ಶುಕ್ರವಾರ, ಆಗಸ್ಟ್ 25, 2023

ಸೂಳೆ-ಒಪ್ಪಮಾಡಿದ್ದು-ಕೈಲಾಸಂ

 



 "ಸೂಳೆ"PDF format https://archive.org/details/unset0000unse_i4i2

ಟಿ. ಪಿ. ಕೈಲಾಸಂ



ಸೂಳೆ



ಅಥ್ವಾ



ಒಲವಿನ ಕೊಲೆ



Murder


0



Mercy



ಟಿ. ಪಿ. ಕೈಲಾಸಂ



ಕಾವ್ಯಾಲಯ : ಪ್ರಕಾಶಕರು : ಜಯನಗರ


ಮೈಸೂರು ೫೭೦ ೦೧೪



SOOLE - A play in Kannada by T. P. Kailasam , Published by

Chidambaram Kudali Krishanamurthy, Kavyalaya Publishers,

Jayanagar, Mysore 14 ; Phone : 0821-567042 ; e -mail :

ckkkavyalaya @ yahoo .com ;New Edition 2002



ಹಕ್ಕುಗಳನ್ನು ಕಾದಿರಿಸಿದೆ



© All Rights Reserved by Publishers



ಬೆಲೆ ರೂ . 40



ಮುದ್ರಣ :

ಶ್ರೀ ಶಕ್ತಿ ಎಲೆಕ್ಟಿಕ್ ಪ್ರೆಸ್, ಜಯನಗರ, ಮೈಸೂರು ೫೭೦ ೦೧೪



ಪಾತ್ರಗಳು



ಮೊದಲನೆ ವಿಟ : An obvious rogue .

ಎರಡನೇ ವಿಟ : The typical “Minor ” of 17 who


has come into the lawful propriety

of parental property and unknow

ingly exploited by the ಮೊದಲನೆ ವಿಟ.

He himself honestly falling in blind


honest love with wiser

ಉಳಿದ ಅಂಕಗಳಲ್ಲಿ ಬರುವ ಸುಬ್ಬು

ಸೂಳೆಯ ತಾಯಿ

ಸೂಳೆ



ಪುಟ್ಟಾ : ಸೂಳೆಯ ಮಗಳು

ಲೇಡಿ ಶಿವದಾಸ ಅಯ್ಯರ್

ನಂಜ : ಜವಾನ



“ ORA PRO NOBIS ”



Let him who hath not sinned throw the first stone


- Lord Christ.



Each Man kills thing he loves



- O . W .



“ There s so much bad in the best of us,

There s so much good in th worst of us,

It ill behoves smuggest of us

To speak aught ill of th rest ofus"



“ As ye treat the lowest amongst ye,


So shall I fell ye treat me”



- The Lord .



In abject Hope & Prayer


That it will see its end

and find itself the

Magnum opus of the author



An Induction


ಪ್ರಸ್ತಾವನ

[ Discovered : ಸೂಳೆ fourteen of age. ( ಹದಿನಾಲ್ಕು ವಯಸ್ಸು) ಉನ್ಮತ್ತರಾದ

ಇಬ್ಬರು ವಿಟರು. ಸೂಳೆ fixing a garland of flowers round a picture of

Saraswati and taking her seat at the Leg -harmonium playing the

song in dulcet.)


ರಾಗ-ಕರ್ನಾಟಕ, ತಾಳ -ತ್ರಿಪುಟ . ಚತುರಶ್ರ ,

ತಾಯೇ ಭಾರತೀ | ತಾಯೆನಗೆ ಸನ್ಮತಿ


|| ಪ | |

ವಾಣಿಯೆನುತ ಗೀ | ರ್ವಾಣಿಯೆ ಜಪಸರ |

ವೀಣಾ ಪುಸ್ತಕ ಪಾ | ಣಿಯೆ ಮಣಿವೇನ್

ಶಾರದ ನೀತಿ ವಿ | ಶಾರದೆ ಜಡತೆಯು |

ಸೇರದು ಎನ್ನೋಳು| ಶಾರದೇಂದುಮುಖಿ || ೨ ||

ಬಾಲಕಿಯರ ತಿಳಿ | ನಾಲಗೆಯೊಳು ನೀ


ನೋಲಗಿಸುತೆ ಮೃದು | ಲೀಲೆಗಳವಳೇ

ಸೂಳೆ ತಾಯಿ : ( ನಿಷ್ಕಮಿಸುತ್ತಿರುವ ವಿಟರಿಗೆ) ತಿರಗ್ನರ್ತಿರ ಅಲ್ವೇ ?

೧ನೇ ವಿಟ : ಬಗ್ಗೆ ಇದ್ದೇವೇ ?

೨ನೇ ವಿಟ : (ಕಣ್ಣುಗಳಿಂದ ಸೂಳೆಯನ್ನು ಸೂಚಿಸಿ) ಬರೇ ಇದ್ದೇವೆ ?

೧ನೇ ವಿಟ : ತಿರ್ಗಿ ಹೊಸSupply ಸಮೇತ ಬಂದ್ದಿತ್ತೇವೆ.

ಸೂಳೆ ತಾಯಿ : ಹೋಗ್ಲ . [ವಿಟರ ನಿಷ್ಕಮಣ]

ಸೂಳೆ: ಯಾಕಮ್ಮಾ ? ಇವ್ರು ? ಈ ಕುಡು ಯಾಕ್ಬರೇಕ್ ತಿರ್ಗಿ ? . . . ನೀನ್ತಾನೆ.

ಯಾಕೆ “ ಬನ್ನಿ ! ಅಂದದ್ದು ? . . . ಅಮ್ಮಾ ನನಗ್ನೀನ್ಬೇಕು, ನಿನ್ಗೆ ನಾನ್ಬೇಕು

. . . ಇವ್ರೆಲ್ಲಾ ಯಾಕಮ್ಮಾ ನಮ್ಗೆ ? (ಎಂದು ತನ್ನ ಎರಡು ಬಾಹುಲತೆ

ಗಳಿಂದ ಮಾತೆಯ ಗ್ರೀವವನ್ನು ಸುತ್ತಲೂ ಆವರಿಸಿ ಆಲಂಗಿಸಿ ಮುಖ

ವನ್ನು ಬಾಗಿಸಿ, ಮುಖಕ್ಕೆ ಮುಖವನ್ನೊತ್ತುವಳು.)

ಸೂಳೆತಾಯಿ : ಇವರೆಲ್ಲಾ ಇಲ್ದಿದ್ರೆ ಕಂದಾ, ನಾವು ಬದುಕೋದ್ಹೇಗೆ ?

ಸೂಳೆ : ಹಾಗಾರಮ್ಮಾ , ನಮ್ಮನೇಲಿ ನಾವ್ ಬದ್ಕೋಕೆ ಇವರ್ಬೇಕಾದ್ಹಾಗೆ . . .

ಇವರ್ಮನೇಲಿನೂ ಇವರ್ ಬದ್ಕೋಕೆ. . . ಬೇರೆ ಯಾರಾದ್ರೂ ಬೇಕೆ ?

. . . ಹೀಗೆ ಕುಡದ್ಬಿಟ್ಟು ಅಧ್ವಾನ ಮಾತು . . . ಅಸಹ್ಯ ವಾಸನೆ . . .

ಇಂಥಾವರಿಂದ್ಲೇನೇವೇಯೇ ಇತ್ರರು ಬದ್ಕೋದು?

ಸೂಳೆತಾಯಿ : ನೀನಿನ್ನೂ ಮಗು ! ಪ್ರಪಂಚ ತಿಳಿಯದು ! ನಾನು ನಿನ್ನಯ


ನಿನ್ನಾಗೇ ಇದ್ದೆ . ಆಗ ನನಗೂ ನಮ್ಮಮ್ಮ ಬೇಕಾಗಿತ್ತು ; ನಮ್ಮಮ್ಮನ್ಗೂ

ನಾನ್ಹೇಕಾಗಿತ್ತು ; ಆಗಿನ್ನಾಲ್ದಲ್ಲೂ ಈಗ್ಬಂದ ಇಂಥಾವರಿಂದ್ಲೇ ನಮ್ಮಮ್ಮ

ನ್ಜೀವ್ನ ಹ್ಯಾಗ್ ಜರ್ಗ್ತಿತ್ತೋ ಹಾಗೇನೇವೇಯೇ ನಿನ್ನ ನನ್ನ ಜೀವ ಜರ

ಗ್ಬೇಕು.

ಸೂಳೆ: ಇವರ್ಮನೆ ಹೆಂಗಸ್ರ ಜೀವ್ನ ? ಇವರ್ಮನೇಲೂ ಅಮ್ಮಗ್ಳೂ ಮಗಳ್ಗ್ಳೂ 

ಇರ್ತಾರೆ ಅಲ್ವೆ ? ಅವರ ಜೀವ್ನನೋ ? . . . ಹೀಗೇನೇವೇಯೇ ? ಅವರ

ಮನೆಗಳಲ್ಲಿ ಇತರರೂ ಹೀಗೆ ಕುಡ್ದ್ಬಿಟ್ಟ್ಬಿಂದು . . .

ಸೂಳೆತಾಯಿ : ( ಅಡ್ಡ ಮಾತಾಡಿ) ಮುಚ್ಚು ಬಾಯಿ ! [ Closing ಸೂಳೆ' s mouth

with right palm] ಅವರು ಕುಲಸ್ತ್ರೀಯರು . . . ಗರ್ತೀರು ! . . .

ನಮ್ಹಾಗೆಲ್ಲಾ ಸಂಕಟಪಡ್ದ್ಹಾಗೆಕೊಟ್ಟಿಟ್ಬಿಟ್ಟಂದೋರು ಕುಲಸ್ತೀಯರು

ಅವರು ! ನಾವೆಲ್ಲೀ . . . ಅವರೆಲ್ಲಿ ?

ಸೂಳೆ : ಕೊಟ್ಟಿಟ್ಟಿಟ್ಟಂದಿರೋದು? ಯಾರತ್ರ ?

ಸೂಳೆತಾಯಿ : ದೇವ್ರ ಹತ್ರ ...ಕೊಟ್ಟಿಟ್ಟಿಟ್ಟಂದಿರೋದು... ಮುಖ್ಯಾ ದೇವರ್ಕಣ್ಣು

ನಮ್ಮ್ಕಡೇಗಿಂತ ಅವರ್ಕಡೆ ವಾಲಿರೋ ಹೊತ್ಗೇನೇ ನಮ್ಗೀ ಕಷ್ಟ .

ಸೂಳೆ : ದೇವರ್ಕಣ್ಣೇ !!.. ಇದ್ಯಾಕಮ್ಮ ? . . . ಈ ವೆತ್ಯಾಸ ಮಾಡೋದುದೇವ್ರೂ

...ನಮ್ಮನೇಲಿಗೋಡ್ವಡೇಗೂ ದೇವರ್ಗೊಂಬೆ... ಶನಿವಾರನಿವಾರ ತಪ್ದೆ

ಭಜನೆ... ಶುಕ್ರವಾರುಕ್ರವಾರ ತಪ್ದೆ ಚಾಮುಂಡಿ ಪೂಜೆ....ಬಂದ್ಬ್ರಾಹ್ಮ

ಣ್ಣ್ರಿಗೆ ಕಾಯಿ ದಕ್ಷಿಣೆ...ಬೇಡದ್ದಕ್ಕೆ ವಾರಕ್ಕೊಪ್ಪತ್ತು ಉಪವಾಸ

ಮಾಡ್ತೀಯಾ ನೀನು...ಇನ್ನಿದಕ್ಕಿಂತೇ ನಮ್ಮಾ ಮಾಡ್ತಾರೆ... ಕುಡುಕರ್ಕಾ 

ಟಾನೂ ಇಲ್ದೆ ಗಂಡ, ಮಕ್ಕಳ್ನಿಡ್ಕೊಂಡು ಹಾಯಾಗ್ಬಾಳೋ ಹೆಂಗ್ಸ್ರು ?... 

ಅದ್ಯಾಕಮ್ಮಾ ಇಷ್ಟ್್ಪಕ್ಷಪಾತ ದೇವ್ರಿಗೆ ?

ಸೂಳೆ ತಾಯಿ : ನನ್ಕಂದಾ ! ನಿನ್ಬುದ್ಧೀನೋ ಚುರುಕು . ... ನಾನೋ ಪೆದ್ದು . . 

... ಯಾಕೀ ವೆತ್ಯಾಸ ಮಾಡ್ತೀಯ ಅಂತ ದೇವರ್ನಾ ಕೇಳೋದೇ ನಾವು ? 

ಗರ್ತೀರೇನು ಸೂಳೇರೇನು . . . ಸೃಷ್ಟಿಕರ್ತ ಬ್ರಹ್ಮ , ಸ್ಥಿತಿಕರ್ತ ವಿಷ್ಣು, 

ಸರ್ವಾನ್ನೂ ಸಂಹರಿಸೋನುಶಿವ . . ಇವ್ರ ನಾಟಕ, ಇವ್ರ ಸಂತೋಷದಲ್ಲಿ 

ಆಡಿಸ್ಕೊಳ್ಳೋ ಗೊಂಬೆಗ್ಳು . . . ನಾವು . . . ಒಳಗ್ಬೂಂದು ಊಟ ಮಾಡಿ 

ಮಲಕ್ಕೊ . ತಿರುಗ್ಬರೋ ಆ ಕುಡುಕರ ನಾನ್ ನಿಭಾಯ್ಕಿಕೊಳ್ತೇನೆ. [ The 

Curtain drops as the mother exits leading ಸೂಳೆ  through C.]



Act 1


Sc1

[ ಸೂಳೆ at twenty- four (ಇಪ್ಪತ್ತುನಾಲ್ಕು ವಯಸ್ಸು) ಸೂಳೆಯ ಮನೆ. Drawing-

room . ಸೂಳೆ  and a “ Friend ” ]


ದೊಡ್ಡ ಮನುಷ್ಯ : ಇಲ್ನೋಡುDear ! ನನ್ಗೆ too much ಆಗಿದ್ರೂನೂವೆI am 

There or the reaboutsh , ಈಗ ನನ್ನ ನೀನು ಬಿಟ್ಬಿಟ್ಟ್ಯೋ . . . 

Shenshible ಆಗಿ ಮನೇಗ್ಹೋಗಿ. . . ಮಾರಿ ಹಾಗ್ಕಾದಿರುತ್ತೆ . . . My 

fateoo. . . My wife you know by name . . .But I know to my 

Cost . . .ಕೂದ್ಲೆಲ್ಲಾ ಕೆದರ್ಕೊಂಡು ಅಂಜೂರು, ಆಮಂಡ್ , all the 

Vibgyor Colours of ಬುಳ್ಳಣ್ಣ and ಬುಳ್ಳಪ್ಪ , ಅವಳಿ ಜವಳಿ 

ಮರ್ಚೆಂಟ್ಸ್ ಅವರ goodsನ . . . Lock stock and barrel 

ಬಂಗ್ಲೀಗೇನೆ transfer ಮಾಡ್ಕೊಂಡು, bed - room ಬೀರೂ ತುಂಬಾ 

ಪೇರ್ ಸಿದಧೇನೆ . . ಇದರ ಬೆಲೆಯೆಲ್ಲಾ Debitoo. . . . ನನ್ನ Salary 

billನಲ್ಲಿ . . . ಇದ್ನೆಲ್ಲಾ ಬಿಟ್ಟಿಟ್ಟು ಮನೇಲಿರೋ oldest and  ಹರ್ ಕ್ಲೆಷ್ಟ್

ಷೀರೇನ್ನೂ ಷುತ್ಕೊಂಡೂ . . . . Barton'sh besht jewellesh 

ಕೊಂಡ್ಕೊಟ್ಟಿಧೇನೆ . . . ಅದ್ದೆಲ್ಲಾ Safeನಲ್ಲಿ shafeಆಗಿ ಬೀಗಹಾಕಿ 

ಬೀಗದ್ಕೈನ ಬಚ್ಚಿಟ್ಕೊಂಡು . . . good old ಅಮರಾ Styleನಲ್ಲಿ

“ ನಾರಾಯಣೀ . . . ಭದ್ರಕಾಳೀ ರುದ್ರಾಣಿ ರಂಟ ಟಂಟಟಂ! ” and 

Something elshoo . . . .ರೌದ್ರಮುಖಿ . . . Ah ! I have got it ! 

ಕಾಳರಾತ್ರಿ . . . losht it again ! ( ನಿಟ್ಟುಸಿರು ಬಿಡುತ್ತಾ ) but anyhow 

ಈಗ . . . ನನ್ಮಿಷೆಷ್ಷೋ . . . ನಿಂತಿರ್ತಾಳೆ . . . Portico lightsh ನೆಲ್ಲಾ 

full ಆಗಿ Shwitch on ಮಾಡ್ಕೊಂಡು . . . ಜವಾನ್ರೂ , Cookshoo, 

ಮಾಲೀ , ಮುಸ್ರೆ ತಿಕ್ಕೋ ದೇವೀರೀನೂ ಬಿಡ್ದೆ ಪರಿವಾರ ಸುತ್ಲೂವೆ. . . 

"ಇದೇನನ್ಯಾಯ ಇಷ್ಟೊತ್ತಿಗ್ಬರೋದು ? ”. . . ಅವಳ opening Wel- 

comeoo ... ಇನ್ನೂ further detalishಓ ಷೇಕ್ಸಪಿಯರ್   Hamletಗೆ 

ಅವನಪ್ಪನ್ Ghosht ಹೇಳ್ದ್ಹಾಗೆ . . .  “I could a tail unfold ”. .. 

ಇಲ್ಲಲ್ಲಾ ನನ್ನ್ಬಾಲ ಬಿಚ್ಚೋದು! and yet : But I am forbid to tell 

the shecretsh of my matrimonial prishonoo ... Derefore Dear ! 

ಈ . . . ಗ . . . ನನ್ಬಟ್ಬಿಟ್ಬ್ಯೋ , . . . goodಉ ! ಮನೇ ಸೇರೋಷ್ಟ್ರಲ್ಲಿ . . .  

“pull up my shocksh ” ಮಾಡ್ಕೊಂಡು ... . ಅವಳ್ನೂ ಗಮನಿಸ್ಥೆ . . . 

ನೆಟ್ಗೆ ಒಳಗೋಗಿ bed-room ಬಾಗಿಲ್ತಾಪಾಳ ಹಾಕ್ಕೊಂಡು 

ಬೆಳಕ್ಹರಿಯೋವರ್ಗೂ ಭಯವೇನೂ ಇಲ್ದೆ ಬಿದ್ಕೊಂಬಿಟ್ಟೇನು, ಇಲ್ಲಾ 

ಇನ್ನೊಂದು Drink ಮೇಲೆ ನಿನ್ನ horribly (ಸೂಳೆಯ ಕೈಯನ್ನು 

ಸವರುತ್ತಾ) Sweet, ನನ್ನ nonentitise ಮಾಡೋ Wayshನಲ್ಲಿ inshisht 

ಮಾಡ್ದ್ಯೋ, ಈಗ Jocose ಆಗಿರೋ ನಾನು ಬಂಗ್ಲೆ ಮುಟ್ಟೋಷ್ಟ್ಹೊ 

ತ್ತಿಗೆ Bellicose ಆಗಿ ಅವಳ curtain lectureಗೆ ತುಂಡ್ಹಾಕಿ ಅವಳ್ಪರಿ 

ವಾರಾನೆಲ್ಲಾ ಬೂಡ್ಸ್ ಕಾಲ್ನಲ್ಲಿ ಒದ್ದೋಡ್ಸಿ ಅವಳ್ಹೆತ್ತ horrible Bratsನ

ಈ ಗಲಾಟೇಲೆಬ್ಬಿ ಅವುಗ್ಳ ಕಿರ್ಲಾಟ ನನ್ನ ಕಿವಿ ತಡಿಯಲಾರದೆ ಅವುಗಳ್ನೂ 

half kill ಮಾಡಿ, ಈ Domestic holocaust Evil Root ಆದ ಶಕುನಿ 

Complexed ಮಂಥರಾ-ನನ್ನ್   Mother-in -law ... ನ ಉಗ್ದು, bed 

ಸೇರಿ ನಿದ್ರೆ ಇಲ್ದೆ ಬೆಳಿಗ್ಗೆ ಎದ್ದು ನನ್ನ peevish wifeನೂ ನನ್ನ helpless

ಮಕ್ಕಳ್ನೂ ಎಲ್ಲನ್ನೂ monthly allowanceನಲ್ಲಿ ಹಾಕ್ಬಿಟ್ಟು , forthwith 

ನಿನ್ಮನೇಗ್ಬಂದ್ಸೇರ್ಕೊಂಡು ನನ್ಮುಂದಿನ Life and Career ಎಲ್ಲಾ 

ನೀನಾಯ್ತು ನಾನಾಯ್ತು ಎಂಬೋ basis ಮೇಲೆ arrange ಮಾಡ್ಕೋ 

ಬೇಕಾಗುತ್ತೆ . Derefore (ಸೂಳೆಯ ಕೈಗಳನ್ನು ತನ್ನ ಎರಡು ಕೈಗಳಿಂದಲೂ 

ಹಿಸುಕುತ್ತಾ ) Dear ! Diplomatic ಆಗಿ Despatch ಮಾಡಿಸ್ಬಿಡು ನನ್ನ , 

and I shall remain .. . ನಮ್ಮ official paperನಲ್ಲಿ ಹೇಳೋ ಹಾಗೇ

. . . . " Your most humble and obedient servant" ನಾನು P. S .

with Compliments .

ಸೂಳೆ : ಒಳ್ಳೆ ಲೆಕ್ಚ್ರೂಂದ್ರೆ ನಿಮ್ದು . . . . ಈಗೇನು ನಿಮ್ಮ ಅಭಿಪ್ರಾಯ ? .  . .  

ನಿಮ್ಮನ್ಕುಸ್ಸಿ , ಜ್ಞಾನ ತಪ್ಸಿ , . . . ಮನೆ ಸೇರಿದಾಗ ನಿಮ್ಮಾಕೆಯೇ ಅಲ್ದೆ ನಿಮ್ಮ 

ಅಡಿಮೆಗಳ ಹಾಸ್ಯಕ್ಕೆ ಗುರಿಮಾಡೋದ್ ನನಗೊಂದ್ಸಂತೋಷಾಂ 

ತಿಳ್ಕೊಂಡ್ರಾ ? ನಿಮ್ಹುದ್ದೇನೂ , ನಿಮ್ಮ ಅಂತಸ್ತೂ ನೀವು ಕಾಪಾ 

ಡ್ಕೊಂಡು . . . ನಿಮ್ಸಂಸಾರದ್ಜವಾಬ್ದಾರೀನ ಸಲ್ಲಸ್ತಾ ನಿಮ್ಮಷ್ಟಿಗೆ ನೀವಿ 

ರೋದಲ್ದೆ . . . . ನನ್ನಂಥಾ . . . ಕುಲಾಜಾತಿ ಎಲ್ಲಾನೂ ಕೆಟ್ಟು ಕಂಗೆ 

ಡ್ತಿರೋ ನನ್ನ ಸ್ಥಿತೀನ (ಕಂಠಸ್ತಂಭಿತವಲ್ಲದ ಭಾಷ್ಪ ವೃಷ್ಟಿಯನ್ನು ಕರವಸ್ತ್ರ 

ದಿಂದ ಒರೆಸುತ್ತಾ ) . . . . ಕನಿಕರಿಸಿ . . . .(ದೊಡ್ಡ ಮನುಷ್ಯನ ಬಲಗೈ 

ಯನ್ನು ಹಿಸುಕುತ್ತಾ . . . “ ಈ ಬೆಕ್ಕು ಈ ಹಾಲ್ನ ಕುಡಿದಿರಬಹುದೇ " 

ಎಂಬಂಥಾ ಮುಖಮುದ್ರೆಯನ್ನು ಧರಿಸಿ ಮುಕ್ತಾಹಾರವನ್ನು ಸೋಲಿಸುವ

ಅಶ್ರುಧಾರೆಗಳನ್ನು ಕಮಲಾಕ್ಷಗಳಿಂದ ಸೂಸುತ್ತಾ , ದೊಡ್ಡ ಮನುಷ್ಯನ 

ಮುಖಕ್ಕೆ ಎತ್ತಿದ ತನ್ನ ಚೆಲುಗಲ್ಲವನ್ನು ಸಮೀಪಿಸುವಳು.)

ದೊಡ್ಡ ಮನುಷ್ಯ : ಏನು Chinನೇ ನಿಂದು . . . ಚಿನ್ನಾ ! My God ! . . . I 

am a brute ! ಇಲ್ಲಿ ನೋಡು Dear ! ಮೊದ್ದು ನಿನ್ನ water Works 

switch off ಮಾಡ್ಬಿಡು ! I hate to see a woman weep. It breaks 

my heart . . . ನಿನ್ಗೇನ್ ಬೇಕೀಗ ? ನೀನ್ನೊಟ್ಟ Drink ಕುಡೀಬೇಕೋ ? 

Rightಓ ! ಭೇಗ್ಕೊಟ್ಬಿಡು . . . Whisky, Brandy !. . . Rum or 

Gin . . . ಎಲ್ಲಾ ಒಂದೇ ನನ್ನ ಈ ಸ್ಥಿತೀಲಿ ! Game for anything !

ಬೇಗ ಕೊಟ್ಟ್ಕಳ್ಸಿಬಿಡು ! .. . By the way ಹೇಳೋಕೇ ಮರೆತುಬಿಟ್ಟೆ ... 

ಇವತ್ತು ನನ್ನ pay day .. .ನನ್ನ ೩ ನೂರು ರುಪೀಸೂನೂ ಪಾಕೆಟ್ನಲ್ಲಿದೆ

. . . at your disposal ನನ್ನ principle ಒಂದೇ ಒಂದು ! ...Don't

take anything, if you can help it.. . If you take anything, don't

forget to pay for it . . . If you order a thing , foot the bill. . .

Therefore Dear ! ಮುಂದಿನ Programme ನಿಂದು . . . ದುಡ್ಡಿಧೇ 

ಅಲ್ಲಿ ಕ್ಷಮ್ಸು  , . . . Bussiness may be business for other people !

But ನನಗೋ  Pleasure is bussiness and business is pleasure.

Again, therefore, business is business and pleasure is 

pleasure ! Quad Erat Demonstrandam ! ಅರ್ಥ್ವೇ Dear ?

ಸೂಳೆ : (ಗಟ್ಟಿಯಾಗಿ) ಸುಬ್ಬೂ ! ಹಾಲು ತಕ್ಕೊಂಡ್ವಾ . . . ಎರಡು ಗ್ಲಾಸ್ 

ಟಂಬರ್ ನಲ್ಲಿ . . . ಗರಮ್ಮಾಗಿ ! . . . . ನಮ್ಮಿಬ್ಬರ್ಗೂ . . . .

(ಸುಬ್ಬು ನಿಷ್ಕಮಿಸುವನು)

ದೊ . ಮ . : Milkಊ !!! ? ?? ನನಗೆ ! ಗೊತ್ತಿಲ್ವೆ ! Milk acts like posion 

on my system !

ಸೂಳೆ : ಅಲ್ನೋಡಿ ! (ಗೋಡೆಯಲ್ಲಿ ತಗುಲಿಸಿರುವ ಒಂದು ಚಿತ್ರಪಠವನ್ನು 

ಸೂಚಿಸಿ) B.A.ಪಾಸ್ ಮಾಡಿ ಸಂಸ್ಕೃತ ವೋದ್ದೋರ್ ನೀವು. . . ಅದರ್ಲೇ 

ನ್ತಪ್ಪಿದೆ ಹೇಳ್ಳಿಡಿ ನೋಡೋಣ ? [ ಪಠವನ್ನು ನೋಡುತ್ತಾ ತಲೆದೂಗುವ 

ದೊಡ್ಡ ಮನುಷ್ಯನಿಗೆ] ಹಾಗೆಲ್ಲಾ ನೋಡಿದ್ರೆ ಗೊತ್ತಾಗುವುದಿಲ್ಲ . ಆ ಪಠ 

ದಲ್ಲಿರೋ ತಪ್ಪು , ಇಂದು ಸ್ವಲ್ಪ ಹಾಲ್ಕುಡಿದ್ವಿಟ್ಟು ಯೋಚಿಸಿ ಹೇಳಿ!

ದೊ , ಮ . : (ಸೂಳೆಯು ನೀಡಿದ ಗಾಜನ್ನು ಸ್ವೀಕರಿಸಿ) ನಾನು ಈಗೇನಾದ್ರೂ 

Drink ಮಾಡಿದ್ನೋ . . . . ನನ್ತಪ್ದಾಗತ್ತೇಂತ ಬರೀ milk ಕೊಡ್ತಾ 

ಇದ್ದೀಯ ?.. . . Let me assure you dear . . .ಈಗೊಂದು  Whole 

Cashk of Brandyಲಿ ನಾನು ಇಳಿದು ಮುಳುಗಿ ಎದ್ದು . . .. ಒಂದು 

Drop of Soda ಕೂಡ ಕೇಳ್ದೆ ಸತ್ತೇನೂ  . . . in really good "spirits" 

Therefore . . . ದಮ್ಮಯ್ಯ ! Dear ! ದ್ರಾವಕ ಏನಾದ್ರೂ ಇದ್ರೆ 

premisesನಲ್ಲಿ , ಧಾರೆ ಎರಿ ಈ ಗ್ಲಾಸ್ ನಲ್ಲಿ . . . only as an antidote

against this poisonous animal food ! Cow's milkeಉ is liquid 

beefಉ ! That is why I drink Whisky, Vegetation foodಉ ! ...  

ದಮ್ಮಯ್ಯ ! send for the stuff ! Money ಇಧೆ pocketಲಿ !

ಸೂಳೆ : ಮೆಲ್ಲನ್ಮಾತಾಡಿ ! ಏನ್ಗಲಾಟೇಂದ್ರೆ ನಿಮ್ದು . . . ಈ ಹಾಲ್ನ ಒಂದ್ಬಾಯಿ 

ಗ್ನುಂಬಿಟ್ಟು ಆ ಮೇಲೆ ಮಾತಾಡಿ ( ಎನ್ನುತ್ತಾ ತನ್ನ ಕೈಯಲ್ಲಿರುವ ಹಾಲು 

ತುಂಬಿದ ಗಾಜನ್ನು ತನ್ನ ಬಾಯಿಗೆ ಸಮೀಪಿಸುತ್ತಾ ) 'ಚ್ಹೀರ್ ಯೋ !' 

(ಎಂದು ಕುಡಿಯುವಳು.)

ದೊ . ಮ . :  'ಚ್ಹೀರ್ ಯೋ' Dear ( ಎನ್ನುತ್ತಾ ಗಾಜಿಗೆ ಗಾಜನ್ನು ತಾಕಿಸುತ್ತಾ ) Chin ! 

Chin! plush ನಿನ್ನ adorable Chinಉ ” ( ಎಂದು ಗಾಜನ್ನು ಸೂಳೆಯ 

ಗಲ್ಲಕ್ಕೂ ತಾಕಿಸಿ, ಗಾಜು ಬಾಯನ್ನು ಸಮೀಪಿಸುತ್ತಲೇ ನಾಸಿಕ ರಂಧ್ರಗಳು 

ಹಾಲಿನಿಂದ ಹೊರಡುವ ಹಬೆಯನ್ನು ಆಕರ್ಷಿಸಿ, ಆಘ್ರಾಣಿಸಿ, ಅನುಭವಿಸಿ) 

Funny smelloo ! Funnier milkoo !funniest cowoo that exuded 

this milkಉ ! in all my late and not lamented mortal lifeeಊ ! 

. . . never met this sort of milkಉ ! . . . ಇದೇನದ್ಭುತ !. . .   

Cowದೇ or ಎಮ್ಮೇದೇ ?. . . . ಎಮ್ಮೆ ! orgood old ಮಹಿಷಾಸುರಾ's 

well- bereaved widowsದೇ ? ಇಲ್ಲಾ . . . . ಈ Cowಊ . . . Cow 

shapeನಲ್ಲಿ Distillery ಕಟ್ಟೆ . . . . ಇರಬಹುದು !.. . . Aspinnal's 

white eEnamelನ್ನ . . . . pour in ಮಾಡಿದ B .C .D . ಹಾಗೇ  ಇದೆಯಲ್ಲಾ? 

ಏನ್ಮಿಲ್ಕು ? ಇದು?

ಸೂಳೆ : Cow ಹಾಲೇ ! ಮನೇಲ್ಕರದ Cow್ನ್ನಾಲ್ಹು! (ಕಬ್ಬಿನ ಹಾಲು) milkoo! 

'ಗರ್ರಂ - ಬಿಸಿ ' ಅಂತಾರಲ್ಲಾ . . . ಹಾಗೆ ! !

ದೊ . ಮ . : ಗರಂ ಹಾಲು ? from a Cow ? Therefore ಗ್ರರಂ Cowಉ !  

Q . E . D . ! Euclid can't object ! ಪಶೂಂತಾರಲ್ಲಾ . . . ತಪ್ಪೂ !  

ಪಶೂಗೆ taste ಇಲ್ಲಾ ! But this Exceptional ಪಶೂ -ಕಾಮಧೇನು 

be damned ! “Martell ’s Three stars ” ಮೇಲೆ  ಖಾಯಿಷ್ ಬಿದ್ದು  

Cow? wonderful milk of Cow brought upon “Martell ’s Three 

stars ” Brandy ಇಂಥಾ  milkನ ಕರಿಯೋ Cowನ  Cattle 

exhibitionನಲ್ಲಿ Auction sale ಗಿಟ್ಟ್ಯೋ . . . Spencer's closhedoo 

... . Funnels ಬಾಗಿಲು ಬೀಗ . . .

ಸೂಳೆ : ಸಾಕ್ಸಾಕು ! ನಿಮ್ಮ Speechoo ( ಪುನಃ ಪೂರ್ವೋಕ್ತ ಪಠವನ್ನೇ 

ಸೂಚಿಸುತ್ತಾ ) ಆ ಬಲಿಚಕ್ರವರ್ತಿ ಪಠ್ದಲ್ಲಿರೋ ತಪ್ಪ್ನ ಈಗ್ಲಾದ್ರೂ 

ಇತ್ಯರ್ಥಮಾಡಿ ನೋಡೋಣ ?

ದೊ . ಮ . :(ಕೈಲಿರುವ ಗಾಜನ್ನು ಖಾಲಿಮಾಡಿ ಮೇಜಿನ ಮೇಲಿಟ್ಟು ಚಿತ್ರಪಟವನ್ನು

ಸಮೀಪಿಸಿ) pictshure ! ಬಲಿ ಚಕ್ರವರ್ತಿ . . . Emperor of all the 

worlds . . . going down into hell . ..Hard lines, old chappie ! 

But then . .. ಯಾರೋ ಹೇಳ್ದ್ಹಾಗೆ  great placeoo Heavenoo , for 

Comfortಗೆ, ಇಂದ್ರ  plush all the absurd ಸ್ತ್ರೀನ್  for really good

Company - . .where my best pals are . . . Hellಉ ! ವಾಮನ ! 

ವಿಷ್ಣು . . . Boss of the Show of Course . . . ಬಲಿ . . . good 

shport ... But can't thelp it ! Born ರಾಕ್ಷಸ  ! Shins of bad parents 

vishited on good children . . . however good . . . Therefore , 

must go down.. .Painter. Ravivarma accidentally also artist, 

Gold medallist in Vienna and Paris,  Royal Family ,Maharaja 

of Travancore's relationoo, ರವಿವರ್ಮ, ರಾಜಾ ರವಿವರ್ಮ . . .

Therefore nothing can be wrong with picture . . . Raja 

Ravivarma painteroo , Raja Balee titleoo . . . Raja Versus  

Raja — Private Quarrelloo ... Q .E .D .mind my own businessesಉ !  

( Raja - Raja !) ನೀನೂ - ನಾನು . . . Cut out the Cackle ! . . . Come 

back to brass fachs . . . . ಅಲ್ಲ್ವೇ ! Dear ? ಯಾಕೆ  . . . . Dear ! 

. . . ಓಹೋ ! [ ತಾನು ಪಠವನ್ನು ನೋಡಿ ಮಾತನಾಡುತ್ತಿರುವಾಗ ಅವನ 

ಬೆನ್ನಿನ ಹಿಂದೆ ಅವನ ಜೇಬಿನಲ್ಲಿ ಐದು ನೂರುರೂಪಾಯಿ ನೋಟುಗಳಲ್ಲಿ 

ನಾಲ್ಕನ್ನು ಸ್ವಸ್ಥಾನ ಪ್ರತಿಷ್ಟಿಸಿ ಐದನೆಯದನ್ನು ಸುಬ್ಬುವಿನ ಕೈಗೆ ಸೂಳೆಯು

ಕೊಡುತ್ತಿರುವುದನ್ನು ನೋಡಿ, ಅವಳ ಹತ್ತಿರಕ್ಕೆ ಬಂದು] ಎಷ್ಟು Dear ! 

Damageoo ?

ಸೂಳೆ : ಇಪ್ಪತ್ತು percentoo ! ಯಾವಾಗಿನ ಹಾಗೇ ! . . . ಯಾಕೆ ಕೇಳಿದ್ದು ?

ದೊ . ಮ . : ಕ್ಷಮ್ಸು , Dear ! ಅದಲ್ಲ ನಾನು ಕೇಳಿದ್ದು , ಯಾವಾಗಿನ ಹಾಗೇ 

. . . . Plus . . . ಈವತ್ತಿನ Damagesoo ಎಷ್ಟೂಂತ ?

ಸೂಳೆ : ಈವತ್ತಿನ Damagesoo “ನ ನ್ಖುಷಿ”. . . ನಾನು ನಿಮಗೆs ಕೊಡೋ   

“ಬಕ್ಷೀಸ್ ! ” .. . ನನಗೆ ನಿಮ್ಮ ಬುದ್ದಿ ಮಂಕುತನಾನ್ನೋಡಿದ ಸಂತೋಷ 

ದಲ್ಲಿ ! . . .

ದೊ . ಮ . : ಬುದ್ದಿ ಮಂಕು ! . . . ನಾನು !. . . Treble first class plus 

economy medal ?

ಸೂಳೆ: ನಿಮ್ಮ first classನೂ . . . ನಿಮ್ಮೆಡಲ್ಲೂ ಮೂಲೆಗೊದ್ದು . . . ಇಲ್ಬನ್ನಿ ! 

(ದೊಡ್ಡ ಮನುಷ್ಯನ ಕೈಯನ್ನು ಹಿಡಿದು ಪೂರ್ವೋಕ್ತ ಪಠವನ್ನು ಸಮೀ 

ಪಿಸಿ). . . "nomistakeshoo ”. . .“ Ravivarma ” ... “ Raja Family ! ” 

ಅಂದ್ರಲ್ಲಾ . ... ಎಲ್ಲಾ ಕೇಳ್ದೆ. . . ಸ್ವಲ್ಪ ನನ್ನ ಮಾತನ್ನೂ ಗಮನಿಸಿ. -

. . ಬಲಿ ಚಕ್ರವರ್ತಿ ಯಜ್ಞ ಮಾಡ್ತಿದ್ದಾಗ ಪುಟ್ಟಕಾಲಿಡ್ಕೊಂಡು ಒಬ್ಬ ಕುಳ್ಳ 

ಬ್ರಹ್ಮಚಾರೀ "ಪ್ರಪಂಚಕ್ಕೆಲ್ಲಾ ಚಕ್ರವರ್ತಿ ನೀನು ನನ್ಹೆಜ್ಜೇಲಿಮೂರ್ಹೆಜ್ಜೆ 

ಜಮೀನ್ಕೊಡು ಅಂತ ಬೇಡ್ಕೊಂಡು, “ ಹೂಂ ” ಅಂತ ಆ ಸತ್ಯವಂತ 

ಹೇಳೋಹಾಗೆ ಪುಸಲಾಯಿಸಿ . . . ಹಾಗಾದರೆ ಅಳಕೋ ನಿನ್ನ ಮೂರ್ 

ಹೆಜ್ಜೇನ” ಅಂತ ಉದ್ದರಣೆ ಪಂಚಪಾತ್ರೆ ಕೈಯಲ್ಲಿ ಹಿಡುಕೊಂಡು ಧಾರೆ 

ಎರೆಯೋಕೇಂತಾ ಆ ಪ್ರಾಣಿ ಕಾದಿರೋವಾಗ . . . ಭೂಮಿಯೆಲ್ಲಾ 

ಒಂದ್ಹೆಜ್ಜೆ . . . ಆಕಾಶ ಎಲ್ಲಾ ಇನ್ನೊಂದ್ಹೆಜ್ಜೆ . . . ಹೀಗೆ ಮುಚ್ಚಿ . ಬೆಚ್ಚಿ 

ಬಿದ್ದ ಆ ಬಲೀನ, "ನೀನ್ನೊಟ್ಟ ಎರಡು ಹೆಜ್ಜೆ ಆಯಿತು. . .ಕೊಟ್ಟ ಮಾತು 

ತಪ್ಪೋದಿಲ್ಲ ನೀನು - ನೀನ್ಮಾತ್ಕೊಟ್ಟ ಮೂರ್ನೆಹೆಜ್ಜೆ ಇಡೋಕೆ ಜಾಗಾ 

ಎಲ್ಲಿ ? ” ಅಂತ ಕೇಳಿ . . . . “ನಿನ್ನ್ಯೋಗ್ಯತೆ ಅರೀದೆ ನಾನ್ಮಾಡ್ಕೊಟ್ಟದ್ದು

ನನ್ತಪ್ಪು . . . ಆದ್ರೂ ನನ್ನ ನಾಲ್ಗೇನ ಕಾಪಾಡ್ಕೊಳೋದು ನನ್ನ್ಧರ್ಮ. 

ಆದ್ದರಿಂದ ನಾನ್ದಾನಾ ಮಾಡಿದ ಮೂರನೇ ಹೆಜ್ಜೆನ ನನ್ತಲೇ ಮೇಲೆ 

ಇಡು ” ಅಂತ ತಲೆಬಾಗಿ ಪಾತಾಳಕ್ಕ್ಮೆಟ್ಟಿಸ್ಕೊಂಡದ್ದು ಎರಡ್ಕಾಲೇ ಇರೋ 

ಈ ರವಿವರ್ಮನ ಪಠದ ವಾಮನನಿಂದಲ್ಲ ! ಬಲಿಚಕ್ರವರ್ತಿನ ಪಾತಾಳ 

ಕ್ಕಳ್ಸಿದ್ದೂ . . . ತ್ರಿವಿಕ್ರಮ . . . ವಾಮನನಲ್ಲ ! ಅದೊಂದು ತಪ್ಪು . . .  

ಚಿಕ್ಚಿಕ್ಚಿಕ್ . . . ಪುಟ್ಟುಟ್ಟುಟ್ತಪ್ಪು (Suits action toward by slapping 

the ದೊ.ಮ. on his cheeks and chin ).

ದೊ . ಮ . : My God ! ಏನ್ Grey matterಏ ! ನಿನ್ನ horrible craniumನಲ್ಲಿ !  

ಏನ್  Piamaterಏ ! ನಿನ್ನ್ಪುಟ್ ಕೊಂಡೇಲೀ ! Physiologyಲೀ terri- 

bleoo ! accent on all the syllablesoo! ನಾನು! terrificcoo! 

plus logic ! . . . Therefore , ಕೇಳು : dear ! ನೀನೂ Womenoo 

First premise . ನನ್ನ Wifeoo womanoo,.. . . second premise. . . But, 

forgive me, dear ! ನಾನು manoo ! Third premise . . . but not 

my fault !moreover . . . don't forget . . .Educated manoo ! 

. . . no question of that ! Besides Ravivarma also a manoo ! . .. . 

painter chappie ! plus ಇನ್ನೊಬ್ಬ Manoo myself . . . explain 

ಮಾಡೋ ನಾನು.... us all ಗಂಡ್ಸೂಸ್ ! The Eternal Joker ವಿಷ್ಣು  

. . . ತ್ರಿವಿಕ್ರಮ Stuntಉ ಮರ್ತ್ಬಿಟ್ಟು  . . .on our male behalf ನಿನಗೆ 

. . . ನಮ್ಮಗಳ apologies Submit ಮಾಡ್ತೇನೆ . . of course 

Ravivarma now dead as a door nailoo . . . ವಾಮನ and Bali 

double dead as double dead doornailsoo . . . Transformation 

sceneಉ !. . . . ತ್ರಿವಿಕ್ರಮ and publishers of pictureoo . . . 

ಎಲ್ಲೊ . . . ಏನೋ ?. . . Therefore sole representative ನಾನು 

. . . Submit ಮಾಡ್ತೇನೆ . . . ತ್ರಿವಿಕ್ರಮ ನೀನ್ಹೇಳ್ದೆ . . . 'Per Contra ” 

ಅಂತ ನಮ್ಮ ರಿಪೋರ್ಟಿ ನಲ್ಬರೋ ಹಾಗೆ But dear !. . . ಈ ಪಠದ 

ಗಲಾಟೇಲಿ ನಿನ್ನ Wonderful brainoo . . . ! ? I mean ನಿನ್ನ intellect! ? 

. . . ನಿನ್ನ intelligence ! ! ! . . . ಅಲ್ಲಾ . . . ಈಗ್ನನ್ನ wife ನೋಡು! 

ಅವಳ Brainoo ತೊಕ್ಕೋ ! ರಾವಣಾಸುರ ತನ್ನಿತ್ತ್ಕೈಲೂ ಇಪ್ಪತ್ತು 

ಆರ್ಕಾಟು ಚಡಾವ್ಗಳ್ನಾ ಹಿಡ್ಕೊಂಡು ಪ್ರಹ್ಲಾದನ ಕೆನ್ನಕೆನ್ನೆಗೂ ಬಜಾ 

ಯಿಸ್ತಾ , ತನ್ನ ದಶಕಂಧರಗಳಿಂದ ಏಕಗ್ರೀವವಾಗಿ, “ ನಮ್ಮಪ್ಪ ಹಿರಣ್ಯ 

ಕಶಿಪೂನ ಫಲಾನ್ ಇದೇ ಕಂಬದಲ್ಲಿ ತೋರಿಸ್ತೀಯೋ , ಇಲ್ಲಾ . . . 

ಅಲ್ನೋಡು! ನನ್ನ ತಪೋಬಲದಿಂದ ತರ್ಸಿ ತಯಾರಾಗಿ ತಂದು ನಿಲ್ಸಿರೋ 

ಆ ತಾಟಕಿ ಬಾಯ್ಗೆ ತುತ್ತಾಗೀಯೋ ನೀನು ??” ಅಂದ್ಧಾಗೂ . . . . ಆಗ 

ಕಂಬ ಬಿರಿದು Bisect ಆಗಿ, ಆ Broken bits of ಕಂಬದಿಂದ ಕಂಸ 

ಸುಯೋಧನರು, ಸೀತಾ ಸಾವಿತ್ರಿಗಳ ಸಮೇತ ಸಿಗರೇಟ್ ಸೇದ್ತಾ ಕೆಳಗಿಳಿ 

ದ್ಹಾಗೂ cut sceneಉ . !. . . audienceನ ಆಶೀರ್ವಾದಕ್ಕೆ ಸರ್ವರೂ . . 

. . the whole tableaux, ನೀನೂ ನಾನೂ ಕೂಡ . . . ತಲೆಬಾಗಿದ 

ಹಾಗೂ . . . ಒಬ್ಬ , not yet born ಅಲ್ದೆ . . .will never be born 

painter ಬರೆದಾಂತಿಟ್ಕೊ ಒಂದು ಪಠಾನ ! Hypothetically assuming 

boiling down to our common or garden -dear old "ಮಸ್ಲಾ ." !. . 

. . ಆ ಪಠದಲ್ಲಿರೋ ಒಂದು ಹುಳುಕೂನೂ ಹೊಳೀದೆ. . . ನನ್ನ Hair-  

brained wife ! . . . ಅವಳ ಮಿದುಳಿಗೆ . . . ಅದ್ನ ದೇವರ್ಮನೇಗಲ್ತ  

ಲ್ಸ್ಕೊಂಡು ತ್ರಿಕಾಲವೂ ಪೂಜೆ ಮಾಡೋ ಬೆಪ್ಪುತಕ್ಕಡಿ.. . ನನ್ನ wifeoo! 

Therefore pen and ink and paperನ ಈಗ ಕೊಟ್ಟೂ ನನ್ನ್  ಕೈಗೆ . 

. . . ನನ್ನ position as husband ರಾಜೀನಾಮೆ ಕೊಟ್ಟಿಟ್ಟು ನನ್ನ wifeಗೆ 

. . . ಅವಳ್ನೂ , ಆ ರಾತ್ರಿ ಎಲ್ಲಾ ಕಿರ್ಲ್ತಾ ನನಗ್ಬರೋ half an hour's 

sleepನೂ disturb ಮಾಡೋ ಅವ್ಹೆತ್ತ ಮಕ್ಕಳ್ನೂ  monthly allow- 

anceನಲ್ಲಿ ಹಾಕ್ಬಿಟ್ಟು, ತೆಪ್ಪಗೆ ನಿಮ್ಮನೆಗ್ಬಂದು Sensible ಆಗಿ ನಿನ್ಜೊ 

ತೇಲಿ ಸಂಸಾರ ಮಾಡೋಕಾಗುತ್ತೆ ! . . . pen and ink ಇಲ್ಕೋಡು. 

ಸೂಳೆ : ನೀವು ಕೊಡೋ ರಾಜೀನಾಮೆ ನಿಮ್ಮ ಆಫೀಸ್ ಪೇಪರ್ನಲ್ಲೇ . . . 

ನಿಮ್ಮನೆಯಿಂದ . . . ನಿಮ್ಮನ್ನಂಬಿ ನಿಮ್ಮಾವನೋರುನಿಮಗೊಪ್ಪಿಸಿದ 

ನಿಮ್ಮಂಡ್ತಿಗೆ ಕೊಟ್ಟೋಳ್ಳಿ ! ಸಧ್ಯ ಒಂದು ಮರೀಬೇಡಿ. ( ದೊಡ್ಡ 

ಮನುಷ್ಯನ ಹತ್ತಿರ ಬಂದು, ಎರಡು ಭುಜಗಳನ್ನೂ ಹಿಡಿದು ಒದರಿ 

ಕೊಡವಿ ) ಇದೇ . . . ಹೀಗೆ ಈವತ್ತೂ ? ಮುಮ್ಮೂರು ಬಾಟ್ಲು  

ಮುಗಿಸ್ಬಿಟ್ಟು, . . . ನೆಟ್ಟಗೆ ಮನೇಗ್ಹೋಗೀ ಸಂತೋಷವಾಗಿ ನಸುನಗ್ತಾ 

. . . ನಿಮ್ಮನೆಯಾಕೆಗೂ ಮಕ್ಕಳ್ಗೂ ತೊಂದ್ರೆ ಇಲ್ದೆ . . . ಯಾವಾಗ್ಲೂ 

ಹೋಗ್ತಿದ್ದ ನೀವು. . . ಈವತ್ತ್ಯಾಕ್ಹೀಗೆ? ( ಪುನಃ ಭುಜವನ್ನು ಜಗ್ಗಿಸುತ್ತಾ ) 

ಚೇತರಿಸ್ಕೊಳ್ಳಿ ! .. .ನೀವೂ ನಿಮ್ಮನೆಯೋರೂ ಸುಖವಾಗಿದ್ರೇ ನನ್ಜೀವ್ನ 

( ಬಲಗೈಯನ್ನು ದೊಡ್ಡ ಮನುಷ್ಯನ ಕುತ್ತಿಗೆಯ ಮೇಲೆ ಹಾಕಿ ಬೀಧಿಯ 

ಬಾಗಿಲ ಕಡೆಗೆ ಎಳೆಯುವಳು ). 

ದೊ ಮ . : ಕ್ಷಮಿಸು Dear ! of course . . . ನೀನು . . . ನೀನು . . . But I 

hate being dragged and dictated to ... I agree . ..ಒಂದೇ ಒಂದು  

condition ಮೇಲೆ . . . ಒಂದು last, longing, lingering ,luscious 

kiss of ಕಾಳಿದಾಸ ಹೇಳ್ದ್ಹಾಗೆ - your ಬಿಂಬಾಧರ lips... ಇಲ್ಲ್ವೋ  

. . . ಇಲ್ಲೇ Collapseಉ ! 

ಸೂಳೆ : ನಿಮ್ಮ Conditionಗ್ಳೆಲ್ಲಾ ತುಂಡು ! ಬನ್ನಿ ! (ಎನ್ನುತ್ತಾ ದೊಡ್ಡ 

ಮನುಷ್ಯನನ್ನು ಮುದ್ದಿನಿಂದ ಕಾಲು ಪಾಲು ಎಳೆಯುತ್ತಲೂ ಮುಕ್ಕಾಲು 

ಪಾಲು ಹೊರುತ್ತಲೂ ಹೊಸಲನ್ನು ಸಮೀಪಿಸಿ) ನಂಜಾ ! 

ನಂಜ : ( ಪ್ರವೇಶಿಸಿ) ಅಮ್ಮಾ ! 

ಸೂಳೆ: ಸಾಹೇಬರ Driver ಎಲ್ಲೋ ? . . . ನಿನ್ನೀ ನಿದ್ರೆ ಫಲ ನಾಳೆ ಗೊತ್ತಾಗುತ್ತೆ 

ಸಂಬ್ಳ ಕೇಳೋವಾಗ . . ಸಾಹೇಬ್ರ Driveroo ನಿನ್ನ ಹಾಗೇನೇ 

  ನಿದ್ರೆಯೇನೋ . . . ? 

ಡ್ರೈವರ್ : (ಸಮೀಪಿಸಿ) ಅಮ್ಮಾ ! 

ಸೂಳೆ : ಸಾಹೇಬರ ಸಂಬಳ ಏನಾದ್ರೂ ಬಾಕೀನೇ ? 

ಡ್ರೈವರ್ : ಇಲ್ಲಾಮ್ಮಾ ! 

ಸೂಳೆ : ಮತ್ಯಾಕೀ ನಿನ್ನಿದ್ರೇ ? . . . ನಿನ್ನ Duty ಮರ್ತ್ಯಾ ? ನಿನ್ನ ಧಣಿನ ಬಂಗ್ಲೆ 

ಸೇರೋಕ್ಕುಂಚೇನೆ ನಿದ್ರೇನೇ ? . . . ಯಾರುಪ್ಪು ತಿನ್ತಿರೋದ್ನೀನು . . 

. . ಜ್ಞಾಪ್ಕ ಇಧೆಯೋ ? 

ಡೈವರ್ : ಕ್ಷಮಿಸೀಮ್ಮಾ . . . ತಪ್ಪು ನಂದು ತಾಯಿ ! (ಸಮೀಪಿಸಿ) ಮರ್ತ್ಬಿಡಿ, 

ನಿದ್ದೆಗಣ್ಣು , ದಿನವೆಲ್ಲಾ Drive ಮಾಡೋ ! ಧಣಿಗಳ ಹುಷಾರಾಗಿ ಬಂಗ್ಲೆ 

ಸೇರಿಸ್ತೇನೆ ಮರತ್ಬಿಡಿ ತಪ್ನಾ !( Driver ದೊಡ್ಡ ಮನುಷ್ಯನನ್ನು ತನ್ನ ವಶಕ್ಕೆ 

ಮರ್ಯಾದೆಯಿಂದ ಮೆಲ್ಲಗೆ ವಹಿಸಿಕೊಂಡು ನಿಷ್ಕಮಿಸುತ್ತಿರಲು) 

ಸೂಳೆ:( ಮೆಲ್ಲಗೆ ಅವನಿಗೆ) ನಿನ್ನ ಮಾಮೂಲೇನೂ ಮರ್ತಿಲ್ಲಾ Driver ! ಸುಬ್ಬೂ  

ನಾಳೆ ಸಲ್ಸ್ತಾನೆ. . . ನಿನ್ನ ಕುಂದುಕೊರ್ತೆಗಳ್ನಾ ! (ಡ್ರೈವರ್ ನಿಷ್ಕಮಿಸಲು; 

ಹೊಸಲಿನಿಂದಲೇ ) Drinkಓ ( ಬಿರುಸಾಗಿ) ಏನ್ಮಾಡ್ತಾ ಇಧೀಯಾ ? 

(ಸುಬ್ಬುವು ತಂದ ಗಾಜನ್ನು ಒಂದೇ ಗುಟುಕಿನಲ್ಲಿ ನುಂಗಿ ಹೊಸಲಿಗೆ 

ಒರಗಿಕೊಂಡು) ಚಿನ್ನದಂಥಾ ಹುಡುಗ ! Thank youಸುಬ್ಬು !! ಮುಂದಕ್ಕೆ 

ಬರೋನು ಇವ್ನು ! ಇವನ ಹೆಂಡ್ತೀನೋ . . . ಇವನಿಗಿಂತಾ ಬುದ್ದಿ 

ಹೆಂಡ್ತಿಗಾರ್ಕೇಲಿ ಮಾತ್ರ ಪೆದ್ದು ! . . . (ನಿಟ್ಟುಸುರುತ್ತಾ ) ಇವನ್ಯೋಗ್ತೆ  

ಅವಳಿಗೊತ್ತಿಲ್ಲ ! ಅವಳ್ಯೋಗ್ತೆ ಇವ್ನಿಗೊತ್ತಿಲ್ಲ ! . . . ಅನ್ಯಾಯ . . . 

ಸುಬ್ಬೂ ! ದೇವರ್ಕೊಟ್ಟ ಅಲ್ಪಸ್ವಲ್ಪ ಭಾಗ್ಯಾನ್ನೂ ಅನುಭವಿಸ್ದೆ. . . 

ಇವನೋ ! ? . . . ಅವಳ ಯೋಗ್ಯತೆ . .. ಅವಳ ರಕ್ತ clean ಅಂತಾರಲ್ಲಾ 

ಅದು ಅವ್ಳು ! . . . ಆದ್ರೆ ರೇಗ್ತಾಳೆ ಬೇಗ ದೊಡ್ಡ್ರಕ್ತದ್ ಜೋರು ; 

ದೊಡ್ಡ ಕುಟುಂಬ . . . ಹೀಗೆ ಕುಡಿಯೋದು. . . ಹೊತ್ತು ಬಿಟ್ಟು ... 

. . ತಲೆ ತೂಗ್ತಾ ಮನೇಗ್ಬರೋ ಗಂಡ್ದ್ರು  ಅಭ್ಯಾಸವಿಲ್ಲ ಅವಳುಟುಂಬಕ್ಕೆ 

. . . ನೀನೇಳೀಯಲ್ಲಾ , Tactic ಅಂದೆಂಥಾದ್ದು ? . . . ಹೂಂ ! 

Diplomatic . . . ಅದಿಲ್ಲ ... . ಅವಳ ತೋಟೀಲಿ, ಅಪರಂಜಿ ಹುಡ್ಗಿ ! 

ಆದ್ರೇನೋ . . . Up -to - date ಅಲ್ಲಾ ! ಅವಳು ಹುಚ್ಚ್ಹುಚ್ಚಾಗಿ ರೇಗೋ 

ಗಲಾಟೇಲಿ ಅವಳ ಯೋಗ್ಯತೆ ಈ ಮಗೂಗೆ ಗೊತ್ತಾಗೋದಿಲ್ಲ . ಹೀಗೆ 

ನೋಡ್ಸುಬ್ಬೂ ! ( ಅವನ ಕಡೆ ತಿರುಗಿ, “ ಏನ್ಮಾಡ್ತಿಧೀಯಾ" ( ಮತ್ತೆ 

ಮೊದಲಿನಂತೆ) ಈ ಕಾಲದ ಸಂಸಾರಗಳಲ್ಲಿ ಗಂಡ ಹೆಂಡತಿಯರು ಒಬ್ಬೊ 

ಬ್ಬರ ಯೋಗ್ಯತೇನ ಅರೀದೆ . . . ರೇಗಿ . . .ತಮ್ಮ ತಮ್ಮ ಕಣ್ಣಿಗೆ ಎಣ್ಣೆ 

ಬಿಟ್ಕೊಂಡು ಪರಸ್ಪರ ಐಬುಗಳನ್ನು ಹುಡ್ಕಿ ಹೇಸ್ಥೆ ಪಟ್ಕೊಳ್ಳೋದ್ರಿಂದ 

ಮುಂದಕ್ಕೆ ಬೆಳೆದು . . . ಹಬ್ಬಿ ಹರಡೋ ಎಷ್ಟು ಸಾವಿರ ಕುಟುಂಬಗಳು 

ಹಾಳಾಗ್ತಿವೆ . . . ಈಗ . . . ಈಗ ಗೊತ್ತೆ ಸುಬ್ಬೂ ? ( ಸುಸ್ತಿನಿಂದ ನಿಟ್ಟುಸಿ 

ರಿಟ್ಟು , ಬಾಗಿಲಿನ ವಾಸ್ಕಾಲಿಗೆ ಒರಗಿಕೊಳ್ಳುವಳು.) 

ಸುಬ್ಬು : ಯಥಾಪ್ರಕಾರ ಚಿನ್ನಾ ... . ಇಷ್ಟು ಹೊತ್ತಿಗೇ , ಇಷ್ಟೇ Drinksoo 

ಆಗತ್ಲೂವೆ. . . ಇದೇ ತತ್ವದ್ ಲೆಕ್ಚ್ರು . . . ನಿಂದು . . . ಊಟಮಾಡಿ 

ಮಲಕ್ಕೋ ಚಿನ್ನಾ . . . ಮಧ್ಯಾಹ್ನಾನೂ ನಿದ್ದೆ ಇಲ್ಲ . . . ತಡಿಯೋದಿಲ್ಲ 

ಚಿನ್ನ ನಿನ್ ದೇಹ. . . ಇವತ್ತೆಲ್ಲಾ Shoppingoo . . . ಜ್ವರವೋ 

ನೆಗಡೀನೋ . . . ಒಟ್ನಲ್ಲಿ ಡಾಕ್ಟರ್ ಪಾಲಾಗ್ತೀಯ (ನಯವಾಗಿ, ಖಾಲಿ 

ಯಾದ ಗಾಜನ್ನು ಸೂಳೆಯ ಕೈಯಿಂದ ಬಿಡಿಸಿ ತೆಗೆದುಕೊಂಡು ಸೂಳೆ 

ಯನ್ನು ಸೋಫಾ ಕಡೆಗೆ ಒಯ್ಯುತ್ತಾ) ಬಾ ಚಿನ್ನಾ ! . . ( ಮೆಲ್ಲಗೆ 

ಒರಗಿಸುವನು.) . 

ಸೂಳೆ : (ಸೋಫಾವಿನ ಬೆನ್ನಿನ ಮೇಲೆ ಕುತ್ತಿಗೆಯನ್ನು ಒರಗಿಸಿಕೊಂಡು) ನಿಜ 

ಸುಬ್ಬೂ ! ನೀನೇಳೋದೆಲ್ಲಾ ನಿಜ ! ಆದ್ರೂನೂವೆ. . . ನಾನು ಹ್ಯಾಗೆ 

ಹೇಳ್ಕೊಳ್ಲಿ ? ಒಂದೊಂದ್ಸರ್ತಿ ಹೊಟ್ಟೆ ಉರಿಯುತ್ತೆ . . . ಇಲ್ಲಾ ಉಕ್ಕುತ್ತೆ 

. . . ಇಲ್ಲಾ ತೋಳಸುತ್ತೆ . ಒಟ್ನಲ್ಲಿ ಎಲ್ಲಾ ಸಂಕಟಾ ಸುಬ್ಬೂ . . . 

ಸಮಸ್ತವೂ ಸಂಕಟ . . . ( ಥಟ್ಟನೆ ಕಣ್ಣುಗುಡ್ಡೆಗಳನ್ನು ಬಾಗಿಲಕಡೆ 

ಹೊರಳಿಸಿ ನಿಲ್ಲಿಸಿ) ಹಾರನ್ನು ! . . . ಬ್ಯೂಕ್ ಅಲ್ಲವೇ ?. . . ಆತ್ನೇ ? 

ಸುಬ್ಬು : ಹೌದು . . . Buick hornಏ . . . ಆತ್ನೇ ! ಇಷ್ಟ್ಹೊತ್ತ್ನಲ್ಲಿ ಬಂದೇ 

ನ್ಗಲಾಟೆ ಮಾಡ್ತಾನೋ ! ? . . . ಆದ್ರೂವೆಒಳ್ಳೇ ಮನಸ್ಸು . 

ಸೂಳೆ: ಗಲಾಟೇ ? ಇಲ್ಲಿ ? ( ತುಟಿಗಳನ್ನು ಬಿಗಿಯುತ್ತಾ ಉಚ್ಚ್ವಾಸಿಸಿ, ಮತ್ತಿರುಗಿ 

ತುಟಿಗಳನ್ನು ಸ್ವಲ್ಪ ಸಡಿಲಿಸಿ) ನನ್ನ್ಮನೇಲಿ ? . . . ಮನಸ್ಸಿಗೆ ಬೆಂಕಿ ಹಾಕ್ಲಿ 

. . . ಮಯ್ಯಾದೆ ಮೊದ್ದು !! ನೋಡೇ ಬಿಡೋಣ ಇದರ್ಗಲಾಟೇನ . . . 

ಹೋಗ್ಬಾ ( ಸುಬ್ಬು ನಿಷ್ಕಮಿಸಲುದ್ಯುಕ್ತನಾಗಲು) ತಡಿ, ಒಂದು Drink 

ಕೊಟ್ಹೋಗು. . (ಸುಬ್ಬುವುಬ್ರಾಂಡಿಯನ್ನು ಹಾಕಿ,ಸೋಡವನ್ನು ಸೇರಿಸು 

ತ್ತಿರುವ ಗಾಜನ್ನು ಕಸಿದುಕೊಂಡು ಹೋಗ್ಬೇಗ . . . ಎಲ್ಲಿಂದ್ಬರತ್ತ್ಯೋ 

. . . ತಿಳ್ಕೊಂಡು. . . ಎಷ್ಟಾಗಿದೆಯೋ . . . ಆಗೋ ಗಲಾಟೆಯೆಲ್ಲಾ 

ಇಲ್ಲಾಗ್ಲೀ . . . ಒಳಗೆ . . . ಹೊರಗ್ಬೇಡ. . . ಹೋಗಿ ಕರ್ಕೊಂಡೋ , 

ಎಳಕೊಂಡೋ , ಹೊಡ್ಕೊಂಡೋ ಹೇಗಾದ್ರೂ ಭೇಗ್ಬಂದ್ಸೇರು ಏನೇ 

ಆದ್ರೂ . . . ನೀನ್ ಹೇಳ್ದ್ಹಾಗೆದೊಡ್ಡ ಮನುಷ್ಯರು . . . ಅಲ್ದೆ ದೊಡ್ಡ 

ಕುಟುಂಬ. 

[ಸೂಳೆಯು ಗಾಜನ್ನು ಖಾಲಿ ಮಾಡುತ್ತಲೇ ಸುಬ್ಬುವುನಿಷ್ಕಮಿಸುವನು.] 

ಸೂಳೆ : ಅಬ್ಬಾ ! . . . ಸೋಡಾ ಆಗ್ಹೋಯ್ತೇ !. . . . ಅನ್ಯಾಯ Strongoo! 

ಇದೇ ಸುಬ್ಬು “ಹೋಫೆಸ್ತೂ ” ಅನ್ನೋದು. . . Drinkಉ ಅಂದ್ರೆ 

Drinkಉ ! Double Drink ಅಲ್ಲಾ . . . ಎಂದೂ ಇಲ್ಲದ್ ತಲೇ ಭಾರ 

ತೂಗ್ಸತ್ತೆ ನನ್ತಲೇನ [ ನಿಶ್ವಾಸಿಸಿ, ಪಕ್ಕದಲ್ಲಿರುವ ಟೀಪಾಯಿನ ಮೇಲಿನ 

ಬೆಳ್ಳಿ ಸಿಗರೇಟ್ ಕೇಸನ್ನು ಬಿಚ್ಚಿ , ಸಿಗರೇಟನ್ನು ಬಾಯಲ್ಲಿಟ್ಟು , ಕೇಸಿನ 

ಪಕ್ಕದಲ್ಲಿರುವ ಲೈಟರಿನಿಂದ ಹಚ್ಚಿಕೊಂಡು ಹೊಗೆಯನ್ನು ಸೂರಿಗೆ 

ಬಿಡುತ್ತಾ ಸೋಫಾವಿನ ಬೆನ್ನಿಗೆ ಪುನಃ ಒರಗಿಕೊಳ್ಳುವಳು.] 

[ ಪ್ರವೇಶ : ದ್ವಿತೀಯ ವಿಟ ; ಐವತ್ತು ನಾಲ್ಕು ವರುಷ ವಯಸ್ಸು ಪ್ರಮುಖ gazetted 

ಆಫೀಸರು.] 

ದ್ವಿ . ವಿ. : ( ಬೆನ್ನಿನ ಮೇಲೆ ಕೈಹಾಕಿ, ಆಸರೆಯನ್ನು ಕೊಡಲು ಯತ್ನಿಸುತ್ತಿರುವ 

ಸುಬ್ಬುವನ್ನು ಒದರಿ ) Do you think I am drunk ? . . . Silly ass . . 

. . ಒಂದ್ಮಟ್ಟಿಗ್ ಮರೀಬೇಡ . . . ಉಳೋನ್ ನೇಗಿಲ್ಮೇಲೂ . . . 

ನಡೆಯೋನ್  ತೋಳಿನ್ಮೇಲೂ ಕೈ ಹಾಕ್ಷೇಡ. (ಪ್ರವೇಶಿಸಿ) Good evening 

beauteoush creature. . . . ( ನಾಲ್ಕು ಹೆಜ್ಜೆಗಳಿಂದ ಹಾಯಬೇಕಾದ, 

ಹೊಸಲಿನಿಂದ ಸೂಳೆ ಕೂತಿರುವ ಸೋಫಾವನ್ನು ಎರಡೇ ಹೆಜ್ಜೆಗಳಲ್ಲಿ 

ಹಾದು) ಕೋಪಿಸ್ಕೋಬೇಡ . . . ಲೇಟ್ houro0 . . . ನನಗ್ಗೊತ್ತು . . . 

ಒಂದ್ Huggoo ! ಒಂದು kissoo (ಜೋಬಿನಿಂದ ಒಂದು ಕಟ್ಟು 

currency ನೋಟುಗಳನ್ನು ಟೀಪಾಯಿನ ಮೇಲೆ ಬಿಸುಟು)  Eight hun 

dred rupees . . . minus twenty percent , ನಿನ್ನ ಕಮಿಷನ್ನು . . . 

balance familyದು. 

ಸೂಳೆ: ( ಥಟ್ಟನೆದ್ದು ಸೋಫಾವನ್ನು ಬಿಟ್ಟು ವಿಟನಿಂದ ನಾಲ್ಕು ಹೆಜ್ಜೆ ಆಚೆ ನಿಂತು) 

ಕಮೀಷನ್ನಂತೆ ! ಕಮೀಷನ್ನೂ ಬೇಡಾ, ನೀವೂ ಬೇಡಾ, ನಿಮ್ಮ Family 

ದುಡ್ಡದೋಚ್ಕೊಳ್ಳೋ ಹಾಗೆ ನಿಮಗ್ನಾನೂ ಬೇಡಾ. . . . ( ಘಟ್ಟಿಯಾಗಿ) 

ಸುಬ್ಬೂ . . . . ( ಪ್ರವೇಶಿಸುವನು) ಈ ಕಟ್ಟು ನೋಟ್ನ ಡ್ರೈವರ್ ಕೈಲಿ 

ಎಣಿಸಿಕೊಟ್ಟು ರಸೀತಿ ತಕ್ಕೊಂಡು . . . ಫೌಂಟನ್ ಪೆನ್ ಟೇಬಲ್ 

ಮೇಲಿದೆ. . . ಈ ಪ್ರಾಣೀನ್ನೂ ಕಾರಲ್ಲ್ಹಾಕಿ ಸಾಗ್ಸು . 

ದ್ವಿ . ವಿ. : ಇದೇನ್ Dear ಇಷ್ಟು ಕೋಪ ? . . . ನಾನು ಬಂದದ್ದು . . . ನನ್ನ 

“ night off ” ಇದು . . . ಮ್ಮ್ ಸಾಹೇಬ್ . . . understands, ಈಗ 

hundred and sixty ಆದ್ರೂನೂವೆ ಮುಂದಕ್ಕೆ more ಆಗುವ ನನ್ನ 

Tributeನ ನಿನ್ಗೊಪ್ಸೊಕ್ ಬಂದ್ನಾನು. . 

ಸೂಳೆ : ಹಯ್ಯಯ್ಯೋ ! ನನಗ್ನೀವೊಪ್ಸೊ ಕಾಣೇನ ಮನಃ ಪೂರ್ತಿ ನಾಳೆ 

ಮಟ್ ಮಟ್ ಮಧ್ಯಾಹ್ನದಲ್ಲಿ ಒಪ್ಪಿದ್ರೇ ನನಗಿಷ್ಟ. ಸಧ್ಯ ನಿಮ್ಮಿ ಸ್ಥಿತೀಲಿ, 

ನಿಮ್ಮ್ಹತ್ರ ಸುಲ್ಕೋಳ್ಳೋಕೆ. . . ಸುಬ್ಬೂ ! ರಾಯರ್ಗೆ Drink ಕೊಡೋ 

(ಸುಬ್ಬುವು ಹಾಗೇ ಮಾಡುವನು. ವಿಟನು ಒಂದೇ ಗುಟುಕಿನಲ್ಲಿ ಖಾಲಿ 

ಮಾಡಿದ ಗಾಜನ್ನು ದಪ್ಪ ರತ್ನಗಂಬಳಿ ಹಾಸಿರುವ ನೆಲಕ್ಕೆ ಬಿಟ್ಟು ) 

ದ್ವಿ . ವಿ. : That is all right Subbu. glass ಒಡದ್ರೆ . . . put it down to me 

. . . ನೋಡು dear . . . ನೀನೂ gentlemanoo. . . . ನಾನೂ 

gentlemanoo. . . ಇಷ್ಟುಕೋಪ ಇದ್ರೂವೆ ನನ್ನ್ಮೇಲೆ  . . . First offer 

your enemy a drink . Then damn him . . . ! ಅದು  shportಉ  . . 

. . ಈ shportನ ನನ್ನ wifeಗ್ಗಾನ ನೀನು ಹೇಳ್ಕೊಡೋದ್ರಾದ್ರೆ . . . at 

thousand rupees a minute , I'll bless you for ever and ever and 

ever, [ ಎನ್ನುತ್ತಾ ತನ್ನ ಹಿಂದೆ ಸಿದ್ದವಾಗಿ ಹರಡಿರುವ ಸುಬ್ಬುವಿನ 

ಬಾಹುವಕ್ಷಗಳ ಮೇಲೆ ಒರಗಿಕೊಳ್ಳುವನು.] 

ಸೂಳೆ : [ ನಯವಾಗಿ ಹತ್ತಿರ ಬಂದು ನೋಟುಗಳ ಕಟ್ಟನ್ನು ವಿಟನ ಕೋಟಿನ 

ಒಳಜೇಬಿಗೆ ಸೇರಿಸಿ, ಆತನ ಗಲ್ಲವನ್ನು ಚಿವುಟುತ್ತಾ , ಅವನನ್ನು ಮೃದು 

ವಾಗಿ ತನ್ನ ಬಾಹುಗಳಿಗೆ ವರ್ಗಾಯಿಸಿ, ಮೆಲ್ಲನೆ ಬಾಗಿಲ ಕಡೆ ಎಳೆಯುತ್ತಾ ] 

ಮನೆಗ್ಹೋಗಿ, ಈ ಸ್ಫೋರ್ಟೂ. . . ಈ ಲೆಕ್ಟರೂ . . . ಇವಕ್ಕೆಲ್ಲಾ 

ತುಂಡ್ಹಾಕಿ. . . ಮಲಗಿರೋ ಮಕ್ಕಳೆಬ್ಬಿಸೊ . . . ಮನೇ ಆಕೇನೂ ರೇಗಿಸ್ದೇ  

ತೆಪ್ನೆ ಹೋಗಿ ಮಲಕ್ಕೊಳೋದಾದ್ರೆ ... . ನೀವು next time ಬರೋವಾಗ 

. . . ಹಗ್ಗೂ . . . ಕಿಸ್ಸೂ ... ಅಂದ್ರಲ್ಲಾ ಆ ಮಾತೆತ್ತ್ಬಹುದು . . . 

ಇದು ನನ್ನ ಜೆಜ್ ಮೆಂಟು! ಅಪೀಲಿಲ್ಲ . . . ಸುಬ್ಬೂ ! ( ಸುಸ್ತಾಗಿ ತನ್ನ 

ತೋಳಿನ ಮೇಲೆ ಒರಗಿದ ವಿಟನನ್ನು ಸುಬ್ಬುವಿಗೆ ವರ್ಗಾಯಿಸಿ) ನಾನ್ಹೇಳಿ 

ದ್ದೆಲ್ಲಾ ಕಿವೀಗ್ಬಿತ್ತೇ ? ಮೆದಳ್ಗೇರ್ತೇ ? . . . ಇಲ್ಲಾ "ಡಂಕೂ"ಂತಾರಲ್ಲಾ 

ಅದೋ ನೀವು ? 

ದ್ವಿ . ವಿ. : Drunkಉ ? . . . ನಾನು ? . . . . ಸುಬ್ಬೂ ! (ಸುಬ್ಬುವಿನ ಕೊರಳನ್ನು 

ತನ್ನ ಕೈಯಿಂದ ಬಿಗಿಯುತ್ತಾ ) ಸುಬ್ಬು ಲೇ ! Sweetheart ಕಾಣೋ ನೀನು 

ನನಗೆ ! ( ಸುಬ್ಬು ಅಪ್ಪಿಕೊಳ್ಳುತ್ತಾ ಅವನ ಗಲ್ಲವನ್ನು ಎತ್ತಿ ) ನೀನ್ಗಾಗ 

ಗರ್ಲಾಗಿದ್ದಿದ್ದರೆ kiss ಮಾಡ್ತಿದ್ದ್ನೋ ನಿನ್ನ . . . honestಓ ನೀನು . . . 

ನೀನೇ ಹೇಳೋ . . . ಸತ್ಯವಾಗ್ಹೇಳೋ . . . Drunkಏ ನಾನು ? ಸತ್ಯ 

ವಾಗ್ಹೇಳೋ , ಕುಡಿದಿದೇನೇ ನಾನು ? 

ಸುಬ್ಬು : ಇದೇನ್ ಪ್ರಶ್ನೆ ಸಾರ್ ? 

ದ್ವಿ . ವಿ . :ಮತ್ತ್ಹೇ ಳ್ತಾಳಲ್ಲಾ ! This beautiful but cruel creatureಊ . . 

ಸುಬ್ಬು : ಏನ್ಸಾರ್ ಇದೂ ? ನೀವೂವೇ, ಇಷ್ಟ್  ತಿಳೋರು. . . ಹೆಂಗ್ಸ್ರ ಮಾತ್ನ 

ಕಳ್ಕೊಂಡು! ( ತೆರೆಯ ಹಿಂದೆ ಕಾರ್ Start ಆದ ಶಬ್ದ ) Caroo! Startoo! 

[ ಮುಂದೆ ಚರ್ಚಿಸುವ ಅವಕಾಶ ಕೊಡದೆ ಕೊಂಡೊಯ್ಯುತ್ತಾ ನಿಷ್ಕಮಿಸು 

ವನು.] 

ಸೂಳೆ : ( ಹಿಂದಕ್ಕೆ ಬಂದು ಸೋಫಾವಿನ ಮೇಲೆ ಕುಸಿಯುತ್ತಾ ) ಅಬ್ಬಾ ! . . . 

ಬದಕ್ದೆ ! 

ಸೂಳೆ ತಾಯಿ : ( ಮುಂಚಿನಿಂದಲೇ ಹಿಂದಿನ ಬಾಗಿಲಿನಿಂದ ಹೊಂಚು ನೋಡು 

ತಿದ್ದು , ಕೇಳುತ್ತಿದ್ದು ಈಗ ಪ್ರವೇಶಿಸಿ) ಇದೇನ್ ಬುದ್ದಿ ಇಲ್ಲದ್ದನ್ನು 

ನಿಂದೂ ? ಬಂದಾತ . . . ನೋಟ್ಗಳ ಕಟ್ಕಟ್ನೇ ಮೇಜಿನ್ಮೇಲೆ ಕುಕ್ಕಿ ,  

“ ಏಣಿಸ್ಕೋ ನಿನ್ನ ತಿಂಗಳಗಟ್ಟೆ ಮಾಮೂಲ್ನಾ” ಅಂತಾತ್ನೇ ಅಂದ್ಮೇಲೇ 

. . . ಕುಡದ್ ಮಂಕ್ತನಲ್ಲಿ ಒಂದೋಗ್ಯೂ ಹಿಂದಿಟ್ಟೋಳೇ ಆತನ 

ಜೋಬ್ಗೆ ತಿರಿಗ್ಸೇರ್ಸಿ . . . ರವಾನಿಸ್ಬಿಟ್ಟು . . . ನಮ್ಮನ್ನೆಲ್ಲಾ ಮರ್ಬಿಟ್ಟು 

. . . “ಬದಕ್ದೇ ?”ಂತ ಬಿದ್ಕೊಂಡಿದ್ದೀಯಲ್ಲಾ . . . ಇದೇನ್ ಬುದ್ದೀನೇ 

ನಿಂದೂ ? 

ಸೂಳೆ : ( ತಾತ್ಸಾರದಿಂದ ನಗುತ್ತಾ ) ಅಮ್ಮಾ , ನಿನ್ಗಕ್ಕಾಚಾರ ನಿನ್ಕಾಲದ್ದು ! 

ಕೈಗ್ಬಂದ್ನ ಕಸ್ಕೊಂಡು ಬಂದೋರ್ನ ಸಾಗ್ಸೋದು ನಿನ್ಕಾಲದ ಠಕ್ಕು ! 

Up-to-date ಅಲ್ಲ ! ಬರೋವ್ನ ಅಂತಸ್ತ್ನೇ ಅರೀದೆ ಈಗ್ಗೆ ಗಿಟ್ಟೋ 

ನೂರರ್ವತ್ ರುಪಾಯ್ಕ ಬಿಟ್ಟು . . . ಈ ಮನುಷ್ಯ, ಮನೇ ಸೇರಿ ನಾಳೆ 

ಬೆಳಿಗ್ಗೆ ಜೋಬ್ನಲ್ಲಿರೋ ದುಡ್ಡೆಣಿಸ್ಕೊಂಡು . . . “ ಈ ದುಡ್ಡೆಲ್ಲಾನೂವೇ 

ನಿನ್ನೆ ರಾತ್ರಿ ಹೋಗ್ಬಿಟ್ಟಿರ್ಬೋಹ್ದಾಗಿತ್ತು . ಆದ್ರೆ ಡ್ರಿಂಕ್ನೂ ಕೊಟ್ಟು, ಒಂದು 

ಬಿಡ್ಗಾಸ್ನೂ ಕಸ್ಕೋಳ್ದೇ ಮರ್ಯಾದೆಯಾಗಿ ಕಳ್ಸಿದ್ಲಲ್ಲಾ ” ಅಂತ ಯೋಚ್ಸಿ, 

ಅದೇ ಯೋಚೇಲಿ ಅದೇ ತಿಂಗನ್ಮಾಮೂಲುನೂರೂ ಚಿಲ್ರೆನ ಇನ್ನೂರಕ್ಕೆ 

ಭರ್ತಿಮಾಡಿ ಕಳ್ಸೋಹಾಗೆ ಮಾಡೋ ದಾರಿ ನನ್ದು !! 

ಸೂಳೆ ತಾಯಿ : ಸರ್ಸರಿ ! ಈ ನಿನ್ಜಂಬಾನ ನಿನ್ನ ಕುಡಿದ ಮಂಕ್ತನದಲ್ಲಿ , ನೀನೇ 

ಮೆಚ್ಕೋಬೇಕೆ ಹೊರ್ತು ನನ್ನ್  ಕಸ್ಬನ್ ತಿರುಳ್ನ ನನ್ಹೊಟ್ಟೇಲ್ಹುಟ್ಟಿದ 

ನೀನ್ಹೇಳ್ಕೊಡ್ಬೋಕೆ ? . . . ನನಗೆ ? . . .  

ಸೂಳೆ : ( ತಾತ್ಸಾರದಿಂದ ತುಟಿಗಳನ್ನು ವಕ್ರಿಸಿ) ರೇಗಿಸ್ಬೇಡಾ ! ( ಹಲ್ಲುಗಳನ್ನು 

ಬಿಗಿದು) ದಮ್ಮಯ್ಯಾ ರೇಗಿಸ್ಬೇಡಾ ! . . . ಕುಡದ್ಮಂಕ್ತನಾಂದ್ಯಲ್ಲಾ ! 

ಕುಡಿಯೋದು ಕಲಿಸಿದ್ದ್ಯಾರೂ ? (ತಾಯಿಯು ತಲೆ ಬಾಗುವಳು) ಆಗ 

ಚಿಕ್ಕುಡ್ಗಿ ನಾನು . . . ಕುಡ್ಡು ದಿಗ್ದೇಶಾನೂ ತಿಳೀದೇ ಗಂಡಸ್ತನಾನೂ 

ಮರ್ತು ನಮ್ಮೇಲೆ ಬೀಳೋಕೆಬಂದ ನಿನ್ನ ಹಾಳು ಗಿರಾಕಿಗಳೂಂದ್ರೆ ನನಗೆ 

ಅಸಹ್ಯ . . . ಇನ್ನೆಲ್ಲಾ ಮರ್ಸಿ . . . ಆಸ್ಪತ್ರೇಲಿ, ಆಪರೇಷನ್ ಗೆ 

Chloroform ಕೊಡೋ ಹಾಗೆ ನನ್ಬಾಯ್ಲಿ ಹಟಾತ್ತಾಗಿ ಸುರೀತಿದ್ದ 

ಕುಡೀತಾನ್ನೇ ಈಗ ಬೈತಿದೀಯಲ್ಲಾ . . . ನೀನೇನ್ ಹೆಂಗ್ಸೇ ? . . . 

ನನ್ನ್ಹೊತ್ತವ್ಳು . . . ಹೆತ್ತವ್ಳು . . .ಹೊತ್ತ್ಹೆತ್ತದ್ನ ಮರ್ತು ನಿನ್ನ್ಹೊಟ್ಟೆ 

ತುಂಬೋಳ್ಳೋಕೆ. . . ಹೆಗತ್ಕೂಸ್ನ. . . ಹಾದರಕ್ಕೆ ತುತ್ತಾಗಿ ಕೊಟ್ಟ ರಾಕ್ಷಸೀ ! 

[ ದ್ರಾವಕದ ಉದ್ರೇಕದಿಂದ ಎದ್ದು ನಿಂತು, ಮುಷ್ಟಿಗಳನ್ನು ಬಿಗಿದು, ಅಮ್ಮ 

ನನ್ನು ಸಮೀಪಿಸುತ್ತಾ ] ರಾಕ್ಷಸೀ ! ಹೆಂಗ್ಸೇನೇ ನೀನೂ !! ಕಿರಾತೀ ! . . 

, , ( ಥಟ್ಟನೆ ಮುಷ್ಟಿಗಳನ್ನು ಸಡಿಲಿಸಿ ಎಡಹಸ್ತದಿಂದ ಮುಖವನ್ನು 

ಸವರಿಕೊಳ್ಳುತ್ತಾ) ಸುಬ್ಬೂ !( ಘಟ್ಟಿಯಾಗಿ) ಸುಬ್ಬೂ !( ಓಡಿಬಂದ ಸುಬ್ಬು 

ವಿಗೆ) ಅಮ್ಮ್ ರೇಗಿಸ್ತಿದಾಳ್ಳನ್ನಾ . . . ಈಗೇನು ಮುದರ್ಕೊತಾಳೋ 

ಅವಳ್ಮೂಲೇಲಿ, ಇಲ್ಲಾ ಅವಳ ಈ ಕ್ಷಣ ಈ ಮನೆಯಿಂದ ಒದ್ದೋಡಿ 

ಸೋದು ನ್ಯಾಯವೋ ಅನ್ಯಾಯವೋ ಭೇಗ ನಿರ್ಧರಿಸು. . . ಈ ಮನೆ 

ಕೊಂಡ್ಕೊಟ್ಟ ನೀನೇ ನಿರ್ಧರಿಸು ! 

ಸೂಳೆ ತಾಯಿ : (ಸೂಳೆಯನ್ನು ಸಮೀಪಿಸಿ, ಭುಜವನ್ನು ಸವರುತ್ತಾ ) ಇದ್ಯಾಕ್ 

ಕಂದಾ, ಹೆತ್ತೋಳ್ಮೆಲೇ ಹೀಗ್ರೇಗ್ತೀಯಾ? . . . (ಸೂಳೆಗೆ ಮತ್ತೊಂದು 

Drinkಅನ್ನು ಕೊಡಲು ಸುಬ್ಬುವಿಗೆ ಸಂಜ್ಞೆ ಮಾಡುವಳು.) . 

ಸೂಳೆ:(ಒಂದೇ ಗುಟುಕಿನಲ್ಲಿ ಖಾಲಿಮಾಡಿ ಗಾಜನ್ನು ನೆಲಕ್ಕೆ ಬಿಟ್ಟು) ಏನನ್ಯಾಯ 

ಅಂತೀಯ ಅಮ್ಮಾ ?. . . . (ತಾಯಿಯನ್ನು ಸೋಫಾವಿಗೆ ತಳ್ಳಿ ತಾನು 

ಪಕ್ಕದಲ್ಲಿ ಕುಳಿತುಕೊಂಡು) ಈಗ್ಹೊದ್ನಲ್ಲಾ ಪ್ರಾಣಿ . . . ದೊಡ್ಕು 

ಟುಂಬಾಮ್ಮಾ ! ಮಹಾಲಕ್ಷ್ಮೀ ಇದ್ದದ್ದು ಸುಳ್ಳಿದ್ರೂ ಈತ್ನ ಹೆಂಡ್ತಿ 

ಇರೋದು ದಿಟ ! ಎಂಟು ಮಕ್ಕು ಹೆತ್ತಿರೋದು, ಮುವತ್ತ್ನಾಕ್ಕೂಡಾ 

ಇಲ್ಲ ವಯಸ್ಸು ಆಕೆಗೆ ! ಇವನ್ಗಲಾಟೇಲಿ ತಲೆ ತುಂಬ ಯೋಚ್ನೆ ! . . 

.. ಅರ್ಧ ಕೂದಲ್ ನರ್ತಿದೇ ಅಮ್ಮಾ ! ಇನ್ನು ಮನೇ ಸೇರಿ, ಈ ಸ್ಥಿತೀಲಿ 

ಒಂದಗ್ಳಾದ್ರೂ ಬಾಯ್ಗ್  ಹಾಕ್ಕೋಳ್ಳೋವರ್ಗೂ . . . ಜಲಪಾನ ಕೂಡ 

ಇಲ್ಲೆ . . . ಮಧ್ಯಾಹ್ನ ಉಂಡ್ಹೊಟ್ಟೇನ, ಇದ್ವರ್ಗೂ ಉಪವಾಸ 

ಹಾಕ್ಕೊಂಡು ಗಂಡ ಉಂಡ್ಮೇಲೇನೇ ಊಟಾಂತ ಕಾದಿರುತ್ತೆ ಆ ಮಹಾ 

ಪ್ರಾಣಿ. ಇದೋ ಬಂಗ್ಲೆ ಮುಟ್ಟುತ್ತೂವೇ ಕೋರ್ಟಲ್ಲೊ ಕಚೇರೀಲೋ 

ಆಟ್ದಲ್ಲೊ . . . ಇಲ್ಲಾ ಇಲ್ಲೋ ಆದ ಅನಾನ್ಮೂಲಗಳ್ನೆಲ್ಲಾ, ತನ್ನಂ 

ಬ್ಕೊಂಡು ಬಂಗ್ಲೆಲ್ಬಿದ್ದಿರೋ ಒಬ್ಬೊಬ್ಬ ಮೇಲೂ ಹೆಂಡ್ತಿ , ಮಕ್ಳು, 

ಮರಿ , ಅಳಿಯ , ಸೊಸೆ, ಜವಾನ, ಜಾಡಮಾಲಿ . . . ಕೊನೆಗೆ ಮುಸ್ರೆ 

ತಿಕ್ಕೋಳ್ನೂ ಬಿಡದೆ, ಎಲ್ಲನ್ನೂ ಎಬ್ಸಿ , ಒದ್ದೋ ಬೈದೋ ಅಂತೂ ಈ 

ಕೋಪ ಕುಡ್ತಗ್ಳಾರೋ ಇಳಿಯೋವರ್ಗೂ ಭೂಕಂಪದ್ಹಾಗೆ ಮನೇನೆಲ್ಲಾ 

ನಡಗ್ಸಿ , ತಾನೂ ಸುಸ್ತಾಗಿ ಬಿದ್ದೋಳ್ಳುತ್ತೆ . . . ಇದ್ನೆಲ್ಲಾ . . . 

ಒಂದೊಂದಿನಾನೂ , ಒಂದೊಂದ್ರಾತ್ರೀನೂ ತಪ್ದೆ , ನೋಡೀ ನೋಡಿ 

ತಡ್ದೂ ತಡ್ದರೂ ಇದ್ಳೋ . . . ಹ್ಯಾಗಿದ್ರೂನೂವೇ ತನನ್ಧರ್ಮಾನ ತಾನು 

ಕಾಪಾಡ್ಕೋಳ್ತಿರೋ ಇವನ್ಹೆಂಡ್ತಿ . . . ಕ್ಷಮೇಂತಾರಲ್ಲಮ್ಮಾ . . . 

ಭೂದೇವಿಯಾವ್ಮೂಲೇ ? ಸುಬ್ಬೂ ! ಎಲ್ಲಿದ್ದೀಯೋ ? ಡ್ರಿಂಕೋ ! 

( ಥಟ್ಟನೆ ಸುಬ್ಬುವು ಒದಗಿಸಿದ ದ್ರಾವಕವನ್ನು ಕುಡಿದು, ಗಾಜನ್ನು ಸುಬ್ಬು 

ವಿನ ಕೈಗಳಿಗೆ ಜಾರಿಸಿ). . . . ಆದ್ರೂನೂವೆ ಅಮ್ಮಾ . . . ಹೇಳ್ತೀನಿ . . . 

ಈಗರ್ತಿಯರ್ಗ್ ಎಷ್ಟ್  ಜಂಭಾಂತೀಯಾ ? . . . ಇಷ್ಟಕ್ಕೂ ಮೂವತ್ತ್ಮು  

ಟ್ಟೋಕ್ಮುಂಚೆ ಎಂಟು ಹತ್ತು ಮರೀಹಾಕಿ ಮೂತಿ ಮೈಯೆಲ್ಲಾ ಉಬ್ಬಿ , 

ಅಕ್ಕಿ ಮೂಟೆ ಮೇಲ್ತಂಬ್ಗೆ ಕವಿತ್ಹಾಗೋ . . . ಇಲ್ಲ ಹೊತ್ತೂ , ಹೆತ್ತೂ , 

ದುಡ್ಡೂ , ದುಡ್ಡೂ, ಕುಗ್ಗೀ ಕುಗ್ಗೀ ಹಂಚಿಕಡ್ಡಿಗೆ ಸೀರೆ ಸುತ್ತಿದ್ಗಾಗೆ ಒಣ್ಗೀ  

ಹಲ್ಲೀ ಹಾಗಿರೋದಲ್ದೆ ತಲೆಯೆಲ್ಲಾ ನರ್ತು . . . ಕಣ್ಣು ಆಳಾಳುದ್ದ 

ಇಳ್ದು . . ಇಲ್ಲಾ ಮೂತಿಯೆಲ್ಲಾ ಉಬ್ಬಿ, ಗಲ್ಲದ್ತಳಗೆಲ್ಲಾ ನಾಲ್ಕು ಗಲ್ಲಗ್ಳೂ 

ಜೋಲಾಡ್ತಾ . . . ಮದ್ವೆ ಆದ್ದಕ್ಕೆ, ತಬ್ಕೋಂಡ್ ಮುತ್ತಿಟ್ ಸಾಕೋಕೆ 

ತನ್ಹೊಟ್ಹೇಲಿ ಒಂದ್ ಮಗೂನೂ ಹೆರ್ದೇನೇ ಆನೇ ಹಾಗೆ ವಾಲಾಡ್ತಾ 

ಇರೋ ಈ ಗರ್ತೀರ್ಗೇ ನಮ್ಮಲಿರೋ ತಾತ್ಸಾರಾ . . . ನಗೂ ಬರುತ್ತೆ 

ಅಮ್ಮಾ . . . ಗರ್ತಿ ಏನೂ . . . ಸೂಳೆ ಏನೂ . . . ಹೆಂಗ್ಸ್ಹೆಗ್ಸೇ . . 

. . ಹೆಣ್ಣ್ಹೇಣ್ಣೇ . . . ಹುಲಿಯಾಗೀ ಹಂದಿಯಾಗ್ಲೀ ಕೋತಿಯಾಗ್ಲೀ 

ಕಿರುಬನಾಗ್ಲೀ ಹೆಣ್ಗ್  ಇಷ್ಟ್ವಿದ್ರೇನೆ, ಗಂಡು ಹತ್ರಾ . . . ಬಂತೋ 

ಇಷ್ಷಷ್ಟ್ವಿಲ್ದಾಗ . . . ಹಜಾ ! ಈಗರ್ತಿರ್ಹಣೇಬರಹಾ ( ನಸುನಗುತ್ತಾ ) 

ಹೆಣ್ ಮೃಗಗಳಿಂತ ಬೀಳು ! ಬಿಟ್ಸ್ಹೊಟ್ಟೇಗೆ ಕೂಳ್ಹೋಯ್ತು ತನ್ಮೈ  

ಮುಟ್ಟೋಕೆ ಬಟ್ಟೇನೊದಗ್ಸೋ ಗಂಡ್ಸಿನ್ಕೈಲಿ ಸಿಕ್ಕೊಂಡು ತನ್ನವಸ್ಥೆ ತನ 

ಗೇನೇ ತಿಳೀದೆ ನರಳ್ತಿದ್ರೂನೂವೆ, ತಾನು . . . ನಮ್ಮಗ್ಳ್ಹಾಗಲ್ಲಾಂಬೊ 

ಜಂಭ . . . ಗರ್ತೀರ್ದು . . . ಒದ್ದೋಡ್ಸೋ ಛಾತಿ ನನ್ಗಿರೋದು. 

( ಪಕಪಕನೆ ನಗುತ್ತಾ ) ಒದ್ದೋಡ್ಸೋ ಛಾತಿ ನನಿಗಿರೋದುನನ್ಜಂಭಾ . . 

. . ಈ ನಮ್ಮಿಬ್ರ ಜಂಭ್ಗಳಲ್ಲೀ . . . ಗರ್ತೀರ್ನೂ, ಸೂಳೇರ್ನೂ. . . 

ಗೊಂಬೆಗ್ಳ್ಹಾಗೆ ನಮ್ಮಿಬ್ಬರ್ನೂ ತನ್ನುಖಕ್ಕೆ ಆಡಿಸ್ತಿರೋ ಅನ್ಯಾಯ ಪಾಪಿ 

ಗಂಡ್ಸಂಬೋನು ಮೃಗಕ್ಕಿಂತ ಬೀಳಾದ ಪ್ರಾಣೇಂಬೋದ್ನ ತಿಳೀದೆ. . . . 

ನಾವ್ನಾವೆ . . . ನಮ್ಜಂಭದಲ್ಲಿ ಹೋರಾಡ್ತಾ ಇರೋದು. . . ಅವತ್ನೋ 

ಡಮ್ಮಾ. . . ಸುಬ್ಬೂ ! ಜ್ಞಾಪಕ್ಕ್ವೇ ? . . . ಮ್ಯಾಟ್ನೀನೋ ! 

ಮೂರೂಪಾಯಿ ಟಿಕೆಟ್ಟೂಮ್ಮಾ ನನಗೆ ಸುಬ್ಬೂ , ಅವನ ಹಳೇ Navy 

Blueನೋ ಅದೆಂಥಾದ್ದೊ ಕೋಟ್ನಾ ಹಾಕಿ, ಮೂರುಪಾಯಿ ಟಿಕೀಟ್ನ  

ಲ್ಕುಕ್ಕರ್ಸಿ ನಾಟ್ಕಕ್ಕ್ಹ್ಕೊದ್ವಿ. . .ನನ್ಸೀಟು ರಿಸರ್ವು . . . ಮ್ಯಾನೇಜರ್ಮುಂ 

ದ್ಬಂದು ತೋರಸ್ದಾ ಸೀಟ್ನ ನನಗೆ . . . ಮೊದಲ್ನೇ ಸೀಟೂಮ್ಮಾ. . . 

ಎಲ್ಲರ್ಗಿಂತಾ Stageಗೆ ಹತ್ರಾ ! . . . ಹೋಗೇನೆಕೂತ್ಕಳೋಕೆ. . 

. . ತಿರಗ್ಡೆ . . . ಏನ್ಹೇಳ್ಳೀಮ್ಮಾ!. . . ಎರ್ಡ್ರೂಪಾಯ್ಸೀಟ್ನಲ್ಲಿ ನೆನೆಸ್ಥ 

ಅರಳೇಪೇಟೆ ಉಟ್ಕೊಂಡು. . . . ತುರುಪಿನೋಲೆ ಇಟ್ಕೊಂಡು ಕೂತಿ 

ದ್ದಾಳೆ! ಯಾರೂಂತೀಯಾ ? ( ತನ್ನ ಕುತ್ತಿಗೆಯಲ್ಲಿರುವ ಸೀಮೆ ಕಮಲ 

ವಜ್ರದ ಶರಡನ್ನೂ , ಮೂಗಿನ ಮೇಲೆ ಪ್ರಜ್ವಲಿಸುವ ಮೂಗುತಿ ಬೇಸರಿ 

ಗಳನ್ನೂ ಬಲಗೈ ಮುಂಬೆಟ್ಟಿನಿಂದ ಸೂಚಿಸಿ) . . . ಇವ್ರ್ಬ್ರಾಬ್ತು !! ಹೊಟ್ಟೆ 

ಉರೀತೂಮ್ಮಾ ನನಗೇನೇ . . . ಹಾಗಿದ್ರೂನೂವೆ  “ಪತ್ನಿ ಪತ್ನೀನೇ! . 

. . ಉಪಪತ್ನಿ ಉಪಪನೇ ” ಅನ್ಕೊಂಡು . . . ಮ್ಯಾನೇಜರ್ಗೆ “ಇಲ್ಲೆಲ್ಲಾ 

ಆಕ್ಟರ್  ಪೌಡರ್  ಕಾಣ್ಸುತ್ತೆ . . . ಟಕೆಟ್ ಪರ್ವಾಗಿಲ್ಲಾ . . . ಆ 

ಒಂದ್ರುಪಾಯಿ ಸೀಟ್ಹತ್ರ ಈ ಕುರ್ಚಿನ ಹಾಕಿಸಿಡೀ"ಂತ . . . ಈಕೆ 

ಮರ್ಯಾದೆ ಕಾಪಾಡೋಕ್ಕೇಂತ ನಾನು ಹಿಮ್ಮೆಟ್ಟೋಷ್ಟ್ರಲ್ಲೇಮ್ಮಾ ! . . 

ಎಲ್ಲ್ರಿಗೂ ಕೇಳೋಹಾಗೆ . . ಆ ಮೂಗ್ತಿ ಇಲ್ಲದ ಮೊಂಡ್ಮೂಗ್ನ ಸೂರ್ಗೆ 

ಎತ್ಕೊಂಡು ಉಸುರು ಹೀರ್ತಾ . . . ಇಂಥಾವರು ಹೀಗೆಲ್ಲಾ ಬರ್ತಾರೇಂತ 

ತಿಳಿದಿದ್ರೆ ಇಲ್ಲಿಗೆ ಬರ್ತಾ ಇರ್ಲಿಲ್ಲಾ" ಂತಾಳಮ್ಮಾ .. . . . ಇಲ್ಲಾದ್ರೇನೂ 

. . . ನನಗೆ ಹೇಳ್ಳೇ ಬೇಕೂಂತಿತ್ತು . . .  "ಇಂಥಾ ಜನರೇನು, ಅಂಥಾ 

ಜನರೇನು ?. . . ನಿನ್ನೀ ಹರಕ್ಲು ಅರಳೇಪೇಟೆ ಸೀರೇನಾ ನಿನ್ನ ಬೊಂಬ್ಳೀ 

ಮಾಸ್ ಮೈಯಿಗೆ ಚೊಕ್ಕೋತನ ಘಟಕ್ಕೆ ಸುತ್ಸಿ , ನಿನ್ಮೊಂಡ್ಮೂಗಿಗೆ 

ಮೂಗ್ತೀನೂ , ಇಲ್ದೇನೆ, ನಿನ್ನಾವೇ ಕಿವೀಗೆ ಪುಷ್ಪರಾಗದ್ವೋಲೆ ಪೋಣಿಸಿ, 

ನಿನ್ನ ಪುಸ್ಲಾಯಿಸ್ತಿರೋ ಗಂಡ್ಸೇ, ನನ್ಜರತಾರಿ ಸೀರೇನೂ , ನನ್ಸೀಮೇ 

ಕಮಲದ ಜ್ಯೂಯಲ್ಸ್ನೂ ನನಗ್ತೊಡ್ಸಿ ನನ್ನ ಕಾಲಿಗ್ಬಂದು ಬೀಳೋನೂ , 

ನಿನ್ನ ನನ್ನ ಟಿಕೆಟ್ಟಿಗೆ ದುಡ್ಡು ಕೊಟ್ಟೋನೂ ಅವನೇ ” ಅಂತ ಒಡ್ದ್ಹೇಳ್ಬಿ  

ಡೋಣಾಂತಾ ತೋಚ್ತೂಮ್ಮಾ ( ಪುನಃ ಶರಡನ್ನು ಮುಟ್ಟಿ ತೋರಿಸುತ್ತಾ ) 

ಆದ್ರೇನ್ಮಾಡೋದು. . . ಈತ್ನಪ್ಪ್ತಿಂದಿಧೇನೆ, ತಿನ್ನುತ್ಲೂ ಇದ್ದೇನೆ . . . 

ಇನ್ಮುಂದಕ್ಕೂ ತಿಂತೇನೇಂತ ಬಂದ್ಕೋಪಾನ ಮೇಷ್ಟ್ರು ಹೆದ್ರಸ್ಥ ಮಗು 

ಹಾಗೆ ನುಂಗ್ಕೊಂಡು ತೆಪ್ಪೆ ಕೂತೇಮ್ಮಾ , ನನ್ನ ಮೂರ್ರುಪಾಯಿ ಕೊಟ್ಟ 

ಒಂದ್ರೂಪಾಯ್ಸೀಟ್ನಲ್ಲಿ . (Sofaವಿನಲ್ಲಿ ಹಿಂದೊರಗುತ್ತಾ ) ಯಾಕೋಮ್ಮಾ 

. . . ಯಾವತ್ತೂ ಇಲ್ಲದ ಸುಸ್ತು ಇವತ್ತು . . .( ತನ್ನೆರಡು ಕೈಗಳಲ್ಲಿ 

ತಾಯಿಯ ಕೈಯೊಂದನ್ನು ಮುಖಕ್ಕೆಳೆದು ಚುಂಬಿಸುತ್ತಾ ನಮ್ಮಮ್ಮಾ ! 

. . . ಊಟಮಾಡಿದ್ಯಾ ? . . . ಕೇಳೋದೇನೂ . . . ಮಾಡೇ ಇರ್ತೀಯ 

. . . . (ತಾಯಿಯ ಕೈಯನ್ನು ಸುಡುವ ವಸ್ತ್ರವನ್ನು ಒದರುವಂತೆ ಒದರಿ) 

.. . ಅಬ್ಬ ! ನಿನ್ಹಣೇಬರಹ . . . ನೀನ್ಹೊಟ್ಟೆ ಹೊರ್ಕೊಳ್ಳೋದೇ ! ! 

ಹೋಗ್ಮಲಕ್ಕೊಮ್ಮಾ . . . ಸುಬ್ಬೂ ಸಾಗ್ಸು . . . ಅಮ್ಮನ್ನಾ ! ವಳ್ಳೇ 

ಜಿಗ್ಣೆ ಬಂದ್ಸೇರ್ಕೊಂಡ್ಳು (ಸುಬ್ಬುವು ಸೂಕ್ಷ್ಮವಾಗಿ ಅಸಮಾಧಾನಪಡುವ 

ತಾಯಿಯನ್ನು ಸಂಜ್ಞೆಗಳಿಂದ ಸಮಾಧಾನಪಡಿಸಿ, ಕರೆದುಕೊಂಡು 

ಕೋಣೆಯ ಬಾಗಿಲಿನಿಂದ ಒಳಕ್ಕೆ ತಳ್ಳುವನು.) 

ಸೂಳೆ : Time ಎಷ್ಟೋ ಸುಬ್ಬು ? 

ಸುಬ್ಬು : Wrist-watch ಏನ್ನಿಂತ್ಹೋಗಿದ್ಯೋ ? ಓಡೋದಿಲ್ವೇ ? 

ಸೂಳೆ : ವಾಚೇನೂ ಓಡೋದು ? ಕುಡ್ದ ನನ್ಕಣ್ಗೆ ನೀನ್ ಓಡೋ ಹಾಗಿದೆ . . . 

( ಸಮೀಪಿಸಿದ ಸುಬ್ಬುವಿಗೆ) ಅನ್ಯಾಯ . . . Drinkಒ ( ಎನ್ನುತ್ತಾ 

ಮುಂದಿರುವ Dressing tableಅನ್ನು ಸಮೀಪಿಸಿ, ಕುರ್ಚಿಯ ಮೇಲೆ 

ಕುಸಿಯುತ್ತಾ ) Ponds Creamಓ ( ಸುಬ್ಬುವು ಒದಗಿಸುವನು. ಸೂಳೆಯು 

ಕೈಯಿಂದ ಮುಖಕ್ಕೆ ಅಂಜನವನ್ನು ತೀಡಿ ಇದುವರೆಗೂ ಹೇಮದಂತೆ 

ಜ್ವಲಿಸುತ್ತಿದ್ದ ಮುಖದ ನೈಸರ್ಗಿಕ ಕಪ್ಪು ತೊಗಲನ್ನು ತೋರ್ಪಡಿಸುತ್ತಾ , 

ಥಟ್ಟನೆ ಎರಡು ಬಾಹುಗಳೂ ಕುಸಿದುಬಿದ್ದು . . . ತಲೆಯನ್ನು ಕುರ್ಚಿಯ 

ಬೆನ್ನಿಗೆ ಒರಗಿಸಿ ನಿಟ್ಟುಸಿರು ಬಿಡುತ್ತಾ ) ಸುಸ್ತೋ . . . ಅನ್ಯಾಯ ಸುಸ್ತು 

. . . ಸುಬ್ಬೂ ! ( ಸುಬ್ಬುವುನಾಜೂಕಾಗಿ ಸೂಳೆಯನ್ನು ಸೋಫಾವಿಗೆ ಸಾಗಿಸಿ, 

ಮಲಗಿಸಿ, ಬಲಬಾಗಿಲಿನಿಂದ ನಿಷ್ಕಮಿಸಿ ಪುನಃ ಕೈಯಲ್ಲೊಂದು Oil 

clothಅನ್ನು ಹಿಡಿದುಕೊಂಡು ಪ್ರವೇಶಿಸಿ, ಅದನ್ನು ಸೂಳೆಯ ತಲೆಯ ಕೆಳಗೆ 

ಇಟ್ಟು , ಮೇಜಿನಿಂದ ಅಂಜನವನ್ನು ತಂದು ಸೂಳೆಯ ಮುಖಕ್ಕೆ ಸವರಿ, 

ಮುಖದ ಬಣ್ಣವನ್ನು ತೆಗೆಯುತ್ತಲೂ ಕೈಚೌಕದಿಂದ ಬಣ್ಣೆತ್ಯಾದಿಗಳನ್ನು 

ಒರಸುವನು.) 

ಸುಬ್ಬು : ಇನ್ನೂಟಾ ಯಾವಾಗ ಮಾಡೋದು? 

ಸೂಳೆ : ( ಮುಚ್ಚಿದಕಣ್ರೆಪ್ಪೆಗಳನ್ನು ಬಿಚ್ಚದೆ) ಇನ್ನೋಟಾ ಬೇಡ ! 

ಸುಬ್ಬು : ಮತ್ತಿನ್ನು ಮೈಯಿ ? . . . ನಾಳೆ ಗತಿ ! | 

ಸೂಳೆ : ಮೈಗೊಳ್ಳೇದು ಉಪವಾಸ ! . . . ನಾಳೆ ಗತಿ ನಾಳೇದು ! 

ಸುಬ್ಬು : ಹಾಲಾದ್ರೂ . . .? 

ಸೂಳೆ : ಬೇಡ ಸುಬ್ಬೂ ! ನಿದ್ರೆ ! ಸುಬ್ಬು ! ಒಂದ್ಕಥೆ ಹೇಳು . . . ಕಥೆ 

ಹೇಳೋದ್ರಲ್ಲಿ ರುಸ್ತುಂ ಅಲ್ವೆ ನೀನು. . . ಎಷ್ಟ್ಟರ್ಷ ಆಯ್ತು ಸುಬ್ಬು ? 

ನಾನೇ ಹೇಳ್ತನೆ ಸರಿಯಾಗಿ ಹತ್ವರ್ಷ , . . ನನಗಾಗ ಹದ್ನಾಲ್ಕ್ವರ್ಷ. . . 

. . ನಿನಗೆ ಹತ್ತೊಂಬತ್ವರ್ಷ . . ಎಷ್ಟೋ ಕಥೆ ಹೇಳಿದ್ದೀಯಾ ನನಗೆ ! . . 

. . ಈಗ ಹೊಸ್ತೋಂದು ಕಥೆ ಹೇಳ್ತಾ ಇರು. . . “ ಹೂಂ ” ಗುಟ್ತಾ ಇರ್ತೇನೆ 

. . . “ ಹೂಂ ” ಅನ್ನೋದು ನಿಲ್ಲುತ್ಲೂವೆ. . . ನೀನು ಮಲಕ್ಕೊ . . . 

ಮರೀದೆ ಹಾಲು ಕುಡೇ ಮಲಕ್ಕೊ (ಸುಬ್ಬು ಕೋಣೆಯ ದೀಪಗಳನ್ನೆಲ್ಲಾ 

Switch off ಮಾಡ್ಬಿಟ್ಟು, ಹಿತ್ತಾಳೆಯ Candle ಒಂದನ್ನು ಹಚ್ಚಿಟ್ಟು, 

ಸೋಫಾವನ್ನು ಸೇರಿ ನೆಲದ ಮೇಲೆ ಕುಳಿತುಕೊಂಡು, ಬೀಸಣಿಗೆಯೊಂದ 

ರಿಂದ ಸೂಳೆಯ ಮುಖಕ್ಕೆ ಬೀಸುತ್ತಾ ಕಥೆಯನ್ನು ಹೇಳತೊಡಗುವನು.) 

ಸುಬ್ಬು : ಅಳ್ಳಾಪುರೀ , ಅಳ್ಳಾಪುರೀಂತ ಒಂದ್ಪಟ್ಣ . . . ಅದಕ್ಕೆ ಅಳ್ಳೇಶ ಅಳ್ಳೇಶ 

ಅಂತ . . . 

ಸೂಳೆ : ಅಳ್ಳಾಪುರಾ ?. . . ಕುಬೇರನ್ಪಟ್ಣಾ ಅಲ್ವೇ ? 

ಸುಬ್ಬು : ಸರ್ಹೋಯ್ತು? ಹೀಗೆ ವ್ಯಾಖ್ಯಾನಮಾಡ್ತಾ ಇದ್ರೆ ನೀನು . . . ಹಾಗಾ 

ರ್ಕೇಳು . . . ಮಥುರಾಪುರೀ ಮಥುರಾಪುರೀಂತ ಒಂದ್ಪಟ್ಣ. 

ಸೂಳೆ : ಯಾವ್ದು ? ಕೃಷ್ಣ ಕಂಸಾನೇ . . . ಉಗ್ರಸೇನ . . . 

ಸುಬ್ಬು : ದಮ್ಮಯ್ಯ ಕೇಳು . . . ಬುಳ್ಳಾಪುರೀ ಬುಳ್ಳಾಪುರೀಂತ ಇಟ್ಕೋ 

ಒಂದ್ಪಟ್ಣ. 

ಸೂಳೆ : (ಕಣ್ಣುಗಳನ್ನು ಅರ್ಧ ಮುಚ್ಚುತ್ತಾ ) ಹೂಂ , ಹೂಂ . 

ಸುಬ್ಬು : ಅಮ್ಮ ಬುಳ್ಳೇಶ ಬುಳ್ಳೇಶಾಂತ ಒಬ್ಬ ರಾಜ ಸತ್ಯವ್ರತನಾಗಿ ಧರ್ಮದಿಂದ 

ಪಾಲಿಸ್ತಾ ಇದ್ದ . 

ಸೂಳೆ : ಹೂಂ . . 

ಸುಬ್ಬು : ರಾಜನಿಗೆ ಸತ್ಯವತೀ ಸತ್ಯವತೀಂತ ಪಾತಿವ್ರತ್ಯದಲ್ಲಿ ಸೀತಾ ಸಾವಿತ್ರಿೇರ್ನೇ  

ಸೋಲಿಸೋ ಧರ್ಮಾನ ಆಚರಿಸ್ತಿರೋ ಪತ್ನಿ , 

ಸೂಳೆ : (ಕಣ್ಣುಗಳನ್ನು ಮುಚ್ಚಿಕೊಂಡು ಘನಶ್ವಾಸವನ್ನು ಬಿಡುತ್ತಾ ) ಹೂಂ . 

ಸುಬ್ಬು : ರಾಜನಿಗೆ ಐವತ್ತು ವಯಸ್ಸಾಗುತ್ತಾ ಬಂತು. ರಾಣಿಗೂ ನಲ್ವತ್ತು 

ನಲ್ವತ್ತೈದು . . . ಆದ್ರ್ ಇಬ್ರಿಗೂ ಒಂದೇ ಕೊರ್ತೆ. ಇಬ್ಬರ್ಗೆ ಏನೂ 

-ಇವರಿಬ್ಬರನ್ನೂ ಪೂಜೆ ಮಾಡ್ತಿದ್ದ ಪ್ರಜೆಗಳಿಗೆಲ್ಲಾ ಇದೇ ಕೊರ್ತೆ ; 

ಇವರಿಗೆ ಮಕ್ಕ್ಳಿಲ್ಲ . .. ರಾಜ್ಯಾನ ಮುಂದಾಳೋಕೊಬ್ಬ ಮಗನಿಲ್ಲ. ಪೂಜೆ 

ಗಳೆಷ್ಟೋ ಸಂತರ್ಪ್ಣೆಗಳೆಷ್ಟೋ , ಗೋದಾನ, ಭೂದಾನಗ್ಳೆಷ್ಟೋ , ಇವೆಲ್ಲಾ 

ಅಲ್ದೆ ಕೋಟ್ಯಾಂತರ ವರಹಾ ಖರ್ಚುಮಾಡಿ ಪುತ್ರಕಾಮೇಷ್ಠನೂ ಆಯ್ತು 

. . . ಫಲವೇನೂ ಇಲ್ಲ . . . . ರಾಜದಂಪತಿಗಳ ದುಃಖ ಹೇಳಕ್ಕಾಗದು 

. . . ಒಂದಮಾವಾಸ್ಯೆ ರಾತ್ರಿ ಉಪವಾಸ ಇದ್ದ ಮಹಾರಾಣೀಗೆ, ಮಧ್ಯ 

ರಾತ್ರಿ ಕನಸೊಂದ್ಬಿತ್ತು . . . “ರಾಜದಂಪತಿಗ್ಳು ಇಬ್ರೂನೂವೆ . . . 

ಪರಿವಾರವೇನೂ ಇಲ್ದೆ . . . ಪಾದಚಾರರಾಗಿ ಒಂದ್ ಗೊಂಡಾರಣ್ಯಾನ 

ಹೊಕ್ಕ್ಹಾಗೂ . . . ಸಿಂಹ, ಶಾರ್ದೂಲ, ಭಲ್ಲೂಕಾದಿ ಕ್ರೂರಮೃಗಗಳ 

ಅಪಾಯ ತಪ್ಪಿಸ್ಕೊಂದ್ಹಾಗೂ , ಕೊನೇಗೆ ಶಾಂತಸ್ವರೂಪಿಯಾದ ಋಷಿ 

ಯೊಬ್ಬನ್ನ ಕಂಡ ಹಾಗೂ , ಆತ ಕೃಪೆಯಿಂದ ನೀವಿಬ್ರೂ ರಾಜ್ಯವನ್ನು 

ಸೇರಿ, ಅಹೋರಾತ್ರಿ ಮೂರು ಮಂಡಲಗಳೂ . . . ಮೂವತ್ತ್ಮೂರು 

ಹಗಲಿರುಳುಗು ಮಹಾಕಾಳೀನ ಸೇವ್ಸಿದ್ರೆ ನಿಮ್ಮಿಷ್ಟಾರ್ಥ ಫಲಿಸುತ್ತೆ ” 

ಅಂದ್ಹಾಗೂ ಬಿದ್ದದ್ದು ಆ ಕನಸು. ಈ ಕನಸ್ನ ರಾಣೀ ರಾಜನಿಗೆ 

ಹೇಳುತ್ಲೂನೂವೆ ಮಂತ್ರಿ ಪುರೋಹಿತರ ಆಲೋಚನೆ ಪ್ರಕಾರ, ರಾಜ 

ದಂಪತಿಗು ಗೊಂಡಾರಣ್ಯ ಹೊಕ್ಕು ರಾಜ ಧನುರ್ಧಾರಿಯಾಗಿ, ದುಷ್ಟ 

ಮನುಜ, ರಾಕ್ಷಸ, ಕ್ರೂರ ಮೃಗೇತ್ಯಾದಿಗಳನ್ನು ಶಿಕ್ಷಿಸುತ್ತಲೂ . . . ಶಿಷ್ಟ 

ಮನುಜ ಮೃಗೇತ್ಯಾದಿಗಳನ್ನು ರಕ್ಷಿಸುತ್ತಲೂ . . . ಕೊನೆಗೆ ಒಂದು 

ಆಶ್ರಮವನ್ನು ಕಂಡು, ಧನುಸ್ಸಿನ ನಾಣನ್ನು ಬಿಚ್ಚಿಬಿಟ್ಟು , ಸತಿಪತಿಗಳಿಬ್ಬರೂ 

ಋಷಿಸೇವೆಯನ್ನು ಮಾಡತ್ಲೂ ಸಂತುಷ್ಟನಾದಾ ಋಷಿ, ನಿಮ್ಮ ಶುಶೂಷೆಗೆ 

ಮೆಚ್ಚಿದೆ . . . ನೀವಿಬ್ಬರೂ ಸ್ವರಾಜ್ಯಕ್ಕೆ ಪುನಃ ತೆರಳಿ , ಅಹೋರಾತ್ರಿ ಅರ್ಧ 

ಹೊಟ್ಟೆಗೆ ಮಟ್ಟಿಗೂ ಆಹಾರಾನ ಒದಗಿಸ್ತಾ ಈ ಹದಿನಾಲ್ಕು ಲೋಕಾನೇ 

ಹೆತ್ತ ಮಹಾಕಾಳೀನ ಔಪಾಸನೆ ಮಾಡಿ ಮುಗಿಸಿದ ಮುಹೂರ್ತ್ವೆ ರಾಜ 

ದಂಪತಿಗ್ಳು , ತಿರಗ್ತಮ್ಮ ರಾಜ್ಯಕ್ಬರ್ತಾಬರ್ತಾ ತಮ್ಗ್ಹುಟ್ಟೋ ಮಗ 

ನ್ಮಾತೇ ಆಡೋ ಸಂತೋಷದಲ್ಲಿ ತಮ್ಸುತ್ಲೂನೆ ಇರೋದುಗೊಂಡಾರಣ್ಯ 

ಅಂಬೋದ್ನೇ ಮರ್ತು ಬರ್ತಿದ್ದಾಗ . . .ಇವ್ರೆದೂರ್ಗೆ ಒಂದ್ಸಂಜೆ 

ಸೂರ್ಯಾಸ್ತಸಮಯದ ಕಾಲದಲ್ಲಿ ಮುಳುಗದ್ ಸೂರ್ಯನ್ ಮುಚ್ಚೋ 

ಕಪ್ಪಂಕಪ್ಪನೆ ನೆಳಲೊಂದ್ ಕಂಡ್ಬಂತು. ಇದೇನೋ ??” ಅಂತ ಅನ್ನುವ 

ಷ್ಟ್ರಲ್ಲೇ ಆ ನೆಳಲು ಆಕಾಶ ಭೂಮೀನ ಅವಲಂಬಿರೋ ಬ್ರಹ್ಮರಾಕ್ಷಸ್ನಾಗಿ 

ತೋರ್ಪಡಿಸ್ಕೊಂಡು ಬರ್ತಾ ಬರ್ತಾ ಆ ಭೂತ ಕುಗ್ಗಿ ಕುಗ್ಗಿ ಕೊನೆ 

ಕೊನೇಗೆ ಇವ್ರೆದುರ್ಗೆ ಇವರಿಬ್ಬರ ಎರಡ್ರಷ್ಟು ಎತ್ತ್ರ ರಾಕ್ಷಸನಾಗಿ ನಿಂತು 

. . . “ಕುದ್ಭಾಧೆ ನನಗೆ . . . ಸರಿಯಾಗಿ ಆಹಾರವಾಗಿ ಬಂದಿದ್ದೀರಾ? 

ಎಂದು ಕೈಗಳನ್ನು ಹರಡಿ, ಬಾಯನ್ನು ಬಿರಿದ ರಾಕ್ಷಸನ್ನೋಡಿ, ರಾಜಪತ್ನಿ, 

“ ಅಯ್ಯೋ ! ನಾವು ವೃದ್ಧದಂಪತಿಗ್ಳು . . . ಮಾಂಸರಕ್ತ ಬಹಳ ಕಮ್ಮಿ 

ನಮ್ಮ ದೇಹದಲ್ಲಿ , ಮುದಿ ದಂಪತಿಗಳ್ನ ಭಕ್ಷಿಸಿದಲ್ಲಿ ನಿನ್ನ ಕುದ್ಭಾಧೆ 

ಶಮನವಾಗದು . . . ಅಲ್ಲೇ “ ಪುತ್ ” ಎಂಬ ನರಕನ್ನಾ ತಪ್ಪಿಸ್ಕೊಳ್ಳೋಕೆ 

ರಾಜ್ಯಾನ ಬಿಟ್ಬಂದು, ಸಂತಾನಕ್ಕೆ ವರಾನ್ನ ಪಡೆದು ಹಿಂತಿರ್ಗೊ ನಮ್ಮ 

ನೀನ್ ತಿಂದ್ರೆ ನಿನ್ನ ಹಸಿವನ್ ತೀರ್ಸಿದ ಪುಣ್ಯಾ ನಮಗೇ ಸೇರುತ್ತೆ . ಆದ್ರೆ 

ನಮ್ಮಿಬ್ಬರ್ಗೆ ತಪ್ಪೋ ಪುನ್ನರಕಾ ನಿನಗ್ ಲಭಿಸುತ್ತೇ ” ಅನ್ನುತ್ತೂವೆ ರಾಕ್ಷಸ 

ಬೆದ್ರಿ , “ ಹಾಗಾದ್ರೆ ನಿಮ್ರಾಜ್ಯ ಸೇರಿ, ನಿಮ್ಮ್ಪುತ್ರನ್ನೀವ್ ಹೆತ್ತು , ನಿಮ್ಸಂ 

ತೋಷನೀವನುಭವಿಸಿಕೊಳ್ಳಿ !. . . . ಆದ್ರೋಂದ್ಮಾತು, ಈವತ್ನಿಂದ ಹದಿ 

ನೆಂಟು ವರ್ಷ ಬಿಟ್ಟು , ಒಂದು ದಿನ ನಿಮ್ಮ ರಾಜ್ಯಕ್ಕೆ ಬಂದು, ನನಗ್ಬೇಕಾದ 

ಒಂದ್ವಸ್ತೂನ ಕೇಳೇನೆ. . . ಅದ್ನ ಕೊಡ್ತೇನೆ ಅಂತ ಈಗ್ಮಾತ್ಕೊಟ್ರೆ 

ಬಿಡ್ತೇನೆ ನಿಮ್ಮನ್ನ . . . ಇಲ್ವೋ ನೀವಿಬ್ರೂನೂವೆ. . . ಒಂದೇ ತುತ್ 

ನನ್ಬಾಯಿಗೆ” ಅನ್ನುತ್ತೂವೆ, ಆ ರಾಜದಂಪತಿಗ್ಳು , “ಸಧ್ಯ ತಪ್ಪಿಸ್ಕೊಂಡ್ರೆ 

ಸಾಕು . . . ಮುಂದಿನ್ನು ಹದ್ನೆಂಟು ವರ್ಷ ಆಗೋ ಹೊತ್ತಿಗೆ ನಾವ್ಬದ್ಕಿ 

ರ್ತೇವೋ ಇಲ್ವೋ ? ಹಾಗ್ಬದ್ರಿದ್ರೂವೆ. . . ಮುಂದೊದ್ಗೋ ಅಪಾಯಕ್ಕೆ 

ಪ್ರತೀಕಾರ ಮುಂದ್ಮಾಡ್ಕೊಬಹ್ದು . . . ಸದ್ಯಕ್ಕೆ ಇವನ್ಬಾಯಿಗೆ ತುತ್ತಾ 

ಗೋದ್ನ ತಪ್ಪಿಸ್ಕೊಳ್ಳೋದೇ ಜಾಣ್ತನ” ಅಂತ ತೀರ್ಮಾನಿಸಿ, ರಾಕ್ಷಸಂಗೆ 

“ ಹದ್ನೆಂಟ್ಟರ್ಷ ನೀನ್ಹೇಳ್ದ್ಹಾಗೆ ನಮ್ಮನ್ಕಾಡಿಸಬೇಡ. ಆಮೇಲೆ ಬಂದು 

ನಮ್ಮಿಬ್ಬರನ್ನು ಬಿಟ್ಟು ನಿನಗ್ಯಾವ ವಸ್ತು ಬೇಕೋ ನಮ್ಮ ಸಾಮ್ರಾಜ್ಯದಲ್ಲಿ 

ಅದನ್ನ ಕೊಡ್ತೇವೇ! ” ಅಂತ ಮಾತ್ಕೊಟ್ಟು ತಮ್ಮ ರಾಜ್ಯಕ್ಕೆ ಹಿಂತಿರು  

ಗ್ಬಂದು ಒಂದು ಮಹಾಕಾಳೀ ಪೂಜೇನ ಋಷಿಗಳ್ ಹೇಳ್ದ್ಹಾಗೆ ಸಾಂಗೋ 

ಪಾಂಗವಾಗಿ ಜರಗ್ಸಿ , ಮಹಾಕಾಳೀನೂ ಸಂತುಷ್ಟಳಾಗಿ ರಾಣಿ ಗರ್ಭಧರಿಸಿ 

ಹತ್ತು ತಿಂಗು ಹೊತ್ತು , ಹೆತ್ತು ರಾಜಪುತ್ರಾನೂ ಹುಟ್ದ . . . ಅಲ್ದೆ 

ಪ್ರಹ್ಲಾದ, ಧ್ರುವ, ಅಭಿಮನ್ಯು ಇತ್ಯಾದಿ ರಾಜಪುತ್ರರ ಹಾಗೆ ಬೆಳ್ದ ; ಇವನ 

ಹದಿನೆಂಟನೆಯ ವಯಸ್ಸಿನಲ್ಲಿ ವೃದ್ಧರಾದ ರಾಜ ರಾಜ್ಞಿಯರು, ಮಗನ್ನ 

ಕೊಟ್ಟ ಮಹಾಕಾಳೀ ಗುಡಿ ಗರ್ಭದಲ್ಲಿ ಮಂಗಳಾರ್ತಿ ತೊಗೊಳ್ತಿದ್ದಾಗ, 

ಬ್ರಾಹ್ಮಣ ಒಬ್ಬ ಇವರಿಬ್ಬರ್ಗೂ ಒಂದು ನೀಲೋತ್ಪಲ ಕೊಟ್ಟು ಆಶೀ 

ರ್ವದಿಸಿದ. ಇದಕ್ಸಂತೋಷಪಟ್ಟು , ಆ ಬ್ರಾಹ್ಮಣನ್ನ ಅರಮನೆಗೆ ಕರ್ಕೊಂ 

ಡ್ಬಂದು ಸತ್ಕರಿಸಿ "ತಮ್ಗೇನ್ಬೇಕೂಂತ ಕೇಳುತ್ತೂವೆ ನೆಲದಿಂದ ಸೂರಿನ 

ವರ್ಗೂ ಒಂದೇ ಸ್ವರೂಪಾನ ಅವಲಂಬ್ಸಿದ, ಹದ್ನೆಂಟ್ವರ್ಷಕ್ಮುಂಚೆ, 

ಗೊಂಡಾರಣ್ಯದಲ್ಲಿ ಕಾಣಿಸ್ಕೊಂಡ ಬ್ರಹ್ಮರಾಕ್ಷಸ. . . “ಕೊಟ್ಮಾತು 

ತಪ್ಪೋದು ನಿಮ್ಮ ಕುಲ ಗೋತ್ರದಲ್ಲೇ ಇಲ್ಲಾ . ನೀವ್ಕೊಟ್ಟ ವಾಗ್ದಾನ 

ನಡಿಸ್ಕೋಡೀ ಅಂತ ಕೇಳೋಕೆ ಬಂದಿದ್ದೇನೆ ನಾನು ” ಅಂತ ಬಲಗೈನ ಚಾಚ್ದ  

ರಾಕ್ಷಸ, , , ಬೆಚ್ಚಿಬಿದ್ದ ರಾಜದಂಪತಿಗ್ಳು ಹದ್ನೆಂಟ್ವರ್ಷಕ್ಕೆ ಮುಂಚೆ 

ನಡೆದದ್ದು ಅರ್ಧಂಬರ್ಧ ಜ್ಞಾಪಕಕ್ಕ್ಹೊಳ್ದು,  “ಅದೇನಾ ವಾಗ್ದಾನಾ ” ಅಂತ 

ಅಂದ್ರು . ರಾಕ್ಷಸ, ನಿಮ್ಮ ರಾಜ್ಯದಲ್ಲಿ ನನಗೇಕಾದ ಒಂದೇ ವಸ್ತು . . . 

ಅದನ್ಕೊಡ್ದಿದ್ದ್ರೋ ಕೊಟ್ಟ ಮಾತ್ತಪ್ಪೊ ನರಕಕ್ಕೆ ನೀವಿಬ್ರೆ ಅಲ್ಲೆ ನಿಮ್ಮ 

ಪಿತೃಗಳೂ ಇಳೀತಾರೆ . . . ಮರೀಬೇಡಿ . . . ನನಗ್ಬೇಕಾದ ವಸ್ತು ಒಂದೇ 

ಒಂದು : ನಿಮ್ಮ ಹದ್ನೆಂಟ್ ವರ್ಷ ತುಂಬಿದ ಕುಮಾರ !?” ಅಂತ್ಹೇಳಿ, 

ವೃದ್ಧ ದಂಪತಿಗಳ್ನ ಮೂರ್ಛೆ ಹೊಂದ್ಸಿ .. . ಪಕ್ಕದಲ್ಲಿದ್ದ ನೀರಿನ ಹೂಜೀನ 

ಅವರ್ಮುಖದ್ಮೇಲೆ ಖಾಲಿ ಮಾಡಿ, ಚೇತರಗೊಳಿಸಿ . . . ಮಂತ್ರಿ ಮಂತ್ರಾ 

ಲೋಚನಾ ಸಭೆಗಳಿಂದ್ಲೂ , “ ಸತ್ಯವೊಂದೇ ಸ್ವರ್ಗ ಸಾಧನ ” ಅಂಬೋದ್ನ  

ಅವರ ಬುದ್ದಿಗೆ ಸಲ್ಲಿಸಿ ಅವ್ರ ಹದ್ನೆಂಟು ವಯಸ್ಸಿನ ರಾಜಕುಮಾರ್ನ  

ಗೊಂಡಾರಣ್ಯದಲ್ಲಿ ತನ್ನ ಮಾಯಾಶಕ್ತಿಯಿಂದ ತಾನು ನಿರ್ಮಿಸಿಕೊಂಡಿದ್ದ 

ಮಾಯಾಪಟ್ಟಣಕ್ಕೆ ತಗೊಂಡ್ಬಂದ. ರಾಜಕುಮಾರನ್ನ ಅವನ ರಾಜ್ಯ 

ಕ್ಕಿಂತಲೂ ಚೆನ್ನಾಗಿದ್ದ ತನ್ನ ಮಾಯಾಪುರದಲ್ಲಿ ಇಟ್ಕೊಂಡು ಅವನಿ 

ಗ್ಬೇಕಾದ ಸಂತೋಷ ಸುಖಗಳ ಒದಗಿಸ್ತಾ ಅವನ ಹತ್ತೊಂಬತ್ತೇ ವಯ

ಸ್ನಲ್ಲಿ , " ದಿನಾ ಬೆಳಗ್ನಿಂದ ಸಾಯಂಕಾಲದವರೂ ನಾನು ನನ್ ಸಂಚಾರ 

ಕ್ಹೋಗ್ಬೇಕಾಗಿದೆ. ನೀನು ನಿನ್ ಸಂತೋಷಕ್ಕೆ ಈ ಪುರದ ಹೊರಗಡೆ 

ಉತ್ತರ, ದಕ್ಷಿಣ, ಪೂರ್ವ ದಿಕ್ಕುಗಳಲ್ಲಿ ಎಲ್ಲಿ ಬೇಕಾದ್ರೂ ಸಂಚರಿಸು. 

ಕ್ಷಣಕ್ಷಣಕ್ಕೂ ಯೋಜನಾ ಲಂಘಿಸೋಹಯ ನಿನ್ನದು. . . ಆದರೆ ಪುರಾನ 

ಬಿಟ್ಟು ಪಶ್ಚಿಮಕ್ಕೆ ಇರೋ ಮಾರ್ಗಾನ ಮಟ್ಗೆ ಹಿಡಿದ್ಹೋಗ್ಬೇಡ” 

ಅಂತೇಳಿ, ದಿನಾ ಬೆಳಿಗ್ಗೆ ಎದ್ದು ಹೊರಟೊಗೋದು; ರಾತ್ರಿ ಪುನಃ ಪಟ್ಣ  

ಸೇರೋದು ಹೀಗ್ಮಾಡ್ತಾ ಇದ್ದ ರಾಕ್ಷಸ. ಹತ್ತೊಂಬತ್ನೇ ವಯಸ್ಮುಗ್ದು ಆ 

ರಾಜಕುಮಾರನ್ಗೇ ಇಪ್ಪತ್ನೇ ಹುಟ್ಟಿದ್ದಿನ ಮಾಯಾಪುರದ ಉತ್ತರ, ದಕ್ಷಿಣ, 

ಪೂರ್ವದ್ಹಾದಿಗಳನ್ನ ಸಂಚರ್ಸಿ ಸಂಚರ್ಸಿ . . . ಒಂದಿನ ಮಟ್ ಮಟ್ 

ಮಧ್ಯಾಹ್ನ ನಿತ್ಯ ಅರಮನೆ ಕಡೆ ತಿರಗ್ತಿದ್ದ ಕುದುರೆ, ಪಶ್ಚಿಮ ದಿಕ್ಕಿನ ಕಡೆ 

ರಶ್ಮೆಗಳನ್ನು ಸೆಳೆಯುತ್ತಾ ಹಟ ಹಿಡೀತು. . . ಅದರ್ಹಟ ಪರೀಕ್ಷ್ಸೋಕೆ, ಆ 

ರಾಜಕುಮಾರ ರಶ್ಮೆಗಳ . . . ರಶ್ಮೆ . . . ಎದ್ದಿದ್ದಿಯಾ ಚಿನ್ನಾ ? 

ಸೂಳೆ: ಹೂಂ ! ಸುಬ್ಬು ! ಈ ರಶ್ಮೆ ಬಾಬ್ತು ಬಿಟ್ಟಿಟ್ಟು, ಬರೀ ಲಗಾಮೂಂತನ್ನೂ ! 

. . . ದಮ್ಮಯ್ಯ, ಸುಬ್ಬು ಕಥೆ ಸ್ವಾರಸ್ಯವಾಗಿದೆ. . . ಮುಂದಕ್ಬೆಳಸು . . . 

ರಾಜಪುತ್ರನ್ಕುದ್ರೆ . . . ಅವನ್ಹೋಗೋವಾಗ ಪಶ್ಚಿಮ ದಿಕ್ಗೇ ಸೆಳೀತಿತ್ತು . 

. . ಅವ್ನು ಆಶ್ಚರ್ಯಪಟ್ಟು ಲಗಾಮ್ ಡೀಲಾಗ್ನಿಟ್ಬಿಟ್ಟ . . . ಮುಂದೇ 

ನಾಯ್ತು ? 

ಸುಬ್ಬು : ಆ ಮೇಲೆ ಕುದ್ರೆ ಹಾಗೇ ಪಶ್ಚಿಮಕ್ಕ್ ತಿರುಕ್ಕೊಂಡು ಹೋಗ್ತಿದ್ದಾಗ . 

. . ನೋಡ್ತಾನೆ ಒಟ್ಟು ಒಂದೇ ಮರುಭೂಮಿ . . . ಹೋಗ್ತಾ ಹೋಗ್ತಾ 

ದೂರದಲ್ಲಿ ಕಂಡ್ಬಂತು ಒಂದೇ ಒಂದು ಗುಡಿಸ್ಲು . ಹತ್ತ್ರಾ ಬರ್ತಾ 

ನೋಡ್ತಾನೆ, ಆ ಗುಡಿಸ್ಲಿಗೆ ಚಂಡುಗ್ಳಿಂದ ಮಾಡಿದಂಥಾ ಗುಂಡು ಗುಂಡು 

ಹೆಂಚುಗ್ಳು ! . . . ಇನ್ನೂ ಹತ್ತ್ರಾ ಬರುತ್ಲೂವೆ. . . ಆ ಗುಂಡು ಗುಂಡು 

ಹೆಂಚುಗಳೆಲ್ಲಾ ಮಾನುಷ ರುಂಡಗ್ಳು . . . ಅಲ್ಲೇ ಜೀವಸಹಿತ ! ಇವ್ನು  

ಗುಡಿಸ್ಲು ಮುಟ್ಟುತ್ಲೂವೇ ಆ ತಲೆಗಳೆಲ್ಲಾ ಇವನ್ಕಡೆ ತಿರುಗಿ, ಫಕಫಕಾಂತ 

ನಗ್ತಾ “ ಹಾ ! ಹಾ !! ಹಾ !!! ಹಾ !!!! ಬಂದ್ಯಾ . . . ಬರ್ತೀಯಾಂತ್ಗೊತ್ತು 

ನಮ್ಗೇ ! ” ಅಂತ ಆ ಮುಂಡಗಳಿಲ್ಲದ ರುಂಡಗ್ಳ ನಗೂನ ಕೇಳುತ್ತ್ಲೂವೆ, 

' ಧನ್' ಅಂತು ಇವನ್ಗುಂಡ್ಗೆ ! . . . ಕುದುರೇನೂ ಹಿಮ್ಮೆಟ್ತು ! ಆದ್ರೂ 

ಲಗಾಮೂ ಬಿಗಿಹಿಡ್ದು , ಹಲ್ಕಚ್ಕೊಂಡು, ಆ ತಲೆಗಳ್ಕಡೆ ಕಣ್ಣೆತ್ತಿ . . . 

“ ಯಾಕ್ನಗ್ತೀರಾ ? ” ಅಂದ. ಮುಂದಿದ್ದ ತಲೆ, “ನಾವೆಲ್ಲಾ ನಕ್ಕದ್ದೂ 

ನೂರೇಳು ತಲೆಗ್ಳು ನಾವು. . . ಇನ್ನೊಂದ್ತಲೇಗೆ ಸ್ಥಳ ಇರೋದು ಇಲ್ಲಿ. 

ಈ ಖಾಲಿ ಯಾವತ್ತು ಭರ್ತಿಯಾಗುತ್ತೇಂತ ಇಷ್ಟ್ದಿನಾನೂ ಎದುರ್ನೋ  

ಡ್ತಿದ್ವು , ಈಗ ನಿನ್ತಲೇ ಕಾಣತ್ಲೂವೆ ನಗು ಬಂತು . . . ನಮ್ಗೆ !?” 

ಅನ್ನೋದ್ನ ಕೇಳತ್ಲೂವೇ ಮೈಯೆಲ್ಲಾ ಬೆವರಿಟ್ಗೊಂಡ್ತು ನಮ್ಮ ರಾಜ 

ಕುಮಾರನ್ಗೇ ! ಇವನವಸ್ಥೇನೋಡಿ ಇನ್ನೊಂದ್ ತಲೇ ಮೊದಲ್ನೇ ತಲೇಗೆ, 

“ ಅಂಗರಾಜಕುಮಾರ ! ಇದು ಹಾಸ್ಯಕ್ಕೆ ಸಮಯವಲ್ಲ ; ಈ ರಾಕ್ಷಸನ 

ಮಾಯೆಯಿಂದ ನಮ್ಮ ರುಂಡಗಳು ಸೂರಿನಲ್ಲೂ , ಮುಂಡಗಳು ಕೆಳಗೆ 

ಕುಟೀರದಲ್ಲೂ ಬೇರೆ ಬೇರೆಯಾಗಿ ಬಿದ್ದಿವೆ . . . ನಮ್ಮ ಅವಸ್ಥೇನಲ್ಲದೇ , 

ನಮ್ಮನ್ನು ಕಳೆದುಕೊಂಡ ನಮ್ಮ ಪುತ್ರ ವಿರಹಾವಸ್ಥೆಯನ್ನೂ ಹೋಗ 

ಗೊಳಿಸುವುದಕ್ಕೆ ನಮ್ಮನ್ನೂ ಹೆತ್ತವರನ್ನೂ ಕಾಪಾಡೋ ಧರ್ಮ 

ದೇವತೆಯೇ ಈತನನ್ನು ನೆಪವಾಗಿ ಕಳುಹಿಸಿರಬೇಕು . . . ಹಾಸ್ಯಾನ ಬಿಟ್ಟು 

ಈತನನ್ನೂ ನಮ್ಮನ್ನೂ ಈ ರಾಕ್ಷಸನ ಕೈಯಿಂದ ಪಾರುಮಾಡಿ ನಮ್ಮ 

ಮಾತಾಪಿತೃಗಳನ್ನು ಕೂಡುವ ಬಗೆಯನ್ನು ಇತ್ಯರ್ಥಮಾಡೋದಲ್ಲವೇ 

ವಿವೇಕ !? ” ತನ್ನತ್ಲೂವೆ ಎಲ್ಲಾ ತಲೆಗೂ “ಹೌದು ಹೌದು!” ಅಂತ 

ಬಾಗಿದವು. ಎರಡನೇ ತಲೆ ನಮ್ಮ ರಾಜಕುಮಾರನನ್ನು ನೋಡಿ, “ ನಿನ್ನನ್ನು 

ಕರೆತಂದ ಮಾಯಾವೀ ರಾಕ್ಷಸನೇ ನಮ್ಮನ್ನೂ ಕರೆತಂದು, ನಮ್ಮ ಇಪ್ಪ 

ತ್ತೆರಡ್ನೇ ಹುಟ್ಟಿದ್ದಿನ ತಲೇನ ಮೈನ ಬೇರೆ ಮಾಡಿ ಈ ಗುಡಿಸಲೆಳಕ್ಕೆಡವಿ, 

ಶಿರಸ್ಸನ್ನು ಹೆಂಚಾಗಿ ಇಟ್ಟು , ಇದೇ ಪ್ರಕಾರ ನೂರೆಂಟು ರಾಜಕುಮಾರ 

ಶಿರಸ್ಸಿನಿಂದ ನಿರ್ಮಿಸಿದ ಸೂರು ಅಲ್ಲದೆ, ಅವರ ನೂರೆಂಟು ಮುಂಡಗಳು 

ತುಂಬಿದ ಕುಟೀರವನ್ನು ನಿರ್ಮಿಸಿ ಅವುಗಳನ್ನು ಅಗ್ನಿಪಾಲು ಮಾಡಿದ 

ಕ್ಷಣವೇ ಅಮರ ರಾಜಪದ್ವೀ ಸಿಕ್ಕುತ್ತೇಂತ ಬ್ರಹ್ಮನಿಂದ ವರ್ಗಳನ್ನು 

ಕೈಗೊಳ್ಳೋ ನಿಮಿತ್ತ , ನಮ್ಮನ್ನೂ ನಿನ್ನನ್ನೂ ಈ ಅವಸ್ಥೆಗೆ ತಂದ 

ರಕ್ಕಸನಿಂದ ನಾವೆಲ್ಲ ತಪ್ಪಿಸಿಕೊಳ್ಳುವ ಸಾಮರ್ಥ್ಯಾ ನಿನ್ನ ಕೈಯಲ್ಲೇ ಇದೆ 

ಅನ್ನತ್ಲೂವೆ “ ಅದೇನಸಾಧ್ಯವಾ? ” ಅಂದ ನಮ್ಮ ರಾಜಕುಮಾರ . . . ಆಗ 

ಆ ಎರಡ್ನೆ ತಲೆ, ಪಶ್ಚಿಮದಿಕ್ಕಿನಲ್ಲಿ ಇನ್ನೂ ಬಹ್ದೂರ್ದಲ್ಲಿ ಕಾಣೋ 

ದೊಡ್ಡಮರಾನ ಕಣ್ಣಿನಿಂದ ಸೂಚಿಸಿ . . . . “ಕಾಣುತ್ಯೇ . . . ಆ 

ದೂರದಲ್ಲಿರೋ ಆಲದಮರ? ” ಅಂತು . . . ಅದಕ್ಕೆ ರಾಜಕುಮಾರ, 

“ ಹೂಂ ! ” ಅನ್ನುತ್ಲೂವೆ. . . (ಸೂಳೆಗೆ) ಇದ್ಯಾಕೇ ಚಿನ್ನಾ . .. ಹೂಂ 

ಗುಟ್ಟಿಲ್ಲಾ ? 

ಸೂಳೆ : ( ಅರೆನಿದ್ದೆಯಲ್ಲಿ ಅರ್ಧ ಮುಚ್ಚಿರುವ ಕಣ್ಣುಗಳನ್ನು ಥಟ್ಟನೆ ಬಿಟ್ಟು ) 

“ ಹೂಂ ” 

ಸುಬ್ಬು : “ ಹಾಗೆ ನಿನಗಾಮರ ಕಂಡರೋದಾದ್ರೆ ನೆಟ್ಗೆ ನಿನ್ಕುದ್ರೇನ್ವೋಡ್ಸಿ  

ಅಲ್ಲಿಗ್ಹೋಗಿ,ಕುದ್ರೇನ್ಬಿಟ್ಟಿಳ್ದು , ಅದ್ರ ಬುಡಾನ್ಸೇರಿ . . . -ಅಹಿಂಸಾ 

ಪರಮೋಧರ್ಮಃ 'ಅಹಿಂಸಾ ಪರಮೋಧರ್ಮಃ' ಎಂದು ಬಾರಿಬಾರಿಗೂ 

ಜಪಿಸುತ್ತಾ , ಆ ಮರಾನ್ಹತ್ತಿ ಕೊನೇ ಕೊಂಬೇನ್ಸೇರುತ್ಲೂವೆ ಅಲ್ಲೊಂದು 

ಪಂಚವರ್ಣದ ಗಿಳಿ ಕಾಣತ್ತೆ . ಅದು ಸಾಧಾರಣದ್ಗಿಳೀಂತ ತಿಳ್ಕೊಬೇಡ . 

. . ಸರ್ವಜ್ಞಳಾದ ಸರಸ್ವತಿಯ ಮುದ್ದು ಗಿಳಿ ಅದು . . . ನೀನದನ್ 

ಸಮೀಪಿಸುತ್ತೂನೂವೆ ಅದು ಯಾರ್ನೀನು ? ಅಂತ ಕೇಳತ್ತೆ . ಆಗ ನೀನು 

ಮಂಕನ್ಹಾಗೆ ನಿನ್ನ ಗುಣಕಥನಮಾಡ್ದೆ , ನಾನ್ಯಾರಾದ್ರೇನು . . . ನೀನು 

ಎಲ್ಲಾನೂ ತಿಳಿದ ಗಿಣಿ' ಅಂತ ಹೇಳಿ . . . ಹತ್ಜನ ಹೇಳಿದ್ಕೇಳಿ 

ಹುಡುಕ್ಕೊಂಬಂದ ನನ್ನ ನೀನ್ಯಾರೂಂತ ಕೇಳೀಯೆಲ್ಲಾ ಹಾಗಾದ್ರೆ ಸರ್ವಜ್ಞ 

ಗಿಣಿ ಅಲ್ಲ ನೀನು. ಸರ್ವೆಸಾಧಾರಣ ಗಿಣಿ ನೀನು ! ಅಂತ ನೀನನ್ನತ್ಲೂವೆ, 

ಆ ಗಿಣಿ ರೇಗಿ ನನ್ನ್ ಜ್ಞಾನ ಹಾಗಿರ್ಲಿ ನಿನ್ನ್ ಜ್ಞಾನ ಪರೀಕ್ಷಿಸಿ ನೋಡೋಣ! 

ಈಗ ನನ್ನ ಮೈಯಲ್ಲೆಷ್ಟು ಬಣ್ಣಗಳಿವೆ ? ಅಂತ ಕೇಳುತ್ತೆ ಆ ಹಕ್ಕಿ.  

ಅದಕ್ಕೇನುತ್ತ್ರ ಹೇಳ್ತೀಯಾ ? ” ಅಂತ ಕೇಳ್ದೆರಡ್ನೇ ತಲೇಗೆ ರಾಜಕುಮಾರ 

. . . ಅದೇ ನೀನ್ಹೇಳಿದ ಪಂಚವರ್ಣದ ಗಿಳಿ . . . ಐದು ಬಣ್ಣಗಳು . . 

, , ಕೆಂಪು, ನೀಲ, ಹಸ್ರು ಇತ್ಯಾದಿ”, ಅಂದದ್ದಕ್ಕೆ ಆ ಎರಡ್ನೇ ತಲೆ, 

“ ಅಯ್ಯಯ್ಯೋ ಬೆಪ್ಪೂ ! ಹಾಗೇನಾದ್ರೂ ಬೊಗುಳ್ದ್ಯೋ ಸರ್ವನಾಶ ! 

ಆಹುತಿ ! ನೀನೂ ನಾವೆಲ್ರೂವೇ ಆ ರಾಕ್ಷಸನ ನಾಲ್ಗೇಗೆ!! ನಾನ್ಹೇಳೋದ್ನ  

ಗಮನ್ಸ್ ಕೇಳು. . . ಆ ಗಿಳಿ ಕೇಳುತ್ಲೂ ಆ ಪ್ರಶ್ನೆನ ನೀನು ನಿನ್ನ್  ಜನಿವಾರ 

ಬಲಗೈಲ್ಹಿಡ್ಕೊಂಡು, "ಮುಕ್ತಾ , ವಿದ್ರುಮ, ಹೇಮ, ನೀಲ, ಧವಳ . . .' ” 

ಅಂತ ಹೇಳಿರುವಾಗ್ಲೇ . . . ನಮ್ಮ ರಾಜಕುಮಾರನ್ಮುಂದೆ ಆಕಾಶ 

ಭೂಮೀನೂ ಆವರ್ಸ್ಕೊಂಡಿರೋ ಕಪ್ಪಂಕಪ್ಪೆ ಆಕಾರ ಬಂದ್ ಧುಮುಕ್ತು. 

ಅದನ್ನೋಡಿ ಆ ನೂರೇಳು ರಾಜಕುಮಾರ ಮುಂಡಗಳಿಲ್ಲದ ರುಂಡ್ಗಳು, 

“ಹಯ್ಯೋ ಕೆಟ್ಟ್ವೆಲ್ಲಾ !!! ಇನ್ನೇನ್ ನಮ್ಮ್ಮ್ಗೀಮ್ಮತೀಂ"ತ ಕಿರ್ಲಿದ್ವು . . . 

ಇದ್ಯಾಕ್ಚಿನ್ನಾ . . . ಹೂಂ ಗುಟ್ಲಿಲ್ಲಾ ! (ಸೂಳೆಯು ಸುಸ್ತಾಗಿ ನಿದ್ರಿಸುತ್ತಿರು 

ವುದನ್ನು ಗಮನಿಸಿ) ಅಬ್ಬಾ ! ನಿದ್ರೆ ! . . . ಪಾಪ ! ಹೀಗಾಗ್ತಾನೇ ಬಂದ್ರೆ . 

ಎಷ್ಟ್  ದಿನಾ ತಡ್ಯತ್ತೇ ಈ ದೇಹ ! ? 

- [ಕೋಣೆಯನ್ನು ಬಿಟ್ಟು ಒಳಗೆ ಹೋಗಿ ಜರತಾರೀ ಅಂಚಿನ ಕಾಶ್ಮೀರ್ ಶಾಲೊಂದನ್ನು 

ಸೂಳೆಯ ನಿದ್ರೆಗೆ ಭಂಗಬರದಂತೆ ಹಗುರವಾಗಿ ಅವಳಿಗೆ ಹೊದಿಸಿ, ಮೂಲೆಯಲ್ಲಿರುವ 

ಜಮಖಾನವೊಂದನ್ನು ಸೋಫಾವಿನ ಕಾಲಿನಕಡೆ ಹರಡಿ, ಆರಾಮ ಕುರ್ಚಿಯೊಂದರಲ್ಲಿನ 

ದಿಂಬನ್ನು ಜಮಖಾನೆಯ ಕೊನೆಯಲ್ಲಿಟ್ಟು ಕೋಣೆ ಮೂಲೆಯಲ್ಲಿರುವ ಮೇಣದ ಬತ್ತಿ 

ಯನ್ನು ಹಿತ್ತಾಳೆಯ ಸ್ಟಾಂಡ್ ಸಹಿತ ತಂದು ದಿಂಬಿನ ಪಾರ್ಶ್ವದಲ್ಲಿ ಇಟ್ಟು , ಕಿಸೆಯಿಂದ 

ತೆಗೆದ ಸಿಗರೇಟನ್ನು ಹಚ್ಚಿಕೊಂಡು, ಜಮಖಾನೆಯ ಮೇಲೆ ಮಲಗಿಕೊಂಡು ಸಿಗರೇಟನ್ನು 

ಸೇದಿ, ಸೂಳೆ ಮಲಗಿರುವ ಸೋಫಾವಿನ ತಳದಲ್ಲಿರುವ ಬಾಳಬಂದು ಲಿಪಿಯ ಭಗವ 

ದ್ಗೀತೆಯನ್ನು ತೆಗೆದು, ಆತ್ಮಗತಂ] 


ಸಮೋಹಂ ಸರ್ವಭೂತೇಷು 

ನಮೇದ್ವೇಷೋsಸ್ತಿ ನ ಪ್ರಿಯಃ 

[ ಎಂದು ಓದುತ್ತಿರುವ ಹಾಗೆಯೇ ತೆರೆಯು ಬೀಳುವುದು] 



Act 2 

Sc . 1 


ಹತ್ತು ವರ್ಷಗಳ ಅನಂತರ 

- [ಸ್ಥಳ :ಸೂಳೆಯ Sitting Room ಕಾಲ : ಸಾಯಂಕಾಲ. Discovered ಸುಬ್ಬು 

(aged thirty nine) and ಸೂಳೆ ( aged thirty four ) ಪುಟ್ಟಾ, (aged four).] 

ಸುಬ್ಬು : ಇದೇನ್ ಚಿನ್ನಾ ? . . . ಬಂದು ಬಿಟ್ಟೆ ಇಷ್ಟ್ ಬೇಗ್ನೆ ? ಬ್ಯಾಂಡ್ 

ಆಗ್ಹೋಯ್ತೇ  Cubbon Parkನಲ್ಲಿ ? 

ಸೂಳೆ : ಬ್ಯಾಂಡ್ ಕೇಳಿದ್ದ . . . ನಂಬುತ್ತೀಯೋ ಇಲ್ಲವೋ ? ನಿನಗೆ ತಿಳಿದ 

ದೊಡ್ಡ ಮನುಷ್ಯ್ರೊಬ್ರು ಒಂದು ವ್ಯಕ್ತಿ ಸಮೇತ ನೆಟ್ಟಗೆ ಎಲ್ಲರೆದುರ್ಗೆ 

ಬಂದ್ರು ನನ್ನ ವಿಕ್ಟೋರಿಯಾ ಹತ್ತಿರ . . . ಯಾರಿರ್ಬಹ್ದು ಹೇಳು . . . ಆ 

ಹೆಂಗ್ಸು ? . . . ನೋಡೋಣ ನಿನ್ನ ಘಟ್ಟಿಗತನಾನ ? 

ಸುಬ್ಬು : ನನ್ನ ಘಟ್ಟಿಗನಾ ಇರ್ಲಿ . . . ನೀನೇ ಹೇಳು. 

ಸೂಳೆ : ಲೇಡಿ 

ಸುಬ್ಬು : (ಚಮಕಿತನಾಗಿ) ಯಾರು ? ಲೇಡಿ ಶಿವದಾಸಯ್ಯರ್ರೇ ? 

ಸೂಳೆ : ಮತ್ಯಾರೋ ಮಂಕು ! ಐವತ್ತು ವಯಸ್ಸು ! ಬೆಳ್ಳಿ ಕೂದ್ಲು. ಆದ್ರೂ 

ಹದ್ನೈದ್ ವರ್ಷ ತುಂಬದ ಹುಡೀಗಿಂತ Sweet faceಉ . . . ನಮ್ಮ 

ಪುಟ್ಟಾನ ನಗು . . . ನೆಟ್ಟಗೆ ಬಂದು. . . ಆ ರಾಮ್ರಾಯ ಅವನ ಉಬ್ಹಲ್ಲು 

ತುಂಬಿದ ಬಾಯಿಬಿಟ್ಟು “ Let me introducec ” ಅಂತ ಶುರು ಮಾಡಿ 

ರೋವಾಗ್ಲೇ . . . ಇವಳು ತನ್ನ ನನ್ನ ಕೈಗಳನ್ನು ಹಿಡ್ಕೊಂಡು ( ಮುಖವನ್ನು 

ವಿಕಾರ ಮಾಡುತ್ತಾ ) ನಿಮ್ಮನ್ನು ನೋಡ್ಬೇಕೂ ಅಂತ ಅನೇಕ ದಿವಸ್ಗಳಾಸೆ 

ನನಗಿತ್ತು . . . ಆದರೆ ನಮ್ಮ City fatherಉ” ಈ ಮುನಿಸಿಪಾಲಿಟಿ 

Councillersಉ ಸುಬ್ಬೂ ! ಊರಿಗೆ ಅಪ್ಪಂದ್ರಂತೆ ನಮ್ಮ ಬೆಂಗ 

ಳೂರು ಮುನಿಸಿಪಾಲಿಟಿ Councillers ಮೂಲಕ ನಿಮ್ಮನ್ನು ನಾನು 

ಈವತ್ತು ಕಂಡದ್ದು ಬಹಳ ಸಂತೋಷ! ” ಅಂದ್ಲು . . . ನೋಡು ಸುಬ್ಬೂ 

ಅವಳೆಲ್ಲಿ ! . . . ನಾನೆಲ್ಲಿ ! . . . ಇದರಲ್ಲೇನೋ ಗೋಲನ್ ಇಧೆಂತ 

ಎತ್ಕೋತ ನನಗ್ ಗುಮಾನಿ . . . “ಸಂತೋಷಾಮ್ಮಾ ನಿಂತ್ಕೊಂಡು ಯಾಕೆ 

ಮಾತಾಡ್ತೀರ. . . ಒಳಕ್ಕೆ ಬಂದು ಕೂತ್ಕೊಳ್ಳಿ. ಇಬ್ಬರಿಗೂ ಸ್ಥಳ ಇದೆ 

ವಿಕ್ಟೋರಿಯಾಲೀ !?” ಅಂದೆ . . . ಅನ್ನತ್ಲೂವೆ ಸುಬ್ಬೂ . . . ಆತ “ ಈಗ 

ಜಾಸ್ತಿ ಬಿಡುವಿಲ್ಲ . . . ಲೇಡಿ ಶಿವದಾಸಯ್ಯರ್ರಿಗೆ Prostitution 

questionನಲ್ಲಿ interest ಇಧೆ. . . ಅದ್ನ ನಿಮ್ ಜೊತೇಲಿ ಮಾತಾಡೋಕೆ 

ಬರ್ಬೇಕೂಂತಿದ್ರೂ ” ಅಂತ ಹೇಳ್ತಿದ್ದಾಗ್ಲೆ , ಆ Prostitution ಅಂಬೋ 

ಪದ ಕೇಳತ್ತ್ಲೂವೇ, ಸುಬ್ಬೂ ನನ್ನ ಮೈ ಉರಿದಿದ್ದಲ್ದೆ, ನನ್ನ ಕಣ್ಣುಗಳು 

ಕಾರಿದ್ದ ಕಿಡಿ ಕಂಡೋ ಏನೋ ಕಾಣೆ ಮುಖ ತಿರುಗಿಸ್ಕೊಂಡ ಆತ . . . 

ಅವನಿಗಡ್ಡ ಮಾತಾಗಿ ಆಕೆ . . . ನಮ್ ಪುಟ್ಟಾನ ಧ್ವನಿಯಿದೆ ನೋಡಿ 

ಅದಕ್ಕಿಂತ ನಯವಾಗಿ “Do not mind him . . . ಏನು ಆದರೂ ಅವರು 

ಗಂಡಸರು . . . ಅವರಿಗೆ ಹೆಂಗಸಿನ delicacy ” ಅಂತ ಅದೇನೋ ಇನ್ನೂ 

ಸ್ವಲ್ಪ ಇಂಗ್ಲಿಷ್ ಹೇಳ್ಕೊಂಡು. .. ಒಟ್ನಲ್ಲಿ . .. “ರೇಗ್ಬೇಡಿ! ಸೂಳೆಗಾರ್ಕೆ 

ನಮ್ಮ ದೇಶಕ್ಕೆ . . . ” ಅದೇ ನೀ ಕೊಟ್ಟ ಲೆಕ್ಟರ್ ಸಾರಾಂಶ . . . ಅದೆಲ್ಲಾ 

ಶುಷ್ಕವಾಗಿ ಹೇಳಿ. . . ಅದ್ನ ನಿಲ್ಸೋ ಬಗೆ ನನ್ ಜೊತೇಲಿ ಮಾತಾಡಿ 

ನಿರ್ಧರಿಸೋಕೆ ನಾಳೆ ಬೆಳಿಗ್ಗೆ ಒಂಬತ್ ಗಂಟೆ ಹೊತ್ಗೇ ನಮ್ಮನೇಗ್ 

ಬರ್ತಾಳಂತೇ ! . . . ಬೆಳಿಗ್ಗೆ ಅಷ್ಟೋ ಹೊತ್ಗೇ ಎದ್ದು , ಹೂವು, ಹಣ್ಣು, 

ಹಂಪಲು, ಅಡಿಕೆ, ಎಲೆ, ಕುಂಕುಮ , ಹಸೀಅರಿಶ್ನ ಅಮ್ಮನ ಪೂಜೆ 

ಸಾಮಾನ್ನಿಂದ ಬಾಚ್ಕೊಂಬಂದು . . . ಎಲ್ಲಾ ತಂದು ಮೂರು ಬೆಳ್ಳಿ 

ತಟ್ಟೆ ತುಂಬ ತುಂಬಿ, ಅವಳ್ ಹೋಗೋವಾಗ ಅವಳ್ ಕಾರ್ ತುಂಬ 

ಪೇರ್ಸಿ Pack off ಮಾಡ್ಬೇಕು. . . ಅಲ್ವೇ ಸುಬ್ಬೂ ! ಮನೇಲಿರೋದು 

ಸಾಲ್ದಿದ್ರೆ . . ಬ್ಯಾಗ್ನಲ್ಲಿ ನೀನ್ ಹಾಕಿದ್ ದುಡ್ಡು ಹಾಗೇ ಇದೆ !. . . ಅದೂ 

ಸಾಲ್ಸಿದ್ರೆ ಕೈಪೆಟ್ಗೆ ಬೀಗದ ಕೈ ನಿನ್ನ ಹತ್ತ್ರವೆ ಇಧೆ ! ಅವಳ್ ಗಂಡ್ನ  

ಅಂತಸ್ತೆಲ್ಲಿ . . . ನಾವೆಲ್ಲೀ ! ಇಷ್ಟಕ್ಕೂ ಮಕ್ಕ್ಳೆಲ್ಲಾ . . . I. C. S . ಒಬ್ಬ 

. . . ಇನ್ನೊಬ್ಬ್ನೆಲ್ಲೋ ದೊಡ್ಕೆಲ್ಸ . . . ಹೆಣ್ಮಕ್ಕಳ್ನೆಲ್ಲಾ ದೊಡ್ಡ್ ದೊಡ್ಡ್  

ಕಡೇ ಕೊಟ್ಟಿದ್ದಾರೆ . . . ಸಂತೋಷವಾಗಿ “ನಾವಾಯ್ತು ನಮ್ ಬಂಗ್ಲೇ  

ಆಯ್ತು ನಮ್ಮ್ ಸುಖ ನಮ್ಮದಾಯ್ತು ”! ಅಂತ ಇರ್ದೆ ಈ ಪ್ರಾಣಿಗೆ ಈ 

ವಯಸ್ಸಲ್ಲಿ ತಾನು ಸುಖವಾಗಿದ್ರೂ ದೇವ್ ಎದುರ್ಗೆ ತನ್ನ ಹಾಗೇ 

ಹೆಂಗಸ್ರಾಗಿ ಹುಟ್ಟಿ ನರಳ್ತಿರೋ ನನ್ನಂಥಾವ್ರ ಯೋಚ್ನೆ ತಗಲಿರೋ ಈ 

ಹುಚ್ಚು ಯಾಕ್ ಹುಟ್ಟಿದ್ಯೋ ಕಾಣೆ . . . ಮುಖ್ಯ ದೇವ್ರ ಸೃಷ್ಟಿ ವಿಚಿತ್ರ 

!! ಮರೀಬೇಡ . . . ದೊಡ್ಡ ಬೀರು ಬೀಗದ್ ಕೈ ನಿನ್ನ ಹತ್ತನೇ ಅಲ್ವೇ ? 

. . . ಬೆಳಿಗ್ಗೆ ಏಳತ್ತ್ಲೂ . . . ತಟ್ಟೆ , ಪನ್ನೀರ್ ದಾನಿ, ಗಂಧದ್ ಬಟ್ಳು  

ಎಲ್ಲಕ್ಕೂ SILVO ಹಾಕಿ ಎಂಟ್ ಗಂಟೆ ಅಷ್ಟೊತ್ಗೇ ಸಿದ್ದವಾಗಿಡ 

ಬೇಕೂಂತ ನಂಜನ್ಗೆ ಹೇಳ್ಬಿಟ್ಟು ನೀನ್ ಗಾಡೀಲಿ ಹತ್ಕೊಂಡ್ ಹೋಗಿ, 

ಮಾರ್ಕೆಟ್ಟಿಂದ ಎಂಟೂವರೇಗೆ ಇಲ್ಲಿರ್ಬೇಕು . . . ಆಕೆ ಬರೋದು 

ಒಂಭತ್ಘಂಟೆ . . . ಮರೀಬೇಡ ! . . . ಪುಟ್ಟಾ ಎಲ್ಲೀ ? . . . 

ಸುಬ್ಬು : ಶನಿವಾರ ಸಾಯಂಕಾಲ . . . ಯಥಾಪ್ರಕಾರ ಮುನಿಸಿಪಲ್ ತೋಟ 

. . Pramಉ . 

ಸೂಳೆ : ಜೋತೇಲಿ ? 

ಸುಬ್ಬು : ನಂಜ. 

ಸೂಳೆ : ಅಮ್ಮ ? 

ಸುಬ್ಬು : ಅವ್ಳೂ ಯಥಾಪ್ರಕಾರ ಶನಿವಾರ . . . ಬೇರೆ ಈ ವಾರ ! ಅಂಜನೇಯನ್ 

ಗುಡೀಗೆ ! 

ಸೂಳೆ : ಇದ್ಯಾಕೋ !! ಅಮ್ಮನ್ಗೆ ಯಾಕೋ ಒಂದೊಂದ್ ಶನಿವಾರಾನೂ 

ಒಬ್ಬೊಬ್ಬ ಹೊಸ ದೇವು ! ಅವಳ ಆಖೈರು ಶನಿವಾರದ್ದೇವ್ರು, ಶನೇ 

ಶ್ವರನ್ ಗುಡೀನೆ ! ಹಾಗೂ ಇಧೆಯೇನೋ ಒಂದ್ಗುಡಿ ? 

ಸುಬ್ಬು : ಶನೇಶ್ವರನೆ ಗುಡೀನೇ ? . . . ಪ್ರಾಕಾರ ಕಟ್ಟಿ ಒಳಗೆ ಪೆಟ್ಟಿಗೆ ಹಾಗೆ 

ಭದ್ರವಾಗಿ ಇಡೋದು, ಎಲ್ಲಾ ದೇವರ ಗುಡಿಗಳ್ನ ! ಶನೇಶ್ವರನ್ ಗುಡಿ 

ಈ ಲೋಕ್ ಲೋಕಾನೇ . . . . ಪ್ರಾಕಾರ ಎಲ್ಲಿದಕ್ಕೇ , ( ಇಬ್ಬರೂ 

ನಗುವರು) 


[ ತೆರೆ] 



Scene 2

[ ಸ್ಥಾನ : ಯಥಾಪೂರ್ವಂ, ಕಾಲ : ಬೆಳಿಗ್ಗೆ ಒಂಭತ್ತು ಘಂಟೆ. Discovered ಸೂಳೆ, 

ನಾಲ್ಕು ವರ್ಷ ವಯಸ್ಸಿನ ಮತ್ತು Pramನಲ್ಲಿ ಕುಳಿತಿರುವ ಪುಟ್ಟಾ ; ಎರಡು ಹೆಜ್ಜೆ ಹಿಂದೆ 

ನಂಜಾ ಮತ್ತು ಬಾ ಮಗು ಎಂದು ಕೈಚಾಚಿ ಪುಟ್ಟಾವನ್ನು ಕರೆಯುತ್ತಿರುವ ಲೇಡಿ ಶಿವದಾಸ 

ಅಯ್ಯ ರ್.] 

ಸೂಳೆ: ಅಯ್ಯೋ ! ಹಾಗ್ ಬರೋದಿಲ್ಲಾಮ್ಮಾ ಅವಳು ! . . . ಹೊಸಬ್ರು ಕರದ್ರೆ 

ಹಟ ಜಾಸ್ತಿ , ಹಂದಿ . . . ಪಿಗೂ Pigg00 ಅಂತಾರಲ್ಲಾ ಹಾಗೆ . . . 

ಲೇಡಿ ಶಿವದಾಸಯ್ಯರ್ : ಯಾಕೆ ಗಂಭೀರಾಗಿ Little Lady ಹಾಗೆ ಕೂತಿದ್ದಾಳೆ 

. . . [ ಪುನಃ ಬಾಹುಗಳನ್ನು ಚಾಚುತ್ತಾ ] ಬಾಮ್ಮಾ . . . ಬಾ ! ಬೆದರ್ ಬೇಡ 

ಬಾ ! 

ಸೂಳೆ: ಹಯ್ಯೋ ! ಹಂದೀಂದ್ನಲ್ಲಾಮ್ಮಾ ಅದು. ಈಗೇನೋ ಇಂಗ್ಲಿಷ್ ಗೊಂಬೆ! 

ರಪ್ಪೆ ಮುಚ್ಚಿದ್ದಾಗೆ ಕಣ್ಣುಗುಡ್ಡಳ ಬಿಡ್ಕೊಂಡು ಹೊಸ್ದಾಗ್ ಬಂದ 

ನಿಮ್ಮನ್ನ ಗಂಭೀರ್ವಾಗಿ ನೋಡ್ತಿದ್ದಾಳ್ಯೇ ಹೊರ್ತು, ನಾಳೆ ಬೆಳಿಗ್ಗೆ 

ನೋಡ್ಬೇಕು ಅವಳ ! Frockನ ಕಿತ್ತೆಸ್ದು . . . ಬೆತ್ತ್ಲೆಮೈ ಬಿಟ್ಕೊಂಡು. 

.. ಈ ಬೀದಿ ಎಲ್ಲಾ ಓಡಾಡ್ತಾ ಒಬ್ಬೊಬ್ಬ ಮಗೂನ್ನೂ ಪರ್ಚಿ . . . 

ಅವುಗ್ಳ ಕೈಲೂ ಪರ್ಚಿಸ್ಕೊಂಡು . . . ಒಂದ್ . . . ಚರಂಡಿ . . . 

ಒಂದ್ ಎಂಜಲ್ ತೊಟ್ಟ ಬಾಕೀ ಇಲ್ಲೆ ಬಿದ್ದು ಹೊರಳಾಡಿ ಮನೇ 

ತಪ್ಪಿಸ್ಕೊಂಡದ್ದಕ್ಕೆ ನೆಪಾಂತ ಯಾವುದಾದರೂ ಬ್ಯಾಂಡ್ ಬಾರ್ಸೋ  

ಜಟ್ಕಾದ್ ಜೊತೇಲಿ ದೊಡ್ಡ್ ಬೀದಿಯುದ್ದಕ್ಕೂ ಓಡಿ ಬಂದು ಸಿನಿಮಾ 

ದ್ನೋಟೀಸೋ ಇಲ್ಲ ನಾಟಕದ್ನೋಟೀಸೋ ಬಿದ್ದದ್ನ ಕಸ್ಕೋಂಡ್ ಮನೇಗ್ 

ಬಂದ್ ಸೇರೋವಾಗ್ . . . ಈಗ ನೀವೇಳೋ “ Little Lady ಅಲ್ಲ ? 

“ ಈ ಸಾಧು ಬೆಕ್ಕಿನ್ ಪಿಳ್ಳೆ . . . ಈ ಹಾಲ್ನ ನಿಜ್ವಾಗಿ ಕುಡ್ದಿದ್ದೀತೆ ? ” 

ಎಂಬೋ ಮೂತೀನ್ ಇಟ್ಕೊಂಡೂ . . . ( ಪುಟ್ಟಾವಿನ ಧ್ವನಿಯನ್ನು 

ಅಣಕಿಸುತ್ತಾ ) (ನೋಟೀಸ್ ತಂದೇಮ್ಮಾ , ನಿನ್ನೆ ನಾಟ್ಕದ್ದು !! ” ಅಂತ 

ಏಳ್ ಗಂಟೆಗೆ ಕಾಫಿ ಕುಡ್ಡು ಮನೇ ತಪ್ಪಿಸ್ಕೊಂಡೋಳು ಹತ್ ಗಂಟೇಗೆ 

ಬಂದ್ ನಿಲ್ತಾಳೆ ! ಚೆನ್ನಾಗಿ ಹೇಳಿದ್ರಿ . . . “Little Lady"ಈ ಅಂತ ! 

[ ಪುಟ್ಬಾನನ್ನು pramನಿಂದ ಹೊರಕ್ಕೆ ನಿಲ್ಲಿಸುವಳು.] 

ಲೇಡಿ ಶಿವ : ( ಮಗುವಿನ ಗಲ್ಲವನ್ನು ಮುಟ್ಟಿ ತಲೆಯನ್ನು ಸವರುತ್ತಾ ) ಮಾತಾ 

ಡ್ತಾಳ್ಯೇ? . . . 

ಸೂಳೆ : ಸ್ಪಷ್ಟವಾಗಿ ಬೊಗಳ್ತಾಳೆ. . . ಬೈಗ್ಳಾದ್ರೆ ! ನಂಜನ್ನ , ಸುಬ್ರೂನ, ನನ್ನೂ 

ಬಿಡ್ದೆ !! ಮೈಸೂರ್ ಕಾಸ್ ಬಂಗ್ಲೆ ಇವಳ್ಗೆ ತೋರಿದ್ದಾರಭ್ಯ ಅಲ್ಲಿರೋ 

ಮೃಗಪಕ್ಷಿಗಳ್ನ ಅವಳ ಹಾಳು ಕಣ್ಣುಗ್ಳಿಂದ ಗಮನಿಸಿ. . . ಈಗ ನಮ್ಮ 

ಮನೇಲಿರೋರ್ಗೆಲ್ಲಾ ಆಯಾ ಮೃಗ ಜಂತು ಪಕ್ಷಿಗ್ಳ ಹೆಸ್ರೇ ಇಟ್ಟಿಧಾಳೆ ! 

( ಪುಟ್ಟಾವನ್ನು ಕುರಿತು) ನಾನ್ ಯಾರೇ ? : 

ಪುಟ್ಟಾ : ಹುಲೀಮ್ಮಾ ! 

ಸೂಳೆ : ಯಾಕೆ ! ? 

ಪುಟ್ಟಾ : ಯಾಕೆನಮ್ಮಾ . . . ಹುಲೀನೇ ! 

ಸೂಳೆ : ನೋಡಿದಿರಾಮ್ಮಾ . . . ಹ್ಯಾಗೆ ಗಮನಿಸ್ತವೆ ಮಕ್ಕಳು. ( ಪುಟ್ಟಾವನ್ನು 

ಕುರಿತು) . . . . ಅಜ್ಜ ? 

ಪುಟ್ಟಾ : ರಣಹದ್ದು ! ಕೇಳೋದೇನಮ್ಮಾ . . . ಸುಬ್ಬೂ . . . . . ಜಿಂಕೆ ಅಲ್ಲ 

. . . ನಮ್ಮನ್ನೂ ನೋಡ್ಕೊಳ್ತಾ ಹಾಲು ಕೊಡೋ ಹಸು ! 

ಸೂಳೆ : ಹೀಗೆಲ್ಲಾ ಬೈಯ್ಯೋ ಮಾತುಗ್ಳು ಮಟ್ಟಿಗೂ ಸ್ಪಷ್ಟ ! ಸಾಧಾರಣ 

ಸಂಭಾಷಣೆಯೋ ಕೊಚ್ಚೆ ! ಈ ಸಂಭ್ರಮದಲ್ಲೂ ಸುಬ್ಬು ಹೇಳ್ದ ಸಂಸ್ಕೃತ 

. . ನಮ್ಮ ಸ್ನೇಹಿತ್ರು ಸೂಸ್ದ ಇಂಗ್ಲೀಷೂ ಕಲಸುಮೇಲೋಗರ ಆಗಿ 

[ ಪುಟ್ಟಾವಿಗೆ] ಹೇಳೇ ! ಮಾಯಾ ಹಿಡಂಬೀ . . . “ ಮಾತಾ ” . . . .!? 

ಪುಟ್ಟಾ : ಮಾಟಾ ನ್ಯಾಸ್ಟಿ . . . ಪಿಟಾ ನ್ಯಾಸ್ಟಿ . . . ನ್ಯಾಸ್ಟಿ . . . ಬಂಡು . . . 

ಸೂಳೆ : ( ಅಡ್ಡವಾಗಿ ಪುಟ್ಟಾನ ಬಾಯನ್ನು ಕೈಯಿಂದ ಮುಚ್ಚಿ ನಗುತ್ತಾ ) ಸಾಕೇ ! 

ಸಾಕು ನಿನ್ನ nasty ! ನೋಡೀಮ್ಮಾ ಇವಳ ಕಣ್ಗೆ ನಮ್ಮನೇಲಿರೋರೆಲ್ಲೂ , 

ನಮ್ಮನೇಗ್ ಬರೋರು ಒಬ್ಬೊಬ್ಬರೂ ಇಂಗ್ಲೀಷ್ ನಲ್ಲೂ ಸಂಸ್ಕೃತ 

ದಲ್ಲೂ ಪ್ರಾಜ್ಞರು ಅಂತ ನನಗ್ ಕಂಡ್ ಬಂದ್ರೂ ಪುಟ್ಟನ್ ಕಣ್ಣ್ಗೆ 

ಬಾಯಿಗೆ. . . nasty !!. . . ಕರ್ಕೊಂಡ್ಹೋಗೋ !( ನಂಜನು ಪುಟ್ಟಾವನ್ನು 

ಎತ್ತಿಕೊಂಡು ಎಡಗೈಯಿಂದ ಬಂಡಿಯನ್ನು ಎಳೆದುಕೊಂಡು ಕೋಣೆಯ 

ಹಿಂದಿನ ದ್ವಾರದಿಂದ ನಿಷ್ಕಮಿಸುವನು.) 

ಕೂತ್ಕೊಳ್ಳೀಮ್ಮಾ ! ಈ ಪಟಿಂಗಿಯ ಪುರಾಣಾ ಹೇಳೋ ಗಲಾಟೇಲಿ 

ನಮ್ಮಿ ಹಾಳ್ ಕೊಂಪೇಗ್ ಬಂದು, ನಿಮ್ಮಂಥಾ ಪುಣ್ಯವಂತರ್ಗೆ ನನ್ 

ಕೈಯಿಂದ ಆಗೋ ಅಲ್ಪಸ್ವಲ್ಪ ಆತಿಥ್ಯ ಮರ್ಯಾದೇನೂ ಮರ್ತ್ ಬಿಟ್ಟೆ . 

. . ಆದ್ರೇನು . . . ಮಕ್ಕಳ ಹೆತ್ತೋರು. . . ನೀವೂನೂ ! ನಿಮಗ್ 

ಅರ್ಥವಾಗುತ್ತೆ . . .ಕೂಡ್ಕೊಳ್ಳಿ . . . [ ಪಕ್ಕದಲ್ಲಿರುವ Chesterfieldನ್ನು 

ಸೂಚಿಸಿ ಆಕೆಯು ಕೂಡುತ್ತಲೂ ಪಕ್ಕದಲ್ಲಿರುವ ಕುರ್ಚಿಯಲ್ಲಿ ತಾನೂ 

ಕೂಡುವಳು .] 

ನೋಡೀಮ್ಮಾ (Sweeping her right arm to the Gods and 

Goddesses Swung right around above her head) ನಿಮ್ಮ ಬಂಗ್ಲೆ 

ಗಳಲ್ಲಿ ಗೋಡೇಗ್ ತಗ್ಲ್ ಹಾಕೋ ಸೀತಾ ಸಾವಿತ್ರಿ ಪಠಗಳೇ ನಮ್ 

ಮನೇಲ್ಲೂ ಗೋಡೇಗ್ ತಗ್ಲ್  ಹಾಕ್ಕೊಂಡಿರೋದು ಮನ್ತನ್ದ  

ಮಾಮೂಲು. ಇದೊಂದೇ ನಮ್ಮಿಬ್ರ ಬಾಂಧವ್ಯ , ನೀವೆಲ್ಲೀ ? . . . 

ನಾವೆಲ್ಲೀ ? ಸಮಾಜದಲ್ಲಿ ! ?! ನೀವು ನನ್ನೀ ಕೊಂಪೇಗ್ ಬಂದಿದ್ದು 

ಬೆಳಕ್ ಕಾಣ್ದ ಬಡವರ ಬಿಲಕ್ಕೆ ಸೂರ್ಯನಾರಾಯಣ್ ನೇ ಹೊಕ್ಕ್ ಹಾಗೆ ! 

ನಮ್ಮ ಸಮಾಜದ ವ್ಯವಸ್ಥೇಲಿ ಪಾಪಿಗಳು ಅಂಬಾದರ್ಶನಕ್ಕೆ ಗುಡಿ 

ಗ್ಹೋಗೋದು ಸಹಜಾಮ್ಮಾ , ಏನ್ ಹೇಳಿದ್ರೂನೂಮ್ಮಾ ನಿಮ್ ಚರಿತ್ರೆ 

ನನಗೇನೂ . . . ನಮ್ಮ ದೇಶಕ್ಕೆಲ್ಲಾ ಬೆಳಕೂಮ್ಮಾ ! ನಿಮ್ ಗೃಹದಲ್ಲಿ 

ನಿಮ್ಮ ದರ್ಶನಕ್ಕೆ ನಾನ್ ಬರೋದು ಈ ಸಮಾಜ್ದ ಈ ಸ್ಥಿತೀಲಿ ಸಾಧ್ಯ 

ವೇಮ್ಮಾ ? ನನಗಿರೋ ಆಶ್ಚರ್ಯ ಪರಮಾತ್ಮನ್ ಕೃಪೆಯಿಂದ ನನ್ನ ಗೃಹ 

ದಲ್ಲೇ ತಮ್ಮ ದರ್ಶನ ಆದದ್ದು , ಆತನ ಕೃಪೆಯೋ ತಮ್ಮ ಕರುಣೆಯೋ 

. . . ನನಗೊಂದೂ ತೋಚೋಲ್ಲಾ ! ಇಹಪರಗ್ಳೆರಡ್ರ ಗತೀನೂ 

ಸೊನ್ನೆಯಾಗಿರೋ ನಾನು ನನ್ನ್  ಕಸುಬನ್ನ ಸಲ್ಲಿಸೋ ಸೂಳೇರು ನಮ್ಗೂ  

ಸಮಾಜಕ್ಕೆಲ್ಲಾ , ಗರತಿಯರು . . . ಕ್ಷಮ್ಸಿ . . . ಸಂಸಾರಿಗ್ಳು . . . ಇವರಿಗೆ 

ಮೇಲ್ಪಂಗ್ತಿಯಾಗಿರೋ ತಮ್ಗೂ ಸಂಬಂಧ (Sweeps her forefinger, 

pointing out the pictures swung amid the ceiling and the floor) 

ಈ ದೇವರುಗ್ಳು !! ಈವತ್ತು ತಾವು ಇಲ್ಲಿ ಬಿಜಯಮಾಡಿದ್ದ್ರ ಅರ್ಥ 

ನನಗಿನ್ನೂ ಗೊತ್ತಾಗ್ಲಿಲ್ಲ . . . ನನ್ನ ಸಾಯಂಕಾಲ ಈ Prostitution 

ಇಂಗ್ಲೀಷು . . . “ಸೂಳೇಗಾರ್ಕೆ ”. . . ನಮ್ಮ ಭಾಷೆ ! ಈ ಬಾಬ್ತು . . 

. ?. . . . 

ಲೇಡಿ ಶಿವ : ನೋಡೀ ! ನಮ್ಮ ಯೆಜಮಾನ್ರೂ . . . ದೊಡ್ಡ ಕೆಲಸದಲ್ಲಿದ್ರೂನೂ 

. . . ದೊಡ್ಡ ಮನುಷ್ಯರ ಹೆಂಡ್ತಿಗ್ಳು ತಾವೂ ಸಮಾಜಕ್ಕೋಸ್ಕರ 

ಕೆಲಸಮಾಡಬೇಕೂ ಅಂತ ಹೇಳಿದ ಪ್ರಕಾರ, ನಮ್ಮೂರಿನಲ್ಲಿ ಇರುವ 

ದೊಡ್ಡ ಮನುಷ್ಯರ ಹೆಂಡ್ತಿಗ್ಳೆಲ್ಲಾ . . . ನಮ್ಮ ಗಂಡಂದಿರು ಎಲ್ಲರೂ 

ನಾವೂ ಸಂತೋಷವಾಗಿದ್ದರೂ . . . ನಮ್ಮ ಗಂಡಂದಿರ ಕೆಲಸ, ಸಂಬಳ 

ಇಲ್ಲದ ಗಂಡಸರ ಹೆಂಡತಿಯರನ್ನು ಸಹೋದರಿಯರಾಗಿ ಭಾವಿಸಿ ಅವರಿಗೆ 

ಸಹಾಯವನ್ನೂ ಮಾಡುವ ಸಂಘ ಒಂದು ಏರ್ಪಡಿಸಿ ಗಂಡಸರೇ ಇಲ್ಲದೆ 

ಸಮಾಜಕ್ಕೆ ದೇಹಾನ ಅರ್ಪಿಸಿ ಜೀವಿಸುವ ಸೂಳೆ . . . ಕ್ಷಮ್ಸಿ ! ನಿಮ್ಮ 

“ Little Lady ಯನ್ನೂ ನಿಮ್ಮನ್ನೂ ನೋಡಿದ ಮೇಲೆ ನೀವು ಎಷ್ಟಾಗಿ 

ದ್ದರೂ ನಿಮ್ಮ ಬುದ್ದಿ . . . ಚೈತನ್ಯ ಇಲ್ಲದ ನಿಮ್ಮ ನಮ್ಮ ( grasping 

ಸೂಳೆ s hand vehemently ) ಸಹೋದರಿಯರಾದ ಇತರರಿಗೆ ಸಹಾಯ 

ಮಾಡುವುದಕ್ಕೇನೇ ನಾನು ನಿಮ್ಮನ್ನು ನಿನ್ನೆ ಸಾಯಂಕಾಲ Cubbon 

parkನಲ್ಲಿ meetಮಾಡಿ appointmentfix ಮಾಡಿ ಈಗ ಬಂದಿರೋದು! 

ಸೂಳೆ : ಏನ್ಸಹಾಯ ಮಾಡೀರಮ್ಮಾ ನೀವಾಗ್ಲೀ, ತಾವು ಹಿಂದೆ ಕುಳಿತು ನಿಮ್ಮನ್ನು 

ಮುಂದೆ ದಬ್ಬಿದ ನಿಮ್ಮ ಕಮಿಟೀ ಆಗ್ಲೀ ? ಅಲ್ಲಮ್ಮಾ ! ನಾವೆಲ್ಲಾ 

ಸಹೋದರಿಯರೂಂತ ನೀವು ಹೇಳಿದರೂ ಭೂಲೋಕದ ಸ್ವರ್ಗದಲ್ಲಿರೋ 

ಸೀಟುಗಳೆಲ್ಲಾ high society Reserve ಆಗ್ಹೋಗಿ ನಮ್ಮ ಗತಿ ಈ 

ಲೋಕದಲ್ಲೇ ನರಕಾ ! ಇಹಪರಗಳೆರಡರ ಗತೀನೂ ಸೊನ್ನೆಯಾಗಿರೋ 

ನನಗೂ ನನ್ನಂಥ ಲಕ್ಷಲಕ್ಷ ಹೆಂಗಸರಿಗೂ ಏನ್ ಸಹಾಯ ಮಾಡೀ 

ರಮ್ಮಾ ? 

ಲೇಡಿ ಶಿವ : ನೀವೇನೋಮ್ಮಾ . . . ನೀವು ! ಆದ್ರೂ ನಿಮ್ಮ ಪುಣ್ಯ ಪ್ರಭಾವ 

ಇಲ್ದೆ ಹೊಟ್ಟೆಗೆ ಹಿಟ್ಟೂ ಮಲಗೋಕ್ ಸೂರೂ ಬೇನೆಗೆ ಔಷಧ್ವೂ ಇಲ್ದೆ  

ನಿಮ್ಮ ನಮ್ಮ ಹಾಗೆ ಹೆಂಗಸ್ರಾದ ಸಹಸ್ರ ತಂಗಿಯರ್ಗೆ ಸಹಾಯ 

ನಾನಾಗ್ಲೀ , ನನ್ನ ಮುಂದಿಟ್ಟಿರೋ ಕಮಿಟಿಯಾಗ್ಲಿ , ನೀವಾನೇ ಆಗ್ಲಿ . 

. . ನಾವೆಲೂವೇ ಏಕಮನಸ್ಕರಾಗಿ ಸಹಾಯಮಾಡ್ಬೇಕು ... ಅಂಬೋ 

ಉದ್ದೇಶ ತಪ್ಪೇ ? ಹೆಂಗ್ಸೂ ಮಕ್ಕಳ್ನ ಹೊತ್ತೂ , ಹೆತ್ತ ತಾಯಿಯಾ 

ಗೋದೇ ಪ್ರಕೃತಿಯ ನಿಮಿತ್ತ ! ಪೃಥಿವಿಯ ಅನಂತತ್ವ ! ನನಗೂ ನಿಮ್ಮ 

ಪುಟ್ಟಾ ವಯಸ್ಸು ಮಗಳು ಇಧಾಳೆ ! ಆದ್ರೂ ನಿಮ್ಮ ಪುಟ್ಟಾ ಮುಖಾ

ನಿಮ್ಮ ಸುಂದರ ಮುಖದ ಹಾಗೇ ! . . . ಮೂಗೂ ಕಣ್ಣು ನಿಮ್ಮ ಹಾಗೇ ! 

. . . ಅಲ್ಲ . . . ಆದರೂ--ಅಲುಮೇಲು” ಅವಳ ಹೆಸರು -ಆದ್ರೂ 

ನನಗೆ ನಿಮ್ಮ ಪುಟ್ಟಾ ನಿಮಿಗೆ ಹ್ಯಾಗೋ ನನಗೆ ಅವಳು, “ಸೂಳೆ ! ” 

“ಸಂಸಾರಿ ! ” ಇದೆಲ್ಲಾ ಸಮಾಜ ತನ್ನ "ಜ್ಞಾನ” “ಅಜ್ಞಾನ" ದ ಆವೇಶದಲ್ಲಿ 

ಸ್ತ್ರೀಯರಿಗೆ ನಿರ್ಣಯಿಸುವ ವೇಷ ! ಸೂಳೆಯಾಗ್ಲೀ !. . . . ಸಂಸಾರಿ 

ಯಾಗ್ಲೀ ! ಮುಖ್ಯ . . . ಸ್ತ್ರೀ . . . ಸ್ತ್ರೀನೇ ! ಆದ್ರೆ ಸಂಸಾರಲ್ಲಿ ತಾನು 

ಅನುಭವಿಸೋ ಸುಖಾನ ಮರೆತು ಆ ಸುಖಗ್ಳು ಇಲ್ಲದ ಸಹೋದರಿಯರಿಗೆ 

ಸಹಾಯ ಮಾಡಲೇಬೇಕೂಂತ ಹತ್ತೆಂಟು ಹೆಂಗಸ್ರು ಸೇರಿ ನಿರ್ಧರಿಸಿ . . . 

. . ನಿಮ್ಮಂಥಾ ಹೆಸರುವಾಸಿ . . . ಆದೋರ್ನ ಹ್ಯಾಗೆ . . . ಯಾವ 

ವಿಧವಾಗಿ ನಮ್ಮ ಸಹೋದರಿಯರಿಗೆ ನಮ್ಮಿಂದ ಆಗುವ . . . ಅಲ್ಪಸ್ವಲ್ಪ 

ಸಹಾಯಾನ ಮಾಡ್ಲೇ ಬೇಕೂ ಅಂತ ಸಂಘದ ಕಮಿಟಿಯವರು ನನ್ನನ್ನು , 

ನಿಮ್ಮನ್ನು Consult ಮಾಡೋಕೆ ಕಳ್ಸಿದ್ದು ತಪ್ಪೇ ? 

ಸೂಳೆ : ತಪ್ಪಲ್ಲ ! ಆದ್ರೆ . . . ಒಂದೇ ಒಂದು ಮಾತು !ನೀವ್ ಹೇಳೋದೇನೂ 

.. . ಈ ಮಾಯಾ ಪ್ರಪಂಚದಲ್ಲಿ ಗಂಡ್ಸಾಗ್ಲೀ , ಹೆಣ್ಣಾಗ್ಲೀ , ಸೂಳೆಯಾಗ್ಲೀ, 

ಗರ್ತಿಯಾಗ್ಲೀ ಹುಟ್ಟಿದ ಕಾರಣ ಸಮಾಜದ ಭಾರವಲ್ಲ ! ಆಯಾ ವ್ಯಕ್ತಿಯ 

ಭಾರ ! ಅಂತ ಆದ್ರೂನೂವೇ ನನ್ನ ಕಸ್ಬಿಗ್  ತುತ್ತಾದ ನನ್ನ ತಂಗಿಯ 

ರ್ಗಿರೋ ಆಹಾರ, ನಿದ್ರಾ , ಭಯ , ಮೈಥುನ ಇತ್ಯಾದಿ ತಿರ್ಯಕ್ ಚತುಷ್ಟಯ 

ಗಳನ್ನು ಅರಿಯುತ್ಲೂನೂವೆ ನೀವಾಯ್ತು ನಿಮ್ಮ ಚತುಷ್ಟಯಗಳಾಯ್ತು 

. . . . ನಾವಾಯ್ತು . . . ನಮ್ಮ ಚತುಷ್ಟಯಗಳಾಯ್ತೂಂತ . . . 

ಲೇಡಿ ಶಿವ : ಅರ್ಥವಾಗಿಲ್ಲ . . . ನೀವೇಳೋದು? 

ಸೂಳೆ : ಅರ್ಥಾಗ್ಲಿಲ್ವೇ ? ನಮ್ಮ ಹಾಗ್ಯೇ ಗರ್ತಿಯರೂ . . . ಕ್ಷಮ್ಸಿ ! . . . 

ಸಂಸಾರಿಗಳೂ . . . ತಮ್ಮ ಆಹಾರ, ತಮ್ಮ ನಿದ್ರೆ , ತಮ್ಮ ಪ್ರಾಣಭಯ , 

ತಮ್ಮ ಮೈಥುನ ಇವುಗಳಿಗೋಸ್ಕರ ಒಬ್ಬ ಗಂಡನ್ನ ಹಿಡ್ಡು . . . ಸಂಸಾರ 

ಮಾಡೋದೂನೂವೇ “ಒಂದ್ ಕಸ್ಬೂ” ಅಂತ - ಅದು ಗರತಿಯರ 

ಕಸುಬೂ ! ”. . . . ಅಂತ ನಾನು ಹೇಳ್ತನೆ !. . . ವಾದಿಸ್ತೇನೆ . . . 

ನಿರ್ಧರಿಸ್ತೇನೆ!. . . ನಿಮಗೆ ಹೊಂದಿಸ್ತೇನೆ. . . ಈ ನಿಮ್ಮ ಗರ್ತಿಕಸಬ್ನಲ್ಲಿ 

. . ಮೂವತ್ತೂ ತುಂಬ್ದೆ . . . ತಿಂಗ್ಳಿಗೆ ಹತ್ತ್ರೂಪಾಯೂ ಸಂಪಾದ್ಸೋಕೆ 

ಯೋಗ್ಯತೆ ಇಲ್ಲ ಗಂಡನ ಕೈನೂ ಹಿಡ್ದು , ಒಂದು ಕಸ್ಬ್ನೂ ಸಮಾಜದಲ್ಲಿ 

ಸಂಪಾದಿಸದ ಅವನ್ ನೂ ಹನ್ನೊಂದ್ನೇ ಮಗುವಾಗಿ ಭಾವಿಸಿ, ಆ ಹತ್ತೇ 

ರೂಪಾಯಿ ಸಂಬ್ಳದಲ್ಲಿ ಮನೆ ಬಾಡೇನೂ ತೆತ್ತು ಮನೇಲಿರೋರ 

ಹೊಟೇನೂ ತುಂಬಿ ಬಿಟ್ಸ್ ಹೊಟ್ಟೆ ಮುಖ ಕಣ್ಣುಗ್ಳು ಇಂಗ್ತಿರೋದ್ನ  

ತಾನು ತಿಳುಕೊಳ್ಳೋಕೆ ತನಗೆ ಒಂದು ಕನ್ನಡೀಗ್ಕೂಡ ಗತಿ ಇಲ್ಲೆ ತನ್ನ ಅಪ್ಪ 

ಅಮ್ಮ ಒಪ್ಪಿದ ಕೆಲಸಕ್ಕೆ ಬಾರ್ದ ಯಾರೋ ಒಬ್ಬ ಗಂಡ್ಸು ತನ್ನ ಕುತ್ಗೇಗೆ 

ಕಟ್ಟಿದ ಕರೀಮಣೀಂಬೋದೇ . . . ತಾನ್ಸಲೆತನ್ನ ಹತ್ತ್ಸಿ ಸ್ವರ್ಗಕ್ಕೇ 

ಸೇರ್ಸೋ . . . ಏಣೀ ಅಂದ್ಕೊಂಡು ದುಡೀತಾ ನರಳಿರೋ ಗರ್ತಿಯರ 

. . . ಲಕ್ಷಗಟ್ಟೆ ಗರ್ತಿಯರ ಏಳ್ಗೇಗೆ ಯಾರಮ್ಮಾ . . . ಯಾವಾಗಮ್ಮಾ 

ಒಂದು ಕಮ್ಟೀಂತ ಏರ್ಪಾಡಾಗೋದು ? ಅವೂ ನಿಮ್ ನಮ್ಮ 

ತಂಗಿಯರೇ ಅಲ್ವೇ ? 

ಲೇಡಿ ಶಿವ : (ಸೂಳೆಯ ಉಕ್ತಿಯನ್ನು ಕೇಳುತ್ತಾ ಕೇಳುತ್ತಾ ಬೆಚ್ಚಿಬಿದ್ದು ) ಅನ್ಯಾಯ 

ಬುದ್ದೀ ಅಮ್ಮಾ ನಿಮ್ದು ! ಪ್ರಶಂಸೆ ಮಾತಲ್ಲಾ . . . ಸತ್ಯವಾಗ್ ಹೇಳೇನೆ! 

... ಸಂಸಾರಿಕ ಹೆಂಗಸ್ರಾದ ನಾವು . . . . ನಮ್ ನಮ್ಮಲ್ಲೇ ಇರೋ 

ಕೊರತೆಗಳಿಗೆಲ್ಲಾ ಕಣ್ಣು ಮುಚ್ಕೊಂಡ್ .. . ನಮ್ ಕುತ್ಗೇಲಿರೋ ಚಿನ್ನದ 

ತಾಳಿಗಳ ಹೆಮ್ಮ . . . ನಮ್ಮ ತಲೆಗೆ ಹತ್ತಿ . . . . 

ಸೂಳೆ : ಹೆಮ್ಮೆಂದ್ರೇನಮ್ಮಾ ! ನಿಮ್ಗೆ ? ಹೆಮ್ಮೆ ?! ಹೆಮ್ಮೆಯ ಲವಲವಾಂಶ 

ವಾದರೂ ನಿಮ್ಗಿದ್ದಿದ್ರೆ . . . ನೀವು ಈ ನಮ್ ಕೊಂಪೇಗೆ . . . ಈ ನಮ್ಮ 

ಸೂಳೆಗೇರಿಗೆ ಬರ್ತಿದ್ರಾ ?. . . ಸೂಳೇರ ಹೊಟ್ಟೇಲಿ ಹುಟ್ಟಿದ ನನ್ನ 

ಪುಟ್ಟಾನ. LittleLady ” ಅಂತಿದ್ರಾ ? ? ನಾನ್ ಹೇಳೋದು ಅದಲ್ಲಾಮ್ಮಾ 

. . . ನನ್ನ ಕಸುಬಿಗೆ ತುತ್ತಾದ ನನ್ನ ತಂಗಿಯರಿಗೋ ಆಹಾರ, ನಿದ್ರಾ 

ಇತ್ಯಾದಿ ಕೊರತೆಗಳನ್ನು ನಾನಾದ ನಾನೂ , ನೀವಾದ ನೀವೂ , ನಿಮ್ಮ 

ಅದ್ಭುತ ಕಮೀಟೀನೂ ಪರಿಹರಿಸಬೇಕೂ , ಅಂಬೋದಲ್ವೇ ನಿಮ್ಮ 

ನಿಮಿತ್ತ ? 

ಲೇಡಿ ಶಿವ : ಹೌದಮ್ಮಾ ಹೌದು ! 

ಸೂಳೆ : ನೋಡೀ, ಕಷ್ಟ್ ಪಡೋ ಹಲಕೆಲವು ಸೂಳೆಗಳಿಗೆ ನೀವುಗ್ಳು ತಾನೇ ಆಗ್ಲಿ , 

ಹಲಕೆಲವು ಬಡ ಗರ್ತಿಯರ್ಗೆ ನನ್ನಾಂಥಾವ್ರು ತಾನೇ ಆಗ್ಲಿ . . . ಸಹಾಯ 

. . . ಕೇವಲ ಧನಸಹಾಯ . . . ಎಷ್ಟೂಂತ ಮಾಡಿದ್ರೆ ತಾನೆ ಏನೂ ? 

ಈಗ್ಲೂನೂ , ಇನ್ನ್ ಮುಂದಕ್ಕೂನೂ ಇದೊಂದು “ ವೇಷಾ"ಂತ ನೀವೇ 

ಹೇಳಿದ್ರೀ ಅಲ್ವೇ ? . . . ಗರ್ತಿ ` ವೇಷ್ವಾಗ್ಲಿ ಸೂಳೆ ವೇಷ್ವಾಗ್ಲೀ . . . 

ಹೆಂಗ್ಸೂ ಅಂತ ಹುಟ್ಟಿದ ಮೇಲೆ ಈ ಎರಡು ವೇಷಗಳಲ್ಲಿ ಒಂದನ್ 

ವಹಿಸ್ಕೊಂಡು ಆಹಾರ, ನಿದ್ರೆ ಅಲ್ದೆ ಇತರ ತಿರ್ಯಕ್ ಪಶುಕರ್ಮಗಳ 

ಗಲಾಟೇಲಿ ನಾಯಿ ನರಿಗ್ಳ ಲೆಖ್ಯಾಚಾರಕ್ಕೆ ಸಿಕ್ಕೊಳ್ದ ಪುಣ್ಯ ಪ್ರಭಾವದಿಂದ 

ಹುಟ್ಟಿದ ಮನುಷ್ಯ . . . ಕಾಲ, ದೇಶ, ವರ್ತಮಾನ ಇಲ್ದೆ. . . ಮೈಥುನಕ್ಕೇ 

ಸರ್ವ ಕಾಲವೂ ಸಾಧಿಸ್ತಾ . ... ಹೆಂಗಸರ್ನ ತನ್ನ ಸುಖಕ್ಕೆ ಆಡಿಸ್ತಾ . . . 

ಪಾಪ ಪುಣ್ಯಕ್ಕೂ ಹೆದರ್ದೆ ನಿಮ್ಮನ್ನು 'ನೀವೂಂ'ತ್ಲೂನೂವೇ ನನ್ನನ್ನು 

“ ನಾನೂ " ತ್ತೂನೂವೇ ವಿಂಗಡಿಸಿ . . . ಇಬ್ಬರ್ನೂ ಹೆಂಗ್ಸಾಗಿ ಹುಟ್ಟಿದ 

ಜನ್ಮಾನೆಲ್ಲಾ ತನ್ನ ಆಹಾರ ನಿದ್ರೆ ಮೈಥುನಕ್ಕೆ ಗರ್ತಿನೂ ಸೂಳೇನೂ 

ಗೊಂಬೆ ಹಾಗೆ ಆಡಿಸ್ತಿರೋ ಗಂಡು ಮೃಗದಿಂದ್ಲೇ ನಿಮ್ಮ . . . 

ನಮ್ಮೀ ಸ್ಥಿತಿಗೆ ಮೂಲಕಾರಣವಾದ ಈ ತಿಳಿದೂ ತಿಳಿಯಲೊಲ್ಲದ 

ಗಂಡು ಮೃಗ - ನೀವು ಶ್ಲೋಕದಲ್ಲಿ ಹೇಳೋ ಹಾಗೇ , , , ಈ 

ಗಂಡೂಂಬೋ . . . ಮೃಗ . . . ನೀವ್ ಹೇಳ್ದ್ಹಾಗೆ . . . 

ಜಾಗರಿಸ್ಕೊಳ್ಳೋವರೆವಿಗೆ . . . ಏಳ್ಗೆ ಎಲ್ಲೀದಮ್ಮಾ ಹೆಂಗಸರಿಗೆ ? ಈ 

ಗಂಡು ಮೃಗ ಆಡಿಸ್ತಿರೋ "ಗರ್ತಿ ಕಸಬ್ಗೆ ” ಪ್ರತಿನಿಧಿಯಾದ ಲಕ್ಷಾಂತ್ರ 

ನಿಮ್ಮ್ ಗಳಿಗಾಗ್ಲೀ "ಸೂಳೆ ಕಸ್ಬಿಗೆ” ಪ್ರತಿನಿಧಿಯಾದ ನನ್ನಂಥಾ ಸಾವ 

ರಾಂತ್ರ ಸೂಳೆಗಳ್ಗಾಗ್ಲೀ  . . . . ? ? ? ( ನಸುನಗುತ್ತಾ ಎದ್ದು ಇದುವರೆಗೆ 

ಸೂಳೆಯ ಮಾತಿಗೆ ಒಳಬಿದ್ದ ಲೇಡಿ ಶಿವದಾಸಅಯ್ಯರನ್ನು ಸಮೀಪಿಸಿ 

ಹೆಗಲನ್ನು ಸವರುತ್ತಾ “ಕ್ಷಮೀಮ್ಮಾ ”! ಎಂದು ಹೇಳಿ ಮೊದಲಿನಂತೆ 

ಕುರ್ಚಿಯಲ್ಲಿ ಕುಳಿತು ) ಒಟ್ನಲ್ಲೀಮ್ಮಾ, ಹೆಂಗ್ಸಿನ ಯೋಗ್ತೈ ಗಂಡು 

ತಿಳೀದೇನೂ ಗಂಡ್ಸಿನ ಅಯೋಗ್ಯತೆಗೆ ಹೆಂಗ್ಸು ಕಣ್ ಮುಚ್ಕೊಂಡೂನೂ 

ಇರೋದ್ರಿಂದ್ಲೇ ಈ ಅವಸ್ಥೆಗಳೆಲ್ಲಾ ಈಗಿರೋದು, ಸಮಾಜಕ್ಕೆ ! 

ಲೇಡಿ ಶಿವ : ( ಚಮಕಿತಳಾಗಿ) ಹಾಗಾದ್ರೆ . . . ಗಂಡೆಸೆಲ್ಲಾ ಕಿರಾತ್ರೇ ? 

ಸೂಳೆ : ಹೌದೂಮ್ಮಾ ! ಎಲ್ಲಾ ಕಿರಾತ್ರೆ ! ನಿಮ್ಮ ಯಜಮಾಗ್ರಂಥ ಒಬ್ಬಿಬ್ರನ್ 

ಮಟ್ಗೆ ಬಿಟ್ಟು , ಮಿಕ್ಕ ಹೆಂಗಸ್ರಿಗೆಲ್ಲಾ ಕಿರಾತ್ರೆ ಗಂಡಸ್ರು , ಒಬ್ಬಿಬ್ಬ 

ಗಂಡಸರ್ನ ಬಿಟ್ಟು , ಮಿಕ್ಕ ಗಂಡಸಿಗೆಲ್ಲಾ ಹೆಂಗ್ಸು ಕೇವಲ ಭೋಗಪದಾರ್ಥ 

. . . ಇದು ನಿಮಗೆ ಗೊತ್ತಿಲ್ಲ . . . ತನ್ನ್ ಭೋಗಕ್ಕೆ ಒದಗಿದೋಳು . . 

. . ಸೂಳೆಯಾಗ್ಲೀ . . ಇಲ್ಲಾ . . . ತಾನು ತಾಳೀಕಟ್ಟಿ ಬೆಂಕಿಯೆದುರ್ಗೆ  

“ ಧರ್ಮಚ ಕಾಮೇಚ ಅರ್ಥಚ ನ ಅತಿಚರಾಮಿ ” ಅಂತ ತಾನು ಮಾತ್ 

ಕೊಟ್ಟ ಹೆಂಡ್ತಿಯಾಗ್ಲೀ . . . ಭೋಗ ಪದಾರ್ಥದ ಆಹಾರಕ್ಕೆ , ನಿದ್ರೇಗೆ 

.. ಆಗಾಗ್ಗೆ ದುಡ್ಡು ಕೊಡುತ್ತಾ ಸಂಸಾರಿಯರನ್ನೂ . . . ಸೂಳೆಯರನ್ನೂ 

. . . ಈ ಡಬ್ಬಲ್ Zaನಾನಾನ ಜರಗಿಸ್ತಾ . . . ಮೀಸೆ ಹೊಸೀತಿರೋ 

ಗಂಡ್ಸು ಕಿರಾತನಲ್ದೆ ಇನ್ನೇನು ? ಇವನ ಭೋಗಕ್ಕೆ ತಾಳೀಕ್ಕಟ್ಟಿಸ್ಕೊಂಡು 

ಬೀಳೋ ತುತ್ತೂ . . . ನೀವು! ತಾಳೀಕ್ಕಟ್ಟಿಸ್ಕೊಳ್ಳದೇನೆ ಬೀಳೊ ತುತ್ತೂ 

ನಾವು ! ಈ ಗಂಡಿನ್ನ ನಮ್ಮ ಹಾಗೇ ತೃಪ್ತಿಪಡಿಸದೆ ಇರೋ ಇವನ 

ಪತ್ನಿಗಳು ಎಷ್ಟು ದುಡ್ತಾನೆ ಎರ್ಚಿ, ಎಷ್ಟು ಕಮಿಟಿಗಳ ಏರ್ಪಡಿಸಿದ್ರೂ  

ನೂವೆ ಏಳ್ಗೇ ಎಲ್ಲೀದಮ್ಮಾ . . . ನಮಗೇ ನಿಮ್ಮಿನ್ದಾ ? 

ಲೇಡಿ ಶಿವ : ಇದೇನಮ್ಮಾ ! ಹೀಗ್ಹೇಳ್ತೀರಾ ! ಯೌವನದಲ್ಲಿ ತಾಳೀಕಟ್ಟಿ , ತನ್ನ 

ಕೈ ಹಿಡ್ಡ ಹೆಂಡ್ತಿ ಜೊತೇಲಿ ತನ್ನ ಯೌವನ . . . ವಾರ್ಧಿಕ್ಯ . . . 

ತನ್ನಾಯಸ್ನೆಲ್ಲಾನೂ ಕಳೀತಾಲೂ . . . ತನ್ನ ತನುಮನ- ಧನಗಳನ್ನೂ ತನ್ನ 

ಕೈಹಿಡ್ದ ಸಹಧರ್ಮಿಣಿ ಕೈಲಿ . . . . 

ಸೂಳೆ: (Interrupting and indignantly ) ತನ್ನ ಸಹಧರ್ಮಿಣಿ ! ಹಯ್ಯೋ , - 

ಬಿಡೀಮ್ಮಾ ! ನಿಮ್ ಮನಸ್ಸು ಶುಭ್ರವಾದಾಕ್ಷಣವೇ . . . ತ್ರಿಲೋಕಾನೂ 

ಶುಭ್ರಾಂಬೋ ಆವೇಶದಲ್ಲಿಧೀರಾ. . .ನೀವು? ಸಮಾಜವೆಲ್ಲಾ ನಿಮ್ಹಾಗೆ 

ಇದ್ದಿದ್ರೆ ಜೈಲುಗಳ್ಯಾಕೆ ? . . . ಬ್ಯಾಂಕುಗಳ್ಯಾಕೆ ? . . . ಬೀಗಗಳ್ಯಾಕೆ ? 

ಮನೆ ಕಿಟ್ಗಿಗಳ್ಗೆ ಕಂಬಿಗಳ್ಯಾಕೆ, ಸಲಾಕಿಗಳ್ಯಾಕೆ ? ಪೋಲಿಸ್ಯಾಕೆ ? . . . 

ಜಡ್ಜಿಗಳ್ಯಾಕೆ ? ಲಾಯರಿಗಳ್ಯಾಕೆ . . . ಸಮಾಜದಲ್ಲಿ ಅನ್ನೋನ್ಯ ಜೀವ್ನಕ್ಕೆ 

ಬೇಕಾದ ಗದ್ದೆ , ಹೊಲ, ಕೃಷಿ ಫಲಗಳನ್ನ ಪರಸ್ಪರ ಕೊಟ್ಟು ತಕ್ಕೊಂಡು . 

. . ಸುಖವಾಗಿ ಜೀವಿಸಬಹುದಾದ ನಮ್ಮ ಸಮಾಜಕ್ಕೆ . . . ಸವ್ರನ್ನು 

ರೂಪಾಯಿ - ಆಣೆ -ಕಾಸು- ಬಿಡ್ಗಾಸು ಅಂಬೋ ನಾಣ್ಯಗಳ್ಯಾಕಮ್ಮಾ ನಮ್ಮ 

ದೇಶ್ದಲ್ಲಿ ? 

ಲೇಡಿ ಶಿವ : ದೇವ್ರೇ ಗತಿಮ್ಮಾ ? ಬೆಪ್ಪು ಹಿಡಿಸ್ತಿದ್ದೀರಾ ನನ್ನ ! ? ನೀವು ಕೈಗಾರ್ಕೆ 

ಕೃಷಿ ವ್ಯವಸಾಯ ದುಡ್ಡೂಂತ ಅಂಬೋದನ್ನೆಲ್ಲಾ ನಮ್ಮ ಯಜಮಾನ್ರು 

. . Finance Commissionಗೆ ಅಂತ ಡೆಲ್ಲೀಗ್ ಹೋಗಿ ತಿರಗ್ಬಂದು . 

. . ತಿಳುವಳ್ಕೆ ಇಲ್ಲದೆ ನನ್ನ ಕಿವೀಗೆ ತುಂಬಿದ speechಉ ಜ್ಞಾಪ್ಕಕ್ಕೆ 

ಬರುತ್ತೆ !! ನೀವೆಲ್ಲಿ ಕಲಿತಿರಮ್ಮಾ . . . ಇದ್ನೆಲ್ಲಾ ? ! 

ಸೂಳೆ: (ನಗುತ್ತಾ ) ನಮ್ ಸುಬ್ಬೂ ಕೂಡ ಓದಿದಾಮ್ಮಾ ಅದೇ Speecho . . 

. B . A. ಆದೋನು ಅವನೂ . . . ನನ್ಗೆ ಅರ್ಥವಾಗ್ದಿದ್ರೂನೂವೇ ಅವನು 

ಓದಿದ ಇಂಗ್ಲಿಷ್ ಪದಗಳ ಭರಾಟೇಗೇನೇ ನಾನು ಬೆಚ್ಚಿದ್ದೇಮ್ಮಾ ! ಆದ್ರೆ 

. . . . “ Financeooಿ"ಂಬೋ ಪದಕ್ಕೆ “ ದುಡ್ಡು ” ಅಂಬೋ ತರ್ಜುಮೆ 

ಮಾಡೋ ಇಂಗ್ಲೀಷಾದ್ರೂ ಸುಬ್ರೂಗ್ ಗೊತ್ತಿರೋ ಹೊತ್ಗೇನೇ . . . 

ನನಗೂ ಹೇಳ್ಕೊಟ್ನಮ್ಮಾ ! . . . ಒಟ್ನಲ್ಲಿ ಇಂಡಿಯಾ ದೇಶ್ದ ಕೋಟ್ಯಾಂತ್ರ 

ರುಪಾಯ್ನ ಜಮಾಖರ್ಚು . . . ನಿಮ್ಮ್ ಯಜಮಾನ್ರು ದೆಹಲಿ 

ವಾದಿಸ್ತಿದ್ದಾಕ್ಷಣ್ವೇ ...ನಮ್ ದೇಶಲ್ಲಿ . . . ನಿಮ್ಮನ್ನ ಮುಂದೆ ತಳ್ಳಿರೋ 

Committee ಹೆಂಗಸ್ರೂ , ನಾವುಸೂಳೇರೂ .. . ನಮ್ಮ ಏಳ್ಗೇಗೆ ಬೇಕಾದ 

ಲಕ್ಷಾಂತರ ರೂಪಾಯ ಒದಗ್ಸೋಕೆ ತಯಾರಾಗಿದ್ದೀರಮ್ಮಾ ? 

ಲೇಡಿ ಶಿವ : ಇದೂ . . . ದುಡ್ಡಿನ್ಮಾತಲ್ಲಾಮ್ಮಾ . . . ! 

ಸೂಳೆ : ನನಗೊತ್ತೂಮ್ಮಾ ! ದುಡ್ಡಿನ್ ಮಾತಲ್ಲಾ ! ನಿಮ್ ಮನಸ್ನ ಕಳವಳ 

ದ್ಮಾತು ನಿಮ್ಮ ಸಂಘ ಸೂಳೇರೇಳ್ಗೇಗೆ ಎದ್ದ್ ನಿಂತದ್ದಾಯ್ತು ! ಅದರ 

ನಿಮಿತ್ತಾನ ಸಾಧಿಸೋಕೇಂತ ( ಮಾತನ್ನು ನಿಲ್ಲಿಸಲು ಪ್ರಯತ್ನಿಸುವ ಲೇಡಿ 

ಶಿವದಾಸಯ್ಯರ್ ರ ಮಾತಿಗೆ ಅಡ್ಡವಾಗಿ) ನಿಮ್ಮನ್ನು ಮುಂದಿಟ್ಟಿರೋದು 

ಈ ಕಮ್ಟಿ ! ಹೌದೋ ಅಲ್ವೋ .. . ? ನಮ್ಮೇಳ್ಗೇಗೇನ್ ಮಾಡ್ತೀರಮ್ಮಾ 

ನೀವು ?. . . ಮಸ್ಲಾ . . . ನಾವೆಲ್ರೂಲೂನೂವೆ . . ನಮ್ಮ್ ಕಸ್ಬಿನೋರು 

ನಾವೆಲ್ರೂನೂವೇ . . ನಿಮ್ ದೊಡ್ಡ ಬಂಗ್ಲೆ ಕಾಂಪೋಂಡಿನಲ್ಲಿ ಹಿಂಡು 

ಹಿಂಡಾಗಿ ಜಮಾಯಿಸ್ಕೊಂಡು, ನಿಮ್ಮ ದರ್ಶನವಾದ್ಮೇಲೆ. . . ಈ ನಮ್ 

ಕಸ್ಬು ಬಿಟ್ಬಿಟ್ಟೂ ಅಂತಿಳ್ಕೊಳ್ಳಿ. . . ಮಸ್ಲ ! . . . ನಾವ್ಬಿಟ್ಟ 

ಮನೇಗ್ ಬದ್ಲಾಗಿ ಇನ್ನೊಂದು ಮನೆಕಟ್ಟಿ ನಾವೀಗ ತಿನ್ತಾ ಇರೋ ಅನ್ನ 

ಬಟ್ಟೆನ ನೀವು ಕೊಟ್ಟು ಲಕ್ಷಾಂತರ ಗಟ್ಲೆಯಾಗಿ ಈಗ ನರಳ್ತಿರೋ 

ನಮ್ಮನ್ನೆಲ್ಲಾ ಸುಖವಾಗಿಡೋಕೆ. . . ಈ ಒಂದು planoo ಅಂತಾರಲ್ಲಾ 

. . . planoo . . . ಅದೇನಾದ್ರೂ ನಿಮ್ಮ committee ತಯಾರು 

ಮಾಡಿಧಾರ್ಯೇ ? 

ಲೇಡಿ ಶಿವ : ಹೌದಮ್ಮಾ ! ನಿಮಗ್ ಕೆಲ್ಸಾ ಕೊಡ್ತೇವೆ ! 

ಸೂಳೆ : ( ನಸುನಗುತ್ತಾ ) ನಿಮಗ್ ಗೊತ್ತಿಲ್ಲಾಮ್ಮಾ ! ಕೆಲ್ಸ ಕೊಟ್ಟಿರೋದೂ . .. 

. ನಿಮಗೆ ? . . . ನಿಮ್ಮ ಕಮ್ಟೀ !. . . ಕಾಮಧೇನೂ ಹಾಗೆ ಆಜನ್ಮಾಂತರ

“ ಸತ್ತ್ವ ” ಅಂತಾರಲ್ಲಾ ಆ ದಾರೀಲೇನೇ ಇದುವರೆಗೂ ಜೀವಿಸಿದ ನಿಮ್ಮನ್ನ 

ತಾವು ಹಿಂದೆ ಅವಿಡ್ಕೊಂಡು ಮುಂದೆ ಕಳಿಸಿದ ಆ ಕಮಿಟಿ ಹೆಂಗಸ್ರು . . 

. . ಕೆಲಸ ಕೊಡೋದೂ . . . ನಮಗಲ್ಲ . . . ನಾವೂ too much ಘಾಟೀ ! 

ನಾನೂ ಸ್ವಲ್ಪ ಇಂಗ್ಲೀಷ್ನ, ಇಲ್ಲಿ ಬರೋ ಸ್ನೇಹಿತರಿಂದ ಕಲ್ತಿಧೇನೆ ! 

ಅವರು ಕೆಲಸ ಕೊಟ್ಟಿರೋದು ತಮಗೆ ! ಚಿರತೆ ಅಂತಾರಲ್ಲಾ . . . ಆ 

ಬಾಬ್ತು ಅವರುಗಳೂ ! ಕಾಮಧೇನು ಅಂದೆನಲ್ಲಾ . . . ಆ ಬಾಬ್ತು ತಾವು! 

ಚಿರತೆಯ ಕುತ್ತಿಗೇ ಬೆನ್ನನ್ನ ಮುರಿದು ಮೂಲೆಗೆ ಎಸಿಯೋ "ಹೆಬ್ಬ್ಹುಲಿ"ಂ  

ತಾರಲ್ಲಾ ಪುಟ್ಟಾ ಅಂದ್ಹಾಗೆ. . . ಆ ಬಾಬತ್ತು ನಾವು ! ಸೂಳೆಗಳು ! 

ಈ ಹೆಬ್ಬುಲಿಗಳು ನಾವು ! ಮನುಷ್ಯಾಮ್ಮಾ ! ನಿಮಗೆ ತಿಳಿಯದ ಸಂಸ್ಕೃತ 

ಇಲ್ಲಾ ! . . . ಆದರೂ ಹೇಳೇನೆ . . . “ ಪುನ್ನಾಮೋ ನರಕಾದಸ್ಮಾತ್ 

ತ್ರಾಯತೇ ಇತಿ . . . ಪುತ್ರಃ ! ” ಹೀಗೆ ತಾನು ಸತ್ಮೇಲೆ ತನಗೂ ತನ್ನ 

ಪಿತೃಗಳಿಗೂ ಸಲ್ಲಿಸಬೇಕಾದ ಪಿಂಡಾನ ಕೊಡೋ ಪುತ್ರ ಬೇಕೂ ಅಂಬೋ 

ಧರ್ಮಾನ ಮುಂದಿಟ್ಕೊಂಡೂ ತನ್ನ ಪುತ್ರನ್ನ ಹೆರೋಕೆ . . . ಹತ್ತು 

ತಿಂಗಳು ಹೊತ್ತು ಜನಾನಾ ಹಾಸ್ಪಿಟಲ್ ಸಹಾಯವಿಲ್ಲದೆ ಹೆರೋ ನಿತಂಬ 

ಗಳು . . . "wet nurse ” ಇಲ್ಲದೆ ಆ ಮಗೂಗೆ ಕುಡಿಸೋ ಮೊಲೆಗಳೂ 

. . . ಅಲ್ದೆ ತನ್ನ ಕುಟುಂಬದಿಂದ “ Hysteria "...." Epilepsy ” ಹುಚ್ಚು 

. . . "Diabetesಊ ಇತ್ಯಾಧಿ ಯಾವ ರೋಗಗಳೂ ಕುಲಗೋತ್ರ, ಜಾತಿ 

ಸಮಾಜದಲ್ಲಿ ಇಲ್ಲದ ಹೆಂಗಸ್ನ ಚುನಾಯಿಸಿದ “ ಮಗು ಬೇಕೂಂ"ಬೊ 

ಗಂಡು ! ಇದು ಒಂದು ತರಹ ಗಂಡ್ಸು . . . ತಮ್ಮಪ್ಪ ಸಂಪಾದಿಸಿದ 

ದುಡ್ಡು , ತನ್ನ ಅಪ್ಪ ಅಮ್ಮ ಕೊಟ್ಟ, ನೆಟ್ಟ ಮೂಗು, ಕೆಂಪು ಚಮ್ಡ , ಈ 

ಆಸ್ತಿಗಳ್ನ ವ್ಯವಸ್ಥೇಗೆತಂದು, ಸಮಾಜದಲ್ಲಿ ಇಲ್ಲದ ಹಾವಳಿ ಮಾಡಿ, ಹಲ 

ವಾರು ಕುಟುಂಬಗಳಿಗೆ ಹಾನಿಬೀರಿ ಕೊನೇಗೆ, ಹಾಸ್ಪಿಟಲ್ ನಲ್ಲಿ ಸಾಯೋ 

ಗಂಡ್ಸು ಇನ್ನೊಂದು ತರಹಾ ಗಂಡ್ಸು ! ಮೊದಲನೇ ಬಾಬ್ತು ಗಂಡಸ್ರುಗಳ 

ಗೋಷ್ಠೀಗೆ ಸೇರಿದವರು ತಾವು : ಈ ಎರಡೇ ಗೋಷ್ಠೀಗೆ ಸೇರಿದ 

ಕ್ರಿಮಿಗಳಿಂದ ಬದುಕಿಯೂ ಘಟ್ಟಿ ಪುಷ್ಟಿಯಾಗಿರೋವ್ರು ನಾವು! ಸಂಸಾರ 

ಗಳು ತಕ್ಕೊಳ್ಳೀಮ್ಮಾ. . . ನಿಮ್ಮ ನಿಮ್ಮಂಥಾ ಎರಡೂ ಮೂರು 

ಸಂಸಾರಗಳ್ನ ! . . . ಬಿಟ್ಟು . . . ಮಿಕ್ಕ ಸಂಸಾರಗಳನ್ನು ತಕ್ಕೊಳ್ಳಿ ! 

ಮಸ್ಲ ! ಮನುಷ್ಯ ! ದೊಡ್ಡ ಮನುಷ್ಯ , ದುಡ್ಡು , ದಂಢ್ಯಾಗಿ ಧನಾನ 

ಸಂಪಾದಿಸೋ ಮನುಷ್ಯ ಆದ್ರೂನೂವೇ" ಆಹಾರ" , "ನಿದ್ರಾ ”, “ ಭಯ ”, 

“ ಮೈಥುನ ” .. . ಈ ಚರ್ಮಾತ್ಮ ತಿರ್ಯಕ್ ಚತುಷ್ಠಯದಿಂದ ಕಟ್ಟಿರೋ 

ಮನೆಯಾಕೆ, ಮರುದಿನ, ಮೂರು ರಾತ್ರೆ . . . ಮೂರುಪ್ಪು ಮುಂದಾಗಿ 

ಹಾಕಿ ಬಡಿಸಲಿ !. . . ಹೋಟೆಲಿಂದ ಅನ್ನ ತರಿಸ್ಕೊಳ್ತಾನೆ . . . office 

ಎಲ್ಲಾ ಅವನು business ಮಾಡೋ ಷಾಪಿನಲ್ಲೇ . . . ಇವನಿಗೇಂತ ಹೆತ್ತ 

ಹಸು ಮಗು ಮಧ್ಯರಾತ್ರೀಲಿ ಶೈಶವಾವಸ್ಥೇಲಿ ಕಿರ್ಲಿ ಇವನ “ನಿದ್ರಾ 

ಸುಖಾನ ಭಂಗಿಸ್ತೋ ಬೇರೆ ಕಡೆ ಮಲ್ಕೊಳ್ಳೋಕೆ ಏರ್ಪಾಡು ಮಾಡು 

ಕೋತಾನೆ . .. . ಇನ್ನು ಇವನ ಸಂಸಾರದಲ್ಲಿ , ಸಿಡುಬೂ ಗಿಡುಬೂ , 

ವಾಂತಿಬೇಧಿ, ಆಮಶಂಕೆ, ರಕ್ತಬೇಧಿ ಇವನ ಸಹಧರ್ಮಿಣೀಗೆ ಆಗ್ಲಿ , 

ಸುಪುತ್ರ , ಶ್ರೀಮಂತ ಪುತ್ರ ಶ್ರೀಮಂತ ಸುಪುತ್ರಿಯರಿಗೆ ಆಗಲಿ ತಗಲ್ತೋ, 

ತನ್ನ ಪ್ರಾಣ, ತನ್ನ ಭಯಾನಕದ ಬೆದರ್ಕೇಲಿ ಕುಟುಂಬಾನೇ ಆಸ್ಪತ್ರೆಗೆ 

ಜರಗಿಸ್ಯೋ , ಇಲ್ಲಾ ತನಗೆ “Business ” “ ಗಿಸಿನೆಸ್ಸೂ ” “Camp duty ” 

“ Calcutta Wire" ಊಂತ ಹೀಗೋ ಹಾಗೋ ತಪ್ಪಿಸ್ಕೋತಾನೆ ಮರಣದ 

ಅಪಾಯಾನ ! ಇನ್ನು ಮೂರೂ ಆಯ್ಕೆ !... “ ಆಹಾರ ” “ನಿದ್ರಾ ” “ ಭಯ ! ” 

ಇನ್ನು ನಾಲ್ಕನೇ ತಿರ್ಯಕ್ ಚಪಲಾನೂ ಹೀಗೇನೇವೇಯೆ , ನೆಟ್ಟ ಮೂಗು, 

ನೀಳಕೂದಲು, ತಲೆ, ಮೊಲೆ, ತೊಡೆ, ನಿತಂಬಗಳ್ನ ನೋಡಿ ತನ್ನ ತಿರ್ಯಕ್ 

ಸುಖಕ್ಕೇಂತ ಹೆಂಗಸನ್ನ ಮದಿವೆ ಮಾಡಿಕೊಳ್ಳೋ ಗಂಡ್ಸು ಒಂದು 

ರಖಮ್ಮು . . . ನಾನು ಮೇಲೆ ಮೇಲೆ ಹೇಳಿದ "ಮಕ್ಕಳು ಬೇಕೂಂ"ತ 

ಮದುವೆ ಮಾಡಿಕೊಳ್ಳೋದು ತಮ್ಮ ಯಜಮಾನ್ರ ಹಾಗೆ ಇವನೊಂದು 

ರಖಮ್ಮು ! ಈ ರಖಮ್ಮಿಗೆ ತನಗೆ "ಮಕ್ಕಳು ಬೇಕೂಂ"ತ ಮಕ್ಕಳನ್ನು 

ಹೊತ್ತೂ ಹೆತ್ತೂ ತನ್ನ ಪ್ರಾಣಗಳ ಪ್ರತಿಯೊಂದು ಹೆರಿಗೇಲೂ ಒತ್ತೆ 

ಯಿಟ್ಟು ಕುಗ್ಗಿ ಕುಗ್ಗಿ ಕೊನೇಗೆ ಹಂಚಿಕಡ್ಡಿ ಹಾಗೆ ನಿಂತಿರೋ ಹೆಂಗ್ಸು  

'ಸಮಾಜಕ್ಕೆ ಐದಾರು ಮಕ್ಕಳ ಹುಟ್ಟಿಸಿ ಶಿಕ್ಷಿಸಿ ಸಮಾಜಕ್ಕೆ ಸಲ್ಲಿಸಿದೇನೆ ! 

ಸೇವೆ ಮಾಡಿದ್ದೇನೆ'ಂತ ಹಿಗ್ಗೋ ಗಂಡನಿಗೆ ಈ ಹಂಚಿಕಡ್ಡೀ ಹೆಂಡತಿ, 

ದೇವತೆ - ದೇವತೆ ಹಾಗೆ ಕಂಡು ಬರ್ತಾಳೆ . . .ಅವನ ಕಣ್ಣಿಗೆ ! ಆ 

ಮೊದಲನೇ ರಖಂ ಗಂಡ್ಸೂ ತನ್ನ ಮಾಂಸ, ದುಡ್ಡಿನ ಕೊಬ್ಬಿನ ಕರಗಿಸಿ 

ಕೊಳ್ಳೋಕೇಂತ . . . ಕೆಂಪು ಚಮ್ಡ . . . ತಲೆಮೊಲೆ . . . ನೆಟ್ಟಗೂ , 

ಮೇಲೆ ಹೇಳಿದ ಬಾಬನ್ನೆಲ್ಲಾ ಮುಂದಿಡ್ಕೊಂಡು ತನ್ನ ಭೋಗ ಮೈಥುನ 

ಕ್ಕೇಂತ ಮದುವೆಯಾಗೋನಿಗೆ ಹುಟ್ಟೋ ಮಕ್ಕಳೆಲ್ಲಾ ಉಪಭೋಗ ಕ್ರಿಮಿ 

ಗಳು [By - Products]. ಇವನು ಯಾವ ಯಾವ ಅಂಗಾಂಗಗಳಿಗೆ ತನ್ನ 

ಹೆಂಡತೀಗೆ ಸೋತು ತಾಳಿ ಕಟ್ಟಿದ್ನೋ ಆಯಾ ಅಂಗಾಂಗಗಳು ಕುಗ್ಗಿ 

ಜೋಲುಬೀಳತ್ಲೂ . . . ಅದೇ ಅಂಗಾಂಗಗಳು ಘಟ್ಟಿಮುಟ್ಟಿಯಾಗಿರೋ 

ಇತರ ಹೆಂಗಸ್ರನ್ನ. . . . ಅಂದ್ರೇನೂ .. . ನಮ್ಮಂಥಾವರ್ನ ಆರಿಸಿಕೊಂಡು 

. . . ಒಟ್ನಲ್ಲಿ ನಮ್ಮ Lineಗೆ ಬಂದು, ತನ್ನ ಸರ್ವಸ್ವಾನ್ನೂ - ಹೆಂಡತೀ , 

ಮಾನ ಮರ್ಯಾದೇ ಎಲ್ಲಾನ್ನೂ ಮರ್ತು ನಮ್ಮ ಕಾಲಿಗೊಪ್ಪಿಸ್ತಾನೆ. 

ಸಮಾಜದ ಗಂಡಸರು ಬುದ್ದಿವಂತರೇ ಆಗ್ಲೀ ಎಷ್ಟು ಎಷ್ಟು ಅಂತಸ್ತಿ 

ನವರೇ ಇರಲಿ ಎಷ್ಟು ಐಶ್ವರ್ಯಾನೇ ಇರ್ಲಿ ಇಲ್ಲಿಗೆ ಅವರವರಾಗಿಯೇ 

ಬಂದು ಅವರ ಮನೇ ಆಕೆಗಳಿಗೆ ಒಪ್ಪಿಸಲೇ ಬೇಕಾದ ದುಡ್ಡ್ನಇಲ್ಲಿ 

ಸುರಿದು ಅವರು ಕೊಡಲೇಬಾರದ ರಣ ರೋಗಗಳನ್ನ ಇಲ್ಲಿ ಸಂಪಾದಿಸಿ 

ಕೊಂಡು ಹೋಗಿ, ಅವರ ಸಂಸಾರದಲ್ಲೀ ಕುಲ, ಗೋತ್ರ, ಪ್ರವರ, 

ಮಕ್ಕಳು, ಮೊಮ್ಮಕ್ಕಳು ಇನ್ನವರ ಮುಂದೆ ಮೂರು ತಲೆಮಾರುಗ್ಳು 

ಕಣ್ಣಿಲ್ದೆ , ಮೂಗಿಲ್ದೆ , ಕೈಕಾಲಿಲ್ದೆ ನರಳೋ ಶಿಶು ಸಹಸ್ರಗಳ ನಿಧೀನ ಮಾತ್ರ 

ಸಲ್ಲಿಸಿ ಸಮಾಜಾನೆಲ್ಲಾ ಒಂದೇ Syphillis Gonorrhea ಕೂಪದಲ್ಲಿ 

ದಬ್ಬಿದರೂನೂವೆ - ಇಂಥಾವರ ಹೆಂಡತಿಯರು - ಗರ್ತಿಯರು ಮಾತ್ರ 

ನಮ್ಮನ್ನು ಸೂಳೆ ಮುಂಡೆ “ ಹಾದರಗಿತ್ತಿ ” “ಗುಡಿಶೆಟ್ಟಿ ” -ಕ್ಷಮ್ಸೀಮ್ಮಾ 

ಇದೆಲ್ಲಾ ನಿಮಗೆ ಗೊತ್ತಿಲ್ಲದ ವಚನಗಳು ಆದ್ರೂ ಕಿವೀಗ್ ಹಾಕ್ಕೊ 

ಳ್ಳೋದು ಮೇಲು - ಹೀಗೇ ನಮ್ಮನ್ನು ಕೂಗೋ ಗರ್ತೀಗಳ ಮೇಲೇ 

ನಮಗಿರೋ ಸೇಡು ತೀರಿಸ್ಕೊಳ್ಳೋ ಹೆಬ್ಬುಲಿಗಳ್ನಾ -ನಮ್ಮನ್ನಾ - ಈ 

ಗಂಡು ಕ್ರಿಮಿಗಳ ಬೆದರಿಕೆಗೆ ಮುದುರಿಕೊಂಡು ಇರೋ ಹೇಡಿ 

ಕಿರುಬಗಳಾಗಿರೋ ಆ ಕ್ರಿಮಿಗಳು - ಗರ್ತಿಯರೂಮ್ಮಾ ! (Shaking ಲೇಡಿ 

ಶಿವದಾಸಯ್ಯರ್ 's hand) ಯಾವ ಹೇಸಿಗೆ ಕಸಬಿಗೆ ಸೇರಿಸ್ಯಾರಮ್ಮಾ 

ನಮ್ಮನ್ನಾ . . . ? ತನ್ನ ಹಸಿವಿಗೆ ? ಹುಲ್ಲು ! ತನ್ನ ದಾಹಕ್ಕೆ ? ಕಾವೇರೀ 

ನೀರು ! . . ತಾನು ಜೀವಿಸಿರೋದು ? ಸಮಾಜ ಸೇವೆಗೆ ! .. . 'ಸರ್ವಿಸ್ಸು' 

ಅಂತಾನಲ್ಲಾ ಸುಬ್ಬು . . . ನಮ್ಮ ಸುಬ್ಬು . . . ಅದಕ್ಕೆ ಅಂತ ಇರೋ 

ಹಸುವೊ , ಕರುವೋ , ಹುಲ್ಲೇನೋ ಆದ ತಾವೇ ಆಗಲಿ, ಸೂಳೇರ 

ಏಳಿಗೇಗೇಂತ ತಮ್ಮ ಏಳಿಗೆ, ತಮ್ಮ ಬೀಳಿಗೇನ ಮರೆತ ಹೆಂಗಸ್ರು , ತಮ್ಮ 

ಹಿಂದಿರೋ ಹೆಂಗಸ್ರು ಯಾವ ಹೇಸಿಗೆ ಕಸುಬಿಗೆ ತಾನೇ ನೇಮಿಸೀರಾಮ್ಮಾ ? 

ಲೇಡಿ ಶಿವ : (ಅಡ್ಡಮಾತಾಗಿ ಗಂಭೀರವಾಗಿ) ದೇವ್ರದುರಿಗೆ ನನ್ ತಂಗೀರೂಂತ 

ನಾನ್ಕಾಣೋ ನಿಮ್ಮನ್ನೆಲ್ಲಾ ನನಗೆ ಹೇಸಿಗೆ ಆದ ಕೆಲ್ಸಕ್ಕೆ . . . ನೇಮ್ಸೇನೆ 

ನಾನು ! ? 

ಸೂಳೆ : ಅಮ್ಮಾ ಸರಿ ! ಈಗ ನಮ್ಮ ಕಸುಬು ಬಿಟ್ಟ ನಾವು, ದಿನ್ದಿನಕ್ಕೆ ನೀವು 

ನೇಮಿಸೋ . . . ಮಸಲ ಎಂಟಾಣೆ ಕೆಲಸಕ್ಕೆ . . . ಒಪ್ಪೋಂಡ್ವೋ . . . 

ಅಲ್ಲಾವಿನ್ನ ನಂಬಿ ಕುಲ್ಲಾವೀನ ಹಾಕಿದರೇ ಅಲ್ಲಾನೂ ಕುಲ್ಲಾವೀನೂ 

ಅಲ್ಬಿದಾಯೋ ಆಯಿತಂತೆ ಅಂದ್ಹಾಗೆ . . . ಆಗುತ್ತೆ . 

ಲೇಡಿ ಶಿವ : ಕ್ಷಮ್ಸಿಮ್ಮಾ !. . . “ Home of industry for fallen Women 

ಏರ್ಪಡ್ಸಿದ್ದೇವೆ. 

ಸೂಳೆ : ನನಗೊತ್ತೂಮ್ಮಾ . . . ನಂದೀಗುಡಿ ಬಂಗ್ಲ . . . ಕೈವಲ್ಯಮ್ಮನ್ 

ಕಾರ್ಖಾನೆ . . . ಬೆತ್ತದ್ ಕಾರ್ಖಾನೆ . . . ನಮ್ ಕಸ್ಬ್ನ . . . ಸಾಧ್ಸೋಕೆ 

ಕೈಲಾಗ್ಗೆ ಸುಸ್ತಾದ ಹೆಂಗಸ್ರು ಕೈ ಬೆರಳುಗ್ಳು ಕಿತ್ಹೋಗೋವರ್ಗೂ ಹೆಣೆದ್ 

ಬೆತ್ತದ ಸಾಮಾನ್ಗಳು, ನಿಮ್ಮ Homeನೂ ಆಕೆ ಮನೇನೂ ತುಂಬಿ ತುಳ್ಕಿ , 

ತುಳಕಿದ್ದ್ನೆಲ್ಲಾ ಮಾರಿದ ದುಡ್ಡಲ್ಲಿ ತನ್ನ ಹೊಟ್ಟೆ ಪಾಡ್ನ ಗಿಟ್ಟಿಸ್ಕೊಂಡು 

ನಿಮ್ಮ ಕಮಿಟೀ ನೇಮಿಸಿರೋ “ಗೌರವ ಕಾರ್ಯದರ್ಶಿ ” ಅದೇ 

ಕೈವಲ್ಯಮ್ಮನ ಬಂಧುವರ್ಗಗಳ ಮನೆಗಳೂ ತುಂಬಿ . . “ ಚಿತ್ರದ್ಕೆಲ್ಸ 

ಸಾಕು ಹೆಂಗಸ್ರಿಗೆ ತರ್ವಲ್ಲ” ಅಂತೇಳಿ ತಮ್ಮ ಕೊಂಪೆಗಳಲ್ಲಿಲ್ಲದ ಮೇಜು, 

ಕುರ್ಚಿ , ಬೆಂಚು ಇವುಗಳ ತುಂಬಿಸ್ಕೊಳ್ಳೋಕೆ “ಮರಗೆಲ್ಸಾ ಮೇಲು 

ಮನೆಗೆಟ್ಟವರಿಗೇ"ಂತಾ ಹೇಳಿ . . . ಉಳಿ, ಕೊಡ್ತಿ. . . ಸಪ್ಲೈಗೆ ನಿಮ್ 

ಕಮ್ಟೀಗೆ ಅಪ್ಲೈ ಮಾಡ್ತಿರೋ . . . ಆ ಗತಿಗೆಟ್ಟ ಕೈವಲ್ಯಮ್ಮ ಭೇಟಿಗಿಂತ 

ನಮ್ಮೀಗಿನ ಸ್ಥಿತೀನೆ ಮೇಲೂಮ್ಮಾ ! ಇಲ್ಲಿ ನೋಡೀ ! ಗರತಿಯರಲ್ಲಿ , 

ದೊಡ್ಡ ಮನುಷ್ಯನ ಹೆಂಡ್ತೀರೂ , ಕೂಲೀ ಹೆಂಡ್ತಿ , ಕಕ್ಕಸು ಬಾಚೋನ 

ಹೆಂಡ್ತಿ - ಹೀಗೆ ಗರತೀರಲ್ಲಿ ಅಂತಸ್ತು ತರಾತಮ್ಯಗಳು ಇರೋಹಾಗೆ 

ನಮ್ಮ ಸೂಳೇಗಾರಿಕೇಲೂ ಇದೇಮ್ಮಾ ? ಕೋಪಿಸ್ಕೋ ಬೇಡೀಮ್ಮಾ ! 

ಹೆಂಗ್ಸು ಹೆಂಗ್ಸಾಗಲೀ , ಗಂಡ್ಸು ಗಂಡ್ಸಾಗಲೀ , ಮಹಾಯತ್ತು ! ಆದರೇ 

ಹೊಸ ಹೊಸದಾಗಿ, ಪರಸ್ಪರ ಮೈ , ಬಟ್ಟೆಗ್ಳು , ಸೀರೆ, ಒಡ್ವೆಗ್ಳೂ , ಈ 

ಬಾಬ್ತುಗ್ಳು ಎತ್ತೋದೂ ತಪ್ಪು ! ಆದರೂ , ಗರತಿಯರ ಸಮಾಜಕ್ಕೆ 

ಶಿಖರವಾಗಿದ್ದರೂ ಅಹಂಭಾವ ಇಲ್ಲದ ತಾವೂ , ಸೂಳೇರ ಕಸುಬಿಗೆ ಈ 

ಊರಿನಲ್ಲಾದೂ ತಕ್ಕಮಟ್ಟಿಗೆ 'ಶಿಖರ"! "ಕಲಶ" ! ನಾನೇ ಅಂತ 

ಹೇಳಬಹುದಾದ ನಾನೂ , ಅಪೂರ್ವವಾಗಿ, ಸಂಧಿಸಿರೋವಾದ ಚಿಕ್ಕ ಚಿಕ್ಕ 

ಮರ್ಯಾದೆಗಳನ್ನ ಒದರಿಬಿಟ್ಟು ಮಾತನಾಡೋಣ. . . ನೋಡೀಮ್ಮಾ ! 

ನೀವು ಕಟ್ಟಿರೋ ಸೀರೆ ಹೊಸಹೊಸ ಧರ್ಮಾವರ ! ಪೆಟ್ಟಿಗೇಲಿ ಸರಿಯಾಗಿ 

ಮಡಿಸದೆ ಅದುಮಿಟ್ಟು ಹೊರಗೆ ತೆಗೆದಿದ್ದು ! ಎಲ್ಲಿ ನೋಡಿದ್ರೂ ನಲು 

ಗಿದೆ! . . . ನನ್ನ ಸೀರೆ ನೋಡೀಮ್ಮಾ ! ಜಂಬದ ಮಾತಲ್ಲಾ ನಾವೀಗ 

ಮಾತಾಡೋ ಪಾಯಿಂಟ್ ಗೆ ಸಂಬಂಧಪಟ್ಟದ್ದು - ಈ ನೀರಾಜಿ ಸೀರೆ 

ನೀರಿಗ್ಹಾಕಿದ್ದು ! ಇಂಥಾದ್ದು ನಾಲ್ಕು ಒಣಗ್ತಿವೆ . . . ಮಡಿಕೋಲುಮೇಲೆ 

--ಹಿಂದಿನ ಕೋಣೇಲಿ ! ಇವುಗಳಲ್ಲಿ ರಾತ್ರಿ ಬರೋ ಸ್ನೇಹಿತರ 

ಸಂತೋಷಕ್ಕೆ ಇಂಥಾ ನೀರಾಜಿ ಸೀರೆಗಳು ಡಜನ್ ಗಟ್ಲೆ ಟ್ರಂಕ್ ನಲ್ಲಿವೆ ! 

ಅಲ್ದೆ, ನನ್ನ ಕಿವೀಲಿ ಹಾಕ್ಕೊಂಡಿರೋ ಬೆಂಡೋಲೆ, ಐದೇ ಕಲ್ಲಾದ್ರೂ 

ಮುಕ್ಕಾಲು ಕ್ಯಾರಟ್ಟು . . ಒಂದೊಂದು ಕಲ್ಲೂ ಹಾಲೆಂಡು ಕಟ್ಟು ! ಸೀಮೆ 

ಕಮಲ ! ನನ್ನ ಮೂಗೂತೀನೂ ಅಷ್ಟೇ . . . ಇದಲ್ದೆ . . . ನನ್ನ ಕುತ್ತಿಗೇ 

ಲಿರೋ ಅಡ್ಡಿಕೇಲಿ ೨೪ ಕಲ್ಲು .... . ಅರ್ಧ ಅರ್ಧ ಕ್ಯಾರೆಟ್ಟು ಒಂದೊಂದು! 

ಇನ್ನು ಪದಕದ ಮಧ್ಯದಲ್ಲಿರೋ ಪಚ್ಚೆ ಕಲ್ಲೂ . . . ಬೆಲೆ ಕಟ್ಟೋರಿಲ್ಲ ! 

ಯಾವುದೋ ಒಂದು ರಾಜಕುಲದಿಂದ ಬಂದದ್ದು ! ಈ ಮನೆ . . . ? 

ಮೂವತ್ತು ಸಾವಿರ ರೂಪಾಯಿಗೆ ಕೇಳ್ತಾರೆ ! ಬೆಳಕವಾಡಿ, ಕೊಳ್ಳೇಗಾಲದ 

ಕಡೆ ಗದ್ದೆಗಳಿವೆ ! ತೋಟಗಳಿವೆ ! ಬ್ಯಾಂಕಿನಲ್ಲಿ ಮೂವತ್ತು ಸಾವಿರ 

ರೂಪಾಯಿ fixed deposit ಇದೆ ! ಇವೆಲ್ಲಾಮ್ಮಾ ಸ್ವಯಾರ್ಜಿತ . . . 

ನನ್ನೀ ಸೂಳೆಗಾರಿಕೆಯಿಂದ! ನಾನೇ ಸಂಪಾದಿಸಿದ್ದು . . . . ಇದೆಲ್ಲಾಮ್ಮಾ 

. . . . ದಾರೀಹೋಕರು, ಬೀದಿ ಹೋಕರು, ಕೂಲಿಗಳು, ಪುಂಡರೂ , 

ಸಾರಾಯಿ ಕುಡುಕರೂ , ಇವರಿಂದ ಸಂಪಾದಿಸಿದೇ ಅಂತ ತಿಳುಕೊಂಡಿಧೀ 

ರಾಮ್ಮಾ ?. . . . ಹೀಗೇ , ಸೂಳೆಗಾರಿಕೇಲೇ ಹುಟ್ಟಿ , ಬೆಳೆದು ಬಾಳೋ , 

ನನ್ನಂಥಾ ನಾನೂರು - ನಾಲ್ಕು ಸಾವಿರ ಸೂಳೇರಿಗೂ , . . . ನಮ್ಮ ಭಾಗ್ಯ 

ಇಲ್ಲದೆ ಬೀಳಾಗಿ ಹುಟ್ಟಿ , ಬೀಳಾಗಿ ಬೆಳೆದು, ಬೀಳಾಗಿ ಬಾಳೋ ನಾಲ್ಕೋ 

ನಲ್ವತ್ತು ಲಕ್ಷವೋ ಆದ ಸೂಳೆಗಳ್ನೆಲ್ಲಾ . . . ದಿನಕ್ಕೆ ಎಂಟಾಣೆ ಕೂಲಿ 

ಕೆಲ್ಸಕ್ಕೆ ನೇಮಿಸ್ತಾರಾಮ್ಮಾ ನೀವೂ ನಿಮ್ಮ ಕಮಿಟೀನೂ ? ಮಸ್ಲ ಈ ಕೂಲೀ 

ಕೆಲ್ಸಕ್ಕೆ ಒಪ್ಕೊಂಡ್ರೆ , ನಾವುಗಳೆಲ್ಲರೂನೂವೇ ತಿಂಗಳ್ಗೆ ಹುಟ್ಟೋ ಹದಿ 

ನೈದು ರುಪಾಯಿ ನಮ್ ಹೊಟೇನ್ನೂ ಹೊರ್ಕೊಂಡು, ಅಲ್ಲಿ ಸಾವಿರ್ 

ಗಟ್ಲೇ ಪುಟ್ಟಾಗಳೂ - “ Little Lady ” ಅಂದ್ರಲ್ಲಾ ಅಂಥಾ ಪುಟ್ಟಗ್ಳೂ 

ನಮ್ಮನ್ನ ಈ ಕಸುಬಿನಲ್ಲಿ ಹೊತ್ತು ಹೆತ್ತು ಸಾಕಿ, ಸೂಳೆಗಾರ್ಕೆಗೆ ಮುಪ್ಪಿ 

ನಲ್ಲಿ ಲಾಯಖ್ಖಿಲ್ಲದೆ ಒದ್ದಾಡೋ ತಾಯಿಗಳೂ , ಇದೂ ಅಲ್ಲದೆ ಹೆಂಗ 

ಸ್ರಾದ ನಮ್ಮ ದುಡ್ಡು , ಒಡವೆಗಳನ್ನೂ ವಿಟರ ವಿಪತ್ತಿನಿಂದ ಕಾಪಾಡೋ 

ಸುಬ್ಬುಗಳೂ , , , ಇವರೆಲ್ಲರ ಹೊಟ್ಟೆಗಳನ್ನೂ ತುಂಬಿಸೋದು 

ಹ್ಯಾಗಮ್ಮಾ . . . ನೀವು ನೇಮಿಸೋ ಎಂಟಾಣೆ ಕೂಲಿ ಕೆಲ್ಸದಲ್ಲಿ ? 

( ಬೆರಳುಗಳನ್ನು ತೋರಿಸುತ್ತಾ -ವೀಣೆಯ ಮೇಲೆ ಆಡಿಸುವಂತೆ ಆಡಿ 

ಸುತ್ತಾ ) ಈ ಬೆರಳು ನೋಡೀಮ್ಮಾ ! . . . ನಿಮ್ಮನೇಲೂ ವೀಣೆ ಇಧೇ 

ಅಲ್ಲವೇ ! ?. . . ನಮ್ಮನೇ ವೀಣೇ . . . ನೂರೈವತ್ತು ವರ್ಷದ ಕಸುಬಿ 

ನೋರ ಮನೆತನದಿಂದ ಬಂದದ್ದು . . . . ! ಅದರ ದಂತದ ಕೆಲಸಕ್ಕೆ ಈಗ 

ಮುನ್ನೂರು ರೂಪಾಯಿ ಖರ್ಚಾಗುತ್ತೆ ! . . . . ಅದರಲ್ಲೀಮ್ಮಾ . . . 

ಮೊದಲನೇ ಋಷಭದಲ್ಲೀ . . . ಧೈವತ . . . ಕಾಕಲಿನಿ . . . ಕೈಶಕಿ 

ನಿಷಾದ . . . ನುಡಿಯುತ್ತಮ್ಮಾ . . . ಗಮಕದಲ್ಲಿ . . . ಇನ್ನು . . . 

ಸ್ವರಗಳ ಆರುಕಾಲದಲ್ಲಿ ಕಣ್ಣು ಮುಚ್ಚಿ ತೆಗೆಯೋದರೊಳ್ಗೆ ಅರವತ್ತ 

ನಾಲ್ಕು ಸ್ವರಗಳನ್ನ ಮೀಟು ಹಾಕಿ ಬಾರಿಸೋ ಗೈರತ್ತು ಇದೇಮ್ಮಾ ಇವಕ್ಕೆ ! 

ಇಂಥಾ ಬೆರಳುಗಳು, ಬೆತ್ತದ ಕೆಲಸಕ್ಕೆ ಬಗ್ಗುತ್ತವೇನಮ್ಮಾ . . . ? . . . 

ಅದಕ್ಕೆ ನಾನು ಹೇಳಿದ್ದೂ . ... ಆ ಗತಿಗೆಟ್ಟ ಕೈವಲ್ಯಮ್ಮನ ಭೇಟಿಗಿಂತ 

ನಮ್ಮ ಈಗಿನ ಸ್ಥಿತೀನೇ ಮೇಲೂ . . .ಂತ !! 

ಲೇಡಿಶಿವ : (ಕೈಗಳನ್ನು ಹಿಸುಕುತ್ತಾ ) ಮತ್ತ್ ಇನ್ನೇನ್ ತಾನೇ ಮಾಡೋದಮ್ಮಾ 

ನಾವು . . . ಸಹಾಯಕರಿಲ್ಲದ ತಂಗೀರ್ಗೆ ಸಹಾಯ ಮಾಡೋಕೂಂತ 

ಪೇಚಾಡ್ತಿರೋ ನಮ್ಗಳ್ಗೆ, ನಿಮ್ಮ ಹಾಗಿರೋ ಅವರಿಗೆ, ತೀಕ್ಷ್ಣಬುದ್ದಿ , 

ಅನುಭವ ಇರೋ ನೀವು, ನೀವೇ ದಾರಿ ಹೇಳಿಕೊಡಬೇಕಮ್ಮಾ , 

ಸೂಳೆ : ಯಾಕ್ ನೊಂದೊಳೀರೀಮ್ಮಾ ? . . . ನೀವಾಯ್ತು . . . ನಿಮ್ ಯಜ 

ಮಾನ್ರಾಯ್ತು . . . ಮನೆ ತುಂಬ ಮಕ್ಕು . . . ಮೊಮ್ಮಕ್ಕು . . . ಸೌಖ್ಯ 

. . . ಸಂತೋಷಾ, ಇದ್ನೆಲ್ಲಾ ಕಣ್ಣುಂಬಾ ನೋಡಾ ನಿಮ್ಮ ಪುರಾಕೃತ 

ಪುಣ್ಯಾನ ಅನಭವ್ಸಿ . . . ಪರಮಾತ್ಮ ಕೂಗತ್ಲೂವೇ ಶಾಂತಮನಸ್ಸಿ 

ಟ್ಕೊಂಡು ಕಣ್ಣುಚ್ಚೋಕೆ ಸಿದ್ಧವಾಗ್ಬೇಕಾದ್ನೀವು. .. ಪುರಾಕೃತ ಪಾಪಾನನು 

ಭವಿಸ್ತಿರೋ ನಮ್ಮನ್ನ ಕನಿಕರೋ ಆವೇಶದಲ್ಲಿ . . . ಯಾಕೆ ನಮ್ಮ ನಮ್ಮ 

ಮಧ್ಯದಲ್ಲಿ ಬರೀರಾ ? 

ಲೇಡಿ ಶಿವ : ಸತ್ಯವಾಗಿ ಹೇಳೀನಮ್ಮಾ , ನಿಮ್ಮ ಬಾಯಿಂದ್ದೇ ಬಂದ "ಶಾಂತಿ" !, 

ನನ್ನ ಕೈಲಾದ ಮಟ್ಗೂ ನನ್ತಂಗಿಯರ್ಗೆ ... . ಜಾತಿ ಮತ ಅಲ್ಲಿ ನೀವು ನನ್ನ 

ಮನಸ್ಸಿಗೆ ವಾದಿಸಿ ಹೊಂದಿಸ್ದ ಗಂಡಸ್ರು ಏರ್ಪಡಿಸಿದ ನಮ್ಮ “ಗರ್ತಿ” 

ಕಸುಬಾಗ್ಲೀ ಅದೇ ಗಂಡಸ್ರು ಏರ್ಪಡಿಸಿದ ನಿಮ್ಮ ಕಸುಬಾಗ್ಲೀ ಇವುಗಳಲ್ಲಿ 

ಸಿಕ್ಕೊಂಡು ವದ್ದಾಡ್ತಿರೊ ತಂಗೀರ್ಗೆ ನನ್ನ ಕೈಯಿಂದಾದ ಅಲ್ಪಸ್ವಲ್ಪ 

ಅಳಿಲ್ ಸೇವೇನಾದ್ರೂ ಮಾಡಿದೇ ಅಂತ ತೃಪ್ತಿ ಪಡೋ ವರ್ಗೂ ನನ್ಗೆ 

ಸಂತೋಷವೆಲ್ಲಿ ? . . . ನನ್ಗ್ ಸುಖವೆಲ್ಲಿ ?... . ಸಂತೋಷವಿಲ್ಲಾ ! 

ಶಾಂತಿ ಇಲ್ಲಾ !!. . . ಹೇಳ್ತೇನೆ ಕೇಳಿ ! ನಮ್ಮೆಜಮಾನ್ರಿಗೂ ಅವ್ರ 

ಸ್ನೇಹಿತರ್ಗಳ್ಗೂ . . . ಎಲ್ರಿಗೂ , ಈ ಪುಣ್ಯ ಕರ್ಮದಲ್ಲಿ ತುಂಬಾ ಉತ್ಸಾಹ! 

. . . ನಿಮ್ ಬುದ್ಧಿ ಚುರುಕ್ತನದಲ್ಲಿ , ನನ್ಮಾತಿನ್ನೆಷ್ಟ್  ಎತ್ತಾಕಿದ್ರೂನೂವೇ 

. . . ಈ ಕಸ್ಸು ಬಿಟ್ಟ ತಕ್ಷ್ಣ . . . ನಿಮ್ಮೆಲ್ಲರ್ಗೂ ಕೈಗಾರಿಕೆಯೋ . . . 

ಇಲ್ಲಾ ಏನಾದ್ರೂನೂವೋ . . .. 

ಸೂಳೆ : [Caressing the Old Lady s face and features with her right 

arm and her owneyes dripping dew drops oflove of sisterhood ] 

ಚಿನ್ನದಂಥಾ ಮಗೂಮ್ಮಾ ನೀವು ! . . . ಮೊಖಾನೂ ಚಿನ್ನ , ಮನಸ್ಸೂ, 

ಹೃದ್ಯಾನೂ ಚಿನ್ನ . . . ಚಿನ್ನದ್ಹಾಗೆ ನಯ . . . ಸರಳ . . . ನಿಮ್ಮ್ 

ಸಂಸ್ಕಾರ ಫಲವಶಾತ್ ದೊಡ್ ಕುಟುಂಬದಲ್ಹುಟ್ಟಿ . . . ಬೆಳೆದು . . . 

ತಂದೆ ತಾಯ್ದಳು ಹಿಂದೆ ಮುಂದೆ ಯೋಚ್ನೆ ಮಾಡಿ . . . ಪ್ಯಾಸಾಗಿ 

ಮುಂದಕ್ಕೆ ಬರೋ ಬ್ರಹ್ಮಚಾರೀಗ್ ಕೊಟ್ಟು . .. ಸಂಸಾರ ವಿಷಯದಲ್ಲಿ 

ಯಾವ ಕೊರತೇನೂ ಬರದ್ಹಾಗೆ ಏರ್ಪಾಟೆಲ್ಲಾ ಮೊದಲೇ ಮಾಡ್ಕೊಟ್ಟು 

. . . ನಿಮ್ಕುಟುಂಬಾನ್ ಕುದರಿಸ್ದ್ರೋ ನಿಮ್ಮ ದಾಂಪತ್ಯದಲ್ಲಿ , ನಿಮ್ಮ 

ವೃದ್ಧಾಪ್ಯದಲ್ಲಿ ಸಂತೋಷವಾಗಿ ಇಧೀರಾ, ನೀವು !! ನಿಮ್ಗಿರೋ ನಯ , 

ಸರಳವಾದ ಬುದ್ದಿ , ಮನಸ್ಸು , ಹೃದಯ ನನಗಿದ್ದಿದ್ದಿತ್ತೋ , ಯಾವಾಗ್ಲೋ 

ಸಿಕ್ಕೊಂಡು ಚಿಟ್ಟೆ ಹುಳ ಹಾಗೆ “ಛಟ್ಟ್ ” ಆಗಿದ್ದೆ ನಾನು . . . ಈ 

ಸಮಾಜಾಂಬೋ ಗಂಡುಮೃಗ ಹತ್ತಿ ಆಳತಿರೋ ಈ ಮೆರವಣಿಗೆ ರಥದ 

ಚಕ್ರಕ್ಕೆ !! (ಹಲ್ಲುಗಳನ್ನು ಕಟಕಟನೆ ಕಡಿಯುತ್ತಾ ) ಕಬ್ಬಿಣವಾಗಿರಬೇಕಮ್ಮಾ 

ನಾವು ! ನಿಮ್ಮ ಹಾಗೆ ಚಿನ್ನವಲ್ಲಾ ! ಕಬ್ಬಿಣ !!. . . ಕಬ್ಬಿಣದ್ ಬುದ್ದಿ , 

ಕಬ್ಬಿಣದ್ ಮನಸ್ಸು , ಕಬ್ಬಿಣದ್ ಹೃದಯ ! ಇದೆಲ್ಲಕ್ಕಿಂತ ಕಬ್ಬಿಣದ್ 

ದೇಹ ಇರ್ಬೆಕಮ್ಮಾ ನಮ್ಮ ! ನಮ್ಮ ಕಸಬ್ನ . . . ಸೂಳೆ ಕಸಬ್ನ . . . 

ಕೊನೇವರಿಗೂ ನಿಭಾಯಿಸಿಕೊಳ್ಳೋಕೆ !!. . . ಹುಟ್ಟಿ ಹಸುಳೆಯಾಗಿ 

ಹೊಸಲ್ ದಾಟಿ ಮನೆ ಮೆಟ್ಲು ಇಳಿದು ಸಮಾಜಾನ ಸೂಕ್ಷಿಸುತ್ಲೂವೇ 

ಸಮಾಜದ ನಾಮಕರಣ ನಮಗೆ ! . . . “ಸೂಳೇ !” . . . ಸೂಳೇ ?! . . . 

“ಸೂಳೇ"ಂತ !! ಷುರುಮ್ಮಾ ಆಗಿನಿಂದಾ ಸುಬ್ಬೂ ಹೇಳೋ ಹಾಗೆ . . . 

Challengeಊ . . . ನಮಗೂ ಸಮಾಜಕ್ಕೂ ! . . . . ಸವಾಲು . . . 

ಸೂಳೇರ್ಗೂ . . . ಗರತಿಯರ್ಗೂ ! ಆ ಸಮಾಜದ ಸಂಸಾರ ಮರೆತ 

ಗಂಡಸ್ರ ತೀಟೆಗೆ ಹುಟ್ಟಿದ ಆ ಮಗು ಬೆಳೆದು ಸೂಳೆಯಾಗಿ, ಬಂದ ವಿಟರು 

ಬಿಟ್ಟು ಹೋದ ರೋಗಗಳಿಂದ ಕೊಳೆತು ಸಾಯೋವರ್ಗೂ ಸವಾಲು ! 

ಸೂಳೇರ್ದು ! ಜವಾಬೇನೂ ! ? . . . ಇದೇ ವಿಟರು ಅಗ್ನಿಸಾಕ್ಷಿಯಾಗಿ 

ತಾಳಿ ಕಟ್ಟಿದ ಗರ್ತೀರ ಜವಾಬೇನೂ ? ಆಗ್ನಿಂದಾ ಸಾಯೋವರ್ಗೂ 

ಸವಾಲು ! ಜವಾಬು ! . . . ಈಗ ನಿಮ್ಮನ್ನ ಮಟ್ಟಿಗೂ ಮುಂದ್ಬಿಟ್ಟು 

ತಾವೆಲ್ಲಾ ಹಿಂದೆ ಮುದರ್ಕೊಂಡು ಇರೋ ಘಾಟಿ ಸ್ತ್ರೀಯರು "ಯಾರು? 

ಏನೂ ? ಎತ್ತಾ ? ” ಅಂತಾ ನನಗೆ ಸಾಂಗೋಪಾಂಗವಾಗಿ ಗೊತ್ತು 

ಅಮ್ಮಾ ! ಅವರುಗಳ ವಿಚಿತ್ರ ಚರಿತ್ರೆ - ನನಗೊತ್ತು! ( Laughs Sardoni 

cally) ನಿಮಗ್ಗೊತ್ತಿಲ್ಲಾ . . . ಹೆಂಗ್ಸಾಗಿ ಹುಟ್ಟಿದ್ದಕ್ಕೆ ಹೊತ್ತು, ಹೆತ್ತು , 

ಹೆತ್ತ ಕಂದಗಳು ಮುಂದಕ್ಬರೋದನ್ನೋಡಿ, ಕಣ್ಮುಚ್ಚೋದೇ ಹೆಂಗ್ಸಿನ 

ಐಹಿಕಾರ್ಥ ಅಂಬೋದ್ನ . . . ಅರಿತು ತೋರ್ಸಿ ಕೊಟ್ಟಿದ್ದೂ ನೀವೇ . . . 

ಸಮಾಜಕ್ಕೆ ! ಅವ್ರೋ ! ? ( ಅಲ್ಪಸ್ಮಿತಳಾಗಿ) ನೀವು ಹಾಕಿದ ಮೇಲ್ 

ಪಂಕ್ತೀನ ಮರೆತು . . . ಗಂಡ ಚಿಕ್ಕ ಕೆಲ್ಸದಲ್ಲಿದ್ದಾಗ, ತಂತಮ್ಮ ಪುಟ್ಟ 

ಪುಟ್ಟ ಸಂಸಾರದಲ್ಲಿ ಒದ್ದಾಡ್ತಿದ್ದು ತಂತಮ್ಮ ಕೊರತೇಲಿ ಕೊರಗಿದ್ದ 

ಪ್ರಾಣೀ . . . . ಗಂಡಂಗೆ ದೊಡ್ಕೆಲ್ಸ ಒದಗುತ್ತ್ಲೂನೂವೇ, ತಾನು ಸೇದೋ 

ಭಾವೀಗ್ ಬದ್ಲಾಗಿ ಪಂಪುಗಳೂ , ಪೈಪುಗಳೂ , ತಾನು ಮುದುರಿಕೊಂಡಿದ್ದ 

ಮಾವಳ್ಳಿ ಬಿಲ ತಪ್ಪಿ , ಬಸವನ ಗುಡೀ ಬಂಗ್ಲೇನೂ . . . ಶುಕ್ರವಾರ 

ಶನಿವಾರನೂ ತಪ್ದೇ ಕಾಲ್ನಡಿಗೇಲೆಹೋಗ್ತಾ ಇದ್ದ ಕಾಳಮ್ಮನ ಗುಡೀನೂ 

ತಪ್ವಿ , ಮೋಟಾರ್ ಬಂಡೀಲಿ ಸುಳಿದಾಡ್ತಾ , ತನ್ನ ಕಸಬರಿಗೇನಾ . . .ಒಬ್ಬ 

ದೇವೇರಿಗೂ . . . ತನ್ನ ಸೌಟನ್ನ ಒಬ್ಬ ನಾರಾಯಣನ್ಗೂ, Charge ಒಪ್ಸಿ , 

ಗಂಡನ ಶುಶ್ರೂಷೆ ಗಲಾಟೆಗ್ಳೆಲ್ಲಾ ತಪ್ಪಿಸ್ಕೊಳ್ಳುತ್ಲೂನೂವೇ, ಇದು 

ವರೆಗೂ ಇದ್ದ, ಕೆಂಪುವಾಲೇ ತಪ್ಪಿ ಹೊಸದಾಗಿ ಬಂದ ಸೀಮೆ ಕಮಲದ 

ಬೆಂಡೋಲೆ ಬೆಳಕ್ನ ಬೀಗ್ತಾ, ಕೈಬಳೆ ಹೋಗಿ Wrist Watch ಬಂದ 

ಕೈಗಳೂ ಬೀಸ್ತಾ ಲಾಲ್ ಬಾಗೂ ! ಕಬ್ಬನ್ ಪಾರ್ಕೂ ! ಬುಳ್ಳಾಚಾರಿ ಭಾಗ 

ವತ, ಪುಳ್ಳಯ್ಯನ ಪೀಟೀಲು ನಾನಾ ವಿಧಾ ಚಾರಿ ನಾಟ್ಕ , ಮೂಗಯ್ಯನ 

ಮುರುಳಿ, ರಾಮಣ್ಣೋರ ರಂಢೋಲು . . . ಅಲ್ಲೆ ಟಾಕಿ ಮೂಕಿ 

ಇವಳೆಲ್ಲಾ , ದನದ ಹಾಗೆ ಗಂಡ ದುಡ್ಡು ತಂದ ದುಡ್ನ, ತನ್ನ ದುಡ್ನ ಹಾಗೆ 

ಸಿಕ್ಕಾಪಟ್ಟೆ ಎರ್ಚೀ . . . ಎರ್ಚೀ . . . ಈ ವಿನೋದಗ್ಳೆಲ್ಲಾ ಬೇಜಾರಾಗಿ 

ತನ್ನ ಕಾಲಹರಣಕ್ಕೆ ತನ್ನ ಗಂಡನ ದುಡ್ನೇ ಸುರ್ಯೋಕೆ ಇದೊಂದು ಹೊಸ 

ದಾರೀನ ನಿಮ್ಮ ಕಮ್ಟಿ ಹುಡುಕ್ತಿರೋ ಹಾಗಿದ್ರೆ ಹೊರ್ತು [ ಮುಷ್ಟಿಗಳನ್ನು 

ಬಿಗಿಯುತ್ತಾ ಏನ್ ಸಹಾಯಾತಾನೇ ಮಾಡ್ತಾರಮ್ಮಾ ನಿಮ್ಮ ಕಮಿಟಿ 

ಯೋರೂ ? . . . ಇದ್ವರ್ಗೂ ದೈವಾನ ಕಾಣಲಾರ್ದ ಪಾಪಿಗೇನೇ 

ಕಾಣಿಸ್ಕೊಳ್ಳೋಕೆ ದೈವಾನೇ ಪಾಪಿ ಹತ್ತ್ರ ಬಂದು ದರ್ಶನ ಕೊಟ್ಟಿದ್ದು ನನಗೆ 

ಹೆಮ್ಮೆ ! ನಮ್ಮ ಕಸುಬಿಗೆ ಹೆಮ್ಮೆ ! ನನ್ನ ಮನೆಗೆ ಹೆಮ್ಮೆ ! ನಿತ್ಯ 

ಕನ್ನಿಕಾಪರಮೇಶ್ವರೀ ಹಾಗೆ ನನ್ನ ಕಣ್ಣಿಗೆ ಕಾಣಿಸ್ತಿರೋ ನಿಮ್ಮ ಸಂಸಾರಕ್ಕೆ , 

ಕರ್ಮಫಲಕ್ಕೆ , ಹೆಮ್ಮೆ ! ಆದರೆ ನಿಮ್ಮ ಕಮಿಟೀಗೆ ಮಾತ್ರ ಬುದ್ಧಿಗೇಡು ! 

ನಾಚಿಗೇಡು ! ಹೆಂಗ್ಸ್ತೇಗ್ಗೇಡು !. . . ನೀವೆಲ್ಲಿಮ್ಮಾ ! ಅವರೆಲ್ಲೀಮ್ಮಾ ! 

(Laughs Sardonically ) ಆ ಕಮಿಟೀ ಕ್ರಿಮಿಗಳೆಲ್ಲೀಮ್ಮಾ !? ಒಟ್ನಲ್ಲಿ 

ಇದುವರ್ಗೂಮ್ಮಾ ಈ ದೇಶದಲ್ಲಿ ನನ್ಹಾಗಿರೋ ನಾವೂನೂವೇ . . . 

ನಿಮ್ಹಾಗೆ ಈ ಕಾಲದಲ್ಲಿ ಅತಿ ವಿರಳವಾಗಿ ಇರೋ ನೀವೂನೂವೇ 

ಸಂಧ್ಸಿರೋದು ಸಮಾಜಕ್ಕೆ ಒಂದು ಹೆಮ್ಮೆಯೋ ಅಲ್ವೋ . . . ಇಲ್ಲಾ 

. . . ನನ್ನೀ ಜನ್ಮಕ್ಕೇನೇ ಮೊದಲೋ . . . . . . 

ಲೇಡಿ ಶಿವ : "ನಾವು ” ! . . . . "ನೀವು! ” , . . ದೇವ್ರೇೕ ಗತಿ ! ನಾನೇನೂ ? 

ನೀವೇನೂ ? ( Puts both her hands on ಸೂಳೇ s shoulders ) ಮಿಕ್ಕ 

ಹೆಂಗಸ್ರೇನೂ ? (ಸೂಳೆಯು ಸೂಚಿಸಿದ ಪಠಗಳನ್ನು ಸೂಚಿಸುತ್ತಾ ). . . 

ಇದೇ ಸೀತೆ. . . ಇದೇ ಸಾವಿತ್ರಿ ಅಲ್ದೆ . . . ಇಲ್ಲಿಲ್ಲದ . . . . ಮಂಡೋದರಿ 

. . . . ಲೋಪಾಮುದ್ರೆ , . . ಅನಸೂಯೆ . . . ಅರುಂಧತೀನೂ . . . 

ಇವರೆಲ್ಲಾ ಯಾಕೇ ? “ಉಮಾ” . . “ ಮಾ ” ಗಳನ್ನೂ ಇವರನ್ನೆಲ್ಲಾನ್ನೂ , 

ನಿಮ್ಮನ್ನೂ , ನಮ್ಮನ್ನೂ ಸೃಷ್ಟಿಸಿದ್ದು ಒಂದೇ ದೇವತೆ ! ಆದಿಶಕ್ತಿ ! 

ಆಕೇನೂ ಹೆಂಗ್ಸು ! ನಿನ್ಹಾಗೇನೂ . . . ನಮ್ಹಾಗೇನೂ ಹೆಂಗ್ಸು ! ಮೂರ್ 

ಕಣ್ಣಿದ್ರೂ ಒಂದೇ ಕಣ್ಣಿಂದ ನೋಡೋ ದೇವತೆ !. . . ನಾವೆಂಗಸ್ರೆಲ್ಲೂ 

ಆಕೆ ಕಣ್ಗೆ ನಾವೆಲ್ಲಾ ಮಕ್ಳೂ ಅಂತೂ , ಅಕ್ಕತಂಗಿಯರೂ ಅಂತ್ಲೂ , 

ನಂಬಿರೋ ನನ್ ನಂಬ್ಕೆ ಮೇಲೆ ಮಾತಾಡೋಕೆ ಬಂದಿರೋದು ನಾನು ! 

“ಪಾಪೀಂತಂದ್ಕೊಂಡ್ರಲ್ಲಾ !” ಪಾಪ ಯಾರದು ? . . . ನಮ್ದೂ ಅಲ್ಲಾ 

. . . “ ನಾವೆಲ್ಲೂ"ಂ ದ್ರಲ್ಲಾ ಆ ನಿಮ್ಮ ಅಲ್ಲಾ , ಯಾರ್ದೂ ಅಲ್ಲಾ ... . 

ಆದ್ರೂನೂವೇ ನಮ್ಮಲ್ಲರ್ದು!!. . . ನಮ್ಮ ಸಮಾಜದ್ದು ! ವ್ಯಕ್ತಿಗ್ಳು 

ಸಮಾಜ್ಜಲ್ಲಿ ಹುಟ್ಟಿದ್ದಕ್ಕೆ . . . ತಂತಮ್ಮ ಸಾಮಾಜಿಕ ಜವಾಬ್ದಾರಿ 

ಅರಿಯುತ್ಲೂನೂವೇ . . . ಪರಸ್ಪರ ಸಹಾಯ ಮಾಡೋ . . . . ಶಾಸ್ತ್ರೋಕ್ತ 

“ಸಮಾಜ ಋಣ" ವಾದ . . . ಸಮಾಜಸೇವೇ ?”ಂಬೋ ಸ್ವಧರ್ಮಾನ ಮರ್ತ್ತು 

ಮೂಲೇಗೆ ಒದರಿದ್ದಲ್ದೆ... ಪರಕೀಯ ಜನರ ಭಾಷೆ, ನಾಗರೀಕತೆ 

ಇತ್ಯಾದಿ ಸಂಪರ್ಕಕ್ಕೆ ಸೋತು, ಸ್ವಧರ್ಮಾನೇ ತೊರೆದು . . . “ ಹೊಸ 

ನಡಿಗೆ ಬರ್ಲೇ ಇಲ್ಲಾ , ಹಳೇ ನಡಿಗೆ ಮರ್ತ್ತೇ ಹೋಯ್ತು”! . . . “ ಹಂಸ 

ನಡೆ ಕಲಿಯೋ ಆಸೇಲಿ, ಕಾಗೇ ನಡೆ ಮರಿಯೋದೇ ! ??? ಅಂತ . . . 

ಹೀಗೆ ಒದ್ದಾಡ್ತಿರೋದು ನಮ್ಮ ಈಗಿನ ಸಮಾಜದ ಪಾಪ ! ! ( ಮುಗುಳು 

ನಗೆಯಿಂದ) ನಾನೂ ನಿಮ್ಹಾಗೆ ನಿಮ್ಮ Little Lady. . . ಪುಟ್ಟಾನ 

ಹಾಗಿರೋ ಮಕ್ಕಳ ಹೆತ್ತೋಳು ! ಒಂದಲ್ಲ ! ಎರಡಲ್ಲ ! ಒಂಭತ್ತು 

ಮಕ್ಕಳು !! . . . ನಾನೂ ನೀವೂ ಈ ಸಮಾಜದ ಕಣ್ಣಿಗೆ ಬೇರೆ ಬೇರೆ 

ಯಾದ್ರೂನೂವೆ ನಮ್ಮನ್ನೆಲ್ಲಾ ಸಮವಾಗಿ ಕಾಣಿರೋ ಆ ದೇವತೆ ಕಣ್ಗೆ 

(Pointing out with her forefinger to a Chamundi picture 

be -decked with flowers and begrimed with saffron & turmeric) 

ತನಗೆ ಇತರರು ತಾನೇಂತ, ನಾವೆಲ್ರೂ ಒಬ್ಬರಿಗೆ ಮತ್ತೊಬ್ರು ಒಬ್ರೇಂತ 

ಅರಿಯಲಾರ್ದೆ ಒದ್ದಾಡ್ತಿದೇವೇಂಬೋದು ನನ್ನ ಹೃದಯಕ್ಕೆ ಹೊಳೆದ 

ಮೇಲೇನೇ ನಾನ್ ಬಂದಿರೋದು. . . ನಿಮ್ಮೊಂದಿಗೆ . . . ಮಾತಾಡೋಕೆ! 

ಸೂಳೆ : ( ಭ್ರಕುಟಿಗಳನ್ನು ರಚಿಸುತ್ತಾ , ಅಲ್ಪಬಿರುಸಾಗಿ) "ಮಾತಾಡೋಕೆ” ? !. . . 

ಅರ್ಥಾಗ್ಲಿಲ್ಲ ! . . . ಏನ್ಮಾತಮ್ಮಾ ?. . . ದೇವರ್ ಕಣ್ಗೆ , . . ನೀವೂ , 

ನಾನೂ , ಎಲ್ರೂ ಒಂದೆ ಒಂದೂಂತ ನೀವೆಷ್ಟ್  ಕೊಂಡಾಡ್ಕೊಂಡ್ರೂ 

ನೂವೆ, ಸಧ್ಯ ನಮ್ಮ ಊರಿನ ಸಮಾಜದ ಕಣ್ಣಿಗೆ, ಸೀತಾದೇವಿ ರವಿ 

ವರ್ಮನ ಪಠದಲ್ಲೇ ! ನೀವು ನಿಮ್ಮ ಯಜಮಾನ ಬಂಗ್ಲೇಲೆ ! ನಾನು 

ನನ್ನೀ ಸೂಳೇ ಕೊಂಪೇಲೇ  ! (Pointing out the selfsame picture of 

Chamundi, ಬಿರುಸಾಗಿ) ಆದಿ- ಅನಂತ- ನಿತ್ಯ ಕನ್ನಿಕಾ ಪರಮೇಶ್ವರೀ 

ಪ್ರತಿಮೇನೂ ಅವರವರ ಮನೇಲೇ !! ಪೂಜೆ- ಅಲಂಕಾರ ಸಮೇತ !! 

ಹ್ಯಾಗೆ ಬಿಡಿಸ್ತೀರಾಮ್ಮಾ ಈ ಒಗಟೇನಾ ? ...( Laughs gurglingly ) 

ಲೇಡಿ ಶಿವ : (Stroking ಸೂಳೇ s hand and joining in the laughter ) 

ನೋಡೀಮ್ಮಾ ! ನನ್ ದೊಡ್ಮಗ್ಳು ಹೆಚೂ ಕಮ್ಮಿ ನಿಮ್ಮ ವಯಸ್ಸು 

“ನಾವು” “ನೀವು” ಅಂದ್ರಲ್ಲಾ ! . . . ಆ ನಾವು ನಮ್ಮ ನಮ್ಮ ಐಹಿಕ 

ಸಂತೋಷಗಳಲ್ಲಿ ನಮ್ಮ ಹೊಟ್ಟೇಲಿ ಹೊತ್ತು ಹೆತ್ತು ನೆಮ್ಮದಿಗೆ ನಲಿ 

ದಾಡೋ ಮಕ್ಕಳ ಸಂತೋಷಪಡ್ಸೋ ದಾಹಾನ ತೀರಿಸ್ಕೊಂಡು ನಂ ನಂ 

ಸಂತೋಷ್ಟಲ್ಲಿ ಮುಳುಗಿರೋ ನಾವು . . . ಈ ಸಂತೋಷ ಇಲ್ಲದೇನೂ , 

ದೇವ್ರೆದುರ್ಗೆ, ತಂಗೀರಾಗಿ, ನಾವಿರೋ ಸಮಾಜಕ್ಕೆ ಒಳಪಟ್ಟಿದ್ರೂನೂವೇ, 

ದಿಕ್ಕಿಲ್ದೆ , ದೇವರ ದಯವಿಲ್ದೆ ಕಂಗೆಡ್ತಿರೋ . . . ನನ್ನ ತಂಗಿಯರ ಏಳಿಗೇ 

ಗೇಂತ ಏರ್ಪಾಡು . . . ನಮ್ನಮ್ಮಲ್ಲೇ ಮಾಡ್ಕೊಂಡ ಹಲವು ಕೆಲವು 

ಅಕ್ಕತಂಗಿಯರ ಸಂಘಕ್ಕೆ ಪ್ರೆಸಿಡೆಂಟ್ ನಾನು !! . . ಹ್ಯಾಗ್ಹೇಳ್ಲೀ ! ? 

ಕೋಪ್ ಸ್ಕೋಬೇಡಿ ! (ಕೈಯನ್ನು ದೂರಮಾಡುತ್ತಿರುವ ಸೂಳೆಯ ಕೈ 

ಯನ್ನು ತನ್ನೆರಡು ಕೈಗಳಿಂದಲೂ ಹಿಡಿದು) . . . ನಿಮಗಿಂತ ಹಿರಿಯಳು 

ನಾನೂಂತ ಮೊದಲೇ ಹೇಳಿದ್ದೇನೆ ನಾನೂ ! . . . ನಮ್ತಂಗೀರಾದ 

ನಿಮ್ಮಗಳ ಏಳಿಗೆಗೆ ಧನಸಹಾಯವೇ ಅಲ್ಲದೆ, ಏನ್ ಸಹಾಯವೇ ಆಗ್ಲೀ 

. . ಮಾಡೋಕೆ ಸಿದ್ದ !! (ಸೂಳೆಯ ಕೈಯನ್ನು ಮತ್ತೆ ಸವರುತ್ತಾ ) ನೀವು 

ಹೀಗಿರುವುದು ಅನ್ಯಾಯ . . . ಸಮಾಜದ ಅನ್ಯಾಯ . . . . ಅಪಮಾನ 

. . . ಸಮಾಜಕ್ಕಪಮಾನ . . . ಸಮಾಜದ ಪಾಪ ” ಅಂತ ತಿಳ್ದು ಈ ನಿಮ್ಮ 

ಜೀವನವನ್ನು ಬಿಟ್ಟು ಏಳಿಗೆಯನ್ನು ಹೊಂದೋಕೆ ಬೇಕಾದ ಸಹಾಯನೆಲ್ಲಾ 

ಒದಗ್ಸೋ ಸಮಾಜ ಸೇವೇಗೇನೆ. . . ಎದ್ದು ಸಿದ್ದರಾಗಿ ನಮ್ನಮ್ಮ ಹೆಂಗಸ್ರು 

ನಾವ್ನಾವೇ ಏರ್ಪಡಿಸ್ಕೊಂಡಿರೋ ಒಂದು ಕಮಿಟಿಯ ಪರವಾಗಿಯೇ ಅಲ್ದೆ 

. . . ನಿಮ್ಮ ಪುಟ್ಟಾ , “ಎಲ್ರೂ Nasty ” ಅಂದ ಹಾಗೆ ಮಾತಾನಾಸ್ತಿ 

ಪಿತಾನಾಸ್ತಿ ನಾಸ್ತಿ ಬಂಧು ಸುಹೃಜ್ಜನಾ| ವಿತ್ತನ್ನಾಸ್ತಿ ಕ್ಷಿತಿರ್ನಾಸ್ತಿ ತಸ್ಮಾತ್ 

ಜಾಗ್ರತ ಜಾಗ್ರತ ! ” “ ಇಹ ಜೀವನ್ವೇ ಒಂದು ಕನ್ಸು ! ಈ ಕನಸ್ನೇ 

ಕೊರ್ದು ಕಣ್ಬಿಡೋದೇ ಮನುಷ್ಯನ ಕರ್ತವ್ಯಾ ”ಂತ ತಿಳಿಕೊಂಡಿದ್ರೂ 

ನೂವೇ, ಇದೇ ಕನಸಿನ ನಾಟ್ಕದಲ್ಲಿ , ಆಡೋ ನಾವು “ ರಾಜ- ಮಂತ್ರಿ 

ಪಾರ್ಟ್ ಗ್ಳು ಹೊಟ್ಟೆಪಾಡ್ಗೇ"ಂತ ಬಣ್ಣ ಬಳ್ಕೊಂಡು ಹಾಡಿ, ಮಾತಾಡಿ 

ಕುಣಿಯೋ ಹಾಗ್ಯೇಂತ ನಮ್ಮಲ್ಲಿ ನಾವು ತಿಳಿದ್ರೂನೂವೆ, ಅವರು ಮೆಟ್ಟಿದ 

ರಂಗ ಸ್ಥಳಾನಾ ಬಿಟ್ಟು ಬರೋವರ್ಗೆ . . . ರಾಜನ ವೇಷ ರಾಜನಾಗೂ , 

ಕಟುಕನ ವೇಷಾ ಕಟುಕನ್ನಾಗೂ , ಮಂತ್ರಿ ವೇಷ ಮಂತ್ರಿ ಹಾಗೂ ತಾರ 

ಮ್ಯದ ಅಭಾವವಿಲ್ಲೆ ತಮ್ಮಲ್ಲಿ ವೇಷಗಳ ತಾವೇ ಒಪ್ಕೊಂಡು ವಹಿಸಿ, 

Stage ಮೇಲೆಸಲ್ಲಿಸಿ ಮುಗ್ಸಿ , ಎಲ್ಲೂ ಒಂದಾಗಿ ವೇಷಗಳ್ನ ನಾಟಕ್ದೋರು 

ಅಳಿಸ್ಕೊಳ್ಳೋ ಹಾಗೆ . . . ಈ ಸಮಾಜ ಅಂಬೋ ಕನಸಿನ ನಾಟಕಕ್ಕೆ ನಾವು 

ಇಳಿದೇ ಬಿಟ್ಟ ಮೇಲೆ ಸೂಳೇಯೇನೂ - ಗರ್ತಿಯೇನೂ ! ನೀರಾಜಿ 

ಯೇನೂ ! ಹರಕಲು ಸೀರೆಯೇನೂ ! ತಾಳಿ ಏನೂ ? . . . ವಜ್ರದ ಅಡ್ಡಿಗೆ 

ಏನೂ . . . “ ನಾವೂ ” “ನೀವೂ ” . . . ಇವರೂ ” . . . "ಅವರೂ" !. . . 

ಹೀಗೇ . . . ನಮ್ಮ ನಮ್ಮ ವೇಷಗಳ ಪುರಾಕೃತ ಪಾಪ ಪುಣ್ಯಗಳಿಂದ 

ಗ್ರಹಿಸಿ ವಹಿಸ್ಬಿಟ್ಮೇಲೆ ಕಷ್ಟ ... ಸುಖ ಅಂಬೋ ಮಾಯೆಗೆ ಅಂಧರಾದ 

ನಾವು . . . ಸುಖಾನನುಭವಿಸೋದು. . . ವ್ಯತ್ಯಾಸವಿಲ್ದೆ . . ಶೋಕದಲ್ಲಿ 

ಒದ್ದಾಡೋ ಇತರಿಗೆ ಸಹಾಯ ಮಾಡೋದೇ ಆತ್ಮಧರ್ಮ ಅಂತ ನನ್ನ 

ಹೃದಯಕ್ಕೆ ಹೊಳೆದು ನಾನೂ , ಹಾಗೇನೇ ನೀವೂನೂವೇ  “Baby Wel- 

fare Fund " . . . ಅಲ್ಲದೆ ಇತರ ಧರ್ಮಗಳ ವ್ಯವಸ್ಥೆಗೆಕೊಟ್ಟಿರೋ ಧನ 

ಸಹಾಯಾನೂ ಅಲ್ಲದೆ ನೀವೇನೇ ನಮ್ಮೂರಿನ ಅಶಕ್ತ ಪೋಷಕ ಸಂಘಕ್ಕೆ 

ವೀಣೆ ಕಛೇರಿ ಮಾಡಿ ಸಂಪಾದಿಸಿ ಕೊಟ್ಟ . . . ನೀವೂ . . . ಸೇರಿ . . . 

ಸೂಳೆ: ( Lady Sನ ಕೈಯನ್ನು ತಾನು ಕೂತಿರುವ ಕುರ್ಚಿಯನ್ನೂ ಥಟ್ಟನೆ ಬಿಟ್ಟು 

. . . ಪಕ್ಕದಲ್ಲಿರುವ ದುಂಡು ಮೇಜಿನ ಅಪರ ಭಾಗದ ಕುರ್ಚಿಯ ಮೇಲೆ 

ಕೂತು, ಅಲ್ಪ ಕ್ರೂರ ಧ್ವನಿಯಲ್ಲಿ) ಕ್ಷಮೀಮ್ಮಾ . . . ನನ್ದಾನ, ನನ್ಧರ್ಮ ... 

ನನ್ದು ! ಮಿಕ್ಕೋರ್ದಲ್ಲ ಕ್ಷಮ್ಸಿ ! ನಿಮ್ದೂ ಅಲ್ಲ ! ನನ್ದು ! ಆ ಧರ್ಮದ 

ಮಾತೆಲ್ಲಾ ತುಂಡ್ಹಾಕಿ, ದಯವಿಟ್ಟು !. . . ಕ್ಷಮ್ಸಿ ! ನನಗೇನೋ 

ತೋಚಿತು ! ಸೂಳೆರಾದ್ರೂ ನಾವು, ಕಣ್ಣು , ಕೈ , ಕಾಲು, ಮೈ ದೇವರು ನೆಟ್ಟಗೇ 

ಕೊಟ್ಟಿದ್ದಾನೆ ನಮಗೆ ! ಆದರೆ ಸೂಳೆಯಾದ ನಾನೂ ಕೂಡ ಕನಿಕರಿಸ 

ಬೇಕಾದ, ಪಂಚೇಂದ್ರಿಯಗಳು ಐಬಾಗಿರೋ ಪ್ರಾಣಿಗಳಿಗೆ, ನಾನು 

ಸಹಾಯ ಮಾಡೋ ಸ್ಥಿತಿಗೆ ಬಂತೇ ? ಅಂಬೋ ಆವೇಶ್ದಲ್ಲೀಮ್ಮಾ ನನ್ನ 

ಕಚೇರಿ ಅಶಕ್ತ ಪೋಷಕ ಸಂಘದಲ್ಲಿ ! . . . ವೀಣೆ ಬಾರಿಸಿದ್ದು ನಾನು, 

ಮೊದಲನೇ . . . ಕೊನೇ ಸಾರ್ತಿ ಅಲ್ಲೇ !!. . . ಇದೆಲ್ಲಾ ಯಾಕಮ್ಮ ? 

ಒಡ್ದೇ ಹೇಳಿದ್ದೇನೆ (ಗಂಭೀರವಾಗಿ) ನೀವಿದುವರೆಗೂ ಹೇಳಿದ ಧರ್ಮಾ 

ಧರ್ಮದ ತಿರುಳು ಇಷ್ಟು ! ನನಗೆ ತೋಚಿದ ಮಟ್ಟಿಗೂ ಇಷ್ಟು ! 

ಸಮಾಜದಲ್ಲಿ ತಾವು ತಾವು ಕೊಟ್ಟು ಇಟ್ಟಿದ್ದ ಪುರಾಕೃತ ಪುಣ್ಯ ಪ್ರಭಾವ 

  ದಿಂದ ತಾವು ತಾವು ಅನುಭವಿಸ್ತಿರೋ ಸುಖಗಳ ತಿಂದು ತೇಗಿರೋ 

ಗಲಾಟೇಲಿ, ಒಬ್ಬರೋ ಇಬ್ಬರೋ ಹೆಂಗಸು , ತಾವು ಅನುಭವಿಸೋ 

ಸುಖವಿಲ್ಲದ ಅನ್ಯರ ದುಃಖಾನ ನೀಗಿಸೋಕೆ. . . ತಮ್ಮನ್ನ ಮದುವೆಯಾದ 

ಗಂಡಸ್ರು ಸಂಪಾದಿಸಿದ ಧನಾನಾ ನಮ್ ಸಹಾಯಕ್ಕೆ ಸುರ್ರೋಕೆ ಸಿದ್ದವಾಗಿ 

ರೋರು ನಿಮ್ಮಂಥಾವು ! ಇಂಥಾ ನಿಮ್ಮ “ಕಮ್ಟಿ" ನೂ ಸಾಕು ; ಈ 

ಕಮಿಟಿ ಹೆಂಗಸ್ರ ಸಹವಾಸಾನೂ ಸಾಕು ! ನಾವು ಮಾಡದ ತಪಸ್ಸಿನ ಫಲ , 

ಬೇಡದವರ ಕೈಯಿಂದ ಬೇಡ ! ನಮಗೆ ! ಸೂಳೆಗಳಿಗೆ !! 

ಲೇಡಿ ಶಿವ : [ಕುರ್ಚಿಯಂದೆದ್ದು ಮೇಜನ್ನು ಬಾಗಿ . . . ಸೂಳೆಯ ಭುಜವನ್ನು 

ಸವರುತ್ತಾ ] ಹಾಗಲ್ಲಾಮಾ !! 

ಸೂಳೆ : [ಎದ್ದು ನಿಂತು] ಕೋಪಿಸ್ಕೋಬೇಡಿಮ್ಮಾ ! [ ಅಲ್ಪಸ್ಮಿತ ಮುದ್ರಿತಳಾಗಿ] 

ಕೋಪಿಸ್ಕೋಬೇಡೀಮ್ಮಾ , ನಿಮ್ಮ ಪರಿಚಯ ಆದ ಈದಿನ ಸುದಿನವೇಂತ 

ನನ್ನ ಹೃದಯಕ್ಕೆ ತಾಕಿದ್ರೂನೂವೇ . . .ನೀವು “ಕಮ್ಟಿ"ಂದ್ರಲ್ಲ . . . ಆ 

ಹೆಂಗಸ್ರ ಪೂರ್ವಪಶ್ಚಿಮವಲ್ಲದೆ, ಉತ್ತರದಕ್ಷಿಣಾನೂ ನನಗೊತ್ತೂ ! 

ನಿಮಗೊತ್ತಿಲ್ಲಾಮಾ !! [Lady Sಅನ್ನು ನಯವಾಗಿ ಕೂಡಿಸುತ್ತಾ ] 

ಕೂತ್ಕೊಳ್ಳಿಮ್ಮಾ!ಕೂತ್ಕೊಳ್ಳಿ . [ ಇಬ್ಬರೂ ಕುಳಿತುಕೊಳ್ಳುವರು.] 

ಲೇಡಿ ಶಿವ : (ಕುಳಿತ ಕುರ್ಚಿಯನ್ನು ಎಳೆದು ಕುಳಿತು, ಸೂಳೆಯನ್ನು ಸಮೀಪಿಸಿ 

ದಕ್ಷಿಣ ಹಸ್ತವನ್ನು ಸವರುತ್ತಾ ) ಸುದಿನ ? ” ನಿಮ್ಮ ಪರಿಚಯ ನಿಮ್ಮ 

ಪುಟ್ಟಾನ ಪರಿಚಯ ಆದ್ದು ನನಗೆ ಸುದಿನ ! 

ಪುಟ್ಟಾ : ( Re-entering with flushed and scratched force , torn frock 

and yet with a triumphant gleam in her eyes ; running into her 

mother slapinJoyous Voice) ಅಮ್ಮಾ ! . . . ಇಲ್ನೋಡು! ( Points 

out a scratch on her cheek ). 

ಸೂಳೆ : ಏನೇ ಪಟಿಂಗಿ, ಏನ್ ಜಗಳಾನೇ ? ಯಾರ ಜೊತೇಲೇ ? ಇಲ್ನೋಡೇ 

(Pointing out to Lady S ). . . ಇವರ್ಯಾರೇ ? 

ಪುಟ್ಟಾ : ( Stands up and folds her hands) ನಮಶ್ಚೇ ! 

ಸೂಳೆ : ಯಾಕೇ ಇವರ್ಗೆ ನಿನ್ನ ನಮಶ್ಚೆೇ ?. . . ಯಾರೇ ಇವ್ರು ? 

ಪುಟ್ಟಾ : ದೊಡ್ಮನ್ಟ್ರು , 

ಲೇಡಿ ಶಿವ : Gathering up Putta in her arms and hugging nd kissing 

and re-kissing Putta ’s brows , eyes, lips , neck and eyes again ) 

ನಾನು ದೊಡ್ಮನ್ಷ್ಪು ಆದ್ರೆ , ನೀನ್ಯಾರೆ ಕಂದಾ ? 

ಪುಟ್ಟಾ : ನಾನೂ . . . ಚೂಳೇಮುಂಡೆ ! (laughs) . 

ಸೂಳೆ : ( Dragging her from Lady S) ಯಾರೇ ಹೇಳಿದ್ದೂ ? (her eyes 

blaze and belch fire ). 

ಪುಟ್ಟಾ : ಬಿಡಮ್ಮಾ !. . . ನೋಯುತ್ತೆ ! ನನ್ನ ಚೂಳೆಮುಂಡೆ ಅಂದದ್ದು 

ಎದುರ್ ಮನೆ ಚರ್ಚು ! ಅವಲ್ ಮುಖವೆಲ್ಲಾ ಪರಬಿಟ್ಟೆ ! ಒಂದೇ 

ರಕ್ತ ! (in a triumphant harranguing blare ) ಇದೇನು ! (Pointing 

to her cheek ) ಅವಳ್ ಮೂತೀನ್ ನೋಡ್ಬೋಕು ! ಬಡುಕೊಳ್ತಿದಾಳೆ 

ಅವರಮ್ಮ ! ಅವಳ ಕೈಗೆ ಶಿಕ್ಕದಾಗೆ ಓಡಿ ಬಂದ್ ಬಿಟ್ಟೆ ! ( Strikes a 

dramatic attitude and laughs sardonically and whole 

heartedly ) ಬರ್ಬಿ, ನಾಳೆ ಬೀದೀಲಿ ! (grinding her teeth — her face 

like a young tiger - cub) ಕಣ್ ಕಣ್ಣೇ ಪರ್ಚ್ತೇನೆ ! "ಚೂಳೆ" ಅಂತೆ 

ನಾನು ! ಮುಂಡೆ ಅಂತೆ ನಾನು ! ಬರ್ಲಿ ನಾಳೆ ಬೀದೀಗೆ ! 

ಸೂಳೆ : ಸುಬ್ಬೂ (Subbu enters ) . . . ಎದುರ್ ಮನೆ ಸರ್ಸು ಜೊತೆಗೆ ಜಗಳಾ 

ಆಡಿ ಪರ್ಚಿ , ಮುಖ ಪರ್ಚಿಸ್ಕೊಂಡ್ ಬಂದಿದಾಳೆ ! ರಕ್ತ ಕಂಡ್ ಬರೋ 

ಜಾಗ್ದಲ್ಲಿ ಅಯೋಡಿನ್ ಹಾಕ್ಬಿಟ್ಟು ಎದುರು ಮನೇಗೆ ಹಾರಿಹೋಗಿ ಆ 

ಮಗೂಗೆ - ಏನಪಾಯ ಆಗಿದೆಯೋ... ಏನು ಬೇಕೋ . . . 

ಅಯೋಡೀನೋ , Iodoformಓ . . . ನೋಡ್ಕೊಂಡು ವಿಚಾರಿಸ್ಕೊಂಡು 

. . . cotton ಇಧೆ, Lint ಇದೆ . . . ಕೈಯಲ್ಲಿ ತಕ್ಕೊಂಡ್ ಹೋಗಿ 

ಮಾಡಬೇಕಾದ್ ಮಾಡಿ . . . “ ಮಕ್ಕಳ ಜಜ್ಳಾ - ದೊಡ್ಕೊರುಮನಸ್ತಾಪ 

ಪಟ್ಯೂಬಾರ್ದೂಂತ ಸಮ್ಜಾಯಿಸ್ಕೊಂಡು ಬಂದು ಸೇರು ! ಓಡು ! 

ಒಂದೇ ಓಟ ಸುಬ್ಬೂ  ! [Subba picks up Putta and exits R 

precipitately ] ನೋಡಿದ್ರಾಮ್ಮಾ ! (ಸೂಳೆ standing up to Lady S 

who also standsup) ಷುರು !. . . ನಮ್ಗೂ . . . ಸಮಾಜಕ್ಕೂ , ನಮ್ಮ 

ಪುಟ್ಟಾನ “ Little Lady ” ಅಂದ್ರೆ ನೀವು ! . . . ಈ Little Ladyನ 

ಎದುರುಮನೆ ಸಂಸಾರಿಗ್ಳು ಸೂಳೆಮುಂಡೆ ಅಂದದ್ದಕ್ಕೆ ನಮ್ ಪುಟ್ಟಾ 

ನೋಡಿ !. . . ಎದುರ್ಮನೆ ಸರ್ಸು ಮುಖ ಪರ್ಚಿ ಬಂದಿದಾಳೆ ಇದೇ 

ನೋಡಿ ! ನಮಗೂ ಸಮಾಜಕ್ಕೂ ಇರೋ ಸನ್ನಿವೇಶ ! ಏನ್ ಹೇಳ್ತಿರಾ 

( Her eyes spitting sparks of fire ) ನಿಮ್ಮ ಮೈಮುಖ ಹೃದಯ 

“ ಚಿನ್ನಾ ”ಂದೆ ! ನನ್ನ ಮೈಮುಖ ಹೃದಯ “ಕಬ್ಬಿಣಾಂ "ದೆ ! ನಮ್ಮ 

ಪುಟ್ಟಾನ ಹೃದಯ , ಬುದ್ದಿ , ಕೈ - ಮೈಯಿ, ಆತ್ಮಾನಾ "ಉಕ್ಕು ” ಮಾಡಿ, ಈ 

ಸಂಸಾರಿಗಳ ಸವಾಲಿಗೆ ಜವಾಬಾಗಿ ಮಾಡಿಬಿಟ್ಟೇ ಸಾಯ್ತೇನೆ ನಾನು ! 

ಈಗೇನ್ ಹೇಳ್ತೀರಾಮ್ಮಾ ! ? 

ಲೇಡಿ ಶಿವ : ನನಗೂ ನಿಮಗೂ ಒಂದು ವ್ಯತ್ಯಾಸಾನೂ ತೋಚೋದಿಲ್ಲಾಮ್ಮಾ ! 

( ಬಿಕ್ಕಿ ಬಿಕ್ಕಿ ಅಳುತ್ತಾ ) ನನ್ನ್ ಮಕ್ಳಿಗೂ , ನನ್ನ್ ಅಲಮೇಲುಗೂ , ನಿಮ್ 

ಪುಟ್ಟಾಗೂ , ಏನೂ ವ್ಯತ್ಯಾಸವೇ ಕಾಣೋದಿಲ್ಲ ನನ್ ಕಣ್ಣಿಗೆ ! ಈಗ ನೀವು 

“ಏನು ಹೇಳೀರಾ? ” ಅಂದ ಪ್ರಶ್ನೆಗೆ . . . ಉತ್ತರ . . . ನನಗೆ ಒಂದೂ 

ತೋಚೋದಿಲ್ಲ ! ನಿಮ್ಮಗಳ ಸ್ಥಿತೀನ ಸ್ವಲ್ಪ ಮೇಲ್ಮಾಡೋಕೇಂತ 

ಬಂದೋಳು ನನ್ ಮನಸ್ಸೇ ಕೀಳಾಗಿರೋವಾಗ ನನಗೆ ಒಂದೂ ತೋಚ್ದು! 

[Sobbing hysterically collapes on ಸೂಳೇ s shoulders. ಸೂಳೆ  

gathers gathers her up tenderly ] ಸುಬ್ಬೂ ಡ್ರೈವರ್ಗೆ ಹೇಳಿ “ಕಾರ್ ಸ್ಟಾರ್ಟ್ 

ಮಾಡೂ" ಅನ್ನು ! ತಟ್ಟೆ, ಹಣ್ಣು , ಹಂಪಲು, ವಗೈರೆ ಕಾರಿಗೆ ಸಾಗ್ಸು . 

ನಮ್ಮನೇಗೆ ದೇವ್ರಹಾಗೆ ಬಂದ ಈ ಪ್ರಾಣೀನ ನಾನು ಕರ್ ತರ್ತೇನೆ ! 


( ಗಟ್ಟಿಯಾಗಿ) ಅಮ್ಮಾ !! (ತಾಯಿಯು ಒಳಗಿನಿಂದ ಬರುವಳು.) 


[Half leads and carries Lady Sivadasa Iyer caressingly mid L 

with help of her mother ... After oneminute the curtain drops slowly .] 



Act 3 


ಹತ್ತು ವರ್ಷಗಳ ಅನಂತರ 

[ಸೂಳೆ is Fourthy four now , and a recumbent mass of femineity 

putrefied in flesh through her calling and petrified in will by her 

experience of life , noep,, the once wealthy her in his teens, who , 

losing his heart to we as depicted in the induction , but now a 

tottering pauper , in loyal attendance on his fate . Themother a dotard , 

is sitting on a bench - C - back ground .] 



ಸೂಳೆ: [ ತಲೆಯನ್ನು ಹೊರಳಿಸುತ್ತಾ ] ಹಯ್ಯೋ ! ಈ ತಲೆ ಶೂಲೇಗಾನ ನಿಂತ್ಬಿಟ್ರೆ 

ನಿದ್ದೆ ಹೋಗ್ಬಹ್ದು ! 

ಸೂಳೆತಾಯಿ : ತಲೆಶೂಲೇ ಏನು ! ಹೊಟ್ಟೆ ಶೂಲೆ ಏನು ? . . . ನಿನಿಗೆ ಹೀಗೆ 

ಆಗಾಗ್ಗೆ ಆಗ್ತಿರೋದು ವಳ್ಳೇದಕ್ಕಲ್ಲ . . . ಒಟ್ನಲ್ಲಿ ವಳ್ಳೇದಕ್ಕಲ್ಲ . . . 

ಮನೇ ಬಾಕ್ಲು ಬಟ್ಟೇಬರಿ . . . ಒಡವೇ ವಸ್ತು . . . ದುಡ್ಡು ದುಗ್ಗಾಣೀ 

. . . ದಿಕ್ಸ್ ದಿಕ್ಕಾಗಿ ಬಿದ್ದಿರೋವಾಗ ತಾನ್ ಹೆತ್ತ ಮಗು , ತನ್ನ್ ಹೆತ್ತ 

ತಾಯಿ ಇವು ಮುಂದೆ ಗತೀ ಕೆಡ್ದ ಹಾಗೆ, ಬುದ್ದಿ ಓಡ್ತಿರೋವಾಗ್ಲೇನೆ 

ಮುಂದಿನ್ ಕ್ರಮಾನ ಏರ್ಪಾಟ್ ಮಾಡೋದ್ ಬಿಟ್ಟಿಟ್ಟು . . . ಈಗ 

ನಿದ್ರೇ ಚಿಂತೇನ್ ಮಟ್ಗೆ ಕಟ್ಕೊಂಡೇನ್ ಬಂದ್ಹಾಗಾಯ್ತು ... . ಮುಂದೆ 

ಬದ್ಕೋ ನಮ್ಗೆಲ್ಲಾ ? 

ಸೂಳೆ :(Sardonically) ಹಾಗಾದ್ರೆ ಖಾತ್ರಿಮಾಡೇಬಿಟ್ಯಾಮ್ಮಾ ? ನನ್ ಸಾವ್ನ!? 

. . . ಸುಬ್ಬೂ ; ಡ್ರಿಂಕೂ . . . ! (ಸುಬ್ಬುವು, ಥಟ್ಟನೆದ್ದು , ಸೀಸೆಯಿಂದ 

ದ್ರಾವಕವನ್ನು ಗಾಜಿಗೆ ಸುರಿದು, ಒಡೆದ ಸೋಡಾವನ್ನು ಸೇರಿಸಿ, ಸೂಳೆಯ 

ಕೈಗಿಡುವನು. ಸೂಳೆಯು ಅದನ್ನು Sipಪ್ಪುತ್ತಾ) ನನ್ ಪಾಡ್ನ . . . ಈಗ್ಲೋ , 

ಆಗ್ಲೋ ಹೊತ್ಕಂಡ್ಹೋಗೊ ಘಟಾಂತ ನಿರ್ಧರಿಸ್ಪಿಟ್ಟು . . . ನಾನ್ 

ಸತ್ಮೇಲೆನೀನ್ ಬದ್ಕೋ ನಿನ್ ಚಿಂತೆ ಅಲ್ವೇಮ್ಮಾ ಹತ್ತಿರೋದುನಿನ್ 

ತಲೇಗೆ ? ಅಲ್ಲಿ ಅಮ್ಮಾ ? ಹೊತ್ತು ಹೆತ್ತ ತಾಯಿಗೆ ಮೊದಲ್ ಚಿಂತೇ 

... ಮೊದಲು ಗೋಳೂ . . . “ಮಗಳು ಸಾಯ್ತಳಲ್ಲಾ ! ” ಅಂಬೋದು 

. . . ಸಹಜ ಸಂಸಾರ್ದಲ್ಲಿ . “ ಮಗಳು ಮಣ್ಣಾದ್ರೇನೂ ? ನನ್ ಮುಂದಿನ್ 

ಬದ್ಕು ಗಿಟ್ಟಿಸ್ಕೋಬೇಕು !” ಅಂಬೋ ನಿಶ್ಚಿಂತೆ ನಿನಗಿರೋದು, ನಿನ್ನ್  

ತಪ್ಪಲ್ಲ , ಅಮ್ಮ ! ? . . . ನಿನ್ನ ಸೂಳಾರ್ಕೆಲಿ ನನ್ನ ಹೊತ್ತು ಹೆತ್ತ 

ಸೂಳಾರ್ಕೆಯ ಪ್ರಭಾವ ! 

ಸುಬ್ಬು : ಕ್ಷಮ್ಸು ಚಿನ್ನಾ ! ( ಬಾಹುವನ್ನು ಮುದುಕಿಯ ಕಡೆಗೆ ಸೂಚಿಸುತ್ತಾ ) ಈ 

ಮುದಿಗೊಡ್ಗ್ ಳು ಪಾಪ !ಹೊತ್ಹೊಟ್ಟೆ , ಹೆತ್ಹೊಟ್ಟೆ, ತೊದಲ್ತ್ ವೇ ... 

ಯಥಾ ಸಂಪ್ರದಾಯ ! 

ಸೂಳೆ : ( ಗಾಜಿನ ದ್ರಾವಕವನ್ನು ಒಂದೇ ಗುಟುಕಿನಲ್ಲಿ ನುಂಗಿ, ಗಾಜನ್ನು ನೆಲಕ್ಕೆ 

ಬಡಿದು, ಥಟ್ಟನೆದ್ದು ಕೂತು ಉನ್ಮಾದಾಗ್ರಹದಿಂದ) “ ಹೊತ್ಹೊಟ್ಟೆ ? ” 

. . . .“ ಹೆತ್ತೂಟ್ಟೆ ?”. . . . ತೊದ್ಲೂ !. . . (ಸುಬ್ಬುವಿನ ಕೈಯನ್ನು 

ಹಿಡಿದು) ಹಯ್ಯೋ . . . ಸುಬ್ಬೂ ! ನನ್ನ ಚಿನ್ನಾ ” ಅಂದ್ಯಲ್ಲಾ ! ದೊಡ್ಡ್  

ಕುಲ್ದಲ್ ಹುಟ್ಟಿ , ದೊಡ್ಡ್ ಪದ್ವೀನ ಅನುಭವಿಸ್ತಿದ್ದ ನೀನು . . . ನನ್ನ 

ಮಾತ್ಗೆ ಮರ್ಲಾಗಿ, ನನ್ನ್  ಮೇಲಿನ ಹುಚ್ನಲ್ಲಿ . . . ಮನೆ, ಮನೆತನ, ಕುಲ, 

ಗೋತ್ರಾನೂ ಒಗ್ದೆಸ್ದು . . . ಅಗ್ನಿಂದ ಇದ್ ವರ್ಗೆ . . . ಮೂವತ್ 

ವರ್ಷಾನೂ , ನನ್ನ್ ಅಂತ್ಯಾವಸ್ಥೆಲೂ ಶಿಶ್ರೂಷೆ ಮಾಡ್ತಿದ್ದೀಯಲ್ಲಾ !... 

ನೀನು . . ಚಿನ್ನಾ ! . . . ನಾನಲ್ಲ ! ಹೊತ್ತವರ್ಗೂ, ಹೆತ್ತವರ್ಗೂ 

ಇರ್ಬೇಕಾದ ಮಮ್ತೆ ನಿನ್ಗಿದೆ ! ನನ್ನ ಹೊತ್ತು, ಹೆತ್ತ ಈ ಕಿರಾತ್ಗೀಗಿಲ್ಲ ! 

ಇವಳು ಹೊತ್ತದ್ದೇಕೆ ? ಹೆತ್ತದ್ದೇಕೆ ? . . . ತಾಯ್ಗಾರ್ಕೆ ಮೇಲಾಶೆಪಟ್ಟೇ ? 

. . . ಎಂದ್ಗೂ ಇಲ್ಲಾ ! ತನ್ನ್ ಹೊಟ್ಟೆಪಾಡ್ಗೆ ! ನನ್ನ್  ಹೆತ್ತದ್ದೂ , 

ಬೆಳ್ಸಿದ್ದೂ , ಸೂಳ್ಗಾರ್ಕೆಲೀ ಮುಂದಕ್ ತಂದಿದ್ದೂ . . . ಅವಳ ಹೊಟ್ಟೆ 

ಪಾಡ್ಗೆ! ನನ್ನ ಮೈ , ಮುಖ ನೋಡಿ, ಮನೆ ಮರ್ತೋರು, ದುಡ್ಡ್ನ ಅವಳ 

ಕಿಸೀಗೆ ಸುರ್ದು , ನನ್ ಮೈ ಮನಸ್ಸು , ಹೃದಯಾ, ಆತ್ಮಾನ್ನ ಹೊಲಸ್ 

ಮಾಡ್ತಿದ್ದಾಗ ಇವಳು ನಸ್ ನಗ್ತಾ ಇದ್ದಿದ್ದೂ , , , ತನ್ ಹೊಟ್ಟೆ 

ತುಂಬೋಕೆ! ಈಗ ಅವಳವಸ್ಥೇ ಪಡ್ತಿರೋದೂ . . . ನಾನು ಸಾಯ್ತೇನೆ 

ಅಂಬೋದಕ್ಕಲ್ಲ . . . ತನ್ನ್  ಹೊಟ್ಟೆಪಾಡು ತಪ್ಪೋ ಭಯದ ಮೇಲೆ ! 

.. . ಅರ್ತ್ವೇ ? ಸತ್ತು ನಾನ್ ಬಿಟ್ಬಿಟ್ಟ್ ಹೋಗೋ ದುಡ್ನಾ, ದಕ್ಕಿಸ್ಕೊಂಡು, 

ತನ್ನ ಬದುಕ್ನ ಗಿಟ್ಟಿಸ್ಕೊಳ್ಳೋಕೆ!! (ಕೆಲವು ನಿಮಿಷಗಳ ಕಾಲ ಕೆಮ್ಮುವಳು) 

ಡ್ರಿಂಕೋ ! ಮಂಕು ? ( ಸುಬ್ಬುವು ಯಥಾಪೂರ್ವ೦ , ಮತ್ತೊಂದು 

ಗಾಜನ್ನು ತಯಾರ್ ಮಾಡಿ ನೀಡಲು, ಸೂಳೆಯು ಅದನ್ನು ಒಂದೇ ಗುಟು 

ಕಾಗಿ ನುಂಗಲು, ಕೈಯಿಂದ ಖಾಲೀ ಗಾಜನ್ನು ತೆಗೆದುಕೊಳ್ಳುವನು) 

ತಪ್ಪೇನೂ ಇಲ್ಲ ! ಯಾರ್ ಸತ್ರೆ ತಾನೇ ಏನು ? . . . ಉಳ್ಯೋರ್ಗೆ 

ಯೋಚ್ನೆ ಇದ್ದೇ ಇರುತ್ತೆ ! ಆದ್ರೆ ನನ್ಗಿರೋ ಆಶ್ಚರ್ಯ, ಹೆಂಗ್ಸು ತನ್ನ್  

ಹೊಟ್ಟೆಲ್ಹುಟ್ಟಿ ಹದಿನಾಲ್ಕು ವರ್ಷ್ವಾದ್ರೂ . . . ಒಂದ್ ಕಲ್ಮಷಾನೂ 

ಕಾಣ್ಣೆ ಇದ್ದ ತನ್ನ್  ಮಗೂನ ತನ್ನ ಹಾಳ್ - ಹೊಟ್ಟೆಪಾಡ್ಗೊಸ್ಕ್ರ ಈ 

ಸಮಾಜ ಮಾಂಸದ ಕೊಬ್ಬಿನ ಹಸ್ವಿಗ್ ತುತ್ತಾಗ್ ಕೊಟ್ಟು, “ಈ 

ಅವಸ್ಥೇಗ್ ನನ್ ಮಗಳ ತಂದಿಟ್ನಲ್ಲಾ ! ”ಂತ ಒಂದ್ ಕ್ಷಣವಾದ್ರೂ 

ತೋಚತ್ತ್ಯೇ ? .. . ಈ ಈ ಪಿಶಾಚಿಗೇಂತ ! ?( ಉನ್ಮಾದದಿಂದ ನಗುವಳು) 

ಹಯ್ಯೋ ಹೋಗಮ್ಮಾ ! ಯಾರತ್ರ ಈ ಬೂಟಾಟ್ಕೆ ! . . . ಹೆದರ್ಬೇಡ! 

. . . ಸಾಯ್ತೇನೆ ಹೌದು !. . . ಆದ್ರೆ ಸಧ್ಯಾ , ಪುಟ್ಟಾನ ಬಿಟ್ಟ್  

ಹೋಗೋವರ್ಗೂ ನಿನ್ ಬದುಕಿಗೇನೂ ಬೇನೇ ಇಲ್ಲಾ ! . . . ಇನ್ನಿಲ್ಲೇ 

ಇದ್ದು ರೇಗಿಸ್ಬೇಡ! . . . ಹೊತ್ತಾಯ್ತು ! . . . ನನ್ ನೋಡ್ಕೊಳ್ಳೋಕ್ 

ಸುಬ್ಬು ಇಧಾನೆ !. . . ಒಳ್ಗ್ ಹೋಗಿ ಮುದುರ್ಕೊ ! . . . ಪುಟ್ಟಾ 

ಓದಿದ್ ಸಾಕೂ !. . . ದೀಪದ್ ಬೆಳ್ಕು ಕಣೋಳ್ಳೇದಲ್ಲಾ !. . . ಅವಳ 

ಓದ್ನ ನಿಲ್ಲಿಸಿ ಕಳಿಸಿಲ್ಲೀಗೆ!...(ಸೂಳೆಯ ತಾಯಿಯ ನಿಷ್ಕಮಣ) ಡ್ರಿಂಕೂ , 

ಸುಬ್ಬೂ ! ( ಸುಬ್ಬುವು ಯಥಾಪ್ರಕಾರ ಉಪಚರಿಸುವನು) 

[ Enter ಪುಟ್ಟಾ , fourteen of age , a fascinating picture of our 

" up- to-date” school going Karnataka girl ; side parted hair ; "ಸೆರಗು" 

caught up by jewelled brooch be-ribboned plait ; Watch bearing 

wrist, and so forth .] 

ಪುಟ್ಟಾ : ( ತಾಯಿ ಇದ್ದಲ್ಲಿಗೆ ಓಡಿಬರುತ್ತಾ ) ಅಮ್ಮ ! ನಮ್ಮಮ್ಮ ! ಎದ್ದಿ 

ದ್ದೀಯಾ? . . . ಯಾಕ್ ನಿದ್ದೆ ಬರ್ಲಿಲ್ವೇ ? . ... (ತಾಯಿಯನ್ನು ತಬ್ಬಿ 

ಕೊಂಡು, ತಲೆಯನ್ನು ಸವರುತ್ತಾ , ಮುಖವನ್ನು , “ ಅಮ್ಮ ! ನಮ್ಮಮ್ಮಾ! ” 

“ ನಮ್ಮಮ್ಮಾ ” ಎಂದು ಉಸುರುತ್ತಾ, ಮುದ್ದಿಡುತ್ತಾ ) ಅಜ್ಜೀ , ನಿನಗ್ 

ನಿದ್ದೇಂದ್ಳು . . . ನನಗೆ ನಿದ್ದೆ ಇಲ್ಲ . . . ಓದ್ ತಿದ್ದೆ. ನಾಳೆ 

examination ನಿನ್ ದನಿ ಕೇಳಿಸ್ತು ! ಓಡ್ ಬಂದೆ .. . . ನಮ್ಮಮ್ಮಾ ! 

( ಮುದ್ದಿಟ್ಟು). . . ಯಾಕಮ್ಮಾ , ನಿದ್ದೆ ಇಲ್ಲ ಇನ್ನೂ ? ಯಾಕ್ ಸುಬ್ಬೂ ? 

...( to Subba ) ಸುಬ್ಬೂ ! ಡಾಕ್ಟ್ರು , “ ಅಮ್ಮನ್ ಔಷ್ದ ಕೊಟ್ಹೋಗಿದ್ದೇನೆ 

- ... ಎಲ್ಲಾ ಸರ್ ಹೋಗುತ್ತೆ ” ಅಂತಂದ್ ಹೋದ್ರಲ್ಲಾ ! . . . ಕೊಟ್ಯಾ ? 

. . . ಕೇಳೋದೇನು ! ಕೊಟ್ಟೇ ಇರ್ತೀಯಾ! . . ..( ಸುಬ್ಬುವಿನ ಕೈಯನ್ನು 

ಸವರುತ್ತಾ ) ನಮ್ ಸುಬ್ಬೂಮ್ಮಾ !. . . ಹೌದೂ ? (ಸುಬ್ಬುವನ್ನು 

ಕುರಿತು) ನಿನಗ್ಯಾಕ್ ಊಟ ಇಲ್ಲಾ ? 

ಸುಬ್ಬು : ಇದೇನ್ ಪುಟ್ಟಾ ? ನನ್ ಕೇಳ್ತೀಯಲ್ಲಾ .! ನಿನ್ ತಟ್ಟೆ ಮಧ್ಯಾಹ್ನದಿಂದ 

ಇಲ್ಲೇ ಇದೆ ? 

ಪುಟ್ಟಾ : (ಸೂಳೆಯನ್ನು ಮುದ್ದಿಡುತ್ತಾ ) ನನ್ಗೇನೋ ಅಮ್ಮ , ನೀನ್ ಬಿದ್ಕೊಂಡಾ 

ಗ್ಲಿಂದ . . . ಹಸ್ವೇ ಇಲ್ಲ . . . ನಿನ್ನ ಹಾಗೇನೇ ಸುಬ್ಬು ? ಆದ್ರೆ . . . 

ಅಜ್ಜಿ ಮಾತ್ರ !!... . 

ಸೂಳೆ : ( ಫಕ್ಕನೆ ನಕ್ಕು ) ನೋಡಿದ್ಯಾ ಸುಬ್ಬೂ . . . ಚೋಟುದ್ದ ಕೂಡ ಇಲ್ದ 

ಮಕ್ಳು . . . ಎಷ್ಟು ಗಮನಿಸ್ತಾರೇಂಬೋ ದ್ನ! . . . ನಾನ್ಹಿಂಗೆ ಬಿದ್ಕೊಂಡಿ 

ರೋದು, ನಿಮ್ಮಿಬ್ಬರ್ದೆ ಹೊಟ್ಟೆ ತೊಳ್ಸಿ ಹಸ್ವಿಲ್ಲದ್ಹಾಗ್ ಮಾಡಿದರೂ . . 

ನನ್ನೆತ್ತ ಆ ಭೂತ ಮಟ್ಗೆ ಘಂಟೆ ತಪ್ಪದ್ಹಾಗೆ ಗದುಕ್ತಿರೋದ್ನ ಗಮನಿಸಿ 

ದ್ದಾಳೆ ನೋಡು? .. . ( ಪುಟ್ಟಾನ ತಲೆಯನ್ನು ಸವರುತ್ತಾ ) ಏನು ಓದ್ತಿದ್ದೆ 

ಕಂದಾ . . . ನಾವಲ್ಲೇ ? ಬೇಡ ಕಂದ . . . ನಾಳೆ examinationಉ ! 

.. . ( ಗಲ್ಲವನ್ನು ಮುಟ್ಟಿ ) ಕೋಪವೇ ? 

ಪುಟ್ಟಾ : ( ನಗುತ್ತಾ ) ಹಯ್ಯೋ !. . . ನಾವಲ್ ಅಲ್ಲಾಮ್ಮಾ . . . textoo . . . 

Sanskrit textoo !! 

ಸೂಳೆ : ಸಂಸ್ಕೃತಾನೇ ? . . . ಏನದು . . . Textoo . ..! 

ಪುಟ್ಟಾ : ಬುದ್ದ ಜನ್ಮಾ ಅಮ್ಮ . . ಅದ್ರಲ್ಲಿ ಒಂದೇ Partoo ! 

ಸೂಳೆ : ಯಾವುದಾದ್ರೂ ಒಂದ್ ಶ್ಲೋಕಹೇಳು ನೋಡೋಣ ! 

ಪುಟ್ಟಾ : ( ರಾಗವಾಗಿ) ಜಾಗರ್ತಿ ಸಂಸಾರಗೃಹೇ ಮನೀಷೀ || 

ಮೋಹಾನ್ಧಕಾರೇ ಸ್ವಪತಿ ಪ್ರಮತ್ತಃ|| 

ಪ್ರಜಾಗರೋ ಜೀವಿತಯೇವ ಸುಪ್ತಃ | 

ಮೃತಸ್ಯ ಸುಪ್ತಸ್ಯಚ ಕೋ ವಿಶೇಷಃ|| 

ಸೂಳೆ : ಏನರ್ಥಾ, ಕಂದಾ ? 

ಪುಟ್ಟಾ : “ ಜಾಗರ್ತಿ ಸಂಸಾರ ಗೃಹೇ ಮನೀಷಿ ” ಅಂದ್ರೆ ಸಂಸಾರಲ್ಲಿ ಜಾಗರ್ಣೆ 

ಮಾಡ್ತಾನೆ ಮನುಷ್ಯ ! ಅಂದ್ರೆ , ಈ ಸಂಸಾರಾನಾ ನಂಬಬಾರ್ದು ಅಂತ 

ಕಣ್ಬಿಟ್ಕೊಂಡಿರ್ತಾನೆ, ತಿಳ್ದೋನು! "ಮೋಹಾನ್ಧಕಾರೇ ಸ್ವಪತಿ ಪ್ರಮತ್ತಃ” 

ಅಂದ್ರೆ . . . ಪ್ರಮತ್ತ . . . ಮನಸ್ಸು ಮೈನ ಮದದಿಂದ ಕೊಬ್ಬಿರೋ 

ಮಂಕು, ಸಂಸಾರಾಂಬೋದು ಕನಸು, ಮೋಹ, ಮಾಯೆ ಅಂತ ತಿಳೀದೆ... 

ಈ ಕತ್ಲೇಲಿ ಗೊರ್ಕೆ ಹೊಡೀತಿರ್ತಾನೆ ! “ಪ್ರಜಾಗರೋ ಜೀವಿತ ಏವ 

ಸುಪ್ತಃ ” ಅಂದ್ರೆ ಕಣ್ಬಿಡ್ಕೊಂಡಿರೋದು ಬಿಟ್ಕೊಂಡ ಹಾಗೇ ಮಲಗಿದ್ದಾರೆ ! 

ಆದ್ದರಿಂದ ಸಂಸಾರದ ಕಣ್ಣಿಗೆ ಕಣ್ಣು ಬಿಟ್ಟಿರೋ ಈ ಮಂಕು, ಬದುಕಿರೋ 

ವಾಗ್ಲೆ ನಿದ್ದೆ ಮಾಡ್ತಿಧಾನೇಂತ ! “ಮೃತಸ್ಯ ಸುಪ್ತಸ್ಯಚ ಕೋ ವಿಶೇಷಃ” 

ಅಂದ್ರೆ ಸತ್ತವನೂ , ನಿದ್ದೆ ಮಾಡೋನೂ ಇಬ್ಬರೂ ಒಂದೇ ! ಹೀಗೆ 

“ಬದುಕಿಯೂ ಕುರುಡನ ಹಾಗೆ ಗೊರ್ಕೆ ಹೊದ್ಯೋವನ್ಗೂ , ಸತ್ತವನ್ಗೂ , 

ವ್ಯತ್ಯಾಸವೇನೂ"ಂತ ಅರ್ಥ ! . . . ಅಲ್ವೇ ಸುಬ್ಬೂ ! 

ಸೂಳೆ : ಇದು ನಿನ್ನಥ್ವೇ ? . . . ಪುಟ್ಟಾ ! 

ಪುಟ್ಟಾ : ದೇವ್ರೇ ಗತಿ ! ನನಗೆಲ್ಲಿ ಸಂಸ್ಕೃತ ಗೊತ್ತು ! ಈ ಅರ್ಥ ನೋಟ್ಸ್ ನಲ್ಲಿ 

ಇರೋ translationಉ . . . plus (ಸುಬ್ಬುವಿನ ಕೆನ್ನೆಗೆ ಒಂದೇಟು 

ಬಿಗಿಯುತ್ತಾ ) ಸುಬ್ಬೂ . . . ವ್ಯಾಖ್ಯಾನಾ ಅಮ್ಮಾ ! ನಾನು ಸಂಸ್ಕೃತದಲ್ಲಿ 

first class ಬರೇಕೂಂತ ಆಶೆ ಅವನ್ಗೆ ! 

ಸೂಳೆ: ನೋಡ್ದ್ಯಾ ಸುಬ್ಬೂ ? ಈ ಹಾಳು ಶ್ಲೋಕಾನ ಬರದ್ದು ಬುದ್ಧ ! . . . 

ವಿಷ್ಣೂ ಅವತಾರ !. . . ಲೋಕ ಸಂರಕ್ಷಣೆಗೆ!. . . “ಸಂಸಾರ ಗೃಹೇ 

... ? ” . . . ನೀನ್ ಬೊಗ್ಳೋ ? 

ಸುಬ್ಬು : ಜಾಗರ್ತಿ ಸಂಸಾರಗೃಹೇ ಮನೀಷಿ !”. . . . 

ಸೂಳೆ : ಸಮಾಜಲ್ಲಿ ಸಹಜವಾಗಿ ಇದ್ದು ಇಲ್ಲೇ ಬೇಕಾದ ಸಂಸಾರಗಳಿಗೆ ನೀತಿ 

ಉಪದೇಶಿಸ್ತಾನಲ್ಲಾ ಬುದ್ದಾ !? ! ಸಮಾಜ್ದಲ್ಲಿ, ಸಂಸಾರ ಸುಖದುಃಖ 

ಸುಳಿವೇ ಸಲ್ಲದ ಸೂಳೇರ್ರತಿ ಈ ಲೋಕೋದ್ಧಾರಕನ ಗೋಚರಕ್ಕೆ ಬರ್ಲಿ 

ಲ್ವಲ್ಲಾ !!! (ಕಣ್ಣಿನಲ್ಲಿ ನೀರು ಸುರಿಸುತ್ತಾ ) ಹೀಗೇ . . . ನೋಡು. . . 

ಪರಮಾತ್ಮನ ಅವತಾರಗಳೆಲ್ಲಾ . . . ಪುಟ್ಟಾ ಹೇಳೋ ಪ್ರಮತ್ತರಿಗೆ ! 

ಸಂಸಾರ್ದ ಪ್ರಮತ್ತರಿಗೆ ! ನನ್ನಂಥ ಪಾಪಿಗಳಿಗಲ್ಲ !. . . ಡ್ರಿಂಕೋ 

ಸುಬ್ಬೂ ! ( ಸುಬ್ಬುವು ಯಥಾಪೂರ್ವಂ ಸತ್ಕರಿಸುವನು.) 

ಸುಬ್ಬು : ಚಿಂತೆ ಹಚ್ಕೋ ಬಾರ್ದೂಂದ್ರು ಡಾಕ್ಟ್ರು !. . . . ಪುಟ್ಟಾ ! ಅಜ್ಜೀ 

ಮಲಕ್ಕೊಂಡ್ಳೋ ಏನೋ . . . ! ಕಾಸಿದ್ಹಾಲಿಟ್ಟಿಧೆ, ಒಲೇ ಮೇಲೆ ! ... 

ಅಮ್ಮನಿಗೆ ! 

ಪುಟ್ಟಾ : (ತಾಯಿ ಮಲಗಿದ್ದ ಮಂಚವನ್ನು ಬಿಟ್ಟೆದ್ದು ) ತಂದ್ ಬಿಟ್ಟೇಮ್ಮಾ ! 

ಒಂದ್ ನಿಮಿಷ !. . . ( ಓಡುತ್ತಾ ನಿಷ್ಕಮಿಸುವಳು ) 

ಸೂಳೆ : ಸುಬ್ಬು ! ಹತ್ತಿರ ಬಾ . (ಸುಬ್ಬುವು ಹತ್ತಿರಕ್ಕೆ ಬರಲು, ಅವನ ಕಿವಿಯಲ್ಲಿ ) 

ನಿನಗೇನ್ ಹೇಳಿದ್ರು ಸುಬ್ಬೂ , ಡಾಕ್ಕು ! ಮನಸ್ಸಿಗೆ ಚಿಂತೆ ಹಚ್ಕೋ 

ಬಾರ್ದೂ"ಂತ್ಲೇ ?. . . ನನಗ್ಹೇಳಿದ್ದಿಷ್ಟು ಕೂತ್ಕೊ ! ( ಮಂಚದ ಮೇಲೆ 

ಕುಳಿತ ಸುಬ್ಬುವಿನ ಕೈಯನ್ನು ಸವರುತ್ತಾ ) ಕೇಳ್ ಸುಬ್ಬೂ ! “ ಇನ್ನ್  ನೀನ್ 

ಬದ್ಕೋದಿಲ್ಲ . . . ಒಂದ್ವಾರ ದಾಟೋದುಅಸಾಧ್ಯ ” ಅಂದ್ರು . ಡಾಕ್ಟ್ರು ! 

ನಾನ್ ಹೋದ್ಮೇಲೆ, “ ಮಿಕ್ಕೋವ್ರ ಗತಿ . . . ಏನೂಂ ಬೋ ಖಾಯಿಲೆ 

ಯಾಗಿ ಬಿದ್ಕೊಂಡಾಗ್ನಿಂದ್ಲೇ ಚಿಂತಿಸ್ತಾ ನೆನ್ನೆ ತಾನೇ ಎಲ್ಲಾ . . . arrange 

ಮಾಡಿದ್ದೇನೆ !. . . ಕೇಳು ! . . . ಹತ್ರ ಬಾರೋ ! . . . ಆ ಮುದ್ಕಿ 

ಹೊಂಚ್ಕೇಳಾಳು !. . . ನನ್ಗಿರೋ ದುಡ್ಡು ಮೂವತ್ತು ಸಾವಿರ ರೂಪಾಯಿ, 

ಬ್ಯಾಂಕ್ನಲ್ಲಿ Fixedಉ ! ಅದ್ರೂ ನನ್ನೊಡವೆಗ್ಳ್ನೂ , ಈ ಮನೇ ಸಹಿತ 

ನಿನ್ನ್  ಹೆಸರಿಗೆ ಬರ್ದಿಟ್ಟಿದ್ದೇನೆ ... . ಬೆಚ್ಚ್ ಬೀಳ್ಬೇಡ. . . ನೀನ್ ತಂದು, 

ನಾನ್ ತಿಂದು, ಕೊಬ್ಬಿದ್ದ್ರಲ್ಲಿ, ಎರಚಿದ್ದ್ರಲ್ಲಿ, ಕಾಲ್ಪಾಲೂ ಕೂಡ ಅಲ್ಲ ! 

. . . ಇದೆಲ್ಲಾ !. . . ಈ ಮನೆ ಕಟ್ಕೋಂಡ್ ನಿನ್ನೇನೂ ಪ್ರಯೋಜ್ನ ಇಲ್ಲ ! 

ಹನ್ನೆರಡ್ ಸಾವ್ರ ರುಪಾಯ್ದೆ ಈ ಮನೇ ಮಾರೋ ಏರ್ಪಾಟ್ ಮಾಡ್ಬಿಟ್ಟಿ 

ದ್ದೇನೆ . . . ಈ ದುಡ್ಡ್ನೂ , ಒಡವೆಗಳ್ನೂ , ಬ್ಯಾಂಕ್ನಲ್ಲಿರೋ ದುಡ್ನೂ, 

ಬೆಳಕವಾಡಿ ಕೊಳ್ಳೆಗಾಲ್ದ ಜಮೀನ್ನೂ , ಜೋಪಾನ ಮಾಡ್ಕೊಂಡು, 

ತಿರುಗ್ಹೋಗಿ ನಿನ್ನ್  ಕುಟುಂಬಾನ್ ಸೇರ್ಕೋ ! 

ಸುಬ್ಬು : ಚೆನ್ನಾಗ್ಹೇಳ್ದೇ ಚಿನ್ನ ! . . ನೀನೊಂದ್ವೇಳೆ . . . ಮಾತಿಗ್ ಹೇಳ್ತೇನೇ 

... ನನ್ನೂ ಪುಟ್ಟಾನೂ ಬಿಟ್ಟು ದೇವರ್ ಪಾದಾನ ಸೇರೂ ಪಕ್ಷಕ್ಕೆ , ನೀನ್ 

ಬಿಟ್ಹೋಗೋ ಒಡವೆ ವಸ್ತುಗಳ , ನಿನ್ನ ಕಳ್ಕೊಂಡು ಹುಚ್ಚೂ ಹಿಡ್ಡು, 

ಒದ್ದಾಡ್ತಾ ತಿರುಗೋ ನನ್ಗೆ , ದುಡ್ಡೇನು ? ಒಡವೆಯೇನು ?. . . ಪುಟ್ಟಾನ 

ಉಪ್ಯೋಗಕ್ಕೆ ಇಡು ! ಚೈತನ್ಯವಿರೋವಾಗ್ಲೇ ಇನ್ನೊಂದು ವಿಲ್ ನ ಬರಿ ! 

. . . ಈಗ್ಲೆ !! 

ಸೂಳೆ : ಹಯ್ಯೋ ! ಮಂಕೂ ! ಸಾಯ್ತಿರೋಳ್ ಹೇಳ್ತಾಳೇಂತ ಕಿವಿಕೊಟ್ಟು 

ಕೇಳೋ !! ಇಷ್ ವರ್ಷ ನೀನೂ ಬಿಟ್ಟ್   ಬಿಟ್ಟು ಪೇಚಾಡ್ತಿರೋ ನಿನ್ 

ಕುಟುಂಬಾನ ತಿರಿಗ್ಸೇರೋದು ನಿನ್ನ ಮೊದಲ್ ಕರ್ತವ್ಯ !. . . ಪುಟ್ಟಾನ, 

ಅವಳ ನಡೆ , ಗುಣದ ಪ್ರಕಾರ ಒಳ್ಳೇ ದಾರಿಗೆ ತರೋದು ನಿನ್ನ್   ಆಮೇಲಿನ 

ಭಾರ ! ಇದಕ್ಕೆ ಎಷ್ಟರಮಟ್ಟಿಗೊಡಂಬಡ್ತಾಳೋ ಅವ್ಳಜ್ಜಿ, ಅಷ್ಟರ ಮಟ್ಟಿ 

ಗೇನೇ ಆ ಮುದ್ಕೀಗೆ ಸಹಾಯ ಮಾಡೋದು ನಿನ್ನ್  ಮೂರ್ನೇ ಡ್ಯೂಟಿ! 

. . . ಆದ್ರೆ ನಾನ್ ಸಾಯುತ್ಲೂನೂವೇ ಮೊದ್ದು ನನ್ನ್  ಲಾಯರ್ ಹತ್ರ 

ಇದೇ ನನ್ನ ವಿಲ್ಲು . . . ದುಡ್ಡು , ಒಡವೆ, ಈ ಮನೆಯ title deedsಉ . 

ನೀನೇ sole . . . ಎಂಥಾದ್ದೊ . . . ಅದು ? ಇವೆಲ್ಲಾನೂ ಭದ್ರ 

ಪಡಿಸ್ಕೊಂಡು, ನಿಮ್ಮನೇಗೆ ಹೋಗೋರು ಮನೇ ಸ್ವತ್ತು , ಇಡ್ಕೊಂಡು 

ಪುನಃ ಮನೆ ಬಂದು ಸೇರಿದ್ರೆ ಅಡ್ಡಿ ಮಾಡೋದಿಲ್ಲ ನಿಮ್ಮ ಜನಗ್ಳೂ !! ... 

ಪುಟ್ಟಾನ ಓದ್ಗಾರ್ಕೇಲೇ ಹಾಕು !. . . ಎಷ್ಟು ಓದಿದ್ರೆ ತಾನೆ ಏನು !. . . 

ಸೂಳೇಗ್ ಹುಟ್ಟಿದ್ ಮಗೂನ ಸಮಾಜ ಸಹಿಸೋದಿಲ್ಲಾ ! . . . ಮದ್ವೆ, 

ಮನೆ, ಮಕ್ಳೂ ಅವಳ ಪಾಲಿಗಿಲ್ಲದ ಪಾಪಾ . . . ಪುಟ್ಟಾನ್ ತಪ್ಪೋ ? 

. . . ನನ್ನೀ ದಾರೀಗ್ ತಂದ, ನಮ್ಮಮ್ಮನ್ ತಪ್ಪೋ ? . . . . ಇಲ್ಲಾ 

ಆ ಬುದ್ದನೇ ಸಂರಕ್ಷಿಸೋ ಸಮಾಜದ ತಪ್ಪೋ ? . . . ಇಲ್ಲಾ , ಧರ್ಮ 

ಸಂಸ್ಥಾಪನೇಗೇ ಅಂತ ಯುಗಯುಗಾನೂ ತಪ್ದೆ ಅವತರಿಸೋ ಸೃಷ್ಟಿಕರ್ತನ 

ತಪ್ಪೋ ? . . . ಒಟ್ನಲ್ಲಿ ಇಂಥಾವರ್ದೆ ತಪ್ಪೂಂತ ನಿರ್ಧರಿಸೋ . . . 

ನೀತಿ ನಿಪುಣರಿನ್ನೂ ಹುಟ್ಟಿಲ್ಲ!.. . ಜಗತ್ನಲ್ಲಿ !! ಸಧ್ಯ , ಅವಳ ಬೆಳವಣ್ಗೆ , 

ವಿದ್ಯ, ನಡತೇನ ಗಮನಿಸ್ತಾ ನಾಲ್ಕ್ ಜನಕ್ಕೆ ಉಪಯೋಗ ಆಗೋಹಾಗೆ, 

ಒಬ್ಬ ನರ್ಸೋ , ಒಬ್ಬ ಟೀಚರ್ರೋ . . . ಇಲ್ಲ ಓದ್ದಾರ್ಕೆಲಿ ಅವಳ ಬುದ್ದಿ 

ಓಡಿದ್ರೆ ಒಬ್ಬ ಲೇಡಿ ಡಾಕ್ಟರ್  ಕಸಬಿಗೋ . . . ಲಾಯಖ್ಖಾಗಿ ಮುಂದಕ್ 

ತರೋದು ನಿನ್ಭಾರಾ ! (ಕಣ್ಣೀರು ಸುರಿಸುತ್ತಾ , ಆಡುವುದಕ್ಕೆ ಪ್ರಯತ್ನಿಸಿದ 

ಮಾತುಗಳು ಹೊರಹೊರಡದೆ, ತಲೆಬಾಗುವ ಸುಬ್ಬುವಿನ ಮುಖವನ್ನು 

ಸವರುತ್ತಾ ) ಹೋಗಿ ಮಲಕ್ಕೋ ಸುಬ್ಬೂ ! . . . ಒಂದ್ ಮಟ್ಟಿಗೂ .... 

ಮರೀಬೇಡಾ !. . . ಈ ಸಂಸ್ಕೃತ ಇತ್ಯಾದಿ ಗಲಾಟೇಲಿ . . . ನನಗೊಂ 

ದ್ಯೋಚ್ನೆ ಹೊಳ್ಯತ್ತೆ ಸುಬ್ಬೂ ! ಕೇವಲ ಕಲ್ಕುಟ್ಟಿ ಕುಟ್ಟಿ ಕೆತ್ತಿದ ಕರೀಕಲ್ನಲ್ಲಿ 

ಭಕ್ತರ ಆಶೇ ಅಂಬೋದು ದೇವ್ರಾಗಿ ಆ ಕಲ್ನಲ್ಲಿ ಅವಿತ್ಕೋಂಡಿರೋಹಾಗೇ 

. . . ಲೋಕ್ವೆಲ್ಲಾ ಎಷ್ಟು ಹೀಯಾಳಿಸಿದರೂ . . . ( ಎದೆಯನ್ನು ಬಿಗಿದ 

ದಕ್ಷಿಣ ಮುಷ್ಟಿಯಿಂದ, ಬಾರಿಬಾರಿಗೂ ವಾಮ ವಕ್ಷವನ್ನು ಬಡಿಯುತ್ತಾ ) 

ಈ ಮನುಷ್ಯ ದೇಹದಲ್ಲಿ , ಈ ಕೊಳೆತ ಕಾಯದಲ್ಲೂ . . . ನಿನ್ನ ಭಕ್ತಿ , 

ನಿನ್ನ ಶಿಶೂಷೆಯಿಂದ, ಇಲ್ಲೆಲ್ಲೋ ಸುಬ್ಬೂ , ನಿನ್ನ್  ದೇವು, ಅಡಗ್ 

ಕೊಂಡಿದೆ ! ಪ್ರಪಂಚದ ಪಾಪಿ ಪ್ರಯೋಜನಕ್ಕೆ ಹುಟ್ಟಿದ ನನಗೆ ಒಂದ್ 

ಹೆಮ್ಮೆ , ಸುಬ್ಬೂ !. ... ನಿನ್ನ್  ಭಕ್ತಿ , ಪ್ರೇಮ, ಸುಬ್ಬೂ !. . . ಇನ್ನೆರಡು 

ದಿನಕ್ಕ್ ಭಯವಿಲ್ಲ . . . ನನ್ ಜೀವಕ್ಕೆ !. . . ಇನ್ನ್  ನಾಳೆ ಬೇರೆ ಇಧೆ 

. . . ಓಡಾಡೋದು !. . . ಡಾಕ್ಟರ್ ಮನೆಗೂ ಇಲ್ಲಿಗೂ !. . . ಕೊನೇ 

ಗೊಂದು ಡ್ರಿಂಕ್ ಕೊಟ್ಬಿಟ್ಟು ಹೋಗ್ ಮಲಕ್ಕೋ , ಸುಬ್ಬೂ !.. . ಪುಟ್ಟಾ 

ತರ್ತಾಳೆ ಹಾಲು ! 

ಸುಬ್ಬು : ಆಗ್ಲಿ ಚಿನ್ನ ! ಆದ್ರೇ . . . .! ? 

ಸೂಳೆ : ( ಬಲಗೈಯಿಂದ ಕುತ್ತಿಗೆಯನ್ನು ನೀವುತ್ತಾ ) ಅಬ್ಬ್ಹಾ !. . . ಅನ್ಯಾಯ 

ಸುಬ್ಬೂ . . . ಈ ತಲೆನೋವು! strong ಮಾಡು drinkನ್ನ ! 

ಸುಬ್ಬು : ( apprehensively ) ಸಾಲ್ದೇ ತಕ್ಕೊಂಡದ್ದು ? . . . ಒಳ್ಳೇದೇ ಮೈಗೆ 

. . . ಈಗ . . . ? 

ಸೂಳೆ : ಈಗ್ಲೊ , ಆಗ್ಲೋ ಸತ್ತು ಸುಟ್ಟು ಬೂದಿಯಾಗೋ ಈ ಕೊಳೆತ ಮೈಗೆ, 

ಒಳ್ಳೇದೇನೂ , ಕೆಟ್ಟದ್ದೇನೂ . . . ಕೊಡು ಮಗು !! 

[ಸುಬ್ಬುವು ಬ್ರಾಂಡಿ ಬಾಟಲಿಂದ ಗಾಜಿಗೆ ದ್ರಾವಕವನ್ನು ಬಗ್ಗಿಸಿ, ಸೋಡಾವನ್ನು ಒಡೆದು 

ಸೂಳೆಯ ಕೈಗೆ ಕೊಟ್ಟು, ಗಟ್ಟಿಯಾಗಿ " ಪುಟ್ಟಾ ! ಅಮ್ಮನಿಗ್ಹಾಲು ! ” ಎನ್ನುತ್ತಾ 

“ಎರ್ಡೂವರೇಗೆ ಔಷ್ದ ಕೊಡ್ಬೋಕು” ಎಂದು ತನಗೆ ತಾನೇ ಹೇಳಿಕೊಳ್ಳುತ್ತ ಅಲಾರಂ ಕ್ಲಾಕ್ 

ಅನ್ನು set ಮಾಡಿ ನಿಷ್ಕಮಿಸುವನು. ಸೂಳೆಯು ಮಲಗಿದ್ದ ಹಾಗೆಯೇ ಅರ್ಧವನ್ನು ಕುಡಿದು, 

ಮಿಕ್ಕ ಅರ್ಧ ಬಾಕಿ ಇರುವ ಗಾಜನ್ನು ಎದೆಯ ಮೇಲೆ ಇರಿಸಿಕೊಂಡು . . . " ಪುಟ್ಟಾ , 

ಹಾಲಿಲ್ಲವೇ . . . ಮನೇಲಿ ಎನ್ನುವಳು.] 

ಪುಟ್ಟಾ : ( ಹಾಲು ತುಂಬಿದ ಚೊಂಬು, ಟಂಬ್ಲರ್ ಸಹಿತ ಎತ್ತಿಕೊಂಡು ಬಂದು 

ಸೂಳೆಯ ತಲೆಭಾಗದಲ್ಲಿ ಇರುವ teapoy ಮೇಲಿರಿಸಿ, ಮಂಚದ ಮೇಲೆ 

ಕೂತು ಬಾಗಿ, ಸೂಳೆಯನ್ನು ಅಪ್ಪಿಕೊಳ್ಳುವಳು ). 

ಸೂಳೆ : ಇದ್ಯಾಕ್ ಕಂದಾ ? ಇಷ್ಟ್ಹೊತ್ತು! ಈ ಹಾಲಿಗೆ ? 

ಪುಟ್ಟಾ : ಹಾಲೇನಮ್ಮಾ !? (ಸೂಳೆಯ ಮೂರ್ಧ್ನಿ, ಫಾಲ, ಅಕ್ಷಗಳನ್ನು ಮುದ್ದಿ 

ಡುತ್ತಾ ) ಅಮ್ಮ ! ನಮ್ಮಮ್ಮ ! ನನ್ನಮ್ಮ್ಮ ಹಾಲ್ ಕಾಯ್ತಿತ್ತು, ಒಲೇ 

ಮೇಲೇ ! ಆದ್ರೂ . . . ಬೇಗ್ ತರ್ದಿದ್ರೆ ಹಾಲ್ನ ! ಆದರಜ್ಜೀಮ್ಮಾ ! 

ಹೆದ್ರಿಸುದ್ಲೂಮ್ಮ್ಮ್ಮ್ರ ! . . . ನನ್ನ . . . ! 

ಸೂಳೆ : (Caresses ಪುಟ್ಟಾ ' s face and yet turning raged eyes spitiing 

fire, to door C) ಹೆದ್ರಿಸ್ ದ್ಳು !. . . ನಿನ್ನ ! ? ನನ್ನ್  . . ಪುಟ್ಟಾನ್ನ್ನಾ ? 

. . . ಹೇಳು ಕಂದಾ ಆ ಮುದಿ ಹದ್ದು ಹೇಳಿದ್ದ್ನಾ ? ! 

ಪುಟ್ಟಾ : (Atwining her creeper arms round ಸೂಳೇ's neck and kissing 

ಸೂಳೇ s forehead) ನೀನು ಎಲ್ಲೋ ಹೊರ್ಟೋಗ್ತೀಯಂತೆ! ಅಮ್ಮಾ ! 

ಅಜ್ಜಿ ಹೇಳ್ತಾಳೆ !, ಅವಳ್ ಪಾಡ್ ಅವಳ ಪಾಡಾಯ್ತು . . . ಹೋರ್ಟ್ಹೋ

ಗ್ತಾಳವ್ಳು ” ಅಂದ್ಲು ಅಜ್ಜಿ ! ನನ್ ಬಿಟ್ಬಿಟ್ಟು . . . ಸುಬ್ಬನ್ನೂ ಬಿಟ್ಟ್  ಬಿಟ್ಟು 

ಎಲ್ಲ್ ಹೋದೀಯಮ್ಮಾ ನೀನು ? . . . ಅಜ್ಜನ್ನ ನಂಬ್ಲಿಲ್ಲಾಮ್ಮಾ , 

ನಾನು !! 

ಸೂಳೆ : ದಿಟಾ ಮಗು ! ಅಜ್ಜಿ ಹೇಳಿದ್ದೂ , ದಿಟಾ !. . . ದಿಟ್ಟಾದ್ರೂ . . . ಸುಳ್ಳು ! 

ಅಜ್ಜಿ ಮೈಯೆಲ್ಲಾ ಸುಳ್ಳು ! ಬೈಬಾರ್ದು ಹೆತ್ತ್ ತಾಯಿನಾ ! ಆದ್ರೂ 

ಮೈಯೆಲ್ಲಾ, ಮುಖವೆಲ್ಲಾ ಸುಳ್ಳು ! ನಿನಗೆ ನಿಮ್ಮಮ್ಮ ಹ್ಯಾಗೋ ಹಾಗೇನೇ 

ವೇಯೇ ನನ್ನ ಹೆತ್ತ ತಾಯಿ ನನಗೆ . . . ಆ ರಣಹದ್ದು ! ಆದ್ರೂನೂವೇ, 

ಸೂಳಾರ್ಕೆಲಿ ಹೆತ್ತದ್ದು ನನ್ನ !. . . ಸೂಳ್ಗಾರ್ಕೆಲೇನೇವೇಯೇ ಪುಟ್ಟಾ , 

ನಿನ್ನ ಹೆತ್ತದ್ದು ನಾನು ! 

ಪುಟ್ಟಾ : ಆದ್ರೆ ಅಮ್ಮಾ . . . ಅಜ್ಜಿ ಹೇಳಿದ್ದು ! ನೀನೆಲ್ಲೋ ಹೋಗ್ತೀಯಂತೇ 

. . . ನಮ್ಮನ್ನೆಲ್ಲಾ ಬಿಟ್ಟ್ ಬಿಟ್ಯೂ . . . ! ಸುಳ್ಳೂ"ಂದೆ ! “ ಯೆಲ್ಲ್ 

ಹೋಗೋದು ?” “ ಯಾವಾಗ ?” ಅಂತ ನಾನ್ ಕೇಳುತ್ಲೂ .. . ಬಾಯ್ 

ಬಿಗಿದ್ಳು ! ನಾನು ಕೇಳೇ ಬಿಟ್ಟೆ ! “ನನ್ನೂ ನಮ್ಮ್ಸುಬ್ಬೂನ್ನೂವೇ ಬಿಟ್ಟಿಟ್ಟು 

. . . ಎಲ್ಫ್ ಹೋದಾಳು . . . ನಮ್ಮಮ್ಮಾ !! ” ಅಂತ . . . ನನ್ನೂ , 

ಸುಬ್ಬೂನ್ನೂ ಬಿಟ್ಟಿಟ್ಟು ( ನಸುನಗುತ್ತಾ ) ಹ್ಹ್ವಾಹಾ !! ನೀನಂತೆ ! 

ಓದ್ಹೋಗೋದಂತೆ !. . . ಅಜ್ಜೀಗಮ್ಮಾ , ಬರ್ತಾ , ಬರ್ತಾ ಬುದ್ದಿ ಕೆಡ್ತಾ 

ಬರ್ತಿಧೆ ! ( ಫಕಫಕನೆ ನಗುವಳು ) [ ಪುಟ್ಟಾ ಸೂಳೆಯನ್ನು ಸಮೀಪಿಸಿದಾಗ 

ಎಲೆಕ್ನಿಕ್ ದೀಪದ ಬೆಳಕು ಪುಟ್ಟಾನ ಮುಖವನ್ನು ಬೆಳಗುತ್ತಲೇ , 

ಸೂಳೆಯು ಪುಟ್ಟಾವಿನ ಮುಖವನ್ನು ಎರಡು ಕೈಯಲ್ಲೂ ಬಿಗಿದು, ಆದರಿ 

ಸುತ್ತಾ ] 

ಸೂಳೆ: ಆಶ್ಚರ್ಯ !!( ಬಿರುಸಾಗಿ) ಒದ್ದ್ ಎಬ್ಬಿಸ್ಕೊಂಡ್ ಬಾ. . . ನಿಮ್ಮ್ಮಜ್ಜ್ಜೀನಾ ! 

ಪುಟ್ಟಾ : [ ಅಲ್ಪ ಬೆದರಿ] ಇದ್ಯಾಕಮ್ಮಾ ? ಅಜ್ಜಿ ? ಈಗ ? 

ಸೂಳೆ : ( ಹಲ್ಲು ಕಡಿಯುತ್ತಾ ಕನಲಿ ಹೇಳಿದ್ದ್  ಕೇಳು ! ಪುಟ್ಟಾ ! ನಿಮ್ಮಜ್ಜೀನ 

ಎಬ್ಬಿಸ್ಕೊಂಡ್ ಬಾ ! [ ಪುಟ್ಟಾ ನಿಷ್ಕ್ರಮಿಸುತ್ತಿರಲು] ಒಂದ್ ಡ್ರಿಂಕ್ 

ಕೊಟ್ಬಟ್ಟ್  ಹೋಗು [ ಪುಟ್ಟ . . . ಸುಬ್ಬುವಿನ ಸತ್ಕಾರವನ್ನು ಅನುಸರಿಸಿ, 

ಸಲ್ಲಿಸಿ, ನಿಷ್ಕ್ರಮಿಸಿ, ಎರಡು ನಿಮಿಷಗಳಲ್ಲಿ ಅಜ್ಜಿಯೊಡನೆ ಪುನಃ ಪ್ರವೇಶಿ 

ಸುವಳು.] ಅಮ್ಮಾ ! ನನ್ನ್  ಹೆತ್ತು ಹೊತ್ತು ಈ ಸ್ಥಿತಿಗೆ ತಂದಿಟ್ಟ 

ನಮ್ಮಮ್ಮಾ ! ಒಳ್ಳೆ ನಿದ್ದೇ ಅಲ್ಲ್ವೇ ನಿಂಗೇ ? ಸೂಳ್ಗಾರ್ಕೆ ಕಸ್ಬೆಲ್ಲಾ 

ರಾತ್ರಿ ನಿದ್ದೆ ಕೆಡೋದು !. . . ಈಗ ಈ ರಾತ್ರಿ , . . . ನಿನ್ನ್  ಮಗ್ಳು 

ಸಾಯ್ತಿರೋ ರಾತ್ರೀನೇ . . . ನಿನ್ಗೆ ಕಣ್ಣುಂಬ ನಿದ್ದೆ ! ಶಾಂತಿ ! (laughs 

hysterically ). . . ನಿನ್ನ್ ಎಬ್ಸಿದ್ದು . . . ಯಾಕೇಂತೀಯಾ ? ... . ಇಲ್ಬಾ, 

ಪುಟ್ಟಾ ! [ ಪುಟ್ಟಾ obeys ಸೂಳೇ, turning ಪುಟ್ಟಾ 's face to the full 

glare of the green-shaded electric lamp] ನೋಡ್ದ್ಯಾಮ್ಮಾ . . . 

ಈ ಮೂತಿ ? ಜ್ಞಾಪಕ ಏನಾದ್ರೂ ಬರುತ್ತೆ ?. . . ನಿನ್ ಗೇ ! ? 

ಸೂಳೆ ತಾಯಿ : ಜ್ಞಾಪ್ಕ ? !. . . ಏನ್ ಜ್ಞಾಪ್ಕ . . . ! 

ಸೂಳೆ : ಕುಕ್ಕರಿಸ್ಕೊ , ಪುಟ್ಟಾ ! ನಾನ್ ಹೇಳೋದು ಕೇಳೀಯಾ ? 

ಪುಟ್ಟಾ : ( ಫಕ್ಕನೆ ನಗುತ್ತಾ ) ಯಾವಾಗಮ್ಮಾ , ನೀನ್ ಹೇಳಿದ್ ಕೇಳ್ಲ್ಲಿಲ್ಲಾ ? 

ನಾನು ? . . . ನೀನ್ ಹೇಳೋದಾಗ್ಲೀ . . . ನಮ್ ಸುಬ್ಬು ಹೇಳೋದಾಗ್ಲಿ ? 

ಸೂಳೆ: ( crooringly ) ಕೇಳು ಕಂದಾ . . . ನನ್ ದೊಡ್ಡ ಡ್ರೆಸ್ಸಿಂಗ್ ಕೇಸ್ ಒಳ್ಗೆ 

ತಳಾತಳದಲ್ಲಿ ಕಪ್ಪಂಕಪ್ಪು ! ನೀರಾಜಿ ! ಚೌಕಿ ಕಿರಿಗೆ ! ಹದಿನಾರೇ ಮೊಳ! 

. . . ಅದ್ನ ನಿನ್ನೀ  "up-to-date” ಬಟ್ಟೆಗಳೆಲ್ಲಾ ಕಿತ್ತೆಸ್ದು , ಆ ಕಿರಿಗೇನ್ 

ಸುತ್ಕೊಂಡು . . . ನಿನ್ನೀ ಸೈಡ್ ಪಾರ್ಟಿಂಗ್ ” ಬಿಟ್ಟು ಮುತೈದೇರ ಹಾಗೆ 

ನಟ್ಟ್ ಬೈತಲೆ . . . ಬಾಚ್ಕೊಂಡು . . . ಹಣೇಗೆ ದೊಡ್ಡದಾಗಿ ಕುಂಕ್ಮ 

ಹಚ್ಕೊಂಡು, ಬಾ ಕಂದ ! ಹೋಗು. . . ಡ್ರೆಸ್ಸಿಂಗ್ ಕೇಸು . . . ಮೊಸಳೆ 

ತೊಗಲು ಡ್ರೆಸ್ಸಿಂಗ್ ಕೇಸು . . . ಆ ಮೂಲೇಲೆ ! ( ಪುಟ್ಟಾ exits) 

ಸೂಳೆ ತಾಯಿ : ಇದೇನು ? ಹುಚ್ಚೇ ? ಕುಡಿದದ್ ಭ್ರಮೇನೇ ? ಸಾಯೋಕ್ 

ಮುಂಚೆ, ದೇವರನ್ನ , ದಿಂಡರ್ನ , ಬೇಡಿಕೊಳ್ಳೋದು ಉಂಟು. ಇಲ್ಲ 

ಸತ್ಮೇಲೆ. . . ಬದ್ಕಿರೋರು. . . ಮುಂದಕ್ ಬದ್ಕೋರು ಹ್ಯಾಗೇಂತ 

ಏರ್ಪಾಟ್ ಮಾಡೋದು ಉಂಟು ! ನೀನೀಗಿರೋ ಗತೀಲಿ . . . ಸ್ಥಿತೀಲಿ 

. . . ನಿಮ್ಮ್ಮಮ್ಮ್ಮ ನಾನೂಂಬೊದ್ನ ಮರೀಬೇಡಾ!. . . ನೀನ್ ಸತ್ತ್ಮೇಲೆ 

ದೇವ್ರ್ ಕೇಳ್ತಾನೇ !: ನಿನ್ನ ಹೊತ್ತು ಹೆತ್ತು ಮುಂದಕ್ ತಂದ ಅಮ್ಮನ್ 

ಗತೀಗೆ ಏನ್ ಏರ್ಪಾಟ್ ಮಾಡ್ಮಿಟ್ಟ್ ಬಂದಿದ್ದೀಯಾ? ” ಅಂತ ದೇವರ್ 

ಕೇಳಿದ್ರೇ . . . ಏನ್ಹೇಳ್ತೀಯಾ ? 

ಸೂಳೆ : ಮ್ಮ್ಮಾ ! ನಿನ್ನ್  ಹೊಟೇಲಿ ನಾನ್ ಹುಟ್ಟಿದ್ದು ನಿನ್ನ್  ತಪ್ಪೋ , ನನ್ನ್  

ತಪ್ಪೋ ಇಲ್ಲಾ ನಾನಿನ್ನೂ ಅರಿಯದ, ನೀನೂ ಹೇಳದ ನಮ್ಮಪ್ಪನ್ 

ತಪ್ಪೋ ! . . . ಇಲ್ಲಾ . . . ನಾಗರೀಕರು ತುಂಬಿದ ಸಮಾಜದತ್ತಪ್ಪೊ ? 

ಇದ್ನ . . . ಅಮ್ಮಾ !. . . ನಿರ್ಧರಿಸೋರ್ ಯಾರು ? ಸತ್ತರೇನು ? 

ಸಾಯ್ತಿದ್ರೇನು ? ಗರ್ತಿ, ಗರ್ತಿನೇ ! ಸೂಳೆ, ಸೂಳೇನೇ ! ಅಮ್ಮಾ , ನೀನ್ 

ಹೀಗಿರೋದು. . . ನಾನ್ ಹೀಗ್ ಸಾಯ್ತಿರೋದು. . . ನಿನ್ನ್  ತಪ್ಪೋ ? 

. . . ನನ್ನ್  ತಪ್ಪೋ ? ಇಲ್ಲಾ ಸಮಾಜದ್ ತಪ್ಪೋ ? ನಿನ್ನನನ್ನ ತಪ್ಪುಗಳ್ನ 

ನಿರ್ಧರಿಸಿ ನ್ಯಾಯ ತೀರ್ಸೋದು ದೇವ್ರಿರೋ ಸ್ವರ್ಗದಲ್ಲಲ್ಲಾಮ್ಮಾ ! ಇದ್ನ 

ನಿರ್ಧರಿಸೋದು. . . ನಾನ್ ಹೋಗೋ ನರಕದ ಯಮಧರ್ಮರಾಯ ! 

. . . ಯಮ, ಯಮನಾದ್ರೂನೂವೇ, ಯಮ . . . ಧರ್ಮರಾಯ ! 

“ಸತ್ಯಾನ್ನಪರೋಧರ್ಮಃ" , “ಅಹಿಂಸಾ ಪರಮೋಧರ್ಮಃ ! ” “ ಸುಳ್ಳೂ 

ಹೇಳಬಾರದು ಪರರಿಗೆ ! ” “ಹಿಂಸೇನು ತರ್ಬಾರ್ದು ಪರರ್ಗೇ"ಂತ ಇವೆ 

ರ್ಡನೂ ಹೊಂದ್ಸೋಕೆ ವರ್ಷಗಟ್ಟೆ ತಪಸ್ಮಾಡ್ತಿಧಾನೆ ಆ ಮಹಾತ್ಮ, 

ಜೈಲಾಶ್ರಮದಲ್ಲಿ (points to a picture of Gandhi) ! ತಪ್ಪ್ಯಾರದೂ ? 

ಸೂಳೇರ್ನ್ನೂ ಗರ್ತಿರ್ನೂ ಸೃಷ್ಟಿಸಿದ ಬ್ರಹ್ಮಂದೇ ? ಇಲ್ಲಾ . . . ಗರ್ತಿ 

ಬೇರೆ ಸೂಳೆ ಬೇರೆ ಆದರೂ , “ಗರ್ತಿಗಂಡ - ಸೂಳೇಗ್ ಮಿಂಡಾ"ಂತ 

ಭೇದ ಮಾಡ್ಕೊಂಡು ನಡೀತಿರೋ ಈ ಸಮಾಜದ್ದೇ ? ಯಾರ್ದು ಈ 

ತಪ್ಪೂ. . . ? [ ಪುಟ್ಟಾ re -enters ; ಪುಟ್ಟಾ ನಾವು ಪ್ರಸ್ತಾಪನೆಯಲ್ಲಿ 

ಕಂಡ ಸೂಳೆಯ ತದ್ರೂಪಾಗಿರುವಳು.] ಬ್ಬಾ ಾ ಾ ಾ  ! ಕನ್ದಾ ಾ ಾ ಾ ! 

( gulping the contents of the glass on her chest at one draught, 

ಸೂಳೆ flings the glass at the old hag . The glass splits into bits 

on the arm of the chair, the mother is sitting on ] ಪುಟ್ಟಾ ! ಆ 

ಡ್ರಾಯರ್ ತಳಾತಳದಲ್ಲಿ ಒಂದು ಚಿಕ್ಕ ಫೋಟೋ ಇದೆ, ತೆಗಿ, ಕನ್ದಾ ! 

[ ಪುಟ್ಟಾ bewildered , mechanically pulls out the drawer of the 

dressing table and fumbling amid the contents therein , with 

her fingers , extracts , a carte - de -vesite of the old P . O . P. type .] 

ಪುಟ್ಟಾ: (With Photo in hand , approaches mother, alternately looking 

at photo and her own image in the cheval glass and mother , 

with wondering look ) ಅಮ್ಮ್ಮಾ ! ನನ್ನ್ನ್ನ್ನ್ ಫೋಟೋ , ಅಲ್ಲ್ಲ್ವೇ ? 

ಸೂಳೆ : ಒಳ್ಳೆ ಬೆಪ್ಪು , ಪುಟ್ಟಾ , ನೀನೂ ! ಇಂಗ್ಲೀಷ್ ಓದಿದೀಯಾ! ಸಂಸ್ಕೃತದಲ್ಲಿ 

firstclass ಅಂತಾನೆ ಸುಬ್ಬೂ ! ಈ ನೀರಾಜಿಕಿರಿಗೆ ಯಾವಾಗಲಾದರೂ 

ಉಟ್ಟಿದ್ದ್ಯಾ ? ತೊಟ್ಟಿದ್ದ್ಯಾ ? . . . ನೆಟ್ಟ ಬೈತಲೆ ಯಾವಾಗಲಾದ್ರೂ 

ತೆಗೆದಿದ್ದ್ಯಾ . . ಏನತ್ಮಧ್ಯೆ , ನಾಳೆ ಸಂಸ್ಕೃತ examinationನ್ನೂ ! I class 

ಅಂತ ಮೊದ್ದೇ ಬೀರ್ ತಿದೀಯಾ ! ಈ ನಿನ್ನ memory ಅಹಂಕಾರದಲ್ಲಿ 

ಮರ್ತೆಬಿಟ್ಟಿಯಲ್ಲಾ !? ಶುಕ್ರಶುಕ್ರವಾರಾನೂ . . . ವಾಣಿ ! ಗೀರ್ವಾಣಿ ! 

(pointing with her right ತೋರಬೆಟ್ಟು , to Vani picture 

indignantly ) ಹೂವೆಲ್ಲೀ ? ಗಂಧದ ಕಡ್ಡಿ ಎಲ್ಲೀ ? . . . ಏನಿದು 

ಪುಟ್ಟಾ ? ನಿನ್ನ ಹಾಡೆಲ್ಲಿ ? 

ಪುಟ್ಟಾ : ದೇವ್ರೇ ಗತಿಮ್ಮಾ ! ಕ್ಷಮಿಸು ! ನಿನ್ನೀ ಸ್ಥಿತೀಲಿ ನನ್ನ ಸರಸ್ವತೀನ್ನೇ 

ಮರ್ತ್ ಬಿಟ್ಟೆ  !  ( In a trice exits and re -enters with a garland of 

           ಏಳುಸುತ್ತು ಮಲ್ಲಿಗೇs and joss-sticks and garlanding the Sara- 

swathi picture , that the audience saw at the inception of the 

play, identically sings at the Harmonium , re - capitulating to 

the audience the song - ತಾಯೆ ಭಾರತಿ - the tone that her mother 

displayed to the spectators two acts ago — in the induction - in 

this play and thirty years ago , in her mother s play. the 

devotional song finishing, she leaves the Harmonium and 

rushing up to her mother's arms) 

ಪುಟ್ಟಾ : ಅಮ್ಮಾ , ನನ್ನ್  ಹಾಗೇ ಇದೆಯಲ್ಲಾ ಇದು ? ಈ ಕಿರಿಗೇನೂ ಉಟ್ಟಿ 

ದ್ದಿಲ್ಲಾ ! ಈ ಬೈತಲೇನೂ ತೆಗೆದಿದ್ದಿಲ್ಲಾ ! ಆದ್ರೂನೂವೇ , ನನ್ನ್  ಹಾಗೇ 

ಇಧೆಯಲ್ಲಾ ಈ ಹಳೇ ಫೋಟೋ ? . . . ಅಮ್ಮಾ ! ಇದು ನಿನ್ನ ಫೋಟೋ ! 

(ತಾಯಿಯನ್ನು ತಬ್ಬಿಕೊಂಡು ಚುಂಬಿಸುತ್ತಾ ) ಹಾಗಾರೇ ಅಮ್ಮಾ ನನ್ನ್  

ವಯಸ್ನಲ್ಲಿ ನೀನು ನನ್ನ ಹಾಗೇ ಇದ್ದೇ ಇರಬೇಕು. 

ಸೂಳೆ : (ತಾಯಿಯನ್ನು ಕುರಿತು) ಹದ್ದೇ !!!. . . . ನನ್ ಹತ್ರ ಹದ್ದೇ . ಲೇ !! 

ರಣಹದ್ದೇ !! ರಾಕ್ಷಸಿಹದ್ದೇ !! ಈಗಲಾದ್ರೂ ನೆನಪೇನೇ ! ನಿನ್ನ್  ಹಾಳು 

ಮೆದಳಿಗೇ ? ( grabbing ಪುಟ್ಟಾ , with her left arm and hand , 

dramatically points out to her mother with her index finger 

and thunders out) ಕುಲ ಕುಲಗಳ್ನೇ . . . . ಕುಟುಂಬ ಕುಟುಂಬಗಳ್ನೇ 

. . . ಕೊಂಪೆ ಕೊಂಪೆಗಳ್ನೇ . . . ಕಿಚ್ಚಿನಪಾಲು ಮಾಡಿದ ಕಿರಾತ್ಕೀೕೕ!! 

. . . ಹೇಳೇಲೇ ಇವಳಿಗೆ ! ಇವಳ ವಯಸ್ಸಲ್ಲಿ ನಾನೂ ಹೀಗೆ ಇದ್ದೇ ಅಂತ! 

ಒಂದು ಪಾಪಾನ್ನೂ ಅರಿಯದೆ ಇದ್ದೆ ನಾನು ಆಗ !! ಹಾಗಿದ್ದ ನನ್ನ , ಈ 

ವಯಸ್ನಲ್ಲಿ , ಈ ಸ್ಥಿತಿಗೆ ತಂದಿಟ್ಟೆ . . . ನಿನ್ನ್  ಹೊಟ್ಟೆಪಾಡ್ಗೆ ! ಈಗ್ 

ನೋಡು! ( ಮುಷ್ಟಿಗಳನ್ನು ಬಿಗಿಯುತ್ತಾ addressing her mother in 

action of throwing the glass of whisky ) ಇದೇ ಗಾಜ್ನಲ್ಲಿ ಕೊಂದ್ 

ಹಾಕ್ ಬಿಟ್ಟೇನು !. . . ಒಳಗ್ ಹೋಗ್ ಮುದರ್ಕೋ ! ಈ ಮುರಿದ 

ಗಾಜಿನ ಚೂರ್ನಲ್ಲಿ ದೊಡ್ಡ ಚೂರ್ನ ನಿನ್ನ ಕುತ್ತಿಗೆಗೆ ಚುಚ್ಚಿ , ಹೆತ್ತ್ಮಗಳ್ನ 

ಸೂಳ್ಗಾರ್ಕೇಗೆ ಬಲಿವೊಪ್ಸಿದ ತಾಯಿನಾ, ಸಾಯೋ ಸೂಳೆ, ಸಾಯೋಕ್ 

ಮುಂಚೆ ಕೊಂದ್ ಬಿಟ್ಟ್ಳೂ ಅಂತಾ, ನಾಳೆ ಊರು ಊರೇ ಡಂಗುರ 

ಹೊಡೆದು ನನ್ನ ಹೊಗಳೊಕ್ ಮುಂಚೇನೇವೇಯೇ . . . ಮುದುರ್ಕೊ 

ನಿನ್ನ್  ಮೂಲೇಲಿ !!! ( mother exits precepitately ) 

ಪುಟ್ಟಾ : ( caressing ಸೂಳೇ s face eyes and chin . .. Sweetly ಅಮ್ಮಾ ! 

ನಮ್ಮ್ಮಮ್ಮ್ಮ !) ಅಮ್ಮಾ ! ಹಾಗಾರಮ್ಮಾ ! ನನ್ನ್ನ್ ವಯಸ್ನಲ್ಲಿ ನೀನು 

ನನ್ನ್  ಹಾಗ್ಯೆ ಇದ್ದ್ಯಾ ! ? ( glancing at ಸೂಳೆ, Cap a pie in ill 

disguised alarm ) ಹಾಗಾರೆ . . . ನಿನ್ನ್  ವಯಸ್ಸಲ್ಲಿ ನಾನೂವೇ ನಿನ್ನ್  

ಹಾಗ್ಯೇ ? ! ? ! ? !( Lumps the rest of the words , that creep into 

her thoughts ) !! 

!! ಸೂಳೇ's face undergoes just all the changes of emotions that 

poor little putta s eyes and face undergo despite her efforts to 

hide her innate horror of feeling that feeling , that intrigues 

her soul to ask her mothe, if the price to pay , for being like 

her loved mother in her teens, spell being like her too at 44 !!; 

ಸೂಳೆ : ( ತನ್ನ ಮನಸ್ಸಿನಲ್ಲಿ ಆಗುತ್ತಿರುವ ಆಂದೋಳನಗಳನ್ನು ಮುಖದಲ್ಲಿಯೂ 

ಕಣ್ಣಿನಲ್ಲಿಯೂ ವ್ಯಕ್ತಪಡಿಸುತ್ತಾ ). . . ತನ್ನಲ್ಲಿ ತಾನೇ . . . “ನನ್ನ 

ವಯಸ್ಸಲ್ಲಿ ! . . . ಅಲ್ಲ . . ನಿನ್ನ ವಯಸ್ಸಲ್ಲಿ . . . ನಾನು ಆಗಿದ್ಹಾಗೇ 

ಇದ್ರೇ . . . ನನ್ನ ವಯಸ್ಸಿನಲ್ಲಿ . . . ನೀನೂ . . . ? . ..! . . .? .. .!. 

.. ?...!” ಎಂದು ಹೇಳಿಕೊಳ್ಳುತ್ತಾ . . . ಥಟಕ್ಕನೆ ಉನ್ಮಾದಾವಸ್ಥೆಯನ್ನು 

ತಾಳಿ ಮನಸ್ಸಿನಲ್ಲಿ ಏನೋ ಧೃಡನಿಶ್ಚಯ ಮಾಡಿದವಳಂತೆ ಇಲ್ಲಾ ಪುಟ್ಟಾ ! 

ನನ್ನ್  ಕಂದಾ ! ನೀನು ಬದುಕಿದ್ದು , ಈ ಮುದಿ ಹದ್ದಿನ ಹತೋಟಿಲಿದ್ರೆ , 

ನನ್ನ ವಯಸ್ನಲ್ಲಿ ನನ್ನಾಗೆ ಆಗಲೇ ಆಗೋ ಅಪಾಯಾನ ಈಗಲೇ ತಪ್ಪಿ 

ಸ್ತೇನೆ ಎಂದು ಗೊಣಗಿ , ಅಗಲಿಸಿದ ನಮ್ಮ ಕಣ್ಣುಗಳಿಂದ ತನ್ನನ್ನೂ , 

ಪುಟ್ಟಾನನ್ನೂ ದುರುಗುಟ್ಟಿ ನೋಡಿಕೊಂಡು. . . ನಿಟ್ಟುಸಿರಿಟ್ಟು . . . ಪುನಃ 

ಥಟಕ್ಕನೆ] ಆ ಮೆಡಿಸಿನ್ chest ತೆಗಿ ! ಅಲ್ಲೊಂದು Brown bottle ಇದೆ 

ನೋಡು ! ಏನೂ ಮಾರ್ಕಿಲ್ಲ ಅದರ ಮೇಲೆ ! Drop Bottleಊ ! 

( ಪುಟ್ಟಾ , chest ಬಾಗಿಲು ತೆಗೆದು ಕೈ ಆಡಿಸಿ ಕೈಲಿ ಹಿಡಿದು ಸೂಳೆಯ ಕಡೆ 

ತಿರುಗಲು ) ಆ !. . . ಅದೇ ! ಸುಸ್ತು ಹೆಚ್ಚಾಗಿ ತಡೆಯೋಕಾಗ್ಲೆ ಇದ್ದರೆ 

ತಗೋಂತ ಹಿಂದೆ ಡಾಕ್ಟ್ರು ಹೇಳಿದ್ರು .. . . ನಿದ್ದೆ ಬರೋ ಔಷಧಿ ! 

ಪುಟ್ಟಾ : (ಸೂಳೆಯು ಸೂಚಿಸಿದ prussic acid ಇರುವ ಬಾಟ್ಟನ್ನು ತರುತ್ತ ) 

ಸುಬ್ಬು , ಔಷಧೀಗೆ ಇನ್ನೂ ಸ್ವಲ್ಪ ಹೊತ್ತಿದೇಂದಿದ್ದ ! ಈಗಲೇ ಹೋಗಿ 

ಕರೀಲೇಮ್ಮಾ ? (ಹೋಗಲು ತಿರುಗುವಳು ) . 

ಸೂಳೆ: ( ಬೆಚ್ಚಿ ಹಠಾತ್ತಾಗಿ ಹಲ್ಲುಕಚ್ಚಿ . . . ಮೆಲ್ಲಗೆ ) ಬೇಡ ! ಹೇಳಿದ ಹಾಗೆ 

ಕೇಳು ! ಇಲ್ಲಿ ತಕ್ಕೊಂಡು ಬಾ !! (ಅಷ್ಟರಲ್ಲಿ ಪುಟ್ಟಾ ಯಾವಾಗಿನಂತೆ 

ವಾಸನೆನೋಡಲು ಬಾಟ್ಟಿನ ಬಿರಡೆ ತೆಗೆಯುತ್ತಿರುವುದನ್ನು ನೋಡಿ) ಬಿರಡೆ 

ಯಾಕೆ ತೆಗೀತೀ . . . ? ಇಲ್ಲಿ ಕೊಡು! ( ಪುಟ್ಟಾನ ಕೈಯಿಂದ ಕಿತ್ತುಕೊಂಡು 

ಬಿರುಡೆಯನ್ನ ತಾನೇ ತೆಗೆದು pours the contents haphazard into the 

two milk laden glasses and hands one to ಪುಟ್ಟಾ) 

ಪುಟ್ಟಾ : [ ಗಾಜಿನ ಹಾಲನ್ನು ಸೂಚಿಸಿ] ಮ್ಮಾ ! ಬಾದಾಮಿ ವಾಸ್ನೆ ! ಷರಬತ್ತೆ ? 

ಸೂಳೆ: ಅನ್ಯಾಯ ಚುರುಕೇ . .. ನಿನ್ನ್ ಪುಟ್ಟ್ಮಗೂ ? ಅಷ್ಟರಲ್ಲೇ ಕಂಡುಹಿಡಿದ್ಯಾ 

ವಾಸ್ನೇನಾ. . . ? ! 

ಪುಟ್ಟಾ :ಸೋಡಾ! ? . . . ಸೋಡಾ. . . ! ? ಇದ್ಯಾಕಮ್ಮಾ ,ಸೋಡಾ ಮರ್ತ್ಯೇ? 

(bending over her mother reaches a bottle of half soda, and 

emptying the stale contents into her mother s glass , this while 

holding her-prussic acid - laden into milk filled glass in her left 

hand and then transferring it to her right) Cheerio , sad !... 

Chin Chin ! ( ತಾನು ಹಿಡಿದಿರುವ ಗಾಜನ್ನು ತಾಯಿಯ ಕೈಲಿರುವ ಗಾಜಿಗೆ 

ತಾಕಿಸುತ್ತಾ ) ಮರ್ತ್ಯಾಮ್ಮಾ ? 

ಸೂಳೆ: ( ತಿರುಗಿ ಬೆಚ್ಚಿ) “ಈ cherrio ಗ್ಳು !. .. ಈ Chin - chinಗ್ಳೂ ಈಗ್ಯಾಕೆ? 

. . . ಪುಟ್ಟಾ ? 

ಪುಟ್ಟಾ : ಯಾಕೇಮ್ಮಾ ?. . . ಮರ್ತ್ ಬಿಟ್ಟಾಮ್ಮಾ ? ನಮ್ಮ ಹಳೇ ಸ್ನೇಹಿತ್ರ್ನ! 

ದೊಡ್ಡ್ ಮನುಷ್ಯರ್ನಾ. . . Firstಉ ಆ ಚಿಕ್ಕ ದೊಡ್ಡ್ ಮನುಷ್ರ  !. . . 

ಜ್ಞಾಪ್ಕಾ ಇಧೆಮ್ಮಾ ? ಅನ್ನ್ಯಾಯ ಗಲಾಟೆ . . . ಆದ್ರೂ Gentlemanಊ ! 

(pointing out the ರವಿವರ್ಮಾ' s "ವಾಮನ ಬಲೀ ?” picture , which 

the audience have seen before ,in Act I) ಆಗೊಂಬೇನ್ ನೋಡಿ 

ಆತ ಹೇಳಿದ ಕಥೆ ಸುಬ್ಬು ನನಗೆ ಹೇಳಿದ. ನಕ್ಕೂ , ನಕ್ಕೂ , ಹೊಟ್ಟೆ 

ಹುಣ್ಣಾಯ್ತು ! ಆತ್ನೇ chin - chin ಅಂತ ಗಾಜಿಗೆ ಗಾಜು ತಾಕಿಸಿ 

ಕುಡೀತಿದ್ದದ್ದು ! ಮರ್ತ್ಯಾಮ್ಮಾ !. . . ಇನ್ನೂ ಆ Cheerio ದೊಡ್ಡ 

ಮನುಷ್ಯ . . . ಮುದುಕ ! ನೀನ್ ಹೇಳಿದ್ದಾಗೆ ಬೂಯಿಕ್ ಕಾರು ? 

ಜ್ಞಾಪ್ಕ್ವೆ ? ಆತ ಬರೋವಾಗ್ಲೆಲ್ಲಾ ನಿನ್ನ ಈ ದ್ರಾವಕದ ಜೊತೇಲಿ. . . 

ನನಗೆ ಒಂದು Raspberry ತಂದು, ತಾನೂ ನೀನೂ ಕುಡಿಯೋವಾಗೆಲ್ಲಾ 

“ಚ್ಹೀರ್ಯೋ ” “ಚ್ಹೀರ್ಯ್ಕೋ ” ಅಂತಿದ್ದ . ಆಗ ನನಗೆ'ರಾ' ಬರ್ತಾ ಇರ್ಲಿಲ್ಲ . 

“ಚ್ಹೀಡ್ಯೊ” “ಚ್ಹೀಡ್ಯೋ ” ಅಂತಿದ್ದೆ ! ಕೇಳ್ದೆ ಒಂದ್ದಿನ ( Resuming her 

Childish droll) “ ಏನ್ಷಾರ್ . . ."ಚ್ಹೀಡ್ಯೊ ಅಂದ್ರೆ ? ” ಅದಕ್ಕಾತ, 

“ಚ್ಹೀರ್ಯೋ ! ಅಂತ ಹೇಳಿ ಬಿಟ್ಟು ಕುಡ್ಡ್ರೆ ವಿಷಾನೂ ಅಮೃತ ಆಗುತ್ತೆ ! 

ಮೈಗೆ ಏನೂ ಕೆಡುಕಿರೋದಿಲ್ಲ ! ” . . . ಅಂತಂತಿದ್ರು . Therefore, 

ಅಮ್ಮಾ ನಾಳೆ ನನಗೆ examination , ನಾನು ಬೆಳಿಗ್ಗೆ ಬೇಗ ಏಳ್ಬೋಕು ! 

ಸುಬ್ಬು ಹೇಳ್ತಾನೆ : ನಿನಗೂ ಡಾಕ್ಟ್ರು ಪರ್ವಾಗಿಲ್ಲಾಂದ್ರಂತೆ. “ಚ್ಹೀರ್ಯೋ ” 

ಅಮ್ಮಾ ! ( Raises the glass higher than her her head about to 

drink ) 

ಸೂಳೆ : [ ಸೂಳೆ with horror in her eyes , springing up with difficulty is 

about to dash down (ಪುಟ್ಟಾ' s) glass with hers, but,with all her 

will power evoked , suppresses the rising, lumps up from her 

breaking heart with set teeth grimly, raising her glass too with - 

tears welling up in her eyes - (ಗದ್ಧದ ಸ್ವರದಿಂದ) ಚ್ಹೀರ್ಯೋೕ ಚೈದ್ಯೋ ನನ್ನ್  

ಕಂದಾ !!! 

ಪುಟ್ಟಾ : ( Turning her face to R . ಮೈಮರೆತು ಸ್ವಲ್ಪ ಘಟ್ಟಿಯಾಗಿ) ಚ್ಹೀರ್ಯೋ ! 

ಸುಬ್ಬೂ !! 

ಸೂಳೆ : (Sharply ) ಸುಬ್ರೂನ ಎಬ್ಬಿಸ್ ಬೇಡ್ವೇ , ಪಟಿಂಗೀ !! 

ಪುಟ್ಟಾ : ಹೌದೂಮ್ಮಾ ! ಮರ್ತೆ ! ಸುಬ್ಬು ! ಪಾಪ ! ರಾತ್ರಿ , ಹಗ್ಲೂ ನಿನ್ನನ್ನ್  

ನೋಡ್ಕೊತಿದ್ದಾನೆ ! ಚ್ಹೀರ್ಯೋಮ್ಮಾ ; ( ಮೆಲ್ಲಗೆ) ಚ್ಹೀರ್ಯೋ ಸುಬ್ಬು ! 

( Turning the glass to the right centre ) ಅಮ್ಮಾ !. . . ಅಜ್ಜಿಗೆ 

ಚ್ಹೀರ್ಯೋ ಇಲ್ಲ !. . ಕಾಸ್ ಬಂಗೇಲಿ ಆ ಬೆಂಕಿ ಕೋಳಿನೋಡ್ದಾಗ್ನಿಂದ 

ಅಜ್ಜಿ ನನ್ನ್  ಕಣ್ಗೆ ಅಗ್ನಿ !” ಬ್ಬಾ ! ಅಂಜಿಕೆಯಾಗುತ್ತಮ್ಮಾ ! ಅಜ್ಜೀನ್ 

ನೋಡಿದಾಗ್ಲೆಲ್ಲಾ ! ( ಥಟಕ್ಕನೆ). . . ನಾನು ಒಂದು ವೇಳೆ ನಿದ್ದೆ ಹೋದ್ರೆ, 

ನನ್ನ್  ಬಿಟ್ಟಿಟ್ಟು ಎಲ್ಲಾದ್ರೂ ಹೋಗ್ತೀಯಾಮ್ಮಾ , ಅಜ್ಜಿ ಹೇಳ್ದ್ಹಾಗೆ ? 

ಸೂಳೆ:( ಅತಿ ಕಷ್ಟದಿಂದ) ಇಲ್ಲಾ ಕಂದ ! ಪುಟ್ಟಾ , ನಿನ್ನಾಣೆಗೂ !. . . ನನ್ನಾಣೆಗೂ ! 

. . . ಅಜ್ಜಿ . . . ಅಲ್ಲಾ . . . ಸುಬ್ಬೂ ಅಣೇಗೂ ! ( giving a gentle : 

yet strong slap to ಪುಟ್ಟಾ;s cheek ) ಎಲ್ಲ್ರಾಣೆಗೂ ! . .. ದೇವ್ರಾಣೆಗೂ 

. . . ನಿನ್ನ್  ಬಿಟ್ಟು ಕಂದಾ, ನಾನೆಲ್ಲೂ ಹೋಗೋದಿಲ್ಲ ! chin - chin 

( ಗಾಜಿಗೆ ಗಾಜು ತಾಕಿಸಿ) ಚ್ಹೀರ್ಯೋ , ನನ್ನ್ರಾಣಿ !! [ The mother and 

daughter raise the glasses to their lips . At her very first gulp , 

ಪುಟ್ಟಾ drops her glass and collapses on her mother's breast 

hardly succeeding in murmuring " ಮ್ಮ್ಮ್ಮಾ !" ) 

ಸೂಳೆ : [Gazing down at the prostrate ಪುಟ್ಟಾ bringdown herunfinished 

glass , places it on the teapoy and empties the rest of the prussic 

acid in the little bottle into it ! Dropping the bottle , gathers up 

her dead child in her arms and with her hand caressing the 

dead face on her lips, kissing the dead lips and dead eyes 

indulges in a drunken apostrophe] ಈಗ್ ಹೆದರೋಡ ನನ್ನ ಕಂದಾ! 

ನಿನ್ನ ವಯಸ್ಸಲ್ಲಿ ನಿನ್ಹಾಗೆ ನಾನಿದ್ದೆ . . . ನನ್ನ್  ಕಂದಾ ! ಅದ್ರೆ ನೀನ್ 

ಹೆದರಿದ್ಹಾಗೆ ನನ್ನ್  ವಯಸ್ಸಲ್ಲಿ ನೀನು ನನ್ನ ಹಾಗೆ ಆಗೋದಿಲ್ಲ . ನೀನು! 

ಈಗ ! ಆ ಹದ್ದು ನಿನ್ನ ವಯಸ್ಸಲ್ಲಿ ನಾನು ನಿನ್ನಾಗಿದ್ದೂ ಈ 

ವಯಸ್ಸಲ್ಲಿ ಹೀಗ್ ತಂದ ಪಾಪ ಅವಳದ್ದೋ ? ಸಮಾಜದ್ದೋ? ಇಲ್ಲ 

ನನ್ನ ಪುರಾಕೃತ ಪಾಪವೋ ? ಯಾರು ನಿರ್ಧರಿಸೋರು ? ಹ್ಯಾಗಿದ್ರೂ 

ನೂವೇ ನೀನು ಪುಟ್ಟಾ ! ಪುಟ್ಟಾ ! ನನ್ನ ಸ್ಥಿತಿಗೆ ಬರೋದಿಲ್ಲ ನೀನು ! 

( Laughs hysterically sobbing) ಇದೊಂದು ಬಾಕಿ ಇತ್ತು ನನ್ನ್ ಪಾಪಿ 

ಜನ್ಮಕ್ಕೆ ! ಖೂನಿ ! ಹತ್ಯ ; ಶಿಶುಹತ್ಯ . ನನ್ನ ಶಿಶುಹತ್ಯ ನಾನೇ ಮಾಡ್ದೆ 

( ಉನ್ಮತ್ತಳಾಗಿ ಕಿರಿಚುತ್ತಾ ) ಯಾಕ್ ಮಾಡ್ದೇ ? (In a sudden gust of 

anger pointing out to apicture of Gandhi) ಅಹಿಂಸಾ ಸಾರ್ತಾನಲ್ಲಾ 

ಆತ, ಆ ಅಹಿಂಸೇಲಿ ಕೊಂದದ್ದು ನನ್ನ್  ಪುಟ್ಟಾನ್ನ ! ತನು, ಮನ, ಹೃದಯ 

ದಲ್ಲಿ ಒಂದು ಪಾಪಾನೂ ಅರೀದೆ, ತೋಚ್ದೆ, ಹೂವಿನಹಾಗೆ ಅರಳ್ತಿರೋ 

ನನ್ನ ಕಂದನ್ನ , ನನ್ನೀ ಹಾಳು ಸ್ಥಿತಿಗೆ ತಂದ ಸಮಾಜಾಂಬೋ ಹದ್ದಿನ 

ಬಾಯಿಗೆ ತುತ್ತಾಗದೇ ಇರೋಕೆ ನಾನ್ ಹುಡ್ಗಿಯಾದಾಗ ಮಾಸದೆ 

ಬಾಡದೆ ಇದ್ದಾಗ ಇದ್ದ ನನ್ನ ಪುಟ್ಟಾನ್ನ ( hysterically kissing the dead 

face) ನನ್ನ್  ಕಂದನ್ನ ! ನಾನ್ ಕೊಂದದ್ದು . ನನ್ಮುಖ ! ನನ್ರಕ್ತ ! ನನ್ 

ದೇಹ ! ಸ್ವಲ್ಪಿರೂ ಕಂದಾ ! ಬಂದೆ (Laughing) ಹ್ಹ! ! ಹ್ಹ ! ಹ್ಹ !

ಒಳ್ಳೆ ಹುಚ್ಚು ನಾನು ಪುಟ್ಟಾ ! ನಿನ್ನ್  ಜೊತೆಗೆ ನಾನ್ ಬರೋದೆ? ನನ್ನ್  

ಪಾಪಕ್ಕೆ ನಾನಿಳಿಯೋ ನರಕವೆಲ್ಲಿ ! ಒಂದ್ ಪಾಪ ಅರೀದೆ ಸೂರ್ಯರಶ್ಮಿ 

ಹಾಗೆ ಬೆಳಗ್ಸಿ , ಮನೇಲಿ ಇಳಿದು ಮನೆಯೆಲ್ಲಾ ಬೆಳ್ಳಂ ಬೆಳಗ್ಸಿಈಗ ನೀನು 

ತಿರುಗ್ಹೋಗ್ತಿರೋ ನಿನ್ನ ಲೋಕ ಎಲ್ಲಿ ? ನೀನ್ ಬಂದ್ ಲೋಕಾನ್ 

ನೀನ್ ಸೇರ್ಕೊಂಡೆ ! ನನಗೇ ಕಾದಿರೋ ನರ್ಕ ನಾನ್ ಸೇರ್ತೇನೆ! ( With 

her left hand as her right arm is hugging the dead child s body 

and neck , she grabs the poision - laden whisky glass and weirdly 

as in a mad trance) ಚ್ಹೀರ್ಯೋ ಹೇಳೇ ಪುಟ್ಟಾ ! ನಾಳೆ examination 

ತಪ್ಪಿಸ್ದೆ ನಿನ್ನ್ ಗೇ ?! ಸಂಸ್ಕೃತದಲ್ಲಿ 1st ಆಗ್ಬೇಕೂಂತ ಆಶೆ ಪಟ್ಟೆ ಅಲ್ಲ್ವೆ , 

ಕಂದಾ ? ಈ ಹಾಳು ಲೋಕದ ಪರೀಕ್ಷೆ ನಿನಗ್ಯಾಕ್ ನನ್ ರಾಣಿ ಈಗ ! ? 

ನಿನಗೆ ತಿಳಿದ ಗೀರ್ವಾಣ, ಪರೀಕ್ಷಿಸೋಕೆ, ಸರಸ್ವತೀ , ಲೋಕಾನೇ 

ಸೇರಿರ್ತಿಯಾ, ಇಷ್ಟೊಹೊತ್ತಿಗೆ ! ಎಲ್ಲಿ ಹೇಳು ! ಕಂದಾ ! (ನಿಧಾನವಾಗಿ 

ಪುಟ್ಟಾ ಕೆನ್ನೆ ತುಟಿಗಳ ಮೇಲೆ ತನ್ನ ಮುಖವನ್ನು ಹೊರಳಿಸುತ್ತಾ ಅವಳನ್ನು 

ತಬ್ಬಿಕೊಂಡು ಮಗುವನ್ನು ಉಯ್ಯಲಾಡಿಸುವಂತೆ ಮೈ ತೂಗುತ್ತಾ , 

drawling sings) 

. . . . ತಾ. . . . ಯೆ . . . . ಭಾ . . . . . . ತೀ . . . . ಬಾಲಕಿಯರ 

ತಿಳಿ | ನಾಲಗೆಯೊಳು ನೀ . . . ನೋಲಗಿಸುತೆ ಮೃದು | ಲೀಲೆಗಳವಳೇ ... 

( Weirdly ) ನನ್ನ ಕಂದಾ ! ನಿನ್ನ ತಿಳಿ ನಾಲ್ಗೇಲಿಲ್ದೇ ಇರೋ ಸಂಸ್ಕೃತ 

ಇನ್ನೆಲ್ಲಿದೇ ಕಂದಾ ! ಪುಟ್ಟಾ ! ಅಲ್ಲಿ ಹೇಳತಾ ಇದೀಯಾ ಇದ್ನಾ ! ? 

ಎಷ್ಟು ಇಂಪು ನಿನ್ನ ಕಂಠ ! ? . . . ಎಷ್ಟು ತಿಳಿ ನಿನ್ನ ನಾಲಿಗೆ . . . ಎಷ್ಟು 

ಶುದ್ದ . . . ನಿನ್ನ ಸಂಸ್ಕೃತ ? !. . . . . . . . . . . . . . ನಿನ್ನ ಪರೀಕ್ಷೆ 

`ಸತ್ಯಲೋಕದಲ್ಲಿ ! ಅಲ್ಲಿ ನೀ ಪಾಸಾಗೋದು first classಉ ! ನಾನು 

first classಆಗಿ ಪಾಸಾದದ್ದು ಈ ಸೂಳೇ ಲೋಕದಲ್ಲಿ . . . ಒಂದು 

ಚ್ಹೀರ್ಯೋ ಹೇಳೆ ! ಒಂದು chin chin ಹೇಳೇ ! ಎಲ್ಲ ಸಂತೋಷಕ್ಕೇ 

ಅಂತ ನೀನ್ ಕುಡಿಯೋಳಲ್ವೇ ನನ್ನ್  ಕಂದಾ ನಾನ್ ಹುಟ್ಟಿ ಬೆಳದದ್ದೂ 

ಸಮಾಜದ ಸಂತೋಷಕ್ಕೆ ನನ್ನ ಸಂತೋಷಕ್ಕೇ ? ನಿನ್ನ ಸಂತೋಷಕ್ಕೆ ? 

. . . ಯಾರ ಸಂತೋಷಕ್ಕೂ ಅಲ್ಲ . . . ನನ್ನ ಕ್ಷೀರೋ ನೀನ್ ನೀನೆ. 

ಕಂದಾ ! ಪುಟ್ಟಾ !! ಸುಬ್ಬೂ ಸುಬ್ಬೂನೂವೆಯೆ ! ಅಮ್ಮಾ ಅಮ್ಮಾನೆ ! 

ಸಮಾಜ ಸಮಾಜಾನೇ ! ಆದ್ರೆ ನೀನೂ ನನ್ಕಂದಾ ! chin chin ! ( Taps 

her glass to the dead chin ) ಚ್ಹೀರ್ಯೋ ಪುಟ್ಟಾ ! ನಿನ್ನ್  ಸಂತೋಷಕ್ಕೆ 

(Grabbing the dead face to her own face, rigidly and so hugging 

her that the dead body is on her own , gulps the glass and even 

before she drops the glass , her head drops down to her breast , 

dead ] 


[ The scene is still for fully a minute and this death reigning scene, 

is fermented by the sweetly sonorous alarm of the clock that Subbu 

has set for 2 - 30 A .M . Precise ] 


ಸುಬ್ಬು : ( Entering) ಇದೇನಿದು, ದೀಪ ಇನ್ನೂ off ಮಾಡೇ ಇಲ್ಲ ! ಸುಸ್ತು 

ಚಿನ್ನಾ !! ಪಾಪ ! ದೇವ್ರದಯ ! - ಡಾಕ್ಟರ್ ಹೇಳ್ದ ! worries ಎಲ್ಲಾ 

ಬಿಟ್ಟ್  ಬಿಟ್ಟು “ rest alone must rescue her ” ಅಂತ !. . . ಒಳ್ಳೆ ನಿದ್ರೆ ! 

. . . ಆದರೂ medicine ಕೊಡ್ಲೇ ಬೇಕು ( ತಿರುಗಿನೋಡಿ) ಪುಟ್ಟಾ ! 

ಪಾಪ, ನಾಳೆ ಪರೀಕ್ಷೆಗೂ ಮರ್ತುಬಿಟ್ಟು ಅಮ್ಮನಮೇಲೆಬಿದ್ದೋಂಡಿಧಾಳೆ! 

ಈಗ ಅವಳ್ನ ನಿದ್ರೆ ಕೆಡದೆ ತಿರುಗಿ ಮಲಗಿ ಬೆಳಿಗ್ಗೆ ಬೇಗ ಎಬ್ಸಿ ಆ 

Sanskrit ಪಾಠ ತಿರಗೂ ಅವಳ ಬಾಯಿಂದ ಕಿರ್ಲ್ಸಿ !. . . ಮಂಕು !. . 

. . . ಹುಂ ! (Goes to the dressing table and holds an ounce 

glass up against the light) & ses (Approaching a wash -basin , 

drops a piece of soap into the glass and dripping a few drops 

of water , whirls the soap in the glass . Rescuing the piece of 

soap and restoring it to the soap box, fills the ounce glass with 

water and cleans it with his forefinger . Snatching at a clean 

napkin , twists it into the glass and dries it. With the now crystal 

clear ounce glass glistening on the table , holds up a 12oz . 

bottle of medicine and glancing at the label, murmurs ) 

“ Directionsಉ !” (Replaces it on the table and exits R ; and 

re-enters, almost immediately with a pair of spectacles on his 

nose and glancing around) ಅನ್ಯಾಯ , ಧೂಳು ! ಕನ್ನಡಕ ! 

(Removes his glasses and placing them on the table exits and 

re -enters with a piece of Velvet and polishes his glasses : 

setting the glasses again on his nose opens the cork of the 

bottle of mixture and meticulously reads aloud the directions 

on the label : “ One doze for every three hours ಏ ! ? ಈಗ 

already five minutes lateer ” : and pours out the doze directed 

in accordance with the instruction on the label. Placing the 

now -medicine filled ounce glass on the table re - corks the 

medicine bottle and carefully replacing it, his righthand takes 

up the medicine filled ounce- glass and approaches the corpses 

with the medicine glass in his left-hand , he gently taps isese s 

cheek ) ಚಿನ್ನಾ !. . . ಚಿನ್ನಾ ! . . . . ಚಿನ್ನಾ !!. . . . ಚಿನ್ನಾ !! . . . 

. ಚಿನ್ನಾ !! . . . ಚಿನ್ನಾ !! . . . ಹೋದ್ಯಾ ! . . . ಹೋಗೇ ಹೋದ್ಯಾ 

. . .ತ್ಸು . . . ತ್ಸು . . . ತ್ಸು . . . ತ್ಸು ! . . ಪುಟ್ಟ ಪಾಪ ! ನಾಳೆ 

ಪರೀಕ್ಷೆ ! ಊಂ ! . . . ತಿಳೀಬಾರ್ದು , ಮೊದಲು ಇವಳ್ನ ಮೆಲ್ಲಗೆ 

ಎತ್ಕೊಂಡ್ ಹೋಗಿ ಮಲಗ್ಸಿ ಬಿಡಬೇಕು ( his right -hand, touches 

ಪುಟ್ಟಾ and feeling the death -cold cheek and arm of ಪುಟ್ಟಾ , 

drops the ounce glass which crashes to the floor and suddenly 

yells out) ಹಯ್ಯಯ್ಯೋ ! ಪುಟ್ಟಾನೂವೇ !. . . ನೀನೂವೇ ? . . . 

ಪುಟ್ಟಾ ! ನಮ್ಪುಟ್ಟಾ ! (Suddenly smelling the empty glass , in 

"ಸೂಳೆ' s ” prone hand and other near Putta's) ವಿಷ ಕುಡ್ದೂ ! 

Prussic Acidoo ! ( sobbing collapses on the corpses whimper 

ing) ಅಯ್ಯಯ್ಯಯ್ಯೋ ! ಇಬ್ಬರೂ ಹೋದ್ರಾ ? ! ಇ . . . ನಾ . . . 

ಕ್ . . . ನಾ . . . ನ್ನ್.. . . ಬ . . . ದ್ಕಿ . . . ರೋ . . . ದೂ ! ?.. . 

? . . . . ? (Raises himself up and meandering to see face 

and rubbing his face on the dead ಸೂಳೇ face) ಚಿನ್ನಾ ! ಚಿನ್ನಾ ! 

(in heart-breaking sobs) ನೀನ್ ಹೋದ್ರೂನೂವೆ ಚಿನ್ನಾ !. . . ನಮ್ಮಿ 

ಬ್ಬರ ಜ್ಞಾಪ್ಕಕ್ಕೇಂತ ಇದ್ದ ಇವಳ್ನೂವೆ. . . ಕರ್ಕೊಂಡ್ ಹೋಗ್ನಟ್ಟ್ಯಾ ! 

? ? . . . ಚಿನ್ನಾ ! ನ್ಯಾಯವೇ ? !. . . ನೀತಿಯೇ . . . ಧರ್ಮವೇ ? 

ಹಯ್ಯೋ ಚಿನ್ನಾ ! ನಿನ್ನ ಕೈಹಿಡಿಯೋಕೆ ಯೋಗ್ಯತೆ ಇಲ್ಲದ ನನ್ನ ಕೈನ ಹೀಗೆ 

ಬಿಟ್ಬಿಟ್ ಹೋಗಬಹುದೇ ? . . . ತಪ್ಪು ... . . ಚಿನ್ನ . . . ನೀ ಮಾಡಿದ್ದು 

. . . ತಪ್ಪು ! ಹಯ್ಯೋ ! ಇನ್ನೇನು ಗತಿ ! ಚಿನ್ನಾ ! . . . ಚಿನ್ನಾ !. . 

ಚಿನ್ನಾ ! . . . ಚಿನ್ನಾ ! ನನಗೆ ಇನ್ನು ಏನ್ಸಂತೋಷ ಇಹದಲ್ಲೀ !! 

( Collapses shreiking out “ ಚಿನ್ನಾ ! ಚಿನ್ನಾ ! ಚಿನ್ನಾ !? ) [Subbu's 

Shrieks having awaken the mother, she slowly stalks into the 

room .] 

ಸೂಳೆ ತಾಯಿ : ಇದೇನು ಸುಬೂ !. . . ಆಗ್ಹೋಯ್ತೆ . . . ಅವಳ ಕೆಲ್ಸ ?. . . 

ಬಡ್ಕೊಂಡೇನ್ ಫಲಾ !? ಕೀರ್ಲಿದರೇನ್ ಪ್ರಯೋಜ್ನ ? ಸತ್ತವ್ರು ತಿರುಗ್ 

ಬರೋದಿಲ್ಲ ! ಅವಳಾಯ್ತು ! ಅವಳ ಕರ್ಮವೂ ಆಯ್ತು ! ಈಗ್ ಮನೇಲಿ 

. . . ನೀನೊಬ್ಬೆ ಗಂಡ್ಸು ! ಅವಳ “ವಿಲ್ಲು” ನಿನಗೋ . . . . ನನಗೋ 

. . . ಪುಟ್ಟಾಗೋ ಬರದೇ ಬರದಿರ್ತಾಳೆ ! ಯಾರಿಗ್ ಬರದರೇನು ! 

ಪುಟ್ಟಾನೂ , ನಾನೂ , ನೀನೂ ! ಸುಬ್ಬು ! ನೀನೂ . . . ಹೊಂಡ್ಕೊಂಡಿ 

ರೋವರ್ಗೂ . . . ನಿನ್ ಚಿನ್ನನ್ ದುಡ್ಡೂ ನಮ್ಮೂವ್ರಲ್ಲಿರೋರ್ವ್ಗೆ ?! 

ಹೋದ ಪ್ರಾಣಿ ಹೋಯ್ತು ! ನಿನ್ ದುಡ್ಡೇನೂ ! ನನ್ ದುಡ್ಡೇನೂ ! 

... ಪುಟ್ಟಾನ ದುಡ್ಡೇನೂ ? ಈ ಮೂವತ್ತು ವರ್ಷ, ನಾನೂ , ನಿನ್ನ್  

ಚಿನ್ನಾನೂ , ಬೆಳ್ದು ಬದುಕಿದ್ದು ನಮ್ಮ ನಮ್ಮ ಸ್ನೇಹ್ದಲ್ಲಿ, ಚಿನ್ನಾ ಸತ್ತ್ರೂ ... 

ಪುಟ್ಟಾ ಇದಾಳೆ ! . . . ಏಳು ಸುಬ್ಬೂ , ಅವಳ ಕಾಲ ಆಗ್ಹೋಯ್ತು ! 

ನನ್ನ ಕಾಲಾನೂ ಈ ಹೊತ್ತೋ ನಾಳೇನೋ ಆಗುತ್ತೆ ಆದರೆ ನನ್ 

ಮುಪ್ಪಿನಲ್ಲಿ ನನ್ನ್  ಜೀವನಕ್ಕೆ , ನನ್ ಕಸಬು . . . ಗಿರಾಕಿಗೆ . . . ಪುಟ್ಟಾ 

ಇದಾಳೆ . . . ಮೆಲ್ಲಗೆ ಪುಟ್ಟಾನ ಅವರಮ್ಮ ಹೆಣಾಂತ ತಿಳಿಯೋಕ್ 

ಮುಂಚೆ ಒಳಗ್ ಸಾಗ್ಸ್ಕೋಂಡ್ ಹೋಗು! ನಾಳೆ ಪರೀಕ್ಷೇಲಿ ಪಾಸಾದ್ರೆ 

. . . ಸೂಳ್ಗಾರ್ಕೆಲಿ . . . ಓದಿದ್ ಸೂಳೇಂದ್ರೆ , ಗಿರಾಕಿ ಜಾಸ್ತಿ ! ನಿನ್ಗೂ 

ಲಾಭ ! ನನ್ಗೂ ಲಾಭ ! ( Gradually approaches the two corpes 

and in trying to gently lift up ಪುಟ್ಟಾ , feels ಪುಟ್ಟಾ' s ice cold 

arms dropping dead; mechanically her fingers stray over ಪುಟ್ಟಾ  

and wises and finding both dead -cold in a frenzy ) ಹಯ್ಯೋ ! 

ಹಯ್ಯೋ ! . . . ಮುಂಡೇ . . . ಮುಂಡೇ . . . ನಾನು ನಿನ್ನ ಹೊತ್ತು 

ಹೆತ್ತು ನಿನಗೆ ನನ್ನ ಕಸ್ಬ್ನ ಕಲ್ಸ್ ಕೊಟ್ಟು ಮುಂದಕ್ಕೆ ತನ್ದು . . . ಮನೆ, 

ಬಾಕ್ಲು , ಹೊಲ, ಗದ್ದೆ ಮಾಡ್ಸ್ ಕೊಟ್ಟು ನಿನ್ನ ಈ ಸ್ಥಿತೀಗ್ ತಂದಾಗ. . . 

ನನ್ನ . . . ಮುಪ್ಪಿನಲ್ಲಿ ನನ್ನ ಜೀವನಕ್ಕೆಂತಿದ್ದ ಈ ಪುಟ್ಟಾನ್ನೂ ಸೆಳಕೊಂಡು 

ಹೋದ್ಯಲ್ಲೇ !! ಮುಂಡೇ !! ಮುಂಡೇ !! ಮುಂಡೇ !! ( ಪ್ರತಿಯೊಂದು 

“ಮುಂಡೇ" ಗೂ ಸೂಳೆಯ ಶವದ ಜಠರದ ಮೇಲೆ ತನ್ನ ಕೈಗಳಿಂದ 

ಬಾರಿಸುತ್ತಾ ). . . ನನ್ಮಂದಿನ ಒಕ್ಕು . . . ನನ್ನ ಸೂಳ್ಗಾರ್ಕೆ ಕಸ್ಬು . . . 

ನಾನು ಗಿಟ್ಟಿಸ್ಕೊಳ್ಳೋಕೆ ನನಗೇಂತ ಇದ್ದ ಪುಟ್ಟಾನ್ನೂ . . . ಎಳ್ಕೊಂಡ್ಹೋ 

ದ್ಯಲ್ಲೇ . . . ಮುಂಡೇ ಮುಂಡೇ . . . ಮುಂಡೇ ! ನನ್ನ ಮುಪ್ಪಿನಲ್ಲಿ 

ನನ್ನ ಜೀವನಕ್ಕೆಂತ ಇದ್ದ ಪುಟ್ಟಾನ್ನೂ ಸೆಳಕೊಂಡ್ಹೋದ್ಯಲ್ಲೇ ! ಮುಂಡೆ 

. . . ! ಮುಂಡೇ ! . . . ನನ್ನ ಹೊಟ್ಟೇಲ್ಲುಟ್ಟಿದ ಮುಂಡೇ ! (She Suits 

to the word by beating bare palm resounding on the dead 

woman s stomach ) “ ಅಯ್ಯೋ , ಹಾಳ್ ದೇವರ್ ಗಳ್ರಾ , ನಿಮಗ್ಮಾಡ 

ದ್ಪೂಜೆ ಇಲ್ಲಾ ! ನಿಮಗೊಪ್ಪಿಸದ ನೇವೇದ್ಯ ಇಲ್ಲ ! ನಿಮ್ಹಾಳು 

ಬ್ರಾಹ್ಮಣ್ರು ತಿಂದು ತೇಗದ ಪ್ರಸಾದ ದಕ್ಷಿಣೇ ಇಲ್ಲ ! ಆದ್ರೂ ನೀವು 

ನೋಡ್ತಿದ್ರಾ ಈ ಅನ್ಯಾಯಾನ ! ನನ್ನ ಮುಪ್ಪಿನಲ್ಲಿ ನನ್ನ ಜೀವನಕ್ಕೇಂತ 

ಇದ್ದ ಈ ಹುಡಿಗೀನೂ ಎಳ್ಕೊಂಡು ಹೋದಾಗ ನೀವಾದ್ರೂ ಒಳ್ಳೆ ಬುದ್ದಿ 

ಕೊಟ್ಟಿರಬಾರ್ದೆ ಈ ಪಾಪಿ ಮುಂಡೇಗೆ ? . . .( Resumes striking dead 

ಸೂಳೇ's stomach , screaming hysterically : " ಮುಂಡೇ ! ಮುಂಡೇ ! 

ನನ್ನ ಮುಪ್ಪಿನಲ್ಲಿ ನನ್ ಜೀವನಕ್ಕೇಂತಿದ್ದ ಹುಡಿಗೀನೂ ಎಳ್ಕೊಂಡ್ 

ಹೋದ್ಯಲ್ಲೇ ! ” 

[ ಸುಬ್ಬುವು ಸೂಳೆಯ ಶವದ ಪಾದಗಳ ಮೇಲೆ ತಲೆಯನ್ನು ಚಚ್ಚಿ 

ಕೊಳ್ಳುತ್ತಾ ಗೋಳಾಡುತ್ತಲೂ . . . . ಮುದುಕಿಯು ಪೂರ್ವೋಕ್ತಂ ಬಡ 

ಕೊಳ್ಳುತ್ತಾ ಶವದ ಜಠರದ ಮೇಲೆ ಹಸ್ತವನ್ನು ಸಭಿಕರು ಕೇಳಬರುವಂತೆ 

ತಾಡಿಸುತ್ತಿರಲು , ಫರದೆಯು ಮೆಲ್ಲನೆ ಜಾರಿದ ಅನಂತರವೂ ಮುದುಕಿಯ 

“ ಮುಂಡೇ ! ಮುಂಡೇ ! ನಿನ್ನ ಹತ್ತಿಂಗಳು ಹೊತ್ತು ಹೆತ್ತು ಮುಂದಕ್ 

ತಂದದ್ದಕ್ಕೆ . . . ನನ್ನ ಮುಪ್ನಲ್ಲಿ ನನ್ ಜೀವ್ನಕ್ಕೆ . . . ಇದ್ದ ಈ 

ಹುಡುಗೀನ್ನೂ ಎಳ್ಕೊಂಡೋಗಿ ನನ್ನ್ಹೊಟ್ಟೇೆ ಮೇಲ್ಹೊಡ್ದ್ಯಲ್ಲೇ !” 

ಎಂಬ ಆರ್ತನವೂ ಕರತಾಡನವೂ ಕೇಳಬರುವುದು.] 


FINISH 


===============================================