ಶನಿವಾರ, ಫೆಬ್ರವರಿ 8, 2020

ಮಾ ಡಿ ದ್ದು ಣ್ಣೋ ಮಹಾರಾಯ - ಎಂ, ಎಸ್. ಪುಟ್ಟಣ್

https://archive.org/details/dli.osmania.4088
M.S. Puttanna (Mysore Suryanarayana Bhatta Puttanna) was born on 21 November 1854 in Mysore
M.S. Puttanna died at age 76 in Bangalore,
Now 88 years after hia death
==============================
ಶ್ರೀ ರಾಮ,

ಮಾ ಡಿ ದ್ದು ಣ್ಣೋ
ಮಹಾರಾಯ
-------
ಗ್ರಂಥಕರ್ತ

ಎಂ, ಎಸ್. ಪುಟ್ಟಣ್ಣ.
ಬೆಂಗಳೂರು ಬುಕ್*ಡಿಪೋ ಪವರ್ ಪ್ರೆಸ್
ಬೆ೦ಗಳೂ ರು
೧೯೧೫.
( All Rights Reserved. )
-----------------------------
PREFACE,
XI.
Most of the works in Kannada ( Kanarese ), whether poetry or prose, are either expansions or contractions of our two great cpics, Ramayana and Maha bharata. Almost every work has for its theme some incident from either of these two immortal works. The object in having the same field for the choice of subjects may be to sing the praises of the ideal and popular heroes in so many different forms, for the edification equally of the learned and the unlearned. While this repetition is laudable on the one hand, it has, on the other, all the short comings of mere imitation without originality; dry ness without curiosity, and a mental cramp without intellectual liberty. The question is whether such pitfalls cannot be avoided by transferring the attention from those ideal heroes and heroines to a conception of characters of our daily life, which in their nature and in their deeds, more
---------------------------------
iv
or less approach the ideal Rama and Seetha, Yudhistira and Droupadi. Deifi cation is a personification of all virtues minus all vices; and the vicissitudes of human life in their case are beyond con ception and border on the ludicrous. If on the other hand human beings are, invested with a character which approaches the heroes and heroines of the great, epics, the effect is very great and the nearer such approach, the grcater will be our admiration. The deified heroes should be our rules of Grammer and ordinary human beings with an elevated conduct should be the examples.
In this view I tried my best to con ceive certain persons who lived at ay time much nearer to ours. From a cen tral grain of an incident which is reported to have been actual, the story is expanded and great attention is paid to the develop ment of characters in different stages! What appear to be digressions are not loose events which mar the unity, but are: mere collateral incidents of the main plot.
------------------------------

Official corruption and its momentous con sequences, village faction and its evils, the Court of His Highness Krishnaraja Wodeyar II the late Maharaja of Mysore and his fabulous generosity, the court jester: the credulous villagers, the story of a chaste woman, Suttee, insanitary condi tion of villages in olden times, treatment of a daughter-in-law by a mother-in-law of a mother-in-law by a daughter-in-law', the Village Schoolmaster and his cruelty, his treatment by the pupils, his horrid ingratitude, a philosophic view of corporal punishment, its effect on the education of the rising generation, hypocrisy and its secret misdeeds, a sincere and distorted description of genuine beauty, the meanest and the most rcprchcnsible attempt to
seduce ideal chastity, a nefarious practice of electrobiology, the indiscreet levity of a mad cap and the ludicrous portion of his conversation, the autobiography of a burglar, an awe inspiring incident on a cremation ground, a miracle worked
----------------------------
vi
by a wonderful sorcerer, and his unselfish ness, other minor matters, and the moral tone intended to pervade from the beginning to the end: have all been treated of in their proper places.
Here I stop leaving the public to form their own opinion about this performance. I have to thank my friends Messrs. K Lakshminara naiya B.A., Sub Judge, Bangalore; R. Raghu natha Rao B.A., Dist. School Head Master (Retired); B. Basavaradhya B.A., B.L., Town Magistrate, Mysore; and M. Ramaswamayya B.A, Assistant, Office of the Inspector General of Education, Bangalore; for kindly hearing the work read out to them. I shall not be doing my duty if I forget to thank publicly M. Shama Rao Esqr. M.A., Rao Bahadur for all his earnest endeavours to further the cause of Education and for the wholesome influence he has been exercising and the encouragement he has been giving to create a healthy literature in Kannada for this improvement of the masses.
Basavanagudi, )
M. S. PUTTANNA. 31st January 1915 )
-------------------------
ಪೀಠಿಕೆ.

ತಿಕ್ಷೆಣಕಿದನು ಫಣಿರಾಯ ರಾಮಾ|ಯಣದ ಕವಿಗಳ ಭಾರದಲಿ ತಿಂ|
ಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ||

ಹೀಗೆಂದು ಕುಮಾರ ವ್ಯಾಸನು ರಾಮಾಯಣದ ವಿಷಯ
ದಲ್ಲಿ ಹೇಳಿರುವ ಮಾತು, ರಾಮಾಯಣ, ಭಾರತ, ಈ ಎರಡು
ಮಹಾ ಕಾವ್ಯಗಳಿಗೂ ವ್ಯಾಪಿಸುವುದು. ಯಾವ ಗ್ರಂಥಕರ್ತ
ಯಾವ ಕವಿ ಏನ ಬರೆದಾಗ್ಯೂ ಈ ಕಾವ್ಯಗಳಿಗೆ ಸಂಬಂಧಿಸಿದ
ಹಾಗೆ ರಾಮಚಂದ್ರಚರಿತ್ರೆ, ಶ್ರೀಕೃಷ್ಣ ಚರಿತ್ರೆ, ಇವೇ ಹೆಚ್ಚಾಗಿ
ತುಂಬಿರುವುದೇ ಹೊರತು ಬೇರೆ ಇಲ್ಲ. ಶ್ರೀರಾನುನೂ, ಶ್ರೀ
ಕೃಷ್ಣನೂ, ಮಹಾ ವಿಷ್ಣುವಿನ ಅವತಾರಗಳಾಗಿರುವುದರಿಂದ
ಇವರು ದೋಷರಹಿತರಾಗಿಯೂ ಗುಣವಿಶಿಷ್ಟರಾಗಿಯು ಇರು
ವುದನ್ನು ಸರ್ವರೂ ಅಂಗೀಕರಿಸಬೇಕು. ಸಾಧಾರಣ ಮರ್ತ್ಯ
ರಂತೆ ಇವರೂ ಲೋಕದ ಕಷ್ಟಸುಖಗಳಿಗೆ ಗುರಿಯಾಗಿದ್ದ
ರೆಂದು ಹೇಳುವನಾತು ತಿಳಿಯದವರಿಗೆ ದೈವಭಕ್ತಿ ಹುಟ್ಟಿಲೆಂದು
ತೆಗೆದ ಸುಲಭವಾದ ದಾರಿಯೇ ಹೊರತು ಜ್ಞಾನಿಗಳಿಗೋಸ್ಕರ
ಹುಟ್ಟಿದ ವಿಧಿಯೆಂದು ಭಾವಿಸಲಾಗದು, ನಿರ್ಮಲವಾದ ಗುಣ
ದಲ್ಲಿ ದೋಷವಿದೆ ಎಂದರೆ ಆಭಾಸ ತೋರದೇ ಇರಲಾರದು.
ಇಂಥಾ ನಿರ್ನು ಮೂರ್ತಿಗಳ ಚರಿತ್ರೆಯು ಎಷ್ಟು ಆನಂದ
ವನ್ನೂ ಜ್ಞಾನವನ್ನೂ ಹುಟ್ಟಿಸಿದಾಗ್ಯೂ, ಕಾಲಾನು ಕಾಲದಲ್ಲಿ
------------------------------
viii
ಮನುಷ್ಯನ ಬುದ್ದಿ ಜೆಡ್ಡು ಕಟ್ಟಿ ಕಥೆಯ ನಿಜವಾದ ಪ್ರಯೋಜ
ನವು ಪೂರ್ತಿಯಾಗಿ ದೊರೆಯದಂತೆ ಆಗಬಹುದು. " ದುಃಖ
ಬೆರೆಸದ ಸುಖವದಾರಿಗೆ ಸಿಕ್ಕುವುದು ? ” ಎಂಬ ಮಾತು ಭಗ
ನಂತನ ಸ್ವರೂಪಗಳಿಗೆ ಹೇಳಿದ್ದಲ್ಲ. ಸಹಜವಾಗಿ ನಿರ್ಮಲವಾ
ಗಿರುವ ವಸ್ತುವನ್ನು ದೋಷರಹಿತವಾದ್ದೆಂದು ಎಷ್ಟು ಸಾರಿ
ಎಷ್ಟೆಷ್ಟು ವಿಧದಲ್ಲಿ ಬಣ್ಣಿಸಿದಾಗೊ ಬುದ್ಧಿಯು ರಾಟೆಯ ಒಂದೇ
ಗಾಡಿಯಲ್ಲಿ ಓಡಾಡುವ ಹಗ್ಗದಂತಾಗುವುದಲ್ಲದೆ ಅದಕ್ಕೆ ವಿಸ್ತಾರ
ವಾದ ಪ್ರದೇಶದಲ್ಲಿ ಸ್ನೇಚ್ಛಾ ಪ್ರವರ್ತಿ ಯುಂಟಾದಂತಾಗಲಿಲ್ಲ ;
ಆ ಬುದ್ದಿಗೆ ಕೂಪ ಕೂರ್ಮದ ಸ್ವಭಾವ ಶಾಶ್ವತವಾಗುವುದು.

ಇಂಥಾ ನಿರ್ದುಷ್ಟ ಪದಾರ್ಥಗಳ ವರ್ಣನೆಯನ್ನು ಬಿಟ್ಟು
ಕೆಳಕ್ಕೆ ಇಳಿದರೆ, ಬುದ್ಧಿಯ ಜೋವು ಬಿಟ್ಟಂತಾಗುವುದು. ಅಂಥಾ
ನಿರ್ಮಲ ಮೂರ್ತಿಗಳಾದ ಶ್ರೀರಾಮ ಸೀತಾದೇವಿ, ಯುದ್ಧಿ
ಷ್ಟಿರ ದೌಪದಿ, ಇವರುಗಳ ಗುಣಗಳಲ್ಲಿ ಕೆಲವು ಭಾಗವನ್ನು
ಹೊಂದಿ, ಲೋಕದ ಲತಾಡಿಗೆ ಸಿಕ್ಕಿ ಕಷ್ಟಕ್ಕೆ ಗುರಿಯಾದರೂ,
"ತಮ್ಮ ಧೀರೋದಾತ್ತ ಗುಣಗಳನ್ನು ಬಿಡದೇ ಇರತಕ್ಕ ಪಾತ್ರಗ
ಇನ್ನು ಮನುಷ್ಯ ಮಾತ್ರದವರಲ್ಲಿ ಆರಿಸಿಕೊಂಡೋ ಊಹಿಸಿ
ಕೊಂಡೋ ವರ್ಣಿಸುವುದು ಮನಸ್ಸನ್ನು ಚೆನ್ನಾಗಿ ಆಕರ್ಷಣ
ಮಾಡುವುದರಲ್ಲಿ ಸಂಶಯವಿಲ್ಲ. ಪುರಾಣ ಪ್ರಸಿದ್ದರು ವ್ಯಾಕ
ರಣದ ಸೂತ್ರಗಳಾಗಿದಾರೆ. ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ
ಧೀರರು ಉದಾಹರಣೆಗಳಾಗಿದಾರೆ.
------------------------------
ix
ಈ ಭಾವವನ್ನು ಮನಸ್ಸಿನಲ್ಲಿಟ್ಟು ಈ ಗ್ರಂಥವನ್ನು ಬರೆದಿ
ದೇನೆ. ಇದರಲ್ಲಿ ಬರುವ ಪಾತ್ರಗಳ ಗುಣದೋಷಗಳು ಮೊದಲು
ಸ್ವಲ್ಪ ತಲೆದೋರಿ ಮುಂದಕ್ಕೆ ಸಂದರ್ಭಾನುಸಾರವಾಗಿ ವೃದ್ಧಿ
ಯಾಗುವ ರೀತಿಯನ್ನು ತೋರಿಸಿದೆ. ಅಸಂಬದ್ಧವೆಂದು ತೋರುವ
ಸಂದರ್ಭಗಳೆಲ್ಲಾ ಮುಖ್ಯವಾದ ಕಥೆಯ ಅಂಗಗಳಾಗಿವೆ. ಲಂಚ
ಕೋರರು ಅವರಿಂದುಂಟಾಗುವ ಪ್ರಮಾದಗಳು ; ಗ್ರಾಮಗಳಲ್ಲಿ
ಕಕ್ಷಿ ಅದರ ಗೋಷಗಳು ; ಮೈಸೂರ ಮುನ್ನುಡಿ ಶ್ರೀಕೃಷ್ಣ
ರಾಜ ಪ್ರಭುವಿನ ಆಸ್ಥಾನ, ಆದರ ಮಹತ್ತರವಾದ ಔದಾರ್ಯ,
ಆಸ್ಥಾನದ ನಕಲಿ ; ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು ;
ಪತಿವ್ರತಾ ಚರಿತ್ರೆ ; ಸಹಗಮನ ; ಗ್ರಾಮಗಳ ಕೊಳಚೆ ; ಅತ್ತೆ
ಸೊಸಯರ ಪರಸ್ಪರ ಕಿರಕುಳ ; ಮಠದ ಉಪಾಧ್ಯಾಯ, ಅವನ
ಕ್ರೌರ್ಯ, ಬಾಲಕರಿಗೆ ಅವಕೊಡುವಶಿಕ್ಷೆ, ಆವನ ಮಹತ್ತರವಾದ
ಕೃತಘ್ನತೆ, ವಿದ್ಯಾರ್ಥಿಗಳಿಗೆ ಮಾಡುವ ಕ್ರೂರವಾದ ಶಿಕ್ಷೆ, ಅದರ
ಧರ್ಮ ಸೂಕ್ಷ್ಮ ; ಕಾಪಠ್ಯ, ಅದರ ನೀಚ ಕೃತ್ಯಗಳು ; ನಿಜವಾದ
ಸೌಂದರ್ಯವನ್ನು ಸ೦ದರ್ಯವಲ್ಲವೆಂದು ಮಾಡುವ ವರ್ಣನೆ ;
ಪಾತಿವ್ರತ್ಯವನ್ನು ಭಂಗಮಾಡಲು ನಡಿಸಿದ ಆತಿಹೇಯವಾದ
ಪ್ರಯತ್ನ ; ಶಾಬರ ಪ್ರಯೋಗದ ನೀಚ ಕೃತ್ಯ ; ಒಬ್ಬ, ಐಲು
ಮನುಷ್ಯನ ಹರಟೆಯಿಂದ ಹುಟ್ಟುವಹಾಸ್ಯ ; ಓಬ್ಬ ಹುಚ್ಚು ಕಳ್ಳ
ಹೇಳಿ ಕೊಳ್ಳುವ ವಿಚಾರದಕಥೆ ; ಸ್ಮಶಾನದಲ್ಲಿ ನಡೆದ ಅತಿಭ
ಯಂಕರವಾದ ವಿಷಯ ; ಒಬ್ಬ ಮಹಾ ಮಂತ್ರವಾದಿ ಮಾಡಿದ
ಅದ್ಭುತವಾದಕಾರ್ಯ; ಮತ್ತು ಅವನ ಪಾರಮಾರ್ಥಿಕತೆ ; ಆದ್ಯಂ
----------------------------------
x
ತವಾಗಿರುವ ನೀತಿಯ ಸಾರಾಂಶ ; ಇವೇ ಮೊದಲಾದ ಸಂಗತಿ
ಗಳನ್ನೆಲ್ಲಾ ಆಯಾ ಳಗಳಲ್ಲಿ ವಿವರಿಸಿದೇನೆ.

ಈ ಗ್ರಂಥವನ್ನು ಓದಿಸಿ ಕೇಳಿದ ಸಹನಕ್ಕಾಗಿ ಮ|| ಸಬ್‌ಜಡ್ಡಿ
ಲಕ್ಷ್ಮೀನಾರಣೈಯ್ಯನವರು, ಮೈಸೂರ ಸಿಟಿ ಮೇಜಿಸ್ಟ್ರೇಟು
ಮ॥ ಬಸವಾರಾಧ್ಯರು, ವಿದ್ಯಾಭ್ಯಾಸದ ಇಲಾಖಾ ಆ, ಅ. ಮ|| 
ರಾಮಸ್ವಾಮಯ್ಯನವರು, ಡಿ ! ಸ್ಕೂಲ್ ಹೆ. ಮಾ. ಮ ||
ರಘುನಾಥರಾಯರು, ಇವರುಗಳಿಗೆ ನಾನು ಕೃತಜ್ಞನಾಗಿದೇನೆ.
ಮುಖ್ಯವಾಗಿ ಕನ್ನಡ ಭಾಷೆಯಲ್ಲಿ ಹುಟ್ಟುವ ಗ್ರ೦ಥಗಳ ಅಭಿವ್ಯ
ದ್ಧಿಗಾಗಿ ಹೆಚ್ಚಾದ ಪ್ರಯತ್ನವನ್ನು ಮಾಡಿ ವಿಶೇಷವಾದ ಪ್ರೋತ್ಸಾ
ಹವನ್ನು ಕೊಡುತ್ತಿರುವ ವಿದ್ಯಾಭ್ಯಾಸದ ಇಲಾಖಾ ಇ, ಜ.
ರಾವಬಹಾದೂರ್ ನ ಶಾಮರಾವ್ ಎಂ. ಎ. ಯವರಿಗೆ ಈ
ಮೂಲಕ ನನ್ನ ಕೃತಜ್ಞತೆಯನ್ನು ಪ್ರಕಾಶಮಾಡಿದೇನೆ.

ಬೆಂಗಳೂರು, ಬಸವನಗುಡಿ, ಆನಂದ ಸಂ||  ಶು|| ೧೫
ಭಾನುವಾರ
                                                        : ಎಂ. ಎಸ್. ಪುಟ್ಟಣ್ಣ,




---------------------------------
ಮಾಡಿದ್ದುಣ್ಣೋ ಮಹಾರಾಯ.

ಶುಭಮಸ್ತು- ನಿರ್ವಿಘ್ನಮಸ್ತು

ಕಿಚ್ಚ ಜೋಯಿಸರು - ಶುಭಮಸ್ತು, ಶುಕ್ಲಾಂಬರಧರಂ ವಿಷ್ಣುಂ|
ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇ |
ತ್ಸರ್ವವಿಘ್ನೋಪಶಾಂತಯೇ ||
ಸ್ನಸ್ಥಿತಿ, ವಿಜಯಾಭ್ಯುದಯ ಶಾಲಿವಾಹನ ಶಕಾಗಿ
ಯಾಗಿ ಸಂದ ವರ್ಷಗಳೊಳು ಪ್ರಭವಾದಿ ಷಷ್ಠಿ ಸಂವ
ತ್ಸರದೊಳು ಪ್ರಮಾದ ನಾಮ ಸಂವತ್ಸರದ ಮಾಗೀಶ್ವರ
ಶುದ್ಧ ೪ ಮಂಗಳವಾರ ೬೪ -೮೨; ಧನಿಷ್ಟಾ ನಕ್ಷತ್ರ ೫ - ೦;
ವೈದೃತಿ ೬೦-೭೨; ಬಾಲಕರಣ ೬೩-೪ ; ದಿನದಲ್ಲಿ ಸಾ
ಮಾನ್ಯ, ರಾತ್ರೆ ಹೆಚ್ಚು ಗಟ್ಟಲೆ, ಮಸಣಕಮ್ಮನ ರಥೋ
ತ್ಸವ, ಶ್ರೀರಂಗದಲ್ಲಿ ಬೃಹದೇಶ್ವರಸ್ವಾಮಿರಥ, ಎಸಾಳ್ವಾ
ರು ತಿರುನಕ್ಷತ್ರಂ, ಇವತ್ತೆಲ್ಲಾ ಸಮಸ್ತ ಕಾರ್ಯಕ್ಕೂ
ವ್ಯತೀತವಾತ ವಾಗಿರುವಂಥಾದ್ದು, ನಾಳೆ ಯಲ್ಲಾ ಸಮಸ,
ಕಾರ್ಯಕ್ಕೂ ವೈದೃತಿಯಾಗಿರುವಂಥಾದ್ದು, ಇವತ್ತು ನಾಳೆ
ಸಮಸ್ತ ಕಾರ್ಯಕ್ಕೂ ಅನುಕೂಲವಾಗಿರುವಂಥಾದ್ದು. ನಾಳೆ
ಯಿಂದ ಧನಿಷ್ಠಾವಂಚಕ ಮೊದಲಾಗುವಂಥಾದ್ದು, ವಿಷ್ಣು 
ವಂಚಕ ಮಾಡತಕ್ಕವರಿಗೆ ಅನುಕೂಲ ವಾಗಿರುವಂಥಾದ್ದು.
-----------------------------
೨                                       ಮಾಡಿದ್ದುಣ್ಣೋ ಮಹರಾಯ.

ಸ್ವಸ್ತಿ ಸರ್ವೇ ಗ್ರಹಾ ಸುನಕ್ಷತ್ರಾ ಶ್ಶುಭಏಕಾದಶ ಸ್ಥಾನ
ಫಲಸಿದ್ದಿರಸ್ತು | ರಾಜದ್ವಾಬರೇ ದಿಗ್ವಿಜಯಮಸ್ತು || ಸಮ
ಸ್ತ ಸನ್ಮಂಗಳಾನಿ ಭವಂತು | ಧನಧಾನ್ಯ ಸಮೃದ್ದಿರಸ್ತು-
ಈದಿವಸ ನಾಳೆ ದಿನಶುದ್ದಿ ಹೀಗೆ ಇದೆ.

ಮಾರಯಣರಾಯರು ಈ ಪಂಚಾಂಗ ಶ್ರವಣವಾಗುವಾಗೆ
ಅದಕ್ಕೆ ಗಮನಕೊಡದೆ ಸುಮ್ಮನಿದು "ರಾಜದ್ದಾರೇ ದಿಗ್ವಿಜ
ಯಮಸ್ತು'' ಎಂದು ಮಾತನ್ನು ಕೇಳಿ, ಜೋಯಿಸರು ಹೇಳಿದ್ದ
ರಿಂದ ಸಾಹೇಬರ ದಯ ತನ್ನ ಮೇಲೆ ಹೆಚ್ಚಾಗಬಹುದೆಂದು
ಯೋಚಿಸುತಾ ಇದ್ದನು. ಅದರಲ್ಲಿ " ಧನಧಾನ್ಯ ಸಮೃದ್ಧಿ
ರಸ್ಸು " ಎ೦ದು ಹೇಳಿದ ಮಾತು ಜೋಯಿಸರ ತುಟಿಯಿಂದ
ಈಚೆಗೆ ಹೊರಡುತಿರುವಾಗಲೇ ದಫೇದಾರ ವೀರನಾಯಕ ಬಂದು
-ಬುದ್ದಿ ಪಟೇಲ ಸಂಗೇಗೌಡ ಬಂದಿದಾನೆ, ಎಂದನು.
ಮಾರನುಣರಾಯ ಜೋಸ್ಯರೇ, ನಿಮ್ಮ ವಾಕ್ಕಿನಾಗೆ ಅಮೃತ
ವಿರಾಮ, ನೀವು ಧನಧಾನ್ಯ ಆಂಬೊವೇಳೆಗೆ ಅದು
ನಿಜವಾಗಿ ಬಂಧಾ೦ಗಾಯಿತು, ಎನೈಯ್ಯ ಬಂದಿ, ಸಂ
ಗಣ್ಣ?
ಸಂಗೇಗೌಡ-ಬಂದಿ ಬುದ್ಧಿ, ವಾದ್ದಲ್ಲಿ.
ಮಾರಮ- ನಾನು ಹೇಳಿದ್ದು ಬಂತಾ ?
ಸಂಗೇ - "(ಬುದ್ಧಿ ಬಂತು" ಎಂದು ೧೦೦ ರೂಪಾಯಿಯನ್ನು ತಂದು
ಎಣಿಸಿ ಸುಬೇದಾರರ ಮೇಲಿನಮೇಲೆ ಇರಿಸಿದನು.
ಮಾರಮ- (ಹಣ ಬಂದದ್ದಕ್ಕೆ ಸ್ವಲ್ಪ ಸಂತೋಷಿಯಾಗಿ, ಮು
ಖದಲ್ಲಿ ಮಾತ್ರ ಗಂಟು ಹಾಕಿದ ಹುಬ್ಬಿನಿಂದ ಕೋಪ
ವನ್ನು ಇರಿಸುವನಹಾಗೆ ನಟಿಸುತಾ) ಬಾಕಿ ಐವತ್ತು
--------------------------------
ಮಾಡಿದ್ದುಣ್ಣೋ ಮಹಾರಾಯ,                                    ೩

ರೂಪಾ ಕಡಿಮೆ ಮಾಡಿದಿ, ನಿಮ್ಮ ಜನಕ್ಕ ಪುತ್ತಿ
ಇಲ್ಲ, ಅದು ಬರೋವರೆಗೆ ಫೈಸಲ ಹೇಳಲಿಕ್ಕೆ ಆಗೋ
ದಾಗೆ  ಹೇಳಿದ್ದು ೨೦೦, ತಂದದು ೧೦೦, ಒಂದೊಂದೂ
ಹೀಗೆ ಕಡಿಮೆ ಮಾಡ್ವಿ, ಹೀಂಗೆ ಕೊಂಚ ಕೊಂಚಕ್ಕೆ
ಏನಾಗೋದು, ಇದಕೆ ನಾವು ದೇಶ ಬಿಟ್ಟು ದೇಶಕ್ಕೆ
ಬಂದೇವು ? ಏನ ಕಣೋ ?
ಸಂಗೇ-ನಾಳೆ ಬತ್ತದೆ ಬುದಿ .
ಮಾರನು-ಜೋಸ್ಯರೆ, ನಮ್ಮ ಕಡಿ ಹೀಂಗಿಲ್ಲ, ಮಾತು ಒ೦ದು
ಕೆಲಸ ಒ೦ದು, ಇರಾದು. ಇಲ್ಲಿ ದಾವುದೂ ನಿಜ
ಇಲ್ಲ, ಈ ಸೀಮಿ ನಮ್ಮ ಸೀಮಿಹಾಂಗೆ ಧರ್ಮ ಸೀಮಿ
ಇಲ್ಲ, ಎ೦ದೂ ಇಲ್ಲ.
ಜೋಯಿಸ-ಆಹ, ಆಪ್ಪಣೆಯಾದ್ದು ಸರಿ, ಅದಕ್ಕೆ ಸಮಾನ
ಉಂಟೆ ? ಶಾಸ್ತ್ರ ಸುಳ್ಳಲ್ಲ, ಲಕ್ಷ್ಮೀ೦ ಕ್ಷೀರ ಸಮುದ್ರ
ರಾಜತನಯಾಂ ಎಂದು ಹೇಳಿದ್ದಾರೆ. ಪೂರ್ಣಾಧಿಕಾರ,
ಕೇಳತಕ್ಕದ್ದೇನು ! ಅನೇಕ ಸುಬೇದಾರರು ಬಂದರು,
ಈ ಸಂಪತ್ತು ಯಾರಿಗೂ ಇಲ್ಲ
ಮಾರಮ --- ಸಂಗಣ್ಣ, ಕೇಳೋ ಕಣೋ ಮೊಸರು ಹೇಳಾ 
ದು, ಅವರಿಗೆ ಏನಾದರೂ ಕೊಡೇನು ?
ಸಂಗ-- ಎನೂ ತರ್ನಿಲ್ಲ ಏಳಿ.
ಹೀಗೆಂದು ಹೇಳುತಾ ಸಂಗಣ್ಣನು ತನ್ನ ಹೊಗೆಸೊಪ್ಪಿನ
ಚೀಲಕ್ಕೆ ಕೈ ಹುಡುಕಿ ಮೂರುಕಾಸಿನ ಬಿಲ್ಲೆಯನ್ನು ತೆಗೆದು
ಜೋಯಿಸರ ಕೈಗೆ ಕೊಟ್ಟನು. ಕಿಟ್ಟನು ಬಂದದ್ದೇ ಲಾಭವೆಂದು
--------------------------------
೪                                              ಮಾಡಿದ್ದುಣ್ಣೋ ಮಹಾರಾಯ

ಆಗ್ಗೆ ಸುಮ್ಮನಾದನು. ಸುಬೇದಾರರ ಅಪ್ಪಣೆ ಪಡೆದು ಈಚೆಗೆ
ಬಂದು ಅದನ್ನು ನೋಡಲಾಗಿ ಅದು ಸಮಕಲ ಕಾಸಾಗಿ
ತ್ತು, ಲಭ್ಯವಿದ್ದಷ್ಟು ಎಂದುಕೊಂಡು ಅವನು ಪೇಟೆಕಡೆ ಮು
ಖವನ್ನು ತಿರುಗಿಸಲು, ಸುಬೇದಾರರ ದಿವಾನಖಾನೆಯಿಂದ ಈ
ಚೆಗೆ ಬಂದ ಸಂಗಣ್ಣನನ್ನು ಕಂಡು, ಒಳಗಿದ್ದ ಅಮ್ಮಾ ಅವರು
-ಗ್ಯವಡ, ಬೇಳಿ ಇಲ್ಲ, ಹತ್ತು ಪಲ್ಲ ಬೇಳಿ ತರಬಾರದಾ ?
ಒಂದು ತಿಂಗಳಿಗಾದರೆ ಆಗಾದು. ಹೀಗೆಂದು ಹೇಳುತಾ
ಗಂಡನಾದಸುಬೇದಾರನ ಮುಖವನ್ನು ನೋಡಿ- ಅವನು ಬರೀ
ಕೈ ಮಾಡಿಕೊಂಡು ಬರುತಾನ, ಸುಮ್ಮನೆ ಇರಾದು,
ಎಂದು ದಿನಕ್ಕೆ ಒಂದುಸಾರಿಯಾಗು ಬೆ(ಳಿ ಸಾರು ಬೇಡವ ?
ಸಂಗೇ-ನಮ್ಮ ದಿಕ್ಕೆ ತುಗರಿ ಒಂದು ಕಾಳಾಗಲಿಲ್ಲ ಕಣವ್ವ.
ಇಷ್ಟರಲ್ಲಿ ಸುಬೇದಾರರ ಮಗಳು ಓಡಿಬಂದು ಸಂಗಣ್ಣನ
ಸಮೀಪದಲ್ಲಿ ನಿಂತು-ಏನಕಣಾ ಗ್ಯವಡ, ಕಾಶ ಕೊಡಾದಿ
ಲ್ಲವಾ ? ಎಂದಳು. ಆಗ ಸಂಗಣ್ಣನು ವಟ್ಟದ ಚೀಲದಿಂದ
ಒಂದು ಪಾವಲಿಯನ್ನು ತೆಗೆದು ಆ ತರುಣಿಯ ಕೈಗೆ ಕೊಟ್ಟನು.
ಅಷ್ಟುಹೊತ್ತಿಗೆ ಸುಬೇದಾರರ ಅಡಿಗೆ ಮನೆಯಿಂದ ಒಂದು
ನಾಯಿ ಬೊಗಳುತಾ ಗೌಡನನ್ನು ಹರಿಸಿಕೊಂಡು ಬಂತು.
ಇದರಿಂದ ಅವನಿಗೆ ಸದ್ಯ ಉಂಟಾಗಿದ್ದ ಕಷ್ಟ ತಪ್ಪಲು ಸಮ
ಯ ದೊರೆಯಿತು. ಸಂಗಂಣನು ಆಚೆಗೆ ಹೊರಟು ಹೋಗಲು
ಕಾಲನ್ನು ತೆಗೆದನು. ಆಗ ಸುಬೇದಾರರು ದಿವಾನಖಾನೆಯ
ಕಿಟಕಿ ಬಾಗಿಲ ಬಳಿಗೆ ಬಂದು ನಿಂತುಕೊಂಡರು. ಅವರ
ಮುಖವನ್ನು ನೋಡುತಾ ಅವರ ಮನೇ ಅಡಿಗೆಯವನಾದ ಸುಬ್ಬ
--------------------------------
ಮಾಡಿದ್ದುಣ್ಣೋ ಮಹಾರಾಯ.                                  ೫

ಯ್ಯನು - ಸಂಗೇಗೌಡ, ಒ೦ದು ಮಣು ಹಸುವಿನ ಬೆಂಣೇ  ಕಳುಹಿಸು.
ಯಜಮಾನರಿಗೆ ಕೆಟ್ಟ ತುಪ್ಪ ಯಾವುದೂ ಸೇರು
ವುದಿಲ್ಲ, ಎಂದನು. ಆಗಲಿ ಕಣಪ್ಪ, ಸುಬ್ಬಪ್ಪ, ಎಂದು
ಸಂಗಂಣ  ಹೋಗುತಿರುವಾಗ ದಫೇದಾರನು- ಗವುಡ, ಎನೋ
ನೂರು ಇನೂರು ಆದರೂ ತೆರುತಿಯೆ, ಎರಡು ಕಂಡಗರಾಗಿ
ಕೊಡಯ್ಯ ಎಂದು ಕೇಳಿದರೆ ಗತಿ ಇಲ್ಲವೆ ?
ಗೌಡ-ಅಯ್, ಈಗ ಮಾರಿಹಬ್ಬದ ಗಜಾಲಲ್ಲವ ? ಎಲ್ಲಾ ತೀರಲಿ
ಕಳಗಸುತೇನೆ, ಓ ಮರತಿ,
ಎಂದು ಹಿಂದಕ್ಕೆ ಹೋಗಿ, ಕಿಟಕಿಯಲ್ಲಿ ನೋಡುತ್ತಾ ನಿಂತಿದ್ದ
ಸುಬೇದಾರರನ್ನು ಕಂಡು ಬುದ್ದಿ, ತಾರೆ ನಮ್ಮೂರ
ಮಾರಿಹಬ್ಬ, ಅದಕೆ ಲೇಲನ್‌ ಬೇಕಾ ?
ಮಾರಮಣ-ಲೇಸನ್‌ ಇಲ್ಲದೆ ಹಬ್ಬ ಉಂಟಾ ?
ಸಂಗೇ-ಏನ ಕೊಡಬೇಕೋ ಬುದ್ದಿ ?
ಮಾರನು-ಟಾಂಪು ೮ ಆಣ, ನಮ್ಮನು ೫೦ ರೂ .
ಆಗ ಗೌಡನು-ಆಗಲಿ ಬುದ್ಧಿ, ಎಂದು ಹೊರಟುಹೋದನು.

ಇದೆಲ್ಲವನ್ನೂ ನೋಡುತಾ ನಿಂತಿದ್ದ ಕಿಟ್ಟ ಜೋಯಿಸನು
ತನ್ನ ಮನಸ್ಸಿನೊಳಗೆ ಈ ಸಂಗೇಗೌಡ ಸುಬೇದಾರರಲ್ಲಿ ಹೆಚ್ಚಾಗಿ
ಪ್ರಬಲನಾಗಿದ್ದಾನೆ. ಸರ್ಕಾರದಲ್ಲಿ ಇವನ ಮಾತು ಚೆನ್ನಾಗಿ ನಡೆ
ಯುತ್ತೆ, ಇವನಲ್ಲಿ ನಾವು ಹೆಚ್ಚಾಗಿ ಸ್ನೇಹವನ್ನು ಬೆಳೆಸಬೇಕು
ಪಟೇಲನಾದ ಇವನನ್ನು ನಾವು ಒಳ್ಳೆಯವನಾಗಿ ಮಾಡಿಕೊಳ್ಳದಿ
ದ್ದರೆ, ನಮ್ಮ ಸಂಜನಾಡಿಯಲ್ಲಿ ಬಾಳುವುದು ಕಷ್ಟ. ಸಂಗಂಣ
ನೇನೋ ನನ್ನ ಕಡೆಯವನೇ, ನಾವು ಇವರ ಮನೆಗೆ ಕುಲಪುರೋ
----------------------------------
೬                                   ಮಾಡಿದ್ದುಣ್ಣೋ  ಮಹಾರಾಯ.

ಹಿತರಲ್ಲವೆ ? ಹೀಗಾದರೂ ಇವನು ಸುಬೇದಾರನ ಮಗಳಿಗೆ
ಪಾವಲಿಕೊಟ್ಟ, ನನಗೆ ಸಮಕಲಕಾಸಕೊಟ್ಟ .ಈಗ್ಗೆ ಹೋಗಲಿ.
ಇವರ ಅಸ್ಮನ ತಿತಿ ಹತ್ತರವಾಯಿತು. ಆಗ ತರ್ಪಣ ಬಿಡಿಸು
ವಾಗ್ಗೆ ಇನ್ನೂ ನಾಲ್ಕು ಹೆಸರನ್ನು ಹೆಚ್ಚಾಗಿ ಹೇಳಿ ಕಾಸನ್ನು
ಎಳೆಯಬೇಕು.

ಹೀಗೆ ಅರ್ಧಜಾಣತನ ಅರ್ಧಬೆಪ್ಪುತನ ಎರಡನ್ನೂ ಸೇರಿಸಿ
ಮಾತನಾಡಿಕೊಂಡು ಮೆಲ್ಲಗೆ ಹೋಗುತ್ತಾ ಇದ್ದ ಕಿಟ್ಟಜೋಯಿ
ಸನು ಕಾಲನ್ನು ಚುರುಕುಮಾಡಿ ಮುಂದೆ ಮುಂದೆ ಬಿರುವಾಗಿ
ಹೋಗುತಾ ಇದ್ದ ಸಂಗೇಗೌಡನನ್ನು ನೋಡಿ - ಎಲೋ
ಸಂಗಂಣ, ಏನೊ ಓಡುತೀಯೆ ? ನಿನಗೇ ಕಾಲಿದೆ ನನಗೆ
ಇಲ್ಲವೇನೋ ? ಮಾತ ಕೂಡ ಆಡದೆ ಓಡುತೀಯೆ ? ಎಂದನು.
ಸಂಗ-ಜಂಬ್ರೈತೆ ಕಣಪ್ಪ, ಕಿಟ್ಟಪ್ಪ.
ಕಿಟ್ಟ-ನಿಂತುಕೊಳ್‌ಳೋ, ಬಲ್ಲೆ, ನೆಶ್ಯಾ ಕೊಡೊ, ಹಳೇಕಾಸ
ಕೊಟ್ಟಿಯಲ್ಲೋ.
ಸಂಗಂಣ-ಎಲ್ಲಿ ತರಲಿ, ಏನು ಸುಲಿದು ತಿಂತೀ,
ಹಾರವೈಯ್ಯ
ನೀನು ?
ಕಿಟ್ಟಿ-ಓಹೋ ! ಸುಬೇದಾರರ ಮನೆಯಲ್ಲಿ ನಿನ್ನನ್ನು ಸುಮ್ಮನೇ
ಬಿಟ್ಟರೇನೋ ? ಮನೆಮಂದಿ ನಕ್ಕಳೆಲ್ಲಾ ಮುತ್ತಿಕೊ
ಳ್ಳಲಿಲ್ಲವೆ ? ಅವರ ಮಗಳು ಕೂಡ ನಿನ್ನ ಬಿಡದೆ
ಕಾಸ ಕಿತ್ತುಕೊಳ್ಳಬಹುದು. ನನಗೆ ವಸಿ ನೆಶ್ಯಾ ಕೊಟ್ಟರೆ
ನಿಮ್ಮಪ್ಪನ ಗಂಟು ಹೋಗುತ್ತೆ !
ಸಂಗ-ಈ ಮಾತ ಇಲ್ಲಿಗೇ ಬುಕ್ಕುಬುಡು. ಏನೈಯ್ಯ ಹರಟೆ
ಹೊಡೆದೀಯ, ಸರ್ಕಾರದಮಾತು ನಿನಗೇಕೆ ?
---------------------------------
ಮಾಡಿದ್ದುಣೋ ಮಹರಾಯ.                                ೭
ಕಿಟ್ಟ-ಹಾಗಾದರೆ, ಕಳ್ಳೆ ಕೊಂಡುಕೊಳ್ಳುತೇನೆ ಮೂರುಕಾಸ
ಕೊಡೋ, ಒಂದು ಕಾಸಕೊಡೊ ಹೋಗಲಿ, ಉಪ್ಪಕಳ್ಳೆಗೆ.
ಸಂಗ-ನಾಳೆ ಚಿನಕುರಳಿ ಕೊಡುತಿವಿನಿ, ಸುಮ್ಮನಿರು ಕಿಟ್ಟಪ್ಪ.
ನಿಮ್ಮ ಬಾವನಿಗೆ ಹೇಳಬೇಡ.
ಹಾಗೇ ಆಗಲೆಂದು ಕಿಜೋಯಿಸನು ಹೊರಟು ಹೋ
ಗಲು, ಸಂಗಂಣನು ತನ್ನೊಳಗೆ ಈ ಜೋಯಿಸರ ಹುಡುಗನ
ಎದುರಿಗೆ ಸುಬೇದಾರನನ್ನು ಕಾಣಬಾರದಾಗಿತ್ತು. ಇವನೆದು
ರಿಗೆ ೧೦೦ ರೂಪಾಯಿ ಕೊಟ್ಟಿದ್ದು ತಪ್ಪಾಯಿತು. ಸುಬೇದಾ
ರನ ಮಗಳು ಆ ಚಂದುಳ್ಳಿ ಚೆಲುವೇ ಕೈಗೆ ಪಾವಲಿ ಕೊಟ್ಟಿದ್ದೂ
ವೆಚ್ಚಾಯಿತು. ಇದನ್ನು ಈ ಪೆದ್ದನು ಎಲ್ಲಿಯಾದರೂ ಹೊರಗೆ
ಬಿತ್ತಿ ಯಾನೋ ? ಒಂದುವೇಳೆ ಹಾಗೆ ಹೇಳಿದರೂ, ಸುಬೇ
ದಾರರು ನಮ್ಮ ಮಾತಕೇಳುತಾರೆ ಎಂಬ ವಾರ್ತೆ ನಮಗೆ ಕೆಟ್ಟ
ದೂ ಎನ್ನ ಕೂಡದು. ನನ್ನನ್ನು ಕಂಡರೆ ಇತರರು ಹೆದರಿ
ಕೊಳ್ಳುವುದಕ್ಕೆ ದಾರಿಯಾಗುತ್ತೆ. ಹೀಗೆಂದುಕೊಳ್ಳುತಾ ಮನೆಗೆ
ಹೋದನು. 
               ---
೨ ನೆ ಆದ್ಯಾಯ,

ಸಂಜವಾಡಿಯಲ್ಲಿ ಮೈಸೂರ ಕಡೆಯಿಂದ ವಲಸೆಹೋದ
ಒಂದು ಬ್ರಾಹ್ಮಣ ಸಂಸಾರವಿತ್ತು. ಸದಾಶಿವದೀಕ್ಷಿತನೆಂಬ ಒಬ್ಬ
ಬ್ರಾಹ್ಮಣನು ಮೈಸೂರಲ್ಲಿ ವಾಸವಾಗಿದ್ದನು. ಈತನ ಹಿರೀ
ಹೆಂಡತಿಯು ಒಂದು ಗಂಡುಮಗುವನ್ನು ಹಡೆದು ಸತ್ತುಹೋದ
ಳು. ಆಗ ಮಗುವಿಗೆ ಎರಡು ತಿಂಗಳಾಗಿತ್ತು. ಈತನಿಗೆ ವ್ಯದ
ಳಾದ ಒಬ್ಬ ತಾಯಿವಿನಾ ಮತ್ತೆ ಯಾರೂ ಮನೆಯಲ್ಲಿ ದಿಕ್ಕಾ
----------------------------------

೮                                               ಮಾಡಿದ್ದುಣ್ಣೋ ಮಹರಾಯ.

ಗಿರಲಿಲ್ಲ. ಆಕೆಗೂ ವಯಸ್ಸಾಗಿತ್ತು, ಕಿವಿ ಮಧ್ಯಸ್ಥವಾಗಿತ್ತು,
ಮನೇ ಕೆಲಸ ಯಾವುದೂ ಇವಳ ಕೈಯಲ್ಲಿ ಸಾಗುತಿರಲಿಲ್ಲ.
ಇಂಧಾ ಮುದುಕಿಯು ಈ ಎಳೆಮಗುವನ್ನು ಸಾಕಿಕೊಂಡು
ಮನೇ ಕೆಲಸವನ್ನೂ ತೂಗಿಸಿಕೊಂಡು ಹೋಗುವುದು ಅಸಾ
ಧ್ಯವಾಗಿತ್ತು. ಈ ಮಗುವಿಗೆ ಕೂಲಿಹಾಲನ್ನು ಕೊಡಿಸುತಾ
ಇದ್ದರು. ಹಾಲು ಕೊಡುತಿದ್ದ ಮರಿಯು ಮಗುವಿಗೂ
ಮನೆಯವರಿಗೂ ವಿಶೇಶವಾಗಿ ಕಿರುಕುಳ ಮಾಡುತಿದ್ದಳು.
ಒಂದಾನೊಂದು ದಿವಸ ಬೆಳಗಿನಿಂದ ರಾತ್ರಿ ೧೦ ಘಂಟೇ
ವರೆಗೂ ಮರಿಯು ಬರಲಿಲ್ಲ. ಮಗುವಿನ ರೋದನ ಬಲವಾ
ಯಿತು. ಯಾವ ಕೆಲಸಕ್ಕೂ ಅದು ಕೈಬಿಡದೇ ಹೋಯಿತು.
ಅತ್ತು ಅತ್ತು ಮಗುವಿನ ಹೊಟ್ಟೆಯೆಲ್ಲಾ ಊದಿಹೋಯಿತು.
ಯಾರು ಸುದಾರಿಸಿದರೂ ಸುಮ್ಮನಾಗದೇ ಹೋಯಿತು.
ಎಲ್ಲೆಲ್ಲಿ ಹುಡುಕಿದರೂ ಮರಿ ಸಿಕ್ಕಲಿಲ್ಲ. ಆಗ ಸದಾಶಿವ
ದೀಕ್ಷಿತನು ತಾಯಿಯನ್ನು ಕುರಿತು-ಅಮಾ, ಮಗು ಹೀಗೆ
ಅಳುವುದನ್ನು ನೋಡಿ ನಾನು ಸಹಿಸಲಾರೆ, ನಾನು ಎಲ್ಲಿ
ಯಾದರೂ ದೇಶಾಂತರ ಹೋಗುತ್ತೇನೆ, ಮಗುವನ್ನು ಸಾಕಿ
ಕೊಳ್ಳುವ ಪುಣರಿಗೆ ಕೊಟ್ಟುಬಿಡೋಣ ಎಂದು ದುಃಖಪ
ಟ್ಟನು. ಪಾರ್ವತಮ್ಮನೂ ಅಳುತಾ ಇದ್ದಳು. ಆ ಸಮಯಕ್ಕೆ
ರಾತ್ರಿ ೧೦ ಘಂಟೆಯಮೇಲೆ ದಾದಿಯು ಬಂದಳು. ಅವಳನ್ನು
ಕಂಡು ಮುದುಕಮ್ಮನು ಮನಸ್ಸು ರೋಸಿ ಎಲೆ ಪಾಪಿ, ನಮ್ಮ
ಗೋಳನ್ನು ಯಾಕೆ ಹುರಿದುಕೊಳ್ಳುತೀಯೆ ? ಈ ಮಗುವ
ನ್ನು ಕೊಂದಾದರೂಬಿಡು, ಎಂದು ಮಗುವನ್ನು ಪಾರ್ವತಮ್ಮ
---------------------------------
ಮಾಡಿದ್ದುಣ್ಣೋ ಮಹಾರಾಯ.                                           ೯

ಎತ್ತಿತಂದು ನಿಂತನಿಲುವಿಗೂ ಅವಳ ಕಾಲನೇಲೆ ಎತ್ತಿಹಾಕಿ
ಬಿಟ್ಟಳು. ಮಗುವಿಗೆ ಮೂರ್ಛೆಬಂತು. ಆಗ ದಾದಿಯು ಯಾ
ವ ಮಾತನ್ನೂ ಆಡದೇ ಮುಗುವನ್ನು ಎತ್ತಿಕೊಂಡು ಕಿವಿಯಲ್ಲಿ
ಊರಿ ಬಾಯಬಿಡಿಸಿ ಹಾಲನ್ನು ಕರೆದಳು. ಸ್ವಲ್ಪಹೊತ್ತಿನ
ಮೇಲೆ ಜ್ಞಾನಬಂತು. ಇಂಥಾ ಹೊಡೆಬಾಳಿನಲ್ಲಿ ಒಂದು ದಿವಸ
ಕಳೆಯುವುದು ಒಂದು ಯುಗವಾಗಿತ್ತು.

ಹೆಂಡತಿಸಾಯುವಾಗ್ಗೆ ಸದಾಶಿವ ದೀಕ್ಷಿತನಿಗೆ ೩೦ ವರ್ಷ
ವಯಸ್ಸು. ಈತನು ಕೆಂಪಗೆ ತೇಜಸ್ವಿಯಾಗಿದ್ದನು. ತಕ್ಕಮ
ಟ್ವಿಗೆ ಋಗ್ವೇದ ಅಧ್ಯಯನವಾಗಿತ್ತು. ಜಾತಕವನ್ನೂ ಪಂಚಾಂ
ಗವನ್ನೂ ಗುಣಿಸುವನುಟ್ಟಿಗೆ ಜೊತಿಷ್ಯ ಬರುತಿತ್ತು. ಆದರೆ
ಯಾರಮನೆಗೂ ಪಂಚಾಂಗಹೇಳುವುದಕ್ಕೆ ಹೋಗುತಿರಲಿಲ್ಲ. ಯಾ
ವ ಕಾವ್ಯ ಪುರಾಣ ಮುಂತಾದ್ದನ್ನು ಕೊಟ್ಟರೂ ಯಾರ ಅ
ಪೇಕ್ಷೆಯ ಇಲ್ಲದೆ ಇತರರಿಗೆ ಅರ್ಧ ಹೇಳುವವಗೆ ಸಂಸ್ಕೃ
ತ ಭಾವೆಯಲ್ಲಿ ಜ್ಞಾನವಿತ್ತು. ಆದರೆ ಕಟ್ಟೇಪುರಾಣ ಮುಂತಾ
ದ್ದಕ್ಕೆ ಹೋಗುತ್ತಿರಲಿಲ್ಲ. ಪೂರ್ವಾಪರಪ್ರಯೋಗವು ವ್ಯಾಖ್ಯಾನ
ಸಹಿತವಾಗಿ ತಿಳಿದಿತ್ತು. ಆದರೆ ಸಿಕ್ಕಿದಕಡೆ ಆಮಶ್ರಾದ್ಧಕ್ಕೆ
ಹೋಗುತಿರಲಿಲ್ಲ. ವೇದಾಂತಶಾಸ್ತ್ರದಲ್ಲಿ ಪರಿಶ್ರಮವಿತ್ತು, ಆದ
ರೆ ಬರೀ ಒಣವೇದಾಂತಿಯಾಗಿ ಪುರಾಣ ವೈರಾಗ್ಯವನ್ನು ಹೇಳು
ತಿರಲಿಲ್ಲ. ಈತನಿಗೆ ಲೌಕಿಕ ಪ್ರವರ್ತನೆಯ ತಕ್ಕಮಟ್ಟಿಗಿತ್ತು.
ಆದರೆ ಜಗಳಗಂಟರಿಗೆ ಅರ್ಜೀ ಬರೆದುಕೊಟ್ಟು ವ್ಯಾಜ್ಯವನ್ನು ಹು 
ಟ್ಟಹಾಕುತಿರಲಿಲ್ಲ. ಗ್ರಂಧಕಾಲಕ್ಷೇಪದಲ್ಲಿ ಯಾವಾಗಲೂ ಆಸ
ಕ್ತಿಯುಳ್ಳ ಸದಾಶಿವದೀಕ್ಷಿತನಿಗೆ ರಾಜಯೋಗದಲ್ಲಿ ಪರಿಶ್ರಮ
-----------------------------
೧೦                                  ಮಾಡಿದ್ದುಣ್ಣೋ ಮಹಾರಾಯ.

ವಿತ್ತು. ಮೈಸೂರಲ್ಲಿ ಈತನ ಸೋದರಮಾವನು ಅರಮನೆ
ಯಲ್ಲಿ ಸಮ್ಮುಖದ ವಿದ್ವಾಂಸನಾಗಿದ್ದನು. ಪಶುಪತಿಸಾಂಬಶಾ
ಸ್ತ್ರಿ ಎಂದು ಆತನ ಹೆಸರು. ಇವನಿಗೆ ಅರಮನೆಯಲ್ಲಿ ವಿದ್ವಾಂ
ಸರ ಸಂಬಳವೆಂತ ತಿಂಗಳ ೫ ವರಹ ಬರುತಾ ಇತ್ತು. ಆಗಿನ
ಕಾಲದಲ್ಲಿ ಇದು ಭಾರೀ ಸಂಬಳವೆನಿಸಿಕೊಂಡಿತ್ತು. ಈ ಸೋ
ದರಮಾವನ ಮೂಲಕ ಸದಾಶಿವದೀಕ್ಷಿತನು ಆಗಾಗ್ಗೆ ಅರಮನೆ
ಗೆ ಹೋಗಿ ತನ್ನ ಮಾವನಸಂಗಡ ಸಭೆಯಲ್ಲಿ ಕೂತುಕೊಳಳ್ಳು
ತಲೂ ಇದ್ದನು. ಶಾಸ್ತ್ರವಿಚಾರ ಬಂದಾಗ ಪಾಂಡಿತ್ಯದ ಕೆಚ್ಚು
ಸುಮ್ಮನೇ ಇರಗೊಡಿಸುತಿರಲಿಲ್ಲ. ತಾನೂ ಬಾಯಹಾಕಿ ಚರ್ಚೆ
ಗೆ ನುಗ್ಗುತಿದ್ದನು. ಒಂದಾನೊಂದುದಿವಸ ಅರಮನೆಯ ನಾಮ
ತೀರ್ಧದ ತೊಟ್ಟಿಯಲ್ಲಿ ಖಾಸಾ ಶಿವಪೂಜೆ ನಡೆಯುತ್ತಿರುವಾಗ
ಯಾವುದೋ ಒಂದು ಶಾಸ್ತ್ರಾರ್ಥವಿಚಾರ ಬಂತು. ಆಗ ಸದಾ
ಶಿವದೀಕ್ಷಿತ ಮಾಡಿದ ವಾಕ್ಯಾರ್ಧವನ್ನು ಕೇಳಿ ಕೃಷ್ಣರಾಜಪ್ರ
ಭುವು ಸಂತೋಷಪಟ್ಟು -ಇವನು ಯಾರೈಯ್ಯ ಸಿಡಿಲಮರಿಯಾ
ಗಿದಾನೆ, ಎಂದುಹೇಳಿ ಆದಿನವೇ ೨ ವರಹ ಸಂಬಳವನ್ನು ಮಾ
ಡಿಕೊಟ್ಟರು. ಪಾಂಡಿತ್ಯವಿದೆಯೆಂದರೆ ಸಾಕು. ಯಾರ ಒತ್ತಾ
ಸೆಯ ಅಗತ್ಯವಿಲ್ಲದೆ ಪ್ರಭುವು ಗುಣದಲ್ಲಿ ಪಕ್ಷವಾತವನ್ನಿಟ್ಟು
ಪುರಸ್ಕಾರಮಾಡುತಿದ್ದರು.

ಹೀಗೆ ಸದಾಶಿವದೀಕ್ಷಿತನ ಯೋಗ್ಯತೆಗೆ ರಾಜಪೂಜ್ಯತೆಯೂ
ಉಂಟಾಗಿತ್ತು. ಆದಾಗ್ಗೂ ತಾಯಿ ಮುದುಕಿ, ಮಗು ಇನ್ನೂ
ಎಳೇದು, ಮನೆಯಲ್ಲಿ ಬೇರೆ ಹೆಣ್ಣು ದಿಕ್ಕಾಗಲಿ ಗಂಡುದಿಕ್ಕಾಗಲಿ
ಯಾರೂ ಇರಲಿಲ್ಲ. ಈ ಕಾರಣಕ್ಕಾಗಿಯೂ, ಸೋದರಮಾವನ
-------------------------------

ಮಾಡಿದ್ದುಣ್ಣೋ ಮಹಾರಾಯ.            ೧೧

ಬಲವಂತಕ್ಕಾಗಿಯೂ, ಮಾತೃವಾಕ್ಯ ಪರಿಪಾಲನೆಗಾಗಿಯೂ ಸದಾ
ಶಿವದೀಕ್ಷಿತನು ಮನಸೋಲ್ದನು, ಪಶುಪತಿ ಸಾಂಬಾಶಾಸ್ತ್ರಿಯು
ಹೆಣ್ಣನ್ನು ಹುಡುಕಿಕೊಂಡು ಬರುತ್ತಾ ಇರುವಾಗ್ಗೆ ಸಂಜವಾಡಿ
ಯಜೋಯಿಸರ ಮಗಳು ಒಂದು ಕನ್ಯ ಇದೆಯೆಂದು ಗೊತ್ತಾ
ಯಿತು. ಈ ಹುಡುಗಿಗೆ ಎಂಟನೇವರುಷವಾಗಿತ್ತು. ಮೊದಲಿನಿಂ
ದಲೂ ವಿಶೇಷವಾಗಿ ಶ್ರೋತ್ರಿಯನಾಗಿಯೇ ಇದ್ದ ಆ ಜೋಯಿ
ಸನು ಮಗಳಿಗೆ ಎಂಟುವರುಷ ಮೀರಿ ಮದುವೇ ವಯಸ್ಸು
ಮಿಂಚಿಹೋಗುತ್ತೆಂದು ಯೋಚಿಸುತ್ತಾ, ಯೋಗ್ಯರಾಗಿದ್ದರೆ ಎರ
ಡನೇ ವರವಾದಾಗ್ಗೂ ಚಿಂತೆಯಿಲ್ಲ, ತೊಳೆದಕಾಲನ್ನು ತೊಳೆ
ಯುವುದಿಲ್ಲವೆಂಬ ಮೂಳ ಪ್ರತಿಷ್ಟೆಯನ್ನು ಬಿಟ್ಟು ಮಗಳನ್ನು
ಕೊಟ್ಟು ಮದುವೆ ಮಾಡುತ್ತೇನೆಂದು ನಿಶ್ಚಯಿಸಿಕೊಂಡಿದ್ದನು.
ಸದಾಶಿವದೀಕ್ಷಿತನ ಯೋಗ್ಯತೆಯನ್ನು ಕೇಳಿ ಆ ಜೋಯಿಸನು
ಸಂತೋಷ ಪಟ್ಟು ನಕ್ಷತ್ರಾನುಕೂಲವನು, ನೋಡಲಾಗಿ 
ಹನ್ನೊಂದು ಕೂಟ ಸರಿಬಂತು. ಆಗ ನಡೆಯುತಾ ಇದ್ದ ಮಾ
ಘಾದಿಪಂಚಕದಲ್ಲಿಯೇ ಸಂಜನಾಡಿಯಲ್ಲಿ ಮದುವೆ ಗೊತ್ತಾಯಿ
ತು, ಈ ಮದುವೇ ವಿಚಾರವನ್ನು ಪ್ರಭುಗಳಲ್ಲಿ ಸೂಚಿಸಿ
ಹಂಣು ಸಕ್ಕರೆಯನ್ನೂ ಅಗ್ರಸತಿ ಕೆಯನ್ನೂ ಒಪ್ಪಿಸಲಾಗಿ,
೨೦೦ ಸೇರು ಅಕ್ಕಿ ಅದಕ್ಕೆ ತಕ್ಕ ಸೋಬಸ್ಕರ, ಒಂದು ಪೀ
ತಾಂಬರದ ಪಟ್ಟೆಸೀರೆ, ಒಂದು ಬಣ್ಣದಸೀರೆ, ಎರಡುಜೊತೆ
ಧೋತ್ರ, ನಗದು ೧೦೦ ರೂಪಾಯು, ಇವುಗಳನ್ನು ಕೊಡಿಸು
ವಂತೆ ದೊರೆಯ ಅಪ್ಪಣೆಯಾಯಿತು. ಆದ ಮಾತ್ರಕ್ಕೆ ಏನು ?
ದೇವರು ವರ ಕೊಟ್ಟರೆ ಬರೀಬಾಯಿಮಾತಾಯಿತು. ಪೂಜಾರಿಯ
-------------------------------
೧೨                                    ಮಾಡಿದ್ದುಣ್ಣೋ ಮಹಾರಾಯ.

ವರವೇ ಕಾರಕಾರಿಯಾದ್ದು. ಆಗ ತಿಮ್ಮಣ್ಣ ಶಾಸ್ತ್ರಿಗಳೆಂ
ಬುವರು ರಾಜರಲ್ಲಿ ಆಪ್ತರಾಗಿ ನಿಂತು ಅರಿಯದವರ ಬಾಯಿ
ಯಲ್ಲಿ, ಮಂತ್ರಿ ಎಂಬ ಹೆಸರನ್ನು ಸಂಪಾದಿಸುತ್ತಾ ಇದ್ದರು. ಅರ
ಮನೇ ವೆಚ್ಚವನ್ನು ಕಡಮೆಮಾಡಿ ದೊರೆಗೆ ಊರಟೆಮಾಡುತೇ
ನೆಂದು ನಟಿಸುತ್ತಾ ಇದ್ದ ಈ ಶಾಸ್ತ್ರೀಯು ಅಪ್ಪಣೆಯಾಗಿದ್ದ ಇನಾ
ಮಿನಲ್ಲಿ ಅರ್ಧವನ್ನು ಮಾತ್ರ ಸದಾಶಿವ ದೀಕ್ಷಿತನಿಗೆ ಕೊಡಿಸಿದನು.
ಸಂಜನಾಡಿಯಲ್ಲಿ ಮದುವೆ ಬೆಳೆಯಿತು.

ಸಂಜನಾಡಿ ಜೋಯಿಸರಿಗೆ ಹೆಚ್ಚಾದ ಭೂಸ್ಥಿತಿ ಮೊದಲಾದ್ದು
ಇತ್ತು. ಕಾಲಕ್ಕೆ ೨೦೦ ಕಂಡಗ ದವಸ ಬರುತಿತ್ತು. ಸಂವತ್ಸ
ರಕ್ಕೆ ೫೦ ರೂಪಾಯಿ ರೊಕ್ಕವಾಗಿ ಬರುವ ಒಂದು ಸರ್ವಮಾ
ನ್ಯವಿತ್ತು. ಚೀಟ ವಾಟಿಗಳು ಎರಡು ಮೂರು ಸಾವಿರ ರೂಪಾ
ಯಿಬಾಳುವಮಟ್ಟಿಗೂ ಇತ್ತು. ಜಾತಕ ಭಾಗದಲ್ಲಿ ಪ್ರಶ್ನೆ ಭಾಗ
ದಲ್ಲಿ ನಾಲ್ಕು ಗಾವುದ ಸುತ್ತಲೂ ಈತನನ್ನು ಮೀರಿಸಿದವರು
ಯಾರೂ ಇರಲಿಲ್ಲ. ಕೃಷ್ಣರಾಜ ಒಡೆಯರವರವರೆಗೂ ಈತನ
ಹೆಸರು ಮುಟ್ಟಿತ್ತು. ಚಾಮರಾಜನಗರಕ್ಕೆ ಬಂದಾಗ ಸಂಜ
ವಾಡಿಯ ನೀಲಕಂರಜೋಯಿಸರನ್ನು ಕರೆಯಿಸಿಕೊಂಡು  ತಮ್ಮ
ಜಾತಕವನ್ನು ತೋರಿಸುವುದು, ಪ್ರಶ್ನೆ ಮೊದಲಾದ್ದನ್ನು ಕೇಳುವುದು
ಹೀಗೆ ರಾಜರು ಮಾಡುತ್ತಾ ಇದ್ದರು. ಜಾತಕ ಭಾಗವನ್ನು ಕೃಷ್ಣ
ರಾಜ ಒಡೆಯರು ಸ್ವಯಂ ಚೆನ್ನಾಗಿ ತಿಳಿದಿದ್ದರು. ಪುಡಿಜೋಯಿ
ಸರುಗಳೆಲ್ಲರೂ ಅವರೆದುರಿಗೆ ಹೋಗಲು ಹೆದರುತಿದ್ದರು. ಪದೇ
ಪದೇ ರಾಜರು ಕರೆಯಿಸಿ ಜೊತಿಷ ವಿಚಾರವನ್ನು ಚರ್ಚಿಸುತಾ
ಇರಬೇಕಾದರೆ, ನೀಲಕಂಠಜೋಯಿಸನ ಯೋಗ್ಯತೆಯು ಸಾಧಾರಣ
ಯೋಗ್ಯತೆ ಎನ್ನಿಸುವುದಿಲ್ಲ.
--------------------------------

ಮಾಡಿದ್ದುಣ್ಣೋ ಮಹಾರಾಯ.                                   ೧೩

ಈ ಜೋಯಿಸನಿಗೆ ತಿನ್ನುಮ್ಮನೆಂಬ ಒಬ್ಬ ಹೆಂಣುಮಗಳು
ಇದ್ದಳು. ಇವಳನ್ನೇ ಸದಾಶಿವದೀಕ್ಷಿತನಿಗೆ ಕೊಟ್ಟು, ಲಗ್ನ ಬೆಳೆ
ದಿತ್ತು. ಕೃಷ್ಣನೆಂಬ ಒಬ್ಬ ಗಂಡು ಮಗನಿದ್ದನು. ಇವನು ವಿಶೇಷ
ವಾಗಿ ಬುದ್ದಿಶಾಲಿಯಲ್ಲ. ಐಲಾಟವನ್ನು ಆಡಿಕೊಳ್ಳುತಾ ಅಲೆ
ಯುತ್ತಾ ಇದ್ದನು. ಸ್ವಲ್ಪ ದಿವಸದಲ್ಲಿ ನೀಲಕಂಠಜೋಯಸನಿಗೆ
ದೇಹಕ್ಕೆ ಉಪಾಧೆ ಯುಂಟಾಗಿ ಅವಸಾನಕಾಲ ಸಂಭವಿಸಿತು. ಆಗ
ಅಳಿಯನಾದ ಸದಾಶಿವದೀಕ್ಷಿತನನ್ನು ಖಂಡಿತವಾಗಿ ಕರೆದು ತರು
ವಂತೆ ಒಬ್ಬ ಆಳನ್ನು ಮೈಸೂರಿಗೆ ಕಳುಹಿಸಿದರು. ಆಳು ತಂದು
ಕೊಟ್ಟ ಕಾಗದದಲ್ಲಿ
ಚಿರಂಜೀವಿ ನನ್ನು ಸದಾಶಿವದೀಕ್ಷಿತರಿಗೆ ಅನೇಕಾಶೀರ್ವಾದ.
ಈ ಬಹುಳ ೧೧ ಶುಕ್ರವಾರದವರೆಗೆ ಇಲ್ಲಿ ಸರ್ವರೂ ಕ್ಷೇಮ ನಿಮ್ಮ
ಪ್ರೇಮಕ್ಕೆ ಬರಿಸಬೇಕು. ಅದಾಗಿ,
ನನ್ನ ಶರೀರದಲ್ಲಿ ಈಗ ತಿಂಗಳಿ೦ದ ಕೇವಲವಾಗಿ ಅಲಸಿಕೆ
ಯಾಗಿದೆ. ಜ್ವರಬಂದು ಬಹಳಮಟ್ಟಿಗೆ ನಿತ್ರಾಣಮಾಡಿತು. ಶೋ
ಭೆಕಾಣಿಸಿದೆ. ನನ್ನ ಪ್ರೀತಿಯನ್ನು ನೋಡಲಾಗಿ ದೇಹ ಉಳಿಯು
ತೆಂಬ ಭರವಸವು ನನಗೆ ತೋರುವುದಿಲ್ಲ. ಇಲ್ಲಿ ಮನೆಯಲ್ಲಿ
ಯಾರೂ ದಿಕ್ಕಿಲ್ಲವೆಂಬ ಸಂಗತಿ ತಿಳಿದೇ ಇದೆ. ನಮ್ಮ ಅಕ್ಕ
ಮುದುಕಿ, ನನಗೂ ನಿನಗೂಸಂಬಂಧ ಬೆಳೆದ ವರುಷದಿಂದ
ಚಿ|| ಕೃಷ್ಣನ ಸ್ಥಿತಿ ಗೊತ್ತಾಗಿಯೇ ಇದೆ. ಈ ಕಾಗದ ಕಂಡಕೂ
ಡಲೆ ಯಾವ ಕೆಲಸವಿದ್ದರೂ ಬಿಟ್ಟು ಜಾಗ್ರತೆಯಾಗಿ ಬಂದು
ಮಾತನಾಡಿಕೊಂಡು ಹೋಗಬೇಕು. ಪಶುಪತಿಸಾ೦ಬಶಾಸ್ತ್ರಿಗಳ
ಅಪ್ಪಣೆ ಪಡೆದು ಅವರಿಗೆ ನನ್ನ ನಮಸ್ಕಾರವನ್ನು ತಿಳಿಸಿ ನೀವು 
-------------------------------

೧೪                        ಮಾಡಿದ್ದುಣ್ಣೋ ಮಹಾರಾಯ. 

ಹೊರಟುಬರಬೇಕು. ಕಾಗದ ಗೊತ್ತಾಗಿ ತಲಪಲೆಂದು ಆಳಿನಮೂ
ಲಕ ಕಳುಹಿಸಿದೆ. ಇತ್ಯಾಶಿಷಃ, ನೀಲಕಂರಜೋಯಿಸ, 

ಹೀಗೆ ಒಕ್ಕಣಿಸಿತ್ತು. ಅದನ್ನು ನೋಡಿಕೊಂಡು ಸದಾ
ಶಿವದೀಕ್ಷಿತನು ಎಂಟು ದಿನಗಳ ಮಟ್ಟಿಗೆ ಅರಮನೆಯಲ್ಲಿ ಅಪ್ಪ
ಣೇಪಡೆದು ಆ ದಿವಸವೆ ಪ್ರಯಾಣಮಾಡಿ ಮಾರನೇ ದಿವಸ
ಸಾಯಂಕಾಲವೇ ಸಂಜನಾಡಿಯನ್ನು ತಲಪಿದನು. ಆಗ ಜೋಯಿ
ಸನು ಎದ್ದು ಕೂತುಕೊಂಡು ಕುಶಲಪ್ರಶ್ನೆಗಳನ್ನು ಮಾಡುತ್ತಾ,
-ನಿಮಗೆ ಊಟವಾಗಲಿ, ಆಮೇಲೆ ಸಾವಕಾಶವಾಗಿ ಮಾತ
ನಾಡತಕ್ಕದ್ದು ವಿಶೇಷವಾಗಿದೆ, ಎಂದು ಜೋಯಿಸರು ಹೇಳಿದ 
ಪ್ರಕಾರ ಆ ರಾತ್ರೆ ಸದಾಶಿವದೀಕ್ಷಿತನು ವಿಶ್ರಮಿಸಿಕೊಂಡನು.

ರಾತ್ರೆ ಮೂರು ಗಂಟೆ ಸಮಯದಲ್ಲಿ ಜೋಸನು ಆಳಿ
ಯನನ್ನು ಕೂಗಿ ಎಬ್ಬಿಸಿ ಮಾಡಿದ ಸಂಭಾಷಣಾಕ್ರಮ ಹೇಗೆಂದರೆ: 
ಜೋಯಿಸ-ಆಯಾಸಪಟ್ಟು ಬಂದ ನಿನಗೆ ನನ್ನಿಂದ ನಿದ್ರಾ
ಭ೦ಗವೂ ಆಗಬೇಕಾಯಿತು. ನನಗೆ ಉಪದ್ರವ ಹೆಚ್ಚುತಾ
ಇದೆ. ನೀವು ಬರಲೆಂದು ನಾನು ಪ್ರಾಣವನ್ನು ಎಡಗೈ
ಯಲ್ಲಿ ಹಿಡಿದಿದ್ದೆ, ನೀವು ಬಂದಿರಿ, ನನಗೆ ಧೈರ್ಯವಾ
ಯಿತು. ಇಲ್ಲಿ ನನ್ನ ಮನೆಗೆ ದಿಕ್ಕು ಯಾರೂ ಇಲ್ಲ.
ಕೃಷ್ಣನ ಐಲುತನ ಗೊತ್ತಾಗಿಯೇ ಇದೆ. ಕೊನೆಗಾಲ
ವಾದ್ದರಿಂದ ಎಲ್ಲವನ್ನೂ ನಿಮ್ಮೊಡನೆ ಹೇಳಿಬಿಡುತ್ತೇನೆ.
ನನ್ನ ಆಸ್ತಿಯು ಬಲವಾಗಿಯೇ ಇದೆ. ಇದೆಲ್ಲವನ್ನೂ
ಉಳಿಸಿಕೊಂಡು ಮನೆಯನ್ನು ಮುಂದಕ್ಕೆ ತರುವ ಯೋ ಗ್ಯತೆ
ಕೃಷ್ಣನಿಗೆ ಇಲ್ಲ. ಈ ಬೀಗದಕೈಯನ್ನು ಹಿಡಿಯಿರಿ, 
--------------------------------

ಮಾಡಿದ್ದುಣ್ಣೋ ಮಹಾರಾಯ.                               ೧೫

ನನ್ನ ವಿಶಿಷ್ಟ ಆಸ್ತಿಯನ್ನೂ ನಿಮ್ಮ ವಶಕ್ಕೆ ಕೊಟ್ಟಿದೇ
ನೆ. ನನ್ನ ಆಸ್ತಿಯಲ್ಲಿ ನೀವು ಬೇಕಾದ ಆದಾಯವೆಚ್ಚ
ಗಳನ್ನು ನಡಿಸಬಹುದು. ಅದಕ್ಕೆ ನೀವು ಯಾರಿಗೂ ಲೆಕ್ಕ
ಹೇಳಬೇಕಾದ್ದಿಲ್ಲ. ಕೃಷ್ಯನಿಗೆ ಮದುವೆ ಮಾಡಬೇಕೆಂದು
ಯೋಚಿಸಿದೆ. ಯಾರೂ ಹೆಣ್ಣು ಕೊಡಲಿಲ್ಲ. ಮುಂದಕ
ಅವನಿಗೆ ಮದುವೆಯಾಗುವ ಯೋಗ ತೋರಲಿಲ್ಲ. ಅವನ
ಜಾತಕವೂ ಅದಕ್ಕೆ ಸರಿಯಾಗಿಯೇ ಇದೆ. ನನ್ನ ತಲೆಗೇ
ನನ್ನ ಮನೆಯು ಹೋಯಿತು ಎನ್ನಿಸದೆ, ನೀವು ಇಲ್ಲಿಯ
ನಿಂತು ನಿಮ್ಮ ಹೆಂಡತಿ ತಿಮ್ಮುವನ್ನೂ ಏನೂ ಅರಿಯದ
ಕೃಷ್ಣನನ್ನೂ ಕಾಪಾಡಿಕೊಂಡು ಬರಬೇಕು. ಹೆಚ್ಚಾಗಿ
ಮಾತನಾಡಲು ನನಗೆ ತ್ರಾಣವಿಲ್ಲ. ಉಸಿರು ಹತ್ತಿರಬರು
ತಿದೆ. ಈ ಊರು ಸಾಧಾರಣವಾದ್ದಲ್ಲ. ಪಟೇನಾದರೋ
ಶುದ್ಧ ಹಗಲುಗಳ್ಳ, ಶಾನುಭೋಗನಾದರೂ ಶುದ್ಧ ಫ
ಟಿಂಗ, ಪರಸ್ವತ್ತನ್ನು ಅಪಹರಿಸುವುದರಲ್ಲಿ ನಿಪುಣರೆನಿಸಿ 
ಕೊಂಡಿರುವ ತಾಲ್ಲೂಕು ಅಧಿಕಾರಿಗಳೇ ಹೇಳಬೇಕಾದ್ದೇ
ಇಲ್ಲ. ಒಂದು ತಂಟೆಗೂ ಹೋಗದೆ ತಕ್ಕಮಟ್ಟಿಗೆ ಬಾಳು
ತಾ ಮಹಾಸ್ವಾಮಿಯವರ ದಯಕ್ಕೆ ನಾನು ಪಾತ್ರನಾಗಿ
ರುವುದರಲ್ಲಿ ಇವರೆಲ್ಲರಿಗೂ ಕಣ್ಣು ಕೆಂಪಾಗಿದೆ. ನಾನು
ಸತ್ತಾನೆ ಎಂದು ಕಾದಿದಾರೆ. ಈಶ್ವರನ ಚಿತ್ತದಲ್ಲಿ ಇದ್ದ
ಹಾಗಾಗಲಿ, ಆದರೆ ಪುರುಷಪ್ರಯತ್ನವನ್ನು ಮಾಡಬೇಕಾ
---------------------------------
೧೬ ಮಾಡಿದ್ದುಣೋ ಮಹರಾಯ.

ದ್ದು ಅವಶ್ಯಕವಾದ್ದರಿಂದ ಎಲ್ಲವನ್ನೂ ನಿಮ್ಮಲ್ಲಿ ತಿಳಿಸಿ
ದೇನೆ, ಇನ್ನು ಹೆಚ್ಚಾಗಿ ಮಾತನಾಡಲಾರೆ.
ಸದಾಶಿವದೀಕ್ಷಿತ-ಮಾವೈಯ್ಯ, ತಾವು ಅಪ್ಪಣೆಕೊಡಿಸಿದ ಸಂ
ಗತಿ ಎಲ್ಲವನ್ನೂ ಕೇಳಿದೆ. ಅಷ್ಟು ದೂರ ಯೋಚನೇಮಾ
ಡಬೇಕಾದ ಸಂದರ್ಭವೇನೂ ಈಗ ಕಾಣಿಸಲಿಲ್ಲ. ಈಗ
ಸುಮಾರು ಸರಿಹೊತ್ತಾಗಿದೆ. ನಿದ್ರೆ ಮಾಡಿದರೆ ಆರೋಗ್ಯ. 
ಬೆಳಗಾದಮೇಲೆ ಯೋಚಿಸೋಣ,
ಜೋಯಿ -ನಿದ್ರೆಯ ಇಲ್ಲ ಗಿದ್ರೆಯ ಇಲ್ಲ. ಸುಸ್ತು ಹೆಚ್ಚು
ತಾ ಇದೆ. ಮಾತನಾಡಲಾರೆ.
ಹೀಗೆನ್ನುತಾ ಜೋಯಿಸನು ಹಾಸಿಗೆಯ ಮೇಲೆ ಮಲಗಿ
ಕೊಂಡನು. ಪ್ರಜ್ಞೆತಪ್ಪಿ ಹೋದ ಸೂಚನೆ ಕಂಡಿತು. ದೀಪಾತಂ
ದುನೋಡುವಾಗ್ಗೆ ಕಣ್ಣಗುಡ್ಡೆ ಮೇಲಕ್ಕೆ ಸಿಕ್ಕಿಹೋಗಿತ್ತು,
ಗಾಬರಿಯಾಯಿತು. ಹುಡುಗರು ಮೊದಲಾಗಿ ಮನೇ ಜನರೆಲ್ಲಾ
ಎದ್ದರು. ಕಿವಿಯಲ್ಲಿ ಎಷ್ಟು ಊದಿದರೂ ಪ್ರಜ್ಞೆ ಬರಲಿಲ್ಲ.
ಗೊರಗೊರ್ ಎಂದು ಶ್ಲಾಸ ಎಳೆಯುವುದಕ್ಕೆ ಆರಂಭವಾಯಿತು.
ಗಾಬರಿ ಹೆಚ್ಚಾಯಿತು, ಬೀದೀಬಾಗಿ ಸಖಾಸದ ಕಿರುನುನೆಗೆ
ಹಾಸಿಗೆ ಹಿತವಾಗಿ ಎತ್ತಿಕೊಂಡು ಹೋದರು. ಪಂಚಾಂಗ ನೋ
ಡಲಾಗಿ ಶ್ರೀಪಾದಿ ನಕ್ಷತ್ರವಾಗಿತ್ತು. ಕಿಟ್ಟನು-ಅಪ್ಪ- ಗೊರ
ಕೇ ಹೊಡೆಯುತ್ತಾನೆ, ನಿದ್ರೆ ಬಂದಿದೆ. ಎಲ್ಲರೂ ಸುಮ್ಮನೇ ಮಲ
ಗಿಕೊಳ್ಳೋಣ ಭಾವ, ತಿಮ್ಮು, ಎದುರುಮನೇ ಪಾಪಯ್ಯನವರ
ಪಾತಕ್ಕೆ ಪುಳ್ಳಂಗಾಯಿ ಉಂಡೇ ತಂದುಕೊಟ್ಟಿದ್ದಳಲ್ಲಾ, ಅದ
-------------------------------
ಮಾಡಿದ್ದುಣ್ಣೋ ಮಹಾರಾಯ, ೧೭

ನ್ನು ಇರಿಸಿದ್ದಿಯೋ ಬಾಯಿಗೆ ಹಾಕಿಕೊಂಡೆಯೋ ? ನನಗೆ
ಒಂದು ಚೂರೂ ಸಿಕ್ಕುವುದಿಲ್ಲ. ಎಲ್ಲಾ ನಿನ್ನ ಹೊಟ್ಟೆಯಲ್ಲೇ
ಮಡಿಯುತ್ತೆ, ಎಂದನು. ಇವನ ಬೆಪ್ಪುತನವನ್ನು ನೋಡಿ,
ಪೇಚಾಡುತಾ, ಸದಾಶಿನದೀಕ್ಷಿತನು - ಕಿಟ್ಟ, ಉದ್ಧರಣೆಯಿಂದ
ಎರಡುಸಾರಿ ದೀಕ್ಷಿತರ ಬಾಯಿಗೆ ನೀರನ್ನು ಹಾಕು ಎಂದನು.
ಕೂಡಲೆ ಜೋಯಿಸರಿಗೆ ನಾಣಹೋಯಿತು. 

ಸದಾಶಿವದೀಕ್ಷಿತನು ಮುಂದಿನ ಕಾರ್ಯಗಳೆಲ್ಲವನ್ನೂ ಸಾಂಗ
ವಾಗಿ ನಡಿಸಿದನು, ತರುವಾಯ ಅಲ್ಲಿನ ಆದಾಯವೆಚ್ಚಗಳನ್ನು
ನೋಡಿಕೊಂಡು, ಕೂಡಲೆ ನೀಲಕಂರಜೋಯಿಸರ ಅಕ್ಯನಾದ
ವೆಂಕಮ್ಮ ನನ್ನು ಕುರಿತು,
ಸದಾಶಿವ-ದೊಡ್ಡಮ್ಮ, ಊರಲ್ಲಿ ಎಲ್ಲವನ್ನೂ ಬಿಟ್ಟು ಏಕಾಏಕಿ 
ನಾನು ಬಂದುಬಿಟ್ಟೆ, ಮೈಸೂರಿಗೆ ನಾನು ಹೋಗಿ
ನಮ್ಮ ಮಾವಂದಿರಲ್ಲಿಯ ಯೋಚನೇಮಾಡಿ ಎಂದು ದಿನ
ಸದೊಳಗಾಗಿ ಬರುತ್ತೇನೆ.
ವೆಂಕನ್ನು - ಇಲ್ಲಿ ದಿಕ್ಕಿಲ್ಲ, ಈ ಹಾಳ ಊರಲ್ಲಿ ತುಂಟರು
ಹೆಚ್ಚು, ಯಾವ ಗಳಿಗೆಗೆ ಏನೋ ?
ಸದಾಶಿವ-ನೀವು ಯೋಚಿಸಬೇಡಿ, ನಾನು ತಕ್ಕ ಏರ್ಪಾಡು
ಮಾಡುತ್ತೇನೆ, ಕೂಡಲೆ ಬಂದೂಬರುತೇನೆ.

ಹೀಗೆಂದು ಸದಾಶಿವ ದೀಕ್ಷಿತನು ಮೈಸೂರಿಗೆ ಬಂದು
ಸೋದರಮಾವನಾದ ಪಶುಪತಿ ಸಾಂಬಶಾಸ್ತಿಗೆ ಸಂಜನಾಡಿಯ
ಸಂದರ್ಭವನ್ನೆಲ್ಲಾ ತಿಳಿಸಿದನು. ಆ ದಿವಸ ಸಾಯಂಕಾಲ
-------------------------------
೧೮                                  ಮಾಡಿದ್ದುಣ್ಣೋ ಮಹರಾಯ.

ಸದಾಶಿವದೀಕ್ಷಿತನೂ ಪಶುಪತಿಶಾಸ್ತ್ರಿಯ ಕೂಡಿ ಅರಮನೆಗೆ
ಹೋಗಿ ಅಂಬಾವಿಲಾಸದಲ್ಲಿದ್ದ ಮಹಾಸ್ವಾಮಿಗಳ ಭೇಟಿಯನ್ನು
ಮಾಡಿಕೊಂಡರು.
ದೊರೆ-ಏನು, ಸಿಡಿಲಮರಿ, ಯಾವಾಗಬಂದೆ ?
ಸದಾಶಿವ ಈದಿನ ಪ್ರಾತಃಕಾಲಕ್ಕೆ ಬಂದೆ. ನಮ್ಮ ಮಾವಂದಿ
ರಾದ ಜೋಯಿಸರು ದೈವಾಧೀನರಾದರು. ನಾನು ಹೋ
ದಾಗ ಬಹಳ ಗಟ್ಟಿಯಾಗಿಯೇ ಇದ್ದರು. ಅವರ ರೋಗದ
ಸ್ಥಿತಿ ಇಂಧಾದ್ದೆಂದು ನನಗೆ ಗೊತ್ತಾಗಲೇ ಇಲ್ಲ. ಸ್ವಲ್ಪ
ಮಟ್ಟಿಗೆ ನಿತ್ರಾಣವಿತ್ತು. ನಾನು ಹೋದ ದಿವಸ ರಾತ್ರೆ
ಸರಿಹೊತ್ತಿನಲ್ಲಿ ನನ್ನನ್ನು ಕೂಗಿ ತಮ್ಮ ಆದಾಯವೆಚ್ಚ
ವೆಲ್ಲವನ್ನೂ ಹೇಳಿ ನನ್ನ ಮನೆಯನ್ನು ನೀನು ಉಳಿ
ಸಬೇಕು, ಸಂಜನಾಡಿಯಲ್ಲಿಯೇ ನೀನು ಇದ್ದು ಗ್ರಹಕೃ
ತ್ಯವನ್ನು ನೋಡಿಕೊ, ಇನ್ನು ಯಾರೂ ನನಗೆ ದಿಕ್ಕಿ
ಲ್ಲ,” ಎಂದು ಹೇಳಿ ನನ್ನ ಕೈಯನ್ನು ಅವರು ಹಿಡಿ
ದುಕೊಂಡು ಇದ್ದ ಹಾಗೆಯೇ ಶ್ವಾಸತುಯ್ಯುವುದಕ್ಕೆ ಆರಂ 
ಭವಾಯಿತು. ಒಂದು ಗಳಿಗೆಯಲ್ಲಿ ಪ್ರಾಣ ಹೋಯಿತು.
ದೊರೆ-ಅಯ್ಯೋ, ನೀಲಕಂಠಜೋಯಿಸರು ದೈವಾಧೀನರಾದರೆ?
ಅನೇಕ ಸಂಗತಿಗಳನ್ನೂ ಜ್ಯೋತಿಷದಲ್ಲಿ ಕೆಲವು ರಹಸ್ಯ
ಗಳನ್ನೂ ನಾನು ಅವರಿಂದ ತಿಳಿದುಕೊಂಡೆ. ಒಳ್ಳೆಯೋ
ಗ್ಯರು. ಅರಮನೇ ವಿದ್ಯಾಂಸರ ಪಟ್ಟಿಗೆ ಅವರ ಹೆಸ
ರನ್ನು ಸೇರಿಸಬೇಕೆಂದು ಮನಸ್ಸಿನಲ್ಲಿತ್ತು. ಚಾಮರಾಜನ
--------------------------------
ಮಾಡಿದ್ದುಣ್ಣೋ ಮಹಾರಾಯ,                            ೧೯

ಗರಕ್ಕೆ ಹೋದಾಗ ಜ್ಞಾಪಕ ಬರುವುದು, ಮೈಸೂರಿಗೆ ನಾ
ನು ಬಂದಾಗ ಮರೆತುಹೋಗುವದು, ಹೀಗೆಯೇ ಆಗು
ತಾಬಂತು, ನನ್ನಿಂದ ಅವರಿಗೆ ಯಾವ ಉಪಕಾರವೂ ಇ
ಲ್ಲವಾಯಿತು. ನನಗೂ ಅವರಿಗೂ ಇದ್ದ ಮೈತ್ರಿಯನ್ನು
ನೋಡಲಾಗಿ ನಮ್ಮಿಬ್ಬರಿಗೂ ಖಣಖಣೀಭಾವವಿಲ್ಲವೆಂದು
ತಿಳಿಯಬೇಕಾಗಿದೆ. ಇನ್ನೇನೂ ತೋರುವುದಿಲ್ಲ. ಅವರ
ಗೃಹಕೃತ್ಯದ ಪ್ರತಿಕೂಲಿಗಳನ್ನು ಬಲ್ಲೆ. ಮಗ ಬೆಪ್ಪ,
ಹೇಪ, ಇನ್ನು ಯಾರೂ ದಕ್ಷರಾದವರು ಇಲ್ಲ, ಇನ್ನು
ಅವರ ಮನೆಯ ಹಾಳಾದಹಾಗಾಯಿತು. ಶಿಡಿಲಮರಿ,
ನೀನು ಅಲ್ಲಿ ಹೋಗಿ ನಿಂತು, ಮನೆ ನಡೆಯುವಂತೆ ಮಾ
ಡೈಯ್ಯ, ಅಗತ್ಯವಾದಾಗ ಬಾ, ಬೇಕಾದಾಗ ನಿನ್ನ ಸಂ
ಬಳವನ್ನು ತೆಗೆದುಕೊ, ನನಗೂ ಜೋಯಿಸರಿಗೂ ಇದ್ದ
ಸ್ನೇಹದಮೇಲೆ ದೃಷ್ಟಿಯಿಟ್ಟು ಈ ಮಾತನ್ನು ನಡಿಸು.
ವಿದ್ವಾಂಸರು ಹಳ್ಳಿಗಾಡನ್ನು ಸೇರುವುದಕ್ಕೆ ಅವರಿಗೆ ಮ
ನಸ್ಸಿರುವುದಿಲ್ಲ. ಆದರೂ ನಿನ್ನನ್ನು ನಾನು ಬಲ್ಲೆ, ನಿನ್ನ 
ಪಾಂಡಿತ್ಯಕ್ಕೇನೂ ಲೋಪವುಂಟಾಗುವುದಿಲ್ಲ.
ಸದಾಶಿವ-ನಾನು ಅರಿಕೆ ಮಾಡಿಕೊಳ್ಳಬೇಕಾದ ಸಂಗತಿಯೆಲ್ಲಾ
ಸನ್ನಿಧಾನದಲ್ಲಿಯೇ ಅಸ ಣೆಯಾದಮೇಲೆ ಅದರಂತೆ ಶಿರಸಃ
ವಹಿಸಿ ನಡೆಯುತ್ತೇನೆ.
ಈ ಪ್ರಕಾರ ಆಪ್ಪಣೆಯನ್ನು ಹೊಂದಿ ಸದಾಶಿವದೀಕ್ಷಿತನೂ
ಪಶುಪತಿ ಸಾಂಬಶಾಸ್ತ್ರೀಯ ಮನೆಗೆ ಬಂದರು. ಆಗ ದೀಕ್ಷಿತನು
--------------------------------
೨೦ ಮಾಡಿದ್ದುಣ್ಣೋ ಮಹಾರಾಯ.

ತಾಯಿಯನ್ನು ಕುರಿತು-ಅಮ್ಮಾ, ಮಾವನವರು ತೀರಿಹೋಗಿ
ಅಲ್ಲಿ ಯಾರೂ ದಿಕ್ಕಿಲ್ಲದೆ ಭಾರಿ ಸ್ವತ್ತು ಕಾಡುಪಾಲಾಗುವ 
ಸಂದರ್ಭವಂತೂ ಗೊತ್ತೇ ಇದೆ. ಮುದುಕಿಯಾದ ನಿನ್ನನ್ನು
ಇಲ್ಲಿ ಬಿಟ್ಟು ನಾನು ಅಲ್ಲಿರುವುದಕ್ಕೆ ಆಗುವುದಿಲ್ಲ. ಮಗು
ಸಣ್ಣದು, ಅದರ ಪೋಷಣೆಯೂ ಆಗಬೇಕು. ಇನ್ನು ಮೇಲೆ ನಿನ್ನ
ಕೈಯಿಂದ ಏನೂ ಸಾಗುವುದಿಲ್ಲ. ಸನ್ನಿಧಾನದಲ್ಲಿಯೂ
ನಾವು ಸಂಜನಾಡಿಯಲ್ಲಿಯೇ ಇರಬಹುದು, ಸಂಬಕ್ಕೇನೂ ಲೋ
ಪವಿಲ್ಲವೆಂದು ಎಲ್ಲಾ ಅಂಶವನ್ನೂ ಪರಲೋಚಿಸಿ ಅಪ್ಪಣೇ
ಕೊಟ್ಟರು.. ನೀನು ಹೇಗೆ ಹೇಳಿದರೆ ಹಾಗೆ. ಮಾವನಮನೆಗೆ
ಹೋಗಿ ಸೇರಿಕೊಂಡನೆಂಬ ಒಂದು ಮಾತು ಮಾತ್ರ ಉಂಟು,
ಎಂದನು. ಆಗ
ಪಶುಪತಿ- ಅಕ್ಕ, ಯಾವ ಸಂದರ್ಭವನ್ನು ನೋಡಿದಾಗ್ಗೂ
ಸಂಜನಾಡಿಗೆ ಹೋಗುವುದೇ ಮೇಲೆಂದು ನನಗೆ ತೋರು
ತ್ತಮ್ಮ.  ನಿನ್ನ ಮನಸ್ಸಿಗೆ ಇನ್ನೇನೂ ತಿಳಿದುಕೊಳ್ಳಬೇಡ,
ನಿನ್ನ ಕೈಯಲ್ಲಿ ಇನ್ನು ಮೇಲೆ ಕೆಂಪಸಾಗುವುದಿಲ್ಲ. ತಾಯಿ
ಸತ್ತ ಮಗುವನ್ನು ಪೋಷಣೆಮಾಡಿಕೊಂಡು ಮನೆ ಕೆಲ
ಸವನ್ನೂ ನಿರ್ವಹಿಸುವುದು ಒರೀ ಬಾಯಿಮಾತಲ್ಲ.
ಪಾರ್ವತಮ್ಮ-ನೀವೆಲ್ಲಾ ಹೇಗೆ ಹೇಳಿದರೆ ಹಾಗಾಗಲಿ, ನನ
ಗೇನು ತಿಳಿಯುತ್ತೆ? ಸಾಯುವ ಮುದುಕಿ.
ಈಪ್ರಕಾರ ಆಲೋಚನೆ ಮಾಡಿಕೊಂಡು, ಸದಾಶಿವದೀಕ್ಷಿ
ತನು ತನ್ನ ಮನೆಯನ್ನೂ ಭೂಮಿಕಾಣಿಯನ್ನೂ ನೋಡಿಕೊ
------------------------------
ಮಾಡಿದ್ದುಣ್ಣೋ ಮಹಾರಾಯ. ೨೧

ಳ್ಳಲು ಸೋದರಮಾವನ ವಶಕ್ಕೆ ಬಿಟ್ಟು ಎಲ್ಲರನ್ನೂ ಕರೆದು
ಕೊ೦ಡು ಸಂಜವಡಿಗೆ ಪ್ರಯಾಣ ಮಾಡಿದನು.
               ---  
೩ ನೇ ಆದ್ಯಾಯ.

ಆ ಕಾಲದಲ್ಲಿ ಚಾಮರಾಜನಗರದ ಚಾಮರಾರೇಶ್ವರ ದೇವ
ಸ್ಥಾನವು ಕಟ್ಟುತಾ ಇತ್ತು. ಹೀಗೆಯೇ ನಂಜನಗೂಡಿನಲ್ಲಿಯೂ
ನಂಜುಂಡೇಶ್ವರನ ಗುಡಿಯ ಹೊರಪ್ರಾಕಾರ, ಒಳ ಕೈಸಾಲೆ ಹೊ
ರಕ್ಕೆಸಾಲೆ, ಶಿವಕೂಟದ ಭೋಜನಶಾಲೆ, ಹೊರಗಡೆ ಮಹಾ
ದ್ವಾರದ ಮೇಲೆ ಏಳು ಕಣ್ಣಿನ ಗೋಪುರ, ಈ ಕಟ್ಟಡಗಳ ಕೆಲ
ಸವೂ ಚೆನ್ನಾಗಿ ಆರ೦ಭವಾಗಿತ್ತು. ಇದೇ ಪ್ರಕಾರ ಚಾ
ಮುಂಡೀ ಬೆಟ್ಟದಮೇಲೆ ಚಾಮುಂಡೇಶ್ವರೀ ಅಮ್ಮನವರ ಗುಡಿ
ಯ ಹೊರಪ್ರಾಕಾರ, ಮಹಾದ್ವಾರದ ದೊಡ್ಡ ಗೋಪುರ, ಈ
ಕಟ್ಟಡವೂ ಜರುಗುತಾ ಇತ್ತು ಮೇಲುಕೋಟೆಯ ಚೆಲುವರಾ
ಯಸ್ವಾಮೀ ದೇವಸ್ಥಾನದಲ್ಲಿ ಭಾರಿಯಾದ ಕೆಲವು ಕೆಲಸ
ಗಳು ನಡೆಯುತಾ ಇದ೦ತೆ ತಿಳಿಯಬರುತ್ತೆ. ಇನ್ನೂ ಅನೇಕ
ಕಡೆಗಳಲ್ಲಿ ಭಾರಿಯಾದ ಕಟ್ಟಡಗಳು ಕಟ್ಟಲ್ಪಡುತಾ ಇದ್ದವು.
ಈ ಕೆಲಸಗಳನ್ನೆಲ್ಲಾ ಕೃಷ್ಣರಾಜಪ್ರಭುವು ಸ್ವಂತವಾಗಿ ಮಾಡಿ
ಸುತಾ ಆ ಕೆಲಸ ಜರುಗುತಾ ಬಂದಹಾಗೆಲಾ ಆಗಗ್ಗೆ ಸ್ವತಃ
ಹೋಗಿ ನೋಡಿಕೊಳ್ಳುತಾ ಇದ್ದರು, ಈಶ್ವರ ಪ್ರೀತಿಯಾಗಿ ಧ
ರ್ಮದ ಕೆಲಸಗಳನ್ನು ಮಾಡಿಸುವ ವಿಷಯದಲ್ಲಿ ದೊರೆಗೆ
ಹೆಚ್ಚಿನ ಉತ್ಸಾಹವಿತ್ತು. ದೇಹಶ್ರಮವನ್ನು ನೋಡುತಾ ಇರಲಿಲ್ಲ.
-------------------------------
೨೨        ಮಾಡಿದ್ದುಣ್ಣೋ ಮಹಾರಾಯ.

ಹಣವನ್ನು ಮುಖನೋಡದೆ ವೆಚ್ಚ ಮಾಡುತ್ತಾ ಇದ್ದರು. ಆಗ
ಅವರು ನಡೆಸಿದ್ದು ಅನೇಕ ಲಕ್ಷರೂವಾಯಿನ ಕಾಮಗಾರಿ
ಯಾಗಿತ್ತು. ಚಾಮರಾಜೇಶ್ವರ, ನಂಜುಂಡೇಶ್ವರ, ಮೈಸೂರ
ಪ್ರಸನ್ನ ಕೃಷ್ಣಸ್ವಾಮಿ, ಮೇಲುಕೋಟೇ ಚಲುವರಾಯಸ್ವಾಮಿ 
ಈ  ದೇವಾಲಯಗಳಿಗೆ ಸ್ವಾಮಿಗಳಿಗೂ ಅಮ್ಮನವರುಗಳಿಗೂ
ಅನೇಕ ಲಕ್ಷರೂಪಾಯಿ ಬಾಳುವ ರತ್ನಪಡಿ ಒಡವೆಗಳು ಚಿನ್ನ
ಬೆಳ್ಳೀ ಸಾಮಾನುಗಳು ಪಾತ್ರೆಗಳು ಇವುಗಳನ್ನು ಹೆಚ್ಚಾಗಿ
ಕೊಟ್ಟಿದ್ದಾರೆ. ಇದೇ ಮೊದಲಾದ ಧರ್ಮ ಕೆಲಸಗಳನೇಕವಾಗಿ
ಮಾಡಿಸಿದರೆ, ಇಂಧಾ ಕೆಲಸಗಳನ್ನು ಮಾಡಿಸುವ ಭಾಗದಲ್ಲಿ
ಆ ಪುಣ್ಯಾತ್ಮರ ಕೈಗೆ ತಡೆಯೇ ಇರಲಿಲ್ಲ. 

ಈ ಪ್ರಕಾರದಲ್ಲಿ ಅನೇಕ ಅನ್ನ ಸತ್ರಗಳನ್ನು ಸ್ಥಾಪಿಸಿ
ದರು. ಅನೇಕ ಆಗ್ರಹಾರಗಳನ್ನು ಕಟ್ಟಸಿ ಲೆಕ್ಕವಿಲ್ಲದಷ್ಟು ಕು
ಟುಂಬಗಳಗೆ ವೃತ್ತಿ ಸ್ವಾಸ್ಥ್ಯಗಳನ್ನು ಧಾರೆ ಎರೆದು ಜನರನ್ನು
ಬದುಕಿಸಿದರು. ಲೆಕ್ಕ ಸಿಕ್ಕದಂತೆ ಈ ಪುಣ್ಯಾತ್ಮನು ಮಾಡಿದ
ಧರ್ಮಕಾರ್ಯಗಳಿಗೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಿದೆ.
ಈ ಸತ್ರ ದೇವಗಾನಗಳು ಮತ್ತು ಅನೇಕ ಕಟ್ಟಡಗಳು ಇವು
ಗಳ ಕೆಲಸವನ್ನೆಲಾ ಗುತ್ತಿಗೆಗೆ ಕೊಡುತ್ತಿರಲಿಲ್ಲ. ಗುತ್ತಿಗೆಗೆ
ತೆಗೆದುಕೊಳ್ಳುವ ಮೇಸ್ತ್ರಿಗಳು ಆ ಕಾಲದಲ್ಲಿ ಯಾರೂ ಇರ
ಲಿಲ್ಲ. ಎಂಥಾ ಭಾರಿ ಕಟ್ಟಡವನ್ನು ಕಟ್ಟಿದಗ್ಯೂ ಕಟ್ಟದ ಕೆ
ಲವು ದಿವಸದಲ್ಲಿಯೇ ಅದು ಬಿದ್ದು ಹೋಗುತ್ತಾ ಇರಲಿಲ್ಲ.
ಬಿದ್ದು ಹೋದರೆ--ಎರಡು ಎಸೆ ಸರಿಯಾಗಿ ಬರಲಿಲ್ಲ, ಬಿರಕು
------------------------------

ಮಾಡಿದ್ದುಣೋ ಮಹರಾಯ.                         ೨೩

ಬೆಟ್ಟು ಹೋಯಿತು, ಇಟ್ಟಿಗೆಯಲ್ಲಿ ಕಲ್ಲು ಇತ್ತು, ಅದು ಬೇಯ
ಲಿಲ್ಲ. ಸುಣ್ಣದಲ್ಲಿ ಬೂದಿ ಇತ್ತು ಅದು ಅಂಬಲಿಲ್ಲ, ಮರ
ದಲ್ಲಿ ಟೊಳ್ಳು ಇತ್ತು, ಅದು ಗೊತ್ತಾಗಲಿಲ್ಲ ಎಂದು ತಿಪ್ಪೆ
ಸಾರಿಸಿ, ಭಾರೀಹಣಕ್ಕೆ ಪುನಃ ಅಂದಾಜುಗಳನು, ಮಾಡಿ
ಕಂಡ ಹಾಗೆಯೇ ಜಾಸ್ತಿ ದರಗಳನ್ನು ಹಾಕಿ ತಾವೂ ಕಂಟ್ರಾಕ್ಟರೂ
ಸಹ ಚೆನ್ನಾಗಿ ಬದಕುವ ಮಾರ್ಗವನ್ನು ಹುಡುಕುತ್ತಾ ಇದ್ದ
ಶಿಲ್ಪಿ ಶ್ರೇಷ್ಠರು ಆಗ ತಯಾರಾಗಿಲಿಲ್ಲ. ಆ ಕ್ಷಣದಲ್ಲಿ ಮಾಡಿ
ದ ಕೆಲಸವೆಲ್ಲಾ ಒಂದೇಸಾರಿ ಕಟ್ಟುವುದು, ಕಟ್ಟಿದ್ದೆಲ್ಲಾ ಭದ್ರ
ವಾಗಿ ನಿಲ್ಲುವುದು, ಹೀಗೆ ಇತ್ತು. ಇದ್ರದಲ್ಲಿ ಆದ ಕೆಲಸವನ್ನು
ಈಗ ಒಡೆಯಲು ತಗಲುವ ವೆಚ್ಚದಲ್ಲಿ ಈಗಿನ ಸಾಲದ ಇನೊ೦
ದು ಕಟ್ಟಡವನ್ನು ಕಟ್ಟಬಹುದು. ಹೀಗೆ ಗಟ್ಟಿಯಾಗಿ ಕೆಲಸ
ಗಳನ್ನು ದಿನಗೂಲಿ ಚೆಂಗೂಲಿ ಜನರು ಮಾಡುತಾ ಇದ್ದರು.
ಮೇಲುವಿಚಾರಣೆಗೆ ಸದ್ದೀವಾಲರು ಎಂದು ನೇಮಕವಾಗಿದ್ದರು.
ಈ ಕೆಲಸಗಳು ಆಗಾಗ್ಗೆ ಜರಗುತಾ ಬಂದಹಾಗೆ ಕೃಷ್ಟ
ರಾಜ ಒಡೆಯರೇ ಸೃತಃ ಹೋಗಿ ನೋಡಿಕೊಳ್ಳುತ್ತಾ ಇದ್ದರು.
ಆದ್ದರಿಂದ ನಂಜನಗೂಡಲ್ಲಿ ಚಾಮರಾಜನಗರದಲ್ಲಿ ಕಟ್ಟುತಾ
ಇದ್ಧ ದೇವಾಲಯಗಳ ಮೇಲುವಿಚಾರಣೆಗೆ ಆಗಾಗ್ಗೆ ಖಾಸ
ಸವಾರಿ ಹೋಗುತ್ತಾ ಇತ್ತು. ಆಗಿನ ಕಾಲದಲ್ಲಿ ಜೋಡುಕುದುರೇ
ಸಾರೋಟೇ ಅತಿ ವೇಗವಾದ ಚಲನಯಂತ್ರವಾಗಿತ್ತು. ದೊರತನ
ಮಾಡತಕ್ಕವರೇ ಹೀಗೆ ಎಲ್ಲವನ್ನೂ ಸ್ವತಃ ನೋಡಿಕೊಳ್ಳಬೇ
ಕೆಂಬ ಆಸಕ್ತಿಯಿಂದ ಉಂಟಾದ ಶ್ರಮವು ಅಲ್ಪವಾಗಿರಲಿಲ್ಲ.
--------------------------------
೨೪                 ಮಾಡಿದ್ದುಣ್ಣೋ ಮಹರಾಯ. 

ಸಾಧಾರಣವಾದ ಮಾರ್ಗಾಯಾಸ, ಅದಕ್ಕೆ ಹೆಚ್ಚಾದ ದೇಹಾ
ಲಸ್ಯ, ಇನ್ನೂ ಹೆಚ್ಚಾದ ಅಪಾಯಗಳು, ಸಾಧಾರಣ ಜನರಿಗೇ
ಬೇಸರಿಕೆಯನ್ನುಂಟುಮಾಡುವಲ್ಲಿ, ಸುಕುಮಾರರಾಗಿ ಪದವಿಯಲ್ಲಿ
ರುವವರಿಗೆ ಹೇಳತಕ್ಕದ್ದೇನು ? ಆದರೂ ನಮ್ಮ ದೊರೆಯು
ಇದು ಯಾವುದನ್ನೂ ಲಕ್ಷ್ಯ ವಿಡದೆ ತಾನೇ ನೋಡಿಕೊಳ್ಳು
ತಿದ್ದರು

ಹೀಗೆ ತಿರುಗಾಡುವಾಗ್ಗೆ ಒಂದಾನೊಂದು ಸಾರಿ ಒ೦ದು
ಹೆಚ್ಚಿನಸಂಗತಿ ನಡೆಯಿತು, ಕುದುರೆ ಟವಾಲನ್ನು ಇಡಿಸಿ
ಸಾರೋಟಿನಲ್ಲಿ ಸವಾರಿಯು ಚಾಮರಾಜನಗರದಿಂದ ವೇಗವಾಗಿ
ಬರುವಾಗ ಮೈಸೂರಿಗೆ ಆರು ದೂರದಲ್ಲಿರುವ ಕಡ
ಕೊಳದ ಸಮೀಪದಲ್ಲಿ ಥಟ್ಟನೆ ಸದ್ದಾಯಿತು. ಖಾಸ
ಸವಾರಿಯ ಸಾರೋಟನ್ನು  ಮೊದಲಿನಿಂದ ಹೊಡೆಯು
ತಿದ್ದ ಬ್ರೌನ್‌ ಎಂಬ ಚಟೀಗಾರನು ಆದಿವಸ
ಗಾಡೀ ಹೊಡೆಯುತಾ ಇದ್ದನು. ಅದೇನು ಸದ್ದು ? ಎಂದು ದೊರೆ
ಕೇಳಿದರು. ಖಾವಿಂದ್, ವಿಶೇಷವೇನೂ ಇಲ್ಲ, ಎಂದು
ಬ್ರೌನ್‌  ಹೇಳಿದನು, ಸಾರೋಟು ಮೈಸೂರ ಅರಮನೇ
ಬಾಗಿಲ ಹತ್ತರ ಬಂತು. ಅದು ನಿಲ್ಲುವ ಸಮಯದಲ್ಲಿ ಬ್ರೌ 
ನನು ಗೇ ಡಿಂದ ಧಮ್ಮಿಕ್ಕಿ , ಸರೋವಿನ ಮುಂಭಾಗದ
ಒಂದು ಚಕ್ರವನ್ನು ಹಿಡಿದು ನಿಂತುಕೊಂಡನು. ದೊರೆಯು
ಗಾಡಿಯಿಂದ ಇಳಿದರು. ಕೂಡಲೆ ಬ್ರೌನನನ್ನು ನೋಡಿ,
ದೊರೆ-ಯಾಕೆ ಚಕ್ರವನ್ನು ಹಿಡಿದು ನಿಂತುಕೊಂಡೆ ?
------------------------------
ಮಾಡಿದ್ದುಣ್ಣೋ ಮಹರಾಯ.             ೨೫

ಬ್ರೌನ್‌-ಜಿಹವರವರ್, ಪಟ್ಟೆ ಬಿಟ್ಟುಹೋಗಿ ಚಕ್ರಮುರಿಯುವ
ಹಾಗೆ ಇದೆ. ಗಾಡಿಬಿದ್ದು ಹೋದೀತೆಂದು ಖಾವಂದರ
ಪಾದ ಗಾಡಿಯಿಂದ ಈಚೆಗೆ ಬರುವವರೆಗೂ ಚಕ್ರವನ್ನು
ಹಿಡಿದುಕೊಂಡೆ.
ದೊರೆ-ಯಾವಾಗ ಚಕ್ರದ ಪಟ್ಟೆ ಬಿಟ್ಟುಹೋಯಿತು ?
ಬ್ರೌನ್‌-ಕಡಕೊಳದ ಸಮೀಪದಲ್ಲಿ ಬಿಟ್ಟುಹೋಯಿತು. ದಾರಿ
ಯಲ್ಲಿ ಸದ್ದಾದ್ದು ಇದೇ.
ದೊರೆ-ಚಕ್ರ ಇಷ್ಟು ಮುರಿದುಹೋಗಿರುವಲ್ಲಿ ಗಾಡಿ ಬೀಳದೇ
ಹೋದ್ದು ಆಶ್ಚರ್ಯ., ಗಾಡಿಬಿದ್ದಿದ್ದರೆ ಕೈ ಕಾಲು ಮುರಿ
ಯುವುದೊ ಪ್ರಾಣ ಹೋಗುವುದೋ, ಏನೋ ಅಪಾ
ಯಾವಾಗುರಾ ಇತ್ತಲ್ಲ !
ಬ್ರೌನ್‌ ಖಾವಿಂದ್, ಚಕ್ರಹೋದರೂ ಅಪಾಯವಾಗದೇ ಇರ
ತಕ್ಕದ್ದು ಗಾಡಿಯನ್ನು ಹೊಡೆಯತಕ್ಕ ಚಮತ್ಕೃತಿಯ
ಫಲವಾಗಿದೆ.
ದೊರೆ-ಬಹಳ ಸಂತೋಷವಾಯಿತೈಯ್ಯ, ಗಾಡಿಬಿದ್ದು ಹೋಗಿ
ಅಪಾಯವಾಗಿದ್ದರೆ ನೀನು ಏನ ಮಾಡುತಿದ್ದೆ ? ಗಾಡಿ
ಯನ್ನು ನಿಲ್ಲಿಸಬೇಕಾಗಿತ್ತು.
ಬ್ರೌನ್‌-ಮಹಾಸ್ವಾಮಿ, ನಾನು ಗಾಡಿಯನ್ನು ನಿಲ್ಲಿಸಿದ್ದರೆ
ಅಪಾಯವಾಗುತಾ ಇತ್ತು. ಮತ್ತು ಸವಾರಿಗೆ ಬೇರೆ
ಗಾಡಿ ಬರುವತನಕ ಕಾಡಿನಲ್ಲಿ ಖಾವಂದರು ನಿಂತಿರಬೇ
ಕಾಗುತಿತ್ತು. ಸಾಯಂಕಾಲದ ಸಮಯವಾಗಿತ್ತು. ಕತ್ತ
--------------------------
೨೬                  ಮಾಡಿದ್ದುಣ್ಣೋ ಮಹಾರಾಯ.

ಲೇಕಾಲ, ಮೋಡವೂ ಕಟ್ಟಿತ್ತು. ಇದೆಲ್ಲವನ್ನೂ ಯೋ
ಚಿಸಿ ಪಾದಕ್ಕೆ ಯಾವ ಅಪಾಯವೂ ತೊಂದರೆಯೂ ಉಂ
ಟಾಗದಂತೆ ಗಾಡಿಯನ್ನು ಹೊಡೆದು ತಂದಿದೇನೆ, ಮಾಫ್
ಮಾಡಬೇಕು.
ದೊರೆ-ಬ್ರೌನ್‌ಸಾಬಿ, ನೀನು ಮಾಡಿದ ಸಾಹಸಕ್ಕೆ ಏನ ಕೊ
ಟ್ಟರೂ ತೀರದು. ಇಂದು ನನ್ನ ಪ್ರಾಣವನ್ನು ಉಳಿಸಿ
ದೆಯಲ್ಲಾ! ಇನ್ನೇನು ಬೇಕು ?
ದೊರೆಯು ಹೀಗೆ ಸಂತೋಷಪಟ್ಟು ಬ್ರೌನ್‌ ಸಾಬಿಗೆ ಭಾರಿ
ಯಾದ ಇನಾಮನ್ನು ಕೊಟ್ಟು-ಈ ರ್ಬೌಸಾಬಿಯು ಇನ್ನು
ಮುಂದಕ್ಕೆ ಯಾವ ಚಾಕರಿಯನ್ನೂ ಮಾಡಬೇಕಾದ್ದಿಲ್ಲ, ನಮ್ಮ
ಖಾಸ ತಬೇಲಿಯಲ್ಲಿ ಮೇಲುವಿಚಾರಣೇ ಮಾಡಿಕೊಂಡು ಅವನ
ಸಂಬಳವನ್ನು ತೆಗೆದುಕೊಳ್ಳುತಾ ಇರಲಿ, ಎಂದು ಅಪ್ಪಣೇ
ಮಾಡಿದರು.

ಹೀಗೆ ನಡೆಯುತ್ತಾ ಇದ್ದ ಗುಡಿಯ ಕಾಮಗಾರಿ ಜಾಗ್ರ
ತೆಯಾಗಿ ಜರಗಲು ಸ್ಥಳದ ಮುಖ್ಯಾಧಿಕಾರಿಯಾದ ಆಮೀಲನ
ಶ್ರದ್ದೆ ಅವಶ್ಯಕವಷ್ಟೆ. ಇದರಂತೆ ಚಾಮರಾಜನಗರದಲ್ಲಿ ಚಾಮ
ರಾಜೇಶ್ವರ ದೇವಾಲಯದ ಕಾಮಗಾರಿಯನ್ನು ಅಕ್ಕರೆಯಿಂದ
ನೋಡಿಕೊಂಡು ಆಗಾಗ್ಗೆ ಬಿನ್ನವತ್ತಲೇ ಮಾಡಿಕೊಳ್ಳಬೇಕೆಂದು
ಅಲ್ಲಿನ ಆಮೀಲ ಮಾರಮಣರಾಯನಿಗೆ ದೊರೆಯು ಅಪ್ಪಣೇ
ಮಾಡಿದ್ದರು. ಆಮೀಲನು ಯಾವ ಕೆಲಸವಿದ್ದರೂ ಬಿಟ್ಟು
ಗುಡಿ ಕಟ್ಟಡದ ಕೆಲಸವನ್ನು ವಿಶೇಷವಾಗಿ ಶ್ರದ್ಧೆಯಿಂದ ನೋ
ಡಿಕೊಳ್ಳುತ್ತಾ ಇದ್ದನು. ಈ ಕಾರಣಕ್ಕಾಗಿ ಈ ಆಮೀಲನಲ್ಲಿ
------------------------
ಮಾಡಿದ್ದುಣ್ಣೋ ಮಹಾರಾಯ.               ೨೭

ದೊರೆಗಳಿಗೆ ಹೆಚ್ಚಿನ ಅಭಿಮಾನವಿತ್ತು. ಚಾಮರಾಜನಗರಕ್ಕೆ
ಸವಾರಿ ಹೋದಾಗಲೆಲ್ಲಾ ಯಾವುದೊಂದು ಕೆಲಸಕ್ಕೂ ರಮ
ಣೈಯ್ಯನನ್ನು ಕರೆ ಎಂದು ಸನ್ನಿಧಾನದಲ್ಲಿ ಅಪ್ಪಣೆಯಾಗು
ತಿತ್ತು. ದೊರೆ ಕರೆಯಿಸಿದಾಗಲೆಲ್ಲಾ ಒಂದೊಂದುವೇಳೆ ರುಮಾ
ಲನ್ನು ಹಿಂದುಮುಂದಾಗಿ ಇಟ್ಟು ಕೊಂಡು ಹೋಗುವುದು, ಅಂ
ಗಿಯನ್ನು ತಳಮೇಲಾಗಿ ತೊಟ್ಟುಕೊಳ್ಳುವುದು, ಸೊಂಟವನ್ನು
ಹರಹರಕಲಾಗಿ ಸುತ್ತಿಕೊಳ್ಳುವುದು, ಮುಖವನ್ನು ಏನೂ ಅರಿಯ
ದವನಹಾಗೆ ಸೊಟ್ಟಸೊಟ್ವನಾಗಿ ಮಾಡಿಕೊಳ್ಳುವುದು, ಅವಸರ
ಅವಸರವಾಗಿ ನಡೆಯುವುದು, ಹೆಚ್ಚಿನ ಹೊಕೆಯನ್ನು ಅರಿಯ
ದವನಹಾಗೆ ನಟಿಸುವುದು, ಅಪ್ರಣೆಯಾದ ಕೂಡಲೆ ಬಹಳ ಅವ
ಸರವಾಗಿ ಬಂದವನ ಹಾಗೆ ತೋರ್ಪಡಿಸಿ ದಾಸದಂಡವನ್ನು
ಹಾಕುವುದು, ಯಾವ ಮಾತು ರಾಜರ ಮುಖದಿಂದ ಹೊರ
ಟರೂ-ಮಹಾಸ್ವಾಮಿ, ಅಪ್ಪಣಿ ಆದಂತ ತಯಾರುಮಾಡಿಧೇನು,
ಏನು ಇದ್ದರೂ ಒಂದು ನಿಮಿಷದಾಗ ಮಾಡಿಸುಥೇನು,
ಆಹಾ ! ಆಕ್ಷೇಪಣಿ ಏನದ ? ಆಹ, ಆಗಬಹುಂದು, ಛಲೋ
ಅಪ್ಪಣಿ, " ಎಂದು ಸಮಯಬಂದಹಾಗೆಲ್ಲಾ ಹೊಗಳುವುದು, ಈ
ಪ್ರಕಾರ ನಟಿಸುತ್ತಾ ಇದ್ದ ಕಾರಣ, ಈ ರಮಣೈಯ್ಯನು ಏನೂ
ಅರಿತವನಲ್ಲ, ಒಳ್ಳೆಯವನು, ಸರ್ಕಾರದ ಕೆಲಸವನ್ನು ಶ್ರದ್ಧೆ
ಯಿಂದ ಬಹು ಚೆನ್ನಾಗಿ ಮಾಡತಕ್ಕವನು, ಎಂದು ದೊರೆಯು
ಇವನಲ್ಲಿ ಬಹಳವಾಗಿ ಅಭಿಮಾನವನ್ನು ಇಟ್ಟುಕೊಂಡು, ಇವನ
ನ್ನು ಬಹಳ ದಿವಸ ಆ ತಾಲ್ಲೂಕಿನಲ್ಲಿಯೇ ಇರುವಂತೆ ಅಪ್ಪ
ಣೇಮಾಡಿಸಿದ್ದರು.
----------------------------

೩೮                                     ಮಾಡಿದ್ದುಣ್ಣೋ ಮಹರಾಯ.

ಹೀಗೆ ತನಗೆ ಉಂಟಾಗಿರುವ ರಾಜಪೂಜ್ಯತೆಯ ಮರೆಯಲ್ಲಿ
ತಾನು ಯೇನ ಮಾಡಿದಾಗ್ಗೂ ನಡೆಯುತ್ತೆಂದು ಈ ಅಖಾಲ
ನು ತಿಳಿದಿದ್ದನು. ಇವನ ಚರಿತ್ರೆ ಇಷ್ಟೇ ಅಲ್ಲ, ಇವನಲ್ಲಿ
ಮೂರು ನಾಲ್ಕು ಜನ ಮಧ್ಯಸ್ಥಗಾರರು ಒಳಗೂ ಹೊರಗೂ
ಓಡಿಯಾಡುತ್ತಲೇ ಇರುತಿದ್ದರು. ಇವರ ಮೂಲಕ ಒಂದೊಂದು
ಮೊಕದ್ದಮೆಯಲ್ಲಿಯೂ ಒಳಲಂಚ ಹೆಚ್ಚಾಗಿ ನಡೆಯುತ್ತಲೇ ಇರು
ತಿತ್ತು. ಹಣಗಾರರಾದ ಜನರು ಕಕ್ಷಿಗಾರರಾಗಿ ಬಂದಾಗ ಸು
ಬೇದಾರರ ಜಾಳಿಗೆಯು ನೂರಾರು ಕಟ್ಟಳೆಯಲ್ಲಿ ತುಂಬುತಾ
ಇತ್ತು. ಈ ಆದಾಯವು ಇನ್ನೂ ಹೆಚ್ಚುತ್ತ ಇತ್ತು. ಕೊಟಾ
ರದ ದಿವಸದಲ್ಲಿ ಜವಾನರು ಗ್ರಾಮಗಳಿಗೆ ಹೋಗಿ ಪಟೇಲರ
ಮುಖಾ೦ತ್ರ ಒಕ್ಕಲುತನದವರಿಂದ ಬೇಕಾದಷ್ಟು ದವಸವನ್ನೂ
ಹುಲ್ಲನ್ನೂ ಬಿಟ್ಟಿಯಾಗಿ ಹೊರಿಸಿಕೊಂಡು ಬರುತ್ತಲೇ ಇದ್ದರು.
ಇದೆಲ್ಲವೂ ಸುಬೇದಾರರ ಮನೆಯಲ್ಲಿ ಮಾರಾಟವಾಗಿ ಬಂದ ಹ
ಣ ಸುಬೇದಾರರ ಬೊಕ್ಕಸಕ್ಕೆ ಬೀಳುತ್ತಲೇ ಇತ್ತು. ಆ ಆ
ಮೀಲರು ಯಾರನ್ನು ಕಂಡಾಗ್ಗೂ ಏಿನಕಣೋ ಗ್ಯವಡ, ನಾಳಿ
ನಮ್ಮಲ್ಲಿ ತಿತಿ ಬರಾದು, ತರಕಾರಿ ಬಾಳಿಯಲಿ ಎಷ್ಟು ಸಿಕ್ಕಿದರೂ
ತಂದುಕೊಡೇನು ? ಎಂದು ಹೇಳುತ್ತಿದ್ದರು. ಹೀಗೆ ಬಂದ ಕಾಯಿ
ಪಲ್ಯ ಮನೆಯಲ್ಲಿ ತುಂಬಿಯೆ ಇರುತಿತ್ತು. ಇದೆಲ್ಲವನ್ನೂ ಸರ್ಕಾ
ರದ ಜವಾನರು ಮಾರಿ ದುಡ್ಡನ್ನು ತಂದು ಅಮ್ಮ ನವರ ಕೈಯಲ್ಲಿ
ಕೊಡುತಿದ್ದರು. ಆಮೀಲರು ಗ್ರಾಮಗಳಿಗೆ ಹೋದಾಗ
ಒಂದಕ್ಕೆ ಹತ್ತರಷ್ಟು ಸೋಬಸ್ಕರವನ್ನು ರೈತರ ಮನೆಯಿಂದ
-----------------------------

ಮಾಡಿದ್ದುಣ್ಣೋ ಮಹಾರಾಯ                         ೨೯

ತರಿಸಿಕೊಂಡು ಗಾಡಿಯಲ್ಲಿ ತುಂಬಿ ಊರಿಗೆ ಕಳುಹಿಸುತ್ತಿದ್ದರು.
ಇದೂ ಅಲ್ಲದೆ ಆಮಿಲನು ಜವಳಿ ಅಂಗಡಿಯಿಂದ ಬೇಕಾದ ಬಟ್ಟೆಗ
ಳನ್ನು ತರಿಸಿಕೊಂಡು ಉಪಯೋಗಿಸುತ್ತಿದ್ದನು. ಅದರ ಕ್ರಯವ
ನ್ನು ಕೇಳುವುದಕ್ಕೆ ವರ್ತಕರು ಭಯಪಟ್ಟು ಸುಮ್ಮನೇ ಬಿಟ್ಟು
ಬಿಡುತಿದ್ದರು. ಆಮೀಲರು ಗ್ರಾಮಾಂತರಗಳಿಗೆ ಒ.೦ಟಿಯಾಗಿ
ಹೋದಾಗ ವಿಷಯವಾಗಿ ಇವರು ನಡಿಸುತಿದ್ದ ಚರ್ಯವನ್ನು 
ವಿವರಿಸಲು ಅಸಹ್ಯವಾಗುತ್ತೆ. ತಾಲ್ಲೂಕು ಕಚೇರಿಯ ಉದ್ಯೋಗ
ಸ್ಥರು ಜನರಿಂದ ಕೂತರೆ ನಿಂತರೆ ಒಳಪಂಚವನ್ನು ವಸೂಲುಮಾ
ಡುತಾ ಧನಿಕರಾಗಿದ್ದರು. ಆದಾಗ್ಯೂ ಆಮೀಲನಿಗೆ ಬರುತಿದ್ದ
ಈ ಚರಾದಾಯದಷ್ಟು ಇತರ ಉದ್ಯೋಗಸ್ಥರಿಗೆ ಬರುತ್ತಿರಲಿಲ್ಲವಾ
ದ್ದರಿಂದ ಅವನಮೇಲೆ ಇವರೆಲ್ಲರಿಗೂ ದ್ವೇಷವು ಹೊಟ್ಟೆಯೊಳಗೇ
ತುಂಬಿತ್ತು, ಹಿ(ಗೆಲ್ಲಾ ಇದ್ದಾಗ್ಯೂ ದೊರೆಗಳದಯಕ್ಕೆ ಆಮೀ
ಲನು ಪಾತ್ರನಾಗಿದ್ದ ಕಾರಣ ಇವನಮೇಲೆ ಯಾರೂ ಎದುರಿಗೆ
ನಿಲ್ಲುತ್ತಿರಲಿಲ್ಲ. ಸಹಿಸುವದಕ್ಕೆ ಅಸಾಧ್ಯವಾದ ಒಳದುಃಖವು ಎಲ್ಲ
ರಿಗೂ ಬೂದಿಮುಚ್ಚಿದ ಕೆಂಡದಹಾಗಿತ್ತು,

ಈ ಕೆಂಡವು ಹತ್ತಿಕೊಂಡು ದೊಡ್ಡ ಉರಿಯಾಗಿ ಏಳುವುದಕ್ಕೆ
ಒಂದು ಸಮಯಬಂತು, ಆ ಸೀಮೆಯಲ್ಲಿ ಉಪ್ಪಲಿಗರು ಅಥ
ವಾ ಮೇಲುಸಕ್ಕರೆಯವರು, ಪರಿವಾರದವರು ಅಥವಾ ತೊರೇರು,
ಎಂದು ಎರಡು ಜಾತಿಯ ಒಕ್ಕಲಿಗರು ಇದಾರೆ. ಈ ಜಾತಿಯ 
ವರ ಮದುವೆ ಮುಂತಾದ ಕಾಲಗಳಲ್ಲಿ ಮಾಡುವ ಬೀದೀಮೆರ
ವಣಿಗೆ ಪದ್ಧತಿಗಳ ಕುರಿತು ಇವರಿವರಿಗೆ ಬಹುದಿವಸದಿಂದಲೂ
ವಿವಾದನಡೆಯುತ್ತಲೇ ಇದೆ. ಹೀಗಿರಲು, ಹಣಗಾರನಾದ ಒಬ್ಬ
-----------------------------

೩೦                ಮಾಡಿದ್ದುಣ್ಣೋ ಮಹಾರಾಯ.

ತೊರೆಯನ ಮನೆಯಲ್ಲಿ ಅವನ ಮಗನಿಗೆ ಮದುವೆ ಯಾ
ಯಿತು. ಪುಣ್ಯವಂತನಾದ ಇವನ ಮನೆಯ ಪ್ರಸ್ತುತಕ್ಕೆ ಆ
ಸುತ್ತಲೂ ಇರುವ ಗ್ರಾಮಗಳ ತೊರೆಯರೆಲ್ಲರೂ ಬಂದಿದ್ದರು.
ಮದುವೆಯು ಅಟ್ಟಹಾಸವಾಗಿಯೇ ಜರಗಿತು. ಇವನು ಸರ್ಕಾ
ರದ ಉದ್ಯೋಗಸ್ಥರೆಲ್ಲರನ್ನೂ ಕರೆದಿದ್ದನು. ಆಮೀಲರೂ
ಕಿಲ್ಲೇದಾರರೂ ತಿರಸ್ತೇದಾರರೂ ಮೊದಲಾಗಿ ಎಲ್ಲರಿಗೂ ಔ
ತನ ಉಡುಗರೆ ಬೇಕಾದ ಹಾಗೆ ಆಯಿತು. ಆ ಮದುವೆ
ಯಾದ ಮದಮಕ್ಕಳಿಗೆ ಮೆರವಣಿಗೆ ಮಾಡಲು ಅಪ್ಪಣೇ
ಕೊಡಿಸಬೇಕೆಂದು ಪ್ರಸ್ತಮಾಡಿದ ಯಜಮಾನನು ಅಮೀಲ
ರಲ್ಲಿ ಒಂದು ಅರ್ಜಿ ಹಾಕಿದನು. ಆ ದಿವಸ ರಾತ್ರೆಯೇ ಮ
ಧ್ಯಗಾರರು ಬಿಂದು ಮಾತನಾಡಿ ಆಮೀಲರ ಕುಟುಂಬ
ವಾದ ಅಮ್ಮ ನವರ ಕೈಗೆ ನೂರು ಇಕ್ಕೇರಿ ವರಹಗಳನ್ನು
ತಂದು ಎಣಿಸಿಕೊಟ್ಟರು. ಈ ಮಧ್ಯೆ ಉಪ್ಪಲಿಗರ ಕಡೆಯವ
ರಿಗೆ ಒಳಗುಟ್ಟು ಗೊತ್ತಾಯಿತು. ಅವರು ಎದುರು ಅರ್ಜಿ
ಯನ್ನು ತಂದು ಆಮೀರಲ್ಲಿ ಕೊಟ್ಟರು. ತೊರೆಯರು ಒಂಭ
ತ್ತುಪಣಕ್ಕೆ ಸೇರಿದವರು, ಪಲ್ಲಕ್ಕಿ ಮೆರವಣಿಗೆ ಮಾಡಿಕೊಂ
ಡು ಉಪ್ಪಲಿಗರೇ ಮೊದಲಾದ ಹದಿನೆಂಟು ಪಣದವರು ಇರುವ
ಪೇಟೆಯಲ್ಲಿ ಹೋಗುವ ಪದ್ದತಿ ಇಲ್ಲ, ತೊರೆಯರಿಗೆ ಲೈಸೆನ್‌
ಸನ್ನು ಕೊಡಕೂಡದು, ಎಂದು ಆ ಅರ್ಜಿಯಲ್ಲಿ ಬರೆದಿತ್ತು.
ಈತಕರಾರನ್ನು ನೋಡಿ ಆಮೀಲರಿಗೆ ಬಹಳ ಸಂತೋಷ
ವಾಯಿತು. ಆ ದಿನ ರಾತ್ರೆ ಮಧ್ಯಸ್ಥಗಾರರು ಆಮೀಲರ
ಮನೆಗೆ ಹೋಗಿ ಭೇಟೀ ತೆಗೆದುಕೊಂಡರು. ಮಚ್ಚಿನಮೇಲೆ ಮಾ 
-----------------------------

ಮಾಡಿದ್ದುಣ್ಣೋ ಮಹಾರಾಯ.                      ೩೧


ತು ನಡೆಯುತಾ ಇತ್ತು. ಅಮ್ಮ ನವರು ಇದನ್ನು ಕೇಳಿ ಮೇ
ಲಕ್ಕೆ ಹೋದರು. ಒಂದುನೂರು ವರಹ ಕೊಡುವುದಾಗಿ ಉ
ಪ್ಪಲಿಗರ ಕಡೆಯವರು ಹೇಳಿದರು.
ಆಮೀಲ-ಅದು ಹ್ಯಾ೦ಗ ಆಗಾದು ? ತೊರೆಯರ ಮರವಣಿಗಿ
ಮಾಮೂಲು ಇಲ್ಲ ಎಂಬ ವೇಳೆಗೆ ಉಪ್ಪಲಿಗರು ತಕರಾರು
ಮಾಡಲಿಕ್ಕೆ ಮಾಮೂಲು ಉಂಟ ?
ಉಪ್ಪಲಿಗರು-ಬುದ್ದಿ, ಹಾಗಲ್ಲ. ತೊರೆಯರ ಮೆರವಣಿಗೆ ಹಿಂದೆ
ನಡೆದಿದ್ದರೆ, ನಾವೂ ತಕರಾರು ಮಾಡುತ್ತಲೇ ಇದ್ದವು.
ಆಗ ತಕರಾರೂ ಮಾಮೂಲಾಗುತಿತ್ತು,
ಆಮೀಲ-ನೀವು ತಕರಾರು ಮಾಡುತೀರೆಂಬ ಸಂಗತಿ ತೊರೆಯ
ರಿಗ ತಿಳಿದಿದ್ದರ ಅವರು ಲೈರ್ಸೆಸಿಗೆ ಅರ್ಜಿಕೊಡಬ
ಹೂಂದು, ನಿಮ್ಮ ತಕರಾರು ಹೀ೦ಗೆ ಎಂದು ಅವರು ಅ
ರಿಯರು, ಹವುದೋ ? ಅದಕ್ಕೆ ಅವರು ಅರ್ಜಿ ಕೊಡಲಿಲ್ಲ.
ಅರ್ಜಿಕೊಟ್ಟ ಮಾಮೂಲೂ ಆಗಲಿಲ್ಲ.
ಉಪ್ಪ-ತೊರೆಯರ ಅರ್ಜಿಯ ಮಾಮೂಲಿನ ವಿಚಾರವಲ್ಲ ಮಹಾ
ಸ್ವಾಮಿ, ಮೆರವಣಿಗೆ ಮಾಮೂಲಿನ ವಿಚಾರ,
ಆಮೀ-ಇದು ಸರ್ಕಾರದ ಮಾತು. ಕಾನೂನೆಲ್ಲಾ ನಿಮಗೆ
ಗೊತ್ತುಂಟ ?
ಉಪ್ಪ-ಅದೆಲ್ಲಾ ನನಗೇನುಗೊತ್ತು ಬುದ್ಧಿ ? ಅದು ಹೇಗಾ 
ದರೂ ಇರಲಿ, ಸ್ವಾಮಿ ನನ್ನ ಮಾನವನ್ನು ಕಾಪಾ
-----------------------------

೩೨                 ಮಾಡಿದ್ದುಣ್ಣೋ ಮಹಾರಾಯ.

ಡಬೇಕು. ಒಂದುನೂರು ವರಹವನ್ನು ಪಾದಕ್ಕೆ ಒಪ್ಪಿ
ಸುತೇವೆ.
ಅಮ್ಮನವರು~೧೨೦ ವರಹ ತೊರೆಯರು ಕೊಡುತ್ತೇವೆಂದು ಹೇ
ಳುತಾರ, ನೀವು ೧೫೦ ವರಹ ಕೊಟ್ಟರ ಲೇಸನ್‌ ದೊ 
ರೆಯೋದು.
ಉಪ್ಪ-ನನಗೆ ಲೇಸನ್‌ ಬೇಡಿತಾಯಿ, ತೊರೆಯರಿಗೆ ಲೇಸನ್‌ ಕೊಡ
ಕೂಡದು. ಇಷ್ಟೇತಾಯಿ ನಾವು ಕೇಳಿಕೊಳ್ಳುವುದು. ಅದೇ
೧೨೦ವರಹ ನಾವು ಒಪ್ಪಿಸುತ್ತೇವೆ.
ಆಮೀ-ಆ ಲೈರ್ಸಸಿನ ತೂಕ ನಿನಗೆ ಹ್ಯಾಂಗ ಗೊತ್ತಾಗಾದು ?
ಏನೋ ನೀವು ಹೇಳಿದಹಾಂಗೇ ಆಗಲಿ.

ಈ ಪ್ರಕಾರ ಮಾತನಾಡಿಕೊಂಡು ಉಲಿಗರ ಕಡೆಯವರು
ಹೊರಟುಹೋದಮೇಲೆ, ಅಮ್ಮ ನವರು ಗಂಡನನ್ನು ಕುರಿತು
ನಾನು ಹೇಳಿದಹಾಂಗೇ ೧೫೦ ವರಹ ಕೊಡಾರು ? ನೀವು
೧೨೦ಕ್ಕೆ ಒಪ್ಪಿಕೊಂಡು ಕೆಡಿಸಿಟ್ಟಿರಿ. ಒಂದೊಂದೂ ಹೀಂಗ ಮಾ
ಡಿದರ ನಾನು ಏನ ಹೊಡಕೊಳ್ಳಿ ? ಎಂದು ಗಂಡನನ್ನು ಆ
ಕ್ಷೇಪಿಸಿ ಕೋಪಮಾಡಿಕೊಂಡು ಗಡಾವಣೆಯಿಂದ ಹೊರಟಳು.
ಆಗ ಆಮೀಲನು-ಇರಲಿ, ಇನ್ನೊಂದುವೇಳೆ ಸೆಳೆದುಹಾಕ
ಥೇನು, ಎಂದು ಹೆಂಡತಿಗೆ ಸಮಾಧಾನ ಹೇಳಿದನು.

ಮಾಮೂಲಿಗೆ ವಿರೋಧವಾಗದಹಾಗೆ ನೀವು ಮೆರವಣಿಗೇ
ಮಾಡಿಕೊಳ್ಳಬಹುದೆಂದು ಬರೆದು ಪರಿವಾರದವರಿಗೆ ಲೈಸನ್‌ನನ್ನು 
ಕೊಟ್ಟರು. ಬಂದಷ್ಟು ಹಣವನ್ನು ದೋಚಿಕೊಳ್ಳುವುದರಲ್ಲಿ ಮಾ-
---------------------------

ಮಾಡಿದ್ದುಣ್ಣೋ ಮಹರಾಯ.              ೩೩
ರಮಣರಾಯನಿಗೆ ಇದ್ದಷ್ಟು ಪ್ರಜ್ಞೆಯ ಜಾಣತನವೂ ಬರವ
ಣಿಗೆಯಲ್ಲಿ ಇರಲಿಲ್ಲವಾದ್ದರಿಂದ, ಮೇಲಿನ ಲೈಸೆನ್‌ಸನ್ನು ಒಕ್ಕ
ಣಿಸುವುದರಲ್ಲಿ ಮುನಷಿಗಳು ಗುಮಾಸ್ತರು ಇವರ ಕೈವಾಡವೇ
ಮುಖ್ಯವಾಗಿತ್ತು. ಇದಕ್ಕಾಗಿ ಪರಿವಾರದವರು ತಮ್ಮ ಕೃತ
ಜ್ಞತೆಯನ್ನು ಕರಗಿಸಿ ಅದನ್ನು ಚಿನ್ನವಾಗಿ ಮಾಡಿ, ಕೂತರೆ
ನಿಂತರೆ ಪಂಚಪ್ರಾಣವನ್ನೂ ಸೆಳೆಯುವುದರಲ್ಲಿ ಕೇವಲ ಪ್ರೌಡ
ರಾಗಿದ್ದ ಮುನಷಿ ಮೊದಲಾದ ಎಲ್ಲಾ ಪರಿವಾರಗಳಿಗೂ ಅವ
ರವರ ಯೋಗ್ಯತೆ ಮೀರಿ ಚಿನ್ನದ ಹಣಗಳನ್ನೂ ಬೆಳ್ಳಿ ಹಣ
ಗಳನ್ನೂ ತೆತ್ತರು.

ಉಪ್ಪಲಿಗರ ಕಡೆಯವರು ಒಳಸಂಚು ಇಟ್ಟು ಈ ಒಳಗಿನ
ಗುಟ್ಟನ್ನೆಲ್ಲಾ ತಿಳಿದುಕೊಂಡರು. ತೊರೆಯರ ಮೆರವಣಿಗೆ ಹೊ
ರಟರೆ ತಾವು ಮುಂಚಿತವಾಗಿ ಮಾಡಿಕೊಂಡಿರಬೇಕಾದ ಮುಸ್ತೈ
ದುಗಳು ಯಾವುದನ್ನೂ ಬಿಡದೆ-~-ಸಿದ್ಧ ಮಾಡಿಕೊಂಡರು. ರಾತ್ರೇ
ಹೊತ್ತು ಒಂದು ಕಾಡಿನಲ್ಲಿ ಯಾರೂ ಅರಿಯದಹಾಗೆ ಗುಂಪು
ಸೇರಿ ಮುಂದೆ ಮಾಡಬೇಕಾದ ಕೆಲಸಗಳನ್ನು ಗೊತ್ತುಮಾಡಿ
ಕೊಂಡರು.

ಪರಿವಾರದವರಾದರೋ, ಸುಬೇದಾರರ ಬಲದಿಂದ ತಮ್ಮ
ಇಷ್ಟ ನೆರವೇರಿತೆಂದು ಬಹು ಸಂತೋಷವಾಗಿ ಮೆರವಣಿಗೆಗೆ
ಬೇಕಾದ ಸಾಮಗ್ರಿಗಳನ್ನು ಸಜ್ಜು ಮಾಡಿಕೊಂಡರು. ಚಾಮರಾ
ಜನಗರದಲ್ಲಿರುವ ಎಲ್ಲಾ ಗುಡಿಗಳಿಗೂ ಹೋಗಿ ಹಣ್ಣು ಕಾಯಿ
ಗಳನ್ನು ಒಪ್ಪಿಸಿ, ಮುಖ್ಯವಾದ ರಜಬೀದಿಗಳಲ್ಲಿ ಮೆರವಣಿಗೆ
ಮಾಡಿಕೊಂಡು, ರಾತ್ರಿ ೧೨ ಗಂಟೆಹೊತ್ತಿಗೆ ಮನೇಸೇರಿ,
----------------------------------

೩೪                       ಮಾಡಿದ್ದುಣ್ಣೋ ಮಹರಾಯ.

ಮದನಕ್ಕಳಿಗೆ ದೃಷ್ಟಿ ತೆಗೆದುಹಾಕಿ ಆರತಿಅಕ್ಷತೆ ಮಾಡಬೇ
ಕೆಂದು ನಿಷ್ಕರ್ಷೆಯಾಯಿತು. ಇವರಿಗೆ ಯಾವುದು ತಾನೇ ಅ
ಸಾಧ್ಯ? ಸುಬೇದಾರರು ಅನುಕೂಲವಾಗಿದಾರೆ, ಇತರ ಉದ್ಯೋ
ಗಸ್ಥರೆಲ್ಲಾ ಕೈವಶರಾಗಿದಾರೆ, ಕಿಲ್ಲೇದಾರರಂತು ತೊರೆಯರೆಂಬ
ಮಹಾರಣ್ಯದಲ್ಲಿ ಮದಗಜವಾಗಿ, ಆಮಾರ್ಗದಲ್ಲಿದ್ದ ಕೆಲವು ತೊ
ರೇರ ಹೆಮ್ಮಕ್ಕಳ ಮಹಾಸಮಾಜದಲ್ಲಿ ಯಾವಾಗಲೂ ಲೋಲ
ರಾಗಿರುವಾಗ್ಗೆ ತೊರೆಯರಿಗೆ ಯಾವುದು ಅಸಾಧ್ಯ?

ಸುಬೇದಾರರು ಮನೆಯಲ್ಲಿಯೇ ಇದ್ದರು. ಕಿಲ್ಲೇದಾರರು ತಮ್ಮ
ಕಂದಾಚಾರದವರನ್ನು ಕರೆದುಕೊಂಡು ಯಾವಗಜಾಲೂ
ಇಲ್ಲದೆ ಮೆರವಣಿಗೆಯನ್ನು ಸರಿಯಾಗಿ ನಡಿಸಲು ತಮ್ಮ ಕುದು
ರೆಯನ್ನು ಹತ್ತಿಕೊಂಡು ಹೊರಟರು. ಸುತ್ತಮುತ್ತಿನ ತೊರೇ
ರ ಮಂಡಲಿಯಲ್ಲಾ ಆದಿವಸ ಚಾಮರಾಜನಗರದಲ್ಲಿ ನೆರೆದು
ನಿಂತಿತು. ಮುಂದೆ ಕೊಂಬು, ತಮಟೆ, ಅದರ ಹಿಂದೆ ರಣ
ಭೇರಿ, ಅದರ ಹಿಂದೆ ಉತ್ತಮವಾದ ಓಲಗವನ್ನು ಮಾಡುವ
ಎರಡು ಗುಂಪಿನ ಓಲಗದವರು, ಅವರ ಹಿಂದೆ ವಿಧವಿಧವಾದ
ಬೆಲೆಯುಳ್ಳ ಒಟ್ಟಿಗಳನ್ನು ಹಾಕಿಕೊಂಡಿರುವ ಗಂಡಸರ ಗುಂಪು,
ಅದರಹಿ೦ದೆ ಕಂದಾಚಾರದ ಜವಾನರಿಂದ ಆವ್ರತವಾಗಿ ಕುದುರೇ
ಮೇಲೆ ಕೂತು ಬರುತ್ತಿರುವ ಕಿಲ್ಲೇದಾರ್ ಸಲಾರ್‌ಖಾನ್‌ ಸಾ
ಹೇಬರು, ಇವರ ಹಿಂದೆ ಮದಮಕ್ಕಳು ಕೂತಿರುವ ಹೂವಿನ
ಪಲ್ಲಕ್ಕಿ, ಇದರ ಹಿಂದೆ ಬೇಕಾದ ಒಡವೆಗಳನ್ನಿಟ್ಟು ಬಗೆಬಗೇ
ಸೀರೆಗಳನ್ನುಳ್ಳು ಬೇಕಬೇಕಾದ ಸಿಸ್ತುಗಳನ್ನು ಮಾಡಿಕೊಂಡು,
ಕನ್ನಡಿ ಕಳಶ, ಸುತ್ತು ವೀಳಯ, ತೆಂಗಿನಕಾಯಿ ಬಾಳೇಹಣ್ಣು
---------------------------

೩೫               ಮಾಡಿದ್ದುಣ್ಣೋ ಮಹಾರಾಯ.

ಈಬಗೆ ತಟ್ಟೆಗಳನ್ನು ಹಿಡಿದು, ಹಾಡುಗಳನ್ನು ಹಾಡುತಾ ಬ
ರುವ ತೊರತಿಯರ ಸಂಘ, ಇವರ ಹಿಂದೆ ಸಾದಾರಣ ಬಟ್ಟೆ
ಗಳನ್ನೂ ಕಂಬಳಿಗಳನ್ನೂ ಹೊದ್ದು ಬರುತ್ತಾ ಇರುವ ಗಂಡ
ಸರ ಹೆಚ್ಚಾದ ಗುಂಪು, ಇವುಗಳೆಲ್ಲಾ ಒರಟುಒರಟಾದ ಸೌಂ
ದರ್ಯವನ್ನು ತೋರಿಸುತಿದ್ದಾಗ್ಗೂ, ಮುಡಿದಿರುವ ಚೆಂಡುಮಲ್ಲಿಗೇ
ಹೂವಿನ ವಾಸನೆ, ಕೈ ಯಣ್ಣೆಯ ಮಣರು ವಾಸನೆ, ನೀರುಳ್ಳಿ
ಬೆಳ್ಳುಳ್ಳಿಯ ವ್ಯಗಳು ವಾಸನೆ, ಇದೆಲ್ಲವನ್ನೂ ಮುಚ್ಚು ತಾ
ಇರುವ ಬೆವರ ವಾಸನೆ, ಇವುಗಳು ತುಂಬಿದ್ದ ಕಾರಣ ಇಂಥಾ
ಗವಲನ್ನು ಎಂದಿಗೂ ಅರಿಯದವರ ಮೂಗು ಆಗಾಗ ಸೊಟ್ಟ
ಸೊಟ್ಟನಾಗುತಿತ್ತು,

ಮೆರವಣಿಗೆಯು ಸುಬೇದಾರರ ಮನೆ ತಟಹಾದು ಪೇಟೆ
ಯವರೆಗೂ ಹೋಯಿತು. ಆಗ ಗುಂಪಿನೊಳಕ್ಕೆ ೧೦-೧೨
ಕಲ್ಲುಗಳು ಬಿದ್ದವು. ಜನ ಗಾಬರಿಯಾಯಿತು. ಕಲ್ಲು ಎಲ್ಲಿಂದ
ಬಂತೊ ನೋಡೋಣವೆಂದು ಕಂದಾಚಾರದ ಜವಾನರು ಓಡಿ
ಹೋದರು. ಆ ಸಮಯಕ್ಕೆ ಸರಿಯಾಗಿ ಕಲ್ಲಿನ ಮಳೆಯೇ
ಸುರಿಯುವುದಕ್ಕೆ ಮೊದಲಾಯಿತು. ಮಧ್ಯೆ ಮಧ್ಯೆ ಪಾದರಕ್ಷೆಗಳು
ಹೆಚ್ಚಾಗಿ ಬಿದ್ದವು. ಅಕಸ್ಮಾತಾಗಿ ನಾಲ್ಕು ದಿಕ್ಕಿನಿಂದಲೂ
ಹಣೆಮಟ್ಟದ ದೊಣ್ಣೆಗಳನ್ನು ಹಿಡಿದಿರತಕ್ಕ ದುಂಡಾಳುಗಳ
ಗುಂಪುಗಳು ನುಗ್ಗಿದವು. ಕಿಳ್ಳೇದಾರರ ಕುದುರೆಗೆ ಬಲವಾದ ಏಟು
ಬಿದ್ದು ಅದರ ಕಾಲು ಮುರಿದು ಹೋಯಿತು. ಸಾಲಾರ ಖಾನ್‌
ಸಾಹೇಬರು ಕೆಳಕ್ಕೆ ಬಿದ್ದರು. ಕೂಡಲೆ ಅವರಿಗೆ ದೊ
ಣ್ಣೇ ಪೆಟ್ಟುಗಳು ಬಲವಾಗಿ ಬಿದ್ದು ಕಾಲು ಮುರಿದುಹೋ 
------------------------------

೩೬                     ಮಾಡಿದ್ದುಣ್ಣೋ ಮಹರಾಯ.

ಯಿತು. ಮುಖ ಜಜ್ಜಿ ಹೋಗಿ ರಾಮರಕ್ತ ಸುರಿಯಿತು. ಗುಂಪಿ
ನಲ್ಲಿ ಇವನ ಕಾಲನ್ನು ಹಿಡಿದು ಯಾರೋ ಬಚ್ಚಲಿಗೆ ಎಳೆದು
ಹಾಕಿದರು. ಸಾಬರಿಗೆ ಜ್ಞಾನ ತಪ್ಪಿ ಹೋಯಿತು, ಜವಾನರಲ್ಲಿ
ಕೆಲವರು ಉಪ್ಪಲಿಗರು ಕೆಲವರು ತೊರೆಯರು. ಇವರೆಲ್ಲಾ ತಂತ
ಮ್ಮ ಗುಂಪಿಗೆ ಸೇರಿಕೊಂಡರು, ಕಾಯುವವರೇ ಕೊಲ್ಲುವವರಾ
ದರು. ತೊರೇರ ಗುಂಪಿನವರಿಗೆ ಬಲವಾದ ಏಟು ಬಿತ್ತು, ಕೆಲ
ವರು ಸತ್ತು ಹೋದರು, ಕೆಲವರು ಜ್ಞಾನತಪ್ಪಿ ಬಿದ್ದರು. ಮದ
ಮಕ್ಕಳು ಎಲ್ಲಿಯೋ ಗೊತ್ತೇ ಆಗಲಿಲ್ಲ. ಒಂದು ಗಳಿಗೆಯಲ್ಲಿ
ಅಂಗಡಿ ಬಾಗಿಲುಗಳನ್ನೆಲ್ಲಾ ಹಾಕಿಬಿಟ್ಟರು, ಜನರೆಲ್ಲಾ ಮನೆ
ಯೊಳಕ್ಕೆ ಸೇರಿಕೊಂಡು ಭಾಗಿಲನ್ನು ಹಾಕಿಕೊಂಡರು, ಈ ಗ
ಲಾಟೆಯನ್ನು ಕೇಳಿ, ಮನೆಯಲ್ಲಿಯೇ ಇದ್ದ ಸುಬೇದಾರರ
ಸವಾರಿಯು ಬೀದೀಬಾಗಿ ಜಗಲಿ ಮೇಲಕ್ಕೆ ಬಂತು. ಉಪ್ಪಲಿ
ಗರ ಬಲವಾದ ಒಂದು ಗುಂಪು ಇವರ ಮನೆಮುಂದೆ ಬಂದು
-ಏನು ಸ್ವಾಮಿ, ಪರಿವಾರದವರಿಗೆ ನೀವು ಲೇಸನ್ನನ್ನು ಹೇಗೆ
ಕೊಟ್ಟಿರಿ ? ಎಂದು ಜೋರಾಗಿ ಕೂಗಿತು. ಆಗ ಹೆಚ್ಚಿನ ಆಗ್ರಹ
ದಿಂದ ಸರ್ಕಾರದ ರಸ್ತೆ, ಬೇಕಾದವರು ಹೋಗಬಹುದು, ನಿ
ಮ್ಮ ಅಡ್ಡಿ ಏನು? ಎಂದು ಅವರನ್ನು ಹಿಡಿದು ಕತ್ತಲೇಮನೆಗೆ
ಕೂಡಿ ಪಹರೆಯಲ್ಲಿಡುವಂತೆ ಆಮೂಾರು ಅಪ್ಪಣೇ ಮಾಡಿದರು.
ಆಗ ಉಪ್ಪಲಿಗರು-ನಾವೇ ಹೋಗುತ್ತೇವೆ, ನೀವೇನು ಕೂಡು
ವುದು ? ಅದೆಲ್ಲಾ ಆಗಲಿ ! ಎಂದು ರೋಷಾವೇಶದಿಂದ ಎಲ್ಲ
ರೂ ಕತ್ತಲೆ ಕೊಠಡಿಗೆ ನುಗ್ಗಿದರು. ಕತ್ತಲೇ ಕೊಠಡಿ, ಸೊಳ್ಳೆ ಮನೆ,
ನೆಲಮಾಳಿಗೆ, ಇವೆಲ್ಲಕ್ಕೂ ಉಪ್ಪಲಿಗರು ತಾವಾಗಿಯೇ
--------------------------------

೩೭  ಮಾಡಿದ್ದುಣ್ಣೋ ಮಹಾರಾಯ.

ನುಗ್ಗಿದರು. ತಾಲ್ಲೂಕು ಕಚೇರಿಯಲಾ ತುಂಬಿಹೋಯಿತು.
ಇನ್ನೂ ಜನ ನುಗ್ಗು ತಾ ಬಂದರು. ಕಚೇರೀ ತಂಬಾಗಿಲಿಗೆ
ಬೀಗಹಾಕಿದರು. ಉಳಿದ ಗುಂಪೆಲ್ಲಾ ಸುಬೇದಾರನ ಮನೆಮೇಲೆ 
ನುಗ್ಗಿತು. ಸುಬೇದಾರರು ಹೆದರಿಕೊಂಡು ತಮ್ಮ ಮನೆಯೊ
ಳಕ್ಕೆ ಹೋಗಿ, ಎಲ್ಲಾ ಬಾಗಿಲುಗಳನ್ನೂ ಹಾಕಿಸಿಕೊಂಡು ಮ
ಚ್ಚಿ ನಮೇಲೆ ಹೋಗಿ ಕೂತುಕೊಂಡರು. ಗುಂಪಿನ ಜನರು ಹೊ
ರಗಡೆಯಿಂದ ಕಲ್ಲು, ಇಟ್ಟಿಗೆ, ಹಳೇ ಪಾಪಾಸು, ಎಕ್ಕಡ
ಇವುಗಳನ್ನು ಅಮೀಲನ ಮನೆಮೇಲೆ ಬೇಕಾದಷ್ಟು ಎಸೆದರು.
ಗೂಡನ್ನು ಬಿಟ್ಟು ಚದರಿಹೋದ ಬಡಹಕ್ಕಿಗಳು ಹಾರಾಡುವ
ಹಾಗೆ ಜೋಡು ಹಾರಾಡಿತು. ಮಚ್ಚಿನವಲಿನ ಕಿಟಕಿಯೊಳಗಿ
ನಿ೦ದ ಕಲ್ಲು, ಸಗಣಿ, ಮೊದಲಾದ ಕೆಟ್ಟ ಪದಾರ್ಥಗಳು ಒಳ
ಕ್ಕೆ ಆಮಿಾಠರ ಸಮೀಪಕ್ಕೆ ಬಂದುಬಿದ್ದವು, ಉಪ್ಪಲಿಗರ ಹೆಂ
ಗಸರು ಗುಂಪುಸೇರಿಕೊಂಡು, ಆಮೀಲನ ಮನೆಮುಂದೆ ಬಂದು
ನಿಂತು ಮನಸ್ಸು ಬಂದಹಾಗೆ ಬಯ್ಯುತಾ ಉಟ್ಟ ಸೀರೆಯ
ನೆರಿಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲಕ್ಕೂ ಕೆಳಕ್ಕೂ
ಅಲಾಡಿಸುತ್ತಾ ಅತ್ಯಂತ ಆಭಾಸವಾಗಿ ನಡೆದುಕೊಂ
ಡರು. ಊರಲ ಗಡಗಡನೆ ನಡುಗಿಹೋಯಿತು. ಮರು ದಿ
ವಸದವರೆಗೆ ಯಾರೂ ಮನೆಬಾಗಿಲನ್ನು ತೆಗೆಯಲಿಲ್ಲ. ಕೊನೆಗೆ
ಮೈಸೂರಿನಿಂದ ಬಾರು ಸಿಪಾಯಿಗಳೂ ಸಿಲೇದಾರರ ಕುದುರೆ
ಯವರೂ ಬಂದು ಈ ದೊಂಬಿಯನ್ನು ಸಮಾಧಾನವಾಡಿದರು.
ಸರ್ಕಾರದ ಉದ್ಯೋಗದ ಅವಿವೇಕದಿಂದಲೂ ಅವರ ದುರಾ
ಶೆಯಿಂದ ಇಂಥಾ ಅನಾಹುತ ನಡೆಯಿತೆಂದು ಎದುರೆದುರಿಗೇ
--------------------------------

೩೮             ಮಾಡಿದ್ದುಣ್ಣೋ ಮಹಾರಾಯ.
ಜನರೆಲ್ಲಾ ಆಡಿಕೊಳ್ಳುವಮಟ್ಟಿಗೆ ಅಧಿಕಾರಿಗಳ ಬಾಳು ಅಬ್ಬೆ
ಯಾಯಿತು. ಈ ಅವಾಂತರದಲ್ಲಿ ಆಮಾಲನ ತಲೆ ಹೋಗು
ತೆಂದು ಜನರೆಲಾ ತಿಳಿದಿದ್ದರು.

ಈ ದೊಂಬಿ ವಿಚಾರವು ಕೃಷ್ಣರಾಜ ಒಡೆಯರವರೆಗೂ
ತಿಳಿಯಿತು. ಮೊದಲಿನಿಂದಲೂ ಈ ಅಮಾನು ರಾಜಾನುಗ್ರ
ಹಕ್ಕೆ ಪಾತ್ರನಾಗಿದ್ದ ಕಾರಣ ಸಮೀಪದಲ್ಲಿದ್ದ ಅಧಿಕಾರಿಗಳು
ಹೆದರಿ ಆಖಾಲನಿಂದ ತಪ್ಪಿಲ್ಲವೆಂದು ಅರಿಕೇಮಾಡಿದರು. " ರಮ
ಣೈಯ್ಯ ಏನನ್ನೂ ಅರಿತ ಪ್ರಾಣಿಯಲ್ಲ. ಈ ದೊಂಬಿಯನ್ನು
ಅವನು ಎಬ್ಬಿಸಿರಲಾರ, ಇದೆಲಾ ಕೆಲವು ಪುಂಡುಜನರ ಕೆಲ
ಸವೇ ಸರಿ,'' ಎಂದು ಅಪ್ಪಣೆಯಾಯಿತಂತೆ, ಅರಮನೆಯಲ್ಲಿ ಓ
ಡಾಡಿಕೊಂಡು ಕೃತ್ರಿಮ ಸಂಧಾನವನ್ನು ಮಾಡುತ್ತಾ ಇದ್ದ ಕೆಲ
ವರ ಮುಖೇನ ಈ ಸಂಗತಿಯು ತಿಳಿಯಿತು. ಆಗಿನಿಂದ ಮಾ
ರಮಣರಾಯನ ಡೊಂಕುನಡತೆ ಹೆಚ್ಚುತಾ ಇನ್ನೂ ಇತರ
ವಿಧದಲ್ಲಿಯೂ ಕಾಣಿಸುತಾ ಬಂತು. ಇದರ ಫಲ ಮುಂದೆ
ಗೊತ್ತಾಗುವುದು. 
             ---
           
೪ ನೇ ಅಧ್ಯಾಯ.
ಅತ್ತ ಸಂಜನಾಡಿಯಲ್ಲಿ ಸದಾಶಿವ ದೀಕ್ಷಿತನು ತನ್ನ ತಾಯಿ
ಪಾರ್ವತಮ್ಮ, ತನ್ನ ಮಗನಾದ ಮಹಾದೇವ ಅವರೊಡನೆ
ವಲಸೆ ಬಂದು ನಿಂತು ಮಾವಂದಿರಾದ ನೀಲಕಂಠಜೋಯಿಸರ
ಆಸ್ತಿಯನ್ನೆಲ್ಲಾ ರೂಡಿಸಿ ಗೌರವದಿಂದ ಜೀವನಾ ಮಾಡುತಾ
ಇದ್ದನು. ತಿಮ್ಮಮ್ಮನು ದೊಡ್ಡವಳಾದಳು. ಈಕೆಗೆ ಮಹಾ
---------------------

ಮಾಡಿದ್ದುಣ್ಣೋ ಮಹರಾಯ.                          ೩೯

ದೇವನಮೇಲೆ ಲೋಕದಲ್ಲಿ ಬಲತಾಯಿಗಳಿಗೆ ಇರತಕ್ಕೆ ಅಸೂ 
ಯ ಏನೂ ಇರಲಿಲ್ಲ. ಈ ಹುಡುಗನು ಕೆಂಪಗೆ ಬಹಳ ಅಕ್ಕ
ಣವಾಗಿದ್ದನು. ಅಂಗಾಂಗಗಳೆಲ್ಲಾ ಪ್ರಮಾಣಕ್ಕೆ ಸರಿಯಾಗಿ
ದ್ದವು, ಮುಖ ಸುಂದರವಾಗಿತ್ತು. ಜುಟ್ಟು ಉದ್ದವಾಗಿತ್ತು.
ಯಾವಾಗಲೂ ಸಾದ್ಯವಾಗಿಯೇ ಕಾಣುತಿದ್ದನು. ಯಾರು
ನೋಡಿದರೂ ಬಹಳ ಬುದ್ದಿಶಾಲಿ, ಒಳ್ಳೆ ಪುಣ್ಯವಂತನಾಗಿ
ಬದುಕುವ ಲಕ್ಷಣವೆಲಾ ಇದೆ, ಎಂದು ಹೇಳುತಿದ್ದರು. ಎಂಥ
ವರಿಗೂ ಇನ್ನೊಂದು ಸಾರಿ ಈ ಮಗುವನ್ನು ತಿರುಗಿನೋ
ಡೋಣವೆನ್ನುವಹಾಗೆ ಮುಖದಲ್ಲಿ ಹೆಚ್ಚಾದ ತೇಜಸ್ಸು ಇತ್ತು,
ಗುಣವೂ ರೂಪಿಗೆ ತಕ್ಕ ಹಾಗೆಯೇ ಇತ್ತು. ದೊಡ್ಡವರು ಹೇಳಿ
ದಹಾಗೆ ಕೇಳುವುದು, ಎಷ್ಟು ತಿಂಡೀಕೊಟ್ಟರೆ ಅಷ್ಟರಲ್ಲಿಯೇ
ತೃಪ್ತಿ, ಹೋರಾಟವಿಲ್ಲ, ಮಕ್ಕಳ ಚೇಷ್ಮೆಯನ್ನು ಮಾಡುವುದು,
ಬೇಡವೆಂದರೆ ಬಿಡುವುದು, ಇವುಗಳೆಲ್ಲಾ ಬಾಲ್ಯದಲ್ಲಿಯೇ ಈ
ಮಹಾದೇವನ ಗುಣಗಳಾಗಿದ್ದವು. ಈ ಹುಡುಗನಲ್ಲಿ ತಿಮ್ಮಮ್ಮ
ನಿಗೆ ಬಹಳ ವಿಶ್ವಾಸವಿತ್ತು. ಅವನನ್ನು ಎತ್ತುವುದು, ಆಡಿಸು
ವುದು, ಬೇಕಾದ ತಿಂಡಿ ಕೊಡುವುದು, ಯಾವಾಗಲೂ
ಆದರಿಸುವುದು, ಇದೆಲ್ಲಾ ತಿಮ್ಮುವು ತಾನು ದಿನಚರಿಯ
ಲ್ಲಿಯೂ ಮಾಡಬೇಕಾದ ಕೆಲಸವೆಂದು ಆಚರಿಸುತಿದ್ದಳು.
ಅವನು ಯಾವ ಕಾರಣದಿಂದಲಾದರೂ ಅತ್ತರೆ, ಇವನಿಗೆ ಸಮಾ
ಧಾನಮಾಡುವವರೆಗೂ ಇವಳ ಮನಸ್ಸು ಬಹಳವಾಗಿ ಕಳವಳ
ಗೊಳ್ಳುತಾ ಇತ್ತು. ಹುಡುಗರು ಹುಡುಗರನ್ನು ಕಂಡರೆ ಸಹ
ಜವಾಗಿ ಇರಿಸಿಕೊಂಡಿರುವ ಅನುರಾಗವೆನ್ನುವುದಕ್ಕೂ, ಲಕ್ಷಣ
---------------------------

೪೦               ಮಾಡಿದ್ದುಣ್ಣೋ ಮಹಾರಾಯ.

ವಾಗಿ ಇದ್ದದರಿಂದಲೂ ಒಳ್ಳೆ ಸ್ವಭಾವದ ಸೂಚನೆಗಳನ್ನು
ತೋರ್ಪಡಿಸುತ್ತಿದ್ದದರಿಂದಲೂ ಸಹಜವಾಗಿ ಹುಟ್ಟತಕ್ಕ ಅಧಿ 
ಮಾನವೆನ್ನುವುದಕ್ಕೂ, ಸಂಬಂಧದಿಂದ ಹುಟ್ಟಿದ ಮಮತೆ
ಎನ್ನುವುದಕ್ಕೂ ಕಾರಣವಿತ್ತು. ಈ ಮಗುವಿಗೆ ಕೊಡದೇ ತಾ 
ನು ಯಾವ ತಿಂಡಿಯನ್ನೂ ತಿನ್ನುತಾ ಇರಲಿಲ್ಲ. ಮಗು ಊಟ
ಮಾಡುವವರೆಗೂ ತಾನು ಊಟಮಾಡುತಾ ಇರಲಿಲ್ಲ. ಲಾಲಿಸಿ
ದರೆ ಮಕ್ಕಳು, ಪೂಜಿಸಿದರೆ ದೇವರು, ಹೂಡಿದರೆ ಒಲೆ, ಕೂಡಿ
ದರೆ ಗಂಡ, ಮಾಡಿದರೆ ಸಂಸಾರ, ಎಂಬ ಗಾಧೆಗೆ ಸರಿಯಾಗಿ
ತಿಮ್ಮು ಮಾಡುತ್ತಾ ಇದ್ದ ಲಾಲನೆಯಿಂದ ಆ ಹುಡುಗನಿಗೂ
ಅವಳಲ್ಲಿ ವಿಶೇಷವಾದ ಪ್ರೀತಿ ಇತ್ತು, ಮಗುವು ಚಿಕ್ಕಮ್ಮ
ನೆಂದು ಕರೆಯುತ್ತಾ ಅವಳನ್ನು ಯಾವಾಗಲೂ ಎಡೆಬಿಡದೆ
ಅವಳ ಹಿಂದೆಯೇ ಓಡಿ,ಯಾಡುತ್ತಾ ಇತ್ತು. 

ಮಹಾದೇವನಿಗೆ ಅಕ್ಷರಾಭ್ಯಾಸವಾಯಿತು. ಆವೂರಲ್ಲಿಯೇ
ನಾರಪ್ಪಯ್ಯನೆಂಬ ಒಬ್ಬ ಬ್ರಾಹ್ಮಣನು ಒಂದು ಮಠವನ್ನು
ಇಟ್ಟಿದ್ದನು. ಆ ಮಠಕ್ಕೆ ಮಹಾದೇವನನ್ನು ಕಳುಹಿಸಿದರು.
ಮಹಾರಾಷ್ಟ್ರವೂ ಈ ನಾರಪ್ಪಯ್ಯನಿಗೆ ಬರುತಿತ್ತು. ಈಗ
ಇಂಗ್ಲಿಷ್ ಭಾಷೆ ಹೇಗೋ, ಆಗ ಮಹಾರಾಷ್ಟ್ರ ಅಥವಾ
ಹಿಂದವಿಯು ಹಾಗೆ, ರಾಜಭಾಷೆ ಎನ್ನಿಸಿಕೊಂಡಿತ್ತು. ರಾಜ್ಯಭಾ
ರದಲ್ಲಿ ನಡೆಯುತ್ತಿದ್ದ ಕಾಗದಪತ್ರಗಳೆಲ್ಲಾ ಹಿಂದವಿಯಲ್ಲಿಯೇ
ನಡೆಯುತಿತ್ತು. ಸರ್ಕಾರದ ಉದ್ಯೋಗಗಳು ಹಿಂದವಿಬಲ್ಲವ
ರಿಗೇ ಹೆಚ್ಚಾಗಿ ದೊರೆಯುತ್ತಿದ್ದವು. ಪುನಹ ಸಂಸ್ಥಾನದಲ್ಲಿ ಶ್ರೀ
ಮಂತ ಬಾಜೀರಾಯರು ನೆಲೆಯಾಗಿ ನಿಂತು ಅನೇಕ ರಾಜ್ಯ
--------------------------------

            ಮಾಡಿದ್ದುಣ್ಣೋ ಮಹರಾಯ.                    ೪೦

ಗಳನ್ನು ಜೈಸಿ ಅಲ್ಲಿ ತಮ್ಮ ಠಾಣ್ಯವನ್ನು ಇರಿಸಿ ತಮ್ಮ
ರಾಜ್ಯಭಾರಕ್ರಮವನ್ನೇ ಅಲ್ಲೆಲ್ಲಾ ಪ್ರಚಾರಕ್ಕೆ ತಂದರು;
ದೊಡ್ಡ ನವಾಬನೆಂದು ಹೆಸರುಗೊಂಡಿದ್ದ ಹೈದರಲ್ಲಿಯು ಕೆಲವು
ಮರಾಟೇ ಸೀಮೆಗಳನ್ನು ಜೈಸಿ ಮೈಸೂರು ರಾಜ್ಯವನ್ನೆಲ್ಲಾ
ತನ್ನ ಸ್ವಾಧೀನಮಾಡಿಕೊಂಡು ತನ್ನ ಕಡೇ ಕರಣೀಕರನ್ನೇ ಇ
ಟ್ಟು ಕೊಳ್ಳುವುದಕ್ಕೋಸ್ಕರವೂ, ಮರಾಟೆಯವರು ಲೆಕ್ಕಾಚಾರದಲ್ಲಿ
ಬುದ್ದಿವಂತರೆನ್ನಿಸಿಕೊಂಡಿದ್ದದರಿಂದಲೂ, ಈ ಸೀಮೆಯ ಅಧಿ
ಕಾರಗಳಿಗೆ ಅಲ್ಲಿನ ಜನರನ್ನು ಹೇರಳವಾಗಿ ತಂದನು. ಅವರು
ಹಿಂದವಿಯಲ್ಲಿಯೇ ಸರ್ಕಾರದ ಕಾಗದಪತ್ರಗಳನ್ನು ಇಡುತಾಬಂ
ದರು, ಈ ಭಾಷೆಯು ಟಿಪ್ಪುಸುಲ್ತಾನನ ದಿವಸದಲ್ಲಿಯೂ ಕೃಷ್ಣ
ರಾಜ ಒಡೆಯರವರ ರಾಜ್ಯಭಾರದಲ್ಲಿಯೂ ಮತ್ತೂ ವೃದ್ಧಿಗೆ
ಬಂತು. ಆದ್ದರಿಂದ ಇದು ರಾಜಭಾಷೆ ಯೆನಿಸಿಕೊಂಡಿತ್ತು. ಇ
ದನ್ನು ಕಲಿಸುವ ಉಪಾಧ್ಯಾಯರಿಗೆ ಪಂತೋಜಿಗಳೆಂದು ಹೆಸರು.
ಇತರ ಕನ್ನಡ ಉವಾಧ್ಯಾಯರಿಗಿಂತಲೂ ಇವರಿಗೆ ಗೌರವ
ಹೆಚ್ಚಾಗಿತ್ತು. ಹುಡುಗರೂ ಸಹಿತ ಹೆಚ್ಚಾಗಿ ಬರುತಿದ್ದರು.
ಪಂತೋಜಿಗಳ ವರಮಾನವೂ ಹೆಚ್ಚಾಗಿಯೇ ಇತ್ತು. ಈ ಮ
ಠಗಳಿಗೆ ಸಾಲೆ ಎಂದು ಹೇಳುತ್ತಾರೆ. ಹೀಗಿರಲು, ಮಹಾ
ದೇವನಿಗೆ ತಾರಾಬಲವನ್ನು ನೋಡಿ, ಒಳ್ಳೆ ದಿವಸ ಎಣ್ಣೆಶಾ
ಸ್ತ್ರವನ್ನು ಮಾಡಿ ಎರೆದು ಹತ್ತುಗಂಟೇಮೇಲೆ ಲಗ್ನಕ್ಕೆ
ಹನ್ನೊಂದನೆಕಡೆ ಗುರು ಇರಲಿಕ್ಕಾಗಿ, ಅಕ್ಷರಾಭ್ಯಾಸವನ್ನು
ಮಾಡಿಸಿದರು. ಮಧ್ಯಾಹ್ನ ಬ್ರಾಹ್ಮಣರಿಗೂ ಮುತ್ತೈದೇರಿಗೂ
ಪಂತರ್ಪಣೆಯನ್ನು ಮಾಡಿ ರಾತ್ರಿ ಆರತಿ ಅಕ್ಷತೆ ಮಾಡಿ 
----------------------------

೪೨       ಮಾಡಿದ್ದುಣ್ಣೋ ಮಹಾರಾಯ.

ಉಂಡೆಚಕ್ಕುಲಿ ಬಾಗಿನವನ್ನು ಕೊಟ್ಟರು. ಮಹಾದೇವನು ದಿನ
ಚರಿಯಲ್ಲಿಯೂ ಬೆಳಗ್ಗೆ ಮದ್ಯಾಹ್ನ ಸಹಾ ಮಠಕ್ಕೆ ಹೋಗಿ
ಉಪಾಧ್ಯಾಯರು ಹೇಳಿದಹಾಗೆ ಕಲಿತುಕೊಳ್ಳುತ್ತಾ ಬಂದನು.
ಏಳುಮುಂಚು ಮಾತು ಹಿಂಚು, ಎಂದುಕೊಂಡು ಹುಡುಗರನ್ನು
ಯಾವಾಗಲೂ ಹೊಡೆದು ಹೆದರಿಸುತಾ ಪಾಠಗಳನ್ನ ಹೇಳು
ತಾ ಇದ್ದ ಈ ಉವಾಧ್ಯಯನ ಕೈಯಿಂದ ಯಾವಾಗಲಾದರೂ
ಮಹಾದೇವನಿಗೆ ಒಂದೊಂದು ಪೆಟ್ಟು ಬೀಳುತಿತ್ತು, 

ಈ ಪಂತೋಜಿಯು ತನ್ನನ್ನು ಹೊಡೆದಾಗ ಮಹಾದೇ
ವನ ಕಣ್ಣಿನಲ್ಲಿ ಸಾಧಾರಣವಾಗಿ ನೀರು ಬರುತ್ತಾ ಇತ್ತು. ಆದರೆ
ಇತರ ಹುಡುಗರನ್ನು ಹೊಡೆಯುವಾಗ ಅವರು ದುಃಖಪಡುವು
ದನ್ನು ನೋಡಿ ಮಹಾದೇವನು ಬಹಳವಾಗಿ ಅಳುತ್ತಿದ್ದನು.
ಇವನನ್ನು ಸಮಾಧಾನವಾಗುವುದು ಕಷ್ಟವಾಗುತಿತ್ತು ಒಂದು
ದಿನ ಸದಾಶಿವದೀಕ್ಷಿತನು ಮಗನನ್ನು ನೋಡಿ,
ಸದಾಶಿವ-ಯಾಕೆ ಮಗು, ಮರಕ್ಕೆ ಹೋಗುವುದಿಲ್ಲವೆ ?
ಮಹಾದೇವ-ಪಂತರು ಹೊಡೆಯುತ್ತಾರೆ.
ಸದಾ- ನಿನ್ನನ್ನು ಹೊಡೆದರೆ ? ಯಾವಾಗ ? ಯಾಕೆ ?
ಮಹಾ-ಭಾವ, ನನ್ನನ್ನು ಹೊಡೆದರೂ ಹೊಡೆಯಲಿ, ಎಲ್ಲಾಹು
ಡುಗರನ್ನೂ ಹೊಡೆಯುತ್ತಾರೆ. ಆ ಹುಡುಗರು ಅಳುವುದ
ನ್ನು ನೋಡಿದರೆ ನನಗೆ ಏನೋ ಸಂಕಟವಾಗಿ ಕಣ್ಣಿನಲ್ಲಿ
ನೀರು ಬರುತ್ತೆ.
ಸದಾ- ಹುಡುಗರು ತಪ್ಪಿದರೆ ಹೊಡೆಯುತ್ತಾರೆ.
ಮಹಾ-ಪಾಠ ಕೊಟ್ಟರೂ ಹೊಡೆಯುತ್ತಾರೆ ಇಲ್ಲದಿದ್ದರೂ ಹೊ
--------------------------------

            ಮಾಡಿದ್ದುಣ್ಣೋ ಮಹರಾಯ.     ೪೩
           
ಡೆಯುತ್ತಾರೆ, ತುಂಟತನ ಮಾಡಿದರೂ ಹೊಡೆಯುತ್ತಾರೆ,
ಇಲ್ಲದಿದ್ದರೂ ಹೊಡೆಯುತ್ತಾರೆ.
ಸದಾ-ಅದು ಹೇಗೆ ?
ಮಹಾ-ಹಾಗಾದರೆ ಹೇಳುತ್ತೇನೆ ಕೇಳು. ಹುಡುಗರು ಏನಾ
ದತಿಳಿಯದೇಹೋದಾಗ ಪಂತರನ್ನು ಕೇಳಿದರೆ ಅಂ
ಥಾಹುಡುಗರನ್ನು ಚೆನ್ನಾಗಿ ಹೊಡೆಯುತ್ತಾರೆ. ಕೇಳಿದ್ದನ್ನು
ಹೇಳಿಕೊಡುವುದೂ ಇಲ್ಲ. ಯಾರಾದರೂ ಹುಡುಗರು ಗಟ್ಟಿ
ಯಾಗಿಕೂಗಿ ಗದ್ದಲ ಮಾಡಿದರೆ ತಮ್ಮ ಜಗಲೀಮೇಲಿ
ನಿಂದ ದುಮಿಕಿ ಬಂದು ಹತ್ತರ ಯಾವ ಹುಡುಗ ಕೈಗೆ
ಸಿಕ್ಕು ತಾನೋ ಅವನನ್ನೆ ಹಿಡಿದು ಹೊಡೆಯುತ್ತಾರೆ. ತಪ್ಪಿ
ಲ್ಲದಿದ್ದರೂ ಹೊಡೆಯುತ್ತಾರೆ.
ಸದಾ- ನಾನಲ್ಲ ಎಂದು ಆ ಹುಡುಗ ಹೇಳಬೇಕು.
ಮಹಾ- ಹಾಗೆ ಅವ ಅಂದರೆ ಅವನ ಆಶೆಯೇ ಇಲ್ಲ.
ಬೆತ್ತ ಮುರಿಯ ಹೊಡೆಯುತ್ತಾರೆ. ಅದೂ ಸಾಲದೆ ಮು
ಷ್ಟಿಯಿಂದ ತಲೆಯಮೇಲೆ ಮಟ್ಟ ಮಟ್ಟ ತಲೆಯನ್ನೆ
ಲ್ಲಾ ಹರಳ ಕಾಯಿ ಮಾಡುತ್ತಾರೆ. ಹೆಚ್ಚಾಗಿ ರೋಷದಿಂ
ದ ಹಿಂತಿರುಗಿ ತಿರುಗಿ ಬಂದು ಮೊಳಕೈಯಿಂದ ತಲೆಯ
ಮೇಲೂ ಬೆನ್ನ ಮೇಲೂ ಕುಕ್ಕುತಾರೆ, ಕಿವಿಹಿಡಿದು ಮೇ
ಲಕ್ಕೆ ಎತ್ತುತ್ತಾರೆ, ಒಳಸುಂಟಿಗಳಂತೂ ಗೊತ್ತೇಇಲ್ಲ. ಆ 
ಗೋಳನ್ನು ನಾನು ನೋಡಲಾರೆ ಭಾವ.
ಸದಾ-ಇಷ್ಟೇತಾನೆ !
ಮಹಾ-ಇನ್ನೂ ಹೇಳುತ್ತೇನೆ ಕೇಳು, ಮಧ್ಯಾಹ್ನದಲ್ಲಿ ಬಂದು 
-------------------------------

೪೪        ಮಾಡಿದ್ದುಣ್ಣೋ ಮಹರಾಯ.

ಅವರ ಜಗಲೀಮೇಲೆ ಹಾಕಿರುವ ಚಾಪೇಮೆಲೆ ಕೂತು
ಕೊಂಡು ತೂಕಡಿಸುತಾರೆ, ಆಮೇಲೆ ಗೊರ್ ಗೊರ್ ಎಂ
ದು ನಿದ್ರೇಮಾಡುತಾರೆ. ಆಗ ಹುಡುಗರೆಲಾ ಪಿಸಪಿಸನೆ
ಮಾತನಾಡುತ್ತಾರೆ. ಸಿದ್ದ ಎನ್ನುವ ಹುಡುಗ ಇದಾನೆ.
ಇವನು ಪಂತರಿಗೆ ನಿತ್ಯವೂ ಬೆಳಗ್ಗೆ ಒಂದು ಕಾಸಿನ ನೆಸ್ಯ
ಮಧ್ಯಾಹ್ನದಮೇಲೆ ಎಲೆ ಅಡಕೆ ತಂದುಕೊಡುತ್ತಾನೆ. ಇವ
ನು ಏನಮಾಡಿದರೂ ಪಂತರು ಇವನನ್ನು ಹೊಡೆಯುವು
ದಿಲ್ಲ. ಹುಡುಗರೆಲ್ಲಾ ಇವನಿಗೆ ತಿಂಡಿ ತಂದುಕೊಡಬೇಕು.
ಇಲ್ಲದಿದ್ದರೆ ಪಂತರಸಂಗಡ ಸುಮ್ಮ ಸುಮ್ಮನೆ ಚಾಡಿಹೇಳು
ತಾನೆ. ತಾನೇ ಹುಡುಗರನ್ನು ಚಿವುಟುವುದು ಅವರು ಚಿ
ವುಟಿದರೆಂದು ತಾನೇ ಅವರಮೇಲೆ ಚಾಡಿ ಹೇಳುವುದು.
ಹೀಗೆಲ್ಲಾ ಏನೇನೋ ತುಂಟತನ ಮಾಡುತ್ತಾನೆ. ಈ ಸಿ
ದ್ದನು ಅವ ಬೈದ ಇವ ಉಗುಳಿದ ಅಂತ ಸುಳ್ಳು ಸು
ಳ್ಳು ಕೂಗುತ್ತಾನೆ. ಆಗ ಪಂತರು ನಿದ್ದೆಗಣ್ಣಿನಲ್ಲಿಯೇ
ಎದ್ದು ಬಂದು ಬೆತ್ರದಿಂದ ಎಲ್ಲರನ್ನೂ ನಾಲ್ಕು ನಾಲ್ಕು ಏ
ಟು ಹೊಡೆಯುತ್ತಾರೆ. ಸಿದ್ದನ್ನ ಹೊಡೆಯುವುದಿಲ್ಲ. ಚಾಡೀ
ಹೇಳುವವರನ್ನು ಹೊಡೆಯುವದಿಲ್ಲ. ಉಳಿದವರಿಗೆ
ಲ್ಲರಿಗೂ ಏಟು.
ಸದಾ-ನಿನ್ನನ್ನು ಹಾಗೆ ಹೊಡದರೆ ?
ಮಹಾ-ನಿತ್ಯವೂ ಹೊಡೆಯುತ್ತಾರೆ. ಬೆಳಗ್ಗೆ ಎದ್ದು ಬೆಕ್ಕಿನ 
ಮುಖ ನೋಡಬೇಡ, ಉಪಾದ್ರು ಹೊಡೆಯುತ್ತಾರೆ ಎಂದು
ಅಜ್ಜಿ ಹೇಳಿದಾಳೆ. ನಾನು ಬೆಕ್ಕಿನಮುಖ ನೋಡುವುದೇ
-------------------------------

        ಮಾಡಿದ್ದುಣ್ಣೋ ಮಹರಾಯ              ೪೫
       
ಇಲ್ಲ. ಆದರೂ ನನಗೆ ಏಟು ಬೀಳುತ್ತೆ, ರಾತ್ರೆ ಬಾಯಿ
ಪಾಠ ಮುಗಿದಮೇಲೆ ಹುಡುಗರಿಗೆ ಮಾನ್ಯ ಸೊನ್ನೆ ಹಾ
ಕುವಾಗಂತೂ ಗೊತ್ತೇಯಿಲ್ಲ. ಮೊನ್ನೆ ಬೆಳಿಗ್ಗೆ ನಾನು
ಮೊದಲು ಮಠಕ್ಕೆ ಹೋದೆ. ಆಮೇಲೆ ಎಲ್ಯಾ ಹುಡು
ಗರೂ ಬಂದರು. ನಾನು ಅವಲಕ್ಕಿಪುರಿ ಕೊಡಲಿಲ್ಲಅಂತ
ಸಿದ್ದ-ಮಹಾದೇವ ಹದಿನೈದನೆಯವನು ಎಂದು ಸುಳ್ಳಾ
ಗಿ ಕೂಗಿದ. ಪಂತರು ನನ್ನನ್ನು ಕೇಳದೆ, ನನಗೆ ಹದಿನೈ
ದು  ಏಟುಗಳನ್ನು ಬಲವಾಗಿ ಹೊಡೆದರು. ಕೈ ಊಟ
ಮಾಡುವುದಕ್ಕಾಗುವುದಿಲ್ಲ.
ಸದಾ-ಹಾಗೆ ಹೊಡೆಯಬೇಡಿ ಎಂದು ನಾನು ಹೇಳುತ್ತೇನೆ,
ಸುಮ್ಮನಿರು.
ಮಹಾ-ನಾಳೆಯಿಂದ ನಾನು ಮನೆಯಲ್ಲಿಯೇ ಓದುತ್ತೇನೆ, ಪಾ
ಠವನ್ನೆಲ್ಲಾ ನಿನ್ನ ಹತ್ತರ ಸರಿಯಾಗಿ ಒಪ್ಪಿಸುತ್ತೇನೆ.
ಸದಾ-ಹಾಗೆ ಮಾಡಬಾರದು, ಮಠಕ್ಕೆ ಹೋಗಬೇಕು.
ಮಹಾ-ಅಲ್ಲಿಗೆ ಹೋದರೆ ನನಗೆ ಅಳು ಬರುತ್ತೆ, ನನ್ನನ್ನು
ಹೊಡೆದರೂ ಹೊಡೆಯಲಿ, ಚಿಕ್ಕ ಹುಡುಗರನ್ನೆಲ್ಲಾ ಬಹಳ
ವಾಗಿ ಹಿಂಸೆಮಾಡುತಾರೆ, ತಪ್ಪಿರಲಿ ಇಲ್ಲದೇ ಇರಲಿ,
ಹುಡುಗರನ್ನು ಕೋದಂಡಕ್ಕೆ ಎತ್ತಿ ತೂಗಕಟ್ಟ ಕಾಲ
ಮೇಲೆ ಹೊಡೆಯುತ್ತಾರೆ. ಗುಗ್ಗರಗೋಲುಹಾಕಿ ಹಿಂದು
ಗಡೆ ಮೆಣಸಿನಕಾಯ ಹೊಗೆ ಹಾಕುತ್ತಾರೆ. ಗೋಡೆಗೆ
ಕುರುಚಿ ಕೂರಿಸಿ ಹಲಗೆ, ಚಪ್ಪಡಿ ಕಲ್ಲು, ಏನು ಸಿಕ್ಕಿ
ದರೆ ಅದನ್ನು ತಂದು ಹೇರುತ್ತಾರೆ. ಆ ಹುಡುಗರು ಅಳು
-------------------------------

೪೬      ಮಾಡಿದ್ದುಣ್ಣೋ ಮಹರಾಯ.

ವುದನ್ನು ನೋಡಿದರೆ ನನಗೂ ಬಹಳವಾಗಿ ಅಳುಬರು
ತ್ತೆ, ನನ್ನ ಮುಖವನ್ನು ಪಂತರು ನೋಡಿ ನೀನು
ಯಾಕೆ ಅಳುತ್ತೀಯೆಲಾ ಎಂದು ಕೂಗುತಾ ಬೆತ್ತದಿಂದ 
ನನ್ನನ್ನೂ ಸೆಳೆಯುತ್ತಾರೆ. ಪುಂಡಮಾತ ಬೈಯುತಾರೆ.
ಸದಾ- ನಾನು ಪಂತರನ್ನು ಕಂಡು ಹೊಡೆಯಬೇಡಿ ಎಂದು ಹೇ
ಳುತ್ತೇನೆ. ನೀನು ಈ ದಿವಸ ಹೋಗಿಬಾ.

ಹೀಗೆ ತಂದೆ ಮಕ್ಕಳು ಮಾತನಾಡುತ್ತಾ ಇರುವಾಗ,
ಮಠದಿಂದ ಇಬ್ಬರು ಹುಡುಗರು ಬಂದು-ಮಹಾದೇವ, ಯಾ
ಕಪ್ಪ ಮಠಕ್ಕೆ ಬರಲಿಲ್ಲ ? ಪಂತರು ಕರೆದುಕೊಂಡು ಬರಹೇ
ಳಿದರು, ನಿಮಗೆ ಆಗುತ್ತೆ, ಬನ್ನಿ, ಎಂದರು. ಆಗ ಮಹಾ
ದೇವನು ಅಳುತಾ ತಂದೆಯ ಮುಖವನ್ನು ನೋಡಿ ಬಿಕ್ಕಳಿ
ಸುತಾ ನಿಂತು ಕೊಂಡನು. ಆಗ ಸದಾಶಿವದೀಕ್ಷಿತನು ತನ್ನ
ಮನಸ್ಸಿನಲ್ಲಿ-ಅಯ್ಯೋ, ಈ ಉವಾಧಯನು ಯಾಕೆ ಹೀಗೆ
ಹುಡುಗರನ್ನು ಹೊಡೆಯುತಾನೋ ತಿಳಿಯದಲ್ಲ. ಹೊಡೆದರೆ
ವಿದ್ಯಬರುತ್ತೆಯೆ ? ಮಕ್ಕಳು ಇದ್ದರೂ ಮೊಂಡಿಗೆ ಬೀಳು
ತಾರೆ. ಅವರಿಗೆ ಹೆಚ್ಚಿನ ಭಯದಲ್ಲಿ ಬಂದದ್ದೂ ಮರೆತು
ಹೋಗುತ್ತೆ ಎಂದುಕೊಳ್ಳುತಾ, ಮಠದ ಹುಡುಗರನ್ನು ಕು
ರಿತು-ಎಲ ಹುಡುಗರ, ನಮ್ಮ ಮಹಾದೇವನನ್ನು ಹೊಡೆಯ
ಬೇಡಿ ಎಂದು ಪಂತರಿಗೆ ಹೇಳಿ, ನಾನು ಹೇಳಿದರು ಎಂದು
ಹೇಳಿ, ಹೀಗೆಂದು ಮಹಾದೇವನನ್ನು ಸಾಲೆಗೆ ಕಳುಹಿಸಿದನು.
ಪಂತನು ಮಠದ ಬಾಗಿಲಲ್ಲಿ ಉದ್ದವಾದ ಸಂಣ ಬೆತ್ತವನ್ನು
ಹಿಡಿದು ಅಳಾಡಿಸುತಾ ದೂರದಲ್ಲಿಯೇ ಹುಡುಗರ ಸಂಗಡ
---------------------------------

    ಮಾಡಿದ್ದುಣ್ಣೋ ಮಹರಾಯ.         ೪೭
   
ಮಹಾದೇವ ಬರುವುದನ್ನು ಕಂಡು-ಎಳೆದುಕೊಂಡು ಬನ್ನಿರೊ
ಅವನನ್ನ ? ಎಷ್ಟು ಹೊತ್ತು ಬರುವುದು ? ಎಂಬದಾಗಿ ಆಲಿ
ಅಬ್ಬರಿಸುತಾ ಮಹಾದೇವನನ್ನು ಮನಸ್ಸು ಬಂದಹಾಗೆ ಬೆತ್ತ
ದಿಂದ ಹೊಡೆಯಲು ಆರಂಭಿಸಿ-ನಿನ್ನನ್ನು ಮಠದಲ್ಲಿ ಗುಂಡೀ
ತೋಡಿ ಹೂಳಿಬಿಡುತ್ತೇನೆ, ಎಂದನು. ಆಗ ಮಹಾದೇವನನ್ನು
ಕರೆದುತಂದ ಹುಡುಗರು ಪಂತರೆ, ಮಹಾದೇವನ ಅಪ್ಪ ನಿನಗೆ
ಹೇಳು ಎಂದರು. ಹೊಡೆಯಬೇಡಿಯಂತ ಹೇಳು ಎಂದರು,
ಎಂದು ಹೇಳಿದರು. ಅದಕ್ಕೆ ನಾರಪ್ಪಯ್ಯನು ಶಿಪಾರ್ಶಿ ತಂದೆ
ಯೇನೋ ಶಿಪಾರ್ಶಿ? ಎನ್ನು ತಾ ಮಹಾದೇವನನ್ನು ಇನ್ನೂ ಎರ 
ಡು ಏಟ ಹೆಚ್ಚಾಗಿ ಹಾಕಿದನು. ಮಹಾದೇವನು ಹೊಡೆತವ 
ನ್ನು ತಾಳಲಾರದೆ ಸಂಕಟಪಡುವುದನ್ನು ಕಂಡು ಮಠದ ಹು
ಡುಗರೆಲ್ಲಾ-ಇಂಥಾ ಒಳ್ಳೆ ಹುಡುಗನನ್ನು ಹೀಗೆ ಅನ್ಯಾಯ
ವಾಗಿ ಹೊಡೆದರಲ್ಲಾ ಎಂದು, ಅಳುತಾ ಇರುವ ಮಹಾದೇವನ
ಮುಖವನ್ನು ನೋಡಿ ಸಹಿಸಲಾರದೆ ತಾವೂ ಅಳುವವರಹಾಗೆ
ಮುಖರಸವನ್ನು ತೋರಿಸುತಾ ಸರಿತಾಪ ಪಡುತಾ, ತಮ್ಮೊಳಗೆ
ಗುಸ ಗುಸನೆ ಏನೂ ಮಾತನಾಡಿಕೊಳ್ಳುತಿದ್ದರು. ಆ ದಿವಸ
ವೆಲ್ಲಾ ಪಂತನ ಕೋಪ ಇಳಿಯಲೇ ಇಲ್ಲ. ಮಧ್ಯಾಹ್ನದಲ್ಲಿ
ಹಲಗೆ ಬರೆಯುವ ಹುಡುಗರಿಗೆ ಕೈ ಬೆರಳ ಗಿಂಣುಗಳಮೇಲೆ
ಏಟು ಬಿತ್ತು. ಕರಡು ಎಂದರೆ ಕಾಗದದಮೇಲೆ ಬರೆದು ಮ
ಸಕು ಮಾಡುವ ಹುಡುಗರಿಗೆ ಲೆಕ್ಕಣಿಕೆಯಲ್ಲಿ ಚೆನ್ನಾಗಿ ಪೆ
ಟ್ಟು ಬಿತ್ತು, ಮರಳಮೇಲೆ ಬರೆಯುವ ಚಿಕ್ಕ ಹುಡುಗರ ಬೆನ್ನಿನ
ಮೇಲಂತೂ ಬೆತ್ತಸೀಳಿ ಮುರಿದುಹೋಗುವಮುಟ್ಟಿಗೂ ಛಡಿ 
-----------------------------------

೪೮      ಮಾಡಿದ್ದುಣ್ಣೋ ಮಹರಾಯ.

ಯಾಡಿ ಹೋಯಿತು. ಎಲ್ಲಾ ಬಾಲಕರಿಗೂ ಆದಿವಸ ಪ್ರಾಯ
ಶ್ಚಿತವಾಯಿತು. ಎಲ್ಲರಿಗೂ ಮೈಯೆಲ್ಲಾ ಬಾಸುಂಡೆ ಬಂತು.

ತರುವಾಯ ಪ್ರದೋಷಬಂತು. ಸಾಯಂಕಾಲದಲ್ಲಿ ಎಂದಿ
ನಂತೆ ಸರಸ್ವತೀಪೂಜೆ ಮೊದಲಾದು ಜರಗಿತು, ವಾಡಿಕೆಯ
ಮೇರೆ ಕಾಗದಾ ಪುಸ್ತಕ ಓದುವ ಹುಡುಗರು ತಲೆಗೆ ಒಂದು
ದುಡ್ಡನ್ನೂ, ಹಲಗೇ ಬರೆಯುವವರು ಮೂರುಕಾಸನ್ನೂ,
ನೆಲ ದಮೇಲೆ ಪಳ್ಳಿ ಬರೆಯುವವರು ಎರಡುಕಾಸನ್ನೂ ತಂದು ಪಂತರಿಗೆ
ಆ ದಿವಸಕೊಟ್ಟು ಶಾರದಾ ಪೂಜೆಯನ್ನು ಮಾಡಿದರು. ಪಂತ
ರಿಗೆ ಆ ದಿನ ಸಾಯಂಕಾಲ ಬಹಳ ಸಂತೋಷವಾಯಿತು.
ಆಗ ಹುಡುಗರೆಲ್ಕಾ-ಪಂತರೇ, ನಾಳೆಯಿಂದ ಮೂರುದಿವಸ
ಅನಧ್ಯೈಯನ, ಸಾಲೆಯಿಲ್ಲ. ಮಠದಲ್ಲಿ ಕಸ ಹೆಚ್ಚಾಗಿದೆ, ಈ
ಮೂರುದಿವಸದೊಳಗಾಗಿ ಗುಡಿಸಿ ಸಾರಿಸಿ ಚೊಕ್ಕಟಮಾಡು
ತೇವೆ ಎಂದರು. ನಾರಪ್ಪಯ್ಯನು ಹಾಗೇ ಆಗಲಿ ಎಂದು
ಒಪ್ಪಿಕೊಂಡು ಮನೆಗೆ ಹೊರಟುಹೋದನು.

ರೂಪಿನಲ್ಲಿ ಅಕ್ಷಣವಾಗಿಯೂ, ಬುದ್ಧಿಯಲ್ಲಿ ವಿಶೇಷ
ವಾಗಿ ಪಟುವಾಗಿಯ, ಗುಣದಲ್ಲಿ ಹೆಚ್ಚಾದ ಸಾತ್ವಿಕ ಸ್ವಭಾ
ವವುಳ್ಳವನಾಗಿಯೂ ಇದ್ದ ಮಹಾದೇವನಿಗೆ ಬಿದ್ದ ಏಟಿನ ಪ್ರ
ಸ್ವಾಸವನ್ನು ಪದೇಪದೇ ಮಠದ ಹುಡುಗರೆಲ್ಲಾ ಹೊರಗೂ
ಮನೆಯಲ್ಲಿಯೂ ಮಾತನಾಡಿಕೊಳ್ಳುತ್ತಾ ಇದ್ದರು. ಪಂತರು
ಇತರ ಹುಡುಗರಿಗೆ ಕೊಟ್ಟ ಏದೂ ಅವರು ಸಂಕಟಪಡು
ವುದೂ ಸಹಿತ ಈ ಸಂದರ್ಭದಲ್ಲಿ ಜ್ಞಾಪಕಕ್ಕೆ ಬರತಕ್ಕದ್ದು ಸಹ
ಜವಾಗಿಯೇ ಇದೆ. ಈ ಹುಡುಗರಲ್ಲಿ ಬಸವನೆಂಬ ಸುಮಾರು
------------------------------

        ಮಾಡಿದ್ದುಣ್ಣೋ ಮಹಾರಾಯ.               ೪೯

ಹದಿನೆಂಟು ವರುಷದ ಒಬ್ಬ ಹುಡುಗನಿದ್ದನು. ಇವನು ಆಗಾ
ಗ್ಯೆ ಮಠಕ್ಕೆ ಬಾರದೆ ತಪ್ಪಿಸಿಕೊಂಡು ಓಡಿಹೋಗುತಿದ್ದ ಕಾರ
ಣ, ಇವನ ಕಾಲಿಗೆ ಒಂದು ಕಬ್ಬಿಣದ ಸರಪಣಿಯನ್ನು ಹಾ
ಕಿ ಅದರ ಕೊನೆಗೆ ಒಂದು ಬಲವಾದ ಹುಣಸೇ ಕೊರಡನ್ನು
ತಗಲಿಸಿದ್ದರು. ಇವನು ತುಂಟಹುಡುಗರಲ್ಲಿ ಅಗ್ರಗಣ್ಯನಾಗಿ
ದ್ದನು. ಯಾವ ಕೆಟ್ಟತನಕ್ಕೂ ಗಣೇಶನಪೂಜೆ ಇವನದೇ ಆ
ಗಿತ್ತು. ಈ ಪಂತೋಜಿಯ ಕೈಯಿಂದ ಬಗೆಬಗೆಯಾದ ಹಲ
ವು ಶಿಕ್ಷೆಗಳನ್ನು ಹೊಂದಿ ಈ ಬಸವನ ಮೈ ಜೆಡು ಕಟ್ಟಿ
ಹೋಗಿತ್ತು. ಇವನು ಇತರರನ್ನು ಕುರಿತು ಈ ಸರಪಣಿ
ಯ ಕೊರಡನ್ನೂ ಏನಾದರೂ ಮಾಡಿ ನೀವೆಲ್ಲಾ ತೆಗೆಯಿಸಿ
ಬಿಟ್ಟರೆ, ಈ ಹಾಳ ಪಂತನಕಾದ ಯಾರಿಗೂ ಇಲ್ಲದಂತೆ ನಾ
ನು ಉಪಾಯವನ್ನು ಹೇಳುತ್ತೇನೆ ಎಂದನು. ಪಡ್ಡೆಹುಡುಗ
ರೆಲ್ಲಾ ಸೇರಿ ಇದಕ್ಕೆ ಒಪ್ಪಿ ಚೆಂಡಾಡುವ ನೆವದಲ್ಲಿ ಹೊಲಗಳಿ
ಗೆ ಹೋಗಿ ತಕ್ಕ ಪ್ರಯತ್ನದಿಂದ ಬಸವನ ಕಾಲಿಗೆ ಹಾಕಿದ್ದ
ಕೊರಡನ್ನು ಕಡಿದು, ಸರಪಣಿಯ ಕೊಂಡಿಯನ್ನು ಮುರಿದು
ಬಿಟ್ಟರು. ಬಸವನ ಕಾಲಲ್ಲಿದ್ದ ಸಂಕೋಲೆ ತಪ್ಪಿ ಹೋಯಿತು.
ಇವನನ್ನು ಮುಂದಾಳಾಗಿ ಮಾಡಿಕೊಂಡರು. ಇವರೆಲ್ಲರೂ ಸೇ
ರಿ ಮಠವನ್ನು ಚೆನ್ನಾಗಿ ಸಾರಿಸಿ ಗುಡಿಸಿದರು. ರಂಗವಲ್ಲಿ
ಯನ್ನು ಹಾಕಿದರು. ಪಂತೋಜಿಯು ಕೂತುಕೊಳ್ಳುವುದಕ್ಕೆ
ವಿಸ್ತಾರವಾಗಿ ಚೌಕನಾಗಿರತಕ್ಕೆ ಒಂದು ಜಗಲಿ ಇತ್ತು.
ಪಂತನು ತನ್ನ ನೆಶ್ಯದ ಸಿಂಬಳವನ್ನು ಒರೆಯಿಸಿ ಒರೆಯಿಸಿ
ಪಕ್ಕದ ಗೋಡೆಯೆಲ್ಲಾ ಕರ್ರಗಾಗಿತ್ತು. ಪಂತನು ಕೂತುಕೊ
---------------------------

೫೦         ಮಾಡಿದ್ದುಣ್ಣೋ ಮಹರಾಯ.

ಳ್ಳುವ ಹಳೇ ಚಾಪೆಯ ಕೆಳಗೆ ಅವನು ಸೀತ ಸಿಂಬಳವು ಹೆ
ಚ್ಚಾಗಿ ಕರೆಕಟ್ಟಿತ್ತು. ಹುಡುಗರು ಆ ಚಾಪೆಗೆ ಬದಲಾಗಿ
ಬೇರೆ ಹೊಸಚಾಪೆಯನ್ನು ತಂದುಹಾಕಿ ಪಕ್ಕದ ಗೋಡೆಗೆ ಸು
ಣ್ಣವನ್ನು ತೊಡೆದು ದಿಟ್ಟನಾಗಿ ಮಾಡಿದರು.

ತ್ರಯಾದಶಿಯ ದಿವಸ ಪಂತನು ಮಹಾದೇವನನ್ನು
ಹೊಡೆದದ್ದಕ್ಕೆ ಮೈಯೆಲ್ಲಾ ಬಾಸುಂಡೆಯಾಗಿ ರಕ್ತ ಉಮ್ಮಿ
ಕೊಂಡು ಬರುತಿತ್ತು. ಈ ಹುಡುಗನು ಬಿಕ್ಕಳಿಸಿಬಿಕ್ಕಳಿಸಿ
ಕೊಂಡು ಗೊಳೋ ಎಂದು ಅಳುತಾ ಮನೆಗೆ ಬಂದನು, ಇವ
ನ ಸ್ಥಿತಿಯನ್ನು ನೋಡಿ ಅಜ್ಜಿಯಾದ ಪಾರ್ವತಮ್ಮನು ಅ
ಳುವುದಕ್ಕೆ ಆರಂಭಿಸಿದಳು. ಇವನನ್ನು ಮಗುವಿನಿಂದ ಎ
ಆಡಿಸಿ ಹೆಚ್ಚಿನ ಲಾಲನೆಯಿಂದ ನೋಡಿಕೊಳ್ಳುತಿದ್ದ ತಿ
ಮ್ಮಮ್ಮನ ದುಃಖವನ್ನು ನೋಡಿ ಸಹಿಸುವುದು ಕಷ್ಟವಾಯಿ
ತು, ತಾಯಿ ಇಲ್ಲದ ಮಗುವನ್ನು ಕಟ್ಟಿಕೊಂಡು ಸಾಕಿ ಸಲಹಿ
ಚಿಕ್ಕದನ್ನು ದೊಡ್ಡದಾಗಿ ಮಾಡಿದವರಿಗೆ ಲಕ್ಷಣವಾಗಿ ಗುಣ
ವಂತನಾದ ಹುಡುಗನಲ್ಲಿ ಅಧಿಕವಾದ ವಾತ್ಸಲ್ಯವಿರುವುದು
ಅನುಭವಸಿದ್ಧವಾಗಿದೆ. ಆಗ ಹೊರಗಿನಿಂದ ಮನೆಗೆಬಂದ ಸ
ದಾಶಿವದೀಕ್ಷಿತನು ಹುಡುಗನ ಸ್ಥಿತಿಯನ್ನು ನೋಡಿ ಕಣ್ಣಿನಲ್ಲಿ
ನೀರ ಹಾಕುವವರೆಗೂ ಒಳಗೆ ಪೇಚಾಡುತಾ ಮಗುವಿಗೆ ಆ
ಗಿದ್ದ ಪೆಟ್ಟಿನ ಗಾಯವನ್ನೆಲ್ಲಾ ನೋಡಿದನು. ಮಗನನ್ನು ವ
ಹಿಸಿಕೊಂಡು ತಾನು ಯಾವಮಾತನಾಡಿದರೂ ಉಪಾಧ್ಯಾಯ
ನಲ್ಲಿ ಹುಡುಗನಿಗೆ ಗೌರವ ಕೆಟ್ಟಿತು, ಅಲಕ್ಷ್ಯ ಹುಟ್ಟಿತು, ಹಾಗಾದರೆ
ಉಪಾಧ್ಯಾಯ ಏನಹೇಳಿಕೊಟ್ಯಾಗೂ ಅದು ಹು
--------------------------

        ಮಾಡಿದ್ದುಣ್ಣೋ ಮಹರಾಯ.  ೫೧
ಡುಗನಿಗೆ ಬರುವುದಿಲ್ಲ, ಎಂಬಯಾಚನೆಯಿಂದ ತನ್ನ ಮಾತಿನ
ಲ್ಲಿಯ ರೀತಿಯಲ್ಲಿಯ ಮಗನಕಡೆಗೆ ವಾಲದೇ ತೂಕಮಾ
ಡಿದಂತೆ ಮಾತನಾಡುತಿದ್ದ ದೂರದರ್ಶಿಯಾದ ಸದಾಶಿವದೀಕ್ಷಿತ
ನಿಂದ ಕೂಡ ಉವಾಧ್ಯಾಯರಮೇಲೆ ಆಕ್ಷೇಪಣರೂಪವಾಗಿ ಹ
ಲವು ಮಾತುಗಳನ್ನು ಆ ತರಳನ ಸ್ಥಿತಿಯು ಹೊರಡಿಸಿತು.
ಆಗ ಆತನು ಮಗುವನ್ನು ಇಷ್ಟು ಕಷ್ಟಪಟ್ಟು ಹಾಕಿದ್ದು ಇ
ಲ್ಲಿಗೆ ಬಂತೆ, ಎಂದುಕೊಂಡು ಒಳಗೇ ಸಂಕಟಪಡುತಾ ಮ
ಗುವನ್ನು ಉಪಚರಿಸಿದನು. ಹೆಚ್ಚಿನ ಬಾಧೆಯಿಂದ ಮನೆಯಲ್ಲಿ
ಯೇ ಆಡಿಕೊಂಡು ಚತುರ್ದಶಿ ಆದಿಯಾದ ಮರುದಿವಸ
ನನ್ನ ಮನೆಯಲ್ಲಿಯೇ ಕಳೆಯುತ್ತಿದ್ದ ಮಹಾದೇವನಿಗೆ ಬಹು
ವಾಗಿ ಮನೆಯವರೆಲ್ಲಾ ಉಪಚರಿಸಿದರು. ಪೆದ್ದನಾದ ಕಿಟ್ಟನೂ
ಸಹಿತ ಹಾರಾಡುವುದಕ್ಕೆ ಮೊದಲುಮಾಡಿದನು. ಇವನು ಆಗ-
ತಿಮ್ಮ, ಮಗೂನ ಆ ಹಾಳಮಠಕ್ಕೆ ಕಳಿಸಬೇಡಕಣೆ, ಭಾವ
ಏನಾದರೂ ಹೇಳಲಿ, ಈ ಕುಂಟುಪಾದ್ರಿಗೆ ಬುದ್ದಿ ಕಲಿಸಿಬಿಡು
ತೇನೆ ಬುದ್ದೀನ, ನನ್ನೂ ಹೀಗೆ ಹೊಡೆಯುತ್ತಾ ಇದ್ದ. ನಾನು
ಕಾಲಿಗೆ ಬುದ್ದಿಹೇಳಿದ್ದೆ ಕೆಲಸ ! ಅಷ್ಟಲ್ಲದೇ ಏನು ? ನಮ್ಮ
ಮಗುವನ್ನು ಇವನು ಯಾಕೆ ಹೊಡೆಯುವುದು, ಇವನ ಮ
ಗುವನ್ನು ನಾವೇನಾದರೂ ಹೊಡೆದೆವೆ ? ಅವನ ಪ್ರತಿಷ್ಟೆ ಅಷ್ಟ
ರಲ್ಲಿಯೇ ಇದೆ. ಇವನ ಧಾರಾಳವನ್ನು ನಾವೇನೂ ಕಾಣೆವೋ ?
ಅವತ್ತು ಒಂದು ಚಿಟಗಿ ನೆಶ್ಚಾಕೊಡೋ ಎಂದರೆ ಕೊಡಲಿಲ್ಲ.
ಕೊಟ್ಟಿದ್ದರೆ ಇವರ ಅಪ್ಪನಗಂಟು ಹೋಗುತಿತ್ತೋ ! ಭಾವ ಈ
ಉವಾದ್ರೀ ಮಠಕ್ಕೆ ಮಹಾದೇವನನ್ನು ಕಳುಹಿಸಬೇಡ, ಇನ್ನು ಮೇಲೆ 
----------------------------------

೫೨     ಮಾಡಿದ್ದುಣ್ಣೋ ಮಹಾರಾಯ.
ಮಗೀಗೆ ನಾನು ಎಲ್ಲಾ ಹೇಳಿಕೊಟ್ಟು ಕಲಿಸಿಬಿಡುತ್ತೇನೆ. ಹೀಗೆಂ
ದು ಮನಸ್ವಿ ಹರಟೇಹೊಡೆದನು. ಆಗ ಸದಾಶಿವದೀಕ್ಷಿತನು ಇ
ವನನ್ನು ಸಮಾಧಾನ ಮಾಡಿ ಪಂತನಲ್ಲಿ ಹುಡುಗನಿಗೆ ಗೌರವ
ತಪ್ಪದಹಾಗೂ ಹುಡುಗನಿಗೆ ಆಪ್ಯಾಯನವಾಗಿರುವಹಾಗೂ ಯಾವ
ರೀತಿಯಲ್ಲಿ ಮಾತನಾಡಬೇಕೋ ಹಾಗೆ ಮಾತನಾಡಿದನು.

- ಅನಧ್ಯೈನ ಕಳೆಯಿತು. ಬಿದಿಗೆ ದಿವಸ ಬೆಳಿಗ್ಗೆ ಮಹಾ
ದೇವನಿಗೆ ಮುಖವನ್ನು ತೊಳೆದು ತಿಂಡಿಯನ್ನು ಕೊಟ್ಟು ನೀ
ನು ಮಠಕ್ಕೆ ನಡೆ, ನಾನೂ ನಿನ್ನ ಹಿಂದೆಯೇ ಬರುತ್ತೇನೆ,
ಹೊಡೆಯಬೇಡಿ ಎಂದು ಪಂತರಿಗೆ ಹೇಳುತ್ತೇನೆ, ನಡೆ ಎಂದು
ಅಂಗಿಯನ್ನು ತೊಡಿಸಿ ದಫ್ತರವನ್ನು ಕೈಗೆ ಕೊಟ್ಟು ಒಳ್ಳೆಮಾ
ತನ್ನು ಹೇಳಿ ತಿರುಗಿ ಮಗನನ್ನು ದೀಕ್ಷಿತನು ಮಠಕ್ಕೆ ಕಳುಹಿ
ಸಿದನು. ದಿನವಹಿ ಹೊತ್ತುಮಾಡಿಕೊಂಡು ಬರುತ್ತಾ ಇದ್ದ ಹು
ಡುಗರೆಲ್ಲಾ ಆದಿನ ಬೆಳಿಗ್ಗೆ ಮಹಾದೇವ ಹೋಗುವುದರೊಳ
ಗಾಗಿ ಮಠಕ್ಕೆ ಬಂದಿದ್ದರು. ಇವನೂಹೋಗಿ ಅವರ ಸಂಗಡ
ಸೇರಿದನು. ಇವನನ್ನು ನೋಡಿ ಹುಡುಗರು ಬಹಳವಾಗಿ
ಉಪಚಾರದ ಮಾತುಗಳನ್ನಾಡಿ ಕನಿಕರವನ್ನು ತೋರಿಸಿದರು.
ಯಾರೂ ಮಠದಲ್ಲಿ ಕೂತುಕೊಳ್ಳದೇ ಅಲ್ಲಲ್ಲಿ ನಿಂತಿದ್ದರು.
ಬಸವನೇ ಮೊದಲಾದ ಹಿರೇಹುಡಗರು ಗುಸಗುಸನೆ ಮಾತನಾ
ಡಿಕೊಳ್ಳುತ್ತಾ ಇದ್ದರು. 

ಆಗ ಪಂತರ ಸವಾರಿ ಬಂತು. ಆದಿನ ನಾರಪ್ಪಯ್ಯನು ಉ
ದ್ದವಾದ ಹೊಸಬೆತ್ತವನ್ನು ಹಿಡಿದು ಅದನ್ನು ಅಲ್ಲಾಡಿಸುತಾ ಮ 
ಠಕ್ಕೆ ಬಂದು- ಯಾಕರೆಲಾ, ಓದದೇ ಸುಮ್ಮನೇ ನಿಂತಿದೀರಿ? 
----------------------------
   
    ಮಾಡಿದ್ದುಣ್ಣೋ ಮಹರಾಯ.             ೫೩
   
ಎಂದು ಕೂಗಿ ಸಿಕ್ಕಿದ ಒಬ್ಬಿಬ್ಬರಿಗೆ ಎರಡೇಟ ಕೊಟ್ಟು
ತಾನು ಎಂದೂ ಕೂತುಕೊಳ್ಳತಕ್ಕ ಜಗಲೀಬಳಿಗೆ ಹೋಗಿ
ಅದನ್ನು ಹತ್ತಿದನು. ಸುತ್ತಲೂ ಗೋಡೆಗೆ ಸುಣ್ಣವನ್ನು
ತೊಡೆದು ಜಗಲಿಯಮೇಲೆ ಹೊರಚಾವೆಯನ್ನು ಹಾಸಿದ್ದರು.
ಇದನ್ನು ನೋಡಿ ಸಂತೋಷಪಟ್ಟು - ದಿನವಹಿ ಹೀಗೆ ಚೊ
ಕ್ಕಟಮಾಡುವವಾಗಿ ಮಾಡುವುದಕ್ಕೆ ನಿನಗೇನು ಕೇಡುಬಂದಿದೆ ? ಎಂದು
ಕೊಳುತಾ ಎಂದೂ ತಾನು ಕೂತುಕೊಳ್ಳುವ ಸ್ಥಳದಲ್ಲಿ ಕೂ
ತುಕೊಂಡನು. ಅಯ್ಯೋ ! ಆಗ ಆ ಪ್ರಾಣಿಗೆ ಸಂಭವಿಸಿದ
ವಿಪತ್ತನ್ನು ಏನೆಂದು ವರ್ಣಿಸಲಿ ? ಉಪಾಧ್ಯಾಯನು ಕೂತು
ಕೊಂಡಕೂಡಲೆ ಮೇಲೆ ಹಾಸಿದ ಹೊಸಚಾಪೆ ದೊಸಕೊಂ
ಡಿತು. ನಾರಪಯ್ಯನು ಕಿಚ್ಚನ ಕಿರಚಿಕೊಂಡನು. ದೂರದೂ
ರವಾಗಿ ನಿಂತಿದ್ದ ದೊಡ್ಡಹುಡುಗರೆಲ್ಲಾ ಕೂಗದೆ ದುಡುದುಡ
ನೆ ಓಡಿಹೋದರು. ಉವಾಧ್ಯಾಯನಿಗೆ ಹೆದರಿಕೊಂಡು ತಮ್ಮ
ಮಟ್ಟಿಗೆ ತಾವು ಮಠಕ್ಕೆ ಬಂದಾಗಿನಿಂದ ಓದಿಕೊಳ್ಳುತಾ ಕೂ
ತಿದ್ದ ಮಹಾದೇವನೇ ಮೊದಲಾದ ೩-೪ ಜನ ಸಣ್ಣ ಹುಡುಗರು
ಈ ಕಿರಚನ್ನು ಕೇಳಿ ಗಾಬರಿಯಾಗಿ ಉವಾಧ್ಯಾಯನ ಜಗಲೀ
ಕಡೆ ನೋಡಿದರು. ಕಣ್ಣಗುಡ್ಡೆ ಮೇಲಕ್ಕೆ ಸಿಕ್ಕಿಕೊಂಡು ಬಾಯಿ
ಯನ್ನು ತೆರೆದುಕೊಂಡು ಹಳ್ಳಕ್ಕೆ ಬಿದ್ದಿದ್ದ ಅವನನ್ನು ನೋಡಿ
ಹೆದರಿಕೆಯಿಂದ ತಂತಮ್ಮ ಮನೆಗೆ ಓಡಿಹೋದರು. ಮಠದಲ್ಲಿ
ಯಾರೂ ಇಲ್ಲವಾಯಿತು. ಆಗ ಕೂಡಲೆ ಮಹಾದೇವನು ತ
ಮೃ ಮನೆಗೆ ಓಡಿಹೋಗಿ ಪ್ರಾತರಾಹ್ನಿಕವನ್ನು ಮುಗಿಸಿಕೊಂಡು
ದೇವತಾರ್ಚನೆಯನ್ನು ಮಾಡಲು ಗಂಧವನ್ನು ತೆಯುತಾ ದೇ 
---------------------------------

೫೪     ಮಾಡಿದ್ದುಣ್ಣೋ ಮಹರಾಯ.

ವರಮನೆಯಲ್ಲಿ ಕೂತಿದ್ದ ತಂದೆಯಮುಂದೆ ಬಂದು ಅಳುತಾ
ನಿಂತುಕೊಂಡನು. ಉಪಾದ್ರಿಯು ಪುನ: ಹೊಡೆದನೋ ಏನೋ
ಆದ್ದರಿಂದ ಮಗುವು ಹೀಗೆ ಹೆದರಿಕೊಂಡು ಗಡಗಡನೆ ನಡ
ಗುತಾ ಓಡಿಬಂತು, ಎಂದು ಗಾಬರಿಯಾಗಿ- ಯಾಕಪ್ಪ, ಏನಾ
ಯಿತು, ಉಪಾದ್ರಿ ಹೊಡೆದನೆ ? ಎಂದು ಕೇಳುತಾ ಹುಡು
ಗನ ಹಿಂದೆಯೇ ಮನೆಯವರೆಲ್ಲರೂ ಓಡಿಬಂದರು. ಹುಡುಗ
ನು ಯಾರಸಂಗಡ ಮಾತನಾಡಲಿಲ್ಲ. ಸುಮ್ಮನೆ ಅಳುತಾ
ನಿಂತಿದ್ದನು. ಮಗನನ್ನು ನೋಡಿ ದೀಕ್ಷಿತನು- ಏನಾಯಿತ
ಪ್ಪ, ಯಾಕೆ ಅಳುತೀಯೆ, ಉಪಾದ್ರು ಹೊಡೆದರೆ ? ಎಷ್ಟು
ಹೇಳಿದರೂ ಆತನ ಕೆಟ್ಟ ಚಾಳಿಯನ್ನು ಆತಬಿಟ್ಟಾನೆ ! ಎಂದನು.
ಆಗ ಮಹಾದೇವನು- ಹೊಡೆಯಲಿಲ್ಲ, ಉಪಾದ್ರು ಜಗಲಿಮೇ
ಲೆ ಹಳ್ಳದೊಳಕ್ಕೆ ಬಿದ್ದಿದಾರೆ, ಒಂದುಸಾರಿ ಗಟ್ಟಿಯಾಗಿ ಕಿರಚಿ
ಕೊಂಡರು. ಹುಡುಗರೆಲ್ಲಾ ಮಠದಿಂದ ಓಡಿಹೋದರು, ನಾನೂ
ಇನ್ನಿಬ್ಬರು ಹುಡುಗರೂ ಮಾತ್ರ ಜಗಲೀಬಳಿ ಹೋಗಿ ನೋಡಿ
ದೆವು, ಹೆದರಿಕೆಯಾಯಿತು, ನಾವು ಓಡಿಬಂದೆವು, ಅಯೊ
ಪಾಪ ! ಉಪಾದ್ರು ಹಾಗೆಬಿದ್ದಿದಾರೆ, ನೀನು ಬಂದು ನೋಡು,
ಈಗಲೇ ಬರಬೇಕು ಎಂದನು. ಆಗ ದೀಕ್ಷಿತನು- ಅಯ್ಯೋ
ಏನಾಯಿತೋ ಕಾಣೆ, ಆ ಬಾಹ್ಮಣನಿಗೆ ಇನ್ನು ಯಾರೂ
ದಿಕ್ಕಿಲ್ಲವಲ್ಲಾ, ಎಂದು ತಾನು ಮಾಡುತ್ತಾ ಇದ್ದ ಕೆಲಸವನ್ನು
ಅಲ್ಲಿಯೇ ಬಿಟ್ಟು ಮಠಕ್ಕೆ ಹೋಗಿನೋಡಿದನು. ಅಲ್ಲಿ ನೆರೆ
ಹೊರೆಯವರಿಬ್ಬರು ಮಠದ ಬಾಗಿಲಲ್ಲಿ ನಿಂತು ಒಳ್ಳೆ ಕೆಲಸ
ವಾಯಿತು, ಅವನು ಹುಡುಗರ ಗೋಳನ್ನು ಹೂಯಿದುಕೊ
----------------------------------

    ಮಾಡಿದ್ದುಣ್ಣೋ ಮಹರಾಯ.      ೫೫
   
ಳುತಾ ಇದ್ದ, ಅವರ ಗೋಳೆಲ್ಲಾ ಅವನಿಗೆ ತಟ್ಟಿತು, ಎಂ
ದು ಮಾತನಾಡಿಕೊಳ್ಳುತ್ತಾ ನಿಂತಿದ್ದರು. ಸದಾಶಿವ ದೀಕ್ಷಿತನು
ಮಠದೊಳಕ್ಕೆ ಹೋಗಲು ಆ ಜನರೂ ಬಂದರು. ಅಲ್ಲಿ ನಡೆ
ದಿದ್ದ ಪ್ರಮಾದವನ್ನು ಎಷ್ಟು ವಿವರಿಸೋಣ ! ನಾರಪ್ಪಯ್ಯನಿಗೆ
ಕಂಣುಗುಡ್ಡೆ ಮೇಲಕ್ಕೆ ಸಿಕ್ಕಿಕೊಂಡು ಹೋಗಿತ್ತು. ಜ್ಞಾನವಿರ
ಲಿಲ್ಲ. ಮೇಲೆಹಾಸಿದ್ದ ಈಚಲ ಚಾಪೆ ಸಹಿತವಾಗಿ ಪಂತನು
ಸುಮಾರು ಸೊಂಟದುದ್ದ ದೊಸೆಕೊಂಡು ಬಿದ್ದಿದ್ದನು. ಕತ್ತು,
ಭುಜ, ಬೆನ್ನು, ಮಗ್ಗಲು, ಹಸ್ತ, ಪೃಷ್ಟಭಾಗ, ತೊಡೆ,
ಮೊಳಕಾಲಕೆಳಗೆ ಮೀನ ಕಂಡ, ಇದೆಲ್ಲಾ ಕೆಳಗೆ ಬಿದ್ದಿತ್ತು.
ಒಂದು ಕೊನೆಯಲ್ಲಿ ತಲೆ ಸ್ವಲ್ಪ ಎತ್ತಿಕೊಂಡಿತ್ತು. ಮತ್ತೊಂದು
ಕೊನೆಯಲ್ಲಿ ಪಾದಗಳೆರಡೂ ಹಾದುಕೊಂಡು ನೆಟ್ಟಗೆನಿಂತಿತ್ತು,
ಮುಖದಮೇಲೂ ಮೈಮೇಲೂ ಎಂಥಾದ್ದೋ ಪುಡಿ ಬಿದ್ದು ಆ
ದು ಅಲ್ಲಿಯೆಲ್ಲಾ ಚೆಲ್ಲಾಡಿತ್ತು. ಆ ಪುಡಿಯು ಇನ್ನೂ ಸ್ವಲ್ಪ
ಸ್ವಲ್ಪವಾಗಿ ಮೇಲಿನಿಂದ ಉದುರುತ್ತಲೇ ಇತ್ತು. ಜಗಲಿಯ
ಮೇಲೆ ಹಾಸಿದ್ದ ಈಚಲಚಾಪೆಯ ಅಂಚಿನ ಮಧ್ಯೆ ಒಂದುಕೊ
ನೆಗೆ ಹೊಲಿಯುವ ದಾರವನ್ನು ಕಟ್ಟಿ ಅದರ ಇನ್ನೊಂದು
ಕೊನೆಯನ್ನು ಒಂದು ಬಟ್ಟೆಗಂಟಿಗೆ ಸುತ್ತಿ ಆ ಗಂಟನ್ನು ಉ
ಪಾದ್ರಿಯ ತಲೆಯಮೇಲೆ ಸರಿಯಾಗಿ ಕಟ್ಟಿದ್ದರು. ಚಾಪೆ ದೊ
ಸಕೊಂಡಕೂಡಲೆ ಸಂಣದಾರ ಕಿತ್ತುಹೋಯಿತು. ಮೇಲುಗಡೆ
ಇದ್ದ ಚೀಲದ ಬಾಯಿ ತೆರೆದುಹೋಯಿತು. ಅದರಿಂದ ಸಂಣ
ಹುಡಿ ಸುರಿದು ಚೆಲ್ಲಾಡಿತ್ತು, ಇನ್ನೂ ಸುರಿಯುತ್ತಲೂ ಇತ್ತು.
ಸಮೀಪದಲ್ಲಿ ನೋಡುವಾಗ್ಗೆ ನಾರಪ್ಪಯ್ಯನ ಮೈಗೆ ಮುಳ್ಳು -----------
------------------------------

೫೬      ಮಾಡಿದ್ದುಣ್ಣೋ ಮಹರಾಯ.

ಚುಚ್ಚಿಕೊಂಡಿತ್ತು. ಚಾಪೆಯ ಕೆಳಗೆಲ್ಲಾ ನೆಲಮುಳ್ಳು ಹರಡಿ
ತ್ತು, ಇದರಿಂದ ಜಗಲಿಯ ಕೊನೆಯಲ್ಲಿ ನಿಂತುಕೊಂಡು ಅ
ವನನ್ನು ಮೇಲಕ್ಕೆ ಎತ್ತುವುದೂ ಕಷ್ಟವಾಗಿತ್ತು, ದೀಕ್ಷಿತನಲ್ಲಿ
ಆವೂರ ಜನರಿಗೆಲ್ಲಾ ಹೆಚ್ಚಾದ ಗೌರವವಿದ್ದ ಕಾರಣ, ಈತನ
ಮಾತಿನಂತೆ ೧೫-೨೦ ಜನರು ಸೇರಿದರು. ಉಪಾಯವಾಗಿ
ನಾರಪ್ಪಯ್ಯನನ್ನು ಮೇಲಕ್ಕೆ ಎತ್ತಿದರು. ಆದರೂ ಅವನಿಗೆ
ಮೂರ್ಛೆ ತಿಳಿಯಲಿಲ್ಲ. ಮುಳ್ಳು ಚಾಪೆಯೊಳಗಿನಿಂದ ಹಾದು
ದೇಹಕ್ಕೆ ನಾಟಿಕೊಂಡಿತ್ತು, ಮುಳ್ಳು ನಾಚಿಕೊಂಡಿದ್ದ ಕಾರಣ
ಚಾವೆಯನ್ನು ಕೀಳುವುದು ಕಷ್ಟ. ಸೂಜಿ ಊರುವುದಕ್ಕೆ ಸ್ಥ
ಳವಿಲ್ಲದಂತೆ ಮುಳ್ಳು ರೋಮ ರೋಮದ ಕುಳಿಗೂ ಬಲಿದಿ
ತ್ತು, ಚಾವೆಯನ್ನೇ ಕಿತ್ತರೆ ದೇಹದ ಕಂಡವೇ ಕಿತ್ತುಬರುವ
ಹಾಗಿತ್ತು. ಒಂದೊಂದು ಮುಳ್ಳನ್ನು ಕೀಳುವುದೂ ಅದಕ್ಕಿಂ
ತಲೂ ಕಷ್ಟವಾಗಿತ್ತು. ಕೆಳಗೆ ಮಲಗಿಸುವದಕ್ಕಿಲ್ಲ, ಕೂರಿಸು
ವುದಕ್ಕಿಲ್ಲ, ಹೀಗೆ ಉಭಯವೇಧೆ ಉಂಟಾಗಿತ್ತು. ದೇಹದಮುಂ
ಭಾಗದಲ್ಲಿ ಮುಳ್ಳು ಬಲಿದಿರಲಿಲ್ಲವಾಗಿ ಆ ಬಡಪಾಯಿಯನ್ನು
ಮುಖ ಅಡಿಯಾಗಿ ಮುಗಿಸಿ ಉಪಾಯವಾಗಿ ಚಿಮ್ಮಟದಿಂದ
ಮುಳ್ಳನ್ನು ಒಂದೊಂದಾಗಿ ಕಿತ್ತುಹಾಕಲು ತೊಡಗಿದರು. ಉ
ಪಾದಿಯ ಬಾಯಿಗೆ ನೀರನ್ನು ತಂದು ದೀಕ್ಷಿತನು ಹಾಕಿ ಕಿವಿ
ಯಲ್ಲಿ ಊದಿದನು. ಸ್ವಲ್ಪ ಪ್ರಜ್ಞೆ ಬಂತು, ಕಂಣಬಿಟ್ಟನು,
ಮುಳ್ಳನ್ನು ಕಿತ್ತಕೂಡಲೆ ರಕ್ತಸುರಿಯಲು ಆರಂಭವಾಯಿತು.
ಎಲ್ಲಾಕಡೆಗಿಂತಲೂ ಪೃಷ್ಟಭಾಗದಲ್ಲಿ ಬಹಳ ಅಪಾಯಕರವಾ
ಗಿತ್ತು. ಆಸನದಾರಕ್ಕೆ ಉದ್ದವಾದ ಪಾವಾಸುಕಳ್ಳಿಯ ಮು
------------------------------

ಮಾಡಿದ್ದುಣ್ಣೋ ಮಹರಾಯ.                        ೫೭

ಳ್ಳು ನಾಟಿಕೊಂಡಿತ್ತು. ಹೀಗೆಹಾಗೆ ಅಲಗುವುದಕ್ಕೂ ಆಸ್ಪದ
ವಿರಲಿಲ್ಲ. ಆ ಮುಳ್ಳನ್ನು ಬಲವಂತವಾಗಿ ಕಿತ್ತರು. ಅದ
ರಿಂದ ರಕ್ತದ ಪ್ರವಾಹವೇ ಹರಿಯುವುದಕ್ಕೆ ಮೊದಲಾಯಿತು.
ಅದುವರೆಗೆ ಪಂತನನ್ನು ಎತ್ತಿ ಇಳಿಸಿ ಒರಗಿಸಿಕೊಂಡು ಹೀಗೆ
ಲ್ಲಾ ಮಾಡಿದವರ ಮೈ ಕೈಗೆಲ್ಲಾ ಅವನ ಮೇಲೆ ಸುರಿದಿದ್ದ ಪು
ಡಿಯು ಅಂಟಿಕೊಂಡು ಕಡಿತಕ್ಕೂ ಉರಿಗೂ ಮೊದಲಾಯಿತು.
ಎಲ್ಲರೂ ಕೆರೆದು ಸಾಕಾಗಿ ಮೈ ಕೈಯೆಲ್ಲಾ ಕೆಂಪಗೆ ಗಂದೆಯಾ
ಯಿತು. ಬಟ್ಟೆಗಂಟಿನಲ್ಲಿ ಉವಾದ್ರಿಯ ಜಗಲಿ ಮೇಲುಗಡೆ
ಕಟ್ಟಿದ್ದು  ತರುವಾಯ ಅವ ದೋಸಗೊಂಡಾಗ ದಾರಕಿತ್ತು ಗಂ
ಟುಬಿಚ್ಚಿ ಹೊಗಿ ಉದುರಿದ ಈ ಹುಡಿಯು ನಸಗುನ್ನಿಕಾಯಿ
ಯ ಚೂರ್ಣವೆಂದು ಗೊತ್ತು ಮಾಡಿದರು. ಪಂತನ ಮೈಯಲ್ಲಿ
ರಕ್ತ ಸುರಿಯುತಿರುವ ಗಾಯಕ್ಕೆ ಈ ಪಡಿ ಸೋಕಿದೊಡನೆಯ
ಗಾಯದಲ್ಲಿ ಕಡಿತಕ್ಕೆ ಮೊದಲಾಗಿ ಕೆರೆದರೆ ಮೈಯೆಲ್ಲಾ ಒಂ
ದೇ ಹುಂಣಾಗುವ ಸಂಭವವಿತ್ತು. ಅದೆಲ್ಲವನ್ನೂ ಉವಾಯ
ವಾಗಿ ಕೂಡಿದಮಟ್ಟಿಗೂ ತೆಗೆದರು. ಆದಾಗ್ಯೂ ಆ ಪುಡಿಯು
ತನ್ನ ಕೆಲಸವನ್ನು ತಾನು ತೋರಿಸಿಯೇ ಬಿಟ್ಟಿತು. ತಂಣೀ
ರನ್ನು ಹಾಕಿ ಎಲ್ಲವನ್ನೂ ತೊಳೆದರು. ಈ ಬಡ ಉವಾದ್ರಿ
ಯ ಹೆಂಡತಿ ಹೆರಿಗೆಗೆ ತೌರುಮನೆಗೆ ಹೋಗಿದ್ದಳು, ಇನ್ನು
ಯಾರೂ ದಿಕ್ಕಿಲ್ಲದೆ ತಾನೇ ಅಡಿಗೆ ಮಾಡಿಕೊಳ್ಳುತಿದ್ದನು.
ಹಬ್ಬ ಹರಿದಿನಗಳಲ್ಲಿ ಅವರಿವರಮನೆಗೆ ಔತನಕ್ಕೆ ಹೇಳುತ್ತಿದ್ದರು.
ಇಂಥಾ ಅಸಂದರ್ಭಕಾಲದಲ್ಲಿ ಈ ವಿಪತ್ತು ಸಂಭವಿಸಿತು. ಸ
ದಾಶಿವದೀಕ್ಷಿತನು ಹೆಚ್ಚಿನ ಮರುಕದಿಂದ ದುಬಟಿಯ ಜೋಳನೆ
------------------------------

೫೮         ಮಾಡಿದ್ದುಣ್ಣೋ ಮಹಾರಾಯ.                      

ಯಲ್ಲಿ ಅವನನ್ನು ತನ್ನ ಮನೆಗೆ ಸಾಗಿಸಿಕೊಂಡು ಹೋದನು.

ಇತ್ತ ಉಪಾದ್ರಿಯ ಗದ್ದಿಗೇಮೇಲೆ ನೋಡಲಾಗಿ ಇವನು
ಕೂತುಕೊಳ್ಳುತಿದ್ದ ಕಡೆ ದೊಡ್ಡದಾಗಿ ಹಳ್ಳವನ್ನು ತೋಡಿ
ದ್ದರು. ಅದರೊಳಗೆ ಗೊಬ್ಬಳೇಮುಳ್ಳು, ಕೊಳವಳಿಕೇಮುಳ್ಳು
ಗುಬ್ಬಿಮುಳ್ಳು, ಇವುಗಳನ್ನು ತಂದು ತುಂಬಿದ್ದರು. ಆ ಪ್ರಾಂ
ತ್ಯದಲ್ಲಿ ಹುಡುಕಿದರೂ ಅಪೂರ್ವವಾಗಿದ್ದ ವಾವಾಸುಕಳ್ಳಿ,
ಮುಳ್ಳೂ ಗಾಜೂ ಸೇರಿತ್ತು. ಇವೆಲ್ಲವನ್ನೂ ಗುಂಡಿಯಿಂದ ಈಚೆ
ಗೆತೆಗೆದು ನೋಡಲಾಗಿ ಕಬ್ಬಿಣದ ಮೊಳೆಗಳ ಮುರಕುಸೂಜಿ
ಗಳೂ ಸಹಿತ ಅಲ್ಲಿ ಸಿಕ್ಕಿದವು. ಒಂದು ಮಾತ್ರ ಬಹಳ ಅಶ್ಚ
ರ್ಯಕರವಾದ್ದು. ಗಾಜಿನಸಾಮಾನುಗಳೂ ಪಿಂಗಾಣಿ ಬಟ್ಟಲುಗ
ಳೂ, ಸೀಸೆಗಳೂ ಹಡಗುಗಳತುಂಬಾ ತುಂಬಿ ಈ ಕಾಲದಲ್ಲಿ
ಬರುವಹಾಗೆ ಆಗ ಬರುತಿರಲಿಲ್ಲ. ಆದಾಗ್ಯೂ, ಆಷ್ಟೊಂದು
ಗಾಜು ಆಗ ಹೇಗೆಸಿಕಿತೋ ತಿಳಿಯದು. ನ್ಯಾಯ
ವಾಗಿಯೋ ಅನ್ಯಾಯವಾಗಿ ಉವಾದ್ರಿಯು ಪ್ರತಿನಿತ್ಯವೂ
ಹುಡುಗರಿಗೆ ಮಾಡುತ್ತಾ ಇದ್ದ ಶಿಕ್ಷೆಗೆ ಪ್ರತಿಯಾದ ಶಿಕ್ಷಯ
ನ್ನು ಮಾಡಿದರೆಂದು ಆ ಪುರಜನರಲ್ಲಿ ಹುಡುಗರು ಮಾಡಿದ
ಈ ಕೆಲಸಕ್ಕೆ ಸಂತೋಷ ಪಡತಕ್ಕವರು ಕೆಲವರು, ಬಾಲಕರ
ದೌಜನ್ಯವನ್ನೇ ಮುಂದುಮಾಡಿಕೊಂಡು ಅವರನ್ನು ಬೈದು
ಯಾರಾದರೂ ಸಿಕ್ಕಿದರೆ ತಕ್ಕ ಪ್ರಾಯಶ್ಚಿತ್ತ ಮಾಡಿಯೇಬಿಡ
ಬೇಕು, ಈ ಹಾರವನ ಸಂಕಲನವನ್ನು ನೋಡಿ ಯಾರು
ಸಹಿಸಬಹುದೆಂದು ಮಾತಿನಲ್ಲಿಯೇ ಹಾರಾಡಿದ ವಾಕ್‌ ಪೌರುಷ
ದ ಗ್ರಹಸ್ತರು ಕೆಲವರು, ಹೀಗೆ ಗ್ರಾಮಸ್ಥರಲ್ಲಿ ನಾನಾವಿಧ 
-----------------------------------

    ಮಾಡಿದ್ದುಣ್ಣೋ ಮಹರಾಯ.                   ೫೯
   
ವಾಗಿ ಮಾತನಾಡಿಕೊಳ್ಳುತಿದ್ದರು. ಆ ಗುಂಡಿಯಿಂದ ಮುಳ್ಳು
ಗಳನ್ನು ತೆಗೆಯುವುದು ಬಹಳ ಶ್ರಮವಾದ್ದರಿಂದ ಅದೆಲ್ಲಕ್ಕೂ
ಅಲ್ಲಿಯೇ ಬೆಂಕಿ ಹಾಕಿ ಸುಟ್ಟು ಜಗಲಿಯ ಹಳ್ಳವನ್ನು ಮುಚ್ಚಿ
ಬಿಟ್ಟರು.

ಪಂತನು ಹಳ್ಳದೊಳಕ್ಕೆ ದೊಸಕೊಂಡ ಕೂಡಲೆ ದಿಕ್ಕು
ದಿಕ್ಕಿಗೂ ಓಡಿಹೋದ ಹುಡುಗರಲ್ಲಿ ಸೃಜನ ೨-೩ ದಿವಸ
ವಾದರೂ ತಂತಮ್ಮ ಮನೆಗೆ ಬರಲೇ ಇಲ್ಲ. ಇನ್ನು ಸ್ವಲ್ಪ
ಜನ ಅದಿನ ಸಾಯಂಕಾವೊ ಮಾರನೇದಿನವೋ ಮನೆಗಳಿಗೆ
ಬಂದರು. ಆಯಾ ಹುಡುಗರ ತಂದೆತಾಯಿಗಳ ಯೋಗ್ಯತೆ
ಇದ್ದಂತೆ ಬಾಲಕರು ಮಾಡಿದ ರಾಕ್ಷಸ ಕೃತ್ಯದ ಏಚಾರವಾಗಿ
ಮಾತನಾಡಿಕೊಳ್ಳುತಿದ್ದರು.

ಸದಾಶಿವದೀಕ್ಷಿತನು ಉವಾದ್ರಿಯನ್ನು ತನ್ನ ಮನೆಗೆ ತೆಗೆ
ಯಿಸಿಕೊಂಡು ಹೋಗಿ ಅಲ್ಲಿ ಆತನಿಗೆ ಬೇಕಾದ ಉಪಚಾರ
ಗಳನ್ನು ಮಾಡುತಾ ಗಾಯದೆಂಣೆ, ಅಂಟುಮುಲಮು ಮೊದ
ಲಾದ್ದನ್ನು ಹಾಕುತಾ, ಬೇಕಾದಾಗ ಕಾಡೀನೀರಿನಲ್ಲಿ ಹುಂಣು
ಗಳನ್ನು ತೊಳೆಯುತ್ತಾ ಪುನಃ ಅದಕ್ಕೆ ಔಷಧಗಳನ್ನು ಹಾಕು
ತಾ ಪಂತನಿಗೆ ಬೇಕಾದ ಪಥ್ಯವನ್ನು ಮಾಡಿಸಿ ಉಪಚರಿಸುತಾ
ಇದ್ದನು. ಮನೆಜನರೆಲ್ಲರೂ ಸ್ವಲ್ಪವೂ ಅಸಹ್ಯ ಪಟ್ಟುಕೊಳ್ಳದೆ
ಆತನನ್ನು ಉಪಚರಿಸಿದರು. ಎಷ್ಟು ಮಾಡಿದಾಗ ಪಂತನಿಗೆ
ಪೂರ್ತಿಯಾಗಿ ಗುಣವಾಗುವುದಕ್ಕೆ ನಾಲ್ಕು ತಿಂಗಳ ಮೇಲಾಯಿತು.
------------------------------------

೬೦     ಮಾಡಿದ್ದುಣ್ಣೋ ಮಹರಾಯ.

೫ ನೆ ಅಧ್ಯಾಯ.

ಚಾಮರಾಜನಗರದಲ್ಲಿ ಉಪ್ಪಲಿಗರಿಗೂ ಪರಿವಾರದವರಿಗೂ
ವಿಪರೀತವಾಗಿ ನಡೆದ ಕಲಹವನ್ನು ಕುರಿತು ಹಿಂದೆ ಸೂಚಿಸಿ
ದೆಯಷ್ಟೆ. ಈ ಎರಡುಜಾತಿಯವರಿಗೂ ಇರುವ ಪರಸ್ಪರದ್ವೇ
ಷವು ಆಗತಾನೇ ಹುಟ್ಟಿದ್ದಲ್ಲ. ತಲಾಂತರದಿಂದ ನಡೆದು
ಬರುವ ಈ ವೈಷಮ್ಯವು ಆಯಾ ಕುಲಕ್ಕೆ ಬಂದದ್ದು. ಚಾ
ಮರಾಜನಗರದಲ್ಲಿ ಈ ಜಾತಿಯ ಜನಗಳು ನಡಿಸಿದ ಗಲಭೆಯ
ಶಖೆಯು ಆವೂರಮಟ್ಟಿಗೆ ನಿಲ್ಲಲಿಲ್ಲ. ಸುತ್ತಮುತ್ತ ಇರುವ
ಊರುಗಳಿಗೂ ಗ್ರಾನುಗಳಿಗೂ ವ್ಯಾಪನೆಯಾಗಿತ್ತು. ಸಂಜ
ವಾಡಿಯಲ್ಲಿ ಉಪ್ಪಲಿಗರ ಒಕ್ಕಲು ಹೆಚ್ಚಾಗಿಯೂ ಪರಿವಾರದ
ವರ ಮನೆ ಕಡಿಮೆಯಾಗಿಯ ಇತ್ತು. ಹೆಚ್ಚಾಗಲಿ ಕಡಿಮೆ
ಯಾಗಲಿ, ಜಾತಿವೈರವೇನೋ ಏಕರೀತಿಯಾಗಿತ್ತು. ಆದರೆ
ವಿಶೇಷ ಸಮಯಗಳಲ್ಲಿ ಈ ಜಾತಿಯವರಿಗೆ ಪರಸ್ಪರ ಇದ್ದ
ಬೆಂಕಿಯ ಹೊಗೆ ಕಂಣಿಗೆ ಕಾಣಿಸುತಾ ಇತ್ತೇ ಹೊರತು ಉಳಿ
ದಕಾಲಗಳಲ್ಲಿ ತೊರೆಯರೂ ಉಪ್ಪಲಿಗರೂ ಸಹಾ ಒಬ್ಬರಿಗೊ
ಬೃರು ಮಿತ್ರಭಾನದಲ್ಲಿಯೇ ಇರುತಾ ಇದ್ದರು.

ಆ ಊರಿನಲ್ಲಿ ಉಪ್ಪಲಿಗರೇ ಆಗಲಿ ಪರಿವಾರದವರೇ ಆಗಲಿ
ಸಮಯಾಂತರಗಳಲ್ಲಿ ಇವರ ಜೊತೆಗೆ ಸೇರಿಕೊಳ್ಳುತಿದ್ದ ಹೊ
ಲೆಯರೇ ಆಗಲಿ ಸುಖಜೀವಿಗಳಾಗಿ ಇರುತಾ ಮನೆಗೆ ಎಷ್ಟು
ಜನ ನಂಟರಿಷ್ಟರು ಬಂದಾಗ್ಯೂ ಲಕ್ಷ್ಯವಿಲ್ಲದೆ ಅವರಿಗೆ
ಸತ್ಕಾರವನ್ನು ಮಾಡುತಾ ಐಶ್ವರ್ಯವಂತರ ಮನೆಯಲ್ಲಿ
--------------------------------

೬೧     ಮಾಡಿದ್ದುಣ್ಣೋ ಮಹಾರಾಯ.

ಮಾಡತಕ್ಕ ಚೊಕ್ಕ ಭೋಜನವನ್ನು ಮಾಡಿಸುತ್ತಾ ಇದ್ದರು.
ಇವರ ಉಡುಪು ಇವರ ಸ್ಥಿತಿಗೆ ನಾಲ್ಕು ಅಂತಸ್ತು ಮೀರಿ
ತು, ಇವರ ಮನೆಗಳಲ್ಲಿ ಹೆಂಗಸರಾಗಲಿ ಗಂಡಸರಾಗಲಿ
ಮೈ ಮೇಲೆ ಚಿನ್ನ ಬೆಳ್ಳಿ ನಗಗಳನ್ನು ಇಟ್ಟುಕೊ
ಳದೇ ಇರುತ್ತಿರಲಿಲ್ಲ. ಮದುವೆ ಮೊದಲಾದ ಶುಭಕಾರ್ಯಗಳು
ನಡೆದಾಗ ಹೆಂಗಸರು ಗಂಡಸರು ಆದಿಯಾಗಿ ಧರಿಸಿಕೊಳ್ಳು 
ದಕ್ಕೆ ಸಂಜವಾಡಿಯವರಿಂದ ಇತರರು ದಿವ್ಯವಾದ ಆಭರಣಗಳ
ನ್ಯೂ ಉತ್ತಮವಾದ ವಸ್ತ್ರಗಳನ್ನೂ ಎರುವಾಗಿ ತೆಗೆದು
ಕೊಂಡು ಹೋಗುತಿದ್ದರು. ಸುತ್ತಲೂ ಹತ್ತು ಇಪ್ಪತ್ತು
ಹಳ್ಳಿಗಳಲ್ಲಿ ಯಾವ ಪ್ರಸ್ತ ಸಮಾರಾಧನೆ ಮೊದಲಾದ್ದು ಜರು
ಗಿದಾಗೂ ಸಂಜನಾಡಿಯವರ ಮನೆಯ ಭಾರೀಕಡಾಯಿ ಮೊದ
ಲಾದ್ದು ಇಲ್ಲದೆ ನಡೆಯುತಾ ಇರಲಿಲ್ಲ, ಇವರ ಮನೆಗಳು
ತೊಟ್ಟಿ ತಿರುಗಿ ಬಲವಾಗಿ ಕಟ್ಟಲ್ಪಟ್ಟಿದ್ದವು. ಆಯಾ ಸಂಸಾ
ರದವರ ಆವಶ್ಯಕತೆ ಇದ್ದ ಹಾಗೆಲ್ಲಾ ಎರಡೂ ಮೂರೂ ತೊಟ್ಟಿ
ಗಳನ್ನು ಕಟ್ಟಿಕೊಂಡು ಗಾರೆಹಾಕಿ ಹಾಕಿದರೆ ಹಾಲಚೆಲ್ಲಿದರೆ ಎತ್ತ
ಬಹುದು ಎನ್ನುವಹಾಗೆ ಚೊಕ್ಕಟವಾಗಿ ಮಾಡಿ ಕೊಂಡಿದ್ದರು. 

ಈ ಊರಿಗೆ ಯಕ್ಷಗಾನದ ಆಟದವರು, ಸಂಗೀತಗಾರರು,
ನಾಟ್ಯ ಕಟ್ಟುವ ನಾಯಕಸಾನಿಯರು, ದೊಂಬರು, ಹಾಸ್ಯಗಾ
ರರು, ಯಕ್ಷಣಿ ಆಟದವರು, ಕುಸ್ತಿ ಮಾಡುವ ಪೈಲವಾನರು,
ಹೀಗೆಯೇ ವಿನೋದ ಗೋಷ್ಠಿಗೆ ಸಂಬಂಧಿಸಿದ ಅನೇಕರು
ಆಗಾಗ್ಗೆ ಬರುತಾ ಇದ್ದರು. ಒಬ್ಬರಲ್ಲದೆ ಆ ಊರಿನ ಹತ್ತು
ಇಪ್ಪತ್ತು ಜನರ ಮನೆಯಲ್ಲಿ ಸಭೆಯಾಗಿ ೮-೧೦ ಊರಸು
--------------------------------

೬೨            ಮಾಡಿದ್ದುಣ್ಣೋ ಮಹರಾಯ.
ತ್ತಿದರೂ ಆಗದೆ ಇರುವ ಪ್ರಯೋಜನ ಈ ಒಂದು ಸಂಜವಾ
ಡಿಯಲ್ಲಿಯೇ ಆಗುತಿತ್ತು. ಆ ಮೊದಲಾದೈಲ ಮುಗಿದ
ತರುವಾಯ ಮುಖ್ಯ ಯಜಮಾನನೇ ಅಗಲಿ ಅಥವಾ ಅಲ್ಲಿ
ಸಭೆಗೆಸೇರಿದ ಜನರಲ್ಲಿ ಯಾರೇ ಆಗಲಿ ಬಹುಮಾನರೂಪವಾಗಿ
ಬಟ್ಟೆಗಳನ್ನೂ, ನಗಗಳನ್ನೂ, ನಾಣ್ಯಗಳನ್ನೂ, ಕೊಟ್ಟರೆ
ಅಂಥಾ ಆಟಗಾರರಲ್ಲಿ ಒಬ್ಬನು ಆ ಬಹುಮಾನವನ್ನು ಕೈ
ಯಲ್ಲಿ ಎತ್ತಿ ಹಿಡಿದುಕೊಂಡು, ಕೊಟ್ಯದಾತನ ಹೆಸರನ್ನು
ಹೇಳಿ ಹೊಗಳತಕ್ಕ ವಾಡಿಕೆ ಈಗಲೂ ಹಳ್ಳಿಗಳಲ್ಲಿ
ಸ್ವಲ್ಪ ಹತ್ತಿದೆ, ಪೂರ್ವದಲ್ಲಿ ಪಟ್ಟಣಗಳಲ್ಲಿಯೂ ಕೂಡ
ಈ ಕರ್ಣಾಟಕ ಪದ್ದತಿಯು ಹೇರಳವಾಗಿತ್ತು. ಹೆಚ್ಚಾಗಿ
ಕೊಟ್ಟವರನ್ನು ಹೆಚ್ಚಾಗಿಯೂ ಕಡಮೆಯಾಗಿ ಕೊಟ್ಟವರನ್ನು
ಕಡಮೆಯಾಗಿಯ ಆಟಗಾರರು ಹೊಗಳುತಿದ್ದರು. ಹೀಗಾ
ದಕಾರಣ ಹೆಚ್ಚು ಹೆಚ್ಚಾಗಿ ಇನಾಮನ್ನು ಕೊಟ್ಟು ಹೆಚ್ಚು
ಹೆಚ್ಚಾಗಿ ಹೊಗಳಿಸಿಕೊಳ್ಳಲು ನಾನುತಾನೆಂದು ಆ ಊರಿನ
ಚತುರ್ಧ ಮಹಾಜನಗಳು ಮುಂದರಿಯುತಾ ಇದ್ದರು.
ಆಟಗಾರರ ಸಂಪಾದನೆ ಈ ಊರಲ್ಲಿ ಹೆಚ್ಚಾಗಲು ಇದೂ ಒಂ
ದುಕಾರಣವಾಗಿತ್ತು. ಇಂಧಾ ಆಟ ಮೊದಲಾದ್ದನ್ನು ಹೂಡಿ
ದದಿವಸಗಳಲ್ಲಿ ನಗರದ ಸುಭೇದಾರರೇ ಮೊದಲಾದವರನ್ನೆಲ್ಲಾ
ಕರೆದು ಬಹುಬಗೆಯಾಗಿ ಹೆಮ್ಮೆ ಯನ್ನೂ ಹೆಬ್ಬುಬ್ಬನ್ನೂ
ತೋರಪಡಿಸುತಿದ್ದರು. ಇದೆಲ್ಲವನ್ನೂ ನೋಡತಕ್ಕವರಿಗೆ ಬಹು
ವಿನೋದವಾಗಿತ್ತು.
---------------------------------

೬೩          ಮಾಡಿದ್ದುಣ್ಣೋ ಮಹರಾಯ.

ಸರಕಾರದ ಉದ್ಯೋಗಸರು ಸಹಿತ ಈ ಊರಜನರು
ಹೇಳಿದಂತೆ ಕುಣಿಯುತ್ತಿದ್ದರು. ಹೀಗೆ ಮಾಡಿಕೊಂಡ ಶಕ್ತಿ
ಯಾತರದು ? ಈ ಊರಿನವರ ಮಟ್ಟಿಗೆ ಆಕಾಶದಿಂದ ಸುವ
ರ್ಣವೃಷ್ಟಿಯಾಯಿತೆ ? ಅಥವಾ ಒಬ್ಬೊಬ್ಬರಿಗೂ ನಿಕ್ಷೇಪಗ
ಳೇನಾದರೂ ಸಿಕ್ಕಿದವೆ ? 

ಆ ಸಂಜನಾಡಿ ಊರಮುಂದೆ ೬.೦ದು ಮಾರಿಗುಡಿ
ಒಂದು ಗಣೇಶನಗುಡಿ ಇವುಗಳ ಹಿಂಭಾಗದಲ್ಲಿ ಒಂದು ಗರಡೀ
ಮನೆ ಇದ್ದವು. ಆ ಊರಿನ ತುಂಡಾಂಡಿಗಳೆಲ್ಲಾ ಆ ಗುಡಿ
ಯ ಕೈಸಾಲೆಯಲ್ಲಿಯೂ ಗರಡಿಮನೆಯಲ್ಲಿಯೂ ಸಹ ಸೇರು 
ತಿದ್ದರು. ಬೆಳಗಿನಿಂದ ರಾತ್ರಿ ಗಹೊರಡುವತನಕ ಈ ಜನ
ರು ದಂಡೆ, ಹೊರಳಿಕೆ, ಬೈಸಿಗೆ, ಪರಟಿ, ಕಂಬಕಟ್ಟುವುದು
ಕೊಣತಾ ಕಟ್ಟುವುದು, ಕುಸ್ತಿ, ಬೈಲಿನಲ್ಲಿ ದೊಂಣೇವರನೆ, ಕತ್ತಿ
ವರಸೆ, ಪಟಾವರಸೆ, ಈಬಗೆ ಸಾಧಕಗಳನ್ನು ಮಾಡುತಿದ್ದರು.
ಮಧ್ಯೆ ಪಗಡೆ, ದಚ್ಚಿ ಬಾರ ಹುಲಿಕಲ್ಲು ಮೊದಲಾದ ಆಟಗ
ಳನ್ನು ಆಡಿ ಚಿಕ್ಕ ಬೆಳ್ಳಿಹಣ ದೊಡ್ಡ ಬೆಳ್ಳಿ ಹಣಗಳನ್ನು ಹಿಡಿ
ಹಿಡಿಯಲ್ಲಿ ಇಟ್ಟಾಡುತಿದ್ದರು. ಇದರಲ್ಲಿ ಜಗಳ ಹುಟ್ಟುವುದು ಸ
ಹಜವಾದೃಷ್ಟೆ. ಹಾಗೆ ಜಗಳ ಬಂದಾಗ ಒಬ್ಬರಿಗೊಬ್ಬರು ಕಾದು ಜ
ಗಳವಾಡಿತಲೇ ಒಡೆದುಕೊಳ್ಳುತಿದ್ದರು. ಈ ವ್ಯಾಜ್ಯವೆಲ್ಲಾ ತಂ
ತಮ್ಮೊಳಗೇ ಫೈಸಲಾಗುತ್ತಿತ್ತೇ ಹೊರತು ಕಚೇರಿವರೆಗೂ ಹೋ
ಗುತಿರಲಿಲ್ಲ. ಪ್ರತಿ ತಿಂಗಳಲ್ಲಿ ಬಹುಳ ೧೦ ಮೊದಲುಮಾಡಿ
ಕೊಂಡು ಶುದ್ದ ೫ ವರೆಗೂ ಈ ಜನರಲ್ಲಿ ಅನೇಕರು ಊರ 
---------------------------------

೬೪         ಮಾಡಿದ್ದುಣ್ಣೋ ಮಹರಾಯ.

ಲ್ಲಿರುತಿರಲಿಲ್ಲ. ಆ ದಿವಸಗಳು ಬಂದರೆ ಇವರು ಮನೆಯನ್ನು
ಬಿಟ್ಟು ಬೇರೆ ಬೇರೇ ಹೊರಟು ಹೋಗುತಿದ್ದರು. ಯಾವ
ಊರಿಗೆ ಹೋಗುತ್ತಾರೆಂಬುವುದು ಇವರಿವರ ಮನೆ ಜನರಿಗೂ
ಸಹಾ ತಿಳಿಯದು. ಇವರುಗಳ ಮನೆಗಳಲ್ಲಿ ವಿಚಾರಿಸಿದರೆ,
"ಈ ದಿವಸ ಬೆಳಿಗ್ಗೆ ಎಲ್ಲಿಯೋ ಹೋದರು, ಸಾಯಂಕಾಲ
ದೊಳಗಾಗಿ ಬರುತಾರೆ " ಎಂದು ಹೆಂಗಸರೂ ಹುಡುಗರೂ
ಏಕರೀತಿಯಾಗಿ ಉತ್ತರ ಹೇಳುತಿದ್ದರು.

ಈ ಜನರು ಈ ಬಗೆಯಾದ ಮೊಹಿಂ ಹೊರಡುವುದಕ್ಕೆ
ಕೆಲವು ದಿವಸ ಮುಂಚೆ ಇನ್ನೊಂದು ಕೆಲಸವನ್ನು ಮಾಡು
ತಿದ್ದರು. ಆ ಊರಿನಲ್ಲಿ ಒಬ್ಬ ಕೊರಮರವನು ಅನೂಚಾನ
ವಾಗಿ ಅಲ್ಲಿನ ಗ್ರಾಮದೇವತೆ ಪೂಜೆಯನ್ನು ಮಾಡುತಾ ಆದೇ
ವರಿಗಾಗಿ ಸರ್ಕಾರದವರು ಬಿಟ್ಟಿದ್ದ ಮಾನ್ಯದ ಭೂಮಿಯನ್ನು
ಅನುಭವಿಸಿಕೊಂಡು ಅರ್ಚನೆಯನ್ನು ತಪ್ಪದೇ ನಡಿಸುತಿದ್ದನು.

ಮೈಸೂರು ಸರಕಾರದ ದಂಡಿನವರು ಅದುವರೆಗೆ ವಿಶೇ
ಷವಾಗಿ ಪರಾಕ್ರಮದಲ್ಲಿಯ ವಿಜಯಸಂಭ್ರಮದಲ್ಲಿಯೂ ಹೆಸ
ರಗೊಂಡಿದ್ದರು. ಇಂಧಾ ದಂಡಿಗೆ ಬಕ್ಷಿ ರಾಮರಾಯರೂ
ಇವರ ಅಂಣನನಗ ಬ& ಭೀಮರಾಯರೂ ಮುಖ್ಯ ಸೇನಾ
ನಾಯಕರಾಗಿದ್ದರು. ಇವರ ಖ್ಯಾತಿಯು ಅನಂತಶಯನದಿಂದ
ದಿಳ್ಳಿವರೆಗೂ ವ್ಯಾಪಿಸಿತ್ತು. ಈ ಸರದಾರರುಗಳಿಬ್ಬರೂ ತಮ್ಮ
ಧಣಿಗಳಾದ ಮೈಸೂರು ರಾಜರಿಗಾಗಲಿ ಕುಂಪನಿ ಸರ್ಕಾರದ
ವರಿಗಾಗಲಿ ಎರಡೆಣಿಸದೆ ಕೇವಲ ಭಕ್ತಿಯಿಂದಲೂ ನಂಬಿಕೆ
ಯಿಂದ ನಡೆದುಕೊಳ್ಳುತಿದ್ದರು. ಇದರ ಪರಾಕ್ರಮದಿಂದ
---------------------------

        ಮಾಡಿದ್ದುಣ್ಣೋ ಮಹರಾಯ.        ೬೫

ಮೇಲೂ ಸಾಹಸದಿಂದ ಮೈಸೂರ ಸೀಮೆಯ ಸೇನೆಗೆ ಬಂದ
ಹೆಸರುವಾಸಿಯು ಹಿಂದುಸ್ಥಾನದಲ್ಲಿಯೂ ಯೂರೋಪು ದೇಶ
ಗಳಲ್ಲಿಯೂ ಚಿತ್ರಿತವಾಗಿದೆ. ಆ ಗಲಾಟೆಯಲ್ಲಿ ಕೊಲ್ಲಾಪುರದ
ರಾಜ್ಯವನೂ ಇವರು ಹಿಡಿಯಬೇಕಾಗಿ ಬಂತಂತೆ, ಸೇನೆಯ
ವರು ಆ ಊರನ್ನು ಕೊಳ್ಳೆಹೊಡೆಯಲು ಆರಂಭಿಸಿದರು,
ಅಲ್ಲಿ ಮಹಾಲಕ್ಷ್ಮಿ ಗುಡಿ ಇದೆ. ಈ ದೇವರಿಗೆ ಅಕ್ಷಾಂತರ
ಜನ ಭಕ್ತಾದಿಗಳಿದಾರೆ. ಇಲ್ಲಿ ವಿಶೇಷವಾಗಿ ಮಹತ್ತು ನಡೆ
ಯುವುದೆಂದು ಪ್ರವಾದವಿದೆ. ಶಾಕ್ತೇಯರಿಗೆ ಇದು ಒಂದು
ದಿವ್ಯಸ್ಥಳ , ನೀರಾವೇಶದಿಂದ ದುರಾಶೆಯಿಂದಲೂ ಮನ
ಸ್ಟು ಬಂದಹಾಗೆ ಹಾವಳಿ ಮಾಡುವ ಸೇನೆಯವರು ಈ ಊರ
ನ್ನೆಲ್ಲಾ ಲೂಟೀಮಾಡುತಿರುವಾಗ ಇವರಿಗೆ ಉಚ್ಛ ವೂ ಇಲ್ಲ
ನೀಚವೂ ಇಲ್ಲ. ಬಹುದಿವಸದಿಂದ ಪ್ರಸಿದ್ಧವಾದ ಈ ಗುಡಿಗೆ
ಅನೇಕ ರಾಜರು ಬೇಕಾದ ಐಶಲ್ಯವನ್ನು ಕೊಟ್ಟಿದಾರೆ, ಅ
ನೇಕಜನ ಭಕ್ತಾದಿಗಳು ಬೇಕಾದ್ದನ್ನು ಹರಕೆಯಾಗಿಯೂ
ಮುಡುವಾಗಿಯೂ ತಂದು ಒಪ್ಪಿಸಿದ್ದಾರೆ. ಅದೆಲಾ ಗುಡಿ
ಯಲ್ಲಿ ಸೇರಿದೆ. ಇಂಧಾದ್ದನ್ನು ಬರೆ ? ಈ ಗುಡಿಯತಂಟೆಗೆ
ಹೋಗದೆ ದೇವರಿಗೆ ನಮಸ್ಕಾರವನ್ನು ಮಾಡಿ ಹೊರಟುಹೋ
ಗುವುದಕ್ಕೆ ದಂಡಿನವರು ಅಂಧಾ ಪುಣ್ಯವನ್ನು ಮಾಡಿರುವು
ದೇನು ? ಇಂಧಾ ಸಮಯ ದೊರೆತಿರುವಾಗ್ಗೆ ಬಿಡುವುದಕ್ಕೆ
ಹೇಗೆ ಆಗುತ್ತೆ ? ದಂಡಿನವರು ಗುಡಿಯೊಳಕ್ಕೆ ನುಗ್ಗಿಯೇ
ನುಗ್ಗಿದರು. ಅಲ್ಲಿ ಸಿಕ್ಕಿದ್ದನ್ನೆಲ್ಲಾ ತೆಗೆದುಕೊಂಡು ಹೋಗು
ವಾಗ್ಗೆ ಗರ್ಭಗ್ರಹದಲ್ಲಿ ಅಮ್ಮ ನವರ ಮೂಗಿಗೆ ಹಾಕಿದ್ದ
-----------------------------------

೬೬     ಮಾಡಿದ್ದುಣ್ಣೋ ಮಹರಾಯ 

ಮೂಗುತಿಯ ಗಾತ್ರವಾದ ಮುತ್ತನ್ನು ತೆಗೆದುಕೊಂಡು ಹೋ
ದರಂತೆ, ಆಗ ಅಮ್ಮ ನವರಿಗೆ ಆಗ್ರಹ ಬಂದು ಈ ಮುತ್ತು
ಯಾವಯಾವ ದೇಶಕ್ಕೆ ಹೋಗುತ್ತೆಯೋ ಅಲ್ಲೆಲ್ಲಾ ವಾಂತಿ
ಭೇದಿ ರೋಗ ಆಗ ಹುಟ್ಟಿ ಹರಡಿಕೊಂಡು ಜನರನ್ನು ಕೊ
ಲ್ಲಲು ಮೊದಲುಮಾಡಿತಂತೆ, ಸಾಧಾರಣ ಜನರೆಲ್ಲಾ ಹೀಗೆ
ನಂಬಿಕೊಂಡರು. ಅದಕ್ಕೆ ಮುಂಚೆ ಅನೇಕ ವರುಷಗಳ ಹಿಂದೆ
ಹುಟ್ಟಿದ ವಾಗ್‌ಭಟ ಅಧವಾ ಬಾಹಟವೆಂಬ ವೈದ್ಯಗ್ರಂಥ
ಗಳಲ್ಲಿ ವಿಷೂಚಿ ಜಾಡ್ಯವೆನಿಸಿಕೊಂಡಿರುವ ಈ ರೋಗಕ್ಕೆ
ಚಿಕಿತ್ಸೆಯನ್ನು ಹೇಳಿದ್ದಾರೆ. ಇದೇ ಮೊದಲಾದ ಕಾರಣಗೆ
ಳಿಂದ ವಾಂತಿಭೇದಿಜಾಡ್ಯವು ಮೈಸೂರ ಸೇನೆಯವರು ಕೊ
ಲ್ಲಾಪುರದಮ್ಮನ ಮೂಗುತಿಯ ಮುತ್ತನು ತಂದಾಗಿನಿಂದ
ಹುಟ್ಟಿತೆಂದು ಹೇಳುವುದು ಹೇಗೆ ? ಏವಂಚ ಈ ವಿಷೂಚಿಯು
ಆಗಿನಿಂದ ಈಚೆಗೆ ವಿಶೇಷವಾಗಿ ಹರಡಿಕೊಂಡನೋ ನಿಜ.

ಅದು ಮೊದಲುಗೊಂಡು ಈ ಸಂಜನಾಡಿಗೆ ಅನೇಕವೇಳೆ
ವರುಷಕ್ಕೆ ಎರಡುಸಾರಿ ವರುಷಕ್ಕೆ ಒಂದುಸಾರಿ ಈ ರೋಗ
ಬಂದು ಮನೆಮನೆಗೂ ತನ್ನ ಕೆಲಸವನ್ನು ಮಾಡಿಕೊಂಡು
ಹೋಗುತಿತ್ತು. ಆಗ ಊರಜನರೆಲ್ಲಾ ಹೆಚ್ಚಾಗಿ ಹೆದರಿಕೊಂ
ಡು ಇದು ಮಾರೀ ಉಪದ್ರವೆಂಬದಾಗಿ ಎಲ್ಲರೂ ಆವೂರ
ದೇವತೆಗೆ ಅತ್ಯಂತ ಭಯಭಕ್ತಿಯಿಂದ ನಡೆದುಕೊಳ್ಳುತಿದ್ದರು.
ಆ ದೇವರಿಗೆ ಕೊಲ್ಲಾಪುರದ ಮಹಾಲಕ್ಷ್ಮಿ ಎಂದು ಹೆಸರಾಯಿ
ತು, ಇವರ ಭಕ್ತಿ ಹೆಚ್ಚಿದಹಾಗೆಲ್ಲಾ ದೇವರಲ್ಲಿ ಮಹತ್ತು
ಹೆಚ್ಚುತಾ ಬಂತು. ಈ ದೇವರಿಗೆ ಮೀಸಲಗಂದು, ಕಪ್ಪದ
-------------------------------

    ಮಾಡಿದ್ದುಣ್ಣೋ ಮಹರಾಯ.             ೬೭
   
ಮುಡಪು, ಕಾಣಿಕೆದುಡ್ಡು, ಗೋಲಕದ ಪುಡಿಕಾಸು ಇವುಗ
ಳೆಲ್ಯಾ ಹೆಚ್ಚಾಗಿ ವರಮಾನವಾಗಿ ಬರುತಿತ್ತು. ಅಷ್ಟು ಹೊ
ತ್ತಿಗೆ ಮೊದಲಿದ್ದ ಹಳೇಪೂಜಾರಿ ಸತ್ತುಹೋದನು. ಅವನ
ವಂಶದ ಹೆಸರನ್ನು ಹೇಳುವುದಕ್ಕೆ ಯಾರೂ ಇರಲಿಲ್ಲ. ಆಗ
ಸಮೀಪದ ಊರಿನಲ್ಲಿ ಸೇರಿಕೊಂಡು ಊರೂರನು ಅಲೆಯು
ತಾ ಹಗಲಿನ ಹಿಟ್ಟಿಗೂ ರಾತ್ರೆ ಅಂಬಲಿಗೂ ಸಹ ಗತಿಯಿ
ಲ್ಲದೆ ಇದ್ದ ಸಿದ್ದನೆಂಬ ಕೊರಮನು ಸತ್ತುಹೋದ ಪೂಜಾರಿಗೆ
ತಾನು ಸಮಿಾವ ದಾಯಾದಿ ಎಂತಲೂ, ತಾನು ಸಂಜವಾಡಿ
ಗ್ರಾಮದೇವತೆಯ ಪೂಜೆಯನ್ನು ಮಾಡುತ್ತೇನೆಂತಲೂ, ಗ್ರಾಮ
ಸ್ತರೆಲ್ಲರಲ್ಲಿಯೂ ಹೇಳಿಕೊಂಡು, ಆ ಊರಿಗೆ ಬಂದು ಶೇರಿದನು.
ಅದುವರೆಗೆ ಆ ದೇವರಿಗೆ ಪೂಜೆಮಾಡತಕನರು ಯಾರೂ ಸಿಕ್ಕಿ
ಯೂ ಇರಲಿಲ್ಲ. ತಾತ್ಕಾಲಕ್ಕೆ ಸಿದ ನೇ ಪೂವಾಡುತಾ ಇರಲಿ,
ಇಂಥಾ ಕೆಟ್ಟ ಕಾಲದಲ್ಲಿ ಅಮ್ಮ ನವರ ಪೂಜೆಯನ್ನು
ನಿಲ್ಲಿಸಿಬಿಟ್ಟರೆ ಯಾವ ವಿಪತ್ತು ಸಂಭವಿಸಿತೋ ಎಂದು ಗ್ರಾ
ಮದ ಮಹಾಜನಂಗಳೆಲ್ಲಾ ಒಪ್ಪಿದರು. ಅದರಂತೆ ಈ ಸಿದ್ಧ 
ನು ಹಳೇ ಪೂಜಾರಿಯ ಮನೆಯಲ್ಲಿಯೇ ವಾಸವಾಗಿರುತಾ
ಆ ದೇವದಾಯದ ಮಾನ್ಯದ ಭೂಮಿಯನ್ನು ಅನುಭವಿಸುತಾ
ದೇವರ ಪೂಜೆಗೆ ಆರಂಭಿಸಿದನು. ಕುಚೇಷ್ಟೆಯಿಲ್ಲದೆ ಪ್ರತಿಷ್ಠೆ
ಬಾರದು. ಆದ್ದರಿಂದ ಸಿದ್ಧನು ದಿನೇದಿನೇ ದೇವರಪೂಜೆ
ಯಲ್ಲಿ ಹೊಸ ಏರ್ಪಾಡುಗಳನ್ನು ಮಾಡುತ್ತಾ ಬಂದನು.
ಶುಕ್ರವಾರ ಮಂಗಳವಾರದ ಪೂಜೆ ಇದ್ದದು ನಿತ್ಯಗಟ್ಟಲೆ
ಪೂಜೆಗೆ ಆರಂಭವಾಯಿತು, ಹಗಲು ಒಂದೇ ಹೊತ್ತು ನಡೆ
-------------------------------

೬೮         ಮಾಡಿದ್ದುಣ್ಣೋ ಮಹರಾಯ.

ಯುತಿದ್ದುದು ಹಗಲು ರಾತ್ರೆ ಎರಡುಹೊತೂ ಆರಾಧನೆ
ಜರುಗುತಾ ಬಂತು, ದಿನಚರಿ ಒಂದೊಂದು ಅಲಂಕಾರ ಮಾ
ಡುವುದು, ಶುಕ್ರವಾರ ಮಂಗಳವಾರ ಹೆಚ್ಚಾದ ವಿಭವವನ್ನೂ
ದೀಪಾರಾಧನೆಯನ್ನೂ ಮಾಡುವುದು, ಕಾಣಿಕೆ ಮೊಲಾದ ಹಣ
ದಲ್ಲಿ ಲೋಕವಿಡಂಬನಾರ್ಧವಾಗಿ ಬೇಕಾದ ವೆಚ್ಚವನ್ನು ಮಾಡಿ
ಜನರನ್ನು ಮೆಚ್ಚಿಸುವುದು, ಆಗಾಗ್ಗೆ ದೇವರ ನಿವೇದನಕ್ಕಾಗಿ
ಬೇಕಾದ ಪಣಿವಾರವನ್ನು ಜೋಯಿಸರ ಮನೆಯವರಿಂದ ಮಾ
ಡಿಸಿ ಅಮ್ಮನವರ ಪ್ರಸಾದವೆಂದು ಆ ಊರಲ್ಲಿ ಮನೆಮನೆಗೂ
ಗ್ರಹಪ್ರಾಪ್ತಿಯಾಗಿ ಕಳುಹಿಸುವುದು, ಹೀಗೆ ಜರುಗಿಸಲು ಸಿ
ದ್ದನು ಆರಂಭಿಸಿದನು.

ಇಷ್ಟೇ ಅಲ್ಲ, ಈ ಹೊಸ ಪೂಜಾರಿಯು ದಿನಕ್ರಮೇಣ
ಕೌರವನ್ನು ಮಾಡಿಸಿಕೊಳ್ಳದೆ ದೀಕ್ಷೆ ಬಿಟ್ಟನು. ಹಣೆಗೆ
ಕುಂಕುಮವನ್ನು ಇಟ್ಟುಕೊಂಡು ಬೆಳ್ಳಿಕಟ್ಟುಗಳನ್ನು ಹಾಕಿದ
ಒಂದು ಕರೀ ಬೆತ್ತವನ್ನು ಹಿಡಿದು ದಿನವಹಿ ಸಾನವನ್ನು
ಮಾಡುತಾ ಮಡಿಬಟ್ಟೆಯನ್ನು ಉಡುತಾ ದೇವರ ಪೂಜೆ
ಯನ್ನು ಬಹಳ ಭಕ್ತಿಯಿಂದ ಮಾಡುತಾ ಶುಕ್ರವಾರ ಮಂಗ
ಳವಾರ ರಾತ್ರೆ ಮಂಗಳಾರತಿಯಾದ ಮೇಲೆ ಮುಖಕ್ಕೆಲ್ಲಾ
ಕುಂಕುಮವನ್ನು ಬಳಿದುಕೊಂಡು ಕೆಂಪು ದಾಸವಾಳದ ಹು
ವ್ವಿನ ದಂಡೆಯನ್ನು ಹಾಕಿಕೊಂಡು ಕೈ ಮುಗಿದುಕೊಂಡು
ದೇವರ ಮುಂದೆ ಯಾವ ಮಾತೂ ಆಡದೆ ಕಂಣಮುಚ್ಚಿಕೊಂಡು
ಸುಮ್ಮನೆ ಕೂತುಕೊಳ್ಳುತ್ತಾ ಬಂದನು. ಹಾಗೆಯೇ ಒಂದೊಂ
ದುಸಾರಿ ತಟ್ಟನೆ ಎದ್ದು ನಿಂತುಕೊಂಡು ಒಂದು ಹಿಡಿ ಕುಂಕು
-----------------------------------

        ಮಾಡಿದ್ದುಣ್ಣೋ ಮಹರಾಯ.                 ೬೯
ಮವನ್ನು ತೆಗೆದು ಎರಚಿ " ದಯಮಾಡಬೇಕು ತಾಯೇ
ಕೊಲ್ಲಾಪುರದ ಮಹಾತಾಯಿ, ಭಕ್ತರನ್ನು ಕಾಪಾಡಬಂದೆಯ
ಮಹಾ ತಾಯಿ ? '' ಎಂದು ಬಾಯಿಯಲ್ಲಿ ಹೇಳುತಾ ನಮಸ್ಕಾರ
ವನ್ನು ಮಾಡಿ ಮಂಗಳಾರತಿಯನ್ನು ಮಾಡುತಿದನು. ಅರಿ
ಯದ ಜನರು ಇದಕ್ಕೆಲ್ಲಾ ಅರ್ಥಮಾಡತಕ್ಕದ್ದನ್ನು ಕೇಳ
ಬೇಕೆ ? ಕೊಲ್ಲಾಪುರದ ಮಹಾಲಕ್ಷ್ಮಿ ಇಲ್ಲಿ ಬಂದು ನೆಲಸಿ
ದಳು ಎಂದು ಕೆಲವರು, ಸಿದ್ದಪ್ಪನಿಗೆ ದೇವತೆ ಪ್ರತ್ಯಕ್ಷವಾ
ಗಿದಾಳೆ ಎಂದು ಕೆಲವರು, ಹೀಗೆ ಮನಸ್ಸಿ ಹೇಳಿಕೊಳ್ಳುವು
ದಕ್ಕೆ ಆರಂಭವಾಯಿತು. ಹಾಗೆ ಪೂಜಾರಿಯು ಮೌನವಾಗಿ
ದೇವರಮುಂದೆ ಕೂತುಕೊಂಡಾಗ ಬೇಕಾದ ಜನರು ಮುಂದೆ
ಬಂದು ನಿಂತು ತಾವು ತಾವು ಕುರಿತ ಕಾರ್ಯಗಳನ್ನು ಕೇಳು
ತಿದ್ದರು. ಅದಕ್ಕೆ ಸಿದ್ಧನು ಸ್ವಲ್ಪ ಹೊತ್ತು ಸುಮ್ಮನೇ ಇರು
ತಾ ಕೇ'ವರಿಗೆ ಒಂದೊಂದು ಸಾರಿ "ದಸಗೆ " ಎಂತಲೂ 
" ಜಯ ” ಎಂತಲೂ, ಮತ್ತೆ ಕೆಲವರಿಗೆ " ಇಲ್ಲ " ಎಂತಲೂ
" ಹೋಗು "ಎಂತಲೂ, ಹೇಳುತಾ ಇದ ನು. ಇದೂ ಅಲ್ಲ
ದೆ ಇವನು ಕಣಿಹೇಳುವುದು ಸಹಾ ಉಂಟು. ಇದರಿಂದೆಲ್ಲಾ
ಸಿದ್ದ ಸಿದ್ದಪ್ಪನಾದ, ಸಿದ್ದಪ್ಪ ಸಿದ್ದಪ್ಪಾಜಿಯವರಾದರು,
ಸಿದ್ದಪ್ಪಾಜಿಯವರು ಹೋಗಿ ಅಪ್ಪಾಜಿಯವರಾದರು. ಕೊಲ್ಲಾ
ಪುರದಮ್ಮ ಬಂದು ನೆಲಸಿದಾಳೆ. ಅಪ್ಪಾಜಿಯವರಿಗೆ ಪ್ರತ್ಯಕ್ಷ
ವಾಗಿದಾಳೆ. ಅವರ ಮಾತು ಸುಳ್ಳಾದೀತೆ ? ದೇವರ ಮಹಿ
ಮೆಗಿಂತಲೂ ಪೂಜಾರಿಯ ಮಹಿಮೆ ಹೆಚ್ಚಾಯಿತು. ದಿನೇ
ದಿನೇ ಇವನನ್ನು ಕಾಣುವುದಕ್ಕಾಗಿ ಅನೇಕರು ಬರುವುಕ್ಕೆ
-------------------------------

೭೦         ಮಾಡಿದ್ದುಣ್ಣೋ ಮಹರಾಯ.

ಆರಂಭವಾಯಿತು. ಪಿಶಾಚ ಹಿಡಿದವರು, ಬ್ರಹ್ಮ ರಾಕ್ಷಸ ಹಿಡಿ
ದವರು, ಮೋಹಿನಿಗ್ರಸ್ಥರು, ಇತರವಿಧವಾದ ಪ್ರಾರಬ್ಧ ಕರ್ಮ
ಪೀಡಿತರು, ಇವರು ಒಂದು ಕಡೆಯಲ್ಲಿಯೂ; ದೀರ್ಘರೋಗಿಗಳು
ಕುಷ್ಠರೋಗಿಗಳು ಕುರುಡರು ಕಿವಡರು ಇವರು ಒಂದು
ಕಡೆಯಲ್ಲಿಯೂ; ಹೆಂಣು ಕೊಟ್ಟು ತೆಗೆದುಕೊಳ್ಳಲು ಉದ್ಯು
ಕ್ತರಾದವರು, ಸರಕಾರದಲ್ಲಿ ನಡೆಯುತಾ ಇರುವ ಕಕ್ಷಿಗಳು
ಒಂದುಕಡೆಯಲ್ಲಿಯೂ ಇವರೇ ಮೊದಲಾಗಿ ಅನೇಕರು ಸಂಜ
ವಾಡಿಗೆ ವಾರಿ ನಡೆಯುತ್ತಾ ಬಂದರು. ಗುಡಿಯ ಆವರ್ಣವು
ಇನ್ನೂ ದೊಡ್ಡದಾಗಿ ಕಟ್ಟಲ್ಪಟ್ಟಿತು. ಆಮ್ಯಾಜಿಯವರ ಹ
ಜಾರವೆಂದು ಒಂದು ದೊಡ್ಡ ಹಜಾರವೂ ಆಯಿತು. ಅದ
ರಲ್ಲಿ ಅಪ್ಪಾಜಿಯವರ ಗದ್ದಿಗೆಯೂ ಒಂದು ನಿರ್ಮಾಣವಾ
ಯಿತು.

ಅಪ್ಪನವರ ಪ್ರಭಾವ ಹೀಗಿರಲಿಕ್ಕಾಗಿ, ಸಂಜನಾಡಿಯ
ಮಹಾಜನರು ಆಗಾಗ್ಗೆ ವಿಜಯಯಾತ್ರೆಗಾಗಿ ಹೊರಡುತಾ
ಇದ್ದರಷ್ಟೆ. ಹಾಗೆ ಪ್ರಯಾಣ ಮಾಡುವುದಕ್ಕೆ ಮುಂಚಿತವಾಗಿ
ಅಪ್ಪಾಜಿಯವರಲ್ಲಿ ಕಣೀಕೇಳಿ ಅವರಲ್ಲಿ ಸೈ ಎನ್ನಿಸಿಕೊಂಡು
ಕೊಲ್ಲಾಪುರದ ಅಮ್ಮನವರಿಗೆ ಬೇಕಾದ ಸೇವೆಯನ್ನು ಮಾಡಿ
ಹರಕೆ ಹೊತ್ತು ಅಪ್ಪಾಜಿಯ ಅಪ್ಪಣೆಯನ್ನು ಪಡೆದು ಹೊರ
ಡುತಿದ್ದರು. ಈ ಜನರು ಸಾಧಾರಣವಾಗಿ ದಕ್ಷಿಣದೇಶಕ್ಕೆ
ಹೋಗುತಿದ್ದರು. ಆದರೆ ಇವರ ದಾರಿಯು ಎಲ್ಲರೂ ತಿರಗ
ತಕ್ಕ ತೊಪ್ಪೂರು ಕಣಿವೆ ಗೆಜ್ಜಲಹಟ್ಟಿ ಕಣಿವೆ ಇವುಗಳಲ್ಲ.
ಇವರು ಯಾವಾಗಲೂ ಜನಸಂಚಾರವಿಲ್ಲದ ಕಾಡುದಾರಿಯಲ್ಲಿ
----------------------------------
೭೧         ಮಾಡಿದ್ದುಣ್ಣೋ ಮಹಾರಾಯ. 

ಬೆಟ್ಟವನ್ನು ಹತ್ತಿ ಬೆಟ್ಟವನ್ನು ಇಳಿದುಕೊಂಡು ಹೋಗಿಬ
ರುತಿದ್ದರು. ಒಂದುಸಾರಿ ಹೋಗಿಬಂದ ದಾರಿಯಲ್ಲಿ ಪುನಃ
ತಿರಗಾಡುತಿರಲಿಲ್ಲ. ಇವರ ಬಟ್ಟೆ ಇಂದಾದೆ೦ದು ಯಾರಿಗೂ
ಗೊತ್ತಿಲ್ಲ. ಊರಬಿಟ್ಟು, ಇವರು ಹೊರದಮೇಲೆ ಇವರ .ಹೆ
ಸರು ವೇಷ ಬೇರೆಬೇರೆಯಾಗುತಿತ್ತು. ಪೆಟ್ಟಗೇಗಾಡಿ, ಸಾ
ರೋಳುಗಾಡಿ, ಜಿಂಕೆ, ಕರಡಿ, ಹಂದಿ, ನೆಲಗವಿಸಿದ್ದೇಶ್ವರ,
ನಾಗರಮುರಿ, ಹೀಗೆ ಬಗೆಬಗೆಯಾಗಿ ಹೆಸರನ್ನು ಇಟ್ಟುಕೊಂಡಿ
ದ್ದರು. ಇದಕ್ಕೆ ಸರಿಯಾಗಿ ವೇಷವನ್ನೂ ಬದಲಾಯಿಸಿಕೊ
ಳ್ಳುತಿದ ರು. ಹೆತ್ತ ತಾಯಿಬಂದು ನೋಡಿದರೂ ಇಂಥವನೇ
ತನ್ನ ಮಗನೆಂದು ಕಂಡುಹಿಡಿಯುವುದು ಕಷ್ಟವಾಗುವಹಾಗೆ
ವಿರೂಪ ಮಾಡಿಕೊಳ್ಳುತಿದ್ದರು. ಇವರಿಗೆ ಕನ್ನಡ ತೆನಗು
ಅರವು ಮಲೆಯಾಳಿ ಹಿಂದುಸ್ತಾನಿ ಕೊರಚರಮಾತು ತೊದ
ವರಮಾತು ಲಂಬಾಣಿಯವರಮಾತು ಇದೆಲಾ ಬರುತಿತ್ತು.
ಕೊಡಗರ ಮಾತನ್ನೂ ಆಡುತಿದ್ದರು. ಹಣೆಮುಟ್ಟಿದ ದೊಣ್ಣೆ
ಒಂದು, ಕೈಬಾಕು ಒಂದು, ಇದು ಒಬ್ಬೊಬ್ಬರಲ್ಲಿಯೂ ಇರು
ತಿತ್ತು. ತಮ್ಮ ಕೆಲಸಕ್ಕೆ ಬೇಕಾದ ಇತರ ಸಾಮಾನುಗಳ
ನ್ನು ತೆಗೆದುಕೊಂಡು ಕಣವೇ ಕೆಳಗೆ ದೊಡ್ಡ ಊರುಗಳಿಗೆ ಹೋಗಿ
ಅಲ್ಲಿ ಜೋಗಿ, ಜಂಗಮ, ದಾಸ, ಗೊರವ, ಪಂ
ಡಾರ, ಬುಡುಬುಡಕೆ, ಕೊರವಂಜಿ, ಇದೇ ಮೊದಲಾದ ವೇ
ಷಗಳನ್ನು ಹಾಕಿಕೊಂಡು ಬೇರೆ ಬೇರೆ ಇರುತಿದ್ದರು. ಕೆಲ
ವರು ಭಾರಿವರ್ತಕರ ವೇಷವನ್ನೂ ಇನ್ನು ಕೆಲವರು ಬ್ರಾ
ಹ್ಮಣರ ವೇಷವನ್ನೂ ಹಾಕಿಕೊಂಡು ಇರುತಿದ್ದರು.
-------------------------------

೭೨          ಮಾಡಿದ್ದುಣ್ಣೋ ಮಹರಾಯ.

ಅದರೆ ಇವರೆಲ್ಲಾ ಊರಿಗೆ ದೂರವಾಗಿ ರಹಸ್ಯವಾದ ಒಂದು
ಕಡೆ ಸಮರಾತ್ರೆಯಲ್ಲಿ ಸೇರಿ ಬೇಕಾದ ಮಾತುಗಳನ್ನಾಡಿಕೊ
ಳ್ಳುತಿದ್ದರು. ಮಳೆಗಾಲ ಕತ್ತಲೇ ಕಾಲ ಕಳೆದಮೇಲೆ ಈ
ಜನರು ಒಬ್ಬೊಬ್ಬರಾಗಿ ಊರಿಗೆ ಬಂದು ಸೇರಿಕೊಳ್ಳುತಿ
ದ್ದರು. ಇವರು ಹೊದ್ದು ಹೇಗೆ ಯಾರಿಗೂ ಗೊತ್ತಾಗು
ತಿರಲಿಲ್ಲವೋ ಹಾಗೇ ಇವರು ಊರಿಗೆ ಬಂದದೂ ಗೊ
ತ್ತಾಗುತಿರಲಿಲ್ಲ. ಒಂದುಸಾರಿ ಹೋಗಿಬಂದರೆ ಒಬ್ಬೊಬ್ಬ
ಐನೂರು ರೂಪಾಯಿಗೆ ಕಡಿಮೆಯಿಲ್ಲದೆ ಸಂಪಾದನೆ ಮಾಡಿ
ಕೊಂಡು ಬಂದು ಗೋಪ್ಯವಾಗಿ ಸೇರಿಕೊಂಡು ಇರುತಿದ್ದರು.

ಇವರು ಮಾಡಿಕೊಂಡು ಬಂದ ಸಂಪಾದನೆಯು ಅಪ್ಪಾ
ಜಿಯವರು ಕಣಿಯನ್ನೂ ಶಕುನವನ್ನೂ ಹೇಳಿದಮೇಲೆ ಅಮ್ಮ
ನವರ ಪ್ರಸಾದದಿಂದಲ್ಲವೇ ಆಗದು : ಅಂಧಾ ಅಮ್ಮನವರ
ಸೇವೆಗೂ ಅಪ್ಪಾಜಿಯವರ ಹಾದಕ್ಕೂ ಕಾಣಿಕೆಯನ್ನು ಕೊ
ಡದಿದ್ದರೆ ಆದ ಸಂಪಾದನೆ ದಕ್ಕಿತೆ ? ಆದ್ದರಿಂದ ಮೋಹಿಂ
ಹೋಗಿ ಬಂದ ವೀರರೆಲ್ಲರೂ ಸಾಗಿಸಿಕೊಂಡು ಬಂದ ಐಶ್ವ
ರ್ಯದಲ್ಲಿ ಒಬ್ಬೊಬ್ಬರೂ ಹತ್ತರಲ್ಲಿ ಒಂದು ಭಾಗವನ್ನು
ಒಪ್ಪಿಸುತ್ತಿದ್ದರು. ಹನಿಹನಿ ಕೂಡಿ ಹಳ್ಳವಾಗಿ ಅವಾಜಿಯ
ವರಿಗೆ ಗಂಟು ದಪ್ಪನಾಗಿಯೇ ಬರುತಿತ್ತು. ಹೀಗೆ ಬಂದ
ಹಣದಲ್ಲಿ ಅಮ್ಮನವರಿಗೆ ಬೇಕಾದ ಒಡವೆಗಳನ್ನು ಮಾಡಿಸಿ
ಮಿಕ್ಕದ್ದನ್ನು ಬಡಬಗ್ಗರಿಗೂ ಬ್ರಾಹ್ಮಣರಿಗೂ ಉತ್ಸವಾದಿಗ
ಳಿಗೂ ಪೂಜಾರಿಯು ವಿನಿಯೋಗಿಸುತಿದ್ದನು. ಮದುವೆಮುಂ
ಜಿ ಇತರ ಹವ್ಯಕನ್ಯಾದಿಗಳು ಎಂದು ಬಂದವರಿಗೆಲ್ಲಾ ಜನರ 
-----------------------------

ಮಡಿದುಣ್ಣೋ ಮಹರಾಯ.                            ೭೩

ಯೋಗ್ಯತಾನುಸಾರವಾಗಿ ಕೊಟ್ಟು ಸಹಾಯ ಮಾಡುತ್ತಿದ್ದನು.
ಯಾವಾಗಲೂ ಇವನ ಸಮೀಪದಲ್ಲಿ ಜನರು ಸೇರಿಕೊಂಡೇ
ಇರುತಾ ಇವನನ್ನು ಅತ್ಯಂತ ಗೌರವವಾಗಿ ಕಂಡುಕೊಂಡಿದ್ದರು.

೬ ನೇ ಅಧ್ಯಾಯ.

ಅತ್ತಲಾ ಮರದಲ್ಲಿ ಹುಡುಗರು ಮಾಡಿದ ಕೆಟ್ಟತಂತ್ರ
ದಿಂದ ಮೈ ಎಲ್ಲಾ ಗಾಯವಾಗಿ ಪ್ರಾಣ ಉಳಿಯುವುದೋ
ಹೋಗುವುದೋ ಎಂಬ ಸ್ಥಿತಿಯಲ್ಲಿದ್ದ ಉವಾಧ್ಯಾಯ ನಾರಪ್ಪ
ಯ್ಯನನ್ನು ಸದಾಶಿವದೀಕ್ಷಿತನು ತನ್ನ ಮನೆಗೆ ಸಾಗಿಸಿಕೊಂಡು
ಹೋಗಿ, ಬಗೆಬಗೆಯಾದ ಔಷಧಗಳನ್ನು ಹಾಕಿ ಬೇಕಾದ ಉಪ
ಚಾರಗಳನ್ನು ಮಾಡಿ ಅವನ ಮೈ ಗಾಯನ ವಾಸಿಮಾ
ಡಿದನು. ಆ ಬ್ರಾಹ್ಮಣರ ಸಂಕಟವನ್ನು ನೋಡಿ ಸಹಿಸಲಾ
ರದೆ ಪಾರಮಾರ್ಥಿಕವಾಗಿ ಜೋಯಿಸರ ಮನೇಜನವೆಲ್ಲಾ ಅವ
ನಿಗೆ ಆರೇಕೆಯನ್ನು ಮಾಡಿದರು. ಚಿರಂಜೀವಿಯಾದ ಮ
ಹಾದೇವನೂ ಕೂಡ ಈ ಪಂತನು ತನ್ನನ್ನು ಹೊಡೆಯುತಿದ್ದ
ದನ್ನೆಲ್ಲಾ ಮರೆತು ಬಹಳವಾಗಿ ಆತನಿಗೆ ಉಪಚರಿಸುತ್ತಿದ್ದನು.
ಈ ಬಾಲಕನ ಗುಣಾತಿಶಯಗಳನ್ನು ನೋಡಿ ಪಂತನಿಗೆ ನಾಚಿಕೆ
ಯುಂಟಾಯಿತು. ನಾರಸ್ಸಯನಿಗೆ ಪೂರ್ತಿಯಾಗಿ ವಾಸಿಯಾ
ಗು ೪-೫ ತಿಂಗಳು ಬೇಕಾಯಿತು. ಹೆರಿಗೆಗಾಗಿ ಊರಿಗೆ
------------------------------

೭೪         ಮಾಡಿದ್ದುಣೋ ಮಹರಾಯ.

ಹೋಗಿದ್ದ ಈತನ ಹೆಂಡತಿಗೆ ದೇಹದಲ್ಲಿ ಏನೋ ಜೆಡ್ಡು
ಪ್ರಾಪ್ತವಾಗಿ ಆಕೆ ತೌರುಮನೆಯಲ್ಲಿಯೇ ಔಷಧವನ್ನು ತೆಗೆ
ದುಕೊಳ್ಳುತ್ತಾ ಇದ್ದಳು. ಈ ಕಾರಣದಿಂದ ಪಂತನು ಜೋ
ಯಿಸರ ಮನೆಯಲ್ಲಿಯೇ ನಿಂತನು.

ಮಹಾದೇವನಿಗೆ ಮಠದಲ್ಲಿ ಓದು ತಪ್ಪಿ ಹೋಯಿತು.
ಆದಕಾರಣ ಸದಾಶಿವದೀಕ್ಷಿತನು ಮಗನಿಗೆ ತಾನೇ ಪಾಠಹೇ
ಳಲು ಆರಂಭಿಸಿದನು. ಗರ್ಭಾಷ್ಟಮದಲ್ಲಿ ಮಗನಿಗೆ ಉಪ
ನಯನವನ್ನು ಮಾಡಿದನು. ಬೆಳಗಿನ ಝಾವದಲ್ಲಿ ಅಮರ
ಶಬ್ದ ಸ್ತೋತ್ರಾದಿಗಳನ್ನು ಹೇಳುತ್ತಿದ್ದನು. ತರುವಾಯ ಬಾಲ
ಕನು ಎದ್ದು ಕೈ ಕಾಲಿಗೆ ಹೋಗಿಬಂದು ಮೈ ತೊಳೆದುಕೊಂಡು
ಸಂಧ್ಯಾವಂದನೆ ಅಗ್ನಿ ಕಾರ್ಯ ಮೊದಲಾದ್ದನ್ನು ಮಾಡಿ, ತರು
ವಾಯ ರಘುವಂಶ ನಾನು ಮೊದಲಾದ ಕಾವ್ಯಗಳನ್ನು ಚಿಂ
ತನೆ ಮಾಡುತ್ತಾ ಇದ್ದನು. ಮಧ್ಯಾಹ್ನ ಊಟವಾದಮೇಲೆ
ಕರಡನ್ನು ಮಸಕುಮಾಡುವುದು, ಲೆಕ್ಕ ಮೊದಲಾದ್ದನ್ನು ಹೇ
ಳಿಸಿಕೊಳ್ಳುವುದು, ಬರೆದ ಕಾಗದಗಳನ್ನು ಓದುವುದು, ಈಪಾ 
ಠಗಳು ನಡೆಯುತ್ತಾ ಇದ್ದವು. ದೀಕ್ಷಿತನು ಮಡಿ ಉಟ್ಟು
ಕೊಂಡಮೇಲೆ ಮಗನಿಗೆ ಅಧ್ಯಯನವನ್ನು ಹೇಳುವುದೂ ಸಹಾ
ಕ್ಲಿಪ್ತವಾಗಿ ಜರಗುತಾ ಇತ್ತು. ಮಹಾದೇವನು ಸಹಜವಾಗಿ
ಜಾಣ, ತಂದೆಯು ಉಪಾಯವಾಗಿಯೂ ಮಕ್ಕಳಿಗೆ ತಿಳಿ
ಯುವಹಾಗೆಯ ಬೋಧಿಸುತ್ತಾ, ಅವರಿಗೆ ಅಸಹ್ಯವೂ
ಬೇಸರಿಕೆಯೂ ಭೀತಿಯೂ ಇಲ್ಲದಹಾಗೆ ಪಾಠದಲ್ಲಿ ಒಂದು
ಅಕ್ಕರೆಯನ್ನು ಹುಡುಗರಿಗೆ ಹುಟ್ಟಿಸಿ, ಬೋಧಿಸುವ ಕ್ರಮವು
----------------------------
        ಮಾಡಿದ್ದುಣೋ ಮಹರಾಯ.        ೩೫
       
ಬಹಳ ಶ್ಲಾಘನೀಯವಾಗಿತ್ತು. ಪಾಠವನ್ನು ಓದಲಿಲ್ಲ, ವಿದ್ಯಾ
ವ್ಯಾಸಂಗವನ್ನು ಮಾಡಲಿಲ್ಲ ಎಂಬ ವಿಚಾರದಲ್ಲಿ ಒಂದು
ದಿವಸವೂ ದೀಕ್ಷಿತನು ಮಗನನ್ನು ಶಿಕ್ಷಿಸಲಿಲ್ಲ. ಹಾಗೆ ಶಿಕ್ಷೆ
ಸಬೇಕಾದ ಅಗತ್ಯವೂ ಇರಲಿಲ್ಲ. ಹೀಗೆ ವಿದ್ಯಾಭ್ಯಾಸ ಜರ
ಗುತಿರುವಾಗ ಒಂದು ದಿವಸ ಮಹಾದೇವನು ಗಣಿತಭಾಗವನ್ನು
ಹೇಳಿಸಿಕೊಳ್ಳುತಾ ತಿಳಿಯದೇಹೋದ ಒಂದೇ ವಿಷಯವನ್ನು
ಕುರಿತು ಎರಡು ಮೂರುಸಾರಿ ತಂದೆಗೆ ಪ್ರಶ್ನೆ ಮಾಡಿದನು.
ಎರಡು ಮೂರುಸಾರಿಯ ವಿವರಿಸಿಹೇಳಿ ತಂದೆಗೆ ಸಾಕಾಯಿ
ತು, ಆಗ ಮಗನನ್ನು ನೋಡಿ ದೀಕ್ಷಿತನು- ಮಹಾದೇವ,
ನಿನಗೆ ಎಷ್ಟು ಹೇಳಿದರೂ ತಿಳಿಯುವುದಿಲ್ಲ. ನೀನು ಮಡ್ಡಿ
ಹುಡುಗ ಎಂದನು. ಈ ಮಾತನ್ನು ಕೇಳಿ ಯಾವಾಗಲೂ
ಒಂದು ಕೆಟ್ಟ ಮಾತನ್ನೂ ಆಡದೆ ಪ್ರೀತಿಯಾದ ಮಾತನಾಡು
ತಾ ಇದ್ದ ತಂದೆಯು ಮುಖವನ್ನು ಗಂಟುಹಾಕಿಕೊಂಡು- 
ನೀನು ಮಡಿ ಹುಡುಗ, ಎಂದು ಹೇಳಿದಮಾತಿನಿಂದ ಬಾಲಕ
ನಿಗೆ ಬಹಳವಾಗಿ ಅಸಮಾನವಾದಹಾಗೆ ಆಯಿತು. ಈ ಯೋ 
ಚನೆಯಲ್ಲಿ ಆದಿನ ರಾತ್ರೆ ಚೆನ್ನಾಗಿ ಊಟವನ್ನೂ ನಿದ್ರೆಯ
ನ್ನೂ ಮಾಡದೆ ಮಹಾದೇವ ಸುಮ್ಮನೇ ಮಲಗಿಕೊಂಡನು.

ಪಾಠವನ್ನು ಹೇಳಿ ಮುಗಿಸಿ ದೀಕ್ಷಿತನು ಸಾಯಂಕಾಲದ
ಸಂಧ್ಯಾವಂದನೆಗಾಗಿ ಹೊರಗೆ ಹೊರಟನು. ಪಾಠ ಹೇಳುವು
ದನ್ನೆಲ್ಲಾ ಕೇಳುತಾ ಕೂತಿದ್ಯ ಉಪಾಧ್ಯ ನಾರಪ್ಪಯ್ಯನು
ದೀಕ್ಷಿತನ ಸಂಗಡ ಹೊರಟು ಮಾತನಾಡಿಕೊಂಡು ಹೋಗುತಾ
ಇರುವಾಗ-
--------------------------------

೭೬         ಮಾಡಿದ್ದುಣೋ ಮಹರಾಯ.

ನಾರಪ್ಪಯ್ಯ-ಮಹಾದೇವ ಪೂರ್ವಕ್ಕೆ ಈಗ್ಗೆ ಎಷ್ಟೋ ಬುದ್ದಿ
ಶಾಲಿಯಾಗಿದ್ದಾನೆ. ಮಠದಲ್ಲಿ ಓದುವಾಗಮಾತ್ರ ಅವನಿಗೆ
ಮಡ್ಡಿತನ ಬಂದಿತ್ತು. ಅದು ಸಹವಾಸ ದೋಷವೆಂದು
ಹೇಳಬೇಕು. ಎಷ್ಟು ಹೇಳಿದರೂ ಅವನ ಮನಸ್ಸಿಗೆ
ಅಂಟುತ್ತಲೇ ಇರಲಿಲ್ಲ.
ದೀಕ್ಷಿತ-ಹುಡುಗರನ್ನು ಉವಾಯವಾಗಿ ಮಾರ್ಗಕ್ಕೆ ತರಬೇಕು.
ನಾರ-ಎಷ್ಟು ಉವಾಯ ಮಾಡಿದರೂ ಹುಡುಗರು ಮನ
ಸ್ಥಿಟ್ಟು ಓದದಿದ್ದರೆ ಪ್ರಯೋಜನವೇನು ?
ದೀಕ್ಷಿ-ಅವರಿಗೆ ಪಾಠದಲ್ಲಿ ಸುಮತಿ ಹುಟ್ಟುವಹಾಗೆ ಮಾಡು
ವುದು ಭಾರ ಹೇಳತಕ್ಕವರ ಕೆಲಸವಾಗಿದೆ.
ನಾರ-ಹಾಗೆ ಎನ್ನುವುದಕ್ಕಾಗುವುದಿಲ್ಲ. ನಾನೂ ನೋಡುತಾ
ಇದೇನಷ್ಠೆ, ಪಾಠಹೇಳುವುದರಲ್ಲಿ ಇನ್ನು ತಮಗಿಂ
ತಲೂ ಉವಾಯವಾಗಿ ಹೋಗತಕ್ಕವರನ್ನು ನಾನು
ಅರಿಯೆ. ಆದಾಗ್ಯೂ ಮಹಾದೇವ ಆ ಗಣಿತವನ್ನು
ತಿಳಿದುಕೊಳ್ಳಲಿಲ್ಲ. ಹುಡುಗರು ಮನಸ್ಸಿಟ್ಟು ಓದು
ವುದಿಲ್ಲ.
ದೀಕ್ಷಿ-ನಾನು ಹೇಳುತ್ತಿದ್ದ ಗಣಿತವು ಸ್ವಲ್ಪ ಕಷ್ಟವಾದ್ದು.
ಅದು ದೊಡ್ಡವರಿಗೇ ಗುಟಕನೀರಾಗುತ್ತೆ. ಆದಾಗ್ಯೂ
ಇನ್ನೊಂದುವೇಳೆ ಹೇಳಿ ವಿವರಿಸೋಣವೆಂದು ಪಾಠ 
ನನ್ನು ಅಲ್ಲಿಗೆ ನಿಲ್ಲಿಸಿಬಿಟ್ಟೆ,
ನಾರ-ತಾವು ಅಷ್ಟು ಹೇಳಿದರೂ ತಿಳಿದುಕೊಳ್ಳದಿದ್ದರೆ ಇನ್ನೇ
ನ ಹೇಳಬೇಕು ?
--------------------------------

೭೭         ಮಾಡಿದ್ದುಣ್ಣೋ ಮಹರಾಯ.

ದೀಕ್ಷಿ-ಮಧ್ಯಾಹ್ನದಿಂದಲೂ ಪಾಠ ಓದುತಾ ವ್ಯಾಸಂಗಮಾ
          ಡುತಲೇ ಇದು ಬುದ್ಧಿ ಹೆಚ್ಚಾಗಿ ದಣಿದಿರುವಾಗ
          ಕ್ಲಿಷ್ಟವಾದ ಹೊಸಸಂಗತಿಗಳು ಮನಸ್ಸಿಗೆ ಹತ್ತುವುದಿಲ್ಲ.
ನಾರ- ತಾವು ಹೇಳುವುದು ಯಳೇಮಕ್ಕಳಿಗೂ ಸಹಾ ತಿಳಿಯು
          ತ್ತೆ. ನನಗಂತೂ ತಾವು ಹೇಳಿದ ಅಂಶ ಅರೆದು ಹು
           ಯಿದ ಹಾಗಾಯಿತು,
ದೀಕ್ಷಿ-ಆಗ ಅವನ ಬುದ್ದಿ ಎಷ್ಟು ಆಯಾಸ ಪಟ್ಟಿತ್ತೋ 
          ಅಷ್ಟು ಆಯಾಸ ನಮ್ಮ ಬುದ್ಧಿ ಆಗಿರಲಿಲ್ಲ. ಮತ್ತು
           ಒಂದುವೇಳೆ ಆನು, ಕ್ಲೇಶ ನನಗೆ ಉಂಟಾಗಿದ್ದಾಗ್ಯೂ
          ದೊಡ್ಡವರಾದ್ದರಿಂದ ನಾವು ತಡೆದುಕೊಳ್ಳಬಲ್ಲೆವು. ಅ
           ವನು ಇನ್ನೂ ಬಾಲಕನಾದ್ದರಿಂದ ತಡೆಯಲಾರ,
ನಾರ-ಬುದ್ಧಿ ಇದ್ದರೆ ಸರಿ. ದೊಡ್ಡವರೇನು ? ಚಿಕ್ಕವ 
    ರೇನು ? ಬುದ್ಧಿಗೆ ಆಯಾಸವೆಂದರೇನು ? ಹುಡು
    ಗರು ಆಟಕ್ಕೋಸ್ಕರ ಹಾಗೆ ಅತ್ತ ಇತ್ತ ಗಮನ
    ವನ್ನು ಕೊಟ್ಟು ಹೇಳಿಕೊಟ್ಟ ಪಾಠವನ್ನು ತಿಳಿದು
    ಕೊಳ್ಳದೇ ಕಾಲಹರಣ ಮಾಡುತ್ತಾರೆ. ಬಿಸಿಬಿಸಿಯಾಗಿ
    ನಾಲ್ಕು ಏನನ್ನು ಸೆಳೆದರೆ ಆ ಮಂಕುತನವೆಲ್ಲಾ
    ಹೋಗಿ ಜ್ಞಾನ ಉಂಟಾಗುತ್ತೆ.
ದೀಕ್ಷಿ-ಹಾಗಲ್ಲ ಉವಾಧ್ಯಾಯರೆ. ವಿದ್ಯಾಭ್ಯಾಸ ವಿಚಾರವಾಗಿ
    ನನಗೂ ನಿಮಗೂ ಇರುವ ಭಿನ್ನಾಭಿಪ್ರಾಯ ಇಲ್ಲಿಯೇ,
    ಯಳೆ ಮಕ್ಕಳು ತೊದಲು ಮಾತನಾಡುತ್ತಾರೆ. ಎರಡು
    ಮೂರು ವರುಷ ವಯಸ್ಸು ಆದಹಾಗೆಲ್ಲಾ ಮಾತನ್ನು
-------------------------------------

೭೮     ಮಾಡಿದ್ದುಣ್ಣೋ ಮಹರಾಯ.

    ಹೆಚ್ಚಾಗಿ ಹೆಚ್ಚಾಗಿ ಆಡುತ್ತಾರೆ. ಆದರೆ ಅವರು
    ಅಕ್ಷರಗಳನ್ನು ಜೋಡಿಸಬಲ್ಲರೆ ? ಲೆಕ್ಕ ಮಾಡಬಲ್ಲರೆ ?
    ಇಲ್ಲ. ಅದಕ್ಕೆ ಇನ್ನೂ ಕೆಲವು ವರುಷಗಳು ಆಗಬೇಕು.
      ದೇಹ ಬಲಿತಹಾಗೆಲ್ಲಾ ತಲೆಯ ಮಿದಳು ಬಲಿಯುತಾ
    ಬರುತ್ತೆ. ಹಾಗೆಯೇ ಭೇದಾಭೇದಗಳನ್ನೂ ಸಾಮಾ
    ನ್ಯ ಧರ್ಮಗಳನ್ನೂ ಬುದ್ದಿಯಿಂದ ತಿಳಿದುಕೊಳ್ಳುತಾರೆ
    ವಯಸ್ಸು ಹೆಚಿ ದಹಾಗೆಲಾ ಈ ತಿಳವಳಿಕೆ ಹೆಚ್ಚಾ
    ಗುತಾ ಬರುತ್ತೆ ದೇಹದಾರ್ಡ್ಯ ಹೆಚ್ಚಾಗಿರುವ ದೊ
    ಡ್ಡವರು ಹೆಚ್ಚು ಹೊತ್ತು ಕೆಲಸಮಾಡುತ್ತಾರೆ. ಶಕ್ತಿ
    ಕಮ್ಮಿಯಾಗಿರುವ ಬಾಲಕರು ಕಡಮೆಯಾಗಿ ಕೆಲಸ
    ಮಾಡುತಾರೆ. ಹುಡುಗರಿಂದ ಹೆಚ್ಚಾ ಗಿ ಕೆಲಸ ಮಾಡಿ
    ಸಿದರೆ ಅವರಿಗೆ ಆಯಾಸ ಹೆಚ್ಚಾಗುತ್ತೆ, ದೊಡ್ಡವ
    ರಿಗೆ ಜಾಗ್ರತೆಯಾಗಿ ಆಯಾಸವಾಗುವುದಿಲ್ಲ. ದೇಹಕ್ಕೆ
    ಹೇಗೆಯೋ ದೇಹಸಂಬಂಧವುಳ ಬುದ್ಧಿಗೂ ಹಾ
    ಗೆಯೇ, ಇದು ಅನುಭವಸಿದ್ಧವಾದ ವಿಚಾರವಾಗಿದೆ.
    ಹೀಗೆ ಚಿಕ್ಕವರಿಗೆ ಬುದ್ಧಿಶಕ್ತಿ ಕಡಮೆಯಾಗಿಯೂ
    ದೊಡ್ಡವರಿಗೆ ಹೆಚ್ಚಾಗಿಯೂ ಇರುವುದು, ಬುದ್ಧಿಗೆ
    ಆಯಾಸವುಂಟು. ದೊಡ್ಡವರಿಗೆ ಹುಡುಗರು ಎಲ್ಲಾ
      ವಿಚಾರದಲ್ಲಿಯೂ ಸಮಾನರು ಎಂದು ತಾವು ತಿಳಿಯ
            ಕೂಡದು.
ನಾರ-ಹಾಗಾದರೆ ಕೇಳಿದ್ದಕ್ಕೆ ತಟ್ಟನೆ ಕೆಲವು ಹುಡುಗರು ಉತ್ತರ
            ಕೊಡುತಾರಲ್ಲ ? ಉಳಿದವರೂ ಹಾಗೆಯೇ ಯಾಕೆ
-------------------------------------

    ಮಾಡಿದ್ದುಣ್ಣೋ ಮಹರಾಯ.     ೭೯
   
    ತಿಳಿದುಕೊಳ್ಳಬಾರದು ? ಒಂದೇ ವಯಸ್ಸಿನ ಹುಡು
    ಗರು ಒಂದೇ ಪಾಠವನ್ನು ಓದುವಾಗ ಒಬ್ಬನಿಗೆ ತಿಳಿ
    ಯುವುದೇನು ಇನ್ನೊಬ್ಬನಿಗೆ ತಿಳಿಯದೇ ಹೋಗುವು
    ದೇನು ?
ದೀಕ್ಷಿ-ಆ ಸಂಗತಿಯನ್ನು ಚೆನ್ನಾಗಿ ವಿಚಾರಮಾಡಿದರೆ ಗೊ
    ತಾಗುತ್ತೆಬುದಿ ಗೂ ಬುದಿ ಗೂ ತಾರತಮ್ಯವಿದೆ.
    ಚೆಟುವಟಿಗೆ ಹೆಚ್ಚು ಕಡಮೆಯಾಗಿರುವುದು ಅವರವರ   
    ಪ್ರಾಚೀನಕರ್ಮಾನುಸಾರವಾದ ಸಹಜಧರ್ಮ, ಆದರೆ
    ಹೇಳಿದ್ದನ್ನು ತಿಳಿದುಕೊಳ್ಳುವ ಕಾಲದಲ್ಲಿ ಹುಡು
    ಗನ ದೇಹಸ್ಥಿತಿ, ಅವನು ತಿಂದಿದ್ದ ಆಹಾರ, ಹೇ
    ಳಿಕೊಟ್ಟಾಗ ಅವನ ಬುದ್ಧಿಗೆ ಇರಬಹುದಾದ ಇತರ
    ಗಲಭೆ, ಹೇಳಿ ಕೊಟ್ಟಾಗ ಬಾಲಕನು ಗಮನಿಸಿ ಕೇಳಿದ
    ರೀತಿ, ಮನಸ್ಸಿನಲ್ಲಿರುವ ಸಂಗತಿಯನ್ನು ಬಾಯಿಂದ
    ವಿವರಿಸಿ ಹೇಳುವ ಸಾಮರ್ಥ್ಯ, ಅದನ್ನು ಹೇಳುವು
    ದಕ್ಕೆ ಬೇಕಾಗುವ ನಿಶ್ಚಯವಾದ ತಿಳುವಳಿಕೆ, ತೋರಿ
    ದ್ದನ್ನು ಹೇಳುವುದಕ್ಕೆ ಮನಸ್ಸಿಗೆ ಉಂಟಾಗುವ ಭೀತಿ
    ಯವರಿನುತಿ, ಇವೇ ಮೊದಲಾಗಿ ಅನೇಕ ಕಾರಣಗಳು
    ಹುಡುಗ ಹುಡುಗರಿಗೆ ಇರುವ ತಾರತಮ್ಯಕ್ಕೆ ಆಧಾರ
    ವಾಗಿವೆ. ಅದರ ಸೂಕ್ಷ್ಮ ಭಾಗಗಳೆಲ್ಲವನ್ನೂ ಶೋಧಿಸಿ
    ಕೊಂಡು ಹೋದರೆ ಅದೆಲ್ಲಾ ಗೊತ್ತಾಗುವದು.
ನಾರ– ಇದೆಲ್ಲವನ್ನೂ ನೋಡಿಕೊಳ್ಳುತಾ ಪಾಠಹೇಳುವುದು
    ಸಾಧ್ಯವೆ ?
------------------------------------

೮೦         ಮಾಡಿದ್ದುಣ್ಣೋ ಮಹರಾಯ 

ದೀಕ್ಷಿ-ಹವುದು ಪಂತರೆ; ಇದೆಲ್ಲವನ್ನೂ ವಿಚಾರಮಾಡಿಕೊಂ
    ಡು ಬಾಲಕನ ಬುದ್ಧಿ ಜಾತಿಯನ್ನೂ ಅದರ ತಾಣ
    ನನ್ನೂ ತಿಳಿದು ಅದಕ್ಕೆ ಅನುಸಾರವಾಗಿ ಪಠಹೇಳ
    ತಕ್ಕವರೇ ನಿಜವಾದ ಉವಾಧ್ಯಾಯರು. ಹುಡುಗರಿಗೆ
    ಬೋಧೆಮಾಡುವುದೂ ಪರಕಾಯ ಪ್ರವೇಶಮಾಡುವುದೂ
    ಎರಡೂ ಒಂದೇ. ಒಬ್ಬ ಬಾಲಕನು ನಾ ಹೇಳಿ ಕೊಟ್ಟ
    ದ್ದನ್ನು ಯಾವರೀತಿ ಅನುಸರಿಸಿ ತಿಳಿದುಕೊಳ್ಳುತಾನೊ
    ಆದೇ ರೀತಿಯಲ್ಲಿ ನಾನೂ ತಿಳಿದುಕೊಳ್ಳುವುದಕ್ಕೆ ಯ
    ತ್ನಿಸಿದರೆ ವಿದ್ಯಾರ್ಥಿಗೆ ಬಂದರೂ ಬಾರದೂ ಆಗ
    ಗೊತ್ತಾಗುತ್ತೆ. ನಮಗೆ ತಿಳಿಯದ ಒಂದು ಸಂಗತಿ
    ಯನ್ನು ಬೇರೊಬ್ಬರು ನನಗೆ ಹೇಳಿಕೊಡುವಾಗ ನ
    ಮ್ಮ ಸ್ಥಿತಿ ಹೇಗೆ ಇರುವುದು ಎಂಬ ಅಂಶ ಜ್ಞಾಪಕ
    ದಲ್ಲಿಡಬೇಕು. ಬೋಧಕರಲ್ಲಿರಬೇಕಾದ ಈ ಗುಣಕ್ಕೆ ಸಹ
    ನವೆಂದು ಹೆಸರು. ಇದನ್ನು ಬಿಟ್ಟು, ಉಪಾಧ್ಯಾಯರು
    ತಪ್ಪುದಾರಿಯನ್ನು ಹಿಡಿಯುವರು. ತರಳ ರು ತಮ್ಮ
    ನ್ನು ಕಂಡರೆ ವಿಶೇಷವಾಗಿ ಭಯಪಡುವಹಾಗೆ ಅವರ
    ಮನಸ್ಸಿನಲ್ಲಿ ನೀತಿಯನ್ನು ಹುಟ್ಟಿಸುವುದು ಉಪಾಧ್ಯಾ
    ಯರೆಂಬ ಹೆಸರಿಗೂ ಪದವಿಗೂ ಮೊದಲನೇ ಕೆಲಸ
    ವೆಂದು ಕೆಲವರು ತಿಳಿದಿದ್ದಾರೆ. ಪಾಠಹೇಳುವಾಗಲೂ
      ಪಾಠಕೇಳುವಾಗ ಬಾಲಕರು ವಿಷಯವನ್ನು ಚೆನಾ
    ಗಿ ನಿಧಾನವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಅವ
    ಕಾಶವಿಲ್ಲದಹಾಗೆ ಏಟಿನ ಭೀತಿಯು ಮನಸ್ಸಿನಲ್ಲಿ ನಾಟು
------------------------------------

        ಮಾಡಿದ್ದುಣ್ಣೋ ಮಹರಾಯ                       ೮೧
    ವಂತೆ, ಕೂತರೆಪೆಟ್ಟು, ನಿಂತರೆವೆಟ್ಟು, ಉಪಾದ್ರಿ ಕೇ
    ಳಿದ್ದಕ್ಕೆ ಜಾಗ್ರತೆಯಾಗಿ ಉತ್ತರಹೇಳಿದರೆ ನಿನ್ನನ್ನು
    ಯಾರು ಕೇಳಿದರು ಎಂದು ಪೆಟ್ಟು; ಕೂಡಲೆ ಉತ್ತ
    ರಹೇಳದೇ ಹೋದರೆ ಪೆಟ್ಟು; ಹೀಗೆ ಹುಡುಗನಿಗೆ
    ಪೆಟ್ಟಿನ ಸೇವೆಯೇ ಮುಕ್ಕಾಲು ಪಾಠವಾಗುವುದು,
    ತಾನು ಹೇಳಿಕೊಟ್ಟ ಭಾರವನ್ನು ಸುಮ್ಮನೆ ಜಾಗ್ರತೆ
    ಜಾಗ್ರತೆಯಾಗಿ ಹತ್ತು ಸಾರಿ ಒರಲಿಸು ಎಂದು
    ಉನಾದ್ರಿ ಹೇಳುತಾನೆ. ಚೆನ್ನಾಗಿ ಉಚ್ಛರಿಸಬಹು
    ದಾದ ಶಬ್ದವಾದರೂ, ಶಿಷ್ಯನು ಮೊದಲು ಸರಿಯಾಗಿ
    ಉಚ್ಚರಿಸುತ್ತಾ ಇದ್ದರೂ, ಉಾದ್ರಿಯು ಎಲ್ಲಿಹೊ
    ಡೆಯುತಾನೋ ಎಂಬ ಭೀತಿ ಮನಸ್ಸಿನಲ್ಲಿ ಅಂಕೊಂ
    ಡಿರುವ ಕಾರಣ, ವೇಗವಾಗಿ 'ಆ ಶಬ್ದವನ್ನು ಹೇಳು
    ವಾಗ ನಾಲಗೆ ಪಲ್ಲಟವಾಗಿ ಅಪಶಬ್ಧ ಹೊರಡು
    ವುದು. ಅದಕ್ಕಾಗಿ ಹುಡುಗನಿಗೆ ಪುನಃ ಎಟುಬೀಳು
    ವುದು.
ನಾರ- ಹಾಗಾದರೆ ನಾನು ಇದುವರೆಗೆ ಶಿಷ್ಯರನ್ನು ಶ್ರಮಪಟ್ಟು,
    ತಯಾರ್ಮಾಡಿದ್ದು ಹೊಳೆಯಲ್ಲಿ ಹುಣಸೇಹಣ್ಣ ಕದರಿದ
      ಹಾಗಾಯಿತು. ಹಾಗಾದರೆ ನನ್ನ ಬಾಳು ಬಹು ಚೆ
    ನಾಯಿತು!
ದೀಕ್ಷಿ-ಪಂತರೆ, ಕೋಪಗೊಳ್ಳಬೇಡಿ. ನಿಮ್ಮ ಸಂಗತಿ ಹೇಳಿದೆ.
ನಾರ- ಪೆಟ್ಟು ಬೀಳುತೆಂಬ ಭಯಕ್ಕೆ ಜ್ಞಾಪಿಸಿಕೊಂಡು
    ಹೇಳುತಾರೆ.
-------------------------------------

೮೨         ಮಾಡಿದ್ದುಣ್ಣೋ ಮಹರಾಯ.

ದೀಕ್ಷಿ-ಪಟ್ಟನ ಭಯವು ಮನಸ್ಸಿನಲ್ಲಿ ಹೊಕ್ಕು ಆಗಿನಮಟ್ಟಿ
    ಗೆ ಜ್ಞಾಪಕ ಶಕ್ತಿಯನ್ನು ಚುರಕುಮಾಡಬಹುದು.
    ಬಾಲಕನ ಮನಸ್ಸಿನಲ್ಲಿ ಬೆಟ್ಟಗೂ ಅದರ ಭಯದಿಂದ
    ಹೊರಡುವ ಸಂಗತಿಗೂ ಸಂಬಂಧ ಕಲ್ಪನೆಯಾಗುವುದು.
    ಆ ಸಂಗತಿ ಹೇಳುವಾಗೆಲ್ಲಾ ಪೆಟ್ಟಿನ ಜ್ಞಾಪಕ ಬರುವ
    ಕಾರಣ, ಈ ಭಯವೂ ಆ ಅಂಶವೂ ಒಟ್ಟಿಗೆ ಸೇರಿ
    ಕೊಳ್ಳುವವು. ಭಯವೆಂದರೆ ಬುದ್ದಿಯು ಹೇಗೆ ಓಕ
    ರಿಸಿಕೊಳುವುದೋ ಅದಕ್ಕೆ ಸಂಬಂಧಿಸಿದ ವಿಷಯ
    ವನ್ನು ಕಂಡರೂ ಹಾಗೆಯೇ ಅಸಹ್ಯ ಪಡುವುದು. ಮ
    ನಸ್ಸಿಗೆ ಅಸಹ್ಯವಾದ್ದು ಜ್ಞಾಪಕದಲ್ಲಿ ನಿಲ್ಲುವುದಿಲ್ಲ.
    ಹೀಗೆ ಭೀತಿಗೆ ಮೂಲಕಾರಣವಾದ ಹೆಚ್ಚಿನದೆಸೆಯಿಂದ
    ತಿಳಿದುಬಂದ ಅಂಶವು ಮನಸ್ಸಿನಲ್ಲಿ ನಿಲ್ಲದೆ ಖಂಡಿತವಾ
    ಗಿಯ ಮರೆತು ಹೋಗುವುದು. ನಮ್ಮ ಇಷ್ಟಕ್ಕೆ
    ವಿರೋಧವಾಗಿ ಒಂದು ಸಂಗತಿಯನ್ನು ನಾಲ್ಕು ಸಾರಿ ಉರು
    ಹಾಕಿದರೆ ಸದ್ಯಕ್ಕೆ ಆ ಅಂಶ ಮನಸ್ಸಿಗೆ ಹತ್ತಿದರೂ,
    ಆಮೇಲೆ ಮರೆಯುವುದು ಸಹಜವಾದ ಮನೋವೃತ್ತಿ
    ಯಾಗಿದೆ. ಇಂಧಾದ್ದರಲ್ಲಿ ನಿಜವಾದ ಭೀತಿಯಿಂದೋಡ
    ಗೂಡಿದ ಅಂಶ ಮನಸ್ಸಿನಲ್ಲಿ ನಿಂತೀತೆ ? ಹೀಗೆ ಹೇಳಿ
    ಕೊಟ್ಟ ಸಂಗತಿಯನ್ನು ಮರೆಯುವುದಕ್ಕೆ ನಾವೇ ಮಾ
    ರ್ಗವನ್ನು ಕಲ್ಪಿಸಿ ಮರೆತುಬಿಟ್ಟೆ ಎಂದು ಹುಡುಗರನ್ನು
    ಶಿಕ್ಷಿಸುವುದು ನ್ಯಾಯವೆ ?
ನಾರ-ನಾನು ಹೇಳಿಕೊಟ್ಟಿದ್ದನ್ನೆಲ್ಲಾ ಹುಡುಗರು ಮರೆತು
--------------------------------

        ಮಾಡಿದ್ದುಣ್ಣೋ ಮಹರಾಯ         ೮೩

    ಬಿಡಲಿ ಎಂದು ನಾನು ಪಾಠಮಾಡಿಸಿದಹಾಗಾಯಿತಲ್ಲ ?
ದೀಕ್ಷಿ-( ವಿಷಯವನ್ನು ಶೋಧಿಸಿ ಒಳಹೊಕ್ಕು ಮಾತನಾ
    ಡುತಾ ಇರುವಾಗ ಹಿಂದಿನ ಚರಗಳೆಲ್ಲಾ ಜ್ಞಾಪಕಕ್ಕೆ
    ಬಂದು ಕೋಪವೂ ಸಲ್ಪ ತಲೆದೋರುವ ಹಾಗೆ ಮಾ
    ತನಾಡಲು ಆರಂಭಿಸಿದನು. ) ನೀವು ಹೇಳಿಕೊಟ್ಟ ಪಾಠ
    ವನ್ನು ಮರೆತು ಹೋಗಲಿ, ನಿಮ್ಮ ಎಟಿನಿಂದ ಪಾ
    ಠದಮೇಲೆ ಹುಟ್ಟಿದ ದ್ವೇಷ ಗುರುಗಳಾದ ನಿಮ್ಮ
    ಮೇಲೆ ತಿರುಗುವುದು, ಇದು ನಿಜವೋ ಸುಳ್ಳೋ
    ನೀವೇ ಬಲ್ಲಿರಿ. ಇಷ್ಟು ದಿವಸದವರೆಗೂ ನೀವು ಅನು
    ಭವಿಸಿದ ಯಾತನೆಯೇ ಇದಕ್ಕೆ ಸಾಕ್ಷಿ. ಹುಡುಗರೆ
    ಲ್ಲಾ ದಿಕ್ಕೆಟ್ಟು ಹೊರಟುಹೋಗಿ ಮಠವೇ ಇಲ್ಲದೆ
    ತಿಂಗಳಿಗೆ ೫ ಅಥವಾ ೬ ನರಹ ಬರುತ್ತಾ ಇದ್ದದ್ದು
    ತಪ್ಪಿ ಹೋದ್ದೇ ಸಾಕ್ಷಿ. ಉಪಾಧ್ಯಾಯನ ಯೋಗ್ಯತೆ
    ಇದ್ದ ಹಾಗೆ ಹುಡುಗರು ತಯಾರಾಗುತ್ತಾರೆ.
ನಾರ-ನನ್ನ ಮಠದಲ್ಲಿ ಹುಡುಗರು ತಯಾರಾಗಲೇ ಇಲ್ಲ ?
ದೀಕ್ಷಿ-ಎಷ್ಟು ಜನ ಎಷ್ಟರಮಟ್ಟಿಗೆ ತಯಾರಾಗಬಹುದಾಗಿ
    ಅಷ್ಟರಮಟ್ಟಿಗೆ ಆಗಲಿಲ್ಲ.
ನಾರ-ಕೆಲವರಾದರೂ ತಯಾರಾದರಷ್ಟೆ ?
ದೀಕ್ಷಿ-ನೀವು ಹೊಡೆಯುತಾ ಹೇಳಿಕೊಟ್ಟಿದ್ದು ಯಾರಿಗೂ
    ಯಾವುದೂ ಬರುವುದಿಲ್ಲ. ಭೀತಿ ಪಡಿಸದೆ ನಿಧಾನವಾ
    ಗಿ ಹೇಳಿಕೊಟ್ಟ ಪಾಠವನ್ನು ಕಲಿತುಕೊಂಡ ಕೆಲವರು
    ಮಾತ್ರ ಅದನ್ನು ತಿಳಿದುಕೊಂಡಿರಬಹುದು. ನಾನೂ
------------------------------------

೮೪             ಮಾಡಿದ್ದುಣ್ಣೋ ಮಹಾರಾಯ.
   
    ಮಠದಲ್ಲಿ ಏನನ್ನು ತಿಂದಿದೇನೆ, ಏಟುಬಿದ್ದು ನಾನು
    ಭಯದಿಂದ ಗಾಬರಿಯಿಂದಲೂ ಸಂಕಟಪಡುವಾಗ
    ಹೇಳಿಕೊಟ್ಟಿದ್ದು ಯಾವುದೂ ನನಗೆ ಜ್ಞಾಪಕವಿಲ್ಲ.
ನಾರ-ಹಾಗಾದರೆ ನೀವು ಹೇಳುವ ಮಾತಿನಿಂದ ನಾನು ಕೆಲ
    ಸಕ್ಕೆ ಬಾರದವನಾದೆನಷ್ಟೆ ?
ದೀಕ್ಷಿ-ಉಪಯೋಗಕ್ಕೆ ಬಾರದ ವಸ್ತುವೂ ಇಲ್ಲ, ಮನುಷ್ಯ
    ನೂ ಇಲ್ಲ.
ನಾಗ-ನೀವು ಹೇಳಿದ ಮಾತಿನಿಂದ ನಾನು ಅಪ್ರಯೋಜಕನಾದೆ.
ದೀಕ್ಷಿ-ನಾನು ಹೇಳಿದ ಮಾತಿನಿಂದ ತನುಗೆ ಕೋಪಬಂದ
    ಹಾಗೆ ತೋರುತ್ತೆ ಪಂತರೆ, ಚಿತ್ತಕ್ಕೆ ಕೋಪ ಬೇಡ.
    ಇದೇ ಸಂದರ್ಭದಲ್ಲಿ ಇನ್ನೂ ಕೆಲವು ರಹಸ್ಯಗಳ
    ನ್ನು ಹೇಳುತ್ತೇನೆ, ಕೇಳಿ, ನಾನು ಹೇಳುವ ಮಾ
    ತಿಗೆ ಕೋಪಮಾಡಿಕೊಳ್ಳಲೇ ಬೇಕೆಂದು ನೀವು ಶಪಧ
    ಮಾಡಿಕೊಂಡಿದ್ದರೆ, ಯಾರು ಹೇಳಿದರೂ ಸಮಾಧಾನ
    ವಾಗುವುದಿಲ್ಲ. ಇದೇ ಸಂದರ್ಭದಲ್ಲಿ ಹೇಳಬೇಕಾದ
    ಅಂಶಗಳು ಇನ್ನೂ ಇವೆ, ಅದನೂ ಹೇಳಿಬಿಡುತ್ತೇನೆ,
    ಕೇಳಿಬಿಡಿ. ನೀವು ಈಗಷ್ಟು ಆಗಷ್ಟು ಕೋಪಮಾಡಿ
    ಕೊಳದೆ ತಪ್ಪು ಆಗ್ರಹವು ಏಕಕಾಲದಲ್ಲಿ ಪ್ರಜ್ವಲಿಸಿ
    ದರೂ ಪ್ರಬಲಿಸಲಿ,
ನಾರ-ಹಾಗಾದರೆ ಅಪ್ಪಣೆ ಕೊಡಿಸಿ,
ದೀಕ್ಷಿ-ಹೇಳುತೇನೆ ಕೇಳಿ, ಮಕ್ಕಳು ಅತ್ತರೆ ಮರುಗದ ಹೃ
    ದಯವು ಕೇವಲ ಕಠಿಣವಾದ್ದು ಎಂದು ಹೇಳಬೇಕು.
---------------------------------

        ಮಾಡಿದ್ದುಣ್ಣೋ ಮಹರಾಯ.              ೮೫

    ಇಂಥಾ ಕರಿಣಮನಸ್ಸುಳ್ಳವರಿಗೆ ಮಕ್ಕಳಾಗುವುದು ಅ
    ಪೂರ್ವ, ಆದರೂ ಬದುಕುವುದು ಅಪೂರ್ವ, ಮು
    ಖ್ಯವಾಗಿ ಮಕ್ಕಳಾಗದೆ ಇರುವುದಕ್ಕೆ ಹೃದಯಕಾಠಿಣ್ಯ
    ವೂ ಒಂದು ಕಾರಣ. ಸಾಧಾರಣವಾಗಿ ಹೃದಯಮಾ
    ರ್ದವ ಉಳ್ಳವರಿಗೆ ಮಕ್ಕಳಾಗುವುದು, ಮಕ್ಕಳುಹು
    ಟ್ಟಿದಷ್ಟೂ ಹೃದಯಮಾರ್ದವ ಹೊಚ್ಚುವುದು, ದುರ್ಬ
    ಲರಾದ ಹುಡುಗರೂ ಮುದುಕರೂ ಬಡವರೂ ಸಹ
    ಆ ಪರಮಾತ್ಮನಿಗೆ ಹೃದಯ ಪದಕಗಳಾಗಿದಾರೆ, ಭಗ
    ವಂತನಿಗೆ ಈ ಮೂರು ಜನರ ಮೇಲೆ ಹೆಚ್ಚಾದ ಅಭಿ
    ಮಾನವಿರುವುದು, ನಿರ್ಮಲ ಚಿತ್ರದ ಬಾಲಕರು
    ಯಾವಾಗಲೂ ಸ್ವಾಮಿಯ ಸಮೀಪ ವೃತ್ತಿಯಲ್ಲಿಯೇ
    ಇರುವರು. ಪರಬ್ರಹ್ಮನು ಸನಕ, ಸನಂದನ, ಸನ
    ತ್ಕುಮಾರ. ಸನತ್ಸುಜಾತರೆಂಬ ನಾಲ್ಕು ಜನ ನುಹಾ
    ಯೋಗಿಗಳನ್ನು ತನ್ನ ಮನಸ್ಸಿನಿಂದ ನಿರ್ಮಾಣ ಮಾಡಿ
    ಅವರಿಗೆ ಯಾವಾಗಲೂ ಬಾಲ್ಯಾವಸ್ಥೆಯೇ ಇರುವಂತೆ
    ಅನುಗ್ರಹಿಸಿ ಅವರನ್ನು ಯಾವಾಗಲೂ ತನ್ನ ಸಮೀ
    ಪದಲ್ಲಿಯೇ ಇರಿಸಿಕೊಂಡು ಆನಂದಪಡುವನು. ಹಾಗ
    ಲ್ಲದಿದ್ದರೆ ಧೃವರಾಯ ಬದುಕಿದ್ದು ಹೇಗೆ ? ಪ್ರಹ್ಲಾದ
    ನನ್ನು ಕಾಪಾಡಿದವರು ಯಾರು ? ಕೋಳೂರುಕೊಡ
    ಗೂಸಿನ ಪ್ರಾರ್ಥನೆಗೆ ಬಾಯನ್ನು ಬಿಟ್ಟು ಹಾಲನ್ನು
    ಕುಡಿದು ಕೊನೆಗೆ ಆ ಮಗುವನ್ನು ರಕ್ಷಿಸಲಿಲ್ಲವೆ,
    ಆ ಪರಮೇಶ್ವರ ? ತಾಯಿಯ ಹರಕೆಗೋಸ್ಕರ ತೇರಿನ
----------------------------------
೮೬         ಮಾಡಿದ್ದುಣ್ಣೋ ಮಹಾರಾಯ. 


    ಗಾಲೀಕೆಳಕ್ಕೆ ಒಪ್ಪಿಸಲ್ಪಟ್ಟ ಶಿಶುವನ್ನು ಲೇಶವೂ
    ಕುಂದಕವಿಲ್ಲದಂತೆ ಕಾವಾಡಿದವರು ಯಾರು ? ಅತ್ಯಂತ
    ವೈದ್ಯರಾದ ಮಹರ್ಷಿಗಳು ಯಾವಾಗಲೂ ಎಡೆಬಿಡದೆ
    ಭಗವಂತನ ಸಮೀಪದಲ್ಲಿಯೇ ಇರುತ್ತಾರೆ. ಆ ತಪಸ್ವಿ
    ಗಳ ಮನಸ್ಸಲ ಸ್ವಾಮಿಯಲ್ಲಿಯೇ ಲೀನವಾಗಿರುವ
    ಕಾರಣ ಭಕ್ತ ಪರಾಧೀನನೆಂಬ ಬಿರುದು ಪರಮಾತ್ಮ
    ನಿಗೆ ಮೊದಲಿನಿಂದಲೂ ಬಂದಿದೆ.
   
    ಬಡವರಮೇಲಂತೂ ಅವನ ಕಟಾಕ್ಷ ಸಂಪೂರ್ಣವಾಗಿ
    ರುವ ಅಂಶವನ್ನು ಹೇಳಬೇಕಾದ್ರೆ ಇಲ್ಲ. ಸುಧಾಮ
    ನನ್ನು ಸ್ವಾಮಿ ಹೇಗೆ ಉಪಚರಿಸಿದನೋ ಅವನ ಬಡ
    ತನವು ಹೇಗೆ ನೀಸಿತೋ ಅದೆಲ್ಲವನ್ನೂ ನೀವೇ ಬಲ್ಲಿರಿ.
    ಶ್ರೀಕೃಷ್ಣನು ಸಂಧಿಮಾಡುವುದಕ್ಕಾಗಿ ಹಸ್ತಿನಾವತಿಗೆ
    ಹೋದಾಗ ಅನೇಕ ಚಕ್ರಾಧಿಪತಿಗಳು ಭಗವಂತನನ್ನು
    ಎದುರುಗೊಂಡು ಕರೆದುಕೊಂಡು ಹೋಗಿ ಸತ್ಕಾರಮಾ
    ಡಲು ಸಿದ್ಧರಾಗಿ ಕಾದುಕೊಂಡಿದ್ದಾಗ್ಯೂ ಅವರೆಲ್ಲರ
    ನ್ನೂ ಬಿಟ್ಟು, ನಿನಗೆ ಕೊಡಲು ನನಗೆ ಏನೂ ಗತಿ
    ಇಲ್ಲವಲ್ಲಾ ಸಾಮಾ, ಎಂದು ಪೇಚಾಡುತಾ ಇದ್ದ
    ವಿದುರನ ಮನೆಗೆ ಹೋಗಿ, ಅಲ್ಲಿ ಅವನು ತನ್ನ ಅಂ
    ಗೈಗೆ     ಹಾಕಿದ ಒಂದು ತೊಟ್ಟು ಹಾಲನ್ನು ನೆಕ್ಕಿ
    ಅವನ ಮನೆಬಾಗಿಲಲ್ಲಿ ಹಾಲಿನ ಕೋಡಿಯನ್ನು ಹರಿಸಿದ
    ಆ ಭಕ್ತಪರಾಧೀನ ಮೂರ್ತಿಗೆ ತನ್ನ ಭಕ್ತರನ್ನು ಕಾಪಾ
    ಡುವುದರಲ್ಲಿ ಇನ್ನು ಎಷ್ಟು ಅಕ್ಕರೆಯೋ ನಾನುಅರಿಯೆ.
-----------------------------------
       
        ಮಾಡಿದ್ದುಣ್ಣೋ ಮಹರಾಯ.         ೮೭
       
ನಾರ–ಏನೋ ಆ ಪುರಾಣಗಳೆಲ್ಲಾ ನನಗೆ ಏಕೆ ? ತಾವು
    ದೊಡ್ಡ ಪಂಡಿತರು. ತಾವು ಹೇಳಿದ ಸಂಗತಿಗಳೆಲ್ಲ
    ವನ್ನೂ ಕೇಳಿದಮೇಲೆ ನನಗೆ ಈಗ ಜ್ಞಾನೋದಯವಾಗು
    ತಾ ಇದೆ. ಇನ್ನು ಆಡಿಕೊಂಡು ಪ್ರಯೋಜನವೇನು?
ದೀಕ್ಷಿ-ಇನ್ನೊಂದು ಮಾತನ್ನು ಹೇಳುತ್ತೇನೆ ಕೇಳಿ. ಒಂದೊಂ
    ದುವೇಳೆ ಬಾಲಕರನ್ನು ಶಿಕ್ಷಿಸಬೇಕಾದ ಸಂದರ್ಭ ಬರು
    ವುದು. ಆಗ ದೇಹಕ್ಕೆ ನಾನಾವಿಧವಾಗಿ ಹಿಂಸೆಯುಂ
    ಟಾಗುವಂತೆ ಮಾಡಿದರೇ ಶಿಕ್ಷೆ, ಬೇರೆ ಇನ್ನು ಯಾ
    ವದೂ ಶಿಕ್ಷೆಯಲ್ಲವೆಂದು ತಿಳಿಯಬಾರದು. ಮಕ್ಕ
    ಳನ್ನು ಪ್ರೀತಿಯಿಂದಲೇ ಕಾಣುತಾ ಅವರಿಂದ ಆಗ
    ಬೇಕಾದ ಕೆಲಸವನ್ನು ಮಾಡಿಸಬೇಕು. ಅವರು ತಪ್ಪು
      ಮಾಡಿದಾಗ ನಾವು ತೋರಿಸತಕ್ಕ ಪ್ರೀತಿಯಲ್ಲಿ
    ಸ್ವಲ್ಪ ಕಡಿಮೆ ಮಾಡಿದರೆ ಅಷ್ಟೇ ಸಾಕು. ಒಂದಕ್ಕೆ
    ಹತ್ತರಷ್ಟು ದಂಡನೆಯಾದಂತೆ ಬಾಲಕರು ಭಾವಿಸುವರು.
   
    ಹೀಗೆ ಮಾತನಾಡಿಕೊಂಡು ದೀಕ್ಷಿತನೂ ನಾರಪ್ಪ
    ಯ್ಯನೂ ತಮ್ಮ ಸಂಧ್ಯಾವಂದನೆಯನ್ನು ಹೊಳೆಯಲ್ಲಿ
      ತೀರಿಸಿಕೊಂಡು ಮನೆಗೆ ಒಂದರು. ದೀಕ್ಷಿತನು ಆಡಿದ
    ಮಾತು ನಾರಪ್ಪಯ್ಯನ ಮನಸ್ಸಿನಲ್ಲಿ ಚೆನ್ನಾಗಿ ಅಂಟಿತು.
    ಆ ವಿಷಯವನ್ನೆ ಹಿಂದೂ ಮುಂದೂ ಯೋಚಿಸುತಾ
      ಹಿಂತಿರುಗಿ ಮನೆಗೆ ಬರುವಾಗ ಯಾವ ಮಾತನ್ನೂ
    ಆಡದೆ ಅದುವರೆಗೂ ಮನವಾಗಿಯೇ ಇದ್ದ ದೀಕ್ಷಿತ
    ನು ಪುನಃ ಉಪಾಧ್ಯಾಯನನ್ನು ಕುರಿತು,
--------------------------------------
೮೮         ಮಾಡಿದ್ದುಣ್ಣೋ ಮಹರಾಯ.

ದೀಕ್ಷಿ-ನಾನು ಹೇಳಿದ ಅಂಶವೇನೋ ನಿಷ್ಟುರೋಕ್ತಿಯಾ
    ಗಿಯೇ ತೋರುತ್ತೆ, ಇನ್ನೂ ಇದರಲ್ಲಿ ಸೂಕ್ಷ್ಮಾ೦ಶ
    ಗಳು ಇವೆ. ತಂದೆಯಾಗಲಿ ತಾಯಿಯಾಗಲಿ ಉಪಾ
    ಧಾಯನಾಗಲಿ ಹುಡುಗರಿಗೆ ವಿಶೇಷವಾಗಿ ಭಯವನ್ನು
    ಹುಟ್ಟಿಸಿ ಶಿಕ್ಷೆಯನ್ನು ಮಾಡುತ್ತಾ ಬಂದರೆ, ಆ ಬಾಲ
    ಕರಿಗೆ ದೊಡ್ಡವರು ಹೇಳುವಮಾತಿನಲ್ಲಿ ಗೌರವಹುಟ್ಟು
    ವುದಕ್ಕೆ ಬದಲಾಗಿ ಅವರಮಾತೆಲ್ಲಾ ಏಟೇ ಎಂದು
      ಮನಸ್ಸಿನಲ್ಲಿ ನಾಟಿಕೊಂಡು, ಹಿರಿಯರಲ್ಲಿಯೂ ಗುರುಗ
    ಳಲ್ಲಿಯೂ ದ್ವೇಷವೃದ್ಧಿಯಾಗುತಾ ಬರುತ್ತೆ. ಮ
    ಕ್ಕಳು ತಂದೆ ತಾಯಿಗಳನ್ನು ಕಂಡು ದ್ವೇಷಮಾಡತ
    ಕ್ಕದ್ದು ಈ ಕಾರಣದಿಂದಲೇ. ಶಿಷ್ಯರು ಗುರುವನ್ನು
    ಕಂಡು ದ್ವೇಷಮಾಡತಕ್ಕದ್ದು ಈ ಕಾರಣದಿಂದಲೇ.
    ಇದನ್ನು ನಾವು ಎಷ್ಟು ಯೋಚಿಸಿಕೊಂಡುಹೋದರೆ
    ಅಷ್ಟು ಸೂಕ್ಷಾಂಶಗಳು ತೋರುತ್ತಿವೆ.
   
ಹೀಗೆ ಮಾತನಾಡುತಾ ಉಭಯರೂ ಮನೆಗೆ ಹೋಗಿ
ಭೋಜನಮಾಡಿ ಮಲಗಿಕೊಂಡರು. ನಾರಪ್ಪಯ್ಯನಿಗೆ ನಿದ್ರೆ ಬರ
ಲಿಲ್ಲ. ಸದಾಶಿವದೀಕ್ಷಿತ ಹೇಳಿದ ಮಾತೆಲ್ಲ ಅವನ ಮನ
ಸ್ಸಿಗೆ ಅಂಟಿತು. ರಾತ್ರಿಯೆಲ್ಲಾ ಅಳೆದು ಸುರಿದು ಯೋಚನೆ
ಮಾಡುತ್ತಲೇ ಇದ್ದನು. ಉಪನ್ಯಾಸ ರೂಪವಾದ ದೀಕ್ಷಿತರ
ಮಾತಿನಲ್ಲಿ ಭಾವಗರ್ಭಿತವಾಗಿ ಸೇರಿಕೊಂಡಿರುವ ತನ್ನ ವಿಷ
ಯವಾದ ತಿರಸ್ಕಾರವು ಈ ಉಪಾಧ್ಯಾಯನ ಮನಸ್ಸನ್ನು ವಿಶೇ
ಷವಾಗಿ ಕಲಕಿಬಿಟ್ಟಿತು. ಯಾರಿಗಾದರೂ ಸರಿಯೇ, ತನ್ನ ತನ್ನ
-----------------------------------

        ಮಾಡಿದ್ದುಣೋ ಮಹರಾಯ.          ೮೯

ಲೋಪಬಂದರೆ ಕೋಪಬರುವುದು ಸಹಜವಾಗಿದೆ. ಆದ್ದರಿಂದ
ಅದೇ ತೊಳಲು ಅಂಟಿಕೊಂಡು ನಾರಪ್ಪಯ್ಯನ ಮನಸ್ಸನ್ನು
ಕೆಡಿಸಿತು. ತನಗೆ ಅಪಮಾನ ಮಾಡಬೇಕೆಂಬ ಉದ್ದೇಶದಿಂದ
ದೀಕ್ಷಿತನು ಹೀಗೆಲ್ಲಾ ಆಡಿದನೆಂಬದಾಗಿ ಉಪಾದ್ರಿಯು ತಿಳಿ
ದುಕೊಂಡು ಮನಸ್ಸಿನಲ್ಲಿ ಕಲ್ಮಷವನ್ನು ಇರಿಸಿಕೊಂಡನು.

ಈ ಮದ್ಯೆ ಹುಡುಗರು ಯಾರೂ ಬಾರದೇ ಮರಒಡೆದು
ಹೋದಮೇಲೆ ನಾರಪ್ಪಯ್ಯನು ಯಾತನೆಯನ್ನು ಅನುಭವಿ
ಸುತಾ ೫-೬ ತಿಂಗಳು ಬಿದ್ದಿದ್ದನು; ತರುವಾಯ ಗುಣವಾಗಿ
ಮೈ ಗಾಯವೆಲ್ಲಾ ವಾಸಿಯಾದಮೇಲೆ, ಹೊತ್ತು ಗೊತ್ತಿಗೆ ದೀಕ್ಷೆ
ತರ ಮನೆಯಲ್ಲಿ ಸಣ್ಣಕ್ಕಿ ಅನ್ನ ಬೆಣ್ಣೆಕಾಸಿದ ತುಪ್ಪವನ್ನು
ಉಂಡುಂಡು ಮಾಡುವುದಕ್ಕೆ ಕೆಲಸವಿಲ್ಲದೆ ಹಗಲು ಸಾಯಂ
ಕಾಲ ಕೊಲ್ಲಾಪುರದ ಅನ್ನು ನಗುಡಿಯಲ್ಲಿ ಕೂತುಕೊಳ್ಳುತಾ,
ಸಿದ್ದಾಜಿಯವರ ಸ್ನೇಹವನೂ ಅನುಸರಣೆಯನ್ನೂ ಹೆಚ್ಚಾಗಿ
ಮಾಡುತ್ತಾ ಬಂದನು. ಇವರಿಬ್ಬರೂ ಒಂದೇ ಕತ್ತಿನಲ್ಲಿ ಪ್ರಾಣ
ಹೋಗುವ ಮಟ್ಟಿನ ಗೆಳೆತನ ಉಂಟಾಯಿತು. ಸ್ವಲ್ಪಹೊತ್ತು,
ನಾರಪ್ಪಯ್ಯ ಗುಡಿಗೆ ಹೋಗದಿದ್ದರೆ ಕೂಡಲೆ ಸಿದ್ದಪ್ಪಾಜಿ
ಯು ಹೇಳಿಕಳುಹಿಸುತ್ತಿದ್ದನು. ಈ ದೆಸೆಯಿಂದ ಆಗ್ರಾಮದ
ಮುಖ್ಯ ಮಹಾಜನಂಗಳ ಸ್ನೇಹವೂ ಪಂತನಿಗೆ ಹೆಚ್ಚಾಯಿತು.
ಆ ಜನರು ಕತ್ತಲೇ ಕಾಲದಲ್ಲಿ ವಾಡಿಕೆಯಾದ ವಿಜಯಯಾ
ತ್ರೆಗೆ ಹೊರಡುವಾಗ ಆ ನಾರಪ್ಪಯ್ಯನ ಸಂಗಡ ಬೇಕಾ
ದ ಆಲೋಚನೆಯನ್ನು ಮಾಡುತ್ತಾ ಇದ್ದರು. ಬರುತಬರು
----------------------------------

೯೦        ಮಾಡಿದ್ದುಣ್ಣೋ ಮಹಾರಾಯ..

ತಾ ಆ ಗ್ರಾಮದ ಹೊಂತಕಾರಿಗಳೆಲ್ಲಾ ಇವನಲ್ಲಿ ಹೆಚ್ಚಾದ ಭಕ್ತಿ
ಯನ್ನೂ ನಂಬಿಕೆಯನ್ನೂ ಇಟ್ಟುಕೊಂಡಿದ್ದರು.

ಈ ಉವಾದ್ರಿಯು ಆ ಜನರಿಗೆ ನಾನಾ ಬಗೆಯಲ್ಲಿ ಸಹಾಯ
ವಾಗಿ ಅವರಿಗೆ ಉಪಕಾರವನ್ನು ಮಾಡುತಾ ಇದ ನು.
ಈ ಮಧ್ಯಕಾಲದಲ್ಲಿ ಮೇಲೆ ಹೇಳಿದಂತೆ ದೀಕ್ಷಿತರ ವಿಷಯವಾಗಿ
ಈ ನಾರಪ್ಪಯ್ಯನಿಗೆ ಅಸಮಾಧಾನ ಉಂಟಾಗಿತ್ತು. ಇದು
ಬೂದಿಮುಚ್ಚಿದ ಕೆಂಡವಾಗಿ ಒಳಗೆ ಪ್ರಜ್ವಲಿಸುತಾ ಮೇಲೆ ಸರ್ವ
ಸಾಧಾರಣವಾಗಿರುತಾ ಇತ್ತು. ನನ್ನನ್ನು ಅಪ್ರಯೋಜಕ ಎಂದ
ನಲ್ಲ ಈ ದೀಕ್ಷಿತ ! ಎಂದು ಉವಾದ್ರಿಯು ಆಗಾಗ್ಗೆ ತೊಳಲು
ತಾ ಇದ್ದನು. ತನಗೆ ಚೆನ್ನಾಗಿ ಅಹಂಕಾರ ಮೋಟನವಾ
ದಕ್ಕೆ ಯಾವ ರೀತಿಯಲ್ಲಿ ಎನಮಾಡಿದರೆ ಪ್ರತೀಕಾರವಾ
ಗುತ್ತೆ ಎಂದು ನಾರಪ್ಪಯ್ಯನು ತನ್ನ ಮನಸ್ಸಿನಲ್ಲಿಯೇ ಯೋ
ಚಿಸಿಕೊಳ್ಳುತಾ ತನಗೆ ಪರಮಾಪ್ತನಾಗಿದ್ದ ಗುಡೀ ಸಿದ್ದಪ್ಪಾ
ಜಿಯಲ್ಲಿ ಆಗಾಗ್ಗೆ ಹೇಳಿಕೊಳ್ಳುತಾ ಇದ್ಮನು. ಈ ಯೋಚ
ನೆಯ ಆವರ್ತಿ ದಿನೇದಿನೇ ಹೆಚ್ಚು ತಾ ಬಂದಹಾಗೆಲಾ ಅಸ
ಮಾಧಾನವು ದ್ವೇಷರೂಪವಾಗಿ ಪರಿಣಮಿಸುತಾ ಬಂತು,
ದೀಕ್ಷಿತನು ಇವನ ಕ್ಷೇಮಕ್ಕಾಗಿ ಹೇಳಿದ ಮಾತೂ ಮಾಡಿದ
ಉಪಕಾರವೂ ಸಹಾ ಕ್ರೋಧದ ಹೊಗೆಯಲ್ಲಿ ಮುಚ್ಚಿ ಹೋಯಿ
ತು. ಇಷ್ಟಾದರೂ ಉವಾದ್ರಿಯು ದೀಕ್ಷಿತರ ಮನೆಯಲ್ಲಿಯೇ
ಊಟಾ ಮಾಡುವುದು ಅವರಮನೆಯಲ್ಲಿಯೇ ಮಲಗಿಕೊಳ್ಳುವು
ದು ಇದನ್ನು ಮಾತ್ರ ಬಿಡಲಿಲ್ಲ. ಬಿಟ್ಟರೆ ಇವನಿಗೆ ಆ ವೂರ
ಲ್ಲಿ ಒಂದು ಹೊತ್ತಾದರೂ ಅನ್ನ ಹುಟ್ಟುವುದು ಹೇಗೆ ? ಎಲ್ಲರೂ
--------------------------------

        ಮಾಡಿದ್ದುಣ್ಣೋ ಮಹರಾಯ         ೯೧
       
ಬಾಯಲ್ಲಿ ಮಾತನಾಡುತ್ತಾರೆ, ಬೇಕಾದಷ್ಟು ಸ್ನೇಹವನ್ನು
ನಟಿಸುತ್ತಾರೆ. ಕಾರ್ಯದಲ್ಲಿ ಸಹಾಯ ಮಾಡಬೇಕಾದರೆ ಹಿಂತೆಗೆ
ಯುತಾರೆ. ಸಾವಿರಸಾರಿ ಗೋವಿಂದ ಎನ್ನಬಹುದು, ಒಬ್ಬ
ದಾಸೈಯ್ಯನಿಗೆ ಇಕ್ಕುವುದು ಕಷ್ಟ. ಉಮಾದ್ರಿಯ ದ್ವೇಷವು
ಪ್ರಛನ್ನವಾಗಿಯೇ ಇತ್ತು.
                ---
            ೭ನೇ ಅಧ್ಯಾಯ.

ಈ ಮಧ್ಯೆ - ಮಹಾದೇವನ ವಿದ್ಯಾಭ್ಯಾಸವು ಸಾಂಗವಾಗಿ
ನಡೆಯಿತು. ಯಾರು ನೋಡಿದರೂ ಒಳ್ಳೇ ವಿದ್ವಾಂಸ ಎನ್ನುವ
ಹಾಗೆ ಇತ್ತು, ಇವನ ರೂಪನ್ನೂ ಯೋಗ್ಯತೆಯನ್ನೂ ಇವರ
ತಂದೆಯ ಆಸ್ತಿಯನ್ನೂ ನೋಡಿ ಎಲ್ಲರೂ ಇವನಿಗೆ ಹೆಂಣಕೊ
ಡುವುದಕ್ಕೆ ನಾನು ತಾನೆಂದು ಮೇಲಾಡುತಿದ ರು. ದೀಕ್ಷಿತನು
ತನ್ನ ಸೋದರಮಾವನಾದ ಪಶುಪತಿ ಸಾಂಬಶಾಸ್ತ್ರಿಯ ಮಾತು
ವಿನಾ ಶುಭಕಾರಗಳು ಯಾವುದನ್ನೂ ಜರಗಿಸುತಿರಲಿಲ್ಲ. ಕಡೆ
ಗೆ ಸಾಂಬಶಾಸ್ತ್ರಿಯ ಮಗನ ಮಗಳನ್ನು ಕೊಡುವುದಾಗಿ ನಿಶ್ಚ
ಯವಾಯಿತು. ಹನ್ನೆರಡು ಕೂಟಗಳು ಸರಿಬಂತು. ಮೈಸೂ
ರಲ್ಲಿಯೇ ಲಗ್ನ ಬೆಳೆಯಿತು. ಹುಡುಗಿಯ ರೂಪನ್ನೂ ಅವಳ
ಗುಣಾತಿಶಯಗಳನ್ನೂ ಹೀಗೆಂದು ಇಲ್ಲಿ ನಾನು ವರ್ಣಿಸಲಾರೆ.
ಮುಂದೆ ಎಲ್ಲಾ ತಿಳಿಯಬಹುದಾಗಿದೆ. ಪಶುಪತಿ ಸಾಂಬಶಾಸ್ತ್ರಿ
ಯ ಯೋಗ್ಯತೆಯಲ್ಲಿ ಶ್ರೀಕೃಷ್ಣರಾಜ ಪ್ರಭುವಿಗೆ ಇದ್ದ ಗೌರ
ವವನ್ನು ತೋರಿಸಲು ಈ ಸನುಯವನ್ನು ತೊರೆಯು ಬಿಡದೆ 
---------------------------------

೯೨          ಮಾಡಿದ್ದುಣ್ಣೋ ಮಹಾರಾಯ.

ಚೆನ್ನಾಗಿ ಉಪಯೋಗಿಸಿಕೊಂಡರೋ ಎನ್ನುವಹಾಗೆ ಮದುವೆಗೆ
ಬೇಕಾದ ಸೋಬಸ್ಕರಗಳೆಲ್ಲವನ್ನೂ ಅರಮನೆಯಿಂದ ಕಳುಹಿ
ಸುವಂತೆ ಅಪ್ಪಣೆಯಾಯಿತು. ಮತ್ತು ವಿಜೃಂಭಣೆಯಿಂದ ನಡೆ
ಯತಕ್ಕ ಆಪ್ರಸ್ತುತದ ಮೆರವಣಿಗೆ ಮುಂತಾದ್ದಕ್ಕೆ ಆನೆ,
ಅಂಬಾರಿ, ಮುವ್ವತ್ತು ಬೆಳ್ಳಿ ಕಟ್ಟಿಗೆ, ಕೊಂಬು ತಮಟೆ, ತಾಸಾ
ಮರಫ, ಖಾಸಾ ಓಲಗದವರು, ಒಂದು ಜೋಡಿ ತಾಫೆದವರು,
ಇಲಾಲುಗಳು, ಫರಮಾನುಗಳು, ಅದಕ್ಕೆ ಬತ್ತಿ ಎಂಣೆ ಸಹಾ,
ಇಬ್ಬರು ಅವಸರದ ಹೊಬಳಿ ಕಟ್ಟಿಗೆಯವರು, ಇದೆಲ್ಲವನ್ನೂ
ಮದುವೆಯ ಕೊನೇ ಮೆರವಣಿಗೇ ದಿವಸದವರೆಗೂ ಕಳುಹಿಸಬೇ
ಕೆಂದು ಅಪ್ಪಣೆಯಾಯಿತು. ಅರಮನೆಯ ಅಹಲೇಕಾರರು
ಕಚೇರಿಯ ಉದ್ಯೋಗಸ್ಥರು ಸಮ್ಮುಖದ ವಿದ್ವಾಂಸರು ಮೊದಲಾ
ದವರಿಗೆಲ್ಲಾ ಔತನ ಹೇಳಿದ್ದರು. ಪ್ರಸ್ತದಲ್ಲಾ ಒಂದೊಂದು
ದಿವಸ ಒಂದೊಂದು ಬಗೇ ರವೇ ಭಕ್ಷವನ್ನು ಮಾಡುತಿ ದರು.
ಪ್ರತಿದಿನವೂ ಆರತಿ ಅಕ್ಷತೇ ಕಾಲದಲ್ಲಿ ಸೂಳೆಯರ
ಮೇಳ, ಸಂಗೀತಗಾರರಗಾನ, ಮಧ್ಯೆ ಮಧ್ಯೆ ನಕಲೀನಾರಣ
ಪ್ಪನಹಾಸ್ಯ, ಇದೆಲ್ಲವನ್ನೂ ಮೀರಿಸುವಹಾಗೆ ನಡೆಯುತಿದ್ದ
ವೇದಘೋಷ, ಶಾಸ್ವಾರ್ಥವಿಚಾರ, ಇವುಗಳೆಲ್ಲಾ ಜರಗಿದವು. 

ಇಷ್ಟೊಂದು ಸಂತೋಷಕ್ಕೂ ಅಟ್ಟಹಾಸಕ್ಕೂ ಯಾರ
ಔದಾರ್ಯವು ಮುಖ್ಯವಾದ ತಲಪರಗಿಯಾಗಿತ್ತೋ ಆ ಪುಣ್ಯಾ
ತ್ಮನ ಪಾದಸ್ಪರ್ಶನವು ಪ್ರಸ್ತದ ಮನೆಗೆ ಆದಲ್ಲಿ ತಾನು
ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದ ಸಾಂಬಶಾಸ್ತ್ರಿಯು
-------------------------------

        ಮಾಡಿದ್ದುಣ್ಣೋ ಮಹರಾಯ.            ೯೩ 
       
ಪ್ರಸ್ತದಲ್ಲಿ ಒಂದುದಿನ ವಿರಾಮುನಾಡಿಕೊಂಡು ಅರಮನೆಗೆಹೋ
ಗಿ ಕಾದಿದ್ದು ಖಾಸಾ ಶಿವಪೂಜೆಯಾದಮೇಲೆ ಆರೋಗಣೆಗೆ
ಸವಾರಿ ದಯಮಾಡಿಸುವುದಕ್ಕೆ ಮುಂಚೆ ಸಮಯವನ್ನು ನೋ
ಡಿ ತಾನು ತೆಗೆಯಿಸಿಕೊಂಡು ಬಂದಿದ್ದ ಮಂತ್ರಾಕ್ಷತೆ, ತಟ್ಟೇ
ಮೇಲೆ ತಟ್ಟೆ ತುಂಬಿದ ಬಗೆಬಗೇ ಫಲಗಳು, ಹೂವು, ಮೊ
ದಲಾದ್ದೆಲ್ಲವನ್ನೂ ಒಪ್ಪಿಸಿ, ವಿನಯದಿಂದ ತಲೆಬಾಗಿ ನಿಂತು
ಕೊಂಡನು. ಸದಾಶಿವ ದೀಕ್ಷಿತನೂ ಆತನ ಸಂಡಗಲೇ ದೂರ
ವಾಗಿ ನಿಂತಿದ್ದನು. ಆಗ ದೊರೆ-ಏನುಶಾಸಿಗಳೆ ಮದುವೆ
ಬೆಳೆಯಿತೆ ?
ಸಾಂಬಶಾಸ್ತ್ರಿ -ಮಹಾ ಸ್ವಾಮಿಯ ಕೃಪೆಯಿಂದ ಬೆಳೆಯಿತು.
ದೊರೆ-ವಿನಯ್ಯ, ಸಿಡಿಲಮರಿ, ಉತ್ತಮವಾದ ಸಂಬಂಧವನ್ನು 
    ಮಾಡಿದೆ ಎಂದು ಬಡಾಯಿನಿಂದ ನಮ್ಮ ಸಂಗಡ
      ಮಾತನಾಡದೆ ಸುಮ್ಮ ನೇ ದೂರದಲ್ಲಿ ನಿಂತುಕೊಂಡೆ ?
    (ನಗುತಾ ಹೀಗೆ ಅಪ್ಪಣೆಯಾಯಿತು.)
ಸದಾಶಿವದೀಕ್ಷಿತ-ಮಹಾಸಾಮಿ ! ಅಪ್ಪಣೆಯಾದಹಾಗೆ ನಾನು
    ಗರ್ವಪಡುವುದಕ್ಕೆ ಸನ್ನಿಧಾನವೇ ಕಾರಣ.
ದೊರೆ-ಏನಯ್ಯ ಮೆಲ್ಲಗೆ ನನ್ನ ಬುಡಕ್ಕೆ ತಂದೆ ?
ಸದಾ-ನನ್ನ ಮಾವಂದರೇನೊ ಸಮ್ಮುಖದ ಮಹಾ ಪಂಡಿತರು.
    ಅವರ ವಿಚಾರದಲ್ಲಿ ಅರಿಕೆ ಮಾಡುವುದಿಲ್ಲ. ಹಳ್ಳೀ
    ಮುಕ್ಕನಾದ ನಾನು ಯಾವ ಪದಾರ್ಥವೆಂದು ಗಣ
    ನೆಗೆ ಬರಲಿ ? ಹಳ್ಳಿಗೂ ದಿಳ್ಳಿಗೂ ಯಾವ ಸಂಬಂ
    ಧ ? ಆದಾಗ್ಯೂ ಅಲ್ಬನಾದ ನನ್ನ ಮೇಲೆ ಇಷ್ಟರ
-------------------------------------

೯೪                         ಮಾಡಿದ್ದುಣ್ಣೋ ಮಹರಾಯ

ಮಟ್ಟಿನ ಕೃಪೆ ಇರುವಾಗ ನನ್ನ ಬಡಾಯಿ ಯಾಕೆ
    ಹೆಚ್ಚಬಾರದು ?
ದೊರೆ-ಲಕ್ಷಾಂತರಹಳ್ಳಿ ಸೇರಿದ್ದರಿಂದಲ್ಲವೆ ದಿಳ್ಳಿ ದಿಳ್ಳಿಯಾಯಿತು?
ಸದಾ- ಹಳ್ಳಿ ಮಹಾ ಸನ್ನಿಧಾನದಿಂದ ರಕ್ಷಿತವಾದ್ದರಿಂದಲೇ 
    ಹಳ್ಳಿಹಳ್ಳಿಯಾಗಿ ನಿಂತಿದೆ ?
ದೊರೆ-ಮಾತಿನಲ್ಲಿ ನಿನಗೆ ಯಾರು ಉತ್ತರ ಕೊಟಾರು ? ಮೊ
    ದಲೇ ಸಿಡಿಲಮರಿ ಎಂದು ಹೆಸರನ್ನು ಇಟ್ಟು ಕೊಂಡಿ
    ದೀಯೆ.
ಸದಾ-ಮಹಾಸ್ವಾಮಿ ಕೊಟ್ಟ ಬಿರದು.
ದೊರೆ-ನಿಮ್ಮಿಬ್ಬರನ್ನೂ ನೋಡಿದರೆ ಏನೋ ಒಂದು ವಿಷಯ
    ವನ್ನು ಅರಿಕೆ ಮಾಡಲಾರದೆ ಮನಸ್ಸಂಕೋಚದಿಂದ
      ನಿಂತಿರುವವರ ಹಾಗೆ ಕಾಣುತ್ತೆ. ಅದೇನುಹೇಳಿ, ಏನು
    ಲೋಪವಾಯಿತು ?
ಪಶುಪ-ಎಲ್ಲಾ ಸಂತೋಷಕ್ಕೂ ಕಾರಣಭೂತರಾದ ಮಹಾ
    ಸ್ವಾಮಿಯವಾದ ಸ್ಪರ್ಶದ ಐಶ್ವರ್ಯಸುಖಕ್ಕೆ ಪ್ರಸ್ತದ
    ಮನೆಯ ಭೂಯಿಷ್ಯವು ಪಾತ್ರವಾಗದೇ ಇರುವುದೇ ದೊ
    ಡ್ಡಲೋಪವಲ್ಲವೆ, ಮಹಾಪ್ರಭು ?
ದೊರೆ-ನಾನು ನಿಮ್ಮ ಮನೆಗೆ ಬರಬೇಕೆಂಬ ನಿನ್ನು ಭಾವ
    ಗೊತ್ತಾಯಿತು. ನಿಮ್ಮ ಮನೆಯ ಭೂಯಿಷ್ಯ ಪರಿ
    ಶುದ್ಧವಾಗುವುದೆಂಬ ಮಾತು ಉಪಚಾರೋಕ್ತಿ. ಮೊದಲು
      ನಿಮ್ಮಂಥಾ ವಿದ್ವಾಂಸರ ಮನೆಯ ನೆಲವು ನನಗೆ
    ಸ್ಪರ್ಶವಾದ ಕೂಡಲೆ ನನ್ನ ಜನ್ಮ ಪವಿತ್ರವಾಗುವುದು
---------------------------------

        ಮಾಡಿದ್ದುಣ್ಣೋ ಮಹರಾಯ.    ೯೫

ಪಶುಪತಿ-ಜನ್ಮಾಂತರದಲ್ಲಿ ಅನೇಕ ತಪಸ್ಸನ್ನು ಮಾಡುತಾ
    ಇರುವಾಗ ಲೇಶಮಾತ್ರ ತಪಸ್ಸು ಭಂಗವಾಗಿ ಪು
    ನರ್ಜನ್ಯ ಬಂದು ಮಹಾ ಪದವಿದೊರೆಯುವುದು, ಅಂ
    ಥಾ ತಪಸ್ವಿಗಳ ಸ್ಪರ್ಶದಿಂದ ಇತರರು ಪವಿತ್ರರಲ್ಲವೆ ?
ದೊರೆ-ನಿಮ್ಮ ಮಾತಿನಮೇಲೆ ಏನು ಹೇಳುವುದಕ್ಕೂ ನನಗೆ
    ತೋರುವುದಿಲ್ಲ. ನಿಮ್ಮ ಇಷ್ಟ ಹೇಗೆ ಇದೆಯೋ ಹಾ
    ಗಾಗಲಿ,
   
ಈ ಪ್ರಕಾರ ಅಪ್ಪಣೆಯಾಯಿತು. ಅದಕ್ಕೆ ತಕ್ಕ ಏರ್ಪಾ
ಡುಗಳೆಲ್ಲಾ ಆಯಿತು. ಗೊತ್ತಾದ ದಿವಸ ಸಾಯಂಕಾಲ ಶಿವ
ಪೂಜೆ ಬೆಳೆದಮೇಲೆ ಪ್ರಭುವು ಗುಲಾಬಿ ರಂಗಿನ ಶಾಲುರುಮಾ
ಲನ್ನು ಸುತ್ತಿ ಬಿಳೀಸಂದರಖಾನೆ ಅಂಗಿಯನ್ನು ತೊಟ್ಟು ಕಠಾ
ರಿಕಚ್ಚೆ ಹಾಕಿ ಕರೀ ಅಂಚಿನಪಂಚೆಯನ್ನುಟ್ಟು, ರತ್ನ ಪಡಿಕಾರ
ಚುರಿಪಿಕಿಂತಾಬು ಕೆಲಸಮಾಡಿರುವ ಪಾಲಾಸನ್ನು ಮೆಟ್ಟಿ ಮೇ
ನಾದಲ್ಲಿ ಸವಾರಿ ಬಿಜಮಾಡಿದರು. ಬ್ರಾಹ್ಮಣಾಶೀರ್ವಾದ, ಫಲ
ಮಂತ್ರಾಕ್ಷತೆ, ಕನ್ನಡಿ ಕಲಶವನ್ನು ಹಿಟಿದ ಮುತ್ತೈದೆಯರು,
ಓಲಗವೊದಲಾದ ವಾದ್ಯಗಳು, ಇವೇ ಮುಂತಾದ ರಾಜಮ
ರ್ಯಾದೆಗಳೊಡನೆ ಮದುವೇ ಮನೆಯ ಬಾಗಿಲಲ್ಲಿ ಇದಿರುಗೊ೦
ಡು ಸಾಂಬಶಾಸ್ತ್ರಿಯ ಇತರರೂ ಸವಾರಿಯನ್ನು ಒಳಕ್ಕೆ
ಬಿಜಮಾಡಿಸಿದರು. ಅಲ್ಲಿ ಮೇಲುಕಟ್ಟು ಮೊದಲಾಗಿ ವಿಧವಿಧ
ವಾಗಿ ಶೃಂಗಾರಮಾಡಿ ರಚಿಸಿದ್ದಂಥಾ ಪೀಠದಮೇಲೆ ಕೃಷ್ಣ
ರಾಜ ಪ್ರಭುಗಳು ಬಿಜಯಂಗೈದು ಕುಶಲಪ್ರಶ್ನೆಯನ್ನು ಮಾಡಿ
ದರು. ಅಲ್ಲಿದ್ದ ವೈದಿಕರು ವೇದಹನಸುಗಳನ್ನು ಹೇಳಿ ಆಶೀ
--------------------------------

೯೬         ಮಾಡಿದ್ದುಣ್ಣೋ ಮಹಾರಾಯ.

ರ್ವಾದವನ್ನು ಮಾಡಿ ಫಲಮಂತ್ರಾಕ್ಷತೆಯನ್ನು ಒಪ್ಪಿಸಿದರು.
ಉಳಿದವರೆಲ್ಲಾ ನಮಸ್ಕಾರ ಮಾಡಿದರು. ಒಂದು ಪಕ್ಕದಲ್ಲಿ
ಮದಮಕ್ಕಳು ಹಸೆಯಮೇಲೆ ಕೂತುಕೊಂಡಿದ್ದರು. ಮೇಳಕ
ಟ್ಟಿತ್ತು, ಹೆಂಗಸರು ಹಾಡನ್ನು ಹೇಳುತಿದ್ದರು. ಆ ದಿವಸಕ್ಕೆ 
ಆ ಸಮಯಕ್ಕೆ ತಕ್ಕ ಹಾಗೆ ಸದಾಶಿವದೀಕ್ಷಿತನು ಮೂರುನುಡಿ
ಯುಳ್ಳ ಒಂದು ಕೀರ್ತನೆಯನ್ನು ಹೊಸದಾಗಿ ಮಾಡಿದ್ದನು.
ಬಹಳ ಚತುರನಾದ ಒಬ್ಬ ಸಂಗೀತಗಾರನು ಅದನ್ನು
ಹಾಡುತಿದ್ದನು. ಮದುವೇ ಮನೆಯ ಗದ್ದಲದ ವಿಭವ
ಹೀಗೆಲ್ಲಾ ಇರುವಾಗ, " ಯಾ ಇಲಾಹ ಇಲ್ಲಿಲ್ಲಾ ಮೊ
' ಹಮ್ಮು ದ್ ರಸೂಲಿಲಾ ! ಅಲ್ಲಾ ಹೊಅಕಬರ್ " ಎಂದು
ಸಭೆಯ ಮಧ್ಯೆ ಗಟ್ಟಿಯಾದ ಕೂಗು ಕೇಳಿತು. ಅದರಲ್ಲಿಯೂ ಈ
ಸದ್ದು ವೈದಿಕ ಮಂಡಲಿಯಿಂದಬಂತು. ತಾಳ ಮೇಳಗಳೆಲ್ಲಾ
ನಿಂತು ಹೋದವು. ಎಲ್ಲರಿಗೂ ಗಾಬರಿಯಾಯಿತು. ಎಲ್ಲಿಂದ
ಈ ಕೂಗು ಬಂತೋ ಗೊತ್ತಾಗಲಿಲ್ಲ. ಸವಾರಿಯ ಸಂಗಡ
ಬಂದಿದ್ದ ಚೋಪದಾರರನ್ನು ಕರೆದು ಕೇಳುವಲ್ಲಿ ಅವರು
ಹಾಗೆ ಕೂಗಲಿಲ್ಲವೆಂದು ತಿಳಿಯಿತು. ಕೊನೆಗೆ ಉದಾಸೀನ
ಭಾವದಿಂದ ಬಿಟ್ಟು, ಸಭೆಯು ತಂತನ್ನು ಮುಂದಿನ ಕೆಲಸ
ವನ್ನು ನಡೆಯಿಸಲು ಆರಂಭವಾಯಿತು.

ಆಗ ಬಿಳೀ ಸೀರೆಯನ್ನುಟ್ಟು, ತಲೆಯಮೇಲೆ ಸೆರಗನ್ನು
ಹೊದ್ದು ಹೆಂಗಸರ ಗುಂಪಿನೊಳಗಿನಿಂದ ಸರ್ರನೆ ಒಬ್ಬಮು
ತ್ತೈದೆಯು ಬಂದು ಹಸೇಮೇಲೆ ಕೂತಿದ್ದ ಮದಮಕ್ಕಳ
ಮುಂದೆ ಆರತಿಮಾಡಿ ಇರಿಸಿದ್ದ ತಟ್ಟೆಯನ್ನು ಹಿಡಿದು 
-----------------------------------

        ಮಾಡಿದ್ದುಣ್ಣೋ ಮಹಾರಾಯ.         ೯೭

ಯಾರಾದರೂ ಬನ್ನಿರೆ, ಯಂಕ, ದೊಡ್ಡಚ್ಚಿ, ಯಾರಾದರೂ
ಬನ್ನಿರೆ ; ಪಾತಿ, ನೀಬಾರೆ ; ಸಾಕಿ, ನೀನು ಹಿಡಿಯ ; ಒಳ್ಳೇದಾ
ಯಿತು, ಆರತಿ ಎತ್ತಿದ್ದನ್ನು ಹೇಳಿ ; ಸಾಕುಕಣೆ, ಹೇಳಿ
ಒಂದುನುಡಿ ; ಸವಾರಿ ಎಷ್ಟು ಹೊತ್ತು ಕೂತಿರಬೇಕು, ನಿಮಗೆ
ಬಾರದೇ ಇದ್ದರೆ ಒಳ್ಳೆದಾಯಿತು, ನಾನಾದರೂ ಒಂದುನುಡಿ
ಹೇಳುತೇನೆ, ಬನ್ನಿ ;
    ಅಂಗೈಯ್ಯ ಹಸೆಮಣೆಮೇಲೆ 1 ನಸ್ಯ ಮಾಲಕುಮಿಕುಳ್ಳಿ
    ರಲು || ಬಾಲೆಯರೆಲ್ಲಾ ಅತಿಹರುಷದಲಿ ! ನೆಸ್ಯಮಾ
    ಲಕುಮಿಗು || ಸುಂಣದರಾಯಗು ತಿಕ್ಕು ವಾರಾತಿಯ
    ಬೆಳಗೀರೆ || ಸೋಬಾನೆ ! ಸೋಬಾನೆ !
ಎನ್ನುವುದಕ್ಕೆ ಕೂಡ ಕೈಲಾಗದೇನರೆ, ಸುಪ
ನಾತೀರ ? ನಾನೆಲ್ಲಿಕಾಣೆನಮ್ಮವ್ವ, ಬಾರದೇ ಇದ್ದರೆ ಬಿಡಿ,
ಆರತಿ ಹಣ ನಿಮಗೇ ಇಲ್ಲ, ನಿಮ್ಮಿಂದ ನನಗೂ ತಪ್ಪಿಹೋಯಿ
ತು, ಮನೆಗೆ ಹೋದರೆ ಅವರು ಇನ್ನು ತಕ್ಕೊತಾರೆ ಮೂಲೇ
ಗುರಿಕಾರರನ್ನ, ರಾತ್ರೆ ಇಷ್ಟೊತ್ತು ಮಾಡಿಕೊಂಡು ಬಂದೆಯಲ್ಲ
ಏನತಂದೆ ಎಂದು ಅಗಾಯಿಸುತಾರೆ. ನಾನು ಎನಜವಾಬುಹೇಳಲಿ ?
ವೇ! ಎಂದು ತಾನು ಮುಖವನ್ನು ಅರೆಯಾಗಿ ಮುಚ್ಚಿಕೊಂಡು ಇದ್ದ
ಸೆರಗನ್ನು ಆಕೆಯು ಶುದ್ಧವಾಗಿ ಕೆಳಕ್ಕೆ ಜಾರಿಸಿಬಿಡಲು, ಹೊ
ದ್ದ ಪಂಚೆಯನ್ನೇ ಹೆಂಗಸರಹಾಗೆ ಹೊದ್ದಿದ್ದ ವ್ಯಕ್ತಿ ಹೆಂಗಸಲ್ಲ,
ನಕಲೀನಾರಣಪ್ಪನೆಂದು ತಿಳಿದುಕೊಂಡರು. ಸಭೆಯಲ್ಯಾ ಗೋಳ್‌
ಎಂದು ಹೊಟ್ಟೆಯೆಲ್ಲಾ ಹುಣ್ಣಾಗುವಹಾಗೆ ನಕ್ಕಿತು. ಹೆಂಣು
ಗಂಡು ಆದಿಯಾಗಿ ಹಾಸ್ಯ ರಸದಲ್ಲಿ ಮುಳುಗಿದರು. ಆಗ ದೊರೆ
-----------------------------------

೯೮        ಮಾಡಿದ್ದುಣ್ಣೋ ಮಹಾರಾಯ.

ಯು ನಗುತಾ ಈ ಹಾಳನಾರಾಯಣನ ವಿಲಾಸ ಎಲ್ಲಿಹೋದ
ರೂ ಬಿಡದು ಎಂದರು.

ನಕಲಿನಾರಣಪ್ಪ-ಮಹಾಸಾಮಿ ನಾರಾಯಣನ ವಿಲಾಸ ಯಾ
ವಾಗಬಿಡುತ್ತೆ ? ಬೆಳಗ್ಗೆ ಎದ್ದರೆ ಹಾಸಿಗೆಮೇಲೆ ನಾರಾಯಣ,
ರಾತ್ರೆಹಾಸಿಗೆಮೇಲೆ ಮಲಗುವಾಗ ನಾರಾಯಣ, ಹಸಿದಿದ್ದರೆ
ನಾರಾಯಣ, ಈ ಪಶುಪತಿ ಸಾಂಬಶಾಸ್ತ್ರಿಗಳ ಮನೇ ಊಟದಹಾ
ಗೆ ರಾವುರಗಡಾದ ಊಟ ಈಗ ೮-೧೦ ದಿವಸದಿಂದ ಸಿಕ್ಕಿ
ದಹಾಗೆ ಸಿಕ್ಕಿದರೆ ನಾರಾಯಣ, ಸಾಲಾ ಮಾಡುವಾಗ ಸಂತೋ
ಷವಾಗಿ ನಾರಾಯಣ, ಸಾಲಾ ತೀರಿಸುವಾಗ ಅಳುತಾ ನಾರಾ
ಯಣ, ಎಲ್ಲಿ ಹೋದರೂ ನಾರಾಯಣ ವಿಲಾಸವೇ ಮಹಾಸ್ವಾಮಿ.
ದೇವರಗುಡಿಗೆ ಹೋದರೆ ನಾರಾಯಣವಿಲಾಸ, ಅದೆಲ್ಲವನ್ನೂ
ತಪ್ಪಿಸಿಕೊಂಡು ಇಲ್ಲಿ ಮಹಾಸನ್ನಿಧಿಗಾದರೂ ಬರೋಣವೆಂದರೂ
ನಾರಾಯಣವಿಲಾಸ, ಎನೈಯ್ಯ ಹವುದೋ ಅಲ್ಲವೋ ? 

ಆಗ ಸವಾರಿಯ ಸಮಾಸದಲ್ಲಿಯೇ ಯಾವಾಗಲೂ ಇರು
ತಾ ಇದ್ದ ಒಬ್ಬ ಕಟ್ಟಿಗೆಯವನು ಯಾವಮಾತನಾಡಿದರೂ "ನಾ
ರಾಯಣ ವಿಲಾಸ ?” ಎಂದು ಹೇಳಿಮುಂದೆ ಮಾತನಾಡುವವಾಡಿ
ಕೆ ಇಟ್ಟಿದ್ದನು. ಇವನಿಗೆ ನಾರಾಯಣ ವಿಲಾಸ ಎಂತಲೇ ಅಡ್ಡ
ಹೆಸರಾಗಿ ಹಾಗೆಯೇ ಎಲ್ಲರೂ ಕರೆಯುತಿದ್ದರು. ನಕಲಿ (ನಾರ
ಯಣ ಕೇಳಿದ ಪ್ರಶ್ನೆಗೆ ಆಕಟ್ಟಿಗೆಯವನು "ಸ್ವಾಮಿ ನಾರಾ
ಯಣವಿಲಾಸ ?” ಎಂದನು, ಆಗ ನಾರಣಪ್ಪನವುದೋ ಅಲ್ಲವೋ
ಹೇಳಯ್ಯ ಹೇಳಯ್ಯ ಎಂದು ಅವನ ಬೆನ್ನ ಮೇಲೆ ಪೊಳ್ಳುಗುದ್ದು
ಹಾಕಲು ಆರಂಭಿಸಿದ ಹಾಗೆಲ್ಲಾ "ನಾರಾಯಣವಿಲಾಸ, ನಾರಾ
---------------------------------

        ಮಾಡಿದ್ದುಣ್ಣೋ ಮಹರಾಯ.          ೯೯

ಯಣವಿಲಾಸ " ಎಂದು ಅವನು ಕೂಗುತಾಬಂದನು. ಈ ವಿನೋ
ದವನ್ನು ಸಭೆಯಲ್ಲಾ ನೋಡಿ ನಕ್ಕು ನಕ್ಕು ಬೇಜಾರಾದರು
ತರುವಾಯ ಹೆಂಗಸರು ಮದಮಕ್ಕಳಿಗೆ ಆರತಿ ಎತ್ತುವುದಕ್ಕೆ ಬಾರದೆ
ಬಹುವಾಗಿ ನಾಚಿಕೊಂಡರು.

ಖಾಸಸವಾರಿಯು ಅರಮನೆಗೆ ಬಿಜನಾಡಿಸುವುದಕ್ಕೆ ಏಳು
ವ ಸಮಯವಾಯಿತು. ಆಗ ನಕಲೀ ನಾರಣಪ್ಪನು - ಮಹಾ
ಸ್ವಾಮಿಯ ಪಾದದಲ್ಲಿ ಇನ್ನೊಂದು ಅರಿಕೆ ಇದೆ. ಪಶುಪತಿ
ಸಾಂಬಶಾಸ್ತ್ರಿಗಳು ದೊಡ್ಡ ಶಾಸ್ತ್ರಿಗಳಾಗಿದ್ದಾರೆ. ಇವರುಮಾ
ಡುವ ಅಕೃತ್ಯವನ್ನು ನಿಲ್ಲಿಸುವವರೇ ಇಲ್ಲ. ಹೇಳಿ ಪ್ರಯೋ
ಜನವೇನು ? ಮಹಾರಾಯ ವೆಂಕಟಸುಬ್ಬಯ್ಯನವರು ; ಅವರು
ವೀಣೇತೆಗೆದುಕೊಂಡು ಕೂತುಕೊಂಡರೆ ಸರಸ್ವತೀ ಮುರುಕೇಸರಿ,
ಇತರರ ಮನೆಗೆ ಅವರನ್ನು ಊಟಕ್ಕೆ ಕರೆದರೆ ಅವರು ವಿನಾ
ಯಕನ ತುಂಡೇಸರಿ, ಮಹಾರಾಯನಮ್ಮಪ್ಪ; ಬ್ರಾಹ್ಮಣಭೋ
ಜನಮಾಡಿಸಬೇಕು ಅವರೇ ಮಾಡಿಸಬೇಕು. ಅವರು ಶೋಭನ
ಪ್ರಸ್ತದ ಸಮಾರಾಧನೆಯನ್ನು ಮಾಡಿಸಿದರು. ಅದರ ವಿಜ್ರುಂಭ
ಣೆಯನ್ನು ವಿವರಿಸಲು ಹತ್ತು ಬಾಯಿಸಾಲದು. ಅರವತ್ತು
ಬಗೆ ಅನ್ನ, ಸಾವಿರಬಗೆ ಸಾರು, ಕೊಟಿಬಗೆ ಕೋಸುಂಬರಿ
ಎನ್ನುವಂಥಾ ಪಂಚಭಕ್ಷ ಪರಮಾನ್ನದ ಸಮಾರಾಧನೇ ಊಟದ
ಪರಿಕರವನ್ನು ನಾನು ಏನೆಂದು ಹೇಳಲಿ ! ಆದರೆ ಅಂಥಾದ್ದು
ಯಾವುದೂ ಇಲ್ಲ. ಕೇಸಕ್ಕಿ ಅನ್ನ ಮೆಣಸಿನನೀರು ಕಂಣೀರಮ
ಜೈಗೆ ಇದನ್ನು ಬ ಡಿಸಿ ನನ್ನು ಅಜೀರ್ಣವನ್ನೆಲ್ಲಾ ಹೋಗ
ಲಾಡಿಸಿದರು.
--------------------------------

೧೦೦         ಮಾಡಿದ್ದುಣ್ಣೋ ಮಹರಾಯ

" ಅನ್ನಂಪಾಟಲಿಪುಷ್ಪವರ್ಣ ಸದೃಶಂ ಕಿಂಚ್ಚಿತ್ತುಷಾರಾನ್ವಿತಂ  .........ಭಗ್ನಾ ಚದಂತಾವಳೀ ಆಜ್ಯಂದೂರತರಂನವಾಪಿಲವಣಂ
 ಶಾಖಾಸು ವಸ್ತಾನಹಿನಿತ್ಯಂ ಚಿತ್ರವಿಚಿತ್ರಭೋಜನಮಿದಂ ಪ್ರತ್ಯ
ಕ್ಷಂಚಾದ್ರಾಯನಂ " ಈ ಶ್ಲೋಕಕ್ಕೆ ಅನುಸಾರವಾಗಿಯೇ
ಇತ್ತು. ಈ ಶಾಸ್ತ್ರಿಗಳು ಮನಸ್ಸು ಬಂದಹಾಗೆ ತಿಂಡಿಯನ್ನು
ಹಾಕಿ ಹೊಟ್ಟೆ ಎತ್ತದಹಾಗೆ ಮಾಡಿದಾರೆ ಮಹಾಸ್ವಾಮಿ, ಹೀ
ಗೆಂದು ನಕಲೀ ನಾರಣಪ್ಪನು ಕೂಗಿದನು.

ಆಗ ರಾಜರು ನಗುತಾ ಮೇಲಕ್ಕೆ ಎಳಲಾಗಿ ಶಾಸ್ತ್ರಿಗಳು
ಅನೇಕ ತಟ್ಟೆಗಳಲ್ಲಿ ನಸರನ್ನು ಒಪ್ಪಿಸಿದರು. ದೊರೆಯು ವಾಡಿ
ಕೇ ಪ್ರಕಾರ ಅದೆಲ್ಲವನ್ನೂ ಸುಮ್ಮನೆ ಕೈಯಿಂದ ಮುಟ್ಟಿ ವಧೂವ
ರರಿಗೆ ಖಿಲ್ಲನ್ನು ತರಿಸಿಕೊಟ್ಟು- ಶಾಸ್ತ್ರಿಗಳೆ, ಪಾತಿವ್ರತ್ಯಕ್ಕೆ ಬೇಕಾದ
ಸಮಸ್ಯಲಕ್ಷಣಗಳೂ (ಮದುವೆ ಹೆಂಣನ್ನು ತೋರಿ
ಸುತಾ) ಈ ಹೆಂಣುಮಗಳಲ್ಲಿರುವ ಕಾರಣ ಈಕೆಗೆ ಸೀತನ್ನು
ನೆಂದು ನೀವು ನಾಮಕರಣಮಾಡಿದ್ದು ಸಾರ್ಥಕವಾಯಿತು,
ಎಂಬದಾಗಿ ಅಪ್ಪಣೆ ಕೊಡಿಸಿ, ಅಲ್ಲಿದ್ದ ಆಬಾಲವೃದ್ಧರಸಂಗಡ
ಲೂ ಮಾತನಾಡಿ ಭವರಾಜುಗಳ ಹೊಗಳಿಕೆಯ ಧ್ವನಿಯಿಂದ
ಅರಮನೆಗೆ ಬಿಜಮಾಡಿದರು. ಆ ಸಮಯದಲ್ಲಿ ಸಾಂಬಶಾಸ್ತ್ರಿ 
ಯು ಮಹಾಸಾಮಿ, ಈ ಹೊತ್ತಿನ ಆನಂದವನ್ನು ನಾನು
ಹುಟ್ಟಿದಾಗಿನಿಂದ ಅರಿಯೆ, ಎಂದನು. ಅಲ್ಲಿದ್ದ ಸಭೆಯಲ್ಲಾ
ಮಹಾರಾಜರ ಸೌಲಭ್ಯವನ್ನೂ ವಿನಯವನ್ನೂ ದಾತೃತ್ವವನ್ನೂ
ಹತ್ತು ಬಾಯಿ ಹೊಗಳಿದರು.

ಇಂಥಾ ಸೌಲಭ್ಯವೂ ಮೃದುಸ್ವಭಾವವೂ ಗಾಂಭೀರದೊ
ಡನೆ ಮಿಳಿತವಾಗಿ ಸೇರಿಕೊಂಡು ಒಂದರಿಂದ ಇನ್ನೊಂದು ಕೆಡದ 
----------------------------------

ಮಾಡಿದ್ದುಣ್ಣೋ ಮಹರಾಯ.         ೧೦೧

ಹಾಗೆ ಇರುವುದು ಬಹು ಅಪೂರ್ವ, ಮಹಾ ಪದವಿಯನ್ನು
ಅನುಭವಿಸತಕ್ಕವರಿಗೆ ಇಂಧಾ ಗುಣ ವಿರತಕ್ಕದ್ದು ಪೂರ್ವಾ
ರ್ಜಿತ ಫಲವಾಗಿದೆ. ತತ್ರಾಪಿ ಈ ಕಾಲಗಳಲ್ಲಿ ಸರ್ಕಾದ ಒಂದು
ಸಾಧಾರಣವಾದ ಉದ್ಯೋಗ ದೊರೆತಾಗ್ಯೂ ಜನರು
ಅಟ್ಟಹಾಸದಿಂದ ಮೆರೆಯುತ್ತಾರೆ. ಗಣ್ಯವಾದ ಉದ್ಯೋಗ
ದೊರೆತರೆ ತಮ್ಮ ಗರ್ವವನ್ನು ಜನರಮೇಲೆ ತೋರಿಸಿ ಅವ
ರಿಗೆ ಬಗೆ ಬಗೆಯಾದ ಬಾಧೆಗಳನ್ನು ಹುಟ್ಟಿಸುತ್ತಾರೆ. ಅವರ
ದೂರುಗಳನ್ನು ಕೇಳದೆ ಅವರ ಸಂಗಡ ಮಾತನಾಡಿದರೆ ತಮ್ಮ
ಗೌರವ ಭಂಗವಾಯಿತೆಂದು ಮೆಡ ಮೆಟ್ಟಿಯನ್ನು ಹತ್ತುತಾ ,
ಸುಮ್ಮನಿದ್ದರೆ ಅವರ ದೂರೇ ಏನೂ ಇಲ್ಲವೆನ್ನುತಾ, ಮಾತ
ನಾಡಿದರೆ ತುಂಟನೆನ್ನುತಾ, ನಾಲ್ಕು ಮಾತ ಹೆಚ್ಚಾಗಿ ಆಡಿದರೆ
ಅಂಥವರಮೇಲೆ ದ್ವೇಷವನ್ನಿಟ್ಟು ಅವರನ್ನು ನಾಶಮಾಡುತಾ,
ತಾವು ಅಜ್ಞಾನದಿಂದ ಅವಿವೇಕದಿಂದಲೂ ಕ್ರೋಧದಿಂದ
ಲೂ ಮಾಡುವ ಕೆಲಸವಲ್ಲಾ ದೊರೆಯ ಅಪ್ಪಣೆಯಂತೆ ಮಾ
ಡಿದೆನೆನ್ನುತಾರೆ. ಆಗಭೋಗ ಅಗಸ್ತ್ಯೇಶ್ಚರನಿಗೆ ಸತ್ಯ
ಪ್ರಮಾಣ ಮಾರ್ಕಂಡೇಶ್ವರನಿಗೆ ಎಂಬ ಗಾಧೆಗೆ ಸರಿಯಾಗಿ,
ಒಳ್ಳೆ ಕೆಲಸವೇನಾದರೂ ಆದರೆ ಅದನ್ನು ತಾವು ಮಾಡಿದೆ
ವೆನ್ನುತಾ, ಕೆಟ್ಟದೇನಾದರೂ ಆದರೆ ಅದಕ್ಕೆ ದೊರೆಯ ತಲೆ
ಯನ್ನು ಗುರಿಮಾಡಿ ಜನರು ಅರಸನ ಸಮೀಪಕ್ಕೆ ಯಾವಾ
ಗಲೂ ಯಾರೂ ಹೊದ್ದದಹಾಗೆ ಮಾಡುತ್ತಾ, ತನ್ನ ಮೇಲೆ
ಯಾರು ಏನ ಹೇಳಿ ಯಾರೋ ಎಂದು ಕಾದುಕೊಂಡಿರುತಾ,
ಅರಸನನ್ನು ಮುಂದೆ ಹೊಗಳುತಾ ಹಿಂದೆ ಬೈಯ್ಯುತಾ
---------------------------------

೧೦೨        ಮಾಡಿದ್ದುಣೋ ಮಹರಾಯ.

ತಮ್ಮ ಪ್ರಯೋಜನವನ್ನು ನಾನಾ ವಿಧದಲ್ಲಿಯೂ ಕಾಪಾಡಿಕೊ
ಳ್ಳುತಾರೆ. ಮತ್ತರಾದ ಅರಸರು ತಮ್ಮ ಸಮಾಜದಲ್ಲಿದ್ದು
ಕೊಂಡು ಹಗಲು ರಾತ್ರೆಯ ಕರ್ಣದಲ್ಲಿ ಜಪಿಸುವ ಜನರೇ
ಅಪ್ತರೆಂದು ತಿಳಿಯುತ್ತಾರೆ. ಅಂಥವರು ಹೇಳಿದ ಹಾಗೆ ನಡೆ
ಯತಕ್ಕದ್ದು ಮನುಷ್ಯ ಸ್ವಭಾವವಾಗಿದೆ. ಹೀಗೆ ಅರಸುಗಳ
ಸಮೀಪದಲ್ಲಿ ಸೇರತಕ್ಕವರು ಅರಸನಿಗೂ ಜನರಿಗೂ ಮಧ್ಯೆ
ನಿಂತು ಕೇಣವಿಲ್ಲದೆ ಅವರವರಿಗೆ ತಂದು ಹಾಕುತಾರ, ಕೊ
ನೆಗೆ ಅರಸನ ಭೇಟಿಯ ಪ್ರಜೆಗಳಿಗಾಗದಂತೆ ಮಾಡುತಾರೆ.
ಇಂಥಾ ಆಚರಣೆಯು ರೂಢಿಗೆ ಬಂದು ಪ್ರಜೆಗಳಲ್ಲಿ ತಾವು
ಮಾತನಾಡಿದರೂ ತಮ್ಮ ಗೌರವ ಭಂಗವಾಯಿತೆಂದು ಅರಸು
ತಿಳಿಯುತ್ತಾನೆ. ಇಂಧಾ ನಡತೆಯಿಂದ ದೊರೆಗೂ ಪ್ರಜೆಗಳಿಗೂ
ಪೂರ್ತಿಯಾಗಿ ಅಗಲಿಹೋಗಿ, ಇವರ ಮನಸ್ಸು ಅವರಿಗೂ,
ಅವರ ಮನಸ್ಸು ಇವರಿಗೂ ಗೊತ್ತಾಗದೆ ಪರಸ್ಪರ ದ್ವೇಷ
ಹುಟ್ಟುವುದು. ಈ ಪ್ರಕಾರ ಬಲಿಷ್ಟರಾದ ದೊರೆಗಳು ಪ್ರಜೆ
ಗಳಿಗೆ ಇಲ್ಲದ ಕಷ್ಟವನ್ನು ಕೊಡುತಾ ತಮ್ಮ ಆನಂದದಲ್ಲಿ
ಕಾಲವನ್ನು ಕಳೆಯುತ್ತಾರೆ.

ಈ ರೀತಿಯಾದ ನಡತೆಯು ಈ ಪ್ರಗ್ದೇಶದ ಅರಸರಲ್ಲಿ
ಹೆಚ್ಚಾಗಿ ಇದ್ದು ನಿಜ. ದೊರೆಗಳು ಎನ್ನಿಸಿಕೊಂಡವರೆಲ್ಲರಿಗೂ
ಈ ಭಾಗದಲ್ಲಿ ಲಲಾಟರೇಖೆಯು ಏಕರೀತಿಯಾಗಿದೆಯೋ ಎನ್ನು
ವಹಾಗೆ ರಾಜಸಗುಣವು ಈ ಪುರುಷ ಶ್ರೇಷ್ಟರಲ್ಲಿ ಸ್ವಚ್ಛೆ
ಯಾಗಿ ವಿಹರಿಸುವುದು. ಆದಾಗೂ ಯುಗಾಂತರದಲ್ಲಿ ಪುರಾ
ಣ ಪ್ರಸಿದ್ಧರಾದ ನಳ ಮಾಂಧಾತ ಶ್ರೀರಾಮ ಮೊದಲಾದ ಚಕ್ರ 
------------------------------

೧೦೩             ಮಾಡಿದ್ದುಣ್ಣೋ ಮಹರಾಯ.

ವರ್ತಿಗಳೂ ಮತ್ತು ಈಚೆಗೆ ಇದ್ದ ಅನೇಕರಾಜರೂ ಪ್ರಜೆ
ಗಳೇ ತಮ್ಮ ದೈವವೆಂದು ತಿಳಿದು ರಾಜಸದ ಅಟ್ಟಹಾಸ
ವನ್ನು ಬಿಟ್ಟು ಎಲ್ಲರಲ್ಲಿಯ ಪಲಿತವಾಗಿ ಇರುತಾ
ಅವರ ಕಷ್ಟ ಸುಖಗಳನ್ನು ಅರಿತು ಲೋಕೋಪಕಾರ
ವನ್ನು ಮಾಡುತಿದ್ದರು. ಪಾಶ್ಚಾತ್ಯರಲ್ಲಿಯ ಹಿಂದೆ
ಇದ್ದ ಅನೇಕ ರಾಜರು ಪ್ರಜೆಗಳ ಸ್ಥಿತಿಯನ್ನು ವಿಚಾರಿ
ಸುವುದರಲ್ಲಿ ಸ್ವಲ್ಪವೂ ಡಂಭವಿಲ್ಲದೆ ಕೇವಲ ಸುಲಭರಾಗಿದ್ದ
ಕಾರಣ ಪ್ರಜಾ ಪರಿವಾಲನೆಯ ಅದಕ್ಕೆ ತಕ್ಕ ಹಾಗೆ ಸರಿ
ಯಾಗಿಯೇ ನಡೆಯುತಿತ್ತು. ಆ ಕಾಲದಲ್ಲಿ ಪಾಶ್ಚಾತ್ಯರು
ಪ್ರಬಲರಾಗಿರಲಿಲ್ಲ. ಅವರ ದೊರೆಗಳೂ ಕೇವಲ ಹೆಮ್ಮೆಯ
ನ್ನು ವಹಿಸಿರಲಿಲ್ಲ. ಪ್ರಜೆಗಳಲ್ಲಿ ಹೆಚ್ಚಾದ ಅನುರಾಗವನ್ನು
ಇಟ್ಟುಕೊಂಡಿದ್ದರು ಈಚೆಗೆ ಪ್ರಾಗ್ದೇಶಕ್ಕೂ ಆ ಜನರಿಗೂ
ಬಳಕೆ ಹೆಚ್ಚಾಗುತ್ತಾ ಬಂತು. ಇಲ್ಲಿ ಆಗಿದ್ದ ದೊರೆಗಳ ಡಂಭ
ವನ್ನು ನೋಡಿ ತಾವೂ ಅವರಂತೆ ಮತ್ತತೆಯನ್ನು ಅವಲಂ
ಬಿಸುತ್ತಾ ಬಂದರು. ರಾಜಸವನ, ಪ್ರಜಾ ಪರಿವಾಲನೆಯನ್ನೂ
ಒಟ್ಟಿಗೆ ಎಕಕಾಲದಲ್ಲಿ ಅನುಸರಿಸುವ ಅಭ್ಯಾಸ ಪ್ರಾಗ್ಧೇಶದ
ಅರಸರಿಗೆ ಇರುವಷ್ಟು ಪಾಶ್ಚಾತ್ಯರ ರಾಜರಲ್ಲಿ ಇರಲಿಲ್ಲವಾದ
ಕಾರಣ, ತಮ್ಮ ರಾಜರು ಹೊಸದಾಗಿ ಸ್ವೀಕರಿಸಿದ ದುರ್ಗು
ಣದ ಫಲವನ್ನು ಪಶ್ಚಿಮ ದೇಶದ ಪ್ರಜೆಗಳು ಸಹಿಸಲಾರದೆ
ಆಗಾಗ್ಗೆ ಆದೇಶದ ರಾಜರೊಡನೆ ವ್ಯಾಜ್ಯವನ್ನಾಡಿ ವಿಧ ವಿಧ
ವಾದ ಮಾನ್ಯಗಳನ್ನು ಅರಸುಗಳಿಂದ ಬಲವಂತವಾಗಿ ಕಸಿದು
ಕೊಂಡು ಅರಸು ಕೆಟ್ಟರೂ ಪ್ರಜೆಗಳೂ ರಾಜ್ಯವೂ ಕೆಡದ
----------------------------------

೧೦೪         ಮಾಡಿದ್ದುಣೋ ಮಹರಾಯ.

ಹಾಗೆ ಪ್ರಜೆಗಳ ಅಭಿಮತಾನುಸಾರವಾಗಿ ರಾಜ್ಯವಾಳುವ ಸಂಸ್ಥೆ
ಗಳನ್ನು ಏರ್ಪಡಿಸಿಕೊಂಡು ಇದಾರೆ. ಹಾಗಾದರೂ ಕೂಡ
ಒತ್ತಟ್ಟೆ ಪ್ರಜೆಗಳ ಕೈಬಣವಾಗುತಾ ಇದ್ದಾಗ್ಯೂ ಒತ್ತಟ್ಟೆ
ರಾಜರ ಅಮ್ಮಹಾಸವೂ ಡಂಭವೂ ಪ್ರಜೆಗಳನ್ನು ಅಲ್ಪರೆಂದು
ದೂರಮಾಡುವುದೂ ಸ್ವಪ್ರಯೋಜನ ಪರಾಯಣರಿಗೆ ಕಿವಿ
ಕೊಟ್ಟು ತಪ್ಪುದಾರಿಗಳನ್ನು ಅನುಸರಿಸುವುದೂ ಸಹಾ
ಅರಸರಲ್ಲಿ ಪ್ರಜೆಗಳ ಅನುರಾಗವನ್ನು ದಿನೇ ದಿನೇ ಕಡಮೆ
ಮಾಡುತ್ತಲಿದೆ. ಇದರಿಂದ ಜನರಿಗೆ ರಾಜಭಕ್ತಿ, ಲೇಶವೂ ಇಲ್ಲದೆ
ರಾಜರಿಗೆ ಅವರ ಪದವಿಯೇ ತಪ್ಪಿಹೋದ ಕಥೆಗಳು ಎಷ್ಟೋ
ಇವೆ. ಈ ಜಗಳದಲ್ಲಿ ಪ್ರಜೆಗಳೂ ರಾಜರೂ ಪ್ರಾಣಬಿಟ್ಟ ಕಥೆ
ಗಳೂ ಎಷ್ಟೋ ಇವೆ.

ಇಂಥಾ ವಿಪರೀತಗಳು ವಾಶ್ಚಾತ್ಯರಲ್ಲಿ ಅನೇಕವಾಗಿ ನಡೆ
ದು ನಮ್ಮ ದೇಶಗಳಲ್ಲಿ ಮಾತ್ರ ಹೀಗೆ ನಡೆಯದೇ ಇರಲು
ಕಾರಣವೇನೆಂದು ವಿಚಾರಿಸಿ ನೋಡಿದರೆ, ಪ್ರತಿಷ್ಟೆಯ ಡಂ
ಭವೂ ನಮ್ಮ ಸೀಮೆಯ ರಾಜರುಗಳಲ್ಲಿ ಹೆಚ್ಚಾಗಿದ್ದರೂ, ಸಮ
ಯ ಬಂದಾಗ ತಮ್ಮ ಪದವಿ ಎಂಬ ಪ್ರತಾಪದ ಗಂಟನ್ನು
ಅತ್ತ ಇರಿಸಿ ಬಡವರಲ್ಲಿ ಬಡವರಾಗಿಯ ಪ್ರಜೆಗಳಲ್ಲಿ ಪ್ರಜೆ
ಯಾಗಿಯೂ ವಿಶೇಷವಾದ ಸೌಲಭ್ಯದಿಂದ ನಡೆದುಕೊಂಡು
ಪ್ರಜೆಗಳನ್ನು ಕೇವಲ ಆದರದಿಂದ ಕಾಣುವ ಸಹಜವಾದ
ಗುಣವು ನಮ್ಮ ಹಲವು ರಾಜರಲ್ಲಿರುವುದರಿಂದ ಎಂಥಾ ತುಂ
ಟನಾದರೂ ರಾಜನ ಒಳ್ಳೆತನದಿಂದ ಜಿತನಾಗುವನು. ಈ ಗು
ಣವು ನಮ್ಮ ಅರಸರಲ್ಲಿರುವುದರಿಂದಲೇ ಪಾಶ್ಚಾತ್ಯರ ರಾಜರಿಗೆ
---------------------------------

        ಮಾಡಿದ್ದುಣ್ಣೋ ಮಹರಾಯ          ೧೦೫

ಉಂಟಾದ ಅನೇಕ ಬಾಧಕಗಳು ನಮ್ಮ ದೇಶಗಳಲ್ಲಿ ಹುಟ್ಟ
ಲಿಲ್ಲ. ಈಚೆಗೆ ಯೂರೋಪಿನ ರಾಜರಹಾಗೆ ನನ್ನ ದೊರೆಗ
ಳೂ ಪ್ರಜೆಗಳ ವಿಷಯದಲ್ಲಿ ಬಿರನೆ ಬೀರಿಕೊಂಡು ಅಸಹ್ಯವಾದ
ಮುರುಕನ್ನು ತೋರಿಸುತಾ ಇರುವುದು ತನ್ನ ಸರಣಿಯಲ್ಲಿ
ಅದರ ಫಲವನ್ನು ತೋರಿಸದೇ ಇರದು. ಇಂಥಾ ದುರ್ಗುಣ
ಗಳು ಸಮಾಸ ವೃತ್ತಿಯಲ್ಲಿರತಕ್ಕ ವರ ದುರ್ಗುಣದ ಪ್ರತಿಬಿಂ
ಬವಾಗಿದೆ. ಈ ಅಂಶವನ್ನು ಬಿಟ್ಟು ಯೋಚಿಸಿದರೆ ಮುಮ್ಮುಡಿ
ಕೃಷ್ಣರಾಜ ಒಡೆಯರ ಸೌಲಭ್ಯವೂ ಧಾರಾಳವೂ ಎಂಥಾ
ಶತ್ರುಗಳನ್ನಾದರೂ ಮಿತ್ರಸ್ಥಾನಕ್ಕೆ ತರುತ್ತಾ ಇದ್ದವು. ಪ್ರಜೆ
ಗಳು ಎಂದರೆ ತನ್ನ ಮಕ್ಕಳು ಎಂದು ಭಾವಿಸಿಕೊಂಡಿದ್ದ ಈ
ಮಹಾರಾಯನ ವಿವೇಕದಿಂದಲೇ ಮೈಸೂರ ರಾಜ್ಯವು ಇದುವ
ರೆಗೆ ಇಷ್ಟರಮಟ್ಟಿಗೆ ಉಳಿದಿದೆ.

ಈರೀತಿಯಲ್ಲಿ ಮದುವೆ ಬೆಳೆಯಿತು. ಬೀಗರ ಔತನ, ಜೀನ
ವಾಸದ ಮನೆ ತುಂಬಿಸಿಕೊಳ್ಳುವುದು, ಅಳಿಯನಿಗೆ ಚಕ್ಕುಲೀಹೆ
ಡಿಗೇ ತಂದಿರಿಸುವುದು, ಕಳಹು ವೂಟ, ಅಳಿಯನನ್ನು ನಿಬ್ಬಣತೆರಳಿ
ಸಾಗಕಳುಹಿಸುವುದು ಇದೆಲ್ಲಾ ಸಾಂಗವಾಗಿ ಜರಗಿದವು. ಬೀಗ
ರೆಲ್ಲರೂ ಸಂಜನಾಡಿಗೆ ಪ್ರಯಾಣಮಾಡಿ ಹೊರಟು ಹೋದರು.
ಶಿಷ್ಯನಾದ ಮಹಾದೇವನ ಮದುವೆಗೆ ಉಪಾಧ್ಯಾಯನಾರಪ್ಪ
ಯ್ಯನೂ ಬಂದಿದ್ದನು. ಇವನು ಈ ವಿವಾಹದ ಅಟ್ಟಹಾಸವನ್ನೆ
ಲ್ಲಾ ನೋಡಿ ಉಭ ಶುಭ ಎನ್ನದೆ ಯಾವ ಮಾತನ್ನೂ ಆಡದೆ
ದುಮ್ಮೆಂದುಕೊಂಡೇ ಇರುತ್ತಿದ್ದನು.

ತೌರುಮನೆಯಲ್ಲಿ ಸೀತಮ್ಮನಿಗೆ ನೊಹಿ ವ್ರತಾದಿಗಳೆಲ್ಲಾ
------------------------------------

೧೦೬         ಮಾಡಿದ್ದುಣ್ಣೋ ಮಹಾರಾಯ.

ಸಾಂಗವಾಗಿ ಬೆಳೆದವು. ಮದುವೆಯಲ್ಲಿ ಯಾಗಲಿ, ಬಾಗಿನಮೊ
ದಲಾದ್ದು ಕೊಡಿಸುವುದರಲ್ಲಿ ಯಾಗಲಿ, ಮುಯಿಗೆ ಮುಯಿ
ಮಾಡುವುದರಲ್ಲಿಯಾಗಲಿ ಬೀಗ ಬೀಗರಿಗೆ ಯಾವ ಗಲಗೂ
ಇಲ್ಲದೆ ಯಾರಿಗೂ ಮನಸ್ಸು ಕಪ್ಪಾಗದಹಾಗೆ ಎಲ್ಲಾ ನಡವ
ಳಿಕೆಗಳೂ ಜರಗಿದವು, ಕೆಲವು ದಿವಸಗಳ ಮೇಲೆ ಸೀತಮ್ಮನನ್ನು
ಅತ್ತೆಮನೆಗೆ ಕರೆದುತಂದು ಕೆಲವು ದಿವಸ ಇರಿಸಿಕೊಂಡಿದ್ದ ರು.
ಅಳಿಯನನ್ನು ಅತ್ತೆಮನೆಗೆ ಯುಗಾದಿ ದೀವಳಿಗೆ ಮೊದಲಾದ
ಹಬ್ಬಕ್ಕೆ ಕರೆದು ವಿಭವವಾಗಿ ಆರತಿ ಅಕ್ಷತೆ ಮೊದಲಾದ್ದನ್ನು
ಮಾಡಿದರು. ಕೆಲವು ದಿವಸದಲ್ಲಿ ಈ ಹುಡುಗಿ ಮೈನೆರೆದಳು.
ಋತುಶಾಂತಿಪ್ರಸ್ವವೂ ಜರಗಿತು. ಹುಡುಗಿಯನ್ನು ಅತ್ತೇಮ
ನೆಗೆ ಕರೆದುತಂದು ಬಿಟ್ಟು ಅಳಿಯನಿಗೂ ಮಗಳಿಗೂ ಚಿನ್ನ ಬೆಳ್ಳೀ
ಸಾಮಾನುಗಳೇ ಮೊದಲಾಗಿ ಅನೇಕ ಪದಾರ್ಥಗಳನ್ನೂ ವಸ್ತ್ರ
ಗಳನ್ನೂ ಬಳುವಳಿಯಾಗಿ ಕೊಟ್ಟರು. ಸೀತಮ್ಮ ನು ಅತ್ತೇಮ
ನೆಗೆ ಬಂದು ಬಾಳಿಕೊಂಡಿರಲು ಆರಂಭವಾಯಿತು.
             ---
           
            ೭ನೇ ಅಧ್ಯಾಯ.
ತಿಮ್ಮಮ್ಮನ ಹೊಟ್ಟೆಯಲ್ಲಿ ಒಂದು ಹೆಂಣುಮಗು
ವಾಯಿತು. ಆ ಹುಡುಗಿಗೆ ಸಾವಿತ್ರಿ ಎಂದು ಹೆಸರಿಟ್ಟಿದ್ದರು.
ಮುದ್ದಿಗೆ ಸಾತಿ ಎಂದು ಕರೆಯುತಿದ್ದರು. ಸೀತಮ್ಮ ನೆರೆದು
ಗಂಡನ ಮನೆಗೆ ಬಂದಾಗ ಸಾತಿಗೆ ಒಂಭತ್ತು ವರುಷತುಂಬಿ
ತ್ತು. ಈ ಹೆಂಣು ರೂಪಿನಲ್ಲಿಯೂ ಗುಣದಲ್ಲಿಯೂ ತಾಯಿ
---------------------------

        ಮಾಡಿದ್ದುಣ್ಣೋ ಮಹರಾಯ.      ೧೦೭
       
ಯನ್ನೇ ಹೆಚ್ಚಾಗಿ ಹೋತಿತ್ತು. ಈ ಹುಡುಗಿಯನ್ನು ಅರಿಕೊ
ಟಾರದ ದೇವರಪ್ಪ ಒಡೆಯರ ಮಗನಿಗೆ ಕೊಟ್ಟಿತ್ತು. ಚಾಮ
ರಾಜನಗರಕ್ಕೆ ಅರಿಕೊಟಾರವೆಂದು ಪೂರ್ವದಹೆಸರು. ತಿಮ್ಮಮ್ಮ
ನ ಹೊಟ್ಟೆಯಲ್ಲಿ ಬೇರೆ ಮಕ್ಕಳಿಲ್ಲದೆ ಇದ್ದ ಕಾರಣ ಸಾತಿಯೇ
ಆಕೆಗೆ ಕೇವಲವಾಗಿ ಮುದ್ದಿನ ಕಂದವಾಗಿದ್ದಳು. ನೋಹಿವ್ರತಾ
ದಿಗಳನ್ನು ಈ ಹುಡುಗಿಯ ಸೀತಮ್ಮ ನೂ ಒಟ್ಟಿಗೇ ಸೇರಿ
ಮಾಡುತಿದ್ದರು. ವೈದಿಕರಾಗಿಯೂ ವಿಶೇಷವಾಗಿ ಆಸ್ತಿಕ್ಯವು
ಳ್ಳವರಾಗಿಯೂ ಇದ್ದ ಸಂಸಾರದಲ್ಲಿ ಈ ಬಗೆ ಆಚರಣೆಗಳು ಬಲ
ವಾಗಿಯೇ ನಡೆಯುವವು. ಪುಣ್ಯವಂತರಾಗಿದ್ದ ಜೋಯಿಸರ
ಮನೆಯವರು ಯಾತರಲ್ಲಿಯೂ ಲೋಪವಿಲ್ಲದಂತೆ ನಡಿಸುತಿದ ರು.
ಲೋಕವಿಡಂಬನಾರ್ಥವಾಗಿ ಇದೆಲ್ಲಾ ಹೀಗೆ ನಡೆಯುತಿತ್ತು.
ಆದಾಗ್ಯೂ ಈ ಸೊಸೆಯನ್ನು ಕಂಡರೆ ತಿಮ್ಮಮ್ಮನಿಗೆ ಆಗುತಿ
ರಲಿಲ್ಲ. ಆ ಹೆಂಣನ್ನು ಕಂಡರೆ ವಿಷದಂತೆ ಕಾಣುತಿದ್ದಳು.
ಮಹಾದೇವನಿಗೆ ಮೊದಲು ಬೇರೇ ಒಂದು ಕನ್ಯವನ್ನು ಕೊಡಲು
ಮಾತು ನಡೆದಿತ್ತು. ಆ ಕನ್ಯವು ತಿಮ್ಮಮ್ಮನ ಸೋದರಮಾನ
ನ ಮೊನ್ನು ಗಳು. ಈ ಸಂಬಂಧವು ಸದಾಶಿವದೀಕ್ಷಿತನಿಗೆ ಸಮಾ
ಧಾನವಾಗಿರಲಿಲ್ಲ. ಹೆಂಣು ಅಷ್ಟು ಅಕ್ಷಣವಾದಲ್ಲ. ಆಸಂಬಂ
ಧದ ಜನರು ಕೇವಲ ಜಗಳಗಂಟರು. ಸೋದರ ಮಾವನಾದ
ಪಶುಪತಿ ಸಾಂಬಶಾಸ್ತ್ರಿಗಳ ಸಂಬಂಧವನ್ನು ಮುಂದಕ್ಕೂ ಬೆಳೆ
ಯಿಸುವುದರಲ್ಲಿ ಆಸಕ್ತಿ ಹೆಚ್ಚಾಗಿತ್ತು, ಮಹಾಸ್ವಾಮಿಯವರ ಅ
ಪ್ಪಣೆಯೂ ಅದರಂತೆಯೇ ಆಯಿತು, ಆದ್ದರಿಂದ ಬೇರೆ ಸಂಬಂ
ಧತಪ್ಪಿಹೋಗಲು ಆಸ್ಪಧವಾಯಿತು, ಸಾಂಬಶಾಸ್ತ್ರಿಗಳಿಗೆ ಇದ್ದ
-------------------------------

೧೦೮         ಮಾಡಿದ್ದುಣ್ಣೋ ಮಹರಾಯ.

ಐಶ್ವರವೂ ರಾಜಪೂಜ್ಯತೆಯ ಬೇರೇ ಸಂಬಂಧಕ್ಕೆ ಸದಾಶಿವದೀ 
ಕ್ಷಿತನು ಮನಸ್ಸು ಮಾಡಲು ಪ್ರತಿಬಂಧಕಗಳಾಗಿರಲಿಲ್ಲವೆಂದು
ಹೇಳುವುದಕ್ಕೆ ಆಗುವುದಿಲ್ಲ.

ಆದರೇನಾಯಿತು ? ಇಂಧಾ ಸಂದರ್ಭದಲ್ಲಿ ಗಂಡನಮನಸ್ಸು
ಇದ ಹಾಗೆಯೇ ಹೆಂಡತಿಯ ಮನಸೂ ಇರುವುದು ಹೇಗೆ ?
ಅವರವರ ಸಂಬಂಧಣನು ಬಂಧಗಳೇ ಬೇರೆ. ಅವರವರ ಅಭಿಮತ
ಗಳೇ ಬೇರೆ. ಆದಕಾರಣ ತಿಮ್ಮಮ್ಮನು ಮೈಸೂರ ನಂಟತನಕ್ಕೆ
ವಿರೋಧಿಯಾಗಿದ್ದಳು. ಈ ವಿರೋಧವು ನಂಟತನದಿಂದ ಸೊಸೇ
ಮೇಲಕ್ಕೆ ಹಾರಿತು. ಎಲ್ಲರ ಮೇಲಿನ ಕೋಪವನ್ನೂ ತಿಮ್ಮ 
ಮ್ಮನು ಸೊಸೆಮೇಲೆ ತೆಗೆಯಲು ಆರಂಭಿಸಿದಳು. 

ಸೀತಮ್ಮ ನಿಗೆ ಋತುಶಾಂತಿ ಪ್ರಸ್ತುತ ಬೆಳೆದ ತರುವಾಯ
ಗಂಡನ ಸಂಗಡ ಮಗಳನ್ನು ಪ್ರಯಾಣಮಾಡಿ ಕಳುಹಿಸಿ ಕೊ
ಡುವಾಗ ತಂದೆತಾಯಿಗಳಿಗೂ ಮತ್ತು ಇತರ ಸಂಬಂಧಿಗ
ಳಿಗೂ ಮನಸ್ಸು ವಿಕಲ್ಪವನ್ನು ಹೊಂದಿ ಕಂಣಿನಲ್ಲಿ ಚುಳ್ಳೆನ್ನು
ವುದು ಮನುಷ್ಯ ಸ್ವಭಾವಕ್ಕೆ ಸೇರಿದ ಸಂಗತಿಯಾಗಿದೆ. ಆ
ಕಾಲದಲ್ಲಿ ವಾಡಿಕೇಪ್ರಕಾರ ಮೊಮ್ಮಗಳು ತಾತನಾದ ಪಶುಪ
ತಿ ಸಾಂಬಶಾಸ್ತ್ರಿಗೆ ನಮಸ್ಕಾರ ಮಾಡುವುದಕ್ಕೆ ಬಂದಳು. ಆಗ
ಈತನಿಗೂ ಬುದ್ದಿ ಕಳವಳಗೊಂಡಿತು. ಆಶಾಸ್ತ್ರೀಯು ಸೀತೆ
ಯನ್ನು ಕುರಿತು- ತಾಯಿ, ಗಂಡನಮನೆಗೆ ಹೋಗಿ ಬರು
ತೀಯ ? ಜೋಕೆ, ಬುದ್ಧಿವಂತಳಾಗಿರು ಎಂದು ಹೇಳಿ ಪ್ರಯಾ
ಣಮಾಡಿಸಿದನು.

ಮಾವನಮುನೆಗೆ ಬಂದಮೇಲೆ ಸೀತಮ್ಮನ ನಡತೆಯನ್ನು
--------------------------------
                                                                          ೧೦೯
ಮಾಡಿದ್ದುಣ್ಣೋ ಮಹರಾಯ

ಇಲ್ಲಿ ಸಂಕ್ಷೇಪವಾಗಿ ಕಾಣಿಸಬೇಕಾಗಿದೆ. ಈ ಹುಡುಗಿಯು ಅತ್ತೆ,
ಮಾವ, ಗಂಡ, ಇವರು ಏನಹೇಳಿದಾಗೂ ಕೋಪಮಾಡಿಕೊ
ಳ್ಳುತಿರಲಿಲ್ಲ. ಅವರ ಸಂಗಡ ಮಾತನಾಡುವಾಗ ಹಸನ್ಮುಖಿ
ಯಾಗಿ ಮಾತನಾಡುತಿದಳು, ಇತರರ ಸಂಗಡ ನಗುತನಗು
ತಾ ಮಾತನಾಡುತಿರಲಿಲ್ಲ. ಪರಪುರುಷರ ಸಂಗಡಮಾತನಾಡು
ವುದೇ ಇಲ್ಲ. ಅಥವಾ ಸಂದರ್ಭ ತಪ್ಪಿ ಮಾತನಾಡಬೇಕಾಗಿ ಬಂ
ದರೆ ಆ ಪುರುಷನ ಮುಖವನ್ನು ನೋಡದೆ ತಲೆಯನ್ನು ಬಗ್ಗಿ
ಸಿಕೊಂಡು ನಗದೆ ಮಿತವಾಗಿ ಮಾತನಾಡುತಿದ್ದಳು. ತನ್ನ
ಗಂಡನೇ ತನಗೆ ದೇವರೆಂದು ತಿಳಿದುಕೊಂಡಿದ್ದಳು. ಮನೆಯ
ಕೆಲಸವನ್ನು ಮಾಡಿಕೊಂಡು ಒಳ್ಳೇ ಮಾರ್ಗದಲ್ಲಿ ಕಾಲವನ್ನು
ಕಳೆಯುತಾ ಒಳ್ಳೇ ಕಥೆಗಳನ್ನು ಕೇಳುತಾ ಕೆಟ್ಟ ಜನರ ಸಂಗಡ
ಸೇರದೆ ಅವರೊಡನೆ ಮಾತನಾಡದೆ ಇರುತಿದ್ದಳು. ತನಗೆ ಕೇ
ಡನ್ನು ಮಾಡಿದವರೇ ಕೆಟ್ಟವರೆಂದು ಈಕೆ ತಿಳಿಯುತ್ತಿರಲಿಲ್ಲ.
ತನ್ನ ಗೋಜಿಗೆ ಬಾರದೇ ಇತರರಿಗೆ ಕೇಡನ್ನು ಮಾಡತಕ್ಕ
ವರೂ ತನಗೆ ಶತ್ರುಗಳೆಂದು ತಿಳಿಯುತಿದಳು. ಮನೆಯಲ್ಲಿ
ಚಾಕರಿ ಮಾಡುವ ಬಾಂದಿಗಳಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ.
ಒಡನೆ ಇಲ್ಲ ಸೀರೆ ಇಲ್ಲ ಎಂದು ಮನಸ್ಕನ್ನು ಚಿಕ್ಕದಾಗಿ ಮಾ
ಡಿಕೊಂಡವಳೇ ಅಲ್ಲ. ಹಬ್ಬ ಹರಿದಿನಗಳಲ್ಲಿ ಬೇಕಾದ ಒಡವೆ
ಯನ್ನು ಇಟ್ಟುಕೊಳ್ಳುತಿದ್ದರೂ ಡಂಭವಾದ ಸೀರೆಯನ್ನು ಮಾ
ತ್ರ ಉಡುತಿರಲಿಲ್ಲ. ಇದ್ದ ಒಡವೆ ಇತರರಿಗೆ ಕಾಣಲೆಂದು
ಸೆರಗನ್ನು ತೆಗೆದುಹಾಕುವುದನ್ನು ಇವಳು ಅರಿಯಳು.
ಹೆಚ್ಚಾಗಿ ಶೃಂಗಾರ ಮಾಡಿಕೊಳ್ಳುವುದರಲ್ಲಿ ಇಚ್ಛೆ ಇಲ್ಲ.
-------------------------------------
೧೧೦         ಮಾಡಿದ್ದುಣ್ಣೋ ಮಹರಾಯ.

ಮಹಾ ಪತಿವ್ರತೆಯರ ಚರಿತ್ರೆಯನ್ನು ಯಾವಾಗಲೂ ಮನಸ್ಸಿ
ನಲ್ಲಿ ಸ್ಮರಿಸುತ್ತಲೇ ಇರುತಿದ್ದಳು. ನೆರೆ ಹೊರೆಯವರು ಅಸ
ಮಾಧಾನ ಪಟ್ಟುಕೊಳ್ಳುವ ಒಂದುಗುಣ ಈಕೆಯಲ್ಲಿತ್ತು. ಯಾ
ರಸಂಗಡ ಹೆಚ್ಚಾಗಿ ಮಾತನಾಡುತಿರಲಿಲ್ಲ. ಯಾರಮನೆಗೆ
ಕರೆದರೂ ಹೋಗುವುದಕ್ಕೆ ಇವಳಿಗೆ ಮನಸ್ಸಿಲ್ಲ. ಮನೆಯಲ್ಲಿ
ಹುಡುಕಿಕೊಂಡು ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ
ಇರುತಿದ್ದಳು. ಇದರಿಂದ ಈ ಹುಡುಗಿಗೆ ವಿಶೇಷವಾಗಿ ದುರ
ಹಂಕಾರವಿದೆ ಎಂದು ಇತರರು ತಿಳಿಯುವಹಾಗಿತ್ತು.

ಗಂಡನಿಗೆ ಹೆಂಡತಿಯಲ್ಲಿ ವಿಶೇಷವಾದ ಪ್ರೀತಿ ಇತ್ತು.
ಮಾವನಿಗೆ ಇವಳನಡತೆ ಅಚ್ಚು ಮೆಚ್ಚಾಗಿತ್ತು. ಆ ಕಾರ್ಯೇಷು
ದಾಶೀ ಕರಣೇಷುಮಂತ್ರಿ ರೂಪೇಚಲಕ್ಷ್ಮಿ ಕ್ಷಮಯಾಧರಿತ್ರೀ
ಭೋಜ್ಯೇಷುಮಾತಾ ಶಯನೇಷುವೇಶ್ಯಾ ಷಟ್ಧರ್ಮಯುಕ್ತಾ
ಕುಲಧರ್ಮಪತ್ನಿ ” ಇದಕ್ಕೆ ಅನುಸಾರವಾಗಿ ಸೀತಮ್ಮ ಇದ್ದ
ಳು. ಕಿಟ್ಟ ಜೋಯಿಸನು ಯಾರು ಹೇಗೆ ಮಾತನಾಡಿದರೆ
ಅವರಂತೆ ಹರಟೇ ಬಡಿಯುತಾ ಐಲಾಟವನ್ನು ಹತ್ತಿಕೊಂಡಿ
ದ್ದನು. ಸಾತಿಯ ರೀತಿ ಮುಂದೆ ಗೊತ್ತಾಗುವುದು. ತಾನು
ಶ್ರಮಟ್ಟು ಹಾಕಿದ ಮಹಾ ದೇವನ ಸಂಸಾರ ಅಚ್ಚ ಕಾಯಿತಲ್ಲ
ಎಂಬ ಸಂತೋಷದಲ್ಲಿ ಪಾರ್ವತಮ್ಮ ಮುಳಗಿದ್ದಳು. ವೆಂಕ
ಮ್ಮನು ತನ್ನ ತಮ್ಮ ನೀಲಕಂಠ ಜೋಯಿಸರ ಮನೆಯ ಹೆಸರ
ವಾಸಿ ಇಷ್ಟರಮಟ್ಟಿಗೆ ನಿಂತಿತಲ್ಲಾ ಎಂದು ಹರ್ಷಿತಳಾಗಿಯೇ ಇದ್ದಳು. ಈಕೆ ಅಷ್ಟೊಂದು ಹೊಗೆಯನ್ನು ಅರಿತ ಪ್ರಾಣಿ
ಯಲ್ಲ, ನಿಮ್ಮ ಮನ ಮನಸ್ಸಿನಲ್ಲಿ ಮಾತ್ರ ಹೊಗೆ ಸುತ್ತಿ
------------------------------

ಮಾಡಿದ್ದುಣ್ಣೋ ಮಹರಾಯ.         ೧೧೧

ಕೊಂಡೇ ಇತ್ತು. ಸೊಸೆ ಯಾವ ಕೆಲಸವನ್ನು ಮಾಡಿದರೂ
ತಿಮ್ಮಮ್ಮನು ಇಲ್ಲದ ದೋಷಾರೋಪಣೆಯನ್ನು ಮಾಡುತಿದ್ದ
ಳು, ಒಂದುದಿನ ಸೀತನು ಬೆಳಗಿನ ಜಾವಕ್ಕೆ ಎಂದಿನಂತೆ ಎದ್ದು
ಮುಖವನ್ನು ತೊಳೆದುಕೊಂಡು ಕುಂಕುನು ಇಟ್ಟುಕೊಂಡು
ಬಾಗಿಲನ್ನೂ ಬೃಂದಾವನದ ಕಟ್ಟೆಯನ್ನೂ ಗುಡಿಸಿ ಸಾರಿಸಿ ರಂ
ಗವಲ್ಲಿಯನ್ನು ಇಟ್ಟಳು. ಆಗ ತಿಮ್ಮಮ್ಮನು ಬೆಳಗಾದಮೇಲೆ
ಎದ್ದು ನೋಡಿ-ಇದೇನೆ, ರಂಗವಲ್ಲಿಯನ್ನು ಸಂಣಗೆ ತೊರೆಯು
ತಾಕುಕ್ಕರಿಸಿದ್ದೀಯ ? ಈ ಕೆಲಸ ಮುಗಿದರೆ ಬೇರೆ ಕೆಲಸಾಮಾ
ಡಬೇಕಾಗುತ್ತೆ ಎಂದು ಒಂದರಲ್ಲಿ ನಣಿಗೆಯಾಡುತಿದ್ದಿಯೆ :
ಈ ನಾಜೂಕನ್ನೂ ನಡವಳಿತವನ್ನೂ ನಾವು ಅರಿಯವು ನಮ್ಮ
ವ್ವ, ನನಗೇನು ತಿಳಿಯುತ್ತೆ ಹಳ್ಳಿಗಾಡವರಿಗೆ ? ಪಟ್ಟಣವಾ
ಸದ ಚೆದರೇರು, ನೀವು ಬಲ್ಲಿರಿ. ಅಮ್ಮಮ್ಮ ಅವಳೇನು ಸಾ
ಮಾನ್ಯಳೆ, ಹೇಳಿದರೆ ಬಿಡುತಾಳೆಯ ? ಇನ್ನು ನಾನುತಾನೆ ಈ
ಮನೆಯಲ್ಲಿ ಅನ್ನಕ್ಕೆ ಸೇಕೊಂಡಿರೋಳು, ನನ್ನ ಮಾತನ್ನು
ನೀನು ಕೇಳೀಯ ? ಛಿ, ಎದ್ದು ನಡೆ ಆಚೆಗೆ, ನಾನು ಚೀಮಾ
ರಿ ಮಾಡಿಬಿಟ್ಟೇನು, ನಿನ್ನ ಹಾಳವಿದ್ಯಕ್ಕೆ ಬೆಂಕಿ ಹಾಕಿ ಸುಡ.
ನಿನಗೆ ಕೆಲಸಾ ಕಲಿಸಿದವಳ ಮುಸುಡಿಗೆ ಎಸರಕಾಸಿದರು,
ಹೇಳುತಾ ಇದ್ದರೆ ಹಾಗೇ ಆಟಾ ಹತ್ತುತಾಳೆ, ಸುಮ್ಮನೆ. ಹೀ
ಗೆ ಕೂಗಾಡುತಾ ಅತ್ತೆಯು ಸೀತೆಯ ಕೈಯನ್ನು ಚಿವಟಿ ಅವ
ಳು ಇಟ್ಟಿದ ರಂಗವಲ್ಲಿಯನ್ನು ಕಾಲಲ್ಲಿ ಅಳಿಸಿ ರಂಗವಲ್ಲೀ
ಮರಗಿಯನ್ನು ಆ ಹುಡಗಿಯ ಕೈಯಿಂದ ಕಿತ್ತುಕೊಂಡು
ಆ ಪುಡಿಯನ್ನು ಅಲ್ಲೆಲ್ಲಾ ಚೆಲ್ಲಾಡಿದಳು. ಸೀತೆಯು ಸು
--------------------------------
೧೧೨         ಮಾಡಿದ್ದುಣ್ಣೋ ಮಹರಾಯ.

ಮ್ಮನೆ ಎದ್ದು ಒಳಕ್ಕೆ ಹೊರಟುಹೋದಳು. ಉಷಃ ಕ್ಕಾಲಕ್ಕೇ
ಎಂದಿನಂತೆ ಎದ್ದು ಹೊರಕ್ಕೆ ಹೋಗಿದ್ದ ಸದಾಶಿವ ದೀಕ್ಷೆ
ತನು ಒಗೆದ ಪಂಚೆಯ ಹಿಂಡಿಕೆಗಳನ್ನೂ ಹೂ ತುಳಸಿಯ
ಬುಟ್ಟಿಯನ್ನೂ ಕೈಯಲ್ಲಿ ಹಿಡಿದುಕೊಂಡು ಹೊರಗಿನಿಂದ ಮನೆ
ಯ ಬಾಗಿಲಿಗೆ ಬಂದುನೋಡಿ- ಇಂದು ಶುಕ್ರವಾರ ಬಾಗಿಲಿಗೆ
ಇಟ್ಟ ರಂಗವಲ್ಲಿಯನ್ನು ಯಾಕೆ ಆಳಿಸಿದೆ ? ಅಲ್ಲಿ ರಂಗವಲ್ಲಿಯ
ನ್ನು ಯಾಕೆ ಚೆಲ್ಲಿಯಾಡಿದೆ ? ಎಂದು ಕೇಳಿದನು. ಕೆಲವು ಕಡೆ
ನಾಜೋಕಾಗಿ ರಂಗವಲ್ಲಿ ಎಳೆಯನ್ನು ಹಾಕಿದ್ದದ್ದು ಇನ್ನೂ ಹಾ
ಗೆಯೆ ಇತ್ತು ಇದನ್ನು ತನ್ನ ಸೊಸೆ ಇಟ್ಟಿರಬೇಕು, ಹಾಗಿ
ದ್ದರೆ ಇಷ್ಟ ಎಳೆಗಳನ್ನು ಅಳಿಸಿ ಚೆಲ್ಲಿಯಾಡಿರಲು ಕಾರಣವಿಲ್ಲ,
ಎಂದು ಯೋಚಿಸುತಾ ಇರುವಲ್ಲಿ, ತಿಮ್ಮಮ್ಮನು- ಇದೆಲ್ಲಾ
ನಿಮ್ಮ ಸೊಸೆ ಮಾಡಿದ ನಾಕೋಕಿನ ಕೆಲಸ ; ಆಡಿದರೆ ನಾನೇ
ಕೆಟ್ಟವಳಾಗುತ್ತೇನೆ. ಜಾಗ್ರತೆಯಾಗಿ ರಂಗವಲ್ಲಿ ಹಾಕಿ ಏಳು,
ಎರೆದುಕೊಳ್ಳುವಂತೆ ಎಂದು ನಾನು ಹೇಳಿದ್ದಕ್ಕೆ ಇಟ್ಟರಂ
ಗಲ್ಲಿಯನ್ನು ಅಳಿಸಿ ಸಟ್ಟ  ಶುಕ್ರವಾರದ ದಿವಸ, ಅಲೈಲಾ
ಅದನ್ನು ಚೆಲ್ಲಾಡಿ ಮರಗಿಯನ್ನು ಅಲ್ಲಿ ಕುಕ್ಕೆ ಹೊರಟು
ಹೋದಳಲ್ಲ ? ಅಬ್ಬಬ್ಬ ಅವಳೇನು ಸಾಮಾನ್ಯಳು ಎಂದು ತಿಳಿ
ದಿಡೀರೋ ಕಾಣೆ, ಅದೆಲ್ಲಾ ಹೇಳುವುದಕ್ಕೆ ಹೋದರೆ ಶಾನೆ
ಶಾನೆ ಇದೆ ಎಂದಳು. ಆ ಸಮಯದಲ್ಲಿ ಸಾತಿಯು ಅತ್ತಿಗೆಯ
ನ್ನು ಕುರಿತು ಅತ್ತಿಗೆ, ಇಲ್ಲಿ ಯಾಕೆ ನಿಂತುಕೊಂಡೆಯ ?
ಉಪ್ಪಿಟ್ಟು ತಿನ್ನೋಣಬಾರೆ, ಅಮ್ಮನ ರಗಳೆ ಕಂಡೇ ಇದೆ, ಎಂ
ದಳು. ಸೀತಮ್ಮ ನು- ಸಾತಿ ಮುಖ ತೊಳೆದುಕೊಂಡು ಬಾ,
--------------------------------
   
    ಮಾಡಿದ್ದುಣ್ಣೋ ಮಹಾರಾಯ.        ೧೧೩
   
ಉಪ್ಪಿಟ್ಟನ್ನು ನಿನಗೆ ಕೊಡುತ್ತೇನೆ ಎಂದಳು. ಆ ಕೂಡಲೆ ಸಾ
ತಿಯು ಹಟ್ಟಿಗೆ ಓಡಿಬಂದು ರಂಗವಲ್ಲಿ ಪ್ರಸಾರದಲ್ಲಿ ಗಂಡನ
ಸಂಗಡ ಮಾತನಾಡುತ್ತಾ ನಿಂತಿದ್ದ ತಾಯಿಯನ್ನು ಕುರಿತು-
ತಿಮ್ಮು, ನೋಡೆ ಅತ್ತಿಗೆ ಅಳುತಾ ದೇವರ ಮನೆ ಜಗಲೀ
ಬಳಿಕೂತಿದಾಳೆ, ತಿನ್ನುವುದಕ್ಕೆ ಏನಾದರೂ ಕೊಡು ಎಂದರೆ
ಏನೂ ಇಲ್ಲ ಹೋಗು ಎಂದು ಅಪ್ಪಿಕೊಳ್ಳುತಾಳೆ, ಎಂದು
ಹೇಳಿದಳು.

ತಿಮ್ಮಮ್ಮ - ( ಗಂಡನನ್ನು ಕುರಿತು ) ನೋಡಿದಿರೋ ಅವಳ
    ಹಮೂಾರತನವನ್ನ ? ಮಗುಹೋಗಿ ತಿಂಡಿ ಕೇಳಿದರೆ ಹೀಗೇ
    ಅವಳು ಅಟ್ಟಿಕೊಳ್ಳುವುದು ? ಅದೇನುಮಾಡಿ
    ತು ಇವಳಿಗೆ ? ಸಾತಿಯನ್ನು ಕಂಡರೆ ವಿಷಾಕಕ್ಕು
    ತಾಳೆ, ಸಾರ್ಥಕವಾಯಿತು. ಬಯಸಿ ಬಯಸಿ ಬಾಳ
    ಹೊಕ್ಕರೆ ಬಡ್ಡಿಗಂಡ ದಡಿ ತಂದ ಎಂದಹಾಗೆ, ಹುಡು
    ಕಿ ಹುಡುಕಿ, ಹಳೇ ನಂಟತನ ನನ್ನದು ತನ್ನದು ಎ೦
    ದು ಮಾಡಿದ್ದಕ್ಕೆ ಈಗ ನನಗೆ ಬಂದಿದೆ.
ಸದಾಶಿವ-ಇನ್ನೂ ಹುಡುಗಿ ತಿಳಿಯದು. ಹೋಗಲಿಬಿಡು, ಸ್ವ
    ಮಾತಿಗೆ ಎಷ್ಟು ದೂರ ಬೆಳಿಸುವುದು ?
ತಿಮ್ಮಮ್ಮ- ನಾನೇ ಬೆಳಿಸುತ್ತೇನೆಯೇ ? ನನಗೇನುಬೇಕು? ಎತ್ತ
     ಲಾಗಾದರೂ ಹೋಗಲಿ, ನಾನು ಅವಳ ಮಾತಿಗೇ ಬರುವುದಿಲ್ಲ. ಅವಳು ಮಾತ್ರ ಹುಡುಗಿಯಾದಳು ನನ್ನ ಮಗು ದೊಡ್ಡ ಮುದುಕಿಯಾದಳು.
    ಹೀಗೆ ಮಾತನಾಡುತ್ತಾ ಇರುವಾಗ ಮಡೀ ಹರವುದಕ್ಕೆ
--------------------------------------
೧೧೪        ಮಾಡಿದ್ದುಣ್ಣೋ ಮಹಾರಾಯ.

ಸದಾಶಿವದೀಕ್ಷಿತ ಹಿತ್ತಲಕಡೆಗೆ ಹೋದನು. ಆಗ ಚಿ ಕ್ಕ
ಮನೆಯಲ್ಲಿದ್ದ ಮಹಾದೇವನು ಯಾವುದೋ ಕೆಲ
ಸಕ್ಕೆ ಈಚೆಗೆ ಬಂದನು. ಆಗ
ತಿಮ್ಮ - ಏನೋ ಮಹಾದೇವ, ನಿನ್ನ ಹೆಂಡತಿಯ ಪ್ರಭಾವನ
    ನ್ನೆಲ್ಲಾ ಕೇಳುತಾ ಒಳಗೇ ಸುಮ್ಮನೇ ಕೂತಿದ್ದು
    ಈಗ ಹೊರಗೆ ಬಂದೆ ?
ಮಹಾದೇವ-ನನಗೇನು ತಿಳಿಯುತ್ತೆ ಚಿಕ್ಕಮ್ಮ, ಬುದ್ದಿ ಕಲಿಸುವ
    ವಳು ನೀನು ಇರುವಾಗ ?
ತಿಮ್ಮ-ನಾನು ಇದೇನೆ, ನಾನು, ನಾನು ಒಂದು ಲಕ್ಷ್ಯವೆ ಅವ 
    ಳಿಗೆ ಸದ್ಯ ?
   
ಈ ಮಾತನ್ನು ಕೇಳಿ ಮಹಾದೇವನು ಹೊರಕ್ಕೆ ಹೋದನು.
ಈ ಮಾತಿನ ಬಾಲ ಆ ದಿವಸ ಸಾಯಂಕಾಲ, ರಾತ್ರೆ, ವರೆ
ಗೂ ಇದ್ದೇ ಇತ್ತು.

ಇನ್ನೊಂದು ದಿವಸ ಸೀತಮ್ಮ ನು ಎಂದಿನಂತೆ ಬೆಳಗ್ಗೆ
ಎದ್ದು ಬಾಗಿಲನ್ನು ಹಾರಿಸಿ ರಂಗವಲ್ಲಿ ಹಾಕುವಾಗ ರಂಗ
ವಲ್ಲಿ ಎಳೆಯನ್ನು ಸಂಣವಾಗಿ ಹಾಕದೆ ಎರಡು ಎಳೆಯನ್ನು
ಹಾಕಿ ಒಂದು ಚಿಕ್ಕದಾದ ಹಸೆಯನ್ನು ಇಕ್ಕಿ ಒಳಕ್ಕೆ
ಹೋದಳು. ತಿಮ್ಮ ನು ಇದನ್ನು ನೋಡಿ- ಇದೇನು
ದನಕ್ಕೆ ಬರೆ ಹಾಕಿದಹಾಗೆ ದಪ್ಪನಾಗಿ ಎರಡೆಳೆ ಹಾಕಿ ಇರು
ವುದು ? ಹಾಕಿರುವ ರಂಗವಲ್ಲಿ ಎಳೆಯನ್ನು ಯಾರಾದರೂ
ಎಡವಿ ಬೀಳುವಹಾಗೆ ಇದೆ. ನೋಡಲಾರೆ ಇದೇ ಪಟ್ಟಣ
ವಾಸದ ನಾಜೂಕು, ನಿನ್ನ ವರು ಹೀಗೇ ಕೆಲಸಾ ಕಲಿಸಿ
--------------------------

೧೧೫     ಮಾಡಿದ್ದುಣ್ಣೋ ಮಹಾರಾಯ.

ದಾರೋ ? ನಿಮ್ಮವ್ವ ಅಷ್ಟು ಜಾಣೆ, ನಿನಗೆ ಕೆಲಸಾ ಕಲಿಸಿರು
ವುದು ಹೀಗೆ ಅಲ್ಲವೆ ? ಶುಕ್ರವಾರದ ದಿವಸ ಅಕ್ಷಣವಾಗಿ ತುಂ
ಬಾ ನಾಜೂಕಾಗಿ ರಂಗವಲ್ಲಿ ಹಾಕುವವರಿಲ್ಲವೆ ? ಇದೆಲ್ಲಾ ಹೇಳಿ
ಕೊಡಬೇಕೆ ? ಎಷ್ಟು ದಿವಸ ಹೇಳಿದರೂ ಒಂದೇ. ಇನ್ನು ನಿನಗೆ
ಕೆಲಸ ಬರುವುದು ಯಾವಾಗ ? ಬಹು ಲಕ್ಷಣವಾಯಿತು. ನಾನು
ಹೇಳಿದರೆ ನನ್ನ ನಾಲಿಗೆಯ ಕೆಟ್ಟದಾಗುತ್ತೆ. ನನಗೇನು
ಬೇಕು, ಎತ್ತಲಾಗಾದರೂ ಹಾಳಾಗಿ ಹೋಗಲಿ, ನಾನು ಆಮಾ
ತಿಗೇ ಬರುವುದಿಲ್ಲ ನಮ್ಮವ್ವ. ನನಗೇನಾಗಬೇಕು ? ತುಂಡು
ಪಿಂಡ, ಅಲ್ಲಿಗೆ ತೀರಿತು, ಬಾಳಿ ಬದುಕುವವರು ಬೇಕಾದರೆ
ಕಲಿತುಕೊಳ್ಳಿ, ಇಲ್ಲದಿದ್ದರೆ ಬಿಡಿ, ಮೊನ್ನೆ ತಾನೆ ಅರೆಪಾವು
ರಾಗಿ ಹಾಕಿ ಹತ್ತು ಸೇರು ರಂಗವಲ್ಲಿ ಕೊಂಡುಕೊಂಡೆ. ಹೇಗೆ
ನೀನು ಎಲ್ಲವನ್ನೂ ಹಾಳುಮಾಡಿದರೆ ನಾವು ಬದುಕುವುದು ಹೇ
ಗೆ ? ನಿಮ್ಮಪ್ಪನ ಮನೇಗಂಟೆ, ಅಷ್ಟೊಂದು ರಂಗವಲ್ಲಿಯನ್ನು
ಹಾಳುಮಾಡಿದೆಯಲ್ಲ ? ಈಗ ಅದೆಲ್ಲವನ್ನೂ ಗುಡಿಸಿ ಎತ್ತು.
ಇಲ್ಲದಿದ್ದರೆ ಚೆನ್ನಾಗಿ ಸೋಟೆ ಸಿಗಿದುಬಿಟ್ಟನು. ನಾನು
ಯಾರೂಎಂತ ತಿಳಿದುಕೊಂಡಿದ್ದೀಯ ? ನಿಮ್ಮಪ್ಪನ ಮನೆ
ಯಿಂದ ಬರುವಾಗ ಒಂದು ಗಾಡಿ ರಂಗವಲ್ಲಿಯನ್ನು ಹೇರಿಸಿ
ಕೊಂಡು ಬಂದವಳಿಗಿಂತಲೂ ಹೆಚ್ಚಾಗಿ ದುಂಪಾದೂಳಿ ಮಾಡು
ತೀಯೆ. ಏನಾದರೂ ಹೇಳುವುದಕ್ಕೆ ಹೋದರೆ ಹಲ್ಲು ಕಿರಿದು
ಕೊಂಡು ಮಾತನಾಡುವುದಕ್ಕೆ ಬರುತ್ತೀಯೆ. ನಾಚಿಗೆ ಇಲ್ಲವೆ ?
ಮುಖ್ಯವಾಗಿ ನೀನೇನು ಮಾಡ್ತೀಯೆ, ನಮ್ಮ ಹಣೇಬರಹ,
--------------------------------------

೧೧೬         ಮಾಡಿದ್ದುಣ್ಣೋ ಮಹಾರಾಯ. 

ಸಿಕ್ಕುತಾ ಸಿಕ್ಕುತಾ ಇಂಥಾ ಹಾಳಮನೇ ಹೆಂಣು ಸಿಕ್ಕ
ಬೇಕೆ ?
ಪಾರ್ವತಮ್ಮ - ತಿಮ್ಮು ಯಾಕೆ ಹಾಳಮನೆ ಹೆಂಣು, ಹಾಗೆ
    ಹೀಗೆ ಎಂದು ಅವರನ್ನು ಬೈದೀಯೆ ? ಯಾವ ಕೆಲಸ
    ಹೇಗೆ ಮಾಡಬೇಕೊ ಹಾಗೆ ಮಾಡುಎಂದು ಹೇಳು.
    ಮಾಡುತಾಳೆ, ನೀನಾಡಿದ ಮಾತಿಗೆ ಅವಳು ಉಭಶುಭ
    ಎನ್ನುವುದಿಲ್ಲ,
ತಿಮ್ಮ-ನೀವು ಈ ಮಾತಿಗೆಲ್ಲಾ ಬರಬೇಡಿ, ನಾನು ತಕ್ಕ ಹಾಗೆ
    ಬುದ್ಧಿ ಕಲಿಸಿಬಿಟ್ಟೆನು. ನಿಮ್ಮ ವುಸ್ತಬಂದಿಯಿಂದಲೇ
    ಅವಳು ಹಮ್ಮು ಹತ್ತಿ ಸಾಯುತಾಳೆ. ಇನ್ನು ನನ್ನ
    ದೇನಿದೆ ಈ ಹಾಳಮನೇಲಿ ?
ಪಾರ್ವ-ಯಾಕೆ ಬಾಯಿಮಾತು ಬಾಯಲ್ಲಿದ್ದ ಹಾಗೆಯೇ ಹಾಳ
    ಮನೆ ಎಂದೀಯ ? ಅದೂ, ಹಾಳಾಗಬೇಡ ಇದೂ
    ಹಾಳಾಗಬೇಡ, ಧನ್ಮ ದೇವತೆ ಅಸ್ತು ಅಸ್ತು ಎನ್ನುತ್ತ
    ಲೇಇರುತ್ತೆ. ಒಂದುಗಳಿಗೆ ಇದ್ದ ಹಾಗೆ ಒಂದುಗಳಿಗೆ
    ಇರುವುದಿಲ್ಲ.
ತಿಮ್ಮ -ಇಲ್ಲದೆ ಇದ್ದರೆ ಎಲ್ಲಾ ಹೋಗಲಿ, ನೀವಿದ್ದೀರಲ್ಲ, ಒಳ್ಳೋ 
    ರು ಲೊಳೊರು. ಅಷ್ಮೆಸಾಕು. ಇನ್ನು ಎಷ್ಟು ಜನ ವಿರ
    ಬೇಕು. ಹೀಗೆ ಅತ್ತೆ ಸೊಸೆಯರು ಸ್ವಲ್ಪ ಹೊತ್ತು ಜಗ
    ಳವಾಡಿ ಸುಮ್ಮನಾದರು. ಗೌರೀಹಬ್ಬ ಬಂತು. ಮೊರದ
    ಬಾಗಿನಕ್ಕೆ ಅಣಿಮಾಡು ಎಂದು ತಿಮ್ಮಮ್ಮನು  ಸೊಸೆಗೆ
    ಹೇಳಿದಳು. ಆ ಹುಡುಗಿಯು ಮೈಸೂರಲ್ಲಿ ದೊಡ್ಡ
---------------------------------

        ಮಾಡಿದ್ದುಣ್ಣೋ ಮಹಾರಾಯ.     ೧೧೭
       
ದೊಡ್ಡವರ ಮನೆಗಳಲ್ಲಿ ಮೊರದ ಬಾಗಿನಕ್ಕೆ ಅಣಿಮಾ
ಡಿದ್ದನ್ನು ನೋಡಿದವಳು, ಅದರ ಹಾಗೆಯೇ ಇಲ್ಲಿ
ಯೂ ಮಾಡಬೇಕೇನೋ ಎಂದು ಅಚ್ಚ ಕನ್ನಾಗಿ ಆ
ಣಿಮಾಡಿದಳು. ಒಂದು ತೆಂಗಿನಕಾಯಿ ಸಾಲಲಿಲ್ಲ.
ಹೀಗೆ ಸಾಲಲಿಲ್ಲವೆಂದು ಅತ್ತೆಗೆ ಸೊಸೆ ಹೇಳಿದಳು.
ಆಗ -
ತಿಮ್ಮ- ಅಲ್ಲಕಣೆ ಗಯ್ಯಾಳಿಗೌಡಿ, ತೆಂಗಿನಕಾಯಿ ಇರಿಸು
    ಬಾಗಿನಕ್ಕೆ ಎಂದು ನಿನಗೆ ಯಾರೆ ಹೇಳಿದವರು ?
    ನಿನ್ನೆಡಯಲ್ಲಿ ಬೇಯುವವರು ಯಾರು ನಮ್ಮವ್ವ ,
    ಹೇಳದೆ ಕೇಳದೆ ಯಾವ ನಿಸೂರಿನಿಂದ ತೆಂಗಿನಕಾಯ
    ನ್ನು ಬಾಗಿನಕ್ಕೆ ಇರಿಸಿದರು ? ನಿನಗೆ ಯಾರೆ
    ಸ್ವತಂತ್ರ ಕೊಟ್ಟವರು ? ಹೊಟ್ಟೆಗೆ ಅನ್ನಾ ತಿನ್ನು
    ತೀಯೋ ಮಂಣ ತಿನ್ನುತೀಯೋ ? ಹೀಗೆಂದು ವಿಪ
    ರೀತವಾದ ಕೋಪದಿಂದ ಬಂದು ಒಂದು ತೆಂಗಿನಕಾ
    ಯನ್ನು ತೆಗೆದುಕೊಂಡು ತಿಮ್ಮಮ್ಮನು ಸೊಸೆಯ
    ತಲೆಯಮೇಲೆ ಕುಕ್ಕಿದಳು. ಪೆಟ್ಟು ಬಲವಾಗಿಯೇ
    ಬಿತ್ತು. ಆ ಹುಡುಗಿಯು ತಡೆಯಲಾರದೆ ಅಯ್ಯೋ ಎಂದು ಸ್ವಲ್ಪ ಗಟ್ಟಿಯಾಗಿ ಎಂದಳು. ಆಗ ತಿಮ್ಮ
    ಮೃ ನು- ಕೂಗುತೀಯ, ತೊಂಡೂರ ರಾಕ್ಷಸಿ ? ಈ
    ಗ ನಿನಗಾದ್ದೇನೆ, ಆಪತ್ತು ಬಂದು ಚಾಪೇಲಿ ಸುತ್ತಿ
    ಕೊಂಡು ಹೋಯಿತೇನೆ, ಗಯ್ಯಾಳಿಗೌಡಿ, ಎನ್ನು
    ತಾ ಸೀತಮ್ಮನ ಕೆನ್ನೆಯನ್ನು ಹಿಡಿದು ಚಿವುಟಿದಳು. ಆ
-----------------------------

೧೧೮        ಮಾಡಿದ್ದುಣ್ಣೋ ಮಹಾರಾಯ.

    ಹೊಡೆದಾಟದಲ್ಲಿ ಸೀತೆಯ ಮೂಗಿನಮೇಲೆಯೂ ಒಂದೇ
    ಟುಬಿತ್ತು. ಮೂಗಬಟ್ಟಿನ ಕಾವು ಮೂಗಿನ ಹೊ
    ಳ್ಳೆಗೆ ಚುಚ್ಚಿ ಕೊಂಡು ರಕ್ತ ಬಂತು. ಸೀತಮ್ಮನು ಯಾ
    ವಮಾತನ್ನೂ ಆಡದೆ ಒಳಕ್ಕೆ ಎದ್ದು ಹೋದಳು.
   
ಹೀಗೆಯೇ ಸ್ವಲ್ಪ ಮಾತಿಗೆಲ್ಲಾ ಸೀತಮ್ಮ ನನ್ನು ತಿಮ್ಮ
ಮ್ಮನು  ಹೀನಮಾನವಾಗಿ ಬೈಯುತಾ ಹಂಗಿಸುತಾ ಹೀಯ್ಯಾ
ಳಿಸುತಾ ಇದ್ದಳು. ಈರೀತಿಯಲ್ಲಿ ಕಾಲಕಳೆಯುತಾ ಇರು
ವಾಗ್ಗೆ, ವೆಂಕಮ್ಮ ಪಾರ್ವತಮ್ಮ ಈ ಇಬ್ಬರು ಮುದುಕ
ರಲ್ಲಿ ಯಾರಾದರೂ ಒಬ್ಬರು ಹಗಲಿನ ಅಡಿಗೆಯನ್ನು ಮಾಡಿ
ಇರಿಸುತಿದ್ದರು. ಒಂದೊಂದು ದಿವಸ ಆ ಮುದುಕಿಯರಲ್ಲಿ
ಯಾರಾದರೂ ಎದ್ದು ಬಡಿಸುವುದು, ಯಾವಾಗಲಾದರೂ
ತಿಮ್ಮಮ್ಮ ನೇ ಎದು ಬಡಿಸುವುದು, ಹೀಗೆ ಇತ್ತು. ತಿಮ್ಮ
ಮ್ಮ ನು ಸ್ವಂತವಾಗಿ ಅಡಿಗೆ ಮಾಡುತ್ತಿರಲಿಲ್ಲ. ಅಥವಾ ಸಮ
ಯತಪ್ಪಿ ಯಾವಾಗಲಾದರೂ ಇವಳು ಅಡಿಗೇ ಒಲೇ ಮುಂ
ದಕ್ಕೆ ಹೋದರೆ, ಅನ್ನ ಮುಗಳಕ್ಕಿಯೋ ಇಲ್ಲ ಮಿಡ್ಡೆಯೋ
ಆಗುತಿತ್ತು. ಹುಳಿಗೆ ಉಪ್ಪು ಹೆಚ್ಚು, ಎಸರಿಗೆ ಹುಳಿಹೆಚ್ಚು
ಒಗ್ಗರಣೆ ಇಲ್ಲದೆ ತಾಳಿದ, ಹೀಗೆಲ್ಲಾ ಮಾಡುತಿದ್ದಾಗ್ಯೂ,
ನಾಲ್ಕು ಜನ ಇವಳ ಸುತ್ತ ಕಲಸಕ್ಕೆ ನಿಂತುಕೊಂಡಿರಬೇಕು.
ಉಪ್ಪು ಇಷ್ಟುಹಾಕು, ಹುಳಿ ಅಷ್ಟುಹಾಕು, ಕಾರ ಇದಕ್ಕೆ
ಹೆಚ್ಚು ಅದಕ್ಕೆ ಕಡಮೆ, ಎಂದು ಹೇಳತಕ್ಕವರು ನಿಂತೇ
ಇರಬೇಕು. ಈ ಪೈಕಿ ಯಾರಾದರೂ ಅತ್ತ ಇತ್ತ ಅಡ್ಡಾಡಿ
ಹೋದರೆ, ಕೂಗಿಕೊಳ್ಳುವುದೆಷ್ಟೊ, ಆಲಿ ಅಬ್ಬರಿಸುವುದೆಷ್ಟೋ
-----------------------------------

        ಮಾಡಿದ್ದುಣ್ಣೋ ಮಹಾರಾಯ.     ೧೧೯

ಸಿಕ್ಕಿದವರನ್ನು ಸಿಕ್ಕಿದಹಾಗೆ ಅಂದುಆಡುವುದೆಷ್ಟೊ, ಹೀಗೆ
ಲ್ಲಾ ಮಾಡಿ ಕೊನೆಗೂ ಅಡಿಗೆಯನ್ನು ಕೆಡಿಸಿ ಯಾರಿಗೂ
ಅರೆಹೊಟ್ಟೆ ಅನ್ನವೂ ದೊರೆಯದಹಾಗೆ ಮಾಡುತಿದ್ದಳು,
ಮಧ್ಯೆ ಮಧ್ಯೆ ದೇವರಿಗೆ ನಿವೇದನವಾಗುವುದಕ್ಕೆ ಮುಂಚೆ ತನ್ನ
ಮಗಳನ್ನು ಕರೆದು ಬಡಿಸುತಿದ್ದಳು. ಕೊನೆಗೆ ಬರುತಬರು
ತಾ ರಾತ್ರಿಹೊತ್ತಿನ ಅಡಿಗೆಯನ್ನು ಸೀತಮ್ಮನ ಕೈಯಲ್ಲಿ
ಮಾಡಿಸಲು ಆರಂಭಿಸಿದರು. ಸೀತಮ್ಮನು ಅಡಿಗೆಯನ್ನು
ಬಹು ಚೆನ್ನಾಗಿ ಮಾಡುತಿದ್ದಳು. ಪಾಕ ಸ್ವಲ್ಪ ಕೆಟ್ಟು
ಹೋಗಿದ್ದರೂ ಸದಾಶಿವದೀಕ್ಷಿತನು ಹೊಟ್ಟೆ ತುಂಬ ಊಟಮಾ
ಡುತಿರಲಿಲ್ಲ. ಹೀಗೆ ಮಗನಿಗೆ ಅರೆಹೊಟ್ಟೆಯಾಗುವುದಲ್ಲಾ 
ಎಂಬ ಪೇಚಾಟದಿಂದ ಪಾರ್ವತಮ್ಮ ನು ದಿನವಹಿ ತಾನೇ ಅಡಿ
ಗೆಗೆ ನಿಲ್ಲುತಿದ್ದಳು. ಬರುಬರುತಾ ಪ್ರಾಯ ಬರುತ್ತೆಯೆ ?
ಮೊದಲೇ ಮುದುಕಿ, ಈಚೆಗೆ ಶಕ್ತಿ ಕಡಿಮೆಯಾಯಿತು. ವೆಂ
ಕಮ್ಮ ಈಕೆಗಿಂತಲೂ ವಯಸ್ಕಾದವಳು. ಆದರೂ ಈ ಇಬ್ಬ
ರು ಮುದುಕರು ಸವರಿಸಿಕೊಳ್ಳುತಿದ್ದರು. ತಿಮ್ಮಮ್ಮನ
ಕೆಲಸವಂತೂ ಕಂಡೇ ಇದೆ. ಮುದುಕರ ನೆರವಿಗೆ ಇನ್ನು
ಯಾರಿದಾರೆ ? ಸೀತಮ್ಮನ ಹೊಟ್ಟೆಯಲ್ಲಿ ಮಕ್ಕಳಾಗುವವರೆಗೆ
ಮುದುಕಿಯರು ಯಾರೂ ಇವಳ ಕೈಯಲ್ಲಿ ಊಟಮಾಡುವು
ದಿಲ್ಲ. ಈ ಕಾರಣದಿಂದ ಒಂದುಹೊತ್ತು ತಾವೇ ಮುದುಕಿ
ಯರು ಯಾರಾದರೂ ಮಾಡಿ ಇರಿಸುತಿದ್ದರು. ಪಾರ್ವತ
ಮ್ಮನಿಗೆ ರಾತ್ರೆಕಾಲದಲ್ಲಿ ಕಂಣು ಚೆನ್ನಾಗಿ ಕಾಣಿಸದಹಾಗೆ
ಆಗುತ ಬಂತು. ಈ ಕಾರಣದಿಂದ ರಾತ್ರೆ ಅಡಿಗೆಯನ್ನು ಸೀ
--------------------------------

೧೨೦        ಮಾಡಿದ್ದುಣ್ಣೋ ಮಹಾರಾಯ. 

ತಮ್ಮ ಮಾಡಲೆಂದು ಬಿಟ್ಟರು. ಈ ಹುಡುಗಿಯು ಮಾಡಿದ
ಅಡಿಗೆಯನ್ನು ಯಾರೂ ಅಲೆಗಳಿಯುತಿರಲಿಲ್ಲ.
    ಒಂದು ದಿನ-
ಸದಾಶಿವ- ನಮ್ಮ ಸೀತಮ್ಮ ಪಟ್ಟಣವಾಗದವಳು. ಐಶ್ಚರ್ಯ 
    ವಂತರ ಮನೆಯಲ್ಲಿ ಹುಟ್ಟಿದವಳು, ತೌರುಮನೆಯಲ್ಲಿ
    ಕೆಲಸ ಮಾಡುವುದಕ್ಕೆ ಜನವೇನೂ ಕಡಮೆಯಾಗಿಲ್ಲ.
    ಅವರೆಲ್ಲಾ ಕೂತುಕೊಂಡು ಇವಳ ಕೈಯಲ್ಲಿ ಕೆಲಸಾ
    ಮಾಡಿಸುತಾರೆಯೆ ? ಆದಾಗ್ಯೂ ಇವಳಿಗೆ ಅಡಿಗೆಕೆಲ
    ಸವೆಲ್ಲವನ್ನೂ ಕಲಿಸಿದಾರಲ್ಲ ?
ಪಾರ್ವ-ಅದೇ ನಾನು ಹೇಳುವುದು ? ಇದು ಒಂದೇ ಅಲ್ಲ, 
    ಮಗು. ಯಾವ ಕೆಲಸವನೂ ನಾಜೋಕಾಗಿ ಮಾಡು
    ತಾಳೆ, ಸೀತನಿಗೆ ಈ ಕೆಲಸ ಬರುತ್ತೆ ಆ ಕೆಲಸ
    ಬಾರದು ಎಂತ ಇಲ್ಲ ನೋಡು.
ತಿಮ್ಮ-ಹವುದು, ಹಾಗೇ ಆಗಲಿ. ನಿಮ್ಮ ಸೊಸೆಯ ಜಾ
    ಣೆ, ಹುಡುಕಿ ಹುಡುಕಿ ಜಾಣೆಯನ್ನೇ ತಂದುಕೊಂಡಿ
    ದ್ವೀರಷ್ಟೆ. ನಾನು ಹುಚ್ಚಿ, ಬೆಪ್ಪಿ, ಅಡಿಗೆ ಮಾಡ
    ಲಾರೆ, ಯಾವ ಕೆಲಸವೂ ಬಾರದು. ನನ್ನ ಅನ್ನುವು
    ದಕ್ಕೆ ಅಲ್ಲದೆ ಇಷ್ಟೂವೆ ? ನಿಮ್ಮ ಮನಸ್ಸಿಗೆ ಏ
    ನೇನು ಬರುತ್ತೊ ಎಲ್ಯಾ ಅನ್ನಿ, ಅನ್ನಿಸಿಕೊಳ್ಳುವು
    ದಕ್ಕೆ ನಾನು ಹುಟ್ಟಿರುವುದು. ನಮ್ಮ ಅಪ್ಪ ಯಾ
    ವಾಗ ಸತ್ತನೋ ಆಗಲೇ ಆಯಿತು. ಇನ್ನು ಅದೆ
    ಲ್ಲಾ ಯಾಕೆ ? ಸಿಕ್ಕಿದವರ ಕೈಯಲ್ಲಿ ಅನ್ನಿಸಿಕೊಂಡು
----------------------------------

        ಮಾಡಿದುಣ್ಣೋ ಮಹಾರಾಯ.        ೧೨೧
       
    ಆಡಿಸಿಕೊಂಡು ನಾನೂ ಇನ್ನು ಹಂಗಿನ ಕೂಳತಿನ್ನು
    ತೇನೆ. ಇನ್ನೂ ಎನೇನು ಆಗುತ್ತೋ ಆಗಲಿ.
ಸದಾ- ನೀನು ಯಾಕೆ ಇಲ್ಲದ ಮಾತನ್ನೆಲ್ಲಾ ಆಡಬೇಕು ?
    ಉಳ್ಳೀ ತಿಂದಮ್ಮನಿಗೆ  ಉಳುಕಿತು ಎಂದಾಗಾಯಿತು.
ತಿಮ್ಮ - ಹಾಗೇ ಆಗಲಿ, ಅವಳೇ ಮಾಡಲಿ. ನನಗೂ ಸರಾ
    ಗವೇ ಆಯಿತು. ನಾನೂ ಕಾಲುಚಾಚಿಕೊಂಡು ಊ
    ಟಾ ಮಾಡುತೇನೆ,
ಈ ಪ್ರವಾರ ಮಾತುನಡೆಯಿತು. ಸೀತಮ್ಮನೇ ರಾತ್ರೆ
ಕಾಲದಲ್ಲಿ ಅಡಿಗೇ ಮಾಡುವುದು, ಇಕ್ಕುವುದು, ಇರಿಸುವುದು,
ರಾತ್ರೆಯ ಮುಸರೆ ಮೊದಲಾದನ್ನೆಲ್ಲಾ ತೊಳೆದು ಉಪಕರಣ
ಗಳೆಲ್ಲವನ್ನೂ ತೊಳೆದು , ಇರಿಸಿ ಹಾಲಿಗೆ ಹೆಪ್ಪುಹಾಕಿ, ತರು
ವಾಯ ತಾನು ಊಟಮಾಡಿ ರಾತ್ರಿಯೇ ಕಸ ಮುಸುರೆ ಕೆಲಸ
ವನ್ನು ಮಾಡಿ ಮುಚ್ಚಿರಿಸುವುದನ್ನು ಮುಚ್ಚಿರಿಸಿ, ಮಲಗಿಕೊಳ್ಳು
ತಿದ್ದಳು. ಅವಳ ಒಪ್ಪ ಓರಣವನ್ನು ಅವಳಿಂದ ಇತರರು ಕಲಿ
ತುಕೊಳ್ಳುವಹಾಗೆ ಇತ್ತು. ಇವಳು ಮಾಡಿದ ಕೆಲಸವನ್ನು
ಎಲ್ಲರೂ ಮೆಚ್ಚುವಹಾಗೆ ಇತ್ತೇ ಹೊರತು ಯಾರೂ ಹೀಗಲ್ಲ
ಹಾಗೆ ಎನ್ನುವಂತೆ ಇರಲಿಲ್ಲ. ಇದೆಲ್ಲ ತಿಮ್ಮಮ್ಮನಿಗೆ ಸೈರಣೆ
ಇಲ್ಲ. ಏನಾದರೂ ತಪ್ಪು ಸಿಕ್ಕೀತೆ, ಅದನ್ನು ಕಂಡು ಆಹುಡು
ಗಿಯನ್ನು ನಾಲ್ಕು ಮಾತು ಅಂದೇನೆ ಎಂದು ಅತ್ತೆಯು ಕಾದು
ಕೊಂಡೇ ಇರುತಿದ್ದಳು. ಅದೇ ಕೆಲಸವಾಗಿ ಕೂತುಕೊಂಡು
ತಪ್ಪು ಕಂಡುಹಿಡಿಯಬೇಕೆಂಬದಾಗಿ ಕ್ಷೂಣತ ಎಣಿಸಿಕೊಂಡಿರು
ವವರಿಗೆ ಏನಾದರೂ ಒಂದು ತಪ್ಪುನೆಸ್ಸು ಸಿಕ್ಕಿಯೇ ಸಿಕ್ಕುವುದು
------------------------------------

೧೨೨        ಮಾಡಿದ್ದುಣ್ಣೋ ಮಹರಾಯ.

ಸಹಜವಾಗಿದೆ. ಯಾವುದ ಮಾಡಿದರೆ ಅದೇ ತಪ್ಪು, ಯಾವು
ದಬಿಟ್ಟರೆ ಅದೇ ತಪ್ಪು, ಹೀಗೆಲ್ಲಾ ಒಂದೊಂದು ಕೆಲಸದಲ್ಲಿ
ಯೂ ಆ ಹುಡುಗಿಯಮೇಲೆ ಆಕ್ಷೇಪಣೆ ಮಾಡುವುದು, ಹಂಗಿ
ಸುವುದು, ಮೂದಲಿಸುವುದು, ಸಮಯಸಿಕ್ಕಿದಾಗ ಸೀತೆಯ
ತರುಮನೆಯವರನ್ನು ಹೀಯಾಳಿಸುವುದು, ಇದೆಲ್ಲಾ ದಿನಗ
ಟ್ಟಲೇ ಚರ್ಯದಲ್ಲಿಯೇ ಸೇರಿ ಹೋಗಿತ್ತು. ಮಧ್ಯೆ ಮಧ್ಯೆ ಸಾಕಿ
ಯ ಚೇಷ್ಟೆಯನ್ನು ಸಹಿಸುವುದು ಬಹುಕಷ್ಟವಾಯಿತು. ಒಂದು
ದಿವಸ ಸಾಯಂಕಾಲ ಮಡಿವುಟ್ಟು ಕೊಂಡು ಒಲೆಯಮೇಲೆ ಅನ್ನ
ಕ್ಕೂ ಸಾರಿಗೂ ಎಸರ ಇರಿಸಿ ನೀರನ್ನು ಸೇದಿಕೊಂಡು ಬರು 
ವುದಕ್ಕೆ ಸೀತೆಯು ಹಿತ್ತಲಕಡೆಗೆ ಬಿಂದಿಗೆ ತೆಗೆದುಕೊಂಡು
ಹೋದಳು. ಇದನ್ನು ನೋಡಿಕೊಂಡಿದ್ದ ಸಾಕಿಯು ಕೋಣೆಗೆ
ಹೋಗಿ ಅನ್ನದ ಎಸರ ಇರಿಸಿದ ತಪ್ಪಲೆಗೆ ಒಂದು ಹಿಡಿ ಉಪ್ಪು
ನ್ನು ಹಾಕಿ ಬಿಟ್ಟು ಗುಟ್ಟಾಗಿ ಹೊರಟುಬಂದಳು. ಸೀತಮ್ಮನು
ಅದು ಹೀಗಾಯಿತೆಂದು ಅನುಮಾನ ಪಡುವುದಕ್ಕೂ ಮಾರ್ಗ
ವಿರಲಿಲ್ಲ. ಇವಳು ಒಂದು ಬಿಂದಿಗೆ ನೀರನ್ನು ಯಡದಸೊಂಟದ
ಮೇಲೆ ಇರಿಸಿಕೊಂಡು ಇನ್ನೊ೦ದು ಬಿಂದಿಗೆ ನೀರನ್ನು ಬಲಗೈ
ಯಲ್ಲಿ ಹಿಡಿದು ಕೋಣೆಗೆ ಬಂದು ಜಾಗ್ರತೆಯಾಗಿ ಅಡಿಗೇಮಾ
ಡಿದಳು. ಯಥಾ ಪ್ರಕಾರವಾಗಿ ಹೊಳೆಯಲ್ಲಿ ಸಂಧ್ಯಾವಂದನೆಯ
ನ್ನು ತೀರಿಸಿಕೊಂಡು ಬಂದಿದ್ದ ಗಂಡಸರೂ ಇತರರೂ ಊಟಕ್ಕೆ
ಎದ್ದರು. ಮಹಾದೇವನು ಮಡಿ ಉಟ್ಟುಕೊಂಡು ಸಂ
ಧ್ಯಾವಂದನೆ ಮಾಡಿ ದೇವರಿಗೆ ಮಂಗಳಾರ್ತಿಯನ್ನು ಮಾಡಿ
ತರುವಾಯ ಎಲ್ಲರಿಗೂ ಮಣೆಯನೂ ಎಲೆಯನ್ನೂ ಹಾಕಿ ಎಲೆ
----------------------------------

        ಮಾಡಿದ್ದುಣ್ಯ ಮಹಾರಾಯ.        ೧೨೩

 ಗೆನೀರನ್ನು ಚಿಮ್ಮಿಕ್ಕಿಸಿ ಎಲ್ಲರನ್ನೂ ಊಟಕ್ಕೆ ಎಬ್ಬಿಸಿ
 ದನು. ಸದಾಶಿವದೀಕ್ಷಿತ ಮೈಸೂರಿಂದ ಬಂದಿದ್ದ ಇಬ್ಬರು
 ನಂಟರು ೧೦ – ೧೫ ವರುಷದಿಂದ ದೀಕ್ಷಿತನ ಮನೆ
 ಯಲ್ಲಿಯೇ ಊಟಾ ಮಾಡಿಕೊಂಡಿದ್ದ ಉವಾದ್ರಿ ನಾರಪ್ಪಯ್ಯ
ಇವರೆಲ್ಲರೂ ಎಡೆಯಮೇಲೆ ಬಂದು ಕೂತುಕೊಂಡರು. ತಂದೆ
ಯ ಸಮೀಪದಲ್ಲಿ ಹಾಕಿ ಬಂದು ಎಲೆಮುಂದೆ ಕೂತು
ಕೊಂಡಳು. ಉಪ್ಪಿನಕಾಯಿ ಮೊದಲಾದನ್ನು ಬಡಿಸಿದ ತರು
ವಾಯ ಸೀತಮ್ಮ ನು ಅನ್ನವನ್ನು ತಂದು ಬಡಿಸಿದಳು. ತಂದೆ
ಯ ಹತ್ತರ ಕೂತಿದ್ದ ಸಾಕಿಯು ಇತರರು ಪರಿಷೇಚನೆಮಾಡಿ
ಪ್ರಾಣಾಹುತಿಯನ್ನು ಹಾಕಿಕೊಳ್ಳುವುದಕ್ಕೆ ಮುಂಚೆ- ಅಪ್ಪಾ
ಅನ್ನವೆಲ್ಲಾ ಉಪ್ಪಿನಕ್ಷಾರವಾಗಿದೆ, ಎಂದಳು. ದೊಡ್ಡವರು ಊ
ಟಕ್ಕೆ ಕೂತುಕೊಳ್ಳುವುದಕ್ಕೆ ಮುಂಚೆ ಹುಡುಗರು ಎಡೆಯನ್ನು
ಮುಟ್ಟುವ ಪದ್ಧತಿ ಇಲ್ಲ. ಇತರರು ಪರಿಷೇಚನೆಯನ್ನೇ ಮಾಡ
ದೆ ಇರುವಾಗ ಸಾಕಿಗೆ ಅನ್ನ ಉಪ್ಪಾಗಿದೆ ಎಂದು ತಿಳಿದದ್ದು
ಹೇಗೆ ? ಇದು ಹಾಗಿರಲಿ, ಅಂತೂ ಈ ಮಾತನ್ನು ಕೇಳಿದಕೂ
ಡಲೆ ಎಲ್ಲರೂ ಆಪೋಶನವನ್ನು ತೆಗೆದುಕೊಂಡು ಬಾಯಿಗೆ
ಪ್ರಾಣಾಹುತಿಯನ್ನು ಹಾಕಿಕೊಂಡರು. ಅನ್ನ ಎಲ್ಲಾ ಹೆಚ್ಚಾಗಿ
ಉಪ್ಪಾಗಿತ್ತು. ಎಲ್ಲರೂ ಅನ್ನವನ್ನು ಚೆಲ್ಲಿ ಎದ್ದು ಬಿಟ್ಟರು.
ಕೂಡಲೆ ಬೇರೆ ಅನ್ನವನ್ನು ಮಾಡಿ ಬಡಿಸಿದರು. ಹೀಗೆ ಮಾಡಿ
ದಳಲ್ಲಾ ಎಂದು ಊಟಕ್ಕೆ ಕೂತಿದ್ದ ಎಲ್ಲರಿಗೂ ಅಗ್ರಹಬಂತು.
ಸದಾ-  ಏನು ಸೀತಮ್ಮ, ಅಡಿಗೇ ಬಲ್ಲಜಾಣೆ ಎಂದು ಅಂದ
    ಳದಮೇಲೆ ಕೂರಿಸಿದರೆ ಚಕ್ಕೋತನ ಸೊಪ್ಪಿಗೆ ಏನು
-----------------------------------

೧೨೪         ಮಾಡಿದ್ದುಣ್ಣೋ ಮಹಾರಾಯ.

    ಮೊಗೆ ನೀರು ಎಂದು ಕೇಳಿದ ಸೊಸೆಯ ಹಾಗೆ
    ಯೇ ಆಯಿತಲ್ಲಾ!
ಉಪಾದ್ರಿ-ಏನೋ ಹುಡುಗಿ, ಅರಿಯದೆ ಉಪ್ಪು ಹಾಕಿರಬಹುದು, ಪಾರ್ವ- ಏನು ಸೀತೆ, ಅಷ್ಟು ಚೆನ್ನಾಗಿ ಅಡಿಗೆ ಮಾಡು
    ತಿದ್ದೆಯಲ್ಲ ? ಅನ್ನಕ್ಕೆ ಉಪ್ಪು ಹಾಕುತಾರೆಯೆ ? ಅಕ್ಕಿ
    ಯಲ್ಲಿ ಏನಾದರೂ ಉಪ್ಪು ಬೆರೆದಿತ್ತೆ ?
ಸೀತ- ಉಪ್ಪು ಬೆರೆದಿರಲಿಲ್ಲ. ಅಕ್ಕಿಯನ್ನು ನಾನು ಆರಕನ
    ಚಟ್ಟಿಯಲ್ಲಿ ಹಾಕಿ ತೊಳೆದು ಬಸೀಹಾಕಿ ತಪ್ಪಲೆಗೆ
    ಹಾಕಿದೆ. ಅನ್ನದೆಸರಿಗೆ ಉಪ್ಪುನೀರನ್ನೂ ನಾನು ಇರಿ
    ಸಲಿಲ್ಲ. ಹೊಳೆನೀರನ್ನೇ ಇರಿಸಿದೆ.
ತಿಮ್ಮ -ಹಾಗಾದರೆ ಇನ್ನು ಯಾರಾದರೂ ಬಂದು ಅನ್ನದ 
    ತಪ್ಪಲೆಗೆ ಉಪ್ಪುಹಾಕಿದರೋ ? ಬಿನ್ನಾಣವಾಗಿ ಮಾ
    ತನಾಡುತೀಯ ಮುಚ್ಚು ಬಾಯನ್ನ ತಿರುಗೆ, ಯಾ
    ರಿಗೂ ಅರೆಗಹೊಟ್ಟೆಯೂ ಇಲ್ಲದಹಾಗೆ ಮಾಡಿದೆಯಲ್ಲೆ,
    ರಟವಾಣಿ, ನಿನ್ನ ಹಾಳ ವಿದ್ಯಕ್ಕೆ ಬೆಂಕಿ ಹಾಕ.
    ಸೋಸೆ ಚೆನ್ನಾಗಿ ಅಗಿಗೇ ಮಾಡುತಾಳೆ ಎಂದು ಮಾ
    ವನವರು ಮೆಚ್ಚಿದರು. ಅಷ್ಟಕ್ಕೆ ಅವಳು ಗಗನಕ್ಕೆ
    ಏರಿದಳು. ಹಾಳಮನೇ ಹೆಂಣ ತಂದು ಇನ್ನು ಹಗ
    ರಣವಾಯಿತು. ನೀನು ಯಾಕೇ ಅನ್ನಕ್ಕೆ ಉಪ್ಪು ಹಾ
    ಕಿದ್ದು ? (ಎಂದು ಅಡಿಗೆ ಒಲೆಯಲ್ಲಿ ಉರಿಯುತಿದ್ದ
    ಕೊಳ್ಳಿಯನ್ನು ತೆಗೆದುಕೊಂಡು ಸೀತಮ್ಮನ ಬಲಗೈ
    ಮೇಲೆ ಎಳೆದಳು. )
------------------------------------

    ಮಾಡಿದ್ದುಣ್ಯ ಮಹಾರಾಯ.      ೧೨೫
   
ಸೀತಮ್ಮನು ಹುಟ್ಟಿದಾಗಿನಿಂದ ಅದುವರೆಗೆ ಇಂಥಾ ಶಿಕ್ಷೆ
ಯನ್ನು ಹೊಂದಿದ ಅಭ್ಯಾಸವಿರಲಿಲ್ಲವಾದ್ದರಿಂದಲೂ ಸುಖವಾಗಿ
ತೌರುಮನೆಯಲ್ಲಿ ಬೆಳೆದ ಹುಡುಗಿಯಾದ್ದರಿಂದಲೂ ತೋಳು
ಕೈ ಸಹಾ ವಿಶೇಷವಾಗಿ ಸುಟ್ಟು ಹೋಯಿತು. ಸೀರೆಯ ಸೆರ
ಗೂ ಸುಟ್ಟುಹೋಯಿತು. ಆ ಹುಡುಗಿಯು " ಹಾ " ಎಂದು
ಸ್ವಲ್ಪ ಗಟ್ಟಿಯಾಗಿ ಕೂಗಿದಳು, ಆಗ ತಿಮ್ಮಮ್ಮನು ಅತಿ
ರೋಷದಿಂದ ನಾಲಿಗೇ ಮಾಡುತೀಯ, ಶೂರ್ಪನಖಿ, ಎಂ 
ದು ಅದೇ ಕೊಳ್ಳಿಯ ಹಿನ್ನೆಯಿಂದ ಸೊಸೆಯ ತಲೆಮೇಲೆ
ಕುಕ್ಕಿದಳು. ಆ ನಿಟ್ಟಿಗೆ ಹುಡುಗಿಯು ಕುಕ್ಕರಿಸಿಕೊಂಡು
ಬಿಟ್ಟಳು. ಆಗ ಪಾರ್ವತಮ್ಮ ಬಂದು,- ಹೀಗೆ ಹೊಡೆ
ಯುತಾರೆಯೇನೆ, ತಿಮ್ಮು ? ಬೇಕೆಂದು ಅವಳು ಅನ್ನಕ್ಕೆ
ಉಪ್ಪುಹಾಕುತಾರೆಯೆ ? ಯಾಕೆ ಅವಳನ್ನು ಹೀಗೆ ಹೊಡೆದು
ಕೊಲ್ಲುತೀಯೆ ? ಎಲ್ಲಿಯಾದರೂ ಪುಣ್ಯವಂತರ ಮನೆಯನ್ನು
ಸೇರಿಕೊಂಡು ಬದುಕಿಕೊಳ್ತಾ ಇದ್ದ ಹೆಂಣನ್ನು ತಂದದ್ದು
ಅದನ್ನು ಜೀವಸಹಿತ ಕೊಲ್ಲುವುದಕ್ಕಾಯಿತು, ಹೀಗೆಂದು
ಆ ಮುದುಕಿಯು ಸೀತೆಯನ್ನು ಆ ಮಾರಿಯ ಎದುರಿನಿಂದ
ಒಂದು ಪಕ್ಕಕ್ಕೆ ಎಳೆದುಕೊಂಡಳು. ಸೀತಮ್ಮ ರಾತ್ರಿ ಊ
ಟವೇ ಮಾಡದೆ ಮಡಿಸೀರೆಯನ್ನು ಉಟ್ಟುಕೊಂಡು ಕೋ
ಣೆಯಲ್ಲಿಯೇ ಕೂತುಕೊಂಡಳು. ಅತ್ತೆಯ ತಲೆಮೇಲೆ
ಹೊಡೆದ ಪೆಟ್ಟಿನಿಂದ ಕೈಮೇಲಿನ ಬರೆಯ ಉರಿಯಿಂದ
ಆ ಹುಡುಗಿಗೆ ಜ್ವರ ಬಂತು. ನೆಲದಮೇಲೆಯೇ ರಾತ್ರಿಯೆಲ್ಲಾ
ಮಲಗಿದ್ದಳು. ಕೊಳ್ಳಿ ಬರೆಯ ಗಾಯ ಕೀತುಕೊಂಡು
--------------------------------

೧೨೬         ಮಾಡಿದ್ದುಣ್ಣೋ ಮಹಾರಾಯ.

ಹೆಚ್ಚಾಗಿ ಯಾತನೆಯಾಯಿತು. ವಾಸಿಯಾಗುವುದಕ್ಕೆ ಎಂದು
ಹತ್ತು ದಿವಸ ಬೇಕಾಯಿತು.

- ಈ ಹಗರಣವೆಲ್ಲಾ ಆದಮೇಲೆ ಒಂದು ದಿವಸ ಸೀತಮ್ಮ
ನು ರಾತ್ರೆ ಅತ್ತೆ ಮಲಗಿಕೊಂಡಮೇಲೆ ತಟ್ಟೆಯಲ್ಲಿ ಎಲೆ
ಅಡಿಕೆಯನ್ನು ಹಿಡಿದು ಮುಚ್ಚಿ ಕೊಂಡು ಗಂಡನ ಚಿಕ್ಕ ಮನೆಗೆ
ಹೋದಳು. ಅಲ್ಲಿ ಹೆಂಡತಿಯು ಗಂಡನಿಗೆ ಎಲೆ ಅಡಿಕೆಯ
ನ್ನು ಮಡಿಸಿಕೊಡುತ್ತಿರುವಾಗ ಗಂಡನ ಕೈ ಸೀತಮ್ಮನ ಬರೇ
ಗಾಯಕ್ಕೆ ತಗಲಿತು. ಅಗ ಸೀತಮ್ಮನು " ಹಾ ?” ಎಂದಳು.
ಮಹಾ-ಯಾಕೆ "ಹಾ?” ಎನ್ನುತೀಯೆ ? ಕೈ ಏನಾಗಿದೆ ?
ಸೀತ - ಗಾಯವಾಗಿ ಊದಿಕೊಂಡಿದೆ.
ಮಹಾ-ಎಲ್ಲಿ ಗಾಯವಾಯಿತು ? ಇಷ್ಟು ದೊಡ್ಡ ಗಾಯ
    ವಾಗುವಹಾಗೆ ಎಲ್ಲಿಯಾದರೂ ತಗಲಿತೆ? ಕಾರಣವೇನು?
ಸೀತ - ವಾಸಿಯಾಗುತಾ ಇದೆ.
ಮಹಾ-ಇಂಥಾ ಗಾಯಕ್ಕೆ ಕಾರಣವೇನು ?
ಸೀತ -ಏನೋ ತಗಲಿತು, ಮಹಾ-ಏನು ತಗಲಿತು ?
ಸೀತ -ಕೋಳ್ಳಿ ತಗಲಿತು.
ಮಹಾ-ಕೊಳ್ಳಿ ತಗಲಿಸಿಕೊಂಡು ಇಷ್ಟುಗಾಯವನ್ನು ಮಾಡಿ
    ಕೊಳ್ಳಬಹುದೆ ? ಪುಣ್ಯವಂತರ ಮನೆಯಲ್ಲಿ ಸುಖ
    ವಾಗಿ ಬೆಳೆದವಳು. ಇಲ್ಲಿ ಕೆಲಸಕ್ಕೆ ಹೊರಟರೆ ಕೈ
    ಮೈ ಸುಟ್ಟುಕೊಳ್ಳುವುದೇ.
ಅದುವರೆಗೂ ಸುಮ್ಮನಿದ್ದ ಸೀತಮ್ಮನಿಗೆ ಸ್ವಲ್ಪ ನಾ
-------------------------------

        ಮಾಡಿದ್ದುಣ್ಣೋ ಮಹಾರಾಯ.       ೧೨೭

ಚಿಕೆ, ದುಃಖ, ಈ ಮಧ್ಯೆ ಅತ್ತೆಯ ಭಯ ಇವೆಲನ್ಸ್ ಸೇರಿ
ಕೊಂಡು ಮುಖ ಒಂದು ಬಗೆಯಾಯಿತು. ಕಂಣಿನಲ್ಲಿ ನೀ
ರುಬಂತು. ಹಾಕಿದ್ದ ಬಾಗಿಲಕಡೆ ಹಿಂದೆ ತಿರುಗಿ ನೋಡುತಾ
ನೋಡುತಾ ಕಂಣನ್ನು ಒರಿಸಿಕೊಳ್ಳುತಾ ಸುಮ್ಮನಾದಳು.
ಮಹಾದೇವನು ಈ ಗಾಯವಾಗುವುದಕ್ಕೆ ಏನೋ ಹೆಚ್ಚಾದ
ಕಾರಣವಿರಬೇಕು, ತನ್ನ ಹೆಂಡತಿಯು ನಾಚಿಕೆಯಿಂದಲೂ ಭ
ಯದಿಂದಲೂ ಸುಮ್ಮನಾಗಿದಾಳೆ, ಎಂದು ಹೆಚ್ಚು ಮಾತನ್ನಾ
ಡದೆ ತಾನೂ ಮೌನವನ್ನು ಧರಿಸಿದನು. ಮಾರನೇ ದಿವಸ
ಗಂಡಸರು ಯಾರೂ ಮನೆಯಲ್ಲಿಲ್ಲದಿರುವಾಗ ಮೂರನೇ ಜಾ
ವದಲ್ಲಿ ತಿಮ್ಮಮ್ಮನು- ಎಲೆ ಸೀತೆ, ಆ ದೇನೆ ನಿನ್ನೆ ರಾತ್ರೆ
ಚಿಕ್ಕಮನೆಯಲ್ಲಿ ಬಹುವಾಗಿ ಮಾತನಾಡಿದಿರಿ ? ಗುಸಗುಸ
ಪಿಸಿಪಿಸಿ ಬಹು ಹೆಚ್ಚಾಗಿತ್ತು, ಯಾವ ಕೋಟೇ ಸಾಧನೆಮಾ
ಡುವುದಕ್ಕೆ ಗಂಡಹೆಂಡಿರಿಬ್ಬರೂ ಮಾತನಾಡಿದಿರಿ ? ಇಬ್ಬರೂ
ಸೇರಿ ನನ್ನನ್ನು ಮನೆ ಬಿಟ್ಟು ದಾಟಿಸಿಬಿಡಿ. ಅದು ಒಂದೇ
ನನಗೆ ಆಗಬೇಕಾದ ಪ್ರಾಯಶ್ಚಿತ್ತ. ಅದೂ ಆಗಲಿ; ಆ ಹೆಂ
ಣನ್ನೂ ಕರೆದುಕೊಂಡು ಹೋಗಿ ಎಲ್ಲಿಯಾದರೂ ಮುಳುಗಿಕೊಂ 
ಡು ಸಾಯುತ್ತೇನೆ. ನಾನು ಈ ಮನೆಯಲ್ಲಿರುವುದರಿಂದ ಹೌ
ದೋ ಅಲ್ಲವೋ ಇಷ್ಟೂವೆ ? ಆಪಾಪದ ಕೇಡು ಉಂಟೆ ?
ನಾನೂ ಕಂಡದ್ದರಲ್ಲಿಯ ಕಂಡೆ, ಇಂಥಾ ಗಂಡಹೆಂಡಿರನ್ನು
ಎಲ್ಲಿಯೂ ನೋಡಲಿಲ್ಲ. ಈ ತಾಟಕಿ ಸುಮ್ಮನೆ ಇರತಕ್ಕ
ವಳೆ ? ಗಂಡನಿಗೆ ಎಲ್ಲಾ ಬೋಧನೆಯನ್ನೂ ಮಾಡಿ ಮಾಡಿ
ತನ್ನ೦ತೆ ಮಾಡಿಕೊಂಡು ಅವನನ್ನು ಒಲಿಸಿಕೊಂಡಿದಾಳೆ, ಅ
-------------------------------

೧೨೮          ಮಾಡಿದ್ದುಣ್ಣೋ ಮಹಾರಾಯ.

ವಳಿಗೆ ಯಾವಯಾವುದು ಬಾರದು ? ಮೈಸೂರ ಸೂಳೆಯರು
ಸಾವಿರ ಜನ ಸತ್ತು ಇವಳೊಬ್ಬಳು ಹುಟ್ಟಿದಾಳೆ. ಅವಳಿಗೆ
ಯಾವುದು ಬಾರದು ? ನಾನೂ ಕಂಡಿದ್ದರಲ್ಲಿಯ ಕಂಡೆ
ಇಂಧವಳನ್ನು ಎಲ್ಲಿಯೂ ಅರಿಯೆ, ಅದೇನೆ ಮಾತಾಡಿದ್ದು
ಹೇಳು, ಇಲ್ಲದಿದ್ದರೆ ತಕ್ಕ ಶಿಕ್ಷೆ ಮಾಡಿಯೇನು, ಹೀಗೆಂದು
ಮನಸ್ಸು ಬಂದಂತೆ ಅಜ್ಜೆಗೆಟ್ಟು ಹೀನವಾದ ಮಾತುಗಳೆಲ್ಲ
ವನ್ನೂ ಆಡಿದ ಅತ್ತೆಯ ಮಾತಿಗೆ ಯಾವ ಉತ್ತರವನ್ನೂ
ಕೊಡದೆ ಸುಮ್ಮನೇ ಇರತಕ್ಕ ಸೀತನ ಅಭಾಸವಾಗಿತ್ತು. 
ಆದರೆ ಮೈಸೂರ ಸೂಳೆಯರಿಗೆ ಅತ್ತೆಯು ತನ್ನನ್ನು ಹೋಲಿ
ಸಿದ್ದೂ ತನ್ನ ಗಂಡನಾದ ಮಹಾದೇವನ ಮೇಲೆ ಆಕ್ಷೇಪಣೆ ಮಾ
ಡಿದೂ ಸಹಾ ಸೀತಮ್ಮ ನಿಗೆ ಬಹಳ ಅಸಮಾಧಾನವನ್ನು ಉಂ ದುಮಾಡಿತು. ಆಗ
ಸೀತ -ಅಮ್ಮ ಯಾಕೆ ಕೋಪಮಾಡಿಕೊಳ್ಳುತೀರಿ ? ನಾನು
    ಯಾರನೂ ಏನೂ ಅನ್ನಲಿಲ್ಲ.
ತಿಮ್ಮ-ಮಾತಿಗೆ ಮಾತಕೊಡುವ ಹಾಗಾದೆಯೇನೆ ? ಇದನ್ನು
    ನಿನ್ನ ಗಂಡ ಹೇಳಿಕೊಟ್ಟನೋ ? ಅವನನ್ನೂ ನಿನ್ನಂತೆ ಮಾಡಿಕೊಂಡೆ, ಇನ್ನೇನು ? ಮನೆ ನಿಮ್ಮದಾಯಿತು,
    ಬಾಗಿಲು ನಿಮ್ಮದಾಯಿತು, ನಮ್ಮಪ್ಪನ ಆಸ್ತಿಯೆ
    ಲ್ಲಾ ಚೆನ್ನಾಗಿ ನಿಮ್ಮದಾಯಿತು. ಇನ್ನು ನನ್ನತ
    ಲೆಗೆ ಮೂಗಳ ಬದೀ ಸುರಿದು ಆಚೆಗೆ ದಾಟಿಸುವುದು
    ಒಂದೇ ಉಳಿದಿದೆ. ಈ ಹಾಳ ಹೊಟ್ಟೆಗೆ ಹಾಕಿಕೊ
    ಳ್ಳದಿದ್ದರೆ ತೀರದು. ಇಷ್ಟು ತುಂಡು ಇಷ್ಟು ಪಿ೦
------------------------------

    ಮಾಡಿದ್ದುಣ್ಣೋ ಮಹರಾಯ.       ೧೨೯

    ಡ, ಎರಡರಲ್ಲಿರಿಸಿದ್ದೀರಿ. ಇನ್ನು ಮೇಲೆ ಅದನ್ನೂ
    ತಪ್ಪಿಸಿ ಆಚೆಗೆ ಅಟ್ಟಿಸುತ್ತಿರಿ. ಗಂಡನ ಸಂಗಡ
    ಏನೇನು ಹೇಳಿ ಏನೇನು ಮಾಡುವ ಹಾಗಿದ್ದೀಯೆ ?
    ಛೀ ! ಹೋಗಲಿ ಎಂದು ನಾನು ಸುಮ್ಮನಿದೇನೆ.
    ಇಲ್ಲದೇ ಇದ್ದರೆ ನಿಮ್ಮಾಟ ತಿಳಿಸಿಬಿಟ್ರೆನು.
ಸಾತಿ- ಅಮ್ಮ, ನಾನು ಅನ್ನಕ್ಕೆ ಉಪ್ಪ ಹಾಕಿದನಂತೆ,
    ಅತ್ತಿಗೆ ಗಂಡನ ಸಂಗಡ ಹೇಳುತಿದ್ದಳು. ನಾನು
    ಅವರ ಚಿಕ್ಕಮನೇ ಗಳುವಿನ ಅಟ್ಟದಮೇಲೆ ಕೂತು
    ಕೊಂಡು ಕೇಳುತಾ ಇದ್ದೆ ಕಣಮ್ಮ, ಇವಳು ಏ
    ನೇನೋ ನಮ್ಮೆಲ್ಲರನ್ನೂ ಬಯ್ಯುತಾ ಇದ್ದಳು.
ಸೀತ ನಾನು ಯಾರನ್ನೂ ಬಯ್ಯಲಿಲ್ಲ. ಹಾಗೆ ಆಡಿದ್ದರೆ
    ನನ್ನ ಬಾಯಲ್ಲಿ ಹುಳು ಸುರಿಯಲಿ.
ತಿಮ್ಮ - ಹಾಗಾದರೆ ನನ್ನ ಮಗು ಸುಳ್ಳ ಹೇಳುತ್ತೆಯೆ ?
    ನಿನ್ನ ಗಂಡನ ಸಂಗಡ ಏನತಾನೇ ಹೇಳಿದೆ, ನೀನು
    ಏನಮಾಡಬಲ್ಲೆ ಅವ ಏನಮಾಡಬಲ್ಲ ? ನಮ್ಮ ಸಾತಿ
    ಅನ್ನಕ್ಕೆ ಉಪ್ಪು ಹಾಕಿದಳೆ ? ಬಹು ಚೆನ್ನಾಯಿತು,
    ಅವಳು ಉಪ್ಪಹಾಕಿದಳು ಎಂದು ನೀನು ಕಂಡೆಯ,
    ಇಲ್ಲದಿದ್ದರೆ ಹೇಗೆ ಹೇಳಿದೆ ? ಉಂಟುಮಾಡಿಕೊಡು,
    ಇಲ್ಲವಾದರೆ, ನಾನು ಸುಮ್ಮನೇ ಬಿಡುವುದಿಲ್ಲ, ಕಿವಿ
    ಕಿತ್ತು ಪಡವಲಕಾಯಿ ಹೋಳಮಾಡಿಬಿಟ್ಟೇನು. ಯಾ
    ರು ಎಂದು ತಿಳಿದಿದಿಯೆ ನಿನ್ನ ಮನಸ್ಸಿಗೆ ಈ
    ಹೊತ್ತು ಅವರು ಬರಲಿ. ಎರಡರಲ್ಲಿ ಒಂದು ಉ೦
-------------------------------

೧೩೦              ಮಾಡಿದ್ದುಣ್ಣೋ ಮಹಾರಾಯ.

    ಟಾಗಬೇಕು. ಅರಿಯದ ಮಗುವಿನವುಲೆಯೇ ನಿನ್ನ
    ಚೋಡಿ ? ಅವಳೇನು ನಿನ್ನ ತಲೆಯಮೇಲೆ ಕಲ್ಲ
    ಎತ್ತಿಹಾಕಿರುವುದು. ಇವತ್ತು ಆದ್ದೆ ಲ್ಯಾ ಆಗಲಿ, ನಿ
    ನ್ನಿಂದ ನನಗೆ ಎತ್ತಿಬರುವ ಮಾಗಡೀಮಣಿ ಇಲ್ಲದಿದ್ದ
    ರೂ ಚಿಂತೆಯಿಲ್ಲ. ಇಂದು ಅದರಮೇಲೆ ಹೇಳಿದೆ
    ನಾಳೆ ನನ್ನ ಮೇಲೆಯೇ ಹೇಳುತ್ತೀಯ. ನೀನು ಯಾ ತಕ್ಕೆ ಹೇನುತೀಯೆ ? ಇಲ್ಲಿ ಬಾರೆ. ಇಲ್ಲಿ, ಮಾಡಿದ್ದ
    ಮಾಡಿ ಮೌನದಲ್ಲಿ ಕೂತೆ ಎಂತ, ಆಡುವಮಾತ
    ಆಡಿ ಹೊರಹೊರಗೇ ತಿರುಗುತೀಯ. ಅವರು ಬರ
    ಲಿ ಮನೆಗೆ, ಇಲ್ಲಿ ನಾನು ಇದ್ದದೊಂದು ಇಲ್ಲ
    ನೀನು ಇದ್ದದೊಂದು,
ಸೀತ - ( ಅತ್ತೆ ಎದುರಿಗೆ ಬಂದು ನಿಂತು ) ಅಮ್ಮ ಯಾವ
    ಮಾತನ್ನೂ ಆಡಲಿಲ್ಲಮ್ಮ,
ಸದಾ - (ಹೊರಗಿನಿಂದ ಮನೆಗೆಬಂದು) ಇದೇನು ನಮ್ಮ ಮನೇ 
    ಕೂಗಾಟಕ್ಕೆ ಕೊನೆಮಿತಿಯೇ ಇಲ್ಲವಲ್ಲ ?
ತಿಮ್ಮ-ಅಲ್ಲ, ನಮ್ಮ ಸಾತಿ ಆದಿನ ರಾತ್ರೆ ಅನ್ನಕ್ಕೆ ಉಪ್ಪ
    ಹಾಕಿದಳು ಎಂದು ಹೇಳಿದಾಳಲ್ಲಾ ನಿನ್ನ ಸೊಸೆ?
    ಸಾತೀನೇ ಕೇಳಿ ಬೇಕಾದರೆ, ನಾನಂತು ಕೆಟ್ಟವಳು,
    ಯಾರಿಗೂ ಬೇಡವಾದವಳು.
ಸಾತಿ- ಹೌದಪ್ಪ ನಿನ್ನೆ ರಾತ್ರೆ ಅತ್ತಿಗೆ ಗಂಡನ ಸಂಗಡ
    ಹೇಳುತಾ ಇದ್ದಳು.
ಸದಾ ನಿನಗೆ ಹೇಗೆ ತಿಳಿಯಿತು ?
---------------------------------

    ಮಾಡಿದ್ದುಣ್ಣೋ ಮಹರಾಯ.                ೧೩೧

ಸಾತಿ-ಅಂಣನ ಚಿಕ್ಕಮನೇ ಗಳುನಅಟ್ಟದಮೇಲೆ ಕೂತುಕೊಂ
    ಡು ನಾನು ಕೇಳುತಾ ಇದ್ದೆ, ನಿನ್ನೆ ರಾತ್ರೆ, ಆಗ ಅತ್ತಿಗೆ
    ನಮ್ಮೆಲ್ಲರನ್ನೂ ಬೈದಳು.
ಸದಾ- ಬೈದಮಾತಿರಲಿ, ನೀನು ಅನ್ನದ ತಪ್ಪಲೆಗೆ ಉಪ್ಪಹಾಕಿ
    ದಳು ಎಂದಳೆ ? ಅಷ್ಟೆ ಹೇಳು.
ಸಾತಿ- ಆದೇನೋ, ಗುನಗುಸ ಅನ್ನುತಿದ್ದಳು. ನನಗೆ ಚೆನ್ನಾ
    ಗಿ ಕೇಳಲಿಲ್ಲ.
ಸದಾ ಛೀ, ನೀನುಹಾಗೆ ಅವರ ಚಿಕ್ಕಮನೇ ಅಟ್ಟದಮೇಲೆ ಕೂ
    ತುಕೊಂಡು ಸಂಚುಕೇಳಿದ್ದು ಯಾಕೆ ? ಗಂಡ ಹೆಂಡಿರು
    ಮಲಗಿರುವಾಗ ನೀನು ಹಾಗೆಲ್ಲಾ ಹೋಗಬಹುದೆ ?
    ಅದು ಗಳುವಿನ ಅಟ್ಟ, ಬಿದರು ದೂರದೂರಕ್ಕೆ ಹಾಕಿದೆ.
    ಮೇಲೆ ಮಂಣುಹಾಕಿಲ್ಲ. ನಿನಗೆ ಹದಿನುರುವರುಷ ವಾಗುತ್ತಾ ಬಂತು. ಮೈನೆರೆಯಲಾದ ಹುಡುಗಿ ಹಾಗೆ
    ಲ್ಲಾ ಹೋಗಬಾರದು.
ತಿಮ್ಮ ಅದನ್ನೇ ಅನ್ನು ತಿರಿ, ಏನೂ ಅರಿಯದ ಹಸುಳೆಯನ್ನ.
    ಆ ಪೂತನಿ ಅಂದದ್ದೂ ಆಡಿದ ಎಲ್ಲಾ ಎಲ್ಲಿಯೋ
    ಹೊಯಿತು, ಆ ಹೆಂಣಿನಮಲೆಯ ದೋಷಾರೋಪಣೆ ?
ಸದಾ ಏನ ಅಂದದ್ದೂ ಆಡಿದ್ದೂ ಎಂದು ಇಲ್ಲದನ್ನೆಲ್ಲಾ
    ಕಟ್ಟಿಕೊಂಡು ಪೇಚಾಡುತೀಯೆ ? ತನಗೆ ಚೆನ್ನಾಗಿ
    ಕೇಳಲಿಲ್ಲವೆಂದು ಸಾತಿಯೇ ಹೇಳುತಾಳಲ್ಲ. ಗಂಡ
    ಹೆಂಡಿರು ಮಲಗಿರುವಾಗ ಅದಮೇಲೆ ಕೂತು ಈ
    ಐಲ ಹೆಂಣು ನೋಡಿದ್ದೂ ಸಂಚು ಕೇಳಿದ್ದೂ ಮೊದ
-----------------------------

೧೩೨        ಮಾಡಿದ್ದುಣ್ಣೋ ಮಹಾರಾಯ.

    ಲು ತಪ್ಪು, ಹಿಂದೆಮುಂದೆ ಆಲೋಚಿಸದೆ ಮಾತನಾಡ
    ಬಾರದು, ಆಡೋರು ಇಬ್ಬರು ನೋಡೋರು ಹಲ
    ವುಮಂದಿ. ಈ ಅವಿವೇಕದ ಮಾತನ್ನು ಕೇಳಿ ನೆರೆ
    ಹೊರೆಯವರು ಏನೆಂದಾರು ? ಸುಮ್ಮನಿರಿ, ಹೊ
    ಗಲಿ. ನಾಚಿಗೆ ಕೇಡು. ಯಾರಾದರೂ ಕೇಳಿದರೆ
    ನಕ್ಕಾರು.
ತಿಮ್ಮ -ನಗೂಹಾಗೆಯೇ ಆಯಿತು ನನ್ನ ಬಾಳು. ನನ್ನ ತಲೆ
    ಗೂ ನನ್ನ ಮಗುವಿನ ತಲೆಗೂ ಮೂಗಳ ಬೂದಿ ಹು
    ಯಿದು ಆಚೆಗೆ ದಾಟಿಸಿಯೇನೆ, ಎಂದು ಕಾದುಕೊ೦
    ಡಿದೀರಿ,
ತಿಮ್ಮ ಮೃನು ಹೀಗೆ ಎನ್ನುತಾ ಇರುವಾಗ ದೀಕ್ಷಿತನು
ಈ ಗಲಭೆಗೆ ಅಸಹ್ಯ ಪಟ್ಟುಕೊಂಡು ಮನೆಯಲ್ಲಿರದೆ ಪುನಃ
ಹೊರಕ್ಕೆ ಹೋದನು. ಗಂಡನು ನ್ಯಾಯವಾಗಿ ಹೇಳಿದನೆ ಸೊಸೆಯನ್ನು ವಹಿಸಿಕೊಂಡು ಹೇಳಿದನೆ ಎಂದು ಯೋಚಿಸಿ
ಕೊಳ್ಳದೆ, ತಿಮ್ಮಮ್ಮನು ಆ ದಿನವೆಲ್ಲಾ ಮನೆಯಲ್ಲಿ ವಿಶೇಷ
ವಾಗಿ ಆರ್ಭಟಿಸಿ, ಮನೆಯ ಜನರೆಲ್ಲರನ್ನೂ ಬೈದು, ಅಂದು,
ಹಣೆಹಣೆ ಚಚ್ಚಿ ಕೊಂಡು ರೋಷಾವೇಶದಲ್ಲಿ ತಲೆಯನ್ನೆಲ್ಲಾ
ಕದರಿಕೊಂಡು ಹೋಗಿ ಒಂದು ಮೂಲೆಯಲ್ಲಿ ಮಲಗಿಕೊಂ
ಡಳು, ಊಟಕ್ಕೆ ಏಳಲಿಲ್ಲ. ಸೀತಮ್ಮ ನು ರಾತ್ರಿ ಎಲ್ಲರಿಗೂ
ಅಡಿಗೆಮಾಡಿ ಬಡಿಸಿ ಅತ್ತೆ ಊಟಮಾಡಲಿಲ್ಲವಾದ ಕಾರಣ ತಾ
ನೂ ಊಟಮಾಡದೆ ಮಡಿಸೀರೆಯನ್ನು ಉಟ್ಟುಕೊಂಡು
ಕೂತುಕೂತು ಸಾಕಾಗಿ, ಅಡಿಗೇ ಒಲೇಮುಂದೆಯೇ ನೆಲದ
--------------------------

         ಮಾಡಿದ್ದುಣ್ಣೋ ಮಹಾರಾಯ.   ೧೩೩

ಮೇಲೆ ಮಲಗಿಕೊಂಡಳು. ಸೀತೆಗೆ ನಿದ್ರೆ ಬರಲಿಲ್ಲ. ಬೆಳಗಿನಿಂದ
ಸಾಯಂಕಾಲದವರೆಗೂ ಕೆಲಸ ಮಾಡಿ ದಣಿದದ್ದು ಒತ್ತಟ್ಟೆ,
ಮುನ್ನಾದಿನ ರಾತ್ರೆ ಸಾತಿಯು ಅಟ್ಟದಮೇಲೆ ಕೂತು ತಾ
ವು ಗಂಡಹೆಂಡಿರು ಮಲಗಿದ್ದದನ್ನು ನೋಡಿ ಹಾದಿರಂಪ
ಬೀದಿರಂಪ ಮಾಡಿದಳಲ್ಲ ಎಂಬ ನಾಚಿಗೆಯೊತ್ತಟ್ಟೆ, ಹೀಗೆ
ತನಗೆ ಮಾನಹೋಯಿತಲ್ಲಾ ಎಂಬ ವ್ಯಸನ ಒತ್ತಟ್ಟೆ, ಹಸಿ
ದಹಾವಿನಹಾಗೆ ಮಲಗಿಕೊಂಡಿರುವ ಅತ್ತೆ ಬೆಳಗಾದಮೇಲೆ
ಇನ್ನೇನು ಮಾಡುತಾಳೆಯೋ ಎಂಬ ಭಯ ಒತ್ತಟ್ಟೆ, ಹೊ
ಟ್ಟೆಯಲ್ಲಿ ಅನ್ನ ವಿಲ್ಲದ ಸಂಕಟ ಒತ್ತಟ್ಟೆ, ಹೀಗೆ ಬಗೆಬಗೆಯಾ
ದ ಚಿಂತೆಯಿಂದ ಸೀತನಿಗೆ ನಿದ್ರೆ ಬಾರದೆ ಹೋಯಿತು. ಇ
ದೂ ಅಲ್ಲದೆ ತೌರುಮನೆಯಲ್ಲಿದ್ದಾಗ ಪಟ್ಟ ಮಂಚದಮೇಲೆ
ಸುಪ್ಪತ್ತಿಗೆ ಹಾಕಿ ಅದರಮೇಲೆ ಮಲಗಿಕೊಂಡು ಸುಖವಾಗಿ
ನಿದ್ರೆ ಮಾಡುತಿದ್ದ ಸುಕುಮಾರಿಯು ಆ ಮುರಡು ನೆಲದ
ಮೇಲೆ ಮಲಗಿಕೊಂಡರೆ ನಿದ್ರೆ ಹೇಗೆ ಬಂದೀತು ?

ಬೆಳಗಾದಮೇಲೆಯೂ ಯಾರು ಎಬ್ಬಿಸಿದರೂ ಏಳದೆ
ಮಲಗಿದ್ದ ಮಹಾಮಾಯಿಯಾದ ತಿಮ್ಮಮ್ಮನು ಮಧ್ಯಾಹ್ನದ
ಮೇಲೆ ಎದ್ದು ತಾನೇ ಮಡಿ ಉಟ್ಟುಕೊಂಡು ಒದ್ದೆ ಉಟ್ಟು
ಬಚ್ಚಲಮನೆಯಲ್ಲಿ ತಾನೇ ಗೊಜ್ಜು ಅನ್ನವನ್ನು ಬೇರೆ
ಮಾಡಿಕೊಂಡಳು. ಯಾರಸಂಗಡ ಮಾತನಾಡದೆ ದುಮು 
ದುಮ ಗುಟ್ಟುತಾ ಹಾರಾಡುತಾ ಇದ್ದ ಈ ದುಮಕ್ಕನು 
ಪಾತ್ರೆಗಳನ್ನು ಕೆಳಗೆ ಕುಕ್ಕುತಾ ಎಲೆಯನ್ನು ಹಾಕಿಕೊಂಡು
ಮಗಳನ್ನು ಕುರಿತು-ಎಲೆಹೆಂಣೆ, ಸಾತಿ, ಬಾ ನನ್ನಮ್ಮ ಬಾ,
--------------------------------

೧೩೪         ಮಾಡಿದ್ದುಣ್ಣೋ ಮಹರಾಯ.

ಎಂದು ಒಂದು ಪಿಡಿಚೆ ಗೊಜ್ಜು ಅನ್ನವನ್ನು ಅವಳಿಗೆ ಕೊ
ಟ್ಟು ತಾನು ಊಟಾನಾಡಿ ವಾತ್ರೆಗಳನ್ನು ತೊಟ್ಟಿಯಲ್ಲಿ ಇರಿ
ಸಿ ನೆರೆಮನೆಗೆ ಹೋಗಿ ಮನೆಯಲ್ಲಿ ಮಾತೆಲ್ಲವನ್ನೂ ಮರಕ
ಳಿಸಿ ಆಕ್ಷೇಪಣೆ ಮಾಡುತಾ ಹರಟೇ ಬಡಿಯುತಾ ಕೂ
ತುಕೊಂಡಳು.
             ===

              ೮ ನೇ ಅಧ್ಯಾಯ
             
ಕೆಲವು ದಿವಸಗಳಲ್ಲಿಯೇ ಋಷಿಪಂಚಮಿ ಬಂತು, ಫಾ
ರ್ವತಮ್ಮ ವೆಂಕನ್ನು ಇವರಿಬ್ಬರಿಗೂ ವ್ರತವಾದ ಕಾರಣ ಇವ
ರು ಯಾರೂ ಹೊತ್ತಿಗೆಮುಂಚೆ ಮಡಿ ಉಟ್ಟು ಅಡಿಗೇಮಾ
ಡಲು ಆಗಲಿಲ್ಲ. ಹೊಳೆಗೆ ಈ ಮುದುಕರು ಇಬ್ಬರೂ ಹೋ
ದರು. ವ್ರತಾಂಗವಾಗಿ ೩೬೦ ಸಾರಿ ಮೃತ್ತಿಗಾಶೌಚ, ೩೬೦
ಸಾರಿ ದಂತಧಾವನ, ೩೬೦ ಸಾರಿ ಸ್ನಾನಮಾಡುವುದು,
ಇದೇ ಮೊದಲಾದನ್ನು ತೀರಿಸಿಕೊಂಡು ಮನೆಗೆ ಬರಲು
ಸಾಯಂಕಾಲ ನಾಲ್ಕು ಗಂಟೆಯಮೇಲೆ ಹಿಡಿಯಿತು.
ಈ ಮುದುಕಿಯರಿಗೆ ಆ ದಿವಸ ಉಪವಾಸವಾದರಿಂದ
ಇವರು ಹಗಲಿನ ಅಡಿಗೆ ಮಾಡಲಿಲ್ಲ. ನೇಮದವರು
ಯಾರೂ ಇಲ್ಲವಾಗಿ ಸೀತಮ್ಮ ನೇ ಮಧ್ಯಾಹ್ನದ ಅಡಿಗೇ ಕೆ
ಲಸಕ್ಕೆ ನಿಂತುಕೊಂಡಳು. ಆ ದಿವಸ ಮನೆಗೆ ಯಾರೋ
ನಂಟರು ಕೆಲವು ಅಭ್ಯಾಗತರು ಸಹಾ ಬಂದಿದ್ದರು. ಆ ದಿ
ವಸ ಸದಾಶಿವದೀಕ್ಷಿತನು-ಸೀತಮ್ಮ, ನಿನ್ನೆ ವಿನಾಯಕಚೌತಿ
----------------------------

        ಮಾಡಿದ್ದುಣ್ಣೋ ಮಹರಾಯ      ೧೩೫

ಯಾಯಿತು. ಕಡುಬಿನ ದಾನ ಕೊಡುವುದಕ್ಕೆ ಸರಿಯಾದ
ಬ್ರಾಹ್ಮಣರು ಸಿಕ್ಕಲಿಲ್ಲ. ಈ ದಿವಸ ಬ್ರಾಹ್ಮಣರು ತಾವಾಗಿ
ಯೇ ಬಂದಿದ್ದಾರೆ. ಕರಿಗಡಬನ್ನು ಮಾಡು, ಮೋದಕದಾನ
ಕೊಡೋಣ. ಈ ದಿನವೂ ಹಬ್ಬವೇ, ದೇವರ ನೈವೇದ್ಯಕ್ಕೆ
ತೋಯಿ ಎಸರು ಪಾಯಸ ಚಿತ್ರಾನ್ನ ಮಾಡು, ಎಂದನು.
ಇಷ್ಟರಮಟ್ಟಿನ ಅಡಿಗೆಯನ್ನು ತಾನು ಮಾಡಬಲ್ಲಳು ಎಂಬ
ನಂಬಿಕೆ ಮಾವನವರಿಗೆ ಇದೆಯಲ್ಲ, ಅವರ ಅಪ್ಪಣೆಯಂತೆ
ಅಡಿಗೆಯನ್ನೆಲ್ಲಾ ಜಾಗ್ರತೆಯಾಗಿಯೂ, ರುಚಿರುಚಿಯಾಗಿಯೂ
ಮಾಡಬೇಕು ಎಂಬ ಕೌತುಕದಿಂದ, ಸೀತಮ್ಮನು ಮೇ
ಲೋಗರವನ್ನು ಹೆಚ್ಚಿ ಇರಿಸಿ, ತೆಂಗಿನಕಾಯನ್ನು ಒಡೆದು
ತಾನೇ ತುರಿದು ಕಾಯತುರಿಯನ್ನು ಚೊಕ್ಕವಾಗಿ ಒಂ
ದು ಮರದ ಮರಗಿಯಲ್ಲಿ ಹಾಕಿ, ಬೆಲ್ಲದ ಅಚ್ಚನ್ನು
ತಾನೇ ತೆಳ್ಳಗೆ ಹೆರೆದು ಆ ಹುಡಿಯನ್ನು ಬೇರೆ ಮರಗಿ
ಯಲ್ಲಿರಿಸಿ ಎಲ್ಲದರಮೇಲೂ ಮುಚ್ಚಿ ಇರಿಸಿದಳು. ಸಾತಿಯು
ಅತ್ತಿಗೇ ಸಂಗಡ ತಾನೂ ಅಡಿಗೆಮಾಡಬೇಕೆಂದು ಒಳಕ್ಕೂ
ಹೊರಕ್ಕೂ ಓಡಿಯಾಡುತಾ ಸೀತಮ್ಮ ಮಡಿಗೆ ಹೋದನ್ನು
ನೋಡಿಕೊಂಡು ಇದ್ದು, ಅವಳು ಇರಿಸಿದ್ದ ತೆಂಗಿನಕಾಯಿತುರಿ
ಯನ್ನೂ ಬೆಲ್ಲದ ಹುಡಿಯನ್ನೂ ಬರಿಸಿ ಅದನ್ನು ಎಣ್ಣೇ
ಬಾಣಲೆಗೆ ಹಾಕಿ ಹುರಿಯುತ್ತೇನೆಂದು ಪ್ರಯತ್ನ ಮಾಡುತಿ
ದಳು. ಅಷ್ಟರಲ್ಲಿ ಮಡೀ ಉಟ್ಟುಕೊಂಡು ಒಳಕ್ಕೆ ಸೀತೆ
ಯು ಬಂದುನೋಡಿ, ಸಾಕಮ್ಮ, ಮಡೀ ಉಟ್ಟುಕೊಳ್ಳದೆ
ಇದೆಲ್ಲವನ್ನೂ ಮುಟ್ಟಬಾರದು, ಕಾಯಿ ಬೆಲ್ಲವನ್ನು ಈಗಲೇ
------------------------------

೧೩೬         ಮಾಡಿದ್ದುಣ್ಣೋ ಮಹರಾಯ

ಯಾಕ ಬೆರಿಸಿದೆ ? ದೇವರ ನಿವೇದನ ಮಾಡಿ ದಾನ ಕೊಡ
ಬೇಕೆಂದು ಮಾನಯ್ಯ ಹೇಳಿದಾರೆ, ಎಲ್ಲವನ್ನೂ ಮಡಿಯಲ್ಲಿ
ಮಾಡಬೇಕು, ಎಂದಳು. ಸಾತಿಯು– ಹಾಗಾದರೆ ನೀನೇ ಅಡಿಗೆ
ಮಾಡಿಕೊ ಎನ್ನುತಾ ಹೊರಕ್ಕೆ ಹೊರಟುಹೋ
ದಳು. ಸೀತೆಯು ಅಡಿಗೆಯನ್ನೂ ಭಕ್ಷ್ಯವನ್ನೂ ಮಾಡಿಪೂ
ರೈಸಿದಳು. ಗಂಡಸರೆಲ್ಲಾ ಮಡೀ ಉಟ್ಟು ಆನ್ಹಿಕಗಳನ್ನೂ
ತೀರಿಸಿಕೊಂಡು ಊಟಕ್ಕೆ ಎಲೆ ಹಾಕಿಕೊಂಡರು. ಮಹಾ
ದೇವನು ದೇವರಪೂಜೆ ಮೊದಲಾದವನ್ನು ಪೂರೆಸಿದನು.
ಸದಾಶಿವದೀಕ್ಷಿತನು ಮೋದಕದಾನವನ್ನು ವಿನಾಯಕ ಪ್ರೀತ್ಯ
ರ್ಥವಾಗಿ ಕೊಟ್ಟು ಎಡೆಮಾಡಿ ಬ್ರಾಹ್ಮಣರನ್ನು ಕೂರಿಸಿ
ಎಲ್ಲವನ್ನೂ ಬಡಿಸಿದ ತರುವಾಯ ಎಲ್ಲರಿಗೂ ಆಪೋಶನವನ್ನು
ಹಾಕಿ ತಾನೂ ಊಟಕ್ಕೆ ಕೂತುಕೊಂಡನು. ಅಡಿಗೆ ಬಹು
ಚೆನ್ನಾಗಿದೆ ಎಂದು ಹೇಳುತಾ ಎಲ್ಲರೂ ಭೋಜನ ಮಾಡು
ತಿದ್ದರು. ಆಗ ಸೀತೆಯು ಕರಿಗಡಬನ್ನು ತಂದು ಎಲ್ಲರಿ
ಗೂ ಬಡಿಸಿದಳು. ಊಟಕ್ಕೆ ಕೂತಿದ್ದವರು ಅದನ್ನು ಕಚ್ಚಿ
ಅಗಿಯಲು ಆರಂಭಿಸಿದರು. ಎಲ್ಲರ ಹಲ್ಲ ಗರಗರಗುಟ್ಟಿ
ಹೋಯಿತು. ಹೂರಣದಲ್ಲಿ ತುಂಬಾ ಮರಳು ಬೆರೆದಿತ್ತು.
ಅದನ್ನು ತಿನ್ನುವುದು ಎಲ್ಲರಿಗೂ ಅಸಾಧ್ಯವಾಯಿತು. ವಿಶಿ
ಷ್ಟರೂ ಕರಿಗಡಬನ್ನು ಚೆಲ್ಲಿಬಿಟ್ಟರು. ಸೀತೆಯ ಸೋದರ
ಮಾವನೂ ಆ ದಿವಸ ಊಟಕ್ಕೆ ಕೂತಿದ್ದನು. ಆತನು-
ಏನು ಸೀತಮ್ಮ, ಇಷ್ಟೊಂದು ಮರಳನ್ನು ಹನುಮಂತನ
ಕೈಯಲ್ಲಿ ಸಮುದ್ರದಿಂದಲೇ ತರಿಸಿದೆಯ ? ಎಂದು ಕುಚೇ.
---------------------------------

        ಮಾಡಿದ್ದುಣ್ಣೋ ಮಹರಾಯ.      ೧೩೭

ದ್ಯವಾಗಿ ಮಾತನಾಡಿದನು. ಹೂರಣದಮೆಲೆ ಮುಚ್ಚದೆ
ತೆಗೆದು ಇರಿಸಿದ್ದೆಯ ? ಮುಂಣು ಏನಾದರೂ ಉದುರಿತೆ ?
ಇಷ್ಟು ಮರಳು ಇರುವುದಕ್ಕೆ ಕಾರಣವೇನು ಸೀತಮ್ಮ ?
ಎಂದು ಮಾವನವರು ಕೇಳಿದರು. ಆಗ ಯಾವ ಮಾತಿಗೂ
ಕುಂದಣದ ಬಾಯಿ ಓಡು ಮುಂದೆಮುಂದೆ ಎಂದು ಸಾತಿಯು-
ಅಪ್ಪಾ ಹಾಗಲ್ಲ, ಇಳಿಗೆ ಮಣೆಯಲ್ಲಿ ಕಾಯುತುರಿ ಇರಿಸಿದ್ದಳು,
ಅತ್ತಿಗೆ ಅದನ್ನು ಮರಗಿಗೆ ಹಾಕುವಾಗ ಅದೆಲ್ಲಾ ಕೆಳಗೆ ಚೆಲ್ಲಿ
ಹೋಯಿತು. ಉಪಗರಣೆ ತೊಳೆಯುವುದಕ್ಕೆ ಸಂಣಮರಳು
ಅಲ್ಲಿ ತಂದು ಹಾಕಿತ್ತು. ಅದಕ್ಕೆ ಕಾಯಿತುರಿ ಬಿದ್ದುಬಿಟ್ಟಿತು.
ಅದನ್ನು ಮೇಲೆಮೇಲೆಯೇ ಬವರಿಬವರಿ ಎತ್ತಿಕೊಂಡು ಬೆಲ್ಕಾ
ಹಾಕಿ ಬೆರೆಸಿದಳು. ಬೇಡಕಣೆ ಮರಳು ಇದೆ ಎಂದು
ಹೇಳಿದೆ, ಅವಳು ನನ್ನನ್ನು ಅಟ್ಟಿಕೊಂಡಳು, ಹೀಗೆ ಹೇಳಿ
ದಳು. ಆಗ ಸದಾಶಿವದೀಕ್ಷಿತನು-ಆ ಹಾಳ ಕಾಯಿತುರಿಹೋದ
ರೆ ಹೋಯಿತು ಬೇರೆ ಕಾಯಿ ಒಡೆದು ತುರಿಯಬಾರದಾಗಿತ್ತೆ ?
ಎಂದು ಬಹಳ ಅಸಮಾಧಾನ ಪಟ್ಟುಕೊಂಡನು. ಆಗ ಸೀತ
ಮ್ಮನು ಏನ ಮಾತನಾಡಿಯಾಳು ? ತಲೆ ಬಗ್ಗಿಸಿಕೊಂಡು
ಗೋಡೆಕಡೆ ಮುಖವನ್ನು ಮಾಡಿಕೊಂಡು ಸುಮ್ಮನೆ ನಿಂತು
ಕೊಂಡು ಇದ್ದಳು. ಅತ್ತೆ ಇನ್ನೇನು ಶಿಕ್ಷೆ ಮಾಡುತಾಳೊ
ಎಂಬ ಹೆದರಿಕೆಯಿಂದ ಯೋಚಿಸುತಿದ್ದಳು. ಹಾಗೆ ಎಂದಹಾ
ಗೆಯೇ ಹಗರಣಗಾತಿಯಾದ ತಿಮ್ಮಮ್ಮ ಕೋಣೆಗೆಬಂದು
ಸೊಸೆಯನ್ನು ನೋಡಿ- ಕಾಯಿಹೂರಣಕ್ಕೆ ಮರಳನ್ನು ಬೆರೆ
ಯಿಸುವುದಕ್ಕೆ ನಿನಗೆ ಬುದ್ದಿ ಇತ್ತೇ ಇಲ್ಲವೇ ? ಮಾಡಿದ
--------------------------------

೧೩೮         ಮಾಡಿದ್ದುಣ್ಣೋ ಮಹರಾಯ.

ಪದಾರ್ಧವೆಲ್ಲಾ ಹಾಳಾಯಿತಲ್ಲ. ನಿಮ್ಮಪ್ಪನಮನೆಯಿಂದ ತಂ
ದಿದ್ದೆಯ ಸಾಮಾನನ್ನು ? ಆ ಕಡಬನ್ನೆಲ್ಲಾ ನೀನೇ ತಿನ್ನು.
ಅದೆಲ್ಲವನ್ನೂ ನೀನು ತಿಂದು ಮುಗಿಸುವತನಕ ನಿನಗೆಬೇರೇ
ಅನ್ನ ಹಾಕುವುದಿಲ್ಲ ಎಂದು ಮನಸ್ಸು ಬಂದಹಾಗೆ ಆ ಹುಡು
ಗಿಯನ್ನು ಬೈದು ಬಂದ ನಂತರ ಎದುರಿಗೆ ಬಹಳವಾಗಿ
ರಂಪಮಾಡಿದಳು. ಸೊಸೆಯು ತೌರುನುನೆಯವರಿಗಂತೂ ಹಿಡಿ
ಶಾಪವಾಯಿತು. ಆಗ ಸೀತಮ್ಮ ನ ಸೋದರಮಾವನು-
ಅಮ್ಮ ಆ ಹುಡುಗಿಯ ತರುನುನೆಯವರನ್ನು ಯಾಕೆ ಹೀ
ಗೆ ಬಯ್ಯುತ್ತೀರಿ ? ಇದು ಸರಿಯಲ್ಲ. ಬೇಕೆಂದು ಹೂರಣ
ಕ್ಕೆ ಮರಳನ್ನು ಯಾರಾದರೂ ಬೆರೆಯುಸಿಯಾರೆ ? ಏನೋ
ತಿಳುವಳಿಕೆ ಸಾಲದೆ ಕೈತಪ್ಪಿತು. ಮರಳ ಮೇಲೆ ಬಿದ್ದ ಕಾ
ಯನ್ನು ಎತ್ತಬಾರದಾಗಿತ್ತು. ಏನೋ ಕೈತಪ್ಪಿತು. ನಿಮ್ಮ
ಸೊಸೆಗೆ ಬೇಕಾದರೆ ಬುದ್ಧಿ ಕಲಿಸಿ. ಅವರ ತಂದೆತಾಯಿಗ
ಳನ್ನು ನೀವು ಹೀಗೆ ಬಯ್ಯಬಾರದು, ಎಂದನು. ಆಗ ತಿ
ಮ್ಮುವು-ನಮ್ಮ ಮನೆ ಮಾತಿಗೆ ನೀವು ಯಾಕೆ ಬರುತ್ತೀರಿ.
ಇಷ್ಟಕ್ಕೂ ನೀವು ಯಾರು ? ಇನ್ನೆಲ್ಲಿಯೂ ಅನ್ನ ಸಿಕ್ಕಲಿಲ್ಲ
ವೇನೋ ಇಲ್ಲಿಗೆ ಬಂದಿರಿ, ಊಟವಾಯಿತಲ್ಲಾ, ಇನ್ನೇನು ?
ನಾವು ಹಾಗೆಯೇ ಸರಿ. ತರುಮನೆಯವರನ್ನೂ ಅನ್ನುತಾರೆ
ಸಿಕ್ಕಿದವರ ಗ್ರಹಚಾರ ಬಿಡಿಸಿಬಿಡುತ್ತಾರೆ. ಅವರ ಮನೆ ಹಾ 
ಳಮಾಡಿಕೊಂಡು ನಮ್ಮ ಮನೆ ಹಾಳಾಗಲಿ ಎಂತ ಹೆಂಣ
ಕೊಟ್ಟರು. ಅವರು ಮಾಡಿದ ಮಾಟವೇ, ಅವರು ಮಾಡಿ
ದ ದುರ್ಬೋಧನೆಯ ಇಷ್ಟಕ್ಕೆ ತಂದಿತ್ತು. ಹೀಗೆ ನಾನಾವಿ
--------------------------------

         ಮಾಡಿದ್ದುಣ್ಯ ಮಹಾರಾಯ.  ೧೩೯

ಧವಾಗಿ ಬಾಯಿಹಿಡಿಯದ ಮಾತನ್ನೆಲ್ಲಾ ಮುಖ ನೋಡದೆ
ಅಂದಳು.
ಸದಾ ಅವರ ಸಂಗಡ ಏನು ಹಾಗೆ ಮಾತನಾಡುತೀ
    ಯೆ ? ಬಹು ಲಕ್ಷಣ ವಾಯಿತು, ಹತ್ತು ಸಾವಿರ ವ
    ರಹ ಕೊಟ್ಟರೆ ಅವರು ನಮ್ಮ ಮನೆಗೆ ಬಂದಾರೆ ? 
    ಏನುಮಾತು? ಶಂಕರಪ್ಪನವರೆ, ತಾವು ಕೊಪಮಾ
    ಡಿಕೊಳ್ಳಬೇಡಿ, ಅವಳ ಸ್ವಭಾವವನ್ನು ನೀವು
    ಅರಿಯಿರಿ, ಎಂದು ಸಮಾಧಾನ ಮಾಡಿದನು.
   
ಈ ನರರಾಕ್ಷಸಿಯು ಆರ್ಭಟಕ್ಕೆ ಹೆದರಿಕೊಂಡು ಸೀತಮ್ಮ
ನು ಹದಿಗಿ ಹೋದಳು. ಕೊನೆಗೂ ಅವಳಿಗೆ ಅತ್ತೆಯು
ಬೇರೇ ಅನ್ನವನ್ನು ಹಾಕಗೊಳಿಸಲಿಲ್ಲ. ಸೀತೆಯು ಕೈಲಾದ
ಮಟ್ಟಿಗೂ ಉಪವಾಸಮಾಡಿ ಕೊನೆಗೆ ಆ ಕರಿಗಡಬಿನ ಹೂರ
ಣನನ್ನೆಲ್ಲಾ ಅತ್ತೆ ಕಾಣದಹಾಗೆ ಆಚೆಗೆ ಚೆಲ್ಲುತಾ ಅದರ
ಮೇಲುಗಡೆ ಹಿಟ್ಟಿನ ಹಪ್ಪಳದ ಹೊದಿಕೆಯನ್ನು ತಿಂದು ಮು
ಗಿಸಿದಳು. ಈ ಒಳಹಿಂಸೆಯನ್ನು ಹೇಳುವುದು ಬಹು ಕಷ್ಟ,
ಅನುಭವಿಸುವುದು ಮತ್ತೂ ಕಷ್ಟ.

ಇನ್ನೊಂದು ದಿವಸ ಬೇರೇ ಹೆಚ್ಚು ಗಟ್ಟಲೆ ನಡೆಯಿತು.
ಸೀತಮ್ಮನು ಯಾವಾಗಲೂ ತನ್ನ ಸೀರೆಯನೂ ಇತರರ ಸೀ
ರೆಯೆನ್ನೂ ಬೇರೇ ಒಂದು ಕಡೆ ಮಡಿ ಹರವುವುದಕ್ಕಾಗಿ ಮಾಡಿ
ದ್ದ ಸ್ಥಳದಲ್ಲಿ ಹರವಿದ್ದಳು. ಬೆಳಗ್ಗೆ ಮುಡಿ ಉಟ್ಟುಕೊಂಡು
ಮಡಿಸೀರೆಯನ್ನು ಗಳುವಿನಮೇಲಿನಿಂದ ಮಡಿಲಿನಲ್ಲಿ ಎಳೆ
ದುಕೊಂಡು ಉಟ್ಟುಕೊಳ್ಳುವುದಕ್ಕಾಗಿ ಬಿಡಿಸಿದಳು. ಸೀರೆ
--------------------------------

೧೪೦         ಮಾಡಿದ್ದುಣ್ಣೋ ಮಹಾರಾಯ.

ಯಾದ ಸೀರೆyeಲ್ಲಾ ಅಂಗೈ ಅಂಗೈಯಗಲಕ್ಕೆ ಹರಿದು ತೂ
ತುಬಿದ್ದು ಹೋಗಿತ್ತು. ಅದು ಹೊಸಪಟ್ಟ ಹೊಸಸೀರೆ.
ತೆಗೆದುಕೊಂಡು ಸುಮಾರು ಒಂದು ತಿಂಗಳಾಗಿತ್ತು. ಎಂಟು
ಹುಂಚದಡಿಸೀರೆ ಬಹು ಚೆನ್ನಾಗಿತ್ತು, ಮಗಳಿಗೋಸ್ಕರ ತೌ
ರುಮನೆಯಿಂದ ಕಳುಹಿಸಿದ್ದರು. ಅದರ ಅಗಲ ಮೊಳವೂ
ವರ್ಣವೂ ಅಂಚೂ ಸೆರಗೂ ಎಲ್ಲಾ ಒಂದಕ್ಕೊಂದು ಹೊಂದ
ವಣಿಗೆಯಾಗಿ ಬಹು ಧಡೂತಿಯಾಗಿತ್ತು. ಅದನ್ನು ಉಟ್ಟು
ಕೊಂಡು ಅತ್ತೆಗೆ ಸೀತೆಯು ನಮಸ್ಕಾರ ಮಾಡಿದಾಗಿನಿಂದಲೂ
ಈ ಮಹಾಮಾತೆಗೆ ಕಂಣು ಕೆಂಪಗಾಗಿಯೇ ಇತ್ತು. ಸಮ
ಯ ಬಂದಾಗಲೆಲ್ಲಾ ತಿಮ್ಮಮ್ಮನು- ಅಯ್ಯೋ ಅವಳಿಗೇನು
ಬೇಕಾದ ಸೀರೆಯನ್ನು ತರುಮನೆಯಿಂದ ತರಿಸಿಕೊಳ್ಳುತಾಳೆ
ಬೇಕಬೇಕಾದವರ ಕೈಲಿ ತರಿಸಿಕೊಳ್ಳುತಾಳೆ. ಬೇಕು ಎಂದರೆ
ಇನ್ನೂ ಭಾರಿ ಸೀರೆಗಳೆಲ್ಲಾ ಅವಳಿಗೆ ಬರುತ್ತೆ. ನನ್ನ ಯಾ
ರು ಕೇಳುತಾರೆ, ನನ್ನ ಯಾರು ಸೀಯುತಾರೆ? ಅವರಪ್ಪ
ನಿಗೂ ಅಜ್ಞನಿಗೂ ದೊರೆ ಬೇಕಾದ್ದನ್ನು ಕೊಟ್ಟಿದ್ದಾನೆ. ನ
ಮ್ಮಪ್ಪ ಬಡವ. ಇಂಥಾ ಆಶ್ಚರ್ಯವೆಲ್ಲಾ ನನಗೆ ಬಾ ಎ೦
ದರೆ ಎಲ್ಲಿಂದ ಬಂದೀತು ? ಹೀಗೆ ನಾನಾ ವಿಧದಲ್ಲಿ ನೆವನೆನ
ದಲ್ಲಿ ಸೊಸೆಯನ್ನು ಅನ್ನುತಾ - ಹಳಿಯುತಾಲೇ ಇದ್ದಳು.
ತಿಮ್ಮುವಿಗೆ ಈ ಸೀರೆಯಮೇಲೆ ಬಹುವಾಗಿ ಕಂಣು ಇತ್ತು.
ಹೇಗೋ ಏನೋ ಎಂತೋ ಸೀರೆಯಲ್ಲಾ ಅಂಗೈ ಅಂಗೈಅಗ
ಲಕ್ಕೆ ತಾತಾತೂತಾಗಿತ್ತು. ಇದನ್ನು ಉಟ್ಟು ಕೊಳ್ಳುವುದಕ್ಕೆ
ಆಗದು, ಬೇರೆ ಮಡಿಸೀರೆ ಇಲ್ಲ. ಸೀರೆ ಉಟ್ಟುಕೊಂಡು
------------------------------------

        ಮಾಡಿದ್ದುಣ್ಣೋ ಮಹಾರಾಯ        ೧೪೧

ಆ ದಿವಸ ಮಾಡಬೇಕಾದ ಮಡಿ ಕೆಲಸ ಬೇರೆ ಇತ್ತು. ಅದ
ನ್ನು ಮಾಡದಿದ್ದರೆ ಅತ್ತೆಯ ಆಗ್ರಹಶಿಖಿಯು ಆಕಾಶಕ್ಕೂ ಭೂ
ಮಿಗೂ ಏಕವಾಗುವುದು. ತನಗಾದ ಅವಸ್ಥೆಯನ್ನು ಹೇಳಿ
ದರೂ ಕಷ್ಟ, ಹೇಳದಿದ್ದರೂ ಕಷ್ಟ. ಏನಮಾಡಬೇಕು? ಹಾಗೆ
ಯೇ ತಾನು ಉಟ್ಟಿದ್ದ ಒದ್ದೇ ಸೀರೆಯನ್ನೇ ಚೆನ್ನಾಗಿ ಹಿಂ
ಡಿ ಉಟ್ಟುಕೊಂಡಳು. ಹರಕು ಸೀರೆಯನ್ನು ತಾನೇ ಸಹಿ
ಸಿಕೊಂಡು ಸುಮ್ಮನಾದಳು.

ಇನ್ನೊಂದು ದಿವಸ ಏನೋ ಹಬ್ಬವಾಯಿತು. ಸೀತ
ಮ್ಮನು ಮಡಿ ಉಟ್ಟುಕೊಳ್ಳುವಾಗ ತಾನು ಹಾಕಿಕೊಂಡಿದ್ದ
ಚಿನ್ನದ ಡಾಬನ್ನೂ ಕತ್ತಿಗೆ ಹಾಕಿದ್ದ ಕರಾಣಿಯನ್ನೂ ತೆಗೆ
ದು ಉಪ್ಪು ಮೆಣಸಿನಕಾಯಿ ಗೂಡಿನಲ್ಲಿರಿಸಿ ಬಚ್ಚಲಮನೆಗೆ ಹೋ
ದಳು. ಈ ಎರಡು ಆಭರಣಗಳೂ ತೌರುಮನೆಯಲ್ಲಿ ಸೀತೆ
ಗೆ ಕೊಟ್ಟಿದ್ದರು.  ಮೈ ತೊಳೆದುಕೊಂಡು ಹೋಗಿ ನೋಡುವಲ್ಲಿ
ಸೀತಮ್ಮನ ಸೊಂಟದ ಅಳತೆಗೆ ನಾಲ್ಕು ಬೆಟ್ಟು ಉದ್ದ
ಕಡಿಮೆಯಾಗಿತ್ತು. ದನ್ನು ಕಂಡು ಸೀತೆಗೆ ಬಹಳ ದುಃಖ
ಬಂತು. ಬಂದರೇನು  ? ಇವಳು ಯಾರನ್ನೇನುಮಾಡುವಹಾ
----------------------------------

೧೪೨         ಮಾಡಿದ್ದುಣ್ಣೋ ಮಹರಾಯ.

ಗಿದಾಳೆ ? ಕೂಗದಹಾಗೆ ಸುಮ್ಮನಿದ್ದು ಆದಿನ ರಾತ್ರೆ ಗಂಡ
ನಸಂಗಡ ತನ್ನ ಸೀರೆಗೂ ಒಡವೆಗೂ ಬಂದ ದುರವಸ್ಥೆಯ
ನ್ನು ಹೇಳಿ ಕಂಣಿನಲ್ಲಿ ನೀರಹಾಕಿದಳು. ಮಹದೇವನು ಇ
ದೆಲ್ಲವನ್ನೂ ಕೇಳಿ ವ್ಯಸನಸೂಚಕವಾಗಿ ಒಂದೆರಡುಬಾರಿ ಲೋ
ಚಗುಟ್ಟಿ, ಯಾವ ಮಾತನ್ನೂ ಆಡದೆ ಸುಮ್ಮನಾದನು. ಅವ
ನು ಮತ್ತೇನಮಾಡುವುದಕ್ಕೂ ಸಾಧ್ಯವಿರಲಿಲ್ಲ. ಪೂರ್ವ ಕಾಲ
ದಲ್ಲಿ ಗಂಡಹೆಂಡಿರು ಎಷ್ಟು ದೊಡ್ಡವರಾಗಿ ಎಷ್ಟು ದಿವಸ
ದಿಂದ ಬಾಳಿಕೊಂಡಿದ್ದಾಗ್ಯೂ ಹೆಂಡತಿಯ ಮಾತನ್ನು ಗಂಡ
ನೂ ಗಂಡನ ಮಾತನ್ನು ಹೆಂಡತಿಯ ಹಿರಿಯರ ಸಂಗಡ
ಆಡುತಿರಲಿಲ್ಲ. ಮೊಟ್ಟಮೊದಲು ನಾಚಿಗೆ, ಎರಡನೆಯದು
ಮನೆಯ ಯಜಮಾನರೇ ಎಲ್ಲರ ಯೋಗಕ್ಷೇಮವನ್ನೂ ನೋ
ಡಿಕೊಳ್ಳತಕ್ಕವರೆಂಬ ನಿಬಂಧನೆ. ಅಂಥವರಲ್ಲಿ ಹೆಂಡತಿಯ
ವಿಷಯವನ್ನು ಕುರಿತು ಗಂಡನಾಗಲಿ ಗಂಡನ ಪ್ರಸ್ತಾಪವನ್ನು
ಕುರಿತು ಹೆಂಡತಿಯಾಗಲಿ ಸ್ವತಂತ್ರಿಸಿ ಮಾತನಾಡಿದರೆ ಯಾಜ
ಮಾನ್ಯದ ಬಿಗಿ ಕಡಿಮೆಯಾಗಿದೆ ಎಂದಹಾಗೆ ಆಗಬಹುದು.
ಆದಕಾರಣ ತಂದೆಯಲ್ಲಿ ಈ ಸಂಗತಿಯನ್ನು ಕುರಿತು ಮಾತ
ನಾಡುವುದು ಮರ್ಯಾದೆಗೂ ಕಡಮೆ. ಇದಕ್ಕೆಲ್ಲಾ ವಿಪರೀತ
ವಾಗಿ ಅರ್ಥವನ್ನು ಕಲ್ಪಿಸಿ ಆಕ್ಷೇಪಣೆ ಮಾಡತಕ್ಕ ಚಿಕ್ಕ
ಮ್ಮನ ಭಯವು ಎಲ್ಲಕ್ಕಿಂತಲೂ ಹೆಚ್ಚಾದ್ದು. ಹೀಗೆ ನಾ
ನಾವಿಧದ ಒಳಸಂಗಟಗಳು ಇದ್ದ ಕಾರಣ ಬಂದ ಕಷ್ಟಗಳೆ
ಲ್ಲವನ್ನೂ ಅನುಭವಿಸಿಯೇ ತೀರಬೇಕು. ಇಲ್ಲವಾದರೆ ಲೋ
------------------------------------
        ಮಾಡಿದ್ದುಣ್ಣೋ ಮಹರಾಯ     ೧೪೩
       
ಕಾಪವಾದವೂ ಇತರ ಹಿಂಸೆಗಳೂ ಸಂಭವಿಸುವವು ಎಂದು
ಆ ಯೌವನಸ್ಥನು ಸುಮ್ಮ ನಾದನು.

ರಾತ್ರಿ ಹೊತ್ತು ನಿಯತವಾಗಿ ಸೀತಮ್ಮನೇ ಅಡಿಗೇಮಾಡಿ
ಬಡಿಸುತಿದ್ದಳಷ್ಟೆ, ಒಂದು ರಾತ್ರೆ ಇಬ್ಬರು ಮರುದಿನ ಊ
ಟಮಾಡಲಿಲ್ಲ. ಮಾಡಿದ್ದರಲ್ಲಿ ಮೂರಾಳು ಅನ್ನ ಮಿಕ್ಕಿತು.
ಅದನು ನೋಡಿ ನಿಮ್ಮ ಮನು ಸೊಸೆಯನ್ನು ಮನಸ್ಸು
ಬಂದಹಾಗೆ ಬೈದು- ಅಕ್ಕಿಯನ್ನು ನಿಮ್ಮಪ್ಪನ ಮನೆಯಿಂದ
ತಂದಿದ್ದೆಯೇನೆ ದಂದರಹಾಳಿ ? ಮಿಕ್ಕ ತಂಗಳೆಲ್ಲವನ್ನೂ
ಆಚೆಗೆ ಹಾಕದೆ ನೀನೇ ತಿಂದು ಮುಗಿಸಬೇಕು, ಅದೆಲ್ಲವನ್ನೂ
ನಿನ್ನ ತಲೆಗೆ ಹಾಕಿ ಕಟ್ಟುತ್ತೇನೆ, ಎಂದು ಬಾಯಿಗೆ ಬಂ
ದಂತೆ ಬೈದಳು. ಸೀತಮ್ಮನು ಹೆದರಿಕೊಂಡು ಮಾರನೇ
ದಿನ ಬೆಳಗ್ಗೆ ತಂಗುಳನ್ನು ಉಂಡಳು. ಆ ದಿನರಾತ್ರೆಯೂ
ಅದನ್ನೆ ಇಕ್ಕಿಕೊಂಡು ಭುಂಜಿಸಿದಳು. ತಂಗಳನ್ನು ತಿಂದ
ಅಭ್ಯಾಸ ಇವಳಿಗೆ ಕಡಮೆಯಾಗಿತ್ತು. ಇದೂ ಅಲ್ಲದೆ ಸೀತೆಯು
ಎರಡು ಹೊತ್ತಿನಿಂದಲೂ ಉಂಡದ್ದು ೧-೧ || ಪಾವು ಅಕ್ಕಿ
ಯ ಅನ್ನ ಹೋಗಲಾಗಿ ಉಳಿದ ಮೂರುವವು ಅಕ್ಕಿಯ ಅನ್ನ
ವು ಹಳಸಿಹೋಯಿತು. ನೆರೆಮನೆಯ ಯಜಮಾನಿಯಾದ ಸುಬ್ಬ 
ಮ್ಮನೆಂಬಾಕೆಯ ಸಂಗಡ ಯಾರೂ ಕಾಣದಹಾಗೆ ಸೀತಮ್ಮನು
ಯಾವಾಗಲಾದರೂ ತನ್ನ ಸಂಕಟಗಳನ್ನು ಹೇಳಿಕೊಳ್ಳುವವಾ
ಡಿಕೆಯಿತ್ತು. ಯಾವ ಮನುಷ್ಯನೇ ಆಗಲಿ ಸಂಕಟ ಉಂಟಾ
ದಾಗ ಅದನ್ನು ಇತರರ ಸಂಗಡ ಹೇಳಿಕೊಳ್ಳದೆ ಇರುವುದು
ಬಹುಶ್ರನು. ಹಾಗೆ ಸಹಿಸಿಕೊಂಡು ತಮ್ಮೊಳಗೇ ಅದನ್ನು ಅಳೆ
--------------------------------

೧೪೪         ಮಾಡಿದ್ದುಣ್ಣೋ ಮಹರಾಯ.

ದು ಸುರಿದು ಮಾಡಿಕೊಂಡಿದ್ದರೆ, ವ್ಯಥೆಯ ಕುರಕು ಬಹುವಾ
ಗಿ ಹೆಚ್ಚಿ ಸಹಿಸುವುದಕ್ಕೆ ಅಸಾಧ್ಯವಾಗುವುದು. ಇತರರ ಸಂಗ
ಡ ತಮ್ಮ ಕಷ್ಟವನ್ನು ಹೇಳಿಕೊಂಡರೆ ಅಂಥಾ ಇತರರೂ
ಅನುತಾಪ ಪಟ್ಟಲ್ಲಿ ನಮ್ಮ ಅಭಿಪ್ರಾಯ ಅನ್ಯಾಯವಾದಲ್ಲ,
ಇತರರೂ ನನ್ನಂತೆಯೇ ನಮ್ಮ ಸ್ಥಿತಿಯನ್ನು ಭಾವಿಸುತ್ತಾರೆ
ಎಂಬ ಒಂದು ಧೈರೈವು ನಮಗೆ ಸ್ವಲ್ಪ ಆಪ್ಯಾಯನವಾಗಿರು
ವುದು. ಮೇಲಾಗಿ ಹಾಗೆ ಆ ಕಷ್ಟವನ್ನು ಹೇಳಿಕೊಳ್ಳುವಾಗ
ಸಹಜವಾಗಿ ಕಂಟಿನಲ್ಲಿ ನೀರು ಬಂದರೂ ಮಾತಿನಲ್ಲಿ ಗದ್ಗದ
ಸ್ವರಹುಟ್ಟಿದರೂ ದುಃಖದವೇಗ ಲೇಶವಾದರೂ ಕಡಮಯಾಗ
ತಕ್ಕದ್ದು ಮನುಷ್ಯ ಸ್ವಭಾವದಲ್ಲಿ ಸಹಜವಾದ ವೃತ್ತಿಯಾಗಿ
ದೆ. ಹೀಗೆ ತನಗೆ ಸಂಭವಿಸಿದ ಸಂಕಟವನ್ನು ಸುಬ್ಬಮ್ಮನ
ಸಂಗಡ ಹೇಳಿಕೊಳ್ಳುವಾಗ ಹಳಸಿದ ಅನ್ನದ ಪ್ರಸ್ತಾಪ ಬಂತು.
ಆ ಸುಬ್ಬಮ್ಮ ಈ ಹುಡುಗಿಗೆ ಸಂಭವಿಸಿರುವಹಿಂಸೆಗೆ ಬಹಳ
ವಾಗಿ ಮರಗುತಾ ಆ ತಂಗಳನ್ನವನ್ನು ತಂಣೀರಿನಲ್ಲಿ ಹಾಕಿ
ಇರಿಸಿದ್ದು ಅದನ್ನು ಹಿಂಡಿಹಾಕಿದರೆ ತಂಗುಳಿನ ದೋಷವೂ
ವಾಸನೆಯೂ ಕಡಿಮೆಯಾಗುತ್ತೆಂದು ಹೇಳಿಕೊಟ್ಟಳು. ಅದ
ರಂತೆ ಸೀತಮ್ಮನು ಮಾಡಿ ಪ್ರಾಣಧಾರಣೆಯನ್ನು ಮಾಡಿದಳು.

ಇನ್ನೊಂದು ದಿವಸ ಸೀತಮ್ಮನು ಅಡಿಗೆಮಾಡಿ ಬಡಿಸಿ
ದಳು. ಅನ್ನದಲ್ಲಿ ಅಗಳೊಂದು ಕೂದಲು ಒಂದು ಹೀಗೆ ಕೂದ
ಲು ಮಿಶ್ರವಾಗಿತ್ತು, ಊಟಮಾಡುವುದು ಬಹುಕಷ್ಟವಾಯಿತು.
ಆಗ ಸದಾಶಿವದೀಕ್ಷಿತನು- ಸೀತಮ್ಮ ಅಡಿಗೆ ಮಾಡಿದ ದಿವಸ
ವೆಲ್ಲಾ ಏನಾದರೂ ಒಂದು ದೋಷವಿದ್ದೆ ಇರುತ್ತೆ. ಇದಕ್ಕೆ
---------------------------------

        ಮಾಡಿದ್ದುಣ್ಣೋ ಮಹರಾಯ.          ೧೪೫

ಕಾರಣವೇನೋ ನಾನರಿಯೆ ಎಂದು ಅಸಮಾಧಾನಕರವಾಗಿ ಮಾ
ತನಾಡಿದನು. ಆಗ ಮಹಾದೇವನು ಸುಮ್ಮನಿರದೆ ಒಂದು
ಅಗುಳಿಗೆ ಒಂದು ಕೂದಲು ಇದೆ ಎಂದನು, ತಿಮ್ಮ್ಮ - ನಿನ್ನ
ಹೆಂಡತಿ ರಂಭೆ ಮಾಡಿದ ಅಡಿಗೆಗೆ ರುಚಿ ಅಷ್ಟರಮಟ್ಟಿಗೆ ಇದೆ;
ಇಲ್ಲಿಯೇ ತಲೇಬಾಚಿ ಕೊಂಡ ಕೂದಲನ್ನು ಹಾಕಿ ನೋಡದೆ ಮಾಡ
ದೆ ಯಲ್ಲರ ಹೊಟ್ಟೆಗೂ ಕೂದ ತೊಂಪೆಯನ್ನು ಹಾಕಿದಳು,
ಎಂದಳು. ಮಹಾದೇವನು ಸುಮ್ಮನಿರದೆ- ಆನ್ನದಲ್ಲಿ ಸಿಕ್ಕಿದ
ಕೂದಲೆಲ್ಲಾ ಚಿಕ್ಕ ಚಿಕ್ಕದಾಗಿವೆ, ಚೋಟುದ್ದದಮೇಲೆ ಯಾವು
ದೂ ಇಲ್ಲ, ಉದ್ದವಾದ ಕೂದಲು ಒಂದೂ ಇಲ್ಲ, ಎಂದ
ನು. ಅದಕ್ಕೆ ತಿಮ್ಮುವು- ಉರಿಮಾರಿಯಹಾಗೆ ಕಂಣ ಬಿಡು
ತಾ- ಏನೋ ಹೆಂಡತಿಯನ್ನು ವಹಿಸಿಕೊಂಡೇ ಮಾತನಾಡು
ತೀಯೆ ? ನಿನ್ನ ಹೆಂಡತಿಯ ಕೂದಲು ಉದ್ದ, ನಮ್ಮ
ಹೆಂಣಿನ ಕೂದಲು ತುಂಡು ಎಂದಲ್ಲವೆ ನೀನು ಹೇಳಿದ್ದು?
ಹಾಗಾದರೆ ನಮ್ಮ ಸಾತಿ ಹಾಕಿತೋ ಅನ್ನದ ತಪ್ಪಲೆಗೆ
ಕೂದಲನ್ನು ? ದೈವವೇ ಎಂದು ಅದರಷ್ಟ್ರಕ್ಕೆ ಅದು ಎಲ್ಲಿ
ಯೋ ಆಡಿಕೊಂಡಿರುತ್ತೆ. ಅದರಮೇಲೆ ಏನು ಇವಳಿಗೆಜೋಡಿ?
ಆ ಹೆಂಣನ್ನು ಎಲ್ಲಿಗೆ ತಳ್ಳಿಬಿಡಲಿ ? ನಿಮ್ಮ ಎಡೆಯಲ್ಲಿ ನಾನು
ಬಾಳಲಾರೆ. ಅದನ್ನೂ ಎಲ್ಲಿಯಾದರೂ ಹೊಳೆಗೆ ತಳ್ಳಿ ನಾ
ನೂ ಬಿದ್ದು ಪ್ರಾಣಾ ಕಳೆದುಕೊಳ್ಳುತ್ತೇನೆ. ಈ ಯಮಹಿಂ
ಸೆಯಲ್ಲಿ ಯಾರು ಬಾಳಿಯಾರು ? ಮಾತು ಮಾತಿಗೂ ನನ್ನ
ಮೇಲಿನ ಆಕ್ಷೇಪಣೆ ಆ ಹೆಣ್ಣಿನಮೇಲಿನ ಆಕ್ಷೇಪಣೆಯೇ ಆಗಿದೆ.
ನೀನು ಇನ್ನೇನು ಮಾಡ್ತೀಯ ? ಎಲ್ಲ ಕೈಗೆ ಸಿಕ್ಕಿತು.
------------------------------------

೧೪೬         ಮಾಡಿದ್ದುಣ್ಣೋ ಮಹಾರಾಯ.

ಇನ್ನು ನನ್ನನ್ನು ಮನೆಬಿಟ್ಟು ದಾಟಿಸುವುದು ತಾನೆ ಉಳಿ
ದಿದೆ ? ಆಗ ನಿಮ್ಮ ಹೊಟ್ಟೆಗೆ ಹಾಲ ಕಎಯಿದಹಾಗೆ ಆಗು
ತ್ತೆ. ನೀವು ತಂದೆ ಮಕ್ಕಳಿಗೆ ನನ್ನ ಮೇಲಲ್ಲವೆ ಇದೆ ?
ಹೀಗೆಂದು ವಿಧವಿಧದಲ್ಲಿ ಬಾಯಿ ಹಿಡಿಯದ ಮಾತನ್ನು ಎಂ
ದಳು. ಅದಕ್ಕೆ ಮಹಾದೇವನು- ಚಿಕ್ಕಮ್ಮ , ನಾನು ಯಾವ
ಮಾತನ್ನೂ ಆಡಲಿಲ್ಲ. ಕೂದಲು ಉದ್ದವಾದ್ದಲ್ಲ ಎಂದು ಹೇ
ಳಿದ ಮಾತ್ರಕ್ಕೆ ಇಷ್ಟೊಂದು ಅಂದು ನಮ್ಮ ಗ್ರಹಚಾರವ
ನ್ನು ಬಿಡಿಸಿಬಿಟ್ಟೆ, ಹೀಗೆಂದು ಹೇಳುತಾ ಆಕೆಗೆ ಹೊರಟು
ಹೋದನು. ತರುವಾಯ ಸೀತನ್ನು ನಿಗೆ ಬೇಕಾದಷ್ಟು ಪ್ರಾ
ಯಶ್ಚಿತ್ತವಾಯಿತು. ತಿಮ್ಮಮ್ಮನು ಕುಟ್ಟಿಕೊಂಡು, ಬಡ
ಕೊಂಡು, ಅತ್ತು ಕರೆದು, ರಂಪಮಾಡಿದಳು.

ಅತ್ತೆಗೂ ನಾದನಿಗೂ ಎರೆದ ತರುವಾಯ ತಾನು ಎರೆ
ದುಕೊಳ್ಳುವುದಕ್ಕಾಗಿ ಸೀತಮ್ಮನು ತಲೆಗೆ ಎಂಣೆಯನ್ನು ತಾನೇ
ಇರಿಸಿಕೊಳ್ಳಬೇಕು, ಇನ್ನು ಯಾರೂ ಇವಳಿಗೆ ಎಂಣೆಯನ್ನು
ಒತ್ತುತಿರಲಿಲ್ಲ. ಇವಳೇ ಎಲ್ಲರಿಗೂ ಎಂಗೇ ಒತ್ತಬೇಕಾಗಿತ್ತು,
ಇವಳಿಗೆ ಒಂದು ಮಿಳ್ಳೆ ಎಂಣೆಯ ಸಿಕ್ಕುತಿರಲಿಲ್ಲ. ಇವ
ಳು ಎಲ್ಲರಿಗೂ ನೀರನ್ನು ಎರೆಯುತಿದ್ದಳು, ಇವಳಿಗೆ ಎರೆ
ದುಕೊಳ್ಳಲು ಎರಡು ಕೊಡ ನೀರೂ ದೊರೆಯುತಿರಲಿಲ್ಲ.
ಮುದ್ದೆ ಮುದ್ದೆ ಸೀಗೇಕಾಯನ್ನು ಇವಳು ತಿರುವಿ ಇರಿಸುತಿ
ದ್ವಳು. ಇವಳಿಗೆ ಮಾತ್ರ ಗಜ್ಜಿಗದಷ್ಟು ಸೀಗೇಕಾಯಿಯೂ
ಸಿಕ್ಕುತಿರಲಿಲ್ಲ. ಇತ್ಯ ಹಂಡೆ ಬರೀದು, ಅತ್ತ ಎಣ್ಣೆಸವ
ಟು ಬರೀದು, ಅತ್ತ ಮರಗಿಯಲ್ಲಿ ಸ್ಪಲ್ಪ ಸಿಗೇಕಾಯಿ ಇ
----------------------------
    ಮಾಡಿದ್ದುಣ್ಣೋ ಮಹಾರಾಯ.     ೧೪೭

ದ್ದರೂ ಮಂಗಳಮಾಯವಾಗಿ ಅದೂ ಬರೀದು. ಈ
ಮಧ್ಯೆ ಸೊಸೆ ಎಳೆದುಕೊಳ್ಳುವುದಕ್ಕೆ ಹೊಕ್ಕರೆ ಯಾವ ಎಂ
ಣೆಯೂ ಸಾಲದು ಯಾವ ನೀರೂ ಸಾಲದು ಎಂಬ ದೂರು
ಮಾತ್ರ ಬಹು ಗನವಾಗಿರುತಿತ್ತು. ಮನೆಯಲ್ಲಿ ಹಬ್ಬ ಹರಿ
ದಿನಗಳಲ್ಲಿ ಏನಾದರೂ ಭಕ್ಷ್ಯಾದಿಗಳನ್ನು ಮಾಡಿದರೆ ಮಾಡಿ
ದ್ದನ್ನೆಲ್ಲಾ ತಿಮ್ಮುವು ಬೇಗ ತೆಗೆದು ಇರಿಸಿಕೊಂಡು ಹಾಳತ
ವಾಗಿ ಎಲ್ಲರಿಗೂ ತಾನೇ ಬಡಿಸಿ ಕೊನೆಯಲ್ಲಿ ಊಟಾಮಾಡು
ತಾ ಇದ್ದ ಸೀತನಿಗೆ ಒಂದು ಚೂರನ್ನೂ ಹಾಕದೆ ಹೋಗು
ತಿದ್ದಳು. ಸೀತನಿಗೆ ಬಡಿಸಿತತೆ ಕೊಟ್ಟಿತೆ ಎಂದು ವಾರ್ವತ
ಮ್ಮ ಕಾವೇರಮ್ಮ ಮೊದಲಾದ ಮುದುಕರು ಯಾರಾದರೂ
ಕೇಳಿದರೆ,- ಅಯ್ಯೋ ನಾನು ಮರೆತುಬಿಟ್ಟ, ಇವಳಿಗೆ ಕೊ
ಡುವುದೇನು ಬಡಿಸುವುದೇನು ? ಇರಿಸಿದ್ದ ಕಡೇ ತಾನೇ ತೆಗೆ
ದುಕೊಳ್ಳುತಾಳೆ. ವಾಸ ಅವಳು ತಿನ್ನುವುದೇ ಇಲ್ಲ ! ಪ
ದಾರ್ದ ಇದ್ದ ಕಡೆಯಲ್ಲಿಯೇ ಮಾಯವಾಗಿ ಮಾತ್ರ ಹೋ 
ಗುತ್ತೆ. ಅವಳ ವಿಚಿತ್ರಕ್ಕೆ ಬೆಂಕಿ ಹಾಕಿದರು. ಉಳಿದವರು
ಆದರ ಮುಖವನ್ನೇ ಕಾಣೆವು. ಮಾಡಿದ್ದೆಲ್ಲಾ ಅವಳ ಹೊ
ಟೈಗೆ ಹೊಕ್ಕು ಈಚೆಗೆ ಬರಬೇಕು. ನಾನಾಗಲಿ ನಮ್ಮ
ಹೆಂಣಾಗಲಿ ಅದರ ಸೆಲೆ ಹೇಗೆ ಇದೆಯೋ ಕಾಣೆವು. ಮಾ
ಡಿದ ದಿವಸ ಎಡೆಗೆ ಬಡಿಸಿದ್ದು ಎಷ್ಟೋ ಅಷ್ಮೆ ನಮ್ಮವ್ವ.
ಮಾಡಿದ್ದೆಲ್ಲಾ ಅವರು ಗಂಡಹೆಂಡಿರಲ್ಲಿಯೇ ಐಕ್ಯವಾಗುತ್ತೆ.
ಆ ಹಾಳ ವಿದ್ಯವನ್ನೆಲ್ಲಾ ಅವರಪ್ಪನ ಮನೆಯಲ್ಲಿ ಚೆನ್ನಾಗಿ
ಅರೆದು ಹುಯಿದುಕೊಂಡು ಬಂದಿದಾಳೆ. ಆ ಮಾಯಾಂಗನೆ
----------------------------------

೧೪೮         ಮಾಡಿದ್ದುಣ್ಣೋ ಮಹಾರಾಯ.

ಏನು ಸಾಧಾರಣಳೆ ? ಅದೆಲ್ಲಾ ಹೇಳಿದರೆ ಚೆನ್ನಿಲ್ಲ. ಹೀಗಲ್ಲ
ಹಾಗೆ ಎಂದರೆ ತೊಂಣೂರ ರಾಕ್ಷಸಿಯ ಹಾಗೆ ಬರುತಾಳೆ.
ಎತ್ತಲಾಗದರೂ ಹಾಳಾಗಿ ಹೋಗಲಿ, ನನ್ನ ತಾಯಿ ; ಅವಳ
ಗೋಜೇ ನನಗೆಬೇಡ, ಹೀಗೆಂದು ಅನೇಕ ವಿಧವಾಗಿ ಅನನ್ವ
ಯವಾಗಿ ಮಾತನಾಡುತಿದ್ದಳು.

              ----
             
            ೯ ನೇ ಅಧ್ಯಾಯ.
           
ಸೀತಮ್ಮ ನು ಈ ಹುರುಪತವನ್ನು ಸಹಿಸಿಕೊಂಡು ಲೇಶ
ವೂ ಪಾತಿವ್ರತ್ಯಧರ್ಮಕ್ಕೆ ಲೋಪವಿಲ್ಲದಂತೆ ನಡೆದುಕೊಳ್ಳುತಿ
ದ್ದಳು. ಹೀಗಿರುವಲ್ಲಿ ಪ್ರತಿದಿನವೂ ರಾತೇಕಾದಲ್ಲಿ ಆವೂರ
ಈಶ್ವರನ ಗುಡಿಯಲ್ಲಿ ಸದಾಶಿವದೀಕ್ಷಿತನು ಗ್ರಾಮಸ್ಥರ ಅಪೇ
ಕ್ಷೆಯಂತೆ ಪುರಾಣವನ್ನು ಹೇಳುತ್ತಿದ್ದನು. ಸ್ವತಃ ಪಂಡಿತ, ಕೇವ
ಲ ಸ್ವಧರ್ಮನಿರತ, ಸಾತ್ವಿಕ, ಅನೇಕ ರಹಸ್ಯಗಳನ್ನು ತಿಳಿದ
ಅಂತರ್ಮುಖಿ; ಇಂಧಾ ಪುರುಷನು ಹೇಳುವ ಪುರಾಣವು ಬಹು
ಮಟ್ಟಿಗೆ , ಪಂಡಿತರಿಗೂ ಪಾಮರರಿಗೂ ರಂಜನೆಯಾಗಿ
ಯೇ ಇರುತಿತ್ತು. ಇದನ್ನು ಕೇಳುವುದಕ್ಕೆ ಸಮೀಪ
ಗ್ರಾಮದ ಜನರೂ ಸಹಿತವಾಗಿ ಬರುತಿದ್ದರು. ಸೀತಮ್ಮ
ಒಬ್ಬಳು ಹೊರತು ಉಳಿದ ಹೆಂಗಸರೆಲ್ಲಾ ಪುರಾಣವನ್ನು ಕೇ
ಳುವುದಕ್ಕೆ ಪ್ರತಿನಿತ್ಯವೂ ಹೋಗುತಿದ್ದರು. ಒಂದಾನೊಂದು
ದಿವಸ ಪುರಾಣದಲ್ಲಿ ಪತಿವ್ರತೆಯರ ಮಹತ್ತನ್ನೇ ವಿಶೇಷವಾಗಿ
ಹೇಳಿದರು. ಮಾರನೇ ದಿವಸ ದ್ವಾದಶಿಯಾದರಿಂದ ಪುರಾಣ
-----------------------------

        ಮಾಡಿದ್ದುಣ್ಣೋ ಮಹಾರಾಯ.   ೧೪೯

ವಿರಲಿಲ್ಲ, ಬೆಳಗ್ಗೆ ಹೊತ್ತಿಗೆ ಮುಂಚೆ ಪಾರಣೆಯಾಯಿತು.
ಹೆಂಗಸರೆಲ್ಲಾ ಗ್ರಾಮ ಪ್ರದಕ್ಷಣೆಯನ್ನು ಮಾಡಿಕೊಂಡುಬಂದರು.
ತಿಮ್ಮಮ್ಮ, ವೆಂಕಮ್ಮ , ಪಾ‌ತಮ್ಮ , ನೆರೆಮನೇ ಸುಬ್ಬಕ್ಕ, ಹೊ
ರಮನೇ ರಾಧಾಬಾಯಿ ಇವರೇ ಮೊದಲಾಗಿ ಮೂರನೇ ಜಾವ
ಕೈ ಜೋಯಿಸರ ಮನೇ ಹಜಾರದಲ್ಲಿ ಸೇರಿದರು. ಮುತ್ತಗದ
ಎಲೆಯನ್ನು ತಂದುಹಾಕಿಕೊಂಡಿದ್ದರು. ಎಲ್ಲರೂ ಊಟದೆಲೆಯ
ನ್ನು ಹತ್ತಿಸುತಾ ಮುನ್ನಾ ದಿವಸದ ಪುರಾಣ ಬಹುಚೆನ್ನಾಗಿ
ತ್ತೆಂತಲೂ, ಪತಿವ್ರತಾ ಧರ್ಮವನ್ನೂ ಪತಿವ್ರತೆಯರ ಚರಿತ್ರೆ
ಯನ್ನೂ ದೀಕ್ಷಿತರು ಬಹುಚೆನ್ನಾಗಿ ಹೇಳಿದರೆಂತಲೂ ಮಾತ
ನಾಡಿಕೊಳ್ಳುತಿದ್ದರು. ಅವರಲ್ಲಿ ಒಬ್ಬರು- ಇದ್ದರೆ ಹಾಗೆ ಇರ
ಬೇಕು. ಇಲ್ಲದಿದ್ದರೆ ಈ ಹಾಳ ಜನ್ಮವನ್ನು ಎತ್ತಲೇ ಬಾರದು.
ನಾಲ್ಕು ಜನರಲ್ಲಿ ಸರಿ ಎನ್ನಿಸಿಕೊಳ್ಳದಮೇಲೆ ಅದು ಎಂಥಾ
ಬಾಳು ಎಂದಳು. ಇನ್ನೊಬ್ಬ ಆಕೆಯು ಎಲ್ಲರಿಗೂ ಅಂಧಾ ಮ
ಹಾತ್ಮರ ಗುಣಮಭಿಸೀತೆ ? ಹಾಗೆಕೊಟ್ಟರೆ ವರ ಇದ್ದರೆ ಶಾಪ
ಎನ್ನು ವಂಧಾ ಪುಣ್ಯಾತ್ಮರು ಯಾರೂ ಕಾಣಿಸಲೂ ಇಲ್ಲ. ಅಧ
ವಾ ಇದ್ದರೂ ಈಗ ಅದೆಲ್ಲಾ ನಡೆಯುವುದೂ ಇಲ್ಲ, ಎಂದಳು.
ಇನ್ನೊಬ್ಬಳು ಅದೆಲ ನಡೆಯುವುದಿಲ್ಲ ಎನ್ನ ಕೂಡದು, ಇದು
ಕಲಿಯುಗ, ಇಂಧಾ ಇಂಥಾ ಯುಗದಲ್ಲಿ ಜನರನಡತೆ ಹೀಗೆ
ಯೇ ಇರುವುದೆಂದು ಯುಗಧರ್ಮವನ್ನು ಹೇಳುವಾಗ ದೀಕ್ಷಿ
ತರು ಹೇಳಿದರು. ಈ ಕಲಿಯುಗದಲ್ಲಿ ಹೇಗೆ ಇರಬೇಕೋ ಹಾಗೆ
ಇದ್ದರೆ ಸಾಕು. ಆಕಾಲದಲ್ಲಿ ಜರಗಿದ್ದೆಲ್ಲಾ ಈಗ ಆಗಬೇಕಾ
ದರೆ ಕಷ್ಟ ಎಂದಳು, ಇನ್ನೊಬ್ಬ ಸ್ತ್ರೀಯು ಮುಖ್ಯವಾಗಿ ಹಿಂದಿ
------------------------------

೧೫೦         ಮಾಡಿದ್ದುಣ್ಣೋ ಮಹಾರಾಯ.

ನ ಯುಗಗಳಲ್ಲಿಯೂ ಒಳ್ಳೆಯವರು ಕೆಟ್ಟವರು ಎಂದು ಇರ
ಲಿಲ್ಲವೆ ? ಅವರವರ ಪೂರ್ವಾರ್ಜಿತವಿದ್ದ ಹಾಗೆಲ್ಲಾ ನಡೆಯುತ್ತೆ.
ಇಲ್ಲದಿದ್ದರೆ ಮಳೆಬೆಳೆ ಆದೀತೆ ? ಈಗಲೂ ಯಾವ ಮಹಾರಾ
ಯತಿ ಇದಾಳೋ ಅವಳ ಪಾದವೇ ಗತಿ ಎಂದಳು. ಇನ್ನೊಬ್ಬ
ಗರತಿಯು– ಪೂರಾರ್ಜಿತವೆಂದೂ ಅದನ್ನು ಅನುಸರಿಸಿ ನಮ್ಮ
ಬುದ್ದಿಯೂ ಹೋಗುತ್ತೆಂದೂ ಹೇಳಿದರೆ ಹೇಗೆ ಆದೀತು ? ಕೆಟ್ಟ
ದಾರಿಗೆ ಹೋಗಿ ಕೆಟ್ಟತನದಲ್ಲಿ ಆಳಿ ಮುಳುಗಿ " ಇದು ನನ್ನ ಪ್ರಾ
ಚೀನಕರ್ಮ, ಅದಕ್ಕೆ ಸರಿಯಾಗಿಯೇ ಎಲ್ಲಾ ಸಂದರ್ಭವೂ ಕೂಡಿ
ತು, ಅದಕ್ಕೆ ಸರಿಯಾಗಿಯೇ ನನಗೆ ಬುದ್ದಿಯೂ ಹುಟ್ಟಿತು,
ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಬ್ರಹ್ಮನಿಂದಲೂ ಆಗದು, ಕೆಟ್ಟ
ದೊ ಒಳ್ಳೆಯದೋ ನನ್ನ ಹಣೆಯಲ್ಲಿ ಬರೆದಿದ್ದಂತೆ ಆಗುತ್ತೆ,
ಅದನ್ನು ಯಾರೂ ತಪ್ಪಿಸಲಾರರು, ” ಎಂದು ತನ್ನ ಮನಸ್ಸಿನಲ್ಲಿ
ತಿಳಿದುಕೊಂಡು ದುರ್ಮಾರ್ಗಕ್ಕೆ ಹೋದರೆ ತಡೆಯೇನಿದೆ ?
ಎಂದಳು. ಅವರಲ್ಲಿ ಇನ್ನೊಬ್ಬ ಜಾಣೆಯು ಪೂರಾರ್ಜಿತಕರ್ಮ
ಎಂದುಕೊಳ್ಳುತಾ ಮನನನ್ನು ಹರಿ ಬಿಡತಕ್ಕದ್ದಲ್ಲ. ನಮ್ಮ
ಮನಸ್ಸನ್ನು ಜಿತವಾಗಿ ಇರಿಸಿಕೊಂಡು ಒಳ್ಳೆ ಮಾರ್ಗದಲ್ಲಿಯೇ
ಇರಬೇಕೆಂದು ನಾವು ಯತ್ನಮಾಡಿದರೆ, ಕ್ಷಣಮಾತ್ರ ಕೆಟ್ಟ ಬು
ದ್ಧಿ ಹುಟ್ಟಿದರೂ ಅದು ಮನಸ್ಸಿನಲ್ಲಿಯೇ ಹುಟ್ಟಿ ಮನಸ್ಸಿನಲ್ಲಿ
ಯೇ ಸೀದುಹೋಗುವುದು ಎಂದಳು. ಅವರಲ್ಲಿ ಮತ್ತೊಬ್ಬ
ಚತುರೆಯು ನಮ್ಮ ಪೂರ್ವಜನ್ಮದ ಕರ್ಮಹೆಚ್ಚಾಗಿ ದುಷ್ಕರ್ಮ
ವಾಗಿದ್ದರೆ ನಮ್ಮ ಮನಸ್ಸು ಹಾಗೆ ಸ್ಥಿರವಾಗಿ ನಿಲ್ಲುವುದೇ ಇಲ್ಲ,
ಮೊದಲು ಮನಸ್ಸಿನಲ್ಲಿ ಯಾವುದು ಹುಟ್ಟುತ್ತೊ ಅದು ಜನ್ಮಾಂ
-------------------------------------

        ಮಾಡಿದ್ದುಣ್ಣೋ ಮಹಾರಾಯ.        ೧೫೧
       
ತರವಾಸನೆಯಿಂದ ಆಗ ತಕ್ಕದ್ದೇ ಸರಿ ಎಂದು ದೀಕ್ಷಿತರು ಹೇ
ಳಿದರಲ್ಲ. ಅದೂ ಅಲ್ಲದೆ ಮನಸ್ಸನ್ನು ನಾವು ಅಡಗುಮೆಟ್ಟುತಾ
ಮೆಟ್ಟುತಾ ಅಭ್ಯಾಸವಾದರೆ, ಹಾಗೆಯೇ ಆ ಕರ್ಮಫ ಲವು ಹೋಗಿ
ಬಿಡುತ್ತೆ. ಹಾಗೆ ಮನಸ್ಸಿನಲ್ಲಿಯೇ ಲಯವಾಗಿ ಹೋದ್ದವಾ
ಸನೆ ಮುಂದಿನಜನ್ಮಕ್ಕೆ ಇರುವುದಿಲ್ಲ. ಮನಸ್ಸಿನಲ್ಲಿ ಹುಟ್ಟಿದ್ದು
ಯಾವಾಗ ಕಾರ್ಯವಾಗಿ ಪರಿಣಮಿಸುತ್ತೋ ಆಗಲೇ ಆಕಾರ್ಯದ
ಫಲ ಈ ಜನ್ಮದಲ್ಲಿ ನಾಶವಾಗದೆ ಮುಂದಿನ ಜನ್ಮಕ್ಕೂ ವ್ಯಾ
ಪಿಸಿಕೊಳ್ಳುವುದು ಎಂತಲೂ ವಿಸ್ತಾರವಾಗಿ ಓದಿಹೇಳಿದರಷ್ಟೆ,
ಎಂದಳು. ಮಗದೊಬ್ಬಾಕೆಯು-ಈ ಕಲಿಯುಗದಲ್ಲಿ ಈ ಜನ್ಮ
ದಲ್ಲಿ ಮಾಡಿದ್ದು ಈ ಜನ್ಮದಲ್ಲಿಯೇ ತೋರಿಸಿಬಿಡುತ್ತೆ. ಮುಂ
ದಿನ ತನಕ ನಿಲ್ಲುವುದೇ ಇಲ್ಲ ಎಂದಳು. ಪುನಃ ಅವರಲ್ಲಿಯೆ
ಇನ್ನೊಬ್ಬ ಹೆಂಗಸು- ಪಾಪವೋ ಪುಣ್ಯವೋ ಹೆಚ್ಚಾದರೆ ಈಗ
ಲೇ ಅದರ ಫಲ ತೋರುತ್ತೆ. ಇಲ್ಲದಿದ್ದರೆ ಮುಂದಕ್ಕೂ ಬರುತಿ
ರುತ್ತೆ ಎಂದಳು. ಆಗ ಇನ್ನೊಬ್ಬಗರತೆಯು--ನಮ್ಮ ಬುದ್ಧಿ
ನಮ್ಮ ಕೈಲಿದ್ದರೆ ಮುಂದಕ್ಕೂ ಬರುವುದಿಲ್ಲ ಹಿಂದಕ್ಕೂ ಹೋ
ಗುವುದಿಲ್ಲ ಎಂದು ಒಂದೇ ಮಾತನಾಡಿ ಮುಗಿಸಿದಳು.

ಹೀಗೆ ಇವರೆಲ್ಲಾ ಪುರಾಣದಲ್ಲಿ ಕೇಳಿದ ಸಂಗತಿಕುರಿತು ತ
ಮಗೆ ಜ್ಞಾಪಕವಿದ ಮಟ್ಟಿಗೆ ಮಾತನಾಡಿಕೊಳ್ಳುತಾ ಎಲೆಯ
ನ್ನು ಹತ್ತಿಸುತ್ತಿರುವಾಗ, ಅದುವರೆಗೂ ಯಾವಮಾತನ್ನೂ ಆಡದೆ
ಸುಮ್ಮನೇ ಇದ್ದ ಮುದುಕಿಯಾದ ವೆಂಕಮ್ಮನು-ಜನ್ಮಾಂತರ
ದಲ್ಲಿ ನಾವು ಮಾಡಿದ್ದ ರಫಲವೆಂತಲಾದರೂ ಹೇಳಿ, ಇದಕ್ಕೆ ನಮ್ಮ ಬುದ್ದಿಯೇ ಕಾರಣವೆಂತಲಾದರೂ ಹೇಳಿ, ಒಳ್ಳೆಯವರು ಈಗಿಲ್ಲ
------------------------------------

೧೫೨         ಮಾಡಿದ್ದುಣ್ಣೋ ಮಹರಾಯ.

ಆಗಿದ್ದರು ಎಂತ ಹೇಳುವುದು ಹೇಗೆ ? ಯಾವಾಗಲೂ ಒಳ್ಳೆ
ಯವರೂ ಉಂಟು, ಕೆಟ್ಟವರೂ ಉಂಟು, ನೋಡು ಭಾ
ಗೀರಥಿ, ನನ್ನ ಅಮ್ಮ ಇದ್ದಳು. ಅವಳು ಯಾರಿಗೆ ಕಡ
ಮೆಯಾಗಿದಳು ? ನೀನೂ ಬಲೆಯಷ್ಟೆ ? ಎಂದಳು. ಆಗ
ಭಾಗೀರಥಮ್ಮ ನು- ಅಯ್ಯೋ ನಾನು ಅರಿಯೆನೆ ಅರುಂದ
ಮ್ಮನವರನ್ನು ? ಬೆಂಕಿಯಂಥಾ ಹೆಂಗಸು, ಇನ್ನು ಅಂಥವರ
ನ್ನು ಹುಟ್ಟಿದವರಲ್ಲಿಯೂ ಕಾಣೆ ಬೆಳೆಯುವವರಲ್ಲಿಯ ಕಾಣೆ,
ಎಂಬದಾಗಿ ಹೇಳಿದಳು. ಪುನಃ ವೆಂಕಮ್ಮನು ಅರುಂದಮ್ಮನ
ಕಥೆಯನ್ನು ಹೇಳಿದ್ದು ಹೇಗೆಂದರೆ: -

ನನ್ನ ಅಮ್ಮನ ಹೆಸರು ಅರುಂದಮ್ಮ ಎನ್ನುವರು.
ಅರಿಯದವರು ಅರವಿಂದಮ್ಮು ಎನ್ನುತಿದ್ದರು. ನಮ್ಮ ಹೆತ್ತ
ಯ್ಯನು ಹೇಳುತಿದ್ದರು. ನಾವೆಲ್ಲ ಹುಡುಗರು. ನಮ್ಮನ್ನು
ಕೂರಿಸಿಕೊಂಡು ಪ್ರಸ್ತಾಪ ಬಂದಾಗ ಹಳೇ ಕಥೆಯನ್ನೆಲ್ಲಾ
ಹೇಳುತ್ತಿದ್ದರು. ನಮ್ಮ ಅಮ್ಮನ ಚಾತಕವನ್ನು ನೋಡಿ ಅ
ವಳಿಗೆ ಅರುಂಧತಿ ಎಂಬ ಹೆಸರು ಸಲ್ಲುವುದು ಎಂದರಂತೆ.
ನಾಮಕರಣದಲ್ಲಿಯೂ ಅದೇ ಹೆಸರನ್ನೇ ಇಟ್ಟರಂತೆ. ಅವಳ
ನ್ನು ಅರುಂಧತಿಯನ್ನು ಎಂದು ಕರೆಯಲಾರದೆ ಎಲ್ಲರೂ ಅ
ರುಂದಮ್ಮ ಎಂದು ಕರೆಯುತಿದ್ದರು. ಅವಳು ಹುಟ್ಟಿದ ನಕ್ಷ
ತ್ರದ ಫಲದಿಂದ ಅವಳಿಗೆ ಈ ಹೆಸರನ್ನು ಇಟ್ಟರಂತೆ. ನ
ಮ್ಮ ಅಮ್ಮನು ಬಾಲ್ಯದಿಂದಲೂ ದೇವರು ಹಿರಿಯರು ಗುರು
ಗಳು ಇವರಲ್ಲಿ ಬಹು ಭಕ್ತಿಯನ್ನು ಇರಿಸಿಕೊಂಡಿದ್ದಳು. ಈ
ಭಕ್ತಿ ಅವಳು ಸಾಯುವವರೆಗೂ ಇತ್ತು. ತನಗೆ ಒಳ್ಳೇ 
----------------------------------

೧೫೩          ಮಾಡಿದ್ದುಣ್ಣೋ ಮಹರಾಯ.

ಸೀರೆ ಬೇಕು ಒಳ್ಳೆ ಒಡವೆ ಬೇಕು ಈ ತಿಂಡಿ ಬೇಕು
ಆ ಹೂವು ಬೇಕು ಎಂದು ಹೀಗೆಲ್ಲಾ ಹಠ ಮಾಡಿದವಳೇ
ಅಲ್ಲವಂತೆ. ಏಳು ವರುಷದ ಹುಡುಗಿಯಿಂದಲೂ ತನಗೆ ಒಳ್ಳೇ
ಗಂಡ ಬರಲಿ ಎಂದು ನಿತ್ಯವೂ ಬಹು ಭಕ್ತಿಯಿಂದ ಗೌರೀ
ಪೂಜೆಯನ್ನು ಮಾಡುತಿದ್ದಳಂತೆ. ಅದಕ್ಕೆ ಸರಿಯಾಗಿಯೇ
ಒಳ್ಳೆ ಗಂಡನೇ ಸಿಕ್ಕಿದ. ನಮ್ಮ ಅಪ್ಪ ವಿದ್ಯದಲ್ಲಿ ಎಂ
ಥಾ ದೊಡ್ಡವರೆನ್ನಿಸಿಕೊಂಡಿದ್ದರೋ ಗುಣದಲ್ಲಿಯೂ ಹಾಗೆಯೇ
ಇದ್ದರು. ಮೊದಲು ನಮ್ಮಪ್ಪ ಬಹು ಬಡವರು, ನಮ್ಮ
ತಾಯನ್ನು ಮದುವೆಯಾದಮೇಲೆ ಅವರಿಗೆ ಎರ್ಲ ಕೈಗೂಡಿ
ಮುಂಣು ಹಿಡಿದರೂ ಹೊನ್ನಾಗುತಾ ಬಂತಂತೆ, ನನ್ನು ತಾ
ಯಿಯನ್ನು ಕಂಡರೆ ನಮ್ಮ ಹೃನಿಗೆ ಬಹು ಪ್ರೇಮವಿತ್ತು.
ನೊಂದ ಬಾಯಲ್ಲಿ ನುಡಿಯುತಾ ಇರಲಿಲ್ಲ. ಇವಳ ಗುಣ
ವನ್ನೂ ನಡತೆಯನ್ನೂ ಕಂಡರೆ ಅತ್ತೆ ಮಾವಂದಿರಿಗೂ
ಎಷ್ಟೊ ವಿಶ್ವಾಸ, ನಮ್ಮ ಭಾಗದ ಲಕ್ಷ್ಮಿ ನಮ್ಮ ಮನೆ
ಗೆಬಂದು ಬೆಳಕು ಮಾಡಿದಳು. ರೂಪಿನಲ್ಲಿ ಸಾಕ್ಷಾತ್ ಆದಿ
ಲಕ್ಷ್ಮಿಯ ಹಾಗಿದಾಳೆ. ಅವಳ ನಡತೆಯ ಅದಕ್ಕೆ ಸಮ
ವಾಗಿಯೇ ಇದೆ, ಎಂದು ಕೊಂಡಾಡುತಿದ್ದರು. ಬೆಳಗ್ಗೆ ಉಷಃಕಾ
ಲಕ್ಕೆ ಎದ್ದು ಮನೆಯ ಕೆಲಸವನ್ನೆಲ್ಲ ಮುಗಿಸಿಕೊಂಡು ಮಡಿ
ಉಟ್ಟುಕೊಂಡು ಅಡಿಗೆ ಮಾಡುತಾಲೇ ನಿತ್ಯಗೌರೀಪೂ
ಜೆಯನ್ನೂ ಬೃಂದಾವನದ ಪೂಜೆಯನ್ನೂ ಮುಗಿಸಿ ಅತ್ತೆಮಾವಂದಿರಿ
ಗೂ ಗಂಡನಿಗೂ ನಮಸ್ಕಾರಮಾಡುತಿದ್ದಳು. ಸಾಯಂಕಾಲವಾದ
ಮೇಲೆಯೂ ಇದೇರೀತಿಯಾಗಿ ಮಾಡುತಿದ್ದಳು. ಇದೂ ಅಲ್ಲದೆ ನಿ
----------------------------------

೧೫೪         ಮಾಡಿದ್ದುಣ್ಣೋ ಮಹರಾಯ,.

ತ್ಯವೂ ಗಂಡನಕಾಲನ್ನು ತೊಳೆದು ಆ ತೀರ್ಥವನ್ನು ತಾನು
ತೆಗದುಕೊಂಡಹೊರತು ಊಟಮಾಡುತಿರಲಿಲ್ಲ. ಆ ತೀರ್ಧವ
ನ್ನು ಬೇರೇ ಒ೦ದು ಲೋಟಿಯಲ್ಲಿ ಇರಿಸಿಕೊಂಡಿದ್ದು , ಗಂಡ
ಊರಿಗೆ ಕೇರಿಗೆ ಹೋದಾಗ ಅದನ್ನು ತೆಗೆದುಕೊಳ್ಳು
ತಿದ ಳು, ಇವಳಿಗಿಂತ ಹಿರಿಯರಾದವರಿಗೆಲ್ಲರಿಗೂ ಇವಳ
ನ್ನು ಕಂಡರೆ ಪರಮಾಶ್ಚರವಾಗುತಿತ್ತು. ಎಲ್ಲರೂ ಅವಳಿಗೆ
ಹೆದರಿಕೊಳ್ಳುತಿದ್ದರು. ನಮ್ಮಮ್ಮನಿಗೆ ಆದ್ದು ಎರಡೇಮಕ್ಕ
ಳು. ನಾನು ಚೆಚ್ಚು ನಮ್ಮ ನೀಲಕಂರನೇ ಮುರಚಲು. ಇ
ನ್ನು ಮಕ್ಕಳಾಗಲೇ ಇಲ್ಲ. ಅವಳು ಆಡಿದ ಮಾತು ಎಂದಿಗೂ
ತಪ್ಪುತಿರಲಿಲ್ಲ.

ಒಂದು ಸಾರಿ ಮಗ್ಯಲಮನೆಯಲ್ಲಿ ಆ ಮನೆ ಅಳಿಯನಾ
ದ ಗೋಪಾಲನೆಂಬುವನು ಇದ್ದನು. ಇವನಿಗೆ ಬಹುದಿವಸಕ್ಕೆ
ಒಂದು ಗಂಡುಮಗುವಾಗಿತ್ತು. ಆ ಮನೆಗೂ ನಮ್ಮ ಮನೆ
ಗೂ ಮಧ್ಯೆ ಇದ್ದ ನಮ್ಮ ಗೋಡೆ ಬಿದ್ದು ಹೋಗ ಬಹುದಿವ
ಸದಿಂದಲೂ ಹಿಂಸೆಯಾಗಿತ್ತು. ನನ್ನ ಅಪ್ಪನು ಆ ಗೋಡೆ
ಯನ್ನು ಹಾಕಿಸಲು ಹದೀ ತೆಗೆಯಿಸಿದರು. ಆಗ ಆ ಗೋ
ಪಾಲನೆಂಬುವನು ಸರ್ಕಾರದಲ್ಲಿ ಫಿರ್ಯಾದುಮಾಡಿ ನಮ್ಮ ತಂ
ದೆಗೆ ಬಹಳ ಹಿಂಸೆ ಪಡಿಸಿದನು. ಗಂಡನಿಗೆ ಮನಸ್ಸು ಸಂ
ತೋಷವಾಗಿಲ್ಲದಿದ್ದ ಕಾರಣ ನಮ್ಮಮ್ಮನಿಗೆ ಬಹಳ ಅಸಮಾ
ಧಾನವಾಗಿತ್ತು. ಕೇವಲಮಾನಭಂಗವಾಗುವಂತೆ ಸಂದರ್ಭವನ್ನು
ತಂದಿದ್ದು ಗೋವಾಲನು ಹಿಂಸೆಯನ್ನು ಮಾಡಿದನು. ಈ ವಿ
ವಾದದಲ್ಲಿ ಗಂಡನಿಗೆ ಮಾನಹೋದೀತಲ್ಲಾ ಎಂಬ ಚಿಂತೆಯಿಂ
------------------------------

        ಮಾಡಿದ್ದುಣ್ಣೋ ಮಹರಾಯ.      ೧೫೫
       
ದ ನನ್ನ ತಾಯಿಯು ನೆರೆಮನೆಯೊಳಕ್ಕೆ ಹೋಗಿ-ಗೋ
ಪಾಲ, ನೀನು ಚಿಕ್ಕವನು, ಆದರೂ ಚಿಂತೆಯಿಲ್ಲ, ಹೇಳಿದವ
ರಮಾತನ್ನು ಕೇಳಿ ಮಾನಿಷ್ಟರಾದ ನಮ್ಮ ಮಾನವನ್ನು
ಕಳೆಯಬೇಡ. ನಿನ್ನ ಕಾಲಿಗೆ ನಮಸ್ಕಾರಮಾಡುತೇನಪ್ಪ, ಎಂ
ದಳು. ಅದಕ್ಕೆ ದುರುಳನಾದ ಆ ಗೋಪಾಲನು ಈ ಬಿ
ನ್ನಾಣವನ್ನು ಯಾರಿಗೆ ಕಲಿಸುತೀಯೆ? ಸೂಳೆಯಹಾಗೆ ಬಂದು
ನಿಂತು ಕೈ ಬಾಯಿ ತಿರುಗಿಸಿಕೊಂಡು ಮಾತನಾಡುವುದಕ್ಕೆ ಬಂ
ದೆಯ ? ಎಂದನು. ಅದನ್ನು ಕೇಳಿದ ಕೂಡಲೆ ಅರುಂದಮ್ಮ
ನ ಕಂಣಿನಲ್ಲಿ ನೀರು ಬಂತು. ಆ ದುಃಖವನ್ನು ಸಹಿಸಿಕೊಂ
ಡು ನಮ್ಮ ತಾಯಿಯು-ಎಲಾ ಗೊಪಾಲ, ನಾನು ನಿನ್ನ
ನ್ನು ಬೈಯುವುದಿಲ್ಲ. ನಿನ್ನಲ್ಲಿ ಸತ್ಯವಿದ್ದರೆ ನಮಗೆ ಹುಟ್ಟು
ವ ಕೂಳು ಹುಟ್ಟಬೇಡ; ನನ್ನೆರಡುಮಕ್ಕಳೂ ಈಗಲೇ ಸು
ಟ್ಟು ಬೂದಿಯಾಗಲಿ. ನಮ್ಮಲ್ಲಿ ಸತ್ಯವಿದ್ದರೆ ನಾನು  ಹೇ
ಳುತೇನೆ ಕೇಳು, ಈ ಸತ್ಯನಾರಾಯಣ ಸಾಕ್ಷಿಯಾಗಿದ್ದಾನೆ.
ನಾನು ಪತಿವ್ರತೆ. ನಿನ್ನ ಎರಡು ಕಾಲಿಗೂ ಕುಷ್ಟರೋಗ ಬಂ
ದು ಬಿದ್ದು ಹೋಗುತ್ತೆ. ನಿನ್ನ ನಾಲಿಗೆ ಸೆಳೆದುಹೋಗುತ್ತೆ,
ನೀರೂ ನೆರಳೂ ಇಲ್ಲದಕಡೆ ನೀನು ಪ್ರಾಣಬಿಟ್ಟು ಅಂತರ್ಪಿ
ಶಾಚಿಯಾಗುತೀಯೆ, ಎಂದು ವಿಶೇಷವಾಗಿ ರೌದ್ರಾಕಾರದಿಂದ
ಶಾಪವನ್ನು ಕೊಟ್ಟಳು. ಹಾಗೆ ಎಂದಹಾಗೆಯೇ ಆ ಗೋ
ಪಾಲನಿಗೆ ಕೆಲವು ಕಾಲದ ಮೇಲೆ ಜ್ವರ ಬಂತು. ಕಾಲು
ಗಳೆರಡೂ ಬಾತುಕೊಂಡು ಒಡೆದು ನೀರು ಸುರಿ
ಯುವುದಕ್ಕೆ ಮೊದಲಾಯಿತು. ಕೊನೆಗೆ ಎರಡುಕಾಲೂ
-------------------------------

೧೫೬         ಮಾಡಿದ್ದುಣ್ಣೋ ಮಹರಾಯ.

ಹುಂಣಾಗಿ ಎರಡು ಪಾದಗಳೂ ಕೊಳೆತು , ಹುಳುಬಿದ್ದು
ಸಾಯಂಕಾಲ ಮಳೆಸಹಿತ ಕಳಚಿಕೊಂಡು ಒಂದುಪಾದ
ಬಿದ್ದೇ ಹೋಯಿತು. ಆ ರಾತೆಯೇ ಗೋಪಾಲನಿಗೆ
ರಣಸನ್ನಿಯಾಗಿ ನಾಲಿಗೆ ಒಳಕ್ಕೆ ಸೇದಿಕೊಂಡು ಹೋಯಿ
ತು. ವೈದ್ಯರಿಗೆ ತೋರಿಸಬೇಕೆಂದು ಅವನನ್ನು ಗಾಡಿಯ
ಮೇಲೆ ಹಾಕಿಕೊಂಡು ಕರೆದುಕೊಂಡು ಹೋಗುತ್ತಿರುವಾಗ
ರಾಮಸಮುದ್ರ ಬಿಟ್ಟು, ಚಾಮರಾಜನಗರಕ್ಕೆ ಹೋಗುವ ಮಧ್ಯ
ಮಾರ್ಗ ದಲ್ಲಿ ಸಂಕಟ ಹೆಚ್ಚಾಗಿ ಗಾಡೀಮೇಲೆಯೇ ಗೋಪಾಲ
ನಿಗೆ ಪ್ರಾಣಹೋಯಿತು. ಇನ್ನೇನು ದೃಷ್ಟಾಂತಬೇಕು ?

ಇದೂ ಅಲ್ಲದೆ ಇನ್ನೊಂದು ವಿಚಿತ್ರ ನಡೆಯಿತು. ನಮ್ಮ
ಗದ್ದೆ ಮಾಡುತಿದ್ದ ವರದನೆಂಬ ಶೂದ್ರನು ಒಂದುಸಾರಿ ಎಂಟು
ಕಂಡಗ ಬತ್ತವನ್ನು ತಂದು ನಮ್ಮ ಮನೆಯಲ್ಲಿ ಅಳೆದು
ಹಾಕಿದನು. ನಮ್ಮಮ್ಮನೇ ನಿಂತುಕೊಂಡು ಅಳಸಿಕೊಂಡ
ಳು. ನಮ್ಮ ಅಪ್ಪ ಆಗ ಊರಲ್ಲಿರಲಿಲ್ಲ. ನಂಜನಗೂಡಿಗೆ
ಹೋಗಿದ್ದರು. ಅವರು ಬಂದಮೇಲೆ ಉಳಿದ ಹನ್ನೆರಡು
ಕಂಡಗವನೂ ತಂದುಕೊಡೆಂದು ಆ ಗೌಡನಿಗೆ ವರಾತುಮಾ
ಡಿದರು. ಅದಕ್ಕೆ ಅವನು ಇಪ್ಪತ್ತು ಕಂಡಗವನ್ನೂ ಅಳತೆ
ಮಾಡಿ ನಮ್ಮ ಮನೆಯಲ್ಲಿ ನನ್ನ ಅಮ್ಮನ ವಶಕ್ಕೆ ಕೊ
ಟ್ಟಿದೇನೆಂದು ಸುಳ್ಳ ಹೇಳಿದ. ನಮ್ಮ ಹೃನು ಅವನನ್ನು
ನಮ್ಮ ಮನೆಗೆ ಕರೆದುತಂದು ನನ್ನು ತಾಯಿಯ ಎದು
ರಿಗೆ ಕೇಳಿದರು. ಅವನು ಸ್ವಲ್ಪವೂ ಅಂದೇಶಪಡದೆ, ನಾ
ನು ಇಪ್ಪತ್ತು ಕಂಡಗವನ್ನೂ ಅಳತೆಮಾಡಿ ಈ ಹಜಾರದಲ್ಲಿ
----------------------------------

        ಮಾಡಿದುಣೋ ಮಹಾರಾಯ.     ೧೫೭
       
ನಿಮ್ಮ ಹಟ್ಟಿಯಲ್ಲಿಯೇ ಸುರಿದುಹೋದೆನಲ್ಲ ಎಂದು ಹೇ
ಳಿದನು. ಅದಕ್ಕೆ ನಮ್ಮ ತಾಯಿಯು--ಎಲಾ, ಸುಳ್ಳಹೇಳಿ
ದೀಯ. ನೀನು ಹುಟ್ಟಿದ ೬೦ ವರುಷಕ್ಕೆ ನಿನಗೆ ನೀನು
ಎತ್ತಿಕೊಂಡಿರುವ ಒಂದು ಗಂಡುಮಗುವಾಗಿದೆ. ನಿನ್ನ ಸು
ಳ್ಳಿಗೆ ಆ ಮಗು ಸಾಕ್ಷಿಯಾಗಿರಲಿ, ಈ ಮಾತನ್ನು ತಿಳಿ
ದುಕೊ ಎಂದಳು. ಆ ಶೂದ್ರನು ಬಾಯಿಗೆ ಬಂದಹಾಗೆ ಆಡಿಕೊ
ಳ್ಳುತಾ ಮಗುವನ್ನು ಎತ್ತಿಕೊಂಡು ಮನೆಗೆ ಹೋದನು. ಒ೦ದು
ದಿನ ಇವನ ಹೆಂಡತಿಯ ಮಗುವೂ ರಾತ್ರೆ ಮಲಗಿರುವಾಗ ಒಳಗೆ
ಗೆದ್ದಲುತಿಂದು ಹೋಗಿದ್ದ ಒಂದು ತೊಲೆ ಮುರಿದು
ಮಗುವಿನ ಮೇಲೆ ಬಿತ್ತು. ಆ ಕ್ಷಣದಲ್ಲಿಯೇ ಮಗು ಸತ್ತು
ಹೋಯಿತು. ಆ ಹೆಂಗಸಿಗೆ ಅರೆಜೀವವಾಯಿತು. ಅರುಂದ
ಮ್ಮನ ಶಾಪದಿಂದ ಹೀಗಾಯಿತೆಂದು ಆ ವೂರಲ್ಲಿಯ ಹ
ತ್ತರಿರುವ ಗ್ರಾಮಗಳಲ್ಲಿಯೂ ವದಂತಿ ಹರಡಿಕೊಂಡಿತು.

ಇದೂ ಅಲ್ಲದೆ ಆ ಸುತ್ತಲಹಳ್ಳಿಗಳಲ್ಲಿ ಯಾರಿಗೆ ಯಾವ
ರೋಗಬರಲಿ, ಏನು ಸಂಕಟವಾಗಲಿ, ನಮ್ಮ ಮನೆಗೆ ರೋಗಿಗ
ಳನ್ನು ಕರೆದು ತರುತಿದ್ದರು. ನಮ್ಮಮ್ಮ ಬೇವಿನಸೊಪ್ಪನ್ನು
ತೆಗೆದುಕೊಂಡು ಮಂತ್ರಹಾಕಿ ಮೂರುಸಾರಿ ನಿವಾಳಿಹಾಕಿದರೆ
ಅವರ ರೋಗ ಹೋಗುತಿತ್ತು. ಆ ಸುತ್ತಿನ ಜನರೆಲ್ಲರೂ ನ
ಮ್ಮಮ್ಮನ ಹೆಸರೆತ್ತಿದ ಕಡೆಗೆ ಕೈ ಮುಗಿಯುತ್ತಿದ್ದರು. ನಮ್ಮ
ತಾತನೂ ನಮ್ಮ ಅಜ್ಜಿಯ ಮೊದಲೇ ತೀರಿಹೋದರು. ಕೆ
ಲವು ವರುಷಗಳಮೇಲೆ ನಮ್ಮ ತಂದೆಗೆ ಜ್ವರ ಬಂತು. ಅವ
ರೂ ಕಾಲವಾದರು. ಅವರಿಗೆ ಆಸಾರಿ ಗುಣವಾಗುವುದಿಲ್ಲವೆಂ
---------------------------------

೧೫೮         ಮಾಡಿದ್ದುಣ್ಣೋ ಮಹರಾಯ

ದು ನನ್ನ ತಾಯಿ ಹೇಗೋ ಗೊತ್ತು ಮಾಡಿಕೊಂಡಿದ್ದಳು.
ಕಂಣಾಗಾಲಕ್ಕೆ ಯಾರ ಕೈಯಲ್ಲಿಯೋ ಒಳಗೇ ಹೇಳಿ ಕಳುಹಿಸಿ ಆ
ಲ್ಲಿಂದ ಅಪರಕರ್ಮವನ್ನು ಚೆನ್ನಾಗಿ ಬಲ್ಲ ಬ್ರಾಹ್ಮಣರನ್ನು ಕರಿ
ಸಿದಳು. ನನ್ನು ಸೃನು ರಾತ್ರೆ .ಒ೦ದುಗಂಟೆಗೆ ಸಾಯುತಾರೆ
ಎನ್ನುವಾಗ ಆ ದಿನ ಸಾಯಂಕಾಲವೇ ನನ್ನನ್ನೂ ನನ್ನು ನೀ
ಲಕಂಠನನ್ನೂ ಕರೆದು-ನೀಲಕಂಠ, ಅಕ್ಕನ ಕೈಬಿಡಬೇಡ, ವೈ
ಧವ್ಯವನ್ನು ಅನುಭವಿಸುವುದು ಅವಳ ಹಣೆಯಲ್ಲಿ ಬರೆದಿತ್ತು,
ಅನುಭವಿಸಿಯೇ ತೀರಬೇಕು. ನಿನಗೆ .೨೫ ವರುಷವಾದರೂ
ಏನೂ ಅರಿತವನಲ್ಲ. ನಿನಗಿಂತ ಐದು ವರುಷಕ್ಕೆ ವೆಂಕ ದೊ
ಡ್ಡವಳಾದರೂ ಏನೂ ಅರಿತವಳಲ್ಲ. ನೀವಿಬ್ಬರೂ ಸೇರಿ ಮನೆ
ಯನ್ನು ನಿಲ್ಲಿಸಬೇಕು. ಕೆಟ್ಟ ಹೆಸರನ್ನು ಎಲ್ಲಿಯಾದರೂ ತಂದೀ
ರಿ. ಈ ಬೀಗದಕ್ಕೆ ಹಿಡಿ, ಯಜಮಾನರಿಗೆ ಜ್ಞಾನಹೋಯಿ
ತು, ಎಲ್ಲಾ ಸೂಚನೆಯೂ ಕೆಟ್ಟದಾಗಿದೆ, ನನ್ನ ಗತಿಯನ್ನು
ನಾನು ನೋಡಿಕೊಳ್ಳುತ್ತೇನೆ. ನಿಮ್ಮ ತಂದೆತಾಯಿಗಳ ಹ೦ಬ
ಲನ್ನು ಇಲ್ಲಿಗೆ ಬಿಡಿ ಎಂದು ಅರುಂದಮ್ಮನು ಬುದ್ದಿವಾದವನ್ನು
ಹೇಳಿದಳು. ನನಗಾಗಲಿ ನನ್ನ ತಮ್ಮ ನಿಗಾಗಲಿ ಯಾವ ಅನು
ಭವವೂ ಇಲ್ಲ. ನಮ್ಮ ಅಮ್ಮನಮಾತನ್ನು ಕೇಳಿ ನಮ್ಮಿಬ್ಬರಿ
ಗೂ ಆಶ್ಚರವಾಯಿತು. ಆದರೂ ನಮ್ಮಮ್ಮನು ಆದಿನ ರಾ
ತ್ರೆ ನನ್ನ ತಮ್ಮ ನಿಗೆ ಅನ್ನವನ್ನು ಬಡಿಸಿ ನನಗೆ ಏನೋ ಫ
ಲಾಹಾರಕ್ಕೆ ಕೊಟ್ಟಳು. ನನಗೆ ಏನೂ ಸೇರಲಿಲ್ಲ. ನಾವು
ಜಾಗ್ರತೆಯಲ್ಲಿ ಎದ್ದು ಕೈ ತೊಳೆದುಕೊಂಡೆವು. ಆಗ ಅಮ್ಮ ನ
ನಮ್ಮಿಬ್ಬರನ್ನೂ ಕರೆದು ಹತ್ತಿರ ಕೂರಿಸಿಕೊಂಡು ತಲೆಯನ್ನು
------------------------------------

        ಮಾಡಿದ್ದುಣ್ಣೋ ಮಹಾರಾಯ.           ೧೫೯

ತಡವರಿಸಿ, ಕಂಣಿನಲ್ಲಿ ಸ್ವಲ್ಪ ನೀರನ್ನು ಹಾಕಿ ನಮ್ಮಿಬ್ಬರ
ನ್ನೂ ಬಾಚಿ ತಬ್ಬಿಕೊಂಡಳು. ತರುವಾಯ ನಮ್ಮ ಹಂಬಲ
 ನ್ಯೂ ಗೃಹಕೃತ್ಯದ ಸಮಾಚಾರವನ್ನೂ ಬಿಟ್ಟು ಗಂಡನ ಹಾ
ಸಿಗೇಮಗಲಲ್ಲಿ ಹೋಗಿ ಕೂತುಕೊಂಡು ಅವರಿಗೆ ಬೇಕಾದಾಗ
ಹಾಲನ್ನೊ ನೀರನ್ನೋ ಹಾಕುತಾಇದ್ದಳು, ಆ ರಾತ್ರೆಯೇ
ನಮ್ಮ ತಂದೆಗೆ ಎಣಹೋಯಿತು. ಅವರು ಬಹಳ ಯೋಗ್ಯ
ರಾದ್ದರಿಂದ ಸನ್ಯಾಸವನ್ನು ಕೊಡಿಸಬಹುದೆಂದು ಬಂದು ಕಾದಿ
ದ್ದ ಕೆಲವು ಬ್ರಾಹ್ಮಣರು ಹೇಳಿದರು. ಆಗ ನನ್ನ ತಾಯಿ
ಯು-ಅವರಿಗೆ ಜ್ಞಾನಹೋಗಿದೆ. ನಾಲಿಗೆ ಬಿದ್ದು ಹೋಗಿದೆ.
ಮಂತ್ರೋಚ್ಚಾರಣೆಗೆ ಮಾರ್ಗವಿಲ್ಲ. ಆದಕಾರಣ ಆಪತ್ಸನ್ಯಾ
ಸವನ್ನು ಕೊಡಿಸುವ ಕಾಲ ಮೀರಿತು, ಎಂದು ಹೇಳಿದಳು.
ಪತಿಗೆ ಪ್ರಾಣಹೋದಮೇಲೆ ಆತನ ಪಾದವನ್ನು ಸ್ವಲ್ಪವೂ
ಬಿಡದೆ ಹಿಡಿದುಕೊಂಡೇ ಇದಳು. ಅರೆಗಳಿಗೆಹೋದಮೇಲೆ ಕಂ
ಣಾಗಾಲದಿಂದ ಬಂದಿದ್ದ ಪುರೋಹಿತರನ್ನು ಕರೆದು-ಸ್ವಾಮಿ
ನಾನು ನನ್ನ ಪತಿಯನ್ನು ಬಿಟ್ಟಿರಲಾರೆ ; ನನ್ನ ಪತಿಯಸಂಗ
ಡಲೇ ನಾನು ಅವ್ರ ಪ್ರವೇಶವನ್ನು ಮಾಡಬೇಕೆಂದು ನಿಶ್ಚೈಸಿ
ದೇನೆ. ಆ ಕರ್ಮಕ್ಕೆ ಬೇಕಾದ ಗ್ರಂಥಗಳನ್ನೆಲ್ಲಾ ಸಿದ್ದಮಾ
ಡಿಕೊಳ್ಳಿ. ಬೇಕಾದ ಸಾಮಾನುಗಳನ್ನು ಜಾಗ್ರತೆಯಾಗಿ ತರಿಸಿ
ಇರಿಸಿಕೊಳ್ಳಿ. ಕಾಲಮೀರಿಹೋಗುವಂತೆ ಮಾಡಬೇಡಿ ಎಂದು
ಹೇಳಿದಳು. ಆಗ ಈ ಮಾತನ್ನು ನಾನೂ ನನ್ನ ತಮ್ಮನೂ
ಕೇಳಿ ನನಗೆ ದುಃಖ ಉಬ್ಬಿ ಉಬ್ಬಿ ಬಂತು. ನಾವು ತಡೆ
ಯಲಾರದೆ ಹೋದೆವು,-ಆನ್ನು ಯಜಮಾನರಂತೂ ಈ ಲೋ
-------------------------------

೧೬೦         ಮಾಡಿದ್ದುಣ್ಣೋ ಮಹರಾಯ.

ಕವನ್ನು ಬಿಟ್ಟರು. ನೀನೂಹೋಗಿ ನಮ್ಮನ್ನು ಶುದ್ಧವಾಗಿ
ತಬ್ಬಲಿಗಳನ್ನು ಮಾಡಬೇಡ ಎಂದು ಎಳೇಮಕ್ಕಳಹಾಗೆ
ಅತ್ತೆವು. ನಮ್ಮಮ್ಮನು ಪುನಃ ನಮ್ಮ ಸಂಗಡ ಇನ್ನೊ೦
ದು ಮಾತನ್ನು ಕೂಡ ಆಡಲಿಲ್ಲ. ಗಂಡನವಾದವನ್ನು ಬಿಟ್ಟು
ಅಡ್ಡಾಡಲಿಲ್ಲ. ಪುರೋಹಿತರು ಬಂದು-ತಾಯಿ ಸುಬೇದಾರ
ರಿಗೆ ಮೊದಲೇ ಈ ಸಂಗತಿಯನ್ನು ತಿಳಿಸಬೇಕಂತೆ ಎಂದರು.
ಆಗ ನನ್ನಮ್ಮನು- ಬೇಕಾದವರಿಗೆ ತಿಳಿಸಿ, ಎಂದಳು.
ಹೀಗೆ ಸಹಗಮನ ಮಾಡಿದರೆ, ಸರ್ಕಾರದಿಂದ ಅರಿಶಿನ ಕುಂ
ಕುಮ, ತಾಂಬೂಲ, ಹೂವು, ದೋತ್ರದ ಜೊತೆ, ಹಳದೀ
ಪತ್ತಲ ಇವೇ ಮೊದಲಾದ್ದನ್ನು ಕೊಡಿಸುತ್ತಿದ್ದದ್ದೂ ಅಲ್ಲದೆ,
ಗಂಡನಸಂಗಡಲೇ ಜೀವಸಹಿತ ಚಿತಿಯನ್ನು ಏರಿದ ಹೆಂಗಸು
ಉರಿಯನ್ನು ತಡೆಯಲಾರದೆ ಈಚೆಗೆ ಎದ್ದು ಓಡಿಬಂದಲ್ಲಿ
ರಾಜ್ಯಕ್ಕೆ ಹಾನಿ ತಟ್ಟುವುದೆಂದು ಅದಕ್ಕೆ ಅಡ್ಡಿಯಾಗಿ
ರುವ ಹಾಗೆ ಮದ್ದು ತುಂಬಿದ ಗಡಿಗೆಗಳು ಬಾಣಗಳು ಎಂ
ಣೆತುಪ್ಪದ ಗಡಿಗೆಗಳು ಇವುಗಳೆಲ್ಲವನ್ನೂ ಚಿತಿಯ ಮಧ್ಯ
ಭಾಗದಲ್ಲಿಯ ಪಕ್ಕಗಳಲ್ಲಿಯೂ ಇರಿಸುವುದಕ್ಕಾಗಿ ಬೇಕಾ
ದನ್ನೆಲ್ಲಾ ಕೊಡಿಸುತ್ತಾ ಇದ್ದರು. ಆ ಸಾಮಾನುಗಳೆಲ್ಲವ
ನ್ನೂ ತೆಗೆಯಿಸಿಕೊಂಡು ತಾಲ್ಲೂಕಿನ ವಿಶಿಷ್ಟ ಉದ್ಯೋಗ
ಸ್ಥರೂ ಬಂದರು. ಬೆಳಗ್ಗೆ ಐದು ಗಳಿಗೆಯೊಳಗಾಗಿ ಸುತ್ತ
ಮುತ್ತಿನ ಗ್ರಾಮದ ಜನರೆಲ್ಲಾ ಬಂದು ನೆರೆಯಿತು. ನನ್ನ
ಕಂಣಿಗೆ ೨೦-೨೫ ಸಾವಿರದಮೇಲೆ ಜನ ಬಂದು ಸೇರಿದ್ದ 
------------------------------------

        ಮಾಡಿದ್ದುಣ್ಣೋ ಮಹಾರಾಯ.   ೧೬೧

ಹಾಗೆ ತೋರಿತು, ಮುಂದಿನ ಕರ್ಮ ನಡೆಯುವುದಕ್ಕೆ ಎ
ಲ್ಲಾ ಸಿದ್ಧವಾಯಿತು.

ನಮ್ಮ ಅಮ್ಮನು ಲೇಶವೂ ಮನಸ್ಸಿನಲ್ಲಿ ಕಳವಳಗೊ
ಳ್ಳದೆ ಸ್ನಾನವನ್ನು ಮಾತ್ರ ತುಂಬಾ ಅರಿಶಿನವನ್ನು ತೊಡೆ
ದುಕೊಂಡು ಹಳದೀಪತ್ತಲವನ್ನು , ಎ೦ದೂ ಇಡುವಂತೆ ಎರ
ಡು ಬೆಟ್ಟಗಲಕ್ಕೆ ಹಣೆಗೆ ಕುಂಕುಮವನ್ನು ಇಟ್ಟು, ಅದರ
ಕೆಳಗೆ ಚಂದ್ರವನ್ನು ಹತ್ತಿಸಿಕೊಂಡು ಹೂಮುಡಿದುಕೊಂಡು
ಗಂಧವನ್ನು ತೊಡೆದುಕೊಂಡು ಬ್ರಾಹ್ಮಣರಿಗೆ ಬೇಕಾದ ದಾನ
ಗಳನ್ನು ಕೊಟ್ಟು ಮುತ್ತೈದೆಯರಿಗೆ ಅರಿಶಿನ ಕುಂಕುನು
ಗಂಧ ಹುವು ಸೀರೆ ಕುಪ್ಪಸ ಮರದ ಬಾಗಿನ ಫಲದಾನ ದಕ್ಷಿ
ಣೆ ತಾಂಬೂಲ ಮೊದಲಾದ್ದಲ್ಲೆನ್ನೂ ಕೊಟ್ಟು ಪುರೋಹಿ
ತರು ಹೇಳಿದ ವಿಧಿಗಳನ್ನೆಲ್ಲಾ ಅನುಸರಿಸಿ ಮಾಡಬೇಕಾದ
ಕರ್ಮಗಳನ್ನು ಮಾಡಿ ಚಿಕ್ಕವರನ್ನೆಲ್ಲಾ ಹರಸಿ ದೊಡ್ಡವರಿ
ಗೆಲ್ಲಾ ನಮಸ್ಕಾರಮಾಡಿ ಅವರ ಅಪ್ಪಣೆಯನ್ನು ಪಡೆದು
ಹೂವಿನಮಾಲೆಯನ್ನು ಹಾಕಕೊಂಡು ಕೈಯಲ್ಲಿ ನಿಂಬೆ ಹಂ
ಣುಗಳನ್ನು ಹಿಡಿದು ಅಮ್ಯಾಲೆ ಚಂದಾಡುತಾ ನಿಂತಳು.
ನನ್ನ ತಂದೆಯನ್ನು ಚಿತಿಯ ಮೇಲೆ ಮಲಗಿಸಿ ಅದನ್ನು ಎ
ತ್ತಿದರು, ಚಿತಿಯು ಮಿನಿ೦ದ ಒ೦ದು ವಾಸಸ್ಸನ್ನು ತಂ
ದು ನನ್ನಮ್ಮನ ಕತ್ತಿಗೆ ಹಾಕಿದರು. ಒಂದು ಕೈಯಲ್ಲಿ
ಗಂಡನ ಪಾದವನ್ನು ಹಿಡಿದು ನೊಂದು ಕೈಯಲ್ಲಿ ನಿಂಬೆ
ಹಂಣಿನಿಂದ ಅಮ್ಮಾಲೆ ಚೆಂಡ್ಡಾತುತಾ ಅಮ್ಮ ತೆರಳಿದಳು, ಈ
ಮಹತ್ತನ್ನು ನೋಡುವುದಕ್ಕೆ ಗ್ರಾಮಾಂತರಗಳಿಂದ ಮುಂದಿ
--------------------------------------

೧೬೨        ಮಾಡಿದ್ದುಣ್ಣೋ ಮಹರಾಯ.

ಗುಂಪು ಗುಂಪಾಗಿ ಬರುತ್ತಲೇ ಇತ್ತು. ಚಿತಿ ಒಡ್ಡಿ
ಸಿದ್ಧವಾಗಿತ್ತು, ಸ್ಮಶಾನದಲ್ಲಿ ಮಾಡಬೇಕಾದ ಕರ್ಮಗಳೆಲ್ಲ
ವೂ ಮುಗಿದ ತರುವಾಯ ಶವವನ್ನು ಚಿತಿಯಮೇಲಿಟ್ಟರು.
ಅದರಮೇಲೆ ಗೊತ್ತಾದ ಸ್ಥಾನದಲ್ಲಿ ನಮ್ಮಮ್ಮ ನನ್ನೂ ಮಲ
ಗಿಸಿದರು, ಸಹಗಮನ ಮಾಡುವ ಸತಿಯು ಬೆಂಕಿಯನ್ನು
ತಡೆಯಲಾರದೆ ಚಿತ್ತ ಚಂಚಲವಾದಾಗ್ಯೂ ಅವಳು ಎದ್ದು ಈ
ಚೆಗೆ ಬಾರದಂತೆ ಬೇಕಾದ ಕಟ್ಟುಗಳನ್ನು ಹಾಕಿ ಭಾರವನ್ನು
ಹೇರಿದರು. ಅಗಿಯು ನಾಲ್ಕು ದಿಕ್ಕಿನಲ್ಲಿ ಹತ್ತಿಕೊಳ್ಳು
ವುದಕ್ಕೆ ಮೊದಲಾಯಿತು. ಆ ಚಿತಿಯ ಮೇಲೆ ದೂರದಿಂದ ಎಂ
ಣೆಯನ್ನು ಆಗಾಗ್ಗೆ ಚೆಲ್ಲುತ್ತಾ ಬಂದರು. ಮಹಾ ಪತಿವ್ರತೆ ಎಂ
ಬ ಕೂಗೂ ಜನರ ಹಾಹಾಕಾರವೂ ಹೆಚ್ಚಾಯಿತು. ದಾರಿಯು
ದಕ್ಕೂ ನಮ್ಮನ್ನು ಹೆಜ್ಜೆ ಇಟ್ಟುಕೊಂಡು ಬಂದಳದ ದೂ
ಳನ್ನು ಗೋರಿಗೋರಿ ತೆಗೆದು ಕಂಣಿಗೆ ಒತ್ತಿಕೊಳ್ಳುವವರು ಎ
ಷ್ಷೋ, ಹಣೆಗೆ ಇಟ್ಟುಕೊಳ್ಳುವವರೆಷ್ಟೋ, ಜಯಜಯ ಮಹಾ
ತಾಯಿ ಆದಿಲಕ್ಷ್ಮಿ ಜಯಜಯ, ಎಂದು ಕೂಗತಕ್ಕವರೆಷ್ಟೋ,
ಇಂಥಾ ಮಹಾತ್ಮಳು ಹೋದಳಲ್ಲಾ ಎಂದು ಅಷ್ಟು ದುಃಖ
ದಿಂದಲೂ ಅಷ್ಟು ಭಕ್ತಿಯಿಂದಲೂ ಕಂಣಿನಲ್ಲಿ ನೀರ ಹಾಕುತಾ
ಗೊಳ್‌ ಎನ್ನುವವರೆಷ್ಟೋ , ಗೊತ್ತಿಲ್ಲದ ಹಾಗೆ ಕೋಲಾಹಲ ಹು
ಟ್ಟಿತು. ಅಲ್ಲಿದ್ದ ಎಲ್ಲರ ದೃಷ್ಟಿಯ ಆ ಚಿತಿಯಮೇಲೆ ನೆ
ಟ್ಟು ಹೋಗಿತ್ತು. ಆದರೆ ಆಗ ಅದ್ಭುತವಾದ ಸಂಗತಿಯೊಂದು
ನಡೆಯಿತು.
ಅಲ್ಲಿ ನೆರೆದಿದ್ದ ಜನವೆಲ್ಲಾ ನೋಡುತಿರುವಾಗಲೇ ಸ್ವಲ್ಪ
---------------------------------

        ಮಾಡಿದ್ದುಣ್ಣೋ ಮಹರಾಯ.    ೧೬೩ 
       
ವಾಗಿ ಚಿತಿ ಅಲುಗಿತು. ಅದರಮೇಲೆ ಹೇರಿದ ಸೌದೆಯ ಭಾ
ರವೂ ಕಲ್ಲುಗಳ ಭಾರವೂ ಯಾವುದೂ ನಿಲ್ಲಲಿಲ್ಲ. ಆರುಂಧತಿಗೆ
ಸಮಾನವಾದ ನಮ್ಮ ಅಮ್ಮನು ತಟ್ಟನೆ ಎದ್ದಳು. ಈಕೆ ಚಿತಿ
ಯಮೇಲೆ ಎದ್ದ ಕೂಡಲೆ, ರಾಜ್ಯಕ್ಕೆ ದೊಡ್ಡ ವಿಪತ್ತು ಬಂತೆಂ
ದು ಯೋಚಿಸಿ ಚಿತಿಯ ಸಮೀಪದಲ್ಲಿ ಇದೇ ಕೆಲಸಕ್ಕಾಗಿ ಕಾ
ದುಕೊಂಡಿದ್ದ ಜನರೆಲ್ಲಾ ಅವಳನ್ನು ಅಲ್ಲಿಯೇ ಬೆಂಕಿಯೊಳ
ಕ್ಕೆ ತಳ್ಳಬೇಕೆಂದು ಯತ್ನಿಸಿದರು. ಅಲ್ಲಿ ಮಾಮಲೇದಾರ
ಮೊದಲಾದ ಉದ್ಯೋಗಸ್ಕೃರೂ ಪುರೋಹಿತ ಮೊದಲಾದ ವೈ
ದಿಕರೂ ಇತರರೂ ಸಹಾ-ಅಯ್ಯೋ ಏನೋ ವಿಪರೀತವಾಯಿ
ತು ಎಂದು ಕಾಗಿಕೊಂಡರು. ಅಲ್ಲಿ ನೆರೆದಿದ್ದ ಗುಂಪೆಲ್ಲಾ
ಗಡಗಡನೆ ನಡುಗಿಹೋಯಿತು. ಆದರೆ ಆ ಅದ್ಭುತವನು,
ಏನಹೇಳಲಿ ? ಕ್ಷಣಮಾತ್ರದಲ್ಲಿ ಆ ಕಡೆಯಿಂದ ಈ ಕಡೆಗೆ ತಿರು
ಗಿ ನೋಡುವಷ್ಟರಲ್ಲಿಯೇ ನನ್ನ ತಂದೆಯ ಕಾಲಮೇಲೆ
ನಮ್ಮಮ್ಮನು ತಲೆಯನ್ನು ಇರಿಸಿ ಮಲಗಿಕೊಂಡಿದ್ದಳು.
ಕೂಡಲೆ ಅವಳ ತಲೆ ಸಿಡಿದುಹೋಯಿತು. ಸ್ವಲ್ಪ ಹೊತ್ತಿನಮೇ
ಲೆ ನಮ್ಮ ತಂದೆಯ ತಲೆ ಸಿಡಿಯಿತು. ಈ ಆಶ್ಚರ್ಯವನ್ನು
ಕಂಡು ಅಲ್ಲಿದ್ದ ಜನರೆಲ್ಲರೂ ನಮ್ಮ ತಾಯಿಯ ಹೆಸರನ್ನು
ಹೇಳಿ ನಮಸ್ಕಾರ ಮಾಡಿದರು. ಇವರಿಬ್ಬರನ್ನೂ ಸುಟ್ಟಕಡೆ
ಜೋಡಾಗಿ ಬೃಂದಾವನವನ್ನು ಜನರು ತಾವುತಾವೇ ಕಟ್ಟಿಸಿ
ದರು. ಅದಕ್ಕೆ ಈಗಲೂ ಈ ಗ್ರಾಮದವರು ಪೂಜೆ ಮು೦
ತಾದ್ದನ್ನು ಮಾಡಿ ಹರಕೆ ಹೊತ್ತುಕೊಳ್ಳುವ ವಿಚಾರ ನಿ
ಮ್ಮೆಲ್ಲರಿಗೂ ತಿಳಿದೇ ಇದೆ, ಅವರವರು ಹರಸಿಕೊಂಡ ಹಾಗೆ
-----------------------------------

೧೬೪         ಮಾಡಿದ್ದುಣ್ಣೋ ಮಹಾರಾಯ.

ಲ್ಲಾ ಅವರಿಗೆ ಕೆಲನಗಳು ಕೈಗೂಡುವವು. ನಮ್ಮ ಮನೆಯ
ಹಿತ್ತಲ ಬಾಗಿಲಲ್ಲಿ ನಿಂತುಕೊಂಡರೆ ಒಂದು ಕಲ್ಲು ಎಸಗೇ ದೂ
ರದಲ್ಲಿ ಜೋರಾಗಿ ಎರಡು ಬೃಂದಾವನಗಳು ಕಾಣುವವು-
ಹೀಗೆಂದು ವೆಂಕನ್ನು ನು ತನ್ನ ತಾಯಿಯ ಚರಿತ್ರೆಯನ್ನು
ಹೇಳಿದಳು. ಅಲ್ಲಿದ್ದವರು ಎಲ್ಲರೂ- ಮಹಪತಿವ್ರತೆ, ಆಕೆ
ಯ ಪಾದವೇ ಗತಿ ಎಂದು ಕೊಂಡಾಡಿದರು. ಎಲ್ಲರ ಸಂಗಡ
ತಾನೂ ಕೂತುಕೊಂಡು ಸೀತಮ್ಮ ನು ಎಲೆಯನ್ನು ಹತ್ತಿಸು
ತಿರುವಾಗ ಈ ಕಥೆಯನ್ನೆಲ್ಲಾ ಕಿಏಗೊಟ್ಟು ಚೆನ್ನಾಗಿ ಕೇಳಿ
ಆಗಾಗ್ಗೆ ಕಂಣಿನಲ್ಲಿ ನೀರನ್ನು ಹಾಕುತಾ ಮಾತನಾಡದೆ ಸು
ಮ್ಮನೇ ಇದ್ದಳು.

ಸೀತಮ್ಮ ನು ಮಾರನೆ ದಿನದಿಂದ ಬೆಳಗ್ಗೆ ಎದ್ದ ಕೂಡ
ಲೆ ಗಂಡನ ಕಾಲಿಗೆ ನಮಸ್ಕಾರ ಮಾಡಿ ತರುವಾಯ ಮನೇ
ಕೆಲಸವನ್ನು ಮುಗಿಸಿಕೊಂಡು ಮಡಿ ಉಟ್ಟು, ನಿತ್ಯ ಗೌರೀ
ಪೂಜೆಯನ್ನು ಮಾಡಿ ಆರುಂದಮ್ಮನ ಬೃಂದಾವನದ ಬಳಿಗೆ
ಅಣಿಮಾಡಿದ ತಟ್ಟೆ ಬಟ್ಟಲಸಮೇತ ಹೋಗಿ ಅಲ್ಲಿ ಪೂಜೆ
ಮಾಡಿ ಪ್ರದಕ್ಷಣೆ ನಮಸ್ಕಾರವನ್ನು ಮಾಡಿ ಮನೆಗೆ ಬಂದು
ಭೋಜನ ಮಾಡಿದಳು. ಆದಿನ ಮೊದಲ್ಗೊಂಡು ಕೇವಲ ಭ
ಕ್ತಿಯಿಂದ ಈ ಆಚರಣೆಯನ್ನು ಮಾಡುತ್ತಾ ಇದ್ದಳು. ಇವ
ಳು ಹೀಗೆ ಭಕ್ತಿಯಿಂದ ನಡೆದುಕೊಳ್ಳುವ ಸಂಗತಿ ಮನೆಯ
ಲ್ಲಿ ಎಲ್ಲರಿಗೂ ತಿಳಿಯಿತು. ಒಳ್ಳೆ ಕೆಲಸವಾದ್ದರಿಂದ ಯಾರೂ
ಆಕ್ಷೇಪಣೆ ಮಾಡಲಿಲ್ಲ. ಅತ್ತೆಯಾದ ತಿಮ್ಮಮ್ಮತನಿಗೆ ಸೀತ
ಮ್ಮ ಯಾವ ಕೆಲಸ ಮಾಡಿದರೂ ಆಕ್ಷೇಪಣೆ ಮಾಡಿ ಮ 
----------------------------------

       
        ಮಾಡಿದ್ದುಣ್ಯ ಮಹಾರಾಯ.     ೧೬೫

ರ್ಮೋದ್ಘಾಟನೆ ಮಾಡುವ ಚಾಳಿ ಬರುತಬರುತನ ಹುಟ್ಟು
ಗುಣವಾಗುತಾ ಬಂತು. ಆ ಬೃಂದಾವನದ ಬಳಿಗೆ ಜೋಯಿ
ಸರ ಮನೆಯಿಂದ ಹೊರಬರ ಬೀದಿಯ ಕಡೆ ಬಳಸಲಾಗಿತ್ತು.
ಊರನ್ನು ಸುತ್ತು ಹಾಕಿಕೊಂಡು ಬೆಸ್ತರ ಕೇರಿಯಮೇಲೆ
ಹಾಯಿದು ಹೋಗಬೇಕಾಗಿತ್ತು. ಈ ದಾರಿ ಬಹು ದೂರ
ವಾಗಿದ್ದ ದೂ ಅಲ್ಲದೆ, ಬರ ಮನೆಯ ಮುಂದುಗಡೆ ಒಣ
ಗಹಾಕಿರುವ ಕರಿಮಿಾನು ಮೊದಲಾದು, ಬದಿಯಲ್ಲೆ
ಲ್ಲಾ ಹರಡಿ ಒಣಗಿಸುತಾ ಇರುವ ದೊಡ್ಡ ದೊಡ್ಡ ಬಲೆಗಳು,
ಮೀನಿನ ವಾಸನೆ, ದಾರಿಯಲ್ಲಿ ಸಿಕ್ಕಿದಹಾಗೆ ಕೂತು ಮಾಡಿದ್ದ
ಹೇಸಿಗೆ, ಬೀದಿಯಲ್ಲೆಲ್ಲಾ ಮನಸ್ಸು ಬಂದಹಾಗೆ ಚೆಲ್ಲಿ
ರುವ ಕಸ, ಅಲ್ಲಲ್ಲಿ ಜನರು ತಂತಮ್ಮ ಮನೇಮುಂದೆ
ಹಾಕಿರುವ ಗೊಬ್ಬರದ ಗುಡ್ಡೆಗಳು, ಒಂದೊಂದು ಮನೆಯಿಂ
ದಲೂ ಉದ್ದಕ್ಕೂ ಬೀದಿಯಲ್ಲಿ ಹರಿಯುವ ಬಚ್ಚಲನೀರಿನ
ಕೊಚ್ಚೆ, ದನಗಳ ಸಗಣಿ, ಕಸದ ಹುಲ್ಲು, ದನಗಳ ಹಳೆ
ಗಂಜಳವನ್ನು ತಂದುತಂದು ಅಲ್ಲಲ್ಲಿ ಚೆಲ್ಲಿರುವ ದನದ ಹಳೇಗಂಜ
ಳ : ಇದೇ ಮೊದಲಾದ ಕೊಳಚೆ ಬದಿಗೆ ಮುಖವನ್ನು ಹಾಕದ
ಹಾಗೆ ಅಸಹ್ಯವಾಗಿತ್ತು. ಅದರಲ್ಲಿಯೂ ಮಡಿ ಉಟ್ಟುಕೊಂಡು
ಹೋಗುವುದು ಸಾಧ್ಯವೇ ಇಲ್ಲ. ಸೀತಮ್ಮನ ಸ್ವಭಾವಕ್ಕೂ
ನೇಮಕ್ಕೂ ಆ ಸ್ಥಿತಿ ಮತ್ತೂ ಹೇಸಿಗೆಯಾಗಿತ್ತು. ಇದೂ
ಅಲ್ಲದೆ ಆ ದಾರಿ ದೂರವಾದ್ದು. ಮತ್ತು ಕೊಲ್ಲಾಪುರದ
ಮಹಾಲಕ್ಷ್ಮಿಯ ಗುಡಿಗೆ ಸಮೀಪದಲ್ಲಿ ಹೋಗುತಿತ್ತು. ಆ
ಗುಡಿಯ ಕೈಸಾಲೆಯಲ್ಲಿ, ಜಾಣಗಾರರು, ಭಂಗಿ ಕುಡ
-----------------------------------

೧೬೬              ಮಾಡಿದ್ದುಣ್ಣೋ ಮಹಾರಾಯ.

ಕರು, ಹರಟೇ ಬಡಿಯುತ್ತಾ ಕಾಲಕ್ಷೇಪ ಮಾಡತಕ್ಕವರು, ಲಾ
ವಣಿಗಳನ್ನೂ ಪ್ರಂಡು ಪದಗಳನ್ನೂ ಹೇಳಿ ಕಾಲಾ ಕಳೆಯತ
ಕ್ಕವರು, ಹೆಂಗಸರನ್ನು ಕಂಡರೆ ಅವರ ಮುಖವನ್ನು ನೋ
ಡಿ ನಗುತಾ ಹಾಸ್ಯ ಮಾಡುತ್ತಾ ಅವರ ಹಿಂದೆ ಸ್ವಲ್ಪ ದೂರ
ಹೋಗುತಾ, ಕೆಟ್ಟ ಹೆಂಗಸರಾದರೆ ಅವರ ಮಾತಿನಲ್ಲಿ ಆನಂದ
ಪಡುತಾ, ಒಳ್ಳೆ ಹೆಂಗಸರಾದರೆ ಅವರ ಕೈಯಲ್ಲಿ ಬೈಸಿಕೊಳ್ಳು
ತಾ ಮನಸ್ಸು ಬಂದಹಾಗೆ ಲಲ್ಲೆಯನ್ನು ಹಾಕಿ ಲೇವಡಿಯ
ನ್ನು ಮಾಡತಕ್ಕವರು, ಇವರೇ ಮೊದಲಾದವರ ಗುಂಪು ಹೆ
ಚ್ಚಾಗಿ ಸೇರುತಿತ್ತು. ಇದೇ ಆದಿಯಾದ ಕಾರಣಗಳಿಗಾಗಿ
ಸೀತಮ್ಮನು ಆ ದಾರಿಯಲ್ಲಿ ಹೋಗುತ್ತಿರಲಿಲ್ಲ. ಜೋಯಿಸರ
ಮನೆಯ ಹಿತ್ತಲ ಬಾಗಿಲನ್ನು ಬಿಟ್ಟರೆ ಒಂದು ಕವಡೇಕಲ್ಲಿನ
ಎಸೆಗೆ ದೂರದಲ್ಲಿ ಆ ಬೃಂದಾವನವಿತ್ತು. ಹುಲ್ಲಹಸಳೆಯ
ಮೇಲೆ ನಡೆದು ಹೋಗಬಹುದು, ಹೇಸಿಗೆ ಮೊದಲಾದು ಯಾ
ವುದೂ ಇಲ್ಲದೆ ಚೊಕ್ಕಟವಾಗಿತ್ತು. ಆದಕಾರಣ ಪ್ರತಿನಿತ್ಯವೂ
ಒಂದು ತಟ್ಟೆಯಲ್ಲಿ ಅರಿಶಿನ, ಕುಂಕುಮ, ಚಂದ್ರ, ಗಂಧ,
ಮಂತ್ರಾಕ್ಷತೆ ಇವುಗಳನ್ನು ಹಾಕಿರುವ ಒಂದು ಪಂಚವಾಳ,
ಸ್ವಲ ಹೂವು ನೈವೇದ್ಯಕ್ಕೆ ಏನಾದರೂ ಒಂದು ಪದಾರ್ಧ ,
ಇವುಗಳನ್ನು ಇರಿಸಿಕೊಂಡು ಸೀತೆಯು ಆ ಬೃಂದಾವನದ
ಬಳಿಗೆ ಹೋಗಿ ಮಡಿಯಲ್ಲಿ ಪೂಜೆಯನ್ನು ಮಾಡಿಕೊಂಡು
ಬರುತಿದಳು, ಸೀತಮ್ಮ ನು ಈ ಮಧ್ಯೆ ಗರ್ಭಿಣಿಯಾದಳು.
ಬಯಕೆ ಸಂಕಟ ವಾಸವಾಯಿತು. ಆಗಾಗ್ಗೆ
ಓಕರಿಕೆ ವನುನ ಸಹಾ ಆಗುತಿತ್ತು. ಹೀಗೆ ಅನ್ನ 
-----------------------------------

        ಮಾಡಿದ್ದುಣ್ಣೋ ಮಹಾರಾಯ.    ೧೬೭

ಸೇರದ ಸಂಕಟ, ಹೊಟ್ಟೇ ಹಸಿವಿನ ಬಾಧೆ, ಮ
ನೆಕೆಲಸದ ಆಯಾಸ, ಸಮಯ ಸಿಕ್ಕಿದಾಗ ಪಂಸಿ ಮೂದ
ಲಿಸಿ ಕರುಳಿಗೆ ಇಷ್ಟಿಷ್ಟು ನೀರಬಿಡುವ ಅತ್ತೆಯ ಹುರುಪತ,
ಇದೆಲ್ಲಾ ಸೇರಿತು. ಈ ಹುಡುಗಿಯು ಸ್ವಲ್ಪ ಕಂಗೆಟ್ಟಿ
ಳು. ಒಂದುದಿನ ಪಾರ್ವತಮ್ಮನು- ಯಾಕಮ್ಮ ಊಟವನ್ನೇ
ಮಾಡುವುದಿಲ್ಲವಲ್ಯಾ, ಕೆಲಸ ಮಾಡುವುದಕ್ಕೆ ಕೈ ಕಾಲು ಹೇಗೆ
ಬರಬೇಕು ? ಸೇರಿಸಿಕೊಂಡು ಹೇಗೆ ದರೂ ಸ್ವಲ್ಪ ಊಟಾ
ಮಾಡಮ್ಮಾ, ಸೇರುವುದಿಲ್ಲವೆಂದು ಹಾಗೆ ಬಿಡಬಾರದು, ಎಂದ
ಳು. ಈ ಮಾತನ್ನು ತಿಮ್ಮಮ್ಮನು ಎಲ್ಲಿ ಸಂಚು ಕೇಳಿಕೊಂ
ಡಿದ್ದಳೋ ಏನೋ ; ಅತ್ತೆಯಾದ ಪಾರ್ವತಮ್ಮ ಮಾತನಾಡಿ
ಮುಗಿಸುವಷ್ಟರೊಳಗಾಗಿ ತಾನು ಬಂದು ನಿಂತು- ಅವಳನ್ನು
ಯಾರು ಊರ ಮಾಡಬೇಡವೆನ್ನತಾರೆ ? ಬೇಕೆಂದು ಈ ಆಟ
ಆಡುತಾಳೆ. ಅತ್ತೇಮನೆಯಲ್ಲಿ ತಮ್ಮ ಮಗಳಿಗೆ ಅನ್ನವನ್ನು
ಕೂಡ ಹಾಕುವುದಿಲ್ಲ, ಹುರಕೊಂಡು ಮುಕ್ಕಿ, ಅರಕೊಂಡು
ಕುಡಿಯುತ್ತಾರೆ ಎಂದು ನೆರೆಹೊರೆಯವರಿಗೂ ತನ್ನ ತೌರು
ಮನೆಯವರಿಗೂ ಹೇಳಿಕೊಂಡು ನಮ್ಮನ್ನು ಕೆಟ್ಟವರನ್ನ ಮಾ
ಡಬೇಕಲ್ಲ. ನಾನಷ್ಟೆ ಕೆಟ್ಟವಳು, ಹಾಳಮೂಳಿ ; ನಾನು
ಹೋದರೆ ನಿಮಗೆಲ್ಲಾ ಸಂತೋಷವಾಗುತ್ತೆ. ಮುಖ್ಯವಾಗಿ
ನನ್ನ ಮೇಲಿದೆ ಅವಳಿಗೆ ಕಣ್ಣು, ಮಾರಿಕಂಡೆಲಾ ಹೋತನ
ಮೇಲೆ ಎನ್ನುವಹಾಗೆ, ಕಂಗೆಟ್ಟುಕೊಂಡಳು ಕಂಗೆಟ್ಟುಕೊಂ
ಡಳು ಎಂದು ಅನ್ನುತ್ತೀರಿ. ಅದೇನು ಕಂಗೆಟ್ಟುಕೊಳ್ಳುವು
ದಕ್ಕೆ ಹೊಡೆದಮಾರಿ ? ಎಲೆತುಂಬಾ ಬಡಿಸಿಕೊಂಡು ವಾಕವಾ
--------------------------------

೧೬೮         ಮಾಡಿದ್ದುಣ್ಣೋ ಮಹರಾಯ.

ಗಿ ಒಂದಗುಳನ್ನೂ ಬಿಡದೆ ಚೆನ್ನಾಗಿ ಕುಮ್ಮರಿಸುತಾಳೆ ಹೊ
ಟೈಯೊಳಕ್ಕೆ, ಎಂದು ಮನಸ್ಸು ಬಂದಹಾಗೆ ಸೀತನನ್ನು
ಹಳಿದಳು. ಅದಕ್ಕೆ ಪಾರ್ವತಮ್ಮನು ಯಾಕೆ ಹಾಗೆಲ್ಲಾ
ಹೊಡೆದಮಾರಿ ಗೀರಿ ಎನ್ನುತೀಯ ಬಸರೀನ ? ಬಯಕೆ ಸಂಕ
ಟ , ಅನ್ನ ಸೇರುವುದಿಲ್ಲ, ನಿಜವೇ, ಎಂದಳು. ಅಷ್ಟು ಮಾತ್ರ
ಕ್ಕೇ ಸಹಿಸಲಾರದ ತಿಮ್ಮ ಮೃನು - ಅದೇನು ಹೇಳಿಕೊಳ್ಳು
ತೀರಿ, ಅದೇನು ಕೊಚ್ಚಿ ಕೊಳ್ಳುತೀರಿ ? ಬಸರಿಯಂತೆ ಬೆಸರಿ;
ಆದರೆ ಆದಳು, ಲಿನು ಉದ್ಧಾರ, ಅದನ್ನು ಎಷ್ಟು ಹಾಡಿ ಹೊ
ಗಳಿಕೊಳ್ಳ ಬೇಕಂತೆ ? ಆದರೆ ಆಗುತಾಳೆ, ಸಗಣಿ ಮೇಲೆ
ಸಗಣಿ ಹಾಕಿದರೂ ಹುಳುಬರುತ್ತೆ, ತಾನು ಬಸರಿ ಅಂತ
ಎಲ್ಲರೂ ಉಪಚರಿಸಲಿ ಎಂದು ಅವಳ ಮನಸ್ಸಿನಲ್ಲಿ. ಅನ್ನ ಬಡಿ
ಸಿಕೊಳ್ಳುವುದು ಬೇಕು ಅಂತ ಚೆಲ್ಲುವುದು, ತಾನು ಬನರಿ
ಎಂತ ಎಲ್ಲರಿಗೂ ತಿಳಿಯಬೇಕಲ್ಲ. ನೀವು ಮಾತುಮಾತಿಗೂ
ವಹಿಸಿಕೊಂಡು ಬರುತ್ತೀರಿ. ಅವಳು ಎತ್ತಲಾಗಾದರೂ ಹಾಳಾ
ಗಲಿ, ಅವಳ ಗಂಧಗಾಳಿಗೆ ನಾನು ಬರುವುದಿಲ್ಲ, ಹೀಗೆಲ್ಲಾ
ಮಾತನಾಡಿದಳು. ಪಾರ್ವತಮ್ಮನು ಇನ್ನು ಮಾತಿಗೆ ಮಾತು 
ಬೆಳೆಯುತ್ತೆ, ಯಾಕೆಬೇಕು ಎಂದು ಸುಮ್ಮನಾದಳು.

ಇನ್ನೊಂದುದಿನ ಬೇರೊಂದು ರಗಳೆ ಜರಗಿತು. ಸೀತಮ್ಮ
ನು ಯೋಗ್ಯರಾಗಿಯೂ ನಿಷ್ಟರಾಗಿಯೂ ಇರತಕ್ಕವರ ಮನೆ
ಯಲ್ಲಿ ಹುಟ್ಟಿದವಳು. ಇವಳಲ್ಲಿ ಅನೇಕವಾಗಿ ಒಳ್ಳೆ ಅಭ್ಯಾ
ಸಗಳೇ ಇದ್ದವು. ಸೀತಮ್ಮನು ನಿತ್ಯವೂ ರಾತ್ರೆ ಮಲಗಿಕೊ
ಳ್ಳುವಾಗ ದೇವರಿಗೆ ಪ್ರಾರ್ಥನೆ ಮಾಡಿ ಮಲಗುವ ಅಭ್ಯಾಸ
---------------------------
        ಮಾಡಿದ್ದುಣ್ಣೋ ಮಹಾರಾಯ.          ೧೬೯

ವು ಮೊದಲಿನಿಂದ ಇತ್ತು. ಒಂದುದಿನ ಮಹಾದೇವ ವೂರಲ್ಲಿ
ರಲಿಲ್ಲ, ಯಾವುದೋ ಕೆಲಸಕ್ಕೆ ಹಳ್ಳಿಗೆ ಹೋಗಿದ್ದನು. ಹೆಂ
ಗಸರೆಲ್ಲರೂ ಹಜಾರದಲ್ಲಿ ಮಲಗಿಕೊಳ್ಳುತಿದ್ದರು. ಸೀತಮ್ಮ
ನು ತನ್ನ ಹಾಸಿಗೆಯನ್ನು ಹಾಸಿಕೊಳ್ಳಲು ಸ್ಥಳ ಸ್ವಲ್ಪವೇ
ಬಿಟ್ಟಿತ್ತು. ಅಲ್ಲಿ ಮಲಗಿಕೊಂಡಳು. ತೊಲೇಕೆಳಗೆ ಸೀತನಹಾ
ಸಿಗೆ ಬಂತು. ಇವಳ ಹಾಸಿಗೇ ಮಗ್ಗಲಲ್ಲಿಯೇ ಸಾಕಮ್ಮನ
ಹಾಸಿಗೆ ಇತ್ತು. ಸೀತನ್ನು ನು ರಾತ್ರೆ ಮಾಡಬೇಕಾದ ಕಸಮು
ಸುರೆಯ ಕೆಲಸವನ್ನು ತೀರಿಸಿಕೊಂಡು ಮಲಗಿಕೊಳ್ಳುವಾಗ್ಗೆ
ಬಹಳ ಹೊತ್ತಾಗಿತ್ತು. ಅವಳು ಬಂದು ಮಲಗಿಕೊಂ
ಡಳು. ಕೂಡಲೆ ತೊಲೆಯ ಕೆಳಗೆ ತನ್ನ ಹಾಸಿಗೆ ಬಂದದನ್ನು
ನೋಡಿ-ಅಯ್ಯೋ ತೊಲೇ ಕೆಳಗೆ ಹಾಸಿಗೆ ಬಂತು, "ತೊಲೆಯೇ
ತೊಲೆಯ ನಾನೇ ಮರ, ನೀನೇ ಮನುಷ್ಯ, ಹಾವಿಗೆ ಹರನ
ಆಣೆ, ಚೇಳಿಗೆ ಭೈರವನ ಆಣೆ, ಇರುವೆ ಎಂಭತ್ತು ಕೋಟಿ
ಜೀವರಾಶಿಗೂ ಬಿದ್ದ ಬಳಿ ಬಿಟ್ಟು ಇತ್ತಿತ್ತ ಬಂದರೆ ತಾಯಿಮು
ದ್ರವ್ವೆಯ ಪಾದದಾಣೆ : ಹರಾ ಎಂತ ಬಲದ ಮಗ್ಗಲ ಹೂಡಿ
ದೆ, ಹರಿ ಎಂತ ಎಡದ ಮಗ್ಗಲ ಹೂಡಿದೆ, ಚಿತ್ತಹೋಗಿ
ಅಚ್ಚುತನನ್ನು ಕೂಡಿತು, ಮನಹೋಗಿ ಮಾಧವನನ್ನು ಕೂಡಿ
ತು, ನಾನುಹೋಗಿ ಕಾಶೀ ಏಶೆಶ್ವರನನ್ನು ಕೂಡಿದೆ. ಸ್ವಾ
ಮಿ ನಂಜುಂಡೇಶ್ವರ, ತಾಯಿ ಚಾಮುಂಡೇಶ್ವರಿ, ಸಜ್ಜನಸಂಗ
ಕೊಡು ದುರ್ಜನರ ದೂರ ಇಡು, ತಾಯೇ ! "  ಹೀಗೆಂದು
ದೇವರ ಪ್ರಾರ್ಥನೆಮಾಡಿ ಕಂಣ ಮುಚ್ಚಿ ಕೊಂಡಳು. ನಿದ್ರೆಬಂ
ತು, ಉಳಿದ ಎಲ್ಲರಿಗೂ ನಿದ್ರೆ ಬಂದಿತ್ತು, ಹತ್ತಿರ ಮಲಗಿದ್ದ
------------------------------
೧೭೦         ಮಾಡಿದ್ದುಣ್ಣೋ ಮಹಾರಾಯ. 

ಸಾಕಿಗೆ ಮಾತ್ರ ಸ್ವಲ್ಪ ಎಚ್ಚರವಾಗಿತ್ತು. ಸೀತಮ್ಮ ಹೇಳು
ತಾ ಇದ್ದದನ್ನೆಲ್ಲಾ ಕೇಳಿ ಸಾಕಿಯು ಆಗ ಸುಮ್ಮನಾಗಿ
ನಿದ್ರೆ ಮಾಡುತ್ತಾ ಮಲಗಿಕೊಂಡಳು. ಮಲಗಿಕೊಳ್ಳುವಾಗ
ಭಗವಂತನ ನಾಮೋಚಾರಣೆಯನ್ನು ಮಾಡಿ ಮಲಗುವುದು ಪೂರ್ವಾಚಾರವಾಗಿದೆ, ಈ ಅಭ್ಯಾಸ ಸೀತಮ್ಮನಿಗೆ ಬಾಲ್ಯದಿಂದ
ಲೂ ಉಂಟು.

ಬೆಳಗ್ಗೆ ಉಷಃಕಾಲಕ್ಕೆ ಸೀತೆಯು ಎದ್ದು ಮನೆಕೆಲಸವ
ನ್ನೆಲಾ ಮುಗಿಸಿಕೊಂಡು ಜಾಗ್ರತೆಯಾಗಿ ಸ್ನಾನಕ್ಕೆ ನೀರನ್ನು
ಕಾಸಿದಳು. ಕೂಡಲೆ ಮಡಿಯನ್ನುಟ್ಟು ನದಿಗೆ ನೀರ ತರಲು
ಹೋಗಿ ಕಂಕುಳಲ್ಲಿ ಒಂದುಕೊಡ ತಲೆಯಮೇಲೆ ಒಂದುಕೊಡ
ತಲೆಯಮೇಲಿನ ಕೊಡದಮೇಲೆ ದೇವರ ಅಗ್ರೋದಕದ ಒಂದು
ತಾಮ್ರದ ತಂಬಿಗೆ, ಇದರೆಲ್ಲಾ, ನೀರನ್ನು ತುಂಬ ಹೊತ್ತು
ಕೊಂಡು ಮನೆಗೆ ಬರುತ್ತಾ ಇರುವಾಗ, ಸೀತಮ್ಮನು ಉದಯ
ರಾಗವನ್ನು ಗಟ್ಟಿಯಾಗಿ ಹೇಳದೆ ಮೆಲ್ಲಗೆ ಪಿಟಪಿಟನೆ ಹೇಳುತಾ
ಮನೆಯ ನಡುವೆಗೆ ಬಂದು ಒಳ ಬಾಗಿಲ ದ್ವಾರಬಂಧನಕ್ಕೆ ತಲೇ
ಮೇಲಿನ ಬಿಂದಿಗೇ ಮೇಲಿರುವ ತಂಬಿಗೆ ತಗಲೀತೆಂದು ಬಗ್ಗಿ
ಹೊಸಲನ್ನು ದಾಟಿ ಒಳಕ್ಕೆ ಬರುವ ಸಮಯದಲ್ಲಿ ಸಾಕಿಯು- 
ಅಮ್ಮ, ಅತ್ತಿಗೆ ಅದೇನೋ ಮಂತ್ರ ಹೇಳುತ್ತಲೇ ಬರುತಾಳೆ,
ರಾತ್ರೆಯ ಹೀಗೆಯೇ ಮಲಗಿಕೊಳ್ಳುವಾಗ ಹಾವಿಗೆ ಆಣೆ
ಚೇಳಿಗೆ ಆಣೆ ಅಮ್ಮನ ಪಾದದಾಣೆ ಎಂದು ನನ್ನ ಹಾಸಿಗೇ
ಬಳಿಯಲ್ಲಿ ಕೂತು ಹೇಳಿದಳು ; ನನಗೆ ಎನೋ ಮಂತ್ರ ಹಾ
ಕಿಬಿದಳು ; ತಲೆ ನೋಯುತ್ತೆ, ಕಂಣು ಉರಿಯುತ್ತೆ, ಎಂದ
-----------------------------

        ಮಾಡಿದ್ದುಣ್ಣೋ ಮಹಾರಾಯ.   ೧೭೧
       
ಳು. ಆಗ ಮಗಳು ಆಡಿದ ಮಾತನ್ನು ಕೇಳಿ ತಿಮ್ಮಮ್ಮನು
ವಿಶೇಷವಾದ ರೋಷದಿಂದ ತಟ್ಟನೆ ಎದ್ದು ನಡುವೆಯ ಒಳಬಾ
 ಗಿಲಿಗೆ ಅಡ್ಡಲಾಗಿ ನಿಂತು ಸೊಸೆಯನ್ನು ಕುರಿತು- ಅದೇನೇ
ನೀನು ಬಾಯಲ್ಲಿ ಪಿಟಗುಟ್ಟುವುದು ? ಯಾವಮಾಯದ ಮಂತ್ರ 
ಯಾವನಾದ ಮಂತ್ರ ? ಬೊಗಳು, ಎಂದಳು. ಆಗ ಸೀತ
ಮ್ಮನು-ಅಮ್ಮ , ಉದಯರಾಗವನ್ನು ಹೇಳಿಕೊಂಡು ಬರುತಿ
ದೈ, ಎಂದಳು. ಅದಕ್ಕೆ ತಿಮ್ಮುವು- ಉದಯರಾಗವೆಂದರೇ
ನೇ ? ನೀನೇನು ಹೇಳುವುದು, ನಿನ್ನೆ ರಾತ್ರಿ ಸಾಕಿಯ ಹಾಸಿ
ಗೇಬಳಿ ಕೂತು ಹೇಳಿದ ಮಂತ್ರವೇನು ? ಎಂದಳು. ಅದಕ್ಕೆ
ಸೀತೆಯು ನೀರನ್ನು ಹೊತ್ತುಕೊಂಡು ಭಯದಿಂದ ಅಲ್ಲಿಯೇ
ನಿಂತು- ಅಮ್ಮ ನಾನು ಯಾವಮಂತ್ರವನ್ನೂ ಹೇಳಲಿಲ್ಲ, ರಾ
ತ್ರೆಹಾಸಿಗೆ ಮೇಲೆ ಮಲಗಿಕೊಳ್ಳುವಾಗ ಯಾವಾಗಲೂ ನಾ
ನು ದೇವರನ್ನು ಪ್ರಾರ್ಥಿಸಿ ಒಳ್ಳೇ ಬೆಳಗು ಕೊಡೆಂದು ಹೇಳು
ವ ವಾಡಿಕೆ ಇದೆ; ಅದರಂತೆ ಹೇಳಿದೆನು, ಎಂದಳು. ಆದ
ಕ್ಕೆ ತಿಮ್ಮಮ್ಮನು ಇನ್ನೂ ಆಗ್ರಹದಿಂದ ಹಾವಿಗೆ ಆಣೆ ಎಂದ
ರೇನು ಚೇಳಿಗೆ ಆಣೆ ಎಂದರೇನು, ನನ್ನ ಮಗುವಿನ ಹಾಸಿ
ಗೆಯ ಬಳಿಯಲ್ಲಿ ಕೂತು ನೀನು ಹಾಗೆ ಆಡುವುದಕ್ಕೆ ಕಾರಣ
ವೇನು ? ರಾತ್ರಿಯಿಂದಲೂ ಸಾಕಿಗೆ ಚೆನ್ನಾಗಿಲ್ಲವಲ್ಲ ; ತಲೆನೋ
ವು, ಚಳಿಚಳಿ, ಎನ್ನುತಾಳೆ, ಅವಳ ತಲೆಕಂಡರೆ ನಿನಗೆ ಆಗ
ದು, ನೀನು ಏನೋ ಮಾಡಿದ್ದೀಯ, ಅದೇನು ಮಾಡಿದೆ ಹೇ
ಳು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ, ಹಿಡಿದ
ಹಿ ಕಾಳಿಯನ್ನು ಬಿಡಿಸಿ ಬಿಡುತ್ತೇನೆ. ನನ್ನ ಮನೆ ಅನ್ನವುಂ
----------------------------------

೧೭೨         ಮಾಡಿದ್ದುಣ್ಣೋ ಮಹರಾಯ.

ಡು ನನ್ನ ಮನೇ ಬಿ ಉಟ್ಟು ನನ್ನ ಮಗಳ ಪ್ರಾಣಕ್ಕೆ ತಂದು
ಇದ್ದೀಯಲ್ಲೆ, ಒಳ್ಳೆ ಮಾತಿನಿಂದ ಏನ ಮಾಡಿದ್ದೀಯೆ ಬೊ
ಗಳು, ನೀವು ಹಾಲುಂಡವನೇ ಕರುನಾಯಲಿ ಎನ್ನುವ ತಟವಾ
ಣೀರು; ಅದೇನು ಮಾಡಿ ಇದೀಯೆ ಹೇಳೆ ಗಯ್ಯಾಳಿ, ಅವಳೇ
ನು ನಿನಗೋಜಿಗೆ ಬಂದಳೆ, ನಿನಸೊಲ್ಲಿಗೆ ಬಂದಳೆ, ನಿನ್ನ
ಗಂದಗಾಳಿಗೆ ಬಂದಳೆ, ನಿನ್ನ ಕಂಣ ಚುಚ್ಚಿದಳೆ, ನಿನ್ನ ಹೊ
ಟೈ ಇರಿದಳೆ, ನಿನ್ನ ನಾಲಿಗೇ ಸೀಳಿ ಉಪ್ಪು ತುಂಬಿದಳೆ, ನಿಮ್ಮ
ಪ್ಪನ ಮನೆಯಿಂದ ತಂದಿದ್ದ ಮಾಗಡಿ ಮಣಿಯನ್ನು ತೆಗೆದು
ಕೊಂಡಳೆ, ನಿಮ್ಮ ಸ್ಮನ ಮನೆಗೆ ಬೆಂಕಿ ಹಾಕಿದಳೆ, ನಿಮ್ಮಪ್ಪ
ನ ಮುಖ ಸುಟ್ಟಳೆ, ನಿಮ್ಮ ಅವ್ವೆತಲೆಗೆ ಬೂದಿ ಸುರಿದಳೆ,
ನಿನ್ನ ಮುಖಕ್ಕೆ ಮುಳ್ಳು ಬಡಿದಳೆ, ಎಂದು ಬಗೆಬಗೆಯಾಗಿ
ಕೆಲೆಯುತ್ತಾ ಬಂದಳು. ಇವಳ ಆಟೋಪವನ್ನು ನೋಡಿ ಇನ್ನೆ
ನು ಮಾಡಿಬಿಡುತಾಳೆಯೋ ಎಂಬ ಹೆದರಿಕೆಯಿಂದ ಸೀತೆಗೆ ಕೈ
ಕಾಲು ನಡುಗುವುದಕ್ಕೆ ಮೊದಲಾಯಿತು. ಗಾಬರಿಗೆ ಕೊಡವ
ನ್ನು ಎತ್ತಿ ಹಾಕಿಕೊಂಡು ಬಿದ್ದು ಬಿಟ್ಟಳು, ಕೊಡಗಳೆರಡೂ ಬಿ
ದ್ದು ತಗ್ಗಿ ಹೋದವು, ಸೀತೆಯು ಕುಕ್ಕರಿಸಿಕೊಂಡಳು, ಹಾಗೇ
ಸೊಕ್ಕಿದ ಹಾಗಾಯಿತು. ಕೂಡಲೆ ಮುದುಕಿಯಾದ ಪಾರ್ವತ
ಮ್ಮ ಬಂದು ಆ ಹುಡುಗಿಯನ್ನು ಮೇಲಕ್ಕೆ ಎತ್ತಿದಳು ; ಪಕ್ಕೆ ಸಿಕ್ಕಿಕೊಂಡಿತು. ತಲೆಮೇಲಿನ ಬಿಂದಿಗೇಮೇಲಿನ ಚೆಂಬು ಕೆಳ
ಕ್ಕೆ ಬಿತ್ತು. ಅದರಮೇಲೆ ಇವಳೂ ಬಿದ್ದಳು. ಎದೆಗೆ ಏದು
ಬಡಿಯಿತು. ಸೊಂಟಕ್ಕೆ ಹೆಚ್ಚಾಯಿತು. ಆಗ ಪಾರ್ವತಮ್ಮನು
ತಿನ್ನು, ಇದೇನು ಬೆಳಕು ಹರಿಯುವಾಗ್ಗೆ ಈ ರಂಪ? ಅವಳು
-----------------------------------

    ಮಾಡಿದ್ದುಣ್ಣೋ ಮಹಾರಾಯ.  ೧೭೩

ಮಾಡಿದ ತಪ್ಪೇನು ? ಮಲಗಿಕೊಳ್ಳುವಾಗ ಏಳುವಾಗ ಯಾ
ರೂ ದೇವರ ಸ್ಮರಣೆ ಮಾಡುವುದಿಲ್ಲವೆ ? ಅದರಿಂದ ನಿನ್ನ ಮಗ
ಳಿಗೆ ಏನಮಾಡಿದಹಾಗಾಯಿತು? ಆ ಎರಡುಜೀವದ ಹುಡುಗಿ
ಯನ್ನು ನೀನು ಹಾಗೆಲ್ಲಾ ಕೆಟ್ಟ ಮಾತುಗಳನ್ನು ಅನ್ನಬಾರ
ದು, ನಾವು ಒಂದು ಹಸೀತಲೆ ಕಂಡೇವೆ ಎಂದು ಹಾರೈಸಿಕೊಂ
ಡಿದೇವೆ. ಇಷ್ಟಕ್ಕೂ ಅವಳು ಮಾಡಿದ ತಪ್ಪೇನು? ಪ್ರಪಂಚ
ದಲ್ಲಿ ಯಾರೂ ದೇವರ ಸ್ಮರಣೆ ಮಾಡುವುದಿಲ್ಲವೆ; ಯಾರೂ
ಕಂಡಿಲ್ಲವೆ ? ಇಷ್ಟು ಮಾತಿಗೆ ಅವರಪ್ಪನನ್ನು ಯಾಕೆ ಅನ್ನಬೇ
ಕು, ಅದರಮ್ಮನ ತಲೆಗೆ ಯಾಕೆ ಬೂದೀ ಸುರಿಯಬೇಕು? ಬಹು
ಚೆನ್ನಾ ಯಿತು. ನಮ್ಮ ಮನೆಮಾತು ನಮ್ಮ ಮನೆಯಲ್ಲಿಯೇ
ಇರುತಾ ಕಿವಿ ಕಿವಿ ಅರಿಯದಹಾಗೆ ಇತ್ತು. ಈ ಹಾದಿರಂಪ ಬೀ
ದಿರಂಪ ಉಂಟೆ? ಊರಜನರೆಲ್ಲಾ ಬಂದು ನೆರೆದು ನಿಂತಿದೆಯ
ಲ್ಲಾ, ಹೋಗಲಿ ಸುಮ್ಮನಿರಮ್ಮ ! ಎಂದು ಸೀತೆಯನ್ನು ಎತ್ತಿ
ಒಳಕ್ಕೆ ಕರೆದುಕೊಂಡು ಹೋದಳು. ಆಗ ತಿಮ್ಮುವು ಈದ
ಹುಲಿಯಹಾಗೆ ಪುನಃ ಕೆದರಿಕೊಂಡು ಬೀದೀ ಬಾಗಿಲಲ್ಲಿ ಕೂತು-
ಈ ಹಾಳಮನೆಯಲ್ಲಿ ನಾನು ಒಂದುಮಾತನೂ ಆಡುವುದಕಿಲ್ಲ,
ನನ್ನ ಬಾಯಿಯನ್ನೆ ಎಲ್ಲರೂ ಮುಚ್ಚಿಸುತಾರೆ. ಎಲ್ಲರೂ ಬಂ
ದು ಸೇರಿಕೊಂಡು ನಮ್ಮಪ್ಪನಮನೆ ಎಲ್ಲಾ ಹೊರಗಿನವರ ಪಾ
ಲಾಯಿತು. ನನ್ನ ಹೊಟ್ಟೆಯಲ್ಲಿ ಒಂದು ಗಂಡುಕೊನೆ ಹುಟ್ಟಿ
ದ್ದರೆ ಹೀಗಾಗುತಿತ್ತೆ? ಈ ಹಾಳಹೊಟ್ಟೆ ಹಾಳಾಯಿತಲ್ಲಾ;
ಈ ಹಳಹೊಗೆ ಬೆಂಕಿ ಬಿದ್ದು ಹೋಯಿತಲ್ಲಾ; ನನ್ನ ತೌ
ರುಮನೇ ಮಲಕ್ಕೆ ಮುಳ್ಳು ಬಡಿದುಹೋಯಿತಲ್ಯಾ ! ಕೈ
---------------------------------
೧೭೪         ಮಾಡಿದ್ದುಣ್ಣೋ ಮಹಾರಾಯ.

ಕಾಲಿಗೆ ಸಾಲದೇ ಇರುವವರೆಲಾ ಅನ್ನುವಹಾಗಾಯಿತು, ಆಡು
ವಹಾಗಾಯಿತು. ಇವತ್ತು ಅವರೇ ಬರಲಿ, ನಾನು ಇದ್ದ
ದೊಂದು ಹೋದೊಂದು ; ಇ೦ದಿಗೆ ಕಡ್ಡಿ ಎರಡು ತುಂಡಾ
ಗಲಿ, ಹೀಗೆಂದು ದೊಡ್ಡದಾಗಿ ಹುಯಿಲು ಮಾಡಿದಳು. ಅಷ್ಟು
ಹೊತ್ತಿಗೆ ಊರಿಂದ ಮಹಾದೇವನೂ ಮನೆಗೆ ಬಂದನು, ದೀ
ಕ್ಷಿತನೂ ಬಾಳೆಯೆಲೆ ಮೇಲೋಗರ ಹೂತುಳಸಿ ಮೊದಲಾ
ದ್ದನ್ನು ತೆಗೆದುಕೊಂಡು ಬಂದು ನಡೆದ ರಂಪವನ್ನೆಲ್ಲಾ ಕೇಳಿ
ವ್ಯಸನಸನ್ನು ಎಲ್ಲರನ್ನೂ ಸಮಾಧಾನಮಾಡಿದನು. ಅಲ್ಲಿ ಈ
ಜಗಳವನ್ನು ನೋಡುವುದಕ್ಕಾಗಿ ಬಂದು ನೆರೆದಿದ್ದ ಜನರೆಲ್ಲಾ
ಒಬ್ಬೊರಾಗಿ ಹೋಗುತಾ ಛೇ ! ಆ ಹುಡುಗಿ ಬಹು ಮಾ
ನಿಷ್ಟೆ, ಅವಳನ್ನು ತಿಮ್ಮಮ್ಮ ಹೀಗೆ ಗೋಳು ಹುಯಿದುಕೊ
ಳ್ಳಬಾರದು, ಅವರಾದರೂ ಬಂದು ಬಾಗಿಲು ತೆರೆದುಕೊಂಡು
ಇರುವಹೊತ್ತಿಗೆ ಜೋಯಿಸರ ಮನೆಎಂತ ಇಷ್ಟರಮಟ್ಟಿಗಾದ
ರೂ ಇದೆ. ಇಲ್ಲದಿದ್ದರೆ ಮನೆಯಲ್ಯಾ ಎಕ್ಕಾ ಗುಳ್ಳ ಹುಟ್ಟೆ
ಹೋಗುತಿತ್ತು. ಹೀಗೆ ಆಡಿಕೊಳ್ಳುತಾ ಹೊರಟುಹೋದರು.

ಮಗಳಿಗೆ ಉಂಟಾಗಿರುವ ಹಿಂಸೆಯನ್ನೆಲ್ಲಾ ಕೇಳಿ ಅವರ
ತೌರುಮನೆಯವರು ಬಂದು ಬಸಿರು ಹುಡುಗಿಯನ್ನು ಮೈ
ಸೂರಿಗೆ ಹೆರಿಗೆಗಾಗಿ ಕರೆದುಕೊಂಡು ಹೋದರು. ಮಗಳ
ಕಷ್ಟವನ್ನೆಲ್ಲಾ ಕೇಳಿ ಕೊಹೆಣ್ಣು ಕುಲಕ್ಕೆ ಹೊರಗು,
ಅವಳ ಹಣೆಯಲ್ಲಿ ಹೇಗೆ ಬರೆದಿದೆಯೋ ಹಾಗೆ ಅನುಭವಿಸಬೇ
ಕು, ಹೇಗಾದರೂ ಹೆಂಣುಜನ್ಮಕ್ಕೆ ಕಷ್ಟವೇಹೊರತು ಸೌ
ಖ್ಯವಿಲ್ಲ ಎಂದುಕೊಂಡು ತೌರುಮನೆಯವರು ಅಕ್ಷತೆ ಪ್ರಸ್ತ
---------------------------------
        ಮಾಡಿದ್ದುಣ್ಣೋ ಮಹಾರಾಯ.    ೧೭೫
       
ಬಳೇ ತೊಡಿಸುವ ಪ್ರಸ್ತ ಸೀಮಂತ ಮೊದಲಾದ್ದನ್ನೆಲ್ಯಾ ಮಾ
ಡಿದರು. ತರುವಾಯ ಸೀತಮ್ಮನು ದಿನತುಂಬಿ ಗಂಡುಮಗು
ವನ್ನು ಹೆತ್ತಳು. 'ಸುಖಪ್ರಸುವಾಯಿತು. ಮಗು ಬಹು ಲಕ್ಷ
ಣವಾಗಿತ್ತು. ನಾಲ್ಕು ತಿಂಗಳವರೆಗೂ ಬಾಣಂತನವನ್ನೂ ಮಾ
ಡಿ, ಐದನೆಯ ತಿಂಗಳಲ್ಲಿ ಗಂಡನಮನೆಗೆ ಸಂಜವಾಡಿಗೆ ಕರೆ
ದುತಂದು ಬಿಟ್ಟರು. ಎಲ್ಲರಿಗೂ ಬಹು ಸಂತೋಷವಾಯಿತು.
ಯಾವಾಗಲೂ ಬೆಂಕಿಯನ್ನು ಮುಖದಲ್ಲಿ ಕಟ್ಟಿಕೊಂಡು ಇರು
ತಿದ್ದ ತಿಮ್ಮಮ್ಮ ಮಾತ್ರ ದುಮದುಮಗುಟ್ಟುತಾ ಎಂದಿನಂ
ತೆ ಇದ್ದಳು. ಆದರೆ ಮೊಮ್ಮಗನನ್ನು ಮಾತ್ರ ಕಂಡರೆ ಬಹು
ಪ್ರೀತಿಯಾಗಿಯೇ ಇದ್ದಳು. ಮಗುವನ್ನು ಎತ್ತಿಕೊಳ್ಳುವವಳ
ಲ್ಲ. ಆಡಿಸುವವಳಲ್ಲ, ಮುದ್ದಾಡುವವಳಲ್ಲ, ತಲೆಯಮೇಲೆ ಕೂ
ರಿಸಿಕೊಳ್ಳುವವಳಲ್ಲ, ಭುಜದಮೇಲೆ ಇರಿಸಿಕೊಳ್ಳುವವಳಲ್ಲ,
ಹೀಗೆಲ್ಲಾ ಮಾಡುತಿದ್ದಳು. ಯಾವಾಗಲೂ ಅದನ್ನು ಎತ್ತಿ
ಕೊಂಡೇ ಇರುತಾ ಲಾಲಿಸುತಿದ್ದಳು. ಬೇಕಾದ ಬಾಲತೊಡಿಗೆ
ಯನ್ನು ಮಾಡಿಸಿ ಇಟ್ಟರು. ಒಬ್ಬರು ತಾರಮ್ಮಯ್ಯ ರಘು
ಕುಲ ರಾಮಚಂದ್ರನ್ಮ, ಎಂದು ಆಡಿಸುವರು. ಇನ್ನೊಬ್ಬರು
ತಾ ತಾಗುಬಿಯನ್ನು ಆಡಿಸುವರು. ಮತ್ತೊಬ್ಬರು ಮಗುವನ್ನು
ಹಿಡಿದು ನಿಲ್ಲಿಸಿಕೊಂಡು "ಆನೆಬಂತೊಂದಾನೆ, ಏರೀಹತೊ೦
ದಾನೆ, ಎಳೆಹುಲ್ಲತಿಂತೊಂದಾನೆ, ತಿಳಿನೀರ ಕುಡಿಯಿತೋಂದಾನೆ,"
ಎಂದು ಹೇಳುತಾ ಈ ಕಡೆಗೂ ಆ ಕಡೆಗೂ ವಾಲಾಡಿಸುವ
ರು. ಇನ್ನೊಬ್ಬರು "ಚಂದಕ್ಕಿ ಮಾಮ ಚಕ್ಕಲೀಮಾನು, ಮು
ತ್ತಲುಕುಡಿಕೆ ತಾರಮಾಮ ತಾರಮಾಮ, ' ಎಂದು ಚಂದ್ರ
------------------------------------

೧೭೬             ಮಾಡಿದ್ದುಣ್ಣೋ ಮಹರಾಯ.

ನನ್ನು ತೋರಿಸುತಿದ್ದರು. ಇನ್ನೊಬ್ಬರು " ನವಿಲೆ ನವಿಲೆ
ಮಳೆಬಂದಾಗೆಲ್ಲಿರುವೆ ? ತಿರುಮಲ ದೇವರ ಗುಡಿಯೊಳ ಗಾಡು
ವೆ, ಬಂಣಾ ಚಿತ್ರದನವಿಲೆ, ಸೋಗೆಗಂಣಿನನವಿಲೆ " ಹೀಗೆಲ್ಲಾ-
ಹೇಳಿಕೊಂಡು ಆಡಿಸುವರು. ಈ ಪ್ರಕಾರ ಆ ಕಂದಕ್ಕೆ ಲಾಲ
ನೆಯಾಗುತಿತ್ತು. ಕಿಟ್ಟನು ಹೊರಕ್ಕೆ ಹೊರಟಾಗಲೆಲ್ಲಾ ಮಗು
ವಿಗೆ ಬೇಕಾದ ಒಡವೆಯನ್ನಿಟ್ಟು " ಬಾರೋ ಕೃಷ್ಣಸ್ವಾಮಿ "
ಎಂದು ಆ ಮಗುವಿನ ಹೆಸರನ್ನು ಹಿಡಿದು ಕೂಗುತ ಅದ
ನ್ನು ಕರೆದುಕೊಂಡು ಹೋಗಿ ಸುತ್ತಿಸಿಕೊಂಡು ಬರುತ್ತಿದ್ದನು.

ಇಷ್ಟು ದಿವಸಕ್ಕೆ ಸಾಕಿಯು ಮೈನೆರೆದು ಪ್ರಸ್ತವಾಗಿ
ಗಂಡನಮನೆಗೆ ಹೊರಟುಹೋದಳು. ತಿಮ್ಮಮ್ಮನಿಗೆ ಕೃಷ್ಟ
ಸ್ವಾಮಿಯ ಆಲೋಡನೆ ಹೆಚ್ಚಾಯಿತು. ದಿನೇದಿನೇ ಸೊಸೆಯ
ಮೇಲಿನ ಆಕ್ಷೇಪಣೆ ಕಡಿಮೆಯಾಗುತ್ತಾ ಬಂತು. ಸೀತಮ್ಮ
ನಾದರೋ ಎಂದಿನಂತೆ ಮನೆಕೆಲಸವನ್ನೆಲ್ಲಾ ಮಾಡಿಕೊಂಡು
ತನ್ನ ನಿತ್ಯ ಗೌರೀಪೂಜೆ ಮೊದಲಾದ್ದನ್ನೆಲ್ಲಾ ಸಾಂಗವಾಗಿ
ಯೂ ಭಕ್ತಿಯಾಗಿಯೂ ಮಾಡುತಾ ಯಾವನಾದೆಗೂ ಲೇ
ಶವೂ ಲೋಪ ಬಾರದಂತೆ ಎಲ್ಲವನ್ನೂ ನಿರ್ವಹಿಸುತಿದ್ದಳು. ಇ
ವಳ ಹೊಟ್ಟೆಯಲ್ಲಿ ಮಗುವಾದಕಾರಣ ಇವಳು ಮಾಡಿದ ಅಡಿ
ಗೆಯನ್ನು ವೆಂಕನ್ನು ಪಾರ್ವತಮ್ಮ ಮೊದಲಾದ ನೇಮವವರೆ
ಲ್ಲಾ ಊಟಮಾಡಲು ಆಕ್ಷೇಪಣೆ ಇರಲಿಲ್ಲ. ಆದಕಾರಣ ಹಗ
ಲಹೊತ್ತಿನ ಅಡಿಗೆಯನ್ನೂ ಸೀತನೇ ಮಾಡುವುದಕ್ಕೆ ಆರಂಭಿಸಿ
ದಳು. ಲಕ್ಷಣವಾಗಿರುವ, ಮೊಮ್ಮಗನ ಲಾಲನೆ, ಅವನ ಬಾ
ಲಲೀಲೆ, ಅವನ ಪೋಷಣೆ, ಅವನಿಗೆ ಮಾಡಬೇಕಾದ ಶೃಂಗಾ
------------------------------------

        ಮಾಡಿದ್ದುಣ್ಣೋ ಮಹರಾಯ.       ೧೭೭
       
ರಳು ಇವೇ ಮೊದಲಾದ ಕಾರ್ಯಗಳಲ್ಲಿ ತಿಮ್ಮಮ್ಮನಿಗೆ ಹೆಚಾ
ದ ಕಾಲ ಕಳೆದು ಹೋಗುತಿದವರಿಂದಲೂ ಹಳೇಗಾಯವನ್ನು
ಆಗಾಗ್ಗೆ ಚುಚ್ಚಿ ಕದಕಿ ಹೊಸದಾಗಿ ದೊಡ್ಡ ಗಾಯವಾಗಿ
ಮಾಡುತಿದ್ದ ಸೂಜಿಯು ಸಮೀಪದಲ್ಲಿಲ್ಲದೆ ಅತ್ತೇಮನಿಗೆ ಹೊರ
ಟುಹೋದರಿಂದಲೂ, ಸೊಸೆಗೆ ತಿಮ್ಮಮ್ಮನ ಆಕ್ಷೇಪಣೆ ಸ್ಪಲ್ಪ
ಕಡಮೆಯಾಯಿತು. ಆದರೂ ಆಗಾಗ್ಗೆ ಅತ್ತೆಯ ಕೊಪಶಿಖಿ
ಯು ಅಲ್ಪ ಕಾರಣಕ್ಕೆ ಹತ್ತಿಕೊಳ್ಳುತ್ತ ಇತ್ತು. ಮು
ಖ್ಯವಾಗಿ ಯಾರಾದರೂ ಸರಿಯೇ ತನ್ನ ಮಗಳನ್ನು ಹಳಿಯ
ಕೂಡದು, ಸೊಸೆಯನ್ನು ಹೊಗಳಕೂಡದು, ಈ ಎರಡರಲ್ಲಿ
ಯಾವ ಅಪರಾಧವನ್ನು ಮಾಡಿದರೂ ಅದು ಪ್ರಮಾದವಾಗುತಿತ್ತು.
            ------

                        ೧೦ ನೇ ಅಧ್ಯಾಯ.
                       
ವೈಶಾಖ ಶುದ್ಧ ೧೫ ದಿವಸ ಪ್ರತಿವರುಷವೂ ತಪ್ಪದೆ
ಜೋಯಿಸರ ಮನೆಯಲ್ಲಿ ಪಾನಕಪೂಜೆ ನಡೆಯುತಿತ್ತು. ಇದು
ಬಹು ವಿಜೃಂಭಣೆಯಿಂದ ನಡೆಯುತಿತ್ತು. ಆ ಒಂದುದಿವಸದ
ಫಲಾಹಾರವೂಜೆಗೆ ಸುತ್ತಲೂ ಇರುವ ೮-೧೦ ಗ್ರಾಮಗಳಿಂ
ದಲೂ ಬ್ರಾಹ್ಮಣರು ಬರುತಿದ್ದರು. ಆ ಒಂದುದಿವಸಕ್ಕೆ ನೂ
ರಾರು ರೂಪಾಯಿನಮೇಲೆ ವೆಚ್ಚವಾಗುತಿತ್ತು. ನೂರಾರು ರೂ
ಪಾಯಿ ಎಂದರೆ ಈಗಿನವರಿಗೆ ಬಹಳ ಅಲ್ಪವಾಗಿ ಕಾಣಬಹು
ದು, ಮಳೆ ಚೆನ್ನಾಗಿ ನಡಿಸುತಿದ್ದ ಕಾರಣ ಬೆಳೆ ಪುಷ್ಕಳವಾ
ಗಿ ಆಗುತಿತ್ತು, ಆಯಾ ದೇಶದಲ್ಲಿ ಬೆಳೆದದ್ದು ಅಲ್ಲಲ್ಲಿಯೇ  ಕರಗುವಡಿಯಾಗುತಿತ್ತು. ಬೇರೆ ದೊಡ್ಡ ಸಂತೆಗಳಿಗಾಗಲಿ 
---------------------------------
೧೭೮         ಮಾಡಿದ್ದುಣ್ಣೋ ಮಹಾರಾಯ.

ದೊಡ್ಡ ಪಟ್ಟಣಗಳಿಗಾಗಲಿ ಗಾಡಿಗಳಮೇಲೆ ಸಾಗಿಹೋಗಲು
ರಾಜಭಾಟಿಗಳು ಇರಲಿಲ್ಲ ... ಎಲ್ಲಾ ಎತ್ತುಗಳನ್ನೆಲೆಯ ಕತ್ತೆ
ಗಳಮೇಲೆಯೂ ಸಾಗುತಿತ್ತು. ಹೀಗೆ ಸರಕುಗಳನ್ನು ಬಹ
ಳವಾಗಿ ಸಾಗಿಸುವುದಕ್ಕೆ ಆಗದ ಕಾರಣ ಅಲ್ಲಲ್ಲಿ ಆದ ದವಸ
ಗಳು ಅಲ್ಲಲ್ಲಿಯೇ ನಿಲ್ಲುತಿತ್ತು. ಈಗ ಪಲ್ಲ ೧ ಕ್ಕೆ ೧೫ ರೂ
ಪಾಯಿಗಿಂತಲೂ ಹೆಚ್ಚಾಗಿ ಮಾರುವ ಅಕ್ಕಿ ಆಗ ಪಲ್ಲ ೧ಕ್ಕೆ
೨ ಅಥವಾ ೨|| ರೂಪಾಯಿನಹಾಗೆ ಮಾರುತಿತ್ತು. ಅದೂ ಕೊ
ಳ್ಳುವವರಿಲ್ಲದೆ ಮಲಾಮೆಯಾಗಿತ್ತು. ಪದಾರ್ಧವೆಲಾ ಬಹಳ
ಅಗ್ಗವಾಗಿ ರೊಕ್ಕ ಮಾತ್ರ ಬಹು ಪ್ರಿಯವಾಗಿ ಇತ್ತು. ಇದೂ
ಅಲ್ಲದೆ ಆಗಿದ್ದ ನಾಣ್ಯದ ಬೆಲೆಯು ಈಗಿನ ನಾಣ್ಯಕ್ಕಿಂತ
ಮರರಷ್ಟು ಆಗಿತ್ತು. ಆದ್ದರಿಂದ ಆಗಿನ ನೂರಾರು
ಪಾಯಿನವೆಚ್ಚ ಈಗ ಸಾವಿರಾರುರೂಪಾಯಿ ಬೆಲೆಯುಳ್ಳದ್ದಾ
ಗುವುದು. ಬ್ರಾಹ್ಮಣರಿಗೂ ಮುತ್ತೈದೆಯರಿಗೂ ಸಂತುಷಿಯಾ
ಗಿ ಫಲಾಹಾರವಾಗಿ, ಊಟ ಹಾಗವಾದರೆ ಫಲಾಹಾರ ಮು
ಪ್ರಾಗ ಎನ್ನುವಮಟ್ಟಗೆ ಆಯಿತು. ಬ್ರಾಹ್ಮಣರಿಗೆಲ್ಲಾ ದಕ್ಷಿಣೆ
ತಾಂಬೂಲವನ್ನು ಕೊಟ್ಟು ಕಳುಹಿಸಿದ ತರುವಾಯ ಮುತ್ತೈ
ದೆಯರೇ ಮೊದಲಾಗಿ ಹೆಂಗಸರೆಲ್ಲಾ ಸೇರಿದ್ದರು. ಇದಕ್ಕಾಗಿ
ಯೇ ಸಾಕಿಯನ್ನೂ ಅತ್ತೆಮನೆಯಿಂದ ಕರಿಸಿದರು. ಫಲಾಹಾ
ರವಾದಮೇಲೆ ಪಾನಕ ನೀರುಮಜ್ಜಿಗೆಯನ್ನು ತೆಗೆದುಕೊಂಡ
ತರುವಾಯ ಹೆಂಗಸರು ತಾಂಬೂಲವನ್ನು ಹಾಕಿಕೊಳ್ಳುತಾ ಕೂ
ತಿರುವಾಗ, ಮಾತಿಗೆಮಾತು ಬಂದು ನೆರೆಮನೇ ಸುಬ್ಬಕ್ಕನು-
ತಿಮ್ಮು ನಿನ್ನ ಸಂಸಾರವೆಲ್ಲಾ ಅಚ್ಚಕಟ್ಟಾಗಿದೆ ; ಹೆಂಣಿಗೆ ಹೆಂ
-------------------------------------

    ಮಾಡಿದ್ದುಣ್ಣೋ ಮಹಾರಾಯ,   ೧೭೯

ಣುಮಗಳು, ಗಂಡಿಗೆ ಗಂಡುಮಗ, ಮುತ್ತಿನಹಾಗಿರುವ ಮೊ
ಮ್ಮಗು ; ಮಗ ಬಲಮಗನಾದರೂ ಯಾವುದೊಂದಕ್ಕೂ ಚಿಕ್ಕ
ಮ್ಮ ಚಿಕ್ಕಮ್ಮ ಎಂದುಕೊಂಡು, ಉಗುಳು ಬಾರದೆ ಇದಾನೆ.
ಆ “ಸೊಸೆಯ ಹಾಗೇ, ಅಂಧಾಸೊಸೆ ಎಷ್ಟು ವರುಷ ತಪಸ್ಸು
ಮಾಡಿದವರಿಗೂ ಇಲ್ಲ. ಆ ಜಾಣತನವೋ ಆ ರೂಪೋ, ನಾನು
ಯಾವುದು ಎಂದು ಹೇಳಲಿ, ಈ ದಿವಸ ಬೆಳಗ್ಗೆ ಬೃಂದಾವನದ
ಪೂಜೆ ಮಾಡಿಕೊಂಡು ಬರುತ್ತಿದ್ದಳು. ನಾನು ಹಿತ್ತಲಬಾಗಿಲಲ್ಲಿ
ನಿಂತಿದ್ದೆ, ನಾನು ಏನಹೇಳಲಿ ? ಸಾಕ್ಷಾತ್‌ ಆದಿಲಕ್ಷ್ಮಿಯಹಾ
ಗೆ ಇದಳು. ಆ ತಲೆಕೂದಲೋ, ಆ ಹಣೆ ಬೈತಲೆಯೋ, ಆ
ಕಂಣು ಮೂಗೋ, ಆ ಹಲ್ಲು ಬಾಯಿದೆರೆಯೋ, ಆ ಕೆನ್ನೆ ಪನ್ನೆ
ಗಳೋ, ಕುಂದಣದ ತಗಡಿನಹಾಗಿರುವ ಆ ಮೈಬಣ್ಣವೋ, ಪ್ರ
ಮಾಣಕ್ಕೆ ಸರಿಯಾಗಿರುವ ಆ ಮೈಸಿರಿಯೋ, ಆ ಗಂಭೀರವಾ
ದ ನಡಿಗೆಯೋ, ಆ ಹಸನ್ಮುಖವೋ, ಆ ಮೃದುವಾದ ಮಾತೋ,
ಆ ಸುಗುಣಗಳೋ, ನಾನು ಯಾವುದು ಎಂದು ಹೇಳಲಿ ! ಮ
ಹಾರಾಯತಿ ಪೂರ್ವಜನ್ಮದಲ್ಲಿ ಏನು ಪುಣ್ಯ ಮಾಡಿದ್ದಳೋ, ಈಗ
ಆ ರೂಪು ಆ ಅಕ್ಷಣಗಳೆಲ್ಲಾ ಪ್ರಾಪ್ತವಾಗಿವೆ : ಹೀಗೆಂದು ಆಕೆ
ಕೊಂಡಾಡಿದಳು. ಅದಕ್ಕೆ ಹೊಟ್ಟೆಯಲ್ಲಿ ಮೆಣಸಿನಕಾಯಿ
ಕಿವಿಚಿದಹಾಗೆ ಆದ ತಿಮ್ಮಮ್ಮನು~ ಎಷ್ಟಾದರೂ ಪಟ್ಟಣವಾಸ
ದವರ ಸಿಸ್ತು ಕೊಂಡಾಡಿಸಿಕೊಳ್ಳುತ್ತೆ. ಆದರೇನು, ತೆಗೆ ಸು
ಬ್ಬಕ್ಕ, ನೋಡಲಾರೆ. ಸೀತೆಯ ಕೂದಲು ಏನೋ ಒಂದು ಬಗೆ
ವಂಕಿವಂಕಿಯಾಗಿ ಗುಂಗುರುಗುಂಗುರಾಗಿದೆ. ಎಷ್ಟು ಬಾಚಿದರೂ
ಎಷ್ಟು ಎಂಣೇ ತೊಡೆದರೂ ಸಾಲದು. ಹಾಗೆ ಮೆಟ್ಟಿಲಮೆಟ್ಟಿಲಾಗಿ 
-------------------------------------
೧೮೦         ಮಾಡಿದ್ದುಣ್ಣೋ ಮಹರಾಯ,

ದ್ದರೂ ಕೂಡ ಉದ್ದವಾಗಿ ಕೂತರೆ ನೆಲದಮೇಲೆ ಸಿಂಬೀ ಸು
ತ್ತಿಕೊಂಡು ಕೆಳಗೆ ಬೀಳುವಹಾಗೆ ಇದೆ. ಅತಿಯಾಗಿ ಹಾಗೆ
ಇದ್ದರೆ ಏನು ಚೆನ್ನ ? ಅವಳಿಗೆ ಜಡೆ ಹಣಿಯುವುದು ಬಹು ಕಷ್ಟ
ನಮ್ಮವ್ವ, ಕೂದಲು ಸರಳುಹೊಡೆದಹಾಗೆ ನೆಟ್ಟಗೆ ಇ
ದ್ದು ಅಡಕನಾದ ಜಡೆಯಾಗುವಹಾಗೆ ಇದ್ದರೆ ಲಕ್ಷಣ. ನಮ್ಮ
ಸಾಕಿಗೆ ಹಾಗಿದೆ, ಹಣೆ ಎರಡು ಬೆರಳು ಅಗಲ ಸಾಕಿಹ
ಣೆ ಹಾಗೆ ಇದ್ದರೆ ಚೆನ್ನ. ಅದಕ್ಕಿಂತಲೂ ಅಗಲವಾಗಿ ಚಪ್ಪ
ಟೆಯಾಗಿದ್ದರೆ ಬಂದ ಭಾಗ್ಯವೇನು ? ನನ್ನ ಹೆಂಣಿಗೆ ಹುಬ್ಬಿ
ನಮೇಲೆ ಸಂಣಗೆ ಅಲ್ಲೊಂದು ಇಲ್ಲೊಂದು ಕೂದಲು ಕಂಡೂ
ಕಾಣದಹಾಗೆ ಇದೆ. ಹೆಂಗಸಿಗೆ ಇನ್ನೆಷ್ಟಿರಬೇಕು ? ಅದಬಿಟ್ಟು
ಸೀತನಿಗೆ ಹುಚ್ಚು ಮೂಗಿನ ಮೇಲುಗಡೆ ದಪ್ಪನಾಗಿದೆ. ಕಿವೀ
ಕಡೆಗೆ ಸಂಣವಾಗುತಾ ಹೋಗುತ್ತೆ, ಒಂದುಬಗೆ ಬೇವಿನೆಲೆಯ
ಹಾಗೆ ಅವಳ ಹುಬ್ಬನ್ನು ನಾನು ನೋಡಿದಾಗಲೆಲ್ಲಾ ಬೇವಿನೆಲೆ
ತಿಂದರೆ ಹೇಗೆ ಅಸಹ್ಯವಾಗುತ್ತೋ ಹಾಗೆ ಆಗುತ್ತೆ. ಅದೇನು
ಸುಬ್ಬಲಕಾಟಯೋ, ಕಂಣುತಾನೆ ಆಗಲಿ, ಸೀತನಿಗೆ ಅದೇನೊ
ಒಂದುಬಗೆ. ಸಾಧಾರಣವಾಗಿ ಅರ್ಧ ಮುಚ್ಚಿದಹಾಗೆಯೇ ಇ 
ರುತ್ತೆ ; ತೆರೆದರೆ ಅಗಲವಾಗಿ ಮಕ್ಕಳನ್ನು ಹೆದರಿಸುತಾಳೋ
ಎನ್ನುವಹಾಗೆ ತೆರೆಯುತ್ತಾಳೆ. ಆ ಕಂಣು ತಿರುಗಿಸುವುದು ಯಾ
ರಿಗೆ ಬರಬೇಕು ; ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಿ
ದರೆ ತಳಾರಪಳಾರ್ ಎನ್ನಿಸುವುದು ಯಾರಿಗೆ ಬರುತ್ತೆ ? ಕಂ
ಣು ನಮ್ಮ ಸಾಕಮ್ಮನ ಕಂಣಿನಹಾಗೆ ಪುಟ್ಟಪುಟ್ಟದಾಗಿದ್ದರೆ
ನೋಡುವುದಕ್ಕೆ ಅಂದವಾಗಿರುತ್ತೆ, ಆ ಮೈಸೂರವರ ಮನೇ 
--------------------------------------

        ಮಾಡಿದ್ದುಣ್ಣೋ ಮಹಾರಾಯ.    ೧೮೧

ಮೂಗೆಲ್ಲ ಒಂದು ತೆರನಾಗಿದೆ, ಹುಬ್ಬಿನ ನಡುವಿನಿಂದ ಸಂಣ
ವಾಗಿ ಆಮೇಲೆ ಸ್ವಲ್ಪ ಬಗ್ಗಿದಹಾಗೇ ಬರುತಾ ದೊಡ್ಡದಾಗಿ
ಕೊನೆಯಲ್ಲಿ ಸ್ವಲ್ಪ ಬಗ್ಗಿದಹಾಗೆ ಇರುತ್ತೆ. ಮೂಗು ಆರೀತಿ
ಯಾಗಿದ್ದರೆ ಉಸಿರು ಬಿಡುವುದೂ ಎಳೆಯುವುದೂ ಕಷ್ಟವಲ್ಲ
ವೆ ? ಸಾದಾರಣವಾಗಿ ನನ್ನ ಕಿಟ್ಟೆ ನಮ್ಮ ಸಾಕು ಇವರಿಗೆ
ಇರುವ ತೆರದಲ್ಲಿ ಕೆಳಗಡೆ ದಪ್ಪವಾಗಿ ತುದಿ ಕೊಂಚ ಎತ್ತಿ
ಕೊಂಡಿದ್ದರೆ ಉಸಿರು ಬಿಡುವುದಕ್ಕೆ ಸರಾಗ, ಬಾಯಿ ನಮ್ಮ
ಸೊಸೆಯ ಬಾಯಿನಹಾಗೆ ಅಷ್ಟು ಪುಟ್ಟದಾಗಿದ್ದರೆ ಉಂಡೆಕಬ್ಬು
ಮೊದಲಾದ ನ್ನು ತಿನ್ನುವುದು ಹೇಗೆ ? ಬಾಯಿ ನನ್ನ ಹೆಣ್ಣಿ 
ನ ಬಾಯಿನಹಾಗೆ ಅಗಲವಾಗಿಯೇ ಇರಬೇಕು. ನೆಗಡಿ ಬಂ
ದು ಮಗು ಕಟ್ಟಿಕೊಂಡರೆ ಬಾಯಿಯಲ್ಲಿಯಾದರೂ ಉಸಿರ
ನ್ನು ಬಿಡಬಹುದು. ತುಟಿಯೂ ಅಷ್ಟೆ , ನಮ್ಮ ಸಾಕಮ್ಮನ
ತುಟಿ ದಪ್ಪ ಸೀತನ ತುಟ ಸಂಣ, ತುಟಿ ದಪ್ಪವಾಗಿದ್ದರೆ ತಿಂ
 ನುವ ಪದಾರ್ಥ ಬಿಟ್ಟು ಹೋಗದಹಾಗೆ ಅಡ್ಡಿಯಾಗಿರುವುದು,
 ಸೀತನಿಗೆ ಮೇಲಿನತುಟಿ ಅತಿ ಅಗಲವಾಗಿ ಕೆಳಕ್ಕೊತ್ತಿ ಇದೆ.
ಸಾಕಿಗೆ ಮೇಲಿನತುಟಿ ಸ್ವಲ್ಪ ಎತ್ತಿದಹಾಗೆ ಯಾವರೀತಿಯಲ್ಲಿರ
ಬೇಕೋ ಹಾಗೆ ಇದೆ. ನೀನು ಸಾವಿರ ಹೇಳು ಸೀತೆಗೆ ಹಲ್ಲು
ಚೆನ್ನಿಲ್ಲ. ಅವಳು ನಕ್ಕರೆ ಹಲ್ಲು ಚೆನ್ನಾಗಿ ಕಾಣಬೇಡವೆ ?
ಕಂಡರೆ ಕಂಡಿತು ಇಲ್ಲದಿದ್ದರೆ ಇಲ್ಲ ಎನ್ನುವಹಾಗೆ ಇದೆ. ಸೀತೆ
ಗೇನೋ ಕೆಂಪುತೋಗಲು ನಿಜ, ಅದೇನು ಚೆನ್ನೋ ನಾನು
ಕಾಣೆ ನಮ್ಮವ್ವ, ಒಂದುಬಗೆ ತೊನ್ನು ಬಡಕರ ಹಾಗೆ ನಮ್ಮ
ಸಾಕಿ ಹುಟ್ಟಿದಾಗ ಸುಮ್ಮನೆ, ಹೇಗೆ ಇರೋದು, ಮಗು ! ನೋ
-------------------------------

೧೮೨         ಮಾಡಿದ್ದುಣ್ಣೋ ಮಹಾರಾಯ.

ಡುವುದಕ್ಕೆ ಹತ್ತು ಕಂಣು ಸಾಲದಹಾಗೆ ಇತ್ತು. ಈಚೆಗೆ ಸಿಡ
ಬು ಎದ್ದು ಹಾಗಾಯಿತು. ಮುಖವೆಲ್ಲಾ ಗುಣಿಯಾಗಿ ಬೂದು
ಕಪ್ಪು ಕವಿಚಿಕೊಂಡಿತು. ಹೀಗಿತ್ತೇ ? ಏನೋ ಹೇಗಾದರೂ
ಇದ್ದು ಬದುಕಿಕೊಳ್ಳಿ. ಇದೂ ಅಲ್ಲದೆ, ಆ ಮೈಸೂರಿನವರ
ಒಲಪು ಆ ಶೃಂಗಾರ ಆ ಬಿನ್ನಾಣ ಯಾರಿಗೆ ಬರುತ್ತೆ ? ಆ
ನಡಗೆ ಯಾರಿಗೆ ಬರುತ್ತೆ ? ಇಷ್ಟೂ ಆಯಿತು, ಆ ಸಿಸ್ತನ್ನೆ
ಲ್ಲಾ ಕಟ್ಟಿಕೊಂಡು ನನ್ನು ಸಾಕಿ ಏನಮಾಡೀತು ? ಗರತಿ ಲಕ್ಷ
ಣಕ್ಕೆ ಇದ್ದು ಗಂಡನಿಗೆ ಹೆಂಡತಿಯಾಗಿ ಮಕ್ಕಳಿಗೆ ತಾಯಾಗಿ
ಹೊಟ್ಟೆತೆರೆದು ಎರಡು ಮಕ್ಕಳಾದರೆ ಸಾಕು.

ಈ ಪ್ರಕಾರದಲ್ಲಿ ಅಲ್ಲಿದ್ದ ಹೆಂಗಸರ ಸಭೆಯಮುಂದೆ
ತಿಮ್ಮಮ್ಮ ಹೇಳಿದಳು. ಇವಳಮಾತ ಎಲ್ಲವನ್ನೂ ಕೇಳಿ ಅಲ್ಲಿ
ದ್ದ ಮುತ್ತೈದೆಯರು ಒಬ್ಬರಿಗೊಬ್ಬರು ಮುಖಾ ನೋಡಿಕೊಂ
ಡು ಹುಶಿನಗೆ ನಗುತಾ ಸುಮ್ಮನಾದರು. ಈ ಗರತಿಯರೆಲ್ಲಾ
ಎಲೆ ಅಡಕೆ ತೆಗೆದುಕೊಂಡು ಮನೆಗೆ ಹೋಗುತಾ ದಾರಿಯಲ್ಲಿ
ತಂತಮ್ಮೊಳಗೆ- ತಿಮ್ಮಮ್ಮನ ಮಾತ ಕಟ್ಟಿಕೊಂಡೇನು, ಹೊ
ಟೈಕಿಚ್ಚಿನ ಮಾತ ? ಅವಳು ಹೇಳುವುದನ್ನೆಲ್ಲಾ ಹೇಳಲಿ ಎಂ
ದು ಸುಮ್ಮನೆ ಕೂತು ತಡೆದುತಡೆದೂ ಸಾಕಾಯಿತು. ಒಂದು
ಬಗೆ ಪಿಶಾಚಿಯಹಾಗೆ ಇದೆ, ಆ ಹಾಳಸಾಕಿ ಎನ್ನುವ ಹೆಂಣು,
ಆ ಮೂದೇವಿಯ ಚೇಷ್ಮೆಯೋ ಅದರ ಬುದ್ಧಿಯೋ ಅದರ
ರೂಪಿಗೆ ತಕ್ಕ ಹಾಗೆಯೇ ಇದೆ, " ಕುರೂಪೀ ಬಹುಚೇಷ್ಟಿತಾ " ಎಂದಹಾಗೆ ನೋಡಿದರೆ ಓಕರಿಕೆ ಬರುತ್ತೆ. ಆ ಹೆಂಣನ್ನು
ಹೊಗಳಿ ಸೊಸೆಯನ್ನು ಹೇಳಿದಳಲ್ಲಾ; ನಮಗೇನು ಕಂಣಿ
-----------------------------------

        ಮಾಡಿದ್ದುಣ್ಣೋ ಮಹಾರಾಯ.     ೧೮೩
       
ಲ್ಲವೆ ? ಪಾಪ ಆ ಹುಡುಗಿ ಸೀತಮ್ಮ ನೂ ಸೀತಮ್ಮನೇ, ಅವ
ಳ ಹೆಸರು ಒಂದಲ್ಲ ಅವಳ ಇರಿಕೆ ಒಂದಲ್ಲ: ಹೀಗೆಂದು ತಮ್ಮ
ಳಗೆ ಮಾತನಾಡಿಕೊಂಡು ಹೋಗುತಿದ್ದರು,

ಇದು ಹೀಗಿರಲಾಗಿ, ಅತ್ತ ಅಮ್ಮನಗುಡಿಯ ಅವ್ಯಾಜಿಯು
ಹೆಚ್ಚಾಗಿ ಪ್ರಬಲಿಸುತಾ ಬಂದನು. ಇವನಕಡೇ ಗುಂಪೂ ದಿನೇ
ದಿನೇ ಬಲವಾಗುತ್ತಾ ಬಂತು. ಅಲ್ಲಿ ಸೇರುತ್ತಾ ಇದ್ದ ತುಂಟರ
ಹಾವಳಿಯನ್ನು ಸಹಿಸುವುದು ದುಸ್ತರವಾಗಿತ್ತು. ಅಮ್ಮನಿಗೆ
ಬರುತಾಇದ ಕಾಣಿಕೆ ಮುಡುಪೆಲ್ಲಾ ಸಿದ್ದಪ್ಪಾಜಿಗೆ ಗಂಟನ್ನು
ದಿನೇದಿನೇ ದಪ್ಪವಾಗಿ ಮಾಡುತ್ತಾ ಬಂತು, ಹಣ ಹೆಚ್ಚಿದರೆ
ಅಲ್ಪರಿಗೆ ಬುದ್ಧಿವಿಕಾರಗಳು ಹುಟ್ಟುವುದು ವಾಡಿಕೆಯಾಗಿದೆ.
ಇವನಿಗೆ ಕಿವಿಗೆ ಹತ್ತಕಡಕಾಯಿತು, ಕೈಗೆ ಚಿನ್ನದ ಕಪ್ಪವಾ
ಯಿತು, ತೋಳಿಗೆ ಚಿನ್ನದ ಮುಡಿ ಬಳೆಯಾಯಿತು, ಬೆರಳಿಗೆ
ಉಂಗರವಾಯಿತು, ಕಾಲಿಗೆ ದಪ್ಪನಾದ ಕಪ್ಪವಾಯಿತು, ಪಟ್ಟೆ
ಅಂಚಿನ ದೋತ್ರವಾಯಿತು, ನಿರಾಜಿ ಬಟ್ಟಿಯಾಯಿತು, ಗದ್ದಿ
ಗೆಯಮೇಲೆ ಕೂತುಕೊಳ್ಳುವಾಗ ತಲೆಯಜಟಿ ಗಂಟಿಗೆ ಸುತ್ತು
ವುದಕ್ಕೆ ಬರೀ ನಿರಾಜಿಯಾಯಿತು, ಗದ್ದಿಗೇ ಮೇಲೆ ಕೂತುಕೊ
ಳ್ಳುವಾಗ ಧರಿಸಿಕೊಳ್ಳುವುದಕ್ಕೆ ನಿರಾಜಿ ಅಂಚುಸೆರಗು ಉಳ್ಳ
ಹಳದೀಮಗುವ ಕೆಂಪಿನ ಮಗುಟಗಳಾದವು ; ಹೀಗೆ ಡಂಭಕ್ಕೂ
ಸೊಗಸಿಗೂ ಬೇಕಬೇಕಾದ ಸಲಕರಣಗಳು ದಿನೇದಿನೇ ಒಂ
ದೊಂದಾಗಿ ಹೆಚ್ಚುತಾ ಬಂದವು. ಇವನು ಎಲ್ಲಿ ಹೋದರೂ ಪೂ
ರ್ವವಯಸ್ಸಿನ ಲಟ್ಟರು ಹಿಂದೂಮುಂದೂ ಓಡಾಡಿಕೊಂಡು
ಹೊರಡುತ್ತಿದ್ದರು. ಕೊನೆಗೆ ಇಂಥಾ ತುಂಡಾಂಡಿಗಳು ; ಗುಡಿಯ
-----------------------------------

೧೮೪         ಮಾಡಿದ್ದುಣ್ಣೋ ಮಹರಾಯ.

ಕೈಸಾಲೆಯಲ್ಲಿ ಕೂತು ಜಾಜ ಮುಂತಾದ್ದನ್ನು ಆಡುತಾ ಇ
ದ್ದದೂ ಅಲ್ಲದೆ ಪುಂಡುಪದಗಳನ್ನು ಕೆಲವರು ಹೇಳುತಿದ್ದರು. ಲಾವಣಿಗಳನ್ನು ಕೆಲವರು ಹೇಳುತಿದ್ದರು. ಜಾವಡಿಗಳನ್ನು
ಕೆಲವರು ಹಾಡುತಿದ್ದರು. ಪೂವಯಸ್ಸಿನ ಹೆಂಗಸರನ್ನು
ಕಂಡಾಗ ಈ ವಿಧವಾದ ರಸಿಕತೆ ಈ ಗುಂಪಿನವರಲ್ಲಿ ಹೆಚ್ಚಾಗು ತಾಇತ್ತು. ಇದರ ಜೊತೆಗೆ ಅಲ್ಲಿಯ ಕ್ಲಾಕೆಯ ಗೊತ್ತಿಲ್ಲದ
ಹಾಗೆ ಆಗುತಿದ್ದವು. ಈ ಹಾವಳಿಯಲ್ಲಿ ಹೆಂಗಸರು ಆ ದಾರಿ
ಯಲ್ಲಿ ತಿರುಗಾಡಲು ಹೆದರಿಕೊಳ್ಳುವಹಾಗೆ ಆಯಿತು. ಊರಿನ
ಜನರು ಅನೇಕರು ಆ ದಾರಿಯಲ್ಲಿಯೇ ನೀರತರಲು ಹೊಳೆಗೆ
ಹೋಗಿ ಬರಬೇಕಾಗಿತ್ತು. ಹೀಗೆ ಕಬ್ಬಹರಿದ ಪಂಜಾಗಿ ನಡೆ
ಯುತಾ ಇದ್ದ ಜನರ ಹಾವಳಿಯಲ್ಲಿ ಯಾವ ಆತನ ನಡೆಯ
ಬಹುದು ಯಾವುದು ನಡೆಯುವುದಿಲ್ಲ ಎಂದು ಹೇಳಬಹುದು ?

ಅತ್ತ ಜೋಯಿಸರ ಮನೆಯಿಂದ ಸೀತಮ್ಮನು ಪ್ರತಿನಿತ್ಯವೂ ಬೃಂದಾವನದ ಪೂಜೆಗೆ ಹೋಗಿ ಬರುತ್ತಾ ಇದ್ದ ಸಂಗತಿ ಗೊತ್ತಾ ಗಿಯೇ ಇದೆ. ಆ ಬೃಂದಾವನವು ಹೊಳೆಗೆ ಸ್ವಲ್ಪ ಸಮೀಪ
ವಾಗಿತ್ತು. ಆದರೆ ಅಲ್ಲಿಂದಾ ಹೊಳೆಗೆ ಹೋಗಲು ಪೂರ್ವದಲ್ಲಿ ಅಡ್ಡಿಏನೂ ಇರಲಿಲ್ಲ. ಈಚೆಗೆ ಹೊಳೇ ತಡಿಯಲ್ಲಿದ್ದ ಹೊಲವ
ನ್ನು ಯಾರೋ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದರು.
ಈ ಬೃಂದಾವನವು ಆ ಹೊಲದ ಮಧ್ಯ ಭಾಗಕ್ಕೆ ಸೇರಿತ್ತು.
ಆದರೆ ಅದು ಪೂಜೆಗೆ ಬರಲು ಯಾರಿಗೂ ಅಡ್ಡಿ
ಇರಲಿಲ್ಲ. ಈ ಬೃಂದಾವನವು ಅಮ್ಮ ನಗುಡಿಯ ಕೈಸಾಲೆಗೆ ಎದುರಾಗಿತ್ತು. ಅಲ್ಲಿಗೂ ಅಲ್ಲಿಗೂ ಸುಮಾರು ೧೦೦-೧೫೦
-------------------------------------------------------

        ಮಾಡಿದ್ದು ಮಹಾರಾಯ,     ೧೮೫   

ಗಜ ದೂರವಿತ್ತು. ದಿನಚರಿಯಲ್ಲಿಯ ಸೀತಮ್ಮ ನು ಬೃಂದಾ
ವನದ ಪೂಜೆಗೆ ಹೋಗಿಬರುವುದು ಗುಡಿಯ ಕೈಸಾಲೆಗೆ ಚೆನ್ನಾಗಿ ಕಾಣಿಸುತಿತ್ತು. ಸೀತಮ್ಮ ನು ಪೂಜೆಗೆ ಹೋಗಿಬರುವ ಹೊ
ತು ಗೊತ್ತಾಗಿತ್ತು. ಆ ಕಾಲದಲ್ಲಿ ಈ ಪಡೆ ಹುಡುಗರ ಹಾ
ವಳಿಯು ಅವನಗುಡಿಯ ಬಳಿಯಲ್ಲಿ ದಿನೇದಿನೇ ವೃದ್ಧಿಯಾ
ಗುತ್ತಲೇ ಬಂತು. ಬುದ್ಧಿವಿಕಾರಕ್ಕೆ ನೋಟವೇ ಅಂಕದ ಬಾ
ಗಿಲಾಗಿದೆ. ಸೀತಮ್ಮ ಹೋಗಿ ಅಲ್ಲಿ ಪೂಜೆಯನ್ನು ತೀರಿಸಿಕೊಂ
ಡು ಬರುವಷ್ಟರಲ್ಲಿ ಗುಡಿಯಲ್ಲಿರತಕ್ಕೆ ಎಲ್ಲರಕಂಡೂ ಆಕಡೆ
ಗೇ ತಿರುಗುತಿತ್ತು. ಒಂದು ದಿವಸ ಅವಾಜಿಯು ಗುಡಿಯ ಕೈಸಾಲೆಯಿಂದಲೇ ದೃಷ್ಟಿಸಿ ನೋಡಿದನು. ಕಂಕಣಿಗೆ ತೃಪ್ತಿ
ಯಾಗಲಿಲ್ಲ, ದೃಷ್ಟಿ ಅಲ್ಲಿಯೇ ನೆಟ್ಟುಹೋಯಿತು. ಸ್ವಲ್ಪ
ಹೊತ್ತಿನಮೇ- ಈಕೆ ದೀಕ್ಷಿತರ ಸೊಸೆಯಲ್ಲವೆ ? ಎಂದನು. ಅಲ್ಲಿದ್ದವರು- ಹವುದು ಎಂದು ಹೇಳಿದರು. ಆಗ ಅಪ್ಪಾಜಿ
ಯು- ಒಳ್ಳೇ ಚೆಲುವೆ, ಬಹು ಸುಂದರಿಯಾಗಿದ್ದಾಳೆ. ನಾ
ನು ಚೆನ್ನಾಗಿ ನೋಡಿಯೇ ಇರಲಿಲ್ಲ. ಈ ಸೌಂದಯ್ಯದ ವೈಖ
ರಿಯನ್ನು ನಾನು ಎಲ್ಲಿಯೂ ಕಾಣಲಿಲ್ಲ ಎಂದನು. ಅಲ್ಲಿ ಇ
ದ್ದವರಲ್ಲಿ ಒಬ್ಬನು ಅವಳ ತಲೆಕೂದಲು ಎಷ್ಟು ಸೊಗ
ಸಾಗಿದೆ ಎಂದನು. ಇನ್ನೊಬ್ಬನು ಬರೀ ಕೂದಲೇ ಅಷ್ಟು
ಹೇಳತಕ್ಕದ್ದಲ್ಲ, ಆ ಕೂದಲು ಆ ಮುಂದಲೇ ಕುರುಳು ಬೆಳ್ಳ
ಗಿರುವ ಮುಖದ ಮೇಲುಗಡೆ ಮೂಲೆ ಮೂಲೆಯಾಗಿ ಕಮಾ
ನು ಕಟ್ಟಿ ಬಿಟ್ಟಹಾಗೆ ಇದೆ, ಎಂದನು. ಇನ್ನೊಬ್ಬನು- ಆ
ಕಂಣು ಆ ಹುಬ್ಬು ಆ ನೋಟ ಇದನ್ನು ಹೋಲುವುದು
--------------------------------------------------------.
 ೧೮೬        ಮಾಡಿದ್ದುಣ್ಣೋ ಮಹಾರಾಯ,

ಯಾವುದೂ ಇಲ್ಲ ತೆಗೆ, ಎಂದನು. ಮತ್ತೊಬ್ಬನು- ಒಂದು
ಸಾರಿ ಅವಳು ನಕ್ಕದ್ದನ್ನು ನೋಡುವುದಕ್ಕೆ ಏನಬೇಕಾದರೂ
ಕೊಡಬಹುದು ಎಂದನು. ಮತ್ತೊಬ್ಬನು ಅವಳ ತುಟಿ
ಭಲೆಜೋಕಾಗಿ ಅದೆ ಕಣೆಲೋ, ಎಂದು ನುಡಿದನು. ಇ
ನೊಬ್ಬನು ಬೇಕೆಂತ ಕಡೆದು ಮಾಡಿದ ಜಂತದ ಬೊಂಬೆ
ಹಂಗನಳೆ, ಅವಳಮೈ ಅಷ್ಟು ಚೆನಾಗೈತೆ ಎಂದನು. ಇನೊ
ಬ್ಬನು- ಐ ಮೈ ಹೇಳತವನೆ ಮೈಯ್ಯ ; ಇನ್ಯಾವುದು
ಕೆಟ್ಟದ್ದಾತು? ಎಂದನು. ಇನ್ನೊಬ್ಬನು ಅಯೆ, ತೆಗೆಯೊ ನೀ ಏನ
ಬಲ್ಲೆ, ಮೈಸೂರಲ್ಲಿ ಪಟ್ಟದಾನೆ ಡುಲಾಯಿಸಿಕೊಂಡು ನಡೆ
ಯಾಕಿಲ್ಲವ ? ಹಂಗೆ ನಡೀತವಳೆ ಕಣೆಲೊ, ಎಂದನು. ಇನ್ನೊ
ಬ್ಬನು- ಅದೇನಹಳಿಯಲೆ, ಬೊಡ್ಡಿ ಈ ಕಡೆಯಿಂದ ಆ ಕಡೆ
ಕಂಣ ತಿರಗಸತನಳೆ, ಅದಕಂಡರೆ ಎಂತವನಗಾದರೂ ಜೀವಾ
ಮಿಳ್‌ ಮಿಳ್‌ ಅನ್ನಾಕಿಲ್ಲವ ? ಎಂದನು. ಇನ್ನೊಬ್ಬನು- ನೀಬಲೆ ಕಂಡವ ಸುಮ್ಮನಿರೆಲೆ, ಒಂದು ಹೇಳತವನೆ ಒಂದ, ಇನ್ಯಾ
ವದು ಕೆಟ್ಟದ್ದಾತು ? ಆ ಎದೆಬಾವಕ್ಕೆ ಏನತಾನೆ
ಹೋಲಿಸೀಯಲೆ? ಎಂದು ಒದರಿದನು. ಇನ್ನೊಬ್ಬನು- ಅವಳು ನಡೆಯೋವಾಗ ಮೈ ಬಳಕತಾ ಬಳಕತಾ ನಡೀತವಳೆ, ಅದ ನೋಡಾಕೆ ಶಿವ ಇನ್ನ ಹತ್ತಕಂಣ ಕೊಟ್ಟರೂ ಸಾಲದುಕಣೆ
ಲೋ, ಎಂದನು. ಇನ್ನೊಬ್ಬನು- ಮೊನ್ನೆ ಸುಕ್ಕರವಾರ
ದೊರಕಿಟ್ಟಪ್ಪ ಓಟು ಗುಲಾಬದ ಹೂ ಮನೆಗೆ ಕೊಟ್ಟು
ಬಾ ಅಂತ ಕಳಗಸದ, ನಾನು ಅವರ ಮನೆಗೆ ಹೋದವ
ಹೂ ತಗಳ್ಳಿ ಅಂದಿ ; ಅವ ಬಂದಿ ಕೈ ಒಡ್ಡಿದ, ಆಹಾ ಅದೇ
------------------------------------------------

        ಮಾಡಿದ್ದುಣ್ಣೋ ಮಹಾರಾಯ. ೧೮೭

ನಕ್ಕೆ ! ಆ ಹುಮ್ಮಿನಬ೦ಣ ಅವಳ ಅಂಗೈಬಂಣ ಒಂದೇ,
ವಸಿನೂ ತಿಳಿಯಾಕಿಲ್ಲ ಹಂಗಿತ್ತು ; ಆ ಬೊಡ್ಡಿ ಕೈ ಉಗುರು ಕಾಲಉಗುರು ಏನಂತೀಯೋ ಕೆಂಗಣಗಿಬಂಣದ ಕನಡಿಹಂಗೆ ತಣಕ್‌ತಣಕ್‌ ಹೊಳೆತಿರಾದು ಕಣೆಲೆ, ಎಂದು ವರ್ಣಿಸಿದ
ನು. ಇನ್ನೊಬ್ಬನು ಅವಳಮಕ ವಸಿ ಮಳುಮಕವಲ್ಲವ ?
ಎಂದು ಕೇಳಿದನು. ಅದಕ್ಕೆ ಮತ್ತೊಬ್ಬನು ತೆಗೆಯೋ ಏನ ಮಾತಾಡ್ತೀಯ, ಇವ ಬಲೇ ಕಂಡವ, ಅವಳ ಮಕ ಎಷ್ಟೋ ನುಂಣಗೈತೆ, ಒಂದು ಬೊಟ್ಟು, ಒಂದು ಚುಕ್ಕಿ, ತೋರೀ
ಯ ನೀನು? ಮಾತಾಡತವನೆ ಮಾತ, ಮನಸ ಕಂಡರೆ ಮಾತಾ ಡಬೇಕು ಕಣೆಲೆ, ಕಾಣದಿದ್ದರೆ ಸತ್ತನಾಯಿನಹಾಗೆ ಬಿದಿರಬೇ
ಕು, ಎಂದು ನುಡಿದನು. ಅದಕ್ಕೆ ಮತ್ತೊಬ್ಬ ಹುಡುಗನು-
ಅವಳು ವಸಿದಪ್ಪನಾಗವಳೆ ಅಲ್ಲವೇನೆಲೆ ತಿಮ್ಮ, ಎಂದನು. ಆ
ಗ ತಿಮ್ಮನು- ಎತ್ತೆಲೆ ನಿನ್ನ ಕಡಾಸಾನ, ನೀಬಲೆ ಹೆಂಣಗ
ಳ ನೋಡಿದವ ; ನೀ ಏನಬಿ ಕಣಾ, ಹುಡುಗಬೊಡ್ಮಿ ಹೈ
ದ, ದಪ್ಪನಾಗವಳಾ ಅವಳು ? ಮೂಲೇಮನೆ ದಡಾಲಿ ಕಂಡು ಹೇಳೀಯೋ ಕಾಣೆ, ಎಳನೇತ್ರವಾಗಿ ಬಳುಕುತಾ ಬಳುಕುತಾ ನಡೀತವಳೆ ; ನಾವು ಎಷ್ಟೊನೋಡಿವಿ, ಮೈಸೂರ ಬುಟ್ಟರೆ
ಇನ್ನಿಲ್ಲ. ಅಲ್ಲಿ ಮುಕ್ಸ ಆರಿಸಿ ತೆಗೆದರೂ ಇಂತವಳು ಸಿಕ್ಕಾ
ಕಿಲ್ಲ, ಎಂದನು. ಅದಕ್ಕೆ ಇನ್ನೊಬ್ಬನು ನೀನೋಡಿಲ್ಲ ಕಣೆ
ಲೆ, ಇವಳ ನೀ ಏನಬಲ್ಲೆ ? ಒಂದು ಪದಾ ಹೇಳತವಳೆ ಹೇ
ಳತವಳೆ, ಅದನ ಕೇಳದವ, ಮನಸಾ ಅಲ್ಲೇ ಮೈಮರೇಬೇ
ಕು ಕಣೆಲೋ, ಹಂಗೆ ಹೇಳತವಳೆ, ಎಂದನು. ಇನ್ನೊಬ್ಬ
-------------------------------------------------
೧೮೮          ಮಾಡಿದ್ದುಣ್ಣೋ ಮಹಾರಾಯ.

ನು- ಸದಾ ಹಂಗಿರಲಿ ಕೈಲೊ, ಇವ ಬಲೆ ಸದಾ ಕಂಡವನ
ಮೊಮ್ಮಗ, ಮೈಸೂರಲ್ಲಿ ಇವಳ ತಾತನಂತವರೆಲ್ಲಾ ಪದಾ ಹೇಳತವರೆ, ಮೊನೆ ಕಿನಡನಂಜನ ಮನೆಗೆ ಬಂದಿರ್ಲಿಲ್ಲ
ವಾ ? ಅವಳ ಮುಂದಿನ ಪದಾ ಹೇಳಾಳ ?, ಅದಲ್ಲಕಣ, ತೆಗೆ
ಯಲೆ ; ಇವಳಲ್ಲಿ ಇನ್ಯಾವತಾನೇ ಕಮ್ಮಿ ಯಾಗೈತೆ ? ಎಂ
ದನು. ಇನ್ನೊಬ್ಬನು ಇ೦ತೇವ ನನಗಿದ್ದರೆ ನಾ ಹೆಂಗೆ ಬಾ ಆಸಿಯೇನೋ ! ಎಂದು ನಿಟ್ಟುಸಿರಬಿದ್ದನು. ಇವರಸಂಗಡ
ಕೂತಿ ಮುದುಕನೊಬ್ಬನು ಅದೇನದಲೆ ಹಲ್ಟೆ ಹೊಡದೀದಿ
ರಿ, ಕೈಲಿ ಕಾಸಿಲ್ಲ ಮೈಲಿ ಬೋಸಿಲ್ಲ ( ಬೋಸ= ಭೂಷಣ ) ಹೋಗೂಸೂಳೆ ಕಂಡು ಹಮ್ಮೈಸಿ ಬಿದ್ದನಂತೆ, ಎಂದು ಹೇ
ಳಿದನು. ಅವರಲ್ಲಿ ಇನ್ನೊಬ್ಬ ಮುದುಕನು- ನಡೀರೋ, ಏನಪಂಗಾಡೀರಿ, ಅವ ಎಂತೆ ಮಾತಾಯೋ ! ನಿನಗೆ ಅಕ್ಕ ತಂಗೀರಿಲ್ಲವ ? ಎಂದನು.

ಆಗ ಅಪ್ಪಾಜಿಯು- ಚಿತ್ರದಲ್ಲಿ ಬರೆದರೆ ಕೈತಪ್ಪಿ ಹೋದೀತು ಎನ್ನುವಹಾಗೆ ಇದಾಳೆ, ರೂಪಿಗೆ ತಕ್ಕ ಹಾಗೆ ಮೈಸೂರ ಬೆಡ
ಗುಬೇರೆ ಇದೆ. ಅದೇ ಗಂಡಸಿನ ಮನಸ್ಸನ್ನು ಕುಯ್ಯವುದು
ಎಂದನು. ಅದಕ್ಕೆ ಸಮೀಪದಲ್ಲಿದ್ದ ಒಬ್ಬನು ಇವಳು ಬಲೇ  ಗರತಿಯಂತೆ, ಮನೇಲಿ ಬದಕುಬಾಳು ಮಾಡಿಕೊಂಡು
ದೇವರು ದಿಂಡರು ಅಂತಾ ಅವಳಂತೆ, ಎಂದನು. ಆಗ
ಅಪ್ಪಾಜಿಯ ಬಲಗಡೆ ಕೂತಿದ್ದ ಉಪಾದ್ರಿ ನಾರಪ್ಪೈಯ್ಯನು-
ಏನೋ ಇದೆ ನಮಗೆ ಯಾಕೆ? ಎನಲು, ಅವಾಜಿಯು ಈ ಮಾ
ತಿನಲ್ಲಿ ಏನೋ ಸ್ವಾರಸ್ಯವಿದೆ ಎಂದು ಮನಸ್ಸಿನಲ್ಲಿ ಆಶೆಯ
----------------------------------------------------

        ಮಾಡಿದುಣೋ ಮಹಾರಾಯ,  ೧೮೯

ಅಂಕುರಕ್ಕೆ ಆರೇಕೆಯನ್ನು ಮಾಡುತಾ- ಉಪಾದ್ರು ಯಾ
ಕೋ ಒಂದು ಬಗೆಯಾಗಿ ಮಾತನಾಡುತಾರಲ್ಲ, ಬಹುದಿವಸ ಅ
ವರ ಮನೆಯಲ್ಲಿಯೇ ಇದ್ದವರಲ್ಲವೆ. ಅವರು ಕಾಣದ್ದು ಯಾ
ವುದು ? ಎಂದು, ಹುಸಿನಗು ನಗುತಾ ಎಂದನು. ಅದಕ್ಕೆ ಉಪಾದ್ರಿಯು- ನಾನು ಕಾಣದ್ದು ಯಾವುದಿದೆ ? ಮೊನ್ನೆ
ಹುಡುಗ ಇವಳ ಗಂಡ, ನನ್ನಲ್ಲಿ ಓದಿ ಬುದ್ಧಿವಂತನಾದ, ನಾನೇ ತಯಾರುಮಾಡಿದೆ. ಅವನಿಗೆ ಇಂಥಾ ಹೆಂಣನ್ನು ತಂದು ಗಂ ಟಹಾಕಿದರೆ ಏನಾದೀತು ? ಬೆಳಗೆದ್ದರೆ ಅತ್ತೆಗೂ ಸೊಸೆಗೂ
ಹಣಾಹಣಿ ಜಗಳ ; ನಾನೂ ಕೇಳಿನೋಡಿ ಅನುಭವಿಸಿ ಸಾ
ಕಾಗಿದೆ. ಆ ಅತ್ತೆಯಾಗುವಹೊತ್ತಿಗೆ ಅಡಗು ಮೆಟ್ಟಿಕೊಂಡು
ಇದಾಳೆ ಎಂದನು. ಆಗ ಅಪ್ಪಾಜಿಯು- ಯಾಕೆ ಅತ್ತೆಗೂ
ಸೊಸೆಗೂ ಅಷ್ಟುಜಗಳ ?
ಉಪಾದ್ರಿ- ಯಾಕೆ ಜಗಳವೋ ನಾ ನು ಏನೆಂದು ಹೇಳಲಿ ?
    ನಾವು ಕಂಡಹಾಗೆ ತಿಮ್ಮಮ್ಮ ಎಂಥಾ ಒಳ್ಳೆ ತಾಯಿ
    ಹೆತ್ತ ಮಗಳು. ಅವಳಿಗೆ ಕೆಟ್ಟ ವಿದ್ಯಗಳು ಸೇರದು.
    ಅದಕ್ಕೆ ಜಗಳ,
ಅಪ್ಪಾಜಿ- ಸೊನೆಯಲ್ಲಿ ಯೇನು ಕೆಟ್ಟವಿದ್ಯವಿದೆ ?
ಉಪಾದ್ರಿ- ಮಾಡಿದನರತಾಪ ಆಡಿದವರ ಬಾಯಲ್ಲಿ ನಮಗೆ
    ಯಾಕೆ ಬೇಕು?
ಅಪ್ಪಾಜಿ- ಹಾಗಾದರೆ ಮತ್ತೆ ಎನಾದರೂ ಹೆಚ್ಚು ಗಟ್ಟಲೆ
    ಉಂಟೋ ?
ಉಪಾದ್ರಿ- ನಾವು ಕಂಡದ್ದಲ್ಲ ಕೇಳಿದ್ದಲ್ಲ. ಹೇಗೆ ಹೇಳುವು
----------------------------------------------------

೧೯೦         ಮಾಡಿದ್ದುಣ್ಣೋ ಮಹಾರಾಯ

    ದು ? ಏನೂ ಇಲ್ಲದಿದ್ದರೆ, ವಾಪ ಆ ಅತ್ತೆ ಯಾಕೆ
    ಸೊಸೆ ಗೋಜಿಗೆ ಹೋದಳು ?
ಅಪ್ಪಾಜೆ- ನೋಡಿ ಉಪಾದ್ರೆ, ನಾನು ಎಷ್ಟೋ ನೋಡಿದೇ
    ನೆ, ರೂವ ಇದಕಡೆ ದೋಷವಿಲ್ಲದೆ ಇರುವುದೇ
    ಇಲ್ಲವಲ್ಲ?
ಉಪಾದ್ರಿ- ತಾರಾಶಶಾಂಕದಲ್ಲಿ ಮೊನ್ನೆ ನಾನು ಓದಲಿಲ್ಲವೆ ?
    ಚಂದ್ರ ಅಷ್ಟು ಸುಂದರನಾದ್ದರಿಂದಲೇ ಅವನಲ್ಲಿ ದೋ 
    ಷ ಉಂಟಾಯಿತು. ಅದೇ ಕಳಂಕವಾಗಿ ನಿಂತುಬಿಟ್ಟಿತು.  ಅಪ್ಪಾಜಿ- ನನಗೆ ಇದು ಒಂದು ಸಂಶಯ ನೋಡಿ ಉಪಾದ್ರೆ.
    ರೂಪು ಇದ ಕಡೆ ದೋಷ ಯಾಕೆ ಇರಬೇಕು ? ದೇ
    ವರ ಮುಖವನ್ನು ನಾವು ಲಕ್ಷಣವಾಗಿ ತಿದ್ದುವುದಿಲ್ಲ
    ವೆ ? ಹಾಗಾದರೆ ದೇವರಲ್ಲಿ ನಾವು ದೋಷವನ್ನು ಆ     ರೋಪಿಸಿದಂತೆಯೇ ಆಯಿತು ? ದೋಷವನ್ನು ನಾವು
    ಆರೋಪಿಸಿದಮೇಲೆ ನಾವು ಅದನ್ನು ಪೂಜಿಸಬಹುದೆ ? ಉಪಾದ್ರಿ- ಕೆಟ್ಟತನವಿಲ್ಲದ ರೂಪು ದೇವರಲ್ಲಿದೆ. ಮನುಷ್ಯರ
    ಲ್ಲಿ ರೂಪಿನಸಂಗಡ ಕೆಮ್ಮತನ ಸೇರಿಕೊಂಡೇ ಇರುತ್ತೆ. ಅಪ್ಪಾಜಿ- ರೂಪು ಇಲ್ಲದಕಡೆ ಕೆಟ್ಟತನ ಹುಟ್ಟುವುದು ಅಪೂರ್ಯ,  ಸಭಾಪತೈಯ್ಯ- ಕೆಟ್ಟತನ ಇರುವ ಕಡೆಯಲ್ಲಾ ರೂಪು ಇ
    ರುತ್ತೆಯೆ ? ರೂಪು ಇದ್ದಕಡೆಯೆಲ್ಲಾ ಕೆಟ್ಟತನವಿರು
    ತ್ತೆಯೆ ? ಹೇಗೂ ಹೇಳುವುದಕ್ಕಾಗದು.
ಅಪ್ಪಾಜಿ- ರೂಪು ಜನರ ಮನಸ್ನನ್ನು ಸೆಳೆಯುವುದು,
ಸಭಾಪತೈಯ್ಯ- ಬರೀರೂಪು ಮನಸ್ಸನ್ನು ಕೆಡಿಸುವುದಿಲ್ಲ. ಉ
---------------------------------------------------

        ಮಾಡಿದ್ದುಣ್ಣೋ ಮಹಾರಾಯ.   ೧೯೧
    ತ್ತಮವಾದ ರೂಪನ್ನು ಕೊಟ್ಟು ಚಿತ್ರದಲ್ಲಿ ಹೆಂಗಸ
    ನ್ನು ಬರೆದರೆ ಮನಸ್ಸು ಕೆಟ್ಟೀತೆ ?
ಅಪ್ಪಾಜಿ-ಹಾಗೂ ಹೇಳುವುದಕ್ಕೆ ಇಲ್ಲ, ಜೀವಇಲ್ಲದ ಬೊಂ 
    ಬೆಯನ್ನೂ ಪಟವನ್ನೂ ಮನುಷ್ಯರಿಗೆ ಹೋಲಿಸುವುದ
    ಕ್ಕೂ ಆಗದು. ಜೀವವುಳ್ಳವರ ರೂಪು ಮನಸ್ಸನ್ನು
    ಸೆಳೆಯುವುದೇನೋ ನಿಜ,
ಸಭಾಪತೈಯ್ಯ- ನಾನು ಹೇಳಿದ್ದು, ಅಪ್ಪಾಜಿ, ನಿನಗೆ ಗೊ
    ತಾಗಲಿಲ್ಲ. ಜೀವವಿಲ್ಲದ ಬೊಂಬೆಗಳಲ್ಲಿ ಸೌಂದರವಿ
    ದ್ದರೆ ಅದನ್ನು ನಾವು ನೋಡಿ ಆನಂದಪಡುತೇವೆ.     ಹಾಗೆಯೇ ಒಂದು ಹುವ್ವನ್ನು ನೋಡಲಿ, ಚೆನ್ನಾಗಿ
    ಕಟ್ಟಿದ ಮನೆಯನ್ನು ನೋಡಲಿ, ನಮಗೆ ಏನೋ         ಆನಂದವಾಗುತ್ತೆ, ಜನರ ರೂಪನ್ನು ನೋಡಿ ಹುಟ್ಟು
    ವ ಆನಂದವೂ ಇಂಧನ, ಹೆಂಗಸು ಗಂಡಸಿನ ರೂ
    ಪನ್ನೂ, ಗಂಡಸು ಹೆಂಗಸಿನ ರೂಪನ್ನೂ ನೋಡಿದಾ
    ಗಲೂ ಮೊದಲು ಇಂಧಾ ಆನಂದವೇ ಹುಟ್ಟತಕ್ಕದ್ದು.
    ಆದರೆ ನನಗೆ ಬುದ್ಯೆಯನ್ನು ವಿಕಾರಮಾಡಿ ಮನ್ಮ
    ಥಬಾಧೆಯನ್ನು ಹುಟ್ಟಿಸತಕ್ಕದ್ದು ಬೇರೆ ಇದೆ.
ಉವಾದ್ರಿ- ಯಾವುದೋ ಹೊಸದಾಗಿ ಹೇಳುತ್ತೀರಿ, ಯಾರೂ
    ಕಾಣದ್ದನ್ನು ; ಹಾಗಾದರೆ ಅದು ಯಾವದಪ್ಪ ?
ಸಭಾಪತೈಯ್ಯ- ಜನರ ಮನಸ್ಯನ್ನು ಕರಗಿಸುವುದು ಬರೀ
    ರೂಪಲ್ಲ, ಹೀಗೆಂದರೆ ಸೌಂದರವಲ್ಲ, ಅದು ಪ್ರತಿ
    ಮೆಗಳಲ್ಲಿಯೂ ಇರುತ್ತೆಂದು ಆಗಲೆ ನಾನು ಹೇಳಿದೇ.
--------------------------------------------------

೧೯೨         ಮಾಡಿದ್ದುಣ್ಣೋ ಮಹಾರಾಯ.

    ನೆ, ಮುಖ್ಯವಾಗಿ ಹೊರಗಿನ ಚರ್ಯಗಳು ಕಲ್ಲಿನಂಥಾ
    ಮನಸ್ಸನ್ನೂ ಕರಗಿಸುವವು. ಹೆಂಗಸು ಗಂಡಸನ್ನು
    ಕಂಡಕೂಡಲೆ, ತಲೆಯನ್ನು ಬಗ್ಗಿಸಿದಹಾಗೆ ಇರುವುದು,
    ಕಡೆಗಂಣಿನಲ್ಲಿ ಅವನ ಕಡೆ ನೋಡುತ್ತಿರುವುದು, ಮುಂ
    ಗುರುಳನ್ನು ಸರಿಮಾಡಿಕೊಳ್ಳುವುದು, ಸೆರಗನ್ನು ಸ್ಪ
    ಲ್ಪ ಜಾರಿಸಿ ಬೇಕೆಂದು ಅದನ್ನು ಜಗ್ಗಿಸಿಜಗ್ಗಿಸಿ ತು
    ಯಿದು ಹೊದಿಯುವುದು, ಯಾರಸ೦ಗಡಲಾದರೂ ಮಾ      ತನಾಡುತಿರುವಾಗ ಇಲ್ಲದ ನೆರವನ್ನು ಕಲ್ಪಿಸಿಕೊಂಡು
    ನಗುವುದು, ಗಂಡಸನ್ನು ಕಂಡರೆ ಅಸಹ್ಯವನ್ನು ತೋ
    ರಿಸುವಳಂತೆ ಹುಬ್ಬನ್ನು ಗಂಭಹಾಕಿಕೊಂಡು ಸರಕ್ಕ
    ನೆ ಬೇರೆ ಕಡೆಗೆ ತಿರುಗಿಕೊಳ್ಳುವುದು, ಅಷ್ಟರಲ್ಲಿಯೇ
    ಸ್ವಲ್ಪ ನಗುವುದು, ಸ್ವಲ್ಪ ಹೊತ್ತಿನಮೇಲೆ ಇನಯನ
    ನ್ನು ಹಿಂತಿರುಗಿನೋಡಿ ಕಂಣಗುಡ್ಡೆಯನ್ನು ತೇಲಾಡಿ
    ಸುತಾ ಹೊರಟುಹೋಗುವುದು, ನೆಪ ತೆಗೆದುಕೊಂಡು
    ಯಾರನ್ನೋ ಕರೆಯುವಂತೆ ಕರೆಯುವುದು, ಇನಯನ
    ಮನನ್ನು ಕರಗುವಹಾಗೆ ಭಾವಗರ್ಭಿತವಾಗಿ ಮಾತ
    ನಾಡುವುದು, ಆಗಾಗೆ ಸೀರೆಯ ಸೊಗಸನ್ನೂ ಒಡವೆ
    ಯ ಬೆಡಗನ್ನೂ ಈಕಡೆ ಆಕಡೆ ಬೇಕೆಂದು ತಿರುಗಿ
    ನೋಡಿಕೊಳ್ಳುವುದು, ಅತಿಯಾದ ನಾಚಿಕೆಯನ್ನು
    ತೋರಿಸುವುದು, ಆಗಾಗ್ಗೆ ಮುಖವನ್ನು ಒರಿಸಿಕೊ
    ಳ್ಳುತಾ, ಕನ್ನಡಿಯನ್ನು ನೋಡಿಕೊಳ್ಳುತಾ, ಮೈ
    ಯನ್ನು ಬಳಕಿಸುತಾ, ಪುರುಷ ತನ್ನನ್ನು ನೋಡದೆ
--------------------------------------------

        ಮಾಡಿದ್ದುಣ್ಣೋ ಮಹಾರಾಯ. ೧೯೩

    ಇರುವಾಗ ಅವನನ್ನು ದೃಷ್ಟಿಸಿ ಲಜ್ಜೆಯನ್ನು ಕೂಡ
    ಬಿಟ್ಟು ನೋಡುತ್ತಾ, ಪುರುಷ ನೋಡಿದಾಗ ಅವನ
    ಕಡೆ ತಿರುಗಿಯೇ ನೋಡದವಳಂತೆ ಇರುತಾ, ಬೆಡ
    ನನ್ನು ಬೀರುವುದು, ಮಕ್ಕಳನ್ನು ಎತ್ತಿ ಅತಿಯಾಗಿ     ಮುದ್ದಾಡುವುದು, ಗಹಗಹಿಸಿ ಹಾಡುವುದು, ನಗುನ
    ಗುತಾ ಅತಿವಿನಯವಾಗಿ ಮಾತನಾಡುವುದು, ಪರಪು     ರುಷರೆದುರಿಗೆ ಅತಿಯಾಗಿ ಸುಳಿದಾಡಿ ಓಡಿಯಾಡುವು
    ದು, ಇವೇ ಮೊದಲಾದ ಹಲವು ಚರಗಳು ಪುರು
    ಷನೆಂಬ ಮೃಗಕ್ಕೆ ಬಲೆಯಾಗುವವು. ಪುರುಷನನ್ನು     ಕಂಡಾಗ ಚಲಿಸದ ಕಂಣು ಎಷ್ಟು ಸುಂದರವಾದರೂ
    ಕೇಡಿಲ್ಲ ; ಮಾತಾಡದಬಾಯಿ ಎಷ್ಟು ಲಕ್ಷ
    ಣವಾಗಿದ್ದರೂ ಬಾಧೆಇಲ್ಲ ; ಚಲನಇಲ್ಲದ ಕೈ ಕಾಲು
    ಗಳು ಎಷ್ಟು ಚೆನ್ನಾಗಿದ್ದರೂ ಭಯವಿಲ್ಲ. ಚೆನ್ನಾ
    ಗಿ ಯೋಚಿಸಿ, ಅಂಧಾ ಚರಗಳೇನಾದರೂ ಇವೆಯ
    ಹೇಳಿ, ಬರೀಸೌಂದಯ್ಯವೇ ಕಾರ್ಯಕಾರಿಯಲ್ಲ.
ಉಪಾದ್ರಿ- ನಾನು ಇಷ್ಟೊಂದು ನೋಡಿ ಅರಿಯ ಸ್ವಾಮಿ,
    ಹೀಗೆ ಹುಡುಕಾಡಿಕೊಂಡು ಹೋಗುವುದಕ್ಕೆ ನನ್ನ
    ಕೈಲಾಗದು. 
ಅಪ್ಪಾಜಿ- ಸಭಾಪಯ್ಯನವರು ಹೇಳುವುದೇನೋ ಪುಸ್ತು
    ಕದಲ್ಲಿ ಬರೆದಿರುವ ಪ್ರಸಂಷೆಯಾಗಿ ಕಾಣುತ್ತೆ. .ಲೋ
    ಕದಲ್ಲಿ ನಡೆಯೋ ಸಂಗತಿಗಳು ಉಪಾದ್ರು ಹೇಳಿ
-------------------------------------------------------

೧೯೪         ಮಾಡಿದ್ದುಣ್ಣೋ ಮಹರಾಯ.

    ದು, ಎಷ್ಟೋ ದಿವಸ ಜೋಯಿಸರ ಮನೇಲೇ ಇದ್ದು
    ನೋಡಿದವರು, ಅವರಿಗೆ ತಿಳಿಯದೆ ?
ಹೀಗೆ ಸಭಾಪತೈಯ್ಯನ ಮಾತಿನಲ್ಲಿ ತಿರಸ್ಕಾರವೂ, ಉ
ಪಾದ್ರಿಯು ಮೇಲುಮೇಲೆ ರುಚಿರುಚಿಯಾಗಿ ಆಡಿದ ಮಾತಿ
ನಲ್ಲಿ ಅಭಿರುಚಿಯ ಅಪ್ಪಾಜಿಗೆ ಹುಟ್ಟಿತು. ಈ ಮಾತೆಲ್ಲಾ  ನಡೆಯುತ್ತಿರುವಾಗಲೇ ಇವನಿಗೆ ಚಿತ್ತ ವಿಕಲವಾಯಿತು, ಅಂಧ
ಕಾರ ಕವಿಚಿಕೊಂಡಿತು. ಬುದ್ದಿಗೆ ಮತ್ತೇನೂ ತೋರದೇ
ಹೋಯಿತು. ಅಪ್ಪಾಜಿಯು ಯಾವಮಾತನ್ನೂ ಆಡದೆ ಸುಮ್ಮ
ನೆ ಕೂತುಕೊಂಡನು. ಅಲ್ಲಿದ್ದವರೆಲ್ಲರೂ ಎದ್ದು ಮನೆಗಳಿಗೆ
ಹೊರಟರು. ಯಾರೂ ಇಲ್ಲದ್ದನ್ನು ನೋಡಿ ಅವಾಜಿಯು ಉಪಾದ್ರಿಯನ್ನು ಕೂಗಿ ಹಿಂದಕ್ಕೆ ಕರೆದನು ; ಅತ್ತ ಇತ್ತ
ನೋಡಿ ಮತ್ತೆ ಯಾರೂ ಇಲ್ಲದ್ದನ್ನು ಕಂಡು--ಉವಾದ್ರೆ ಹಾ
ಗಾದರೆ ದೀಕ್ಷಿತರ ಸೊಸೇವಿಚಾರದಲ್ಲಿ ಜನವೇನೋ ಹೊಗಳಿ  ಕೊಂಡಾಗ್ಗೂ ಒಳಗಿನಸ್ಥಿತಿ ಬೇರೆ ಇದೆ ಅನ್ನಿ ? ನಾನೇನೋ
ಜನ ಹೊಗಳುವುದನ್ನು ನಂಬಿಕೊಂಡಿದ್ದೆ, ಎಂದನು. ಅದಕ್ಕೆ ಉಪಾದ್ರಿಯು-- ನಾನೇನೋ ಅವರ ಮನೆಯಲ್ಲಿಯೇ ಇದ್ದು  ಮರುಹೊತ್ತೂ ನೋಡಿದವನಷ್ಟೆ, ಆ ಹೆಂಣಿಗೂ ಆ ಗಂ
ಡಿಗೂ ಈಡೇ ಇಲ್ಲ. ಆ ಮಹಾದೇವ ನನ್ನಲ್ಲಿ ಓದಿ ಬುದ್ಧಿ
ವಂತನಾದ ಹೈದ, ಈಗ ನನ್ನ ಕಂಡರೆ ಲಕ್ಷವೇ ಇಲ್ಲ. ಈ
ಹುಚ್ಚು ಮುರವನ ಆಳಿಕೆಗೆ ಬರತಕ್ಕ ಹೆಂಗಸಲ್ಲ ಅವಳು. ನಾ
ನೇನೋ ಮುದುಕನಾದೆ, ಇದ್ದ ಮಾತ ಹೇಳುತ್ತೇನೆ. ಆ ಹೆಂ
ಣಿಗೆ ಎಲ್ಲಿಯಾದರೂ ಅವರಂಧ ಇವರಂಧ ನಿನ್ನಂಥ ಅಗಡು
--------------------------------------------

    ಮಾಡಿದ್ದುಣ್ಣೋ ಮಹರಾಯ.     ೧೯೫

ಬೊಮ್ಮನಹಾಗೆ ಇರತಕ್ಕವರು ಇದ್ದರೆ ಸಗ್ಗಿಯಾಳು. ಅವ
ಳು ಎಂದಿದ್ದರೂ ಹೋಗಲಿ ಬಿಡಪ್ಪ, ನನಗೆ ಯಾಕೆಬೇ
ಕು, ಮೊದಲೇ ಆ ಸದಾಶಿವ ದೀಕ್ಷಿತನಿಗೆ ನನ್ನ ಮೇಲೆ ಕತ್ತಿನ
ತನಕ ಇದೆ. ಹುಡುಗರನ್ನು ಹೊಡೆಯದೇ ಇದ್ದರೆ ಓದುಬರು
ತ್ತೆಯೆ ? ಹಿಂದಕ್ಕೆ ಇದೇ ಮಹದೇವನಿಗೆ ಒಂದು ಪೆಟ್ಟಹಾ
ಕಿದ್ದಕ್ಕೆ ಅಷ್ಟು ರಂಪವಾಯಿತು. ನನ್ನ ಪ್ರಾಣ ಉಳಿಯುವುದೇ
ಕಷ್ಟವಾಯಿತು. ನಿನಗೆ ಅದೆಲ್ಲಾ ತಿಳಿಯದು. ಹೇಳಿದರೆ
ಮರುದಿವಸದ ಪುರಾಣವಾಗುತ್ತೆ. ಕೊನೆಗೆ ಹುಡುಗರನ್ನು ಓದಿಸುವದಕ್ಕೆ ನನಗೆ ಬಾರದು ಎಂದುಬಿಟ್ಟ, ಆ ದೀಕ್ಷಿತ.
ಈ ವೂರಲ್ಲಿ ಯಾರು ನನ್ನ ಕೈಲಿ ತಯಾರಾಗದೆ ಇದ್ದವ ? ಒಬ್ಬ
ನ್ನ ಬೆಟ್ಟಮಡಿಸಿ ಹೇಳಲಿ ನೋಡೋಣ. ಅವ ಆಡಿದಮಾ
ತು ಇನ್ನೂ ನನ್ನ ಹೊಟ್ಟೆಯಲ್ಲಿ ಕುದಿಯುತಾ ಇದೆ. ಜೋ ಯಿಸರಮನೆಗೆ ಇವರೆಲ್ಲಾ ಬಂದು ಸೇರಿಕೊಂಡರು. ಇಲ್ಲದಿ
ದ್ದರೆ ಇವರಿಗೇನುಗತಿ ಇತ್ತು. ದೊರೆಹತ್ತರೇನೋ ಸ್ವಲ್ಪ ಓಡಿಯಾಟವಿದೆ, ಆದರೇನು ಇಂಧವರು ಎಷ್ಟು ಜನವೋ ಆ ಸನ್ನಿಧಾನದಲ್ಲಿ ! ಆಸ್ತಿ ಪಾಸ್ತಿ ಎಲ್ಯಾ ಹ್ಯಾಪಕಿಟ್ಟಂದು. ಆ
ತಿಮ್ಮಮ್ಮನ ತಂದೆ ಸಂವಾದಿಸಿದ್ದು, ಆ ತಿಮ್ಮಮ್ಮ ಈ ಮ
ಹಾದೇವನ ಹೆಂಡತಿಯನ್ನು ಪೂರಾ ಬಂದೋಬಸ್ಸಿನಲ್ಲಿಟ್ಟಿದಾ
ಳೆ, ಎಂದು ಹೇಳಿದನು. ತರುವಾಯ ಆವಾಜಿಯು ಉಪಾ
ದ್ರಿಯನ್ನು ಮನೆಗೆ ಕಳುಹಿಸಿ ತಾನು ಒಂಟಿಯಾಗಿ ಮನೆಗೆ
ಹೋಗುತ್ತಾ ತನ್ನ ಮನಸ್ಸಿನಲ್ಲಿಯೇ ಅವ ಆಡಿದಮಾತುಗಳ
ನ್ನು ಗುಣಿಸಿಕೊಳ್ಳುತಾ ಹೆಜ್ಜೆ ಇಡುತ್ತಿದ್ದನು, " ನಿನ್ನಂಥಾ
----------------------------------------------

೧೯೬         ಮಾಡಿದ್ದುಣ್ಣೋ ಮಹಾರಾಯ.

ಅಗಡುಬೊಮ್ಮ ” ಎಂದು ಹೇಳಿದ ಒಂದು ಮಾತಿನಿಂದ ತಾ
ನು ಸರಿಯಾದ ವರನೆಂದು ಊಹಿಸಿಕೊಂಡನು. ಉಪಾದ್ರಿಯು ಲೋಕಾಭಿರಾಮವಾಗಿ ಆಡಿದನೋ ಅಧವಾ ಬೇಕೆಂದು ಅಪ್ಪಾ
ಜಿಯ ಹುಚ್ಚಿಗೆ ಧೂಪಹಾಕುವುದಕ್ಕೆ ಹೇಳಿದನೋ ಗೊತ್ತಾಗ
ಲಿಲ್ಲ. ಏವಂಚ ಅವಾಜಿಯು ಅದನ್ನು ತನ್ನ ಸ್ತೋತ್ರವೆಂದು ಅನ್ವಯಿಸಿಕೊಳ್ಳುವುದಕ್ಕೆ ಸಂದರ್ಭ ಸಾಕಾಗಿತ್ತು. ಮನ್ಮಥ
ನ ಮಾಯವೆಂಬ ಬಲೆಯು ಒಳಗಿನಕಂಣಿಗೆ ಪರೆಯಾಯಿತು.
ಈ ಬಯಕೆ ಕೈಗೂಡುವುದು ಹೇಗೆ ? ಯೋಚಿಸಿಕೊಂಡು ಹೋ
ಗುತಾ ತಿಮ್ಮಮ್ಮನು ಮನೆಗೆ ಯಜಮಾನಿ, ಇವಳು ಸೊಸೆ
ಯನ್ನು ತನ್ನ ಕೈ ಹಿಡಿಯಲ್ಲಿ ಹಿಡಿದಿದಾಳೆ, ಇದೇ ಮಾರ್ಗವೆಂ
ದು ನಿರ್ಧರಿಸಿಕೊಂಡನು. ಇವನಿಗೆ ಹುಟ್ಟಿದ ಈ ವಿಪರೀತ
ಬುದ್ದಿಯ ಗೀಳು ಬಲವಾಯಿತು.

ದಿನಚರಿಯಲ್ಲಿಯ ರಾತ್ರೆ ಕಾಲದಲ್ಲಿ ಅಮ್ಮ ನಗುಡಿಯ ದೊ
ಡ್ಡ ಮಂಗಳಾರತಿಯೂ ದೇವರಿಗೆ ಮಾಡತಕ್ಕ ಅಲಂಕಾರವೂ ನೈವೇದ್ಯಕ್ಕೆ ಮಾ ಡಿಸಿ, ಬಂದಭ ಕ್ಯಾದಿಗಳಿಗೆ ಪ್ರಸಾದವಾಗಿ ಕೊಡತಕ್ಕ ಪಣಿವಾರದ ತರತೀಪೂ ಒಂದುದಿವಸಕ್ಕೆ ಒಂದುದಿನ
ಸ ಅಧಿಕವಾಗುತ್ತಾ ಬಂತು. ಅಮ್ಮನವರಿಗೆ ಅಲಂಕಾರಮಾಡ
ಲು ಮೈಸೂರಿನಿಂದ ಜನರು ಬಂದರು. ಮಹಿಷಾಸುರಮರ್ದಿ
ನಿ, ಮಹಾಕಾಳಿ, ಸೀತಾಪಾರ್ವತಿ, ಸಾವಿತ್ರಿ, ಗಾಯತ್ರಿ,
ಸತಿ, ಪಾರ್ವತಿ, ರಾಜರಾಜೇಶ್ವರಿ, ತ್ರಿಪುರಸುಂದರಿ, ಗಂಗ,
ಇವೇ ಮೊದಲಾಗಿ ಬಗೆಬಗೆಯಾದ ಅಲಂಕಾರವಾಗುತ್ತಾ ಬಂತು.
ಆಗಾಗ್ಗೆ ಉತ್ಸವಗಳ ಮೆರವಣಿಗೆಗಳೂ ನಡಿಯುತ್ತಾ ಬಂದವು,
---------------------------------------------------

        ಮಾಡಿದ್ದು ಮಹಾರಾಯ.  ೧೯೭

ವಿಶೇವವಾದ ಆಟ್ಟಹಾಸದಿಂದ ದೇವರಸೇವೆ ನಡೆಯುವುದೆಂದೂ ಎಲ್ಲರೂ ಅದನ್ನು ಬಂದು ಅಗತ್ಯವಾಗಿ ನೋಡತಕ್ಕದ್ದೆಂದೂ ಆಶೆಹುಟ್ಟುವರೀತಿಯಲ್ಲಿ ಎಲ್ಲಾಕಾರ್ಯಗಳೂ ಜರಗುತಿದ್ದವು.
ಇದನ್ನು ನೋಡುವುದಕ್ಕೆ ದೂರದ ಗ್ರಾಮದವರೆಲ್ಲಾ ಬರುತಿ
ದ್ದರು. ಶತಕಂಠರಾವಣನ ಸಂಹಾರದ ಅಲಂಕಾರವನ್ನೂ ಮೋ
ಹಿನೀ ಅಲಂಕಾರವನ್ನೂ ಮಾಡುವ ದಿವಸಗಳ ವಿಜೃಂಭಣೆ
ಯು ಇನ್ನೊಂದು ಸಾರಿ ನೋಡಬೇಕೆಂದು ಜನರಿಗೆ ನಿಜವಾಗಿ
ಯೂ ಆಶೆ ಹುಟ್ಟುವಹಾಗೆಯೇ ಇರುತಿತ್ತು. ಮಂಗಳಾರತಿ
ಕಾಲಕ್ಕೆ ಅಧಿಕಾರಿಗಳನ್ನೂ ಖ್ಯಾತಿವಂತರಾದ ಪುರುಷರನ್ನೂ ಔತನಕೊಟ್ಟು ಕರಿಸುತಿದ್ದರು. ಶುಕ್ರವಾರದ ದಿವಸ ಗುಡಿಗೆ ಬರೀಹೆಂಗಸರೇ ಬರಬೇಕೆಂದು ಏರ್ಪಾಡಾಯಿತು. ಜೋಯಿಸರ ಮನೇಹೆಂಗಸರನ್ನು ವಿಶೇಷವಾದ ಮರವೆಯಿಂದ ಕರೆದುಕೊಂ
ಡು ಹೋಗುವುದು ಕರೆದುತಂದು ಬಿಡುವುದು, ಅವರಿಗೆ ಇತರ ರಿಗಿಂತಲೂ ಹೆಚ್ಚಾಗಿ ತಟ್ಟೆತಟ್ಟೆ ತುಂಬಿ ಹೂವನ್ನೂ ಪಣಿ
ವಾರವನ್ನೂ ಪ್ರಸಾದವೆಂದು ಕೊಡುತಾ ಬರುವುದು ಹೀಗೆ ಜರು
ಗಿತು. ನವರಾತ್ರೆಯಲ್ಲಿಯೂ ವರಮಹಾಲಕ್ಷ್ಮಿ ಹಬ್ಬದಲ್ಲಿಯೂ  ಸುವಾಸಿನಿಯರ ಪೂಜೆ ಎಂಬ ನೆವದಿಂದ ಒಳೆಸೀರೆಗಳನ್ನೂ ಕುಪ್ಪುಸಗಳನ್ನೂ ದೀಕ್ಷಿತರ ಕುಟುಂಬಕ್ಕೆ ಕೊಡಲು ಆರಂಭ
ವಾಯಿತು. ಮನೆಮನೆ ಗಡಿಯ ಊರೂರು ಗಡಿಯ ಅಪ್ಪಾಜಿ
ಯನ್ನು ಸ್ತೋತ್ರ ಮಾಡಲು ಆರಂಭವಾಯಿತು.

ಇಷ್ಟೇ ಅಲ್ಲ, ಕ್ಲುಪ್ತವಾಗಿ ಒಂದುದಿವಸವೂ ಬಿಡದೆ ಸೀ
ತಮ್ಮನು ತುಳಸೀಪೂಜೆಗೆ ಹೋಗಿಬರುತಾ ಇದ್ದದು ಸರಿಯ
----------------------------------------------------

೧೯೮        ಮಾಡಿದ್ದುಣ್ಣೋ ಮಹಾರಾಯ.

ಷ್ಟೆ, ಹೀಗೆಯೇ ತಪ್ಪದೆ ಪ್ರತಿದಿನವೂ ಹೊಳೆಗೆಹೋಗಿ ಸೀನೀ
ರನ್ನು ತೆಗೆದುಕೊಂಡು ಬರುತಾಇದ್ದಳು. ಈ ಎರಡು ಕೆಲಸಕ್ಕೆ
ವಿನಾ ಮತ್ತೆ ಯಾತಕ್ಕೂ ಸೀತೆಯು ಹೊರಕ್ಕೆ ಹೋಗುತಿರ
ಲಿಲ್ಲ. ಹೀಗಿರಲಾಗಿ, ತುಳಸೀಕಟ್ಟೆಗೆ ಸಮೀಪವಾಗಿ ಇವಳು
ಪ್ರದಕ್ಷಣೆ ನಮಸ್ಕಾರಮಾಡುವಕಡೆ ಹರಳೆಲೆಯಲ್ಲಿ ಕಟ್ಟಿದ ಹು
ವ್ವಿನ ಪಟ್ಟಣಗಳು, ಗಂಧದಬಿಲ್ಲೆ ಹಾಕಿತುಂಬಿದ ಡಬ್ಬಿಗಳು,
ಪುಣುಗು, ಜವ್ವಾಜಿ, ಕುಂಕುಮ ಕೇಸರಿ, ಪಚ್ಚ ಕರ್ಪೂರ ಮೊದ
ದಲಾದ ವಾಸನಾದ್ರವ್ಯಗಳನ್ನು ಹಾಕಿದ ಭರಣಿಗಳು, ಮಲ್ಲಿಗೆ
ಸಂಪಿಗೆ ಇರವಂತಿಗೆ ಪಾದ್ರಿ ಈ ಹೂವುಗಳನ್ನು ಹಾಕಿ ಮಧ್ಯೆ
ಮಧ್ಯೆ ಪಚ್ಚೆ ತೆನೆಯನ್ನು ಸೇರಿಸಿ ಕಟ್ಟಿದ ಹುವಿನ ಕುಚ್ಚು
ಗಳು, ರಾಜಾರೂವಾಯಿಗಳು, ಕ೦ಠಿರಾಯಿ ವರಹಾಗಳೂ ಇವೆ
ಲ್ಲಾ ಬಂದು ಬೀಳುವುದಕ್ಕೆ ಆರಂಭವಾಯಿತು. ಅವುಗಳೆಲ್ಲವ
ನ್ನೂ ಸೀತಮ್ಮನು ವಿಷದಂತೆ ಕಾಣುತಿದ್ದಳು. ಇವಳ ಚಿತ್ತ  ಚಂಚಲವಾಗಲಿಲ್ಲ, ಒಂದು ದಿವಸಕ್ಕೆ ಒಂದುದಿವಸ ಹೆಚ್ಚು ತಾ
ಇದ್ದ ಅಮ್ಮನಗುಡಿಯ ಅಂಥಾ ವಟ್ಟೆಗಾರರ ಆಟೋಪಗಳ
ನ್ನೂ ಬೇಕೆಂದು ಅವರು ಗಟ್ಟಿಯಾಗಿ ತನ್ನ ಕಿವಿಗೆ ಕೇಳಲೆಂದು ಆಡಿಕೊಳ್ಳುತಿದ್ದ ಮಾತಿನ ಭಾವವನ್ನೂ ಕಂಡು ಊಹಿಸಿ
ಅದರ ಅರ್ಥವನ್ನೆಲ್ಲಾ ತಿಳಿದುಕೊಳ್ಳುತ್ತಾ ಇದ್ದ ಸೀತಮ್ಮನ
ಮನಸ್ಸು ಕೇವಲ ದೃಢವಾಗಿತ್ತು,

ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಯಿತು. ಅರುಂದ
ಮ್ಮನ ಬೃಂದಾವನಕ್ಕೆ ೪-೫ ಮಾರು ದೂರದಲ್ಲಿ ಒಂದು
ಅಶ್ವತ್ಥ ಕಟ್ಟೆ ಇತ್ತು. ದಿನವೂ ಆ ಅರಳೀಮರಕ್ಕೆ ತಾನು
---------------------------------------------

೧೯೯         ಮಾಡಿದ್ದುಣ್ಣೋ ಮಹಾರಾಯ.

ಪೂಜೆಯನ್ನು ಮಾಡಿ ಪ್ರದಕ್ಷಿಣೆಮಾಡುವ ಏರ್ವಾಡನ್ನು ಅಪ್ಪಾ
ಜಿ ಹೂಡಿದನು. ಈ ಅಶ್ವತ್ಯಪ್ರದಕ್ಷಿಣೇ ಕಾಲದಲ್ಲಿ ಬೇಕಾದ
ತನ್ನ ಡಂಭವನ್ನೆಲ್ಲಾ ತೋರಿಸುತ್ತಾ ಬಂದನು. ಸೀತಮ್ಮ ತು
ಳಸೀಪೂಟೆಗೆ ಹೋಗುವ ಹೊತ್ತನ್ನು ನೋಡಿಕೊಂಡಿದ್ದು ಆಗ
ತಾನೂ ಅರಳಿಕಟ್ಟೆಗೆ ಹೋಗುತಾ ವಿಶೇಷವಾದ ಪರುರವಣೆ
ಯಿಂದ ತಾನೂ ಒಬ್ಬನೇ ಇದ್ದು ಮರಕ್ಕೆ ಪೂಜೆಮಾಡುತಾ
ಅವಳು ಬೃಂದಾವನದ ಬಳಿ ಇರುವತನಕ ತಾನೂ ಇರುತಾ
ಬಂದನು. ಆ ಕಾಲದಲ್ಲಿ ಈ ಅಪ್ಪಾಜಿ ಎನ್ನಿಸಿಕೊಂಡಿದ್ದ ಸಿದ್ದ
ನು ಸೀತನಕಡೆ ನೋಡಿನೋಡಿ ಬೇಕೆಂದು ನಗುತಬಂದನು.
ಇದನ್ನು ಸೀತೆ ಲಕ್ಷ್ಯಮಾಡಲಿಲ್ಲ. ಪೂಜೆಗೆ ಹುವ್ವನ್ನು ಹಿಡಿ
ಯಿರಿ, ದೇವರ ನಿವೇದನಕ್ಕೆ ಹಂಣನ್ನು ಹಿಡಿಯಿರಿ ಎಂದು
ನೆವನೆವದಲ್ಲಿ ಮಾತಾಡಿಸಿಕೊಂಡು ಬರುತಾ ಸಮೀಪವಾಗಿ ಬರು
ವುದಕ್ಕೆ ಆರಂಭಿಸಿದನು. ಸೀತೆಯು ಆಕಡೆಯ ತಿರುಗಿನೋ
ಡದೆ ತನ್ನ ಪೂಜೆಯನ್ನು ಜಾಗ್ರತೆಯಾಗಿ ತೀರಿಸಿಕೊಂಡು ಮು
ಖವನ್ನು ಗಂಟುಹಾಕಿಕೊಳ್ಳುತಾ ಜಾಗ್ರತೆಯಿಂದ ಹೊರಟು
ಹೋಗುತಿದ್ದಳು. ಹೀಗೆ ಈ ನೀಚನ ಬಾಧೆ ಬಲವಾಗುತಾ ಬಂ
ತು, ಇದನ್ನು ಇತರರಲ್ಲಿ ಹೇಳಿದರೂ ಕಷ್ಟ ಹೇಳದಿದ್ದರೂ
ಕಷ್ಟ, ಪ್ರತಿದಿನವೂ ಅನುಭವಿಸುವುದು ಮತ್ತೂ ಕಷ್ಟ. ಹೀ
ಗೆ ಆಗುತಾಬಂತು. ಸೀತಮ್ಮನ ಮನಸ್ಸು ಬಹು ಖಚಿತವಾ
ಗಿಯೇ ಇತ್ತು. ಸಾಯಂಕಾಲದ ಹೊತ್ತಿನಲ್ಲಿ ಮೈಸೂರಿಂದ
ತರಿಸಿದ ಉತ್ತಮವಾದ ಹೂವು ಎಲೇಪಟ್ಟಣದಲ್ಲಿ ಕಟ್ಟಿ ಅ ಮ್ಮನಗುಡಿಯ ಪ್ರಸಾದವೆಂದು ಜೋಯಿಸರಮನೆಗೆ ಬರಲು
---------------------------------------------------

೨೦೦         ಮಾಡಿದ್ದುಣ್ಣೋ ಮಹಾಯು.

ಆರಂಭವಾಯಿತು. ಪ್ರತಿನಿತ್ಯವೂ ದೇವಸ್ಥಾನಕ್ಕೆ ತಿಮ್ಮಮ್ಮ ಹೋಗುವುದೂ ಅಥವಾ ಎಂದಾದರೂ ತಪ್ಪಿದರೆ ಈಕೆ ಹೋಗು
ವತನಕ ಆಳಮೇಲೆ ಆಳುಬಂದು ಕುಕ್ಕಿ ಕರೆದುಕೊಂಡು ಹೋ ಗುವುದೂ ವಾಡಿಕೆಗೆ ಬಂತು. ಈಕೆಗೆ ಗುಡಿಯಲ್ಲಿ ಹೆಚ್ಚಿನ ಮ
ರ್ಯಾದೆ ನಡೆಯುತಿದ್ದೂ ಅಲ್ಲದೆ ಬಾಳೇಹಂಣಿನ ರಸಾಯನವೇ
ನು ಬಗೆಬಗೇ ಹಂಣುಗಳತುಂಬಿದ ತಟ್ಟೆಗಳೇನು ಬಾದಾಮಿ ಕಲ್ಲುಸಕ್ಕರೆ ದ್ರಾಕ್ಷಿ, ಖರ್ಜೂರ ಇವುಗಳನ್ನು ತುಂಬಿದ ತಟ್ಟೆ
ಗಳೇನು ಶುಕ್ರವಾರದ ದಿವಸ ಒಳ್ಳೆ ಕಲಾಬತ್ತು ಕುಪ್ಪಸವೇ
ನು ಇವುಗಳನ್ನೆಲ್ಲಾ ಆಳುಗಳ ತಲೆಯಮೇಲೆ ಹೊರಿಸಿ ಆಕೇ
ಸಂಗಡ ಕಳುಹಿಸುತಿದ್ದರು. ಬರಗೆಟ್ಟ ಮುತ್ತೈದೆ ಚೌಲವ
ಟ್ತೆಗೆ ಕೂತಹಾಗೆ ಇದೆಲ್ಲವನ್ನೂ ಕಂಡು ತಿಮ್ಮಮ್ಮನಿಗೆ ಒ
ಮ್ಮೈಇಮ್ಮೈ ಆಗುತಾಬಂತು. ಒಂದುದಿನ ರಾತ್ರೆ ಗುಡಿಯಿಂ
ದ ಮಂಗಳಾರತಿಯನ್ನು ತೀರಿಸಿಕೊಂಡು ಮನೆಗೆ ಹೊರಟು ಬರುವಾಗೆ ತಿಮ್ಮಮ್ಮನು- ಅಪ್ಪಾಜಿ, ನೀನು ಮಹಾರಾಯ,
ದೇವತೆ ನಿನಗೆ ಒಲಿದಿರುವಹಾಗೆ ಯಾರಿಗೂ ಒಲಿದಿಲ್ಲ. ಪೂಜಾ ರಿಗಳು ಎಮೊಜನ ಬಂದರು. ಹೀಗೆ ಸೇವೆ ನಡೆದದ್ದು ಎಂ
ದಿಗೂ ಇಲ್ಲ. ದೊರೆಮಾರರುಗಳಿಗೂ ಹೀಗೆ ನಡೆಯಲಾರದು.
ಹಿಂದಿನಜನ್ಮ ದಲ್ಲಿ ಪೂಜೆ ಮಾಡಿದೆ, ಈಗ ಅನುಭವಿಸುತೀಯ,
ಈ ಜನ್ಮದಲ್ಲಿ ಬೇಕಾದಹಾಗೆ ಪೂಜೆ ಮಾಡುತೀಯ ಮಹಾರಾ
ಯ, ಮುಂದಿನಜನ್ಮಕ್ಕೂ ಒಳ್ಳೇಪದವಿ ಅನುಭವಿಸುತೀಯೆ,
ಎಂದು ಹೊಗಳಿದಳು. ಆಗ ಅಪ್ಪಾಜಿಯು ತಾಯಿ ತಮ್ಮ  ಆಶೀರ್ವಾದದಿಂದ ಎಲ್ಲಾ ಸೇವೆಯನ್ನೂ ನಾನು ಮಾಡುವಶಕ್ತಿ
----------------------------------------------
        ಮಾಡಿದ್ದುಣ್ಣೋ: ಮಹಾರಾಯ. ೨೦೧

ಉಂಟಾಗಿದೆ. ಆದುಸರಿ ತಾಯಿ- ಈ ಊರವರೇಅಲ್ಲದೆ ಇನ್ನೂ
ಸೀಮೆಸೀಮೆಯದರಲ್ಲಾ ಗುಡಿಗೆ ಬಂದು ದೇವರ ದರ್ಶನಮಾಡಿ
ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ. ನಮ್ಮ ಚಿಕ್ಕ
ಶಾಸ್ತ್ರಿಗಳ ಕುಂಬಮಾತ್ರ ಯಾವತ್ತೂ ಗುಡಿಗೆ ಬರಲಿಲ್ಲವಲ್ಲಾ,
ದೇವರದರ್ಶನಕ್ಕೆ ಒಂದುವಸ  ಅವರನ್ನೂ ಕಳುಹಿಸಬೇಕು
ಅಮ್ಮಯ್ಯ, ಮೈಸೂರಲ್ಲಿ ಅವರು ಎಷ್ಟೇ ನೋಡಿದವರು,
ಇದೇನು ಲಕ್ಷವಿಲ್ಲ, ಎಂದು ನಿಂತುಕೊಂಡು ಕೈ ಮುಗಿದನು.
ಆಗ ತಿಮ್ಮಮ್ಮನು- ಒಳ್ಳೇದಪ್ಪ ಅವಳನ್ನೂ ಕಳುಹಿಸು
ತೇನೆ ; ನೀನು ಕರೆಯುವುದು ಹೆಚ್ಚೋ ಅವಳು ಬರುವುದು
ಹೆಚ್ಚೋ ! ಏನೋ ಈಗಿನ ಕಾಲದವರು, ನಾನು ಏನಹೇಳಲಿ,
ನನ್ನ ಮಾತು ಯಾವುದು ನವೆಯುತ್ತೆ ಅಪ್ಪಾಜಿ ? ಚಿಂತೆಇಲ್ಲ
ಅವಳನ್ನೂ ಕಳುಹಿಸುತ್ತೇನಪ್ಪ, ಎಂದು ಹೊರಟುಹೋದಳು.
ತಿನ್ನುಮ್ಮನು ಸೊಸೆಯನ್ನು "ಈಗಿನ ಕಾಲದವರು" ಎಂದು
ಹೇಳಿದ ಮಾತಿಗೆ ಅವಾರ್ಥವನ್ನು ಕಲ್ಪಿಸಿಕೊಂಡು ವಿಶೇಷವಾಗಿ
ಕಳವಳವನ್ನು ಹೊಂದಿ ತನ್ನ ಬಯಕೆ ಕೈಗೂಡುವದಿವಸ ಸ
ಮೀಪಿಸಿತೆಂದು ಅನ್ನು ಯೋಚಿಸಿಕೊಂಡನು. ಅತ್ತ
ತಿಮ್ಮಮ್ಮನು ಮನೆಗೆಹೋದ ತರುವಾಯ~ ಎಲೆ ಸೀತೆ, ನೀ
ನುಯಾಕೇ ಅಮ್ಮನಗುಡಿಗೆ ಯಾವೊತ್ತೂ ಹೋಗುವುದೇ ಇಲ್ಲ ?
ಅಪ್ಪಾಜಿ ಎಷ್ಟೋ ಪೇಚಾಡಿಕೊಂಡ ; ಮುತ್ತಿನಹಾಗೆ ಎಲ್ಲರ
ಹಾಗೆ ತಾನೂಹೋಗಿ, ಬರುವವರಿಲ್ಲವೆ ? ಎಷೋ ಚೆನ್ನಾಗಿ
ಅಮ್ಮನಿಗೆ ಅಲಂಕಾರ ಮಾಡುತ್ತಾರೆ, ನೋಡಿದರೆ ಈ ಕಂಣ
ಪಾಪವೆಲ್ಲ ಪರಿಹಾರವಾಗುತ್ತೆ ; ಹೋಗಿ ದೇವರನೋಡಿಕೊ೦
-----------------------------------

೨೦೨        






























ಮಾಡಿದುಣ್ಣೋ ಮಹಾರಾಯ.

ಡು ಬೇಕಬೇಕಾದರೆ ಅವರು ಕೊಡುವ ಪ್ರಸಾದವನ್ನೆಲ್ಲಾ
ತೆಗೆದುಕೊಂಡು ಮನೆಗೆ ಬಂದರೆ ನಿನಗೇನು ಪಾಪಬರುತ್ತೆಯೆ ?
ಎಲ್ಲರೂ ಹೋಗುವಾಗ ನಿನ್ನನು ಶ್ರೇಷ್ಠ ? ಅಮ್ಮಮ್ಮ,
ಮಹಾ ಚಿತ್ತರವಿತ್ತರಿ, ಅವಳೇನು ಸಾಮಾನ್ಯಳೆ ? ಹೋಗು
ನಡೆ, ಕರೆಯುವುದಕ್ಕೆ ಬಂದು ಕಾದಿದಾರೆ, ಎರಡುಪಂಜು ತಂ
ದಿದಾರೆ ಹೊರಡು. ಮಹಾರಾಯ ಅಪ್ಪಾ ಯಂಥಾದುನುಷ್ಯ
ಉಂಟ ? ಹೀಗೆಂದಳು. ಆಗ ಸೀತಮ್ಮನು ಎಷ್ಟು ಬಲವಂ
ತ ಮಾಡಿದರೂ ನಾನು ಆ ಗುಡಿಗೆ ಹೋಗುವುದಿಲ್ಲ ಎಂದು
ಖಂಡಿತವಾಗಿ ಹೇಳಿದಳು. ಇದು ಅಪ್ಪಾಜಿಗೆ ತಿಳಿದಕೂಡಲೆ
ತಾನು ಇಷ್ಟು ವೆಚ್ಚ ಮಾಡಿ ನಡಿಸಿದ ಪ್ರಯತ್ನ ಸಾಗಲಿಲ್ಲವ
ಲ್ಲಾ ಎಂದು ನನು ಅರೆವಾಸಿ ಕುಗ್ಗಿ ಹೋದನು.

ತರುವಾಯ ಒಂದನೊಂದು ದ್ವಾದಶಿಯದಿವಸ ಅಡಿಗೆ
ಮೊದಲಾದ ಕೆಲಸವೆಲ್ಲಾ ತೀರಿತು. ಸೂರ್ಯೋದಯದ ಸಮ
ಯಕ್ಕೆ ಸರಿಯಾಗಿ ಗಂಡಸರಿಗೆ ಪಾರಣೆಯಾಯಿತು. ಅರ
ಳೀಕಟ್ಟೆಗೆ ಆನೀಚ ಬರುವುದಕ್ಕೆ ಮುಂಚೆಯೇ ತುಳಸೀಪೂಜೆ
ಯನ್ನು ಜಾಗ್ರತೆಯಿಂದ ತೀರಿಸಿಕೊಂಡುಬಂದು ಪಾರಣೆ ಮಾ
ಡೋಣವೆಂದು ಸೀತಮ್ಮನು ಬೃಂದಾವನದಬಳಿಗೆ ಹೋಗಿ ಪೂ
ಜೆಯನ್ನು ಮಾಡುತಿದ್ದಳು. ಇದನ್ನು ತಿಳಿದುಕೊಂಡು ಅಪ್ಪಾ
ಜಿಯು ಅತಿವೇಗವಾಗಿ ಅರ" ಮರದ ಪೂಟಿಗೆ ಬಂದು ಒಂದು
ಹಿಡಿ ಹೂವನ್ನು ಮರಕ್ಕೆ ಎರೆಚಿ, ತುಳಸೀಕಟ್ಟೆಯಲ್ಲಿದ್ದ
ಸೊಡರಿನ ದೀಪದಿಂದ ಮಂಗಳಾರತಿಗೆ ಕರ್ಪೂರ ಹತ್ತಿಸಿಕೊಂ
ಡು ಹೋಗುತ್ತೇನೆಂಬ ನೆವದಿಂದ ಅಲ್ಲಿಗೆ ಬಂದನು. ಸುತ್ತಲೂ
-----------------------------------

ಮಾಡಿದ್ದುಣ್ಣೋ ಮಹರಾಯ.  ೨೦೩
ಆಳ ಮೇಲೆ ಎತ್ತಕೈ ವರೆಗೆ ಕಳ್ಳಿಬೇಲಿ ಇತ್ತು. ಗುಡೀಕೈಸಾ
ಲೆಕಡೆಗೆ ಮಾತ್ರ ಕಾಣುತಿದ್ದಾಗ್ಗೂ ಆಗ ಗುಡಿಯಲ್ಲಿ ಯಾ
ರೂ ಇಲ್ಲದಹಾಗೆ ಮೊದಲೇ ನಿರ್ಣಾಡಾಗಿತ್ತು. ಜನರು ಯಾ
ರೂ ಈಚೆಗೆ ಬರುವನುಟ್ಟಿಗೆ ಹೊತ್ತು ಆಗಿರಲಿಲ್ಲ, ಮತ್ತು ಆ
ದಿವಸ ಮಂಜು ವಿಶೇಷವಾಗಿ ಕವಿದುಕೊಂಡಿತ್ತು. ಅದು ಕಾ
ಮಾಂಧರಕಂಣಿನ ಮುಂಜೋ, ನೀಚನ ಸಿರಿಹತ್ತಿ ಉರಿಯುವುದ
ಕ್ಕೆ ಮುಂಚೆ ಆಡುವ ಹೊಗೆಯ ಮಂಜೋ, ದುಷ್ಕಾರ್ಯದ
ಕಪ್ಪಿನ ಮಂಜೋ, ಮಹಾ ಪತಿವ್ರತೆಯ ಆಗ್ರಹ ಶಖಿಯಿಂದ ಹೊ
ರಡುವ ಹೊಗೆಯ ಮುಂಗೋ, ದೇವಬ್ರಾಹ್ಮರ ಸೇವೆಯಲ್ಲಿ
ಮಾಡಿದ ಸತ್ಕಾರ್ಯವೆಲ್ಲಾ ಹತ್ತಿ ಉರಿದು ಬೂದಿಯಾಗಲು ಸಜ್ಜ
ನರ ನಿಟ್ಟುಸಿರ ಗಾಳಿಯಿಂದ ಮೇಲಕ್ಕೆ ಎದ್ದು ಕವಿಚಿಕೊಂಡ
ಬೂದಿಯ ಮಂಝೋ ಹೇಳಲು ಸಾಧ್ಯವಿಲ್ಲವಾಗಿತ್ತು. ಮುಂದಿ
ನ ಕಥೆಯನ್ನು ಎಂದು ಹೇಳಲಿ ? ಬಾಯಲ್ಲಿ ಹೇಳುವರೆ ನಾ
ಲಿಗೆ ತೊದಲಿಹೋಗುತ್ತೆ , ಕೈಯಲ್ಲಿ ಬರೆಯುವರೆ ಲೇಕಣಿ ಜಾರಿ
ಬಿದ್ದು ಹೋಗುತ್ತೆ. ಆ ಕಾಲದಲ್ಲಿ ದೇವರ ಮಂಗಳಾರತಿಗೆ
ಕರ್ಪೂರವನ್ನು ಹತ್ತಿಸಿಕೊಂಡು ಹೋಗಬೇಕೆಂಬ ನೆವದಿಂದ ತು
ಳಸೀಕಟ್ಟಿಯಬಳಿಗೆ ಆತುರನಾಗಿ ಬಂದ ಆ ಸಿದ ನು ನವೀನ
ರಾವಣನೋ ಕಲಿಯುಗದ ಕಾಲನೇಮಿ ಎನ್ನುವಕಾಗೆ ಕಾ
ಣಿಸುತಾ, ತುಳಸಿಗೆ ನಮಸ್ಕಾರಮಾಡಿ ಜಾಗ್ರತೆಯಾಗಿ ಮೇಲ
ಕ್ಕೆ ಏಳುತಾಇದ್ದ ಸೀತಮ್ಮನ ಸಮೀಪದಲ್ಲಿ ನಿಂತು ಅವಳು ಮೇಲ
ಕ್ಕೆ ಎಳುವ ಸಮಯದಲ್ಲಿ ಅವಳ ಸೀರೆಯ ನೆರಿಯನ್ನೂ
ಸೆರಗನೂ ಹಿಡಿದು ಎಳೆಯುತಾ ಸೀತಮ್ಮನ ಮುಖವನ್ನು
------------------------------------

೨೦೪ ಮಾಡಿದ್ದುಣ್ಣೋ ಮಹರಾಯ.
 
ನೋಡುತಾ... ನೀನು ನನ್ನ ಭಾಗದ ಲಕ್ಷ್ಮಿ ಯಾಗಿದ್ದೀಯ, ಬಹು
ದಿವಸದಿಂದ ನಿನ್ನ ದಯಕ್ಕೆ ಪಾತ್ರನಾಗಬೇಕೆಂದು ಬಹಳವಾಗಿ
ಶ್ರಮಪಟ್ಟಿ ; ನಿನ್ನ ರೂಪಿಗೆ ಆ ಬಡಹೈದನೆ ? ನಿನ್ನನ್ನು ನೋ
ಡಿ ದೊರೆಹೆಂಡಿರುಕೂಡ ಅಸೂಯಪಡುವ ಸ್ಥಿತಿಯಲ್ಲಿ ನಿನ
ನ್ನು ಇರಿಸುತೇನೆ ಎಂದು ಆ ಮಹಾಪತಿವ್ರತೆಯನ್ನು ತಬ್ಬಿ
ಕೊಳ್ಳುವುದಕ್ಕೆ ಕೈಯನ್ನು ಚಾಚಿದನು. ಸೀತಮ್ಮನು ಬಿಗಿ
ಯಾಗಿ ಡಾಬನ್ನು ಹಾಕಿದ್ದ ಕಾರಣ ಸೀರೆ ಬಿಚ್ಚಿ ಹೋಗಲಿಲ್ಲ.
ಆಗ ಸೀತಮ್ಮ ನು ವಿಶೇಷವಾಗಿ ರೌದ್ರಾಕಾರವನ್ನು ತಾಳಿ ಅತ್ಯಾ
ಗ್ರಹದಿಂದ ಎಲಾಖೂಳ, ನೀಚ, ಚಂಡಾಲ, ನನ್ನ ಮೈಯ
ನ್ನು ಮುಟ್ಟೀಯೆ, ಇಲ್ಲಿಯೇ ನಿನ್ನನ್ನು ಕೊಂದು ಹೆಣವನ್ನು
ನಾಯಿಗೆ ಹಾಕಿ ಮನೆಗೆ ಹೋಗುವಶಕ್ತಿ ನನಗೆ ಇದೆ, ಜೋಕೆ
ದೂರದಲ್ಲಿರು, ಇಂದಿಗೆ ನಿನ್ನ ಹಣೇಬರಹ ತೊಡೆದುಹೋಯಿ
ತು ; ನಿನ ಭಾಗಕ್ಕೆ ನಾನೇ ಮೃತ್ಯುದೇವತೆ ಎಂದು ತಿಳಿ,
ಎಂದು ಗಟ್ಟಿಯಾಗಿ ಕೂಗುತ್ತಾ ತನ್ನ ಕೈಲಿದ್ದ ತಂಬಿಗೆ ನೀರ
ನ್ನು ಅವನಮೇಲೆ ಸುರಿದು ತನ್ನ ತಟ್ಟೆಯನ್ನು ಕೆಳಗೆಇರಿಸಿ
ಸಮಾಸದಲ್ಲಿ ವಿವಿದ ತೆಂಗಿನಕಾಯಿ ತೋರದ ಕಲ್ಲನ್ನು ತೆಗೆ
ದುಕೊಂಡು ಉಳ್ಳಂಬಿರಿಸಿಗೂ ಅವನ ಎದೆಯ ಮೇಲೆ ಎಸೆದಳು,
ಆಕಲ್ಲು ಆ ಖಳನ ಎದೆಗೆ ತಗುಲಿತು. ಅವನು ಅಲ್ಲಿಯೆಸೊ
ಕ್ಕಿ ಕೆಳಕ್ಕೆ ಬಿದ್ದನು ; ಮೇಲಕ್ಕೆ ಏಳಲಾರದೆ, ಹಾ ! ಅ
ಯ್ಯೋ ! ಸತ್ತೆ ! ಎಂದು ಅಂಚಿಕೊಳ್ಳುತಾ- ಎಲೇ ಇರಲಿ,
ನನ್ನನ್ನು ಹೊಡೆಯುತ್ತೀಯ ? ಎಂದಿಗಾದರೂ ನಿನ್ನನ್ನು ವಶ
ಮಾಡಿಕೊಳ್ಳುತ್ತೇನೆ. ನೀನು ಹೆಣವಾದವಳಾಗಲೂ ನಿನ್ನ ಸಂ
------------------------------------

ಮಾಡಿದ್ದುಣ್ಣೋ ಮಹಾರಾಯ.   ೨೦೫

ಗವನ್ನು ಮಾಡುತ್ತೇನೆ ; ಈಗ ನಿನ್ನನ್ನು ಹಿಡಿದು ಜೈಸುವುದೇ
ನೂ ಕಷ್ಟವಲ್ಲ. ಆದರೆ ನನ್ನ ಸಾಮರ್ಥ್ಯವನ್ನು ಮುಂದಕ್ಕೆ
ನಿನಗೆ ತೋರಿಸಿ ನನ್ನ ಹಠ ಗೆದ್ದುಕೋತೇನೆ, ಎಂದು ಅರಿಚಿಕೊ
ಳ್ಳುತಿರುವಾಗ, ಸೀತಮ್ಮ ನು ತನ್ನ ತಟ್ಟೆ ಬಟ್ಟಲುಗಳನ್ನು
ತೆಗೆದುಕೊಂಡು ಹೊರಟಳು. ಪುನಃ ಚೇತರಿಸಿಕೊಂಡು ಸಿದ್ಧ
ಏಳುವಷ್ಟರಲ್ಲಿ ಮಗ್ಗಲಮನೇ ಸುಬ್ಬಯ್ಯ ಪಾರಣೆಮಾಡಿ ಎಂ
ಜಲೆಲೆಯನ್ನು ಆಚೆಗೆ ಬಡಲು ತಮ್ಮ ಮನೆಯ ಹಿತ್ತಲಬಾಗಿ
ಲನ್ನು ತೆಗೆದಳು. ಅದು ತಿರುಗುಣಿ ಕದವಾದ್ದರಿಂದ ಕೀರ್ರನೆ
ಸದ್ದಾಯಿತು. ಅದನ್ನು ಕೇಳಿದಕೂಡಲೆ ಸಿದ್ದನು ತಬ್ಬರಿನಾ
ಡಿಕೊಂಡು ಮೇಲಕ್ಕೆ ಎದ್ದು ಓಡಿಹೋದನು. ಸುಬ್ಬಕ್ಕನ
ಕಂಣಿಗೆ ನರಕಭಾಜನನಾದ ಈ ನೀಚನು ಕಾಣಿಸಲಿಲ್ಲ.
ಸೀತಮ್ಮನಿಗೆ ಅತ್ಯಾಗ್ರಹದಿಂದುಂಟಾದ ವೀರಾವೇಶ ಇಳಿಯ
ಲಿಲ್ಲ. ಹತ್ತಾಳಿಗೆ ಇರುವಶಕ್ತಿ ಆಗ ಅವಳಿಗೆ ಬಂದಹಾಗೆ ಕಾಣಿ
ಸಿತು. ತಲೆ ಕೂದಲೆಲ್ಲಾ ಕೆದರಿಹೋಯಿತು, ಮುಖವೂ ಕಂಣೊ
ಕೆಂಡದಹಾಗೆ ಕೆಂಪಾದವು. ಯಾವಾಗಲೂ ಮೆಲ್ಲಗೆ ನಡೆಯುವ
ಈ ಹೆಂಗಸು ಕಾಲಿಟ್ಟರೆ ಭೂಮಿ ನಡುಗಿ ಹೋಗುತ್ತೋ ಎನ್ನು
ವಹಾಗೆ ಹತ್ತಿಯನ್ನು ಹಾಕುತಾ ಬಿರ್ರನೆ ಮನೆಕಡೆಗೆ ಹೊರ
ಟಳು. ಆಗ ಸುಬ್ಬಕ್ಕ ನು ಇವಳನ್ನು ನೋಡಿ ಇದೇನು ಹೀಗಿ
ದಾಳೆಂದು ಯೋಚಿಸಿ ವಾರಣೆಯಾಯಿತೆ ಸೀತಮ್ಮ ಎಂದು ಕೇ
ಳಿದ್ದಕ್ಕೆ ಸೀತಮ್ಮನು ಏನೋ ಉತ್ತರ ಹೇಳಿದಳು. ಕೈಕಾಲು
ನಡುಗುತಾ ತುಟಿ ಬಾಯಿಗಳು ಅದರುತಾ ಅವಳು ಆಡಿದ ಮಾ
ತು ಬಾಯಿಯಿಂದ ಈಚೆಗೆ ಹೊರಡಲೇ ಇಲ್ಲ, ಸೀತೆಯು ಮನೆಗೆ
---------------------------------------

೨೦೬     ಮಾಡಿದ್ದುಣ್ಣೋ ಮಹಾರಾಯ.

ಹೋಗಿ ಸುಮ್ಮನೇ ಅಡಿಗೆ ಮನೆಯಲ್ಲಿ ಕೂತುಕೊಂಡಳು. ಊ
ಟವನ್ನು ಮಾಡು, ಯಾಕೋ ಮುಖ ಈ ದಿವಸ ಕೆದರಿಕೊಂಡಿದೆ
ಎಂದು ಅಜ್ಜಮ್ಮ ಹೇಳಿದರೂ ಅವಳೊಡನೆ ಮಾತನಾಡಿ ಕೊ
ನೆಗೆ ಎಂಜಲುಪವಾಸ ಮಾಡಿ ಎದ್ದಳು. ತರುವಾಯ ಯಾವಕೆಲ
ಸಾ ಮಾಡುವುದಕ್ಕೂ ಮನಸ್ಸು ಬಾರದು; ನಡೆದ ವಿಪರ್ಯಾಸ
ವನ್ನು ಯಾರಸಂಗಡ ಹೇಳಬೇಕು ? ಅಜ್ಜಿಗೆ ಹೇಳಿಕೊಂಡರೆ
ಅವಳ ಕೈಯಲ್ಲಿ ಏನಾದೀತು ? ಏನೂ ಇಲ್ಲದೆ ಉರಿದುರಿದು ಬೀಳು
ವ ಅತ್ತೆಗೆ ಹೇಳಿಕೊಂಡರೆ -ಕೊಳ್ಳಿ ತೆಗೆದುಕೊಂಡು ತಲೇ ತುರಿ
ಸಿಕೊಂಡಹಾಗೆ ಆಗಲಾರದೆ ? ಮಾವನಲ್ಲಿ ಹೇಳಿದರೆ ಮರ್ಯಾದೆ
ಮೀರುವುದಿಲ್ಲವೆ ? ಗಂಡನಲ್ಲಿ ಹೇಳಿದರೆ ಮತ್ತೆ ಯಾವ ಪ್ರಮಾ
ದವೂ ಉಂಟಾಗಲಾರದೆ? ಯಾರನಂಗಡ ತಾನೇ ಆಯಿತು, ಈಸಂ
ಗತಿಯನ್ನು ಹೇಳಿಕೊಳ್ಳುವುದು ಹೇಗೆ ? ಎನೆಂದು ಹೇಳಿಕೊಳ್ಳು
ವುದು ? ನೀಚನಾದ ಪರವುರುವ ತಾನು ಉಟ್ಟ ಬಟ್ಟೆಯನ್ನು
ಹಿಡಿದು ಸೆಳೆದಮೇಲೆ ತನ್ನ ಪಾತಿವ್ರತ್ಯಕ್ಕೆ ಭಂಗಬಂತೆ ಇಲ್ಲವೆ ?
ಇನ್ನು ತಾನು ಪ್ರಾಣವನ್ನು ಇರಿಸಿಕೊಂಡಿರಬೇಕೆ ? ಆತ್ಮ ಹತ್ಯ
ಮಾಡಿಕೊಳ್ಳುವುದು ಉತ್ತಮವಲ್ಲವೆ ? ಆತ್ಮ ಹತ್ಯ ಮಹಾಪಾತಕ
ವಲ್ಲವೆ ? ದುರ್ಮಾರ್ಗನಾದ ದುಶ್ಯಾಸನು ಬ್ರೌಪದಿಯ ಸೀರೆಯ
ನ್ನು ಎಳೆದು ಬಿಚ್ಚಿ ಹಾಕಿದನಷ್ಟೆ ? ಅವಳ ಪಾತಿವ್ರತ್ಯಕ್ಕೆ ಭಂಗ
ಬರಲಿಲ್ಲವಷ್ಟೆ? ಆತ್ಮ ಹತ್ಯವನ್ನು ಮಾಡಿಕೊಳ್ಳಬೇಕೆಂದು ನಿಶ್ಚ
ಯ ಮಾಡಿದರೆ ಇಷ್ಟು ಸುಂದರವಾಗಿರುವ ಗಂಡು ಮಗುವನ್ನು
ಹೇಗೆ ಬಿಟ್ಟು ಹೋಗುವುದು ? ತಾನು ಪ್ರಾಣವನ್ನು ಕಳೆದುಕೊಂ
ಡರೆ "ಏನೋ ಕೆಟ್ಟ ಕೆಲಸವನ್ನು ಮಾಡಿದಳು ಅದು ಹೊರ
-------------------------------------

    ಮಾಡಿದ್ದುಣ್ಣೋ ಮಹಾರಾಯ.  ೨೦೭

ಕ್ಕೆ ಬಂತು, ಪ್ರಾಣ ಕಳೆದುಕೊಂಡಳು ಎಂದು ಜನರು ಆಡಿಕೊಂ
ಡಾಗ್ಯೂ ಮಾನ ಹೋಯಿತಲ್ಲವೆ ? ಅಷ್ಟು ದೂರ ತಾನು ದುರಾ
ಲೋಚನೆ ಮಾಡತಕ್ಕದ್ದೂ ಪಾಪವಲ್ಲವೆ ? ಸೀತಾಮ್ಮನವರನ್ನು
ರಾವಣ ಕೈಯ್ಯಾರ ಮುಟ್ಟಿ ಎತ್ತಿ ರಧದಮೇಲೆ ಕೂರಿಸಿಕೊ೦
ಡು ಹೋದನಲ್ಲ ? ಆದಾಗ್ಯೂ ಅವಳ ಪಾತಿವ್ರತ್ಯಕ್ಕೆ ಭಂಗ ಬರ
ಲಿಲ್ಲವಲ್ಲ ? ತುಳಸಿ ಕಟ್ಟೆಯಲ್ಲಿ ಆ ನೀಚನು ಮಾಡಿದ ಮಾನ
ಭಂಗವನ್ನು ಯಾರು ಯಾರು ನೋಡಿದರೆ ? ಅದನ್ನು ಕಂಡವರಿ
ಗೆಲ್ಲಾ ತಾನು ಮುಖವನ್ನು ತೋರಿಸುವುದು ಹೇಗೆ ? ಈ ಪ್ರಕಾ
ರದಲ್ಲಿ ಸೀತಮ್ಮನ ಮನಸ್ಸಿಗೆ ಬಗೆ ಬಗೆಯಾಗಿ ತೋರುತಾ ಬಂತು.
ಎಂಜಲೆತಿ ಗೋಮಯವನ್ನು ಹತ್ತಿಸಿ ಪಾತ್ರೆಯನ್ನು ತೊಳೆದು ಇರಿ
ಸುವಷ್ಟರೊಳಗಾಗಿ ಇವಳ ಮೈಗೆ ಇರನು ಮುರಸಾಯಿತು.
ವಿಶೇಷವಾಗಿ ಕೋಸವಾಗಲಿ ಭೀತಿಯಾಗಲಿ ಆನಂದವಾಗಲಿ ಹು
ಟ್ಟಿದರೆ ದೇಹದ ಸಹಜವಾದ ವೃತ್ತಿ ಬದಲಾಯಿಸಿ ವಿಗಡವಾಗು
ವುದು. ಯಾವುದು ಎನಾದರೂ ಆಗಲಿ, ಸೀತಮ್ಮನಿಗೆ ಬಂದಕೋ
ಪವೇನೋ ಆ ದಿವಸವು ಇಳಿಯಲೇ ಇಲ್ಲ. ಮರುದಿವಸವೂ
ಮೂರನೇ ದಿವಸವೂ ಹಾಗೂ ಹೀಗೂ ಇತ್ತು. ಸೀತಮ್ಮ ಏನೋ
ಒಂದು ವಿಧವಾಗಿದಾಳೆಂದು ಮನೆಯವರೆಲ್ಲರೂ ಅಂದು ಕೊಳ್ಳುತಾ
ಬಂದರು. ಏನಾದರೂ ಆಗಲಿ, ತುಳಸೀ ಪೂಜೆಯನ್ನು ಮಾತ್ರ
ಬಿಡಲಿಲ್ಲ. ಪುನಃ ಆ ನೀಚ ಸಮಯವನ್ನು ಸಾಧಿಸಿಕೊಂಡಿದ್ದು
ಬಂದಾನೋ ಮಾನಭಂಗ ಮಾಡಿಯಾನೋ ವ್ಯಾಣವನ್ನು ತೆಗೆದಾ
ನೋ ಎಂಬ ಭಯ ಚೆನ್ನಾಗಿ ಹುಟ್ಟಿತ್ತು. ಆದಕಾರಣ ಬೃಂದಾ
ವನದ ಬಳಿಗೆ ಪೂಜೆಗೆ ಹೋಗುವಾಗೈ ಸೀತೆಯು ಪಾರ್ವತಮ್ಮ
-------------------------------

೨೦೮         ಮಾಡಿದ್ದುಣ್ಣೋ ಮಹಾರಾಯ.

ನನ್ನೂ ಸಂಗಡ ಕರೆದುಕೊಂಡು ಹೋಗುತಿದ್ದಳು. ಆ ಸ್ಥಳಕ್ಕೆ
ಹೋದಕೂಡಲೆ ದ್ವಾದಶಿಯ ದಿನ ಬೆಳಗ್ಗೆ ಬಂದಿದ್ದ ರೌದ್ರಾಕಾ
ರವು ಪುನಃ ಬಂದಂತೆ ಆಗುತಿತ್ತು. ಹೀಗೆ ತ್ರಯೋದಶಿ ಚತು
ರ್ದಶಿ ಕಳೆಯಿತು. ಅಮಾವಾಸ್ಯೆ ದಿನದ ಪೂಜೆಯ ಜರಗಿತು.
ಆಮೇಲೆ ನಡೆದ ವಿಪರೀತನನ್ನು ಏನೆಂದು ಹೇಳಲಿ ?
        ----

೧೧ ನೇ ಅಧ್ಯಾಯ.

ಅಮಾವಾಸ್ಯೆ ದಿನ ಹಗಲು ನಿತ್ಯ ಗೌರೀಪೂಜೆ ತುಳಸೀ ಪೂಜೆ
ಮೊದಲಾದ್ದೆಲ್ಲಾ ಮುಗಿಯಿತು. ಸೀತಮ್ಮನು ಅಡಿಗೇಮಾಡಿ
ಬಡಿಸಿದಳು, ಗಂಡಸರು ಊಟ ಮಾಡುತ್ತಾ ಇದ್ದರು. ಸೀತಮ್ಮ
ನು ನೀರನೇದಿಕೊಂಡು ಬರಲು ಹಿತ್ತಲ ಕಡೆಗೆ ಹೋದಳು. ಅಲ್ಲಿ
ಸ್ನಾನಮಾಡುತ್ತಾ ಇದ್ದ ವೆಂಕಮ್ಮನು---ಸೀತ, ಯಾಕಮ್ಮ ಈಗ
ಮೂರುದಿವಸದಿಂದ ನಿನ್ನ ಮುಖ ಕೆದರಿಕೊಂಡು ಏನೋ ಒಂದು
ಬಗೆಯಾಗಿ ಕಾಣುತ್ತೆ? ಯಾರಸಂಗಡಲೂ ಚೆನ್ನಾಗಿ ಮಾತ ಕೂಡ
ಆಡುವುದಿಲ್ಲ ; ನೀನು ಸ್ವಸ್ಥವಾಗಿದ್ದಿಯ, ನಿನಗೆ ಏನಾಗುತ್ತೆ
ಹೇಳು. ಎಷ್ಟೋ , ಗೆಲುವಾಗಿತ್ತಲ್ಲ ಮುಖ, ಈಗ ಏನಾಗಿದೆಯ
ಮ್ಮ, ಎಂದು ಕೇಳಿದಳು. ಆಗ ಸೀತಮ್ಮನು ತಂಬಿಗೆಯಲ್ಲಿ ನೀ
ರನ್ನು ಸೇರಿಕೊಂಡು ಬರುತಾ ಹಿತ್ತಲ ಬಾಗಿಲ ಹೊಸಲನ್ನು
ದಾಟಿ ಒಳಕ್ಕೆ ಕಾಲಿಟ್ಟಕೂಡಲೆ ಒಳ ಬಾಗಲಲ್ಲಿ ಆ ಚಂಬನ್ನು
ಎತ್ತಿ ಹಾಕಿಕೊಂಡು ಓ! ಎಂದು ಕೆಟ್ಟಸ್ವರದಲ್ಲಿ ಅರಚಿಕೊಳ್ಳು
ತಾ ತಟ್ಟನೆ ಬಿದ್ದಳು. ಆಗ ಒಳ್ಳೇ ಮಟ್ಟ ಮಧ್ಯಾಹ್ನ ವಾಗಿತ್ತು,
--------------------------------------------------------

        ಮಾಡಿದ್ದುಣ್ಣೋ ಮಹಾರಾಯು. ೨೦೯

ಚಂಬೂ ಇವಳೂ ಒಟ್ಟಿಗೆ ಬಿದ್ದ ಕಾರಣ ಧಡ್ಡನೆ ಸದ್ದಾಯಿತು. ಊಟಾಮಾಡುತ್ತಾ ಇದ್ದ ಗುಡಸರು ಮೊದಲು ಎದ್ದು ಬಂದು ನೋ
ಡಿದರು. ಸೀತಮ್ಮ ಮುಖ ಅಡಿಯಾಗಿ ಬಿದ್ದಿದ್ದಳು. ಗಂಡ, ಮಾವ ಯಾರು ಬಂದರೂ ಏಳಲಿಲ್ಲ. ಇವರುಗಳೆದುರಿಗೆ ಮುಯ್ಯಾ
ದೆಯನ್ನು ಮೀರಿ ಅವಳು ಹಾಗೆ ಇದು ಅಪೂರ್ವವಾದ ಕಾರಣ, ದೀಕ್ಷಿತನು- ಅಯ್ಯೋ ಸೀತಮ್ಮ ಬಿದ್ದು ಬಿಟ್ಟಿದಾಳೆ, ಯಾರಾದ
ರೂ ಬನ್ನಿ ಎಂದು ಗಟ್ಟಿಯಾಗಿ ಕೂಗಿದನು. ಮನೆ ಹೆಂಗಸರೆ
ಲ್ಲಾ ಓಡಿಬಂದರು. ನಿಮ್ಮ ನು ತನ್ನ ವಾಡಿಕೆಯಾದ ರೀತಿ
ಯಲ್ಲಿ ಬೀಳುವುದಕ್ಕೆ ಇವಳಿಗೇನಂತೆ ಹೊಡೆದ ಮಾರಿ, ದೊಣ್ಣೆ ಯಹಾಗೆ ಇದಾಳೆ, ಏಳೇ ಸಾಕು ನಿನ್ನ ಬಿತ್ತರಿತನ, ಮನೆಯವ
ರೆಲ್ಲಾ ಬಂದು ಉಪಚಾರ ಹೇಳಲಿ ಅಂತ ; ಕಂಣ ಬಿಟ್ಟುಕೊಂಡು ಎಲ್ಯಾನೋಡುತಾ ಸುಮ್ಮನೇ ಬಿದ್ದಿದಾಳೆ, ಎಂದು ಮನಸ್ವಿ ಅನ್ನ
ಲು ಆರಂಭಿಸಿದಳು. ವೆಂಕಮ್ಮನು ಹಿಡಿದು ಮೇಲಕ್ಕೆ ಎಬ್ಬಿಸುವು
ದಕ್ಕೆ ಹೋದಳು;- ನಾನು ಎತ್ತಲಾರೆ ಯಾರಾದರೂ ಗಂಡ
ಸರು ಹಿಡಿದುಮೇಲಕ್ಕೆ ಎತ್ತಿ ಎಂದಳು. ಮಹಾದೇವನೇ ಮೇ
ಲಕ್ಕೆ ಹಿಡಿದು ಎತ್ತಿದ ; ನಿಲ್ಲಿಸುವುದಕ್ಕೂ ಆಗಲಿಲ್ಲ, ಕೂರಿಸುವು
ದಕ್ಕೂ ಆಗಲಿಲ್ಲ. ಜ್ಞಾನವೇ ಇರಲಿಲ್ಲ. ಹಾಸಿಗೆಯನ್ನು ಹಾಸಿ
ಅದರಮೇಲೆ ಮಲಗಿಸಿದರು. ಗಲಗಾಯಿತು, ರಾವು ಬಡಿದಿರ
ಬಹುದೆಂದು ಕೆಂಪನೀರ ತೆಗೆದು ಹಾಕಿದರು. ತಲೆಗೆ ನೀರತಟ್ಟಿ
ದರು. ಕಿವಿಯಲ್ಲಿ ಊದಿದರು. ಬೀಸಿದರು, ಪಿತ್ತವಾಗಿರಬಹುದೆಂ
ದು ಬೆಲ್ಲ ಹುಣಿಸೆಗೊಜ್ಜು ಮೊದಲಾದ್ದೆಲ್ಲವನ್ನೂ ಕೊಟ್ಟರು.
ಸದಾಸಿವದೀಕ್ಷಿತನಿಗೂ ಅವರ ತಾಯಿ ಪಾರ್ವತಮ್ಮನಿಗೂ ಗೊತ್ತಾ
-----------------------------------------------------

೨೧೦     ಮಾಡಿದ್ದುಣ್ಣೋ ಮಹಾರಾಯ.

ಗಿದ್ದ ಚಿಕಿತ್ಸೆಯನ್ನೆಲ್ಲಾ ಮಾಡಿದರು. ನೆರೆ ಹೊರೆಯವರೆಲ್ಲಾ
ಬಂದು ನೋಡಿ ಒರು ಒಂದೊಂದು ಚಿಕಿತ್ಸೆಯನ್ನು ಮಾಡಿ
ಸಿದರು. ಮಂತ್ರತಾಕಿದರು ಇಂದ್ರಾ ಶಿರಕವಚವನ್ನು ಹೇಳಿ
ವಿಭೂತಿ ಇಟ್ಟರು. ವಿಷ್ಣು ಸಹಸ್ರನಾಮ ಪಾರಾಯಣಮಾಡಿ ಮಂತ್ರಾಕ್ಷತೆ ಹಾಕಿದರು. ಅಲಿತಾ ಸಹಸ್ರನಾಮವನ್ನು ಮಾಡಿ ಕುಂಕುಮವನ್ನು ಇಟ್ಟರು, ಏನೇನಮಾಡಿದರೂ ಜ್ಞಾನ ಬರ
ಲಿಲ್ಲ. ಬಾಯಿಗೆ ಹಾಲನ್ನು ಹಾಕಿದರು, ಕಟವಾಯಲಿ ಸೋರಿ ಹೋಯಿತು, ಬಾಯನ್ನು ಬಿಡಿಸಿ ನೋಡುವಾಗ ಹಲ್ಲು ಗಿಟ್ಟಗಿ
ರಿದು ಹೋಗಿತ್ತು. ತಿಮ್ಮಮ್ಮನು-ಅವಳಿಗೇನು ಉಪಚಾರ, ಎಲ್ಲರೂ ತನ್ನ ಸೇವೆ ಮಾಡುತಾರೆಯೆ ಬಿಡುವೆಯೆ ನೋಡಬೇ
ಕೆಂದು ಹಾಗೆ ಬಿದ್ದಿದಾಳೆ. ಚೆನ್ನಾಗಿ ಸವಟಕಾಸಿ ಬರೇ ಹಾಕಿದರೆ ತಾನೇ ಏಳುತಾಳೆ ಎಂದಳು ! ಮೂಗು ಕಟ್ಟರೆಯಾಗಿರ ಬಹು
ದೆಂದು ಯೋಚಿಸಿ ಅಂಗಾಲಿಗೆ ಮಂಜೀ ಹುರಿಯನ್ನು ಬಿಟ್ಟು ಬರೆ ಯನ್ನು ಹಾಕಿದರು. ಬಳೇ ಚೂರಿನಲ್ಲಿ ಚಿಟಕಿಯರು, ಯಾ
ವುದು ಮಾಡಿದರೂ ಹಾ ಎಂದು ಕೂಡ ಅನ್ನಲಿಲ್ಲ. ಆಗ ಕೂಡ ಅತ್ತೆಯು- ಅಗ್ನಿಸ್ಥಂಭ ಜಲಸ್ತಂಭವನ್ನು ಕಲಿತವಳು, ಅವಳಿಗೆ
ಇದೆಲ್ಲಾ ಯಾವ ಮೂಲೆಗೋ ಎಂದು ಆಡಿದಳು. ಮಗುವಾದ
ಕೃಷ್ಣಸ್ವಾಮಿಗೆ ತಾಯನ್ನು ಕಾಣದೆ, ತಾಯಿ ಸಂಗಡ ಮಾತಾ
ಡದೆ ಹುಚ್ಚು ಹಿಡಿದಹಾಗೆ ಆಗಿತ್ತು. ಎದೆ ಹಾಲನ್ನು ಕುಡಿದು
ಬಹಳ ಹೊತ್ತಾಗಿತ್ತು. ಆ ಮಗುವಿಗೆ ಅಮ್ಮ, ಪಾಚಿ, ಬಾ, ಇವೇ ಮೊದಲಾದ ಮೂರು ನಾಲ್ಕು ಮಾತುಗಳು ಬರುತಿದ್ದವು. ಮಗು
ತಾಯ ಬಳಿಗೆ ಹೋಗಿ ಸ್ತನ್ಯ ಪಾನಮಾಡಬೇಕೆಂದು ಅಳುವು
----------------------------------------------------

        ಮಾಡಿದ್ದುಣ್ಣೋ ಮಹಾರಾಯ. ೨೧೧

ದಕ್ಕೆ ಆರಂಭಿಸಿತು. ಎಷ್ಟು ಸಮಾಧಾನ ಮಾಡಿದರೂ ಸುಮ್ಮ ನಾಗಲಿಲ್ಲ. ತಾಯಿಯ ಬಳಿಗೆ ಹೋಯಿತು. ಅವಳ ಮೇಲೆ ಬೀ ಳುವುದು ಮುಖವನ್ನು ತೆರೆಯುವುದು ಸೆರಗನ್ನು ಎಳೆಯುವುದು, ಹೀಗೆಲ್ಲಾ ಮಾಡಿತು. ಯಾರು ಏನಮಾಡಿದಾಗೂ ಬಾಹ್ಯ ಪ್ರ
ಪಂಚದ ಜ್ಞಾನವೇ ಸೀತಮ್ಮ ನಿಗೆ ಇರಲಿಲ್ಲ. ದುನೆಯಲ್ಲಿ ಯಾರಿ
ಗೂ ಆರಾತ್ರಿ ನಿದ್ರೆ ಬರಲಿಲ್ಲ. ನೆರೆಮನೆ ಸುಬ್ಬಕ್ಕ ನೋಡಿ ಏಕಾದಶಿವರೆಗೆ ಸೌಖ್ಯನಾಗಿದ್ದಳು. ದ್ವಾದಶಿ ದಿವಸ ಬೃಂದಾ
ವನದ ಪೂಜೆ ಮಾಡಿಕೊಂಡು ಬರುತ್ತಾ ಇದ್ದಳು. ನಾನು ಹಿತ್ತಲ
ಕಡೆ ನೋಡಿದೆ. ಮುಖವೆಲ್ಲಾ ಕೆದರಿಕೊಂಡಿತ್ತು. ಮಾತನಾಡಿಸಿದೆ, ತುಟಿ ಬಾಯ ಎಲ್ಲಾ ನಡುಗುತಾ ಏನೋ ಉತ್ತರ ಹೇಳಿ ಗಣಬಜ
ಗುಟ್ಟಿದಳು. ನನಗೆ ಗೊತಾಗಲಿಲ್ಲ. ಇವಳಿಗೆ ನೋ ಅಲಸಿಗೆ
ಯಾಗಿದೆ ಎಂದು ಆಗಲೇ ನನಗೆ ಅನುಮಾನವಾಯಿತು. ಎನಹೇ
ಳಲಿ ಹೀಗೆ ಮಲಗಿದಾಳಲ್ಲ, ಯಾರು ನೋಡಿ ಹೊಟ್ಟೆ ಹಿಡಿಯ
ಬಹುದು? ಎಂದು ಪೇಚಾಡಿದಳು. ಊರಲ್ಲಿ ಎಲ್ಲರೂ ಬಂದು ಬಂ
ದು ನೋಡಿಕೊಂಡು ಹೋದರು. ಎರಡು ದಿನವಾಯಿತು. ಮೂ ರುದಿನವಾಯಿತು. ಹೀಗೆ ಹಲವು ದಿನವಾಯಿತು. ತಿಂಗ
ಳಾಯಿತು. ಏನಾದರೂ ಮೇಲಕ್ಕೆ ಎಳಲಿಲ್ಲ. ಅರೆಗಂಣು ತೆರೆದು ಮುಸಗುಮ್ಮತಾ ಸುಮ್ಮನೆ ಮಲಗಿದ್ದಳು. ಈ ಮಧ್ಯ ಆ ಮಗು
ವಿನ ರೋದನವನ್ನು ನೋಡಿದರೆ ಎಂಥವರಿಗೂ ಕಂಣಿನಲ್ಲಿ ನೀರು
ಬರುವ ಹಾಗೆ ಇತ್ತು. ತಿಮ್ಮಮ್ಮನಿಗೆ ಸೊಸೆಯಮೇಲೆ ಅಭಿಮಾ ನವಿಲ್ಲದಿದ್ದರೂ ಮೊಮ್ಮಗನ ಮೇಲಿನ ಪ್ರೀತಿಯಿಂದ ಅವಳೂ ವ್ಯಸನಪಡುವುದಕ್ಕೂ ಅವರು ಇವರು ಹೇಳಿದ ಚಿಕಿತ್ಸೆಗಳನ್ನು
-----------------------------------------------

೨೧೨         ಮಾಡಿದ್ದುಣ್ಣೋ ಮಹಾರಾಯ.

ಆಗಾಗ್ಗೆ ಮಾಡುವುದಕ್ಕೂ ಆರಂಭಿಸಿದಳು. ಆದರೆ ಪ್ರಯೋಜನ ವೇನು? ಇವಳ ಕೆಲಸವೆಲ್ಲಾ ಕೊಳ್ಳಿ ತೆಗೆದುಕೊಂಡು ತಲೆ ತು ರಿಸಿಕೊಳ್ಳುವ ಕೆಲಸವೇ ಆಗಿತ್ತು, ಆಗ ತಿಮ್ಮಮ್ಮನು-ಸಾವಿರ ಔಷಧಿಮಾಡಿ ಪ್ರಯೋಜನವೇನು? ಅಮ್ಮನಗುಡಿಗೆ ಹೋಗಿ ಅಪ್ಪಾ ಜಿಯ ಬಾಯಲ್ಲಿ ಕಣಿ ಕೇಳಿದರೆ ಎಲಾ ಗೊತ್ತಾಗುತೆ, ಎಂದು
ಕೊಂಡು, ಎಲೆ ಅಡಕೆ ಕರ್ಪೂರ ಸಾಂಬ್ರಾಣಿ ತೆಂಗಿನಕಾಯಿ ಬಾ
ಳೇ ಹಂಣು ಎರಡು ದುಡ್ಡು ದಕ್ಷಿಣೆ ಇದೆಲ್ಲವನ್ನೂ ತಟ್ಟೆಯಲ್ಲಿರಿಸಿ ಕೊಂಡು ಗುಡಿಗೆ ಹೋಗಿ ಸಿದ್ದನನುಂದೆ ಆ ತಯನ್ನು ಇರಿಸಿ- ಅಪ್ಪಾಜಿ, ನಮ್ಮ ಸೀತಮ್ಮ ಜ್ಞಾನಮಾನವಿಲ್ಲದೆ ಬಿದ್ದಿದಾ
ಳಲ್ಲಾ, ಇದೇನು ಪೀಡೆಯೇ, ಪಿಶಾಚಿಯೆ, ಜನ್ಮಾಂತರದ ಕಾಟವೆ; ದೇವರಕಡೇದೆ, ಮನುಷ್ಯರಕಡೇದೆ ? ಇದು ಗುಣವಾಗುತ್ತೆ. ಇ
ಲ್ಲವೆ ? ಕಣಿ ಹೇಳು ಎಂದಳು. ಆಂಜನೇಯನು ಕಾಲನೇಮಿಯ
ನ್ನು ಕುರಿತು ಸಂಜೀವನ ಪರ್ವತಕ್ಕೆ ದಾರಿಯನ್ನು ಕೇಳಿದಹಾಗಾ
ಯಿತು. ಆ ದುರ್ಮಾರ್ಗನು ಬಯಸಿದಂತೆ ಆಯಿತು. ಅವ
ನು ಚಚ್ಚೌಕನಾಗಿ ಕೂತುಕೊಂಡು ಬಲಗೈಯಲ್ಲಿ ಬೆಳ್ಳೀ
ಕಟ್ಟು ಹಾಕಿದ ತುಂಡು ಬೆತ್ತವನ್ನು ಹಿಡಿದು ಅದನ್ನು ನೆಲದಮೇಲೆ ಬಡಿ ಯುತಾ ಯಡಗೈಯಲ್ಲಿ ಕಬ್ಬಿಣದ ಉಂಗುರಗಳ ಹಿಡಿಯನ್ನು
ಅಳ್ಳಾಡಿಸುತಾ ಮೊದಲು ದೇವರುಗಳನ್ನೂ ದೇವತೆಗಳನ್ನೂ ಆ
ಮೇಲೆ ಮಾರಿ ಮಸಣಿಯರನೂ ಆವಾಹನೆ ಮಾಡಿ ರಾಗವಾಗಿ
ಕಣಿ ಹೇಳುತಾ ನೀವು ಜೀವಚಿಂತೆಗಾಗಿ ಪ್ರಶ್ನೆ ಮಾಡಿದ್ದೀರಿ, ಇದು ರೋಗವಲ್ಲ, ದೇವರಕಡೆಯದಲ್ಲ, ಮನುಷ್ಯರ ಕಡೇರಲ್ಲ, ಆಲಸಿಗೆ ಏನೂ ಇಲ್ಲ, ಮನುಷ್ಯರ ಮನಸ್ಸಿನ ಅಡಿಯಾಳವನ್ನು ನೋಡುವು
-----------------------------------------------------

        ಮಾಡಿದ್ದುಣ್ಣೋ ಮಹಾರಾಯ.   ೨೧೩

ದಕ್ಕೆ ತನ್ನ ಕೈಯಾರ ಮಾಡಿಕೊಂಡದ್ದಾಗಿದೆ; ಇದು ಕಪಟವೇಷ ವೆಂದು ತಿಳಿಯಿರಿ ಎಂಬದಾಗಿ ಹೇಳಿದನು. ಅವನ ಮಾತು ನಿಜ ಎಂದು ನಂಬಿ ತಿಮ್ಮಮ್ಮನು-ಮನೆಗೆ ಬಂದು ಸೊಸೆಯನ್ನು ಮ
ತ್ತೂ ಬೈಯುವುದಕ್ಕೆ ಮೊದಲು ಮಾಡಿದಳು- ಆಗ ನೆರೆಮನೆ
ಸುಬ್ಬಕ್ಕ ಬಂದು,
ಸುಬ್ಬಕ್ಕ-ಯಾಕೆ ಹಾಗೆಲಾ ಹೇಳುತೀಯೆ, ಪಾಪ, ಬಾಯಿಗೆ
    ಹೋಗುವ ನೊಣಕಾಣದೆ ಬಿದ್ದಿದ್ದಾಳೆ, ಒಂದು ದಿವಸ     ಎರಡುದಿವಸ ಸರಿ. ಹೀಗೆ ತಿಂಗಳು ಗತಿ ಅನ್ನ ನೀ
    ರಿಲ್ಲದೆ ಬರುವಾಗ ನಿಜವಾದ ಸ್ಥಿತಿಯನ್ನು ಅರಿಯದೆ,         ಮನಸ್ಸು ಬಂದಹಾಗೆ ಆ ಹಾಳ ಅಪ್ಪಾಜಿ ಬೊಗಳಿಯಾನು,
    ಅವನ ನಡತೆಗೂ ಅವನ ಚಾಳೀಗೂ ಕೊಳ್ಳಿಬಡಿದರು. ತಿಮ್ಮ ಈ-ಹಾಗಾದರೆ ಅಪ್ಪಾಜಿಗೆ ಸುಳ್ಳಹೇಳಿ ನನಗೆ ಮೋಸಾ
    ಮಾಡಬೇಕಾದ್ದೇನು ?
ಸುಬ್ರಹ್ಮ-ಅವನ ಮಾತನ್ನು ನೀನು ನಂಬಬೇಡ, ಮೈಸೂರಿಗಾ
    ದರೂ ಕರೆದುಕೊಂಡು ಹೋಗಿ ಅಲ್ಲಿ ಯಂತ್ರವೋ ಮಂ     ತ್ರವೋ ಮಾಡಿಸಿ ಔಷಧಿಯನ್ನು ಕೊಡಿಸುವುದು ಮೇ
    ಲು ; ಹುತ್ತದೊಳಗೆ ಹಾವನ್ನು ಇರಿಸಿಕೊಂಡು, ದೊಂ     ಣೆಯಿಂದ ಹುತ್ತವನ್ನು ಬಡಿದ ಹಣವು ಸತ್ತೀತೆ ?
ಇದರಂತೆ ಮೈಸೂರಿಗೆ ಕರೆದುಕೊಂಡು ಹೋಗಬೇಕೆಂದು
ಗೊತ್ತು ಮಾಡಿದರು. ಗಾಡಿ ಬಂದು ಸಿದ್ಧವಾಯಿತು. ಗಾಡಿಯ
ಮೇಲೆ ಮಲಗಿಸುವುದಕ್ಕಾಗಿ ಸೀತಮ್ಮ ನನ್ನು ಎತ್ತಿದರು. ಅವಳು ಕಿರ್ರನೆ ಕಿರಕಿ ಕೊಂಡು ಎಷ್ಟು ಜನ ಹಿಡಿದರೂ ದಕ್ಕದೆಬಿಡಿಸಿಕೊಂಡು
--------------------------------------------------

೨೧೪     ಮಾಡಿದ್ದುಣ್ಣೋ ಮಹರಾಯ.

ತಾನು ಮೊದಲು ಮಲಗಿದ್ದ ಸ್ಥಳದಲ್ಲಿಯೇ ಪುನಃ ಬಿದ್ದು ಬಿಟ್ಟ
ಳು, ಆ ಭೂಗ್ರಹಚೇಷ್ಟೆ ಇರಬಹುದೆಂದು ಪೂಜೆಯನ್ನು ಮೂ
ರುಸಾರಿ ಹಾಕಿಸಿದರು. ಎನೇನೋ ಮಾಡಿದರು. ಉಪಯೋಗವಾ
ಗಲಿಲ್ಲ. ಇದೆಲ್ಲವನ್ನೂ ನೋಡಿ ಮಹಾದೇವನಿಗೆ ಬಹಳ ಚಿಂತೆ ಯಾಯಿತು. ಇತರರಲ್ಲಿ ಹೇಳಿಕೊಳ್ಳುವುದಕ್ಕೆ ನಾಚಿಕೆ, ಸುಮ್ಮನೆ ಇರುವುದಕ್ಕೆ ಮನಸ್ಸು ನಮಾಧಾನವಿಲ್ಲ. ಹೀಗೆ ಇವನಿಗೆ ಹಗಲು
ಅನ್ನ ಸೇರದು ರಾತ್ರಿ ನಿದ್ರೆ ಬಾರದು. ಹೆಂಡತಿಯ ಚಿಂತೆಯು ಕು
ಟ್ಟೇಹುಳುನಹಾಗೆ ಕೊರೆಯುತಾ ಇತ್ತು : ಇವನು ಬಹಳ ಕಂ ಗೆಟ್ಟುಕೊಂಡನು, ಇದರಮೇಲೆ ಮಗುನ ರೋದನದ ಚಿಂತೆಯಂ
ತೂ ಯಾರಿಗೂ ಕೊನೆ ಮಿತಿ ಇಲ್ಲದ ಸಂಕಟವನ್ನು ಉಂಟುಮಾಡು
ತಿತ್ತು. ಈ ವಿಷಯವನ್ನು ಕುರಿತು ಮೈಸೂರಲ್ಲಿ ವಿಚಾರಮಾ  ಡಬೇಕೆಂದು ಸದನ ಬತನು ಹೊರತರನು, ಮಗಳ ಸ್ಥಿತಿ
ಯನ್ನು ಕೇಳಿ ವ್ಯಸನಪಟ್ಟು ಅವಳನ್ನು ನೋಡುವುದಕ್ಕೆ ಬಂದಿ
ದ್ದ ಅವಳ ತಂದೆ ತಾಯಿಗಳ ಆವಳ ತಾತನಾದ ಪಶುಪತಿ ಸಾಂ
ಬಶಾಸ್ತ್ರೀಯೂ ಸಹಾ ದೀಕ್ಷಿತನ ಸಂಗಡಲೇ ಪ್ರಯಾಣ ಮಾಡಿದರು.
                            -------

        ೧೨ ನೇ ಅಧ್ಯಾಯ.
ಅತ್ತ ಅಪ್ಪಾಜಿಯಾದರೋ ಉವಾದ್ರಿಯ ಸಂಧಾನದಿಂದ ಆಗಬೇಕೆಂದು ಇದ್ದ ಕಾರ್ಯ ಕೈಗೂಡಲಿಲ್ಲ. ತಿಮ್ಮಮ್ಮನಿಗೆ ಕೊ
ಡುವ ಉಲುವೆಯ ದೆಸೆಯಿಂದ ಆಗಬಹುದೆಂದು ಹುಟ್ಟಿದ್ದ ಆಶೆ
ಯು ಭಗ್ನವಾಯಿತು. ಆದಕಾರಣ ಇದುವರೆಗೆ ಮಾಡಿದ ಸಾಹಸ
------------------------------------------

        ಮಾಡಿದ್ದುಣ್ಣೋ ಮಹರಾಯ.   ೨೧೫

ಗಳೂ ಅಲ್ಲದೆ ಇನ್ನೂ ಕೆಲವು ಕಾವ್ಯಗಳನ್ನು ನಿರ್ಗಹಿಸುವುದಕ್ಕೆ
ಹೊಸ ದಾರಿಗಳನ್ನು ಯೋಚಿಸಬೇಕಾಯಿತು. ಅದಕ್ಕೆ ವೈದ್ಯನಾದ ಕಿಟ್ಟಜೋಯಿಸನೇ ಸಯಾದ ದರ್ವಿಯಾಗಿವನೆಂದು ಯೋಚಿಸಿ
ದರು. ಅಪ್ಪಾಜಿ, ಉವಾದ್ರಿ ಮೊದಲಾದ ಆ ಗುಂಪಿನ ಜನರು ಕೃ ತಸಂಕೇತರಾಗಿ ಉದ್ದಿಷ್ಟವಾದ ಕಾರ್ಯ ಸಾಧನೆಗೋಸ್ಕರ ಕಿಟ್ಟ ಜೋಯಿಸನನ್ನು ಅನುಸರಿಸಲು ಆರಂಭಿಸಿದರು.

ಒಳಗೊಳಗೆ ನಡೆಯತಕ್ಕ ಮರ್ಮವನ್ನು ಲೇಶವೂ ಅರಿ
ಯದ ಕಿಟ್ಟ ಜೋಯಿಸನು ಮೊದಲಿನಿಂದಲೂ ವಿಶೇಷವಾಗಿ
ಅಮ್ಮನಗುಡಿಗೆ ಹೋಗುವುದು ಅಲ್ಲಿಯೇ ಹೆಚ್ಚಾದ ಕಾಲವ
ನ್ನು ಕಳೆಯುವುದು ಅಲ್ಲಿಗೆ ಬಂದ ಭಕ್ತಾದಿಗಳು ಕೊಡುವ ದಾನಧರ್ಮಗಳಿಂದ ಬರತಕ್ಕ ವುಡಿಕಾಸುಗಳನ್ನು ದಿನವಹಿ
ಸೊಂಟಕ್ಕೆ ಸಿಕ್ಕಿಸುವುದು ಅಲ್ಲಿ ನಡೆಯತಕ್ಕ ಕುಚೋದ್ಯಗಳಿ
ಗೆಲಾ ವಿಷಯನಾಗಿ ಎಲ್ಲರನ್ನೂ ನಗಿನುತಾ ತಾನೂ ನಗು
ತಾ ಕೇಲವನ್ನು ಕಳೆಯುತ್ತಿದ್ದನು. .೦ದುನ ಗುಡಿಯಲ್ಲಿ
ಮೂರನೇ ಜಾವದಮೇಲೆ ಎಲ್ಲರೂ ಸೇರಿದರು. ಎಲ್ಲಾವಿನೋ
ದಗಳ ಜೊತೆಗೆ ಹಿರ ಸಾಸಂಗಡ ಮಾತನಾಡಿ ಅವ
ನನ್ನು ರೇಗಿಸಿ ನಡೆಯುವ ಕುಚೋದ್ಯದ ಹಾಸ್ಯರಸದಿಂದುಂ
ಟಾಗುವ ಆನಂದವನ್ನು ಎಲ್ಲರೂ ಅನುಭವಿಸುತಿದ್ದರು.
ಉವಾದ್ರಿ- ಜೋಯಿಸ, ಪಂಚಾಂಗ ತಂದುಇದ್ದೀಯ ? ಈವ
    ತ್ತಿನ ದಿನಶುದ್ಧಿ ಹೇಳಯ್ಯ
ಕಿಟ್ಟ- ಓ ಬೇಕಾದಹಾಗೆ ಹೇಳುತ್ತೇನೆ. ನನಗೇನೂ ಬಾರದು
ಎಂತ ಹೇಳುತ್ತೀರೋ ಉವಾದ್ರೆ ? ಪಂಚಾಂಗ ಓದುತೇ
---------------------------------------------------
೨೧೬         ಮಾಡಿದ್ದುಣ್ಣೊ ಮಹಾರಾಯ,

    ನೆ ಕೇಳಿ : ಪ್ರಮಾದಸಂವತ್ಸರದ ಮಾರ್ಗಶಿರ ಬಹು
    ಳ ಪಂಚಮಿ ಶನಿವಾರ ೧೦ ಗಳಿಗೆ ೨೦ ವಿಗಳಿಗೆ ಚಿತ್ತಾ
    ನಕ್ಷತ್ರ ೪ -೫, ಅತಿಗಂಡ ನಾಮಯೋಗ ೧-೨, ಶಕು
    ನಿ ನಾಮಕರಣ ೫೭-೫೪, ರಾತ್ರೆ ಎಲ್ಲಾ ಕತ್ತಲೆಯಾ     ಗಿರುವಂಥಾದ್ದು ಕೆಲವರಿಗೆ ಅನುಕೂಲ ಕೆಲವರಿಗೆ ಪ್ರತಿ
    ಕೂಲ, ದಿ ೩೫ "
ಉವಾದ್ರಿ- ದಿನಶುದ್ದಿಯ ಫಲವೇನಯ್ಯ ?
ಕಿಟ್ಟ- ಓಹೋ ಹೇಳುತ್ತೇನೆ. " ಪ್ರಮಾದಸಂವತ್ಸರವಾದ್ದರಿಂ
    ದ ಪ್ರಮಾದಗಳು ನಡೆಯುವಂಥಾದ್ದು , ಮಾರ್ಗಶಿರ
    ಬಹುಳ ಪಂಚಮಿಯಾದ್ದರಿಂದ ಮಾರ್ಗಶಿರ ದಾರಿಯ
    ಲ್ಲಿ ಹೋಗತಕ್ಕವರ ತಲೆಯು- ಬಹುಳ ಎಂದರೆ ವಿ     ಶೇಷವಾಗಿ, ಪಂಚಮಿ ಎಂದರೆ ಪಂಚತ್ವ ಅಧವಾ     ಮರಣವನ್ನು ಹೊಂದುವುದು ಹೀಗೆಂದರೆ, ದಾರಿ
    ಯಲ್ಲಿ ಹೋಗತಕ್ಕವರ ತಲೆಯನ್ನು ಕಳ್ಳರು ಒಡೆಯು
    ವರು ಎಂದು ಅರ್ಧ, ಇದೂ ಅಲ್ಲದೆ ಪಂಚಮಿ
    ಶನಿವಾರ ಎಂದರೆ ಪಂಚಮ ಶನಿಕಟವಾಗುವಂಥಾ
    ದ್ದು, ಚಿತ್ತಾ ನಕ್ಷತ್ರಕ್ಕೆ ಚಿತ್ರಕ್ಕೆ ತೋರಿದಹಾಗೆ
    ಜನರು ನಡಿಸತಕ್ಕದ್ದೇ ಫಲ. ಅತಿ ಗಂಡಯೋಗಕ್ಕೆ     ಗಂಡಾಂತರಗಳು ಅತಿಯಾಗಿ ಉಂಟಾಗುವವು, ಶಕುನಿ
    ಕರಣದ ಫಲವು, ಈ ದಿನ ಹುಟ್ಟುವವರೆಲಾ ಶಕು
    ನಿಯಹಾಗೆ ಯುಕ್ತಿಗಾರರು, ಏನಪ್ಪ ಅರ್ಧವಾಯಿ 
    ತೆ ನಾನು ಹೇಳಿದ್ದು ?
-------------------------------------------------------

        ಮಾಡಿದ್ದುಣ್ಣೋ ಮಹಾರಾಯ.  ೨೧೩
ಅಪ್ಪಾಜಿ- ಪಂಚಾಂಗದ ಫಲವನ್ನು ಹೇಳು ಕಿಮ್ಮಪ್ಪ,
ಕಿಟ್ಟ-– ನಾನೇನು ಹೇಳಲಾರೆ ಎಂತ ತಿಳಿದು ಕೊ೦ಡೆಯೊ ?
    ಏನು ನೀನು ಕಣಿಹೇಳುತೀಯಲ್ಲ ಹಾಗೊ ? ಹೇಳುತ್ತೇನೆ
    ತಕೊ. " ತಿಥೇಚ ಶ್ರೀಮಾಪ್ನೋತಿ" ಪಂಚಾಂಗ ಕೇ
    ಳಿ ತಂದೆತಾಯಿಗಳ ತಿಥಿ ಮಾಡುತ್ತಾರೆ, ಅದರಿಂದ
    ಊಟ ಸಿಕ್ಕಿ ದಕ್ಷಿಣೆ ಬರುತ್ತೆ, ಇದರಿಂದ ಶ್ರೀ
    ಎಂದರೆ ಸಂಪತ್ತು ಬರುತ್ತೆ, " ವಾರಾದಾಯುಷ್ಯ
    ವರ್ಧನಂ ” ಎ೦ದರೆ ವಾರ ತಿಳಿದರೆ ಇಂಧಾವಾರ ಇ೦ಥ
    ವರ ಮನೆ ಊಟವೆಂದು ಗೊತ್ತಾಗುತ್ತೆ, ಹೀಗೆ
    ಮನೆಮನೆ ವಾರದ ಊಟದಿಂದ ಹೊಟ್ಟೆ ತುಂಬಾ
    ತಿಂದು ಆಯಸ್ಸು ವೃದ್ಧಿಯಾಗುತ್ತೆ. - ನಕ್ಷತ್ರಾದ್ಧಿ
    ರತೇಪಾಪಂ " ನಕ್ಷತ್ರ ತಿಳಿಯುವದರಿಂದ ಪಾಪ-
    ಮಕ್ಕಳನ್ನು ಎತ್ತಿಕೊಳ್ಳುತ್ತಾರೆ. " ಯೋಗಾದರೋಗ
    ನಿವಾರಣಂ '' ಯೋಗ ನಮ್ಮ ಜಾತಕರ ಯೋಗ
    ಗಳನ್ನು ತಿಳಿದು ಕೆಲಸ ಮಾಡಿದರೆ ಸುಂಕದ ದರೋಗ
    ಸಾಬರಕಾರ ನಿವಾರಣೆಯಾಗುತ್ತೆ, ಕರಣಾತುಕಾ
    ರ್ಯಸಿದ್ಧಿಂಚ ? ಕರಣ ಎಂದರೆ ಮನೆಯಲ್ಲಿ ಉಪಕ
    ರಣ ಮೊದಲಾದ ಕಾರ್ಯಗಳು ನಡೆಯುವವು-ಹೀಗೆಂ
    ದು ಅರ್ಥ ಉವಾದ್ರೆ, ನನಗೆ ಬರುವುದಿಲ್ಲ ಅಂದು
    ಪರೀಕ್ಷೆ ಮಾಡುತೀರೋ ?
ಉಪಾದ್ರಿ- ನಿಮ್ಮ ಮನೆಯಲ್ಲಿ ನೀನು ಎಲ್ಲಿ ಮಲಗಿಕೊಳ್ಳುತಿ
    ಯಪ್ಪ ?
-------------------------------------------------------

೨೧೮     ಮಾಡಿದ್ದುಣ್ಣೋ ಮಹಾರಾಯ.

ಕಿಟ್ಟ- ನಾನು ಯಾವಾಗ ನಡುವೆ ಬಿಗುಲೀಮೇಲೆ ಹಾ
    ಸಿಗೆ ಹಾಕಿಬಿಡುವುದೇ, ಜಪ್ಪಯ್ಯ ಎಂದರೂ ಎಳುವು
    ದಿಲ್ಲ, ಆನೆ ಆಡಿ ಕುದುರೆ ಕುಣಿಯಲಿ, ಬೆಳಗಾದಮೇ
    ಲೆಯ ಎಳುವುದು; ಹೋಗಲಿ, ಒಂದು ಚಿಟಗೆ ನೆಶ್ಶ 
    ಕೊಡಿ.
ಸಭಾಪತೈಯ್ಯ- ಕಿಟ್ಟ, ವೆಂಕಟೈಯ್ಯನ ಛತ್ರದ ಅಪ್ಪಳೈ
    ಯ್ಯಂಗಾರು ಬಂದಾರೆ, ನೋಡಿದೆಯ ?
ಕಿಟ್ಟ--- ಎನೊ ಅಪ್ಪಳೆಯಂಗಾರಿ, ಸಂಡಿಗೆ ಅಯ್ಯಂ
    ಗಾರಿ, ಯಾವಾಗಬಂದೆ ?
ಅಪ್ಪಯ್ಯಂಗಾರಿ--- ನಿನ್ನೆ ರಾತ್ರೆ ಬಂದೆ ಕಿಟ್ಟಿ.
ಕಿಟ್ಟಿ-, ಎಲ್ಲಿ ಇಳಿದಿದೀಯ ? ರಾತ್ರೆ ಅಡಿಗೆ ಮಾಡಿಕೊಂಡೆ
    ಯ, ಇಲ್ಲ ನಾಮದಪೆಟ್ಟಿಗೆ ತಂದಿದೀಯ ? ಅಥವಾ
    ಎಡದ ಮಗ್ಗಲಾಗಿ ಮಲಗಿಕೊಂಡೆಯ ?
ಸಭಾ-- ಏನು ಹೀಗೆ ಹೇಳುತ್ತೀಯ ? ಅಡಿಗೆ ಮಾಡಿಕೊಂಡ
    ರೆ ಹೊಟ್ಟೆ ತುಂಬುತ್ತೆ, ನಾಮದಪೆಟ್ಟಿಗೇ ತಂದರೆ
    ಹೊಟ್ಟೆ ತುಂಬುತ್ತೇನೈಯ್ಯ ?
ಕಿ- ಚೆನ್ನಾಗೂ ತುಂಬುತ್ತೆ, ಅಯ್ಯಂಗಾರಿಗೆ ಇರುವುದೇ
    ನಾಮದಪೆಟ್ಟಿಗೇ ಜೀವಾಳ.
ಅಪ್ಪಾಜಿ-- ನಾಮದಕಟ್ಟಿಗೆಯಲ್ಲಿ ನಾನು ಇರುತ್ತೆ, ಹೊಟ್ಟೆ
    ತುಂಬೋದು ಹೆಂಗೆ ?
ಕಿಟ್ಟ- ಆರಹಸ್ಯ ನಿನಗೇನುಗೊತ್ತು ? ಆ ಪಟ್ಟಿಗೆಯಲ್ಲಿ ಚೆಂ
    ಬು, ಕಂಬಳಿ, ಪಾಹೇಯ ಎಂದರೆ ಅನ್ನದಬುತ್ತಿ, ಪಾ
---------------------------------------------------

    ಮಾಡಿದ್ದುಣ್ಣೊ ಮಹಾರಾಯ.    ೨೧೯

    ದರಕ್ಷೆ, ಪೂಜೆಗೆ ಯಂಬರಮನ್ನಾರು ಎಂಬ ವಿಗ್ರಹ
    ಈ ಐದೂ ಆಜಿಗೆಯಲ್ಲಿ ಇರುತ್ತೆ. ಆ ಒಂದುಪೆ 
    ಟ್ಟಿಗೆಯನ್ನು ಹೆಗಲಿಗೆ ತಗಲ ಹಾಕಿಕೊಂಡು ಹೋದರೆ     ಲೋಕವನ್ನೆಲ್ಲಾ ಸುತ್ತಿಕೊಂಡು ಬರಬಹುದು. ಈ
    ಐದೂ ಯಾವಾಗಲೂ ಅದರಲ್ಲಿರಬೇಕು. ಆದ್ದರಿ೦
    ದಲೇ ಇವರಿಗೆ ಐಯ್ಯಂಗಾರ ಎಂದು ಹೆಸರುಬಂತು.
 ಅಪ್ಪಯ್ಯಂಗಾರಿ~ ಎಲಾ, ಛಿ, ಛಿ , ಅನ್ನದಬುತ್ತಿ, ಯಕ್ಕ 
    ಡ, ದೇವರು ಇದೆಲ್ಲವನ್ನೂ ನಾಮದವೆಟ್ಟಿಗೆಯಲ್ಲಿ         ಯಾರಾದರೂ ಇರಿಸುತಾರೆಯೆ ? ಹುಚ್ಚನಹಾಗೆ ಬೊ
    ಗಳಬೇಡ ಕಣೋ. 
ಕಿಟ್ಟ- ಹಾಗಾದರೆ ನಾಮದಟ ಆಷ್ಟು ಗಾತ್ರವಾಗಿ ಓ
    ಲೆಗರಿಯಲ್ಲಿ ಹಣೇದಿರಲು ಕಾರಣವೇನು ? ನಿಮ್ಮ ಜನ     ಮೈಸೂರಿ೦ದ ಗೆಜ್ಜಲಹಟ್ಟಿ ಕಣವೇಮಾರ್ಗವಾಗಿ ಶ್ರೀ
    ರಂಗಕ್ಕೆ ತಲಪುವುದಕ್ಕೆ ಹತ್ತು ದಿನವೂ ಮಧ್ಯಾಹ್ನ ವಾ         ಗುತ್ತೆಯಲ್ಲಾ , ನೀವು ದಾರಿಯಲ್ಲಿ ಎಲ್ಲಿ ಅಡಿಗೇಮಾ
    ಡುತೀರಿ ಹೇಳು. ನೀರಕಂಡಕಡೆ ಮುಖ ತೊಳೆದು
    ಕೊಂಡು, ನಾಮಾ ಇಟ್ಟು ಕೊಂಡು ಯಟ್ಟ ಬಿಚ್ಚಿ         ಕೊಡವಿಕೊಳ್ಳುತಾ ಅಂಗವಸ್ತ್ರವನ್ನು ಮರೇಕಟ್ಟಿ ಬೆರ
    ಣೀಸುಂಡೆ ಆದು ಬೆಂಕಿಹತ್ತಿಸಿ ಬಿಸಿನೀರಕಾಸಿ ನಾಮದ
    ದಪೆಟ್ಟಿಗೆಯಲ್ಲಿರುವ ೨೧ ಹುಳಿಯನ್ನದ ಪೊಟ್ಟಣದ
    ಲ್ಲಿ ಒಂದು ಪೊಟ್ಟಣವನ್ನು ಬಿಚ್ಚಿ ಊಟಮಾಡಿ ತರು
    ವಾಯು ಬಿಸಿನೀರುಕುಡಿದು ಶ್ರೀ ವೈಷ್ಣವವರು ಮು೦ದ
------------------------------------------------------

೨೨೦     ಮಾಡಿದ್ದುಣ್ಣೋ ಮಹರಾಯ,

    ಕ್ಕೆ ಪ್ರಯಾಣ ಮಾಡುವುದು ಉಂಟಿ ಇಲ್ಲವೆ ?
ಅಪ್ಪಳ್ಳಿ- ಯಾರೋ ಒಬ್ಬ ಕುಲಗೆಟ್ಟವ ಮಾಡಿದರೆ ಎಲ್ಲ
    ರೂ ಮಾಡುತ್ತಾರೆಯೇನೊ ?
ಕಿಟ್ಟ- ಹಾಗೆ ಮಾಡಿದವರಿಗೆ ಬಹಿಷ್ಕಾರ ಹಾಕಿಬಿಟ್ಟಿದ್ದೀರ ?
    ಇಲ್ಲ; ನಂಟರಮನೆಗೆ ನಾಯಿಹೊಕ್ಕರೆ ಎಂಟೂರಿಗೂ
    ಬೆರೆಯಿತು,
ಸಭಾಪತೈಯ್ಯ - ಮುಸರೆ ಬುತ್ತಿಯನ್ನು ಹಾಗೆ ತೆಗೆದುಕೊಂಡು
    ಹೊದಾರೇನೈಯ್ಯ ? ಹೇಳುವರು ಹೆಡ್ಡರಾದರೆ
    ಕೇಳುವರು ಕಿವಡರಾಗಬೇಕು.
ಕಿಟ್ಟ- ನೀವೇನುಬಲ್ಲಿರಿ, ಆ ರಹಸ್ಯಗಳೆಲ್ಲಾ ಬೇರೆ. ರಾಮಾ
    ನುಜ ರಹಸ್ಯ, ಚಿದಂಬರ ರಹಸ್ಯ, ರತಿ ರಹಸ್ಯ, ಯೋ
    ಗ ರಹಸ್ಯ ಎಂದು ರಹಸ್ಯ ಚತುಷ್ಟಯಗಳಿವೆ. ಶ್ರೀವೈ         ಷ್ಣವರಲ್ಲಿ ಮುಸುರೆ ದೋಷವಿಲ್ಲ. "ಅಲ್ಲಾಂಡ ಪಲ್ಲಾಂ
    ಡೋ ಕಾಸಿಗೆ ಮೂಣ ಅಪ್ಪನ ಕೊಂಡೋ, ಮುರಚಿ ಮು
    ರಚಿ ವಾಯಿಗೆ ವೋಟಿಕೊಂಡೋ ಕಬ್ಬಚ್ಚಿ ಮೇಲೆ ಕೈತೇ
    ಚಿಕೊಂಡೋ ?” ಎಂದು ಹೇಳಿದರೆ ಮುಸಲೇದೋಷಹೋ 
    ಯಿತು.
ಅಪ್ಪಳ- ಎಲಾ, ಎನು ಬೊಗಳುತಿಯೋ ನಾಯಿ ಬೊಗುಳಿದ
    ಹಾಗೆ ? ಎಲ್ಲಕ್ಕೂ ಮುಸರೆ , ಇಲ್ಲವೆಂದು ಯಾರು ಹೇಳಿ     ದರೋ ? ದೇವರ ಸನ್ನಿಧಿಯಲ್ಲಿ ನೈವೇದ್ಯವಾದ ಪ್ರಸಾ
    ದಕ್ಕೆ ಮುಸರೇ ದೋಷವಿಲ್ಲ, ಎಂದು ಶಾಸ್ತ್ರವಿದೆ. ಅ
    ದರಲ್ಲಿ ಯಾವುದಾದರೂ ದೋಷವನ್ನು ಕಲ್ಪಿಸಿದರೆ
--------------------------------------------------------
        ಮಾಡಿದ್ದುಣ್ಣೋ ಮಹರಾಯ.  ೨೨೧

    ಅನೇಕ ಪಾಪ ಮಾಡಿದಂತೆ ಆಗುತ್ತೆ. ಅದಕ್ಕೆ ಪ್ರಾ 
    ಯಶ್ಚಿತ್ತವನ್ನು ಕೂಡ ಹೇಳಿದಾರೆ.
ಕಿಟ್ಟ- ಅದೇನೋ ಸರಿ, ನೀನು ಹೇಳುವುದು ನಿಶ್ಚಯ. ಇದ
    ಕ್ಕೆ ಬೀಜಮಂತ್ರ ಬೇರೆ ಇದೆ. "ರಂಗನೇ ಪೆರುಮಾಳು,     ಪೊ೦ಗಲೇ ಪ್ರಸಾದಂ, ಕಂಬವೇತಣ್ಣಿ " ಈ ಮಂತ್ರ ವನ್ನು     ಹೇಳಿಬಿಟ್ಟರೆ ಮುಸರೆ ದೋಷವೆಲ್ಲಾ ಹೋ ಯಿತು ಎಂದು     ಶಾಸ್ತ್ರವಿದೆ. ಮಡಿಯ ವಿಚಾರ
    ವಂತು ಕೇಳಲೇಬೇಡಿ.
ಅಪ್ಪಳ- ಈ ಹುಚ್ಚನ ಮಾತೇನು ? ಸುಮ್ಮನೆ ತಲೆ ಹುಳಿತ
    ನಾಯಿನಾಗೆ ಬೊಗಳುತಾನೆ.
ಅವಾಜಿ- ಮಡಿಯ ಸಂಗತಿ ಯನು ?
ಕಿಟ್ಟ- ಇವರ ಜನರಲ್ಲಿ ಯುಗಾದಿ ದೀವಳಿಗೆಗೆ ಸ್ನಾನಮಾ 
    ಡುವುದು, ಹಾಗಿಲ್ಲದೆ ದಿನಚರಿಯಲ್ಲಿಯೂ ಇವರು ಸ್ನಾ          ನಮಾಡಿದರೆ ಇವರಿಗೆ ಜುಟ್ಟು ಇಷ್ಟು ಗಾತ್ರ ಇದ್ದೀ
    ತೆ ? ಒಂದು ಮಡೀ ಉಮೇಲೆ ಏನನ್ನು ಮುಟ್ಟಿದ
    ರೂ ಅದು ಮಡಿಯಂತಲೇ ; ಮೈಲಿಗೆ ಯಾಗುವುದೇ
    ಇಲ್ಲವಂತೆ,
ಅಪ್ಪಳ~ ಹವುದು ನಮ್ಮಲ್ಲಿ ಹಾಗೆಯೇ ( ಉಪಸ್ಪರ್ಶೋ ನ
    ಸ್ಪರ್ಶಃ ) ಎಂದು ಹೇಳಿದೆ.
ಕಿಟ್ಟ – ಮಡಿ ಉಟ್ಟು ಗಾಡಿಯಮೇಲೆ ಹಾಸಿಗೆಹಾಕಿ ಆದ
    ರಮೇಲೆ ಕೂತುಕೊಂಡರೆ ಮೈಲಿಗೆ ಯಾಗಲಿಲ್ಲವಂತೆ, ಅಹಳ- ಹವುದು ಹಾಗೇಸರಿ, ಗಾಡೀ ಮೇಲೆ ನಾವು ಕೂತು
----------------------------------------------------

೨೨೨         ಮಾಡಿದ್ದುಣ್ಣೊ ಮಹಾರಾಯ

    ಕೊಳ್ಳುತ್ತೇವೆ ಹಾಸಿಗೆ ಮೇಲಲ್ಲ. ಗಾಡಿ ನಮಗೆ ಮು
    ಖ್ಯಾಧಾರವಾದು, ಅದರಮೇಲೆ ಹಾಸಿಗೆ ಇದೆ, ಅದ
    ಕ್ಕೂ ಗಾಡಿಯೇ ಆಧಾರ, ಗಾಡೀಸಂಬಂಧದಿಂದ ನಾವು     ಹಾಸಿಗೆ ಮುಟ್ಟಿದ ಹಾಗಾಯಿತು. ಪ್ರತ್ಯಕ್ಷವಾಗಿ
    ನಾವು ಹಾಸಿಗೆ ಮುಟ್ಟಿದಹಾಗಾಗಲಿಲ್ಲ.
ಕಿಟ್ಟ- ಭೂಮಿಯಮೇಲೆ ಹಾಸಿಗೆ ಹಾಕಿ ಅದನ್ನು ನಾವು
    ಮುಟ್ಟಿದರೆ ?
ಅಪ್ಪಳ- ಆಗ ಮೈಲಿಗೆ ಯಾಯಿತು.
ಕಿಟ್ಟ- ಆಗಲೂ ಆಗಲಿಲ್ಲವೆಂತಲೇ ಹೇಳಬೇಕು. ಯಾಕೆ ಅನ್ನು
    ತೀಯೋ ? ಭೂಮಿಮೇಲೆ ಹಾಸಿಗೆ ಇದ್ದು ಅದರ
    ಮೇಲೆ     ನಾವು ಕೂತಾಗ್ಯೂ ಭೂಮಿಯೇ ನಮಗೆ
    ಮುಖ್ಯಾಧಾರವಾಗಿ ಹಾಸಿಗೆ ಅದಕ್ಕೆ ಸಂಬಂಧಿಸಿರುವ     ಕಾರಣ ಹಾಸಿಗೆ ನಮಗೆ ಉಪರ್ಶವೇ ಆದಂತಾ
    ಯಿತು. ಈ ತರ್ಕಕ್ಕೆ ಒಪ್ಪಿಕೊಳ್ಳುತೀಯ ?
ಅಪ್ಪಳ-- ಭೂಸಂಬಂಧಕ್ಕೆ ಮಾತ್ರ ಅದು ಉಪ ಸಂಬಂಧ
    ವಾಗುವುದಿಲ್ಲ. ಆಗ ಮೈಲಿಗೆಯಾಯಿತೆಂದು ಹೇ
    ಳಬೇಕು.
ಕಿಟ್ಟ- ಮಡಿಯುದು, ಜಮಖಾನ ತುಳಿಯುತ್ತೀರಿ, ಆದರೂ
    ಮಡಿ ಎನ್ನುತೀರಿ. ಇದಕ್ಕೇನು ಹೇಳುತೀಯ ?
ಅಪ್ಪಳ - ಏನೋ ದೇಶಾಕಾರ ಕುಲಾಚಾರ ರೀತ್ಯಾ ನಡೆ
    ಯುತ್ತೆ,
ಉವಾದ್ರಿ- ನಿಮ್ಮ ಸೀತಮ್ಮನಿಗೆ ಹೇಗೆ ಇದೆಯೋ ಕಿಟ್ಟ
--------------------------------------------------------

        ಮಾಡಿದ್ದುಣ್ಣೋ ಮಹಾರಾಯ. ೨೨೩

    ಜೋಯಿಸ ? ಬಿದ್ದ ಕಡೆಯಲ್ಲಿಯೇ ಬಿದ್ದಿದಾಳಂ
ತಲ್ಲ ಪಾಪ ?
ಕಿಟ್ಟ- ಮೊದಲು 'ಹಾಗೆಣತ್ತು. ಈಚೆಗೆ ಮಂತ್ರಾ ಹಾಕಿಸಿ
    ದೆವು. ಬೀದೀಛೋರಿ ಯಿರುವ ಮುತಾದೇವನ ಕೊಠ
    ಡಿಯಲ್ಲಿ ಮಲಗಿಸಿದಾರೆ, ನನ್ನ ಭಾವ ಮೈಸೂ
    ರಿಗೆ ಹೋಗಿದಾರೆ ಅಲ್ಲಿಂದ ಮಂತ್ರ ವಾದಿಗಳನ್ನು
    ಕರೆದು ತರುತ್ತಾರೆ. ಅವರು ಬರುವತನಕ ಮಹಾ
    ದೇವನ ಕಿರುಮನೆಯಲ್ಲಿ ಎಲ್ಲವನ್ನೂ ಇರಿಸಿ ಹೋ
    ಗಿದಾರೆ.
ಅಪ್ಪಳ- ಹಾಗಾದರೆ ವೈಷ್ಣವರ ದು ನಿನಗೆ ಸಮಾಧಾ 
    ನವೇನೂ ಅಲ್ಲವೆ ಕಿಟ್ಟ ?
ಕಿಟ್ಟ- ಬಿಡಪ್ಪ ಅದನು ಹೇಳಿ ? ಅಂದು ವಿಪ
    ರೀತ. ಅವರಿಗೆ ಎಲ್ಲಾ ಮಡಿಯಲ್ಲಿ ಆಗಬೇಕು.
    ಅವರಿಗೆ ಆಚಾರ್ರು ಇದ್ದರೆ ಸಾಕು ಎಲಾ ಆವರು
    ಹೇಳಿದಹಾಗೆ,
ಸಭಾಪತಿ--- ಯಾವ ಆಚಾರ್ರೋ ? ಕಿಟ್ಟ ?
ಕಿಟ್ಟ- ಆಚಾರ್ರಹಾಗೆ ವೇಷ ಹಾಕಿಕೊಂಡು ಬಂದವರೆಲ್ಲಾ
    ದೊಡ್ಡಾಚಾರ್ರು, ಪೂರಿ ರಾಮಾಚಾರ್ರು, ವಗ್ಗರಣೆ
    ಭೀಮಾಚಾರ್ರು, ಎಂಟುಮಣಾಚಾರ್ರು, ಗೋವಾಟ್ಟ
    ಚಾರ್ರು. ಅಪ್ಯ, ಟೂಪ್ಯ, ಟೊಣ್ಯ, ಟೊಶ್ಯ
    ಎಂತ ಇವರ ಶಿಷ್ಯರು. ಇವರಿಗೆ ಒರಳಗಲ ಮುದ್ರೆ
    ವನಕೆಗಾತ್ರ ಅಂಗಾರ, ಇವರೆಲ್ಲರನ್ನೂ ಬಲ್ಲೆ ಕಣೊ 
------------------------------------------------------

೨೨೪         ಮಾಡಿದ್ದುಣ್ಣೋ ಮಹಾರಾಯ. 

    ಇವರಲ್ಲೀಗ ಮಡಿಹೆಚ್ಚು ನಾನು ಒಪ್ಪಿದೆ, ಕೂತರೆ
    ಮಡಿ, ನಿಂತರೆ ನುಡಿ, ಕಾಲುನುಡಿ, ಕೈಮಡಿ,
    ಸಾನಕ್ಕೆ ಮಡಿ, ಉಳ್ಳಿಕ್ಕೆ ಮಡಿ, ತಿಲ್ಲಿಕ್ಕೆ ಮಡಿ,
    ಹೆಂಡತಿಗೆ ಮಡಿ, ಗಂಡನಿಗೆ ಮಡಿ, ಎಲ್ಲಾ ಕೆಲ
    ಸಕ್ಕೂ ಮಡಿಯ ಮಡಿ.
ಸಭಾಪತಿ- ಕಿಮ್ಮ ಆಚಾರ್ರು, ರಾಯರಮನೆಗೆ ಹೊರಟಿದ್ದ
    ಹೇಳೊ
ಕಿಟ್ಟ- ರಾಯರ ಮನೆ ಮದ್ವಿಗೆ ಆಚಾರ್ರು ತಮ್ಮೂರಿಂದ
    ಹೊರಟರು, ಇವರ ಸಂಗಾತ್ಲಿ ಅವರ ಸಂಸಾರ     ಹೊರಡಬೇಡೇನು ? ಆಚಾರ, ಕುದರಿ ಸಿದ್ಧವಾಯಿತು.         ಆಗೋಣ, ಠೊಣ್ಯ ಅಂಬೊ ಶಿಷ್ಯ- ಅಶ್ವದ
    ಮೇಲೆ ಕೊಡಲಿಕ್ಕೆ ಧಾರುಧಾರು ಇದ್ದಾರೆ, ಎಂದು
    ಕೂಗಿದ. ಆಗ ಆಚಾರ್ರು- ಅಶದಮೇಲ ಕೂಡ್ಲಿ
    ಕ್ಕೆ ? ಕೂಸು, ಕೂಸಿನ ತಾಯಿ, ಮೀಶೇರಾಯ
    ಯಂಕಣ್ಣ, ರೊಟ್ಟಿ ಕೃಷ್ಟಾಚಾರ್ರು, ಬಾಳೇ
    ಗೆಡ್ಡೆ ರಾಮಾಚಾರ್ರು, ಆರುಮಣ ಅರಳಿಟ್ಟು,
    ಮೂರುಮಣ ಕೋಡಬೇಳಿ, ಇಷ್ಟೇ ಮತ್ತೆ ದಾರಿ
    ದ್ದಾರೆ ? ಎಂದರು. ಆಚಾರು ಸವಾರಿ ಹೊರಟರು.
    ದಾರ್ಯಾಗ ಕಾವೇರಿ ನದಿ ಸಿಕ್ಕಿತು. ಸಾನಾಮಾಡದ
    ಹಣೀಗೆ ಶ್ರೀಮುದ್ರಿ ಗೋಪೀಚಂದನ ಹಟ್ಟಿ ಕೊಳ್ಳದ
    ಹಾಂಗೇ ಗ್ರಹಸ್ಪರ ಮನೀಗೆ ಹೋಗಬಹುಂದೆ ? ಆಚಾ
    ರ್ರಿಗೆ ಸಾನಾಯಿತು. ನಾಸಾದಿ ಕೇಶಪರಂತಂ ಗೋ
--------------------------------------------------------

        ಮಾಡಿದ್ದುಣ್ಣೋ ಮಹಾರಾಯ. ೨೨೫

ಪೀಚಂದನ ಧಾರಣೆ ಆಯಿತು, ದ್ವಾದಶನಾಮ ಪೂರೈ
ಸಿತು. ದೇವರ ಪೂಜಿ ಮಾಡಬೇಡೇ ? ಆಚಾರ್ರ
ತೀರ್ಧ ತಕ್ಕೊಳ್ಳಿಕ್ಕೆ ಗ್ರಹಸ್ಥರು ಕಾದಿದ್ದಾರೆ,
ದೀಪ ಹಚ್ಚಬೇಡೆ ? ಪ್ರಣತಿ ತೆಗೆದಿದ್ದರು. ಎಂಣಿ
ಎಲ್ಲದ ? ಆಚಾರು ಮಡಿ ಚೀಲದಾಗ ಹುಡಕಲಿಕ್ಕೆ 
ಹತ್ತಿದರು. ಎಂಣಿ ಇಲ್ಲ. ಆಗ ಆಚಾರ್ರಾಕಿಯು --
ಏನು ಏನೂ ಬಾಯಿ, ಹೀಂಗ ಉಂಟಾ ? ಕಾಸಿನ
ಚಿಟ್ಯಾಗ ಒಂದು ಚಿಟ್ಟಿ ಎಂಣಿತಂದು ಕೂಸಿಗೆ ಎರೆದು
ಶೇಶಿಗೆರೆದು ನರಾರಿಗೆರೆದು ಪತ್ತೂಗೆರೆದು
ಸಿಂದೂಗಿಕ್ಕಿ ಮಂಗೂಗಿಕ್ಕಿ ಮಗನಾಧವಗ ದೊಗ
ದೊಗದಿಕ್ಕಿ ನೆರಮನೀದೀಪಾ ಹೊರಮನೀದಿಪಾ
ನಂದಾದೀವಾ ನಗರಣೆ ಸೌಟು, ಎಲ್ಲಾ
ಕಳೆದು ಕೊಂಡು ಕಾಸಿನ ಚಿಟ್ಯಾಗ ಒಂದು ಚಿಟ್ಟಿ ಎಂಣಿ
ಇಟ್ಟಿದ್ದೆ, ಸಿಂಗು ನುಂಗು ಕೂಡಿಕೊಂಡು ಮಂಗಳ
ಮಾಯ ಮಾಡಿದ್ದಾರಲ್ಲ ? ಎಂದಳು. ಆಗ ಆಚಾ
ರ್ರು- ಸಾಕ್ಷಾತು ಸೂರದೇವರು ದೀಪಕ್ಕ ದೀಪ
ವಾಗಿದ್ದಾರೆ. ಮತ್ತೆ ಬೇರೆ ದೀಪ ಅವಶ್ಯಕಿಲ್ಲ, ಎಂ
ದು ಶಾಸ್ತ್ರ ಅದ, ಎಂದು ಹೇಳಿ ದೇವರ ಪೆಟ್ಟಿಗೆ
ಬಿಚ್ಚಲಿಕ್ಕೆ ಹಚ್ಚಿದರು. ಆಗ ಗ್ರಹಸ್ಥರ ಮನಿ
ಯಿಂದ ಆಚಾರನ್ನು ಕರೀಲಿಕ್ಕೆ ಬಂದರು.
" ಶುಕ್ಲಾಂಬರಧರಂವಿಷ್ಟುಂ ” ಎಂದು ಹೇಳುತಾ ಪೂ
ಜಿಗೆ ಆರಂಭ ಮಾಡೋ ವೇಳೆಗೆ ಕರೀಲಿಕ್ಕೆ ಬಂದ
-----------------------------------------------

೨೨೬         ಮಾಡಿದು ಮಹಾರಾಯ.

    ರೆಂದು ತಿಳಿಯಿತು. ಆ ಕೂಡಲೆ " ಸೃಸ್ತಿಪ್ರಜಾಭ್ಯಃ
    ಪರಿವಾಯಂತಾಂ " ಎಂತ ಪೂಜಿ ಕೊನೀಮಂತ್ರ
    ಹೇಳಿ ಪೆಟಗಿ ಹುರಿಯನ್ನ ಮೊದಲು ಬಿಚ್ಚುವ ಹಾಗೇ
    ಬಿಚ್ಚುತಾ ಕೊನೀಗೆ ಹಂಗೆಯ ಸುತ್ತಿ ಪೆಟ್ಟಿಗಿ
    ಕಟ್ಟಿಬಿಟ್ಟರು. ಆಗ ಆಚಾರ ಕೂಸು- ಅಮ್ಮ
    ತಿಲ್ಲಿಕ್ಕೆ ಕೊಡು ಎಂದು ಕೇಳಿತು, ಅದಕ್ಕೆ ಆಕಿ-
    ಹಲಸಿನಕಾಯಿ ತಿಲ್ಲಿಕ್ಕೆ ನಾವು ಅರಸು ಮುಕ್ಕಳ,
    ಬಾಳಿಕಾಯಿ ಅಲ್ಲಿ ನಾವು ಭಾಗ್ಯವಂತರ, ದೊನ್ನಿ
    ದೊನ್ನಿ ತುವ ತಿಲ್ಲಿಕ್ಕೆ ಪೂರ್ಣಯ್ಯನ ಮನಿ
    ಶಾರ್ದವ ? ಎಂದು ಸಮಾಧಾನ ಹೇಳಿದಳು,
ಸಭಾಪತೈಯ್ಯ- ಆ, ನೀನು ಹುಚ್ಚ ಎಂತ ಯಾರೋ
    ಅಂದರಲೋ ?
ಕಿಟ್ಟ- ನಾನು ಹುಚ್ಚನೂ ಹವುದು, ನೀನು ಬೆಪ್ಪನೂ ಹವುದು. ಉವಾದ್ರಿ-ಹಾಗಾದರೆ ಪೆಟ್ಟಿಗೆ ಪೇಳಿಗೆ ಎಲ್ಲಾ ಮಹಾ ದೇವ
    ನ ಕೊಠಡಿಗೆ ಸೇರಿಬಿಟ್ಟಿತು ?
ಕಿಟ್ಟ- ಸೇರಿದರೆ ಭಯವೇನು ? ನನ್ನು ಸೀತ ಅಲ್ಲಿಯೇ ಮ
    ಲಗಿಕೊಂಡಿದ್ದಾಳಲ್ಲ ?
ಅದ್ಬಳ್ಳಿ- ಎಲ್ಲರನ್ನೂ ಆನ್ನು ತೀಯೆ. ನೀವು ಅಡ್ಡಗಂಧದವ
    ರು ಮಾತ್ರ ಸರಿಯೋ ?
ಕಿಟ್ಟ – ನಾವು ಎಲ್ಲದರಲ್ಲಿಯೂ ಸರಿಯೇ, ಹರವಿದ ಮಡಿ
    ಯನ್ನು ಕೋಲಿನಲ್ಲಿ ತರುತ್ತಾರೆ. ಆದರೂ ಅದು ನಮ
    ಗೆ ಮಡಿಯಾಯಿತು. ಆಮಡಿಯಲ್ಲಿ ಶ್ರಾದ್ಧ ಕೂಡ ಆ
----------------------------------------------------

        ಮಾಡಿದ್ದುಣ್ಣೊ ಮಹಾರಾಯ, ೨೨೬

    ಗುತ್ತೆ, ಅನ್ನ ದಬುತ್ತಿ ಕಟ್ಟಿಕೊಂಡು ಹೋಗುತ್ತೇವೆ.
    ಅದು ದಾರಿಯಲ್ಲಿ ಮುಸರೆ ಅಲ್ಲವಂತೆ. ನಮ್ಮಲ್ಲಿ ಉ      ಪ್ಪಹಾಕಿದರೆ ಮುಸರೆ ಅನ್ನುತಾರೆ. ಉಪ್ಪಹಾಕಿದ
    ಹೆಸರುಬೇಳೆ ಕಡಲೇಬೇಳೆ ಮಸರೆಯಲ್ಲವಂತೆ, ಬೆಂ
    ದರೆ ನುಸರೆ ಎನ್ನುತಾರೆ. ಗೋಧಿ ರವೆ ಬೆಂದರೂ
    ಮುಸರೆಯಲ್ಲವಂತೆ, ನಮ್ಮಲ್ಲಿ ಯಾವುದೂ ಗೊತ್ತಿಲ್ಲ.
    ವಸಿಮಡಿ ವಸಿಮೈಲಿಗೆ, ಹೊದ್ದರೆ ಮಡಿ ಉದ್ಮರೆ ಮೈ
    ಲಿಗೆ, ಊಟಾ ಮಾಡದೆ ಬಿಚ್ಚಿರಿಸಿದರೆ ಉಟ್ಟದ್ದು ಮಡಿ
    ಯೇ, ಶ್ರಾದ್ಧದ ಕಜ್ಜಾಯ ಪಿತೃ ಶೇಷ, ನಾವೇನೋ
    ದೈತ್ಯಶೇಷ. ನಮ್ಮಲ್ಲಿ ಎಲ್ಲಾ ದೇವರ ಒಕ್ಕಲವರೂ
    ಇದಾರೆ. ಹೇಳುವುದು ವಿಭೂತಿಯವರು ಎಂತ, ಬೇಟಿ
    ರಾಯಸ್ವಾಮಿ ಒಕ್ಕಲಾಗದೆ ಮರುನಾಮು ಹಾಕುತೇ
    ವೆ, ಹುಚ್ಚರಾಯಸ್ವಾಮಿ ಒಕ್ಕಲಾದರ ಮುದ್ರೇ ಹಾ
    ಕುತ್ತೇವೆ. ಚಾಮುಂಡಿ ಒಕ್ಕಲಾದರೆ ಕುಂಕುಮ ಇ
    ಟ್ಟುಕೊಳ್ಳುತೇವೆ. ಬಾಬೈಯ್ಯನ ಒಕ್ಕಲಾದರೆ ಲಾ
    ಡಿ ಹಾಕಿಕೊಳ್ಳುತ್ತೇವೆ. ಕಿಸಿಮಿಸಿ ಒಕ್ಕಲಾದರೆ ಸರ್ವೇ
    ಶ್ವರಗುಡಿಗೂ ಹೋಗುತ್ತೇವೆ. ಹೊಗೆಸೊಪ್ಪಿನ . ಒ
    ಕ್ಕಲಾದರೆ ಗುಡಿಗುಡಿಗೂ ಹೋಗುತ್ತೇವೆ.
ಸಭಾಪತಿ- ಹುಲಿಗೆ ತನ್ನ ಕಾಡೇನು ಸರರಕ ಡೇನು, ಕಿಟ್ಟ?
ಕಿಟ್ಟ- ಅಷ್ಟಲ್ಲದೇ ಏನು ? ನೀನೇನು ಹೇಳುವುದು ? ಎಲ್ಲ
    ರೂ ಇಷ್ಟು ಹರಟೆ ಹೊಡೆದರಲ್ಲ, ಯಾರಾದರೂ ಒಂ
    ದು ಚಿಟಿಗಿ ನೆಸ್ಯ ಕೊಟ್ಟರೆ ? ನಾನು ಏನಾದರೂ ಒಂದು
-------------------------------------------------

೨೨೮ ಮಾಡಿದ್ದುಣ್ಣೋ ಮಹಾರಾಯ,

    ಮಾತನಾಡಿದರೆ ಎಲ್ಲರೂ ಗೊಳ್‌ ಎಂದು ನಕ್ಕು ಲೇವಡಿ
    ಹತ್ತಿಸುವುದು ಮಾತ್ರ ನಿಮಗೆಲ್ಲಾ ತಿಳಿಯುತ್ತೆ, ಒಂ
    ದುಚಿಟಿಗಿ ನಸ್ಯಕ್ಕೆ ಮಾತ್ರ ಯಾರೂ ಬದುಕಿಲ್ಲ.
ಈ ಪ್ರಕಾರದಲ್ಲಿ ಇವರೆಲ್ಲಾ ಮಾತನಾಡುತ್ತಾ ಇರುವುದು
ಕೇಳುವವರಿಗೆ ವಿನೋದವಾಗಿ ಕಾಣಿಸಿದಾಗೂ ಉಪಾದ್ರಿ ಕೇ
ಳುವ ಪ್ರಶ್ನೆಯೇ ಬೇರೆ ಅವನಮನಸ್ಸೇ ಬೇರೆ ಇತ್ತು. ಆಗಾ
ಗ್ಯೆ ಅವನು ಕೇಳುವಮಾತೇ ಬೇರೆ ತೆರವಾಗಿತ್ತು. ಎಲ್ಲರೂ
ಎದ್ದು ಗುಡಿಯಿಂದ ತಂತಮ್ಮ ಮನೆಗಳಿಗೆ ಹೋದಮೇಲೆ,
ಉವಾದ್ರಿ- ಕೊರಡಿಬೀದೀ ಬಾಗಿಲಕಡೆಗೇ ಇದೆ ಎನ್ನುವುದು
    ಗೊತ್ತಾಯಿತಷ್ಟೆ, ಮೊದಲು ಮಾತನಾಡಿದ ಪ್ರಕಾರ
    ಎರಡು ಕೆಲಸವೂ ಸಾಗುವುದಕ್ಕೆ ಇದೇ ಸಮಯ.
ಅಪ್ಪಾಜಿ- ತಮ್ಮ ದಯದಿಂದ ಆಗಬೇಕು.
ಉಪಾದ್ರಿ- ನನಗೆ ಒಳಗುಮ್ಮ ತಿಳಿಯದೆ ? ಕೆಲಸದ ರೀತಿಯ
    ನ್ನೆಲ್ಲಾ ನಾನು ಹೇಳುತ್ತೇನೆ.
ಅಪ್ಪಾಜಿ- ತಮ್ಮ ಅಪ್ಪಣೆಯಂತೆ ಮಾಡೋಣ, ಈ ಪ್ರಕಾರ
ಮಾತನಾಡಿಕೊಂಡು ಹೊರಟುಹೋದರು,
                           ------

        ೧೧ ನೇ ಅಧ್ಯಾಯ.

ಅತ್ತ ಮೈಸೂರಿಗೆ ಹೋದ ಸದಾಶಿವದೀಕ್ಷಿತನು ಸೊಸೆ
ಗೆ ಪ್ರಾಪ್ತವಾಗಿರುವ ಸ್ಥಿತಿ ಇಂಥಾದ್ದೆಂದು ಗೊತ್ತಿಲ್ಲದೆ ಸಿಕ್ಕಿ
ದಕಡೆ ವಿಚಾರಮಾಡುತಾ ಬಂದನು. ಎಂಥಾ ಜೋಯಿಸರಲ್ಲಿ
ಪ್ರಶ್ನೆ ಮಾಡಿದರೂ ಯಾರೂ ಗೊತ್ತಾಗಿ ಹೇಳುತಾ ಇರಲಿಲ್ಲ.
-----------------------------------------------------

ಮಾಡಿದ್ದುಣ್ಣೋ ಮಹರಾಯ ೨೨೯ 

ಕೆಲವರು ಪ್ರಾಣಭೀತಿಯುಂಟು ಎನ್ನುತಿದ್ದರು. ಕೆಲವರು ದೊ
ಡ್ಡ ಜೀವಕ್ಕೆ ಭಯವಿಲ್ಲ ಎನ್ನುತಿದ್ದರು. ಇನ್ನು ಕೆಲವರು ಯಾ
ವುದೂ ಖಂಡಿತವಾಗಿ ತೋರದೆ ಹೀಗೂ ಹಾಗೂ ಸಂಶಯ ಪಡುತಿದ್ದರು. ಒಬ್ಬಿಬ್ಬರುಮಾತ್ರ ಇದು ಆಭಿಚಾರಿಕ, ಶಾಬ ರಪ್ರಯೋಗವಾಗಬೇಕೆಂದು ಕಾಣುತ್ತೆ ಎಂದರು. ಪಶುಪತಿ ಸಾಂಬಶಾಸ್ತ್ರೀಯು ಹೀಗೆಯೇ ವಿಚಾರಮಾಡುತಾ ಬಂದನು. ಕೊನೆಗೆಮಂತ್ರ ಮೂರ್ತಿ ತಲಚೇರಿ ಶೇಷಯ್ಯನವರು ಎಂದು ಇದಾರೆ ಅವರಿಗೆ ವೈದ್ಯಶಾಸ್ತ್ರ, ಮಂತ್ರಶಾಸ್ತ್ರ, ಮಾಟಮಾ
ಡುವುದು ಅದಕ್ಕೆ ತಡೆ ಕಟ್ಟುವುದು, ಇದೆಲ್ಲಾ ಗೊತ್ತಿದೆ.
ಅವರು ಕೊಲ್ಲಾಪುರದ ಮಹಾಲಕ್ಷ್ಮಿ ಉಪಾಸಕರು, ಅವರಲ್ಲಿ ವಿಚಾರಿಸಿದರೆ ಅನುಕೂಲಿಸಬಹುದೆಂದು ಗೊತ್ತಾಯಿತು.

ಈ ಶೇಷಯ್ಯನು ಒಳ್ಳೆ ಆಸ್ತಿವಂತನಾಗಿದ್ದನು. ಯಾವ
ವಿಧದಲ್ಲಿಯೂ ಮತ್ತೊಬ್ಬರ ಸಹಾಯವನ್ನು ಅಪೇಕ್ಷಿಸುತ್ತಿರ
ಲಿಲ್ಲ. ಅರಮನೆಯಿಂದ ಸಂಬಳವೂ ನಡೆಯುತಿತ್ತು. ಈತನು
ಹಣೆತುಂಬ ಕುಂಕುಮವನ್ನು ಇಟ್ಟುಕೊಳ್ಳುತಿದ್ದನು. ಈತ
ನ ಆಹ್ನಿಕವೆಲ್ಲಾ ತೀರುವಾಗ್ಗೆ ಹಗಲು ಜಾವಹೊತ್ತು ಆಗು
ತಿತ್ತು. ತರುವಾಯ ಹೊರಗಿನ ಹಜಾರದಲ್ಲಿ ಬಂದು ಕೂತು
ಕೊಂಡು ಬೇಕಾದವರಿಗೆ ಔಷಧಿ ಕೊಡುವುದು ಬೇಕಾದವರಿಗೆ
ಮಂತ್ರ ಹಾಕುವುದು ಈ ಪ್ರಕಾರ ಮಾಡುತಿದ್ದನು. ಯಾರಮ
ನೆಗೂ ಹೋಗುತಿರಲಿಲ್ಲ. ಯಾರಿಂದಲೂ ಹಣ ತೆಗೆದುಕೊ
ಳ್ಳುತಿರಲಿಲ್ಲ. ಸಾಯಂಕಾಲದ ಪೂಜೆ ಬಹಳ ಅಟ್ಟಹಾಸವಾ
ಗಿ ಜರಗುತಿತ್ತು. ಆ ಕಾಲದಲ್ಲಿ ದೇವರ ನಿವೇದನಕ್ಕಾಗಿಯೂ
----------------------------------------------------

೨೩೦         ಮಾಡಿದ್ದುಣ್ಣೋ ಮಹರಾಯ.

ಕಾಣಿಕೆಗಾಗಿಯೂ ಯಾರು ಏನತಂದು ಇರಿಸಿದರೂ ಅದನ್ನು
ಮಾತ್ರ ತೆಗೆದುಕೊಳ್ಳುವುದುಂಟು. ಆದರೆ ಪ್ರತಿಶುಕ್ರವಾರದ
ಪೂಜೆ, ವರಮಹಾಲಕ್ಷ್ಮಿ ಹಬ್ಬದ ಪೂಜೆ, ನವರಾತ್ರೆಪೂಜೆ, ಅದ ರಲ್ಲಿಯೂ ಕಾಳಿರಾತ್ರೆಪೂಜೆ, ಇದಕ್ಕೆ ಸಂಬಂಧವಾದ ಸುವಾ
ಸಿನಿಪೂಜೆ ಬ್ರಾಹ್ಮಣಸಂತರ್ಪಣೆ, ಮೊದಲಾದ ವೆಚ್ಚ ಬ
ಹುಬಲವಾಗಿ ನಡೆಯುತಿತ್ತು. ಈತನು ಸ್ವಭಾವದಲ್ಲಿ ಬಹು
ಸರಸಿ, ಜನರಲ್ಲಿ ಹೊಂದುವುದು ಬಲ; ಮೂರನೇ ಜಾವದ
ಲ್ಲಿ ಚದರಂಗ ಗಂಜೀಫ್, ಇದನ್ನು ಆಡುವ ಅಭ್ಯಾಸ ಉಂ
ಟು. ಆಗಾಗ್ಗೆ ಭಾರತ ಭಾಗವತ ರಾಮಾಯಣ ಮೊದಲಾದ ಪುರಾಣಗಳನ್ನು ಹೇಳಿಸುವುದು ಕನ್ನಡ ಕಾವ್ಯಗಳನ್ನು ರಾಗ
ವಾಗಿ ಓದಿಸುವುದು, ಇದರಲ್ಲಿ ಕಾಲವನ್ನು ಕಳೆಯುತಿದನು.
ಇದೂ ಅಲ್ಲದೆ ಲೌಕಿಕ ವ್ಯವಹಾರಜ್ಞಾನ ಈತನಿಗೆ ಚೆನ್ನಾ
ಗಿತ್ತು. ಆ ವಿಷಯವಾಗಿ ಅಭಿಪ್ರಾಯ ಕೇಳುವುದಕ್ಕೂ ಅರ್ಜಿ ಮೊದಲಾದ್ದನ್ನು ಬರಿಸುವುದಕ್ಕೂ ಈತನಲ್ಲಿ ವಿಶೇಷವಾಗಿ ಜ
ನರು ಬರುತಿದ್ದರು. ಈತನಿಗೆ ದೇಶಾಭಿಮಾನ ಭಾಷಾಭಿಮಾ
ನ ಬಹು ಹೆಚ್ಚಾಗಿತ್ತು. ಅದರ ಜೊತೆಗೆ ಇನ್ನೊಂದು ಭ್ರ
ಮೆಯೂ ಈತನನ್ನು ಬಾಧಿಸುತಿತ್ತು, ಕುಂಪಣಿಯವರು ಈ
ದೇಶ ವನ್ನು ಬಿಟ್ಟು ಹೊರಟುಹೋಗುತ್ತಾರೆ, ಅವರು ವ್ಯಾಪಾರ
ಗಾರರು, ರಾಜ್ಯ ಕಟ್ಟಿ ಅವರಿಗೆ ಏನಾಗಬೇಕು ? ತುರುಕರ
ನ್ನು ತಾನು ಮಂತ್ರ ಹಾಕಿ ಈ ರಾಜ್ಯದಿಂದಲೇ ಓಡಿಸಬಲ್ಲೆ
ಎಂದು ತಳ್ಳಿ ಮಾತುಗಳನ್ನು ಆಗಾಗ್ಗೆ ಆಡಿಕೊಳ್ಳುತಿದ್ದನು'
ಯಾರು ಯಾವ ಮಾತನಾಡುತಿದಾಗ್ಯೂ ನಮ್ಮ ದೇಶದ ಶಬ್ದ
------------------------------------------------------

೨೩೧     ಮಾಡಿದ್ದುಣ್ಣೊ ಮಹಾರಾಯ.

ಗಳನ್ನೇ ಉಪಯೋಗಿಸಿ ಮಾತನಾಡಿ ಎನ್ನುತಿದ್ದನು. 'ಅರ್ಜಿ'  ಎನ್ನುವುದಕ್ಕೆ ಬದಲಾಗಿ ಮನುವೆ ಎಂತಲೇ ಬರೆಯಬೇಕು,
' ಶಾಯಿ ' ಗೆ ಬದಲಾಗಿ ಮುಸಿ ಎಂತಲೇ ಹೇಳಬೇಕು. 'ಛಾ
ಪಾ ಕಾಗದ ' ಕ್ಕೆ ಬದಲಾಗಿ ಮುದ್ರೇಕಾಗದ ಎಂತಲೇ ಹೇಳಬೇಕು.  'ಮುಲಕಿಬಾಬು ' ಎನ್ನುವುದಕ್ಕೆ ಅಟ್ಟವಣೆ ಎಂತಲೇ ಹೇಳ
ಬೇಕು. ವೇನಾಗರಿ ಎಂದು ಹೇಳಿದರೆ ಬಹು ಕೋಪ, ಲೇ
ಕಣಿ ಎಂತಲೇ ಕರೆಯಬೇಕು. ' ಹುದ್ದೇ ದಾರ್‌ ' ಎನ್ನಲಾಗ
ದು, ಅಧಿಕಾರಿ ಎಂದು ಹೇಳಬೇಕು. ' ತೇರೀಜ್ ' ಎಂದರೆ
ಬಹು ಕೋಪ ಬರುತಿತ್ತು. ಟವಣೆ ಎಂತ ಕರೆಯಬೇಕು
' ತರಿ ಋಷ್ಕಿ ' ಎನ್ನ ಕೂಡದು, ಗದ್ದೆ ಬೆದ್ದಲು ಎನ್ನಬೇಕು.
ಅಥವಾ ನೀರಾರಂಬ ಕಾಡಾರಂಬ ಎಂದು ಹೇಳಿದರೂ ಸರಿ
ಯೆ. ' ಹಣದವಸೂಲಿ' ಎನ್ನಲಾಗದು, ಹಣ ಎತ್ತುವುದು
ಎನ್ನಬೇಕು. ಒಂದೊಂದುವೇಳೆ ಈ ಅಭಿಪ್ರಾಯ ಸ್ವಲ್ಪ ಪಲ್ಲ
ಟವೂ ಆಗುತಿತ್ತು, ಮಾತನಾಡುತ್ತಾ ಮಾತನಾಡುತ್ತಾ ಇರು
ವಾಗ ಯಾರೋ ಅರಮನೆಯಲ್ಲಿ ರಾತ್ರಿ 'ಒಡ್ಡೋಲಗದಲ್ಲಿ'
ಎಂದು ಹೇಳಿದರು ಆಗ ಈ ಶೇಷಯ್ಯನು 'ಒಡ್ಡೋಲಗ '
ಎಂದರೇನು ಮಾತು ? ಚೆನಾಗಿ ದರ್ಬಾರು ? ಎನ್ನಿ ಎಂ
ದನು. ಈತನ ಸಂಗಡ ಬಹು ಸಲಿಗೆಯಾಗಿ ಮಾತನಾಡುತ್ತಾ
ಚದರಂಗೆ ಆಡುತಿದ್ದ ಒಬ್ಬ ಮನುಷ್ಯನು- ದರ್ಬಾರು ಎನ್ನು
ವುದು ದೇಶಭಾಷೆಯಲ್ಲವಲ್ಲ, ಅದನ್ನು ಹೇಗೆ ಹೇಳುವುದು ?
ಎಂದನು. ಅದಕ್ಕೆ ಶೇಷಯ್ಯನು ದರ್ಬಾರು ಎನ್ನುವುದು
ಮೊಗಲಾಯಿ, ಹೇಳುವಾಗ ಜರಬಾಗಿರುತ್ತೆ, ಎಂದನು.
-----------------------------------------------------

೨೩೨         ಮಾಡಿದ್ದುಣ್ಣೋ ಮಹಾರಾಯ.

ಈ ಮನುಷ್ಯನನ್ನು ಪಶುಪತಿ ಸಾಂಬಶಾಸ್ತ್ರಿಯ ಸದಾ ಶಿವ
ದೀಕ್ಷಿತನೂ ಹೋಗಿ ಆತನ ಮನೆಯಲ್ಲಿ ಕಂಡರು. ಜನ
ವಿಶೇಷವಾಗಿ ಇಲ್ಲದ ಸಮಯವನ್ನು ನೋಡಿ, ಸೀತಮ್ಮನ ಸ್ಥಿ
ತಿ ಕುರಿತು ವಿಸ್ತಾರವಾಗಿ ಹೇಳಿದರು. ಏನೋ ಕೆಲವು ಗಣಿ
ತವನ್ನು ಹಾಕಿ ನೋಡಿ ಮಂತ್ರ ಶಾಸ್ತ್ರದ ಪುಸ್ತಕಗಳನ್ನು
ಶೋಧಿಸಿದ ತರುವಾಯ ಶೇಷಯ್ಯನು ಈ ದಿವಸ ಶುಕ್ರ
ವಾರ, ನನಗೆ ವ್ಯವಧಾನ ಕಡಮೆ ಮತ್ತು ಯಾವ ಸಂಗತಿ
ಯನ್ನೂ ಖಂಡಿತವಾಗಿ ಮಾತನಾಡತಕ್ಕದೂ ಅಲ್ಲ. ನಾಳೆ
ಶನಿವಾರ ಯಾವ ಮಾತೂ ಬೇಡ, ನಾಡಿದ್ದು ಆದಿತ್ಯವಾರ
ಬೆಳಗೆ ಬಂದರೆ ಹೇಳುತ್ತೇನೆ ಎಂದನು. ಅದೇಪ್ರಕಾರ ಆದಿ
ತ್ಯವಾರ ಹೊಗಿ ಕಾಣಲಾಗಿ ಶೇಷಯ್ಯನು ನನ್ನ ಲೆಕ್ಕಾ
ಚಾರದಲ್ಲಿ ಹೊರಟದ್ದನ್ನು ನಾನು ಹೇಳುತ್ತೇನೆ, ನಿಮ್ಮ 
ಅನುಭವವನ್ನು ನೀವು ನೋಡಿಕೊಳ್ಳಿ, ನಿಮ್ಮ ಸ್ವಸ್ಥಳಕ್ಕೆ
ಕೇವಲ ಸಮೀಪವಾಗಿ ಒಬ್ಬ ಶೂದ್ರ ಇದಾನೆ, ಅವನು
ದುಷ್ಟ, ಸ್ತ್ರೈಣ್ಯನಾಗಿ ಮಾಡಿದ ಪ್ರಯತ್ನ ನಾಗದೇ ಹೋ
ದ್ದರಿಂದ ಒಂದು ದೇವತೆಯನ್ನು ಆವಾಹನೆಮಾಡಿ ಶೂನ್ಯ
ಮಾಡಿ, ರೋಗಿಯು ಯಾವಾಗಲೂ ತುಳಿಯತಕ್ಕ ಒಂದು
ಸ್ಥಳದಲ್ಲಿ ಒಂದು ಬೊಂಬೆಯನ್ನು ಹೂಳಿದಾನೆ. ಇವನಿಗೆ
ಒಬ್ಬ ಬ್ರಾಹ್ಮಣನ ಸಹಾಯವಿದೆ. ಈ ಬ್ರಾಹ್ಮಣನು ಮೊದ
ಲಿನಿಂದಲೂ ನಿಮಗೆ ಮಿತ್ರನಾಗಿಯೇ ಇದ್ದು ಶತ್ರುವಾಗಿದಾನೆ.
ಇದು ಚೆನ್ನಾಗಿ ನೋಡಿದರೆ ಗುಣವಾದೀತೆ ಆಗಲಾರದೆ
ಎಂದು ಜೀವಚಿಂತೆ ನಿಮಗೆ ಹುಟ್ಟಿದೆ. ನನ್ನ ಜನ್ಮದಲ್ಲಿ
--------------------------------------------------
೨೩೩         ಮಾಡಿದ್ದುಣ್ಣೊ ಮಹಾರಾಯ.

ಇಂಥಾ ಸಂದರ್ಭ ನನಗೆ ದೊರೆತಿರಲಿಲ್ಲ. ಗ್ರಂಥದಲ್ಲಿ
ಯೇನೋ ವಿಷಯ ಹೇಳಿದಾನೆ. ವಾಣಭಯ ಚೆನ್ನಾಗಿ
ತೋರುತ್ತೆ, ಇದು ಹಿಂತಿರುಗುವುದು ಕಷ್ಟ: ಇನ್ನೊಂದು
ಪ್ರಕ್ರಿಯೆ ರೀತ್ಯಾ , ನೋಡಿದರೆ ಕೊನೆಗೆ ವಾಣಭೀತಿ ಇಲ್ಲ
ವೆಂತಲೂ ತೋರುತ್ತೆ. ಹೇಗೆ ಹೇಳುವುದಕ್ಕೂ ನನಗೆ ಬು
ದ್ಧಿ ಓಡುವುದಿಲ್ಲ. ಹಗಲುವೇಷದ ಕೃಷ್ಣೈಯ್ಯ ಇಲ್ಲಿಗೆ ಬರು
ತಾನೆ. ಆತನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಇಬ್ಬರೂ
ಸೇರಿ ಯೋಚಿಸಿ ಆ ಮಹಾತಾಯಿಯಮೇಲೆ ಭಾರ ಹಾಕಿ
ನಿಷ್ಕರ್ಷೆ ಮಾಡೋಣ. ಈ ವಿಜಾತೀಯವಾದ ಸ್ಥಿತಿಯನ್ನು ವಿಚಾರಮಾಡಿ ಒಂದು ಸಿದ್ಧಾಂತ ಮಾಡುವುದರಲ್ಲಿ ನನಗೆ ಕು
ತೂಹಲ ನಿಮಗಿಂತಲೂ ಹೆಚ್ಚಾಗಿದೆ. ನಾಳೆ ಸೋಮವಾರ
ಮಧ್ಯಾಹ್ನ ಬನ್ನಿ ಎಂದು ಹೇಳಿದನು.

ಹಗಲುವೇಷದ ಕೃಷ್ಣೈಯ್ಯನು ಇಂಧಾ ವಿಷಯಗಳ
ನ್ನು ಬಹಳವಾಗಿ ತಿಳಿದವನು. ಇವನು ಹುಟ್ಟುತಾ ತೆನಗು ರಾಜ್ಯದವನಂತೆ, ಬಾಲ್ಯದಿಂದಲೂ ಮಲೆಯಳದಲ್ಲಿದ್ದನು. ಅ
ಲ್ಲಿ ಅನೇಕ ಸಂಗತಿಗಳನ್ನು ವ್ಯಾಸಂಗಮಾಡಿ ತಿಳಿದುಕೊಂಡಿ
ದ್ದನು. ಈತನಿಗೆ, ಯಂತ್ರ, ಮಂತ್ರ, ಶುಕ್ರನಾಡಿ ಪ್ರಕಾರ ಜ್ಯೋ
ತಿಷ, ಚರಕ ಪ್ರಯೋಗದ ವೈದ್ಯ, ಗಣೇಶಪ್ರಶ್ನೆ, ಶೂನ್ಯ ಮಾಡು
ವುದು, ಮಾಡಿದ್ದನ್ನು ತಿರುಗಿಸುವುದು, ಅಗ್ನಿ ಸ್ತಂಭ ಜಲಸ್ತಂ
ಭಾದಿ ಕಂಣುಕಟ್ಟು ಮಾಯದವಿದ್ಯೆಗಳು ಚೆನ್ನಾಗಿ ತಿಳಿದಿದ್ದದ
ಲ್ಲದೆ ಹಗಲವೇಷವನ್ನು ಹಾಕುವುದರಲ್ಲಿ ಇವ ನಿಪುಣನಾಗಿದ್ದನು. ಈತನು ಮೈಸೂರು ಸಂಸ್ಥಾನಕ್ಕೆ ಬಂದು ಪ್ರಭುಗಳ ಭೇ
---------------------------------------------------

೨೩೪         ಮಾಡಿದ್ದುಣ್ಣೋ ಮಹರಾಯ.

ಟಿಯನ್ನು ಮಾಡಿಕೊಂಡು ಆಗಾಗೆ ಅರಮನೆಗೆ ಹೋಗಿ ಬ
ರುತಾ ಇದ್ದನು. ಇವನು ಯಾವಾಗ ಹೇಗೆ ಬಂದಾಗ
ಯಾರೂ ತಡೆಯಕೂಡದೆಂದು ಅಪ್ಪಣೆಯಾಗಿತ್ತು.

ಒಂದು ದಿವಸ ಈ ಕೃಷ್ಣಯ್ಯನು ಮೈಗೆಲ್ಲಾ ವೀಭೂ
ತಿಯನ್ನು ಬಳಿದುಕೊಂಡು ತಲೆಯನ್ನು ಜಟೆಯಾಗಿ ಬಿರೀಹು  ಯಿದುಕೊಂಡು ಬಲಗೈಯಲ್ಲಿ ಒಂದು ಚಿಮಚವನೂ ಎಡಗೈ
ಯಲ್ಲಿ ಒಂದು ತಲೆಬುರುಡೇ ಹೋಳನ್ನೂ ಹಿಡಿದು ತನ್ನ
ಗಂಡುಮಕ್ಕಳಲ್ಲಿ ಒಬ್ಬ ಚಿಕ್ಕವನಿಗೆ ಲಂಗೋಟಿಯನ್ನು ಕಟ್ಟಿ
ಅವನಿಗೂ ಮೈಗೆಲಾ ಏಭೂತಿಯನ್ನು ಬಳಿದು ಅವನನ್ನು
ಶಿಷ್ಯನಾಗಿ ಮಾಡಿಕೊಂಡು ತಾನು ನಿರ್ವಾಣದಲ್ಲಿ ಹೊರಟನು. ಹಗಲಿವೇಷದವನಾದ್ದರಿಂದ ಇವನು ಯಾವಾಗ ಅರಮನೆಗೆ ಯಾ
ವ ವೇಷದಲ್ಲಿ ಬಂದರೂ ಯಾರೂ ತಡೆಯಕೂಡದೆಂದು ಒಟ್ಟು ಅಪ್ಪಣೆಯಾಗಿತ್ತು. ಈ ವೇಷದಲ್ಲಿ ವಿಶೇಷವಾದ ಸಂಗತಿಯೊ೦
ದಿತ್ತು. ಕೃಷ್ಣಯ್ಯನು ಪುರುಷಚಿಹ್ನೆಯೇ ಕಾಣದಹಾಗೆ ನೇ   ದಿಕೊಂಡಿದ್ದನು. ಜಲವಿಸರ್ಜನೆಗೆ ಮಾತ್ರ ಒಂದು ರಂಧ್ರವಿ
ರುವಂತೆ ಕಾಣುತಿತ್ತು. ಈ ಗತಿಯಲ್ಲಿ ಅಂಬಾ ವಿಳಾಸದೊಳ
ಕ್ಕೆ ಹೋದನು. ಅಲ್ಲಿದ್ದ ಸಭೆಯಲ್ಲಾ ನೋಡಿ ಆಶ್ಚರ್ಯಪ
ಟ್ಟಿತು. ಇವನನ್ನು ಕೊನೆಯವರೆಗೂ ಪರೀಕ್ಷಿಸಬೇಕೆಂದು ಯೋ
ಚಿಸಿ ನಿರ್ವಾಣವಾಗಿದ್ದ ಆ ಪುರುಷನೆದುರಿಗೆ ಸುಂದರಿಯರಾದ ಹಲವುಜನ ಸೂಳೆಯರನ್ನು ಕರೆಯಿಸಿ ನಿಲ್ಲಿಸಿದರು. ಆ ಸ್ತ್ರೀ
ಯರು ಇವನೊಡನೆ ಇನ್ನು ಇಲ್ಲದ ಹಾಗೆ ಗೇಲಿಮಾಡುತಾ ಚ ಕ್ಕಂದವಾಡುತಾ ಬಂದರು. ಅವನ ಸ್ಥಿತಿ ವ್ಯತ್ಯಾಸವಾಗಲಿಲ್ಲ,
-------------------------------------------------------
       
        ಮಾಡಿದ್ದುಣ್ಣೊ ಮಹಾರಾಯ. ೨೩೫

ಆಗ ದೊರೆಯು ಬಹಳ ಆಶ್ಚರನನ್ನು ಬೇಕಾದಷ್ಟು ಇನಾ
ಮನ್ನು ಕೊಟ್ಟು ಕಳುಹಿಸಿದನು.

ಇನ್ನೊಂದು ದಿವಸ ಮತ್ತೊಂದು ವಿಶೇಷವಾದ ಸಂಗತಿ
ನಡೆಯಿತು. ಮೈಸೂರಿಗೆ ಆಗ ಒಬ್ಬ ಪಕೀರ ಬಂದಿದ್ದನು.
ಇವನು ಬೆತ್ತಲಗಾಡಿಯಮೇಲೆ ತುಂಬಾ ಗೊಬ್ಬಳೇ ಮುಳ್ಳ
ನ್ನು ಹಾಕಿಸಿ ಅದರಮೇಲೆ ಬರೀ ಮೈಯಲ್ಲಿ ಅಂಗತಂಗನಾಗಿ ಮಲಗಿಕೊಂಡು ಗಾಡಿಯನ್ನು ಹೊಡೆಯಿಸಿಕೊಂಡು ಕುಂದಣ
ಮಟ್ಟಿಗೆ ಬಂದನು, ತೊರೆಯು ಇದನ್ನು ನೋಡಿ ಈ ಫಕೀ
ರನಿಗೆ ಇನಾಮು ಕೊಟ್ಟು ಕಳುಹಿಸಿದರು. ಈ ಸಂಗತಿ ಕೃ
ಷ್ಣೈಯ್ಯನಿಗೆ ತಿಳಿಯಿತು. ಮಾರನೇದಿವಸ ಕೃಷ್ಣೈಯ್ಯನು
ಹಾಗೆಯೇ ಗೊಬ್ಬಮುಳ್ಳನ್ನು ತುಂಬಾ ಹಾಕಿಸಿ ಬೆತ್ತಲೆಯಾ
ಗಿ ತಾನು ಅದರಮೇಲೆ ಮಲಗಿಕೊಂಡು ದೊಡ್ಡದಾದ ಎರಡು ಚಪ್ಪಡಿಯನ್ನು ತನ್ನ ಮೈ ಮೇಲೆ ಹಾಕಿಸಿಕೊಂಡು ಅದೇ ಕುಂ
ಗಣ ಮುಟ್ಟ ಬೈಲಿನಲ್ಲಿ ಬೆಳಗ್ಗೆ ಪ್ರಭುಗಳ ಶಿವಪೂಜೇಹೊತ್ತಿ
ಗೆ ಸರಿಯಾಗಿ ಬ೦ದನು. ಶಿವಪೂಜೆಯಾಗಿ ಆ ತೊಟ್ಟಿಯಂ
ದ ಬರುವ ಸಮಯದಲ್ಲಿ ಈ ಸಂಗತಿ ತಿಳಿಯಿತು. ಕಿಟಕಿಯಿಂ ದಸರಾಂಬಳಕೆಯಾಯಿತು. ರಾಣಿವಾಸದವರ ಮೇಲೆ ಜಾ
ಲದ ಕಿಟಕಿಯಲ್ಲಿ ಬಂದು ನಿಂತು ನೋಡಿದರು. ಈ ಗಾಡಿ
ಯು ಅರಮನೆ ಎದುರಿನ ಬೈಲಿನಲ್ಲಿ ಮೂರು ಸುತ್ತು ಸು
ತ್ತಿತು. ಕೃಷ್ಣೈಯ್ಯನ ಸಾಹಸಕ್ಕೆ ಮೆಚ್ಚಿದರು. ಪುನಃ ಬ
ಹುಮಾನ ದೊರೆಯಿತು.

ಮತ್ತೂ ಒಂದು ಅದ್ಭುತವಾದ ಕಾರ್ಯ ನಡೆಯಿತು.
----------------------------------------------

೨೩೬     ಮಾಡಿದ್ದುಣ್ಣೋ ಮಹಾರಾಯ,

ಆ ಕಾಲದಲ್ಲಿ ಮೈಸೂರಿಗೆ ಒಬ್ಬ ಬೈರಾಗಿ ಬಂದಿದ್ದನು.
ಕುಪ್ಪಣ್ಣನ ತೋಟಕ್ಕೆ ಪಶ್ಚಿಮದಲ್ಲಿದ್ದ ಪೂರ್ಣಯ್ಯನ ಕಂದ
ಕದಲ್ಲಿ ಅವಧೂತ ಸೂರ್ಯನಾರಾಯಣನ ಮಂಟಪವೆಂದಿತ್ತು.
ಅದರಲ್ಲಿ ಆ ಬೈರಾಗಿ ಬಂದು ಇಳಿದುಕೊಂಡನು. ಇವನು
ಪ್ರತಿನಿತ್ಯವೂ ಒಂದುಸೇರು ಹಸೀ ಜಾವಾಳದ ಬೀಜವನ್ನು ತಿ
ನ್ನು ತಾ ಇದ್ದನು. ಅರಮನೆ ಇಲಾಖೆಯ ಜಿನಸಿ ಕಚೇರಿ
ಯಿಂದ ಚಾವಾಳವನ್ನು ಕೊಡಿಸಬೇಕೆಂದು ದೊರೆಗಳ ಅಪ್ಪಣೆ
ಯಾಗಿತ್ತು. ಅದನ್ನು ಕೊಡಿಸತಕ್ಕ ಕೆಲಸವು ಚಿತ್ರಗಾರ ಆ
ತಿಪ್ಪಣ್ಣನಿಗೆ ನೇಮಕವಾಗಿತ್ತು. ಈ ಚಿತ್ರಗಾರ ತಿಪ್ಪಣ್ಣನಲ್ಲಿ
ದೊರೆಗೆ ವಿಶೇಷವಾದ ಅಭಿಮಾನವಿತ್ತು. ರಾತ್ರೆ ಸ್ವಲ್ಪ ಹೊ
ತ್ತು ಹೊರತು ಉಳಿದ ಎಲ್ಲಾ ಕಾಲದಲ್ಲಿಯೂ ತಿಪ್ಪಣ್ಣನು
ದೊರೆಯ ಸಮೀಪದಲ್ಲಿಯೇ ಇರುತಾ ಚೆದುರಂಗ ಗಂಜೀಪು ಮೊದಲಾದ ಆಟಗಳನ್ನು ಅವರ ಸಂಗಡ ಆಡುತಾ ವಿನೋ
ದವಾಗಿ ಕಾಲವನ್ನು ಕಳೆಯುತ್ತಿದ್ದನು. ಪ್ರಭುಸನ್ನಿಧಿಯಲ್ಲಿ
ಈ ತಿಪ್ಪಣ್ಣನಿಗೆ ವಿಶೇಷವಾದ ಗೌರವವಿದರೂ, ಈತನು
ಯಾರಿಗೂ ಕೇಡನ್ನು ಮಾಡುತಿರಲಿಲ್ಲ. ಸಾಧ್ಯವಾದಮಟ್ಟಿಗೆ
ಅನೇಕರಿಗೆ ಉಪಕಾರವನ್ನು ಮಾಡಿದನು. ಇತರರಿಂದ ಆಗದ
ಕೆಲಸ ಈತನಿಂದ ಆಗುತಿತ್ತು. ಜೀವನ್ಮುಕ್ತಿ ಪಠದ ಆಟ
ಮೊದಲಾದ ಆಟಗಳನ್ನು ಹೊಸದಾಗಿ ಏರ್ಪಡಿಸಿದವನು ಈತನೇ. ಅನೇಕರು ಈತನನ್ನು ಮನೆಯಲ್ಲಿ ಅನುಸರಿಸುತಿದ್ದರು. ಒಂ
ದುದಿವಸ ಬೆಳಗ್ಗೆ ೮ ಗಂಟೆ ಸಮಯದಲ್ಲಿ ತಿಪ್ಪಣ್ಣನ ಮ
ನೆಯ ಮಹಡಿ ಮೇಲೆ ಅನೇಕರು ಸೇರಿದ್ದರು. ಹಗಲವೇಷ
--------------------------------------------

        ಮಾಡಿದ್ದುಣ್ಣೊ ಮಹಾರಾಯ. ೨೩೭

ದ ಕೃಷ್ಣೈಯ್ಯನೂ ಅಲ್ಲಿಗೆ ಬಂದು ಕೂತಿದ್ದನು. ಬೈರಾಗಿ
ಗೆ ಜಾವಾಳದ ಬೀಜವನ್ನು ತೆಗೆದುಕೊಂಡು ಹೋಗಲು ಅ ವನಕಡೆಯವರು ಬಂದು ತಗಾದೆ ಮಾಡಿದರು. ಕೃಷ್ಣೈಯ್ಯ
ನು ಈ ಸಂಗತಿಯನ್ನು ವಿಚಾರಿಸಿ ತಿಳಿದುಕೊಂಡು-ತಿಪ್ಪಣ್ಣ
ನವರೆ, ಸಮೀರ, ವತ್ಸನಾಧಿ, ಇಲಿ ಪಾಷಾಣ ಮೊದಲಾಗಿ ನವಪಾಷಾಣಗಳನ್ನು ತರಿಸಿ ಒರಳಲ್ಲಿ ಹಾಕಿಸಿ ಕುಟ್ಟಿ ಪುಡಿ
ಮಾಡಿಸಿ ತರಿಸಿ ; ಅದರಲ್ಲಿ ಒಂದು ಚಮತ್ಕಾರವಾದ ಸಂಗತಿ
ಯನ್ನು ತೋರಿಸುತ್ತೇನೆ ಎಂದನು. ಹಗಲುವೇಷದವನಾದಕಾ
ರಣ ಯಾವ ತಂತ್ರವನ್ನು ಮಾಡುತಾನೋ ನೋಡಬೇಕೆಂದು
ತಿಪ್ಪಂಣನು ಜಿನಸೀಕಚೇರಿಯಿಂದ ನವವಾಷಣಗಳನ್ನು ತರಿಸಿ
ಹುಡಿಮಾಡಿಸಿದನು. ಆ ಹುಡಿಯನ್ನು ಬೆಳ್ಳಿತಟ್ಟೆಯಲ್ಲಿ ಹಾ
ಕಿತಂದು ಕೃಷ್ಣೈಯ್ಯನ ಮುಂದೆ ಇರಿಸಿದರು. ಕೃಷ್ಣೈಯ್ಯ
ನು ಆ ಪುಡಿಯನ್ನೆಲ್ಯಾ ಹುರಿಟ್ಟು ಮುಕ್ಕಿದಂತೆ ಮುಕ್ತಿ ಪೂ
ರೈಸಿದನು. ಅಷ್ಟರಲ್ಲಿಯೇ ಅರಮನೆಯಿಂದ ಕರೆಯುವುದಕ್ಕೆ
ಬಂದರು. ತಿಪ್ಪಂಣ ಹೊರಟುಹೋದನು. ಅಲ್ಲಿದ್ದವರೆಲ್ಲರಿ
ಗೂ ಈ ಕೃಷ್ಣೈಯ್ಯನ ಕೃತ್ಯವನ್ನು ಕಂಡು ವಿಶೇಷವಾಗಿ ಭ
ಯವಾಯಿತು. ಒಬ್ಬೊಬ್ಬರಾಗಿ ಎದ್ದು ತಮ್ಮ ಮನೆಗಳಿಗೆ
ಹೊರಟುಹೋದರು. ಕೃಷ್ಣೈಯ್ಯ ಒಬ್ಬನೇ ನಿಂತನು. ಎ
ಷ್ಟು ಹೊತ್ತು ನೋಡಿದರೂ ಯಾರೂ ಬರಲಿಲ್ಲ. ಕೃಷ್ಣೈಯ್ಯ
ನು ತಾನೂ ಎದ್ದು ಮನೆಗೆ ಹೊರಟುಹೋಗಿ ಆಹ್ನಿಕವನ್ನು ತೀರಿಸಿಕೊಂಡು ಊಟಾ ಮಾಡಿ ಸುಖವಾಗಿ ಮಲಗಿಕೊಂಡು ನಾ
ಲ್ಕು ಗಂಟೆಗೆ ಎದ್ದು ಎಲೆ ಅಡಕೆಯನ್ನು ಹಾಕಿಕೊಳ್ಳುತಾ
------------------------------------------------------

೨೩೮     ಮಾಡಿದ್ದುಣ್ಣೋ ಮಹಾರಾಯ.

ಕೂತುಕೊಂಡನು. ಅರಮನೆಯಲ್ಲಿದ್ದ ತಿಪ್ಪಣನಿಗೂ ಬಹು
ಭಯವುಂಟಾಯಿತು. ಅದುವರೆಗೆ ಕೃಷಣೈಯ್ಯ ಸತ್ತುಹೋಗಿರ ಬಹುದೆಂದು ಆತನ ಅವರ ಮನೆಯಲ್ಲಿ ಬೆಳಗೆ ಕೂತಿದ
ಜನರೆಲ್ಲರೂ ಊಹಿಸಿಕೊಂಡಿದ್ದರು. ತಿಪ್ಪಂಣನು ಪದೇ ಪದೇ
ಜವಾನರನ್ನು ಕಳುಹಿಸಿ ಕೈಷ್ಣೈಯ್ಯನ ಸ್ಥಿತಿಯನ್ನು ಕುರಿತು ವರ್ತಮಾನವನ್ನು ತರಿಸಿಕೊಳ್ಳುತಾ ಇದ್ದನು. ಸುಖವಾಗಿ
ಆ ಮನುಷ್ಯನು ಮನೆಯಲ್ಲಿ ತಂಬೂಲವನ್ನು ಹಾಕಿಕೊಳ್ಳುತಾ
ಇದಾನೆಂದು ಕೇಳಿ ತಿಪ್ಪಂಣನು ನಡೆದ ಸಂಗತಿಯನ್ನು ದೊ
ರೆಗಳಲ್ಲಿ ಅರಿಕೇಮಾಡಿದನು. ರಾಜಸಭೆಗೆ ಸಬೆಯ ಆಶ್ಚರ್ಯ
ದಲ್ಲಿ ಮುಳುಗಿಹೋಯಿತು. ಕೃಷ್ಣೈಯ್ಯನನ್ನು ಅರಮನೆಗೆ
ಕರಿಸಿ ನೋಡುವಾಗ ಅವನು ಸುಖವಾಗಿದ್ದನು. ಅವನಿಗೆ ದೊ
ರೆಗಳು ವಿಶೇಷವಾದ ಬಹುಮಾನವನ್ನು ಮಾಡಿದರು.

ಇಂಧಾ ಅಮಾನುಷ ಕೃತ್ಯಗಳನ್ನು ಯಾವ ಮಂತ್ರಶಕ್ತಿ
ಯಿಂದ ಯಾವ ಉಪಾಶನಾಶಕ್ತಿಯಿಂದ ಆತ ಮಾಡುತಿದ್ದನೊ
ತಿಳಿಯದು, ಇಂಧಾ ಮನುಷ್ಯನನ್ನು ಕಂಡು ಮಂತ್ರಮೂ
ರ್ತಿ ಶೇಷಯ್ಯನು ಮಾತನಾಡಿ ಸದಾಶಿವದೀಕ್ಷಿತನ ಸೊಸೆಯ
ಸ್ಥಿತಿಯನ್ನು ವಿವರಿಸಿ ಹೇಳಿದನು. ಇಂಧಾ ವಿಷಯಗಳಲ್ಲಿ ರ
ತ್ನಾಕರ ಮಹೋದಧಿಯಹಾಗೆ ಇದ್ದ ಇವರಿಬ್ಬರಿಗೂ ಸೀತ
ಮ್ಮನ ವ್ಯಾಧಿಯ ಗುಟ್ಟಿ ಗೊತ್ತಾಗಲಿಲ್ಲ. ಇದಕ್ಕೆ ನಿವಾ
ರಣೆ ಏನೆಂಬುವುದು ಇನ್ನೂ ಅರಿಯುವುದಕ್ಕೆ ಸಾಧ್ಯವಾಗಿ
ತೋರುತ್ತಿರಲಿಲ್ಲ. ಕೊನೆಗೆ ರೋಗಿಯತಿಯನ್ನು ಮುಖತಃ
ನೋಡಿ ಅನುಭವಮಾಡಿ ಕೊಂಡಹೊರತು ಯಾವಯೋಚನೆಯನ್ನೂ
-----------------------------------------------------

        ಮಾಡಿದ್ದುಣ್ಣೋ ಮಹಾರಾಯ, ೨೩೯

ಮಾಡುವುದಕ್ಕೆ ಆಗುವುದಿಲ್ಲವೆಂದು ಸಿದ್ಧಾಂತವಾಡಿ, ಈ ಸಂಗ ತಿಯನ್ನು ಪಶುಪತಿ ಸಾಂಬಶಾಸ್ತ್ರಿಗೂ ಸದಾಶಿವದೀಕ್ಷಿತನಿಗೂ ತಿಳಿಸಿದರು. ಶೇಷಯ್ಯನು ಎಲ್ಲಿಗೂ ಊರಬಿಟ್ಟು ಹೊರಡತಕ್ಕ
ವನಲ್ಲ. ಕೃಷ್ಣೈಯ್ಯನು ಸ್ಥಳಕ್ಕೆ ಹೋಗಿ ತಾನು ಸೀತಮ್ಮನ
ಸ್ಥಿತಿಯನ್ನು ನೋಡಿಕೊಂಡು ಬರಲು ಒಪ್ಪಿದನು. ಆದರೆ ತಾ
ನು ಹೊರಡುವುದಕ್ಕೆ ರಾಜರ ಅಪ್ಪಣೆಯಾಗಬೇಕೆಂದು ಹೇಳಿದನು.

ಅಂಧಾ ಅಪ್ಪಣೆ ಪಡೆಯುವುದಕ್ಕಾಗಿ ಪಶುಪತಿ ಸಾಂಬ
ಶಾಸ್ತ್ರಿಯೂ ಸದಾಶಿವದೀಕ್ಷಿತನೂ ಅರಮನೆಗೆ ಹೋದರು;
ಶಿವಪೂಜೆ ಮುಗಿದಮೇಲೆ ವಿದ್ವದ್ಗೋಷ್ಠಿಯಲ್ಲಿ ಮಡಿಯಾಗಿ
ಯೇ ಸ್ವಲ್ಪ ಹೊತ್ತು ಕೂತುಕೊಳ್ಳುವ ವಾಡಿಕೆ ಪ್ರಕಾರ ನಾ
ಮತೀರ್ಥದ ತೊಟ್ಟಿಯಲ್ಲಿ ದೊರೆಯು ಬಿಜಮಾಡಿ ಪಂಡಿತರು
ಗಳ ಸಂಗಡ ಮಾತನಾಡುತ್ತಾ ಕೂತಿರುವಾಗ ಸಮಯವನ್ನು
ನೋಡಿ ಪಶು ಪತಿಸಾ೦ಬಶಾಸ್ತ್ರೀಯು- ಮಹಾಸ್ವಾಮಿ ಹಗಲು
ವೇಷದ ಕೃಷ್ಣೈಯ್ಯನವರನ್ನು ನಂಬದಾಡಿಗೆ ಎಂಟುದಿವಸದ
ವರೆಗೆ ಕರೆದುಕೊಂಡು ಹೋಗಲು ಅಪ್ಪಣೆಯಾಗಬೇಕು ಎಂದು
ಸೀತಮ್ಮನ ಸ್ಥಿತಿಯನ್ನೇ ಅರಿಕೆ ಮಾಡಿದನು. ಆಗ
ದೊರೆಯು-ಸೀತಮ್ಮ ನೆಂಬ ಹುಡುಗಿ ನಮ್ಮ ಸಿಡಲು ಮರಿಯ
ಸೊಸೆಯಲ್ಲವೆ ? ಮದುವೆಗೆ ನಾನೂ ಬಂದಿದ್ದೆ, ಇನೂ
ಮೊನ್ನೆ ಮೊನ್ನೆ ಎನ್ನುವ ಹಾಗಿದೆ, ನೀವು ಹೇಳುವುದನ್ನು ಕೇ
ಆದರೆ ವಿಲಕ್ಷಣವಾದ ಸ್ಥಿತಿಯಾಗಿದೆ. ಇದು ಏನೋ ಕೃತ್ರಿ
ಮದಿಂದ ನಡೆದಿರಬೇಕು. ನನ್ನು ಸಿಡಿಲಮರಿಯ ಹೆಂಡತಿ
ಯೇನೊ ಆ ಹುಡುಗಿಗೆ ವಿಪರೀತವಾಗಿ ಹಿಂಸೆಯನ್ನು ಮಾ
----------------------------------------------------

೨೪೦         ಮಾಡಿದ್ದುಣ್ಣೋ ಮಹರಾಯ.

ಡುತಿದ್ದಳೆಂದು ಎಲ್ಲಿಯೋ ಗಾಳೀ ಸಮಾಚಾರ ಕೇಳಿದ್ದೆ. ಈ
ಗಲೂ ಹಾಗೆಯೇ ಇದೆಯೆ ? ಎಂದು ಅಪ್ಪಣೆಯಾಯಿತು.
ಈ ಮಾತಿಗೆ ಪಶುಪತಿ ಸಾಂಬಶಾಸ್ತ್ರಿಯು ಯಾವ ಮಾತನ್ನೂ ಆಡದೆ ಸುಮ್ಮನೇ ನಿಂತುಕೊಂಡನು. ಸದಾಶಿವ ದೀಕ್ಷಿತನು-  
ರಾಜಸಭೆಯಲ್ಲಿಯೂ ಸಹಿತ ಹೆಂಡತಿಯ ಅವಿವೇಕವು ಬಂಣಾ
ಬರೆದು ಹೋದಮೇಲೆ, ಇನ್ನು ತಾನು ಬದುಕಿ ಫಲವೇನೆಂ
ದು ಮುಖವನ್ನು ಚಿಕ್ಕದು ಮಾಡಿಕೊಂಡು ತಲೆಬಾಗಿ ಮೌ
ನವಾಗಿ ನಿಂತುಕೊಂಡನು. ಅದಕ್ಕೆ ಕೃಷ್ಣರಾಜಪ್ರಭುವು--
ಸಿಡಿಲಮರಿ, ನೀನು ಯಾಕೆ ಅಷ್ಟರಲ್ಲಿಯೇ ಖಿನ್ನನಾಗುತೀಯೆ?
ಈ ಗ್ರಹಛಿದ್ರ ಎಲ್ಲಿಯೂ ಇದೆ. ದೇವತೆಗಳಿಗೆ ತಪ್ಪಲಿಲ್ಲ.
ಪಾಡವಾದಿಗಳಿಗೆ ತಪ್ಪಲಿಲ್ಲ. ಆ ವಿಷಯವಾಗಿ ಸಂಕೋಚ
ಬೇಡ, ಹಗಲುವೇಷದ ಕೃಷ್ಣಯ್ಯನನ್ನು ಅಗತ್ಯವಾಗಿ ಕರೆ
ದುಕೊಂಡು ಹೋಗು ಎಂದು ಇಂಗಿತಜ್ಞರಾದ ಪ್ರಭುವು ಅ
ಪ್ಪಣೆ ಕೊಡಿಸಿದರು. ಇನ್ನು ೫-೬ ದಿವಸಕ್ಕೆ ತನ್ನ ತಂ
ದೆಯ ವೈದೀಕ ಬರುವುದು, ಅದನ್ನು ಮಾಡಿಕೊಂಡು ಹೊರ ಡುತ್ತೇನೆಂದು ಕೃಷ್ಣಯ್ಯನು ಹೇಳಿದನು.

ಅಲ್ಲಿಂದ ಪಶುಪತಿ ಸಾಂಬಶಾಸ್ತ್ರಿಯ ಸದಾಶಿವದೀಕ್ಷಿತ
ನೂ ಮನೆಗೆ ಬಂದು ಭೋಜನ ಮಾಡಿ ಕೂತುಕೊಂಡರು. ಅಷ್ಟರೊಳಗಾಗಿ ಮಹಾದೇವನು ತಂದೆಗೆ ಒಂದು ಕಾಗದವ
ನ್ನು ಬರೆದು ಒಬ್ಬ ಆಳಿನಕೈಯಲ್ಲಿ ಕಳುಹಿಸಿದ್ದು ಬಂದು
ತಲಪಿತು. ಅದರಲ್ಲಿ ಬರೆದಿದ್ದ ಒಕ್ಕಣೆ ಎನೆಂದರೆ :-
------------------------------------------------------

    ಮಾಡಿದ್ದುಣ್ಣೋ ಮಹಾರಾಯ.     ೨೪೧

ತೀರ್ಧರೂಪರವರ ಪಾದಪದ್ಮಂಗಳಲ್ಲಿ,

ಬಾಲಕ ಮಹಾದೇವ ಮಾಡುವ ಶಿರಸಾಷ್ಟಾಂಗ ನಮ
ಸ್ಕಾರ. ಈ ವೈಶಾಖ ಶು || ೨ ಭಾನುವಾರದಲ್ಲು ಇಲ್ಲಿ
ಸರ್ವರೂ ಕ್ಷೇಮವಾಗಿದೇವೆ. ಅಲ್ಲಿನ ಕುಶಲಾತಿಶಯಂಗ
ಳಿಗೆ ಬರಿಸಿ ಬುದ್ದಿ ಪತ್ರಿಕೆ ಅಪ್ಪಣೆಯಾಗಬೇಕು. ಸೌಭಾಗ್ಯ
ವತಿಯನ್ನು ಬೀದೀಬಾಗಿಲಕಡೆ ಚಿಕ್ಕ ಮನೆಯಲ್ಲಿ ಮಲಗಿಸಿದ್ದ
ದ್ದು ಸರಿಯಷ್ಟೆ. ಮೊನ್ನೆ ಸಾಯಂಕಾಲ ಆಕಸ್ಮಾತ್ತಾಗಿ ಹಾಹಾ
ಎಂದು ಕೈ ಕಾಲುಗಳನ್ನು ಬಡಿಯುತಾ ಕೂಗುವುದಕ್ಕೆ ಮೊದಲು
ಮಾಡಿದಳು. ಕೂಡಲೆ ಹಜಾರಕ್ಕೆ ತಂದು ಮಲಗಿಸಿದೆವು. ಚಿರಂ
ಜೀವಿ ಕೃಷ್ಣನು ದಿವಸಕ್ಕೆ ಹತ್ತುಸಾರಿಯಾದರೂ ತಾಯಿಯಮೇಲೆ
ಬಿದ್ದು ಹೊರಳಾಡಿ ಅಳುತಾನೆ. ಅವನ ದುಃಖವನ್ನು ಮನುಷ್ಯ
ಮಾತ್ರದವರು ನೋಡಿ ಸಹಿಸುವುದು ಕಷ್ಟವಾಗಿದೆ.

ಈ ಮಧ್ಯೆ ಇನ್ನೊಂದು ವಿಪತ್ತು ಸಂಭವಿಸಿದೆ. ಆ ಕೊಠ
ಡಿಯಿಂದ ಸಾಯಂಕಾಲ ಸೌಭಾಗ್ಯವತಿಯನ್ನು ಹಜಾರಕ್ಕೆ ಕರೆ ದುತಂದು ಮಲಗಿಸುವಾಗ್ಗೆ ಎಲ್ಲಾ ಸರಿಯಾಗಿಯೇ ಇತ್ತು.
ಒಳಗಡೆ ಕದಾಹಾಕಿಕೊಂಡು ನಾವೆಲ್ಲರೂ ಮಲಗಿಕೊಂಡೆವು.
ನಿನ್ನೆ ಬೆಳಗಾದಮೇಲೆ ನೋಡುವಾಗ ಆ ಕೊರಡಿಗೆ ಬೀದೀಕಡೆ
ಯಿಂದ ದೊಡ್ಡದಾಗಿ ಕನ್ನ ಬಿದ್ದಿತ್ತು, ಕನ್ನದಲ್ಲಿ ಎರಡಾಳು
ನುಸಿಯಬಹುದು. ಅಷ್ಟು ದೊಡ್ಡದಾಗಿದೆ. ಅಲ್ಲಿರಿಸಿದ್ದ ಸಾಮಾ ನುಗಳೆಲ್ಯಾ ಗೂರಾಡಿದೆ. ಒಂದು ಕೈ ಪೆಟ್ಟಿಗೆ ಒಡೆದು ಅಲ್ಲಿಯೇ
ಹಾಕಿದೆ. ನೌಭಾಗ್ಯವತಿಯು ದಿನಚರಿಯಲ್ಲಿ ಇಟ್ಟುಕೊಳ್ಳುತಾ
ಇದ್ದ ಅಡಿಕೆ ಜಡೇಹುವು ಚೌರಿಕೊಟ್ಟು ದೊಡ್ಡ ಗುಂಡು
-----------------------------------------------------

೨೪೨         ಮಾಡಿದ್ದುಣ್ಣೋ ಮಹಾರಾಯ.

ಬುಗಡಿ ಇವುಗಳನ್ನು ಆ ಕೊಠಡಿಯ ಕದ ಬಾಗಿಲ ಗೂಡಿನಲ್ಲಿ
ಹೆಂಗಸರೇ ಇರಿಸಿದ್ದ ಹಾಗೆ ಇತ್ತು. ನಾನು ನೋಡಿದ್ದೆ. ಅವು
ಗಳು ಇಲ್ಲ. ಇನ್ನೇನು ಹೋಗಿದೆಯೋ ನನಗೆ ಗೊತ್ತಿಲ್ಲ. ಈ
ಕಾಗದ ಕಂಡಕ್ಷಣವೇ ತಾವು ಯಾವ ಕೆಲಸವಿದ್ದರೂ ಬಿಟ್ಟು ಹೊರ
ಟು ಬರಬೇಕು. ಮನೆಯಲ್ಲಿ ಹೆಂಗಸರೆಲ್ಲರೂ ಬಹಳವಾಗಿ ಭೀ
ಕರಾಗಿದಾರೆ; ತಮ್ಮ ದಾರಿಯನ್ನೇ ಎದುರು ನೋಡುತಾ ಇ
ದಾರೆ. ಈ ವಿವರವನ್ನು ಚಿತ್ತಕ್ಕೆ ಸರಿತರುವಂತೆ ಮಾಡಿಸಬೇಕು.
ಅಲ್ಲಿ ಎಲ್ಲರಿಗೂ ನನ್ನ ಸಾಷ್ಟಾಂಗ ನಮಸ್ಕಾರವನ್ನು ತಿಳಿಸ
ಬೇಕು.             ಇಂತಿ ಸಾ|| ನಮಸ್ಕಾರ.

ಹೀಗೆಂದು ಆ ಕಾಗದದಲ್ಲಿ ಬರೆದಿತ್ತು. ಸದಾಶಿವದೀಕ್ಷಿ
ತನು ಅದನ್ನು ಓದಿಕೊಂಡು- ಎನೋ ನನಗೆ ಗ್ರಹಚಾರಕಾ
ಲ. ಒಂದಲ್ಲದೆ ಅನೇಕ ಭಾಗದಲ್ಲಿ ಕಷ್ಟ ಬಂದಿದೆ. ದೇವರು
ಕಾಡಬೇಕು. ಮಾವೈಯ್ಯು, ನಾನು ಈಗಲೇ ಹೊರಡುತೇನೆ.
ಅಲ್ಲಿನ ಸ್ಥಿತಿಗೆ ಕಾಗದ ಬರೆಯುತ್ತೇನೆ. ತರುವಾಯ ಕೃಷ
ಯ್ಯನನ್ನು ನೀನು ಕರೆದುಕೊಂಡು ಬಾ ಹೀಗೆಂದು ಹೇಳಿ ಊ
ರಿಗೆ ಹೋದನು. ಹೋಗುತಾ ದಾರಿಯಲ್ಲಿ ನಗರದ ಆಮೀಲ
ರಲ್ಲಿ ಈ ಕಳವಾದ ಸಂಗತಿಯನ್ನು ತಿಳಿಸಿದನು. ಕಿಲ್ಲೇದಾರರು
ಆಮೀಲರು ಸಹಾ ಇವರ ಮನೆಯಲ್ಲಿ ಕಳ ವಾದಕ್ಕೆ ಆಶ್ಚ
ರ್ಯ ಪಟ್ಟವರಂತೆ ನಟಿಸಿದರು. ಕಿಳ್ಳೇದಾರರು ಸ್ಥಳಕ್ಕೆ ಬಂದು
ನೋಡಿದರು. ಕಳ್ಳರನ್ನು ಪತ್ತೆಮಾಡಿ ಅವರಿಗೆ ಶಿಕ್ಷೆಮಾಡಿಸು
ವುದಾಗಿ ಹೇಳಿ ಹೊರಟುಹೋದರು.
                                ======
-------------------------------------------------------
        ಮಾಡಿದುಣ್ಣೋ ಮಹಾರಾಯ.  ೨೪೨

        ೧೧ ನೇ ಅಧ್ಯಾಯ.

                         ಅಮಾಸೆಯ ಕಥೆ

ಅಕಸ್ಮಾತ್ತಾಗಿ ಕುಂಪಣಿ ಸರ್ಕಾರದ ಕೆಲವು ಜವಾನರು ೮
ಜನರನ್ನು ಕರೆದುಕೊಂಡು ಮೈಸೂರಿಗೆ ಬಂದು ಸರಮಿನ್‌ಚಾ
ವಡಿಗೆ ಹೋಗಿ ಒಂದು ಕಾಗದವನ್ನು ಕೊಟ್ಟರು. ಅದನ್ನು
ನೋಡಿಕೊಂಡು ಸರಾಮೀನನು ಮೇಲ್ಪಟ್ಟ ಅಧಿಕಾರಿಗಳ ಅಪ್ಪ
ಣೇಪಡೆದು ಆ ಜವಾನರು ಕರೆದುಕೊಂಡು ಬಂದ ೮ ಜನರನ್ನೂ  ಶ್ರೀರಂಗಪಟ್ಟಣದ ಗಂಜಾಮದಲ್ಲಿರ ಬಂದೀಖಾನೀ ದರೋಗ
ಗೆ ಕಳುಹಿಸಿದನು. ಆ ೮ ಜನರಲ್ಲಿ ಒಬ್ಬೊಬ್ಬನನ್ನು ಒ೦ದೊಂ
ದು ಕೊರಡಿಗೆ ಕೂಡಿ ಕಂದಾಚಾರದವರನ್ನು ಪಹರೆ ಇಟ್ಟರು.
ಈ ಕೊಠಡಿಯೊಳಕ್ಕೆ ಚಾಕರರ ವೇಷದಲ್ಲಿ ಕಳ್ಳ ಬಂಟರು ಮಾತ್ರ
ಹೋಗಿ ಒಂಟಿ ಒ೦ಟಿಯಾಗಿದ್ದ ಆ ಜನರಲ್ಲಿ ಮಾತನಾಡುತಿ
ದ್ದರೇ ಹೊರತು ಮತ್ತೆ ಯಾರನ್ನೂ ಒಳಕ್ಕೆ ಬಿಡುತ್ತಿರಲಿಲ್ಲ.
ಈ ಕಳ್ಳ ಬಂದರು ಮಾತ್ರ ಆ ಜನರಿಗೆ ಸಂತೋಷಕರವಾದ ಮಾತುಗಳನ್ನೇ ಆಡುತಾ ಅವರಿಗೆ ಬೇಕಾದ ತಿಂಡಿಗಳನ್ನು ಮಾಡಿಕೊಡುತಾ ಕೇವಲ ಹಿತಚಿಂತಕರಂತೆ ನಟಿಸಿಕೊಂಡು
ಅವರಲ್ಲಿ ತನ್ನ ಸುಖದುಃಖಗಳೆಲ್ಲವನ್ನೂ ಉಂಟಾದ್ದರ ಜೊತೆ
ಗೆ ಇಲ್ಲವಾದ್ದನ್ನೂ ಸ್ವಲ್ಪ ಸೇರಿಸಿ ಹೇಳಿಕೊಳ್ಳುತ್ತಾ ಬಂದು,
ಅವರ ನಂಬಿಕೆಗೆ ಪಾತ್ರರಾಗಿ ಆ ಜನರ ಗುಟ್ಟನ್ನು ಒಂದೊಂ
ದಾಗಿ ಸೆಳೆಯುತ್ತಾ ಬಂದರು. ಒಟ್ಟಾಗಿ ಬ೦ದ ಆ ಎಂಟುಜನ
ರು ಬೇರೆ ಬೇರೇ ಒಂಟಿಯಾಗಿರುತಾ ತಮ್ಮ ಜೊತೆಗಾರರಲ್ಲಿ
---------------------------------------------------
೨೪೪         ಮಾಡಿದ್ದುಣ್ಣೋ ಮಹಾರಾಯ.
ಒಬ್ಬನ ಯೋಗಕ್ಷೇಮ ಇನ್ನೊಬ್ಬನಿಗೆ ತಿಳಿಯದಂತೆ ಇದ್ದ ಕಾ
ರಣ ಕಳ್ಳ ಬಂಟರು ಚತುರೋಪಾಯಮಾಡಿ ಕೆಲವು ಸಂಗತಿಗ
ಳನ್ನು ತಿಳಿದುಕೊಳ್ಳಲು ಯತ್ನ ಮಾಡಿದರು. ಆದರೆ ಅವರು
ಮಾಡಿದ ಯಾವ ಯತ್ನವೂ ನಾಗಲಿಲ್ಲ. ಆ ಜನರಲ್ಲಿ ಒಬ್ಬ ವಿನಾ
ಉಳಿದ ಏಳುಮುಂದಿಯ ಎಷ್ಟೊಸಾರಿ ಅನೇಕ ಬಂದೀಖಾನೆಗ
ಳಲ್ಲಿದ್ದು ಅನೇಕ ಜನ ಕಳ್ಳಬಂಟರ ಪುಸುಲಾವಣೆಗೂ ಅನೇಕ
ಜನ ಕಂದಾಚಾರದ ಕಟಗರ ಚಿಟಗಮುಳುಳ್ಳಿಗೂ ಸಿಕ್ಕಿ ಅನುಭ
ವಿಸಿ ತೀರಿದ ಕೈಗಳಾಗಿದ್ದ ಕಾರಣ, ನಾಕಾಣೆ ನಾನರಿಯೆ, ಎಂಬ ಸಸೇಮಿರವನ್ನು ನುಡಿಯುತ್ತಲೇ ಬಂದರು. ಆದರೆ ಅವರಲ್ಲಿ
ಒಬ್ಬ ಮಾತ್ರ ಕಾರಾಗ್ರಹಕ್ಕೆ ಹೊಸಬನಾಗಿದ್ದನು; ಆ ಗುಂಪಿ
ನವರೆಲ್ಲರಿಗಿಂತಲೂ ಪೂರ್ವಯಸ್ಸಿನವನಾಗಿದ್ದನು. ಇವನ ಹತ್ತ
ರ ಸೇರಿಕೊಂಡು ಇವನಿಗೆ ಆಪ್ತನಂತೆ ನಟಿಸುತ್ತಿದ್ದ ಕಳ್ಳ
ಬಂಟನು ಕೇವಲ ಚಾತುರ್ಯ ಉಳ್ಳವನಾದ ಕಾರಣ ದಿನಕ್ರಮೇಣ
ಆ ಯವ್ವನಸ್ಥನನ್ನು ಮಾರ್ಗಕ್ಕೆ ತಂದನು. ಕಳ್ಳ ಬಂಟನು ಆ
ಡುತಾ ಬಂದ ನೀತಿಗೂ ಹೇಳುತಾ ಬಂದ ಕಥೆಗಳಿಗೂ ಮರು
ಗಿ ಆ ಹುಡುಗನು ತನ್ನ ಕಥೆಯನ್ನು ಹೇಳುತ್ತಾ ಬಂದದ್ದು
ಹೇಗೆಂದರೆ:-
ಹಿಮವದ್ರೋಪಾಲನ ಬೆಟ್ಟದ ತಪ್ಪಲಲ್ಲಿರುವ ಒಂದು
ಊರಿನಲ್ಲಿ ನಾನು ಹುಟ್ಟಿದೆ. ಆ ಊರಹೆಸರನ್ನು ನಾನರಿ
ಯೆ. ನಮ್ಮ ತಂದೆ ಕೇವಲ ಬಡವ. ನಮ್ಮ ತಾಯಿಗೆ ಒಂ
ದುಕಾಲು ಕುಂಟು, ಯಾವ ಕೆಲಸವನ್ನೂ ಮಾಡಲಾರಳು. 
ಇವಳ ಹೊಟ್ಟೆಯಲ್ಲಿ ಒಂದು ಹೆಂಣು ಒಂದು ಗಂಡು ಹೀಗೆ
----------------------------------------------------

    ಮಾಡಿದ್ದುಣ್ಣೋ ಮಹರಾಯ. ೨೪೫
ಎರಡು ಮಕ್ಕಳಾದವು. ನಮ್ಮ ತಂದೆಯು ಕೂಲಿ ಕಂ
ಬಳಮಾಡಿ ಜೀವಿಸುತ್ತಿದ್ದನಂತೆ. ನಾನು ಆದಿತ್ಯವಾರ ಅಮಾ
ವಾಸ್ಯೆ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದೆನಂತೆ. ನಾನು ಹುಟ್ಟಿ
ದ ತಿಥಿ ವಾರ ನಕ್ಷತ್ರಗಳು ಕೆಟ್ಟಿದೆಂದು ನನ್ನ ತಂದೆಗೆ
ಆ ಊರ ಜೋಯಿಸರು ಹೇಳಿದರಂತೆ. ಅದರಿಂದ ಏನು ಕೇ
ಡಾಗುತ್ತೆ ಎಂದು ಭೀತಿಪಡುತಾ ಇದ ನಮ್ಮವ್ವನು ನ
ನಗೆ ವರುಷ ತುಂಬುವುದರೊಳಗಾಗಿ ಸತ್ತುಹೋದನಂತೆ. ತರು
ವಾಯ ಆರುತಿಂಗಳೊಳಗಾಗಿ ನಮ್ಮ ತಾಯಿ ಸತ್ತುಹೋದ
ಳಂತೆ. ಆಗ ನನಗೆ ವರಷೂವರೆ. ನಮ್ಮ ಅಕ್ಕನಿಗೆ ಐದು
ವರುಷ ವಯಸ್ಸಂತೆ. ಅದುವರೆಗೂ ನಮ್ಮಪ್ಪನ ಸಂಗಡ ಜಗಳವಾಡುತಿದ್ದ ನನ್ನ ಚಿಕ್ಕಪ್ಪನು ನನ್ನನ್ನೂ ನಮ್ಮಕ್ಕನ
ನ್ನೂ ತನ್ನ ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಂಡು
ನಮ್ಮಪ್ಪನ ಮನೆಯನ್ನೂ ಹೊಲವನ್ನೂ ತಾನೇ ಸೇರಿಸಿಕೊಂ
ಡನಂತೆ. ನನ್ನ ಚಿಕ್ಕಮ್ಮ ನು ದಿಕ್ಕಿಲ್ಲದ ಪರದೇಶಿಗಳಾಗಿದ್ದ
ನಮ್ಮನ್ನು ಮನಸ್ಸು ಬಂದಹಾಗೆ ಹೊಡೆಯುವುದು ಬಯ್ಯು
ವುದು ದಿವಸಕ್ಕೆ ಒಂದು ಸಾರಿಯೂ ನಮಗೆ ಹಿಟ್ಟನ್ನು ಹಾ ಕಬಾರದು, ಗಂಡನಲ್ಲಿ ಇಲ್ಲದ ಚಾಡಿಯನ್ನು ಹೇಳಿ ನಮ್ಮ 
ನ್ನು ಹೊಡಿಸುವುದು, ನನ್ನ ಕೈಲಾಗದ ಕೆಲಸವನ್ನು ನಮ್ಮಿಂ
ದ ಮಾಡಿಸುವುದು, ಹೀಗೆಲ್ಲಾ ಮಾಡುತಿದ್ದಳು. ನಾವು ಇದ್ದ
ದು ಶುದ್ಧವಾಗಿ ಮಲೆಸೀಮೆ. ಅಲ್ಲಿ ಚಳಿ ಹೆಚ್ಚಾಗಿತ್ತು.
ಹೊದ್ದು ಕೊಳ್ಳುವುದಕ್ಕೆ ಅಂಗೈ ಅಗಲ ಬಟ್ಟೆಗೂ ಗತಿ ಇರಲಿ
ಲ್ಲ. ಬರೀ ಮೈಯಲ್ಲಿ ನಾವು ಓಡಿಯಾಡುತಿದ್ದೆವು. ಒಂದು
-------------------------------------------------

೨೪೬         ಮಾಡಿದ್ದುಣ್ಣೋ ಮಹರಾಯ.
ಹರಕು ಕಂಬಳಿ ಇತ್ತು. ಅದು ನನ್ನ ಅಪ್ಪನಂತೆ. ಅ
ದನ್ನು ನಾನೂ ನನ್ನ ಕೈನೂ ಹೊದ್ದು ಕೊಂಡು ಸುರುಟಿಕೊಳ್ಳು
ತಿದ್ದೆವು. ನನ್ನ ಮೂರನೇ ವರುಷ ವಯಸ್ಸಿನಿಂದ ನಡೆದ ಸಂ
ಗತಿಗಳೆಲ್ಲಾ ನನಗೆ ಚೆನ್ನಾಗಿ ಜ್ಞಾಪಕವಿದೆ. ಹಗಲುಹೊತ್ತು
ಅಲ್ಲಿ ಇಲ್ಲಿ ಸಿಕ್ಕಿದ ಒಣಹುಲನು ಆ ಕಂಬಳಿಯೊಳಗೆ ಹಾಕಿ
ಬೇರೇ ಸುತ್ತಿರಿಸುತಿದ್ದೆವು. ಈ ಹುಲ್ಲನ್ನು ರಾತ್ರೆ ಹಾಸಿಕೊ೦
ಡು ದನದ ರಂಜಳಿಗೆಯೊಳಗೆ ಬಿದ್ದುಕೊಳ್ಳುತಿದ್ದೆವು. ಕೊ
ಟ್ಟಿಗೆ ಸುತ್ತಲೂ ಮುಳ್ಳುಬೇಲಿ ಹಾಕಿರುತಿತ್ತು. ಅಲ್ಲಿಗೆ
ಕದವಿಲ್ಲ ಬಾಗಿಲಿಲ್ಲ. ನನಗೆ ಐದು ವರುಷ ನಮ್ಮಕ್ಕನಿಗೆ
ಒಂಭತ್ತು ವರುಷ ತುಂಬಿತು. ನಾವು ರಾಗಿ ಬೀಸುತಿದೆವು.
ಸಂಣ ಮೊಗೆಯಲ್ಲಿ ಒ೦ದು ಕೊಂಬಿನ ಕೂಗು ದೂರದಿಂದ ನಾ
ನೂ ನಮ್ಮಕ್ಕನೂ ನೀರನ್ನು ತಂದು ದನಗಳು ಕುಡಿಯುವುದ
ಕ್ಕೂ ಮನೇ ಬಳಕೆಗೂ ಬಾನಿಗೆ ಹಾಕುತಿದೆ ವು. ದೊಡ್ಡ
ಮಡಕೆಯಲ್ಲಿ ನೀರ ಹೊತ್ತುಕೊಂಡು ಬನ್ನಿ ಎಂದು ನಮ್ಮ
ಚಿಕ್ಕಮ್ಮ ಹೇಳಿದಳು. ಮೊಗೆಯಲ್ಲಿ ಅಲ್ಲಿನ ಆಳವಾದ ಕೊಳ
ದಿಂದ ನೀರನ್ನು ತಂದು ಆ ದೊಡ್ಡ ಮಡಕೆಯನ್ನು ತುಂಬಿ
ದೆವು. ಆ ಮಡಕೆಯನ್ನು ಎತ್ತುವುದು ಹೇಗೆ ? ನಮ್ಮಿಬ್ಬರ ಕೈಯಲ್ಲಿಯ ಆಗದು. ಏನಮಾಡಬೇಕು ? ಅಲ್ಲಿ ಬಿದ್ದಿದ್ದ
ಒಂದು ಕಟ್ಟಿಗೆಯನ್ನೂ ಬೇಲಿಗೆ ಹಚ್ಚಿದ ಹಂಬನ್ನೂ ತೆಗೆ
ದುಕೊಂಡು ಹರವಿಗೆ ಉಗ್ಗದಹಾಗೆ ಕಟ್ಟಿ ಕಟ್ಟಿಗೆಯ ಮ
ಧ್ಯಕ್ಕೆ ಅದನ್ನು ನಮ್ಮಕ್ಕ ಬಿಗಿದಳು. ಆ ಕಟ್ಟಿಗೆಯನ್ನು
ನಾನೊಂದು ಕಡೆ ಅವಳೊಂದು ಕಡೆ ಎತ್ತಿ ತೋಳಮೇಲೆ ಇರಿ
----------------------------------------------

        ಮಾಡಿದ್ದುಣ್ಣೋ ಮಹರಾಯ.  ೨೪೬

ಸಿಕೊಂಡು ನಾಲ್ಕು ಹೆಜ್ಜೆ ಹೋಗುವುದು ಒಂದುಕಡೆ ಇರಿಸು
ವುದು, ಹೀಗೆಯೇ ಮಾಡಿ ನಮ್ಮ ಹಟ್ಟೀ ತನಕ ಕೊಂಡು
ಹೋದೆವು. ನಮ್ಮಿಬ್ಬರಿಗೂ ಬಹು ಕಷ್ಟವಾಯಿತು, ಏರು
ಬ್ಬಸಬಂತು. ಕೊನೆಗೂ ತಂತುನಾ ಎಂಬ ಸಂತೋಷದಿಂದ,
ಒಳಕ್ಕೆ ಜಾಗ್ರತೆಯಾಗಿ ತೆಗೆದುಕೊಂಡು ಹೋಗಿ ಇರಿಸಿದರೆ
ನಮ್ಮ ಚಿಕ್ಕವನಿಗೆ ಸಂತೋಷವಾಗಬಹುದೆಂದು ಯೋಚಿಸಿ ಆ
ತುರಪಟ್ಟೆವು. ನಮ್ಮ ಹಾಳ ಗ್ರಹಚಾರವನ್ನು ಏನ ಹೇಳ
ಲಿ ? ಹೊಸಲಿನಿಂದ ಮೇಲಕ್ಕೆ ಎತ್ತಲು ನನ್ನ ಕೈಲಾಗ
ಲಿಲ್ಲ. ಹೊಸಲು ನುಡಕೆಗೆ ತಗಲಿ ಅದು ಒಡೆದು ಹೋಯಿತು.
ಮನೆ ಎಲ್ಲಾ ನೀರಾಯುತು. ನನ್ನ ಚಿಕ್ಕವ್ವ ಬಂದುನೋ
ಡಿ ನಮ್ಮಿಬ್ಬರನ್ನೂ ಕೈಯಿಂದ ಚೆನ್ನಾಗಿ ಹೊಡೆದಳು.
ನನ್ನ ಮೇಲೆ ಎಳು ಬೀಳುತಿರುವಾಗ ನನ್ನ ಹೆಚ್ಚಾಗಿ ಅ
ಳುತಾ - ಚಿಕ್ಕವ್ವ, ತಮ್ಮ ನನ್ನು ಹೊಡೆಯಬೇಡ, ಬೇಕಾದರೆ ನನ್ನನ್ನು ಹೊಡೆ ಎಂದು ಕೈಯನ್ನು ಅಡ್ಡಕಟ್ಟಿಕೊಂಡಳು.
ನಮ್ಮ ಚಿಕ್ಕಮ್ಮನಿಗೆ ಇನ್ನೂ ಕೋಪಬಂತು. ತಮ್ಮನಿಗೆ ವ ಹಿಸಿಕೊಂಡು ಬರುತೀಯ ಲೌಡಿ, ಎಂದು ಚಿಕ್ಕವೂ ನನ್ನ
ನ್ನೂ ನಮ್ಮಕ್ಕನನ್ನೂ ಇನ್ನೂ ಹೆಚ್ಚಾಗಿ ಹೊಡೆದಳು. ಸ್ವ
ಲ್ಪ ಹೊತ್ತಿಗೆ ನನ್ನ ಚಿಕ್ಕಪ್ಪ ಬಂದ. ಅವನ ಸಂಗಡ ನಮ್ಮ
ಚಿಕ್ಕವ್ವನು ಇಲ್ಲದ ಚಾಡಿಯನ್ನೆಲ್ಲಾ ಸುಳ್ಳು ಸುಳ್ಳಾ
ಗಿ ಹೇಳಿದಳು. ಅವನಿಗೂ ನನ್ನ ಮೇಲೆ ಕೋಪಬಂತು.
ಅಲ್ಲಿ ಬಿದ್ದಿದ ಹಂಬನ್ನು ತೆಗೆದುಕೊಂಡು ಅವನೂ ಚೆನ್ನಾ
ಗಿ ಹೊಡೆದನು. ನಮ್ಮಿಬ್ಬರಿಗೂ ಮೈ ಎಲ್ಲಾ ಬಾಸುಂಡೆ
--------------------------------------------

೨೪೮      ಮಾಡಿದ್ದುಣ್ಣೊ ಮಹಾರಾಯ. 

ಯಾಯಿತು. ಅದರಿಂದ ರಕ್ತ ಅಲ್ಲಲ್ಲಿ ಉಮ್ಮು ತಾ ಇತ್ತು.
ಅವತ್ತೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ. ರಾತ್ರೆಯಾಯಿತು. ಬಾ ಗಿಲಹಾಕಿಕೊಂಡು ನಮ್ಮ ಚಿಕ್ಕವ್ವನೂ ಚಿಕ್ಕಪ್ಪನೂ ಮಲಗಿ
ಕೊಂಡರು. ನನ್ನ ಕಂಬಳಿ ಒಳಗೆ ಸಿಕ್ಕಿ ಹೋಯಿತು. ಬ
ರೀಮೈಯಲ್ಲಿ ಎಂದಿನ ರಂಜಳಿಗೆಯಲ್ಲಿ ಕೂತುಕೊಂಡೆವು. ಏ
ಟುಬಿದ್ದದು ಬೇರೆ, ಚಳಿ ಬೇರೆ, ಹೊಟ್ಟೆಗೆ ಹಿಟ್ಟಿಲ್ಲದ್ದು ಬೇರೆ
ಹೀಗೆ ಇತ್ತು. ನಿದ್ರೆ ಬರಲೇ ಇಲ್ಲ. ಅಲ್ಲೆಲ್ಲಾ ಹುಲಿ ಕಿ
ರಬ ಇವುಗಳ ಕಾಟ ಬಲ, ಸರಿಹೊತ್ತು ಮೀರಿತ್ತು. ಒ೦
ದುಹುಲಿ ಕೂಗುತಾ ನಮ್ಮ ಗುಡಲಿನ ಹತ್ಯಹತ್ತರಕ್ಕೆ ಬಂ
ತು, ನಮಗೆ ಬಹು ಹೆದರಿಕೆಯಾಯಿತು. ನಾವಿಬ್ಬರೂ ಗಡ
ಗಡನೆ ನಡುಗುತಾ ಕೂತಿದ್ದ ಕಡೆಯಲ್ಲಿಯ ಕಾಲಮಡಿ ಮಾ
ಡಿಕೊಂಡೆವು. ಹುಲಿ ಹಾಗೆಯೇ ಹೊರಟುಹೋಯಿತು. ಕೊ
ಳಕ್ಕೆ ಹೋಗಿಬಿದ್ದು ಸಾಯೋಣ ಬರುತೀಯ ? ಎಂದು ನ
ಮ್ಮಕ್ಕ ಕೇಳಿದಳು. ಸಾಯುವುದು ಎಂದರೆ ನನಗೆ ತಿಳಿಯ
ದು. ಹಾಗೆ ಸತ್ತರೆ ನಮ್ಮ ಚಿಕ್ಕ ಹೊಡೆಯುತಾಳೊ
ಏನೋ, ನಾನು ಏಟ ತಡೆಯಲಾರೆ ಕಣಕ್ಕಯ್ಯ ಎಂದೆ. ನಾ
ನು ಆಡಿದ ಮಾತಿಗೆ ನನ್ನ ಅಕ್ಕನಿಗೆ ಬಹಳ ದುಃಖಬಂತು.
ಅಯ್ಯೋ ನನ್ನ ಕಂದ ಎಂದು ಅವಳು ನನ್ನ ಕತ್ತನ್ನು ಕ
ಟ್ಟಿಕೊಂಡು ಅತ್ತಳು. ಅಷ್ಟರಲ್ಲಿ ಬೆಳಗಾಯಿತು. ಮೇಲಕ್ಕೆ
ಏಳುವುದಕ್ಕೆ ನನ್ನ ಕೈಲಾಗದು. ಮೆಲ್ಲಗೆ ಎದ್ದು ಈಚೆಗೆ
ಬಂದು ನಿಂತುಕೊಂಡೆವು. ಬಾಗಿಲ ತೆಗೆದುಕೊಂಡು ನಮ್ಮ
ಚಿಕ್ಕಪ್ಪ ಈಚೆಗೆ ಬಂದು ನನ್ನನ್ನು ನೋಡಿದ. ರಾತ್ರೆ
-------------------------------------------------

        ಮಾಡಿದ್ದುಣ್ಣೋ ಮಹಾರಾಯ    ೨೪೯

ಯಾಕೆ ಹಿಟ್ಟಿ ತಿನ್ನಲಿಲ್ಲ ಎಂದು ಕೇಳಿದ. ನಾನು ಗಡಗ
ಡನೆ ನಡುಗುತಾ ಕೆಳಕ್ಕೆ ಬಿದ್ದೆ. ಆಗ ಅವನು ಒಣಕಲ
ರೊಟ್ಟಿಯನ್ನು ತಂದು ನಮ್ಮಿಬ್ಬರಿಗೂ ಕೊಟ್ಟನು. ಅದನ್ನು
ತಿಂದು ನೀರ ಕುಡಿದಮೇಲೆ ಸ್ವಲ್ಪ ಉಸಿರು ಬಂತು. ಹೀ
ಗೆಯೇ ಕಷ್ಟಪಟ್ಟು ಕಾಲಾ ಕಳೆಯುತಾ ಬಂದೆವು. ನಮ್ಮ
ಕ್ಕ ಅಡಿಗೇ ಮಾಡುವ ಹಾಗಾದಳು. ನನ್ನ ಚಿಕ್ಕವ್ವ ಅ
ಡಿಗೆಯನ್ನು ಅವಳ ಕೈಲಿ ಮಾಡಿಸುತ್ತಾ ಬಂದಳು. ಆಗಿನಿಂದ
ನಮ್ಮಿಬ್ಬರಿಗೂ ಹೊಟ್ಟಿತುಂಬ ಹಿಟ್ಟು ಸಿಕ್ಕುವಹಾಗಾಯಿತು.

ನಾವು ಜಾತಿಯಲ್ಲಿ ಮರಾಠೆಯವರಂತೆ, ನಮ್ಮಲ್ಲಿ ನೆರೆ
ಯುವುದಕ್ಕೆ ಮುಂಚೆಯೇ ಮದುವೆಯಾಗಬೇಕಂತೆ, ನಮ್ಮ
ಕ್ಕ ನೋಡುವುದಕ್ಕೆ ಬಹಳ ಲಕ್ಷಣವಾಗಿದ್ದಳು. ಅವಳಿಗೆ
೧೨-೧೩ ವರುಷವಾಗುತಾ ಬಂತು. ಅವಳನ್ನು ಮದುವೇ
ಮಾಡಿಕೊಡಿ ಎಂದು ಅನೇಕರು ಕೇಳುವುದಕ್ಕೆ ಬಂದರು.
ಆ ಹೆಣ್ಣಿಗೆ ೫೦ ವರಹ ಕೊಟ್ಟವರಿಗೆ ಮದುವೆ ಮಾಡಿಕೊ
ಡುವುದಾಗಿ ನನ್ನ ಚಿಕ್ಕಪ್ಪ ಹಠಮಾಡಿಕೊಂಡಿದ್ದನು. ಮ
ದುವೆಗೆ ಮುಂಚೆ ತಾನು ದೊಡ್ಡವಳಾದರೆ ಜಾತಿಯಿಂದ ಹೊ
ರಗೆ ಹಾಕುತ್ತಾರೆ, ಹೇಗಾದರೂ ಆಗಲಿ ಯಾರಾದರೂ ಮದು
ವೇಮಾಡಿಕೊಂಡರೆ ಸಾಕು ಎಂದು ನನ್ನ ಅಕ್ಕ ದೇವರಿಗೆ
ಹರಕೆ ಹೊರುತಿದ್ದಳು. ಕಣವೇ ಕೆಳಗಿನಿಂದ ಹೆಂಣ ಹುಡುಕಿ
ಕೊಂಡು ಒಬ್ಬ ಮನುಷ್ಯ ಬಂದನು. ಯಥಾ ಪ್ರಕಾರವಾಗಿ ೫೦ ವರಹಕ್ಕೆ ಒಂದು ಕಾಸು ಕಡಮೆಯಾದರೂ ಹೆಂಣ ಕೊ ಕೊಡುವುದಿಲ್ಲವೆಂದು ನನ್ನ ಚಿಕ್ಕಪ್ಪ ಹೇಳಿದನು. ಕೊನೆಗೆ
--------------------------------------------------

9೫0     ಮಾಡಿದ್ದುಣ್ಣೋ ಮಹಾರಾಯ.

ಐವತ್ತು ವರಹವನ್ನು ಎಣಿಸಿಕೊಟ್ಟ ಹುಡುಗಿಯನ್ನು ನಮ್ಮ
ಸಂಗಡ ಈಗಲೇ ಕಳುಹಿಸಬೇಕೆಂದು ಆತ ಹೇಳಿದನು,
ಅದಕ್ಕೆ ನಮ್ಮ ಚಿಕ್ಕವ್ವನು ನಮ್ಮ ಮನೆಯಲ್ಲಿ ಹಿಟ್ಟ
ಹಾಕುವುದೇ ಮಿಕ್ಕಿತು, ಈಗಲೇ ಕರೆದುಕೊಂಡು ಹೋಗಯ್ಯ
ಎಂದಳು. ನಮ್ಮಕ್ಕನು ಹೋಗುವುದಕ್ಕೆ ಒಪ್ಪಿದಳು. ಆಗ
ನಮ್ಮ ಚಿಕ್ಕನು-ನಮ್ಮ ಮನೆ ಸೀರೆಯನ್ನು ಬಿಚ್ಚಿ ಹಾ
ಕಿ ನಿನ್ನ ಗಂಡನನುನೆ ಸೀರೆಯನ್ನು ಉಟ್ಟುಕೊಂಡು ಹೋ
ಗು ಎಂದಳು. ಕನ್ಯಾರ್ಥಿಯು ಬಹುಚೆನ್ನಾಗಿದೆ, ಐವತ್ತು ವರಹ ಕೊಟ್ಟಿದ್ದೇನೆ, ನಿಮ್ಮ ಮನೆಯಿಂದ ಒಂದು ಹಣದ
ತುಂಡನ್ನಾದರೂ ಉಡಿಸಿ ಕಳುಹಿಸುವುದಿಲ್ಲವೆಂದು ಹೇಳಿದಮೇಲೆ ನಿಮ್ಮ ಹೆಂಣೇ ಬೇಡವೆಂದು ಸುಮ್ಮನೇ ಹೊರಟನು. ಆಗ
ನಮ್ಮಕ್ಕನು ಸುಮ್ಮನಿರದೆ ಆತನನ್ನು ಕುರಿತು ಸ್ವಾಮಿ ನನ
ಗೋಸ್ಕರ ೫೦ ವರಹ ಕೊಟ್ಟವರು ಇನ್ನೊಂದು ಹರಕು
ಪಂಚೆಯನ್ನು ಕೊಡಲಾರಿರ ? ದಯಮಾಡಿ ಒಂದು ಬಟ್ಟೆಯ
ನ್ನು ನನಗೆ ಕೊಟ್ಟು ನನ್ನ ಕಷ್ಟವನ್ನು ಬಿಡಿಸಿ ಎಂದು
ಅಳುವುದಕ್ಕೆ ಮೊದಲುಮಾಡಿದಳು. ಆ ಪುರುಷನು ಬಹಳ
ಕನಿಕರದಿಂದ ತನ್ನ ಒಂದು ಪಂಚೆಯನ್ನು ನಮ್ಮಕ್ಕನಕೈಗೆ
ಕೊಟ್ಟನು. ಅದನ್ನು ಉಟ್ಟುಕೊಂಡು ಮೊದಲು ಉಟ್ಟಿದ್ದ
ಹರಕುತುಂಡನ್ನು ಬಿಚ್ಚಿ ಇರಿಸಿ, ನನ್ನನ್ನು ತಬ್ಬಿಕೊಂಡು
ಅತ್ತಳು. ಅಕ್ಕ ನನ್ನನ್ನು ಬಿಟ್ಟು ಹೋಗಬೇಡ, ನಾನು
ಏಟ ತಡೆಯಲಾರೆ ಎಂದು ಗಟ್ಟಿಯಾಗಿ ನಾನು ಅತ್ತೆ, ನಮ್ಮಿ
ಬ್ಬರ ಮುಖವನ್ನು ನೋಡಿ ನಮ್ಮ ಭಾವನ ಮನಸ್ಸು ಕರ
---------------------------------------------------
        ಮಾಡಿದ್ದುಣ್ಣೊ ಮಹಾರಾಯ. ೨೫೧

ಗಿತು. ಕಳುಹಿಸಿಕೊಟ್ಟರೆ ನನ್ನನ್ನೂ ಸಂಗಡ ಕರೆದುಕೊಂ
ಡು ಹೋಗಿ ಕಾನಾಡುವುದಾಗಿ ಹೇಳಿದನು. ನನ್ನ ಚಿಕ್ಕ
ಪ್ಪ ಕಳುಹಿಸುವುದಿಲ್ಲವೆಂದು ಹೇಳಿಬಿಟ್ಟನು. ಆಗ ನಮ್ಮಕ್ಕ
ನು ನನ್ನ ತಲೆ 'ತಡವರಿಸಿ ಎಲ್ಲಿಯಾದರೂ ತಂಣಗೆ ಬದಕು
ಕಂದ ಎಂದು ಹೇಳಿ ಅಳುತಾ ಹೊರಟುಹೋದಳು.

ನಮ್ಮಕ್ಕನ ಹಂಬಲು ನನಗೆ ಮರೆಯಲಿಲ್ಲ. ಅವಳನ್ನು ನೆನಿಸಿಕೊಂಡು ಆಗಾಗ್ಗೆ ಅಳುತ್ತಲೇ ಇದ್ದೆ. ನಮ್ಮಕ್ಕನನ್ನು
ಮಾರಿ ಬಂದ ೫೦ ವರಹವನ್ನು ನಮ್ಮ ಚಿಕ್ಕಪ್ಪನು ಒಂದು
ಗಳಗೆ ಯೊಳಗೆ ಇರಿಸಿದನು. ನಮ್ಮ ಚಿಕ್ಕವ್ವನು ಅದ
ನ್ನು ಯಾರೂ ಕಾಣದಹಾಗೆ ತೆಗೆದುಕೊಂಡು ಯಾವ
ನೋ ಒಬ್ಬನಸಂಗಡ ಎಲ್ಲಿಯೋ ಓಡಿಹೋದಳು. ಹಿಟ್ಟ
ಬೇಸುವುದಕ್ಕೂ ಯಾರೂ ಇಲ್ಲದಹಾಗಾಯಿತು. ಕಡೆಗೆ
ನಮ್ಮ ಚಿಕ್ಕಪ್ಪನು ಆ ಊರನ್ನು ಬಿಟ್ಟು ನನ್ನನ್ನೂ ಕರೆ
ದುಕೊಂಡು ಊರೂರು ಗಡಿಯ ಹೊರತರನು, ದಾರಿಯಲ್ಲಿ ಕಂ
ಡವರಸಂಗಡಿಲಾ- ಈ ಹುಡುಗನಿಗೆ ಯಾರಾದರೂ ೨೦ ವರ
ಹ ಕೊಟ್ಟರೆ ಸಾಕಕೊಟ್ಟುಬಿಡುತ್ತೇನೆ ಎಂದು ಹೇಳಿಕೊಳ್ಳು
ತಲೇ ಬಂದನು. ಈ ಸಂಗತಿಯನ್ನು ಹೇಳುವಾಗಲೆಲ್ಲಾ
ನಾನು ಹುಟ್ಟಿದ ತಿಥಿ ವಾರ ನಕ್ಷತ್ರಗಳನ್ನು ಹೇಳುತಾ-
ಈ ಹುಡುಗನನ್ನು ತೆಗೆದುಕೊಳ್ಳತಕ್ಕವರಿಗೆ ಬಹಳ ಹಣ
ದೊರೆಯುವುದು, ಇವನು ಬಹಳ ಪುಣ್ಯವಂತನಾಗುತಾನೆಂದು
ಜೋಯಿಸರು ಹೇಳಿದಾರೆಂಬದಾಗಿ ಎಲ್ಲರಲ್ಲಿಯೂ ಹೇಳುತಾ
ಬಂದನು. ಕಡೆಗೆ ಅರಿಕುಲಾರದಕಡೆ ಇರುವ ಸಂಜನಾಡಿಗೆ
--------------------------------------------------

೨೫೨         ಮಾಡಿದ್ದುಣ್ಣೋ ಮಹಾರಾಯ

ಬಂದೆವು. ಸಾಯಂಕಾ€ವಾಗಿತ್ತು. ನಾವು ತಂದಿದ್ದ ರೊಟ್ಟಿ
ಎಲ್ಲಾ ಮುಗಿದುಹೋಗಿ ನನಗೆ ಒಂದುದಿವಸದ ಉಪವಾಸ
ವೂ ನಮ್ಮ ಚಿಕ್ಕಪ್ಪನಿಗೆ ಎರಡುದಿವಸದ ಉಪವಾಸವೂ ಆಗಿ
ತ್ತು, ನಮ್ಮ ಚಿಕ್ಕಪ್ಪನ ದೊಡ್ಡ ಗಂಟನ್ನು ಹೊತ್ತು
ಕೊಂಡು ಅವನಸಂಗಡ ಓಡಿಓಡಿ ನನಗೆ ಸಾಕಾಗಿತ್ತು. ಆ
ವೂರ ಅಮ್ಮನಗುಡಿಯ ಕೈಸಾಲೆಯಲ್ಲಿ ಹೋಗಿ ಮಲಗಿಕೊಂ
ಡೆವು. ಅಲ್ಲಿ ಯಾರುಯಾರೋ ಜನರು ಬಂದು ಕೂತುಕೊ೦
ಡಿದ್ದರು. ಅವರು ನನ್ನ ಕ್ಷೇಮುಲಾಭವನ್ನು ವಿಚಾರಿಸಿದ
ರು, ನಮ್ಮ ಕಥೆಯನ್ನು ಚಿಕ್ಕಪ್ಪ ಹೇಳಿದನು. ಅವರಲ್ಲಿ
೫೦ ವರುಷಕ್ಕೆ ಮೇಲ್ಪಟ್ಟ ಒಬ್ಬ ಮನುಷ್ಯನು ಪಶ್ಚಾತ್ತಾ
ಪದಿಂದ ನಮ್ಮಿಬ್ಬರನ್ನೂ ಕರೆದುಕೊಂಡುಹೋಗಿ ತನ್ನ ಮನೆ
ಯಲ್ಲಿ ಹಿಟ್ಟನ್ನೂ ಅನ್ನವನ್ನೂ ಹಾಕಿ ಉಪಚರಿಸಿದನು.
ನನಗೆ ಹಸಿವು ಬಹಳವಾಗಿತ್ತು. ಆ ಮನುಷ್ಯ ಯಾವ
ಜಾತಿಯವನೆಂದೂ ಕೂಡ ಕೇಳದೆ ಊಟಾ ಮಾಡಿದೆವು, ಆ ಮ
ನುಷ್ಯನ ಮನೆ ಬಾಗಿಲನ್ನೂ ಅವನು ವಾಸಮಾಡತಕ್ಕ ರೀತಿ
ಯನ್ನೂ ನೋಡಿ ಯಾರೋ ಉತ್ತಮಜಾತಿಯವನೇ ಆಗಿರ
ಬಹುದೆಂದು ತಿಳಿದುಕೊಂಡೆವು. ಹೇಗಾದರೂ ಆಗಲಿ, ಹೊಟ್ಟೆ
ತುಂಬಿತು. ಅವರಮನೇ ಜಗಲೀಮೆಲೆ ನಾನು ಮಲಗಿಕೊಂ
ಡೆ. ಆತನೂ ನಮ್ಮ ಚಿಕ್ಕಪ್ಪನೂ ಏನೋ ಮಾತನಾಡುತಾ
ನನ್ನ ಪ್ರಸ್ತಾಪವನ್ನು ಎತ್ತಿದರು. ಅಷ್ಟರಲ್ಲಿ ನನಗೆ ನಿದ್ದೆ ಬಂತು, ಆಮೇಲೆ ಏನುಮಾತು ಜರಿಗಿತೋ ಕಾಣೆ. ಬೆಳ
ಗಾಯಿತು ಬೀದೀಬಾಗಿಲ ಜಗಲೀಮೇಲೆ ೮-೧೦ ಜನರು
------------------------------------------------

        ಮಾಡಿದ್ದುಣ್ಣೋ ಮಹಾರಾಯ   ೨೫೩

ಕೂತು ಮಾತನಾಡಲು ಆರಂಭಿಸಿದರು. ಆ ಮಾತು ನನಗೆ ಚೆನ್ನಾಗಿ ಗೊತ್ತಾಗಲಿಲ್ಲ. ಅವರಲ್ಲಿ ಒಬ್ಬನು ಏನು ಮೀನವೇ
ಸ ಯೋಚಿಸುತಿತ, ಮಾದ, ನಿನಗೆ ಮಕ್ಕಳಿಲ್ಲ, ಹುಡುಗ ಚೆನ್ನಾಗಿದಾನೆ. ಅವನು ಹುಟ್ಟಿದ ತಿಥಿ ವಾರ ನಕ್ಷತ್ರವನ್ನು
ನೋಡಿದರೆ ಇವನಿಂದ ಅನೇಕ ಕೆಲಸಗಳು ಆಗಬೇಕಾಗುತ್ತೆ.
ಹಣದಮುಖವನ್ನು ನೋಡಬೇಡ, ನಾವಾಗಿ ಹುಡುಕಿಕೊಂಡು ಹೋಗಬೇಕಾದ್ದು ತಾನಾಗಿ ದೊರೆತಿದೆ. ಹಣಕ್ಕೆ ಪಾಲುಮಾ
ರಬೇಡ. ಒ೦ದುದಿವಸದಲ್ಲಿ ಇದಕ್ಕೆ ನೂರರಷ್ಟು ಸಂಪಾದಿಸಬಲ್ಲ
ಎಂದು ಹೇಳಿದನು. ಅಷ್ಟು ಹೊತ್ತಿಗೆ ಆ ವೂರಗಂಡಸರೆಲ್ಲರೂ ಸೇರಿಬಿಟ್ಟರು. ಅವರುಗಳೂ ಕೂಡ- ಮಾದೈಯ್ಯ ಬದಲುಮಾ ತನಾಡಬೇಡ, ಸುಮ್ಮನೇ ಹಣ ಕೊಟ್ಟು ಬಿಡು ಎಂದರು.
ಆಗ ಮಾದಯ್ಯನು ಒಂದೇ ಮನಸ್ಸಿನಲ್ಲಿ ಇಪ್ಪತ್ತುವರಹವ
ನ್ನು ತಂದು ನನ್ನ ಚಿಕ್ಕಪ್ಪನಿಗೆ ಕೊಟ್ಟು ತಾನಾಗಿ ತನ್ನ ಸಂತೋಷದಿಂದ ಒಂದು ಪಂಚೆಯನ್ನೂ ಒಂದು ಕರಿ ಕಂಬಳಿ ಯನ್ನೂ ಮನೆಯೊಳಗಿನಿಂದ ತಂದು ಎಲೆಅಡಕೆ ಇರಿಸಿಕೊಟ್ಟ
ನು. ನನ್ನ ಚಿಕ್ಕಪ್ಪ ಅದನ್ನು ತೆಗೆದುಕೊಂಡು ಊಟಾಮಾ
ಡಿ--ನೀನು ಇವರಮನೆಯಲ್ಲಿರು, ನಾನು ಬರುತ್ತೆನೆಂದು ನನ
ಗೆ ಹೇಳಿ ಅದೇ ಮುಖಕ್ಕೆ ಹೋದರು. ನನ್ನನ್ನು ಆ ವೂರ
ವರೆಲ್ಲರೂ ಬಂದು ನೋಡಿಕೊಂಡು ಹೋದರು. ಮಾದೈಯ್ಯನಿ
ಗೆ ಇನ್ನು ಯಾವ ಹೆಂಣಾಗಲಿ ಗಂಡಾಗಲಿ ಮಕ್ಕಳಿರಲಿಲ್ಲ.
ಅವನ ಮನೆಯಲ್ಲಿ ಗಂಡಹೆಂಡಿರು ಇಬ್ಬರೇ ಇದ್ದರು. ನನ್ನ
ನ್ನು ಅವರು ಬಹು ಪ್ರೀತಿಯಿಂದ ಕಂಡರು. ನಾನು ಅವ
-------------------------------------------------

೨೫೪         ಮಾಡಿದ್ದುಣ್ಣೋ ಮಹಾರಾಯ,

ರಿಗೆ ಮಗನಾದೆ. ಕುಲದವರಿಗೆ ಊಟಮೊದಲಾದ್ದೆಲ್ಲಾ ಆಯಿ
ತು, ನನಗೆ ಅಮಾಸೆ ಎಂದು ಹೆಸರಿಟ್ಟರು.

ತರುವಾಯ ಆ ವೂರಜನರೆಲ್ಲಾ ನನ್ನನ್ನು ಪ್ರೀತಿಯಾಗಿ ಕಾಣುತಿದ್ದರು. ಏಟೆಲ್ಲಾ ನನ್ನ ಚಿಕ್ಕಪ್ಪನ ಹಿಂದೆಯೇ ಹೋ 
ಯಿತು. ಅಮ್ಮನಗುಡಿಯ ಹಿಂದಿನ ಗರಡಿಮನೆಗೆ ನನ್ನನ್ನು ಕರೆದುಕೊಂಡುಹೋಗಿ ಕೆಲವುದಿವಸ ಸಾದಕಮಾಡಿಸಿದರು.
ತರುವಾಯ ಬೈಲುಸಾದನೆ, ದೊಂಡೇವರಸೆ, ಕತ್ತಿವರಸೆ, ಪ ಲಾವರಸೆ, ಬಾಕಿನವರಸೆ, ಕುಸ್ತಿ, ಓಡುವುದು, ಇವುಗಳೆಲ್ಲ
ವನ್ನೂ ಹೇಳಿಕೊಟ್ಟರು. ಎಲ್ಲವನ್ನೂ ನಾನು ಜಾಗ್ರತೆಯಾಗಿ ಕಲಿತುಕೊಂಡೆ. ಅದರಲ್ಲಿ ಕೆಲವು ಹೊಸವರಸೆಗಳನ್ನು ಮಾಡಿ
ತೋರಿಸಿದೆ. ಆ ಊರವರೆಲ್ಲರೂ ನನ್ನನ್ನು ನೋಡಿ ಆಶ್ಚ 
ರ್ಯ ಪಟ್ಟರು, ಎಲ್ಲರೂ ನನ್ನನ್ನು ಉಪಚರಿಸಿ ತಿಂಡೀ ಕೊಡಿ ಸುತ್ತಿದರು. ನಮ್ಮ ಮನೆಯಲ್ಲಿಯೂ ಸುಖವಾಗಿ ಊಟ
ವಾಗುತಿತ್ತು. ನಾನು ಉದ್ದವಾಗಿ ಬೆಳೆದೆ. ದಿನದಿನಕ್ಕೆ ನನ
ಗೆ ಉಮ್ಮಸ್ಸು ಬಹು ಬಲವಾಯಿತು. ಯಾವ ಕೆಲಸವೂ ಕಷ್ಟ
ವಾಗಿ ಕಾಣುತಿರಲಿಲ್ಲ. ನನಗೆ ಭಯವೇ ಇರಲಿಲ್ಲ. ಯಾವು
ದಕ್ಕೂ ಮುಂದಾಳಾಗಿ ನುಗ್ಗುತಿದ್ದೆ, ಇತರರು ಕೈಲಾಗದು
ಎಂದ ಕೆಲಸವನ್ನು ನಾನು ಮಾಡುತಿದ್ದೆ . ನನಗೆ ಸುಮಾರು
೧೮ ವರುಷವಾಯಿತು. ಒಂದು ಒಳ್ಳೇದಿನವನ್ನು ನೋಡಿ,
ನನಗೆ ಬಿಟ್ಟು ಇಲ್ಲದಹಾಗೆ ತಲೆಯನ್ನು ಕ್ಷೌರಮಾಡಿಸಿದರು. ಹೊಸಬಟ್ಟೆಯನ್ನು ಹೊದಿಸಿದರು, ಹುವ್ವಿನಹಾರವನ್ನು ಕತ್ತಿ
ಗೆಹಾಕಿ ಊರೆಲ್ಲರೂ ಸೇರಿ ಅಮ್ಮ ನಗುಡಿಗೆ ಕರೆದುಕೊಂಡು
---------------------------------------------

        ಮಾಡಿದ್ದುಣ್ಣೋ ಮಹಾರಾಯ,     ೨೫೫
ಹೋಗಿ ಮೂರು ಪ್ರದಕ್ಷಿಣೆ ಮಾಡಿಸಿ ನಮಸ್ಕಾರಮಾಡಿಸಿದರು.  ಅಮ್ಮನಿಗೆ ಮಂಗಳಾರತಿಮಾಡಿ ನನಗೆ ಪ್ರಸಾದವನ್ನು ಕೊಟ್ಟ
ರು. ಕುಂಕುಮವನ್ನು ಹಣೆಗಿಟ್ಟರು. ಅಮ್ಮನಪೂಜಾರಿ
ಯಾದ ಅಪ್ಪಾಜಿಎಂಬುವನು ಬೆಳ್ಳಿ ಕಟ್ಟುಹಾಕಿದ ಎ೦ದು ಕರೀ ಬೆತ್ತವನ್ನು ತಂದು ಅದರಿಂದ ಮುರುಸಾರಿ ತಲೆಯಿಂದ ಕೆಳ
ಕ್ಕೆ ಸವರಿದನು. ಬಾಯಲ್ಲಿ ಏನೋ ಪಿಟಪಿಟನೆ ಹೇಳುತಿದ್ದ
ನು. ಹಂಣುಕಾಯ ಪ್ರಸಾದವನ್ನು ಕೊಟ್ಟರು. ನನ್ನನ್ನು
ಎಲ್ಲರೂ ಬಂದು ಮನೆಗೆ ಕರೆದುಕೊಂಡು ಹೋಗಿಬಿಟ್ಟರು. ಮಾದೈಯ್ಯನನ್ನು ಅಪ್ಪಾಯೆ೦ತಲೂ ಅವನ ಹೆಂಡತಿಯನ್ನು
ಅವ್ವ ಎಂತಲೂ ಕರೆಯುತ್ತಿದ್ದೆ. ಅದೇ ದಿವಸ ನನ್ನಪ್ಪನೂ
ಇನ್ನೂ ಊರಲ್ಲಿ ಹಿರಿಯರಾದವರೂ ಕೂತು ಕೊಂಡರು. ಆಗ
ನನ್ನನ್ನು ಕುರಿತು ನನ್ನುಪ್ಪನು ಹೇಳಿದೆನೆಂದರೆ--
ಮಾದ-ಈ ವೂರಜನರೆಲ್ಲಾ ನಂನಮ್ಮಲ್ಲಿ ಬಹಳ ಒಗ್ಗಟ್ಟಾ 
    ಗಿದೇವೆ. ನಾವು ಕತ್ತಲೇ ಕಾಲದಲ್ಲಿಯ ಮಳೆಗಾಲ
    ದಲ್ಲಿಯೂ ಊರನ್ನು ಬಿಟ್ಟು ಕಾಡುದಾರಿಯಲ್ಲಿ ಹೋ
    ಗುತ್ತೇವೆ. ನಾವು ಹೋಗಿಬರುವ ದಾರಿ ಯಾರಿಗೂ         ತಿಳಿಯದು, ನಂಗೆಮಾತ್ರ ಗೊತ್ತು. ಯಾರೂ
    ನಮ್ಮನ್ನು ಬಂದು ಹಿಡಿಯಬಾರದೆಂದು ಹೀಗೆ ಮಾ     ಡುತ್ತೇವೆ. ದೇಶಾಂತರಗಳಿಗೆ ಹೋಗಿ ಐಶ್ವರ್ಯವಂತ
    ರಮನೆಗೆ ಕನ್ನ ವನ್ನು ಹಾಕುತ್ತೇವೆ. ಒಳಕ್ಕೆ ನುಗ್ಗಿ     ಸಿಕ್ಕಿದಪದಾರ್ಥವನ್ನು ತರುತ್ತೇವೆ. ಈ ವಿಷಯದಲ್ಲಿ ಈ         ಊರವರೆಲ್ಲಾ ಸೇರಿ ಒಂದು ಸಂಕೇತಮಾಡಿ
--------------------------------------------------

೨೫೬          ಮಾಡಿದ್ದುಣೋ ಮಹಾರಾಯ.

    ಕೊಂಡು ಇದೇವೆ. ಯಾರಾದರೂ ನಮ್ಮ ಕಳ್ಳತನ
    ವನ್ನು ಕಂಡುಹಿಡಿದರೆ ನಮ್ಮಲ್ಲಿ ಯಾರೂ ಒಬ್ಬರ
    ಹೆಸರನ್ನು ಒಬ್ಬರು ಹೇಳಕೂಡದು, ನಾವು ಮಾಡುವ
    ಕೆಲಸ ಸಾಗುತ್ತೆ ಇಲ್ಲ ಎನ್ನುವ ವಿಷಯದಲ್ಲಿ ಅಮ್ಮನ
    ಗುಡೀ ಅವಾಜಿಯು ಅಮ್ಮ ನ ಪ್ರಸಾದವನ್ನು ಕೊ
    ಟ್ಟು ಕಣಿ ವಗೈರೆ ನಗುಗೆ ಹೇಳಿ ನನಗೆ ಜಯ
    ವಾಗುವುದಕ್ಕೆ ತಕ್ಕ ಬುದ್ಧಿಯನ್ನು ನನಗೆ ಹೇಳು
    ತಾನಾದಕಾರಣ, ತಂದದರಲ್ಲಿ ಹತ್ತುಪಾಲು ಮಾಡಿ
    ಒಂದುಪಾಲನ್ನು ಅವನಿಗೆ ಕೊಡುತ್ತೇವೆ; ಕನ್ನದೊಳ
    ಗೆ ನುಗ್ಗಿ ಒಳಗಿನಿಂದ ಒಡವೆಮೊದಲಾದ ನ್ನು ಈಚೆ
    ಗೆ ತೆಗೆದುಕೊಡತಕ್ಕವನಿಗೆ ಒಂದುಕಾಲು ಕೊಡುತ್ತೇ
    ವೆ. ನಗರದ ಆಮೀಲ ಕಿಳ್ಳೇದಾರ ಮೊದಲಾದವರಿ
    ಗೆ ಒಂದುಪಾಲು ಹೋಗುತ್ತೆ. ಉಳಿದ ಏಳುಪಾಲ
    ನ್ನು ಉಳಿದವರೆಲ್ಲಾ ಸಮನಾಗಿ ಹಂಚಿಕೊಳ್ಳುತ್ತೇವೆ.
    ಇದರಲ್ಲಿ ಒಳಕ್ಕೆ ನುಗ್ಗತಕ್ಕವನು ಅಮಾವಾಸ್ಯೆ ಆದಿ
    ತ್ಯವಾರ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದವನಾಗಬೇಕು.
    ನೀನು ಇಂಥಾದಿನದಲ್ಲಿ ಹುಟ್ಟಿದವನಾಗಿದೀಯ. ನೀ
    ನು ಧೈರವಾಗಿ ಕೆಲಸ ಮಾಡಬಲ್ಲೆಯ ?
ಅಮಾಸೆ-ಯಾವಕೆಲಸ ಮಾಡುವದಕ್ಕೂ ನಾನು ಹೆದರುವುದಿ
    ಲ್ಲ. ಯಾವಗುಟ್ಟನ್ನೂ ಹೊರಗೆ ಹಾಕುವುದಿಲ್ಲ.
    ಎಲ್ಲರೂ ನ್ಯಾಯವಾಗಿ ಮಾತ್ರ ನಡೆಯಬೇಕು. ಒಗ್ಗ
    ಟ್ಟು ಚೆನ್ನಾಗಿರಬೇಕು.
----------------------------------------------------

        ಮಾಡಿದ್ದುಣ್ಣೋ ಮಹರಾಯ.   ೨೫೭
ಮಾದ-ನೀನು ಹೆದರದೆ, ಧೈಯ್ಯದಿಂದ ಕೆಲಸ ಮಾಡಿದರೆ
    ಸಾಕು, ನಾವೆಲ್ಲರೂ ಒಂದಾಗಿ ಕೆಲಸಮಾಡುತ್ತೇವೆ.
    ನಾಳೆ ಎಲ್ಲರೂ ಹೊರಡುತ್ತಾರೆ. ಅವರಸಂಗಡ ನೀನೂ         ಹೊರಡಬೇಕು. ಆದ್ದರಿಂದಲೇ ಈ ದಿವಸ ಶಾಸ್ತಮಾ
    ಡಿ ಗುಡಿಗೆ ಕರೆದುಕೊಂಡು ಹೋಗಿದ್ದೆವು. ನೀನು     ಮಾಡಬೇಕಾದ ಕೆಲಸಗಳನ್ನು ಹೇಳುತ್ತೇನೆ ಕೇಳು.         ನೀನು ಕನ್ನದೊಳಗೆ ನುಗ್ಗಬೇಕಾದ ದಿವಸಕ್ಕೆ ಹಿಂದಿ
    ನರಾತ್ರೆ ಚೆನ್ನಾಗಿ ನಿದ್ರೆಮಾಡಿ ಬೆಳಗ್ಗೆ ಎದ್ದು ನಿನ್ನ
    ತಲೆಯನ್ನು ನುಣ್ಣಗೆ ಬೋಳಿಸಿಕೊಳ್ಳಬೇಕು. ಜುಟ್ಟು
    ಇರಕೂಡದು, ಅದು ಇದ್ದರೆ ಯಾರಾದರೂ ಹಿಡಿ
    ದುಕೊಳ್ಳಬಹುದು. ಆದಿನ ಹಗಲು ಅರೆಹೊಟ್ಟೆ
    ಊಟಮಾಡಬೇಕು. ರಾತ್ರೆ ಹಾಲನ್ನು ಕುಡಿಯಬೇ
    ಕು, ಅನ್ನ ತಿನ್ನಬಾರದು. ಹಾಗೆ ತಿಂದರೆ ತಪ್ಪಿ
    ಸಿಕೊಂಡು ಓಡಲು ದೇಹ ಸಸಾರವಾಗಿರುವುದಿಲ್ಲ.
    ಮೈಗೆಲ್ಲಾ ಎಂಣೆತೋಡದುಕೊಳ್ಳಬೇಕು. ಹಿಡಿದು
    ಕೊಂಡರೆ ಚಾರಿಹೋಗುತ್ತೆ. ಉಡಿದಾರವೂ ಕೌಪೀನ
    ವೂ ಬಾಳೆಪಟೈನಾರಿನದಾಗಬೇಕು. ಹಿಡಿದುಕೊಂಡರೆ
    ಕಿತ್ತು ಹೋಗುತ್ತೆ. ಮುಖಕ್ಕೆಲ್ಲಾ ಮಸೀಬಳಿದುಕೊ
    ಳ್ಳಬೇಕು, ಕಂಡರೆ ಗುರುತುಸಿಕ್ಕುವುದಿಲ್ಲ. ಯಾರಾ
    ದರೂ ಹಿಡಿದುಕೊಂಡರೆ ಅವಾಯಕ್ಷಳಕ್ಕೆ ಒದೆದು
    ಓಡಿಹೋಗಬೇಕು. ನಾರಿನ ಉಡಿದಾರಕ್ಕೆ ಸಂಣ
    ಬಾಕನ್ನು ಸಿಕ್ಕಿಸಿಕೊಂಡಿರಬೇಕು. ಯಾರಾದರೂ
----------------------------------------------------

೨೫೮         ಮಾಡಿದ್ದುಣ್ಣೋ ಮಹರಾಯ. 
     ಬಲವಾಗಿ ಹಿಡಿದುಕೊಂಡರೆ ಬಾಕಿನಿಂದ ಅವರ ಗೋ
    ಮಾಳೆಗೋ ಹೊಟ್ಟೆಗೋ ತಿವಿದು, ತಪ್ಪಿಸಿಕೊಂಡು
    ಓಡಿಹೋಗಬೇಕು. ಒಳಕ್ಕೆ ನುಗ್ಗಿ ಮನೆ ಸೋಸುವಾ
    ಗ್ಗೆ ಬಹು ಎಚ್ಚರವಾಗಿರಬೇಕು. ಗೋಡೇಅಂಚಿನಲ್ಲಿ
    ಸಂಣ ಪೆಟ್ಟಿಗೆಗಳನ್ನು ಇರಿಸುತ್ತಾರೆ. ಕನ್ನಹಿಡಿಯು
    ತಾಇದ್ದರೆ ಮೊದಲು ಅದನ್ನು ತೆಗೆದು ಹೊರಕ್ಕೆ         ಕೊಡಬೇಕು. ದೊಡ್ಡ ಪೆಟಾರಿಗಳ ಬೀಗವನ್ನು ಬೇರೆ
    ಕೈಗಳಿಂದ ತೆಗೆದು ಒಡವೆಗಳನ್ನು ಸಾಗಿಸಬೇಕು.     ಹೆಂಗಸರ ಮೈಮೇಲಿನ ಒಡವೆಗಳನ್ನು ಅವರಿಗೆ     ಎಚ್ಚರವಾಗದಾಗೆ ತೆಗೆಯಬೇಕು. ಕಂಠಾಭರಣ
    ವನ್ನು ಕತ್ತರಿಯಲ್ಲಿ ಕತ್ತರಿಸಿಕೊಳ್ಳಬೇಕು. ಕೈ
    ಕಾಲ ಒಡವೆಗಳನ್ನು ತಿರುವುತ್ತಿರುಗಿಸಿ ಅಥವಾ ಅಗ
    ಣೀತೆಗೆದು ಮೆಲ್ಲಗೆ ಕಸಿದುಕೊಳ್ಳಬೇಕು. ಅವರ     ಮಾಂಗಲ್ಯವನ್ನು ಮಾತ್ರ ಮುಟ್ಟಬಾರದು. ಹೆಂಗಸರಿ
    ಗೆ ಆಶೆಪಡಬಾರದು. ಮನೆಯ ಯಜಮಾನ ಯಜ
    ಮಾನಿಯಗೆ ನಮಸ್ಕಾರಮಾಡಿ ಹೊರಡಬೇಕು.
    ಕನ್ನ ದೊಳಕ್ಕೆ ನುಗ್ಗಿದಕೂಡಲೆ ತಪ್ಪಿಸಿಕೊಂಡು ಹೊರ         ಟುಹೋಗುವುದಕ್ಕೆ ಸರಾಗವಾಗಿರುವಹಾಗೆ ಒಳಗಿನಿಂದ
    ಬೀದೀ ಬಾಗಿಲವರೆಗೂ ಅಥವಾ ಹಿತ್ತಲಬಾಗಿಲವರೆಗೂ
    ಬಾಗಿಲ ಚಿಲಕಗಳನ್ನು ಮೊದಲೇ ತೆಗೆದಿರಬೇಕು.
    ಕಳ್ಳತನಕ್ಕೆ ಹೋದವರಲ್ಲಿ ಯಾರಿಗಾದರೂ ಎಟುಬಿ
    ದ್ದು ಅವರು ಕೆಳಗೆ ಬಿದ್ದರೆ, ಅವರಿಗೆ ಜೀವ ಇರಲಿ
---------------------------------------------------

        ಮಾಡಿದ್ದುಣ್ಣೋ ಮಹಾರಾಯ.  ೨೫೯
     ಹೋಗಿರಲಿ ಅವರ ತಲೆಯನ್ನು ತೆಗೆದುಕೊಂಡು
    ಹೊರಟುಹೋಗಬೇಕು. ಹೆಚ್ಚು ಜನ ಹಿಡಿಯಲು ಬಂದ
    ರೆ ಸಿಕ್ಕಿದ ದೊಣ್ಣೆಯನ್ನು ತಿರುಗಿಸಿ ತಪ್ಪಿಸಿಕೊಂ
    ಡು ಹೊರಟುಹೋಗಬೇಕು. ನಿನ್ನ ಕೆಲಸ ಇಷ್ಟೇ.
    ಉಳಿದವರು ತಂತಮ್ಮ, ಕಾರ್ಯಗಳನ್ನು ಮಾಡಿಕೊಳ್ಳು
    ತಾರೆ. ಕನ್ನ ಹಾಕುವದಿವಸ ಹಗಲು ಸನ್ಯಾಸಿಯೋ
    ಜೋಗಿಯೋ ಬೋಯಿಯೋ ಜಂಗಮನೋ ಆಗಿ
    ವೇಷಹಾಕಿಕೊಂಡು ನೀನು ರಾತ್ರೆ ಕನ್ನ ಹಾಕಬೇಕೆಂ
    ದಿರುವ ಮನೆಗೆ ಹೋಗಿ ಒಳ್ಳೇಮಾತನಾಡುತ್ತಾ ಪದ
    ಮುಂತಾದ್ದನ್ನು ಹೇಳುತಾ ಒಳಕ್ಕೆ ನುಗ್ಗಿ ಆ ಮನೆ
    ಯ ಸಿತಿಯನ್ನು ನೋಡಿಕೊಂಡಿರಬೇಕು. ರಾತ್ರೆ
    ಕಾಲದಲ್ಲಿ ಹಿಂದುಮುಂದಾದ ಎಕ್ಕಡವನ್ನು ಹಾಕಿ
    ಕೊಂಡಿರಬೇಕು.
ಹೀಗೆ ನಮ್ಮಪ್ಪನು ತನ್ನ ಕಳವು ಮಾಡುವುದಕ್ಕೆ ಬೇಕಾ
ದ ಅನೇಕ ರಹಸ್ಯಗಳನ್ನು ಹೇಳಿ ಕೊಟ್ಟನು ಎಲ್ಲವನ್ನೂ
ಮನಸ್ಸಿಟ್ಟು ಕೇಳಿ ತಿಳಿದುಕೊಂಡೆ. ಅದು ಯಾವುದೂ ನನ
ಗೆ ಅಸಾಧ್ಯವಾಗಿ ತೋರಲಿಲ್ಲ.

ಮಾರನೇದಿವಸ ಸಂಕೇತಮಾಡಿದ್ದ ಪ್ರಕಾರ ಕೊಯಮು
ತ್ತೂರಿಗೆ ಹೋದೆ, ನನ್ನು ತೆಗಾರರೆಲ್ಲರೂ ಬೇರೆಬೇರೆಯಾ
ಗಿ ಬಂದರು, ಹಗಲಹೊತ್ತು, ನಾವೆಲ್ಲರೂ ಬೇರೆಬೇರೆಯಾಗಿ
ಯೇ ವಾಸಮಾಡಿಕೊಂಡಿದ್ದು , ರಾತ್ರಿಯಾದ ಕೂಡಲೆ ಒಂದು
ಕಡೆ ಸೇರುತಿದ್ದೆವು. ಕಲೆಕ್ಟರು ಕಚೇರಿ ಹೆಡ್ಡುಮುನಿಸಿ ನವ
---------------------------------------------------

೨೬೦         ಮಾಡಿದ್ದುಣ್ಣೋ ಮಹಾರಾಯ.
ನೀತವಿಲಿವ್ತಾಂಗೈಯ್ಯರು ಎಂಬಾತನು ಎರಡು ಕೈಯಿಂದಲೂ
ದೋಚಿದೋಚಿ ದೊಡ್ಡೊಕ್ಕಲಾಗಿದಾನೆಂದು ತಿಳಿಯಿತು. ಹಗ
ಲೆಲ್ಲಾ ನೋಡಿಕೊಂಡಿದ್ದು ಒಂದುದಿನ ರಾತ್ರೆ ನಮ್ಮ ಕೆಲ
ಸಾ ಮಾಡಿದೆವು. ಜಯಪರಮೇಶ್ವರಿ ಎಂದು ನಾನು ಒಳ
ಕ್ಕೆ ನುಗ್ಗಿದೆ. ಚಿನ್ನದ ಒಡವೆಯೇ ೧೦-೧೫ ಸಾವಿರ ರೂಪಾ
ಯಿನದು ದೊರೆಯಿತು. ಆ ರಾತ್ರಿಯೇ ಎಲ್ಲವನ್ನೂ ಸಾಗಿ
ಸಿಕೊಂಡು ಕಾಡುದಾರಿಬಿದ್ದು ರಾತ್ರೆ ಹಗಲು ಪ್ರಯಾಣ
ಮಾಡಿ ಊರಿಗೆ ಬಂದೆವು. ಆ ಮುನಷಿಗೂ ಇನ್ನೊಬ್ಬ
ಲಂಚಕೋರನಿಗೂ ಹಿಂದಕ್ಕೆ ಜಗಳವಾಗಿದ್ದ ಕಾರಣ ಸರ್ಕಾರದ
ವರು ಆ ಜನರನ್ನು ಹಿಡಿದು ತೊಂದರೆ ಮಾಡಿದರೆಂದುನಮ
ಗೆ ಆಮೇಲೆ ತಿಳಿಯಿತು.

ಮೊದಲುಸಾಗಿಯೇ ನಾನು ಇಷ್ಟು ಐಶ್ವರ್ಯವನ್ನು ತಂದ
ದ್ದು ಊರಲ್ಲಿ ಎಲ್ಲರಿಗೂ ಬಹು ಸಂತೋಷವಾಯಿತು. ಹೀಗೆ
ನಾವು ಶ್ರೀರಂಗ, ತಿರುಚನಾಪಳ್ಳಿ, ಕುಂಭಕೋಣ, ಮಧುರೆ,
ಸೇಲ್ಯ, ದಿಂಡಗಲ್ಲು, ಧಾರಾಪುರ, ತಿನ್ನ ವಳ್ಳಿ, ಮೊದಲಾದ
ಪ್ರಾಂತ್ಯಗಳಲ್ಲಿ ಅನೇಕ ಗ್ರಾಮಗಳಿಗೆ ಹೋಗಿ ಅಲ್ಲಿ ಹೀಗೆ
ಯೇ ಪೂರಾ ಸಂವಾದನೆಮಾಡಿದೆವು. ಅನೇಕ ಅನೇಕ ವೂರು
ಗಳಲ್ಲಿ ನಾನು ಮನೇನುಗಿದಾಗ ನನ್ನನ್ನು ಒಳಗೆ ಹಿಡಿದು
ಕೊಂಡಿದ್ದರು. ಆಗೆಲ್ಲಾ ಬಿಡಿಸಿಕೊಂಡು ಬಂದೆ. ಕೆಲವರನ್ನು
ಕೈ ಬಾಕಿನಿಂದ ತಿವಿದು ಓಡಿಹೋದೆ, ಅವರಲ್ಲಿ ಅನೇಕರು
ಸತ್ತು ಹೋದರೆಂತಲೂ ಕೇಳಿದೆ. ನಾನು ರೂಪಾಯಿಯನ್ನು ತೆಗೆದುಕೊಳ್ಳುತ್ತಿರಲಿಲ್ಲ, ಚಿನ್ನ ಬೆಳ್ಳಿ ರತ್ನಗಳು ಎಷ್ಟಿದ್ದ
------------------------------------------------

        ಮಾಡಿದ್ದುಣ್ಣೋ ಮಹರಾಯ. ೨೬೧

ರೂ ನಾನು ಸೋಸಿಬಿಟ್ಟು ಕಂನದಿಂದ ಈಚೆಗೆ ಕೊಡುತಿದ್ದೆ.
ಸಾಧ್ಯವಾದಮಟ್ಟಿಗೆ ತಂದ ನಗಗಳೆಲ್ಲವನ್ನೂ ಕರಗಿಸಿಬಿಡುತಿ
ದ್ದೆವು. ತಾಲ್ಲೂಕಿನವರ ಹಂಚಿಗೆಯನ್ನು ಮಾತ್ರ ನಗವಾಗಿ
ಯೇ ಕೊಟ್ಟುಬಿಡುತ್ತಿದ್ದೆವು, ಚಾಮರಾಜನಗರದ ಆಮೀಲ
ಕಿಲ್ಲೇದಾರ ಇವರ ಮನೆಯಲ್ಲಿ ಈಗಲೂ ನಾವು ಕೊಟ್ಟು
ನಗಗಳಿವೆ. ನಾನು ಕ೦ನದೊಳಕ್ಕೆ ನುಗ್ಗಿರುವಾಗ ಯಾರೂ
ಆ ಮನೆಯ ಸುತ್ತಲೂ ಬರದಹಾಗೆ ನಮ್ಮ ಕಡೆಯವರು
ಕತ್ತಿ ಕರಾರಿ ದೊ೦ಣೆ ಕವಣೇಕಲ್ಲು ಇವುಗಳನ್ನು ಹಿಡಿದು
ನಿಂತಿರುತಿದ್ದರು. ನಾನು ಕಂನದೊಳಗಿನಿಂದ ಒಡವೆಗಳಂನು
ತೆಗೆದು ಈಚೆಗೆ ಹಾಕುತ ಬಂದಾಗೆಲ್ಲಾ ಆಗಆಗಲೇ ನಮ್ಮ
ಕಡೆಯವರು ಸಾಗಿಸಿಬಿಡುತಿದ್ದರು. ಆ ಮನೇಸುತ್ತಲೂ ೧೦೦
ಗಜ ಫಾಸಲೆಯಲ್ಲಿ ಯಾರು ಬಂದಾಗ್ಯೂ ಅವರನ್ನು ನಮ್ಮ
ವರು ಹೊಡೆದುಹಾಕುತಿದ್ದರು. ನನ್ನ ಕಡೆಯವರು ಬಹು
ವೇಗವಾಗಿ ಓಡುತಿದ್ದರು. ವೆಟ್ಟಗೇಗಾಡಿ ಸರೋಟುಗಾಡಿಯೆಂ
ದು ಹೆಸರುಳ್ಳವರು ಆ ದರಹಾಗೆಯೇ ಓಡುತಿದ್ದರು. ಗೋಡೇ
ಗುದ್ದಯ್ಯ, ನೆಲಗವಿಸಿದ್ದೇಶ್ಚರ ಎಂಬುವರು ಕನ್ನಾಹಾಕುವುದ
ರಲ್ಲಿ ಬಹು ಜಾಣರು, ಕನ್ನಾ ಹಾಕುವುದರಲ್ಲಿ ಒಬ್ಬೊಬ್ಬರ
ಕೈವಾಡ ಒಂದೊಂದುವಿಧ, ಹೊರಗೆ ಕೂತುಕೊಂಡು ಒಳ
ಗಡೆಯಿಂದ ಕನ್ನಾಹಾಕಿದಹಾಗೆ ಕನ್ನ ಕೊರೆಯುತಿದ್ದವನು
ಒಬ್ಬ ಇದ್ದ. ಅವನು ಬಹುಜಾಣ. ನನಗೆ ಅನೇಕ ಭಾಷೆ
ಗಳು ಬರುತ್ತೆ. ನಮ್ಮವರು ಅನೇಕ ವಿಧವಾದ ವೇಷವನ್ನು
ಹಾಕಿಕೊಳ್ಳುತ್ತಾರೆ. ಇದಲ್ಲದೆ ಒಬ್ಬ ಕಾಡಹಂದಿಯಹಾಗೆ
-----------------------------------------------

೨೬೨         ಮಾಡಿದ್ದುಣ್ಣೋ ಮಹಾರಾಯ. 

ವೇಷವಂನು ಹಾಕಿಕೊಂಡು ಗೊರಗೊರಎನ್ನುತಾ ಹೋಗುತಾ
ನೆ, ಇವನಿಗೆ ವರಹಾ ಎಂದು ಹೆಸರು. ಒಬ್ಬ ಕರಡಿಯ
ಹಾಗೆ ವೇಷ ಹಾಕಿಕೊಳ್ಳುತಾನೆ. ಇವನಿಗೆ ಜಾ೦ಬವನೆಂದು
ಹೆಸರು. ಇವರು ರಾತ್ರಿ ಯಾರಾದರೂ ಹರಿಸಿಕೊಂಡುಬಂ
ದಾಗ ಹಂದಿಯಹಾಗೂ ಕರಡಿಯಕುಳಿಗೂ ಜನರನ್ನು ಭಯಪ
ಡಿಸಿ ಓಡಿಸುತ್ತಾರೆ. ಹೀಗೆ ಮಾಡಿಕೊಂಡು ಕಣವೇಕೆಳಗೆ
ಅನೇಕ ವೂರುಗಳಲ್ಲಿ ಒಳ್ಳೆ ಐಶ್ವರ್ಯವಂತರ ಮನೆಯನ್ನೆಲ್ಲಾ
ಚೆನ್ನಾಗಿ ಸವರಿ ಗುಡಿಸಿಬಿಟ್ಟೆವು.

ಒಂದುಸಾರಿ ಇನ್ನೊಂದು ಆಶ್ಚರ್ಯಕರವಾದ ಸಂಗತಿ ನಡೆ
ಯಿತು. ಸತ್ಯಮಂಗಲದ ತಾಲೂಕಿನಲ್ಲಿ ಒಂದು ಗ್ರಾಮವಿ
ದೆ. ಅದರಲ್ಲಿ ಒಬ್ಬ ಪುಣ್ಯವಂತನಾದ ಗೌಡ ಇದಾನೆಂದು ತಿಳಿಯಿತು. ಆ ಕಡೆ ಗೌಡರಿಗೆ ಗೌಂಡ ಎನ್ನುತಾರೆ, ಆ ವೂ
ರಿಗೆ ಹೋದೆವು. ಹೊಂಚುಹಾಕುತಾಇದ್ದೆವು. ನಾನು ಆ ವೂ
ರ ಬೀದಿಯಲ್ಲಿ ಬರುತಾಇದ್ದೆ. ಆ ದಿನ ರಾತ್ರಿ ಕನ್ನಾ ಹಾಕ
ಬೇಕೆಂದು ನಾವು ಗೊತ್ತುಮಾಡಿಕೊಂಡಿದ ಮನೆಯೊಳಗಿನಿಂ
ದ ಒಬ್ಬ ಹೆಂಗಸು ಬಂದಳು. ಅವಳು ಲಕ್ಷಣವಾಗಿದ್ದಳು.
ಅವಳು ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು,
ಕೈಯಲ್ಲಿ ಒಂದು ಮಗುವನ್ನು ಹಿಡಿದು ನಡಿಸಿಕೊಂಡು ಮನೆ
ಯಿಂದ ಈಚೆಗೆ ಬಂದಳು. ಭಾರೀ ಒಡವೆಗಳನ್ನು ಇಟ್ಟಿದ್ದ
ಳು. ಅದನ್ನು ನೋಡಿ ನಾವು ರಾತ್ರೆಗೆ ಮಾಡುವ ಕೆಲಸ
ನಿಷ್ಪ್ರಯೋಜನವಾಗಲಾರದೆಂದು ಸಂತೋಷಪಟ್ಟುಕೊಂಡೆ. ಹಾ
ಗೆಯೇ ಆ ಮನೆಮುಂದೆ ಹಾದು ನಾನು ಆ ಕಡೆಗೆ ಹೋ
----------------------------------------------------

        ಮಾಡಿದ್ದು ಸ್ಪೂ ಮಹಾರಾಯ.   ೨೬೩

ಗುತಾ ಇರುವಾಗ ಆ ಹೆಂಗಸು ನನ್ನನ್ನು ದುರುಗುಟ್ಟಿಕೊಂ
ಡು ನೋಡುತ್ತಾ ನಿಂತುಕೊಂಡಳು. ಹೊಸಮುಖವೆಂದು ಗು
ರುತು ನೋಡಿಕೊಳ್ಳು ತಾಳೆ ಎಂಬದಾಗಿ ನಾನು ಒಳಗೆ ಭ
ಯಪಟ್ಟುಕೊಂಡು ಕಾಲನ್ನು ಜಾಗ್ರತೆ ಮಾಡಿದೆ. ಎಲಪ್ಪ ನೀನು ಯಾವವೂರೋ? ಎಂದಳು. ನಾನು ಮಾತನಾಡದೆ
ಸುಮ್ಮನೇ ಹೋಗುತಿದ್ದೆ. ಆಕೆ ಪುನಹ-ಬಲ ನೀನು
ಜಯಪ್ಪನಲ್ಲವೇನೋ ಎಂದಳು. ಈ ಹೆಸರು ನನಗೆ ನಮ್ಮ
ತಂದೆ ಇಟ್ಟಿದು , ಈ ಹೆಸರನ್ನು ಹಿಡಿದು ಕೂಗುವ ಈ
ಹೆಂಗಸು ಯಾರೋ ನೋಡಲೇಬೇಕು, ಆದ್ದೆಲ್ಲಾ ಆಗಲಿ
ಎಂದು ನಾನು ಹಿಂತಿರುಗಿ ನೋಡಿ ನಿಂತುಕೊಂಡೆ. ಆಕೆ
ನನ್ನ ಸಮೀಪದಲ್ಲಿ ಒಂದು ನಿಂತು ನನ್ನನ್ನು ಚೆನ್ನಾಗಿ
ದ್ರಿಷ್ಟಿಸಿನೋಡಿ, ಜಯ ಎಲ್ಲಿಂದ ಬಂದೆ ಕಂದ ಎಂದು ಕೇಳಿ
ದಳು. ಅವಳ ಕಂಣಿನಲ್ಲಿ ಪಳ ಪಳನೆ ನೀರು ಸುರಿಯುವುದ
ಕ್ಕೆ ಮೊದಲcತು. ಆಗ ಅವಳು ನನ್ನ ಅಕ್ಕನೆಂದು
ತಿಳಿದುಕೊಂಡೆ. ನನಗೂ ತುಂಬಾ ದುಃಖ ಬಂತು. ನಾವಿ
ಬ್ಬರೂ ಅತ್ತೆವು. ತಮ್ಮ ಮನೆಗೆ ಕರೆದುಕೊಂಡುಹೋದಳು.
ನಾವು ಬಾಲ್ಯದಲ್ಲಿ ಪಟ್ಟ ಕಷ್ಟವೆಲ್ಲಾ ಜ್ಞಾಪಕಕ್ಕೆ ಬಂತು.
ಪ್ರನಃ ಅತ್ತೆವು. ಅವಳನ್ನು ಅವಳ ಗಂಡ ಕರೆದುಕೊಂಡು
ಹೋದಾಗಿನಿಂದ ಅದುವರೆಗೆ ನಡೆದ ಸಮಾಚಾರವನ್ನೆಲ್ಲಾ
ಹೇಳಿದೆ. ನನ್ನ ಚಿಕ್ಕಪ್ಪನೂ ಚಿಕ್ಕಮ್ಮ ನೂ ಮಾಡಿದ್ದ
ನೆಲ್ಲಾ ತಿಳಿಸಿದೆ. ಆದರೆ ನಾನಿರುವ ವೂರನ್ನೂ ಅನು
ಸರಿಸಿರುವ ವೃತ್ತಿಯನ್ನೂ ನಾನು ಹೇಳಲಿಲ್ಲ. ನಾನು ವ್ಯಾ
------------------------------------------------

೨೬೪     ಮಾಡಿದ್ದುಣ್ಣೋ ಮಹರಾಯ,

ಪಾರ ಮಾಡುವುದಾಗಿಯೂ ಅದಕ್ಕಾಗಿ ನಾನು ಬಂದಿದ್ದೆನೆಂತ
ಲೂ ಹೇಳಿದೆ. ತರುವಾಯ ನಮ್ಮಕ್ಕನು ತನಗೆ ಮೂರು ಜನ
ಗಂಡುಮಕ್ಕಳೂ ಮೂರುಜನ ಹೆಂಣುಮಕ್ಕಳೂ ಇದಾ
ರೆಂತಲೂ ತಾನು ಸುಖವಾಗಿದ್ದೇನೆಂತಲೂ ತನ್ನ ಐಶ್ವರ್ಯವನ್ನೆ
ಲ್ಲಾ ವಿವರಿಸಿ ಹೇಳಿದಳು. ನನಗೆ ಬಹಳ ಸಂತೋಷವಾಯಿ
ತು, ಅಲ್ಲಿಯೇ ಇರು ಎಂದು ಬಲವಂತಮಾಡಿದಳು, ಆಗು
ವದಿಲ್ಲವೆಂದೆ. ನನಗೆ ಒಳಗೆ ಎಲೆಹಾಕಿ ಒಳಕ್ಕೆ ಕರೆದಳು,
ನಾನು ಹೊರಗೇ ಊಟಕ್ಕೆ ಕೂತುಕೊಳ್ಳುತ್ತೇನೆ, ಒಳಕ್ಕೆ ಬರಲು
ನನಗೆ ಯೋಗ್ಯತೆಯಿಲ್ಲವೆಂದು ಹೇಳಿದೆ. ಹೊರಗಡೆ
ಬಡಿಸಿದರು ಊಟಾ ಮಾಡಿದೆ. ಎಲೆಅಡಿಕೆ ತೆಗದುಕೊಂಡೆ.
ಮಕ್ಕಳೆಲ್ಲಾ ಬಂದು ನನಗೆ ನಮಸ್ಕಾರ ಮಾಡಿದರು, ಅಲ್ಲಿ
ಯೇ ಇರು, ತನ್ನ ಎರಡನೇ ಮಗಳನ್ನು ಕೊಟ್ಟು ಮದು
ವೇಮಾಡುತ್ತೇನೆ ಎಂದು ನಮ್ಮ ಅಕ್ಕ ಬಲವಂತಮಾಡಿದಳು.
ನಾನು ಇನ್ನೊಂದು ವೇಳೆ ಬರುತ್ತೇನೆ, ನನ್ನ ಯಜಮಾನರಾ
ದ ಸಾಹುಕಾರರು ಹೊರಟು ನಿಂತಿದ್ದಾರೆ ಎಂದೆ. ನಮ್ಮಕ್ಕ
ನು ಪುನಃ ಕಂಣಿನಲ್ಲಿ ನೀರತಂದುಕೊಂಡು ಹೋಗಿಬರುತಿ
ಯ ಮಗ ? ಎಂದಳು. ನನಗೂ ದುಃಖಬಂತು. ಹಿಂದಿನ
ಕಥೆಯೆಲ್ಲಾ ಪುನಃ ಜ್ಞಾಪಕಕ್ಕೆ ಬಂತು. ಬಾಲ್ಯದಲ್ಲಿ ನಮ್ಮ
ಕ್ಕನಿಗೆ ನನ್ನ ಮೇಲೆ ಇದ್ದ ಪ್ರೀತಿಯ ಅವಳು ನನ್ನ
ಹೊಡೆಯಬೇಡವೆಂದು ನನ್ನ ಚಿಕ್ಕಪ್ಪನಿಗೆ ಅಡ್ಡಲಾಗಿ ಬರು
ತಿದ್ದದೂ ಎಲ್ಲವನ್ನೂ ಜ್ಞಾಪಕಮಾಡಿಕೊಂಡೆ. ಬಂದ ದುಃಖ
ವನ್ನು ತಡೆದುಕೊಂಡು ನಮ್ಮಕ್ಕನಿಗೆ ನಮಸ್ಕಾರ ಮಾಡಿ ಹೊರ
----------------------------------------------------

೨೬೫         ಮಾಡಿದ್ದುಣ್ಣೊ ಮಹಾರಾಯ.

ಟುಹೋದೆ. ಆಗ ನನ್ನ ಮನಸ್ಸಿಗೆ ಬಹಳ ಕಳವಳವಾಯಿ
ತು, ರಾತ್ರೆ ನಾನು ಏನ ಮಾಡಬೇಕು ? ಕನ್ನ ಹಾಕಿ ಒಳ
ಗೆ ನುಗ್ಗಿ ಲೂಟೀಮಾಡಲೆ, ಸಾಕ್ಷಾತ್‌ ಅಕ್ಕನಿಗೆ ದ್ರೋಹಿ
ಯಾಗುತ್ತೇನೆ. ಒಲ್ಲೆನೆಂದೇನೇ ನಮ್ಮ ಜೊತೆಗಾರರು ನನ್ನ
ಸುಮ್ಮನೇ ಬಿಡುವುದಿಲ್ಲ. ಈ ಕಳವಳ ನನಗೆ ಹೆಚ್ಚಾಯಿತು.
ಕೊನೆಗೆ ಏನೋ ಸಿದ್ದಾಂತಮಾಡಿಕೊಂಡೆ. ಆ ದಿವಸ ಕರೀ
ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಹೋದೆ. ಕತ್ತಲೆ
ಯಾದ್ದರಿಂದ ಅದುಯಾರಿಗೂ ಕಾಣಲಿಲ್ಲ ಕನ್ನದ ಒಳಕ್ಕೆ
ನುಗ್ಗಿದೆ. ಸ್ವಲ್ಪಹೊತ್ತು ಒಳಗೆ ಇದ್ದೆ. ಬಂಗಾರದ ಬಂದಿ
ಯನ್ನು ಚೂರುಚೂರಾಗಿ ಕತ್ತರಿಸಿದ ಚಿನ್ನದ ಮರುಕುಗ
ಳು ಸುಮಾರು ತೂಕದಲ್ಲಿ ಮರುಸೇರಿನಷ್ಟು ನನ್ನ ಕರೀ
ಬಟ್ಟೆಯಿಂದ ತೆಗೆದು ನಮ್ಮಕ್ಕನ ತಲೆದಸಿಯಲ್ಲಿರಿಸಿ ಅವಳ
ಕಾಲಿಗೆ ನಮಸ್ಕಾರಮಾಡಿ ಈಚೆಗೆ ಬಂದೆ. ನಮ್ಮವರು ಏನು
ಎಂದು ಕೇಳಿದರು. ಸಾಮಾನೆಲ್ಲವನ್ನೂ ನೆಲಮಾಳಿಗೆಯಲ್ಲಿ
ಹಾಕಿದಾರೆಂದು ತೋರುತ್ತೆ. ಮೇಲೆ ಏನೂ ಸಿಕ್ಕಲಿಲ್ಲ
ಎಂದು ಸುಳ್ಳ ಹೇಳಿದೆ.

ಒಂದುಸಾರಿ ಇನ್ನೊಂದು ಹೆಚ್ಚು ಸಂಗತಿ ನಡೆಯಿತು.
ಒಂದು ಊರಿಗೆ ಹೋದರೆ ನನ್ನ ಜೊತೆಗಾರರೆಲ್ಲರೂ ಒಂದೇ ಕಡೆಯಲ್ಲಿಳಿಯುತಿರಲಿಲ್ಲ. ಒಬ್ಬೊಬ್ಬರು ಒಂದೊಂದು ಕಡೆ
ಇಳಿಯುತಿದ್ದೆವು. ಆ ಊರಹೊರಗೆ ಒಂದು ಕೊಂಬಿನಕೂಗಿ
ನದೂರದಲ್ಲಿ ಒಂದು ಗುಡಿಸಿತ್ತು. ಅದು ದೊಡ್ಡಗುಡಿ,
ಕೈಸಾಲೆ ಮೊದಲಾದ್ದೆಲ್ಲಾ ಬಹಳ ರಮ್ಯವಾಗಿತ್ತು. ನಾನು
--------------------------------------------------
34
೨೬೬         ಮಾಡಿದ್ದುಣ್ಣೋ ಮಹಾರಾಯ.

ಅಲ್ಲಿಹೋಗಿ ಕೈಸಾಲೆಯಲ್ಲಿ ಇಳಿದುಕೊಂಡೆ. ಅಲ್ಲಿ ಸುತ್ತಲೂ
ಕಾಡು ಜೀ ಎನ್ನು ತಾಇತ್ತು. ಮರಗಳೆಲ್ಲಾ ಗಗನಕ್ಕೆ
ಹೋಗಿತ್ತು. ಮಧ್ಯಾಹ್ನದಲ್ಲಿ ಕೂಡ ಬಿಸಿಲುಬೀಳುತಿರಲಿ
ಲ್ಲ. ಕತ್ತಲೆಯಾಗಿತ್ತು. ಅಲ್ಲಿ ಕಿರು ತೋಳ ಬಹು ಬಲಿ
ವಾಗಿದ್ದವು. ಗುಡಿಗೆ ಹತ್ತಿರದಲ್ಲಿ ಒಂದು ಹಳ್ಳ ಹರಿಯುತಾ
ಇತ್ತು. ಆ ಹಳ್ಳದ ತಡಿಯಲ್ಲಿ ಕಾಡತುಳಸಿ ಕಾಡಮಲ್ಲಿಗೆ
ವನಸಂಪಿಗೆ ಪಗಡೆ ಮೊದಲಾದ ಹೂವುಗಳು ಬೇಕಾದಷ್ಟು
ಬಿಟ್ಟಿತ್ತು. ಕುಯ್ಯುವವರೇ ಇರಲಿಲ್ಲ. ಆ ಹೂಗಳ ವಾಸನೆ
ಗಮಗಮನೆ ಅಲ್ಲ ಸುತ್ತಿಕೊಂಡಿತ್ತು. ಅದೆಲ್ಲವನ್ನೂ
ನೋಡಿದರೆ ಮನೋಹರವಾಗಿತ್ತು. ನಾನು ಆ ನದಿಯಲ್ಲಿ
ಸ್ನಾನಮಾಡಿ ಸಾಧ್ಯವಾದಮಟ್ಟಿಗೆ ಹುವ್ವನ್ನು ಕುಯಿದು
ತಂದು ಗುಡಿಯಲ್ಲಿದ್ದ ದೇವರುಗಳ ತಲೆಯಮೇಲೆ ಒ೦
ತೊಂದು ಹಿಡಿ ಇರಿಸುತ್ತಾ ಬಂದೆ. ನಾನು ಆ ಗುಡಿಗೆ ಹೋ
ದಾಗಿನಿಂದ ಯಾರೋ ಅಳುತಾ ಇದ್ದ ಹಾಗೆ ಸದ್ದು ಕೇಳುತಾಇ
ತ್ತು, ನಾನು ಎಲ್ಲಿ ಹುಡುಕಿನೋಡಿದರೂ ಯಾರೂ ಇರ
ಲಿಲ್ಲ. ಗರ್ಭಗೃಹದಬಳಿಗೆ ಹೋದಾಗ ಆ ಸದ್ದು ಹೆಚ್ಚಾಗಿ
ಕೇಳುತಿತ್ತು. ಆಗ ಗುಡಿಯೊಳಗೆ ಯಾರಿದಾರೋ ನೋಡ
ಬೇಕೆಂದು ಹೋದೆ. ಬಾಗಿಲಿಗೆ ಬೀಗಹಾಕಿತ್ತು. ಆ ಬೀಗ
ವನ್ನು ಮುರಿದೆ. ಎಷ್ಟೋ ಬೀಗ ಮುರಿದವನಿಗೆ ಅದೊ೦
ದು ದೊಡ್ಡದಾಗಿರಲಿಲ್ಲ. ಬಾಗಿಲನ್ನು ತೆಗೆದು ಒಳಕ್ಕೆ ಹೋದೆ.
ಒಳಗೆ ಕತ್ತಲೆಯಾಗಿತ್ತು. ಒಂದು ದೀಪ ನೊಣನೊಣನೆ
ಉರಿಯುತಿತ್ತು, ಅದನ್ನು ಮೀಡಿ ನೋಡಿದೆ. ಅಲ್ಲಿ ಒಂದು
-----------------------------------------------------

        ಮಾಡಿದಷ್ಟೂ ಮಹಾರಾಯ. ೨೬೭

ಅಂಕಣದಲ್ಲಿ ಹಸೆಮಣೆ ಹಾಕಿ ಮೇಲುಹಾಸುಗೆಯನ್ನು ಹಾಸಿ
ತ್ತು, ತೆಂಗಿನಕಾಯಿ ಬಾಳೆಹಂಣು ಅರಿಶಿನ ಕುಂಕುಮ
ಮಂತ್ರಾಕ್ಷತೆ ಹುವು ಬಳಯದೆಲೆ ಅಡಕೆ ಒಂದುಸೇರು ಅಕ್ಕಿ
ನಾಲ್ಕು ಬಾಳೆಲೆ, ಇವೇ ಮೊದಲಾಗಿ ಮಂಗಳದ್ರವ್ಯಗಳನ್ನಿ
ರಿಸಿತ್ತು, ಯಾವುದೇ ಪ್ರಸ್ತಕ್ಕೆ ಸಿದ್ಧ ಮಾಡಿರುವಂತೆ ಕಂಡಿ
ತು. ನಾನು ಒಳಕ್ಕೆ ಹೋದಕೂಡಲೆ ಸದ್ದಾಗುತಾ ಇದ್ದುದು
ನಿಂತುಹೋಯಿತು. ನಾನು ಅಲ್ಲೆಲ್ಲಾ ಹುಡುಕಿದೆ. ಒ೦ದು
ಮೂಲೆಯಲ್ಲಿ ಒಬ್ಬ ಲಕ್ಷಣವಾದ ಹೆಂಗಸು ಕೂತಿದ್ದಳು,
ನೀನು ಯಾರನ್ನ ಎಂದೆ. ಆಕೆ ಮಾತನಾಡಲಿಲ್ಲ ; ಆಕೆಗೆ
ಕೈ ಕಾಲು ನಡುಗುವುದಕ್ಕೆ ಮೊದಲಾಯಿತು. ಭೀತಿಯಿಂದ
ಹೀಗಾಗುತಾಇದೆ ಎಂದು ತಿಳಿದು-ನೀನು ಯಾರಮ್ಮ ಮಾತ
ನಾಡು, ನಿನಗೆ ಯಾವಕಷ್ಟ ಪ್ರಾಪ್ತವಾಗಿದ್ದರೂ ನಾನು ನಿವಾ
ರಣೆ ಮಾಡುತ್ತೇನೆ, ಹೆದರಬೇಡ, ಎಂದೆ. ಇನ್ನೂ ಗಟ್ಟಿ
ಯಾಗಿ ಅಳುತ ಅಳುತಿ-ನೀನು ಯಾರಪ್ಪ ಎಂದಳು.
ನಾನು ಯಾರೋ ಪರದೇಶಿ, ಯಾರಾದರೇನು ಎಂದೆ. ನನ್ನ
ಕಷ್ಟವನ್ನು ನಿವಾರಣೆಮಾಡುತೆನೆಂದು ಕೈಮುಟ್ಟಿ ಪ್ರಮಾಣ
ಮಾಡು ಎಂದಳು. ನಾನು ಪ್ರಮಾಣಮಾಡಿಕೊಟ್ಟೆ. ಆಗ
ಆ ಹೆಂಗಸು-ನನ್ನನ್ನು ಈ ಸ್ಥಳಬಿಟ್ಟು, ಯಾರೂ ಇಲ್ಲವಕ
ಡೆಗೆ ಕರೆದುಕೊಂಡು ನಡೆ ಎಂದಳು. ಮಗ್ಗಲಲ್ಲಿದ್ದ ಕಾಡಿ
ನೊಳಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಒಂದು ಬಂಡೆ
ಇತ್ತು. ಅದರ ಕೆಳಗೆ ಒಂದು ಪೊಟ್ಟರೆ ಇತ್ತು. ಅದರ ಕೆಳ
ಗೆ ನುಸಿದು ಹೋದೆವು. ಅಲ್ಲಿ ಎತ್ತರವಣಗಿ ಹಜಾರದಹಾಗೆ
-------------------------------------------------

೨೬೮         ಮಾಡಿದ್ದುಣ್ಣೋ ಮಹಾರಾಯ.

ಸ್ಥಳವಿತ್ತು, ಮಗ್ಗಲಲ್ಲಿಯೇ ನೀರಿನ ಚಿಲುಮೆ ಇತ್ತು.
ಆ ಬಿಲ್ಲದ ದ್ವಾರದಲ್ಲಿ ಮಧ್ಯೆ ಪೊಟ್ಟರೆಯಾಗಿತ್ತು. ಅದರಿಂ
ದ ಬೇಕಾದಷ್ಟು ಗಾಳಿ ಬೆಳಕು ಒಳಕ್ಕೆ ಬರುತ್ತಿತ್ತು. ಆ ಸ್ಥಳ
ದಲ್ಲಿ ನಾವಿದ್ದೇವೆ ಎಂದು ಯಾರು ಎಷ್ಟು ಹುಡುಕಿದರೂ
ಗೊತ್ತಾಗುವಹಾಗಿರಲಿಲ್ಲ. ಅಲ್ಲಿ ಆಕೆ ನಾನು ಕೂತುಕೊಂಡೆ
ವು. ಆಗ ಆ ಹೆಂಗಸು ಹೇಳಿದ್ದೇನೆಂದರೆ:-

ಇಲ್ಲಿಗೆ ಮುರುಗಾವುದ ದೂರದಲ್ಲಿ ನನ್ನ ಗಂಡನ ಮನೆ ಇದೆ.
ನಾವು ಜಾತಿಯಲ್ಲಿ ಉಪ್ಪಲಿಗರು. ನನಗೆ ಗಂಡಇದಾ
ನೆ. ಎರಡು ಮಕ್ಕಳಿವೆ. ನನ್ನ ಗಂಡ ಒಳ್ಳೇ ಪ್ರಾಯದವ
ನು. ತಕ್ಕಮಟ್ಟಿಗೆ ನೆಮ್ಮದಿಯಾಗಿದಾನೆ. ಈ ವೂರಲ್ಲಿ
ಹೆಚ್ಚಾಗಿ ಹಣಗಾರನಾದ ಒಬ್ಬ ಉಪ್ಪಲಿಗ ಇದಾನೆ. ಅವನಿ
ಗೆ ೬೦ ವರುಷವಾಗಿದೆ. ಅವನಿಗೆ ಮೂರುಜನ ಹೆಂಡಿರಿದಾ
ರೆ. ಮಕ್ಕಳಿಲ್ಲ. ನನ್ನನ್ನು ಮದುವೆಯಾದರೆ ಮಕ್ಕಳಾಗು
ವುದೆಂದು ಯೋಚಿಸಿ, ನನ್ನ ಮಕ್ಕಳನ್ನು ನನ್ನ ಗಂಡನಿಗೆ
ಬಿಟ್ಟು, ಅವನಿಗೆ ನನ್ನ ಮದುವೇತರವನ್ನೂ ಮೇಲೆ ೧೦೦
ವರಹವನ್ನೂ ಕೊಟ್ಟು ನನ್ನ ತಾಳಿಯನ್ನು ಅವನಿಗೆ ಕೊಡಿ
ಸಿ ತರುವಾಯ ಈ ಮುದುಕನಿಗೆ ನನ್ನನ್ನು ಪುನಃ ಮದು
ವೇಮಾಡಬೇಕೆಂದು ಕೆಲವರು ಗೊತ್ತು ಮಾಡಿಕೊಂಡರು. ಈ
ಮುದುಕ ಜಾತಿಯ ಯಜಮಾನನಂತೆ. ಅವನ ಮಾತನ್ನು
ತೆಗೆಯುವುದಕ್ಕೆ ಯಾರಿಂದಲೂ ಆಗುವುದಿಲ್ಲ. ನನ್ನ ಗಂಡನು
ಅಳುತಾಬಂದು ನಿಂತುಕೊಂಡು ಈ ಮಾತನ್ನು ನನಗೆ ತಿಳಿ
ಸಿದನು. ಆಗ ನಾನು-ಛೀ, ಎಂಥಾ ಮಾತು ? ಇದ್ದರೆ ಒಬ್ಬ
---------------------------------------------------

        ಮಾಡಿದ್ದುಣ್ಣೋ ಮಹಾರಾಯ.  ೨೬೯

ಗಂಡ ಇರಬೇಕು, ಇಲ್ಲದಿದ್ದರೆ ಈ ಪ್ರಾಣ ಹೋಗಬೇಕು,
ಈ ಹಾಳ ಉಪ್ಪಲಿಗರ ಜಾತಿಪದ್ಧತಿಯನ್ನು ಸುಡಬೇಕು ;
ಒಬ್ಬರಹೆಂಡತಿಯನ್ನು ಇನ್ನೊಬ್ಬನಿಗೆ ಕೊಡುವುದು ಜಾತಿಪದ್ಧ
ತಿಯೆ ? ಒಂದು ಕಾಲಕೂ ನಡೆಯತಕ್ಕದ್ದಲ್ಲ. ಅವರ ಒಡವೆ
ಯೂ ಬೇಡ ಹಣವೂ ಬೇಡ, ನೀನೇ ನನಗೆ ಒಡವೆ, ನಿನ್ನ
ನ್ನೂ ಮಕ್ಕಳನ್ನೂ ಬಿಟ್ಟು ನಾನು ಎಂದಿಗೂ ಹೋಗತಕ್ಕ
ವಳಲ್ಲ ಎಂದೆ. ಈ ಮಾತನ್ನು ಹೊರಗಿದವರು ಕೇಳಿದರು,
ನನಗೆ ಇಲ್ಲದಸಮಾಧಾನವನ್ನೆಲ್ಲಾ ಹೇಳಿದರು. ಹರಗೀನ
ನಾನು ಒಪ್ಪಲಿಲ್ಲ. ಅವರೆಲ್ಲರೂ ಎದ್ದು ಹೊರಟು ಹೋದರು.
ತರುವಾಯ ೮-೧೦ ದಿವಸವಾಯಿತು. ಹಗಲು ಊಟದಹೊ
ತ್ತಿನಲ್ಲಿ ಹೊಲದಲ್ಲಿದ್ದ ನನ್ನ ಗಂಡಸಿಗೆ ಹಿಟ್ಟನ್ನು ತೆಗೆದು
ಕೊಂಡು ಹೋಗುತಿದ್ದೆ. ಜನರು ಯಾರೂ ಅಲ್ಲಿರಲಿಲ್ಲ.
ಹಿಂದುಗಡೆಯಿಂದ ಯಾರೋ ಬಂದು ನನ್ನ ಕಂಣನ್ನು ಬಟ್ಟೆ
ಯಿಂದ ಕಟ್ಟಿದರು. ಮತ್ತೆ ಯಾರೋ ಬಂದು ನನ್ನ ಬಾಯಿ
ಗೆ ಬಟ್ಟೆಯನ್ನು ಗಿಡಿದರು. ಹಿಟ್ಟನಗೂಡೆಯೂ ಉದಕದ
ಅಂಡೆಯ ನೀರಿನ ತಂಬಿಗೆಯ ಎಲ್ಲಿ ಎಲ್ಲಿಯೋ ಬಿದ್ದು ಹೋ
ಯಿತು. ಇಬ್ಬರು ಬಂದು ನನ್ನ ಕೈ ಕಾಲುಗಳನ್ನು ಕಟ್ಟಿ
ಎತ್ತಿಕೊಂಡು ಹೋದರು. ಕೊನೆಗೆ ಇಲ್ಲಿಗೆ ಕರೆದುತಂದು
ಕಂಣಬಿಚ್ಚಿದರು. ನೋಡಿದರೆ ಮದುವೇಸಾಮಾನೆಲ ಸಿದ್ಧ
ವಾಗಿದೆ. ನನಗೆ ಇಂಧಾ ವಿಪತ್ತು ಬಂತು, ಎಂದು ದುಃಖ
ಪಟ್ಟಳು.
ಅದಕ್ಕೆ ನಾನು ಅಮ್ಮ ನಿನ್ನ ಗಂಡ ಮಕ್ಕಳು ಇರು
----------------------------------------------

೨೭೦         ಮಾಡಿದ್ದುಣ್ಣೊ ಮಹಾರಾಯ.

ವಕಡೆಗೆ ನಿನ್ನನ್ನು ನಾನು ತಲಪಿಸುತ್ತೇನೆ, ಭಯಬೇಡ
ಎಂದು ಹೇಳಿದೆ. ನೀನು ಅಷ್ಟು ಉಪಕಾರವನ್ನು ಮಾಡಿದ
ರೆ ನೀನೇ ನನ್ನ ಭಾಗದ ಈಶ್ಚರ, ಎಂದಳು. ನಾನು
ರೊಟ್ಟಿ ತಿಂದೆ. ಅವಳಿಗೂ ಒಂದು ರೊಟ್ಟಿಯನ್ನು ಕೊಟ್ಟೆ.
ತರುವಾಯ ಕೂತು ವಿಶ್ರಮಿಸಿಕೊಂಡೆ. ಅಲ್ಲಿ ಇನ್ನೊ೦
ದು ಪ್ರಾಣಿಯೂ ಇರಲಿಲ್ಲ ಆ ಹೆಂಗಸಿನ ರೂಪವನ್ನೂ
ಪ್ರಾಯವನ್ನೂ ನೋಡಿ ನನಗೆ ಮನಸ್ಸು ಕಳವಳಗೊಂಡಿ
ತು, ನನ್ನು ಗುಂಪಿನಲ್ಲಿ ಯಾರೇ ಆಗಲಿ ಪರಸ್ತ್ರೀಗೆ ಆಶೆ
ಬಿದ್ದ ಕೂಡಲೆ ನಮ್ಮೂರೆಲ್ಲಾ ಹಾಳಾಗತ್ತೆ ಎಂದು ನನ್ನ
ಪ್ಪ (ಮಾದ) ಹೇಳಿದ್ದ ಮಾತು ಜ್ಞಾಪಕಕ್ಕೆ ಬಂತು. ಆಗ
ಮನಸ್ಸನ್ನು ಅಡಗಮೆಟ್ಟಿದೆ. ಅವಳನ್ನು ನನ್ನ ಅಕ್ಕನಂತೆ
ತಿಳಿದುಕೊಂಡೆ. ಅವಳೂ ನಾನೂ ಕಾಡುದಾರಿಯಲ್ಲಿ ಹೊರ
ಟೆವು. ಆ ದಾರಿಯಲ್ಲಿ ಹಕ್ಕಿಗಳು ಕೂಡ ಹಾರಾಡುತ್ತಿರಲಿಲ್ಲ.
ಅವಳ ಗಂಡನ ಊರಿಗೆ ಗಟ್ಟಿದಮೋಳೆ ಎಂದು ಹೆಸರು.
ಅದರ ಸಾಸಕ್ಕೆ ಹೋದೆವು. ಆ ವೂರು ಬಂದು ಹರಿದಾ
ರಿ ಇದೆ ಎನ್ನುವಾಗ ಎಲ್ಲಿಂದಲೋ ೧೦-೧೫ ಜನ ದುಂಡಾಳು
ಗಳು ಓಡಿವೋಡಿ ಬಂದರು. ಇವರನ್ನು ಆ ಹೆಂಗಸು ಮೊದ
ಲು ಕಂಡು ಗಟ್ಟಿಯಾಗಿ ' ಸತ್ತೆ ' ? ಎಂದು ಅರಿಚಿಕೊಂಡಳು.
ಹಿಂತಿರುಗಿನೋಡಿದೆ. ಆಕೆ ಕೈಯನ್ನು ಹಿಡಿದುಕೊಂಡು ಆ ಜನ
ರನ್ನು ಕುರಿತು-ನೀವು ಎಷ್ಟು ಜನವಾದರೂ ಇರಿ, ನಾನು ಹೆದ
ರುವುದಿಲ್ಲ. ಈ ಹೆಂಗಸಿನ ತಂಟೆಗೆ ಯಾರಾದರೂ ಬಂದರೆ,
ನಿಮ್ಮ ಹೆಂಡತಿಯರ ತಾಳಿ ಈ ಕ್ಷಣವೇ ಕಡೆದುಹೋಯಿ
-------------------------------------------------

        ಮಾಡಿದ್ದುಣ್ಣೋ ಮಹಾರಾಯ.  ೨೭೧
ತೆಂದು ತಿಳಿಯಿರಿ ಎಂದೆ. ನನ್ನ ಬಾಯಿಗೆ ಅಂಜದೆ ಆ ಜನ
ರು ಮುಂದರಿದು ಆ ಹೆಂಗಸಿನಮೇಲೆ ಬೀಳಲು ಬಂದರು.
ಆಗ ನಾನು ಆಕೆಯನ್ನು ಕೆಳಗೆ, ಕೂರಿಸಿ ನನ್ನಲ್ಲಿದ್ದ ಗುಪ್ತಿ
ಎಂಬ ಕತ್ತಿಯನ್ನು ಹಿರಿದು ಪಟಾ ತಿರುಗಿಸುತಾ ಆ ಹೆಂಗಸಿನ
ಸುತ್ತಲೂ ಸುತ್ತಾಡುತ್ತಾ ಬಂದೆ. ನಿಂತಕಡೆಯಲ್ಲಿ ನಿಲ್ಲದೆ
ಆಕೆಗೆ ಲೇಶವೂ ಕುಂದಕವಾಗದೆ ಎಲವರಸೆಗಳನ್ನೂ ನಾನು
ತಿರುಗಿಸುತ್ತಾ ಬಂದ ಕಾರಣ ೮-೧೦ ಜನರು ಕತ್ತೀಏಟು ತಗಲಿ
ಬಿದ್ದುಬಿಟ್ಟರು. ಕಾಲುಹೋದವರು ಕೈಹೋದವರು ಹೊಟ್ಟೆ
ಶೀಳಿದವರು ಮಗು ಕುಳಿದವರು ತಲೆಚಿಪ್ಪುಹಾರಿದವರು
ಹೀಗೆ ವಿಧವಿಧವಾಗಿ ಪೆಟ್ಟಾಯಿತು. ಅವರೆಲ್ಲರೂ ಮೇಲಕ್ಕೆ
ಏಳದಹಾಗೆ ಬಿದ್ದುಬಿಟ್ಟರು. ಮೂರುನಾಲ್ಕು ಜನಕ್ಕೆ ಪ್ರಾಣವೇ ಹೋದಹಾಗೆ ಕಾಣಿಸಿತು. ಮರುನಾಲ್ಕುಜನ ದೂರದಲ್ಲಿ
ನಿಂತು ನೋಡಿ ಹೆದರಿಕೊಂಡು ಅರಿಚುತಾ ಓಡಿ ಹೋದರು.
ಉಳಿದ ಒಬ್ಬಿಬ್ಬರು ಕಾದಿ ಹೊರಟುಹೋದರು, ಕಾಡೆಲ್ಲಾ
ರಕ್ತಮಯವಾದಗಾಯಿತು. ಆಗ ಆ ಹೆಂಗಸನ್ನು ಕರೆದು
ಕೊಂಡು ಅವರ ವೂರಿಗೆಹೋದೆ. ರಾತ್ರಿ ಊಟದಹೊತ್ತಾಗಿ
ತ್ತು. ಅವರಮನೆಯಲ್ಲಿ ಕೂಗಿ ಬಾಗಿಲತೆಗೆಸಿದೆ. ಆಕೆ
ಯೂ ನಾನೂ ಒಳಕ್ಕೆ ಹೋದೆವು. ಮನೆಯವರೆಲ್ಲಾ ಅಳು
ತಾಇದ್ದರು. ಅವಳ ಗಂಡ ಅನ್ನ ತಿಂದು ಮೂರುದಿವಸವಾಗಿ
ತ್ತು, ಮಕ್ಕಳಿಗೆ ಒಟ್ಟಹಾಕತಕ್ಕವರು ಯಾರೂ ಇಲ್ಲದೆ ಹಾಗೆ
ಯೇ ಬಿದ್ದಿದ್ದವು. ಅವರನ್ನು ನೋಡಿ ಆ ಹೆಂಗಸು ಬಹು
ದುಃಖಪಟ್ಟು ಮಕ್ಕಳನ್ನು ಆ ಕ್ಷಣದಲ್ಲಿಯೇ ಎತ್ತಿಕೊಂಡಳು.
-----------------------------------------------------

        ೨೭೨ ಮಾಡಿದ್ದುಣೋ ಮಹಾರಾಯ.

ಎಲ್ಲರೂ ಬಿಕ್ಕಳಿಸಿಕೊಂಡು ಅತ್ತತರುವಾಯ ಮೊದಲಿನಿಂದ
ಲೂ ಆ ಅಬಲೆಗೆ ಬಂದವಿಪತ್ತನೂ ಅದು ಪರಿಹಾರವಾದಬ
ಗೆಯನ್ನೂ ನಾನು ಆಕೆಸಹಾ ವಿವರಿಸಿದೆವು. ನನ್ನ ಪ್ರತಾ
ಪವನ್ನು ಹೇಳುವಕಡೆ ನಾನು ಕೊಚ್ಚಿಕೊಳ್ಳದೆ ಸಂಕ್ಷೇಪಮಾ
ಡಿದರೆ ಅದನ್ನು ಆಕೆ ಚೆನ್ನಾಗಿ ವಿವರಿಸುವಳು. ಹೀಗೆ ಎಲ್ಲ
ವನ್ನೂ ಹೇಳಿದಮೇಲೆ ಸಮಸ್ತರೂ ಸಂತೋಷಪಟ್ಟರು.
ನಮ್ಮ ಭಾಗದ ಪರಮೇಶ್ವರ ನಿನ್ನ ರೂಪದಲ್ಲಿ ಬಂದನೆಂದು ಮನೆಯವರೆಲ್ಲರೂ ನನ್ನನ್ನು ಬಹಳವಾಗಿ ಉಪಚರಿಸಿದರು
ನನ್ನನ್ನು ಮರುದಿವಸ ಇರಿಸಿಕೊಂಡಿದ್ದು ಔತನಮಾಡಿ ನನ
ಗೆ ಉಡುಗರೆಯನ್ನು ಕೊಟ್ಟರು. ನಾನು ಬೇಡವೆಂದು ಹೇಳಿ
ಬಿಟ್ಟೆ. ನನ್ನ ಸಾಹಸಕ್ಕೆ ಆ ಊರವರೆಲ್ಲಾ ಆಶ್ಚರ್ಯಪಟ್ಟರು.

ತರುವಾಯ ಆ ವೂರನ್ನು ಬಿಟ್ಟು ಬೇರೆ ದಾರಿಯಿಂದ
ಸಂಜವಾದಿಗೆ ಬಂದು ತಲುಪಿದೆ. ಅದುವರೆಗೆ ನಮ್ಮ ಗುಂಪಿ
ನವರೆಲ್ಲಾ ನನ್ನನ್ನು ಹುಡುಕಿ ಕಾಣದ ಯಾರೂ ಕೊಂದುಹಾ ಕಿರಬೇಕೆಂದು ಯೋಚಿಸಿಕೊಳ್ಳುತಾ ತಾವು ಊರಿಗೆಬಂದರು.
ನಾನು ಬರಲಿಲ್ಲವೆಂದು ನಮ್ಮ ಹೃನು ಬಹಳ ಪೇಚಾಡುತಾ
ಹುಡುಕುವುದಕ್ಕೆ ಕೆಲವು ಜನರನ್ನು ಕಟ್ಟಿಕೊಂಡು ಹೊರಡಲು
ಸಿದ್ಧನಾಗಿದ್ದನು. ಆ ಸಮಯಕ್ಕೆ ನಾನು ಹೋದೆ. ನಮ್ಮ
ಪ್ಪನು ನನ್ನನ್ನು ಕಂಡು ಸಂತೋಷಪಟ್ಟು ನೀನು ಯಾಕೆ
ಒಬ್ಬನೇ ಒಂದೆನಿಂತ? ಎಲ್ಲರೂ ಬಂದು ೧೦-೨೦ ದಿವಸವಾ
ದರೂ ನೀನು ಬರದೇಇರಲು ಕಾರಣವೇನೆಂದು ಕೇಳಿದನು.
ಉಪ್ಪಲಿಗಿಯ ಕಥೆಯನ್ನೆಲ್ಲಾ ಹೇಳಿದೆ. ಆಗ ನನ್ನಪ್ಪ
---------------------------------------------------

        ಮಾಡಿದ್ದುಣ್ಣೋ ಮಹಾರಾಯ. ೨೭೩

ನು-ನೀನು ಬಹು ಒಳ್ಳೆ ಕೆಲಸ ಮಾಡಿದೆ. ಗಂಡಸಾದವನಿಗೆ
ಪತಿವ್ರತೆಯಮಾನವನ್ನು ಕಾಪಾಡುವುದಕ್ಕಿಂತಲೂ ಪರಾಕ್ರಮ
ವಿಲ್ಲ; ಮಕ್ಕಳನ್ನೂ ಮುದುಕರನ್ನೂ ದೀನರಾದವರನ್ನೂ
ದುರ್ಬಲರನ್ನೂ ಕಾವಾಡುವುದಕ್ಕಿಂತಲೂ ಬೇರೆಧರ್ಮವಿಲ್ಲ,
ಎಂದು ಹೇಳುತ್ತಾ ಹಾಗೆಯೇ-ಇದುವರೆಗೂ ಹೀಗೆಯೇ ಈ
ವೂರವರು ನಡಿಸುತ್ತಾ ಬಂದರು, ಪರಸ್ತ್ರೀಮೇಲೆ ಕಂಣಹಾ
ಕದೆ ಇರುವುದು ನಾವು ಇದ್ದ ವೂರಿನ ಪದಾರ್ಧಕ್ಕೆ ನಾವು
ಆಶೆಬೀಳದೆ ಇರುವುದು, ಇವೆರಡೂ ನಮಗೆ ಇದುವರೆಗೆ ಪರ
ಮಧರ್ಮವಾಗಿ ನಡೆದುಬಂತು. ಇನ್ನು ಮೇಲೆ ಅದಕ್ಕೆ ಲೋಪ
ಬರುವಂತೆ ಕಾಣುತ್ತೆ. ಇಂಧಾ ಕೆಟ್ಟತನದಿಂದ ಊರೇ
ಹಾಳಾಗುತ್ತೆ. ಆ ತಾಯಿ, ಆ ಕೊಲ್ಲಾಪುರದ ಅಮ್ಮ ನೇ
ಕಾವಾಡಬೇಕು, ಎಂದು ಗೊಣಗಿಕೊಂಡನು.

ತರುವಾಯ ೨-೩ ದಿವಸದಲ್ಲಿಯೇ ಇನ್ನೊಂದು ಮೋಹಿಂ
ಹೊರಟೆವು. ದಾರಿಯಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಂಡ
ದ್ದು ಹೇಗೆಂದರೆ:
ಅಮಾಸೆ-ಪರಸ್ತ್ರೀಗೂ ನಾವು ಇರುವ ವೂರಿನಲ್ಲಿ ಪರರ
    ಸ್ಪತಿಗೂ ಆಶೆಬೀಳಬಾರದು. ಈ ಧರ್ಮ ಈಗ ಕೆಟ್ಟಿ 
    ತು ಎಂದು ನಮ್ಮಪ್ಪ ಹೇಳಿದ ಕಾರಣವೇನೋ
    ಅರಿಯೆ.
ಕಳ್ಳ ವರದ-ನಿಮ್ಮಪ್ಪ ಎಷ್ಟೋ ಕಾಲ ಕಂಡ ಮುದುಕ ; ಅವ
    ಹೇಳಿದ್ದು ನಿಜ. ಅಪ್ಪಾಜಿಯಬುದ್ದಿ ಈಚೆಗೆ ಬಲೇಕೆಟ್ಟು
    ಹೋಯಿತು. ಹಾರವ ಉಪಾದ್ರಿಬಂದು ಅವನ ಹತ್ತ
---------------------------------------------------

೨೭೪         ಮಾಡಿದ್ದುಣ್ಣೋ ಮಹಾರಾಯ.

    ರ ಸೇರಿದಾಗಿನಿಂದ ಪೂಜಾರಿಯ ಬುದ್ಧಿಯೇ ಕೆಟ್ಟುಹೋ
    ಯಿತು. ಅದಕ್ಕೆ ಮುಂಚೆ ಅವನು ಆಡಿದ್ದೇರಾಗವಾಗಿ
    ತ್ತು, ಅವ ಹೇಳಿದ್ದು ಯಾವುದು ತಪ್ಪುತಿತ್ತು ?
ಅಮಾಸೆ-ಸಿದ್ಧ, ಅಪ್ಪಾಜಿ ಏನಮಾಡಿದ ? ಕೂತಕಡೆಬಿಟ್ಟು
    ಏಳುವುದಿಲ್ಲವಲ್ಲಾ? ಅಂತು ಅವನಮುಖ ಒಂದುಬಗೆಯಾ
    ಗಿದೆಯಪ್ಪ, ಮೊದಲಿನಹಾಗೆ ಕಳೆಯಾಗಿಲ್ಲ.
ಸಿದ್ದ- ಅದು ಹೇಗೆಇದ್ದಾತುಅಮಾಸೆ ? ಮನಸಿನಂತೆ ಮನಸ.
    ಮಾಡೋಕೆಲಸ ಎಂತೇದು, ಮನೇ ಕುಲಕ್ಸವಾಗೋ
    ಕೆಲಸವ ?
ಕಳ್ಳವರದ-ಉಪಾದ್ರಿ ದೀಕ್ಷಿತರ ಮನೆಯಲ್ಲಿಯೇ ಹುಟ್ಟಿ ಬೆಳೆ
    ದ. ಅವರು ಇವನಿಗೆ ಬಲೇ ಉಪಕಾರಮಾಡಿದರು.
    ಓದಿಸುವಾಗ ಹೈಕಳನ್ನು ಹೊಡೆಯಬೇಡ ಎಂದರಂತೆ.
    ಅದಕೆ ಮುನಸಿಕೊಂಡು ಒಳಗೇ ಇಸಾ ಕಾರುತಾ ಇದ್ದ.
    ಮಾದೇವನ ಹೆಡತಿ ಕೆಟ್ಟವಳು ಹಾಗೆಹೀಗೆ, ಯಾರುಬೇ
    ಕಾದರೂ ಅವಳನ್ನು ಕೆಡಿಸಬಹುದು ಎಂದು ಏನೇನೋ     ಹೇಳಿ ಅವಳಿಗೆ ಮನಸ್ಸ ಕೆಡಿಸಿದನಂತೆ. ಅದರಮೇ
    ಲೆ ಉಪಾದ್ರಿ ಮಾತಕೇಳಿ ಅವಳ ಮೇಲೆ ಅಪ್ಪಾಜಿ ಬೀಳಾ
    ಕೆ ಹೋದನಂತೆ, ಅವಳೆನೋ ಇವನ ಎದೆಗೆ ಕಲ್ಲಿನಿಂ
    ದ ಹೊಡೆದು ಓಡಿದಳಂತಪ್ಪ, ಅಂತೂ ಅಪ್ಪಾಜಿಯೇ
    ನೋ ಎದೆ ಬಹುನೋವು ಎನ್ನುತಾ ನರಳುತಾ ಇದಾ
    ನೆ. ಇಷ್ಟು ಮಾತ್ರ ನಾನು ಬಲ್ಲೆ.
ಅಮಾ-ಆ ಬೋಡ್ಡಿ ಬಲೆ ಸಡಕಿನವಳು, ಇವನ ಲಕ್ಷ್ಯ ಮಾಡ
---------------------------------------------------
        ಮಾಡಿದ್ದುಣ್ಣೋ ಮಹಾರಾಯ.  ೨೭೫

    ತನಳೆಯ ? ಊರವರೊಡವೆಗೆ ಆಶೆಬೀಳೋದು ಎಂತ     ಏನೇನೋ ನಮ್ಮಪ್ಪ ಅನ್ನುತಿದ್ದ, ಅದೇನೋ ಗೊತ್ತಾ
    ಗಲಿಲ್ಲ.
ವರದ-ಹಾಗೆ ನಮ್ಮ ರಲ್ಲಿ ಇನ್ನೊಂದು ನಡೆಯಿತು. ಅದ
    ನ್ನು ಕಿಲ್ಲೇದಾರ ಸುಬೇದಾರ ಇವರೆಲ್ಲಾ ಸೇರಿ ಅಲ್ಲ
    ಲ್ಲೇ ತಿಪ್ಪೇಸಾರಿಸಿಬಿಟ್ಟರು. ಮಾದೇವನ ಹೆಡತಿಗೆ ಚಳಿ
    ಜರಬಂದು ಕಿರುಮನೆಯಲ್ಲಿ ಮನಿಸಿಕೊಂಡಿದ್ದಳಂತೆ. ಉ
    ಪಾದ್ರಿ ಒಳಗೆ ಎಲ್ಲಾ ಕಂಡುಕೊಂಡು ಅವಾಜಿಗೆ ಇಲ್ಲದ
    ಆಸೆ ತೋರಿಸಿ ಆ ಕರುನುನೆಗೆ ಕನ್ನ ಹೊಡಿಸಿದ.
    ಅಪ್ಪಾಜಿಯ ಒಳಕ್ಕೆ ನುಗ್ಗಿದ್ದ. ಅವಳು ಆ ರಾತ್ರೆ
    ಹೊರಗೆ ಮಲಗಿದಳಂತೆ ಈ ಪೂಜಾರಿ ಕೆಟ್ಟ ಮುಖ
    ಹಾಕಿಕೊಂಡು ಆ ಕಿರುಮನೆಯಲ್ಲಿದ್ದ ಚಿಲ್ಲರೆ ಚೀಟಪಾಟಿ
    ಯನೂ ತೆಗೆದುಕೊಂಡು ಹೊರಟುಬಂದ, ಇದೆಲ್ಲಾ
    ಆಗಿ ೬-೭ ದಿವಸವಾಯಿತು ನೆಲಗವಿಸಿದ್ದನೇ ಕನ್ನ
    ಹೊಡಿಯಾಕೆ ಹೋಗಿದ್ದವ, ಅವನೇ ಹಿಂಗೆಹಿಂಗೆ ಆಯಿ
    ತು ಎಂತ ಹೇಳಿದ.
ಅಮಾಸ-ನಮ್ಮಪ್ಪ ಎಷ್ಟೋ ನೋಡಿದವ, ಆಷ್ಟಕಾಣದೆ ಹೇಳಿ
    ದನ ? ಇದೆಲ್ಲಾ ಕೇಳಿದಮೇಲೆ ನನಗೇನೋ ಕೈಕಾಲೇ
    ಬರಾಕಿಲ್ಲ. ಈ ಸಾರಿ ನಾವು ಹೋದಾಗ ಏನಾಗುತ್ತೊ ?
    ಹೀಗೆ ಮಾತನಾಡಿಕೊಂಡು ನಾನು ಹೋಗಿ ವಾಮನೂ     ರಲ್ಲಿ ಒಬ್ಬ ದೇವಾಂಗದವನ ಮನೆಗೆ ಕನ್ನಾ ಹಾಕಿದವು. ಒಳಗೆ ಎಲ್ಲವನ್ನೂ ಸವರಿಸುತಾ ಇರುವಾಗ ಭಾಗ ಕರೀಬಟ್ಟೇ ಹೊದ್ದು
-----------------------------------------------------
೨೭೬         ಮಾಡಿದ್ದು ಸ್ಕೋ ಮಹಾರಾಯ.

ಕೊಂಡು ಮಲಗಿದ್ದ ಒಬ್ಬನಮೇಲೆ ಕತ್ತಲೆಯಲ್ಲಿ ಕಾಣದೆ ಕಾಲಿ
ಟ್ಟು ತುಳಿದೆ. ಅವನು ತನ್ನ ಮಗಲಲ್ಲಿರಿಸಿಕೊಂಡಿದ್ದ
ದೊಂಣೆಯನ್ನು ಎತ್ತಿ ಎರಡು ಬಾರಿ ಬೀಸಿದ. ಮೊದಲನೇ
ಏಟು ಬಲದರಟ್ಟೆಗೆ ಬಿತ್ತು. ಕೈಲಿದ್ದ ಪೆಟ್ಟಿಗೆ ಕೆಳಕ್ಕೆ
ಬಿತ್ತು. ಸದ್ದಾಯಿತು. ಮನೆಯವರೆಲ್ಲಾ ಎದ್ದರು. ಕೈಲಿದ್ದ ಬಾಕು ಎಲ್ಲಿಯೋ ಹೋಯಿತು. ಅವನು ಎರಡನೇ ಬಾರಿ ಬೀಸಿ
ದಾಗ ದೊಂಣೆಪಟ್ಟು ನನ್ನ ತೊಡೆಗೆ ಬಿತ್ತು. ನಾನು ಜ್ಞಾ
ನತಪ್ಪಿ ಕೆಳಕ್ಕೆ ಬಿದ್ದೆ. ದೀಪಾ ಹತ್ತಿಸಿದಹಾಗೆ ಕಂಡಿತು.
ನನ್ನ ಕೈ ಕಾಲುಗಳನ್ನು ನವಾರದಿಂದ ಬಿಗಿದಹಾಗೆ ತೋರಿತು. ಬೆಳಗಿನಜಾವದಲ್ಲಿ ಜ್ಞಾನಬಂತು. ಈಗ ನನ್ನ ಸಂಗಡ ಬಂ
ದಿರುವ ನಮ್ಮ ಜೊತೆಗಾರರನ್ನು ಹಿಂಗಟ್ಟು ಕಟ್ಟಿ ತಂದು ಇರಿಸಿಕೊಂಡಿದ್ದರು. ಸರಾರದವರು ಬಂದು ನೋಡಿ ನಾವು ಮೈಸೂರುಸೀಮೆಯವರೆಂದು ನನ್ನನ್ನು ಇಲ್ಲಿಗೆ ಕರೆದು
ತಂದರು.

ಅಮಾಸೆಯು ಈ ಪ್ರಕಾರ ತನ್ನ ಕಥೆಯನ್ನು ಹೇಳಿ
ಮುಗಿಸಿದನು. ಇದನ್ನು ಕೇಳಿದ ಕಳ್ಳಬಂದನು ಇದನ್ನು
ಗುಟ್ಟಾಗಿ ಬಂದೀಖಾನೇ ದರೋಗನಿಗೆ ಮಾತ್ರ ಹೇಳಿದನು.
                       ===================
   
        ೧ ೨ ನೇ ಅಧ್ಯಾಯ.

ಅಮಾಸೆಯು ತನ್ನ ಪೂರ್ವವೃತ್ತಾಂತವನ್ನೆಲ್ಲಾ ಹೇಳಿ
ಮುಗಿಸಿದ ಮರುದಿವಸಗಳ ತರುವಾಯ ಮೈಸೂರಿಂದ
ಅಧಿಕಾರಿಗಳು ಬಂದು ನಗರದ ಆಮೀಲರಮನೆಯನ್ನೂ ಕಿಲ್ಲೆ
-----------------------------------------
೨೭೭         ಮಾಡಿದ್ದುಣ್ಣೋ ಮಹಾರಾಯ.

ದಾ ರರಮನೆಯನ್ನೂ ತಾಲ್ಲೂಕಿನ ಇತರ ಅಧಿಕಾರಿಗಳ ಮನೆ
ಯನ್ನೂ ಝಡತೀ ಮಾಡಿದರೆಂತಲೂ ಅವರ ಮನೇ ನಗಗಳು
ಅನೇಕವನ್ನು ತೆಗೆಸಿಕೊಂಡು ಹೋದ್ದಲ್ಲದೆ ಆಯಾ ಅಧಿ
ಕಾರಿಗಳನ್ನು ಅಮಾನತ್ತು ಮಾಡಿ ಮೈಸೂರಿಗೆ ಕರೆದುಕೊಂ
ಡುಹೋದರೆಂತಲೂ ಬಲವಾದ ವರ್ತಮಾನ ಹುಟ್ಟಿತು. ಕಾರ
ಣವೇನೋ ಯಾರಿಗೂ ಗೊತ್ತಾಗಲಿಲ್ಲ. ಆಗ ಮಾರನುಣರಾ
ಯನ ಹೆಂಡತಿಯು ಅಯ್ಯೋ ಈ ಕೇಡು ಉಂಟಾ ? ಯಜ
ಮಾನರು ತಾಲ್ಲೂಕು ಧೋರಿ, ಅವರನ್ನು ಹಿಡಿದುಕೊಂಡು ಹೋಗಬಹುಂದಾ ? ಕೇಳೋರೇ ದಿಕ್ಕಿಲ್ಲದಹಾಂಗದಲ್ಲ. ಅವರ ಅಧಿಕಾರಕ್ಕದಾವುದು ದೊಡ್ಡದು. ಕೊಡುತಾರೆ ತಕೋತಾರೆ
ಲಾಕ್ ಏಕಮಾಡಥಾರ ಏಕ್‌ ಲಾಕ್‌ ಮಾಡಥಾರ, ಆಕ್ಷೇಪಣಿ
ಏನದ ? ಇಂಥಾ ಅಧಿಕಾರಿಗಳ ಮಾನ ಹೀಂಗ ಹೋಗಬಹುಂ
ದಾ ? ನಮ್ಮ ಮುನಿ ಎಲ್ಲಿ ಗುಡಿಸಿದಹಾಂಗ ತೆಗೆದುಕೊಂಡು
ಹೋದರಲ್ಲ. ಯಜಮಾನರು ಒಂದುಕಾಸು ಮುಟ್ಟುತಿರಲಿಲ್ಲ.
ದಿಕ್ಕಿಲ್ಲದಸೀಮ್ಯಾಗ ಬಂದು ಹೀ೦ಗಾಯಿತು. ಸ್ವಲ್ಪಕ್ಕೆಲ್ಲಾ
ನಾವು ಹಾ೦ಗೆ ಹೋಗುತಿದ್ದೆವಾ ? ಅಂಧಾ ಧೋರಿ ಈ ತಾ
ಲ್ಲೋಕಿಗ ಎಂದಿಗೆ ಬಂದಾನು ? ನನ್ನು ಮನಿಯವರೂ
ಹಾಂಗೇ ಹೇಳಿ ಧಾ೦ಗ ಕೇಳೋಣಿಲ್ಲ. ದಾವುದೂ ಮುಟ್ಟಬೇ
ಡಿ ಅಂತ ಆಗಾಗ ಹೇಳಿದ್ದೇನು. ಆತಗದಾವುದು ಲಕ್ಷ್ಯ ?
ನಾನು ಆಮೀಲರ ಹೆಂಡತಿಯಲ್ಲವ, ಇವರು ಹ್ಯಾಂಗಾದರೂ
ಹೋಗಲಿ, ನನಗ ಅವಮಾನವಲ್ಲವ ? ಇಂಥ ಗ್ಯಂಡ ಇದ್ದೇ
ನು ? ಸುಮ್ಮಗ ಕಂಣಮುಚ್ಚಿ ಕೊಂಡು ಆ ಕಡಿ ಹಾಳಾದರ
----------------------------------------------------

೨೭೮     ಮಾಡಿದ್ದುಣ್ಣೋ ಮಹಾರಾಯ.

ಲಕ್ಷಣವಾಗಿ ಈ ಹಳತಲಿ ಬೋಳಿಸಿಕೊಂಡು ಅಂಗಾ ರಹಚ್ಚಿ
ಕೊಂಡು ಸುಖವಾಗಿ ಇದ್ದೆನು. ಅಷ್ಟಕ್ಕ ಮಾರ್ಗ ಇಲ್ಲ
ದ ಹೀಂಗೆ ಈತಗಾಗಿ ನಾನು ಹೊರಗ ಮುಖಇಡಲೀಕ್ಕಾಗ
ದಹಾಂಗಾಯಿತು. ಏನಬಡಿಕ್ಕೊಳ್ಳಿ ? ಎಂದು ನೆರೆಹೊರೆಯ
ವರ ಸಂಗಡ ಆಡಿಕೊಂಡಳು.

ಅತ್ತ ಮೈಸರಿಂದ ಸವಾರಕುದುರೆಯವರೂ ಬಾರಿನವ
ರೂ ಸಹಾ ಮದ್ದುಗುಂಡು ಕತ್ತಿ ಭರ್ಜಿಗಳಸಮೇತ ಚಾಮ ರಾಜನಗರದ ಕಡೆಗೆ ಹೊರಟರು. ಇದಕ್ಕೂ ಕಾರಣ ಸಾಧಾರ
ಣ ಜನರಿಗೆ ಗೊತ್ತಾಗಲಿಲ್ಲ. ತೊಪ್ಪೂರು ಕಣವೆ ಗೆಜ್ಜಲಹಟ್ಟಿ
ಕಣವೆ, ಈ ಮಾರ್ಗವಾಗಿ ಕಣಿವೇಕೆಳಕ್ಕೆ ಹೋಗುವ ಜನರ
ನ್ನು ಕಳ್ಳರು ದರೋಡೇಮಾಡಿ ಸುಲಿಗೆಮಾಡಿ ಅನೇಕರನ್ನು
ತಲೇ ಒಡೆಯುತಾಇದ್ದರು. ಇದರ ಬಂದೋಬಸ್ಸಿಗಾಗಿ ಆ
ದಾರಿಗಳಲ್ಲಿ ಬಾರುಮಾಡಿದ ಬಂದೂಖವನ್ನು ಹಿಡಿದು ಸಿಪಾಯಿ
ಗಳೂ ಸವಾರರೂ ಗಸ್ಸು ಮಾಡುವ ಏರ್ಪಾಡು ಇತ್ತು. ಈ
ಕೆಲಸಕ್ಕಾಗಿ ಬಾರಿನವರೂ ಸವಾರರೂ ನಗರಕ್ಕೆ ಬಂದಿರಬ
ಹುದೆಂದು ಜನರು ತಿಳಿದುಕೊಂಡರು. ಇತರವಿಧವಾದ ವುಕಾ
ರೆ ಲೇಶವೂ ಆಗಲಿಲ್ಲ. ಕಣವೇಕೆಳಕ್ಕೆ ವಿಜಯಯಾತ್ರೆಗಾಗಿ
ಮೋಹಿಂ ಹೋಗಿದ್ದ ಜನರು ಯಾರೂ ಸಂಟವಾಡಿಗೆ ಹಿಂತಿ
ರುಗಿಬರಲಿಲ್ಲ. ಎಂದಿನಂತೆ ಎಲ್ಲರೂ ಬರುತ್ತಾರೆ ಎಲ್ಲವೂ ಸರಿ
ಯಾಗಿ ನಡೆದುಕೊಂಡು ಹೋಗುತ್ತೆ ಎಂದು ಆ ಗ್ರಾಮದವ
ರೆಲ್ಲಾ ತಿಳಿದುಕೊಂಡು ನಿರ್ಭಿತರಾಗಿದ್ದರು,

ಆಗ ನಡೆದ ಅದ್ಭುತವನ್ನು ಏನಹೇಳಲಿ ! ಸದಾಶಿವದೀ
--------------------------------------------------
        ಮಾಡಿದ್ದುಣ್ಣೋ ಮಹಾರಾಯ.  ೨೭೯

ಕ್ಷಿತನು ಊರಿಗೆ ಬಂದಮೇಲೆಯೂ ಹಟ್ಟಿಯಲ್ಲಿ ಮಲಗಿದ್ದ
ಸೀತಮ್ಮ ನ ಸ್ಥಿತಿ ಏಕರೀತಿಯಾಗಿತ್ತು. ಆ ಮಧ್ಯೆ ಕಿಟ್ಟಿ
ಜೋಯಿಸನು ನಸ್ಯದ ಆಶೆಗೋಸ್ಕರ ಅಮ್ಮನಗುಡಿಯ ಗುಂಪಿ
ಗೆ ಹೋಗಿ ಕೂತುಕೊಂಡು ಹರಟೇ ಬಡಿಯುತಿರುವಾಗ, ಪೂಜಾ
ರಿ ಅಪ್ಪಾಜಿಯು ಲೋಕಾಧಿರಾಮವಾಗಿ ಯಾವದೋ ಮಾತ
ನಾಡುತಾ-ಏನುಕಿಟ್ಟಪ್ಪ, ದೀಕ್ಷಿತರು ಮೈಸೂರಿಗೆ ಹೋಗಿ
ಬಂದರಲ್ಲ, ಯಾರಾದರೂ ಸಿಕ್ಕಿದರೆ ? ನಿಮ್ಮ ಮಹಾದೇವನ
ಹೆಂಡತಿಗೆ ಏನಮಾಡಿಸಿದರು ? ಎಂದನು. ಅದಕ್ಕೆ ಕಿಟ್ಟಜೋ
ಯಿಸನು-ನಮ್ಮ ಭಾವ ಮೈಸೂರಿಗೆ ಹೋಗಿಬಂದರು.
ದೊಡ್ಡ ಮಂತ್ರವಾದಿ ೩-೪- ದಿವಸದಲ್ಲಿ ಬರುತ್ತಾನೆ, ಅದು
ಎಂಧಾ ರೋಗವೇ ಆಗಲಿ ಭೀತಿಶಂಕೆಯ ಆಗಲಿ ದೇವರಕುಶಲ
ವಾದರೂ ಸರಿಯೇ ಮನುಷ್ಯರ ಕಡೆಯದಾದರೂ ಸರಿಯೆ, ಒಂದು
ದಿವಸದಲ್ಲಿ ಗುಣಮಾಡುತ್ತಾನೆ. ನೀನು ಏನೂಮಾಡಲಾರದೇ
ಹೋದೆ ; ಇನ್ನೆನುಮಾಡುವುದು ? ಯಾರನ್ನಾದರೂ ಕರೆದು
ತಂದು ಎನಾದರೂ ಮಾಡಿಸಲೇಬೇಕು, ಎಂದು ಐಲೈಲಾಗಿ
ನೆಸ್ಸದ ಸಿಂಬಳವನ್ನು ಮೇಲಿನ ತುದಿಯಿಂದ ಬಾಯಿಗೆ ಹರಿ
ಸಿಕೊಳ್ಳುತಾ ಅದನ್ನು ಆಗಾಗ್ಗೆ ತೆಗೆದು ಬಟ್ಟೆಗೆ ಒರಿಸಿಕೊ
ಳ್ಳುತಾ ಮಾತನಾಡಿದನು. ಈ ಮಾತ ಕೇಳಿದಕೂಡಲೆ ಅಪ್ಪಾ
ಜಿಯ ಮನಸ್ಸಿನಲ್ಲಿ ಬಹಳ ಕಳವಳವಾಯಿತು, ದೊಡ್ಡ
ಸಂಸ್ಥಾನದಿಂದ ಬರತಕ್ಕ ಮಂತ್ರವಾದಿಯ ಹೆಸರುವಾಸಿಯು
ಎಷ್ಟಾದರೂ ದೊಡ್ಡದಾಗಿಯೇ ಇರುತ್ತೆ ? ಅವನು ಬಂದ
ಮೇಲೆ ಏನಾದರೂ ಮಾಡಿಯಮಾಡುತ್ತಾನೆ ಎಂಬ ದಿಗಲು
---------------------------------------------------

೨೮೦         ಮಾಡಿದ್ದುಣ್ಣೋ ಮಹಾರಾಯ.
.
ತಟ್ಟಿತು. ಈ ಮಾತು ಜರಗಿದದಿರಸ ಮಧ್ಯಾಹ್ನ ಸೀತಮ್ಮ
ನಸ್ಥಿತಿ ವ್ಯತ್ಯಾಸವಾಯಿತು. ಗಳಿಗೆಗಳಿಗೆಗೆ ಮೇಲಿಬ್ಯುಸ
ಹೆಚ್ಚಾಯಿತು. ಬಾಯಲ್ಲಿ ಮೊದಲೆಹೊರಟಿತು. ಗಟ್ಟಿಯಾಗಿ
ಶ್ವಾಸ ತುಯ್ಯುವುದಕ್ಕೆ ಮೊದಲಾಯಿತು. ಮನೆಯಲ್ಲಿ ಎಲ್ಲ
ರೂ ಭೀತಿಪಟ್ಟರು. ಆಗ ತಿಮ್ಮಮ್ಮನು- ಇಷ್ಟುದಿವಸ
ಸುಮ್ಮನೇ ಬಿದ್ದಿರಲಿಲ್ಲವೆ? ಈಗೇನಂತೆ ಇವಳಿಗೆ ಬಂದದ್ದು ?
ಸೊಸೆಯನ್ನು ಕಂಡರೆ ಮಾವನವರು ಅಷ್ಟೊಂದು ಪ್ಯಾರಂ ದಹತ್ತಿಸುತಾ ಇದಾರಲ್ಲ, ಹೀಗೂ ಮಾಡಿದರೆ ಹೇಗೆ ಇರುತ್ತೆ ನೋಡೋಣ ಎಂದು ಆಟಹತ್ತುತಾಳೆ, ಬೇಕು ಎಂತ ಕೆಂಪು
ತೊಗಲಿನ ಸೊಸೆಯನ್ನು ಮಾಡಿಕೊಂಡಿದ್ದಾರೆ. ಏನು ನನ್ನ
ಹಾಗೆ ಕರೀಮೂತಿಯೇ ? ಎಂದಳು. ಆಗ ಪಾರ್ವತಮ್ಮ ನು
ತಿಮ್ಮು, ಆ ಹುಡುಗಿ ಸಾಯುತಾ ಬಿದ್ದಿದಾಳೆ ಗಳಿಗೆಯೋ ಕ್ಷಣ
ವೋ ಎನ್ನುವಹಾಗೆ ಇದೆ, ಈಗಲೂ ಅವಳ ಮೇಲೆ ನಿನಗೇನು?
ಎಂದಳು. ಅದಕ್ಕೆ ನಿಮ್ಮ ಮೃನು ನಿಮ್ಮ ಷ್ಟಕ್ಕೆ ನೀವು ಬಿದ್ದಿರಿ.
ನನ್ನ ಮಾತಿಗೆ ನೀವು ಬರಬೇಡಿ. ಇನ್ನೇನು ಎಲ್ಲಾ ಕೈಗೆ
ಸಿಕ್ಕಿತು ? ನಮ್ಮಪ್ಪನ ಮನೆ ಎಲ್ಲಾ ಬರಿದಾಯಿತು. ಈಗ ನನ್ನ
ಮೇಲೆಯೇ ಎಲ್ಲರೂ ತಾನಬಾಜಿಗೆ ಹೊರಟರು. ಹೀಗೆ
ಮನಸ್ಸು ಬಂದಹಾಗೆ ತಿರಸ್ಕಾರವಾಗಿ ಮಾತನಾಡಿದಳು. ಈ
ಮಧ್ಯೆ ಸೀತಮ್ಮನಿಗೆ ಪ್ರಾಣ ಉಳಿಯುವುದಿಲ್ಲವೆಂದು ಗೊತ್ತು
ಮಾಡಿ ಆ ದಿನ ಮೂರನೇ ಜಾವದಲ್ಲಿ ಹೊರನಡುವೆಗೆ ಹಿಡಿ
ದರು. ಅದುವರೆಗೆ ಮನೆಯವರಿಗೆ ಗಾಬರಿ ಹೆಚ್ಚಾಗಿ ಯಾರಿ
ಗೂ ಊಟವೇ ಇರಲಿಲ್ಲ. ಮುಂದೆ ಏನಾದೀತೋ ಜಾಗ್ರತೆ
--------------------------------------------------

        ಮಾಡಿದ್ದುಣ್ಣೊ ಮಹಾರಾಯ.   ೨೮೧

ಯಾಗಿ ಊಟಮಾಡಿಕೊಳ್ಳೋಣವೆಂದು ಒಬ್ಬೊಬ್ಬರಾಗಿ ಹೊರ
ಟರು, ಸದಾಶಿವದೀಕ್ಷಿತನು ಸ್ನಾನಮಾಡುತಿದ್ದನು. ಆಗ ಪಾರ್ವ
ತಮ್ಮನು ಮಗನಿಗೆ  ನೀರನ್ನು ತುಂಬಿ ಕೊಡುತಾ ಅವನನ್ನು
ಕುರಿತು- ಮಗು ತಿಮ್ಮು ಹಂಗಣೆ ಸಾಕಾಗಿದೆಯಪ್ಪ; ಈವೂ
ರಿಗೆ ನಾವು ಬಂದದ್ದು ಹಂಗಿನ ಕೂಳ ತಿನ್ನುವಹಾಗಾಯಿತು.
ಬಾಯಿ ಹಿಡಿಯದ ಮಾತನ್ನೆಲ್ಲಾ ಆಡುತಾಳೆ. ಇವಳ ಸಂಗ
ಡ ಹೊಡ ಚಂಡಲ ಹತ್ತಿ ನನಗೆ ಬೇಜಾರಾಗಿದೆ. ಮೈಸೂರಲ್ಲಿ
ನಾವು ತಿರಕೊಂಡು ತಿನ್ನುತಿದ್ದದೇನು ? ಇಲ್ಲಿಗೆ ಬಂದಮೇಲೆ
ಇವರ ಅಪ್ಪನನನೇ ಐಶ್ವರ್ಯವನ್ನೆಲ್ಲಾ ನಾವು ಹೊತ್ತುಕೊಂ
ಡು ಹೋದ್ದೇನು ? ಹೇಗಾದರೂ ಆಗಲಿ ; ಮತೊಬ್ಬರಮನೆ
ಯಲ್ಲಿರುವುದು ನನಗೆ ಮಾನವಲ್ಲ. ಈ ಊರಿಗೆ ನಾವು ಬಂದ
ದ್ದು ನನಗೆ ಆಗಿ ಬರಲಿಲ್ಲ. ಹಳ್ಳಿಗಾಡವಾಸ ನಮಗೆ ಪಲ
ಸಿಗೆ ಇಲ್ಲ. ಮೊದಲಿನಿಂದಲೂ ಹಾಗೆಯೇ ಇನ್ನೆನು ರತ್ನ
ದಂಥಾ ಹುಡುಗಿಯನ್ನು ತಂದು ಕಾಡುಪಾಲುಮಾಡಿ ಬಿಡು
ತ್ತೇವೆ. ಇನ್ನೆಲ್ಲಾ ಒಂದುಗಳಿಗೆ ಎರಡುಗಳಿಗೆಯೋ, ಅ
ಷ್ಟರಲ್ಲಿಯೇ ಇದೆ. ಇಂಥಾ ಕಾಲದಲ್ಲಿಯ ಇವಳು ಹೀಗಾ
ಡುವುದು ನೋಡಿದವರಿಗೆ ತಾನೆ ಚೆನ್ನಾಗಿರುತ್ತೆಯೆ ? ಬಂದಿ
ರುವುದು ಅಸವಲ್ಲದರೋಗ, ಹಿಂದೆ ಕೇಳಲಿಲ್ಲ ಮುಂದೆ ಕೇಳು
ವುದಿಲ್ಲ. ಈಗಲೂ ಇವಳು ಹೀಗಾಡುತ್ತಾ ಬಂದರೆ, ಇವಳೇ
ಏನೋ ಮಾಡಿಬಿಟ್ಟಳು ಎನ್ನುತಾರೋ ಇಲ್ಲವೊ ? ಈಶ್ವರಬಲ್ಲ
ಯಾರ ಯಾರ ಮನಸ್ಸು ಹೇಗೆ ಹೇಗೆ ಇರುವುದೊ ! ನಮ್ಮ
ಮನಸ್ಸು ಕಳಂಕವಿಲ್ಲದ್ದಾಗಿದ್ದರೆ ಸರಿ, ಅದೇನಾದರೂ ಆಗಲಿ,
------------------------------------------------------

೨೮೬     ಮಾಡಿದ್ದುಣ್ಣೊ ಮಹಾರಾಯ.

ಇನ್ನು ಮೇಲೆ ನಾನು ಈ ಊರಲ್ಲಿರುವುದಿಲ್ಲ. ನಮ್ಮೂರಿಗೆ ಹೋ
ಗೋಣ. ಇಲ್ಲದಿದ್ದರೆ ನನ್ನೊಬ್ಬಳನ್ನಾದರೂ ಕಳುಹಿಸಿಬಿಡು.
ಪಶುಪತಿ ಮನೆಯಲ್ಲಿರುತೇನೆ. ಬೆನ್ನಲ್ಲಿ ಬಿದ್ದ ತಮ್ಮ ಒಂದು
ತುತ್ತು ಅನ್ನ ಒಪ್ಪತ್ತು ಹಾಕಲಾರನೆ ? ಸಾಯುವ ಕಡೆಗಾಲ
ಕ್ಕೆ ಹಂಗಿನಕೂಳು ಇಲ್ಲದೆ ಮರುದಿನವಾದರೂ ಇರೋಣ,
ಮೈಸೂರಿಗೆನಡೆ, ಎಂದು ಕಂಣಿನಲ್ಲಿ ನೀರಹಾಕುತಾ ಎಂದಳು.
ಆಗ ಸದಾಶಿವದೀಕ್ಷಿತನು ತಾಯಿಯನ್ನು ಕುರಿತು- ಅಮ್ಮ ನಾನು
ಎಲ್ಲವನ್ನೂ ಬಲ್ಲೆ. ಈಗ ಆಡಿ ಪ್ರಯೋಜನವಿಲ್ಲ. ನೀನು ಹೇಳಿ
ದ್ದೆಲ್ಲಾ ನನಗೂ ಗೊತ್ತಾಗಿದೆ. ನೀನು ಬಾಯಲ್ಲಿ ಆಡುತೀ
ಯ, ನಾನು ಒಳಗೇ ಕೊರೆದುಕೊಂಡು ಪೇಚಾಡುತೇನೆ. ಈ
ಊರಬಿಟ್ಟು ಹೋಗಬೇಕೆಂದು ನನ್ನ ಮನಸ್ಸಿನಲ್ಲಿಯೂ ಇದೆ.
ಅದಕ್ಕೆ ಸಮಯ ಬರುತ್ತೆ. ಅದುವರೆಗೆ ಬಂದದನ್ನೆಲ್ಲಾ ಅನುಭ
ವಿಸಿ ತೀರಬೇಕು, ಎಂದು ತಾಯಿಗೆ ಸಮಾಧಾನ ಹೇಳಿದನು.
ಎಲ್ಲರೂ ಜಾಗ್ರತೆಯಾಗಿ ಮಡಿ ಉಟ್ಟುಕೊಂಡು, ಎಲೇ ಮುಂದೆ
ಕೂತ ಶಾಸ್ತ್ರ ಮಾಡಿದರು, ಕಂಣಿಗೆ ಒಂದು ತುತ್ತು, ಮೂಗಿಗೆ
ಒಂದುತುತ್ತು ಹಾಕಿಕೊಂಡು ಎದ್ದು ಕೈ ತೊಳೆದುಕೊಂಡುಹೋಗಿ
ನೋಡುವಾಗ್ಗೆ ಸೀತಮ್ಮನ ಸ್ಥಿತಿ ಅಸ್ತಾವಸ್ಥೆಯಾಗಿತ್ತು. ಮ
ನೆಯವರೆಲ್ಲರೂ ಬಂದು ನೋಡಿದರು. ಆಗ ತಿಮ್ಮಮ್ಮನು-
ಎಲೆ ಮಗು ಸಾಕಿ, ನೀನು ಅಲ್ಲಿಗೆ ಹೋಗಬೇಡಮ್ಮ. ಹೆದ
ರಿಕೊಂಡೀಯೆ, ಇಲ್ಲಿಗೆ ಬಾ ಎಂದು ಮಗಳನ್ನು ಕೂಗಿದಳು.
ಪಾರತಮ್ಮನು ಸೀತನ ಬಾಯಿಗೆ ನೀರನ್ನು ಹಾಕಿದಳು. ಆ
ನೀರು ಕಟವಾಯಲ್ಲಿ ಸುರಿದು ಹೋಯಿತು. ತಟ್ಟನ ಮೈ
-----------------------------------------------------

        ಮಾಡಿದ್ದುಣ್ಣೋ ಮಹರಾಯ.   ೨೮೩

ಕೈಯೆಲ್ಲಾ ತಂಣಗಾಯಿತು. ಕೈಯಲ್ಲಿ ನಾಡಿಸಿಕ್ಕಲಿಲ್ಲ. ತುಯ್ಯು
ತಾ ಇದ್ದ ಶಾಸ ಒಂದು ಸಾರಿ ಗೊರ್ರೆಂದ ಹಾಗಾಯಿತು.
ಹಾಗೆಯೇ ನಿಂತು ಹೋಯಿತು. ರುದ್ರನಾಡಿ ಹಿಡಿದು ನೋ
ಡಿದರು. ಅದೂ ನಿಂತು ಹೋಯಿತು. ಎಲ್ಲಾ ಮುಗಿದುಹೋ
ಯಿತು. ಮನೆಯವರೆಲ್ಲರೂ ಗೊಳ್ ಎಂದು ಅಳುವುದಕ್ಕೆ
ಮೊದಲು ಮಾಡಿದರು. ಸೀತಮ್ಮನ ಮಗುವಾದ ಕೃಷ್ಣಸ್ವಾ
ಮಿಯು ದಿಗಲಿನಿಂದ ತಾನೂ ಅಳುವುದಕ್ಕೆ ಮೊದಲುಮಾಡಿ
ತು. ತಾಯಿಯ ಹತ್ತಿರ ಕೂತುಕೊಂಡು, ಅಮ್ಮ ಅಮ್ಮ,
ಹ್ಬು ಹ್ಬು  ಎನ್ನು ತಾ ಅವಳ ತುಟಿ ಬಿಡಿಸುವುದು, ಎದೆಯ
ಮೇಲೆ ಬಿದ್ದುಕೊಳ್ಳುವುದು ಸೆರಗ ತೆಗೆಯುವುದು, ಸೀರೇ
ಎಳೆಯುವುದು, ಅಳುವುದು, ಹೀಗೆಲ್ಲಾ ಮಾಡುತಿತ್ತು,
ಇದನ್ನು ಕಂಡು ಎಲ್ಲರಿಗೂ ದುಃಖ ಇನ್ನೂ ಹೆಚ್ಚಿತು. ಆ
ಗೋಳಿನಲ್ಲಿ ಪಾರ್ವತಮ್ಮ ನಿಗೆ ಏನೂ ಬೇಕಾಗಲಿಲ್ಲ. ವೆಂಕ
ಮ್ಮನು ಕೇವಲ ಮುದುಕಿ, ಕೈಹಿಡಿದು ಇಬ್ಬರು ಎಬ್ಬಿಸ
ಬೇಕು. ಆ ಸ್ಥಿತಿಯಲ್ಲಿದ್ದಳು. ತಿಮ್ಮಮ್ಮನು ಹೆಣದ ಸಮೀ
ಪಕ್ಕೆ ಬರಲಿಲ್ಲ. ಆ ಹಸುಳೆಯ ದುಃಖವನ್ನು ನೋಡಲಾ
ರದೆ ಸಧಾಶಿವದೀಕ್ಷಿತನು ಮಗುವನ್ನು ಎತ್ತಿಕೊಂಡನು. ನಾ 
ಲ್ಕಾರು ತಿಂಗಳು ಅನ್ನ ನೀರು ಇಲ್ಲದಿದ್ದಾಗ್ಯೂ ಸೀತಮ್ಮ
ನಿಗೆ ಸುಖ ಕೊಟ್ಟಿರಲಿಲ್ಲ, ಮೈ ಕುಂದಿರಲಿಲ್ಲ. ನೋಡಿದವ
ರೆಲ್ಲಾ-ಅಯ್ಯೋ ಗಾಬರಿ ಮಾಡಬೇಡಿ, ಮುಖ ಕೆಟ್ಟಿಲ್ಲ,
ಪ್ರಾಣವಿದೆ, ಮೂರ್ಛ ಹೋಗಿರಬಹುದು ಎನ್ನುತಾ ಬಂದರು,
ಸಾಕಿಯು-ಅಮ್ಮ ಅತ್ತಿಗೆ ಸತ್ತ ಹಾಗೆ ಇಲ್ಲ, ನಿದ್ರೆಮಾಡು
------------------------------------------------

೨೮೪         ಮಾಡಿದ್ದುಣ್ಣೋ ಮಹಾರಾಯ.

ತಾಳಮ್ಮ ಎಂದಳು. ಅಷ್ಟರಮಟ್ಟಿಗೆ ಮುಖ ಲಕ್ಷಣವಾ
ಗಿತ್ತು. ಆ ವೂರ ಜನರೆಲ್ಲಾ ಹೆಂಗಸರು ಗಂಡಸರು ಆದಿ
ಯಾಗಿ ಬಂದು ನೆರೆದರು. ಈ ಸೀತಮ್ಮ ಸತ್ತು ಹೋದಳೆಂದು
ಕೇಳಿ ಸಮಾನ ಗ್ರಾಮದವರೆಲ್ಲಾ ಬಂದರು.

ಆಗ ಪುರೋಹಿತರು ವಾಹಕರು ಮೊದಲಾದವರೆಲ್ಲರನ್ನೂ
ದೀಕ್ಷಿತನು ಕರೆಸಿದನು. ಅಪರಕರ್ಮಕ್ಕೆ ಬೇಕಾದ್ದೆಲ್ಲಾ
ಸಿದ್ಧವಾಯಿತು. ಜಾತ್ರೆಗೆ ತ್ರಿಪದಿ ನಕ್ಷತ್ರವಿರುತ್ತೆ. ಈಗಲೇ
ಶವವನ್ನು ಸಾಗಿಸಿಬಿಡೋಣ. ಇವತ್ತು ಪೌರ್ಣಮಿ ರಾತ್ರೆ
ಎಲ್ಲಾ ಬೆಳದಿಂಗಳಿದೆ, ವೈಶಾಖಮಾಸ, ಮಳೆ ಬರುತ್ತೆ ಎಂಬ
ಭಯವೇನೂ ಇಲ್ಲ. ಈಗಲೇ ಶವವನ್ನು ಸಾಗಿಸಿಬಿಡೋಣ
ಎಂದನು. ಚಿತಿ ಮೊದಲಾದ್ದು ಸಿದ್ಧವಾಯಿತು. ಹೆಣವನ್ನು
ತೆಗೆದುಕೊಂಡು ಹೋಗಿ ಚಟ್ಟದಮೇಲೆ ಇಟ್ಟರು. ಮುತ್ತೈ
ದೆಯಾದ್ದರಿಂದ ಮುಖವನ್ನು ಬಿಟ್ಟು ಮೈಗೆಲ್ಲಾ ಹೊಸಬಟ್ಟೆ
ಯನ್ನು ಹೊದ್ದಿಸಿದರು. ಅರಿಸಿನವನ್ನು ತೊಡೆದು ಕುಂಕು
ಮವನ್ನು ಇಟ್ಟು ಹೂವನ್ನು ಮುಡಿಸಿದರು. ವಾಹಕರು
ಚಟ್ಟಕ್ಕೂ ಹೆಣಕ್ಕೂ ಹಗ್ಗವನ್ನು ಸುತ್ತುತಾ ಬಂದರು. ಆಗ
ಪಾರ್ವತಮ್ಮನು ಆ ಶವದ ಹತ್ತಿರ ಬಂದು ಕೂತುಕೊಂಡು
ದುಃಖಪಡುತಾ- ಅಯ್ಯೋ ಸೀತ, ನಿನ್ನನ್ನು ಹೇಗಮ್ಮ ಕಾಡಿಗೆ
ಕಳುಹಿಸಲಿ, ಪಶುಪತಿಗೆ ಏನಹೇಳಲಿ, ನಿನ್ನ ತಂದೆ ತಾಯಿ
ಗಳ ದುಃಖವನ್ನು ಹೇಗೆ ಸಮಾಧಾನವಾಡನ್ನು ? ಲೋಕ
ದಲ್ಲಿ ಇಲ್ಲದ ರೋಗವೇ ನಿನಗೆ ಬಂತಲ್ಲ ; ಮನೆಯಲ್ಲಿ ನಾವಿ
ಬ್ಬರು ಮುದುಕರು ಇದ್ದೆವು. ಹಾಳ ಜವರಾಯ .ನಿನ್ನನ್ನು
------------------------------------------------------

ಮಾಡಿದ್ದುಣ್ಣೋ  ಮಹಾರಾಯ.   ೨೮೫  

ಬಿಟ್ಟು ನನ್ನನ್ನು ಕೊಂಡುಹೋಗಬಾರದಾಗಿತ್ತೆ ? ಯಮ
ನಿಗೆ ಕಂಣಿಲ್ಲವೆ, ತಾಯಿ ? ಮಗುವನ್ನು ಹೇಗೆ ತಡೆಯಲಿ.
ಅದರ ಗೋಳನ್ನು ಹೇಗೆ ಸಮಾಧಾನಮಾಡಲಿ, ಅಯ್ಯೋ
ಈಶ್ವರ, ಇಂಧಾ ಹೊತ್ತ ಕೋಟೆಯಾ ? ಎಂದು ಹಲುಬಿ
ಅಳುತಿದ್ದಳು. ಅದುವರೆಗೂ ಸುಮ್ಮನೇ ಸಾಧಾರಣವಾಗಿದ್ದ
ತಿಮ್ಮಮ್ಮನು ಶವದಮೇಲೆ ಅಕ್ಕಿಯನ್ನು ಎಸೆಯುವುದಕ್ಕೆ
ಬಂದಾಗ ಒಂದು ಸಾರಿ ಸ್ವಲ್ಪ ಎರೆಚಿದಳು, ಎಲ್ಲಿಯೂ ಇಲ್ಲದ
ದುಃಖ ಬಂತು, ಅಯ್ಯೋ ಸೀತ ಹೋಗುತೀಯ ; ಇನ್ನು
ನಿನ್ನಂಥಾ ಸೊಸೆಯನ್ನು ಎಲ್ಲಿ ಕಾಣಲೇ ? ಏಳುಜನ್ಮ ಎತ್ತಿ
ದರೂ ಸಿಕ್ಕು ವದಿಲ್ಲವಕ್ಕೆ ನನ್ನನ್ನು , ನಿದ್ರೆ ಮಾಡುವವಳ ಹಾಗೆ
ಮಲಗಿದೀಯಲ್ಲೇ, ನಾನು ನಿನ್ನ ಅಂದು ಆಡಿದ್ದಕ್ಕೆ ಕೋಪ
ಮಾಡಿಕೊಂಡು ಮಲಗಿಕೊಂಡೆಯ ತಾಯಿ ? ನಾನು ಏನ
ಅ೦ದರೂ ಒಂದು ಮಾತನ್ನಾದರೂ ಎದುರಾಗಿ ನಿಂತು
ಆಡಿದವಳವಲ್ಲೇ ನೀನು ; ಈಗ ಒಂದು ಮಾತನಾಡಮ್ಮ,
ಬಂದು ಮಾತನಾಡು, ನಾನು ಇನ್ನು ತಾ ಇದ್ದದು ನನ್ನಿಂದ
ತಪ್ಪಾಯಿತು ಕಣಮ್ಮ, ಒಂದು ಮಾತನಾಡು. ನೀನು
ನಗುತಾ ಮಾತನಾಡುತಿದರೆ ಎಷ್ಟೋ ಚೆನ್ನಾಗಿರುತಿತ್ತಲ್ಲೇ.
ನಾನು ಒಳಗೇ ಸಂತೋಷಪಟ್ಟುಕೊಳ್ಳುತಿದ್ದೆನಲ್ಲೇ, ಸೀತ
ಮ್ಮಾ ನಿನ್ನ ಹೆಸರು ಒಂದಲ್ಲ ನಿನ್ನ ಇರಿಕೆ ಒ೦ದಲ್ಲವಲ್ಲೇ.
ನಿನ್ನ ಸಂಸಾರ ನೆಟ್ಟಗಿದೆ, ನಿನ್ನ ಸೊಸೆಗೆ ಸಮಾನವಿಲ್ಲ
ಎಂದು ಎಲ್ಲರೂ ಹೊಗಳುತಿದ್ದರಲ್ಲೇ ಮಗು ಹೊಡಕೊ
ಳ್ಳುತ್ತೆಯಲ್ಲೇ, ಅದನ್ನು ಹೇಗೆ ಸಮಾಧಾನನಾಡಲಿ, ಮಗು
--------------------------------------------------

೨೮೬         ಮಾಡಿದ್ದುಣ್ಣೋ ಮಹರಾಯ.

ವನ್ನು ತಬ್ಬಲಿವಾಡಿ ಹೋಗುತೀಯ ? ತಾಯಿ, ನಿನಗೆ ಯಾರೇನುಮಾಡಿ ಅವರ ಕೈಸೇದಿಸಿಕೊಂಡರೇ ? ಅವರ ಮನೆ ಹಾಳಾಗ, ಅಯೋ ದೇವರೇ ! ನಿನಗೆ ವಾಸಿಯಾಗಲಿ ಎಂದು ಹದಿನೆಂಟು ದೇವರಿಗೆ ಹರಕೆ ಹೊತ್ತೆನ, ಕೊಲ್ಲಾಪುರದ
ಅಮ್ಮನ ಗುಡಿಗೆ ತಂಬಿಟ್ಟಿನ ದೀಪಾ ವಾರವಾರಕ್ಕೂ ಹೊತ್ತೆ
ನಲ್ಲಮ್ಮ, ನಮ್ಮ ಭಾಗಕ್ಕೆ ಯಾವ ದೇವರೂ ಇಲ್ಲದೇ
ಹೋಯಿತೇ ? ಅಯ್ಯೋ ಸೀತ, ಸೀತಮ್ಮ, ಅಯ್ಯೋ ವಿಧಿ
ಯೇ, ನಾವು ಏನು ಪಾಪಮಾಡಿದೆವು ? ಹಾಳ ಜವರಾಯನೇ,
ನನ್ನ ಸೊಸೆ ಇಲ್ಲದಿದ್ದರೆ ನಿನ್ನ ಪಟ್ಟಣ ತುಂಬುತಿರಲಿಲ್ಲವೇ
ನೋ, ಈ ಬೆಳದಿಂಗಳ ಮುಖವಿಲ್ಲದಿದ್ದರೆ ನಿನ್ನ ಹಾಳಪ
ಟ್ಟಣ ಬೆಳಕಾಗುತಿರಲಿಲ್ಲವೇನೋ, ಪಾಪೀ, ಯಾರೂ ಕಂಡಿ
ರಲಿಲ್ಲ ಯಾರೂ ಕೇಳಿರಲಿಲ್ಲ, ಅಂಧಾ ರೋಗ ಬಂತೆ ನಿನಗೆ ?
ಅಯ್ಯೋ ಮಗುವೇ ಕೃಷ್ಣಸ್ವಾಮಿ ನಿನ್ನ ಗೋಳನ್ನು ನಾನು
ಕೇಳಿ ಹೇಗೆ ಸಹಿಸಲೋ ನಾನು ಹೇಗೆ ಹೊಟ್ಟೆ ಹಿಡಿಯು
ಲೋ ಅಪ್ಪಯ್ಯಾ ? ನಾನು ಒಂದು ದಿವಸವಾದರೂ ನಿನ್ನ
ಸಂಗಡ ನೆಟ್ಟಗೆ ಮಾತನಾಡಲಿಲ್ಲವಲ್ಲೇ, ಇನ್ನು ಮೇಲೆ ನಾನು
ಸರಿಯಾಗಿ ಮಾತನಾಡುತ್ತೇನೆ. ನಾನು ನಿನಗೆ ಕೈಮುಗಿಯು
ತೇನೆ. ನನ್ನ ಅಪರಾಧವೇನಿದ್ದರೂ ಕ್ಷಮಿಸಿಬಿಟ್ಟು ಏಳನ್ನು,
ಹಾ ಸೀತಾ, ಸೀತಾ ! ಎಂದು ತಿಮ್ಮಮ್ಮನು ಬಗೆಬಗೆಯಾಗಿ
ಹಾಡಿಹಾಡಿ ಹಲ್ಲುಬಿ ಹಲುಬಿ, ಹೆಣದಮೇಲೆ ಬಿದ್ದು ಹೊರ
ಳಾಡುತಾ ನೆಲದಮೇಲೆ ಬಿದ್ದು ಉರುಳಾಡುತಾ, ಹಣೆ ಚೆಚ್ಚಿ
ಕೊಂಡು, ಎದೆ ಎದೆ ಬಡಿದುಕೊಂಡು ಬಾಯಿಬಾಯಿ ಬಡಿದುಕೊ
------------------------------------------------------

        ಮಾಡಿದ್ದುಣ್ಣೋ ಮಹರಾಯ.  ೨೮೭

ಳ್ಳುತಾ ಶವವನ್ನು ಮೇಲಕ್ಕೆ ಎತ್ತಲೀಸದ ಪ್ರಲಾಪಿಸುತಿದ್ದಳು.
ಇವಳ ದುಃಖವನ್ನು ನೋಡಿ ಅಲ್ಲಿ ನೆರೆದಿದ್ದ ಜನರೆಲ್ಲಾ
ಗೊಳೋ ಎಂದು ಅತ್ತರು. ಶವವನ್ನು ಎತ್ತಿಕೊಂಡು ವಾಹ
ಕರು ಹೊರಟರು. ದಾರಿಯಲ್ಲಿ ಆ ಹೆಣದಮೇಲೆ ಅರಿಶಿನ ಎರೆ ಚಿದವರು, ಕುಂಕುಮ ಎರೆಚಿದವರು, ಹೂ ಎರೆಚಿದವರು,
ಹೀಗೆಲ್ಲಾ ಆಯಿತು. ನಮ್ಮ ರ ಲಕ್ಷ್ಮಿ ಹೊರಟುಹೋದಳು
ಎಂದು ಗುಂಪಲ್ಲಾ ಒಟ್ಟಿಗೆ ಅತ್ತುಬಿಟ್ಟಿತು.

ಊರಿಗೆ ಸ್ಮಶಾನವು ಬಹಳ ದೂರವಾಗಿರಲಿಲ್ಲ. ನದೀ
ತೀರದಲ್ಲಿ ಎರಡು ಮೂರು ಕಲ್ಲು ಎಸೆಗೇ ದೂರದಲ್ಲಿತ್ತು,
ಹೆಣವನ್ನು ತೆಗೆದುಕೊಂಡು ಹೋಗಿ ಅಲ್ಲಿಳುಕಿದರು. ಸದಾ
ಶಿವದೀಕ್ಷಿತನೇ ಬೆಂಕಿಯನ್ನು ಹಿಡಿದು ಕೊಂಡು ಹೋದನು.
ಮುಂಚಿತವಾಗಿಯೇ ಚಿತಿ ಒಡ್ಡಿತ್ತು. ಕಾಡು ಸಮೀಪದಲ್ಲಿ
ದ್ದ ಕಾರಣ ಬೇಕಾದಷ್ಟು ಸೌದೆಯನ್ನು ಒಡ್ಡಿದ್ದರು. ಮಗು
ವಾದ ಕೃಷ್ಣಸ್ವಾಮಿಯ ಹೆಸರಿನಮೇಲೆ ಸದಾಶಿವದೀಕ್ಷಿತನೇ
ಮಂತ್ರಾಗ್ನಿಯನ್ನು ಹಾಕಿದನು. ಶವಕ್ಕೆ ಉಡಿಸಿದ್ದ ಬಟ್ಟೆಯ
ನ್ನು ಶಾಸ್ತ್ರ ರೀತ್ಯಾ ತೆಗೆದು ಹಾಕಲು ಪುರೋಹಿತನು ಮಂ
ತ್ರಹೇಳಿದಾಗ ವಾಹಕರು ಹೆಣದ ಮೈ ಮೇಲಿದ್ದ ಸೀರೆಯನ್ನು
ಬಿಚ್ಚುವುದಕ್ಕೆ ಹೋದರು. ಆಗ ದೀಕ್ಷಿತನು- ಕಂಣಿನಲ್ಲಿ
ತುಂಬಾ ನೀರಸುರಿಸುತಾ ಬಿಕ್ಕಳಿಸಿ ಬಿಕ್ಕಳಿಸಿ ಅಳುತಾ-
ನಮ್ಮ ಸೀತಮ್ಮ ಬಹು ಮಾನಿಷ್ಠಳು. ಆ ಸೀರೆಯನ್ನು
ಬಿಚ್ಚಬೇಡಿ, ಕರ್ಮ ಲೋಪವಾದರೆ ಪ್ರಾಯಶ್ಚಿತ್ತ ಮಾಡಿಬಿ
ಡೋಣ ಎಂದು ಹೇಳಿದನು. ಅದರಂತೆ ಸೀರೆಯನ್ನು ತೆಗೆ
--------------------------------------------------
೨೮೮          ಮಾಡಿದ್ದುಕ್ಕೂ ಮಹಾರಾಯ,

ಯದೆ ಹೆಣದಮೇಲೆ ಬಿಟ್ಟುಬಿಟ್ಟರು. ಅಗ್ನಿ ಪ್ರವೇಶವಾಯಿತು.
ಕಟ್ಟಿಗೆ ಸ್ವಲ್ಪ ಹಸಿಯಾಗಿತ್ತು. ಹತ್ತುವುದು ತಡವಾಯಿತು.
ಎಲ್ಲರೂ ಸ್ವಲ್ಪ ಹೊತ್ತು ಇದ್ದು ಇನ್ನೇನು ಹತ್ತಿಕೊಳ್ಳುತ್ತೆ
ಎಂದುಕೊಂಡು ಹೊರಟುಹೋದರು. • ಆಗ ರಾತ್ರಿ ಹತ್ತು
ಳಿಗೆಯಾಗಿತ್ತು.

ಕೊಯಮುತ್ತೂರು ಮೊದಲಾದ ಪ್ರಾಂತ್ಯಕ್ಕೆ ಹೋಗು
ವದಾರಿಯು, ಈ ನದೀ ತೀರದಲ್ಲಿ ಸ್ಮಶಾನಕ್ಕೆ ಸಮಾನವಾ
ಗಿ ಇತ್ತು. ಕಣವೇಕೆಳಕ್ಕೆ ಹೋಗಿ ಅಲ್ಲಲ್ಲಿ ತಂಗಿ ಹಿಂದಿನ
ಊರಿನಲ್ಲಿ ಸ್ವಲ್ಪ ಬಿಸಿಲ ತಂಪಿಸಿಕೊಂಡು ಹೊರಟ ಇಬ್ಬರು
ಬ್ರಾಹ್ಮಣರು ಮಡಿಚೀಲದ ಗಂಟುಗಳನ್ನು ಹೆಗಲಿಗೆ ಸೇಬಿಕೊಂ
ಡು ಬೆಳದಿಂಗಳಲ್ಲಿ ಇಬ್ಬರೂ ಮಾತನಾಡಿಕೊಳ್ಳುತಾ ಬೀಸಿ
ಕಾಲನ್ನು ಹಾಕುತಾ ಆ ದಾರಿಯಲ್ಲಿ ಬಂದರು. ಇವರಲ್ಲಿ ಒ
ಬ್ಬನು ಆಂಧ್ರದೇಶದವನು. ಇವನ ಹೆಸರು ಆನಂದ ಭಟಜಿ,
ಇನ್ನೊಬ್ಬನು ಕರ್ನಾಟಕ. ಶ್ರೀರಂಗಪಟ್ಟಣದ ವಾಸಸ್ಥ, ಇ
ವನ ಹೆಸರು ಗಿರಿಯಣ್ಣ, ಇವರಿಬ್ಬರೂ ಬಹುಕಾಲದಿಂದ
ಸ್ನೇಹಿತರಾಗಿದ್ಧರು. ಇವರಿಬ್ಬರೂ ಅಲ್ಲಿ ಬರುತ್ತಿರುವಾಗ ದೂ
ರಕ್ಕೆ ಬೆಂಕಿಯ ಬೆಳಕು ಕಂಡಿತು. ಇನ್ನೂ ಹತ್ತರಕ್ಕೆ
ಬಂದರು. ಮಷಾಣದ ಬೆಂಕಿ ಕಂಡಿತು. ಆಗ ಭಟಜಿಯು
ದೂರದಿಂದಲೂ ಆ ಬೆಂಕಿಯನ್ನೇ ಸೃಷ್ಟಿಸಿ ನೋಡಿಕೊಂಡೇ
ಬರುತಾ ಸ್ವಲ್ಪ ಹೊತ್ತು ಗಿರಿಯಣ್ಮನ ಸಂಗಡ ಯಾವ ಮಾ
ತನ್ನೂ ಆಡದೆ ಅವನು ಕೇಳಿದ್ದಕ್ಕೆ ಯಾವ ಉತ್ತರವನ್ನೂ ಕೊಡದೆ ಹೋಗುತಾ ತಟ್ಟನೆ -
---------------------------------------------------
೨೮೯         ಮಾಡಿದ್ದುಣ್ಣೋ ಮಹಾರಾಯ.

ಭಟಜಿ - ಗಿರಿಯಂಣ, ಈ ಬೆಂಕಿ ನೋಡಿದೆಯ ?
ಗಿರಿಯಂಣ- ನೋಡಿದೆ. ಕಾಡಿನಲ್ಲಿ ಇದ್ದಲ ಸುಡುವುದಕ್ಕೆ
    ಬೆಂಕಿ ಹಾಕಿದಾರೋ, ಇಲ್ಲ ಹೆಣಕ್ಕೆ ಬೆಂಕಿ ಹಾಕಿ
    ದಾರೋ, • ಯಾವುದೋ ಎರಡರಲ್ಲಿ ಒಂದು.
ಭಟಜಿ- ಇದ್ದಲ ಸುಡುವ ಬೆಂಕಿಯಲ್ಲ. ಹೆಣಾ ಸುಡುವ ಬೆಂಕಿ.
    ಯಾವುದೊ ಊರು ಹತ್ತರವಾಯಿತು. ಸಂಜನಾಡಿ
    ಯಾಗಿರಬೇಕು. ದೂರದಲ್ಲಿ ಬೆಳಕು ಕಾಣುತ್ತೆ.
ಗಿರಿ- ನೀನು ಹೇಳಿದ್ದೇ ಸರಿ, ಹೆಣವೆಂತಲೇ ತೋರುತ್ತೆ.
    ಇನ್ನೂ ಈಗತಾನೇ ಬೆಂಕೀಹಾಕಿ ಹೊರಟುಹೋಗಿದಾರೆ.
ಭಟಜಿ-ಇದು ಹೆಣ ಎನ್ನ ಬೇಡ, ಮನುಷ್ಯ ದೇಹವೇನೋ ಹ
    ವುದು. ಅದು ಸತ್ತಿಲ್ಲ, ಪ್ರಾಣವಿದೆ. ಆದರೂ ಬೆಂ
    ಕೀ ಹತ್ತಿಸಿ ಹೋಗಿದಾರೆ.
ಗಿರಿ- ಬೆಂಕಿ ಹತ್ತಿ ಉರಿ ಏಳು ತಾ ಇದೆ. ವಾಣವಿದೆಯೆಂದ
    ರೇನು ?
ಭಟಜಿ-ಬೇಕಾದರೆ ಪರೀಕ್ಷೆ ಮಾಡು, ತೋರಿಸುತ್ತೇನೆ. ಆ
    ಶರೀರಕ್ಕೆ ಪ್ರಾಣವಿದೆ,
ಗಿರಿ- ಪ್ರಾಣವಿದೆ ಎಂತ ಹೇಗೆ ಹೇಳುತ್ತೀಯ ?
ಭಟಜಿ-ನೀನು ಸ್ವಲ್ಪ ನಿಂತುಕೊಂಡು ಧ್ಯಾನಿಸಿ ಕೇಳು. ಆ
    ಶರೀರ ಕೂಗುತಾ ಇರುವ ಸದ್ದು ಕೇಳುತ್ತೆ.
ಗಿರಿ- ಸ್ವಲ್ಪ ಸದ್ದೇನೋ ಬಹಳ ಹೊತ್ತಿನಿಂವ ಸಂಣಗೆ
    ಕೇಳುತಿದೆ. ಆದರೆ ಅದು ಗಾಳಿ ಬೀಸುವ ಸದ್ದೆ ?
    ಆ ಹೆಣದ ಸದ್ದೆ ?
-----------------------------------------------------
೨೯೦         ಮಾಡಿದ್ದುಣ್ಣೊ ಮಹಾರಾಯ. 

ಭಟಜಿ-ಹೆಣದಲ್ಲಿ ಸದ್ದೆಲ್ಲಿಯದು ? ಕೂಗು ಆ ಶರೀರದಿಂದ
    ಹೊರಡುತ್ತೆ,
ಗಿರಿ- ಹೆಣ ಹತ್ತಿ ಉರಿಯುತಾ ಇದೆ. ಅದು ಅರಿಚುತ್ತೆ
    ಎಂದರೆ ನಂಬುವ ಮಾತಲ್ಲ.
ಭಜಿ-ಖಂಡಿತವಾಗಿ ನಾನು ಪರೀಕ್ಷಿಸಿ ತೋರಿಸುತ್ತೇನೆ. ನೀ
    ನು ಧೈರ್ಯವಾಗಿ ನೋಡುತ್ತಾ ಒಂದು ಕಡೆ ಕೂತು     ಕೊಳ್ಳುತೀಯ ? ಈ ಪ್ರಾಣಿಗೆ ಯಾರೋ ನೀಚ ಬ
    ಲವಾಗಿ ಕೈ ಕೊಟ್ಟಿದ್ದಾನೆ. ಒಳ್ಳೇದು ಇರಲಿ, ನೀನು
    ಮಾತ್ರ ಹೆದರಬೇಡ.
ಗಿರಿ- ಹಾಗೇ ಆಗಲಿ.
ಹೀಗೆ ಮಾತನಾಡುತಾ ಇಬ್ಬರೂ ಆ ಊರಿಗೆ ಸ್ವಲ್ಪ ದೂರವಾಗಿ
ನಿಂತುಕೊಂಡರು. ಭಟಜಿಯು ತನ್ನ ಮಡಿ
ಚೀಲದ ಗಂಟನ್ನು ಗಿರಿಯಂಣನ ವಶಕ್ಕೆ ಕೊಟ್ಟು ಅವನನ್ನು
ಒಂದು ಸ್ಥಳದಲ್ಲಿ ಕೂರಿಸಿ ತಾನು ಮಡಿಪಂಚೆಯನ್ನುಟ್ಟು
ನದಿಯಲ್ಲಿ ಸ್ನಾನಮಾಡಿ ಹಣೆಗೆ ವಿಭೂತಿಯನ್ನೂ ಮಡಿ
ಚೀಲದಲ್ಲಿದ್ದ ಕುಂಕುಮವನ್ನೂ ಇಟ್ಟುಕೊಂಡು, ಗಟ್ಟಿ
ಯಾಗಿ ಕೂಗಿ ಏನೋ ಮಂತ್ರವನ್ನು ಹೇಳುತ್ತಾ ನಿಂತು
ಕೊಂಡಿದ್ದ ತರುವಾಯ ಕೂತುಕೊಂಡು ಬೆಂಕಿಯ ಕಡೆಗೆ ತಿರು
ಗಿದನು; ಮತ್ತು ಎರಡು ಕೊನೆಗೂ ಬೆಳ್ಳಿಕಟ್ಟಿ ಹಾಕಿದ್ದ
ಒತ್ತೋಳುದ್ದ ಕರೀ ಬೆತ್ತವನ್ನು ತೆಗೆದುಕೊಂಡು ನೀರು ಸೋ
ರುತಿದ್ದ ತನ್ನ ಜಟ್ಟಿನಿಂದ ನೆಲದಮೇಲೆ ಬಡಿಯುತಾ ಪುನಃ
ಬೆತ್ತದಿಂದ ನೆಲವನ್ನು ಬಡಿಯುತಾ, ಅನೇಕ ದೇವರುಗಳ
----------------------------------------------------
       
        ಮಾಡಿದ್ದುಣ್ಣೊ ಮಹಾರಾಯ.  ೨೯೧

ಹೆಸರನೂ ದೇವತೆಗಳ ಹೆಸರನ್ನೂ ಹೇಳುತಾ ಹ್ರಾಂ,
ಹ್ರೀಂ, ಹ್ರೂಂ, ಪಟುಸ್ವಾಃ ಎನ್ನುತಾ,-ಮುವತ್ತಮೂರು
ಕೋಟಿ ದೇವತೆಗಳನ್ನು ಕಟ್ಟುವೆ: ಭೂತ, ಭೇತಾಳ, ಬ್ರ
ಹ್ಮ ರಾಕ್ಷಸ, ಶಾಕಿನಿ, ಡಾಕಿನಿ, ಪ್ರೇತಪಿಶಾಚಗಳನ್ನು ಕಟ್ಟು
ವೆ, ದುಷ್ಟರ ಕೈಕಟ್ಟುವೆ, ನೀಚರ ಮನವನ್ನು ಕಟ್ಟುವೆ,
ಓಂ ಪಟುಸ್ವಾಃ, ಓಂ ಪಟುಸ್ವಾಃ, ಓ೦ ಪಟುಸ್ವಾಃ; ಹೀ
ಗೆಂದು ಗಟ್ಟಿಯಾಗಿ ಕೂಗಿ ತರುವಾಯ ನಾಲ್ಕು ಕಲ್ಲನ್ನೂ
ಒಪ್ಪಿಡಿ ಮರಳನೂ ಹಿಡಿದು ಮಂತರಿಸಿ ಈ ಕಲ್ಲನ್ನು
ಹಿಡಿ, ಈ ಮರಳನ್ನು ಹಿಡಿ, ನೀನು ಧೈರ್ಯವಾಗಿ ಕೂ
ತುಕೊ, ನಿನ್ನ ನಾಲ್ಕು ದಿಕ್ಕಿಗೂ ಈ ನಾಲ್ಕು ಕಲ್ಲನ್ನು ಎಸೆ.
ಯಾವ ದಿಕ್ಕಿನಿಂದ ನಿನಗೆ ಭಯ ತೋರುತ್ತೋ ಆ ಕಡೆಗೆ
ಒಂದೊ೦ದು ಚುಟಗಿ ಮರಳನ್ನು ಎಸೆಯುತಾ ಬಾ,
ಎಂದು ಗಿರಿಯಂಣನಿಗೆ ಹೇಳಿದನು, ಕಡಲೇ ಆ ಮಹಾಮಂ
ತ್ರವಾದಿಯು ಪುನಃ ಹೊಳೆಗೆ ಹೋಗಿ ಸ್ನಾನಮಾಡಿ ಗಟ್ಟಿ
ಯಾಗಿ ಮಂತ್ರವನ್ನು ಹೇಳುತಾ ಕೈಯಲ್ಲಿ ನೀರನ್ನು ತೆಗೆದು
ಕೊಂಡು ಆ ಬೆಂಕಿಯ ಸುತ್ತಲೂ ಪ್ರದಕ್ಷಿಣೆ ಮಾಡಿ ನೀರನ್ನು
ಸುತ್ತ ಕಟ್ಟಿ ತನ್ನ ಜುಟ್ಟಿನ ನೀರನ್ನು ಆ ಬೆಂಕಿಯಮೇಲೆ
ಹಿಂಡುವುದು, ಪುನಃ ನೀರಿನಲ್ಲಿ ಮುಳುಗುವುದು, ಪುನಃ
ಜುಟ್ಟಿನ ನೀರನ್ನು ಬೆಂಕಿಯಮೇಲೆ ಹಿಂಡುವುದು, ಹೀಗೆ ಮೂ
ರುಸಾರಿ ಮಾಡಿ, ತನ್ನ ಬೆತ್ತದಿಂದ ನೆಲದಮೇಲೆ ಒಂದು
ಚಕ್ರವನ್ನು ಬರೆದು ಅದರ ಮನೆಗಳಲ್ಲಿ ಏನೇನೋ ಬೀಜಾ
ಕ್ಷರಗಳನ್ನು ಬರೆದು ಅದರ ಮುಂದೆ ತಾನು ಕೂತು ತನ್ನ ಬೆ
-----------------------------------------------------

೨೯9         ಮಾಡಿದ್ದುಣ್ಣೋ ಮಹಾರಾಯ.
ತ್ತವನ್ನು ಅದರಮೇಲೆ ಬಡಿಯುತಾ ನಂತರಿಸುವುದಕ್ಕೆ ಆ
ರಂಭಿಸಿದನು.

ಅಯ್ಯೋ ! ಆಗ ನಡೆದ ಅದ್ಭುತವನ್ನು ಏನೆಂದು ವಿವ
ರಿಸಲಿ ಈ ಲೋಕದಲ್ಲಿ ಏನೇನು ರಹಸ್ಯಗಳಿವೆಯೋ ಅವು
ನಮಗೆ ಗೋಚರವಾಗುವುದಿಲ್ಲ. ಎಲ್ಲವೂ ಆ ಸರ್ವಜ್ಞ
ನಾದ ಪರಮೇಶ್ವರನಿಗೇ ಗೊತ್ತು. ಆ ಬೆಂಕೆಯಿಂದ ಹೊರಡುತಿದ್ದ
ಕೂಗು ಸಲ್ಪ ಹೊತ್ತಿಗೆ ಹೋ ಎಂದು ಗಟ್ಟಿಯಾಯಿತು, ಆಗ
ಗಿರಿಯಂಣನು ಭಯದಿಂದ ಕೆಟ್ಟದನಿಯಲ್ಲಿ ಅರಿಚಿಕೊಂಡನು.
ಭಟಜಿಯು ತನ್ನ ಕೈಬೆತ್ತದಿಂದ ಅವನನ್ನು ಮೂರುಸಾರಿ
ನೀವಾಳಿಸಲು ಗಿರಿಯಂಣ ಸುಮ್ಮನೇ ಕೂತುಕೊಂಡನು. ಪು
ನಃ ಆನಂದ ಭಟಜಿಯು ಸ್ನಾನಮಾಡಿ ನೀರು ಜುಟ್ಟಿನಿಂದ
ಸೋರುತಾ ಇರಲಿಕ್ಕಾಗಿ ಮರುಬೊಗಸೆ ಜಲವನ್ನು ಬೆಂಕಿಯ
ಮೇಲೆ ಎರೆಚಿ ಏನೋ ಮಂತ್ರವನ್ನು ಹೇಳುತಾ ಮೊದಲಿದ್ದ
ಸ್ಥಳದಲ್ಲಿ ವೀರಾಸನವನ್ನು ಹಾಕಿ ಕೂತುಕೊಂಡನು. ಚಿತಿ
ಯಕಡೆಗೆ ಮುಖ ಮಾಡಿಕೊಂಡನು. ಆಗ ಆಡುತಾ ಇದ್ದ
ಮೋಡದಿಂದ ಬೆಳದಿಂಗಳು ಮಂಕಾಯಿತು, ಚಿತಿ ಅಲ್ಲಾಡಿತು.
ಅದರಮೇಲೆ ಕೈಕಾಲು ಆಡಿದಹಾಗೆ ಗೋಚರವಾಯಿತು.
ಅಲ್ಲಿ ಒಂದು ಮನುಷ್ಯ ಶರೀರ ಏಳುವಹಾಗೆ ಕಂಡಿತು.
ಗಿರಿಯಂಣ ಪುನಃ ಕೆಟ್ಟ ಸ್ವರದಲ್ಲಿ ಅರಚಿಕೊಂಡು
ಗಡಗಡನೆ ನಡುಗುತಾ ನಿಂತುಕೊಂಡನು. ಆಗಿನ ಸ್ಥಿತಿ
ಯಲ್ಲಿ ಎಂಥವರಿಗೂ ಭಯವಾಗತಕ್ಕದ್ದೇ, ಮಧ್ಯರಾತ್ರೆ;
ಸ್ಮಶಾನ ; ಮಹಾನಿಶಿ; ಮೇಲ್ ಮೋಡದ ಕತ್ತಲೆ ;
-------------------------------------------------------

        ಮಾಡಿದ್ದುಣ್ಣೊ ಮಹಾರಾಯ. ೨೯೩

ಪಿಶಾಚಿಯನ್ನು ಎಬ್ಬಿಸಿ ಕುಣಿಸುವ ಮಂತ್ರವಾದಿ; ಸುತ್ತಲೂ ಬೂದೀರಾಸಿ; ಮೂಳೇರಾಸಿ; ನಾಯಿ ನರಿ ಕಿತ್ತು ತಿನ್ನುತಿ
ರುವ ಹೆಣಗಳ ವಿಕಾರರೂಪು; ನಿರ್ಮಾನುಷ್ಯವಾದ ಪ್ರದೇಶ;  ವಿಪರೀತವಾದ ಹೆಣದ ನಾತ; ಈ ಮಧ್ಯೆ ಚಿತಿಯಿಂದ ಹೆಣ
ವು ಎದ್ದು ಬಂದು ಮಾತನಾಡುವುದು : ಏನು ಭಯಂಕ
ರವಾದ ಸ್ಥಿತಿ! ಭೀತಿಯುಂಟಾಗುವುದಕ್ಕೆ ಇನ್ನೇನು ಬೇಕು ?
ಯಾವುದು ಕಡಿಮೆಯಾಗಿದೆ ? ಸಾಲದ್ದಕ್ಕೆ ಹೆಣವು ಎದ್ದು ಬಂದು
"ಅಪ್ಪಾ ಹೆಂಣುಜನ್ಮ , ಬಟ್ಟೆ ಕೊಡಿ,'' ಎಂದು ಕೂಗಿತು.
ಇದನ್ನು ಕೇಳಿ ಗಿರಿಯಂಣನಿಗೆ ಪಂಚಪ್ರಾಣವೂ ಹೋಯಿತು.
ಆಗ ಭಟಜಿಯು ತಟ್ಟನೆ ಎದ್ದನು; ಹೆಣದಕಡೆ ತನ್ನ ಧೋ
ತ್ರವನ್ನು ಎಸೆದನು: ಒ೦ದುಕಡೆ ವೀಭೂತಿಯನ್ನು ಗಿರಿಯಂ
ಣನಮೇಲೆ ಚೆಲ್ಲಿ ಮಂತ್ರಿಸಿ, ಉಭಶುಭ ಎನ್ನದಹಾಗೆ ಅವನ
ನ್ನು ಸುಮ್ಮನೇ ಕೂರಿಸಿದನು. ತರುವಾಯ ಭಟಜಿಯು
ಗಟ್ಟಿಯಾಗಿ ಕೂಗುತಾ ಆರ್ಭಟಿಸುತಾ ಏನೋ ಮಂತ್ರವ
ನ್ನು ಹೇಳುತ್ತಿದ್ದನು. ಕೈ ಸನ್ನೆ ಮಾಡಿದನು. ಆ ಸ್ತ್ರೀ
ಜನ್ಮವು ಹೊಳೆಯಲ್ಲಿ ಸ್ನಾನಮಾಡಿ ಎದುರಿಗೆ ಬಂದು ನಿಂತಿ
ತು, ಈ ಮಹಾಮಾಂತ್ರಿಕನು ಅವಳಿಗೆ ಶಿರಸ್ಸಿನಿಂದ ಕಾಲಿನ
ವರೆಗೂ ತನ್ನ ಕೈಬೆತ್ತದಿಂದ ನಿವಾಳಿಸಿದನು. ಅವಳನ್ನು
ಕೂರಿಸಿದನು. ಅವಳ ಸುತ್ತಲೂ ಗೀಟಹಾಕಿ ಏನೋ
ಅಕ್ಷರವನ್ನು ಬರೆದನು. ತನ್ನ ಭರಣಿಯಿಂದ ಒಂದು
ಚುಟಗಿ ಕುಂಕುಮವನ್ನು ತೆಗೆದು ಅವಳ ಮೇಲೆ
ಹಾಕಿ ಬೆತ್ತವನ್ನು ಹಿಡಿದು ಮತ್ತೆ ವಿಶೇಷವಾಗಿ
-----------------------------------------------------

೨೯೪         ಮಾಡಿದ್ದುಣ್ಣೋ ಮಹರಾಯ.

ಮಂತರಿಸುವುದಕ್ಕೆ ಮೊದಲು ಮಾಡಿದನು. ಆಗ ಊರಕಡೆ
ಯಲ್ಲಿ ದೊಡ್ಡದಾಗಿ ಕೂಗಾಯಿತು. "ಅಯ್ಯೋ ಅಯ್ಯೋ''
ಎಂದು ಗಟ್ಟಿಯಾಗಿ ಕೂಗುತ್ತಾ ಒಂದು ವ್ಯಕ್ತಿಯು ಓಡಿಓಡಿ
ಬರುತಾ ಅಲ್ಲಲ್ಲಿ ಎಡವಿ ಬೀಳುತಾ " ಅಮ್ಮಾ ಉರಿ, ತಾ
ಯೇ ಉರಿ; ತಪ್ಪಾಯಿತು ತಪ್ಪಾಯಿತು " ಎಂದು ಕೂಗಿ
ಕೊಂಡು ಹೆಜ್ಜೆ ಹೆಜ್ಜೆಗೂ ನಮಸ್ಕಾರ ಮಾಡುತ್ತಾ ಬರುತಿತ್ತು.
ಆಗ ಮಾಂತ್ರಿಕನು ತನ್ನ ಮುಂದಿರುವ ಚಕ್ರದಮೇಲೆ ಪುನಃ
ಪುನಃ ಗಟ್ಟಿಯಾಗಿ ತನ್ನ ಬೆತ್ತದಿಂದ ಹೊಡೆಯುತ್ತಾ ಬಂದ
ನು. ಇವನು ಹೊಡೆಯುತ್ತಾ ಬಂದ ಹಾಗೆಲ್ಲಾ ಓಡಿಬರುತಿದ್ದ
ವನ ಅರಚಲು ಗಟ್ಟಿಯಾಗುತ್ತಾ ಬಂತು. ಕೊನೆಕೊನೆಗೆ ಸ
ಮೀಪಕ್ಕೆ ಬರುತ್ತಾ ಇರುವಾಗ ಅದು ಒಬ್ಬ ಗಂಡಸು ಎಂ
ದು ಗೊತ್ತಾಯಿತು. ಅವನು ಬಂದು ಭಟಜಿಗೆ ನಮಸ್ಕಾರ
ವನ್ನು ಮಾಡುತಾ ಕೈ ಕೈ ಮುಗಿಯುತಾ ಗೊಳೋ ಎಂದು
ಅಳುತಾ ನಿಂತುಕೊಂಡನು. ಆಗ ಭಟಜಿಯು ಬಹು ಕ್ರೂರ
ವಾದ ಧ್ವನಿಯಿಂದ "ಹೂಳಿರುವುದನ್ನು ತೆಗೆದುಕೊಂಡು ಬಾ"
ಎಂದನು. ಕೂಡಲೆ ಆ ಮನುಷ್ಯನು ಓಡಿಹೋಗಿ ಸಹಗಮ
ನದ ಜೋಡೀ ಬೃಂದಾವನದ ಬಳಿಯಲ್ಲಿ ಸೀತಮ್ಮನು ಪೂಜೆ
ಗೋಸ್ಕರ ತುಳಿದುಕೊಂಡು ಬಂದು ಹೋಗಿ ಮಾಡುತಿದ್ದ
ಕಡೆ ತಾನು ಹೂಳಿದ ಗೇಣುದ್ದ ಮರದ ತುಂಡನ್ನು ಕಿ
ತ್ತು ತಂದು ಭಟಜಿಯ ಮುಂದೆ ಇರಿಸಿದನು. ಅದು ಮರ
ದಲ್ಲಿ ಮಾಡಿದ ಹೆಂಣುಬೊಂಬೆಯಾಗಿತ್ತು. ಆ ಬೊಂಬೆಯ
ತಲೆ ಕೈ ಕಾಲು ಮೈ ಮೊದಲಾದ ಎಲ್ಲಾ ಕಡೆಗೂ ಮೊಳೆ
--------------------------------------------------

        ಮಾಡಿದ್ದುಣ್ಣೊ ಮಹಾರಾಯ.  ೨೯೫ 

ಹೊಡೆದಿತ್ತು. ಭುಜಿಯು ಆ ಬೊಂಬೆಗೆ ಮಂತ್ರಿಸಿ ಅದರ
ಮೇಲೆ ನೀರನ್ನು ಪ್ರೋಕ್ಷಿಸಿ , "ಅದನ್ನು ಆ ಬೆಂಕಿಯಲ್ಲಿ
ಹಾಕಿ ಸುಡು ” ಎಂದು ಘರ್ಜನೆ ಮಾಡಿದನು. ಅದರಂತೆ
ಆ ಮನುಷ್ಯನು ಬೆಂಕಿಗೆ ಹಾಕಿದನು. ಅದು ಸುಟ್ಟುಹೋ
ಯಿತು. " ಆ ಮನುಷ್ಯ ಯಾರು ನೋಡಮ್ಮ ?” ಎಂದು
ಭಟಜಿ ಹೇಳಿದನು. ಬೆಂಕಿಯ ಬೆಳಕಿನಲ್ಲಿ ಅವನನ್ನು ನೋ
ಡಿ ಸೀತಮ್ಮನು-ಸ್ವಾಮಿ, ಇವ ನಮ್ಮೂರ ಅಮ್ಮನಗುಡಿ
ಪೂಜಾರಿ, ಎಂದಳು, ಮಂತ್ರವಾದಿಯು ತನ್ನ ಚಿತ್ತದಿ೦ದ ಆ ಪೂ
ಜಾರಿಯ ಎರಡು ಕೆನ್ನೆಯನ್ನೂ ಮುಟ್ಟಿದನು. ಆಕೂಡಲೆ ಆ ನೀ
ಚನ ಹೊಟ್ಟೆಯಲ್ಲಿ ಮಹಾ ಸಂಕಟವುಂಟತು; ಆಕ್ಷಣವೇ
ಅವನು ರಕ್ತವನ್ನು ಕಾರಿಕೊಂಡನು. ಆ ರಕ್ತ ಸಂಗಡಲೇ ಅವನ
ಬಾಯಲ್ಲಿದ್ದ ಹಲ್ಲುಗಳೆಲ್ಲಾ ಒಂದೂ ಇಲ್ಲದಹಾಗೆ ಬಿದ್ದು
ಹೋದವು. ಪುನಃ ಭಟಜಿಯು ತನ್ನ ಬೆತ್ತಗಿಂದ ಗಟ್ಟಿ
ಯಾಗಿ ಅವನ ತಲೆಯಮೇಲೆ ಒಂದೇಟನ್ನು ಹೊಡೆದು "ನಿನ್ನ
ಹಲ್ಲನ್ನು ಉದುರಿಸಿದೇನೆ, ಇನ್ನು ಮೇಲೆ ನೀನು ಯಾರಿಗೂ
ಇಂಥಾ ಕೇಡನ್ನು ಮಾಡಲಾರೆ, ನೀನು ಪರಮನೀಚ, ಈ
ಮಹಾ ಪತಿವ್ರತೆಗೆ ನೀನು ಎರಡಬಗೆದದ್ದಕ್ಕೆ ಇನ್ನೂ ಕಷ್ಟ
ವನ್ನು ನೀನು ಅನುಭವಿಸೀಯ, ತೆಲಗಾಚೆಗೆ ” ಎಂದು ಗದ
ರಿಸಿದನು. ಆ ದುರ್ಮಾರ್ಗನು ಬಾಯಲ್ಲಿ ರಕ್ತವನ್ನು ಸೋ
ರಿಸಿಕೊಳ್ಳುತಾ " ಹಾಳ ಉಪಾದ್ರಿಯ ಮಾತ ಕೇಳಿದ್ದಕ್ಕೆ
ಇಷ್ಟಾಯಿತು ದೇವರೇ " ಎಂದು ಅರಚಿಕೊಳ್ಳುತ್ತಾ ತನ್ನ
ಮನೆಗೆ ಹೊರಟು ಹೋದನು. ಹೀಗೆ ಬೆಂಕಿಯಲ್ಲಿ ಉರಿಯು
----------------------------------------------

೨೯೬     ಮಾಡಿದ್ದುಣ್ಣೊ ಮಹಾರಾಯ.

ತಾ ಇದ್ದ ಸೀತೆಯು ಬದುಕಿ ಈಚೆಗೆ ಬಂದಳು.

ಆಗ ರಾತ್ರೆ ೨೫ ಘಳಿಗೆಯಾಗಿತ್ತು, ಭುಜಿಯು ಪುನಃ
ಸ್ನಾನವನ್ನು ಮಾಡಿ ಬೇರೇ ಬಟ್ಟೆಯನ್ನುಟ್ಟು ಸೀತಮ್ಮನ
ವೃತ್ತಾಂತವನೆ ಲಾ ಆಕೆ ಬಾಯಿಂದ ಸಂಕ್ಷೇಪವಾಗಿ ತಿಳಿದು
ಕೊಂಡು ಅವಳನೂ ಗಿರಿಯಂನನ್ನೂ ಕರೆದುಕೊಂಡು ಊ
ರೊಳಕ್ಕೆ ಪ್ರವೇಶಮಾಡಿ ಜೋಯಿಸರ ಮನೆ ಬಾಗಿಲಲ್ಲಿ
ಕೂಗಿದನು; ಕದ ತೆಗೆಯಿರಿ ಎಂದನು, ಅವರ ಮನೆಯಲ್ಲಿ
ಒಬ್ಬಿಬ್ಬರು ಕೂತಕಡೆಯಲ್ಲಿಯೇ ಸುರುಟಿಕೊಂಡಿದ್ದರು. ಸದಾ
ಶಿವದೀಕ್ಷಿತ, ತಿಮ್ಮಮ್ಮ, ಮಹಾದೇವ, ಇವರು ಮಾತ್ರ
ಸೀತಮ್ಮನ ವಿಚಾರವನ್ನೆ ಮಾತನಾಡುತಾ ಹಲಬುತಾ ಕೂ
ತಿದ್ದರು. ಒಂದು ಕಂಬದಲ್ಲಿ ದೀಪ ಉರಿಯುತಿತ್ತು. ಅಂ
ಥಾ ಅನೇಳೆಯಲ್ಲಿ ಬಾಗಿಲಲ್ಲಿ ಕೂಗಿದವರು ಯಾರೆಂದು ಧ್ಯಾ
ನಿಸಿದರು. ಮೈಸೂರಿನಿಂದ ಯಾರೋ ಬಂದಿರಬೇಕೆಂದು
ಯೋಚಿಸಿ ಮಹಾದೇವನು ಎದ್ದು ಬಾಗಿಲತೆಗೆದನು. ಭಟಜಿ
ಗಿರಿಯಂಣ ಸಹಿತ ಸೀತಮ್ಮನನ್ನೂ ಕರೆದುಕೊಂಡು ಒಳಕ್ಕೆ
ನುಗ್ಗಿ ಹಜಾರದಲ್ಲಿ ಬಂದು ಕೂತುಕೊಂಡರು. ಬಿಳಿ ಪಂಚೆ
ಯನ್ನು ಟ್ಟುಕೊಂಡಿದ್ದ ಸೀತಮ್ಮನ ಗುರುತು ಯಾರಿಗೂ ಸಿಕ್ಕ
ಲಿಲ್ಲ. ರಾತ್ರೆ ಅನ್ನ ನೀರಿಲ್ಲದೆ ನಿದ್ರೆಯಿಲ್ಲದೆ ದುಃಖದಲ್ಲಿ ಇ
ಳಿಯಮುಳುಗಿದ್ದ ಆ ಮನೆಯ ಜನರಿಗೆ ಯಾರನ್ನು ನೋಡು
ವುದೂ ಬೇಕಾಗಿರಲಿಲ್ಲ. ದೀಪವಿದ್ದರೂ ಅದು ಎಲ್ಲಿಯೋ
ಒಂದುಕಡೆ ಸಂಣಗೆ ಉರಿಯುತಿತ್ತು. ಸೀತಮ್ಮ ನು ಒಂದು
ಕತ್ತಲೆಯಾಗಿರುವ ಮೂಲೆಯಲ್ಲಿ ಹೋಗಿ ನಿಂತು ಕೊಂಡಳು.
-----------------------------------------------------
       
        ಮಾಡಿದ್ದುಣ್ಣೊ ಮಹಾರಾಯ. ೨೯೭
ಆಗ ಸದಾಶಿವ ದೀಕ್ಷಿತನು ಭ್ರಮೆಯಿಂದ, ಅವರಲ್ಲಿ ಒಬ್ಬನು
ಪಶುಪತಿ ಸಾಂಬಶಾಹಿಯಾಗಿರಬಹುದೆಂದು ತಿಳಿದು, ದೀಕ್ಷಿತ-ಯಾರು, ಮಾವಯ್ಯನೆ ?
ಭಟಜಿ- ಸ್ವಾಮಿ, ನಾವು ಕೊಯಮುತ್ತೂರು ಪ್ರಾಂತ್ಯದಿಂ
    ದ ಬಂದೆವು. ಹಗಲು ಬಿಸಿಲು, ಆದಕಾರಣ ರಾತ್ರೆ
    ಯೆಲ್ಲಾ ನಡೆದುಕೊಂಡು ಬಂದೆವು. ಬಹು ಆಯಾಸ
    ವಾಗಿದೆ. ಈ ಊರಲ್ಲಿ ಇನ್ನು ಎಲ್ಲಿಯೂ ಇಳಿಯು
    ವುದಕ್ಕೆ ಸ್ಥಳ ದೊರೆಯಲಿಲ್ಲ. ಎಲ್ಲಿ ವಿಚಾರಿಸಿದರೂ
    ಜೋಯಿಸರ ಮನೆಗೆ ಹೋಗಿ ಎಂದು ಹೇಳುತ ಬಂ
    ದೆವು. ತಮ್ಮ ಖ್ಯಾತಿಯನ್ನು ಕೇಳಿ ಇಲ್ಲಿಗೆ ಬಂ
    ದೆವು. ನಾಳೆ ಸಾಯಂಕಾಲದವರೆಗೂ ಇಲ್ಲಿದ್ದು ಸುದಾ
    ರಿಸಿಕೊಂಡು ಮುಂದಕ್ಕೆ ಹೋಗುತ್ತೇವೆ.
ದೀಕ್ಷಿತ-ಸ್ವಾಮಿ, ತಾವು ಇನ್ನು ಯಾರಮನೆಗಾದರೂ ಹೋ
    ಗಿ ಇಳಿದುಕೊಳ್ಳಿ. ಕತ್ತಲೆಯಲ್ಲಿ ಕಾಣಿಸಲಿಲ್ಲ. ಮೈಸೂರಿಂದ     ಬಂದ ನಮ್ಮ ಬಂಧುಗಳಿರಬಹುದೆಂದು     ತಿಳಿದುಕೊಂಡಿದ್ದೆವು. ನೀವು ಮೈಸೂರಿನವರಲ್ಲವೆಂದು     ತಿಳಿದಿದ್ದರೆ ಬಾಗಿಲ ತೆಗೆಯುತಿರಲಿಲ್ಲ. ನಮಗೆಲ್ಲಾ
    ಆಶೌಚ. ಬೇರೆ ದಯಮಾಡಿಸಿ,
ಭಟಜಿ-ತಮಗೆ ಎಂಥಾ ಆಶೌಚ ?
ದೀಕ್ಷಿ-ನನಗೆ ಮೃತಾಶೌಚ.
ಭಳಜಿ-ಕಾರಣವೇನು ?
ದೀಕ್ಷಿ-ನನ್ನ ಸೊಸೆ ಸತ್ತು ಹೋದಳು. ಸ್ಮಶಾನಕ್ಕೆ ಕೊಂಡು
    ಹೋಗಿ ದಹನಮಾಡಿ ಬಂದು ಜಾವ ಹೊತ್ತಾಯಿತು.
------------------------------------------------------
೨೯೮  ಮಾಡಿದ್ದುರ್ಣಣೋ ಮಹಾರಾಯ,

ಭಟಜಿ-ಏನುನಾಮಿ ಹೀಗೆ ಹೇಳುತ್ತೀರಿ ? ನಿಮ್ಮ ಸೊಸೆ
    ಸತ್ತಹಾಗೆ ಕಾಣುವುದಿಲ್ಲವಲ್ಲ ?
ದೀಕ್ಷಿ- ಸುಟ್ಟು ಬಂದು ಕೂತಿರುವವ ನಾನು ನಿಮಗೆ
    ಹೇಗೆ ತಿಳಿಯಬೇಕು ?
ಭಟಜಿ-ತಾವು ಏನೋ ಹೀಗೆ ಹೇಳುತ್ತೀರಿ. ತಮ್ಮ ಸೊಸೆ
    ಸತ್ತಂತೆ ತೋರುವುದಿಲ್ಲ. ನಾನು ಸ್ವಲ್ಪ ಮಟ್ಟಿಗೆ
    ಜ್ಯೋತಿಷವನ್ನು ಬಲ್ಲೆ,
ದೀಕ್ಷಿ- ಪ್ರತ್ಯಕ್ಷವಾಗಿ ನಡೆದದಕ್ಕೆ, ಇನ್ನು ನಿನ್ನ ಜ್ಯೋತಿ
    ಷವೇತಕ್ಕೆ ? ಮನೆಯವರಿಗೆಲ್ಲಾ ದುಃಖ ಪ್ರಾಪ್ತವಾಗಿ
    ರುವಾಗ ತನ್ನ ವಿತಂಡ ವಾದ ನನಗೆ ಬೇಡ, ಈ
    ಸೂತಕದ ಮನೆಯಲ್ಲಿರುವುದು ಸಮನಲ್ಲ. ಬೇರೆ
    ಯಾರಮನಗಾದರೂ ದಯಮಾಡಿ, ಅಧವಾ ಗುಡಿಯ
    ಕೈಸಾಲೆ ಚೆನ್ನಾಗಿದೆ. ಅಲ್ಲಿ ಹೋಗಿ     ಮಲಗಿಕೊಳ್ಳಿ.
ಭಟಜಿ-ತಮಗೆ ದುಃಖದ ವೇಳೆಯಲ್ಲಿ ನಾವು ತಮ್ಮನ್ನು ತೊ೦
    ದರೆ ಮಾಡುವುದು ಸರಿಯಲ್ಲ. ಏನೋ ಅರಿಯದೆ ಬಂ
    ದುಬಿಟ್ಟವು. ಬೆಳಗಾದಮೇಲೆ ಹೊರಟು ಹೋಗುತ್ತೇವೆ.
    ಅಷ್ಟಕ್ಕಾದರೂ ಅಪ್ಪಣೆ ಕೊಡಿಸಿ. ಈ ಅವೇಳೆಯಲ್ಲಿ
    ನಾನು ಎಲ್ಲಿಗೆ ಹೋಗಲಿ, ನಮ್ಮ ಸಂಗಡ ನಮ್ಮ
    ತಂಗಿ ಬಂದಿದಾಳೆ. ಆಕೆಗೋಸ್ಕರ ಇಲ್ಲಿಗೆ ಬಂದೆವು. ಸದಾ-- ಹಾಗಾದರೆ ಬೀದೀ ನಡುವೆಯಲ್ಲಿ ಜಗಲಿ ಇಧೆ, ಅಲ್ಲಿ
    ಮಲಗಿಕೊಳ್ಳಿ.
ಅದೇ ಪ್ರಕಾರ ನಡುವೆ ಜಗಲಿಯಮೇಲೆ ಭಜಜಿ ಗಿರಿ
ಯಣ್ಣ ಕೂತುಕೊಂಡರು. ಸೀತಮ್ಮ ಒಂದು ಮೂಲೆಯಲ್ಲಿ
-------------------------------------------------

ಮಾಡಿದ್ದುಣ್ಣೊ ಮಹಾರಾಯ.  ೨೯೯
ಕೂತುಕೊಂಡಳು. ಬೆಳಕು ಹರೆಯುತಬಂತು. ಭಟಜಿಯು ಒಳ ಕ್ಕೆಹೋಗಿ ದೀಕ್ಷಿತರವರೆ, ಬೆಳಗಾಯಿತು, ನಾವು ಹೊರಡ
ಬೇಕು. ನನ್ನ ತಂಗಿಯ ಸೀರೆ ದಾರಿಯಲ್ಲಿ ಬರುವಾಗ್ಗೆ
ಬೆಂಕಿಬಿದ್ದು ಸುಟ್ಟುಹೋಯಿತು. ನನ್ನ ಪಂಚೆಯನ್ನು
ಕಟ್ಟಿಕೊಂಡಿದಾಳೆ. ಹೊರಗೆ ಹೊರಡುವುದಕ್ಕೆ ನಾಚಿಕೊಳ್ಳು
ತಾಳೆ. ತಮ್ಮ ಸೊಸೆಯ ಒ೦ದು ಹಳೇ ಸೀರೆ ಅಪ್ಪಣೆಯಾ
ದರೆ ಉಪಕಾರವನ್ನು ಮರೆಯಲಾರೆ. ತಾವು ಬಹು ಸತ್ಯವಂ
ತರೆಂದು ಕೇಳಿ ಇಲ್ಲಿಗೆ ಬಂದೆವು, ತಾವಾಗಿ ಮಾನಾ ಕಾಪಾಡಿದ
ಹಾಗಾಗುತ್ತೆ. ಹಾಗೂ ಸರಿ ಹೀಗೂ ಸರಿ, ದಾನಕ್ಕೆ ಸಕಾ
ಲವಾಗಿದೆ. ನಾವೂ ಅರ್ತ ರಾಗಿದೇವೆ, ಎಂದು ವಿನಯವಾಗಿ
ಹೇಳಿದನು. ಆಗ ದೀಕ್ಷಿತನು ಪಾರ್ವತಮ್ಮ ನನ್ನು ಕುರಿತು ಅಮ್ಮ-
ಅಮ್ಮ ಹುಡುಗಿ ಉಟ್ಟುಕೊಳ್ಳುತಿದ್ದ ಒಂದು ಹಳೇ
ಸೀರೆಯನ್ನೂ ಅದರ ಜೊತೆಗೆ ಅವಳ ಕುಪ್ಪಸವನ್ನೂ ಕೊಟ್ಟ
ಬಿಡು, ಎಂದನು. ಅದೇ ಪ್ರಕಾರ ಆ ಮುದಿಕಿಯು ತಂದು
ಭಟಜಿಯ ಮುಂದಿರಿಸಿದಳು. ಆಗ ತಿಮ್ಮಮ್ಮನು-ಅವಳಿದ್ದು
ಈ ಸೀರೆಯನ್ನುಟ್ಟು ಕೊಳ್ಳುತಿದ್ದರೆ, ಇರಬೇಕು, ಇಲ್ಲದಿದ್ದರೆ
ಇದು ಯಾತಕ್ಕೆ ? ಅದನ್ನು ನೋಡಿದಾಗಲೆಲ್ಲಾ ದುಃಖಪಡ
ಬೇಕಾಗುತ್ತೆ. ಈ ಸೀರೆಯನ್ನುಟ್ಟುಕೊಂಡು ಅವಳು ಬರುತಾ
ಇದ್ದರೆ ಸಾಕ್ಷಾತ್ ಆದಿಲಕ್ಷ್ಮಿಯೇ ಬರುತಾಳೊ, ಎನ್ನುವ
ಹಾಗೆ ಇರುತಿದ್ದಳು. ಅಯ್ಯೋ ಅಯ್ಯೋ ! ಅಂಥಾ ರೂಪೋ
ಆ ಗುಣವೋ ! ಇನ್ನೆಂದಿಗೆ ಕಂಡೇವು ! ತೆಗೆದುಕೊಳ್ಳಿಯಪ್ಪ,
ಯಾರಾದರೂ ಪುಣ್ಯಾತ್ಮರು ಉಟ್ಟುಕೊಳ್ಳಿ, ಸಾರ್ಧಕವಾಗಲಿ
ಎಂದಳು. ಅದಕ್ಕೆ ಭಟಜಿಯು- ತಾಯಿ ತಮಗೇನು ಕಡಮೆ?
-----------------------------------------------------

೩೦೦         ಮಾಡಿದ್ದುಣ್ಣೋ ಮಹಾರಾಯ.

ಯಾತಕ್ಕೆ ದುಃಖಪಡುತೀರಿ. ಅಂಥಾ ಸೊಸೆಯೇ ಬರುತಾಳೆ
ಎಂದು ಹೇಳುತಾ ಬಟ್ಟೆಯನ್ನು ತೆಗೆದುಕೊಂಡು ಸ್ಪಲ್ಪ ಕುಂ
ಕುಮವನ್ನು ಅದರ ಸಂಗಡ ಇಸುಕೊಂಡು, ನಡುವೆಗೆಹೋ
ಗಿ ಸೀತಮ್ಮನಿಗೆ ಕೊಟ್ಟನು. ಅವಳು ಆ ಸೀರೆಯನ್ನುಟ್ಟು
ಕುಪ್ಪಸವನ್ನು ತೊಟ್ಟ ಕುಂಕುಮವನ್ನು ಹಣೆಗೆ ಇಟ್ಟು
ಕೊಂಡಳು. ಇವಳು ನಡುವೆಯಲ್ಲಿಯೇ ಇದ್ದಳು. ಸ್ವಲ್ಪ
ಹೊತ್ತಿನಲ್ಲಿಯೇ ಭಟಜಿಯೂ ಗಿರಿಯಂಣನೂ ಒಳಕ್ಕೆ ಬಂದು
ಕೂತುಕೊಂಡರು. ಸದಾಶಿವದೀಕ್ಷಿತನು- ಮತ್ತೇನು ಸ್ವಾಮಿ ?
ಎಂದನು. ಭಟಜಿಯು ತನ್ನ ಸಂಗಡ ನಾನು ವಿಶೇಷವಾಗಿ
ವಾದ ಮಾಡುವುದಿಲ್ಲ. ತನ್ನ ಸೊಸೆ ಸತ್ತು ಹೋದಳೆಂದು ತಾವು
ಹೇಳಿದಿರಿ. ಹಾಗಾದರೆ ತಾವು ಹಾಗೆಯೇ ನಂಬಿಕೊ೦
ಡಿರಿ. ನನ್ನದೊಂದು ಮನುವೆ ಇದೆ, ಅದನ್ನು ಲಾಲಿಸಿ, ತನ್ನು ಮ
ನೇ ಜನರನ್ನೆಲ್ಲಾ ಈಗ ಇಲ್ಲಿಗೆ ಕರೆಯಿಸಿ, ನಾನು ಒಂದು
ಸಂಗತಿಯನ್ನು ಹೇಳುತ್ತೇನೆ ಎಂದನು. ಅದಕ್ಕೆ ದೀಕ್ಷಿತನು ತನ್ನ
ಮನಸ್ಸಿನಲ್ಲಿ-ಪದೇ ಪದೇ ಈ ಬ್ರಾಹ್ಮಣ ಹೀಗೆ ಹೇಳುತಾ
ನಲ್ಲ ? ಯಾತಕ್ಕಾಗಿ ಹೀಗೆ ಹೇಳುತಾನೆ ? ಯಾವರೋಗವೂ ಇಲ್ಲ
ದೆ ನನ್ನ ಹುಡುಗಿ ಸತ್ತದ್ದೇನೋ ತಿಳಿದೇ ಇದೆ. ಇದು ಭೀತಿ ಶಂ
ಕೆಯ ಶಾಬರ ಪ್ರಯೋಗವೇ ಎಂಬ ವಿಚಾರ ಕುರಿತು ಮಂತ್ರ
ವಾದಿಗಳನ್ನು ಕೂಡ ವಿಚಾರಿಸಿ ಗೊತ್ತು ಮಾಡಿತ್ತಷ್ಟೆ, ಈ
ಬ್ರಾಹ್ಮಣ ಏನೋ ಹೀಗೆ ಕುಣಿಚಿ ಕುಣಿಚಿ ಹೇಳುತ್ತಾನೆ. ಹೀಗೆ
ಆ ಗಂತುಕರಾಗಿ ಬರುವ ಜನರಲ್ಲಿ ಏನಾದರೂ ಮಹತ್ತುಗ
ಳಿರುವುದುಂಟು. ಈತ ಏನು ಹೇಳುತಾನೋ ಪರೀಕ್ಷಿಸೋಣ
-------------------------------------------------

        ಮಾಡಿದ್ದುಣ್ಣೋ ಮಹರಾಯ ೩೦೧

ವೆಂದು ಯೋಚಿಸಿಹೋಂಡು ಮನೆಯವರೆಲ್ಲರನ್ನೂ ಹಜಾರಕ್ಕೆ ಬರುವಂತೆ ಹೇಳಿದನು. ಎಲ್ಲರೂ ಬಂದು ನಿಂತುಕೊಂಡರು.

ಆಗಿನ ಆಶ್ಚಯ್ಯನನ್ನು ಏನಹೇಳಲಿ ? ಯಾಕೆ ಎಲ್ಲರನ್ನೂ ಕರೆಯಿಸಿದ್ದಾರೆ ಎಂದು ಎಲ್ಲರಿಗೂ ಅನುಮಾನವಾಯಿತು.
ಎಲ್ಲರ ದೃಷ್ಟಿಯ ಆ ಬ್ರಾಹ್ಮಣನಮೇಲೆ ಬಿತ್ತು. ಭಟ
ಜಿಯು ಅಲ್ಲಿದ್ದ ಜನರು ಯಾರೂ ಹೆದರಿಕೊಳ್ಳದಹಾಗೆ ಬಾ
ಯಲ್ಲಿ ಏನೋ ಮಂತ್ರವನ್ನು ಜಪಿಸಿ, " ಸೀತಮ್ಮ, ಬಾ "
ಎಂದು ಗಟ್ಟಿಯಾಗಿ ಕೂಗಿದನು, ಸೀತಮ್ಮ ತಟ್ಟನೆ ನಡುವೆ
ಯಿಂದ ಒಳಕ್ಕೆ ಬಂದು ಎಲ್ಲರಿಗೂ ನಮಸ್ಕಾರಮಾಡಿ ತಲೆ
ಬಾಗಿ ನಿಂತುಕೊಂಡಳು. ಸಮಸ್ತರಿಗೂ ಆಶ್ಚರ್ಯವಾಯಿತು.
ಅಲ್ಲಿದ್ದವರಿಗೆಲ್ಲಾ ಕಂಣು ದೊಡ್ಡದಾಯಿತು, ದೃಷ್ಟಿಸೀ ತನ
ಮೇಲೆ ನೆಟ್ಟಿತು. ಬಾಯಿ ತಾನಾಗಿ ತೆರೆದುಹೋಯಿತು. ಭ
ಯ ಆಶ್ಚರ ಸಂತೋಷ ಮೂರೂ ಮುಖದಲ್ಲಿ ನಾನು ತಾನೆಂ
ದು ಮುಂದರಿಯುತಿದ್ದವು. ಆಗ ಪಾರ್ವತಮ್ಮನು " ಸೀತ?" , ಎಂದಳು. ಸೀತನು " ಆ " ಎಂದು ಉತ್ತರಕೊಟ್ಟಳು. ಆಗ ಮನೇ ಹೆಂಗಸರೆಲ್ಲಾ ಬಂದು ಅಯ್ಯೋ ನನ್ನ ತಾಯಿ, ನೀನು
ಎಲ್ಲಿ ಹೋಗಿದ್ದೆ ? ನಿನಗೇನಾಗಿತ್ತು ? ” ಎಂದು ಒಬ್ಬರು
ತಬ್ಬಿಕೊಂಡರು, ಒಬ್ಬರು ತಲೇ ತಡವರಿಸಿದರು, ಇನ್ನೊ
ಬ್ಬರು ಕೈ ಹಿಡಿದುಕೊಂಡರು, ದೀಕ್ಷಿತನು ಸೀತಾದೇವಿ ಅಗ್ನಿ
ಕುಂಡದಿಂದ ಬಂದಹಾಗೆ ಬಂದೆಯಾ ಅಮ್ಮಾ ? ನಮ್ಮ
ಭಾಗ್ಯಲಕ್ಷ್ಮಿ ಬಾ ಎಂದನು. ಕೂಡಲೆ ಅದುವರೆಗೆ ಆಶ್ಚರ್ಯ
ಸಾಗರದಲ್ಲಿ ಮುಳುಗಿದ ತಿಮ್ಮಮ್ಮನು ಸೀತಮ್ಮನ ಹತ್ತ
ರ ನಿಂತು ಅವಳನ್ನು ಅರ್ಧ ಆಲಿಂಗನ ಮಾಡಿಕೊಳ್ಳುತಾ
-------------------------------------------------
೩೦೨         ಮಾಡಿದ್ದುಣ್ಣೋ ಮಹಾರಾಯ.

ಅವಳ ತಲೆಯನ್ನು ತಡವರಿಸುತಾ- ಅಮ್ಮಾ, ನೀನು ನಮ್ಮೆ
ಲ್ಲರನ್ನೂ ಬಿಟ್ಟು ಎಲ್ಲಿ ಹೋಗಿದ್ದೆ ತಾಯಿ ? ಹೇಗೆ ಬದುಕಿ
ಬಂದೆ ? ಇದೇನಾಶ್ಚರ್ಯ ! ನಿನಗೆ ಏನಾಯಿತು ? ಯಾ
ವದುರ್ಮಾರ್ಗರು ಏನಮಾಡಿದರೆ ? ನಿನ್ನ ಭಾಗದ ರಾಮ
ಲಕ್ಷಣರ ಹಾಗೆ ಬಂದು ಈ ಪುಣ್ಯಾತ್ಮರು ಕಾಪಾಡಿದರೆ
ಅಮ್ಮ ? ಪುನಃ ತಾಯಿಹೊಟ್ಟೆಯಲ್ಲಿ ಹುಟ್ಟಿದೆಯ, ಗಂಡ
ನಿಗೆ ಹೆಂಡತಿಯಾದೆಯ, ಮಗುವಿಗೆ ತಾಯಾದೆಯ ? ಎಂದು
ಹಲವು ಬಗೆಯಲ್ಲಿ ಹಂಬಲಿಸಿದಳು. ಎಲ್ಲರಿಗೂ ಆನಂದಬಾಷ್ಪ
ಸುರಿಯಿತು. ದೀಕ್ಷಿತನು ಎದ್ದು ಬ್ರಾಹ್ಮಣರಿಬ್ಬರಿಗೂ ನಮ
ಸ್ಕಾರಮಾಡಿ ಸ್ವಾಮಿ ಎಂದೆಂದಿಗೂ ಇಲ್ಲದ ಈ ಆಶ್ಚರ್ಯ
ಕ್ಕೆ ಕಾರಣವೇನು, ಅಪ್ಪಣೆಯಾಗಲಿ, ಎಂದು ಎರಡು ಕೈ
ಗಳನ್ನೂ ಮುಗಿದು ಕೇಳಿಕೊಂಡನು. ಅದಕ್ಕೆ ಭಟಜಿಯು
ಸೀತಮ್ಮನೇ ಹಿಂದಿನ ವ್ಯತ್ಯಾಂತವನ್ನು ಹೇಳಲಿ, ಎಂದನು.
ಆಗ ಸೀತಮ್ಮ ನು ಪರಮ ನೀಚನಾದ ಅಮ್ಮನಗುಡಿ ಸಿದ್ದ
ಮಾಡಿದ ಅಕೃತ್ಯವನ್ನು ತಾನು ತಿಳಿದಮಟ್ಟಿಗೆ ವಿವರಿಸಿ ತಾ
ನು ಮೊದಲು ಹಿತ್ತಲ ಬಾಗಿಲಿನಿಂದ ಬರುತಾ ಇರುವಾಗ್ಯೆ
ಜ್ಞಾನ ತಪ್ಪಿ ಬಿದ್ದು ಹೋಗುವ ತನಕ ನಡೆದ ವೃತ್ತಾಂತವ
ನ್ನೆಲ್ಲಾ ಸ್ಪವ್ಯವಾಗಿ ವಿವರಿಸಿದಳು. ಆ ತರುವಾಯ ಗಿರಿ
ಯಂಣನು ಸ್ಮಶಾನದಲ್ಲಿ ನಡೆದ ಸಂಗತಿಗಳನ್ನೂ ಸಿದ್ದ ಮಾ
ಟದ ಬೊಂಬೆ ಕಿತ್ತು ತಂದು ಬೆಂಕಿಯಲ್ಲಿ ಸುಟ್ಟಿದ್ದನ್ನೂ,
ಅವನ ಹಲ್ಲುಗಳೆಲ್ಲಾ ಉದುರಿ ಹೋದನ್ನೂ ಅವನು
ರಕ್ತ ಕಾರಿಕೊಂಡು ಅಳುತಾ ಊರಿಗೆ ಓಡಿಹೋದ್ದನ್ನೂ ತಾ
ವುಗಳು ಊರಿಗೆ ಬಂದದ್ದನ್ನೂ ಸವಿಸ್ತಾರವಾಗಿ ಹೇಳಿದನು.
-------------------------------------------------------
       
        ಮಾಡಿದ್ದುಣ್ಣೋ ಮಹಾರಾಯ. ೩೦೩

ಆಗ ಮನೆಯವರೆಲ್ಲರೂ ಆ ಮಹಾತ್ಮ ನಾದ ಭಟಜಿಗೆ ಏಕಕಾ
ಲದಲ್ಲಿ ಸಾಷ್ಟಾಂಗವಾಗಿ ನಮಸ್ಕಾರಮಾಡಿ--ಸ್ವಾಮಿ ನಮ್ಮ
ಭಾಗದ ಪರಮೇಶ್ವರನು ತನ್ನ ರೂಪಿನಲ್ಲಿ ದಯಮಾಡಿದಾ
ನೆ, ಎಂದು ಹತ್ತು ಬಾಯಲ್ಲಿ ಹೊಗಳಿದರು.

ಕೂಡಲೆ ಆಪರಕರ್ಮಾದಿಗಳ ಆಚರಣೆಯಿಂದ ಅಶುಚಿ
ಯಾಗಿದ್ದ ಮನೆಗೆ ಸುಂಣದ ನೀರನ್ನು ಎರಚಿ, ಪುಣ್ಯಾವ
ರ್ಚನೆಯನ್ನು ಮಾಡಿ, ವಸಿಷ್ಟ ವಾಮದೇವರಿಗೆ ಸಮಾನ
ವಾಗಿ ಬಂದಿದ್ದ ಆ ಇಬ್ಬರು ಬ್ರಾಹ್ಮಣರಿಗೂ ವಿಶೇಷವಾಗಿ
ಉಪಚರಿಸಿ, ದೀಕ್ಷಿತನು ಈ ಸಂಗತಿಯಲ್ಲವನ್ನೂ ಕುತುಸವಿಸ್ತಾರ
ವಾಗಿ ಪಶುಪತಿ ಸಾಂಬಶಾಸ್ಸಿಗೆ ಕಾಗದವನ್ನು ಬರೆದು ಕಳು
ಹಿಸಿದನು. ಸತ್ತುಹೋದ ಸೀತಮ್ಮ ಬದುಕಿಬಂದಳು ಎಂಬ
ವರ್ತಮಾನವು ಹೇಗೊ ಬೆಳಕು ಹರಿಯುವುದರೊಳಗಾಗಿ ಕಿ
ವಿಯಿಂದ ಕಿವಿಗೆ ಬಿದ್ದು ಒಂದು ನಿಮಿಷದಲ್ಲಿ ಪರಿಮಳದ್ರವ್ಯ
ದವಾಸನೆಯಹಾಗೆ ಊರಿಂದ ಊರಿಗೆ ಹರಡಿಕೊಳ್ಳುತ್ತಾ ಬಂ
ತು, ಸೀತಮ್ಮನನ್ನು ಹೊತ್ತುಕೊಂಡು ಹೋದಾಗ ಎಷ್ಟು
ಇತ್ತೋ ಅದಕ್ಕಿಂತ ಒಂದಕ್ಕೆ ಹತ್ತರಷ್ಟು ಜನ ಬಂದುಬಿ
ಟ್ಟಿತು. ಎಲ್ಲರೂ ಸೀತಮ್ಮನನ್ನು ನೋಡಿ ಆಶ್ಚಯ್ಯಪಟ್ಟು
ಕೊಂಡು ಸ್ಥಳವನ್ನು ಬಿಟ್ಟು ಹೋಗಲಾರದೆ ಅವಳನ್ನು ಎಷ್ಟು
ನೋಡಿದರೂ ದಣಿಯದೆ ಅವಳ ವಿಚಾರವನ್ನು ಎಷ್ಟು
ಕೇಳಿದರೂ ತೃಪ್ತಿಯಾಗದೆ ಆಶ್ಚರ್ಯದಲ್ಲಿ ಮುಳುಗಿದ್ದರು,
ಜನ ಒಬ್ಬರಮೇಲೆ ಒಬ್ಬರು ಬರುತ್ತಲೇ ಇದ್ದರು. ಸದಾ
ಶಿವದೀಕ್ಷಿತನು ಗಿರಿಯಂಣ ಭಟಜಿ ಇವರನ್ನು ವಿಶೇಷವಾಗಿ
--------------------------------------------------

೩೦೪         ಮಾಡಿದ್ದುಣ್ಣೊ ಮಹಾರಾಯ.

ಉಪಚರಿಸಿ ಹೆಚ್ಚಾದ ಮಯ್ಯಾದೆಯಿಂದ ಕಾಣುತಾ ಬಲವಂತ
ವಾಗಿ ಅವರನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡನು.

ಅತ್ತ ಮೈಸೂರಿಗೆ ಈ ವರ್ತಮಾನವು ಸದಾಶಿವದೀಕ್ಷಿತ
ನ ಕಾಗದ ತಲಪುವದಕ್ಕೆ ಮುಂಚೆಯೇ ಮುಟ್ಟಿತ್ತು. ಆ
ಕೂಡಲೇ ಪಶುಪತಿ ಸಾಂಬಶಾಸ್ತ್ರಿಗೆ ಕಾಗದದ ಮೂಲಕ
ನೇಟಾದ ವರ್ತಮಾನವೇ ತಲಪಿತು. ಆ ಶಾಸ್ತ್ರೀಯ ಅವ
ರ ಮನೆಜನರೂ ಈ ಕಾಗದವನ್ನು ಓದಿದ ಕ್ಷಣದಲ್ಲಿ ಬೆಚ್ಚಿ
ಬೆರಗಾಗಿ ಹೋದರು. ಶಾಸ್ತ್ರಿಯು ಆ ಗಳಿಗೆಯಲ್ಲಿಯೇ ಅ
ರಮನೆಗೆ ಹೋಗಿ ಸಮಯವನ್ನು ದೊರಕಿಸಿಕೊಂಡು ಅಂಬಾ
ವಿಳಾಸದಲ್ಲಿ ಸದಾಸಿವದೀಕ್ಷಿತನ ಕಾಗದವನ್ನು ಕೃಷ್ಣರಾಜ ಪ್ರಭು
ಗಳ ಸನ್ನಿಧಿಯಲ್ಲಿ ಓದಿ ಅರಿಕೆ ಮಾಡಿದನು. ಆಗ ಮಹಾರಾಜ
ರೂ ಅಲ್ಲಿದ್ದ ಸಭೆಯ ಅತ್ಯಾಶ್ಚರ್ಯವನ್ನು ಪುನಃ ಪುನಃ ಕಾ
ಗದವನ್ನು ಓದಿಸಿ ಕೇಳಿ-ಇದೇನಾಶ್ಚರ್ಯ ? ಎಲ್ಲಿಯೂ ನಡೆಯ 
ದೇ ಇದ್ದ ಸಂಗತಿ ನಮ್ಮ ರಾಜ್ಯದಲ್ಲಿ ಜರಗಿದೆ. ಸತ್ತ ಹೆಣಕ್ಕೆ
ಜೀವಕಳೆಯನ್ನು ತುಂಬಿ ಪ್ರಾಣದಾನವನ್ನು ಮಾಡಿದ ಆ ಮಹಾ
ತ್ಮನ ದರ್ಶನವನ್ನು ನಾವು ಮಾಡಲೇ ಬೇಕು. ಆತನನ್ನು ಇಲ್ಲಿ
ಗೆ ಕರೆದುಕೊಂಡು ಬನ್ನಿ ಎಂದು ಅಪ್ಪಣೆಯಾಯಿತು. ಸಾಂಬ
ಶಾಸ್ತ್ರಿಯ ಅವರ ಮನೇಜನರೆಲ್ಲರೂ ಸೇರಿ ಹೋರಟು ಅತಿ
ಜಾಗ್ರತೆಯಾಗಿ ಸಂಜನಾಡಿಯನ್ನು ಸೇರಿದರು. ಸೀತಮ್ಮನನ್ನು
ಕಂಡಕೂಡಲೆ ಇವರುಗಳ ಆನಂದಕ್ಕೆ ಅಂತ್ಯವೇ ಇಲ್ಲದೇ ಹೋ ಯಿತು. ಎಲ್ಲರೂ ಈ ಮಾತನ್ನೆ ಪುನಃ ಪುನಃ ಕುಣಚಿಕುಣಚಿ
ಕೇಳುತಾ ಬಂದರು.
----------------------------------------------------
   
೩೦೫         ಮಾಡಿದ್ದುಣ್ಣೊ ಮಹಾರಾಯ.

ಅತ್ತಲಾ ದಂಡಿನ ಜನರು ಚಾಮರಾಜನಗರದಲ್ಲಿ ಬಂದು ಇಳಿದಿದ್ದರಷ್ಟೆ. ಇವರು ಸೀತಮ್ಮ ನನ್ನು ತೆಗೆದುಕೊಂಡು
ಹೋಗಿ ಉರಿಯಮೇಲೆ ಇಟ್ಟ ರಾತ್ರೆಯೇ ದಾರಿಬಿಟ್ಟು
ದಾರಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಹೊರಟು ಸಂಜ
ವಾಡೀ ಬಳಿಗೆ ಬಂದು ಊರಸುತ್ತಲೂ ಮುತ್ತಿಗೆ ಹಾಕಿಕೊಂ
ಡರು. ಅಮ್ಮ ನಗುಡಿ ಸಿದ್ದಪ್ಪಾಜಿಯವರ ಮನೆಯ ಮತ್ತು
ಗುಡಿಯ ಸುತ್ತಲೂ ಹೆಚ್ಚು ಬಿಗಿಯುಳ್ಳ ಪಹರೇ ಬಂದು
ಮುತ್ತಿಕೊಂಡಿತು. ಈ ಊರ ಜನಗಳ ಸ್ಥಿತಿಯು ಅಮಾಸೆ
ಹೇಳಿದ ಚರಿತ್ರೆಯಲ್ಲಿ ವಿಶದವಾಯಿತು, ಅಲ್ಲಿ ಕಳ್ಳರ ಹುತ್ತ
ವೇ ಸೇರಿಕೊಂಡಿತ್ತು. ಈ ಜನರು ಯಾತಕ್ಕೂ ಹೇಸತಕ್ಕವ
ರಲ್ಲ. ಸಮಯ ಬಂದರೆ ಎಷ್ಟು ಜನರನ್ನಾದರೂ ಕೊಂದು
ತಪ್ಪಿಸಿಕೊಂಡು ಓಡಿಹೋಗುವ ಸಾಮರ್ಧ್ಯವೂ ಅಭ್ಯಾಸವೂ
ಇವರಿಗೆ ಇತ್ತು. ಮತ್ತು ಪೂಜಾರಿ ಸಿದ್ದಪ್ಪಾಜಿಯ ಕಡೆ
ಯವರು ಕೇವಲ ಸಾಹಸಿಗಳೆಂದೂ, ಇವನು ಈಚೆಗೆ ವಿಶೇ
ಷವಾಗಿ ಖ್ಯಾತಿಗೆ ಬಂದ ಗುಡಿಯ ಪೂಜಾರಿಯಾದ್ದರಿಂದ
ದೇವರ ಭಕ್ತರ ಒಗ್ಗಟ್ಟಾಗಿ ಮೇಲೆ ಬರಬಹುದೆಂದೂ
ಸಹ ಭಯವಿತ್ತು. ಆದ ಕಾರಣ ಹೆಚ್ಚಾದ ಸೇನೆಯು ಅಲ್ಲಿ
ಸೇರಿ ಮುತ್ತಿಗೆ ಹಾಕಿದರು. ಬೆಳಗಿನ ಜಾವದಲ್ಲಿ ಸೀತಮ್ಮ
ಊರೊಳಕ್ಕೆ ಬಂದಳು. ಬೆಳಗಾದಮೇಲೆ, ದಂಡಿನವರು
ಬಂದು ಈ ಮುತ್ತಿಗೆ ಹಾಕಿದರು. ಆ ಊರಲ್ಲಿ ಎಲ್ಲಾ ಮನೆ
ಯೊಳಕ್ಕೂ ಏಕಕಾಲದಲ್ಲಿ ನುಗ್ಗಿ ಅಲ್ಲಿದ್ದ ಹೆಂಗಸರು ಗಂಡ
ಸರು ಎಲ್ಲರನ್ನೂ ಹಿಂಗಟ್ಟು ಮುರಿಕಟ್ಟಿ ಕೂರಿಸಿ ಎಲ್ಲಾ
---------------------------------------------------

೩೦೬ ಮಾಡಿದ್ದುಣ್ಣೊ ಮಹಾರಾಯ

ಮನೆಯನ್ನೂ ಝಡತೀಮಾಡಿದರು; ಮನೆಗಳ ಹಾರನ್ನು ಎ
ತ್ತಿದರು, ಗೋಡೆಗಳನ್ನು ಕೆಡವಿದರು, ನೆಲವನ್ನು ಅಗೆದರು.
ಅನೇಕ ಒಡವೆಗಳೂ, ವರಹಗಳೂ, ರತ್ನ ಪಡಿ ನಗಗಳೂ
ಅಲ್ಲಲ್ಲಿ ಸಿಕ್ಕಿದವು, ಸಿದ್ದಪ್ಪಾಜಿಯ ಮನೆಯಲ್ಲಿಯೂ ಗುಡಿ
ಯಲ್ಲಿಯ ಲೆಕ್ಕವಿಲ್ಲದಷ್ಟು ಒಡವೆಯ ಹಣವೂ ಸಿಕ್ಕಿತು.
ಬಾಯಲ್ಲಿ ಒಂದು ಹಲ್ಲೂ ಇಲ್ಲದೆ ರಕ್ತ ಸೋರುತಾ ಮುಖ
ವೆಲ್ಲಾ ಬಾತುಕೊಂಡು ಮೈ ಎಲ್ಲಾ ತರೆದುಹೋಗಿ ಮೇಲ
ಕ್ಕೆ ಏಳಲಾರದೆ ಸ೦ಕಟಪಡುತಾ ಬಿದ್ದಿದ್ದ ಸಿದ್ಧವಾಜಿಯವ
ರಿಗೂ ನಿಗಳ ಬಂಧನವಾಯಿತು. ಉಪಾದ್ರಿ ನಾರಪ್ಪಯ್ಯ
ನವರಿಗೆ ಕೈಕೊಳವಾಯಿತು. ಇದೂ ಒಂದು ಆಶ್ಚರ್ಯವಾ
ಯಿತು. ಸರಕಾರದವರು ಇವರೆಲ್ಲರ ಮಧ್ಯೆ ಬಿಟ್ಟು
ಕೊಂಡು ಅಲ್ಲಿ ದೊರೆತ ನಗ ನಾಣ್ಯಗಳೆಲ್ಲವನ್ನೂ ಚೀಲಗಳಲ್ಲಿ
ಹಾಕಿ ಮೊಹರು ಮಾಡಿ ಗಾಡಿಗಳ ಮೇಲೆ ಹೇರಿಸಿಕೊಂಡು
ಎಲ್ಲಕೂ ಬಾರಿನವರೂ ಕುದುರೆ ಸವಾರರೂ ಸುತ್ತಿಕೊಂಡು ಮೈಸೂರಿಗೆ ಹೋದರು. ಈ ಹಾಳ ಕಳ್ಳರ ಗುಂಪಿಗೆ ಸೇರಿ ಸರ್ಕಾರದವರ ಕೈಗೆ ಸಿಕ್ಕದೇ ಹೋದ ಜನರು ಕೆಲವರು ತಪ್ಪಿಸಿಕೊಂಡು ಕಾಡುಪಾಲಾಗಿ ಓಡಿಹೋದರು. ಒಂದೆರಡು
ದಿವಸದೊಳಗಾಗಿ ಊರೆಲ್ಲಾ ಹಾಳಾಯಿತು. ಈ ವದಂತಿ
ಎಲ್ಲೆಲ್ಲಿಯೂ ಸುತ್ತಲೂ ಹತ್ತು ಗಾವುದದ ವರೆಗೂ ಹರಡಿ
ಕೊಂಡಿತು. ತಮ್ಮನ್ನೂ ಎಲ್ಲಿ ಹಿಡಿದುಕೊಂಡು ಹೋಗು
ತಾರೋ ಎಂದು ಯಾವ ಊರವರೂ ಸಂಜನಾಡಿಯ ಕಡೆ
ತಿರುಗಿ ಕೂಡ ನೋಡುವುದನ್ನು ಬಿಟ್ಟುಬಿಟ್ಟರು. ಅಮ್ಮ
ನಗುಡಿಗೆ ದೀಪ ಹತ್ತಿಸುವವರು ಕೂಡ ಇಲ್ಲದೇ ಹೋದರು.
--------------------------------------------------
        ಮಾಡಿದ್ದುಣ್ಣೊ ಮಹಾರಾಯ. ೩೦೬
ಕೊಲ್ಲಾಪುರದ ಮಹಾಲಕ್ಷ್ಮಿಯು ಆ ಊರನ್ನು ಬಿಟ್ಟು
ಬೇರೆಕಡೆಗೆ ಬಿಜಯಂಗೈದಳು. ಆಕಡೆ ನಗರದ ಅಮಲ್ದಾರ
ರೂ ಕಿಲ್ಲೇದಾರರೂ ಹೆಡಮುನ್ಷಿಯವರೂ ಇತರ ಕರಣೀ
ಕರೂ ಗುಮಾಸ್ತೆಯವರೂ ಪಟೇಲರೂ ಶಾನುಭೋಗರೂ
ದೇವರ ಪೂಜಾರಿಗಳೂ ಉಪಾಧ್ಯಾಯರೂ ಉಳಿದ ಸಾಮಾಜಿ
ಕರೂ ಮೋಹಿ೦ವಿಜಯ ಯಾತ್ರೆಗೆ ಸೇರಿದ ಚೋರಭಟರೂ
ಇವರೆಲ್ಲರೂ ಮೈಸೂರಿಗೆ ಹೋದರು. ಎಲ್ಲರಿಗೂ ನಸರು ಬಂದಿಯಲ್ಲಿಟ್ಟು ವಿಚಾರಣೆ ಮಾಡುವಾಗ್ಯೆ ದಂಡಿನವರು
ಸಂಜನಾಡಿಯಿಂದ ತೆಗೆಯಿಸಿಕೊಂಡು ಬಂದಿದ್ದ ನಗಗಳನ್ನು
ದೇಶಾಂತರಗಳಿಂದ ಬಂದಿದ್ದ ಜನರು ನಮ್ಮದು ತಮ್ಮದು
ಎಂದು ಗುರುತಿಸಿದರು. ವಿಚಾರಣೆ ಅನೇಕ ತಿಂಗಳು ಜರ
ಗಿತು. ಈ ಕಳ್ಳರ ಗುಂಪಿನಲ್ಲಿ ಸಿದ್ದಪ್ಪಾಜಿ ಮೊದಲಾದ
ಜನರನ್ನು ನೀರಿನಮಳೆ ಕಳುಹಿಸಿದರು. ಉಳಿದವರಿಗೆ ಹತ್ತು
ಹದಿನೈದು, ಇಪ್ಪತ್ತು ವರುಷಗಳ ವರೆಗೆ ಬಂದೀಖಾನೆ ಪ್ರಾ
ಪ್ತಿಯಾಯಿತು. ಉಪಾದ್ರಿ ನಾರಪ್ಪಯ್ಯನವರಿಗೂ ಐದುವರುಷ
ಜ್ಞಾನಮಂಟಪವಾಸ ಪ್ರಾಪ್ತಿಯಾಯಿತು. ಇದಕ್ಕೆಲ್ಲಾ ಒಳಗಾ
ಗಿದ್ದ ಸರ್ಕಾರದ ಉದ್ಯೋಗಸ್ಕೃರು ಕೆಲವರಿಗೆ ಬಂದೀಖಾನೆಯಾ
ಯಿತು. ಉಳಿದ ಕೆಲವು ಜನರನ್ನೆಲ್ಲಾ ಬಿಟ್ಟು ಬಿಟ್ಟರು.

ಇತ್ತ ಸಂಜನಾಡಿಯಲ್ಲಿ ಸದಾಶಿವದೀಕ್ಷಿತ ಪಶುಪತಿ ಸಾಂ
ಬಶಾಸ್ತಿ ಮೊದಲಾದವರು ಭಟಜಿ ಗಿರಿಯ೦ಣ ಇವರಿಬ್ಬ
ರಿಗೂ ಹೆಚ್ಚಾದ ಉಪಚಾರವನ್ನು ಮಾಡಿ ನಾಲೈದು ದಿನ
ಸ ತಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ತರುವಾಯ
ಒಂದುದಿನ ಅವರಿಗೆ ಔತನಮಾಡಿ ಬೇಕಾದ ಉಡುಗರೆಯನ್ನೂ
------------------------------------------------------
೩೦೮         ಮಾಡಿದ್ದುಣ್ಣೊ ಮಹಾರಾಯ.

ಐವತ್ತು ಬಹದರೀ ವರಹಾವನ್ನೂ ಒಂದು ತಟ್ಟೆಯಲ್ಲಿರಿಸಿ
ಭಟಜಿಗೂ, ಸಾಧಾರಣ ಉಡುಗರೆಯನ್ನು ಗಿರಿಯಂಣನಿಗೂ,
ತಂದು ಇರಿಸಿದರು. ಸೀತಮ್ಮನೂ ಮಹಾದೇವನೂ ಆ ಬ್ರಾ ಹ್ಮಣರಿಬ್ಬರಿಗೂ ನಮಸ್ಕಾರಮಾಡಿದರು. ಆಗ ಭಟಜಿಯು
ಸ್ವಾಮಿ ತಾವು ಸತ್ಪುರುಷರು, ನನ್ನಲ್ಲಿದ್ದ ಅಲ್ಪ ಶಕ್ತಿಯ
ನ್ನು ನಾನು ತೋರಿಸಿದ ಮಾತ್ರಕ್ಕೆ ತಾವು ಹೀಗೆ ನನಗೆ
ಪ್ರತ್ಯುಪಕಾರರೂಪವಾಗಿ ಇದನ್ನು ತಂದು ಇರಿಸಿ ಸ್ವೀಕರಿಸ
ಬೇಕೆಂದು ಕೇಳುವುದು ತಮ್ಮ ಸತ್ಸ್ವಭಾವವನ್ನು ಪ್ರಕಾಶ
ಮಾಡುತ್ತೆ. ಆದರೆ ನಾನು ಯಾವುದನ್ನೂ ಅಂಗೀಕರಿಸತಕ್ಕ
ವನಲ್ಲ. ಹಾಗೆ ಅಂಗೀಕರಿಸಿದ ಕ್ಷಣದಲ್ಲಿ ನನ್ನ ಮಂತ್ರಶಕ್ತಿ
ಎಲ್ಲಾ ಹೋಗುತ್ತೆ. ಅದು ನನಗೆ ಒಂದು ಶಿಕ್ಷೆ ಎಂದು
ಭಾವಿಸುತ್ತೇನೆ. ದಯಮಾಡಿ ಕ್ಷಮಿಸಬೇಕು. ನಾನು ಏನನ್ನೂ
ಮುಟ್ಟತಕ್ಕವನಲ್ಲ, ಇದು ನಮ್ಮ ಗುರುಗಳ ಅಪ್ಪ
ಣೆಯಾಗಿದೆ. ಆಪತ್ಕಾಲಗಳಲ್ಲಿ ನನ್ನ ಶಕ್ತಿಯನ್ನು ಪ್ರಯೋ
ಗಿಸಿ ಜನರಿಗೆ ನಾನು ಮಾಡುವ ಉಪಕಾರವನ್ನು ತಾವಾಗಿ
ನಿಲ್ಲಿಸಿ ಆರ್ತರಾದವರ ಕಷ್ಟವನ್ನು ತಾವಾಗಿ ಹೆಚ್ಚು ಮಾಡಿ
ದಂತಾಗುತ್ತೆ, ಈ ಪಾಪಕ್ಕೆ ತಾವು ಗುರಿಯಾಗುತ್ತೀರಿ, ಎಂ
ದು ಖಂಡಿತವಾಗಿ ಹೇಳಿದನು. ಆಗ ಪಶುಪತಿ ಸಾಂಬಶಾ
ಸ್ತ್ರಿಯೂ ಸದಾಶಿವದೀಕ್ಷಿತನೂ ಆತನನ್ನು ಕುರಿತು- ಸಾಮಿ
ತಾವು ಯಾರೋ ಮಹರ್ಷಿಗಳೇ ಸರಿ. ಈ ಕಲಿಯುಗದಲ್ಲಿ
ಲೋಕೋಪಕಾರಾರ್ಥವಾಗಿ ದಯಮಾಡಿಸಿದ್ದೀರಿ. ತಮ್ಮ ದ
ರ್ಶನವಾದ್ದು ನಮ್ಮ ಪೂರ್ವಾರ್ಜಿತ ಪುಣ್ಯ ಫಲವೇ ಹೊರ
ತು ಬೇರೆ ಇಲ್ಲ. ತಾವು ಅಪ್ಪಣೆ ಕೊಡಿಸಿದ ಮಾತಿಗೆ
-------------------------------------------------

        ಮಾಡಿದ್ದುಣ್ಣೋ ಮಹಾರಾಯ. ೩೦೯

ಏನು ಅರಿಕೆ ಮಾಡುವುದಕ್ಕೂ ನಮಗೆ ಶಕ್ತಿ ಸಾಲದು.
ಆದರೂ ತಾವು ಎರಡು ಮಾತನ್ನು ನಡಿಸಿಕೊಡಬೇಕು. ಈ ಉಡುಗರೆ ಮೊದಲಾದ್ದನ್ನು ನಾವು ಹಿಂದಕ್ಕೆ ತೆಗೆದುಕೊಂಡು
ಹೋಗುವುದಿಲ್ಲ. ಬ್ರಾಹ್ಮಣರ ವಿನಿಯೋಗಕ್ಕಾಗಿ ಎಂದು
ಉದ್ದೇಶಮಾಡಿ ತಂದ ಕಾರಣ ಅದು ಬ್ರಾಹ್ಮಣರಿಗೆ ದತ್ತ
ವಾದಂತಾಯಿತು. ಇದಕ್ಕೆ ವಿನಿಯೋಗ ಹೇಗೆ ಆಗಬೇಕು ?
ತಮ್ಮ ಅನುಜ್ಞೆಯಾದ ಹಾಗೆ ಅದನ್ನು ವಿನಿಯೋಗಿಸ ಬೇಕಾ
ಗಿದೆ. ತಾವುಗಳು ವಸಿಷ್ಟ ವಾಮದೇವರಂತೆ ದಯಮಾಡಿಸಿ
ನಿಜವಾಗಿಯೂ ಪ್ರಾಣದಾನವನ್ನು ಮಾಡಿ ನಮ್ಮನ್ನು ಉದ್ಧಾ
ರಮಡಿದಿರಿ. ಈ ಭಾಗದಲ್ಲಿ ನಮ್ಮ ವಂಶವಿರುವವರೆಗೂ
ತಮ್ಮ ಪ್ರತಿಮೆಯನ್ನಿಟ್ಟು ಪೂಜೇಮಾಶತಕ್ಕದ್ದಾಗಿದೆ. ಈ
ದೇಹವನ್ನೆ ತನಗೆ ತೆದು ಕೊಟ್ಟರೂ ಸಾಲದು. ಇಂ
ಥನರಲ್ಲಿ ನಾವು ಹೆಚ್ಚಾಗಿ ಅರಿಕೇ ಮಾಡಲಾರೆವು, ಎಂದರು.
ಆಗ ಭಟಜಿಯು- ಗಿರಿಯಂಣ, ಅವರು ಮಾಡಿದ ಮರ್ಯಾ
ದೆಯನ್ನು ನೀನು ಸ್ವೀಕರಿಸು, ಅವರ ನುನೆಗೆ ಬಂದು ಅವ
ರಿಗೆ ಅಸಮಾಧಾನವನ್ನು ಯಾಕೆ ಉಂಟುಮಾಡಬೇಕು ? ಎಂ
ದನು. ಅದಕ್ಕೆ ಗಿರಿಯಂಣನು ಭಟಜಿಯ ಮಾತಿನಂತೆ ಒಂದು
ಧೋತ್ರವನ್ನು ತೆಗೆದುಕೊಂಡನು. ಪುನಃ ಪಶುಪತಿ
ಸಾಂಬಶಾಸ್ಮಿಯು ನಾವು ಅರಿಕೆ ಮಾಡಿಕೊಂಡಿದ್ದ ಒಂದು ಅಂಶವೇನೊ ಪೂರ್ತಿಯಾಗಿ ಚಿತ್ರಕ್ಕೆ ಬಾರದೇ ಹೋಯಿತು.
ತಾವೇನೋ ಮಹಾತ್ಮರು. ವಿಶೇಷವಾಗಿ ನಿಸ್ಪೃಹರು,
ತಾವು ಮಾಡಿದ ಪ್ರಾಣದಾನಕ್ಕೆ ನನ್ನ ಕೃತಜ್ಞತೆಯನ್ನು
ತೋರಿಸಲು ಆಸ್ಪದವನ್ನು ಕೊಡದಿದ್ದರೆ ನಮ್ಮನ್ನು ಕೃತ
--------------------------------------------------
೩೧೦         ಮಾಡಿದ್ದುಣ್ಣೋ ಮಹಾರಾಯ,

ಘ್ನರನ್ನಾಗಿಯೇ ಭಾವಿಸಬೇಕಾಯಿತು. ಅದು ಅಂತಿರಲಿ.
ಇನ್ನೊಂದು ವಿಷಯವೇನೆಂದರೆ, ತಮ್ಮ ಪ್ರಭಾವವು ಕೃಷ್ಣ ರಾಜಪ್ರಭುಗಳ ಆಸ್ಥಾನದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲ್ಪ
ಟ್ಟಿತು. ತಮ್ಮಂಥಾ ಮಹಾತ್ಮರ ದರ್ಶನವನ್ನು ಮಾಡ
ಬೇಕು ಎಂದು ದೊರೆಯು ಅಪೇಕ್ಷಿಸಿ ತಮ್ಮನ್ನು ಕರೆದು
ಕೊಂಡು ಹೋಗುವ ರ್ದಾಗಿ ನನ್ನನ್ನು ಕಳುಹಿಸಿದಾರೆ, ಖಂಡಿತ
ವಾಗಿಯೂ ತಾವು ಮೈಸೂರಿಗೆ ದಯಮಾಡಿಸಬೇಕು. ಪ್ರಭು
ಗಳ ಭೇಟಿಯನ್ನು ಮಾಡಿಕೊಂಡು ತರುವಾಯ ತಾವು
ಎಲ್ಲಿಗೆ ಬೇಕಾದರೂ ತೆರಳಬಹುದು, ಎಂದನು. ಅದಕ್ಕೆ
ಭಟಜಿಯು- ಇದು ಆಗಲಾರದು, ರಾಜಾಸ್ಥಾನದಲ್ಲಿ ನನ
ಗೇನೂ ಕೆಲಸವಿಲ್ಲ. ಅಲ್ಲಿಗೆ ಬಂದಮೇಲೆ ಅವರು ಹೇಳಿ
ದಂತೆ ಕೇಳಬೇಕಾಗುವುದು. ಇಂಧಾ ಸಂದರ್ಭ ದಲ್ಲಿ ಏನಾದರೂ
ಮರ್ಯಾದೆ ನಡೆಯುವುದು. ಅದನ್ನು ಅಂಗೀಕರಿಸದಿದ್ದರೆ
ಆ ಮಹಾ ಪದವಿಗೆ ಅವಮಾನ ಮಾಡಿದ ಹಾಗಾಗುತ್ತೆ ಅಂ
ಗೀಕಾರ ಮಾಡಿದರೆ ನನ್ನ ಗುರುಗಳ ಆಯ್ಕೆಯನ್ನು ಮೀರಿ
ದಂತಾಗುತ್ತೆ. ಮೇಲಾಗಿ ಅಂಧಾ ಮಹಾಸ್ಥಳಕ್ಕೆ ಹೋಗುವ
ಮಟ್ಟಿನ ಯೋಗ್ಯತೆ ನಮಗೆ ಇದೆಯಲ್ಲಾ ಎಂಬ ದುರ
ಹಂಕಾರವು ನನಗೆ ಒಂದು ನಿಮಿಷಮಾತ್ರವಾದರೂ ಹುಟ್ಟು
ವುದು. ಅಂಥಾ ಅಹಂಕಾರ ಹುಟ್ಟಿದ ಗಳಿಗೆಯಲ್ಲಿಯೇ
ನಮ್ಮ ಶಕ್ತಿ ಕುಂದಿ ಹೋಗುವುದು, ಆದ್ದರಿಂದ ನಾನು
ಮೈಸೂರಿಗೆ ಬರುವುದಿಲ್ಲ, ಎಂದನು. ಪುನಃ ಪಶುಪತಿ
ಸಾಂಬಶಾಸ್ತ್ರಿಯು ತನ್ನ ಮನೋನಿಶ್ಚಕ್ಕೆ ಯಾವರೀತಿಯ
ಲ್ಲಿಯ ಕುಂದಕೆ ಬಾರದಂತೆ ನೋಡಿಕೊಳ್ಳುವ ಭಾರ ನನ
----------------------------------------------

    ಮಾಡಿದ್ದುಣ್ಣೋ ಮಹಾರಾಯ. ೩೧೧

ಗಿರಲಿ, ಖಂಡಿತವಾಗಿ ತಾವು ಮೈಸೂರಿಗೆ ದಯಮಾಡಲೇ
ಬೇಕೆಂದು ಹೇಳಿದನು. ಇದೆಲ್ಲವನ್ನೂ ಕೇಳಿ ಆ ದಿವಸ
ರಾತ್ರೆ ಗಿರಿಯಂಣನೂ ಭಟಜಿಯೂ ಅವರ ಮನೆಯನಡುವೇ
ಜಗಲಿಯ ಮೇಲೆ ಮಲಗಿಕೊಂಡರು. ಬೆಳಗಾದಮೇಲೆ ನೋ
ಡುವಾಗ ಬೀದಿಯ ಬಾಗಿಲು ಅರಕದಾ ತೆಗೆದಿತ್ತು. ಆ
ಬ್ರಾಹ್ಮಣರಿಬ್ಬರೂ ಅಲ್ಲಿರಲಿಲ್ಲ. ಎಷ್ಟು ಹುಡುಕಿಸಿದಾಗ್ಯೂ 
ಸಿಕ್ಕಲಿಲ್ಲ. ಇಂಥಾ ಮಹಾತ್ಮರು ಹೊರಟು ಹೋದರಲ್ಲಾ
ಎಂದು ಎಲ್ಲರೂ ಪೇಚಾಡಿಕೊಂಡರು.

ಸಂಜನಾಡಿಯೆಲ್ಲಾ ಮೂರು ದಿವಸದಲ್ಲಿ ಹಾಳ ಊರಿ
ನಂತೆ ಆಯಿತು. ಬಿದ್ದು ಹೋದ ಗೋಡೆಗಳು, ಮುರಿದು
ಹೋದ ಹಾರುಗಳು, ಅಗೆದು ಗುಂಡಾಂತರ ಮಾಡಿದ ನೆಲ,
ತೆರೆದ ಬಾಗಿಲು, ಒಡೆದ ಮಡಕೇಸಾಲು, ಯಾವ ದಿಕ್ಕಿನಲ್ಲಿ
ನೋಡಿದರೂ ಹಾಳುಹಾಳು ಸುರಿಯುತಾ ಇತ್ತು. ಆ ಊರ
ಜನರೆಲ್ಕಾ ದಿಕ್ಕಾಪಾಲಾದರು. ಒಂದೆರಡು ಮನೆಯಲ್ಲಿ
ಮಾತ್ರ ಕೈಲಾಗದ ಮುದುಕರು ಹತ್ತಿಕೊಂಡಿದ್ದರು. ಆ
ಊರಲ್ಲಿದ್ದ ಬ್ರಾಹ್ಮಣರೆಲ್ಲಾ ಬೇರೆ ಊರಿಗೆ ಹೊರರುಹೋಗಿ
ಅಲ್ಲಿ ಸೇರಿಕೊಂಡರು. ಇಂಥಾ ಊರಲ್ಲಿ ಇನ್ನು ನಾವು
ಇರುವುದು ಸರಿಯಲ್ಲವೆಂದು ಸದಾಶಿವದೀಕ್ಷಿತನೂ ಪಶುಪತಿ
ಸಾಂಬಶಾಸ್ತಿಯೂ ನಿಷ್ಕರ್ಷೆ ಮಾಡಿಕೊಂಡು ಮಾರನೇದಿನ
ಸವೇ ಸಾಮಾನುಗಳನೂ ಸಾಗಿಸಿಕೊಂಡು ಮನೆಯವರೆಲ್ಲ
ರನ್ನೂ ಕರೆದುಕೊಂಡು ಮೈಸೂರಿಗೆ ಹೊರಟು ಹೋದರು.
ಹದಿನೈದು ದಿವಸದೊಳಗಾಗಿ ಒಂದು ಪ್ರಾಣಿಯೂ ಇಲ್ಲದ
ಹಾಗೆ ಊರೆಲಣ್ಣ ನಾಶವಾಯಿತು. ಪಶುಪತಿ ಸಾಂಬಶಾಸ್ತ್ರಿಯೂ
------------------------------------------------------

೩೧೨         ಮಾಡಿದ್ದುಣ್ಣೊ ಮಹಾರಾಯ.

ಸದಾಶಿವ ದೀಕ್ಷಿತನೂ ಕೃಷ್ಣರಾಜ ಒಡೆಯರವರ ಭೇಟೀ ಮಾಡಿಕೊಂಡರು; ನಡೆದ ಸಂಗತಿಯನ್ನೆಲ್ಲಾ ವಿಸ್ತಾರವಾಗಿ
ಅರಿಕೆ ಮಾಡಿದರು. ಅದಕ್ಕೆ ಪ್ರಭುಗಳು ಅಂಧಾ ಮಹಾ
ತ್ಮರ ದರ್ಶನ ಇಲ್ಲದೆ ಹೋಯಿತಲ್ಲಾ ಎಂದು ಬಹಳವಾಗಿ ಪೇಚಾಡಿದರು. ಈ ಸಂಗತಿಯನ್ನು ಕೇಳಿ ರಾಜಸಭೆ ಯೆಲ್ಲಾ
ಬೆರಗಾಯಿತು, ಸದಾಶಿವದೀಕ್ಷಿತನು ಸಂಸಾರ ಸಮೇತವಾಗಿ ಮೈಸೂರಲ್ಲಿಯೇ ನಿಂತನು, ಸೀತಮ್ಮನೂ ಮಹಾದೇವನೂ
ಅನೇಕ ಕಾಲ ಸಂಸಾರ ಮಾಡಿಕೊಂಡು ಸುಖವಾಗಿದ್ದರು.

ಅತ್ತ ಸಂಜನಾಡಿಯ ಕಳ್ಳರ ಹುತ್ತವೇ ಒಡೆದು ಹೋ
ಯಿತು. ಆ ಗುಂಪಿಗೆ ಶಿಕ್ಷೆಯಾಯಿತಷ್ಟೆ. ಅದೇ ಕಾಲದಲ್ಲಿ
ಅಮಾಸೆಯದೆಸೆಯಿಂದ ಇದೆಲ್ಲಾ ಹೊರಕ್ಕೆ ಬಂದ ಕಾರಣ
ಅವನ ಅಪರಾಧವನ್ನು ಮನ್ನಿಸಿ ಅವನಿಗೆ ಶಿಕ್ಷೆಮಾಡದೆ ಸ
ರ್ಕಾರದವರು ಬಿಟ್ಟುಬಿಟ್ಟರು. ಸಂಜನಾಡಿ ಮಹಾಜನರೆಲ್ಲಾ
ಕಾರಾಗೃಹಕ್ಕೆ ಹೊರಡುತಾ ಇರುವಾಗ ಅಮಾಸೆಯು ಕಚೇ
ರಿಯಿಂದ ಬಿಡುಗಡೆಯಾಗಿ ಈಚೆಗೆ ಬರುತಾ ಅವರನ್ನು ಕಂ
ಡು- "ಮಾಡಿದ ಉಣ್ಣೋ ಮಹಾರಾಯ, ಮಾಡಿದ್ದ ಉಣ್ಣೋ  ಮಹಾರಾಯ, ಮಾಡಿದ್ದ ಉಣೋ ಮಹಾರಾಯ "
ಎಂದು ಕೂಗಿದನು, ಎಂಬಲ್ಲಿಗೆ ಮಂಗಳಮಹಾ-
ಸ೦ಪೂರ್ಣ ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ