ಮಂಗಳವಾರ, ಫೆಬ್ರವರಿ 18, 2020

ಹಾಸ್ಯ ಪ್ರಬಂದಗಳು-ಕೌಜಲಗಿ ಹಣುಮಂತರಾಯರು

https://archive.org/details/in.ernet.dli.2015.364322
  ನಾಟ್ಯಛಬಗಳು   ಭಾಗ ೧ 
ಈ ನಾಟ್ಯಛಟಗಳಲ್ಲಿ ಮಾನವಸ್ತಭಾವದ ವಿವಿಧ ಚಿತ್ರಗಳನ್ನು   ಸುಂದರವಾಗಿ ವರ್ಣಿಸಿದೆ.   [ರ್ಟ   ಇ   ಗಿಟಿ.   (3).   (೨.   ಕಾಶೀಬಾಯಿಯನರ ಯಾತ್ರಾಪ್ರಯಾಣ   ಕಲಿಯುಗದ ಹರಿಶ ಂದೃ ಅರ್ಧಾ   ನ ಬ ಹಾಕ್ರೀದಾರ   ಆತಿಥ್ಯ   ಜೀವಂತ ಜ್ಮಾಲಾಮುಖಿ ಅಥವಾ   ಹಳ್ಳಿಯ ಸೂತ್ತಾ ಶರು   ದೇನರ ಪೂಜೆ   ಹೊಯ ಮಾಲಿ ಅಧವಾ   ಮುತ್ತಿನ ಬಂಡವಾಲಿ   ವರದಕ್ಷಿಣ ನಿರ್ಮೂಲನ ಅರ್ಥಾತ್‌   ಮೂರ್ತಿಮಂತ ಸ್ಪಾರ್ಥತ್ಯಾಗ   ನತೂರನೇ ಮುಡದಿವಿ ಮಹಾಸಂಕಟಿ   ಧಾರನಾಡದ ಅಶ್ವರತ್ತ್ನ ಅರ್ಥಾತ್‌   ಒಾಂಗಾದ ಕುದಡಿ   ಕಲಿಯತುಗೆ ಬಂತು   ವುತಸಂಪಾದನೆಗೆ ರಾಮಜಭಾಣ      ಆದುನಿಕ ಅಜವಿಲಾಪ
==============================================
  'ನಾಟ್ಯಛಟ' 

   ಕಾಶೀಬಾಯಿಯವರ ಯಾತ್ರಾಪ್ರಯಾಣ 
ಕಾಶೀಬಾಯಿ-" ಟಾಂಗಾ ಬಂತು ! ಎಂಥಾ ಲಗೂನ ಗಾಡೀ ಹೊತ್ತಾ 
ತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ 
ಮುಗಿದs ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗs ಉಡುಪಿ 
ಕೃಷ್ಣನ್ನs ನೋಡೆರ ಬರೂಣ. ಗಂಟ ಕಟ್ಟಿದ್ದs ಅದ. ವೈದು ಬಾಂಗಾದಾಗ 
ಇಡಪಾ. ನೀ ಬ್ಯಾಡ ಮಲ್ಯಾ. ಈಗs ಮೈಲಿಗಿ ಮಾಡಬ್ಯಾಡ, ಗೋವಿಂದಾ 
ನೀ ಇಡ ಬಾಳಾ. ಹಿಂದಿನ ಮಗ್ಗಲ ಇಡು. ಟಾಂಗಾದ ಇಮಾಮಗ 
ಮುಟ್ಟಿಸ ಬ್ಯಾಡ. 
ಹೋಗಿಬರ್ತಿನಾ ಗಂಗಾಬಾಯಿ, ಹುಡುಗುರು ಹುಪ್ಚಿ ಜ್ವಾಕೀಲೆ 
ಇರ್ಯಾs. ಅಂದಾಕರಾ ಉಲಳಕೋಚಿ ಹುಡುಗರು. ಭಾವಿಕಡೆ ಹೋಗ್ಗೊಡ 
ಬ್ಯಾಡಾ. ಭಾಂವ್ಯಾಗ ಹಣಿಕಿ ಹಾಕ್ಯಾವು ಎಲ್ಯಾರೆ, ಒಂದು ಹೋಗಿ 
ಒ೦ದು ಆದೀತು. ಹಿಂದಿನ ಬಾಗಲಾನ ಇಕ್ಕಿ ಚಿಲಕಾ ಹಾಕು. ಅಂದರ 
ನಿಶ್ಚಿಂತಿ ಆಗತದ. ಇಷ್ಟು ಹುಡುಗುರ್ನ ಕಟಿಕೊಂಡು ಹ್ಯಾಂಗ ಇರ್ತೀಯೋ 
ಏನೋ. ಇದೇ ಚಿಂತಿ ಹತ್ತೇದ ನನಗ. ಅವು ಕಿರಿಕಿರಿ ಮಾಡತಾವಂತ 
ಸಿಕ್ಕದ್ದ ತಿನ್ಲಿಕ್ಕೆ ಕೊಡಬ್ಯಾಡ. ಬ್ಯಾಸಿಗೆ ದಿವಸ ನೀರು ಕುಡಕುಡದು 
ಜಡ್ಜಾಗ್ತದ ಹುಡುಗರಿಗೆ, ಮನ್ಯಾಗೇನಾರ ಮಾಡಿದರ ಇರಿವಿ   ಮುಕರಿದ್ಹಂಗ
ಮುಕರತಾವ ಖೋಡಿಗೋಳು ! 
ಹೌದು ನೋಡು. ಮರ್ತೆ ಬಿಟ್ಟಿದ್ದೆ. ಇರವಿ ಅಂಬೋಣ ನೆನಪು ಆಯ್ತು. 
ಬೆಲ್ಲದ ಹರಿವಿ ಬುಡದಾಗಿನ ಪರಾತದಾಗ ನೀರು ಉಳಿದಿಲ್ಲ. ಎಲ್ಲಾ ಇರಿಬೀ 
ಪಾಲು ಆದೀತು. ಬೆಲ್ಲಾ ನೋಡಪಾ ರಾಮೂ. ನೀನರೆ ನೆನಪಲೆ ನೀರ್ಹಾಕು.
ಇಲ್ದ್ರಿದ್ರ ತಟ್ಟಿನಾಗ ಕಟ್ಟಿ ನೆಲನಿನ ಮ್ಯಾಲೆ ಇಡು.ಅಂದರs ತಾಪೇ ತಪ್ತದ. 
ಅದೇನು ಹಾಲ್ಮಸರಿನ ಗಡಿಗೆಲ್ಲಾ.  ಬೆಕ್ಕು ಹಾರಿ ಕೆಡವು ಹಾಂಗಿಲ್ಲ. ಅಷ್ಟು 
ಮಾಡಿ ಬಿಡು. 
ಬೆಕ್ಕಂಬೂಣಾ ಧ್ಯಾನಕ್ಕ ಬಂತ ನೋಡು. ಈ ಗಾಡಿ ಗಡಿಬಿಡಿ 
ಯೊಳಗ ಹಾಲು ಮಸರಿನ ಕಿಡಕಿ ಬಾಗ್ಲಾನs ಹಾಕಿಲ್ನಾನು. ಗೋವಿಂದಾ 
ಹಾಕಿಬಾರಪಾ ಬಾಗಲಾ. ಮುಪ್ಪಿನಕಾಲ. ನನಗೂ ಅರವು ನುರವು ಆಗ್ಲಿಕ್ಕೆ 
ಹತ್ತೇದ, ಕೈಕಾಲೊಂದು ಒಣಗಿ ಹತ್ತೀಕಟಗಿ ಆಗ್ಯಾವ.  ನೆನಪೊಂದು 
ಹಾರಲಿಕ್ಹಂತ್ಯಂ ಆಗೇ ಹೋತು. ಕೃಷ್ಣಾ ನೀ ಮಾಡಿದ್ದೇ ಖರೇಪಾ 
ಇರ್ಲಿ! ನಂದೇನ ಯಾಕಾಗವಲ್ದು, ಹತ್ತೀ ಕಟಿಗಿ ಅಲ್ಲೇ ಬಿಟ್ಟಿರ್ನೋಡ್ರಿ 
ಬೈಲಾಗ್ಯೆ. ಎಲ್ಯಾರೆ ಒಂದು ಅಡ್ಡ ಮಳಿ ಹೊಡೀತಂದರs ಎಲ್ಲಾ ತೊಯ್ದು
ಹೋಗ್ತಾವ, ತಂದು ಎಮ್ಮೆ ಕಟ್ಟೊ ಕೊಟ್ರ್ಯಾಗರಂs ಇಡಸು ರಾಮೂ; 
ಮರೆಯಬ್ಯಾಡಾ. ಅಯ್ಯಯ್ಯ. ಎಮ್ಮಿ ಕರಾ ಕಟ್ಸೂದ್ಸುದ್ದಾಾ ಮರ್ತೆ 
ಬಟ್ನಾನು ! ಮಲ್ಯಾ ನೀನರೇ ನೆನಪ ಮಾಡಬೇಕೋ ಇಲ್ಲೋ ! ಹೋಗು 
ಕರಾಕಟ್ಟು. 
ನಾ ಬರ್ತೀನ್ಯಾ ಹೂಂ. ಟಾಂಗಾ ಹೆೊಡೀಪಾ ಇಮಾಮಾ, ಉಡುಪಿ 
ಯಾತ್ರೀಯವರೆಲ್ಲಾರೂ ಟೇಸನ ತನ್ಕ ಹೋಗಿದ್ದಾರೋ ಏನೋ ! ತಡಾ 
ಅತ! ಗಾಡೀ ಸಿಗೂದಿಲ್ಲ? ಅಯ್ಯ ನನ್ನ ಕರ್ಮ | ನನ್ನ ನಸೀಬ್ದಾಗಿಲ್ಲ 
ಉಡುಪಿ ಯಾತ್ರಿ. ದೇವರೇನ್ಮಾಡ್ಯಾನು. ಇರ್ಲಿ. ಹೊರಟಿದ್ದು ಹೊರಟೇವು 
ತೊರವಿಗ್ಹೋಗಿ ನರಸಿಂಹ ದೇವರಿಗೆ ಕಾಯರೇ ಒಡಿಸಿಗೊಂಡು ಬರೋಣ.   
ನಮ್ಮ ಪಾಲಿಗೆ ತೊರವಿ ನರಸಿಂಹ ದೇವ್ರs ಉಡುಪಿ ಕೃಷ್ಣಾಂಬೂಣು.
ಇಂದ್ಯಾವಾರ ? ಮಂಗಳವಾರ ! ತೊರವಿಗ್ಹೋಗೂದಾದ್ರ ನಾಡ್ದ ಬ್ರಸ್ಪತ್ವಾರ 
ಹೋದರಾತು. 
ಇಳಸಸಪಾ ಸಾಮಾನ. ನಿನ್ಮಾಡೂದು ಹರಿ! ನಿನ್ನಿಛ್ಛಾ || 
==================================
  ಕಲಿಯುಗದ ಹರಿಶ್ಚಂದ್ರ   ಅರ್ಥಾತ್‌      ಸಾಕ್ಷೀದಾರ 
  (ವಿಜಾಪುರ ಡೋಣಿಸಾಲಿನ ಭಾಷೆಯಲ್ಲಿದೆ) 

 ರಾಮಣ್ಣ- ನಟ್ಟ ಕಡದಾದ್ರೂ ಖರೇತನದಿಂದ ಹೊಟ್ಟೀ ತುಂಬಿಕೋ 
 ಬೇಕಂತ ಶಾಸ್ತ್ರಾ ಹೇಳ್ಳಾಕ ಬಂದಾರು ಶಾಸ್ತ್ರಾನ ಏ. ಯಾರು ಕೇಳಿದ್ರ ನನ್ನ,   
ನಟ್ಟು ಕಡೂಮುಂದs ಎಷ್ಟ ನಶಿಕ್ಲೆ ಹೋದ್ರೂ ತಡಾಯಾಕಂತ ಕೇಳವ್ರs 
ಮತ್ತ ನಟ್ಟ ಕಡದ ಮ್ಯಾಲ ಹೆಂಟಿ ಉಳಿದೂವು ಪಳಿ ಉಳಿದೂವು ಗುದ್ಲಿ 
ನೆಟ್ಗೆ ಇಳಿಸಿಲ್ಲಾs ಬಿಸಲ್ನೆತ್ತಿಮ್ಯಾಗ ಬಂದಿಲ್ಲಾs ಇನ್ನೂ ಆರತಾಸ ಆಗಿಲ್ಲಾ   
ಒಂದs ಎರಡು ನೂರನೆವಾ ಹೇಳಿ ಎರಡು ಸೇರ ಸರಗ ಜೋಳ ಕೂಲಿ ಅಳೀ 
ಬೇಕಾದ್ರ ಮೂರ್ಕೇರೀ ನೀರ್ಕುಸ್ಬಿಡತಿದ್ರಪಾ, ಗೋಳು. ನಟ್ಟಿನ ಹೊಲದಾಗ   
ಕಾಕುಳ್ಳ ಕೂಡಿಸಿ ಚಾ ಮಾಡಿ ಕುಡದ್ದ್ರ ತಮ್ಮಪ್ಪನ ಗಂಟು ಹೋದ್ಹಾಂಗ     
ಮಾಡತಿದ್ದ್ರು. ಎಕ್ಕೀ ಎಲೀ ಬತ್ತಿ ಕಟ್ಟಿ ತಂಬಾಕ ಸೇದಿದ್ರ ಕಂಣು ಕೆಂಪ 
ಮಾಡ್ತಿದ್ರಣ್ಣವರು. ಅವs. 
ಈ ಗ್ಹಾಂಗಾಗೇತಿ ? ಗಳಿಗ್ಗೊಮ್ಮೆ ರಾಮಣ್ಣಾ ! ಚುಟ್ಬಾ ಬೇಕs ಬಿಳಿ 
ಬಿತ್ತಿಬೇಕs ಅಂತ ಕೇಳೇ ಕೇಳ್ಸೂದು. ಹರ್ಯಾಗ ಎಳಾಣ ಚಾದಂಗ್ಡಿ ತಿಂದಷ್ಟ   
ಕಾರಾ ಕುಡದಟ್ಟಚಾ. ಎರಡೂ ಹೊತ್ತು ಕಾನಾವಳಿ ಊಟಾ ಕಟ್ಟೀ ತುದಿಗೆ 
ನಿಂದ್ರಗೊಡ್ತಿದ್ದಿಲ್ಲ ನಮ್ಮನ್ನ ವಕೀಲರಮನ್ಯಾಗ. ಅದು ಈಗ ವಕೀಲರ 
ಮನೀಗೆ ಹೋಗಾಣಾ. "ಮ್ಯಾಲೆ ಬಾ ರಾಮಣ್ಣಾ ಇಕ್ಲಿ ಕೂಡಬಾ ಅಲ್ಲಿ 
ಕೂಡ ಬಾ. ಅಂತ ವಕೀಲರು ಕಾರಕೂನರು ಎಲ್ಲಾರು ಕರ್ಯಾವರs ನನಗೂ 
ಇದಲ್ಲಾ ಗತ್ತು ಗೊತ್ತೈತಿ. ಹಗರ ಎದ್ದು ಈಗ ಒಂಜರಾ ಪ್ಯಾಟ್ಯ್ಯಾಗ ದಗ 
ದೈತಿ ಹೋಗಿ ಬರ್ತೀನಂತ ಎದ್ದ ಏಳತೀನು. ಏಳಾಣ ಹೀಂಗ ಮಜಾಆಗ್ತೈತಿ,     
ಎಲ್ಯಾರೆ ಸಾಕ್ಷೀ. ಒಡದಗಿಡದೀತಂತ ಬೆನ್ನ ಹತ್ತತಾರ.
ಲ್ಲೊಂಟಿ ರಾಮಣ್ಣಾಅಂತ ಕುಂಡ್ರ ಸತಾರ. ಇಲ್ಲಪಾ. ಹಿರ್ಯಾಳಿಗೊಂದು   
ಗಚ್ಚಿನ್ದಡೀ ಸೀರಿ ಬೇಕು. ಪ್ಯಾಟ್ಯಾಗ ಹೋಗ್ಬರ್ತ್ರೀನಂತ ಅಂತಿದೇನು. ನನ್ನ   
ಬೆನ್ಹತ್ತಿ ಬಂದು ಸೀರಿ ಕೊಡಸ್ತಾರು ಖಣ ಕೊಡಸ್ತಾರು, ಎಲ್ಲಾ ಕೊಡಿಸಿ 
ಮತ್ತ ತಿರಗಿ ವಕೀಲರ ಮನೀಗೆ ಕರಕೊಂಡು ಬರತಾರ. ಈಗತ್ತು ಮಾಡದ     
ಹೊರ್ತ ಗತೀನ ಇಲ್ಲಾ. ಇಲ್ದಿದ್ರ ಮನೀಖರ್ಚ ನಡಿಯೂ ಬಗೀ ಹ್ಯಾಂಗ? 
ಹೌದು ರೌದು ನಾವು ರೊಕ್ಳಾತಗೊಂಡ ಸಾಕ್ಷೀಬರ್ತೀವಿ. ನಮ್ಮನೀ 
ಅನ್ನ ಉಂಡು, ನೋಡದ ಕೇಳದ ನೋಡಿದ್ಹಾಂಗ ಕೇಳಿದ್ಹಾಂಗ ಹೇಳ 
ಬೇಕಾದ್ರ ಪುಗಸಟ್ಟೆ ಐತೆ? ಅದರಾಗ ಅವರ ವಕೀಲ ಹಡ್ಡಿ ಹಡ್ಡಿ ಕೇಳಾಂವಾ, 
ಎಲ್ನಿಂತ್ತಿದ್ದಿ, ! ಎಲ್ಕುಂತಿದ್ದಿ ? ಮಾರಿ ಯಾವ ದಿಕ್ಕಿಗಿತ್ತು ? ಬೆನ್ನಯಾವ 
ದಿಕ್ಕಿಗಿತ್ತು? ಮಾಡಹಾಕಿತ್ತೋ? ಬಿಸಲ್ಬಿದ್ದಿತ್ತೋ? ಏಡಕ್ಯಾರಿದ್ರು ? 
ಬಲಕ್ಯಾರಿದ್ರು? ಹಿಂದೇನಿತ್ತು ? ಮುಂದೇನಿತ್ತು ? ಅಂತ ಒಂದs ಎರಡs 
ಸಾವಿರ ಕೇಳಾಂವಾ. ಅದಕ್ಕೆಲ್ಲಾಕೂ ಜವಾಬ ಕೂಡಬೇಕಾದ್ರ ಮನಿಷ್ಯಾ   
ಹುಶ್ಯಾರ ಇರಬೇಕು. 
ಇಲ್ಲಿದ್ರ ಅಂದಾಕರಾ ಬೆರಕಿ ಮಕ್ಕಳು ವಕೀಲರು, ಹಗರಕ ಒಯ್ದು   
ತೆಗ್ಗಿನ್ಯಾಕ ಹಾಕ್ತಾರು. ಸಾಕ್ಷಿದಾರನ ದಗದ ಬಲು ಬೆಂಡ್ಲ ದಗದ. ಸುಳ್ಳಿಂದು   
ಖರೇ ಹಾಂಗ ಹೇಳಬೇಕು. ಖರೇ ಇದ್ರೂ ಸುಳ್ಳು ಕಾಣ್ಣಾಂಗಿದ್ರ, ಅದನ್ನು   
ಹೇಳಬಾರದು. ಹಿಂಗ ಮಾಡಿದ್ರನ ರಾಮಣ್ಣಾ, ರಾಮಣ್ಣಾ ಅಂತ ಕರಕಕೊಂಡು   
ಹೋಗಿ ಗೋದಿರೊಟ್ಟಿ ಬಾಳೀಹಣ್ಣ ತಿನಸ್ತಾರ, ಇಲ್ದಿದ್ರ ಪುಂಡೀಪಲ್ಯಾ 
ತಂಗಳ ರೊಟ್ಟಿ ಸಿಗಬೇಕಾದ್ರ ಕಣ್ಣೀರ ಕಪಾಳಿಗೆ ಬರ್ತಾವ. ತಿಳಿತs, ನಟ್ಟ 
ಗಿಟ್ಟು ಎಲ್ಲಾಸುಳ್ಳು. ಸುಳ್ಳ ಸಾಕ್ಷೀ ನುಡೀಲಾಕ ಕಲೀಬೇಕು ಆಂದ್ರನs 
ನಾಕೊಪ್ಪತ್ತು ದೇವರು ಹೊಟ್ಟಿ ಸಾಗಸ್ತಾನ, ತೀಳೀತs
==================================== 
  ಆತಿಥ್ಯ   
  ( ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ 
   ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು) 

“ಆಲಲ ರಾಯರ ಬರೋಣಾಯ್ತೇನು?,... ಬರಬೇಕ.... ಬರಬೇಕು. 
ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?.... ಇಲ್ಲೆ ,ಇಲ್ಲೆ 
ಮ್ಳಾಲೆ ಕೂಡ್ರಿ ರಾಯರs! ಎಲೋ... ಯಾರಾವರು....? ದಿಂಬೆಲ್ಲಿ 
ಅದನೋ....? ತಾ; ತಾ, ಲಗೂನs ತಾ! ಏನಪಾ... ಈ ಹುಡಗೋರು.... ! 
ಇಟ್ಟದ್ದು ಇಟ್ಟಲ್ಲಿ ಇರಗೊಡೂಹಾಂಗs ಇಲ್ಲ! ಕೂಡ್ರಿ ರಾಯರs ಕೂಡ್ರಿ.... !   
ಹುಡುಗೂರ ಕಾಲಾಗ ಬ್ಯಾಸತ್ತು ಹೋಗಿನ್‌ ನೋಡ್ರಿ... ಅತು ಹಾಸಗೀ 
ಸುರಳೀಗೆ ನಂಬಿ ಕೂತುಗೊಳ್ರಿ!  ಏನು ಚಹ ಆಗಬೇಕ್ಕೂ ಕಾಫಿಯೋ, 
ಹಾಲೊ....? ಏನುಬೇಕು ಹೇಳ್ರಿ! ಒಲ್ಲೇ ಅಂದ್ರ ಕೇಳೂಹಾಂಗಿಲ್ಲ... 
ಬಡವರ ಮನೀಗೆ ಬಂದು ಏನು ಹಾಂಗs ಹೋಗತಿರಾ? ನಾಳೆ ನಿಮ್ಮ 
ಮನೀ ಮುಂದ ನಾಲಗೀ ಕಿತ್ತಿಗೊಂಡು ಪ್ರಾಣಾ ಕೊಟ್ಟೇನು! "
"ಏ... ಒಳಗ ಹೇಳೊ ರಾಯಂಗೆ ಸ್ವಲ್ಪ ಸಜ್ಜಗೀ ಮಾಡಂತ 
ಹೇಳು....! ಮತ್ತ ಸಜ್ಜಗೀ ತುಪ್ಪದಾಗ ಕರೀಲಿಕ್ಕೆ ಹೇಳು....! .ಇಲ್ಲನಿದ್ದರ 
ಏನ ಕೇಳತೀ ಅದು ಡೊಣಿಸಾಲ ಹೆಣ್ಣು ! ನುಚ್ಚು ಕುದಿಸಿ ಇಟ್ಟೀತು...!
ಸೀ ಸಜ್ಜಗೀ ಅಂತ ಹೇಳು ಮತ್ತೆ... ! ಇಲ್ನೋಡು, ಒಮಗಿಲೆ ಓಡಬ್ಯಾಡ ! 
ಕಿವಿ ಕಿತ್ತೇನು... ಪೂರಾ ಕೇಳಿಕೊಂಡು ಹೋಗು! ಬರೇ ಸೀ ಆದರ ನೆಟ್ಟ- 
ಗಾಗೂದಿಲ್ಲ, ಸ್ಪಲ್ಪ ಅವಲಕ್ಕೀ ಒಗ್ಗರಣೀ ಹಾಕಲಿಕ್ಕೆ ಹೇಳು....! ಎಲೆ 
ಯಲ್ಲಾ! ಗೌಡರ ಹಿತ್ತಲಾಗಿಂದs ಕರೀಬೇವು ಇಸಗೊಂಡು ಬಾರೊ-- 
ಅವಲಕ್ಷಿಗೆ-ಅವಲಕ್ಕಿ ಘೆಮಾ ಘಮಾ ಆಗಲಿ!.... ಚಹಾಕ್ಕ ಒಂದು ಬ್ಯಾರೆ 
ಎಸರಿಡಲಿಕ್ಕೆ ಹೇಳು ಸುಳ್ಳs ತಡಾ ಮಾಡಬ್ಬಾಡ್ರಿ'
“ ಎಲೊ--ಅಳಮಾರೀಗಂಡೇ ! ಗಂಡಸು ನೀನು?,.. 'ಸಕ್ರಿಲ್ಲಾ- 
ಚಹಾ ಇಲ್ಲಾ-' ಹೇಳಲಿಕ್ಟ ಬಂದಾನ ಅತುಗೋತ....! ಹೋಗು ಓಡು 
ಜಲ್‌ದಿ..., ಚಿನಬಸಪ್ಪನ ಅಂಗಡಿಗೆ ಹೋಗು, ನಾ ಹೇಳಿಸಿ ಅಂತ ಹೇಳು! 
ಅತಗೋತಾs ತಿರಿಗಿ ಬರಬ್ಯಾಡ ! ಕಾಲು ಮುರದೀನು, ಹಾಂಗ ಹೀಂಗ ಅಂತ   
ಚೆನಬಸಪ್ಪ ಅದs ಮಾತು ಹಚ್ಚಾನು...., ರಾಯರು ಬಂದು ಕೂತಾರಂತ     
ಹೇಳು, ಇಲ್ನೋಡು.... ಹಂಗs ನಾಲ್ತು ಅಡಕಿ ಒಂದ್ನಾಲ್ಕು ಲವಂಗ, ಒಂದು 
ಕಾಚಿನಿ ಹಳ್ಳು ಕೊಡಂತ ಹೇಳು-- ಜೆನಬಸಪ್ಪಗ... ಲಗೂ ಬಾ, 
ಬಿಸಲಾಯ್ಕು.... ! 
“ ಏನಂತಾರೋ ಒಳಗ....? ತುಪ್ಪಿಲ್ಲಂತ....? ಇಷ್ಟೊತ್ತು ಏನು 
ಮಾಡತಿದ್ಲು,...! ಹೇಳಲಿಕ್ಕೆನಾಗಿತ್ತು... ಹುಣ್ಣಾಗಿತ್ತೃನು  ಬಾಯಿಗೆ... ? 
ತುಪ್ಪ ತೀರಿಯೋಯ್ತೇನು ? ಇದs, ಇಂದ ಇನ್ನೂ ಮಂಗಳವಾರ...
ಶನಿವಾರ   ಸಂತೀ ದಿನ ಮೂರು ಸೇರು ಬೆಣ್ಣಿ ತಂದಿತ್ತು....; ಏನು  ಎರಕೋತಾಳೋ 
ಏನೊ ತುಪ್ಪದಲೆ! ಎಷ್ಟು ತಂದರೂ ಈಡs ಆಗೋದಿಲ್ಲ... ! ಹೋಗೋ   ದಾಮೂ;
ಕುಲಕರ್ಣ್ಯಾರ ಮನ್ಯಾಗ ತುಪ್ಪಾ ಇಸಗೊಂಡು ಬಾ... ಸಂತೀ 
ದಿವಸ ಕೊಡತೀವಂತ್‌ ಹೇಳು ! ಕೂಡ್ರಿ ರಾಯರು ತಡಾ ಅತ್ಯು! ಹತ್ತ. 
ನಿಮಿಷದಾಗs ಚಹಾ ಆಗತದ...; ಎಂದೂ ಬಾರದವರು. ಹಂಗs ಕಳ- 
ಸೂದು ನಮ್ಮ ಧರ್ಮs ? 
“ ಏನದೂ....? ಗುರೂಗುರೂ ಸಪ್ಪಳ್ಳಾತರದು? ಸಜ್ಜಗೀ ಒಡೀತಾರ 
....? ಬೇಶ್‌ ಬೇಶ್‌ ಇದ್ದರಿಂಥಾ ಹೆಣ್ಣು ಇರಬೇಕು....; ಲಗೂ ಆಗಲೀ 
ಅಂತ ಹೇಳು. ರಾಯರು ಹಸದಿದ್ದರು.... " 
 ( ಒತ್ತಾಯದ ಕೆಮ್ಮನ್ನು ತಂದುಕೊಂಡು ಖೇಕರಿಸಿ ಉಗಳಲೆಂದ. 
 ಹೊರಗೆ ಹೋದ ರಾಯರು ಮೊಚ್ಚೆಯ ಪರಿವೆಯಿಲ್ಲದೆ ಊರಿನ ವರೆಗೆ 
 ಓಡಿ ಬಿಟ್ಟರು.) 
 =====================================
ಜೀವಂತ ಜ್ಲಾಲಾಮುಖಿ     
ಅಥವಾ 
ಹಳ್ಳಿಯ ಸೊಸ್ತ್ಯಾರು 

"ಅಯ್ಯ ಶಿವನss....,' ಸೊಸ್ಗತ್ಯಾರು ಮಕಳು ನೂಲತಿದ್ದರ 
ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ ........ಇವರೆಲ್ಯಾರೇ ದಗದಾ 
ಮಾಡವರs ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಆಂದರ ನಡಾ ನೂಸ 
ತೈತಿ. ಪಿಂಡ್ರಿ ನೂಸತಾವು ಅಂತಾರು! ಒಂದs ಒಂದ ಧಡೆ ಕಾಳು ಆರೂ 
ದ್ರಾಗs ಚರೀನ ಕಟ್ತಾರ ಮ್ಯಾಗಿಂದ ತೆಳತನಕಾ! ಇದರಾ ಬದರಾ ಕಟ್ಟೀ 
ಮ್ಯಾಗ ಕುಂತು ಚಕ್ಕಂದ ಆಡಲಾಕ ಕಲ್ತಾರ ಚಕ್ಕಂದಾ!!! 
" ಎಮ್ಮಿ ಮೈತೊಳಕೊಂಡ ಬಾ ಅಂದರ ಹಳ್ಳದ ದಂಡಿ ಮ್ಳಾಗ 
ಹಿಂಬಡಾ ತಿಕ್ಕೊಂತs ಕೂಂಡ್ರತಾಳ ನನ್ನ ಸೊಸಿ....! ಎಮ್ಮಿ ಬಾಲಕ್ಕ ಹತ್ತಿದ್ದ 
ಹೆಂಡಿ (ತೆಗಣಿ) ಹಂಗs ಇರತೈತಿ...ಈ ಚದುರಿ s ಮುರಕಾ ಮಾಡಿಕೊತೇs 
ತಿರತಿರಗಿ ಹಿಂಬಡಾ ನೋಡಿಕೋತ,- ಬರತಿರತಾಳ ಓಣಿಗುಂಟ. ಇಕಿ  ಹೀಂಗ 
ಬರೂದರೊಳಗು ಎಮ್ಮಿ, ಕರೀಗೆ ಹಾಲುಣಸಿ ಬಿಟ್ಟರತೈತಿ...ಆತಲ್ಲಾ ಮುಗದs- 
ಹೋತು ” 
"ಇವರನ್ನ ಸಂತಿ ಮಾಡಿಕೊಂಡು ಬರಲಾಕ ಪಂಚೇತಿ 
ಐತ್ರಿ.... ಮುಂಗ್ಟೆ ಮ್ಯಾಲಿನ ಹಚ್ಚೀಬಟ್ಟು ನೋಡಿಕೋತ ತಕ್ಕಡೀ ಹಿಡಿದರ 
ಏಲ್ಯಾರೆ ತೂಕ ಆಕ್ಕೈತೆ? ಆದರಾಗೂ ಕಳಕೂೊಳ್ಳೂೂದು ಮಾತ್ರ. ಬೆಣ್ಣೀ 
ಮಾರಿ ಕಂಡ್ಹಾಳ (ಕನ್ನಡಿ) ಕೊಳ್ಳೂ ಅವರನ್ನ ನೀ ಎಲ್ಲ್ಯಾರ ನೋಡೀದೀಯಾ 
ಯಪ್ಪಾ? ಹುಟ್ಟಿ ಮೂರಿಪ್ಪತ್ತರ ಮ್ಯಾಲೆ ಹತ್ತ್ರವರಸ ಆದೂ.......ನಾ ಹೆಣ 
ಮಗಳ ಇನ್ನೂವರಿಗೂ ಒಂದಿನಾ ಕಂಡ್ಹಂಳ್ಳ ಕೈಯಾಗ ಹಿಡಿದಿಲ್ಲ...? ಈಕಿ 
ನನ್ನಸೊಸಿ!...ಮುಚ್ಚೌ‌ಲು ಕೊಟ್ಟು ಕಂಡ್ಹಳ್ಳ ಕೊಂಡುಕೊಂಡು ಬಂದಾಳ. 
ಇದಕ್ಕ ಏನಿನ್ನ ಹಣೀಹಣೀ ಗಟ್ಟಿಸಿಕೊಂಡ್ರನs ಸರಿ! ಸಂತಿಗೆ ಹೋಗೂ
ದಂದರs ಎಲ್ಲಮ್ಮನ ಜಾತರಿಗ್ಹೋದ್ಹಾಂಗ ಮಾಡ್ತಾರ. !ಇವರ ಆದವಾನೀ ಕರೆ 
ಅಂಚೆನಸೀರಿ ಇವರ ಜರಾಗೊಂಡೇವಹಚ್ಚಿದ ಚೆಪ್ಪಲಿ ಏನ ಹೇಳ್ಯೂ   
ಯಪ್ಪಾ; ಎಲ್ಲಾ ದಿವಸಾನs ಉಪರಾಟೀ ಬ೦ದಾವು ! 
"ಗಂಡಂದಿರ ಅಂಜಿಕ್ಯಂತ... ಇದಕೇಳ್ರಿ ನಗ್ಗೇಡು....! ಗಂಡಂದಿರ 
ಅಂಜಿಕೆ ಇವರಿಗೆ ಎಲ್ಲೈತೊ ನನ್ನ ಮಗನs! ಹೆಂಡಂದಿರ ಸೀರಿ ಒಗೆಯೊ 
ಈ ಹೊಲಸ ಗೋಳು, ಹೆಣತಿನ್ನ  ಅಂಜಿಕ್ಯಾಗಿಡತಾವs....! ಇವು 
ಎಲ್ಯಾರೆ ಬಲೂರೀ.... ಹಾಕ್ಕೊಂತ ಗೊಬ್ಬರ ಬಂಡೀನ ಹೊಡೀಬೇಕು.
ಹೆಂಡರು ಇವರ ಮಾತ ಕೇಳಿದರ ಮಳೀಬೆಳಿ ಯಾಕ ಹೋಗತಿತ್ತು
”ಈಗಿನ ಕಾಲನs ಬ್ಯಾರೆ ಬಂದೈತಿ! ನೂಲವರೆಲ್ಲಾ ಸತ್ತಸತ್ತ
ಹೋದರು....; ಇಲ್ಲೆ ಈ ನ್ಯಾಮದೀವರ ಕಟ್ಟೀಮ್ಯಾಗ ಆರಾರು ತಾಸು 
ರಾತ್ರೀ ತಂಕಾ 'ರಂವ್‌ ರಂವ್‌' ಅಂತ ನೂಲೂದsನೂಲದು....; ಸೇರು 
ಹಂಜೀ ನೂಲೂದರೊಳಗ ಗಿರಪಾವು ಕಡ್ಲೀ ಶಿಂತಿದ್ಲು ನಮ್ಮ ಅತ್ತಿ....!  ಈಗಿನ 
ಹೆಣ್ಣs ! ಹಾಲೂ ಅನ್ನಾ ಉಂಡು ಹಾಸು ಹೊಯ್ಯs ನನ್ನ  ಮಗಳs ಅಂದರs 
ನಾ ಊರನ್ನ ನೋಡಿಕೊಂತs ನೀರ ತರತೀವಿ ಅಂತಾವ್ರು, ತಮ್ಮಾ...?   
ನೋಡೊs ಯಪ್ಪಾ ನೋಡು; ನಾಬೇದs ಬೆಯ್ಯತೇನು, ಅವಕ್ಕ  ಏನಾರೆ 
ಬುದ್ದಿ ಐತೇ ನೋಡು ಹ್ಯಾಂಗ ಖಿಸಿ ಖಿಸಿ ಹಲ್ಲ ಕಿಸೂತಾವ! ಸುಟ್ಟಶಿವಾ 
ಮರತಾನ್ನ ನನ್ನ! ಏನು ಮಾಡೂದೈತಿ 9 ಅಷ್ಟs ಉಪ್ಪು  ಮೆಣಸಿನಕಾಯಿ 
ಆದೀತು. ಬಡತನದ ಜಲಮ ಯಪ್ಪಾ.... ! ಕಾರಹುಣ್ಣವೀ ಆಗಾಣಾ 
ಜಂತ್ರಾ ಇಡತೇನಿ ತಮ್ಮಾ! ಇವರೀಗೇನ ಇಲ್ಲಿದ್ರೂ? ನನಗ್ಸ್ಬ್ಯಾಂಗ ಬಿಟ್ಟೀ- 
ತಪ್ಪಾ ನೋಡ್ರಿ !!!
=========================
  ದೇವರ ಪೂಜೆ 

( ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ 
ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವ- 
ದೆಂದು ಯಾವಾಗಲೂ ಅವರು ಹೇಳುವರು ಇಂದು ಸ್ನಾನಮಾಡಿ ದಿನ- 
ದಂತೆಯೇ ಯಜಮಾನರು ದೇವರ ಕಬ್ಬೆಯ ಮೇಲೆ ಪೂಜೆಗೆ ಕುಳಿತಿರುವರು. 
ದೇವರ ಕಟ್ಟಿಯ ಎಡಪಕ್ಕದಲ್ಲಿಯೇ ಅಡಿಗೆಯ ತಗ್ಗಿನಕಟ್ಟೆ. ಹೆಣ್ಣು 
ಮಗಳೊಬ್ಬಳು ಅಡಿಗೆ ಮಾಡುತ್ತಿರುವಳು. ರಾಯರ ಪೂಜೆಗೆ ಆರಂಭ 
ವಾಗುವದು. ) 
"ಓ೦ ಕೇಶವಾಯನಮಃ ನಾರಾಯಣಾಯನಮಃ ಓಂ ದಾಮೋದರಾಯ 
ನಮಃ ಏ ಗೋದೀ ಸಪ್ಪಗೀನ ತವವ್ವಿಗೆ ಬ್ಯಾರೆ ಬ್ಭಾಳಿ ತಗದೀಯೋ ಇಲ್ಲೊ ? 
ಹೂಂ! ಬೇಶ್‌ !.... 'ಪ್ರಣವಸ್ಯ ಪರಬ್ರಹ್ಮಋಷಿಃ '....ಎಲೇ ಕೃಷ್ಟ್ಯಾ 
ಬಾಳಿ ಎಲೀ ನೆಟ್ಟಗಮಾಡು.... ಸುಮ್ಮನsಅಡ್ಯಾಡಬೇಡ! ' ಪಾಂತ್ರಸ್ಮಾನ್‌ 
ಪುರಹೂತ ವೈರಿ ಬಲವಾನ್‌' ಬದನೀಕಾಯಿ ಎಳೇವವ, ಇಂದ ತುಂಬ ಗಾಯಿ 
ಪಲ್ಯಾ ಯಾಕ ಮಾಡಲಿಲ್ಲಾ ಇದನ್ನೂ ಹೇಳಬೇಕs ? ಗಿಂಜಗಾಯಿ 
ತುಂಬಗಾಯಿ ಮಾಡತಿರತೀ ಒಮ್ಮೊಮ್ಮೆ ! 'ಲಕ್ಷ್ಮೀಕಾಂತ ಸಮಂತತೊ 
ವಿಕಲಯನ್‌...'  ಏ ರಾಮಾ, ಕಷ್ಟಾ ಮಾಡಿಸಿಗೊಂಡು ಲಿಸಿಲಿಸೀ ಹೋಗ 
ಬ್ಯಾಡಾ--ಊಟಕ್ಕೂಡೂ ಜಾಗಾದಾಗಿಂದ s ! " ಉತ್ಕಂಠಾ ಕುಂಠಕೋಲಾ' 
ಸಾಲಿಗ್ರಾಮಕ್ಕ ಈ ಬೆಳ್ಳಿ ಸಂಪುಷ್ಟ ಸಣ್ಣದಾಗೇದ ! ಡೊಗ್ಲಾಲ ಕೃಷ್ಣಗ
ಭಂಗಾರ ನೀರು ಕುಡಿಸಬೇಕು ! ಅಣ್ಣಾಚಾರು ಕುಡಿಸ್ಯಾರs ಛಂದಾಗೇದ!
'ಜನ್ಮಾದಿವ್ಯಾಧಿಪಾಧಿ' ಚಟ್ನಿ ಯಾತರದು ಕುಟ್ಟೀರಿ ? ಹಸೀ ಖೊಬ್ಬರೀ 
ಸಿಗಲಿಲ್ಲ? ಬ್ಯಾಸರ, ಪ್ಯಾಟ್ಯಾಗಹೋಗಬೇಕು ಯಾರು? ಖಂದಟ ಖೊಬ್ರೀ 
ಚೆಟ್ನಿ ತಿನಬೇಕs ಎಲ್ಲಾರು ಮೈಗಳ್ಳರು! ' ಮಧ್ವಾಂಖ್ಯಂ ಮಂತ್ರಸಿದ್ಧಂ' 
ಲಗೂ ಲಗೂ ಆಗಲಿ ಅಡಗಿ ಕಚೇರಿಗೆ ಹೋಗಬೇಕಾಗೇದ, ಇಂದ ಪೆನಶನ್‌ 
ತಗೊಳಿಕ್ಸೆ ! ಎಲಾ ರಾಮ್ಯಾ! ಅಗಸರಾಶ ಅರಿವೀ ತಂದನೊ ಇಲ್ಲೊ
ನೋಡು! ಇಸ್ತ್ರಿ ಮಾಡ್ಯಾನೊ ಇಲ್ಲೊ ನೋಡು.!.... ಕಣ್ಣ ಮುಚ್ಚಬ್ಯಾಡಾ. 
ಹುಡಗೋರು ಹ್ಯಾಂಗ ಚಕ್‌ ಚಕ್‌ ಇರಬೇಕು! ' ಸಾಭ್ರೋಷ್ಣಾ ಭೀ 
ಶುಶುಭ್ರಾ' ಗೋದೀ, ಭಕ್ರಿಹಿಟ್ಟು ಮುಗಿಸಿ ಬಿಡಬ್ಯಾಡ ! ಒಲಿಮ್ಯಾಲೆ 
ಹಾಂಗs ಸ್ವಲ್ಪ ಹಂಚು ಇಟ್ಟೀರು! ಊಟಕ್ಕ ಕೂತಾಗs ಒಂದು ಬಿಸಿ ಬಿಸೀ 
ದಮಟೀ ಮಾಡಿ ಹಾಕೀ ಅಂತ....! ಹೆಲ್ಲಿಂದೊಂದು ತ್ರಾಸನs ಆಗೇದ... 
ಪೂರಾ ಅರ ಬಿದ್ದು ಹೋಗವವೊಲ್ವೂ. ಹೆಡಮಾಸ್ತರ್ಹಂಗ ಹೊಸಾ
ಹಲ್ಲು   ಕೂಡಿಸಬೇಕಂದರs ! ' ಆನಂದಾನ್ಮಂದ ಮಂದಾ '  ಹುಳೀಗೆ ತುಪ್ಪದ 
ಒಗ್ಗರಣೇ ಹಾಕು-- ಗಂಟಲ್ಯಾಕೊ ಘುಸೂ ಘುಸೂ ಅಂತದ...  ಲುಚ್ಛಾರು 
ಈಗ ಎಣ್ಣೀ ಒಳಗ ಭಯಿಮಂಗದ ಎಣ್ಣಿ ಕೂಡಸ್ತಾರ! ( ಖೇಕರಿಸಿ) 
ಮರೀಬ್ಯಾಡ.... ತುಪ್ಪದ ಒಗ್ಗರಣೀ ಕೊಡು...! ' ವಂದೇಹಂತಂ 
ಹನುಮಾನ್‌' ಅಕ್ಚದಾಸ ಭಟ್ಟ ಕಳಿಸಿದ ಗಂಧಕೊರಡು; ಭಾಳವಾಸ ಅದs   
ಇದು; ಸಾಣೀಕಲ್ಲೊಂದು ಸಂವದು ಹೋಗೇದ....; ಎಷ್ಟು ಹೊಡೀತು 
ನೋಡು ಕೃಷ್ಣಾ... ಹನ್ನೊಂದs? ಅಬ್ಬಾ s! ಹಾಂ, ಹಾಕು ಎಲಿ,  ತಗೀ 
ನೈವೇದೃ....? ' ವಂದೇ ವಂದ್ಯಂ ಸದಾನಂದಂ....' ಸೀತಾಬಾಯ್ಕಿ ಮಣೀ 
ಹಾಕು ! ನನ್ನ ಮಣೀ ಎಲ್ಲಿ ಅದs? ದಿನಾ ಹೇಳಬೇಕೇನು ? ನೋಡು,
ಎಲ್ಲಾರದೂ ಸ್ನಾನಾಗೇದೊ ಇಲ್ಲೊ.... ? ' ಸುಜನೋದಧಿ ಸಂವೃದ್ಧಿ,...' 
ಹೂಂ ಬಡಿಸಲಿಕ್ಕೆ ಸುರೂ ಮಾಡು. ಈಗ ನೈವೇದೃ ಇಡತೀನಿ' ಲಿಂಬಿಹಣ್ಣು 
ಹೆಚ್ಚರಿ ದಿನಾ ಮರೀತೀರಿ. ಸುಳ್ಳೇ ಒಣಗೀ ಹೋಗತಾವ ಅವು! ' ಮಂಗ 
ಲಾನಿ ಭವಂತು ಸಂತತಂ ಶ್ರೀರಸ್ತು....! ಆತು ಮುಗೀತ s ನನ್ನ ಪೂಜಿ ! 
ಯಾವಾಗ ಒಂಭತ್ತು ಘಂಟೇಕ ಸ್ನಾನಾಮಾಡಿ ಕೂತೀನಿ, ಹನ್ನೊಂದು  ಹೊಡೀ 
ತೀಗ ! ಉಫ್ರಿನಕಾಯಿ ತಗದಿಲ್ಲs? ಉಪ್ತಿನಕಾಯೀ ಅಂದೆ 1 ಪ್ರಥಮೊ
ಹನುಮನಾಮ ...' ತೀರ್ಥಾ ತಕ್ಕೂಳ್ಳಿರೊ ಹುಡುಗೂರ್ಯಾ ! ಉಪ್ಪಿನಕಾಯಿ 
ಇಲ್ಲಿದ್ರ ಇಲ್ಲ; ಸ್ವಲ್ಪ ಮೆಂತೇದಹಿಟ್ಟು ಹಾಕು! ಅಕ್ಷಂತೀ ತಗೊ ಕೃಷ್ಣಾ!... 
ಮುಟ್ಟೀ ಹೋಗಕಡೆ! ಹೂಂ ಕೂಡ್ರಿ ಎಲ್ಲಾರೂ ।   ಶ್ರೀಮದ್‌ರಮಾರಮಣ 
ಗೋವಿಂದಾssಗೋ.... ಇಂದಾ !" 
( ಯಜಮಾನರು ಆಸೋಶನ ತೆಗೆದುಕೊಂಡು ಊಟಕ್ಕೆ ಪ್ರಾರಂಭಿ-   ಸುವರು. )
==============================
  ಹೊಯಮಾಲಿ   ಅಧವಾ   ಮುತ್ತಿನ ಬಂಡವಾಲಿ 

( ನಡು ಮನೆಯ ಬಾಗಿಲ ಒಳಬದಿಯನಲ್ಲಿ ಗಂಗಾಬಾಯಿ ನಿಂತಿದ್ದಾಳೆ. 
ಶಾಮರಾಯರು ಕಚೇರಿಯಿಂದ ಬಂದು ಪಡಸಾಲೆಯೊಳಕ್ಕೆ ಪ್ರವೇಶಿಸುವರು. 
ಸಮಯ ಸಂಜೆಯ ಆರು ಗಂಟಿ. ಬೇಸಿಗೆಯ ಕಾಲ, ಗಂಗಾಬಾಯಿ ಒಬ್ಬಳೇ 
ಮಾತನಾಡುವಳು; ಕೇಳುವವರು ಶಾಮರಾಯೆರೊಬ್ಬರೆ ) 
" ಅಯ್ಯs! ಈಗ ಬಿಟ್ಚಿತೇನು ಹಾಂಗಾದರ ಕಚೇರಿ...) ಯಾವಾಗ 
ಹನ್ನೊಂದು ಸುರುವು ಆದ್ರ ಸಂತೆನಕಾ ದುಡದು ದುಡದು ಜೀವ 
ಸಣ್ಣ ಆಗತ್ದದ...! ಬಿಸಲಂತೂ ಹೇಳೂಹಾಗಿಲ್ಲ.... ಸದರಾ ಶರ್ಟು  ಎರಡೂ 
ತೊಯ್ದ ಹೋದ್ಹಾಂಗ ಕಾಣಸ್ತಾವ. ! ತರ್ರಿ ಎರಡೂ ತರ್ರಿ
ಒಣಗಲಿಕ್ಕೆ 
ಹಾಕತೀನಿ. 
ಸ್ನಾನ ಮಾಡತೀರೋ ಏನು ಬರೇ ಕೈಕಾಲು ತೊಳಕೋತೀರೋ ?...
ಫಳಾರ ಮಾಡಲಿಕ್ಕೆ ಎಳ್ರಿ...; ಈಗ ಬರತಾರ ಮತ್ತ ಮಾರವಾಡ್ಯಾರು- 
ಲೆಖ್ಖದ ಗಂಟು ತಗೊಂಡು...! ಸುಡ್ಲಿ ತಾಯಿ! ಮುಂಜಾನೆ ಕಚೇರಿ; 
ಮಧ್ಯಾನ ಕಚೇರಿ ಮತ್ತ ಸಂಜೀನ್ಯಾಗ ಸುದ್ದಾ ಇವರ ಕಾಟ ಅದsನs! 
ನೀವಂತ ಇಷ್ಟೆಲ್ಲಾ ತಾಳಿಕೋತೀರಿ..... ಮತ್ತೊಬ್ಬರ್ಯಾರಾದರೂ  ಆಗಿದ್ದರ 
ಮೂರುದಿನಾ ಏನೂ ಪುರೋಸತಿದ್ದಿಲ್ಲ. ನಡೀರಿ... ನೀರ ಮನೆಗೆ ! 
* * * *
" ಅಯ್ಯ... ಬಿಡ್ರಿ ಸಾಕು, ಥಣ್ಣಗಿನ ನೀರು ಭಾಳ ಸುರುವಿಕೊಳ್ಳ 
ಬ್ಯಾಡ್ರಿ! ಥಂಡಿಗಿಂಡ್ಯಾದೀತು. ಅಲ್ಲೇ ಮಳೀಗೆ ಟಾವೇಲ ಅದ ತೊಗೊಂಡು 
ಒರಿಸಿಕೊಳ್ರಿ ! ” 
* * * *
"ಒಡೀ ಹ್ಯಾಂಗ ಆಗ್ಯಾವ ?... ಆಂ ನೋಡ್ರೀ ನಾಯಕರ ಕೇಸಪ್ಪ 
ಭಾಳ ಹರೇಮಿ |... ಮಾತಿನ್ಯಾಗಂತೂ ಅವನ ತೈ ಹಿಡ್ಯಾವರು ಯಾರೂ 
ಇಲ್ಲ...; ಇಂದ ಮಧ್ಯಾಂದಾಗ ಭೆಂಡವಾಲೀ ಜೋಡು ತೊಗೊಂಡು ಬಂದಿದ್ದ 
- ಮುತ್ತಿನ್ನೂ '.... ' ಗಂಡಸರು ಮನ್ಯಾಗಿಲ್ಲ.... ನೀ ಬರಬ್ಯಾಡ. ? ಅಂತ 
ಹೇಳಿಬಿಟ್ಟಿ.--ಆತಗ....! ಕೇಸಪ್ಪಾ ಎಷ್ಟ ರಿಪೀ ಇದ್ದಾನ ನಿಮಗ ಗೊತ್ತಿಲ್ಲ   
ಕಾಣಸ್ತದ...! 'ನೋಡ್ಕ್ಯಾರೆ ನೋಡ್ರಿ; ಮುತ್ತು ಭಾಳ ಅಗ್ಗ ಆಗ್ಯಾವ.... 
ಕಣ್ಣಿಲೆ ಒಮ್ಮೆ ನೋಡ್ರಿ, ಆ ಮ್ಯಾಲೆ ಬ್ಯಾಡಾ ಅಂದೀರಂತ....! ' ಅಂತ 
ಹೇಳ ಹೇಳತs ಪಡಸಾಲೀ ಕಟ್ಟಮ್ಭಾಲ ಕೂತ ಥೈಲೀನೂ ಬಿಚ್ಚಿದ...; -  ಖಾರ್‌ 
ಸಜ್ಜಿಗಿ ಹಾಕಲಿ? _ ನಾ ಭೆಂಡವಾಲಿ ನೋಡೂsದೇ ಇಲ್ಲಾsಂತ ಹೇಳಿದೆ. 
ಅದೇ ವ್ಯಾಳ್ಯಾದಾಗs ನಮ್ಮ ಕಾಧೊಟೆ ಬಯ್ಯಕ್ಕ ಬಂದಿದ್ರು-- ಸುಮ್ಮನ s 
ಭಟ್ಟಗಂತ.! 'ಅವರಿಗೆ ತೋರಿಸ್ತೀನಿ ನಿಮಗೇನೂ ತೋರಸೂದಿಲ್ಲ' ಅಂತ 
ಕೂತಬಿಟ್ಟ ಕೇಸಪ್ಪ' ಮುತ್ತು ಇಷ್ಟೊಂದು ಅಗ್ಗ ಆಗ್ಯಾವಂತ ನನಗ  ಗೊತ್ತೇ 
ಇದ್ದಿದ್ದಿಲ್ಲಾ....; ಛೆಲೊ ತೊಗರೀ ಕಾಳಿನಷ್ಟು ಅವ--ಒಂದೊಂದು ಮುತ್ತು 
" ಕಿವಿಯೊಳಗ s ಇಟಕೊಂಡು ನೋಡ್ರಿ ' ಅಂತ ಅನ್ಲಿಕ್ಕೆ ಹತ್ತಿದ ಕೇಸಪ್ಪ್ರ. 
ಬಯ್ಯಕ್ಛಗ 'ನಾ ಮುದುಕಿ ನನಗ್ಳಾತಕ್ಕ ಬೇಕs ತಾಯೀ! ನೀ ಇಟುಗೋ' 
ಅಂತ ನನಗ ಆಗ್ರಹ ನಡಿಸಿದರು ಬಯ್ಯಕ್ಕ! ಮೊಸರು ಹಾಕಲೇನು 
ಇನ್ನಷ್ಟು?.... ವಡೀ ಛಲ್ಲಬ್ಯಾಡ್ರಿ--ನಿಮ್ಮದು ಮೊದಲs ಸಿಟ್ಟಿನ  ಸ್ವಭಾವ; 
ನನಗಂತೂ ಅಂಜಿಕೀನೇ ಬಂತು.... ಆ ಬೆಂಡವಾಲೀ ಇಟಗೋಳೂ  ವ್ಯಾಳ್ಳಾಕs 
ನೀವೂ ಕಚೇರಿಂದ ಬಂದು ಬಿಟ್ಟದ್ದರ ಅಲ್ಲೇ ಕೂತ ಬಿಡತಿದ್ರೆ ಕಾಲ 
ಕಳ್ಳೊಂಡು | ಬಯೃಕ್ಕ ಬಿಡ್ಲೇ ಇಲ್ಲ... ಬೆಂಡವಾಲೀ ಇಡಿಸಿ ಕನಡೀ  ಮುಂದ 
ಒಯ್ದು ನಿಂದರಿಸಿದರು.... " ಭೆಂಡವಾಲಿ ಭಾಳ ಒಪತಾವ ನೋಡು ನಿನಗ ' 
ಅಂತ ಹೇಳಿ ಗಲ್ಲದ ಮ್ಯಾಲ ಕೈಯಾಡಿಸಿ ಲಟಕೀ  ಮುರದರು -ಬಯ್ಯಕ್ವ.... 
ನನಗ ನಾಚಿಕಿಸಾವು ಬಂತು ತಾಯೀ! ಆದರೂ ಕೇಸಪ್ಪಾ ಬ್ಯಾಡಾ  ಬ್ಭಾಡಾ 
ಅಂತಿರೋವಾಗ s ನಾ ಭೆಂಡವಾಲಿ ಬಿಚ್ಚಿ ಬಿಟ್ಟೆ! ನನಗ್ಯಾ ತಕ್ಕಬೇಕು
ಅಂಧಾ ಭಾರಿ ಭೆಂಡವಾಲಿ! ಕಾಕಾ ಅವರು ಕೊಂಡುಕೊಡಬೇಕಾಗಿತ್ತು... 
ಯೋಳೆಂಟುನೂರು ರೂಪಾಯಿ ಖರ್ಚು ಮಾಡಿ, ಅವರು ಭೆಂಡವಾಲೀ
ಕೊಡಿಸಬೇಕಂತ ನಾಯಾಕ ಆಶಾ ಮಾಡಬೇಕು?.... ಫಿಮ್ಮಂಥನ ವಾರಿಗಿ
ವಗತಾನ ಇರುವಾಗ ( ಆ ವಸ್ತ) ತೊಂಗೊಂಡsರೆ ಏನು ಮಾಡೂದು ?-- 
ಮುತ್ತು ಅಗ್ಗ ಅಗ್ಯಾವ; ಈಗ ಕೊಂಡರ ಕೊಳಬೇಕು-- ಇಷ್ಟs ಅಪೇಕ್ಷಾ! 
ಅಯ್ಯಯ್ಯ ! ತುಪ್ಪಾ ಹಾಕತೀನಿ ತಡೀರಲ್ಲಾ-- ಚಿರೊಟ್ಯಾ ಹಂಗs ತಿಂದರ 
ಹೊಟ್ಟಿ ಕಡೀಲಿಕ್ಕೇನು?... ಕೇಸಪ್ಸಂದು ಎಲ್ಲಾ ಚಮತ್ಸಾರs! ಬ್ಯಾಡಾ 
ಬ್ಯಾಡಾ ಆಂತಿರಲಿಕ್ಕೇ ಬಿಟ್ಟು ಹೋಗ್ಭಾನ ಭೆಂಡವಾಲೀ! ನೋಡ್ರಿ 
ಬೇಕಾದರ ಇಟುಗೊಂಡೇ ತೋರಸ್ತೀನಿ! ( ಇಟುಗೊಂಡು ಬಂದು) ಒಪ್ಪೂ 
ದಿಲ್ಲs ಭೆಂಡವಾಲಿ? ಹೋಗ್ರಿ ಚಾಷ್ಟಿ, ಮಾಡಿದರ ನಾ ಮಾತಾಡೂದೇ
ಇಲ್ಲ... ! ಸರಬತ್ತು ಮರತು ಎದ್ದೀರಿ, ಬೆಳ್ಳಿವಾಟಗಾದಾಗಿಂದು ಕೇಳೂದು 
ಹೌದಲ್ಲೊ ಭಂಡವಾಲಿ? ' ( ಪಾಪ ಶಾಮಾಯರು ! ಬಾಯಲ್ಲಿ ಚಿರೋ
ಟ್ಯಾದ ತುತ್ತು ಇದ್ದದ್ದರಿಂದ ಸುಮ್ಮನೆ ಗೋಣು ಹಾಕದೆ ಬೇರೆ  ಉಪಾಯವೇ 
ಉಳಿಯಲಿಲ್ಲ. ಚಿರೋಟಿಯ ತುಂಬ ತುಪ್ಪದ ಸೂರೆ. ಗಂಗಾಬಾಯವರ
ಮುಖ ತುಂಬ ಮುಗಳು ನಗೆ ಸೂರೆ.
=============================
 ವರದಕ್ಷಿಣ ನಿರ್ಮೂಲನ 
ಅರ್ಥಾತ್‌ 
ಮೂರ್ತಿಮಂತ ಸ್ನಾರ್ಥತ್ಕಾಗ 

( ಗಂಡಿನ ತಂದೆ ಗಾಂಭೀರ್ಯದಿಂದ ಲೋಡಿಗೆ ಆತುಗೊಂಡು ಕುಳಿ 
ತಿದ್ದಾನೆ. ಸ್ವಾರ್ಥತ್ಯಾಗವನ್ನು ಕುರಿತು ಉಪನ್ಯಾಸವನ್ನು ಕೊಡುವ ದೇಶ 
ಭಕ್ತನ ಆವಿರ್ಭಾವದಲ್ಲಿ ಗಂಡಿನ ತಂದೆ ಮಾತನ್ನು ಆರಂಭಿಸುವನು) 
“ಏನೂ ವರದಕ್ಷಿಣೆ ...? ಅದರ ಹೆಸರು ತಗೀಬ್ಯಾಡ್ರಿ " ಕನ್ಯಾ 
ಮನಸ್ಸಿಗೆ ಬಂತೂ ಆಗಿ ಹೋತು....! ವರದಕ್ಷಿಣಿ ತೊಗೊಂಬೂ ಹಾಂಗಿಲ್ಲ- 
ಅಂತ ನಿಶ್ಚಯೆ ಮಾಡೀನಿ; ಒಮ್ಮೆ ಆಗಿ ಹೋಗಲಿ....'' ಮಂದಿ  ಏsನಂತಾರ 
ಅಲ್ಲಿ...! ನೋಡ್ರಿ ನಮ್ಮಂಥವರು ಒಮ್ಮೆ ಹಾದಿs ತೋರಿಸಿದರೇನs ಜನಾ 
ಬೆನ್ನ ಹತ್ತಾರ ! ಇದರ ಹೊರತು ಹೋಗುವದಿಲ್ಲ ಈ ಕಟ್ಟ ಚಾಳಿ... 
“ ಹುಡುಗನ ಮನಸ್ಸಿಗೆ ಹುಡಿಗಿ ಬಂದಾಳ; ಹುಡಗೀ ಮನಸ್ಸಿಗೆ 
 ಹುಡಗ ಬಂದಾನೇನಪಾ-- ಹೀಂಗಿರುವಾಗ ನಾವು ವರದಕ್ಷಿಣೀ  ದಸೀಂದ 
ಲಗ್ನಾ ಮುರದು ಬಿಟ್ಟರ ಛಂದ ಕಾಣಿಸೀತs... ನೀವs ಹೇಳ್ರಿ ! 
ಈಗಿನ ಹುಡುಗೂರಿಗೆ ವಸ್ತ ಬ್ಳಾಡ ಒಡವಿ ಬ್ಯಾಡಾ... ಏನೂs ಬ್ಯಾಡ.,...! 
ಅದರಿಂದ ಒಂದು ದೊಡ್ಡ ಖರ್ಚ ಉಳಿತsದ. ಇನ್ನೇನು ನಿಮಗ ಛಂದ 
ಕಾಣಸ್ತಿದ್ದಿಲ್ಲಾsಂದ್ರ ಒಂದು ನಾಕು ಠಳಕ ವಸ್ತಾ ಇಡಸರಿ 
ಬೇಕಾದರ....! ನಾವ ಮೊದಲೇ ಜೋಯಿಸೆರೆನ್ರೆಪಾ! ಈಗೇನೋ ರಾಯ 
ರಂತಾರ ಜನಾ ! ನಾಕು ವಸ್ತಾ ಇಡಿಸಿ ಮದಿವಿ ಮಾಡಿ ಕೊಟ್ಟರ, ಬ್ರಾಹ್ಮ   
ಣಗ ಸಾಲಂಕೃತ ಕನ್ಫಾದಾನ ಮಾಡಿದ ಪ್ರಣ್ಛಾನೂ ಬರತsದ... ಈಗೀನ
ಕಾಲದವರಿಗೇನ ವಂಸೇ ಸರಗೀ ಬೇಕಾಗಿಲ್ಲ; ಸರಪಳೀ ಡಾಬು ಬೇಕಾಗಿಲ್ಲ... ! 
ಅದರ ಫ್ಯಾಶನ್ನ ಹೋಗಿ ಬಿಟ್ಟsದ ಈಗ! ಜೋಡು ಗೋಟು ಪಾಟ್ಲಿ 
ಎರಡು ತೋಡೆ ಇಷ್ಟ ಇಡಿಸಿದರೂ ಸಾಕು... ! ಹೆಚ್ಚು ಖರ್ಚಿನ್ಛಾಗ ಬೀಳ 
ಬ್ಯಾಡರಿ ನೀವು... ! ನೋಡ್ರಿ ವಸ್ತಾಂದರ ಏನಂತೀಠಿ.... ಎಷ್ಟು ಮಾಡಿಸಿ   
ದರೂ ಕಡಿಮೀನೆ! ಯಾವ ಖರ್ಚಾದರೂ ನಿಮ್ಮ ಲತೋಪಿನೊಳಗs 
ಇರಲಿ... ತಿಳಿತೇನು? 
“ ವರದಕ್ಷಿಣಿ ಬ್ಯಾಡಾ ಅಂದ್ನೆಲ್ಯಾ! ಇನ್‌ ನೋಡ್ರಿ ನಮ್ಮ ಮನ್ಯಾಗ   
ಧುಸು ಮುಸು ಸುರು ಆಗಲಿಕ್ಸೇ ಬೇಕು... ದೇಸಾಯರು ಎರಡು ಸಾವಿರ 
ತಗೊಂದರು, ದೇಶಪಾಂಡೇರು ಮೂರ ಸಾವಿರ ತಗೊಂಡರು. ನಮಗ  ಯಾವ 
ಹಾದೀಲೆ ಹೋಗೂ ಹೊಲ್ಸ ಸುಧ್ದಾ ಮೂರು ಸಾವಿರ ಕೊಡುತಿದ್ದ... ವರದ 
ಕ್ಷಿಣಿ ಇಲ್ಲದ ಮದವೀ ಮಾಡಿಕೂಳ್ಳಲಿಕ್ಕೆ ನಾವೇನು ಅಡಗೀಯವರs  ನೀರಿ 
ನವರs. ಹಿಂತಾ ಪರಿಯಿಂದ ಈ ಗ್ಯಾಕ ಬೇಕಾಗಿತ್ತು ಮದಿವಿ?....  ಇವೆಲ್ಲಾ 
ಸುರೂ ಆಗ್ತಾವ ನಮಸುತ್ತ! ಜೀವಾ ಒಲ್ಲೇ ಅನಿಸಿಬಿಡತಾರ. ಕಾಲಯಾವದು! 
ಮಾತು ಯಾವದು? ಹೆಂಗಸರಿಗೆ ಇದರ ತಿಳವಳಿಕೆ ಎಲ್ಲಿ ಇರತದ ಹೇಳ್ರಿ!   
ಅದಕ್ಕ ಈಗs ಒಂದ ಕಿವಿಮಂತ್ರಾ ಹೇಳಿ ಇಟ್ಟಿರತೇನಿ! ಮದವ್ಯಾಗ   
ಬೀಗಿತ್ತಿ ಕಳಸಗಿತ್ತಿ ಇವರಿಬ್ಬರನ್ನು ಕಾಯ್ದುಕೊಂಡು ಹೋದರ ಆತು! 
ಚೌಕಲಾಣೀ ಆಂತಾವ; ಎಲ್ಲೆ ಬಳೀ ಇಡ್ಲಬೇಕು-ಆಂತಾವ ಹಾಗಲಕಾಯೀ 
ಸರಾನಃ ಬೇಕೂ ಆಂತಾವ, . ಇಂಧಾ ಬಡದಾಟ ತಕ್ಕೊಂಡು ಕೂಡತಾವ! 
ನೀವು ಇದ್ಯಾವದೂ ಬಡದಾಟ ಬಾರದ್ಹಾಂಗ ಮಾಡ್ರಿ ಅತ್ತು... 
" ನನ್ನ ಸ್ವಂತದ್ದು ಯಾವ ತಕರಾರನೂ ಇಲ್ಲ ಏನ್ರಪಾ. ನಮ್ಮ 
ಕರ್ತವ್ಯ ನಾವು ಮಾಡಿಬಿಟ್ಟೇವಿ.... ನಮ್ಮ ತಾಯಿ ತಂದೀ  ನಮಗೆಷ್ಟು 
ಶಿಕ್ಷಣ ಕೊಟ್ಟಿದ್ದರು ಅಷ್ಟು ನಾವು ನಮ್ಮ ಹುಡಗ್ಗ ಕೊಟ್ಟು ಬಿಟ್ಟೇವಿ. 
ಮ್ಯಾಟ್ರಿಕ ಪಾಸ ಆಗ್ಕಾನ....! ನಮಗೇನೋ ಅಷ್ಟು ಸಾಕು...! ಅಳ್ಯಾ 
ಬಿ.ಎ. ಆಗಬೇಕೂ ಅಂತ ನಿಮಗ ಆನಸತಿದ್ದರs ಬೇಕಾದರ  ಕಲಿಸಿಕೊಳ್ಳ್ರಿ 
ನಮ್ಮದೇನೂ ತಕರಾರಿಲ್ಲ ಅದಕ್ಕ... ! ನಿಮ್ಮ ಅಳ್ಯಾ ನಿಮ್ಮ ಮಗಳು... 
ನಾವ್ಯಾಕರೆಪಾs ನಡವ ಬರಬೇಕು? ಹೌದೂ ಅಲ್ಲೋ ಹೇಳ್ರಿ!  ಯಾವದs 
ಮಾತಾಡಿದರೂ ಒಬ್ಬರು ಅಲ್ಲಾ- ಆಂದಿರಬಾರದ್ರೇನ್ರೆಪಾ,.., [ 
“ನಾ ಅಂತೂ ಫಳಾ ಫಳಾ ಹೇಳಿಬಿಟ್ಟ್ಬೇನಿ; ಮನೀ ಮುಂದ ನಿಮ್ಮ
ಮೋಟಾರು ಬಂದು ನಿಂತೂ ಆಂದರ, ಎದ್ದs ಏಳೂದುು,.., ನೀವು ಕೂಡು 
ಅಂದಲ್ಲೆ ಕೂಡತೀವಿ ಏಳು ಅಂದಲ್ಲೆ ಏಳತೀವಿ... ! ನಾಲ್ಬು ದಿನಾ ಧುರಂಧುರಿ 
ಯಿಂದ ಮದವೀ ಮಾಡಿ ನಿರೋಪ ಕೊಟ್ರಿ ಅಂದರ ನಾವೇನು ಒಂದು 
ಮಿನೀಟು ಕೂಡಾ ನಿಮ್ಮೂರಾಗ ಇರುವನರಲ್ಲ....; ಹೊರಟುಬಿಡತೀವಿ ನಮ್ಮ 
ಊರಿಗೆ. ಹೀಂಗ ಮಾಡದ ಹೊರ್ತು ಗತೀನs ಇಲ್ಲ... ನಾವೂ ನೀವೂ ಕೂಡಿ 
ಈ ವರದಕ್ಷಿಣಿ ಚಾಳೀ ನಿರ್ಮೂಲ ಮಾಡಲಿಕ್ಸೇ ಬೇಕು; ನೋಡ್ರಿ, ಇಲ್ಲ 
ದಿದ್ದರ ನಮ್ಮ ಸಮಾಜಾ ಇಂದಲ್ಲಾ ನಾಳೆ ಹಾಳಾತ್ಯಂತ ತಿಳೀರಿ....  ಯಾಕ? 
ಖರೇ ಅಂತೀರೂ ಸುಳ್ಳಂತೀರೂ, ನನ್ನ ಮಾತು?
( ಈ ಪ್ರಶ್ನೆಯನ್ನು ಕೇಳಿದೂಡನೆಯೆ ಹೆಣ್ಣಿನ ತಂಬಿ ಒಮ್ಮೆಲೆ 
ಮೂರ್ಛಿತನಾಗಿ ಬೀಳುತ್ತಾನೆ. )
==================================
  ಮೂರನೇ ಮದಿವಿ ಮಹಾಸಂಕಟ     
 
( ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗ 
ನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ 
ಮಾತನಾಡುವನು. ] 

....ನೀವೀಗೇನ್‌ ಮಾತಾಾಡಿದಿರ ರಾಯರs ಬರಾಬ್ಬರೀ ನೋಡಿರಿ... ! 
ನಾನೂ ನಿಮ್ಮ ಮತದಂವನs ಏನ್ರೆಪಾ! ಇಷ್ಟು ವಯಸ್ಸಾದ ಮ್ಯ್ರಾಲ  ಲಗ್ನ 
ಆಗೂದಂದರ ನಗ್ಗೇಡ ಕೆಲಸ! ಅದಕ್ಕಂತ - ನಾನೂ---ಹೆಂಡತಿ ಸತ್ತು 
ಎರಡು ತಿಂಗಳಾಗಿ ಹೋದರೂ ಇನ್ನೂ ಲಗ್ನದ ಮಾತು ತಗದಿದ್ದೇ ಇಲ್ಲ...! 
ನನಗೂ-- ದೇವರ ದಯದಿಂದ ಭಂಗಾರದಂಥ ಐದು ಹುಡುಗೋರು ಅವs! 
ದೇವರು ಹೊಟ್ಟೀ ಪೂರ್‌ತೆ ನಾಕು ಕೂರಿಗಿ ಭೂಮಿನೂ ಕೊಟ್ಟಾನ !  ಎಲ್ಲಾ 
ನೆಟ್ಟಗs ಅದs ಆನ್ರಿ .... ! ಆದರ ನೋಡ್ರಿ, ಹೊರಗಿಂದ ಬಂದು  ಮನಿವಳಗ 
ಕಾಲಿಟ್ಟ ಕೂಡಲೇ ಎದಿ 'ಧಸ್‌' ಅಂತುದ!! ಮನಿ ಭಣಾಭಣಾ ಸುರೀ
ತsದ! ಎದ್ದ ಬಡೀಲಿಕ್ಕೆ ಬಂದ್ಹಾಂಗ ಆಗತsದ... ! ಮನಿವೊಳಗ  ಯಾರಾ 
ದರೂ ಬಂದರ ಎದ್ದು ಒಂದು ತಂಬಿಗಿ ನೀರು ಕೊಡಲಿಕ್ಕೆ ಸುದ್ದಾ ಯಾರೂ 
ಇಲ್ಲದ್ದಾಂಗ ಆತಲಾ ಅಂತ ಅನಸತsದ.... | 
“ ಹುಡುಗೂರಾರೆ ದೊಡ್ಡ್ವ ಆಗ್ಯಾವ ಅಂತೀರೇನು! ಹಾಂಗೂ ಇಲ್ಲ...
ಕಚೆೇರಿಂದs ಬರೂದರೊಳಗs  ಒಂದು ಮಣಕಾಲ  ಡದಕೊಂಡಿರತದs; 
ಒಂದು ತಲೀಗೇ ಪೆಟ್ಟು ಹಚ್ಚಿಕೊಂಡಿರತsದ... ನೋಡ್ರಿ ಮನೀಗೆ ಬರೂದ 
ರೊಳಗೆ ಸರ್ಯೊಮರ್ಯೋ ನಡದಿರತsದ ಹಾಂಗs ದಿನಾ! ಪಾಪ  ಅಕ್ಕ ಮುದಿಕಿ; 
ಆಕಿ ಕಡಿಂದ. ಈ ಹುಡಗರನ್ನ ಸಂಭಾಳಸೂದು ಆಗೂದಿಲ್ಲ. ಈ  ಹುಡಗೋರ 
ಕಿಂತಾ ಆಕೀ ತಾಪs ನನಗ ಹೆಚ್ಚಾಗೇದ, ಈ ಹುಡಗೋರ  ತಾಪಕ್ಕಾಗಿ
ಬ್ಯಾಸತು, ತಮ್ಮ ಊರಿಗ್ಹೋಗತೀನಂತ ದಿನಕ್ಕೊಮ್ಮೆ ಹೊಂಟ  ನಿಂದರತಾಳ !
ಪರದೇಶಿ ಹುಡಗೋರು, ಬಿಟ್ಟು ಹೋಗಬ್ಯಾಡ...' ಅಂತ ಮತ್ತ ಆಕಿ
ಕೈಕಾಲು   ಹಿಡಕೊಂಡು, ಸಮಾಧಾನ ಮಾಡಿ ಇರಿಸಿಕೂಳ್ಳೂಪ್ರಸಂಗ  ಬರ- 
ತsದೆ ನನಗ! ಮತ್ತ ನಮ್ಮ ಅಕ್ಕನ ಬಾಯಂದ್ರ ನಿಮಗ ಗೊತ್ತಿಲ್ಲೇನು! 
ಒಮ್ಮೆ ಸುರು ಮಾಡಿದಳಂದರ ಮುಗಸೂ ಮಾತs ಇಲ್ಲ! 
" ನಮ್ಮಕ್ಕ ಏನಂಶಾಳ ಗೊತ್ತದ: ಏನು? 'ಅಲ್ಲಪಾ, ಮದಿವಿ ಬಿಡಲಿಕ್ಕೆ
ನೀಯೇನು ಮುದಕs ತದಕs... ಒಳ್ಳೇ ನನಕಿಂತ ಮೂರು  ವರ್ಷಕ್ಕ]' 
ಸಣ್ಣಾವಾ! ಐವತ್ತು ವರ್ಷಕ್ಕ ಯಾರೂ ಲಗ್ನಾನ, ಮಾಡಿಕೊಳ್ಳೂsದಿಲ್ಲ? 
ದೊಡ್ಡ ಕಾಕಾ ಅವರ ನಾಕನೇ ಮದಿವಿ ಐವತ್ತುಮೂರು ವರ್ಷಕ್ಕ ಆಗಿತ್ತು. 
ಮುಂದ ನಾಕು ಮಕ್ಕಳನ್ನ ಹಡೆದು ಕಕ್ಕೀನ ಮೊದಲು ತೀರಿಕೂಂಡರು. 
ಈಗಂತೂ ಹೆಣ್ಣು ಬೇಕಾದಷ್ಟು ದೊಡ್ಡ್ವೂ ಸಿಗತಾವ... ಆಗಿನ್ಹಾಂಗೇನು 
ಎಂಟು ಹತ್ತು ವರ್ಷದ ಕನ್ಯಾs ಇರತಾವs ಈsಗ ನಿ ಮದಿವೀ  ಮಾಡಿ 
ಕೊಳ್ಳಲಿಕ್ಕೆ ತಯಾರಾಗು ಹೆಣ್ಣಿಗೇನು ಕಡಿಮಿ! ವರದಕ್ಷಿಣೀ ಕೊಟ್ಟು 
ಹೆಣ್ಣು ಕೊಡತಾರ ಬೇಕ್ಕಾದವರು--! ನಾ ಮುದುಕಿ ದುಡದು ದುಡದು 
ಸಾಯಬೇಕಂತೀನಿ... ಅದೇನಿಲ್ಲ... ನೀ ಲಗ್ನಾ ಮಾಡಿಕೂಂಡರ ಇಲ್ಲಿ ಇರ- 
ತೀನಿs; ಇಲ್ಲದಿದ್ದರೆ ನಾ ಹೋಗತೀನನಿ.!' ಅಂತ ನೋಟೀಸ ಕೊಟ್ಟಾಂಗ 
ಮಾಡ್ಯಾಳ ಅಕ್ಕ. 
“ನನಗೂ ಪಂಚೇತೇ  ಬಿದ್ದsದ ಏನ್ರೆಪಾ! ಲಗ್ನ ಬ್ಯಾಡss ಬ್ಯಾಡಾ- 
 ಅಂತ ನಿಶ್ಚಯ ಮಾಡಿದ್ದೆ; ಅದರ ಅಕ್ಕನ ಕಿರಿ ಕಿರ ತಾಳಲಾರದಷ್ಟು-- 
ಆಗೇದ. ವರದಕ್ಷಿಣೀ ಅಂತೂ ತಗೊಳ್ಳೂ ಹಾಂಗಿಲ್ಲಾ ಅಗs ಅಕ್ಕಗ ಹೇಳಿ- 
ಬಿಟ್ಟೇನಿ! ಬಡವರದು ಹೆಣ್ಣು ಮಾಡಿಕೊಂಡರ ಅವರಿಗೂ 
ಒಂದು ರೀತಿಂದs ಸಹಾಯ ಮಾಡಿದ್ಹಾಂಗ ಅಕ್ಕನ ಕಿಟಿ ಕಿಟೀನೂ 
ತಪ್ಪತsದ; ಹುಡಗೂರ ತಾಪಾದರೂ ಕಡಿಮಿ ಆದೀತು, ಅಂತ ಆಶಾ! 
ಮುಂದ ದೇವರು ಏನ ಮಾಡಸತಾನ ನೋಡಬೇಕು! ವಯಸ್ಸೂ  ಹೆಚ್ಚೂ 
ಕಡಿಮೆ ಆಗ್ತಾವಾಃ ಈ ಮಾತೇನೋ ಖರೆ ಅನ್ರಿ! ದೊಡ್ಡ ಕನ್ಯಾನs  ನೋಡಿ 
ಮಾಡಿಕೊಬೇಕು! ಆದವನ್ಮ ನಮ್ಮ ಎರಡನೇ ಕುಟುಂಬ ಮುತ್ತಯಿದಿ ತನ 
ತೀರಿಕೊಳ್ಳಲಿಲ್ಲೇನು? ಅದೆಲ್ಲಾ ದೇವರ ಕೈಯಾಗಿನ ಮೂತೇ
ನ್ರೆಪಾ; ನಾವು ಎಷ್ಟರವರು? ಹರೀ! ನಮ್ಮಪ್ಪಾ, ಎಲ್ಲಾ ನಿನ್ನ ಇಚ್ಛಾ !   
ಹೌದಲ್ಲೋ ರಾಯರs ನಿವs ಹೇಳ್ರಿ
(   (ರಾಯರ ಬಾಯಿ ಒಣಗಿ ಹೋಗಿದ್ದಿತು. ನಾಲಗೆಯೆ ಏಳ 
ದಂತಾಗಿದ್ದಿತು. ಮದುವಣಿಗನನ್ನು ಬರೀ ಗುರುಗುಟ್ಟಿ ನೋಡತೊಡಗಿ   ದ್ದರು.)
==============================
  ಧಾರವಾಡದ ಅಶ್ವರತ್ನ 
  ಅರ್ಥಾತ್‌ 
  ಟಾಂಗಾದ ಕುದರಿ 
 
(ಸೆಟ್ಟಿರಿಗೆ ಧಾರವಾಡದಿಂದ ಹುಬ್ಬಳ್ಳಿಗೆ ಹೋಗಬೇಕಾಗಿತ್ತು. ತುಂಬ 
ಗಡಬಡಿಯ ಕೆಲಸ ಅವರಿಗೆ. ಉಗೆ ಬಂಡಿ ಬಿಡುವದಕಕ್ಕೆ‌ ಸ್ವಲ್ಪವೇ ಅವಕಾಶ 
ಉಳಿದಿತ್ತು.
ಬಾಡಿಗೆಗೆ ಒಂದು ಟಾಂಗಾ ಗೊತ್ತು ಮಾಡಿ ಸೆಟ್ಟರು ಅದರಲ್ಲಿ 
ಕುಳಿತರು. ಬೇಗ ಬೇಗ ಬಾಂಗಾ ಹೊಡೆಯೆಂದು ಅಡಿಗಡಿಗೆ ಅವಸರ 
ಪಡಿಸಲು ತೊಡಗಿದರು. ಟಾಂಗಾದವನು ಹಾಗೆ ಮಾಡದಿದ್ದುದರಿಂದ, 
ಸೆಟ್ಟರು ಕುದುರೆಗೇ ದೋಷಕೂಡಲಾರಂಭಿಸಿದರು. ಸೆಟ್ಟರ  ಮಾತುಗಳನ್ನು 
ಕೇಳಿ ಟಾಂಗಾದವನು ಹೆಮ್ಮೆಯ ನುಡಿಗಳಲ್ಲಿ ಹೇಳಲಾರಂಭಿಸಿದ) 
ಟಾಂಗಾದವ: ಏನು ಸೆಟ್ಟರs! ಹೆಂತಾ ಕುದುರಿಗೆ ಏನು ಹೆಸರ 
ಇಡತದೀರಿ....? ಇದು ಜತ್ತಿ ಪಂಡ್ರಾಪೂರ್‌ ಕಡೇದು ಕುದರಿ ಐತಿ !...ನಾ 
ನೋಡ್ರಿ....ಟಬಾಂಗಾ ಮಾಡಿ ಮೂನತ್ತು ವರ್ಸ ಅದೂ. ಅದರ ಮೂವತ್ತ 
ವರ್ಸದಾಗ, ಒಂದೂ ಹಿಂತಾ ಕುದರೀನs ನೋಡಿಲ್ಲ....ಭಾಳ ಅಂದರ   
ಭಾಳ ! ಹುಶಾರಿ ! ಹಿಂತಾ ಕುದರಿ ಲಕ್ಸದಾಗ ಒಂದು ಎಲ್ಯಾರೆ  ಹುಟ್ಟಿರ 
ತೈತಿ .!
ಸೆಟ್ಟರು;--ಟಾಂಗಾ ನಿಂದರಿಸಿದ್ಯಾಕೊ? ಹೊಡಿಯಲಾ ಲಗೂನ s!
ಟಾಂಗಾದವ;--ಇಲ್ರೀ....ಕುದರಿ ಲದ್ದೀಹಾಕಲಾಕ ನಿಂತೈತಿ....,...? 
ಬಾಕಿ ಕುದರಿ ಹಾಂಗೆಲ್ಲಾ ಓಡೂಮುಂದ ಲದ್ದೀಹಾಕೂವದಿಲ್ಲ ಈ ಕುದರಿ... 
ಓಣೆಗುಂಟs ಲದ್ದೀ ಹಾಕಲಾಕ ಇದೇನು ಕ್ವಾಣ ಏನ್ರಿ ಸೆಟ್ಟರ?   
(ವಿ, ಸೂ, ಟಾಂಗಾವವನ ಭಾಷೆ ಉರ್ದು ಮಿಶ್ರಿತ ಕನ್ನ ಡವಿತ್ತು, ಆದರೆ ಸಂಪಾ 
ದಕರ ಮತ್ತು ವಾಚಕರ ಸೌಕರ್ಯಕ್ಕಾಗಿ ಆದನು ಕನ್ನಡದಲ್ಲಿಯೇ ಕೊಟ್ಟಿರುತ್ತದೆ.)
ಸೆಟ್ಟರು-ಕುಂಟತsದೇನೋ ಸಾಬಾ ನಿನ್ನ ಕುದರಿ? 
ಟಾಂಗಾದವ;--ಹೌದರಿ....ಜರಾsನ ಕುಂಟತೈತಿ ! ನೀವು ಒಳೇ 
ಹುಡಿಕಿ ಹಿಡದ್ರಿ ನೋಡ್ರಿ ಇದರ ಕುಂಟೊದನ್ನ ! ಇಲ್ಲದಿರಕ ಇದು 
ಬೆರಕೀ ಹೆಣ್ಣಜಾತಿ; ಟಾಂಗಾ ಫಾಸ ಆಗೂಮುಂದ ಒಳ್ಳೇ ಪೋಲೀಸ   
ಸಾಬನ ಕಣ್ಣೀಗೇ ಇಂಗ ಹಚ್ಚಿತು ನೋಡ್ರಿ !.. ಎರಡ ಹೆಜ್ಜೀ ಕುಂಟತೈತೋ 
ಇಲ್ಲೋ ...ಮುಂದ ನಡಗೀ ನಡದ್ಹಾಂಗ ಮಾಡತೈತಿ. ಪೋಲೀಸಸಾಬ 
ಬಿಟ್ಟು ಅವನ ಕಾಕಾ ಬಂದರೂ ತಿಳಿಯೂ ಹಾಂಗಿಲ್ಲ...! ಹಿಂಗಾಲ ಎಡ   
ಗಾಲು ಕುಂಟ ಇದ್ದದ್ದು ನನಗs ಗೊತ್ತು. ಅದಕ್ಕs ಗೊತ್ತು ! ಬಲ್‌   
ಬೆರಕಿ ಅಂದರ ಬಲ್‌ಬೆರಕಿ...! ಕಾಲ ಕಟ್ಟಿ ಮೆಯ್ಮಲಾಕ ಬಿಟ್ಟಾಗ, 
ಹುಡಗೂರ ಕರದರ ಹತೀಲಿ ಬರತೈತಿ....ಅದ s ನನ್ನ ನೋಡಿದರ    ಓಡೂದ s 
ಮಾಡತೈತಿ ! ಹಿಂತಾ ಬೆಂಡ್ಲ ಜಾತೀದು ಐತಿ...! ಹೂಡಲಿಕ್ಗೆ ಹತ್ತಿದಾಗ 
ಹೊಸದಾಗಂತೂ ಹುಡೂತಲೇನs ನೆಲಕ್ಕ s ಕುಂಡ್ರೂದು  ಮಾಡತಿತ್ತು..! 
ಕುಂತೈತೀ ಅಂತ ಬಿಚ್ಚಿ ಬಿಡೂತಲೇನ s ಎದ್ದು ಓಡೇ ಓಡೂದು !  ಹಿಂತಾ
ಕುದುರೇನs  ಸಿಗಾಕಿಲ್ಲ...! ನಾನೂ ಏನ ಹಾಂಗs ಬಿಡಲಿಲ್ಲ.  ನಾಡಾಗಿಲ್ಲದ 
ಬೆರಕಿ ! ಇದಕ್ಕ ಓಂದ ಬೇತಾ ಮಾಡಿದೆ; ನಮ್ಮ ಅಂಗಳದಾಗೆ ಮಳೇ 
ನೀರು ನಿಂತಿದ್ದೂ: ಅಲ್ಲೆ ಟಾಂಗಾ ಹೂಡಿದೆ ಕುದರೀ ಹೊಟ್ಟಿಗೆ  ಒಂದೆರಡು 
ಒಳ್ಳೇ ಸುಣ್ಣದ ಹಳ್ಳು ಕಟ್ಟಿದ್ದೆ. ಕುದರಿ ಕೂಂಡ್ರೂದಷ್ಟ s ತಡಾನೋಡ್ರಿ, 
ಸುಣ್ಣದ ಹಳ್ಳು ನೀರಾಗ ತೊಯ್ದು ಕುದೀಲಾಕ ಹತ್ತಿದೂ; ಕುದರಿ ಜಿಗಿತು   
ಎದ್ದು ನಿಂತ್ಯು. ಅಂದ s ಕಡೀದಿನಾ ನೋಡ್ರಿ. ಅಂದಿನಿಂದs  ಕುಂಡ್ರೂದ s 
ಬಿಟ್ಟು ಬಿಟ್ಟಿತು | 
“ ನೀವೆಲ್ಲಾ ಕತ್ತಿ ಓಡಿಸ ಅಂದೀ; ಕುದರಿ ಹ್ಯಾಂಗ ಓಡೀತು ಹೇಳ್ರಿ ! 
ಮೊನ್ನೆ ಕಾಮನ ಕಟ್ಟ್ಯಾಗ ನನ್ನ ಟಾಂಗಾದ ಎದುರಿಗಿಂದನs ನಬೀಸಾಬನ 
ಟಾಂಗಾ ಭರದಾಂಡ್‌ ಜೋರಲೇ ಬರುತ್ತಿತ್ತು... ; ತರಬ್‌ ತರಬ್‌ ಅನ್ನೂ 
ದರಾಗ 5 ಓಣೀ ಒಳಗ ಆಡೂ ಹುಡುಗನ ಕಾಲಮ್ಯಾಗ ಹಾಯ್ದು
ಹೋತು.... ! ಅದನ್ನ ನೋಡಿದಾಗಿನಿಂದ s ನಮ್ಮ ಕುದರಿ ಓಡೂದನ್ನs s 
ಬಿಟ್ಟು ಬಿಟ್ಟೈ ತಿ... ! ಮುದಿಕಿ ಆಗೈತಿ, ಹಾಂಗ್‌ ಐತಿ ಹಿಂಗ್‌ ಐತಿ... ಅಂತ 
ಪೊಜದಾರಸಾಬ ಬಯೃಲಾಕ ಸುರೂ ಮಾಡಿದ್ದ-- ಪಾಸ್‌ ಮಾಡೂ ಮುಂದ!
ಆಗ ನಾ ಒಂದs ಮಾತ ಹೇಳಿದೆ; ರಾವಸಾಬ್‌ ನನ್ನ ಕುದರಿಗೀಗ ಹದಿ
ನೆಂಟಿ ವರಸ ಆಗಿದಾವ್‌,,.,. ; ಇದು ಕುುದುರೀ ಇರೂsದs ಹದಿನಂಟು   
ವರ್ಸದ ಹುಡಿಗಿ ಇತ್ತಂದರ ನಿಮಗ ಪಾಸ್‌ ಬೀಳುತ್ತಿತ್ತು... . ಪಾಪ, 
ಕುದರಿ ಮಾತ್ರ ನಾಪಾಸ್‌ ಯಾಕ ?.... ನೋಡ್ರಿ ಸೆಟ್ಬರs ನಾ ಕರೇ 
ಹೇಳಿದರೂ ಕೇಳತೀರಿ ಸುಳ್ಳ ಹೇಳಿದರೂ ಕೇಳತೀರಿ.... ಹಿಂಗs ಅಂದು ಬಿಟ್ಟೆ. 
ನನ್ನ ಮಾತಿಗೆ ಪೊಜದಾರ್‌ಸಾಬ ನಗಲಾಕ ಹತ್ತಿದ... ಬಾಂಗಾ ಫಾಸ್‌ 
ಅಂದ... ! ಹಿಂಗ್‌ ಐತಿ ಸೆಟ್ಟಿರ ಕುದರೀ ಮೋಜು! ಸುಮ್ಮನs ಇಲ್ಲ ಈ 
ಹುಡಿಗಿ....! ಇಬ್ಬರ ಫಾಸ್‌ ಐತಿ ನೋಡ್ರಿ ಈ ಟಾಂಗಾಕ....; ಅಫ್ಲ್ರಿ ತಪ್ಪಿ 
ಮೂರ ಮಂದಿ ಕುಂತರೂ ಪೋಲಿಸಗ ತಿಳೀಲಾಕಿಲ್ಲ; ಇದಕ್ಕ ತಿಳಿದು 
ಬಿಡತೈತಿ....! ಮೂರು ಮಂದಿ ಕುಂತರ ಮುಂದಕ್ಕ ಹೆಜ್ಜೀನs ಇಡೂ 
ದಿಲ್ಲ...! ಕುದರೀ ಶಾಣೇತನದಿಂದನs ನನ್ನ ಮ್ಯಾಲೆ ಇನ್ನೂ ಯಾವ     
ಪೋಲಿಸನೂ ಒಮ್ಯೂ ಕಟ್ಲೇನs ಹಾಕಿಲ್ಲ... ! ಇಂಥಾದ ಐತಿ ನನ್ನ 
ಮಗಳು ಇದು! 
" ನೋಡ್ರಿ ಟೇಸನ್‌ ಬಂತು ನೋಡ್ರಿ... ! ಎಲೀ ಇವನ....! ಗಾಡೀ 
ಹೊಂಟೈತ್ಯಲಾ ! ಅದs ಅಂತೀನಿ. ಈ ಗಾಡಿ ಹೋದರ ಹುಬ್ಬಳ್ಳಿಗೆ ಹೋಗ 
ಲಾಕ-- ಇನ್ನೊಂದ್‌ ಅರ್ಧಾತಾಸಿನೊಳಗs-- ಇನ್ನೊಂದು ಗಾಡೀ  ಐತೀ 
ಅಂತ ಗೊತ್ತು ನನ್ನ ಕುದರಿಗೆ....! ಸೆಟ್ಟಿರs ಸಾಮಾನು  ಇಳಿಸಿಕೂಂಡರ್ಯಾ? 
( ಬಾಡಿಗೆ ತಕ್ಕೂಂಡ ಮೇಲೆ) ಸಲಾಂ ಸಾಬ್‌ ಸಲಾಂ ಸಾಬ್‌, ಚಲ್‌ ಬೇಟಿ ಚಲ್‌  ! " 
( ಗಾಡಿ ತಫ್ಪಿದುದರಿಂದ ಸೆಟ್ಟರಿಗೆ ಸಾವಕಾಶವಾಗಿ ವಿಚಾರ 
ಮಾಡಲು ಅವಕಾಶ ದೊರೆಯಿತು. ಇಂಥಾ ಬುದ್ಧಿವಂತ ಕುದುರಿಯನ್ನು 
ಸಾಕಿದ್ದ ಸೆಟ್ಟರು ಅನೇಕಾನೇಕ ಧನ್ಯವಾದಗಳನ್ನೂ   ಕೊಟ್ಟರು. 
ಕಲಿಯುಗದಲ್ಲಿ ಯಾರಾದರೂ ಅಶ್ವಮೇಧ ಮಾಡಿದರೆ, ಇದೇ 
 ಕುದುರೆಯನ್ನು ಅವರು ಒಯ್ದರೆ ಒಳ್ಳೆಯದೆಂದು ಮನಸ್ಸಿನಲ್ಲಿಯೇ ಅಂದು   ಕೊಂಡರು, )
============================
 ಕಲಿಯುಗಾ ಬಂತು 
 ( ಪೇನಶನ್‌ ಪಡೆದ ಮಾಮುಲೇದಾರ ಕಜೀರಿಯ - ಕಾರಕೂನರು  )
 ರಾಯರ ಕೂಡ ಮಾತನಾಡುತ್ತ ಮನೆಯಲ್ಲಿ  ಕುಳಿತಿದ್ದಾರೆ.
 ಕಾರಕೂನರಾಯರಿಗೆ ತಿರಸ್ಥಾರ ಕ್ರೋಧ ಹೆಮ್ಮೆಗಳ ಮೂಲಕ ಆವೇಶ
 ತುಂಬಿದಂತಾಗಿದೆ. ಹಾವ ಭಾವದೊಂದಿಗೆ ಜೊತೆಯಲ್ಲಿ ಕುಳಿತಿದ್ದ ರಾಯ 
ರಿಗೆ ಕೂಗಿ ಕೂಗಿ ಹೇಳುತ್ತಲಿದ್ದಾರೆ. )
ನಾ ಏನ್‌ ಹೇಳಿದೆ ನಿಮಗ..! ಈ ಲಂಡ... ಮಕ್ಕಳಿಗೆ ಮಡೀ 
ಇಲ್ಲಾ... ಮೈಲಿಗಿ ಇಲ್ಲಾ! ದಶಮೀ ಕಟಿಗೊಂಡು ಫಿರತೀಮ್ಯಾಲೆ ಹೋಗೂ 
ಮಾಮಲೇದಾರನ್ನ ಎಂದsರೇ ನೋಡಿದ್ದೀರಾ? ಏನ್‌ ಹೇಳ್ಳಿ...!
ಈಗಿನ್ನೂ ಎಲ್ಲಾ ದಶಮಿ ಕಟಿಗೂಂಡು ಹೋಗುತಾವಂತ.... ; ದುಡ್ಡಿನ 
ಹಾಲು ದುಡ್ಡಿನ ಮಸರು ತರಿಸಿ ಚ್ಯಾವಡಿ ಕಟ್ಟೆಮ್ಯಾಲೆ ದಶಮೀ ಗಂಟು 
ಬಿಚ್ಚಿ, ತಿಂದು ಬರತಾವಂತ.... ವಾಲೀಕಾರರ ಹಾಂಗ! ಇವರು ಮಾಮಲೇ 
ದಾರರs ಇವರು..! 
" ಹೋಗಬೇಕು ಹೋದರ ಫಿರತೀಮ್ಯಾಲೆ.... ನಮ್ಮ ಗೋವಿಂದ 
ರಾಯರಗೂಡಾ |! ಅವರ ಮಡೀ ಏನೂ, ಮೈಲಿಗಿ ಏನೂ,  ಎಲ್ಲಾ--ವಿಲಕ್ಷಣ 
ನೋಡ್ರಿ ! ನರಸಿಂಹ ಸಾಲಿಗ್ರಾಮ ಇರತಿತ್ತು.... ಅವರ ಪೆಟ್ಟಿಗ್ಯಾಗ; ನಿತ್ಯ
ಅದರ ಅಭಿಷೇಕ ಆಗದ ಹೊರತು ಊಟಾನೆ ಇಲ್ಲಾ! ನಾಕು ಸೇರು ಹಾಲು 
ಬೇಕಾಗತಿದ್ದೂ. ಅಭಿಷೇಕಕ್ಕ! ಇಷ್ಟ ಹಾಲು ಹ್ಯಾಂಗ ಸಿಗsದ್ದೂವs....? 
ಹಳ್ಳಿ ಗೌಡ ಕುಲಕರ್ಣ್ಯಾರ ತಾಯಿ ಏನ ಹಡೆದ್ದು ಹಾಲು ಇಲ್ಲಾ ಇಂತ   ಹೇಳಲಿಕ್ಕೆ . '' 
" ನಿಮಗೊಂದು ಮೋಜು ಹೇಳತೀನಿ ರಾಯರs ! ಒಮ್ಮೆ ಚೈತ್ರ 
ಮಾಸ, ತಿಮ್ಮಾಪೂರದಾಗ ಮುಕ್ಕಾಂ ಇತ್ತು! ರಣಾ ರಣಾ ಬ್ಯಾಸಗಿ; 
ಬಿಸಲಾಗ ತಿರಿಗಿ ತಿರಿಗಿ ಬ್ಯಾಸತ್ತು ಹೋಗಿತ್ತು ಕಚೇರಿ....! ಒಂದು ದಿನಾ 
ಶ್ರೀಖಂಡ ಅರೇ ತಿಂದರ ಥಣ್ಣಗ s ಅನಿಸೀತೂ ಅಂತಾ ವಿಚಾರ ಬಂತು. 
ನಸೀಕಲೇ ಎದ್ದವರೇ ಮಸರಗಡಗೀ ತರಿಸಲಿಕ್ಟೆ ಹೇಳಿದಿವಿ ಗ್ರಾಮನ್ನರಿಗೆ! 
ಐದಾರು ಮಸರಗಡಗೀ ತಂದರು... ನೋಡತೀವs - ಮಸರಿನಮ್ಯಾಲ 
ಕೆನೀನೇ ಇಲ್ಲಾ! ಇಂಥಾ ಲುಚ್ಚಾ ಆಗೇದ ಜನಾ! ಒಂದರ ಬೆನ್ನ ಹಿಂದ
ಒಂದರಂತೇ ಯಾವ ಗಡಗೀ ನೋಡಿದರೂ ಅದೇ ಹಣೇಬಾರ! ನಮ್ಮ 
ಸಿರಸ್ತಾರರ ಸಿಟ್‌ ಏನ್‌ ಕೇಳತೀರಿ... ಗಡಗೀ ತೊಗೊಂಡು ಬಿಸಾಟೆ ಬಿಟ್ಟರ, 
ಕುದರೀ ಕಾಲಾಗ ಹೋಗಿ ಬಿತ್ತು ಗಡಗಿ ! ಧರ್ಮಸಾಲಿ ಮುಂದೆಲ್ಲ  ಗೋಪಾಳ 
ಕಾವಲಿ ಅದ್ಹಾಂಗ ಆಯ್ತು! ಮತ್ತೇನದ...! ಗೌಡಾ ಕುಲಕರ್ಣಿ 
ಬಂದರು....; ನಮೋ ನಮೋ ಅನಿಸಿ ಬಿಟ್ಟೆ ಅವರ ಕಡಿಂದ!  ಮುಂದೇನ್‌ 
ಕೇಳತೀರಿ, ಆ ಮುಕ್ಕಾಮಿನೊಳಗ ಇರೂ ತನಕ ಒಂದು ದಿನಾ  ಶ್ರೀಯಂಡ,... 
ಒಂದು ದಿನಾ ಬಾಸುಂದೀ.... ! ಅಮಲಂದರ ಹೀಂಗ ಕೂಡಿಸಬೇಕಾಗತದs 
ರಾಯರs! ಇಂಥಾ ಕೆಲಸ ದುಡ್ಡಿನ ಹಾಲು ಮಸರು ತೊಗೊಳ್ಳುವರ 
ಕಡಿsಂದ ಆಗತದs ಎಲ್ಲಾರೆ? 
"ಅಲ್ರಿ... ಇವರ ನತೀಬಕ್ಕ ಅಡಗೀಯವರು ಸಿಗಬಾರದs ? ತಾಲೂ   
ಕಿಗೆ ದೀಡನೂರ ಹಳ್ಳಿ; ಒಬ್ಬಿಲ್ಲಾ ಒಬ್ಬ ಕುಲಕರ್ಣೇರು ನೇಮಣೂಕಿ ಕೆಲಸ 
ಇದ್ದೇ ಇರತದ! ಊರಿದ್ದಲ್ಲೆ ಹೊಲಗೇರಿ ಅಂತ, ಎಲ್ಲಾಕಡೆ ಅದಾವ- 
ತೀನೂ ಇದ್ದೇ ಇರತಾವ! ಯಾರದಾದರೂ ಒಂದು ಅರ್ಜಿ ತಗೊಂಡು  ಚೌಕ 
ಶೀಗೆ ಹಾಕ್ಕೋsತ, ನಡದರಾತ್ರೆಪಾ....? ಕುಲಕರ್ಣಿ ಕ್ಯಾಂಪಿನ ಬೆನ್ನು
ಹತ್ತೆ ಹತ್ತತಾನ... ! ಅಲ್ಲಿಂದೇನು ಅಡಗೀ ಆಗತsದ--ನೀರು ಆಗತಂದ-
ಎಲ್ಲಾ ಆಗತsದ! ನಮ್ಮ ರಾವಸಾಹೇಬ ಕಡೆ ಇದ್ದನಲ್ಲಾ ನಾರಾಯಣಪ್ಪ! 
ಅವನದೊಂದು ಮೋಜಿನ ಕತೀನ... ಆತ; ಬಾಯೀಯವರ  ಕೈತಳಗಿದ್ದು
ಅಡಗೀ ಕಲಿತ ನಾರಾಯಣಪ್ಪ ' ಇನ್ನೇನು ಕುಲಕರ್ಣಕಿ ಬ್ಯಾಡ,  ಅಡಗೀನs 
ಮಾಡಿಕೊಂಡಿರೂದು ನೆಟ್ಟಿಗ! ಅಂದ, ಈಗ ನೋಡ್ರಿ ನಾನೂರು-ಐನೂರು 
ಜನರ ಪ್ರಸ್ತದ ಅಡಿಗಿ ಅಂದರೂನೂ ಹೊಡದು ಚೆಲ್ಲತಾನ ನಾನಾಯಣಪ್ಪ ! 
" ಇದಲ್ಲಾ ಅಮಲ್ಪಾರರ ಕರ್ತಬ ಗಾರೀ ಮಾತು ಅದ ಏನ್ರೆನಾ! 
ಇವೇನ್ರಿ ಗಳಗಳಾ ಗಳಗಳಾ ಆಳತಾವ!  ಸ್ಪಾನ ಇಲ್ಲದsನ, ಮೂರು ಮೂರು
ದಿವಸ ತಂಗಳ ದಶೀಮೀ ತಿಂತಾನ! ಅದಕs ಕಲಿಯುಗಾ ಬಂತೂ ಅಂದೆ! 
ಏನು ಮಾಡೂದದs! ಆ ಕಾಲ ಹೋತು ಆ ಮಾತ ಹೋತು! ನಡೀರಿ 
ಪುರಾಣದ ಹೊತ್ತಾತು.... ಆಚಾರ್ರು ಬಂದಿದ್ದಾರು ! ” 
(ಕಾರಕೂನರ ಮಾತನ್ನ ಕೇಳಿದ ರಾಯರ 'ಈ ಕಲಿಯುಗದಲ್ಲಿ
ಜೇವಿಸಿರುವದೇ ಬೇಡ. ಎಂದು ಪ್ರತಿಜ್ಞೆ ಮಾಡುತ್ತಲೇ ಪುರಾಣಕ್ಕೆ   
ಹೊರಟರು. )
=============================
  "ಮತಸಂಪಾದನೆಗೆ ರಾಮಬಾಣ ಉಪಾಯು' 
 
ಬರ್ರಿ, ಬರ್ರಿ ಗೋಪಾಳರಾವ ನಮ್ಮನ್ನಗ್ದಿ ಮರೇತ್ರಂತ ತಿಳಕೂಂಡಿದ್ದಿವಿ. 
ಬರ್ರಿ ಇಲ್ಲೆ ಕೂಡಬರ್ರಿ. ಅಕಡೆ ಕೂಡಬಾಡ್ರಿ ನಿಮ್ಮ ಕೂಡುವ ಸ್ಥಾನ ಈ 
ಗಾದಿಯ ಮೇಲೆ ಅದೆ. ನಿಮ್ಮನ್ನ ತೆಳಗ ಕೂಡ್ರಿಸಿ ನಾವೆಲ್ಲಿ ಕೂಡ್ರ ಬೇಕು. 
 ಗಾದಿಯ ಮ್ಕಾಲಿ ಕೂಡ್ರಿ ರಾಯರೆ 
ಎಲಾ ಅಲ್ಲಿ ಯಾರಿದೀರಿ ಎರಡು ಕಪ್ಪು ಉತ್ತಮ ಚಹಾ ಮಾಡಂತ 
ಹೇಳ್ರಿ, ಗೋಪಾಳರಾಯರಿಗೆ ಸ್ಟ್ರಾಂಗ ಚಹಾ ಬೇಕು ಗೊತ್ತದ ಇಲ್ಲೊ.
ತಾಜಾ ಹಾಲು ಹಾಕಲಿಕ್ಕೆ ಹೇಳು. 
ಇದ್ನೋಡ್ರಿ ಆನಂದರಾವ, ಗೋಪಾಳಾರಾವ ಅಂದ್ರ ಒಂದು ವ್ಯಕ್ತಿ 
ಅದs, ವ್ಯಕ್ತಿ .ಒಬ್ಬ ಮನುಷ್ಯ ತಮ್ಮವ ಅಂತ ಅಂದ್ರ ಜೀವ  ಹೋದರು 
ಅವನ ಕೈ ಬಿಡುವದಿಲ್ಲ... ಬಹಳ ದಿವಸದಾಗ ಅವರ ಛೆಟ್ಟಿಯಾಗಿದ್ದಿಲ್ಲ
ಎಂದು ತಿಳಿದು ನಿನ್ನೆ ಅವರ ಮನಿಗೆ ಹೋಗಿದ್ದೆ. ಗೋಪಾಳ್ರಾಯರು ಮನೆ- 
ಯಾಗದ್ದಿಲ್ಲಂತ ಅವರ ಮನ್ಯಾಗ ಹೇಳಿಬಂದೆ. ಇಂದು ಬೆಳಗಾಗುವದರೂಳಗೆ 
ಗೋಪಾಳಾರಾವ ಇಲ್ಲಿ ಹಜರರಿದ್ದಾರ. ಖಣಾನಬಂಧ? ಅಂದ್ರ ಹೀಂಗ  ಇರ 
ಬೇಕು. ನಮ್ಮದು ಅವರದು ಗೆಳತನ ಅಂತ ಅಂದ್ರ ನಮ್ಮ ಪೂರ್ತೆಕ್ಕ  ಇಲ್ಲ 
ಅದು. ವಂಶಪರಂಪರಾಗಿದ್ದು ಅದು ಅವರ ತಂದಿ ನಮ್ಮ ತಂದಿ  ಮನೂಗಳಿ 
ಯೊಳಗ ಸಾಲಿ ಕಲಿಯುವ ಮುಂದೆ ಇಬ್ಬರೂ ಕೂಡಿ ಸಾಲಿ ತಪ್ಪಿಸಿ ಗಿಡ   
ಮಂಗ್ಳಾನ ಆಟಾ ಆಡಲಿಕ್ಕೆ ಹೋಗುತ್ತಿದ್ದರು. ಅಂದಿನಿಂದ ಅವರದು 
ನಮ್ಮದು ಗೆಳೆತನ. 
ಯಾಕ್ರೀ ಗೋಪಾಳ ರಾವ, ಆಗಿನ ಗಿಡಮಾಗ್ಳಾನ ಆಟದ ದಿವಸ 
ಹೋದವು. ಈಗಿನ ಹುಡುಗರು ಖೋಡಿಗಳು ಕೆರಿಕೆಟ, ಹಾಕಿ, ಅಂತಾವ 
ದುಡ್ಡಿನ ಹೊರ್ತು ಕೆಲಸಿಲ್ಲ. ನಮ್ಮ ಆಟಗಳಿಗೆ ಒಂದು ದುಡ್ಡು ಸಹ  ಖರ್ಚು 
ಹತ್ತುದಿಲ್ಲ. 
ಎಲಾ ಚಹ ಆಗಿದ್ದರ ತರ್ಯೋ ಸಂಗಡ ಎನರೆ ಖಾರ  ತೊಗೊಂಬರ್ಯೋ 
ಆದರ ಹೊರ್ತಾಗಿ ಚಹಕ್ಕ ರುಚಿನೇ ಬರುವದಿಲ್ಲ... ಗೋಪಾಳ್ರಾವ  ಅಂದರ 
ಚಹೆದ ಪಕ್ಳ್ರಾ ಸವಿಗಾರರು, ಹಳದೀ ಡಬ್ಬಿಯ ಹೊರ್ತು ಗೊತ್ತಿಲ್ಲ  ಅವರಿಗೆ. 
ನಾನು ಮ್ಯುನಸಿರ್ಪಲ್ಟಿಯ ಚುನಾವಣಿಗೆ ನಿಂತದ್ದು ಅರರಿಗೆ ಹೇಳ. 
ಲಿಕ್ಕ ಬೇಡ ನನ್ನ ಚುನಾವಣೆ ಅಂದ್ರ ಅನರ ಚುನಾವಣೆ ಇದ್ದಂಗ.  ಗೋಪಾ 
ಳ್ರಾಯರಷ್ಟ ಆತ್ಮೀಯ ಭಾವನೆಯಿಂದ ಕಲಸ ಮಾಡನವರೆಂದರೆ  ಕ್ವಚಿತ್‌ 
ಸಿಗುವರು. ಎಲಾ, ಎಲಿ ಅಡಕಿ ಡಬ್ಬಿ ತಗೊಳ್ಳಿರೋ, ವಿಳೇದೆಲಿ  ಕೂಡಿಗಿವು 
ಅವ ಕೂಡಗಿವು, ಇನ್ನೇನು ಕೇಳಬೇಕ ನಿನುಗ, ಎಲ್ಲ  ನೆನಪಿನಲ್ಲರಿಲ್ಲಿರಲಿ, 
ಅಂದ್ರ ಆತು ೨೮ ನೇ ತಾರೀಖು ಮಾತ್ರ ನೆನಪಿನಲ್ಲಿರಿಲಿ. 
ಸ್ಥಾನದ ವಾಳ್ಯಾ ಆದಂತೆ ತೋರತದ. ವಿನಾಕಾರಣ ನಿನ್ಮು ಅನ್ಹೇ   
ಕಕ್ಕ ಯಾಕ ಹರಕತ್ತು ಮಾಡಬೇಕು ಹೋಗಿಬರ್ರಿ. ನಮಸ್ಕಾರ( ಹೊರಗೆ
ಬಂದ ಮೇಲೆ ಗೋಪಾಳರಾಯರ) ೬ ತಿಂಗಳಿಗೊಮ್ಮೆ ಮ್ಯುನಸಿಪಾಲ್ಟಿಯ 
ಚುನಾವಣಿ ಇದ್ದರೆ ಎಷ್ಟು ಮಜಾ ಆಗುತ್ತಿತ್ತು ಎಂದರು "
===============================
ಆಧುನಿಕ ಅಜವಿಲಾಪ 

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ 
ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ  ಬೋಧಾಮೃತದ 
ಶೆಲಿ ಬೀಳ್ತಿದ್ದಲ್ಲ. ಅಂತ "ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ.
ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂದು ನಿಮ್ಮ ಹೆಂಡತಿ ತೀರ.
ಕೊಂಡ್ಲು. ನಾಳೇ ನೀವು ಹೋಗುವವರು ವಿನಾಕಾರಣ ದುಃಖ ಮಾಡಿ
ಉಸಯೋಗವೇನು?
ವಾವಾ ಹೀಗೆ ಸಮಾಧಾನ ಹೇಳಲಿಕ್ಕ ನಮಗೂ ಬರತಿತ್ತು. ನಿಮ್ಮ 
ಮ್ಯಾಲೆ ಈ ಪ್ರಸಂಗ ಬಂದಿದ್ರ ಆ ಬೋಧದಿಂದ ನಿನ್ಮು ಸಮಾಧಾನ ಆಗ 
ತಿತ್ತೇನು? ಇದೇ ನನ್ನ ಪ್ರಶ್ನೆ. 
ಲಗ್ನ ಆದಮ್ಯಾಲೆ ಎಂಟು ಹತ್ತು ವರ್ಷಗಳಲ್ಲಿಯೇ ಆಕಿ ತೀರಿಕೂಂಡಿ 
ದ್ದರೆ ಇಷ್ಟು ಕಟ್ಟು ಅನಿಸ್ತಿದ್ದಿಲ್ಲ ಈಗ ಲಗ್ನ ಆಗಿ ನಲವತ್ತು ವರ್ಷಾಯ್ತು,. 
ಒಂದು ರೀತಿಯಿಂದ ಆಕಿ ಚಟ ಬಿದ್ಹಾಂಗೇ ಆಗಿತ್ತು ಮೊನ್ನೆ ಮೊನ್ಸೆ ಹತ್ತಿದ 
ನಾಸೀ ಪ್ರಡೀ ಚೀಟಿ ಬಿಟ್ಬೇನಂದರ ಬಿಡವಲ್ತು. ಇದು ನಲವತ್ತು  ವರ್ಷದ 
ಚಟ, ಬಿಡಬೇಕು ಹ್ಯಾಂಗ, ನನಗಂತೂ ಬೆಳಿಗ್ಗೆದ್ದ ಕೂಡಲೆ  ಮಾರೀಮ್ಯ್ಭಾಲ 
ಕೈಯಾಡಿಸಬೇಕು ಮತ್ತು ಆ ಕೈಗೆ ಮೂಗುಹತ್ತಬಾರದು ಹೀಗೆ ಸ್ಥಿತಿ 
ಯಾಗೇದ. ಇನ್ನು ಅನಳ ಜಾಗಾ ತುಂಬೂ ಬಗೀ ಹ್ಯಾಂಗ, ಏನೀ ಇರ್ಲಿ 
ಈಗ ಸಿಟ್ಟಿಗೆದ್ದರ ಬೈಬೇಕು ಯಾರ್ನ ಇದರದು ಸಹಿತ ಪಂಚೇತಿ  ಬಂದದ. 
ಅಡಗೀ ವಿಚಾರ ಮಾಡಿದ್ರ ನೋಡ್ರಿ ಖಾರ, ಹುಳಿ, ಉಪ್ಪು ಪದಾರ್ಥ 
ಹ್ಯಾಂಗಾದ್ಹಂಗ ನುಂಗಬೇಕು ಸುಮ್ಮನೆ. ಸ್ವಲ್ಪ ಇಳೀಸ್ಪರದಲ್ಲಿ ತಪ್ಪು  ತಗೀ 
ಲಿಕ್ಕೆ ಹೋದರ ಅಡಿಗಿಯವಳ್ನ ಸಿಟ್ಟಿಗೆದ್ದು ದುಮು ದುಮು ಉರಿಯಹತ್ತು
ವಳು. ಮತ್ತ ಅಡಿಗೀಯವಳ್ನ ತಗದು ಯಾನನಾದರೂ ಗಂಡಾಳು  ಅಡಿಗೆ 
ಯವನ್ನ ಇಡಬೇಕಾದ್ರ ಅಡಿಗೀ ಮನೀ ಒಳಗ ಕಾಲಿಡಬೇಕಾದ್ರ  ಮನಸ್ಸು 
ಹಿಂಜರಿತದ. ಒಲೀ ಹತ್ರ ಸುಟ್ಟ ಬೀಡಿಯರೇ ಕಾಣಸ್ತದ. ಅಥವಾ
ಮುಂದು ಬಗ್ಗಿ ಉರಿಯುವ ಒಲಿಯೊಳಗ ತಂಬಾಕದ ಜೀಕಳಿ  ಹೊಡೆಯುವ 
ಬಲ್ಬವಾಚಾರ್ಯರೇ ಕಾಣಸ್ತ್ರಾರ ಅವಗೆ ಸಿಟ್ಟು ಮಾಡ್ತೀನss ನನಗಿಂತ 
ಮೊದಲೇ ಅವನು ನೋಟೀಸ ಕೊಟ್ಟು ಸ್ವತಂತ್ರ ಆಗತಾನ. ಆದರ ಇವಳ 
ವಿಷಯದಲ್ಲಿ ನೋಟೀಸಿನ ಅಂಜಿಕೆ ಯಾವಾಗಲೂ ಇದ್ದಿದ್ದಿಲ್ಲ ಎಷ್ಟೇ ಸಿಟ್ಟು
ಮಾಡಿ ಕಾಲು ಅಪ್ಪಳಿಸುತ್ತಾ ನಾವು ಹೊರಬಿದ್ರೂ ನನ್ನ ಬದಲಿ  ಮನೆಯ 
ಲ್ಲಿಯ ಹುಡುಗರ್ನ ಮಾತ್ರ ನಾಲ್ಕು ಪೆಟ್ಟು ಬಡಕೋತಿದ್ಲು. ಮತ್ತೆ  ನಾನು 
ಸಾಯಂಕಾಲ ತಿರುಗಿ ಬರುವ ಕಾಲಕ್ಕೆ ನನಗೆ ಸೇರುವ ಖಾರಸಜ್ಗಿ ಮಾಡಿ 
ಟ್ಟಿರತಿದ್ಲು. ಹೇಳಿದರ ಈಗ ಸಹ ಯಾರಾದರೂ ಖಾರ ಸಜ್ಜಿಗಿ  ಮಾಡ್ಯಾರು 
ಆದರೆ ಹೊಟ್ಟೀಯೊಳಗಿನ ಎಲ್ಲಾ ಸಿಟ್ಟ ನುಂಗಿ ನಗೆಮಾರಿಯಿಂದ ಸಜ್ಜಿಗೀ 
ತಿನ್ನಲಿಕ್ಕೆ ಕರೆಯುನರ್ಯಾರು ? 
ಖರೇ ಹೇಳ್ತಿನಿ ನಗಬ್ಯಾಡ್ರಿ ಕದಾಚಿತ್‌ ನಿನುಗೆ ಖೊಟ್ಟಿ ಅನಿಸೀತು? 
ಆದರ ನಿಜವಾಗಿ ಇಕೀಯಿಂದ ನನ್ನ ತಾಯಿಯದು ಸಹ  ವಿಸ್ಮರಣೆಯಾಗಿತ್ತು. 
ನಾನು ಮನೆಯೊಳಗೆ ಇದ್ದೇನೆಂದರೆ ಕೇವಲ ಕಾಲೇಜದೂಳಗಿನ ಒಬ್ಬ
ಚೈನೀಬಾಜೀ ವಿದ್ಯಾರ್ಧಿಯಂತೆಯೇ ಇದ್ದೆ. ಸಂತಿ ಇಲ್ಲ ಪ್ಯಾಟಿ ಇಲ್ಲ.
ಏನ್‌ ತರೂದಿಲ್ಲ ಬರೂದಿಲ್ಲ. ಎಲ್ಲಾ ವ್ಯವಸ್ಥ ಆಯಾ ವ್ಯಾಳ್ಯಾಕ್ಕ  ಬರೋ 
ಬರಿ ಆಗತ್ತಿತ್ತು. ನನಗೇನೂ ನೋಡಬೇಕಾಗ್ತಿದ್ದಿಲ್ಲ. ಈಗ ಪರಿಸ್ಥಿತಿ ಅದರ   
ಉಪರಾಟಿಯಾಗೇದ. ಬೆಳಿಗ್ಗೆದ್ದು ನೀರು ಕಾಸಲಿಕೆ ಹಂಡೇದ ಒಲಿಗೆ  ಉರಿ 
ಹಚ್ಚುವದರಿಂದ ಹಾಲಿಗೆ ಹೆಪ್ಪು ಹಾಕ್ಯಾರೋ ಇಲ್ಲೋ ಈ ವರಗೆ ಎಲ್ಲ 
ಕೆಲಸಗಳನ್ನು ನಾನೇ ಮಾಡಬೇಕು. ಅಥವಾ ಆಗ್ಯಾವೋ ಇಲ್ಲೊ  ನೋಡ- 
ಬೇಕು. ಇದಕ್ಕೂ ಹೆಚ್ಚು ತ್ರಾಸಿನ ಸಂಸಾರ ಹುಡುಕಿದರ ಸಿಗಲಿಕ್ಕಿಲ್ಲ.
ಮನೆಯೊಳಗಿನ ಆಳುಗಳು ಸುದ್ದ ಇದೇ ಹಾಡು. ಇಕೀ ಇರುವ 
ವರೆಗೆ ಭಾಂಡೀ ತಿಕ್ಕುವ ಹೆಣ್ಮಗಳಿಂದ ಅಗಸರ ವರೆಗೆ ಎಲ್ಲರ ಕೆಲಸಗಳು 
ಚನ್ನಾಗಿ ಆಗ್ತಿದ್ದವು. ಈಗ ಈ ಮಕ್ಕಳಿಗೆ ಏನಾಗೇದೋ ಯಾರಿಗೊತ್ತು?
ಭಾಂಡೇ ತಿಕ್ಕಾಕಿರೆ ಬಂದ್ರ ಕೈಕೆಳಗಿನ ಆಳು ಬರುವದಿಲ್ಲ. ಇವರಿಬ್ಬರೂ ಬಂದ್ರ 
ಎಮ್ಮೀ ಕಾಯುವವ ಬರುವದಿಲ್ಲ, ಇವರ ಮರಜೀ ಹಿಡಿದು ಜೀವ  ಓಲ್ಯಾ- 
ಗೇದ. ನಮ್ಮ ಸಂಸಾರ ಮೋಟರದ ಘಾಲಿ ದರುಸ್ತ ಅದ ಎಂದು   
ಹೇಳಲಿಕ್ಕೆ ಬರೂದಿಲ್ಲ. ಕನಿಷ್ಟಪಕ್ಷಕ್ಕ ಒಂದು ಘಾಲಿಯಾದರೂ ಘಾಳಿ 
ಹೋಗಿರತದ. ಈ ಬೇಜಾರಕ್ಕ ಬೇಸತ್ತು ಒಮ್ಮೊಮ್ಮೆ ಅತೃಂತ ಭಯಂಕರ
ವಿಚಾರಗಳು ಮನಸಿನಲ್ಲಿ ಬರುವವು. ಎಲ್ಲ್ಯಾದರೂ ಒಂದು  ಧೊಡ್ಡ
ಕಡವಂಡೀ ಮ್ಯಾಲಿಂದ ಹಾರಕೊಂಡು ಜೀವ ಕೊಡಬೇಕು ಅಥವಾ ಹಿಂದು 
ಮುಂದೆ ನೋಡದೆ ಭರದಿಂದ ಎರಡನೇ ಲಗ್ನಾ ಮಾಡಿಕೊಂಡು ಬಿಡಬೇಕು. 
ಹೀಗನಸ್ತದ. ಆದರ ಈ ವಯಸ್ಸಿನಲ್ಲಿ ಲಗ್ನಾ ಮಾಡಿಕೂಂಡರ ಒಂದು 
ಪಂಚೇತಿ. ಬಿಟ್ಟರ ಪಂಚೇತಿ. ಈ ಪೇಚಿನಲ್ಲಿ ಬಿದ್ದಿರುವೆನು. ಈ ಹೊಸ 
ಕುಟುಂಬದ ಚಟ ಬೀಳುವರ ಒಳಗಾಗಿ ಹೇಮಗರ್ಭ ಮಾತ್ರೆ ಅಗತ್ಯ 
ಬಿದ್ದಿರುತ್ತದೆ ಏನು ಮಾಡ್ಲೀರಿ! ಈಗ! ನನ್ನ ಅರ್ಥಾಂಗಿ ತೀರಿಕೊಂಡಿಲ್ಲ 
ಆದರೆ ಈಗ ನನಗೆ ಅರ್ಧಾಂಗವಾಯುವೇ ಆಗೇದ. ಇಂಥ ಸಮಯದಲ್ಲಿ 
ಅಳದೇ ಏನು? ಶಂಖವಾದ್ಯ ಮಾಡಲ್ಯಾ ? ನೀವೇ ಹೇಳ್ರಿ.”
===================================
  ಭಾಗ ೨ 
  ವಿಡಂಬನಾತ್ಮಕ ಬರಹಗಳು 
 
  ಈ ದೀರ್ಧ ಬರೆಹಗಳಲ್ಲಿ ಆಯಾಕಾಲದ ಸಮಾಜ ಮನೋವೃತ್ತಿಯನ್ನು 
ಚಿತ್ರಿಸಲಾಗಿದೆ. ಐತಿಹಾಸಿಕ ಹಿನ್ನೆಲೆಯಿಂದ ಇವುಗಳ ಕಡೆಗೆ ನೋಡಬೀಕು-
ಜಾತೀಯ ದೃಷ್ಟಿಯಿಂದಲ್ಲ. ಎಲ್ಲ  ಸಮಾಜಗಳಲ್ಲಿಯೂ ಈ ಮನೋವೃತ್ತಿಯನ್ನು
ಕಾಣಬಹು.ದು. 
 
  ೧.ಮಫ್ಲರ ಗೌಡನ ಮೃತ್ಯುಪತ್ರ 
  ೨. ವಿಧುರ ಮಂಡಲದ ಅವಶ್ಯಕತೆ 
  ೩, ಅಪ್ಪಾ ಸಾಹೇಬರ ಭಾಷಣ 
(ಮಹಾರಾಷ್ಟ್ರ ಸಾರಿತೃ ಸಮ್ಮೇಲನ  ) 
==================================
ಮಫ್ಲರ ಗೌಡನ ಮೃತ್ಕುಪತ್ರ 

ಬಿರುದಿನ ಬರಗಾಲ 
ಮಹಾನಾಜ ರಾ|| ರಾ।| ಸಂಪಾದಕ ಕರ್ನಾಟಕ ವೈಭವ ಇವರಿಗೆ- 
ಕೃತಾನೇಕ ಶರಣ ಶರಣಾರ್ಥಿ ವಿನಂತಿ ವಿಶೇಷ. ವಿಜಾಪೂರ ಜಿಲ್ಹೆಯೊಳಗಿನ 
ಜನರ ಸುಖದುಃಖಗಳನ್ನೆಲ್ಲ ಸರಕಾರದ ಮುಂದೆ ಮಂಡಿಸಿ ಮತ್ತು ಅವು 
ಗಳನ್ನು ದಾದ ಮಾಡಿಸಿ ಕೊಡಬೇಕೆಂದು ತಾವು ಕಂಕಣಬದ್ಧರಾಗಿರುವಿರೆಂದು 
ತಿಳಕೂಂಡು ನಿನ್ಮು ಕಡೆಗೆ ಈ ಪತ್ರವನ್ನು ಲೋಕಮಾನ್ಯವಾದ ತಮ್ಮ ಪತ್ರ 
ದಲ್ಲಿ ಪ್ರಸಿದ್ಧಿಸುವಿರೆಂದು ಆಶೆಗೊಂಡು ಕಳಿಸಿರುನೆನು. 
ಯೇಸುಕ್ರಿಸ್ತನ ಪ್ರತಿಯೊಂದು ವರ್ಷದ ಆರಂಭಕ್ಕೆ ಅಂದರೆ ಜಾನೇ 
ವಾರಿಯ ಒಂದನೇ ತಾರೀಖಿಗೆ ನಮ್ಮ ದಯಾಳು ತಾಯಿತಂದೆ ಸರಕಾರವು 
ನಮ್ಮಲ್ಲಿಯ ಎಷ್ಟೋ ಪ್ರಮುಖ ಜನರಿಗೆ ಪದವಿದಾನಗಳನ್ನು ಮಾಡುವದು. 
ಆ ಪ್ರಕಾರ ಈ ವರ್ಷವೂ ಕೂಡ ಹಿಂದುಸ್ಥಾನದಲ್ಲಿಯ ಸಾವಿರಗಟ್ಲೆ  ಜನರಿಗೆ 
ಪದವಿಗಳು ದೊರೆತಿರುವವು. ಇದರಿಂದ ನನಗೆ ಎಷ್ಟೋ ಆನಂದವು. ಆದರೆ 
ಈ ಸಾವಿರಾರು ಪದವಿಗಳಲ್ಲಿ ಒಂದಾದರೂ ಕೂಸ ನಮ್ಮ ವಿಜಾ- 
ಪೂರ ಜಿಲ್ಲೆಯ ಪಾಲಿಗೆ ದೊರೆಯಲಿಲ್ಲೆಂದು ನನಗೆ ಬಹಳ ಖೇದವೆನಿಸುತ್ತದೆ. 
ವಿಜಾಪೂರ ಜಿಲ್ಲೆಯಲ್ಲಿ ನಾಲ್ಕೈದು ವರ್ಷ ಒಂದೇ ಸವನೇ ಬರವು ಬಿದ್ದರೇ 
ನಾಯಿತು? ವಿಜಾಪೂರ ಜಿಲ್ಲೆಯು ನಿರ್ಜನವಾಯಿತೋ ಹೇಗೆ? 
ಒಂಬತ್ತು ಲಕ್ಷ ಎಪ್ಪತ್ತು ಸಾವಿರ ಜನಸಂಖ್ಯೆಯಲ್ಲಿ ಸಾನಿರಾರು 
ಜನರು ಮುಳಸೀಪೇಶಠೆ ಮುಂಬಯಿ ಮೈಸೂರ ಮತ್ತು ಆಸಾಮಗಳಲ್ಲಿ
ಕೂಲಿಯ ದೆಶೆಯಿಂದ ಹೋದರೂ ಕೂಡ ಸಣ್ಣ ರಾವಸಾಹೇಬ ಪದನಿಗೆ 
ಯೋಗ್ಯವಿದ್ದವನು ವಿಜಾಪೂರ ಜಿಲ್ಹೆಯಲ್ಲಿ ಉಳಿದಿಲ್ಲವೇನು?
 
ಮುಂಬಯಿ ಇಲಾಖೆಯನ್ನಿಯ ಪ್ರತಿಯೊಂದು ಜಿಲ್ಹೆಗೆ ಒಬ್ಬಿಬ್ಬರು
ರಾವಸಾಹೇಬರು ಆಗೇ ಆಗಿರುವರು. ಆದರೆ ವಿಜಾಪೂರ ಜಿಲ್ಹೆಯೊಂದೇ 
ಅಂಥವೇನು ಪಾತಕ ಮಾಡಿರುವದು? ಈ ಜಿಳ್ಹೆಯಲ್ಲಿ ತಮ್ಮ ಮನೆಯ 
ಕೆಲಸಕ್ಸಿಂತ ಸರಕಾರೀ ಕೆಲಸವನ್ನು ಅತ್ಯಂತ ದಕ್ಷತೆಯಿಂದ ಮಾಡಿದಂಥ 
ಸರಕಾರಿ ವಕೀಲರಿರುವರು; ಅವರಂತೆ ಮುನಸಿಪಾಲಟಿ ಮತ್ತು  ಲೋಕಲ 
ಬೋರ್ಡಗಳ ಹಿಂದಿನ ಮತ್ತು ಈಗಿನ ಅಧ್ಯಕ್ಷರಿರುವರು; ಸರಕಾರದ
 ದೊಡ್ಡ   ದೊಡ್ಡೆ ಕಂತ್ರಾಟದ ಕೆಲಸಗಳನ್ನು ಹಿಡಿಯುವಂಥ  ಕಂತ್ರಾಟದಾರರಿರುವರು; 
ಮತ್ತು ಪೆನ್ಶನ್‌ ತಕ್ಕೊಂಡಮೇಲಾದರೂ ಕೂಡ ಒಣ ಪಗಾರಿಯಿಂದ  ಸರಕಾ 
ರದ ಕೆಲಸಗಳನ್ನು ಮಾಡಲಿಕ್ಕೆ ಯಾವಾಗಲೂ ಟೊಂಕ ಕಟ್ಟಿ ನಿಂತಂಥ 
ಮತ್ತು ವಾರ್ಥಕ್ಕದಿಂದ ಬಾಗಿದಂಧ ಅನುಭವದಿಂದ ಮುದುಕರಾದಂಥ 
ಎಷ್ಟೋ ಪೆನ್ಶನರ ಜನರು ಇಲ್ಲಿ ವಾಸ ಮಾಡಿರುವರು. ಹತ್ತು ವರ್ಷಗಳ 
ವರೆಗೆ ಒಂದೂ ದಿನಸ ಕೂಡ ತಪ್ಪದೆ ಏಕನಿಷ್ಠೆಯಿಂದ ಕೆಲಸ ಮಾಡಿದಂಥ 
ಬೆಂಚ  ಮ್ಯಾಜಿಸ್ಟ್ರೇಟರಿರುವರು; ಅದರಂತೆ ಪ್ರತಿಯೊಂದು ವರ್ಷಕ್ಕೆ   ಸರಕಾರದ
ಬೊಕ್ಸಸಿಗೆ ಸಾವಿರಾರು ರೂಪಾಯಿಗಳನ್ನು ಭರಣ ಮಾಡುವಂಥ ಶಿಂದಿಯ 
ಮಕ್ತೇದಾರರಿರುವರು; ವಿಜಾಪೂರ ಜಿಲ್ಹೆಯಲ್ಲಿ ದುಷ್ಕಾಳವಿದ್ದರೂ  ಸಹಿತ 
ಬಡರೈತರ ಹೊಟ್ಟೆಯ ಮೇಲೆ ಕಾಲ ಕೊಟ್ಬು ಅವರ   ಮಾನಮರ್ಯಾದೆ
ಯನ್ನು ಬದಿಗೊತ್ತಿ ಜುಲುಮೆಯಿಂದ ಕರವನ್ನು ವಸೂಲ  ಮಾಡುವಂಥ 
ಬಹಾದ್ದೂರ ಮಾಮಲೇದಾರರಿರುವರು ಕೇವಲ ವರಿಷ್ಠ ಅಮಲದಾರರಿಗೆ   
ಸರನರಾಯಿ ಮಾಡುನದರಲ್ಲಿಯೇ ನಿಷ್ಣಾತರಿದ್ದಂಥ ಪೋಲೀಸ 
ಅಮಲದಾರರು
ಕೂಡ ಇರುವರು. ಎಷ್ಟೋ ಸಹಕಾರಿಸ೦ಘಗಳ ಅಧ್ಯಕ್ಷರೂ 
ಕೂಡ ಇರುವರು. ಮತ್ತು ಹೊತ್ತೊತ್ತಿಗೆ ಏನಾದರೊಂದು ಮಾತಾಡಿ ಜಾತಿ
ದ್ವೇಷಗಳನ್ನು ಬೆಳಿಸುವಂಧ ದೊಡ್ಡ ಭಾಷಣಕಾರರಾದರೂ  ಇರುವರು. 
ಈ ಎಲ್ಲ ಜನಗಳಲ್ಲಿ ಒಬ್ಬನೂ ಕೂಡ ಸರಕಾರದ ಮನಸ್ಸಿಗೆ ಬರಲಿಲ್ಲೆಂದರೆ
ಬಹಳ ಆಶ್ಚರ್ಯಕಾರಕವಾದ. ಸಂಗತಿಯು. ವಿಜಾಪೂರದ ಪೇಟಿ 
ಸಣ್ಣ ಪುಟ್ಟದಲ್ಲ. ದೊಡ್ಡ ದೊಡ್ಡ ಪರದೇಶಿ ಅರಿವೆಗಳ ಅಂಗಡಿಗಳ 
ಮಾಲಕರಿಂದಲ್ಕೂ ಕಿರಾಣಿ ವ್ಯಾಪಾರಸ್ಥರಿಂದಲೂ, ಅಡತಿ 
ಜನರಿಂದಲೂ, ಮನೆಮನೆಗೆ ೫-೬ ಗಾಣಗಳಿದ್ದಂಥ ಗಾಣಿಗರಿಂದಲೂ, ಹತ್ತು
ಪೌಂಡದ ವರಿಗೆ ಚಹಾವನ್ನು ಮಾರುವ ಚಹಾದ ಅಂಗಡಿಗಳಿಂದಲೂ   
ಮತ್ತು ೧೦೦೦೦ ಬೀಡಿಗಳನ್ನು ಮಾರುವಂಥ ಬೀಡಿ ಅಂಗಡಿಕಾರರಿಂದಲೂ 
ಮತ್ತು ಇಂಥ ಎಷ್ಟೋ ತರದ ಜನರಿಂದಲೂ ಕೂಡಿ ಈ  ವಿಜಾಪೂರ
ಪೇಟೆಗೆ ಶೋಭೆಯುಂಟಾಗಿರುವದು. ಆದರೆ ಇವುಗಳಲ್ಲಿ ಒಬ್ಬನಾದರೂವ 
ಗೃಹಸ್ಥನು ಸರಕಾರದ ಕಣ್ಣಿಗೆ ಬೀಳಲಿಲ್ಲೆಂಬದು ನಮ್ಮ  ದುರ್ದೈವವಲ್ಲವೋ? 
ಪುಣೆ ಮುಂಬಯಿಗಳಲ್ಲಿಯ ಸೇವಾಸದನದಲ್ಲಿದ್ದ ಸ್ರೀಯರಿಗೂ ಕೂಡ 
ಪದವಿಗಳು ದೊರೆತಿರುವವು. ಆದರೆ ವಿಜಾಪೂರದಲ್ಲಿಯ ಉದ್ದುದ್ದ 
ಮೀಸೆಯನ್ನು ಹೊತ್ತಂಥ ಮತ್ತು ಬಣ್ಣದ ಗಡ್ಡಗಳನ್ನು ಬೆಳಸಿ 
ದಂಧ ಪುರುಷರಿಗೆ ಒಂದಾದರೂ ಪದವಿಯು ದೊರೆಯಬಾರದೆಂದರೆ  ಇದಕ್ಕಿಂತ 
ನಾಚಿಕೆಗೇಡಿತನವು ಎರಡನೆಯದು ಯಾವದು? ಸತೃವಾಗಿ  ಹೇಳುವವಾದರೆ 
ಈ ವರ್ಷ ಒಂದಾದರೂ ನದವಿಯು ಸಿಗುವದಿಂದು ನನಗೆ ಬಹಳ   ಆಶೆಯಿತ್ತು.   
ಜಾನೇವಾರಿ ೨ನೇ ತಾರೀಖಿನ ವರ್ತಮಾನ ಪತ್ರವನ್ನು ನೋಡಲಿಕ್ಕೆ ನಾನು
ಬಹಳೇ ಆತುರನಾಗಿದ್ದೆನು. ವರ್ತಮಾನ ಪತ್ರವು ಕೈಯಲ್ಲಿ ಬಂದ  ಕೂಡಲೇ
ಮ್ಯಾಟ್ರಿಕ ಕುಳಿತ ವಿದ್ಯಾರ್ಥಿಯಂತೆ ನಾನು ಪದವಿಯನ್ನು 
ಓದಲಿಕ್ಕೆ, ಸುರು ಮಾಡಿದೆನು. ಯಾದಿಯು ಮೆಟ್ರೀಕ ಪರೀಕ್ಷೆಯ
ಪರಿಣಾಮದಷ್ಟೇ ದೊಡ್ಡದಿದ್ದರೂ ಕೂಡ, ಅದರಲ್ಲಿ ನನ್ನ ಹೆಸರು ದೊರೆಯ 
ಲಿಲ್ಲ. ಆ ದಿವಸ ನಾನು ಅಷ್ಟೇನು ನಿರಾಶೆಯಾಗಲಿಲ್ಲ. ಯಾಕಂದರೆ ಒಂದು 
ವೇಳೆ ನನ್ನ ಹೆಸರು ಪುರವಣಿಯ ಯಾದಿಯಲ್ಲಿಯಾದರೂ ಬರಬಹುದೆಂದು 
ನನಗೆ ಅನಿಸಿತ್ತು. ಆದರೆ ಮೂರು ನಾಲ್ಕು ದಿವಸಗಳಾದರೂ ಕೂಡ 
ಪುರವಣಿಯ ಯಾದಿಯು ಬರಲಿಲ್ಲವೆಂದು ತಿಳಕೊಂಡು ಮೆ|| ಗವ್ಹರ್ನರ 
ಸಾಹೇಬರ ಕಡೆಗೆ ಒಂದು ತಂತಿಯನ್ನು ಕಳುಹಿಸಿಕೊಟ್ಟೆನು. ಆದರ ಉತ್ತರ 
ತೀವ್ರವಾಗಿ ಬರಬೇಕೆಂಬುವದರ ದೆಶೆಯಿ:ದ ೧॥ ರೂಪಾಯನ್ನಾದರೂ  ನಾನೇ 
ತುಂಬಿದೆನು. ಆ ತಂತಿಗೆ ಅವರ ಉತ್ತರವು ಬಂದದ್ದೇನೆಂದರೆ “ ನೀವ್ರ ಯಾರು 
ಇದ್ದೀರೆಂದು ನಮಗೇನೂ ಗೊತ್ತಿಲ್ಲ ಇದರ ದೆಶೆಯಿಂದ ನನಗೆ ಬಹಳ ಖೇದ 
ವೆನಿಸುತ್ತದೆ"  ಈ ತಂತಿಯನ್ನು ಓದಿದ ಕೂಡಲೇ ನನ್ನ ಸಿಟ್ಟು ನೆತ್ತಿಗೇರಿ
ಸಹಿಸಲಾರದೆ ಈ ಇತಿವೃತ್ತವನ್ನು ಬರೆಯಲು ಅರ್ಹ‌ನಾದೆನು. ಒಂದು
ಪದನಿಯನ್ನಾದರೂ ದೊರಕಿಸುನ ಸಲುವಾಗಿ ನನ್ನ ಯೋಗ್ಯತೆಯು ಎಷ್ಟು

ಅದೆ ಎಂಬದನ್ನು ಮುಂದಿನ ಪತ್ರದೆಲ್ಲಿ ಬರೆಯುವೆನು. ನೀವು ಈ ಪತ್ರವನ್ನು 
ಪ್ರಸಿದ್ಧಿಸಿದರೆ ಸರಕಾರವು ಜನರನ್ನು ಯಾವ ಪ್ರಕಾರ ಮೋಸ ಮಾಡುತ್ತ 
ದೆಂಬ ಮಾತು ತನ್ನಷ್ಪಕ್ಕೆ ತಾನೇ ಹೊರಬೀಳುವದು. 

   ಯೋಗ್ಯತಾ ದಿಗ್ಗರ್ಶನ 
ಈ ಪತ್ರದಲ್ಲಿ ರಾವಸಾಹೇಬ ಇಲ್ಲವೆ ರಾವಬಹಾದ್ದೂರ ಆಗಲಿಕ್ಕೆ ನನ್ನ
ಯೋಗ್ಯತೆಯು ಎಲ್ಲಿಯವರೆಗೆ ಇದೆ ಎಂಬುದನ್ನು ಸ್ವಲ್ಪದರಲ್ಲಿ ದಿಗ್ಬರ್ಶನ 
ಮಾಡಬೇಕೆಂದು ನಾನು ವಿಚಾರಿಸಿರುವೆನು. 
ಸ್ವಲ್ಪದರಲ್ಲಿ ಹೇಳುವದಿಂದರೆ ಈದು ನನ್ನ ಅತ್ಮ ಚರಿತ್ರವೇ ಇರುವದು. 
ದೊಡ್ಡ ದೊಡ್ಡೆ ಪ್ರಮುಖ ಜನರು ತನ್ಮು ಆತ್ಮ ಚರಿತ್ರೆಯನ್ನು ಬರೆಯುವರು 
ಅಂದ ಮೇಲೆ ನಾನು ಸಹಿತ ಯಾಕೆ ಬರೆಯಬಾರದು? ಸರಕಾರೀ ಪದವಿ 
ಗಳಿಗೆ ನಾನು ಯೋಗ್ಯನಿದ್ದೇನೆಂದು ನಿಮಗೆ ತಿಳಿಸಬೇಕಾದರೆ ನನ್ನ ಪೂರ್ವದ 
ಚರಿತ್ರೆಯನ್ನು ಹೇಳುವದು ಅತ್ಛಂತ ಅವಶ್ಯವಿರುನದು. 
ಡೋಗಿಬರದ ನಂತರೆ ೪-೫ ವರ್ಷಗಳ ಮೇಲೆ ವಿಜಾಪೂರ ಜಿಲ್ಹೆ   
ಯೆಲ್ಲಿಯ ಒಂದು ಸಣ್ಣ ಹಳ್ಳಿಯಲ್ಲಿ ನಾನು ಜನಿಸಿದೆನು.  ರಾಗೀಬರದಲ್ಲಿ 
ನನಗೆ ಮೊಗಮಮೀಸೆಗಳು ಒಡೆಯುತ್ತಿದ್ದವು. ನಾವು ಪಾಟೀಲ  ಮನೆತನದವ 
ರಿದ್ದರೂ ಕೂಡ ನಮ್ಮ ಕಡೆಗೆ ಗೌಡಿಕೆ ಇದ್ದಿದ್ದಿಲ್ಲ. ನವು ಬಿಡಾರ     
ಪಾಟೀಲರು. ನಾವು ಮನೆಯಲ್ಲಿ ಎರಡು ಎತ್ತುಗಳನ್ನಿಟ್ಟು ಹೇಗಾದರೂ 
ಮಾಡಿ ಸಂಸಾರವ ಚಕ್ರನನ್ನು ಸಾಗಿಸುತ್ತಿದ್ದೆವು. ನಾನು ಸಣ್ಣ  ವಯಸ್ಸಿನಲ್ಲಿ 
ದ್ದಾಗ್ಗೆ ಶಿಕ್ಷಣದ ಪ್ರಸಾರವು ಅಷ್ಟು ಇದ್ದಿದ್ದಿಲ್ಲ.. ಆದ್ದರಿಂದ ನಾನು ಕನ್ನಡ 
೪ ನೇ ಇಯತ್ತೆಯಲ್ಲಿ ತೇರ್ಗಡೆ ಹೊಂದಿದೆನು. ಇಂಗ್ರೇಜಿ ಸಹಿಯನ್ನು   ಈಗ 
ಇತ್ತಿತ್ತಲಾಗಿ ಕಲಿತಿರುವನು. 
ನನ್ನ ಹಿರಿಯರು ನಾನು ಸಾಲೆಯನ್ನು ಬಿಟ್ಟಿ ಕೂಡಲೇ ಓಕ್ಕಲತನದ   
ಕೆಲಸವನ್ನು ಮಾಡಲಿಕ್ಕೆ ಹೇಳಿದರು, ಅದರೆ ಕೆಲಸವೆಂದರೆ ನನಗೆ ನೊದಲಿ
ನಿಂದ ಬೇಸರಿಕೆ ಮತ್ತು ನಮ್ಮ ಹಳ್ಳಿಯಲ್ಲಿ ಶಾಲೆಯು ಕೂಡ ಇದ್ದಿದ್ದಿಲ್ಲ 
ಈ ಎರಡು ಕಾರಣಗಳ ದೆಶೆಯಿಂದ ನಾನು ಅಲ್ಲಿಯೇ ಒಂದು 
ಶಾಲೆಯನ್ನು   ಸ್ಫಾಪಿಸಿ ಅದರಲ್ಲಿಯೇ ಶಿಕ್ಷಕನಾದೆನು. ಮುಂದೆ ಕೆಲವು  ಕಾಲ ಗತಿಸಿದ 
ನಂತರ ನನ್ನ ಪ್ರಯತ್ನದಿಂದ ವತನದಾರ ಪಾಟೀಲನು ಬರತರ್ಫನಾದನು. 
ಮತ್ತು ಗೌಡಕಿಯ ಕೆಲಸದ ಮೇಲೆ ಸರಕಾರದ ವತಿಯಿಂದ ನನ್ನ ನೇಮಣೂಕ 
ವಾಯಿತು. ನಾನು ಗೌಡಿಕೆಯ ಕೆಲಸವನ್ನು ಮಾಡುವ ಕಾಲಕ್ಕೆ ನಮ್ಮ 
ತಾಲೂಕದಲ್ಲಿಯ ಘೌಜದಾರ ಮತ್ತು ಮಾಮಲೀದಾರ ಇವರ ಗುರ್ತು 
ನನಗೆ ಆಯಿತು. ಮತ್ತು ಅಮಲದಾರಿಗೆ ನಾನು ಮಿತ್ರತ್ವದ ನಾತೆಯಿಂದ 
ಬೆಣ್ಣಿ, ಕಣಿಕಿ ಮತ್ತು ಕಟ್ಟಿಗೆಗಳನ್ನು ಮೇಲಿಂದ ಮೇಲೆ ಕಳಿಸಹತ್ತಿದೆನು. 
ನಾನು ಅಮಲದಾರರ ಮನೆಗೆ ಹೋದಾಗೆ, ಅವರು ಸಹಿತ ತಾವು  ಚಹವನ್ನು 
ಕುಡಿದ ನಂತರ ನನಗಾದರೂ ಕುಡಿಯಲಿಕ್ಕೆ ಕೊಡುತ್ತಿದ್ದರು ಈ   ವ್ಯವಹಾರ 
ದಲ್ಲಿ ನನಗೂ ಲಾಭವಾಗುತ್ತಿತ್ತು. ಮತ್ತು ಅಮುಲದಾರರಿಗೂ ಕೂಡ  ಲಾಭ 
ವಾಯಿತು. ಮುಂದೆ ಕೆಲವು ದಿವಸಗಳ ನಂತರ ನಾನು ಗೌಡಿಕೆಯನ್ನು 
ಬಿಟ್ಟರೂ ಕೂಡ ನಾನು ಮೊದಲಿನಂತೆ ಅಮಲದಾರರ ಕಡಿಗೆ ಬೆಣ್ಣಿ 
ಮೊದಲಾದವುಗಳನ್ನು ಕಳಿಸಿ ಕೊಡಲಿಕ್ಕೆ ಎಂದೂ ತಪ್ಪಲಿಲ್ಲ.  ಇದರಂತೆ 
ಹಳ್ಳಿಯಲ್ಲಿ ದಿವಾಣಿ ಅಧವಾ ಫೌಜದಾರಿ ತಂಟಿಗಳಾದರೆ ನಾನು ವಾದಿ 
ಅಥವಾ ಪ್ರತಿವಾದಿ ತರ್ಫೆ ಸಾಕ್ಷಿ ಪುರಾವೆಗಳ ಸಹಾಯದ ಸಲವಾಗಿ ಕೋರ್ಟು 
ಕಚೇರಿಗಳಿಗೆ ಹೋಗಲಿಕ್ಕೆ ಪ್ರಾರಂಭಿಸಿದನು. ಆದ್ದರಿಂದ ಬಡ ಜನರಿಗೆ 
ಸಹಾಯ ಮಾಡಿದ ಬಗ್ಗೆ ನನಗೆ ಪುಣ್ಯವು ದೊರಕುತ್ತಿತ್ತು. ಮತ್ತು ಹಣದ   
ದೃಷ್ಟಿ ಯಿಂದಾದರೂ ವಿಶೇಷ ನನಗೆ ಲಾಭವಾಗುತ್ತಿತ್ತು. ಈ ಪ್ರಕಾರ 
ಪ್ರಾಮಾಣಿಕ ರೀತಿಯಿಂದ ಸಂಸಾರ ಮಾಡುವ ನನ್ನ ಮೇಲೆ ಪ್ರಾಂತ 
ಸಾಹೇಬರ ಕೃಪಾ ದೃಷ್ಟಿಯು ಬಿತ್ತು. ಮತ್ತು ಸಾಹೇಬರ ಅನುಗ್ರಹದಿಂದ 
ನಮ್ಮ ತಾಲೂಕ ಬೋರ್ಡಿಗೆ ಸರಕಾರ ವತಿಯಿಂದ ನಾನು ಸಭಾಸದನಾದೆನು 
ಆ ದಿವಸವು ನನ್ನ ಆಯುಷ್ಯದಲ್ಲಿ ಸುವರ್ಣ ಅಕ್ಷರದಿಂದ ಬರೆಯತಕ್ಕಂಧದಿರು 
ವದು. ನಾನು ತಾಲೂಕಾ ಲೋಕಲ್‌ಬೋರ್ಡದ ಸಭೆಗೆ ನನ್ನ ಗಾಡಿಯಲ್ಲಿ 
ಕೂತು ಹೋಗುವಾಗ್ಗೆ ಪ್ರಕಿಯೊಬ್ಬ ಮನುವೃನು ನನಗೆ * ಪಾಟೀಲ 
ಪಾಟೀಲ" ಎಂದು ಆದರ ಪೂರ್ವಕವಾಗಿ ಮಾತಾಡಲಿಕ್ಕೆ ಹತ್ತಿದರು. ನನ್ನ
ಅನಂದವು ಆಕಾಶದಲ್ಲಿಯೂ ಕೂಡ ಹಿಡಿಸಲಾರದಷ್ಟಾಯಿತು. ಈ  ಕೆಲಸದಲ್ಲಿ 
ನನಗೆ ಒಂದು ಎಮ್ಮೆ ನಾಲ್ಕು ಗಾಡಿ ಕಣಕಿ ಮತ್ತು ಎಂಟು  ಕುಂಬಳಕಾಯಿ; 
ಇಷ್ಟು ಖರ್ಚು ಬಂದಿತು. ಆದರೆ ಈ ಕೆಲಸದ ಸಲುವಾಗಿ ನಾನು ಇನ್ನೂ
೪ ಎಮ್ಮೆಗಳನ್ನು ಕೊಡಲಿಕ್ಕೆ ಸಿದ್ದನಿದ್ದೆನು. ತಾಲೂಕಾ ಲೋಕಲ  ಬೋರ್ಡಿಗೆ 
ಹೋದನಂತರ ನನ್ನ ಭರಭಾಟಿಯು ಬಹಳೇ ಜೋರಿನಿಂದ ಪ್ರಾರಂಭ
ವಾಯಿತು. ಇದೇ ಸಂಧಿಗೆ ಜರ್ಮನ್‌ ಯುದ್ಧವು ಸುರುವಾಯಿತು. ಮತ್ತು 
ವಾರಫಂಡನ್ನು ಕೂಡಿಸಲಿಕ್ಕ ಸರಕಾರದವರು ಆರಂಭಿಸಿದರು. ನನ್ನ ತಾಲೂ 
ಕಿನಲ್ಲಿ ಜನರು ಫಂಡನ್ಮು ಕೂಡಲಿಕ್ಕೆ ತಯಾರಿದ್ದಿದ್ದಿಲ್ಲ. ಎಷ್ಟು  ಪ್ರಯತ್ನ 
ಪಟ್ಟರೂ ಫಂಡು ಕೊಡಲೊಲ್ಲರು. ಕಟ್ಟಕಡೆಗೆ ಕಲೆಕ್ಟರರು ಮತ್ತು 
ಮಾಮಲೇದಾರ ಮೊದಲಾದವರೆಲ್ಲರೂ ಕಲೆತು ನಮ್ಮ ತಾಲೂಕಿನಲ್ಲಿ  ಒಂದು 
ದೊಡ್ಡ ಸಭೆಯನ್ನು ಮಾಡಿದರು. ಈ ಸಭೆಯಲ್ಲಿ ನಾನು ಭಾಷಣ  ಮಾಡಿ 
ವಾರಲೋಫಿಗೆ ೧೦೦೦ ರೂಪಾಯಿ ಕೂಡುತ್ತೇನೆಂದು ವಚನವನ್ನು  ಕೊಟ್ಟೆನು 
ಈ ಯುಕ್ತಿಯನ್ನು ಸಾಧಿಸಿ ನನ್ಮು ತಾಲೂಕಿನಲ್ಲಿ ಒಂದು   ಕಮೀಟಿಯನ್ನು 
ವಾರಲೋನ ವಸೂಲ ಮಾಡಲಿಕ್ಕೆ ಸ್ಥಾಪಿಸಿ ಅದಕ್ಕೆ ನಾನು  ಅಧ್ಯಕ್ಷನಾದೆನು. 
ಆ ಮೇಲೆ ಏನು ವಿಚಾರಿಸುವದು? ಹಳ್ಳಿಯಲ್ಲಿ ನನ್ನ ವಿರುದ್ಧ ಇದ್ದ ಎಲ್ಲ 
ಜನರ ಸಮಾಚಾರವನ್ನು ನಾನು ತಕ್ಕೊಂಡೆನು. ಸರಕಾರಕ್ಕೆ  ೧೫-೨೦ಸಾವಿರ 
ರೂಪಾಯಿಗಳು ಕೂಡಿದವು. ಮತ್ತು ಅವರ ಕೃಪೆಯಿಂದ ನನಗಾದರೂ 
೩-೪ ಸಾನಿರೆ ರೂಪಾಯಿಗಳು ದೊರತವು. ಈ ಸಂಧಿಯನ್ನು ಸಾಧಿಸಿ 
ನನ್ನನ್ನು ಗೌಡಿಕೆಯಿಂದ ತೆಗೆಯಬೇಕೆಂದು ಪ್ರಯತ್ನ ಪಟ್ಟ ಜನರೆಲ್ಲರ
ಸಮಾಚಾರವನ್ನು ನಾನು ಚನ್ನಾಗಿ ತಕ್ಕೊಂಡೆನು. ಭರತಿಯ  ಸಲುವಾಗಿಯೂ 
ಕೂಡ ನಾನು ಮನಃಪೂರ್ನಕ ಸರಕಾರದ ಕೆಲಸ ಮಾಡಿದೆನು. ಅದರಲ್ಲಿ   
ನನ್ನ ಊರಲ್ಲಿಯ ಕೆಲವು ದಷ್ಟಪುಟ್ಟ ಜನರನ್ನು ಫೌಜದಾರ ಖಾತೆಯಲ್ಲಿ
ತೆಗೆದುಕೊಂಡು ಸೈನ್ಯದಲ್ಲಿ ಭರತಿ ಮಾಡಿಸಿದರು. ಅನರು ಹತ್ತು  ಜನರಿದ್ದರು. 
ಆದರೆ ಯುದ್ಧದಲ್ಲಿ ಅವರೆಲ್ಲರೂ ಮರಣ ಹೊಂದಲಿಲ್ಲ. ಅವರಲ್ಲಿ  ಮೂವರು 
ಮಾತ್ರ ತಿರುಗಿ ಬಂದರು. ಅವರು ತಮ್ಮ ಜೀವದಾಸೆಯನ್ನು  ಬಿಟ್ಟು 
ಯುದ್ಧಕ್ಕೆ ಹೋದ್ದರಿಂದ ಅವರಿಗೆ ಈಗ ಯಾವ ತರದ್ದೂ  ಭಯವಿರುವದಿಲ್ಲ. 
ಹಿಂದಿನ ದಾವೆಗಳನ್ನು ನನ್ನ ಮೇಲೆ ತೆಗೆಸುವರು. ಬೇಕಾದ ಹಾಗೆ ನನ್ನ  ಮೇಲೇರಿ
ಬರುವರು ಮತ್ತು ವಾರಲೋನದ ಸಲುವಾಗಿ ಎಷ್ಟೋ ಜನರು ನನ್ನ  ಮೇಲೆ 
ಸಿಟ್ಟಾಗಿದ್ದರು.. ಇನ್ನು ಮೇಲೆ. ಊರಲ್ಲಿರುವದು. ನೆಟ್ಟಗಲ್ಲೆಂದು
ತಿಳಕೊಂಡು ಹೊಲ ಮನೆಗಳ ಯೋಗ್ಯವ್ಯವಸ್ಥೆ ಮಾಡಿ ನಾನು  ಹೆಂಡರು 
ಮಕ್ಕಳನ್ನು ಕಟ್ಟಿ ಕೊಂಡು ವಿಜಾಪೂರಕ್ಕೆ ಬಂದೆನು. ಇನ್ನು ವಿಜಾಪೂರಕ್ಕೆ 
ಬಂದ ಮೇಲೆ ನನ್ನ ದೈವವು ಹೇಗೆ ತೆರೆಯಿತು? ನಾನು ರಾವಸಾಹೇಬ 
ಪದವಿಗೆ ಹೇಗೆ ಯೋಗ್ಯನಾದೆ ಎಂಬುದನ್ನು ಇನ್ನು ಮುಂದೆ ಹೇಳುವೆ.

ಏರಿಕೆಯ ರೂಪಾಂತರ 
ನಾನು ಹಿಂದಿನ ಪತ್ರದಲ್ಲಿ ಹೇಳಿದಂತೆ ವಿಜಾಪೂರಕ್ಕೆ ಬಂದ ಮೇಲೆ   ಹೇಗೆ
ಘನತೆಗೇರುತ್ತಾ ಹೋದನೆಂಬುದನ್ನು ಹೇಳುವೆ. 
ವಿಜಾಪೂರಕ್ಕ ಬಂದಮೇಲೆ ಸುಮ್ಮನೆ ಕೂಡುವದು ಎಂದೂ ಯೋಗ್ಯ 
ವಾಗಲಾರದಿಂದು ವಿಚಾರಿಸಿ ನನ್ನ ಹತ್ತರವಿದ್ದ ಎಲ್ಲ ಭಾಂಡವಲ ಹಾಕಿ 
ಒಂದು ಅಡತಿ ಅಂಗಡಿ ಸ್ಟಾಪನೆ ಮಾಡಿದೆ. ಮತ್ತು ನಮ್ಮ ಊರ ಕಡೆಯ ಎಲ್ಲ 
ಮಾಲಿನ ಗಾಡಿಗಳನ್ನು ನಮ್ಮಲ್ಲಿಗೆ ಬರುವಂತೆ ಏರ್ಪಾಡು ಮಾಡಿದೆ. ಈ ಅಡತಿ 
ಅಂಗಡಿಯಿಂದ ಲಾಭವಾಗಬೇಕೆಂದು ಕಾಯಿದೇಶೀರ ಮತ್ತು ಬೇಕಾಯದೇ 
ಶೀರದಿಂದ ಎಷ್ಟು ಪ್ರಯತ್ನಪಟ್ಟರೂ ವ್ಯರ್ಥವಾಯಿತು. ಎಷ್ಟೋ ತರದ 
ಉಪಾಯಗಳನ್ನು ಯೋಚಿಸಿದರೂ ಸಹಿತ ಅಂಗಡಿಯು ಹಾನಿಯಲ್ಲಿಯೇ 
ಬಂದಿತು. ಈ ಕೆಲಸದಲ್ಲಿ ನನಗೆ ಯಶವು ದೊರಕಲಾರದೆಂದು  ಶ್ರೀಚನ್ನ 
ಬಸವೇಶ್ಚರರ ಇಚ್ಛೆಯಿದ್ದಂತೆ ತೋರುತ್ತದೆ. ಅದರೆ ಎರಡನೇ ವಿಷಯದಲ್ಲಿ 
ನನಗೆ ತೀವ್ರವೇ ಯಶವು ದೊರೆಯಹತ್ತಿತು. 
ವಿಜಾಪೂರ ನಗರದಲ್ಲಿ ಎಷ್ಟೋ ಜನರು ಸರಕಾರಿ ಅಧಿಕಾರಿಗಳಿರುವರು. 
ನಾನು ವಿಜಾಪೂರಕ್ಕೆ ಬಂದ ಮೇಲೆ ದೊಡ್ಡ ದೊಡ್ಡ ಅಮಲದಾರರ ಮನೆಗ 
ಳಿಗೆ ಹೋಗಿಬರುವ ಪರಿಪಾಠವನ್ನಿಟ್ಟೆನು. ಏನಾದರೂ ಕೆಲಸವಿರಲಿ 
ವಿಲ್ಲದಿರಲಿ ಅಮಲದಾರರ ಭೆಟ್ಟಿಯು ನನಗೆ ದಿನಾಲು ಆಗತಕ್ಕದು 
ಮುಂಜಾವಿನಲ್ಲಿ ಒಮ್ಮೆ ಯಾರಾದರೊಬ್ಬ ಸರಕಾರಿ ಅಮಲದಾರರ ಭೆಟ್ಟಿ
ತೆಗೆದುಕೊಂಡು ಅವರಿಗೆ ನಮಸ್ಕಾರ ಮಾಡದ ಹೊರತು ನನಗೆ 
ಊಟವು ರುಚಿ ಹತ್ತುತ್ತಿದಿಲ್ಲ. ಅಮಲದಾರರ ಮನೆಯಲ್ಲಿ ಒಂದು 
ಶುಭಕಾರ್ಯವಿದ್ದರೆ ಸಾಕು. ಅವರ ಕೆಲಸ ಮಾಡುನದರಲ್ಲಿ ನನಗೆ ಎರಡನೇ 
ಕಡೆಗೆ ನೇಳೆಯು ಕೂಡ ಸಿಗುತ್ತಿದ್ದಿಲ್ಲ. ಅಮಲದಾರರಿಗೆ ಬೇನೆ ಅಧವಾ ಉರಿ 
ಬಂದರೆ ನನಗಾದರೂ ಧಂಡಿ ಅದಂತಾಗಿ ನನ್ನದೂ ಮತ್ತು ಅನುಲದಾರರದೂ 
ತನ್ಮಯವಾದಂತಾಗುವದು. ಒಬ್ಬ ಅಮಲದಾರನು ತನ್ನ ಮನೆಯನ್ನು 
ಕಟ್ಟಿಸಲಿಕ್ಕೆ ಆರಂಭಿಸಿದರೆ ಅನನಿಗೆ ನಮ್ಮೂರಿಂದ ಕಲ್ಲುಗಳನ್ನು ತೀರ ಅಗ್ಗ 
ರೀತಿಯಿಂದ ಪೂರೈಸಿದನು. ಈ ನನ್ನ ಕನಿಷ್ಟ ಸೇವೆಯು ಪ್ರತಿಫಲವಿಲ್ಲದೆ 
ಹೋಗಲಿಲ್ಲ. ಕೆಲವು ಅನುಲದಾರರ ಸಹಾಯದಿಂದ ವಿಜಾಪೂರ ನಗರದಲ್ಲಿ 
ನನಗೆ ಒಂದು ಬೆಂಚೆ ಮ್ಯಾಜಿಸ್ಟ್ರೇಟ ಜಾಗೆಯು ಲಭಿಸಿತು. ಈ ಕೆಲಸದ 
ಸಲುವಾಗಿ ನನಗೆ ಸರಕಾರದ ಕಡೆಯಿಂದ ಏನೂ ಸಂಬಳ ಸಿಗದಿದ್ದರೂ 
ಅನ್ಯರೀತಿಯಿಂದ ನನಗೆ ಬಹಳ ಲಾಭವಾಗುತ್ತಿತ್ತು. ಇರಲಿ. ನಾನು ಬೆಂಚ 
ಮ್ಯಾಜಿಸ್ಟ್ರೇಟನಾದುದರಿಂದ  ನನ್ನ ಸಂಸಾರದ ಖರ್ಚು ಅತ್ಯಂತ ಸುರಳೀತ 
ರೀತಿಯಿಂದ ಸಾಗಿರುವದು. ಮತ್ತು ವೋಲೀಸ ಶಿಪಾಯಿಗಳು ಕೂಡ ಹೋಗು 
ಬರುವ ಕಾಲಕ್ಕ ನನಗೆ ನಮಸ್ಕಾರ ಮಾಡಲಿಕ್ಕೆ ಹತ್ತಿದರು. 
ನಾನು ಬೆಂಚ ಮ್ಯಾಜಿಕ್ಟ್ರೀಟಿನಾದರೂ ನನಗೆ ಸಮಾಥಾನವಾಗ 
ಲೊಲ್ಲದು. ಇನ್ನು ಇದಕ್ಕೂ ಹೆಚ್ಚಿನ ಅಧಿಕ ಹುದ್ದೆಯನ್ನು ದೊರಕಿಸ 
ಬೇಕೆಂದು ನನ್ನ ಮನಸ್ಸಿನಲ್ಲಿ ಮಹಾತ್ವಾಕಾಂಕ್ಷೆಯು  ಉತ್ಪನ್ನವಾಯಿತು. 
ನಮ್ಮ ಜಿಳ್ಬೆಯಲ್ಲಿ ಸಹಕಾರಿ ಸಂಸ್ಥೆಗಳು co-operative ಬಹಳ ಸ್ವಲ್ಪು 
ಇರುವವು. ಆ ಸಂಸ್ಥೆಗಳನ್ನು ಇನ್ನಿಷ್ಟು ಹೆಚ್ಚಿಗೆ ಬೆಳಿಸಬೇಕೆಂದು  ಸರಕಾರಿ 
ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಈ ಸುಸಂಧಿಯನ್ನು ಸಾಧಿಸಿ 
ಬಿನ್‌ ಪಗಾರಿ ಕಲನ ಮಾಡಲಿಕ್ಕೆ ನಾನು ಸಿದ್ಧನಾದೆನು. ಮತ್ತು ಸಹೆಕಾರಿ 
ಸಂಘಗಳ ಸಂಬಳವಿಲ್ಲದ ಸಂಸ್ಥಾಪಕನಾದೆನು. ಇದರಿಂದ ನನ್ನ  ಪ್ರತಿಷ್ಠೆಯು 
ಜಿಲ್ಹೆಯಲ್ಲಿ ಬೆಳೆಯಹತ್ತಿತು. 
ಇದೇ ಕಾಲಕ್ಕೆ ಅಂದರೆ ಇನ್‌ಪ್ಲು ಎಂಝಾ ಸುರುವಾಗುವದಕ್ಕಿಂತ 
ಒಂದು ವರ್ಷ ಮೊದಲು ವಿಲಾಯತಿಯಿಂದ ಮಾಂಟೆಗೂ ಎಂಬ ಹೆಸ)ನ
ಸಾಹೇಬರು ಬಂದಿದ್ದರು. ಆ ಕಾಲಕ್ಕೆ ಬ್ರಾಹ್ಮಣೇತರರು, ಬಹಳ  ಹಿಂದುಳಿದ 
ಜನರಲ್ಲಿ ಎಷ್ಟು ಪ್ರಯತ್ನ ಬಟ್ಟರೂ ಅನರು ಕಲಿಯಲೊಲ್ಲರು.  ಅವರಿಗೆ 
ದೊಡ್ಡ ದೊಡ್ಡ ಅಧಿಕಾರದ ಜಾಗೆಗಳನ್ನು ಮತ್ತು ಕೌನ್ಸಿಲದಲ್ಲಿ ಕೆಲವು 
ಜಾಗೆಗಳನ್ನು ಅವರ ದೆಸೆಯಿಂದ ಇಟ್ಟರೆ ಆ ಆಶೆಯಿಂದಾದರೂ ಅವರು 
ಶಿಕ್ಷಣವನ್ನು ಪಡಯುವರೆಂದು ಒಂದು ಅರ್ಜಿಯನ್ನು ಮಾಂಟೆಗೂ 
ಸಾಹೇಬರ ಕಡೆಗೆ ಕೊಟ್ಟರು. ಮಾಂಟೆಗೂ ಸಾಹೇಬರು ಈ 
ಅರ್ಜಿಯನ್ನು ಮಂಜೂರ ಮಾಡಿ ಆರ್ಜದಾರ:ಗೆ ಶಹಾಬಾಸಕಿಯನ್ನು 
ಕೊಟ್ಟರು. ಆ ಮೇಲೆ ಕೆಲವು ಶಿಕ್ಷಿತ ಬ್ರಾಹ್ಮಣೇತರರಿಗೆ ಮಾಮಲೇದಾರ 
ಮುಂತಾದ ದೊಡ್ಡ ದೊಡ್ಮ ಅಧಿಕಾರದ ಸ್ಫಳಗಳು ಸಿಕ್ಕವು. ನನ್ನ  ಮನಸ್ಸಿ 
ನಲ್ಲಿ ಆಶೆಯು ಹುಟ್ಟಿತು. ಆದರೆ ದುರ್ದೈವದಿಂದ ನಾನು ಎನೂ ಶಿಕ್ಷಣ 
ವನ್ನು ಪಡೆದಿದ್ದಿಲ್ಲಾದರೂ ಸಹಿತ ನನ್ನ ಮಗನಾದರೂ  ಮಾಮಲೇದಾರ 
ನಾಗಬೇಕಂದು ನನ್ನ ಪ್ರಯತ್ನಗಳು ಸುರುವಾದವವು. 
ಆದರೆ ಇದಕ್ಕೃ ಗಂಡಾಂತರಗಳು ಬಹಳವಿದ್ದವು. ಬ್ರಾಹ್ಮಣೇತರ 
ರಲ್ಲಿ ಬ್ರಾಹ್ಮಣರ ಹೊರ್ತಾಗಿ ಉಳಿದ ಎಲ್ಲ ಜಾತಿಗಳು, ಅಂದರೆ  ಲಿಂಗಾಯತ 
ರಡ್ಡಿ, ಬಡಿಗೇರ, ಕ್ರಿಶ್ಚನ್‌, ಮುಸಲ್ಮಾನ, ಹೊಲೇರ, ಮಾದಿಗ ಮರಾಠಾ 
ರಜಪೂತ ವೊದಲಾದ ಜಾತಿಗಳ ಸಮಾವೇಶವಾಗಿದ್ದಿತು. ನಮ್ಮ  ಪ್ರಾಂತದ 
ಚಳವಳಿ ಮಾಡುವ ಬಹುಜನ ಮುಖಂಡರು ಲಿಂಗಾಯತರಿದ್ದುದರಿಂದ 
ಬ್ರಾಹ್ಮಣೇತರ ಇದರ ಅರ್ಥವನ್ನು ಕೇವಲ ಲಿಂಗುಯತ ಎಂದು  ಮಾಡುವದು 
ನನ್ನ ದೃಷ್ಟಿಗೆ ಬಿದ್ದಿತು. ಇದು ಅಸ್ವಾಭಾವಿಕವೂ ಇದ್ದಿಲ್ಲ. ಯಾಕಂದರೆ 
ನೋಕರಿ ಮೊದಲಾದ ಕೆಲಸಕ್ಕ ಅರ್ಜಿಯನ್ನು ಮಾಡಿದಿ ವಸೀಲಿ ಹಚ್ಚಿದ  ಲಿಂಗಾ 
ಯತ ಜನರಿಗಷ್ಟೇ ನೌಕರಿಯನ್ನು ಕೊಡಲಿಕ್ಕೆ ಹತ್ತಿದರು. ಇದರಿಂದ  ನಾನು 
ಗಾಬರಿಯಾದೆನು. ಯಾಕಂದರೆ ನಾನು ಜನ್ಮತಃ ರೆಡ್ಹೀ ಇರುವೆನು ಇನ್ನು 
ಹೇಗೆ ಮಾಡಬೇಕೆಂದು ನಾನು ಗೊಂದಲದಲ್ಲಿ ಬಿದ್ದೆನು. ಕಟ್ಟ ಕಡೆಗೆ  ನನ್ನ 
ಸುದೈವದಿಂದ ಒಂದು 'ಸರಳ ಮಾರ್ಗವು ಹೊಳೆಯಿತು. ನಾನೂ  ಲಿಂಗರಡ್ಡಿ 
ಯಲ್ಲವೇ ಎಂದುಕೊಂಡೆ ನನ್ನ ಮಗನು ಮಾಮಲೇದಾರನಾಗಲಿಕ್ಕೆ  ಯಾವ 
ತರದ ಅಡಚಣಿಯೂ ಕೇನಲ ಅನನು ಮ್ಯಾಟ್ರಿಕ್‌ ಪಾಸಾಗಿ
ಬಿ.ಎ ದಲ್ಲಿ ತೇರ್ಗಡೆ ಹೊಂದತಕ್ಕದೊಂದೇ ಉಳಿಯಿತು. ನಾನು ಲಿಂಗ 
ರಡ್ಡಿಯಾದುದು ನನಗೆ ಬಹಳೇ ಲಾಭವಾಯಿತು. 
ನಂತರ ನಾನು ದೊಡ್ಡ ದೊಡ್ಡೆ ಪ್ರಮುಖ ಜನರಲ್ಲಿ ಸುಳಿದಾಡ 
ಹತ್ತಿದನು. ಮತ್ತು ನನ್ನ ಮುಖದಿಂದ ಸಭಾ ಕಮೀಟಿ, ಸೊಸಾಯಿಟಿ 
ವಗ್ಫೆರೆ ಶಬ್ಧಗಳು ಯಾವಾಗಲೂ ಹೊರಬೀಳುತ್ತಿದ್ದವು. ಬ್ರಾಹ್ಮಣೇತರ 
ಜನರ ಪ್ರತಿಯೊಂದು ಸಣ್ಣ ದೊಡ್ಡ ಮತ್ತು ಚಲೋ ಕೆಟ್ಟ  ಚಳವಳಿಗಳಲ್ಲಿ 
ನಾನು ಮುಂದೆ. ಸ್ವಲ್ಪದರಲ್ಲಿ ಹೇಳುವದೆಂದರೆ ನಾನು ಬ್ರಾಹ್ಮಣೇತರ  ಜನರ 
ಮುಂದಾಳು ಆದೆನು. ಕಾಲಕಾಲಕ್ಕೆ ಬ್ರಾಹ್ಮಣರಿಗೆ ಬಯ್ಯುವದು  ಬ್ರಾಹ್ಮಣ 
ಕುಲಕರ್ಣಿಯರು ಮತ್ತು ಬ್ರಾಹ್ಮಣ ಅಮಲವಾರರು ಲಂಚವನ್ನು ತೆಕ್ಕೊ 
ಳ್ಳುವರು, ರೈತ ಜನರನ್ನು ಪೀಡಿಸುವರು, ಮತ್ತು ಬ್ರಾಹ್ಮಣೇತರ ಅಮಲ 
ದಾರರು ಬೇಕು ಮೊದಲಾದ ಭಾಷಣಗಳನ್ನು ಮಾಡಿ ಸ್ವಲ್ಪ  ದಿನಸಗಳಲ್ಲಿ 
ಲೋಕಪ್ರಿಯನಾದೆನು. ಬ್ರಾಹ್ಮಣರಿಗೆ ಬೆ.ಗಳನ್ನು ಬೈದರು ಕೂಡ
ಬ್ರಾಹ್ಮಣ ಅಮುಲದಾರರ ಕಡೆಗೆ ಹೋಗಿ ಅವರ ಬಾಲಾ  ಬಡಿಯುವದನ್ನು 
ಸರ್ವಥಾ ಬಿಡಲಿಲ್ಲ... ಪ್ರಸಂಗ ಬಂದರೆ ಅಮಲದಾರರ ಮುಂದೆ 
ಬ್ರಾಹ್ಮಣರ ಸ್ತುತಿಯನ್ನು ಮಾಡಿ ಹಿಂದೆ ಬ್ರಾಹ್ಮಣೇತರರನ್ನು ನಿಂದಿಸಿ  ನನ್ನ 
ಕಾರ್ಯವನ್ನು ಸಾಧಿಸುತ್ತಿದ್ದೆನು 
ಇನ್‌ಪ್ಲುಯಂಠರೂ ಬಂದ ವರ್ಷ ಎಪ್ರಿಲ ತಿಂಗಳಲ್ಲಿ ನಮ್ಮ ನಗರ 
ದಲ್ಲಿಯ ಬ್ರಾಹ್ಮಣ ವಕೀಲರು ಕೂಡಿ ಒಂದು ಜಾಹೀರ ಸಭೆಯನ್ನು  ಕರೆದರು. 
ಆ ಸಭೆಗೆ ಪುಣೆ ಮುಂಬಯಿ ಕಡೆಯ ಪ್ರಮುಖ ಜನರು ಬಂದಿದ್ದರು. 
ಅದಕೂ ಮೊದಲು ಪುಣೆಯ ಟಿಳಕರಾದರೂ ಕೂಡ ಬಂದಿದ್ದರು. ಆ  ಜನರು 
ಬ್ರಾಹ್ಮಣ ಬ್ರಾಹ್ಮಣೇತರಲ್ಲಿ ಒಕ್ಕಟ್ಟನ್ನು ಮಾಡಬೇಕೆಂದು ಎಷ್ಟು  ಪ್ರಯತ್ನಿಸಿ 
ದರೂ ಕೂಡ ನಾವು ಅದಕ್ಕೆ ಅಡ್ಡಗಾಲನ್ನು ಹೊಡೆದೆವು. ಯಾಕಂದರೆ 
ಒಟ್ಟಾದ ಮೇಲೆ ನಮ್ಮಂಥವರನ್ನು ಯಾರು ವಿಚಾರಿಸುವರು? ಅವರೂ 
ಒಂದು ಸಭೆಯನ್ನು ಕೂಡಿಸಿದರು. ಮತ್ತು ನಾವು ಒಂದು  ಬ್ರಾಹ್ಮಣೇತರರ 
ಸಭೆಯನ್ನು ಕರೆದೆವು. ಮತ್ತು ದೊಡ್ಡ ಸಮಾರಂಭವನ್ನು ಮಾಡಿದೆವು  ನಮ್ಮ 
ಸಮಾರಂಭದಿಂದ ಸರಕಾರಕ್ಕೆ ಸಂತೋಷವಾಗಿದೆಯೆಂದು ಅನಿಸಿತು.
ಆ ಮೇಲೆ ಕೆಲವು ದಿವಸಗಳ ನಂತರ ಗಾಂಧಿ ಚಳವಳಿಯು ಪ್ರಾರಂಭ 
ವಾಯಿತು. ನನ್ನ ಕೆಲಸವನ್ನು ನಿರೀಕ್ಷಿಸಿದರೆ ನಾನು ರಾವಸಾಹೇಬನಾಗಲಿಕ್ಕೆ 
ಯೋಗ್ಯನಿರುವೆನು. ಆದರೆ ನನ್ನ ಕಾರ್ಯವು ಗವ್ಹರ್ನರ ಸಾಹೇಬರ  ನಿರೀ 
ಕ್ಷಣೆಗೆ ಯಾಕೆ ಬರಲೊಲ್ಲದಿಂಬದು ನನಗೆ ಹೊಳೆಯಲೊಲ್ಲದು. 

ಆಯುಷ್ಯದ ಆಯಕಟ್ಟು 
ಈ ಪತ್ರದಲ್ಲಿ ನನ್ನ ಆಯುಷ್ಯದಲ್ಲಿಯ ಅತ್ಯಂತ ಆಯಕಟ್ಟಿನ  ಪ್ರಸಂಗದ 
ವರ್ಣನೆಯನ್ನು ಮಾಡಲಿರುವೆನು 
ಮಹಾತ್ಮಾ ಗಾಂಧಿಯವರ ಚಳವಳಿಯು ಇಡೀ ದೇಶದಲ್ಲೆಲ್ಲ ಪ್ರಾರಂಭ
ವಾದಂತೆ ನಮ್ಮ ಜಿಲ್ಲೆಯಲ್ಲಿಯೂ ಪ್ರಾರಂಭವಾಯಿತು ಪದವಿಗಳನ್ನೂ 
ಶಾಲೆಗಳನ್ನೂ ಸಂಬಳವುಳ್ಳ, ಹಾಗೂ ಸಂಬಳವಿಲ್ಲದ ಎಲ್ಲ ಸರಕಾರೀ ನೌಕರಿ 
ಗಳನ್ನೂ ಬಿಡಬೇಕೆದು ಎಲ್ಲೆಡೆಯಲ್ಲಿಯೂ ಉಪದೇಶವು  ಪ್ರಾರಂಭವಾಯಿತು 
ವಿಜಾಪುರದಲ್ಲಿ ಕೆಲವು ವಕೀಲರು ವಕೀಲಿಯನ್ನು ಬಿಟ್ಟರು. ಈಗ ಮಾತ್ರ 
ನಾವು ಏನು ಮಾಡುವೆವೆಂಬ ಕಡೆಗೆ ಕಲ ಜನರ ಲಕ್ಷವು  ಹೊರಳಹತ್ತಿತು. 
ಆದರೆ ನಾವು ಕ್ವಚಿತ್ತಾಗಿ ಮೋಸ ಹೋಗುವವರು. ಬ್ರಾಹ್ಮಣರಿಗೆ ಸರ 
ಕಾರದವರು ನೌಕರಿಯನ್ನು ಕೊಡುವದಿಲ್ಲವೆಂದು ತಿಳಿದು ನೌಕರಿಯನ್ನು 
ಬಿಟ್ಟುಕೊಡಿರೆಂದು ಬ್ರಾಹ್ಮಣರು ಉಪದೇಸಿಸುತ್ತಿರುವರೆಂದೂ, ಬ್ರಾಹ್ಮಣ
ರೆಲ್ಲರೂ ಕಲಿತು ಸುಶೀಕ್ಷಿತರಾದರು; ಬ್ರಹ್ಮಣೇತರರು ಮಾತ್ರ ಕಲಿಯ 
ಬಾರದೆಂಬ ದುರುದ್ಧೇಶದಿಂದ ಸಾಲೆಗಳನು ಬಿಡಲಿಕ್ಸೆ  ಹೇಳುತ್ತಿರುವರಾದ 
ರಿಂದ ಬ್ರಾಹ್ಮಣೇತರರು ಈ ಚಳವಳಿಯಲ್ಲಿ ಸೇರಿಕೊಳ್ಳದೆ ಸರಕಾರದ  ಬಗಲು 
ಗೂಸುಗಳಾಗಿಯೇ ತಮ್ಮ ಉದ್ಧಾರನನ್ನು ಮಾಡಿಕೊಳ್ಳ ಬೇಕೆಂದೂ  ನಾವು 
ನಮ್ಮ ಉಪದೇಶವನ್ನು ಆರಂಭಿಸಿದೆವು ಸಂಬಳವಿಬ್ಬದೇ ಇರಲಿ;   
ಕೈಯಲ್ಲಿ ಬಂದ ನೌಕರಿಯನ್ನು ಕಳೆದುಕೊಳ್ಳುವವರಾರು? ಗಾಂಧೀ  ಜನರು 
ಮಾತ್ರ ಹಳ್ಳಿ ಹಳ್ಳಿಗೆ ಹೋಗಿ ವ್ಯಾಖ್ಯಾನಗಳ ಸುಗ್ಗಿಯನ್ನೇ ಸುರು ಮಾಡಿ 
ದರು. ಇಂಥ, ದೊಡ್ಮ ಇಂಗ್ರೇಜಿ ಸರಕಾರಕ್ಕೂ ಅವರನ್ನು ಕಂಡರೆ ಅಂಜಿಕೆ
ಯಾಗಹತ್ತಿತು. ಆದರೆ ಒಂದು ವರ್ಷದ ಒಳಗಾಗಿಯೇ ಗಾಂಧಿ  ಚಳವಳಿಗೆ 
ಇಳಿಗಾಲದ ಕಳೆಯು ಬರಹತ್ತಿತು. ಕೆಲ ಜನ ಚಳವಳಿಗಾರವಕೀಲರ 
ಮೇಲೆ ಖಟ್ಲೆಯನ್ನು ಮಾಡಿದರು. ಅದರಲ್ಲಿ ಹಳ್ಳಿಗಳಲ್ಲಿಯ  ಬ್ರಾಹ್ಮಣೇತರ 
ಜನರ ಸಾಕ್ಷಿಗಳಾದವು.. ಸರಕಾರದವರ ಮನಸ್ಸಿನಂತೆ ಸಾಕ್ಷಿಯನ್ನು 
ಹೇಳಿ ಚಳವಳಿ ಜನರನ್ನು ಸೆರೆಮನೆಗಳಲ್ಲಿ ನೂಕುವ ಕಾರ್ಯದಲ್ಲಿ 
ನೆರವಾದುದಕ್ಕೆ ಕೆಲ ಬ್ರಾಹ್ಮಣೇತರರು ಸರಕಾರದ ಮೆಚ್ಚಿಗೆಗೆ  ಪಾತ್ರರಾದರು. 
ಗಾಂಧಿ ಅನುಯಾಯಿಗಳ ವಿರುದ್ಧ ಹಳ್ಳಿ ಹಳ್ಳಿ ಗಳಲ್ಲಿಯೂ ತಾವೂ 
ಸಭೆಗೂಡಿಸಿ ಚಳವಳಿ ಜನರ ವಿರೋಧ ಮಾಡಬೇಕೆಂದು ಬ್ರಾಹ್ಮ 
ಣೇತರೆ ಜನರು ಒಂದು ಸಂಘವನ್ನು ಸ್ಥಾಪಿಸಿ ಅದಕ್ಕೆ ರಾಜನಿಷ್ಠ
ಸಂಘವೆಂದು ಹೆಸರಿಟ್ಟರು. ಗೌಡರ ದೊಡ್ಡ ಪರಿಷತ್ತು ಕೂಡಿತು ಆ 
ಪರಿಷತ್ತಿಗೆ ಸ್ವತಃ ಕಲೆಕ್ಟರ ಸಾಹೇಬರೇ ಅಧ್ಯಕ್ಷರಾದರು. ಅರ್ಥಾತ್‌ 
ಮೇಲಿನ ಎಲ್ಲ ಕಾರ್ಯದಲ್ಲಿಯೂ ನಾನು ಪ್ರಾಮುಖ್ಯವಾಗಿ ಭಾಗಿ 
ಯಾಗಿದ್ದೆನು. ಇದ್ದಬಿದ್ದ ಜನರ ಬಾಯಿಯಲ್ಲಿ ಬಸನಗೌಡನ ಹೆಸರೇ 
ಹೆಸರು. ಕೆಲ ಜನರು ಒಮ್ಮೊಮ್ಮೆ ನನಗೆ ' ಬಸವಂತರಾವ ' ಎಂದು 
ಸಹ ಕರೆಯಹತ್ತಿದರು. ಬ್ರಾಹ್ಮಣ ಜನರ ಫಜೀತಿಯು ಚೆನ್ನಾಗಿ  ಆಯಿತು. 
ಬ್ರಾಹ್ಮಣರನ್ನು ಫಜೀತಿ ಮಾಡಬೇಕೆಂದು ಒಬ್ಬ ದೊಡ್ಡ ಅಧಿಕಾರಸ್ಥನ 
ಸಲಹೆಯಿಂದ ಕೊಲ್ಹಾಪುರದ ಸತೃಶೋಧಕರ ಒಂದು ನಾಟಕ ಮಾಡಿಸಲಾ 
ಯತು. 
ಗಾಂಧಿಯು ಸೆರೆಯಾಳಾದ ಕೂಡಲೇ ಚಳವಳಿಯು ತನ್ನಿಂದ ತಾನೇ 
ಕಡಿಮೆಯಾಗಹತ್ತಿತು. ಆದುದರಿಂದ ನಮ್ಮಂತಹ ಜನಂಗೆ ಏನೂ  ಕೆಲಸವು 
ಉಳಿಯಲಿಲ್ಲ. ಆದರೂ ನಮ್ಮ ಜಿಲ್ಚೆಯ ಕಲೆಕ್ಟರರು ಕುರುಡರ ವಿಷಯ 
ವಾಗಿ ಬಹಳ ಕಾಳಜಿಯನ್ನು ತೆಗೆದುಕೊಳ್ಳು ತ್ತಿದ್ದರು. ಕುರುಡರ ಫಂಡನ್ನು 
ಕೂಡಿಸುವ ಅವರ ಕಾರ್ಯದಲ್ಲಿ ನಾನು ಅವರಿಗೆ ಸ್ವಹಸ್ತ ಪರಹಸ್ತಗಳಿಂದ 
ನೆರವಾಗಲು ಉದ್ಯುಕ್ಕನಾದೆನು. ನನ್ನ ಮೇಲೆ ಈ ಸಾಹೇಬರ ಪೂರ್ಣ
ಕೃಪಾದೃಷ್ಟಿಯು ಇದೆ. ಇಲ್ಲಿಂದ ಅವರಿಗೆ ವರ್ಗವಾದರೂ ನನಗೆ ಇನ್ನೂ 
ಅವರಿಂದ ಪತ್ರಗಳು ಬರುತ್ತವೆ. ನನ್ನ ದೈವವೇ ದರಿದ್ರವಾಗಿದೆ. ಶ್ರೀ.
ಚನ್ನ ಬಸವೇಶ್ವರನ ಕೃವೆಯಿಂದ ಕುರುಡರ ಸಾಹೇಬ-ಅವರ ಹೆಸರು 
ಹೆಂಡರಸನ್ನ-ಇನ್ನೂ ವಿಜಾಪುರದ ಕಲೆಕ್ಟರರಾಗುಳಿದಿದ್ದರೆ ನಿಜವಾಗಿಯೂ 
ಇಷ್ಟರಲ್ಲಿ ನಾನು ರಾವಬಹಾದ್ದೂರನಾಗಿ ಬಿಡುತ್ತಿದ್ದೆನು. 
ಅವರು ತೆಗೆದ ಪ್ರತಿಯೊಂದು ನಿಧಿಗೂ ನನ್ನ ನೆರವು ಇದೆ. ಅವರು 
ರೆಡ್‌ಕ್ರಾಸ್‌ವೆಂದು. ಸಾಹೇಬ ಜನರ ದಾಯಿಯರ ಸಲುವಾಗಿ ಒಂದು 
ಫಂಡನ್ನು ತೆಗೆದರು. ಅದರಲ್ಲಿ ನಾನು ಜೀವದ ಹಂಗು ದೊರೆದು ಪ್ರಯತ್ನ 
ಮಾಡಿದೆನು. ಖಾದಿಯ ಮೇಲೆಯೂ, ಗಾಂಧಿ ಟೊಪ್ಪಿಗೆಯ ಮೇಲೆಯೂ 
ಅವರು ಸಿಟ್ಬಾಗಿರುವರೆಂದು ತಿಳಿದ ಕೂಡಲೇ ನಾನು ಶುದ್ದ ಅಚ್ಚ ಪರದೇಶೀ 
ಬಟ್ಟೆಯನ್ನೇ ಧರಿಸಹತ್ತಿದೆನು. ಯಾಕಂದರೆ ಶುದ್ಧ ಸ್ವದೇಶೀ ಗಿರಣೀ 
ಅರಿವಿಯ ಮೇಲೆ ಸಹ ಸಾಹೇಬರ ಸಿಟ್ಟು ಅದೆಯೋ ಎನೋ ಯಾರಿಗೆ 
ಗೊತ್ತ್ಮು ? 
ನನ್ನ ಉಡಿಗೆಯನ್ನು ನಾನು ಕೆಳಗಿನಂತೆ ಗೊತ್ತು ಮಾಡಿ ಬಿಟ್ಟಿದ್ದೇನೆ. 
ಯಾವಾಗಲೂ ಸಾಹೇಬ ಜನರ ಭೆಟ್ಟಿಗೆ ಹೋಗುವ ಪ್ರನಂಗವು ನನಗೆ ಬರು 
ವದರಿಂದ ನಾನು ಯಾವಾಗಲೂ ಬೂಟುಗಳನ್ನು ಹಾಕುತ್ತಲಿದ್ದೇನೆ. ನನ್ನ 
ಕಾಲುಚೀಲಗಳು ಒಳ್ಳೇ ಹಸರು ಬಣ್ಣ ದ್ದಿರುತ್ತವೆ. ಅವುಗಳನ್ನು ಏರಿಸಿ 
ಮೇಲೆ ಕಟ್ಟುವದು ನನತೆ ವಿಶೇಷ ತೊಂದರೆಯೆನಿಸುತ್ತದೆ. ಆದ್ದರಿಂದ ಆ 
ಕಾಲುಚೀಲಗಳು ಸಡಿಲಾಗಿ ನನ್ನ ಕಾಲುಗಳಲ್ಲಿ ಹಾಗೇ ಬಡಿದಾಡುತ್ತಿ,ರುತ್ತವೆ. 
ಮೇಲಿಂದ ಮೇಲೆ ನನಗೆ ಮೂತ್ರ ಬಾಧೆಯಾಗುವದರಿಂದ ನನಗೆ ಪಾಟಿಲೋನ 
ಹಾಕಿಕೊಳ್ಳದೆ ಧೋತರವನ್ನೇ ಉಟ್ಟುಕೂಳ್ಳ ಬೇಕಾಗುತ್ತದೆ. ಈ ವಿಷಯ 
ವಾಗಿ ನನಗೆ ಅಂತ್ಯಂತ ಕೆಡಕೆನಿಸುತ್ತದೆ. ಮೈಯ್ಯಲ್ಲಿ ಒಂದು ಪೈರಣ, 
ಅದರ ಮೇಲೆ ಜಾಕೀಟು ಮತ್ತು ಕೋಟು ಹಾಕಿಕೊಳ್ಳುತ್ತೇನೆ. ಕೋಟು 
ಕರಿಯದು ಇರುತ್ತದೆ. ಅದು ಹೊಲಸಾದರೂ ಕಾಣಿಸುವದಿಲ್ಲ. ಆದರೆ 
ಪೈರಣವು ಮೇಲಿಂದ ಮೇಲೆ ಹೊಲಸಾಗುತ್ತದೆ. ಹೊಲಸಾದುದು ಸಾಹೇಬರ 
ಕಣ್ಣಿಗೆ ಬೀಳಬಾರದೆಂದು ತಿಳಿದು ನಾನು ಒಂದು ನಾಮೂನೆಯ (ಚೌಕೋನ) 
ಅರಿನೆಯನ್ನು ಕೊರಳಿಗೆ ಸುತ್ತುವೆನು. ಇದಕ್ರ ಮಫ್ಲರವೆಂದು ಕರೆಯು 
ತ್ತಾರೆ. ಈ ಉಡುನಿನಿಂದ ನಾನು ಅತ್ಯಂತಸಂಭಾವಿತನಂತೆ. ತೋರುತ್ತೇನೆ. 
ಇದಿಷ್ಟು ನನ್ನ ಉಡಿಗೆ.
ಗಾಂಧೀ ಚಳವಳಿಯು ನಿಂತುದರಿಂದ ನಾನು ಈಗ ನಿಶ್ಚಿಂತನಾಗಿದ್ದೇ ನೆ 
ಯಾಕಂದರೆ ಈ ಚಳವಳಿಯಲ್ಲಿ ನನ್ನ ಬೆಂಚ ಮ್ಯಾಜಿಸ್ಥೇಟ ನೌಕರಿಯು 
ಹೋಗುತ್ತದೆಯೋ ಏನೋ ಎಂಬ ಭೀತಿಯು ಉಂಟಾಗಿತ್ತು ಕುಚೇಷ್ಟೆಯಿ 
ಲ್ಲದೆ ಪ್ರತಿಷ್ಠೆಯು ಬೆಳೆಯಲಾರದೆಂಬ ತತ್ವವನ್ನು ನಾನು ಮನಗಂಡಿದ್ದೇನೆ. 
ಈ ತತ್ವದ ಪ್ರಕಾರದ ಮುನಿಸಿಪಾಲಿಟಿ ಲೋಕಲಬೋರ್ಡುಗಳ ಕಾರ್ಯದಲ್ಲಿ 
ವಿಶೇಷ ಮನಸ್ಸಿಡಹತ್ತಿದೆನು. ಈ ಸಂಸ್ಥೆಗಳ ಉಪಯೋಗವನ್ನು ನನ್ನ   
ಸ್ವಂತದ ಕೆಲಸದಲ್ಲಿ ಹೇಗೆ ಮಾಡಿಕೊಳ್ಳುತ್ತೇನೆಂಬುದನ್ನು ಅವುಗಳ ಸಹಾಯ 
ದಿಂದ ನನಗೆ ರಾವಸಾಹೇಬ ಪದವಿಯು ಸಿಗುವದು ಹೇಗೆ ಸಂಭವೀಯವಿದೆ 
ಯೆಂಬುದನ್ನೂ ಸವಿಸ್ತಾ ರವಾಗಿ ಮುಂದಿನ ಪತ್ರದಲ್ಲಿ ವರ್ಣಸುವನು. 

ಮುನಸಿಪಾಲಿಟಿಯ ಪುರಾಣ 
ಈ ಪತ್ರದಲ್ಲಿ ನಾನು ಮುನಸಿಪಾಲಿಟಿಯಲ್ಲಿ ಯಾವ ಕಾರ್ಯಗಳನ್ನು 
ಮಾಡಿದೆನೆಂಬುದನ್ನು ಉಲ್ಲೇಖಿಸುವೆನು. ಮುನಸಿಷಾಲಟಿಯ ಪುರಾಣ 
ವೆಂದರೆ ಮೆಂಬರ ಜನರ ಚುನಾವಣೆಯಿಂದ ಉಪಕಮೀಟಿಗಳ ಚುನಾವಣಿಯ 
ಪರ್ಯಂತ, ಚೀಫ ಆಫೀಸರನ ಪಗಾರ ಬಡತಿಯಿದ ಟೋಲ ನಾಕೆಯ 
ಕಾರಕೂನನ ನೇಮಣೂಕಿಯ ವರೆಗೆ, ಒಂದು ದೊಡ್ಡ ಎಂಜಿನ್ನಿನ ಖರೀದಿಯಿಂದ 
ಒಂದು ಕಸಬರಿಗೆಯ ಖರೀದಿಯ ವರೆಗೆ ಇವೆಲ್ಲವುಗಳು ಸಮಾವೇಶವಾತ ವೆ. 
ಇವೆಲ್ಲವುಗಳನ್ನು ಬರೆಯುತ್ತ ಹೋದರೆ ಕತ್ತೆ ಹೊರಲಾರದಷ್ಟು ಗೃಂಥವಾಗ 
ಬಹುದು. ಆದ್ದರಿಂದ ನನಗೆ ಸಂಬಂಧವಾಗಿ ಎಷ್ಟು ಹೇಳಬೇಕಾಗುವದೋ 
ಅಷ್ಟು ಹೇಳುವೆನು. 
ನಾನು ಮುನಸಿಪಾಲಿಟಯ ಚುನಾವಣಿಯಲ್ಲಿ ಉಮೇದವಾರನಾಗಿ   ನಿಂತು
ಅನೇಕ ಯುಕ್ತಿ ಸಾಹಸಗಳಿಂದ ಆರಿಸಿ ಬಂದನು. ಈ ಕೆಲಸದಲ್ಲಿ 
ನಾನು ೨೦೦೦ ರೂಪಾಯಿ ಖರ್ಚು ಮಾಡಬೇಕಾಯಿತು. ಮುಂದೆ  ಮೂರು 
ವರುಷಗಳಲ್ಲಿ ಇಷ್ಟು ರೂಪಾಯಿಗಳನ್ನು ಹೇಗಾದರೂ  ಗಳಿಸಬಹುದೆಂದು 
ತಿಳಿದು ಇಷ್ಟು ಖರ್ಚು ಮಾಡಿದೆನು. ಆದರೆ ನನ್ನ ಆಪ್ತೇಷ್ಟರಲ್ಲಿ ಯಾರೂ
ಮಕ್ತೆದಾರರಿಲ್ಲದ್ದರಿಂದಲೂ ಮತ್ತು ಮುನಸಿಪಾಲಿಟಿಯ  ಕೆಲಸಕ್ಕಾಗಿ ಬಾಡಿಗೆ 
ಯನ್ನು ಕೊಡಲಿಕ್ಕೆ ಸ್ಪಂತ ಯಾವೂ ಮನೆಯಿಲ್ಲದ್ದರಿಂದಲೂ,  ಮತ್ತು ನನ್ನ 
ದುರ್ದೈವದಿಂದ ಮುನಿಸಿಪಾಲಿಟಿಯಲ್ಲಿ ಯಾವ ದೊಡ್ಡ  ಜವಾಬದಾರಿಯ 
ಕಲಸಗಳು ಸಿಗದ್ದರಿಂದಲ್ಯೂ ಮೂರು ವರ್ಷಗಳಲ್ಲಿ ೫೦೦-೬೦೦  ರೂಪಾಯಿ 
ಗಳಿಗಿಂತ ಹೆಚ್ಚು ನನ್ನ ಪದರಿನಲ್ಲಿ ಬೀಳಲಿಲ್ಲ ನನಗೆ  ಮುನಸಿಪಾಲಿಟಯ 
ಬಗ್ಗೆ ಅನಾದರವು ಉತ್ಪನ್ನವಾಯಿತು ಮುನಸಿಪಾಲಿಟಿಯ  ಮೆಂಬರನಾಗಿ 
೨೦-೨೫ ವರ್ಷಗಳ ವರಿಗೆ ತಮ್ಮ ಸಂಸಾರದ ಖರ್ಚನ್ನು ನಿರಾಯಾಸನಾಗಿ 
ಗಳಿಸುವವರನ್ನು ನೋಡಿದರೆ ನನ್ನ ಮನದಲ್ಲಿ ಅವರ ಬಗ್ಗೆ  ಪೂಜ್ಯಬುದ್ಧಿಯು 
ಉತ್ಪನ್ನವಾಗುತ್ತದೆ. ಆಂಥ ಮೆಂಬರರೇ ಧನ್ಯ! ಅದು ಏನೇ ಇರಲಿ  ಮೂರು 
ವರ್ಷಗಳಲ್ಲಿ ನನಗೆ ೨೪೦೦ ರೂಪಾಯಿ ಹಾನಿಯಾದ್ದರಿಂದ ನಾನು ಮುನಸಿ 
ಪಾಲಿಟಿಯ ಚುನಾವಣಿಯ ಉಸಾಬರಿಯನ್ನು ಬಿಟ್ಟು ಬಿಟ್ಟೆನು.  ಅದರೆ 
ಮುನಸಿಪಾಲಿಟಿಯಿಂದ ಹಣವನ್ನು ಗಳಿಸುವ ಯುಕ್ತಿಯನ್ನು ಯೋಚಿಸಿ 
ದೆನು. 
ಪ್ರತಿ ವರ್ಷ ನಮ್ಮ ಜಿಲ್ಪೆಯಲ್ಲಿ ತೆರೆ, ಸಿಂದಿ ಗುತ್ತೆಗಳು ಲಿಲಾವು 
ಮಾಡಲ್ಪಡುವವು. ಆ ಸಮಯಕ್ಕೆ ಆ ಗುತ್ತೆಗಳನ್ನು ಹಿಡಿಯದಿದ್ದರೂ 
ಲಿಲಾವಿನಲ್ಲಿ ಹೆಣವನ್ನು ಏರಿಸಲಿಕ್ಕೆ ಕೆಲವು ಗೃಹಸ್ಥರು ಬರುತ್ತಾರೆ  ಇದನ್ನು 
ನೋಡಿ ಆ ಗುತ್ತೆಗಳನ್ನು ಹಿಡಿಯಲಿಚ್ಛಿಸುವವರು ಬೆದರಿ ಲಿಲಾವಿನ ಹಣ 
ವನ್ನು ಹೆಚ್ಚಿಸಬಾರದೆಂದು ತಿಳಿದು ಅವರೆ ಕಿಸೆಯಲ್ಲಿ ೨೦೦-೪೦೦  ರೂಪಾಯಿ 
ಗಳನ್ನು ಹಾಕಿ ಅವರನ್ನು ಸಮ್ಮನೆ ಕೂಡಿಸುತ್ತಾರೆ. ಈ ಯುುಕ್ತಿಯು
ಸರ್ವೋತ್ಕೃಷ್ಟ ವಾದದ್ದೆಂದು ತಿಳಿದು ನಾನೂ ಒಂದು ವಾರ್ಡಿನ  ವತಿಯಿಂದ 
ಮುನಸಿಪಾಲಿಟಯ ಉಮೇದವಾರನಾಗಿ ನಿಂತುಕೊಂಡೆನು. ಮತ್ತು ಅದೇ 
ವಾರ್ಡಿಗೆ ಮತ್ತೊಬ್ಬ ಉಮೇದವಾರನು ನಿಂತು ನನಗೆ ೧,೦೦-೪೦೦ ರೂಪಾಯಿ 
ಗಳನ್ನು ಕೊಟ್ಟರೆ ತೀರಿತು. ಅವನ ವತಿಯಿಂದ ನಾನು ರಾಜಿನಾಮೆಯನ್ನು 
ಕೊಟ್ಟು ಬಿಡುತ್ತಿದ್ದೆನು. ಈ ರೀತಿಯಿಂದ ತಿಂಗಳೆರಡು ತಿಂಗಳ ನನ್ನ ಸಂಸಾರದ 
ಖರ್ಚು ಸಾಗಲಾರಂಭಿಸಿತು. 
ನಾನು ಮುನಸಿಪಾಲಿಟಿಯ ಮೆಂಬರನಿರುವವರೆಗೆ ಸರಕಾರದ ಮರ್ಜಿ 
ಯನ್ನು ಸಂಪಾದಿಸಿಕೊಳ್ಳಲು ಯಾವ ಸಮಯವನ್ನು ನಾನು ಹೋಗಗೊಡ
ಲಿಲ್ಲ. ವಿಜಾಪೂರಕ್ಕೆ ಬೂಟು ಪಾಟಲೋಣಗಳನ್ನು ಹಾಕಿ ಸಾಹೇಬರ 
ಟೊಪ್ಪಿಗೆಯನ್ನು ಹಾಕಿಕೊಂಡು ಯಾರಾದರೂ ಹಿಂದುವೇ ಇರಲಿ ಮುಸಲ್ಮಾನ 
ನಿರಲಿ ಅಥವಾ ಕ್ರಿಶ್ಚನನಿರಲಿ, ಹಿಂದುಸ್ತಾನದವನಿರಲಿ ಅಥವಾ ಪರದೇಶದವ 
ನಿರಲಿ ಯೋಗ್ಯನಿರಲಿ, ಅಥವಾ ಅಯೋಗ್ಯನಿರಲಿ, ಬಂದರೆ ತೀರಿತು.
ಅವನಿಗೆ   ಮಾನಪತ್ರವನ್ನರ್ಪಿಸುವ ಚಳವಳಿಯು ಸುರುವಾಯಿತು. ಮುನಸಿಪಾಲಿಟಿ 
ಯವರಂತೂ ಮಾನಪತ್ರವನ್ನು ಕೊಟ್ಟೇ ಕೊಡುವರು; ಇದಲ್ಲದೆ ಹೊಸದಾಗಿ 
ಜನ್ಮತಾಳಿದ ರಾಜನಿಷ್ಠ ಸಂಘ, ಪಾಟೀಲ ಸಂಘ ಮುಂತಾದ ಸಂಘಗಳ 
ವತಿಯಿಂದಾದರೂ ನಾನು ಬ್ರಾಹ್ಮಣೇತರ ಪುಢಾರಿಯೆಂದು ಹೋಗಿ ಸಾಹೇ 
ಬರಿಗೆ ಮಾನಪತ್ರವನ್ನು ಕೊಟ್ಟು ಧನ್ಯನಾಗುತ್ತಿದ್ದೆನು. ಒಂದೆರಡು ಮಾನ 
ಪತ್ರಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದರು. ಅದನ್ನು ನನಗೆ ಓದಬೇಕಾದರೆ 
ಸಾಕು ಬೇಕಾಯಿತು. ಅವತ್ತಿನ ನನ್ನ ಸಿತಿ ರಾತ್ರಿ ೨-೪ ತಾಸುಗಳ 
ಪರ್ಯಂತ ಕೂತಲ್ಲಿಯೇ ಕೂತು ಅದನ್ನು. ಪಾಠಮಾಡಿದೆನು.
ಮುಂಜಾನೆ   ಸ್ವಚ್ಛ ಮುಂಡಣ ಮಾಡಿಸಿಕೊಂಡು ಗಂಜಿ ವಸ್ತ್ರಗಳನ್ನು ಧರಿಸಿದನು. 
ವಸ್ತ್ರಗಳಿಗೆಲ್ಲ ಸುಗಂಧ ತ್ರೈಲನನ್ನು ಹಚ್ಚಿ, ಬಾಯಲ್ಲಿ ಒಂದು ಯಾಲಕ್ಕಿ 
ಮತ್ತು ಲವಂಗವನ್ನು ಹಾಕಿಕೊಂಡು ಅಂತರ್ಬಾಹ್ಯ ಸುವಾಸಿತನಾದನು. 
ಇಷ್ಟು ತಯಾರಿಯಲ್ಲಿದ್ದರೂ ಕೂಡ ಮಾನಪತ್ರವನ್ನು ಓದುವ ಕಾಲಕ್ಕೆ
ಕೈಯು ಕಂಪಿಸುತ್ತಿತ್ತು. ಮಾನಪತ್ರನನ್ನು ಓದಿ ಕೆಳಗೆ ಕೂತ ಕೂಡಲೇ 
ಪ್ರಚಂಡವಾಗಿ ಚಪ್ಪಾಳೆಯನ್ನು ಬಾರಿಸಲಿಕ್ಕೆ ಹತ್ತಿದರು. ನಾನು ಧನ್ಯ 
ನಾದೆನು ಇದನ್ನು ನೋಡಲಿಕ್ಕೆ ನನ್ನ ಹಿರಿಯರು ಇಲ್ಲೆಂದು ತಿಳಕೊಂಡು 
ನನ್ನ ಕಣ್ಣಲ್ಲಿ ನೀರು ಸುರಿಯಲಿಕ್ಕೆ ಆರಂಭಿಸಿದವು. ಸಾಹೇಬರು ನನ್ನನ್ನು 
ತಮ್ಮ ಹತ್ತರ ಕರೆದು ನನಗೆ ಹಸ್ತಾಂದೋಲನವನನ್ನು ಮಾಡಿದರು. ನನ್ನ 
ಹಸ್ತದ ಭಾಗ್ಯವು ಉದಯಿಸಿತು. ಯಾವ ಬಲಹಸ್ತದಿಂದ ಸಾಹೇಬರ 
ಸ್ಪರ್ಶವಾಯಿತೋ  ಆ ಕೈಯನ್ನು ಕಡಿದು ಅವರ ಪೂಜೆಯನ್ನು ದಿನಾಲು 
ಮಾಡಬೇಕೆಂದು ಅನಿಸಿತು. ಆದರೆ ಆ ಮೇಲೆ ಎಡಗೈಯಿಂದ ಹೊಗೆಸೊಪ್ಪು 
ಗಳನ್ನು ಸೇದುವ ಕಾಲಕ್ಕೆ ಕಡ್ಡಿಗಳನ್ನು ಕೂರೆಯಲಿಕ್ಕೆ ಬಲಗೈಯು ಅಡಚಣೆ 
ಯಾಗಬಹುದೆಂದು, ಆ ಕೈಯನ್ನು ಹಾಗೆ ಅಲ್ಲಿಗೆ ಬಿಟ್ಟಿನು ಇರಲಿ. 
ಸತ್ಯವಾಗಿ ನಾನು ಮಾನಪತ್ರನನ್ನು ಓದಿದ ದಿವಸವೇ ರಾವಬಹಾದ್ದೂರ 
ನಾಗಬೇಕಾಗಿಶ್ತು. ಆದರೆ ನನ್ನ ದೈವವು ಇನ್ನೂ ಉದಯಸಿಲ್ಲ.

ಮಾದರಿಯ ಮಹತ್ವಾಕಾಂಕ್ಷೆ 
ಹೋದವಾರದಲ್ಲಿ ವಿಜಾಪುರಕ್ಕೆ ಮೇಹರಬಾನ ಕಮೀಶನರ ಸಾಹೇ 
ಬರು ಬಂದದ್ದರಿಂದ ನನಗೆ ಸ್ವಲ ಸಹಿತ ಅವಕಾಶವು ದೊರೆಯಲಿಲ್ಲ.
ನಾನು   ನನ್ನ. ಎಲ್ಲ ವೇಳೆಯನ್ನು ಸಾಹೇಬರ ಭೆಟ್ಟಿಯಲ್ಲಿಯೂ ಅನರು ಹೋದಲ್ಲಿಗೆ 
ಅವರೊಡನೆ ಹೋಗಿಯೂ ಮತ್ತು ಅವರ ಸಂಗಡ ಫೋಟೋ ತೆಗೆಸಿಕೊಳ್ಳು 
ವದರಲ್ಲಿಯ್ಕೂ ಕಳೆದೆನು. ಆದ್ದರಿಂದ ನನ್ನ ಆತ್ಮಚರಿತ್ರೆಯನ್ನು ಬರೆಯುವ 
ದರಲ್ಲಿ ನನಗ ವೇಳೆಯು ಸಿಗಲಿಲ್ಲ. 
ನಾನು ನನ್ನ್ನ ಊರಲ್ಲಿದ್ದಾಗೆ. ತಾಲೂಕಾ ಲೋಕಲಬೋರ್ಡದ   
ಸಭಾನದನಿದ್ದೆನು ತಾಲೂಕಿನ ಜಮಾ ಖರ್ಚವು ಅಷ್ಟು ದೊಡ್ಡದಿಲ್ಲದ್ದರಿಂದ 
ಅದರಲ್ಲಿ ದೊಡ್ಡಸ್ತಿಕೆ ಹೊರತು ಎರಡನೆ ಯಾವ ದೃಷ್ಟಿಯಿಂದಲೂ 
ಲಾಭ ಇದ್ದಿಲ್ಲ. ಅಲ್ಲಿಂದ ತಾಲೂಕ ಲೋಕಲಬೋರ್ಡಿನ ಸಭಾಸದ 
ನಾಗುವದು ಕೆಳಗಿನ ತರಗತಿಯದೆಂದು ನನಗೆ ಅನಿಸಲಿಕ್ಸೆ ಹೆತ್ತಿತು. 
ಸಭಾಸದನಾದರೆ ಜಿಲ್ಪೆಯ ಲೋಕಲಬೋರ್ಡದ ಸಭಾಸದನಾಗಬೇಕೆಂಬ 
ಮಹತ್ವಾಕಾಂಕ್ಷೆಯಿಂದ ನಾನು ಅದರ ಸಲುವಾಗಿ ಜೋರಿನಿಂದ ಕೆಲಸ 
ಮಾಡಲಿಕ್ಕೆ ಪ್ರಾರಂಭಿಸಿದನು ಮತದಾರ ಜನರಿಗೆ ಹಣವನ್ನು ಕೊಡುತ್ತ 
ಹೋದರೆ ಕೆಲಸವಾಗದಿಂದು ತಿಳಿದು ಮತ್ತೊಂದು ಯೋಜನೆ ಮಾಡಿದೆನು. 
ವಿಜಾಪೂರದ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯ ಮಠದಲ್ಲಿ 
ಒಬ್ಬ ಸ್ವಾಮಿಯು ಇರುತ್ತಿರುವನು ನಿತ್ಯವೂ ಅವರ ಮಠದಲ್ಲಿ ಪುರಾಣ 
ವನ್ನು ಕೇಳುವದರ ಸಲುವಾಗಿ ದೊಡ್ಡ ದೊಡ್ಡ ಪ್ರಮುಖ ಜನರು ಬರತ್ತಿರು 
ವರು ನಾನಾದರೂ ಕೂಡ ಆ ಮಠಕ್ಕೆ ಹೋಗಿ ಬರು ಪರಿಪಾಠವನ್ನಿಟ್ಟೆನು.
ನಾನು ಮಠಕ್ಕೆ ಹೋದ ಕೂಡಲೇ ಒಮ್ಮೆ ಸ್ವಾಮಿಗೆ ನಮಸ್ಸಾರ ಮಾಡು 
ತ್ತಿದ್ದೆನು. ಮತ್ತು ತಿರುಗಿ ಬರುವ ಕಾಲಕ್ಕೆ ಸ್ವಾಮಿಗಳು ಸಾಕು ಅಂದರೂ 
ಕಾಡ ಹಾಗೆಯೇ ಸ್ವಾಮಿಗಳ ಪಾದಗಳ ಮೇಲೆ ನನ್ನ ಮಸ್ತಕವನ್ನು ಒಂದು 
ನಿಮಿಷದವರೆಗೆ ಇಡುತ್ತಿದ್ದೆನು. ನನ್ನ ಭಕ್ತಿಯಿಂದ ಸ್ನಾಮಿಗಳು ಚಕಿತ 
ರಾದರು. ಮತ್ತು ಉಳಿದ ಜನರಾದರೂ ಆಶ್ಚರ್ಯ ಚಕಿತರಾದರು.
ಒಂದು ದಿವಸ ಸ್ವಾಮಿಗಳು ಒಬ್ಬರೇ ಇದ್ದಾಗ ಹೋಗಿ ನಮಸ್ಕಾರ 
ಮಾಡಿ ದೀನ ಮುದ್ರೆಯಿಂದೆ ಅವರ ಕಡೆಗೆ ನೋಡಲಿಕ್ಕೆ ಹತ್ತಿದೆನು. ಮತ್ತು 
ಮಠದ ಉತ್ಸವಕ್ಕಾಗಿ ೨೦೦ ರೂಸಾಯಿ ಕೂಡುವೆನು. ಅದನ್ನು ನೀವು 
ಸ್ವೀಕಾರ ಮಾಡಬೇಕೆಂದು ಸ್ವಾಮಿಗಳಿಗೆ ಹೇಳಿದೆನು. ಸ್ವಾಮಿಗಳ ಮುಖ 
ಮುದ್ರೆಯು ಅರಳಿತು. ನನಗೆ ಅವರು ರೂಪಾಯಿಗಳನ್ನು ಕೇಳದೆ ನೀವು 
ಯಾಕೆ ಕೊಡುವಿರೆಂದು ವಿಚಾರಿಸಿದರು. ನಾನು ಲೋಕಲ್‌ ಬೋರ್ಡಿನ 
ಚುನಾವಣೆಗೆ ಉಮೇದ್ವಾರನಾಗಿ ನಿಂತಿರುವೆನು. ಚುನಾವಣಿಯಲ್ಲಿ ನಾನು 
ಉತ್ತೀರ್ಣನಾಗಬೇಕೆಂದು ತಿಳಿದುಕೊಂಡು ನಿಮ್ಮ ಚರಣಗಳಿಗೆ ಈ 
ರೂಪಾಯಿಗಳನ್ನು ಅರ್ಪಿಸಿರುವೆನೆಂದು ನಾನು ಅವರಿಗೆ ಹೇಳಿದೆನು. 
ಸ್ವಾಮಿಗಳು ಶ್ರೀ. ಚನ್ನಬಸವೇಶ್ವರನು ಯಶಕೊಡುವನೆಂದು ನನಗೆ 
ಆಶೀರ್ವದಿಸಿದರು ಅಲ್ಲಿಂದ ನನ್ನ ಪ್ರಯತ್ನ ಆರಂಭವಾಯಿತು. ಪ್ರತಿಯೊಬ್ಬ 
ಮತದಾರನನ್ನು ಸ್ವಾಮಿಗಳ ಕಡೆಗೆ ಕರಕೊಂಡು ಹೋಗುತ್ತಿದ್ದೆನು. ಇಲ್ಲವೆ 
ಸ್ಪಾಮಿಗಳನ್ನೇ ಮತದಾರರ ಊರಿಗೆ ಒಯ್ಯುತ್ತಿದ್ದೆನು. ಮತದಾರರಿಗೆ 
ಸ್ವಾಮಿಗಳ ಪಾದವನ್ನು ಮುಟ್ಟಿ ಆಣೆ ಮಾಡಲಿಕ್ಕೆ ಹೇಳುತ್ತಿದ್ದನು. ಕೇವಲ 
೨೦೦ ರೂಪಾಯಿಗಳನ್ನು ಮಠಕ್ಕೆ ಕೊಟ್ಟಿದೃರಿಂದ ಇಷ್ಟೇ ಖರ್ಚನಿಂದ ನಾನು 
ಲೋಕಲಬೋರ್ಡಿನ ಸಭಾಸದನಾದೆನು- 
ನಮ್ಮ ಮತದಾರ ಜನರು ಅಂಧ ಶ್ರದ್ಧೆಯುಳ್ಳವರು. ಇದರ ಲಾಭ 
ನನಗೆ ಸಿಕ್ಕಿತು ಸ್ವಾಮಿಗಳು ಹೇಳುವರೆಂದು ತಿಳಕೊಂಡು ಎಲ್ಲ ಜನರು 
ನನಗೆ ತಮ್ಮ ಮತಗಳನ್ನು ಕೊಟ್ಟರು. ಈ ತಮ್ಮ ಸ್ವಭಾವವನ್ನು ಯಾವ 
ದಾದರೊಂದು ಉತ್ತಮ ಕೆಲಸದಲ್ಲಿ ತೊಡಗಿಸಿದ್ದರೆ ಕ್ಷಣದಲ್ಲಿ ಅವರು 
ಉದ್ಧಾರವಾಗುತ್ತಿದ್ದರು. ಇರಲಿ. ಅವರ ಉದ್ಧಾರ ಗೊಡವೆಯು ನವಗೇಕೆ? 
ನನ್ನ ಉದ್ಧಾರವಾದರೆ ತೀರಿತು. 
ಈ ತರದ ಪ್ರಯತ್ನವನ್ನು ಈ ಸಾರೆ ಯಣದರೂ ಮಾಡಿದ್ದರಿಂದ 
ಜಿಲ್ಲಾ ಲೋಕಲ ಬೋರ್ಡದ ಸಭಾಸದನಾದೆನು. ಈ ಸಾರೆಯ ಬೋರ್ಡಿನ 
ಅಧ್ಯಕ್ಷರ ಚುನಾನಣಿಯ ಕಾಲಕ್ಕೆ ನನಗಾದರೂ ಕೂಡ ನಾಲ್ಕು ದುಡ್ಡುಗಳು 
ದೊರೆತವು. ನಾನು ಲೋಕಲ ಬೋರ್ಡದಲ್ಲಿದ್ದಾಗ್ಗೆ ನನ್ನ ಆಪ್ತ ಇಷ್ಟರಿಗೆ 
ಮೇಸ್ತ್ರಿ, ಮುಕಾದಮ ಮಾಸ್ತರ ಮುಂತಾದ ಹಲ ಕೆಲವು ಬೊಡ್ಡ ದೊಡ್ಡ
ಜಾಗಗಳು, ದೊರೆಯೆಲಿಕ್ಕೆ ಹತ್ತಿದವು. ಎಲ್ಲ ಕಡೆಯಲ್ಲಿಯೂ ಬಸವಂತ
ರಾಯರ ಜಯಘೋಷವಾಗಲಿಕ್ಕೆ ಹತ್ತಿತು. ನಾನು ಲೋಕಲ ಬೋರ್ಡದ 
ಕಾಯಿದೆಯ ಅಭ್ಯಾಸ ಕ್ರಮಚನ್ನಿಟ್ಟೆನು. ನೌಕರ ಜನರ ನೆಮಣೂಕಿಯಲ್ಲಿ 
ಮತ್ತು ಕಂತ್ರಾಟದಂಥ ಅನೇಕ ಕೆಲಸಗಳಲ್ಲಿ ಪ್ರಯತ್ನ ಮಾಡಿದರೆ  ಬೇಕಾ 
ದಷ್ಟು ಹಣವು ದೊರೆಯಬಹುದೆಂದು ನನಗೆ ಅನಿಸಲಿಕ್ಸೆ ಹತ್ತಿತು. ಇದರ 
ಲಾಭವನ್ನು ನನ್ನ ಶಕ್ತ್ಯಾನುಸಾರ ಅನುಭವಿಸುತ್ತಿದ್ದೆನು. ಆದರೆ ಈಗ ನನ್ನ 
ಕೆಲಸವು ಯಭಾಪ್ರಕಾರ ನಡೆದಿರುವದು, ಖರ್ಚಿನ ಅಡಚಣಿಯು ನನಗೆ 
ಯಾವ ತರದ್ದೂ ಇಲ್ಲ. ಆದರೆ ಪ್ರಕೃತಿಯ ಅಸ್ವಸ್ಥತೆಯು ನನಗೆ ಇರುವದು. 
ನನಗೆ ಈಗ ೫೦ ವರ್ಷಗಳಾದವು. ನಾನು ಈಗ ಮುಪ್ಪಿನವನಾಗಲಿಕ್ಕೆ 
ಹತ್ತಿದೆನು. ರಾವಸಾಹೇಬನಾಗುವದಕ್ಕಿಂತ ಪೂರ್ವದಲ್ಲಿಯೇ ನಾನು ಸಾಯು 
ವೆನೆಂದು ನನಗೆ ಭೀತಿಯುಂಟಾಗಿರುವದು. ಶ್ರೀ. ಚನ್ನಬಸವೇಶ್ವರರ 
ಕೃಪೆಯಿಂದಾದರೂ ಮೃತವಾಗುವದಕ್ಕಿಕಂತ ಪೂರ್ವದಲ್ಲಿಯೇ ನಾನು ರಾವ 
ಸಾಹೇಜನಾದರೆ ಒಳ್ಳೇದು. 
೭ 
ದೃಶ್ಯ ಫಲವು ಕೈಸೇರಲೊಲ್ಲದು 
ತಮ್ಮ ಅಡಿಗೆ ನಾನು ಆಗಾಗ್ಗೆ ಕಳುಜದ ಪಕಶ್ರಗಳ ಮೇಲಿಂದ 
ತಮಗೂ ಮತ್ತು ತಮ್ಮ ವಾಚಕ ಗಣಕ್ಕೂ ನಾನು ರಾವಸಾಹೇಬ 
ಪದವಿಗೆ ಯೋಗ್ಯನಿದ್ದ ಬಗ್ಗೆ ತಿಳಿದಿರಲಿಕ್ಸೆ ಸಾಕು. ಈ ಒಂದು ಪದವಿಯ 
ಆಶೆಗೆ ಬಿದ್ದು ನಾನು ಎಷ್ಟೋ ಚಲೋ ಕೆಟ್ಟ ಕೆಲಸಗಳನ್ನು ಮಾಡಿದೆನು. 
ಆದರೆ ಅವುಗಳ ದೃಶ್ಯ ಫಲವು ಈ ವರೆಗೆ ನನ್ನ ಕೈಸೇರಲೊಲ್ಲದು ಮಾಡುವ 
ದೇನು? ಮನಸ್ಸಿಗೆ ಬಹಳ ವೃಸನವಾಗುತ್ತದೆ. ಬ್ರಿಟಿಶರ ರಾಜ್ಯದಲ್ಲಿ 
ನ್ಯಾಯವಿದೆ ಎಂದು ಹೇಳಲಿಕ್ಕೆ ಬಾರದಂತಾಗಿದೆ. ಕಾನೂನು ಮಂಡಲ ಸೇರಿ 
ಆರು ವರುಷದ ವರೆಗೆ ಬಾಯಿ ಬಿಚ್ಚದೆ ಕೇವಲ ಸರಕಾರಕ್ಕೆ  ಅನುಕೂಲವಾಗಿ 
ಮತ ಕೊಟ್ಟವರಿಗೆ 'ರಾವಸಾಹೇಬ '  'ರಾವಬಹಾದ್ದೂರ' ಪದವಿಯು 
ದೊರೆಯುವದು. ಆದರೆ ಹಗಲಿರುಳು ಅಧಿಕಾರಿಗಳ ಮುಂದಿ ಕೈಜೋಡಿಸಿ
ನಿಂತವರಿಗೆ ಯಾವ ಪದವಿಯು ದೊರೆಯುವದಿಲ್ಲವಲ್ಲ! ಈ ಸಂಗತಿಯ 
ಅರ್ಥವೇ ನನಗೆ ತಿಳಿಯದಂತೆ ಆಗಿದೆ. 
ಸದ್ಯಕ್ಕೆ ನಮ್ಮ ಜಿಲ್ಹೆಯನ್ನು ಆಳುವ ಕಲೆಕ್ಟರ ಸಾಹೇಬರು ನಮ್ಮ 
ಜ್ಞಾತಿಬಾಂಧವರಿದ್ದು ಅವರ ಆಳಕೆಯಲ್ಲಿಯಾದರೂ ನನಗೆ ಪದವಿದಾನವಾಗು 
ವದೆಂದು ಆಶೆ ಇತ್ತು. ನನ್ನದೂ ಕಲೆಕ್ಟರರದೂ ಬಹಳ ಸ್ನೇಹ, ಖಣಾನು 
ಬಂಧವಿದೆ. ನಾನು ಅವರ ಭೆಟ್ಟಿಗೆ ಹೋದಾಗ್ಲೆ ಎಷ್ಟೋ ತಾಸುಗಳವರೆಗೆ 
ನನ್ನೊಡನೆ ಅವರು ಮಾತನಾಡುತ್ತಾರೆ, ಅವರ ಕೃಪೆಯಿಂದಾದರೂ ಈ 
ಸಾರೆ ನಾನು ಪದವಿಗೆ ಪಾತ್ರನಿದ್ದ ಬಗ್ಗೆ ತಿಳಿಸಿದ್ದರೆಂದು ಕೇಳಿದೆ. ನನ್ನ 
ದುರ್ದ್ವೈವದಿಂದ ಕಲೆಕ್ಟರ ಸಾಹೇಬರು ಸಾಹೇಬರಂತೆ, ಉಡುಪುಗಳನ್ನು ಧರಿಸಿ 
ದರೂ ದೇಶೀ ಸಾಹೇಬರಿದ್ದ ಮೂಲಕ, ಜಾತಿಯಿಂದ ಸಾಹೇಬರ ಶಿಫಾರಸ 
ದಂತೆ ಇವರ ಶಿಫಾರಸಕ್ಕೆ‌ ದೊಡ್ಡ ಸರಕಾರದಲ್ಲಿ ಮನ್ನಣೆ ಇಲ್ಲದ್ದನ್ನು ಮನ 
ಗಂಡೆನು. ಕಲೆಕ್ಟರ ಸಾಹೇಬರ ದಾರಿಬಿಟ್ಟು ಎತ್ತ ಹೋಗಬೇಕೆಂಬ ವಿಚಾರ 
ಮಾಡುವಾಗಲೇ ಮೇಹರಬಾನ ಕಮಾಶನರ ಸಾಹೇಬ ಬಹಾದ್ದೂರರವರ 
ಪಾದಧೂಳಿಯು ವಿಜಾವುರದಲ್ಲಿ ಬಿತ್ತು ಅವರ ಭೆಟ್ಟಿಯ ಸಲುವಾಗಿ ನಾನು 
ಹೊಸ ಪೊಷಾಕ ಮಾಡಿಸಿದೆ; ಬೂಟಿಗೆ ಅಚ್ಚಾದ ಕೊಬ್ರಾ ಬೂಟಪಾಲಿಸ 
ತಿಕ್ಕಿಸಿದೆ. ಬಿಳೆ ಮೀಶೆಗಳಿಗೆ ದಟ್ಟ ಕರೇ ಕಲಪು ಹಚ್ಚಲಿಕ್ಕೆ ನಾನು ಮರೆಯ 
ಲಿಲ್ಲ. ರಾಮಯ್ಯನನ್ನು ಕರೆತಂದು ಎದುರುಗಟ್ಟ ಮಾಡಿಸಿ ಸರ್ವ ತಯಾರಿ 
ಮಾಡಿಕೊಂಡು ಸಲಾಮ ಹೇಗೆ ಮಾಡಬೇಕು, ಅವರ ಮಾತು ತಿಳಿ 
ದಿದ್ದರೂ ಹೇಗೆ ನಗಬೇಕು ಇದನ್ನೆಲ್ಲ ಕೇಳಿಕೊಂಡು ಸಾಹೇಬರ ಭೆಟ್ಟಿಗೆ 
ಹೋದೆ. ನನಗೆ ಇಂಗ್ರೇಜೀ ಬರದೇ ಇದ್ದ ಮೂಲಕ ಸಾಹೇಬರಿಗೆ 
ನನ್ನ ಭೆಟ್ಟಿಯ ಕಾರಣ ಕನ್ನಡದಲ್ಲಿ ಹೇಳಿಕೊಂಡು ಮತ್ತು ಬದಿಯಲ್ಲಿದ್ದ 
ಕಾರಕೂನನ ಕಡಯಿಂದ ಅದರ ಅರ್ಥವನ್ನು ಸಾಹೇಬರಿಗೆ ತಿಳಿಸಿದೆ. 
' ರಾವಸಾಹೇಬ ' ಪದವಿಯನ್ನು ದೊರಕಿಸಲಿಕ್ಕೆ ಬಂದಿದ್ದೇನೆಂದು ಕೇಳಿದ 
ಕೂಡಲೇ ಸಾಹೇಬ ಬಹಾದ್ದೂರವರು ಫೂಲ್‌, ಫೂಲ್‌ (Fool Fool) 
ಎಂದು ಒದರಿದ್ದರಿಂದ ಅವರಿಗೆ ಸಂತೋಷವಾಗಿದೆ ಎಂದು ತಿಳಿದೆ. ಹದಿನೆಂಟು 
ವರುಷದ ನನ್ನ ಮಗನು ಇಂಗ್ರೇಜಿ ಕಲಿಯುತ್ತಲಿದ್ದಾನೆ. ಅವನಿಗೆ ಆ ಶಬ್ದದ 
ಅರ್ಥವನ್ನು ಕೇಳಿದೆ. ಆದರೆ " ಘೂಲ ಇದರ ಅರ್ಥ ". ಮೂರ್ಖ ಆಂತ
ತಿಳಿಯಿತು. ಅದರೂ ನನಗೆ "ರಾನಸಾಹೇಬ ಪದವಿ ಅಡಿ   ಆಗುವದಿಲ್ಲ.
'ರಾವ ಸಾಹೇಬ ರಾವಬಹಾದ್ದೂರ ಅದವರೆಲ್ಲರೂ ಬಹುತರ 
ವಾಗಿ ನನ್ನ ವರ್ಗದಲ್ಲಿರುವದರಿಂದ ನಾನಾದರೂ   ಅಡ್ಡಿ ಇಲ್ಲವೆಂದು ಸಮಾಧಾನ ಮಾಡಿಕೊಂಡೆ. 
ಎಷ್ಟೋ ಗುಪ್ತ ರೋಗಗಳು ನನ್ನಲ್ಲಿ ಮನೆಮಾಡಿಕೊಂಡಿರುವದರಿಂದ 
ನನಗೆ ಈ ಪದನಿಯು ಆದಷ್ಟು ತೀವ್ರ ದೊರೆಯಬೇಕಾಗಿದೆ. ಯಾಕಂದರೆ 
ಓಮ್ಮಿಂದೊಮ್ಮೆಲೇ ಎದಿಬೇನೆಯಿಂದ ಕೈಲಾಸಕ್ಕೆ ಎಲ್ಲಿ ತೆರಳುವೆನೋ ಎಂಬ 
ಬಲವಾದ ಶಂಕೆಯು ನನ್ನಲ್ಲಿ ಹುಟ್ಟಿದೆ. ಆದ್ದರಿಂದ ಟಾಂಗಾದಲ್ಲಿ ತಿರುಗಾಡು 
ತ್ತೇನೆ ಹತ್ತರ ಔಷಧದ ಬಾಟ್ಲಿಯನ್ನುಇಟ್ಟುಕೊಂಡಿರುತ್ತೇನೆ. ಇಷ್ಟಾಗಿ ಶಿವನ 
ಮನಸ್ಸಿನಲ್ಲಿ ನನ್ನನ್ನು ಕೈಲಾಸಕ್ಕೆ ಅಟ್ಟಬೇಕೆಂದು ಇದ್ದರೆ ನನ್ನ ದೇನು ಉಪಾ 
ಯವಿದೆ. ಕಳೆದ ನಾಲ್ಗಾರು ವರುಷಗಳಿಂದ ಹೊಲಗಳು ಬೆಳೆದಿಲ್ಲ. ಹೊಲ 
ಗಳು ಒತ್ತೀ ಬಿದ್ದಿವೆ. ಅಡತಿ ಅಂಗಡಿ ದಿವಾಳಿ ಹೊರಡುವ ಪ್ರಸಂಗ 
ಬಂದಿದೆ. ನಾನು ಮೆಂಬರನಿದ್ದ ಮೂಲಕ ಕೈ ಮೇಲೆ ಹೊಟ್ಟಿ ತುಂಬಿಕೊ 
ಳ್ಳುತ್ತೇನೆ. ಈ ಕಾಲದಲ್ಲಿ ನಾನು ದೇಹವಿಡುವದು ಯೋಗ್ಯವೆ. ಆದರೆ 
' ರಾವಸಾಹೇಬ '' ಪದವಿ ಇಲ್ಲದೆ ಸಾಯಬೇಕಾಗುವದರಿಂದ ಬಹಳ ವೃಸನ 
ಪಡುತ್ತೇನೆ. ಸರಕಾರದವರು ಪದವೀದಾನ ಸಮಾರಂಭದಲ್ಲಿ ಸಹ ಕೃಪಣತನ 
ಮಾಡುತ್ತಾರೆ. ಎಲ್ಲಮ್ಮನ ಪ್ರಸಾದದಂತೆ ಪ್ರತಿವಾರ ಪದವೀದಾನ 
ದರಿಂದ ಸರಕಾರದವರದೇನೂ ಹಾನಿ ಇರುವದಿಲ್ಲ. ಈ ವಾರದಲ್ಲಿ ನನಗೆ 
ಪದವಿ ದೂರೆಯದೇ ಹೋದರೆ ನನ್ನ ಗತಿ ನೆಟ್ಟಗಿಲ್ಲ. ನಿಮ್ಮ ಪತ್ರದ್ವಾರಾ 
ನಾನು ಸರಕಾರಕ್ಕೆ ಒಂದು ರೀತಿಯಿಂದ ನೋಟೀಸು ಕೊಡುತ್ತೇನೆ. ನಾನು 
' ರಾವಸಾಹೇಬ' 'ರಾವಸಾಹೇಬ ' ಅಂತ ಪ್ರಾಣ ಬಿಟ್ಟರೆ  ಅದಕ್ಕೆ ಸರಕಾರ 
ದವನರೇ ಹೂಣೆಗಾರರು. 
ಸಂಪಾದಕ ಮಹಾಶಯರೇ, ಈ ಪತ್ರ, ಕೊನೆಯದು. ತಾವು ನನ್ನ 
ದೂರನ್ನು ಜನರ ಮುಂದೆ ಮತ್ತು ಸರಕಾರದವರ ಮುಂದೆ ಇಡಲಿಕ್ಕೆ ಅವಕಾಶ 
ಕೊಟ್ಟ ಬಗ್ಯೆ ನಾನು ಬಹಳ ಖುಣಿಯಾಗಿದ್ದೇನೆ. ನಾನು ಬೇರೆ ಕಡೆಗೆ 
ಕಳಿಸಿದ್ದರೆ ದುಡ್ಡು ಬೇಡುತ್ತಿದ್ದರು.

ಅಪಾರವಾದ ಅನರ್ಥ 

ವಿಜಾಪೂರ ಪಟ್ಟಣದಲ್ಲಿ ಅಬಾಲ ವೃದ್ಧರಿಗೂ ಗೊತ್ತಿಂದ್ಹಧ ರಾಜ ಶ್ರೀ. 
ಬಸವಂತರಾಯಾ ಇವರ ಆಕಸ್ಮಿಕ ಮರಣದಿಂದ ನಮಗಾದ ದುಃಖದಷ್ಟೇ 
ನಮ್ಮ ವಾಚಕರಿಗೂ ಆಗಿರುವದರೆಂಬದರಲ್ಲಿ ಸಂದೇಹವಿಲ್ಲ.  ಅವರ ಮರಣದ 
ಸಂಗತಿಯಾದರೂ ಅನರ ಚರಿತ್ರದಂತೆ ಬೋಧ ಪ್ರದವಿರುವದರಿಂದ ಅದನ್ನು 
ಅವರ ಮಗನ ಶಬ್ದದಲ್ಲಿ ಕೆಳಗೆ ಕೊಡುತ್ತೇವೆ. 

ರಾ. ಕರ್ನಾಟಕ ವೈಭವದ ಸಂಪಾದಕರಿಗೆ 

ವಿ. ವಿ. ನಮ್ಮ ತಂದೆಯಾದ ಶ್ರೀಮಂತ ಬಸವಂತರಾಯಾ ತಿಮ್ಮುಣ 
ಗೌಡಾ ಪಾಟೀಲ ಇರುವ ಊರು ಹುಚನೂರು ಆನರರಿ ಬೆಂಚ ಮಾಜಿಸ್ತ್ರೇಟ 
ಮೊದಲನೇ ವರ್ಗ, ಮೆಂಬರ ಜಿಲ್ಹಾ ಲೋಕಲಬೋರ್ಡ, ಬ್ಲಾಯಿಂಡ ರಿಲೀಫ 
ಅಸೋಸಿಯಶೇನ, ಉಪಾಧ್ಯಕ್ಷ ಜಿಲ್ಹಾ ಪಾಟೀಲ ಸಂಘ, ಅಧ್ಯಕ್ಷ ಬ್ರಾಹ್ಮಣೇ
ತರ ಸಂಘ, ಅಗ್ಗದ ನಾಯಿದ ( ಆನರರಿ ಆರ್ಗನಾಯಿಝರ )  ಸಹಕಾರೀ 
ಸಂಘ ಕಾರ್ಯದರ್ಶಿ ತಾಲೂಕ ಡೆವಲಪ್‌ಮೆಂಟ  ಆಸೋತಿಯೇಶನ್‌ ವಗೈರೆ 
ಇವರು ತಾರೀಖು ೨೫ನೇ ಮಾರ್ಚ ದಿವಸ ಬಿಳಿಗ್ಗೆ ೮ ಘಂಟೆಗೆ  ಶಿವನ 
ಕಡೆಯಿಂದ ಆಜ್ಞಾ, ಬಂದದ್ದರಿಂದ ಕೈಲಾಸಕ್ಕೆ ತೆರಳಿದರು.  ಸುಮಾರು ಒಂದು 
ತಿಂಗಳಿಂದ ಅವರ ಪ್ರಕೃತಿಯು ಚನ್ನಾಗಿದ್ದಿಲ್ಲ. ಯಾವದೋ  ಒಂದು ವಸ್ತು 
ವಿನ ಸಲುವಾಗಿ ಹೃದ್ರೋಗವು ಉಂಟಾಗಿತ್ತು. ಮುನಸಿಪಾಲಟಿ  ಮತ್ತು 
ಲೋಕಲಬೋರ್ಡದವರು ಮಹಾತ್ಮಾ ಗಾಂಧಿಯವರಿಗೆ ಮಾನಪತ್ರ  ಕೊಡ 
ಬೇಕೆಂದು ಠರಾವು ಪಾಸು ಮಾಡಿದ್ದರಿಂದ ಅವರ ಎದೆಗೆ  ಧಕ್ಕೆ ತಗಲಿತೆಂದು 
ತೋರುತ್ತದೆ. ಸಾಯುವವರೆಗೆ ಅವರು ಎಚ್ಚರವಿದ್ದರು. ಸಾಯುವದಕ್ಕಿಂತ 
೫ ಮಿನಿಟು ಮೊದಲು ನನ್ನನ್ನೂ ನನ್ನ ತಾಯಂದಿರನ್ನೂ ಕರೆದು ಮೃತ್ಯುಪತ್ರ 
ದಲ್ಲಿ ಬರೆದಂತೆ ನಡೆಯಲಿಕ್ಕೆ ಆಜ್ಞಾಪಿಸಿದರು. ನಾವು ಅಳುತ್ತ  ನಿಂತಿರುವಾಗ 
ರಾವಸಾಹೇಬ, ರಾವಸಾಹೇಬ ಅನ್ನುತ್ತ ಪ್ರಾಣಬಿಟ್ಟರು . ಮೃತ್ಯುಪತ್ರವನ್ನು
ಒಂದು ಪಾಕೀಟನಲ್ಲಿ ಹಾಕಿ ಇಟ್ಟಿದ್ದರು. ಅವರ ಹೇಳಿಕೆಯ  ಪ್ರಕಾರ 
ಆ ಮೃತ್ಯುಪತ್ರವನ್ನು ಪ್ರಸಿದ್ಧ ಮಾಡುವ ಕುರಿತು ನಿಮ್ಮ ಕಡೆಗೆ ಕಳಿಸು 
ತ್ತಿದ್ದೇನೆ. ತಾವು ಅದನ್ನು ಪ್ರಸಿದ್ಧ ಮಾಡುವಿರೆಂದು ಆಶಿಸುತ್ತೇನೆ.   
ತಮ್ಮ ಕೃಪಾಭಿಲಾಷಿ 
ಬಸಲಿಂಗರಾವ ಬಸವಂತರಾಯಾ ಬಿರಾದಾರ ಪಾಟೀಲ

ಮೃತ್ಯುಪತ್ರ 
ಮೃತ್ಯುಪತ್ರ ಬೇಸ್ಮಿ ಬಸವಂತರಾಯಾ ಬಿನ್ನ ತಿಮ್ಮಣಗವಡಾ  ಪಾಟೀಲ 
ಸಾ. ಹುಚನೂರ ಹಲ್ಲವಸ್ತಿ ವಿಜಾಪುರ ಜಾತಿ ಲಿಂಗಾಯತರಡ್ಡೀ  ವಯ 
೫೫, ಧಂದೆ ವೃಾಪಾರ, ಮುಖ್ಯತಃ ಬೆಂಚ ಮ್ಯಾಜಿಸ್ಟ್ರೀಟ, ಹೀಗೆ  ಮೃತ್ಯುಪತ್ರ 
ಬರೆದಿರುತ್ತೇನೆ. ನಾನು ರಾವಸಾಹೇಬನಾಗದ್ದರಿಂದ ನನ್ನ ರೋಗವು   
ಹೆಚ್ಚಾಗಿ ಕ್ಷೀಣವಾಗಹತ್ತಿದ್ದೇನೆ. ಯಾವಾಗ ಕೈಲಾಸಕ್ಕೆ ಹೋಗುವೆ
ನೆಂಬದು ನಿಯಮವಿಲ್ಲ. ನನ್ನ ಮರಣದ ನಂತರ ನನ್ನ ಆಸ್ತಿಯ ಸಲುವಾಗಿ 
ಕೋರ್ಟ ಕಚೇರಿಗೆ ಹೋಗುವ ಪ್ರಸಂಗ ಬರಬಾರದು.  ಮತ್ತು ನನ್ನ 
ಆಯುಷ್ಯದಿಂದ ನನ್ನ ಮಕ್ಕಳು ಬೋಧ ತೆಗೆದುಕೊಳ್ಳಬೇಕೆಂದು ಈ ಮೃತ್ಯು 
ಪತ್ರವನ್ನು ಬರಿದಿಡುತ್ತೇನೆ. 
ಪದವಿ ಮತ್ತು ಸರ್ಟಿಫಿಕೇಟ 
ನಾನು ಪದವಿ ಸಲಾವಾಗಿ ಬಹಳ ಪ್ರಯತ್ನ ಮಾಡಿ 
ದೆನು. ಆದರೆ ಅ ಪದವಿಯು ವೇಳೆಗೆ ಬರಲಿಲ್ಲ... ತಥಾಪಿ ನಾನು ಕೈಲಾಸ 
ವಾಸಿಯಾದ ಎಂಟು ದಿವಸಗಳಲ್ಲಿ ರಾವಸಾಹೇಬ ಪದವಿಯು ಸಿಕ್ಕರೆ 
ನನ್ನನ್ನು ಸಮಾಧಿಯ ಹೊರಗೆ ತೆಗೆದು ನನ್ನ ಕೊರಳೊಳಗೆ ಆ ಪದಕವನ್ನು 
ಕಟ್ಟಬೇಕು. ಒಂದು ವೇಳೆ ೮ ದಿವಸಗಳೊಳಗೆ ಬರದಿದ್ದರೆ ವಿಜಾಪುರ ಶಹರ 
ದಲ್ಲಿರುವ ಹೆಣ್ಣು ಹುಡುಗರ ಸಾಲೆ ಫೌಜದಾರ ಕಚೇರಿ ಲಾಯಬ್ರರಿ 
ಇವುಗಳ ಮಧ್ಯದಲ್ಲಿರುವ ಕಂದೀಲ ಕಂಬಕ್ಕೆ ತೂಗಹಾಕಬೇಕ್ಕು ನನ್ನ 
ಮರಣದಿಂದ ಒಂದು ವರುಷದ ವರೆಗೆ ಕಲೆಕ್ಟರ ಸಾಹೇಬರಿಗೆ ಊರೊಳಗಿನ
ಚಾಡಿ ಹೇಳುತ್ತಾರೋ ಮತ್ತು ಕಲೆಕ್ಟರ ಸಾಹೇಬರು ಆ ವಿಷಯವಾಗಿ 
ಸರ್ಟಿಫಿಕೇಟ ಕೊಡುತ್ತಾರೋ ಅವನಿಗೆ ಈ ರಾವಸಾಹೇಬ ಪದವಿ 
ಯನ್ನು ಕೊಡಬೇಕು. ವಾರಲೋನ, ರಿಕ್ರುಟಿ ಫಂಡು, ಕುರುಡರ ಫಂಡು, 
ಮೊದಲಾದ ಅನೇಕ ಕೃತ್ಯಗಳನ್ನು ಮಾಡಿದ್ದರಿಂದ ಸಾಹೇಬ ಜನರು ನನಗೆ 
ಎಂಟು ಸರ್ಟಿಫಿಕೇಟ ಕೊಟ್ಟಿರುತ್ತಾರೆ. ನನ್ನ ಮಗನಿಗೆ ಅವುಗಳ ಉಪಯೋಗ 
ವಿಲ್ಲ ಅವುಗಳನ್ನು ಜಿಲ್ಹಾ ಲೋಕಲ ಬೋರ್ಡದ ಸರಕಾರ  ನಿಯುಕ್ತ ಒಬ್ಬ 
ಹಿಂದೀ ಮತ್ತು ಮುಸಲ್ಮಾನ ಸಭಾಸದರಲ್ಲಿ ಹಂಚಿ ಕೊಡಬೇಕು.  ನಾನು 
ಎಷ್ಟೋ ಸಾಹೇಬರ ಕೂಡ ಫೋಟೊ ತೆಗೆಸಿಕೊಂಡ  ಪ್ರತಿಗಳಿರುತ್ತವೆ 
ಅವುಗಳನ್ನು ಶೆಪರ್ಡ ಹಾಲದಲ್ಲಿ ನನ್ನ ಸ್ಮರಣಾರ್ಥ  ತೂಗಹಾಕಬೇಕು. 
ಎಲ್ಲ ಫೋಟೊಗಳನ್ನು ಏಕತ್ರ ಮಾಡುವದರಿಂದ ಜಿಲ್ಹೆಯೊಳಗಿನ  ರಾಜನಿಷ್ಠ 
ಜನರ ಯಾದಿಯನ್ನು ಮಾಡಲಿಕ್ಸೆ ಉಪಯೋಗ ಬೀಳುವದು.
ನನ್ನ ಪದಕ ಮತ್ತು ಸರ್ಟಿಫಿಕೇಟಗಳು ಎಷ್ಟು ಮಹತ್ವದ್ದಿರುತ್ತ 
ವೆಯೋ ಅಷ್ಟೇ ನನ್ನ ಪೋಷಾಕವಾದರೂ ಮಹತ್ವದ್ದಿರುತ್ತದೆ.  ನನ್ನ ಕೋಟ 
ಪಾಟಲೋಣ ನನ್ನ ಹುಡುಗನಿಗೆ ನಿರುಪಯೋಗಿ ಇರುತ್ತವೆ. ಆದರೆ  ಬಹಳ 
ಹಣವನ್ನು ವೆಚ್ಚ ಮಾಡಿ ತಯಾರ ಮಾಡಿಸಿದ ಅರಿವೆಗಳನ್ನು  ವೃರ್ಥವಾಗಿ 
ಚಲ್ಲುವದು ಯೋಗ್ಯವಲ್ಲ. ನನ್ನ ಎಲ್ಲ ಪೋಷಾಕ  ಮುನಸವಾಲಿಟಿಯಲ್ಲಿ 
ಡತಕ್ಕದ್ದು. ಮತ್ತು ದೊಡ್ಡ ದೊಡ್ಡ ಸಾಹೇಬರಿಗೆ  ಮುನಸಿಪಾಲಿಟಿಯವರು 
ಮಾನಪತ್ರ ಕೊಡುವಾಗ ಮುನಸಿಪಾಲಿಟಿಯ ಬಡ ಮೆಂಬರರಿಗೆ  ಚಲೋ 
ಪೋಷಾಕ ಮಾಡಿಸುವದಾಗುವದಿಲ್ಲ. ಆದ್ದರಿಂದ ಅಂಥ ಬಡ ಮೆಂಬರರಿಗೆ 
ನನ್ನ ಪೋಷಾಕವನ್ನು ಬಾಡಗಿಯಿಂದ ಕೊಟ್ಟು ಆ ಬಾಡಗಿ ಹಣವನ್ನು 
ಮುನಸಿಪಾಲಿಟಿಯ ಸಭೆಯು ನಡೆದಾಗ ಮೆಂಬರರಿಗೆ ಬೀಡಿ, ಕಡ್ಡಿ, ಚುಟ್ಟಾ 
ಮೊದಲಾದವುಗಳನ್ನು ಪೂರೈಸುವದಕ್ಕೆ ಉಪಯೋಗಿಸಬೇಕೆಂದು ಇಚ್ಛೆ 
ಇರುತ್ತದೆ. ಈ ಇಚ್ಛಿಯನ್ನು ಶ್ರೀ. ಚನ್ನಬಸವೇಶ್ವರನು   ಸಮರ್ಧನಿದ್ದಾನೆ. 

ನನ್ನ ಹೆಂಡಂದಿರು 
ಮನೆಯ ಸಂಬಂಧಿ ಬರೆಯಬೇಕಾದರೆ ನನ್ನ ಕ್ಕೆ ನಡಗುತ್ತದೆ. 
ಇಬ್ಬರು ಹೆಂಡಂದಿರನ್ನು ಮಾಡಿಕೊಂಡದ್ದರಿಂದ ಮನೆಯಲ್ಲಿಯ ಜಗಳವನ್ನು
ತೀರಿಸುವದರಲ್ಲಿ ನನ್ನ ವೇಳೆಯು ಹೋಗಹತ್ತಿತ್ತು. ನನ್ನ ಮೊದಲನೇ 
ಹೆಂಡತಿಯ ಹೆಸರು ಯಲ್ಲಿ. ಎರಡನೇ ಹೆಂಡತಿಯ ಹೆಸರು ಪಾರ್ವತಿ. 
ಯಲ್ಲಿಯ ಹೊಟ್ಟಿಯಿಂದ ಒಬ್ಬ ಮಗನಿದ್ದಾನೆ. ಆದರೆ ನನ್ನಂತೆ ನಾಲ್ಬು 
ಜನ ಸಂಭಾವಿತರ ಆಗ್ರಹದಿಂದ ಮತ್ತು ಸ್ವಾಮಿಗಳ ಅಜ್ಜೆಯ ಮೇರೆಗೆ 
ಪಾರ್ವತಿಯನ್ನು ಉಡಕಿ ಮಾಡಿಕೊಂಡೆನು. ಆಕೆಯಿಂದಲೂ ಒಬ್ಬ ಮಗ 
ನಿದ್ದಾನೆ. ನಾನು ಜೀವಂತ ಇದ್ದಾಗ ಹೇಗಾದರೂ ಮಾಡಿ ಹೆಂಡಂದಿರ 
ಜಗಳವನ್ನು ಮುರಿಯುತ್ತಿದ್ದೆನು. ಆದರೆ ನಾನು ಸತ್ತ ಮೇಲೆ  ಅವರೀರ್ವರು 
ಟಗರಿನಂತೆ ಹೊಡೆದಾಡುವರೆಂದು ನನಗೆ ಪೂರ್ಣ ಮನವರಿಕೆ ಅದೆ.  ಪಾರ್ವತಿ 
ತರುಣ ಇದ್ದು ಸುಂದರ ಇದ್ದಾಳೆ. ಆಕೆಯನ್ನು ಉಡಕಿ  ಮಾಡಿಕೊಳ್ಳಲಿಕ್ಕೆ 
ಯಾರಾದರೂ ಒಪ್ಪಬಹುದು. ನಾನು ಸತ್ತ ಮೇಲೆ ಯಲ್ಲಿಯ  ಗೂಡ 
ಹೊಡದಾದುತ್ತ ಅನಾಚಾರಿಯಾಗಿ ನನ್ನ ಮನೆಯಲ್ಲಿರುವದಕ್ಕಿಂತ 
ಯೋಗ್ಯ   ಎರಡನೇದವನನ್ನು ಉಡಕಿ ಮಾಡಿಕೊಂಡು  ಹೋಗುವದು ಚಲೋದು 
ನನ್ನ ಮರಣದ ನಂತರ ಆಕೆಯು ಒಂದು ವರುಷದೊಳಗೆ ಉಡಕಿ ಮಾಡಿ 
ಕೊಂಡು ಹೋದರೆ ಆಕೆಗೆ ಕುಪ್ಪಸ ಸೀರೆಯ ಸಲುವಾಗಿ ಪ್ರತಿ ತಿಂಗಳ ನಾಲ್ಕು 
ರೂಪಾಯಿ ಆಕೆಗೆ ಕೊಡಬೇಕು. ಆಕೆಯು ಉಡಕಿ ಮಾಡಿಕೊಂಡು ಹೋಗ 
ದಿದ್ದರೆ ಕೆಳಗಿನ ಪ್ರಕಾರ ವ್ಯವಸ್ಥಾ ಮಾಡಬೇಕು. 
ದರವರ್ಷ ಪ್ರತಿಯೊಬ್ಬಳಿಗೆ ನಾಲ್ನು ಚೀಲ ಜೋಳ ಕೊಡಬೇಕು. ಮತ್ತು 
ಪ್ರತಿಯೊಬ್ಬರಿಗೆ ಒಂದೊಂದು ಎಮ್ಮೆ ಕೊಡಬೇಕು. ಎಮ್ಮೆಯ ಕಿಮ್ಮತ್ತು 
ನೂರು ರೂಪಾಯಿ ಬಿದ್ದರೂ ಚಿಂತೆಯಿಲ್ಲ ಆ ಎಮ್ಮೆಯ ಹಾಲು ಮೊಸರು 
ಮಾರಿಕೊಂಡು ಅವರು ಉಪಜೀವನ ಮಾಡಿಕೊಳ್ಳು ತಕ್ಕದ್ದು. ಅವರಿಗೆ 
ಹೊತ್ತು ಹೋಗುವ ಸಲುವಾಗಿ ಒಂದೊಂದು ರಾಟಿ ಕೊಡಬೇಕು. ರಾಟಿ 
ಯಿಂದ ಅವರಿಬ್ಬರು ನೂಲು ತೆಗೆಯಹತ್ತಿದರೆ ನನ್ನ ಆಸ್ತಿಯೊಳಗಿಂದ ಅವರಿಗೆ 
ಒಂದೊಂದು ಮಣ ಆರಳಿ ಕೊಡಬೇಕು. ನನ್ನ ಹೆಂಡರು ವಿಜಾಪೂರ ಬಿಟ್ಟು 
ಹುಚನೂರೊಳಗೆ ಹೋಗಿ ಇದ್ದರೆ ಮಾತ್ರ ಅವರಿಗೆ ಈ ಪ್ರಕಾರ ಕೊಡಬೇಕು 
ಇಲ್ಲದಿದ್ದರೆ ಏನೂ ಕೊಡಬಾರದು. ಅವರ ಮೈ ಮೇಲೆ ಇದ್ದ ವಸ್ತ್ರ  ಒಡವೆ 
ಗಳ ಮಾಲಕರು ಅವರೆ ಇದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಅವರು
ಅವುಗಳ ವ್ಯವಸ್ಥೆ ಮಾಡಿಕೊಳ್ಳಬಹುದು. ಸಾಯುವವರೆಗೆ ಅವು
ಗಳನ್ನು ಇಟ್ಟಿಕೊಳ್ಳಬೇಕಂದು ನನ್ನ ಶಿಫಾರಸ ಅದೆ. ಆಭರಣಗಳು ಹೋದ 
ವೆಂದರೆ ಮುಪ್ಪಿನಲ್ಲಿ ಅವರನ್ನು ಯಾರೂ ಕೇಳುವದಿಲ್ಲ. ಇರಲಿ, ಒಬ್ಬ 
ಹೆಂಡತಿ ಜೀವಂತ ಇರಲಿಕ್ಕೆ ಎರಡನೇ ಹೆಂಡತಿಯನ್ನು ಮದುವೆ ಅಥವಾ 
ಉಡಕಿಯನ್ನು ಮಾಡಿಕೊಳ್ಳಬಾರದಿಂದು ನನ್ನ ಅನುಭವದಿಂದ ಬರೆದಿಡು 
ತ್ತೇನೆ ಇಬ್ಬರ ಹೆಂಡರೆ ಮೂಲಕ ನನಗೆ ತೀವ್ರ ಮರಣ ಬಂದಿತೆಂದು 
ನನಗೆ ಅನಿಸುತ್ತದೆ. ನನ್ನ ರೋಗ ಅವರಿಗೆ ಹತ್ತಲಿ. ಅಥವಾ ಅವರ ರೋಗ 
ನನಗೆ ಅಂಟಿಕೊಳ್ಳ ಲಿ. ನಾನು ಮಾತ್ರ ತೀವ್ರ ಮುಪ್ಪಾದೆನು. ಈ  ಪ್ರಕಾರ 
ಹೆಂಡಂದಿರ ವ್ಯವಸ್ಥಾ ಮಾಡಿದ್ದೀನೆ. 

ಮುಕ್ಕಳು 
ನಾನು ನಿಮಗಾಗಿ ಏನನ್ನೂ ಮಾಡಿಲ್ಲ. ಮನೆಮಾರುಗಳನ್ನು ಹಾಳು 
ಮಾಡಿಕೊಂಡು, ರಾವಸಾಹೇಬ ಪದವಿಯ ಅಮೌಲ್ಯಜ್ಞಾನ ನಿಧಿಯನ್ನು 
ನಿನುಗಾಗಿ, ಇಟ್ಟಿದ್ದೇನೆ. ನನ್ನ ಸಹವಾಸದಿಂದ ನನ್ನ ಚಲೋ ಕೆಟ್ಟ  ವ್ಯಸನ 
ಗಳು ನಿಮ್ಮ ಸ್ಪಾಧೀನವಾಗಿವೆ. ಸಾಲಕ್ಕಾಗಿ ಆಸ್ತಿಯನ್ನು ಮಾರಿ  ಉಳಿದುದ 
ರಲ್ಲಿ ಸಮನಾಗಿ ಹಂಚಿಕೊಳ್ಳ ಬೇಕು. ಬಸಲಿಂಗರಾಯನು  ಆಡತಿಯ ಅಂಗಡಿ 
ಯನ್ನೂ ಇನ್ನೊಬ್ಬನು ಹೊಲಮನೆಗಳನ್ನೂ ತೆಗೆದುಕೊಂಡು ಹುಚನೂರಲ್ಲಿ 
ಇರಬೇಕು ನನ್ನ ಕೊನೆಯ ಇಚ್ಛೆಯು ಇಷ್ಟೆ. ನೀವು ಮಾತ್ರ ಈ ರಾವ 
ಸಾಹೇಬಕೀ ಮಬ್ಬಿಗೆ ಬೀಳಬಾರದೆಂದೂ ಈ ನನ್ನ ಅದ್ಭುತವಾದ  ರಾವಸಾಹೇ 
ಬಕಿ ಚರಿಶ್ರಯನ್ನು ಮುದ್ರಿಸಿ ತರುಣರಲ್ಲಿ ಪುಕ್ಕಟೆಯಾಗಿ ಹಂಚಬೇಕು. 
ತಮ್ಮ   
ಬಸವಂತರಾಯ
=================================
  ವಿಧುರ ಮಂಡಲ ಮತ್ತು ಅದರ   ಅವಶ್ಯಕತೆಯು 
 
ಕೇವಲ ನೈತಿಕ ಅಥವಾ ಆರ್ಥಿಕ ದೃಷ್ಟಿಯನ್ನಿಟ್ಟು ಯಾವದೊಂದು 
ರಾಷ್ಟ್ರವು ಅಥವಾ ಸಮಾಜವು ಉನ್ನತಿ ಹೊಂದಿರುತ್ತದೆಂದು  ಹೇಳುವದು 
ಸಮಂಜಸವಾಗಲಾರದು. ಸಮಾಜದ ಅಥವಾ ರಾಷ್ಟ್ರದ  ಸ್ವಘಟಕಾವಯವ 
ಗಳು ಸುಸಂಘಟತವಿದ್ದರೆ ಮಾತ್ರ, ಅದಕ್ಕೆ ಉಚ್ಚರಾಷ್ಟ್ರ ಅಥವಾ ಸಮಾಜ 
ವೆಂದು ಕರೆಯಬಹುದು. ಹಿಂದೀ ಸಮಾಜದ ಸರ್ವವಿಧದ  ಬೆಳವಣಿಗೆ 
ಯಾಗಬೇಕೆಂದು ಪ್ರಯತ್ನ ನಡೆದಾಗ ಅದರ ಅಂಗಭೂತವಾದ ವಿಧುರ 
ಸಮಾಜವು ದಿನೇ ದಿನೇ ಬೆಳೆಯಹತ್ತಿದಾಗ್ಯೂ ಅದು  ಸುಸಂಘಟತವಿಲ್ಲದೆ 
ವಿಸ್ಖಲಿತವಾಗಿರುವದು ಹಾನಿಕಾರಕವಿರುತ್ತದೆ. ವಿಧುರ ಸಮಾಜೆದ  ಸ್ಥಿತಿಯು 
ದಿನದಿನಕ್ಕೆ ಸುಧಾರಿಸುವ ಕುರಿತು ಒಂದು ಮಂಡಳ ಸ್ಥಾಪಿಸುವದು  ಎಷ್ಟು 
ಅವಶೃವಿರುತ್ತಬೆಂಬುದು ಮೇಲಿನ ವಿವೇಚನೆಯ ಮೇಲಿಂದ  ಸ್ಟುಟವಾಗಿ ಕಂಡು 
ಬರುವದು. ಇಂಥ ಮಂಡಳದ ಇಷ್ಟು ಅವಶ್ಯಕತೆಯಿದ್ದರೂ ಯಾವ ಪ್ರಾಂತ 
ದಲ್ಲಿಯೂ ಈ ಮಂಡಳವು ಸ್ಟಾಪಿತವಾದಂತೆ ತೋರುವುದಿಲ್ಲ. ಇದರ ಮುಖ್ಯ 
ಕಾರಣವೇನೆಂದರೆ ಜನರ ಔದಾಸಿನ್ಯವು. ನಮ್ಮ ಕರ್ನಾಟಕದ ಕಡೆಗೆ ನೋಡಿರಿ. 
ಡೇ. ಗಂಗಾಧರರಾವ ದೇಶಪಾಂಡೆ ಕರ್ನಾಡ ಸದಾಶಿವರಾಯರಂಥ ಹಗಲಿ 
ರುಳು ದೇಶದ ಸಲುವಾಗಿ ಕುದಿಯುವ ವಿಧುರಾಗ್ರಣಿಗಳು ನಮ್ಮ ಪ್ರಾಂತ 
ದಲ್ಲಿದ್ದರೂ ಒಂದು ಸಣ್ಣ ವಿಧುರ ಮಂಡಳವನ್ನು ಸ್ಥಾಪಿಸಬೇಕನ್ನುವದು 
ಅವರ ಧ್ಯಾನದಲ್ಲಿಲ್ಲದ್ದು ನಮ್ಮ ಸಮಾಜಕ್ಕಿಂತಲೂ ನಮ್ಮ ಪ್ರಾಂತದ 
ದುರ್ದೈವವೇ ಸರಿ. "ಎಂದೂ ಇಲ್ಲದ್ದಕ್ಕಿಂತಲೂ ತಡವಾದರೂ ಲೇಸು" 
ಏಂಬ ಇಂಗ್ಲೀಷ ನಾಣ್ಣುಡಿಯಂತೆ ಈಗಾದರೂ ಒಂದು ವಿಧುರ ಸಂಸ್ಥೆ ಸ್ಟಾಪಿಸಿ 
ವಿಧುರರ ಉದ್ಧಾರ ಮಾಡುವರೆಂಬ ಆಶೆಯಿಂದ ಕೆಲವು ಸೂಚನೆಗಳನ್ನು 
ಮಹಾಜನರ ಮುಂದೆ ಇಡುತ್ತೇನೆ.
ವಿಧುರ ಮಂಡಳದ ಉದ್ದೇಶವೇನು? ಎಂದು ಕೆಲವರು ಶಂಕಿಸಬಹುದು. 
ಅನಾಧ ಅಂದರೆ ಅಪತ್ನೀಕ ವಿಧುರರ ಸಂಘಟನೆ ಮಾಡಿ ಅವರ ಸಲುವಾಗಿ 
ಕುಮಾರಿಯರನ್ನು ಅಧವಾ ವಿವಾಹ ಮಾಡಿಕೊಳ್ಳುವ ಇತರ ಸ್ತೀಯರ ರೋಧ 
ಮಾಡಿ ವಿಧುರರನ್ನು ಸನಾಥ ಇಲ್ಲವ ಸಪತ್ನೀಕ ಅಂದರೆ ಸಧುರರನ್ನಾಗಿ 
ಮಾಡುವದು. ಈ ಮಂಡಲದ ಧ್ಯೇಯವಿರಬೇಕೆಂದು ಕೆಲವರು ಒಮ್ಮೆಲೇ 
ಭಾವಿಸಬಹುದು. ಹಾಗೆ ಮಾಡುವದಿಂದರೆ ತಮ್ಮ ಕಾಲುಗಳ ಮೇಲೆ 
ತಾವೇ ಕಲ್ಲು ಹಾಕಿಕೊಂಡಂತಾಗುವದು. ಇದು ಆತ್ಮಘಾತವೇ ಸರಿ ಅನೇಕ 
ಧರ್ಮಗುರುಗಳು ತಮ್ಮ ಶಿಷ್ಯವೃಂದವು ಹೆಚ್ಛಾಗಲೆಂದು ಪ್ರಯತ್ನಪಹಡುತ್ತಿರು 
ವಾಗ ವಿಧುರರು ಮಾತ್ರ ತಮ್ಮ ಸಂಖ್ಯಯು ಕುಗ್ಗುವ ಮಾರ್ಗ ಹಿಡಿ 
ಯುವದು ಲಜ್ಜಾಸ್ಪದವಾದೀತು ಆದ್ದರಿಂದ ವಿಧುರರಲ್ಲಿ ಪರಸ್ಸರ ಸಂಘಟನೆ 
ಯನ್ನೂ ಸಹಕಾರವನ್ನೂ ಹೆಚ್ಚಿಸಿ ಪ್ರಯೊಬ್ಬ ವಿಧುರರಿಗೆ ವಿಧುರಾವಸ್ಥೆ 
ಯಿಂದ ಹೆಚ್ಚು ಸೌಖ್ಯ ಮತ್ತು ಅನಂದಉಂಟಾಗುವಂತೆ ಪ್ರಯತ್ನ ಮಾಡು 
ತ್ತಿರಬೇಕು. ಮೇಲಿನ ಉದ್ದೇಶವು ಸೃಷ್ಟವಿದ್ದು ಆಕರ್ಷಕವಿರುತ್ತದೆ. 
ಮಂಡಳವು ಸ್ಥಾಪಿತವಾದಕೂಡಲೇ ಸಭಾಸದರನ್ನು ಮಾಡಿಕೊಂಡು ಆದಷ್ಟು 
ಮಂಡಳದ ಸಂಖ್ಯಾಬಲವನ್ನು ಹೆಚ್ಚು ಮಾಡಬೇಕು. ವಿಧುರರಾಗುವದು 
ಮನುಷ್ಯನ ಆಧೀನವಾಗಿರದೆ ದೇವರಾಧೀನವಿರುತ್ತದೆ. ಅದು ಮನುಷ್ಯರ 
ಆಧೀನವಿದ್ದರೆ ಈಗ ಕಂಡುಬರುವ ಸಾವಿರಗಟ್ಲೆ ಬದಲು ಲಕ್ಷಗಟ್ಟಿ ವಿಧುರರು 
ಸಿಗುತ್ತಿದ್ದರು. ಈಶ್ವರಾಧೀನವಿದ್ದ ವಿಷಯವಾಗಿ ಹಳಹಳಿಸಿ ಫಲವೇನು? 
ಆದರೆ ಕೇವಲ ಪರಮಾತ್ಮನ ಮೇಲೆ ಭಾರ ಹಾಕಿ ಮಂಡಳದ ಹಿತಚಿಂತಕರು 
ಸ್ವಸ್ಥ ಕುಳಿತರೆ ಜಗತ್ತಿನಲ್ಲಿ ಪ್ರಯತ್ನವಾದಕ್ಕೆ ಅರದಾಳ ಹಾಕಬೇಕಾದೀತು. 
ವಿಧುರನನ್ನು ನಿರ್ಮಾಣ ಮಾಡಲಿಕ್ಕೆ ಬರದಿದ್ದರೂ ದೈವಯೋಗದಿಂದ ವಿಧುರ
ರಾದವರನ್ನು ಅದೇ ಅವಸ್ಥೆಯಲ್ಲಿಡಲಿಕ್ಕೆ ಪ್ರಯತ್ನ ಮಾಡುವದು ಪ್ರತಿ 
ಯೋರ್ವ ಮಂಡಳದ ಹಿತಚಿಂತಕನ ಆದ್ಯ ಕರ್ತವ್ಯವಿರುತ್ತದೆ. ವಿಧುರ 
ಮಂಡಳದ ಕಾರ್ಯಕ್ರಮದಲ್ಲಿ ಇದೇ ಮುಖ್ಯ ಕೆಲಸವಿರುತ್ತದೆ. ಸುದೈವ 
ದಿಂದ ಅಧವಾ ದುರ್ದೈವದಿಂದ ಪ್ರಾಪ್ತವಾದರೆ ಅವನ 
ಗೂಡ ಸ್ನೇಹ ಬೆಳಿಸಿ ಬಶ್ದದಿಂದಾಗಲೀ ಅಥವಾ ಸನ್ನೆಗಳಿಂದಾಗಲೀ ಮತ್ತು 
ಇತರ ಮಾರ್ಗದಿಂದಾಗಲೀ ಅವನನ್ನು ಆಮರಣ ಪರ್ಯಂತ, ಅದೇ ಸ್ಥಿತಿಯಲ್ಲಿ
ಡಲಿಕ್ಕ ಪ್ರಯತ್ನ ಮಾಡುವದು ಮಂಡಳದ ಮುಖ್ಯ ಕೆಲಸವಿರುತ್ತದೆ. ವಿಧುರ 
ಮಂಡಳದ ಮುಖ್ಯ ಕಾರ್ಯನಿರ್ದೇಶ ಮಾಡಿದ ಮೇಲೆ ಕಾರ್ಯದಲ್ಲುಂಟಾ 
ಗುವ ತೂಂದರೆಗಳನ್ನು ಹೇಳಿದರೆ ತಪ್ಪಾಗಲಾರದು. 
ವಿದುರಾವಸ್ಥೆಯು ಪ್ರಾಪ್ತವಾದ ಮೊದಲನೇ ವರುಷವು ಅತ್ಯಂತ 
ಕಂಟಕಮಯವಾಗಿರುತ್ತದೆ. ಹೆಂಡತಿಯು ಸತ್ತ ಮೊದಲನೇ ಹದಿನೈದು 
ದಿವಸಗಳು ನಿಸ್ಸೀಮ ವೈರಾಗ್ಯದ ದಿವಸಗಳು. ಪತ್ನಿಯಗೂಡ ಸಹಗಮನ 
ಮಾಡುವ ಕಲ್ಪನೆಗಳು ಸಹ ವಿಧುರರ ತಲೆಯಲ್ಲಿ ಒಮ್ಮೊಮ್ಮೆ ತಾಕಲಾಡು 
ತ್ತವೆ, ಪೆನಶನ್‌' ತೆಗೆದುಕೊಂಡು ಮನೆಯಲ್ಲಿ ಕುಳತ ವೃದ್ಧನಿಗೆ ಹೇಗೆ 
ಸಂಸಾರ ಅಸಾರವಾಗಿ ತೋರುವದೊ ಅದರಂತೆ ಹೊಸ ವಿಧುರನಿಗೆ ಸಂಸಾರ
ಅಸಾರವೆಂದು ತೋರುವದು. ಮೃತಪತ್ನಿಯ ಗುಣವರ್ಣನೆಯನ್ನು ಸ್ವತಃ 
ಮಾಡದಿದ್ದರೂ ಎರಡನೇಯವರ ಬಾಯಿಂದ ಆ ವರ್ಣನೆಯನ್ನು ಕೇಳುವದ 
ರಲ್ಲಿ ಆನಂದವಾಗುತ್ತಿದೆ. ಬಂಧುಬಳಗದವರಲ್ಲಿ ಯಾರಾದರೂ ಎರಡನೇ 
ಲಗ್ನದ ಮಾತೆತ್ತಿದ ಕೂಡಲೆ ನವವಿಧುರನು ಸಿಟ್ಟಗೆದ್ದು ಆಕಾಶ ಪಾತಾಳ 
ವನ್ನು ಒಂದು ಮಾಡುವದರಲ್ಲಿ ಎಂದೂ ಕಡಿಮೆ ಮಾಡುವುದಿಲ್ಲ ದೇವನಿರ್ಮಿತ 
ವಾದ ವಿಸ್ಮೃತರೂಪಿ ಆವರಣದ ಪ್ರಭಾವದಿಂದ ವಿಧುರನಲ್ಲಿ ಸಾವಕಾಶ 
ವಾಗಿ ಪರಿವರ್ತನವಾಗಹತ್ತುತ್ತದೆ. ಹೊರಗಿನಿಂದ ಮನೆಗೆ ಬಂದಕೂಡಲೆ 
ಮನೆಯು ಭಣಗುಟ್ಟುತ್ತದೆ. ಎಲ್ಲಿ ನೋಡಿದಲ್ಲಿ ಔಿದಾಸೀನ್ಯವು ಕಂಡು 
ಬರುತ್ತದೆ. 
ಹೊರಗಿನಿಂದ ನೀರಡಿಸಿ ಮನೆಗೆ ಬಂದರೆ ಒಂದು ಪಾತ್ರೆ ನೀರು ಕೊಡು 
ವವರು ಸಹ ಯಾರಿಲ್ಲೆಂಬುದು ಎಂಥ ದುರ್ದೈವವು. ತನ್ನ ಚಿಕ್ಕಮಕ್ಕಳನ್ನು 
ನೋಡಿ ಹೊಟ್ಟೆಯಲ್ಲಿ ಬೆಂಕಿಯನ್ನು ಹಚ್ಚಿದಂತಾಗುತ್ತದೆ ವಿಧುರನ ಮನಃ 
ಸ್ಥಿತಿಯನ್ನು ಕಂಡುಹಿಡಿದು ಅನನ ಹಿತಚಿಂತಕತವು ಒಳ್ಳೇ ಜೋರಿನಿಂವ ಉಪ 
ದೇಶ ಪ್ರಾರಂಭ ಮಾಡುತ್ತಾರೆ ಗೃಹಲಕ್ಷ್ಮಿಯಿಲ್ಲದ ಗೃಹದ ಭಯಾನಕ 
ಚಿತ್ರವಿಟ್ಟು, ಐತಿಹಾಸಿಕ ಕಾಲದ ಓರ್ವ ವಿಧುರನು ಹೇಗೆ ದುರ್ಮಾರ್ಗಕ್ಕೆ 
ಹತ್ತಿದನೆಂಬುದನ್ಳು ವೇಳೆ ಅವೇಳೆಯಲ್ಲಿ ಹೇಳುವದರಲ್ಲಿ ನನವಿಧುರನ ಬಂಧು 
ಬಳಗದವರಿಗೂ ಮಿತ್ರರಿಗೂ ಒಂದು ತಾಮಸಿಕ ಅನಂದವನಿಸುತ್ತದೆ. ಇವೆಲ್ಲ
ಸಂಗತಿಗಳನ್ನು ಕೇಳಿ ವಿಧುರನ ಅಂತಃಕರುಣ ಮತ್ತು ಮಿದುಳು ಕಿಂಚಿತ್‌ 
ಮೆತ್ತಗಾಗುತ್ತದೆ. ಇಂಥ ಸಮಯದಲ್ಲಿ ವಿಧುರನ ಇಷ್ಟ ಮಿತ್ರರಿಗೆ ವಿಧು 
ರನು ತರುಣ ಕಾಣಿಸುತ್ತಾನೆ. ಅವನ ವಯಸ್ಸಿನಲ್ಲಿ ಹತ್ತು ಹದಿನೈದು 
ವರುಷಗಳು ಕಳಚಿ ಕೆಳಗೆ ಬೀಳುತ್ತವೆ. ವಿಧುರನ ವಯಸ್ಸು ೪೦-೫೦ ಆಗಿ 
ದರೂ ಅವನ ಕಿವಿಗೆ ಬೀಳದಂತೆ ಅನನು ೩೦ ವರುಷದವನಿದ್ದಾನೆಂಬ ವಿಧಾನ 
ವನ್ನು ಪುನಃಪುನಃ ಮಾಡುವದರಿಂದ ತಾನು ನಿಜವಾಗಿಯೂ ೩೦ ವರುಷದವ 
ನಿದ್ದೇನೆಂದು ಅವನಿಗೆ ಅಸಿಸಹತ್ತುತ್ತದೆ. ಇಷ್ಟಾದಮೇಲೆ ವಿಧುರ ಮಹಾ 
ರಾಜನು (ಮಹಾಭಾರತದ ವಿಧಾನದಲ್ಲಿ) ಮತ್ತೊಂದು ಮೆಟ್ಟಿಲನ್ನು ಏರು 
ತ್ತಾನೆ. ಎಂದಾದರೊಮ್ಮೆ ಅಪ್ಪಿತಪ್ಪಿಯಾಗಲಿ ಇಲ್ಲವೆ ಬುದ್ಧಿ ಪೂರ್ವಕ 
ವಾಗಲಿ ಆತನು ತನ್ನ ಮೋರೆಯನ್ನು ಕನ್ನಡಿಯಲ್ಲಿ ನೋಡುವನು. ಆಗ 
ಕನ್ನಡಿಯಲ್ಲಿ ಜೊಂಡಿಗದ ಮೀಸೆಯಂತೆ ಉದವಾಗಿ ಬೆಳೆದ, ನಡುನಡುವೆ 
ಬೆಳ್ಳಿಯ ಬಣ್ಣದಿಂದ ವಿಭೂಷಿತವಾದ ಮೀಸೆಯಿಂದ ವಿದ್ರೂಪವಾದ ಅವಡೊ 
ತ್ತಿದ ಮೋರೆ ಕಾಣಿಸುವದು ಸಹಜವಿದೆ. ಎಲ್ಲರೂ ತರುಣನೆಂದೆನ್ನುತ್ತಿರು 
ವಾಗ ಬಾಡಿದ ಮುಖಮುದ್ರೆಯ ಮೂಲಕ ಮುಪ್ಪಿನತನದ ಡಂಗುರ ಸಾರು 
ವದು, ಆತನಿಗೆ ಅಸಹೃವೆನಿಸುತ್ತದೆ. ಆಮೇಲೆ ಕೇವಲ ಲೌಕಿಕರ ಅಭಿ 
ಪ್ರಾಯ ಸತ್ಯ ಮಾಡಿ ತೋರಿಸುವದಕ್ಕೋಸ್ಟರ ವಿಧುರ ಮನುಷ್ಯನು ತರುಣ 
ನಾಗಲು ಧಡಪಡಿಸುವನು. ಬಿಳಿಗೂದಲುಗಳ ಸಂಖ್ಯೆ ಕಡಿಮೆ ಇದ್ದರೆ 
ಅಷ್ಟು ಕೂದಲುಗಳನ್ನು ತೆಗೆದು ಮೀಸೆಯನ್ನು ಒಳಿತಾಗಿ ಕತ್ತರಿಸಿ, ತಲೆಯ 
ಮೇಲಿನ ಕೂದಲುಗಳನ್ನು ಬೆಳಿಯಿಸಿ ತಾರುಣ್ಯದ ಸೋಗನ್ನು ಮಾಡಲು 
ವಿಧುರನು ಪ್ರವೃತ್ತನಾಗುತ್ತಾನೆ. ಆದರೆ ಬೆಳ್ಳಿಯ ಕೂದಲುಗಳು ಮಿತಿ 
ಮೀರಿದ್ದರೆ ಕತ್ತಿಯ ಒಂದು ಎಳೆತದಿಂದ ಮೀಸೆಯ ಗುಂಜನ್ನು ತೆಗೆ 
ದೊಗೆದು, ತನ್ನ ವಯಸ್ಸಿನಲ್ಲಿ ೨೦ ವರ್ಷ ಕಡಿಮೆ ಮಾಡಿಕೊಳ್ಳಲು 
ವಿಧುರನು ಪ್ರಯತ್ನಿಸುವನು. ಮೀಸೆಗಳು ಮಾಯೆವಾದವೆಂದರೆ ವಿಧುರ 
ಮಣಿಯು ತೀವ್ರವೇ ವಿನಾಹಬದ್ಧ ನಾಗುವನೆಂದು ನಿರಾತಂಕಶವಾಗಿ ತಿಳಿದು 
ಕೊಳ್ಳ ಬೇಕು. ಈ ವಿವಾಹವನ್ನು ಆತನು ತನ್ನ ಅನುಕೂಲ ಅನಾನುಕೂಲತೆ 
ಗಾಗಿ ಮಾಡಿಕೊಳ್ಳುವನೆಂದು ಯಾರೂ ತಿಳಿಯಕೂಡದು. ಯಾಕಂದರೆ 
ವಿಧುರರ ವಿವಾಹದಲ್ಲಿ ಯಾವಾಗಲೂ ಪರೋಪಕಾರಬುದ್ದಿಯಿರುತ್ತದೆ.
ಕೇವಲ ತನ್ನ ವೃದ್ಧ ಮಾತೋಶ್ರೀಯ ಸೇವಾಶುಶ್ರೂಷೆಗಾಗಲಿ, ಇಲ್ಲವೆ ತನ್ನ 
ಕೂಸು ಕುನ್ನಿಗಳ ಪಾಲನ ವೋಷಣೆಗಾಗಿಯಾಗಲಿ ಎರಡನೆಯ ಲಗ್ನವನ್ನು 
ಮಾಡಿಕೊಳ್ಳುವರಿರುತ್ತಾರೆ. ತನ್ನ ಸ್ಪಂತದ ಸುಖೋಪಭೋಗಕ್ಕಾಗಿ ಲಗ್ನ 
ಮಾಡಿಕೊಳ್ಳುತ್ತೀನೆಂದು ಹೇಳುವ ವಿಧುರರು ಅವರೂಪ 
ಮೇಲಿನ ಎಲ್ಲ ವಿವೇಚನೆಯಿಂದ ವಿಧುರಾವಸ್ಥೆಯಲ್ಲಿ ನಿರಂತರವಾಗಿ 
ಇರುವದು ಎಷ್ಟು ಕರಿಣವಾಗಿದೆಯಂಬದು ಕಂಡುಬರುತ್ತದೆ. ಅದಕ್ಕಾಗಿಯೇ 
ಯಾವನೊಬ್ಬ ವಿಧುರನನ್ನು ವಿಧುರ ಮಂಡಳದ ನಿರಂತರ ಸಭಾಸದನನ್ನು 
ಮಾಡಿಕೊಳ್ಳುವ ಪೂರ್ವದಲ್ಲಿ ಆತನನ್ನು ಕನಿಷ್ಟ ಪಕ್ಷಕ್ಕೆ ಒಂದು ವರುಷದ 
ವರೆಗಾದರೂ ಕೇವಲ ಉಮೇದವಾರರ ಪಟ್ಟಿಯಲ್ಲಿಯೇ ಇಡುನದು 
ಸಯುಕ್ತಿಕವಾಗುವದು. ಮೇಲಿನ ಎಲ್ಲ ಮೋಹಪರಂಪರೆಯಿಂದ ಮುಕ್ತ 
ನಾಗಿ ಒಂದು ವರ್ಷದ ವರೆಗೆ ತನ್ನ ಅವಸ್ಥೆಯನ್ನು ನಿರಂತರವಾಗಿಟ್ಟರೆ 
ಬಳಿಕ ಆತನನ್ನು ಸಭಾಸದನನ್ನಾಗಿ ಮಾಡಿಕೊಳ್ಳುವದು ಯೋಗ್ಯವಾಗುವದು. 
ಉಮೇದವಾರಿಯ ಅನಧಿಯಲ್ಲಿಯೂ ಈತನನ್ನು ಸ್ಪತಂತ್ರವಾಗಿಡುವ 
ಯೋಗ್ಯವಲ್ಲ. ಉಮೇದವಾರರ ಪಟ್ಟಿಯಲ್ಲಿ ಆತನ ಹೆಸರನ್ನು ಹಚ್ಚಿಕೊಂಡು 
ನಿತೃನೇಮಗಳ ಸಂಬಂಧವಾಗಿ ಕೆಲವು ನೇಮಗಳನ್ನು ಹಾಕಿಕೊಡಬೇಕು. 
ಕೇವಲ ದಿಗ್ದರ್ಶನವೆಂದು ಅವುಗಳಲ್ಲಿಯ ಒಂದೆರಡನ್ನು ಇಲ್ಲಿ ಉಲ್ಲೇಖಿ 
ಸುವೆವು, 
(೧) ಎರಡನೇ ಅಥವಾ ಮೂರನೆಯ ಲಗ್ನ ಮಾಡಿಕೊಂಡು ಕೂಡಾ 
ಇಂತಿಂಥಹ ಮನುಪೃನು ಸುಖದಿಂದ ಸಂಸಾರ ಮಾಡುತ್ತಿರುನನು ಎಂಬ 
ವಿಷಯಗಳ ಸತ್ಛ ಅಸತ್ಯ ಸುದ್ದಿಗಳನ್ನು ಯಾರಾದರೂ ಹೇಳಿದರೆ ವಿಧುರನ 
ಅವುಗಳಿಗೆ ಕಿವಿಗೊಡಬಾರದು. ಅಧವಾ ಕೇಳಿದರೂ ಅವನ್ನು ನಂಬಬಾರದು. 
(೨) ವಿಧುರನು ತರುಣನಂತೆ ಕಾಣಸಿಕೊಳ್ಳುನ ಯತ್ನವನ್ನು 
ಎಂದೂ ಮಾಡಕೂಡದು. ಇಷ್ಟೇ ಅಲ್ಲ ವೃದ್ದನಂತೆ ತೋರಿಸಿಕೊಳ್ಳುವ 
ಯತ್ನವನ್ನು ಮಾಡಬೇಕು ಅಂದರೆ ಪುನಃ ಲಗ್ನವಾಗಲು ಆಗ್ರಹ ಮಾಡುವ 
ಒಂದು ಆಧಾರವು ಕಡಿಮೆಯಾಗುತ್ತದೆ. ಇದಲ್ಲದೆ ವಿಧುರ ಸಂಸ್ಥೆ ಯಿಂದ 
ಕೆಲವೊಂದು ವ್ಯವಸ್ಥೆ ಮಾಡಬೇಕಾಗುತ್ತದೆ.
(೩) ವಿದುರನಿಗೆ ನಿರುದ್ಯೋಗಿಯಾಗಿ ಕೂಡಲು ತುಸು ಕೂಡ 
ಅವಕಾಶ ಕೊಡಕೂಡದು. ಹಗಲಿರುಳು ಅತನ ಮನಸ್ಸು ಬುದ್ಧಿಯು 
ಯಾವದೇ ವೃವಸಾಯದಲ್ಲಿ ತೊಡಕದಿದ್ದರೆ ಗೂಳಿಯಂತೆ ಇರುವ ಆತನ 
ಚಿತ್ತವು ಅವ್ಯಸ್ಥಿತವಾಗುತ್ತದೆ. ಆದುದರಿಂದ ವಿಧುರನನ್ನು ಯಾವದೊಂದು 
ಕಾರ್ಯದಲ್ಲಿ ತೊಡಕಿಸಿ, ಆತನಿಗೆ ಆತನ ವಿಧುರಾವಸ್ಥೆಯ ವಿಸ್ಮರಣೆಯನ್ನು 
ಮಾಡುವದು ವಿಧುರ ಮಂಡಲದ ಕರ್ತವ್ಯವಿದೆ. 
(೪) ಎರಡನೆಯ ಮಾತು ತುಸು ಖರ್ಚಿನದಿದೆ. ಬಾಲ ವಿಧವೆಯರಿ 
ಗಾಗಲಿ, ವೃದ್ಧ ವಿಧವೆಯರಿಗಾಗಲೀ, ಶಿಕ್ಷಣವು ದೂರೆತು ತನ್ಮುಖವಾಗಿ 
ಅವರಿಗೆ ಸಮಾಧಾನದಿಂದ ಕಾಲಕಳೆಯಲು ಬರೆಬೇಕೆಂದು ತಿಳಿದು ಅವರ 
ದುಸ್ಥಿತಿಯು ವಿಸ್ಮರಣೆವುಂಟಾಗಬೇಕಾಗಬೇಕಂದು ಅಲ್ಲಲ್ಲಿ ವಿಧವಾಶ್ರಮ 
ಗಳನ್ನು ಅನಾಥ ಬಾಲಿಕಾಶ್ರಮಗಳನ್ನು ಸ್ಥಾಪಿಸಲಾಗಿದೆಯಷ್ಟೆ! ಇದೇ ಪಂಕ್ತಿ 
ಯನ್ನನುಸರಿಸಿ ಮತ್ತು ಇದೇ ಧ್ಯೇಯದಿಂದ ತಾಣತಾಣಗಳಲ್ಲಿ ನಿರಾಶ್ರಿತ 
ವಿಧುರಾಶ್ರಮಗಳನ್ನು ಸ್ಥಾಪಿಸಬೇಕೆಂದು ನಮ್ಮ ಸೂಚನೆಯಿದೆ. 
ಈ ಆಶ್ರಮವು ಶಕ್ಯವಾದಷ್ಟು ಕೈಲಾದ ಮಟ್ಟಿಗೆ ವಿಧವಾಶ್ರಮಗಳಿಂದ 
ದೂರವಾಗಿರಬೇಕಂದು ಯಾವ ಸಮಂಜಸ ಪುರುಷನಿಗಾದರೂ ಹೊಳೆಯದೆ 
ಇರದು. ಅದೇ ಪ್ರಕಾರಾ ಪ್ರತಿಯೊಂದು ಜಿಲ್ಲೆಯಲ್ಲಿ ಮುದುಕ ವರಗಳಿಗೆ 
ಕನ್ಯಾದಾನ ಮಾಡಿಕೊಟ್ಟು ಸಂಪತ್ತಿಯನ್ನು ದೊರಕಿಸುವ ವಿಷಯದಲ್ಲಿ 
ಪ್ರಸಿದ್ಧಿಯನ್ನು ಪಡೆದಿರುತ್ತದೆ. ಈ ಊರುಗಳ ಸಂಪರ್ಕವು ವಿಧುರಾಶ್ರಮ 
ಗಳಿಗೆ ಆಗಬಾರದಂತೆ ಎಚ್ಚರಪಡುವದು ಅವಶ್ಯವು. ಹೀಗಾದರೆಯೇ ಈ 
ಆಶ್ರಮಗಳು ಗಟ್ಟಿ ಯಾಗಿ ಉಳಿಯುವವು.   
ಮೇಲಿನ ಸೂಚನೆಗಳನ್ನು ಲಕ್ಷದಲ್ಲಿಟ್ಟು ಕೊಂಡು ಕೆಲಸ ಮಾಹಹತ್ತಿ 
ದರೆ, ವಿಧುರ ಮಂಡಳದ ಉತ್ಕರ್ಷವಾಗಲು ಬಹಳ ಅನಕಾಶವು ಬೇಕಾಗುವ 
ದಿಲ್ಲ. ನಮ್ಮ ಕರ್ನಾಟಕದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, 
ಪ್ರಚಾರಕ, ಪ್ರಸಾರಕ, ಕೋಶಾಧ್ಯಕ್ಷ, ಮೊದಲಾದ ಮಂಡಳದ ಹೊಣೆ 
ಗಾರಿಕೆಯ ಕೆಲಸವನ್ನು ಕೈಕೊಳ್ಳಲು ಸಾರ್ವಜನಿಕ ಕೆಲಸಕ್ಕೆ ಆತ್ಮಾರ್ಪಣ 
ಮಾಡಿದ ಅನೃಕ ವಿಧುರ ಮಣಿಗಳು ಸಿಕ್ಳುವರು. ಆದರೆ ಈ ಸತ್ಕಾರ್ಯವು 
ಆರಂಭವಾಗಲಿಕ್ಕೆ ಯಾರಾದರೂ ಮುಂದಾಳುಗಳ ಕೈನೆರವು ಅವಶ್ಯವಾಗಿದೆ. 
ಅನೇಕ ಕಾರ್ಯ ಬಾಹುಲ್ಯದ ಮೂಲಕ ಲೋಕಮಾನ್ಯರಿಗೆ ಸವಡು 
ಸಿಕ್ಕಲಿಲ್ಲ. ಇಲ್ಲದಿದ್ದರೆ ಮಂಡಾಲೆಯಿಂದ ತಿರುಗಿ ಬಂದ ಬಳಿಕ ಒಂದೇ 
ಒಂದು ವರ್ಷದಲ್ಲಿ ಇಂತಹ ಮಂಡಲವನ್ನು ಸ್ಥಾಪಿಸಿಬಿಡುತ್ತಿದ್ದರು. ಅವರು 
ಅನುಯಾಯಿಗಳ ಪೈಕಿ ಅನೇಕೆ ಜನರು ವಿಧುರರಿದ್ದರೂ ಲೋಕಮಾನ್ಯ 
ರಲ್ಲಿದ್ದ ಮುಂಬರಿಯು ಇವರಲ್ಲಿಲ್ಲದ್ದರಿಂದ ಈ ಕಾರ್ಯವು ಹಾಗೆಯೇ 
ಉಳಿದು ಹೋಗಿದೆ. ಇರಲಿ, ಈಗ ಮಹಾತ್ಮಾ ಗಾಂಧಿಯವರು ವಿಲಾಯತಿಗೆ 
ಹೋಗಿದ್ದಾರೆ. ಅವರು ಮರಳಿ ಬಂದರೆಂದರೆ ಸುಮ್ಮನೆ ಏನಾದರೂ ಗಲಭೆ 
ಎಬ್ಬಿ ಸುತ್ತಾರೆ. ಅವರಿಲ್ಲದ ಈ ವೇಳೆಯಲ್ಲಿ ಜೋರಿನಿಂದ ಸಾಹಸ ಮಾಡಿದರೆ 
ಈ ಮಂಡಳವು ಸಹಜವಾಗಿ ಸ್ಥಾಪಿತಬಾಗುವುದೆಂದು ನಮಗೆ ತುಂಬಾ 
ನಂಬಿಗೆಯಾಗಿದೆ. 
ಪ್ರಸಿದ್ಧಿ ಕಾಲ ಓರ್ವ ವಿಧುರ. 
  ೨೯ - ೧೧ - ೩೧
 ========================================
  ಸ್ವಾಗತಾಧ್ಯಕ್ಷರ ಭಾಷಣ   
ದಾದಾಸಾಹೇಬ, ತಾತ್ಯಾಸಾಹೇಬ, ಕಾಕಾಸಾಹೇಬ, ಬಾಪೂಸಾಹೇಬ 
ಅಣ್ಣಾಸಾಹೇಬ ಹಾಗೂ ಪ್ರತಿನಿಧಿ ಬಂಧುಭಗಿನಿಯರೆ, ಬೆಳಗಾವಿ ಶಹರದ 
ಮರಾಠಿ ಮಾತನಾಡುವವರ ಪರವಾಗಿ ಅತ್ಯಾನಂದದಿಂದ ಇಂದು ತಮ್ಮೆಲ್ಲರಿಗೆ 
ನಾನು ಸ್ವಾಗತ ಬಯಸುತ್ತೇನೆ. ದೂರದೂರದ ಪ್ರವಾಸ ಕೈಕೊಂಡು 
ನಮ್ಮ ಗ್ರಾಮಕ್ಕೆ ಬಂದದ್ದಕ್ಳಾಗಿ ತಮಗೆ ಎಷ್ಟು ಆಭಾರ ಸಲ್ಲಿಸಿದರೂ 
ಕಡಮೆಯೇ. ಯಾನವ ಪ್ರಾಂಶದ ಬಹುಜನ ಸಮಾಜಕ್ಕೆ ತಮ್ಮ ಸಾಹಿತ್ಯದ
ಪರಿಚಯವಿಲ್ಲವೊ ಹಾಗು ಎಲ್ಲಿ ತಮ್ಮ ಭಾಷೆಯನ್ನು ಮಾತನಾಡುವವರ 
ಸಂಖ್ಯೆಕೂಡ ತೀರ ಕಡಿಮುಯೂಗಿದೆಯೊ ಅಂಥ ಅಪರಿಚಿತ ಪ್ರಾಂತಕ್ಕೆ ಈ 
ಪರಿಷತ್ತಿನ ನಿಮಿತ್ತವಾಗಿ ತಾವು ದರ್ಶನಲಾಭವನ್ನಿತ್ತದ್ದು ಮಹದ್ಚಾಗ್ಯ 
ವೆಂದೇ ಭಾವಿಸಬೇಕು. ಮರಾಠೀ ಸಾಹಿತ್ಛ ಪರಿಷತ್ತಿನ ನಿಮಿತ್ತವಾಗಿ 
ಮಹಾರಾಷ್ಟ್ರೇತರ ಪ್ರಾಂತಕ್ಕೆ ತಮಗೆ ಆಗಾಗ್ಗೆ ಹೋಗುವ ಪ್ರಸಂಗ ಬರು 
ವದು ಸಹಜ. ಅಲ್ಲಿಯ ಭಾಷಾಭಿನ್ನತಿಯ ಅಜ್ಞಾನದ ಮೂಲಕ ಒದಗುವ 
ಅನನುಕೂಲಗಳನ್ನು ಸಹಿಸುವ ರೂಢಿ ತಮಗಿದ್ದದ್ದು ಇದರಲ್ಲೊಂದು ಸಮಾ 
ಧಾನದ ಸಂಗತಿ. ಮಿರಜಿಯ ಈಚೆಗೆ ಬಂದಾಗ ಈ ತ್ರಾಸು, ಹೆಚ್ಚಾಗಿ ತಮ್ಮ 
ಅನುಭನಕ್ಕೆ ಬಂದಿರಲು ಸಾಕು. ಆದರೆ ದಯಾಳುವಾದ ಇಂಗ್ಲಿಷ್‌ ಸರಕಾರದ
ಪುಣ್ಯದಿಂದ ಹಿಂದುಸ್ತಾನದ ಎಲ್ಲ ಭಾಷೆಗಳಲ್ಲಿಯೂ ಚಹಕ್ಕ ಚಹ ಎಂದೇ 
ಅನ್ನುತ್ತಿರುವದರಿಂದ ಒಳಗಿನ ತನ್ಮು ಚಹದ ಚಟ ಹಿಂಗಿಸಲು ತಮಗೆ ತ್ರಾಸ 
ಆಗಿರಲಾರದಿಂದು ನಾನು ಅಶಿಸುತ್ತೇನೆ. ಬಂದು ಭಗಿನಿಯರೆ, ಯಾವಾಗಲೂ 
ಕರ್ಣಕಟುವಾದ ಕನ್ನಡ ಭಾಷಣಗಳನ್ನೇ ಕೇಳಿ ಕೇಳಿ ಬೇಸರಗೊಂಡ ನಮ್ಮ 
ಕಿವಿಗಳಿಗೆ, ತಮ್ಮ ಶುಭಾಗಮನದಿಂದ, ಉಚ್ಚಾರಿತ ಹಾಗು ಅನುಚ್ಚಾರಿತ 
ಅನುಸ್ವಾರಗಳಿಂದ ತುಂಬಿದ ಮರಾಠೀ ಭಾಷಣಗಳನ್ನು ಕೇಳುವ ಅಮೂಲ್ಯ 
ಸಂಧಿ ದೊರೆತೆದ್ದು ನಮ್ಮ ಸುದೈವವೆಂದೇ ಹೇಳಬೇಕು.

ಬೆಳಗಾವಿ ಶಹರ 
ಈ್ರ ಪಟ್ಟಣವನ್ನು ಬಹಳ ಪ್ರಾಚೀನಕಾಲದಲ್ಲಿ ಜೈನಧರ್ಮದ ರಾಜರು 
ಸ್ಥಾಪಿಸಿದರೆಂದು ಹೇಳುತ್ತಾರೆ. ಆದರೆ ಇದರ ಉಲ್ಲೇಖ ಕ್ರಿ. ಶ. ೧೧೬೦ರ 
ಗುಲ್ಲಹಳ್ಳಿಯ ಶಿಲಾಲೇಖದಲ್ಲಿ ದೊರೆಯುತ್ತದೆ. ವೇಲುಗ್ರಾಮ ಇದು ೭೦ 
ಹಳ್ಳಿಯ ಫಿರ್ಕಾದ ಒಂದು ಮುಖ್ಯ ಸ್ಥಳವೆಂದು ಅದರಲ್ಲಿ ಕಾಣಸಲಾ 
ಗಿದೆ. ಆ ಕಾಲಕ್ಕೆ ಈ ಪಟ್ಟಣವು. ಕಲಾಣದ ಚಾಲುಕ್ಯರ ಮಾಂಡಲೀಕ 
ರಾದ ಕದಂಬರಾಜರ ವಶದಲ್ಲಿತ್ತು. ಮುಂದೆ ಇದು ಶಟ್ಟಿರಾಜರವಶಕ್ಕೆ 
ಬಂದಮೇಲೆ ಸವದತ್ತಿಯನ್ನು ಬಿಟ್ಟು ಬೆಳಗಾವಿಯನ್ನೇ ಅವರು ತಮ್ಮ ರಾಜ 
ಧಾನಿಯನ್ನಾಗಿ ಮಾಡಿಕೊಂಡರು. ಆಮೇಲೆ ದೇವಗಿರಿಯೆ ಯಾದವರು 
ಇದನ್ನು ತಮ್ಹ ಸ್ಟಾಧೀನದಲ್ಲಿಟ್ಟು,ಕೊಂಡಿದ್ದರು. ಇವರ ತರುವಾಯ ಕೆಲವು 
ಕಾಲದ ಅದರ ನಮಗೆ ಅಜ್ಞಾತವಾಗಿದೆ. ಮುಂದೆ ಕ್ರಿ. ಶ. ೧೪೭೧ 
ರಲ್ಲಿ ಬಾದಶಹರು ವಿಜಯನಗರದ ಅರಸರಿಂದ ಈ ಶಹೆರವನ್ನು 
ವಶಪಡಿಸಿಕೊಂದರೆಂದು ಫರಿಸ್ತನು ಹೇಳುತ್ತಾನೆ. ವಿಜಾಪುರದ ಸರದಾರನಾದ
ಅಸದಖಾನನು ಕಟ್ಟಿಸಿದ ಬೆಳಗಾವಿ ಕೋಟೆಯಲ್ಲಿರುವ ಮಸೀದಿಯಮೇಲೆ 
೧೫೧೯ನೆಯ ಇಸ್ವಿಯನ್ನು ಹಾಕಿದೆ. ಇದರ ಮೇಲಿಂದ ಬೆಳಗಾಂವಿ ಶಹರವು 
ಪ್ರಾಚೀನವೂ ಇತಿಹಾಸ ಪ್ರಸಿದ್ಧವೂ ಇರುವದೆಂಬದು ಸ್ಪಷ್ಟವಾಗುತ್ತದೆ. 
ಆದರೆ ಬೆಳಗಾಂವ ಎಂಬ ಹೆಸರು ಬಂದದ್ದು ಹೇಗೆ? ಈ ವಿಷಯದಲ್ಲಿ ಅನೇ 
ಕರು ಅನೇಕ ವಿಧವಾಗಿ ತರ್ಕಿಸುತ್ತಾರೆ. ಯಾದವನ ಮನೆತನದಲ್ಲಿ ವೇಣು 
ಎಂಬ ರಾಜನಿದ್ದ. ಅವನಿಂದಲೇ ಇದಕ್ಕೆ ವೇಣುಗ್ರಾಮ ಎಂಬ ಹೆಸರು ಬಂದು, 
ಅದೇ ಅಪಭ್ರಂಶವಾಗಿ ಈಗಿನ ಹೆಸರು ಬಂತು ಎಂದು ಕೆಲವರು ಹೇಳುತ್ತಾರೆ. 
ಇಲ್ಲಿಸುತ್ತುಮುತ್ತು ಬಿದಿರಿನ ಪೊದರುಗಳು ಅನೇಕವಾಗಿದ್ದು ಅದರ ಮೂಲಕ 
ವೇಣುಗ್ರಾಮು ಎಂಬ ಹೆಸರು ಬಂದು ಅದೀ ಬರಬರುತ್ತ, ವೇಲುಗ್ರಾಮ, 
ಬೇಲುಗ್ರಾಮ, ಬೆಲುಗಾಮ, ಬೆಳಗಾಂವ ಹೀಗೆ ಅಪಭ್ರಂಶ ರೂಪ ತಾಳಿರ 
ಬೇಕೆಂದು ಕೆಲವರ ಮತ. ಆದರೆ ಈ ಏರಡೂ ಅಭಿವ್ರಾಯಗಳು ನಮ್ಮ ಅಭಿ 
ಪ್ರಾಯಕ್ಕೆ ಹೊಂದುವದಿಲ್ಲ. ನನ್ಮು ಅಭಿಪ್ರಾಯದ ಪ್ರಕಾರ ಬೆಲಗಾಮ 
ಇದು ಮಾರಾಠಿ ಶಬ್ದ. ಮುರವತ್ತು ಇಲ್ಲದವ ಬೇಮುರ್ದತ್‌, ಜಬಾಬದಾರಿ 
ಇಲ್ಲದನ ಬೇಜಬಾಬದಾರ ಇವು ಯಾವ ಪ್ರಕಾರ ಉರ್ದು ಸಂಮಿಶ್ರ ಮರಾಠಿ
ಯಾಗಿವೆಯೋ ಅದೇ ಪ್ರಕಾರೆ ಯಾವ ಊರೆ ಜನರಿಗೆ ಬಂಧನ ಅಥವಾ 
ಲಗಾಮು ಇಲ್ಲವೋ ಆ ಊರು ಬೇಲಗಾಮ ಎಂದು ಇರಬೇಕು. ಇದೇ 
ಮುಂದ ಅಪಭ್ರ್ರಂಶವಾಗಿ ಬೆಳಗಾಂವ ಎಂದು ಆಗಿರಬೇಕು. ಇನ್ಟೊಂದು 
ಅರ್ಥದಿಂದಲೂ ಈ ಹೆಸರು ಈ ಊರಿಗೆ ಒಪ್ಪುತ್ತದೆ. ನಾವು ಎಷ್ಟೋ 
ತಲೆಗಳಿಂದ ಈ ಊರಲ್ಲಿದ್ದರೂ ಭಾಷೆ ಮತ್ತು ವಾಙ್ಮಯದ ವಿಷಯದಲ್ಲಿ 
ಪೂರ ದುರ್ಲಕ್ಷವುಳ್ಳವರಾಗಿದ್ದೇವೆ. . ಆ ಕಾರಣದಿಂದಲೂ ಇದಕ್ಕೆ ಬಂದ 
ಹೆಸರು ಯಥಾರ್ಥವಾದದ್ದೆಂದೇ ಹೇಳಬಹುದು. ಚಾಲುಕ್ಕ, ಕದಂಬ, 
ರಟ್ಟ ಅಥವಾ ವಿಜಯನಗರ ಮುಂತಾದ ರಾಜರು ಕನ್ನಡಿಗರಾಗಿದ್ದು, ಮತ್ತು 
ಕ್ರಿ, ಶ. ೧೧೬೦ರಲ್ಲಿ ದಕ್ಷಿಣದಲ್ಲಿ ಮುಸಲ್ಮಾನರ ಪ್ರವೇಶವೂ ಇಲ್ಲದಿರುವಾಗ, 
ಈ ಉರ್ದು-ಮರಾರಿ ಹೆಸರು ಈ ಊರಿಗೆ ಬಂದದ್ದು ಹೇಗೆ ಎಂದು ಕೆಲವರು 
ಸಂಶಯಪಡಬಹುದು. ಆದರೆ 'ಮಧ್ಯಯುಗೀನ ಭಾರತ'ಕಾರರ ಪ್ರಮಾಣ 
ಸರಣಿಯಮೇರೆಗೆ ಹಿಂದುಸ್ಥಾನದ ಯಾವ ರಾಜರನ್ನೂ ಮರಾರಿರಾಜರನ್ನಾಗಿ 
ಮಾಡಲು ಬರುತ್ತದೆ. ಆ ರಾಜರ ಶಿಲಾಲೇಖಗಳ ಭಾಷೆ ಹಾಗು ಲಿಪಿ 
ಕನ್ನಡವಿದ್ದರೂ ಅವನ್ನು ಕೊರೆದ ಶಿಲ್ಪಿಗರು ಕನ್ನಡಿಗರಿದ್ದಿರಬಹುದಾಗಲಿ, 
ರಾಜರು ಮರಾಠಿಗರೇ ಇದ್ದರೆಂದು ಹೇಳಬೇಕಾಗುತ್ತಬೆ. ಮೇಲಿನ ಈ ಎಲ್ಲ 
ವಿವೇಚನೆಯ ಮೇಲಿಂದ ಬೆಳಗಾವಿಯನ್ನು ಕರ್ನಾಟಕದಲ್ಲಿ ದೂಡುವದು 
ಎಷ್ಟೊಂದು ಅನ್ಯಾಯದ್ದೆಂಬದು ತಮಗೆ ತಿಳಿದು ಬರುವದು. ಇಂದಿನ ಈ 
ಸಾಹಿತೃ ಪರಿಷತ್ತು ಬೆಳಗಾವಿಯ ಇತಿಹಾಸದಲ್ಲಿಯೇ ಒಂದು ಮಹತ್ವದ 
ಸ್ಥಾನವನ್ನು ಪಡೆಯಬಹುದು. 
ತಮ್ಮಂಥ ಮಹಾ ಮಹಾ ಇತಿಹಾಸಕಾರರು,   ನಾಟಕಕಾರರು,
ವರ್ತಮಾನಪತ್ರಕಾರರು, ಮತ್ತು ಟೀಕಾಕಾರರು ಇಲ್ಲಿ 
ಸೇರಿರುವಾಗ ಅವರೆದುರಿನಲ್ಲಿ ಬೆಳಗಾವಿಯವರು ಮಾಡಿದ ಸಾಹಿತ್ಯ ಸೇವೆಯ 
ಉಲ್ಲೇಖ ಮಾಡುವದು ಧಾರ್ಷ್ಟ್ಯವಾಗಬಹುದು. ಆದರೂ ಕಾಲೇಜದಿಂದ 
ಸೂಟಿಯಲ್ಲಿ ಹಿರಿಯಣ್ಣ ಮನೆಗೆ ಬಂದಾಗ ಚಿಕ್ಕತಮ್ಮ ತನ್ನ ಸಾಹಸ 
ಕೃತ್ಛಗಳನ್ನೆಲ್ಲ ಬಣ್ಣಿಸಲು ಹೇಗೆ ಉತ್ಸುಕನಾಗಿರುವನೊ ಹಾಗೆ ನಾನು 
ಕೂಡ. ನಮ್ಮ ಸಾಹಿತ್ಯ ಸೇವೆಯನ್ನು ತಮ್ಮದುರಿಗೆ ಹೇಳಲು ಉದ್ಯಕ್ತ 

ಮಾತೃಭಾಷೆಯೊ ಭಾರ್ಯಾಭಾಷೆಯೊ? 
ನಮ್ಮ ದುರದೃಷ್ಟಕ್ಕೆ ನಮ್ಮ ಅನೇಕರ ಮಾತೃಭಾಷೆ ಕನ್ನಡವಾಗಿ 
ದ್ದರೂ ನಾವು ದೊಡ್ಡವರಾಗಿ ಶಾಲೆ ಕಾಲೇಜುಗಳನ್ನು ಸೇರುತ್ತಲೇ 
ತಾಯಿಯ ಪ್ರೀತಿಗೆ ಎರವಾದೆವು; ಮುಂದೆ ನಮ್ಮ ಸುದೈವದಿಂದ ಮರಾಠೀ 
ಮಾತನಾಡುವ ಹೆಂಡಂದಿರೇ ನಮಗೆ ದೊರೆತು, ಅವರ ಗೃಹಪ್ರವೇಶದ 
ಜೊತೆಗೆ ಮರಾಠಿಯದೂ ಗೃಹಪ್ರವೇಶವಾಯಿತು. ಅಂದಿನಿಂದ ಅಹೊರಾತ್ರಿ, 
ಹೆಂಡತಿಯ ಜತಿಗೇ ನಮಗೆ ಹೆಚ್ಚು ಸಂಬಂಧ ಬರುತ್ತಿರುವ ಮೂಲಕ ನಾವು
ಮಾತೃಭಾಷೆಗಿಂತ ಭಾರ್ಯಾಭಾಷೆಗೆ ವಿಶೇಷ ಮಹತ್ವ ಕೊಡುತ್ತ ಬಂದೆವು. 
ನಮ್ಮ ಭಾರ್ಯಾಭಾಷೆಯೇ ಮುಂದೆ ನಮ್ಮ ಮಕ್ಕಳ ಮಾತೃಭಾಷೆ ಆಯಿ 
ತೆಂಬದನ್ನು ತಮ್ಮಂಥ ಸುಜ್ಞರಿಗೆ ಒಡೆದು ಹೇಳುವ ಕಾರಣವಿಲ್ಲ. ಕೆಲ 
ವೊಂದು ಸಲ ನಮ್ಮ ಮನೆಯಲ್ಲಿ ಅತ್ತೆ-ಸೊಸಿಯರಲ್ಲಿ ಜಗಳವುಂಟಾದಾಗ 
ಮನೆಗೆ, ಕನ್ನಡ ಮಾರಾಠಿಯ ವಾದಕ್ಕೆ ಬಲಿಯಾದ ಸಭೆಯ ಕಳೆ ಬರುತ್ತದೆ. 
ಕೊನೆಗೆ ತಾಯಿ ಮುಪ್ಪಿನವಳಾದ್ದರಿಂದ ಭಾರ್ಯಾ ಭಾಷೆಯ ಮುಂದೆ 
ಮಾತೃಭಾವೆಯೆ ಆಟ ನಡಿಯದಂತಾಗುತ್ತದೆ. ನಮ್ಮಲ್ಲಿಯ ಅನೇಕರ 
ಮನೆಯಲ್ಲಿ ಶುಭಪ್ರಸಂಗದಲ್ಲಿಯಾದರೂ ಮರಾಠೀ ಭಾಷೆಯ ಉಚ್ಚಾರ   
ಘಟಿಸಲಿ ಎಂದು ನಮ್ಮ ಹೆಣ್ಣುಮಕ್ಕಳಿಗೆ ಗಂಡನ ಹೆಸರು ಹೇಳುವಾಗ     
ಮಾರಾಠೀ ಒಗಟಗಳನ್ನೇ ಹಾಕುವ ರೂಟಿಯನ್ನು ಹಚ್ಚಿದ್ದೇವೆ. 

ಸಮಾಜದಲ್ಲಿಯ ಸಾಹಿತ್ಯಸೇವೆ 
ಮನೆಯಲ್ಲಿಯ ಸಾಹಿತೃ ಸೇವೆಯ ವಿಚಾರ ಈಗ ಹೇಳಿದ್ದಾಯಿತು 
ಇನ್ನು ಸಾಮಾಜಿಕವಾಗಿ ನಾವು ಮರಾಠಿಭಾಷೆಯ ಸೇವೆಯನ್ನು ಯಾವ 
ರೀತಿಯಲ್ಲಿ ಮಾಡುತ್ತೇವೆಂಬುದನ್ನು ಸ್ವಲ್ಪದರಲ್ಲಿ ಹೇಳುತ್ತೇನೆ, ಕೆಲವು 
ಪ್ರಸಂಗದಲ್ಲಿ ನಿರ್ವಾಹವಿಲ್ಲದೆ ನಮಗೆ ಕನ್ನಡ ಮಾತನಾಡುವ ಅಗತ್ಯ 
ಬೀಳುತ್ತದೆ. ಆಗ ನಾವು ಮರಾಠೀ ಕ್ರಿಯಾಪದಗಳಿಗೆ ಕನ್ನಡ ಪ್ರತ್ಯಯ 
ಗಳನ್ನು ಹಚ್ಚಿ, ನಮ್ಮ ಭಾಷೆಯ ಪ್ರಭಾವ ಕನ್ನಡದ ಮೇಲೆ ಬೀಳುವಂತೆ 
ಮಾಡುತ್ತೇವೆ, ಕೋರ್ಟುಕಚೇರಿಗಳಲ್ಲಿ ಕೆಲಸ ಮಾಡುವ ನಮಲ್ಲಿ ಅನೇಕ
ರಿಗೆ ಮೇಲಿಂದ ಮೇಲೆ ಇಂಧ ಪ್ರಸಂಗಗಳು ಬರುತ್ತವೆ. ಆಗ ಕನ್ನಡ ಬರುವ 
ದಿಲ್ಲ ಎಂದು ಹೇಳುವದು ನಮಗೇ ಕೇಡು. ಯಾಕಂದರೆ, ವಕೀಲಿಯ ಸನದು 
ಪಡೆಯುವಾಗ ಓದಲು,  ಮಾತನಾಡಲು ಕನ್ನಡ ಚೆನ್ನಾಗಿ ಬರುತ್ತದೆ 
ಎಂದು ಹೇಳಲೇಬೇಕಾಗುತ್ತದೆ. ನಮ್ಮ ಉದ್ಭೋಗದ ಮುಖಾಂತರ ಕನ್ನಡ 
ವನ್ನು ಹೆಚ್ಚು ಸುಸಂಸ್ಕೃತವಾಗಿ ಮಾಡುವ ನಮ್ಮ ಪ್ರಯತ್ನವಂತೂ ಹೀಗೆ 
ನಡೆದೇ ಇದೆ. ಇಂಗ್ಲೀಷಿನಂತೆ ಕನ್ನಡದಲ್ಲಿಯೂ ಪುರುಷ ಪುಲ್ಲಿಂಗ ಸ್ತ್ರೀ 
ಸ್ತ್ರೀಲಿಂಗ ಮಿಕ್ಕವೆಲ್ಲ ನಪುಂಸಕಲಿಂಗ ಎಂದು ನಿಯಮವಿದೆ. ಆದರೆ ನಾವು 
ಕನ್ನಡ ಮಾತನಾಡುವಾಗ ಮರಾಠಿಯೊಳಗಿನ ಲಿಂಗಭೇದಗಳನ್ನೂ ಅನೇಕ 
ಸಲ ಆ ಭಾಷೆಯಲ್ಲಿ ತುರುಕುತ್ತೇವೆ. ಆದರೆ ಒಂದೇ ಗಿಡದಿಂದ ಆದ ಕಂಭ 
ಪುಲ್ಲಿಂಗ ಜಂತೆ ಸ್ರೀಲಿಂಗ ಮೂಲ ಗಿಡ ಮಾತ್ರ ನಪುಂಸಕಲಿಂಗ ಇದು ಹೇಗೆ 
ಎನ್ನುವದೇ ನಮ್ಮ ಬುದ್ದಿಗೆ ಇನ್ನೂ ನಿಲುಕದ ವಿಷಯವಾಗಿದೆ. ಇದಕ್ಕೇನು
ಮಾಡುವದು ? 

ವರ್ತಮಾನಪತ್ರಗಳು 
ಖುದ್ಧ ಬೆಳಗಾವಿಯ ಮರಾಠೀ ಸಾಹಿತ್ಯ ಸೇವಕರ ವಿಚಾರ ಹೇಳುವ 
ಮೊದಲು ಇಲ್ಲಿಯ ಮರಾಠೀ ವರ್ತಮಾನಪತ್ರಗಳ ನಾಮನಿರ್ದೀಶ ಮಾಡು 
ವದು ಅಗತ್ಯ. ಇಂದು ಈ ಶಹರದಲ್ಲಿ ೫ ೬ ಮರಾರೀ ವರ್ತಮಾನ ಪತ್ರಗಳು 
ಪ್ರತಿವಾರ ಪ್ರಸಿದ್ದವಾಗುತ್ತಿರುವದನ್ನು ನೋಡಿದಕ್ಕೆ ಬೆಳಗಾಂವಿಯವರಿಗೆ 
ಮರಾಠೀ ಭಾಷೆಯ ಬಗ್ಗೆ ಎಷ್ಟೊಂದು ಅಭಿಮಾನವಿದೆ ಎನ್ನುವದು ಕಂಡು 
ಬರುತ್ತದೆ. ಆದರೆ ಇಲ್ಲಿ ಕಾಯದೆ ಮಂಡಳಗಳು ಇಲ್ಲದಿರುವದರಿಂದ, ಕೇವಲ
ಮುನಸಿಪಾಲಿಟಿ ಹಾಗು ಲೋಕಲ್‌ ಬೋರ್ಡುಗಳಲ್ಲಿ ನಡೆಯುವ ಕೆಲಸದ 
ರಂಜಕ ವರ್ಣನೆಗಳನ್ನೇ ಜನರ ಮನಸ್ಸನ್ನು ಆಕರ್ಷಿಸಬೇಕಾಗುವ 
ದೆಂಬುದು ನಮ್ಮ ವರ್ತಮಾನಪತ್ರಗಳ ತಪ್ಪಲ್ಲ. ಕಡಮೆ ಇದ್ದರೂ 
ಔಷಧಧ ಜಾಹೀರುತುಗಳನ್ನೇ ಎದ್ದು ಕಾಣಿಸುವಂತೆ ಮಾಡಿ ವಾಚಕರ 
ಮನಸ್ಸನ್ನು ರಂಜಿಸಬೇಕಾಗುತ್ತದೆ. ಏನೇ ಆದರೂ ನಸ್ಟವನ್ನು ಸಹಿಸಿಕೊಡ 
ಮರಾಠೀ ಸಾಹಿತ್ಯ ಸೇವೆಯನ್ನು ಎಡೆಬಿಡದೆ ಮಾಡಬೇಕೆಂಬ ಧ್ಯೇಯದ 
ಹಾದಿಯಲ್ಲಿ ಕಾರ್ಯಮಾಡುತ್ತಿರುವ ನಮ್ಮ ವರ್ತಮಾನಪತ್ರಕಾರರನ್ನೂ 
ನಾವು ಅಭಿನಂದಿಸದೆ ಇರಲಾರೆವು.

ನಿಜವಾದ ಸಾಹಿತ್ಯದ ಕೊರತೆ 
ಇನ್ನು ರೂಢಿಯಲ್ಲಿ ಯಾವದಕ್ಕ ಸಾಹಿತ್ಯ ಎಂದು ನಾವು ಹೇಳು 
ತ್ತೇವೊ ಅಂಥ ಮರಾಠೀ ಸಾಹಿತ್ಯ ಬೆಳಗಾವಿಯಲ್ಲಿ ಇನ್ನೂ ಹೊರಬಂದಿಲ್ಲ ಎಂಬ 
ಮಾತನ್ನು ನಾವು ಒಪ್ಪಲೇಬೇಕು. ಈ ಹಾದಿಯಲ್ಲಿ ಪ್ರಯತ್ನಗಳು ನಡೆಯದೆ 
ಇಲ್ಲ. ಮಹಾರಾಷ್ಟ್ರದಲ್ಲಿ ಇದೀಗ ಬೆಳಕಿಗೆ ಬಂದ ಮೌಜ ಮೊದಲ್ಗೊಂಡು 
ಕೇಸರಿ ನವಾಕಾಳಡವರೆಗೆ, ಯಾವದೇ ಮರಾಠೀ ಪತ್ರಿಕೆ ಇರಲಿ ಅಧ 
ಹಿಡಿದು ಇತಿಯವರೆಗೆ ಒಂದಕ್ಷರವನ್ನೂ ಬಿಡದೆ ಭಕ್ತಿಯಿಂದ ಓದುವ 
ಸದ್ಗೃಹಸ್ತರು ಬೆಳಗಾವಿಯಲ್ಲಿ ಬೇಕಾದಷ್ಟು ಜನರಿದ್ದಾರೆ. ಅದೇ ರೀತಿಯಾಗಿ 
ಶ್ರೀ. ಅಸ್ನೊಡಕರರ ಸೊಗಸಿನ ಕಥಗಳಷ್ಟೇ ಕೈ. ಹರಿನಾರಾಯಣ ಆಹಟೇ 
ಯವರ ಕಾದಂಬರಿಗಳನ್ನೂ ಪಠಣಮಾಡುವ ವಾಚಕರಿದ್ದಾರೆ. ಆದರೆ 
ಇಲ್ಲಿಯ ಲೇಖಕರ ಲೆಕ್ಕಣಿಕೆಗಳು ಮಾತ್ರ ಶ್ರೀ. ಆಸ್ನೋಡಕರ ಅಥವಾ 
ಆಪಟೆಯವರ ಲೆಕ್ಕಣಿಕೆಗಳನ್ನು ಅನುಕರಿಸಲು ಅಸಮರ್ಥವಾಗಿವೆ. ಕಾದಂಬ 
ರಿಗಳ ವಿಷಯದಲ್ಲಿ ಹೇಳುವ ಮಾತೇ ನಾಟಕಕ್ಕೂ ಅನ್ವಯಿಸುವುದು. 
ಮಾನಾಪಮಾನ ನಾಟಕದ ಗೂಢ ಪದಗಳು, ಬಾಲಗಂದರ್ವನ ಬಾಯಿಂದ 
ಕೇಳಿದಮೇಲೆಯೇ ವೇದೋಪನಿಷತ್ತುಗಳಂತೆ ವಂದ್ಯವಾಗಿವೆ. ಭಟ್ಟರು ಹೇಗೆ 
ಅರ್ಥ ತಿಳಿಯದಲೆ ಮಂತ್ರಗಳನ್ನು ಮುಖೋದ್ಗತವಾಗಿ ಹೇಳುತ್ತಾರೋ 
ಹಾಗೆಯೇ ನಾವು ಈ ಪದಗಳನ್ನು ಹೊತ್ತಿಲ್ಲದ ಹೊತ್ತಿನಲ್ಲಿ ಗುಣಗುಣಿಸು 
ತ್ತೇವೆ. ಆದರೆ ಈ ನಾಟಕ ಪ್ರೀತಿ ಇಷ್ಪಕ್ಕೇ ಕೊನೆಗೊಂಡಿದೆಯಾಗಲಿ 
ಸ್ವತಂತ್ರ ನಾಟಕ ರಚನೆಯಲ್ಲಿ ಪರ್ಯವಸಾನಗೊಳ್ಳಲಿಲ್ಲ. ಕಾದಂಬರಿ 
ನಾಟಕಗಳದೇ ಈ ಹಣೆಬರಹವಾದಮೇಲೆ ಶಾಸ್ತ್ರೀಯ ವಿಷಯಗಳ 
ಮೇಲೆ ಸಾಹಿತ್ಯ ನಿರ್ಮಿತಿಯಾಗುವ ಮಾತಂತೂ ದೂರವೇ ಉಳಿಯಿತು. 
ಬೆಳಗಾಂವಿಯ ರೇಲ್ವೆಮಂಡಲದ ಒಂದು ಪುಸ್ತಕವು ಮಾತ್ರ ಮರಾಠಿಯಲ್ಲಿ   
ಪ್ರಕಟವಾಯಿತು. ಕನ್ನಡದಲ್ಲಿಯೂ ಇದರದೊಂದು ಆವೃತ್ತಿಯು ಹೊರಟಿ 
ದ್ದರಿಂದ ಇದಕ್ಕೆ ಮರಾಠೀಸಾಹಿತ್ಯ ಕೃತಿ ಅನ್ನಲು ಬಾರದು ಎಂದು ಕೆಲವರ 
ಆಕ್ಷೇಪಣೆ. ಅದರೆ ಇದು ಮೂಲದಲ್ಲಿ ಮರಾಠಿಯಲ್ಲಿಯೇ ಬರೆಯಲಾಗಿದ್ದು, 
ಅದರ ಭಾಷಾಂತರವಷ್ಟೇ ಕನ್ನಡದಲ್ಲಾದದ್ದರಿಂದ ಇದನ್ನು ಮರಾಠೀಸಾಹಿತ್ಯ 
ದಲ್ಲಿ ಸೇರಿಸಲು ಯಾವ ಅಭ್ಯಂತರವೂ ಇಲ್ಲವೆಂದು ನಾವು ಎದೆತಟ್ಟಿ ಹೇಳು
ವೆವು. ಆದರೂ ಒಂಟಿ ಕೋಗಿಲೆಯಿಂದ ವಸಂತಮಾಸ ಹೇಗೆ ನಿರ್ಮಾಣ 
ವಾಗುವದಿಲ್ಲವೋ ಹಾಗೆ ಒಂದೇ ಗ್ರಂಥದಮೇಲಿಂದ ಬೆಳಗಾವಿಯಲ್ಲಿ ಮರಾಠೀ 
ಸಾಹಿತ್ಯ ನಿರ್ಮಾಣವಾಗುವದೆಂದು ಹೇಳುವದು ತಪ್ಪಾಗುವದು. 

ಸಾಹಿತ್ಯದ ದುರ್ಭಿಕ್ಷೆಗೆ ಕಾರಣ 
ಮೇಲೆ ಹೇಳಿದ ಸಾಹಿತ್ಯದ ಅಭಾವಕ್ಕೆ ಅನೇಕ ಕಾರಣಗಳಿವೆ ಅವುಗ 
ಳಲ್ಲಿ ಕೆಲವನ್ನೇ ಇಲ್ಲಿ ಉಲ್ಲೇಖಿಸುತ್ತೇನೆ. ಒಂದು ಭಾಷೆಯಲ್ಲಿ ಸಾಹಿತ್ಯ 
ನಿರ್ಮಾಣವಾಗುವದಕ್ಕೆ ವಿಶಿಷ್ಟ್ರ ತರದ ವಾತಾವರಣವು ಅಗತ್ಯ; ಅಂಥ 
ವಾತಾವರವು ಬೆಳಗಾಂವಿಯಲ್ಲಿಲ್ಲ ಎಂದು ನಮ್ಮ ಅಭಿಪ್ರಾಯ. ಪುಣೆಯ 
ಸುತ್ತುಮುತ್ತಲೂ ಹಬ್ಬಿರುವ ಬೆಟ್ಟದಮೇಲೆ ನಿಂತ್ಕು ಯಾವ ಸಾಹಿತ್ಯಕ 
ನಾದರೂ ಸಿಂಹಗಡದಕಡೆಗೆ ದೃಷ್ಟಿಯನ್ನು ಚೆಲ್ಲಿದರೆ ಅವನಿಗೆ ಕೂಡಲೆ 
'ಗಡ ಆಲಾ ಪಣ ಹಿಂಹ ಗೇಲಾ' ಎಂಬ ಕಾದಂಬರಿಯನ್ನು ಬರಯುವ 
ಸ್ಫೂರ್ತಿಯಾಗುತ್ತದಿ. ಅದರಂತೆಯೇ ಶನಿವಾರ ವಾಡೆಯನ್ನು ನೋಡುವವ 
ನಿಗೆ ಬಾಜೀರಾವ್‌ಮಸ್ತಾನಿ ಇಲ್ಲವೆ ರಾಘೋಬಾದಾದಾನ ಅಣ್ಣತಮ್ಮಂದಿರ 
ಜಗಳದ ಸ್ಮರಣೆಯಾಗುತ್ತದೆ. ನಾಮಶೇಷವಾದ ಬುಧವಾರವಾಡೆಯನ್ನು 
ನೋಡಿದವರಿಗೆ ವಾಸುದೇವ ಬಳವಂತ ಫಡಕೆಯ ಬಂಡಾಯದ ನೆನಪಾಗದೆ 
ಇರದು. ಈ ಸ್ಥಿತಿ ಬೆಳಗಾವಿಗಿಲ್ಲ.. ಮರಾಠಿಗರ ಮತ್ತು ಪೇಶವೆಯರ ಇತಿ 
ಹಾಸಗಳೇ ನಮ್ಮ ಲಕ್ಷ್ಯವನ್ನು ಹೆಚ್ಚಾಗಿ ಸೆಳದದ್ದರಿಂದ ಬೆಳಗಾವಿಯ 
ಪ್ರಾಚೀನ ಇತಿಹಾಸವನ್ನು ನಾವು ಕಣ್ಣಿತ್ತಿಸಹ ನೋಡಲಿಲ್ಲ. ಮೇಲಾಗಿ ಆ 
ಇತಿಹಾಸದಲ್ಲಿ ಇರುವದಾದರೂ ಏನು ? ವಿಜಯನಗರದ   ಆಳಿಕೆನಂತರ   
ಬೆಳಗಾವಿಯ ಇತಿಹಾಸವೆಂದರೆ ಈ ಊರು ಒಬ್ಬನ ಆಧೀನದಿಂದ ಇನ್ನೊಬ್ಬನ 
ಅಧೀನಕ್ಕೆ ಹೋದದ್ದೇ ಕಂಡು ಬರುವದು. ಮಲೆನಾಡಿನ ಮರ ಹೇಗೆ ಬೆಳ 
ವಲದಲ್ಲಿ ಬೆಳೆಯುವದಿಲ್ಲವೋ ಹಾಗೆ ಇಲ್ಲಿ ಮರಾಠೀ ಸಾಹಿತ್ಯದ ಗತಿ ಆಗಿದ್ದರೆ
ಆಶ್ಚರ್ಯಪಡುವ ಕಾರಣವಿಲ್ಲ. 
ಅದರಂತೆಯೇ, ನಾವು ಕರ್ತೃತ್ವಹೀನರು ನಮ್ಮ ಕೈಯಿಂದ ಯಾವ 
ಮಹತ್ಕಾರ್ಯವೂ ಆಗಲಾರದು ಮಹಾರಾಷ್ಟ್ರ್ರೀಯರೇ ನಮ್ಮ ಮಾರ್ಗ
ದರ್ಶಕರಾಗಬೇಕು, ನಾವುಮಾತ್ರ ಕೇವಲ ಅವರನ್ನು ಅನುಕರಿಸುವದಕ್ಕೆ 
ತಕ್ಕವರು. ನಮ್ಮಕಿಂತಲೂ ಅವರು ಶ್ರೇಷ್ಠರು ಎಂಬ ಭಾವನೆ ಯಾವದಕ್ಕೆ 
ಇಂಗ್ಲೀಹಿನಲ್ಲಿ Inferiority Complex (ಸ್ವಯಂ ತುಚ್ಛತೆಯ
ಭಾವನೆ)   ಎಂದು ಹೇಳುವರೊ ಅದು ನಮಗೆ ಬಡಿದು ಕೊಂಡಿದೆ. ನಮ್ಮಲ್ಲಿಯ ಸಾಹಿ 
ತ್ಯದ ಅಭಾವಕ್ತ ಇದೂ ಒಂದು ಕಾರಣವಾಗಿರಬಹುದು. 
ಇನ್ನೊಂದು ಕಾರಣವನ್ನೂ ಹೇಳಬಹುದು. ನಮ್ಮ ಮರಾಠೀ ವಾಚ 
ನವು, ಕಾದಂಬರಿ, ನಾಟಕ ಮತ್ತು ವರ್ತಮಾನಪತ್ರ ಇವುಗಳನ್ನು ದಾಟಿ 
ಮುಂದೆ ಹೋಗಿಲ್ಲ. ಅಂತೆಯೇ ಅದು ನಮ್ಮ ಮೆದುಳಿನಲ್ಲಿ ರಸವಾಗಿ 
ಬೆರೆತಿಲ್ಲ. ಇತ್ತ ನಮಗೆ ಸರಿಯಾಗಿ ಕನ್ನಡ ಮಾತನಾಡುವದಕ್ಕೂ ಬಾರದು. 
ಇತ್ತ ಮರಾಠಿ ಬರೆಯುವದಕ್ಕೂ ಬಾರದು ಹೀಗೆ ಕರುಣಾಜನಕವಾಗಿದೆ 
ನಮ್ಮ ಸ್ಥಿತಿ. 
ಇವೆಲ್ಲದರ ಜತಿಗೆ ನಾಲ್ಕನೆಯದೊಂದು ಕಾರಣ ಇರುವ ಸಂಭವವೂ 
ಇದೆ, ಅದು ಯಾವದಿಂದಕರೆ ಕ್ರಮವಿಭಾಗದ ತತ್ವ ಸಾಹಿತೃ ಕ್ಷೇತ್ರದಲ್ಲಂತೂ 
ಇದು ಪೂರ್ಣತ್ವಕ್ಕೇ ಮುಟ್ಟಿದೆ. ಲೇಖಕ ಬೇರೆ, ಮುದ್ರಕ ಬೇರೆ, ಪ್ರಕಾಶಕ 
ಬೇರೆ ಈ ಮೂರು ವಿಭಾಗಗಳಂತೂ ಸರಿಯೆ ಮುಂದೆ ಸಾಹಿತ್ಯದ ಪ್ರಸಾರದ 
ದೃಷ್ಟಿಯಿಂದ ಪುಸ್ತಕವನ್ನು ಕೊಳ್ಳುವವರು ಬೇರೆ ಅದನ್ನು ಓದುವವರು 
ಬೇರೆ ಮತ್ತು ಅವರಲ್ಲಿ ಬರದಂತೆ ಆಚರಿಸುವವರು ಬೇರೆ, ಹೇಗೆ ಮತ್ತೆ ಈ 
ಶ್ರಮವಿಭಾಗ ಪರಂಪರೆ ಮುಂದರಿದದ್ದು ಕಂಡುಬರುವದು ಈ ತತ್ತ್ವಕ್ಕನು 
ಸಾರವಾಗಿ ನಮ್ಮ ಕಡೆಗೆ ಪುಸ್ತಕಗಳನ್ನು ಕೊಳ್ಳುವದು ಮತ್ತು ಅವನ್ನು 
ಓದುವದು ಇವೆರಡೇ ಕೆಲಸಗಳು ಬಂದಿರಬೇಕು ಎಂದಿಸನಿಸುವದು. 
ಮೇಲಿನ ಕಾರಣಗಳನ್ನೆಲ್ಲ ತೂಗಿ ನೋಡಲಾಗಿ ನಮನೆ ಮನವರಿಕೆ 
ಯಾಗುವ ಮಾತು ಇದು: ಕರ್ನಾಟಕದ ವಾತಾವರಣದಲ್ಲಿ ಮರಾಠೀ 
ಸಾಹಿತ್ಯ ಹುಟ್ಟೀತು ಎಂದು ಅಪೇಕ್ಷಿಸುವದೆಂದರೆ ಹುಣಸೆಯ ಟೊಂಗೆಗೆ 
ಮಾವಿನ ಆಂಟುಮಾಡಿ ಅದರಿಂದ ಮಧುರ ಫಲನನ್ನು ಅಪೇಕ್ಷಿಸಿದಂತೆಯೇ 
ಇದೆ 
ನಮ್ಮ ನ್ಯೂನತೆಯ ವಿವೇಚನೆಯನ್ನು ಇಷ್ಟೊಂದು ಕೂಲಂಕಹವಾಗಿ 
ಮಾಡಿದ ಕಾರಣವಿಷ್ಟೇ: ಬಳಗಾವಿಯ ಜನರು ಮರಾಠೀ ಸಾಹಿತ್ಯ ಪರಿಷತ್ತ
ನ್ನೇನೋ ಕರೆದರು, ಆದರೆ ಅವರಲ್ಲಿ ಮಾದರಿಗೂ ಒಬ್ಬ ಗ ೦ಥಕರ್ತನಿಲ್ಲವಲ್ಲ 
ಎಂದು ನೀವು ಟೀಕಮಾಡಬಾರದೆಂಬುದೇ ನನ್ನ ಉದ್ದೇಶ. ಭಕ್ತಿಮಾರ್ಗದಲ್ಲಿ 
ಭಗವಂತನ ದಾಸರ ದಾಸರು ಅಥವಾ ದಾಸಾನುದಾಸರು ಹೇಗೆ ಇರುವವರೋ, 
ಹಾಗೆ ನೀವು ಸಾಹಿತ್ಯಸೇವಕರಾದರೆ ಸಾಹಿತ್ಯಸೇವಕರ ಸೇವಕರು ನಾವು 
ಎಂದು ವಿನಮ್ರಭಾವದಿಂದ ಹೇಳಿಕೊಳ್ಳುತ್ತೇವೆ. 
ನಮ್ಮ ಕನ್ನಡ ಮಿತ್ರರು ನಮ್ಮ ಮರಾಠಿಯ ಅಭಿಮಾನಕ್ಕಾಗಿ 
ನಮ್ಮನ್ನು ದೂಷಿಸುತ್ತಾರೆ. ಹತ್ಹತ್ತು ತಲೆಮಾರುಗಳು ಕರ್ನಾಟಕದಲ್ಲಿ 
ಕಳೆದರೂ, ನಮ್ಮ ಅಸ್ತಿತ್ವವೇ ಕರ್ನಾಟಕದ ಮೇಲೆ ಅವಲಂಬಿಸಿದ್ದರೂ, 
ನಾವಿನ್ನೂ ಮಹಾರಾಷ್ಟ್ರದ ಅಭಿಮಾನಿಗಳಾಗಿರುವದನ್ನು ನೋಡಿ ಅವರು 
ಆಶ್ಚರ್ಯಪಡುತ್ತಾರೆ. ನಾವು ಮಹಾರಾಷ್ಟ್ರದ ಅಭಿಮಾನಿಗಳೆಂದು ಹೇಳಿ 
ಕೊಳ್ಳ ಲು ನಮಗೂ ಗೌರವವೆನಿಸುತ್ತದೆ. ಈ ವಿಷಯದಲ್ಲಿ ಮರಾಠೀ 
ರಾಜದ ಸಂಸ್ಥಾಪಕನಾದ ಶಿವಾಜಿ ಕೂಡ ನಮ್ಮಿಂದ ಪಾರಕಲಿಯುವ 
ಹಾಗಿದೆ. ಯೂಕಂದರ ಶಿವಾಜಿ ಮಹಾರಾಜನ ಮೂಲಪ್ರರುಷ ಸುಜಿನ 
ಸಿಂಹನೆಂಬವನು ರಜಪೂತಸ್ಥಾನದವನು. ತಾನು ರಜಪೂತನೆಂಬುದದನ್ನು 
ಮರೆತು, ಮರಾಠರ ರಾಜನೆಸಿಸಿಕೊಳ್ಳುವದೇ ಭೂಷಣ ಎಂದು ಶಿವಾಜಿ 
ಭಾವಿಸಿದನು. ರಾಮದಾಸರು ಕೂಡ 'ಮರಾಠಾತಿತುಕಾ ಮೇಳವಾವಾ ' 
ಎಂದು ತಪ್ಪು ಉವದೇಶವನ್ನೇ ಮಾಡಿದರು. ಈ ಕಾಲದಲ್ಲಿ ಶಿವಾಜಿ ಮಹಾ 
ರಾಜರು ಬದುಕಿ ಇದ್ದರೆ ಅಧವಾ ನಾವು ಯಾರಾದರೂ ಅವರ ಕಾಲದಲ್ಲಿ 
ಜನ್ಮಿಸಿದ್ದರೆ ರಾಜಪುತಾನೆಯಿಂದ ಶಿಕ್ಷಕನನ್ನು ಕರೆಯಿಸಲು ಅನರಿಗೆ ಸಲಹೆ 
ಕೊಡುತ್ತದ್ದೆವು. ಆದದ್ದಾಗಿ ಹೋಯಿತು. ಈಗ ಆ ಮಾತನಾಡಿ ಏನು 
ಪ್ರಯೋಜನ? ಶಿವಾಜಿರುಹಾತಾಜರೂ ಅವರ ಪೂರ್ವಜರೂ ಮಾರಾಠ 
ರೊಡನೆ ಸಮರಸವಾಗಿದ್ದರೆಂಬ ಮಾತು ಸುಳ್ಳಲ್ಲ. 

ಕೇಸರಿಕಾರರ ಅಬಿನಂದನ 
ಇತ್ತೀಚೆ ಆರೇಳು ವರ್ಷ ದೇಶಸೇವೆ ಯ ಬಿರುಗಾಳಿಯೇ ಎದ್ದಿದೆ. ಆ 
ಝಂಜಾವಾತದಲ್ಲಿ ಸಿಕ್ಕು ನಾವು ಕೂಡಿ ಕನ್ನಡಿಗರೊಡನೆ ಎಲ್ಲಿ ಬೆರತು
ಹೋಗುತ್ತೇವೋ ಎಂದು ಹೆದರಿಕೆಯುಂಟಾಗಿತ್ತು. ಆದರೆ ಈ ಸಂಕಟ 
ದೊಳಗಿಂದ ಕೇಸರೀಕಾರರು ಹಾಗು ಅವರಂಥ ಇತರ ಮಹಾರಾಷ್ರ್ರೀಯ 
ಮಿತ್ರರು ನಮ್ಮನ್ನು ಪಾರುಮಾಡಿದರು. 
ಲೋಕಮಾನ್ಯರು ಜೀವಿಸಿರುವಾಗ ಅವರ ಕೇಸರೀ ಪತ್ರಿಕೆ ಜನರಿಗೆ 
ಮಾರ್ಗದರ್ಶಕ,  ಸರಕಾರಕ್ಕೆ ಲೋಕಮತ ನಿದರ್ಶಕ ಎಂಬ ರೀತಿಯಲ್ಲಿ 
ನಡೆದಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ. ಬಹುಕಾಲದಿಂದ ಗೋಪುರದಲ್ಲಿ 
ದೊಡ್ಡ ಗಡಿಯಾರವನ್ನಿಟ್ಟು, ಅದು ಆಮೇಲೆ ನಿಂತುಹೋದರೆ, ಹಾಯ್ದಾಡುವ 
ಜನರು ಪುನಃ ಪುನಃ ಮರೆವಿನಿಂದ ಅದರ ಕಡೆಗೇ ಹೇಗೆ ನೋಡುವರೊ ಆ 
ರೀತಿಯಾಗಿ ಲೋಕಮಾನ್ಯರು ನಿಧನಹೊಂದಿದ ಮೇಲೂ ಅವರ ಕೇಸರಿ 
ತಮಗೆ ಮಾರ್ಗದರ್ಶಕವಾಗಬಹುದೆಂದು ಜನರು ಈಗಲೂ ಇಚ್ಛಿಸುತ್ತಾರೆ 
ದುರ್ದೈವದಿಂದ ಈ ಅವರ ಇಚ್ಛೆ ಸಫಲವಾಗುವದಿಲ್ಲ ಎಂದು ಬೇರೆ ಹೇಳುವ 
ಕಾರಣವಿಲ್ಲ ಸರಕಾರಕ್ಕೆ ತಿಳಿವಳಿಕೆ ಕೊಡುವ ಕಾರ್ಯವು ಸಹ ಕೇಸರಿ 
ಯಿಂದ ಈಗ ಆಗುತ್ತಿಲ್ಲ. ವಾರಜ ಹಾರಿದ ಕನ್ನಡಿಯಂತೆ ಅದು ನಿರುವ 
ಯುಕ್ತವಾಗಿದೆ. ಆದರೆ ನಮ್ಮ ಮಟ್ಟಿಗೆ ಅದು ನಿಜವಾಗಿಯೇ ಉಪಕಾರಿ 
ಯೆನಿಸಿಕೊಂಡಿದೆ. ತನ್ನ ಸ್ವಂತ ಖರ್ಚಿನಿಂದ ಕರ್ನಾಟಕದಲ್ಲಿ ಒಬ್ಬ ಸುದ್ದಿ 
ಗಾರನನ್ನಿಟ್ಬು ಕರ್ನಾಟಕದ ಯಾವ ಮೂಲೆಯಲ್ಲಿ ಏನೇ ಕೊಳೆ ಇದ್ದರೂ 
ಅದನ್ನು ಪ್ರತಿವಾರ ತಪ್ಪದೆ ಪ್ರಕಟಿಸಿ, ಕರ್ನಾಟಕದ ಕಡೆಗೆ ಪ್ರೇಮಾದರ 
ಗಳಿಂದ ನೋಡುವ ನಮ್ಮು ಪ್ರವೃತ್ತಿಯಿಂದ ಪರಾವೃತ್ತಿಗೊಳಿಸುವ ಪುಣ್ಯ 
ಕಾರ್ಯಮಾಡಿದ್ದಾರೆ. ಟೈಮ್ಸ್‌ ಪತ್ರಿಕೆಯವರು 'Through Indin
eyes ಎಂಬ ಶಿರೋನಾಮದ ಕಳಗೆ ಯಾನ ಸಂಗತಿಗಳನ್ನು ಬರೆದು ತಮ್ಮ 
ವರಿಗೆ ಉಪಕಾರ ಮಾಡುತ್ತಿದ್ದಾರೋ ಅದೇ ಬಗೆಯಲ್ಲಿ ಕೇಸರಿಕಾರರು 'ಕರ್ನಾ 
ಟಕದ ಬಾತಮೀವತ್ರ' ಪ್ರಸಿದ್ಧಿಸಿ ನಮ್ಮ ಮೇಲೆ ಉಪಕಾರ ಮಾಡುತ್ತಿದ್ದಾರೆ 
'ನಿಂದಕರ ಮನೆ, ನೆರೆಯಲ್ಲಿರಬೇಕು? ಎನ್ನುವದರ ಬದಲಾಗಿ ನಿಂದಕ ಪತ್ರಿಕೆ 
ಎಂದರೆ ಕೇಸರಿ' ಎನ್ನುವಂತಾಗಿದೆ ಕನ್ನಡಿಗರು! ಕೇಸರಿಯ ಬರವಣಿಗೆಯಿಂದ 
ಕನ್ನಡಿಗರ ಹಾಗು ಕರ್ನಾಟಕದೊಳಗಿನ ಮರಾಠಿಗರ ಹಿತಸಂಬಂಧಗಳು 
ಎಂಬ ಭಾವನೆಯಳಿದು, ನನ್ಮು ವೈ ಶಿಷ್ಟ್ಯವನ್ನು ಉಳಿಸಿಕೊಳ್ಳಲು 
ಸಹಾಯಕವಾಗಿದೆ. ಹಿಂದುಸ್ಥಾನದಲ್ಲಿ ಇಂಗ್ಲೀಷರು ಯಾವ ವಿಧವಾಗಿ ಇರು 
ತ್ತಾರೋ ಹಾಗೆಕರ್ನಾಟಕದಲ್ಲಿ ನಾವು ಇರುತ್ತೇವೆ ಎಂದು ಅನೇಕರು ಕಿಳಿಯು 
ತ್ತಾರೆ; ಆದರೆ ಇದು ಸಂಪೂರ್ಣ ಯೋಗ್ಯ ಎಂದು ಯಾರೂ ಭಾವಿಸಕೂಡದು 
ಈ ವಾದದಲ್ಲಿ ಕೇಸರಿಕಾರರ ಆಭಾರ ಮನ್ನಸುವದು ಮತ್ತು ಅವರನ್ನು 
ಅಭಿನಂದಿಸುವದು ಮರೆತು ಹೋದೀತು. ಯಾವದೇ ಮಾತು, ಮತ, ಹಾಗು 
ಠರಾವುಗಳನ್ನು ಸುಲಭ ಹಾಗು ಸುಸ್ಪಫ್ಟವಾದ ಭಾಷೆಯಲ್ಲಿ ಇಡದಿೆಅನೇಕ 
ತೊಡಕಿನ ಸಂಯುಕ್ತ ಕ್ರಿಯಾಪದಗಳನ್ನೂ, ಸಾಮಾಸಿಕ ಪದಗಳನ್ನು ಬಳಸಿ 
ಬೇಕಾದ ಅರ್ಧವು ಹೊರಡುವಂತೆ ಬರೆಯುವ ಪದ್ಧತಿಯನ್ನು ಪ್ರಾರಂಭಿಸಿ 
ದ್ವಕ್ಳಾಗಿ ಈ ಪರಿಷತ್ತು ಅವರನ್ನು ಅಭಿನಂದಿಸದೆ ಇರಲಾರದು. ಯಾಕಂದರೆ 
ಈ ಲೇಖವದ್ದತಿ ಬಳಸಿದ್ದಕ್ಕಾಗೆಯೇ ಪತ್ರಿಕೆಯ ಆಕಾರ ಬೆಳೆಯಿಸಬೇಕಾಯಿ 
ತೆಂಬದನ್ನು ಅನೇಕರು ಬಲ್ಲರು. ಅವರು ಹಣವನ್ನು ಸದುಪಯೋಗಕ್ಕೆ ಹಚ್ಚಿ 
ಕರ್ನಾಟಕದಲ್ಲಿ ಸ್ವತಂತ್ರ ಒಬ್ಬ ಸುದ್ದಿಗಾರನ ಸ್ಟಾನವನ್ನು ನಿರ್ಮಿಸಿ 
ಅವನು ಕಳಿಸುವ ಸುದ್ದಿ ಸಮಾಚಾರಗಳನ್ನು ಕಾಲಕಾಲಕ್ಕೆ  ಕೇಸರಿಯಲ್ಲಿ 
ಪ್ರಕಟಸಿದ ಮಹೋಪಕಾರಕ್ಕಾಗಿ ಕರ್ನಾಟಕ ಮರಾಠಿಗರ ವತಿಯಿಂದ 
ನಾನು ಅವರ ಆಭಾರ ಮನ್ಸಿಸುತ್ತೇನೆ 
ಸರಸ್ಪತಿಯ ಪೂಜಕರೆ, ಇಂದಿನ ಮಂಗಲ ಪ್ರಸಂಗದಲ್ಲಿ ಇನ್ನೊಂದು 
ಸಮಾಧಾನದ ಸಂಗತಿಯನ್ನುಲ್ಲೇಖಿಸದೆ ಇರಲಾರೆ. ಸರಕಾರೀ ನವಕರಿಗಳಿ 
ಗಾಗಿ ಮತ್ತು ಲೋಕನಿಯುಕ್ತ ಸಭೆಗಳಲ್ಲಿಯ ಪೊಳ್ಳು ಗೌರವದ ಸ್ಥಾನಗಳಿ 
ಗಾಗಿ ನಮ್ಮ ಬ್ರಾಹ್ಮಣ ಬ್ರಾಹ್ಮಣೇತರರಲ್ಲಿ ತಿಕ್ಕಾಟಗಳುಂಟಾಗುವ ಮಾತು 
ಸುಪ್ರಸಿದ್ಧ! ಆದರೆ ಈ ಸಾಹಿತೃ ಪರಿಷತ್ತಿನ ಮಟ್ಟಿಗೆ ನಾವು ಬ್ರಾಹ್ಮಣ 
ಮತ್ತೂ ಬ್ರಾಹ್ಮಣೇತರರು ಒಂದಾಗಿ ಸರಸ್ವತಿಯ ರಥವನ್ನು ಜೋಡಿಯಿಂದ 
ಎಳೆಯಲು ಹೆಗಲು ಒಡ್ಡಿದ್ದೇವೆ ಎಂಬದು ಕೌತುಕಾಸ್ಪದವಾದದ್ದು ! ಇರಲಿ
ಮಿತ್ರರೆ ಬೆಳಗಾಂವಿಯಲ್ಲಿ ಮರಾಠೀ ಸಾಹಿತ್ಯ ನಿರ್ಮಾಣವಾಗುವದಿಲ್ಲ 
ಎಂದು ಮನಸ್ಸು ಬೇಸರಮಾಡಿಕೊಳ್ಳ ಬೇಡಿರಿ. ಸಾಹಿತೃ ಸೇವಕರ ಸೇವೆ 
ಯನ್ನು ಸಲ್ಲಿಸಲು ಇಲ್ಲಿ ಅಕ್ಕಿ, ತುಪ್ಪ ಸಮೃದ್ಧಿಯಾಗಿ ದೊರೆಯುತ್ತವೆ. 
ಇಷ್ಟಾಗಿ ಕೆಲವು ಕೊರತೆಗಳು ಇದ್ದರೆ ತಾವು ಅವನ್ನು ಗಮಸಿಸಲಾರಿರಿ 
ಎಂದು ಆಶಿಸುತ್ತೇನೆ.
ಸದ್ಗೃಹಸ್ಥರೆ, ನನ್ನ ಭಾಷಣ ಪ್ರಮಾಣ ಮೀರಿ ಬಿಳೆಯಿತೆಂಬದರ 
ಅರಿವು ನನಗಿದೆ. ಆದರೆ ಅದನ್ನು ಮುಗಿಸುವ ಪೂರ್ವದಲ್ಲಿ ಸ್ವಾಗತಮಂಡಳದ 
ಪರವಾಗಿ ೨-೩ ಆವಶ್ಯಕ ಠರಾವುಗಳನ್ನು ಸ್ವಲ್ಪದರಲ್ಲಿ ವಿವೇಚಿಸುತ್ತೇನೆ. 
ಒಂದನೆಯ ಠರಾವು ಹೀಗಿರಬೇಕು:--ಪುಣೆ ಅಥವಾ ಮಹಾರಾಷ್ಟ್ರದ 
ಯಾವದೇ ಭಾಗದಲ್ಲಿ ಗುಜರಾಥೀ ಸಾಲೆ ಸ್ಥಾಪಿತವಾದರೆ, ಯಾವ ತತ್ತ್ವದ 
ಮೇಲೆ ಅದನ್ನು ವಿರೋಧಿಸಲಾಗುವದೋ ಅದೇ ತತ್ತ್ವದ ಮೇಲೆ ಕರ್ನಾಟ 
ಕದಲ್ಲಿ ಸ್ಥಾನಿತವಾಗುವ ಮರಾಠಿ ಸಾಲೆಯನ್ನು ವಿರೋಧಿಸುವದು ಶುದ್ಧ 
ಅನ್ಯಾಯದ್ದೂ ದ್ವೇಷಮೂಲಕವಾದದ್ದೂ ಎಂದು ಈ ಪರಿಷತ್ತಿನ ಪ್ರಾಮಾ 
ಣಿಕ ಅಭಿಪ್ರಾಯವಿದೆ ಇಂಥ ಠರಾವನ್ಫು ಯಾಕೆ ಮಾಡಬೇಕೆಂಬುದರ 
ಕಾರಣಗಳನ್ನು ನಾನು ಇಲ್ಲಿ ಚರ್ಚಿಸುವದಿಲ ನಮಗೆ ಒಪ್ಪಿಗೆಯಾದ 
ವಿಷಯ ಇನ್ನೊಬ್ಬರಿಗೂ ಒಪ್ಪಿಗೆ ಯಾದೀತೆಂದು ಹೇಳಲು ಬರುವದಿಲ್ಲ 
ಇನ್ನು ನಾನು ಸೂಚಿಸುವ ಎರಡನೆಯ ಠರಾವು ಅಷ್ಟು ವಾದಗ್ರಸ್ತವಾಗಿಲ್ಲ 
ಅದು ಹೀಗೆ--ಮರಾಠೀ ಸಾಹಿತ್ಯದ ವಿಶೇಷ ಪ್ರಸಾರಕ್ಕಾಗಿ ಮುಂದಿನ 
ಮೂರು ವರ್ಷಗಳ ಮರಾಠೀ ಸಾಹಿತ್ಯ ಸಮ್ಮೇಲನಗಳನ್ನು ಅನುಕ್ರಮವಾಗಿ 
ಅಂದಮಾನ, ಫಿಜಿ ನಡುಗಡ್ಡೆಗಳು ಹಾಗು ದಕ್ಷಿಣ ಆಫ್ರಿಕಾ ಈ ಭಾಗಗಳಲ್ಲಿ 
ನೆರೆಯಿಸಬೇಕು. ಮತ್ತು ಅದಕ್ಕಾಗಿ ಅಲ್ಲಿ ವಾಸವಾಗಿರುವ ಮಾರಾಠಿಗ 
ರೊಡನೆ ಈಗಿನಿಂದಲೇ ಪತ್ರವೃವಹಾರವನ್ನು ಪ್ರಾರಂಭಿಸಬೇಕು. 
ನಾನು ಈಗ ಸೂಚಿಸುತ್ಮಿರುವ ಮೂರನೆಯ ಠರಾವು ಸರ್ವರಿಗೂ 
ರುಚಿಸೀತು ಎಂದು ಹೇಳಲಾರೆ. ಕಾರ್ಯದ ಮಹೆತ್ತವನ್ನು ಲಕ್ಷಿಸಿದರೆ ಈ 
ಠರಾವುಕೂಡ ಸ್ತೀಕೃತವಾಗಬಹುದೆಂದು ಆಶಿಸುತ್ತೇನೆ. ಆ ಠರಾವು 
ಹೀಗಿದೆ :--ಬೆಳಗಾಂವಿ ಶಹರದಲ್ಲಿ ಮರಾಠೀ ಭಾಷೆ ಸ್ಥಿರವಾಗಿ ಉಳಿಸಿ 
ಕೊಳ್ಳುವದಕ್ಕಾಗಿ ಪ್ರತಿವರ್ಷ ಕನಿಷ್ಠ ಇಲ್ಲಿಯ ನೂರು ಹುಡುಗಿಯ 
ರನ್ನು ಮಹಾರಾಷ್ಟ್ರದ ವರರ ಜೊತೆಗೆ ವಿವಾಹ ಜರುಗಿಸಬೇಕು. ಮತ್ತು 
ಅದೇ ಪ್ರಕಾರ ಮಹಾರಾಷ್ಟ್ರದ ನೂರು ಹುಡುಗಿಯರನ್ನು ಬೆಳಗಾವಿ  ಮತ್ತು 
ಸುತ್ತುಮುತ್ತಲಿನ ಊರುಗಳ ವರರೆ ಜೊತೆಗೆ ಮದುವೆಮಾಡಿಕೊಡಬೇಕು. 
ಇಂಥ ಹೆಣ್ಣು ಮಕ್ಕಳು ಅತ್ತೆಮನೆ ತವರುಮನೆಗಳಿಗೆ ಹೋಗುವ ಬರುವ
ಖರ್ಚು ಹೆಚ್ಚು ಬರದಂತೆ ನೋಡಿಕೊಳ್ಳುವದು ಅಗತ್ಯ, ಸಾಹಿತ್ಯ ಸಮ್ಮೇಲ 
ನದ ಅಧ್ಲಕ್ಷರ ಶಿಫಾರಸ್‌ಪತ್ರ ( Certificate ) ತೋರಿಸಿದರೆ, ಇಂಥ 
ಹೆಣ್ಣು ಮಕ್ಕಳಿಗೆ ಅರ್ಥದರದಲ್ಲಿ ಪ್ರವಾಸಮಾಡುವ ಸೌಕರ್ಯವನ್ನು ಒದಗಿ 
ಸಲು ರೇಲ್ವೆ ಕಂಪನಿಗಳಗೆ ವಿನಂತಿಮಾಡಿಕೊಳ್ಳ ಬೇಕು. ಈ ಠರಾವನ್ನು 
ಇದೇ ಭಾಷೆಯಲ್ಲಿ ಮುಂಡಿಸಿದರೆ ಕೆಲವರಿಗೆ ಅದುತ್ರಾಸದಾಯವಾಗಬಹುದು. 
ಕೇಸರೀಕಾರರ ಭಾಷಾ ಪದ್ದತಿಯ ಮೇರೆಗೆ ಅದಕ್ಕೊಂದು ವಾಕ್ಯ ಹೀಗೆ 
ಜೋಡಿಸಬಹುದು. ' ಯಾರಿಗೆ ಈ ಠರಾವು ಒಪ್ಪಿಗೆ ಇದೆಯೋ ಅವರು 
ಅದನ್ನು ಆಚರಣೆಯಲ್ಲಿ ತರಲು ಶಕ್ಯವಾದರೀತಿಯಲ್ಲಿ ಪ್ರಯತ್ನಿಸಬೇಕು 
ಎಂದು ಈ ಪರಿಷತ್ತು ಸೂಚಿಸುತ್ತದೆ'
ಸಭ್ಯ ಗೃಹಸಸ್ಥರೆ,  ನನಗೆ ಹೇಳಬೇಕಾದದ್ದನ್ನೆಲ್ಲ ಹೇಳಿದ್ದೇನೆ. ನಮ್ಮಿಂದ, 
ಸಾಹಿತ ಭಕ್ತರ ಆದರಸತ್ಕಾರ ಆಗಬೇಕಾದ ಪ್ರಮಾಣದಲ್ಲಿ ಆಗಲಿಕ್ಕಿಲ್ಲ 
ಎಂಬ ಮಾತನ್ನು ನಾನು ಅರತಿದ್ದೇನೆ. ಆದರೂ ನಮ್ಮಲ್ಲಿ ತೋರುವ ನ್ಯೂನ 
ತೆಗಳನ್ನು ಮನಸ್ಸಿನಲ್ಲಿ ತರದೆ ನಮ್ಮ ಆಲ್ಬ ಸೇವೆಯನ್ನು ಸ್ಲೀಕರಿಸುವರೆಂದು 
ಆಶಿಸಿ, ಪುನಃ ಒಂದು ಸಲ ಸ್ವಾಗತ ಬಯಸುತ್ತೇನೆ. 
=======================================
  ಭಾಗ ೩ 
ಹರಟೆ-ಕತೆಗಳು

ಈ  ಹರಟೆ ಹಾಗು ಕತೆಗಳಲ್ಲಿ ಅವರ ಹೃದಯದಲ್ಲಿಯ ಭಾವಗಳು 
ಹೇಗೆ ಅರಳಿವೆ  ಎಂಬುದನ್ನು ಸಾವು ಕಾಣಬಹುದು, 
೧. ಸರಕಾರದ ಆದಾಯನ್ನು   ಹೇಗೆ ಹೆಚ್ಚಿಸಬೇಕು 
೨. ಬೀಡಿ ಸಸೆದುವ ಸಂಸ್ಕೃತಿ 
೩. ಆಮೀನಗಡದ ಸಂತೆ 
೪, ದುರ್ಗಗಳೇ! 
೫.ಐದು ಕೊಡಗಳ  ಆತ್ಮಕತೆ
೬. ನನ್ನ ಸಾವ್ರ 
೭. ಗೋಪಾಳ ಭಟ್ಟರ ಹುಲಿ 
೮. ದಧೀಚಿ 
೯. ಎಚ್ಚರಿಕೆ 
================================
  ಸರಕಾರದ ಆದಾಯವನ್ನು   ಹೇಗೆ ಹೆಚ್ಚಿಸಬೇಕು   
( ಒಂದು ಹೊಸ ಮಾದರಿಯ ಸಲಹೆ) 
ನಮ್ಮ ಬಡದೇಶದಲ್ಲಿಯೆ ಜನರ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ 
ಇಚ್ಛೆಯು ಸರಕಾರದ ಹೃದಯದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಹೆಜ್ಜೆ 
ಹೆಜ್ಜೆಗೆ ಹಣದ ಕೊರತೆಯು ಅಡ್ಡಬರುತ್ತದೆ. ಯಾವದೇ ಕೆಲಸವನ್ನು 
ಕೈಕೊಳ್ಳಬೇಕಾದರೂ “ಸರ್ವಾರಂಭಾಃ ತಂಡುಲಃ ಪ್ರಸ್ತಮೂಲಾಃ" ಎಂಬ 
ನಾಣ್ನುಡಿಯಂತೆ ಹಣವಿಲ್ಲದೆ ಮುಂದೆ ಹೆಜ್ಜೆ ಇಡಲಾಗದು. ಹಣವಿಲ್ಲದ 
ಮೂಲಕವೇ ಸರಕಾರದ ಆಕಾಂಕ್ಷೆಗಳು ಪೂರ್ತಿಗೊಳ್ಳದೆ ಮನಸಿನಲ್ಲಿಯೆ 
ಕರಗಹತ್ತಿವೆ. ಜನರ ಹಿತಕ್ಕಾಗಿ ಕೊರಗುವ ಇಂಥ ಸರಕಾರಕ್ಕೆ ಹಣ 
ದೊರಕಿಸುವ ಕೆಲ ಮಾರ್ಗಗಳನು ಸೂಚಿಸಬಯಸುತ್ತೇವೆ. ಈ ಮಾರ್ಗಗಳು 
ಕೆಲಜನರಿಗೆ ಹೊಸವು ಕಂಡರೂ ಸರಕಾರಕ್ಕೆ ಅವೇನು ಹೊಸವಲ್ಲ. ಆದ್ದರಿಂದ 
ನಾವಾದರೂ ಒಳ್ಳೇ ಧೈರ್ಯದಿಂದ ಈ ಮಾರ್ಗಗಳನ್ನು ವಿಮುವರಿಸುತ್ತೇವೆ. 
ಈ ಸೂಚನೆಗಳನ್ನು ಓದಿ ಸರಕಾರಿ ನೋಕರಿಯಲ್ಲಿದ್ದ ನಮ್ಮ ಅನೇಕ 
ಮಿತ್ರರಿಗೆ ಸಿಟ್ಟು ಬರಬಹುದು. ನೋಕರಿಯಲ್ಲಿ ಸೇರಿದಂದಿನಿಂದಾ ಜನರಿಂದಾ 
ಗಲೀ, ಅನ್ಯಾಯದಿಂದಾಗಲಿ ಒಂದು ಕಾಸು ಸಹ ತಕ್ಕೊಳ್ಳದೆ ಧರ್ಮರಾಜನಂತೆ   
ಪ್ರಾಮಾಣಕತನದಿಂದ ನೋಕರೀ ಮಾಡುತ್ತಿದ್ದರೂ ತಮ್ಮ ಬಗ್ಗೆ ಈ 
ಬಗೆಯ ಲೇಖನನ್ನು ಓದಿದರೆ, ಕೆಲ ನೋಕರರಿಗೆ ಕೆಡಕನಿಸುನದು ಸಹಜವದೆ. 
ಇಂಥ ನೋಕರ ಜನರು ಈ ನಮ್ಮ ಕಲಿಯುಗದಲ್ಲಿ ಅಪವಾದಾತ್ಮಕವಾಗಿರು 
ವರು. ನಿಜವಾಗಿ ಅವರು ದ್ವಾಪರ ಅಥವಾ ಕೃತಯುಗದಲ್ಲಿ ರಾಮರಾಜರ 
ಅಥವಾ ಧರ್ಮರಾಜರ ಸಂಸ್ಥಾನದಲ್ಲಿ ನೋಕರರಾಗಿರಬೇಕಾಗಿತ್ತು. ಈ 
ನಮ್ಮ ಕಲಿಯುಗದಲ್ಲಿ ಅವರಿಗೆ ಸ್ಥಾನವೇ ಇಲ್ಲ. ಅವರು ಈಗ ನೋಕರಿ   
ಮಾಡುವದೆಂದರೆ ಚಹಾದಲ್ಲಿ ಯಾಲಕ್ಕಿ ಕೂಡಿಸಿದಂತೆ ವಿಸಂಗತವಾಗುವದು. 
ಇರಲಿ. 
ನಾವು ಈ ಲೇಖದಲ್ಲಿ ಸರಕಾರೀ ನೋಕರರು ಲಂಚವನ್ನು ಸಾಕಷ್ಟು 
ಹೊಟ್ಟೆತುಂಬಿ ಮನೆ ತುಂಬುವವರೆಗೆ ತಿಂಬುವರೆಂದು ಕಾಣಿಸಿದ್ದೇವೆ. 
ಜನರು ತಾವಾಗಿಯೆ ಹೇಗೆ ಬಿಡಬೇಕು? ಗಂಗಾಪ್ರವಾಹ ಹರಿದು 
ಕೊಂದು ಮೈಮೇಲೆ ಬಂದರೆ ಗಂಗಾಸ್ಟ್ರಾನದ ಪುಣ್ಯವನ್ನು ಪಡೆಯಲಿಕ್ಟೇ 
ಬೇಕು. ಅಲ್ಲದೆ ಹೋದರೆ ಹೇಡಿಯೆಂದು ಹುದ್ದೆ ದೊರೆಯುವದು. ಹೀಗೆ
ಎಷ್ಟೋ ಅಧಿಕಾರಿಗಳು ಅನ್ನುವದುಂಟು, ನಾವಾದರೂ ಈ ಮಾತನ್ನು 
ಅರಿತುಕೊಂಟೇ ಸೂಚನೆಗಳನ್ನು ಕೊಟ್ಟಿದ್ದೇವೆ. 
ತನ್ಮು ಎಲ್ಲ ನೋಕರದಾರರ ಪಗಾರವು ಪ್ರತಿ ತಿಂಗಳ ಲಕ್ಷಗಟ್ಲೆ ಆಗುವ 
ದೆಂದೂ ಮತ್ತು ತುಟ್ಟೀ ಕುಲದಲ್ಲಿ ಆ ಪಗಾರವನ್ನು ಅಷ್ಟೇ ಅಲ್ಲ ಪೆನಶನ್‌ 
ಜನರ ಪೆನಶನ್ ಹೆಚ್ಚಿಸಿದ್ದರಿಂದ ಪ್ರತಿ ತಿ೦ಗಳಿಗೆ ಸರಕಾರಕ್ಕೆ ಲಕ್ಷಗಟ್ಟಲೆ 
ವೆಚ್ಚವಾಗುವದೆಂಬುದು ನಿಜ, ಆದರೆ ಈ ಪಗಾರದ ವೆಚ್ಚವೇ ಈ ಕಾಲದಲ್ಲಿ 
ಸರಕಾರದ ಮೇಲೆ ಬೀಳತಕ್ಟದಲ್ಲವೆಂದು ನನ್ನ ಮತ. 
ಅದು ಬೇರೆ ಬೇರೆ ಖಾತೆಗಳಲ್ಲಿಯ ಬೇಕೆ ಬೇರೆ ಹುದ್ದೇದಾರರ ಯಾದೀ 
ಮಾಡತಕ್ಕದ್ದು. ಮತ್ತು ಆಯಾ ಹುದ್ದೆಯ ಮುಂದೆ ಅವರವರೆ ಯೋಗ್ಯತೆಯ 
ಪ್ರಕಾರ ದೊಡ್ದ ಸಣ್ಣ ರಕಮು ಕಾಣಿಸಬೇಕು. ಈ ಹಣವು ಸೆರಸಿಂದಿಗಳ 
ಲಿಲಾವುಗಳಲ್ಲಿ ಸರಕಾರಿ ಸವಾಲದಂತೆ ಒಂದು ಅಂಕಿ ಗೊತ್ತುಮಾಡಿರುತ್ತದೆ. 
ಅಂದರೆ ಕನಿಷ್ಟ ಪಕ್ಷಕ್ಕೆ ಅಷ್ಟಾದರೂ ಬರಬೇಕೆಂದು ಸರಕಾರದೆ ಆಶೆಯಿರು 
ತ್ತದೆ. ಮತ್ತು ಈ ರಕಮಿಗೆ ಬೇಡಿ, ಯಾವನು ಲಿಲಾವಿನಲ್ಲಿ ಅ ಹುದ್ದೆಯ 
ಮಕ್ತೆ ಹಿಡಿಯುವನೋ ಆವನಿಗೆ ಆ ಹುದ್ದೆಯ ಮಕ್ತೆ ಕೊಡತಕ್ಕದ್ದು. 
ಒಂದೇ ಸ್ಥಳದಿಂದ ಅಥವಾ ಒಂದೇ ಹುದ್ದೇದಿಂದ ಮೇಲಿಂದ ಮೇಲೆ ಬದಲೀ 
ಮಾಡಿದಕರೆ ಆ ಹುದ್ದೇದಾರನಿಗೆ ಅದರ ಫಾಯದೆ ಸಾಕಷ್ಟು ಮುಟ್ಟುವದಿಲ್ಲ. 
ಆದ್ದರಿಂದ ಈ ಮಕ್ತೆಗಳ ಲಿಲಾವುಗಳನ್ನು ಮೂರುವರ್ಷದ ಬಗ್ಗೆ ಮಾಡ 
ತಕ್ಕದ್ದು. ಮೂರು ವರ್ಷ ಕಳೆದ ಮೇಲೆ ಲಿಒಲಾವುದಾರನಿಗೆ ಲಿಲಾವಿನಲ್ಲಿ 
ಬೇರೆ ಸ್ತಳದಲ್ಲಿಯ ಬೇರೆ ಹುದ್ದೆಗಳನ್ನು ಬೇಡಲಿಕ್ಕೆ ಕೊಡಬೇಕು.
ಯಾಕೆಂದರೆ ನಮ್ಮ ಜಿಲ್ಲೆಯಲ್ಲಿಯೇ ನೋಡಿದರೆ ಜಿಲ್ಲೆಯ ಸ್ಥಳವನ್ನು ಬಿಟ್ಟು 
ದೂರಯಿದ್ದ ರಾಣೆಗಳಲಿ ಫೌಜದಾರ, ಹವಾಲ್ದಾತ, ನಾಯಿಕ, ಮುಂತಾ   
ದವರು ಹೆಚ್ಚು ಸುಖದಿಂದ ಇದ್ದಾರೆ. ಅದರಂತೆ ಲಮಾಣಿ   ತಾಂಡೆಗಳ   
ಹತ್ತರದಲ್ಲಿದ್ದ ಅಬಕಾರೀ ಇನಸ್ಪೆಕ್ಟರರು ಹೆಚ್ಚು ಆನಂದದಿಂದ ಇದ್ದಾರೆ 
ಸರಕಾರದನರು ಮಾರಲಿಕ್ಕೆ ಇಟ್ಟ ಕಡಿಮೆ ಶಕ್ತಿಯ ಸರಾಯಿ ಕದಿಯುವ 
ಪ್ರಸಂಗವು ಅವರ ಮೇಲೆ ಬರುವದಿಲ್ಲ. ಲಮಾಣೀ ಜನರು ಭಟ್ಟಿಯಿಂದ 
ಮಾಡಿದ ಉತ್ತಮ ಸುರಾಪಾನ ಮಾಡಿ, ಅವರ ವ್ಯಾಪಾರದಲ್ಲಿ ಪಾಲಿಟ್ಟು 
ಯಾವನಾದರೂ ಮೂರು ತಿ೦ಗಳಿಗೊಮ್ಮೆ ಆ ಜನರ ಅನುಮತಿಯಿಂದಲೇ 
ಒಬ್ಬನನ್ನು ಹಿಡಿದು ತಮ್ಮ ಕೆಲಸದಲ್ಲಿ ಕೃತಕೃತ್ಯರಾಗುತ್ತಾರೆ. ಈ 
ಎಲ್ಲ ಸಂಗತಿಗಳನ್ನು ವಿಚಾರ ಮಾಡಿದರೆ ಅದೇ ಅಮಲ್ದಾರನನ್ನು ಅದೇ 
ಸ್ಥಳದಲ್ಲಿ ಕಾಯಂ ಇಡುವದು, ಆತನ ದೃಷ್ಟಿಯಿಂದಾಗಲಿ ಅಥವ ಸರಕಾರ   
ದೃಷ್ಟಿಯಿಂದಾಗಲಿ ಫಾಯದೇಸೀರ ಆಗುವದಿಲ್ಲ. 
ಸರಕಾರದವರು ಹೇಗೆ ಹೇಗೆ ಹೊಸ ಖಾತೇಗಳನ್ನು ನಿರ್ಮಿಸುವರೋ 
ಹಾಗೆ ಲಂಚಗೂಳಿತಕನವು ಹೆಚ್ಚಾಗಿದೆ. ಈಗ ಹೊಸದಾಗಿ ಜನಿಸಿದ ಪೂರೈಕೆ 
ಖಾತೆ ಮತ್ತು ಸೀದಾ ಖಾತೆಗಳನ್ನು ವಿಚಾರಿಸುವಾ. ಆ ಖಾತೆಯ ಕಾಯದೆ 
ಗಳು ಬಹಳ ೊತ್ತರದಿಂದ ಬದಲಾಗುತ್ತವೆ. ಹಿಂದಕ್ಕೆ ಬಾದಶಹನ ಕಾಲಕ್ಕೆ 
ತಾನು ಕೆಲಸ ಮಾಡಬೇಕಾದ ಒಂದು ಕೋಟೆಯ ಕಡೆಗೆ ಹೊರಟ ಒಬ್ಬ
ಸುಬೇದಾರನು ಕುದುರೆಯ ಮೇಲೆ ಬಾಲದ ಕಡೆ ಮಾರಿ ಕುಳಿತಿದ್ದನಂತೆ, 
ತನ್ನ ಸ್ಥಳದ ಮೇಲೆ ಯಾರಾದರೊಬ್ಬ  ಬೇರೆ ಜನರು ನೇಮಕವಾಗುವ
ರೆಂದು ಅವನಿಗೆ ಅಂಜಿಕೆ ಹಾಗೆಯೇ ಈಗಾದರೂ ಮೇಲಿದ ಖಾತೆಗಳಲ್ಲಿ 
ಒಂದು ಬಟ್ಟು ಹುಕುಂ ಹೊರಟು ಅದು ಹಳ್ಳಿಗಳಿಗೆ ಮುಟ್ಟುವದರೂಳಗಾಗಿ 
ಅದರ ವಿರುದ್ಧಾರ್ಥದ ಹುಕುಂಗಳು ಹೊರಡುವವು ಹೀಗಾಗಿ ಆ ಖಾತೆಯಲ್ಲಿ 
ಹಳ್ಳೀ ಜನರಿಗೆ, ಇಷ್ಟೇ ಅಲ್ಲ, ನಿಜವಾಗಿ ವಕೀಲರಿಗೂ ಮತ್ತು ಮ್ರಾಜಸ್ಟ್ರೇಟ
ರಿಗೂ, ಅದರಂತೆ ಮಾಮಲೇದಾರರಿಗೂ ಮೇಲಿನಿಂದ ಹೊರಟ ಹುಕುಂಗಳು
ಗೊತ್ತಿರುವದಿಲ್ಲ. ಅದರಿಂದೆ ಲಕ್ಷ್ಮೀವಂತನಾದ ಬೇಕಾದ ರೈತನನ್ನು ತಂದು, 
ಆತನ ಮೇಲೆ ಆರೋಪಗಳನ್ನು ಹೂರಸಿ ಅನನನ್ನೇ ಕೋರ್ಟಿಗೆ ಎಡತಾಕ 
ಹಚ್ಚಲು ಅಧವಾ ಕೈದಿಯ ಕೋಣೆಯಲ್ಲಿ ಕೊಳಿಸಲು ಬಿಟ್ಟು ಬಿಡಲಿಕ್ಕೆ ಯಾವ
ಅಮಲ್ದಾರನಿಗಾದರೂ ಸಹಜವಾಗಿ ಹೋಗಿದೆ. ಯಾವ ವಸ್ತುಗಳ ದೆಸೆ 
ಯಿಂದ ಯಾವ ಬಗೆಯ ಪರವಾನಗೀ ಅವಶೃಕತೆಯಿಲ್ಲವೋ ಅಂಥ ವಸ್ತು 
ಗಳನ್ನು ಕೊಳ್ಳಲಿಕ್ಕೆ ಮಾರಲಿಕ್ಕೆ ಜಿಲ್ಹೆಯ ಒಳಗೆ ತರಿಸಲಿಕ್ಕೆ ಅಥವಾ 
ಜಿಲ್ಹೆಯ ಹೊರಗೆ ಒಯ್ಯಲಿಕ್ಕೆ ಹೀಗೆ ಯಾವದೇ ಕೆಲಸಕ್ಕಾದರೂ ತಮ್ಮ 
ಅಪ್ಪಣೆ ಪಡೆಯಬೇಕೆಂದು ಹೇಳಿ ಲಕ್ಷ್ಮಿಯನ್ನೆ ವಶಮಾಡಿಕೊಳ್ಳಲು 
ಠಾಣೆಯ ಸಿಪಾಯಿಯಿಂದ ಮಾಮಲೇದಾರರ ವರೆಗೆ ಯಾರಿಗಾದರೂ ಬರು 
ವದು. ಇಂಥ ಕಾಯದೆಗಳು ಅಮಲಿನಲ್ಲಿರುವಾಗ ತಮ್ಮ ನೋಕರ ಜನರ 
ಸಂಬಳದ ಒಗ್ಗೆ ವೆಚ್ಚ ಮಾಡುವದೆಂದರೆ ಕೇವಲ ಹುಚ್ಚುತನದ ಕೆಲಸ. 
ಇದರಲ್ಲಿ ಎಷ್ಟೋ ಇನಕಂಟಾಕ್ಸ ಅಮಲ್ದಾರರ ಹೇಳಿಕೆ ಲಕ್ಷ್ಯದಿಂದ ಅಭ್ಯಶಿಸು 
ವಂಥದಿರುತ್ತದೆ. ಒಬ್ಬ ವ್ಯಾಪಾರಿಯು ತನ್ನ ವ್ಯಾಪಾರದಲ್ಲಿ ಎರಡೇ ಸಾವಿರ 
ಫಾಯದೆ ಅಗಿದೆ ಎಂದು ಲೆಕ್ಕದಿಂದ ತೋರಿಸಿದರೂ ಅವನಿಗೆ ಕಳ್ಳಪೇಟಿಯಲ್ಲಿ 
ಕನಿಷ್ಟ ಪಕ್ಷಕ್ಕೆ ಹತ್ತುಸಾವಿರವಾದರೂ ಲಾಭವಾಗಿರಬೇಕೆಂದು ಆಕಾರದ 
ಪ್ರಮಾಣವನ್ನು ಗೊತ್ತುಪಡಿಸುತ್ತಾರೆ. ವ್ಯಾಪಾರಸ್ಥರು ಕಳ್ಳ ಪೇಟೆಯಲ್ಲಿ 
ಹಣ ತಿಂದರೆ ಅಮಲ್ದಾರನು ಏಕವ ತಿನ್ನಬಾರದು? 
ಸದ್ಯಕ್ಕೆ ಇಲ್ಲಿಯ ವ್ಯಾಪಾರಸ್ಥರನ್ನು ಬದಿಗಿರಿಸಿ,  ತಮ್ಮ ದೇಶದ ವ್ಯಾಪಾ 
ರಸ್ಥರಿಗೆ ಮತ್ತು ಜನರಿಗೆ ಎಲ್ಲ ಬಗೆಯ ಲಾಭ ಮುಟ್ಟಬೇಕೆಂಬ ಇಚ್ಛೆಯಿಂದ
ಹಿಂದುಸ್ತಾನದಲ್ಲಿ ವ್ಯಾಪಾರ ಹೂಡಿದ ಇಂಗ್ಲಂಡದ 'United ಕಿಂಗಡಮ್‌ 
ಸರಕಾರ ಕಮರ್ಶಯಲ್‌' (U.K.C.C). ಅವರಿಗೆ ತಮ್ಮ ವ್ಯಪಾರ 
ವನ್ನು ಒಪ್ಪಿಸಿರುವದು. ಎಲ್ಲರಿಗೂ ಗೊತ್ತೇ ಇದೆ. ಆದ್ದರಿಂದ ನಾವು 
ಹೇಳಿದ ಸೂಚನೆಯಾದರೂ ಸರಕಾರಕ್ಕೆ ಸಲ್ಲುವದೆಂದು ಆಶೆ.
=============================
  ಬೀಡಿ ಸೇದುವ ಸಂಸ್ಕೃತಿ
 
ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು 
ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳ ಬಾರದು. 
ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. 
ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ ನನಗೆ 
ಸಿಟ್ಟು ಬರಲಿಲ್ಲ. ಆದರೆ ನನ್ನ ಕಾರ್ಯ ಬಾಹುಲ್ಯದ ಮೂಲಕ ನಾನು 
ನಾಲ್ಕು ಜನರಲ್ಲಿ ಅಡ್ಡಾಡಹತ್ತಿದ ಮೇಲೆ, ಸಾನಕಾಶವಾಗಿ ನನ್ನ ಭ್ರಮವು 
ದೂರಾಗಹತ್ತಿತು ಮತ್ತು ಬೀಡಿ ಸೇದುವದರಿಂದ ಅನೇಕ ಲಾಭಗಳು 
ನನಗೆ ಕ್ರಮವಾಗಿ ತಿಳಿಯಹತ್ತಿದವು. ಇಷ್ಟೇ ಅಲ್ಲ ಬೀಡಿ ಸೀದುವಂಥ ಸಣ್ಣ 
ಪುಟ್ಟ ವ್ಯಸನಗಳನ್ನು ಸಮಾಜದಲ್ಲಿ ರೂಢಿ ಮಾಡಿದ ಮಹಾತ್ಮರು ಒಂದು 
ಬಗೆಯ ಸಂಸ್ಕೃತಿಯನ್ಸೆ ನಿರ್ಮಿಸಿದರೆಂದು ನನ್ನ ತಿಳಿವಳಿಕೆಯಾಯಿತು. 
ಸಣ್ಣ ವಯಸ್ಸಿನಲ್ಲಿಯೇ ಮನುಷ್ಯನ ಶೀಲ ಸ್ವಭಾವಗಳ ವಿಕಾಸವಾಗು 
ತ್ತದೆ. ಅಂಥ ವಯಸ್ಸಿನಲ್ಲಿ ಅತನಿಗೆ ಪರೋಪಕಾರ ಮಾಡಲಿಕ್ಕೆ ಅವಕಾಶ 
ಕೊಟ್ಟು ಅದರ ಅಭ್ಯಾಸವನ್ನು ಕಲಿಸಬೇಕಾಗುತ್ತದೆ. ತಮ್ಮ ಕಡೆಗೆ ಇದ್ದ 
ಒಂದು ಲವಂಗೀ ಬೀಡಿಯನ್ನು ತಮ್ಮ ನೆರೆಯವರಿಗೆ ಕೊಡುವದು ಅಥವಾ 
ಒಂದು ನಿಮಿಷ ಮಾತ್ರವೇಕಾಗಲೊಲ್ಲದು ತಮ್ಮ ಬೆಂಕಿ ಪೆಟ್ಟಿಗೆಯನ್ನು 
ಆತನ ಉಪಯೋಗಕ್ಕಾಗಿ ಕೊಡುವದು, ಇಲ್ಲವೇ ತಮ್ಮ ಬೀಡಿಯನ್ನು ಹೊತ್ತಿ 
ಸುವ ಸಲುವಾಗಿ ಕೊರೆದ ಕಡ್ಡಿಯನ್ನು ಆರಿಸುವ ಮೊದಲು ನೆರೆಯವನ 
ಬಾಯಿಯಲ್ಲಿಯ ಬೀಡಿಯ ಮುಂದೆ ಹಿಡಿಯುವದು,  ಮುಂತಾದ ಕೃತಿಗಳು 
ಸಣ್ಣವಾಗಿಯೇ ಕಾಣಿಸುವವು. ಆದರೆ ಸ್ಪಲ್ಪ ವಿಚಾರ ಮಾಡಿದರೆ ಮನುಷ್ಯನ 
ಪರೋಪಕಾರ ವೃತ್ತಿಯ ವಿಕಾಸವಾಗಲಿಕ್ಕೆ ಇವುಗಳ ಉಪಯೋಗವು ಹೆಚ್ಚಾಗಿ 
ಇದ್ದುದ ಕಂಡು ಬರುವದು. 
ದೇಶಾಟನ ಮಾಡಿದ್ದರಿಂದ ಆಗುವ ಲಾಭಗಳನ್ನು ಕವಿಯು ಕೆಳಗಿನಂತೆ 
ತೋರಿಸಿರುವನ.. " ದೇಶಸಂಚಾರಗಳಿಂದ ಪಂಡಿತರ ಸಂದರ್ಶನ, ಆಲ್ಲಲ್ಲಿ   
ಹೊಸ ಹೊಸ ವಿಷಯಗಳ ಪರಿಚಯವಾಗಿ ಮನುಷ್ಯನು ಬುದ್ಧಿವಂತನಾಗಿ,
ಜ್ಞಾನವೃದ್ಧಿಯಾಗುವದು. " 
ಕವಿಯ ಈ ಹೇಳಿಕೆಯನ್ನು ನಾವಾದರೂ ಒಪ್ಪುತ್ತೇವೆ. ಆದರೆ 
ಮೋಟಾರಿನಲ್ಲಿ ಅಧವಾ ಉಗಿಬಂಡಿಯಲ್ಲಿ ಪ್ರವಾಸ ಮಾಡುವಾಗ್ಗೆ ಸುಮ್ಮನೆ 
ಖಿಡಕಿಯಲ್ಲಿ ಮೋರೆ ಹಾಕಿ ಬೈಲು ಭೂಮಿಯ ಕಡೆಗೆ ಅಧವಾ 
ಮುಗಿಲ ಕಡೆಗೆ ಶೂನ್ಯ ದೃಷ್ಟಿಯಿಂದ ನೋಡುತ್ತ ಕುಳಿತ ಗೃಹಸ್ತರಿಗೆ 
ಕವಿಯ ಮೇಲೆ ವರ್ಣಿಸಿದ ಪ್ರವಾಸದ ಲಾಭಗಳು ದೊರಕುವದೆಂತು? 
ಅಂಧವರಿಗೆ ಜನರ ಪರಿಚಯವಾದರೂ ಹೇಗಾಗಬೇಕು? ಪರಿಚಯ ಮಾಡಿ 
ಕೊಳ್ಳ ಬೇಕೆಂಬ ಇದಿರಿನಲ್ಲಿ ಕುಳಿತ ಗೃಹಸ್ಥನಿಗೆ " ತಾಪು ಯಾರು? ಎಲ್ಲಿ 
ಹೊರಟಿರಿ? ಎಲ್ಲಿಯವರು? ಯಾಕೆ ಹೊರಟಿರಿ ? ಮುಂತಾದ ಪ್ರಶ್ನೆಗಳನ್ನು 
ಸುರಿಸಿದರೆ ಆತನ ಪರಿಚಯವಾಗುವ ಬದಲು ಇಲ್ಲದ ಉಸಾಬರಿ ಮಾಡಿದ 
ಬಗ್ಗೆ ಮೊಸಡಿಯ ಪೂಜೆಯಾಗುವ ಸಂಭವವು ಹೆಚ್ಚು. ಇಂಥ ಗೊಡವೆಗೆ 
ಹೋಗದೆ, ಕಿಸೆಯೊಳಗಿಂದ ಎರಡು ಬೀಡಿ ತೆಗೆದು ಒಂದನ್ನು ತಮ್ಮ ಬಾಯಲ್ಲಿ 
ಇಟ್ಟುಕೊಳ್ಳಬೇಕು ಮತ್ತೊಂದನ್ನು ಆತನಿಗೆ ಕೊಡಬೇಕು. ಅದನ್ನು ಅವನು 
ಮುಗುಳು ನಗೆಯಿಂದ ಸ್ವೀಕರಿಸಿದರೆ ನಮ್ಮ ಕೆಲಸ ಸಾಧಿಸಿತೆಂದು ತಿಳಕೊಳ್ಳ
ಬೇಕು. ಬೀಡಿ ತಕ್ಕೊಳ್ಳದಿದ್ದರೆ ಕನಿಷ್ಟ ಪಕ್ಷಕ್ಕೆ ಆ ಗೃಹಸ್ಥನು ಆಭಾರ 
ಪ್ರದರ್ಶನವನ್ನಾದರೂ ಮಾಡುವನು. ಅದನ್ನೂ ಮಾಡದಿದ್ದರೆ ಕಡೆಗೆ 
ಇರುಕಳ ಎಮ್ಮೆಯಂತೆ ಮೈ. ಮೇಲಾದರೂ ಬರಲಿಕ್ಕಿಲ್ಲ. ಇಂಧ ಪ್ರಸಂಗದಲ್ಲಿ 
ಆತನ ಬಣ್ಣ ತಿಳಿದು ಹರಟೆ ಪ್ರಾರಂಭಿಸಲು ಅಡ್ಡಿ ಇಲ್ಲ... ಈ ರೀತಿಯಿಂದ 
ವಿದ್ದನ್‌ ಮಣಿಗಳ ಕೂಡ ಸಂಭಾಷಣೆಯಾಗಿ ಮನುಷ್ಯನಿಗೆ ಜ್ಞಾನ ಪ್ರಾಪ್ತಿ 
ಯಾಗುತ್ತದೆ. 
ಇತ್ತೀಚೆಗೆ ಸಮಾಜ ರಚನೆಯ ಬಗ್ಗೆ ಜನರ ವಿಚಾರಗಳಲ್ಲಿ ಬಹಳ
ವೇಗದಿಂದ ಬದಲಾವಣೆಯಾಗಹತ್ತಿದೆ. ಸಮಾಜದಲ್ಲಿ ಉಚ್ಚ, ನೀಚ ಭಾವ 
ಗಳ ನಾಮಾವಶೆಷವಾಗಬೇಕು. ಇಷ್ಟೇ ಅಲ್ಲ ವೃದ್ಧರು, ತರುಣರು, ಗಂಡಸರು 
ಹೆಂಗಸರು ಬಡವರು ಶ್ರೀಮಂತರು ಎಂಬ ಭೇದ ಭಾವಗಳು ಸಹ ಜನರಿಗೆ 
ಗ್ರಾಮ್ಯವೆನಿಸಹತ್ತಿವೆ... ಈ ಆಧುನಿಕ ವಿಶ್ವದಲ್ಲಿ ಮೇಲೆ ಹೇಳಿದ ಭೇದ
ಭಾವಗಳನ್ನು ನಷ್ಟ ಮಾಡಲಿಕ್ಕೆ ಬೀಡಿ , ಬೆಂಕಿಪೆಟ್ಟಿಗೆಯ ಸಂಗಮದಥ ಬೇರೆ
ರಾಮಬಾಣ ಉಪಾಯವು ಎಲ್ಲಿಯೂ ಸಿಗಲಾರದು. ಕೇವಲ ಅಮೃತಪಾನ 
ಮಾಡಿ ಉದರ ನಿರ್ವಾಹಮಾಡುವ ಇಂದ್ರಲೋಕದಲ್ಲಿಯ ದೇವತೆಗಳಲ್ಲಿಯೂ 
ಸಹ ಭೇದ ಭಾವಗಳಿರಬಹುದು. ಆದರೆ ಬೀಡಿಸೇದುವ ಆ ಮಾನವರಲ್ಲಿ 
ಆ ಭೇದ ಭಾವವು ಕಾಣಲಿಕ್ಕಿಲ್ಲ. ಯಾರು ಬೇಕಾದವರು ಬೇಕಾದವರ ಕಡೆ 
ಯಿಂದ ಬೀಡಿ ತಕ್ಕೊಳ್ಳಬಹುದು. ಮತ್ತು ಬೇಕಾದವರಿಗೆ ಕೊಡಬಹುದು. 
ಬೀಡಿ ಸೇದಲಿಕ್ಕೆ ಅಥವಾ ಹೊಗೆ ಬಿಡಲಿಕ್ಕೆ ಯಾವ ಸ್ಥಳದಲ್ಲಿಯೂ ಅಥವಾ 
ವೇಳೆಯಲ್ಲಿಯೂ ಅಡ್ಡಿ ಇಲ್ಲ. ಒಂದು ವೇಳೆ ಹಾಗಿದ್ದರೆ ಇರಬಹುದು. ಕೆಲವು 
ತರುಣರು ಬೀಡಿ ಬೆಂಕಿಪೆಟ್ಟಿಗೆಗಳ ಗೆಳೆತನವನ್ನು ಹೊಸದಾಗಿ ಮಾಡಿಕೊಳ್ಳು 
ವಾಗ ಹಿರಿಯರಿಗೆ ಹೆದರುವರು. ಸಾಧಾರಣವಾಗಿ ಅನರು ಅನಾರೋಗ್ಯಕರ 
ವಾದ ಸ್ಥಳದಲ್ಲಿ ಬೀಡಿ ಬೆಂಕಿಪೆಟ್ಟಿಗೆಗಳ ಪ್ರಥಮಭೆಟ್ಟಿಯನ್ನು ತಕ್ಕೊಳ್ಳುತ್ತಾರೆ. 
ಆದರೆ ಅಂಧ ಹಿರಿಯರಿಗೆ ಅಧವಾ ಅವರಿಗೆ ಅಂಜುವ ತರುಣರಿಗೆ ಒಂದು 
ವೇಳೆ ಈ ಹೊಸ ಸಂಸ್ಕೃತಿಯ ಮಹತ್ವವು ತಿಳಿಯಿತೆಂದರೆ ಈ ಭೇದ 
ಭಾವವೂ ಅಥವಾ ಈ ಭೀತಿಯು ತನ್ನಷ್ಟಕ್ಕೆ ತಾನೇ ಕಮರಿ ಹೋಗುವದು. 
' ಜ್ಞಾನಭಾಂಡಾರ 'ವೆಂದು ವಿಚಾರ ಮಾಡಲಾಗಿ. ಒಂದೇ ಒಂದು 
ಬೀಡಿಯಲ್ಲಿ ಜ್ಞಾನವು ತುಂಬಿಕೊಂಡಿದುದು ಕಂಡುಬರುನದು ಮಧ್ಯ ಪ್ರಾಂತ 
ದಲ್ಲಿರುವ ಗೊಂಡಿಯಾದ ಹತ್ತರದಲ್ಲಿರುವ. ಅರಣ್ಯದಿಂದ ಬೀಡಿಎಲೆ 
ಗಳನ್ನು ಬೆಳಗಾವಿ ಜಿಲ್ಪೆಯಲ್ಲಿ ನಿಪ್ಪಾಣಿ ಭಾಗದೊಳಗಿನ ತಂಬಾಕನ್ನೂ 
ಕೂಡಿಸಿ ಪುಣೆಯಲ್ಲಿ ಓಣಿ ಓಣಿಗಳಲ್ಲಿ ವಾಸಿಸುವ ಸ್ತ್ರೀ ಪ್ರರುಷರ ಕಡೆಯಿಂದ 
ಸಣ್ಣ ದೊಡ್ಡ ಬೀಡಿಗಳನ್ನು ಕಟ್ಟಿಸಿ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು 
ಕೊಟ್ಟು, ಅವುಗಳನ್ನು ದೊಡ್ಡ ದೊಡ್ಡ ಶಹರ ಪಟ್ಟಣಗಳಲ್ಲಿ ಮಾರಲು 
ಬೇಕಾಗುವ ಶಾರೀರಕ ಶ್ರಮವು ದುಡ್ಡು, ಸಂಘಟನೆ ಮುಂತಾದವುಗಳನ್ನು 
ವಿಚಾರ ಮಾಡಿ ನೋಡಿದರೆ, ನಾವು ಚಿಕ್ಕಂದಿನಲ್ಲಿ ಓದಿದ ನಿಸ್ಮಯಕಾರಕ 
ಕಡಬಿನ ಕಥೆಯ 'Wonderful Pudding' ನೆನಪಾಗುತ್ತದೆ. 
ಇಷ್ಟರ ಮೇಲೆಯೇ ಬೀಡಿಯ ಮಹತ್ವವು ತೀರುವಂತಿಲ್ಲ. ಆರ್ಥಿಕ, 
ವ್ಯಾವಹಾರಿಕ, ಮತ್ತು ಮುಖ್ಯವಾಗಿ ಸಾಂಸ್ಕೃತಿಕ ದೃಷ್ಟಿಯಿಂದಾಗುವ 
ಬೀಡಿಯ ಲಾಭವನ್ನು ನಾವು ಹೇಳಿದೆವು. ಇನ್ನು ಕಲೆಯ ದೃಷ್ಟಿಯಿಂದ ಸಹ 
ನಾವು ಬೀಡಿಯ ವಿಚಾರ ಮಾಡಬಹುದು.
ಕಿಸೆಯೊಳಗಿಂದ ಬೀಡಿಯನ್ನು ತೆಗೆದು ಬಾಯಲ್ಲಿಟ್ಟು ಕೊಳ್ಳುವದು 
ಒಂದು ಸಣ್ಣ ಕೆಲಸವಾದರೂ ಬೀಡಿಯನ್ನು ತುಟಿಯಲ್ಲಿ ಹೇಗಿಟ್ಟು ಕೊಳ್ಳ 
ಬೇಕು, ಎಡಗಡೆ ಮೂಲೆಯಲ್ಲಿಟ್ಟುಕೊಳ್ಳಬೇಕೋ? ಬಲಗಡೆಯ ಮೂಲೆಯ
ಲ್ಲಿಟ್ಟುಕೊಳ್ಳಬೇಕೊ, ಬಾಯಲ್ಲಿ ಬೀಡಿಯನ್ನಿಟ್ಟು ಕೊಂಡು ಮಾತಾಡಲಿಕ್ಕೆ 
ಬರುವಷ್ಟು ಹಗುರಾಗಿ ಹಿಡಿಯಬೇಕೊ, ಅಥವಾ ಗಟ್ಟಿಯಾಗಿ ಹಿಡಿಯ 
ಬೇಕೊ ಇತ್ಯಾದಿ ವಿಷಯಗಳಲ್ಲಿ ಕೌಶಲ್ಯವು ಉಂಟು. ಕಲೆಯೂ ಉಂಟು. 
ಬಾಯಿಯಲ್ಲಿ ಬೀಡಿ ಹಿಡಿಯುವ ಠೀವಿಯ ಮೇಲಿಂದ ಆ ಮನುಷ್ಯನ ಭಾವ 
ಪರೀಕ್ಷೆಯನ್ನಾದರೂ ಒಮ್ಮೊಮ್ಮೆ ಮಾಡಲಿಕ್ಕೆ ಬರುವದು. ಅದೇ ಪ್ರಕಾರ 
ಹೊಗೆಬಿಡುವದಾದರೂ ಕೂಡ ಒಂದು ವಿಷಯವಾಗಿದೆ. ಒಮ್ಮೆಲೇ ಹೊಗೆಯ 
ತುತ್ತನ್ನು ಹೊರಗೆ ಬಿಟ್ಟು ಎಲ್ಲರ ತಲೆಯ ಮೇಲೆ ಹೊಗೆಯ ಮೋಡನ್ನು 
ಕವಿಸುವದು. ಅಥವಾ ನಿಲ್ದಾಣದಿಂದ ಹೊರಡುವ ತಯಾರಿಯಲ್ಲಿದ್ದ ಉಗೆ 
ಬಂಡಿಯ ಇಂಜನ್‌ದಂತೆ ಭುಸ್‌, ಭುಸ್‌, ಹೀಗೆ ಸ್ಪರ ತೆಗೆಯುತ್ತ 
ಸ್ವಲ್ಪು ಸ್ವಲ್ಪೇ ಹೊಗೆ ಬಿಡುವದು, ಅಥವಾ ಬಾಯಲ್ಲಿ ಸ್ವಲ್ಪು ಸ್ವಲ್ಪೇ ಹೊಗೆ 
ತಳ್ಳೊಂಡು ಅದನ್ನೇ ಕಲ್ಲು ಸಕ್ಕರೆಯ ಹರಳಿನಂತೆ. ಬಹಳ ಹೊತ್ತಿನವರೆಗೆ 
ಇಟ್ಟು ಕೊಳ್ಳುವದು. ಇವೆಲ್ಲ ಕಲಾಕೃತಿಗಳು. ಮತ್ತು ಇದರಿಂದ ಬೀಡಿ ಭಕ್ತರು 
ಹೇಗೆ ಬರಬರುತ್ತ ಕಲೋಪಾಸಕರಾಗುತ್ತಾರೆಂಬುದನ್ನು ನಮ್ಮ ನಿದರ್ಶನಕ್ಕೆ 
ತಂಡು ಕೊಡುತ್ತವೆ. 
ಬೀಡಿ ಸೇದುವ ಅಭ್ಯಾಸವಿತ್ತೆಂದರೆ ಒಮ್ಮೊಮ್ಮೆ ಬೀಡಿ ಚುಂಬನ 
ಉದ್ಭವಿಸುತ್ತದೆ. ನಮ್ಮ ಮುಂದೆ ಒಬ್ಬ ಗೃಹಸ್ಥನು ಬೀಡಿ ಸೇದುತ್ತ 
ಕುಳಿತಿರುವನೆಂದು ಕಲ್ಪಿಸುವಾ, ಅವನ್ನು ನೋಡಿ ನಮಗೂ ಕೂಡ ಬೀಡಿ 
ಸೇದುವ ನೆನಪಾಗುತ್ತದೆ. ಕೂಡಲೆ ಕಿಸೆಯೊಳಗಿಂದ ಒಂದು ಬೀಡಿ ತೆಗೆಯು 
ವೆವು. ಆದರೆ ದುರ್ದೈವದಿಂದ ನಮಲ್ಲಿ ಕಡ್ಡಿ ಇರಬಾರದು. ಅಥವಾ ನಮಗೆ 
ತಿಳಿಯದೆ ನಮ್ಮ ಪೆಟ್ಟಿಗೆಯು ಖಾಲಿಯಾಗಿರಬೇಕು ಇಂಥ ದುರ್ಧರೆ 
ಪ್ರಸಂಗದಲ್ಲಿ ನಾವು ನಮ್ಮ ಸುತ್ತಮುತ್ತು ನೋಡಹತ್ತುವೆವು. ನಮ್ಮ ಹಾವ 
ಭಾವಗಳನ್ನು, ನೋಡಿ ನಮಗೊದಗಿದ ಸಂಕಟ ಪ್ರಸಂಗವನ್ನು ಇದರಿನಲ್ಲಿ 
ಕುಳಿತ ಭಕ್ತನು ಕೂಡಲೇ ಕಂಡುಹಿಡಿಯುವನು. ನತ್ಯದ ಪರೋಪಕಾರ 
ವೃತ್ತಿಗನುಸಾರವಾಗಿ ಆ ಗೃಹಸ್ತನು ತನ್ನಬೆಂಕಿ ಪೆಟ್ಟಿಗೆಯನ್ನುನಮಗೆ ಕೊಡ 
ಬೇಕೆಂದು ಹುಡುಕಹತ್ತುವನು. ಅದು ಅವನಿಗೆ ಸಿಗುವದಿಲ್ಲ. ಸಿಕ್ಕರೂ ಅದ 
ರಲ್ಲಿ ಕಡ್ಡಿ ಗಳಿಲ್ಲವೆಂದು ತಿಳಿಯೋಣ, ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ನಮ್ಮನ್ನು 
ಎಳ್ಳಷ್ಟೂ ಎದೆಗುಂದಿಸದೆ ಯಾರ ಬಾಯಲ್ಲಿ ಹೊತ್ತಿದ ಬೀಡಿ ಇರುವದೋ, 
ಆ ಗೃಹಸ್ಸನು ಪ್ರೇಮದಿಂದ ಬಾಗಿ ಮೋರೆ ಮುಂದಕ್ಕೆ ಮಾಡುವನು. 
ಆ ವೇಳೆಗೆ ನಾನಾದರೂ ನಮ್ಮ ಬಾಯಲ್ಲಿ ಹೊತ್ತದೆ ಇದ್ದ   ಬೀಡಿಯನ್ನಿಟ್ಟು
ಕೊಂಡು ಅಂತ್ಯಂತ ಆದರದಿಂದ ಬಾಗುಪೆವು. ಈ ಕ್ರಿಯೆಯಲ್ಲಿ ಎರಡು ಬೀಡಿ 
ಗಳ ತಲೆಗಳು ಒಂದಾಗುವವು ಮತ್ತು ಇಬ್ಬರೂ ಒಂದೇ ವೇಳೆಯಲ್ಲಿ ಶ್ವಾಸ 
ಜಗ್ಗಿದರೆ ಐದಾರು ಸೆಕೆಂದುಗಳಲ್ಲಿ ನಿರ್ಜೀವನಾದ ಬೀಡಿಯು ಸಜೀವವಾಗು 
ವದು ಮುಂದೆ ಎರಡೂ ಬಾಯಿಯೊಳಗಿಂದ ಹೊಗೆಯು ಹಾಯಹೆತ್ತ್ಮುವದು. 
ಈ ರೀತಿ ಬೀಡಿ ಹೊತ್ತಿಸುವದಕ್ಕೆ ನಾವು ಬೀಡಿ ಚುಂಬನವೆಂದು ಕರೆಯು 
ವೆವು. ಇದರಲ್ಲೇನು ತಪ್ಪು. 
ಇನ್ನು ಬೇಕಾದಂಥ ಚಲೋ ಪದಾರ್ಥಕ್ಕೂ ಹೆಸರಿಡುವ ಸರ್ವ 
ಜ್ಞರು ಜಗತ್ತಿನಲ್ಲಿ ಉಂಟು, ಇಂಥ ಜನರು ಬೀಡಿ ಸೇದುವದರ ಕಡೆಗೆ 
ವಕ್ರದೃಷ್ಟಿಯನ್ನು ಬೀರುನರು. ಅವರು ಯಾವಾಗಲೂ ಮಾಡುವ ತಕರಾ 
ರೆಂದರೆ ಬೀಡಿ ಸೇದುವವನು ಬೇಕಾನಾಗ ಬೇಕಾದಲ್ಲಿ ಕೆಮ್ಮುವನ್ಕು ಉಗುಳು 
ವನು ಹೊಗೆ ಬಿಡುವನು ಮತ್ತು ತನ್ನ ಈ ಸೊಗಡುತನದಿಂದ ಎರಡನೇಯವ 
ರಿಗೆ ತೊಂದರೆ ಆಗಬಹುದೆಂಬ ಕಲ್ಪನೆಯು ಕೂಡಾ ಅನನಿಗೆ ಇರುವದಿಲ್ಲ. 
ಇಷ್ಟು ಸಂಸ್ಕೃತಿ ಹೀನನಾಗುತ್ತಾನೆ. ಬೀಡಿ ಸೇದುವ ಭಕ್ತರು ಅಲ್ಲಲ್ಲಿ 
ಬೂದಿ ಚಟಕೆ ಹೊಡೆಯುತ್ತ, ಬೇಕಾದಲ್ಲಿ ಬೀಡಿ ಕಡ್ಡಿಗಳನ್ನು ಒಗೆ 
ಯುತ್ತ, ಮತ್ತು ಬಾಯೊಳಗಿನ ಹೊಗೆಯಿಂದ ಸುತ್ತಮುತ್ತಲಿನ ಹವೆಯನ್ನು 
ಕೆಡಿಸುತ್ತ, ಜನರ ಸೋವು, ಗೈರಸೋವಿಗಳನ್ನು ಲಕ್ಷಕ್ಕೆ ತಾರದೆ ಜಗತ್ತಿನಲ್ಲಿ 
ಅಲೆಯುತ್ತಾರೆ. ಇದು ಅವರ ಮೇಲೆ ಹೊರೆಸುನ ಮತ್ತೊಂದು ಆರೋಪ. 
ಆದರೆ ನಾವು ಮೇಲೆ ಹೇಳಿದಂತೆ ಈ ಕಲಿಯುಗದಲ್ಲಿಯೂ ಕೂಡ ದೇವರಿಗೆ 
ಹೆಸರಿಡುವವರಿದ್ದಾರೆ. ಅಂದ ಮೇಲೆ ಬೀಡಿ, ಸೇದುವನರೆ ಮೇಲೆ ಪುಷ್ಪಗಳು 
ಏರಿದರೆ ಇದರಲ್ಲಿ ಆಶ್ಚರ್ಯವೇನು. ಒಂದು ವೇಳೆ ಬೆಂಕಿ ಕಡ್ಡಿಯು ಹತ್ತರ 
ವಿದ್ದರೆ ಅದರ ಉಸಯೋಗ ಮಾಡಿ ಪಂಚಪಕ್ವಾನ್ನಗಳ ಭೋಜನವನ್ನು 
ತಯಾರಿಸಬಹುದು. ಅದರಂತೆ ಅದೇ ಕಡ್ಡಿಯಿಂದ ಮೃತದೇಹ ಸಂಸ್ಕಾರ
ಮಾಡಬಹುದು. ಅಥವಾ ಒಬ್ಬರ ಮನೆಗೆ ಹಚ್ಚಲಿಕ್ಕೂ ಬರುವದು, ಇಷ್ಟರ 
ಮೇಲಿಂದಲೇ ನಾವು ಪದಾರ್ಥ ಯಾವದೇ ಇದ್ದರೂ ಅದು ಉಪಯೋಗ 
ಮಾಡುವವನ ಮೇಲೆ, ಅದು ಚಲೋ ಅಥವಾ ಕೆಟ್ಟವೆಂಬುದು ಅನಲಂಬಿಸಿರು 
ತ್ತದೆ, ಎಂದು ಉಪದೇಶ ಮಾಡಬಹುದು. ಇದರ ಮೇಲಿಂದ ಹಿಂದು 
ಮುಂದಿನ ವಿಚಾರ ಮಾಡದೆ ಬೀಡಿ ಸಂಸ್ಕೃತಿಗೆ ಹೆಸರಿಡುವದು ಮೂರ್ಖ 
ತನದ್ದೆಂದು ತಿಳಿಯಬೇಕು.
=====================================
  ಅಮೀನಗಡದ ಸಂತೆ. 

ಅಮೀನಗಡದ ಸಂತೆ ದೊಡ್ಡದು. ಸುತ್ತಲಿನ ಇಪ್ಪತ್ತು ಹರದಾರಿ 
ಇಷ್ಟು ದೊಡ್ಡ ದನಗಳ ಸಂತೆ ಕೊಡುವದಿಲ್ಲ. ಅದರಲ್ಲಿ ಈ ವರ್ಷ ಬರ 
ಬಿದ್ದು ದುರ್ಭಿಕ್ಷಾದ್ದರಿಂದ ದನದ ಸಂತೆಗೆ ಮತ್ತಿಷ್ಟು ಕಳೆ ಏರಿತ್ತು.
ಈ   ಹೆಸರಾದ ಸಂತೆಯಲ್ಲಿ ಮತ್ತಾವ ವಸ್ತುಗಳನ್ನು ಕೊಳ್ಳುವ ಅಥವಾ ಮಾರುವ 
ವ್ಯವಹಾರವಾಗುವದಿಲ್ಲ. ಆದರೆ ಎಲ್ಲಿ ನೋಡಿದಲ್ಲಿ ದನಗಳು ಮಾತ್ರ 
ಕಾಣುವವು. 
ಈ ವರ್ಷ ಕರಿಸಾಲವೆಂದು ಮೊದಲೇ ಹೇಳಿದ್ದೇವೆ. ಆದ್ದರಿಂದ 
ಸಂತೆಯಲ್ಲಿ ಒಂದು ಹಿಂಡುವ ಎಮ್ಮೆ ಅಥವಾ ಆಕಳವನ್ನು ತಕ್ಕೊಂಡು ಅದರ 
ಹೈನವನ್ನು ಉಣ್ಣ ಬೇಕೆಂಬ ಅಭಿಲಾಷೆಯಿಂದ, ಎಮ್ಮೆ ಆಕಳನ್ನು ಹುಡುಕುವ 
ಸವಿಗಾರರು ಅಲ್ಲಿ ಕಂಗೊಳಿಸುವ ಬಗೆ ಹ್ಯಾಗೆ? ಮನೆಯಲ್ಲಿ ಬೇಕಾದಷ್ಟು 
ಹತ್ತೀಕಾಳುಂಟು. ಒಂದು ಸಣ್ಣ ಹೋರಿಗರುವನ್ನು ವೈದು, ಮೆಯಿಸಬೇಕೆಂಬ 
ಲವಲವಿಕೆಯುಳ್ಳ ಒಬ್ಬ ಒಕ್ಕಲಿಗನು ಸಹ ಆ ಸಂತೆಯಲ್ಲಿ ಇದ್ದಿಲ್ಲ. ಇದೇ 
ವರ್ಷ ಹೆಗಲು ಹೆಚ್ಚಿದ ಬಿಳೆ ಹೊಸ ಹೋರಿಯ ಜೋಡಿಗೆ ಅದರಂಥ ಬಿಳೇ 
ಹೋರಿಯನ್ನೇ ಕೊಳ್ಳುವ ಉಬ್ಬು ಯಾರ ಮೋರೆಯ ವೇಲೂ ಹೊಳೆಯು 
ತ್ತಿದ್ದಿಲ್ಲ. 
ನದೀ ವಂಡೆಯೆ ಮಡಿಯಲ್ಲಿ ಕಟ್ಟಿ ಮೆಯಿಸಿದ್ದರಿಂದ ತೆನ್ನ ಮೆಚ್ಚಿನ 
ಆಕಳವು ಕೈಯಿಟ್ಟರೆ ಮಾಸುವದೆಂದು ಅದರ ಮೇಲೆ ಜೂಲು ಹಾಕಿ 
ಮಾರಾಟಕ್ಕೆ ತಂದ ಆಕಳ ಒಡೆಯನು ಆ ಸಂತೆಯಲ್ಲಿ ಇದ್ದಿಲ್ಲ... ಗೋದಿಯ 
ಹುಗ್ಗೀ ತಿರಿಸಿದ್ದರಿಂದ ತನ್ನ ಹೋರಿ ಕಸಿವಿನದು, ಬೇಕಾದರೆ ಕಲ್ಲೆಳಸಿ 
ನೋಡಿ ಪರೀಕ್ಷಿಸಿ ಹೋರಿಯನ್ನು ಕೊಳ್ಳಬೇಕಂದು ಅಭಿಮಾನದಿಂದ ಹೇಳುವ 
ಸೌಭಾಗ್ಯವು ಆ ಸಂತೆಯಲ್ಲಿ ಯಾರ ಪಾಲಿಗೂ ಬಂದಿದ್ದಿಲ್ಲ.
ಒಣ ಚಿಪ್ಪ್ಸಾಡಿ ಮೆದ್ದು, ಅಸ್ಥಿಮಾತ್ರ ಅವಶೇಷವಾದ, ಉಣ್ಣೆ, ಚಿಕ್ಕಾಡು 
ಗಳಿಂದ ಮುತ್ತಿದ, ಮತ್ತು ಕಣ್ಣಲ್ಲಿ ಜೀವ ಹಿಡಿದ ಸಣ್ಣ ಬೊಡ್ಡ ದನಗಳನ್ನು 
ಹರಕ ಹೆಗ್ಗಗಳಿಂದ ಕಟ್ಟಿಕೊಂಡು ಬಂದು, ಒಕ್ಕಲಿಗರು ಸಂತಿಯಲ್ಲಿ ಕೆಳಗೆ 
ಮೋರಿ ಮಾಡಿ ಕುಳಿತಿದ್ದರು. ಅಂಥ ಸಂತೆಯಲ್ಲಿ ಸಹ ಗಿರಾಕಿಗಳಿಗೆ ಕಡಿಮೆ 
ಯಿದ್ದಿಲ್ಲ. ಆದರೆ ಆ ಗಿರಾಕಿಗಳು ಮಾತಾಡಿಸಿದ ಕೂಡಲೆ ದನಗಳನ್ನು ತಂದ 
ಒಕ್ಕಲಿಗರು ನಿದ್ದೆಯಿಂದ ಎದ್ದು ಗಾಬರಿಯಾಗಿ ನೋಡುನಂತೆ ಗಿರಾಕಿ 
ಗಳನ್ನು ನೋಡುತ್ತಿದ್ದರು. ಯಾಕಂದರೆ ಗಿರಾಕಿಗಳು ಬಹುತರವಾಗಿ ಕಟುಕ 
ರಿದ್ದರು ಒಂದು ಕಾಲಕ್ಕ ಹೊಟ್ಟೆಯ ಮಕ್ಕಳಿಗಿಂತ ಹೆಚ್ಚಿನ ಪ್ರೀಕಿಯಿಂದ 
ಬೆಳೆಸಿದ ದನಗಳನ್ನು ಈಗ ಅವುಗಳ ಮರುಕ ನೋಡಲಾರದೆ ತಮ್ಮ 
ಹೊಟ್ಟಿಯ ಸಲುವಾಗಿ ಕಟಕರಿಗೆ ಮಾರುವ ಪ್ರಸಂಗ ಒದಗಿದ್ದರಿಂದ ಒಕ್ಕಲಿ 
ಗರ ಹೃದಯದಲ್ಲಿ ಬೆಂಕಿ ಬಿದ್ದಿತ್ತು. ಕೂತಲ್ಲಿಯೇ ಭೂಮಿ ಒಡೆದು ತಮ್ಮನ್ನು 
ನುಂಗಿದರೆ ಒಳಿತಾಗುವದೆಂದು ಸಹ ಒಮ್ಮೊಮ್ಮೆ ಅವರಿಗೆ ಅನಿಸುತ್ತಿತ್ತು. 
ಗಿಐಾಕಿ ಹತ್ತರ ಬಂದ ಕೂಡಲೆ ಅವರ ಕೂಡ ಮಾತಾಡುನದೂ ಬೇಡ 
ಬೆಲೆಯಗೋಸ್ಕರ ವಾದಿಸುವದೂ ಬೇಡ, ಕೈ ಯಲ್ಲಿಯ ದನಗಳನ್ನು ಬಿಟ್ಟು 
ದೂರ ಓಡಿಹೋಗಬೇಕೆಂಬ ಬುದ್ಧಿಸಹ ಕಲನರಿಗೆ ಆಗುತ್ತಿರಬಹುದು. ಆದರೆ 
ಮಾಡುವದೇನು? ' ಕಣ್ಣುಮರೆ ಮಣ್ಣುಮರೆ' ಎಂಬ ಗಾದೆಯಂತೆ ಒಮ್ಮೆ 
ದನಗಳನ್ನು ಕಣ್ಣುಮರೆ ಮಾಡಿದರೆ ಸಾಕು ಇಷ್ಟೇ ಎಲ್ಲರ ವಿಚಾರ. ಇರಲಿ. 
ವ್ಯಾಪಾರಕ್ಕೆ ಪ್ರಾರಂಭವಾಯಿತು. ಐದು ಸೂಲ ಸೊಗಸಾದ ಹೈನ 
ಮಾಡಿದ ಎಮ್ಮೆಯನ್ನು ಕೇವಲ ಅದರ ತೊಗಲಿನ ಬೆಲೆಗೆ ೫ ರೂಪಾಯಿಗ 
ಳಿಗೆ ಕಟಕನಿಗೆ ಕೊಟ್ಟು, ಅದನ್ನುಆತನು ಎಳಕೊಂಡು ಹೋಗುವಾಗ್ಗೆ ಅತ್ತೆಯ 
ಮನೆಗೆ ಹೋಗುವ ಮಗಳ ಕಡೆಗೆ ನೋಡುವಂಕೆ ಅದನ್ನು ನೋಡುತ್ತಒಬ್ಬ 
ಒಕ್ಳಲಿಗನು ಒಂದಿದಿಯಲ್ಲಿ ಕೂತಿದ್ದನು. ಪ್ರತಿ ಸಲ ಹೋರಿಯನ್ನೇ ಈದು 
ಓಂದುಕಾಲಕ್ಕೆ ತನ್ನಮೇಲೆ ಬಂಗಾರದ ಮಳೆಗರೆದ ದೊಡ್ಡಗೋಮಾತೆಯನ್ನು 
ಕಟಿಕರ ಕೈಗೆ ಕೊಟ್ಟು, ತನ್ನ ತಾಯಿ ಸತ್ತಂತೆ ಮನದಲ್ಲಿಯೇ ಕೊರಗುವ 
ದೈವಗೇಡಿಯು ಮತ್ಕೊಂದೆಡೆಯಲ್ಲಿದ್ದನು, ಮಳೆಗಾಳಿಗಳಲ್ಲಿ ಅಧವಾ ಛಳಿ 
ಬಿಸಲುಗಳಲ್ಲಿ ಯಾವಾಗಲೂ ಮೈಮುರಿ ದುಡಿದು ತನ್ನ ಸಂಸಾರದಲ್ಲಿ ಒಡಹು 
ಟ್ಟಿದ ತಮ್ಮನಂತೆ ಸಹಾಯ ಮಾಡಿದ, ಎತ್ತುಮಾರಿದ ಮತ್ತೊಬ್ಬನು ಭ್ರತೆೃವಿ
ಯೋಗದ ದುಃಖವನ್ನು ಅನುಭವಿಸುತ್ತಿದ್ದನು. ಆಯಿತು ಸಂತೆ ಮುಗಿಯಿತು. 
ತಮ್ಮ ತಮ್ಮ ಪಾವಡದಲ್ಲಿ ರೂಪಾಯಿಗಳನ್ನು ಕಟ್ಟಿಕೊಂಡು ಒಕ್ಕಲಿಗರು 
ತಮ್ಮ ತಮ್ಮ ಹಳ್ಳಿಗಳಿಗೆ ಹೊರಟರು. ಈ ಹಣದಿಂದ ಅವರ ಕಣ್ಣು
ಗಳು ಆನಂದಾಶ್ರುಗಳಿಂದ ತುಂಬದೆ ದುಃಖಾಶ್ರುಗಳಿಂದ ತುಂಬಿದ್ದವು. 
ರೂಪಾಯಿಗಳ ಗಂಟು ಕೆಂಡದಂತೆ ಅವರ ತಲೆಯನ್ನು ಸುಡುತ್ತಿತ್ತು. ಮನೆಗೆ 
ಹೋಗಲಿಕ್ಕೆ ಅವರ ಹೆಜ್ಜೆಗಳು ಕಿತ್ತಲೊಲ್ಲವು. ಮನೆಗೆ ಹೋದ ಕೂಡಲೆ 
' ಹಂಬಾ ' ಎಂದು ಮೇವು ಹಾಕಲಿಕ್ಕೆ ಕರೆಯುವ ಅಕಳವು ಇಂದು ಮನೆ 
ಯಲ್ಲಿ ಇಲ್ಲ. ಈ ವಿಚಾರದಿಂದ ಅವರ ಹೃದಯವು ಕರಗಿ ನೀರು ನೀರು 
ಆಗಿತ್ತು. ಯಾರಾದರೂ ಪ್ರಿಯರಾದಂಥವರ ಅಂತ್ಯ ವಿಧಿ ಮುಗಿಸಿ ಸ್ಮಶಾನ 
ದಿಂದ ಮನೆಗೆ ತಿರುಗಿ ಹೋಗುವಂತೆ ಒಕ್ಕಲಿಗರು ತಮ್ಮ ತನ್ಮು ಮನೆಗೆ 
ಹೋದರು.
ಅವರ ಸಂತೆ ಮುಗಿಯಿತು. 
ಸಂತೆಯಲ್ಲಿ ಕೊಂಡ ದನಗಳನ್ನು ಹೊಡಕೊಂಡು ಕಟಕರು ಹೊರಟಿ 
ದ್ದರು. ಸಂತೆಯಲ್ಲಿ ಕೊಂಡಕೂಡಲೆ ಅವುಗಳಿಗೆ ಮೇವು ಹಾಕುನ ನೆನಪು 
ಅಧವಾ ಸಮಯ ಕಟಕರಿಗೆ ಸಿಗದ್ದರಿಂದ ಸಂಜೆಯ ವರೆಗೆ ದನಗಳು ಉಪ 
ವಾಸ ಇದ್ದವು... ಈ ಮಾದರಿಯ ಉಪವಾಸವು ಅವುಗಳಿಗೆ ಹೊಸದಲ್ಲ. 
ಆದರೆ ಮನೆಯಲ್ಲಿ ಉಪವಾಸ ಕಟ್ಟಿದರೂ ಮೇಲಿಂದಮೇಲೆ ಹತ್ತರ ಬಂದು 
ಮೈಮೇಲೆ ಕೈಯಾಡಿಸುವ ಮರುಕಿನ ಒಡೆಯನಿದ್ದನು. ಕಟಿಕರ ಕೈಸೇರಿದ 
ಮೇಲೆ ಕೇಳುವವರಾರು? ಮೈ ದಡವಿ ಮಾತಾಡಿಸುವದಂತೂ ಕನಸಿನಲ್ಲಿಯೇ. 
(ದೂರೇ ಉಳಿಯಿತು). 
ಏನೂ ಪ್ರಯಾಸ ತಟ್ಟದೆ ಹಿಂಡುದನಗಳನ್ನು ಹೊಡಕೊಂಡು ಹೋಗುವ 
ಸುಲಭ ಉಪಾಯವು ಕಟಬಿಕರಿಗೆ ಗೊತ್ತಿದೆ. ಒಂದೊಂದು ಹಗ್ಗದಿಂದ 
ನಾಲ್ಕೈದು ಸಣ್ಣದೂಡ್ಡ ದನಗಳನ್ನು ತೊಡಕಿಸಿ ಕಟ್ಟುವ ಯುಕ್ತಿಯಿಂದ 
ಅವರ ಕೆಲಸವು ಹಗುರಾಗಿತ್ತು. ಈ ತೊಡಕುಗಳಲ್ಲಿ ಎರಡು ಮೂರು ದುಷ್ಪ 
ದನಗಳಕೂಡ ಒಂದೆರಡು ಸುಷ್ಟ ದನಗಳು ಸಿಕ್ಕರೆ ಅವುಗಳ ಬೊಗಳೆ ನೋಡ 
ಲಾರರು. ಒಂದನ್ನೊಂದು ಎಳೆಯುತ್ತ, ಎಡವುತ್ತ, ತುಳಿಯುತ್ತ ಮತ್ತು 
ಒಮ್ಮೊಮ್ಮೆ ಇರಿಯುತ್ತ ಆ ದನಗಳ ಹಿಂಡುಸಾಗಿತು, ತನ್ನ ಕೂಡ ತೊಡಕಿಸಿದ 
ಅಡನಾಡಿದನಗಳನ್ನು ಎಳೆದೆಳೆದು ಅಥವಾ ಹೊಟ್ಟೆಯಲ್ಲಿ ಕೂಳಲ್ಲದೆ ದಣೆದು 
ಯಾವದಾದರೊಂದು ಹೋರಿ ನಿಂತು ಬಿಟ್ಟರೆ ಕೈಯಲ್ಲಿಯ ಬಡಿಗೆಯಿಂದ ಕಟ 
ಕರ ಹುಡುಗನು ಚಿರ್ಚಿನಂತೆ ಆ ಹೋರಿಯ ಮೇಲೆ ಸಾಗಿ ಹೋಗುತ್ತಿದ್ದನು. 
ಕೂಡಲೆ ಆ ಹೋರಿ ಮುಂದ ಧಾವಿಸುಕ್ತಿತ್ತು. ತಮ್ಮ ಮುಂಚಿನ ಒಡೆಯನು 
ತಮ್ಮನ್ನು ಏಕೆ ಬಿಟ್ಟನು? ಈಗಿನವನು ತಮ್ಮನ್ನು ಏಕೆ ಹೀಗೆ ಪೀಡಿಸುವನು? 
ತಾವು ಎರಿ ಏಕೆ ಹೋಗುತ್ತಿರುವವು? ಇವೆಲ್ಲ ತಿಳೆಯದೆ ದಾರೀ ಹಿಡಿದು 
ನಡೆಯುವ ದನಗಳನ್ನು ನೋಡಿದರೆ ಯಾರ ಹೃದಯದಲ್ಲಾದರೂ ಔದಾಸೀ 
ನ್ಯದ ಕತ್ತಲೆಯು ಪಸರಿಸದೆ ಇರಲಾರದು. 
ಆ ದನಗಳ ಸಮೂಹದ ಮುಂಭಾಗದಲ್ಲಿ ಒಂದು ಎತ್ತು ನಡೆದಿತ್ತು. 
ಅದು ಇಣಗೂಡಿಸಿ ಪೂರ ಎಂಟು ಗೇಣು ಇದ್ದದ್ದರಿಂದ, ಅದರ ಜೊತೆಗೆ 
ತೊಡಕಿಸಲಿಕ್ಕೆ ಬೇರೆ ದನಗಳು ಸಿಗದ್ದರಿಂದ, ಅದನ್ನೊಂದನ್ನೇ ಬಿಟ್ಟಿರಬಹುದು. 
ಅಥವಾ ಅದನ್ನು ನೋಡಿದ ಕೂಡಲೆ ಕಟಿಕರೆ ಮನಸ್ಸಿನಲ್ಲಿ ಸಹ ಪೂಜ್ಯಭಾವ 
ಹುಟ್ಟಿ, ಅಂಥ ಸಂಭಾವಿತ ಮತ್ತು ಭವ್ಯ ಎತ್ತಿಗೆ ಹಗ್ಗಹಚ್ಚಿ ಅದರ ಅಪಮಾನ 
ಮಾಡಬಾರದೆಂದು ಅವರು ಬಿಟ್ಟಿರಬಹುದು. ತುಂಬಿದ ಕೊಡದಂತೆ ಕಾಣುವ 
ಅದರ ಇಣಿಯ ಮೇಲೆ ಕಟಕರು ತಮ್ಮ ಉಳಿದೆ ಹೆಗ್ಗಗಳ ಸುರಳಿಯನ್ನು 
ಹಾಕಿದ್ದರು. ಎತ್ತು ಅತಿಶಯ ಸೊರಗಿದ್ದರಿಂದ ಅದರ ತಿಗದ ಮೇಲಿನ 
ಎಲವಿನ ಮೇಲೆ ಸಹ, ಹಗ್ಗದ ಸುರಳಿ ಇಡುವಂತೆ ಇತ್ತು. ಎಷ್ಟು ಸೋತಿ 
ದ್ದರೂ ಸಹ ಅದು ತನ್ನ ನಡಿಗೆಯ ಅಂದ ಬಿಟ್ಟಿದ್ದಿಲ್ಲ. ತನ್ನ ಬೆನ್ನಮೇಲೆ 
ಅಂಬಾರಿಯನ್ನು ಹೊತ್ತು ಅದರಲ್ಲಿ ಸಾರ್ವಭೌಮರು ಮೆರೆಯುವಾಗ ಪಟ್ಟ 
ದಾನೆ ಎಷ್ಟು ಅಭಿಮಾನದಿಂದ ಮತ್ತು ಗಾಂಭೀರ್ಯದಿಂದ ಪದನ್ಯಾಸ ಮಾಡು 
ವದೊ ಅಷ್ಟು ಗಾಂಭೀರ್ಯದಿಂದ ಈ ಎತ್ತು ನಡೆದಿತ್ತು. ಎಷ್ಟೇ ಸಾವಕಾಶ ನಡೆ 
ದರೂ ಅದರ ಹೆಜ್ಜೆಗಳು ದೊಡ್ಡವಾದ್ಧರಿಂದ ಎಷ್ಟೊಸಲ ಮಿಕ್ಕದನಗಳು ಹಿಂದೆ 
ಉಳಿಯುತ್ತಿದ್ದವು. ಆಗ್ಗೆ ಆ ಎತ್ತು ತನ್ನ ಚಿಕ್ಕಪುಟ್ಟ ಬಾಂಧವರನ್ನು ಕಾಯುತ್ತ 
ನಿಲ್ಲುತ್ತಿತ್ತು. ಈ ದನಗಳು ತಮ್ಮೊಳಗೆ ಹೊಡೆದಾಡುವದನ್ನು ನೋಡಿ ಅದಕ್ಕೆ 
ಆಶ್ಚರ್ಯವಾಗುವಂತೆ ಕಾಣುತ್ತಿತ್ತು. ಈ ಎತ್ತಿನ ಜನ್ಮಕಾಲಕ್ಕೆ ಅದರ 
ತಾಯಿಗೆ ಎಷ್ಟು ಅನಂದ ಆಗಿದ್ದೀತು. ಅದರಂತೆ ಆಕಳ ಒಡಯನಿಗಾದರೂ 
ಚೆೊಚ್ಚಿಲ ಗಂಡುಮಗೆ ಹುಟ್ಟಿದಂತೆ ಅನಿಸಿರಬಹುದು. ಇದು ಸ್ವಲ್ಪದೊಡ್ಡವಾದ 
ಮನೆಯಲ್ಲಿಯ ಚಿಕ್ಕಮಕ್ಕಳು ತಮ್ಮು ಎಡೆಯಲ್ಲಿಯ ಬೆಣ್ಣಿರೊಟ್ಟಿ 
ಯನ್ನು ಪ್ರೇಮದಿಂದ ಇದಕ್ಕೆ ತಿನಿಸಿರಬಹುದು. ಇದು ದೊಡ್ಡದು ಆದಾದಹಾಗೆ 
ಕಾರ್ಹುಣ್ಣಿವಿಗೆ ಮತ್ತು ಮಣ್ಣೆತ್ತಿನ ಅಮಾಸಿಗೆ ಇದನ್ನು ತೊಳೆದು ಪೂಜಿಸಿ 
ಶೃಂಗಾರ ಮಾಡುವದರಲ್ಲಿ ಮನೆಯಲ್ಲಿಯ ಎಲ್ಲರೂ ಪ್ರಹರಗಟ್ಟಿಲೆ ತೊಡಕಿರ 
ಬಹುದು. ಇದಕ್ಕೆ ದೃಷ್ಟಿ ತಾಕಬಾರದಿಂದು ಕಾಲಲ್ಲಿ ಕರಿ ಕಟ್ಟಿರಬಹುದು. 
ಮತ್ತು ಕೊರಳಲ್ಲಿಯ ಕಣ್ಣಿಗೆ ಗೊಂಬೀ ಕಟ್ಟಬಹುದು. ದೊಡ್ಡ ದೊಡ್ಡ   
ಬಂಡಿಗಳನ್ನು ಎಳೆಯುವ. ಮೇಲಾಟದಲ್ಲಿ ಮಿಗಿಲಾದ್ದರಿಂದ ಇದಕ್ಕೆ ಬಹು 
ಮಾನ ಮಾಡಿ ಇದರ ಕೊರಳಲ್ಲಿ ಹುಲ್ಲಿನ ಸರಬಿ ( ಬಹುಮಾನ ಸೂಚಕ 
ಕಣ್ಣೆ) ಕಟ್ಟಿ ಮೆರನಣಿಗೆ ತೆಗೆದಿರಬಹುದು. ತನ್ನ ಒಡಯನ ಬೇಸಾಯದಲ್ಲಿ 
ಇದು ಹಲವು ತರದಿಂದ ನೆರವಾಗಿರಬಹುದು. ಆದರೆ ದೈವಗತಿಗೆ ಯಾರು 
ಏನು ಮಾಡುವರು? ಆ ಎತ್ತಿಗೆ ಈಗ ತನ್ನ ಪೂರ್ವಾಯುಷ್ಯದ ನೆನಪು 
ಆಗುತ್ತಿದ್ದೀತು. ದನಗಳ ಸ್ಮರಣಶಕ್ತಿ ಪ್ರಬಲವಿರುತ್ತದೆಂದು ಅನುಭವ 
ಉಂಟು.-- ಪೂರ್ವಾಯುಷ್ಯ ನೆನಸಿ ಪಾಪ ಏನು ಮಾಡೀತು ಪಾಲಿಗೆ 
ಬಂದುದನ್ನು ಅದುಭವಿಸಿಯೇ ತೀರಬೇಕು. ನಮಗಂತು ಆ ಆನೆಯಂಥ 
ಎತ್ತನ್ನು ಆ ದನಗಳ ಹಿಂಡನ್ನು ನೋಡಿ, ಅನೇಕ ವರ್ಷ ಸೌಖ್ಯದಿಂದ 
ಮತ್ತು ಐಶ್ಚರ್ಯಗಳಿಂದ ಪ್ರಪಂಚ ಮಾಡಿ ಕಡಗೆ ದುಷ್ಕಾಳ ಮೂಲಕ 
ಕುಟುಂಬ ಸಹಿತ ಗುಳೆ ಹೋಗುನ ಮಾನಧನ ಪ್ರಪಂಚಕನ ನೆನಪು 
ಆಯಿತು.
=======================================
ದುರ್ಗಗಳೇ! 

ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ 
ಯಾರಾದರೂ ಬಂದು ಮುಂದಿ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ 
ನೀವು ನಂಬುತ್ತಿದ್ದಿರೋ? ಫೀನೇ ಏಕ ಈ ಭವಿಷ್ಯವನ್ನು ಆ ಕಾಲದ ಮಹಾ 
ಮಹಾ ಮೇಧಾವಿಗಳು ಸಹ ನಂಬುತ್ತಿದ್ದಿಲ್ಲ. 
ನಿಮ್ಮ ಸುತ್ತಲಿನ ಯಾವ ಕೊಳ್ಳಗಳಲ್ಲಿ ಜೀವದ ಪರಿವೆಯಿಲ್ಲದೆ 
ಹೋರಾಡುವ ವೀರರ ರಣಘೋಷವು ಒಂದು ಕಾಲಕ್ಕೆ ತುಂಬುತ್ತಿತ್ತೋ ಅದೇ 
ಕೊಳ್ಳ ಗಳಲ್ಲಿ ವನ್ಯಪಶುಗಳ ಚೀರಾಟದ ಹೊರ್ತು ಮತ್ತೇನೂ ಕೇಳಿಸುವದಿಲ್ಲ. 
ಯಾವ ಹಾದಿಗಳಲ್ಲಿ ಕುದುರೆ ಆನೆ ಪಲ್ಪಕ್ಕಿಗಳ ಸಾಲು ಹತ್ತುತ್ತಿತ್ತೋ ಆ 
ಹಾದಿಗಳ ಮೇಲೆ ಈಗ ಹುಲ್ಲು ಬೆಳೆದು ಅವು ನಾಮರೇಷ ಆಗಿರುವವು. 
ಗುಡ್ಡದೋರೆಯಲ್ಲಿಯ ಹಳ್ಳಿಗಳಂತೂ ನೋಡಲಿಕ್ಟೇ ಬೇಡ, ಯಾವ ಹಳ್ಳಿ 
ಗಳಲ್ಲಿಯ ಪ್ರತಿಯೊಬ್ಬ ತರುಣನು ತಾನು ಸೂರ್ಯಾಜೀ ತಾನಾಜೀ ಅಥವಾ 
ಪ್ರತ್ಛಕ್ಷ ಶಿವಾಜಿಯಂತೆ ಶೂರನಾಗಿ ಮೆರೆಯಬಹುದೆಂದು ಆಕಾಂಕ್ಷೆ ಪಡುತ್ತಿ 
ದ್ದನೋ ಆದೇ ಹಳ್ಳಿಗಳಲ್ಲಿ ಹ್ಯಾಗಾದರೂ ದಿವಸ ಹಾಕುತ್ತ ಮರಣದ 
ಮಾರ್ಗ ಪ್ರತೀಕ್ಷೆ ಮಾಡುವ ಒಕ್ಕಲಿಗರನ್ನು ಕಾಣಬಹುದು. 
ಗೋಡೆಗಳು; ಇವುಗಳಿಗೆ ಕೋಟಿಯ ಗೋಡೆಗಳೆಂದು ಯಾರನ್ನಬೇಕು 
ಸಿಕ್ಕ ಸಿಕ್ಕ ಗಿಡಗಳು ಹತ್ತಿ ಅವುಗಳ ಬೇರು ಮತ್ತು ಶಾಖೆಗಳು ಮುದಿಕೆಯ 
ಮೈ ಮೇಲಿನ ನರಗಳಂತೆ ಎಲ್ಲ ಕಡೆಗೂ ಹಬ್ಬಿದ್ದರಿಂದ ಗೋಡೆಗಳ ಅಂದವು 
ಕೆಟ್ಟು ಹೋಗಿದೆ. ಹಲವು ಸ್ಥಳಗಳಲ್ಲಿ ಗೋಡೆ ಬಿದ್ದದ್ದರಿಂದ ಆ ನಿಟ್ಟಿಗೆ 
ಹಲ್ಲು ಬಿದ್ದ ಬಾಯಿಯ ವಿಕೃತ ಸ್ವರೂಪ ಬಂದಿರುವದು. ಯಾವ ಗೋಡ 
ಗಳ ಮೇಲೆ ಎಲ್ಲ್ಯಾದರೊಂದು ಹುಲ್ಲಿನ ಕಡ್ಡಿ ಕಂಡರೆ ದುರ್ಗರಕ್ಷಕರು ಕಠಿಣ 
ಶಿಕ್ಷೆಗೆ ಗುರಿಯಾಗುಕ್ತಿದ್ದರೋ ಅವೇ ಗೋಡೆಗಳ ಮೇಲೆ ಹಬ್ಬಿದೆ ಗಿಡಗಂಟಿ 
ಗಳಲ್ಲಿ ನಿಶ್ಯಂಕವಾಗಿ ಓಡಾಡುವವು.
ದುರ್ಗದ ಒಳಭಾಗದಲ್ಲಿ ಎಲ್ಲಿ ನೋಡಿದರೂ ಬಿದ್ದಮನೆಗಳ, ಹಾಳು 
ದಿಬ್ಬಗಳ ಹೊರ್ತಾಗಿ ಏನೂ ಕಾಣುವದಿಲ್ಲ. ಯಾವ ಪ್ರಾಸಾದದಲ್ಲಿ ಭೂತ 
ಕಾಲದ ಇತಿಹಾಸ ಬರೆಯಲ್ಪಟ್ಟಿತ್ತೊ ಯಾವ ಅರಮನೆಗಳಲ್ಲಿ ನಡದ ಕಾರ 
ಸ್ಥಾನಗಳಿಂದ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಹುಟ್ಟಿದವೋ ಮತ್ತು ನಾಶ 
ಹೊಂದಿದವೋ ಆ ಪ್ರಾಸಾದದ ಕುರುಹು ಈಗ ಒಂದು ದೊಡ್ಡ ದಿಬ್ಬದ ರೂಪ 
ದಿಂದ ಮಾತ್ರ ಕಾಣುವದು. ತಮ್ಮ ಖುರಪುಟದ ಖಡಖಡಾಟದಿಂದ ಎಲ್ಲ 
ದೇಶವನ್ನು ಗದಗಮಿಸಿದ ಜಾತಿಯ ಕುದುರೆಗಳ ಲಾಯದ ಮೇಲೆ ಈಗಿನ 
ಕಾಲಕ್ಕೆ ಡಬಗಳ್ಳಿಯು ಬೆಳೆದಿರುತ್ತದೆ. ಗುಪ್ತ ಮಾರ್ಗಗಳೂ ಮದ್ದಿನ ಮನೆ 
ಗಳೂ ಶಸ್ತ್ರಾಗಾರಗಳೂ ಕೋಶಾಗಾರವೂ ಮುಂತಾದವು ಹೇಳಹೆಸರಿಲ್ಲದೆ 
ಮಾಯವಾಗಿರುವವು. 
ಹೆಬ್ಬಾಗಿಲಗಳ ಗತಿಯಂತೂ ಕೇಳಲಿಕ್ಕೆ ಬೇಡ. ಆನೆಗಳಿಗೆ ಸಹ 
ಜೋರಿನಿಂದ ಹಾಯ್ದು ಕೆಡವಲಿಕ್ಕೆ ಬರಬಾರದೆಂದು ಮಳೆಗಳಿಂದ 
ತುಂಬಿನ ಬಾಗಿಲಗಳನ್ನು ಒಡೆದು ಅವುಗಳ ಕಟ್ಟಿಗೆಯಿಂದ ಕೈ ಕಾಯ್ಸಿ 
ಕೊಂಬ ಪುಣ್ಯಾತ್ಮರಿಗೇನು ಕಡಿಮೆ? ಯಾವ ದಾರಿಗಳು ನೂರಾರು 
ಯುದ್ಧದ ಸಮರಾಂಗಣ ಆಗಿರಬಹುದೋ, ಎಲ್ಲಿಯ ಹಾಸುಗಲ್ಲುಗಳು 
ಅಸಂಖ್ಯ ಸಲ ವೀರರ ಮಾಂಸ ರಕ್ತಗಳಿಂದ ಮುಚ್ಚಿರಬಹುದು ಅವೆಲ್ಲವು 
ಗಳು ಈಗ ಸ್ಮಶಾನ ಶಾಂತತೆಗೆ ಎಡೆಯಾಗಿರುವವು. ಒಟ್ಟಾರೆ ಈ ದುರ್ಗ 
ಗಳನ್ನು ನೋಡಿ ಚಮತ್ಕಾರ ನಿಕೇತ (Musium ) ದಲ್ಲಿಯ ತಿಮಿಂಗಲ 
ಮೀನದ ಎಲವಿನ ಹಂದರವು ನನಪಾಗುವದು.
===========================================
  ಐದು ಕೊಡಗಳ ಆತ್ಮಕಥೆ 
 
ಗಾಂಧಿ ಯುಗದಲ್ಲಿ ಏನು ಆದೀತು ಏನು ಆಗಲಿಕ್ಕಿಲ್ಲ! ಇದರೆ ಕಲ್ಪನೆ 
ಸಹ ಮಾಡುವದಾಗುವದಿಲ್ಲ. ಬಾಹ್ಯದೃಷ್ಟಿಗೆ ಅತೃಂತ ಸ್ವಾರ್ಥಿಗಳೆಂದು 
ಹೆಸರಾದ ಜನರು ತಮ್ಮ ಮನೆ ಮಕ್ಕಳ ಮೇಲೆ ತುಳಿಸಿಪತ್ರ ಇರಿಸಲೂ ಸಿದ್ಧ 
ವಾಗಿರುವದನ್ನೂ ಎಷ್ಟೊ ಹೇಡಿಗಳು ಇಂದು ತಮ್ಮ ಪ್ರಾಣಾಹುತಿಯನ್ನೇ 
ಕೊಡಲು ಮುಂದೆ ಬಂದಿರುವದನ್ನು ನೋಡಿದರೆ ನಾವೇನು ಸ್ಪಪ್ನ ಸೃಷ್ಟಿ 
ಯಲ್ಲಿರುವೆವೋ ಏನೊ ಎಂದು ಅನಿಸಬಹುದು. ಇಂಥ ಒಂದು ವಿಚಿತ್ರ ಘಟ 
ನೆಯು ಬಾಗಲಕೋಟೆಯ ಜೇಲಿನಲ್ಲಿ ನಡೆದದ್ದು ನನ್ನ ಅನುಭವಕ್ಕೆ ಬಂದಿತು 
ಅದನ್ನೆ ನನ್ನ ಗೆಳೆಯರ ಲಾಭಕ್ಕಾಗಿ ಇಲ್ಲಿ ಸಂಕ್ಷಿಪ್ತ ರೂಪದಲ್ಲಿ ಕೊಡ 
ತ್ತಿದ್ದೇನೆ. 
ನಾನು ಆದಿನ ಬಾಗಲಕೋಟಿಯ ಜೇಲಿನಲ್ಲಿದ್ದೆ. ಬ್ರಿಟಿಶ್‌ ಸರಕಾರದ 
ಆತಿಥ್ಯ. ನನ್ನ ಕೋಣೆಯಲ್ಲಿಯೇ ೫ ಹಿತ್ತಾಳಿ ಕೊಡಗಳಿದ್ದವು. ಅವು ಅಲ್ಲಿ 
ಹೇಗೆ ಬಂದವು? ಯಾಕೆ ಬಂದವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ 
ಉಂಟಾಯಿತು. ಆದರೆ ಯಾರಿಗೆ ಕೇಳಬೇಕು ? ನನ್ನ ಕೋಣೆಯ ಕಾವಲು 
ಗಾರನನ್ನು ನೋಡಿದರೆ ಅವನೊಬ್ಬ ಸೂತ್ರದಗೊಂಬೆ, ತಾನು " ಡ್ಯೂಟಿ " 
ಮೇಲೆ ಇದ್ದಾಗ ಕೈದಿ ಇರಲಿ ಅಥವಾ ಏನೆ ವಸ್ತುಗಳಿರಲಿ ಅವನ್ನು ಇದ್ದು 
ಕ್ಕಿದ್ದಂತೆ ತನ್ನ ಬದಲಿಯಾಗಿ ಬಂದವನಿಗೆ ಒಪ್ಪಿಸುವದಷ್ಟೆ ಗೊತ್ತು. ಆದರೆ 
ಆ ಕೊಡಗಳ ಕಡೆಗೆ ಮೇಲಿಂದ ಮೇಲೆ ನೋಡಿದಂತೆ ನನ್ನ ಕುತೂಹಲವು 
ಮಾತ್ರ ಬೆಳಯತೊಡಗಿತು. ಅವುಗಳ ಮೈತುಂಬ ಬಿದ್ದ ತಗ್ಗುಗಳು ಕಂಟ 
ಕುಸಿದು ವಿದ್ರೂಪವಾದ ಅವುಗಳ ಸ್ವರೂಪ, ಅವುಗಳಲ್ಲಿ ಅಲ್ಲಲ್ಲಿ ಕಾಣುವ 
ಛಿದ್ರಗಳು, ಮತ್ತು ಅನೇಕ ದಿನಗಳ ವರೆಗೆ ಕೈಯಾಡಿಸದೆ ಬಿಟ್ಟಿದ್ದರಿಂದ 
ಹಸಿರುಗಟ್ಟಿ ಹೋದ ಅವುಗಳ ಬಣ್ಣ, ಇವನ್ನೆಲ್ಲ ನೋಡಿದರೆ ಈ ಕೊಡಗಳೂ 
ಸಹ ಮನುಷ್ಯರಂತೆಯೇ ಈ ಸಂಸಾರಸಾಗರದಲ್ಲಿ ಅನೇಕ ಹೊಡೆತಕ್ಕೆ ಸಿಕ್ಕು 
ಕಡೆಗೆ “ ಇಲ್ಲಿಗೆ " ಬಂದಿರಬಹುದಿಂದು ಅನಿಸತೊಡಗಿತು. ದುಷ್ಪ ಹಾಗೂ 
ಕ್ರೂರವಾದ ಬಾಹ್ಯ ಜಗತ್ತಿನಿಂದ ತಮ್ಮ ಬೆಂದು ಹೋದ, ನೊಂದ ಅಂತಃ 
ಕರಣವನ್ನು ಮಾಮುಲೇದಾರ ಕಚೇರಿಯ ಈ ಚಿಕ್ಕ ಕೋಣೆಯಲ್ಲಿ ಬಚ್ಚಿಟ್ಟು 
ಕೊಳ್ಳಲು ಇಲ್ಲಿಗೆ ಬಂದಿರಬೇಕೆಂದು ಅನಿಸಿತು. ಅಂತೂ ಸಂಜೆಯಾದರೂ 
ನನಗೆ ಆ ಕೊಡಗಳ ನಿಜ ಸಂಗತಿಯೇ ಗೊತ್ತಾಗಲಿಲ್ಲ. ರಾತ್ರಿಯಾದರೂ 
ನನ್ನ ಮನಸ್ಸಿನಲ್ಲಿ ಇನ್ನೂ ಅದೇ ವಿಚಾರವೆ ಕಟಿಯುತ್ತಿತ್ತು. 
ರಾತ್ರಿ ಸುಮಾರು ೧೧ ಗಂಟೆಯಾಗಿರಬಕುದು. ನಾನು ಇನ್ನೂ ತೂಕ 
ಡಿಸುತ್ತಿದ್ದೆ, ಅಷ್ಟರಲ್ಲಿ ಕಾಲ ಕೆಳಗೆ ಏನೋ ಸರಿದಾಡಿದಂತೆ ಭಾಸವಾಯಿತು. 
ಇಲಿಗಳೇನಾದರೂ ಇರಬಹುದೆಂದು ಮತ್ತೊಂದು ಬದಿಗೆ ಹೊರಳಿದೆ. ಪುನಃ 
ಮತ್ತೊಮ್ಮೆ ಅದೀ ಪ್ರಕಾರದ ಸಪ್ಪಳವಾಯಿತು. ಈ ಸಾರೆ ಸ್ವಲ್ಪ ಹೆಚ್ಚು 
ಲಕ್ಷ ಕೊಟ್ಟು ಆ ಕಡೆಗೆ ನೋಡಲು, ನನ್ನ ಕಾಲ ಹತ್ತಿರ ಮೂಲೆಯಲ್ಲಿಟ್ಟಿದ್ದ 
ಕೊಡವು ಎರಡನೇ ಕೊಡದ ಕಡೆಗೆ ಸರಿಯುವದು ಕಾಣಿಸಿತು. ನಾನು 
ಆಶ್ಚರ್ಯದಿಂದ ಅವಕ್ಕಾದೆ. ಚಳಿಗಾಲದಲ್ಲಿ ಚಳಿ ಕಾಯಿಸಲು ಬೈ.ಲಿನಲಿ
ಹಳ್ಳಿಗರು ಗುಂಪು ಕಟ್ಟಿಕೊಂಡು ಕೂಡುವಂತೆ, ಆ ಐದೂ ಕೊಡಗಳು ಕೂಡಿ 
ಕೊಂಡವು. ಅದರೊಳಗೆ ಒಂದು ಕೊಡದ ಬಾಯಿಂದ ಕೆಲವು ಶಬ್ದಗಳೂ ಸಹ 
ಹೊರಟಂತೆ ಕೇಳಿಸಿತು. ಛೆ! ಕೊಡಗಳೆಂದಾದರೂ ಮಾತಾಡಬಹುದೆ ? 
ಎಂದು ವಿಚಾರ ಮಾಡುತ್ತಿರುವಾಗ “ಎ ಭಾಳ ಬ್ಯಾಸರಕಿ ಬಂದದ ಒಂದು 
ಚುಟ್ಟಾ ಅರೆ ಇದ್ದರ ತಗಿ ಅಲಾ"  ಎಂದು ಆ ಕೊಡವು ಅನ್ನುವದು ಸ್ಪಷ್ಟ
ವಾಗಿ ಕೇಳಿಸಿತು. ಮುಂದೆ ಆ ಐದೂ ಕೊಡಗಳು ತಮ್ಮ ತಮ್ಮೊಳಗೆ ಏನೋ 
ಮಾತಾಡತೊಡಗಿದವು. ಕುತೂಹಲ ಕೆರಳಿ ಮತ್ತಿಷ್ಟು ಕಿವಿಗೊಟ್ಟು ಕೇಳಿದೆ. 
ಅವು ತಮ್ಮ ತಮ್ಮೊಳಗೆ ತಾವು ಮಾಮಲೇದಾರ ಕಚೇರಿಯ ಈ ಕೋಣೆ 
ಯೊಳಗೆ ಹೀಗೆ ಬಂದೆವೆಂಬುದರ ಇತಿಹಾಸವನ್ನು ಹೇಳುತ್ತಿದ್ದವು. ಒಂದು 
ಕೊಡವು ತನ್ನ ಆತ್ಮಕಭೆಯನ್ನು ಹೇಳುವಾಗ ಉಳಿದವುಗಳು ಅದನ್ನು ಲಕ್ಷ 
ಕೊಟ್ಟು ಕೇಳುತ್ತಿದ್ದ ವು. 
ನಾನಿನ್ನೂ ಆಗ ಅರನಿದ್ದೆಯಲ್ಲಿಯೇ ಇದ್ದೆ. ಆದ್ದರಿಂದ ಅವು ಹೇಳಿ 
ದ್ದೆಲ್ಲಾ ನನ್ನ ಲಕ್ಷ್ಯದಲ್ಲಿ ಉಳಿದಿಲ್ಲ. ಆದರೂ ಸ್ಮರಣೆಯಲ್ಲಿದ್ದಷ್ಟನ್ನೆ ಹೇಳು 
ತ್ತಿರುವೆನು.

ಒಂದನೇ ಕೊಡದ ಆತ್ಮಕಥೆ 
« ಗೆಳೆಯರೇ ನನ್ನ ಈ ಅವತಾರದ ಕಡೆಗೆ ನೋಡಿ ನಗಬೇಡಿ2. ನನ್ನ 
ಮೈತುಂಬ ಈಗ ತೂತು ತಗ್ಗುಗಳು ಬಿದ್ದಿವೆ. ಮತ್ತು ಕಂಠವೂ ಕುಸಿ 
ಬಿದ್ದಂತೆ ಕಾಣಬಹುದು. ಅದರೆ ನಾನು ಜನ್ಮತಃ ಹೀಗೆ ಇದ್ದೇನೆಂದು 
ಮಾತ್ರ ತಿಳಿಯಬೇಡಿರಿ. ನಾನೂ ಎಷ್ಟೋ ಸುದಿನಗಳನ್ನು ಕಂಡಿದ್ದೇನೆ. 
ಒಂದು ಊರಿನ ಒಬ್ಬ ಕಂಚಗಾರನ ಮನೆಯಲ್ಲಿ ನನ್ನ ಜನ್ಮವಾಯಿತು. ನನ್ನ 
ಆಗಿನ ಮನಮೋಹಕ ರೂಪ ಹಾಗೂ ಮೈಕಟ್ಟನ್ನು ಕಂಡು ಕಂಚುಗಾರನ 
ಹೆಂಡತಿಯು ಹುಚ್ಚಾಗಿ ನನ್ನನ್ನು ಮಾರಬಾರದೆಂದು ಹಟ ಹಿಡಿದಳು. ಆದರೆ 
ಅದು ಕಂಚುಗಾರನ ಮನಸ್ಸಿಗೆ ಬರಲಿಲ್ಲ. ತಾನು ಮಾಡಿದ ಕೊಡಗಳ ಸಲು 
ವಾಗಿ ಹೀಗೆ ಹಟ ಹಿಡಿಯುತ್ತ ಕುಳಿತರೆ ಮನೆ ತುಂಬಿಲ್ಲ ಕೊಡಗಳನ್ನೇ 
ಇಟ್ಟುಕೊಂಡು ಹೊಟ್ಟಿಗೆ ಕೇರು ಹಾಕಿಕೊಳ್ಳುವ ಪ್ರಸಂಗ ಬಂದೀತೆಂದು 
ನಿಷ್ಟುರವಾಗಿ ಹೇಳಿದನು. ಹೆಂಡತಿಯ ಉತ್ತರ ಕೂಡ ಕಾಯದೇ, ನನ್ನನ್ನು 
ಎತ್ತಿಕೊಂಡು ಒಬ್ಬ ವ್ಳಾವಾರಿಗೆ ಕೊಟ್ಟು ಬಂದನು. ಅಲ್ಲಿ ನನ್ನ ಬಳಗದವ 
ರೊಂದಿಗೆ ನಾನು ಎರಡು ತಿಂಗಳವರೆಗೆ ಮಾತ್ರ ಇದ್ದೆನು. ಮುಂದೆ ವೈಶಾಖ 
ಮಾಸವು ಬಂದಿತು. ಹತ್ತಿಯ ವ್ಭಾಪಾರವು ಅದೇ ಪ್ರಾರಂಭವಾಗಿತ್ತು. ಆ 
ಸುಮಾರಿಗೆ ದಂಪತಿಗಳ ಜೋಡಿಯೊಂದು ನಾನಿದ್ದ ಅಂಗಡಿಗೆ ಬಂದಿತು. 
ಅವರಿಗೆ ಒಂದು ಕೊಡವನ್ನು ಕೊಳ್ಳುವದಿತ್ತು. ಅವರು ಬಡವರಿದ್ದರೂ 
ಹತ್ತಿಯ ಸುಗ್ಗಿಯಲ್ಲಿ ೧೫-೨೦ ರೂಪಾಯಿಗಳನ್ನುಳಿಸಿದ್ದರು. ಈ ರೂಪಾಯಿ 
ಗಳಿಂದ ತನಗೊಂದು ಜರೆದಂಚಿನ ರೂಮಾಲು, ಹೆಂಡತಿಗೊಂದು ಸೀರೆ ತೆಗೆದು 
ಕೊಳ್ಳ ಬೇಕಂದು ಗಂಡನ ವಿಚಾರವಿತ್ತೆಂದು ನನಗೆ ನಂತರ ತಿಳಿಯಿತು. ಅವರು 
ಅಂಗಡಿಗೆ ಬಂದಾಗ ಬರಿ ಗಂಡನ ತಲೆಯ ಮೇಲೆ ಅಷ್ಟೆ ಹೊಸ ರೂಮಾಲು 
ಕಂಡು ಬಂದರೂ, ಹೆಂಡತಿಯ ಆಗ್ರಹದ ಮೇರೆಗೆ ಸೀರೆ ತೆಗೆದುಕೊಳ್ಳದೆ ಒಂದು 
ಹಿತ್ಕಾಳೆಯ ಕೊಡ ತೆಗೆದುಕೊಳ್ಳುವದನ್ನು ಅವರು ನಿಶ್ಚಯಿಸಿದಂತೆ ತೋರಿತು. 
ಅಂಗಡಿಯೊಳಗಿದ್ದಷ್ಟೆಲ್ಲ ಕೊಡಗಳನ್ನುತಿರುವಿ ಹಾಕಿದರೂ ಆ ಮಹಾರಾಯಳ 
ಮನಸ್ಸಿಗೆ ಒಂದೂ ಬರಲಿಲ್ಲ. ಕಟ್ಟಕಡೆಗೆ ನಾನು ಆಕೆಯ ಕೈಗೆ ಸಿಕ್ಕಿದೆ. 
ಆಕೆಯ ದರ್ಶನದಿಂದಲೇ ನಾಕು ಮೋಹಿತನಾಗಿದ್ದೆ. ಹಾಗೂ ಕರ್ಮ ಧರ್ಮ
ಸಂಯೋಗದಿಂದ ನನ್ನನ್ನೇ ಆಕೆಯು "ಪಾಸು” ಮಾಡಿದಳು. ಒಂದು 
ಯಃಕಶ್ಚಿತ್‌ ಕೊಡದ ಸಲುವಾಗಿ ಇಷ್ಟು ಚೌಕಸಿ (ಜಿಕೇರಿ) ಮಾಡಿದ್ದಕ್ಕಾಗಿ 
ಆಕೆಯ ಗಂಡ ಎಷ್ಟು ಗೇಲಿ ಮಾಡಿದರೂ ಆಕೆಯೇನೂಮಣಿಯಲಿಲ್ಲ. ನನ್ನ 
ತೂಕ ಮಾಡಿ ಅಂಗಡಿಕಾರನು ಬೆಲೆಯನ್ನು ಹೇಳಿದ. ಅದು ಬಹಳವೆನಿಸಿ 
ಎಲ್ಲಿ ಆಕೆ ನನ್ನ ಕೈ ಬಿಡುವಳೋ ಎಂದು ಹೆದರಿದೆ. ಅದರೆ ಮುಂದೆ ಇಬ್ಬರೂ 
ಸಲ್ಪ ಜಗ್ಗಾಡಿ, ಒಂದು ಬೆಲೆಯನ್ನು ಗೊತ್ತು ಮಾಡಿ ನನ್ನನ್ನು ತಕ್ಕೊಂಡರು. 
ನಾನು ಆ ದಂಪತಿಗಳ ಜೊತೆಗೆ ಅವರೂರಿಗೆ ಹೊರಟಿ, ದಾರಿಯಲ್ಲಿ ನನ್ನನ್ನು 
ಅವರು ತಮ್ಮ ಪ್ರೀತಿಯ ಮಗನಂತೆ ಹೆಗಲಮೇಲೂ ಬಗಲಲ್ಲಿಯೂ ಕರೆದು 
ಕೊಂಡು ಹೊರಟರು. 
ಅಂತೂ ನಾನೊಂದು ಹಳ್ಳಿಯ ಜೀವಿಯಾದೆ. ನನ್ನನ್ನು ಕೊಂಡುತಂದ 
ಮನೆಯಲ್ಲಿ. ಮಣ್ಣಿನ ಮಡಿಕೆಗಳೆ ಹೆಚ್ಚಾಗಿದ್ದುದರಿಂದ. ನಾಲ್ಕು 
ಹಿತ್ತಾಳೆ ಸಾಮಾನುಗಳಲ್ಲಿ ನಾನೇ ಅಗ್ರ ಸ್ಟಾನವನ್ನು ಪಡದೆ, ನನ್ನನ್ನು 
ತಂದ ಎರಡನೇ ದಿನಸದಿಂದಲೇ ನಿನ್ಸ್ಪ "ಅವ್ವ" ನನ್ನನ್ನು ಬಗಲಲ್ಲಿ ಕೂಡಿಸಿ 
ಕೊಂಡು ನೀರಿಗೆ ಹೊರಟಳು. ಆಕೆ ನನ್ನನ್ನು ಪ್ರೀತಿಸುವದನ್ನು ನೋಡಿದರೆ 
ಆಕೆಯನ್ನು ಅವ್ವನೆಂದೇ ನಾನು ಕರೆಯಬೇಕು. ಆಕೆಗೆ ಇತರರು ಚಿನ್ನವ್ವ 
ಎಂದು ಕರೆಯುತ್ತಿದ್ದರು. ನದಿ ಮುಟ್ಟುವದರೊಳಗೆ ಕನಿಷ್ಟ ೪೦-೫೦ ಜನ 
ರಾದರೂ ಚಿನ್ನವ್ವನಿಗೆ " ಈ ಕೊಡ ಎಲ್ಲಿಂದ ತಂದೆ ಎಷ್ಟು ಕೊಟ್ಟೆ ತೂಕ 
ಎಷ್ಟಿದೆ ಹೆಸರು ಹಾಕಿಸಿದಿಯಾ' ಎಂದು ಮುಂತಾದ ನೂರಾರು ಪ್ರಶ್ನೆಗಳನ್ನು 
ನನ್ಪ ಬಗ್ಗೆ ಕೇಳುತ್ತಿದ್ದರು. ಅವಳು ಅದಕ್ಕೆಲ್ಲ ಉತ್ತರ ಕೊಡುತ್ತ ನದಿ 
ಮುಟ್ಬಲು ೧೫ ನಿಮಿಷದ ಬದಲು ಒಂದು ತಾಸು ಹತ್ತಿತು. ಆದರೂ ಆಕೆಗೆ 
ಬೇಸರ ಬರಲಿಲ್ಲ. ನಾನು ಬಗಲೊಳಗೆ ತನ್ನ ಜೊಚ್ಚಲ ಮಗನೇ ಕುಳಿತಿರುವೆ 
ನೆಂದು ಆಕೆ ತಿಳಿದುಕೊಂಡು ಬಿಟ್ಟಿದ್ದಳು. 
ನದಿಯಲ್ಲಿ ತಾನು ಜಳಕ ಮಾಡುನದತ್ಸಂತೆ ಮುಂಚೆ ಚಿನ್ನವ್ಹನು 
ನನ್ಸ ಮೈಯನ್ನು ಹುಣಚೆ ಹಣ್ಣು ಹಚ್ಚಿ ಉಸುಕಿನಿಂದ ಸ್ಪಚ್ಛವಾಗಿ ತೊಳೆ 
ದಳು. ನನ್ನನ್ನು ಎಷ್ಟೆ ತಿಕ್ಕಿದರೂ ಆಕೆಗೆ ಸಮಾಧಾನವಾಗಲಿಲ್ಲ. ಕಡೆಗೆ 
ಬಹಳ ತಡವಾದೀತೆಂಬ ಭಯದಿಂದ ನಿರುಪಾಯಳಾಗಿ ಮನೆಗೆ ತಿರುಗಿದಳು. 
ನನ್ನನ್ನು ಅಂಚು ಮಟ ತಂಬಿ ತಲೆಯ ಮೇಲೆ ಇಟ್ಟು ಕೊಂಡಳು ನನ್ನನ್ನು   
ಎತ್ತಿಕೊಳ್ಳಲು ಆಕೆಗೆ ಆಸರ ಕೊಡಲು ಒಬ್ಬ ಶರುಣ ಮುಂದೆ ಬಂದಿದ್ದ. 
ಅದರೆ ಚೆನ್ನವ್ಹನು “ ಇದೇನು ' ಘಗ್ಗರಿ, ಕೊಡ. ಏನೊ, ಇಟ ಐತಿ. ಇದ 
ಕ್ಯಾಕ ಎಡ್ನೆದವರ ಕೈ ' ಎಂದು ಅವನ ಸಹಾಯವನ್ನು ನಿರಾಕರಿಸಿದ್ದಳು. 
ನಾನೇನು ಚಿಕ್ಕವನಿರಲಿಲ್ಲ ತನ್ನನ್ನು ಒಬ್ಬಳೆ ಎತ್ತಿಕೊಂಡು ಹೋಗಿ ಚಿನ್ನವ್ವ 
ನಿಗೆ ಬಹಳ ಶ್ರಮವಾಗಿರಲೇಬೇಕು. ಆದರೆ ಆ ತರುಣನು ಅದೇ ಹೆಂಡೆಗಸ 
ಮಾಡಿ ( ಗೊಬ್ಬರ ತೆಗೆದು) ಬಂದದ್ದರಿಂದ ಅವನ ಕೈ ಹೊಲಸು ನನ್ನ 
ಮ್ಚೆಗೆ ಹತ್ತೀತೆಂದು ಅವಳ ಭಯ. ಅದಕ್ಕಾಗಿಯೇ, ಆಕೆ ಅವನ ಸಹಾಯ 
ನಿರಾಕರಿಸಿದಳು. 
ಚಿನ್ನವ್ವನನ್ನು ಕರಕೊಂಡು ಮನೆಗೆ ತಿರುಗಿದಳು. ಹಾದಿಯಲ್ಲಿ 
ಪುನಃ ಮೊದಲಿನ ಪ್ರಶ್ನೆಗಳನ್ನೇ ಮತ್ತೆ ಅನೇಕರು ಕೇಳಿದರು ಅದಕ್ಕೆಲ್ಲ ಆಕೆ 
ನಗುನಗುತ್ತಲಿ ಉತ್ತರ ಕೊಡುತ್ತಿದ್ದಳು. ಮನೆ ಬಾಗಿಲಿಗೆ ಬಂದ ಕೊಡಲೆ 
ನನ್ನನ್ನು ಇಳಿಸಿಕೊಳ್ಳಲು ಆಕೆ ತನ್ನ ಗಂಡನನ್ನು ಕರೆದಳು. ಅವನು ಕೂಡಲೆ 
ಎದ್ದು ಬಂದು, ಕೆಲ ನಿಮಿಷ ಆತ, ನನ್ನನ್ನೂ ತನ್ನ ಹೆಂಡತಿಯನ್ನೂ ಆಶೆಯಿಂದ 
ನೋಡಿ ಕೆಳಗೆ ಇಳಿಸಿ, ಅಡಿಗೆ ಮನೆಯಲ್ಲಿ ಸ್ಪಚ್ಚವಾಗಿ ಸಾರಿಸಿದ ಒಂದು 
ಮೂಲೆಯಲ್ಲಿ ಇರಿಸಿದ. 
ಈ ರೀತಿ ಆ ದಂಪತಿಗಳ ಅಚ್ಚುಮೆಚ್ಚಿನ ಚೊಬ್ಚಲ ಮಗನಾಗಿ ಆ
ಮನೆಯಲ್ಲಿ ನಾನು ಆನಂದದಿಂದ ಇರುತ್ತಿದ್ದೆ. ಆದರೆ ಎಲ್ಲ ಸಮನೆ 
ಲ್ಲಿರಬೇಕು? ಕಾಲ ಚಕ್ರ ತಿರುಗಿತು. ಭರಮಪ್ಪನು ಚಿನ್ನವ್ವನ ಗಂಡನು 
ಬಾಗಿಲಕೋಟಿಗೆ ಮೇಲಿಂದ ಮೇಲೆ ಹೋಗ ತೊಗಗಿದನು. ಒಬ್ಬ ಗೆಳಯನ 
ಕೃಪೆಯಿದ ಆತನಿಗೆ ಸುರಾಪಾನದ ವ್ಯಸನ ಹತ್ತಿತು, ಮೊದಲನೇಯ 
ದಿವಸ ಭರಮಪ್ಪ ಕುಡಿದು ಮನೆಗೆ ಬಂದಾಗ್ಗೆ ಏನು ಶೆರೆಯ ದುರ್ಗಂಧ
ವಾಸವು ಹಬ್ಬಿತೋ ಅದರಿಂದ ಆ ಪುಟ್ಟ ಮನೆಯ ಪ್ರೀತಿಯ ಸುಗಂಧವು 
ಶಾಶ್ಚತವಾಗಿ ಅಳಿದು ಹೋಯಿತು. ಚಿನ್ನವ್ವನ ಮೋರೆಯ ಮೇಲಿನ ಮುಗ 
ಳ್ನಗೆ ಕಮರಿ ಹೋಯಿತು. ಅವಳ ಮುಖ ಚರ್ಯೆಯ ಮೇಲೆ ಯಾವಾಗಲೂ 
ಭೀತಿಯ ಕಳೆ ಸುರಿಯುತ್ತಿತ್ತು. ಅಗತ್ಯದ ಕೆಲಸದ ಹೊರತು ಗಂಡ ಹೆಂಡಿರ 
ಪರೆಸ್ಫರ ಮಾತು ಕತೆಗಳು ನಿಂತು ಹೋದುವು. ಮೊದಲಿನ ನಗುವದು ನಲಿ 
ಯುವದು ಎಲ್ಲವೂ ಮಾಯವಾದವು. ಶೆರೆಯ ಗುಂಗು ಇಳಿದ ಕೂಡಲೆ 
ಭರಮಪ್ಪನು ಒಬ್ಬ ಆರೋಪಿಯಂತೆ ಮುಖ ಮಾಡಿಕೊಂಡು ಸ್ತಬ್ದನಾಗಿ 
ಕೂಡುತ್ತಿದ್ದ. ಕೋಪದಿಂದ ಉರಿದು, ಹಾಯ್ದಾಡುವ ಚಿನ್ನವ್ವನ ಕಡೆಗೆ ನೋಡಿ 
ಆತ ಒಮ್ಮೊಮ್ಮೆ ತನ್ನ ವಿಕಟ ಹಾಗೂ ಕ್ರೂರವಾದ ನಗೆಯನ್ನೂ ಬೀರುತ್ತಿದ್ದ. 
ಇಂಥ ಪ್ರಕ್ಷುಬ್ಧ ಮನಸ್ಸಿತಿಯಲ್ಲಿ ಚಿನ್ನವ್ವನ ಮನಸ್ಸು ಸಂಸಾರದಿಂದ 
ದೂರಾಗತೊಡಗಿತು. ನನ್ನ ಮೇಲಿನ ಆಕೆಯ ಪ್ರೀತಿಯು ಎಳ್ಳಷ್ಟೂ ಕಡಿಮೆ 
ಯಾಗದಿದ್ದರೂ ನನ್ನ ಸ್ಪಚ್ಛತೆಯ ಬಗ್ಗೆ ಆಕೆ ಮೊದಲಿನಷ್ಟು ಕಾಳಜಿ ತೆಗೆದು 
ಕೊಳ್ಳು ತ್ತಿರಲಿಲ್ಲ. ನಾನು ಮಖಾಳನಾಗತೊಡಗಿದೆ. ಒಂದು ರಾತ್ರಿ ಭರಮ 
ಪ್ಪನ ಬಿರ್ಕ ತಲೆಯಿಂದ ಮನೆಗೆ ಬಂದ, ಪರಸ್ಪರರ ಫ್ರೀತಿಯ ಕುರುಹಾದ 
ಆತನ ಜರದಂಚಿನ ರುಮಾಲು ತಲೆಯ ಮೇಲಿರಲಿಲ್ಲ. ಚಿನ್ನವ್ಹನಿಗೆ ಅದು 
ಒಮ್ಮೆಲೆ ಹೊಳೆಯಿತು. ಕೂಡಲೆ ಆ ರುಮಾಲಿನ ಬಗ್ಗೆ ಆಕೆ ವಿಚಾರಿಸಿದಳು. 
ಆದರೆ ಭರಮಪ್ಪ ಮಾತ್ರ ಅದಕ್ಕೆ ಉತ್ತರ ಕೊಡುವ ಸಿತಿಯಲ್ಲಿರಲಲ್ಲ. 
ಬೆಳಕು ಹರಿಯುತ್ತಲೆ ಅಮಲಿಳಿದ ಭರಮಪ್ಪ ಹೆಂಡತಿಯ ಕಣ್ಣು ತಪ್ಪಿಸಿ 
ತನ್ನ ಕೆಲಸಕ್ಕೆ ಹೋದ. 
ಮುಂದೆ ಏಳೆಂಟು ದಿನಗಳು ಶಾಂತವಾಗಿ ಉರುಳಿದವು ಎನ್ನುವಷ್ಟ 
ರಲ್ಲಿ ಒಂದು ದುರ್ಭಟನೆ ಸಂಭವಿಸಿತು. ಭರಮಪ್ಪನಿಗೆ ಶೆರೆಯ ತಲಬಾಗಿ 
ದ್ದರೂ ಆತನ ಹತ್ತಿರ ಒಂದ ಒಡಕ ಕವಡಿ ಸಹ ಇರಲಿಲ್ಲ. ಮಧ್ಯಾಹ್ನದ 
ಸುಮಾರು ಮೂರು ಘಂಟೆಯ ವೇಳೆಯಾಗಿರಬಹುದು. ಚಿನ್ನವ್ವನು ಕೂಲಿ 
ಮಾಡಿ ಬಂದು ದಣಿದದರಿಂದ ಹಾಯಾಗಿ ಬಿದ್ದುಕೊಂಡಿದ್ದಳು. ಆಕೆ 
ಮಲಗಿದ್ದು ಕಂಡು ಭರಮಪ್ಪ ಕಳ್ಳಹೆಜ್ಜೆಯಿಂದ ಅಡಿಗೆಯ ಮನೆಯಲ್ಲಿ 
ಪ್ರವೇಶ ಮಾಡಿದ. ಅತ್ತಿತ್ತ ನೋಡುತ್ತ ನಡುಗುತ್ತಿರುವ ತನ್ನ ಕೈಗಳಿಂದ 
ನನ್ನನ್ನು ಹಗುರಾಗಿ ಎತ್ತಿಕೊಂಡು ಹೊರಗೆ ಬಂದ. ಭರಮಪ್ಪನ ಚಲನವಲನ 
ಗಳನ್ನು ನೋಡಿದ ಕೂಡಲೆ ನನಗೆ ಏನೋ ದುರ್ಧ್ಥರ ಪ್ರಸಂಗ ಬಂದೇ ತೀರು 
ವದಂದು ಸಂಶಯ ಬಂದಿತು. ಭರಮಮಪ್ಪನು ತನ್ನ ಕರಾಳ ಹಸ್ತದಿಂದ 
ನನ್ನನ್ನು ಎತ್ತಿದ ಕೂಡಲೆ ನಾನು ಚಿನ್ನವ್ವನನ್ನು ಕರೆದೆ. ಆದರೆ ನಿರ್ಜೀವಿ 
ಯಾದ ನನ್ನ ಕೂಗು ಚಿನ್ನವ್ವನಿಗೆ ಕೇಳಿಸಿತೋ ಇಲ್ಲೋ ನನಗೆ ಗೊತ್ತಿಲ್ಲ. 
ಚಿನ್ನವ್ಪನು ಮಾತ್ರ ಭರಮಪ್ಪನು ಅಡಿಗೆ ಮನೆಯೊಳಗಿಂದ ಪಾರಾಗುವದ 
ರೊಳಗಾಗಿಯ ಎಚ್ಚರಾದಳು,
ಭರಮಪ್ಪನ ಸ್ವರೂಪ ನೋಡಿದ ಕೂಡಲೆ ಅಕೆಗೆ ಅವನ ಉದ್ದೇಶ 
ಹೊಳೆಯಿತು. ಕೂಡಲೆ ಆಕೆ ಸಿಂಹಿಣಿಯಂತೆ ಅನನ ಮೇಲೆ ಹಾರಿ ನನ್ನನ್ನು 
ಗಟ್ಟಿಯಾಗಿ ಹಿಡಿದುಕೊಂಡಳು. ಗಂಡ ಹೆಂಡತಿಯರ ಬಡಿದಾಟಕ್ಕೆ ಪ್ರಾರಂಭ 
ವಾಯಿತು. ಇವರಿಬ್ಬರ ಗುದ್ದಾಟದಲ್ಲಿ ನನ್ನೊಳಗಿನ ಅರ್ಧಕ್ಕಿಂತ ಹೆಚ್ಚು 
ನೀರು ಚಲ್ಲಿ ಹೋಯಿತು. ಭರಮಪ್ಪನು ಗಂಡುಸಾಗಿದ್ದರೂ ಸಹ ನನ್ನ 
ಮೇಲಿನ ಮಮತೆಯ ಬಲದಿಂದ ಚಿನ್ನವ್ವನ ಬಲವು ದ್ವಿಗುಣಿತವಾಗಿ, ಅವನ 
ಕೈಯೂಳಗಿಂದ ಆಕೆ ನನ್ನನ್ನು ಕಸಿದುಕೊಂಡಳು. ಆದರೆ ಅಷ್ಟರಲ್ಲಿ ಆಕೆಯ 
ಕೈ ಜಾರಿ ನಾನು ಕೆಳಗೆ ಅಪ್ಪಳಿಸಿಕೊಂಡು ಬಿದ್ದು ಉರುಳಿಬಿಟ್ಟೆ. ಬಿದ್ದ 
ಹೊಡತದಿಂದ ನನಗೆ ಅನೇಕ ಕಡೆಗೆ ತಗ್ಗುಗಳು ಬಿದ್ದವು. ನನ್ನ  ಸ್ಥಿತಿಯು
ಹೀಗಾದ್ದನ್ನು ಕಂಡ ಕೂಡಲೆ ಚಿನ್ನವ್ಹನು ತನ್ನ ಹಣೆಯನ್ನು ಗೋಡಿಗೆ ಬಡಿದು 
ಕೊಳ್ಳಹತ್ತಿದಳು. ಇದನ್ನು ನೋಡಿ ನಮ್ಮಿಬ್ಬರನ್ನು ಬಿಟ್ಟು ಭರಮಪ್ಪನು 
ಓಡಿ ಹೋದ. ಶೆರೆಯ ಸಲುವಾಗಿ ಆತನ ರುಮಾಲು ಒತ್ತಿ ಬಿದ್ದಿದ್ದರೂ 
ಚಿನ್ನವ್ವನ ಕೃಪೆಯಿಂದ ನಾನು ಮಾತ್ರ ಆ ದಿನ ಉಳಿದುಕೊಂಡೆ. 
ಅತ್ತು, ಅತ್ತು ದಣಿದ ಮೇಲೆ ಭಾರವಾದ ಅಂತಃಕರುಣದಿಂದ ಚಿನ್ನ 
ವ್ವನು ನನ್ನನ್ನು ಎತ್ತಿ ಒಳಗೆ ಒಯ್ದಿಟ್ಟಳು. ಮುಂದೆ ಎರಡು ದಿವಸಗಳಾದರೂ 
ಭರಮಪ್ಪನ ಸುದ್ದಿಯೇ ಇಲ್ಲ. ಮೂರನೆ ದಿನ ಪೋಲೀಸರ ಕಾವಲಿನೊಂದಿಗೆ 
ಭರಮಪ್ಪನು ಮನೆಗೆ ಬಂದ ಶೆರೆ ಕುಡಿದು ಗೊಂದಲ ಮಾಡಿದ್ದಕ್ಕಾಗಿ 
ಅವನಿಗೆ ಐದು ರೂಪಾಯಿ ದಂಡವಾಗಿತ್ತು. ಅದರೆ ಸಲುವಾಗಿ ಪೋಲೀಸರು 
ಜಪ್ತಿ ಮಾಡಿ ನನ್ನನ್ನು ಇಲ್ಲಿಗೆ ತಂದರು. ಒಯ್ಯುವಾಗ ಚಿನ್ನವ್ವನು  ಹಾಡಿ 
ಹಾಡಿ ಹೊರಳಾಡಿ ಅತ್ತಳು, ಇದು ಇನ್ನೂ ನನ್ನ ಕಣ್ಣಮುಂದೆ ಕಟ್ಟಿದೆ. 
ಅದೆಲ್ಲವನ್ನು ನೆನೆದರೆ ಮೈ ಜುಮ್ಮ ಅನ್ನುತ್ತದೆ. ನಾನು ಬಡವರ ಮನೆಯ 
ಲಿರುತ್ತಿದ್ದರೂ ಅತ್ಯಂತ ಸುಖದಿಂದ ಇರುತ್ತಿದ್ದೆ. ಈ ಸುಡಗಾಡು ಶೆರೆ 
ನನ್ನನ್ನು ಈ ಅವಸ್ಥೆಗೀಡು ಮಾಡಿತು, ಕಳೆದ ಸುಖದದಿನಗಳನ್ನು ಪುನಃ ಈ 
ಜನ್ಮದಲ್ಲಿ ಕಾಣಬಹುದೇ? 

ಉಳಿದ ಕೊಡಗಳ ಕಥೆ 
ತನ್ನ ಕಥೆಯನ್ನು ಮುಗಿಸಿ ಕೊಡವು ಸುಮ್ಮನೆ ಕುಳಿ 
ತಿತು. ಆ ಮೇಲೆ ಎರಡು ಕೊಡಗಳು ತಮ್ಮ ಕಥೆಯನ್ನು ಪ್ರಾರಂಭಿಸಿದವು.
ಅದೇನು ಅಷ್ಟು ಮನೋವೇಧಕವಿಲ್ಲದ್ದರಿಂದ ಸಂಪೂರ್ಣವಾಗಿ ನನ್ನ ಸ್ಮರಣೆ 
ಯಲ್ಲಿ ಉಳಿದಿಲ್ಲ. ಆವೆರಡು ಕೊಡಗಳೂ ಒಂದೇ ಮನೆಯಿಂದ ಬಂದಿದ್ದವು. 
ಅವು ಬಂದ ಮನತನವು ಒಂದು ಹಳ್ಳಿಯಲ್ಲಿ ಎಂಟೆತ್ತಿನ ಕಮತ ಮಾಡು 
ತ್ತಿತ್ರು. ಆ ಮನೆಗೆ ಬಹು ನೀರು ಬೇಕಾಗುತ್ತಿದ್ದುದರಿಂದ ಎತ್ತಿನ ಮೇಲೆ 
ಲಗಳಿ ಹಾಕಿ ನಾಲ್ಕು ನಾಲ್ಕು ಕೊಡ ಒಮ್ಮೆಲೆ ತರುತ್ತಿದ್ದರು. ಈ ಎರಡೂ 
ಕೊಡಗಳು ಆ ಲಗಳಿ ಒಳಗಿನವಿದ್ದವು. ನೀರು ತರುವ ಆಳು ಉಸುರಿನಿಂದ 
ಕೊಡಗಳನ್ನು ಮೇಲಿಂದ ಮೇಲೆ ತಿಕ್ಕುತ್ತಿರಬೇಕೆಂಬುದರ ಕಲ್ಪನೆ ಕೂಡ 
ಇರುತ್ತಿರಲಿಲ್ಲ. ಲಗಳಿ ಎತ್ತು ಒಮ್ಮೊಮ್ಮೆ ಹೊಸದೂ ಅಥವಾ ಉದ್ದಟವೂ 
ಇದ್ದಾಗ ಸಬರದ ಮೇಲಿನ ಕೊಡಗಳನ್ನು ಕೆಳಗೆ ಅಪ್ಪಳಿಸುತ್ತಿದ್ದವು. ಅದರಿಂದ 
ಈ ಕೊಡಗಳು ನೆಗ್ಗಿ ಅಷ್ಟು ಮುಖಗಳೇ ಆಗಿಬಿಟ್ಟಿವೆ. ಆದರೂ ಒಂದು 
ದೊಡ ಮನೆತನದಲ್ಲಿ ಕೆಲಸ ಮಾಡಿದ ಕೀರ್ತಿಯು ಈ ಕೊಡಗಳಿಗಿದ್ದವು. 
ಒಮ್ಮೆ ಆ ಮನೆಯಲ್ಲಿ ಲಮಾಣಿ ಜನರಿಂದ ಎಷ್ಟೋ ಸಾಮಾನುಗಳು ಕಳ 
ವಾಗಿ ಹೋದವು. ನಂತರ ಪೋಲೀಸ ತಪಾಸಣೆಯಲ್ಲಿ ಈ ಎರಡೂ ಕೊಡ 
ಗಳು ಮಾತ್ರ ಸಿಕ್ಕಿದವು.  ಅವನ್ನೇ ಈಗ ಈ ಕಚೇರಿಯ ಕೋಣೆಯಲ್ಲಿ   ತಂದಿಟ್ಬ,ದ್ದರು.

೪ ನೆಯ ಕೊಡದ ಕಥೆ 
ಇದು ಸ್ಪಲ್ಪ ಮನೋರಂಜಕವಿತ್ತು " ನನ್ನ ತುದಿಗಿದ್ದ ಕಲಾಕೃತಿ 
ಯಿಂದ ಹಾಗೂ ನನ್ನ ಆಕಾರದಿಂದಲೇ ನಾನು ದೇವರ ಪೂಜೆಗಾಗಿ ಕೆಲಸ 
ಮಾಡುತ್ತಿದ್ದೆನೆಂಬುದು ನಿಮಗೆ ಗೊತ್ತಿರಬಹುಹುದು. ದೇವರಆರಾಧನೆ 
ಯಿಂದಲೇ ತನಗೆ ಬಹಳ ದಿನಗಳ ಮೇಲೆ ಗಂಡಸುಮಗ ಹುಟ್ಟಿದ್ದರಿಂದ 
ಒಬ್ಬ ಶ್ರೀಮಂತ ಗೃಹಸ್ತನ ಹೆಂಡತಿಯು ನನ್ನನ್ನು ಮುದ್ದಾಂ ಕೊಂಡು ಆ 
ದೇವರ ಗುಡಿಗೆ ದಾನಕೊಟ್ಟಿದ್ದಳು, ನನ್ನನ್ನು ಕಂಡು ಆಗುಡಿಯ ಪೂಜಾ 
ರಿಗೂ ಅತ್ಯಂತ ಸಂತೋಷವಾಯಿತು. ಅಗ್ರೋದಕವನನ್ನು ನನ್ನಲ್ಲಿಯೇ ತುಂಬು 
ತ್ತಿದ್ದ. ಸತ್ಕಾರ್ಯಕ್ಕಾಗಿ ನನ್ನ ಉಪಯೋಗವಾಗುತ್ತಿರುವದನ್ನು ನೋಡಿ 
ನನಗೂ ಬಹಳ ಸಮಾಧಾನವಾಗಿತ್ತು. ಹೀಗೆ ಕೆಲವು ಮಾಸಗಳು ಕಳೆದು 
ಹೋಗಲಾಗಿ ಒಂದು ದಿನ ಆ ಪೂಜಾರಿಯು ನೀರು ತರಬೇಕೆಂದು. ನನ್ನನ್ನು
ನದಿಗೆ ಒಯ್ದಾಗ ಅವನ ಪರಿಚಿತಳಾದ ಒಬ್ಬ ಸ್ತ್ರೀಯು ನನ್ನನ್ನು ಬಹಳ 
ಹೊಗಳಿದಳು. ಆಕೆಯ ಸ್ತುತಿಯನ್ನು ಕೇಳಿ ನನಗೆ ಸಂತೋಷವಾಗದೆ ಹೆದ 
ರಿಕೆ ಉಂಟಾಯಿತು. ನಾನು ಗುಡಿಗೆ ಬಂದೆ. ಮುಂದೆ ೩-೪ ದಿನಗಳ ಮೇಲೆ 
ಮಧ್ಯಾನ್ಹ ೩-೪ ಘಂಟೆಯ ಸುಮಾರಕ್ಕೆ ಗುಡಿಯೊಳಗೆ ಬಂದು ಆ ಫೂಜಾ 
ರಿಯು ನನ್ನನ್ನು ಹಿಡಿದುಕೊಂದು ಹೊರಟ. ಇಂಧ ಅಡ್ಡವೇಳೆಯಲ್ಲಿ ನನ್ನನ್ನು 
ಎಲ್ಲಿಗೆ ಒಯ್ಯುತ್ತಿರಬಹುದೆಂಬುದು ನನಗೆ ಹೊಳೆಯಲಿಲ್ಲ. ನನ್ನನ್ನು ಹಿಡಿದು 
ಕೊಂಡು ಗುಡಿಯ ಹೊಸಲಿನ ವರೆಗೆ ಹೋಗಿ, ಆತ ಪುನಃ ತಿರುಗಿ ಬಂದು 
ನನ್ನ ಸ್ಥಳದಲ್ಲಿ ನನ್ನನ್ಪಿಳಿಸಿದ. ನನ್ನನ್ನು ಎತ್ತಿಕೊಂಡು ಎಲ್ಲಿಗೋ ಹೋಗುವ 
ಬಗ್ಗೆ ಅವನ ಮನಸ್ಸು ಇನ್ನೂ ಹೊಯ್ದಾಡುತ್ತಿದ್ದಂತೆ ತೋರಿತು. ಮೂರು
ದಿನಗಳ ವರೆಗೂ ಅವನು ಹೀಗೆ ಮಾಡಹತ್ತಿದ. ನನ್ನನ್ನು ಹೊರಗೆ ಒಯ್ಯು 
ವಷ್ಟು ಅವನ ಮನಸ್ಸಿನ ಧೈರ್ಯವಾಗಿದ್ದಿಲ್ಲವೆಂದು ತೋರುತ್ತಿದೆ. ಆದರೆ 
ನಾಲೃನೇ ದಿನ ಅದೇ ಹೊತ್ತಿಗೆ ಪೂಜಾರಿಯು ಗುಡಿಯೊಳಗೆ ಬಂದಕೂಡಲೇ 
ಈ ದಿನ ಈತನು ತನ್ಪ್ನ ಮನಸ್ಸಿನಲ್ಲಿದ್ದುದನ್ನು ಮಾಡಿಯೇ ತೀರುವನೆಂದು 
ನನಗೆ ಗೊತ್ತಾ ಯಿತು. ನನ್ನನ್ನು ಎತ್ತಿಕೊಂಡವನೇ ತನ್ನ ಮನೆಯ ದಾರಿ 
ಹಿಡಿದು ಬಿಟ್ಟ. ಅವನ ಮನೆಯಲ್ಲಿ ಎಲ್ಲರೂ ದೇವರ ಕೊಡವನ್ನು ಮನೆಗೆ 
ಹೇಗೆ ತಂದಿರಿ ” ಎಂದು ಕೇಳಹತ್ತಿದರು. ಅವರ ಮುಂದೆ ಕೊಡಕ್ಕೆ ಹೆಸರು 
ಹಾಕಿಸುವದಿದೆ ಎಂದು ಗುಳಿಗೆ ಹೊಡೆದ ಆ ಪೂಜಾರಿ. 
ಅದೇ ದಿನ ರಾತ್ರಿ ೧೧ ಘಂಟೆ ಸುಮಾರಕ್ಕೆ ಆ ಪೂಜಾರಿಯು ನನ್ನನ್ನು 
ಒಬ್ಬ ಹೆಂಗಸಿನ ವಶಕ್ಕೆ ಒಪ್ಪಿಸಿ ಬಿಟ್ಟಿ, ಆ ದಿನ ನದಿಯ ಮೇಲೆ ನನ್ನನ್ನು 
ಮಿತಿಮೀರಿ ಹೊಗಳಿದ ಹೆಂಗಸೇ ಅವಳಿದ್ದಳು. ಪೂಜಾರಿಯು ಅವಳನ್ನು 
ಪೂಜಿಸುತ್ತಿದ್ದ, ಆದರೆ ಅವಳ ಮನೆಯಲ್ಲಿ ನನಗೆ ಬಹಳ ದಿನಗಳಿರಬೇಕಾಗ 
ಲಿಲ್ಲ. ಕೆಲವು ದಿನಗಳ ಮೇಲೆ ಆ ಸ್ತ್ರೀಯು ಕಾಲರಾದಿಂದ ಒಮ್ಮಿಂದೊಮ್ಮೆಲೆ 
ಇಹಲೋಕವನ್ನು ತ್ಯಜಿಸಿದಳು. ಹತ್ತಿರದವರು ಯಾರೂ ಇರಲಿಲ್ಲ ಪೋಲೀ 
ಸರು ಪಂಚನಾಮೆ ಮಾಡಿ ಅಕೆಯ ಆಸ್ತಿಯನ್ನುನಾಜರರ ವಶಕ್ಕೆ ಕೊಟ್ಟರು. 
ಅದರಲ್ಲಿ ನಾನೂ ಬಂದೆ. ಇನ್ನು ಮುಂದೆ ನನ್ನ ನಶೀಬದಲ್ಲಿ ಏನು ಇದೆಯೊ 
ಯಾರು ಬಲ್ಲರು.

೫ನೇ ಕೊಡದ ಕಥೆ 
ಕೊಡವು ಇಲ್ಲಿಯವರೆಗೆ ಸ್ತಬ್ದವಾಗಿ ಕುಳಿತು ತನ್ನ ಸರದಿ ಬಂದ 
ಕೂಡಲೆ ಮೊದಲು ಒಂದು ದೀರ್ಘವಾದ ನಿಟ್ಟುಸಿರನ್ನು ಬಿಟ್ಟು ಹೀಗೆ ಹೇಳಿತು. 
"ನಾನು ಸುದೈವದಿಂದ ಒಂದು ದೊಡ್ಡ ಮನೆತನವನ್ನು ಸೇರಿಕೊಂಡು ಸುಖ 
ವಾಗಿದ್ದೆ. ಕನಿಷ್ಠ ೩೦-೪೦ ಜನರಾದರೂ ಅಲ್ಲಿರುತ್ತಿದ್ದರು. ಅವರೆಲ್ಲರೂ 
ಒಂದಿಲ್ಲೊಂದು ಕೆಲಸದಲ್ಲಿ ತತ್ಪರರಾಗಿಯೇ ಇರುತ್ತಿದರು.
ಆ ಮನೆಯ ಹಿರಿಯ ಮಗನ ಲಗ್ನವು ಸುಲಕ್ಷಣೆಯಾದ ಒಬ್ಬ ಸುಂದರ 
ಯುವತಿಯ ಕೂಡ ಜರುಗಿತು. ಸೊಸೆಯು ಅತ್ತಿಯ ಮನೆಗೆ ಬಂದಳು. 
ಆ ತರುಣ ದಂಪತಿಗಳನ್ನು ನೋಡಿದರೆ ರತಿ ಕಾಮರ ಕಲ್ಪನೆಯು ಯಾರಿ 
ಗಾದರೂ ಬರುತ್ತಿತ್ತು. ಅದನ್ನು ನೋಡಿ ವಿಧಿಗೆ ಹೊಟ್ಟಿ ಕಿಚ್ಚು ಆಗಿರಬೇಕು. 
ಆ ಹಿರಿಯ ಮಗನ ಮನಸ್ಸಿನಲ್ಲಿ ತನ್ನ ತರುಣ ಸುಂದರ ಹೆಂಡತಿಯ ಶೀಲದ 
ಬಗ್ಗೆ ಸಂಶಯ ಉತ್ಪನ್ನವಾಯಿತು. ಕೂಡಲೆ ಆಕೆಯನ್ನು ನಾನಾ ವಿಧವಾಗಿ 
ಪೀಡಿಸಹತ್ತಿದ. ಪಾಪ ಅಕೆಯೇನು ಮಾಡಬೇಕು. ಒಂದು ದಿನ ದೇವರ 
ಪೂಜೆಗೆ ಮಡಿ ನೀರು ತರುವ ನೆಪ ಮಾಡಿಕೊಂಡು ಹೊರಬಿದ್ದಳು. ಬಾವಿಯ 
ದಂಡಿಯ ಮೇಲೆ ನನ್ನನ್ನಿಟ್ಟವಳೇ ತಾನು ಒಳಗೆ ಹಾರಿಕೊಂಡಳು. ನೀರೊಳಗೆ 
ಬೀಳುವ ಮುಂದೆ ಆ ತರುಣ ಜೀವಿಯು ಮಾಡಿದ ಅರ್ತನಾದವು ಇನ್ನೂ ನನ್ನ 
ಕಿವಿಯಲ್ಲಿ ದನಿಗೊಳ್ಳುತ್ತಿದೆ ಆ ಮೇಲೆ ಪೋಲೀಸರು ಪಂಚನಾಮೆ ಮಾಡಿ 
ನನ್ನನ್ನು ಇಲ್ಲಿ ತಂದು ಒಗೆದರು. ಈಗಲೂ ಆ ದುರ್ದೈವಿ ತರುಣಿಯ ನೆನಪಾದ 
ಕೂಡಲೆ ಎದೆಯು ದಸ್ಸನ್ನುತ್ತದೆ. 
ಹೀಗೆ ಹೇಳುತ್ತ ನಿಜವಾಗಿಯೂ ಆ ಐದನೆಯ ಕೊಡವು ಅತ್ಯಂತ 
ಕರ್ಕಶ ಸ್ವರದಿಂದ ಚೀರಿತು. ಅದೆನ್ನು ಕೇಳುತ್ತಲೆ ನಾನು ಗಡಬಡಿಸಿಕೊಂಡು 
ಎಚ್ಚತ್ತೆ. ಎದ್ದು ನೋಡುವದರೊಳಗೆ ಆ ಕೊಡಗಳು ತಮ್ಮ ತಮ್ಮ ಸ್ಥಾನ 
ಗಳಲ್ಲಿಯೇ ಇದ್ದುವು, ನನ್ನ ಕೋಣೆಯ ಕಾವಲಗಾರನು ಮಾತ್ರವಿಚಿತ್ರ ಸ್ವರ 
ದಿಂದ “ಆಲಬೆಲ್‌” ಕೊಡುತ್ತಿದ್ದ. 
೧೭-೧-೧೯೪೯    ಕರ್ಮವೀರ
=======================================
  ನನ್ನ ಸಾವು 
ನಾನು ಸತ್ತಿರವಿನೆಂದು ಜನರು ಅನ್ನುತ್ತಾರೆ, ದುಃಖ ಪಡುತ್ತಾರೆ. 
ಕೆಲವರು ದುಃಖಬಡುವವರಿಗೆ ಸಮಾಧಾನದ ಮಾತು ಹೇಳುತ್ತಾರೆ. ಹೀಗಿ 
ದ್ದರೂ ನಾನು ಸತ್ತಿಲ್ಲ. ಜೀವದಿಂದಿರುವೆನೆಂದು ನನಗೆ ಅನಿಸುವದು. ಬಹು 
ಜನರ ಮತವು ನಾನು ನಿಜವಾಗಿ ಮೃತಪಟ್ಟನೆಂದು, ಆದರೆ ನನ್ನ ಅನುಭವವು 
ನಾನು ಮೃತಪಟ್ಟಿಲ್ಲವೆಂದಿರುವದರಿಂದ ಈ ವೃತ್ಯಾಸವು ಹೋಗಿ ಐಕ್ಕಮತ್ಯ 
ವಾಗುವ ಬಗೆಯು ತೋರದಂತಾಗಿರುವದು. ನಿಜಸ್ಥಿತಿಯನ್ನು ಹೇಳಿದರೆ 
ಕೇಳುವರೆಂಬ ಅಶೆಯಿಂದ ನಾಲ್ಕು ಶಬ್ದಗಳನ್ನು ಹೇಳಲುದುಕ್ತನಾಗಿರುವೆನು. 
ಸ್ವಲ್ಪ ಥಂಡಿಯಾಗಿ ಜ್ವರ ಬಂದವೆಂದು ಮನೆಯಲ್ಲಿ ಮಲಗಿಕೊಂಡೆನು 
ಜ್ವರವು ಆರಲಿಲ್ಲ. ಉಪಚಾರಗಳು ಹೆಚ್ಚು ಹೆಚ್ಚು ಆದಂತೆ ಬೇನೆಯು, 
ಬೆಳೆಯುತ್ತ ನಡೆಯಿತು. ಮೈಯಲ್ಲಿ ಜ್ವರವಿದ್ದಾಗ ಗಾಳಿ ತಾಗಿದ್ದರಿಂದ 
ಕಫ ಉಂಟಾಯಿತು. ವೈದ್ಯರು ಚಿಂತಾಕ್ರಾಂತರಾದರು. ವಿಲಾಯತಿಯ 
ಔಷದಗಳಿಂದ ಏನೂ ಗುಣಬಾರದ್ದರಿಂದ ಆಯುರ್ವೇದದ ಪಂಡಿತರ ಕಡೆಗೆ 
ಆಪ್ತೇಷ್ಟರು ಎಡತಾಕಹತ್ತಿದರು. ನನ್ನ ಬೇನೆಯ ಬಗ್ಗೆ ಮಾತಾಡುವದಾ 
ದರೆ ಖೋಲಿಯಿಂದ ಹೊರಗೆ ಹೋಗಿ ಸದ್ದು ಮಾಡದೇ ಮಾತಾಡ ಹತ್ತಿದರು. 
ಜ್ಹರದಿಂದಾಗುವ ವಿಕಾರಗಳು ನನ್ನ ಬೆನ್ನು ಬಿಡಲಿಲ್ಲ. ಹಸ್ತಪಾದಗಳಿಗೆ 
ಪಂಜು ಹಚ್ಚಿದಂತೆ ಅಥವಾ ಕಣ್ಣ ಮುಂದೆ ಸಾವಿರಾರು ವಿದ್ಯು ದೀಪಗಳನ್ನು 
ಒಮ್ಮೆಲೆ ಬೆಳಗಿದಂತೆ ಅನಿಸಹತ್ತಿತು. ಒಮ್ಮೊಮ್ಮೆ ನಾನು ಮಲಗಿದಲ್ಲಿಯೇ 
ನನ್ನ ಮೇಲೆ ಅರಳೆಯ ದಿಂಬುಗಳನ್ನಿಟ್ಟಂತೆ ಅನಿಸುವದು. ಕಾರಣ ವಿಲ್ಲದ 
ನನ್ನ ಮೇಲೆ ದಿಂಬುಗಳನ್ನು ಯಾರು ಇಡುವರು. ಇದು ನನಗೆ ತಿಳಿಯುತ್ತಿ 
ದ್ದಿಲ್ಲ. ಅಥವಾ ದಿಂಬುಗಳನ್ನು ಇಡಬೇಡಿರೆಂದು ಹೇಳುವ ಬುದ್ಧಿಯಾದರೂ 
ತೋಚುತ್ರಿದಿಲ್ಲ. ದಿಂಬುಗಳ ಭಾರವು ಅಸಹ್ಯವಾದಕೂಡಲೆ ನಾನು ಒದರು 
ತ್ತಿದ್ದೆನು. ಆರೈಕೆಗಾಗಿ ನನ್ನ ಹತ್ತರಕೂತ ಜನರು ನನ್ನನ್ನು ಎಚ್ಚರಿಸಿದ 
ಮೇಲೆ ಚಿಲಾಟವು ನಿಲ್ಲುತ್ತಿತ್ತು. ಸ್ವಲ್ಪ ಸಮಯದಲ್ಲಿಯೇ ಮತ್ತೆ ಸ್ಮೃತಿ 
ತಪ್ಪಿ ಬೇರೊಂದು ತರದ ಮಾಯಾ ತರಂಗವು ಮನಸ್ಸಿನಲ್ಲಿ ಹುಟ್ಟುತ್ತಿತ್ತು. 
ಮಂಚದ ಮೇಲೆ ಬಿದ್ದ ದೇಹವು ತನ್ನಿಂದ ತಾನೆ ಎದ್ದು ಆಂತರಾಳದಲ್ಲಿ ಸಂಚ 
ರಿಸಿದಂತೆ ಅನಿಸುವದು. ಸಂಚರಿಸುತ್ತ ಗಿಮಿ ಗಿಮಿ ತಿರುಗುತ್ತ ಅದು ಮೇಲೆ 
ಹೋದಂತೆ ನನಗೆ ಒಂದು ಬಗೆಯ ಆನಂದವಾಗುತ್ತಿತ್ತು. ಆದರೆ ಅತ್ಯುಚ್ಚ 
ಸ್ಥಾನಕ್ಕೆ ಮುಟ್ಟಿದ ಕೂಡಲೆ ಒಮ್ಮೆಲೆ ದೇಹದಲ್ಲಿಯ ಹಾರಾಡುವ ಶಕ್ತಿಯು 
ನಷ್ಟವಾಗಿ ಅದು ಭೂತಲಕ್ಕೆ ಅಪ್ಪಳಿಸುವಂತೆ ಅನಿಸಿ ಭೂಮಿಯ ಮೇಲೆ 
ಬಿದ್ದರೆ ಛಿನ್ನವಿಛಿನ್ನವಾಗುವೆನೆಂದು ಅಂಜಿ ನಾನು ಚೀರುತ್ತಿದ್ದೆನು. ಜನರು 
ಎಚ್ಚರಿಸಿ ಹೇಳಿದ ಮೇಲೆ, ನಾನು ಹಾಸಿಗೆಯ ಮೇಲೆ ಇರುವೆನೆಂದು ಸಮಾ 
ಧಾನ ಪಡುತ್ತಿದ್ದೆನು. 
ಹೀಗೆ ಮೂರು ದಿನಗಳು ಹೋದವು. ಆ ಮೇಲೆ ಎದೆಯಲ್ಲಿ ಕಫ 
ಕೂಡಿ ಶ್ವಾಸೋಚ್ಛ್ವಾಸಕ್ಕೆ ತೊಂದರೆಯಾಗಹತ್ತಿತು. ಈ ಸ್ಥಿತಿಯಲ್ಲಿ ನಾನು 
ಬೇಶುದ್ದನಾಗಿ ಇರುವದು ಹೆಚ್ಚಾಯಿತು. ವೇದವೆಗಳು ಉತ್ಕಟವಾದವು. ಶುದ್ದಿ 
ಯಲ್ಲಿದ್ದಾಗ ವೇದನೆಗಳ ತಾವಕ್ಕಿಂತ ಮರಣವು ಒಳಿತೆಂದೆನಿಸುವದು. ಈ 
ದೇಶೆಯಲ್ಲಿ ಬಹಳ ಹೊತ್ತು ಇರಬೇಕಾಗಲಿಲ್ಲ. ಒಮ್ಮೆಲೆ ಎಲ್ಲ ವೇದನೆಗಳು 
ನಿಂತಂತಾಯಿತು. ದೇಹದ ಮೇಲೆ ಈ ವರೆಗೂ ಇಟ್ಟಂಧ ಒಂದು ದೊಡ್ಡ 
ಭಾರವು ಹಗುರಾದಂತೆ ಆಯಿತು, ನನಗೆ ತಿಳಿಯಲಿಲ್ಲ. ನನ್ನ ಹತ್ತಿರ ಜನರು 
ಮಾತನಾಡುವರು (?) ಮುಂತಾದ ಕೃತಿಗಳು ನನಗೆ ಸ್ಪಷ್ಟವಾಗಿ ತಿಳಿಯ 
ಹತ್ತಿದವು. ಒಬ್ಬ ಮನುಷ್ಯನು ನನ್ನ ಕಾಲುಗಳನ್ನು ತಿಕ್ಕುತ್ತ ಅವುಗಳಲ್ಲಿ 
ಉಷ್ಣತೆ ಉಂಟುಮಾಡಲು ಯತ್ನಿಸುತ್ತಿದ್ದನು. ಮತ್ತೊಬ್ಬನು ಲವಂಗ 
ತೇದು ನನ್ನ ಕಣ್ಣಿಗೆ ಹಚ್ಚುತ್ತಿದ್ದರು. ನಮ್ಮ ತಂಗಿ ನನ್ಸ್ಪ ಸೆವಿಗೆ ಬಾಯಿ 
ಹಚ್ಚಿ ಜೋರಿನಿಂದ ನನ್ನ ಹೆಸರುಗೊಂಡು ಚೀರುತ್ತಿದ್ದಳು. ಇಷ್ಟೆಲ್ಲ ಉಪ 
ಚಾರಗಳನ್ನು ಅನುಭವಿಸುತ್ತಿದ್ದರೂ, ಈ ಉಪಚಾರಗಳ ಪ್ರಯೋಜನ ಮಾತೃ 
ನನಗೆ ತಿಳಿಯಲೊಲ್ಲದು. ಒಂದೆರಡು ನಿಮಿಷದಲ್ಲಿ ನನ್ನ ವೇದನೆಗಳಿಗೆ ಮತ್ತೆ 
ಪ್ರಾರಂಭವಾಯಿತು. ಪುನಃ ನಾನು ನರಳಹತ್ತಿದ್ದನ್ನು ನೋಡಿ ಎಲ್ಲರೂ 
ಆನಂದೋದ್ಗಾರಗಳನ್ನು ತೆಗೆದರು. ಸ್ವಲ್ಪ ಸ್ಮೃತಿ ಬಂದ ಮೇಲೆ ನನ್ನ 
ಜೀವವು ಹೋಗಿದ್ದು ತಿರುಗಿತೆಂದು ಯಾರೋ ಹೇಳಿದರು. ಜೀವ ಹೋಗಿ 
ತಿರಗುವ ಈ ಚಮತ್ಕಾರವು ಓಮ್ಮೆ ಆಗಿ ನಿಲ್ಲಲಿಲ್ಲ... ಆ ದಿವನ ಮತ್ತೆ ಎರಡು 
ಸಾರೆ ಮೇಲಿನಂತೆ ಆಯಿತು. 
ಮರುದಿನ ಬೆಳಗಿನ ಜಾವದಲ್ಲಿ ನಮ್ಮ ಮನೆಯಲ್ಲಿ ಬಹಳ ಜನರು 
ಬಂದಂತೆ ಅನಿಸಿತು. ಶ್ವಾಸಫಚ್ಛ್ವಾಸದ ತೊಂದರೆಯಿಂದೆ ನನ್ನ ವೇದನೆಗಳು 
ಹೆಚ್ಚಿದ್ದರಿಂದ ಇಷ್ಟು ಜನರು ಬಂದ ಕಾರಣವು ನನಗಿ ತಿಳಿಯಲಿಲ್ಲ. 
ಮತ್ತೊಮ್ಮೆ ನನ್ನ ಎಲ್ಲ ವೇದನೆಗಳೂ ನಿಂತಂತಾಯಿತು ಆದರೆ ಮೇಲೆ 
ಹೇಳಿದಂತೆ ವೇದನೆಗಳು ತಿರುಗಲಿಲ್ಲ ಈ ರೀತಿಯಿಂದ ಮುಕ್ತನಾದ ನಾನು 
ಮನೆಯಲ್ಲಿ ಅಡ್ಡಾಡ ಹತ್ತಿದೆ. ಆದರೆ ನನಗೆ ತಿಳಿಯದಂಭ ಒಂದು ಚಮ 
ತ್ಕಾರವನ್ನು ಮಾತ್ರ ನಾನು ಕಂಡೆನು. ನನ್ನಂಥ ಆಕಾರವುಳ್ಳ ದೇಹದ 
ಸುತ್ತಲೂ ಕುಳಿತು ನನ್ನ ಆಪ್ತೇಷ್ಠರು ಎದೆ ಎದೆ ಬಡಿದುಕೊಂಡು ಅಳುತ್ತಿ 
ದ್ದರು. ಯಾಕೆ ಅಳುತ್ತಿರುವರೋ ತಿಳಿಯಲೊಲ್ಲದು. ಅವರ ಶಬ್ದಗಳನ್ನು 
ಕೇಳಿದ ಮೇಲೆ ನಾನು ಸತ್ತನೆಂದು ಅಳುತ್ತಿರುವದಾಗಿ ಗೊತ್ತಾಯಿತು. 
ನಾನು ಇದ್ದಾಗ್ಯೂ ಸತ್ತನೆಂದು ಭಾವಿಸುವದನ್ನು ನೋಡಿ ಆಶ್ಚರ್ಯವಾ 
ಯಿತು. " ನಾನು ಸತ್ತಿಲ್ಲ ಅಳಬೇಡಿ" ಎಂದರೆ ಕೇಳಿಸುವಂತೆ ತೋರಲಿಲ್ಲ. 
ಅವರ ಆಕ್ರೋಶವು ಜೋರಿನಿಂದ ನಡೆಯಿತು. ನನ್ನ ಶಬ್ದವು ಏಕೆ ಕೇಳಿಸ 
ಬಾರದು ? ಇದೂ ನನಗೆ ತಿಳಿಯಲಿಲ್ಲ.. ಈ ಸಂದರ್ಭದಲ್ಲಿ ಮತ್ತೊಂದು 
ಆಶ್ಚರ್ಯದ ಸಂಗತಿಯು ಇತ್ತು. ನನ್ನಂತೆ ಕುಣಿಸುವ ದೇಹವು ನನ್ನ ಬಳಗ 
ದವರ ಮಧ್ಯದಲ್ಲಿ ಬಿದ್ದಿದರೂ ಆ ದೇಹವೆಂದರೆ ನಾನಲ್ಲ ಅದು ನನ್ಸಂತೆ
ಕಾಣಸುತ್ತಿರಬಹುದೆಂದು ನನಗೆ ಭಾವನೆಯಾಯಿತು. ನನ್ನ ಬಾಲ್ಬದಲ್ಲಿಯ 
ಛಾಯಾಚಿತ್ರವನ್ನು ನೋಡಿ, ಒಬ್ಬ ಮಧ್ಯ ವಯಸ್ಕನಾದ ಮನುಷ್ತವಿಗೆ
ಏನೇನಿಸುವದೋ ಅದೇ ಭಾನನೆಯು ನನಗೆ ಆಯಿತು. ಭೂಮಿಯ ಮೇಲೆ 
ಬಿದ್ದ ಆ ದೇಹದ ಮೇಲಿನ ಮಹತ್ವವು ಪೂರಾ ಹೋಗದಿದ್ದರೂ ಅದೂ ನಾನೂ 
ಬೇರೆ, ಒಂದೇ ಅಲ್ಲ. ಅದರ ಅಸ್ತಿತ್ವಕ್ಕೆ ಸಂಬಂಧವಿಲ್ಲೆಂದು ಕಂಡಿತು. 
ಹೀಗೆ ನಾನು ಎಲ್ಲ ವೇದನೆಗಳಿಂದ ಮುಕ್ತನಾಗಿ ನಾನು ಸತ್ತಿಲ್ಲ ಜೀವದಿಂದ 
ಸುರಕ್ಷಿತವಾಗಿರುವನೆಂದು ಎಷ್ಟು ಹೇಳಿದರೂ ನನ್ರ ಬಾಂಧವರ ಆಕ್ರೋಶ 
ನಿಲ್ಲಲಿಲ್ಲ. ಒಂದೆರಡು ತಾಸಿನ ನಂತರ ನನ್ನ ಛಾಯಾ ಚಿತ್ರವಾದ ಆ ದೇಹ 
ವನ್ನು ಸ್ಮಶಾನಕ್ಕೆ ಒಯ್ದು ಸುಟ್ಟುಬಂದರು. ಆ ಮೇಲೆ ಹತ್ತು ಹದಿನಾರು 
ದಿವಸದ ವರೆಗೆ ನನ್ಮು ಮನೆಯಲ್ಲಿ ಗೊಂದಲವೇ ನಡೆಯಿತು. ನಾನು ಸತ್ತೆ 
ನೆಂದು ದುಃಖಪಡುವ ನನ್ನ ಕುಟುಂಬದವರ ಸಮಾಧಾನ ಮಾಡುವದಕ್ಕೆ 
ಊರ ಜನರು ಬರುತ್ತಿದ್ದರು. ಅವರು ಬಾಗಿಲದಲ್ಲಿ ಬಂದ ಕೂಡಲೆ, ನಮ್ಮ 
ಮನೆಯ ಜನರು ಜೋರಿನಿಂದ ಅಳಲಿಕ್ಕೆ ಪ್ರಾರಂಭ ಮಾಡುತ್ತಿದ್ದರು. ಬಂದ 
ವರು ನಾಲ್ಕು ಉಪಚಾರದ ಮಾತುಗಳನ್ನು ಹೇಳಿ, ತಾವೂ ಸ್ವಲ್ಪ ಸ್ವಲ್ಪ 
ಅತ್ತು ದುಃಖ ಪ್ರದರ್ಶನ ಮಾಡುತ್ತಿದ್ದರು. ಈ ಜನರು ಹುಚ್ಕರಂತೆ 
ಕಾರಣವಿಲ್ಲದೇ ಅಳುವದನ್ನು ನೋಡಿ, ನನಗೆ ಬೇಸರ ಬಂದಿತು. ಅವರು 
ಅಳಬಾರದು, ದುಃಖ ಪಡಬಾರದು ಎಂದು ನಾನು ಅವರಿಗೆ ಪರಿ ಪರಿಯಿಂದ 
ಹೇಳಿದನು. ನಾನು ಎದುರಿನಲ್ಲಿ ಕುಳಿತು ಎಷ್ಟು ಚೀರಿದರೂ ನನ್ನ ಶಬ್ದವೇ 
ಅವರ ಲಕ್ಷಕ್ಕೆ ಬಾರದಂತೆ ಕಂಡಿತು. ಮತ್ತು ನನ್ನ ಶಬ್ದವೇ ಅನರಿಗೆ ಕೇಳಿಸ 
ದಂತೆ ಅವರು ವರ್ತಿಸ ಹತ್ತಿದರು. ಮನೆಯಲ್ಲಿ ಈ ಹಾಡಾಯಿತು ನಿತ್ಯವೂ 
ಹೋಗುವಂತೆ ಖಾದೀ ಭಾಂಡಾರಕ್ಕೆ ಹೋದೆನು. ಕಟ್ಟಿಯ ಮೇಲೆ ಏರಿ 
ನಿತ್ಯದ ಕುಳಿತೆನು; ಆದರೆ ಭಾಂಡಾರದಲ್ಲಿಯ ವ್ಯವಸ್ತಾಪಕನು ನನ್ನ 
ಸಂಗಡ ಮಾತಾಡುವದಂತಿರಲಿ, ನನ್ನ ಕಡೆಗೆ ಅವನು ಕಣ್ಣೆತ್ತಿ ಸಹ ನೋಡಲಿಲ್ಲ 
ಇಷ್ಟೆ ಅಲ್ಲ, ಯಾರೋ ವ್ಯಪಾರಕ್ಕೆ ಬಂದಾಗ್ಗೆ ಅವರ ಸಂಗಡ ಅವನು ಸಹ     
ನನ್ನ ಮರಣದ ಸುದ್ದಿಯನ್ನೇ  ಮಾತಾಡಹತ್ತಿದನು. ನನಗೆ ಸಿಟ್ಟು ಬಂದಿತು. 
ನಾನು ಸತ್ರಿಲ್ಲವೆಂದು ಅವರ ಮನನರಿಕೆಮಾಡಲು ಇಲ್ಲಿ ಆದರೂ ಪ್ರಯತ್ನ 
ಬಟ್ಟೆನು, ಅದೂ ವೃರ್ಥವಾಯಿತು. 
ಅಲ್ಲಿಂದ ವಾಚನಾಲಯಕ್ಕೆ ಹೋದೆನು. ಅಲ್ಲಿ ಪರಿಚಯಸ್ಥರು ಎದುರಿ 
ನಲ್ಲಿ ಭೆಟ್ಟಿಯಾದರೂ ಮಾತಾಡಿಸದೇ ಹಾಗೆ ಹೋದರು.  ಹೊತ್ತು
ಕಳೆದ ಮೇಲೆ ನಮ್ಮ ಮಿತ್ರ ಸಮಾಜಕ್ಕೆ ಹೋದೆನು. ಅಲ್ಲೆಿ ನನ್ನ 
ಮಿತ್ರರು ಇಸಪೇಟ ಆಡುತ್ತಿದ್ದರು. ಕೆಲವರು ಸುಮ್ಮನೆ ಹರಟ ಹೊಡೆಯು 
ತ್ತಿದ್ದರು. ಅವರೊಡನೆ ಏನಾದರೂ ಮಾತಾಡಿ ಕಾಲಕಳೆದು ಮನೆಗೆ ಹೋಗ 
ಬೇಕೆನ್ನುವಷ್ಟರಲ್ಲಿ ಅವರಾದರೂ ನನ್ನ ಮರಣದ ಸುದ್ದಿಯನ್ನೇ ಮಾತಾಡುವ 
ದನ್ನು ಕೇಳಿದೆನು; ಮುಗಿಯಿತು. ಕಡೆಯ ಯತ್ನವೆಂದು ಇವರ ಮುಂದಾದರೂ 
ನಾನು ಸತ್ತಿಲ್ಲ, ಇರುವೆನೆಂದು ಹೇಳಲಿಕ್ಕೆ ಪ್ರಯತ್ನಿಸಿದೆನು. ಇವರಾದರೂ 
ನನ್ನ ಶಬ್ದಗಳು ಕೇಳಿಸಿದಂತೆ ಆಚರಿಸಿದರು. ನಿರಾಶನಾಗಿ ನುನೆಗೆ ಹೋದೆನು.
ನನ್ನ ಮಾತು ಕೇಳುವವರಿಲ್ಲ. ನನಗೆ ಮಾತು ಹೇಳುವವರಿಲ್ಲ. ಇಂಥ ಸ್ಥಿತಿ 
ಯಲ್ಲಿ ಕಾಲಹರಣ ಮಾಡಲಿಕ್ಕೆ ಬೇಸರ ಬರಹತ್ತಿತ್ತು. ಹೀಗೆ ಹೀನವಾದ 
ಆಯುಷ್ಯವನ್ನು ಹೇಗೆ ಕಳೆಯಬೇಕೆಂಬ ವಿವಂಚನೆಯಲ್ಲಿ ಮನಕ್ಕೆ ಬಂದಂತೆ 
ಅಡ್ಡಾಡುವಾಗ ದಣಿದುಬಂದು ಶಾಂತ ಸ್ಥಳದಲ್ಲಿ ಕುಳಿತೆನು. ಶ್ರಮದಿಂದ 
ಸ್ವಲ್ಪು ಜಂಪು ಹತ್ತಿತು. ಎಚ್ಚರಾಗಿ ನೋಡುವಷ್ಟರಲ್ಲಿ ನನ್ನ ಎದುರಿನಲ್ಲಿ 
ನನ್ನ ಗುರುತಿನವರಾರೋ ಕುಳಿತಂತೆ ಕಾಣಿಸಿತು. ಆ ಗೃಹಸ್ಥನ ಮೋರೆ 
ಯನ್ನು ನೋಡಿ ಚಕಿತನಾದೆನು. ನಾನು ನಿದ್ದೆಯಲ್ಲಿ ಇರುವೆನೋ ಎಚ್ಚರಾ 
ಗಿರುವೆನೋ ಎಂಬ ಶಂಕೆ ಬಂದಿತು. ಏಕೆಂದರೆ ಯಾವನ ಮೃತ್ಯುಲೇಖವನ್ನು 
ನಾನೇ ಬರೆದು ವೃತ್ತ ಪತ್ರಕ್ಕೆ ಕಳುಹಿದ್ದೆನೋ ಅದೇ ರಾಮರಾಯನು 
ನನ್ನೆದುರಿನಲ್ಲಿ ಕುಳಿತು ನನ್ನ ಕಡೆಗೆ ನೋಡುತ್ತ ನಸುನಗುತ್ತಿದ್ದನು. ನಾನು 
ಸ್ಮಂಭಿತನಾದುದನ್ನು ಕಂಡು ಅವನೇ ಬಂದು “ಏಕೆ ರಾಯರೇ ಗುರುತು 
ಹತ್ತಲೊಲ್ಲದೊ?” ಎಂದು ಮಾತಾಡಿಸಿದನು. ನಾನು ದಿಙ್ಮೂಢನಾದೆನು. 
ಕಳೆದ ಹದಿನಾರು ದಿನದಲ್ಲಿ ನನ್ನ ಕಣ್ಣಿಗೆ ಕಣ್ಣು ಹಚ್ಚಿ ನನ್ನನ್ನು ಯಾರೂ 
ಮಾತಾಡಿಸಿದ್ದಿಲ್ಲ, ಈ ಹೊತ್ತು ಇಷ್ಟು ಪ್ರೇಮದಿಂದ ಮಾತಾಡಿಸುವವನು 
ಭೆಟ್ಟಿಯಾದ್ದರಿಂದ ನನಗೆ ಆನಂದವಾಗತಕ್ತದ್ದು ಸರಿ. ಆದರೆ ಭೆಟ್ಟಿಯಾದ 
ವೃಕ್ತಿಯು ದಿವಂಗತನಾದ ರಾಮರಾಯನಾದ್ದರಿಂದ ನನ್ನ ಹೊಟ್ಟಿಯಲ್ಲಿ 
ತಣ್ಣಗಿನ ಕಲ್ಲು ಇಟ್ಟಂತಾಯಿತು. ಇಷ್ಟು ಮೈಮೇಲೆ ಬಿದ್ದು ಮಾತನಾಡಿ 
ಸುವವನನ್ನು ಬಿಟ್ಟುಬಿಡುವದೆಂದರೆ ಹೀನತನವೆಂದು ಭಾವಿಸಿ, ಮನಸ್ಸನ್ನು, 
ಗಟ್ಟಿಮಾಡಿ " ಬರ್ರಿ ರಾಮರಾಯರೆ, ದೃಷ್ಟಿಯು ಸ್ತಲ್ಪ ಮಂದಾದ್ದರಿಂದ 
ಬೇಗನೆ ಗುರುತುಹತ್ತಲಿಲ್ಲ. ಕ್ಷಮಿಸಿರಿ ” ಅಂದೆನು. ಅದೇನು ರಾಯರೇ 
ಕ್ಷಮಿಸುವದು ? ಎಂದು ರಾಮರಾಯನು ಅಂದನು. ಹದಿನಾರು ದಿನಗಳ 
ವರೆಗೆ ನಾನು ಎಷ್ಟು ಚೀರಿದರೂ ನನ್ನ ಶಬ್ದವು ಯಾರಿಗೂ ಕೇಳಿಸಲಿಲ್ಲ. 
ಆದರೆ ರಾಮರಾಯರಿಗೆ ಹೇಗೆ ಕೇಳಿಸಿತು? ಇದೇ ಒಂದು ಸೋಜಿಗವಾ 
ಯಿತು. ನನ್ನ ಕೂಡ ಮಾತಾಡುವವನು ಒಬ್ಬನಾದರೂ ಸಿಕ್ಕನೆಂದು 
ನನಗೆ ಆನಂದವಾಯಿತು. ಮತ್ತು ಆ ಆನಂದದಲ್ಲಿ ಮೊದಲು ಉಂಟಾದ 
ಭಯೆಮಾಯವಾಯಿತು ಇಷ್ಟಾದರೂ ರಾಮರಾಯನ ಸಂಗಡ ಕೇವಲ 
ಮೇಲುಪಚಾರದ, ಕ್ಷೇಮಸಮಾಜಚಾರದ ಮಾತುಗಳನ್ನೇ ಆಹಹತ್ತಿದೆನು. 
ಆವನು ಮೃತಪಟ್ಟವನೆಂಬ ಭಾವನೆಯು ಇನ್ನೂ ನನ್ನ ಮನಸ್ಸನ್ನು ಬಿಟ್ಟಿ 
ದ್ದಿಲ್ಲ. ನಾನು ಹೀಗೆ ಆಂಜುತ್ತ ಅಂಜುತ್ತ ಮಾತಾಡುವದನ್ನು ಕಂಡು ರಾಮ 
ರಾಯರಿಗೆ ಸ್ವಲ್ಪು ಸಿಟ್ಟು ಬಂದಂತೆ ತೋರಿತು. " ಸಂಕೋಚವೇಕೆ ? ಇತರ 
ರಂತೆ ನೀವಾದರೂ ನಾನು ಮೃತನೆಂದು ತಿಳಿಯುತ್ತೀದ್ದೀರಿ, ತಿಳಿಯಿರಿ, 
ನಾನು ಹೋಗುವೆನು * ಎಂದು ರಾಮರಾಯನು ಹೊರಟನು. ಸಿಕ್ಕವನೊಬ್ಬ 
ಮಿತ್ರನು ಕೈಬಿಟ್ಟು ಹೋಗುವನೆಂದು ಹತಾಶನಾಗಿ ನಾನು ಮಾತಾಡಿದೆನು. 
ಕೂತುಕೊಳ್ಳಿ ರಾಮರಾಯರೇ ಮಿಕ್ಕವರಂತೆ ನಾನಾದರೂ ತಾವು ಮೃತ 
ಪಟ್ಟವರೆಂದು ಭಾವಿಸಿದ್ದು ನಿಜ. ಆದರೆ ನನ್ನ ಭವಣಿಯನ್ನು ಕೇಳಿದರೆ 
ತಮಗೆ ನಿಜಸ್ಥಿತಿ ಗೊತ್ತಾಗುವದು. ರಾಮರಾಯನು ಕುಳಿತನು. ಕಳೆದ 
ಹದಿನಾರು ದಿನಗಳಲ್ಲಿ ನಾನು ಜೀವಂತ ಇರುವೆನೆಂದು ಸಿದ್ಧಮಾಡಲು ನಾನು 
ನಡಿಸಿದ ಪ್ರಯತ್ನಗಳು ಅದರಂತೆ ನನ್ನ ಇಷ್ಟಮಿತ್ರರು ನಾನು ಸತ್ತೆನೆಂದು 
ಕಲ್ಪಿಸಿ, ನನ್ನ ಅಸ್ತಿತ್ವದ ಬಗ್ಗೆ ತೋರಿಸಿದ ಔದಾಸಿನ್ಯ ಇವುಗಳನ್ನು ಸವಿಸ್ತಾರ 
ವಾಗಿ ರಾಮರಾಯನಿಗೆ ಹೇಳಿದೆನು. ಇದನ್ನೆಲ್ಲ ಕೇಳುವ ಮುಂದೆ ರಾಮ 
ರಾಯನು ನಗುತ್ತಿದ್ದನು. ನನ್ನ ಕತೆ ಮುಗಿದ. ಮೇಲೆ ಸಹ ರಾಮ 
ರಾಯನು ನಗೆ ನಿಲ್ಲಲಿಲ್ಲ! ಕಡೆಗೆ ಸಲ್ಪ ನಿಂತ, ರಾಮರಾಯನು ಅಂದ; ಸಿಟ್ಟು 
ಮಾಡಬೇಡಿ. ತಮ್ಮದುರವಸ್ಥೆಗೆ ನಾನು ನಗುವೆನೆಂದು ತಿಳಿಯ ಬೇಡಿ. ಕೇವಲ 
ನಿಮ್ಮಂತೆಯೇ ನನ್ನದಾದರೂ ಭವಣಿಯಾಗಿತ್ತು. ಆಗ ನಾನು ನಿಮ್ಮಂತೆಯೇ 
ನಿರಾಶನಾಗಿದ್ದೆನು. ಆದರೆ ಚಿಂತೆ ಇಲ್ಲ, ಬರ್ರಿ. ಎಂದು ರಾಮರಾಯನು ನನ್ನ 
ಕೈ ಹಿಡಿಮ ಕರೆದುಕೊಂಡು ಒಂದು ಸ್ಥಳಕ್ಕೆ ಹೋದನು.
======================================
ಗೋಪಾಳಭಟ್ಟಿರ ಹುಲಿ 

ನಮ್ಮೂರಿಗೆ ಪುಣೆ ಮುಂಬೈ ಕಡೆಯಿಂದ ಅತಿಥಿಗಳು ಬಂದರೆ ನಿಜವಾ 
ಗಿಯೂ ನಮ್ಮ ಊರಿನ ಪರಿಸ್ಲಿತಿಯನ್ನು ಕಂಡು ಅವರಿಗೆ ಕನಿಕರವೆನಿಸದೇ 
ಇರುವದಿಲ್ಲ, ಐದಾರು ಸಾವಿರ ಜನವಸತಿ ನಮ್ಮೂರಿನದು.ಇತ್ತ ಹಳ್ಳಿಯೂ ಅಲ್ಲ, 
ಇತ್ತ ಪಟ್ಟಣವೂ ಅಲ್ಲ. ಆದರೆ ಹಳ್ಳಿಯ ಎಲ್ಲ ಅನಾನುಕೂಲತೆಗಳೂ ಪಟ್ಟಣದ 
ಎಲ್ಲ ತುಟಾಗ್ರತೆಯೂ ಇಲ್ಲಿ ಕೂಡಿಕೊಂಡಿವೆ. ಸುದ್ದಿ ಎನ್ನಬಹುದಾದ ಯಾವ 
ಸಂಗತಿಯೂ ಇಲ್ಲಿ ಘಟಸುವದಿಲ್ಲ. ಸಭೆ, ಮೆರವಣಿಗೆ, ಪರಿಷತ್ತು ಅಥವಾ 
ಕನಿಷ್ಟವಾಗಿ ಹೊಡದಾಟ ಬಡಿದಾಟಗಳು ಜರುಗಿದರೂ ಊರಿಗೊಂದು   
ಕಳೆಬರಬಹುದಾಗಿತ್ತು. ಅದರೆ ಅಂಥದೇನೂ ಫಲಿಸುತ್ತಿರಲಿಲ್ಲವಾದ್ದರಿಂದ,   
ಆಳಬಾವಿಯಲ್ಲಿರುವ ಅವೆಯಂತೆ ನಮ್ಮ ಆಯುಷ್ಯವು ಸಾಗಿದ್ದಿತು. ಆದರೆ 
ಆಗಾಗ್ಗ ಚಿಕ್ಕ ಪುಟ್ಟ ಘಟನೆಗಳೂ ಜರಗುತ್ತಿದ್ದವು. ಅವುಗಳನ್ನು ಹತ್ತು 
ಹನ್ನೆರಡು ವರುಷಗಳಾದರೂ ನಾವು ನೆನಪಿನಲ್ಲಿಡುತ್ತಿದ್ದೆವು. ಇಂತಹದೇ 
ಒಂದು ಘಟನೆ ನಮ್ಮ ಗೋಪಾಳಭಟ್ಟರ ಹುಲಿಯ ಕತೆಯಾಗಿದೆ. 
ನಮ್ಮ ಊರಿಗೆ ಯಾವುದಾದರೂ ನಾಟಕ ಕಂಪನಿಗಳಾಳಲೀ, ಸರ್ಕಸ 
ಕಂಪನಿಗಳಾಗಲೀ ಬಂದುವೆಂದರೆ, ಅವು ತಮ್ಮ ಅಂತ್ಯವಿಧಿಗಾಗಿಯೇ ಬರುತ್ತ 
ವೆಂದು ನಮ್ಮೂರಿನ ಖ್ಯಾತಿ. ಒಮ್ಮೆ ಇಂತಹದೇ ಒಂದು ಚಿತ್ತಾಕರ್ಷಕ 
ಸರ್ಕಸ ಕಂಪನಿಯು ನಮ್ಮೂರಿಗೆ ಬಂದಿತು. ಮತ್ತು ಅವರು ತಮ್ಮ ತಂಬೂ 
ವನ್ನೂ ಹೊಡೆದರು. ತಂಬೂ ನಿಂತರೂ, ಒಲೆ ಉರಿ ಕಂಡಿದ್ದಿಲ್ಲ. ಸರ್ಕಸ 
ಕಂಪನಿಯಲ್ಲಿ ಆನೆ ಇತ್ತು; ಹುಲಿ ಇತ್ತು; ಮತ್ತು ಕದುರೆಗಳೂ ಇದ್ದವು; 
ಆದರೆ ಅಕ್ಕಿ ಮಾತ್ರ ಇರಲಿಲ್ಲ. ಮಾನೇಜರರು ಬಹಳ ಚಿಂತೆಯಲ್ಲಿ ಬಿದ್ದಿ 
ದ್ದರು, ಅವರಿಗೆ ಹಸಿವೆ ಬಹಳವಾಗಿತ್ತು. ಆದರೂ ಊರಾದರೂ ಹೇಗಿದೆ. 
ನೋಡಿಬರೋಣವೆಂದು, ಹಸಿದ ಹೊಟ್ಟಿ ಯಿಂದಲೇ ಹೊರಗೆ ಹೊರಟರು. 
ಒಂದೆರಡು ಮನೆ ದಾಟುವಷ್ಪವರಲ್ಲಿ ಅವರಿಗೆ ಗೋಪಾಳಭಟ್ಟರ ದರ್ಶನವಾ   
ಯಿತು. ಗಣಪತಿಯನ್ನೂ ನಾಚಿಸುವ ಅವರ ಹೊಟ್ಟೆಯನ್ನೂ ಗಡ್ಡಮೀಸೆ 
ಗಳ ಅರಣ್ಯದಲ್ಲಿ ಅಡಗಿದ ಅವರ ಬಾಯಿಯನ್ನೂ, ಮತ್ತು ಬಚ್ಚಲ ಮನೆಯಲ್ಲಿ 
ಸ್ನಾನಕ್ಕೆ ಕೂತವರಂತೆ ಕೂತ ಅವರ ರೀತಿಯನ್ನೂ ನೋಡಿ ಮ್ಯಾನೇಜರರ 
ಮನಸ್ಸಿನಲ್ಲಿ ಪೂಜ್ಯಭಾವನೇ ಉತ್ಪನ್ನವಾಯಿತು. ವಿಶೇಷವಾಗಿ ಗೋಪಾಳ 
ಭಟ್ಟರು ಕಿರಾಣಿ ಅಂಗಡಿಯ ವ್ಯಾಪಾರಿಗಳಾಗಿದ್ದರು. ಮತ್ತು ಅವರು 
ಆವಾಗ ತಮ್ಮ ಅಂಗಡಿಯಲ್ಲಿಯೇ ಕುಳಿತಿದ್ದರು. ಅಂತೆಯೇ ಮಾನೇಜರರ 
ಪೂಜ ಭಾವನೆಗೆ ಉಕ್ಕು ಬಂದಿತು. ಅವರು ಬಾಗಿ ಭಟ್ಟರಿಗೆ ನಮಸ್ಕಾರ 
ಮಾಡಿದರು. 
ವೇಷದಿಂದ ನೋಡಿದರೆ ಪೆನ್ಸನ್‌ ತೆಗೆದುಕೊಂಡ ಪೋಲೀಸಇನ್‌ಸ್ಪೆಕ್ಟರ 
ರಂತೆ ಕಾಣುವ ಡೌಲಿನ ಒಬ್ಬ ಗೃಹಸ್ಥನು ತಮಗೆ ನಮಸ್ಕಾರ ಮಾಡುವ 
ದನ್ನು ಕಂಡು, ಗೋಪಾಳ ಭಟ್ಟರಿಗೆ ಆಶ್ಚರ್ಯವೆನಿಸಿತು; ಒಂದಿಷ್ಟು ಸಂತೋ 
ಷವೂ ಆಯಿತು. ಅವರದು ನಗುನಗುತ್ತ ಮ್ಯಾನೇಜರರನ್ನು ಸ್ವಾಗತಿಸಿದರು. 
ಮ್ಯಾನೇಜರರು ತಮ್ಮ ಸರ್ಕಸಿದನ ವಿಷಯಕ್ಕೆ ಹೇಳಿ, ತಮ್ಮ ಮುಕ್ಕಾಮು 
ಈ ಊರಿನಲ್ಲಿ ಇರುವ ವರೆಗೆ ಉತ್ತಮ ಪ್ರಕಾರದ ಕಿರಾಣೀ ಸಾಮಾನುಗಳನ್ನು 
ಪೂರೈಸುವ ಒಬ್ಬ ಖರೇ ವರ್ತಕರು ತಮಗೆ ಬೇಕಾಗಿದ್ದಾರೆ ಎಂದು ಹೇಳಿದರು. 
ಇಂಧ ದೊಡ್ಡ ಗಿರಾಕಿಯು ಅನಾಯಾಸವಾಗಿ ನಡೆಯುತ್ತ ತಮ್ಮ ಕಡೆಗೇ 
ಬಂದದ್ದನ್ಫು ಕಂಡು ಗೋಪಾಳಭಟ್ಟರಿಗೆ ಸಂತೋಷವೆನಿಸಿತು. ಮ್ಯಾನೇ 
ಜರರು ಆಗಾವ ಹಣ ಕೊಡಬೇಕೇ? ಎಂದು ಕೇಳಿದರು. ಈ ಹೊಸ ಗಿರಾಕಿ 
ಯನ್ನು ಸಂತೋಷಗೊಳಿಸುವದೇ ಜಾಣತನದ್ದೆಂದು ತಿಳಿದು ಗೋಪಾಳ 
ಭಟ್ಟರು ಆಗಾವ ಹಣವನ್ನು ಸ್ವೀಕರಿಸಲು ನಿರಾಕರಿಸಿದರು ಮ್ಯಾನೇಜರ 
ರಿಗೂ ಇದೇ ಬೇಕಾಗಿತ್ತು. ಚಿತ್ತಾಕರ್ಷಕ ಕಂಪನಿಯ ಒಲೆ ಹೊತ್ತಿತು. 
ಹುಡುಗರನ್ನು ಹಿಡಿದು ಹಿರಿಯರ ವರೆಗೆ, ಆಡಿನಿಂದ ಆನೆಯ ವರೆಗೆ 
ಆನಂದವೇ ಆನಂದ ವಸರಿಸಿತು. 
ಗೋವಾಳಭಟ್ಟರ ಚೌರ ಹಾರಾಡಹತ್ತಿತು. ಅವರಿಗೆ ಸರ್ಕಸ್ಸಿಗೆ   
ಹೋಗಲಿಕ್ಕೆ, ಯಾವಾಗಲೂ ಮುಕ್ತದ್ದಾರವಿದ್ದಿತು. ಅಲ್ಲದೇ ಮನೆಯ ಮಂಡ
ಳಿಗೂ ಕುರ್ಚಿಯ ಪುಕ್ಕಟೆ ಪಾಸುಗಳು ಇದ್ದವು. ಒಂದೆರಡು ದಿವಸಗಳಲ್ಲಿ 
ಸರ್ಕಸಿನ ನಾಯಿಗಳೂ ಕೂಡ  ಗೋಪಾಳಭಟ್ಟರನ್ನು ಕಂಡ ಕೂಡಲೆ ಬಾಲ 
ಅಲ್ಲಾಡಿಸಹತ್ತಿದವು. ನಿಜವಾಗಿ ನೋಡಿದರೆ, ಮೂಕ ಪ್ರಾಣಿಗಳಿಂದಲೂ 
ತಮಗೆ ಇಂತಹ ಮರ್ಯಾದೆ ಸಿಗುತ್ತಿರುವಾಗ, ಗೋಪಾಳಭಟ್ಟರ ಮನಸ್ಸು 
ಅನಂದಸಾಗರದಲ್ಲಿ ಈಸಾಡಬೇಕಾಗಿತ್ತು. ಆದರೆ ಹಾಗೇನೂ ಇರದೆ, ಅವರ 
ಮನಸ್ಸಿನಲ್ಲಿ ಒಂದು ತರದ ಡುಗು ಡುಗಿ ಇದ್ದಿತು. ಸರ್ಕಸ್ಸಿನಲ್ಲಿ ಕುರ್ಚಿಯ 
ಮೇಲೆ ಕುಳಿತುಕೊಳ್ಳುವ ಒಬ್ಬಿಬ್ಬರು ಗೃಹಸ್ತರನ್ನು ಮಾತನಾಡಿಸುವ 
ಪ್ರಸಂಗವೂ ಇವರಿಗೆ ಬಂದಿತು. ಆದರೆ ಅವರೆಲ್ಲರೂ ಮುಖ್ಯವಾಗಿ ಪುಕ್ಕಟೆ 
ಯಾಗಿಯೇ ಬಂದವರಾಗಿದ್ದರು. ಪೋಲೀಸ ಅಧಿಕಾರಿಗಳೂ, ಮಾಮಲೇದಾರ 
ಇತ್ಯಾದಿ ಅಮಲದಾರರೂ ಮತ್ತು ಆವರ ಮನೆಯ ಮಂಡಲಿಯವರೇ ಈ 
ಕುರ್ಚಿಗಳನ್ನು ಅಲಂಕರಿಸುತ್ತಿರುವದನ್ನು ಕಂಡು ಭಟ್ಟರಿಗೆ ತಮ್ಮ ಬಾಕಿ 
ವಸೂಲಿಯೆ ಚಿಂತೆ ಹತ್ತಿತು. 
ಇಂಥ ಚಿಂತಾಕ್ರಾಂತ ಸ್ಥಿತಿಯಲ್ಲಿ ಒಂದು ದಿವಸ ಗೋವಾಳಭಟ್ಟರು 
ತಮ್ಮ ಚಿರಂಜೀವನಾದ ವಿಠ್ಠಲನನ್ನು ಕರೆದುಕೊಂಡು ಬಾಕೀ ಕೇಳಲಿಕ್ಕೆಂದು 
ಮ್ಭಾನೇಜರರ ಕಡೆಗೆ ಹೋದರು. ಆಗ ಮ್ಭ್ಳಾನೇಜರ ಸಾಹೇಬರು ಆನೆಗೆ 
ಏನನ್ನೋ ಕಲಿಸುವುದರಲ್ಲಿ ಮಗ್ನರಾಗಿದ್ದರು. ಅವರು   ದೂರದಿಂದಲೇ 
ನಮಸ್ಕಾರ ಮಾಡಿದರು. ಮತ್ತು ತಂದೆ ಮಕ್ಕಳು ಸಮೀಪಕ್ಕೆ 
ಬರುತ್ತಲೇ ಥಟ್ಟನೇ ಮಗುವನ್ನೆತ್ತಿ ಮಾವುತನ ಕೈಯಲ್ಲಿ ಕೊಟ್ಟರು.
ಆನೆಯ   ಮೇಲೆ ವಿರಾಜಮಾನನಾಗಿರುವ ವಿಠ್ಠಲನನ್ನು ಕಂಡು ಭಟ್ಟರು ಹಿಗ್ಗಿ 
ಹೋದರು, ಮುಂದೆ ವಿಠ್ಠಲನ ಮನಸ್ಸು ತಿರುಗಿಸಿ ಕೆಳಗಿಳಿಸಬೇಕಾದರೆ 
ಭಟ್ಟರಿಗೆ ಸಾಕುಬೇಕಾಯಿತು. . ಈ ಗದ್ದಲದಲ್ಲಿ ಬಾಕೀ ಕೇಳುವ ನೆನಪು 
ಕೂಡ ಭಟ್ಟರಿಗೆ ಉಳಿಯಲಿಲ್ಲ. ಈ ರೀತಿಯಾಗಿ ಸರ್ಕಸಿನ ಮೇಲಿನ ದೊಡ್ಡ 
ಸಂಕಟವು ಅನಾಯಾಸವಾಗಿ ತಪ್ಪಿತು. 
ಚಿತ್ತಾಕರ್ಷಕ ಸರ್ಕಸ ಮಂಡಲಿಯನರು ನಮ್ಮೂರಿಗೆ ಬಂದು ೧೫ 
ದಿನಸಗಳಾದವು. ಸರ್ಕಸಿನ ಉತ್ಪನ್ನ ಮತ್ತು ವೆಚ್ಚ ಇವು ಎಂದೂ ಬಾಯಿ 
ಗೂಡುತ್ತಿರಲಿಲ್ಲ. ಇಂಥ ಹೊತ್ತಿನಲ್ಲಿಯೇ "ನಾಳಿನಿಂದ ಉದ್ರಿ ಬಂದು” ಎಂಬ 
ನೋಟೀಸನ್ನು ಭಟ್ಟರು ಕೊಟ್ಟರು. ಮ್ಯಾನೇಜರರಿಗೆ ಸರ್ಕಸ್ಸನ್ನು ಕಿತ್ತುದ 
ಹೊರತು ಬೇರೊಂದು ಉಪಾಯವೇ ಉಳಿಯಲಿಲ್ಲ.
ಬಾಡಿಗೆಯ ಬಂಡಿಗಳಲ್ಲಿ ಸರ್ಕಸಿನ ಸಾಮಾನುಗಳನ್ನು ಹೇರುತ್ತಿರುವ 
ದನ್ನು ಕಂಡು ಗೋಪಾಳಭಟ್ಟರು ಯವಮುದೂತರ ಹಾಗ ಮ್ಯಾನೇರರ 
ಮುಂದೆ ಬಂದು ನಿಂತರು. "ಮುಂದಿನ ಊರಿನ ಉತ್ಪನ್ನದಿಂದ ತಮ್ಮ ಬಾಕಿ 
ತೀರಿಸುತ್ತೇನೆ” ಎಂದು ಮ್ಯಾನೇಜರರು ಹೇಳಹತ್ತಿದರು. ಆದರೆ ಭಟ್ಟರು 
ಒಳ್ಳೇ ಆಸಾಮಿ ಗಂಟು ಬಿದ್ದರು. ಅವರು ಇಂಥ ಗುಳಿಗೆಗಳಿಗೆ ಮೋಸ 
ಹೋಗುವವರಿರಲಿಲ್ಲ, ತಮ್ಮು ಎರಡುನೂರು ರೂಪಾಯಿಗಳನ್ನು ಎಣಿಸದ 
ಹೊರತು ಗಾಡಿಗಳನ್ನು ಮುಂದೆ ಹೋಗಗೊಡುವದಿಲ್ಲವೆಂದು ಭಟ್ಟರು ಸ್ಪಷ್ಟ   
ಹೇಳಿಬಿಟ್ಟಿದ್ದರು. “ನನ್ಮು ಹತ್ತರ ಹಣವಿಲ್ಲ. ಬೇಕಾದರೆ ಹಣಕ್ಕಾಗಿ 
ಏನಾದರೂ ಸಾಮಾನುಗಳನ್ನು ಒತ್ತೆ ಇಟ್ಟು ಕೊಳ್ಳರಿ” ಎಂದು ಮ್ಯಾನೇಜರರು 
ಹೇಳಿದರು. ಗೋಪಾಳಭಟ್ಟರಿಗೆ ವಿಚಾರಿಸುವುದಕ್ಕೆ ಸಮಯವೇ ಇರಲಿಲ್ಲ. 
ಅವರು ನಿಂತ ನಿಂತಲ್ಲಿಯೇ ನಿಶ್ಚಯ ಮಾಡಿದರು. ತಮ್ಮಕಡೆಗೆ ಹುಲಿಯನ್ನು 
ಒತ್ತೆ ಇಟ್ಟರೆ ಮಾತ್ರ ಉಳಿದ ಗಾಡಿಗಳನ್ನು ಮುಂದೆ ಬಿಡುವುದಾಗಿ ಬಜಾಯಿ 
ಸಿದರು  ಮ್ಯಾನೇಜರರು ಬೇಕಾದಷ್ಟು, ಅತ್ತು ಕರೆದು ಹೇಳಿಕೊಂಡರೂ   
ಗೋಪಾಳಭಟ್ಟರ ಮನಸ್ಸು ಕರಗಲಿಲ್ಲ. ಸರ್ಕಸನಲ್ಲಿ ಹುಲಿಯ ಕೆಲಸವೇ 
ಮಹತ್ತದ್ದಿರುವುದರಿಂದ ಮ್ಯಾನೇಜರರು ಶಕ್ಯವಿದ್ದಷ್ಟು ತೀವ್ರ ಬಾಕಿ ತೀರಿಸಿ, 
ಹುಲಿ ಬಿಡಿಸಿಕೊಂಡು ಹೋಗುವರೆಂದು ಭಟ್ಟರು ತರ್ಕಿಸಿ ಹುಲಿಯ ಬಂಡಿಗೇ 
ಗಂಟುಬಿದ್ದರು. ಪಾಪ ಮ್ಯಾನೇಜರರಿಗೆ ಇನ್ನೊಂದು ಉಪಾಯವೇ ಉಳಿಯ 
ಲಿಲ್ಲ. ಅವರು ಹುಲಿಯ ಪಂಜರವನ್ನು ಗೋಪಾಳಭಟ್ಟರ ಸ್ವಾಧೀನಪಡಿಸಿ 
ಮುಂದಿನ ಊರಿನ ದಾರಿ ಹಿಡಿದರು. 
ಹುಳಿಯ ಪಂಜರವು ಮನೆಯ ತಲೆಬಾಗಿಲಿನಿಂದ ಹಾಯ್ದು ಅಂಗಳ 
ದಲ್ಲಿ ಹೋಗುವಂತೆ ಇರದ್ದರಿಂದ, ಮನೆಯ ಹೊರಗೆ ಕಟ್ಟೆಯ ಮೇಲೆಯೇ 
ಪಂಜರವನ್ನು ಇಡಬೇಕಾಯಿತು. ತಮ್ಮ ಬಾಕಿ ಕೊಡದೆ ರಕ್ಕಿಸಿ ಹೋಗುವ 
ಮ್ಯಾನೇಜರರನ್ನೇ ತಾವು ಮೀರಿಸಿದಿವೆಂದು ಭಟ್ಟರು ಒಳಗಿಂದೂಳೆಗೇ ನಗು 
ತ್ತಿದ್ದರು. ಈ ಹಿಗ್ಗಿನ ಭರದಲ್ಲಿ ಅಂದು ಅವರಿಗೆ ಅಂಗಡಿಯ ನೆನಪು ಕೂಡ 
ಆಗಲಿಲ್ಲ. ಬಲಗಡೆಯ ಕಟ್ಟೆಗೆ ಹುಲಿಯ ಪಂಜರ ಎಡಗಡೆಯ ಕಟ್ಟೆಗೆ 
ಗೋಪಾಳಭಟ್ಟರು. ಈ ಜೋಡಿ ಸಂಜೆಯನರೆಗೆ ಕಾಣುತ್ತಿದ್ದಿತು. ಸಂಜೆಗೆ 
ಅಡಿವಿಗೆ ಹೋದ ಭಟ್ಟರ ಆಕಳು ತಿರುಗಿ ಮನೆಗೆ ಬಂದಿತು. ಆದರೆ ದೂರ 
ದಿಂದಲೇ ಹುಲಿಯ ವಾಸನೆ ಹತ್ತಿ ಆಕಳು ಹಿಂದಿನಿಂದಲೇ ತಿರುಗಿ ಓಡಿ 
ಹೋಯಿತು. ಏಕಾಗ್ರಚಿತ್ತರಾಗಿ ಹುಲಿಯನ್ನೇ ನೋಡುತ್ತ ಕುಳಿತ ಭಟ್ಟರ 
ಲಕ್ಷವು ಈಗ ಇತರ ವಿಷಯಗಳ ಕಡೆಗೆ ಹೊರಳಿತು. ಅವರು ಅವಸರದಿಂದ 
ದೋತರವನ್ನು ಸರಪಡಿಸುತ್ತ ಅಕಳ ಹಿಂದೆ ಧಾವಿಸಿದರು. ಆದರೆ ತನ್ನ ಜೀವ 
ಉಳಿಸಿಕೊಳ್ಳಲು ಓಡುವ ಆಕಳ ವೇಗಕ್ಕೂ ತಮ್ಮ ಹೊಟ್ಟೆ ಸಂಭಾಳಿಸಿ 
ಕೊಂಡು ಓಡುವ ಭಟ್ಟರ ವೇಗಕ್ಕೂ ಮಹದಂತರವಾದ್ದರಿಂದ ಭಟ್ಟರಿಗೆ 
ಆಕಳು ಸಿಕ್ಕಲಿಲ್ಲ. 
ಭಟ್ಟರು ತಿರುಗಿದರು. ಅದರೆ ಮನೆಯ ಮುಂದೆ ಓಣಿಯ ಹುಡುಗರ 
ಬಾಜಾರವೇ ನೆರದಿತ್ತ್ಕು. ಆಕಳನ್ನು ಕಂಡಾಗಿನಿಂದ ಹುಲಿಯು ಒಂದೇಸನನೇ 
ಗರ್ಜಿಸುತ್ತ ಪಂಜರದಲ್ಲಿ ಸುತ್ತಾಡುತ್ತಿತ್ತು. ಹುಡುಗರಿಗೆ ಇದೊಂದು 
ಮೌಜೇ ಆಗಿತ್ತು. ಅವರು ಸಣ್ಳ ಸಣ್ಣ ಹರಳು ಒಗೆಯಹತ್ತಿದರು. ಇದ 
ರಿಂದ ಹುಲಿ ಮತ್ತಷ್ಟು ರೇಗಿತ್ತು. ಭಟ್ಟರು ತಿರುಗಿ ಬರುತ್ತಲೇ ಹುಡುಗರು 
ಚದುರಿದರು. ಭಟ್ಟರು ಆಕಳನ್ನು ಹುಡುಕಲಿಕ್ಟೆ ಒಂದು ಆಳು ಕಳಿಸಿದರು. 
ಮತ್ತು ಇನ್ನೊಂದು ಆಕಳನ್ನು ಹುಲಿಯ ಪಂಜರದ ಪಹರೇ ಮಾಡಲಿಕ್ಕಿ 
ಟ್ಟರು. ತಾವು ಸ್ವತಃ ಹುಲಿಯ ಸಂಜೆಯ ಫಲಾಹಾರದೆ ವ್ಯವಸ್ಥೆಗೆ ನಿಂತರು, 
ಅಂಗಡಿಗೆ ಹೋಗಿ, ಅವರ ಸಲಹೆಯಂತೆಯೇ ಅವರ ಅಳಿನ ಕಡೆ 
ಯಿಂದಲೇ ನಾಲ್ಕೈದು ಸೇರು ಆಡಿನ ಮಾಂಸನನ್ನು ತರಿಸಿ ಪಂಜರದಲ್ಲಿ 
ಹಾಕಿಸಿದರು. ಹುಲಿರಾಯನ ವೃವಸ್ಥೆಯಾದ ನಂತರ ಭಟ್ಟರು ಊಟ ಮಾಡಿ 
ಮಲಗಿದರು. 
ಮರುದಿನಸ ಒಂದು ಹೊಸ ಸಮಸ್ಯೆಯೇ ಉಸಸ್ಥಿತವಾಯಿತು. 
ಮೊದಲಿನಿಂದಲೂ ಹುಲಿಯ ಪಂಜರದಿಂದ ಉಗ್ರವಾದ ದುರ್ವಾಸನೆ ಬರು 
ತ್ತಿತ್ತು. ಅದರಲ್ಲಿ ಕೊಳೆತ ಮಾಂಸದ ಮತ್ತು ಹುಲಿಯ ಮಲ ಮೂತ್ರದ 
ವಾಸನೆ ಕೂಡಿದ್ದರಿಂದ ಆ ಓಣಿಯಲ್ಲೆಲ್ಲ ದುರ್ವಾಸನೆ ತುಂಬಿಹೋಯಿತು. 
ಗೋಪಾಳ ಭಟ್ಟರ ಮನೆಗೆ ಭಿಕ್ಷುಕರು ಕೂಡ ಬರದಂತಾಯಿತು ಅಪ್ಪಿ ತಪ್ಪಿ 
ಕಾವಲುಗಾರರ ಕಣ್ಣು ತಪ್ಪಿಸಿ ಕಲ್ಲು ಒಗೆಯಲಿಕ್ಕೆ ಹುಡುಗರು ಮಾತ್ರ
ಬರುಶ್ತಿದ್ದರು. ಈ ದುರ್ವಾಸನೆಗಾಗಿ ಓಣಿಯ ಜನರಿಂದ ತಕರಾರು ಬರ 
ಹತ್ತಿತು. ಆದರೂ ಭಟ್ಟರು ಇದಕ್ಕೆ ಕಿವಿಗೊಡಲಿಲ್ಲ.
ಮೂರನೇ ದಿವಸ ಭಟ್ಟರ ಧರ್ಮಪತ್ನಿಯೂ ನೋಟಸು ಕೊಟ್ಟಳು. 
ಪಾಪ ಅವಳಿಗೆ ಹಗಲು-ರಾತ್ರಿ ಮನೆಯಲ್ಲಿಯೇ ಇರಬೇಕಾದ್ದರಿಂದ ಹುಲಿಯ 
ದುರ್ವಾಸನೆ ಅಸಹ್ಯವಾಗಿತ್ತು. ಇತ್ತ ಹುಲಿಗೆ ಏನು ಅನಿಸಿತ್ತೋ ದೇವರೇ 
ಬಲ್ಲ!! ಹುಲಿಯು ಆ ದಿವಸ ಎನೂ ತಿನ್ನಲಿಲ್ಲ. ಕೇವಲ ಪಂಜರದ ಒಂದು 
ಮೂಲೆಯಲ್ಲಿ ಬಿದ್ದುಕೊಂಡಿತ್ತು. ಭಟ್ಟರ ಮನಸ್ಸು.  ಚಂಚಲವಾ 
ಯಿತು. ಮನೆಯಿಂದಲೂ, ಓಣಿಯ ಜನರಿಂದಲೂ ತಕರಾರುಗಳಂತೂ 
ನಡೆದೇ ಇದ್ದವು. ಇತ್ತ ಹುಲಿಯಂತೂ ಅನ್ನಸತ್ಯಾಗ್ರಹವನ್ನೇ ಪ್ರಾರಂಭಿ 
ಸಿತ್ತು. ಈ ಗೊಂದಲದಲ್ಲಿ ಹುಲಿಯ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆ 
ಯಾದರೆ ಮುಂದೇನು? ಎಂಬ ಪ್ರಶ್ನೆ ಭಟ್ಟರೆ ಮುಂದೆ ನಿಂತಿತು. ತಮ್ಮ 
ಬಾಕೀ ಬರುವದಂತೂ ದೂರೇ ಉಳಿಯಿತು. ತಿರುಗಿ ಮ್ಭಾನೇಜರರಿಗೆ 
ಮತ್ತೊಂದು ಹೊಸ ಹುಲಿಯನ್ನೇ ತಂದು ಕೊಡಬೇಕಾದೀತು! ಇಷ್ಟರಿಂದಲೇ 
ಬಗೆ ಹರಿಯಲಿಕ್ಕಿಲ್ಲ. ಸರ್ಕಸ ಮಾಡುವ ಹುಲಿಯೇ ಬೇಕು ಎಂದು ಮ್ಯಾನೇ 
ಜರನು ಹಟ ಹಿಡಿದರೆ ಮಾಡುವುದೇನು? ಈ ಎಲ್ಲ ವಿಚಾರಗಳನ್ನು ಮಾಡಿ, 
ಅಂದು ಭಟ್ಟರಿಗೆ ಚಹ ಕೂಡ ರುಚಿ ಹತ್ತಲಿಲ್ಲ. ಈ ಅವಧಿಯಲ್ಲಿ ಭಟ್ಟರ 
ಕೈಯಿಂದ ೫-೬ ರೂಪಾಯಿಗಳೂ ಕೈ ಬಿಟ್ಟಿದ್ದವು. ಇನ್ನು ಹುಲಿಯ ಓಷ 
ಧೋಪಚಾರಕ್ಕಾಗಿ ಹಣ ಖರ್ಚು ಮಾಡುವ ಪ್ರಸಂಗ ಬಂದಿತು. 
ಗೋಪಾಳಭಟ್ಟರ ಓಡಾಟ ಸುರುವಾಯಿತು. ಅವರಿಗೆ ಬಾಡಿಗೆ ಬಂಡಿ 
ಸಿಗುವದು ಕೂಡ ಕಠಿಣವಾಯಿತು. ನಿತ್ಯದ ಬಾಡಿಗೆಯ ಮೂರುಪಟ್ಟು 
ಬಾಡಿಗೆ ಕೊಟ್ಬು ಭಟ್ಟರು ಒಂದು ಗಾಡಿ ಮಾಡಿ ಸಮೀಪದ ಊರಲ್ಲಿಯೇ 
ಇರುವ ಸರ್ಕಸ ಕಂಪನಿಗೆ ಹುಲಿರಾಯನನ್ನು ಮುಟ್ಟಿಸಿ ತಿರುಗಿ ಬಂದರು. 
ಅಂದಿನಿಂದ ನಮ್ಮ ಭಟ್ಟರು ಮೊಹರಮ್ಮದ ಹುಲಿಯನ್ನು ಕಂಡರೂ ರೇಗು 
ತಾರೆ, ಮತ್ತು ಸರ್ಕಸ ಎಂದರೆ ಬಯ್ಯಲಿಕ್ಕೆ ಪ್ರಾರಂಭಿಸುತ್ತಾರೆ. 
======================================
ಎಚ್ಚರಿಕೆ 

ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ 
ಭಂಗಾರದ್ದೇನು ತಪ್ಪು? 
ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ 
ಮಣ್ಣೇನು ಮಾಡೀತು? 
ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ 
ಕಟ್ಟೇನು ಮಾಡ್ಯಾವು? 
ನಾನು ಗುಣಹೀನನಾದಕ್ಕೆ ದೇವಾ 
ನೀನು ಹೊಣೆಗಾರನು. 

ಒಬ್ಬ ಸೊನಗಾರ ಕೆಲಸ ಕೆಡಿಸಿದರೆ ಮತ್ತೊಬ್ಬ ದೊರೆಯುವ 
ನೆಂದು ಜನರಿಗೆ ನಂಬಿಕೆ. ಆದರೆ ಸೃಷ್ಟಿಕರ್ತನು ಬೀದಿ-ಬೀದಿಗೆ 
ದೊರಕುವದುಂಟೆ? ದೇವಾ ನೀ ಮಾಡಿದ ತಪ್ಪನ್ನು ಮತ್ತಾರು 
ತಿದ್ದುವರು? ಜೀವಿಗಳನ್ನು ನಿರ್ಮಿಸುವಾಗ್ಗೆ ಎಚ್ಚರಿರಬೇಡವೆ? 
ನನ್ನಂಥ ಪಾಮರರನ್ನು ಜನಿಸಿಸಿ ನಿನ್ನ ಹೆಸರಿಗೆ ನೀನೇ ಕುಂದು ತಗಲಿ
ಸುವದುಚಿತವೆ? 
ಕುಂಬಾರನಿಂದ ಒಡಕ ಗಡಿಗೆಗಳನ್ನಾರೂ ಕೊಳ್ಳುವದಿಲ್ಲ. 
ಕೊಳಕು ಹಣ್ಣುಗಳು ಮಾರಾಟವಾಗುವದಿಲ್ಲ. ಒಡಕ ಗಡಿಗೆಗಳು 
ತಿರುಗಿ ಕುಂಬಾರನ ಮನೆಗೇ ಹೋಗುವವು. ಎಲೈ ಭವಚಕ್ರನಾಡಿ 
ಸುವ ಕುಂಬಾರನೇ! ನನ್ನಂಥ ನಿರ್ಗುಣಿಗಳು ತಿರುಗಿ ನಿನ್ನೆಡೆಗೆಯೇ 
ಬರುವರು ಎಚ್ಚರಿಕೆ. 
ನನ್ನ ಪೂರ್ವ ಕರ್ಮದ ಫಲವೆಂದು ನೀನು ದೋಷ ತಪ್ಪಿಸಲು 
ಯತ್ನಿಸಬಹುದು, ಆದರೆ ಪೂರ್ವ ಕರ್ಮವನ್ನಾದರೂ ಮಾತಾಡಿಸಿ 
ದವರಾರು ?