಕಾರ, ರೂಪವು ರೂಪವಂತನಲ್ಲಿ ಇಲ್ಲ, ರೂಪವು ನೋಡುವವನ ಮನಸ್ಸಿನ 

ಲ್ಲಿದೆ. ಹಾಗಿಲ್ಲದಿದ್ದರೆ, ಒಬ್ಬ ಮನುಷ್ಯನನ್ನು ಎಲ್ಲರೂ ಸಮಾನವಾದ ರೂಪವಂತನ 

ನ್ನಾಗಿ ನೋಡುವುದಿಲ್ಲವೇತಕ್ಕೆ ? ಎಲ್ಲರೂ ಒಬ್ಬನಲ್ಲಿಯೇ ಆಸಕ್ತವುಳ್ಳವರಾಗುವುದಿ 

ಲ್ಲ ವೇತಕ್ಕೆ ? ಆ ರೂಪವೆಂಬುದು ಶಬ್ದವೂ ಸಹ ನಿಮ್ಮ ಮನಸ್ಸಿನಲ್ಲಿರತಕ್ಕದ್ದು. 

ರೂಪವೆಂಬುದು ದರ್ಶಕನ ಮನಸ್ಸಿನ ಸುಖಮಾತ್ರವಾಗಿದೆ. ಶಬ್ದವೂ ಶ್ರೋತೃವಿನ 

ಮನಸ್ಸಿನ ಸುಖಮಾತ್ರವಾಗಿದೆ. ಸ್ಪರ್ಶವೂ ಸ್ಪರ್ಶಕನ ಮನಸ್ಸಿನ ಸುಖಮಾತ್ರ. ನನಗೆ 

ರೂಪಸುಖದ ಮಾರ್ಗವು ಬಂಧವಾಗಿರುವ ಮಾತ್ರಕ್ಕೆ ಶಬ್ದ ಸ್ಪರ್ಶಗಂಧವು ರೂಪಸುಖದ 

ಹಾಗೆ ಮನಸ್ಸಿನಲ್ಲಿ ಸರ್ವಮಯವಾಗಲಾರದೇನು ? 


ಶುಷ್ಕವಾದ ಭೂಮಿಯ ಮೇಲೆ ಮಳೆ ಬಿದ್ದರೆ ಅದು ಉತ್ಪಾದಿನಿಯಾಗಲಾರ 

ದೇನು ? ಶುಷ್ಕವಾದ ಕಾಷ್ಟದಮೆಲೆ ಬೆಂಕಿಯು ಬಿದ್ದರೆ ಅದು ಜ್ವಲಿಸಲಾದೇನು ? 

ರೂಪದಲ್ಲಿಯೇ ಆಗಲಿ ಶಬ್ದದಲ್ಲಿಯೇ ಆಗ೨ ಸ್ಪರ್ಶದಲ್ಲಿಯೇ ಆಗಲಿ ಒರೇಡಾದ ರಮ 

ಣಿಯ ಹೃದಯದಲ್ಲಿ ಸುಪುರುಷನ ಸಂಸ್ಪರ್ಶದ ಧರೆ ಪ್ರೇಮವು ಹುಟ್ಟದಿರು 

ವುದು ? ಈಗ ನೀವು ಕಂಡ ಬಾಲೆ ಅಧರದಲ್ಲಿಯೂ ಹೂ ಅರಳುವುದು, ಮೇಘವು 

ಮುಚ್ಚಿಕೊಂಡಿದ್ದರೂ ಚಂದ್ರನು ಗಮನದಲ್ಲಿ ವಿಹರಮವಾಗುವನು. ಜನಶೂನ್ಯವಾದ 

ಅರಣ್ಯದಲ್ಲಿಯ ಕೋಕಿಲವು ಧ್ವನಿಮಾಡುತ್ತೆ. ಮನುಷ್ಯನು ಪ್ರವೇಶ ಮಾಡದ ಆ 

ಸಾಗರದ ಗರ್ಭದಲ್ಲಿ ನಟ ರತ್ನವು ಪ್ರಭಾಸಿತವಾಗಿರುತ್ತದೆ. ಅಂಧಕರ ಹೃದಯದ 

ಲ್ಲಿಯ ಪ್ರೇಮವು ಹುಟ್ಟುವುದು-ನನ್ನ ನಯನಗಳು ನಿರುದ್ಧವಾಗಿವೆಯೆ೦ದು 

ಹೇಳಿದಮಾತ್ರಕ್ಕೆ ನನ್ನ ಮನಸ್ಸು ಪ್ರಸ್ಫುಟಿತವಾಗಲಾರದೇನು ? 


ಆಗಲಾರದೆ ಇರದು, ಆಗಿಯೇ ಆಗುತ್ತದೆ, ಆದರೆ ಹಾಗಾಗುವುದು ನನಗೆ 

ಕಷ್ಟವನ್ನುಂಟುಮಾಡುವುದಕ್ಕೆ ಆಗುತ್ತದೆ. ಮೂಕನ ಕವಿತ್ವವು ಅವನಿಗೆ ಕಷ್ಟದಾ 

ಯಕವಾದುದು, ಕಿವುಡನಿಗೆ ಸಂಗೀತದಲ್ಲಿ ಅನುರಾಗ ಹುಟ್ಟುವುದಾದರೆ ಅದು ಅವನಿಗೆ 

ಕಷ್ಟವನ್ನುಂಟುಮಾಡುವುದು, ತನ್ನ ಸ್ವಂತ ಗಾನವನ್ನು ತಾನೇ: ಕೇಳಲಾರ; ನನ್ನ 

ಮನಸ್ಸಿನಲ್ಲಿ ಪ್ರಣಯಸಂತರವುಂಟಾಗಿರುವುದು ಹಾಗೆಯೇ ಕಷ್ಟಜನಕವಾದುದು. 

-----------------------------------------------

ನಾಲ್ಕನೆಯ ಪರಿಚ್ಛೇದ 13 

ಪರರ ರೂಪವನ್ನು ನೋಡುವುದು ಹೇಗೆ ? ನಾನು ನನ್ನ ಸ್ವಂಶಸ್ವರೂಪವನ್ನೇ ಯಾವ 

ಗಲೂ ನೋಡಿದವಳಲ್ಲ, ರೂಪ ! ರೂಪ ! ನನ್ನ ರೂಪ ಎಂತಹದುದು ? ಈ ಭೂಮಂಡಲ 

dಲ್ಲಿ ರಜನಿಯೆಂಬ ಹೆಸರುಳ್ಳ ಅಲ್ಪವಾದ ಒಂದು ಬಿಂದು ಹೇಗೆ ಕಂಡಿತು ? ನನ್ನನ್ನು 

ನೋಡಿದರೆ ಯಾರಾದರೂ ಯಾವಾಗಲಾದರೂ ಪುನಃ ನೋಡಬೇಕೆಂದು ಇಷ್ಟವುಳ್ಳವ 

ರಾಗುವುದಿಲ್ಲವೆ? ಈ ಪ್ರಪಂಚದಲ್ಲಿ ನೀಚಾಶಯನಾದ ಅಲ್ಪ ಮನುಷ್ಯನೇ ಆಗಲಿ, 

ನನಲ್ಲಿ ಸೌಂದರವನ್ನು ಕಂಡವವನು ಯಾರೂ ಇಲ್ಲವೆ? ನಯನಗಳೆಲ್ಲದಿದ್ದರೆ ನಾರಿಯು 

ಸುಂದರಿಯಾಗಳು, ನನಗೆ ನಯನಗಳಿಲ್ಲ, ಹಾಗಾದರೆ ಶಿಲ್ಪಿಯು ಕಲ್ಲನ್ನು ಕಡೆದು 

ಕಣ್ಣಿಲ್ಲದ ಮೂರ್ತಿಯನ್ನು ಏತಕ್ಕೆ ಮಾಡುತ್ತಾನೆ ? ಹಾಗಾದರೆ ವಿಧಾತನು 

ಈ ಪಾಷಾಣದ ಮಧ್ಯದಲ್ಲಿ ಈ ಸುಖದುಃಖಗಳಿಂದೊಡಗೂಡಿದ ಪ್ರಣಯದಲ್ಲಿ ಆಶಾಪರ 

ವಶವಾದ ಹೃದಯವನ್ನೇತಕ್ಕೆ ಹುಗಿದಿಟ್ಟನು ? ಪಾಷಾಣಕ್ಕೆ ಉಂಟಾಗಬೇಕಾದ ದುಃಖ 

ವನ್ನು ಅನುಭವಿಸಿದೆನು, ಪಾಷಾಣಕ್ಕೆ ಬರಬೇಕಾದ ಸುಖವೇತಕ್ಕೆ ಹೊಂದಲಿಲ್ಲ ? 

ಈ ಜಗತ್ತಿನಲ್ಲಿ ಈ ತಾರತಮ್ಯವೇತಕ್ಕೆ ? ಅನಂತವಾದ ದುಷ್ಪಾಪವನ್ನು ಮಾಡುವವರು 

ಕೂಡ ಕಣ್ಣುಗಳಿಂದ ನೋಡುತ್ತಾರೆ, ನಾನು ನೋಡುವುದಕ್ಕೆ ಜನ್ಮಾಂತರದಲ್ಲಿ ಏನು 

ಪಾಪವನ್ನು ಮಾಡಿದೆ ? ಇಹಸಂಸಾರದಲ್ಲಿ ವಿಧಾತನೂ ಇಲ್ಲ; ವಿಧಾನವೂ ಇಲ್ಲ; 

ಪಾಸಪುಣ್ಯಕ್ಕೆ ದಂಡ ಪುರಸ್ಕಾರಾದಿಗಳಿಲ್ಲ, ನಾನು ಪ್ರಾಣಬಿಡುವೆನು, 


ನನ್ನ ಈ ಜೀವನದಲ್ಲಿ ಅನೇಕ ವರುಷಗಳು ಕಳೆದುಹೆವೀದವು. ಇನ್ನು ಅನೇಕ 

ವರುಷಗಳು ಬರುವ ಸಂಭವವುಂಟು, ವರುಷವರುಷಕ್ಕೂ ಬಹು ದಿನಗಳು, ದಿನ 

ದಿನಕ್ಕೂ ಬಹು ದಂಡಗಳು, ದುತದಂಡಕ್ಕೂ ಬಹು ಮುಹೂರ್ತಗಳು, ಅವುಗಳಲ್ಲಿ 

ಒಂದು ಮೂಹೂರ್ತಕಾಲ, ಒಂದು ಕಣ್ಣುರೆಪ್ಪೆ ಮುಚ್ಚುವ ಹೊತ್ತು ನನ್ನ ಕಣ್ಣು 

ಗಳು ನೋಡಲಾರವೆ ? ಒಂದು ಮುಹೂರ್ತಕಾಲ ಕಣ್ಣ ತೆರೆದು ನೋಡುವದಾದರೆ 

ಸ್ಪರ್ಶಮಯವಾದ ಈ ವಿಶ್ವಸಂಸಾರವೇನು, ನಾನೇನು, ಶಶೀಂದ್ರನು ಯಾರು ? 

ಎಂದು ನೋಡಿಕೊಳ್ಳುವೆನು. 

....

 

ನಾಲ್ಕನೆಯ ಪರಿಚ್ಛೇದ. 


ನಾನು ನಿತ್ಯವೂ ಹೂವನ್ನು ತೆಗೆದು ಕೆಎಂಡು ಹೋಗುತಲಿದ್ದೆ; ಚಿಕ್ಕ ಬಾಬುವಿನ 

ಮಾತಿನ ಶಬ್ಬ ಶ್ರವಣವು ನಿತ್ಯವೂ ಉಂಟಾಗಲಿಲ್ಲ ಒಂದೊಂದು ದಿನ ಶ್ರವಣ 

ವಾಗುಲಿತ್ತು. ಅದನ್ನು ಕೇಳಿದ ಆಹ್ಲಾದವನ್ನು ಹೇಳಲಾರೆ. ಮೇಘವು ಜಲದಿಂದ 

--------------------------------------------

೧೪ ರಜನಿ 

ತುಂಬಿ ಗರ್ಜನೆಮಾಡಿ ಮಳೆ ಕರದಾಗ ಮೇಘಕ್ಕೆ ಆಹ್ವಾದವುಂಟಾಗುತ್ತದೆಂದು 

ತೋರುತ್ತದೆ; ನನಗೆ ಅಂತಹ ಆಹ್ಲಾದವುಂಟಾಗುತಲಿತ್ತು, ನನಗೂ ಹಾಗೆಯೇ ಕೂಗಿ 

ಗರ್ಜಿಸುವುದಕ್ಕೆ ಇಷ್ಟವುಂಟಾಗುವುದು. ನಿತ್ಯವೂ ಚಿಕ್ಕ ಬಾಬುವಿಗೆ ಕೆಲವು ಉತ್ಕೃ  

ಷ್ಟವಾದ ಮೊಗ್ಗುಗಳಿಂದ ಒಂದು ತೋಡಾ ಕಟ್ಟಿ ತೆಗೆದುಕೊಂಡುಹೋಗಿ ಅವನ 

ಕೈಗೆ ಕಟ್ಟಿ ಬರಬೇಕೆಂದು ಯೋಚಿಸುತಲಿದ್ದೆವು. ಆದರೆ ಒಂದು ದಿನವಾದರೂ ಕಟ್ಟ 

ಲಾರದೆ ಹೋದೆನು, ಲಜ್ಜೆಯೊಂದು ಅಡ್ಡಿಯಾಗಿ ಬರುವುದು; ಮತ್ತು ಮನಸ್ಸಿನಲ್ಲಿ 

ಅವನಿಗೆ ಹೂ ಕೊಟ್ಟ ಮೇಲೆ ಅದಕ್ಕವನು ಕ್ರಯವನ್ನು ಕೊಟ್ಟರೆ ತೆಗೆದುಕೊಳ್ಳದಿರು 

ವುದು ಹೇಗೆ ಎಂದು ಯೋಚನೆ ಬರುವುದು. ಈ ದುಃಖದಿಂದ ಮನೆಗೆ ಬಂದು ಪುಷ್ಟ 

ವನ್ನು ತೆಗೆದುಕೊಂಡು ಅವನಿಗೋಸ್ಕರ ಕಟ್ಟುವೆನು, ಹೇಗೆ ಕಟ್ಟುವೆನು ? ಅದು 

ಗೊತ್ತಿಲ್ಲ. ಇಟ್ಟಿದ್ದನ್ನು ಎಂದೂ ನೋಡಿಲ್ಲ. 


ಇತ್ತಲಾಗಿ ಈ ರೀತಿಯಾಗಿ ನನ್ನ ಹೋಗಿಬರೋಣವು ಒಂದು ಅಚಿಂತನೀಯ 

ವಾದ ಫಲೋದಯಕ್ಕೆ ಕಾರಣವಾಯಿತು, ಅದು ನನಗೆ ಗೊತ್ತೇ ಇಲ್ಲ ನನ್ನ ತಾಯಿತಂದೆ 

ಗಳು ಪರಸ್ಪರ ಮಾತನಾಡುವಾಗ ಕೇಳಿ ಅದು ಸ್ವಲ್ಪ ಗೊತ್ತಾಯಿತು. ಒಂದು 

ದಿನ ಸಾಯಂಕಾಲವಾದ ಮೇಲೆ ನಾನು ಮಾಲೆಗಳನ್ನು ಕಟ್ಟುತಲಿದ್ದಾಗೆ ನಿದ್ರೆ 

ಬಂತು. ಏನೋ ಒಂದು ಶಬ್ಬವಾಗಿ ಎಚ್ಚರವಾಯಿತು, ಎಚ್ಚರವಾದಮೆಲೆ ನನ್ನ 

ತಂದೆತಾಯಿಗಳಿಬ್ಬರೂ ಮಾತನಾಡುವ ಶಬ್ದವು ಕಿವಿಗೆ ಬಿತ್ತು, ದೀಪವು ಇರಲಿಲ್ಲ 

ವೆಂದು ತೋರುತ್ತದೆ. ಏತಕ್ಕಂದರೆ ಅವರಿಗೆ ನಾನು ಎಚ್ಚರವಾದುದು ಗೊತ್ತಾದ 

ಹಾಗೆ ತೋರಲಿಲ್ಲ. ಅವರ ಮಾತಿನಲ್ಲಿ ನನ್ನ ಹೆಸರು ಬಂದುದರಿಂದ ನಾನು ಏನೂ 

ಉಸುರದೆ ಸುಮ್ಮನೆ ಕೇಳುತಲಿದ್ದೆನು. 


ತಾಯಿ-ಹಾಗದರೆ ಖಂಡಿತವಾಗಿ ಗೊತ್ತಾಯಿತು ? 


ತಂದೆ-ಗೊತ್ತಾಗದೆ ಮನು ? ಅಂತಹ ದೊಡ್ಡ ಮನುಷ್ಯರು ಮಾತು ಕೊ 

ಟ್ಟಮೇಲೆ ಇನ್ನು ಅಡ್ಡಿಯುಂಟೆ ? ಆದರೆ ನಮ್ಮ ಹ ಡಗಿ ಕುರುಡು, ಇಲ್ಲದಿದ್ದರೆ 

ಇಂತಹ ಹೆಣ್ಣು ಲೋಕದಲ್ಲಿ ತಪಸ್ಸು ಮಾಡಿದರೂ ಸಿಕ್ಕದು. 


ತಾಯಿ-ಅವಳು ಏತಕ್ಕೆ ಇಷ್ಟು ಮಾಡಬೇಕು ? 


ತಂದೆ ನಿನಗೆ ಗೊತ್ತಿಲ್ಲ, ಅವರು ನಮ್ಮ ಹಾಗೆ ಕಂಗಾಳಿ;ಗಳಲ್ಲ; ಒಂದೆರಡು 

ಸಾವಿರ ರೂಪಾಯಿ ಎಂದರೆ ಅವರಿಗೆ ಲಕ್ಷ್ಯವಿಲ್ಲ. ಯಾವದಿನ ರಜನಿಯು ಕೇಳುವ 

ಹಾಗೆ ರಾಮಸದಯನ ಹೆಂಡತಿ ವಿವಾಹದ ಪ್ರಸ್ತಾಪವನ್ನು ಮಾಡಿದಳೋ ಅದು 

ಮೊದಲ್ಗೊಂಡು ರಜನಿಯು ನಿತ್ಯವೂ ಅವಳ ಬಳಿಗೆ ಹೋಗಿ ಹೋಗಿರುತ್ತಾಳೆ. 

-------------------------------------------- 

೧೫ ನಾಲ್ಕನೆಯ ಪರಿಚ್ಛೇದ 


ಮೊದಲದಿನ ಅವಳು ತನ್ನ ಮಗನನ್ನು ಕುರಿತು ದುಡ್ಡು ಕೊಟ್ಟರೆ ಕುರುಡಿಯನ್ನು 

ಮದುವೆ ಮಾಡಿಕೊಳ್ಳುವವರು ಯಾರೆಂದು ಕೇಳಿದಳು. ಹುಡಗಿಗೂ ಇವಳು ದಯಾ 

ಪರಳು, ಹಣವನ್ನು ಕೊಟ್ಟು ತನ್ನ ಮದುವೆ ಮಾಡಿಸುವಳೆ೦ದು ಭರವಸೆಯೂ 

ಹುಟ್ಟಿ ಅವಳು ನಿತ್ಯವೂ ಅವರ ಮನೆಗೆ ಹೋಗಿ ಬರುತ್ತಾಳೆ, ಅದು ಮೊದಲ್ಗೊಂಡು 

ಹೋಗಿ ಬರುವದನ್ನು ನೋಡಿ ಲವಂಗಲತೆಯೂ ಹುಡುಗಿಯು ಮದುವೆಗೋಸ್ಕರ 

ಕಾತಳಾಗಿರಬಹುದೆಂತಲೂ, ಅದೂ ಅಲ್ಲದೆ ಹುಡುಗಿಗೆ ವಯಸ್ಸಾಗಿದೆ ಎಂತಲೂ 

ಯೋಚಿಸಿರುವ ಹಾಗೆ ಕಾಣುತ್ತದೆ, ಅದಲ್ಲದೆ ಚಿಕ್ಕ ಬಾಬುವೂ ಸಹ ದುಡ್ಡು ಕೊಟ್ಟು 

ಹರನಾಧವಸುವಿನ ಒಪ್ಪಿಗೆ ತೆಗೆದುಕೊಂಡಿದ್ದಾನೆ, ಗೋಪಾಲನೂ ಒಪ್ಪಿಕೊಂಡಿದ್ದಾನೆ. 


ಹೀಗೆ ಅವರವರು ಮಾತನಾಡುತಲಿದ್ದದ್ದನ್ನು ಕೇಳಿದೆ. 


ಹರನಾಥನು ರಾಮಸದಯನ ಮನೆಯ ಆಳು. ಗೋಪಾಲನೆಂಬುವನು 

ಅಳಿನ ಮಗ, ಗೋಪಾಲನ ಸಮಾಚಾರವೂ ನನಗೆ ಸ್ವಲ್ಪ ಗೊತ್ತುಂಟು. ಗೋಪಾಲ 

ನಿಗೆ ಮುವತ್ತು ವರಷ ವಯಸ್ಸು. ಒಬ್ಬ ಹೆಂಡತಿ ಇದ್ದಾಳೆ; ಆದರೆ ಅವಳಿಗೆ ಮಕ್ಕ 

ಳಿಲ್ಲ. ಗೃಧರ್ಮಾರ್ಧಕ್ಕಾಗಿ ಗೃಹಣಿಯೊಬ್ಬಳಿದ್ದಾಳೆ; ಸಂತಾನಾರ್ಥವಾಗಿ ಒಬ್ಬ 

ಅಂಧಪತ್ನಿಯನ್ನು ಮದುವೆ ಮಾಡಿಕೊಳ್ಳಲು ಅವನಿಗೆ ಆಕ್ಷೇಪವಿರಲಾರದೆಂದು ತಿಳಿದು 

ಕೊಂಡೆನು. ಅದಲ್ಲದೆ ಲವಂಗತೆಯು ಅವರಿಗೆ ದುಡ್ಡು ಕೊಡುವಳು. ತಂದೆತಾಯಿ 

ಗಳು ಆಡಿದ ಮಾತುಗಳಿಂದ ನನ್ನನ್ನು ಗೋಪಾಲನಿಗೆ ಕೊಟ್ಟು ವಿವಾಹವು ನಡೆಯು 

ವುದು ಗೊತ್ತಾಗಿದೆಯೆಂದು ತಿಳಿದೆನು. ಅವನು ದುಡ್ಡಿನ ಆಶೆಗೆ ಹತ್ತೊಂಭತ್ತು ವರು 

ಷದ ಹೆಣ್ಣನ್ನು ಕೂಡ ಮದುವೆಮಾಡಿಕೊಳ್ಳಲೊಪ್ಪಿಕೊಂಡನು, ದುಡ್ಡು ಕೊಟ್ಟರೆ 

ಜಾತಿ ಬಂದೀತೆ ? ನನ್ನ ತಾಯಿತಂದೆ ಛು ಮನಸ್ಸಿನಲ್ಲಿ ಈ ಜನ್ನಲ್ಲಿ ಅಂಧಳಾದ 

ಮಗಳು ಉದಾರವಾದಳೆಂದು ತಿಳಿದು, ಅವರು ಸಂತೋಷ ಚಿತ್ತರಾದರು, ನನ್ನ 

ತಲೆಯಮೇಲೆ ಆಕಾಶವೇ ಕಳಚಿಬಿದ್ದ ಹಾಗಾಯಿತು. 

 

ಆ ಮಾರನೇದಿನ ನಾನು ಲವಂಗತೆಯ ಮನೆಗೆ ಹೋಗಕೂಡದೆಂದು ಸಂಕಲ್ಪ 

ಮಾಡಿಕೊಂಡೆನು, ಮನಸ್ಸಿನಲ್ಲಿ ಅವಳ ಕೆಟ್ಟ ಮೇರೆಗೆ ಬೆಂಕಿಹಾಕಿತೆಂದು ಸಹಸ್ರ 

ವಾಗಿ ಬೈದೆನು. ಲಜ್ಜೆಯಿಂದ ಎಲ್ಲಾದರೂ ಹೋಗಿ ಸಾಯಬೇಕೆಂದು ಇಷ್ಟವುಂಟಾ 

ಯಿತು, ಕೋಪಗೊಂಡವಳಾಗಿ ಹೋಗಿ ಲವಂಗಲತೆಯನ್ನು ಹೊಡಿಯಬೇಕೆಂದು 

ಮನಸ್ಸು ಬಂತು. ದುಃಖದಿಂದ ಕಣ್ಣುಗಳಲ್ಲಿ ನೀರು ಸುರಿಸಲಾರಂಭವಾಯಿತು. ನಾನು 

ಲವಂಗಲತೆಗೆ ಏನುಮಾಡಿದ್ದಕ್ಕೆ ಅವಳು ನನ್ನ ಮೇಲೆ ಇಷ್ಟು ಅತ್ಯಾಚಾರ ನಡೆಸಲುದ್ಯು 

ಕ್ತಳಾದಳು ? ಬಹುಶಃ ಅತ್ಯಾಚಾರಗಳನ್ನು ನಡಿಸೋಣದರಿಂದ ದೊಡ್ಡ ಮನುಷ್ಯರು 

--------------------------------------------

೧೬ ರಜನಿ  


ಸುಖಿಯಾಗುತ್ತಾರೆಂದು ತಿಳಿದುಕೊಂಡೆನು, ಹಾಗೆ ದೊಡ್ಡವರ ಸ್ವಭಾವವು ನಿಜವಾಗಿ 

ದ್ದರೆ ಈ ಜನ್ಮಾಂಧಳ»ಗಿ ದುಃಖಿಯಾದವಳನ್ನು ಹೊತ್ತು ಬೇರೆ ಯಾರು ಅವಳ 

ಆತ್ಯಾಚಾರಕ್ಕೆ ಪಾತ್ರರಾಗಿ ಸಿಕ್ಕಲಿಲ್ಲವೆ ? ಪುನಃ ಮನಸ್ಸಿನಲ್ಲಿ ಇನ್ನೊಂದುದಿನ ಅವಳ 

ಮನೆಗೆ ಹೋಗಿ ಅವಳನ್ನು ಚನ್ನಾಗಿ ತಿರಸ್ಕರಿಸಿ ಬಂದುಬಿಡಬೇಕೆಂತೇ, ಪುನಃ 

ಹೋಗಕೂಡದೆಂತಲೂ, ಪಸಃ ಅವಳಿಗೆ ಹೂವನ್ನು ಕೊಡಕೂಡದೆಂತಲೂ, ಪುನಃ 

ಅವಳ ದುಡ್ಡು ಮುಟ್ಟಕೂಡದೆಂತಲೂ, ತಾಯಿಯು ಹೂವು ಮಾರಿ ಅವಳಿಂದ 

ರೂಪಾಯಿ ತಂದರೆ, ಅದುಂದ ಬಂದ ಅನ್ನವನ್ನು ತಿಪ್ಪ ಕೂಡದೆಂತಲೂ, ಅದಕ್ಕಿಂತಲೂ 

ಅನ್ನವಿಲ್ಲದೆ ಸಾಯುವುದೇ ಮೇಲೆಂತಲೂ ಯೋಚಿಸಿಕೊಂಡೆನು, ಮತ್ತು ದೊಡ್ಡವ 

ಳಾದಮಾತ್ರಕ್ಕೆ ಪರಪೀಡೆಯನ್ನು ಮಾಡುವದುಂಟೆ ? ಎಂದು ಕೇಳುವೆನೆಂತಲೂ, 

ನಾನು ಅಂಧಳು.--.ಅಂಧಳೆಂದು ನನ್ನಲ್ಲಿ ದಯೆ ತೋರಿಸಬೇಡವೆ ? ಪೃಥ್ವಿಯಲ್ಲಿ 

ಯಾವ ಸುಖವನ್ನೂ ಅರಿಯದವಳಿಗೆ ಾವಳ ಅಪರಾಧವೇನೇನೋನೂ ಇಲ್ಲದೆ ಕಷ್ಟಕೊಡು 

ವುದು ನಿನಗೇನು ಸುಖ? ಎಂದು ಕೇಳುವೆನೆಂತಲೂ ಯೋಚಿಸಿಕೊಂಡೆನು. ಈ ಪ್ರಕಾ 

ರವಾಗಿ ಹೇಳಬೇಕೆ೦ದು, ಯೋಚಿಸಿಕೊಂಡಾಗಲೆಲ್ಲಾ ಕಣ್ಣುಗಳಿಂದ ಅಶ್ರುಧಾರೆಯು 

ತಾನಾಗಿಯೆ ಹೆಚ್ಚುಹೆಚ್ಚಾಗಿ ಸುರಿಯಲಾರಂಭವಾಗಿ, ಕಡೆಗೆ ಹೇಳಬೇಕೆಂಬ ಸಮಯ 

ದಲ್ಲಿ ಯೋಚಿಸಿದುದೆಲ್ಲಾ ಮರೆತುಹೋದೀತೆಂಬ ಭಯವುಂಟಾಯಿತು, 


ಯುಥಾಕಾಲದಲ್ಲಿ ಪುನಃ ರಾಮಸದಯನ ಮನೆಗೆ ಹೊದೆ, ಹೂವನ್ನು ತೆಗೆದು 

ಕೊಂಡು ಹೋಗಕೂಡದೆಂದು ಯೋಚಿಸಿಕೊಂಡಿದ್ದವಳು, ಬರೀ ಕೈಲಿ ಹೋಗಲು ಲಜ್ಜೆ 

ಯುಂಟಾಯಿತು. ಹೋಗಿ ಏನೆಂದು ಕೇಳಿ ಕುಳಿತುಕೊಳ್ಳಲಿ? ಮೊದಲಿನಂತೆ ಕೈಲಿ 

ಹೂವನ್ನು ತೆಗೆದುಕೊಂಡೆ ; ಆದರೆ ಆಸೆ ಇತ್ತು ತಾಯಿಗೆ ತಿಳಿಸದೆ ಹೋದೆ. 

 

ಹೂವನ್ನು ಕೊಟ್ಟೆ ತಿರಸ್ಕಾರಮಾಡಬೇಕೆಂದು ಲವಂಗಳ ಹತ್ತಿರ ಕೂತು 

ಕೊಂಡೆ ಏನು ಹೇಳಿ ಮಾತಿಗೆ ಉಪಕ್ರಮಿಸಲಿ ? ಹರಿ ! ಹರಿ ! ಏನು ಹೇಳಿ ಪ್ರಾರಂ 

ಭಿಸಲಿ ? ಮುಖಸ್ತುತಿ ಪ್ರಾರಂಭಿಸುವುದು ಹೇಗೆ ? ನಾಲ್ಕು ದಿಕ್ಕುಗಳಲ್ಲಿಯೂ ಬೆಂಕಿ 

ಎದ್ದು ಉರಿಯುವಾಗ ಯಾವ ದಿಕ್ಕಿನಲ್ಲಿ ಉರಿಯನ್ನ ಣಗಿಸಲಿ ? ಏನು ಹೇಳುವುದಕ್ಕೂ 

ಆಗಲಿಲ್ಲ ! ಮಾತು ಕಥೆ ನಡೆಸಲಾಗಲೇ ಇಲ್ಲ. ಆಳುವಹಾಗೆ ಆಯಿತು.  


ಭಾಗ್ಯಕ್ರಮದಲ್ಲಿ ಲವಂಗಲತೆಯೇ ಮಾತೆ, ಕುರುಡಿ!  ನಿನಗೆ ಮದುವೆಯಾ 

ಗುವುದೆಂದಳು. 


ನನಗೆ ಮೈಯೆಲ್ಲಾ ಬೆಕಿಯಾಗಿ, ನಾನು ಸತ್ತು ಬೂದಿಯಾದೆ, ಎಂದು 

ಹೇಳಿದೆ.

-------------------------------------------------

ನಾಲ್ಕನೆಯ ಪರಿಚ್ಛೇದ 17 


ಲವಂಗ-ಏತಕ್ಕೆ ? ಚಿಕ್ಕ ಬಾಬು ಮದುವೆ ಮಾಡಿಸುತ್ತಾನೆ, ಏತಕ್ಕೆ, ಆಗ 

ಕೂಡದೆ ? 


ಇನ್ನೂ ಹೆಚ್ಚು ಉರಿದು, ನಾನು ನಿಮಗೇನು ತಪ್ಪಮಾಡಿದೆ ಎಂದು ಕೇಳಿದೆ 

ಲವಂಗಲತೆಯು ಕೋಪಗೊಂಡು, ಅಯ್ಯೋ ! ಹೆಣ್ಣೆ ! ನಿನಗೆ ಮದುವೆಯಾ 

ಗುವ ಮನಸ್ಸು ಇಲ್ಲವೇನೆ ? ಎಂದಳು.

 

ನಾನು ತಲೆಯನ್ನ ಲ್ಲಾಡಿಸುತ್ತ, ಇಲ್ಲವೆಂದೆನು. 


ಲವಂಗತೆಯು ಮತ್ತಷ್ಟು ಕೋಪವಶಳಾಗಿ, ಎಂತಹ ಪಾಪಿಷ್ಟಕ್ಕೆ ನೀನು ! 

ನಿನ್ನನ್ನು ಮದುವೆಮಾಡಿಕೊಳ್ಳುವವರು ತಾನೇ ಯಾರೇ ? ಎಂದಳು. 


ನಾನು-ಇಷ್ಟ. 


ಲವಂಗಲತೆಯ ಮನಸ್ಸಿನಲ್ಲಿ, ನಾನು ಕುಲಭ್ರಷ್ಠಳೆಂತಲೂ ಇಲ್ಲದಿದ್ದರೆ ವಿವಾ 

ಹಕ್ಕೆ ಏತಕ್ಕೆ ಸಮ್ಮತಿಸದಿರುವಳು ಎಂತಲೂ ತಿಳಿದುಕೊಂಡಹಾಗೆ ತೋರುತ್ತದೆ. 

ಅವಳು ಇನ್ನೂ ಹೆಚ್ಚು ರಾಗಾಂಧಳಾಗಿ, ಆಹಾ ! ಹೆಣ್ಣೆ ! ಇಷ್ಟವಿಲ್ಲದಿದ್ದರೆ 

ಕಸಬರಿಕೆಯಿಂದ ಹೊಡದು ಇಲ್ಲಿಂದ ಹೊರಡಿಸುತ್ತೇನೆಂದು ಹೇಳಿದಳು. 

 

ನಾನು ಎದ್ದೆ- ನನ್ನ ಎರಡು ಆಧ ಚಕ್ಷುಗಳಿಂದ ನೀರು ಸುರಿಯುತಲಿತ್ತು, 

ಅದನ್ನು ಲವಂಗಲತೆಗೆ ತೋರಿಸದೆ ಮುಖವನ್ನು ತಿರುಗಿಸಿಕೊಂಡೆನು, ಮನೆಗೆ ಹೋಗ 

ಬೇಕೆಂದು ಹೊರಟೆ, ಹೊರಟವಳು ಮೆಟ್ಲುಗಳ ಹತ್ತಿರ ತಡವಾಡುತಲಿದ್ದೆ, ಲವಂಗ 

ಲತೆಯನ್ನು ತಿರಸ್ಕರಿಸಲು ಹೇಳಬೇಕೆಂದಿದ್ದ ಮಾತುಗಳು ಯಾವವೂ ಏತಕ್ಕೆ ಬಾಯಿ 

ನಿಂದ ಹೊರಡಲಿಲ್ಲವೋ ಗೊತ್ತಾಗಲಿಲ್ಲ. ಅಕಸ್ಮಾತ್ತಾಗಿ ಯಾವದೋ ನಡೆದುಬರುವ 

ಶಬ್ದವು ಕಿವಿಗೆ ಬಿತ್ತು, ಅಂಧಕರ ಶ್ರವಣಶಕ್ತಿಯು ಅತಿಶಯವಾಗಿ ಅಸಾಧಾರಣ 

ವಾದ ಪ್ರಖರತೆಯನ್ನು ಹೊಂದುತ್ತದೆ. ನಾನು ಆ ಪದಶಬ್ದವನ್ನು ಒಂದೆರಡು ತಡವೆ 

ಕೇಳಿದ್ದೆನು. ಅದು ಇಂತಹವರದೆಂದು ಗೊತ್ತಾಯಿತು, ಮೆಟ್ಲುಗಳಮೇಲೆ ಕುಳಿತು 

ಕೊಂಡೆನು ಚಿಕ್ಕ ಬಾಬುವು ಹತ್ತಿರ ಬಂದು ನನ್ನನ್ನು ನೋಡಿದನು. ನೋಡಿ ನನ್ನ 

ಕಣ್ಣುಗಳಿಂದ ಬರುತಲಿದ್ದ ನೀರನ್ನು ನೋಡಿದನೆಂದು ತೋರುತ್ತದೆ. ನೋಡಿದವನು, 

ಏತಕ್ಕೆ ರಜನಿ ? ಎಂದು ಕೇಳಿದನು, 


ಎಲ್ಲಾ ಮರೆತುಬಿಟ್ಟೆ ! ಕೋಪ ಹೋಯಿತು ! ಅಪಮಾನವನ್ನು ಮರತೆ ! 

ದುಃಖವನ್ನು ಮರತೆ | ಕಿವಿಯಲ್ಲಿ, ಏತಕ್ಕೆ ರಜನಿ? ಎಂಬುದು ಶಬ್ದ ವಾಗಲಾರಂಭ 

ವಾಯಿತು. ನಾನು ಉತ್ತರವನ್ನು ಕೊಡಲಿಲ್ಲ-ಮನಸ್ಸಿನಲ್ಲಿ ಇನ್ನೊಂದೆರಡು ತಡವೆ 

ಕೇಳಲಿ–ನಾನದನ್ನು ಕೇಳಿ ಕಿವಿಗಳನ್ನು ಇಂಪುಮಾಡಿಕೊಳ್ಳುತ್ತೇನೆಂದು ಸುಮ್ಮನಿದ್ದೆ. 

----------------------------------------------

18 ರಜನೀ 


ಚಿಕ್ಕ ಬಾಬು ಪುನಃ, ರಜನಿ ! ಅಳುವದೇತಕ್ಕೆ ? ಎಂದನು. 


ನನ್ನ ಹೃದಯವು ಆನಂದದಿಂದ ತುಂಬುತ್ತ ಬಂತು, ಕಣ್ಣಿನ ನೀರು ಇನ್ನೂ 

ಹೆಚ್ಚಾಗಿ ಉಕ್ಕಿತು. ನಾನು ಮಾತನಾಡಲಿಲ್ಲ. ಮತ್ತೂ ಕೇಳಲಿ, ಮನಸ್ಸಿನಲ್ಲಿ, 

ನಾನು ಎಂತಹ ಭಾಗ್ಯವತಿ ! ವಿಧಾತನು ನನ್ನನ್ನು ಅಂಧಳನ್ನಗಿ ಮಾಡಿದನೇ 

ಹೊರ್ತು ದೇವರದಯದಿಂದ ಕಿವಡಳನ್ನಾಗಿ ಮಾಡಲಿಲ್ಲ ಎಂದು ಹೇಳಿಕೊಂಡೆ 


ಅವನು ಪುನಃ, ಏತಕ್ಕೆ ಅಳುತ್ತಿ ? ಯಾರಾದರೂ ಏನಾದರೂ ಹೇಳಿದರೆ ? 

ಎಂದು ಕೇಳಿದನು. 

 

ನಾನು ಈಸಲ ಉತ್ತರವನ್ನು ಕೊಟ್ಟೆನು-ಅವನ ಸಂಗಡ ಮಾತನಾಡುವ 

ಸುಖವನ್ನು ಈ ಜನ್ಮದಲ್ಲಿ ಸಿಕ್ಕಿರುವಾಗ ಏತಕ್ಕೆ ಬಿಡಬೇಕು ?-ಚಿಕ್ಕಮ್ಮನು ತಿರ 

ಸ್ಕಾರ ಮಾಡಿದಳೆಂದು ಹೇಳಿದೆನು. 

 

ಚಿಕ್ಕ ಬಾಬುವು ನಕ್ಕು, ಅವಳ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ ; 

ಅವಳ ಬಾಯಿಯೇ ಅಂತಹದು. ಆದರೆ ಅವಳ ಮನಸ್ಸು ಬಹಳ ಒಳ್ಳೇದು, ಯಾವು 

ದನ್ನೂ ಮನಸ್ಸಿನಲ್ಲಿಡುವುದಿಲ್ಲ. ನೀನು ನನ್ನ ಜತೇಲಿ ಬಾ, ಈ ಕೂಡಲೆ ಪುನಃ ಅವಳು 

ಒಳ್ಳೆ ಮಾತನಾಡುತ್ತಾಳೆ ಎಂದನು. 

+

ಅವನ ಸಂಗಡ ಹೋಗಬಾರದೇತಕ್ಕೆ ? ಅವನು ಕರೆದರೆ ಪುನಃ ಕೋಪವುಳಿಯು 

ವುದೆ ? ನಾನೆದ್ದೆನು, ಅವನ ಜತೇಲಿ ಹೋದೆ, ಅವನು ಮೆಟ್ಲು ಹತ್ತಲಾರಂಭಿಸಿದನು. 

ನಾನೂ ಅವನ ಹಿಂದೆ ಹತ್ತಿದೆ ಅವವ ನೀನು ನೋಡಲಾರೆ, ಮೆಟ್ಲು ಹತ್ತುವುದಕಕ್ಕಾ 

ಗುವುದಿಲ್ಲ, ನಾನು ಕೈ ಹಿಡಿದು ಕರೆದುಕೊಂಡು ಹೋಗುತ್ತೇನೆಂದನು. 


ನನ್ನ ಮೈ ಕಂಪಿತವೆನಿಸಿತು. ಸರ್ವ ಶರೀರವು ರೋಮಾಂಚವಾಯಿತು, 

ಅವನು ನನ್ನ ಕೈ ಹಿಡಿದುಕೊಂಡನು ! ಹಿಡಿಯಕೂಡದು, ಜನರು ಆಡಿಕೊಳ್ಳುತ್ತಾರೆ. 

ನಿಂದಿಸುತ್ತಾರೆ. ನಿಂದಿಸಿಕೊಳ್ಳಲಿ. ನನ್ನ ನಾರಿ ಜನ್ಮವು ಸಾರ್ಧಕವಾಗಲಿ ! ನಾನು 

ಇತರರ ಸಹಾಯವಿಲ್ಲದೆ ಕಲಿಕತ್ತಾದಲ್ಲಿ ಸಂದಿ ಸಂದಿಯಲ್ಲಿಯೂ ತಿರುಗಬಲ್ಲೆ. ಆದರೆ 

ಚಿಕ್ಕಬಾಬುವನ್ನು ನಿಷೇಧಿಸಲಿಲ್ಲ. ಚಿಕ್ಕ ಬಾಬು-ಏನೆಂದು ಹೇಳಲಿ ? ಯಾವ ಹೆಸರಿ 

ನಿಂದ ಕರೆಯಲಿ ? ಸರಿಯಾದ ಮಾತೇ ಸಿಕ್ಕದು-ಚಿಕ್ಕಬಾಬು ಕೈ ಹಿಡಿದುಕೊಂಡನು. 

 

- ಪ್ರಭಾತದಲ್ಲಿ ಪದ್ಮವು ಪ್ರಫುಲ್ಲವಾಗಿ ಅದರ ದಳಗಳಿಂದ ನನ್ನ ಕೈ ಸುತ್ತಿ 

ಹಿಡಿದುಕೊಂಡಿತೋ, ಅಥವಾ ಗುಲಾಬಿ ಹೂಗಳನ್ನು ಮಾಲೆ ಕಟ್ಟಿ ಯಾರಾದರೂ 

ನನ್ನ ಕೈಗೆ ಸುತ್ತಿದರೋ ಎಂಬಹಾಗೆ ತೋರಿತು ! ನನಗೆ ಇನ್ನೇನೂ ತೋರಲಿಲ್ಲ. 

ಆಗ ಮನಸ್ಸಿನಲ್ಲಿ ಈ ಪ್ರಾಣ ಹೊರಗೆ ಹೊರಡಲಿಲ್ಲ ವೇತಕ್ಕೆ ? ಎಂದು ಹೊಳೆಯಿತು. 

-------------------------------------------- 

ಐದನಯ ಪರಿಚ್ಛೇದ - 19 


ಕರಗಿ ನೀರಾಗಿ ಅವನೊಂದಿಗೆ ನಾನು ಸೇರಿಹೋಗಕೂಡದೆ ಎಂದು ಇಷ್ಟವುಂಟಾ 

ಯಿತು. ಶಚೀಂದ್ರನೂ ನಾನೂ ಸಹ ಎರಡು ಹೂಗಳಾಗಿ ಒಬ್ಬರಿಗೊಬ್ಬರು ಈರೀತಿ 

ಯಾಗಿ ಮುಟ್ಟಿಕೊಂಡು ಒಂದು ವನವೃಕ್ಷದ ಕೊಂಬೆಗೆ ನೇತಾಡಕೂಡದೆ ಎಂದು 

ಆಶೆಯುಂಟಾಯಿತು. ಇನ್ನೂ ಏನೇನೋ ಆಶೆಯುಂಟಾಯಿತು. ಜ್ಞಾಪಕವಿಲ್ಲ, 

ಮೆಟ್ಲು ಹತ್ತಿದಮೇಲೆ ಚಿಕ್ಕ ಬಾಬುವು ಕೈ ಬಿಟ್ಟನು, ಆಗ ನಿಟ್ಟುಸಿರು ಬಿಟ್ಟನು. 

ಆಗ ಪುನಃ ಪ್ರಪಂಚದ ಜ್ಞಾನವು ಬಂತು. ಅದರೊಂದಿಗೆ, ಏನುಮಾಡಿದೆ, ಪ್ರಾಣೇ 

ಶ್ವರ ! ತಿಳಿಯದೆ ಏನು ಮಾಡಿದೆ ! ಎಂದು ಜ್ಞಾನೋದಯವಾಯಿತು. ನೀನು ನನ್ನ 

ಪಾಣಿಗ್ರಹಣಮಾಡಿದೆ, ನೀನು ನನ್ನನ್ನು ಗ್ರಹಿಸಿದರೆ ಗ್ರಹಿಸು, ಇಲ್ಲದಿದ್ದರೆ ಬಿಡು. 

ನೀನು ನನಗೆ ಸ್ವಾಮಿ ; ನಾನು ನಿನಗೆ ಪತ್ನಿ, ಇಹಜನ್ಮದಲ್ಲಿ ಅಂಧಳಾದ ಈ ಹೂವಾ 

ಡಗಿತ್ತಿಗೆ ಮತ್ಯಾರೂ ಸ್ವಾಮಿಯಾಗಲಾರರು ಎಂದು ಮನಸ್ಸಿನಲ್ಲಿ ಹೇಳಿಕೊಂಡೆನು, 

...... 

ಐದನೆಯ ಪರಿಚ್ಛೇದ. 


ಚಿಕ್ಕ ಬಾಬು ಚಿಕ್ಕಮ್ಮನ ಬಳಿಗೆ ಬಂದು, ರಜನಿಗೆ ಏನು ಹೇಳಿದೆ ? ಎಂದು 

ಕೇಳಿ, ಅವಳು ಅಳುತ್ತಾಳೆ೦ದನು. ಚಿಕ್ಕ ತಾಯಿಯು ನನ್ನ ಕಣ್ಣುಗಳಲ್ಲಿ ನೀರನ್ನು 

ನೋಡಿ; ಅಪ್ರತಿಭಳಾಗಿ, ನನ್ನ ಸಂಗಡ ಒಳ್ಳೆ ಮಾತನಾಡಿ ಹತ್ತಿರ ಕೂಡಿಸಿಕೊಂಡು, 

ತನ್ನ ಸವತಿಯ ಮಗನ ಸಂಗಡ ನಡೆದ ಮಾತುಗಳನ್ನೆಲ್ಲಾ ಬಿಚ್ಚಿ ಹೇಳಲಾರದೆ 

ಹೋದಳು, ಚಿಕ್ಕ ಬಾಬುವು ಚಿಕ್ಕ ತಾಯಿಯು ಪ್ರಸನ್ನಳಾಗಿರುವುದನ್ನು ಕಂಡು ತನ್ನ 

ತಾಯಿಯ ಬಳಿಗೆ ಬೇರೆ ಕೆಲಸ ಆಗಿ ಹೊರಟುಹೋವನು. ನಾನು ಮನೆಗೆ 

ಬಂದುಬಿಟ್ಟೆ. 


ಇತ್ತಲಾಗಿ ಗೋಪಾಲಬಾಬುವಿಗೆ ಕೊಟ್ಟು ನನ್ನ ಮದುವೆಯ ಪ್ರಯತ್ನವು 

ನಡೆಯಲಾರಂಭವಾಯಿತು, ನಾನೇನು ಮಾಡಲಾಪೆ ? ಹೂ ಕಟ್ಟುವುದು ನಿಲ್ಲಿಸಿ 

ಬಿಟ್ಟು ಈ ಮದುವೆಯನ್ನು ಹೇಗೆ ಆಗದಹಾಗೆ ಮಾಡಲಿ ? ಎಂದು ಹಗಲೂ ರಾತ್ರಿ 

ಯೋಚನೆಗೆ ಪ್ರಾರಂಭಿಸಿದೆ, ಈ ವಿವಾಹದಲ್ಲಿ ತಾಯಿಗೆ ಆನಂದ ; ತಂದೆಗೆ ಉತ್ಸಾಹ; 

ಲವಂಗಲತೆಯ ಪ್ರಯತ್ನ, ಚಿಕ್ಕ ಬಾಬು ಘಟಕ ! ನಾನು ಅಂಧಳೊಬ್ಬಳು ಇದರ 

ಪ್ರತಿಬಂಧಕವನ್ನು ಹೇಗೆ ಮಾಡಲಿ ? ಯಾವ ಉಪಾಯವೂ ತೋರಲಿಲ್ಲ. ಹೂ 

ಕಟ್ಟುವುದು ನಿಂತುಹೋಯಿತು, ತಾಯಿತಂದೆಗಳು ನಾನು ವಿವಾಹದ ಆನಂದದಿಂದ 

ವಿಹ್ವಲಚಿತ್ತಳಾಗಿ ಮಾಲೆ ಕಟ್ಟುವುದನ್ನು ನಿಲ್ಲಿಸಿಬಿಟ್ಟನೆಂದು ತಿಳಿದುಕೊಂಗರು. 

------------------------------------------------ 

20 ರಜನಿ 


ಈಶ್ವರನು ನನಗೆ ಒಂದು ದಾರಿಯನ್ನು ತೋರಿಸಿದನು, ಗೋಪಾಲಬಾಬುವಿಗೆ 

ಮದುವೆಯಾದವಳು ಇದ್ದಾಳೆಂದು ಹೇಳಿದ್ದೆನಷ್ಟೆ. ಅವಳ ಹೆಸರು ಚಂಪಾ-ಅವಳ 

ತಂದೆಯು ಇಟ್ಟ ಹೆಸರು ಚಂಪಕಲತೆ, ಚಂಪಳೇ ಈ ವಿವಸಕ್ಕೆ ಒಪ್ಪಳು. ಅವಳು 

ಬಹಳ ಘಟ್ಟವಳ್ತಿ ಹೆಂಗಸು, ಮನೆಗೆ ಸವತಿ ಬಾರದಿರುವುದಕ್ಕೆ ಏನು ಆಗಬೇಕೊ 

ಆ ಪ್ರಯತ್ನದಲ್ಲಿ ಸ್ವಲ್ಪವೂ ಕಡಮೆ ಮಾಡಲಿಲ್ಲ, 


ಹೀರಾಲಾಲನೆಂಬುವನು ಅವಳಿಗೆ ತಮ್ಮನಾಗಬೇಕು, ಅವಳಿಗಿಂತ ವಯಸ್ಸಿನಲ್ಲಿ 

ಒಂದೂವರೆ ವರುಷ ಚಿಕ್ಕವನು. ಹೀರಾಲಾಲನು ಮದ್ಯವನ್ನು ಪಾನಮಾಡುವನು. 

ಅದೂ ಸ್ವಲ್ಪವಲ್ಲ. ಗಾಂಜಾ ಸಹಾ ಸೇದುತ್ತಾನೆಂದು ಕೇಳಿದ್ದೆ. ಅವನ ತಂದೆಯು 

ಅವನಿಗೆ ಓದುಬರಹ ಕಲಿಸಲಿಲ್ಲ -ಯಾವ ಪ್ರಕಾರದಿಂದಲೋ ಅವನು ಕೈಆಕ್ಷರವನ್ನು 

ತಿದ್ದಿಕೊಂಡು ಚನ್ನಾಗಿ ಬರೆಯುವನು, ಇಕ್ಕೇನೇ ರಾಮಸದಯನು ಅವನಿಗೆ 

ಎಲ್ಲಿಯೋ ಒಂದು ಗುಮಾಸ್ತಗಿರಿಯನ್ನು ಮಾಡಿಸಿಕೊಟ್ಟಿದ್ದನು. ಪಾನಧಾರಿಯಾದು 

ದರಿಂದ ಆ ಉದ್ಯೋಗವು ತಪ್ಪಿಹೋಯಿತು. ಅನಂತರ ಹರನಾಧವಸು ಎಂಬುವನು 

ಇವನ ಕೆಟ್ಟ ನಡತೆಯನ್ನು ಮನಸ್ಸಿಗೆ ತಂದುಕಕೊಳ್ಳದೆ, ಲಾಭದ ಆಶೆಗೋಸ್ಕರ ಹೀರಾ 

ಲಾಲನನ್ನು ಪಾಲಿಗೆ ಸೇರಿಸಿಕೊಂಡು ಒಂದು ಷಾಪನ್ನು ಮಾಡಿ ಕೊಟ್ಟನು. ಷಾಪಿನಲ್ಲಿ 

ಲಾಭವು ಯೌಗಿ, ಸಾಲವೇ ಹೆಚ್ಚಾಗುತ್ತಾ ಬಂತು. ವ್ಯಾಪಾರ ನಿಂತುಹೋಗಿ 

ಷಾಪು ಮುಚ್ಚಿದ್ದಾಯಿತು. ಇದಮೇಲೆ ಹಿರಾಲಾಲನು ಒಂದು ಗ್ರಾಮದಲ್ಲಿ 

ಹನ್ನೆರಡು ರೂಪಾಯಿ ಸಂಬಳವವುಳ್ಳ ಸ್ಕೂಲ್‌ ಮಾಸ್ಟರಾದನು. ಆ ಗ್ರಾಮದಲ್ಲಿ 

ಪಾನಕ್ಕೆ ಮದ್ಯ ಸಿಕ್ಕಲಿಲ್ಲವಾಗಿ ಅವನು ಅಲ್ಲಿಂದ ಪರಾರಿಯಾಗಿ ಬಂದುಬಿಟ್ಟನು. 

ಅದಾದಮೇಲೆ ಅದು ಒಂದು ನ್ಯೂಸಪೇಪರನ್ನು ಪ್ರಾರಂಭಿಸಿದರು. ಅದರಲ್ಲಿ ಕೆಲದಿನ 

ಚನ್ನಾಗಿ ಲಾಭ ಬಂತು. ಕೈಯಲ್ಲಿ ದುಡ್ಡು ಕಾಸು ಹೆಚ್ಚಾಗಿ ಓಡಾಡುವುದಕ್ಕೆ ಪ್ರಾರಂ 

ಭವಾಯಿತು, ಆದರೆ ಅಶ್ಲೀಲತೆ, ವ್ಯಭಿಚಾರ ಮುಂತಾದ ಕಾರಣದಿಂದ ಪ್ರತ್ಯಹವೂ 

ಪೋಲೀಸಠಾಣೆಗೆ ಹೋಗಿ ಬರಬೇಕಾಗಿ ಬಂದಿರಿಂದ ಭಯಹುಟ್ಟಿ ನ್ಯೂಸಪೇಪರನ್ನು 

ಕೈ ಬಿಟ್ಟು ಎಣ್ಣೆಯೋ ಮಾಯವಾಗಿ ಹೋದನು, ಕೆಲದಿನಗಳಮೇಲೆ ಅಕಸ್ಮಾತ್ತಾಗಿ 

ತೇಲಿಬಂದವನಹಾಗೆ ಎದ್ದು ಬಂದು ಚಿಕ್ಕ ಬಾಬುವಿನ ಹತ್ತಿರ ಮುಸಾಯೆಬಿ ಮಾಡ 

ಲಾರಂಭಿಸಿದನು. ಆದರೆ ಚಿಕ್ಕ ಬಾಬುವಿ ಹತ್ತಿರ ಪಾನಾದಿ ನಡತೆಯಿಲ್ಲದ್ದನ್ನು 

ಕಂಡು ತಾನಾಗಿಯೇ ಅಲ್ಲಿಂದ ಸರಿದನು. ಬೇರೆಯುಪಾಯಗಳು ತೊರದೆ ನಾಟಕಗ 

ಳನ್ನು ಬರೆಯಲಾರಂಭಿಸಿ, ತಾನೇ ಅಭಿನಯಿಸುವುದಕ್ಕೆ ನಾಟಕಶಾಲೆಯಲ್ಲಿ 

ಮ್ಯಾನೇಜರರಸು ಅಲ್ಲಿ ಖರ್ಚು ಹುಟ್ಟದೆ ಹೋಗಿ ಆ ಯಾತ್ರೆಯನ್ನು ಬಿಟ್ಟನು. 

----------------------------------------------

ಐದನೆಯ ಪರಿಚ್ಛೇದ ೨೧

 

ಈ ಭವಸಂಸಾರದಲ್ಲಿ ಮತ್ತಾವ ಕೂಲ ಕಿನಾರೆ ಸಿಕ್ಕದೆ ಗತ್ಯಂತರ ರಹಿತನಾಗಿ ಪ್ರಕೃತ 

ತನ್ನ ಅಕ್ಕನಾದ ಚಂಪಕೆಯ ಶೀರೆ ಸೆರಗನ್ನು ಹಿಡಿದುಕೊಂಡು ಕುಳಿತಿದ್ದನು. 


ಚಂಪಕೆಯು ಶಮ್ಮನನ್ನು ಸ್ವಕಾರ್ಯೋದ್ದಾರಕ್ಕೊಸ್ಕರ ನಿಯಮಿಸಿದಳು, 

ಹೀರಲಾಲನು ಅಕ್ಕನ ಹತ್ತಿರ ಸಮಾಚಾರವನ್ನೆಲ್ಲಾ ವಿವರವಾಗಿ ತಿಳಿದುಕೊಂಡು, 

ರೂಪಾಯಿನ ಮಾತೇನೋ ನಿಜವಷ್ಟೆ; ಈ ಕುರುಡಿಯನ್ನು ಮದುವೆಮಾಡಿಕೊಂಡವನಿಗೆ 

ಆ ರೂಪಾಯಿ ಸಿಕ್ಕುತ್ತದೋ ? ಎಂದು ಕೇಳಿದನು. 


ಚಂಪಕೆಯು ಆ ವಿಚಾರವನ್ನು ಕುರಿತು ಸಂದೇಹವನ್ನು ಹರಿಸಿದಳು. ಹೀರಾ 

ಲಾಲನಿಗೆ ದುಡ್ಡಿನ ಅಗತ್ಯ ಬಹಳವಾಗಿತ್ತು. ಅವನು ಆ ಕೂಡಲೆ ನಮ್ಮ ತಂದೆಯ 

ಮನೆಗೆ ಬಂದು ದರ್ಶನವನ್ನು ಕೊಟ್ಟನು. ತಂದೆಯು ಮನೆಯಲ್ಲಿದ್ದು, ನಾನು 

ಅಲ್ಲಿಯೇ ಇರದೆ ಪಾರ್ಶ್ವದಲ್ಲಿ ಕೊಠಡಿಯಲ್ಲಿದ್ದನು. ಅಪರಿಚಿತನಾದವನು ಬಂದು 

ತಂದೆಯ ಸಂಗಡ ಮಾತನಾಡುವ ಧ್ವನಿಯನ್ನು ಕೇಳಿ ಕಿವಿಗೊಟ್ಟು ಅವರವರ ಮಾತು 

ಕಥೆಯನ್ನು ಕೇಳುತ್ತಿದ್ದೆನು, ಹೀರಾಲಾಲನ ಕಂಠಸ್ವರವು ಅತಿ ಕರ್ಕಶವಾಗಿ ಕೇಳು 

ವುದಕ್ಕೆ ಕಠೋರವಾಗಿತ್ತು, 


ಹಿರಾಲಾಲ-ಸವತಿಯಾಗುವುದಕ್ಕೆ ಮಗಳನ್ನು ಕೊಡುವುದೇತಕ್ಕೆ ? 


ತಂದೆಯು ದುಃಖಭ ವದಿಂದ, ಏನು ಮಾಡಲಿ! ಕೊಡಿದಿದ್ದರೆ ಅವಳಿಗೆ ಮದುವೆ 

ಯಾಗುವುದಿಲ್ಲ. ಇಷ್ಟು ವಯಸ್ಸಾದರೂ ಆಗಲಿಲ್ಲ ! ಎಂದು ಹೇಳಿದನು. 

 

ಹೀರಾಲಾಲ- ನಿಮ್ಮ ಮಗಳಿಗೆ ಮದುವೆಯಾಗುವುದಕ್ಕೆ ಯೋಚನೆ ಏತಕ್ಕೆ? 


ತಂದೆಯು ನಕ್ಕ ನಾನಾದರೋ. ಬಡವ, ಹೂವನ್ನು ಮಾರಿ ಕಾಲಹಾಕು 

ತ್ತೇನೆ. ನನ್ನ ಮಗಳನ್ನು ಯಾರು ಮದುವೆಮಾಡಿ ಕೊಳ್ಳುತ್ತಾರೆ ? ಅದರಲ್ಲಿಯೂ 

ಅವಳು ಕಣ್ಣು ಇಲ್ಲದ ಹುಡುಗಿ, ಮತ್ತು ವಯಸ್ಸು ಕೂಡ ಹೆಚ್ಚಾಗಿಹೋಗಿದೆ ಎಂದನು. 


ಹೀರಾ-ವರನಿಗೆ ಆಭಾವವೇನು ? ನನಗೆ ಹೇಳಿದರೆ ನಾನೇ ಮದುವೆಮಾಡಿ 

ಕೊಳ್ಳುತ್ತೇನೆ. ಈಗಿನ ಕಾಲದಲ್ಲಿ ಜನರು ವಯಸ್ಸಾದ ಹೆಣ್ಣನ್ನೇ ಅಪೇಕ್ಷಿಸುತ್ತಾರೆ. 

ನಾನು " ದಿ. ಲ್ಯನೇರಿರ್ಯ ಟೈಂಸ್ " ಎಂಬ ನ್ಯೂಸಪೇಪರಿಗೆ ಎಡಿಟರಾಗಿದ್ದಾಗ 

ಹೆಣ್ಣ ಹುಡುಗರಿಗೆ ಹೆಚ್ಚು ವಯಸ್ಸಾಗಿ ದೊಡ್ಡವರಾದ ಮೇಲೆ ವಿವಾಹವನ್ನು ಮಾಡ 

ಬೇಕೆಂದು ಎಷ್ಟೋ ಆರ್ಟಿಕಲಗಳನ್ನು ಬರೆದಿದ್ದೇನೆ, ಓದಿ ಆಕಾಶದ ಮೇಘವೇ ಗರ್ಜೆ 

ಸುವುದಕ್ಕೆ ಪ್ರಾರಂಭವಾಯಿತು. ಬಾಲ್ಯ ವಿವಾಹ ! ಛಿ! ಛಿ: ಹೆಣ್ಣು ಹುಡುಗರನ್ನು 

ದೊಡ್ಡವರನ್ನಾಗಿ ಮಾಡಿಯೇ ವಿವರವು ಮಾಡಬೇಕು ; ಬನ್ನಿ! ದೇಶದ ಉನ್ನತಿ 

ಗೋಸ್ಕರ ನನ್ನ ನ್ನು Example (ಎಕ್ಲಾಂಪಲ್-ಉದಾರಣ ಸ್ವರೂಪವಾಗಿ) Set 

(ಏರ್ಪಾಡು) ಮಾಡು, ನಾನೇ ಈ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತೇನೆ.  

---------------------------------------------

22 ರಜನೀ

 

ಆಗ ನಾನು ಹೀರಾಲಾಲನ ಚರಿತ್ರೆಯನ್ನು ಕೇಳಿರಲಿಲ್ಲ. ಈಚಿಗೆ ಕೇಳಿದೆ. 

ನಮ್ಮ ತಂದೆಯು ಸ್ವಲ್ಪ ಅನುಮಾನಪಟ್ಟುಕೊಂಡು ಹಿಂಜರಿಯಲಾರಂಭಿಸಿ, ಇಂತಹ 

ದೊಡ್ಡ ಪಂಡಿತನಾದ ಅಳಿಯನನ್ನು ಕೈಬಿಡಬೇಕಾಗಿ ಬಂತೆಂದು ದುಃಖಪಟ್ಟು, ಕಡೆಗೆ, 

ಮಾತು ನಿಷ್ಕರ್ಷೆಯಾಗಿ ಹೋಯಿತು. ಈಗ ಬದಲಾಯಿಸುವುದಕ್ಕಿಲ್ಲವಾಗಿದೆ, 

ಅಲ್ಲದ ಈ ವಿವಾಹಕ್ಕೆ ಶಚೀಂದ್ರಬಾಬುವೇ ಯಜಮಾನನಾಗಿದ್ದಾನೆ, ಅವನೇ ಲಗ್ನ 

ಮಾಡಿಸುವನು, ಅವನು ಹೇಗೆ ಮಾಡುವನೋ ಹಾಗಾಗುತ್ತದೆ. ಅವನೇ ಗೋಪಾಲ 

ಬಾಬುವಿನ ಸಂಬಂಧವನ್ನು ಗೊತ್ತು ಮಾಡಿದ್ದಾನೆಂದು ಹೇಳಿದನು. 


ಹೀರಾ-ಅವನ ಅಭಿಪ್ರಾಯವನ್ನು ನೀನು ಹೇಗೆ ತಿಳಿಯುವೆ ? ದೊಡ್ಡವರ 

ಮರ್ಮವನ್ನು ತಿಳಿಯುವುದು ಕಷ್ಟ. ಅವರನ್ನ ನಂಬಬೇಡ, ಹೀಗೆಂದು ಹೇಳಿ ಹೀರಾ 

ಲಾಲನು ತಂದೆಯ ಕಿವಿಯಲ್ಲಿ ಏನೋ ಏಕಾಂತವಾಗಿ ಹೇಳಿದ. ಅದು ಕೇಳಿಸಲಿಲ್ಲ. 

ತಂದೆಯು ಅದು ಹೇಗೆ ? ಇರಲಾರದು, ನನ್ನ ಮಗಳು ಕಣ್ಣಿಲ್ಲದಹುಡುಗಿ ಎಂದನು. 


ಹೀರಾಲಾಲನು ಭಗ್ನ ಮನೋರಧನಾಗಿ ಅತ್ತಿತ್ತ ನೋಡಿದನು, ನಾಲ್ಕು 

ಕಡೆಯೂ ನೋಡಿ, ನಿಮ್ಮ ಮನೆಯಲ್ಲಿ ಮದ್ಯವಿಲ್ಲವೆ ? ನಿಜ, ಇರಲಾರದೆಂದು ಹೇಳಿ 

ಕೊಂಡನು. ತಂದೆಯು ಆಶ್ಚಯ್ಯ ಪಟ್ಟು ಮದುವೆ ! ಏತಕ್ಕೆ ಇಡಲಿ ? ಎಂದನು. 

 

ಹೀರಾಲಾಲನು ಮದ್ಯವಿಲ್ಲವೆಂದು ತಿಳಿದು, ಕೇವಲ ಪಂಡಿತನ ಹಾಗೆ ನಟಿಸಿ, 

ನಿಮಗೆ ಎಚ್ಚರಿಸುವುದಕ್ಕೋಸ್ಕರವಾಗಿ ಹಾಗೆ ಕೇಳಿದೆ. ಈ ಕಾಲದಲ್ಲಿ ದೊಡ್ಡವರ 

ಸಂಗಡ ಸಂಬಂಧವನ್ನು ಬೆಳಸಬೇಕಾದರೆ ಅದು ಮನೆಯಲ್ಲಿ ಇದ್ದೇ ಇರಬೇಕು. ಇಲ್ಲ 

ದಿದ್ದರೆ ಗೌರವವೇ ಇಲ್ಲವೆಂದನು.  



ಈ ಮಾತು ನಮ್ಮ ತಂದೆಗೆ ಚೆನ್ನಾಗಿ ತೋtಲಿಲ್ಲವಾಗಿ ಅವನು ಸುಮ್ಮನ್ನಿದ್ದು 

ಬಿಟ್ಟನು, ಹೀರಾಲಾಲಯ ಮದುವೆಯಲ್ಲಿಯೂ ಮದ್ಯಪಾನದಲ್ಲಿಯೂ ದೇಶದ ಉನ್ನ 

ತಿಗೆ ಎಗ್ಜಾಂಪಲ್‌ಸೆಟ್ ಮಾಡುವುದಕ್ಕೆ ಅವಕಾಶ ಸಿಕ್ಕದೆ ಕ್ಷುಣ್ಣನಾಗಿ ಹೊರಟು 

ಹೋದನು. 

.... 

ಆರನೆಯ ಪರಿಚ್ಛೇದ. 

ಲಗ್ನವು ಬಹಳ ಹತ್ತಿರವಾಯಿತು, ಒಂದೇದಿನ ಉಳಿಯಿತು. ಉವಾಯವಿಲ್ಲ! 

ನಿಷ್ಕೃತಿಯಿಲ್ಲ ! ನಾಲ್ಕು ದಿಕ್ಕುಗಳಿಂದಲೂ ಉಕ್ಕುತ್ತಿರುವ ವಾರಿರಾಶಿಯು ಗರ್ಜಿಸಿ 

ಕಂಡು ಬರುತ್ಯದೆ. ನಿಜವಾಗಿ ಮುಣುಗಿ ಹೋಗುವೆನು. 

--------------------------------------------- 

ಆರನೆಯ ಪರಿಚ್ಛೇದ ೨೩ 


ಆಗ ಲಜ್ಜೆಗೆ ತರ್ಪಣವನ್ನು ಕೊಟ್ಟು ತಾಯಿಯ ಕಾಲುಗಳ ಮೇಲೆ ಅಡ್ಡ 

ವಾಗಿ ಬಿದ್ದು ಅಳುವುದಕ್ಕೆ ತೊಡಗಿದೆನು, ಕೈ ಮುಗಿದುಕೊಂಡು, ನನಗೆ ಮದುವೆ 

ಮಾಡಬೇಡ, ನಾನು ಹೀಗೆಯೇ ಮುದಿಯಾಗುವೆನೆಂದು ಹೇಳಿಕೊಂಡನು. 


ತಾಯಿಯು ವಿಸ್ಮಿತಳಾಗಿ ಏತಕ್ಕೆ ? ಎಂದು ಕೇಳಿದಳು. ಏತಕ್ಕೆ ? ಎಂಬ 

ಪ್ರಶ್ನೆಗೆ ಉತ್ತರವನ್ನು ಕೊಡಲಾರದೆ ಹೋದೆನು, ಸುಮ್ಮನೆ ಕೈ ಮುಗಿದುಕೊಂಡು 

ಸುಮ್ಮನೆ ಅಳುತ್ತಿದ್ದನು. ತಾಯಿಯು ವಿರಕ್ತಳಾಗಿ ಕೋಪಗೊಂಡು ಬೈದಳು, ಕಡಗೆ 

ತಂದೆಗೆ ಹೇಳಿಬಿಟ್ಟಳು, ತಂದೆಯ ಬೈದು ಹೊಡಿಯುವುದಕ್ಕೆ ಬಂದನು. ಏನೇನೂ 

ಹೇಳಲಾರದ ಹೋದೆ. 

 

ಉಪಾಯವಿಲ್ಲ : ನಿಷ್ಕೃತಿಯಿಲ್ಲ ! ಮುಣುಗಿದೆ ! 


ಆ ದಿನ ಸಾಯಂಕಾಲ ಮನೆಯಲ್ಲಿ ನಾನೊಬ್ಬಳೇ ಇದ್ದೆ. ತಂದೆಯು ಮದುವೆ 

ಖರ್ಚಿಗೆ ಹಣವನ್ನೊದಗಿಸಲು ಹೊರಗೆ ಹೋಗಿದ್ದನು. ಕಾಯಿಯ ಬೇಕಾದ 

ಸಾಮಾನುಗಳನ್ನು ತರುವುದಕ್ಕೆ ಹೋಗಿದ್ದಳು. ಆ ವೇಳೆಯಲ್ಲಿ ಮನೆಯ ಬಾಗಲನ್ನು 

ಸುಮ್ಮನೆ ಮುಚ್ಚಿದ್ದೆನು. ವಾಮಾಚರಣನು ನನ್ನ ಸಂಗಡ ಇರುತ್ತಿದ್ದನು. ಯಾರೋ 

ಒಬ್ಬರು ಬಾಗಲು ತಳ್ಳಿಕೊಂಡು ಒಳಗೆ ಬಂದರು. ನನಗೆ ಗೊತ್ತಿದ್ದ ಕಾಲುಶಬ್ದವಾ 

ಗಿರಲಿಲ್ಲ. ಯಾರು ? ಎಂದು ಕೇಳಿದೆ. 

 

ಉತ್ತರ-ನಿನ್ನ ಯಮ. 

 

ಮಾತೇನೋ ಕೋಪಯುಕ್ತವಾದ ಮಾತಾಗಿತ್ತು, ಆದರೆ ಧ್ವನಿಯಲ್ಲಿ ಸ್ತ್ರೀ 

ಕಂಠವಾಗಿತ್ತು, ನಾನು ಭಯಪಡಲಿಲ್ಲ. ನಕ್ಕು, ನನ್ನ ಯಮ ಯಾರು ಇದ್ದಾನೆ ? 

ಹಾಗಿದ್ದರೆ ಇಷ್ಟು ದಿನವೆಲ್ಲಿದೆ ? ಎಂದೆನು. 

 

ಹೆಂಗಸಿಗೆ ಕೋಪವು ಶಾಂತವಾಗಲಿಲ್ಲ, ಅವಳು, ಈಗ ಗೊತ್ತಾಗಿ ತಿಳಿಯುವೆ. 

ದೊಡ್ಡ ಮದುವೆಯ ಗದ್ದಲ ! ಕೆಟ್ಟ ಮೋರೆಯವಳೆ ! ದುರ್ಭಾಗ್ಯಳೆ ! ಎಂದು 

ಮುಂತಾಗಿ ಬೈಗಳ ಪರಂಪರೆಗೆ ಪ್ರಾರಂಭಿಸಿದಳು, ಬೈಗಳು ಸಮಾಪ್ತವಾದ ಮೇಲೆ ಆ 

ಮಧುರಭಾಷಿಯು ನೋಡೆ ! ಕುರುಡಿ ! ನನ್ನ ಗಂಡನಿಗೆ ಮದುವೆಯಾದೆಯೋ, 

ಮದುವೆಯಾಗಿ ಯಾವ ದಿನ ನಮ್ಮ ಮನೆಗೆ ಬರುವೆಯೋ, ಆ ದಿನವೇ ನಿನಗೆ ವಿಷ 

ವನ್ನು ತಿನ್ನಿಸಿ ಕೊಂದುಹಾಕುತ್ತೇನೆಂದಳು. 

 

ಸ್ವಯಂ ಚಂಪಾ ಎಂದು ಗೊತ್ತಾಯಿತು. ಆದರದಿಂದ ಕೂಡಮ್ಮ ಎಂದು 

ಹೇಳಿದೆ. ಹೇಳಿ, ಕೇಳಮ್ಮ, ನಿನ್ನ ಸಂಗಡ ಮಾತನಾಡುವದುಂಟೆಂದು ಹೇಳಿದೆ. ಅಷ್ಟು 

ಬೈಗಳಿಗೆ ಪ್ರತಿಯಾಗಿ ಆದರದಿಂದ ಮಾತನಾಡಿದ್ದನ್ನು ಕೇಳ ಚಂಪಳು ಸ್ವಲ್ಪ ಶೀತಳ 

ವಾಗಿ ಕುಳಿತುಕೊಂಡಳು. 

---------------------------------------------

೨೪ ರಜನೀ  


ನಾನು-ಕೇಳೆ, ತಾಯಿ, ! ಈ ವಿವಾಹದಲ್ಲಿ ನೀನು ಎಷ್ಟು ವಿರಕ್ತಳಾಗಿದ್ದೀಯೋ 

ನಾನೂ ಅಷ್ಟು ವಿರಕ್ತಳಾಗಿದ್ದೇನೆ, ಈ ವಿವಾಹವು ನಡೆಯದಿರಲು ಏನು ಮಾಡ 

ಬೇಕೋ ಅದನ್ನು ಮಾಡಲು ಸಿದ್ದವಾಗಿದ್ದೇನೆ, ಯಾತರಿಂದ ಈ ವಿವಾಹವು ನಿಂತು 

ಹೋಗಬಹುದೋ ಅದನ್ನು ಹೇಳಬಲ್ಲೆಯಾ ? 


ಚಂಪಳು ವಿಸ್ಮಿತಳಾಗಿ, ಹಾಗಾದರೆ ನಿಮ್ಮ ತಂದೆತಾಯಿಗಳಿಗೆ ಹೇಳಕೂಡ 

ದೇತಕ್ಕೆ ? ಎಂದಳು. 


ನಾನು-ಸವಿರಸಲ ಹೇಳಿದೆ. ಏನೂ ಆಗಲಿಲ್ಲ. 


ಚಂದ -ಬಾಬುಗಳ ಮನೆಗೆ ಹೋಗಿ ಅವರ ಕಾಲು ಕಟ್ಟಿ ಕೊಳ್ಳಕೂಡದೆ ? 


ನಾನು-ಅದರಿಂದ ಏನೂ ಆಗಲಿಲ್ಲ. 


ಚಂಪಳು ಸ್ವಲ್ಪ ಯೋಚಿಸಿ, ಹಾಗಾದರೆ ಒಂದು ಕೆಲಸ ಮಾಡುತ್ತೀಯಾ? 

ಎಂದಳು. 

 

ನಾನು....ಏನು ? 


ಚಂಪ-. ಎರಡು ದಿನ ಔತುಕೊಂಡಿರುವಿಯಾ ? 


ನಾನು-ಎಲ್ಲಿ ಔತುಕೊಂಡಿರಲಿ ? ನನಗೆ ಸ್ಥಳವೆಲ್ಲಿ ? 


ಚಂಪಳು ಪ್ರತಿ ಸ್ವಲ್ಪ ಯೋಚಿಸಿ, ನಮ್ಮ ತಂದೆಯ ಮನೆಯಲ್ಲಿ ಹೋಗಿರು 

ವೆಯಾ ? ಎಂದಳು. 

 

ಕೆಟ್ಟದ್ದೇನು ? ಈ ಆಪಾಯದಿಂದುದ್ಧಾರವಾಗುವುದಕ್ಕೆ ಬೇರೆ ಮಾರ್ಗವಿಲ್ಲ 

ಎಂದು ಯೋಚಿಸಿ, ನಾನು ಕಣ್ಣು ಇಲ್ಲದವಳು, ಹೊಸ ಸ್ಥಳಕ್ಕೆ ನನ್ನನ್ನು ಕರೆದು 

ಕೊಂಡು ಹೋಗುವವರು ಯಾರು ? ನಿಮ್ಮ ತಂದೆಯ ಮನೆಯಲ್ಲಿ ಸ್ಥಳವನ್ನು 

ಕೊಟ್ಟಾರೆ ? ಎಂದು ಕೇಳಿದೆನು. 

 

ಚಂಪಳು ನನ್ನ ಸರ್ವನಾಶಕ್ಕೆ ಕುಪ್ರವೃತ್ತಿಯುಳ್ಳ ಮರ್ತಿಮತಿಯಾಗಿ ಬಂದಿ 

ದ್ದವಳು, ಅದರ ಯೋಚನೆ ನಿನಗೆ ಬೇಡ, ಅದರ ಅನುಕೂಲಗಳನ್ನೆಲ್ಲ ನಾನು ಮಾಡು 

ತ್ತೇನೆ, ನಾನು ಸಂಗಡ ಮನುಷ್ಯನನ್ನು ಕಳುಹಿಸುತ್ತೇನೆ ; ಅವನ ಸಂಗಡ ಎಲ್ಲಾ 

ಹೇಳುತ್ತೇನೆ ; ನೀನು ಹೋಗುವುದು ನಿಜವೊ ? ಹೇಳೆಂದಳು. 

 

ಮುಣುಗಿ ಹೋಗುವವನಿಗೆ ಹತ್ತಿರದಲ್ಲಿ ಕೈಗೆ ಸಿಕ್ಕಿದ ಹಲಿಗೆಯಂತೆ ಹೀಗೆ 

ಮಾಡುವುದೊಂದೇ ನನ್ನ ರಕ್ಷಣೆಗೆ ಉಪಾಯವೆಂದು ನನಗೆ ಬೋಧೆಯಾಯಿತು, 

ನಾನು ಅದಕ್ಕೆ ಒಪ್ಪಿಕೊಂಡೆನು. 

 

ಚಂಪಳು, ಒಳ್ಳೇದು ಸರಿಯಾಗಿದ್ದುಕೊಂಡಿರು, ರಾತ್ರಿ ಎಲ್ಲರೂ ಮಲಗಿದ 

ಮೇಲೆ ನಾನು ಬಂದು ಬಾಗಿಲು ತಟ್ಟುತ್ತೇನೆ, ಹೊರಗೆ ಹೊರಟು ಬಂದುಬಿಡೆಂದಳು. 


ನಾನು ಸಮ್ಮತಳಾದೆನು. 

....

------------------------------------------------

ಆರನೆಯ ಪರಿಚ್ಛೇದ 25 

ರಾತ್ರಿ ಎರಡನೆಯ ಪ್ರಹರದಲ್ಲಿ ಭಾಗಳನ್ನು ಮೆಲ್ಲ ಮೆಲ್ಲಗೆ ತಟ್ಟಿದ ಹಾಗಾ 

ಯಿತು, ನಾನು ಎಚ್ಚರವಾಗಿದ್ದೆ. ಕೈಯಲ್ಲಿ ಇನೆನ್ನಿ೦ದು ಸೀರೆಯನ್ನು ತೆಗೆದುಕೊಂಡು 

ಬಾಗಲು ತೆರೆದು ಹೊರಗೆ ಹೊರಟಿ ಚಪಳು ನಿದ್ದಳೆಂದು ತಿಳಿದು ಅವಳ ಜತೇಲಿ 

ಹೋದೆ, ಇದು ಕೆಟ್ಟ ಕೆಲಸ, ಹೀಗೆ ಮಾಡಬಾರದೆಂಗು ಒಂದು ಸಲ ಯೋಚಿಸಿದೆ, 

ಎರಡು ಸಲ ಯೋಚಿಸಿದೆ. ತಂದೆತಾಯಿಗಳಿಗೆ qರ ಮ.ನಸ್ಸು ಕಳವಳಗೊಂಡಿತು, 

ನಿಜ, ಆದರೆ ಆಗ ಒಂದೆರಡು ದಿನಗಳ ಮಟ್ಟಿಗೆ ಹೋಗಿ ಬರುತ್ತೇನೆಂದು ನಂಬಿದ್ದೆ. 

ವಿವಾಹದ ಮಾತು ನಿವೃತ್ತಿಯಾದ ಕೂಡಲೆ ಹಿಂದಿರುಗಿ ಬರುವೆವೆಂದು ತಿಳಿದಿದ್ದೆನು. 

 

ನಾನು ಚಂಪಳ ಮನೆಗೆ-ಅತ್ತೆಯ ಮನೆ ? ಹೋಗುತ್ತಲೇ ಚಂಪಳು ಕೂಡಲೇ 

ಒಬ್ಬ ಮನುಷ್ಯನನ್ನು ನನ್ನ ಸಂಗಡ ಕೊಟ್ಟು ಕಳುಹಿಸಿಬಿಟ್ಟಳು. ಸಾವಕಾಶವಾದರೆ 

ಗಂಡನು ಕಂಡಾನೆಂಬ ಭಯದಿಂದ ಅವಸರ ಪಟ್ಟ ಕಳುಹಿಸಿಬಿಟ್ಟದಳು. ಅವಳು ನನ್ನ 

ಜತೆಗೆ ಕಳುಹಿಸಿದವನ ಸಂಗಡ ಹೋಗಲು ಇಷ್ಟವಿಲ್ಲ, ಆದರೆ ಅವಳು ತ್ವರೆಪಡಿಸಿದ 

ಅವಾಂತರದಲ್ಲಿ ನನ್ನ ಆಕ್ಷೇಪಣೆಯು ಎಲ್ಲಿಯೋ ಹೋಗಿಬಿಟ್ಟಿತು. ನನ್ನ ಜತೆಗೆ ಬಂದ 

ವನು ಯಾರು ಇರಬಹುದು ? ಯೋತಿಸಿ ನೋಡಿರಿ. ಹೀರಾಲಾಲನನ್ನು ಕಳುಹಿಸಿದ್ದಳು. 


ಹೀರಾಲಾಲು ಕೆಟ್ಟ ಚರಿತ್ರೆಯು ಆಗ ನನಗೆ ತಿಳಿಯದು. ಆದುದರಿಂದ 

ನಾನು ಆಕ್ಷೇಪಿಸಲಿಲ್ಲ. ಅವನು ಯುವಾಪುರುಷ, ನಾಡು ಯುವತಿ, ಅವನ ಜತೆ 

ಯಲ್ಲಿ ಒಬ್ಬಳೇ ಹೋಗುವುದು ಹೇಗೆ ? ಇದು ಆಕ್ಷೇಪಣೆ ಆದರೆ ಆಗ ನನ್ನ 

ಮಾತನ್ನು ಕೇಳುವವರು ಯಾರು ? ನಾನು ಅಂಧಳು ಮಾರ್ಗವು ತಿಳಿಯದು, ರಾತ್ರಿ 

ಕಾಲದಲ್ಲಿ ಹೊರಟು ಬಂದುಬಿಟ್ಟೆ. ಶಬ್ದ ಘಟಿಕವಾದ ಕುರುಹುಗಳನ್ನು ತಿಳಿದು 

ಮಾರ್ಗವನ್ನು ಗೊತ್ತುಮಾಡಿಕೊಳ್ಳಲು ರಾತ್ರಿಯಾದುದುಂದ ನಿಶ್ಚಬ್ಬವಾಗಿದೆ ಸಹಾ 

ಯವಿಲ್ಲದೆ ಮನೆಗೆ ಹಿಂದಿರುಗಿ ಹೋಗಲು ಸಾಧ್ಯವಿಲ್ಲ. ಮನೆಗೆ ಹಿಂದಿರುಗಿ ಹೋದರೆ 

ಅಲ್ಲಿ ಆ ಪಾಪಾಕ್ತವಾದ ವಿವಾಹ ! ಯತ್ನವಿಲ್ಲದೆ ಹೀರಾಲಾಲನ ಜತೇಲಿ ಹೋಗ 

ಬೇಕಾಯಿತು. ಆಗ ಮನಸ್ಸಿನಲ್ಲಿ, ಅಂಧಳಿಗೆ ಸಹಾಯಕರು ಇದ್ದರೂ ಒಂದೇ, ಇಲ್ಲ 

ದಿದ್ದರೂ ಒಂದೇ ; ತಲೆಯ ಮೇಲೆ ದೇವರು ಇದ್ದಾನೆ. ಅವನು ಲವಂಗಲತೆಯಹಾಗೆ 

ಪೀಡಿತರಾದವರನ್ನ ಪೀಡಿಸಲಾರ ; ಅವನಿಗೆ ದಯೆಯುಂಟು, ಶಕ್ತಿಯುಂಟು. ಆದ 

ಕಾರಣ ನನ್ನಲ್ಲಿ ಅವಶ್ಯಕವಾಗಿ ದಯೆಯನ್ನು ತೋರಿಸಿ ಕಾಪಾಡುವನು ; ನನ್ನಂತಹವ 

ಳಿಗೆ ಅಲ್ಲದೆ ದಯೆಯನ್ನು ಮತ್ತಾರಿಗೆ ತೋರಿಸುವನೆಂದು ಮುಂತಾಗಿ ಭಾವಿಸಿ 

ಕೊಂಡೆನು.

---------------------------------------------- 

26 ರಜನೀ 


ಆಗ ಐಶಿಕ ಅಂದರೆ ಈಶ್ವರ ಸಂಬಂಧವಾದ ನಿಯಮವು ವಿಚಿತ್ರವಾದುದೆಂದು 

ನಾನು ಅರಿತಿರಲಿಲ್ಲ, ಮನುಷ್ಯನ ಬುದ್ದಿಗೆ ಅತೀತವಾದುದು. ನಾವು ಯಾವುದನ್ನು 

ದಯೆಯೆಂದು ಹೇಳುತ್ತೇವೋ ಈಶ್ವರನ ಅನಂತವಾದ ಜ್ಞಾನದಲ್ಲಿ ಅದು ದಯೆಯೆಂದು 

ಆಗಲಾರದು, ನಾವು ಯಾವುದನ್ನು ಪೀಡನವೆಂದು ಹೇಳುತ್ತೇವೋ ಈಶ್ವರನ ಅನಂತ 

ವಾದ ಜ್ಞಾನದಲ್ಲಿ ಅದು ಪೀಡನವಲ್ಲ. ಆಗ ಈ ಸಂಸಾರದಲ್ಲಿರುವ ಅನಂತವಾದ 

ಚಕ್ರವು ದಯಾದಾಕ್ಷಿಣ್ಯ ಶೂನ್ಯವಾದುದೆಂತಲೂ ಆ ಚಕ್ರವು ನಿಯಮಿತವಾದ 

ಮಾರ್ಗದಲ್ಲಿ ಅನತಿಕ್ಷುಣ್ಣವಾದ ರೇಖೆಯಲ್ಲಿ ಅಹರಹ ತಿರುಗುತಲಿದೆ ಎಂತಲೂ ಅದರ 

ದಾರುಣವಾದ ವೇಗವಾದ ಮಾರ್ಗಕ್ಕೆ ಸಿಕ್ಕಿದವನು ಆಂಧನಾಗಲಿ, ಖಂಜನಾಗಲಿ, 

ಆರ್ತನಾಗಲಿ, ಯಾರೇ ಆಗಲಿ, ಅವನು ಸಿಕ್ಕಿ ದಮಾತ್ರಕ್ಕೆ ಪಿಡಿಚೂರ್ಣವಾಗಿ ಹೋಗು 

ವನೆಂತಲೂ ತಿಳಿದಿರಲಿಲ್ಲ. ನಾನು ಅಂಧಳಾದ ನಿಸ್ಸಹಾಯಕಳೆಂದು ಗೊತ್ತಿದ್ದು 

ಅನಂತವಾದ ಸಂಸಾರದ ಚಕ್ರದ ಪಧವನ್ನು ಬಿಟ್ಟು ಹೊರೆಟೆನೇತಕ್ಕೆ ? 


ನಾನು ಹೀರಾಲಾಲನ ಜತೇಲಿ ಪ್ರಶಸ್ತವಾದ ಕಾಜಮಾರ್ಗದಲ್ಲಿ ಹೊರಟೆನು. 

ಅವನ ಪದಶಬ್ದವನ್ನು ಅನುಸರಣಮಾಡಿಕೊಂಡು ನಡೆದೆನು. ಎಲ್ಲಿಯದೋ ಒಂದು 

ಘಡಿಯಾರವು ಒಂದು ಘಂಟೆ ಹೊಡೆಯಿತು. ಮಾರ್ಗದಲ್ಲಿ ಯಾರೂ ಇಲ್ಲ. ಯಾವ 

ಶಬ್ಬವೂ ಇಲ್ಲ, ಒಂದೆರಡು ಗಾಡಿಗಳು ಹೋಗುವ ಶಬ್ದ, ಒಬ್ಬಿಬ್ಬರು ಕುಡಿದು 

ಜ್ಞಾನತಪ್ಪಿದ ಹೆಂಗಸರ ಅಸಂಬದ್ಧವಾದ ಗೀತಶಬ್ದ. ನಾನು ಇದ್ದಕ್ಕಿದ್ದ ಹಾಗೆ ಹೀರಾ 

ಲಾಲನನ್ನು ಕುರಿತು, ಹೀರಾಲಾಲ ಬಾಬು ! ನಿನ್ನ ಮೈಯಲ್ಲಿ ಎಂತಹ ಬಲವುಂಟು ? 

ಎಂದು ಕೇಳಿದೆ. 


ಹೀರಾಲಾಲನು ವಿಸ್ಮಿತನಾಗಿ, ಏತಕ್ಕೆ ? ಎಂದು ಕೇಳಿದನು. 


ನಾನು-ಸುಮ್ಮನೆ ಕೇಳುತ್ತೇನೆ. 


ಹೀರಾಲಾಲ-ಶಕ್ತಿಯು ಕಡಮೆಯಾದುದಲ್ಲ. 


ನಾನು--ನಿನ್ನ ಕೈಯಲ್ಲಿರುವ ಕೋಲು ಯಾತರದು ? 


ಹೀರಾಲಾಲ-ತಾಳೆ ಮರದ ಕೋಲು.  


ನಾನು-ಅದನ್ನು ಮುರಿಯಬಲ್ಲೆಯಾ ? 


ಹೀರಾಲಾಲ -ಸೌಧ್ಯವೆ ? ಯಾರಿಂದಲೂ ಸಾಧ್ಯವಿಲ್ಲ. 


ನಾನು ನನ್ನ ಕೈಗೆ ಕೊಡು, ನೋಡೋಣ, 

--------------------------------------

ಏಳನೆಯ ಪರಿಚ್ಛೇದ  27  


ಹೀರಾಲಾಲನು ಕೋಲನ್ನು ನನ್ನ ಕೈಯಲ್ಲಿ ಕೊಟ್ಟನು. ನಾನದನ್ನು ಸುಲಭ 

ವಾಗಿ ಎರಡು ತುಂಡಾಗಿ ಮುರಿದೆನು. ಹೀರಾಲಾಲನು ನನ್ನ ಬಲವನ್ನು ನೋಡಿ ವಿಸ್ಮಿ 

ತನಾದನು, ನಾನು ಅವನಿಗೆ ಒಂದು ತುಂಡನ್ನು ಕೊಟ್ಟು ಮತ್ತೊಂದು ಅರ್ಧತುಂಡನ್ನು 

ನಾನು ಹಿಡಿದುಕೊಂಡೆ. ಅವನ ಕೋಲನ್ನು ಮುರಿದುಬಿಟ್ಟೆನೆಂದು ಅವನು ಕೋಪ 

ಮಾಡಿದನು. ನಾನು, ಈಗ ನಿಶ್ಚಿಂತಳಾದೆನು. ಕೋಪಮಾಡಬೇಡ. ನೀನು ನನ್ನ ಬಲ 

ವನ್ನು ನೋಡಿದ್ದೀಯೆ. ನನ್ನ ಕೈಯಲ್ಲಿ ಈ ಅರ್ಧಕೋಲನ್ನು ನೋಡಿದ ಮೇಲೆ 

ನಿನಗೆ ಇಷ್ಟ ಬಂದರೂ ನನ್ನ ಮೇಲೆ ಯಾವ ಅತ್ಯಾಚಾರವನ್ನು ನಡೆಸಲಾರೆ ಎಂದು ತೋರು 

ತ್ತದೆ, ಎಂದು ಹೇಳಿದೆನು. 


ಹೀರಾಲಾಲನು ಸುಮ್ಮನಾದನು. 

....

ಏಳನೆಯ ಪರಿಚ್ಛೇದ. 


ಹೀರಾಲಾಲನು ಜಗನ್ನಾಥಘಾಟಿಗೆ ಹೋಗಿ ಅಲ್ಲಿ ಒಂದು ದೋಣಿಯನ್ನು 

ಗೊತ್ತು ಮಾಡಿದನು. ದೋಣಿಯನ್ನೇರಿದೆವು. ರಾತ್ರಿ ಕಾಲ-ದಕ್ಷಿಣಗಳಿಗೆ ಪಟವು 

ಏರಿಸಲ್ಪಟ್ಟಿತು. ಅವನು ತನ್ನ ತಂದೆಯಮುನೆಯು ಹೂಗ್ಲಿಯಲ್ಲಿದೆ ಎಂದು ಹೇಳಿದನು, 

ನಾನು ಅದನ್ನು ಕೇಳುವುದನ್ನು ಮರೆತಿದ್ದೆನು. 


ಹೋಗುತ್ತ ಪ್ರಯಾಣದಲ್ಲಿ ಹೀರಾಲಾಲನು ನಿನ್ನನ್ನು ಗೋಪಾಲನಿಗೆ ಕೊಟ್ಟು 

ಮದುವೆಯಾಗುವುದು ನಿಂತು ಹೋಯಿತು, ನನ್ನನ್ನು ಮದುವೆ ಮಾಡಿಕೊ ಎಂದು 

ಹೇಳಿದನು. ನಾನು ಆಗುವದಿಲ್ಲವೆಂದೆನು, ಅವನು ಮಾತನಾಡುವುದಕ್ಕೆ ಪ್ರಾರಂಭಿಸಿ, 

ತನ್ನ ಹಾಗೆ ಪ್ರಪಂಚದಲ್ಲಿ ಒಳ್ಳೆ ವರನು ಸಿಕ್ಕುವುದಿಲ್ಲ ವೆಂತಲೂ ನನ್ನ ಹಾಗೆ ಕುರೂ 

ಪಿಯು ಎಲ್ಲಿಯೂ ಇಲ್ಲವೆ,ತ, ತಿಳಿಯ ಹೇಳಿದನು, ನಾನು ಎರಡಕ್ಕೂ ಒಪ್ಪಿ 

ಕೊಂಡೆನು; ಆದರೂ ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಹೇಳಿಬಿಟ್ಟನು. 

 

ಆಗ ಹೀರಾಲಾಲನು ಬಹಳ ಕೋಪಗೊಂಡು ಕುರುಡಿಯನ್ನು ಯಾರು ತಾನೇ 

ಮದುವೆಮಾಡಿಕೊಳ್ಳಲೊಪ್ಪುವರು ಎಂದು ಹೇಳಿ ಸುಮ್ಮನಾದನು. ನಾವಿಬ್ಬರೂ 

ಸುಮ್ಮನಾದೆವು. ಹೀಗೆ ರಾತ್ರಿ ಕಳೆಯುತ್ತ ಬಂತು. 

---------------------------------------------

೨೮ ರಜನೀ 

 

ಆಗ ಬೆಳಗಿನ ಜಾವದಲ್ಲಿ ಹೀರಾಲಾಲನು ದೋಣಿಯನ್ನು ನಡೆಸುತಲಿದ್ದವ 

ರನ್ನು ಕುರಿತು, ಇಲ್ಲಿಯೇ ದೋಣಿಯನ್ನು ನಿಲ್ಲಿಸಿರಿ ಎಂದು ಹೇಳಿದನು. ಅಂಬಿಗರು 

ದೋಣಿಯನ್ನು ತಡಕ್ಕೆ ಕಟ್ಟಿದರು. ದೋಣಿಯು ನೆಲವನ್ನು ಮುಟ್ಟಿದ ಶಬ್ದವನ್ನು 

ಕೇಳಿದೆನು, ಹೀಳಾ ಎನು ಇಳಿ, ಬಂದೆವು ಎಂದು ಹೇಳಿ, ನನ್ನ ಕೈಯನ್ನು ಹಿಡಿದು 

ಇಳಿಸಿದನು. ನಾನು ದಡದಲ್ಲಿ ಬಂದು ನಿಂತೆನು. 

 

ಅನಂತರ ಹೀರಿಲಾನು ಪುನಃ ದೋಣಿಯನ್ನು ಹತ್ತಿದ ಶಬ್ದವನ್ನು ಕೇಳಿ 

ದೆನು. ಅವನು ಅಂಬಿಗರನ್ನು ಕುರಿತು, ದೋಣಿಯನ್ನು ಬಿಚ್ಚಿ ಹೂಟು ಹೊಡೀರಿ 

ಎಂದು ಹೇಳಿದರು, ನಾನು ಅದೇತಕ್ಕೆ ? ನನ್ನನ್ನು ಇಳಿಸಿ ಬಿಟ್ಟು ದೋಣಿಯನ್ನು 

ಬಿಚ್ಚಿದಿರಿ ? ಎಂದು ಕೇಳಿದಿರು, 


ಹೀರಾಲಾಲನು ನಿನ್ನ ಹಾದಿಯನ್ನು ನೀನು ನೋಡಿಕೊ ಎಂದು ಹೇಳಿದನು. 

ಅಂಬಿಗರೂ ದೋಣಿಯನ್ನು ಬಿಚ್ಚುವದಕ್ಕೆ ಪ್ರಾರಂಭಿಸಿದ ಶಬ್ದವು ಕೇಳಿಬಂತು. 

ನಾನು ಆಗ ಕಾತರಳಾಗಿ ನಿಮ್ಮ ಕಾಲಿಗೆ ಬೀಳುತ್ತೇನೆ ' ನಮ ಕಣ್ಣ ಕಾಣಿಸದವಳು. 

ನನ್ನನ್ನು ಬಿಟ್ಟು ಹೋಗುವದಾದರೆ ಯುದದಾ ವನೆಯ ಹತ್ತಿರ ಕರೆದುಕೊಂಡು 

ಹೋಗಿ ಬಿಟ್ಟು ಬಿಟ್ಟು ಹೋಗಿ, ನಾನೆ ಇಲ್ಲಿಗೆ ಯಾವಾಗಲೂ ಬಂದವಳಲ್ಲ. ಇಲ್ಲಿನ 

ಮಾರ್ಗವು ನನಗೆ ಹೇಗೆ ಗೊತ್ತು? ಎಂದು. ಮುಂತಾಗಿ ಹೇಳಿದೆನು. 


ಹೀರಲಾಲನು ನನ್ನನ್ನು ಮದುವೆಮಾಡಿಕೊಳ್ಳಲು ಸಮ್ಮತಿಸುತ್ತೀಯಾ ? 

ಎಂದನು. 


ನನಗೆ ಅಳು ಬಂತು. ಒಂದು ನಿಮಿಷ ರೋದನವJAವನು, ಅನಂತರ ಕೋಪ 

ದಿಂದ ಹೀರಾಲಾಲನ್ನು ಕುರಿತು, ನೀನು ಹೋಗು, ನಿನ್ನಿಂದ ಯಾವ ಉಪಕಾರ 

ವನ್ನೂ ಹೊಂದಲಾರೆನು, ಬೆಳಗಾದರೆ ನಿನಗೊಂತ ಹೆಚ್ಚು ದಯಳುಗಳಾದ ನೂರಾರು 

ಜನರು ಸಿಕ್ಕುವರು, ಅವರು ಆಂಧಳಲ್ಲಿ ದಯೆಯನ್ನು ತೋರಿಸುವರು ಎಂದು ಹೇಳಿದೆನು. 


ಹೀರಾಲಾಲ-ಜನರು ಸಿಕ್ಕಿದ ಹಾಗೆಯೇ ಸರಿ, ನೀವು ನಿಂತಿರುವುದು ನದಿಯ 

ಮಧ್ಯಸ್ಥಳ; ನಾಲ್ಕು ದಿಕ್ಕುಗಳಲ್ಲಿರುವ ನೀರು. ನನ್ನನ್ನು ಮದುವೆಮಾಡಿಕೊಳ್ಳುವಿಯಾ? 


ಹೀರಾಲಾಲನ ದೋಣಿಯು ಆಗ ಸ್ವಲ್ಪ ದೂರ ಹೋಗಿತ್ತು. ಶ್ರವಣ ಶಕ್ತಿಯು 

ನನಗೆ ಜೀವನಾವಲಂಬನ; ಶ್ರವಣವೇ ನನಗೆ ಕಣ್ಣುಗಳು ಮಾಡುವ ಕೆಲಸವನ್ನು 

ಮಾಡುತಲಿತ್ತು, ಯಾರಾದರೂ ಮಾತನಾಡಿದರೆ ಅವರು ಎಷ್ಟು ದೂರದಲ್ಲಿದ್ದಾರೆ, 

ಯಾವ ದಿಕ್ಕಿನಲ್ಲಿದ್ದಾರೆ, ಎಂಬುದನ್ನು ತಿಳಿದು ಕೊಳ್ಳುತ್ತಿದ್ದೆನು. ಹೀರಾಲಾಲನು 

--------------------------------------------- 

29 ಎಂಟನೆಯ ಪರಿಚ್ಛೇದ 


ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿದ್ದಾನೆಂಬುವದನ್ನು ಮನುಸ್ಸಿನಲ್ಲಿ ಅನುಭವಮಾಡಿ 

ಕೊಂಡು ನೀರಿನಲ್ಲಿಳಿದು ಆ ದಿಕ್ಕಿನಲ್ಲಿ ಸ್ವಲ್ಪ ದೂರ ಹೋದೆ, ದೋಣಿಯನ್ನು ಹಿಡಿದು 

ಕೊಳ್ಳಬೇಕೆಂದು ಹೋದೆ, ಕುತ್ತಿಗೆವರೆಗೆ ನೀರಿನಲ್ಲಿಳಿದೆನು, ದೋಣಿಯು ಸಿಕ್ಕಲಿಲ್ಲ, 

ದೋಣಿಯು ಇನ್ನೂ ಹೆಚ್ಚು ಆಳದಲ್ಲಿತ್ತು. ಮುಂದೆ ಜೋಗಿದ್ದರೆ ಮುಣುಗಿ ಹೋಗು 

ತಲಿದ್ದೆನು. 


ತಾಳೆ ಮರದ ಕೋಲು ಇನ್ನೂ ಕೈಯಲ್ಲಿತ್ತು. ಇನ್ನೂ ಚೆನ್ನಾಗಿ ಶಬ್ದಾನು 

ಭವದಿಂದ ಹೀರಾಲಾನು ಇರುವ ದಿಕ್ಕು ಮತ್ತು ದೂರವನ್ನು ಗೊತ್ತು ಮಾಡಿಕೊಂಡು 

ಹಿಂದಕ್ಕೆ ಸೊಂಟದ ಉದ್ದ ನೀರಿನಲ್ಲಿ ನಿಂತು ಶಬ್ದಸ್ಥಾನಾನುಭವಮಾಡಿಕೊಂಡು 

ಆ ತಾಳೇ ಮರದ ಕೋಲನ್ನು ಬಲವಾಗಿ ಎಸೆದೆನು. 


ಹೀರಾಲಾಲನು ಅಯ್ಯೋ ! ಎಂದು ಚೀತಾರಮಾಡಿಕೊಂಡು ದೋಣಿಯಲ್ಲಿ 

ಬಿದ್ದು ಬಿಟ್ಟನು. ಅಂಬಿಗರೆಲ್ಲರೂ, ಖೂನಿಯಾದನು ! ಖೂನಿಯಾದನು ! ಎಂದು 

ಕೂಗಿದರು. ವಾಸ್ತವವಾಗಿ ಆ ಪಾಪಿಷ್ಟನು ಖೂನಾಗಲಿಲ್ಲ. ಆಗ ಅವನ ಮಧುರ 

ವಾದ ಕಂಠವು ಕೇಳಿಸಿತು. ದೋಣಿಯ ಮುಂದೆ ಸಾಗಿತು. ಅವನು ಗಟ್ಟಿಯಾಗಿ 

ನನ್ನನ್ನು ಬೈಯುತ್ತ ಹೋಗುತಿದ್ದನು. ಅತಿ ಕೆಟ್ಟ ಮಾತುಗಳನ್ನು ಹೇಳುತ್ತ ಕೇಳ 

ಕೂಡದ ಬೈಗಳಿಂದ ಬೈಯುತ್ತ ಪವಿತ್ರಳಾದ ಗಂಗೆಯನ್ನು ಕಲುಷಿತಮಾಡುತ್ತ 

ಹೋದನು. ಅವನು ಪುನಃ " ಮಂದೋದಯ ” ವೆಂಬ ವರ್ತಮಾನಪತ್ರಿಕೆಯನ್ನು 

ಹೊರಡಿಸಿ ನನ್ನ ಹೆಸರಿನಲ್ಲಿ ಕೆಟ್ಟ ಕೆಟ್ಟ ಆರ್ಟಿಕಲಗಳನ್ನು ಬರೆದು ದೂಷಿಸುವುದಾಗಿ 

ಹೇಳಿಕೊಳ್ಳುತ್ತಿದ್ದುದು ಚೆನ್ನಾಗಿ ಕೇಳಿದೆನು. 

....

ಎಂಟನೆಯ ಪರಿಚ್ಛೇದ. 


ಆ ಜನವಿಹೀನವಾದ ರಾತ್ರಿಯಲ್ಲಿ ಅಂಧಯುವತಿಯಾದ ನಾನೊಬ್ಬಳೇ 

ಆ ದ್ವೀಪದಲ್ಲಿ ನಿಂತುಕೊಂಡು ಗಂಗೆಯ ಕಲಕಲ ಜಲಕಲ್ಲೋಲ ಶಬ್ದವನ್ನು 

ಕೇಳುತ್ತಿದ್ದೆನು. 

 

ಹಾ ! ಮನುಷ್ಯನ ಜೀವನವೇ ! ನೀನು ಎಷ್ಟು ಆಸಾರ ಏತಕ್ಕೆ ಬರುತ್ತಿ ! 

ಏತಕ್ಕೆ ಇರುತ್ತಿ ! ಏತಕ್ಕೆ ಹೋಗುತ್ತಿ! ಈ ದುಃಖಮಯವಾದ ಜೀವನವೇಶಕ್ಕೆ ? 

ಯೋಚಿಸಿಕೊಂಡರೆ ಜ್ಞಾನವೇ ಇರುವದಿಲ್ಲ. ಶಚೀಂದ್ರಬಾಬುವು ಒಂದು ದಿನ ತನ್ನ 

---------------------------------------------

30 ರಜನೀ 


ತಾಯಿಗೆ ಎಲ್ಲವೂ ನಿಯಮಾಧೀನವೆಂದು ತಿಳಿಯಹೇಳಿದ್ದನು, ಮನುಷ್ಯನ ಜೇವನವು 

ಕೇವಲ ಆ ನಿಯಮದ ಫಲವೇನು ? ಯಾವ ನಿಯಮದಿಂದ ಪುಷ್ಪವು ಅರಳುವುದೋ 

ಮೇಘವು ಹಾರುವುದೋ, ಚಂದ್ರನು ಉದಯವಾಗುವುನೋ, ಯಾವ ನಿಯಮದಿಂದ 

ನೀರಿನ ಗುಳ್ಳೆಯು ತೇಲಿ, ಆಡಿ, ನಕ್ಕು, ಪುನಃ ನೀರಿಗೆ ಸೇರಿಹೋಗುವುದೋ, ಯಾವ 

ನಿಯಮದಿಂದ ಧೂಳಿಯು ಮೇಲಕ್ಕೆ ಏಳುವುದೋ, ತೃಣವು ಸುಡುವುದೋ, ಎಲೆಯು 

ಕಸದು ಬೀಳುವುದೋ ಆ ನಿಯಮದಿಂದಲೇ ಈ ಸುಖದುಃಖಮಯವಾದ ಮನುಷ್ಯ 

ಜೀವನವು ಕಟ್ಟಲ್ಪಟ್ಟು, ಪೂರ್ಣತೆಯನ್ನು ಹೊಂದಿ, ಎಲೀನವಾಗುವುದೇನು ? ಯಾವ 

ನಿಯಮಕ್ಕೆ ಅಧೀನವಾಗಿ ಈ ನದಿಯ ಗರ್ಭದಲ್ಲಿರುವ ಕುಂಭೀರವನ್ನು ಸಿಕಾರಿ 

ಮಾಡುವವರು ಹುಡುಕುತ್ತಾರೋ, ಯಾವ ನಿಯಮಕ್ಕಧೀನವಾಗಿ ಈ ದ್ವೀಪದಲ್ಲಿ 

ಅಲ್ಪವಾದ ಕೀಟಗಳೆಲ್ಲ ಬೇರೆ ಕೀಟಗಳನ್ನು ಹುಡುಕುತ್ತ ಓಡಾಡುತ್ತವೆಯೋ, ಆ 

ನಿಯಮಕ್ಕೆ ಅಧೀನಳಾಗಿ ಶಚೀಂದ್ರನಿಗೋಸ್ಕರ ಪ್ರಾಣತ್ಯಾಗಮಾಡಲು ಕುಳಿತಿದ್ದೇ 

ನೇನು ? ಪ್ರಾಣತ್ಯಾಗವನ್ನು ಧಿಕ್ ! ಪ್ರಣಯವನ್ನು ಧಿಕ್ ! ಮನುಷ್ಯನ ಜೀವನ 

ವನ್ನು ಧಿಕ್ ! ಏತಕ್ಕೆ ಇದನ್ನು ಈ ಗಂಗಾಜಲದಲ್ಲಿ ಪರಿತ್ಯಾಗ ಮಾಡುವುದಿಲ್ಲ ?  


- ಜೀವನವು ಅಸಾರವಾದುದು---ಸುಖವಿಲ್ಲವೆಂದು ಅಸಾರವಾದುದಲ್ಲ. ಬೂರ 

ಗದಮರದಲ್ಲಿ ಬೂರಗದ ಹೂವೇ ಬಿಡುವುದೆಂದು ಅಚನ್ನು ಅಸಾರವಾದುದೆಂದು ಹೇಳ 

ಲಾಗದು, ದ.8ಖಮಯವಾದ ಜೀವನದಲ್ಲಿ ದುಃಖವೇ ಇದೆಯೋದು ಅದನ್ನು ಅಸಾರ 

ವಾದುದೆಂದು ಹೇಳಬೇಡಿ. ಆದರೆ ಅಸಾರವೆಂದು ಹೇಳುವುದೇತಕ್ಕೆ೦ದರೆ, ದುಃಖವೇ 

ದುಃಖದ ಪರಿಣಾಮವಾಗಿದೆ. ಅದರ ಆಚೇ ಏನೂ ಇಲ್ಲ. ನನ್ನ ಆಂತರ್ಯವಾದ 

ಮರ್ಮಭೇದಿಕಾರಿಯಾದ ದುಃಖವನ್ನು ನಾನೊಬ್ಬಳೇ ಅನಿಭವಿಸಿದೆನು. ಮತ್ಯಾರೂ 

ತಿಳಿಸಲ್ಪಡಲಿಲ್ಲ, ಯಾರೂ ತಿಳಿಯಲಿಲ್ಲ, ದುಃಖವನ್ನು ಪ್ರಕಾಶಮಾಡಿ ಹೊರಪಡಿ 

ಸಲು ಭಾಷೆಯ ಸಾಲದದದುದರಿಂದ ಹೊರಪಡಿಸಲಾರದೆ ಹೋದೆನು, ಕೇಳುವವರು 

ಇಲ್ಲವಾದದರಿಂದ ತಿಳಸಲಾರದೆ ಹೊದೆನು, ಸಹೃದಯರಾದ ಬೋದ್ದರು (wise 

men) ಇಲ್ಲದುದರಿಂದ ತಿಳಿಯ ಹೇಳಲಾರದೆ ಹೋದೆನು. ಒಂದು ಬೂರಗದ ಮರ 

ದಿಂದ ಸಾವಿರಾರು ಬೂರಗದ ಮರಗಳು ಆಗುತ್ತವೆ. ಆದರೆ ನಿಮ್ಮ ದುಃಖದಿಂದ 

ಮತ್ತೆಷ್ಟು ಜನರಿಗೆ ದುಃಖವುಂಟಾಗುತ್ತದೆ ? ಪರರ ಅಂತಃಕರಣದಲ್ಲಿ ಅದು ಪ್ರವೇಶ 

ಮಾಡಲಾಪದು. ಆದರೆ ಅಂತಹ ಪರರಾದವರು ಭೂಮಿಯಲ್ಲಿ ಎಷ್ಟು ಜನರು ಹುಟ್ಟಿ 

ದ್ದಾರೆ? ಪೃದ್ಧಿಯಲ್ಲಿ ಆಂಧಳಾದ ಪುಷ್ಪನಾರಿಯ ದುಃಖವನ್ನು ತಿಳಿದುಕೊಳ್ಳುವವರು 

ಯಾರಾದರೂ ಹುಟ್ಟಿದ್ದಾರೆಯೇ ? ಈ ಸಣ್ಣದಾದ ಹೃದಯದಲ್ಲಿ ಪ್ರತಿಮಾತಿನಲ್ಲಿಯೂ, 

-----------------------------------------------

ಎಂಟನೆಯ ಪರಿಚ್ಛೇದ 31 

ಪ್ರತಿಶಬ್ದದಲ್ಲಿಯ, ಪ್ರತಿ ಅಕ್ಷರದಲ್ಲಿಯೂ ಎಷ್ಟು ಸುಖದುಃಖಗಳ ತರಂಗಗಳು 

ಏಳುತ್ತದೆಯೋ ಅದನ್ನು ತಿಳಿಯುವವರು ಯಾರಾದರೂ ಹುಟ್ಟಿದ್ದಾರೆಯೇ ? ಸುಖ 

ದುಃಖ ? ಓ ! ಸುಖವೂ ಇದೆ ! ಚೈತ್ರಮಾಸದಲ್ಲಿ ಪುಷ್ಪ ತುಂಬಿದ ಬುಟ್ಟಿಗಳೊಂದಿಗೆ 

ಮಧುಮಕ್ಷಿಗಳು ನಮ್ಮ ಮನೆಯೊಳಗೆ ಪ್ರವೇಶ ಮಾಡಿದಾಗ ಅದರ ಝೇಂಕಾರ 

ಶಬ್ಬವು ನನಗೆ ಎಷ್ಟು ಸುಖವುಂಟುಮಾಡುತಲಿತ್ತೊ ಅದನ್ನರಿಯುವವರು ಯಾರು ? 

ಸಂಗೀತ ವ್ಯವಸಾಯಿಯ ಮಹಡಿಯ ಮೇಲಿನಿಂದ ವಾದ್ಯ ನಿಕ್ವಣವು ಸಂಧ್ಯಾಕಾಲದ 

ತಂಗಾಳಿಯಲ್ಲಿ ಹರಿದುಬಂದು ಕರ್ಣಕುಹರವನ್ನು ತುಂಬುವಾಗ ನನಗೆ ಉಂಟಾಗುತ 

ಲಿದ್ದ ಸುಖವನ್ನು ಯಾರು ತಿಳಿಯುವವರು ? ವಾವಚರಣನು ತೊದಲು ನುಡಿ 

ಗಳನ್ನು ನುಡಿಯುವುದಕ್ಕೆ ಪ್ರಾರಂಭಿಸಿ ಅನ್ನಕ್ಕೆ "ಬೊ" ಎಂತಲೂ, ನೀರಿಗೆ 

" ತೀ'' ಎ೦ತಲೂ, ಪದ್ಮಾ ಅನ್ನು ವುದಕ್ಕೆ " ಡಬ್ಬ ” ಎಂತಲೂ, ರಜನಿ ಎಂಬುವು 

ದಕ್ಕೆ "ಜಂಜಿ ” ಎಂತಲೂ ಅರ್ಧಸ್ಫುಟಿತವಾದ ಅಕ್ಷರಗಳನ್ನು ನುಡಿದಾಗ ಕೇಳಿ 

ನನ್ನ ಮನಸ್ಸಿನಲ್ಲಿ ಉಕ್ಕಿ ಬರುತಲಿದ್ದ ಸುಖವನ್ನು ಯಾರು ತಿಳಿಯುವವರಾಗಿದ್ದರು ? 

ನನ್ನ ದುಃಖವನ್ನು ತಾನೇ ಯಾರು ತಿಳಿಯುವರು ? ಅಂಧಳಿಗೆ ಇರುವ ರೂಪೋನ್ಮಾದ 

ವನ್ನು ಯಾರು ಅರಿಯವರು ? ಕಣ್ಣು ಕಾಣಿದಿರುವುದರಿಂದುಂಟಾಗುವ ದುಃಖವನ್ನು 

ಯಾರು ಬಲ್ಲರು ? ತಿಳಿದರೂ ತಿಳಿಯಬಹುದು, ಆದರೆ ದುಃಖವನ್ನು ಹೊರಪಡಿಸಲಶ 

ಕ್ಯಳಾದವಳ ದುಃಖವನ್ನು ಯಾರು ತಿಳಿಯ ವರು ? ಪೃಥ್ವಿಯಲ್ಲಿ ದುಃಖದ್ಯೋತಕವಾದ 

ಭಾಷೆಯಿಲ್ಲವೆಂಬ ದುಃಖವನ್ನು ಯಾರು ತಿಳಿಯುವರು ? ಸಣ್ಣದಾದ ಬಾಯಿಂದ 

ದೊಡ್ಡದಾದ ಮಾತನ್ನು ಹೇಳಿದರೆ ನೀವು ಪ್ರೀತಿಸುವುದಿಲ್ಲ. ಸಣ್ಣದಾದ ಮಾತಿನಿಂದ 

ದೊಡ್ಡದಾದ ದುಃಖವನ್ನು ಪ್ರಕಾಶಮಾಡಲು ಸಾಧ್ಯವೆ ? ಇನ್ನೂ ದುಃಖವೇನೆಂದರೆ ; 

ನನಗೆ ಇರವ ದುಃಖದಿಂದ ಹೃದಯವು ಸುಟ್ಟು ಧ್ವಂಸವಾಗುತಲಿದ್ದರೂ ಅದೆಲ್ಲವನ್ನೂ 

ಮನಸ್ಸಿನಲ್ಲಿ ಭಾವಿಸಿ ತಿಳಿದು ಕೊಳ್ಳಲಾರೆನೆಂಬ ದುಃಖವೇ ಹೆಚ್ಚು ದುಃಖವಾಗಿದೆ. 


ಮನುಷ್ಯ ಭಾಷೆಯಲ್ಲಿ ಅಂತಹ ಮಾತೂ ಇಲ್ಲ ! ಮನುಷ್ಯನಲ್ಲಿ ಅಂತಹ 

ಚಿಂತಾಶಕ್ತಿಯ ಇಲ್ಲ. ದುಃಖವನ್ನು ಅನುಭವಿಸುತ್ತೇನೆ, ದುಃಖವೆಂತಹದೆಂಬು 

ದನ್ನು ತಿಳಿದುಕೊಳ್ಳಬಾರದವಳಾಗಿದ್ದೇನೆ. ನನ್ನ ದುಃಖವು ಯಾವದು ? ಅದು ಏನೋ 

ಯಾವದೋ ತಿಳಿದಿಲ್ಲ. ಆದರೆ ಹೃದಯವು ಸೀಳಿಹೋಗುತ್ತಲಿದೆ. ದೇಹವು ಶೀರ್ಣ 

ವಾಗುತಲಿರುತ್ತದೆ; ಬಲವು ಕಡಮೆಯಾಗುತಲಿರುತ್ತದೆ. ಇದನ್ನು ನೀವು ಸರ್ವದಾ 

ನೋಡುವಿರಿ ; ಆದರೆ ನಿಮ್ಮ ಶಾರೀರಕವಾದ ರೋಗವೆಂತಹದು ಎಂದು ಗೊತ್ತು ಮಾಡಿ 

ಕೊಳ್ಳಲಾರಿರಿ, ಮತ್ತು ಅನೇಕ ಸಮಯದಲ್ಲಿ ನಿಮ್ಮ ದುಃಖದಿಂದ ವಕ್ಷವು ವಿದೀರ್ಣ 

------------------------------------------------

32 ರಜನೀ 


ವಾಗಿ ಪ್ರಾಣವೇ ಹೊರಗೆ ಬಂದು ಶೂನ್ಯಮಾರ್ಗಕ್ಕೆ ಹೋಗಲೆಳಿಸವಹಾಗಾಗು 

ತ್ತದೆ. ಆದರೆ ಅದು ಎಂತಹ ದುಃಖವೋ ಅದನ್ನು ನೀವು ತಿಳಿದುಕೊಳ್ಳಲಾರಿರಿ, ನಿಮ್ಮ 

ದುಃಖವನ್ನೆ ನೀವು ತಿಳಿದುಕೊಳ್ಳಲಾರದವರು ಇತರರ ದುಃಖವನ್ನು ಹೇಗೆ ತಿಳಿಯು 

ವಿರಿ ? ಇದೇನು ಸಾಮಾನ್ಯವಾದ ದುಃಖವೇ ? ನಾನು ಕಂಡು, ತಿಳಿದು, ದೈನ್ಯಳಾಗಿ 

ಒತ್ತಿ ಹೇಳುತ್ತೇನೆ, ಏನೆಂದರೆ, ಜೀವನವು ಅಸಾರವಾದುದು. 

 

ಯಾದ ಜೀವನವು ಇಷ್ಟು ದುಃಖಮಯವಾದುದೇ ಅದರ ರಕ್ಷಣೆಗೋಸ್ಕರ 

ಇಷ್ಟು ಭಯಪಡುತಲಿದ್ದೇನೇತಕ್ಕೆ ? ನಾನು ಏತಕ್ಕೆ ಇದನ್ನು ತ್ಯಾಗಮಾಡಲಾರೆನು ? 

ಈಗ ಈ ಕುಲಕಲನಾದಿನಿಯಾದ ಗಂಗೆಯು ತರಂಗ ಮಧ್ಯದಲ್ಲಿ ನಿಂತು ಇದ್ದೇನೆ. 

ಇನ್ನು ಒಂದೆರಡು ಹೆಜ್ಜೆಗಳು ಮಂಜರಿದರೆ ಸಾಯಬಲ್ಲವಳಾಗಿದ್ದೇನೆ ? ಸಾಯುವ 

ದಿಲ್ಲವೇತಕ್ಕೆ ? ಈ ಜೀವನವನ್ನು ಇಟ್ಟು ಏನಾಗಬೇಕು ? ಸಾಯುವೆನು ! 


ನಾನು ಏತಕ್ಕೆ ಹುಟ್ಟಿದೆ ? ಏತಕ್ಕೆ ಅಂಧಳಾದೆ ? ಹುಟ್ಟಿದರೂ ಶಚೀಂದ್ರನಿಗೆ 

ಯೋಗ್ಯಳಾಗಿ ಹುಟ್ಟಲಿಲ್ಲವೇತಕ್ಕೆ ? ಶಚೀಂದ್ರನಿಗೆ ಯೋಗ್ಯಳಾಗಿ ಹುಟ್ಟಿದಮೇಲೆ 

ಅವನನ್ನು ಪ್ರೀತಿಸಿದೆನೇ ? ಏತಕ್ಕೋಸ್ಕರ ಶಚೀಂದ್ರನನ್ನು ಭಾವಿಸಿಕೊಂಡು 

ಗೃಹತ್ಯಾಗವನ್ನು ಮಾಡಿದೆ ? ನಿಸ್ಸಹಯಳಾದ ಆಂಧಳು ಗಂಗಾನದಿಯ ಮಧ್ಯದ 

ದಿಬ್ಬದಲ್ಲಿ ಪ್ರಾಣಬಿಡಲು ಬಂದೆನೇತಕ್ಕೆ ? ಭರತದ (Tide) ಬಾಯಿಗೆ ಸಿಕ್ಕಿದ 

ಹುಲ್ಲುಕಡ್ಡಿಯಹಾಗೆ, ಸಂಸಾಭ ಸ್ರೋತದಲ್ಲಿ ಅನೇಕ ದುಃಖಿಗಳಿದ್ದಾರೆ; ನಾನು ಎಲ್ಲರಿ 

ಗಿಂತಲೂ ಹೆಚ್ಚು ದುಃಖಿಯಾಗಿದ್ದೇನೇತಕ್ಕೆ? ಇದೆಲ್ಲಾ ಯಾರಲೀಲೆ? ದೇವರ ಲೀಲೆಯೆ? 

ಜೀವನಿಗೆ ಇಷ್ಟು ಕಷ್ಟವನ್ನು ಕೊಡುವುದು ದೇವರಿಗೇನು- ಸುಖ ? ಕಷ್ಟಪಡಿಸುವದಕ್ಕೆ 

ಸೃಷ್ಟಿ ಮಾಡುವುದೇನು ಸುಖ ? ಮೂರ್ತಿಮತ್ತಾದ ನಿರ್ದಯತೆಗೆ ಏತಕ್ಕೆ ದೇವತೆ 

ಯೆಂದು ಹೇಳಬೇಕು ? ಎತಕ್ಕೆ ನಿಷ್ಟುರತೆಯ ಪೂಜೆಮಾಡಬೇಕು ? ಮನುಷ್ಯನ 

ಇಷ್ಟು ಭಯಾನಕವಾದ ದುಃಖವು ಯಾವಾಗಲೂ ದೇವಕೃತವಲ್ಲ. ಹಾಗಿದ್ದರೆ 

ದೇವರು ರಾಕ್ಷಸರಗಿಂತಲೂ ಸಹಸ್ರಪಾಲು ನಿಕೃಷ್ಟವೇ ಸರಿ, ಹಾಗಾದರೆ ನನ್ನ ಕರ್ಮ 

ಫಲವೇನು ? ಯಾವ ಪಾಪಕ್ಕೊಸ್ಕರ ನಾನು ಜನ್ಮಾಂಧಳು ! 


ಒಂದೆರಡು ಹೆಜ್ಜೆಗಳನ್ನು ಇಡುತ್ತ ಮುಂದಾಗಲಾರಂಭಿಸಿದೆನು, ಸಾಯಬೇ 

ಕೆಂದು ! ಗಂಗೆಯ ಶರಂಗವು ಕಿವಿಯಲ್ಲಿ ಶಬ್ದ ಮಾಡುತಲಿತ್ತು. ಇನ್ನೂ ಸಾಯಲಿಲ್ಲ 

ವೆಂದು ತಿಳಿದೆನು. ನನಗೆ ಸುಶಬ್ದವನ್ನು ಕೇಳಲು ಬಹಳ ಇಷ್ಟ ! ಇಲ್ಲ. ಸಾಯುವೆನು! 

ಕುತ್ತಿಗೆವರೆಗೆ ನೀರು ಬಂತು ! ಬಾಯಿಗೆ ಬಂತು ! ಇನ್ನು ಸ್ವಲ್ಪ ಮಾತ್ರ ಮಗು 

ಮುಣುಗಿತು ! ಕಣ್ಣು ಮುಣುಗಿತು ! ನಾನೇ ಮುಣುಗಿದೆ ! 

--------------------------------------------

38 ಮೊದಲನೆಯ ಪರಿಚ್ಛೇದ 


ಮುಣುಗಿದೆ, ಆದರೆ ಸಾಯಲಿಲ್ಲ. ಕಷ್ಟಮಯವದ ಈ ನನ್ನ ಜೀವನವನ್ನು 

ಕುರಿತು ಮುಂದೆ ಹೇಳಲು ನನಗೆ ಆಶೆಯಿಲ್ಲ. ಮತ್ತೊಬ್ಬನು ಹೇಳುವನು. 


ನಾನು ಆ ಪ್ರಭಾತದ ಗಾಳಿಯಿಂದ ಹೊಡೆಯಲ್ಪಟ್ಟ ಗಂಗೆಯ ಚಲಪ್ರವಾಹ 

ದಲ್ಲಿ ಮುಣುಗೇಳಿ ತೇಲುತ್ತ ತೇಲುತ್ತ ಹೊರಟುಹೋದೆನು. ಕ್ರಮವಾಗಿ ಶ್ವಾಸವು 

ನಿಂತಿತ್ತು. ಜೇತನವೂ ಹೋಗುತ್ತ ಬಂತು. 

.............

 

   ಎರಡನೆಯ ಭಾಗ. 

ಅಮರನಾಥನ ಹೇಳಿಕೆ. 

ಮೊದಲನೆಯ ಪರಿಚ್ಛೇದ. 

ನನ್ನ ಈ ಅಸಾರವಾದ ಜೀವನದ ಚಿಕ್ಕದಾದ ಕಥೆಯನ್ನು ಬರೆದಿಡುವುದರಲ್ಲಿ 

ಹೆಚ್ಚು ಪ್ರಯೋಜನವುಂಟು, ಈ ಸಂಸಾರಸಾ ಭದಲ್ಲಿ ಯಡಿ ಬಂಡೆಗೆ ಸಿಕ್ಕಿ ನನ್ನ 

ನೌಕವು ಒಡೆದುಹೋಯಿತೋ ಅದನ್ನು ಈ ವಿಶ್ವ ಚಿತ್ರದಲ್ಲಿ (World's Map) 

ಅಂಕಿಸಿಡುವನು. ಅದನ್ನು ನೋಡಿ ಹೊಸನಾವಿಕರು ಜಾಗರೂಕರಾಗುವರು. 


ನನ್ನ ನಿವಾಸ ಅಧವಾ ಪಿತ್ರಾಲಯವು ಶಾಂತಿ ಪುರದಲ್ಲಿ--ನನ್ನ ಈಗಿನ ವಾಸ 

ಸ್ಥಾನವು ಸ್ವಲ್ಪವೂ ಗೊತ್ತಿಲ್ಲ. ನಾನು ಒಳ್ಳೆ ಕಾಯಸ್ಥ ಕುಲದಲ್ಲಿ ಹುಟ್ಟಿದವನು. 

ಆದರೆ ನಮ್ಮ ಪಿತೃ ಕುಲದಲ್ಲಿ ಒಂದು ದೊಡ್ಡ ಕಳಂಕವುಂಟಾಗಿತ್ತು. ನಮ್ಮ ಚಿಕ್ಕ 

ತಾತಂದಿರ ಹೆಂಡತಿಯು ಕುಲತ್ಯಾಗಿಯಾಗಿದ್ದಳು. ನನ್ನ ತಂದೆಗೆ ಇದ್ದ ಭೂಸಂಪತ್ತಿ 

ಯಿಂದ ಅನ್ನ ಅವಲಂಬನವಿಲ್ಲದೇನೇ ಸಂಸಾರಯಾತ್ರೆಯು ನಿರ್ವಾಹವಾಗುತಲಿತ್ತು. 

ಜನರು ನನ್ನ ತಂದೆಯನ್ನು ಧನಿಕನೆಂತಲೇ ಹೇಳುತ್ತಿದ್ದರು. ಅವನು ನನ್ನ ವಿದ್ಯೆಗೋ 

ಸ್ಕರ ಬಹಳ ಹಣವನ್ನು ವ್ಯಯ ಮಾಡಿದನು, ನಾನೂ ಇದ್ದಮಟ್ಟಿಗೆ ಓದುಬರಹಾ 

ಕಲಿತಿದ್ದನು. ಆದರೆ ಆ ಪ್ರಸ್ತಾಪದಿಂದ ಪ್ರಯೋಜನವಿಲ್ಲ. ಸರ್ವದಲ್ಲಿ ಮಣಿ ಇದೆ. 

ನನಗೂ ವಿದ್ಯೆ ಇತ್ತು. 

-------------------------------------------------

34 ರಜನೀ 

 

ನನಗೆ ನಿವಾಸಕ್ಕೆ ಯೋಗ್ಯವಾದ ವಯಸ್ಸು ಬಂದಾಗ ಅನೇಕರು ಹೆಣ್ಣು 

ಕೊಡುವುದಾಗಿ ಬಂದರು. ಆದರೆ ಯ ಸಂಬಂಧವೂ ನಮ್ಮ ತಂದೆಯು ಮನಸ್ಸಿಗೆ 

ಒಪ್ಪಿತವಾಗಲಿಲ್ಲ. ನಮ್ಮ ತಂದೆಯ ಇಷ್ಟದಲ್ಲಿ ಕನೈಯು ಪರಮ ಸುಂದರಿಯಾಗಿರಬೇ 

ಕೆಂತಲೂ, ಕನ್ಯೆಯ ತ೦ದೆಯು ಪರಮ ಧನಿಕನಾಗಿರಬೇಕೆಂತಲೂ, ಮತ್ತು ಕುಲಾ 

ಚಾರದಲ್ಲಿ ಪರಮ ನಿಷ್ಠನಾಗಿರಬೇಕೆ೦ತಲೂ ಹೀಗಿದ್ದಲ್ಲಿ ಕನ್ಯೆಯನ್ನು ಗ್ರಹಿಸಬೇಕೆಂದು 

ಇತ್ತು, ಇಂತಹ ಸಂಬಂಧವು ಯಾವುದೂ ದೊರಕಲಿಕಲ್ಲ. ಮುಖ್ಯವಾಗಿ ಒಳಗುಟ್ಟೇ 

ನಂದರೆ, ನಮ್ಮ ಕುಲಕಳಂಕವನ್ನು ಕೇಳಿ ದೊಡ್ಡವರು ಯಾರೂ ನನಗೆ ಕನ್ಯಾದಾನ 

ಮಾಡಲು ಮುಂದಾಗಿ ಬರಲಿಲ್ಲ. ಈ ರೀತಿಯಾವ ಕನ್ಯಾನ್ವೇಷಣದಲ್ಲಿಯೇ ನಮ್ಮ 

ತಂದೆಗೆ ಪರಲೋಕಪ್ರಾಪ್ತಿಯುಂಟಾಯಿತು.  


ಕಡೆಗೆ ಅಂದರೆ ನಮ್ಮ ತಂದೆಯ ಸ್ವರ್ಗಾರೋಹಣವಾದಮೇಲೆ ನನ್ನ 

ಸೋದರ ಅತ್ತೆಯೊಬ್ಬಳು ಒಂದು ಹೆಣ್ಣನ್ನು ಮಾಡಿದಳು, ಗಂಗಾನದಿಯ 

ಆಚೆ ಕಾಳಿಕಾಪುರವೆಂದು ಒಂದು ಗ್ರಾಮವಿತ್ತು. ಈ ಕಥೆಯಲ್ಲಿ ಭವಾನಿನಗರವೆಂದು 

ಮತ್ತೊಂದು ಗ್ರಾಮವುಸೇರಿರುವುದು. ಈ ಕಾಳಿಕಾಪುರವು ಆಭವಾನಿನಗರ 

ವೆಂಬ ಗ್ರಾಮದ ಹತ್ತಿರದಲ್ಲಿ ನಮ್ಮ ಸೋದರತ್ತೆಯ ಮಾವನಮನೆ. ಆ ಕಾಳಿಕಾ  

ಪುರದಲ್ಲಿರುವುದು  ಆಊರಿನಲ್ಲಿದ್ದ ದೊಡ್ಡ ಮನೇನವರ ಮಗಳು ಲವಂಗಳೆಂಬ 

ಹುಡಗಿಯನ್ನು ಗೊತ್ತುಮಾಡಿದ್ದರು. 

 

ಈರೀತಿ ಗೊತ್ತುಮಾಡಿರುವುದಕ್ಕೆ ಮೊದಲಿಮದಲೂ ನಾನು 

ನೋಡುತಲಿದ್ದೆ. ನಮ್ಮ ಸೋದರತ್ತೆಯ ಮನೆಗೆ ನಾನು ಆಗಾಗ್ಗೆ ಹೋಗುತಲಿದ್ದೆ. 

ಲವಂಗಳನ್ನು ಸೋದರತ್ತೆಯ ಮನೆಯಲ್ಲಿಯೂ ಅವಳ ತಂದೆಯ ಮನೆಯಲ್ಲಿಯೂ 

ನೋಡುತಲಿದ್ದೆ. ಮಧ್ಯೆ ಮಧ್ಯೆ ಲವಂಗಳಿಗೆ ಬಾಲಬೋಧೆಯಲ್ಲಿ ಶ್ರೀ ಓ ನಾಮ 

ವನ್ನು ಹೇಳಿಕೊಡುತಲಿದ್ದೆ, ಹೀಗೆ ಅವಳನ್ನು ಗೊತ್ತುಮಾಡಿದ ಮೊದಲ್ಗೊಂಡು 

ಅವಳು ನನ್ನ ಹತ್ತಿರ ಬರುವುದನ್ನು ಬಿಟ್ಟಳು. ಆದರೆ ನಾನು ಅವಳನ್ನು ನೋಡುವು 

ದಕ್ಕೆ ಹೆಚ್ಚು ಉತ್ಸುಕನಾದೆನು. ಆಗ ಲವಂಗಳಿಗೆ ವಿವಾಹದ ವಯಸ್ಸು ಬಂದಿತ್ತು, 

ಆಗವಳು ಆಗತಾನೆ ಅರಳುವ ಮೊಗ್ಗಿನಹಾಗೆ ಅರಳುತಲಿದ್ಬಳು, ಚಕ್ಷುಗಳ ದೃಷ್ಟಿಯು 

ಚಂಚಲವಾಗಿ ಭೀತಿಗೊಳ್ಳುತ್ತ ಬರುತಲಿತ್ತು. ಘಟ್ಟಿಯಾದ ನಗುವು ಮೃದುವಾಗಿ 

ಲಜ್ಞಾಯುಕ್ತವಾಗಿತ್ತು. ವೇಗವಾದ ಗತಿಯು ಮಂಥರ (Slow) ವಾಗುತ್ತ ಬಂತು. 

ನಾನು ಇಂತಹ ಸೌಂದರ್ಯವನ್ನು ಯಾವಾಗಲೂ ನೋಡಿರಲಿಲ್ಲವೆಂದು ತಿಳಿದೆನು. 

ಯಾವ ಯುವತಿಗೂ ಯಾವಾಗಲೂ ಘಟಿಸಿರಲಿಲ್ಲ. ವಸ್ತುತಃ ಶೈಶವಾತೀತವಾದ 

--------------------------------------------_

ಮೊದಲನೆ ಪರಿಚ್ಛೇದ 35 

 

ಅಪಾಪ್ತವಾದ ಯೌವನದ ಸೌಂದರ್ಯವು  ಸಹ ಅತಿಶಯವಾಗಿ ಮನೋಹರವಾಗಿರುವುದು. 

ಯೌವನದ ಸೌಂದರ್ಯವು ಹಾಗಿರುವುದಿಲ್ಲ. ಯೌವನದಲ್ಲಿ ವಸನ ಭೂಷಣಾದಿಗಳ 

ವೈಯಾರ,ಹಾಸಾಪಾಂಗಗಳ ಬಿಣ್ಣಾನ, ವೇಣಿಯ ಹರಿವಾಟ, ದುಂಡಾದ ಬಾಹು 

ಗಳ ಚಾಲನ ಮಾಂಸಲವಾದ ಗೀವಾಭಂಗಿ, ಮಾತಿನ ವೈಖರಿ, ಇವೇ ಮು೦ತಾದ 

ಯುವತಿಯ ರೂಪವಿಕಾಸವು ಒಂದು ವಿಧವಾಗಿ ಕಲ್ಪಿತವಾದುದಾಗಿ ಕಾಣುತ್ತದೆ. 

ಅದಲ್ಲದೆ ನಾವು ಆ ಸೌಲಭ್ಯವನ್ನು ಯಾವ ದೃಷ್ಟಿಯಿಂದ ನೋಡುತ್ತೇವೋ ಅದೂ 

ವಿಕೃತವಾದುದು, ಯಾವ ಸೌಂದರ್ಯದ ಉಪಭೋಗಳಲ್ಲಿ ಇಂದ್ರಿಯಗಳೊಂದಿಗೆ 

ಸಂಬಂಧವುಳ್ಳ ಚಿತ್ತಭಾವದ ಸಂಸ್ಪರ್ಶವಿರುವುದಿಲ್ಲವೊ ಆ ಸೌಂದರ್ಯವೇ ಸೌಂದರ್ಯ. 


ಈ ಸಮಯದಲ್ಲಿ ನಮ್ಮ ಕುಲಕಳಂಕದ ವಾರ್ತೆಯು ತಂದೆಯ 

ಕಿವಿಗೆ ಬಿತ್ತು ಸಂಬಂಧ ಗೊತ್ತಾಗಿದ್ದದು ತಪ್ಪಿ ಹೋಯಿತು. ನನ್ನ ಹೃದಯವೆಲ್ಲ 

ಅವಳಲ್ಲಿತ್ತು. ಈ ಸಮಯದಲ್ಲಿ ಭವಾನಗರದ ರಾಮಸದಯ ಮಿತ್ರನು ಒಂದು ಲವಂಗ 

ಲತೆಯನ್ನು ಕಿತ್ತುಕೊಂಡು ಹೊರಟು ಹೋದರು. ಅವಳು ಅವನನ್ನು ಮದುವೆಯಾ 

ದಳು, ನಾನು ಲವಂಗ ಲಾಭದಲ್ಲಿ ನಿರಾಶನಾಗಿ ಬಹಳ ಖಿನ್ನನಾದೆನು. 


ಇದಾದ ಕೆಲ ವರುಷಗಳ ಮೇಲೆ ಒಂದು ಘಟನಾವಿಶೇಷವು ಸಂಘಟಿಸಿತು. 

ಅದನ್ನು ಹೇಳಲಾರೆ. ಕಡೆಗೆ ಹೇಳುವೆನೋ ಇಲ್ಲವೋ ಹೇಳಲಾರೆ. 

ಅದು ಮೊದಲು ನಾನು ಗೃಹವನ್ನು ತ್ಯಾಗಮಾಡಿ ನಾನಾದೇಶಗಳನ್ನು ಅಲೆದೆನು. 

ಎಲ್ಲಿಯ ಸ್ಥಾಯಿಯಾಗಿ ನಿಲ್ಲಲಾರದೆ ಹೋದೆ. 


ಎಲ್ಲಿಯೂ ಸ್ಥಾಯಿಯಾಗಿ ನಿಲ್ಲಲಿಲ್ಲ; ಆದರೆ ಮನಸ್ಸು ಮಾಡಿದ್ದರೆ ನಿಲ್ಲುತ 

ಲಿದ್ದೆ. ಮನಸ್ಸಿದ್ದರೆ ಕುಲೀನ ಬ್ರಾಹ್ಮಣರಿಗಿಂತಲೂ ಹೆಚ್ಚು ಮದುವೆಗಳನ್ನು ಮಾಡಿ 

ಕೊಳ್ಳುತ್ತಿದ್ದೆ. ನನಗೆ ಎಲ್ಲ ಇತ್ತು. ಧನ, ಸಂಪತ್ತು,ವಯಸ್ಸು, ವಿದ್ಯೆ ಬಾಹು 

ಬಲ, ಯಾವದರಲ್ಲಿಯೂ ಕಡಿಮೆಯೂಗಿರಲಿಲ್ಲ.  ಅದೃಷ್ಟದೋಷದಿಂದ-ಒಂದು ದಿನದ 

ದುರ್ಬುದ್ದಿ ದೋಷದಿಂದ ಎಲ್ಲವನ್ನೂ ತ್ಯಗಮಾಡಿ ನಾನು  ಈ ಸುಖ.ಮಯವಾದ 

ಗೃಹವನ್ನೂ ಈ ಉದ್ಯಾನಸಮನಾದ ಪುಷ್ಪಮಯವಾದ ಸಂಸಾರವನ್ನೂ ಬಿಟ್ಟು 

ಗಾಳಿಯಿಂದ ಹೊಡಿಯಲ್ಪಟ್ಟ ಪತಂಗದಹಾಗೆ ದೇಶ ಅಲೆದೆನು.  ನನಗೆ ಮನಸ್ಸು 

ಬಂದಿದ್ದರೆ ನನ್ನ ಆ ಜನ್ಮಭೂಮಿಯಲ್ಲಿ ರಮ್ಯವಾದ ಗೃಹವನ್ನು ನಿರ್ವಾಣಮಾಡಿ 

ರಮ್ಯವಾದ ಛೇರ್, ಸೋಫಾ(Fashionಡೌಂದಾರಿ) ಎ೦ಬ ಪವನದಲ್ಲಿ ಜಾಂಡೇ 

----------------------------------------------------------------------------------86 ರಜನೀ 

 

ಹಾಕಿ ಧ್ವಜಪಟವನ್ನು ಏರಿಸಿ ಹಾರಿಸುತ್ತ ನಗುವೆಂಬ ಬಾಣದಿಂದ ದುಃಖವೆಂಬ 

ರಾಕ್ಷಸನನ್ನು ವಧೆಮಾಡುತಿದ್ದೆನು, ಆದರೆ,- 

 

ಈಗ ಹಾಗೇತಕ್ಕೆ ಮಾಡಲಿಲ್ಲವೆಂದು ಯೋಚಿಸುತ್ತೇನೆ. ಸುಖದುಃಖಗಳ 

ವಿಧಾನವು ಇತರರ ಕೈಯಲ್ಲಿ ; ಆದರೆ ಮನಸ್ಸು ನಮ್ಮ ಕೈಯಲ್ಲಿದೆ. ಅಲೆಗಳ ಹೊಡ 

ತದಿಂದ ಹಡಗು ಮಣಗಿದರೆ ನಾನೇತಕ್ಕೆ ಮುಣುಗಿದೆ ? ಈಜಿಕೊಂಡು ಬಂದು 

ದಡವನ್ನು ಸೇರಬಹುದು, ಮತ್ತು ದುಃಖ- ದುಃಖವೆಂದರೇನು ? ಮನಸ್ಸಿನ ಅವಸ್ಥಾ 

ವಿಶೇಷ. ಮನಸ್ಸು ನಮ್ಮ ಸ್ವಾಧೀನವೇ ಹೌದು. ಹಾಗಾದರೆ ಸುಖದುಃಖಗಳೆಂ 

ಬುದು ಅನ್ಯರ ಕೈಯಲ್ಲಿಲ್ಲ. ನಮ್ಮ ಸ್ವಂತಕೈಯಲ್ಲಿದೆಯಲ್ಲವೆ ? ಅನ್ಯರು ಬಾಹ್ಯ 

ಜಗತ್ತಿಗೆ ಕರ್ತ, ಅಂತರ್ಜಗತ್ತಿಗೆ ನಾನೊಬ್ಬನೇ ಕರ್ತನು. ನನ್ನ ಸ್ವಂತ ರಾಜ್ಯವನ್ನು 

ವಶಮಾಡಿಕೊಂಡು ನಾನು ಸುಖಿಯಾಗಲಾರನೇತಕ್ಕೆ ? ಜಡಜಗತ್ತು ಜಗತ್ತು, ಅಂತ 

ಜಗತ್ತು ಜಗತ್ತಲ್ಲವೆ? ನನ್ನ ಮನಸ್ಸನ್ನು ನಾನು ಇಟ್ಟು ಕೊಳ್ಳಕೂಡದೇನು ? 

ನಿಮ್ಮ ಬಾಹ್ಯ ಜಗತ್ತಿನಲ್ಲಿ ಅನೇಕ ಸಾಮಗ್ರಿಗಳಿವೆ ನನ್ನ ಅಂತರ್ಜಗತ್ತಿನಲ್ಲಿಲ್ಲವೇನು ? 

ನನ್ನ ಅಂತರ್ಜಗತ್ತಿನಲ್ಲಿರುವುದನ್ನು ನಿಮ್ಮ ಬಾಹ್ಯ ಜಗತ್ತಿನಲ್ಲಿ ತೋರಿಸಬಲ್ಲಿರಾ ? ಅದು 

ಸಾಧ್ಯವೆ? ಈ ಮೃತ್ತಿಕೆಯಲ್ಲಿ ವಿಕಸಿಸುವ ಕುಸುಮವೂ, ಈ ಆಕಾಶದಲ್ಲಿ ಬೀಸುವ 

ವಾಯುವೂ, ಈ ಗಗಸದಲ್ಲಿ ಉದಯನಾಗುವ ಚಂದ್ರನೂ, ಈ ಅಂಧಕಾರದಲ್ಲಿ ತನಗೆ 

ತಾನಾಗಿಯೇ ಹೆಪ್ಪಾಗುವ ಸಮುದ್ರವೂ ಇವೇ ಮುಂತಾದುವು ನಿಮ್ಮ ಬಾಹ್ಯ ಜಗತ್ತಿ 

ನಲ್ಲಿ ಎಲ್ಲುಂಟು ? 


ಹಾಗಾದರೆ ಆ ಅರ್ಧರಾತ್ರಿಕಾದಲ್ಲಿ ಮಲಗಿದ್ದಾ ಸುಂದರಿಯ ಸೌಂದಯ್ಯ 

ಪ್ರಭೆಗೆ ಮರುಳಾಗಿ..ಛೇ ! ಅದು ದೂರ ಹೋಗಲಿ ? ಆ ಮಾತು ಬೇಡ, ಒಂದು 

ದಿನ ನಿತೀಧಕಣದಲ್ಲಿ ಈ ಸೀಮಾರಹಿತವಾದ ಸೃಷ್ಟಿಯು ಇದ್ದಕ್ಕಿದ್ದ ಹಾಗೆ ನನ್ನ 

ಕಣ್ಣಿಗೆ ಶುಷ್ಕವಾದ ಬದರೀಹಣ್ಣಿನಹಾಗೆ ಅಲ್ಪವಾದುದಾಗಿ ಹೋಯಿತು. ನಾನು 

ಔತುಕೊಂಡಿರುವುದಕ್ಕೆ ಇಲ್ಲದೆ ಹೋಯಿತು, ದೇಶ ದೇಶ ತಿರುಗಿದೆನು. 

.....

ಎರಡನೆಯ ಪರಿಚ್ಛೇದ. 


ಕಾಲದ ಶೀತಲವಾದ ಲೇಪನದಿಂದ ಹೃದಯದಲ್ಲಿ ಉಂಟಾಗಿದ್ದ ಘಾಯವು 

ಕ್ರಮವಾಗಿ ಮಾಡುತ್ತಾ ಬಂತು.  

------------------------------------------

ಎರಡನೆಯ ಪರಿಚ್ಛೇದ 37 

ಕಾಶೀಧಾಮದಲ್ಲಿ ಒಬ್ಬ ಸಚ್ಚರಿತ್ರವಾದ ಅತಿ ಪುರಾತನವಾದ ದೊಡ್ಡ ವಂಶ 

ಸ್ಥನಾದ ಗೋವಿಂದ ಕಂತದತ್ತನೆಂಬವನ ಸಂಗಡ ನಾನು ವಾಸಮಾಡುತಲಿದ್ದೆನು. 

ಇವನು ಬಹುಕಾಲದಿಂದ ಕಾಶೀ ವಾಸ ಮಾಡುತ್ತಲಿದ್ದನು.  


ಒಂದುಸಲ ಅವನಸಂಗಡ ಮಾತನಾಡುತ್ತಿದ್ದಕಾಲದಲ್ಲಿ ಪೊಲೀಸಿನವರು 

ಮಾಡುವ ಅತ್ಯಾಚಾರವ: ಪ್ರಸ್ತಾಪತ್ವೇನ ಬ೦ತು.ಆಖೈರು ಪೋಲೀಸಿನವರು 

ಮಾಡುವ ಅತ್ಯಾಚಾರಗಳ ಕಥೆಗಳನ್ನು ಹೇಳಿದರು. ಅದರಲ್ಲಿ ಒಂದೆರಡು ನಿಜ; ಒಂದೆ 

ರಡು ಹೇಳುವವರ ಕಪೋಲಕಲ್ಪಿವಾದುದು. ಗೋವಿಂದಕಂತನು ಒಂದು ಕಥೆ 

ಯನ್ನು ಹೇಳಿದನು. ಅದರ ಮರ್ಮವೇನೆಂದರೆ:- 

 

ನಮ್ಮ ಗ್ರಾಮದ ಹರೆಕೃಷ್ಣನೆಂಬ ದರಿದ್ರನಾದ ಕಾಯಸ್ಥನೆಂಬನಿದ್ದನು. 

ಅವನಿಗೆ ಒಬ್ಬ ಮಗಳ ಹೊರ್ತು ಬೇರೆ ಮಕ್ಕಳಿಲ್ಲ . ಅವನ ಹೆಂಡತಿ ಮೃತಳಾಗಿ 

ದ್ದಳು. ಆದಕಾರಣ ಮಗಳನ್ನು ಪೋಷಿಸುವದಕ್ಕೆ ತನ್ನ ಹೆಂಡತಿಯ ತಂಗಿಯ ಗಂಡನ 

ಮನೆಯಲ್ಲಿ ಬಿಟ್ಟಿದ್ದನು. ಮಗಳದಾಗಿದ್ದ ಕೆಲವು ಒಡವೆವಸ್ತ್ರಗಳನ್ನು ಲೋಭದಿಂದ 

ಷಡ್ಡಕನಲ್ಲಿ ಕೊಡಲಿಲ್ಲ. ಆದರೆ ಅವನಿಗೆ ಮೃತ್ಯು ಕಾಲ ಒದಗಿದಾಗ ನನ್ನನ್ನು ಕರೆದು 

ನನ್ನ ವಶಕ್ಕೆ ಆಭರಣಗಳನ್ನೆಲ್ಲಾ ಕೊಟ್ಟು ತನ್ನ ಮಗಳು ದೊಡ್ಡವಳಾದ ಮೇಲೆ ಅವ 

ಳಿಗೆ ಕೊಡಬೇಕೆಂತಲೂ, ಅದೆಕ್ಕೆ ಮೊದಲು ಷಡ್ಡಕನಾದವನಿಗೆ ಕೊಟ್ಟರೆ ಅವನು 

ಸ್ವಂತಕ್ಕೆ ಇಟ್ಟುಕೊಂಡುಬಿಡುವನೆಂದಲ್ಲದೆ, ಬೇಡಿದನು. ನಾನು ಒಪ್ಪಿಕೊಂಡೆನು. 

ಅನಂತರ ಹರೆಕೃಷ್ಣನೇ ಸತ್ತುಹೋದನು. ಅವನು ಬೇವಾರಸಾಗಿ ಸತ್ತನೆಂದು ತಿಳಿದು, 

ನಂದೀ, ಭಂಗಿ ಸಮೇತನಾಗಿ ದೇವಾದಿದೇವನಾದ ಪೋಲೀಸು ಇನ್‌ಸ್ಪೆ 

ಕ್ಟರನು ಬಂದು ನಿಂತು ಪ್ರತ್ಯಕ್ಷನಾದನು, ಪ್ರತ್ಯಕ್ಷನಾಗಿ ಹರೆಕೃಷ್ಣನು ಬೇವಾರ 

ಸಾಗಿ ಸತ್ತನೆಂದು ಅವನ ಮನೆಯಲ್ಲಿದ್ದ ಮಡಿಕೆ ಕುಡಿಕೆ ಪಾತ್ರೆ ಪದ ರ್ಧಗಳನ್ನೆಲ್ಲಾ 

ಕೈವಶ ಮಾಡಿ ಕೊಂಡನು. ಕೆಲವರು ಮೃತನಿಗೆ ಕಲಕತ್ತೆಯಲ್ಲಿ ಒಬ್ಬ ಮಗಳಿದ್ದಾ 

ಳೆಂದು ಹೇಳಿದರೂ ಪೋಲೀಸು ಅನಿಷ್ಠಾ ದೇವತೆಯು, ವಾರಸದಾರರು ಇದ್ದರೆ 

ಹುಜರಿಗೆ ಹಾಜರಾಗಲೆಂದು ಹೇಳಿಬಿಟ್ಟನು. ಆಗ ನನಗೆ ಆಗದವರು ಈ ಸಮಯ 

ನೋಡಿ, ಹರೆಕೃಷ್ಣನು ಗೋವಿಂದದತ್ತನಲ್ಲಿ ಕೆಲವು ಭಂಗಾರದ ನಗೆನಟ್ಟು ಇಟ್ಟಿದ್ದ 

ನೆಂದು ಇನ್‌ಸ್ಪೆಕ್ಟರಿಗೆ ತಿಳಿಸಿದರು. ನನಗೆ ಕರೆ ಬಂದು ನಾನು ದೇವಾದಿದೇವನ 

ಬಳಿಗೆ ಬಂದು ಕೈಮುಗಿದು ಕೊಂಡು ನಿ೦ತೆನು. ಕೆಲವು ಬೈಗುಳವನ್ನು ತಿಂದೆನು. ಆಪಾದಿ 

ತರ ಗುಂಪಿಗೆ ಸೇರುವ ಗತಿಬಂತು. ಏನು ಹೇಳಲಿ ? ಪ್ರಹರಪ್ರಯೋಗದ ಪ್ರಯತ್ನ 

ಗಳನ್ನು ಕಂಡವನ:ಗಿ ಆಭರಣಗಳನ್ನೆಲ್ಲ ಇನ್‌ಸ್ಪೆಕ್ಟರನ ಪಾದಪದ್ಮಗಳಲ್ಲರ್ಪಿಸಿ 

----------------------------------------------

 

 ಅದರಮೇಲೆ ನಗದು ಇಪ್ಪತ್ತು ರೂಪಾಯಿ ಕೊಟ್ಟು ನಿಷ್ಕೃತಿಹೊಂದಿ ಪ್ರನೀತನಾ 

 ಬೆನು. ಇ೯ಸ್ಪೆಕ್ಟರ ಸಾಹೇಬರು ಅಭರಣಗಳನ್ನೆಲ್ಲಾ ಮಗಳ ಉಪಯೋಗಕ್ಕೆ ಮನೆಗೆ 

 ಕಳುಹಿಸಿದರೆಂದು ಹೇಳಬೇಕಾದ ಅವಶ್ಯವಿಲ್ಲ. ಕಡೆಗೆ ಸಾಹೇಬರು ಹರೆಕೃಷ್ಣನ 

 ಬಾಬತು ಒಂದು ಲೋಟ, ಒಂದು ದೀಪದ ಹಣತೆ ಹೊರ್ತು ಮತ್ತೇನೂ ಆಸ್ತಿಯು 

 ದೊರೆಯಲಿಲ್ಲವೆಂತಲೂ ಮೃತನಿಗೆ ವಾರಸು ಯಾರೂ ಇಲ್ಲದ್ದರಿಂದ ದಫನಿಗೆ ಅಪ್ಪಣೆ 

 ಮಾಡಿರುತ್ತದೆ ರಿಪೋರ್ಟನ್ನು ಕೊಟ್ಟು ಬಿಟ್ಟರು.'' ಎಂದು ಒಂದು ಕಥೆಯನ್ನು 

 ಹೇಳಿದನು. 

 

ಹರೆಕೃಷ್ಣನ ಹೆಸರನ್ನು ನಾನು ಕೇಳಿದ್ದೆನು. ನಾನು ಗೋವಿಂದಬಾಬುವನ್ನು 

ಕುರಿತು ಹರೆಕೃಷ್ಣದಾಸನಿಗೆ ಮನೋಹರದಾಸನೆಂಬ ತಮ್ಮನು ಇದ್ದನಲ್ಲವೆ ? ಎಂದು 

ವಿಚಾರಿಸಿದೆನು. 

 

ಗೋವಿಂದ - ಹೌದು, ನಿನಗೆ ಹೇಗೆ ಗೊತ್ತು ? 


ನಾನು ವಿಶೇಷವೇನೂ ಹೇಳಗೆ ಹರೆ ಕೃಷ್ಣನ ಷಡ್ಡಕನ ಹೆಸರೇನು ? ಎಂದು 

ಕೇಳಿದನು. 


ಗೋವಿಂದ -ರಾಜಚಂದ್ರದಾಸ 


ನಾನು-ಅವನ ಮನೆ ಎಲ್ಲಿದೆ ? 


ಗೋವಿಂದ- ಕಲಿಕತ್ತೆಯಲ್ಲಿ. ಆದರೆ ಇಂತಹ ಕಡೆ ಇದ್ದಾನೆಂಬುದು ಮರೆತು 

ಹೋಯಿತು 


ನಾನು-ಆ ಮಗಳ ಹೆಸರೇನು ? ಗೊತ್ತಿದೆಯೇ ? 


ಗೋವಿಂದ-ಹ“ಕೃಷ್ಣನು ಮಗಳೆಗೆ ರಜನೀ ಎಂದು ಹೆಸರು ಇಟ್ಟಿದ್ದನು 

ನಾನು ಕೆಲವು ದಿನಗಳ ಮೇಲೆ ರ್ಕಶಿಯಂದ ಹೊರಟೆನು. 

........

ಮೂರನೆಯ ಪರಿಚ್ಛೇದ. 


ಮೊದಲು ನಾನು ಯಾರನ್ನು ಹುಡುಕು ಕೋನೆಯೋ ಅದನ್ನು ತಿಳಿದುಕೊಳ್ಳ 

ಬೇಕು. ನನ್ನ ಚಿತ್ರವು ದುಃಖಮಯವಾಗಿದೆ. ನನ್ನ ಪಕ್ಷಕ್ಕೆ ಈ ಸಂಸಾರ ಪ್ರಪಂಚವು 

ಅಂಧಕಾರವಾಗಿದೆ. ಈ ಹೊತ್ತು ನನಗೆ ಮೃತ್ಯುವುಂಟಾದರೆ ಇನ್ನು ಹೆಚ್ಚು ಕಾಲವಿರ 

ಬೇಕೆಂದು ಅಪೇಕ್ಷಿಸುದಿಲ್ಲ. ದಃಖವನ್ನು ನಿಕಿರಣೆಮಾಡಿ ಕೊಳ್ಳದೆ ಹೋದರೆ 

ನನ್ನ ಪುರುಷತ್ವವೇನಾದ ಹಾಗಾಯಿತು ? ಆದರೆ ವ್ಯಾಧಿಗೆ ಶಾಂತಿ ಮಾಡಬೇಕಾದರೆ 

-----------------------------------------------

ಮೂರನೆಯ ಪರಿಚ್ಛೇದ 39 

ಮೊದಲು ವ್ಯಾಧಿಯ ನಿರ್ಣಯಮಾಡಿಕೊಳ್ಳಬೇಕು, ದುಃಖವನ್ನು ನಿವಾರಣೆಮಾಡಿ 

ಕೊಳ್ಳಬೇಕಾದರೆ ಮೊದಲು ನನ್ನ ದುಃಖವ ಯಾರದು ? ಅದನ್ನು ನಿರೂಪಣಮಾಡು 

ವುದು ಅವಶ್ಯಕ. 


ದುಃಖವೇನು ? ಅಭಾವ, ಅಂದರೆ ಇಲ್ಲದ್ದು -ದುಃಖವೆಲ್ಲಾ ಅಭಾವವೇ 

ಹೌದು, ರೋಗವು ದುಃಖ-ಏತಕ್ಕೆಂದರೆ, ರೋಗವು ಸ್ವಾಸ್ಥ್ಯದ ಅಭಾವ, ಅಭಾವ 

ಮಾತ್ರವೇ ದುಃಖವಾಗದೆಂದು ತಿಳಿದು ಇದ್ದೇನೆ. ರೋಗದ ಅಭಾವವು ದುಃಖವಲ್ಲ, 

ಅಭಾವ ವಿಶೇಷವ ದುಃಖವಾಗುತ್ತದೆ. 


ನನಗೆ ಯಾವದರ ಅಭಾವ ? ನನಗೆ ಬೇಕಾದುದು ಯಾವದು ? ಮನುಷ್ಯನು 

ಬೇಕೆನ್ನುವುದು ಯಾವದು ? ಧನವೆ ? ನನಗೆ ಯಥೇಷ್ಟವುಂಟು. 


ಯಶಸೈ ? ಪೃಥಿವಿಯಲ್ಲಿ ಯಶಸ್ಸು ಇಲ್ಲದವನು ವಾರೂ ಇಲ್ಲ. ಪಕ್ಕಾ 

ದಗಾಖೋರನಿಗೂ ಬುದ್ಧಿ ಸಂಬಂಧುವಾದ ಯಶಸ್ಸು ಉಂಟು. ಒಬ್ಬ ಕಸಾಯಿಗಾರನ 

ಯಶಸ್ಸು ಕೂಡ ಕೇಳಿದ್ದೇನೆ. ಮಾಂಸಸಂಬಂಧವಾಗಿ ಯಾರಿಗೂ ಯಾವಾಗಲೂ 

ವಂಚಿಸಿಲ್ಲ. ಮೇಷಮಾವನ್ನು ಗೋಮಾಂಸವೆಂದು ಸುಳ್ಳು ಹೇಳಿ ಮಾರಿಲ್ಲ. 

ಅಧವಾ ನಾಯಿ ಮಾಂಸವನ್ನು ಹಮದಿ ಮಾ೦ಸವೆ೦ದು ಹೇಳಿ ಕೊಟ್ಟಿಲ್ಲ. ಯಶಸ್ಸು 

ಎಲ್ಲರಿಗೂ ಇದೆ. ಆದರೆ ಯಾರ ಯಶಸ್ಸೂ ಸಂಪೂರ್ಣವಾದುದಲ್ಲ. ಬೇಕನಿಗೆ 

(Bacon)ಘೂಸಾಖೋರನೆಂದು ಅಪವಾದ ಉಂಟು. ಸೊಕ್ರೆಟಿಸನು (Socrates) 

ಅಪಯಶಸ್ಸಿನಿಂದ ವಧದಂಡರ್ಹನಾದನು. ಯುಧಿಷ್ಠಿರನು ದೋಣವಧೆಯಲ್ಲಿ 

ಮಿಧ್ಯಾ ವಾದಿಯಾದನು. ಅರ್ಜುನನು ಬಬ್ರುವಾಹನನಿಂದ ಪರಾಜಿತನಾದನು. ಕಸರನನ್ನು 

(Casar) ಬಧೀನಿಯಾದ (Bithynia) ರಾಣಿಯಂದು ಹೇಳಿದ್ದ ಮಾತು 

ಈಗಲೂ ಪ್ರಚಾರದಲ್ಲಿದೆ. ಷೇಕಸ್ಷೀರನನ್ನು ವಾಲ್ವೇರನು ವಂಚಕನಾದ ಹಾಸ್ಯಗಾರ 

ನೆಂದು ಹೇಳಿದ್ದಾನೆ. ನನಗೆ ಯಶಸ್ಸು ಬೇಡ. 

 

ಯಶಸ್ಸೆಂಬುದು ಸಾಧಾರಣ ಜನರ ಬಾಯಿಯಲ್ಲಿರತಕ್ಕದ್ದು. ಸಾಧಾರಣ 

ಜನರು ಯಾವಸಂಗತಿಯನ್ನೂ, ವಿಚಾರಮಾಡುವುದಿಲ್ಲ. ಏತಕ್ಕೆಂದರೆ, ಅವರು 

ಮೂರ್ಖರು, ಮತ್ತು ಸ್ಥೂಲಬುದ್ದಿಯುಳ್ಳವರು, ಮೂರ್ಖರಾದ ಸ್ಥೂಲಬುದ್ದಿಯು 

ಳ್ಳವರ ಹತ್ತಿರ ಯಶಸ್ವಿಯಾಗಿ ನನಗೇನು ಸುಖವಿದ್ದೀತು ? ನನಗೆ ಯಶಸ್ಸು ಬೇಡ. 

 

ಮಾನವೊ ? ಪ್ರಪಂಚದಲ್ಲಿ ಮರ್ಯಾದೆ ಮಾಡಿದರೆ ಸುಖಿಯಾಗದೆ ಇರುವವರು 

ಯಾರು ? ಇರುವ ಮರು ನಾಲ್ಕು ಜನರಲ್ಲಿ ನನಗೆ ಮಾನವುಂಟು, ಇತರರಲ್ಲಿ 

-------------------------------------------

40 ರಜನೀ 

 

ಮಾನವೆಂದರೆ ಅಪಮಾನದೆ, ರಾಜರಬಾಳಿನಲ್ಲಿ ಮಾನವೆಂಬುದು ಕೇವಲ ದಾಸತ್ವದ 

ಪ್ರಧಾನವಾದ ಚಿನ್ಹೆ ಎಂದು ತಿಳಿದಿದ್ದೇನೆ. ನನಗೆ ಮಾನ ಬೇಡ ನಿಮ್ಮಲ್ಲಿ ಮಾತ್ರ 

ಬೇಕು, ನನಗೆ ಮಾನ. 

 

ರೂಪವೊ ?  ಎಷ್ಟು ಬೇಕು? ಸ್ವಲ್ಪ ಬೇಕು. ಜಸರು ನೋಡಿದರೆ ಮುಖದ 

ಮೇಲೆ ಉಗಳದಿದ್ದರೆ ಸಾಕು, ನನ್ನನ್ನು ನೋಡಿ ಯಾರೂ ಮುಗಿದಮೇಲೆ ಉಗುಳ 

ಲಿಲ್ಲ. ನನಗಿರುವ ರೂಪವೇ ಯಥೇಚ್ಛವಾಗಿದೆ. 


ಸ್ವಾಸ್ಥ್ಯವೋ? ನನಗೆ ಶರೀರ ಸ್ವಾಸ್ಥ್ಯವು ಇನ್ನೂ ಅನಂತವಾಗಿದೆ. 

ಬಲವೂ ಬಲವನ್ನು ತೆಗೆದುಕೊಂಡು ಏನುಮಾಡುವೆ? ಪ್ರಹಾರಕ್ಕೋಸ್ಕರ 

ಬಲಬೇಕು. ನಾನು ಯಾರನ್ನೂ ಪ್ರಹಾರಮಾಡುವುದಕ್ಕೆ ಇಷ್ಟಳ್ಳವನಾಗಲಿಲ್ಲ. 

ಬುದ್ಧಿಯೊ ? ಈ ಪ್ರಪಂಚದಲ್ಲಿ ಯಾರೂ ತಮ್ಮಲ್ಲಿ ಬುದ್ದಿಯ ಆಭಾವವಿದೆ 

ಯೆಂದು ತಿಳಿದುಕೊಳ್ಳುವುದಿಲ್ಲ. ನಾನೂ ತಿಳಿದುಕೊಳ್ಳುವುದಿಲ್ಲ. ಎಲ್ಲರೂ ತಾವು ತಾವು 

ಅತ್ಯಂತ ಬುದ್ಧಿವಂತರೆಂದು ತಿಳಿದುಕೊಂಡಿದ್ದಾರೆ; ನಾನೂ ಹಾಗೆಯೇ ತಿಳಿದು 

ಕೊಂಡಿದ್ದೇನೆ. 

ವಿದ್ಯವೊ? ಇದರ ಅಭಾವವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಯಾರೂ ಮನ 

ಸ್ಸಿನಲ್ಲಿ ವಿದ್ಯೆಯ ಅಭಾವದಿಂದ ಅನುಪಮಳಾದೆಯೆಂದು ತಿಳಿಯಲಿಲ್ಲ. ನಾನೂ ತಿಳಿ 

ಯುವುದಿಲ್ಲ. 


ಧರ್ಮವೋ ? ಜನಗಳು ಹೇಳುವುದರಲ್ಲಿ  ಧರ್ಮದ ಅಭಾವವು ಪರಲೋಕದಲ್ಲಿ 

ದುಃಖಕ್ಕೆ ಕಾರಣವೆಂದು ದೇಹತ್ಯಾಗ,  ಒಂದು ಚರಿತ್ರೆಯನ್ನು ನೋಡುವುದರಲ್ಲಿ ಅಧ 

ರ್ಮದ ಅಭಾವವೇ ದುಃಖವನ್ನು ಕಾಣುತ್ತೇವೆ. ಇದು ಸುಳ್ಳು ಎಂದು ನನಗೆ 

ಗೊತ್ತುಂಟು. ಆದರ ಹಾಗೆ ತಿಳಿದಿದ್ದರೂ ಅನು ಧರ್ಮವನ್ನು ಅಪೇಕ್ಷಿಸುವುದಿಲ್ಲ, 

ನನಗೆ ಧರ್ಮದ ಅಭಾವವು ದುಃಖವಾಗಿಲ್ಲ. 


ಪ್ರಣಯವೋ ?  ಸ್ನೇಹವೊ ? ಪ್ರಿತಿಯೊ  ? ನಾನು ಇತರ ಅಭಾವವಾಗಿರುವುದು ಸುಖ 

ಎಂದು ತಿಳಿದು ಕೊಂಡಿದ್ದೇನೆ, ಪ್ರೀತಿ ಯೇ ದು-ಇದಕ್ಕೆ ಸಾಕ್ಷಿ-ಲವಂಗಲತೆ.  

 

ಹಾಗಾದರೆ ನನಗೆ ದುಃಖ ಯಾವದರದು ? ನನಗೆ ಅಭಾವವಾಗಿರುವುದು 

ಯಾವದು ? ನನಗೆ ಬೇಕಾದುದು ಯಾವದು ? ಯಾವುದರ ಲಾಭದಿಂದ ನಾನು ದುಃಖ 

ವನ್ನು ನಿವಾರಣೆಮಾಡಿಕೊಂಡೇನು ? ನನ್ನ ಕಾಮ್ಯವಸ್ತು ಯಾವದು ? 

 

ಗೊತ್ತಾಯಿತು. ನನ್ನ ಕಾಮ್ಯವಸ್ತುವಿನ ಅಭಾವವೇ ನನಗೆ ದುಃಖವೆಂದು 

ಗೊತ್ತಾಯಿತು. ಆದರೆ ಎಲ್ಲವೂ ಅಸಾರವಾದುದೆಂದು ತಿಳಿದಿದ್ದೇನೆ. ಹಾಗಾದರೆ 

ನನಗೆ ಕೇವಲ ದುಃಖವೇ ಸಾರವಾದುದು. 

-----------------------------------------

ನಾಲ್ಕನೆಯ ಪರಿಚ್ಛೇದ. 


ಸ್ವಲ್ಪ ಕಾಮ್ಯವಾದುದನ್ನು ಹುಡುಕಿದರೆ ಹೊಂದಲಾರೆನೆ ? ಇದು ಅನಂತ 

ವಾದ ಸಂಸಾರ, ಅಸ೦ಖ್ಯಾತವಾದ ರತ್ನರಾಜೆಮಯವಾದುದು. ಇದರಲ್ಲಿ ನನಗೆ 

ಪ್ರಾರ್ಥಿನೀಯವಾದುದು ಯಾವದೂ ಇಲ್ಲವೇ? ಯಾವ ಸಂಸಾರದಲ್ಲಿ ದೃಷ್ಟಿಗೆ 

ಗೋಚರವಿಲ್ಲದ ಅತ್ಯಲ್ಪವಾದ  ಒಂದೊಂದು ಕೀಟ ಪತಂಗವೂ ಅನಂತವಾದ ಕೌಶಲ 

ಪ್ರದರ್ಶಕವಾಗಿ ಅನಂತವಾದ ಜ್ಞಾನಕ್ಕೆ ಭ೦ಡಾರವಾಗಿದೆಯೋ, ಯಾವ ಜಗತ್ತಿನಲ್ಲಿ 

ಮಾರ್ಗದಲ್ಲಿ ಬಿದ್ದಿರುವ ಶಿಲಾಖಂಡವೂ ಅನಂತ ರತ್ನಗಳನ್ನು ಜನಿಸುವ ನಗಾಧಿರಾಜ 

ನಾದ ಮಹಾಮೇರುವನ ಭಗ್ನಾಂಶವಾಗಿರುವುದೋ, ಅಂತಹ ಜಗತ್ತಿನಲ್ಲಿ ನನಗೆ 

ಕಾಮ್ಯವಾದುದು ಒಂದು ವಸ್ತುವೂ ಇಲ್ಲವೆ ? ನೋಡಿ, ನಾನು ಎಷ್ಟು ಅಲ್ಪ ! 

ಟಿಂಡಲ್, ಹಕ್ಸಲಿ, ಡಾರ್ವಿನ್‌, ಢೈಯರ್‌ ಮು೦ತಾದವರು ಏಕಾಸನದಲ್ಲಿ ಕುಳಿತು, 

ಆ ಅಲ್ಪವಾದ ನೀಹಾರಬಿಂದು, ಆಮರಳುಕಣ, ಒಂದೇ ಮುಳ್ಳುಗಿಡದ ಹೂವು, 

(Argemona MexiCana) ಇವುಗಳ ಗಣವರ್ಣನೆ ಮಾಡಿ ಪೂರೈಸಲಿಲ್ಲ.

 ಹಾಗಿದ್ದರೂ ನನಗೆ ಬೇಕಾದವಿಲ್ಪವೆ ?  ನಾನೇನು ? 

 

ಈಗ ನೋಡಿ, ಈ ಪೃಥಿವಿಯಲ್ಲಿ ,  ಎಷ್ಟು ಕೋಟಿ ಮನುಷ್ಯರಿದ್ದಾರೆಂಬುವದಕ್ಕೆ ಯಾರ 

ಲೆಕ್ಕ ಮಾಡಿ ಪೂರೈಸಿಲ್ಲ. ಬಹುಕೋಟಿ ಮನ್ಗಷ್ಯರು ಇದ್ದಾರೆಂಬುದಕ್ಕೆ ಸಂದೇಹ 

ವಿಲ್ಲ. ಅದರಲ್ಲಿ ಒಬ್ಬೊಬ್ಬ ಮನುಷ್ಯನೂ ಅಸಂಖ್ಯವಾದ ಗುಣಗಳಗೆ ಆಧಾರನಾಗಿ 

ದ್ದಾನೆ. ಎಲ್ಲರೂ ಭಕ್ತಿ ಪ್ರೀತಿ ದಯೆ ಧರ್ಮಾದಿಗಳಿಗೆ ಆಧಾರವಾಗಿದ್ದಾರೆ. 

ಎಲ್ಲರೂ ಪೂಜ್ಯರು. ಎಲ್ಲರೂ ಅನುಸರಣೀಯರು. ನನ್ನ ಕಾಮ್ಯವಾದವರು ಯಾರೂ 

ಇಲ್ಲವೆ ? ನಾನೇನು ? 


ನನಗೆ ಬೇಕಾದದು ಒಂದು ಇತ್ತು. ಈಗಲೂ ಇದೆ. ಆದರೆ ಆ ಆಶೆಯು 

ಪೂರ್ಣವಾಗತಕ್ಕದ್ದಲ್ಲ. ಪೂರ್ಣವಾಗತಸ್ಮದಲ್ಲವೆಂತಲೇ ನನ್ನ ಹೃದಯದಿಂದ 

ಅದನ್ನು ತೆಗೆದುಹಾಕಿ ಒಹಳ ದಿನಗಳಾದವು. ಆದನ್ನು ಪ್ರವಃ ನೋಡುವುದಕ್ಕೆ ಇಷ್ಟ 

ಪಡುವುದಿಲ್ಲ. ಇನ್ನು ಬೇರೇ ವಾಂಛನೀಯವಾದುದು ಇಲ್ಲವೆ ? ಈ ಪ್ರಪಂಚದಲ್ಲಿ 

ಇಲ್ಲವೆ ? 


ಆದುದರಿಂದ ಹುಡುಕಬೇಕು, ಎನುಮಾಡಲಿ ? 


ಕೆಲವು ವರುಷಗಳಿಂದ ನನಗೆ ನಾನೇ ಈ ಪ್ರಶ್ನೆಯನ್ನು ಹಾಕಿಕೊಂಡು 

ಅದಕ್ಕೆ ಸರಿಯಾದ ಉತ್ತರವನ್ನು ಕೊಡಲಾರದವನಾಗಿದ್ದೆನು, ಒಬ್ಬಿಬ್ಬರು ಸ್ನೇಹಿತ 

----------------------------------------------  

42 ರಜನೀ 


ರನ್ನು ಕೇಳಿದರೆ ಅವರು ನಿನಗೆ ಸ್ವಂತ ಕೆಲಸವಿಲ್ಲದಿದ್ದರೆ ಇತರರ ಕೆಲಸವನ್ನು ಮಾಡು; 

ಜನರಿಗೆ ಯಧಾಸಾಧ್ಯವಾಗಿ ಉಪಕಾರವನ್ನು ನಾಡು ಎಂದು ಹೇಳುತಲಿದ್ದರು. 


ಅದು ಹಳೇ ಮಾತು, ಜನರಿಗೆ ಉಪಕಾರ ಮಾಡುವುದು ಹೇಗೆ ? ರಾಮನ 

ತಾಯಿಯ ಮೊಗುವಿಗೆ ಜ್ವರವಾಗಿದೆ. ನಾಡಿ ಹಿಡಿದು ನೋಡಿ ಸ್ವಲ್ಪ ಕ್ವಿನೈನು 

ಕೊಡು ; ಹುಚ್ಚನಾದ ರಘುವಿಗೆ ಮೈ ಮೇಲೆ ಬಟ್ಟೆ ಇಲ್ಲ. ಒಂದು ಕಂಬಳಿಯನ್ನು 

ತೆಗೆದುಕೊಡು ; ಹನುಮಂತನ ತಾಯಿ ವಿಧವೆ ; ಅವಳಿಗೆ ಮಾಶಾಶನವೇನಾದರು 

ಕೊಡು; ನಾಪಿಲ ಸುಂದರನು ಮಗನನ್ನು ಸ್ಕೂಲಿಗೆ ಕಳುಹಿಸಲು ಶಕ್ತಿಯಿಲ್ಲ. ಆತನಿಗೆ 

ಸ್ಕೂಲ್ ಫೀಗೊಸ್ಕರ ಅನುಕೂಲಪಡಿಸಿಕೊಡು. ಹೀಗೆ ಮಾಡುವುದು ಪರೋಪ 

ಕಾರವೆ ? 


ಇದೆಲ್ಲ ಪರರಿಗೆ ಉಪಕಾರವೆಂತಲೇ ಹೇಳೋಣ. ಇದನ್ನು ಮಾಡುವುದಕ್ಕೆ 

ಎಷ್ಟು ಹೊತ್ತು ಹಿಡಿದೀತು ? ಇದರಲ್ಲಿ ಎಷ್ಟು ಕಾಲ ಕಳೆಯಬಹುದು ? ಇದಕ್ಕೆ 

ಎಷ್ಟು ಶ್ರಮ ಪಡಬೇಕು ? ಇದರಿಂದ ಮಾನಸಿಕವಾದ ಶಕ್ತಿಯು ಎಷ್ಟರಮಟ್ಟಿಗೆ 

ಉತ್ತೇಜಿತವಾಗುವದು ? ಇಂತಹ ಕೆಲಸಗಳನ್ನೆಲ್ಲ ಯ.ಧಸಾಧ್ಯವಾಗಿ ನಾನು ಮಾಡಿ 

ದ್ದೇನೆಂದು ಹೇಳುವುದಿಲ್ಲ. ಆದರೆ ಎಷ್ಟು ಮಟ್ಟಿಗೆ ಮಾಡಿದರೆ ನನಗೆ ಇರುವ ಆಭಾ 

ವವು ಪೂರ್ಣವಾಗುವುದೋ? ಅದು ನನಗೆ ಗೊತ್ತಾಗುವುದಿಲ್ಲ. ನನ್ನ ಮನಸ್ಸು 

ಯಾವ ಕೆಲಸವನ್ನು ಮಾಡಿದರೆ ಅದರಲ್ಲಿ ಮಗ್ನನಾಗುವುದೋ ಅಂತಹ ಯೋಗ್ಯವಾದ 

ಕೆಲಸವನ್ನು ಹುಡುಕುತ್ತೇನೆ. 

 

ಮತ್ತೊಂದುಪ್ರಕಾರವಾದ ಲೋಕೋಪಕಾರದ ಗದ್ದಲವು ಹತ್ತಿದೆ. ಅದರ 

ಹೇಳಬೇಕಾದರೆ " ತಟವಟ ತುಡುಗು ವಾಚಾಟ, ಸರಬರ ಬರೆಯಾಟ" 

ಎಂದು ಹೇಳಬಹುದು. ಸೊಸೈಯಿಟಿ, ಕ್ಲಬ್ಬು, ಆಸೊಸಿಯೇಷನ್‌, ಸಭಾ, 

ಸ್ಟಾಂಡಿಂಗ್ ಕಮಿಟಿ, * ನೇಷನಲ್ ಕಾನ್‌ಗ್ರೆಸ್, ಸೋಷಿಯಲ್ ಕಾನ್‌ಗ್ರೆಸ್, 

.................

* ಇದೂ ಒಂದು ರೋಗ ವಿಶೇಷ :ಶೀತ ಪಿತ ವಾತೆಷ್ಟಗಳು ಹೆಚ್ಚು ಕಡಮೆಯಾದ

 ಹಾಗೆಲ್ಲಾ ರೋಗ ನಿದಾನದಿಂದ ರೋಗಕ್ಕೆ ಬೇರೆ ಬೇರೆ ಹೆಸರು ಉಂಟಾಗುತ್ತದೆ, ಪಿತ್ತ ವಾತೋಷ್ಣ 

 ಗಳು ಉಲ್ಬಣವಾದರೆ, ಸ್ವಾಂಡಿಂr ಕಮ್ಮಿಟಿ, ಸ್ಲಾಂಟಿಂಗ್ ಕಮ್ಮಿಟಿ, ಸೈಡಿಂಗ್ ಕಮ್ಮಿಟಿ, ಸಿಟ್ಟಿಂಗ್ 

 ಕಮ್ಮಿಟಿ, ಎಂದು ಮುಂತಾಗಿ ರೋಗದಲ್ಲಿ ಪ್ರಭೇದಗಳುಂಟಾಗುತ್ತವೆ ಶೀತವು ವಿಷಮಿಸಿದರೆ ಸ್ಲೀಪಿಂಗ್ 

 ಕಮ್ಮಿಟಿಯಾಗಿ ಪರಿಣಮಿಸುತ್ತದೆ ಹೀಗೆಯೇ ಗ್ರಾಮದ ಸಭೆ, ಕೃಷಿಕರ ಸಭೆ, ಆವೂರ, ಸಭೆ, ಈ

 ವೂರು ಸಭೆ, ಪಟ್ಣ ಸಭೆ, ನಗರ ಸಭೆ, ಎಂದು ಮುಂತಾಗಿ ಪ್ರಭೇದವುಂಟಾಗುತ್ತದೆ. ಮಳೆಗಾಲವಾದ 

 ಭಾದ್ರಪದ ಆಶ್ವಯುಜ ಮಾಸಗಳಲ್ಲಿ ಒಂದೊಂದುಸಲ ಶೀತವು ವಿಷಮಿಸಿ, ರೋಗಿಯೂ ರೋಗವೂ ಸಹ 

 ತಣ್ಣಗಾಗುವುದುಂಟು, ಹೀಗಾಗುವುದು ಆಶ್ವಯುಜ ಮಾಸದಲ್ಲಿ ಹೆಚ್ಚು, 

--------------------------------------------

ನಾಲ್ಕನೆಯ ಪರಿಚ್ಛೇದ ೪೩ 


ಸಮಾಜ, ವಕ್ತೃತೆ, ರೆಜಲ್ಯೂರ್ನ್‌, ಮೆಮೋರಿಯಲ್, ಆವೇದನ, ನಿವೇದನ, ಸಮ 

ವೇದನ, ಇತ್ಯಾದಿಗಳೆದ್ದಿವೆ. ನಾನು ಅದಕ್ಕೆ ಯೋಗ್ಯನಲ್ಲ. ನಾನೊಂದುಸಲ ಸನ್ನ 

ಸ್ನೇಹಿತನು ಒಂದು ಮಹಾಸಭೆಯ ಆವೇದನಪತ್ರವನ್ನು ಓದುತಲಿದ್ದುದನ್ನು ನೋಡಿ, 

ಇದೇನೆಂದು ಕೇಳಿದ್ದಕ್ಕೆ ಅವನು ಅಂತಹದು ಏನೂ ಅಲ್ಲ ; ಒಬ್ಬ ಕುರುಡ ಫಕೀರನು 

ಭಿಕ್ಷೆ ಬೇಡುತ್ತಾನೆಂದು ಹೇಳಿದನು. ಇದೆಲ್ಲ ನನ್ನ ಅಲ್ಪಬುದ್ದಿಗೆ ಕುರುಡ ಫಕೀರನ 

ಭಿಕ್ಷೆ ಎಂದು ತೋರುತ್ತದೆ. 


ಈ ರೋಗಕ್ಕೆ ಮತ್ತೊಂದು ಪ್ರಕಾರವಾದ ವಿಕಾರವಂಟು, ವಿಧವೆಗಳಿಗೆ 

ವಿವಾಹ ಮಾಡು ; ಕುಲೀನ ಭಾಹ್ಮಣರ ವಿವಾಹವನ್ನು ನಿಲ್ಲಿಸು ; ಅಲ್ಪವಯಸ್ಸಿನಲ್ಲಿ 

ವಿವಾಹವನ್ನು ಬಂಧಮಾಡು ; ಜಾತಿಯನ್ನು ತೆಗೆದುಹಾಕು ; ಹೆಂಗಸರು ಈಗ ದನ 

ಗಳಹಾಗೆ ಕೊಟ್ಟಿಗೆಯಲ್ಲಿ ಕಟ್ಟಲ್ಪಟ್ಟಿದ್ದಾರೆ ; ಹಗ್ಗ ಬಿಚ್ಚಿ ಅವರನ್ನು ಬಿಟ್ಟುಬಿಡು ; 

ಧಾರಾಳವಾಗಿ ಮೇಯುತ್ತಿರಲಿ ಎಂದು ಮುಂತಾಗಿ ಒಂದು ವಿಧವಾದ ಬೊಗಳು 

ಏರಿಹೋಗಿದೆ. ನನಗೆ ದನವಿಲ್ಲ. ಇತರರ ಕೊಟ್ಟಿಗೆಯಲ್ಲಿ ಸಂಬಂಧವೂ ಇಲ್ಲ. ಜಾತಿ 

ಯನ್ನು ತೆಗೆದುಹಾಕಲು ನನಗೆ ಅಷ್ಟು ರಾಜೆಯಿಲ್ಲ, ನಾನು ಅಷ್ಟು ದೂರ ಇದುವ 

ರೆಗೂ ಸುಶಿಕ್ಷಿತನಾಗಿಲ್ಲ. ನನಗೆ ಇನ್ನೂ ಬೀದಿ ಗುಡಿಸುವವರ ಪಂಕ್ತಿಯಲ್ಲಿ ಕೂತು 

ಕೊಂಡು ಊಟಮಾಡುವುದಕ್ಕೆ ಇಷ್ಟವಿಲ್ಲ, ಅವರ ಹೆಣ್ಮಕ್ಕಳನ್ನು ಮದುವೆ 

ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ. ಪಂಡಿತಶಿರೋಮಣಿ ಮಹಾಶಯರು ನನ್ನನ್ನು 

ಬೈಯುವ ಬೈಗಳನ್ನಾದರೂ ಸಹಿಸಿಕೊಳ್ಳುವೆನೇ ಹೊರ್ತು ಮಾರ್ಜಸಿಧಾರಿಗಳ ಹತ್ತಿರ 

ಕೂಡುವುದನ್ನು ಸಹಿಸಲಾರೆನು, ಆದಕಾರಣ ನನಗೆ ಜಾತಿಯಿರಲಿ, ವಿಧವಾ ವಿವಾಹ 

ವನ್ನು ಮಾಡುವವರು ಮಾಡಿಕೊಳ್ಳಲಿ. ಕುಲೀನ ಬ್ರಾಹ್ಮಣರು ಏಕಪತ್ನಿ ವ್ರತದ 

ಕಷ್ಟದಲ್ಲಿ ಸುಲಿಗಳಾದರೆ ಆಗಲಿ, ನನ್ನಾಕ್ಷೇಪಣೆ ಯಿಲ್ಲ. ಆದರೆ ಇದನ್ನೆಲ್ಲಾ ಅನು 

ಮೋದಿಸಿ ಪೋಷಿಸುವುದರಿಂದ ಜನಗಳಿಗೆ ಏನು ಹಿತಮಾಡಿದಹಾಗಾಗಳಗುತ್ತದೋ ಅದು 

ನನ್ನ ಅಲ್ಪಬುದ್ದಿಗೆ ಗೋಚರವಾಗುವುದಿಲ್ಲ. 


ಆದುದರಿಂದ ಈ ಸಮಾಜದಲ್ಲಿ ನನಗೇನೂ ಕಾರ್ಯವಿಲ್ಲ. ನಾನು ಯಾರ 

ಅಲ್ಲ. ಇದುವರೆಗೆ ನಾನೇ ನಾನಾಗಿದ್ದೇನೆ. ಇನ್ನೇನೂ ಇಲ್ಲ. ನನಗೆ ಆ ದುಃಖ-- 

ಮತ್ಯಾವ ದುಃಖವೂಇಲ್ಲ., ಲವಂಗತಿಯ ಕೈ ಬರಹವು ಮರೆಯುತ್ತ ಬಂತು. 

--------

------------------------------------------

ಐದನೆಯ ಪರಿಚ್ಛೇದೆ 


ನನ್ನ ಮನಸ್ಸು ಈಯವಸ್ಥೆಯಲ್ಲಿದ್ದ ಸಮಯದಲ್ಲಿ ಕಾಶೀಧಾಮದಲ್ಲಿ 

ಗೋವಿಂದದನಿಂದ ರಜನಿಯ ಹೆಸರನ್ನು ಕೇಳಿದೆನು. ಅದನ್ನು ಕೇಳಿ, ಮನಸ್ಸಿನಲ್ಲಿ 

ಈಶ್ವರನು ನನಗೆ ಒಂದು ಗುರುತರವಾದ ಕಾರ್ಯಭಾರವನ್ನು ವಹಿಸಿದನೆಂದು ತಿಳಿದು 

ಕೊಂಡೆನು, ಈ ಸಂಸಾರ ಪ್ರಪಂಚದಲ್ಲಿ ನನಗೆ ಒಂದು ಕಾರ್ಯವು ಸಿಕ್ಕಿತು. ರಜನಿಗೆ 

ಯಥಾರ್ಥವಾದ ಉಪಕಾರವನ್ನು ಮಾಡಬಹುದು. ನನಗೇನೋ ಬೇರೆ ಕೆಲಸವಿಲ್ಲ. 

ಈ ಕೆಲಸವನ್ನೇತಕ್ಕೆ ಮಾಡಕೂಡದು ? ಇದು ನನಗೆ ಯೋಗ್ಯವಾದ ಕಾರ್ಯ 

ವಲ್ಲವೇನು ? 


ಇಲ್ಲಿ ಶಚೀಂದ್ರನ ವಂಶಾವಳಿಯ ಪರಿಚಯವನ್ನು ಸ್ವಲ್ಪ ಹೇಳಬೇಕಾಗಿ 

ಬಂತು, ಶಚೀಂದ್ರನಾಥನ ತಂದೆಯ ಹೆಸರು ರಾಮಸದಯಮಿತ್ರ : ಪಿತಾಮಹನ 

ಹೆಸರು ವಾಂಛಾರಾಮಮಿತ್ರ ; ಪ್ರಪಿತಾಮಹನ ಹೆಸರು ಶುದ್ಧರಾಮಮಿತ್ರ, ಅವನ 

ಪೂರ್ವಪುರುಷರ ವಾಸಸ್ಥಳವು ಕಲಿಕಯಲ್ಲ. ಅವರು ಭವಾನಿನಗರದಲ್ಲಿದ್ದರು. 

ಅವನ ತಂದೆಯೇ ಮೊದಲು ಕಲಿಕತ್ತಾಕ್ಕೆ ಬಂದವನು, ಪ್ರಪಿತಾಮಹನು ಏನೂ 

ಇಲ್ಲದ ದರಿದ್ರನಾಗಿದ್ದನು. ಪಿತಾಮಹನು ಸ್ವಬುದ್ದಿ ಬದಿಂದ ಹಣ ಸಂಪಾದಿಸಿ 

ಭೂಮಿ ಕಾಣಿ ಮಾಡಿದ್ದನು. 

 

ವಾಂಛಾರಾಮನಿಗೆ ಒಬ್ಬ ಪರಮಸ್ನೇಹಿತನಿದ್ದನು. ಅವನ ಹೆಸರು ಮನೋಹರ 

ದಾಸ, ವಾ೦ಛಾರಾಮನು ಮನೋಹರದಾಸನ ಸಹಾಯದಿಂದಲೇ ಈ ವೈಭವಗಳಿಗೆ 

ಅಧಿಪತಿಯಾದನು. ಮನೋಹರನು ಸತ್ವ ಪ್ರಯತ್ನದಿಂದ ಸ್ನೇಹಿತನ ಕಾರ್ಯವನ್ನು 

ಮಾಡುತಲಿದ್ದನು, ಸ್ವಂತವಾಗಿ ಹಣ ಸಂಪಾದಿಸಿಕೊಳ್ಳಲಿಲ್ಲ. ವಾಂಛಾರಾಮನು ಈ 

ಗುಣಗಳನ್ನು ಕಂಡು ಅವನಿಗೆ ಬಹಳ ಬಾಧ್ಯಪಟ್ಟಿದ್ದನು. ಮನೋಹರನನ್ನು ಸಹೋ 

ದರನ ಹಾಗೆ ಭಾವಿಸಿ ಪ್ರೀತಿಸುತಲಿದ್ದನು. ಮತ್ತು ಮನೋಹರನು ವಯೋಜ್ಯೇಷ್ಠ  

ನಾದುದರಿಂದ ಅಣ್ಣನ ಹಾಗೆ ಅವನನ್ನು ಮರ್ಯಾದೆ ಮಾಡುತಲಿದ್ದನು. ರಾಮಸದಯನ 

ತಂದೆಯಾದ ವಾಂಛಾಗಾಮನಿಗೂ ಮನೋಹರನಿಗೂ ಇದ್ದ ಹಾಗೆ ಮನೋಹರನಿಗೂ 

ರಾಮಸದಯನಿಗೂ ಪ್ರೀತಿ ವಿಶ್ವಾಸವಿರಲಿಲ್ಲ. ಅವರವರಿಗೆ ಸ್ವಲ್ಪ ದ್ವೇಷವೇ ಇತ್ತೆಂದು 

ತೋರುತ್ತದೆ. 

 

ಒಂದುಸಲ ರಾಮಸದಯನಿಗೂ ಮನದರದಾಸನಿಗೂ ಘೋರತರವಾದ 

ವಿವಾದವುಂಟಾಯಿತು. ಮನೋಹರನು ವಾಂಛರಾಮನಿಗೆ ನಿನ್ನ ಮಗ ರಾಮಸದ 

---------------------------------------------

ಐದನೆಯ ಪರಿಚ್ಛೇದ ೪೫ 

ಯನು ಒಂದು ವಿಷಯದಲ್ಲಿ ಸಹನಾತೀತವಾದ ಅಪಮಾನ ಮಾಡಿದ್ದಾನೆಂದು ತಿಳಿಸಿ, 

ಅಪಮಾನದ ಮಾತನ್ನು ಅವನಿಗೆ ಹೇಳಿ, ವಾ೦ಛರಾಮನ ಕೆಲಸಗಳನ್ನು ಮಾಡಿ 

ಸಹಾಯಮಾಡುವುದನ್ನು ಬಿಟ್ಟು ಸಪರಿವಾರವಾಗಿ ಭವಾನಿನಗರವನ್ನು ಬಿಟ್ಟು ಹೊರಟು 

ಹೋದನು. ವಾಂಛಾenಮನು ಮನೋಹರನಿಗೆ ಅನೇಕವಿಧವಾಗಿ ಅನುನಯ ವಿನಯ 

ಗಳಿಂದ ಹೇಳಿಕೊಂಡನು. ಆದರೆ ಮನೋಹರನು ಯಾಗದನ್ನೂ ಕೇಳಲಿಲ್ಲ. ಊರು 

ಬಿಟ್ಟು ಯಾವದೇಶಕ್ಕೆ ಹೋದನೋ ಅದನ್ನೂ ಹೇಳದೆ ಹೊರಟುಹೋದನು. 


ವಾಂಛಾರಾಮನು ಮಗನಮೇಲೆ ವಿಶ್ವಾಸವುಳ್ಳವನಾಗಿದ್ದರೂ ಮನೋಹರ 

ನನ್ನು ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತಲಿದ್ದನು. ಆದಕಾರಣ ರಾಮಸದಯನ 

ಮೇಲೆ ಅಪರಿಮಿತವಾಗಿ ಕೋಪಗೊಂಡು ಅವನನ್ನು ಅತ್ಯಂತ ಕಟೂಕ್ತಿಗಳಿಂದ ಬೈದನು. 

ರಾಮಸದಯನೂ ಎಲ್ಲಾ ಮಾತುಗಳನ್ನು ನಿಶ್ಯಬ್ದವಾಗಿ ಸಹಿಸಿಕೊಂಡು ಕೇಳಲಿಲ್ಲ, 


ತಂದೆ ಮಗನ ವಿವಾದದಲ್ಲಿ ವಾಂಛಾರಾಮನು ಮಗನನ್ನು ಮನೆಯಿಂದ 

ಹೊರಡಿಸಿಬಿಟ್ಟನು, ಮಗನು ಮನೆಯನ್ನು ಬಿಟ್ಟು ಪುನಃ ತಂದೆಯ ಮನೆಯಲ್ಲಿ ಮುಖ 

ತೋರಿಸುವುದಿಲ್ಲವೆಂದು ಶಪಥಮಾಡಿಕೊಂಡು ಹೊರಟುಹೋದನು. ವಾಂಛಾರಾಮನು 

ಒಂದು ಉಯಿಲ್ ಬರೆದಿಟ್ಟನು, ಉಯಿಲಿನಲ್ಲಿ ತನ್ನ ಪುತ್ರನಾದ ರಾಮಸದಯನು 

ಯಾವಾಗ ತನ್ನ ಆಸ್ತಿಗೆ ಅಧಿಕಾರಿಯಾಗಕೂಡದೆಂತಲೂ, ವಾ೦ಛಾರಾಮನ 

ಮರಣಾನಂತರ, ಮನೋಹರದಾಸನು, ಅವನು ಇಲ್ಲದಿದ್ದರೆ ಅವನ ಉತ್ತರಾಧಿಕಾರಿ 

ಗಳು ಆಸ್ತಿಗೆ ಅಧಿಕಾರಿಗಳಾಗಬೇಕೆಂತಲೂ, ಅವರಿಲ್ಲದಿದ್ದರೆ ರಾಮಸದಯನ ಪುತ್ರ 

ಪೌತ್ರಾದಿಗಳು ಯಧಾಕ್ರಮವಾಗಿ ಅಧಿಕಾರಿಗಳಾಗಬೇಕೆಂತಲೂ, ರಾಮಸದಯನ 

ಮಾತ್ರ ಆಸ್ತಿಯನ್ನು ಹೊಂದಕೊಡದೆಂತಲೂ ಬರೆದಿಟ್ಟನು. 


ರಾಮಸದಯನು ಮೊದಲು ಹೆಂಡತಿಯನ್ನು ಕರೆದುಕೊಂಡು ತಂದೆಯ ಮನೆ 

ಯನ್ನು ಬಿಟ್ಟು ಕಲಿಕತ್ತೆಗೆ ಬಂದನು. ಆ ಹೆಂಡತಿಗೆ ತಂದೆಯು ಕೊಟ್ಟ ಸ್ವಲ್ಪ ಸ್ತ್ರೀ 

ಧನವಿತ್ತು, ಅದರ ಅವಲಂಬನದಿಂದಲೂ ಒಬ್ಬ ಒಳ್ಳೆ ಸಜ್ಜನನಾದ ವರ್ತಕನ 

ಸಹಾಯದಿಂದಲೂ ರಾಮಸದಯನು ವ್ಯಾಪಾರದಲ್ಲಿ ಪ್ರವೃತ್ತನಾದನು. ಲಕ್ಷ್ಮಿಯು 

ಸುಪ್ರಸನ್ನಳಾದಳು, ಸಂಸಾರ ನಡೆಯುವುದಕ್ಕೆ ಅವನಿಗೆ ಕಷ್ಟವೇನೂ ಉಂಟಾಗಲಿಲ್ಲ. 

 

ಹಾಗೆ ಕಷ್ಟವೇನಾದರೂ ಬಂದಿದ್ದರೆ ವಾಂಛಾರಾಮನು ಸದಯನಾಗುತ 

ಲಿದ್ದನು. ಪುತ್ರನ ಸುಖಃವಸ್ಥೆಯನ್ನು ಕೇಳಿ ತಂದೆಗೆ ಇದ್ದ ಸ್ನೇಹಣವಶೇಷವೂ ಕೂಡ 

ಅಳಿಸಿಹೋಯಿತು. ಪುತ್ರನು ಸ್ವಾಭಿಮಾನದಿಂದ ತಂದೆಯು ಕರೆಯದೆ ಪುನಃ ಮನೆಗೆ 

---------------------------------------------

46 ರಜನೀ 


ಹೋಗುವದಿಲ್ಲ ಎಂದು ಸ್ಥಿರಮನಸ್ಕನಾಗಿ ತಂದೆಯ ಸಮಾಚಾರವನ್ನೇ ವಿಚಾರಿಸಿ 

ಕೊಳ್ಳಲಿಲ್ಲ. ಭಕ್ತಿಯಿಲ್ಲದೆ ತಾತ್ಕಾರದಿಂದ ಪುತ್ರನು ಹೀಗೆ ಮಾಡುತ್ತಾನೆಂದು 

ಯೋಚಿಸಿಕೊಂಡು ವಾ೦ಛಾರಾಮನು ಅವನನ್ನು ಪುನಃ ಕರೆಯಲೇ ಇಲ್ಲ. 

 

ಆದುದರಿಂದ ಪರಸ್ಪರ ಪುನಃ ಪ್ರೀತಿಯುಂಟಾಗಲಿಲ್ಲ. ಉಯಿಲು ಬದಲಾಯಿಸ 

ಲ್ಪಡದೆ ಹಾಗೆಯೇ ನಿಂತಿತು. ಹೀಗಿರುತ್ತ ಹಟಾತ್ತಾಗಿ ವಾಂಛಾರಾಮನಿಗೆ ಸ್ವರ್ಗ 

ಪ್ರಾಪ್ತಿಯುಂಟಾಯಿತು. 


ರಾಮಸದಯನು ಶೋಕಾಕುಲನಾದನು ; ತಂದೆಯು ಸಾಯುವುದಕ್ಕೆ 

ಮೊದಲು ಅವನ ಸಂಗಡ ಸಾಕ್ಷಾತ್ಕಾರವಾಗಿ ಮಾತನಾಡಿ ಮಾಡತಕ್ಕದ್ದೇನೆಂಬುದನ್ನು 

ತಿಳಿದುಕೊಳ್ಳದೆ ಹೋದುದಕ್ಕಾಗಿ ದುಃಖದಿಂದ ಅನೇಕ ದಿನಗಳ ಪರ್ಯ೦ತವಾಗಿ 

ರೋದನ ಮಾಡಿದನು. ಅವನು ಪುನಃ ಭವಾನಿನಗರಕ್ಕೆ ಹೋಗಲಿಲ್ಲ. ಕಲಿಕತ್ತೆ  

ಯಲ್ಲಿಯೇ ಪಿತೃ ಕೈ೦ಕರ್ಯವನ್ನು ನೆರವೇರಿಸಿದರು, ಏತಕ್ಕೆ೦ದರೆ, ಈಗ ಭವಾನಿನಗರದ 

ಮನೆಯು ಮನೋಹರದಾಸನದಾಯಿತು.  


ಇತ್ತಲಾಗಿ ಮನೋಹರನ ಸಮಾಚಾರವೇ ಇಲ್ಲ. ಕಡೆಗೆ ತಿಳಿದುಬಂದುದರಲ್ಲಿ 

ವಾಂಛಾರಾಮನು ಬದುಕಿರುವಾಗಲೇ ಮನೋಹರನ ಸಮಾಚಾರೆ ಗೊತ್ತಾಗಿರಲಿಲ್ಲ, 

ಮನೋಹರದಾಸನು ಮೊದಲು ಭವಾನಿನಗರವನ್ನು ಬಿಟ್ಟಾಗಲೇ ಹೊರಟುಹೋದದು,  

ವಾಂಛಾರಾಮನು ಎಷ್ಟು ಪ್ರಯತ್ನ ಪಟ್ಟಾಗ್ಗೂ ಸಮಾಚಾರವೇ ಸಿಕ್ಕಲಿಲ್ಲವಾದ 

ಕಾರಣ ಉಯಿಲಿಗೆ ಒಂದು ಕ್ರೋಡ ಪತ್ರವನ್ನು (Codicil) ಬರೆದಿಟ್ಟನು. ಅದರಲ್ಲಿ 

ತನ್ನ ಬಂಧುವಾದ ಕಲಿಕತ್ತೆಯಲ್ಲಿರುವ ವಿಷ್ಣು ರಾಮಸರ್ಕಾರನೆಂಬುವನನ್ನು ಉಯಿಲಿಗೆ 

ಯಗ್ಜಿಕ್ಯೂಟರನ್ನಾಗಿ ಗೊತ್ತು ಮಾಡಿ ಅವನು ಮನೋಹರನನ್ನು ಪ್ರಯತ್ನ ಪಟ್ಟು ಪತ್ತೆ 

ಹಚ್ಚಿಸಿ ಆ ಪ್ರಯತ್ನದ ಫಲಾನುಸಾರವಾಗಿ ಆಸ್ತಿಯು ಯಾರಿಗೆ ಸೇರಬೇಕೋ ಅವರವ 

ರಿಗೆ ತಲ್ಪಿಸಬೇಕೆಂದು ಬರೆದನು. 


ವಿಷ್ಣು ರಾಮಬಾಬು ಬಹಳ ವಿಚಕ್ಷಣನಾಗಿ ನಿರಪೇಕ್ಷನಾದ ಕರ್ಮಠನಾಗಿದ್ದನು. 

ಅವನು ವಾಂಛಾರಾಮನು ಸತ್ತಕೂಡಲೇ ಮನೋಹರನು ಇರುವ ಸ್ಥಳದ ಅನು 

ಸಂಧಾನ ಮಾಡತೊಡಗಿದನು. ಬಹಳ ಶ್ರಮಪಟ್ಟು ದುಡ್ಡು ಖರ್ಚುಮಾಡಿ ವಾಂಛಾ 

ರಾಮನು ಹುಡುಕದ ಸ್ಥಳಗಳನ್ನು ಹುಡುಕಿದ್ದರಮೇಲೆ, ಮನೋಹರನು ಭವಾನಿ 

ನಗರದಿಂದ ಓಡಿಹೋದವನು ಕೆಲಕಾಲ ಸಪರಿವಾರವಾಗಿ ಡಾಕ್ಕಾ ಪ್ರಾಂತ್ಯದಲ್ಲಿದ್ದು, 

ಅಲ್ಲಿ ಜೀವನ ನಡೆಯುವದು ಕಷ್ಟವಾಗಿ ಕಲಿಕತ್ತೆಗೆ ಹೋಗಬೇಕೆಂದು ನೌಕದಲ್ಲಿ ಬರು 

------------------------------------------------

ಆರನೆಯ ಪರಿಚ್ಛೇದ ೪೭ 

ತ್ತಿರುವಾಗ ದಾರಿಯಲ್ಲಿ ಬಿರುಗಾಳಿ ಎದ್ದು ಸರಿವಾರವಾಗಿ ನೌಕದೊಂದಿಗೆ ಜಲಮಗ್ನ 

ನಾದನೆಂದು ತಿಳಿಯಬಂತು. ಅವನ ಉತ್ತರಾಧಿಕಾರಿಗಳಿರುವುದು ಗೊತ್ತಾಗಲಿಲ್ಲ. 


ವಿಷ್ಣು ರಾಮಬಾಬುವು ಇದರ ನಿಜತ್ವಕ್ಕೆ ಬೇಕಾದ ರುಜುವಾತಗಳನ್ನು ಒದಗಿಸಿ 

ಕೊಂಡು ರಾಮಸದಯನಿಗೆ ತಿಳಿಸಿದನು. ಆಗ ವಾ೦ಛಾರಾಮನ ಆಸ್ತಿಯು ಶಚೀಂದ್ರ 

ಮತ್ತು ಅವನ್ನ ಅಣ್ಣ ಇವರಿಬ್ಬರಿಗೆ ಬಂತು. ವಿಷ್ಣು ರಾಮಬಾಬು ಆಸ್ತಿಯನ್ನೆಲ್ಲಾ 

ಅವರಿಗೆ ಒಪ್ಪಿಸಿದನು, 


ಈಗ ರಜಿನಿಯು ಬದುಕಿದ್ದರೆ ರಾಮಸದಯನು ಅನುಭವಿಸುವ ಆಸ್ತಿಯು 

ಅವಳದಾಗುವುದು, ರಜನಿಯು ಅತ್ಯಂತ ದರಿದ್ರಾವಸೆಯಲ್ಲಿದ್ದಾಳೆ. ಹುಡುಕಿ ಪತ್ತೆ 

ಹಚ್ಚಬೇಕು. ನನಗೆ ಬೇರೆ ಕೆಲಸವಿಲ್ಲ. 

   -------

ಆರನೆಯ ಪರಿಚ್ಛೇದ. 

ಬಂಗಾಳೆಗೆ ಬಂದಮೇಲೆ ಒಂದು ಗ್ರಾಮದಲ್ಲಿ ನಮ್ಮ ನೆಂಟರು ಔಶನಹೇಳಿ 

ದ್ದರು ; ಅಲ್ಲಿಗೆ ಹೋಗಿದ್ದೆ. ಪ್ರಾತಃಕಾಲದಲ್ಲಿ ಊರು ತಿರುಗಿಕೊಂಡು ಬರೋಣ 

ವೆಂದು ಹೊರಟೆನು. ಒಂದು ಸ್ಥಳದಲ್ಲಿ ಅತಿ ಮನೋಹರವಾದ ನಿಭೃತವಾದ ಕಾಡು. 

ಪಕ್ಷಿಗಳು ಸಪ್ತ ಸ್ವರಗಳನ್ನು ಸೇರಿಸಿ ಆಶ್ಚರ್ಯವಾಗಿ ಹಾಡುತಲಿದ್ದವು. ನಾಲ್ಕು ದಿಕ್ಕು 

ಗಳಲ್ಲಿಯ ವೃಕ್ಷರಾಜೆ ; ಮರಗಳು ದಟ್ಟವಾಗಿ ಬೆಳದು ಕೋಮಲತರವಾದ ಶಾಮಲ 

ವರ್ಣದ ಪಲ್ಲವಗಳಿಂದ ಮರೆಮಾಡಲ್ಪಟ್ಟಿದ್ದವು. ಮರದೆಲೆಗಳು ಒಂದಕ್ಕೊಂದು 

ದಳದುಕೊಂಡು ಏಕಾಕಾರವಾಗಿ ಶ್ಯಾಮರೂಪವುಳ್ಳ ರಾಶಿರಾಶಿಯಾಗಿ ಕಣ್ಗೊಳಿಸುತ 

ಲಿದ್ದವು. ಒಂದೊಂದು ಕಡೆಯಲ್ಲಿ ಹೂ ಮೊಗ್ಗುಗಳು ; ಒಂದೊಂದು ಕಡೆಯಲ್ಲಿ 

ಸುಚಿತವಾದ ಪುಷ್ಪಗಳು ; ಒಂದೊಂದು ಕಡೆಯಲ್ಲಿ ಪಕ್ವವಾದ ಮತ್ತು ಅಪಕ್ವವಾದ 

ಫಲಗಳು, ಆ ವನ ಮಧ್ಯದಲ್ಲಿ ಯಾರೋ ಆರ್ತನಾದವನ್ನು ಮಾಡುತಲಿದ್ದ ಹಾಗೆ 

ಕೇಳಿಸಿತು. ಕೇಳೆ ಆ ವನದೊಳಗೆ ಪ್ರವೇಶಿಸಿ ನೋಡಲಾಗಿ ಒಬ್ಬ ವಿಕಟಾಕಾರ್ಯವುಳ್ಳ 

ಪುರುಷನು ಒಬ್ಬ ಯುವತಿಯನ್ನು ಆಕ್ರಮಣಮಾಡುತಲಿದ್ದುದನ್ನು ನೋಡಿದೆನು. 

 

ನೋಡಿದ ಕೂಡಲೇ ಪುರುಷನು ಅತಿ ನೀಚ ಜಾತಿಯವನಾದ ಪಾಷಂಡನಾಗಿ 

ಕoಡಿತು. ಅವನು ಹೊಲೆಯನೋ ಮಾದಿಗನೂ ಆಗಿರಬಹುದೆಂದು ತೋರಿತು. 

ಸೊಂಟದಲ್ಲಿ ಒಂದು ಮಚ್ಚು ಇತ್ತು, ಅತ್ಯಂತ ಬಲಶಾಲಿಯಾಗಿ ಕಂಡನು 

------------------------------------------

೪೮ ರಜನಿ 


ಮೆಲ್ಲ ಮೆಲ್ಲಗೆ ಅವನ ಹಿಂದುಗಡೆ ಹೋದೆನು, ಹೋಗಿ ಅವನ ಸೊಂಟದ 

ಲಿದ್ದ ಮಚ್ಚನ್ನು ತೆಗದು ದೂರ ಬಿಸಾಟೆನು, ದುಷ್ಟನು ಆಗ ಯುವತಿಯನ್ನು ಬಿಟ್ಟು 

ನನ್ನ ಇದಿರಿಗೆ ಬಂದು ನಿಂತನು, ನನ್ನನ್ನು ಬೈದನು, ಅವನ ಕಣ್ಣುಗಳನ್ನು ನೋಡಿ 

ನನಗೆ ಭಯವಾಯಿತು. 

 

ಇನ್ನು ಅಲ್ಲಿ ಹೆಚ್ಚು ಕಾಲವಿಳಂಬ ಮಾಡುವುದು ಸರಿಯಲ್ಲ ಎಂದು ತಿಳಿದು 

ಒಂದುಸಲ ಅವನ ಕುತ್ತಿಗೆಗೆ ಕೈ ಹಾಕಿದೆನು, ಅವನದನ್ನು ಬಿಡಿಸಿಕೊಂಡು ನನ್ನನ್ನು 

ಹಿಡಿದುಕೊಂಡನು. ನಾನೂ ಪುನಃ ಅವನನ್ನು ಹಿಡಿದೆನು. ಅವನಿಗೆ ಬಲ ಹೆಚ್ಚು. 

ಆದರೆ ನಾನು ಭೀತನಾಗಲಿಲ್ಲ. ನನಗೆ ಧೈರ್ಯವೂ ಕುಂದಲಿಲ್ಲ. ಅವನನ್ನು ಹಿಡಿದು 

ಕೊಂಡು, ಅಲ್ಲಿದ್ದ ಯುವತಿಯನ್ನು ಕುರಿತು, ನೀನು ಓಡಿಹೋಗು, ಇವನಿಗೆ ಸರಿ 

ಯಾದ ದಂಡನೆ ಮಾಡುತ್ತೇನೆಂದು ಹೇಳಿದನು. 


ಯುವತಿಯು ಎಲ್ಲಿಗೆ ಹೋಗಲಿ ; ನಾನು ಕುರುಡಳು, ಇಲ್ಲಿ ದಾರಿಯು 

ಗೊತ್ತಿಲ್ಲವೆಂದು ಹೇಳಿದಳು. 


ಅಂಧ ! ನನ್ನ ಬಲವು ಹೆಚ್ಚಾಯಿತು. ನಾನು ರಜನಿಯೆಂಬ ಒಬ್ಬ ಅಂಧ 

ಕನೈಯನ್ನು ಹುಡುಕುತಲಿದ್ದೆನು. 

 

ಆ ಬಲಿಷ್ಠನಾದ ದುಷ್ಟನು ನನ್ನನ್ನು ಬಲಪೂರ್ವಕವಾಗಿ ಎಳೆದುಕೊಂಡು 

ಹೋಗುತಲಿದ್ದನು. ಅವನು ನನ್ನನ್ನು ಎಳೆದುಕೊಂಡು ಹೋದ ದಿಕ್ಕು ನೋಡಲಾಗಿ 

ನಾನು ಬಿಸಾಟಿದ್ದ ಮಚ್ಚು ಕತ್ತಿಯನ್ನು ತೆಗೆದುಕೊಳ್ಳಲು ಹೋಗುವಹಾಗೆ ಕಂಡಿತು. 

ನಾನು ಕೂಡಲೇ ಅವನನ್ನು ಬಿಟ್ಟು ಬಿಟ್ಟು ಓಡಿಹೋಗಿ ಆ ಮಚ್ಚು ಕತ್ತಿಯನ್ನು ತೆಗೆದು 

ಕೊಂಡೆನು, ಅವನು ಒಂದು ಮರದ ರೆಂಬೆಯನ್ನು ಮುರಿದುಕೊಂಡು ಅದನ್ನು ತಿರು 

ಗಿಸಿ ಹಿಡಿದು ನನ್ನ ಕೈಮೇಲೆ ಹೊಡದನು, ನನ್ನ ಕೈಲಿದ್ದ ಮಚ್ಚು ಕಳಚಿ ಕೆಳಗೆ ಬಿತ್ತು. 

ಅವನದನ್ನು ತೆಗೆದುಕೊಂಡು ನನ್ನ ಮೈಯಲ್ಲಿ ಎರಡು ಮೂರು ಕಡೆ ಘಾಯಮಾಡಿ 

ಬಿಟ್ಟು ಓಡಿಹೋದನು. 


ನಾನು ಬಹಳ ನೋವು ತಿಂದು ಅತಿ ಕಷ್ಟದಿಂದ ನಾನು ಉಳಿದಿದ್ದ ನೆಂಟರ ಮನೆಗೆ 

ಹೋದೆನು. ಅಂಧ ಯುವತಿಯು ನನ್ನ ಪದಶಬ್ದಾನುಸರಣ ಮಾಡಿಕೊಂಡು 

ಬರುತ್ತಿದ್ದಳು. ಸ್ವಲ್ಪ ದೂರ ಹೋಗಿ ಮುಂದೆ ಹೋಗಲು ಸಾಗದೆ ಹೋಯಿತು 

ದಾರಿಯಲ್ಲಿ ಹೋಗತಕ್ಕವರು ಕೈ ಹಿಡಿದುಕೊಂಡು ಹೋಗಿ ಮನೆಯಲ್ಲಿ ಬಿಟ್ಟರು. 

-----------------------------------------------

ಏಳನೆಯ ಪರಿಚ್ಛೇದ ೪೯

ಆ ಊರಲ್ಲಿ ನಾನು ಕೆಲಕಾಲ ಶಯ್ಯಾಗತನಾಗಿ ಬಿದ್ದಿದ್ದೆ, ಅನ್ಯ ಆಶ್ರಯವೂ ಇರಲಿಲ್ಲ. 

ನನ್ನ ದೆಶೆ ಏನಾಗುತ್ತದೋ ಅದನ್ನು ತಿಳಿದುಕೊಳ್ಳದೆ ಎಲ್ಲಿಯ ಹೊರಡ 

ಲಾಗದು. ಈ ಎರಡು ಕಾರಣಗಳಿಂದ ಅಲ್ಲಿಯೇ ಇರಬೇಕಾಯಿತು. ಅಂಧ 

ಯುವತಿಯ ಅಲ್ಲಿಯೇ ಇದ್ದಳು. 


ಬಹಳ ಕಷ್ಟದಿಂದ ಬಹು ದಿನಗಳಮೇಲೆ ಆರೋಗ್ಯ ಲಾಭವನ್ನು ಹೊಂದಿದೆನು.  

ಅಂಧ ಯು'ತತಿಯನ್ನು ನೋಡಿದಾರಭ್ಯ ನನಗೆ ಸಂದೇಹವುಂಟಾಗಿತ್ತು. ನನಗೆ 

ಮಾತನಾಡುವುದಕ್ಕೆ ಶಕ್ತಿ ಬಂದಾಗ ಅವಳು ನನ್ನ ರುಗ್ನ ಶಯ್ಯ ಪಾರ್ಶ್ವ ಬಂದು 

ಕೂತಳು. ಆ ದಿನವೇ ಅವಳನ್ನು ನಿನ್ನ ಹೆಸರೇನಮ್ಮ ! ಎಂದು ಕೇಳಿದೆನು. 


ಅವಳು ರಜನಿಯೆಂದು ಹೇಳಿದಳು. 


ಕೇಳಿ ನಾನು ಚಮಕಿತನಾಗಿ, ನೀನು ರಾಜಚಂದ್ರನ ಮಗಳೆ ? ಎಂದೆನು. 

ರಜನಿಯ - ವಿಸ್ಮಿತಳಾಗಿ ನನ್ನ ತಂದೆಯನ್ನು ಕಂಡಿದ್ದೀಯಾ? ಎಂದು ಕೇಳಿದಳು. 

ನಾನು ಸ್ಪಷ್ಟವಾಗಿ ಯಾವ ಉyಗವನ್ನೂ ಕೊಡಲಿಲ್ಲ. 


ನನಗೆ ಸಂಪೂರ್ಣವಾಗಿ ಆರೋಗ್ಯಲಾಭವಾದಮೇಲೆ ರಜನಿಯನ್ನು ಕಲಿಕತ್ತೆಗೆ 

ಕರೆದುಕೊಂಡು ಹೋದೆನು. 

..............

ಏಳನೆಯ ಪರಿಚ್ಛೇದ. 

ಕಲಿಕತ್ತೆಗೆ ಹೋಗುವಾಗ ರಜನಿಯನ್ನು ನಾನೊಬ್ಬನೇ ಕರೆದುಕೊಂಡು ಹೋಗ 

ಲಿಲ್ಲ. ಆ ಗ್ರಾಮದಲ್ಲಿ ಮುರಕಿ ಎಂದೊಬ್ಬ ಮುದಕಿಯನ್ನು ಪರಿಚಾರಕಳನ್ನಾಗಿ 

ಗೊತ್ತು ಮಾಡಿಕೊಂಡು ಸಂಗಡ ಕರೆದುಕೊಂಡು ಹೋದೆನು, ರಜನಿಯ ಮನಸ್ಸಿಗೆ 

ಸಂತೋಷವುಂಟಾಗಲೆಂದು ಹೀಗೆ ಮಾಡಿದೆನು. ಹೋಗುತ್ತ ದಾರಿಯಲ್ಲಿ ರಜನಿಯನ್ನು 

ಕುರಿತು, ರಜನಿ ! ನಿನ್ನ ಮನೆಯಿರುವುದು ಕಲಿಕೆಯಲ್ಲಿ. ಇಲ್ಲಿಗೆ ಹೇಗೆ ಬಂದೆ? 

ಎಂದು ಕೇಳಿದೆನು. 

ರಜನಿ :-ನಿನಗೆ ಎಲ್ಲಾ ಸಂಗತಿಗಳನ್ನು ವಿವರವಾಗಿ ಹೇಳಬೇಕೆ ? 

ನಾನು :- ನಿನಗೆ ಇಷ್ಟವಿಲ್ಲದಿದ್ದರೆ ಹೇಳಬೇಡ. 

--------------------------------------------

೫೦ ರಜನೀ

 

ವಸ್ತುತಃ ದ ಅಂಧ ಯುವತಿಯ ಬುದ್ಧಿ ವಿವೇದನೆ. ಸರಳತೆ ಮುಂತಾದುದನ್ನು 

ನೋಡಿ ನಾನು ಬಹಳ ಪ್ರೀತನಾದೆನು. ಅವಳಿಗೆ ಕ್ಲೇಶವುಂಟು ಮಾಡುವದಕ್ಕೆ ನನಗೆ 

ಇಷ್ಟವಿರಲಿಲ್ಲ. ಅವಳು, ನೀನು ಕೋಪಗೊಳ್ಳದಿದ್ದರೆ ಕೆಲ ಸಂಗತಿಗಳನ್ನು ಗೋಪ್ಯ 

ವಾಗಿಟ್ಟುಕೊಳ್ಳುವೆನು ! ಗೊಪಾಲಬಾಬು ಎಂಬವನೊಬ್ಬನು ನಮ್ಮ ನೆರೆಯವ 

ನಾಗಿದ್ದನು. ಅವನ ಹೆಂಡತಿ ಚಂಪಾ, ಅವಳಿಗೂ ನನಗೂ ಅಕಸ್ಮಾತ್ತಾಗಿ ಪರಿಚಯ 

ವಾಯಿತು, ಹೂಗ್ಲಿಯಲ್ಲಿ ಅವಳ ತೌರುಲನೆ. ಅವಳು ನನ್ನ ತೌರು ಮನೆಗೆ ಹೋಗು 

ವಿಯ ? ಎಂದು ಕೇಳಿದಳು, ನನೊಪ್ಪಿಕೊ೦ಡೆನು ., ಅವಳು ಒಂದು ದಿನ ನನ್ನನ್ನು 

ತಾನೇ ತನ್ನ ತೌರುಮನೆಗೆ ಕರೆದುಕೊಂಡು ಹೋಗದೆ ಅವಳ ತಮ್ಮನಾದ ಹೀರಾ 

ಲಾಲೆಂಬುವನನ್ನು ಸ೦ಗಡ ಕೊಟ್ಟು ಕಳುಹಿಸಿದಳು. ಅವನು ಒಂದು ನೌಕವನ್ನು 

ಮಾಡಿ ಹೂಗ್ಲಿಗೆ ಹೋಗಲು ಹೊರಟನು. 


ಅಷ್ಟು ಕೇಳಿ, ಹೀರಾಲಲನ  ಸಂಬಂಧವಾದ ಮಾತುಗಳನ್ನು ಮರೆಮಾಡಿದ್ದಾ 

ಳೆಂದು ಭಾವಿಸಿ, ನೀನು ಅವನ ಸಂಗಡ ಹೋದೆಯೋ ? ಎಂದು ಪ್ರಶ್ನೆಯನ್ನು 

ಮಾಡಿದೆನು. 


ರಜನಿ :- ಇಷ್ಟವಿರಲಿಲ್ಲ, ಆದರೆ ಹೋಗಬೇಕಾಯಿತು, ಏತಕ್ಕೆ ಹೋಗ 

ಬೇಕಾಯಿತೋ ಆದನ್ನು ಹೇಳಲಾರೆನು. ಮಧ್ಯವಾರ್ಗದಲ್ಲಿ ಹೀರಾಲಾಲಳು ನನ್ನ 

ಮೇಲೆ ಅತ್ಯಾಚಾರಮಾಡಲು ಬಂದನು. ನಾನು ಅವನ ಇಷ್ಟಕ್ಕೆ ಸರಿ ಯಾಗಿ ಒದುಗುವ 

ಳಲ್ಲವೆಂದು ತಿಳಿದು ನನ್ನನ್ನು ದ್ವಂಸಮಾಡಬೇಕೆಂದು ಗಂಗೆಯು ನಡ-ನೀರಿನಲ್ಲಿ ಇಳಿಸಿ 

ಕೈ ಬಿಟ್ಟು ದೋಣಿಯನ್ನು ತೆಗೆದು ಕೊಂಡು ಹೊರಟು ಹೋದನು. 


ಇಷ್ಟು ಹೇಳಿ ರಜನಿಯು ಸುಮ್ಮನಾದಳು. ನಾನು ಹೀರಾ;ಲಾಲನು ಛದ್ಮವೇಷಿ 

ಯಾದ ರಾಕ್ಷಸನೆಂದುಕೊಂಡು ಮನಸ್ಸಿನಲ್ಲಿ ಅವನ ರೂಪವನ್ನು ಊಹಿಸಿಕೊಳ್ಳ 

ಲಾರಂಭಿಸಿದೆನು. ರಜನಿಯು ಮುಂದೆ ಹೇಳತೊಡಗಿ, ಅವನು ಹೊರಟುಹೋದ ಮೇಲೆ 

ನಾನು ಬಿದ್ದು ಸಾಯಬೇಕೆಂದು ನೀರಲ್ಲಿ ಬಿದ್ದನೆಂದು ಹೇಳಿದಳು. 


ನಾನು :-ಏತಕ್ಕೆ ನೀನು ಹೀರಾಲಾಲನನ್ನು ಅಷ್ಟು ಪ್ರೀತಿಸುತಲಿದ್ದೆಯಾ ? 


ರಜನಿಯು ಹುಬ್ಬು ಗಂಟುಹಾಕಿಕೊಂಡು, ತಿಲಾರ್ಧವೂ ಕೂಡ ನಾನು ಅವ 

ನನ್ನು ಪ್ರೀತಿಸುತ್ತಿರಲಿಲ್ಲ. ನಾನು ಸೃಥಿವಿಯಲ್ಲಿ ಯಾರಮೇಲೆಯ ಆಷ್ಟು ವಿರಕ್ತೆ 

ಳಾಗಿರಲಿಲ್ಲ ಎಂದು ಹೇಳಿದಳು. 


ನಾನು--ಹಾಗಾದರೆ ನೀರಿನಲ್ಲಿ ಬಿದ್ದು ಸಾಯಬೇಕಾಗಿದ್ಧದೇತಕ್ಕೆ ? 

-------------------------------------------

ಏಳನೆಯ ಪರಿಚ್ಛೇದ 51 

ರಜನಿ~-ನನ್ನ ದುಃಖವನ್ನು ನಿನಗೆ ಹೇಳಲಾರೆನು. 


ನಾನು-ಒಳ್ಳೆದು ಮುಂದೆ ಹೇಳು 


ರಜನಿ-ನಾನು ಮುಣಗಿ ತೇಲಿಕೊಂಡು ಹೋಗುತಲಿದ್ದೆನು. 'ಒಂದು ಚಿಕ್ಕ 

ಹಡಗು ಹೋಗುತಲಿತ್ತು, ಆ ಹಡಗಿನವರು ನನ್ನನ್ನು ಕಂಡು ಹಡಗಿನಲ್ಲಿ ಎತ್ತಿ ಹಾಕಿ 

ಕೊಂಡರು. ನೀನು ನನ್ನನ್ನು ನೋಡಿದ ಊರಿನಲ್ಲಿ ಒಬ್ಬನು ಹಡಗಿನಿಂದ ಇಳಿದನು. 

ಅವನು ನನ್ನನ್ನು ಎಲ್ಲಿಳಿಯುವೆ ಎಂದು ಕೇಳಿದ್ದಕ್ಕೆ ಎಲ್ಲಿ ಬೇಕಾದರೂ ಇಳಿಯುತ್ತೇನೆಂ 

ದೆನು. ಅವನು ನಮ್ಮ ಊರನ್ನು ಕೇಳಿದ್ದಕ್ಕೆ ಕಲಿಕತ್ತೆ ಎಂದು ಹೇಳಿದನು. ಅವನು 

ತಾನೂ ನಾಳೆ ಕಲಿಗೆ ಹೋಗುವುದಾಗಿ ಹೇಳಿ ತನ್ನ ಸಂಗತ ಬದು ತನ್ನೆ ಮನೆ 

ಯಲ್ಲಿ ಆ ದಿನವಿದ್ದು ಮಾನೆಯದಿನ ಕಹಿಗೆ ಕರೆದು ಕೊಂಡು ಜೋಗುವುದಾಗಿ 

ಹೇಳಿದನು, ನಾನು ಆನಂದಿತಳ ಗಿ ಇಳಿದೆನು . ಅವನು ನನ್ನನ್ನು ಸಂಗಡ ಕರೆದು 

ಕೊಂಡು ಹೋದನು. ಅದುವೆ.(ಲೆ ನಂಗೆಗೆ ದು ನೀನೇ ಬಲ್ಲೆ. 


ನಾನು-ನಾನು ನಿನ್ನ ನ್ನು ಯಾರ ಕೈಯಿಂದ ಬಿಡಿಸಿಕೊಂಡೆನೋ ಅವನೇ 

ಆ ಮನುಷ್ಯನೊ ? 


ರಜನಿ- ಅವನೇ ಹೌದು. 


ನಾನು ರಜನಿಯನ್ನು ಕಲಿ ಕತ್ತಿಗೆ ಕರೆತಂದು, ಅವಳು ಹೇಳಿದ ಸ್ಥಳವನ್ನು 

ಹುಡುಕಿ ಗೊತ್ತು ಮಾಡಿಕೊಂಡು ರಾಜಚಂದ್ರನ ಮನೆಗೆ ಕರೆದುಕೊಂಡು ಹೋದೆನು. 


ರಾಜಚಂದ್ರನು ಮಗಳನ್ನು ಕಂಡು ಆನಂದಭರಿತನಾದನು. ಆವನ ಹೆಂಡ 

ತಿಯು ಬಹಳ ಅತ್ತಳು. ಅವರಿಬ್ಬರೂ ರಜನಿಯ ವೃತ್ತಾಂತವನ್ನೆಲ್ಲಾ ನನ್ನಿಂದ ಕೇಳಿ 

ಬಹಳ ಕೃತಜ್ಞತೆಯನ್ನು ಪ್ರಕಾಶಮಾಡಿದರು. 

 

ಕಡೆಗೆ ನಾ : ರಜಚ :ದ್ರನನ್ನು ಒಂದುಕಡೆಗೆ ಏಕಾಂತವಾಗಿ ಕರೆದು 

ಕೊಂಡು ಹೋಗಿ, ನಿನ್ನ ಮಗಳು ಏತಕ್ಕೆ ಗೃಹವನ್ನು ತ್ಯಾಗಮಾಡಿ ಹೋದಳು ? 

ಅವಳು ಗೃಹತ್ಯಾಗಿಯೆ, ಏನು ? ಎಂದು ಕೇಳಿದೆನು. 


ರಾಜಚಂದ್ರ-ಇಲ್ಲ. ಗೃಹತ್ಯಾಗಿಯಲ್ಲ, ನ?ಸರ್ವದಾ ಹಾಗೆಯೇ 

ಯೋಚಿಸಿಕೊಂಡಿದ್ದೆ. ಆದರೆ ಅವಳ ಪತ್ತೆಮಾಡಲಾರದೆ ಹೋಬೆನು. 


ನಾನು-ಯಾವ ದುಃಖದಿಂದ ರಜನಿಯು ನೀರಿನಲ್ಲಿ ಬಿದ್ದು ಸಾಯಬೇಕೆಂ 

ದಿದ್ದಳು. ಅದು ಗೊತ್ತುಂಟೆ ? 

--------------------------------------------

೫೨ ರಜನೀ 


ಕಜಚಂದ್ರನು ವಿಸ್ಮಿತನಾಗಿ ರಜನಿಗೆ ಅಂತಿಹ ನದಿಯಲ್ಲಿ ಬಿದ್ದು ಸಾಯ 

ಬೇಕೆಂಬ ದುಃಖ ಯಾವದೂ ನಾನರಿಯೆ. ಅವಳು ಅಂಧಳು, ಅದೇನೋ ಹೆಚ್ಚು 

ದುಃಖವೇ ಹೌದು. ಆದರೆ ಅದಕ್ಕೋಸ್ಕರ ಇಷ್ಟು ದಿನಗಳಮೇಲೆ ನದಿಯಲ್ಲಿ ಬಿದ್ದು 

ಸಾಯುವುದಕ್ಕೆ ಏತಕ್ಕೆ ಹೋದಾಳು ? ಇಷ್ಟು ದೊಡ್ಡವಳಾದರೂ ಮದುವೆಯಾಗ 

ಲಿಲ್ಲವೆಂದೇನಾದರೂ ಇರಬಹುದೆನ್ನುವುದಕ್ಕೆ ಅದಿರಲಾರದು. ವಿವಾಹವಾಗುವುದ 

ಕ್ಕೆಲ್ಲಾ ನಿಷ್ಕರ್ಷೆ ಮಾಡಿದ್ದೆ. ವಿವಾಹವಾಗುವುದಕ್ಕೆ ಹಿಂದಿನ ರಾತ್ರಿಯಲ್ಲಿಯೇ 

ಎಲ್ಲಿಯೋ ಓಡಿಹೋದಳು. 


ನನಗೆ ಇದೊಂದು ಹೊಸ ಸಮಾಚಾರ ತಿಳಿದಹಾಗಾಯಿತು. ಆ ಮಾತು 

ಕೇಳಿ, ಅವಳು ಓಡಿ ಹೋದಳೆ ? ಎಂದು ಪುನಃ ಕೇಳಿದೆನು, 


ರಾಜ-ಹೌದು. ನಾನು-ನಿನಗೆ ಹೇಳದೆ ಓಡಿಹೋದಳೆ ? 


ರಾಜ- ಯಾರಿಗೂ ಹೇಳದೆ ಹೋದಳು. 


ನಾನು-ಗೊತ್ತಾಗಿದ್ದ ವರನು ಯಾರು ? 


ರಾಜ-ಗೋಪಾಲಬಾಬು. 


ನಾನು-ಗೋಪಾಲಬಾಬು ಯಾರು, ಚಂಪಾ ಗಂಡನೆ ? 


ರಾಜ-ನಿನಗೆ ಎಲ್ಲಾ ಗೊತ್ತು. ಅವನೇ ಹೌದು. 


ನನಗೆ ಒಂದು ಬೆಳಕು ಹರಿದಹಾಗಾಯಿತು. ಹಾಗಿದ್ದರೆ ಚಂಪಳು ಸವತಿ 

ಭಯದಿಂದ ರಜನಿಯನ್ನು ವಂಚಿಸಿ ತಮ್ಮನನ್ನ ಸಂಗಡಿಟ್ಟು ಹೋಗಲಿಗೆ ಕಳುಹಿಸಿರ 

ಬೇಕು. ಅಕ್ಕನ ಹೇಳಿಕೆ ಪ್ರಕಾರ ಹೀರಾಲಾಲನು ರಜನಿಯ ನಾಶಕ್ಕೆ ಪ್ರಯತ್ನ ಪಟ್ಟರ 

ಬಹುದೆಂದು ತೋರುತ್ತದೆ. 


ಇದು ಯಾವದನ್ನೂ ಕೇಳದೆ ರಾಜಚಂದ್ರನನ್ನು ಕುರಿತು ನಾನು ಎಲ್ಲಾ 

ಬಲ್ಲೆ, ನನಗೆ ಇನ್ನೂ ಕೆಲ ಸಂಗತಿಗಳು ಗೊತ್ತುಂಟು, ಅದನ್ನು ಮರೆಮಾಚಬೇಡ 

ವೆಂದು ಹೇಳಿದೆನು. 


ರಾಜ-ಏನು ? ಹೇಳಬಹುದು ! 

ನಾನು ರಜನಿಯು ನಿನ್ನ ಮಗಳಲ್ಲ. 

----------------------------------

ಏಳನೆಯ ಪರಿಚ್ಛೇದ 63 


ರಾಜಚಂದ್ರನು ಆಶ್ಚಯ್ಯಪಟ್ಟುಅದೇನು ? ನನ್ನ ಮಗಳಲ್ಲದೆ ಮತ್ಯಾರ ಮಗ 

ಳೆಂದು ಕೇಳಿದನು. 


ನಾನು-ಹರೇಕೃಷ್ಣನ ಮಗಳು. 


ರಾಜಚಂದ್ರನು ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ, ನೀನು ಯಾರೋ 

ನಾನರಿಯನು. ಆದರೆ ನೀನು ಈ ಮಾತನ್ನು ರಜನಿಗೆ ಹೇಳಕೂಡದೆಂದು ಬೇಡಿಕೊಳ್ಳು 

ತ್ತೇನೆಂದನು. 


 ನಾನು-ಈಗ ಹೇಳುವುದಿಲ್ಲ. ಆದರೆ ಹೇಳಲೇಬೇಕು, ಹರೇ ಕೃಷ್ಣನು 

 ಸಾಯುವಾಗ ರಜನಿಯ ಕೆಲ ಒಡವೆ ವಸ್ತುಗಳಿದ್ದವಲ್ಲವೆ? 

 

ರಾಜಚಂದ್ರ ಭಯಪಟ್ಟವನಾಗಿ, ನಾನು ಆ ಗ ಸಟ್ಟುಗಳ ಸಮಾಚಾರವನ್ನು

 ಅರಿಯೆನು, ನಾನು ಆಭರಣಗಳು ಯಾವದನ್ನೂ ಹೊಂದಲಿಲ್ಲವೆಂದನು. 

 

ನಾನು-ನೀನು ಹರೇಕೃಷ್ಣನು ಸತ್ತ ಮೇಲೆ ಅವನ ಆಸ್ತಿ ಏನಿದೆಯೆಂದು 

ಹುಡುಕುವುದಕ್ಕೆ ಆ ದೇಶಕ್ಕೆ ಹೋಗಿರಲಿಲ್ಲವೆ ? 


ರಾಜ-ಹೌದು, ಹೋಗಿದ್ದೆ, ಹೋಗಿ ವಿಚಾರಿಸಲಾಗಿ ಹರೇಕೃಷ್ಣನ ಬಾಬತು 

ಇದ್ದುದುನೆಲ್ಲಾ ಪೋಲೀಸಿನವರು ತೆಗೆದು,ಂಡು ಹೋದರೆಂದು ತಿಳಿಯಬಂತು. 


ನಾನು-ಅದರಮೇಲೆ ನೀನೇನು ಮಾಡಿದೆ ? 


ರಾಜ-ಇನ್ನು ನಾನೇನು ಮಾಡಲಿ ? ನಾನು ಪೋಲೀಸಿನವರಿಗೆ ಬಹಳ 

ಭಯಪಡುತ್ತೇನೆ, ರಜನಿಯು ಕಳವಾಗಿ ಹೋಗಿದ್ದ ಮೊಕದ್ದಮೆಯಲ್ಲಿ ಬಹಳ ಪಾಡು 

ಪಟ್ಟಿದ್ದೇನೆ. ನಾನು ಪೋಲೀಸಿನವರ ಹೆಸರು ಕೇಳಿ ಮತ್ತೇನೂ ಹೇಳಲಿಲ್ಲ. 


ನಾನು-ರಜನಿಯು ಆಸಾಮಿ ಚೋರಿಯಾದುದು ಹೇಗೆ ? 


ರಾಜ-ರಜನಿಗೆ ಅನ್ನ ಪ್ರಾಶನವಾಗುವ ವಯಸ್ಸಿನಲ್ಲಿ ಅವಳನ್ನು ಯಾರೋ 

ಕಳವು ಮಾಡಿಕೊಂಡು ಹೋಗಿದ್ದರು, ವರ್ಧಮಾನದಲ್ಲಿ ಆ ಮೊಕದ್ದಮೆಯು ನಡೆ 

ಯಿತು. ಈ ಕಲಿಕತ್ತೆಯಿಂದ ವರ್ಧಮಾನಕ್ಕೆ ಸಾಕ್ಷಿ ಕೊಡುವುದಕ್ಕೆ ನಾನು ಹೋಗ 

ಬೇಕಾಯಿತು. ಆಗ ಪೋಲೀಸಿನವರ ಕೈಯಲ್ಲಿ ಸಂಕಟಪಟ್ಟು ಪಾಡುಪಟ್ಟೆನು. 


ನನಗೆ ಮಾರ್ಗವು ಸಿಕ್ಕಿದಹಾಗಾಯಿತು. 

..............

-------------------------------------------

ಮೂರನೆಯ ಭಾಗ. 

ಶಚೀಂದ್ರನ ಹೇಳಿಕೆ. 

ಮೊದಲನೆಯ ಪರಿಚ್ಛೇದ. 

ಈ ಭಾರ ನನ್ನ ಮೇಲೆ ಬಿತ್ತು. ರಜನಿಯ ಜೀವನ ಚರಿತ್ರೆಯ ಕೆಲ ಅಂಶ 

ನಾನು ಬರೆಯಬೇಕಾಯಿತು ; ಬರೆಯುತ್ತೇನೆ. 


ನಾನು ರಜನಿ ಯ ಮದುವೆಗೆ ಎಲ್ಲ ಸಿದ್ಧಪಡಿಸಿದ್ದೆನು. ವಿವಾಹದ ದಿನ 

ಪ್ರಾತಃಕ»ಲದಲ್ಲಿ ರಜನಿಯು ಓಡಿಹೋಗಿದ್ದಾಳೆ, ಎಲ್ಲಿಯೂ ಸಿಕ್ಕಿಲ್ಲವೆಂದು ಕೇಳಿದೆ. 

ಆನೇಕ ಸ್ಥಳಗಳಲ್ಲಿ ಹುಡುಕಿದೆನು. ಆದರೂ ಸಿಕ್ಕಲಿಲ್ಲ.  ಅನೇಕರು ಅವಳು ಭ್ರಷ್ಟ 

ಲಾದಲೆಂದು ಹೇಳಿದರು. ನಾನದನ್ನು ನಂಬಲಿಲ್ಲ. ಅವಳನ್ನು ಅನೇಕ ತಡವೆ ನೋಡಿ 

ದ್ದೇನೆ. ಅವಳೆ೦ದಿಗೂ ಭ್ರಷ್ಠಳಾಗಲಾರಳು. ಲಸ್ಟಾಗ ಬಹುದು. ಏಕೆಂದರೆ ಅವಳು 

ಅವಿವಾಹಿತಳಾದ ಕುಮಾರಿ. ಕೌಮಾರ್ಯಾಯಲ್ಲಿಯೇ ಯಾರಲ್ಲಿಯೋ ಪ್ರಣಯಾ 

ಸಕ್ತಳಾಗಿದ್ದು, ಒಗಗಿದ್ದ ವಿವಾಹದ ಭಯದಿಂದ ಗೃಹವನ್ನು ತ್ಯಾಗ ಮಾಡಿರಬೇಕೆಂದು 

ಊಹಿಸಿದೆನು, ಆದರೆ ಇದಕ್ಕೂ ಎರಡು ಆಕ್ಷೇಪಣೆಗಳುಂಟು. ಮೊದಲನೆಯದು, 

ಅವಳು ಅಂಧಳಾಗಿದ್ದುಕೊಡು, ಯಾವ ಪ್ರಕಾರವಾಗಿ ಸಾಹಸಮಾಡಿ ಒಂದು 

ಆಶ್ರಯವನ್ನು ಬಿಟ್ಟು ಹೋದಾಳು ? ಎರಡನೆಯದು, ಅಂಧಳು ಪ್ರಣಯಾಸಕ್ತಳಾಗು 

ವುದು ಹೇಗೆ? ಯಾವಾಗಲೂ ಆಗದೆಂತಲೂ, ಆಗಲಾರದೆಂತಲೂ ಸಹ ತಿಳಿದು 

ಕೊಂಡೆನು. ಯಾರೂ ಕೇಳ ನಗಬೇ.ಡಿ, ನನ್ನ ಹಾಗೆ ಭಂಡ ಮೂರ್ಖರು ಅನೇಕರಿ 

ದ್ದಾರೆ. ನಾನು ಎರಡು ಮೂರು ಬುಕ್ಕುಗಳನ್ನು ಓದಿದ್ದೇನೆ. ಅದನ್ನು ಓದಿಕೊಂಡು 

ಜಗತ್ತಿನಲ್ಲಿರುವ ಚೇತನಾಚೇತನಗಳ ಗೂಢಕ್ಕಿಂತಲೂ ಗೂಢವಾದ ತತ್ವಗಳನ್ನೆಲ್ಲ ನನ್ನ 

ನಖದರ್ಪಣರ್ಥವಾಗಿ ಅಡಿಕೊಂಡು ಬಿಟ್ಟಿದ್ದೇನೆ. ಯಾವದು ನನ್ನ ಮನಸ್ಸಿಗೆ 

ಹಿಡಿಯಲಾರದೋ ನಾನದನ್ನು ನಂಬುವುದಿಲ್ಲ. ನಾನು ದೇವರನ್ನು ನಂಬುವುದಿಲ್ಲ.  

ಏತಕ್ಕೆಂದರೆ, ನನ್ನ ವಿಚಾರಶಕ್ತಿಗೆ ಆ ದೊಡ್ಡ ಸಂಸ್ಕೃತಿಯು  ಹಿಡಯುವುದಿಲ್ಲ. ಅಂತಹ

ದರಲ್ಲಿ ಅಂಧಳಿಗೆ ರೂಪೋನ್ಮಾದವೆಂದೆಂದು ಹೇಗೆ ತಿಳಿಯುವುದು. 


ಹುಡುಕಿ ಹುಡುಕಿ ವಿಚಾರಿಸಲಾಗಿ ಅವಳು ಮನೆಯನ್ನು ಬಿಟ್ಟುಹೋದ 

ರಾತ್ರಿಯಿಂದಲೂ ಹೀರಾಲಾಲನೂ ಅದೃಶ್ಯನಾಗಿದ್ದಾನೆಂದು ತಿಳಿಯಬಂತು. ಎಲ್ಲರೂ 

ಅವಳು ಹಿರಾಲಾಲನ ಸಂಗಡ ಕುಲಳವನ್ನು ತ್ಯಾಗಮಾಡಿ ಹೋಗಿದ್ದಾಳೆಂದು ಹೇಳಿ 

----------------------------------------------------

ಎರಡನೆಯ ಪರಿಚ್ಛೇದ 55 

 

ದರು. ನಿರ್ವಾಹವಿಲ್ಲದೆ ಹಿರಾಲಾಲನೂ ಅವಳನ್ನು ವಂಚಿಸಿ ಕರೆದುಕೊಂಡು ಹೋಗಿ 

ದ್ದಾನೆಂದು ಸಿದ್ಧಾ೦ತ ಮಾಡಿದೆನು ರಜನಿಯಾದರೊ ಪರಮಸುಂದರಿ;  ಕುರುಡು 

ಹೆಂಗಸಾದರೂ ಅವಳ ರೂಪವನ್ನು ನೋಡಿ ಮುಗ್ಧರಾಗದವರು ಯಾರೂ ಇಲ್ಲ. 

ಹೀರಾಲಾಲನು ಅವಳ ರೂಪಕ್ಕೆ ಮುಗ್ಧನಾಗಿ ಅವಳನ್ನು ವಂಚಿಸಿ ಕರೆದುಕೊಂಡು 

ಹೋಗಿ ರಬೇಕು. ಅಂಧರನ್ನು ವಂಚಿಸುವದು ಬಹಳ ಸುಲಭ.

 

ಕೆಲ ದಿನಗಳಮೇಲೆ ಹೀರಾಲಾಲನು ಕಣ್ಣಿಗೆ ಕಾಣಿಸಿಕೊಂಡನು.  ನಾನು ಅವ 

ನನ್ನು ರಜನಿಯ ಸಮಾಚಾರವನ್ನು ಬಲ್ಲೆಯಾ ? ಎಂದು ಕೇಳಿದ್ದಕ್ಕೆ ಅರಿಯೆ 

ಎಂದು ಹೇಳಿಬಿಟ್ಟನು. 


ಮಾಡುವುದೇನು ? ಫಿರ್ಯಾದು. ಫಿರ್ಯಾದಿಗೆ ಮಾರ್ಗವಿಲ್ಲ. ನನ್ನ ಅಣ್ಣನಿಗೆ 

ತಿಳಿಸಿದೆ.  ಅವನು ಡಂಗೋರೆ ಹೊಡೆಯಿರೆಂದು ಹೇಳಿದನು. ಹೊಡಿಸಿ ಆಗುವುದೇನು ? 

ನಾನು ನ್ಯೂಸಪೇಪರದಲ್ಲಿ ಯಾರು ರಜನಿಯ ಸಮಾಚಾರವನ್ನು ತಂದುಕೊಡುವರೋ 

ಅವರಿಗೆ ಇನಾಮ. ಕೊಡುವೆನೆಂದು ಇಸ್ತಿಹಾರು ಹಾಕಿಸಿದೆನು. ಏನೋ ಫಲ 

ವಾಗಲಿಲ್ಲ. 

-----

ಎರಡನೆಯ ಪರೊಚ್ಛೇದ 

ರಜನಿಯು ಜನ್ಮಾಂಧಳು, ಆದರೆ ಆವಳ ಕಣ್ಣುಗಳನ್ನು ನೋಡಿದರೆ ಅವಳು 

ಆಂಧಳೆಂದು ಗೊತ್ತಾಗುವುದಿಲ್ಲ. ಕಣ್ಣಿನಲ್ಲಿ ಏನೇನು ದೋಷವಿಲ್ಲ , ಕಣ್ಣುಗಳು 

ದೊಡ್ಡವು. ನೀಲವಾಗಿ ಭ್ರಮರದ ಹಾಗೆ ಕಪ್ಪಾದ ತಾರೆಯುಳ್ಳದ್ದಾಗಿವೆ, ಆತಿ 

ಸುಂದರವಾದ ಕಣ್ಣುಗಳು. ಕಣ್ಣುಗಳ ಸ್ನಾಯು ಅಂದರೆ ನಾಡಿಗಳ ದೋಷದಿಂದ 

ಕಣ್ಣು ಕಾಣಿಸುವುದಿಲ್ಲ. ಸ್ನಾಯುವಿಗೆ ಚಾಲನವಿಲ್ಲದುದರಿಮದ ರೆಟಿನಾ (Retina) 

ಅಂದರೆ. ಕಣ್ಣು ಒಳಗಿರುವ ದೃಷ್ಟಿ ಫಲಕದಲ್ಲಿ ಬಿದ್ದ ಪ್ರತಿಬಿಂಬವು ಮಸ್ತಿಷ್ಕಕ್ಕೆ 

(Brain) ವೈಯ್ಯಲ್ಪಡುವುದಿಲ್ಲ. ರಜನಿಯು ಸರ್ವಾಂಗ ಸುಂದರಿ; ವರ್ಣವು 

ಬಾಯಿ ಬಿಡಿಸಿಕೊಂಡು ಮೇಲಕ್ಕೆ ಏಳುವ ಅತ್ಯಂತ ನವೀನವಾದ ಕದಲಿಪತ್ರದಹಾಗೆ 

ಗೌರವವಾದುದು, ದೇಹಘಟನೆಯೋ, ಮಳೆ ನೀರಿನಿಂದ ಪೂರ್ಣವಾದ ನದಿಯಹಾಗೆ 

ಸಂಪೂರ್ಣತೆಯನ್ನು ಹೊಂದಿದೆ, ಮುಖದ ಕಾಂತಿಯು ಗಂಭೀರವಾದುದು, ಅವಳ 

ನಡೆ, ಅಂಗಭಂಗಿಗಳೆಲ್ಲ ಮದುವಾಗಿ ಸ್ಥಿರವಾಗಿ ಆಂಧತ್ವದಿಂದ ಸರ್ವದಾ ಸಂಕೋಚ 

ಸೂಚಕಗಳಾಗಿವೆ, ಅವನ ನಗು ದುಃಖಮಯ. ಈ ಸ್ಥಿರಪ್ರಕೃತಿಯನುಳ್ಳ ಸುಂದರ 

-----------------------------------------------

ರಜನೀ 

ವಾದ ಶರೀರದಲ್ಲಿ ಆ ಕಟಾಕ್ಷಹೀನವಾದ ಕಣ್ಣುಗಳನ್ನು ನೋಡಿದರೆ ಶಿಲ್ಪಶಾಸ್ತ್ರವಿಶಾ 

ರದನಾದ ಶಿಲ್ಪಿಯು ಕೈಯಿಂದ ಯತ್ನಪೂರ್ವಕವಾಗಿ ನಿರ್ಮಿತವಾದ ಪ್ರಸ್ತರಮಯ 

ವಾದ ಸ್ತ್ರೀಮೂರ್ತಿಯೆಂದು ಬೋಧ ವಾಗುತ್ತಲಿತ್ತು. 


ರಜನಿಯನ್ನು ಮೊದಲು ನೋಡಿದಾಗ, ಆ ಸೌದಠ್ಯವು ಅನಿಂದನೀಯವಾ 

ದರೂ ಮುಗ್ಧಕಾರಿಯಾದುದಲ್ಲವೆಂದು ವಿಶ್ವಾಸವು ಹುಟ್ಟಿತು. ರಜನಿಯು ರೂಪವತ್ಣಿ 

ಆದರೆ ಅವಳ ರೂಪವನ್ನು ನೋಡಿ ಯಾರೂ ಉನ್ಮಾದಪ್ರಸ್ತರಾಗರು. ಅವಳ ಕಣು; 

ಗಳಲ್ಲಿ ಆ ಮೋಹಿನಿ ಗತಿಯಿಲ್ಲ. ಸೌಂದರ್ಯವನ್ನು ನೋಡಿ ಜನರು ಶ್ಲಾಘಿಸುವರು. 

ಆ ಮೂರ್ತಿಯನ್ನು ನೋಡಿದಮೇಲೆ ಸಾಮಾನ್ಯವಾಗಿ ಮರೆಯಲಾರರೆಂತಲೂ ಕಾಣು 

ತ್ತದೆ. ಏತಕ್ಕೆಂದರೆ, ಆ ಸ್ಥಿರವಾದ ಗಂಭೀರವಾದ ಕಾಂತಿಯಲ್ಲಿ ಒಂದು ಅದ್ಭುತವಾದ 

ಆಕರ್ಷಣ ಶಕ್ತಿಯುಂಟು ; ಆದರೆ ಆ ಆಕರ್ಷಣವು  ಬೇರೆ ಕಡೆಗೆ ; ಇಂದ್ರಿಯಗಳೊಂ 

ದಿಗೆ ಅದರ ಸಂಬಂಧವೇನೂ ಇಲ್ಲ. ಯಾವದಕ್ಕೆ ಪಂಚಬಾಣನೆ.ದು ಹೇಳುತ್ತಾರೋ 

ರಜನಿಯ ರೂಪದೊಂದಿಗೆ ಆದರ ಸಂಬಂಧವೇನೂ ಇಲ್ಲ. ಇಲ್ಲವೇನು ? 


ಅದು ಹೇಗಾದರೂ ಆಗಲಿ. ನನಗೆ ಮಧ್ಯೆ ಮಧ್ಯೆ ರಜನಿಯ ದೆಶೆ ಏನಾಗ 

ಬಹುದೆಂದು ಯೋಚನೆಗೆ ಬರುತ್ತಲಿದೆ. ಆವಳು ಸಾಮಾನ್ಯರಾದವರ ಕನ್ಯೆ. ಆದರೆ 

ಅವಳನ್ನು ನೋಡಿದರೆ ಅವಳು ಸಾಮಾನ್ಯಪ್ರಕೃತಿ ವಿಶಿಷ್ಟಳೆಂದು ಬೋಧೆಯಾಗುವು 

ದಿಲ್ಲ. ಸಾಮಾನ್ಯ ಜನರಲ್ಲಿ ಬೆರ್ತು ಬೇರೆ ಕಡೆ ಅವಳಿಗೆ ವಿನಾಹವಾಗುವ ಸಂಭವ 

ವಿಲ್ಲ. ಸಾಮಾನ್ಯರಾದವರಲ್ಲಿಯೂ ಅವಳಿಗೆ ಇದುವರೆಗೂ ಮದುವೆಯಾಗಲಿಲ್ಲ. 

ದರಿದ್ರನಿಗೆ ಮನೆಯ ಕೆಲಸ ಮಾಡುವುದಕ್ಕೆ ಹೆಂಡತಿ ಬೇಕು, ಯಾವ ಹೆಂಡತಿಯು 

ಅಂಧತ್ವದಿಂದ ಗೃಹಕಾರ್ಯವನ್ನು ಮಾಡಲು ಸಹಾಯಕಳಾಗಲಾರಳೋ ಅಂತಹವಳನ್ನು 

ಯಾವ ದರಿದ್ರನು ವಿವಾಹ ಮಾಡಿಕೊಳ್ಳುವನು ? ಆದರೆ ಸಾಮಾನ್ಯ ಜನರನ್ನು 

ಹೊರ್ತು ಈ ಸಾಮಾನ್ಯವಾದ ವೃತ್ತಿಪರಾಯಣಳಾದ ಕಾಯಸ್ಥ ಕನೈಯನ್ನು 

ಯಾರು ವಿವಾಹ ಮಾಡಿಕೊಳವರು ? ಅದಲಲ್ಲಿಯೂ ಇವಳು ಅಂಧಳು, ಇಂತಹ 

ಗಂಡನ ಸಹವಾಸದಿಗೆ ರಜನಿಗೆ ದುಃಖ. ಹೊರ್ಕು ಸುಖದ ಸಂಭವವಿಲ್ಲ. ದುಶ್ಛೇದ್ಯ 

ವಾದ ಕಂಟಕಕಾನಸದಲ್ಲಿ ಪ್ರಯತ್ನಪುರಸ್ಸರವಾಗಿ ಪಾಲನೀಯವಾದ ಉದ್ಯಾನದ 

ಪುಷ್ಪವು ಹುಟ್ಟಿರುವದರೋಪಾದಿಯಲ್ಲಿ ಈ ರಜನಿಯು ಹೂವಾಡಿಗರ ಮನೆಯಲ್ಲಿ 

ಹುಟ್ಟಿದ್ದಾಳೆ. ಮುಳ್ಳುಗಳಿಂದ ಆವೃತಳಾಗಿಯೇ ಇವಳು ಸಾಯಬೇಕಾಗುತ್ತದೆ. 

ಹಾಗಾದರೆ ಇವಳನ್ನು ಗೋಪಾಲನಿಗೆ ಕೊಟ್ಟು ಮದುವೆ ಮಾಡಿಸುವ ಪ್ರಯತ್ನವನ್ನು 

-----------------------------------------------

ಎರಡನೆಯ ಪರಿಚ್ಛೇದ ೫೭ 

 

ನಾವೇತಕ್ಕೆ ಮಾಡಬೇಕು ? ಚೆನ್ನಾಗಿ ತಿಳಿಯಲಾರೆನು .ಹಾಗದರೆ ಚಿಕ್ಕಮ್ಮನ 

ದೌರಾತ್ಮ್ಯವು ಬಹಳ ಹೆಚ್ಚು. ಅವಳ ಉತ್ತೇಜಕವಾದ 'ಪ್ರೇರಣೆಯಿಂದ ಇವಳಿಗೆ 

ಮದುವೆ ಮಾಡಿಸುವುದಕ್ಕೆ ಪ್ರವೃತ್ತನಾದೆನು ಯಾರನ್ನು ಸ್ವಂತವಾಗಿ ವಿವಾಹ 

ಮಾಡಿಕೊಳ್ಳಲಾರೆನೋ' .ಅಂತಹವಳನ್ನು ಇತರರಿಗೆ ಕೊಟ್ಟು ವಿವಾಹ ಮಾಡಿಸುವ 

ದಕ್ಕೆ ಇಷ್ಟವುಳ್ಳವನಾಗಿದ್ದೇನೆ. ಇದಕ್ಕೇನು ಹೇಳಲಿ ? 


ಈ ಮಾತನ್ನು ಕೇಳಿ ಅನೇಕ ಸುಂದರಿಯರು ಮಧುರವಾದ ನಗುವನ್ನು 

ನಕ್ಕು, ರಜನಿಯನ್ನು ನೀನೇ ವಿವಾಹ ಮಾಡಿ ಕೊಳ್ಳಬೇಕೆಂಬ ಇಷ್ಟವು ಮನಸ್ಸಿನಲ್ಲಿ 

ಉಂಬೋ ಏನೋ ? ಎಂದು ಕೇಳುವರು, ಇಲ್ಲ. ಆ ಇಷ್ಟ ನನಗೆ ಇಲ್ಲ. ರಜನಿಯು 

ಸುಂದರಿಯಾದರೂ ಅಂಧಳು, ಅದೂ ಅಲ್ಲದೆ ರಜನಿಯು ಹೂವಾಡಿಗರ ಮಗಳು. 

ಮತ್ತು ವಿದ್ಯಾವಂತಳೂ ಸುಶಿಕ್ಷಿತಳೂ ಆದವಳಲ್ಲ. ರಜನಿಯನ್ನು ಮದುವೆ ಮಾಡಿ 

ಕೊಳ್ಳಲಾರೆ. ಅದೂ ಅಲ್ಲದೆ ನನಗೆ ಇಷ್ಟವೂ ಇಲ್ಲ: ನಾನು' ವಿವಾಹದಲ್ಲಿ ಇಷ್ಟ 

ವಿಲ್ಲದೆ ಇರುವವನಲ್ಲ. ನಾನು ಯಾರನ್ನು ಮದುವೆ ಮಾಡಿಕೊಳ್ಳುವೆನೋ ಅವಳು 

ರಜನಿಯ ಹಾಗೆ ಸುಂದರಿಯಾಗಿರಬೇಕು, ಮತ್ತು ಮಿಂಚಿನ ಹಾಗೆ ಕಟಾಕ್ಷವನ್ನು 

ಬೀರುವವಳಾಗಿರಬೇಕಲ್ಲದೆ ವಂಶಮರ್ಯಾದೆ ವಿಷಯಗಲ್ಲಿ ಷಹಾಲಂ ಅಥವಾ ಮಲ್ಹಾರಿ 

ರಾವ್ ಹೋಲಕಾರನ ಸಾಕ್ಷಾತ್ ಪೌತ್ರಿಯಾಗಿರಬೇಕು. ವಿದ್ಯೆಯಲ್ಲಿ ಲೀಲಾವತಿ 

ಅಥವಾ ಶಾಪಭ್ರಷ್ಟಳಾದ ಸರಸ್ವತಿಯಾಗಿರಬೇಕು. ಪತಿಭಕ್ತಿಯಲ್ಲಿ ಸಾವಿತ್ರಿಯಾಗಿರ 

ಬೇಕು. ಚರಿತ್ರೆಯಲ್ಲಿ ಲಕ್ಷ್ಮಿಯಾಗಿಯೂ, ಅಡಿಗೆ ಮಾಡುವುದಲ್ಲಿ ದ್ರೌಪದಿಯಾ 

ಗಿಯೂ, ಆದರಲ್ಲಿ ಸತ್ಯಭಾಮೆಯಾಗಿಯೂ, ಮನೆಯ ಕೆಲಸದಲ್ಲಿ ಪಾಂಡವರ 

ತಾಯಿಯಾಗಿಯೂ ಇರಬೇಕು. ನಾನು ತಾಂಬೂಲವನ್ನು ಹಾಕುವಾಗ ಲವಂಗ 

ವನ್ನು ತೆಗೆದು ಕೊಡಬೇಕು. ಹುಕ್ಕಾ ಸೇದುವಾಗ ಅದರಲ್ಲಿ ತಂಬಾಕು ಇದಿಯೇ 

ಇಲ್ಲವೇ, ನೋಡಿ ಕೊಡಬೇಕು. ನಾನು ಊಟ ಮಾಡುವಾಗ ಮೀನಿನ ಮುಳ್ಳು 

ಏನಾದರೂ ಇದೆಯೇ ನೋಡಬೇಕು, ನಾನು ಸ್ನಾನ ಮಾಡುವಾಗ ಮೈ ಒರಸಿಕೊಂ 

ಡನೇ' ಇಲ್ಲವೇ ಅದರ ಜಾಗರೂಕತೆ ನೋಡಿಕೊಳ್ಳಬೇಕು. ನಾನು ಟಿ (Tea) ಕುಡಿ 

ಯುವಾಗ ಚಮಚೆ ಯನ್ನು.' ದೌತಿಯೊಳಗೆ  ಅದ್ದಿ, ಟಿ ಬಟ್ಟಿನಲ್ಲಿ ಹಾಕದಿರುವಹಾಗೆ 

ನೋಡಿಕೊಳ್ಳಬೇಕು. ಮತ್ತು ಪೀಕದಾನಿಯಲ್ಲಿ ರೂಪಾಯಿ ಹಾಕಿಬಿಟ್ಟು ಪೆಟ್ಟಿಗೆ 

ಯಲ್ಲಿ.ಉಗುಳದಹಾಗೆ ಖಬರದಾರಿಯಿಂದ ನೋಡಿಕೊಳ್ಳಬೇಕು, ಸ್ನೇಹಿತನಿಗೆ ಕಾಗದ 

ವನ್ನು ಬರೆದುಬಿಟ್ಟು ಸನ್ನ: ಸ್ವಂತ ಹೆಸರಿಗೆ ಮೇಲ್ವಿಳಾಸವನ್ನು ಬರೆದುಕೊಳ್ಳದಿರವ 

ಹಾಗೆ ನೋಡಿ ಬಂದೋಬಸ್ತು ಮಾಡಬೇಕು.. 'ಮಲಗಿಕೊಳ್ಳುವಾಗ ಮದುವೆಯಾದ 

--------------------------------------------

58 ರಜನೀ 


ವಳ ಹೆಸರು ಹಿಡಿದು ಕರೆಯುವುದಕ್ಕೆ ಬದಲಾಗಿ ಮರೆತು ನೆರೆಮನೆಯಲ್ಲಿರುವ ಭಕ್ತಿ 

ಪರಾಯಣಳಾದವಳ ಹೆಸರನ್ನು ಹಿಡಿದು ಕರೆದರೆ ಆ ತಪ್ಪನ್ನು ಕಂಡುಹಿಡಿದು ಕೂಡ್ಲೆ 

ತಿದ್ದಬೇಕು. ಇಂತಹ ಗುಣವಂತಳು ಸಿಕ್ಕಿದರೆ ಆಗವಳನ್ನು ವಿವಾಹ ಮಾಡಿಕೊಳ್ಳು 

ವೆನು, ನಿಮ್ಮಲ್ಲಿ ಆ ಇಣಿಕಿ ನೋಡಿ ನಗುವವರಲ್ಲಿ ಯಾರಾದರೂ ಅವಿವಾಹಿತರಾ 

ಗಿದ್ದು ಇಷ್ಟು ಗುಣವುಳ್ಳವಾಗಿ ವಿವಾಹ ಮಾಡಿಕೊಳ್ಳಲು ಇಷ್ಟವಿದ್ದು ಹೇಳಿದರೆ 

ಈಗಲೇ ಪುರೋಹಿತನನ್ನು ಕರೆಸುವೆನು. 

.............

ಮೂರನೆಯ ಪರಿಚ್ಛೇದ. 

ಕಡೆಗೆ ರಜನಿಯು ಸಿಕ್ಕಿದಳೆಂದು ರಾಜಚಂದ್ರನಿಂದ ತಿಳಿಯಬಂತು. ಆದರೆ 

ರಾಜಚಂದ್ರದಾಸನು ಈ ವಿಷಯದಲ್ಲಿ ನಿನ್ನ ಸಂಗಡ ಬಹಳ ಚಮತ್ಕಾರ ಮಾಡಿ 

ಬಿಟ್ಟನು, ರಜನಿಯು ಎಲ್ಲಿ ಸಿಕ್ಕಿದಳು, ಹೇಗೆ ಸಿಕ್ಕಿದಳು, ಇವೇ ಮುಂತಾದ ಸಮಾ 

ಚಾರವನ್ನು ಹೇಳಲಿಲ್ಲ. ಅವಳು ತಂದೆಯ ಮನೆಯನ್ನು ಏತಕ್ಕೆ ಬಿಟ್ಟು ಹೋಗಿ 

ದ್ದಳೋ ಅದನ್ನ ತಿಳಿಸಲಿಲ್ಲ. ಬಹಳ ಕೇಳಿದೆ. ಆದರೂ ಹೇಳಲಿಲ್ಲ. ಅವನ 

ಹೆಂಡತಿಯ ಏನು ಹೇಳಲಿಲ್ಲ. ನಮ್ಮ ಚಿಕ್ಕಮ್ಮನು ಸೂಚಿಸುವಹಾಗೆ ಎಲ್ಲರ ಮನ 

ಸ್ಸಿನೊಳಗೆ ಹೊಗರುವವಳು. ಅವಳಿ೦ದ ಏನೂ ಸಮಾಚಾರವನ್ನು ಹೊರಪಡಿಸ 

ಲಾರದೆ ಹೋದೆನು. ರಜಸಿಯು ನಮ್ಮ ಮನೆಗೆ ಏತಕ್ಕೆ ಬರಲಿದ್ದುದು ನಿಂತು 

ಹೋಯಿತೋ ಅದೂ ಗೊತ್ತಾಗಲಿಲ್ಲ. ಕಟ್ಟಕಡೆಗೆ ರಾಜಚಂದ್ರಸೂ ಅವನ ಹೆಂಡ 

ತಿಯೂ ಸಹ ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿಬಿಟ್ಟರು. ಚಿಕ್ಕಮ್ಮನು ಸ್ವಲ್ಪ 

ವ್ಯಸನಪಟ್ಟವಳಾಗಿ ಅವರನ್ನು ಹುಡುಕಿಸಿ ನೋಡಿಸಿದಳು. ಹೋದವರು ಬಂದು, 

ಅವರು ಸಪರಿವಾರವಾಗಿ ಬೇರೆ ಕಡೆಗೆ ಹೊರಟು ಹೋದರೆಂತಲೂ. ಇcಹ ಕಡೆಗೆ 

ಹೋದರೆಂಬುದು ಗೊತ್ತಿಲ್ಲವೆಂತಲೂ ಹೇಳಿದರು. 


ಇದಾದ ಒಂದು ತಿಂಗಳಮೇಲೆ ಒಬ್ಬ ದೊಡ್ಡಮನುಷ್ಯನು ನಮ್ಮ ಮನೆಗೆ 

ಬಂದು ನನ್ನನ್ನು ನೊಡಿದನು. ಅವನು ಬರುತ್ತಲೇ, ನಾನು ಕಲಿಕೆಯಲ್ಲಿ ವಾಸವಾ 

ಗಿಲ್ಲ. ನನ್ನ ಹೆಸರು ಅಮರನಾಥಘೋಷ, ನಾನು ಇರುವುದು ಶಾಂತಿಪುರದಲ್ಲಿ, 

ಎಂದು ತನ್ನ ಪರಿಚಯವನ್ನು ಹೇಳಿದನು. 

-----------------------------------------

ಮೂರನೆಯ ಪರಿಚ್ಛೇದ 59 

ಆಮೇಲೆ ಅವನ ಸಂಗಡ ಮಾತನಾಡಲು ತೊಡಗಿದನು. ಏನು ಕೆಲಸವಾಗಿ 

ಅವನು ಬಂದನೋ ಅದನ್ನು ಹಠಾತ್ತಾಗಿ ಕೇಳಲಿಲ್ಲ. ಅವನೂ ಏನೂ ಹೇಳಲಿಲ್ಲ. 

ಆದಕಾರಣ ದೊಡ್ಡವರು ತಮ್ಮನ್ನು ನೋಡುವುದಕ್ಕೆ ಬಂದವರನ್ನ ನೋಡಲು ಇಷ್ಟ 

ವಿಲ್ಲದೆ ಇದ್ದರೂ ಬಹಳ ಒಳ್ಳೆಯವರೆಂದು ಕಾಣಿಸಿ ಕೊಳ್ಳುವುದಕೋಸ್ಕರ ಒಂದೆರಡು 

ಮಾತು ಕೇಳಿ ಕಳುಹಿಸಿಬಿಡುವ ಪದ್ಧತಿಯನ್ನು ಅವಲಂಬಿಸಿ ಕಾಲಸಿತಿಯನ್ನು ಕುರಿತು 

ಮಾತನ್ನು ಎತ್ತಿದೆನು, ಹಾಗೆಯೇ ಮಾತು ಮಾತಿನ ಮೇಲೆ ಸಾಮಾಜಿಕ , ರಾಜಕೀಯ 

ವಿಷಯಗಳ ನಾನಾ ವಿಧವಾದ ಮಾತು ಬಂತು. ನೋಡಲಾಗಿ ಅವನು ಮಾತು ಕಥೆ 

ಯಲ್ಲಿ ಅತ್ಯಂತ ವಿಚಕ್ಷಣವಾಗಿ ಕಂಡು ಬಂದನು. ಅವನ ಬುದ್ಧಿಯು ಅತಿ ವಿಲಕ್ಷ್ಯ 

ಣವಾಗಿ ಶಿಕ್ಷಿತವಾದುದಾಗಿಯೂ, ಅವನ ಶಿಕ್ಷೆಯು ಸಂಪೂರ್ಣವಾದುದಾಗಿಯೂ 

ಕಂಡು ಬಂತು, ಮಾತನಾ) ಇವ ದು ಸ್ವಲ್ಪ ನಿಂತ ಅವಕಾಶದಲ್ಲಿ ಅವನು ನನ್ನ ಮೇಜಿನ 

ಮೇಲಿದ್ದ " ಷೇಕಸ್ಸಿಯರ್‌ ಗೆಲರಿ '' ಎ೦ಬ ಪುಸ್ತಕದ ಹಾಳೆಗನ್ನು ತಿರಿಗಿಸುತ 

ನೋಡುತಲಿದ್ದನು. ಆ ಸಮಯದಲ್ಲಿ ನಾನವನನ್ನು ನೋಡುತಲಿದ್ದೆನು ಅಮರನಾಥನು 

ನೋಡುವುದಕ್ಕೆ ಸುಂದರಪುರುಷ, ಗೌರವರ್ಣ; ಸ್ವಲ್ಪ  ಖಚ , ಸ್ಥುಲಕಾಯನೂ 

ಅಲ್ಲ, ಶೀರ್ಣ ಕಾಯನೂ ಅಲ್ಲ: ದೊಡ್ಡ ದೊಡ್ಡ ಕಣ್ಣುಗಳು; ಕೂದಲು ಸೂಕ್ಷ್ಮವಾಗಿ 

ಮೃದುವಾಗಿ, ಗುಂಗುಗು ಗುಂಗುರಾಗಿ ಕೃಷ್ಣವರ್ಣದ್ದಾಗಿತ್ತು, ಚೆನ್ನಾಗಿ 

ಬಾಚಿಕೊಂಡಿದ್ದನು.  ಉಡುಪಿನ ಪಾರಿಪಾಟ್ಯವು ಅತಿ ಜಂಭವಾಗಿರಲಿಲ್ಲ. ಆದರೆ ಪರಿ 

ಷ್ಕಾರವಾಗಿ ಮೈ ತುಂಬ ಸರಿಯಾಗಿತ್ತು. ಅವನು ಮಾತನಾಡವ ರೀತಿಯು ಅತಿ 

ಮನೋಹರವಾಗಿತ್ತು. ಕಂಠಸ್ವರವು ಅತಿ ಮಧುರವಾಗಿತ್ತು, ನೋಡಲಾಗಿ ಮನುಷ್ಯನು 

ಅತಿ ಸುಚರಿತನಾಗಿ ಕಂಡುಬಂದನು. 


ಷೇಕಸ್ಪೀರ ಬುಕ್ಕಿನ ಹಾಳೆಗಳನ್ನು ತಿರುಗಿ ನೋಡಿ ತಾನು ಬಂದ ಸಮಾಚಾರ 

ವನ್ನು ಹೇಳದೆ ಆ ಪುಸ್ತಕದಲ್ಲಿದ್ದ ಚಿತ್ರಗಳ ಸಮಾಲೋಚನೆಗೆ (Review) ಪ್ರಾರಂ 

ಭಿಸಿದನು. ಮಾತುಗಳಿಂದಲಣ ಕಾರ್ಯದಿಂದಲೂ ಚಿತ್ರಿತವಾಗತಕ್ಕದ್ದನ್ನು ಚಿತ್ರದ ಫಲ 

ಕದಲ್ಲಿ ಚಿತ್ರಿಸುವದು ಧೃಷ್ಟ ಕೆಲಸವೆಂತಲೂ ಆಚಿತ್ರವು ಯಾವಾಗಲೂ  ಸಂಪೂರ್ಣವಾ 

ದುದಾಗುವದಿಲ್ಲ ವೆಂತಲೂ ಪುಸ್ತಕದಲ್ಲಿದ್ದ ಚಿತ್ರಗಳು ಸರಿಯಾದ ಭಾವಗಳನ್ನು ತೋರಿ 

ಸುವಲ್ಲವೆಂತಲೂ ಹೇಳಿ, ಡೆಸಡಿಮೋನಳ ಚಿತ್ರವನ್ನು ನನಗೆ ತೋರಿಸಿ, ಈ ಚಿತ್ರದಲ್ಲಿ 

ತಮಗೆ ಕಂಡುಬರುವ ಭಾವಗಳು  ಧೈಯ್ಯ, ಮಾಧುರ್ಯ, ನಮ್ರತೆ, ಇಷ್ಟು ಭಾವಗಳೇ, 

ಹೊರ್ತು ಧೈರ್ಯದೊಂದಿಗೆ ಕೂಡಿರುವ ಸಾಹಸದ ಭಾವವು ಎಲ್ಲಿ ಕಾಣುತ್ತದೆ ? ನಮ್ರತೆ 

ಯಿಂದೊಡಗೂಡಿದ ಆ ಸತೀತ್ವದ ಅಹಂಕಾರಭಾವವು ಎಲ್ಲಿ ಕಾಣುತ್ತದೆ? ಹೀಗೆಂದು 

-----------------------------------------------

60 ರಜನೀ


ಹೇಳಿ ಜೂಲಿಯೆಟ್ಟಿನ ಚಿತ್ರವನ್ನು ತೋರಿಸಿ, ಇದು ನವಯುವತಿಯ ಚಿತ್ರವೇನೋ 

ಹೌದು, ಆದರೆ ಆ ಜೂಲಿಯಟ್ಟಿನ ನವಯೌವನದ ಅದವ ನೀಯವಾದ ಚಾಂಚಲ್ಯವು 

ಎಲ್ಲಿ ಕಾಣುತ್ತದೆ ಎಂದು ಹೇಳಿ ಮಾತಿನಿಂದಲೂ ಕಾರ್ಯದಿಂದಲೂ ಚಿತ್ರಿತವಾಗುವ 

ಹಾವಭಾವಾದಿಗಳನ್ನು ಚಿತ್ರಿಸುವದು ಕೇವಲ ಧೃಷ್ಟಕಾರ್ಯವೆಂದು  ಹೇಳಿದನು. 


ಅಮರನಾಥನು ಹೀಗೆ ಮಾತನಾಡುತ್ತ ಷೇಕಸ್ಪಿಯರನ ಗ್ರಂಥಗಳಲ್ಲಿ ವರ್ಣಿತ 

ರಾದ ನಾಯಿಕಿಯಳ ಮಾತಿನಮೇಲೆ ಶಕುಂತಳಾ, ಸೀತಾ, ಕಾದಂಬರಿ, ವಾಸವದತ್ತ, 

ರುಕ್ಮಿಣಿ, ಸತ್ಯಭಾಮಾ, ಮುಂತಾದವರ ಮಾತು ಬಂತು. ಅಮರನಾಥನು ಅವರಲ್ಲಿ 

ಒಬ್ಬೊಬ್ಬರ ಚಿತ್ರವನ್ನು ವಿಶ್ಲೇಷಣಮಾಡಿ ( Analyse)ಹೇಳಿದನು. ಪ್ರಾಚೀನ ಸಾಹಿ 

ತ್ಯದ (1iterature) ಮಾತಿನಮಾತಲಿ ಕ್ರಮವಾಗಿ ಪ್ರಾಚೀನ ಇತಿಹಾಸದ ಮಾತು  

ಬಂತು. ಆ ಪ್ರಸ೦ಗದಲ್ಲಿ ಟೆಕ್‌ಟಸ್‌  (Tacitus )ಪ್ಲಟಾರ್ಕ (Platarch) ಧುಕಿ 

ದೈದಸ್‌ ದೈವ (Theeydides}ಮುಂತಾದವರ ಅಪೂರ್ವವಾದ ಸಮಾಲೋಚನೆಗಳ ಅವ 

ತಾರಣೆಗಳು ನಡೆದು ಪ್ರಾಚೀನ ಅತಿವ್ಯಕ್ತಿಯವರ ಮತಾಮತವನ್ನು ಕುರಿತು ಅಮರ 

ನಾಥನು  ಕಾ*************************************************** ಮತವನ್ನು ಸಮರ್ಥನ 

ಮಾಡಿದನು.  ******************************************* ರೋಮಾಂಚಕರಾದ ಮಿಲ್‌

ಹಕ್‌ಸ್ಲಿ ಮುಂತಾದವರ ಮಾತು ಬಂತು. ಹಕ್‌ಸ್ಲಿಯಿಂದ ಜೆನ್‌, ದಾರುನ್‌ ಡಾರ 

ವಿನ್‌ಯಿಂದ ಬುಕೆಸಿಯರ್‌ ಸವನಿಯರ್‌ ಮುಂತಾದವರ ಸಮಾಲೋಚನೆಯಾಯಿತು. 

ಅಮರನಾಥನು ಅಪೂರ್ವವಾದ ಪಾಂಡಿತ್ಯಸ್ರೋತವು ನನ್ನ ಕಿವಿಯಲ್ಲಿ ಹರಿಯಿತು. 

ನಾನು ಕೇವಲ ಮುಗ್ಧನಾಗಿ ಮುಖ್ಯವಾದ ಮಾತನ್ನು ಮರೆತುಬಿಟ್ಟೆನು. 


ಹೊತ್ತಾದುದನ್ನು ನೋಡಿ ಅಮರನಾಥನು, ಇನ್ನು ನಿಮಗೆ ತಪ್ಪ ಬೇಜಾರು 

ಮಾಡುವುದಿಲ್ಲ. ನಾನು ಬಂದ ಸಮಾಚಾರವನ್ನು ಇದುವರೆಗೂ ನಿಮಗೆ ತಿಳಿಸಲಿಲ್ಲ. 

ನಿಮ್ಮ ಮನೆಗೆ ಹೂವನ್ನು ಕೊಡುವ ರಾಜಚಂದ್ರದಾಸನಿಗೆ ಒಬ್ಬ ಮಗಳಿಲ್ಲವೆ ? 

ಎಂದೆನು.


ನಾನು-ಇದ್ದಾಳೆಂದು ಕಾಣುತ್ತದೆ


ಅಮರನಾಥನು ಸ್ವಲ್ಪನಕ್ಕು, "ಕಾಣುತ್ತದೆ" ಅಲ್ಲ! ಇದ್ದಾಳೆ. ನಾನವ 

ಳನ್ನು  ಮದುವೆ ಮಾಡಿಕೊಳ್ಳಬೇಕೆಂದು ಖಂಡಿತ ಮಾಡಿಕೊಂಡಿದ್ದೆನು. 


ನೀನು ಮೊದಲು ಅದನ್ನು ಅಮರನಾಥನ ಮುಂದೆ ಹೇಳತೊಡಗಿ ನಾನು

ರಾಜಚಂದ್ರನಲ್ಲಿ ಈ ಮಾತು ಹೇಳುವುದಕ್ಕೇನೇ ಹೋಗಿದ್ದೆನು. ಅವರಿಗೆ ಹೇಳಿದ್ದಾ

---------------------------------------------------- 

ನಾಲ್ಕನೆಯ ಪರಿಚ್ಛೇದ _61 


ಯಿತು, ಈಗ ನಿಮ್ಮಲ್ಲಿ ಹೇಳತಕ್ಕ ಮಾತು ಒ ದ ೧.೪ತು. ಆ ಮಾತು ನಿಮ್ಮ 

ತಂದೆಯ ಸeಗಡಿ ಹೇಳತಕ್ಕದ್ದು ; ಏತಕ್ಕೆಂದರೆ ಅವನು ಯಜಮಾನ ; ಆದರೆ ನಾನು 

ಹೇಳೆತಕ್ಕ ಮಾತು ನಿಮಗೆ ಕೋಪವುಂಟುಮಾಡತಕ್ಕ ಮಾತಾಗಿದೆ. ನೀವು ಎಲ್ಲರಿಗಿಂ 

ತಲೂ ಸ್ಥಿರಸ್ವಭಾವವುಳ್ಳವರು ಮತ್ತು ಧರ್ಮಜ್ಞರಾಗಿರುವ ಕಾರಣ ನಿಮ್ಮಲ್ಲಿಯೇ. 

ತಿಳಿಸೋಣವೆಂದು ಬಂದನೆಂದು ಹೇಳಿದನು.


ನಾನು....ಅದು ಎಂತಹ ಮಾತು ಇರಬಹುದು ... ? 


ಅಮರನಾಥೆ - ರಜನಿಗೆ ಸ್ವಲ್ಪ ಆಸ್ತಿಯುಂಟು 


ನಾನು--ಇದು ಹೇಗೆ ? ಅವಳು ರಾಜಚಂದ್ರನ ಮಗಳು. 


ಅಮರನಾಥ--ರಾಜಚಂದ್ರನ ಸಾಕು ಮಗಳು. 

  

ನಾನು - - ಹಾಗಾದರೆ ಅವಳು ಯಾರ ಮಗಳು ? ಆಸ್ತಿಯನ್ನು ಎಲ್ಲಿ ಹೊಂದಿ 

ದಳು ? ನನಗೆ ಏತಕ್ಕೆ ಎಳ್ಳಷ್ಟಾದರೂ ಇದು ಗೊತ್ತಾಗದೆ ಹೋಯಿತು? 

ಅಮರನಾಥನು ಈಗ ಯಾವ ಆಸ್ತಿಯನ್ನು ಅನುಭವಿಸುತ್ತಿರೋ ಅದೇ  

ರಜನಿಗೆ ಸೇರಿದ್ದು. ರಜನಿಯು ಮನೋಹರದಾಸನ ಅಣ್ಣನ ಮಗಳು. 


ಇದನ್ನು ಕೇಳಿ ಒಂದು ಸಲ ಚಮಕಿತನಾದೆನು. ಅನಂತರ ಯಾರೋ ಮೋಸ   

ಗಾರರ ಕೈಗೆ ಸಿಕ್ಕದನೆಂದುಕೊಂಡು ಪ್ರಕಾಶವಾಗಿ ಘಟ್ಟಿಯಾಗಿ ನಕ್ಕು, ತಮಗೆ ಬೇರೆ 

ಕೆಲಸವಿಲ್ಲವೆಂದು ಕಾಣುತ್ತದೆ. ಈಗ ನಮ್ಮಲ್ಲಿ ಏಕಾಂತ ಮಾಡುವುದಕ್ಕೆ 

ಸಮಯವಿಲ್ಲ. ನೀವು ಮನೆಗೆ ಹೋಗಬಹುದೆಂದು ಹೇಳಿದೆನು. 


ಅಮರನಾಥನು, ಹಾಗಾದರೆ ಲಾಯರ ಮೂಲಕ ಸಮಾಚಾರವನ್ನೆಲ್ಲಾ ತಿಳಿ 

ಯುವಿಯೊಂದನು. 

... 

ನಾಲ್ಕನೆಯ ಹರಿದ. 

---- 

ಇತ್ತಲಾಗಿ ವಿಷ್ಣುರಾಮಬಾಬುವು ಮನೋಹರದಾಸನಿಗೆ ಉತ್ತರಾಧಿಕಾರಿ 

ಗಳು ಉಂಟಾಗಿದ್ದಾರೆ, ಆಸ್ತಿಯನ್ನೆಲ್ಲಾ ಬಿಟ್ಟುಕೊಡಬೇಕೆಂದು ಸಮಾಚಾರವನ್ನು 

ಕಳುಹಿಸಿದನು. ಅಮರನಾಥನು ಹಾಗಾದರೆ ಮೋಸಗಾರನಲ್ಲವಷ್ಟೆ ? 

----------------------------------------------

62 ರಜನೀ 


ಉತ್ತರಾಧಿಕಾರಿ ಯಾರು ಎಂಬುದನ್ನು ವಿಷ್ಟರಾಮಬಾಬುವು ಮೊದಲು ತಿಳಿ 

ಸಲಿಲ್ಲ. ಆದರೆ ಅಮರನಖವನ ಮಾತುಗಳು ಸ್ಮರಣೆಗೆ ಬಂದವು. ರಜನಿಯೇ ಉತ್ತರಾ 

ಧಿಕಾರಿಯಾಗಿರಬೇಕೆಂದು ತಿಳಿದುಕೊಂಡೆನು, ನಾನು ಯಾರು ಹಕ್ಕುದಾರರೆಂದು 

ಬಂದಿದ್ದಾರೋ ಅವರು ಮನೋಹರದಾಸನ ಯಧಾರ್ಧವಾದ ಉತ್ತರಾಧಿಕಾರಿಗಳು 

ಹೌದೆ ಅಲ್ಲವೆ ? ಆ ವಿಚಾರದ ನಿಶ್ಚಯತ್ವವನ್ನು ತಿಳಿಯಲು ವಿಷ್ಣುರಾಮಬಾಬು 

ಬಳಿಗೆ ಹೋದೆನು, ಹೋಗಿ, ಏನಯ್ಯಾ ! ನೀನು ಮನೋಹರದಾಸ ಸಪರಿವಾರ 

ವಾಗಿ ನದಿ ಯಲ್ಲಿ ಮಿಣುಗಿ ಹೋದವೆಂತಲೂ ಅದಕ್ಕೆ ರುಜುವಾತುಗಳುಂಟಿಂತಲೂ 

ತಿಳಿಸಿದೆ ; ಹಾಗಿದ್ದರೆ ಅವನಿಗೆ ಪುನಃ ವಾರಸದಾರರು ಹೇಗೆ ಬಂದರೆಂದು ಕೇಳಿದೆನು. 


ವಿಷ್ಟು ರಾಮ-ಹರೇಕೃಷ್ಣನೆಂದು ಮನೋಹರನಿಗೆ ಒಬ್ಬ ಸಹೋದರನಿದ್ದ 

ನೆಂದು ಕೇಳಿದ್ದೆಯಷ್ಟೆ ? 


ನಾನು....ಅದನ್ನು ನಾನು ಬಲ್ಲೆ. ಆದರೆ ಅವನೂ ಸತ್ತುಹೋದನು. 

 

ವಿಷ್ಣು- ನಿಜ, ಆದರೆ ಮನೋಹರನು ಸತ್ತ ನಂತರ ಅವನು ಸತ್ತುಹೋದನು, 

ಆದಕಾರಣ ಅವನು ಆಸ್ತಿಗೆ ಅಧಿಕಾರಿಯಾಗಿ ಸತ್ತುಹೋದ. 

 

ನಾನು... - ಆಗಲಿ, ಆದರೆ ಹರೇಕೃಷ್ಣನ ವಾರಸುದಾರರು  ಈಗ ಯಾರೂ 


ಇಲ್ಲವಷ್ಟೆ. 


ವಿಷ್ಣು - ನಾನು ಹಾಗೆಯೇ ತಿಳಿದು ಆಸ್ತಿಯನ್ನೆಲ್ಲ ನಿನಗೆ ಒಪ್ಪಿಸಿದೆನು. 

ಈಗ ವಿಚಾರಿಸಲಾಗಿ ಅವ.ಗೆ ಒಬ್ಬ ಮಗಳು ಇದ್ದಾಳೆಂದು ತಿಳಿಯಬರುತ್ತದೆ. 


ನಾನು-- ಹಾಗಿದ್ದರೆ ಆ ಮಗಳ ಸಮಾಚಾರವು ಇದುವರೆಗೆ ಏತಕ್ಕೆ ಹೊರ 

ಪಡಲಿಲ್ಲ ? 


ವಿಷ್ಣು..ಹರೇ ಕೃಷ್ಣನ ಹೆಂಡತಿಯು ಅವನಿಗೆ ಮೊದಲೇ ಸತ್ತುಹೋದಳು. 

ಹೆಂಡತಿಯ ಹೆಸೇಗ ಬಳಿಕ ಶಿಶುವಾಗಿದ್ದ ಮಗಳನ್ನು ಸಾಕುವವರು ಇಲ್ಲದೆ ಹರೇ 

ಕೃಷ್ಣನು ಮಗಳನ್ನು ಹೆಂಡತಿ ತಂಗಿಯ ಗಂಡನ ವಶಕ್ಕೆ ತನ್ನ ಮಗಳೆಂತಲೇ ಪಾಲನೆ 

ಮಾಡೆಂದು ಕೊಟ್ಟುಬಿಟ್ಟನು. ಹರೇ ಕೃಷ್ಣನ ಸತ್ತನಂತರ ಮೇಜಸ್ಟ್ರೇಟರಲ್ಲಿ ಅವನು 

ಬೇವಾರಸೆಂದು ಇತ್ಯರ್ಥವಾಗಿದ್ದ ರುಜುವಾತಿನಮೇಲೆ ನಾನು ನಿಮಗೆ ತಿಳಿಸಿದೆನು. 

ಆದರೆ ಈಗ ಹರೇ ಕೃಷ್ಣನ ನರೆಯಾಗಿದ್ದವನು ನನ್ನ ಹತ್ತಿರ ಬಂದು ಅವನ ಮಗಳ 

ವೃತ್ತಾಂತವನ್ನು ಹೊರಪಡಿಸಿದನು. ಅವನು ಹೇಳಿದ ಪ್ರಕಾರ ಎಲ್ಲಾ ಸಂಗತಿಗಳನ್ನು 

ವಿಚಾರಮಾಡಿದ್ದರಮೇಲೆ ಮಗಳು ಇರುವದ, ನಿಜವೆಂದು ಗೊತ್ತಾಯಿತು. 

-------------------------------------------------- 

ನಾಲ್ಕನೆಯ ಪರಿಚ್ಛೇದ 63 


ನಾನು - ಯಾರಾದರೂ ಧೂರ್ತರಾದವರು ಒಬ್ಬ ಹ ಡುಗಿಯನ್ನು ಹಿಡಿದು 

ಕೊಂಡು ಹರೇ ಕೃಷ್ಣನ ಮಗಳೆಂದು ಹೇಳಿ ಕೊಂಡು ಬಂದಿದ್ದರೂ ಬ೦ದಿರಕೂಡದೇ 

ತಕ್ಕೆ? ಅವಳು ಯಥಾರ್ಥವಾಗಿ ಹರೇ ಕೃಷ್ಣನ ಮಗಳೆಂಬುದಕ್ಕೆ ರುಜುವಾತು ಏನಿದೆ ? 


"ಇದೆ ” ಎಂದು ಹೇಳಿ ವಿಷ್ಣುರಾಮಬಾಬುವು ನಂಗೆ ಒಂದು ಕಾಗದ 

ವನ್ನು ತೋರಿಸಿ, ಈ ವಿಷಯದಲ್ಲಿ ಏನೇನು ರುಜುವಾತುಗಳುಂಟೋ ಅದಕ್ಕೆಲ್ಲ 

ಒಂದು ಯಾದಾಸ್ತು ಮಾಡಿಟ್ಟೇ ಇದ್ದೇನೆಂದು ಹೇಳಿದನು. 


ನಾನು ಆ ಕಾಗದವನ್ನು ತೆಗೆದುಕೊ೦ಡು ಓದಿದೆನು, ಅದರಿಂದ, ಹರೇ ಕೃಷ್ಣನ 

ಷಡ್ಡಕನು ರಾಜಚಂದ್ರನೆಂತಲೂ ಮತ್ತು ಹರೇ ಕೃಷ್ಣನ ಮಗಳು ರಜನಿ ಎಂತಲೂ 

ಗೊತ್ತಾಯಿತು. 


ನಾನು ನೋಡಿದ್ದಲ್ಲಿ ರುಜುವಾತುಗಳೆಲ್ಲ ಬಹಳ ಭಯಂಕರವಾಗಿದ್ದವು, 

ನಾನು ಇಷ್ಟು ದಿನ ಅಂಧಳಾದ ರಜನಿಯ ಧನದಿಂದ ಧನಿಯಾಗಿ ಅವಳನ್ನು 

ದರಿದ್ರ ಳೆಂದು ತಿರಸ್ಕರಿಸುತ್ತಿದ್ದೆನು. 


ವಿಷ್ಣು ರಾಮನು ಒಂದು ಕೈಫಿಯತ್ತಿನ ನಕಲನ್ನು ನನ್ನ ಕೈಯಲ್ಲಿ ಕೊಟ್ಟು, 

ಈಗ ನೋಡು, ಇದು ಯಾರ ಕೈಫಿಯತ್ತು ಎಂದನು. 


ನಾನು ಓದಿ ನೋಡಲಾಗಿ ಹರೇಕೃಷ್ಣನ ಕೈಫಿಯತಾಗಿತ್ತು. ಮೇಜಸ್ಟ್ರೇಟನ 

ಮುಂದೆ ಆಸಾಮಿ ಚೋರಿ ಮೊಕದ್ದಮೆಯಲ್ಲಿ ಕೊಟ್ಟ ಕೈಫಿಯತ್ತು ಅದರಲ್ಲಿ ಅವನ 

ತಂದೆಯ ಹೆಸರು, ವಾಸಸ್ಥಾನ ಬರೆದಿದ್ದವು ಅವನ್ನು ಓದಿದೆನು. ಅದೂ ಮನೋಹರನ 

ತಂದೆಯ ಹೆಸರೂ ಒಂದಾಗಿತ್ತು. ವಿಷ್ಟುರಾಮನು ಮನೋಹರನ ಹರೇರಾಮ 

ಕೃಷ್ಣನೂ ಏಕೋದರರೆಂದು ಕೈಫಿಯತ್ತಿನಿಂದ ಗೊತ್ತಾಯಿತೆ ಎ೦ದು ಕೇಳಿದನು 


ನಾನು-ಗೊತ್ತಾಯಿತು, 


ವಿಷ್ಣು-ಹಾಗೆ ಸಂಶಯವಿದ್ದರೆ ಅದನ್ನು ಈಗಲೇ ಹರಿಸುತ್ತೇನೆ. 

ಹೀಗೆಂದು ಹೇಳಿ ಮು೦ದೆ ಓದೆಂದನು. 

 

ನಾನು ಮುಂದೆ ಓದತೊಡಗಿದೆನು. ಕೈಫಿಯ ತನಲ್ಲಿ " ನನಗೆ ಆರು ತಿಂಗಳು 

ವಯಸ್ಸಿನ ಒಂದು ಹೆಣ್ಣು ಮಗುವಿದೆ. ಇಲ್ಲಿ ಒಂದು ವಾರಕ್ಕೆ ಮat: ಅದಕ್ಕೆ ಅನ್ನ

ಪ್ರಾಶನ  ಮಾಡಿಸಿದೆ.  ಅನ್ನಪ್ರಾಶನದ ರಾತ್ರಿಯೇ  ಆ ಮಗುವನ್ನು ಕಳವು ಮಾಡಿ 

ಕೊಂಡು ಹೋದರು."  ಇದುವರೆಗೆ ಓದಿದಮೇಲೆ    ವಿಷ್ಣುರಾಮನು ನೋಡು, ಇದು 

ಎಷ್ಟು ವರುಷದ ಕೈಫಿಯತು ? ಎಂದನು. 

--------------------------------------------------

64 ರಜನೀ 


ಕೈಫಿಯತನ ತಾರೀಖು ನೋಡಲಾಗಿ ಹತ್ತೊಂಭತ್ತು ವರುಷದ್ದಾಗಿ ತಿಳಿಯಿತು.  


ವಿಷ್ಣು-ಈ ಹುಡಗಿಗೆ ಲೆಕ್ಕ ಮಾಡಿದರೆ ಎಷ್ಟು ವರುಷ ವಯಸ್ಸು ? 


ನಾನು- ಹತ್ತೊಂಭತ್ತು ವರುಷದಮೇಲೆ ಕೆಲತಿಂಗಳಾಗುತ್ತದೆ. 

 

ವಿಷ್ಣು-ರಜನಿಗೆ ಎಷ್ಟು ವರುಷವಿರಬಹುದು ? 

ಸುಮಾರು ಇಪ್ಪತ್ತು ವರುಷವಾಗಬಹುದು. 


ವಿಷ್ಣು- ಮುದೆ ಓದಿನೋಡು, ಹರೇಕೃಷ್ಣನು ಹೆಸರು ಹೇಳುತ್ತಾನೆ. 


ನಾನು ಮು೦ದೆ ಓದಿದೆ. ಕೈಫಿಯತನಲ್ಲಿ ಹರೇ ಕೃಷ್ಣನ ಪ್ರನಃ . ಸಿಕ್ಕಿದ್ದ ಮಗು 

ವನ್ನು ಮೊಕಾಬಿಲೆಮಾಡಿಸಿದಾಗ  “ನೋಡಿದೆ. ಇದೇ ನನ್ನ ಮಗು,' ರಜನಿಯೆಂಬ 

ಹುಡಗಿ ” ಎಂದು ಹೇಳಿದ್ದಾನೆ. 

 

ಇನ್ನು ಹೆಚ್ಚು ಸಂಶಯ ಉಳಿಯಲಿಲ್ಲ. ಅದರ ಮುಂದೆ ಓದಿದೆನು. ಅಪರಾ 

ಧಿಯ ವಕೀಲರು ಫಾಟೆಸವಾಲುಮಾತವದರಲ್ಲಿ ಹರೇ ಕೃಷ್ಣನನ್ನು ನೀನು ದರಿದ್ರ. ನಿನ್ನ 

ಮಗಳಿಗೆ ಬಂಗಾರದ ಬಳೆ ಕೊಟ್ಟಿದ್ದು ಹೇಗೆ ? ಎಲ್ಲಿಂದ ಬಂತು ? ಎಂದು ಕೇಳಿದ್ದಕ್ಕೆ 

ನಾನು ಗರೀಬನೇ ಹೌದು ;  ಆದರೆ ನನ್ನ ಸೋದರ ಮನೋಹರನು ಹತ್ತುರೂಪಾಯಿ 

ಸಂಪಾದಿಸುತ್ತಾನೆ. ಅವನು ನನ್ನ ಮಗಳಿಗೆ ಭಂಗಾರದ ನಗನಟ್ಟಿ ಮಾಡಿಸಿಕೊಟ್ಟಿದ್ದಾ 

ನೆಂದು ಹೇಳಿದ್ದಾನೆ. 


ಇದರಿಂದ ಮನೋಹರನು ಹರೇಕೃಷ್ಣನ ಸಹೋದರನೆಂಬುದಕ್ಕೆ ಏನೇನು 

ಸಂಶಯವಿಲ್ಲ. 


ಪುನಃ ವಕೀಲನು ಮಾಡಿದ ಮೇಲೆ ಪಾಟೆಸವಾಲು. 


ನಿನ್ನ ಸಹೋದರನು ನಿಮ್ಮ ಪರಿವಾರದಲ್ಲಿ ಇತರರಿಗೆ ಯಾರಿಗಾದರೂ ನಗನಟ್ಟು 

ಕೊಟ್ಟಿದ್ದಾನೋ ? 


ಜವಾಬು--- ಇಲ್ಲ. 


ಸವಾಲು-ಹಾಗಾದರೆ ನಿನ್ನ ಮಗಳಿಗೆ ಅನ್ನ ಪ್ರಾಶನದಲ್ಲಿ ನಗನಟ್ಟುಗಳನ್ನು 

ಕೊಡಲು ಕಾರಣವೇನು ? 


ಜವಾಬು-ನನ್ನ ಈ ಹೆಣ್ಣು ಮಗಳು ಜನ್ಮಾಂಧಳು, ಅದಕ್ಕಾಗಿ ನನ್ನ ಹೆಂಡ 

ತಿಯು ಯಾವಾಗಲೂ ಕೊರಗಿ ಅಳುವಳು. ಅದನ್ನು ನೋಡಿ, ನನ್ನ ಸಹೋದರನು 

ಮತ್ತು ಅವನ ಹೆಂಡತಿಯು ಸಹ ದುಃಖಿತರಾಗಿ, ನಮ್ಮ ಮನಸ್ಸಿಗೆ ದುಃಖವು ಸ್ವಲ್ಪ 

ವಾದರೂ ಕಡಮೆಯಾಗಲೆಂದು ಅನ್ನ ಪ್ರಾಶನದಲ್ಲಿ ಮಗುವಿಗೆ ಈ ಒಡವೆಗಳನ್ನೆಲ್ಲ 

ಕೊಟ್ಟರು 

----------------------------------------------

ನಾಲ್ಕನೆಯ ಪರಿಚ್ಛೇದ 65 

 

ಜನ್ಮಾಂಧ ! ಹಾಗಾದರೆ ಈ ರಜನಿಯ ಆ ಹೆಣ್ಣು ಮಗು ಎಂಬುದಕ್ಕೆ 

ಇನ್ನು ಅನುಮಾನವೇನು ? 


ನಾನು ಹತಾಶನಾಗಿ ಕೈಫಿಯತ್ತನ್ನು ಮುಂದಕ್ಕೆ ಓದದೆ ಕೆಳಗೆ ಇಟ್ಟು ಬಿಟ್ಟು 

ನನಗೆ ಇನ್ಯಾವ ಸಂಶಯವೂ ಇಲ್ಲ ವೆಂದನು. 


ವಿಷ್ಣು ರಾಮ-ಈಯೊಂದು ಕೈಫಿಯತ್ತನಿಂದಲೇ ತೃಪ್ತನಾಗಬೇಡ, ಇನ್ನೊಂದು 

ಕೈಫಿಯತ್ತನ ನಕಲನ್ನು ನೋಡು. 


ಎರಡನೆಯ ಕೈಫಿಯತ್ತನ ನಕಲನ್ನು ನೋಡಲಾಗಿ ಅದೂ ಇದೇ ಆಸಾಮಿ 

ಚೋರಿಮೊಕದ್ದಮೆಯಲ್ಲಿ ತೆಗೆದುಕೊಂಡಿದ್ದಾಗಿತ್ತು. ಇದು ರಾಜಚಂದ್ರ ದಾಸನ 

ಹೇಳಿಕೆಯಾಗಿತ್ತು, ಅವನೊಬ್ಬನೇ ಸಂಬಂದಿಯೆಂದು ಈ ಅನ್ನ ಪ್ರಾಶನದ ಉತ್ಸವಕ್ಕೆ 

ಬಂದಿದ್ದನು.  ತಾನು ಹರೇಕೃಷ್ಟನ ದೊಡ್ಡಣ್ಣನೆಂದು ಹೇಳಿಕೆಣಂಡಿದ್ದಾನೆ ; ಮತ್ತು ಈ 

ಆಸಾಮಿ ಚೋರಿಮೊಕದ್ದಮೆಯು ಅವನ ಸಾಕ್ಷ್ಯ:ದಿಂದ ರುಜುವಾತಾಗಿದೆ. 

 

ವಿಷ್ಣುರಾಮನು, ಈ ಇರುವ ರಾಜಚಂದ್ರನೆ ಆಗ ಕೈಫಿಯತ್ತನ್ನು ಕೊಟ್ಟ 

ವನು, ಅನುಮಾನವಿದ್ದರೆ ಅವನನ್ನು ಕರೆಸಿ ಕೇಳಬಹುದೆಂದನು. 

 

ನಾನು-ಅದು ನಿಷ್ಪ್ರಯೋಜನ. 


ವಿಷ್ಣು ರಾಮನು ಇನ್ನೂ ಅನೇಕ ದಾಖಲೆಗಳನ್ನು ತೋರಿಸಿದನು, ಅದನ್ನೆಲ್ಲಾ 

ಇಲ್ಲಿ ಹೇಳಕೂತರೆ ಎಲ್ಲರಿಗೂ ಚೆನ್ನಾಗಿ ತೋರುವುದಿಲ್ಲ. ನನಗೆ ಆ ರಜನಿಯು ಹರೇ 

ಕೃಷ್ಣನ ಮಗಳೆಂಬುದಕ್ಕೆ ಮತ್ಯಾವ ಸಂಶಯವೂ ಇರಲಿಲ್ಲವೆಂದು ಇಷ್ಟು ಹೇಳಿದರೆ 

ಸಾಕು, ಅದರಮೇಲೆ, ವೃದ್ಧರಾದ ತಾಯಿ ತಂದೆಗಳನ್ನು ಕಟ್ಟಿಕೊಂಡು ಅನ್ನಕ್ಕೆ ಶ್ರಮ 

ಪಡುತ್ತಾ ಎಲ್ಲಿ ಹೋಗಲೆಂಬ ಯೋಚನೆ ಒ೦ತು. 


ನಾನು ವಿಷ್ಣು ರಾಮನಿಗೆ, ಮೊಕದ್ದಮೆ ಮಾಡಿ ಕೋರ್ಟಿಗೆ ಹೋಗುವುದು 

ವೃಧಾ ದುಡ್ಡು ಖರ್ಚು, ಆದಕಾರಣ ಆಸ್ತಿಯ ನ್ನು ರಜನಿಗೆ ಕೊಟ್ಟುಬಿಡುವೆನು. 

ನನ್ನ ಅಣ್ಣನಿಗೂ ನನಗೂ ಇದರಲ್ಲಿ ಜಂಟಿಹಕ್ಕು ಉಂಟು, ಅವನನ್ನು ಕೇಳುವುದು 

ಒಂದೇನಿಂತದ್ದೆಂದು ಹೇಳಿದೆನು. 

 

ನಾನು ಆ ಕೋರ್ಟಿಗೆ ಹೋಗಿ ಅಸಲು ಕೈಫಿಯತ್ತುಗಳನ್ನು ನೋಡಿ ಬಂದೆನು. 

ನಕಲುಗಳಲ್ಲಿ ಕೃತ್ರಿಮವಿಲ್ಲವೆಂದು ತಿಳಿದೆನು. ಆಸ್ತಿಯನ್ನು ರಜನಿಗೆ ಬಿಟ್ಟುಕೊಟ್ಟೆನು. 

......

--------------------------------------------

ಐದನೆಯ ಪರಿಚ್ಛೇದ. 

ರಜನಿಗೆ ಆಸ್ತಿಯನ್ನು ಬಿಟ್ಟು ಕೊಟ್ಟೆನು. ಆದರೆ ಯಾರೂ ಸ್ವಾಧೀನೆ ತೆಗದು 

ಕೊಳ್ಳುವುದಕ್ಕೆ ಬರಲಿಲ್ಲ.  


ರಾಜಚಂದ್ರನು ಒಂದು ದಿನ ನೋಡುವುದಕ್ಕೆ ಬಂದಿದ್ದನು, ಅವು ಸಿಂಲಾ 

ದಲ್ಲಿ ಒಂದು ಮನೆಯನ್ನು ಕ್ರಯಕ್ಕೆ  ತೆಗೆದು ಅಲ್ಲಿಗೆ ರಜಸಿಯನ್ನು ಕರೆದುಕೊಂಡು 

ಹೋದಂತೆ ಹೇಳಿದರು. ಕ್ರಯಕ್ಕೆ ಹಣವೆಲ್ಲಿತ್ತೆಂದು ಕೇಳಿದ್ದಕ್ಕೆ ಅಮರನಾಥನು ಸಾಲ 

ಕೊಟ್ಟಿರುವದಗಿಯೂ ಅನಂತರ ಆಸ್ತಿಯಿಂದ ಸಾಲ ತೀರಿಸಬೇಕೆಂತಲೂ ಹೇಳಿದನು. 

ಹಾಗಾದರೆ, ಒಂದು ಆಸ್ತಿಯನ್ನು ಏತಕ್ಕೆ ಸ್ವಾಧೀನಕ್ಕೆ ತೆಗೆದುಕೊಳ್ಳಲಿಲ್ಲವೆಂದು 

ಕೇಳಿದನು. ಅವನು ಅದೆಲ್ಲ ಅಮರನಾಥನಿಗೆ ಗೊತ್ತು ಎಂದನು. ಆಮರನಾಥನು 

ರಜನಿಯನ್ನು ಮದುವೆಮಾಡಿಕೊಂಡೊಡನೆ ? ಎಂದು ನಾನು ಕೇಳಿದ್ದಕ್ಕೆ ರಾಜಚಂದ್ರನು 

ಇಲ್ಲವೆಂದು ಹೇಳಿದನು. ಅನಂತರ ಅವನೊಂದಿಗೆ ಮಾತನಾಡುತ್ತ, ರಾಜಚಂದ್ರ ! 

ನಿನ್ನನ್ನು ಇಷ್ಟು ದಿನ ನೋಡಲಿಲ್ಲವೇತಕ್ಕೆ ಎಂದೆನು. 

 

ರಾಜಚಂದ್ರ - - ಸ್ವಲ್ಪ ತಲೆ ಮರೆಮಾಡಿಕೊಂಡಿರಬೇಕಾಯಿತು.  


ನಾನು- ತಲೆಮರೆಮಾಡಿಕೊಳ್ಳಬೇಕಾದರೆ ಯಾರ ಮನೆಯಲ್ಲಿಯಾದರೂ 

ಕಳವುಮಾಡಿದಿಯೆ ? ಏನು ? 


ರಾಜ-- ಕಳವು ಮಾಡುವುದೆಲ್ಲಿ? ಅಮರನಾಥನು ಈಗ ಆಸ್ತಿ ವಿಷಯದಲ್ಲಿ 

ಸ್ವಲ್ಪ ಗದ್ದಲವಾಗುತ್ತದೆ. ಸ್ವಲ್ಪ ಮರೆಯಾಗಿರೆಂದು ಹೇಳಿದ್ದನು, ಜನಗಳು ಆಡಿಕೊ  

ಳ್ಳುವುದಿಲ್ಲವೆ? 


ನಾನು--ನೀವೇನಾದರೂ ಬಿಡೆಂದು ಹೇಳುತ್ತೇವೆಂತಲೋ ? ಅಮರನಾಥನು 

ಬಹಳ ತಿಳುವಳಿಕೆಯುಳ್ಳವನೆಂದು ತೋರುತ್ತದೆ. ಅದು ಹೇಗಾದರೂ ಆಗಲಿ ಈಗೇನು ? 

ನೋಡುವುದಕ್ಕೆ ಬಂದುದು ? 


ರಾಜ--ನಿಮ್ಮ ತಂದೆಗಳು ನನ್ನನ್ನು ಕರೆಸಿದರು .


ನಾನು--ನಮ್ಮ ತಂದೆಯೆ? ನೀನು ಇರುವುದನ್ನು ಅವರು ಏಗೆ ತಿಳಿದರು.  


ರಾಜ--ಹುಡುಕಿದುದು. 


ನಾನು--ಇಷ್ಟು ಹುಡುಕುವುದೇತಕ್ಕೆ ? ಆಸ್ತಿಯನ್ನು ಬಿಟ್ಟುಬಿಡೆಂದು ಹೇಳು 

ವುದಕ್ಕೆ ಇರಬಹುದೆಂದು ನಂಬುತ್ತೇನೆ. 

------------------------------------------ 

ಐದನೆಯ ಪರಿಚ್ಛೇದ 67 

ರಾಜ-- ಇಲ್ಲ, ಇಲ್ಲ,-, ಅದಕ್ಕೆ ಇರಲಾರದು , ಬೇರೆ ಮಾತಿಗೆ, ಈಗ ರಜನಿಗೆ 

ಸ್ವಲ್ಪ ಆಸ್ತಿ ಇದೆಯೆಂದು ಎಲ್ಲರೂ ಹೆಣ್ಣನ್ನು ಕೇಳುವುದಕ್ಕೆ ಬರುತ್ತಾರೆ, ಎಲ್ಲಿ ಸಂಭಂಧ 

ಬೆಳಸಲಿ ? ಏನೆಂಬದನ್ನು ತಮ್ಮನ್ನು ಕೇಳಿಕೊಂಡು ಹೋಗೋಣವೆಂದು ಬಂದೆ. 


ನಾನು - ಅದೇತಕ್ಕೆ? ಅಮರನಾಥನಿಗೆ ಕೊಡುವುದು ನಿಷ್ಕರ್ಷೆಯಾಗಿದೆ 

ಯಷ್ಟೆ ? ಅವನು ಇಷ್ಟೆಲ್ಲಾ ಮಾಡಿ ರಜನಿಯ ಆಸ್ತಿಯನ್ನು ಉದ್ಧಾಮಾಡಿದ್ದಾನೆ. 

ಅವನನ್ನು ಬಿಟ್ಟು ಮತ್ತಾರಿಗೆ ಕೊಡುವುದು?  


ರಾಜ- ಒಂದುವೇಳೆ ಯಾರಾದರೂ ಒಳ್ಳೆಯವರು ಸಿಕ್ಕಿದರೆ ? 


ನಾನು-ಅಮರನಾಥನು *************************************


ರಾಜ- ************************************************


ನಾನು ಸ್ವಲ್ಪ ಚಮಕನಾಗಿ  *****************************

ಉತ್ಕೃಷ್ಟನಾದ ಪಾತ್ರಲಾಗಲಾರೆನು. ಸುಮ್ಮನೆ **************** 

ತರದಮಾತನ್ನು ಬಿಡು. ರಜನಿಯನ್ನು ಮದುವೆ ಮಾಡಿಕೊಳ್ಳಬೇಕಾಗಿಯೂ 

ಇಷ್ಟವುಂಟೋ ಎಂಬುದನ್ನು ತಿಳಿದುಕೊಂಡು ಹೋಗುವುದಕ್ಕಾಗಿ ಬಂದಹಾಗೆ ತೋರು 

ತ್ತದೆ, ಹೌದೋ ? 

 

ರಾಜಚಂದ್ರನು ಸ್ವಲ್ಪ ಕುಂಠಿತನಾಗಿ, ಹೌದು, ಅದೆ ನಿಜ. ಈ ಸಂಬಂಧವನ್ನು 

ಬೆಳೆಸುವುದಕ್ಕನೇ ಯಜಮಾನರು ನನ್ನನ್ನು ಕರೆಸಿದರು ಎಂದನು. 

 

ಕೇಳಿ ಆಕಾಶದಿಂದ ಬಿದ್ದವನಾದೆನು, ಇದಿರಿಗೆ ದಾರಿದ್ರ್ಯವೆಂಬ ರಾಕ್ಷಸ 

ನನ್ನು ನೋಡಿ ಭೀತಿಗೊಂಡು ತಂದೆಯು ಈ ಸಂಬಂಧವನ್ನು ಬೆಳೆಸಲುದ್ಯುಕ್ತನಾಗಿ 

ದ್ದಾನೆ೦ದು ತಿಳದೆನು. ರಜನಿಯನ್ನು ನಾನು ಮದುವೆ ಮಾಡಿಕೊಂಡರೆ ಮನೆಯಲ್ಲಿ 

ರುವ ಆಸ್ತಿಯು ಮನೆಯಲ್ಲಿಯೇ ಉಳಿದಹಾಗಾಗುತ್ತದೆ. ನನ್ನನ್ನು ಅಂಧಳಾದ 

ಹೂವಾಡಿಗರವಳಿಗೆ ವಿಕ್ರಯಿಸಿ ತಂದೆಯುವಿಕ್ರಯದ ಮೂಲ್ಯಸ್ವರೂಪವಾಗಿ ಹೋಗಿ 

ರುವ ಆಸ್ತಿಯನ್ನು ಪುನಃ ಹೊಂದುವನಾಗಿದ್ಮನೆ ; ಕೇಳಿ ಮೈಮೂಳೆಯು ಲಟಲಟ 

ಮುರಿದು ಮೈಯೆಲ್ಲಾ ದಗದಗ ಉರಿದಹಾಗಾಯಿತು. 


ರಾಜಚಂದ್ರನನ್ನು ಕುರಿತು ಈಗ ನೀನು ಹೋಗು, ಯಜಮಾನರ ಸಂಗಡ 

ಆ ವಿಷಯ ಮಾತನಾಡುತ್ತೇನೆಂದು ಹೇಳಿದನು. 


ನನ್ನ ಕೋಪವನ್ನು ನೋಡಿ ರಾಜಚಂದ್ರನು ತಂದೆಯ ಬಳಿಗೆ ಹೋದನು. ಅಲ್ಲಿ 

ಏನು ಹೇಳಿದನೆ? ನಾನು ಹೇಳಲಾರೆನು, ತಂದೆಯು ಅವನನ್ನು ಕಳುಹಿಸಿಬಿಟ್ಟು 

ನನ್ನನ್ನು ಕರೆಸಿದನು. 

-------------------------------------------- 

68 ರಜನೀ 


ನಾನು ಹೋದೆ, ತಂದೆಯು ನನಗೆ ನಾನಾವಿಧವಾಗಿ ಬೋಧಿಸಿ ರಜನಿಯನ್ನು 

ಮದುವೆ ಮಾಡಿಕೊಂಡು ತೀರಬೇಕೆಂತಲೂ, ಇಲ್ಲದಿದ್ದರೆ ಸಪರಿವಾರವಾಗಿ ಎಲ್ಲರೂ 

ಪ್ರಾಣಬಿಡಬೇಕಾಗುತ್ತದೆ೦ತಲೂ, ತಿನ್ನುವುದಕ್ಕೆ ಮಾರ್ಗ ಇಲ್ಲದೆ ಹೋಗುತ್ತದೆ೦ತಲೂ 

ಬಹಳ ದುಃಖಿತನಾಗಿ ಹೇಳಿದನು. ನಾನು ಅವನ ದುಃಖವನ್ನು ನೋಡಿ ದುಃಖಿತನಾಗ 

ಲಿಲ್ಲ. ನನಗೆ ಬಹಳ ಕೋಪ ಬಂತು. ಕಪಿಸಿಕೊಂಡು ಹೊರಟುಹೋದನು. 


ತಂದೆಯು ಹತ್ತಿರದಿಂದ ಹೋದವನು ನಮ್ಮ ತಾಯಿಯ ಕೈಯಲ್ಲಿ ಬಿದ್ದೆ. 

ತಂದೆಯ ಇದಿರಿಗೆ ಕೋಪಬಂತು, ಆದರೆ ತಾಯಿಯ ಹತ್ತಿರ ಕೋಪಮಾಡಲಾಗದೆ 

ಹೋಯಿತು. ಅವಳ ಕಣ್ಣೀರನ್ನು ನೋಡಿ ಸಹಿಸಲಾರದೆಹೋದೆನು. ಅಲ್ಲಿಂದ ಬಿಟ್ಟು 

ಪಲಾಯನಮಾಡಿದೆ, ಆದರೆ ನನ್ನ ಪ್ರತಿಜ್ಞೆಯೇನೋ ಸ್ಥಿರವಾಗಿತ್ತು. ರಜನಿಯನ್ನು 

ಗೋಪಾಲಬಾವಿಗೆ ಕೊಟ್ಟು ವಿವಾಹಮಾಡಿಸಿಬಡಬೇಕೆಂದು ಸ್ಥಿರಮನಸ್ಕನಾಗಿದ್ದೆನು. 

ಈಹೊತ್ತು ಅವಳ ಆಸ್ತಿಗೆ ಆಶೆಪಟ್ಟಯ ನಾನೇ ಮದುವೆಯಾಡಿ ಕೊಳ್ಳುವದುಂಟೆ ? 


ಈ ವಿಪತ್ತಿನಲ್ಲಿ ಬಿದ್ದು ಮನಸ್ಸಿನಲ್ಲಿ ಚಿಕ್ಕಮ್ಮನಲ್ಲಿ ಹೋಗಿ ಶರಣಾಗತನಾಗ 

ಬೇಕೆಂದು ಯೋಚಿಸಿದೆನು. ಮನೆಯಲ್ಲಿ ಚಿಕ್ಕಮ್ಮನೇ ಬುದ್ಧಿವಂತಳು, ಅವಳ ಬಳಿಗೆ 

ಹೋದೆನು. 


ಚಿಕ್ಕಮ್ಮ-ಮಗು! ರಜನಿಯೇನೋ ಒಳ್ಳೇ ಕಾಯಸ್ಥವಂಶದವಳು, 

ಹೌದೋ? 


ನಾನು-ಆದರೆತಾನೇ ಏನು? 

ಹೋಗಿ, ಚಿಕ್ಕಮ್ಮ ! ನಾನು ರಜನಿಯನ್ನು ಮದುವೆ ಮಾಡಿಕೊಳ್ಳಬೇಕೆ ? 

ನಾನೇನು ತಪ್ಪುಮಾಡಿದೆ? ಎಂದು ಕೇಳಿದೆ. ಚಿಕ್ಕವನು ಸುಮ್ಮನಿದ್ದಳು. 

 

ನಾನು-ನಿನಗೂ ಅದೇ ಅಭಿಪ್ರಾಯವೋ  ? ನೀನು  ಅವರಹಾಗೆಯೇ ಹೇಳುವ 

ಳಾಗಿದ್ದೀಯೋ ? 

 

ಚಿಕ್ಕಮ್ಮ-ಅವಳು ಸಚ್ಚರಿತ್ರಳೆಂದು ನಾನು ಬಲ್ಲೆನು. 


ನಾನು-ಅದನ್ನು ಒಪ್ಪಿಕೊಳ್ಳುತ್ತೇನೆ. 


ಚಿಕ್ಕಮ್ಮ-ಅವಳು ಪರಮ ಸುಂದರಿ. 


ನಾನು---ಪದ್ಮ ಚಕ್ಷು! 


ಚಿಕ್ಕಮ್ಮ-ಅಣ್ಣ ! ಹಾಗೆ ಪದ್ಮಚಕ್ಷುಳೇ ಬೇಕಾಗಿದ್ದು ಹುಡುಕಿದರೆ, ನಿನಗೆ 

ಇನ್ನೊಂದು ಮದುವೆ ಮಾಡುವುದಕ್ಕೆ ಎಷ್ಣು ಹೊತ್ತು ಬೇಕು ? 

-------------------------------------------

ಐದನೆಯ ಪರಿಚ್ಛೇದ 69 


ನಾನು-ಅದು ಹೇಗೆ ? ಅಮ್ಮ ! ರಜನಿಯ ದುಡ್ಡಿಗೋಸ್ಕರ ರಜನಿಯನ್ನು 

ವಿವಾಹ ಮಾಡಿಕೊಡು ಆವಳ ದುಡ್ಡನ್ನು ತೆಗೆದು ಕೊಂಡು, ಆನಂತರ ಅವಳನ್ನು 

ಒಕ್ಕಡೆ ಒಗಡಿಸಿಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿ ಕೊಳ್ಳುವುದು, ಇದೇನು ? 

ಕೆಲಸವೆ ? ಆಗತಕ್ಕದ್ದೆ ? 


ಚಿಕ್ಕಮ್ಮ---ಒಗಡಿಸಿ ಬಿಡುವದೇತಕ್ಕೆ ? ಒಕ್ಕಡೆ ಒತ್ತರಿಸುವುದಕ್ಕೆ ಕಸವೆ ? 

ನಿಮ್ಮ ಹಡೆದ ತಾಯಿಯನ್ನು ಒತ್ತರಿಸಿಬಿಟ್ಟಿದ್ದಾರೊ ? 


ಈ ಮಾತಿಗೆ ಉತ್ತರವನ್ನು ಚಿಕ್ಕಮ್ಮನಿದಿರಿಗೆ ಹೇಳಲಾರದೆ ಹೋದೆನು. ಅವಳು 

ನಮ್ಮ ತಂದೆಗೆ ಎರಡನೆಯ ಜೆಂಡತಿ, ಬಹುವಿವಾಹದ ದೋಷವನ್ನು ಕುರಿತು ಅವಳ 

ಇದ.ರಿಗೆ ಹೇಳುವುದು ಹೇಗೆ ? ಆ ಮಾತು ಬಿಟ್ಟವನಾಗಿ, ನಾನು ಈ ಮದುವೆ ಮಾಡಿ 

ಕೊಳ್ಳುವುದಿಲ್ಲ ; ನೀವೇನಾದರೂ ಮಡಿ ನನ್ನನ್ನು ಉದ್ಧಾರ ಮಾಡಬೇಕು. ನಿನಗೆ 

ಮನಸ್ಸು ಬಂದರೆ ಮಾಡಬಲ್ಲೆ ಎಂದೆನು. 


ಚಿಕ್ಕಮ್ಮ-ನಾನರಿಯೆ. ನನಗೆನೋ ಅದು ಗೊತ್ತಾಗುವದಿಲ್ಲ, ಆದರೆ 

ವಿವಾಹ ಮಾಡಿಕೊಳ್ಳದೆ ಹೋದರೆ ನಾವೆಲ್ಲ ಸಪರಿವಾರವಾಗಿ ಅನ್ನವಿಲ್ಲದೆ ಸಾಯ 

ಬೇಕು. ನಾನು ಯಾವಕಷ್ಟಕ್ಕೊಳಗಾಗಬೇಕಾದರೂ ಸಿದ್ದವಾಗಿದ್ದೇನೆ, ಆದರೆ ನೀವು 

ಕಷ್ಟಪಡುವುದನ್ನು ನಾನು ಕಣ್ಣಾರೆ ನೋಡಲಾರೆನು, ನೀನು ಸಹಸ್ರಾಯಷ್ಟನಾಗಿರು ; 

ಇದಕ್ಕೆ ಒಪ್ಪ ಬೇಡ. 

 

ನಾನು -ದುಡ್ಡೇಹೆಚ್ಚಾಯಿತೋ ?  


ಚಿಕ್ಕಮ್ಮ-ನಿನಗೂ ನನಗೂ ದೊಡ್ಡದಲ್ಲ. ಆದರೆ ನಿನಗೂ ನನಗೂ ಯಾರು 

ಸರ್ವಸ್ವರಾಗಿದ್ದಾರೋ ಅವರಿಗೆ ದೊಡ್ಡದಾಗಿದೆ, ಆದುದರಿಂದ ನಮ್ಮ ಇಬ್ಬರಿಗೂ 

ದೊಡ್ಡದೆ ಆಗಬೇಕು ! ಈಗ ನೋಡು, ಇನ್ನೊಬ್ಬನಿಗೋಸ್ಕರ ನಾವು ಮೂರುಮಂದಿ 

ಪ್ರಾಣಬಿಡಬೇಕಾಗುತ್ತದೆ. ಬಿಟ್ಟರೂಬಿಡುತ್ತೇವೆ. ನೀನು ನಮಗೊಸ್ಕರ ಒಬ್ಬ ಅಂಧ 

ಳನ್ನು ವಿವಾಹಮಾಡಿಕೊಳ್ಳಬಾರದೇನು ? 


ಚಿಕ್ಕಮ್ಮನು ಮಾತಿನಲ್ಲಿ ಗೆದ್ದಳು. ನಾನು ಸೋತೆ. ಸೋತರೆ ಕೋಪ ಹೆಚ್ಚಾ 

ಗುತ್ತದೆ. ನನಗೆ ಕೋಪ ಹೆಚ್ಚಾಯಿತು. ಮನಸ್ಸಿನಲ್ಲಿ ದುಡ್ಡಿಗೋಸ್ಕರ ರಜನಿಯನ್ನು 

ಮದುವೆಮಾಡಿ ಕೊಳ್ಳುವುದು ಬಹಳ ಅನ್ಯಾಯವೆ:ದು ನಂಬಿಕೆಯಾಗಿತ್ತು. ಆದು 

ಕಾರಣ ನಾನು ದಂಭದಿಂದ ನೀನು ಏನುಬೇಕwದರೂ ಹೇಳು, ನಾನು ಈ ಮದುವೆ 

ಮಾಡಿಕೊಳ್ಳುವದಿಲ್ಲವೆಂದೆನು. 

----------------------------------------------

70 ರಜನೀ 

 

ಚಿಕ್ಕಮ್ಮನೂ ದಿಂಭಂದ, ನೀನು ಏನುಬೇಕಾದರೂ ಹೇಳು, ನಾನು ಕಾಯಸ್ಥ 

ಹೆಣ್ಣಾಗಿದ್ದರೆ ನಿಮಗೆ ಈ ಮದುವೆಯನ್ನು ಮಾಡಿಸಿಯೇ ತೀರುತ್ತೇನೆಂದಳು. 

 

ನಾನು ನಕ್ಕು ಹಾಗಾದರೆ ನೀನು ದನಾಕಾಯುವ ಹೆಂಗಸು. ನನಗೆ ಈ 

ಮದುವೆಯನ್ನು ಮಾಡಿಸಲಾರೆ ಎಂದೆನು. 

 

ಚಿಕ್ಕಮ್ಮ-ಇಲ್ಲವಪ್ಪಾ ! ನಾನು ಕಾಯಸ್ತರ ಹೆಂಗಸು, ದನಕಾಯುವವಳು 

ನಾನಲ್ಲ. 

 

ಚಿಕ್ಕಮ್ಮನು ಬಹಳ ದುಷ್ಟಳು. ಅಪ್ಪಾ ! ಎಂದು ಹೇಳುತ್ತ ಮಾತನ್ನು ತಿರು 

ಗಿಸಿ ನನ್ನ್ನೇ ಗೆದ್ದುಬಿಟ್ಟಳು. ದನಾಕಾಯುವನೆಂದು ಸ್ಪಷ್ಟವಾಗಿ ಹೇಳಲಿಲ್ಲ. 

.........

ಆರನೇ ಪರಿಚ್ಛೇದ 

ನಮ್ಮ ಮನೆಗೆ ಒಬ್ಬ ಸನ್ಯಾಸಿ ಆಗಿಂದಾಗ್ಗೆ ಬಂದು ಕೆಲಕಾಲ ಇರುತ್ತ 

ಲಿದ್ದನು. ಅವನನ್ನು ಕೆಲವರು ಬ್ರಹ್ಮಚಾರಿಯೆಂತಲೂ, ಕೆಲವರು  ಡೋಂಗಿಯೆಂತಲೂ, 

ಕೆಲವರು ಅವಭುತಿಯೆಂತಲೂ ಹೇಳುತ್ತಲಿದ್ದರು. ಅವನ ಉಡುಪು ಭಯರವ ವಸನ; 

ಕಂಠದಲ್ಲಿ ರುದ್ರಾಕ್ಷಿಮಾಲೆ; ತಲೆಯಲ್ಲಿ ಜದಮಲ್ಲದ ರುಕ್ಷಕೇಶ; ಹಣೆಯಲ್ಲಿ ರಕ್ತ 

ಚಂದನದ ಬಟ್ಟು; ಕೇಯಲ್ಲಿ ಮಣ್ಣಿನ ಕಮಂಡಲ ಮುಂತಾದವು ಏನೂ ಇರಲಿಲ್ಲ. 

ಸನ್ಯಾಸಿಯರ ಜಾತಿಯಲ್ಲಿ ಅವನು ಒಬ್ಬ ಲೌಕಿಕನಾಗಿದ್ದನು. ಕೈಲಿ ಚಂದನದ ಕೋಲು 

ಅದಕ್ಕೆ ದಂತದ ಹಿಡಿ. ಅವನು ಯಾರೇ ಆಗಲಿ, ಹುಡುಗರು ಅವನನ್ನು ಸನ್ಯಾಸಿ 

ಮಹಾಶಯನೆಂದು ಕರೆಯುತ್ತಲಿದ್ದರು. ನಾನು ಅವನನ್ನು ಹಾಗೆಯೇ ಕರೆಯುವೆನು. 

 

ತಂದೆಯು ಇವನನ್ನು ಎಲ್ಲಿಂದಲೋ ಕರೆತಂದಿದ್ದನು, ತಂದೆಯು ಮನಸ್ಸಿನಲ್ಲಿ 

ಸರಸಿಯ ನಾನಾ ವಿಧವಾದ ಔಷಧಬಲ್ಲವನೆಂತಲೂ ತಾಂತ್ರಿಕವಾದ ಯಾಗಯಜ್ಞ 

ಗಳಲ್ಲಿ ದಕ್ಷನೆಂತಲೂ ತಿಳಿದುಕೊಂಡಿದ್ದನು. ನಮ್ಮ ಚಿಕ್ಕಮ್ಮನು ವಂಧ್ಯಳಾಗಿದ್ದಳು. 

 

ತಂದೆಯ ಆದರದಿಂದ ಸನ್ಯಾಸಿಯು ಮಹಡಿಯ ಮೇಲಿನ ಬೈಠಕಾನೆಯಲ್ಲಿ 

ಸಾಮಾನು ಇಟ್ಉಕೊಂಡು ಅಲ್ಲಿಯೇ ಇರುವನು. ಇದು ನನಗೆ ಇಷ್ಟವಿಲ್ಲ.  ಮತ್ತು 

ಸಂಧ್ಯಾಕಾಲದಲ್ಲಿ ಸೂರ್ಯನನ್ನು ದೃಷ್ಟಿಸಿ ನೋಡುವ ಸಾರಂಗರಾಗಿಣಿಯಲ್ಲಿ ಆರ್ಯಾಛಂದ  

ಸ್ಸಿನಲ್ಲಿ ಸ್ತೋತ್ರ ಮಾಡತಲಿರುವನು. ಈ ವಂಚಕನ ವಂಚನೆಯನ್ನು ನಾನು ಇನ್ನು 

ಸಹಿಸುವುದಕ್ಕಾಗಲಿಲ್ಲ. ಆವಗೆ ಅರ್ಧ ಅರ್ಧಚಂದ್ರಪ್ರಯೋಗ ಮಾಡಬೇಕೆಂದು ಅವನ 

ಹತ್ತಿರ ಹೋದೆನು, 

----------------------------------------------

ಆರನೆಯ ಪರಿಚ್ಛೇದ 71 

ಹೋಗಿ, ಸನ್ಯಾಸಿ ಮಹಾಶಯರೆ ! ಆಕಾಶಕ್ಕೆ ತಲೆಯನ್ನೆತ್ತಿಕೊಂಡು  ಏನೋ  

ಕೂಗುತ್ತಲಿದ್ದಿರಿ ಅದೇನು ? 


ಸನ್ಯಾಸಿಯು ಹಿಂದುಸ್ತಾನಿ ; ಆದರೆ ನಮ್ಮ ಸಂಗತ ಮಾತನಾಡುವಾಗ ಹದಿ 

ನಾಲ್ಕು  ಆಣೆ ಸಂಸ್ಕೃತ, ಒಂದಾಣೆ ಹಿಂದಿ, ಒ೦ದಾಣೆ ಬಂಗಾಳಿ ಮಾತನಾಡುತ 

ಲಿದ್ದನು.  ನಾನು ಬೆಂಗಾಳಿಯಲ್ಲಿಯೇ ಮಾತನಾಡಿದೆನು. 

 

ಸನ್ಯಾಸಿ-ಏತಕ್ಕೋಸ್ಕರ ಏನು ಕೂಗುತಲಿದ್ದೇನೋ ನಿನಗೆ ಗೊತ್ತಿಲ್ಲವೇನು? 


ನಾನು. ವೇದಮಂತ್ರವೇ?  


ಸನ್ಯಾಸಿ -. ಆದರೂ ಆಗಿರಬಹುದು. 


ನಾನು-ಮಂತ್ರಹೋಳಿ ಏನಾಯಿತು ? 


ಸನ್ಯಾಸಿ --ಏನೂ ಆಗಲಿಲ್ಲ. 


ಈ ಉತ್ತರದಿಂದ ಸನ್ಯಾಸಿಯ ಕೆಳಗೆ ಬಿದ್ದ. ನಾನು ಅವನು ಅಷ್ಟು ಮಟ್ಟಿಗೆ 

ಹೇಳಿ ಬಿಡುವೆನೆಂದು ಇದಿರುನೋಡಿರಲಿಲ್ಲ. ಅದರಮೇಲೆ ನಾನು ಹಾಗಾದರೆ ಆ ಮಂತ್ರ 

ವನ್ನು ಹೇಳುವುದೇತಕ್ಕೆ ? ಎಂದೆನು. 


ಸನ್ಯಾಸಿ-ಏತಕ್ಕೆ ? ಕೇಳುವುದಕ್ಕೆ ಕಷ್ಟವೋ ? 


ನಾನು-ಇಲ್ಲ, ಕೇಳುವುದಕ್ಕೆ ಅಷ್ಟು ಬೇಸರವಾಗುವುದಿಲ್ಲ. ಅದೂ ಅಲ್ಲದೆ 

ನಿಮ್ಮ ಕಂಠವೂ ಚೆನ್ನಾಗಿದೆ. ಫಲವೇನೂ ಇಲ್ಲದಿದ್ದರೆ ಹೇಳಬೇಕಾದುದು ಏತಕ್ಕೆ ? 


ಸನ್ಯಾಸಿ- ಇದರಿಂದ ಯಾರಿಗೂ ಕಷ್ಟ ಇಲ್ಲದಾಗ ಹೇಳಿದರೆ ಅದರಿಂದ 

ನಷ್ಟವೇನು ? 


ನಾನು ಸ್ವಲ್ಪ ಇಳಿಯುತ್ತ ಬಂದೆ. ಸ್ವಲ್ಪ ಎಡವಿದಹಾಗಾಯಿತು. ಹಾಗೆಯೇ 

ಎಚ್ಚತ್ತುಕೊಂಡು ನಷ್ಟವೇನೂ ಇಲ್ಲ. ಆದರೆ ನಿಷ್ಫಲವಾಗಿ ಯಾರು ಯಾವಕಾರ್ಯ 

ವನ್ನೂ ಮಾಡುವುದಿಲ್ಲ. ವೇದಗಾನವು ನಿಷ್ಟವಾಗಿದ್ದರೆ ತಾವು ಏತಕ್ಕೆ ವೇದಗಾನ  

ಮಾಡಬೇಕು ? ಎಂದೇ.  


ನಿನ್ನಿಂದೇನೂ ಪ್ರಯೋಜನ ನೀನು ಹೇಳು ನೋಡೋಣ,  ಮರದ 

ಮೇಲೆ ಕೋಕಿಲವು ಏತಕ್ಕೆ ಗಾನಮಾಡುತ್ತದೆ ? 


ನಾನು ಸ್ವಲ್ಪ ಹಳ್ಳಕ್ಕೆ ಬಿದ್ದಹಾಗಾಯಿತು. ಈ ಪ್ರಶ್ನೆಗೆ ಎರದು ಉತ್ತರ 

ಉಂಟು. ಒಂದನೇದು ಇದರಿಂದ ಕೋಕಿಲಕ್ಕೆ ಸುಖವುಂಟು. ಎರಡನನೇದು, ಹೆಣ್ಣು 

ಕಕಿಲೆಯನ್ನು ಮೋಹಪಡಿಸುವುದಕ್ಕೆ, ಇದಕ್ಕೆ ಯಾವ ಉತ್ತರವನ್ನು ಹೇಳೋಣ? 

----------------------------------------------

72 ರಜನೀ 


ಮೊದಲನೆಯ ಉತ್ತರವನ್ನು ಹೋಳೋಣವೆಂದು ಯೋಚಿಸಿ, ಗಾನದಿಂದ ಕೋಕಿಲಕ್ಕೆ 

ಸುಖವುಂಟೆಂದು ಹೇಳಿದೆನು, 


ಸನ್ಯಾಸಿ-ನನಗೂ ಗಾನಮಾಡುವುದೇ ಸುಖ, 


ನಾನು-ಹಾಗಾದರೆ ರಾಗದಮೇಲಿನ ಖ್ಯಾಲಿದ್ದರೆ ವೇಗಾ ಮಾಡಲೇತಕ್ಕೆ? 


ಸನ್ಯಾಸಿ--ಯಾವುದು ಸುಖಕರವಾದುದು ? ಸಾಮಾನ್ಯರಾದ ಸೂಳೆಗಳ ಕದ 

ರ್ಯವಾದ ಚರಿತ್ರದ ಗುಣಗಾನ ಸುಖಕರ ವೊ ? ಅಥವ ದೇವರ ಅಸೀಮವಾದ 

ಮಹಿಮೆಯ ಗಾನವು ಸುಖಕರವೊ ? 


ಅದರಲ್ಲಿ ಸೋತವನಾಗಿ ಎರಡನೆಯ ಉತ್ತರ ಹೇಳಬೇಕೆಂದು, ಕೋಕಿಲವು 

ಹೆಣ್ಣು ಹಕ್ಕಿಗೆ ಮೋಹವನ್ನುಂಟುಮಾಡಲು ಕೂಗುತ್ತದೆ. ಮೋಹನಾರ್ಥವಾಗಿ 

ಯಾವುದು ಶಾರೀರವಾದ ಸ್ಫೂರ್ಥಿಯಾಗುತ್ತೋ ಅದರಿಂದ ಹಿಂದಕ್ಕೆ ಸುಖವುಂಟು. 

ಕಂಠಸ್ವರದ ಸ್ಫೂರ್ತಿಯು ಆ ಶಾರೀರಸ್ಫೂರ್ತಿಯಲ್ಲಿ ಅಂತರ್ಗತವಾದುದು. ತಾವು 

ಯಾರನ್ನು  ಮುಗ್ಧ ಮಾಡುವುದಕ್ಕೆ ಇಷ್ಟವುಳ್ಳವರಾಗಿದ್ದೀರಿ ? ಎಂದು ಹೇಳಿದನು. 


ಸನ್ಯಾಸಿಯು  ಇದಕ್ಕೆ ನನ್ನ ಮನಸ್ಸನ್ನು ಮುಗ್ಧ ಮಾಡುವುದಕ್ಕೆ -- ಮನಸು 

ಆತ್ಮನಲ್ಲಿ ಅನುರಾಗಿಯಾಗಿಲ್ಲ. ಆತ್ಮನು ಹಿತಕಾರಿಯಾಗಿಲ್ಲ. ಅದನ್ನು ವಶೀಭೂತ 

ಮಾಡುವುದಕ್ಕೆ ಗಾನಮಾಡುತ್ತೇನೆ. 


ನಾನು- ತಾವು ದಾರ್ಶನಿಕರು, ಮನಸ್ಸು ಬೇರೇ ಆತ್ಮಬೇರೆ ಎಂದು ಹೇಳುತ್ತೀರಿ 

ಆದರೆ ಮನಸ್ಸು ಬೇರೆ ಪರಾರ್ಧವೆಂತಲೂ ಆತ್ಮ ಬೇರೆ ಪದಾರ್ಧವೆಂತಲೂ 

ನಾನು ತಿಳಿಯಲಾರೆ. ಮನಸ್ಸಿನ ಕ್ರಿಯೆಗಳನ್ನು ನೋಡುತ್ತೇವೆ. ಇಚ್ಛಾ, ಪ್ರವೃತ್ಯಾದಿಗಳು 

ನಮ್ಮ ಮನಸ್ಸಿನಲ್ಲಿವೆ ಸುಖವು ನಮ್ಮ ಮನಸ್ಸಿನಲ್ಲಿದೆ, ದುಃಖವು ನಮ್ಮ ಮನಸ್ಸಿನಲ್ಲಿದೆ. 

ಹೀಗಿರುತ್ತ ಮನಸ್ಸು ಬಿಟ್ಟು ಬೇರೆ ಆತ್ಮನು ಇದ್ದಾನೆಂದು ಹೇಳಬೇಕಾದುದೇತಕ್ಕೆ ? 

ಯಾವದರ ಕ್ರಿಯೆಯನ್ನು ನೋಡುತ್ತೇವೋ ಅದನ್ನು ಒಪ್ಪುತ್ತೇವೆ. ಯಾವದಕ್ಕೆ 

ಯಾವ ಚಿನ್ಹೆಯೂ ಇಲ್ಲವೋ ಅಂತಹದುದು ಇದೆಯೆಂದು ಹೇಳಬೇಕಾದುದೇತಕ್ಕೆ ? 


ಸನ್ಯಾಸಿ-ಹಾಗಾದರೆ ಮನಸ್ಸೂ ಶರೀರವೂಸಹ ಒಂದೆಂತಲೆ! ಏತಕ್ಕೆ ಹೇಳು 

ವುದಿಲ್ಲ ? ಶರೀರ ಬೇರೆ ಮನಸ್ಸು ಬೇರೆ ಎಂದು ಹೇಳಬೇಕಾದುದೇತಕ್ಕೆ ? ನೀನು 

ಮಾಡತಕ್ಕ ಕೆಲಸಗಳೆಲ್ಲ ಶರೀರದ ಕಾರ್ಯವಾಗಿದೆ. ಮನಸ್ಸಿನ ಕಾರ್ಯವೆಂಬುದು 

ಯಾವುದು ? 


ನಾನು --ಚಿಂತಿಸುವುದು ಈ ಮುಂತಾದ ಪ್ರವೃತ್ತಿಭೋಗಾದಿಗಳು, 

-----------------------------------------------

 

ಆರನೆಯ ಪರಿಚ್ಛೇದ 73 


ಸನ್ಯಾಸಿ.-ಇದೆಲ್ಲಾ ಶರೀರಕ್ರೆಯೆಯಲ್ಲ ಎಂದು ಗೊತ್ತಾದುದು ಹೇಗೆ ? 


ನಾನು-ಅದು ನಿಜವಾಗಿ ಮನಸ್ಸು ಶರೀರದ ಕ್ರಿಯಾಮಾತ್ರವಾಗಿದೆ, 

(Function of the brain) 


ಸನ್ಯಾಸಿ -ಬಹಳ ಒಳ್ಳೆದಾಯಿತು. ಇನ್ನು ಸ್ವಲ್ಪ ಮುಂದಕ್ಕೆ ಬಾರಣ್ಣ ! 

ಹಾಗಾದರೆ, ಶರೀರವೂಕೂಡ ಪಂಚಭೂತಗಳ ಕ್ರಿಯಾ ಮಾತ್ರವೆಂದು ಹೇಳಕೂಡ 

ದೇತಕ್ಕೆ ? ನೀವು ಪಂಚಭೂತವನ್ನು ಒಪ್ಪುವುದಿಲ್ಲವೆಂದು ಕೇಳಿದ್ದೇನೆ. ನೀವು 

ಬಹುಭೂತವಾದಿಗಳು, ಆಗಲಿ ; ಕ್ಷಿತ್ಯಾದಿ ಅಥವಾ ಆನ್ಯ ಭೂತಗಳು ಶರೀರರೂಪವನ್ನು 

ಧಾರಣೆ ಯಂಮಾಡಿ ಎಲ್ಲಾ ಕ್ರಿಯೆಗಳನ್ನು ಮಾಡುತ್ತವೆ ಎಂದು ಹೇಳಕೂಡದೇತಕ್ಕೆ ? 

ಈಗ ನನ್ನ ಇದಿರಾಗಿ ನಿಂತು ಮಾತನಾಡುತ ನೀನು- " ನಾನು " ಎಂದು ಹೇಳಿಕೊ 

ಳ್ಳುವ ನೀನು, ಕೇವಲ ಕ್ಷಿತ್ಯಾದಿ ಪಂಚಭೂತಗಳು ನನ್ನ ಇದಿರಿಗೆ ನಿಂತು ಶಬ್ದಮಾಡು 

ತ್ತವೆಯೇ ಹೊರ್ತು, ಶಚೀಂದ್ರನಲ್ಲ. ಮನಸ್ಸೆಂತಲೂ ಶರೀರವೆಂತಲೂ ಹೇಳುವುದು 

ಕಲ್ಪನೆಮಾತ್ರವಾಗಿದೆ. ಅದರಿಂದ ಪ್ರಯೋಜನವೇನು ? ಕ್ಷಿತ್ಯಾದಿ ಭೂತ ಸಮಷ್ಟಿ 

ಯನ್ನು ಹೊರ್ತು ಶಚೀಂದ್ರನು ಇದ್ದಾನೆಂದು ನಾನು-ಒಪ್ಪುವದಿಲ್ಲ. 


ಇದನ್ನು ಕೇಳಿ ಸೋತುಹೋದವನಾಗಿ ಭಕ್ತಿಭಾವದಿಂದ ಸನ್ಯಾಸಿಗೆ ಪ್ರಣಾ 

ಮವನ್ನು ಮಾಡಿ ಎದ್ದು ಹೊರಟುಹೋದನು. ಅದುಮೊದಲ್ಗೊಂಡು ಸನ್ಯಾಸಿಯನ್ನು 

ಕಂಡರೆ ಸಂಪೂರ್ಣವಾದ ಪ್ರೀರ್ತಿಗೌರವಗಳುಂಟಾದವು, ಯಾವಾಗಲೂ ಅವನ ಹತ್ತಿರ 

ಹೋಗಿ ಕೂಡುತ್ತ ಶಾಸ್ತ್ರೀಯವಾದ ಮಾತುಗಳನ್ನಾಡುತ್ತಲಿರುವೆನು, ಆದರೆ ಅವನು 

ಕೆಲಮೋಸಗಾರ ವಿದ್ಯೆಗಳನ್ನು ಮಾಡುತ್ತಲಿದ್ದನು. ಔಷದ ಕೊಡುವದು; ಕೈನೋಡಿ 

ಮುಂದೆ ನಡೆಯುವ ಸಂಗತಿಗಳನ್ನು ಹೇಳುತ್ತೇನೆನ್ನು ವುದು ಯಾಗ ಹೋಮಾದಿಗ 

ಳನ್ನು ಮಾಡುವುದು, ಅಂಜನಾದಿಗಳನ್ನು ಹಾಕಿ ಕಳ್ಳನನ್ನು ಹಿಡಿದು ಕೊಡುತ್ತೇನೆನ್ನು 

ವುದು, ಹೀಗೆ ಅನೇಕ ಮೋಸಗಾರಿಕೆಯನ್ನು ಮಾಡುತಲಿದ್ದನು. ಇದೆಲ್ಲಾ ನನಗೆ ಸಹಿ 

ಸಲಾಗದೆ ಹೋಯಿತು. ಒಂದು ದಿನ ನಾನು ಆ ಸನ್ಯಾಸಿಯನ್ನು ಕುರಿತು, ತಾವು 

ಮಹಾಮಹೋಪಾಧ್ಯಾಯರಾದ ಪಂಡಿತರು. ಹೀಗಿದ್ದು ಕೊಂಡು, ತಮಗೆ ಈ 

ಮೋಸಗಾರಿಕೆ ವಿದ್ಯೆಗಳೇತಕ್ಕೆ ? ಎಂದು ಕೇಳಿದನು. 


ಸನ್ಯಾಸಿ-ಯಾವುದು ಮೋಸಗಾರಿಕೆ ? 


ನಾನು-ಈ ಅಂಜನತಾಕುವದು, ಕೈನೋಡುವುದು ಇದೇ ಮುಂತಾದುದು. 


ಸನ್ಯಾಸಿ... ಇವುಗಳಲ್ಲಿ ಕೆಲವು ಅನಿಶ್ಚಿತವಾಗುದು ಹೌದು, ಆದರೂ ಮಾಡಿ 

ತೀರಬೇಕು,. 

----------------------------------------------

74                                                      ರಜನೀ 

 

ನಾನು-ಅನಿಶ್ಚಿತವಾದುದೆಂದು ತಿಳಿದೂ ತಿಳಿದು ಜನಗಳನ್ನು ಆದರಿಂದ 

ವಂಚಿಸಲೇತಕ್ಕೆ ? 


ಸನ್ಯಾಸಿ. ನೀವು ಸತ್ತು ಹೋದ ಮನುಷ್ಯ ದೇಹವನ್ನು ಕುಯ್ಯುವುದೇತಕ್ಕೆ ? 


ನಾನು-ಶಿಕ್ಷಾರ್ಥವಾಗಿ, ತಿಳಿದುಕೊಳ್ಳುವುದಕ್ಕೆ. 


ಸನ್ಯಾಸಿ-ತಿಳಿದಿದ್ದವರೂ ಕೂಡ ಕುಯ್ಯುವುದೇತಕ್ಕೆ ? 


ನಾನು-ತತ್ವವನ್ನು ಕಂಡುಹಿಡಿಯುವುದಕ್ಕೆ ? 


ಸನ್ಯಾಸಿ-ನಾವೂ ತತ್ವವನ್ನು ಕಂಡುಹಿಡಿಯುವುದಕ್ಕೋಸ್ಕರ ಇದನ್ನೆಲ್ಲಾ 

ಮಾಡುತ್ತೇವೆ, ವಿಲಾಯಿತಿಯಲ್ಲಿರುವ ಪಂಡಿತರೂ ಕೂಡ ಮನುಷ್ಯನ ತಲೆಯ ಘಟನಾ 

ಕಾರಾದಿಗಳನ್ನು ನೋಡಿ ಅವನ ಚರಿತ್ರೆಯನ್ನು ಹೇಳುತ್ತಾರೆಂದು ಕೇಳಿದ್ದೇನೆ. ತಲೆಯು 

ಘಟನೆಯನ್ನು ನೋಡಿ ಒಬ್ಬನ ಚರಿತ್ರೆಯನ್ನು ಹೇಳಬಹುದಾದರೆ ಕೈಯಲ್ಲಿರುವ ರೇಖೆ 

ಗಳನ್ನು ನೋಡಕೂಡದೇತಕ್ಕೆ ? ಕೈರೇಖೆಗಳನ್ನು ನೋಡಿ ಎಲ್ಲಾ ಸಂಗತಿಗಳನ್ನು ಸರಿ 

ಯಾಗಿ ಹೇಳುವಷ್ಟು ಇನ್ನೂ ಚೆನ್ನಾಗಿ ಗೊತ್ತಾಗಿಲ್ಲವೆಂದು ಒಪ್ಪಿಕೊಳ್ಳೋಣ.

ಇದಕ್ಕೆ ಕಾರಣವೇನೆಂದರೆ --ಇದರ ನಿಜವಾದ ಸಂಕೇತಗಳು ಇನ್ನೂ ಚೆನ್ನಾಗಿ 

ನಿರ್ಧಾರಕವಾಗಿ ಗೊತ್ತಾಗಿಲ್ಲ. ಆದರೆ ನೋಡುನೋಡುತ್ತಾ ಇದ್ದರೆ ಇದರ ನಿಜ 

ವಾದ ಸಂಕೇತಗಳು ಚೆನ್ನಾಗಿ ಗೊತ್ತಾಗಬಹುದು. ಅದು ಕಾರಣ ಯಾರಾದರು 

ಕೈನೋಡಬೇಕೆಂದರೆ ನೋಡುತ್ತೇನೆ. 

 

ನಾನು.... ಅಂಜನವನ್ನು ಹಾಕಳುವದೋ? ಮ೦ತ್ರಿಸಿ ಕಡ್ಡಿ ಕೊಡುವುದೊ ? 


ಸನ್ಯಾಸಿ-ನೀವು ಕಬ್ಬಿಣದ ತಂತಿಯಿಂದ ಪೃಥಿವಿಯಲ್ಲೆಲ್ಲ ಲಿಪಿಯ ಮೂಲಕ 

ಸಮಾಚಾರಗಳು ಕಳುಹಿಸುತ್ತೀರಿ. ನಾನು ಅಂಜನದಿಂದ ನಡೆಸಲಾರನೆ ? ನಿಮಗೆ 

ಇರುವ ಭ್ರಮೆಯೆನಂದಗೆ, ಇಂಗ್ಲಿಷರು ಯಾವದನ್ನು ಬಲ್ಲರೊ ಅದೇ ನಿಜವಾದು 

ದೆಂತಲೂ, ಇಂಗ್ಲೀಷರಿಗೆ ತಿಳಿಯದ್ದು ನಿಜವಲ್ಲವೆಂತಲೂ, ಅದು ಮನುಷ್ಯನ 

ಜ್ಞಾನಕ್ಕೆ ಅತೀತವಾದೆ೦ತಲೂ, ಅದು ಅಸಾಧ್ಯವಾದುದೆಂತಲೂ, ತಿಳಿದುಕೊಂಡಿರು 

ವಹಾಗೆ ಕಾಣುತ್ತದೆ. ವಸ್ತುತಃ ಹಾಗಲ್ಲ. ಜ್ಞಾನವೆಂಬುದು ಅನಂತವಾದುದು 

ಕೆಲವು ನಿಮಗೆ ಗೊತ್ತು ; ಕೆಲವು ನಮಗೆ ಗೊತ್ತು, ಮತ್ತೆ ಕೆಲವರಿಗೆ ಇನ್ನೂ ಹೆಚ್ಚು 

ಗೊತ್ತು, ಆದರೆ ಯಾರೇ ಆಗಲಿ, ನಾನೂ ನೀನೂ ತಿಳಿಯದೆ ಇರುವುದು ಮತ್ಯಾರಿಗೂ 

ಗೊತ್ತಿಲ್ಲವೆಂದು ಹೇಳಲಾಗದು, ಯಾರಿಗೂ ಎಲ್ಲಾ ಗೊತ್ತು ಉಂಟೆಂದು ಹೇಳಲಾರರು. 

ಇಂಗ್ಲೀಷರು ಕೆಲಸಂಗತಿಗಳನ್ನು ಬಿಲ್ಲರು. ನಮ್ಮ ಪೂರ್ವಪುರುಷರು ಕೆಲಸಂಗತಿಗಳನ್ನು 

ಬಲ್ಲವರಾಗಿದ್ದರು. ಇಂಗ್ಲೀಷರಿಗೆ ಈಗ ತಿಳಿಯುತ್ತದೆಂಬುದು ಋಷಿಗಳಿಗೆ ಗೊತ್ತಿಲ್ಲದೆ 

----------------------------------------------

ಆರನೆಯ ಪರಿಚ್ಛೇದ 75

ಇದ್ದರೂ ಇರಬಹುದು. ಋಷಿಗಳು ತಿಳಿದಿದ್ದುದು ಇಂಗ್ಲೀಷರಿಗೆ ಇನ್ನೂ ಗೊತ್ತಾ 

ಗಿಲ್ಲ, ಆ ಆರ್ಯ ವಿದ್ಯೆಗಳೆಲ್ಲ ಬಹಳ ಲುಪ್ತವಾಗಿ ಹೋಗಿವೆ. ನಮ್ಮಲ್ಲಿ ಕೆಲವರಿಗೆ ಅದ 

ರಲ್ಲಿ ಒಂದೆರಡು ಗೊತ್ತು ಇರಬಹುದು. ನಮ್ಮವರು ಅದನ್ನು ಗೋಪ್ಯವಾಗಿಟ್ಟುಕೊ೦ 

ಡಿದ್ದಾರೆ. ಯಾರಿಗೂ ಕಲಿಸಿಕೊಟ್ಟಿಲ್ಲ. 


ನಾನು ನಕ್ಕು ಬಿಟ್ಟೆನು. ಸನ್ಯಾಸಿಯು ನಿನಗೆ ನಂಬಿಕೆ ಇರಲಾರದು. ಪ್ರತ್ಯಕ್ಷ 

ವಾಗಿ ಬೇಕಾದರೆ ನೋಡಬಹುದು ಎಂದನು. 


ನಾನು-ನೋಡಿದರೆ ತಿಳಿಯುವೆನೆಂದೆನು, 


ಸನ್ಯಾಸಿ-ಕಡೆಗೆ ತೋರಿಸುತ್ತೇನೆ. ಈಗ ನಿನ್ನಲ್ಲಿ ಒಂದು ವಿಶೇಷ ಮಾತನಾಡು 

ವುದು ಉಂಟು. ನೀನು ನನ್ನಲ್ಲಿ ಉದಾಸೀನನಾಗಿರುವುದನ್ನು ಕಂಡು ನಿಮ್ಮ ತಂದೆಯು 

ನಿನಗೆ ವಿವಾಹ ಮಾಡಿಕೊಳ್ಳುವ ಪ್ರವೃತ್ತಿಯನ್ನುಂಟುಮಾಡಿಸುವಹಾಗೆ ಮಾಡಬೇ 

ಕೆಂದು ಹೇಳಿದ್ದಾನೆ. ನಿನಗೆ ಆ ಪ್ರವೃತ್ತಿಯನ್ನುಂಟುಮಾಡಿಸುತ್ತೇನೆ, ನೋಡುವಿಯಾ ? 


ನಾನ ನಕ್ಕು ನನಗೆ ಪ್ರವೃತ್ತಿಯನ್ನು ಕಟುಮಾಡಲಾರರಿ ; 

ನಾನು ವಿವಾಹ ಮಾಡಿಕೊಳ್ಳುವುದಕ್ಕೆ ಸಿದ್ಧನಾಗಿದ್ದೇನೆ. ಆದರೆ - 


ಸನ್ಯಾಸಿ-ಆದರೆ ಏನು ? 


ನಾನು-ಕನ್ಯೆಯು ಎಲ್ಲಿ ? ಒಬ್ಬ ಕುರುಡು ಹೆಣ್ಣು ಇದ್ದಾಳೆ, ಅವಳನ್ನು ಮದು 

ವೆಯಾಗುವುದಿಲ್ಲ. 

 

ಸನ್ಯಾಸಿ-ಈ ಬಂಗಾಳೆ ದೇಶದಲ್ಲಿ ನಿನಗೆ ಯೋಗ್ಯಳಾದ ಕನೈಯು ಇಲ್ಲವೆ ? 


ನಾನು-ಸಾವಿರಾರು ಕನ್ಯಗಳು ಇದ್ದಾರೆ, ಆದರೆ ಹುಡುಕಿ ಬೇಕಾದವಳನ್ನು 

ವರಿಸುವುದು ಹೇಗೆ ? ಈ ಶತಸಹಸ್ರ ಕನೈಯರಲ್ಲಿ ನನ್ನ ನ್ನು ಚಿರಕಾಲ ಪ್ರೀತಿಸುವಳು 

ಯಾರೆಂಬುದನ್ನು ಹೇಗೆ ತಿಳಿಯುವುದಕ್ಕಾಗುತ್ತದೆ ? 


ಸನ್ಯಾಸಿ ನನ್ನಲ್ಲಿ ಒಂದು ವಿದ್ಯೆಯುಂಟು, ಈ ಪೃಥಿವಿಯಲ್ಲಿ ನಿನ್ನನ್ನು 

ಮರ್ಮಾಂತಿಕವಾಗಿ ಯಾರು ಪ್ರೀತಿಸುತ್ತಾಳೋ, ಅವಳನ್ನು ನಿನ್ನ ಸ್ವಪ್ನದಲ್ಲಿ ತೋರಿ 

ಸಬಲ್ಲೆನು, ಆದರೆ ಈಗ ನಿನ್ನನ್ನು ಪ್ರೀತಿಸದೆ ಮುಂದೆ ಪ್ರೀತಿಸುವವಳನ್ನು ತೋರಿಸುವು 

ದಕ್ಕೆ ನನ್ನಿಂದಾಗುವುದಿಲ್ಲ. 

 

ನಾನು-ಇದೇನು ಅಂತಹ ಆವಶ್ಯಕವಾದ ವಿದ್ಯೆಯಲ್ಲ. ಯಾರು ಯಾರನ್ನು 

ಪ್ರೀತಿಸುತ್ತಾರೋ ಅಂತಹವು ಅವರನ್ನು ಪ್ರೀತಿಯುಳ್ಳವರೆಂದು ತಿಳಿದೇ ಇದ್ದಾರೆ. 


ಸನ್ಯಾಸಿ-ಖಾರೂ ಹೇಳರು, ಆಜ್ಞಾತವಾದ ಪ್ರಣಯವೇ ಪೃಥಿವಿಯಲ್ಲಿ ಹೆಚ್ಚು. 

ನಿನ್ನನ್ನು ಯಾರು ಪ್ರೀತಿಸುತ್ತಾರೆ ? ಅಂತಹವರನ್ನು ನೀನು ತಿಳಿದಿದ್ದೀಯಾ ? 

----------------------------------------

76 ರಜನೀ


ನಾನು-ಆತ್ಮೀಯರನ್ನು ಹೊರ್ತು ನನ್ನನ್ನು ಹೆಚ್ಚು ಪ್ರೀತಿಸುವವರು ಯಾರನ್ನೂ 

ನಾವರಿಯೆನು.

 

ಸನ್ಯಾಸಿ --ನೀನು ನನ್ನ ವಿದ್ಯೆಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಇಷ್ಟವಿ 

ದ್ದರೆ ಈ ಹೊತ್ತು ಇದನ್ನು ಪ್ರತ್ಯಕ್ಷವಾಗಿ ತೋರಿಸುತ್ತೇನೆ. 

 

ನಾನು-ಅದಕ್ಕೆ ಆಕ್ಷೇಪಣೆ ಏನು ? 


ಸನ್ಯಾಸಿ-ಹಾಗಾದರೆ ನೀನು ಮಲಗುವ ಸಮಯದಲ್ಲಿ ನನ್ನನ್ನು ನಿನ್ನ ಶಯ 

ನಾಗಾರಕ್ಕೆ ಕರೆಯಬೇಕು. 

 

ನನ್ನ ಶಯನ ಗೃಹವು ಮನೆಯ ಮುಂದುಗಡೆ.  ನಾನು ಮಲಗುವ ಸಮಯ 

ದಲ್ಲಿ ಸನ್ಯಾಸಿಯನ್ನು ಕರೆಸಿದೆ, ಸನ್ಯಾಸಿಯು ಬಂದು, ನನ್ನನ್ನು ಶಯನ ಮಾಡೆಂದು 

ಹೇಳಿದನು. ನಾನು ಮಲಗಿಕೊಂಡ ಮೇಲೆ ಅವನು, ನಾವು ಇಲ್ಲಿರುವವರೆಗೂ ಕಣ್ಣು 

ತೆಗೆಯಬೇಡ, ಮುಚ್ಚಿಕೊಂಡಿರು ; ನಾನು ಹೊರಟು ಹೋದಮೇಲೆ ಎಚ್ಚರವಾ 

ಗಿದ್ದರೆ ಕಣ್ಣು ಬಿಟ್ಟು ನೋಡು, ಎಂದು ಹೇಳಿದನು. ನಾನು ಅದೇ ಪ್ರಕಾರ ಕಣ್ಣು 

ಮುಚ್ಚಿಕೊಂಡಿದ್ದನು. ಸನ್ಯಾಸಿಯು ಏನು ತಂತ್ರವಾಡಿದನೋ ನಾನು ನೋಡಲಿಲ್ಲ. 

ಸನ್ಯಾಸಿಯು ಹೊರಟು ಹೋಗುವುದಕ್ಕೆ ಮೊದಲೇ ನನಗೆ ನಿದ್ರೆಬಂತು. 


ಸನ್ಯಾಸಿಯು, ಈ ಪೃಧಿವಿಯಲ್ಲಿ ಯಾವ ನಾಯಿಕಳು ನನ್ನನ್ನು ಅತ್ಯಂತ 

ಮರ್ಮಾಂತಿಕವಾಗಿ ಪ್ರೀತಿಸುವಳೋ ಅವಳನ್ನೇ ನೀನು ಈ ಹೊತ್ತು ಸ್ವಪ್ನದಲ್ಲಿ ನೋಡುವೆ 

ಎಂದು ಹೇಳಿದ್ದನು. ಸ್ವಪ್ನವನ್ನು ನೋಡಿದೆನು. ಕಲಕಲ ನಾದ ಮಾಡವ ಗಂಗಾ 

ಪ್ರವಾಹ ಮಧ್ಯದಲ್ಲಿ ಮರಳುಗುಡ್ಡೆ, ಅದರ ಅಂಚಿನಲ್ಲಿ ಅರ್ಧ ಜಲಮಗ್ನವಾಗಿ ಯಾರು ? 

ರ ಜ ನಿ , 

ಮರುದಿನ ಬೆಳಿಗ್ಗೆ ಸನ್ಯಾಸಿಯು ಬಂದು, ಯಾರನ್ನು ಸ್ವಪ್ನದಲ್ಲಿ ಕಂಡೆ ಎಂದು 

ಕೇಳಿದನು. 


ನಾನು-ಅಂಧಳಾದ ಹೂವಾಡಗಿತ್ತಿಯನ್ನ.  


ಸನ್ಯಾಸಿ-ಕುರುಡಳೆ ? 


ನಾನು-ಜನ್ಮಾಂಧಳು. 

ಸನ್ಯಾಸಿ-ಆಶ್ಚರ್ಯ ! ಅದು ಹೇಗಾದರು ಆಗಲಿ, ಈ ಮಂಡಲದಲ್ಲಿ ನಿನ್ನನ್ನು 

ಯಾರೂ ಅವಳಿಗಿಂತಲೂ ಹೆಚ್ಚಾಗಿ ಪ್ರೀತಿಸರು. 

 

ನಾನು ಸೊಲ್ಲಿಲ್ಲದೆ ಸುಮ್ಮನಾಗಿಬಿಟ್ಟೆನು. 


........

---------------------------------------------

ನಾಲ್ಕನೆಯ ಭಾಗ. 

ಎಲ್ಲರ ಹೇಳಿಕೆ, 


      ಮೊದಲನೆಯ ಪರಿಚ್ಛೇದ. 

...

        ಲವಂಗತೆಯ ಹೇಳಿಕೆ. 


ಬಹಳ ಗದ್ದಲಕ್ಕಿಟ್ಟಿತು. ನಾನು ಸನ್ಯಾಸಿಯ ಕೈಕಾಲು ಕಟ್ಟಿಕೊಂಡು ಅತ್ತೂ 

ಕರದು, ಶಚೀಂದ್ರವನ್ನು ರಜನಿಗೆ ವಶೀಭೂತನಾಗುವ ಉಪಾಯವನ್ನು ಮಾಡುತ್ತೇನೆ, 

ಸನ್ಯಾಸಿಯು ತಂತ್ರಸಿದ್ದನು ; ಅವನು ಜಗದಂಬೆಯ ಕೃಪೆಯಿ೦ದ, ಮನಸ್ಸಿಗೆ ಬಂದುದ 

ನ್ನೆಲ್ಲಾ ಮಾಡಬಲ್ಲವನಾಗಿದ್ದಾನೆ : ಯಜಮಾನರು ಅಷ್ಟು ದೊಡ್ಡವರಾಗಿದ್ದರೂ 

ಈ ಪಾಮರಿಯಾದ ನನಗೆ ವಶೀಭೂತರ ಗಿದ್ದಾರೆ ; ಅದು ನನ್ನ ಗುಣಗಳಿ೦ದಲೋ 

ಅಥವಾ ಸನ್ಯಾಸಿಯ ಮಹಾತ್ಮ್ಯದಿಂದಲೋ ಹೇಳುವುದಕ್ಕೆ ಕಷ್ಟವಾಗಿದೆ. ನಾನೂ 

ಕಾಯಮನೋವಾಕ್ಕಯಗಳಿಂದ ಪತಿಪಾದಗಳ ಸೇವೆಯಲ್ಲಿ ಸ್ವಲ್ಪವೂ ಕಡಮೆ ಮಾಡದೆ 

ಅದೇ ಸೇವಾತತ್ಪರಳಾಗಿದ್ದೇನೆ. ಸನ್ಯಾಸಿಯಕೂಡ ನನಗೋಸ್ಕರ ಯಾಗ, 

ಯಜ್ಞ, ಮಂತ್ರ, ತಂತ್ರಗಳನ್ನು ಮಾಡುವುದರಲ್ಲಿ ಕಡಿಮೆ ಮಾಡಿಲ್ಲ. ಅವನು ಯಾರಿ 

ಗೋಸ್ಕರ ಏನು ಮಾಡಿದರೂ ಸಫಲವಾಗಿಯೇ ಇದೆ, ಕಾಮಾಕ್ಷಮ್ಮನ ಸೊಸೆಯು 

ಉಕ್ಕಿನ ತುಂಡಾಗಿ ಕಲ್ಲುಗುಂಡಿನಹಾಗೆ ಮೊಂಡಿಯಾಗಿದ್ದವಳನ್ನು ಚೆಕ್ಕ ಬಂಗಾರದ 

ಬೊಂಬೆಯಹಾಗೆ ಮಾಡಿದ್ದಾನೆ, ಅವನ ಕೈಯಲ್ಲಿ ಆಗದಿರುವುದು ಯಾವದು ತಾನೇ 

ಉಂಟು ? ಅವನ ಮಂತ್ರೌಷಧಗಳ ಸಾಮರ್ಥ್ಯದಿಂದ ಶಚೀಂದ್ರನು ರಜನಿಯಲ್ಲಿ ಅನುರಾ 

ಗವುಳ್ಳವನಾಗುವುನಲ್ಲದೆ ರಜನಿಯನ್ನು ವಿವಾಹ ಮಾಡಿಕೊಳ್ಳುವುದಕ್ಕೆ ಆಶೆಯುಳ್ಳವ 

ನಾಗುವುದು, ಅದಕ್ಕೆ ಸಂದೇಹವಿಲ್ಲ. ಆದರೆ ಗದ್ದಲವು ಇನ್ನೂ ತಪ್ಪಿಲ್ಲ. ಅಮರನಾ 

ಥನು ಗದ್ದಲವನ್ನು ಹಚ್ಚತಾನೆ. ಅಮರನಾಥನೇ ರಜನಿಯನ್ನು ವಿವಾಹ ಮಾಡಿಕೊ 

ಳ್ಳುವುದಾಗಿ ಕೇಳಿದೆ ಅದು ಆಗಲೇ ನಿಷ್ಕರ್ಷೆಯಾಗಿದೆಯೆಂತಲೂ ಕೇಳಿದೆ. 


ರಜನಿಯ ಚಿಕ್ಕಪ್ಪ ಚಿಕ್ಕಮ್ಮಂದಿರಾದ ರಾಜಚಂದ್ರ ಅವನ ಹೆಂಡತಿ ಇವರೆಲ್ಲಾ 

ನಮ್ಮ ಕಡೆಗೆ ಇದ್ದಾರೆ; ಏತಕ್ಕೆ೦ದರೆ, ಅವರಿಗೆ ಯಜಮಾನರು ವಿವಾಹವಾದರೆ ನಿಮ 

ಗೇನಾದರೂ ಉಡುಗೊರೆ ಕೊಡುತ್ತೇವೆಂದು ಹೇಳಿದ್ದಾರೆ, ಹೆಣ್ಣಿನ ಕಡೆಯವರಿಗೇನೋ ಕೈಬೆ 

ಚ್ಚಗೆಮಾಡುವೆವು. ಆದರೂ ನೂರಾರು ಅಡ್ಡಿಗಳು ಅಡ್ಡವಾಗಿವೆ. ಹೆಣ್ಣಿನಕಡೆಯವರು 

ನಮ್ಮ ಕಡೆಯಾದರೂ ಏನೂ ಸಫಲವಾಗುವಹಾಗಿಲ್ಲ, ಅಮರನಾಥನು ಬಿಡುವಹಾ 

-----------------------------------------------

78 ರಜನೀ 

 

ಗಿಲ್ಲ, ಅಮರನಾಥನು ಬಿಡುವಹಾಗಿಲ್ಲ. ಅವನು ರಟನಿಯನ್ನು ವಿವಾಹಮಾಡಿ 

ಕೊಳ್ಳುವುದು ನಿಜ. ಮುಷ್ಕರಹಿರಿದು ಜಿದ್ದು ಮಾಡುತ್ತಾನೆ. 

 

ಒಳ್ಳೇದು, ಅಮರನಾಥನು ಯಾರು ? ಹೆಣ್ಣನ್ನು ದಾನಮಾಡುವವನು ತಂದೆ- 

ತಾಯಿಗಳ ಹಾಗಿರುವ ಚಿಕ್ಕಮ್ಮ ಇವರು ಮುಂದಾಗುವುದು ಸರಿಯಾದುದು, ಅವ 

ರೆಲ್ಲಾ ನಮ್ಮ ಕಡೆಗೆ ಇದ್ದ ಮೇಲೆ ಅಮರನಾಥನು ಮುಷ್ಕರಹಿಡಿದರೆ ಅದರಿಂದ ಆಗುವುದು 

ತಾನೇ ಏನು ? ಅವನು ಅವಳಿಗೆ ಆಸ್ತಿಯನ್ನು ಕೊಡಿಸಿರುವುದು ನಿಜ. ಆ ಮೆಹನತ್ತಿಗೆ 

ಸಾವಿರ ಎರಡುಸಾವಿರ ಕೊಟ್ಟರೆ ಸಾಕು. ನಾವುಗೊತ್ತು ಮಾಡಿಕೊಂಡ ಹುಡುಗಿಯನ್ನು 

ಅಮರನಾಥನು ಮದುವೆಮಾಡಿಕೊಳ್ಳಬಾರದೆ ? ಅಮರನಾಥನಿಗೆ ನಿಜವಾಗಿಬಹಳ 

ಹೊಟ್ಟೆಗಿಚ್ಚು, ನಾನೊಂದುಸಲ ಅಮರನಾಥನಿಗೆ ಶಿಕ್ಷೆ ಕೊಟ್ಟಿದ್ದೇನೆ. ಇನ್ನೊಂದು 

ತಡವೆ ಸಿಕ್ಕರೆ, ಕೊಟ್ಟೇಕೊಡುವೆನು. ನಾನು ಕಾಯಸ್ಥರ ಹೆಣಗಿದ್ದರೆ ಅಮರನಾ 

ಥನಿಂದ ಈ ಹುಡಗಿಯನ್ನು ಬಿಡಿಸಿಕೊಂಡು ನಮ್ಮ ಹುಡುಗನಿಗೆ ಮಾಡಿಯೇ ತೀರು 

ತ್ತೇನೆ. 


ನಾನು ಅಮರನಾಥನ ಗುಣಗಳನ್ನೆಲ್ಲಾ ಚೆನ್ನಾಗಿಬಲ್ಲೆ. ಅವನು ಅತ್ಯಂತ 

ಧೂರ್ತ, ಅವನ ಸಂಗಡ ಜಗಳಕ್ಕೆ ನಿಂತರೆ ಬಹಳ ಜಾಗರೂಕತೆಯಿಂದ ಇರಬೇಕು. 

ನಾನು ಜಾಗರೂಕತೆಯಿಂದಲೇ ಕೆಲಸಕ್ಕೆ ಆರಂಭಿಸಿದೆನು. 


ಮೊದಲು ರಾಜಚಂದ್ರನ ಹೆಂಡತಿಯನ್ನು ಕರೆಸಿದನು, ಅವಳು ಬಂದು ಏನಮ್ಮ ! 

ಕರೆಸಿದಿರಿ ? ಎಂದಳು. 


ನಾನು, ಹೂವಾಡಗಿತ್ತಿ !-ನಾನು ಈಗಲೂ ಹೂವಾಡಗಿತ್ತಿಯಂತಲೇ ಕರೆಯು 

ತ್ತೇನೆ, ಕೋಪಿಸಿಕೊಳ್ಳಬೇಡ, ಕೋಪಿಸಿಕೊಂಡರೂ ಹಾಗೆಯೇ ಕರೆಯುತ್ತೇನೆಂದು 

ಹೇಳಿದೆ. 

 

ಅದಕ್ಕವಳು, ಏನಮ್ಮ ! ಎಂದಳು. 


ನಾನು-ಹೆಣ್ಣನ್ನು ನಮ್ಮ ಹುಡುಗನಿಗೆ ತಾನೆ ಕೊಡುವುದಕ್ಕೆ ನಿಶ್ಚಯ 

ಮಾಡಿಕೊಂಡಿದ್ದಿಯಷ್ಟೆ? 


ಹೂವಾಡಗಿತ್ತಿ-ಆಮಾತೇ ಈಗ ನಡೆಯುತಲಿರುವುದು. 

 

ನಾನು-ನಡೆಯುತಲಿರುವುದೆಂದು ಹೇಳುವುದೇತಕ್ಕೆ ? ನನ್ನ ಸಂಗಡ ಆಡಿದ 

ಮಾತೇನಾಯಿತು ? 


ಹೂವಾಡಗಿತ್ತಿ-ಏನುಮಾಡಲಮ್ಮ!-ನಾನು ಹೆಣ್ಣು ಹೆಂಗಸು ಅದೆಲ್ಲಾ 

ನಾನೇನುಬಲ್ಲೆ ? 

-------------------------------------------

ಮೊದಲನೆಯ ಪರಿಚ್ಛೇದ 79 

ಹೆಂಗಸಿನ ಒನಕೆ ಬುದ್ಧಿಯನ್ನು ನೋಡಿ ನನಗೆ ಬಹಳ ಕೋಪಬಂದು ಅದೇನೆ ! 

ಹೆಣ್ಣು ಹೆಂಗಸಿಗೆ ತಿಳಿಯದ್ದು ಪುರುಷನು ಬಲ್ಲನೆ ? ಪುರುಷನಿಗೆ ಸಂಸಾರ. ಮನೇ 

ಗೃಹಕೃತ್ಯ, ಇದೆಲ್ಲಾ ಹೇಗೆ ಗೊತ್ತು ? ಗಂಡಸಾದವನು ! ಹೊರೆಹೊತ್ತು ಕಷ್ಟ ಪಟ್ಟು 

ಮನೆಗೆ ತಂದುಹಾಕುವ ಮಟ್ಟಿಗೆ ಸರಿ. ಮಿಕ್ಕದ್ದಕ್ಕೆಲ್ಲ ಪುರುಷನೇ ಯಜಮಾನ ? 

ಎಂದು ಹೇಳಿದೆ. 


ಆ ಹೆಂಗಸಿನ ಒನಕೆ ಬುದ್ದಿಗೆ ನಾನು ಹೇಳಿದುದೆಲ್ಲ ಅಸಂಗತವಾದುದೆಂದು ಕಂಡ 

ಹಾಗೆ ತೋರುತ್ತದೆ. ಅವಳು ಸ್ವಲ್ಪ ನಕ್ಕಳು, ನಾನು ನಿನ್ನ ಗಂಡನು ಹೆಣ್ಣನ್ನು ಅಮರ 

ನಾಧನಿಗೆ ಕೊಡಬೇಕೆಂದು ಇದನೇನೆಂದು ಕೇಳಿದೆನು. 


ಹೂವಾಡಗಿತ್ತಿ-ಅವನ ಅಭಿಪ್ರಾಯವೇನೂ ಅಲ್ಲ, ಅಮರನಾಧನು ರಜನಿಗೆ 

ಆಸ್ತಿಯನ್ನು ಸಂಪಾದಿಸಿಕೊಟ್ಟನು, ಅವನಿಗೆ ಬಾಧ್ಯರಾಗಲೇ ಬೇಕಾಗಿದೆ. 


ನಾನು-ಹಾಗಾದರೆ ಹೋಗಿ, ಅಮರನಾಧನಿಗೆ, ರಜನಿಗೆ ಇನ್ನೂ ಆಸ್ತಿಯು 

ಬಂದಿಲ್ಲ, ಆಸ್ತಿಯೆಲ್ಲ ನನ್ನದು, ನಾವು ಆಸ್ತಿಯನ್ನು ಬಿಟ್ಟು ಕೊಡುವದಿಲ್ಲವೆಂದು 

ಹೇಳು, ಬೇಕಾದರೆ ನಿಮ್ಮ ಆಸ್ತಿಯನ್ನು ಮೊಕದ್ದಮೆಮಾಡಿ ತೆಗೆದುಕೊಳ್ಳಲಿ; ಸಾಧ್ಯವೆ, 

ನೋಡೋಣ. 


ಹೂವಾಡಗಿತ್ತಿ- ಆ ಮಾತು ಮೊದಲೇ ನಡೆದಿದೆ. ಇಷ್ಟು ದಿನಕ್ಕೆ ಮೊಕದ್ದ 

ಮೆಯು ದಾಖಲಾಗಿರಬಹುದು. 

 

ನಾನು-ಮೊಕದ್ದಮೆ ಮಾಡುವುದು ಬಾಯಿಮಾತಲ್ಲ. ರೂಪಯಿ ದಂಡ 

ತೆರಬೇಕು. ರಾಜಚಂದ್ರನು ಹೂವು ಮಾರಿ ಎಷ್ಟು ದುಡ್ಡು ಸಂಪಾದಿಸಿ ಗಂಟು 

ಕಟ್ಟಿದ್ದಾನೆ ? 


ಹೂವಾಡಗಿತ್ತಿ ಕೋಪದಿಂದ ಉರಿದುರಿದು ಬಿದ್ದಳು. ನಿಜವಾಗಿಯೂ ನನ 

ಗೇನೂ ಕೋಪಬರಲಿಲ್ಲ. ಹೂವಾಡಗಿತ್ತಿಯು ಕೋಪವನ್ನು ಸ್ವಲ್ಪ ಶಮನ ಮಾಡಿ 

ಕೊಂಡು, ಅಮರಬಾಬು ನಮ್ಮ ಅಳಿಯನಾದರೆ ಆಸ್ತಿಯ ಅವನದಾಗುತ್ತದೆ. 

ಅವನಿಗೆ ದುಡ್ಡು ಖರ್ಚು ಮಾಡಿ ಮೊಕದ್ದಮೆ ಮಾಡುವುದಕ್ಕೆ ಶಕ್ತಿಯಿದೆ, ಎಂದಳು. 


ಇಷ್ಟು ಹೇಳಿ ಅವಳು ಎದ್ದು ಹೊರಟುಹೋಗುತ್ತಿದ್ದಳು. ನಾನು ಅವಳ 

ಶರಗನ್ನು ಹಿಡಿದು ಕೂಡಿಸಿಕೊಂಡೆ. ಅವಳು ನಕ್ಕು ಕುಳಿತುಕೊಂಡಳು. ನಾನು, 

ಅಮರನಾಥನು ಮೊಕದ್ದಮೆಯನ್ನು ಮಾಡಿ ಆಸ್ತಿಯನ್ನು ತೆಗೆದುಕೊಂಡರೆ ನಿಮಗೇ 

ನಾದಹಾಗಯಿತೆಂದು ಕೇಳಿದೆನು. 


ಹೂವಾಡಗಿತ್ತಿ-ನಮ್ಮ ಹುಡುಗಿಗೆ ಸುಖವುಂಟಾಗುತ್ತದೆ. 

----------------------------------------------

80 ರಜನೀ

 

ನಾನು-ನಮ್ಮ ಹುಡುಗನಿಗೆ ಕೊಟ್ಟು ಮದುವೆಯಾದರೆ ದುಃಖವುಂಟಾಗು 

ತ್ತದೇನೋ ? 


ಹೂವಾಡಗಿತ್ತಿ-ಅದೇತಕ್ಕೆ ? ಎಲ್ಲಿದ್ದರೂ ನಮ್ಮ ಹುಡುಗಿಗೆ ಸುಖವೇ 

ಆಗುತ್ತದೆ. 


ನಾನು- ನಿಮಗೆ ಸ್ವಂತ ಸುಖವನ್ನೇನೂ ಅಪೇಕ್ಷಿಸುವುದಿಲ್ಲವೋ ಏನು ? 


ಹೂವಾಡಗಿತ್ತಿ-ನಮಗೆ ಇನ್ನೇನು ಸುಖ? ಹುಡುಗಿಯ ಸುಖವೇ ನಮ್ಮ ಸುಖ. 


ನಾನು-ಹೆಣ್ಣಿನ ತಂದೆತಾಯಿಗೆ ಬರಬೇಕಾದುದೊ ? 


ಹೂವಾಡಗಿತ್ತಿಯು, ಹುಸಿನಗು ನಕ್ಕು-ಮುಖ್ಯವಾದ ಮಾತು ಏನು ? ಹೇಳ 

ಕೂಡದೇನಮ್ಮ! ಈಗ ಮದುವೆಯಾಗಲು ಹುಡುಗಿಗೆ ಮದುವೆಯಲ್ಲಿ ಇಷ್ಟವೆ ಇಲ್ಲ 

ವೆಂದಳು. 


ನಾನು-ಅದು ಹೇಗೆ ? ಹಾಗೇತಕ್ಕೆ ಹೇಳುತ್ತಿ ? 


ಹೂವಾಡಗಿತ್ತಿ--ರಜನಿಯು ಇಲ್ಲಿನ ಮಾತಿನಮೇಲೆ ಕುರುಡಿಗೆ ಏತಕ್ಕೆ 

ಮದುವೆ ? ಎಂದು ಹೇಳಿದಳು. 


ನಾನು-ಅಮರನಾಥನಿಗೆ ಕೊಟ್ಟು ಮದುವೆಯಾಗುವ ಮಾತು ನಡೆದುದು 

ಹೇಗೆ ? 


ಹೂವಾಡಗಿತ್ತಿ-ಅವನು ಹೇಳಿದ್ದು-ಅವನು ಹೇಳಿದ ಹಾಗೆಲ್ಲ ಮಾಡೇ 

ತೀರಬೇಕಾಗಿದೆ. 

 

ನಾನು-ಹಾಗಾದರೆ ಮದುವೆ ವಿಚಾರದಲ್ಲಿ ಹೆಣ್ಣಿನ ಅಭಿಪ್ರಾಯವನ್ನು ಕಟ್ಟಿ 

ಕೊಂಡು ಪ್ರಯೋಜನವೇನು ? ತಾಯಿತಂದೆಗಳ ಇಷ್ಟದಂತೆ ಆಗಬೇಕು. 


ಹೂವಾಡಗಿತ್ತಿ--ರಜನಿಯು ಚಿಕ್ಕ ಹುಡುಗಿಯಲ್ಲ. ನನ್ನ ಹೊಟ್ಟೆಯಲ್ಲಿ 

ಹುಟ್ಟಿದವಳೂ ಅಲ್ಲ. ಅದಲ್ಲದೆ ಆಸ್ತಿಯೆಲ್ಲಾ ಅವಳದು. ನಮ್ಮದಲ್ಲ. ಅವಳು 

ನಮ್ಮನ್ನು ಹೊರಡಿಸಿಬಿಟ್ಟರೆ ನಾವು ಮಾಡತಕ್ಕದ್ದೇನು ? ಅವಳ ಮನಸ್ಸಿಗೆ ಸರಿಯಾ 

ಗಿದ್ದರೆ ನಾವೂ ಕಾಲ ಕಳೆಯಬಹುದು. 


ನಾನು ಹಾಗೆಯೇ ಸ್ವಲ್ಪ ಯೋಚಿಸಿ ರಜನಿಯನ್ನು ಅಮರನಾಥನು ನೋಡಿ 

ಅವಳ ಸಂಗಡ ಮಾತನಾಡಿದ್ದಾನೇನೆಂದು ಕೇಳಿದೆನು, 


ಹೂವಾಡಗಿತ್ತಿ-ಇಲ್ಲ. ಅಮರನಾಥನು ಅವಳನ್ನು ನೋಡಿಲ್ಲ. 


ನಾನು-ರಜನಿಯನ್ನು ನಾನೊಂದುಸಲ ನೋಡಕೂಡದೆ ? 

-------------------------------------------

ಎರಡನೆಯ ಪರಿಚ್ಛೇದ 81 

ಹೂವಾಡಗಿತ್ತಿ- ನನಗೂ ಅದೇ ಇಷ್ಟ, ನೀನು ಅವಳನ್ನು ನೋಡಿ ತಿಳಿಯ 

ಹೇಳಿದರೆ ಅವಳು ಒಪ್ಪಿಗರೂ ಒಪ್ಪಿಕೊಂಡಳು. ನಿಮ್ಮಲ್ಲಿ ಅವಳಿಗೆ ಭಕ್ತಿಯೂ ಇದೆ. 


ನಾನು- ಹಾಗೆ ಮಾಡಿ ನೋಡುತ್ತೇನೆ. ಆದರೆ ಅವಳನ್ನು ನೋಡುವುದು 

ಹೇಗೆ ? ನಾಳೆ ಸ್ವಲ್ಪ ಹೊತ್ತಿನಮಟ್ಟಿಗೆ ಅವಳನ್ನು ಇಲ್ಲಿಗೆ ಕಳುಹಿಸುವಿಯಾ ? 


ಹೂವಾಡಗಿತ್ತಿ-ಅದಕ್ಕೇನೂ ಅಡ್ಡಿಯಿಲ್ಲ. ಅವಳು ಇಲ್ಲಿನ ಅನ್ನ ಬಟ್ಟೆಯಿಂ 

ದಲೇ ದೊಡ್ಡವಳಾದವಳು. ಆದರೆ ಮನೆಗೆ ಸೊಸೆಯಾಗುವಳು, ಹೊ , ವೇಳೆ 

ಇಲ್ಲದೆ ಅವನೆಗೆ ಬರುವುದೆ ? 


ಹಾಳಾಯಿತು! ಇದೊಂದು ಅಡ್ಡಿ ! ಮಾಡುವುದೇನು? ನಾನು ಬೇರೆ ಉಪಾಯ 

ತೋರದೆ, ಒಳ್ಳೇದು, ರಜನಿಯು ಬರಕೂಡದು, ನಾನೇ ಒಂದುಸಲ ನಿಮ್ಮ ಮನೆಗೆ 

ಬರಲೆ ? ಎಂದೆನು. 


ಹೂವಾಡಗಿತ್ತಿ-ಅದೇನಮ್ಮ ! ಹಾಗೆ ಕೇಳುತ್ತಿ? ನಿಮ್ಮ ಪಾದಧೂಳಿ ನಮ್ಮ 

ಮನೆಯಲ್ಲಿ ಬೀಳುವಷ್ಟು ನಾವು ಪುಣ್ಯ ಮಾಡಿದ್ದೇವೆ ? 


ನಾನು-ಸಂಬಂಧಬೆಳದರೆ, ನಾನೇನು ? ಎಲ್ಲರೂ ಬಂದು ಹೋಗಬೇಕಾಗು 

ತ್ತದೆ. ನೀನು ನನಗೆ ಔತನ ಹೇಳಿ ಹೋದರೆ ಬರುತ್ತೇನೆ. 


ಹೂವಾಡಗಿತ್ತಿ--ನಮ್ಮ ಮನೆಗೆ ಬರಬೇಕಾದರೆ ತಮ್ಮ ಯಜಮಾನರ ಅಪ್ಪಣೆ 

ಬೇಡವೆ ? ಅವರು ಒಪ್ಪುವರೆ ? 


ನಾನು-ಗಂಡಸರ ಮಾತು ಇದಕ್ಕೆಲ್ಲ ಏತಕ್ಕೆ ? ಇಂತಹ ಸಂಗತಿಯಲ್ಲಿ ಹೆಂಗ 

ಸರ ಅಭಿಪ್ರಾಯವೇ ಗಂಡಸರ ಅಭಿಪ್ರಾಯ. 


ಹೂವಾಡಗಿತ್ತಿಯು ಕೈಮುಗಿದುಕೊಂಡು ನಗುನಗುತ್ತ ನಾಳೆ ನಮ್ಮ ಮನೆಗೆ 

ಊಟಕ್ಕೆ ದಯಮಾಡಿಸಬೇಕೆಂದು ಹೇಳಿ ಹೊರಟು ಹೋದಳು. 

......

ಎರಡನೆಯ ಪರಿಚ್ಛೇದ. 


ಅಮರನಾಥನ ಹೇಳಿಕೆ 


ರಜನಿಯ ಆಸ್ತಿಯನ್ನು ದೂರಮಾಡುವುದಕ್ಕೋಸ್ಕರ ನಾನು ಪಟ್ಟ ಶ್ರಮವು 

ಸಾರ್ಥಕವಾಯಿತು. ಮಿತ್ರನ ಮನೆಯವರೂ ಸಹ ನಿರ್ವಿವಾದವಾಗಿ ಆಸ್ತಿಯನ್ನು 

ಬಿಟ್ಟು ಬಿಟ್ಟರು. ಆದರೂ ಆಸ್ತಿಯು ಸ್ವಾಧೀನಕ್ಕೆ ಬಾರದಿರುವುದು ನೋಡಿ ಎಲ್ಲರೂ 

---------------------------------------------- 

82 ರಜನೀ 


ಆಶ್ವರ್ಯಪಡುತ್ತಾರೆ, ನನಗೂ ಸ್ಪಲ್ಪ ಆಶ್ಚರ್ಯವೇ ಆಗಿದೆ. ಆಸ್ತಿಯು ನನ್ನದಲ್ಲ. ನಾನು 

ಸ್ವಾಧೀನಕ್ಕೆ ತೆಗೆದುಕೊಳ್ಳಲು ನಾನು ಯಾರು ? ಆಸ್ತಿಯು ರಜನಿಗೆ ಸೇರಿದ್ದು. 

ಅವಳು ಸ್ವಾಧೀನಕ್ಕೆ ತೆಗೆದುಕೊಳ್ಳದಿದ್ದರೆ ಯಾರು ತಾನೇ ಮಾಡುವುದೇನು ? ರಜನಿಗೆ 

ಸ್ವಾಧೀನಕ್ಕೆ ತೆಗೆದ. ಕೊಳ್ಳುವುದಕ್ಕೆ ಶುದ್ಧವಾಗಿ ಇಷ್ಟವಿಲ್ಲವಾಗಿದೆ. ಅವಳು, ಇಂದು 

ಬೇಡ, ಇನ್ನೆರಡು ದಿನ ಹೋಗಲಿ, ಕಡೆಗೆ ಸ್ವಾಧೀನ ಮಾಡಿಕೊಳ್ಳೋಣವೆಂದು ಹೇಳು 

ತ್ತಾಳೆ, ಸ್ವಾಧೀನಕ್ಕೆ ತೆಗೆದುಕೊಳ್ಳದೇ ಹೋಗಲಿ ಆದರೆ ದರಿದ್ರಳಾದ ಹೆಂಗಸಿಗೆ 

ಐಶ್ವರ್ಯದಲ್ಲಿ ಇಷ್ಟು ಅನಾದರವೇತಕ್ಕೆ ? ಆರನ್ನು ಕುರಿತು ಎಷ್ಟು ಯೋಚಿಸಿಕೊಂ 

ಡರೂ ನನ್ನ ಬುದ್ಧಿಗೆ ಹರಿಯುವ ಹಾಗಿಲ್ಲವಾಗಿದೆ, ರಾಜಚಂದ್ರನೂ ಅವನ ಹೆಂಡ 

ತಿಯೂ ಸಹ ರಜನಿಗೆ ಎಷ್ಟೋ ಹೇಳಿದರು. ಆದರೂ ರಜನಿಯು ಆಸ್ತಿಯನ್ನು 

ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಇಷ್ಟ ಪಡಲಿಲ್ಲ. ಇದರ ಮರ್ಮವೇನಿರಬಹುದು ? 

ನಾನು ಯಾರಿಗೋಸ್ಕರ ಇಷ್ಟು ಶ್ರಮ ತೆಗೆದುಕೊಂಡೆ ? 


ಇದರ ಸಂಗತಿಯನ್ನು ಪೂರ್ತಿಯಾಗಿ ತಿಳಿಯಲು ರಜನಿಯನ್ನು ನೋಡಿ 

ಮಾತನಾಡುವುದಕ್ಕೋಸ್ಕರ ಹೋದೆನು. ರಜನಿಗೂ ನನಗೂ ಮದುವೆ ಆಗುವ 

ಪ್ರಸ್ತಾಪವು ನಡೆದ ಮೊದಲ್ಗೊಂಡು ನಾನು ಅವಳನ್ನು ನೋಡಲು ಪದೇಪದೆ ಹೋಗು 

ತ್ತಿರಲ್ಲ. ಏತಕ್ಕೆಂದರೆ ಅವಳು ನನ್ನನ್ನು ನೋಡಿದರೆ ಲಜ್ಜಿತಳಾಗುವಳು ಈಹೊತ್ತು 

ಹೋಗದಿದ್ದರೆ ತಿರುಗಾಡುದರಿಂದ ಅವಳ ಬಳಿಗೆ ಹೋದೆನು. ನಾನು ಆ ಮನೆಗೆ 

ಹೋಗುವುದಕ್ಕೆ ಅಡ್ಡಿಯೇ ಇಲ್ಲ. ಅಲ್ಲಿ ಹೋಗಿ ರಜನಿಯನ್ನು ಅವಳ ಕೊಠಡಿಯಲ್ಲಿ 

ನೋಡಿದೆನು. ಅವಳು ಅಲ್ಲಿ ಇರಲಿಲ್ಲ. ನಾನು ಹಿಂದಿರುಗಿ ಬರುತಲಿದ್ದೆನು. ಆಗ 

ರಜನಿಯು ಮತ್ತೊಬ್ಬ ಹೆಂಗಸಿನ ಸಂಗಡ ಮನೆಗೆ ಬರುತ್ತಿದ್ದಳು, ನಾನು ಅವಳನ್ನು 

ನೋಡುತ್ತಲೇ ಗುರುತು ಹಿಡಿದನು. ಬಹಳ ದಿನಗಳಿಂದ ನಾನವಳನ್ನು ನೋಡಿರಲಿಲ್ಲ. 

ಆದರೆ ನೋಡುತ್ತಲೇ ಗುರುತಾಯಿತು. ಅವಳಾಗಜೇಂದ್ರಗಾಮಿನಿಯಾದ ಲಲಿತ 

ಲವಂಗಲತೆ !  


ರಜನಿದು ಮನಃಪೂರ್ವಕವಾಗಿ ಜೀರ್ಣವಾದ ಹಳೆಬಟ್ಟೆಯನ್ನುಟ್ಟಿದ್ದಳು. 

ಲಜ್ಜೆಯಿಂದ ಅವಳ ಲವ೦ಗಲತೆಯೊಡನೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಲವಂಗ 

ಲತೆಯು ನಗುವಿನಿಂದ ಉಚ್ಛಳಿಸುತ್ತಲಿದ್ದಳು. ಕೋಪ ಅಥವಾ ವಿದ್ವೇಷದ ಯಾವ 

ಕ್ಷಣಗಳ ಕಂಡುಬರಲಿಲ್ಲ. 


ಆ ನಗುವನ್ನು ಆನೇಕ ದಿನಗಳಿಂದ ಕೇಳಿರಲಿಲ್ಲ. ಆ ನಗುವು ಮೊದಲಿನ 

ಹಾಗೆಯೇ ಇತ್ತು, ಪೂರ್ಣಿಮಾ ದಿನ ಸಮುದ್ರದಲ್ಲಿ ಚಿಕ್ಕಚಿಕ್ಕ ತರಂಗಗಳಹಾಗೆ 

------------------------------------------------

ಎರಡನೆಯ ಪರಿಚ್ಛೇ ದ 83 

ಪುಷ್ಪಸಮೇತವಾದ ವಸಂತದ ಲತೆಯು ತೂಗಾಡುವಂತೆ ಅದರಿಂದ ಸುಖವು ಜರಿದು 

ಜರಿದು ಬೀಳುತಲಿತ್ತು. 

 

ನಾನು ಅವಾಕ್ಕಾಗಿ, ನಿಷ್ಪಂದಶರೀರವುಳ್ಳವನಾಗಿ ಸಶಂಕಚಿತ್ತನಾಗಿ ಈ 

ವಿಚಿತ್ರವಾದ ಚರಿತ್ರೆಯನುಳ್ಳ ರಮಣಿಯ ಮಾನಸಿಕ ಶಕ್ತಿಯನ್ನು ಕುರಿತು ಆಲೋ 

ಚಿಸಿಕೊಂಡಿರುತ್ತಿದ್ದೆನು. ಲಿಲಿತಲವಂಗಲತೆಯು  ಹಿಂಜರಿಯಲಿಲ್ಲ.  ಲವಂಗಲತೆಯು 

ಮಹಾ ಐಶ್ವರ್ಯದಿಂದ ದಾರಿದ್ರಾವಸ್ಥೆಯಲ್ಲಿ ಬಿದ್ದಿದ್ದಾಳೆ. ಆದರೂ ಆ ಸುಖಮಯ 

ವಾದ ನಗು. ಯಾವ ರಜನಿಯಿಂದ ಈ ಘೋರತರವಾದರ ತರವಾದ ದರಿದ್ರವು ಬಂತೋ ಅವಳ 

ಮನೆಗೇನೇ ಬಂದಿದ್ದಾಳೆ ; ಅವಳ ಸಂಗಡಲೇ ಮಾತು. - - ಆದರೂ ಆನಂದಮಯ 

ವಾದ ನಗು, ನಾನು ಇದಿರಿಗೆ ನಿಂತಿದ್ದೆ. ಆದರೂ ಆ ಸುಖಮಯವಾದ ನಗು ! ಇದ 

ಲ್ಲದೆ ಅವಳು ಯಾವದನ್ನೂ ಮರೆಯತಕ್ಕವಳಲ್ಲ. 


ನಾನು ಸರಿದು ಪಾರ್ಶ್ವದ ಕೊಠಡಿಗೆ ಹೋದೆನು. ಅವಳು ಆ ಮನೆಯೊಳಗೆ 

ಪ್ರವೇಶ ಮಾಡಿದಳು. ನಿಶ್ಶ೦ಕಚಿತ್ತಳಾಗಿ ಆಜ್ಞಯನ್ನು ಕೊಡುವವಳ ಹಾಗೆ ರಾಜ 

ರಾಜೇಶ್ವರಿಯೋಪಾದಿಯಲ್ಲಿ ರಜನಿಯನ್ನು ಕುರಿತು, ರಜನಿ ! ನೀನು ಇಲ್ಲಿ ಎಲ್ಲಾ 

ದರೂ ಹೋಗಿರು. ನಿನ್ನ ವರನ ಸಂಗಡ ನಾನು ಸ್ವಲ್ಪ ಏಕಾಂತವಾಗಿ ಮಾತನಾಡ 

ಬೇಕಾಗಿದೆ. ಭಯವೇನೂ ಇಲ್ಲ ! ನಿನ್ನ ವರನು ಸುಂದರನಾದರೂ ನನ್ನ ವಯಸ್ಸು 

ಹೋದ ಸಾ ಮಿಗಿಂತಲೂ ಸುಂದರನಲ್ಲವೆಂದು ಹೇಳಿದಳು. ರಜನಿಯು ಪ್ರತಿಭಳಾಗಿ 

ಏನೋ ಯೋಚಿಸಿಕೊಳ್ಳುತ್ತ ಸರಿದು ಹೊರಟು ಹೋದಳು. 


ಲಲಿತಲವಂಗಲತೆಯು ಹುಬ್ಬನ್ನು ಕುಟಿಲ ಮಾಡಿಕೊಂಡು ಆ ಮಧುರವಾದ 

ನಗುವನ್ನು ನಗುತ್ತ ಇಂದ್ರಾಣಿಯಾಗೆ ನನ್ನ 'ಇದಿರಿಗೆ ಬಂದು ನಿಂತಳು. ಒಂದು ಸಲ 

ವಾದರೂ ಅಮರನಾಥನು ಮೈಮರೆತವನಹಾಗೆ ಇದ್ದುದನ್ನು ಯಾರೂ ನೋಡಲಿಲ್ಲ. 

ಈಗ ಪುನಃ ಆತ್ಮ ವಿಸ್ಮೃತನಾದೆನ ಇದು ಎರಡನೆ ತಡವೆ .... ಮೊದಲನೆಯತಡವೆ 

ಆತ್ಮವಿಸ್ಮೃತನಾದಾಗಲೂ ಲಲಿತಲವಂಗತಿಯೇ ಕಂಡವಳು ಈಸಲವೂ ಲಲಿತ 

ಲವಂಗಲತೆ. 

 

ಲವಂಗಳು ನಕ್ಕು, ನನ್ನ ಮುಖವನ್ನು ದೃಷ್ಟಿಸಿ ನೋಡುವುದೇತಕ್ಕೆ ? ನೀನು 

ಕಷ್ಟಪಟ್ಟು ಆರ್ಜನೆ ಮಾಡಿರುವ ಆಸ್ತಿಯನ್ನು ಕಿತ್ತು ತೆಗದುಕೊಂಡು ಹೋಗುತ್ತೆ 

ನೆಂದು ನೋಡುತ್ತೀಯೋ?  ಹಾಗೆ ನನ್ನ ಇಕ್ಕೆ ಬಂದರೆ ಅದೂ ಮಾಡಬಲ್ಲೆನೆಂದಳು, 


ನಾನು, ನೀನು ಎಲ್ಲ ವನ್ನೂ ಮಾಡಬಲ್ಲೆ ; ಆದರೆ ಇದನ್ನು ಮಾತ್ರ ಮಾಡ 

ಲಾರೆ. ಹಾಗೆ ನೀನು ನನ್ನ ಬಲ್ಲವಳಾಗಿದ್ದರೆ ಆಸ್ತಿಯನ್ನು ರಜನಿಗೆ ಕೊಟ್ಟು ಬಿಟ್ಟು 

----------------------------------------------

84 ರಜನಿ 


ಈಗ ಸ್ವಂತವಾಗಿ ಅಡಿಗೆಯನ್ನು ಮಾಡಿ ಸವತಿಗೆ ಅನ್ನವನ್ನು ಬಡಿಸಿಕೊಂಡು ಕೂತಿ 

ರುವ ಏರ್ಪಾಡನ್ನು ಮಾಡಿಕೊಳ್ಳುತ್ತಿರಲಿಲ್ಲವೆಂದು ಹೇಳಿದೆನು. 

 

ಲವಂಗಳು ಘಟ್ಟಿಯಾಗಿ ನಕ್ಕು, ಅದನ್ನು ಮನಸ್ಸಿಗೆ ಬಹಳ ಹಚ್ಚಿಸಿಕೊಂಡಿ 

ದ್ದೇನೆಂದು ತಿಳಿದಿಯೊ ? ಸವತಿಗೆ ಅಡಿಗೆಮಾಡಿ ಹಾಕಬೇಕು. ಅದು ಕಷ್ಟವಾದ 

ಕೆಲಸವಾಗಿದ್ದರೂ ಇರಬಹುದು. ಆದರೆ ಒಬ್ಬ ಪೋಲೀಸಿನವನನ್ನು ಕರೆದು ನಿನ್ನನ್ನು 

ದಸ್ತಗಿರಿಮಾಡಿಸಿಬಿಟ್ಟರೆ, ಈಗಲೇ ಹತ್ತು ಸಲ ಅಡಿಗೆ ಮಾಡಿದ ಹಾಗಾಗುತ್ತದೆಯಲ್ಲವೆ? 

ಎಂದಳು. 


ನಾನು-ಆಸ್ತಿಯು ರಜನಿಗೆ ಸೇರಿದ್ದು ; ನನ್ನನ್ನು ದಸ್ತಗಿರಿ ಮಾಡಿಸುವುದ 

ರಿಂದ ಆಗುವದೇನು ಆಸ್ತಿಯು ಯಾರದೋ ಅವರು ಅನುಭವಿಸಬೇಕು. 


ಲವಂಗ-ನೀನು ಹೆಂಗಸರ ಸ್ವಭಾವವನ್ನು ಯಾವಾಗಲೂ ಅರಿತವನಾಗಿಲ್ಲ. 

ರಜನಿಯು ಯಾರನ್ನು ಪ್ರೀತಿಸುವ ಅವರ ಸಂರಕ್ಷಣೆಗೋಸ್ಕರ ಆಸ್ತಿಯನ್ನೆಲ್ಲ 

ಬಿಟ್ಟು ಕೊಡುವಳು. 


ನಾನು-ಹಾಗೆಂದರೆ, ರಜನಿಯು ನನ್ನ ರಕ್ಷಣೆಗೋಸ್ಕರ ಆಸ್ತಿಯನ್ನೆಲ್ಲ 

ನಿನಗೆ ಲಂಚವಾಗಿ ಕೊಟ್ಟು ಬಿಡುವಳು. 


ಲವಂಗ-ಹಾಗೆಯೆ ಇರಬಹುದು. 

 

ನಾನು-ಇದುವರೆಗೆ ನನಗೆ ಮದುವೆಯಾಗಲಿಲ್ಲವೆಂದು ನೀನು ಆ ಲಂಚ 

ವನ್ನು ಕೇಳಲಿಲ್ಲ ; ಮದುವೆಯಾದ ಕೂಡಲೆ ಲಂಚವನ್ನು ಕೇಳುವೆ ಎಂದು 

ಕಾಣುತ್ತದೆ. 


ಲವಂಗ-ನಿನ್ನಂತಹ ಅಲ್ಪ ಮನುಷ್ಯನು ಮತ್ತೆ ಹೇಗೆ ತಿಳಿಯಬಲ್ಲೆ ? 

ಕಳ್ಳರು ಪರರ ಸ್ವತ್ತನ್ನು ಮುಟ್ಟುಕೂಡದೆಂದು ತಿಳಿಯಲಾರರು. ರಜನಿಯು ಒಂದು 

ವೇಳೆ ಆಸ್ತಿಯನ್ನು ಬಿಟ್ಟರೂ ನಾನೇತಕ್ಕೆ ತೆಗೆದುಕೊಳ್ಳಲಿ ? 


ನಾನು-ನೀನು ಇಂತಹವಳಾಗದೆ ಇದ್ದಿದ್ದರೆ ನನಗೆ ಆ ಸಾಯುವಕಾಲದ 

ದುರ್ಬುದ್ದಿಯು ಹೇಗೆ ಬರುತಲಿತ್ತು ? ನೀನು ನನ್ನ ಅಪರಾಧವನ್ನು ಮನ್ನಿಸುವಳಾಗಿ 

ನನ್ನಲ್ಲಿ ಅನುಗ್ರಹ ಮಾಡುವವಳಾಗಿದ್ದರೆ, ನಾನು ಬೇಡಿಕೊಳ್ಳುವದೊಂದು ಭಿಕ್ಷೆ 

ಯುಂಟು ; ಅದೇನೆಂದರೆ-ನಿನಗೆ ತಿಳಿದಿರುವುದನ್ನು ಇತರರಿಗೆ ಹೇಳಕೂಡದು, ರಜನಿಗೂ 

ಹೇಳಕೂಡದೆಂದು ಪ್ರಾರ್ಥಿಸುತ್ತೇನೆ. 

------------------------------------------------- 

ಎರಡನೆಯ ಪರಿಚ್ಛೇದ 85 

ದರ್ಪಿತಳಾದ ಲವಂಗತೆಯು ಭ್ರೂಭಂಗಿ ಮಾಡಿದಳು-ಎಂತಹ ಭ್ರೂಭಂಗಿ ! 

ಭ್ರೂಭಂಗಿ ಮಾಡಿ, ನಾನು ಠಕ್ಕು ಮಾಡುವವಳೆ ! ನಿನ್ನ ಹೆಂಡತಿಯಾಗುವವಳಲ್ಲಿ 

ನಿನ್ನ ಹೆಸರಿನಲ್ಲಿ ಠಕ್ಕುನಿಕ್ಕುವುದಕ್ಕೋಸ್ಕರವೇ ನಾನವಳ ಮನೆಗೆ ಬಂದುದು ? ಎಂದು 

ಹೇಳಿದಳು. 


ಹೀಗೆಂದು ಹೇಳಿ ಲವಂಗತೆಯು ನಕ್ಕಳು. ಅವಳ ನಗುವಿನ ಮರ್ಮವನ್ನು 

ನಾನು ಯಾವಾಗಲೂ ಕಂಡುಹಿಡಿಯಲಾರದೆ ಹೊದೆನು, ಲವಂಗಳು ಬಹಳ 

ಕೋಪಗೊಂಡಿದ್ದಳು. ಆದರೆ ಕೋಪವು ಆ ನಗುವಿನಲ್ಲಿ ತೇಲಿಹೋಯಿತು, ನೀರಿನ 

ಮೇಲೆ ಇದ್ದ ಮೇಘದ ಛಾಯೆಯು ಸರಿದುಹೋಗಿ, ಅದರ ಮೇಲೆ ಮೇಘದಿಂದ 

ಮುಕ್ತನಾದ ಚಂದ್ರನು ಪ್ರಜ್ವಲಿಸಲಾರಂಭಿಸುವಹಾಗೆ ಅವಳ ಮುಖವು ಪ್ರಕಾಶ 

ವಾಯಿತು. ಅವಳ ಮರ್ಮವನ್ನು ನಾನು ಯಾವಾಗಲೂ ಅರಿಯಲಾರದೆ ಹೋದೆನು. 


ನಕ್ಕು, ಲವಂಗಲತೆಯು ಹಾಗಾದರೆ, ನಾನು ರಜನಿಯ ಹತ್ತಿರ ಹೋಗು 

ತ್ತೇನೆಂದಳು. 

 

ನಾನು-ಹೋಗು. 


ಲಲಿತಲವಂಗಲತೆಯು ಲಲಿತವಾದ ಲವಂಗದ ಲತೆಯಹಾಗೆ ಬಳಕು 

ಬಳುಕುತ್ತ ನಡೆದುಹೋದಳು. ಒಂದು ಕ್ಷಣದಮೇಲೆ ನನ್ನನ್ನು ಕರೆಸಿದಳು. ಹೋಗಿ 

ನೋಡಲಾಗಿ, ಅವಂಗಲತೆಯು ನಿಂತಿದ್ದಳು, ರಜನಿಯು ಅವಳ ಕಾಲುಗಳನ್ನು ಹಿಡಿದು 

ಕಂಡು ಅಳುತ್ತಿದ್ದಳು. ನಾನು ಅಲ್ಲಿಗೆ ಹೋದ ಮೇಲೆ ಅವಂಗಲತೆಯು, ಕೇಳು, 

ನಿನ್ನನ್ನು ಮುಂದೆ ಮದುವೆಯಾಗುವ ಹೆಂಡತಿಯು ಏನು ಹೇಳುತ್ತಾಳೋ ಕೇಳು | 

ನಿನ್ನಿ ದಿರಿಗೆ ಹೊರ್ತು ನಾನು ಇಂತಹ ಮಾತನ್ನು ಕಿವಿಯಲ್ಲಿ ಕೇಳಲಾರೆ ಎಂದಳು. 


ನಾನು ವಿಸ್ಮಿತನಾಗಿ ಅದೇನೆಂದು ಕೇಳಿದೆನು. 


ಲವಂಗತೆಯು ರಜನಿಯನ್ನು ಕುರಿತು, ಹೇಳು, ನಿನ್ನ ವರನು ಬಂದಿ 

ದ್ದಾನೆಂದಳು. 


ರಜನಿಯು ಕಾತರದಿಂದ ಕಣ್ಣೀರು ತುಂಬಿದವಳಾಗಿ ಲಲಿತಲವಂಗಲತೆಯ 

ಚರಣಗಳನ್ನು ಸ್ಪರ್ಶಮಾಡಿಕೊಂಡು, ನನ್ನ ಪ್ರಾರ್ಥನೆ ಏನೆಂದರೆ-ನನಗೆ ಇರತಕ್ಕ 

ಆಸ್ತಿಯೆಂದರೆ ಈ ಬಾಬು ಮಹಾಶಯರ ಪ್ರಯತ್ನದಿಂದ ಉದ್ಧಾರವಾದ ಆಸ್ತಿಯನ್ನು 

ಕಾಗದಪತ್ರಗಳನ್ನು ಬರೆಸಿ ನಿನಗೆ ದಾನವಾಗಿ ಕೊಟ್ಟು ಬಿಡುವೆನು ; ನೀನು ದಯವಿಟ್ಟು 

ಗ್ರಹಣ ಮಾಡುವೆಯೆ ? ಇದೇ ನನ್ನ ಪ್ರಾರ್ಥನೆಯೆಂದಳು. 

---------------------------------------------- 

86 ರಜನೀ 


ಇದನ್ನು ಕೇಳಿ ನನ್ನ ಸರ್ವಾ೦ತಃಕರಣವೂ ಆಹ್ವಾದದಲ್ಲಿ ಮುಣುಗಿತು. 

ನಾನು ರಜನಿಗೋಸ್ಕರ ಯಾವ ಪ್ರಯತ್ನ ಮಾಡಿದೆನೋ, ಎಷ್ಟು ಕಷ್ಟವನ್ನು ವಹಿಸಿ 

ದೆನೋ ಅದೆಲ್ಲಾ ಸಾರ್ಥಕವಾಯಿತೆಂದು ತಿಳಿದೆನು. ನನಗೆ ಮೊದಲೇ ಗೊತ್ತಿತ್ತು. 

ಈಗ ಪರಿಷ್ಕಾರವಾಗಿ ಗೊತ್ತಾಯಿತು : ಏನೆಂದರೆ-ರಮಣಿಗಳ ಕುಲದಲ್ಲಿ ಅಂಧಳಾದ 

ರಜನಿಯು ಅದ್ವಿತೀಯವಾದ ರತ್ನ ವೆಂದು ಗೊತ್ತಾಯಿತು. ಲವಂಗಲತೆಯ 

ಅತ್ಯಂತ ಉಜ್ವಲವಾದ ಕಾಂತಿಯೂ ಕೂಡ ಅವಳಿದಿರಿಗೆ ಮನವನ್ನು ಹೊಂದಿತು. 

ನಾನು ಇದಕ್ಕೆ ಮೊದಲೇ ರಜನಿಯ ಅಂಧನಯನದಲ್ಲಿ ಆತ್ಮಸಮರ್ಪಣೆಯನ್ನು ಮಾಡಿ 

ಕೊಂಡಿದ್ದೆನು. ಇಂದು ನಾನವಳಿಗೆ ಕ್ರಯದ ಮೂಲ್ಯವಿಲ್ಲದೆ ವಿಕ್ರೀತನಾದೆನು. 

ಈ ಅಮೂಲ್ಯವಾದ ರತ್ನ ದಿಂದ ಅಂಧಕಾರದ ಪುರಿಯಾಗಿದ್ದ ನನ್ನ ಹೃದಯವು 

ಪ್ರಭಾಸಿತವಾಗಿ ಈ ಸುಖಜೀವನದಲ್ಲಿ ಕಾಲವನ್ನು ಕಳೆಯುವೆನು. ವಿಧಾತನು ನನಗೆ 

ಆ ದಿನವನ್ನು ಬೇಗನೆ ಒದಗಿಸಲಾರವೇನು ? ಎಂದಂದು ಕೊಂಡೆನು. 

....

ಮೂರನೆಯ ಪರಿಚ್ಛೇದ. 

...

             ಲವಂಗತೆಯ ಹೇಳಿಕೆ. 


ರಜನಿಯ ಈ ವಿಸ್ಮಯಕರವಾದ ಮಾತುಗಳನ್ನು ಕೇಳಿ ಅಮರನಾಥನು 

ಬೆಂಕಿಯ ಮೇಲಿರುವ ಹುರಿಯುವ ಹೆಂಚಿನಮೇಲೆ ಹಾಕಿದ ಹಸೀಕಡ್ಲೆಯಹಾಗೆ 

ಹುರಿದು ಒಣಗಿ ಶುಷ್ಕನಾಗುವುದೆಂದು ತಿಳಿದುಕೊಂಡಿದ್ದನು. ಆದರೆ ಸ್ವಲ್ಪವೂ ಹಾಗೆ 

ಕಂಡುಬರಲಿಲ್ಲ. ಅವನ ಮುಖವು ಖಿನ್ನವಾಗಿ ಬಾಡಿರುವುದಕ್ಕೆ ಬದಲಾಗಿ ಪ್ರಫುಲ್ಲ 

ವಾಗುತ್ತ ಬಂತು. ಆಶ್ಚರ್ಯದಿಂದ ಹತಬುದ್ಧಿಯುಳ್ಳವಳಾಗಿದ್ದೆನು. 


ನಾನು ಮೊದಲು ರಜನಿಯು ಹುಡುಗಾಟಕ್ಕೆ ಹೇಳಿರಬಹುದೆಂದು ಊಹಿಸಿ 

ದೆನು ಆದರೆ ರಜನಿಯ ಕಾತರತೆ ಕಣ್ಣೀರು, ದಾರ್ಥ್ಯ ಇವೇ ಮುಂತಾದುದನ್ನು 

ನೋಡಿ ಅವಳು ಮನಃಪೂರ್ವಕವಾಗಿ ತನ್ನ ಆತ್ಮಸಾಕ್ಷಿಯಾಗಿ ಹೇಳಿದಳೆಂದು ಸ್ಥಿರ 

ನಂಬಿಕೆಯುಂಟಾಯಿತು. ಇದನ್ನು ತಿಳಿದವಳಾಗಿ ನಾನು, ರಜನಿ ! ಕಾಯಸ್ಥರ 

ಕುಲದಲ್ಲಿ ನೀನೇ ಧನ್ಯಳು ! ನಿನ್ನ ಹಾಗೆ ಯಾರೂ ಇಲ್ಲ ! ಆದರೆ ನಾನು ನಿನ್ನ 

ದಾನವನ್ನು ಪರಿಗ್ರಹ ಮಾಡಲಾರೆನೆಂದು ಹೇಳಿದೆನು. 

----------------------------------------------

ಮೂರನೆಯ ಪರಿಚ್ಛೇದ 8? 


ರಜನಿಯು, ನೀವು ತೆಗೆದುಕೊಳ್ಳದಿದ್ದರೆ, ನಾನು ಆಸ್ತಿಯನ್ನೆಲ್ಲಾ ಯಾರಿಗಾ 

ದರೂ ಸುಮ್ಮನೆ ಕೊಟ್ಟು ಬಿಡುವೆನೆಂದಳು. 


ನಾನು-ಅಮರನಾಥಬಾಬುವಿಗೆ ! 


ರಜನಿ--ನೀನು ಅವನನ್ನು ಚೆನ್ನಾಗಿ ತಿಳಿಯಲಿಲ್ಲ. ನಾನು ಕೊಟ್ಟರೂ 

ಅವನು ತೆಗೆದು ಕೊಳ್ಳುವುದಿಲ್ಲ. ತೆಗೆದುಕೊಳ್ಳುವವರು ಬೇರೇ ಜನರು ಇದ್ದಾರೆ. 


ನಾನು-ಅಮರನಾಥಬಾಬು ! ಏನು ಹೇಳುತ್ತಿ ? 


ಅಮರನಾಥ-- ನನ್ನ ಸಂಗಡ ಯಾವ ಮಾತೂ ನಡೆದಿಲ್ಲ. ನಾನೇನು ಹೇಳಲಿ ? - 


ನಾನು ಬಹಳ ಅನುಮಾನದಲ್ಲಿ ಬಿದ್ದೆ, ರಜನಿಯು ಆಸ್ತಿಯನ್ನು ಬಿಟ್ಟು 

ಕೊಟ್ಟಿದ್ದು ಆಶ್ಚರ್ಯವಾದುದು, ಅಮರನಾಥನು ಯಾವ ಆಸ್ತಿಗೋಸ್ಕರ ಇಷ್ಟು 

ಕಷ್ಟ ಪಟ್ಟು ಯಾವದರ ಆಶೆಗೊಸ್ಕರ ರಜನಿಯನ್ನು ವಿವಾಹಮಾಡಿಕೊಳ್ಳುವವನಾಗಿ 

ದ್ದಾನೆ, ಅವನೂ ಕೈಬಿಡುವಹಾಗಿರುವವನಾಗಿದ್ದಾನೆ. ನೋಡಿದರೆ. ಅವನು 

ಏನೇನೂ ವ್ಯಾಕುಲವಿಲ್ಲದೆ ಪ್ರಫುಲ್ಲಚಿತ್ತನಾಗಿದ್ದಾನೆ. ಇದೇನು ವ್ಯಾಪಾರ ! ಎಂದು 

ಯೋಚಿಸುತಲಿದ್ದೆನು. 


ನಾನು ಅವರನಾಥನನ್ನು ಕುರಿತು, ನೀನು ಬೇರೆ ಕಡೆಗೆ ಹೋಗು ; ನಾನು 

ರಜನಿಯ ಸಂಗಡ ಕೆಲವು ಮಾತುಗಳನ್ನು ಸ್ಪಷ್ಟವಾಗಿ ಹೇಳಬೇಕಾಗಿದೆ ಎಂದು 

ಹೇಳಿದಪ್ರಕಾರ ಅಮರನಾಥನು ಬೇರೆಕಡೆಗೆ ಹೋದನು. ಅನಂತರ ನಾನು ರಜನಿ 

ಯನ್ನು ಕುರಿತು ನೀನು ನಿಜವಾಗಿಯೂ ಆಸ್ತಿಯನ್ನು ಯಾರಿಗಾದರೂ ಕೊಟ್ಟು 

ಬಿಡುವೆಯಾ ? ಎಂದು ಕೇಳಿದೆನು. 

 

ರಜನಿ-ನಿಜವಾಗಿ ಸತ್ಯವಾಗಿ ಕೊಟ್ಟು ಬಿಡುವೆನು. ನಾನು ಗಂಗೆಯ ಜಲ 

ವನ್ನು ಕೈಲಿ ತೆಗೆದುಕೊಂಡು ಪ್ರಮಾಣ ಮಾಡುತ್ತೇನೆ. 

 

ನಾನು-ನಾನು ನಿನ್ನ ದಾನವನ್ನು ಪರಿಗ್ರಹಿಸುತ್ತೇನೆ. ನೀನು ನಮ್ಮಿಂದ 

ಏನಾದರೂ ತೆಗೆದುಕೊಂಡರೆ-ಇಲ್ಲವಾದರೆ ತೆಗೆದುಕೊಳ್ಳುವುದಿಲ್ಲ. 


ರಜನಿ-ಬಹಳ ತೆಗದುಕೊಂಡಿದ್ದೇನೆ. 


ನಾನು-ಇನ್ನೇನಾದರೂ ಸ್ವಲ್ಪ ತೆಗೆದುಕೊಳ್ಳಬೇಕು; 


ರಜನಿ ತಮ್ಮ ಹೆಸರಾಗಿ ನೀವು ಉಟ್ಟ ಒಂದು ಹಳೇಬಟ್ಟೆಯನ್ನು ಕೊಟ್ಟರೆ ಸಾಕು. 


ನಾನು-ಅದಲ್ಲ. ನಾನು ಕೊಡುವುದನ್ನು ತೆಗೆದುಕೊಳ್ಳಬೇಕು, 


ರಜನಿ- ಏನು ಕೊಡುವೆ ? 

----------------------------------------

88 ರಜನೀ 


ನಾನು --- ಶಚೀಂದ್ರನೆಂಬ ನಮ್ಮ ಮಗನೊಬ್ಬನು ಇದ್ದಾನೆ. ನಾನು ನಿನಗೆ 

ಶಚೀಂದ್ರ ದಾನ ಮಾಡುತ್ತೇನೆ. ನಿನ್ನ ಸ್ವಾಮಿಯ ಸ್ವರೂಪವಾಗಿ ನೀನವನನ್ನು 

ಪರಿಗ್ರಹ ಮಾಡಬೇಕು, ನೀನು ಅವನನ್ನು ಗ್ರಹಣ ಮಾಡಿದರೇನೇ ನಾನು ನಿನ್ನ 

ಆಸ್ತಿಯನ್ನು ಗ್ರಹಣ ಮಾಡುವೆನು. 

 

ರಜನಿ ಯು ಅದುವರೆಗೆ ನಿಂತಿದ್ದವಳು ಮೆಲ್ಲ ಮೆಲ್ಲಗೆ ಕೂತುಕೊಂಡು ಅಂಧ 

ನಯನಗಳನ್ನು ಮುಚ್ಚಿ ಕೊಂಡಳು. ಅನಂತರ ಅವಳಾಮುದಿತವಾದ ನಯನಗಳಿಂದ 

ಜಲಧಾರೆಯು ಅವಿರಳ ವಾಗಿ ಸುರಿಯಲಾರಂಭಿಸಿತು. ಕಣ್ಣಿನ ನೀರು ಸುರಿಯುವುದು 

ಇನ್ನೂ ಪೂರೈಸಲಿಲ್ಲ. ನಾನು ಅತ್ಯ೦ತ ವಿಷಮವಾದ ವಿಪತ್ತಿನಲ್ಲಿ ಬಿದ್ದೆ. ರಜನಿಯು 

ಮಾತನಾಡಳು. ಸುಮ್ಮನೇ ಅಳುತ್ತಾಳೆ, ನಾ, ಏತಕ್ಕೆ, ರಜನಿ ! ಇಷ್ಟು ಅಳುತ್ತಿ ? 

ಎಂದೆನು 


ರಜನಿಯು ಅಳುತಳುತ್ತ, ಆ ದಿನ ನಾನು ಗಂಗೆಯಲ್ಲಿ ಬಿದ್ದು ಸಾಯುವುದಕ್ಕೆ 

ಹೋಗಿದ್ದೆ. ಮುಣುಗಿಹೋಗಿದ್ದೆ. ಜನರು ಬಂದು ಹಿಡಿದು ಎತ್ತಿದರು. ಅದು 

ಶಚೀಂದ್ರನಿಗೋಸ್ಕರ. ನೀನು ಹೇಳುವಿಯೇನೆಂದರೆ :--ನೀನು ಅಂಧಳು, ಕಣ್ಣು 

ಬರುವಹಾಗೆ ಮಾಡುತ್ತೇನೆಂದು ಹೇಳುವೆ ನನಗೆ ಕಣ್ಣು ಬೇಡ. ನನಗೆ ಶಚೀಂದ್ರ 

ಬೇಕು, ಶಚೀಂದ್ರನನ್ನು ಹೊರತು ನನಗೆ ಈ ಪ್ರಪಂಚದಲ್ಲಿ ಮತ್ಯಾವುದೂ ಬೇಡ. 

ನನ್ನ ಪ್ರಾಣವು ಆವನಲ್ಲಿದೆ. ದೇವರಲ್ಲಿ ಪುಷ್ಪವು ಮಾತ್ರ. ಅವನ ಚರಣದಲ್ಲಿ ಸ್ಥಾನ 

ಸಿಕ್ಕಿದರೆ ಸಾರ್ಥಕ, ಅಂಧಳ ದುಃಖವನ್ನು ಕೇಳುವವರು ಯಾರು ? ಎಂದಳು. 


ನಾನು ರಜನಿಯ ಕಾತರೋಕ್ತಿಯನ್ನು ಕೇಳಿ ಕಾತರಳಾಗಿ, ನಾನು ಕೇಳು 

ತ್ತೇನೆಂದೆನು. 


ಆಗ ರಜನಿಯು ಅಳುತಳುತ್ತ ಮನಸ್ಸು ಬಿಚ್ಚಿ ಎಲ್ಲಾ ಸಂಗತಿಯನ್ನು ವಿವರ 

ವಾಗಿ ಹೇಳಿದಳು. ಶಚೀಂದ್ರನ ಕಂಠಸ್ವರ, ಶಚೀಂದ್ರನ ಸ್ಪರ್ಶ, ಅಂಧಳಿಗೆ ಉಂಟಾದ 

ರೂವೋನ್ಮಾದ ! ಅವಳು ಓಡಿಹೋದುದು, ಮುಣುಗಿಹೋದುದು, ಉದ್ದಾರವಾ 

ದುದು, ಇವುಗಳನ್ನೆಲ್ಲ ಹೇಳಿದಳು, ಅಳುತಳುತ್ತ, ಅಮ್ಮ, ಯಜಮಾನಿ | ನಿನಗೆ 

ಕಣ್ಣು ಇದೆ, ಕಣ್ಣುಗಳಿದ್ದರೂ ನೀನು ಇಷ್ಟು ಹೆಚ್ಚಾಗಿ ಪ್ರೀತಿಸುವೆಯಾ ? ಎಂದಳು. 


ನಾನು ಮನಸ್ಸಿನಲ್ಲಿ, ಅಯ್ಯೋ ! ಕುರುಡಿ !  ಪ್ರೀತಿಸುವದೆಂಬುದನ್ನು ನೀನೇನು 

ಬಲ್ಲೆ ? ನೀನು ಲವಂಗಲತೆಗಿಂತ ಸಹಸ್ರಪಾಲು ಸುಖಿಯಾಗಿದ್ದೀಯೆ, ಎಂದಂದು 

ಕೊಂಡು, ಪ್ರಕಾಶ್ಯವಾಗಿ, ಇಲ್ಲ, ರಜನಿ ! ನನ್ನ ಸ್ವಾಮಿಯು ವಯಸ್ಸಾದವರು.  

ನಾನು ಈ ನೂರಾರು ಕಂಡವಳಲ್ಲ. ಹಾಗಾದರೆ ನೀನು ಶಚೀಂದ್ರನನ್ನು ವಿವಾಹ 

ಮಾಡಿಕೊಳ್ಳುವುದು ಖಂಡಿತವಷ್ಟೆ ? ಎಂದು ಹೇಳಿದೆನು. 

--------------------------------------------- 

ಮೂರನೆಯ ಪರಿಚ್ಛೇದ 89 

ರಜನಿ-' ಇಲ್ಲ' 

 

ನಾನು-ಅದೇನೆ ? ಹಾಗಾದರೆ, ಇಷ್ಟು ಮಾತುಗಳನ್ನೆಲ್ಲ ಹೇಳಿದ್ದೇತಕ್ಕೆ ? 

ಇಷ್ಟೆಲ್ಲಾ ಅತ್ತದ್ದೇತಕ್ಕೆ ? 


ರಜನಿ-ನನಗೆ ಆ ಸುಖವು ಹಣೆಯಲ್ಲಿ ಬರದಿಲ್ಲವೆಂತಲೇ ಇಷ್ಟು ಅತ್ತದ್ದು. 


ನಾನು-ಅದೇತಕ್ಕೆ ? ನಾನು ಮದುವೆ ಮಾಡುತ್ತೇನೆ. 


ರಜನಿ-ನೀನು ಮದುವೆ ಮಾಡಲಾರೆ. ಅಮರನಾಥನು ನಮಗೆ ಸರ್ವಸ್ವನಾಗಿ 

ದ್ದಾನೆ. ಅಮರನಾಥನು ನಮ್ಮ ಆಸ್ತಿಯನ್ನು ಉದ್ಧಾರ ಮಾಡುವುದಕ್ಕೆ ಮಾಡಿರುವಷ್ಟು, 

ಇತರರು ಪರರಿಗೋಸ್ಕರ ಅಷ್ಟುಮಾಡುವರೆ ? ಅದು ಸಾಲದುದಕ್ಕೆ ಅವನು ತನ್ನ ಪ್ರಾಣ 

ವನ್ನು ಕೊಟ್ಟು ನನ್ನ ಪ್ರಾ"ವನ್ನು ರಕ್ಷಣೆ ಮಾಡಿದ್ದಾನೆ. 

 

ರಜನಿಯು ಆ ಸಮಾಚಾರವನ್ನೆಲ್ಲಾ ಹೇಳಿದಳು. ಅನಂತರ ಅವಳು ನಾನು 

ಯಾರಲ್ಲಿ ಇಷ್ಟು ಋಣಿಯಾಗಿದ್ದೇನೋ, ಅವನು ಹೇಳುವಹಾಗೆ ನಡೆಯಬೇಕು. ಅವನು 

ಅನುಗ್ರಹಿಸಿ ನನ್ನನ್ನು ತನ್ನ ದಾಸಿಯಾಗಬೇಕೆಂದರೆ ನಾನವನ ದಾಸಿಯಾಗುವೆನು. 

ಮತ್ಯಾರಿಗೂ ದಾಸಿಯಾಗಲಾರೆನೆಂದಳು, ಹರಿ ! ಹರಿ ! ಸನ್ಯಾಸಿಯು ಹುಡುಗನಿಗೇತಕ್ಕೆ 

ಔಷಧವನ್ನು ಕೊಟ್ಟನೋ ? ವಿವಾಹವಿಲ್ಲದೇ ಆಸ್ತಿಯು ಉಳಿಯುವದು. ರಜನಿಯು 

ಆಸ್ತಿಯನ್ನು ಕೊಡಲು ಈಗಲೇ ಸಿದ್ಧಳಾಗಿದ್ದಾಳೆ ಛಿ ! ರಜನಿಯ ದಾನವನ್ನು ತೆಗೆದು 

ಕೊಳ್ಳುವುದೆ ? ಬಿಕ್ಷೆಯನ್ನು ಬೇಡಿ ತಿನ್ನು ಇದು ಅದಕ್ಕಿಂತಲೂ ಮೇಲು, ನಾನು 

ಮೊದಲು, ಈ ವಿವಾಹವನ್ನು ಮಾಡದಿದ್ದರೆ ನಾನು ಕಾಯಸ್ಥ ಹೆಣ್ಣೆ ಅಲ್ಲವೆಂದು 

ಹೇಳಿಕೊಂಡಿದ್ದೇನೆ. ನಾನು ಈ ಮದುವೆಯನ್ನು ಮಾಡಿಯೇ ತೀರುತ್ತೇನೆಂದು ಹೇಳಿ 

ಕೊಂಡು, ರಜನಿಯನ್ನು ಕುರಿತು, ಹ: ಗಾದರೆ ನಾನು ನಿನ್ನ ದಾನವನ್ನು ತೆಗೆದುಕೊಳ್ಳು 

ವುದಿಲ್ಲ. ನೀನು ಯಾರಿಗೆ ಬೇಕೋ ಅವರಿಗೆ ಕೊಟ್ಟು ಬಿಡೆಂದು ಹೇಳಿ ಅಲ್ಲಿಂದ ಎದ್ದೆನು. 


ರಜನಿಯು, ಸ್ವಲ್ಪ ಕಳಿತುಕೊ, ನಾನು ಅಮರನಾಥನಿಂದ ಒಂದು ಮಾತು 

ಹೇಳಿಸುತ್ತೇನೆ. ಅವನನ್ನು ಕರೆಯುತ್ತೇನೆಂದು ಹೇಳಿದಳು. 


ನಾನು ಅಮರನಾಥನನ್ನು ಇನ್ನೊಂದುಸಲ ನೋಡಬೇಕೆಂದಿದ್ದೆನು. ಅದು 

ಕಾರಣ ಪುನಃ ಕೂತುಕೊಂಡೆನು. ರಜನಿಯು ಅವರನಾಥನನ್ನು ಕರೆದಳು. 


ಅಮರನಾಥನು ಬರುತ್ತಲೇ ನಾನು ರಜನಿಯನ್ನು ಕುರಿತು, ಅಮರನಾಥನು 

ಈ ವಿಷಯದಲ್ಲಿ ಏನಾದರೂ ಹೇಳಬೇಕಾದರೆ ನಿನ್ನ ಇದುರಿಗೆ ಅದನ್ನೆಲ್ಲಾ ಹೇಳಲಾ 

ರನು, ನಿನ್ನ ಪ್ರಶಂಸೆಯನ್ನು ನೀನೇ ಕೇಳುವುದು ಸರಿಯಲ್ಲವೆಂದೆನು, 


ರಜನಿಯು ಅಲ್ಲಿಂದ ಹೊರಟುಹೋದಳು. 

......

-------------------------------------------------

ನಾಲ್ಕನೆಯ ಪರಿಚ್ಛೇದ. 


ಲವಂಗಲತೆಯ ಹೇಳಿಕೆ. 


ನಾನು ಅಮರನಾಧನನ್ನು ಕುರಿತು, ನೀನು ರಜನಿಯನ್ನು ವಿವಾಹಮಾಡಿ 

ಕೊಳ್ಳುತ್ತೀಯೆ ? ಎಂದು ಕೇಳಿದೆನು. 

 

ಅಮರನಾಧ-ಮಾಡಿಕೊಳ್ಳುವೆನು. ಸ್ಥಿರವಾಗಿದೆ. 


ನಾನು-ಈಗಲೇ ಸ್ಥಿರವಾಗಿದೆಯೋ ? ರಜನಿಯು ಅವಳ ಆಸ್ತಿಯನ್ನು 

ಕೊಟ್ಟು ಬಿಡುವಳಲ್ಲ ? 


ಅಮರನಾಧ-ನಾನು ಜನಿಯನ್ನು ವಿವಾಹ ಮಾಡಿಕೊಳ್ಳುತ್ತೇನೆ. ಆಸ್ತಿ 

ಯನ್ನು ವಿವಾಹ ಮಾಡಿಕೊಳ್ಳುವುದಿಲ್ಲ. 


ನಾನು-ಆಸ್ತಿಗೋಸ್ಕರವಲ್ಲವೆ ರಜನಿಯನ್ನು ವಿವಾಹ ಮಾಡಿಕೊಳ್ಳಲು 

ಇಷ್ಟ ಪಡುವುದು ? 


ಅಮರನಾಧ-ಹೆಂಗಸರ ಮನಸ್ಸು ಹೀಗೆ ಕದರ್ಯವಾಗುದು. 


ನಾನು:-ನನ್ನ ಮೇಲೆ ಭಕ್ತಿಯಿಲ್ಲದ್ದು ಎಷ್ಟು ದಿನದಿಂದ ? 


ಅಮರ-ಆಭಕ್ತಿಯಿಲ್ಲ. ಹಾಗಿದ್ದರೆ ವಿವಾಹ ಮಾಡಿಕೊಳ್ಳಲು ಇಷ್ಟ +

ಪಡುತ್ತಿರಲಿಲ್ಲ, 


ನಾನು -ಆದರೆ ಹುಡುಕಿ ಹುಡುಕಿ ಅಂಧಕಖ್ಯೆಯಲ್ಲಿ ಇಷ್ಟು ಅನುರಾಗ 

ವೇತಕ್ಕೆ ? ಅದು ಕಾರಣವೇ ಆಸ್ತಿಯ ಮಾತನ್ನು ಹೇಳಿದೆನು. 

 

ಆಮರ-ನಿನಗೆ ವೃದ್ಧನಲ್ಲೇತಕ್ಕೆ ಇಷ್ಟು ಅಸುರಾಗ ? ಆಸ್ತಿಗೊಸ್ಕರವೇ ? 


ನಾನು ----ಯಾರ ಇದಿರಿಗೂ ಗಂಡನು ವೃದ್ದನೆಂದ: ಹೇಳಲಿಲ್ಲ. ನನ್ನ ಮೇಲೆ 

ಕೋಪವೇತಕ್ಕೆ ? ನೀನು ಮುಗ್ಧರಾದ ಹೆಂಗಸಗೆ ಭಯತೋರಿಸುತ್ತೀಯೆ ? 


ಆದರೆ ಕೋಪವು ನನ್ನ ಆಂತರಿಕವಾದ ಆಶೆ. 


ಆಮರ-ಭಯವಡಿಸಿದುದು ಎಲ್ಲಿ ? ಕೋಪ ಹುಟ್ಟಿಸುವ ಮಾತೇನೂ ಹೇಳ 

ಲಿಲ್ಲ. ನೀನು ಮಿತ್ರಮಹಾಶಯನನ್ನು ಹೇಗೆ ಪ್ರೀತಿಸುತ್ತೀಯೋ ಹಾಗೆಯೇ ನಾನೂ 

ರಜನಿಯನ್ನು ಪ್ರೀತಿಸುತ್ತೇನೆ. 


ನಾನು-ಅವಳ ದೃಷ್ಟಿ ಕಟಾಕ್ಷವನ್ನು ನೋಡಿಯಲ್ಲವೆ ? 


ಅಮರ-ಇಲ್ಲ-ಕಟಾಕ್ಷವಿಲ್ಲವೆಂತಲೇ ಅವಳಲ್ಲಿ ಅನುರಾಗವುಳ್ಳವನಾಗಿ 

ದ್ದೇನೆ, ನೀನೂ ಕುರುಡಾಗಿದ್ದರೆ ಇನ್ನೂ ಹೆಚ್ಚು ಸುಂದದಿಯಾಗುತಲಿದ್ದೆ. 

----------------------------------------------

ನಾಲ್ಕನೆಯ ಪರಿಚ್ಛೇದ 91

ನಾನು-ಆ ಮಾತನ್ನು ಮಿತ್ರಮಹಾಶಯರನ್ನು ಕೇಳುತ್ತೇನೆ. ನಿನ್ನನ್ನು 

ಕೇಳಲಿಲ್ಲ. ಈಗ ನೀನು ರಜನಿಯನ್ನು ಹೇಗೆ ಪ್ರೀತಿಸುತ್ತೀಯೋ ನಾನೂ ಅವಳನ್ನು 

ಹಾಗೆಯೇ ಪ್ರೀತಿಸುತ್ತೇನೆ. 

 

ಅಮರ-ನೀನೂ ರಜನಿಯನ್ನು ವಿವಾಹಮಾಡಿಕೊಳ್ಳುವೆಯೋ ? 


ನಾನು-ಮುಕ್ಕಾಲುಪಾಲು ನಾನು ಸ್ವಂತವಾಗಿ ಮಾಡಿಕೊಳ್ಳುವುದಿಲ್ಲ. 

ಅವಳಿಗೆ ಒಳ್ಳೇ ವಿವಾಹವನ್ನು ಮಾಡಿಸುತ್ತೇನೆ, ನಿನಗೆ ಅವಳನ್ನು ಕೊಟ್ಟು ವಿವಾಹ 

ವಾಗದಹಾಗೆ ಮಾಡುತ್ತೇನೆ. 

 

ಅಮರ-ನಾನು ಒಳ್ಳೆ ಸತ್ಪಾತ್ರ, ಇ೦ತಹ ವರನು ರಟನಿಗೆ ಸಿಕ್ಕನು. 


ನಾನು-ನೀನು ಕುಪಾತ್ರ, ನಾನು ಒಳ್ಳೆ ಪಾತ್ರವನ್ನು ಒದಗಿಸುತ್ತೇನೆ. 


ಅಮರ-ನಾನು ಕುಪಾತ್ರನು ಹೇಗೆ ? 


ನಾನು-ಮೈ ಮೇಲಿರುವ ಬಟ್ಟಿಯನ್ನು ತೆಗದು ನಿನ್ನ ಬೆನ್ನು ತೋರಿಸು. - 


ಅಮರನಾಥನ ಮುಖವು ಶುಷ್ಕವಾಗಿ ಒಣಗಿಹೋಯಿತು. ಅವನು ದುಃಖಿತ 

ನಾಗಿ, ಛಿ ! ಲವಂಗ ! ಎಂದನು. 


ನನಗೆ ದುಃಖವಾಯಿತು. ಆದರೆ ದುಃಖ ನೋಡಿ ಹಿಂದಿನ ಕಾಲದ್ದು ಮರೆಯ 

ಲಿಲ್ಲ, ನಾನು ಒಂದು ಕಥೆಯನ್ನು ಹೇಳುತ್ತೇನೆ, ಕೇಳುವಿಯಾ ? ಎಂದೆನು. 


ನಾನು ಕಥೆಯನ್ನು ಮರೆಮಾಚಿ ಹೇಳುವೆನೆಂದು ತಿಳಿದು ಅಮರನಾಥನು 

ಕೇಳುವೆನೆಂದನು. 

ನಾನು ಹೇಳತೊಡಗಿದೆನು, ಏನೆಂದರೆ : --


" ಮೊದಲು ಯಾವನಕದಲ್ಲಿ ಜನರು ನನ್ನ ನ್ನು ರೂಪವತಿಯೆಂದು 

ಹೇಳುತ್ತಿದ್ದರು. ” 


ಅಮರ-ಇದು ಕಥೆಯಾದರೆ ನಿಜವಾದುದು ಯಾವುದು ? 


ನಾನು -ಕಡೆಗೂ ಕೇಳು, ಆ ರೂಪವನ್ನು ನೋಡಿ ಒಬ್ಬ ಕಳ್ಳನು ಮುಗ್ಧ 

ನಾಗಿ, ನನ್ನ ತಂದೆಯ ಮನೆಯಲ್ಲಿ ನಾನು ಒಬ್ಬ ಪರಿಚಾಕಳನ್ನು ಸಂಗಡ ಮಲಗಿಸಿ 

ಕೊಂಡು ಮಲಗಿದ್ದ ಕೊಠಡಿ 1 ಸದಾಗಿ ಕನ್ನವನ್ನು ಹಾಕಿದನು. 


ಈ ಕಥೆಯನ್ನು ಹೇಳುವುದಕ್ಕೆ ಪ್ರಾರಂಭಿಸುತ್ತಲೇ ಅಮರನಾಥನು 

ಮೈಯೆಲ್ಲಾ ಬೆವರಿದವನಾಗಿ, ಕ್ಷಮಿಸು, ಕ್ಷಮಿಸು, ಎಂದು ಬೇಡಿಕೊಂಡನು. 


ನಾನು ಮುಂದೆ ಹೇಳತೊಡಗಿದೆನು. ಆ ಕಳ್ಳನು ಆ ಕನ್ನದಲ್ಲಿ ತೂರಿ ನನ್ನ 

ಕೊಠಡಿಯೊಳಗೆ ಪ್ರವೇಶಮಾಡಿದನು. ಕೊಠಡಿಯಲ್ಲಿ ದೀಪವು ಉರಿಯುತಲಿತ್ತು, 

------------------------------------------

92 ರಜನೀ  


ನಾನು ಕಳ್ಳನನ್ನು ಗುರ್ತಿಸಿದೆನು, ಭಯಪಟ್ಟು ಪರಿಚಾರಿಕೆಯನ್ನು ಎಬ್ಬಿಸಿದೆನು. 

ಅವಳಿಗೆ ಕಳ್ಳನ ಗುರುತು ಇರಲಿಲ್ಲ. ನಾನು ಯತ್ನವಿಲ್ಲದೆ ಕಳ್ಳನನ್ನು ಒಳ್ಳೆಯ 

ಮಾತನ್ನು ಹೇಳಿ ಮುಂಚದಮೇಲೆ ಕೂಡಿಸಿದೆನು. " 


ಅಮರ-ಕ್ಷಮಿಸು, ನಾನು ಅದೆಲ್ಲ ಬಲ್ಲೆನು. 


ನಾನು ಒಂದುಸಲ ಜ್ಞಾಪಕಕ್ಕೆ ತರುವುದು ಒಳ್ಳೆಯದೆಂದು ಯೋಚಿಸಿ 

ಮುಂದೆ ಹೇಳತೊಡಗಿದೆನು,  " ಅನಂತರ ಒಂದು ಕ್ಷಣದಮೇಲೆ ಕಳ್ಳನಿಗೆ ಗೊತ್ತಾಗದೆ 

ನನ್ನ ಸಂಕೇತಾನುಸಾರವಾಗಿ ಪರಿಚಾರಕಳು ಹೊರಗೆ ಹೋಗಿ ಪಹರೆಯವನನ್ನು 

ಕರೆದು ಕನ್ನದ ಹತ್ತಿರ ಹೊರಗಡೆ ನಿಲ್ಲಿಸಿದಳು. ನನಗೆ ಅದು ಗೊತ್ತಾಗಿ ಸ್ವಲ್ಪ 

ಕೆಲಸವಿದೆಯೆಂದು ಹೇಳಿ ಹೊರಗೆ ಹೋಗಿ ಚಿಕ್ಕವನೆದು ಬಾಗಲಿನ ಹೊರಗಿನ ಚಿಲಕ 

ವನ್ನು ಹಾಕಿಕೊಂಡೆನು, ” ಇಷ್ಟು ಹೇಳಿ ಕೆಟ್ಟ ಕೆಲಸವಾಯಿತೇನು ? ಎಂದೆನು, 


ಅಮರ-ಈ ಮಾತುಗಳೆಲ್ಲ ಏತಕ್ಕೆ ? 


ನಾನು-ಕಡೆಗೆ ಕಳ್ಳನು ಹೊರಗೆ ಬಂದುದು ಹೇಗೆ ? ಹೇಳು. ನೆರೆಹೊರೆಯ 

ಜನರನ್ನೆಲ್ಲಾ ಕರೆದು ಗುಂಪು ಸೇರಿಸಿದೆನು. ಒಳ್ಳೆ ಬಲಿಷ್ಟರು ಬಂದು ಕಳ್ಳನನ್ನು 

ಹಿಡಿದುಕೊಂಡರು. ಕಳ್ಳನು ಲಜ್ಜೆ'ಯಿಂದ ಮುಖಕ್ಕೆ ಬಟ್ಟೆಯನ್ನು ಹಾಕಿ ಮುಚ್ಚಿ 

ಕೊಂಡನು, ನಾನು ದಯಮಾಡಿ ಆ ಮುಖದ ಬಟ್ಟೆ ಯನ್ನು ತೆಗಿಸಲಿಲ್ಲ. ಆದರೆ 

ನಾನೇ ಬಂದು ಕಬ್ಬಿಣದ ಸಲಾಕಿಯನ್ನು ಚೆನ್ನಾಗಿ ಕಾಸಿ ಅವನ ಬೆನ್ನಿನಮೇಲೆ ಬರೆ 

ಯನ್ನು ಹಾಕಿ ಒಂದೆನು. ಏನೆಂದು ? 

" ಕಳ್ಳ "--ಎಂದು. 


ಅಮರನಾಥನು ಅತ್ಯಂತ ಬಿಸಲು ಕಾಲದಲ್ಲಿಯ ಕವಚವನ್ನು ಹಾಕಿ 

ಕೊಳ್ಳದೆ ಮಲಗುವುದಿಲ್ಲ ವೇತಕ್ಕೆ ? ಎಂದು ಕೇಳಿದೆನು. 


ಅಮರ...ಇಲ್ಲ. 


ನಾನು-ಲವಂಗಲತೆಯ ಹಸ್ತಾಕ್ಷರವು ಅಳಿಸಿಹೋಗುವುದಿಲ್ಲ. 


ನಾನು ರಜನಿಯನ್ನು ಕರೆದು ಅವಳಿಗೆ ಈ ಕಥೆಯನ್ನು ಹೇಳಬೇಕೆಂದು ಇಷ್ಟ 

ವಿತ್ತು. ಆದರೆ ಕೇಳುವುದಿಲ್ಲ. ನೀನು ರಜನಿಗೆ ಯೋಗ್ಯನಲ್ಲ. ಅವಳನ್ನು ಮದುವೆ 

ಮಾಡಿಕೊಳ್ಳುವ ಪ್ರಯತ್ನ ಮಾಡಬೇಡ ; ಹಾಗೆ ಸುಮ್ಮನೆ ಕ್ಷಾಂತನಾಗದಿದ್ದರೆ, 

ಆಗವಳಿಗೆ ಹೇಳಬೇಕಾಗುತ್ತದೆಂದು ಅಮರನಾಥನಿಗೆ ಹೇಳಿದೆನು. 

-------------------------------------------- 

ಐದನೆಯ ಪರಿಚ್ಛೇದ 93 


ಅಮರನಾಥನು ಸ್ವಲ್ಪ ಹೊತ್ತು ಯೋಚಿಸಿ ದುಃಖಭಾವದಿಂದ, ತಿಳಿಸಬೇಕಾದರೆ 

ತಿಳಿಸು ; ನೀನು ತಿಳಿಸಿದರೂ, ತಿಳಿಸದಿದ್ದರೂ ನಾನೇ ಈಹೊತ್ತು ಇದನ್ನೆಲ್ಲ ಅವಳಿಗೆ 

ತಿಳಿಸುವೆನು. ಅವಳು ನನ್ನ ಗುಣಗಳನ್ನೂ ದೋಷಗಳನ್ನೂ ತಿಳಿದವಳಾಗಿ ನನ್ನನ್ನು 

ಪರಿಗೃಹಿಸುವವಳಾಗಿದ್ದರೆ ಪರಿಗೃಹಿಸಲಿ; ಇಲ್ಲವಾದರೆ ಬಿಡಲಿ ; ನಾನವಳಿಗೆ ವಂಚಿಸು 

ವುದಿಲ್ಲವೆಂದು ಹೇಳಿದನು. 

 

ನಾನು ಸೋತುಹೋದವಳಾಗಿ ಮನಸ್ಸಿನಲ್ಲಿ ಅಮರನಾಥನಿಗೆ ಅನೇಕ ವಿಧವಾಗಿ 

ಧನ್ಯನೆಂದು ಹೇಳಿ ಹರ್ಷವಿವಾದಗಳಿ೦ದ ವಿಕಲಚಿತ್ತಳಾಗಿ ಹಿಂದಿರುಗಿ ಮನೆಗೆ ಬಂದು 

ಬಿಟ್ಟೆನು. 

.....

ಐದನೆಯ ಪರಿಚ್ಛೇದ. 

ಶಚೀಂದ್ರನ ಹೇಳಿಕೆ. 

ಐಶ್ವರ್ಯವನ್ನು ಕಳೆದುಕೊಂಡವನಾಗಿ ಕೆಲದಿನಗಳನಂತರ ಸ್ವಲ್ಪ ಆಲಸ್ಯದಿಂದ 

ಪೀಡಿತನಾಗಿದ್ದೆನು. ಐಶ್ವರ್ಯದಿಂದ ದಾರಿದ್ರಕ್ಕೆ ಬಂದ ಕೊರತೆಯಿಂದ ಮನಸ್ಸಿಗೆ 

ವಿಕಾರವುಂಟಾಯಿತು. ಎಂತಹ ಕಾಯಿಲೆಯುಂಟಾಯಿತೆಂಬುದನ್ನು ವಿವರಿಸಿ ಹೇಳಲು 

ಪ್ರಯತ್ನ ಪಡುವುದಿಲ್ಲ. ಕೇವಲ ಆ ಕಯಿಲೆಯ ಲಕ್ಷಣಗಳನ್ನು ಮಾತ್ರ ತಿಳಿಸುವೆನು, 


ಸಾಯಂಕಾಲವಾಗುವುದಕ್ಕೆ ಮೊದಲು ಅಂದರೆ ಬಿಸಿಲಿನ ತಾಪವು ಕಡಮೆ 

ಯಾದಮೇಲೆ ಮಹಡಿಯ ಮೇಲೆ ಓದುತ್ತಲಿರುವೆನು, ಹಗಲೆಲ್ಲ ಓದುತಿದ್ದೆನು. 

ಪ್ರಪಂಚದ ಗೂಢವಾದ ತತ್ವಗಳನ್ನೆಲ್ಲ ಆಲೋಚಿಸುತ್ತಲಿರುವೆನು. ಆದರೆ ಅದರ 

ಯಾವ ಮರ್ಮವನ್ನೂ ಅರಿಯಲಾರೆನು, ಯಾವದರ ಉದ್ದೇಶ್ಯವೂ ಗೊತ್ತಾಗುತ್ತಿರ 

ಲಿಲ್ಲ. ಎಷ್ಟು ಓದಿದರೂ ಓದಬೇಕೆಂಬ ಆಶೆಯಿರುವುದು, ಕಡೆಗೆ ಒಂದುದಿನ ಶ್ರಾಂತಿ 

ಯುಂಟಾಗಿ ಪುಸ್ತಕವನ್ನು ಮುಚ್ಚಿ ಬಿಟ್ಟ ಕೈಲಿಟ್ಟು ಕೊಂಡು ಹಾಗೆಯೇ ಯೋಚಿಸಿ 

ದೆನು. ಹಾಗೆಯೇ ನಿದ್ರೆಯು ಬಂತು ನಿದ್ರೆಯ ಅಲ್ಲ-ಅದು ಮೋಹ-ನಿದ್ರೆಯ 

ಹಾಗೆ ಸುಖಕರವಾಗಿ ತೃಪ್ತಿಜನಕವಾದುದಲ್ಲ. ಕ್ಲಾಂತವಾದ ಹಸ್ತದಿಂದ ಪುಸ್ತಕವು 

ಜರಿದುಬಿದ್ದು ಹೋಯಿತು. ಕಣ್ಣುಗಳನ್ನು ತೆರೆದುಕೊಂಡು ನೋಡುತ್ತಲೇ ಇದ್ದೆನು, 

ಬಾಹ್ಯವಸ್ತುಗಳನ್ನೆಲ್ಲಾ ನೋಡುತಲಿರುವೆನು. ಆದರೆ ನೋಡಿದುದು ಇಂತಹದುದೆಂದು 

ಹೇಳುವುದಕ್ಕಾಗುತ್ತಿರಲಿಲ್ಲ. ಅಕಸ್ಮಾತ್ ಅಲ್ಲಿ ಪ್ರಭಾತದ ತರಂಗವಿಕ್ಷೇಪದಿಂದ 

-------------------------------------------------

94 ರಜನೀ 

 

ಚಪಲವಾದ ಕಲಕಲ ನಾದ ಮಾಡುವ ನದಿಯು ವಿಸ್ತೃತವಾದುದನ್ನು ನೋಡಿದೆನು. 

ಅಲ್ಲಿ ಉಪಾವಿನ ಉಜ್ವಲವಾದ ವರ್ಣದಿಂದ ಪೂರ್ವದಿಕ್ಕು ಪ್ರಭಾಸಿತವಾದಹಾಗಾ 

ಯಿತು, ಹಾಗೆಯೇ ನೋಡುತ್ತಿದ್ದಹಾಗೆ ಗಂಗಾಪ್ರವಾಹದ ಮಧ್ಯದಲ್ಲಿ ಮರಳು 

ದಿಬ್ಬದ ಅಂಚಿನಲ್ಲಿ ರಜನಿ ! ರಜನಿಯು ನೀರಿನಲ್ಲಿ ಇಳಿಯುತ್ತಾಳೆ. ಮೆಲ್ಲ ಮೆಲ್ಲಗೆ 

ಇಳಿಯುತ್ತಾಳೆ, ಅಂಧಳು ! ಹಬ್ಬು ಕುಂಚಿತವಾಗಿದೆ; ವಿಕಲಳಾಗಿದ್ದರೂ ಸ್ಥಿರಳಾಗಿ 

ದ್ದಾಳೆ, ಆ ಪ್ರಭಾತದ ಶಾ೦ತಿಯಾದ ಸೀತಲವಾದ ಭಾಗೀರಥಿಯಹಾಗೆ ಗಂಭೀರ 

ಳಾಗಿ, ಧೀರಳಾಗಿದ್ದಾಳೆ ; ಆ ಭಾಗಿರಥಿಯ ಹಾಗೆ ಒಳಗಡೆ ದುರ್ಜಯವಾಗಿ ವೆಂಗಶಾ 

ಲಿನಿಯಾಗಿದ್ದಾಳೆ, ಮೆಲ್ಲ ಮೆಲ್ಲಗೆ ನೀರಿನಲ್ಲಿ ಇಳಿಯುತ್ತಾಳೆ ನೋಡಲಾಗಿ ಎಷ್ಟು 

ಸುಂದರಳಾಗಿದ್ದಾಳೆ ! ರಜನಿ, ಏನು ಸು೦ದಿರಿ ! ವೃಕ್ಷದಿಂದ ನವಮಂಜರಿಯ 

(ಹೊಸಪುಷ್ಪಗುಚ್ಛದ ಸುಗಂಧದಹಾಗೆ ದೂರದಿಂದ ಕೇಳಿ ಬರುವ ಸಂಗೀತದ 

ಕಡೆಯಭಾಗದ ಹಾಗೆ ರಜನಿಯ ನೀರಿನಲ್ಲಿ ಮೆಲ್ಲಗೆ ಇಳಿಯುತ್ತಾಳೆ !ಮೆಲ್ಲಗೆ, 

ರಜನಿ ! ಮೆಲ್ಲಗೆ, ನಾನು ನಿನ್ನನ್ನು ನೋಡುತಲಿದ್ದೇನೆ, ಆಗ ಅನಾದರದಿಂದ ನೋಡ 

ಲಿಲ್ಲ. ಈಗ ಒಂದುಸಲ ಚೆನ್ನಾಗಿ ನೋಡುತ್ತೇನೆ, ಮೆಲ್ಲಗೆ ! ಮೆಲ್ಲಗೆ ! 


ನನಗೆ ಮೂರ್ಛೆಯುಂಟಾಯಿತು. ಮೂರ್ಛೆಯ ಲಕ್ಷಣಗಳೆಲ್ಲ ನನಗೆ 

ಗೊತ್ತಿಲ್ಲ. ಅನಂತರ ಕೇಳಿದುದನ್ನು ಹೇಳಿ ಫಲವೆನೂ ಇಲ್ಲ. ನನಗೆ ಪುನಃ ಚೇತನ 

ಬಂದಾಗ ರಾತ್ರಿಕಾಲವಾಗಿತ್ತು. ನನ್ನ ಹತ್ತಿರ ಅನೇಕ ಜನರಿದ್ದರು, ಆದರೆ ನಾನು 

ಅವರನ್ನೆಲ್ಲ ನೋಡಲಿಲ್ಲ. ನಾನು ನೋಡಿದುದು ಕೇವಲ ಆ ಮೃದುನಾದಿನಿಯಾದ 

ಗಂಗೆ, ಮತ್ತು ಆ ಮೃದುಗಾಮಿಸಿಯಾದ ರಜನಿ ; ಮೆಲ್ಲ ಮೆಲ್ಲಗೆ ನೀರಿನಲ್ಲಿಳಿಯು 

ತ್ತಾಳೆ, ಕಣ್ಣು ಮುಚ್ಚಿಕೊಂಡೆನು. ಆಗ ಆ ಗಂಗೆ, ಆ ರಜನಿ ! ತಿರುಗಿ ಕಣ್ಣು 

ಬಿಟ್ಟು ನೋಡಿದೆ ; ಅದೇ ಗಂಗೆ, ಅದೇ ರಜನಿ ! ಬೇರೇ ಕಡೆ ನೋಡಿದೆ ; ಪುನಃ ಅದೇ 

ಗಂಗೆ, ಅದೇ ರಜನಿ. ನೀರಿನಲ್ಲಿ ಮೆಲ್ಲ ಮೆಲ್ಲಗೆ ಇಳಿಯುತ್ತಾಳೆ. ಮೇಲಕ್ಕೆ ತಲೆಯೆತ್ತಿ 

ನೋಡಿದೆ ಮೇಲೆಯೂ ಆಕಾಶವಿಹಾರಿಣಿಯಾದ ಗಂಗೆಯು ಮೆಲ್ಲ ಮೆಲ್ಲಗೆ ಪ್ರವಹಿ 

ಸುತ್ತಾಳೆ, ಮತ್ತು ಆಕಾಶವಿಹಾರಿಣಿಯಾದ ರಜನಿಯು ಮೆಲ್ಲ ಮೆಲ್ಲಗೆ ಇಳಿಯು 

ತ್ತಾಳೆ, ಬೇರೆಕಡೆಗೆ ತಿರುಗಿಕೊಂಡೆ ; ಆದರೂ ಅದೇ ಗಂಗೆ, ಅದೇ ರಜನಿ ! ನಾನು 

ನಿರಸ್ತನಾದೆ. ಚಿಕಿತ್ಸಕರು ನನಗೆ ಚಿಕಿತ್ಸೆಯನ್ನು ಮಾಡಲಾರಂಭಿಸಿದರು. 


ನನಗೆ ಅನೇಕ ದಿನಗಳವರೆಗೂ ಚಿಕಿತ್ಸೆಗಳನ್ನು ಮಾಡಿದರು. ಆದರೆ ನನ್ನ 

ನಯನಾಗ್ರದಿಂದ ರಜನಿಯ ರೂಪವು ಎಳ್ಳಷ್ಟಾದರೂ ಅಂತರ್ಹಿತವಾಗಲಿಲ್ಲ. ಚಿಕಿತ್ಸ 

------------------------------------------------- 

ಆರನೆಯ ಪರಿಚ್ಛೇದ 95 

 

ಕರು ನನಗೆ ಯಾವ ರೋಗವೆಂದು ತಿಳಿದು ಚಿಕಿತ್ಸೆಯನ್ನು ಮಾಡುತಲಿದ್ದರೋ 

ನನಗೆ ಗೊತ್ತಾಗಲಿಲ್ಲ. ನನ್ನ ಕಣ್ಣುಗಳಿದಿರಿಗೆ ಕುಣಿಯುತಲಿದ್ದ ರೂಪವನ್ನು ಕುರಿತು 

ನಾನು ಯಾರಿಗೂ ಹೇಳಲಿಲ್ಲ. 

...... 

ಆರನೆಯ ಪರಿಚ್ಛೇದ. 


ಶಚೀಂದ್ರನ ಹೇಳಿಕೆ. 


ಓಹೊ ! ಮೆಲ್ಲಗೆ, ರಜನಿ, ಮೆಲ್ಲಗೆ ! ಮೆಲ್ಲಗೆ ಮೆಲ್ಲಗೆ ನನ್ನ ಹೃದಯ 

ಮಂದಿರದಲ್ಲಿ ಪ್ರವೇಶಮಾಡು ! ಇಷ್ಟು ದ್ರುತಗಾಮಿನಿಯಾಗುವುದೇತಕ್ಕೆ ? ನೀನು 

ಅಂಧಳು, ಮಾರ್ಗವು ಗೊತ್ತಿಲ್ಲ. ಮೆಲ್ಲಗೆ, ರಜನಿ, ಮೆಲ್ಲಗೆ ! ಅಲ್ಪವಾದ ಈ 

ಪುರಿಯು ಕತ್ತಲೆ, ಶುದ್ಧ ಕತ್ತಲೆ, ! ಚಿರಾಂಧಕಾರವಾಗಿದೆ ! ಬೆಂಕಿಕಡ್ಡಿಯ ಹಾಗೆ 

ಇದನ್ನು ಪ್ರವೇಶಮಾಡಿ ಬೆಳಕು ಮಾತು ; ದೀಪದಕಡ್ಡಿಯಹಾಗೆ ನೀನು ಉರಿಯುತ್ತಿ; 

ಆದರೆ ಈ ಅಂಧಕಾರಮಯವಾದ ಪುರಿಯನ್ನು ಬೆಳಕು ಮಾಡುವಿಯೆ ! 


ಓಹೋ  ! ಮೆಲ್ಲಗೆ, ರಜನಿ, ಮೆಲ್ಲಗೆ ! ಈ ಪುರಿಯನ್ನು ಬೆಳಕು ಮಾಡು.

ಆದರೆ ಸುಡುವುದೇಕೆ ? ಶೀತಲವಾದ ಶಿಲೆಯು ಕೂಡ ಸುಡುವುದೆಂದು ಯಾರಿಗೆ 

ಗೊತ್ತು ? ನೀನೋ, ಪಷಾಣಘಟಿತಳೆಂತ, ಪಾಷಾಣಮಯಿಯೆಂತಲೂ ಬಲ್ಲೆನು. 

ಈ ಪಾಷಾಣವೂ ಕಡ ಸುಡುವುದೆಂದು ಯಾರು ಬಲ್ಲರು ? ಅಥವಾ ಪಾಷಾಣವೂ 

ಕೂಡ ಲೋಹಸಂಘರ್ಷಣದಿಂದ ಬೆಂಕಿಯನ್ನುಂಟುಮಾಡುತ್ತದೋ ? ಯಾರು 

ಬಲ್ಲರು ? ನಿನ್ನ ಪ್ರಸ್ತರದಂತಹ ಧವಳವೂ ಸ್ನಿಗ್ಧವಾದ ಪ್ರಸ್ತರದ ದರ್ಶನವೂ, 

ಪ್ರಸ್ತರದಿಂದ ಘಟಿತವದಹಾಗೆ ಇರುವ ಮೂರ್ತಿಯೂ. ಇವುಗಳನ್ನೆಲ್ಲ ನೋಡಿದ 

ಹಾಗೆಲ್ಲಾ ಹೆಚ್ಚು ನೋಡಬೇಕೆಂದು ಇಚ್ಛೆಯುಂಟಾಗುತ್ತದೆ. ನಿತ್ಯವೂ ನೋಡುತ 

ಲಿದ್ದರೂ ಪಲಕಪಲಕದಲ್ಲಿಯೂ ನೋಡಿದ್ದರೂ ನೋಡಿದೆನೆ ? ಎಂದು ಅನುಮಾನ 

ದಿಂದ ಪುನಃ ನೋಡಬೇಕೆಂದು ಇಷ್ಟವುಂಟಾಗುತ್ತದೆ. ಪುನಃ ಪುನಃ ನೋಡುತ್ತಲಿ 

ದರೂ ಆಶೆಯು ದಣಿಯುವುದಿಲ್ಲ. 

 

- ಈ ಆಲಸ್ಯದಲ್ಲಿ ನಾನು ಯಾರಸಂಗಡ ಮಾತನಾಡುತ್ತಿರಲಿಲ್ಲ. ಯಾರು 

ಬಂದು ಮಾತನಾಡಿದರೂ ಇಷ್ಟವಾಗದು. ರಜನಿಯ ಮಾತು ಬಾಯಿಯಿಂದ 

--------------------------------------------

96 ರಜನೀ 

••••••••••••.............................

 

ಯಾರಿಗೂ ಹೇಳುತ್ತಿರಲಿಲ್ಲ. ಆದರೆ ಕಳವಳದಲ್ಲಿ ಏನಾದರೂ ಹೇಳುತ್ತಿದ್ದೆನೋ ಅದು 

ಈಗ ಜ್ಞಾಪಕವಿಲ್ಲ. ಯಾವಾಗ ಕಳವಳವೇ ಇರುವುದು. 


ಹಾಸಿಗೆಯನ್ನು ಬಿಡುತ್ತಲೇ ಇರಲಿಲ್ಲ. ಮಲಗಿ ಮಲಗಿ ಏನೇನು ನೋಡುತ 

ಲಿದ್ದೆನೋ ಅದನ್ನು ಹೇಳಲಾರೆನು, ಒಂದೊಂದುಸಲ ಯುದ್ಧ ಕ್ಷೇತ್ರದಲ್ಲಿ ಯವನರು 

ಸೋತುಹೋದಹಾಗೆ ಕಾಣುತ್ತಲಿತ್ತು. ರಕ್ತದ ನದಿಯು ಪ್ರವಹಿಸುವುದು, ಸುವರ್ಣದ 

ಪ್ರಾಂತರದಲ್ಲಿ ವಜ್ರಖಚಿತವಾದ ವೃಕ್ಷಗಳಲ್ಲಿ ಗೊಂಚಲುಗೊಂಚಲಾಗಿ ನಕ್ಷತ್ರಗಳು 

ಬಿಟ್ಟಿರುವಹಾಗೆ ಕಾಣುತಲಿತ್ತು, ಒಂದೊಂದುಸಲ ಆಕಾಶಮಾರ್ಗದಲ್ಲಿ ಅಷ್ಟ ಶಶಿ 

ಸಮನ್ವಿತವಾದ (With eight moons) ಶನಿಗ್ರಹವು ಚತುಶ್ಚಂದ್ರವಾಹಿನಿಯಾದ 

(With four moons) ಬೃಹಸ್ಪತಿಯಮೇಲೆ ಮಹಾ ವೇಗದಿಂದ ಬಿದ್ದು ಗ್ರಹ 

ಗಳ ಉಪಗ್ರಹಗಳೂ ಸಹ ಖಂಡಖಂಡವಾಗಿ ಒಡದು ಪರಸ್ಪರ ಆಘಾತದಿಂದುಂ 

ಟಾದ ಬೆಂಕಿಯಿಂದ ಅವೆಲ್ಲ ಉರಿಯುತಿದ್ದ ಹಾಗೆ ಅತಿ ವೇಗದಿಂದ ಭೂಮಂಡಲದ 

ಸುತ್ತಲೂ ಬಂದು ಬೀಳುವಹಾಗೆ ಕಾಣಿಸುವುದು. ಒಂದೊಂದುಸಲ ಈ ಜಗತ್ತೆಲ್ಲ 

ಜ್ಯೋತಿರ್ಮಯವಾದ ಕಾಂತಿಯುಳ್ಳ ರೂಪಧಾರಿಗಳಾದ ದೇವತೆಗಳಿಂದ ಪರಿಪೂರ್ಣ 

ವಾಗಿ ಅವರು ಆಕಾಶಮಾರ್ಗದಲ್ಲಿ ಸಂಚಾರ ಮಾಡುತ್ತ, ಅವರ ದೇಹದ ಸುಗಂಧವು 

ನನ್ನ ಮೂಗಿಲ್ಲಿ ತುಂಬುವುದು ; ಆದರೆ ಅವರಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸದೆ 

ಅವರ ಮಧ್ಯದಲ್ಲಿ ರಜನಿಯು ಮಾತ್ರ ಕಣ್ಣಿಗೆ ಬೀಳುವಳು, ಹಾ ! ರಜನಿ ! ಕಲ್ಲಿನಲ್ಲಿ 

ಇಷ್ಟು ಬೆಂಕಿಯುಂಟೆ ! 

 

ಮೆಲ್ಲಗೆ, ರಜನಿ, ಮೆಲ್ಲಗೆ ! ಮೆಲ್ಲ ಮೆಲ್ಲಗೆ ಈ ಅಂಧನಯನಗಳನ್ನು ವಿಕಸಿತ 

ಮಾಡು, ನೋಡು, ನನ್ನನ್ನು ನೋಡು, ನಾನು ನಿನ್ನನ್ನು ನೋಡುತ್ತೇನೆ ! ಇಗೋ, 

ನೋಡತ್ತೇನೆ, ನಿನ್ನ ನಯನಪದ್ಮವು ಕ್ರಮವಾಗಿ ಅರಳುವಹಾಗಿದೆ. ಮೆಲ್ಲ ಮೆಲ್ಲಗೆ 

ಕ್ರಮಕ್ರಮವಾಗಿ ನಯನ ರಾಜೀವವು ಅರಳುವಹಾಗೆ ಕಾಣುತ್ತದೆ ! ಈ ಪ್ರಪಂಚದಲ್ಲಿ 

ಯಾರಿಗೆ ತಾನೇ ಕಣ್ಣಿಲ್ಲ, ದನ, ಮೇಕೆ, ನಾಯಿ, ಬೆಕ್ಕು ಎಲ್ಲದಕ್ಕೂ ಕಣ್ಣುಂಟು. 

ನಿನಗೆ ಇಲ್ಲ ವೆ? ಇಲ್ಲ. ಇಲ್ಲ. ಹಾಗಾದರೆ ನನಗೂ ಇಲ್ಲ. ನಾನೂ ಇನ್ನು 

ಕಣ್ಣುಗಳನ್ನ ಸೇಕ್ಷಿಸುವುದಿಲ್ಲ, 

.........

-----------------------------------------------

ಏಳನೆಯ ಪರಿಚ್ಛೇದ. 


ಲವಂಗಲತೆಯ ಹೇಳಿಕೆ. 


ಗೊತ್ತಾಯಿತು. ಶಚೀಂದ್ರನು ಏನೇನು ಮಾಡಿಬಿಡುತ್ತಾನೋ, ದೇವರು 

ಕಾಪಾಡಬೇಕು-ಹುಡುಗ ! ಈ ವಯಸ್ಸಿನಲ್ಲಿ ಇಷ್ಟು ಕಳವಳವುಂಟೆ ! ಅಕ್ಕನಾ 

ದರೋ, ಒಂದು ತಡವೆಯಾದರೂ ಇತ್ತ ಕಡೆ ತಿರುಗಿ ನೋಡುವುದಿಲ್ಲ. ನಾನು ಹೇಳುವು 

ದಕ್ಕೆ ಹೋದರೆ ಬಲತಾಯಿಯೆಂದು ಅದು ಲಕ್ಷ್ಯಕ್ಕೆ ಬರುವುದಿಲ್ಲ. ಅದೆಲ್ಲಾ 

ಹುಡುಗನಿಗೆ ಹೇಳಿ ಪೂರೈಸುವುದು ಬಹಳ ಕಷ್ಟ, ಎಲ್ಲ ನನ್ನ ಮೇಲೆ ಬಿದ್ದಿದೆ. 

ಡಾಕ್ಟರನ ಔಷಧದಿಂದ ಏನೂ ಗುಣವಿಲ್ಲ. ಆಗುವಹಾಗೆ ಇಲ್ಲ. ಅವರಿಗೆ ರೋಗ 

ನಿರ್ಣಯ ಮಾಡುವುದೇ ಗೊತ್ತಿಲ್ಲ. ರೋಗವಿರುವುದು ಮನಸ್ಸಿನಲ್ಲಿ ಕೈ, ಕಣ್ಣು, 

ನಾಲಿಗೆ ನೋಡಿದರೆ ಏನುತಾನೇ ತಿಳಿಯುವುದು ? ನನ್ನ ಹಾಗೆ ಅವರೂ ಮರೆಯಲ್ಲಿ 

ಕುಳಿತುಕೊಂಡು ಹುಡುಗನ ಚರ್ಯವನ್ನೆಲ್ಲ ನೋಡಿದರೆ ಏನಾದರೂ ರೋಗ ರುಜನ 

ಗೊತ್ತಾದೀತು. ಅದೇನೂ ಇಲ್ಲ. 

 

ಹುಡುಗನಾದರೊ, " ಮೆಲ್ಲಗೆ, ರಜನಿ ! ” ಎಂದು ಕಳವಳಪಡುತ್ತಾನೆ. 

ಅದೂ ಅವನೊಬ್ಬನೇ ಇದ್ದಾಗ ಆ ಮಾತು ಬಾಯಿಯಿಂದ ಹೊರಡುತ್ತೆ. ಹೀಗೆ ದಿನ 

ಕಳೆದರೆ ಹುಡುಗನೇನಾಗಬೇಕು ! ಸನ್ಯಾಸಿಯ ಔಷಧವು ಹೀಗೆ ಫಲಿಸಿತೆ ! ನಾನು 

ಹಾಳಾಗುವುದಕ್ಕೆ ಏತಕ್ಕೆ ಈ ಕೆಲಸ ಮಾಡಿದೆನೋ ! ಒಳ್ಳೇದು, ರಜನಿಯನ್ನು 

ಒಂದುಸಲ ಸನ್ಯಾಸಿಯ ಹತ್ತಿರ ಕರೆತಂದು ಕೂಡಿಸಿ ನೋಡಲೆ ? ಏನಾದೀತೋ, 

ನೋಡೋಣ ನಾನು ಒಂದುಸಲ ರಜನಿಯ ಮನೆಗೆ ಹೋಗಿದ್ದೆ, ಅವಳು ಅದು 

ಮೊದಲು ನಮ್ಮ ಮನೆಗೆ ಒಂದು ತಡವೆಯಾದರೂ ಬಂದಿಲ್ಲ ! ಕರೆಸಿದರೆ ಬಾರದೆ 

ಇರಲಾರಳು. ಹೀಗೆಂದು ಯೋಚಿಸಿ ಅವಳ ಮನೆಗೆ ಆಳನ್ನು ಕಳುಹಿಸಿದನು. ಸ್ವಲ್ಪ 

ಮಾತನಾಡುವುದು ಬಹಳ ಅವಶ್ಯವಾಗಿದೆ, ಬಂದು ಹೋಗಬೇಕೆಂದು ಅವನ ಸಂಗಡ 

ಹೇಳಿಕಳುಹಿಸಿದನು. 


ಮನಸ್ಸಿನಲ್ಲಿ ಮೊದಲು ಶಚೀಂದ್ರನ ಹತ್ತಿರ ರಜನಿಯ ಮಾತು ಎತ್ತಿ ನೋಡಿ 

ದರೆ, ಅವಳ ಸಂಬಂಧವಾದ ಮನೋರೋಗವಿದ್ದರೆ ಅದು ಹೊರಪಡುವುದೆಂದು 

ಯೋಚಿಸಿ ನಿಜಾಂಶವನ್ನು ತಿಳಿಯುವುದಕೋಸ್ಕರ ಶಚೀಂದ್ರನ ಹತ್ತಿರ ಹೋಗಿ 

ಕೂತುಕೊಂಡೆನು, ಆ ಮಾತು ಈ ಮಾತು ಆಡುತ್ತ ಪ್ರಸ್ತಾಪದಮೇಲೆ ರಜನಿಯ 

----------------------------------------- 

98 ರಜನೀ


ಮಾತನ್ನು ಎತ್ತಿದೆ ಅಲ್ಲಿ ಮತ್ಯಾರೂ ಇರಲಿಲ್ಲ. ರಜನಿಯ ಹೆಸರು ಕೇಳುತ್ತಲೇ 

ಹುಡುಗನು ಹಂಸಿಯಹಾಗೆ ಕುತ್ತಿಗೆ ಎತ್ತಿಕೊಂಡು ನನ್ನ ಮುಖವನ್ನು ನೋಡುತ 

ಲಿರುವನು. ನಾನು ರಜನಿಯ ಪ್ರಸ್ತಾಪವನ್ನು ಮಾಡುತ್ತಿದ್ದರೆ ಯಾವುದಕ್ಕೂ ಅವನು 

ಉತ್ತರವನ್ನು ಹೇಳಲಿಲ್ಲ. ಆದರೆ ವ್ಯಾಕುಲವಾದ ಕಣ್ಣುಗಳಿಂದ ನನ್ನನ್ನು ನೋಡುತ್ತ 

ಲಿರುವನು, ಹುಡುಗನು ಬಹಳ ಅಸ್ಥಿರನಾಗುತ್ತ ಬಂದ -ಇಲ್ಲಿ ಬಿದ್ದೇಳುವುದು, ಅಲ್ಲಿ 

ಬಿದ್ದೇಳುವುದು, ಹೀಗೆ ಮಾಡಲಾರಂಭಿಸಿದನು. ಕಡೆಗೆ ನಾನು ರಜನಿಯನ್ನು ತಿರಸ್ಕಾರ 

ಮಾಡುತ್ತ ಬಂದೆನು ಅವಳು ಅತ್ಯಂತ ಧನಲುಬ್ಧಳು, ಅವಳು ನಾವು ಮಾಡಿದುಪ 

ಕಾರಗಳನ್ನು ಸ್ಮರಿಸುವುದು ಕೂಡ ಇಲ್ಲವೆಂದು ಮುಂತಾಗಿ ಹೇಳಿದುದನ್ನು ಕೇಳಿ 

ಶಚೀಂದ್ರನು ಅಪ್ರಸನ್ನ ಭಾವವುಳ್ಳವನಾದನೆಂದು ತೋರಿತು. ಆದರೆ ಯಾವ ಮಾತೂ 

ಬಾಯಿ ಬಿಟ್ಟು ಹೇಳಲಿಲ್ಲ. 


ನಿಶ್ಚಯವಾಗಿ ಇದು ಸಸಿಯ ಮಹಿಮೆಯೆಂದು ತಿಳಿದುಕೊಂಡೆನು. 

ಈಗ ಸನ್ಯಾಸಿಯು ಊರಲ್ಲಿಲ್ಲ. ಅವನು ಬೇಗ ಬರುವುದಾಗಿ ವರ್ತಮಾನವಿತ್ತು. 

ಅವನು ಬರುವುದನ್ನು ನಿರೀಕ್ಷಿಸಿಕೊಂಡಿದ್ದೆವು. ಅಲ್ಲದೆ ಅವನು ತಾನೇ ಬಂದು 

ಮಾಡುವದೇನಂತಲಣ ಯೋಚಿಸಿಕೊಂಡೆನು. ನಾನು ನಿರ್ಬೋಧಳಾದ ಹೆಂಗಸು. 

ಧನಲೋಭದಿಂದ ಹಿಂದುವುದು ನೋಡದೆ ನನಗೇ ನಾನೇ ಈ ವಿಪತ್ತನ್ನು ತಲೆಯ 

ಮೇಲೆ ತಂದಿಟ್ಟುಕೊಂಡಹಾಗಾಯಿತು ? ಆಗ ರಜನಿಯ ನ್ನು ಸೊಸೆಯಾಗಿ ಮೂಡಿ 

ಕೊಳ್ಳಬೇಕೆಂದು ಮನಸ್ಸಿನಲ್ಲಿ ಖಂಡಿತ ಮಾಡಿಕೊಂಡನು. ಅದು ತಾನೇ ಹೇಗೆ 

ಗೊತ್ತು ! ಕುರುಡಿಯಾದ ಹೂವಾಡಗಿತ್ತಿಯ ಕೂಡ ರ್ದರ್ಲಭಳಾದರೆ ಮಾಡುವು 

ದೇನು ? ಏನು ಆಗುವುದೊ ? ಸನ್ಯಾಸಿಯ ಔಷಧವು ಹಿತದಲ್ಲಿ ವಿಪರೀತಕ್ಕೆ ಇಟ್ಟು 

ಬಿಟ್ಟರೆ ಮಾಡುವುದೇನು ? ಹೆಂಗಸಿನ ಬುದ್ದಿ ಅತಿ ಅಲ್ಪವಾದುದು ಎಂದು ಗೊತ್ತಿರ 

ಲಿಲ್ಲ. ನನ್ನ ಬುದ್ಧಿಯ ಅಹಂಕಾರದಿಂದ ನಾನೇ ಮುಣುಗಿದೆ. ನನಗೆ ಇಂತಹ 

ಬುದ್ದಿಯು ಹುಟ್ಟುವುದಕ್ಕೆ ಮುಂಚೆಯೇ ಪ್ರಾಣ ಹೋಗಿದ್ದರೆ ಚೆನ್ನಾಗಿತ್ತು. 

ಈಗಲೂ ಪ್ರಾಣಬಿಡುವುದಕ್ಕೆ ಸಿದ್ಧಳಾಗಿದ್ದೇನೆ. ಆದರೆ ಮಗು ಶಚೀಂದ್ರನ ಆರೋಗ್ಯ 

ಲಾಭವನ್ನು ನೋಡದೆ ಸಾಯಲಾರೆನು.  


ಕೆಲದಿನಗಳಮೇಲೆ ಪೂರ್ವಪರಿಚಿತನಾದ ಆ ಸನ್ಯಾಸಿಯು ಬಂದು, ಶಚೀಂದ್ರನ 

ಅನಾರೋಗ್ಯದ ಸಮಾಚಾರವನ್ನು ಕೇಳಿ ಬಂದೆನೆಂದು ಹೇಳಿದನು. ಅವನಿಗೆ ಈ 

ಸಮಾಚಾರವನ್ನು ಯಾರು ಕೊಟ್ಟರೆ ಗೊತ್ತಾಗಲಿಲ್ಲ. 

-------------------------------------------

ಏಳನೆಯ ಪರಿಚ್ಛೇದ 89 


ಅವನು ಶಚೀಂದ್ರನ ಅನಾರೋಗ್ಯದ ವೃತ್ತಾಂತವನ್ನೆಲ್ಲ ಕೇಳಿ, ಅವನ ಹತ್ತಿರ 

ಹೋಗಿ ಕೂತುಕೊಂಡು ನಾನಾ ಸಂಗತಿಗಳನ್ನು ಕುರಿತು ಮಾತನಾಡಲಾರಂಭಿಸಿ 

ದೆನು. ಅನಂತರ ನಾನು ಸನ್ಯಾಸಿಗೆ ಪ್ರಣಾಮ ಮಾಡಬೇಕೆಂದು ಅವನನ್ನು ಕರೆಸಿ 

ದೆನು. ಕರೆಸಿ ಪ್ರಣಾಮವನ್ನು ಮಾಡಿ, ಕ್ಷೇಮಲಾಭ ಕೇಳಿದಮೇಲೆ, ಸ್ವಾಮಿ ! 

ತಾವು ಸರ್ವಜ್ಞರು ; ತಮಗೆ ತಿಳಿಯದ ತತ್ವವು ಯಾವುದೂ ಇಲ್ಲ ; ಶಚೀಂದ್ರನ 

ರೋಗವು ಇಂತಹದುದೆಂದು ತಮಗೆ ಅವಶ್ಯ ಗೊತ್ತಿರಬೇಕೆಂದೆನು. 

 

ಸನ್ಯಾಸಿ-ಅದು ವಾಯುರೋಗ, ಚಿಕಿತ್ಸೆಯಾಗುವುದು ಅತಿ ಕಷ್ಟ, 


ನಾನು-ಹಾಗಾದರೆ ಶಚೀಂದ್ರನು ಯಾವಾಗಲೂ ರಜನಿಯ ಹೆಸರನ್ನು 

ಹೇಳುತಲಿರುತ್ತಾನೇತಕ್ಕೆ ? 


ಸನ್ಯಾಸಿ-ಅಮ್ಮಾ! ನೀನು ಇನ್ನು ಹುಡುಗಿ, ತಿಳಿಯುವೆ ಹೇಗೆ ? (ಇದೇನು, 

ಹಾಳಾಯಿತು ! ನಾನು ಇನ್ನೂ ಹುಡುಗಿಯೆ ! ನಾನು ಶಚೀಂದ್ರನ ತಾಯಿ !) 

ಅಮ್ಮಾ! ಈ ರೋಗಕ್ಕೆ ಒಂದು ಲಕ್ಷಣವೇನೆಂದರೆ--ಹೃದಯದಲ್ಲಿ ಮರೆಯಾಗಿದ್ದು 

ಅಪರಿಚಿತವಾದ ಭಾವ ಅಥವಾ ಪ್ರವೃತ್ತಿಗಳೆಲ್ಲ ಪ್ರಕಾಶಿತವಾಗಿ ಹೊರಪಡುತ್ತದೆ 

ಯಲ್ಲದೆ, ಅದೆಲ್ಲ ಅತ್ಯಂತ ಬಲವುಳ್ಳದ್ದಾಗಿ ತಲೆಯೆತ್ತಿಕೊಳ್ಳುತ್ತದೆ. ಶಚೀಂದ್ರನು 

ಒಂದು ದಿನ ನನ್ನ ದೈವಜ್ಞ ವಿದ್ಯೆಯನ್ನು ಪರೀಕ್ಷಿಸಬೇಕೆಂದು ಕೇಳಿದನು. ನಾನು 

ಒಂದು ತಂತ್ರವನ್ನು ಅನುಷ್ಠಾನ ಮಾಡಿ ಅವನನ್ನು ಯಾರು ಈ ಪ್ರಪಂಚದಲ್ಲಿ 

ಅತ್ಯಂತವಾಗಿ ಆಂತರ್ಯದಿಂದ ಪ್ರೀತಿಸುವರೋ ಅಂತಹವರನ್ನು ರಾತ್ರಿ ಸ್ವಪ್ನದಲ್ಲಿ 

ನೋಡುವೆಯೆಂದು ಅವನಿಗೆ ಹೇಳಿದೆನು. ಶಚೀಂದ್ರನು ರಾತ್ರಿ ಸ್ವಪ್ನದಲ್ಲಿ ರಜನಿ 

ಯೆಂಬ ಹೆಂಗಸನ್ನು ನೋಡಿದನು. ಸ್ವಭಾವಸಿದ್ಧವಾದ ನಿಯಮವೇನೆಂದರೆ ; ನಾವು 

ನಮ್ಮನ್ನು ಯಾರು ಪ್ರೀತಿಸುತ್ತಾರೆಂದು ತಿಳಿಯುತ್ತೇವೋ ಅವರಲ್ಲಿ ಅನುರಕ್ತರಾಗು 

ತ್ತೇವೆ. ಅದು ಕಾರಣ ಆ ರಾತ್ರಿ ಶಚೀಂದ್ರನ ಮನಸ್ಸಿನಲ್ಲಿ ಅನುರಾಗದ ಬೀಜವು 

ಗೋಪ್ಯವಾಗಿ ನೆಡಲ್ಪಟ್ಟಿತು. ಆದರೆ ರಜನಿಯು ಅ೦ಧಳು, ಅಲ್ಲದೆ ಸಾಮಾನ್ಯ 

ರಾದವರ ಹೆಣ್ಣು ; ಇವೇ ಮುಂತಾದ ಕಾರಣಗಳಿಂದ ಆ ಅನುರಾಗವು ವಿಕಾಸ 

ವಾಗಲಾರದೆ ಹೋಯಿತು. ಅನುರಾಗದ ಲಕ್ಷಣವೇನೆಂದರೆ ; ಮನಸ್ಸಿನಲ್ಲಿ 

ಏನಾದರೂ ಕಂಡುಬಂದರೆ ಶಚೀಂದ್ರನಿಗೆ ಅದು ಗೋಚರವಾಗುವುದಿಲ್ಲ. ಕ್ರಮೇಣ 

ನಿಮಗೆ ದಾರಿದ್ರ್ಯದ ಶಂಕೆಯುಂಟಾಗಿ ಅದರಿಂದ ಪೀಡಿತರಾದಿರಿ.  ಎಲ್ಲರಿಗಿಂತ 

ಶಚೀಂದ್ರನೇ ಆದರಿಂದ ಹೆಚ್ಚು ವೃಧೆಪಟ್ಟನು. ಆ ವ್ಯಧೆಯನ್ನು ಮರೆಯುವುದಕ್ಕೆ 

----------------------------------------------

100 ರಜನೀ

 

ಅವನು ಓದುವುದರಲ್ಲಿ ಕುಳಿತು, ಅನನ್ಯ ಮನಸ್ಸುಳ್ಳವನಾಗಿ ವಿದ್ಯಾಲೋಚನೆಗೆ 

ಪ್ರಾರಂಭಿಸಿದನು. ಆ ವಿದ್ಯಾಲೋಚನೆಯಿಂದ ಹೆಚ್ಚಾಗಿ ಮನಸ್ಸಿಗೆ ಉದ್ಭ್ರಾಂತ 

ವುಂಟಾಯಿತು. ಅದರಿಂದ ಈ ಮಾನಸಿಕವಾದ ರೋಗವುಂಟಾಗಿ ಆ ಮಾನಸಿಕವಾದ 

ರೋಗಾವಲಂಬನೆಯಿಂವ ರಜನಿಯ ಮೇಲಿನ ಆ ವಿಲುಪ್ತವಾಗಿ ಹೋಗಿದ್ದ ಅನು 

ರಾಗವು ಪುನಃ ಪ್ರಸ್ಫುಟಿತವಾಯಿತು. ಆಗ ಶಚೀಂದ್ರನಿಗೆ ಮೊದಲು ಇದ್ದ ಮಾನಸಿಕ 

ವಾದ ಶಕ್ತಿಯು ಹೋಗಿ ತನಗೆ ಯೋಗ್ಯಳಲ್ಲವಾದವಳ ಮೇಲಿನ ಅನುರಾಗವನ್ನು 

ಅಣಗಿಸಲು ಅಸಮರ್ಥನಾಗಿದ್ದನು. ಮಾನಸಿಕವಾದ ರೋಗದಲ್ಲಿ ಲುಪ್ತವಾಗಿರುವ 

ಮಾನಸಿಕಭಾವಗಳು ವಿಕಾಸವಾಗಿ ಹೆಚ್ಚಾಗಿ ತಲೆದೋರಿಸುವುದೆಂದು ಮೊದಲೇ 

ಹೇಳಿದ್ದನಷ್ಟೆ, ಅದು ವಿಕಾರವಾಗಿ ಕಾಣಿಸಿಕೊಳ್ಳುತ್ತದೆ, ಶಚೀಂದ್ರನಿಗೂ ಅದೇ 

ಪ್ರಕಾರ ವಿಕಾರವುಂಟಾಗಿದೆ. 

 

ನಾನು-(ಕಾತರಳಾಗಿ)--'ಇದಕ್ಕೆ ಪ್ರತೀಕಾರ ಮಾಡಲು ಉಪಾಯವೇನು ? 


ಸನ್ಯಾಸಿ--ನಾನು ಡಾಕ್ಷರಿಶಾಸ್ತ್ರವನ್ನೇನೂ ಅರಿಯೆನು. ಅದು ಕಾರಣ 

ಡಾಕ್ಟರಗಳಿಂದ ಈ ರೋಗವು ಉಪಶಮನವಾಗುವುದೋ ಇಲ್ಲವೋ ಹೇಳಲಾರನು. 

ಆದರೆ ಡಾಕ್ಟರುಗಳು ಇಂತಹ ರೋಗವನ್ನು ವಾಸಿಮಾಡಿದರೆಂದು ನಾನೆಂದೂ 

ಕೇಳಲಿಲ್ಲ. 


ನಾನು- ಅನೇಕ ಡಾಕ್ಟರುಗಳು ಬಂದು ನೋಡಿದರು. ಏನೂ ಉಪಕಾರ 

ವಾಗಲಿಲ್ಲ. 


ಸನ್ಯಾಸಿ-ಬೇರೇ ನಮ್ಮ ವೈದ್ಯ ಚಿಕಿತ್ಸಕರಿಂದಲೂ ಏನುಪಕಾರವೂ ಆಗ 

ಲಾರದು. 

 

ನಾನು-ಹಾಗಾದರೆ, ಇದಕ್ಕೇನೂ ಉಪಾಯವೇ ಇಲ್ಲವೆ ? 


ಸನ್ಯಾಸಿ-ಬೇಕಾದರೆ ನಾನು ಔಷಧ ಕೊಟ್ಟು ನೋಡುತ್ತೇನೆ. 


ನಾನು-ತಮ್ಮ ಔಷಧ ಬಿಟ್ಟು ಮತ್ಯಾರ ಔಷಧ ? ತಾವೇ ರಕ್ಷಿಸಬೇಕು ; 

ತಾವೇ ಔಷಧ ಕೊಡಬೇಕು. 


ಸನ್ಯಾಸಿ-ನೀನು ಮನೆಯ ಯಜಮಾನಿ. ನೀನು ಹೇಳಿದರೆ ಸಾಕು, ಔಷಧ 

ವನ್ನು ಕೊಡುತ್ತೇನೆ, ನೀನು ಹೇಳಿದರೆ ಶಚೀಂದ್ರನೂ ಕೇಳುತ್ತಾನೆ. ಔಷಧವನ್ನು 

ಸೇವನೆ ಮಾಡುವನು. ಆದರೆ ಕೇವಲ ಔಷಧದಿಂದಲೇ ಆರೋಗವಾಗುವುದಿಲ್ಲ. 

-------------------------------------------

ಮೊದಲನೆಯ ಪರಿಚ್ಛೇದ 101 

ಮನೋರೋಗಕ್ಕೆ ಮಾನಸಿಕವಾದ ಚಿಕಿತ್ಸೆಯನ್ನೂ ಮಾಡಬೇಕು. 

ರಜನಿಯೂ ಬರಬೇಕಾಗುತ್ತದೆ. 

 

ನಾನು-ರಜನಿಯೂ ಬರುವಳು, ಹೇಳಿಕಳುಹಿಸಿದ್ದೇನೆ. _


ಸನ್ಯಾಸಿ-ಆದರೆ ರಜನಿಯು ಬರುವುದರಿಂದ ಗುಣವಾಗುವುದೊ, ಅಥವಾ 

ಇನ್ನೇನಾದರೂ ಆಗುವದೋ ಅದನ್ನು ಮೊದಲು ಯೋಚಿಸಬೇಕು. ಶಚೀಂದ್ರನಿಗೆ 

ರಜನಿಯಮೇಲೆ ಉಂಟಾಗಿರುವ ಅನುರಾಗವು ಅವನಿಗೆ ಮದುವೆಯಾಗಲು ಅವಳು 

ಅನರ್ಹಳಾಗಿದ್ದು ಅವನು ಈ ರುಗ್ನಾವಸ್ಥೆಯಲ್ಲಿ ಅವಳನ್ನು ನೋಡಿಬಿಟ್ಟರೆ ರೋಗವು 

ನೆಲೆಯಾಗಿ ನಿಂತುಬಿಡುವುದು, ರಜನಿಗೂ ಅವನಿಗೂ ದಾಂಪತ್ಯ ಸಂಬಂಧವು ಆಗದು

 ದಾಗಿದ್ದರೆ ಅವರವರು ನೋಡದಿರುವುದೇ ಒಳ್ಳೇದು. 

 

ನಾನು-ರಜನಿಯು ಬರುವುದು ಒಳ್ಳೇದಾಗಲಿ ಕೆಟ್ಟ ದುದಗಲಿ ಅದನ್ನು 

ವಿಚಾರ ಮಾಡುವದಕ್ಕೆ ಈಗ ಸಮಯವಿಲ್ಲ. ಅಲ್ಲಿ ನೋಡಿ, ಅವಳು ಬರುತ್ತಾಳೆ.  


ಆ ಸಮಯಕ್ಕೆ ಸರಿಯಾಗಿ ಪರಿಚಾರಕಳೊಬ್ಬಳು ರಜನಿಯನ್ನು ಕರೆತಂದಳು. 

ಅಮರನಾಥನು ಶಚೀಂದ್ರನ ಆಲಸ್ಯವನ್ನು ಕೇಳಿ ತಾನೇ ನೋಡುವುದಕ್ಕೆ ಬಂದಿದ್ದನು. 

ಅವನು ರಜನಿಯ ಸಂಗಡಲೇ ಬಂದನು, ತಾನು ಹೊರಗಡೆಗೆ ದಿವಾನಖಾನೆಯಲ್ಲಿ ನಿಂತು 

ಕೊಂಡು, ರಜನಿಯನ್ನು ಪರಿಚಾರಕಳ ಸಂಗಡ ಅಂತಃಪುರಕ್ಕೆ ಕಳುಹಿಸಿದ್ದನು. 

.........

ಐದನೆಯ ಭಾಗ. 

  ....

ಅಮರನಾಥನ ಹೇಳಿಕೆ

ಮೊದಲನೆಯ ಪರಿಚ್ಛೇದ. 

ಈ ಅಂಧಳಾದ ಪುಷ್ಪನಾರಿಯು ಎಂತಹ ಮನಮೋಹಿನಿಯಾದವಳೋ 

ಅದನ್ನು ಹೇಳಲಾರೆನು, ಚಕ್ಷುಗಳಲ್ಲಿ ಕಟಾಕ್ಷವಿಲ್ಲ ; ಆದರೂ ನನ್ನಂತಹ ಸನ್ಯಾಸಿ 

ಯನ್ನೂ ಮೋಹಿತನನ್ನಾಗಿ ಮಾಡಿಬಿಟ್ಟಳು. ನಾನು ಮನಸ್ಸಿನಲ್ಲಿ ಲವಂಗತೆಯ 

ಅನಂತರ ಮತ್ತಾರನ್ನೂ ಪರೀತಿಸಲಾರೆನೆಂದು ತಿಳಿದುಕೊಂಡಿದ್ದೆನು. ಮನುಷ್ಯನಿಗೆ 

---------------------------------------------

102 ರಜನೀ 


ಅನರ್ಥಕವಾದ ಬರೇ ದಂಭ ! ಇತರರ ಮಾತು ಹಾಗಿರಲಿ; ನಾನೇ ಈ ಅಂಧನಾರಿ 

ಯಿಂದ ಮೋಹಿತನಾಗಿ ಹೋಗಿದ್ದೇನೆ. 


ಮೊದಲು ಈ ಜೀವನವು ಅಮಾವಾಸ್ಯದ ರಾತ್ರಿಯ ಸ್ವರೂಪವಾದುದೆಂತlU, 

ಅಂಧಕಾರದಲ್ಲಿಯೇ ಕಾಲಹರಣ ಮಾಡಬೇಕೆಂದು ಸ್ಥಿರಮಾಡಿಕೊಂಡಿದ್ದೆನು. ಇದ್ದ 

ಕ್ಕಿದ್ದ ಹಾಗೆ ಚಂದ್ರೋದಯವಾಯಿತು ! ಈ ಜೀವನವು ಅನಂತವಾದ ಪರವಿಲ್ಲದ 

ಸಮುದ್ರವೆಂತಲೂ, ಈಜಿಯೇ ಪಾರಾಗಿ ತೀರಬೇಕೆಂತಲೂ ಭಾವಿಸಿದ್ದೆನು. ಇದ್ದ 

ಕಿದ್ದ ಹಾಗೆ ಸಮ್ಮುಖದಲ್ಲಿ ಕಟ್ಟಿರುವ ಸುವರ್ಣದ ಸೇತುವೆಯನ್ನು ಕಂಡೆನು. ಮನಸ್ಸಿನಲ್ಲಿ 

ಈ ಮರುಭೂಮಿಯು ಚಿರಕಾಲ ಹೀಗೆಯೇ ದಗ್ಧ ಕ್ಷೇತ್ರವಾಗಿರುವುದೆಂದು ತಿಳಿದಿದ್ದೆನು. 

ರಜನಿಯು ಇದ್ದಕ್ಕಿದ್ದ ಹಾಗೆ ಅಲ್ಲಿ ನಂದನಕಾನನವನ್ನು ತಂದಿಟ್ಟಳು ! ನನ್ನ ಈ

ಸುಖಕ್ಕೆ ಪಾರವೇ ಇಲ್ಲ. ಚಿರಕಾಲ ಅಂಧಕಾರವಾದ ಗುಹಾಮಧ್ಯದಲ್ಲಿ ವಾಸ  

ಮಾಡುತಲಿದ್ದವನನ್ನು ಸೂರ್ಯಕಿರಣಗಳಿಂದ ಸಮುಜ್ವಲವಾದ ತರುಪಲ್ಲವ ಕುಸುಮಾ 

ದಿಗಳಿಂದ ಸುಶೋಭಿತವಾದ ಮನುಷ್ಯಲೋಕದಲ್ಲಿ ಇದ್ದಕ್ಕಿದ್ದ ಹಾಗೆ ತಂದು ಸ್ಥಾಪಿತ 

ಮಾಡಿದರೆ ಅವನಿಗೆ ಯಾವ ಆನಂದವುಂಟಾಗುವುದೆ ನನಗೆ ಅದೇ ಆನಂದ ! ಚಿರ 

ಕಾಲ ಪರಾಧೀನದಲ್ಲಿ ಪರರಿಂದ ಪೀಡಿತನಾಗಿ ದಾಸಾನುದಾಸನಾಗಿದ್ದವನು ಹಠಾತ್ತಾಗಿ 

ಸರ್ವೇಶ್ವರಸಾರ್ವಭೌಮನಾದರೆ ಯಾವ ಆನಂದವನುಳ್ಳವನಾಗುವನೂ ನನಗೂ 

ಅದೇ ಆನಂದ ! ರಜನಿಯಹಾಗೆ ಜನ್ಮಾಂಧಳಾದವಳಿಗೆ ಹಠಾತ್ತಾಗಿ ಕಣ್ಣುಗಳು 

ಬಂದರೆ ಯಾವ ಆನಂದವುಂಟಾಗುತ್ತದೋ ನಾನೂ ರಜನಿಯನ್ನು ಪ್ರೀತಿಸಿ ಅದೇ 

ಆನಂದವುಳ್ಳವನಾಗುತ್ತೇನೆ. 


ಆದರೆ ಆನಂದವು ಕಡೆಗೆ ಏನಾಗುವುದೋ ಅದನ್ನು ಹೇಳಲಾರೆನು. ನಾನು 

ಕಳ್ಳನು ! ನನ್ನ ಬೆನ್ನಿನಮೇಲೆ ಬೆಂಕಿಯ ಅಕ್ಷರಗಳಿಂದ ನಾನು ಚೋರನೆಂದು ಬರೆ 

ಹಾಕಲ್ಪಟ್ಟಿದೆ ! ರಜನಿಯು ಕೈಯಿಂದ ಆ ಬರೆಯನ್ನು ಸ್ಪರ್ಶ ಮಾಡಿ ಇದು ಯಾವ 

ಬರೆಯಂದು ಕೇಳಿದರೆ ಏನುಹೇಳಲಿ ! ಅದೇನೂ ಅಲ್ಲ ಎಂದು ಹೇಳಲೆ ; ಅವಳು ಅಂಧ 

ಆದುದರಿಂದ ಏನೂ ಅರಿಯಳಾರಳು. ಆದರೆ ಯಾರನ್ನು ಅವಲಂಬಿಸಿಕೊಂಡು ಸಂಸಾ 

ರದಲ್ಲಿ ಸುಖಿಯಾಗಬೇಕೆಂದಿದ್ದೆನೋ ಅಂತಹವಳನ್ನು ಪುನಃ ವಂಚಿಸಲೆ ! ವಂಚನೆಮಾಡ 

ಬೇಕಾದವರು ಹಾಗೆ ಮಾಡಲಿ-ನಾನು ಮಾಡಬಲ್ಲವನಾಗಿದ್ದಾಗ ಇದಕ್ಕಿಂತಲೂ 

ಹೆಚ್ಚಾದ ದುಷ್ಕಾರ್ಯವನ್ನು ಮಾಡಿದ್ದೇನೆ ಹಾಗೆ ಮಾಡಿ ಅದರ ಫಲವನ್ನು ಅನುಭೋಗಿ 

ಸುತ್ತೇನೆ, ಪುನಃ ಏತಕ್ಕೆ ಮಾಡಲಿ? ನಾನು ಲವಂಗಲತೆಯೊಡನೆ ರಜನಿಗೆ ಇದ್ದ ಸಂಗ 

----------------------------------------------

ಮೊದಲನೆಯ ಪರಿಚ್ಛೇದ 103 

ತಿಳಗನ್ನೆಲ್ಲಾ ಹೇಳಿಬಿಡುವೆನೆಂದು ಹೇಳಿದೆನು, ಆದರೆ ಹೇಳಿಬಿಡುವುದಕ್ಕೆ ಬಾಯಿ ಬರು 

ವುದಿಲ್ಲ. ಈಗ ಹೇಳಿಬಿಡುವೆನು. 


ಯಾವದಿನ ರಜನಿ ಋು ಶಚೀಂದ್ರನನ್ನು ನೋಡುವುದಕ್ಕೆ ಬಂದಿದ್ದಳೋ ಆದಿನ 

ಮಧ್ಯಾನದಲ್ಲಿ ಈ ಮಾತು ರಜನಿಗೆ ಹೇಳಬೇಕೆಂದು ಹೋದನು. ಹೋಗಿ ನೋಡಲಾಗಿ 

ರಜನಿಯೊಬ್ಬಳೇ ಕೂತುಕೊಂಡು ಅಳುತ್ತಿದ್ದಳು. ನಾನು ಆಗವಳಿಗೆ ಏನೂ ಹೇಳದೆ, 

ರಜನಿಯ ಚಿಕ್ಕ ತಾಯಿಯನ್ನು ಕುರಿತು ರಜನಿಯು ಅಳುವುದೇತಕ್ಕೆ ಎಂದು ಕೇಳಿದೆನು. 

ಚಿಕ್ಕ ತಾಯಿಯು ಗೊತ್ತಿಲ್ಲ.ಮಿತ್ರರ ಮನೆಗೆ ಹೋಗಿ ಬಂದಾರಭ್ಯ ಅಳುತ್ತಾಳೆಂದಳು. 

ನಾನು ಶಚೀಂದ್ರನಬಳಿಗೆ ಹೋಗಿರಲಿಲ್ಲ. ಶಚೀಂದ್ರನು ನನ್ನ ಮೇಲೆ ವಿರಕ್ತನಾಗಿದ್ದಾನೆ. 

ನನ್ನನ್ನು ನೋಡಿ ಅವನ ರೋಗವು ಹೆಚ್ಚಾದೀತೆಂಬ ಭಯದಿಂದ ಹೋಗಿ ನೋಡಲಿಲ್ಲ. 

ಅದುಕಾರಣ ಅಲ್ಲಿ ಏನು ನಡೆಯಿತೋ ಅದು ನನಗೆ ಗೊತ್ತಿಲ್ಲ. ರಜನಿಯನ್ನು ಕುರಿತು 

ಅಳುವುದೇತಕ್ಕೆ ? ಎಂದು ಪ್ರಶ್ನೆ ಮಾಡಿದೆನು. ರಜನಿಯು ಕಣ್ಣು ಮುಚ್ಚಿಕೊಂಡು 

ಸುಮ್ಮನಾದಳು.  


ನಾನು ಬಹಳ ಕಾತರನಾಗಿ, ನೋಡು, ರಜನಿ ! ನಿನಗೇನಾದರೂ ದುಃಖವಿದ್ದು 

ಅದನ್ನು ತಿಳಿದವನಾದರೆ ನಾನದನ್ನು ನಿವಾರಣೆ ಮಾಡಲು ನನ್ನ ಪ್ರಾಣಾಂತವಾದರೂ 

ಪ್ರಯತ್ನ ಪಡುವೆನು. ನೀನು ಯಾವದುಃಖಕ್ಕೋಸ್ಕರ ಆಳುತ್ತಿ ? ಹೇಳಲಾರೆಯಾ ? 

ಎಂದು ಕೇಳಿದೆನು. 


ರಜನಿಯು ಪುನಃ ಅಳಲಾರಂಭಿಸಿದಳು. ಬಹುಕಷ್ಟದಿಂದ ರೋಗವನ್ನು ನಿಲ್ಲಿಸಿ, 

ನೀವು ಅನುಗ್ರಹವುಳ್ಳವರಾಗಿದ್ದೀರಿ ; ಆದರೆ ನಾನು ಆ ಅನುಗ್ರಹಕ್ಕೆ ಯೋಗ್ಯಳ 

ಲ್ಲವೆಂದಳು. 


ನಾನು-ಅದೇತಕ್ಕೆ ರಜನಿ ? ನಾನೇ ನಿನಗೆ ಯೋಗ್ಯನಲ್ಲವೆಂದು ತಿಳಿದುಕೊಂಡಿ 

ದ್ದೇನೆ. ನಾನು ಆ ಮಾತನ್ನೇ ಹೇಳುವುದಕ್ಕೆ ಬಂದಿದ್ದೇನೆ. 

 

ರಜನಿ-ನಾನು ತಮ್ಮಿಂದ ಅನುಗೃಹೀತಳಾದ ತಮ್ಮ ದಾಸಿ ; ನನಗೆ ಇಂತಹ 

ಮಾತನ್ನು ಹೇಳುವುದೇತಕ್ಕೆ ? 


ನಾನು-ಕೇಳು, ರಜನಿ ! ನಾನು ನಿನ್ನನ್ನು ವಿವಾಹಮಾಡಿಕೊಂಡು ಇಹಜನ್ಮ 

ದಲ್ಲಿ ಸುಖವಾಗಿರಬೇಕೆಂದು ಅತ್ಯಂತ ಭರವಸೆಯುಳ್ಳವನಾಗಿದ್ದೇನೆ, ಈ ಆಶೆಯು 

ಭಗ್ನವಾದರೆ ನಾನು ಉಳಿಯುವುದಿಲ್ಲವೆಂದು ಕಾಣುತ್ತೆ. ಆದರೆ ಆ ಆಶೆಗೆ ಇರುವ 

ವಿಘ್ನವನೊಂದನ್ನು ನಿನಗೆ ಹೇಳಬೇಕೆಂದು ಬಂದಿದ್ದೇನೆ. ಕೇಳಿ ಉತ್ತರವನ್ನು ಕೊಟ್ಟರೆ 

ಕೊಡು ; ಇಲ್ಲವಾದರೆ ಬೇಡ. ಪ್ರಥಮ ಯೌವನದಲ್ಲಿ ಒಂದು ದಿನ ನಾನು ರೂಪಾಂ 

--------------------------------------------- 

104 ರಜನೀ 


ಧನಾಗಿ ಉನ್ಮತ್ತನಾದೆನು. ಜ್ಞಾನಹೋದವನಾಗಿ ಕಳ್ಳನು ಮಾಡುವ ಕೆಲಸವನ್ನು 

ಮಾಡಿಬಿಟ್ಟೆನು, ಮೈಯಲ್ಲಿ ಅದರ ಚಿಹ್ನೆ ಯು ಇನ್ನೂ ಇದೆ. ಆ ಮಾತನ್ನು ನಿನಗೆ 

ತಿಳಿಸಲು ಬಂದಿದ್ದೇನೆ. 


ಆಗ ಮೆಲ್ಲಗೆ ಮೆಲ್ಲಗೆ ಕೇವಲ ಧೈರ್ಯಮಾತ್ರಾವಲಂಬನವುಳ್ಳವನಾಗಿ 

ಆ ಹೇಳಕೂಡದ ಮಾತುಗಳನ್ನೆಲ್ಲ ಹೇಳಿದೆನು. ರಜನಿಯು ಅಂಧಳಾದುದರಿಂದ ಅದ 

ನ್ನೆಲ್ಲ ಹೇಳಲು ಸಮರ್ಧನಾದೆನು. ಕಣ್ಣು ಕಣ್ಣುಗಳಿಗೆ ಸಂದರ್ಶನವಾಗಿದ್ದರೆ ಹೇಳುವ 

ದಕ್ಕೆ ಆಗುತ್ತಿರಲಿಲ್ಲ. 


ರಜನಿಯ ನೀರವವಾಗಿ ಸುಮ್ಮನಿದ್ದಳು. ನಾನು, ರಜನಿ ! ರೂಪೋನ್ಮಾದ 

ದಿಂದ ಉನ್ಮತ್ತನಾಗಿ ಪ್ರಧನ ಯೌವನದಲ್ಲಿ ಒಂದು ದಿನ ಈ ಅಜ್ಞಾನದ ಕೆಲಸವನ್ನು 

ಮಾಡಿಡೆನು, ಮತ್ಯಾವಾಗಲೂ ಯಾವ ಅಪರಾಧವನ್ನೂ ಮಾಡಿದವನಲ್ಲ. ಚಿರ 

ಜೀವನವೂ ಆ ಒಂದುದಿನದ ಅಪರಾಧಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿದ್ದೇನೆ. 

ನೀನು ನನ್ನನ್ನು ಗ್ರಹಣಮಾಡುವಿಯಾ ? ಎಂದು ಕೇಳಿದೆನು. 


ರಜನಿಯು ಅಳುತಳುತ್ತ, ತಾವು ಚಿರಕಾಲ ಕಳ್ಳ ತನ ಮಾಡಿದರೂ, ತಾವು 

ಸಹಸ್ರ ಬ್ರಹ್ಮಹತ್ಯ. ಗೋಹತ್ಯೆ, ಹತ್ಯಗಳನ್ನು ಮಾಡಿದ್ದರೂ ತಾವು ನನಗೆ ದೇವತಾ 

ಸ್ವರೂಪರಾಗಿರುತ್ತೀರಿ. ತಮ್ಮ ಚರಣದಲ್ಲಿ ನನಗೆ ಸ್ಥಾನವನ್ನು ಕೊಡುವಿರಾದರೆ 

ನಾನು ತಮ್ಮ ದಾಸಿಯಗುವೆನು, ಆದರೆ ನಾನು ತಮ್ಮ ದಾಸಿಯಾಗಲು ಯೋಗ್ಯ 

ಳಲ್ಲ. ಆ ಮಾತನ್ನು ತಾವು ಕೇಳುವುದು ಉಳಿದಿದೆ ಎಂದಳು. 

 

ನಾನು-ಅದೇನು ರಜನಿ ! 


ರಜನಿ-ಈ ನನ್ನ ಪಾಪಿಯಾದ ಮನಸ್ಸು ಇತರರಿಗೆ ವಿಕ್ರೀತವಾಗಿದೆ. 


ನಾನು ಚಮಕಿತನಾಗಿ ನಡುಗಿದೆನು, ಅದೇನು ರಜನಿ ! ಎಂದು ಹೇಳಿದನು. 


ರಜನಿ-ನಾನು ಹೆಂಗಸು. ನಾನು ತಮ್ಮ ಸಂಗಡ ಇನ್ನೇನು ಯಾವಪ್ರಕಾರ 

ಹೇಳಲಿ ? ಆದರೆ ಲವಂಗಲತೆಯು ಎಲ್ಲವನ್ನೂ ತಿಳಿದವಳಾಗಿದ್ದಾಳೆ. ತಾವು ಹೋಗಿ 

ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ. ನಾನು ಎಲ್ಲ ತಿಳಿಸಬೇಕೆಂದು ಹೇಳಿದೆನೆಂದು 

ಹೇಳಬಹುದು. 


ನಾನು ಆ ಕೂಡಲೇ ಮಿತ್ರರ ಮನೆಗೆ ಹೋದೆನು, ಅವಂಗತೆಯನ್ನು 

ನೋಡಲು ಯಾವಪ್ರಕಾರ ಅನುಕೂಲಪಡಿಸಿಕೊಂಡೆನೋ ಅದು ಅಲ್ಪ ವಿಷಮಯ 

ವಾದುದರಿಂದ ಅದನ್ನು ವಿವರಿಸಿ ಕಾಲಹರಣ ಮಾಡುವುದಿಲ್ಲ. ಹೋಗಿ ನೋಡಿದೆನು. 

----------------------------------------------

ಮೊದಲನೆಯ ಪರಿಚ್ಛೇದ 105 

 

ನೋಡಲಾಗಿ ಲವಂಗತೆಯು ಧ೧ಳಿಯಲ್ಲಿ ಬಿದ್ದು ಶಚೀಂದ್ರನಿಗೋಸ್ಕರ ಅಳುತ್ತಿ 

ದ್ದಳು. ನಾನು ಹೋಗುತ್ತಲೇ ಅವಂಗಲತೆಯು ತನ್ನ ಕಾಲುಗಳನ್ನು ಹಿಡಿದು 

ಕೊಂಡು ಮತ್ತಷ್ಟು ಹೆಚ್ಚಾಗಿ ಅಳಲಾರಂಭಿಸಿದಳು. ಕಡೆಗೆ ಕ್ಷಮಿಸು, ಅಮರನಾಥ ! 

ಕ್ಷಮಿಸು, ನಿನ್ನ ಮೇಲೆ ನಾನು ಹೆಚ್ಚು ಅತ್ಯಾಚಾರ ಮಾಡಿದುದರಿಂದ ದೇವರು 

ನನಗೆ ತಕ್ಕ ಶಿಕ್ಷೆ ಮಾಡುತ್ತಾನೆ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಪುತ್ರನಿಗಿಂತಲೂ 

ನನಗೆ ಹೆಚ್ಚು ಪ್ರಿಯಪುತ್ರನಾದ ಶಚೀಂದ್ರನು ನನ್ನ ದೋಷದಿಂದಲೇ ಪ್ರಾಣವನ್ನು 

ಕಳೆದುಕೊಂಡರು. ನಾನು ವಿಷಪಾನ ಮಾಡಿ ಪ್ರಾಣಬಿಟ್ಟು ಬಿಡುವೆನು. ಈಹೊತ್ತು 

ನಾನು ನಿನ್ನ ಇದಿರಿ: ವಿಷವನ್ನು ತೆಗೆದುಕೊಂಡು ಪ್ರಾಣವನ್ನು ಬಿಡುವೆನೆಂದು 

ಹೇಳಿದಳು. 

 

ನನ್ನ ಎದೆಯ ಸೀಳಿದಹಾಗಾಯಿತು.  ಲವಂಗಳು ಅಳುತ್ತಾಳೆ, ರಜನಿಯೂ 

ಅಳುತ್ತಾಳೆ ಇವರು ಹೆಂಗಸರು. ಎಷ್ಟು ಬೇಕಾದರೂ ಕಣ್ಣೀರನ್ನು ಸುರಿಸಬಲ್ಲರು. 

ನನ್ನ ಕಣ್ಣುಗಳಿಂದ ನೀರು ಬೀಳುತ್ತಿರಲಿಲ್ಲ. ಆದರೆ ರಜನಿಯ ಮಾತನ್ನು ಕೇಳಿ ನನ್ನ 

ಹೃದಯದೊಳಗಿನಿಂದ ರೊದನಧ್ವನಿಯು ಏಳುತಲಿತ್ತು, ಲವಂಗಳು ಅಳುತ್ತಾಳೆ ; 

ರಜನಿಯ ಅಳುತ್ತಾಳೆ ; ನಾನೂ ಅಳುತ್ತೇನೆ ಮತ್ತು ಶಚೀಂದ್ರನಿಗೆ ಈ ದೆಶೆ ! 

ಸಂಸಾರದಲ್ಲಿ ಸುಖವಿದೆಯೆಂದು ಯಾರು ಹೇಳುವರು ? ಸಂಸಾರವು ಅಂಧಕಾರ ! 


ನನ್ನ ದುಃಖವನ್ನು ಒಂದು ಕಡೆಗೆದಗಿಸಿಟ್ಟುಕೊಂಡು ಮೊದಲು ಲವಂಗ 

ಲತೆಯ ದುಃಖವನ್ನು ಕುರಿತು ವಿಚಾರ ಮಾಡಿದೆವು. ಲವಂಗಳು ಅಳುತಳುತ ಶಚೀಂ 

ದ್ರನ ರೋಗದ ವೃತ್ತಾಂತವನ್ನೆಲ್ಲ ವಿಶದವಾಗಿ ಹೇಳಿದಳು, ಸನ್ಯಾಸಿಯ ವಿದ್ಯಾ 

ಪರೀಕ್ಷೆಯನ್ನು ಮಾಡಿದ ಮೊದಲ್ಗೊಂಡು ರುಗ್ನ ಶಯ್ಕೆಯಲ್ಲಿ ರಜನಿಯನ್ನು ನೋಡಿ 

ದವರೆಗೆ ನಡೆದುದೆಲ್ಲ ಹೇಳಿದಳು. 


ಅನಂತರ ರಜನಿಯ ಮಾತನ್ನು ಕಂಡು ಕೇಳಿ ಅವಳು ಹೇಳುವಹಾಗೆ ಹೇಳ 

ಬೇಕೆಂದು ಹೇಳಿದ್ದಳೆಂದು ತಿಳಿಸಿದೆನು. ಲವಂಗಳು ರಜನಿಯಿಂದ ಕೇಳಿದುದನೆಲ್ಲ 

ಮರೆಮಾಚದೆ ಹೇಳಿದಳು. 


ರಜನಿಯು ಶಚೀಂದ್ರನವಳು, ಶಚೀಂದ್ರನು ರಜನಿಗೆ ಸೇರಿದವನು. ಮಧ್ಯೆ 

ನಾನು ಯಾರು ? 


ಈ ತಡವೆ ಬಟ್ಟೆಯನ್ನು ಮುಖದ ಮೇಲೆ ಹಾಕಿ ಕೊಂಡು ಆಳುತಳುತ ಮನೆಗೆ 

ಹಿಂದಿರುಗಿ ಹೋಟುಹೋದೆನು. 

.....

ಎರಡನೆಯ ಪರಿಚ್ಚೇದ. 


ಈ ಸಂಸಾರವೆಂಬ ಸಂತೆಯಿಂದ ನನ್ನ ಅಂಗಡಿಯನ್ನು ಎತ್ತಿದ್ದಾಯಿತು. 

ವಿಧಾತನು ನನ್ನ ಗಣೆಯಲ್ಲಿ ಸುಖವನ್ನು ಬಯಲಿಲ್ಲ. ಇತರರ ಸುಖವನ್ನು ನಾನೇ

ಶಕ್ಕೆ ತೆಗೆದುಕೊಳ್ಳಲಿ ? ಶಚೀಂದ್ರನ ರಜನಿಯನ್ನು ಶಚೀಂದ್ರನಿಗೆ ಕೊಟ್ಟು ಬಿಟ್ಟು 

ನಾನು ಈ ಸಂಸಾರವನ್ನು ತ್ಯಾಗ ಮಾಡುವೆ.. ಈ ನೆರೆದ ಸಂತೆಯ ಮುಗಿಯಿತು. 

ಈ ಹೃದಯವನ್ನು ಶಾಸಿತ ಮಾಡುವೆನು, ಯಾವನು ಸುಖ ದುಃಖಗಳಿಗೆ ಅತೀತ 

ನಾಗಿದ್ದಾನೋ ಅರನ ಚರಣಗಳಲ್ಲಿ ಸಕಲವನ್ನು ಸಮರ್ಪಿಸುವೆನು. 


ಪ್ರಭೋ ! ನಿನ್ನನ್ನ ಬಹಳ ಹುಡುಕಿದೆನು-ನೀನು ಎಲ್ಲಿ ? ದರ್ಶನಗಳಲ್ಲಿಯ 

ವಿಜ್ಞಾನಗಳಲ್ಲಿಯ. ನೀನು ಇಲ್ಲ. ಜ್ಞಾನಿಗಳ ಜ್ಞಾನದಲ್ಲಿ, ಧ್ಯಾನಿಗಳ ಧ್ಯಾನದಲ್ಲಿ 

ನೀನು ಇಲ್ಲ. ನೀನು ಅಪ್ರಮೇಯನು ; ಆದಕಾರಣ ನಿನ್ನ ವಿಚಾರದಲ್ಲಿ ಪ್ರಮಾಣ 

ವಿಲ್ಲ. ಈ ಸ್ಟುಟಿಕೋನ್ಮುಖವಾದ ಹೃದಯಪದ್ಮವೇ ನಿನ್ನ ಪ್ರಮಾಣವಾಗಿದೆ. 

ಇದನ್ನು ನೀನು ಆರೋತಣ ಮಾಡು, ನೇ ತು ಅಂಧಳದ ಪುನರಿಯನ್ನು ತ್ಯಾಗ 

ಮಾಡಿ ನಿನ್ನ ಛಾಯೆಯನ್ನು ಆ ಸ್ಥಾನದಲ್ಲಿ ಸ್ಥಾಪನೆ ಮಾಡುತ್ತೇನೆ. 

 

ನೀವು ಇಲ್ಲವೇನು ? ಬೇಡ-- ನಿನ್ನ ಹೆಸರಿನಲ್ಲಿ ನನ್ನ ಸರ್ವಸ್ವವನ್ನೆಲ್ಲಾ 

ಉತ್ಸರ್ಗ ಮಾಡುವೆನು. " ಲುಂಡಮಂಡಲೀಕಾರಂ ವ್ಯಾಪ್ತಂ  ವಿನ ಚರಾಚರಂ 

ತಸ್ಮೈನಮಃ" ಎಂದು ಹೇಳಿ ಈ ಕಳಂಕವಾದ ರಾಂಚಿತವಾದ ದೇಹವನ್ನು 

ಉತ್ಸರ್ಗ ಮಾಡುವೆನು. ನೀನು ಕೊಟ್ಟಿದುದು ನೀನು ತೆಗೆದುಕೊಳ್ಳುವುದಿಲ್ಲವೆ ? 

ನೀನು ತೆಗೆದುಕೊಳ್ಳವ ; ಇಲ್ಲದಿದ್ದರೆ ಈ ಕಳಂಕದ ಭಾರವನ್ನು ಯಾರು ಪವಿತ್ರ 

ವಾಗಿ ಮಾಡುವರು ? 


ಪ್ರಭೋ! ನಿನ್ನಲ್ಲಿ ನನ್ನದೊಂದು ವಿಜ್ಞಾಪನೆಯುಂಟು. ಈ ದೇಹವನ್ನು 

ಕಳಂಕವಾಗಿ ಮಾಡಿದವರು ಯಾರು, ನೀನೋ ನಾನೋ ? ನಾನು ಅಸತಾದ 

ಅಸಾದನು. ದೋಷವು ನನ್ನದೋ ಅಥವಾ ನಿನ್ನದೋ ? ನನ್ನ ಈ ಚಿಲ್ಲರೆಅಂಗಡಿ 

ಯನ್ನು ಹರಡಿಕೊಟ್ಟವರು ಯಾರು ? ನೀನೆ ಅಥವಾ ನಾನೆ ? ನೀನು ಇಟ್ಟು ಕೊಟ್ಟ 

ಅಂಗಡಿಯನ್ನು ನಿನಗೇನೇ ಕೊಟ್ಟುಬಿಡುತ್ತೇನೆ. ನಾನು ಇನ್ನು ಈ ಅಂಗಡಿಯನ್ನು 

ಇಟ್ಟುಕೊಂಡು ವ್ಯಾಪಾರ ಮಾಡುವುದಿಲ್ಲ. 


ಸುಖ ! ನಿನ್ನನ್ನು ಸರ್ವತ್ರ ಹುಡುಕಿದೆನು --ಸಿಕ್ಕಲಿಲ್ಲ. ಸುಖವಿಲ್ಲ. ಇನ್ನು 

ಆಶೆಪಟ್ಟು ಪ್ರಯೋಜನವೇನು ? ಅಗ್ನಿಯಿಲ್ಲದೆ ದೇಶದಲ್ಲಿ ಸೌದೆಯನ್ನು ತಂದು 

ಮಾಡುವದೇನು ? 

---------------------------------------------

ಎರಡನೆಯ ಪರಿಚ್ಛೇದ 107 


ಸರ್ವಸ್ವವನ್ನು ವಿಸರ್ಜನೆ ಮಾಡಬೇಕೆಂದು ಪ್ರತಿಜ್ಞೆಯನ್ನು ಮಾಡಿದೆನು, 

......

ನಾನು ಮರುದಿನ ಶಚೀಂದ್ರನನ್ನು ನೋಡುವುದಕ್ಕೆ ಹೋದೆ. ಹೋಗಿ ನೋಡ 

ಲಾಗಿ ಆವನು ಬಹಳಮಟ್ಟಿಗೆ ಸ್ಥಿರನಾಗಿದ್ದನು. ಮೊದಲಿಗಿಂತಲ ಪ್ರಫುಲ್ಲ ಚಿತ್ತ 

ನಾಗಿದ್ದನು, ಅವನ ಸಂಗಡ ಬಹಳ ಹೊತ್ತು ಮಾತನಾಡುತಲಿದ್ದೆನು. ಅವನ ಮನ 

ಸ್ಸಿನಲ್ಲಿ ನನ್ನ ಮೇಲಿದ್ದ ಕೋಪವು ಶುದ್ಧವಾಗಿ ಹೋದಹಾಗೆ ಕಾಣಿಸಲಿಲ್ಲ. 


ಆ ಮರುದಿನ ಪುನಃ ಅವನನ್ನು ನೋಡುವುದಕ್ಕೆ ಹೋದೆನು. ನಿತ್ಯವೂ 

ನೋಡುವುದಕ್ಕೆ ಹೋಗುತಲಿದ್ದೆ. ಅವನ ದುರ್ಬಲವೂ ಕ್ಲಿಷ್ಟಭಾವವೂ ಕಡಿಮೆಯಾ 

ಗಲಿಲ್ಲ. ಆದರೆ ಕ್ರಮೇಣ ಸ್ಥೈರ್ಯವು ಬರಲಾರಂಬಿಸಿತು ಕಳವಳವು ನಿಂತಿತು. 

ಕಾಲಕ್ರಮೇಣ ಪ್ರಕೃತಿಸ್ಥನಾದೆನು. 


ಒಂದು ದಿನವಾದರೂ ಶ೦ದ್ರನ ಬಾಯಿ೦ದ ರಜನಿಯ ಮಾತು ಬರ 

ಲಿಲ್ಲ. ಆದರೆ ಯಾವ ದಿನದಿಂದ ಚವಿಯು ಬರುತಿದ್ದಳೋ ಆ ದಿನ ಮೊದ 

ಲ್ಗೊಂಡು ಅವನ ಆಲಸ್ಯವು ಉಪಶಮನವಾಗುತ್ತ ಬಂತೆಂದು ತಿಳಿದೆನು. 


ಒಂದು ದಿನ ಶಚೀಂದ್ರನ ಹತ್ತಿರ ಯಾರೂ ಇಲ್ಲದಿರುವಾಗ ರಜನಿಯ 

ಪ್ರಸವವನ್ನು ಎತ್ತಿದೆನು. ಕ್ರಮವಾಗಿ ಅವಳ ಅಂಧತ್ವವನ್ನು ಕುರಿತು ಮಾತನಾಡಿ 

ಅವಳ ದಃಖ ವಿಚಾರವನ್ನು ಹೇಳಲಾರಂಭಿಸಿದೆನು. ಆವಳು ಈ ಜಗತ್ಸಂಸಾರದ 

ಶೋಭಾರಾತಿಯ ದರ್ಶನದಿಂದ ವ೦ಚಿತಳಾಗಿದ್ದಾಳೆಂತಲೂ, ಪ್ರಿಯಜನ ದರ್ಶನದಿಂ 

ದುಂಟಾಗುವ ಸುಖದಿಂದ ಆಜನ್ಮಮೃತ್ಯು ಪರ್ಯಂತವೂ ವಂಚಿತಳಾಗಿದ್ದಾಳೆಂತಲೂ 

ಹೀಗೆಲ್ಲಾ ಮಾತನಾಡುವುದಕ್ಕೆ ತೊಡಗಿದನು. ಇದನ್ನು ಕೇಳಿ ಅವನ ಮುಖವನ್ನು 

ತಿರುಗಿಸಿಕೊಂಡನು. ಅವನ ಕಣ್ಣುಗಳಲ್ಲಿ ನೀರು ತುಂಬಿದುದನ್ನು ಕಂಡೆನು. 

 

ಅನುರಾಗವೇ ಹೌದಾಗಿತ್ತು. 


ಅನಂತರ ನಾನು, ನೀನು ರಜನಿಯ ಮಂಗಳಾಕಾಂಕ್ಷಿ ಯಾದುದರಿಂದ ನಿನ್ನಲ್ಲಿ 

ಒಂದು ಪರಮಾರ್ಶಕೊಸ್ಕರ ಬಂದಿದ್ದೇವೆ ; ರಜಸಿಯು ಒಂದು ಕಡೆಯಲ್ಲಿ ವಿಧಾತ 

ನಿಂದ ಪೀಡಿತಳಾಗಿದ್ದಾಳೆ. ಮತ್ತೊಂದು ಕಡೆಯಲ್ಲಿ ನನ್ನಿಂದ ಸಿಡಿ ತಳಾಗಿದ್ದಾಳೆಂದೆನು.  


ಶಚಿಂದ್ರನು ನನ್ನ ಮೇಲೆ ವಿಕಟವಾದ ಕಟಾಕ್ಷವನ್ನು ಬೀರಿದನು 


ನಾನು---ನೀನು ನಾನು ಹೇಳುವುದನ್ನೆಲ್ಲ ಮನವಿಟ್ಟು ಕೇಳುವದಾದರೇನೇ 

ಹೇಳಲು ಪ್ರವೃತ್ತನಾಗುತ್ತೇನೆ. 

ಶಚೀಂದ್ರಿ-ಹೇಳು. 


ನಾನು- ನಾನು ಅತ್ಯಂತ  ಲೋಭಿ ಮತ್ತು ಸ್ವಾರ್ಥಪರನು. ನಾನವಳ ಚರಿತ್ರೆ 

ಯನ್ನು ನೋಡಿ ಮೋಹಿತನಾಗಿ ಅವಳನ್ನು ವಿವಾಸಮಾಡಿಕೊಳ್ಳುವ ಪ್ರಯತ್ನ ಪಟ್ಟಿ 

---------------------------------------------

108 ರಜನೀ

 

ದ್ದೇನೆ. ಅವಳು ನನ್ನಲ್ಲಿ ಕೃತಜ್ಞತಾಪಾಶದಿಂದ ಬದ್ಧಳಾಗಿದ್ದಾಳೆ. ಅದು ಕಾರಣ ನನ್ನ 

ಅಭಿಪ್ರಾಯಕ್ಕೆ ಸಮ್ಮತಳಾಗಿದ್ದಾಳೆ. 

 

ಶಚೀ೦ದ್ರ-ಅಯ್ಯಾ ! ಈ ಮಾತುಗಳನ್ನೆಲ್ಲ ನನಗೆ ಹೇಳುವುದೇತಕ್ಕೆ ? 


ನಾನು-- -ನಾನು ಸನ್ಯಾಸಿಯಾಗಿ ದೇಶ ದೇಶ ತಿರುಗಬೇಕೆಂದು ಯೋಚಿಸಿಕೊ೦ 

ಡಿದ್ದೇನೆ ; ಹೀಗಿರುವಲ್ಲಿ ಅಂಧಳಾದ ರಜನಿಯು ನನ್ನ ಜತೆಯಲ್ಲಿ ಹೇಗೆ ದೇಶ ದೇಶ 

ತಿರುಗುವಳು ? ಅದು ಕಾರಣ ಅವಳನ್ನು ಇನ್ನಾರಾದರೂ ದೊಡ್ಡ ಮನುಷ್ಯರಾದವರು 

ವಿವಾಹ ಮಾಡಿಕೊಳ್ಳು ವುರಾದರೆ ಅವನನ್ನು ಬೇರೆ ಪಾತ್ರಲ್ಲಿ ಒಪ್ಪಿಸಿ ಹೊರಟುಹೋಗ 

ಬೇಕೆಂದಿದ್ದೇನೆ, ನಿನ್ನ ದೃಷ್ಟಿಯಲ್ಲಿ ಯಾರಾದರೂ ಅ೦ವರು ಇದ್ದರೆ ತಿಳಿದು 

ಕೊಳ್ಳಬೇಕೆಂದು ಇದನ್ನೆಲ್ಲಾ ಹೇಳಿದೆನು. 


ಶಚೀಂದ್ರನು ಸ್ವಲ್ಪ ಆತುರದಿಂದ ರಜನಿಗೆ ವರನ ಅಭಾವವಿಲ್ಲವೆಂದನು. 


ನಾನು ರಜನಿಯ ವರನು ಯಾರೆಂಬುದನ್ನು ತಿಳಿದುಕೊಂಡೆನು. 

.....

ಮೂರನೆಯ ಪರಿಚ್ಛೇದ. 


ಮರುದಿನ ಪುನಃ ಎತ್ರರ ಮನೆಗೆ ಹೋಗಿ ದರ್ಶನವನ್ನು ಕೊಟ್ಟೆನು, ಲವಂಗ 

ಲತೆಗೆ ನಾನು ಕಲ್ಕತ್ತೆಯನ್ನು ಬಿಟ್ಟು ಹೊರಟುಹೋಗುವೆನೆಂತಲೂ, ಪ್ರಕೃತ ಪುನಃ 

ವಸತಿ ಹಿಂದಿರುಗಿ ಬರುವುದಿಲ್ಲವೆತಲೂ ಅವಳು ನನ್ನ ಶಿಷ್ಯಳಾದಕಾರಣ ಆಶೀರ್ವಾದ 

ಮಾಡಿ ಹೋಗುವುದಕ್ಕಾಗಿ ಬಂದಿದ್ದೆನೆಂತಲೂ ಹೇಳಕಳುಹಿಸಿದೆನು. 

 

ಲವಂಗಲತೆಯು ಪುನಃ ಒಂದು ನನ್ನನ್ನು ನೋಡಿದಳು. 


ನಾನು ನಾನು ನಿನ್ನೆ ಶಂಚೀ೦ದ್ರನ ಸಂಗಡ ಹೇಳಿದುದೆಲ್ಲ ಕೇಳಿದೆಯಾ ? 


ಲವಂಗ - ಕೇಳಿದೆನು. ನೀನು ಅದ್ವಿತೀಯನು, ನನ್ನನ್ನು ಕ್ಷಮಿಸಬೇಕು ನಾನು ನಿನ್ನ 

ಗುಣವನ್ನು ತಿಳಿದಿರಲಿಲ್ಲ. 

 

ನಾನು ಸುಮ್ಮನಿದ್ದೆನು ಆ ಅವಕಾಶದಲ್ಲಿ ಲವಂಗಲತೆಯು, ನೀನು ನನ್ನನ್ನು 

ನೋಡಬೇಕೆಂದು ಅಪೇಕ್ಷಿಸಿದ್ದು ದೇತಕ್ಕೆ ? ನೀನು ಕಲ್ಕತ್ತೆಯನ್ನು ಬಿಟ್ಟು ಹೋಗುತ್ತೀ 

ಯೇನು ? ಎಂದು ಕೇಳಿದಳು 


ನಾನು-ಹೋಗುವೆನು. 


ಲವಂಗ-ಏತಕ್ಕೆ ? 

-------------------------------------------------

ಮೂರನೆಯ ಪರಿಚ್ಛೇದ 109 

ನಾನು ಹೋಗಕೂಡದೇಶಕ್ಕೆ ? ನಾನು ಹೋಗುವುದಕ್ಕೆ ಅಡ್ಡಿ ಮಾಡುವ 

ವರು ಯಾರು ? ಯಾರು ಇಲ್ಲವಷ್ಟೆ ? 


ಲವಂಗ-- ನಾನು ಆಡಿ ಮಾಡಿದರೆ ? 


ನಾನು-ಅಡ್ಡಿ ಮಾಡುವದಕ್ಕೆ ನೀನು ಯಾರು ? ನನಗೇನು ಆಗಬೇಕು ? 


ಲವಂಗ-ನೀನು ನಂಗೇನಾಗಬೇಕೋ ನಾನದನ್ನು ಅರಿಯೆ. ಈ ಪೃಧಿವಿಯಲ್ಲಿ 

ನೀನು ನನಗೇನೂ ಆಗತಕ್ಕದ್ದಿಲ್ಲ. ಆದರೆ ಲೋಕಾಂತರವಿದ್ದರೆ- 

 

ಲವಂಗತೆಯ : ಮತ್ತೇನೂ ಹೇಳಲಿಲ್ಲ. ನನ್ನ ಸ್ವಲ್ಪ ಹೊತ್ತಿನಮೇಲೆ, 

ಲೋಕಾ೦ತರವಿದ್ದರೆ, ಆಗ ? 


ಲವಂಗ- ನಾನು ಹೆಂಗಸು. ಸಹಜವಾಗಿ ದುರ್ಬಲಳು. ನನ್ನ ಹೇಳಿಕೆಯಿ೦ದ 

ನಿನಗೇನಾದೀತು ? ನಾನು ನಿನ್ನ ಪಂಮ ಮಂಗಳಾಕಾಂಕ್ಷಿ. ಇಷ್ಟು ಹೇಳಬಲ್ಲೆನು. 

 

ನಾನು ಬಹಳ ವಿಚಲಿತನಾಗಿ ನಾನು ಆ ಮಾತನ್ನು ನಂಬುತ್ತೇನೆ. ಆದರೆ 

ಒಂದು ನನಗೆ ಗೊತ್ತಾಗಲ್ಲಾ. ನೀನು ನನ್ನ ಮಂಗಳಾಕಾಂಕ್ಷಿಯಾಗಿದ್ದರೆ ನನ್ನ 

ಮೈಮೇಲೆ ಬಹಳ ದಿನಗಳು ಗುರುತಾಗಿರುವಾಗೆ ಈ ಕಳ೦ಕವನ್ನು ಬರೆದುದೇತಕ್ಕೆ ? 

ಇದು ಅಳಿಸಿಹೋಗುವುದಿಲ್ಲ ಯಾವಾಗಲೂ ಅಳಿಸಿಹೋಗುವುದಿಲ್ಲ ಎಂದು ಕೇಳಿದನು. 


ಲವಂಗತೆಯು ಆಧೋವದನಳಾಗಿದ್ದು ಸ್ವಲ್ಪಹೊತ್ತು ಯೋಚಿಸಿ, ಅನಂತರ, 

ನೀನು ಕೆಟ್ಟ ಕೆಲಸಮಾಡದೆ, ನಾನು ಬಾಲಿಕೆಯ ಬುದ್ಧಿಯಿಂದ ಕೆಟ್ಟ ಕೇಸವನ್ನು 

ಮಾಡಿದೆ   ಯಾವದಕ್ಕೆ ಯಾವದು  ಶಿಕ್ಷೆಯೋ ಅದನ್ನು ದೇವರು ವಿಚಾರಿಸುವನು. 

ನಾನು ವಿಚಾರಮಾಡುವದಕ್ಕೆ ಯಾರು. ಅದಕ್ಕೆ ಈಗ ನಾನು ಅನುತಾಪಡುತ್ತೇನೆ. 

ಆದರೆ ಆಮಾತುಗಳನ್ನೆಲ್ಲ ಈಗ ಹೇಳದಿರುವುದೇ ಒಳ್ಳೇದು. ನೀನು ನನ್ನ ಅಪರಾಧವನ್ನು 

ಮನ್ನಿಸುವೆಯಾ ? ಎಂದು ಕೇಳಿದಳು. 


ನಾನು..ನೀನು ಹೇಳದೆಯೇ ನಾನು ಕ್ಷಮಿಸಿದ್ದೇನೆ. ಕ್ಷಮಿಸುವುದೇನು ? 

ನನಗೆ ಉಚಿತವಾದ ದ೦ಡನೆಯಾಯಿತು. ನಿನ್ನ ಅಪರಾಧವಲ್ಲ, ನಾನು ಇನ್ನು ಹಿಂದಿ 

ರುಗಿ ಬರುವುದಿಲ್ಲ. ಪುನಃ ನಿನ್ನನ್ನು ನೋಡಲಾರೆನು. ಆದರೆ ನೀನು ಯಾವಾಗಲಾ ದರೂ 

ಅಮರನಾಥನು ಕುಚರಿತ್ರನೆಲ್ಲವೆಂದು ಕೇಳಿದರೆ ಸೀವಿ ನಲ್ಲಿ ಸ್ವಲ್ಪ-ಅಣು 

ಮಾತ್ರ-ಸ್ನೇಹಮಾಡುವಿಯಾ ? 


ಲವಂಗ- ನಿನ್ನಲ್ಲಿ ಸ್ನೇಹ ಬೆಳೆಸಿದರೆ ನಾನು ಧರ್ಮದಿಂದ ಭ್ರಷ್ಟಳಾಗುವೆನು. 

 

ನಾನು ಇಲ್ಲ ನಾನು ಆ ಸ್ನೇಹವನ್ನು ಬೇಡುವುದಿಲ್ಲ. ನಿನ್ನ ಈ ಸಮುದ್ರ 

ಸದೃಶವಾದ ಹೃದಯದಲ್ಲಿ ನನಗೋಸ್ಕರ ಅಷ್ಟು ಸ್ಥಳವು ಸಿಕ್ಕದೆ ? 


ಲವಂಗ-ಇಲ್ಲ -ಯಾವನು ನನ್ನ ಸ್ವಾಮಿಯಾಗದೆಯೇ ನನ್ನ ಪ್ರಣಯಾ 

ಕಾಂಕ್ಷಿಯಾಗಿದ್ದಾನೋ ಅವನು ಸ್ವಯಂ ಮಹದೇವನಾದರೂ ಅಂತಹವನಿಗೆ ನನ್ನ 

---------------------------------------------

110 ರಜನೀ 


ಹೃದಯದಲ್ಲಿ ಅಷ್ಟು ಮಾತ್ರವೂ ಸ್ಥಳವು ಸಿಕ್ಕದು. ಜನರು ಹಕ್ಕಿಯನ್ನು ಸಾಕಿ ಅದರ 

ಲ್ಲಿಡುವ ಸ್ನೇಹದಷ್ಟು ಕೂಡ ಸ್ನೇಹವು ಈ ಲೋಕದಲ್ಲಿ ನನ್ನ ಹೃದಯದಲ್ಲಿ ನಿನಗೆ 

ಸಿಕ್ಕಲಾರದು. 


ಪುನಃ " ಈ ಲೋಕದಲ್ಲಿ" ಅದು ಹೋಗಲಿ. ನಾನು ಲವಂಗಲತೆಯ 

ಮಾತನ್ನು ತಿಳಿದುಕೊಂಡೆನೋ ಇಲ್ಲವೋ ಹೇಳಲಾರೆನು. ಆದರೆ ಲವಂಗಳು ನನ್ನ 

ಮಾತನ್ನು ತಿಳಿದು ಕೊಳ್ಳಲಿಲ್ಲ. ನೋಡುತ್ತಿದ್ದಹಾಗೆ, ಲವಂಗಳು ಸ್ವಲ್ಪ ಅತ್ತಳು. 


ನಾನು-ನಾನು ಹೇಳತಕ್ಕದ್ದು ಸ್ವಲ್ಪವಿದೆ. ಅದನ್ನು ಹೇಳಿಬಿಟ್ಟು ಹೊರಟು 

ಹೋಗುತ್ತೇನೆ. ನನ್ನ ಸ್ವಲ್ಪ ಆಸ್ತಿಯು೦ಟು, ಅದರಿಂದ ನನಗೇನೂ ಪ್ರಯೋಜನವಿಲ್ಲ. 

ಅದನ್ನು ದಾನಮಾಡಿಬಿಟ್ಟು ಹೊರಟು ಹೋಗುತ್ತೇನೆ.  


ಲವಂಗ.... ಯಾರಿಗೆ ? 


ನಾನು - ರಜನಿಯನ್ನು ವಿವಾಹಮಾಡಿಕೊಳ್ಳುವವನಿಗೆ. 


ಲವಂಗ-ನಿನ್ನ ಭೂಸ್ಥಿತಿಯನ್ನೆಲ್ಲ ? 


ನಾನು--ಹೌದು-ನೀನು ಈ ದಾನಪತ್ರವನ್ನು ಈಗ ನಿನ್ನಲ್ಲಿ ಗೋಪ್ಯವಾಗಿ 

ಟ್ಟು ಕೊಂಡಿರು, ರಜನಿಗೆ ವಿವಾಹವಾಗದ ವರೆಗೂ ಇದನ್ನು ಹೊರಪಡಿಸ ಕೂಡದು. 

ವಿವಾಹವಾದಮೇಲೆ, ಅವಳ ಗಂಡನಿಗೆ ದಾನಪತ್ರವನ್ನು ಕೊಡು. 


ಇಷ್ಟು ಹೇಳಿ ಲಲಿತಲವಂಗಲತೆಯ ಉತ್ತರವನ್ನು ನಿರೀಕ್ಷಿಸದೆ ದಾನಪತ್ರವನ್ನು 

ಅವಳಹತ್ತಿರ ಹಾಕಿಬಿಟ್ಟು ಹೊರಟುಹೋದೆನು, ನಾನು ಆಸ್ತಿ ವಿಚಾರದಲ್ಲಿ ಮಾಡ 

ಬೇಕಾದ ಏರ್ಪಾಡುಗಳನ್ನೆಲ್ಲ ಮಾಡಿ ಬಂದಿದ್ದೇನಾದುದರಿಂದ, ಪುನಃ ಮನೆಯ ಕಡೆಗೆ 

ಹೋಗದೇ ನೆಟ್ಟಗೆ ಸ್ಟೇಷನಿಗೆ ಹೋಗಿ ಹೊಗೆಯಬಂಡಿಯನ್ನೇರಿ ಕಾಶ್ಮೀರಕ್ಕೆ ಹೊರಟು 

ಹೋದೆನು. 


ಅಂಗಡಿಯನ್ನು ಎತ್ತಿದ್ದಾಯಿತು

.....


 

ನಾಲ್ಕನೆಯ ಪರಿಚ್ಛೇದ. 

ಇದಾದ ಎರಡು ವರ.ಷಗಳಮೇಲೆ ಒಂದು ಸಲ ದೇಶದೇಶಭ್ರಮಣ ಮಾಡುತ್ತ 

ಭವಾನಿನಗರಕ್ಕೆ ಹೋದೆನು ಅಲ್ಲಿ ಮಿತ್ರವಂಶದವರು ಬಂದು ವಾಸಮಾಡುತ್ತಾರೆಂದು 

ಕೇಳಿದೆನು. ಕುತೂಹಲವುಳ್ಳವನಾಗಿ ಅವರನ್ನು ನೋಡೋಣವೆಂದು ಹೋದೆನು, 

ಮನೆಯ ಬಾಗಿಲಿನಲ್ಲಿ ಶಚೀಂದ್ರನು ನಿಂತಿದ್ದನು. 

----------------------------------------------- 

ನಾಲ್ಕನೆಯ ಪರಿಚ್ಛೇದ 111 

ಶಚೀಂದ್ರನು ನನ್ನನ್ನು ಗುರುತಿಸಿ ನಮಸ್ಕಾರ ಮಾಡಿ ಆಲಿಂಗನ ಮಾಡಿ 

ಕೊಂಡು ಅನಂತರ ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋಗಿ ಉತ್ತಮಾಸನ 

ದಲ್ಲಿ ಕುಳ್ಳಿರಿಸಿದನು. ಬಹಳಹೊತ್ತು ಅನೇಕ ಮಾತು ಕಧೆಯು ನಡೆಯಿತು. ರಜನಿ 

ಯನ್ನು ತಾನು ವಿವಾಹ ಮಾಡಿಕೊಂಡಿರುವುದಾಗಿ ಹೇಳಿದನು, ಮತ್ತು ರಜನಿಯು 

ಹೂವಾಡಗಿತ್ತಿಯಾಗಿದ್ದುದರಿಂದ ಕಲಿಕತ್ಸೆಯಲ್ಲಿದ್ದರೆ ಜನರು ಹೇಳಿಕೊಂಡಾರೆಂಬ 

ಶಂಕೆಯಿ೦ದ ಕಲಿಕತ್ತೆಯನ್ನು ಬಿಟ್ಟು ಬಂದು ಭವಾನಿನಗರದಲ್ಲಿ ವಾಸಮಾಡುವು 

ದಾಗಿಯೂ ತನ್ನ ತಂದೆ ಅಣ್ಣ ಎಲ್ಲರೂ ಕಲಿಕತ್ತೆಯಲ್ಲಿಯೇ ವಾಸವಾಗಿರು 

ವುದಾಗಿಯೂ ಹೇಳಿದನು. 

 

ಶಚೀಂದ್ರನು ನನ್ನೆ ಆಸ್ತಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನನ್ನನ್ನು 

ಬಹಳವಾಗಿ ಕೇಳಿಕೊಂಡನು. ನಾನು ಅದಕ್ಕೆ ಒಪ್ಪಲಿಲ್ಲವೆಂದು ಹೇಳಬೇಕಾದ 

ಅವಶ್ಯವಿಲ್ಲ. ಕಡೆಗೆ ಅವನು ನಾನು ರಜನಿಯನ್ನು ನೋಡಬೇಕೆಂದು ಕೇಳಿಕೊಂಡನು. 

ನನಗೆ ಆ ಆಶೆಯಿತ್ತು. ಅವನು ನನ್ನನ್ನು ಅಂತಃಪುರದಲ್ಲಿ ರಜನಿಯ ಹತ್ತಿರ 

ಕರೆದುಕೊಂಡು ಹೋದನು. 


ಅಂತಃಪುರಕ್ಕೆ ಹೋಗುತ್ತಲೇ ರಜನಿಯು ಬಂದು ನನಗೆ ನಮಸ್ಕಾರವನ್ನು 

ಮಾಡಿ ನನ್ನ ಪಾದಧೂಳಿಯನ್ನು ತೆಗೆದು ಕೊಂಡಳು. ಪಾದಧೂಳಿಯನ್ನು ಗ್ರಹಣ 

ಮಾಡುವಾಗ ಅ೦ಧರು ಕೈಯಿಂದ ತಡವರಿಸುವಹಾಗೆ ತಡವರಿಸದೆ ಒಂದೇ ತಡವೆಗೆ 

ಕಾಲು ಮುಟ್ಟಿದಳು. ಸ್ವಲ್ಪ ಆಶ್ಚರ್ಯವುಂಟಾಯಿತು. 


ಅವಳು ನನಗೆ ಪ್ರತಿ ದುಮಾಡಿ ನಿಂತುಕೊಂಡಳು, ಆದರೆ ವ.ಖವನ್ನು 

ತಗ್ಗಿಸಿಕೊಂಡಿದ್ದಳು. ನನ್ನ ಆಶ್ಚರ್ಯವು ಹೆಚ್ಚಾಯಿತು. ಅಂಧರಿಗೆ ಲಜ್ಜೆಯು ಚಕ್ಷು 

ರ್ಗತವಲ್ಲ, ಕಣ್ಣಿಗೆ ಕಣ್ಣಿಗೆ ಸೇರಿ ಅದರಿಂದುಂಟಾಗುವ ಲಜ್ಜೆಯು ಅವರಿಗೆ ಉಂಟಾಗ 

ಲಾರದಾಗಿ ಅವರು ದೃಷ್ಟಿಯನ್ನು ಮರೆಮಾಡಿಕೊಳ್ಳಲು ಮುಖವನ್ನು ತಗ್ಗಿಸಿಕೊಳ್ಳು 

ವುದಿಲ್ಲ. ಏನೋ ಒಂದು ಮಾತನ್ನು ಕೇಳಿದೆ. ಅವಳ ಮುಖವನ್ನು ಎತ್ತಿ ನೋಡಿ 

ಪುನಃ ತಗ್ಗಿಸಿಕೊಂಡಳು. ಕಣ್ಣಿನಲ್ಲಿ ನಿಜವಾಗಿಯ ದೃಷ್ಟಿ ಯಿದೆ ಎಂದು ಕಂಡಿತು. 


ಜನ್ಮಾಂಧಳಾದ ರಜನಿಯು ಈಗ ಕಣ್ಣುಗಳಿಂದ ನೋಡುತ್ತೇನೆಂದು 

ಶಚೀಂದ್ರನನ್ನು ಕೇಳಬೇಕೆಂದು ಮಾತು ಎತ್ತುವುದರಲ್ಲಿ ಶಚೀಂದ್ರನು ರಜನಿಯನ್ನು 

ಕುರಿತು ನನಗೆ ಕೂಡುವುದಕ್ಕೆ ಏನಾದರೂ ತಂದುಹಾಕೆಂದು ಹೇಳಿದನು. ರಜನಿಯು 

ಒಂದು ರತ್ನಗಂಬಳಿಯನ್ನು ತಂದು ಹಾಸಿದಳು. ಹಾಸುವ ಸ್ಥಳದಲ್ಲಿ ಸ್ವಲ್ಪ ನೀರು 

ಬಿದ್ದಿತ್ತು; ರಜನಿಯ ರತ್ನ ಕಂಬಳಿಯನ್ನು ಹಾಗೆಯೇ ಇಟ್ಟು ಬಟ್ಟೆಯನ್ನು ತಂದು 

ಆ ನೀರನ್ನೊರಸಿ ರತ್ನ ಕಂಬಳಿಯನ್ನು ಹಾಸಿದಳು. ಅವಳು ನೀರನ್ನು ಕೈಯಿಂದ ಸ್ಪರ್ಶ 

ಮಾಡದೆ ರಕ್ತ ಕಂಬಳಿಯನ್ನು ಒಂದುಕಡೆ ಇಟ್ಟು ಅದನ್ನು ಒರಸುವುದಕ್ಕೆ ಬಟ್ಟೆ 

ಯನ್ನು ತಂದು ಒರಿಸಿದಳು. ಆದುಕಾರಣ ದೃಷ್ಟಿ ಯಿದೆಯೆಂದು ಸ್ಪಷ್ಟವಾಯಿತು. 


ನಾನು ಇನ್ನು ಹೆಚ್ಚು ಹೊತ್ತು ತಾಳಲಾರದೆ, ರಜನಿ ! ಈಗ ನೀನು ನೋಡ 

ಬಲ್ಲೆಯಾ ? ಎಂದು ಕೇಳಿದೆನು. 

---------------------------------------------- 

112 ರಜನೀ 


ರಜನಿಯು ಮುಖವನ್ನು ತಗ್ಗಿಸಿ ಸ್ವಲ್ಪ ನಕ್ಕು, ಹೌದು, ಎಂದಳು. 


ನಾನು ವಿಸ್ಮಿತನಾಗಿ ಶಚೀಂದ್ರನ ಮುಖವನ್ನು ನೋಡಿದೆನು, ಶಚೀಂದ್ರನು 

ಆಶ್ವರವೇ ಹೌದು ಆದರೆ ಈಶ್ವರನ ಕೃಪೆಯುಂಟಾದರೆ ಏನು ತಾನೇ ಆಗುವುದಿಲ್ಲ ? 

ನಮ್ಮ ಭಾರತವರ್ಷದಲ್ಲಿ ಚಿಕಿತ್ಸಾ ಸಂಬಂಧವಾಗಿ ಕೆಲವು ಆಶ್ಚರ್ಯಪ್ರಕರಣಗಳಿದ್ದುವು 

ಯರೊಫಿನವರು ಇನ್ನೆಷ್ಟು ಕೆಲ ಶ್ರಮಪಟ್ಟರೂ ಅವುಗಳನ್ನು ಕಂಡುಹಿಡಿಯಲಾ 

ರರು, ಚಿಕಿತ್ರಾಶಾಸ್ತ್ರ ಒಂದೇ ಅಲ್ಲ-ಎಲ್ಲಾ ವಿದ್ಯೆಗಳಲ್ಲಿಯೂ ಹಾಗೆಯೇ ಇತ್ತು. 

ಆದರೆ ಅದೆಲ್ಲಾ ಈಗ ಲೋಪವಾಗಿ ಹೋಯಿತು, ಆದರೆ ಒಬ್ಬಿಬ್ಬರು ಸನ್ಯಾಸಿಗಳಲ್ಲಿ 

ಆ ಲುಪ್ತವಾಗಿ ಹೋದ ವಿದ್ಯೆಗಳ ಕೆಲವು ಅ೦ಶಗಳು ಅತಿ ಏಕಾ೦ತವಾಗಿ ಉಳಿದಿವೆ. 

ನಮ್ಮ ಮನೆಗೆ ಒಬ್ಬ ಸನ್ಯಾಸಿಯು ಬಂದು ಹೋಗುತ್ತಿದ್ದನು. ಅವನು ನಮ್ಮನ್ನು 

ಹೆಚ್ಚು ಪ್ರೀತಿಸುತಲಿದ್ದನು. ನಾನು ರಜನಿಯನ್ನು ವಿವಾಹ ಮಾಡಿಕೊಳ್ಳುತ್ತೇನೆಂದು 

ಕೇಳಿ, ವಿವಾಹದಲ್ಲಿ ಶುಭವೃಷ್ಟಿಯಾಗುವುದು ಹೇಗೆಂದು ಕೇಳಿದ. ಕನೈಯು 

ಅಂಧಳು ; ಏನುಮಾಡುತ್ತೀರೆಂದನು. ನಾನು ರಹಸ್ಯವಾಗಿ, ನೀವು ಅಂಧತ್ವವನ್ನು 

ಹೋಗಲಾಡಿಸುವಿರಾ ? ಎ:ದು ಕೇಳಿದೆ ಏು, ಸನ್ಯಾಸಿಯು ಒಂದು ತಿಂಗಳಲ್ಲಿ 

ಹೋಗಲಾಡಿಸುವೆನೆಂದು ಹೇಳಿ, ರಜನಿಗೆ ಔಷಧವನ್ನು ಕೊಟ್ಟು ಒಂದು ತಿಂಗಳಲ್ಲಿ 

ದೃಷ್ಟಿಯನ್ನು ಬರಮಾಡಿದನು ಎಂದು ಹೇಳಿದನು. 


ನಾನು ಮತ್ತಷ್ಟು ಆಶ್ಚರ್ಯಪಟ್ಟು, ಇದನ್ನು ನೋಡದೆ ಇದ್ದರೆ ನಂಬುತ್ತಿರ 

ಲಿಲ್ಲ. ಯುರೋಪಿನವ ಶಾಸ್ತ್ರಾನುಸಾರವಾಗಿ ಇದು ಅಸಾಧ್ಯವಾದುದು ಎಂದೆನು. 


ಈ ಮಾತು ನಡೆಯುತ್ತಿರುವಾಗ ಒಂದು ವರುಷದ ಒಂದು ಶಿಶುವು ಅಂಬೆ 

ಗಾಲು ಇಡುತ್ತ, ಏಳುತ್ತ, ಬಿಳುತ್ತ ತಪ್ಪು ಹೆಜ್ಜೆಗಳನ್ನು ಹಾಕುತ್ತ 'ಅಲ್ಲಿಗೆ ಬಂದು 

ರಜನಿಯ ಕಾಲುಗಳನ್ನು ಹಿಡಿದೆದ್ದು ಬಿದ್ದು ಅವಳ ಸೀರೆಯ ಶರಗನ್ನು ಹಿಡಿದು 

ನಿಂತುಕೊಂಡು ಅವಳ ಮುಖವನ್ನು ನೋಡಿ ಘಟ್ಟಿಯಾಗಿ ನಗಲಾರಂಭಿಸಿತು. 


ಆನಂತರ ನನ್ನ ಮುಖವನ್ನು ನೋಡಿ ಕೈ ಯತ್ತಿ ನನ್ನನ್ನು ದಾ ! ಜಾ ! 

ಎಂದು ಕೂಗಿತು. 


ನಾನು-ಮಗು ಯಾರು ? 


ಶಚೀಂದ್ರ-ನಮ್ಮ ಮಗು. 


ನಾನು-ಮಗುವಿನ ಹೆಸರು ಏನು ಇಟ್ಟಿದೆ ? 


ಶಚಿಂದ್ರ-ಅಮರಪ್ರಸಾದ 


ನಾನು ಅಲ್ಲಿ ನಿಲ್ಲಲಿಲ್ಲ. 


ಸ೦ಪೂರ್ಣ 

..................................................