ಹುತ್ತದಲ್ಲಿ ಹುತ್ತ
AN UNROMANTIC COMEDY
WEALS WITHIN WEALS
ಪಾತ್ರಗಳು
ಸುಬ್ಬಮ್ಮ - ದಿವಂಗತ ರಾಮಪುರದ ಮುನಿಸಿಪಲ್ ಪ್ರಸಿಡೆಂಟ್,
ಜೋಡಿದಾರ್ ರಾವ್ ಸಾಹಲ್ ರಾಮರಾಯರ
ವೃದ್ದ ವಿತುಂತು ವಯಸ್ಸು 61
ಹಿರಿಯಣ್ಣಯ್ಯ - ವಾರ್ಧಿಕ್ಯವನ್ನು ಸಮೀಪಿಸುತ್ತಿರುವ ಪುತ್ರ ವಯಸ್ಸು 45
ರಾಮರಾವ್ - ಬಾಲ್ಯವನ್ನು ಹಿಂದೆ ಬಿಡುತ್ತಲಿರುವ ಪೌತ್ರ ವಯಸ್ಸು 18
ಕಪ್ಪಣ್ಣ - ಹಿರಿಯಣ್ಣಯ್ಯನ ಸೆಕ್ರೆಟರಿ ವಯಸ್ಸು 40
ಶ್ರೀಮತಿ ಸರೋಜಾದೇವಿ - ರಾಮರಾಯರ Stenographer ವಯಸ್ಸು 35
ಬೋರ - ಸೇವಕ ವಯಸ್ಸು 70
ನಾರಣಪ್ಪ - ಅಡಿಗೆಯವ ವಯಸ್ಸು 65
The barque of humour olien veers
From shoals of smiles to seas of tears!
-K.
ಕಿರಿಆಳದ ನಗನೀರಿನ ಮೇಲೆ
ತಿರುಗುತ ಬಹುವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು
-ರಾ.
-------------------------------------------------------------------
ಸೀನ್ -೧
(Found entered Hiriyannayya in chair at desk and Kappanna standing near.
Time: 8 in the evening.]
ಹಿರಿಯಣ್ಣಯ್ಯ: (Drawing) ... Excuse me... ಕ್ಷಮ್ಸು … ಅಲ್ಲ... ಕ್ಷಮ್ಸಿ... (ಕಾಲ್ಮೇಲೆ
ಕಾಲನ್ನು ಹಾಕಿ ಮೀಸೆಯನ್ನು ತಿರುವುತ್ತಾ “Mr.... ಮಿಸ್ಟರೇ?” ಏನ್ನಿಮ್ಹೆಸರು?
ಕಪ್ಪಣ್ಣ: ಮಿಸ್ಟರ್ ಗಿಸ್ಟರ್ ಏನಿಲ್ಲಾ ಸಾರ್ ನನ್ಹೆಸರಲ್ಲಿ... ಮರ್ಯಾದೆ ತಿಳಿದ gentlemenoo
ನನ್ನ ಮಾತಾಡೋವಾಗ ಅವರ್ಯೋಗ್ಯತ ತಿಳಿಸ್ಕೊಳ್ಳೋಕೆ “ಮಿಸ್ಟರೂ”ಂತ ಮೊದಲು ಸಿಕ್ಸೋ
ಸಂಪ್ರದಾಯ ಹೊರ್ತು ... ನನ್ನ ಹೆಸರುಬರೀ ‘ಕಪ್ಪಣ್ಣ’; but then Sir, ನಿಮಗೆ ನಾನು Quote
ಮಾಡ್ಬೇಕೆ... 'what is in a nameoo? a Roseoo smells as sweetoo by any other
nameoo... Shakespeare... Play: Romeo and Juliet, Act II, Sc. II, lines 44-45 ...
Shakespeare's date of birth 1564, death 1616.
ಹಿರಿಯಣ್ಣಯ್ಯ: (ಬೆಚ್ಚಿಬಿದ್ದು ಮೇಲಿನಕಾಲ ಕೆಳಗಿನ ಕಾಲನ್ನು ಬಿಟ್ಟು ಅಲ್ಪಜಾರುತ್ತಾ)...
ನಿಜ...I mean, of course ನಿಜ.... but then foodoo ಎಲ್ಲಾನೂ supply ಮಾಡಿ seventy
five rupees a monthನ್ನೂ ನೀವ್ಕೇಳಿದ್ರೆ... ನಾನೇನ್ ಹೇಳೋದು ... ನೀವೇ ಹೇಳಿ... Say it
yourself.
ಕಪ್ಪಣ್ಣ: ನನ್ನ selfಏ ಹೇಗ್ಹೇಳೋದು ಸಾರ್! ನಿಮ್ಮ circumstances ನನಗೆ ಗೊತ್ತಿಲ್ಲ;
Hinduಲಿ ನೋಡ್ದೆ advertisementoo: "rich gentlemanoo... culturedoo... affluent
circumstancesoo... wants secretary... very very strong both in writing and speaking
English, apply in personooನ್ತ; ಬಂದೇ ಸಾರ್ at my own expensoo and at my own
riskoo
; un-knownooನೀವು ನನಗೆ; but then platformಮೆಟ್ಟುತ್ಲೂವೆ... ನಿಮ್ಮೆಸ್ರು ಹೇಳತ್ಲೂನೂವೆ,
ನೋಡೀ!.... porterಗ್ಳು ನನ್ನ ಸಾಮಾನ್ನ free of charge. ನಿಮ್ಹೆಸರಿಗೋಸ್ಕ್ರ ಜಟ್ಕಾಲಿ ಪೇರ್ಸಿದ್ದಲ್ದೆ
ಜಟ್ಕದೋರು ನಿಮ್ಹೆಸರು ಹೇಳತ್ಲೂನೂವೆ also free of chargeoo... ಮನೇತಲ್ಪಿಸಿದ್ನ realize
ಮಾಡ್ಕೊಂಡು ನಾನೂನು ನಿಮ್ಮಂಥಾವ್ರ ಸೇವೇನ like the porters and jutkawala... also
free of chargoo ಆಚಂದ್ರಾರ್ಕ ಮಾಡಿಬಿಡಬೇಕೂಂತ determine ಮಾಡ್ಕೊಂಡ್ರೂನೂವೆ... willಓ
Willingoo, but fleshಓ protestedoo. ನನ್ನ circumstancesso ಸಾರ್! ನಾನೇನ್ ಹೇಳೋದು
a poor proletariateoo. ಈಗ ನಮ್ಮ societyಯ unsettled conditionನಲ್ಲಿ, ತಾವೋ
generations after generations of aristocratsನಿಂದ ಜನಿಸಿದ aristocratoo. ನಾನೋ a
plebianoo.... "particians and plebians”, Roman Historyಲಿ ಬರುತ್ತೆ ...
ಹಿರಿಯಣ್ಣಯ್ಯ: (ಮೇಲಿದ್ದ ಕಾಲು ಸಂಪೂರ್ಣವಾಗಿ ಜಾರಿ ಬಿದ್ದು) Excuse me...
I mean... take a seat...
-----------------------------------------------------------------
ಕಪ್ಪಣ್ಣ: ಕ್ಷಮ್ಸಿ ಸಾರ್, ನನ್ನ brass bound principleoo.... never sit before my future
master is so... it not so... ಇದ್ದೇ ಇದೆ common courtesy. Kingoo ಒಂದೇ ಕೂಲೀನೂ
ಒಂದೇ for the moment.
(ಪಕ್ಕದಲ್ಲಿದ್ದ ಕುರ್ಚಿಯನ್ನು ಜರ್ರನೆ ಎಳದು ಕುಳಿತುಕೊಂಡು)
Sir. I pause for a reply-Shakespeare, birth and death ಮೊದಲೇ ಹೇಳಿದ್ದೇನೆ…
Drama, Julius Ceasaroo... Brutus ಹೇಳಿದ್ದು mobಗೆ... this time reversedoo... mobman
to noblemanoo.
ಹಿರಿಯಣ್ಣಯ್ಯ: ಕ್ಷಮಿಸಾರ್... ನಾನು... What I wanted to.... ex...
ಕಪ್ಪಣ್ಣ: Express... explain... exlcaim... expostulate... expectorate... exonerate...
ex...
ಹಿರಿಯಣ್ಣಯ್ಯ: ಹೌದ್ಹೌದು ... quite So... quite so. But then... ನೋಡೀ ....
ನನಗ್ಬೇಕಾದದ್ದು ಒಬ್ಬ secretary ... ಚಿಕ್ಕ Small secretary ... ನನ್ನ election... municipal
election... of course... can manage myself... bul Englishನಲ್ಲಿ strong ಆಗಿದ್ರೆ myself
ಮೊದ್ಲು ... but Want of practice, nothing else. Therefore speeches ಗೀಚಸ್... ಈ
ಬಾಬತ್ಗಳ್ಗೆ ಅಲ್ಲಸ್ವಲ್ಪ help... help ಏನೂ... co...
ಕಪ್ಪಣ್ಣ: Co-operation... co-ordination... coherence... or perhaps quorum... no.
cannot be!
ಹಿರಿಯಣ್ಣಯ್ಯ: ಹೌದು... ಆದ್ರೂ ಅದೆಲ್ಲಾ ಅಲ್ಲ... ನೋಡಿ, ಈ ಕಾಲಲ್ಲಿ B.A.. B.L..
Pass ಮಾಡಿದ್ದೋರೂ ಕೂಡಾ fifty rupees a month ಸಿಕ್ದೆ ನರಳಿದಾರೆ. ಹೀಗಿರುವಾಗ ನೀವು
ಊಟ etc. ನೂ ಕೊಟ್ಟು... 75 rupees ನೂ expect ಮಾಡೋದು ... ಒಂದು mis..
ಕಪ್ಪಣ್ಣ: Mistake ಏ? ... miscalculation ಏ? misunderstanding ಏ ? mis...
ಹಿರಿಯಣ್ಣಯ್ಯ: ನೋಡಿ... you see...
ಕಪ್ಪಣ್ಣ: Don't trouble. I see everything... not only so, I heard everything...
ಜಟ್ಕಾ ಕಾಫಿಹೋಟಲ್ ಎದುರಿಗೆ ನಿಲ್ಲಿಸ್ದ. ಹೋಟ್ಲೋನು ನಿಮ್ಹೆಸ್ರು ಕೇಳುತ್ಲೂನೂವೆ ಕಾಫಿ and
ಇಡ್ಲಿ Supply free of chargesoo ಅಲ್ದೆ full information about.... ತಮ್ಮ family... also
free of chargesoo, ತಮ್ಮ ಮನೆತನ... ತಮ್ಮ fatheroo Viceroy ಕೈಯಿಂದ ಖುದ್ದಾಗಿ ದೆಹಲೀಲಿ
ರಾವ್ಸಾಹೇಬ್ ಆದದ್ದು, Highness himselfoo once upon a time ತಮ್ಮ ತೋಟದ
ಗಂಗಾಪಾಣೇಲಿ ಮೂರು ಖಾಲಿಮಾಡಿದ್ದು... ಅಲ್ದೆ ತಮ್ಮ ಜನಕ ತಮ್ಮನ್ನ future Rao Saheb
and Municipal President of Local Corporation ಅಂತ ಹರಸ್ತಾ ಕಣ್ಮುಚ್ಚಿದ್ದೂ, ಆತ ಹರಸಿದ
title and position... both heriditary ಅಲ್ಲದ... Small defectನ... ತಮ್ಮ Capabilities ಇಂದ
make up ಮಾಡ್ತಿರೋ ಯತ್ನ ಕೇಳಿಯೇ... ನಾನು ಈ ವಿಷಯದಲ್ಲಿ... ಯತ್ ನನ್ ಶಕ್ತಿ, ಯತ್
---------------------------------------------------------------------
ನನ್ಬುದ್ದಿ... ಯತ್ ನನ್... ಒಟ್ನಲ್ಲಿ ಯತ್ನನ್ಕೈಲಿ ಏನೇನಾಗುತ್ತೋ... ತತ್ ವರಿಗೂ ತಮಗೆ
ಕುಮ್ಮಕ್ ಕೊಡ್ಲೇ ಬೇಕೂಂತಂಬೋ ಹುಮ್ಮಸ್ಸಿನಲ್ಲಿ... ಹೋಟ್ಲಿಂದ ತಮ್ಮನೇವರಿಗೂ ಕಂಡುಬಂದ
Local Municipal conditionsನ... with a view to embody... in ತಮ್ಮ future election
speeches... ಗಮನಿಸ್ತಾ ಬಂದ... salubrious climatoo, but Sanitationಓ! ಏನ್ಹೇಳ್ಳಿ!! ನಿಮ್ಮ
future regimeನಲ್ಲಿ... ಈಗ fluginous ಆಗಿರೋ conditions ಎಲ್ಲಾ fulgent ಆಗೋ ಹಾಗೆ
ಮಾಡೋ poweroo...ನಿಮ್ಮ future speeches ನಲ್ಲಿ... Local residentsಗೆ ನೀವು ...
inteligibleಆಗಿ... ಇವೆಲ್ಲಾ good wordsoo ಸಾರ್ ! ಬರಿ B.A.B.L.ಗ್ಳು.. ಅಡ್ಜರ್ನ್ಮೆಂಟ್
feesನಲ್ಲಿ ಹೊಟ್ಟೆ ಹೊರ್ಕೊಳ್ಳೋ ಬರೀB.A.B.L.ಗ್ಳ ಬಾಯಿಂದ ಹೊರಡೋ words
ಅಲ್ಲಾಸಾರ್ ಇವು. And yet...ಬರೀ samplesoo...ನನ್ನ main stock ಬೇರೆ ಇದೆ, ಮಂಡೇಲಿ...
ಇವಲ್ದೆ Local Self Govertiment, Civil responsibilities... Municipal body corporates
ಈ ಬಾಬುಗಳು ಬೇಕಾದಷ್ಟಿವೆ, Vote ಗ್ಳುದಿರ್ಸೋ Wordsoo. ಇವೆಲ್ಲಾ... ಯೋಚಿಸಿ ನೋಡೀ
ಸಾರ್. ತಮ್ಮ ಜನಕ... dying momentsನಲ್ಲಿ ಹರಸಿದ ಮಾತು ಸುಳ್ಳು ಮಾಡದ ಹಾಗೆ the
old case of Dasaratha cum Rama episode... author Valmiki... Birth and Death, can
find out, if necessary .... ... in your opinion... ನಿಮ್ಮ future campaignಗೂ ಅಲ್ದೆ,
this important matter of Rao Saheb titleನ ಸಂಪಾದಿಸ್ಬೇಕಾದ ವಿಷಯದಲ್ಲಿ big big
personageನ ಭೇಟಿ ಮಾಡ್ಬೇಕಾದ ವಿಷಯದಲ್ಲೂ ನನ್ನ ಅಲ್ಪ ಸ್ವಲ್ಪ ಸಹಾಯ ನಿಮಗೆ useful
ಆಗೋ ಹಾಗೆ ತೋಚಿದ ಪಕ್ಷದಲ್ಲಿ....
(ಕುರ್ಚಿಯಿಂದೆದ್ದು ಮೂಲೆಯಲ್ಲಿಟ್ಟಿದ್ದ Gladstone bagಅನ್ನು ಎತ್ತಿಕೊಂಡು ಹೊರಬಾಗಿಲನ್ನು
ಸಮೀಪಿಸುತ್ತಾ)
A meagre sum of solitary rupees a 75 month, plus board and lodging...
ತಮ್ಮಂಥ particiansನ... ಹಿಮ್ಮೆಟ್ಟೋ ಹಾಗೆ ಮಾಡಿದ ಪಕ್ಷಕ್ಕೆ ಇದ್ದೇ ಇದೆ my already
arranged programme..
(ಆತ್ಮಗತಂ)
...as per contingency: back to the Station to catch Bangalore passangeroo.
foodless, free of charge areas ಜಟ್ಕಾನು ತುಂಡು... but then 'at a risk' ಬಂದದ್ದು, therefore
at a risk' must go back also;
(ನಿಟ್ಟುಸಿರು ಬಿಡುತ್ತಾ)
Life is a walking: shadow... Shakespeare... Macbeth... Act, Sc. “Line...
ಈಗ್ಯಾಕೆ?!
ಹಿರಿಯಣ್ಣಯ್ಯ: ಸ್ವಲ್ಪಿರೀ ಸಾರ್... 1 am trying to re...
ಕಪ್ಪಣ್ಣ: To reconsidcr... to recalculate... to remember... to repeat... to repent...
to refuse...
------------------------------------------------------
ಹಿರಿಯಣ್ಣಯ್ಯ: To ನಿಮ್ಮ terms ಪ್ರಕಾರ್ವೆ... agree ಮಾಡೋಕೆ... ಕೂತ್ಕೊಳ್ಳಿ..
ಕಪ್ಪಣ್ಣ: (Bag ಅನ್ನು ಮೂಲೆಯಲ್ಲಿಟ್ಟು ಬಂದು)
ಕ್ಷಮ್ಸಿ ಸಾರ್ ... told you before... if engaged ... master, masteroo: servant,
servantoo... therefore if engaged... if not of course ಇದ್ದೇ ಇದೆ, common courtesy.
(ಕೂಡುಲುಪಕ್ರಮಿಸುವನು)
ಹಿರಿಯಣ್ಣಯ್ಯ: ಕೂಡ್ಬೇಡಿ... don't sit down... ದಯವಿಟ್ಟು...ನಿಂತ್ಕೊಂಡಿರಿ.., but
ನಮ್ಮ motherಗೆ ಒಂದ್ wordoo... you know.
ಕಪ್ಪಣ್ಣ: Yes sir, Dowager Mrs. Laie Rao Saheb... naturally... must ask
permission! After all Elders eldersay! Domestic discipline... can understand...
ಜಟ್ಕಾದೋನ್ನ ತಿರಿಕ್ಕಳಿಸಿ ಬರ್ತೇನೆ... in the meanwhile ತಾವು... ತಮ್ಮ conference...
conversation... consultation... ಪರ್ವಾ ಇಲ್ಲಾ Sir, I can understand...
(exit by door L.)
ಹಿರಿಯಣ್ಣಯ್ಯ: (Approaching C) 'ಮ್ಮಾ'!
ಸುಬ್ಬಮ್ಮ: (ಒಳಗಿನಿಂದ) ಯಾರದು?... ಮಗೂನೇ?)
ಹಿರಿಯಣ್ಣಯ್ಯ: ಹೂಂಮ್ಮಾ... ಸ್ವಲ್ಪ ಹೀಗ್ಬರ್ತ್ತೀಯಾ?
ಸುಬ್ಬಮ್ಮ: (ಪ್ರವೇಶಿಸಿ) ಇದನಿನ್ನೂ ಇಲ್ಲೇ ಇಧೀಯಾ? ಎಲೆಕ್ಷನ್ನು ಇನ್ನೊಂತಿಗ್ಳೂ ಇಲ್ಲಾ
ಡೆಪ್ಟಿಕಮಿಷನ್ರು ಮೀಟಿಂಗ್ ಮಾಡೋಕೆ ಟೌನ್ ಹಾಲಿನಲ್ಲಿ ಕಾದಿಧಾರೆ, ನಿಂಬೆಹಣ್ಣು, ಹಾರ,
ಕಾಫಿ ತಿಂಡೀಂತೆಲ್ಲಾ ಹೇಳಿ ಐದ್ರೂಪಾಯಿ ಸುಲ್ಕೊಂಡ್ಬಿಟ್ಟು ಇನ್ನೂ ಇಲ್ಲೇ ಕೂತಿಧೀಯಾ?
ಚೆನ್ನಾ...ಯ್ತು! ನೋಡೂ... ಮಗು... ಒಂದೇ ಮಾತಲ್ಲಿ ಹೇಳ್ಬಿಡ್ತೇನೆ. ಊರ್ಗೆಲ್ಲಾ ಮುಂದಾಗಿ,
ಮುನ್ಸಿಪಾಲ್ಟಿಗೆ 20 ವರ್ಷ ಪ್ರೆಸ್ಡೆಂಟಾಗಿ.. ಇದ್ದದ್ದಲ್ದೆ, ಹುಡ್ಗೀರಿಸ್ಕೂಲು, ಆಸ್ಪತ್ರೆ, ದನಕರುಗಳ್ಗೆ ನೀರಿನ್
ತೊಟ್ಟಿ ಇವುಗಳೆಲ್ಲಾ ಊರ್ಗೆ ತನ್ನ ಖರ್ಚಿನಲ್ಲೇ ಧರ್ಮಕ್ಕೆ ಕಟ್ಟಿಕೊಟ್ಟು... ಮಹಾರಾಜರ ಕೈಲಿ
ನವರಾತ್ರಿ ದರ್ಬಾರಿನಲ್ಲಿ ಖಾಸಾ ಹಾರ... ತಹಲ್ ವರ್ಗೂ ನೀನೂ ನಾನೂ ಹೊದ್ಕೊಳ್ಳೋ
ಶಾಲ್ಜೋಡೀನೂ ಸಂಪಾದ್ಸಿದ್ದಲ್ದೆ ಮಹಾಭಾರತಕಾಲ್ಲಿಂದ ಬೆಳದ್ಬಂದ 'ಡಿಲ್ಲೀ'ಗೆ ಹೋಗಿ ವೈಸ್ರಾಯ್ರ
ಕೈಯಿಂದ ರಾವ್ ಸಾಹೇಬ್ ಪಟ್ಟಾನ ಸಂಪಾದಿಸ್ದ ನಿಮ್ಮಪ್ಪನ ಹೊಟ್ಟೆಲೂ ನನ್ಹೊಟ್ಟೆಲೂ
ಹುಟ್ಟಿದ್ರೂನೂವೆ ನೀನು ಸಿಂಹಗ್ಳ ಹೊಟ್ಟೇಲ್ಹುಟ್ಟಿದ್ದ ಸಿವಂಗಿ ಹಾಗೆ ಹೇಗೆ ಹುಟ್ಟಿದ್ಯೋ! ಆಶ್ಚರ್ಯ!...
ರೇಗ್ಬೇಡಾ... ಪ್ರಯೋಜನವೇನೂ ಇಲ್ಲಾ, ಮಗ ಎದುರ್ಗೆ ಇದ್ರೂನೂವೆ ತನ್ನ ಲಕ್ಷಾಂತರೂಪಾಯಿ
ಆಸ್ತಿ ; ಬ್ಯಾಂಕ್ ನಲ್ಲಿ ಬಡ್ಡೀಗಿದ್ದ ಎರಡು ಲಕ್ಷ ರೂಪಾಯಿ ನಗದು ಅಲ್ದೆ ಜೊಡಿ ಗ್ರಾಮ, ಗದ್ದೆ,
ಹೊಲ, ತೋಟ, ಮನೆಗ್ಳು ಇದಲ್ಲಾನ್ನೂ ಓದ್ಗಾರ್ಕೆ ಅರೀದ ನನ್ಹೆಸರ್ಗೇನೆ ಬರೆದಿಟ್ಬಿಟ್ಟು... ಕಣ್ಮುಚ್ದ
ನಿಮ್ಮ ತಂದೆ... ಧಡ್ಡ್ರಲ್ಲಾ ಮಗೂ... ಧಡ್ಡ್ರಲ್ಲಾ.. ನಿನ್ನ ದುಂದ್ಗಾರ್ಕೆ ನನಗೀಗ ಹೇಗ್ಗೊತ್ತೋ ಹಾಗ್ಯೇ
ಆ ಪ್ರಾಣಿಗೆ ಆಗ್ಲೇ ಗೊತ್ತಿತ್ತು... ಆದ್ರೆ ಹೇಳ್ತನೆ. ಆತನ್ಗೆ ಅಂತ್ಯಕಾಲ್ದಲ್ಲೂ, ನನಗೀಗ್ಲೂ ಒಂದೇ
-----------------------------------------------------------
ಚಪಲ! ಆತ್ನ ರಾವ್ ಸಾಹೆಬ್ ಪಟ್ಟಾ, ಈ ವೂರಿನ ಪ್ರಸಿಡಂಟ್ ಪದ್ವಿ ಬರಬೇಕೂಂಬೋ ಒಂದ್
ಚಪ್ಲ ನನ್ಗೂ ತೀರೇಕು. ಇದರಿಂದ್ದೇ ಆಮೇಲೆ ನನಗೇಂತ ಕಾದಿರೊ ಆ ಆತ್ಮಕ್ಕೂ ಶಾಂತಿ ಬರೇಕು.
ಇದಕ್ಕೇನ್ಕರ್ಚಾದ್ರೂ ಪರಾ ಇಲ್ಲ, ಇವಕ್ಕಲ್ದೆ ಒಂದ್ಬಿಡಿಕಾಸು ನಿನ್ನ, ಅಲ್ದೆ ನಿನ್ನ ಕೆಲಸಕ್ಕೆ ಬಾರದ
ನಿನ್ನ ಮಗನ, ದುಂದುಗಾರಿಕೆಗೆ ಕೇಳಿದ್ರೋ...
ಹಿರಿಯಣ್ಣಯ್ಯ: ಕ್ಷಮ್ಮಮ್ಮಾ ನಿನ್ನ... ಕರದದ್ದು ನಾನು ಈಗ.., (ಮೂಲೆಯಲ್ಲಿರುವ
bagನ್ನು ಸೂಚಿಸಿ) ಆಧೇನಮ್ಮಾ?
ಸುಬ್ಬಮ್ಮ: ಇದೇನು ದೃಷ್ಟಿ ಪರೀಕ್ಷೇನೊ ನಿಂದು... ತೊಗಲಿನ ಚೀಲ...... ವಿಲಾಸ್ತಿ
ತೂಗು,
ಹಿರಿಯಣ್ಣಯ್ಯ: ತೊಗಬ್ಬಿಡು... ಚೀಲಬಿಡು... ಆದ್ರೆ ವಿಲಾಸ್ತೋತಂದ್ಯಲ್ಲಾ ಅದು ಬಿಡಬೇಡ...
ಅದೇನ್ಹಾಣಿಂತೀಯಾ ಅದು! ಮೇಲ್ಕಾದಿರೋ ಅಷ್ಟೇ... electionನು ಒಂದು ತಿಂಗಲ್ಲೇ
ಬರೂದ್ನೂ, ಒಂದು Speech ಕೂಡಾ ತಯಾರಾಗಿ ಕಣ್ಣು ಕಣ್ಣು ಬಿಡ್ತಿರೋ ನನ್ನ ಗಮನಿಸಿ,
ಕನಿಕರಿ ಬನ್ನಿರೋ ನಿನ್ನ, ಸತ್ತಿರೋ ತನ್ನ ಚಪಲ ತೀರಿಸ್ಕೊಳೋಕೇಂತ ಕಳ್ಳಿರೊ ವಸೂದು ಆ
ಚೀಲ!... ಏನ್ಪ್ರಾಣಿಂತೀಯಮ್ಮಾ!... ರೈಲ್ವೆ ಚಾರ್ಜು ತಾನೇ ಕೊಟ್ಟುಕೊಂಡು ಬಂದಿಳಿದಿದ್ದಾನೆ...
ಒಂದೊಂದು ಇಂಗ್ಲಿಷ್ ಮಾತು ಮೊಳುದುದ್ದ... ನಿಘಟನ ನುಂಗಿಬಿಟ್ಟಿದ್ದಾನೆ. ಅಲ್ಲಿ ಮುನ್ಸಿಪಾಲಿಟಿ
ಬಾಬತ್ತೆಲ್ಲಾ ಲೇಹ್ಯಮಾಡಿಟ್ಗೊಂಡಿಧಾನೆ ಮಂಡೇಲಿ; ಇವನ ಸಹಾಯದಿಂದ ಅಪ್ಪ ಹರಸಿ ನೀನು
ಬಯಸೋ President ಪದವಿ ಖಾತ್ರಿ ಆಗೊದಲ್ದೆ ..... Rao Bahadur ಪಟ್ಟ ದೊರ್ ಕೋಕೆ
ಏನ್ಮಾಡಬೇಕು.... ಯಾವ್ಯಾರ ನೋಡೋಕು ಈ ಬಾಬ್ತೆಲ್ಲಾ ಪೊಗದಸ್ತಾಗಿ plan ಮಾಡ್ಕೊಂಡು
ಇಟ್ಗೊಂಡಿಧಾನೆ ಮನುಷ್ಯ. ಇಂಥ ಅದ್ಭುತ ಪ್ರಾಣೀನ ಹಿಡಿದ್ಹಾಕ್ಬಿಟ್ಟಿದ್ದೇನೆ! ಏನ್ಹೇಳೀಯಾ!
ಇನ್ನೆಷ್ಟೇಯಾ ! ನಿನ್ನ ಚಿಂತೇನೂ ತಪ್ಪಿತು, ಅಪ್ಪನ ಆತ್ಮಕ್ಕೂ ಶಾಂತಿ, ಆದ್ರೆ ಈ ನಿಮ್ಮಿಬ್ಬ
ಸಂತೋಷ್ದಲ್ಲಿ ಒಂದ್ ಚಿಕ್ಮಾತು. ಮನುಷ್ಯ ನನ್ಗೆ ಪಟ್ಟಾನು ಪದ್ವಿನೂ ಸಿಗೋವರ್ಗ ತನ್ನ
ತನುಮನದ ತಾಬೇದಾರಿ ಧಾರೆ ಎರಬ್ಬಿಟ್ಟೆವಾನೆ ನಮ್ಕುಟುಂಬಕ್ಕೆ. ಅವನು ಕೇಳೊದು ಹೊಟ್ಟೆಗೊಂದಿಷ್ಟು
ಕೂಳು... ಬಿಡ್ಕೊಳೋಕ್ ಒಂದಿಷ್ಟು ಜಾಗ... ಅಲ್ಲಿ ತಿಂಗಳಿಗೆ ಒಂದಿಪ್ಪತ್ತೈದು ರೂಪಾಯಿ...
ಸುಬ್ಬಮ್ಮ: ಎಪ್ಪತ್ತೈದ್ರೂಪಾಯಿ!... ಮಾಮ್ಮೆದಾರ ಸಂಬಳವಾಯ್ತಲ್ಲೋ?
ಹಿರಿಯಣ್ಣಯ್ಯ: ಮಾಮ್ಲೇದಾರ್ರೇ!... ಮಾಮ್ಲೆದಾರ್ರ ಮುತ್ತಾತನ್ನ ಬಿಟ್ಟು... Commissionerಗೂ
ತಿಳಿಯದ ಇಂಗ್ಲಿಷು ಡಜನ್ನಿಗೆ ಇಪ್ಪತ್ತರ ಹಾಗೆ ಮಾತುಗ್ಳು ಬಿತ್ತಿಧಾಳೆ ಅವನ್ನಾಲ್ಗೇಲಿ... ಇಂಗ್ಲಿಷ್
ಸರಸ್ವತಿ.
ಸುಬ್ಬಮ್ಮ: ಆದ್ರೂಪ್ಪ... ತಿಂಗಳೆಪ್ಪತ್ತೈದೂಂದ್ರೆ...
ಹಿರಿಯಣ್ಣಯ್ಯ: ಅಮ್ಮಾ, ಇದು ತರ್ಕಮಾಡೋ ಮಾತಲ್ಲ.. ವ್ಯಾಪಾರವಲ್ಲ... ಅವನಿದ್ರೋ ನಿನ್ನಾಸೆ
ಘಟಿಸಿದ ಹಾಗೆ... ಇಲ್ವೋ...
(ಜೇಬಿನಿಂದ ೫ ರೂ. ನೋಟನ್ನು ತೆಗೆದು ನೀಡುತ್ತಾ)
-------------------------------------------------
ಕಮಿಷನರಿಗೆ ಕೊಡೋ ಹಣ್ಣು ಹೂವೂ, ಹಂಪ್ಲು ಖರ್ಚು ವ್ಯರ್ಥ, ತಿರಿಗೂ ಸೇರಿಸ್ಕೋ
ಈ ಐದು ರೂಪಾಯ್ನ ನೀನೇ ಅನುಭವಿಸಿಕೊಳ್ಳೋ ಪುಟ್ಟ ಗಂಟಿಗೆ.
(ಬಿರುಸಾಗಿ)
ಒಂದ್ಮರೀಬೇಡಾ... ಅಲ್ಮೇಲೆ ಕಾದಿಧೆ ಅಪ್ಪನ ಆತ್ಮ ತನ್ಮಾತು ಸುಳ್ಳಾಗಬಾರದೂಂತ!
(ತಲೆಬಾಗಿಸಿ ಗದ್ದದ ಸ್ವರದಿಂದ)
ಆ ಆತ್ಮದ ಶಾಂತೀನೂ... ಈ ಪ್ರಾಣಿ ಕೇಳೋ ಶನಿ ಕಾಸ್ನೂ ಎದ್ರು ಬದ್ರು ತೂಗೋದಾದ್ರೆ
ನೀನು... ಹುಂ! ಇನ್ಮಾತೇನಿದೆ... ತಗೊಮ್ಮಾ... ನಿನ್ನೈದ್ರೂಪಾಯಿ ನೋಟ್ನಾ!
(ಮೇಜಿನಂಚಿನಲ್ಲಿ ನೋಟನ್ನು ನಾಜೂಕಾಗಿ ಮಡಿಸಿಟ್ಟು ರುಮಾಲನ್ನು ತೆಗದು ಗೂಟಕ್ಕೆ
ತಗುಲಿಸಿ ಜೇಬಿನಲ್ಲಿರುವ ಬಂಗಾರದ ಸರಪಣಿಗೆ ತಗುಲಿಸಿದ ಬಂಗಾರದ ಗಡಿಯಾರಕ್ಕೂ ಗೋಡೆಗೆ
ಅರೆದಿರುವ ಗಡಿಯಾರಕ್ಕೂ ಇರುವ ಕಾಲ ತಾರತಮ್ಯವನ್ನು ಗಮನಿಸುತ್ತಾ in loud whisper)
ಹ್ಹುಂ... ಉಸ್ ... ಅಪ್ಪನ ವಾಚು... girls, school building Foundation ಮಹಾರಾಜ್ರು
ಹಾಕ್ದಾಗ.. ಊರೆಲ್ಲಾ subscription ಹಾಕಿ presentation ಮಾಡಿದ್ದು! (ನಿಟ್ಟುಸಿರು ಬಿಡುವನು)
Poor old Appa!
ಸುಬ್ಬಮ್ಮ: (ಸಮೀಪಿಸಿ ಪುತ್ರನ ಬೆನ್ನನ್ನು ಸವರುತ್ತಾ) ಹಯ್ಯೋ ಮಗೂ, ಇದೇನು,
ಐವತ್ತು ರೂಪಾಯಾಗ್ಲೀ... ಸಾವಿರವಾಗ್ಲೀ... ಈ ಹೊತ್ತೇನೇನೋ... ನಾಳೇನೇನೋ... ನಿಮ್ಮ
ತಂದೇನ ಸೇರೋ ನನ್ಗೆ ದುಡ್ಡಿನ ಚಂತೆ ಏನೂ ಇಲ್ಲ. ಆದ್ರೆ ಒಂದ್ಸಂತೋಷ! ಜೋಲ್ಬಾಯಿ
ಬಿಟ್ಕೊಂಡು ಜಡಭರತನ ಹಾಗೆ ಸರ್ವದಾ ತೂಗಾಡ್ತಿದ್ದ ನೀನು ಈ ಎಪ್ಪತ್ರದ್ರೂಪಾಯಿ ಮನುಷ್ಯ
ಬರುತ್ಲೂನೂವೆ... ಈ ಮುನಿಪಾಲ್ಟಿ ರಾವ್ ಸಾಹೆಬ್ ವಿಷಯದಲ್ಲಿ ಹಲ್ಲು ಕಚ್ಚಿಕೊಂಡು ನೀನು
ಈಗ ಹಿಡಿದಿರೂ ಮುಷ್ಕರಾನ ಸಾಧಿಸೋದಾದ್ರೆ ಮುಂದೆ ನಮ್ಮ ಹಾರೈಕೆಗೂ ಹಿತಕ್ಕೂ
ದಾರೀಂತ ನನಗಿಲ್ಲೆಲ್ಲೂ ಹೇಳುತ್ತೆ... ಆದ್ರೆ ಮರಿಬೇಡ... ತಿಂಗಳ್ಗೆ ಎಪ್ಪತ್ತೈದೊಂದ್ರೆ...
ದಿನಕ್ಕೆರಡೂವರೆ ರೂಪಾಯಿ... ಅನ್ನ ಅಲ್ದೆ!... ನೀನೇನು ಕೆಲ್ಸ ನೇಮಿಸ್ತೀಯೋ ಅವೆಲ್ಲಾನೂ ಅಲ್ದೆ
ಮನೇ ಲೆಖ್ಖಗ್ಳು ಬರೆಯೋದು... ಒಟ್ನಲ್ಲಿ ಸೌದೆ ಒಡಿಯೋದೂ ಅಲ್ಲದೆ ದನಕರು... ಕುಟುಂಬದ
ಒಟ್ಟು ಉಸ್ತುವಾರಿ ಎಲ್ಲಾ ವಹಿಸೋದಾದ್ರೆ... ಅವನು...
ಹಿರಿಯಣ್ಣಯ್ಯ: ಈ ಕುಟುಂಬದ ಉಸ್ತುವಾರಿ! ಅವನ್ನ್ ಗೊತ್ತಿಲ್ಲಾಮ್ಮ ನಿನಗೆ, ಮುಂದಕ್ಕೆ
ಗೊತ್ತಾಗುತ್ತೆ. ಚಂಡ ಪ್ರಚಂಡ...ಅವನ್ಮಾತೂ... ಜಬರ್ದಸ್ತು ನೋಡ್ದ್ರೇ... Congress ಕೆಲ್ಸಾನೇ...
ಒಮ್ಮೆ contract ತಗೊಳೋ ಗೈರತ್ತು...
ಸುಬ್ಬಮ್ಮ: (ನಿಷ್ಟ್ರಮಿಸುತ್ತಾ by C) ಅದೇನೋಪ್ಪಾ, 'ಮೈಮುರಿಯ ಹಾಗೆ ಕೆಲ್ಸ
ತಗೊಂಡ್ರೇನೆ ಮಾತುಕೊಟ್ಟಹಾಗೆ ಕೂಲಿ ಕೊಡೋದು ಜಾಣತನಾ'ಂತ ನಿಮ್ತಂದೆ ಹೇಳ್ತಿದ್ದದ್ದೂ
ಇಧೆ... ನಾನೀಗ್ಹೇಳೋದೂ ಅಧೇ... ಮುಖ್ಯ ಎಂತವ್ನಾದ್ರೂ ಹತೋಟಿಲಿಳ್ಕೊಂಡು ಕೆಲಸ ತಗೋ ...
(ನಿಷ್ಕ್ರಮಿಸುವಳು by C.)
---------------------------------------------
ಕಪ್ಪಣ್ಣ: (ಪ್ರವೇಶಿಸಿ, by L) Forgive me sir, ಮನೆಗೊಂದು ಹೆಸರಿಡಬೇಕು.
ಹಿರಿಯಣ್ಣಯ್ಯ: ಮನೇಗ್ಹೆಸರು!?
ಕಪ್ಪಣ: Just imagine sir... hypothetical ಆಗ್ಹೇಳ್ತೇನೆ ... address... letter. On His
Imperial Majesty George Rex's- Latinನಲ್ಲಿ Kingoo..... of Englandoo... Imperator...
also DOನಲ್ಲಿ Emperoroo O.H.M. apostrophe S. Serviceoo-to Hiriyannayya, four
Upon sixty four, Doddabrahmin Street-old Sunkadakatte Road... ಹ್ಯಾಗಿದ ಕಿವೀಗೆ?
Horrible ? ಅಲ್ವೇ? ತಿರ್ಗೂ ಬನ್ನಿ ... Rao Saheb Hiriyannayya, The Eagles' Nest, Rampur,
ಚೆನ್ನಾಗಿದೆ?
ಹಿರಿಯಣ್ಣಯ್ಯ: ಚೆನ್ನಾಗಿದೆ.... you sec, ಇನ್ನೆಲೆ ಈ ನನ್ನ...
ಕಪ್ಪಣ್ಣ: Official affairನೆಲ್ಲಾ ನಾನೇ incharge ತಗೊಳ್ಳೋ ...
ಹಿರಿಯಣ್ಣಯ್ಯ: Quite so... ಆದ ನಾನು think... mean... ಮಾಡಿದ್ದು.
ಕಪ್ಪಣ್ಣ: Don't take the trouble, sir. From this moment ನಾನು post paid
servantoo...ನಿಮ್ಮ affairs ನಲ್ಲಿ think ಮಾಡೂದೂ ... mean ಮಾಡೋದೂ... ಈ
ಭಾರಾನೆಲ್ಲಾ ನನಗ್ಬಿಟ್ಬಿಡಿ. ಸದ್ಯ before I dispose myself with regard... ಅಧೇ... ರೂಮು
etc.. ಹೇಳ್ತೇನೆ.
ಹಿರಿಯಣ್ಣಯ್ಯ: ಬೋರಾ!
ಬೋರಾ: (ಬಂದು) ಬುದ್ದಿ.
ಹಿರಿಯಣ್ಣಯ್ಯ: ರಾಯರ...(ಸೂಚಿಸಿ) ಪೆಟ್ಗೇನಾ...
ಕಪ್ಪಣ್ಣ: (ಅಡ್ಡಮಾತಾಡಿ) plus my ಸರ್ವಧಾರಿ- hold all. ಹಾಸ್ಗೇನೂ... ಹೊರಗಿದೆ.
ಹಿರಿಯಣ್ಣಯ್ಯ: ಇದನ್ನೆಲ್ಲಾ ಬೋರಾ, ಮಹಡಿವಳ್ಗಣ ಕೋಣೇಲಿಟ್ಟು... ಕೊಣೇನ್ಗುಡ್ಸಿ
ಒಂದು ಲಾಂದ್ರಾನೂ ಹಚ್ಚಿಡು.
(ಕಪ್ಪಣ್ಣನಿಗೆ)
Now that you are engaged... one more detail... my old mother you know...
old fashioned also. too old to manage... but still...
ಕಪ್ಪಣ್ಣ: (ಅಡ್ಡಮಾತಾಡಿ)
Ponderous responsibilities of the house, property, wealth. servants, cattles.
dogs, cats ಅಲ್ಲಿ ಉಗ್ರಾಣದ ಸರ್ಕುಗಳ ಸೂರೆಹೂಡೀತಿರೋ mice also! ಅರ್ಥಾಯ್ತು ಸಾರ್...
ನಿಮ್ಮ municipality ಮೆನೋವರ್ಸ್ ಅಲ್ಲ... ಮನೆ managementoo ಜವಾಬ್ದಾರಿನೂ ವಹಿಸ್ಬೇಕಾದ...
ಒಟ್ನಲ್ಲಿ ನಾನು sleep ಮಾಡೋ twelve to six ಜಾತಾಬಾಕಿ ಹದಿನೆಂಟು ಘಂಟೇನ... ಯತ್
ನನ್ನ ದೇಹ ಬುದ್ದಿ etc...
----------------------------------------------------------
ಹಿರಿಯಣ್ಣಯ್ಯ: You understand me, petectly... ಇನ್ಮೇಲೆ ಮನೆ management...
ಕಪ್ಪಣ್ಣ: Plus...
ಹಿರಿಯಣ್ಣಯ್ಯ: My future..
ಕಪ್ಪಣ್ಣ: Prospects of Planning and the road to... realisation of... ತಮ್ಮ ದಿವಂಗತ
ಜನಕ್ರು Prophecy... prognosticate ಮಾಡಿದ fathership of Mayorally of the Local
Corporation ಅಲ್ದೆ Rao Saheb certainly... Rao Bahadur probably... Dewan Bahadur
possibly... ಹೇಳೇಬಿಡ್ತೇನೆ ಸಾರ್... Careful ಆಗಿ deplomaticಆಗಿ move ಮಾಡಿದ್ರೆ Sir
titloo... why not? ... K.C.S.L.... K.C.I.E. ಇಲ್ದಿದ್ರೂನೂವೆ... ಬರಿ: ಒಂದು beggarly Kt.
hoodoo... impossible ಏ ಸಾರ್…ನಿಮ್ಮ power self and position plus my humble
brainoo ಸೇರಿರೋವಾಗ?.... ನೀವೇನ್ತಾನೇ ಹೇಳಿ ಸಾರ್... ಸಾಹೇಬೊ, ಬಹದೂರೋ, ನಿಮ್ಮ
fatheroo ಏನಿದ್ರೂನೂವೆ Sir Hiriyannayya, the Eagles' nest, Rampur, South India.
ಹ್ಯಾಗಿದೆ ಸಾರ್ addressoo...
ಹಿರಿಯಣ್ಣಯ್ಯ: (Suddenly waking up from the beautiful dream that Kappanna has dropped him into)
Thank you very much but in the meanwhile motheroo.... ನಿಮ್ಮನ್ನ…
ಕಪ್ಪಣ್ಣ: “ನಿನ್ನ”....ನನ್ನ ಮೇಲೆ ನಿಮಗಿರೋ personal affection ಗಲಾಟೇಲಿ ತಾವು
masteroo ನಾನು servantoo ಅಂಬೋದ್ನ ಮರೀಬೇಡಿ… but... ನೀವ್ಹೇಳ್ತಿದ್ರಿ.... something....
ಹಿರಿಯಣ್ಣಯ್ಯ: ಆದೇ...ಮನೆ management ವಿಷ್ಯದಲ್ಲಿ.... mother ಹತ್ರ... detailoo...
ಕಪ್ಪಣ್ಣ: Certainly sir... report ಮಾಡ್ಕೊತೇನೆ... Dowager Mrs, late Rao
Sahebಗೆ...
(approaching C)
(ನೀವೇನ್ಹೇಳಿದ್ರೂ still Sir.... 'Sir' titleoo ‘Sir title' ಏ!)
ಹಿರಿಯಣ್ಣಯ್ಯ: ಅದೆಲ್ಲಾ impossibleoo.
ಕಪ್ಪಣ್ಣ: “Nothing is impossible" is the first word in my dictionary. Authority:
Napolean Bonyparte. birth Corsica. death St. Helena. dates can supply if necessary....
ಮೊದಲು sepoy. Easter Emperoroo... atraga serbis impossible, sir?
[ಹಿರಿಯಣ್ಣಯ್ಯ ಇದನ್ನು ಕೇಳಿ ಕಣ್ಣುಗಳು ಹೊಳೆಯುತ್ತಾ ದಿಗ್ದೇಶಭ್ರಮಿತನಾಗಿ 'Sir
titleoo..... “beggarly KT. hoodoo... Napoleonoo.... ಸಿಪಾಯಿ Emperoroo possible
always in my dictionary” ಎಂದು ಸ್ವಗತ ಗೊಣಗುಟ್ಟುತ್ತಾ exit by R]
-----------------------------------------------------------------------------------
ಕಪ್ಪಣ್ಣ: (At C) ಅಮ್ಮಾ... ಅಮ್ಮಾವ್ರೇ... ಯಜಮಾನಮ್ಮನೋರೆ...
ಸುಬ್ಬಮ್ಮ: (From within) ಯಾರದು?
ಕಪ್ಪಣ್ಣ: ನಾನೂಮ್ಮಾ ... ಈಗತಾನೆ ತಮ್ಮ... (ಸುತ್ತುಮುತ್ತಲೂ ನೋಡಿ) .. ತಮ್ಮ
ತಮ್ಮಾವ್ರು ತಮ್ಮ ಕುಟುಂಬದ ವಿಶಿಷ್ಟ ಕೆಲ್ಸಾನೂ ಜರುಗ್ಸೋಕೆ ಈಗತಾನೆ ನೇಮಿಸ್ದ ಜವಾನಾಮ್ಮಾ...
ಸೇವ್ಕ...ದಾಸ... ಕಪ್ಪಣ್ಣ ನನ್ನ ಹೆಸರು... ಬ್ರಾಹ್ಮಣ... ಕರ್ಣಾಟಕ... ಸ್ಮಾರ್ತ... ಕಮ್ಮೆ... ಆದ್ರೆ,
ಅಮ್ಮ, ಹೆಮ್ಮೆ ಇಲ್ಲದ ಕಮ್ಮೆ...
ಸುಬ್ಬಮ್ಮ: (ಪ್ರವೇಶಿಸಿ) ನೋಡೂ.... ಮನೇ ಎಲ್ಲಾ ತಾರುಮಾರಾಗಿ ಹೋಗಿದೆ.
ಕಪ್ಪಣ್ಣ: ಧ್ವನಿಯನ್ನು ಅಲ್ಪ ತಗ್ಗಿಸಿ) ಗೊತ್ತೂಮ್ಮಾ... ತಮ್ಮ ತಮ್ಮಾವ್ರು ತಪ್ಸೀಲಾಗಿ
ವಿವರಿಸ್ದ್ರು.
ಸುಬ್ಬಮ್ಮ: ತಮ್ಮ? ಯಾರದು ?... ನನ್ತಮ್ಮ ?
ಕಪ್ಪಣ್ಣ: ರಾಯ್ರೂಮ್ಮಾ ... Rao Sahebಮುಂದಾಗೋ ಹಿರಿಯಣ್ಣಯ್ಯನೋರು... ಈಗತಾನೇ... (indicating R)
ಮಹಡಿ ಹತ್ತಿತ್ಹೋದ್ರು.
ಸುಬ್ಬಮ್ಮ: (ಮುಗುಳುನಗೆಯಿಂದ) ತಮ್ಮಲ್ವೋ ಅದು... ನನ್ಮಗ.
ಕಪ್ಪಣ್ಣ: (ಚಮಕಿತನಾಗಿ) ಮಗ ?... ಹೇಗಮ್ಮಾ ಅದು?... (smiling)
ಅರ್ಥವಾಯ್ತು.
ಸುಬ್ಬಮ್ಮ: ಏನರ್ಥ್ವಾಯ್ತು.
ಕಪ್ಪಣ್ಣ: ಸುಮಿತ್ರಾದೇವಿಗೆ ಶ್ರೀರಾಮ ಹೇಗೆ ಮಗನೊ ಹಾಗೆ... ಅಲ್ವೇನಮ್ಮಾ?
ಸುಬ್ಬಮ್ಮ: ಎಲ್ಲಿಂದೆಲ್ಲಿಗೋ... ಕೌಸಲ್ಯಾ ಅಲ್ವೆ...?
ಕಪ್ಪಣ್ಣ: ಅಧೇಮ್ಮಾ ದಶರಥರಾಜನಿಗೆ... ಇರ್ಲಿ... ದಿವಂಗತರಾದ ದೊಡ್ಡ ಯಜಮಾನ್ರು
Rao Saheb ಊರೆಲ್ಲಾ ಈಗ ಹೊಗಳ್ತಿರೋ ಯಜಮಾನ್ರ ದಿವಂಗತ ದೊಡ್ಡ ಹೆಂಡ್ತಿಯ
ಮಗ... ನನ್ನ ಯಜಮಾನ್ರು... ತಾವು ಸುಮಿತ್ರೆ.. ಕ್ಷಮ್ಸಿಮ್ಮಾ ಒಟ್ನಲ್ಲಿ ಅಕ್ಕ ತಮ್ಮಂದಿರ ಹಾಗೆ
ಇತ್ತು... ಇಧೆ... ಮುಖನೋಡಿದ್ರೆ ಹೇಳ್ತನೆ!
ಸುಬ್ಬಮ್ಮ: (ನಗುತ್ತಾ)
ಹ್ಹ: ಹ್ಹ: ಹ್ಹ..... ಇದೇನಾಶ್ಚರ್ಯ. ಆ ಪೂಜಾರಿ ಆಗ ಹೇಳಿದ್ದೇನೂ!... ನೀನು ಈಗ
ಹೇಳ್ತಿರೋಧೇನು! .... ಹ್ಹ: ಹ್ಹ: ಹ್ಹ: ಹ್ಹ ... ಆಶ್ಚರ್ಯ.
------------------------------------------------------------------
ಕಪ್ಪಣ್ಣ: ಪೂಜಾರಿ... ಯಾವ...
ಸುಬ್ಬಮ್ಮ: ನೋಡೋ ಮಗು. ಲಾಗಾಯ್ತಿಂದ ನಮ್ಮ ಮನೆತನದ, ತೌರ್ಮನೆತನದ
ಮಂಗಳಾರ್ತಿ... ಮೈಸೂರು ಚಾಮುಂಡೀಗೆ, ಬೆಟ್ಟ ಹತ್ತಿ ಮನೆಯೋರಲ್ಲಾ ಮಾರ್ನವಮಿ ರಾತ್ರಿ
ನೂರೆಂಟ್ರೂಪಾಯಿ ಮಂಗಳಾರ್ತಿ ಅಮ್ಮನಿಗೆ... ನನ್ನ ಚಿಕ್ಕಂದಿನಲ್ಲಿ ನಮ್ಮ ವೆಂಕಟಲಕ್ಷ್ಮಿ...
(snivelling)
-ತಾಳೀ ಕಟ್ಟಿಕೊಂಡು ಕಣ್ಮುಚ್ಚಿದಳು ಪುಣ್ಯಾತಗಿತ್ತಿ-ಅವಳೂ ನಾನೂ ನಿಂತಿದ್ದೇವೆ..
ಗರ್ಭಗೃಹದಲ್ಲಿ... ಗಲಾಟೆ ಜಾಸ್ತಿ... ಆಗ ಅಷ್ಟೋತ್ತರ ಹೇಳಿ ಮುಗ್ಸಿ ಮಂಗಳಾರ್ತೀಗೆ ಕರ್ಪೂರ
ಹಾಚ್ತಾ... ಸುತ್ತ ಮುತ್ತಲಿರೋರು ನಮ್ಮೆಲ್ಲೀರೂ ಗಮನಿ ಆ ಪೂಜಾರಿ... ಅಕ್ಕನ್ನ “ಅಮ್ಮಾ,
ನಿಮ್ಮಗಳ್ನ ಕರ್ಕೊಂಡು ಹೀಗೆ ಬನ್ನಿಮ್ಮಾಂ”ತಂದ. ಅನ್ಯಾಯ, ರೇಗಿದ್ಳು ನಮ್ಮಕ್ಕ! ಹ್ಹ: ಹ್ಹ: ಹ್ಹ: ಹ್ಹ:
ಆಶ್ಚರ್ಯ... ಆಶ್ಚರ್ಯ! ಮಗು ನನ್ತಮ್ನೇ ?... ಒಳ್ಳೇ ಬೆಪ್ಪು ನೀನು!
ಕಪ್ಪಣ್ಣ: (ತಲೆಬಾಗಿ)
ಬೆಪ್ಪನೋ ಹೌದೂಮ್ಮಾ... ಆದ್ರೂನೂವೆ... ಒಬ್ಬರ್ನೊಬ್ಬರ್ನ ಹೋಲ್ಸಿದ್ರೆ... ಹಾಗ್ತೋಚ್ತು ...
ಕಂಡುಬಂತು... ನನ್ಕಣ್ಣಿಗೆ... ನಾನು ಬೆಪ್ಪಾದ್ರೂನೂವೇನಮ್ಮಾ ತಮ್ಮನೇ ಅನ್ನಾ ತಿನ್ನೋ ಲಭ್ಯಾನ
ನನಿಗೆ ಪರಮಾತ್ಮ ನನ್ಹಣೇಲಿ ಬರದಿರೋವರ್ಗೂ ಮನೇಗೆ ಸರ್ವವಿಷಯದಲ್ಲೂ ಉಪಯೋಗವಾಗೋ
ವಿಧಾನಗಳ್ನ ತಪ್ಸೀಲಾಗಿ ತಮ್ಹತ್ರದಿಂದ ತಿಳ್ಕೋಂತ ಯಜಮಾನ್ರು... ತಮ್ಕುಮಾರ್ರು ಆಜ್ಞಾಪಿಸಿದ್ದಾರೆ.
(Getting fountain-pen and book out of pocket and preparing to take down
instructions)
ಪ್ರಥಮತಃ... ಒಂದ್ಪಟ್ಟೀ of propertyಸು... ಹೇಳ್ತೇನಮ್ಮಾ... ಮೊಟ್ಟಮೊದಲು ಮನೆತನಕ್ಕೇರಿದ
ಮನೆಗಳಷ್ಟು... ಬಾಕ್ಲೆಷ್ಟು... ಮಕ್ಕಳೆಷ್ಟು... ಮರಿಯೆಷ್ಟು... ದನಯೆಷ್ಟು... ಕರುಯೆಷ್ಟು...
ಜೋಡಿಗ್ರಾಮಗಳೆಷ್ಟು. ಅವುಗಳ ವರಮಾನ ಎಷ್ಟು, ಅವುಗಳಿಗೆ ಸೇರಿದ ತೋಟತಿಟ್ಟುಗಳೆಷ್ಟು...
ಹೊಲಗದ್ದೆಗಳೆಷ್ಟು... ಇವುಗಳಿಂದೆಲ್ಲಾ ಜಮಾ ಎಷ್ಟು... ಖರ್ಚು ಎಷ್ಟು... ಜಮಾದಿಂದ ಖರ್ಚು
ಜಾತಾ ಬ್ಯಾಂಕಿಗೆ ಬಡ್ಡಿಸಹಿತ ಬೆಳೆಯೋಕೆ ಹೋಗೋಬಂಡ್ವಾಳ ಎಷ್ಟು... ಅಲ್ದೆ pass bookooಗ್ಳು...
cheque bookooಗ್ಳು... ರಸೀದಿಗ್ಳು... ಅಲ್ಲ ಹಳೇ ಪತ್ರಗಳು... ಒಟ್ನಲ್ಲಿ...
ಸುಬ್ಬಮ್ಮ: (With admiring eyes) ನೀನೇಳೊದ್ದೆಲ್ಲಾ ಈಗ ಹ್ಯಾಗೆ ಒಪ್ಸೋದು ನಾನು....
ಕಪ್ಪಣ್ಣ: ಒಪ್ಪೋದಲ್ಲಾಮ್ಮಾ... ದೊಡ್ಡೆಜಮಾನ್ರು ಕಣ್ಮುಚ್ಚಿದ ಕ್ಷಣದಿಂದ ಈ ಕ್ಷಣದವರ್ಗೂ
ಬರೆದಿಟ್ಟಿರೋ ಲೆಕ್ಕದ ಪುಸ್ತಕಗಳ ನನ್ಕೈಲಿ ಈಗ ಇಡ್ಬಿಟ್ರೆ... ರಾತ್ರಿ ಎಲ್ಲಾ ಓದಿ ಬೆಳಕು ಹರಿಯೋಷ್ಟು
ಹೊತ್ಗೆ... ಮನಸ್ಸಿಗೆ ಎಲ್ಲಾ ತದ್ಕೊಂಡು... ಮುಂದಿನ ಕ್ರಮಾನ...
ಸುಬ್ಬಮ್ಮ: (ಗದ್ದದ ಸ್ವರದಿಂದ) ಹಯ್ಯೋ ಮಗು... ಏನ್ಹೇಳ್ಳಿ... ಈ ಕುಟುಂಬದ ವಿಚಿತ್ರಾನ...
--------------------------------------------------------------------------
ಕಪ್ಪಣ್ಣ: (ಥಟ್ಟನೆ ಕುರ್ಚಿಯನ್ನಿತ್ತಿ ಸುಬ್ಬಮ್ಮನ ಹಿಂದಿಟ್ಟು) ಹೀಗೆಲ್ಲಾ ಅಧೈರ್ಯಪಟ್ಟು
ಪ್ರಯೋಜನವಿಲ್ಲಾಮ್ಮಾ!... ಸ್ಥೈರ್ಯ ತದ್ಕೊಳ್ಳೊ ಸಮಯಾ ಇದು. ಕೂತ್ಕೊಳ್ಳಿ.
(ಸುಬ್ಬಮ್ಮನು ಕುಳಿತುಕೊಳ್ಳುವಳು. ಕಪ್ಪಣ್ಣನು ಆಕೆಯ ಮುಂದೆ ನೆಲದಲ್ಲಿ ಕುಳಿತುಕೊಳ್ಳುವನು.)
ಸುಬ್ಬಮ್ಮ: ಅಯ್ಯೋ... ಬರೀ ನೆಲ.
ಕಪ್ಪಣ್ಣ: ಪರ್ವಾ ಇಲ್ಲಾಮ್ಮಾ... ಮಾಸಿದ್ಪಂಚೆ...ರೈಲಲ್ಲಿ ಬಂದದ್ದು... ಸಂಸಾರದ ವಿಷ್ಯಾನಮ್ಮಾ
ಸಾಂಗೋಪಾಂಗವಾಗಿ ವಿವರಿಸಿ ನನಗೆ; ನನ್ನಿಂದ ಕುಟುಂಬಕ್ಕಾಗೋ ಸಹಾಯಾನ ನಾನ್ಮಾಢ್ತೇನೆ.
ಮುಖ್ಯಾಮ್ಮ ಸ್ನೇಹಾಂಬೋದು ಮಾಡ್ಲೇಬಾರ್ದು ಮನುಷ್ಯ! ಇಲ್ಲ ಒಂದು ವೇಳೆ ಮಾಡಿಬಿಟ್ನೋ...
ಪಂಚಪ್ರಾಣಗಳು ಹೋಗೂವರಿಗೂ ಆ ಸ್ನೇಹಾನ ಸಾಧಿಕ್ಬೇಕು... ನಿಭಾಯಿಸಬೇಕು... ಒಟ್ನಲ್ಲಿಮ್ಮಾ...
ರೆಟ್ಟೆ ಮುರ್ಯೋಹಾಗೆ ಮತ್ತು ಸಂಪಾದಿಸ್ದ ರೊಟ್ಟಿ ರುಚಿ ದೇವಲೋಕದ ಅಮೃತಕ್ಕೂ ಇಲ್ಲಾಮ್ಮಾ...
ನಾನೇಕ್ಹೇಳ್ಳಿ. ಪರಮಾತ್ಮನೇ ಹೇಳ್ತಾನೆ ಭಗವದ್ಗೀತೇಲಿ... “ನಯನಂ ಛಿಂದಂತಿ... ಶಾಸ್ತ್ರಾಣಿ.”
ಸುಬ್ಬಮ್ಮ: (Aghast)
ಸಂಸ್ಕೃತಾನೂ ಗೊತ್ತೇ ನಿನಗೆ!?
ಕಪ್ಪಣ್ಣ : (Laughing sardonically)
ಹ್ಹೆ! ಸಂಸ್ಕೃತ ಗೊತ್ತೆ... ನಮ್ಕುಟುಂಬದ ಏಳ್ತಲೆಮಾರಮ್ಮಾ... ಶೃಂಗೇರಿಲಿ ಠಿಕಾಣೀ...
ಏನೋ ಕಾಲಪರಿಸ್ಥಿತಿವಶಾತ್... ಭರ್ತಹರಿ ಹೇಳ್ದ್ಹಾಗೆ “ಕಾಲೋಹ್ಯಂ ನಿರವಧಿ”...
ವಿಧೀಮ್ಮಾ ಮುಖ್ಯ ಕಾರಣ.
ಸುಬ್ಬಮ್ಮ: (Controlling her mixed complex of admiration relief, sadness etc.)
ಏನೋಪ್ಪಾ, ನನ್ಮಗ್ನೋ ಅವನ ಮುನ್ಸಿಪಲ್ ವಿಷ್ಯದಲ್ಲಿ ನಿನ್ನಿಂದ ಉಪಯೋಗಾಂತ
ಹೇಳಿದ್ಮೇಲೆ ಒಪ್ಕಕೊಂಡೆ... ನೀನು ಮನೆ ಒಳ್ಗೆ... ಆದ್ರೆ ನಮ್ಮುಟುಂಬ ಮುಂದಕ್ಬರೋ ವಿಷ್ಯದಲ್ಲಿ
ನಿನಗಿಷ್ಟು...
ಕಪ್ಪಣ್ಣ: ಹುಮ್ಮಸ್ಸು... ಉತ್ಸಾಹ... ವಿಧೇಯತೆ.. ಏವೇಕ...ವಿ...
ಸುಬ್ಬಮ್ಮ: ಹೌದು. ನೀನೀಗ್ಹೇಳಿದ್ದೆಲ್ಲಾ ನಿನಗಿಧೆಂತಾ ನನಗೊತ್ತಿರಲಿಲ್ಲಾ... ನಮ್ಮೆಲ್ಲರ
ಸಂರಕ್ಷಣೆಗೆ ದೇವ್ರೇ ನಿನ್ನ ಕಳಿಸಿದ್ದಿರಬೇಕು.
( ಗೋಡೆಗೆ ತಗುಲಿಸಿರುವ oil painting ಅನ್ನು ತೋರಿಸುತ್ತಾ)
ನನ್ನ ಮೊಮ್ಮಗನಾಗ್ಲೀ...
ಕಪ್ಪಣ್ಣ: ಕ್ಷಮ್ಸೀಮ್ಮಾ, ನಿಮಗೆ ಯಜಮಾನ್ರು ಮಗಾಂಬೋದಿರ್ಲಿ... ಇಷ್ಟು ಮೊಮ್ಮಗ...
ಆಶ್ವರ್ಯಾಮ್ಮಾ... ಭಗವದ್ಗೀತೇಲಿ ಬರೋವಾಗ 'ಆಶ್ಚರ್ಯವತ್ವಶ್ಯತಿಕಶ್ಚಿದೇಣಂ...'
ಸುಬ್ಬಮ್ಮ: ಹಯ್ಯೋ! ಹೇಳ್ತೇನೆ ಕೇಳೂ.
(ನಿಟ್ಟುಸಿರುಬಿಡುತ್ತಾ)
------------------------------------------------------------
ನಾನ್ಹೇಳೋದೇನು... ನಿನಗೇ ಗೊತ್ತಾಗುತ್ತೆ... ಕ್ರಮೇಣ... ಆದ್ರೂ ಕಾಲಹರಣ ಆಗದ
ಹಾಗೆ...ರೈಲಿನಲ್ಲಿ ಬಂದಿಧೀಯಾ... ಕೈಕಾಲ್ ತೊಳಕೊಂಡು ಊಟ ಮಾಡಿ ಮಲಕ್ಕೋ... ಬೆಳಗ್ಗೆ
ನನ್ಮಗ್ನೂ ಮೊಮ್ಮಗ್ನೂ ತಂತಮ ದುಂದ್ಕಾರ್ಕೇಲಿ ಮುಳುಗ್ತಿರೋ ಅವಸ್ಥೇಲಿ ಕುಟುಂಬದ
ಭಾರಾನೆಲ್ಲಾ ವಹಿಸ್ಕೊಂಡು ಗೋಳಾಡ್ತಿರೋ ನನ್ನ ಅವಸ್ಥೇನ ಬೆಳಗ್ಗೆ ಹೇಳ್ತೇನೆ. ಮಗೂ, ಎದ್ದು
ಕೈಕಾಲು ತೊಳ್ಕೊಂಡು... ಸಂಧ್ಯಾವಂದನೆ...
ಕಪ್ಪಣ್ಣ: ಈಗ್ಲೇ...? ಇಧೇನಮ್ಮಾ... ಸಂಧ್ಯೆ ಹೊತ್ಗೇ ಆಗೋಯ್ತು, ದೇವ್ರದಯದಿಂದ
ಆರೂವರೆಘಂಟೆಗೆ, ಇಂಜಿನ್ನು ನೀರ್ಕುಡ್ಯೋಕೆ ಅಂತ ನಿಂತ ಸ್ಟೇಷನ್ನಲ್ಲೇ ನನ್ನ ಸಂಧ್ಯೆ ತೀರಿಸ್ಕೊಂಡೆ...
ಸಮುದ್ರವಲ್ಲ... ನದಿಯಲ್ಲ... ನಲ್ಲಿ ನೀರು! ... ಆದ್ರೇನ್ಮಾಡೋದೂಮ್ಮಾ... ಕಲಿಯುಗ... ಲೌಕೀಕ
ಆಪದ್ಧರ್ಮ... ಸಂಧ್ಯೆ ಆಯ್ತೂಮ್ಮಾ … ಗುರುವಾರ ರಾತ್ರಿ ಉಪವಾಸ... ನನ್ನ ಸಂಪ್ರದಾಯ.
ಒಂದಿಷ್ಟು ನೀರ್ಮಜ್ಜಿಗೆ ಕೊಟ್ರೆ ಸಾಕೂಮ್ಮಾ...
ಸುಬ್ಬಮ್ಮ: ಬೋರಾ!
(ಬರುವನು by L)
ಈ ರಾಯರ್ಗೆ...
ಕಪ್ಪಣ್ಣ: ನಾ ನೋಡ್ಕೊತೇನೇಮ್ಮಾ... ಬೋರಣ್ಣೋರು ಇಧಾರೆ ಸಹಾಯಕ್ಕೆ... (ಮುಂದೆ
ಬರುವನು)
ಏನೂ ಇಲ್ಲ ಬೋರಣ್ಣೋರೆ... ಹೊಸಬ ಈಗ ಮನೇಗೆ... ನಿಮ್ಹಾಗೆ ಹಳಬನಲ್ಲ... ಏನೂ
ಇಲ್ಲ... ಭಾವಿ... ನೀರು...
(C ಯನ್ನು ಸಮೀಪಿಸಿದ ಸುಬ್ಬಮ್ಮನಿಗೆ)
ತಾವು ದಯವಿಟ್ಟು ಒಂದಿಷ್ಟು ಮಜ್ಜಿಗೇನಾ ಹೊರಗಿಟ್ಟು ಮಲಕ್ಕೊಳ್ಳೀಮ್ಮಾ... ಬಾಗಿಲು
ಹಾಕಿ ದೀಪಾನಾರ್ಸಿ... ಎಲ್ಲಾ ನಾ ನೋಡ್ಕೊತೇನಮ್ಮಾ... ಬೋರಣ್ಣೋರು ಇಧಾರೆ ನನ್ಸಹಾಯಕ್ಕೆ.
ಸುಬ್ಬಮ್ಮ: ಹಾಗಾರ್ಸರಿ.
(Exit Subbamma)
ಕಪ್ಪಣ್ಣ: ಬನ್ನಿ ಬೋರಣ್ಣೋರೆ... ಹಗ್ಗ ಬಿಂದಿಗೆ ಇಧೇತಾನೇ... ಭಾವೀಗೆ?
ಬೋರಣ್ಣ: ಊಂ ಬುದ್ದಿ.
ಕಪ್ಪಣ್ಣ: ಹಾಗಾರ್ದೀಪ ಚಿಕ್ಕದ್ಮಾಡ್ಹೊರಡಿ, ಪಂಚೆ, ಟವಲ್ ಎತ್ಕೊಂಡು ಬಂದೆ, ಈಗ
(As Bora after lowering the lamp exits by L and Kappanna by R. curain drops)
------------------------------------------------------------
ಸೀನ್ - ೨
(Time: next morning. Found entered Hiriyannayya and Kappanna. Same
place but brighter light and same position as previous night.]
ಹಿರಿಯಣ್ಣಯ್ಯ: Just a letter to my son... you know! Of course you don't know...
ಕಪ್ಪಣ್ಣ: But I do know. Sir ಅಮ್ಮಾವ್ರು ಹೇಳಿದ್ರು... ನಿಮಗೆ... ನಿಮ್ಮ letter purport
ಹೇಳ್ಬಿಡಿ ಸಾರ್ ಸಾಕು... brief long handನಲ್ಲಿ ಬರ್ಕೊಂಡು before your very eyes draft
ಒಪ್ಪಿಸ್ತೇನೆ... ಕೂತ್ಕೊಳ್ಳೀ ಸಾರ್.
(ಹಿರಿಯಣ್ಣಯ್ಯನು ಕೂತುಕೊಳ್ಳುತ್ತಲೇ ತನ್ನ ಜೇಬಿನಿಂದ Fountain-pen, note-book
hand ಇವುಗಳನ್ನು ಹೊರತೆಗೆದು ಲಿಖಿಸಲುದ್ಯಕ್ತನಾಗಿ)
...my dear... my own... my affectionate... my dearest... my beloved ... my dutiful... which is it, sir... ನಿಮ್ಮ sonಗೆ ಕಾಗದ ಬರೋವಾಗ...
ಹಿರಿಯಣ್ಣಯ್ಯ: (ಸುಲೋಚನವನ್ನು ತಗುಲಿಸಿಕೊಂಡು, ಮೇಜಿನ ಡ್ರಾಯರಿನಿಂದ ಸೆಳೆದ
Hindu Paperನ ಪ್ರಥಮ ಪುಟವನ್ನು ಜಿಗುಪ್ಪೆಯಿಂದ ಸೂಚಿಸುತ್ತಾ... ಆತ್ಮಗತಂ) ಹುಂ...!
S.S.L.C. ಎರಡ್ಸಾರ್ತಿ failoo. ನನ್ನ ಹಳೇ volumes (of Sexton Blakeoo, Sarojini's
Poemsoo byrote ಮಾಡ್ಬಿಟ್ಟು ಇವನ್ಬರಿಯೊ ಇಂಗ್ಲಿಷಿಗೆ Poet ಆಗಬೇಕಂತೆ, ಇನ್ನಿವನ p೧emಗೆ
stenographer ಬೇರೇನೇ ಇವನ್ಗೇ?.... only because ...motherಗೆ pet grandsonoo ಅಂಬೋ
ಜೋರ್ನಲ್ಲಿ ಮನೆ ಕಾಸಿನ ಗಿಡ ಹಾಕಿಧೇವೆ ಅಂತ ತಿಳ್ಕೊಂಡಿದ್ದಾನೆ... ಇವನ ಪಟಾಟೋಪಾನ
must... must...
ಕಪ್ಪಣ್ಣ : 'Nip it in the bud' suitable ಏ ಸಾರ್ ? Good phraseoo... idiomaticoo,
congenial under the circumstances. ಒಟ್ನಲ್ಲಿ ಅಭಿಪ್ರಾಯ ದಯಪಾಲಿದ್ರೆ ತಾವು, ಒಂದು
draft ತಮ್ಮೆದುರ್ಗೆ ಬರೆದು submit ಮಾಡ್ತೇನೆ. (Strong-in short-gunpowder letter... as well
as trusting. ತಾವು... now that I am your trusted secretary... ಮುಂದಕ್ಕೆ ನನಗೆ must be
known ಆದ family affairsನ ನೀವೇ ಹೇಳ್ಬಿಡೋದು best thingoo ಸಾರ್... in the long
runoo.
ಹಿರಿಯಣ್ಣಯ್ಯ: Family affairs ಏನೂ... Usual... financial...
ಕಪ್ಪಣ್ಣ: Crisis. I understand Sir. world trade depression...ಒಟ್ನಲ್ಲಿ money market
tightoo... ಅ್ ಲ್ವೇ?
ಹಿರಿಯಣ್ಣಯ್ಯ: Quite so. Therefore ನಮ್ಮ familyಲಿ ... So to speak of...ಗೊತ್ತಿಲ್ವೆ...
we have to...
---------------------------------
ಕಪ್ಪಣ್ಣ: Retrench... economise... cut out luxuries... simple life... share market
rise ಆಗೋವರೆಗೂ... therefore ಈಗ perhaps... ನನ್ನ sudden appointmentoo precludes
ತಮ್ಮ ಮಗನ... intending...
ಹಿರಿಯಣ್ಣಯ್ಯ: Yes, appointment of an unnecessary typewriting assistant...
you see. Mute, you are a trusted...
ಕಪ್ಪಣ್ಣ: Receptical of the family affairs ... ಹೇಳಿ ಸಾರ್... ಹೆದರ್ಬೇಡಿ.
ಹಿರಿಯಣ್ಣಯ್ಯ: ಹೇಳೋಧೇನೂ...
(Showing a particular item on the Ist page of the Hindu)
Read yourself.
ಕಪ್ಪಣ್ಣ: (ಓದುತ್ತಾ)
Wanted Typewriter... quick typing... money does not matter... see personally.
Jodidar Rama Rao, grandson of Late Rao Saheb Jodidar Rama Rao of Rampura,
now camp, care of post master. Balepet P.O. Bangalore City... ಏನನ್ಯಾಯ ಸಾರ್ ...
ನನಗ್ಹೇಳ್ತೇನೆ. Pitman school special certificate ಕಳ್ಸಿದೆ shothandಗೆ ಇನ್ನು typewriterನೋ ...
ಬುಲ್ ಬುಲ್ ತರಂಗದ್ದಾಗೆ ಬಾರ್ಸಿಬಿಡ್ತೇನೆ... ಹೌದು, ನೀವ್ಹೇಳೊಹಾಗೆ ಈ extra amenuencies...
terrible wordoo Sir! but congenial... ಈ advenisementoo unnecessary... extravagent...
exhorbitant... ನಾನೇ ಇಲ್ಲಿರೋವಾಗ quite ex...
ಹಿರಿಯಣ್ಣಯ್ಯ: Quole So! ಅಧೇ ನಾನು ಬರಿಬೇಕೂಂತಿರೊದು, ಅವನ್ಗೆ.. you
see...ನಿಮ್ಮ...
ಕಪ್ಪಣ್ಣ: 'ನಿನ್ನ'- discipline ಮರೀಬೇೆಡಿ, ದಯವಿಟ್ಟು ನಿಮ್ಮೆಲ್ರ kindness ನಲ್ಲಿ... ನನ್ನ
positinoo, paid servant of the family ಅಂಬೊದನ್ನ ಮರೀಬಾರ್ದು. helpoo... ನೀವು ...
ನನ್ದಣೀ...my master... must... give...ಕೊಡಬೇಕು... ಕ್ಷಮ್ಸಿ interrupt ಮಾ ಡ್ದೆ ... ನೀವೇಳ್ತಿದ್ರಿ...
'ನನ್ನ'
ಹಿರಿಯಣ್ಣಯ್ಯ: ನಿನ್ನ appointment... salary... necessary. of course... ಜೊತೇಲಿ...
ಈಗ ಅಮ್ಮ... my mother you already know... ಖರ್ಚಿನ ವಿಷಯ್ದಲ್ಲಿ...ಇದು...extra...
ಕಪ್ಪಣ್ಣ: Grasp ಮಾಡ್ಕೊಂಡೇ ಸಾರ್... Position... ಸ್ವಲ್ಪಿರಿ... (Opening the Hindu Paper)
ಈ articleನ enjoy ಮಾಡ್ತಿರಿ. ನನ್ನ draftನ shorthandನಲ್ಲಿ ಬರ್ದು submit ಮಾಡ್ತೇನೆ.
(As Hiriyannayya is reading newspaper Kappanna scribbles on pocket book
with fountain-pen for fully two minutes... later)
ಕೇಳಿ ಸಾರ್:
-----------------------------------------
My beloved but erring... ಇಲ್ಲಾ indiscreet ಅಥ್ವಾ, ill-advised... son child.
You know how difficult it is to get any money from mother except for
purposes of your Grand-father's peace of soul viz. my Rao Saheb and Municipal
Presidentships. I have just appointed a secretary on proper salary. He also knows
type-writer work. Therefore, he can be your type-writer. also of your poetries, therefore.
The one stone of my secretary can kill both the birds of your advertisement and my advertisement. Therefore, take away back again your
advertisement in Hindu paper and waste no more money. Come back at once and
do your poetry works here.
Your well-wishing but obedience expecting father.
ನಿಮ್ಮ sign ಒಂದೇ ಸಾರ್ wantingoo... Transform ಮಾಡ್ಬಿಡ್ತೇನೆ letter paper
ಮೇಲೆ... of course, if you approve... ಈ draftನ...
ಹಿರಿಯಣ್ಣಯ್ಯ: Approve ಏನು.., of course, I approve.
(Opening a drawer. puts out a card board letter paper envelope box)
ಬೋರಣ್ಣ : (Entering with a cover in hand as Kappanna starts writing) ಬುದ್ಧೀ :
ಈ ಕಾಗ್ಜ ತಮ್ಮ ಕೊಡಂತಂದ್ರು.
(Hands letter to Hiriyannayya)
ಹಿರಿಯಣ್ಣಯ್ಯ: (Tearing letter open) ಯಾರೂ ಕೊಟ್ಟಿದ್ದು?
ಬೋರಣ್ಣ: (ತಲೆಯನ್ನು ಬಾಗುತ್ತಾ ಬಂದವ್ರೆ ಬುದ್ದಿ... ಆಸ್ಗೆ ಪೆಟ್ಗೆ ಸಮೇತ... ಜಟ್ಕಾಲಿ
ನಿಮ್ ಕೈಯಾಗೆ ಇಡೂಂದ್ರು ... ಕಾಗ್ಜಾನ... ನಿಂತವ್ರೆ ಗೇಟ್ ಬಾಗ್ಲತ್ರ!
ಹಿರಿಯಣ್ಣಯ್ಯ: (Reads the letter and as he is reading. his eye-brows start up
and eye-balls start out... in slentorian tones) ಏನನ್ಯಾಯ ಇದು Mr... ಅಲ್ಲಾ ಕಪ್ಪಣ್ಣ...
ಅಲ್ಲಾ ಕಪ್ಪೂ, Look at this I say, ನನ್ಮಗ... ನನ್ಹೊಟ್ಟೇಲ್ಹುಟ್ದೋನು ... ನನಗ ತಿರ್ಗು ತಿನ್ನಿಸ್ತಾನೆ
ನನ್ಮಂತ್ರಾನ.... read it. I say.
(throwing letter across to Kappanna)...
It is...
ಕಪ್ಪಣ್ಣ: Stupendous... ಇರ್ಲಿ.
(ಓದುತ್ತಾ)
-----------------------------------------
My dear father,
You forget in these hard-up days our rich family even cannot chuck away
patemal property on dreams like your thinking of titles and presidentships. This
is an age ruled by poetry people and Nobel prize men like Galsworthy. Bernard
Shah and Tagore. Therefore, any money in the family must be spent to bring to
the front grandfather- beloved my namesake Rao Saheb's name in the shape of
Nobel prize because of my poetry... Eight thousand pounds into fifteen equals say...
a lakh of Rs. money prize solid cash down plus also 'Sir' title bigger than
grandfather's Rao Saheb even which you will never forget. What I mean is, because
my poetry must go to the big-wigs in England to get the Nobel prize, it must be
type-written on one side of the paper. Therefore, a type-writer is necessary for the
family future, whom I have already employed. Take away your advertisement which I saw in the Hindu paper.
Your Son,
Ramu P.S.P.T.O.
ಹಿರಿಯಣ್ಣಯ್ಯ: ಅದೇನದು P.S.P.T.O. ನಾನೋದ್ಲಿಲ್ಲ!?
ಕಪ್ಪಣ್ಣ: (Turning overleaf)
P.S. ಆಂದ್ರ ಪೂರ್ತಿ ಶೇಷ. Please See, P.T.O. equales ಪೇಜು ತಿರಿವಿ ಓದು.
ಅತ್ಕಡೇನೂ ಬರೆದಿದ್ದೇನೆ... This letter bearing type-writer already employed will arrive
there just now with this letter whose convenience you must arrange properly. That
is all that you have to do in this matter. I will be coming by evening train and
explain everything to beloved Ajji for final arrangements.
Again your
Son,
Ramu
ಹಿರಿಯಣ್ಣಯ್ಯ: ಹೀಗ್ಹುಟ್ಟಿದ್ರೆ ಮಕ್ಳು... ಇನ್ಹೇಗೆ? ಈಗ ನನಿಗೇ ಗೊತ್ತಿಲ್ಲ ನನ್ನ ಮುಂದಿನ...
ಕಪ್ಪಣ್ಣ: Proceedings ಅಲ್ವೇ...?
ಹಿರಿಯಣ್ಣಯ್ಯ: ಹೌದು... ಈಗ್ನೋಡೂ ಆ Type writeroo ಗೇಟ್ ಹತ್ರ ಕಾದಿದ್ದಾನೆ!
ನನ್ನ after all my sonoo... but...
ಕಪ್ಪಣ್ಣ: Before all his beloved Ajji's grandson... ಏನೂ ಇಲ್ಲ ಸಾರ್ . Late
lamented ನಿಮ್ಮ ತಂದೆ Rao Saheb's ಹೆಸರು ಇಟ್ಟಿದ್ದು ತಲೇನ ಬಿರ್ರ್ ಅಂತ ತಿರುಗಿಸ್ತಿದೆ!...
------------------------------------
coolಆಗಾನ ಇದ್ದಿದ್ರೆ... ನಾವಿಬ್ಬರೂ... ಹತೋಟಿಗೆ ತಂಡ್ಕೊಂಡು ಕೈಯಿಂದ ತಿನ್ನಿಸ್ಬಹುದು ಸಾರ್...
ಗಿಳಿಮರೀಗೆ ಗೂಡಂಬಿ ತಿನ್ನಿಸ್ಸಾ ಗೆ! but coolness ಬೇಕೀಗ? therefore... position...
problem... Predicament... hopeless... ನಿಮಗಲ್ಲಾ-ನನಗೆ ... ಆ type Writeroo already
engaged ಕಾದಿರೋವಾಗ... for me perilous... ಇಂಗ್ಲೀಷಿನಲ್ಲಿ ಬರೋಹಾಗೆ... ಅವ್ರಜ್ಜಿ ಕಣ್ಗೆ
ಚಿಕ್ರಾಯ್ತು ಸೇಬ್ಹಣ್ಣು ... the apple of her eyesoo... ನೀವೇನ್ಮನಸ್ಸಿಗೆ ತಂದೊಂಬೇಡೀ
ಸಾರ್...after all Six thousand pounds ಏನು... guineas ಏನು? Pound equals twenty
shillings. but guineas equals twenty one shillings: but money ಏನು ಬೇಕಾದಷ್ಟು
ಬಿದ್ಬಿಟ್ಟಿದೆ ಮನೇಲಿ! ಅದಲ್ಲಾ pointoo, Nobel prizee ನೂ ಅಲ್ಲ! 'Sir' titleoo ಮುಖ್ಯ
familyಗೆ!... ಯಾರಿಗೆ ಬಂದ್ರೆ ಏನು?... my master that was for 12 hours and is no
moreಗಾಗ್ಲಿ... or his sonಗಾಗ್ಲೀ. ಮುಖ್ಯ ದೇಹಾತೀತರಾದ Late lamented father
ಸಂಪಾದಿಸ್ಥ... Rao Saheb titleನ ನೀವೂನೂವೆ as befits ಒಬ್ಬ Worthy Son again
ಸಂಪಾದ್ಸೋ quite certainlyನ ಬಿಟ್ಬಿಟ್ಟು his Ajji's ಮುದ್ದು ಮೊಮ್ಮಗ ಬಳೇಪೇಟೆ type-
writer ಬೆಂಬಲ್ದಲ್ಲಿ. 'Sir' title ಬಿಸಿಲ್ಗುದುರೆ ಸವಾರಿ ಬಯಸ್ತಿರೋದು ...
(laughing sardonically)
ಇಂಗ್ಲೀಷ್ proverb ಜ್ಞಾಪಕ ಬರುತ್ತ ಸಾರ್ : “A stone in a good hand is worth
two birds in a bush'...ಅಂದ್ದಾಗೆ ಕಲ್ಲುಗುಂಡ್ಹಾಗೆ ಕೈಲಿರೋ Rao Saheb ಎಲ್ಲಿ... Nobel prize,
Sir title... ಹಕ್ಕಿಗಳೆಲ್ಲಿ?
(loudly to himself)
ಆದರೆ ನನಗ್ಯಾಕೆ ಈ ದೊಡ್ಡ ಮನೆತನದ ಗಲಾಟೆಗ್ಳು ?
(loudly)
ನಿಮ್ಮನ್ನಂಬ್ಕೊಂಡು ಬಂದೆ... ನನ್ನನ್ನೇ ನಂಬ್ಕೊಂಡು ಹೋಗ್ತೇನೆ.
(ಬೋರನಿಗೆ)
ಬೋರಣ್ಣಾ, ನನ್ನ ಮೇಲಿರೋ ಹಾಸ್ಗೇನೂ, ಚೀಲಾನೂ, ಈಗ್ಬಂದ ಜಟ್ಕಾಲೆ ಸೇರಿಸ್ಬಿಡು!...
(ಬೋರನು exit R)
Good bye Sir, Motherಗೆ ಹೇಳ್ಕೊಳ್ಳೊಕೆ, too much over-come... (Hanging his
head down... walking towards L)
God bless you Sir, good-bye... ಏನೋ ! ರುಣ ಇತ್ತು... ತೀರ್ತು, ಭಗವದ್ಗೀತೇಲಿ
ಬರೂಹಾಗೆ ಯಥಾ ಯಥಾ... ತಥಾ ತಥಾ...
(ಮುಖದಲ್ಲಿ ವಿಷಾದವನ್ನು ಸೂಚಿಸುತ್ತಿರುವ ಹಿರಿಯಣ್ಣಯ್ಯನ ಭುಜವನ್ನು ಸವರುತ್ತಾ)
... ಮನಸ್ಸಿಗೆ ತಂದ್ಕೋಬೇಡಿ ಸಾರ್... ಪ್ರಕೃತಿ ಎಂಬೋದು ಸಾಗರ! ಮನುಷ್ಯ... ತಮ್ಮ
ಹಾಗೆ Partician... Roman History ಮೊದ್ಲೇ ಹೇಳಿದ್ದೇನೆ. ತಮ್ಮನ್ನ ಪರಮಾತ್ಮ ಪ್ರಪಂಚ
-----------------------------------------------------
profitಗೇಂತಾ ಹುಟ್ಸಿದ್ಮಮೇಲೆ ತಮ್ಮ ಸಂಸಾರನೌಕಕ್ಕೆ... Captain... Commander.. ಯಾಕ್ಸಾರ್
Admiral Jelico himselfಆಗಿರೋ ನೀವು ನಿಮ್ಹೊಟ್ಟೇಲ್ಹುಟ್ಟಿದ ಪಸುಳೆ ನಿಮಗೆ ಕರಗತವಾಗಿರೋ
Rao Saheb titleನ, 'Sir' titleನ, ಆತ-ತಾನೇ ನಿಮಗ್ಮುಂಚೆ, may perhaps
ಸಂಪಾದ್ಸೋ ...impertinency ... ಇದೆಲ್ಲಾ ಯಾಕೆ ಸಾರ್, ಇವೆಲ್ಲಾ ಬರೀ languageoo!
languageoo! languagcoo! Hamlet's Drama in Shakespeare's works, Birth and
Death, Date and Place ಸಮೇತ ಮೊದಲೇ ಹೇಳಿದ್ದೇನೆ.
(Hold-all ಅನ್ನೂ bag ಅನ್ನೂ ತಂದ ಬೋರನಿಗ ಬಾಗಿಲು ತೆಗದು)
ಹೊರಡಣ್ಣಾ... Dowager Mrs. Rao Saheh ತಮ್ಮ ತಾಯೀಗೆ ನನ್ನ respectsನ....
(hanging his head down. closing his face with his right palm is exiting
sobbing heavily)
....but Sir ನನ್ನ ಕಿವೀಗನೋ Sir Hinyannayya Sir Rama Rao ಗಿಂತ sonorous
ಆಗಿಧೆ!
ಹಿರಿಯಣ್ಣಯ್ಯ: (Catching hold of Kappanna frenziedly, in hysterical tone)
No, no. Kappao... dont desert me. ನಡ್ನೀರ್ನಲ್ಲಿ ಈಗ ಬಿಡ್ಬೇಡ... ದಮ್ಮಯ್ಯಾ ...
(ಬೋರನಿಗೆ)
ತಿರಗ್ತಕ್ಕೊಂಡ್ಹೋಗಿಡೊ ಕಪ್ಪಣ್ಣರ ಕೋಣೇಲಿ...
(Bora exits with luggage R)... (
Collapsing into chair and burying face in hands)
I don't know what to do..
(Sobbing)
ನನಗೊಂದೂ ತೋಚೋಲ್ಲ.
ಕಪ್ಪಣ್ಣ: ಇದನ್ಹುಚ್ಚು ಸಾರ್, ಹೀಗೆ ನೀವು ಇಂಥಾ simple matterಗ give way
ಮಾಡ್ಕೊಂಡ್ಬಿಟ್ರೆ, ಮುಂದೆ Delhiವರೆಗೂ ನೀವು reach ಮಾಡೋ ದಾರಿ ಎಲ್ಲಿ ಸಾರ್ ? ಶ್ರೀ
ಕೃಷ್ಣಪರಮಾತ್ಮ ಭಗವದ್ಗೀತೆಯ 'ಅರ್ಜುನ ನಿಷಾದಯೋಗೋ ನಾಮ ಪ್ರಥಮೋಧ್ಯಾಯಃ'
ಅದರಲ್ಲಿ ಅರ್ಜುನನಿಗೆ ಅಂದ್ಹಾಗೆ... ಪ್ರಪಂಚ ಒಂದು ಕುರುಕ್ಷೇತ್ರ ಸಾರ್... ನೀವು ಒಬ್ಬ 'ನರ'...
ಈಗ್ಲೇ! ನಿಮ್ಮ ನರ ಕುಗ್ಗೋದು? Ditto authority ಹೇಳ್ದ್ಹಾಗೆ `ತ್ಯಕ್ತ್ವೋತಿಷ್ಠಃ ಪರಂತಪ' ಎದ್ದೇಳು
ಪಾರ್ಥ, ಎದೆಗುಂದಬೇಡ... ನಮ್ಮ grandfather ಕಾಲ್ದಲ್ಲಿ late lamented ಸ್ವಾಮಿಗಳಿಗಿಂತ
ಮುಂಚೇನೇ later lamented ಸ್ವಾಮಿಗಳ ನರಸಿಂಹ ಭಾರತಿಗಳ e...X...eX...ಏನೂ translationoo!
Now Coming to your position... ಧೈರ್ಯಾನೂ ಸ್ಥೈರ್ಯಾನೂ ತಂದ್ಕೊಳ್ಳಿ ಸಾರ್, ಮನಸ್ಸಿಗೆ...
ನಿಮ್ಮ positionon perilous! precarious... predicamental... after... all ಏನೂ ... Small
-----------------------
question of big father versus small son... problemನ sensible ಆಗಿ ನೀವ್ನೀವೆ solve
ಮಾಡ್ಬೇಕು..
ಹಿರಿಯಣ್ಣಯ್ಯ: (Who all this while has gradually passed from helpless tearful
to incited almost belicose condition)
Solve ಏನು?... solution ಇದ್ದೇ ಇಧೆ...
(ಸಾಮಾನುಗಳನ್ನು ಮಹಡಿಯಮೇಳ ಸ್ವಸ್ಥಾನ ಇಟ್ಟು ಪುನಃ ಬಂದ ಬೋರನಿಗೆ)
ಆತನ್ನ ಬಂದ ಜಟ್ಯಾನೇ ಹತ್ತಿ ಅಲ್ಲಿ ಬಂದ ದಾರಿನೇ ಹಿಡೀಂತ ಹೇಳು!
ಕಪ್ಪಣ್ಣ: (lo Bora approaching L)
ಸ್ವಲ್ಪ ತಡೀ ಬೋರಾ !... ಕ್ಷಮ್ಸಿ ಸಾರ್, an insult to that type-writer man is an
insult to my master... therefore.. to... ನಿಮ್ಮ selfಗೇ! ಆತನ್ಕರ್ದು ಗಂಭೀರವಾಗಿ ತಿರುಗಿ
ಕಳ್ಸೋದು ಲಾಯಕ್ಕು! Noblesse and oblige= noble gentlemanoo oblige ಮಾಡೋಕೂ...
quotation... position.. partician means polite ಆಗಿರ್ಬೇಕು... after all Sir, ಆತ್ನೂ
ಬಂದಿದಾನೆ... ತನ್ಹೊಟ್ಟೆ ಪಾಡ್ಗೆ... he also all his expense perhaps, ನನ್ಹಾಗೆ... ನೀವೇ...
(to Bora)
ಆತನ್ನ ಕರ್ಕೊಂಬಾ, ಬೋರಣ್ಣಾ... ರಾಯರ ಭೇಟೀಗೆ...
(Receds to back wall and stands in respectful attitude as Bora exits)
ಹಿರಿಯಣ್ಣಯ್ಯ: Quite-right ಕಪ್ಪೂ! ಬಂದಿರೋ type-writerಗೆ return fareoo ಕೊಟ್ಟು
night trainನಲ್ಲಿ ಮರ್ಯಾದೆಯಾಗಿ ಅವನ್ನ ಕಳಿಸ್ಬಿಡೋದು ... best thingoo.
ಕಪ್ಪಣ್ಣ: ಅದು style 'Sir'ಗಳಿಗೆ... ಮರ್ಯಾದೆ ಕೊಟ್ಟು ಮರ್ಯಾದೆ ತಗೋಳ್ಳೋದೆ ಮರ್ಮ
ಸಾರ್ ಮಹನೀಯರ್ದು, ಬಂದಾಂತ ಕಾಣುತ್ತೆ ಆತ... mild ಆಗಿ get rid ಮಾಡ್ಬಿಡಿ.. return
fareo I can advance... ನಾಳೆ ಅಮ್ಮಾವ್ರ ಹತ್ರ ನನ್ನ amountನ adjust ಮಾಡ್ಕೋತೇನೆ .
[Sounds rupees in his pockel and places two rupees on the table]
... must be third class... still ಬಂದ troubleಗೆ intermediate, Plus, tiffin,
Plus also Porter, and cooly... ಎಲ್ಲಾ cover ಆಗುತ್ತೆ.
ಹಿರಿಯಣ್ಣಯ್ಯ: (ಬೋರನ್ನ ನೋಡಿ)
ಬಾನ್ನೋ ಆತನ್ನ ಒಳಕ್ಕಳಿಸ್ಬಿಟ್ಟು, ತಿರ್ಗೂ ಆತನ್ನ Stationಗೆ ಬಿಡೋಕೆ ಮಾತಾಡಿ ನಿಲ್ಸು
ಜಟ್ಕಾದವನ್ನ.
(Exit Bora incmorising in astonishment... 'ಆತ'!!! )
ಸರೋಜ: (Sails into the room and looking askance at Kappanna and
Hiriyannayya). Which of you (wo is the late lamented Rao Saheb Rama Rao's
------------------------------------------------
son, Mr. Hiriyannayya? ನಾನು understand ಮಾಡಿದ್ದು gentlemen familyಲಿ
employmentooತ, At least 14 minutes by my Watch gatewayಲಿ ಬಿಸಿಲ್ನಲ್ಲಿ ನನ್ನ
ನಿಲ್ಸಿ...Wait ಮಾಡ್ಸಿ...ಬರೀ.... at least politeness...
(broods about with eyes flashing indignation)
ಕಪ್ಪಣ್ಣ: (in loud whisper to Hiriyannayya)
Quite right Sir, politeness ತೋರಿಸ್ಟೇಕು... ಕೂತ್ಕೋನ್ನಿ ಸಾರ್... ಯಾರೋ!
ಎನೋ?!
ಹಿರಿಯಣ್ಣಯ್ಯ: ಕ್ಷಮಿಸಿ. Miss..Mrs
ಕಪ್ಪಣ್ಣ: (Whispering) ಮದ್ವೆ ಗೊತ್ತಿಲ್ಲದವರೆಗೂ... 'ಶ್ರೀಮತಿ' bestoo.
ಹಿರಿಯಣ್ಣಯ್ಯ: (Aloud) ಕ್ಷಮ್ಸಿ... ಶ್ರೀಮತಿ...
ಸರೋಜ: Thank you for noticing me.. Saroja is my name.
ಕಪ್ಪಣ್ಣ: (Creeping along the wall to Hiriyannayya)
Sit ಮಾಡ್ಸಿ Sir ಮೊದಲೂ... politeness... policy... oblige, nobles... ಮರೀಬೇಡಿ.
ಹಿರಿಯಣ್ಣಯ್ಯ: Quite So, Kappoo...
(aloud)
Will you please be seated, Sreemathi Saroja...
ಕಪ್ಪಣ್ಣ: (prompting) ದೇವೀನೂ ಸಿಕ್ಸೀ ಕೊನೇಗೆ ... up-to-date fashionoo....
ಹಿರಿಯಣ್ಣಯ್ಯ: Yes ... Yes... um.um...um... Devi... please be seated.
ಸರೋಜ: Thank you... at least ಈ village ಕೊಂಪೇಲೂ civilised people
ಇರೋದ್ನೋಡಿ... great satisfaction ನನಗೆ... a sort of waking up from a night-mareoo
ಕಪ್ಪಣ್ಣ: (to Hiriyannayya)
'Night-Mayor'!! Must be England returned... Godಏ ಗತಿ....
(Pulling Hiriyannayya by the sleeve)... (Pulls out book and fountain-pen.
whispering to himself ‘NIGHT MAYOR ... aloud)
She must be terrible in English. Sir.....r ನಿಮ್ಮಗ employ ಮಾಡಿ ಕಾದ್ಕೊಂಡು
ಬಿದ್ದಿರೋ typewriter ಎಲ್ಲಿ... ನಾನ್ತಾನೇ ಎಲ್ಲಿ.... in our Englishes before this Indian ವೇಷಾ
ಹಾಕ್ಕೊಂಡಿರೂ ಇಂಗ್ಲಿಷ್ ಸರಸ್ವತಿ...
ಸರೋಜ: (To Bora who has entered)
----------------------------------------------------------
ಇಲ್ಲಿ ಬಾ. ಈ ರೂಪಾಯ್ ಆ ಗಾಡಿಯೋನ್ ಕೊಟ್ಟು, (welve annas, Englishಗೊತ್ತಿಲ್ಲ
ನಿನ್ಗೆ... Oh! my poor motherland with 92% illiterate brethren and sisters! ಮುಕ್ಕಾಲು
ರೂಪಾಯಿ ಮಾತಾಡಿದ್ದು... ಹದ್ಮೂರು ಸಾಮಾನುಗ್ಳು... parasol... ಅಂದ್ರೆ ಕೊಡೆ, tiffin-carrier
ಸಹಿತ, ಹಾರ್ ಮೋನಿಯಮ್ಮು, ವೀಣೆ, ಪಿಟೀಲು, ಮುರಿದ್ಹಾಗೆ ಭದ್ರ, ಇವನ್ನೆಲ್ಲಾ ಅವನೆದುರೇ ಎಣ್ಸಿ, ಒಳಗ್ತಂದಿಟ್ಟು...ಕಾಲ್ರೂಪಾಯಿ ಬಾಕಿನ ನೀನೇ ಇಟ್ಕೋ ... tipಉ... ಇನಾಮು.
ಬೋರಣ್ಣ: (Receiving the rupec from her bejewelled hands, bowing to the
ground)
ಅಪ್ಣೆ! ನಮ್ಮವ್ವ!
(Exits)
ಕಪ್ಪಣ್ಣ: (In whisper to Hiriyannayya)
ಮುಂದಕ್ಮಾತಾಡಿ ಸಾರ್... ಹೆಂಗ್ಸಿಗೆ ಬೆದರೋದೇ... ನಿಮ್ಮ ನೆಂಟ್ರೇ...? perhaps ನಿಮ್ಮ
patrician ಕುಟುಂಬದ ಯಾವದಾದ್ರೂ up-to-date branchಏ... ನೋಡಿದ್ರೆ, England returned
ಹಾಗಿದೆ...'Night Mayor' ನನ್ಗನೆ new word-plus Harmonium... Can understand foreign
instrument! but... ವೀಣೆ and ಪಿಟೀಲು... English educated, also ನಂಮ್ಸಂಗೀತ! ಬೆಚ್ಚಿ
ಬೀಳ್ಬೇಡಿ... ಮುಂದ್ಹೋಗ್ಮಾತಾಡಿ ಸಾರ್ ! What is this pusillanimousness... I wonder,
ಆಕೆಗೊತ್ತಿದೆಯೇ ಈ Wordoo..
(to himself)
(Night Mayor'ಉ Night Mayor ಏನು... Day Mayor ಏನು... must refer to
Nattal... ಎಷ್ಟು ತಿಳಿದಿದ್ರೇನು? inust be live to learn... Old proverb...ಮುಂದ್ಹೋಗ್ಮಾತಾಡೀ
ಸಾರ್ !
ಹಿರಿಯಣ್ಣಯ್ಯ: Miss... Madam... ಅಲ್ಲಾ ಶ್ರೀಮತಿ ದೇವಿ...........I..I donot....
ಸರೋಜ: ನಿಮ್ಮ embarassment ನನಗರ್ ಥ್ವಾಯ್ತು I shall explain in a
moment.
(ಸಾಮಾನುಗಳನ್ನೆಲ್ಲಾ ತಂದು ಒಂದು ಭುವನೇಶ್ವರಿ ಹಾಗೆ ಪೇರಿಸಿದ ಬೋರನಿಗೆ)
God boy.... ಅವನಿಗೆ ಕೊಟ್ಟು ಕಳುಹಿಸಿದ್ಯಾ?
ಬೋರಣ್ಣ: ಊಂ! ನಿಂಪಾದ... ಔವ್ರವ್ವಾ... ಮಾತಾಯಿ.
(bows to the ground)
ಸರೋಜ: ಸರಿ ಹೋಗು.
(exit Bora)... (turning to Hiriyannayya)
-------------------------------------------
ಹಾಗಾದ್ರೆ ನೀವೇ Mr...?
(ಜೇಬಿನಿಂದ silver mounted leather card-caseನಿಂದtaking out a card and
giving it to Hiriyannayya)
Hiri Annayya the revered father of my employer Jodidar Mr. Rama Rao.ಅಲ್ವೆ
ನೀವು? Though I cannot see any resemblance... ನಿಮ್ಮ face long and pale! though
not quite ಕೆಂಪು. My employer ಹಾಗೆ ಕಪ್ಪೂಂತ ತಿಳ್ಕೊಂಡಿದ್ದೆ. ನನ್ನಾರ್ಡು... ನಿಮ್ಮ Son
the poet ಅವರ poetryನ print and publisher ಆಗೋಗ್ಮಂಚೆ Western Worldಗೆ type-written
shapeನಲ್ಲಿ submit ಮಾಡೋಕಂತ ನನ್ನ employ ಮಾಡಿದ್ದಾರೆ... Stenographer ಆಗಿ... | I have
come to report myself. In the meanwhile. you. his father. Local Municipality
Election Speeches ವಿಷಯದಲ್ಲಿ ನನಿಗೆ... perhaps 1 should say ನನ್ನ type-Writerಗ ಸ್ವಲ್ಪ
ಕೆಲ್ಸ include ಆದ್ರೂ ...that also is included in my contract... of hundred rupees a month
with living found as becomes my as well as your position. ನನಗೆ Shorthandoo
ಗೊತ್ತು... speed test pass ಮಾಡಿದ್ದೇನೆ... therefore hesitate ಮಾಡ್ದೇನೂ... after all ನೀವು
gentlemen ಆಗಿಯೂ... ನಾನು lady ಆಗಿದ್ರೂನೂವೆ, ನಾನು a servant on monthly
Subsistence.
(Kappanna whispering to himself aloud... 'existence' ಕೇಳಿದ್ದೇನೆ .... 'resistance'
have also heard, but subsistence'...! ಅನ್ಯಾಯ... terrible “wordoo ಸಾರ್! ತ್ಸು! ತ್ಸು!!
ತ್ಸು!!!"... pulling out note book & noting it down: 'S.U.B.C. or S... dictionaryಲಿ
ನೋಡ್ಕೊಬಹುದು ನಾಳೆ... 1 S or C as per ಮೊದಲೇ ಹೇಳಿದ್ದಾಗೆ... T E N S or C as
per aforesaid!!!)
ಹಿರಿಯಣ್ಣಯ್ಯ: (ಆತ್ಮಗತಂ to Kappanna)
ಕಪ್ಪೂ... This...she... ಇವ್ಳೇ ... I mean ಈ ನೀನ್ಹೇಳ್ದ ದೇವಿ... alsoಆ ಹುಚ್ಚು ಹುಡುಗ
ಬರೆದಿರೋ type writerಏ! ಈಗೇನ್ಮಾಡೋದು ... please advise me... ಬುದ್ದಿ ಹೇಳು ಕಪ್ಪೂ!
ಕಪ್ಪಣ್ಣ: ಸಾರ್!... ನಾನು ಹೇಳೋಕಾದ್ದು ನಿಮಗಲ್ಲ... ನನ್ನಾಲ್ಗೆ... ಏನ್ಮಾರ್ after all
a ಹೆಂಗ್ಸು ... ಹೆಣ್ಣು ಪ್ರಾಣಿ... 'Night Mayor'... 'Subscis'.... dairy ಲಿ ಬರೂಂಡಿಧೇನೆ... but
still sir... ನನ್ನಿಂದಾಗಬಹುದಾದ ಕೆಲ್ಲ... So far as English... type writing... Speech
writing... ನಮ್ಮಪ್ನ ಹಾಗೆ ಈ ಹೆಂಗ್ಸು better than myself can manage ಅಂಬೋದ್ನ ನಾಚ್ಗೆ
ಇಲ್ದೆ honest ಆಗಿ ಒಪ್ಯೂಂಡೂನೂವೆ... ಗಂಡ್ಸಿನ ಕಟ್ಟ ಇಧೆ ಸಾರ್ ಮುಂದಕ್ಕೆ... first Bangalore
Cannt. Resident. British Resident ಹತ್ತರ್ದಿಂದ recommendation letter to Governor of
Madras. ಅಲ್ಲಿಂದ Private Secretary ಇರ್ ತಾನೆ to the Viceroy... Majorಓ... ಕರ್ ನಲ್ಲೋ....
Simlaಲೋ, ಡೆಲ್ಲಿಲೋ ... accorüing to season. From him... Governor Generalಗೆ!...
but you will see ಸಾರ್ , ನೂರೂಪಾಯಿ ಆಕೆ ಸಂಬ್ಳ ... meagre ಎಪ್ಪತ್ತೈದು ನಂದು... ಈ...
-------------------------------------------------------------
ಸರೋಜ (imperiously) ನೋಡೀ ನೀವು Mr, Hirannayya ತಾನೇ...?
ಹಿರಿಯಣ್ಣಯ್ಯ: ಹೌದು... ಹೌದಮ್ಮಾ... ಅಲ್ಲ ಹೌದು ಮಹಾತಾಯಿ... I mean ...
Miss...Madam... I mean Sreemathi Devee..
ಸರೋಜ: But then, impolite ಆಗಿ ನಿಮ್ಮಿವೀಲಿ whisper ಮಾಡ್ತಿರೋ ಈ cannot
be a gentleman-ಯಾರೀತ? 'Whispering in company bad manners', you know...
(to Kappanna)
Be honest. ಹೇಳೋದೇನಾದ್ರೂ ಇದ್ರ ಘಟ್ಟಿಯಾಗಿ ಹೇಳಿ, Secrets ಏನಾದ್ರೂ ಇದ್ರೆ
ಹೊರಾಗ್ಹೋಗ್ಮಾತಾಡ್ಕೊಳ್ಳಿ. This is....ಹ್ಯಾಗ್ಹೇಳ್ಳಿ ... preposterous.
ಕಪ್ಪಣ್ಣ: (aghast, writing in his note book... in undertone)
P.R.E. yes pree... P.O.S. or C... ಟರಸ್ T.E.R.U.S. or C.S. or ESS...
dictionaryಲಿ ಗೊತ್ತಾಗುತ್ತೆ ನಾಳೆ.... 'Whispering in company bad manners'.... ಎಲ್ಲಿಂದಲೋ
ಹಾರಿಸಿಟ್ಟಿದ್ದಾಳ good quotationoo...
(to Hiriyannayya)
Terrible sentenceoo ಸಾರ್ ... but then ತಿಂಗ್ಳಿಗೆ ನೂರ್ ರೂಪಾಯಿ! ... speed test pass
ಮಾಡಿದ್ದಾಳೆ... ಮುಂದ್ಹೋಗ್ಮಾತಾಡಿ ಸಾರ್... 'ಗುಣಕ್ಮಕ್ಕತ್ತರವಿಲ್ಲಾಂ'ತಾರಲ್ಲ... old Kannada
proverboo... ಹಾಗೇಯೇ even my big English ಕೂಡಾ ... ಸಾರ್ ... can appreciate ಆಕೆ
bigger Englishಉ... ಮಸ್ಲ ಇಕೇನೇ Local hallನಲ್ಲಿ ಒಂದು municipality speechಉ
on your berhalf ಕೊಟ್ಟು ... ಗೋಣಿಚೀಲಗ್ಳು ತುಂಬ್ಸೀ ತುಂಬ್ಸೀ ಸಾಗಿಸ್ಕೊಂಡು
ಬರಬಹುದಲ್ವೇ -voteಗಳ್ನ! ಹೇಳ್ತೇನೆ voteಗಳ್ನ! After all a ಹೆಂಗ್ಸು! but then hundred rupees
a month plus food and suffering of her ಸಂಗೀತ! ಏನ್ಸಾರ್ Harmonium ಅಲ್ದೆ ವೀಣೆ
plus ಪಿಟೀಲು plus also perhaps ಕಂಠ ಹೇಗಿದ್ಯೋ ಕಾಣೆ, Singing even... ಇನ್ನು ಇದಲ್ದೆ
Plus, preposterous, Night Mayor... new wordsoo ಸಾರ್... ನನಗ್ ನನಗೇ ...
ನನಗೂಂದೂ ತೋಚಲ್ಲಾ ಸಾರ್.
(dairyಯನ್ನು ತೆಗೆದು)
'Night Mayor!''susceptibility!!''preposterous!!!''whispering...!!!!!
(ಇತ್ಯಾದಿಗಳನ್ನು ಜಪಿಸುತ್ತಿರುವನು)
ಹಿರಿಯಣ್ಣಯ್ಯ: Motherನ ಕರೀಲೆ? Advice ಮಾಡೂ ಕಪ್ಪೂ.
ಕಪ್ಪಣ್ಣ: Quite right Sir, after all ladyಗೆ ಲೇಡಿ, ಕೂಗಿ.. at first ಸ್ವಲ್ಪ... ಈಕೆ...
ಹೇಳ್ದ್ಹಾಗೆ thank God ನನಗೂ ಗೊತ್ತಿದೆ ಆ wordoo! 'embarasingoo.' Verb formoo,
but must go through it. ಬೆದರ್ ದೆ ಅಮ್ಮಾವರ್ ನ ಕೂಗಿ... ಹ್ಯಾಗ್ಮಾಡ್ತೀರೋ ನಾನೆಂದೂ
ಹೇಳ್ಳಾರೆ... but Sir... think ಮಾಡಿ... it is... ನಾನೇ ಒಪ್ಪೋತನ, better English... better
-----------------------------------------------------------------------
type writing than myself... but 100 Rupees! ನಾನೋ good English...ತಕ್ಮಟ್ಟಿಗೆ type
writing.. but ಮರೀಬೇಡಿ... ಗಂಡ್ಸು and only 75 rupees including house-hold work,
accounts & estate management plus also ಮುಂದಿನ ನಿಮ್ಮ knight-hood ಕ್ರಮ and no
sangeetha torture to the family. But ಆದ್ರೂ ಯೋಚ್ಸಿ ಸಾರ್ ...ಈ up-to-date timeನಲ್ಲಿ
... ಒಬ್ಹೆಗ್ಸು... election campaignನಲ್ಲಿ... on your behalf... ಅವಳ 'Night Mayor', 'susceptible'. 'preposicrous'... ಈ terrible words use ಮಾಡ್ಕೊಂಡು ... Town-hall ನಲ್ಲಿ
on your behalf speech ಮಾಡಿದ್ರೆ...
(ಥಟ್ಟನೆ ತಲೆಯನ್ನು ಜೋಲುಬಿಟ್ಟು)
.... ನನಗೊಂದೂ ತೋಚೋಲ್ಲಾ ಸಾರ್ !... ನೀವೂ, ಮಾತೋಶ್ರೀ ನಿಮ್ಮ motheroo
ಆ extra-ordinary lady ವಸ್ತೂನೂ ನಿಮ್ಮಿಮ್ಮಲ್ಲೇ ತೀರಾನಿಸ್ಕೊಬೇಕು ... ನಾನು 'Meagre
seventyfive rupees” ಅಂದ್ದಾಗೆ... a meagre hundred rupees” ಎಲ್ಲಿ?... ಒಬ್ಬ ಹೆಂಗಸು
ನಮ್ಮಿಬ್ಬರಮುಂದೆ 'Night Mayor', 'susceptibility swas! preposterous, ಅಲ್ದೆ s
Harmonium.ವೀಣೆ...' ಪಿಟೀಲು... ಆಶ್ಚರ್ಯ... ದೇವೀಂದ್ರಲ್ಲಾ.. ಯಾವಕಲಿಯುಗ್ದ ದೇವೀನೋ...
ಗುಡೀ ಬಿಟ್ಟು ಈ ಕೋಂಪೇಗೆ...! ಆಶ್ಚರ್ಯ ಸಾರ್ !
(ಎಂದು ಗೊಣಗುಟ್ಟುತ್ತಾ exit L)
ಸರೋಜ: Recover ಮಾಡೊಳ್ಳಿ, Mr. Jodidar Rama Rao's father!
opening chatelaine and extracting card)
Mr. Hiri Annayya, I am glad that that person...your friend perhaps but with
manners that want mending... ಹೊರಟ್ಗೊದ್ದು ! ನೋಡೀ ನಿಮ್ಮ Sonoo will be here
before tea time. ಆತ of course... ನನ್ನಗೆ ಈ Jobನೂ guarantee by written contract before
a lawyer ಮಾಡಿರೋದಕ್ಕೆ, his grand mother Rani Sahibಗೆ explain ಮಾಡ್ಕೊತಾರೆ ಅವ್ರು.
Therefore you have nothing to do with the matter. ನೀವು worry ಮಾಡ್ಕೊ ಬೇಕಾದ್ದು
ಏನೂ ಇಲ್ಲ. Of course. ಅವ್ರು ಹೇಳಿದ್ರು , before engaging me, ಅವರ poetry ವಿಷ್ಯದಲ್ಲಲ್ದೆ
his father, ನಿಮ್ಮ municipal activitiesನಲ್ಲಿ ಇರೋ interestಗೆ helpful ಆಗಿ... speeches
ನಾನೇ compose ಮಾಡಿ, because, he said ನೀವು weak in English, ನಿಮಗೆ ನನ್ನ
speechesನ C೧ach ಮಾಡೋದೂ ಅಲ್ಲೇ election campaignನಲ್ಲಿ local meetingsನಲ್ಲಿ
ನಾನೇ Speech ಮಾಡೋ Contingency ಸಂಭವಗಳ undertake ಮಾಡ್ಕೊಳ್ಳಬೇಕಾಗುತ್ತಂತ-ಮೊದ್ಲೇ
ಹೇಳಿಧಾರೆ, ನಿಮ್ಮ son my employer. In the meanwhile... ನನ್ರೂಮೆಲ್ಲಿ?
ಹಿರಿಯಣ್ಣಯ್ಯ: ಮಹಡೀಲಿ!... shall arrange to.
ಸರೋಜ: (Hiriyannayya ತೋರಿಸ್ದ R ಅನ್ನು ಅನುಸರಿಸಿ ನಿಷ್ಟ್ರಮಿಸುತ್ತಾ)
Send up my luggage carefully. Thank you verymuch... but ಮರೀಬೇಡಿ ನನ್ನ
musical instrumentsoo... fragileoo...why ವೀಣೆ, Voilinನ ನಾನೇ-
(steps back apace)
-------------------------------------------------------------
ಹಿರಿಯಣ್ಣಯ್ಯ: (In a deep Voice)
ತೊಂದ್ರೆ ತಗೋಬೇಡಿ, ನಿಮ್ಮ musical ಬಾಬ್ತುಗಳಲ್ಲಾ... ಮುರಿದ್ದಾಗ ಸೇರಿಸ್ತೇವೆ.
(exit Saroja sniffing the roof)
(ಘಟ್ಟಿಯಾಗಿ)
ಬೋರಾ!
(ಬಂದ ಬೋರನಿಗೆ)
ಅಮ್ಮಾವ್ರ ಹಿಂದೆ ಹೋಗಿ ದೊಡ್ಡಜಮಾಗ್ರ ಕೋಣೇನ ತೋರ್ಸಿ, ಈ ಸಾಮಾನುಗಲ್ಲಾ
ಮುರಿದ್ದಾಗೆ ಮೇಲೆ ಸಾಗಿಸ್ಬಿಟ್ಟು, ಮಧ್ಯಾಹ್ನ ಕಾಫಿಗೆ ಚಿಕ್ಕರಾಯ್ರೂ ಇನ್ನೊಬ್ರೂ ಬರ್ ತಾರೇಂತ ಅಮ್ಮಾವಿಗೆ ತಿಳ್ಸು,
(exit Bora)
(ಆತ್ಮಗತಂ)
"You have nothing to do in this matter" ಓ! "don'worry yourself!!"
“ಜೋಡಿದಾರ್ ರಾಮರಾವ್ ಓ!!!”... ಹಾಗಾದ್ರೆ ನಾನ್ಯಾರೂ... ಇವನಪ್ಪ!? .... ಹಾಗಾದ್ರೆ
ಈ future Sir Rama Rao ಆಯ್ತು... ನಮ್ಮಮ್ಮ ರಾಣಸಾಹೇಬ್ ಆಯ್ತು. ನಾನು nobodyನೇ
after all!? ನನ್ನ old Sekton Blakesoo, ಗಾಜಿನ ಬೀರೂ Poetry Booksoo ಮಾಡ್ಬಿಟ್ಟು
C/o Post office camp ಮಾಡ್ಕೊಂಡಿರೋ ಇವ್ನು employ ಮಾಡಿದ ಒಬ್ಬ ಹೆಂಗಸು type
Writern 'weak in English'... ನಾನು!... ಅವಳು compose ಮಾಡೋದು speechesoo
ನನಗೆ..! ಒಟ್ಟಲ್ಲಿ I am nobody in this housಂತ ತಿಳ್ಕೊಂಡಿದ್ದಾನ್ಯೆ?... ಈ ನನ್ನ ಹೊಟ್ಟಲಿ
ಹುಟ್ಟಿದ ಕ್ರಿಮಿ? ತೋರಿಸ್ತೇನೆ ನನ್ಕಯ್ಯ... ಭಗವದ್ಗೀತೆ ಕೃಷ್ಣ... ಅಲ್ಲ, later ಶೃಂಗೇರಿ ಸ್ವಾಮಿಗ್ಳು,
ಅಲ್ಲ ಕಪ್ಪೂ ಹೇಳ್ದಾಗೆ... 'ಎದೆಗುಂದಬೇಡ ಪರಂತಪ'!!! must be my motto. ಹೌದೂ...
ಈ ಕ್ರಿಮಿ ಏನೂ ನಾಲ್ಕು ಘಂಟೆ ಬಂದಿಳಿದ್ದಿಡ್ತಾನೆ... Tea Time ಅಂದಳು... ಅವಳು...
but in the meanwhile... 'you have nothing to do in the matter'!! ಅಂದ ಅವಳ್ಗೂ...
ಅವಳ್ಳಾಯಿಂದ ಅನ್ನಿಸಿದ ಅವನ್ನೂ ಒಂದು lesson teach ಮಾಡೇಬಿಡ್ಬೇಕು... to show who
I am. What I am... and why I am!!! but then ಏನ್ಮಾಡೋದು . ನಾನು aloneಉ... father
deadoo, mother and son againstoo... therefore worse than deadoo... ಏನೋ ಒಬ್ಬನೇ
ಒಬ್ಬ honest Servant... ಕಪ್ಪೂ...
(eyes gleaming, stands up stiffening all his muscles and doubling his fists)
God idea. ಈ ಜೋಡಿದಾರ್... ಶ್ರೀಮತಿ... ರಾಣಿಸಾಹಬಾ gangಗೆ ಕಪ್ಪೂ ಬೆದರಿ
ಬಿದ್ರೂನೂವೆ ಅವನಿಗ್ಬೇಕಾದ Courageನ ನಾನು supply ಮಾಡಿ, must make use of him.
ಬಿಡಬಾರು ಅವನ್ನ ಈಗ, at any cost 'Drowning manoo must catch at a straw even', Weak in English ಏ ನಾನು! With this English ತೋರಿಸ್ತೇನೆ, through my Secretary Kappanna.
(ಘಟ್ಟಿಯಾಗಿ)
---------------------------------------------------------
ಕಪ್ಪೂ, Come back!
ಕಪ್ಪಣ್ಣ: (Entering cautiously like a burglar... in a loud whisper.) (All this while Bora is carrying out of and going into R with one at a time of the 13 articles of Saroja... and not taking any notice of Kappanna's or Hiriyannayya's talk or activities.)
ಎಲ್ಲಾರ್ , ಆ ಹೆಂಗಸು ಭೂತ?... beautiful bul a ಭೂತಾ, like ಮಾಯಾ ಶಶಿರೇಖೆ.
ನಮ್ಮ Puranas ಏನು Written for nothing ಅಂತ ತಿಳ್ಕೊಳ್ಬೇಡಿ ಸಾರ್; ತ್ಸು! ತ್ಸು!! ತ್ಸು!!!
Up-to-date examples of out-of-dated ಪುರಾಣ, ಮಾಯಾ ತಾಟಕೀs ಲಂಕಿಣೀ s etc.
ಗ್ಳು ಎಷ್ಟು ಹೊರಗೆ ಬೀಳುತ್ತವೆ ನೋಡಿದ್ರಾ?... mother ಹತ್ರ, reverend mother ಹತ್ರ
ಮಾತಾಡೋಕ್ಹೋಗಿಧಾಳೋ... in the meanwhile... ನಮ್ಮ ಸಾಮಾನುಗ್ಳು ತಾನೇ.. Bangalore Passengeroo 17-55ಗೆ arrivaloo. 17-57 departureoo, per Railway Guide
latest, ಅದೊಂದು two annas wastedoo because of big size and beautiful cover.
ಈಗಿನ್ನೂ ten ಆಗ್ಲಿಲ್ಲ. ಬೋರನಿಗೆ ಹೇಳಿದ್ದನೆ; ಈ ಸಾಮಾನುಗಲ್ಲಾ ಮೇಲ್ಸೇರ್ ಸಿ ಬಿಡುವಾದಾಗ
stationಗೆ ಸಾಗಿಸ್ಕೊಂಡು ಬಾ ಅಂತ. In the meanwhile Hotelನಲ್ಲಿ at my own expense.
because sir, at my own risk ಬಂದದ್ದು ಈ jobಗೆ.... at my own risk ಹೋಗ್ತಿರೋದು...
but ಪರ್ ವಾ ಇಲ್ಲ.
ಹಿರಿಯಣ್ಣಯ್ಯ: (clutching at ಕಪ್ಪಣ್ಣ )
Don'i be a fool, Kappoo! Don't bother about luggage or job or expense or
silly nonsense like that... Kappoo... do you think I am weak in English I say?
ಕಪ್ಪಣ್ಣ: (Cautiously) .
ಈ question ಯಾಕ್ಬಂತೂ ಸಾರ್.. ಈಗ?
ಹಿರಿಯಣ್ಣಯ್ಯ: She says I say!!... ಇವಳ್ಗೆ ... ನನ್ಮಗ... ಹೇಳ್ಕೊಟ್ಟಿಧಾನೆ... my son..
ಕಪ್ಪಣ್ಣ: (Aghast)
You mean. exposing family secrets to a strange woman...?
ಹಿರಿಯಣ್ಣಯ್ಯ: Yes I say, I mean... ಅಲ್ಲ... ಇಲ್ನೋಡೂ ಕಪ್ಪೂ: ಇವನ arangementoo... ಇವನ
horrible poetry ಬಾಬ್ತಿರಲಿ... ಒಂದ್ಕಡೆ ನನ್ನ future English
speeches... - English or no English, up-to-date or no-up-10-date but after all a ಹೆಂಗ್ಸು... ಅವಳು compose ಮಾಡೋದು , ನನ್ನ speeches.... ಅದನ್ನ ಹೇಳೋ ಬಗೆ ನನಿಗೆ
ಇವ್ಳು ... ಅದೇನೊ ಹೇಳಿದ್ಳು... like a... Carriage... ಆಗ್ಮಾಡೋದಂತೆ ನನ್ಗೆ...
ಕಪ್ಪಣ್ಣ: Speeches carriage ಮಾಡೋದು!? 'carriage'.... ಜಟ್ಕ ... Victoria... motor car... Bullock coach...
-------------------------------------------------------------
(grinning)
“coach' ಮಾಡೋದು ಅವಳು ಹೇಳಿರ್ ಬೇಕು!- terrible Englishoo ಸಾರ್... terrible
ಹೆಂಗ್ಗು, But still ನನ್ನ Englishoo ಏನ್ಸಾರ್, Two thousand familiar quotations ಅಲ್ದೆ
Natal dictionary byrote plus Latin and foreign quotations also. like 'Entent cordiate,' 'I out ensemble' 'Arcedes Ambo' etc, etc... but ಆದ್ರೂನೂವೆ ಗುಣಕ್ಕೆ
ಮತ್ತರವಿಲ್ಲ... old Kannada proverboo... still! ಹೆಂಗ್ಸೇನೂ, ಗಂಡ್ಸೇನೂ... Saraswathi
herself ಹೆಂಗ್ಸು, ನನಗ್ಸಾರ್ ...
(filling his chest soundfully)
ಒಂದು ಕೈ...ನಿಮ್ಮನ್ನೂ 'ಇಂಗ್ಲಿಷ್ ನಲ್ಲಿ Weakoo'. ನನ್ನೂ 'manners that want
mending'- ಬಾಕಲ್ನಲ್ಲೇ ಹೂಂಚಿಕೇಳೇ ಸಾರ್ with your presumed permission- ಅಂದ
ಇವಳ್ಗೆ, ಸಾರ್, ಒಂದು never forgetting lessonoo, that though after all ಹೆಂಗಸ್ರು ತ
ಹೆಂಗಸ್ರಾದ್ರೂನೂವೆ before all ಗಂಡಸ್ರು are ಗಂಡಸ್ರೂಂತ ಒಂದು ever...everlasting lesson
ನೀವೂ ನಾನೂ teach ಮಾಡಿಯೇ ಬಿಡ್ಬೇಕೂಂತ ಅನ್ಸುತ್ತೆ ನನ್ನ mindu! but then, Sir, ೧nce
again a question of will challengingoo but flesh feebleoo. 'ಅಮರನ ಹೊಟ್ಟೆಗೂ
ಅಮೃತ ಬೇಕು!' New Kannada proverbu yet to be published... my own... ನಿಮ್ಮಗ,
ನಿಮ್ಮ ತಾಯಿ ಗಲಾಟೇಲಿ poor ನೀವೂ cannot afford my Salary... p೧orer ನಾನೋ!...
Can understand-as per Kannada proverb as aforesaid... ಸಾರ್, I am going away
happily. One man to another man ಹೇಳ್ತನೆ, ವ್ಯಥೆಪಡಬೇಡಿ But...
(approaching L)
...ಒಂದು matter ಮಟ್ಟೆಗೂ ನನ್ನ bloodನ..
(clenching his flists and talking between grit teeth)
BOIL ಮಾಡುತ್ತೆ.... ಮೈಮುಖಾನೆಲ್ಲಾ ಪರಚಿಕೊಳ್ಳೋಣಾ ಅನ್ನಿಸುತ್ತೆ... ಈ ಹೆಂಗಸು
ನಿಮ್ಮನ್ನ weak in English ಅಂದದ್ದು! ಹ್ಹ!ಹ್ಹ!! ಹ್ಹ!!!
(striking a melodramatic attitude)...
Helplessಉ ಸಾರ್ ನಾನು , as your secretary dismissed and resigned before
proper appointment even... ದೇವ್ರಿಗೇ ಗೊತ್ತು... ನಿಮ್ಮೂರ್ ಹೋಟೆಲ್ ಹೇಗಿರುತ್ತೋ
ಏನೋ... Cooking I mean... ಪ್ರಪಂಚವೆಲ್ಲಾ ಲೀಲೆ ಆಗಿರ್ಬಹುದು ಪರಮಾತ್ಮನಿಗೆ, but then
sir, all the world, Shakespeare ಹೇಳ್ದಾಗೆ, Stage ಅಲ್ಲಾ ಸಾರ್, ಸಮಾಜ!... ಸುಸ್ತಾದಾಗ
ಸುಧಾರಿಸ್ಕೊಳ್ಳೋಕೆ stage side wings ಇಲ್ಲಾ ಸಾರ್... ಸಮಾಜದಲ್ಲಿ! that is why
we all must suffer you and your partician family and I and my own plebian self- hopelesso sir, hotel foodoo.. always dangerous in foreign places, but then must be a man. At my ೧wn risk ಬಂದದ್ದು... ಬರ್ ತೇನೆ sir... friendನ desert ಮಾಡೋದು ನನ್ನ
-------------------------------------------------------------------------
principle ಅಲ್ಲ., but again circumstantial evidence alters strongest cases... English Proverb )...
(ನಿಟ್ಟುಸಿರುಬಿಡುತ್ತಾ)
ಇಲ್ಲ ಈ ಹೆಂಗಸಿನ ಇಂಗ್ಲಿಷ್... ದೇವರುಗಾನ ದಯವಿಟ್ರೆ ಒಂದು ದಿನ ೧pen platform
ನಲ್ಲೇ man to man...ಇಲ್ಲ man to woman. but never woman to man... ನೋಡ್ಯೇ
ಬಿಡಬೇಕು! ಇವಳ್ಕೈನ... but that of course in hopeless... ನಿಮ್ಮ ಈ helplessnessನಲ್ಲಿ...
ಬರ್ ತೇನೆ ಸಾರ್... Goodbye, ಬರ್ ತೇನೆ... but then..
(thumping his hear with clenched fist standing on doorstep of L)
(ಆಗ್ತಾನೆ ಹದಿಮೂರನೆಯ ಸಾಮಾನಾದ ಪಿಟೀಲನ್ನು ಮೇಲೆತ್ತಿಕೊಂಡು ಹೋಗಲು ಹೊರಟಿರುವ ಬೋರನಿಗೆ)
ಬೋರಣ್ಣಾ... ಅದ್ನೂ ಮೇಲ್ಸಾಗ್ಸಿ ... ನನ್ಹಾಸ್ಗೆ bagನ ಒಂದು... ಜಟ್ಕಾಲಿ ಸಾಗಿಸಿಕೊಂಡು
stationನಲ್ಲಿರು... ನಾನು ಬತರ್ ತೇನೆ... ಹೋಟಲಿಂದ... ಆದ್ರೂನೂವೆ ಸಾರ್ ಇಲ್ಲಿ... ಇಲ್ಲಿ...
(as he thumps his heart as aforesaid)
ಇಲ್ಲಿ... ನನ್ನ unappointed master. ಧಣಿ ನೀವು... I mean ತಾವೂನೂವ... ಅಲ್ಪಪ್ರಾಣಿ J
ನಾನೂನೂವೆ ... somehow... somewhere... somewhich.... somewhat... somewhen...
Somewhy... Somewhynot?... meet ಏ ಮಾಡ್ತೇವೆಂತ... ಇಲ್ಲಿ ಹೇಳುತ್ತೆ ಸಾರ್.... though
not in this case perhaps... in Paramathma's Presence!.... ಬರ್ ತೇನೆ.
(Bows to the ground as he pulls out his forelock and turns his back to exit)
ಹಿರಿಯಣ್ಣಯ್ಯ: (in despair) ಹಯ್ಯಯ್ಯೋ ಕಪ್ಪೂ... ನೀನೇನೋ man ಏ?...
ಮೃಗವೇ ?... friendನ ಅವಸ್ಥೆಗೆ blind ಮಾಡ್ಕೊಂಡು moneyu chief thingooತ
ತಿಳ್ಕೊಂಡಿರೋ... ಹಯ್ಯೋ ಕಪ್ಪೂ... even you after all are a...
ಕಪ್ಪಣ್ಣ: (ತಿರುಗಿ) 'monitary friend' ಅಲ್ವೆ ಸಾರ್, ನೀವು ಹುಡುಕಿರೋ Wordo?...
ಅದಲ್ಲಾ ನಾನೂಂತ ನಿಮ್ಮ ಬುದ್ದಿಗೆ ಹೊಳೆಯದಿದ್ರೂ ನಿಮ್ಮ ಹೃದಯಕ್ಕೆ ಹೊಳದೇ ಇದ್ದಿರಬೇಕು!
I am poorಉ ಸಾರ್ ನನ್ weak pointoo... but sir, I am proudoo... ನನ್ನ strong
pointoo:... ನಿಮಗೇನ್ಬೇಕೋ ಹೇಳಿ. But first sit down... Selfನ collect... ಮಾಡ್ಕೊಂಡು...
mother, Son ಅಲ್ವೆ with the help of ಈ ಒಬ್ಬ ಹೆಂಗ್ಸಿನ ಹಿಂದೆ ಔತ್ತೂಂಡು ನಿಮ್ಮನ್ನ down
ಮಾಡೋಕೆ try ಮಾಡ್ತಿರೋ trivarmite... another Shakespeare, drama Julius Caesar...
terrible drama ಸಾರ್, ಮೂರನೆ trivamite ಸೇರ್ ಕೊಂಡು ಒಬ್ಬನ್ನ Julius Caesarನ
ಮೂವತ್ತೂರು ಕಡೆ ಚುಚ್ಕೊಂಡುಬಿಟ್ರು; but then like Mahabharata it was ಗಂಡ್ಸ್ರು against
ಗಂಡ್ಸ್ರು! but then ಇದು ಅನ್ಯಾಯ ಸಾರ್, Two ಹೆಂಗಸೂಸ್ lplus one Sexton Blakeಓದಿದ
boy against the future 'Sir Hiriyannayya'... a lonely Knightoo with a lonely well- wisher=viz, your humble servant jobless Kappanna. ಆದ್ರೂನೂವೆ ಸಾರ್, ಧರ್ಮ ಇನ್ನೂ
ಇಧೆ ಕಲಿಯುಗದಲ್ಲೂನೂವೆ! ಧ್ರುವ ಇರಿ! ಪ್ರಹ್ಲಾದ ಇರ್ ಲಿಲ್ವೆ?...ನನ್ನೆ ಮೊನ್ನೆ ಕೂಡ
----------------------------------------------------------
ನಚಿಕೇತಸ್ಸಿರಲಿಲ್ವೆ... ಅಪ್ಪನ್ನ ರೇಗ್ಸಿದ್ರ ಫಲ ನರಕದಲ್ಲಿ ಅನುಭವಿಸೋಕೆ. ಒಟ್ನಲ್ಲಿ ಸಾರ್... ನಿಮ್ಮ
seventy-five rupeeso ಬೇಡ! ನನಗೆ cooking ಗೊತ್ತು ... shall be always in local hotel self-supporting. ದೋಸೇ ಹುಯ್ತಾಲೋ ... customers attend ಮಾಡ್ತಾಲೋ for your
friendship's sake... ಈ gang ನಿಮ್ಮನ್ನ down ಆಗೋಕೆ ಮಾಡ್ತಿರೋ plotನ Counterplot
ಮಾಡೋಕೆ only command ಮಾಡೀ ಸಾರ್ ನನ್ನ, I am from this moment your self-
appointed though salaryless secretary.
ಹಿರಿಯಣ್ಣಯ್ಯ: ಕಪ್ಪೂ!
(Placing left arm round Kappanna and rising K's chin with his right hand)
ನನ್ನ ಸಂರಕ್ಷಣೆಗೆ, ಕಪ್ಪ! ದೇವ್ರ ಕಟ್ಟಿರಬೇಕು, ನಿನ್ನ! ಆತನ ಲೀಲೆ, ಆಶ್ಚರ್ ಯ -ನನ್ಮಗ
ಇವಳಿಗೆ guarantee ಮಾಡಿದ ಹಾಗೆ ನಿನಗೆ seventy five ಅಲ್ಲ... the same hundred
rupees....
ಕಪ್ಪಣ್ಣ: “Per mensum' ಅಲ್ವೇ ನೀವು ಹುಡುಕಿರೋ Wordoo?
ಹಿರಿಯಣ್ಣಯ್ಯ: ಹೌದು... yes, ಆ hundred rupees written contract ಅವಳು
ಹೇಳಿದಾಗ before a lawyer ನಾನೂ ಮಾಡ್ತೇನೆ ಕಪ್ಪು. Only ಈಗ desert ಮಾಡೇಡ ನನ್ನ.
ಕಪ್ಪಣ್ಣ: Never let it be said, sir. ನಾನೋ your friend... but unfortunately in
needu, but I shall try to be your friend in deedu ಕೂಡ. English plus your English also-versus ಈ Sreemathi's Englishoo, minus in Sexion Blake Englishoo... w
ಒಂದು matchu, ಒಂದು English Waroo... I mean one war in English. At least ಒಂದು
test match with reverend ತಾಯೀ ರಾಣಿಸಾಹಿಬಾ, ಮಹಾ ಮಾತೋಶ್ರೀ as umpire,
this side or that side according to our... our diplomacies!
(Strokes Hiriyannayya's back)
ಹೇಗಿದೆ ಸಾರ್! thoughtoo!... cold ಆಗಿ ಕೂತ್ಕಂಡು ...Con...
ಹಿರಿಯಣ್ಣಯ್ಯ: Contemplate... ಅಲ್ವೇ ? what you mean?
ಕಪ್ಪಣ್ಣ: (Aghast)
ಏನ್ಸಾರ್ !! ಇದು. ನಿಮ್ಮ ಇಂಗ್ಲಿಷ್ನೂವೆ!?... ನಾವಿಬ್ರೂ ಸೇರಿದೆ terrible English
Couple ಆಗೋಗ್ತೇವೆ... Then sir! no time to waste... must get busy... waroo ಅಂತ
ಹೇಳ್ಬಿಟ್ಟೆ eveningಗೆ, Time ಕೊಟಬಾರ್ ದು... it is a question... a question or Brutus or
Cassius versus Cleopatra. Boil ಮಾಢ್ತಿಧೆ ಸಾರ್ bloodoo ನನಗೆ!... ನಿಮಗೆ ಹ್ಯಾಗಿದೆ ಸಾರ್
blood systemoo? Equal to the battleಏ ?... reverend mother of academia though
'pet grandsonoo'! ಮುಂದಕ್ಕೆ ಇವನಿಂದ್ಲೇ ಪಿಂಡ ಮೇಲ್ಲೋಕದಲ್ಲಿ ? In spite of 'pet
grandosn!' influenceoo... reverend umpireನ ನಮ್ಕಡೆ ತಿರಿಗ್ಸೋದು ನನ್ಭಾರ... ನನಗೆ
----------------------------------------------------------
women ಗೊತ್ತೂ ... as a rule. but 'every rule has exception': old proverb but author
cannot quote... ಈ ರೂಲಿಗೆ exceptionoo this English-knowing Kannada Cleopatra...
(
ಹಿರಿಯಣ್ಣಯ್ಯನನ್ನು ಷರಟು ಹಿಡಿದು ಜಗ್ಗಿಸುತ್ತಾ)
ಚೇತರಿಸಿಕೊಳ್ಳಿ: ಸಾರ್ ... after all Cleopatraನೂ ಹೆಂಗ್ಸು... Chloroform ಅಲ್ಲಾ!...
ಮುಂದಿನ ಕ್ರಮ... but a once-ನಮ್ಮ motto.
ಹಿರಿಯಣ್ಣಯ್ಯ: ಕಪ್ಪೂ, everything... at once ನಿನೇ ತಗೊಂಡ್ಡಿಡು chargo...
ರಾಮ ಬರೋದು 4 0'clock, tea time೦o ಅಂತ ಬರೆದಿದ್ದಾನೆ! Before he comes family
lawyer ವೆಂಕಟೇಶಯ್ಯನ ಹತ್ರ ಹೋಗಿ stamp paperನಲ್ಲಿ ನಿನ್ನೂ...
(ಕೈಯನ್ನು ಮಾಡಿ ತೋರಿಸುತ್ತಾ)
...ಅವಳ ಹಾಗೇನೇ by contract before a lawyer on same salary appoint
ಮಾಡ್ಬಿಟ್ಟು... ನಾನು appoint ಮಾಡಿದ ನಿನಾಯ್ತು... ನನ್ನೊಟ್ಟಿಗೆ ಹುಟ್ಟಿದ್ರೂನೂವೆ ಇವನು
ನನಗೆ against ಆಗಿ appoint ಮಾಡಿದ ಈ ಹೆಂಗ್ಸಾಯ್ತು... ಅವಳ fight ಮಾಡೋಕೆ ನೀನು.
ನನ್ನ Sexton Blake and ಗಾಜಿನ ಬೀರು poetry ನೂ ನುಂಗ್ಬಿಟ್ಟು ನನ್ನ ಬೆದರಸ್ತಿರೋ ಈ ಪಿಳ್ಳೇನ
Smash ಮಾಡ್ಕೋನೆ ನಾನು.
ಕಪ್ಪಣ್ಣ: ಏನ್ಸಾರ್ , Regular battle of action... ಅಲ್ದೇ ಸಾರ್ ! Author Shakespeare;
characters Cleopatra. Antony ಕುಸಿದಿದ್ದು .... battle field Riveroo... Longest river in Africa... Date of battle and length of river, can supply from Geography and History... but detailsಯಾಕೆ before battle...?Victory ಆದ್ಮೇಲೆ discuss ಮಾಡ್ಕೊಳ್ಳೋಣ,
Therefore I think everything is...
ಹಿರಿಯಣ್ಣಯ್ಯ: Understand.
ಕಪ್ಪಣ: (ಹಿರಿಯಣ್ಣಯ್ಯನನ್ನು ತಬ್ಬಿಕೊಳ್ಳುತ್ತಾ)
ಏನ್ಸಾರ್ ಇದು! ನೀವು! ನಿಮಗೂ ನನಗೂ as Geometry says Supplementary as
also Complementary ... ಇನ್ಮುಂದಿನ battleoo ಪರಮಾತ್ಮ plus ಪಾಂಡವಾಸ್ against
ಕೌರವಾಸ್... through dismissed from Hastinapur without salary.ಅರ್ಜುನ Hastinapur
Crown prince... plus though dismissed from Mathura to Dwaraki... then of course
no railways... terrible Walking. poor Krishna... ಪುಟ್ಪುಟ್ಟ ಕಾಲು... ಗೋಪೀ beloved
ಬಾಬ್ತು, But even then, though author of ಭಗವದ್ಗೀತೆ and head of family only
Kavadigas ಆದ್ರೂನೂವೆ , nobody noticing... because of Balarama and other people.
ನಿಮ್ಮ positionoo ಸಾರ್ , if I may say so, ಹಾಗೇ ಇದೆ . Though present Zamindar...
Balarama I mean Mr. Rama Rao Junior c/o. Post office addressನಲ್ಲಿ family position
of... ನಿಮ್ಮ position ಹೇಳ್ತೇನೆ, usurp ಮಾಡಿಕೊಂಡುಬಿಟ್ಟಿದ್ದಾರೆ. ಅಲ್ಲ blood relations
recognise...Example reverend mother ಮಾತೋಶ್ರೀಯವರು ಕೂಡ partiality ತೋರಿಸ್ತಾ,
----------------------------------------------------------------------
ನಿಮ್ಮ positionನ ಕರ್ಣನ ಹಾಗ...mother, yet no mother...ನೆಂಟ್ರು also ditto. ಹೀಗೆ lone
ಆಗಿ... but still ನಾನೊಬ್ಬ ಸರ್ಪಾಸ್ತ್ರ ಇಧೇನೆ ಸಾರ್.. but what is the use...? there at
least it was ಗಂಡಸ್ versus ಗಂಡಸ್ ... with God umpire of course. ಈಗ ನಾವೋ ...
ಚೇತರಿಸಿಕೊಳ್ಳಿ ಸಾರ್, ಬಾಯಿಬಿಡಿ... first thing೦೦ ನನ್ನ positionನ ನಿಮ್ಮಗ ಬರೋಕ್ಮುಂಚೆ
establish ಮಾಡಿಟ್ರೆ..before that leader of local barಏ? ಆ ವಂಕಟೇಶಯ್ಯನೋರು ...
battleಗೆ ಮುಂಚೆ ಸಾರ್, Field Marshall ಕೈಲಿ official sword... after all 'weak in
English'ಊಂತ ಈಕೆ ಮೂಲ್ಕ ನಿಮ್ಮನ್ನ the future may perhaps 'Sir Rama Rao...'
ಹಿರಿಯಣ್ಣಯ್ಯ: (ಕನಲಿ)
SHUT UP! ಸರ್ ರಾಮರಾವ್ ಅಂತೆ!!! (
Loudly) ಬೋರಾ!
ಬೋರಣ್ಣ: (ಹದಿಮೂರು ಸಾಮಾನುಗಳಲ್ಲಿ ಕೊನೆಯದಾದ ಪಿಟೀಲನ್ನು ಕೈಲಿ ಹಿಡಿದುಕೊಂಡು
ಆಗ ತಾನೆ ನಿಷ್ಠಮಿಸಿದ R ನಿಂದ ಪ್ರವೇಶಿಸಿ) ಬುದ್ದೀ...
ಹಿರಿಯಣ್ಣಯ್ಯ: ಜಟ್ಕಾ ನಿಲ್ಲಿಸಿದ್ದೀಯಾ? ಪೇಟೆಗೆ ಹೋಗಬೇಕು.
ಬೋರಣ್ಣ ಊ ಬುದ್ದಿ... ಈ ರಾಯ್ರು ರೈಲಿಗೆ ಸಾಮಾನ್ತಾಗ್ದಾಕೆ ನಿಲ್ಸೂಂದ್ರು.
ಹಿರಿಯಣ್ಣಯ್ಯ: Good!ಈ ರಾಯ್ರ ಸಾಮಾನು ಕೋಣೆಲಿ ಇರ್ ಲಿ! ಇಲ್ಲೇ ಇರ್ ತಾರೆ. ಇವರ
ಮಂಚಕ್ಕೆ ಸೊಳ್ಳೆಪರದೆ ಕಟ್ಟಿರು... ನಾನು ಸಾಯಂಕಾಲ... ಕ್ಲಬ್... ರಾತ್ರಿ ಊಟ ಆದ್ಮೇಲೆ ಮನೆಗೆ
ಬರ್ತ್ತೇನೆ... ಅಮ್ಮಾವಿಗೆ ಹೇಳು... ದೊಡ್ಡಮ್ಮಾವ್ರಿಗೆ, ನಾಲಕ್ ಘಂಟೆ ರೈಲ್ನಲ್ಲಿ ಚಿಕ್ಕಾಯ್ತು ಬರ್ ತಾರೆ..
ರೈಲಿಗೆ ಹೋಗು, ನನ್ನೊಟು, ರುಮಾಲು, ಕೋಲು... ಜಟ್ಕಾಲಿ ಇರ್ ತೇನೆ... ಇದ್ನ...
(Indicating violin) ಆ ಹೆಂಗಸಿನ ಕೋಣೇಲಿ ಕುಬ್ಬಿಟ್ಟು... ತಗೊಂಬಾ ಜಟ್ಕಾಗೆ,
(Exit Bora R with ಪಿಟೀಲ್ )
Come on, dear boy... ನೋಡೇಬಿಡೋಣ ಈ battleನ.... ಈಗ half-past tenoo
timeoo...
(After referring to gold watch)
...mother ಬರ್ ತಾಳೆ... after pooja in ಕಾಲ್ಗಂಟೇ... ಇವ್ಳು, ನನ್ಮಗ್ನ Lady Field
Marshal... ತಾನ್ಯಾರು... ಯತ್ತಾ?...
ಕಪ್ಪಣ್ಣ: (Drawing him to door with interlocked arm)...
Come on Sir! can understand easily... commander... dash... Born commander
ನೀವು... first thing in battle opposite Captainಗೂ Umpireಗೂ ಜಗ್ಳ ತಂದಿಡೋದು !...
But ಸಾರ್..ಈ ಹೊತ್ತು ಮಧ್ಯಾನ?... ಸಾಯಂಕಾಲ? ನಿಮ್ಮಗ ಬಂದ್ಮೇಲೆ...?
--------------------------------------------
ಹಿರಿಯಣ್ಣಯ್ಯ: (Dragging Kappanna to L)
ನಾವು ಬರೋದು night timeoo... to sleep. ನಾಳೆ ಬೆಳಗ್ಗೆ battleoo. Plenty of
time... cosa... as you say... I am Commander! I can manage my position. Am I weak in English I say!!!
ಕಪ್ಪಣ್ಣ: ಏನ್ಸಾರ್ ! ಗಂಡಸು ನೀವು...
ಹಿರಿಯಣ್ಣಯ್ಯ: But then, Kappu... ಹೆಂಗ್ಸ್ಹೇಳ್ತಾಳೆ ... ನಾನು Weak in Englishಊ ...
'Also nothing to do in this matter'. 'You are Nobody'... quiet ಆಗಿ ನನ್ ಜೊತೇಲ್ಬಾ...
ನಾಳೆ ತೋರ್ ಸೋಣ, ಇವರ್ ಗೆಲ್ಲ ... who I am... why I am... and where I am... last...
ಕಪ್ಪಣ್ಣ:But not least... ನಾನು ಇಧೇನೆ ಸಾರ್ , ಪಕ್ದಲ್ಲಿ !
ಹಿರಿಯಣ್ಣಯ್ಯ: Yes! yes!... as I was saying... WHAT I NOT ONLY AM BUT
I SHALL ALSO BE....ನಿನ್ನ kind help ಸಮೇತ !... after all. Kappu...
ಕಪ್ಪಣ್ಣ: Can supply words, sir... after all, future son and mother are only father,
son and mother! bul Love and Friendship are LOVE and FRIENDSHIP! But
before all. Sir. ... War is war... ನಾಳೆ ಬೆಳೆಗ್ಗೆಯಿಂದ ಇಧೆ ಸಾರ್ , Battleoo. but small
Kurukshetra. also bigger Mahabharata... , ಬನ್ನಿ ಸಾರ್ , ಜಟ್ಕಾ 2ಕಾದಿದೆ.
(Exit Hiriyannayya & Kappanna....L)
(Curtain drops as Bora cxils with Black long Croat, ಜರ್ ತಾರೀ ರುಮಾಲ್, ಸರಿಗೆ
ವಲ್ಲಿ & silver mounted black-wood-stick and blood-red Poona slippers in his hand through L)
ಸೀನ್ - ೩
(Time: next moring. Place: same. The appointment of the room considerably
altered. A big square table with coloured obvious ಮಗ್ಗಲ್ಹಾಸಿಗೆ over it, supports a
number of her crockery as hectic coloured while, ಬಟ್ಲೂಸ್ , ಬಸೀಸ್ and huge sized
cups with soup plates for saucers and no spoon smaller than a dessert spoon. Also
brightly painted water-carafes of porcelain doing service for coffee pots. There is
milk in a glass tumbler and a conically shaped newspaper ಪೊಟ್ಣ of ಬೂರಾ ಸಕ್ಕರೆ
standing with the Apex hcaven-ward and burst coarsely at top offering its contents
to the coffee party. Found seated Saroja. rainbow colour patched on a cream ground
sarce with lect enclosed in blood-red velvet-loppcd also in shrill green
-------------------------------------------------------------------
bodice. a multicoloured parasol resting on the chair. Her hair done up and
ornamented with one ದಾಸವಾಳದ ಹೂವು the best she could get in the ಹಳ್ಳಿ ಕೊಂಪೆ
facing R and ರಾಮರಾವ್ with back to C, facing the footlights, a bundle of straight
hair parted mathematically in the middle but infinity-strength lenses in Harold
Lloyd spectacles. crimson butterfly bow, scarlet socks, lawn tennis shoe and gold
wristlet watch, eight bright jewelled rings on all his fingers-in short. a hotch-potch
of rich man's son, artist, gentleman, turned out by tailor. jeweller. cobbler and hair cutting saloon)
ಸರೋಜ: Milkooನೂ Decoctionooವೆ kitchenನಲ್ಲಿ mixಮಾಡಿ ತರೂದು
fashion ಅಲ್ಲ... Various tastes of various consumersಗೆ, blind ಆಗಿ sugarನೂ ಸುರ್ ದು
dissolve ಮಾಡಿ... ಎಲ್ರಿಗೂ forcible feeding ಮಾಡೋದು ... inane... Frenchನಲ್ಲಿ
ಬಂದಹಾಗೆ -ಚ್ಯಾಕ್ ನ್ ಔಸನ್ ಗೌಟ್ (Chacon-aw-Son-gout).
ರಾಮರಾವ್ : (Holding half way betwixt cup and lip the dessert spoon full
of coffee) ಚಾಕನ್ನೂ ... English !!
ಸರೋಜ: Certainly not... ಫ್ರೆಂಚು ... most up-to-date language! English
ಹಿಂದ್ದಿದ್ದು lots of time. ಬರೀ ಇಂಗ್ಲಿಷಿನಲ್ಲಿ ಇದರರ್ಥ- “different tastesoo, different
peopleಗೆ differenloo ಂತ .” ನಾನ್ಕೊಟ್ಟ note book ತೆಗೆದು, take it down. at once...
(To Rama Rao who has placed spoon in cup and wiped his face with a big
blue silk kerchief and is preparing to take down in aforesaid book)
ಸಿ ಹೆಚ್ ಯೆ ಸಿ ವೊ ಎನ್ ಔ ಸನ್
ಚ್ಯಾ ... see... hetch... yay...ಕನ್ . see... woe...yen...ಔ...ow...son. ಗೌಟ್
ಗೌಟ್ ... Gout...ಆಯ್ತೇ?
ರಾಮರಾವ್ : ಹುo. ಇದೆಲ್ಲ ನೆನ್ನೆ ಕೊಂಡುಕೊಂಡ Three Volumes of Higgin
Botham's dictionaryಲಿ ಎಲ್ಲಾದ್ರೂ...
ಸರೋಜ: Of course ಇಧೆ! ಇಲ್ದಿದ್ರೆ ನಿಮ್ಕೈಲಿ .. Sevenly Rupeesoo ಕೊಡಿಸ್ತಿದ್ನೆ ?...
but then, Goods-trainನಲ್ಲಿ ಬರ್ ತಿವೆ with Encyclopedias Etiquette books also. Manners
for Gentleman in Drawing rooms in London and foreign, etc... in the meanwhileಗೇಂತ ಬರಿಸ್ತಿದ್ದಿದ್ದು ... but never mind. Book and pencil pocketನಲ್ಲಿ ಹಾಕಿ. And continue your
coffee.
ರಾಮರಾವ್ : [Lifting up spoon, holding cup of coffee and emplying it
sonorously... restores il lo soup-plate]
-------------------------------------------------------------
Thank you... ಈಗ ನೀವೇಳಿದಿದ್ದು...
ಸರೋಜ: What I was saying was... table ನಲ್ಲಿ company ಇರೋವಾಗ milkಓ,
ಡಿಕಾಕ್ಷನ್ ಓ, Sugarಓ... ಅವರವರ ಬೇಕಾದದ್ದು... ಅವ್ರವ್ರು... you see what I mean.. chance
ಕೊಡಬೇಕು ಎಲ್ರಿಗೂ good companyಲಿ, ಹಾಗೇ society which... of course, birth
qualification ನಿಮಗಿದೆ... deathqualificationನಿಮ್ಮ grandfatherಗೂ ಇತ್ತು... ಆದ್ರೆ family
matersನಲ್ಲಿ interfere ಮಾಡೋದು ನನ್ನ business ಅಲ್ಲ, therefore... Iype-writer work...
ರಾಮರಾವ್: Good God! ಸ್ವಲ್ಲಿರಿ, ಶ್ರೀಮತಿ ಸರೋಜಾದೇವಿ! Only because I am
rich and good family. plus also a poet... ನೀವು ಬರಿ type-writingsಗೇನೇವೇಯೆ ಈ
jobನ... accept ಮಾಡ್ಕೊಂಡಿದ್ದು ? ಕ್ಷಮ್ಸಿ ದೇವಿ... ಬರೀ type-writing ಅಲ್ದೆ... ಈ ಕ್ಷಣದಿಂದ ...
through my poetry talents... Nobel prize. cash down money, ಅಲ್ದೆ 'Sir' title ಸಹಿತ
ಸಂಪಾದ್ಸಿ... ನನ್ನ namesake grandfather ರಕ್ತ ನನ್ನ bloodನಲ್ಲಿದ್ದ ನನ್ನ fatherಗೆ
ತೋರೊವರ್ ಗೂ ... ನೀವು ನನ್ನ desert ಮಾಡೋದಿಲ್ಲಾಂತ... promise ಮಾಡ್ಲಿಲ್ವೆ... in
Bangalore?
ಸರೋಜ: Yes, Yes, That is why... though ನನ್ನ ಹೆರಳಿಗೆ ಈ rotten flowerಒಂದೇ
ನಿಮ್ಹಳ್ಳೀಲಿ available ಆಗಿದ್ರೂನೂವೆ... Complain ಮಾಡ್ದೆ ... Suffer ಮಾಡ್ತಾ... ಅದಿರ್ ಲಿ, must
warn you once again...
(In a serious loud whisper]
That unnecessary advertise ಮಾಡ್ದ... Secretary ಇನ್ನೂ ಊರ್ ಬಿಟ್ಟು ಹೋಗಿಲ್ಲ! Bora
tells me this morning... ನೆನ್ನೆ ನಾನು ಬರುತ್ಲೂ ಹೊರಗ್ಹೋದ your father and that
mannerless man ರಾತ್ರಿ ತಿರುಗ್ಬಂದು ಇಲ್ಲೇ ಮಲಕ್ಕೊಂಡು... before everybody's getting
up went out againಂತ ಬೋರ ಹೇಳ್ತಾನೆ... Therefore not yet dismissed. Bora too poor
to tell a lie. because tipಕೊಟ್ಟಿದ್ದೇನೆ. Therefore, before they come in..if... ಒಟ್ನಲ್ಲಿ ನಿಮ್ಮ
grand mother ಹತ್ರ positionನ ಈಗ್ಲೇ explain ಮಾಡೋದು best thingoo... my opinion!
but then ನಾನು....
(ನಿಟ್ಟುಸಿರು ಬಿಡುತ್ತಾ)
only a servantoo! (Exilliing by R.)
ರಾಮರಾವ್: [Helplessly following her)
Servantoo... Paid servanto... good God! ಶ್ರೀಮತಿ ದೇವೀ, you must advise.
like you faithfully promised in Bangalore...
-------------------------------------------------------------------
(Exit Ramarao after Saroja muttering to himself.]
Father againstoo. Grand motheroo ಬಂದಾಗ್ನಿಂದ ಮಾತೇ ಇಲ್ಲ... horrible
position! This educated ladyನೇ... must advise me.
(Fully a minute after-enter by C. Subbamma, Notices table and appertainances.)
ಸುಬ್ಬಮ್ಮ: (Aghast) ಏನಿದನ್ಯಾಯ!... ಶೂದ್ರರ ಮನ ಹಾಗೆ... ಬೋರಾ ...!
ಬೋರಣ್ಣ: (Entering !.) ಅವ್ವಾ !
ಸುಬ್ಬಮ್ಮ: ಈ ಅಧ್ವಾನಗ್ಳೆಲ್ಲಾ ಎಲ್ಲಿಂದ ಬಂದದ್ದು?
ಬೋರಣ್ಣ: ಲಬ್ಬೆ ಮಾಮ್ಮದ್ ಸಾಬಿ ಅಂಗ್ಡಿ ಇಂದಾಮ್ಮಾ... ಪಿಂಗಾಣಿ, ಗಾಜು,
ಚಂಚಾಗ್ಳು.... ಕಾಪಿ ಕಷಾಯ ಉಡುಪಿ ಅಯ್ಯನ ಓಟ್ಲು... ಆಲೂ ಮನೇದು... ಬೂರಾಸಕ್ರೆ
ಅಂಗ್ಡೀದು... ಬಟ್ಟೆ ದೊಡ್ರಾಯರ ಮಗ್ಲಾಸ್ಗೆ... ಮೆಜು ಮಾಡೀಯಿಂತಂದದ್ದು.
ಸುಬ್ಬಮ್ಮ: ಚನ್ನಾಯ್ತು... ತುರುಕರಂಗ್ಡೀ ಪಾತ್ರೆ... ಹೋಟಲ್ ಕಾಪಿ... ಹಾಗಾದ್ರೆ, ಬೋರಾ,
ನಾನ್ನುಡಿಗೋಗಿ ಬರೋಷ್ಟೊತೆ, ಊಟ ಆಗಿತ್ತೊಂದ್ರಲ್ಲಾ... ಎಲ್ಲಿ?... ಹಾಗೆ?
ಬೋರಣ್ಣ: ಇಂಗೇನ್ರವ್ವಾ!... ಇದೇ ಮೇಜು... ಇದೇ ಪಿಂಗಾಣಿ.. ಓಟ್ಲನ್ನ... ತಾವು ಕಥೆ
ಕೇಳಿ ಬರೊಷ್ಟೊತ್ಗೆ... ಸಾಮಾನುಗ್ಳು ಅಲ್ಕಾರ ಸೇರಿ, ಮೇಜು ಮೂಲೇಲಿ.
ಸುಬ್ಬಮ್ಮ: ದೊಡ್ರಾಯ್ರು?
ಬೋರಣ್ಣ: ಏಳಿದ್ನಲ್ಲವ್ವಾ... ಬೈಸಾರನೆ ಹೇಳಿದ್ದಲ್ಲವ್ವಾ..; ಎಲ್ಲೊ ಉಂಡಿದ್ದಿರಬೇಕು.
ಐನೋರೂ, ಆ ಒಸ್ಸಪ್ನೂವೆ... ರಾತ್ರಿ ದೀಪ ಆರಿಸ್ದಮ್ಯಾಕೆ ಬಂದು ಬಿದ್ದೊಂಡೋರು
ಬೆಳಕರಿಯೋಕ್ಕುಂಚೇನೆ 'ಯಾರೂ ಯಳ್ಳೇಡಾ'ಂತೇಳಿ ಓದ್ರೂರ್ ರವ್ವ... ದೊಡ್ಡಜಮಾನ್ರು...
(frightenedly approaching subbamma & talking in panic
striken whisper)
ಔವ್ವಾ... ಇಧೇನವ್ವಾ?... ಎಲ್ಲಾನೂವೆ... ಇಂಗಾಗೊಗೈತೆ ನಾನೇನೋ...
(ಬೆಚ್ಚಿಬಿದ್ದ ಹಾಗೆ)
ಇಧೇನ್ರವ್ವಾ... ದೊಡ್ಡಜವಾನ್ನು ಇದ್ದದ್ದೇನು? ಆ ಕಾಲ್ವೇನು.. ಇವ್ರು ಈ ಪಿಂಗಾಣಿ
ಸಾಮಾನುಗ್ಳು... ಚಿಕ್ಕಜಮಾಗ್ರಿದ್ರೆ ಚಿಕ್ಕೋವಿದ್ರೆಲ್ಲ! ಚಿಕ್ಕೋದ್ರಿದ್ರೆ ಚಿಕ್ಕಜಮಾನ್ರಿಲ್ಲ...! ಅಲ್ಲಿ ಅವ್ವಯ್ಯ,
ಒಸಯ್ಯ ನನ್ಗನೋ ನೆಟ್ಟವನೇಂತ್ತೋಚ್ತೈತೆ... ಅವ್ನ ಬಾಯೆಲ್ಲಾ ಮಾತು! ದೊಡ್ಡಯ್ಯನೊಂದ್ಗೆ...
ಅಲ್ಲೆ ಇವೊಮ್ಮ... ರೂಪಾಯಿ ಬಿಸಾಕಿ ಪಾವಲಿ ಇನಾಂ ಕೂಡತಾಳವ್ವ ನಂಗೆ,
ಇವೊಮ್ಮ-ಚಿಕ್ಕಯ್ಯನೊಂದ್ಗೆ.. ಯಾಕಪ್ಪಾ?... ಏನವ್ವಾ, ಇದೆಲ್ಲಾ? ನನ್ನೇನೋ... 'ಪುಕಾ'
'ಪುಕಾ!' ಅಂತೈತೆ ಗುಂಡ್ಗೇಲಿ! ಏನವ್ವಾ, ಇದೆಲ್ಲಾ!?
ಸುಬ್ಬಮ್ಮ: (coming into the middle of the room, extending her arms wild)
ಇದೆಲ್ಲಾ ಒಳ್ಳೆದಕ್ಕಲ್ಲಾ ಬೋರಾ... ನೋಡು ಬೋರಾ, ನಾನು ಸೊಸೆಯಾಗಿ ಬರೋಕ್ಕುಂಚೇನೆ
ಇಲ್ಲಿದ್ದೋನು... ನೀನು, ಹಳಬ! ನಾನು ಬರೋಕ್ಕುಂಚೇನೇ....
---------------------------------------------------------------
ಬೋರಣ್ಣ: (with eyes glearning) ಅದೂನೂವೆ ಯಂಗ್ ಬಂದ್ರಿವ್ವಾ ಟೇಸನ್ನಿಂದ!
ಆಗ ತಾನೇ ರೈಲ್ಬಂದಿದ್ದು ನಮ್ಮೂರ್ ಗೆ, ಟೇಸನ್ನಿಂದ ಮನೇಬಾಕಲ್ವರ್ಗೂ ದೀವ್ಟಿಗಳು!... ಈಗ್ಲೂ
ಮಾತಾಡ್ಕೊತಾರವ್ವಾ, ಊರೆಲ್ಲಾ ಸಾವಕಾರ್ ದೊಡ್ಡವೀರಪ್ಪನ ಮದ್ವೆ ಮೆರವಣಿಗೆ ಎಲ್ಲಿ...!
ನಾನೈದ್ನಾಗಿದ್ದಾಗ ದೊಡ್ಡದೊಡ್ಡೈನೋರು ಸೊಸೇನ ಮನೆ ತುಂಬಿಸ್ಕೊಂಡ ಮೆರವಣಿಗೆ ಎಲ್ಲಿ?
ನಾಲ್ಕುದುರೆ ಸಾರೋಟು... ಮುಂದೆಲ್ಲಾ ಬ್ಯಾಂಬ್ರು ಮಂತ್ರಯೇಳ್ತಾ... ಅವ್ರ ಮುಂದೆ ಬೆಳ್ಳಿ ವಾಲ್ಗ...
ಸೂಳೇರು... ನೀವೋ ಸಾರೋಟ್ಟಲ್ಲಿ ಚಿನ್ನದ್ಗೊಂಬೆ ಅಂಗೆ...
ಸುಬ್ಬಮ್ಮ: (sobbing into her hands) ನಿಲ್ಲೋ , ಹಾಳಾದೋನೇ.... ಮುಚ್ಚು ನಿನ್ಬಾಯಿ.
ಏನ್ ಜ್ಞಾಪಕಶಕ್ತಿನೋ ನಿನ್ಗೆ... ಪಾಪಿ... ನಾನು ಸೋಸಗಾರ್ಕೆ ಮಾಡೂಕೆ ಈ ಊರಿಗ್ಬಂದ
ವಿಜೃಂಭಣೇನ ಕೇಳೋಕಲ್ಲ ನಾನಿಲ್ಲಿ ನಟ್ಕೊಂಡಿರೋದು...
ಬೋರಣ್ಣ: (ತಲೆಬಾಗಿ) ಮರ್ತ್ತೇ ರ್ ರವ್ವಾ--
(Totters through C and re-enters through C with a tiger-skin spreads it
at mid-ground between C and L)
ಮರ್ ತೇರ್ ರವ್ವಾ!... ಕುಂತೋಳ್ಳಿ.
(to Subbamma after she has settled herself on the skin and seating himself
after her “ನೀನೂ ಕುಕ್ಕರಿಸೋ... ಹಣ್ಣಣ್ಣು ಮುದ್ಕ)
ಬೋರಣ್ಣ: ಈಗೇಳವ್ವಾ!... ಈ ಪಾವಲಿಗ್ಳೂ, ಈ ಪಿಂಗಾಣಿ ಸಾಮಾನುಗ್ಳೂ, ಇವುಗಳ್ಚಲ್ಲಾಟ...
(quoting to L)
ಈ ವಸ್ಸಯ್ಯಾ ...
(pointing to R)
ಈ ವಸ್ಸಮ್ಮಾ ...
ಇವಳಲ್ಲಾ ದುಡ್ಡುದುಗ್ಗಾಣಿ ಇಲ್ದೆ ಆರಾಡೋ ಅಂಗಿಲ್ಲ! ಮನೆ ದುಡ್ಡು ಎಲ್ಲಾ ಒಂದು
ಬಿಡ್ಡಾಸು ಒರಕ್ಕೆ ಬರ್ ಬೇಕಾದ್ರೆ ನಿಮ್ಮ ಕೈಯಿಂದ!... ಮತ್ಯಂಗವ್ವ, ಇದೆಲ್ಲಾನೂವೆ...?
ಸುಬ್ಬಮ್ಮ: ಬೋರಾ!... ಹಳಬ ನೀನು ಮನೇಗೆ? ನಿನಗೇಳೆ ಇನ್ಯಾರಿಗೆ ಹೇಳೇನು... ಆ
ವಸ್ತು...
(pointing upwards)
ಅಲ್ಲೋಗಿ ನನಗೇಂತ ಕಾದಿರೊಸಗ... ಆತನ್ನೂ ವಹಿಸ್ಕೊಂಡ ದುಡ್ನ...
(moving her right hand to R. and L)
ಈ ಅನ್ಯಾಯ ಮಕ್ಕಳ್ಗೆ ಸೇರಿಸಿಟ್ಟು... ಆ ವಸ್ತೂನ ಸೇರ್ ಬೇಕು ಅಂತ ಕಾದಿರೋ ನನಗೆ ಈ
ಎರಡ್ಮೂರು ದಿನ್ದಿಂದ ಮನೇಲಿ ಆಗ್ತಿರೋ ಅನ್ಯಾಯಗ್ಳು ನಿನಗ್ಯಾಗೋ ನನಗೂ ಹಾಗ್ಯೇ ಹೊಟ್ಟೆ
ಉರಿಸ್ತಿಧೆ!... ಬೋರಾ... ಹೇಳ್ತೇನೆ, ಕೇಳೂ... ಇದೆಲ್ಲಾ ವಳ್ಳದಕ್ಕಲ್ಲಾ... ಇದೇನೂ ಶೋದ್ನೆ...
ಪರಮಾತ್ಮಂದು!... ಮಗು ಮಂಕಾಗಿಲ್ಲ... ಇಲ್ಲೇ ಇರಿ... ಒಟ್ನಲ್ಲಿ , ಸಾಧೂ! ಆದ್ರೆ...
(pointing toL. pointing to R)
----------------------------------------------------------
ಇವರ ಹೆಸ್ರಿಟ್ಕೊಂಡು, ಇವರೂ ನನ್ಗೂ ಮುಂದಕ್ಕೆ ಶ್ರಾದ್ಧ ಮಾಡಿ ಪಿಂಡದ್ಮೇಲೆ ಎಳ್ಳೂ
ನೀರನ್ನರಚಬೇಕಾದ ಚಿಕ್ಕೊವ್ನೂವೆ... ನೆನ್ನೆ ತಾನೆ ಜುಟ್ಸಮೇತ ಧೋತ್ರ ಕಟ್ಗೊಂಡು ಹಣೆಗೆ ವಿಭೂತಿ
ಇಟ್ಕೊಂಡು ನನಗ್ನಮಸ್ಕಾರಮಾಡಿ ಶುಭ್ರವಾಗಿ ಹೋದ ಬ್ರಹ್ಮಚಾರಿ... ಈಗ... ಈ ವೇಷ
ಹಾಕ್ಕೊಂಡು... ಹೆಂಗಸ್ತನಾನೇ ಮರ್ ತ ಆ ಜಂತೂನ್ನೂ ಜೊತೇಲ್ಕರ್ ಕೊಂಡು ಹೀಗಲ್ಲಾ... ಏನೋ
ಬೋರಾ ಇದೆಲ್ಲಾ ಮಾಯೆ... ಒಂದು ಶೋಧನೆ, ಅದೇನು ಹಾಳ್ಕರ್ಮಾನ ಮಾಡಿದ್ದೆನೋ
ಪೂರ್ವಜನ್ಮದಲ್ಲಿ... ಆನುಭವಿಸ್ತಿಧೇನೆ, ಈಗ ಅರ್ಥ ತಿಳೀದೆ, ಆ ಹೊಸ್ಪ್ರಾಣಿ ಬಂದಿಧಾನ್ನೋಡು
ಮಗು ಕರಸ್ದೋನು... ಅವನಿಗೆ ಸಂಸ್ಕ್ರುತ ಗೊತ್ತು. ಆ ಪ್ರಾಣಿ ಒಂದ್ವೇಳೆ ಈ ಒಗಟಿನ ಬಿಡಿಸಿ
ಹೇಳಿದ್ರೇನಯೇ ಉಂಟು ಶಾಂತಿ, ನನ್ನ ಮನಸ್ಸಿಗೆ... ವಿಮೋಚ್ನೆ ನಮ್ಕುಟುಂಬಕ್ಕೆ.
ಬೋರಣ್ಣ: ಊಂರವ್ವಾ... ಬಾಯಲ್ಲಾ ಮಾತುಂಬಿದ್ರೂನೂವೆ... ಘಾಟಿ... ಮನ್ಸ ಬಲ್ಘಾಟಿ.
ನಂಗೇನೋ ಈವ್ವಸಮ್ಮಂನ್ಗಿತ... ನೆಟ್ಗೌನೇಂತ.
ಸುಬ್ಬಮ್ಮ: ಏನೋ ಬೋರಾ! ನನ್ಗನೋ ಹೆದರ್ಕೆ ಆಗುತ್ತೆ... ಇದೆಲ್ಲಾ ಒಳ್ಳೇದಕ್ಕಲ್ಲಾಂತ!
(rising up)
ಭಾನ್ವಾರಾ... ಸೂರ್ ಯ ನಮಸ್ಕಾರ ... ನಾನು ಹೊರ್ ಟು ಗುಡಿಯಿಂದ ತಿರ್ ಗೂ ಬರೂಹೋತ್ಗೆ,
ನೀನೂ ನಾರಾಯಣ್ನೂವೆ ನೋಡ್ಕೋಬೇಕು, ಬ೦ದಿರೂರ ಊಟ ಉಪಚಾರಾನ.
(pointing to L)
ಪಿಂಗಾಣಿ ಪಾತ್ರೆ... ಹೊಟ್ಲನ್ನಾ... ಜಾತಿ, ಹೆಂಗಸ್ತನಾನ ಮರ್ ತ (including R)
ಅವರ್ ಗೂ... ಮಂಕಾದ್ರೂನೂವೆ... ಮನತನ್ದ ಮಾನಾನ ಮರಿದ ಮಗನೂ, ಸಂಸ್ಕ್ರುತ
ತಿಳಿದಿರೋ ಆ ಹೊಸಯ್ಯ ಇವರ್ ಗೆಲ್ಲಾ... ನಾರಾಯಣನಿಗೆ ಹೇಳಿ... ಊಟಕ್ಕೆ... ಬೆಳ್ಳಿ ಪಾತ್ರೆ...
ತಕೋ, ಅಲ್ಮಾರ ಬೀಗದ ಕೈ.
(putting a key in Bora's hand) ...
ತೋಟ್ದಿಂದ ಬಾಳೆಎಲೆ ಕೊಯ್ಕಂಡು, ನಾರಾಯಣನ ಕೈಲಿ... ತರ್ ಕಾರಿ... ನಿನ್ಮಗಳು...
ಬೋರಣ್ಣ: ಊರವ್ವಾ, ತಂದಾಕೌಳೆ ತರಾರಿ ಬೈಸಾರೀನೆ.
ಸುಬ್ಬಮ್ಮ : (exitting C followed by Bora with rolled up tigerskin in his hand)
ಏನೋ ಬೋರ, ಇದೆಲ್ಲಾ ಹ್ಯಾಗ್ಮುಗಿಯುತ್ತೋ ಏನೋ ದೇವ್ರಿಗೆ ಬೆಳ್ಕು.
(Exit)
ಕಪ್ಪಣ್ಣ: (Entering cautiously reconnoitering... sighing unnecessarily loudly in
relief)
ಬನ್ನಿ ಸಾರ್ !... ಯಾರೂ ಇಲ್ಲ.
(ಪ್ರವೇಶಿಸಿದ ಹಿರಿಯಣ್ಣಯ್ಯನಿಗೆ)
Notice ಮಾಡಿ ಸಾರ್... enemy retreat ಮಾಡ್ಬಿಟ್ಟಿದೆ. But....
-------------------------------------------------
(ಮೇಜೂ ಪಿಂಗಾಣಿ ಬಾಬತ್ತನ್ನು ಸೂಚಿಸಿ)
Battle field completely occupied by foreign foe... but local made...
(indicating to Bora)
But here is ancient authority... ಬೋರಣ್ಣಾ ! ಎಲ್ಲಿದ್ದಂದಿದ್ದು ಈ ... ಬಾಯ್ತುಗಳೆಲ್ಲಾ..?
ಬೋರಣ್ಣ: ನಮ್ಮನೇವಲ್ಲ ನನ್ನೊಡ್ಯಾ! ಇವೆಲ್ಲಾ ಚಿಕ್ರಾಯ್ತು ನನ್ನ ಟೇಸನ್ನಿಂದ ಪಾವಲಿ ಕೊಟ್ಟ
ಆವಮ್ನೊಂಗೆ ಬುಡನ್ ಸಾಬಿ ಜಟ್ಕಾಲಿ ಟೆಸನ್ನಿಂದ ಬರೂ ದಾರೀಲಿ ಲಬ್ಬೇ ಮಮ್ಮದ್ ಸಾಬಿ
ಅಂಗ್ಡೀಲಿ ಕೊಂಡ್ಕೊಂಡು ಜಾಕಾಯಿ ಪೆಟ್ಗೇಲಿ ತಂದೋವು... ನಮ್ಮನೇವ್ಯಾಕಾದಾವು... ಇವು!
ನೂರ್ ಮಂದಿಗೆ ತಟ್ಟೆ, ಬಟ್ಟು, ಟಂಬ್ಲಲ್ಲು ಎಲ್ಲಾ ಬೆಳ್ಳೀಲೆ ಇಡೋ ಪಾತ್ರೆ ... ಅಲ್ಮಾರೇ ಬೀಕ್ಕೈ
ನನ್ಕೈಲಿಟ್ಟು... ನಿಮ್ಮೂಟಾ ಬ್ಯಾಂಬ್ರಿಂಗೆ ಒಳ್ಗೇ...
(indicating R)
ಅವ್ರೂಟ ನೆನ್ನೆ ರಾತ್ರಿ ತಿಂದಂಗೆ ಓಟ್ಲನ್ನ... 'ಲಬ್ಬೆಸಾಖಿ ಪಿಂಗಾಣಿ ಪಾತ್ರೆ'ಲಿ...
(to Hiriyannayya)
ಗುಡೀಗೊಂಟ್ರು ಬುದ್ದೀ ದೊಡ್ಡಮ್ಮಾವ್ರು... ತಾಣಕ್ಕೆ ನೀರ್ ತೋಡಿ ಕಾದನ್ನೆ ನಾಣಪ್ಪಾ... ಒಂಡೀ
ಬುದ್ದಿ!
(to Kappanna)
ನೀವೂನೂವೆ ಅಂಗೆ... ಬೆಳಗ್ಬಿಟ್ಟೊದ ಪಂಚೆನೂ, ತುಂಡನೂವೆ... ನಾನೊಗ್ದು...
ನಾಣಪ್ನೋರು ಒಣಗಾಕೌರೆ... ಒಳಗೆ.
(Exitting)
ಬಂದಿರೋದ ತಿಳಿಸ್ತೇನೆ ಆವಯ್ಯನ್ಗೆ.
(Exit C]
ಕಪ್ಪಣ್ಣ: (Helping Hiriyannayya with the Coat, Turban and Valli)
Quickly, sir....
(Taking off his own coat and turban]
Quickly sir, reverend umpire, our side!!! ಆಶ್ಚರ್ಯ !!! ನನ್ನೆಯಿಂದೀಚ್ಗೆ! Not
because our share-market climbed... but I think because gang...I mean... ನೋಡೀ
ಸಾರ್: ನನ್ನೆ ನೀವು ಮನೆ ಬಿಟ್ಟಿದ್ದು.... I mean battleಗೆ ಬೆದರಿ ಓಡಿಹೋದ್ದು Ten O'cluckoo.
ಈಗ ಕೂಡಾ very nearly ditto... you must admit ಇಷ್ಟಲ್ಲಿ ಈ, ಲಬ್ಬೇ ಅಂಗಿ ಪಿಂಗಾಣಿ
ಪಾತ್ರೆ... that up-to-date ಹೆಂಗ್ಸೂಸ್ influence of course... ಬಂದ್ದಿಟ್ಟಿದ್ದು reverened
umpire. ನಾವೇನೂ ಮಾಡೆನೇವೆ, ನಮ್ಕಡೆ ವಾಲ್ಗೊಂಡಿರೋದು ... not so much to our soldier
credit, but because some mistake of other of Kauravas... I mean opposite side...
--------------------------------------------------------------
therefore position ತಿಳ್ಕೋಬೇಕು. Reverend umpire at ಗುಡಿ... Silver vessels according
to umpire's orders. ನಮ್ಮೂಟಕ್ಕೆ ... ಲಬ್ಬೇಸಾಬಿ ಪಿಂಗಾಣಿಪಾತ್ರೆ unworthy opposite sideಗೆ.
Therefore must quickly take advantage of strong position now alone before both
foreign foe and reverend umpire ಬರೋಷ್ಟ್ರಲ್ಲಿ... food first, fighting next, ಬಂದ್ಬಿಡಿ
ನೀವೋ ಬೇಗ...
ಹಿರಿಯಣ್ಣಯ್ಯ: Quite right, Kappu
(Joins Kappanna)
But ಇವ್ರು ... with my Son... ರಾಮೂನ ಎಲ್ಲಕ್ಕೂ explanation ಕೇಳೂದು ಈಗ್ಲೇ ...
ಕಪ್ಪಣ್ಣ: (Dragging Hiriyannayya through C)
ಎಲ್ಲಿಧೀರಾ ಸಾರ್... whistle ಆಗೋಯ್ತು . ಎಲ್ಲಿಧೀರಾ ಸಾರ್, the battle has
started... too late for discussions... ಭಗವದ್ಗೀತಾ discussion before battleಉ... ಈಗ
too lateಉ Quick action... equals victory... victory equals ಬರಿ 'Rao Saheb'ಅಲ್ಲ,
“Sir hood!' ಈಗ್ಗಾನ... ಅಂಜಿದ್ವೋ?!... meagre ಹೆಂಗಸಿನ... ಶ್ರೀಮತಿ or Devi... but pure
ಹೆಂಗ್ಸನ್ನ ಮುಂದಿಟ್ಕಂಡು ಗಾಜಿನ ಬಿರೂ ಓಬೇರಾಯನ್ 's poetry plus Sexton: Blake...
ಇದೆಲ್ಲಾ ಯಾಕ್ಸಾರ್ ನಿಮಗೆ...? ಅರ್ಜುನ ನೀವು! Legally by contract. Lawyer ಎದ್ರೂಗೆ
appointed ಆದ ಗಾಂಡೀವ ನಾನು, Therefore ಬಾಣ ಬಿಡೊದ್ನ ನನಗ್ಗಿಟ್ಟಿಟ್ಟು ಶ್ರೀಕೃಷ್ಣ
ಪರಮಾತ್ಮನ ಹಾಗೆ ತಪ್ಪಗೆ ತಮಾಷೆ ನೋಡ್ತಿರಿ. I shall take care of the battle, and bulletin
after bulletin ಕೊಡ್ತಿದ್ದೇನೆ ನಿಮಗೆ, War news, ಸ್ನಾನ ಮಾಡಿ, ಮಾಧ್ಯಾನ್ಹಿಕ ತೀರಿಸ್ಕೊಂಡು let
us see what your Bheemasena has provided for dinner... ಬಂದ್ಬಿಡಿ .
(Exeunt)
ಬೋರಣ್ಣ: (ನಿಟ್ಟುಸಿರು ಬಿಡುತ್ತಾ)
ಹುಸ್-ಸ್-ಸ್, ಇವ್ರೂಟಾನೇನೋ ಇಂಗಾಯ್ತು, ಇನ್ನು ಚಿಕ್ಕೋವ್ರುಟಾನೂ ಅವ್ವಸಮ್ನೂಟ
ಎಂಗೊ... ಓಟ್ಲಲ್ಲೊ, ಇಲ್ಲ ಓಟಲ್ನಿಂದ ತರಿಸ್ಕೊಂಡಿಲ್ಲೊ...
(Enter through R. Ramarao & Saroja]
ಸರೋಜ: ನೋಡೀ , Before lunchuo one iong walk ತೊಗೊಳ್ಳೋದು upto-to-
dateಉ. Up-to-date ಆಂದ್ರೆ ಜ್ಞಾಪ್ಕ ಬರುತ್ತೆ... ನಿಮ್ಮ father introduction ಇಲ್ದೆ meet
ಆಗಿದ್ರೂನೂವೆ.. etiquette ಪ್ರಕಾರ ನೀವೇ introduce ಮಾಡಲು ಮುಂದೆ according to
the conditions I have laid... ಈಗಿಂದ till you get your Nobel prize... nearly two or three yets ಆಗುತ್ತೆ... my relations ನಿಮ್ಮ farmily ಜೊತೇಲಿ must be amicable.
Therefore first opportunity ತೊಗೊಂಡು formality and introduce ಮಾಡಿ.
---------------------------------------------------------
(In a hard tone)
But one thing. ಆತನ್ಜೊತೇಲಿ there is a mannerless person... that is of course...
ನಿಮ್ತಂದೆ business. I have selected this room because we shall be always under your
grand mother's eye: ನಿಮ್ಮ Poetry Work ಎಲ್ಲಾ ಈ ರೂಮ್ನಲ್ಲೆ ನಾನು type ಮಾಡೋದು .
But ನಿಮ್ಮ father municipal speeches etcರಾಗೆ, so ಬೇರೆ ನಿಮ್ಮ father's assistant. I
have no malice... ಒಟ್ನಲ್ಲಿ, What I mean is, ನಮ್ಮ Work ಆಗ್ತಿರೋವಾಗ. ಇದೇ ರೂಂ
ನಿಮ್ಮ father's office room ಆಗಿರೋವಾಗ , as you told you must arrange... ಈಗೊಂದ್ಗೋಡೆ
ಕಟ್ಟೋದು impossible... but at least a temporary panition...
ರಾಮರಾವ್: Yes! yes! Partition'? sorme ಪರ್ ದೆ!
(Aloud)
ಬೋರಾ!
ಬೋರಣ್ಣ: ಬುದ್ದಿ.
ರಾಮರಾವ್: (Pointing to wall over C)
ಆ ಗೋಡೆಗೆ ಇಲ್ಲೊಂದ್ಮಳೆ ಹೊಡ್ದು...
(pointing to corresponding place over foot-light)
ಆ ಗೋಡೆಗೂ ಒಂದ್ಮಳೇ ಬಡ್ಡು ಮಾಡಿ ವರಾಂಡಾದಲ್ಲಿ ಮಳೆ ಬಂದಾಗ ಕಟ್ಟೋ
ಪರ್ ದೇನ, ಕಟ್ಟಿಡು, ಇಲ್ಲಿ.
ಬೋರಣ್ಣ: ಊ ಬುದ್ದಿ.
ರಾಮರಾವ್: ಈಗ್ಗೆ ಅಲ್ಲ. ನಮ್ಮೂಟ ಆದ್ಮಲೆ, ನಾವು ಹೊರಗೆ ಹೋಗ್ತವೆ. ಬರೋಷ್ಟ್ರಲ್ಲಿ
ಈ ಸಾಮಾನುಗಲ್ಲಾ ತೊಳೆದಿಟ್ಟಿರು, ಅನ್ನ ತಂದಿಡ್ತಾರೆ, ಹೋಟ್ಲಿಂದ. ನಾವ್ ಬಂದೂಟಾಮಾಡಿ
ಆದ್ಮೇಲೆ ಪಾತ್ರೆನೆಲ್ಲಾ ತೊಳ್ದು ಅಲ್ಕಾರಾಗೇರ್ ಸಿ... ಈ ಮೇಜ್ನೆ...
(pointing to corner L.C.)
ಅಲ್ಲಿಟ್ಬಿಟ್ಟು... ಪರ್ ದೇನ ಕಟ್ಟು.
(t0 Saroja)
ಬನ್ನಿ
Srimathi. Everything is alright.. half of father's office room is mine... grand motherಗೆ explainಮಾಡ್ಕೋತೇನೆ .. Leave it to me. Other half... father..... his
municipality and assistant-manners, or no manners-ನಮಗ್ಯಾಕೆ ? His affairs fatherಗೆ...
ನಮ್ಮ poetry affairs ನಮಗೆ... grand mother ಮಟ್ಗೂ ಇದ್ದೆಲ್ಲಾ ಸರ್ ಯಾಗಿ ತಿಳ್ಕೊಂಡ್ವಿಟ್ರೆ...
ಎಲ್ಲಾ smooth... will explain to her ಬನ್ನಿ. 'Walkoo'ಅಂದ್ರಲ್ಲಾ . I shall take you...
ನಮ್ತೋಟಕ್ಕೆ, Fruits and cocoanut gardensoo ಅಲ್ದೆ... many many cattles, calfs, ಎಲ್ಲಾ
------------------------------------------------------
ಕಟ್ಹಾಕಿರ್ ತಾರೆ, ತೋಟದಲ್ಲೇ; because running off to mothers and drinking milk... small
hill within a mile...ಅಲ್ಲಿ all the big cows and buffaloes, beautiful grassನ
ಮೇಯ್ತಿರುತ್ತೆ... very poetical sceneoo... green green grass below, blue blue sky
above...ಬೇಗ್ಬನ್ನಿ ... for God's sake fee... "green green grass below. blue, blue
sky above"... may be beginning of my Nobel prize poetry... ಬನ್ನಿ,...
(Tears out of L. with saroja following after, opening her multicoloured
parasol)
ಬೋರಣ್ಣ: ಇಧೇನ್ಲೆ ಕ್ಯಾಶಾರಾ, ಪಿಸೀಪಿಸೀ ಇಂಗ್ಲೀಷ್ ಯೋಳ್ತಾ ಚಿಕ್ಕೋರು ಓಡೋದೇನೂ...
ಮಳೇನೆ ಇಲ್ದಾಗ, ಕಾಮನ ಬಿಲ್ಕೊಡೇನ ಇಲ್ಲಿಂದ್ಲೇ ಬಿಚ್ಕೊಂಡು ಇವ್ವಮ್ಮಾ ಇಂದೋಗೋದೇನು...
ಗಂಡಸ್ರಂಗೆ ಎಕ್ಕಡ ಮೆಟ್ತಾ ! ಇನ್ನವ್ವಾವ್ರು ಗುಡೀಲಿ ಎಂದ್ನಂತೆ ಸೂರ್ ಯನಮಸ್ಕಾರ ಆಕ್ತಾ ಸಾವ್ರಗಟ್ಲೇ ...
ಇನ್ನಯ್ಯಾ ಅವಸಯೊಂದ್ಗೆ ಊಟ ಒಳ್ಗೇನೇವೆ... ಇಲ್ಲಿ ಈ 'ಪಿಂಗಾಣಿ ಊಟ' ಆಗೊತ್ಲೂನೂವೆ...
ಮಾಡಿಪರ್ ದೆ ಇಲ್ಕಟ್ಟಿ ವಂದ್ಕೋಣೆನ ಎಂಡ್ಕೋಣೆ... ಯಾಕೋ ಕಾಣೆ... ಈ... ಗಲಾಟೆಲಿ...
(goes up to corner R. C. and picking up broom-stick)
ಆಯ್ನ ಆಪೀಸ್ ಕೊಣೆ ಗುಡಿಸದೇ ಮರ್ತೇಬಿಟ್ಟೆ...
(Alter a few strokes of sweeping with broom-stick... stopping and
gesturing with broom-stick)
ಇದೆಲ್ಲಾ ... ಅವ್ವಾ ಯೋಳ್ದಂಗೆ... 'ಒಳ್ಳೇದಕ್ಕಲ್ಲಾ'!
(curtain drops slowly with Bora sweeping)
--------------------------------
ಸೀನ್ - ೪
(Place same as before but now arranged as below)
C
|
|
|
|
|
|
|
|
Chair |
for Ramu | Hiriyannayya
|
Stool o | Kappanna O Table
|
|
Table with Type-writer |
|
F x x x x x x x x x x F
Fool-Lights
(Found entered Saroja on stool at type-writer and Rama Rao in chair...
Hirivannayya at table with Kappanna, fountain pen in hand held against a sheaf
of papers.)
ಕಪ್ಪಣ್ಣ: (In a loud voice)
No good listening. Sir.... must get on with municipality work... ನೋಡೀ ..
your first speech must be... for poor people. ಯಾಕೇಂತೀರಾ: Voteಗಲ್ಲಾ... ಪೇಟೇಲಿ;
extensionನಲ್ಲಲ್ಲಾ . But ನಿಮ್ಮ ಪೇಟೆಯಲ್ಲ ನೋಡಿದ್ದೇನೆ by my nose.ಗಲ್ಲಿಗ್ಳೂ ಓಣಿಗ್ಳೂ...
ಒಟ್ನಲ್ಲಿ hopeless condition. Therefore your first lecture must be sanitary.
ಬೊಮ್ಮನಪೇಟೇಲೇ ತಗೊಳ್ಳಿ ಸಾರ್ . Municipal office figures...
-------------------------------------------------------------------
ಆಕ್ಲಾರ್ ಕನ without introduction... ತಾರಿಫ್ ಸಂಪಾದಿಸ್ದೆ ... figures.... death
figures... ವರ್ಷಕ್ಕೆ ಸಾರ್ ನಿಮ್ಮ... now of course ನಮ್ಮ... ಈ ಊರಿನಲ್ಲಿ... let me refer...
(buries himself into pocket-book)
ರಾಮರಾವ್ : “Silver moonlight beams
that dance upon the streams...” type ಮಾಡಿ...
(Saroja lypes it sounding the words)
ಹಿರಿಯಣ್ಣಯ್ಯ : (In loud whisper)
ಕೇಳ್ದಾ, ಕಪ್ಪೂ! ... ಕದ್ದದ್ದು... ಆ coupling linesoo... from Sarojini's poetry book in
my glassಬೀರು ... the lines are...
ಕಪ್ಪಣ್ಣ: ಇದ್ಕೊಳ್ಳೀ ಸಾರ್ ! ನಮಗ್ಯಾಕೆ? Come back to sanitary figures! ನೋಡಿ.
Death figures not only in cholera alone but diarrohea and plus dyscntry also...
ನಿಮ್ಗೇ shock ಆಗುತ್ತೆ ಸಾರ್ .
ಸರೋಜ: ನೋಡೀ ... I can type of course but that 'Dance upon' ಆದ್ಮೇಲೆ
Dysentry ಬಂದ್ದಿದ್ದು, Only because ನಿಮ್ಮ moon beams ಆ ಮುನಿಸಿಪಾಲಿಟಿ death
figures... not to speak of streams and cholera. ಈ confused ಗಲಾಟೇಲಿ ... cool ಆಗಿ
consider ಮಾಡಿ ಹೇಳಿ ... I am afraid that...
ಕಪ್ಪಣ್ಣ: (To Hiriyannayya whispering)
Afraido.... ಗಮ್ನಿಸಿದ್ರಾ...? ನಮ್ಮ diarrhea ಎದುರ್ ಗೇ Where is their poetry
ಸಾರ್ !... now must get on:
(In a loud voice)
"after having dealt with death figures through cholera, dyseniry and
diarrohea. let me now proceed to prove to your satisfaction. Ladies & Gentlemen"....
ನಿಮ್ಮ speechoo ಸಾರ್ ... "that through the neglect of hitherto municipal management
because I was not there as president. death figures for plague. influenza and malaria
for grown-ups but also small-pox for not-yet-grown-ups have added to annual death figures in municipality".... shall write down.
ರಾಮರಾವ್: Can-not-help. Devi. Must concentrate terminous ಹಲ್ಕಚ್ಕೊಂಡು ಸಧ್ಯ type
ಮಾಡ್ಬಿಡಿ ಇದ್ನ . Inspired linesoo.
(Loudly)
Father liar! ಗಾಜಿನ ಬೀರೂ! My inspiration ಕೊಟ್ಟದ್ದು. ಲೈಬ್ರರಿ ಒಪ್ಪಿಸ್ತೇನ್ನಿಮಗೆ..
ಈ two lines.
----------------------------------------------------------
“Beams of silver moonlight
That on brooks alight"
ನಾನ್ಹೇಳಿದ್ನಲ್ಲಾ... ಅದ್ಗಾನ ಗಾಜಿನ ಬೀರೂನಲ್ಲಿದ್ರೆ...
ಹಿರಿಯಣ್ಣಯ್ಯ: ಕೇಳ್ದ್ಯಾ ಕಪ್ಪೂ? Scoundrel change ಮಾಡ್ಬಿಟ್ಟ linesoನ A! gain ಕದ್ದದ್ದು B
and Sillyly, ಮೊನ್ಮೊನ್ನೆ ಅವನೇ ಸ್ಟೇಷನ್ನಲ್ಲಿ ಕೊಂಡುಕೊಂಡ ಬಂದ magazineನಲ್ಲಿ
ಬಂದ lines ಓದಿದ ಜ್ಞಾಪಕ ಬರುತ್ತೆ, Thiefoo... Nobel prize ಅಂತೆ, ಈ... ಈ...
ಕಪ್ಪಣ್ಣ: Ignoble... ಅಲ್ವೆ ಸಾರ್ wordoo? ನಮಗ್ಯಾಕ್ಸಾರ್ ಅವ್ರ ಕದ್ದ Poetry? Let us
come back to cholera.
ಸರೋಜ: ನೋಡೀ ... I can concentrate upon my work, but I am afraid... that
you...
ರಾಮರಾವ್: am a thief of poetryಂತಾ ತಿಳ್ಕೊಂಡಿದ್ದೀರಾ? ನನ್ನ... but to show you...
ಈಗ್ಹೇಳಿದ್ದ lines ಎಲ್ಲಾ by some accidentಗಾಜಿನ ಬೀರೂ and magazineನಲ್ಲಿ ಬಂದಿದ್ರೂನೂವೆ...
(defiantly. to the screen)
mind you... I don't admit it... still I shall show my own unquestionable poetry originally... ದಯವಿಟ್ಟು ಆ cholera, diarrohea ಕಿವಿಗೆ ಹಾಕ್ಕೊಳ್ದೇ Concentrate ಮಾಡಿ...
get on with the type-writing...
(tugging fiercely at his fore-lock...)
Silver moon-light ಯಾಕೆ, ಬೇರೆ ಏನೂ ಇಲ್ವೆ natureನಲ್ಲಿ ?... ಆಂ... ಬರೀರಿ.
Golden sunlight down the hill-Lightens waters of the river ಸರ್ ಯಾಗಿಲ್ವಾ... running
water ಆಗ್ಯೂ ಇರ್ ಬೇಕು . hillಗೆ rhymeoo ಆಗ್ಬೇಕು... can you not suggest for God's sake?
ಕಪ್ಪಣ್ಣ: (Coming close to the partition screen)
Can supply necessary information, but only.if permission coming from my
salary-paying-master appointed yesterday properly before lawyer. ಇದಕ್ಕೆ ಏನು ? for
all the balance of your Poetries up to nobel prize itself... that lady ಬರೀ
typewritero೧... ನೀವು ಹುಡುಕ್ತಿರೋ- but for me never-ಈ ಯುಗವೆಲ್ಲಾ ನಿಮಗ ಸಿಕ್ಕಲಾರ್ ದ
wordoo... shall give you gratis-free. Question:- running water of similar h-
i-l-l; answer equals r-i-double. 1. Natal dictionarynನಲ್ಲಿದೆ. Therefore your poetry with
proper coupling lines equals:
Gold coloured sunlight washing hills
Therefore muse join the hill-bottom rills.
(resuming his seal, to Hiriyannayya)
----------------------------------------------
ಸಾರ್ , if this is Nobel prize poetry, ಭಿರ್ ಟಕ್ಕೆ twine ಬಿಟ್ಟಾಗೆ ಗಜಗಜ
ಎಳ್ದುಬಿಟ್ಟೇನು, ಸಾರ್. ಆ ಹೆಂಗಸ್ಗೆ hundred rupees ಕೊಟ್ರೂ ಅವ್ರೇನು ಬರ್ ದಾರು ?... ನಾವಿಬ್ರೂ
Nobel prizer... plus of course municipality work and Rao Saheb of course.
per contract before lawyer ಇಲ್ದಿದ್ರೂನೂವೆ , per man to man contract included... ಈ
Nobel prizeಗೆ ಒಂದ್ಕೈ ನೋಡಿಬಿಡೋನ್ವೆ? Not now of course... never mind this small
poetry and this gratis information viz., rills. Viz=namely. But ಹೋಗ್ಲೀ ಸಾರ್ ...
ನಮ್ಮ workou get on ಆಗೋಣ! ಒಂದು, ಆತ್ಮಡೇ Workಓ ನನ್ನ Natal ಇಲ್ಲಿದೆ... ಐಬು..! ...
but Supplies Cut off from enemy because dictionary trunk ನಲ್ಲಿದೆ, ಗಾಜಿನ
ಬೀರೂಲಿಲ್ಲ, Locked up. Key ಜನಿವಾರದಲ್ಲಿ! But ನಮಗ್ಯಾಕೆ ಅವ್ರೊದ್ದಾಟ-Let us come
back to cholera...
ರಾಮರಾವ್: (raging) Sunlightಹೂ ಬಿಟ್ಟಿಡಿ... Starlight ತೊಗೊಳ್ಳಿ...
ಸರೋಜ: (Sweetly, in a whisper)
ಹೀಗೆ ರೇಗಿದ್ರೆ poetry ಬರೋಲ್ಲ. That man, mannerless he might be, but "hillsಗೆ"
“rills”oo ready ಆಗಿ ಇಟ್ಗೊಂಡಿದ್ದಾನೆ ಮಂಡೇಲಿ, Englishನಲ್ಲಿ quite useful ಅಂತ ಕಾಣತ್ತೆ...
ಕಪ್ಪಣ್ಣ: ಕೇಳಿದ್ರಾ ಸಾರ್... admission of enemy !!!!ನನ್ನ ನಿಮ್ಮ 'Hindu'ಲಿ ಬಂದ್ಹಾಗೆ-
Defcatism... ಸುಸ್ತು ಸಾರ್ ಅವ್ರು, I tell you they are Kauravas and we... We ಏನು ...!
You... everything depends upon you...
(whispering into Hiriyannayya's ear)
therefore 1st thing... ಈ poetry ಗಿಯಟ್ರಿಗ್ಹೆದರ್ ಬೇಡಿ...ಈ poetry ನಾಲ್ಕು ಗಾಜಿನ
ಬೀರೂ ತುಂಬಿ...with or without Natal... my favourite author... perhaps after all this
is God's Leela... but Soonest possible ಕುಂತಿಕರ್ ಣ scene ಒಂದು ಮಾಡೇಬಿಡ್ಬೇಕು ನೀವು
before God's Lecla. ಯಾಕಂತೀರೋ... and...
(pointing to himsell)
but reverend mother umpire ಏನ್ಬೇಡಿ2ಒಂಡ್ರೂನೂವೆ don't ತ್ಯಾಗJ, your servant -
ಸರ್ಪಾಸ್ತ, ಏನೋ ಸಾರ್... ಹೀಗ 'Rao Saheb!' ಸಂಪಾದಿಸ ಗಜ್ಬಿಜೀಲಿ...ಈ moonlight,
sun-light beams and rays of hills and rills Nobel prize ಬಾಬ್ತೂನೂ of say lakh
of Rs.ಅಲ್ದೆ ಒಂದು 'Sir' title ಅತ್ಕಡೆಯಿಂದ ಕೊಚ್ಕೊಂಡು ನಮ್ಮನಮ್ಗೇ ಬಂದ್ಬಿಡುತ್ಯೋ
ಏನೋ ಕಾಣೇ ... All depends upon Almighte's ಲೀಲೆ ! But thank God! Natal sleeping
in my trunk.
ರಾಮರಾವ್: (loudly)
I can understand. Srimathi... Devi... ಈ ಗಲಾಟೇಲಿ you cannot type. ನನ್ನ
--------------------------------------------------
fatheroo paid servantಗ ಹೀಗೆ ಜಾಗಾ ಕೊಟ್ರೆ ಎಷ್ಟು advantage ತಗೊಳಿಧಾನೆ ನೋಡಿದ್ರಾ...
ಆ wormಉ! Can I not with help of your B.A. English get on with poetry?
ಸರೋಜ: ನಾನ್ಹೇಗ್ಹೇಳ್ಲಿ ? I am B.A, of course, but now only a type-writer. That
is all. You are asking my help. Though I hate that mannerless man... his Natal dictionary we can order from Higginbotham's by V.P. to-morrow.
ರಾಮರಾವ್: (excited)
...order...? wire ನಲ್ತರ್ ಸೋಣ.!
ಸರೋಜ: ಅದೆಲ್ಲಾ ನನ್ನ Wory... though I hate that man... ಹೇಗ್ಹೇಳ್ಲೀ ...
ಕಪ್ಪಣ್ಣ: (in a whisper)
ಸಾರ್ . Enemy admits Hate. But Hatred equals Fear. Therefore though
ಹೊಂಚಿಕೇಳೋದು is bad manners... but then, I am...ಅವಳೇ ಹೇಳಿದ್ದು mannerlessಊಂತಾ.
Therefore, with or without your permission... I must..
(comes to screen & listens)
ಸರೋಜ: ನಿಮ್ಮ father ಮೇಲೆ ಬಹಳ influence ಇಧೇಂತ ಕಾಣುತ್ತೆ, that creatureಗೆ.
ನೀವೇ explain ಮಾಡಿದ್ಹಾಗೆ, everything depends upon your grand-mother... from my
salary to the price of this typewriter. ಆಕೇ ಮೇಲ್ಯೇ dependingoo.
(in a whisper)
ಮೆಲ್ಲಗ್ಮಾತಾಡಿ, ಆ mannerless wily brute ಇದೆ ಅತ್ಕಡೆ, ಬರೀ Cotton curain in
the middle... ಹೊಂಚಿ ಕೇಳ್ತಿರಬಹುದು. ನೀವ್ಗಾನ ಬೇಗ ನಿಮ್ಮ Grandmotherಗೆ... ಇಷ್ಟು
orthodooಂತ ಗೊತ್ತಿರಲಿಲ್ಲ ನನಗೆ... ನನ್ನ ಹೊಟಲ್ ಮೀಲ್ಸು ... porcelain ಪಾತ್ರೆಗಳು
ಇವೆಲ್ಲಾ ಆಕೆಗೆ might-have-shocked ಆಗಿರೋ prejudiceನಲ್ಲಿ... ನಿಮ್ಮ and ನನಗೆ
prejudice ಆಗಿರೋವಾಗ first hearing by your grand mother... ಆ Cunning manಗೆ
ಸಿಕ್ಬಿಡ್ತೂ ಅಂದ್ರೆ ... ಬೇಗಾ you must forth-with talk to your grand mother.
(leans her left car to R)
ರಾಮರಾವ್: You see.... ಕೇಳ್ಸತ್ಯೇ?
ಸರೋಜ: (still lower)
Yes yes. Go on. but be careful and remember: every-thing depends, as that
bad mannered man said. upon your Grand mother... I understand it when he called
her Kunthi! You must not waste... ಕೇಳಿಸ್ತೇ ?
(on Rama Rao nodding assent)
After all everything question of money. But we are honestly working for...
---------------------------------------------------------------
ರಾಮರಾವ್: Yes yes. I know. “Nobel prize”. Grand motheroo too old for
education... up-to-date ತರ್ ಸೋಷ್ಟ್ಹೊತ್ಗೆ her ಆಯಸ್ will be finished. But in the
meanwhile... ಇಷ್ಟು ದಿನ್ದಿಂದ I was ಹೆದರಿಂಗ್ to talk to her... must meet her
somehow and have a...a...
ಸರೋಜ: Heart to heart talk but before they talk to her! because ಹೇಳ್ತೇನೆ ...
ನಾನು ಆ creature ಹಾಗೆ ಹೊಂಚಿಕೇಳ್ದೆ ಇದ್ರೂನೂವೆ... Could not help overheading-soon
as possible father with ಆ creature's brain ಹಿಂದಿಟ್ಕೊಂಡು ನಿಮ್ಮ motherನ meet
ಮಾಡೋಕ್ಮುಂಚೆ ನೀವೇ ಆಕೇನ meet ಮಾಡಿ ... after all pet grandson ನಿಮ್ಮ position...
and my position alsoಆಕೇಗೆ explain ಮಾಡ್ಬಿಟ್ಟು... ಈ creatureನ get rid ofಮಾಡೋದು
necessary for our programme...ಅಲ್ವೆ?
ಕಪ್ಪಣ್ಣ:[ to Hiriyannayya, whom he has brought to the screen to overhear all
of the latest speeches of Rama Rao and Saroja and after leading him back to L)
ಕೇಳಿದ್ರಾ, ಸಾರ್, Get rid of me ಅಂತೇ ತಿಳೀತೇ, B.Cityಲಿ ಹೋಗಿದ್ದ ಮಾರಿ ನಮ್ಮನೇ
ನುಗ್ಗಿ ಈಗ್ಬೆದರ್ ತಿಧಾಳೆ ... I told you. Fear!... ಈ ಕುಂತಿ interview with Karnaಗೇನೇ arrange
ಮಾಡ್ತಿಧಾಳೆ. Meeting of Kunti, of Abhimanyu with Mayahidimbi. Terrible ಹೆಂಗ್ಸೂ
ಸಾರ್, ಅವಳೂನೂವೆ. As before us ಆಗೋ ಹಾಗೆ yet still ಆಗೋ ಕೆಲ್ಸವಲ್ಲಾ ಸಾರ್.
Must admit. ನಗು ಬರುತ್ತೆ... ಧರ್ಮ ನಮ್ಕಡೆ. ಪರಮಾತ್ಮಾ our side. What can anybody
do?... ಅದೂ Test match is test match. Reverend Umpire's mind ನಲ್ಲಿ.. ಮೊದಲೇ
reserve seat Book ಮಾಡ್ಕೊಳ್ಳೋದು best thing. Too much rushoo ಅಲ್ವೇ? But one
thing: ಇದ್ರಲ್ಲೆಲ್ಲಾ “Understand yourself and act properly and that is your honourable self.” Authority Reverend Pope. Sometime poet. Present address: Vacuam c/o Italy. Head Quarters: Rome. Never mind. ಸದ್ಯಾ ಸಾರ್, ನೀವ್ನೋಡೋನ್ಮುಂಚೆ ಅಮ್ಮಾವನ್ನ
ಅವರ್ ಕಣ್ಗೆ ಸೋಕಿಸ್ಬಾರ್ ದು.
ಸರೋಜ: (Whispering to Rama Rao from curtain edge to which she has
drawn him)
Cannot hear a word...
ರಾಮರಾವ್ : Black cloth... cannot see also... ಬಾಕಲ್ಗಾಚೆ ಅಪ್ಪನ್ನ ಕರ್ ಕೊಂಡು ಹೋಗಿ
ಮಾತ್ನಾಡಿಸ್ತಿರಬೇಕು! What do you think... ಇದೆಲ್ಲಾ...
ಸರೋಜ: Must be deep plot.
ರಾಮರಾವ್: But what do you advise me? Srimati Devi... as you say... ಅಜ್ಜೀನ
ಹೇಗಾದ್ರೂ ನೋಡಿ ಸರ್ಮಾಡ್ಕೊಬೇಕೇ... ಅಲ್ವೇ?
-------------------------------------------------------
ಸರೋಜ: Yes-but... before they do...
(Heard through C.... ಬೋರಣ್ಣ and ಸುಬ್ಬಮ್ಮ )
ಬೋರಣ್ಣ: ಉಗ್ರಪ್ಪಾ, ಯಜಮಾನ್ನೂವೆ, ಅಪ್ಪಯ್ಯನೂವೆ ಬೀದಿಬಾಕಲ್ಕಡೆ ಕುಂತೂ,
ಬರೀತ್ಲೂ ಚಿಕ್ಕೋವ್ರೂ, ಅವಮ್ನೂವೆ ಮಾಡಿ ಬಾಕಲ್ಕಡೆ ಕುಂತು ಇಂಗ್ಲೀಸೂ ಕಣ್ಡಾ ಪಿಸಿಪಿಸಿ'ಂತಾ
ಗುಸುಗುಟ್ಕೊಂತಾ... ಮದ್ಯದಾಗೆ ಪರ್ ದೆ ಬಿಟ್ಕೊಂಡು ಕುಂತವ್ರೆ... ನೀವೇ ಬತ್ತಿರಾ.. ಅಂಗಾರೆ
ಬನ್ನೀ... ಉಲೀ ಚರ್ ಮ ಆಸ್ತೀನಿ ಮೊದ್ಲೆತ್ಕೊಂಡೋಗಿ.
ಸುಬ್ಬಮ್ಮ: ಹೌದು. ಹೀಗೆ ಹೇಸ್ಗೆಪಟ್ಟು ಉಪಯೋಗ್ವಿಲ್ಲ. ಹೀಗೆ ಮುಂದಿನ್ನೋಣೇಲಿ ಪರ್ ದೆ
ಬಿಟ್ಕಂಡು ಮಗು ಒಂದ್ಕಡೆ, ಹುಡ್ಗ ಒಂದ್ಕಡೆ... ಇಷ್ಟು ದಿನ ಆಡ್ತಿದ್ದ ನಾಟ್ಕಾನ ಈಕ್ಷಣ್ವೇ ಇತ್ಯರ್ಥ
ಮಾಡ್ತಿಡೋದು ಉತ್ಮ ಅಲ್ವೇ?...
ಬೋರಣ್ಣ: ಅಲ್ದೇ ಏನ್ರವ್ವಾ... ಆವಸಯ್ನೂ, ಅವಮ್ನೂ ಬಂದ್ದಿನಾನೇ ಕಾದ್ಬಿಟ್ಟಿರ್ದ್ದೇಕಾದ
ಜಗ್ಳಾನಾ... ಇದ್ವರ್ರೂ ಬುಟ್ಟಿದ್ದೇ ತಪ್ಪೂರವ್ವಾ... ಈಗ್ಲಾದ್ರೂವೆ "ಇಂಗೋ!” ಅಲ್ಲ “ಅಂಗೋ”,
ನೀವೇ ಕುಂತು ತನ್ಕೆಮಾಡಿ ತೀರಿಸ್ಬಿಡಿ.
ಸುಬ್ಬಮ್ಮ: ನಡ್ಯೋ.
ಕಪ್ಪಣ್ಣ: Good God! Reverend Kunti Coming... ಈಗ್ಸಾರ್ ಇಧೆ everything,
ಹೆದರ್ ಬೇಡಿ. Have already managed ಮಾತೋಶ್ರೀ: umpire with humble Sanskrit. Bold
face ಇಟ್ಕೊಳ್ಳಿ... behind ನಿಂತಿದ್ದೇನೆ. To manage everything. But you must speak to reverend lady... before opposite camp..
ಸರೋಜ: ಅಕೋ ನೋಡಿ. ನಿಮ್ಮ grandmother ಬಾರ್ ತಾರೇಂತ್ಕಾಣುತ್ತೆ, ಏ ನ್ಹೇಳ್ತೀರೋ
ಹ್ಯಾಗ್ಹೇಳ್ತೀರೋ d epends upon ಬೆಂಗಳೂರಿನಲ್ಲಿ ನೀವು ಹೇಳ್ಕೊಂಡ influence ಮೇಲೆ, But
whatever you can do you must do quickly. I can of course do nothing but encourage.
One thing: fatherಓ quite harmless. But paid scrvant- what a clever
scoundrel to take advantage from harmless gentleman like your father! ಅವ್ನು ಈ
ಮನೇಲಿರೂವರೆಗೆ ಈ mother and son. Grandmother and Grandson father and son
ಜಗ್ಳಗ್ಳು ಆಗ್ತಾನೇ ಇರುತ್ವೆ, Therefore your first idea is to get rid of him.., of course
you can get many type-writers like myself.... therefore ನೀವೊದ್ಮಾತ್ಹೇಳ್ಬಿಡಿ ... ನನ್ನಿಂದ
ಏನಾದ್ರೂ impediments ಇರೋದಾದ್ರೆ shall go away now alone.
ರಾಮರಾವ್: (Helplessly)
ಹಯ್ಯಯ್ಯೋ ಶ್ರೀಮತಿ ದೇವಿ! ನಿವೆ! ನೀವೇ ಹೊರಟೋಗೋದೇ!!... ಈಗ!!! ಆ
rolton scoundrel ಹೇಳ್ದ್ಹಾಗೆ... battle time ಇದು. ಸುಮ್ಮನೇ ಇರಿ... ಅಜ್ಜಿಗೆ ನನ್ಮೇಲಿರೋ
ಮಮತೆ ನಿಮಗೊತ್ತಿಲ್ಲಾ... shall get rid of the fellow at once... ಅಜ್ಜಿ! ಬಾ! ಕೂತ್ಕೋ
ಕುರ್ಚಿಮೇಲೆ.
(rushing up to C)
-------------------------------------------------------------
ಕಪ್ಪಣ್ಣ: (Swinging the rings of the curtain to clear at least two yards of
common space between the hither-lo fully-curain-divided room: to Rama Rao)
ದೊಡ್ಡಮ್ಮಾವು ಮಡಿ: ಸೋಮವಾರ; ಉಪವಾಸ... ಕುರ್ಚಿ ಗಿರ್ಚಿಲಿ ಕೂತ್ಕಂಡು
ಮೈಲ್ಗೆ... ಬೋರಣ್ಣಾ... ಏನ್ಮಾಡ್ತಿದ್ದೀಯಾ, ಅಮ್ಮಾವ್ರು ನಿಂತ್ಕೊಡಿಧಾರೆ, ಹುಲಿಚರ್ಮ ತಂದ್ಹಾಸು.
ಬೋರಣ್ಣ: ಊಂ ಬುದ್ದೀ... ಇಕೋ.
(enter with rolled up tiger-skin)
ಕಪ್ಪಣ್ನ: (Pulling the screen-rings right up to F. twisting it and putting it
in a knot and pointing to mid-centre of the stage)
ಇಲ್ಹಾಸು.
ಸುಬ್ಬಮ್ಮ : (To Rama Rao]
ನೋಡು! ಹುಡ್ಗಾ ನೆನ್ಮೊನ್ನೆ ಶುಭ್ರವಾಗಿ ಬ್ರಾಹ್ಮಣ... ಬ್ರಹ್ಮಚಾರಿಯಾಗಿ ಬೆಂಗ್ಳೂರ್ ಗೆ
ಹೋದೂನು ಇಷ್ಟು ಬೇಗನೆ ಈ ಅವತಾರ.. ನಾನು ಮಡಿ... ಪೂಜೆ.
ಕಪ್ಪಣ್ಣ: (Standing in humble submission)
ಪುನಸ್ಕಾರ... ಪುಣ್ಯದಿವಸ... ವ್ರತ... ನಿಯಮ... ಒಟ್ನಲ್ಲಮ್ಮಾ, ತಾವು ಅಪ್ಣೇಕೊಡಿಸ್ದ
ಬ್ರಾಹ್ಮಣಿಕೆ ಈ ಕಾಲ್ದಲ್ಲಿ ವಿರಳ... ಅತಿ ವಿರಳ...
ಸುಬ್ಬಮ್ಮ: ಹೂಂಪಾ, ಅಧೇ ನಾನೀಗ ಹೇಳಿದ್ದದ್ದು, ಹುಡುಗನ್ಗೆ...
ಕಪ್ಪಣ್ಣ: ಕೂಡೀಮ್ಮಾ!... ನಾವೇನು ಗಂಡಸ್ರು. ತಾವು ನಿಂತ್ಕಂಡಿರೋದು ನಮಗಪಮಾನ.
ಇರ್ ಲಿ.. ಕೂಡೀಮ್ಮಾ.
ರಾಮರಾವ್: (As old lady is sitting down-in an excited tone)
ಅಜ್ಜೀ, ಈ black-guardನ... ಗೋಲನ್ಗೆಲ್ಲಾ ಬೆಚ್ಚಿಬೀಳ್ಬೇಡ... ಹೇಳ್ತೇನೆ ಕೇಳೂ...
(comes nearer)
ಸುಬ್ಬಮ್ಮ: (ರೇಗಿ) ದೂರಾ ನಿಂತ್ಕಳೋ, ಅಧ್ವಾನ್ನ! ಮಡೀ ನಾನು.... ಇಂಗ್ಲೀಷಿನಲ್ಲಿ
ನನ್ನ ಮಾತಾಡಿಸ್ಬೇಡ... ನೀನು ಮನೇಲ್ಹುಟ್ಟಿದ್ದೂ, ಮನೇಲ್ಬೆಳದಿದ್ದೂ... ಮನೆತನದ ಮತ..
ಕಪ್ಪಣ್ಣ: (Humble submitting)
ಆಚಾರ ವಿಚಾರಗ್ಳುನ್ನೂ, ಸಂತತಿಯ ಮರ್ ಯಾದೆ ಮುಂತಾದವುಗಳೂ, ಅಲ್ಲದೆ ಗೋತ್ರ
ಪ್ರವರಗಳ ಪ್ರಭಾವ ಇತ್ಯಾದಿಗಳನ್ನೂ ಮರೆತುಬಿಟ್ಟು... ಅಲ್ವೇಮ್ಮಾ?
ರಾಮರಾವ್: (Doubling his fists.)
I shall kill you... who are you I say... a peon... making a fool of my father...
I shall kill you...
--------------------------------------------------
ಸುಬ್ಬಮ್ಮ: (excited) ಹುಡ್ಗಾ ದುಡಕ್ಬೇಡಾ...
ಕಪ್ಪಣ್ಣ: (Calmly)
ಪರವಾ ಇಲ್ಲಮ್ಮಾ, ಹೆದರ್ ಬೇಡಿ, ಆ ಮಗು ನನ್ನ ಬೈದ ಬೈಗ್ಳೆಲಾ, ಇಂಗ್ಲಿಷಿನಲ್ಲಿ
ಬೈಯ್ಯೋವರೆಗೂ ಬಾಧಕವಿಲ್ಲ. ಕನ್ನಡದಲ್ಲಿ ಬೈದರೆ ತಾನೇ ತಮಗೆ ಮನೋವ್ಯವಸ್ಥೆ... ತಮ್ಮ ಮನಸ್ನ
ಔದಾರ್ಯ ನೋಯಿಸ್ದ್ಹಾಗೆ... ಇಂಗ್ಲೀಷಿನಲ್ಲಿ...... ಇದುವರೆಗೂ ಈ ಪಾಪಿ ನನ್ನ ಮೇಲೆ ಮಾಡ್ದ
ಆರೊಪ್ಣೆಗ್ಳೆಲ್ಲಾ ಮರ್ ತುಬಿಡೀಮ್ಮಾ... ಸೋಮವಾರ... ಪುಣ್ಯದಿನ... ವ್ರತ, ಶಾಂತಿ ತಗೊಳ್ಳಿ
ಮನಸ್ಸಿಗೆ, ಚಕ್ರಾಯ್ರು ರೇಗೋದ್ರಲ್ಲಿ ಆಶ್ಚರ್ಯವೇನೂ ಇಲ್ಲ. ಚಿಕ್ವಯಸ್ಸು... ದೊಡ್ಡ ಕುಟುಂಬ...
ದೊಡ್ಡ ರಕ್ತ... ದೊಡ್ಡಮನ್ತನ, ಆದ್ರೂನೂವೆ... ಬಾಲ್ಯ...ಶೈಶವ್ಯ... ಮಕ್ಳು ರೇಗಿದ್ರೆ ಮನಸ್ಸಿಗೆ
ತಂದ್ಕೋಬಾರ್ ದು ದೊಡ್ಡವ್ರೂಂತ ನಾನು ತಮಗೆ ಹೇಳೋಕೇನಮ್ಮಾ... ಪರಮಾತ್ಮಾಕೊಟ್ಟ ಅಲ್ಪ ಸ್ವಲ್ಪ
ಬುದ್ದೀನ.. ರಾಯರ ಸಹಾಯಕ್ಕೆಂತ ತಮ್ಮ ಪಾದಾರವಿಂದಗಳ ಧಾರೆ ಎರ್ ದು... ತಮ್ಮ ಇಷ್ಟದ
ಪ್ರಕಾರ... ಸಿಕ್ದ ಅಲ್ಪಸ್ವಲ್ಪ ಕೂಲಿಯಿಂದ ನನ್ನ ಅಲ್ದೆ ನನ್ನ ನಂಬಿರೋವ್ರ... ನಮ್ಹೊಟ್ಟೆಗ್ಳು
ಹೊರ್ ಕೊಳ್ಳೋಕೇಂತ... ಹುಟ್ಟಿದೂರ್ಬಿಟ್ಟು ಇಲ್ಲಿಗೆ ಬಂದ ಬಡಪಾಯಿ ಬ್ರಾಹ್ಮಣ... ನಾನೆಲ್ಲಿ? ರಾಜ
ಸಂತತೀಲಿ ಹುಟ್ಟಿ ಬೆಳೆದಿರೋ ಈ ಉತ್ತರ... ಅಲ್ಲ ಅಭಿಮನ್ಯು ಆದ ತಮ್ಮ ಈ ಕೌಮಾರ
ಕಂಠೀರವರಲ್ಲಿ?... ನಾನ್ಬಂದದ್ದೂ ಯಜಮಾನ್ರ...
ಸುಬ್ಬಮ್ಮ: (To Hinyannayya)
ಮಗೂ, ಇದ್ಯಾಕೆ ಹುಡುಗ ಹೀಗೆಲ್ರಮೇಲೂ ಹುಚ್ಚುಹುಚ್ಚಾಗಿ ರೇಗ್ಬೀಳ್ತಿಧಾನೆ? ಯಾವಾಗ್ಲೂ
ಇದ್ದಿದ್ದಿಲ್ಲ ಹೀಗೆ...
ಕಪ್ಪಣ್ಣ: (Taking Hiriyannayya to comer C and F)
ಹೇಳೇಬಿಡಿ ಸಾರ್ ! best chance. 'Boy splendidoo... but misguided and mislead
by that terrible ಹೆಂಗ್ಸೂ, therefore ಈ ಕ್ಷಣವೇ ಅವ್ಳು with her 13 ಸಾಮಾನ್ಸ್ , including
two terrible coloured umbrellas, boots, shoes, harmonium, veena plus ಪಿಟೀಲೂ
also... ಹೊರಗ್ಹಾಕ್ದೇ ಇದ್ರೆ...Grandson ಹೋದಹಾಗೇನೆ....... in Practicality like a
ghatasraddha ಮೊಮ್ಮಗನಿಗೆ ಮಾಡಿಟ್ಟಹಾಗೇನೆ...' ಅಂತ at once ಹೇಳ್ಬಿಡಿ ಸಾರ್.... Don't
forget Sringeri advice: 'ಎದೆಗುಂದಬೇಡ' etc. ಹಿಂದೇನೆ ಇರ್ತೇನೆ for contingencyಆ firm
ಈಗ ಐಬ್ ಆಂಡ್ ಕೋ, very limited.
ಸುಬ್ಬಮ್ಮ: ಇಲ್ಬಾರೋ ಮಗು, ಏನಿಧೆಲ್ಲಾ ಗಲಾಟೆ?
ಹಿರಿಯಣ್ಣಯ್ಯ: ನಾನೇನ್ಹೇಳ್ಳೀಮ್ಮಾ ! ನಾನೇನೋ ಯಾವಾಗಿನ ಹಾಗೆಯೇ. ಅದಕಕ್ಮೇಲೆ
ಇನ್ನೇನು ಹೇಳೇನು? ನಿನಗ್ತಿಯದ್ದು ನಾನೇನೂ ಹೇಳ್ತಾರೆ.
ರಾಮರಾವ್: ಆದರೆ ನಾನ್ಹೇಳ್ತೇನೆ... ಅಜ್ಜಿಗೆ ತಿಳಿಯದು ನಾನ್ಹೇಳ್ತೇನೆ, ಅಜ್ಜಿ ನನ್ನಂಬು...
ಅಪ್ಪನ್ನಂಬ್ಬೇಡ... ಅಪ್ಪ ಈ ಪೋಕರೀನ ನಿನ್ನ ಕೇಳದ ಹಾಗೆ ಸಂಬ್ಳಕ್ಕಿಡ್ಕೊಂಡು ನಮ್ಕುಟುಂಬದ
ಮೇಲೆ ಫಿತೂರಿ ಮಾಡ್ತಿಧಾನೆ...
-------------------------------------------------
ಸುಬ್ಬಮ್ಮ: ಸಾಕು, ನಿಲ್ಸೋ!... ಮತಕಳೊಂಡ ಪಾಪದ ಜತೇಲಿ...
ಕಪ್ಪಣ್ಣ: (To himself but very much aloud and beating on his fore-head)
ಪಿತನ್ನ ನಿಂದಿಸೋ ರೌರವಾದಿ ನರಕಾನ್ನೂ? ಇದೆಲ್ಲಾ ವಿಧಿ, ಕಲಿಯುಗದ ಮಾಯೆ...
ರಾಕ್ಷಸಿಯರ ಸಹವಾಸ! ತ್ಸು! ತ್ಸು!! ತದ್ಸು!!! ತ್ಸು !!!!
(ಪಕ್ಕದಲ್ಲಿ ನಿಂತ ಬೊರನಿಗೆ)
ನೆನ್ನೆ ಬಂದ ನನಿಗೇ ಹೀಗಿದೆಯಲ್ಲಾ ಬೋರಣ್ಣಾ! ಆಯಸ್ಸೆಲ್ಲಾ ಈ ಉತ್ಕೃಷ್ಟವಾದ
ಕುಟುಂಬದಲ್ಲಿ ಸೇವೆಮಾಡೋ ಪುಣ್ಯದಲ್ಲೇ ಕಳೆದು, ಇನ್ಕನ್ಮುಚ್ಚಿದಮೇಲೂ ಅಲ್ಲಿ ಮೇಲೆ
ಗಗನದಲ್ಲಿ ಕಾದಿರೋ ನಿನ್ನ ದೊಡ್ಡ ಧಣಿ ಸೇವೆಗೆ ಈಗ್ಲೊ ಆಗ್ಲೋ ಹೊರಡ್ತಾ ಇರೋ ನಿನ್ನೊಟ್ಟೆ
ಹ್ಯಾಗುರೀತಾ ಇರಬೇಕು... ಕೇಳಿದ್ಯಾ, ಚಿಕ್ಕಜಮಾನು ಹೇಳಿದ್ನ: ಹೆತ್ತ ತಂದೆ... ಪಿತೂರಿ ಮಾಡ್ತಾನೆ
ಅಂತ. ಒಂದೇ ಮಾತ್ನಲ್ಲಿ ಅಂದ್ಬಿಟ್ಟರಲ್ಲಾ ಚಿಕ್ಕೋರು... ಇನ್ಗತೀಯೇನು ಕುಟುಂಬಕ್ಕೆ? ತಂದೆ ಮಗ,
ಚಿಕ್ಕೋರು, ದೊಡ್ಡೋರು, ಧರ್ಮ, ಸ್ವರ್ಗ, ನರಕ ಈ ವ್ಯತ್ಯಾಸಾನೇ... ಈ ಇನ್ನೂ ಕಣ್ಬಿಡ್ದ
ಹುಡುಗರ ಕಣ್ಗೆ ಮುಚ್ಚಿಸ್ಬಿಟ್ಟ ಈ ಕಲ್ಯುಗದ ಮಾಯೆ... ಕಂಡ್ಯಾ ಬೋರಣ್ಣಾ!?
ಬೋರಣ್ಣ: (Who at every grate of Kappanna's last speech has been mounting
to a terrible pitch of a crescendo... now)
ದಿಟಾ-ನನ್ನೊಡ್ಯಾ.. ಆದ್ಯಾವ್ದೇವ್ರೋ... ಅದ್ಯಾವ್ದಿಂಡ್ರೋ... ಇಲ್ಲ, ನೀವೇ ಯೋಳ್ದಂಗೆ
ನನ್ಸೇವೇಗೆ ಮೇಲ್ಕಾದಿರೋ ನನ್ದಣಿನೋ... ತಿರುಗ್ಸರ್ ಬೇಕು ನಿಮ್ಕಾಲುಗಳ್ನ-ನಮ್ಮೂರ್ ಕಡೆ. ಚಿಕ್ಕೆಜಮಾನ್ರ್ಗೋ
ಒಂದೂ ತಿಳೀದು. ಇನ್ನು ಚಿಕ್ಕೋರೂ ಅವ್ವಸಮ್ಮ ಬಲೇಗೆ ಬುಡ್ಕೊಂಡು ಒದ್ದಾಡ್ತಿರೊ ಮೀನ್ಪಿಳ್ಳೆ ...
ದೊಡ್ಡಮ್ನೋರ್ ಗೆ ನಿಮ್ಮಂತೋವ್ರು ಇದ್ರೇನೇನೇ... ನೆಟ್ಟಾಗೋದು ಎಲ್ಲಾನೂವೆ...
ಕಪ್ಪಣ್ಣ: ಬೋರಣ್ಣಾ, ಚಿಕ್ಕೋರೇ ನನ್ನೇಲೆ ಬಿದ್ಮೇಲೆ ನಾನೇ ಮುಂದಾಗೋದು ತರವಲ್ಲ
ಬೋರಣ್ಣಾ! ಸತ್ಯವಾಗಿ ಕುಟುಂಬಕ್ಕೆ ಒಳ್ಳಿದ್ನ ಬಯ್ಸೋ ನಂಬ್ಕೆ ಮನುಷ್ಕ ಯಾರಾದ್ರೂ ಈ ನೀನ್ಹೇಳ್ದ
ಮಾತ್ನ ಆಕೆ ಕಿವಿಗೆ ಹಾಕಿದ್ರೆ...
ಬೋರಣ್ಣ: ಯಾರನ್ಬುದ್ದೀ.. ನಾನೇ ಯೋಳ್ತೀನಿ.
(rushes sobbing to Subbamma)
ಒಳಕ್ಬರ್ ರವ್ವಾ.. ಎಲ್ಲಾನೂ ನಾನ್ಯೇಳ್ತಿವ್ನಿ! ಇವ್ರಿವ್ರೇ ಸರ್ಮಾಡೋ ಅಂಗಿಲ್ಲ ಈ ಜಗ್ಳಾನೆಲ್ಲಾ...
ಎದ್ಬರ್ ರವ್ವಾ...
ಸುಬ್ಬಮ್ಮ: ಇದೇನ್ನಾಟ್ಕಾನೋ?! ಬೋರ.
ಕಪ್ಪಣ್ಣ: ನಾಟಕವೇನಮ್ಮಾ... ಕುಟುಂಬಕ್ಕೆ ನೀವ್ಬೇಕು. ನಿಮಗೆ ಕುಟುಂಬ ಮುಂದಕ್ಬರಬೇಕು...
ಈ ವಿಷ್ಯದಲ್ಲಿ... ಹೀನ್ಜಾತೀಲಿ ಹುಟ್ಟಿದ್ರೂನೂವ ಕುಟುಂಬ ಹಿತೈಷಿಯಾದ ಈ ಪ್ರಾಣಿಗೆ ಇರೋ
ಹೃದಯ ಇತ್ಯಾದಿಗಳೆಲ್ಲಾ ನಮ್ಮಗಳಿಗೆಲ್ಲಾ... ಎಲ್ಲಾ ಯಾಕೆ?...
(... Thumping his left pectoral resounding with his open palm...)
ಕಡುಪಾಪಿಯಾದ ನನಗಾನಾ ಇದ್ದಿದ್ರೆ... ಮಗ. ಪತ್ರ... ಜನಕ ಪಿತನ್ನ, ಧಿಕ್ಕರಿಸೋ...
------------------------------------------------
ಪರುಷವಾಕ್ಯಗ್ಳು ಕೇಳಿ ನರಳೋ ಹಿಂಸೆ ನನಗಿರಿತ್ತಿಲ್ಲ... ಇವೆಲ್ಲಾನ್ನೂ ಬೋರಣ್ಣ ತಮ್ಮ ಪಾದಗಳಿಗೆ
ಸಮರ್ಪಿಸ್ನಾನಮ್ಮಾ... ಒಳಗೆ.
ಸುಬ್ಬಮ್ಮ: (who has already stood up and moved away towards C)
ಏನೋ ಬೋರಾ... ಇವೆಲ್ಲಾ..?
ಬೋರಣ್ಣ: (bending, rolling up tiger-skin, approaching C irritatedly)
ಒಳಕೊಂಡ್ರಪ್ಪಾ, ಯೋಳ್ತೀನಿ, ಅವಮ್ಮನ್ತಂತ್ರಾನೂ, ಎಲ್ಲಾನೂವೆ...
(exits C with tiger-skin]
ರಾಮರಾವ್: (in his excitement approaching Subbamma)
ಅಜ್ಜಿ!... ನಂಬೇಡಾ... ಇದೆಲ್ಲಾ terrible conspiracy....ಬೋರ ಕೂಡಾ... bribedoo...
ಸುಬ್ಬಮ್ಮ: (exitting C) ಈ ಹಾಳು ಚಟ್ಟೆಗಾರ್ರ ಮಾತ್ನೂ, ಉಡುಪ್ನೂ ಬಿಟ್ಟು...
ಕಪ್ಪಣ್ಣ: ಪ್ರಾಯಶ್ಚಿತ್ರಾನೂ ಮಾಡಿ... ಶುಭ್ರವಾಗಿ ವಿಭೂತಿ ಸಹ...
ಸುಬ್ಬಮ್ಮ: ಅಧೇ! ಇದೆಲ್ಲಾ ಮಾಡಿದ್ಮೇಲೆ ಒಂದ್ವೇಳೆ...
ಕಪ್ಪಣ್ಣ: ಕಿವಿ ಕೊಟ್ಟೆನು... ಅಲ್ಲ... ಕೊಟ್ಟೀರಾ ಚಿಕ್ಕಜಮಾಗ್ರ ಮಾತ್ಗೆ...
ಸುಬ್ಬಮ್ಮ: ಹುಂ... ಅಧೇ
(exit)
ಕಪ್ಪಣ್ಣ: (Unknotling screen and elaborately restoring partition of the room)
ಸಾರ್... ನಿಮ್ಮ speech ಓ, nothingdo yet everything. Just what was wanted.
ಹಾಗಿರ್ ಬೇಕು speechoo; ಮಾತೂ ಆಡ್ಬೇಕು... meaningಗೂ ಇರ್ ಬಾರ್ ದು. Regular political
speechoo! ಅದೊಂದು department ಇಧೆ ಸಾರ್ ನಮಗೆ... representative, legislative plus
Congress also. ನಾವು attend ಮಾಡೋದು only if in big big places like Bombay
Calcutta. Delhi and London, Perhaps Geneva and Ottava also... ಅದಕ್ಕೀಗೇನ್
ಅವಸರವಿಲ್ಲಾ... but all these things after 'Sir Title' of course! ಈಗ್ಲೇ politics
ಮುಟ್ಟಿದ್ವೋ 'title'ಗೇ ಐಬು!
(as partition is completed)
Battle field restored but with what results... ವಿದುರ advising Kunti... on our behalfo... all ಅಭಿಮನ್ಯೂಸ್... ಉತ್ತರಾಸ್... ಮಾಯಾ ಹಿಡಂಬಿಸ್...ಕಣ್ ಕಣ್ಬಿಡ್ತಾ , ಕೈ ಕೈ
ಹಿಸಕ್ತಿಧಾರೆ... opposite side. ಇನ್ನು ಇಲ್ಲಿ ನಮ್ಮ municipal work Continue ಆಗೋಹಾಗಿಲ್ಲ,
(gathering up papers on the table.)
ಬನ್ನಿ, ತಾಲ್ಲೂಕು ಕಛೇರೀಲಿ... must meet those old councillors,
------------------------------------------------------
ಹಿರಿಯಣ್ಣಯ್ಯ: Quite right, Kappu... but stil...
ಕಪ್ಪಣ್ಣ: (Leading Hiriyannayya to Left)
Stillಏನೂ... hillಏನೂ...
(with a grin significantly indicating with his eyes the 'R' side of the battle-
field)
...ಇನ್ನು Rill ತಾನೇ ಏನೂ ಒಂದ್ಕೈ ನೋಡೇಬಿಡೋಣ... ಬೆದರೇಡ... ಬನ್ನಿ ಸಾರ್
and await developments from opposite battle camp.
(Execnt L...Kappanna and Hiriyannayya)
ರಾಮರಾವ್: (Tearing his hair and ಕೈ ಕೈ ಹಿಸಕ್ತಾ... approaching Saroja who is gazing)
ಸರೋಜ: (At L. murmering)
'ಮಾಯಾ ಹಿಡಂಬಿ'.... he said... 'ರಾಕ್ಷಸಿಯರ ಸಹವಾಸ'... did you hear?...that
poor old saintly lady's sweet mindನ ಎಷ್ಟು subtle ಆಗಿ poison ಮಾಡ್ಡಿಟ್ಟು... ನಮ್ಮ
position helpless ಮಾಡ್ಬಿಟ್ಟಿದ್ದಾನೆ ನೋಡಿ, ಆ wily worm... with his cheap ಅಮರಾನೋ ...
ಸಂಧ್ಯಾವದ್ನೆ ಮಂತ್ರಾನೋ...
ರಾಮರಾವ್: ಶ್ರೀಮತಿ ದೇವೀ... ಈಗ್ನೋಡಿ... ಅಜ್ಜಿ againstoo ನನಗೆ... don't know
what to do... besides insults for you... ಹಾಗಾದ್ರೂ avenge ಮಾಡ್ಬಿಡ್ತೇನೆ.
ಸರೋಜ: (Indignantly)
Shut up!... you are only a baby... ಈ western garbನಲ್ಲಿ half and half ಇಂಗ್ಲೀrಷ್ನ
ಹೇಳ್ತಾ ಆ Orthodox lady excited ಆಗಿ approach ನೀವು ಮಾಡಿದ್ನೇ... ಆ subtle villian
advantage ತೆಗೊಂಡಿದ್ದು ! ಇದೂ a sort of battle of wits... brain against brain... ನೀವೋ,
ಕೋಪಿಸ್ಕೋಬೇಡಿ, a ಬರೀ baby in this thing... by cooll thinking alone...
ನಿಮ್ಮ grandmother favourನಲ್ಲಿ ನಿಮ್ಮನ್ನೂ as before restore ಮಾಡ್ಡಿಟ್ಟು, ನನ್ನ... fancy!...
'ರಾಕ್ಷಸ' 'ಮಾಯಾ ಹಿಡಿಂಬಿ' ಅಂದ ಆ verminಗೆ ಬುದ್ದಿ ಕಲಿಸಿಬಿಟ್ಟೆನೇವೆ will stir from
this... battle field... this house. For all this. first thing: your grandmother's anger must be Cooled. Therefore ಈ clothes ಎಲ್ಲಾ ಬಿಟ್ಬಿಟ್ಟು... let me think.
(seats herself in chair and resting chin on palms)
ಖದರ್ ಪಂಚೆ... ಖದ್ದರ್ cuffless shirt and also ಗಾಂಧೀcap if available...?
ರಾಮರಾವ್: Certainly, Khaddar shop ಇದೆ ಪೇಟೇಲಿ .
ಸರೋಜ: ಇವುಗಳ್ನ Wear ಮಾಡ್ಕೊಂಡು, with three bright parallel ವಿಭೂತಿ lines
------------------------------------------------
drawn on forehead.... grandmotherಗೆ ಕಾಣಿಸ್ಕೋಬೇಕು , the very next time she sees
you, ಆಗ ನನ್ನ influence over you not quite bad ಅಂತ old ladyಗೆ ತೋಚಿದ momenಏ, I shall be able to play through her...my B.A.. passed brain game against ಆ unpassed candidate of perhaps not even S.S.L.C.... but Dictionary ನುಂಗ್ಬಿಟ್ಟು ... ಸಾಧುಗಳ್ನ
ಬೆದರಿಸ್ತಿರೋ ... do you see what I mean?
ರಾಮರಾವ್: (Helplessly)
Yes, ಶ್ರೀಮತಿ ದೇವಿ, ನೀವೇ ನನ್ನ ಬದುಕಿಸ್ಟೇಕು. from this... position, ನೀವ್ಹೇಳ್ದ್ಹಾಗೆ I will at once rush off.
ಸರೋಜ: The local Khaddar shop and purchase your disguise... ಯಾರ್ ಗೂ
ತಿಳಿಯ್ದಹಾಗೆ! In the mean-while I shall be thinking out future plans... ಬೇಗ್ಹೋಗಿ...
ಹೋಗ್ಬರೋದು ವಿದುರನಿಗೂ...
(ನಗುತ್ತಾ) ...I mean... ಬೋರನಿಗೂ ತಿಳಿಬಾರ್ ದು.
(Exit Saroja R)
ರಾಮರಾವ್: (Gazing at floor)
She is right. Poor noble Devi, ಮಾತುಮಾತಿಗೂ “I know better: I am your big
big sistero?! ಆಕೇನ 'ರಾಕ್ಷಸಿ' 'ಹಿಡಿಂಬಿ' etc! ಇಷ್ಟು insulಗ್ಳೂ ತಡ್ಕೊಂಡು... in Ajji's
love back again ನಿನ್ನ ಸೇರಿಸ್ಬಿಟ್ಟೇನೆ... I shall go away ಅಂದ್ರಲ್ಲಾ! Noble Woman! Poor
father...ಮೊದಲೇ Dufferoo... ಇನ್ನು ಇವನ್ನ Double duffer ಮಾಡ್ತಿರೂ ಈ SC೧undrelನ
ಮನೆಯಿಂದ ಒದ್ದೋಡ್ಸೋದು not possible except with ಶ್ರೀಮತಿ ದೇವೀಸ್ instructions,
'My Noble prize' must really go to her. Meanwhile... I must obey
orders... ನೋಡ್ದೋರೆಲ್ಲಾ ಪಟೇಲಿ ಏನನ್ಕೊಂಡಾರೋ ಕಾಣೆ, but ಹಲ್ಕಚ್ಕೊಂಡು must buy
and wear Khaddar disguise... from Jatka alone... this up-to-date clothes...
(Approaching L)
but what to do... according to my motto, must sacrifice for art's sake.
(Exit L)
(Curtain drops slowly)
-------------------------------------------
ಸೀನ್ - ೫
-Three hours later
(Same day. place same as scene 4. Find entered Subbamma)
ಸುಬ್ಬಮ್ಮ: ಬೋರಾ!
ಬೋರಣ್ಣ: ಅವ್ವಾ!
ಸುಬ್ಬಮ್ಮ: ಈ ಪರ್ ದೆ ಯಾಕೋ ಕಟ್ಟಿದ್ದು?... ಮಾಡಿ ವರಾಂಡಾದಲ್ವೇ?
ಬೋರಣ್ಣ: ಅವ್ವಾ, ಚಿಕ್ಕೆಜಮಾನ್ರ್ತ... ಅವ್ವಸಯ್ನ... ಚಿನ್ನದಂಥಾ ಮನುಷ್ಕಾ ಅವ್ವ ಆತ!
ಅವ್ವಯ್ಯನಗಾನ ಮನೇಲೇ ಇದ್ರೆ... ಚಿಕ್ಕಯಜಮಾನ್ನು ಕೈಲಿ... ದೊಡ್ಯಜಮಾಗ್ರಂಗೆ...ಈ ಊರಲ್ದೆ...
ತಾಲ್ಲೂಕಾನೂ ಅಲ್ಲ ಡಿಸ್ಟಿಕಟ್ನೂ ನಮ್ಮನೆಗೆ ತರೋ ಅಂಗೆ ಮಾಡ್ಬೈದ್ರವ್ವ!... ದೊಡ್ಯಜಮಾನು...
ದುಪಟೀ ಕಮಿಷನೇ... ಮನೇಕ್ಕರ್ ತಂದು... ಅವ್ವಾ?... ಅವು ಗುಮಾಸ್ತೆಗ್ಳು ಅಲ್ದೆ, ಪೋಲೀಸ್ನೋರೂ,
ಬಡವೂ... ಬಗ್ಗರೂ ಏಟ್ಜನ... ಕೈತೊಳದವ್ರ ನಮ್ಮಟ್ಟೇಲಿ... ಅಂಗೇನೇ ನಾನ್ಕಣ್ಮುಚ್ಚೋಕ್ಮುಂಚೆ...
ಚಿಕ್ಕದಣಿಕಾಲ್ದಲ್ಲಿ... ನಮ್ಕಣ್ಣೆದುರಿಗೆ... ಸಾವ್ರ ಜನ ನಿಮ್ಮಟ್ಟೀಲಿ ಕೈತೊಳೆಯೋದ್ನ... ಅವ್ವಸಯ್ಯ...
ಅವ್ವಾ... ಇದ್ನೆಲ್ಲಾ... ಮಾಡ್ಯಾನು.. ಆದ್ರೆ ಈ ವ್ವಸಮ್ಮ ಬಲೆಗೆ ಸಿಕ್ಕೊಂಡು ಚಿಕ್ಕೂರು...
ರೈಲ್ವೇಸನ್ ಚಟ್ಟಿಗಾರ್ ರಂಗೆ ಚಣೆ... ಕುಡ್ತ... ಇಂಗಲ್ಲಾ...
ಸುಬ್ಬಮ್ಮ: ಗೊತ್ತೋ ಮಂಕು!... ಆ ಹೊಸಾತನ್ಬಿಡಬಾರ್ ದು. ಆತ ಬಂದಾಗಿನಿಂದ್ಲೇ ....
ಲಾಗಾಯಿತಿನಿಂದ ಮಂಕ್ಮುಚ್ಚಿದ ಮಗು ಈಗೇನೋ ಬೆಚ್ಚಿಬಿದ್ದೋನ್ಹಾಗೆ ಕಣ್ಗಳು ಬಿಡ್ತಿದ್ದಾನೆ...
ನಾನ್ಹೇಳಿದ್ದು ಈ ಪರದೆಮಾತು.
ಬೋರಣ್ಣ: ನೋಡ್ರವ್ವಾ! ಚಿಕ್ಕಯ್ಯ.... ಈವಮ್ಮ... 'ಟಿಕಾ! ಟಿಕಾ!'೦ತಾ ಆ ಮಿಸೀನಿನ್ಮೇಲೆ
ಕೈಓಡಾಡಿಸ್ತಿರೋವಾಗ-ಯಂಗವ್ವಾ ರಾಯ್ರು ಮೂನ್ಸಿಪಾಲ್ಟಿ ಕೆಲ್ಲ ಆವಯ್ಯನ ಕೈಲಿ ಕಲ್ಯೋದು...
ಅದ್ಕೇನೇವೆ... ಒಂದೊಣೇನ ಎಂಡೋಣೆಮಾಡಾಕೆ...
(Ramu entering by R walks precipitately to Subbamma and in Gandhi dress
and buries his head at her feet... murmuring“ನಮಸ್ಕಾರ! ಅಜ್ಜಿ” and rising up recedes
and stands at attention)
ಸುಬ್ಬಮ್ಮ: ದೇವ್ರೇ ಗತಿ, ಇದ್ಯಾರಿದು?...
(slares fully a minute and bursts into tearful laughter)
ಚಿಕ್ಕೋನು... ಇದೇನದ್ಭುತಾ!
(holds out her arms. Ramu rushes forward and buries himself in his
Grandmother's lap... both sobbing ... Bora too affected to bear the sight... hanging
on to the curtain... also sobs)
-----------------------------------------------
ಸುಬ್ಬಮ್ಮ: (Nursing the boy, drying his tears with her ಸೆರಗು) ಇದೇನ್ಕಂದ,
ಯಾವ್ದೇವ್ರು ನಿನಗೀಬುದ್ದೀನ, ಇಷ್ಟು ಬೇಗನೆವೆ.. ಕೊಟ್ಟದ್ದೂ?
ರಾಮರಾವ್: (Sinking to the floor)
ದೇವ್ರಲ್ಲ... ಅಜ್ಜಿ... ದೇವಿ!
(Nursing his grandmothers feet while seated there)
ಈ... ಶ್ರೀಮತಿದೇವಿ... ನೋಡಜ್ಜಿ ಬೆಂಗೂರಲ್ಲಿ ಅವಳ ಕಂಡಾಗ... ನೀನ್ಯಾರು... ಯೇನೂ,
ಎಲ್ಲಾನೂ ಕೇಳ್ಕೊಂಡು... ನನ್ಕೈಯಿಂದ ಒಂದ್ಕಾಸೂ ಖಿರ್ಚಿಲ್ಲಾ ಅಜ್ಜಿ... ನನ್ನಿಂಗ್ಲೀಷ್ಗೆ ಆಶ್ಚರ್ಯಪಟ್ಟು,
ಇಷ್ಟಕ್ಕೂ ಕಾಲೇಜ್ B.A.. B.L.. ಪ್ಯಾಸಿಲ್ದೆನೇ ನನ್ಗಿರೋ ಇಂಗ್ಲಿಷ್ಗೆ ಬೆಚ್ಚಿಬಿದ್ದು... ನನ್ನ ಇಂಗ್ಲಿಷ್
ಕಾವ್ಯಗಳುಗಾನ ಇಂಗ್ಲೆಂಡಿಗೆ ತಿಳೀತೊ... ಅವ್ಳೂಮ್ಮಾ ಇಂಗ್ಲೀಷ್ ಪ್ಯಾಸ್ ಮಾಡ್ದೋಳು....
ಸರಿಯಾಗಿಮ್ಮಾ ನನ್ನಿಂಗ್ಲೀಷು.
(pointing to type-writer at R.F.)
ಅಚ್ಚಾಗಿ-ಇಂಗ್ಲೆಂಡ್-ವಿಲಾಯ್ತೀಗೆ-ಮುಟ್ಟಿದ್ರೆ.... 'Nobel prize' ಅಂದ್ರೆ ಸನ್ಮಾನಾಮ್ಮಾ...
ಲಕ್ಷರೂಪಾಯಿ ದುಡ್ಡೂ ಅಲ್ದೆ 'Sir' title ... ದೊಡ್ಡ ವೀರಪ್ಪನ ಕೂನಿಯಾದಾಗ... ಊರಿಗೆ
ಬಂದಿದ್ರೂ ನೋಡು ದಿವಾನ್ರು... ಅವ್ರ ಹಾಗೇ 'ಸರ್' ಪಟ್ಟ... ಇನ್ಮೂರ್ ನಾಲ್ಕು ವರ್ಷದಲ್ಲಿ ನನ್ಗೆ
ಸಿಕ್ಕುತ್ತೆ... ಅಜ್ಜಿ. ಇದೆಲ್ಲ ಈಗ್ಹೇಳಿ... ಇಧೇನೇಳಿದ್ರೂ ನಂಬೋ ಹಾಗಿಲ್ಲ ನೀನು. ಆಕೇನೇ ಹೇಳಿದ್ದು
ಬೆಂಗ್ಳೂರಲ್ಲಿ ಹೇಗಿದ್ರೂ ಸರಿಹೋಗುತ್ತೆ... ಮನೆಗೆ ಬರೋತ್ಲೂವೆ... ಮನೇಗೆ ದೊಡ್ಡೋರು
ಹ್ಯಾಗ್ಹೇಳ್ತಾರೋ ಹಾಗೇ ನಡ್ಕೊಳ್ಳೋದು ಧರ್ಮ... ನಿಮ್ಮಜ್ಜೀ ಸಂತೋಷಕ್ಕೋಸ್ಕರ ಹುಟ್ಟಿರೋ
ನೀನು... ಆಕೆ ಕಣ್ಣಿಗೆ ಸರಿಯಾಗಿ ನಡ್ಕೊಳ್ಳೋದಂತ... ಹಯ್ಯೋ ಅಜ್ಜಿ... ಅಪ್ಪಾ ಸಾಧು... ಆ
ಹೊಸ್ಬ... ಅವನ್ಯಾಕೆ ಬಯ್ಲಿ... ಈಕೆ....
(Pointing to R)
ಮದುವೆಯಾಗಿ... ಬಡತನ ತಡೀಲಾರ್ ದೆ... ಹೆತ್ತ ಮಗನ್ನೂ ಸಾಕಲಾರ್ ದೆ... ನಾನೇನ್ಹೇಳೋದಜ್ಜೀ...
ಆಕೇನ ಒಂದ್ಮಾತಾಡ್ಡಿ... ಆಮಲ್ಬೇಕಾದ್ರೆ ... ಕಳಿಸ್ಬಿಡು.
ಸರೋಜ: (Suddenly entenng by R dressed in orthodox Karnatak style in a sweet voice)
ಬೋರಣ್ಣಾ... ದಯವಿಟ್ಟು ಒಂದ್ಜಟ್ಕ ರೈಲ್ವೆಸ್ಟೇಷನ್ಗೆ... (Noticing Ramu, Subbamma and Bora) ಕ್ಷಮ್ಸೀಮ್ಮಾ... ನೀವು... ಇಲ್ಲಿರೋದು ಗೊತ್ತಿದ್ದಿಲ್ಲ. (approaching Subbamma)
ನಿಂತಿಧಿರಾ... ಬೋರಣ್ಣಾ... ಜಟ್ಕಾ ಇರ್ಲಿ. ಅಮ್ಮಾವ್ರು ಇಷ್ಟೊತ್ತು ನಿಂತಿದ್ದಿರೋದು
ನಿನ್ ತಪ್ಪೋ... ಚಿಕ್ಕೆಜಮಾನ ತಪ್ಪೋ! ಸದ್ಯ ಆ ಹುಲಿ ಚರ್ಮಾನ ಹಾಸು... ಯಜಮಾನಮ್ನೋರು
ಕೂತ್ಕೊಳ್ಳೀ... ಕ್ಷಮ್ಸೀಮ್ಮಾ, ನಿಮ್ಮ ಔದಾರದಲ್ಲಿ ಮಗ್ನಾಗ್ಲೀ, ಮೊಮ್ಮಗ್ನಾಗ್ಲೀ, ಆಳಾಗ್ಲೀ,
------------------------------------------------
ಅಡಿಯಾಳಾಗ್ಲಿ... ಅವ್ರವ್ರ ಧರ್ಮ ಕರ್ಮ ಮರ್ ತಿರೋ ತಪ್ಪು ನಿಮ್ಮಧೇಮ್ಮಾ... ಆದ್ರೆ ದೊಡ್ಡವರಾದ
ನಿಮಗೆ ನಾನೇನು ಹೇಳೇನು ? ಆದ್ರೆ ನನ್ನ ಹೊಟ್ಟೆಪಾಡ್ಗೂ... ನನ್ನ ಗಂಡನಿಗೆ ಹೆತ್ತು... ಇನ್ನೂನೂವೆ
ಬೆಂಗ್ಳೂರಲ್ಲಿ ನಾನಿಲ್ದೆ “ಅಮ್ಮಾ!.... ಅಮ್ಮಾ!೦ತ” ಆರಚಿಕೊಳ್ಳಿರೋ ಒಂದ್ಮಗು ಹೊಟ್ಟೆಪಾಡ್ಗೂ...
ಸಂಪಾದಿಸೋಕೆ ಬಂದ ಹೆಂಗ್ಸಾದ ನನ್ನ-ಏನ್ಹೇಳ್ದ ಚಿಕ್ಕರಾಯರೇ... ಆತ...? 'ರಾಕ್ಷಸೀನೆ'? ಹೀಗೆ...
ನಿಮ್ಮಣ್ಣೆದುರ್ ಗೇ ನನ್ನ ಹೀಯಾಳಿಸಿ..
(sobs)
ಸುಬ್ಬಮ್ಮ: ಹಯ್ಯೋ... ನನಿಗ್ಮಾತು ಬರೋಲ್ಲ.... ಹಳೆಕಾಲ್ದ ಮುದುಕಿ ನಾನೂ... ಈಗ್ತಾನೇ
ತಿಳೀತು ನನ್ಕಂದನ ಬಾಯಿಂದ... ನೀವು ಮುತ್ತದೆ, ನಮ್ಮವರೂಂತ...
ಸರೋಜ: ಮಾತಿರ್ಲೀಮ್ಮಾ,
(to Bora who has returned with rolled up tiger-skin)
ಹಾಸು ಬೋರಣ್ಣಾ,
(Bora does accordingly... after Subbamma seats herself, with Ramu still at
her feet, Saroja flops down but gracefully on the bare floor)
ಸುಬ್ಬಮ್ಮ: ಹಯ್ಯೋ ಬರೀನೆಲ... ಬೋರಾ... ರತ್ನಕಂಬಳಿ...
ಸರೋಜ: ಬೇಡಾ ಬೋರಣ್ಣ.
ಸುಬ್ಬಮ್ಮ: ಅಲ್ಲ... ಬರೀನೆಲ...
ಸರೋಜ: ಅಮ್ಮಾ, ನಿಮ್ಮನೇ ಆತಿಥ್ಯಾನ ಎರಡುದಿನಕ್ಮೇಲೆ ಅನುಭವಿಸೋ ಲಭ್ಯ
ನನಗಿಲ್ಲದ್ದು ... ನನ್ನ ಪುರಾಕೃತ ಪಾಪ... ಆದ್ರೂ ಅನುಭವಿಸ್ತಷ್ಟು ಅನುಭವಾನ ಒಂದೇ ಮಾತಲ್ಲೇ
ಹೇಳ್ತನೆ... ಬೋರಣ್ಣಮ್ಮಾ... ಈ ಕೋಣೆನ ಎಷ್ಟು ಚೊಕ್ಕವಾಗಿ ಗುಡಿಸ್ತಾನೇಂತೀರಾ.. ಒಂದು
ಕಶ್ಮಲ, ಒಂದು ಕಾಷ್ಟ ಇಲ್ಲ ಶುಭ್ರವಾಗಿ ಭೂದೇವಿನ ನೆಲ ಈ ಮನೇಲಿ, ಜರ್ ತಾರಿ ಸೀರೆ ಅಗ್ಲಿ,
ನೀರಾಜೀ ಆಗ್ಲಿ... ಮಾಸೋದಿಲ್ಲಾಮ್ಮಾ... ಸೀರೆ... ಹಣ್ಣು ಹಣ್ಣು ಮುದುಕನಾದ್ರೂವೆ...
ಆಶ್ಚರ್ಯವೇನು... ಹಳೇ ಸೇವಕ ಮನೇಗೆ... ಭಕ್ತ ಕುಟುಂಬಕ್ಕೆ... ಮೈಬಗ್ಗಿ ಕೆಲ್ಸ ಮಾಡ್ತಾನೆ...
ಚೊಕ್ಕಟವಾಗಿ... ನನಗೆ ತಿಳಿದಷ್ಟು ಮಟ್ಗೂಮ್ಮಾ ನಿಮ್ಮ ಪುತ್ರ, ನಿಮ್ಮ ಪೌತ್ರ ಇವರಲ್ಲಿ ಬೇರೆ
ಯಾರೂ ಬಂಧುಗಳು ಇಲ್ಲಿರೋ ನಿಮಗೆ ಬೋರಣ್ಣ ಇರೋವರೆಗೂ... ಯಾವ ಹಾನೀನೂ
ಸಂಭವಿಸೋ ಹಾಗಿಲ್ಲಾಮ್ಮಾ ಇಲ್ಲಿ ನಾನು B.A., ಮಾಡಾಗ ಭಗವದ್ಗೀತೆ ಭಾಗ ಒಂದ್ರಲ್ಲಿ... 'ನಹಿ
ಕಲ್ಯಾಣಕೃತ್ಕಶ್ಚಿತ್... ದುರ್ ಗತಿಂ ತಾತ ಗಚ್ಚತಿ' ... ಅಂದ್ಹಾಗೆ, ಸತೃತಿ ಮಾಡೋಕ್ಕೆ ಹಾನಿಯಿಲ್ಲಾಂತ
ಪರಮಾತ್ಮಾ ಹೇಳಿದ್ದಾನೆ! ನಾನ್ತಾನೆ ಆಗ್ಲೀಮ್ಮಾ... ತಮ್ಮ ಮೊಮ್ಮಗನಿಗೆ ಬೇಕಾದ ಸಹಾಯಾನ
ಒದಗ್ಸೋಕೆ... ಕಾಲವಶಾತ್ ಬಂದು ಸಿಕ್ಕೊಂಡಿರೋ ನಾನು ತಾನೇ ಆಗ್ಲೀ ತಮ್ಮ ಕುಮಾರನಿಗೆ
ಮುನಿಸಿಪಾಲ್ಸಿ ರಾವ್ ಸಾಹೇಬ್ ಪಟ್ಟ ಇವುಗಳ ಆರ್ಭಟಿಸ್ತಾ ಬಂದಿರೋ ಆತ್ನೇ ಆಗ್ಲಿ... ನಾವುಗಳು
ನಮ್ಮ ನಮ್ಮ ಹೊಟ್ಟೆಪಾಡ್ಗೆ ನಮಗ್ಸೇರದ ಕುಟುಂಬಕ್ಕೆ ಎಷ್ಟು ಕೃತ್ರಿಮ... ಕುಯುಕ್ತಿಗಳು
ಕುಚೋದ್ಯಗಳು ನಾವು ನಾವು ಮಾಡ್ಕೊಂಡ್ರೂನೂವೆ.. ಸಾಧುಗಳಾದ ಹಣ್ಣು ಹಣ್ಣು ಮುದುಕ
----------------------------------------------------
ಬೋರಣ್ಣನನ್ನೂ... ಮನೆ ಮತ್ತು ಸಂತೋಷ್ವಾಗಿರೊದ್ನ ಕಣ್ತುಂಬ ನೋಡ್ಬಿಟ್ಟು, ಕಣ್ಮುಚ್ಚಬೇಕೂಂತಿರೋ ತಮ್ಮನ್ನೂ...ಕಾಯೋಕೆ... ದೇವ್ರೊಬ್ಬನಿಧಾನಮ್ಮಾ! ಏನೊಮ್ಮಾ-ನಿಮ್ಹಾಗಿಲ್ದಿದ್ರೂ ನಿಮ್ಹಾಗೆಯೇ
ಹೆಗ್ಸು-ಒಬ್ಹೆಂಗ್ಸು -ನಿಮ್ಮ ಕೌಮಾರನ್ನ-ಅವನ್ತಾತ್ನ ಹ್ಯಾಗೇ ಅವನ್ಬುದ್ಧೀ ನೋಡಿ ಮೆಚ್ಚಿ! ಇನ್ಮುಂದಕ್ಕೆ
ಅವನು ಪ್ರಪಂಚದೆದುರಿಗೆ ಮುಂದಕ್ಬರೋ ಸಹಾಯಾನ ಒದಗ್ಸೋಕೆ ಬಂದೆ. ಆ ಸಹಾಯಾನ ಈ
ದೊಡ್ಕುಟುಂಬಕ್ಕೆ ಕೊಡೋ ಭಾಗ್ಯ ನನ್ಹಣೇಲಿ ಬರೀದೇ ಇರೋದು ನಿಮ್ತಪ್ಪಲ್ಲ!...
(Sobbing into her ಸೆರಗು)
...ಬೋರಣ್ಣಂದೂ ಅಲ್ಲ... ನನ್ನ ಪಾಪಕರ್ಮ, ಬರೇನಮ್ಮ,
(to Subbamma who is 'ಸವರು' ಇಂಗ್ Ramu's Gandhi cap out of shape in
her emotion)
...ಬೋರಣ್ಣಾ... ನಡ್ಕೊಂಡೇ ಹೊಗ್ತೇನೆ, ಬಿಸಿಲು ಆದ್ರೂ ಪರ್ವಾಇಲ್ಲ... ಸಾಮಾನಿಗೆ ...
ಜಟ್ಕಾ... ಕಳಿಸ್ತೇನೆ... ಸ್ಟೇಷನ್ನಿಂದ. ಅವನಿಗೆ ಸಾಮಾನುಗಳ... ಗಾಡೀ... ತುಂಬಿಸ್ಕೋಳ್ಳೋಕೆ...
ಅವಕಾಶಾನ ಕೊಟ್ರೆ, ನಿಮ್ಮುಪ್ಕಾರ... ಎಷ್ಟೊ ಆದ್ಹಾಗಾಯಿತು. ರೈಲಿನ್ನೂ ಮೂರು ಘಂಟೇ ಹೊತ್ತಿದೆ.
(raises herself)
ಸುಬ್ಬಮ್ಮ: (Helplessly opening her ams out) ಹಯ್ಯಮ್ಮಾ... ನೀವು ಹೀಗೊಗೋದು ಉಚಿತವಲ್ಲ, ಮುಮ್ಮಾ ನೀವು. (Sobbing into her me and to herself)
ಮನೇಗ್ಬಂದ ಮುತ್ತೈದೇಗೆ, ಕುಂಕ್ಮ ಹಚ್ಚೋ ಯೋಗ್ಯತೇನೂ ಇಲ್ಲ ನನ್ನೆ, ಹೀಗೆ
ನೀವ್ಹೋಗೋದು ಶುಭವಲ್ಲಮ್ಮಾ! ನೀವೂ ನೀವೂಂತ ಬಡ್ಕೊತಿಧಾನೆ ಚಿಕ್ಕೋನು... ಇವನ್ನೂ,
ಇವನ್ಮುಖಾನೂ, ಇವನ ಹಣೆ ವಿಭೂತೀನ್ನೂ ನೋಡಿದ್ರೆ ನನಗೇನೋ... ಜ್ಞಾಪ್ತಾಬಂತು...
(collapses sobbing)
ಬೋರಣ್ಣ: (approaching Saroja)
ನೀವಿಂಗೆಲ್ಲಾ ಒಂಟೋಗೋದು ನೆಟ್ಟಗಿಲ್ಲಾವ್ವಾ... ಚಿಕ್ಕೂರ ಬುದ್ದಿ ಕಲ್ಸಿದ್ದೂ ನೀವೆ...
ನೀವಿಂಗೂ, ಇಲ್ಲ ಅಂಗೋಂತ ಗುಮಾನಿಯಾಗಿದ್ದ ನಂಗೆ ಬುದ್ದಿಕಲ್ಸಿದ್ದೂ ನೀವೆ! ಇಂಗನೇವವ್ವಾ
ಚಿಕ್ಕ ಯಜಮಾನ್ರಿಗೂವೆ. ಇಂಗನೇವೇ ಬುದ್ದಿಕಲ್ಸಿ... ದೊಡ್ಡವ್ವನಿಗೆ ... ಆವ್ವಸಾಳು ಬಾಯ್ತುಂಬ
ಮಾತ್ತುಂಬ್ಕೊಂಡು, ಒಂದು ಚಿಕ್ಕೆಜಮಾನ್ರನ ಗುಮಾಯ್ಸಿ, ಇಲ್ಲಿಂದಲ್ಗೆ ಓಡಾಡಿಸ್ತಾ, ನಮ್ಮೇಲ್ರನ್ನ
ದಬಾಯ್ಸ್ತಿರೋ ಆವಯ್ಯಾ, ನಮ್ಮೂರು ಊರಿಂದ್ಲೇನೆ ಓಡ್ಸೋ ಬುದ್ದೀನ... ಅಮ್ನೋರ್ ಗೆ
ಕಲ್ಸಾಕ್ಮುಂಚೆ ನೀವು ಒಂಟೋಗೂದು ನೆಟ್ಗಿಲ್ಲ. ಮಾತಾಯಿ... ದೇವ್ರು ಬಂದಂಗೆ ಬಂದ್ರಿ.
ದೇವಂಗ ಓಗ್ಬೇಕ್ನೀವು...
(to Subbamma)
ಅಲ್ವೆವ್ವಾ !?
-------------------------------------------------
ಸುಬ್ಬಮ್ಮ: (to Bora... snivelling)
ಹೂಂ. ಬೋರಾ, ಹೂಂ, ಮನೇಹಿತಕ್ಕೆ ನಿಗ್ಗೆ ತಿಳ್ಯದ್ಯಾವ್ದಿಧೇಪ್ಪಾ,
(to Saroja with pleading eyes)
ನೀವು ಈಗ ಹೀಗೆ ಹೋಗೋದು... ಹಿತ್ವಲ್ಲಾಮ್ಮಾ. ಏಳೂ ಕಂದ... ಕಾಫಿ ಹೊತ್ತು...
(noticing Saroja rising)
ಹಯ್ಯೋ, ಏಳ್ಬೇಡಿ! ನಿಮ್ಮ ಕಾಫೀ.... ಟೀನೆ... ಇಲ್ಲ... ಅದೆಂಥಾದ್ದೊ ಬೋರಾ? ಆ
ಹೊಸ ಬಾಬ್ತು...
ಬೋರಣ್ಣ: (ಪಕಪಕನ ನಗುತ್ತಾ)
ಕೋಕೊರ್ರವ್ವಾ... ಕೊಕೋ... ಚಿಕ್ಕೋರು ಕುಸಿಮೇಲೆ ಬೆಂಗೂರಿಂದ ತಂದದ್ದು... ಎಂಡ್
ಚಮ್ಚ ಖರ್ಚಾದ್ದು... ಬಾಕಿ ಇಲಾಯ್ತಿ ಡಬ್ಬಾಡಬ್ಬಾನೆ ಕುಂತೈತೆ ನಾಣಪ್ಪನ ಪೆಟ್ಗೇಲಿ... ಕುಂಡ್ರವ್ವಾ...
ಸರೋಜ: ಬರಿ ಹಾಲೂಮಾ.
(sitting herself)
ಹಸುವಿನ ಹಾಲು, ಕಾಸಿದ್ದು, ನನ್ಬಿಟ್ಟು ಸಾಯೋನ್ಮುಂಚೆ ನಮ್ಮಮ್ಮ ಹೇಳಿದ್ದು: 'ಟೀಯೇನು
ಕಾಪಿಯೆನು-ಏನಾದ್ರೆಯೇನು-ಮಕ್ಕಳಿಗೆ ತಾಯಿಹಾಲು, ಬೆಳದೋರ್ ಗೆ ಹಸುವಿನ ಹಾಲೂ'ಂತ.
ಆಗ್ನಿಂದ ಈಶ್ವರಿಗೂ ಬರೀ ಹಾಲೂಮ್ಮಾ, ಹಸುವಿನ ಹಾಲು. ಕಾಸಿದ್ದು.
ಬೋರಣ್ಣ: ಆಲಿಗೇನಪ್ಪಾ ಬರ ನಮ್ಮನೇಲಿ... ಅಂಗ್ ನೋಡಿದ್ರೆ ಯಾವುದಕ್ಕೆ ತಾನೇ ಏನು
ಬರ... ನಾಣಪ್ಪಾ...
ಸುಬ್ಬಮ್ಮ: ನಾ-ರಾ-ಯ-ಣಾ!
ಬೋರಣ್ಣ: (In a highly pitched voice) ನಾಣಪ್ಪಾ! ನಾಣಪ್ಪಾ...!
ನಾರಾಯಣ: (entering C)
ಬೋರಣ್ಣ... ಅಲ್ಲ... ಅಮ್ಮಾ...
ಸುಬ್ಬಮ್ಮ: ಚಿಕ್ಕೋರಿಗೆ ಕಾಫಿ, ಈಕೆಗೆ... ಹಾಲು, ನನಗೊಂದ್ಪಂಚಪಾತ್ರೆ ಅಭಿಷೇಕ
ಮಾಡಿದ್ನೀರು.
ಬೋರಣ್ಣ; ಯಾತ್ರಲ್ರವ್ವಾ...? ಭೀಕೈ ನಿಮ್ಮತ್ರಲೇನೇವೆ!
(At this stage Kappanna enters)
ಸುಬ್ಬಮ್ಮ: ಹೌದೋ...
(bringing out key and handing it to Narayana)
ಬೆಳ್ಳಿ ಪಾತ್ರೆ ಅಲ್ಮಾರೇ ಬೀಗದಕೈ. ದೊಡ್ಡ ತಟ್ಟೇಲಿ ಹೊಸ ಟಂಗ್ಲರುಗಳು ಬೇಗ.
---------------------------------------
ನಾರಾಯಣ: ಹೂಂಮ್ಮಾ,
(Exit C)
ಸುಬ್ಬಮ್ಮ: (as Narayana is exitting) ಮರಿಬೇಡ್ವೋ... ಸಕ್ಕರೆ... ಜಾಸ್ತಿ...
(mischievously patting Ramu' Gandhi-capped head)
(crooningly ಚಿಕ್ರಾಯ್ತ ಕಾಫೀಗೆ.
[at once Narayana from within] ('ಹೊಂಮ್ಮಾ' ಗೊತ್ತಿದೆ.)
ge
...ನೋಡೀಮ್ಮಾ, ಸಕೇಂದ್ರ ಪ್ರಾಣ ಚಿಕ್ಕೋನ್ಗೆ. ಇವ್ರಜ್ಜಂತೂ... ಕಾಪಿಗೆ ಸಕ್ರೆ ಅಲ್ಲ..
ಸಕ್ರೇಗೇನೇವೇಯೆ ಕಾಪಿ... ಏನೋ ಬೋರ? ಜ್ಞಾಪಕ್ವಿದ್ಯೇ... ಕೂತ್ಕೋ...
ಬೋರಣ್ಣ: (After seating himself respectfully away)
ನಾನೇನೇಳ್ಲವ್ವಾ... ನನ್ಕಣ್ಮುಂದೇನೇವೆ ... ನಿಂತಂಗವ್ರೆ ದೊಡ್ಡೋರು, ಈಗ, ಸಕ್ರೇನೆ...
ಕೇಳವ್ವಾ... ಪಾಪಣ್ಣನ ಆಲೇ ಅವ್ವಾ... ನನ್ಮೋನ್ನೆ ತಾನೇ... ಮಕ್ಕಳ್ನೂ, ಮನೇನೂ ನೆಮ್ಮದಿಯಾಗಿ
ಬಟ್ಟುಟ್ಟು ತೀರೋದ, ಅಯ್ನೋರ ಎಸರೇಳ್ತಾ! ಚಿಕ್ತೋಟ್ದಲ್ಲಿ ಕಬ್ಬಿನ ಕಂತ್ರಾಟು ಕೊಟ್ಟಿದ್ದ್ರವನ್ಗೆ.
ಆಡಸ್ತಾ ಔನ ಆಲೆನ. ಎತ್ತುಗಳ್ನಮ್ಮೋವು... ಬಾಡ್ಗೆಗೆ ಬಿಟ್ಟೋವು... ಇದ್ದಕ್ಕಿದ್ದಂಗೆ 'ಪಕ್ಕ'ನ್ನುಗ್ಗುಬುಟ್ರು
ದೊಡ್ಡೋರು... ಬೇಲಿ ಬೇಲಿನ್ನೇ...
(indicating with arms)
ಇಂಗ್ಬಿರ್ಕೊಂಡು 'ಏನೋ... ಪಾಪಾ... ಕಯ್ಞೀನೋ? ಸಿಯೀನೊ? ನಿನ್ಕಬ್ಬು!' ಕೇಳ್ತಾನ್ನನ್ನೊಡ್ಯಾ
... ಪಾಪಣ್ಣನೇನೇಳಾನು... ಆದ್ರೂನೂವೆ ದೊಡ್ಗುಂಡ್ಗೆ. ಗಲ್ಡೀಲಿ ಕಲಿಪೂಮ್ಮಾ!.. “ಕಬ್ಬಿನಾಲು
ಕುಡ್ಡು ತಾವೇ ಯೋಳೀ ಬುದ್ದಿ-ಕಬ್ಬು ತಮ್ತೋಟದ್ದು” ಅಂದ. ಸುತ್ಮುಲಿದ್ದ ಮಡ್ಕೇನಾ, ಕುಡ್ಕೆನಾ
ದೊಡ್ಡವ್ರಿಗೆ? ... ಬೆಳ್ಳಿಪಾತ್ರೆ ಅಲ್ಮಾರೇ ತುಂಬ ತಟ್ಟೆ ಟಂಬ್ರಲ್ಲಾ... ಅಲ್ಲಿ! ಏನೇಳವ್ವಾ
ಎಂಗೇಳವ್ವಾ... ದಣಿ ದಣೀನೆ. ಪಕ್ದಲ್ಲಿ ತೆಂಗಿನ್ಪಟ್ಟೆ ಬಿದ್ದಿತ್ತವಾ-ಗರ್ಗೋಳ್ಗಸ್ಕೊಂಡು, ಅದಂಗೊ
ದೊಡ್ದೋನ್ನೆ ಎತ್ಕಂಡು... ಎಂಟು ದೊನ್ನೆರವಾ... ಒಂದಲ್ಲ.... ಎಂಡಲ್ಲ... ಎಂಟ್ದೊನ್ನೆ ಕಬ್ನಾಲು
ಕುಡ್ದುಬುಟ್ಟು... ತೇಗ್ತಾ ತೇಗ್ತಾ ಯೋಳ್ತಾನೆ ಭೂಪ; 'ಪಾಪಾ ಲೋ, ನಿಜ ಕಾಣೋ, ಕೈಯ್ಞಿಲ್ಲ,
ಸಿಯೇನೊ ನನ್ಕಬ್ಬೂ'ಂದ್ರು... ನೋಡಿದ್ರಾವ್ವ ಜೀವಾಳಾನ... ಸಿಯಿ ನನ್ಕಬ್ಬೂಂದ ನನ್ನ ಧಣಿ....
ಧಣೀಂದ್ರ ಧಣಿ, ಔನು.... ಒಂಟೋದ... ನನ್ಬುಟ್ಟಟ್ಟು...
(collapses sobbing)
ಸುಬ್ಬಮ್ಮ: (Sobbing) ಸಾಕೋ, ನಿಲ್ಲೋ ಹಾಳಾದೋನೆ, ಏನ್ಹಾಳ್ ಜ್ಞಾಪಕಶಕ್ತಿನೋ ನಿನ್ಗೆ... ಪಾಪೀ...
(collapse; into her ಮುಸುಕು)
(As Ramu and Saroja are all this-while looking askance at each other and
-----------------------------------------------------------
are at consternation at sobbing Subbamma and Bora. Narayana enters with three
huge brand-new-polished silver tumblers and a panchapatre of copper resting on
a gigantic carved silver salver]
(Kappanna's pantomime culminates with his gulping four Poona tumblers
of kooja water two forcibly feeding of Hiriyannayya likewise... and frenzied
explanations of "All ಪುರಾಣ against poor Kappanna plus of course worthy master...
etc.” finishing with the curtain dropping on...)
ಕಪ್ಪಣ್ಣ: ಒಟ್ಟಲ್ಲೇನ್ಸಾರ್ ? ತಗೊಳ್ಳಿ ಇನ್ನೊಂದು ಟಂಬ್ಲರು...
(sonorously from with in the tumbler he is drinking out of]
ಒಟ್ನಲ್ಲಿ ನೀರ್ಕುಡಿಸ್ತಿಧಾಳೆ... ನಮ್ಮಿಬ್ಬರಿಗೂ... ಆ typewriter ಹೆಂಗ್ಸು... silver vessels
ಎಲ್ಲಾ ಅತ್ಕಡೆ... but for the present situation... ಕೂಜಾ ನೀರು ಕುಡಿಸ್ತಿಧಾಳೆ!
(Curtain drops)
ಸೀನ್ - ೬
(Place: Same. Time: The next morning)
(Found entered Saroja draped in a diaphanous snow-white silk saree patched
with embroidered flowers with bodice also white to match, drinking out of Silver
tumbler, with Narayana respectfully standing bowed. Silver Salver in hands)
ಸರೋಜ: ಬೊರಪ್ಪಾ! (drinks delicately) ಬೋರಪ್ಪಾ!
ಬೋರಣ್ಣ: (Entering) ತಾಯಿ, (bows to the ground)
ಸರೋಜ: (Sweetly)
ಈ.... ಪಚ್ಚೆ ಅಮ್ಮಾವ್ರು ಹೇಳಿದ್ರು... ಮಾಡಿ ವರಾಂಡಾಲಿದ್ದದ್ದೂಂತ... ಮೊಳ ಸಮೇತ ಈಗ್ಗೆ ಕಿತ್ತು ಮುಂದಿನ ಹಾಗೆಯೇ ಕಟ್ಟಿಡು... ಮಾಡೀಲಿ.
೩೦೮ | ಕೈಲಾಸಂ ಕನ್ನಡ ನಾಟಕಗಳು
ಬೋರಣ್ಣ: ತಾವೇಲ್ದಂಗ ತಾ...
(inustering unbelievable activity jerks out on top of C and F and rolling up curtain, exits R)
Lidoca: (Placing tumbler on Silver Salver which Narayana re:spectfully holds out)
ನಾರಣಪ್ಪನೂರ... ಸಕ್ಕರೆ ಹಾಕಿದ್ರೆ? ಅನ್ಯಾಯ.. ಸಿಹಿ ನಿಮ್ಮನೇ ಹಾಲು.
Noorators: (An old man of 70 bowed down with greyed age and culinary Service)
ನಮ್ಮನೆಗೆ ಬಂದು ಹಾಡೊವ್ರಲ್ಲಾ... ಹೀಗೇನೇವ ಹೇಳಿದ್ದಮ್ಮಾ... ಸಂಪ್ರದಾಯ... ಕರೋನು ಕರದ ಹಾಗೇ ತರಾನೆ... ನಾನೂ ಸಕ್ಕರೆ ಬೆರೋದಿಲ್ಲ. ಒಂದ್ವೇಳೆ ಆಕ್ಕು ಮಯೂ
ಹುಲ್ಲು... ಸಕ್ರ ಸುತ್ತು ಬೆಳದಿದ್ದೂ ಏನೂ... ಕಾಣೆ.
(smiles)
ಸರೋಜ: ಹೌದು! ನಿಮ್ಮಾಕ್ಕುಗ ಮೇಲೂ ಗುಡ್ಡಕ್ಕೆ ಹೋಗಿದ್ದೆ... ಹಚ್ಚಗಿತ್ತು ಹುಲ್ಲೆಲ್ಲಾ... ಹಾಗೆ ನೋಡಿದ್ರೆ ನಿಮ್ಮೂರಲ್ಲಿ...
(airily)
ಕನೂ ಹುಲ್ಲನೂ ಹತ್ರತ್ರಲೇ ಬೆಳಿತಿರೋವಾಗ ಕಬ್ಬಿನ ಸಿಹಿ ಹತ್ತಿದ ಹುನ್ನ ಮದ ನಿಮ್ಮಾಕಳಿನ ಹಾಲು... ಸಿಹಿಯಾಗಿರೋದು ಆಶ್ಚರ್ಯವಲ್ಲ... ನಾರಣಪ್ಪನೋರೆ.
(It is at this moment that she puts the tumbler on the salver... smilling gracefully on the servant)
(Exit Narayana)
(as Saroja noticing Hiriyanayya al C... apparently to herself but deliberately
loud enough for Hiriyannayya to hear)
ಅ...ಬ್ಬ! ತೊಲಗಿತು... ಈ battle-field! B.A.ಲಿ ಇಂಗ್ಲಿಷ್ಟಲ್ಲಿ record marks ನನಗೆ...
University prizeoo at the Governor's hands and introduction to the Lady Governor
at the Government House Garden Party. “Hindu'ಲಿ ಬಂದಿತ್ತು. Photo... Governor
ಇತ್ಕಡೇ Lady Governor ಅತ್ಕಡೇ... myself in the middle. S.S.L.C. Certificate ಕೂಡಾ
ಇಲ್ಲ... ಇವನು speeches ಹೇಳ್ಕೊಡ್ತಾನಂತ... tothe noble head of this anstocratic family!...
(ನಗುತ್ತಾ)
That villain ಒಂದು ಮತ್ತುಬಿಟ್ಟ!... God ಒಬ್ಬ ಇಧಾನೆ ಅಂಬೊದ್ದ, Sweet minds
like Mr. Hiriyanayya's conceal unknown depths of integrity, intellectuality.
-----------------------------------
responsibility and mental and moral rectitude! Os dictionary and some cheap
book of quotations from Literatureನೂ ಅವಸರವಸರಾಗಿ byrote ಮಾಡ್ಲಿಟ್ಟು ಸಿಕ್ಕಾಪಟ್ಟೆ
ಒಪ್ಸಿ ಬೆದರಿಸ್ತಾ a simple but Sweet Soulನ hypnotise ಮಾಡಿ... victimise ಮಾಡ್ತಿರೋ...
ಆ negligible villain ಹಾಗಿಲ್ಲ... ಇಷ್ಟು hospitality ತೋರಿಸಿದ ಈ family ಗೆ big son
of the familyನ್ನೂ ಆತನ big father with Rao Saheb Hiriyannayya, President of
the Corporation of Rampur ಆಗೋಗ್ಬೇಕಾದ speeches... ಆತನ ಬಾಯಲ್ಲೇ perorate
ಮಾಡ್ಸಿ, besides all this my ಪ್ರಾಣಸ್ನೇಹಿತಿ Lady Bullappa now in Delhi... ಆಕೆ ಮೂಲ್ಕ
the Lady Goverಗೂ and through her Govenor of Madrasಗೂ introduce ಮಾಡಿ...
very long before Employer Mr. Rama Rao 'Sir Ramarao'ಆಗೋಗ್ಮುಂಚೇನೇ ... ನನ್ಗೆ ಆ
horrible Secretary... ಎಷ್ಟು clever ಆಗಿ ನನ್ನ drive out of this house ಮಾಡೋಕೆ try
ಮಾಡಿದ್ರೂನೂವೆ still ನನಗೆ kind ಆಗಿರೋ Lady of the familyನ Delhiಗ ಕರ್ ಕಡ್ಹೋಗಿ
ಆಕೆ ಕಣ್ತುಂಬ... ತನ್ಮಗ Viceroy... sword in hand now... son of the familyನ... Knight
Commander of the Star of India... Sir Hiriyannayya of Rampur, in South India!ಂತ
Dub ಮಾಡೋದ್ದ... Viceroy's ಪಕ್ಷಕ್ಕೆ ಕೂತು ನೋಡಿ feel ಆಗೋ pleasureನ ಆSweet
ladyಗೆ ಒದಗ್ಸೋಗೆ poweroo... powerfull influencers also powerful friendsoo ನನಗೆ c
ಇಧೇಂತ ಹ್ಯಾಗ್ಹೇಳೋದು ನಾನು... ಈ orthodox familyಲಿ! Master of the Homeನ
approach ಮಾಡೋ ಹಾಗಿಲ್ಲ ನಾನು ... a weak horrible designing woman ಊಂತ 5
ತಿಳ್ಕೊಂಡಿಧಾರೆ ನನ್ನ, that innocent Gentleman. Young Mr. Rama Raoಓ ... too
orthodox to see me talking to un-introduced gentleman, however good-mindedly,
to the master of the House... but until he drives out this unnecessary loquacious parasite fecding upon this good gentleman in the disguise of a secretary...
ನಾನೇನ್ಮಾಡೋ ಹಾಗೂ ಇಲ್ಲ,
(sighing helplessly)
ಶ್ಶ್ ...ಶ್ಶ್ ...ಶ್ಶ್ ...
(holding her hands alost)
ಹಯ್ಯೋ ದೇವ್ರೆ ! helplesoo womanoo! ಬರೀ womanoo... and all the while
wanting to help a noble man who is made a fool of ... why! a duffer by clever,
designing Scoundrel... ಹಯ್ಯ ಯ್ಯೋ ನಾನ್ಯಾಕ್ಬಯ್ಬೇಕು.... ದೇವ್ರಿಧಾನೆ ! Even if I cannot
advice the master of the house personally... God will... spiritually... through some
saintly old soul...
(Exits like a tragedy Queen-R)
[From within... Subbamma's voice... ಮಗೂ (in louder voice) ಹಯ್ಯೋ! ಇಲ್ಲೇ
ಇಧೀಯಾ? ... ಇದೇನು (at C...) ಹೊಸಲ್ನಲ್ಲಿ ?... ನಡಿ ಮುಂದಿನ ಕೋಣೇಗೆ]
-------------------------------------------------------
(Enter C Hiriyannayya with Subbamma following.
ಸುಬ್ಬಮ್ಮ: ಪರದೆ ಹೊರಟ್ಟೋಯ್ತ! ಒಳ್ಳೆ ಕೆಲ್ಸ! ಬೋರಾ ಹೇಳ್ದ, ಜಾಣೆ ಆಕೆ! ಏನ್ಹೇಳ್ಳಿ
ಮಗು, ಏನ್ಹೇಳಿದ್ರೂನೂವೆ ಹೆಂಗ್ಸು ಹೆಂಗ್ಸೇಂತ ನಮ್ಮೋಂಡಿದ್ದ ನನಗೆ ಪ್ರಪಂಚದಲ್ಲಿರೋ
ಗಂಡಸ್ರಗಿರೋ ವಿದ್ಯಾನ ಕಲ್ಸೋ ಸರಸ್ವತಿ ನನ್ನ ಹಾಗೇ ಹೆಂಗ್ಸು!... ಪ್ರಪಂಚದಲ್ಲಿರೂ ಸಮಸ್ತ
ದುಡ್ಡು, ದುಗ್ಗಾಣಿ, ಚಿನ್ನ, ಬೆಳ್ಳಿ ವಜ್ರ, ವೈಡೂರ್ಯ ಇವುಗಳಲ್ಲಾ ದಯಪಾಲಿಸೋ ಮಹಾಲಕ್ಷ್ಮೀನೂ...
ನನ್ಹಾಗೇನೇ ಹೆಂಗ್ಸೂಂತ್ಲೂ ! ಸೃಷ್ಟಿ, ಸ್ಥಿತಿ, ಲಯ ಇವುಗಳ್ನೆಲ್ಲಾ ಜರ್ ಗಿಸ್ತಿರೋ ತ್ರಿಮೂರ್ತಿಗಳು
ಗಂಡಸ್ರಾದ್ರೂನೂವೆ... ಈ ಮೂವರ ಜುಟ್ಟ ಹಿಡ್ದು ಜಗ್ಸೋ ಜಗನ್ಮಾತೆ ಚಾಮುಂಡೇಶ್ವರೀನೂ...
ನಮ್ಮ ತೌರುಮನೆ ದೇವ್ರು ಮಗು-ನಿಮ್ಮನೇ ದೇವ್ರು ವೆಂಕಟಾಚಲಪತಿ... ಈವತ್ತೂನೂವೆ
ನೂರೆಂಟ್ರೂಪಾಯಿ ಮಂಗಳಾರ್ ತಿ ಆ ಮಹಾತಾಯಿಗೆ ... ನಮ್ಮನೇಯಿಂದ ಮಾರ್ನವಮೀ ರಾತ್ರಿ...
ಆ ಚಾಮುಂಡೇಶ್ವರಿನೂವ ನನ್ನ ಹಾಗೇ ಹೆಂಗ್ಸೂ!... ಮನೆತನಗ್ಳು ಮೆರ್ ಯೋದಾಗ್ಲಿ, ಮುರ್ ಯೋದಾಗ್ಲಿ
ಹೆಂಗಸ್ನಿಂದಲೇ... ಅಂತ ಎಷ್ಟು ಚೆನ್ನಾಗಿ ನನ್ನ ಮನಸ್ಸಿಗೆ ಮಂದಟ್ಟು ಮಾಡಿದ್ಲು...
(waving her right hand to R)
ಆ ಮುತ್ತೈದೆ... ಕೂತ್ಕೋ ಮಗು. ಕಾಫಿ ಆಯ್ತೇ? ಆ ಶನಿ ಯೆಲ್ಲಿ...
ಹಿರಿಯಣ್ಣಯ್ಯ: ಕಾಫಿ ಆಯ್ತಮ್ಮಾ ... ಶನಿ? ... ಇರ್ ಲಿ...
(loudly) ಬೋರಾ... ಎಲ್ಲಿದೀಯಾ?
ಬೋರಣ್ಣ: (Entering) ಬುದ್ದೀ...
ಹಿರಿಯಣ್ಣಯ್ಯ: ಕಣ್ಣೆಲ್ಲೋ ? ನಿಂತಿಧಾರೆ... ಅಮ್ಮಾವು!
ಬೋರಣ್ಣ; (In ecstasy)
ಮರ್ ತೆ ನನ್ದಣಿ!
(toSubbamma)
ಇದೂ ಧಣಿವ್ವಾ!... ದೊಡ್ಡಯ್ಯನಂಗೆ... ನೀವು ನಿಂತಿಧೀರೋ ಕುಂತಿಧಿರೋ
ನೋಡ್ಕೊಳ್ಳೋದು ... ಹಯ್ಯಯ್ಯೋ... ನಿನ್ನೀ ನಾಲ್ಗೆ...
(exits C. Re-enters in ridiculous precipitancy with tiger-skin, and spreads it
C-L)
ಸುಬ್ಬಮ್ಮ: (Seating herself)
ಕೂತ್ಕೋ ಮಗು... ಕೂತ್ಕೋಂಡು ... ನಿಧಾನ್ವಾಗಿ ಕೇಳು.. ನಾನ್ಹೇಳೋದ್ನ ಕೇಳು...
ರೇಗ್ಬೇಡ, ಈಕೆ ಮೇಲೆ...
(Pointing to R)
ನಿನಗೇನು ದ್ವೇಷ?
-------------------------------------------
ಹಿರಿಯಣ್ಣಯ್ಯ: ಕಪ್ಪೂ ಹೇಳ್ತಾನೆ... ಅಲ್ಲ... ಕಪ್ಪಣ್ಣ... ಅಲ್ಲ... ನನ್ನ Secretary ಹೇಳ್ತಾನೆ:
ಅವ್ಳುವ... ಅಲ್ಲ... ಆಕೆ...ಅಲ್ಲ.. ಆ Lady...
ಸುಬ್ಬಮ್ಮ: ಅವಳ ಆರೋಪ್ಸಿರೋ... ಅಪಚಾರಗಳ್ನ... ನಿನ್ನ ಕಿವಿಗೆ ನಿನ್ನ ಸಿಗ್ಬೇರೀನೋ...
ಯಾವನ್ತಾನೇ ಆಗ್ಲಿ ಮಗು, ನಿನಗ್ನಿನಿಗೆ ತಿಳಿದಹಾಗೆ ಏನಾದ್ರೂ... ದೋಷ. ಆ ಮುತ್ತೈದೇಲಿ...
ನಿನ್ನಿನ್ ಕಣ್ಣಿಗೆ...?
ಹಿರಿಯಣ್ಣಯ್ಯ: ಇಲ್ಲಾಪ್ಪಾ! ಹಯ್ಯೋ ಆಕೆ Lady: real lady.. real Englishoo
ಅವಳು... without a dictionary. ನನಿಗ್ಯಾಕಮ್ಮಾ ದ್ವೇಷ ಅವಳ್ಮೇಲೆ ! ನಿನಗೂ ಇಷ್ಟ, ಎಲ್ರಿಗೂ
ಇಷ್ಟ ಅವಲಳ್ಮೇಲೆ, ನನಗೂ ಅನಿಷ್ಟವೇನೂ ಇಲ್ಲ ಆಕೆ ಮೇಲೆ.
ಸುಬ್ಬಮ್ಮ: ಅಯ್ಯೋ ? ಹೂಂ. ಈ ಶಿಗ್ಬೇರಿ ಯಾಕೆ ನಿನಗೆ? ಮಾತಾಡ್ಬೇಡ, ನನಗೊತ್ತು
ಮಗೂ ನನಿಗೆ! ಈ ಕಡುಪಾಪಿಯಿಂದ ಮನೇಗಾಗೊ ಉಪಯೋಗ ಆವತ್ತೇ ನೀನ್ಹೇಳಿದ್ದು
ಮರೀಲಿಲ್ಲ ನಾನು. ಅವನಿಂಗ್ಲೀಷು, ಅವನ್ಸಹಾಯದಿಂದ ನಿನ್ಗೂ ನಿಮ್ತಂದೆ ಹಾಗ 'ರಾವ್ ಸಾಹೇಬ್'
ಪಟ್ಟ ಸಿಗೋ ಬಗೆ ತೋರ್ ಸೋಕೆ ಬಂದ ಬೃಹಸ್ಪತಿ! ಈ ಪುರಾಣಾನಲ್ಲಾ ತಿರ್ ಗೂ ಎತ್ಬೇಡ,
ಅವನ್ಗಿರೋ ಇಂಗ್ಲಿಷ್ನೆಲ್ಲಾ-ಅವನ್ಗಿಲ್ಲದ ಇಂಗ್ಲೀಷ್ನೂ ಸಂಸ್ಕೃತಾನೂ ಕಲಿತು B.A. ಭಗವದ್ಗೀತೆ
ಎರಡೂ ಬಾಯಿಪಾಠವಲ್ದೆ... ಚಿಕ್ಕೊನು ಕೊಂಡುಕೊಂಡ್ಬಂದ... ಹೇಳ್ತಾ ಹೇಳ್ತಾನೇ ಆಚ್ಚಾಪೀಸ್ಹಾಗೆ
ಛಾಪೆ ಮಾಡೋ ಮಿಷಿನ್ನ... ಎರಡೂ ಕೈಲಿ ವೀಣೆ ಬಾರಿಸ್ದ ಹಾಗೆ ಬಾರ್ ಸೋದಲ್ದೆ... ಮುಂದಕ್ಕೆ
ಗೌನರುಗ್ಳಾಗ್ಲಿ... ಯಾರಾಗ್ಲೀ... ತನ್ನ ಹೆಣ್ಣು ಸ್ನೇಹಿತ್ರ ಮೂಲ್ಕ ಯಾವ್ಪಟ್ಟಾನ ತಾನೇ ಆಗ್ಲಿ
ಸಂಪಾದಿಸೋಕೆ ಸಹಾಯ ಕೊಡ್ಬೇಕೂಂತ ಇರೋ ಆಕೇನ ಆದರ್ ಸೋದು .... ಜಾಣತನಾನೊ...
ಆಕೆ ಹೇಳ್ದ್ಹಾಾಗೆ ಅಮರಾನೂ ಸಂಧ್ಯಾವಂದನೇನೂ ಸಂಸ್ಕೃತಾಂತ ನಿನಗೆ ಒಪ್ಸಿ... ಬೋರಾ ಹೇಳೊ
ಹಾಗೆ... ಗುಮಾಯ್ಸಿ... ಬಂದಾಗ್ನಿಂದ ಇದ್ವರ್ ಗೂ ತಣ್ಣಗಿದ್ದ ಮನೇಲಿ ಜಗಳ ತಂದಿಡ್ತಿರೋ
ಆ ಕಪ್ಪಣ್ಣ... ನಿನಗ್ಯಾರು ಮಗೂ?... ಏನೋ ಬಂದ ಕೆಲ್ಲಕ್ಕೆ... ಸುಳ್ಳೋ ಪಳ್ಳೋ ... ಅವನಾಯ್ತು,
ಅವನ್ದೇವ್ರಾಯ್ತು. ನಮಗ್ಯಾಕೆ? ಮಾತನೋ ಕೊಟ್ಟೆ; ಕೊಟ್ಟ ಮಾತು ತಪ್ಪಬಾರ್ ದೂಂತ ನಿಮ್ಮ ತಂದೆ
ಹೇಳಿದ್ದಹಾಗೇ ಅವನ್ತಿಂಗ್ಳ ಸಂಬ್ಳ ಎಪ್ಪತ್ತೈದ್ರೂಪಾಯಿ ಕೊಟ್ಟು ಅವನ್ನ ಕಳಿಸ್ಬಿಡೋದು ಎಲ್ರಿಗೂ
ಉಚಿತ, ಮಗು.
(to Bora who is standing respectfully all this time)
ಬೋರಾ, ಆ ಮೇಜ್ಮೇಲೆ ಎಣಿಸಿಟ್ಬಿಡು: ಆ ಹೊಸಬ್ರ ಸಂಬಳ ಎಪ್ಪತ್ತೈದ್ರೂಪಾಯಿ.
ಬೋರಣ್ಣ; ಎಣಿಸೊದೇನವ್ವಾ... ಅದ್ನೈದು... ನೋಟ್ಗೋಳು... ಐದೈದ್ರೂಪಾಯಿಗಳ್ನೋವು.
(places bundle of notes on table L.C. and reccdes L-ways)
ಹಿರಿಯಣ್ಣಯ್ಯ: (helplessly
ನಾನೇನ್ಹೇಳ್ಳೀಮ್ಮಾ , ಕಪ್ಪೂ... ಅಲ್ಲಾ ಇರ್ಲಿ! ಈ ಶ್ರೀಮತಿ ಸರೋಜಾದೇವಿ ಮೇಲೆ ನನಗೇನೂ
ದ್ವೇಷ ಇಲ್ಲಾಮ್ಮಾ!... ನನಗ್ಯಾಕ ದ್ವೇಷ!... ಗೌರ್ ನರುಗಳೂ, ವೈಸ್ರಾಯ್ರುಗಳೂ ಅಲ್ಲಿ 'Sir'ಗ್ಳೂ...
ಇವ್ರೆಲ್ರುಗಳ ಹೆಡ್ತೀರ ಪ್ರಾಣಸ್ನೇಹಿತೆ ಈಕೆ... ಅಲ್ಲಿ ಇಂಗ್ಲಿಷಿನಲ್ಲಿ B.A... ಅಲ್ದೆ Type-writer
ಕೆಲ್ಲ... ಇದೆಲ್ಲಾ ನನಿಗ್ಹ್ಯಾಗ್ಗೊತ್ತಾಗೋದಮ್ಮಾ? ಅವ್ಳು ಯಾರೂಂತ? .... ನೀನೂ, ಬೋರ,
----------------------------------------------
ಎಲ್ಲೂ ಹೇಳೋಹಾಗೆ ಮನೆಗೊಳ್ಳೇದೇನೆ... ಆದ್ರೆ ಕಪ್ಪು ಬರೀ ದುಡ್ಡಿಗೇಂತ ಬಂದೆನಲ್ಲಮ್ಮಾ..
ಆದ್ರೂನೂವೆ ಅವ್ನು ಹೋಗೋದು ಒಳ್ಳದೇ. ಆದ್ರೂ ಸುಮ್ನೆ ಈ ನೋಟುಗ್ಳ ಕಟ್ನ ಅವನ್ಕೈಲ್ಕೊಟ್ಟು
ಹೋಗೂನ್ನೊದು..
(ಕೈ ಕೈ ಹಿಸುಕುತ್ತಾ)
ಅಮ್ಮಾ, ಅವ್ನಿಂದೇನೂ ಜಗ್ಳ ಮನೇಲಾಗ್ದ್ಹಾಗೆ ನಾನ್ನೋಡ್ಕೊತೇನೆ. ಇನ್ನೆರಡ್ದಿನ... ಇಲ್ಲ
ಒಂದಿನ್ದೊಳ್ಗೇನೇವೇ... ಅವನ ಮನಸ್ಸು ನೋಯ್ದ ಹಾಗೆ ರವಾನಿಸ್ಬಿಡ್ತೇನಮ್ಮ ಅವನ್ನ ಮನೆಯಿಂದ...
ಮರ್ಯಾದೆಯಾಗಿ... ಏನ್ಹೇಳ್ತೀಯೋ ಬೋರಾ?
ಬೋರಣ್ಣ: ಸೈ ಬುದ್ದಿ ಅವ್ವಯ್ತು... ಅಂಗನೂ ಕೆಟ್ಟೋನಲ್ಲ... ಎಂಗಿದ್ರೂನೂವೆ...
ಇಬ್ಬರೂವೇ ಇದ್ರೆ.. ಆವಮ್ಮ, ಈವಯ್ನೂ... ಬೆಂಕಿನೂ, ನಿರ್ ನಂಗೆ... ಪಾಚೀನೂ, ನೀರ್ನೂ
ಎಂಗೋ ಆಂಗೆ, ಅಂಟೋ ಅಂಗೂ ಇಲ್ಲ ಒಂಟೋ ಅಂಗೂ ಇಲ್ಲ!.... ಎಂಗಾದ್ರೂ ಗಂಡ್ಸು...
ಅಲ್ಲೆ ಗಾಟಿ! ಎಲ್ಲಾದ್ರೂ ಜೀವ್ನ ಮಾಡ್ಕೊಂತಾನೆ. ಆವಯ್ಯ ಎಂಗಿದ್ರೂ ಗಂಡ್ಸು!.... ನೋಂದ್ದೋಬೇಡಿ
ಬುದ್ದೀ! ಅವಯ್ಯ ಓಗೋದೆ ಮೇಲು. ಆದ್ರೆ ನೀವೇಳ್ದಂಗೆ ನೋಯಿಸ್ಬಾರ್ ದು ಆತ್ನ ಜೀವಾನ.
ಅವ್ವಾ!
(to Subbamma)
“ನಸ್ ನಗ್ತಾ ನಮ್ಮನೆಗ್ಬದೋರು... ನಸ್ ನಗ್ತಾನೆ ನಮ್ಮನೇಲಿಂದ ಓಗ್ಬೇಕೋ, ಬೊರಾ!”
ಅಂತಿದ್ದಾ ನನ್ಬುಟ್ಟುಟ್ಟೋದ ನನ್ದಣಿ...
(sobs heavily)
ಸುಬ್ಬಮ್ಮ: ಸಾಕೋ! ಪಾಪಿ!!
(Exits C sobbing ಏನ್ಹಾಳ್ ಜ್ಞಾಪಕಶಕ್ತಿನೋ ಪಾಪಿ.....
ಏನೋಪ್ಪ ಇನ್ನು ಒಂದ್ಹತ್ತಿಪ್ಪತ್ರೂಪಾಯಿ ಅವ್ನು ಕೇಳಿದ್ರೂನೂವೆ ಕೊಟ್ಟು ರವಾನಿಸೋದು
ಮೇಲು! ಬ್ರಾಹ್ಮಣ! ಸಂಸ್ಕೃತ ತಿಳ್ದೋನು! ಪ್ರಾಜ್ಞಾ! ಆದ್ರೆ ಬೋರ ಹೇಳ್ದ್ಹಾ ಗೆ ಗಂಡ್ಸು
ಎಲ್ಲಾದ್ರೂ ಜೀವನಮಾಡ್ಕೊತಾನೆ... ಈ ಗಲಾಟೆಗ್ನೆಲ್ಲಾ... ತೀರಿದಮೇಲೆ ತಿರುಗೋಂದ್ವೇಳೆ ಬಂದಾಗ...
ನೋಡ್ಕೊಬಹುದು!
(Exits sobbing)
ಬೋರಣ್ಣ: (Ditto murmuring)
ಊಂರವ್ವಾ ಚಿನ್ನದಂಥಾ ನಾಲ್ಗೆ, ಆದ್ರೂ ಆತ ಒಂಡೋದೇ ಮೇಲು. ನನ್ದಣಿ ದಣೀನೆ
ಓದ್ನಂತೆ.
(Exits sobbing)
ಹಿರಿಯಣ್ಣಯ್ಯ: Poor old Kappu!... ಅನ್ಯಾಯ ಅವನು ಹೋಗೂದು !... but then
ಅವನಿರಲಿ, ಅವನ Natal'sdictionary ಇರಲಿ! rea1 B.A.. ಇವ್ಳು.... also friend of lady...
ಯಾರೊ Indian Lady Govemor's wife's ಪ್ರಾಣಸ್ನೇಹಿತೆ ! She of course has Lady
Governor Viceroy's wifeನ ಪ್ರಾಣಸ್ನೇಹಿತ! ಏನ್ಹೇಳಿದ್ದು? 'Sir Hiriyannayya' long before
“Sir Rama Rao”
---------------------------------------------------
[Noticing S and R entering big R (side) exits C and is ea-es-dropping!
(Saroja now in a pink creation of Saree and bodice exccupying chair... whilst
R at Stool)
ರಾಮರಾವ್ : Thank God! Srimati Devi! ನಿಮ್ಮ Brain ಇತ್ತೋ ಬದ್ಕಕ್ಕೆ both in
Nobel prize and also ನನ್ನ Grand-mother regardನಲ್ಲಿ ಆ Scoundrelನ ಸಾಗಿಸ್ದ ಹಾಗೇನೆ.
Now before we start... on our daily work. you must teach me... proper ಆಗಿ- like
a man...ಹ್ಯಾಗೆ behaving... ಹೇಳೇನೇ...
ಸರೋಜ: First of all... ಕೋಪಿಸ್ಕೊಬೇಡಿ...Cultured ಆಗಿರರೋವ್ರು ಮೊದಲು ತಮ್ಮ
culture of birthiನಾಗ್ಲೀ breedingನಾಗ್ಲೀ languageನಾಗ್ಲೀ ನೋಡ್ದೋರು ತಿಳ್ಕೊಳ್ಕೊಕ್ಮುಂಚೆ...
ಅವರ appearance ಇಂದ್ಲೇ judge ಮಾಡ್ತಾರೆ people!ನವ್ನೋಡಿ... ನಿಮ್ಮ dressಓ English
ಆಗ್ಲೀಲಿ... Indian ಆಗ್ಲೀ... ಕೋಪಿಸ್ಕೊಬೇಡಿ. ನಿಮ್ಮ familyಲಿ ದುಡ್ಡು ಜಾಸ್ತಿಯಾಗಿದೇಂಬೊ
ಜಂಬಾನ ನೀವು ಕೊಚ್ಕೊಳ್ತಿಧೀರಾಂಬೋ impression ಮೊಟ್ಮೊ ದಲೆ ಬಂದ್ದಿಡುತ್ತೆ .
ನಿಮ್ಮನ್ನೋಡಿದಾಕ್ಷಣ್ವೆ! ಇದ್ರಿಂದ pick-pockets parasitesoo ನಿಮ್ಮ ಹತ್ತಿರ ಬಂದಾರೆ
ಹೊರ್ತು people of real blood and breeding ಸುಳ್ಯೋದಿಲ್ಲ... ನೀವು ಹೀಗೆ ನಿಮ್ಮ ದುಡ್ಡಿನ
ಹಮ್ಮೇನ ಕುದವಗಾರನಹಾಗೆ.. flount ಮಾಡ್ತಿದ್ರೆ... public ಆಗಿ-
ರಾಮರಾವ್: ನನಿದುಡ್ಡಿನ ಹೆಮ್ಮೆ ಏನೂ ಇಲ್ಲ ಶ್ರೀಮತಿ ದೇವಿ... ನಾನು... Want to
become a poet...“ದುಡ್ಡಿನ ಹೆಮ್ಮೆ”ಂತ ಹ್ಯಾಗೆ peopleoo?...
(sees Saroja drop her head)
...plain ಆಗಿ ಹೇಳ್ಬಿಡಿ!
(Irritatedly and commandingly) plain ಆಗಿ ಹೇಳ್ಬಿಡಿ ದೇವಿ!
ಸರೋಜ: Plain ಆಗ್ಹೇಳ್ತೇನೆ... after all ಗಂಡ್ಸು ನೀವು, ನಿಮ್ಮ eight masculine
fingers ಒಂದೊಂದಕ್ಕೂ ಒಂದು precious Stone ಇರೋ ringoo!.... ಯಾಕಿದು ? Being in
the family Circle I can understand! Pure grand mother's love! but ನೀವು ಹೊರಗ್ಹೊರಟಾಗ
people's interpretation: pawn broker or proprietor P. Orr and Sonsoತ ಊಹಿಸ್ತಾರೆ.
ಜನಗಳ ಬಾಯಿ ಮುಚೊಕಾಗುತ್ತೆ?
(swectly smiling plays upon the type-writer as though really typing
something...)
...ರಗೈಡಿ, ನೀವ್ಕೇಳಿದ್ರಿ plain ಆಗಿ ಹೇಳೂಂತ!... ಹೇಳ್ದೆ... plain ಆಗಿ.. I have only
done my duty and no more.
(continues playing upon Keyboard)
ರಾಮರಾವ್ : (After a minute's anguish... mustering up a smile)
ನಿಜ ದೇವಿ, ನನ್ನ horrible black fingers ಒಂದೊಂದಕ್ಕೂ ವಜ್ರ, ಕಂಪ, ಪಚ್ಚೆ... ಹೀಗೆ
---------------------------------------------------
ನನ್ನ ಇಲ್ಲದ ಬೆಳಕ್ನ, ನಮ್ಮ ತಾತನ ಮನೆಗಂಟ್ನ, ಬೀರ್ ತಾಹೋದ್ರೆ ಬೀದಿಲಿ... quite right
Devi...ನಿವೇಳ್ದ್ಹಾಗೆ ಇದೆಲ್ಲಾ ನಮ್ಮಜ್ಜಿ ಚಪಲ; ಈಗ್ಲೆ family ringsನ restore ಮಾಡಿಬಿಡ್ತೇನೆ.
(Noticing Saroja's lithe. lilly-sprout slender fingers dancing on the keys)
ಒಂದು, ಶ್ರೀಮತಿ... ಇಷ್ಟು Love ನಮ್ಮಜ್ಜಿಗೆ ನನ್ಮೇಲಿದ್ರೂ, ಅದೆಲ್ಲಾನೂ
ಹೋಗಲಾಡಿಸ್ಕೊಂಡಿದ್ದ ನನ್ನ ನಮ್ಮಜ್ಜಿ love ನ restore ಮಾಡಿದ್ದಕ್ಕೆ rewardoo-God
ಕೊಡಬೇಕು ನಿಮಗೆ.
(Taking all the rings off his eight fingers)
ಈ seven ings back again to Ajji? ನನ್ನ finger ಓ blackoo, ನೀವು ನನಗೆ ಈಗ
'ಮನದುಡ್ನ ಮಂದೀ ಎದುರಿಗೆ... ಮೆರೆಸಬಾರದೂಂತ ನೀವು ಹೇಳೂವ್ರ ಪಾಠ... ನೀವು type ಮಾಡ್ತಿರೋವಾಗಲ್ಲಾ...
ನಮ್ಮ ತಾತನ ಈ ಪಚ್ಚೆ ಉಂಗುರ ನಿಮ್ಮ ಬೆರಳಲ್ಲೇ ಇದ್ರೆ... ನನ್ಗೆ
ಆಗಾಗ್ಗೆ... poetಗೆ ದುಡ್ಡಿನ ಯೋಚ್ನೆ ಇರ್ ಬಾರ್ ದೂಂತ again and again ಜ್ಞಾಪಿಸುತ್ತೆ,
[Impulsively snatching off all the rings and before Saroja realises what he
is doing slips a huge emarald ring on her finger and shouting)
“ಅಜ್ಜಿಗೆ shall restore The family rings"
(exits through C not noticing Hiriyannayya who stands aside)
ಸರೋಜ: (Aware of but not noticing H's presence at C)
ಇದೇನ್ಹುಚ್ಚು ಈ ಮಗೂಗೆ! treating family property that belongs to his father
and not to that old-fashioned old Lady!
(examining ring)
Beautiful old-fashioned setting but... pure water. At least 5 carats!...
ಈ greenನ ನೋಡ್ತಿದ್ರೆ hill ಯಾಕೆ... dale ಯಾಕೆ... greenest grassನ ಇದಕ್ಕೆ refer ಮಾಡಿ
check ಮಾಡೋಕು!
(In a serious tone)
But then... ನನ್ನ ಹೆಂಗಸಿನ ಚಪಲಾನ ಒದರಿ “ನನ್ಕೈಲಿಟ್ಟಿದ್ದು ಒಂದ್ಮಗು... ಈ ಉಂಗ್ರಕ್ಕೆ ಹಕ್ಕಿಲ್ಲ
ಎಂದು ಶಿಶೂ”ಂಬೋದು ಮರೀದೆ... ಇದಕ್ಕೆ ಮಾಲೀಕರು...ಈ ತಿಳೀದ ಹುಡ್ಗ... “ಅಜ್ಜಿ,
ಅಜೀ"ಂತ ಎಷ್ಟು ಬಡ್ಕೊಂಡ್ರೂನೂವೆ... Law ತಿಳಿದ ನಾನು.... this Property belongs to
the man to whom ಈ ring ಏನು ? ಆ ಮಗು ತಗೊಂಡ್ಹೋದ seven rings ಅಲ್ವೆ...
all this property of House. Villages and also Coffce estates... ಇದೆಲ್ಲನೂವೆ
ತನಗ್ಸೇರಿದ್ರೂನೂವೆ ... ಮಾತೃಪತ್ರವಾತ್ಸಲ್ಯದಲ್ಲಿ ತನ್ನ ಹಕ್ಕೂ ಮರ್ ತು ಕಂಗೆಡ್ತಿರೋ that...
Sweet looking man... if only ನನಗೆ ಒಂದು chance I show my powers ಕೊಟ್ರೆ... easily
'Sir Hiriyannayya' ಆಗಬಹುದಾದ ... but I am only wasting words! ... first to restore
to the real master of all this princely estate... this ring... ಈ ಪಚ್ಚೆಕಲ್ಲು..
---------------------------------------------------------
(admiring it)
ಆ ಹುಡ್ಗ ಹೇಳ್ದ್ಹಾಗೆ splendid ಆಗಿ suit ಆಗುತ್ತೆ ನನ್ನ handಗೆ, But then...
(recovering herself with a shake of her head as though from a dream]
but 'duty is duty.... before even woman's eternal beauty!...
ಬೋರನ್ನ ಕರೀಲೇಬೇಕು. ಅವನ್ಕೈಲಿ ಕೊಟ್ಟೂ... ಮನೆ ಯಜಮಾನ್ತಿಗೆ ಕೊಟ್ಬಿಡೂಂತ...
(In a soft deliberately low voice) ಬೋರಣ್ಣಾ-ಬೋರಣ್ಣಾ.
ಹಿರಿಯಣ್ಣಯ್ಯ: (In an equally hushed voice)
ಬೋರಾ! ಬೋರಾ! ಯಾರೋ ಕೂಗ್ತಾರೆ.
(entering through C)
ಕ್ಷಮ್ಸಿ Miss-Madam-as the case may be letter writer ಹೇಳೋಹಾಗೆ , I am very
Sorry, ಬೊರಾ ಇಲ್ಲಾಂತ ಕಾಣುತ್ತೆ...... you see- ನಮ್ಮ father ಕಾಲಲ್ಲಿ ನಮ್ಮ ತಾಲ್ಲೂಕಿಗ
ೆ Highnessಗ್ಳು ಬಂದಿರೋದೂ ಅಲ್ದೆ once or twice tiger-shooting colonels and
journals... I mean generals... ಒಟ್ನಲ್ಲಿ also Govenor knowing people... with of course English Ladies ಬಂದು camp ಮಾಡಿ... ನನಿಗೆ High Society movement-ಹೊಸ್ದಲ್ಲ!
therefore proper ಆಗಿ introduce ಮಾಡೋಕೆ...ಯಾರೂ ಇಲ್ಲಿದ್ರೂನೂವೆ... real master
of this house ಆದ್ರೂನೂವೆ... ಬೋರ, ತಾವು ಕೂಗಿದಾಗ ಇಲ್ಲಿ ಇಲ್ಲೇ ಇದ್ದದ್ದು... apolo...
ನಾನು Sorryಂತ
(approaches Saroja and stands like a crass-ass)
ಸರೋಜ: ದಯವಿಟ್ಟು don't apologise! ನೀವೇ master of the houseಂಬೋದ್ನ
ಮರ್ ತದ್ದಲ್ದೆ you have also forgotten. ನಾನೂ ಬೋರನ ಹಾಗೆ paid servantoo ಅಂಬೋದ್ನ.
Society, high societyಲಿ ನಾನು refer ಮಾಡೋದು , high, high, very very high, which
means 'Sir'ಗ್ಳು... 'Sir'ಗ್ಳ Ladiesoo Lordsoo, Lady Lords as Governorsoo and ಲೇಡಿ
ಗೌರ್ ನರ್ ಸುಗ್ಳು and so onಗ್ಳು meet ಮಾಡೋ Societyಲಿ proper introductionಇಲ್ದೆ Ladies
and Gentlemen ಮಾತಾಡೋದೂ bad mannersoo. But circumstances alter cases.
ಇದೂ peculiar ಕಾಲ. Though I am a lady... which I know and you are a Lord which
you don't know... ಹೀಗೆ ಯಾರೂ ಇಲ್ಲಿ introduce ಮಾಡೋಕೆ ಇಲ್ದೆ .... let me come to
the point...
(with apparent difficulty trying to extract ring from finger with effort... with screwed up face)
ಹಿರಿಯಣ್ಣಯ್ಯ: (affected by her hitherto speech)
No! No! No! No! No!... Don't take trouble. ಹ್ಯಾಗಿದ್ರೂ permanentoo your
employement...
-------------------------------------------------------
ಸರೋಜ: (Sweetly)
ಹಾಗಂದ್ರೇನು! ಈಗಿಲ್ದಿದ್ರೂ ... ನಿಮ್ಮನೇಲಿ permanent servant ಆಗಿ ನಾನು employ
ಆಗಿರೋವಾಗ.. ಯಾವತ್ತಾದರೂ ಒಂದು ದಿನ ಈ ringo ನಿಮ್ಮ Wonderful handಗೆ ತಿರುಗಿ
ಬಂದೇ ಬರುತ್ತೇಂಬೊ... Con...
ಹಿರಿಯಣ್ಣಯ್ಯ: No! No: Srimati Devi! ನನ್ನ ugly hand ಗೇಕೆ! ಆ ರಿಂಗು! ನಿಮ್ಮ
beautiful handiಗೆ suit ಆಗುತ್ತೆ ಅದು. ಆ ಕೈಲೇ ಇರ್ ಲಿ, as a present for your great services
to the family.
ಸರೋಜ: ಇದು costly emeraldoo...
ಹಿರಿಯಣ್ಣಯ್ಯ: (In an impulse)
Do you think I care for money?
(nearing Saroja)
ಹಯ್ಯೋ, Miss or Madam Srimati Devi... Money is nothig to me! Honour...
ಹೇಳ್ತೇನೆ... ಕೊಟ್ಟ ಮಾತು... ತಪ್ಪಬಾರ್ದು... all these things... everything to me!ಆ ಉಂಗ್ರ
ಏನು ?... ಆ ಶಿಶು ಕೊಟ್ಟಿದ್ದು, ಇರ್ಲ್ಲಿ
(bowing to the ground)
ನಾನು master of the house ಆಗಿ, in reward for your future help for my
municipality and title ಬಾಬ್ತು... to show money is nothing to me...
(In an impulse draws a diamond ring off his finger and throws it gently at
Saroja which she catches muttering)
ಸರೋಜ: ಕ್ಷಮಿ, Mr. Hiriyannayya. This is madness!
ಹಿರಿಯಣ್ಣಯ್ಯ: No-No... Madam Devi! ಇಂಥಾ ringಗು ಎಷ್ಟೋ ಇವೆ familyಲಿ.
Costly ಗೀಸ್ಟ್ಲಿ ಅಂದ್ರಲ್ಲಾ... question of money never in Our family... Honour...
Honesty...
ಕಪ್ಪಣ್ಣ: (Entering L with Bora] ನೋಡಾ, ಬೋರಣ್ಣಾ, ನಾ ಹೇಳ್ಳಿಲ್ವೆ!
(confronting Saroja and Hiriyannayya)
ಈ ಹೆಂಗ್ಸು ಈ ಮನೇಗ್ನಂದದ್ದು, ಮನೇದುಡ್ನ ದೋಚ್ಕೊಂಡೋಗೋಕೆ ಹೊರ್ ತು... ಮನೇ
ಶುಭಕ್ಕಲ್ಲಾಂತ! ನೋಡವಳ್ಕೈಲಿ... ಯಾರ್ ದಾ ಪಚ್ಚೆ ಉಂಗ್ರ?
ಬೋರಣ್ಣ: ಅಯ್ಯಯ್ಯೋ... ನಮ್ದಣೀದು!
ಕಪ್ಪಣ್ಣ: ಪಕ್ಕದಲ್ಲಿರೋದ್ನೋಡು, ನಾನೀ ಹೊಸ್ಲು ಮೆಟ್ಟಾಗಿಂದ ಚಿಕ್ಕ ಯಜಮಾನ್ರ
ಕೈಲೇನವೆ ನೋಡ್ತಿದ್ದ ವಜ್ರದುಂಗ್ರ!
--------------------------------------------------
ಬೋರಣ್ಣ: ಅಯ್ಯಯ್ಯೋ... ಅಯ್ಯಯ್ಯೋ! ಅದೂನೂವೆ, ನನ್ಬುಟ್ಟುಟ್ಹೋದ ನನ್ನ ದಣೀ
ಕೈಲಿದ್ದದ್ದೇವೆ!
ಕಪ್ಪಣ್ಣ: (sternly)
ಬೋರಾ-ನನಿಗೇನೂ ಚಿಂತೆಯಿಲ್ಲ, ಹ್ಯಾಗಾದ್ರೂ ಗಂಡ್ಸು-ಎಲ್ಲಾದ್ರೂ ನನ್ನ ಹೊಟ್ಟೆಪಾಡು
ನಿಭಾಯ್ಸಿಕೋತೇನೆ, ಆದ್ರೆ ಬಂದೆ... ಈ ಮನೆ ಉಪ್ಪು ತಿಂದೆ! ಹಾಲ್ಕುಡಿದೆ! ಇದ್ದಮಟ್ಟಿಗೂ ಈ
ಮನೆಗೆ ನನ್ನ ಕೃತಜ್ಞತೆ ತೋರ್ ಸೇ ಹೋಗ್ತನೆ. ದೊಡ್ಡಮ್ಮಾವ್ರನ್ನ ಕರಕೊಂಡ್ಬಾ, ಆಕೆಗೆ ತಿಳಿಸಬೇಕು
ಈ ಅನಾಹುತ!
(Bora exits C and shouts)
ಬೋರಣ್ಣ: ನಾಣಪ್ಪಾ! ಅವ್ವಾ! ದೊಡ್ಡವ್ವಾ! ಬರ್ ರಿ! ಬ್ಯಾಗ್ನೆ ಮುಂದಿನ ಕೋಣೆಗೆ!
ಚಿಕ್ಕೋರೆ... ನಾಣಪ್ಪಾ... ದೊಡ್ಡವ್ವಾ...
(shreiks and the three rush to C)
ಕಪ್ಪಣ್ಣ: ಸಾರ್... ಅಲ್ಲ... madam as the case may be... authority leller Writer.....
One-ten ಕೊಟ್ಟಿದ್ದನೆ, V.P. Therefore eliquette cannot be wrong... even if wrong...
ನೀವೇನೂ ಸೀಮೆದೊರೆಸಾನಿಗಳಲ್ಲ... ಇಷ್ಟು ಜನರೆದ್ರೂಗೆ ಕೇಳ್ತೇನೆ... ಧನವಂತರ ಕುಟುಂಬದಲ್ಲಿ
ಹುಟ್ಟಿದೂನೂವೆ... ತನ್ನ ಮನತನಾನ ಮರೆತು... ತಾಯಿ ಇಲ್ದೆ ಕೂಸ್ನ...
(approaching Rama Rao and rolling his Gandhi Cap)
ಈ ಕೂಸ್ನ ಅದರ ಅಜ್ಜಿ ಮಡಿಯಿಂದ ಸೆಳ್ದು... ಅದನ್ನ ಪುಸಲಾಯ್ಸಿ... ಪಿಂಗಾಣಿ ಪಾತ್ರೇಲಿ
ಭೋಜನ ಮಾಡ್ಸಿ... ಜಾತಿ ಕೆಡ್ಸಿ... ಅದರ ವಸ್ತ್ರಗಳನ್ನೆಲ್ಲಾ ವಿದೇಶಿ ಮಾಡಿದ್ದಲ್ದೆ...
(Dragging out Rama Rao)
ಈ ಮುಂದಕ್ಟರೋ ಈ ಶಿಶೂನ ಮೋಸಗೊಳ್ಸಿ... ಆತನ ತಾತಾವ್ರು ಬೆಟ್ನಲ್ಲಿ ಹಾಕ್ಕೊಂಡಿದ್ದ
ಪಚ್ಚೆ ಉಗ್ರಾನೂ ಸುಲ್ಕೊಂಡು...
ರಾಮರಾವ್: Don't say it... ನಾನೇ ಕೊಟ್ಟಿದ್ದು.
ಕಪ್ಪಣ್ಣ: ಶಾಂತಿ ತೊಗೊಳ್ಳಿ ಸಾರ್... ನಿಮ್ದಲ್ಲ ಬೆಲೆಯುಳ್ಳ ಉಂಗ್ರ... ನಿಮ್ಮ ಕುಟುಂಬದ್ದು!
ಅಂತಾವು ಸಾವಿರ ಉಂಗುರಗಳು ಕುಟುಂಬವು ಎಷ್ಟಿದ್ರೂನೂವೆ... ಒಂದನ್ನಾದರೂ ಕೊಡೂ
ಹಕ್ಕು ದೊಡ್ಡಮಾವ್ರದು! ನಿಮ್ದಲ್ಲ!... ಮಾತಾಡ್ಬೇಡಿ....
(toSubbamma)
ಇದೊಂದೇ ಅಲ್ಲ ಅಮ್ಮಾವೇ!... ಕೇಳಿಧೀರಾ, ನಾರಾಣಪ್ಪನೋರೇ! ನಾನ್ಹೊಸ್ಬ.
ನನ್ನಂಬಿದ್ರೂನೂವೆ... ಬೋರ ಹಳಬ ಮನೇಗೆ... ಅವನ್ನಂಬ್ತೀರಾ ?... ಬೋರಣ್ಣಾ... ನೋಡಿಲ್ವೆ
ನೀನು? ಚಿಕ್ಕ ಯಜಮಾನುನೂವೆ... ಲಾಗಾಯ್ತಿನಿಂದ... ಕಿರುಬೆಟ್ಟಿನಲ್ಹಾಕೊಂಡಿದ್ದ ದೊಡ್ಡೆಜಮಾನ್ರ
ವಜ್ರದುಂಗ್ರಾಣಾ... ಈಕೆ ಕೈಗೆ ಹಾಕಿದ್ದೂ...
(to Subbamma in a Bull-dog tone)
----------------------------------------------------
ಒಟ್ನಲ್ಲಿ ಹೇಳ್ತೇನಮ್ಮ... ನಾನು ಮನೆ ಬಿಟ್ಟು ಹೋಗೋನು, ಬ್ರಾಹ್ಮಣ... ಬಡವನಾಗಿ
ಬಂದೆ... ನಿಮ್ಮ ಅನ್ನಾನೂ ತಿಂದೆ. ಅಲ್ಪಕಾಲ... ಈಗ ಹಿಂತಿರುಗಿ ಹೋಗ್ತೇನೆ. ಆದರೆ ಒಂದು
ಪ್ರತ್ಯುಪಕಾರ ನಿಮ್ಮುಟುಂಬಕ್ಕೆ, ಕೇಳೀಮ್ಮಾ... ಬಂದ ಒಂದೆರಡು ದಿನ್ದಲ್ಲಿ ದೊಡ್ಯಜಮಾನ್ರ
ಪಚ್ಚೆಕಲ್ಲುಂಗ್ರಾನ ಚಿಕ್ಕೋರ್ ನ ಮೋಸಮಾಡ್ಯೂ... ವಜ್ರದುಂಗ್ರಾನ ಯಜಮಾನ್ರಿಗೆ ಬೆಪ್ಪು ಹಿಡಿಸ್ಯೂ...
ದೋಚ್ಕೊಂಡಾ ಈ ಮೋಹಿನಿ...
ಹಿರಿಯಣ್ಣಯ್ಯ: (Desperately)
Not at all... ಆಕೆ ಏನೂ ದೋಚ್ಕೊಳ್ಲಿಮ್ಮಾ... ನಾನೇ ಕೊಟ್ಟಿದ್ದು...
ಕಪ್ಪಣ್ಣ: ಹಯ್ಯೋ ! ಬಾಯ್ಮುಚ್ಚಿ ಸಾರ್. Commit ಮಾಡ್ಕೊಬೇಡಿ! ನೋಡೀಮ್ಮಾ, ಚಿಕ್ಕ
ಯಜಮಾನ್ರಗೂ 'ನಾನೇ ಕೊಟ್ಟೇ'ಂಬೋ ಹುಚ್ಚು ಹಿಡ್ಸೋ ಹೆಂಗ್ಸು... ಇನ್ನಗಾನಾ ಕುಟುಂಬದಲ್ಲಿ
ಇದ್ಳೋ... ಒಂದೊಂದು ದಿನಕ್ಕೆ ಎರಡೆರಡು ಉಂಗ್ರ ಅಲ್ದೇ... ಚಿಕ್ಕೋರ್ಗೂ ಯಜಮಾನ್ರಿಗೂ
ಹಿಡಿಸಿದ್ದ ಬೆಪ್ನ... ನಿಮಗೂ ಅಲ್ದೆ ಸಮಸ್ತ್ವೋ ತಿಳ್ದ ಬೋರಣ್ಣರಿಗೂ, ನಾರಣಪ್ಪನೋರಿಗೂ
ಹಿಡ್ಸಿ ಇನ್ವಂದು ತಿಂಗ್ಳೊಗ್ಳೆ ಕುಟುಂಬಾನಲ್ಲಾ ನುಂಗೋಕೆ ಬಂದಿರೂ 'ಮಾರಿ' ಅವಳು, ಜೋಕೆ!
ಜೋಕೆ!! ಜೋಕೆ!!! ನಾನು ಪಟ್ನವಾಸ್ದಲ್ಲಿ ಹುಟ್ದೋನು. ಈಕೆ ಹಾಗೆ, ಇಂಥಾವ್ರ ಠಕ್ಕುಗಳ್ನ
ಅರಿತೋನು. ನಿರ್ಮಲಮನಸ್ಕರಾದ ನಿಮ್ಮವ್ರ ಬೆಪ್ಪುತನಾನ ತಿಳ್ಕೊಂಡು ನಿಮಗೆ ಈಕೆ ಇವ್ವರ್ ಗೂ
ಮಾಡಿದ, ಇನ್ಮುಂದಕ್ಕೂ ಮಾಡಬಹುದಾದ ಅನ್ಯಾಯಾನ ಹೇಳಿದ್ದೇನೆ, ಜೋಕೆ! ಜೋಕೆ!!
ಜೋಕೆ!!! ಬರ್ ತೇನೆ ಬೋರಣ್ಣ,
(squeezing Bora's hands)
ನನ್ನ ಟ್ರಂಕು ಹಾಸ್ಟೇನ ನನ್ನ ಕೈಯಿಂದ ಒಂದ್ಕಾಸೂ ತಗೊಳ್ದೆ ಸ್ಟೇಷನ್ಗೆ ಸಾಗಿಸಿದ್ದಕ್ಕೆ
ಚಿರರುಣಿಯಾಗಿದ್ದೇನೆ! ಇಲ್ಯಾರೂ ನನ್ನಂಬೋ ಹಾಗಿಲ್ಲ. ನಿಮ್ಮನ್ನಾದರೂ ನಂಬ್ಯಾರು... ಒಬ್ಹೆಂಗಸು
ಮನೇವ್ರ ಕಣ್ಣೆದುರಿಗೆ ಮನೆ ಒಡವೆಗಳ ದೋಚಿದ್ರೂ... ಅವಳ ನಂಬ್ಯಾರೆ ಹೊರ್ತು... ನನ್ನಾಗ್ಲಿ...
ಬೋರಣೋರೆ, ನಿಮ್ಮನ್ನಾಗ್ಲಿ... ಕುಟುಂಬದ ಕೆಲ್ಸದಲ್ಲಿ ಕುಗ್ಗಿ ತಲೆ ನರ್ ತ ನಾರಣಪ್ಪನೋರ್ ನೇ ಆಗ್ಲಿ
ನಂಬೋ ಹಾಗಿಲ್ಲ. ಈ ದೊಡ್ಡ ಕುಟುಂಬ... ಸರ್ವರಿಗೂ ನಮಸ್ಕಾರ... ಬರ್ ತೇನೆ.
(Exit)
ನಾರಾಯಣ: (to Subbamma)
ಅಮ್ಮಾ... ಹೋಗ್ತಿಧಾನಮ್ಮಾ ಆತ...
ಬೋರಣ್ಣ: ಅವ್ವಾ!
(Points out to door that K is exitting and exits)
ಸುಬ್ಬಮ್ಮ: (to herself) 'ಪಚ್ಚೆ ಉಂಗ್ರ'....'ವಜ್ರದುಂಗ್ರ'... ಮಗೂ ತಾನ ಕೊಟ್ಟಿಟ್ಟ!
(to Saroja) ಇದು ನಿಜ್ವೇನಮ್ಮಾ ?
Lidlused: (suiling superciliously)
ಇಧೇನ್ಹೀಗೆ ಕೇಳ್ತೀರಾ? ನಿಮ್ಮಗ, ನಿಮ್ಮೊಮ್ಮಗೆ ಇನ್ನೂ ಎದುರಿರೋವಾಗ ನನ್ನೆನ್
ಕೇಳ್ತೀರಾ? ಆವರ್ ನೆ ಕೇಳಿ.
----------------------------------------------------
ಸುಬ್ಬಮ್ಮ: ಯೇಳಿದ್ರೂನೂವೇಮ್ಮಾ... ಅವರಿಬ್ರೂ ವಯಸ್ಕರಾದ್ರೂನೂವೆ ತಿಳಿದೋರಲ್ಲ,
ಹಳ್ಳಿಲೇ ಬೆಳದೋೂರು!... ನಿಮ್ಮ ಹಾಗೆ B.A. ಗ್ಳೆಲ್ಲಾ ಪ್ಯಾಸ್ ಮಾಡಿ ಪ್ರಪಂಚದ ಅನುಭವ
ತಿಳಿದೋರಲ್ಲ!....ನೀವು ಹೀಗೆ ಕುಟುಂಬದ ಒಡವೆಗಳ್ನ...
ಸರೋಜ: ಚೆನ್ನಾಗಿ ಕುಟುಂಬದ ಒಡವೆಗಳಮ್ಮಾ!
(Sardonically)
ಹ್ಹ! ಹ್ಹ!ಹ್ಹ!ಹ್ಹ! ಮಕ್ಕಳಂತೆ! ಒಬ್ಬರಿಗೆ ಐವತ್ತು ವಯಸ್ಸು, ಅವರ ಮಗನಿಗೆ ಇಪ್ಪತ್ತು ...
ಒಂದೂ ತಿಳೀದಂತೆ! ಹ್ಹ! ಹ್ಹೈ! ಹ್ಹ !
ಕಪ್ಪಣ್ಣ: (rushing into the room)
ಬೋರಣ್ಣೋರೆ!... ಸಾರ್ ನಾನು ರಾಕ್ಷಸೀಂತ ಕೂಗಿದ್ದು ತಪ್ಪೆ ಸಾರ್... Look at her face...
(to Rama Rao) ಚಿಕ್ಕೋವ್ರ ನೋಡಿ ಸಾರ್... ಅಮ್ಮಾ, ಇನ್ನೂ ಆಪ್ನಂಬಿಕನೇ ನನ್ನ ಮೇಲೆ?
(appealingly)
ನಾರಣಪ್ಪನೋರೆ, ತಾವಾದ್ರೂ ಹೇಳಿ ಅಮ್ಮಾವಿಗೆ... ಬೋರಣ್ಣೋರೆ, ಅಮ್ಮಾವರಿಗೆ
ಹೇಳಿ ನೀವಾದರೂ.. ಈಕೆ ಈ ಕ್ಷಣವೇ ಹೊರಟ್ಹೋಗೋದು ಮೇಲು ಅಂತ.
ಸರೋಜ: ಹಾಗೆಲ್ಲಾ ಹೇಳ್ಪ್ರಯೋಜ್ನ ಇಲ್ಲ! Mr. Jodidar Rama Rao... minor ಅಲ್ಲ
majoroo. Bangaloreನಲ್ಲಿ one month's notice each way contract ಬರ್ ಸಿಕೊಂಡಿದ್ದೇನೆ,
ಲಾಯ್ರ ಎದುರಿಗೆ, Therefore salary ಪ್ರಕಾರ 100Rs. for this month plus 100 Rs.
in lieu of notice. Total Rs 200 ಇಟ್ಟಿಡಬೇಕು.
ಸುಬ್ಬಮ್ಮ: (Pathetically clutching a Kappanna's arm)
ಕಪ್ಪೂ! ಏನ್ಹೇಳಿಧಾಳೆ ಈ ಕಿರಾತೀ?
ಕಪ್ಪಣ್ಣ: ಬಲು ಸೂಕ್ಷ್ಮಾಮ್ಮಾ ಹೆಂಗ್ಸು. ನಮ್ಮ ಚಿಕ್ಕೋರು ತನ್ನ signಗೆ ತಾನೇ ಜವಾಬ್ದಾರಿ
ಆಗಿರೋ ವಯಸ್ಸು ಅವರ ಬಾಯಿಂದಾನೇ ಆರಿಕ್ಕೊಂಡು... ಈ ಉಂಗುರ, ಎರಡು
ಉಂಗಗಳನ್ನೂ ಅವ್ರ ಕೈಯಿಂದಾನೇ ಸುಲ್ಗೊಂಡದ್ದಲ್ದೆ... ಈ ತಿಂಗ್ನ ಸಂಬ 100 ರೂಪಾಯಿ, ಅಲ್ದೆ
ಡಿಸ್ ಮಿಸ್ ಆದದ್ದಕ್ಕೆ ಇನ್ನೊಂದ್ನೂರ್ ರೂಪಾಯಿ ಲಾಯ್ರಮೂಲ್ಕ ಕೋರ್ಟಿನಲ್ಲಿ ಸುಲಕೊಳ್ಳೋಕೆ
ಅವಳ್ಗಿರೋ ಶಕ್ತೀನ ತೋರ್ಪಡಿಸ್ಕೊತ್ತಿದ್ದಾಳೆ...
(sternly to Saroja)
Devi or Devva, whatever you call yourself.
ಸರೋಜ: (airily)
You are right. That is my plot. ನನ್ನ things ಎಲ್ಲಾ ಮೇಲಿವೆ. ಹದಿಮೂರು in
number. ಎಲ್ಲಾ packed.
(ನಗುತ್ತಾ)
ಹ್ಹ! ಹ್ಹ! ಹ್ಹ! ನನಗ್ಗೊತ್ತು ಹೀಗೊಂದ್ವೇಳೆ ಆಗುತ್ತಂತೆ! ಅವುಗಳಲ್ಲೆಲ್ಲಾ ನನ್ನ
------------------------------------------------------
Harmonium, ವೀಣೆ and ಪಿಟಿಲು ಮುರೀದ್ಹಾಗೆ Stationಗೆ ಸಾಗ್ಸಿ ನನಗ್ಬರಬೇಕಾದ ಇನ್ನೂರು
ರೂಪಾಯ್ನ ಕೊಟ್ಟುಬಿಟ್ರೆ ನನ್ನ ಲಾಯರ್ ಗೂ ಈ ಕುಟುಂಬಕ್ಕೂ ತಕರಾರು ಏನೂ ಇರೋದಿಲ್ಲ.
ಸುಬ್ಬಮ್ಮ: (ರೇಗಿ ಸರೋಜಳ ಮೇಲೆ ಬೀಳಲುದ್ಯುಕ್ತಿಸುತ್ತಿರುವ ಕಪ್ಪಣ್ಣನನ್ನು ಹಿಡಿದು ನಿಲ್ಲಿಸಿ)
ಶಾಂತಿ ತಗೋ ಕಪ್ಪು, ಮನಸ್ಸಿಗೆ! ನಾನ್ನೋಡ್ಕೋತೇನೆ! ನಾರಾಯಣಾ, ಆ ತಾವರಕೆರೆಯಿಂದ
ತೆಂಗಿನ ತೊಟ್ಟ ಬಾಬ್ತು ಬಂದ ಡುಡ್ನಲ್ಲಿ ಎರಡೂರು ರೂಪಾಯಿ ನೋಟುಗ್ಳು ಎತ್ಕೊಂಡ್ವಾ!
ಬೋರಾ, ಈ ಪಿಶಾಚಿ ಸಾಮಾನುಗ್ಳು ಒಂದೂ ಬಾಕಿ ಇಲ್ಲಿ ಸ್ಟೇಷನ್ನಿಗೆ ಸಾಗ್ಸಿ ಅಲ್ಲೇ ಇರು.
(exit Bora R. exit Narayana interior of C)
ಕಪ್ಪಣ್ಣ: (to Saroja) ನಿಮ್ಮ ಸಂಬಳಾನೂ ಆಯ್ತು. ನಿಮ್ಮ ಸಾಮಾನು..
(indicating Bora who with unbelievable energy is shifting her things R to L] ಭದ್ರವಾಗಿ ಹರಪಡ್ತಿವೆ... ದಯವಿಟ್ಟು...
[snatching the two hundred Rupee notes from Subbamma who has just
received them from Narayana)
ಇಡೀಮ್ಮಾ... ನಿಮ್ಮೆಯಿಂದ ಯಾಕ್ಹೋಗ್ಬೇೈಕು ಈ ಹಾಳುದ್ದು!
(to Saroja)
ತಾವೂನೂವ ದಯವಿಟ್ಟು ತಮ್ಮ ಸಾಮಾನುಗಳ ಜೊತೆಗೆ ತಾವ್ಕೇಳ್ದೆ ಶನಿದುಡ್ಡೂ
ಎತ್ಕೊಂಡು ಹೊರಟ್ಹೋದ್ರೆ ಸರ್ವರಿಗೂ ಶುಭ...
(Whipping out his fountain-pen and tearing out a blank leaf from his diary
and laying it on table L.F.)
But ಬಂದ ದುಡ್ಗೆ ಒಂದು ರಸೀತಿ ಬರದ್ದಿಟ್ಟೇ ನೀವಿಲ್ಲಿಂವೊರಡೋದು... ಮುಂದಕ್ಕೆ
ನೀವೇಳಿದ ನಿಮ್ಮ ಲಾಯರಿನ ತೊಂದ್ರೆ ನಮ್ಕುಟುಂಬಕ್ಕೆ ಇಲ್ದ ಹಾಗೆ..
(Saroja approaches table. seats herself and writes out a receipt with a sweet
smile)
(in a very very stern voice)
ಅಲ್ದೆ ಆ ಎರಡು ಉಂಗುರಗಳ್ನ ಇಲ್ಲೇ ಇಟ್ಬಿಟ್ಟು ಹೋಗ್ಬೇಕು, ಯಾರನ್ನ ಬೆದರಿಸಿದ್ರೂ ಈ
ಕುಟುಂಬದಲ್ಲಿ ನನ್ನ ಬೆದರ್ಸೋ ಹಾಗಿಲ್ಲ! ಒಂದು ನಿಮಿಷದಲ್ಲಿ ಆ ಉಂಗುರಗಳು ನೀವು ಕೆಳಗೆ
ಇಡದ ಪಕ್ಷದಲ್ಲಿ Police Inspectorಗೆ ಹೇಳಿ ಕಳಿಸ್ತೇನೆ, ಆತನ್ನ ಕರ್ಸಿ... 'ಇವು ಕದ್ದ
ಉಂಗುರಗಳೂಂ'ತ Case ಮಾಡಿ... ನೀವು Count ನಲ್ಲಿ ನಿಮಗೆ ಸಜಾ ಆಗೋ ಆಪತ್ತು
ತಪ್ಪಿಸಿಕೊಳ್ಳೋಕೆ ಇದೊಂದು ಅವಕಾಶ? ತೆಪ್ಪನೆ ಆ ಉಂಗುರಗಳಿಟ್ಬಿಟ್ಟು ಹೊರಟು ಹೋಗಿ!
ಸರೋಜ : (dropping the currency notes into her hodica from her neck)
ಸಾಮಾನೆಲ್ಲಾ ಹೊರಗ್ಹೋಯ್ತೇ, ಬೋರಾ... ಸ್ಟೇಷನ್ನಿಗೆ ಹೋಗು. ಬಂದ್ಬಿಟ್ಟೆ ನಾನು.
ಇನ್ನೊಂದು ಜಟ್ಕಾನೂ ಕಳ್ಸು ಅಲ್ಲಿಂದ.
-------------------------------------
ಕಪ್ಪಣ್ಣ: ಹೌದು. ಬೋರಪ್ನೋರೆ, ಎಷ್ಟಕ್ಕಷ್ಟು ಬೇಗ ಈ ಪಿಶಾಚಿ ಸಾಮಾನುಗಳ ಸ್ಟೇಷನ್ನಿಗೆ
ಸಾಗ್ಸಿ ಅಲ್ಲಿಂದ double charge ಆದ್ರೂ ಕೆಡ್ತು... ಒಂದ್ಜಟ್ಕಾನ ಕಳ್ಸಿ... ಈಕೆ ಮನೆಯಿಂದ
ಹೊರಡೋವರಗೂ... ನಿಮ್ಮನ್ನ ಬಿಟ್ಹೋದ ದೊಡ್ಡ ಧಣಿ ಕುಟುಂಬಕ್ಕೆ ಹಾನಿ!
(Bora with extra-ordinary agility shifts the last of the luggage and exits L)
ಸರೋಜ: (to Kappanna) ಇಧೇನಿದು! Police ಗೀಳೀಸ್ ಅಂದ್ರಲ್ಲಾ... ಆ ವಿಚಾರ ನಿಮಗನಾದ್ರೂ ಗೊತ್ತೇ?
ಕಪ್ಪಣ್ಣ: ನನಗ್ಗೊತ್ತಿಲ್ದಿದ್ರೂನೂವೆ ಆ ಎರಡು ಉಂಗುರಗಳ ಈ ಕ್ಷಣ ಇಲ್ಲಿ ಇಟ್ಬಿಡದಿದ್ರೆ
ನಿಮಗೊತ್ತಾಗುತ್ತೆ,
ಸರೋಜ: (laughing)
ಹ್ಹ! ಹ್ಹ!! !!! ಹ್ಹ!!!! ಹ್ಹ!!!!! ಈ ಕುಟುಂಬವೆಲ್ಲಾ ಹಳ್ಳಿ ಗಮಾರ್ರಾದ್ರೂನೂವೆ ನಿಮಗಾದ್ರೂ
ಸ್ವಲ್ಪ ಬುದ್ದಿ ಇದೆ ಅಂತ ತಿಳ್ಕೊಂಡಿದ್ದೆ... ಹದಿಮೂರ್ಸಾಮಾನ್ಸಮೇತ ಮನೆಗ್ಬಂದು. ಮನೆ Jodidar
Rama ರಾಯರ ಕೈಯಿಂದ appointment salary Cerificate ಕೈಲೂ ಇಟ್ಕೊಂಡು, ಬಂದ
ಮೂರ್ದಿನದಲ್ಲಿ ಇನ್ನೂರ್ರೂಪಾಯ್ನೂ ಸಂಪಾದಿಸ್ಕೊಂಡು ಹೊಗ್ರಿರೂ ನಾನು ಹೆಗ್ಸು ಮಟ ಮಟ
ಮಧ್ಯಾಹ್ನ... ಈ ಎರಡೂ ದಾಂಡಿಗರ ಕೈಯಿಂದ ಉಂಗುರಗಳ್ನ ಕದ್ದುಕೊಂಡು ಹೋದೇಂಬೊ
ಕೇಸ್ನ... magistrate ಎದುರಿಗೆ ನೀವು prove ಮಾಡೋದಿರ್ಲಿ.. ಕೋರ್ಟಿನಲ್ಲಿ ಇದೇ
ಹಿರಿಯಣ್ಣಯ್ಯನೋರ ಕೈಲಿ “ದೇವರು ಸಾಕ್ಷಿಯಾಗಿ ಈ ಉಂಗ್ರಾನ ನಾನೇ ಈಕೆಗೆ ಕೊಟ್ಟಿದ್ದೂ"ಂತ
ಕೈಫಿಯತ್.. Best lawyer in Bangalore ಕೈಲಿ ಹೊರಡ್ಸೋದಲ್ದೆ... ಈ ಕೇಸೇನು?
“ಕೆಣಕಿದ ಹೆಂಗ್ಸು ಕೆಂಡಕ್ಕಿಂತ ಕೇಡೂ"ಂಬೋ ಸಾಮತೀನ ತೋರಿಸ್ತೇನೆ! ಐವತ್ತು ವರ್ಷದ ಮನುಷ್ಯ...
ಇಂಗ್ಲಿಷ್ ರೂಢಿ ತಿಳ್ದೋನು... ಮಗನಿಗೆ type-writer ಮಾಡೋಕೆ ಬಂದ ಹೆಂಗಸಿನ ಬೆರಳ್ಗೆ
ಸಾವಿರಾರು ರೂಪಾಯಿ ಬೆಲೆ ಬಾಳೂ ವಜ್ರದುಂಗ್ರ ತೊಡಿಸಿ ಇಂಗ್ಲಿಷ್ ಅರ್ಥಾನ... ಆ ಇಂಗ್ಲಿಷ್
ಜಡ್ಜಿ... ನಾನು ಇಪ್ಪತ್ತು ಸಾವಿರ ರೂಪಾಯಿ damages, breach of promise from mamiage
ಕೇಸ್ ಹಾಕ್ದಾಗ ಗೊತ್ತಾಗುತ್ತೆ... ನನ್ಬುದ್ಧೀನೂ... ಈ ಕುಟುಂಬವ ಯೋಗ್ಯತೇನೂ ಪ್ರಪಂಚಕ್ಕೆಲ್ಲಾ
ಗೊತ್ತಾಗುತ್ತೆ... ಈ ಮನೇವರ್ನೆಲ್ಲಾ ಕೋರ್ಟಿಗಳೊವಾಗ ಈ ಊರೋರೆಲ್ಲಾ ಈ ಕುಟುಂಬಾನ
ನೋಡಿ ಪಕ್ಕೆ ಪಕ್ಕೆಗಳ್ನ ಹಿಡ್ಕೊಂಡು 'ಪಕಪಕಾ'ಂತಾ ನಗ್ತಾರಲ್ಲಾ... ಆಗ ಗೊತ್ತಾಗುತ್ತೆ... ನನ್ಬುದ್ಧೀಗೂ
ನಿನ್ಬುದ್ಧೀಗೂ ವ್ಯತ್ಯಾಸ.
{sails In L)
ಕಪ್ಪಣ್ಣ: (ಹಣೆಯನ್ನು ಹಚ್ಚಿಕೊಳ್ಳುತ್ತಾ)
(aside... to Saroja)
ಹಯ್ಯಯ್ಯೋ , ಅಮ್ಮಾ, ಆ ಹಾಳುಂಗುರಗಳ್ನ...ದೇವ್ರು ಕೊಟ್ಟಿದ್ದು ಎಷ್ಟೋ ಇದೆ ಈ
ಕುಟುಂಬಕ್ಕೆ ... ನೀವೂ ತಿಂದಿಧೀರಾ ಈ ಮನೆ ಅನ್ನ... ನಾನು ನಿಮ್ಮ ಹಾಗೇ ತಿಂದು ನಾಳೆ
ಬಿಟ್ಟು ಹೋಗೋನು... ತಿಂದುಪ್ಪಿಗೆ ಎರಡು ಬಗೀಬಾರ್ದು! ಬೇಕಾದ್ರೆ ಆ ಹಾಳು ಎರಡುಂಗ್ರಾನೂ
ನುಂಗೊಂಡು ಹೋಗಿಮ್ಮಾ, ಕುಟುಂಬಾನ್ಮಟ್ಟಿಗೆ...
--------------------------------------
(drops to his knees at Saroj's feet and with arms aloft)
ಹೆಂಗ್ಸಿನ ಕಾಲ್ಗೆ ಹಿಗ್ಬೀಳೋನಲ್ಲಾಮ್ಮಾ ನಾನೂ... ಆದ್ರೂ ಕೇಳ್ಕೋತೇನೆ... ಮುಂದಕ್ಕೆ
ನಿಮ್ಮನ್ನೂ ಕೆಲವು ಕಾಲ ನಂಬಿ ಈಗ ನನ್ನಂಬ್ರಿರೋ ಈ ಕುಟುಂಬಾನ... ನೀವು ಹೇಳ್ದ damages
for breach of promiseಗೆ ಮನೆಗೆ ಹಿರಿಯರಾದ ಹಿರಿಯಣ್ಣಯ್ಯೋರ್ನ ಕೋರ್ಟಿಗಳೀಬೇಡಮ್ಮಾ...
ಏನೂ ಬಂದ್ರಿ. ನಿಮ್ಮನ್ಯಾರೂ ಬಯ್ಯೋದಿಲ್ಲ... ಬಂದದ್ದಕ್ಕೆ ರೂಪಾಯಲ್ದೆ ಉಂಗ್ರಗಳೂ ಲಾಭ
ಆಯ್ತು... ದಮ್ಮಯ್ಯಾ, ಹೋಗ್ಸೇರಿ! ದೊಡ್ಡ ಕುಟಂಬಾಮ್ಮಾ ಇದು. ಊರೆಲ್ಲಾ ಕಣ್ಣೆತ್ತಿ ನೋಡ್ತಿರೋ
ಕುಟುಂಬ. ಇದ್ನ ಕೋರ್ಟಿಗಳಿಬೇಡಿ... ನಿಮ್ಕಾಲಿಗ್ಬೀಳ್ತೇನೆ
ಸುಬ್ಬಮ್ಮ: (Coming forward... in a strong voice)
ಕಪ್ಪೂ!... ಇಲ್ಬಾ...ಗಂಡ್ಸು! ನೀನ್ಯಾಕ್ಬೀಳೋದು ಅವಳ ಕಾಲ್ಗೆ, ಕೊಟ್ಟಾಯ್ತಲ್ವೆ.
ಅವಳು ಕೇಳಿದ್ದುಡ್ನ... ಇನ್ನೇನು... ಆ ಹಾಳು ಉಗ್ರಗಳ್ಗೇಂತ ಬೇಡ್ಕೊಳ್ತಿಧಿಯಾ? ಆ ಶನಿ ಕೈ
ಮುಟ್ಟಿದುಂಗ್ರಗಳು ನಮಗಿನ್ಬೇಡ.. ತಕ್ಕೊಂಡೋಗ್ಲಿ ಅದ್ನೂವೆ.
ಕಪ್ಪಣ್ಣ: (Throwing himself abjectly at Subbamma's feet)
ಹಯ್ಯೋಮ್ಮಾ , ನಾನ್ಯಾವದ್ತಾನೆ ಏನ್ಹೇಳ್ಲಿ?!... ಇಲ್ಲ ಆ ಹಂಗ್ಸಿನ ಘಟ್ಟಿಗತನ ನಾನೇನ್ಹೇಳ್ಲಿ?
ಇಲ್ಲ, ನಮ್ಮ ಚಿಕ್ಕೆಜಮಾನ್ರ ಮಂಕುತನಾನ್ಹೇಳ್ಲೇ? ಹಯ್ಯೋಮ್ಮಾ . ಕೋರ್ಟಿಗಳೆದ್ಬಿಡ್ತಾಳೆ ನಮ್ಮನ್ನೆಲ್ಲಾ...
High Court ಜಡ್ಡಿ... ಇಂಗ್ಲೀಷ್ ನೋನೂಮ್ಮಾ! ಎಲ್ಲಾ... ....... ಹೇಳ್ದ್ಹಾಳಗೆ... ಇಂಗ್ಲಿಷ್
ಪದ್ದತೀಲೇ ನೋಡೋನು...
(to Hiriyannayya) ಕೋಪಿಸ್ಕೊಬೇಡಿ ಸಾರ್! ಅನ್ಯಾಯ! ಮಂಕು ಅಮ್ಮಾ ನಮ್ಮ ಚಿಕ್ಕೆಜಮಾನ್ರು!...
(bows his head down)
ಹಿರಿಯಣ್ಣಯ್ಯ: What do you mean... ಮಂಕು ?
ಸುಬ್ಬಮ್ಮ: ಸುಮ್ನೆ ಇರ್ಮಗೂ! ನೀನು ಮಂಕೂಂತ ಊರ್ಗೆಲ್ಲಾ ಗೊತ್ತು! ತೆಪ್ನಿರು.
(stroking Kappu's head)
ಕಪ್ಪೂ! ಮಗು ಎಷ್ಟು ಮಂಕ್ತಾನೇ ಆಗ್ಲಿ... ಅವಳ ಸಾಮಾನಾಯ್ತು. ಅವಳು ಕೇಳ್ದ
ರೂಪಾಯಾಯ್ತು... ಆ ಉಂಗ್ರಗಳಾಯ್ತು; ಇನ್ನೇನು? ನಿನ್ನ ಅವಳ ಕಾಲ್ಗೆ ಬೀಳೋಹಾಗೆ
ಬೆದರಿಸ್ತಾಳೇ...? ಆದ್ಹ್ಯಾಗೆ ಕೋರ್ಟಿಗೆಳೆದಾಳು ನಮ್ಮನ್ನ?
ಕಪ್ಪಣ್ಣ: (standing up)
ಅದೆಮ್ಯಾ ಅವಳ ಸೂಕ್ಷ್ಮಾ, ಅವಳು B.A. ಪ್ಯಾಸ್ ಮಾಡಿದ ಸೂಕ್ಷ್ಮಾ!
ಮನೆಬಿಟ್ಹೋಗ್ತದ್ದೋಳ್ನ ಬೋರಣ್ಣೋರು ಮನೇವ್ರಿಗೆಲ್ಲಾ ಬುದ್ದಿ ಕಲ್ಸ್ಹೋಗ್ಬೇಕು ಅಂತ ಬೇಡ್ಕೊಂಡ
ಹಾಗೇನೇವೆ ಬುದ್ದಿ ಕಲಿಸ್ತಿಧಾಳೇಮ್ಮಾ, ಮನೆಯವರ್ಗೂ ಅಲ್ದೆ ಸರ್ವವೂ ತಿಳ್ದೆಹಂಕಾರದಲ್ಲಿ
ಮುಳುಗಿದ್ದ ನನಗೂನೂವೆ! ಕೇಳಮ್ಮಾ, ನಾವೇನೋ ಪೋಲಿಸ್ನಿಂದ ಇವಳ್ನ ಮುಟ್ಟೋಹಾಗಿಲ್ಲ,
ಇವಳತ್ರ ಇರೋ ಸರ್ವಸ್ವವೂ ಇವಳ್ಗೆ ನಾವ್ನಾವೇ ಕೊಟ್ಟದ್ದು. ಹಾಗೆ ಕೊಡದಿದ್ರೂನೂವೆ ಪೋಲಿಸ್
ಕೋರ್ಟಿಗೆ ನಮ್ಮ ಕುಟುಂಬ ಏನೂ ಹೋಗೋಹಾಗಿಲ್ಲ, ಹೋಗ್ಲಿ ಹಾಳಾಗಿ! ಅಲ್ದೇಮ್ಮಾ
------------------------------------------------
ಅವಳ್ಕೋಪದಲ್ಲಿ ಈಗೊಂದ್ನಮೂನೆ ತಿರುಗೊಂಡಿಧಾಳೆ ಚಿಕ್ಕೆಜಮಾನ್ರ ಮೇಲೆ ಮದ್ವೆ ಕೇಸ್ಹಾಕ್ತೇನೇನಂತ...
ಇಪ್ಪತ್ತು ಸಾವಿರ ರೂಪಾಯ್ಹೆ...
ಸುಬ್ಬಮ್ಮ: ಮಧ್ಯೆ ಕೇಸು!... ಅದಂಥ ಕೇಸು?
ಕಪ್ಪಣ್ಣ: ಹಯ್ಯೋ , ನಾನೇನ್ಹೇಳ್ಲಿ ಅಮ್ಮಾ, ನೀವು ಸಾಧು, ಯಜಮಾನ್ನು ಮಂಕು. ಈಕೆನೋ
ಘಾಟಿ! ಲಾಯರ ಕುಟುಂಬಾನೋ ಅದೇನ್ ಅನಾಹುತ್ವೋ ಕಾಣೆ. ಅಮ್ಮಾ ಕೇಳಿ, ವಯಸ್ಸಾದ
ಮನುಷ್ಯ... ಒಪ್ಕೋತೇನಮ್ಮಾ, ನಾನು ಲಾಯ್ರಲ್ಲ... ಪೇಪರ್ ನಲ್ಲೋದಿಧೇನೆ. ಹೆಂಡ್ತಿ ಇಲ್ಲದ
ಗಂಡ್ಸೇನಾದ್ರೂ ಒಬ್ಬ ಹೆಂಗಿನ ಬೆರಳ್ಗೆ ಉಂಗ್ರ ಇಟ್ರೆ... ನಿನ್ಮದ್ವೇಮಾಡ್ಕೊತೇನೇಂಭೋ ಶಪಥಕ್ಕೆ
ಗುರ್ತೂಂತ ಅರ್ಥ ಇಟ್ಕೊಳೋ ಹಾಗೆ ವಾದಿಸೋಕಾಗುತ್ತೆ ಅಮ್ಮ ಕೋರ್ಟಿನಲ್ಲಿ! ಅವ್ರು ಇಷ್ಟು
ದೊಡ್ಡ ಕುಟುಂಬಕ್ಕೆ ಯಜಮಾನಿಯಾಗೊ ಆಸ್ಪದ ಹೋದದ್ದಕ್ಕೆ ಇಪ್ಪತ್ತು ಸಾವಿರ ರೂಪಾಯ್ನ
ನಷ್ಟಕ್ಕೆ ಕೇಸ್ ಹಾಕಿ ಚಿಕ್ಕಜಮಾನನ್ನ ಕೋರ್ಟಿಗಳೀತೇನೇಂತ ಹೇಳಿದ್ದಕ್ಕೆ ಯಾರ್ಗೂ ಬೆದರದ ನಾನು...
(to Hiriyannayya) By your foolishness ಸಾರ್...ನಾನು...
ಸುಬ್ಬಮ್ಮ: ಹಯ್ಯೋ! ಈ ಉಂಗ್ರಾನ ಸುಮ್ನೆ ಕೊಟ್ನೆ ಹೊರ್ತು...
ಕಪ್ಪಣ್ಣ: ಅಮ್ಮಾ! ನಿಮ್ಮ ಮನಸ್ಸು ನಿರ್ಮಲ!...
ಸರೋಜ: ಸಂಬ್ಳಕ್ಕೇಂತ ಬಂದ ಹೆಂಗ್ಸಿನ ಬೆರಳಿಗೆ ಮನೆ ಯಜಮಾನ, ಲಕ್ಷಾಧಿಕಾರಿ,
ಸಾವಿರಾರು ರೂಪಾಯಿ ಬೆಲೆ ಬಾಳೋ ತಂದೆ ಹಾಕ್ಕೊಂಡಿದ್ದ ವಜ್ರದುಂಗ್ರಾನ ತಾನಾಗಿಯೇ
ತೊಡ್ಸಿದ್ರೆ... ಏನರ್ಥಾಮಾಡ್ಕೊಂಡಾರೂಮ್ಮಾ ಜನಗ್ಳು?... ಜಡ್ಜಿಗ್ಳು ?... ಇನ್ನಲ್ದೆ...
(showing collapsing Hiriyannayya)
ಈ ಪ್ರಾಣಿ, ಇಲ್ಲಿ ತಲೆ ತೂಗ್ತಿರೋವಾಗ, ಹಗಲ್ನಲ್ಲಿ... public courtನಲ್ಲಿ, ಲಾಯರಿ
ಇದೇ question ಕೇಳ್ದಾಗ ತಲೆಯೆತ್ತಿ...
ಕಪ್ಪಣ್ಣ: (To Subhamma)
...ಇದೆಲ್ಲಾ ಆಗೋ ಕೆಲ್ಲವಲ್ಲಾಮ್ಮಾ... ಮೆಲ್ಲಗೆ ನಾನು ಆಗ ಬಿದ್ದ ಹಾಗೆ ಇನ್ತಿರುಗ್ಬಿದ್ದು ಅವಳ
ಕಾಲ್ಗೆ... ಹೇಗಿದ್ರೂ ದುಡ್ಡಿನಾಸೆಗೆ ಬಂದೋಳೂ...
(to Hiriyannayya)
ಏನ್ಸಾರ್... ಇದ್ಹೀಗೆ collapse ಆಗಿಧೀರಾ...
(Hinyannayya ನನ್ನು ಒಡಿದು ಜಗ್ಗಿಸಿ)
ಚೇತರ್ಸ್ಕೊಳ್ಳಿ ಸಾರ್ !... The dangerous Woman can do everything she says!
Explain ಮಾಡಿ ಸಾರ್ motherಗೆ...
ಹಿರಿಯಣ್ಣಯ್ಯ: ಅಮ್ಮ! ತಪ್ಮಾಡ್ಬಿಟ್ಟೆ... ಕ್ಷಮ್ಸೂಮ್ಮಾ .
ಕಪ್ಪಣ್ಣ: (Desperately)
ಹಯ್ಯಯ್ಯೋ! ನಿಮ್ಮನ್ನ ಕ್ಷಮ್ಸೋದಲ್ಲಾ ಸಾರ್ pointoo! ಅಮ್ಮಾವರೇ! ಹೇಳ್ತೇನ್ಕೇಳಿ.
--------------------------------
ಇದೆಲ್ಲಾ ತೀರ್ಮಾನಿಸೊಕ್ಮುಂಚೆ... ಆ ಹೆಂಗ್ಸನ್ನ ಹೊರಗ್ಬಿಟ್ವೋ... ಅಪಾಯಾಮ್ಮಾ ನಿಮ್ಮುಟುಂಬಕ್ಕೆ...
ಇನ್ಹ್ಯಾಗ್ಹೇಳ್ಲೀಮ್ಮಾ...
(tears his hair)
ಸರೋಜ: (Coming forward)
ಯಾರೂ ಹೇಳೇಕಾದ್ದಿಲ್ಲ. ನಾನೇ ಹೇಳ್ತೇನೆ, ದುಡ್ನಾಸ್ಗೇ ಬಂದಿರೋದು ನಾನು.
ನನಗ್ತಿಳಿದ್ಮಟ್ಗೂ ಈತ್ನೇನೂ ಧರ್ಮಕ್ಕಲ್ಲ ಬಂದಿರೋದು. ಈಗೇನೋ ನಿಮ್ಮ ಪರವಾಗಿದ್ದಾನೆ, ಆದ್ರೆ
ಮುಂದಕ್ಕೆ ಈತ್ತಾಯ್ತು ನೀವಾಯ್ತು! ಸದ್ಯ ಈಗೊಂದು ಕೋರ್ಟಿಗೆ ಹೋದ್ರೂ ನನಗೆ ಆ ದೊಡ್ಡ
ಮನುಷ್ಯ ನನ್ಕೈಲಿ ಉಂಗ್ರ ತೊಡಿಸಿದ್ದಕ್ಕೆ 20 ಸಾವಿರ ರೂಪಾಯಿ ನನಿಗೆ ನಷ್ಟ ಜಡ್ಡಿ ಕೊರ್ಟಿನಲ್ಲಿ
ಕೊಟ್ರೂನೂವೆ ಆಗ್ಲಿ, ಕೋಡ್ದಿದ್ರೂನೂವೆ ಆಗ್ಲಿ... ನಿಮ್ಮೆಲ್ರನ್ನೂವೆ ಕೊರ್ಟಿಗೆಳೆದು ನಿಲ್ಸಿ ನನ್ನ
ಲಾಯರ ಮುಖಾಂತ್ರ ದೇವ್ರ ಸಾಕ್ಷಿಯಾಗಿ ಪ್ರಶ್ನೆಗ್ಳು... ನಿಮ್ಮನ್ನೂ ಕೂಡಾಮ್ಮಾ... ಕೋರ್ಟಿನಲ್ಲಿ
ಪ್ರಶ್ನೆಗಳು ಕೇಳೋ ಅಧಿಕಾರ ಯಾರೂ ತಪ್ಸೋಹಾಗಿಲ್ಲ ನನಗೆ. ಆದರೆ ನಿಮ್ಮನ್ನೆಲ್ಲಾ ಹೀಗೆ
ಹೀಯಾಳಿಸಬೇಕೂಂತ ನನಿಗೇನೂ ಸೇಡಿಲ್ಲ. ನೀವು ನೀವೇ ಯೋಚಿಸ್ಕೊಂಡು... ಕೋರ್ಟಿನಲ್ಲಿ
ಸಿಕ್ಬಹುದಾದ ದುಡ್ನ... ಇಲ್ಲೇ... ಈಗ್ಲೇ...
ಸುಬ್ಬಮ್ಮ: (Penilently)
ಒಪ್ದೇಮ್ಮಾ ತಾವು ದಯವಿಟ್ಟು...
ಸರೋಜ: ಅರ್ಥ್ವಾಯ್ತು... ನಿಮ್ಮಗನಹಾಗೆ ನಾನೇನೂ ಮಂಕಲ್ಲ... ನೀವ್ನೀವೇ
ಮಾತಾಡ್ಕೊಬೇಕಂತಿರೇನೋ... ಮಾತಾಡ್ಕೊಳ್ಳಿ... ಆದ್ರೊಂದ್ಮಾತು. ನಿಮ್ಮಂತ್ರಾಲೋಚನಾಸಭೆ...
ಬೇಗ... ತೀರ್ಬೇಕು. ರೈಲ್ಹಿಡ್ದು ಬೆಂಗಳೂರಿಗೆ ಸೇರಿ ನಾಳೆ ಇಷ್ಟ್ಹೊತ್ಗೆ ಲಾಯ್ರ ಮೂಲ್ಕ ನೋಟೀಸ್...
ನಾನೇನ್ಹೇಳೋದು.. ನಿಮ್ಕುಟುಂಬಾನ ಮುಂದಕ್ಕೆ ನುಂಗೊಕೊ ಇಲ್ಲ ಬದುಕ್ಸೋಕೋ ಬಂದಿರೋ
ಆ ಬೃಹಸ್ಪತಿಗೆ ಗೊತ್ತು... ನನ್ಮುಂದಿನ ಕ್ರಮ!...
(sails to table L. and dragging a chair along the floor ... seats herself at L)
ಸುಬ್ಬಮ್ಮ: ಕಪ್ಪೂ... ಈಗೇನ್ಗತಿ ?
ಕಪ್ಪಣ್ಣ: ಗತಿಯೇನಮ್ಮಾ, ಈಗ ಒಬ್ಬರಿಗೊಬ್ರು “ನಿನ್ತಪ್ಪು ನನ್ತಪ್ಪೂ"ಂತ ಬೈಯ್ಕೊಂಡ್ಪ್ರಯೋಜನ್ವಿಲ್ಲ.
ನೀವೊಂದ್ಮಾತ್ಹೇಳಿ, ಒದ್ದೋಸ್ಬಿಡ್ತೇನೆ ಆ ಹೆಂಗಸ್ನ! ಅವಳ ಕೇಸು ಸತ್ರೂ ಜಯವಾಗೋ ಹಾಗಿಲ್ಲ,
ಆದ್ರೂನೊವೇಮ್ಮಾ ಕೇಸು ಸೋತದ್ರಿಂದ ಅವಳಿಗೇನೂ ನಷ್ಟವಿಲ್ಲ.. ಕೇಸ್ ಗೆದ್ರೇನೋ ನಮಗೇನೂ
ಲಾಭವಿಲ್ಸಿದ್ರೂನೂವೆ... ಚಿಕ್ಕೆಜಮಾನ್ರನ್ನೂ, ಚಿಕ್ಕವರ್ನೂ, ನನ್ನೂ, ಬೋರಣ್ಣರ್ನೂ,
ನಾರಣಪ್ಪನೊರ್ನೂ, ಕೊನೆಗೆ ನಿಮ್ಮನ್ನೂ ಬಿಡದೆ ಕೋರ್ಟಿಗೆ ಕೈಫಿಯತ್ ಕೋಡೋಕೆ, ಈಕೆಗೆ
ಇರೋ ಹಕ್ಕನ್ನ ಯಾರೂ ತಪ್ಸೋಹಾಗಿಲ್ಲ..... ಆದ್ರೂನೂವೇಮ್ಮಾ ನಮಗೂ ಲಾಯರಿದ್ದಾರೆ...
ಇದೇ ಕೋಣೀಲಿ ಪರ್ದೆಕಟ್ಟಿ ಈಕೇನೂ ನಾನೂ ಮಾಡಿದ ಕಾಳಗಾನ ಕೋರ್ಟಿನಲ್ಲಾದ್ರೂ ತೀರ್ಮಾನ
ಮಾಡ್ಕೊಳ್ಳಬೇಕು,
(in blazing anger to Saroja)
ನಿಮ್ಕೈಲಾದ್ದು ನೀವ್ಮಾಡಿಕೊಳ್ಳಿ. ನಮ್ಕೈಲಾದ್ದು ನಾವು...
--------------------------------
ಸುಬ್ಬಮ್ಮ: (ಕಪ್ಪುವಿನ ಕೈಯನ್ನು ಹಿಡಿದು)
ಹಯ್ಯೋ ದುಡುಕ್ಷೇಡ ಕಪ್ಪೂ! ರೇಗಿಧಾಳೌಳು. ನೀನೇನ್ರೇಗಿ ಸಾಧಿಸಿದ್ರೂನೂವೆ ಮನೆ
ಹೆಸರಿಗೆ ಕುಂದಕ ತಪ್ಪೋದಿಲ್ಲ, ಹೋಗಿ ನೀನೇ ನ್ಯಾಯವಾಗಿ ಮಾತಾಡಿ ಅವಳ ಕೈಲಿ ಅಲ್ಪಸ್ವಲ್ಪ
ಕೊಟ್ಟು ಶಾಂತವಾಗಿ ಕಳ್ಸೋದು ಮೇಲು, ಕಪ್ಪೂ!
ಕಪ್ಪಣ್ಣ: ಏನೈದೂ ಹತ್ತೂಮ್ಮಾ! ಐದ್ರೂಪಾಯಿ ಹತ್ರುಪಾಯ್ಗೆ ಬೀಳೋ ಬೆಪ್ಪಳಲ್ಲಅವ್ಳು.
ಸುಬ್ಬಮ್ಮ: ನಾನ್ಹೇಳಿದ್ದ್ಹಾಗಲ್ಲಾ. ಮಗೂ ಮಂಕತನಕ್ಕೆ... ಅವಳ 20 ಸಾವಿರವೇನು..
70 ಸಾವಿರ ಕೊಟ್ರೂ ಸಾಲ್ದು ಮಗೂಗೆ ಬುದ್ದಿಬರೋಕೆ! ಅವಳು ಕೋರ್ಟಿಗೆ ಹೋಗಿ ಕೇಸ್ ಹಾಕಿ
ಗೆದ್ದು, ದೇಶದಲ್ಲಿ ಧರ್ಮ ಇಲ್ದೆ, ಆ ಜಡ್ಡಿಗೂ ಸತ್ಯ ತಿಳೀದೆ, ಇವಳಿಗೆ ಒಂದ್ವೇಳೆ ಸಿಕ್ಕಬಹುದಾದ
ಇಪ್ಪತ್ತು ಸಾವಿರಕ್ಕೆ ಬದಲಾಗಿ... ಸದ್ಯ... ನಾರಾಯಣಾ!
ನಾರಾಯಣ: ಅಮ್ಮಾ!
ಸುಬ್ಬಮ್ಮ: ತಾವರೆಕೆರೆಯಿಂದ ಶಾನುಭೋಗರು ತಂದದ್ದೆಷ್ಟು?
ನಾರಾಯಣ: ಮೂರುಸಾವಿರದೈನೂರಮ್ಮ.
ಸುಬ್ಬಮ್ಮ: ಪಾಪಣ್ಣಯ್ಯನ ಮಗ... ಈಚ್ಲೂ , ಕಬ್ಬೂ ಬಾಯ್ತು?
ನಾರಾಯಣ: ಅದೊಂದು ಮೂರುಸಾವಿರಾಮ್ಮಾ,
ಸುಬ್ಬಮ್ಮ: ಚಿಲ್ರೆ... ಕೈಲಿ?
ನಾರಾಯಣ: ಐನೂರೂ ಚಿಲ್ರೆ
ಸುಬ್ಬಮ್ಮ: ಆ ಏಳು ಸಾವಿರ ರೂಪಾಯ್ನೂ ತಂದಿಲ್ಲಿಡು.
(Exit Narayana)
ಕಪ್ಪಣ್ಣ: ಅಮ್ಮಾ! ಇದೇನುಚ್ಚು, ಹಿಗ್ದುಡ್ಸುರ್ಯೊದು ?
ಸುಬ್ಬಮ್ಮ: ನಿನಗೊತ್ತಿಲ್ಲಾ... ಕಪ್ಪೂ!.... ಏಳು ಸಾವಿರವೇನು? ಎಪ್ಪತ್ತು ಸಾವಿರವೇನು?
ಅದೆಲ್ಲ ಲೆಖ್ಖವಲ್ಲ, ಓದ್ಗಾರ್ಕೆ ಬರದ ನನ್ಕೈಯಲ್ಲೇ ತಾನೇ ಸಂಪಾದಿಸಿದ್ದ ಲಕ್ಷಾಂತರ ರೂಪಾಯಿ
ಆಸ್ತೀನ... ಮಗ ಮೊಮ್ಮಗ ಇದ್ರೂನೂವೆ... ನನ್ನ ಹತೋಟೀಲೆ ಬಿಟ್ಟಿಟ್ಹೋದ ನಮ್ಮಜಮಾನ್ರ
ಬುದ್ದಿ... ಈಗೊತ್ತಾಯ್ತು. ಈ ದುಡ್ಡು ಹೋದ್ರೂನೂವೆ ನಷ್ಟವೇನೂ ಇಲ್ಲ , ಕಪ್ಪೂ, ಈಕೆ
ಮುಖಾಂತ್ರ ಮಗೂಗೂ, ಚಿಕ್ಕೋನ್ಗೂ ಬುದ್ದಿ ಬಂದ್ರೆ ಮುಂದಕ್ಕೆ ಎಷ್ಟೋ ಲಕ್ಷಗಳ ಲಾಭ
ಬಂದ್ಹಾಗಾಯ್ತು, ಕುಟುಂಬಕ್ಕೆ.
(patting Kappanna on the shoulders)
ಹೋಗಿ ಹೇಗಾದ್ರೂ ಒಡಂಬಡ್ಸಿ... ಬಂದ್ಯಾ ನಾರಾಯಣಾ!...
(putting the bundle of notes Narayana has given into Kappanna's hands.
Which Kappanna puts into his pockets unnoticed by Saroja)
ಮನೆಯಿಂದ ಸಾಗಿಸ್ಬಿಡೂ ಕಪ್ಪೂ...
-----------------------------
ಕಪ್ಪಣ್ಣ: (ತಲೆ ಬಾಗಿ)
ಅನ್ಯಾಯ ಹುಚ್ಚೂಮ್ಮಾ ನಿಮ್ಮದು! ಆದ್ರೆ ಒಂದು. ದೇವ್ರ ಲಕ್ಷಾಂತರ ರೂಪಾಯಿ ವರ್ಷ
ವರ್ಷವೂ ಉತ್ಪತ್ತಿಯಾಗೋ ಆಸ್ತಿ ನಿಮಗೂ, ನಿಮ್ಮ ಮಗ, ನಿಮ್ಮ ಮೊಮ್ಮಗನಿಗೂ ದೇವ್ರ
ಕೊಟ್ಟಿರೋ ಹೊತ್ಗೆ ಒಪ್ತೇನೆ... ಹೊರ್ತು... ಅಲ್ಲದೆ... ಏನಮ್ಮ ಇದು... ಮನೆಗೂ ಬಂದು
ತಿಂದದ್ದೂ ಅಲ್ಲಿ ಎರಡು ಉಂಗುರಗಳು, ಇನ್ನೂರು ರೂಪಾಯಿ, ಅಲ್ಲೆ ಏಳುಸಾವಿರ... ಹೆಂಗಸಿಗೆ...
ಹೊಟ್ಟೆ ಉರಿಯುತ್ತೆಮ್ಮಾ, ಇಷ್ಟು ಸತ್ಯವಾಗಿ ದುಡ್ಡು ಸಂಪಾದಿಸಬೇಕಾದ್ರೆ... ಏಳ್ವರ್ಷ ಸಾಲ್ದೂಮ್ಮಾ...
ಇಷ್ಟನ್ನೂ ಒಂದೇ ತುತ್ತು... ಆ ಮಾರಿ ಬಾಯ್ಗೆ...
ಸುಬ್ಬಮ್ಮ: ಹಯ್ಯೋ ಕಪ್ಪು! ಎದ್ದು ನಿಂತುಬಿಟ್ಲು... ಹೋಗು...
(Kappanna approaches Saroja)
ಕಪ್ಪಣ್ಣ: ನೀವೇಳಿದ್ದೆಲ್ಲಾ ಸರಿ... But ಅಮ್ಮಾವ್ರು ಹೆಂಗ್ಸು, ಹೆಂಗ್ಸಿನ್ಮೇಲೆ ಪೋಲೀಸ್ನ
ಭೂಬಿಡೂದು ಅಧರ್ಮ ಹೇಗಿದ್ರೂ ಹೆಂಗ್ಸು... ಏನೋ ಒಂದ್ವೇಳೆ ಅನಾನ್ಕೂಲಗ್ಳು
ಜರುಗಿದ್ರೂನೂವೆ, ಇದನ್ನೆಲ್ಲಾ ಮನಸ್ಸಿಗೆ ತಂದ್ಕೊಳ್ಳದ್ಹಾಗೆ ನೀವು ಹೋಗೋದು...
ಸರೋಜ: ನೋಡೀ! ನಿಮಗ್ಬುದ್ಧಿ ಇದೆ... ನನಗ್ಬುದ್ದಿ ಇಧೇಂತ ತಿಳಿಯೋಷ್ಟಾದರೂ ಬುದ್ದಿ
ನಿಮಗಿದೆ. ಎರಡನೇದು ನನಗೆ ಕಿವಿನೂ ಇದೆ. ನೀವು ಈ case ಹಾಕೋಕೆ ನನಗಿರೋ
ಅನಾನುಕೂಲಗಳ್ನ ಅಮ್ಮಾವ್ರಿಗೆ ಹೇಳಿದ್ರೂ ಕೇಳ್ದೆ, ನಾನು ಗೆಲ್ ಲಿ ಸೋಲ್ಲಿ... ಕೋರ್ಟಿಗೆ
ಬರ್ಲೇಬೇಕಾದ ಕುಟುಂಬಕ್ಕೆ ಬರೋ ಅಪಖ್ಯಾತಿನ ಮರೀದೆ ಅಮ್ಮಾವ್ರು ನಾರಾಯಣನ
ಬಾಯಿಂದ 3500 ರೂಪಾಯಿ plus ಮೂರುಸಾವಿರ plus also 500... ಏಳ್ಸಾವಿರ್ರೂಪಾಯ್ಗೆ
ನೋಟುಗಳ್ನ ನಿಮ್ಕೈಗ್ಕೊಟ್ಟು ನೀವು pocket ನಲ್ಲಿಟ್ಕೊಂಡು ಅದ್ನ ಕುಟುಂಬಕ್ಕೆ ಲಾಭಮಾಡೋ
ಬಗ್ಗೆ ನನ್ನ ನಾಜೋಕಾಗಿ ಕಳ್ಸೋಕೆ ಪಡೋ ಪ್ರಯತ್ನ uselessoo...
ಕಪ್ಪಣ್ಣ: ಅಮ್ಮಾ... ಏನೂ try ಮಾಡ್ಡೆ, ಈ ದುಡ್ಡೇನೂ ನಷ್ಟಾಂತಲ್ಲ ಈ ದೊಡ್ಡ
ಕುಟುಂಬಕ್ಕೆ. ಹಿರಿಯಣ್ಣಯ್ಯನೋರಿಗೂ, ರಾಮರಾಯರಿಗೂ, ಅಮ್ಮಾವರಿಗೂ, ನಾರಣಪ್ಪನೋರ್ಗೂ
ಅಲ್ಲೆ ಬಲು ಘಾಟೀಂತ ತಿಳ್ಕೊಂಡಿದ್ದ ನನಗೂನೂವೆ ಯಾವಾಗೂ ಮರಿಬಾರದ ಬುದ್ದಿ ನೀವು
ಕಲ್ಸಿದ್ದಕ್ಕೆ ಇದು ದಕ್ಷಿಣೆ, ತಮಗೆ.
(takes out the notes and puts them on a table C.L.)
ತಕ್ಕೊಂಡು ಹೋಗಿ ಬನ್ನಿಮಾ,
ಸರೋಜ: (ನಗುತ್ತಾ)
ಹ್ಹ! ಹ್ಹ!! ಹ್ಹ!!! ಹ್ಹೈ!!!! ನನಗ್ಗೊತ್ತು ನಿಮ್ಬುದ್ಧಿ, ನೋಟುಗ್ಳೂ.... ನಾನ್ತಕ್ಕೊಂಡು
ಹೋಗೋದೂ ಈಗ... ನಾನು ಬೆಂಗಳೂರು ಸೇರೋಕ್ಮುಂಚೆ... ನೋಟುಗ್ಳ ನಂಬರ್ನೆಲ್ಲಾ Police
ಕೊಟ್ಟು theft case... ಹಯ್ಯೋ ನಾನೇನ್ಮಂಕಲ್ಲ... ನನ್ನ fountain-pen ಇಲ್ಲಿದೆ. ಅಲ್ಲಿ ನಿಮ್ಮ
Cholera, Diarrhoea, Dysentery ಪೇಪರುಗಳಲ್ಲಿವೆ. Mr. Hiriyannayya ನೂರ್ನ ಕರದೂ...
ಕಪ್ಪಣ್ಣ: (ರೇಗಿ) I see what you mean...
----------------------------------
(to Hiriyannayya)
ಬನ್ನಿ ಸಾರ್..
(Hiriyannayya comes forward)
ಸರೋಜ: Sorry to disturb the Head of the family. ಕೂತ್ಕೊಂಡು ಬರೀರಿ.
(Hiriyannayya sits to write... pen in hand)
ಕಪ್ಪಣ್ಣ: ಏನ್ಮಾಡೋದು ಸಾರ್. But ನೋಡೋಣ, ಏನ್ಬರಿಸ್ತಾಳೆ.
ಸರೋಜ: ನಾನು dictate ಮಾಡೋ ಹಾಗೆ ಬರೀರಿ, ಇಷ್ಟ್ವಿದ್ರೆ, ಇಲ್ದಿದ್ರೆ ... of course
ಕಪ್ಪಣ್ಣ: ನಿಮ್ಮ trainಗೆ time ಆದೀತು. Dictate ಮಾಡಿ, ಬರೀತಾರೆ.
ಸರೋಜ: (Sweetly)
I. Jodiar Hiriyannayya of Rampur. son of...
(opening out a note-book and reading out of it)
Late Rao Saheb Jodidar Rama Rao of Rampur. do hereby in my own
writing declare that I have presented to Smt. Sarojamma of Bangalore the sum of Rs. 7000
and two hundred Rupees cash and also an emerald and a diamond ring in grateful
Thanks for services rendered to my family. Witnessed by my son and my servant...
ಹಾಕಿ ನಿಮ್ಹೆಸ್ರು.
(Hiriyannayya aftixes his signature]
Please call your Witnesses... ಬನ್ನಿ, Mr, Rama Rao,
ರಾಮರಾವ್: (Coming forward)
Devi, ಶ್ರೀಮತೀದೇವಿ, little brotheroತ ಕೂಗ್ಯೂನು ನನ್ನ... you have broken my
heart...
(Collapses)
ಸರೋಜ: No no... Baby brother... you are a born poet... poetಗೇ real poetಗೇ...
heartಏ ಇಲ್ಲ... break ಆಗೋಲೆ...except in poetry... sign ಮಾಡಿ... with a steady hand.
(Ramu does accordingly) Where is the servant Mr. Narayanappa...
ಕಪ್ಪಣ್ಣ: ಬನ್ನಿ ನಾರಣಪ್ಪನೋರೇ... ಹೆಸರು ಬರ್ಯೋಕೆ ಗೊತ್ತೇ ?
(to Saroja snappishly)
Suppose he cannot sign... ?
------------------------------------------
ಸರೋಜ: (Sweetly)
One of the 92% of illiterate Indiaಂತ ತಿಳ್ಕೊಂಡಿದ್ದೀರಾ... ನಾರಣಪ್ಪನೋರ್ನ...
ಮನೇ account ಬರ್ಯೋದ್ನ ನೋಡಿಧೇನೆ. He can sign. Thumb impressionoo ಕೂಡಾ ಇರ್ಲಿ
See to it.
ಕಷ್ಟಣ: (ಕೈ ಕೈ ಹಿಸಿಕಿಕೊಳ್ಳುತ್ತಾ ನಾರಾಯಣಪ್ಪನನ್ನು ಕರೆದುಕೊಂಡು ಹೋಗಿ ರುಜುವನ್ನು
ಮಾಡಿಸಿ ಎಡಗೈ ಹೆಬ್ಬೆಟ್ಟಿಗೆ ಮಸಿಯನ್ನು ಹಚ್ಚಿ ಪತ್ರದ ಮೇಲೆ ಒತ್ತಿಸುವನು.)
ಸರೋಜ: Blot ಮಾಡಿ-pad ಪಕ್ಕದಲ್ಲೇ ಇಧೆ. ಇಲ್ಕೊಡಿ..
(Receiving the receipt and folding it, takes up the 7000 Rupee note bundle
and unobserved of all but the audience, includes in her booty the 75 Rupees-
Kappanna's pay money also.)
(Filling her chatelaine with the lot and deliberately folding and pulling the
receipt in her chatclaine... proceeding towards L... loudly but sweetly)
ಈ ಮನೇಲಿ ಇಷ್ಟು ಜನ ಒಬ್ಬ ಹೆಂಗ್ಸಿನ ಮೇಲೆ ಸೇಡು... ಈಗ... speech ಯಾಕೆ-
ನಾನ್ಹೇಳಿದ್ದಾಗೆ 'ಕೆಣಕಿದ ಹೆಣ್ಣು ಕೆಂಡಕ್ಕಿಂತ ಕೇಡೂ'ಂಬೋದು ಈ ಮನೆ ಗಂಡಸರಿಗೆಲ್ಲಾ...
ಗೊತ್ತಾದ್ರೆ ಸಾಕು!
ಸುಬ್ಬಮ್ಮ: ಕಪ್ಪೂ, ನನಗಿನ್ನೂ ನಂಬಿಕೆ ಇಲ್ಲ...
ಕಪ್ಪಣ್ಣ: (Hearing with his eyes and pointing to L)
ಆಕೊ, ಜಟ್ಟಾನೂ ಬಂತು. ಇನ್ನೇನಮ್ಮಾ ಹೆದರ್ಕೆ?
ಸುಬ್ಬಮ್ಮ: ನನಗೇನೋಪ್ಪಾ ಈಕೆ ರೈಲು ಹತ್ತೋವರೀಗೂನೂ ಹೆದರ್ಕೇನೆ.
ಕಪ್ಪಣ್ಣ: ಅದೆಂಥಾ ಹೆದರ್ಕೆಮ್ಮಾ?
ಸುಬ್ಬಮ್ಮ: ಇಲ್ಲಿಂದ ಸ್ಟೇಷನ್ ಸೇರೋ ಅಷ್ಟ್ರಲ್ಲಿ... ಯಾರ್ಹತ್ರ ಏನ್ಹೇಳ್ತಾಳೋ... ಒಟ್ನಲ್ಲಿ...
ಅವಳ್ಹತ್ತಿದ ರೈಲು ಊರ್ಬಿಟ್ಟು ಹೊರಡವರಿಗೆ ಅವಳ ಮೇಲೆ ಕಣ್ಣಿಟ್ಟಿರೋದು ಮೇಲು... ಅಲ್ದೆ
ನಿನ್ನ ಸಾಮಾನುಗ್ಳುನ್ನೂ ಇಟ್ಕೊಂಡು, ಬೋರ ಕಾದಿರ್ತಾನೆ ಸ್ಟೇಷನ್ನಲ್ಲಿ ನೀನೇ ಹೋಗಿ ಈಗ
ಜೊತೇಲಿ... ರೈಲು ಹೊರಡೋವರಿಗೂ ಅಲ್ಲೇ ಇದ್ದು ಆಮೇಲೆ ನಿನ್ನ ಸಾಮಾನುಗಳ್ನ
ಸಾಗಿಸ್ಕೊಂಡು ಬೋರನ್ಜತೇಲಿ ಬಂದ್ಸೇರು.
(Kappanna bows)
ರಾಮರಾವ್: (Sobbing) (In a hysterical voice to Subbamma)
ಅಜ್ಜಿ... ಈಗ್ನೂನೂವೆ ಹೇಳ್ತೇನೆ... ಶ್ರೀಮತಿ ದೇವಿ... ನನ್ಗೇನೋ ಅಜ್ಜಿ... ಈಕೆ ಸುಳ್ಳಲ್ಲ...
ಸರೋಜ: (Sweeyly (Over her shoulders)
ಈ ಕಾಲ್ದಲ್ಲೂ ... young boysಗೆ Womanನಲ್ಲಿ trustoo beliefoo... ನಾನು disgraced
------------------------------------
ಆಗಿ ಹೋಗ್ತಿದ್ರೂನೂವೆ... ನನ್ನಲ್ಲಿ ಇನ್ನೂ faith ಇಟ್ಕೋಂಡಿರೋ chivalry ನಮ್ಮ Indian-
manhoodನಲ್ಲಿ ಇರೋದು ಆಶ್ಚರ್ಯ.
(Ramu rushes out shouting out hysterically...)
“Srimathi Devi! I believe you..."
(rushes towards Saroja)
ಕಪ್ಪಣ್ಣ: (By force retaining Ramu)
ಹುಚ್ಚೇ ನೀವು? ನಿಮಗೆ ಹೆಂಗಸೂಂದ್ರೆ ಗೊತ್ತಿಲ್ಲ!...
(to Naranappa)
ನಾರಣಪ್ಪನೊರೆ... ಚಿಕ್ಕೋರ್ನ ಒಳಗೆ ಎಳ್ಕೊಂಡೋ... ಸೆಳಕೊಂಡೋ... ಎತ್ಕೊಂಡೋ...
(Ramu exits C sobbing lead by Naranappa... at this stage Subbamma is at
C. Hiriyannayya at table corner C.L.)
ಕಪ್ಪಣ್ಣ: (assuming coat and turban... to Saroja)
ಇನ್ನೇನೆ?
ಸರೋಜ: ಏನೇನು? ಯಥಾಪ್ರಕಾರ horible memory ನಿಮ್ದು, ಅಲ್ನೋಡಿ... ಆ
ಮೂಲೇಲಿ ಇರೋ ನನ್ನ pink parasolನೂ ಮರ್ತದ್ದು ಅಲ್ದೆ...
(pointing with her lily fingered hand at table C-L)
ಆ ಮೇಜಿನ್ಮೇಲೆ ಈ ಹಿರಿಯಣ್ಣಯ್ಯ, ಪ್ರಾಣಿ ಎಸ್ದ ನಿಮ್ಮ monthly salary... 75
ರೂಪಾಯಿ ನೋಟುಗಳ್ನೂ... ನೋಟೀಸ್ ಮಾಡ್ದೆ ಬೆಪ್ಪಾಗಿ...
ಕಪ್ಪಣ್ಣ: (In a trice recovering pink parasol from wall R and rejoining Saroja)
ಕ್ಷಮ್ಸು dear.... ನನಿಗೆ... feelingsoo.
ಸರೋಜ: ಹಯ್ಯೋ! ನೀವು sentimental. ಬರೀ Heartಉ ಈ ನಿಮ್ಗೆ! Brain ಏ ಇಲ್ಲ
ನಿಮ್ಗೆ, ನಾನ್ಹೇಳ್ಳಿಲ್ವೆ... ಈ schemeoo 'ಬೇಡಾ! ಬೇಡಾ!! ಬೇಡಾ!!!'ಂತಂದ್ರೂನೂವೆ.. ನೀವು
'talkies' ಬಂದಿದ್ರೂನೂವೆ 'mookies'ನಲ್ಲಿ ದುಡ್ಡು ಇನ್ನೂ ಇಧೇಂತ... ಹೇಳ್ಳಿಲ್ವೇ ನಾನು...
ಕಪ್ಪಣ್ಣ: ಅಲ್ಕಣೇ, ಬಂದ business ಏನೋ ಆಯ್ತು! But still ಇವರೆಲ್ಲಾ ಇಷ್ಟು
lacrimose ಆಗಿ ಬಿಟ್ಟಿಟ್ಟು ಹೋಗೋದು...
ಸರೋಜ: ಹಯ್ಯೋ ನಿಲ್ಸೀಂದ್ರೆ! Latrimose ಅಲ್ಲ Wordoo, ನಿಮ್ಹಾಳು Nattal
dictionaryಗೆ ಬೆಂಕಿ ಹಾಕ್ತು, 'Lugubrious' is the right Word... ನೋಡಿ ಎಷ್ಟು ಸಾರ್ತಿ
ಹೇಳಿಧೇನೆ... ನಿಮ್ಮಿ೦ಗ್ಲಿಷು horill nebulous... brush up ಮಾಡ್ಕೋಬೇಕು.
ಕಪ್ಪಣ್ಣ: (in despair) ಒಪ್ಪೇ! ಒಪ್ಪೇ!! ಒಪ್ಪೇ!!! ದಮ್ಮಯ್ಯ.. ಟ್ರೆಯ್ನ್ missಮಾಡಬಾರ್ದು ಜಟ್ಕಾ ಕಾದಿದೆ.
---------------------------------------------
(opening pink parasol and holding it over Saroja's head)
ನಡಿ
(As Subbamma despairingly collapses against doorpost C screaming
'ಹಯ್ಯಯ್ಯೋ'... Hiriyannayya reaches for cool kooja at his right and empties
tumbler after tumbler of the contents until and after Ramu and Narayana hearing
the old Lady's cry rush in through C. Peep over Subbamma's head into the stage in silent consternation as the curtain drops slowly)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ