https://archive.org/details/dli.osmania.3692
ಕವಿರಾಜಮಾರ್ಗವಿವೇಕ
ಭಾಗ ೧
ಮುಳಿಯ ತಿಮ್ಮಪ್ಪಯ್ಯ
ಮಂಗಳೂರು
UNIVERSAL LIBRARY
8615
LIBRARY UNIVERSAL
OUP_902—26-3-70--5,000
OSMANIA UNIVERSITY LIBRARY Call No. K 80.1/N39k Accession No. K 732 Author dos Ed oco Title red or edunco.
This book should be returned on or before the date last marked below
ಕಾ ಣಿ ಕೆ
ಮಂಗಳೂರು ಸೈಂಟ್ ಎಲೋಶಿಯಸ್ ಕೋಲೇಜಿನ ಕನ್ನಡ ವಿದ್ಯಾರ್ಥಿ ಗಳ ವರ್ಗಕ್ಕೆ ವಿಶೇಷವಾಗಿ ಕನ್ನಡ ವಿದ್ಯಾರ್ಥಿ ಸಂಘಕ್ಕೆ ನನ್ನಲ್ಲಿ ಅಪಾರವಾದ ವಿಶ್ವಾಸ ಮೂವತ್ತು ವರ್ಷಗಳಿಂದ ಇಲ್ಲಿ ಉಪಾಧ್ಯಾಯನಾಗಿದ್ದು ಅವರೆದೆ ಯನ್ನೇ ನನ್ನ ಕನ್ನಡ ಸೇವೆಯ ಪ್ರಯೋಗ ಶಾಲೆಯನ್ನಾಗಿಸಿಕೊಂಡು ದುಡಿಯು. ತಿದ್ದೇನೆ. ಆ ಸಂಗತಿಯನ್ನು, ಇತ್ತೀಚೆಗಿನ ವಿದ್ಯಾರ್ಥಿಗಳು ಮಾತ್ರವೇ ಅಲ್ಲ; ಅಂದಿನಿಂದಿಂದಿನ ವರೆಗಿನ ಪ್ರತಿ ವರ್ಷದವರೂ ಬಲ್ಲರು. ಅವರ ಆ ತಿಳಿವು. ಒಂದೆರಡು ಬಾರಿ ಉಕ್ಕಿ ಕಾರ್ಯರೂಪವಾಗಿ ಹರಿದುದೂ ಇದೆ, ಬಹುಶಃ ೧೯೩೧ನೆ ಇಸವಿಯಲ್ಲೆಂದು ತೋರುತ್ತಿದೆ. ಈ ಕನ್ನಡ ವಿದ್ಯಾರ್ಥಿ ಸಂಘದ ಅಂದಿನ ಸದಸ್ಯರು ನಾನು ಬರೆದ ಸೊಬಗಿನ ಬಳ್ಳಿ ಎಂಬ ಕಾವ್ಯವನ್ನು ಅಂದ ವಾಗಿ ಅಚ್ಚು ಹಾಕಿಸಿದರು. ಅದು ಅಚ್ಚಗನ್ನಡದಲ್ಲಿ - ಎಂದರೆ ಪ್ರತಿ ಜ್ಞಾ ಪೂರ್ವಕವಾಗಿ ಸಂಸ್ಕೃತ ರಹಿತವಾದ ತಿಳಿಗನ್ನಡದಲ್ಲಿ - ಬರೆದುದು. ಈ ವರೆಗೆ ತಿಳಿದು ಬಂದಂತೆ, ಆ ರೀತಿಯ ಕನ್ನಡ ಕಾವ್ಯವೆಂದರೆ, ಸುಮಾರು ೧೩ನೆ ಶತಮಾನದಲ್ಲಿ ಆ ೦ ಡ ಯ ನು ಬರೆದ ಕಾವನಗೆಲ್ಲ' (ಕಬ್ಬಿಗರ ಕಾವುವೇ ಮೊದಲಿನದಾದರೆ ಇದು ಆ ದಾರಿಯಲ್ಲಿ ಮತ್ತಿನದು. ಎರಡನೆಯ ಬಾರಿ ಹಾಗೆ ಕಾರ್ಯರೂಪದಲ್ಲಿ ಮುಂಬರಿದುದೆಂದರೆ ಕಳೆದ ಕೊಲೇಜಿನ ವರ್ಷಾ೦ ತೋತ್ಸವದ ಸಮಾರಂಭದಲ್ಲಿ, ಉತ್ಸವಾಧ್ಯಕ್ಷರಾಗಿದ್ದ 'ಕರ್ಣಾಟಕ ಏಕೀಕರಣ' ಸಂಸ್ಥೆಯ ಪ್ರಮುಖರಾದ ನಮ್ಮ ಶ್ರೀ ಕೆ. ಬಿ. ಜಿನರಾಜ ಹೆಗ್ಗಡೆಯವರ ಹಸ್ತ ದಿಂದ ಈ ಕನ್ನಡ ಸಂಘದವರು ನನಗೊಂದು ನಿಧಿಯನ್ನೊಪ್ಪಿಸಿದರು. ಅದರ ಸ್ಮರಣಾರ್ಥವಾಗಿ ಈ “ಕವಿರಾಜಮಾರ್ಗ - ವಿವೇಕ" - ಪ್ರಥಮ ಭಾಗವನ್ನು ಅಚ್ಚು ಹಾಕಿಸಬೇಕು; ಕನ್ನಡ ಸಂಘಕ್ಕೆ - ಆಯಾ ಸದಸ್ಯರಿಗೆ ಕಾಣಿಕೆಯಾಗಿ ಒಪ್ಪಿಸಬೇಕು ಎಂದು ಭಾವಿಸಿದ್ದೆ. ಆದರೆ, ಕಳೆದ ವರ್ಷಕ್ಕದು ಮನಸ್ಸಿನ ಮಂಡಿಗೆ'ಯೇ ಆಗಿಬಿಟ್ಟಿತು. ಕಾಗದ ಮೊದಲಾದುವುಗಳ ಅನಾನುಕೂಲ್ಯ ದಿಂದಾಗಿ ಈ ವರ್ಷವೂ ಹಾಗೆಯೇ ಆಗಿ ಬಿಡುವುದೋ ಎಂಬ ಅಂಜಿಕೆಯೂ
ಈ ಗ್ರಂಥರಚನೆಯಲ್ಲಿ ನೆರವಾದ ಗ್ರಂಥಗಳೂ
ಪ್ರಸಿದ್ಧ ಲೇಖಗಳೂ
- ಕನ್ನಡ (೧) ಕವಿರಾಜಮಾರ್ಗ. (೨) ಕಾವ್ಯಾವಲೋಕನ, (೩) ಪಂಪ ಭಾರತ, (೪) ನಾಡೋಜ ಪಂಪ, (೫) ಪ್ರಬುದ್ಧ ಕರ್ಣಾಟಕ, (೬) ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ.
ಪ್ರಾ ಕೃ ತ (೧) ಗಾಥಾ ಸಪ್ತಶತಿ, (೨) ಪ್ರಾಕೃತ ಸೈಂಗಲ.
ಇ೦ಗ್ಲಿ ಪು (1) Rashtrakutas and their Times. by Sri A. S. Altekar. (2) Early History of the Dekkan by Sri R. N. Bhandarkar. (3) Collected works of Sri R. G. Bhandarkar. (4) Eastern Chalukyas-by Sri D. C. Ganguly. (5) Elements of South Indians Paliography -- 1878. (6) Sources of Karnataka History, by Sri S. Shrikanta Shastri 1940.
ಸ೦ಸ್ಕೃತ - (೧) ಕೌಟಿಲೀಯಂ ಅರ್ಥಶಾಸ್ತ್ರಂ, (೨) ಚಾಣಕ್ಯ ಸೂತ್ರಂ. (೩). ಪ್ರತಾಪ ರುದ್ರೀಯಂ,
ಶಾ ಸ ನ ಗಳು - (೧) ಅಮೋಘವರ್ಷ ನೃಪತುಂಗನ ಸಂಜನ ಶಾಸನ, (೨) ಅಮೋಘ ವರ್ಷ ನೃಪತುಂಗನ ಕೊಲ್ಲೂರು ಶಾಸನ. (೩) Epi. Carna Vol. VIII ಸೊರಬ ನಂ. 85. (೪) Indi-Anti Vol. VIII ನೃಪತುಂಗನ ಕಾಲದ ಕನ್ನೇರಿ ಶಾಸನ. (೫) Epigraphia Indica Vol. II - VI - VIT. (೬) ಜಗತ್ತುಂಗ ಮೂರನೆ ಗೋವಿಂದರಾಜನ ಮಂಡಳ-ಶಾಸನ. (೭) ಇನ್ನೂ ಹಲವು ಶಾಸನಭಾಗಗಳು.
ಅನುಕ್ರಮಣ ಕೆ
ರಾಷ್ಟ್ರಕೂಟ ವಂಶ
ರಾಷ್ಟ್ರಕೂಟರು ಹುಟ್ಟುಗನ್ನಡಿಗರು. ರಾಷ್ಟ್ರಕೂಟ ವಂಶದ ಮೂಲ ವಿಚಾರವೂ ವಂಶಚಿತ್ರವೂ, ಆದಿಯ ಐವರ ಸಾಮಾನ್ಯ ಪರಿಚಯ, ರಟ್ಟ - ರಾಷ್ಟ್ರಕೂಟರು.
ರಾಷ್ಟ್ರಕೂಟ- ತ್ರಿಮೂರ್ತಿಗಳು
ದಂತಿದುರ್ಗನೂ ಅವನ ರಾಜಧಾನಿಯ, ಅಕಾಲವರ್ಷ-ಕೃಷ್ಣರಾಜ ಧ್ರುವ-ನಿರುಪಮ.
ಪ್ರಭೂತವರ್ಷ - ಗೋವಿಂದ
ಜಗತ್ತುಂಗನ ವಿನಯೋದಾತ್ತತಾ ಪ್ರತಾಪಗಳು, ಗೋವಿಂದರಾಜನು ಭಾರತ ಜಕ್ರವರ್ತಿ, ಗೋವಿಂದನ ರಾಜಧಾನಿ, ಪೋಷಕಾಧಾರ. ಗೋವಿಂದನ ಕಾಲದ ಕನ್ನಡ ಸಾಹಿತ್ಯದ ಸೂಚನೆ..
ಅಮೋಘವರ್ಷ - ನೃಪತುಂಗ
ರಾಜ್ಯ ವಿಪ್ಲವ, ವಿಪ್ತ ವವೂ ತನ್ನಿವಾರಣೋಪಾಯವೂ, ಪುನರುದಯ. ಮತ್ತಿನ ಸಂಕಟ, ಸಂಕಟದ ನಿವೃತ್ತಿಯ ರಾಜ್ಯಶಾಂತಿಯ.
ನೃಪತುಂಗನ ಆಳಿಕೆ
ಅಧಿಕಾರಿಗಳ ಸ್ವರೂಪ, ಕಿ. ಶ. ೮೬೧ ಕೋಳಕೂರ ಶಾಸನ, ಕ್ರಿ. ಶ. ೮೭೧ ಸಂಜನ ಶಾಸನ, ಕ್ರಿ ಶ. ೮೦೯ ಗೋವಿಂದರಾಜನ ರಾಧನಪುರದ ಶಾಸನ, ರಾಷ್ಟ್ರಪತಿ, ವಿಷಯಪತಿ, ಗ್ರಾಮಕೂಟ ಯುಕ್ತಕ ನಿಯು ಕಕರು, ಮಹಾಜನವೂ ಅದರ ಅಧಿಕಾರ ಸ್ವರೂಪಗಳೂ, ಗೊರವರು, ನೃಪತುಂಗನ ಉದಾತ್ತ ಧರ್ಮ,
೬೯
ನೃಪತುಂಗನ ಮತವಾವುದು?
ನೃಪತುಂಗನು ಜೈನನಾಗಿರಬಹುದೆ? ಆಧಾರಗಳ ವಿವೇಚನೆ, ಇನ್ನೊಂದು ಆಕ್ಷೇಪ.
ಕವಿರಾಜ ಮಾರ್ಗಕಾರನಾರು?
ನೃಪತುಂಗನನೇ ಗ್ರಂಥಕಾರನು ಎಂಬ ಹೇಳಿಕೆಯ ತನ್ನಿರಾಸವೂ. ಕವಿರಾಜ ಮಾರ್ಗಕಾರನು ನೃಪತುಂಗ ಸಭಾಸದನು. ಶ್ರೀ ವಿಜಯನೇ ಗ್ರಂಥಕಾರನು, ಶ್ರೀ ವಿಜಯನು ಹಲಮಂದಿ ಪ್ರಸಿದ್ಧ ಕವಿಗಳಿಂದ ಸ್ತುತನಾದವನು, ಜಯಾ ಅಥವಾ ಜಯ-ಎಂಬುದು ಗ್ರಂಥಕಾರನ ಮಲನಾಮ. ಈ ವಿಜಯಾನೆಂದರೆ ನೃಪತುಂಗನ 'ಸಂದ ಪಿಂದಾಳ್', ನೃಪತುಂಗ-ಜಯಾ-ಸಭಾಸದರ ಸಂಬಂಧ, ಇನ್ನೂ ಹೆಚ್ಚಿನ ಹೊಲಬುಗಳು, ಭ್ರನ ನಿವೃತ್ತಿ. ಗ್ರಂಥಕಾರನ ಬಿರುದುಗಳು. ಗ್ರಂಥಕಾರನ ಹುಟ್ಟೂರು ಒ೦ಕುಂದವಿರಬಹುದೆ? ಗ್ರ೦ಥಕಾರನ ಮತ ಕಾಲಗಳು.
೧೧೩
ಆಗಿನ ಕನ್ನಡದ ಸ್ವರೂಪವೂ ಗ್ರಂಥಕಾರನ ಗುರಿಯ
ಆಗಿನ ಕಾಲದ ಗದ್ಯ ಸಾಹಿತ್ಯ, ಕನ್ನಡದ ಪುರಾತನ ಪದ್ಯ ಕಾವ್ಯ ಸ್ವರೂಪ. ಪ್ರಕೃತ ಗ್ರಂಥದ ಉದ್ದೇಶ.
ಹಿನ್ನೋಟ
೧೩೧
ರಾಷ್ಟ್ರಕೂಟ - ವಂಶ
ಹಿಂದುಸ್ಥಾನದೊಳಗೆ ಆಗಿಹೋದ ಪ್ರಖ್ಯಾತ ರಾಜವಂಶಗಳಲ್ಲಿ ರಾಷ್ಟ್ರ ಕೂಟವಂಶವೂ ಒಂದು. ಆಯಾ ಪ್ರಾಂತಗಳಲ್ಲಿ ತಲೆದೋರಿ ಅಲ್ಲಲ್ಲಿ
ಜ್ವಲಿಸಿ ಒಂದಷ್ಟು ಬೆಳಗಿ ಆ ಮೇಲೆ ನಂದಿಹೋದ ಬೇರೆ ರಾಷ್ಟ್ರಕೂಟರು - ಹುಟ್ಟುಗನ್ನಡಿಗರು !
ಹಲವು ಅರಸು ಕುಲಗಳೂ ಇದ್ದುವು. ರಾಷ್ಟ್ರಕೂಟ
* ಕುಲ ಅಂಥದಲ್ಲ. ಹುಟ್ಟು ಕನ್ನಡಿಗರಾದರೂ ಈ ಕುಲದ ಅರಸರೊಳಗೆ ಕೆಲವರ ಅರಸಾಳಿಕೆ ಭಾರತ ಭೂಮಿಯಲ್ಲಿ ತುಂಬಿ ಹೊರಗೆ ತುಳುಕಿದೆ. ಈ ಕವಿರಾಜ ಮಾರ್ಗ'ವು ಯಾವ ಮಹಾರಾಜನ ಆಶ್ರಯ ದಲ್ಲಿ ತಲೆದೋರಿತೋ ಆ ಅಮೋಘವರ್ಷ ನೃಪತುಂಗನು ಸುಸಂಸ್ಕೃತರೂ ಸಮರ್ಥರೂ ಆದ ರಾಷ್ಟ್ರಕೂಟರಾಜರೊಳಗೆ ಒಬ್ಬನು. ಅವನ ಮಾನ್ಯ ಖೇವಾಸ್ಥಾನಕ್ಕೆ ಚೈನ - ಅರೇಬಿಯಾ ಮೊದಲಾದ ಹೊರಗಣ ಭೂಭಾಗ ಗಳಿಂದ ರಾಯಭಾರಿಗಳು ಬರುತ್ತಿದ್ದರು. ಯಾವ ಭೇದಗಳೂ ಇಲ್ಲದೆ ಸರ್ವಮತೀಯರನ್ನೂ ಆತನು ಅವರವರ ಮನಸ್ಸಿಗೆ ಮೆಚ್ಚುಗೆಯಾಗು ವಂತೆ ದಾನಮಾನಾದಿಗಳಿಂದ ಮನ್ನಿಸುತ್ತಿದ್ದುದನ್ನು ಶಾಸನಗಳೇ ಘಂಟಾ ಘೋಷವಾಗಿ ಸಾರುತ್ತಿವೆ. ಅವನು ಭಾರತಭೂಮಿಗೆ ಸಾರ್ಥಕ ಚಕ್ರವರ್ತಿ ಎನ್ನುವಂತಿಲ್ಲದಿದ್ದರೂ, ಆತನ ತಂದೆಯಾದ ಜಗತ್ತುಂಗ ಗೋವಿಂದರಾಜನು ನಿಜವಾಗಿಯೂ ಆ ಪದವಿಗೇರಿದವನು. ಇದು ಅಭಿಮಾನಗ್ರಸ್ತರಾಗಿ ಆಡುವ ಮಾತಲ್ಲ; ಮಹಾರಾಷ್ಠ ದೇಶೀಯರೇ ಆಗಿರುವ ಶ್ರೀ ಅನಂತ ಸದಾಶಿವ ಅಳೇಕರರು ತಮ್ಮ ಪ್ರಸಿದ್ದವಾದ * “ರಾಷ್ಟ್ರಕೂಟರೂ ಮತ್ತು ಅವರ ಕಾಲವೂ” ಎಂಬ ಗ್ರಂಥದಲ್ಲಿ ಸಾಧಾರವಾಗಿ ಹೇಳಿದ ಸಂಗತಿ ಇದು. ತನ್ನ ಇಪ್ಪತ್ತು ವರ್ಷಗಳ (ಕ್ರಿ. ಶ. ೭೯೨ . ೮೧೨) ರಾಜ್ಯಭಾರದಲ್ಲಿ ಹಿಮವತ್ಸರ್ವತದಿಂದ ತೆಂಕಣ ಲಂಕಾಂತವಾದ ಅಖಂಡ ಭಾರತಭೂಮಿ, ಆ ಜಗತ್ತುಂಗ ಗೋವಿಂದ
* Rashtrakutas and their times, Govinda III P. 8. 69–71,
ರಾಜನ ಅಂಕಿತದೊಳಗೆ ಅಡಕವಾಗಿತ್ತೆಂಬುದು ವಿಶದವಾಗಿದೆ. ರಾಷ್ಟ್ರಕೂಟರು ಅಚ್ಚಗನ್ನಡಿಗರೇ ಎಂಬುದನ್ನೂ ಅವರು ಒಪ್ಪಿದ್ದಾರೆ. ಅದಕ್ಕಿಂತ ಕೆಲಗಾಲಕ್ಕೆ ಹಿಂದಿನ ವರೆಗೆ, ರಾಷ್ಟ್ರಕೂಟ ವಂಶೀಯರು ಜನ್ಮತಃ ಮರಾಠಿಯೇ ಮನೆಮಾತಾ ಗಿದ್ದವರು ಎಂದು ಕೆಲಮಂದಿ ವಾದಿಸುತ್ತಿದ್ದ ಸ್ಥಿತಿ, ಇಂದು ಉಳಿದಿಲ್ಲ. ಕನ್ನಡ ಸಾಹಿತ್ಯವು ಎಂದಿಗೂ ಮರೆಯಲಾರದ ನೃಪತುಂಗದೇವನ ಕನ್ನಡ ಭಾಷಾ ಭಕ್ತಿ ಹಾಗಿರಲಿ, ಗುಜರಾಥ ಪ್ರಾಂತದಲ್ಲಿ ಉಪರಾಜಧಾನಿಯನ್ನೆಸಗಿಕೊಂಡಿದ್ದ, ಅವನ ಚಿಕ್ಕಪ್ಪ ಕರ್ಕರಾಜ - ಸುವರ್ಣವರ್ಷ (ಕ್ರಿ. ಶ. ೮೧೨) ಮೊದಲಾದವರ ಅನೇಕ ಶಾಸನಗಳು ಆಯಾ ಪ್ರಾಂತಗಳಲ್ಲಿ ಸಿಕ್ಕಿವೆ; ಶಾಸನಗಳು ಸಂಸ್ಕೃತ ಭಾಷೆಯಲ್ಲಿದ್ದರೂ ಶಾಸನಕಾರರಾದ ಅರಸರ ಹೆಸರು ಕನ್ನಡದಲ್ಲಿ ಇರು ವುದು ಕಂಡುಬಂದಿದೆ, “ಸ್ವಹಸ್ತೋಯಂ ಮಮ ಶ್ರೀ * ಕರ್ಕರಾಜಸ್ಯ ಶ್ರೀಮದಿಂದ್ರರಾಜಸುತಸ್ಯ” ಎಂಬುದು ಒಂದು ದೃಷ್ಟಾಂತವಾದರೆ ಕ್ರಿ.ಶ. ೮೮೪ರ ವರೆಗೆ ಈ ವಂಶೀಯರಾದ ಹಲ ಮಂದಿ ರಾಜರ ಅಂಥ ಶಾಸನ ದೃಷ್ಟಾಂತಗಳೂ ಈಗ ದೊರೆತಿವೆ. ಈಚೆಗೆ ಗೋಕಾಕಿನಲ್ಲಿ ರಾಷ್ಟ್ರಕೂಟ ದಜ್ಜ ಮಹಾರಾಜನ ೬-೭ನೆಯ ಶತಮಾನದ ಕನ್ನಡ ಲಿಪಿಯ ಶಾಸನವೊಂದು ದೊರಕಿದೆ ಎಂಬುದು ಮೇಲಿನ ಹೇಳಿಕೆಗೆ ಮತ್ತಿಷ್ಟು ಸಾಧಕವಾಗಿದೆ. ಹದಕ್ಕಿಳಿದ ಹಿಟ್ಟನ್ನು ಇನ್ನೂ ಹಿಸುಕುವುದು ಅನಾವಶ್ಯಕ.
ಈ ಕುಲದವರ ಲಾಂಛನವಾಗಿ ನೇಗಿಲು - ಗರುಡ ಮುದ್ರೆಗಳು ಇದ್ದಂತೆ ಕಂಡುಬರುತ್ತಿವೆ. ನೇಗಿಲಿನಿಂದ ಒಕ್ಕಲುತನದವರೆಂದು ಭಾವಿಸಿದರೆ,
ಗರುಡ ಚಿಹ್ನೆಯಿಂದ ಶ್ರೀ ಕೃಷ್ಣನ ವಂಶೀಯರೆಂದು ರಾ. ಕೂಟ ವಂಶದ ಊಹಿಸಬಹುದು. ಯಾದವಾನ್ವಯದೊಳಗೆ ಬಲಭದ್ರ ಮಲ ವಿಚಾರವೂ
ಶ್ರೀಕೃಷ್ಣರೆಂದರೆ ಪ್ರಖ್ಯಾತಿಗೊಂಡವರು. ಮೊದಲಿನ ವಂಶ ಚಿತ್ರವೂ
* ನನಿಗೆ ನೇಗಿಲಿನ ಆಕಾರದ ಆಯುಧವಾದರೆ ಮತ್ತಿನವನು ಗರುಡಧ್ವಜನು ಲೋಕಪ್ರಸಿದ್ಧರಾದ ಬಲಭದ್ರ ಕೃಷ್ಣರು ನಿಜವಾಗಿ ಯಾದವಾ ಸ್ವಯದವರಾದರೂ ಗೊಲ್ಲರೊಡನಾಡಿ ಗೋವಳರೆಂದೇ ಪ್ರಸಿದ್ದಿಗೊಂಡವರಲ್ಲವೆ? ಅದರಿಂದ ಮತ್ತಿನ ಪ್ರಾಬಲ್ಯಕ್ಕೇರಿದ ಗೊಲ್ಲ ಅಥವಾ ಆಭೀರ ವಂಶೀಯರು ತಾವು ಯಾದವ ವಂಶೀಯರೆನ್ನುವುದೂ, ಪುರಾಣ ಪ್ರಸಿದ್ಧರಾದ ಆಯಾ
* ಪ್ರಬುದ್ಧ ಕರ್ಣಾಟಕ ೨೦, ೩, ೮೩ (ಶ್ರೀ. ಎನ್. ಲಕ್ಷ್ಮಿನಾರಾಯಣ ರಾಯರು ಬರೆದ “ಮಾಲ್ ಬೇಡಿನ ರಾಷ್ಟ್ರಕೂಟರು ಎಲ್ಲಿಯವರು' ಎಂಬ ಲೇಖನ.
ವಿಶಿಷ್ಟ ವ್ಯಕ್ತಿಗಳ ಧ್ವಜಗಳನ್ನು ಧರಿಸಿಕೊಳ್ಳುವುದೂ ಸ್ವಾಭಾವಿಕವಾಗಿಯೇ ಬಂದುದು. ಪುರಾತನ ಕಾಲದಲ್ಲಿ ವಿಂಧ್ಯಾದ್ರಿಯಿಂದುಕ್ಕಿ ಹರಿದ ರೇವಾ - ಗೋದಾವರಿಗಳೆ ಮೊದಲಾದ ಪುಣ್ಯ ವಾಹಿನಿಗಳ ತೀರಗಳಲ್ಲಿ ರಸಿಕರೂ ವೀರರೂ ಆದ ಆಭೀರ (ಗೊಲ್ಲ) ರ ಅನವಧಿ ಸಂತಾನಗಳು ವಾಸಿಸುತ್ತಿದ್ದುವು ಎಂಬುದು ಸುಮಾರು ಕ್ರಿ. ಶ. ೧-೨ ನೇ ಶತಮಾನದ ಕುಂತಳಾಧಿಪತಿ ಶಾತವಾಹನನ ಅಲ್ಲವೆ ಸಾಲರಾಯನ ಆಸ್ಥಾನದಲ್ಲಿ ರಚಿತವಾದ *ಗಾಥಾ ಸಪ್ತಶತಿ' ಎಂಬ ಪ್ರಾಕೃತ ಗ್ರಂಥದಿಂದ ಗೊತ್ತಾಗುತ್ತಿದೆ. ಕ್ರಿ. ಶ. ನಾಲ್ಕನೆ ಶತಕದ ಆದಿಯಲ್ಲಿ, ನಾಸಿಕ – ಖಂಡೇಶ ಗವಿಗಳೊಳಗೆ ದೊರಕಿದ ಶಾಸನ ದೊಳಗೆ ದವರೀ - ಶಿವದತ್ತರೆಂಬ ದಂಪತಿಗಳ ಪುತ್ರನಾದ +ವೀರಸೇನ - ಆಭೀರ ಎಂಬವನ ಆಳಿಕೆಯ ವಿಚಾರ ಉಪಲಬ್ದವಾಗಿದೆ. ಈ ಆಭೀರ ವಂಶವೇ ಮುಂದೆ ಮೇಗೇರಿ ಯಾದವ ವಂಶ ಮತ್ತು ರಾಷ್ಟ್ರಕೂಟ ವಂಶ ಎಂಬ ಹೆಸರನ್ನೊಂದಿರಬಹುದು ಎಂದು ತೋರುತ್ತಿದೆ. ಈ ರಾಜವಂಶದ ಚರಿತ್ರವನ್ನು ಆಮೂಲಾಗ್ರವಾಗಿ ವಿಸ್ತರಿಸುವುದು ಪ್ರಕೃತದ ಗುರಿಯಲ್ಲ. ಕವಿರಾಜಮಾರ್ಗಕ್ಕೆ ಆಸರೆಯಾದ ನೃಪತುಂಗನ ಮತ್ತು ಮಾನ್ಯಖೇಟ – ಆಸ್ಥಾನದ ವಿಚಾರವನ್ನು ಸಾಧ್ಯವಾದಷ್ಟು ಅರಿತುಕೊಳ್ಳುವುದೇ ನಮ್ಮ ಉದ್ದೇಶವು. ಈ ಸಂದರ್ಭದಲ್ಲಿ ನೃಪತುಂಗನಿಗಿಂತಲೂ ಹಿಂದಿನ ಕೆಲಮಂದಿ ರಾಜರ ಸಾಮಾನ್ಯ ವಿಚಾರವು ಆವಶ್ಯಕವಾಗುತ್ತಿದೆ. ಮೊತ್ತಮೊದಲು ಆ ವಂಶಭಾಗದ ಚಿತ್ರವೊಂದನ್ನು ಮುಂದೆ ಸಮರ್ಪಿಸುವ:
ಮುಂದಿನ ವಂಶಶಾಖಾ ಚಿತ್ರದೊಳಗೆ ಗುಜರಾತ ಪ್ರಾಂತದ ಶಾಖೆಯ ಪ್ರಧಾನ ವ್ಯಕ್ತಿಗಳನ್ನು ಸಂಖ್ಯಾ ಪೂರ್ವಕವಾಗಿ ಕಾಣಿಸಿಲ್ಲ. ಅದೇ ರೀತಿಯಲ್ಲಿ ಶುಭತುಂಗ ಕೃಷ್ಣನ ಪ್ರಥಮ ಪುತ್ರನಾದ ಎರಡನೆ ಗೋವಿಂದನ ಹೆಸರನ್ನೂ
.. ಅಂಕಿಸಿಲ್ಲ. ಗುಜರಾತ ಶಾಖೆಯವರ ವಿಚಾರ ನಮಗಿಲ್ಲಿ ಆದಿಯ ಐವರ
ಹೆಚ್ಚಿನ ಆವಶ್ಯಕವಿಲ್ಲವೆಂದಾದರೆ, ಎರಡನೆ ಗೋವಿಂದನ ಸಾಮಾನ್ಯ ಪರಿಚಯ *
ಈ ಸಂಗತಿಯ ಅಧಿಕಾಂಶವೇನೂ ಈ ವರೆಗೆ ಗೊತ್ತಾಗಿಲ್ಲ ಎನ್ನಬಹುದು. ನಮಗಿಲ್ಲಿ ಚರಿತ್ರೆಗೆ ಅತ್ಯಾವಶ್ಯಕವಾದುವೆಂದರೆ ದಂತಿದುರ್ಗ
* Durgaprasad & Panashikar (Ed:-) Gathasaptha-Shathi by Shathavahana.
+ Early History of the Dekkhan P. 46, or Collected works of Sir R. G. Bhandarkar vol. III, P. 63.
ರಾ, ಕೂಟವಂಶ ಪ್ರಮುಖಾಂಶದ ಚಿತ್ರ*
೧. ದಂತಿ ವರ್ಮ
೨. ಇಂದ್ರ I
೩. ಗೋವಿಂದ I
೪. ಕರ್ಕ I (ರಟ್ಟ)
೫. ಇಂದ್ರ II (ರಾಷ್ಟ್ರ ಕೂಟ)
೭. ಕೃಷ್ಣ (ಅಕಾಲ ವರ್ಷ ಶುಭತುಂಗ)
೬. ದಂತಿದುರ್ಗ (ಕ್ರಿ. ಶ. ೭೪೭ ೭೫೪)
ಗೋವಿಂದ II (ಕ್ರಿ. ಶ. ೭೮೩)
೮. ಧ್ರುವ - ನಿರುಪಮ
೯. ಗೋವಿಂದ III ಜಗತ್ತುಂಗ (ಪ್ರಭೂತ ವರ್ಷ) ಕರ್ಕ ಇ೦ದ್ರ
೧೦. ಶರ್ವ-ನೃಪತುಂಗ (ಅಮೋಘ ವರ್ಷ 1)
(ಕ್ರಿ. ಶ. ೮೧೪ ೮೭೭)
ಕರ್ಕ (ಕೃಷ್ಣ) ಗೋವಿಂದ
(ಕ್ರಿ. ಶ. ೮೦೨) (ಗುಜರಾತಿನ ಶಾಖೆ)
* Collected works of Sir R. G, Bhandarkar Vol III P. 108,
ಶುಭತುಂಗ ಕೃಷ್ಣ - ಧ್ರುವ ನಿರುಪಮ - ಮೂರನೆ ಗೋವಿಂದ~ ನೃಪತುಂಗ ಎಂಬ ಐದು ಮಂದಿಯ ವಿಚಾರಗಳು. ಆದರೂ ಆದಿಯ ದಂತಿವರ್ಮನಿಂದ ಎರಡನೆ ಇಂದ್ರರಾಜ ಪರ್ಯ೦ತದ ಐವರ ಹೊಲಬುಗಳನ್ನೂ ಮೇಲಿಂದ ಮೇಲೆ ಪರಿಶೀಲಿಸಬೇಕಾಗಿದೆ. ದಂತಿದುರ್ಗನಿಂದ ಹಿಂದಣವರ ಕಾಲ ದೇಶ ಗಳೆರಡೂ ಈ ವರೆಗೆ ಸ್ಪುಟವಾಗಿ ಗೊತ್ತಾಗಿಲ್ಲ. ಆದರೇನು, ಸಹೇತುಕವಾದ ಅನುಮಾನವೂ ಪ್ರಮಾಣವೇ ಅಲ್ಲವೆ?
ಮೇಲೆ ಕಾಣಿಸಿದ ಚಿತ್ರದಲ್ಲಿ ಆದಿಯ ಐವರ ಕಾಲವೂ ತೋರು ವುದಿಲ್ಲ. ಆರನೆಯವನಾದ ದಂತಿದುರ್ಗನದು ತೋರುತ್ತಿದೆ. ಈತನ ತಂದೆ ಎರಡನೆಯ ಇಂದ್ರರಾಜನ ಹೆಸರಿನ ಮುಂಬದಿಯಲ್ಲಿ ರಾಷ್ಟ್ರಕೂಟ ಎಂದು ಕಂಸದೊಳಗೆ ತೋರಿದರೂ, ಆ ರಾಷ್ಟ್ರಕೂಟ- ರಾಜ್ಯವನ್ನು ಸ್ಥಾಪಿಸಿದಾತನು ಮಗ ದಂಗನೇ ಎಂದು ಶಾಸನಾದಿಗಳಿಂದ ವಿಶದವಾಗುತ್ತಿದೆ. ಗೊತ್ತಾ ದಂತೆ, ಈತನ ರಾಜ್ಯ ಭಾರವೆಂಬುದು ಏಳೆಂಟು ವರ್ಷ, ಇವನ ರಾಜಧಾನಿ ಯಾವುದು ಎಲ್ಲಿ ಮೊದಲಾದ ಹೊಲಬು ಇನ್ನೂ ಸಂದೇಹತರಂಗಗಳಲ್ಲಿ ತೇಲಾಡುತ್ತಿದೆ. ಹಾಗಿದ್ದರೂ ಕಾಲಮಾನದ ಸೂಚನೆಯೊಂದು ಮುಂದೆ ದೃಷಾ೦ತಿಸುವ ಈ ವರೆಗೆ ಲಭಿಸಿದ, ಒಂದೇ ಒಂದಾದ ಸಾಮನ್ ಗಡ ಎಂಬಲ್ಲಿಯ ಇವನ ಶಾಸನದ ಭಾಗದಿಂದ ಗೊತ್ತಾಗುತ್ತಿದೆ. ಶಾಸನಾಂಶ ವದು ಹೀಗಿದೆ:
* “ಸಚ ಸೃದ್ವೀವಲ್ಲಭ ಮಹಾರಾಜಾಧಿರಾಜಪರಮೇಶ್ವರ ಪರಮಭಟ್ಟಾ ರಕ ಖಡ್ತಾವಿಕ ದಂತಿದುರ್ಗ ರಾಜದೇವಃ ಸರ್ವಾನೆವ ರಾಷ್ಟ ಪತಿ ವಿಷಯಪತಿ ಗ್ರಾಮಕೂಟಾನ್ ಯಥಾರ್ಹಪತಿಪತ್ಯಾಜ್ಞಾಪ ಯತಿ:- ಅಸ್ತು ನಃ ಸಂವಿದಿತಂ ಯಥಾ ಪಂಚಸಪ್ತತ್ಯಧಿಕ ಶಕಕಾಲ ಸಂವತ್ಸರಶತಷ ವ್ಯತೀತೇ ಸಂವತ್ಸರೇ (೬೭೫) ಪೊಚ್ಚಿಕಾಯ ಮಾಘಮಾಸರಥಸಪ್ತಮ್ಯಾಂ ತುಲಾಪುರುಷಸ್ಥಿತೇ ಮಾತಾಪಿತೋ ರಾತ್ಮನಶ್ನ ಪುಣ್ಯಯಶೋಭಿವೃದ್ಧಯೇ ಕೊಪ್ಪಾರ ಪಂಚಶತಭುಕ್ಯರ ತರ್ಗತ ಕರಂದೀವಡೆ ಜಫಿತದೆಳುವಾಡಗ್ರಾಮ:-)
ಈ ಶಾಸನಾವಸರದಲ್ಲಿ ಶಾಲಿವಾಹನ ಶಕಕಾಲದೊಳಗೆ ೬೭೫ ವತ್ಸರ
* "Sources of Karnataka History' by S. Shrikanta Shastri Page 58 Published by the Mysore University 1940
ಗಳು-ಎಂದರೆ ಕ್ರಿ. ಶ. ೭೫೩ ಕಳೆದು ಹೋಗಿ ಕ್ರಿ. ಶ. ೭೫೪ನೆಯ ವರ್ಷ ನಡೆಯುತ್ತಿತ್ತೆಂದು ಮೇಲಿನ ಹೇಳಿಕೆಯಲ್ಲಿ ವ್ಯಕ್ತವಾಗುವುದು. ಮತ್ತೆ ಬಹುಕಾಲ ದಂತಿದುರ್ಗನು ಆಳುತ್ತಿದ್ದಂತೆ ತೋರುವುದಿಲ್ಲ. ಸ್ವಲ್ಪವೇ ಕಾಲದಲ್ಲಿ ಆತನ ಚಿಕ್ಕಪ್ಪನಾದ ಶುಭತುಂಗ ಕೃಷ್ಣರಾಜನು ಪಟ್ಟವನ್ನೇರಿದಂತೆ ಗೊತ್ತಾಗುತ್ತಿದೆ. ದಂತಿದುರ್ಗನು ಕ್ರಿ. ಶ ೭೪೭ರಲ್ಲಿ ಕನ್ನಡ ಚಕ್ರವರ್ತಿ ಯಾಗಿದ್ದ ಚಾಲುಕ್ಯ ಕೀರ್ತಿವರ್ಮನನ್ನು ಗೆದ್ದು ದಕ್ಷಿಣ ಚಕ್ರವರ್ತಿ ಎನಿಸಿ ದುದೂ ತಿಳಿದುಬಂದಿದೆ. ಅವನ ಆಳಿಕೆಯ ಆ ಕಾಲಮಾನಗಳನ್ನೇ ಮೇಲಿನ ವಂಶ ಚಿತ್ರದಲ್ಲಿ (ಕ್ರಿ. ಶ. ೭೪೭-೭೫೩) ಎಂದು ಕಾಣಿಸಿದುದು, ತಲೆ ಮಾರಿಗೆ ಸರಾಸರಿಯಾಗಿ ೨೫ರಂತೆ ವರ್ಷ ಗಣನೆ ಮಾಡುವುದು ಚಾರಿತ್ರಿಕರ ಪದ್ದತಿಯಷ್ಟೆ. ಅದಕ್ಕನುವಾಗಿ ಅವನಿಂದ ಹಿಂದಿನ ಐವರ ಕಾಲವನ್ನು ಲೆಕ್ಕಿಸಿದಲ್ಲಿ ಆದಿಯವನಾದ ದಂತಿವರ್ಮನು ಸುಮಾರು ಕ್ರಿ. ಶ. ೬೨೨ರ ಹಿಂದು ಮುಂದಿ ನಲ್ಲಿ ಹುಟ್ಟಿರಬೇಕೆಂಬುದು ನಿಶ್ಚಯ. ಆ ಕಾಲವೆಂದರೆ, ಕನ್ನಡಿಗರ ಕೀರ್ತಿಗೆ ಕಣ್ಮಣಿ ಎನ್ನಿಸಿದ ಚಾಲುಕ್ಯ ಕುಲದ ಎರಡನೆ ಪುಲಿಕೇಶಿ ಮಹಾರಾಜನು (*ಕ್ರಿ. ಶ. ೬೧೦-೬೩೪) ಬಾದಾಮಿಯ ಪಟ್ಟವನ್ನೇರಿ ಕನ್ನಡವನ್ನು ಮಾತ್ರವೇ
ಅಲ್ಲ, ಇಡೀ ದಕ್ಷಿಣಾಪಥವನ್ನೇ ತನ್ನ ಅಂಕೆಯಲ್ಲಿಟ್ಟು ಆಳುತ್ತಿದ್ದ ಕಾಲ. ಈ ಸಂದರ್ಭದಲ್ಲೇ ವಿಂಧ್ಯಾದುತ್ತರ ಭಾಗದ ಚಕ್ರಾಧೀಶನಾಗಿದ್ದ ಹರ್ಷ ವರ್ಧನನು ದಕ್ಷಿಣಕ್ಕೆ ದಾಳಿವರಿದು ರೇವಾನದಿಯ ದಂಡೆಯಲ್ಲಿ ಸಸೈನ್ಯನಾಗಿ ಹೋರಾಡಿ ಈ ಪುಲಿಕೇಶಿಯಿಂದ ಪರಾಜಿತನಾಗಿ ಹಿಂಜರಿದುದು. ಪೂರ್ವೋಕ್ತ ದಂತಿವರ್ಮನು ಹಾಗೆ ಕ್ರಿ. ಶ. ೬೨೨ರ ಸಂದಿನಲ್ಲಿ ಹುಟ್ಟಿ ಬೆಳೆದರೆ, ಅವನ ಮಗ ಒಂದನೆ ಇಂದ್ರನು ಕ್ರಿ. ಶ. ಸು. ೬೪೭ರ ಸಂದರ್ಭದಲ್ಲಿ ಉದಯಿಸಿರ ಬೇಕು. ಆಗ ಇಡೀ ಕರ್ನಾಟಕಾಧೀಶ್ವರನೆಂದರೆ ಪುಲಿಕೇಶಿ ಮಹಾರಾಜನ ದ್ವಿತೀಯ ಪುತ್ರನಾದ ಚಾಲುಕ್ಯ ವಂಶದ ಒಂದನೇ ವಿಕ್ರಮಾದಿತ್ಯನು. ಆತನು ಬಾದಾಮಿಯ ಪಟ್ಟವನ್ನೇರಿ ಕ್ರಿ. ಶ. ೬೩೪ರಿಂದ ೬೮೦ರ ವರೆಗೆ ಆಳಿದವನು, ಮೇಲೆ ಸೂಚಿಸಿದ ಒಂದನೆ ಇಂದ್ರನೂ ಆತನ ಮಗ ಒಂದನೆ ಗೋವಿಂದನೂ ಆ ಚಾಲುಕ್ಯ ವಿಕ್ರಮನ ಕಾಲದಲ್ಲಿ ಬಾಳುತ್ತಿದ್ದವರು. ಆ ವಿಕ್ರಮಾದಿತ್ಯನು, ತಂದೆಯಾದ ಪುಲಿಕೇಶಿಯಂತೆಯೇ ಪ್ರಬಲ ಪ್ರತಾಪಿ
* Early History of the Dekkan Printed at Government Central Press 1884. - Page 46.
ಯಾದುದರಿಂದ, ಪರಾಕ್ರಮಿಗಳಾಗಿರಬಹುದಾದರೂ ಮೇಲೆ ಸೂಚಿಸಿದ ಇಂದ್ರ - ಗೋವಿಂದ ರಾಜರಿಗೆ ಅವನನ್ನು ಮೀರಿ ಸ್ವತಂತ್ರಾಧಿಕಾರವನ್ನು ಸ್ಥಾಪಿಸುವುದು ಅಸಾಧ್ಯವಾಗಿರಬೇಕು. ಇಂದ್ರ-ಗೋವಿಂದರಿಬ್ಬರ ಜೀವನ ಕಾಲವು ಸುಮಾರು ಕ್ರಿ. ಶ. ೬೯೭ರ ವರೆಗೆ ಸಾಗಿರಬಹುದು. ಆಗ ಕನ್ನಡ ಚಕ್ರಾಧೀಶನಾಗಿದ್ದ ಅರಸನೆಂದರೆ, ಹಿಂದೆಂದ ಚಾಲುಕ್ಯ ಒಂದನೆ ವಿಕ್ರಮಾದಿತ್ಯನ ಮಗ ವಿನಯಾದಿತ್ಯನು (ಕ್ರಿ. ಶ. ೬೦-೬೯೭), ಹಿಂದೆ ಸೂಚಿಸಿದ ಗೋವಿಂದ ರಾಜನ ಕುಮಾರನು ಒಂದನೆ ಕಕ್ಕರಾಜನು. ಅವನಿಗೇ 'ರಟ್ಟ' ಎಂಬ ನಾಮಾಂತರವೆಂಬುದು ಅದೇ ವಂಶೀಯನೂ ಪ್ರಖ್ಯಾತಿ ಗೊಂಡವನೂ ಆದ ಅಕಾಲವರ್ಷ ಕೃಷ್ಣ (ಕನ್ನರ) ರಾಜನ ಕರಹಾಡ ಶಾಸನದ ಮುಂದಿನ ಹೇಳಿಕೆಯಿಂದ ಸಿದ್ದವಾಗುತ್ತಿದೆ:
**ಕೃತಿಕಲತಿಲಕಸ್ತ್ರದನ್ವಯೇ ಚ ಕ್ಷತರಿಪುದಂತಿ ಘಟೋಜನಿಷ್ಟ ರಟ್ಟಿ : | ತಮನುಚ ಸುತರಾಷ್ಟ್ರಕೂಟನಾಮಾ ಭುವಿ ವಿದಿತೋಜನಿ ರಾಷ್ಟ್ರ
ಕೂಟ ವಂಶಃ 18 (೬) ಭೂತಲಕ್ಕೂ ಅದರಂತೆ ಆ ವಂಶಕ್ಕೂ ತಿಲಕ ಪ್ರಾಯನಾದ ಹಗೆಗಳೆಂಬ ಆನೆಗಳನ್ನು ನಾಶಿಸಿದ ರಟ್ಟನು ಜನಿಸಿದನು. ಅವನ ರಟ್ಟ'ನಾಮವೂ, ವಿಶೇಷ ವಾಗಿ ಅವನ ಮಗ ಇಂದ್ರರಾಜನ (ರಾಷ್ಟ್ರಕೂಟ' ಎಂಬ ಬಿರುದೂ ಆ ವಂಶದ (ರಾಷ್ಟ್ರಕೂಟ' ಎಂಬ ಹೆಸರಿಗೆ ಕಾರಣವಾಯಿತು.
ಇದರಿಂದ, ರಟ್ಟ - ರಾಷ್ಟ್ರಕೂಟರು ತಂದೆಮಕ್ಕಳೆಂಬುದು ವಿದಿತವಾಗು ತಿದೆ. ಈ ರಟ್ಟ - ರಾಷ್ಟ್ರಕೂಟರೆಂಬ ವಿಶಿಷ್ಟ ನಾಮಗಳವರೆಂದರೆ ಬೇರೆ ಯಾರೂ ಅಲ್ಲ; ಕ್ರಮವಾಗಿ ಹಿಂದೆ ಸೂಚಿಸಿದ ಒಂದನ ಗೋವಿಂದನ ಮಗನಾದ ಕಕ್ಕರಾಜನೂ ಮತ್ತು ತತ್ಪುತ್ರನಾದ ಎರಡನೆ ಇಂದ್ರರಾಜನೂ ಎಂಬುದು ಮೇಲೆ ಸೂಚಿಸಿದ ದಂತಿದುರ್ಗನ ಸಾಮನ್‌ಗಡದ ಶಾಸನಾಂಶದಿಂದಲೂ ಗೊತ್ತಾಗುತ್ತಿದೆ. “ಶ್ರೀ ಕಕ್ಕರಾಜ ಇತಿ ಗೋತ್ರಮಣಿರ್ಬಭೂವ” ಎಂದು ಆ ರಟ್ಟನ ಹುಟ್ಟನ್ನೂ, ಮುಂದೆ ಆ ಅಭೂತನೂಜಃ ಸದ್ರಾಷ್ಟಕೂಟ ಕನಕಾದ್ರಿ ರಿವೇಂದ್ರರಾಜಃ” ಎಂದು ಆತನ ಪುತ್ರ ಇಂದ್ರರಾಜನ ಜನನವನ್ನೂ ಸೂಚಿಸಿ ದ್ದಾನೆ. ಆ ಕಾಲದಲ್ಲಿ ಕ್ರಮವಾಗಿ ಬಾದಾಮಿಯ ಪಟ್ಟಾರೂಢರಾಗಿದ್ದ ಚಾಲುಕ್ಯ ರಾಜರೆಂದರೆ, ಹಿಂದೆ ಸೂಚಿಸಿದ ವಿನಯಾದಿತ್ಯನ ಕುಮಾರಕನಾದ
* Collected works of Dr. R. G. Bhandarkar P. 281 A. d. 1927.
ವಿಜಯಾದಿತ್ಯ (ಕ್ರಿ. ಶ. ೬೯೭ ೭೩೩) ಅವನ ಪುತ್ರನಾದ ವಿಕ್ರಮಾದಿತ್ಯ (ಕ್ರಿ. ಶ. ೭೩೩ - ೭೪೭) ಎಂಬವರು, ಬಾದಾಮಿವಂಶದ ಚಲುಕ್ಯರಾಜರೊಳಗಿನ ಆ ರಾಜರಿಬ್ಬರೆಂದರೆ ತಮ್ಮ ಪೂರ್ವಜರಂತೆ ಅತಿ ಪರಾಕ್ರಮಿಗಳೆನ್ನಿಸಿದವರಲ್ಲ. ಆದರೆ ಹಿಂದೆಂದ ಆ ರಟ್ಟ ರಾಷ್ಟ್ರಕೂಟರು ತಮ್ಮ ಪೂರ್ವಜರಿಗಿಂತಲೂ ಅಧಿಕಾಧಿಕವಾಗಿ ಹುರುಪೇರುತ್ತಾ ಬಂದವರು. ಇಂದ್ರರಾಜನು ಚಾಳುಕ್ಯ ನೃಪಾತ್ಮಜೆಯನ್ನು ರಾಕ್ಷಸಿ ವಿವಾಹದಿಂದ ವರಿಸಿದನೆಂದು ಸಂಜನ ಶಾಸನವು ಸಾರುತ್ತಿದೆ:
'ಇಂದ್ರರಾಜಸ್ತತೊಗೃಹಾತ್ ಯಶಾಲುಕ್ಯನೃಪಾತ್ಮಜಾಂ | ರಾಕ್ಸಿನ ವಿವಾಹೇನ ರಣೆ ಖೇಟಕ ಮಂಡಪೇ .i ೭.
ಈ ಹೇಳಿಕೆ, ಹಿಂದೆ ಸೂಚಿಸಿದ ದಂತಿದುರ್ಗನ ಸಾಮನ್ ಗಡದ ಶಾಸನ ದೊಳಗಿನ (ರಾಜ್ ಸೊಮಾನ್ವಯಿ ತಸ್ಯ ಪಿತೃತಪ್ಪ ಸಳುಕ್ಯಜಾ' ಎಂಬ ವ್ಯಕ್ತ ಸೂಚನೆಗೂ ಸರಿಯಾಗುತ್ತಿದೆ. ಆ ಚಾಲುಕ್ಯಪಾಜೆಯಾದ ರಾಣಿಯಲ್ಲಿ ಇಂದ್ರರಾಜನಿಗೆ ಜನಿಸಿದ ವಿತರಕುಮಾರನೇ ಈ ಸಾಮನ್‌ಗಡದ ಶಾಸನವನ್ನು ಬರೆಯಿಸಿದ ದಂತಿಗನು. ಈ ರಾಣಿಯ ಹೆಸರು ನಿರ್ದಿಷ್ಟವಾಗಿಲ್ಲ. ಕಾಲಮಾನ ವನ್ನು ಭಾವಿಸಿದರೆ ಮೇಲೆ ನಿರ್ದೇಶಿಸಿದ ಚಾಲುಕ್ಯರಾಜರೊಳಗೆ ಕಡೆಯವನಾದ ವಿಕ್ರಮಾದಿತ್ಯನ ತಂಗಿಯನ್ನ ಮಗಳನ್ನೋ ಈ ಇಂದ್ರರಾಜನು ರಾಕ್ಷಸೀ ವಿವಾಹದಲ್ಲಿ ವರಿಸಿದುದೆಂದು ಭಾವಿಸಬೇಕು,
ಇದರಿಂದ, ಆ ಎರಡನೆಯ ಇಂದ್ರರಾಜನು, ಆಗಿನ ಚಾಲುಕ್ಕಾಧಿಕಾರ ವನ್ನು ಮಾರಿ ನಡೆಯಲಾರಂಭಿಸಿದುದು ವ್ಯಕ್ತವಾಗುತ್ತಿದೆ. ಅವನ ಮಗನೆ ದಂತಿದುರ್ಗನು. ಆತನು, ಆಗಿನ ಚಾಲುಕ್ಯರಾಜನಾದ, ಹಿಂದೆ ತೋರುವ ವಿಕ್ರಮಾದಿತ್ಯನ ಮಗ ಕೀರ್ತಿವರ್ಮನ (ಕ್ರಿ. ಶ. ೭೪೭ -೭೫೩) ರಾಜ್ಯಾಧಿ ಕಾರವನ್ನು ಸೆಳೆದುಕೊಂಡುದಲ್ಲದೆ ಅವನ ಕುಮಾರಿಯನೂ ವರಿಸಿದನೆಂಬುದು ಗೊತ್ತಾಗಿದೆ. ಹಿಂದೆ ರಾಷ್ಟ್ರಕೂಟ ವಂಶ ಚಿತ್ರವನ್ನು ಕೊಟ್ಟಿದ್ದೇವೆಯಷ್ಟೆ. ಆ ವಂಶದ ಆದಿಯ ವ್ಯಕ್ತಿಗಳಿಗೂ ಚಾಲುಕ್ಯವಂಶದವರಿಗೂ ಇರುವ ಸಂಬಂಧ ಗಳನ್ನು ಇನ್ನಷ್ಟು ವಿಶದವಾಗಿ ಭಾವಿಸಿಕೊಳ್ಳಲೆಂದು ಎರಡನೇ ಪುಲಿಕೇಶಿ ಮೊದ ಲ್ಗೊಂಡು ಕಡೆಯ ಕೀರ್ತಿವರ್ಮನ ಪರ್ಯಂತದ ಬಾದಾಮಿ ಚಾಳುಕ್ಯರ ವಂಶ ಚಿತ್ರವನ್ನೂ ಮುಂದೆ ಅಂಕಿಸುತ್ತೇವೆ:
* Sanjan Platng of Amoghavarsha I Saka Samvat 269 (3: D. 871)
ಬಾದಾಮಿಯ ಚಾಲುಕ್ಯ ವಂಶದ ಕಡೆಯ ಭಾಗ ೧. * ಸತ್ಯಾಶ್ರಯ ಪುಲಿಕೇಶಿ II ಶಾ. ಶ. ೫೩೨-೫೫೬ (ಕ್ರಿ. ಶ. ೬೧೦-೬ ೩೪)
೨. ವಿಕ್ರಮಾದಿತ್ಯ [ ಶಾ. ಶ. ೫೫೬-೬೦೨ (ಕ್ರಿ. ಶ. ೬೩೪-೬ ೮೦)
ತಿ, ವಿನಯಾದಿತ್ಯ ಶಾ. ಶ. ೬೦೨-೬೧೪ (ಕ್ರಿ. ಶ. ೬೮ ೦-೬೯೭)
೪. ವಿಜಯಾದಿತ್ಯ ಶಾ. ಶ. ೬ ೧೯- ೬೫೫ (ಕ್ರಿ. ಶ. ೬೯೭-೭೩೩)
೨. ವಿಕ್ರಮಾದಿತ್ಯ ಶಾ, ಶ. ೬೫೫-೬೬೯ (ಕ್ರಿ. ಶ. ೭೩೩-೭೪೭)
೬. ಕೀರ್ತಿವರ್ಮನ್ ಶಾ. ಶ. ೬೬೯ (ಕ್ರಿ. ಶ. ೭೪೭)
ಮೇಲೆ ಸಂಗ್ರಹವಾಗಿ ಸೂಚಿಸಿದ ರಾಷ್ಟ್ರಕೂಟ ವಂಶದ ಮೂಲ ಪುರುಷ ರೊಳಗೆ ಮೊದಲಿನ ದಂತಿವರ್ಮ ಮೊದಲಾದ ಮೂವರಿಗೆ ರಾಷ್ಟ್ರಕೂಟ ಎಂಬ ಹೆಸರಿನ ಛಾಯೆಯಾದರೂ ಆಗಿನ ಕಾಲದಲ್ಲಿ ಇತ್ತೋ ಇಲ್ಲವೋ ಎಂದು ಸಂಶಯ
ನಾಗುತ್ತಿದೆ. ವಿಂಧ್ಯಾದ್ರಿಯ ರೇವಾ ನದಿಯ ತಟಪ್ರದೇಶ ರಟ್ಟ-ರಾಷ್ಟ್ರಕೂಟರು ಗಳಲಿ ' ಆದಿಯಿಂದಲೂ ಮನೆಮಾಡಿಕೊಂಡು ಹುಟ್ಟು, ಗನ್ನಡಿಗರಾದ ಗೊಲ್ಲರಿದ್ದರೆಂಬುದು ಪ್ರಸಿದ್ದಿಗೊಂಡ ಸಂಗತಿ. ಅದೇ ವಂಶಕ್ಕೆ ಸೇರಿದ, ಕ್ರಮೇಣ ಒಂದಷ್ಟು ಮೇಲೆ ನಡೆದ ರಾಜವಂಶದ ಶಾಖೆಯೊಂದಕ್ಕೆ (ಆಭೀರ ವಂಶ' ಎಂಬ ಹೆಸರಾಗಿತ್ತು. ಈ ರಾಷ್ಟ್ರಕೂಟ ವಂಶದ ಹಿಂದಿನ ವರು ಆ ಆಭೀರ ವಂಶದ ರಾಜರೆಂದೇ ನಮಗೆ ಭಾಸವಾಗುತ್ತಿದೆ. ನಾಲ್ಕನೆ ಯವನಾದ ಕಕ್ಕನಿಗಿದ್ದ ಬಿರುದು ರಟ್ಟ ಎಂದಲ್ಲದೆ ರಾಷ್ಟ್ರಕೂಟ ಎಂದಲ್ಲ. ರಟ್ಟ ಕಕ್ಕೆ) ರಾಜನ ಮಗನಾದ ಇಂದ್ರನನ್ನು ಬಣ್ಣಿಸುವಲ್ಲಿ ಸಾಮನ್ ಗಡದ ಶಾಸನಕಾರನು ಪ್ರಯೋಗಿಸಿದ “ಸದ್ರಾಷ್ಟಕೂಟ ಕನಕಾದ್ರಿವೇಂದ್ರ ರಾಜಃ” ಎಂಬ ಪದವೈಶಿಷ್ಟ್ಯವನ್ನು ಭಾವಿಸಿರಿ. ಇದಕ್ಕೆ ಆ ರಾಷ್ಟ್ರ ಕೂಟ ವಂಶರೂಪದ ಕನಕಾದ್ರಿ (ಮೇರು ಪರ್ವತ) ಯಂತೆ ಇಂದ್ರರಾಜನಿದ್ದನು ಎಂಬ ಅರ್ಥವಾಗು ತಿದೆ. ರಟ್ಟ' ಎಂಬ ದೇಸಿ ಪದವನ್ನೆ : ರಾಷ್ಟ್ರ'ವನ್ನಾಗಿ ಸಂಸ್ಕೃತಕ್ಕೆ ಮಾರ್ಪ ಡಿಸಿಕೊಂಡುದಲ್ಲದೆ, ಅದು ಮೂಲತಃ ಸಂಸ್ಕೃತವಲ್ಲ ಎಂಬುದನ್ನೂ ಮರೆಯ
* Early History of the Dekkan, Printed in Government Contral Press 1884. - Page 46.
- ೧೦ + ಲಾಗದು. ರಟ್ಟರ ಕೂಡು' ಅಥವಾ 'ರಟ್ಟರ ಕೂಡಲ್' (ರಟ್ಟರ ಕೂಟ) ಎಂಬ ಪದವದು ಸಂಸ್ಕೃತೀಕೃತವಾಗಿ ರಾಷ್ಟ್ರಕೂಟ ಎಂದಾಗಿದೆ. ಇದ ರಿಂದ, ಇಂದ್ರರಾಜನು ಬರಿಯ 'ರಾಷ್ಟ್ರಕೂಟ 'ನಷ್ಟೇ ಅಲ್ಲ; ಅಂಥ ಅನೇಕ ಕೂಟ (ಶಿಖರ) ಗಳಿಗಾಶ್ರಯವಾದ ರಾಷ್ಟ್ರಕೂಟ-ಕನಕಾದ್ರಿ ಎಂದಾಗುತ್ತಿದೆ.
ಆ ಇಂದ್ರರಾಜನು ರಟ್ಟರ ಭಿನ್ನ ಭಿನ್ನ ಸೇನಾಸಮುದಾಯಗಳಿಂದ ಕೂಡಿ
ರನು ಎಂದು ತಾತ್ಪರ್ಯ, ಇಂದ್ರನು ದಂತಿದುರ್ಗನ ತಂದೆಯೇ ಆದುದರಿಂದ ಈ ಶಾಸನಕಾರನಿಗೆ ಅವನ ಯೋಗ್ಯತೆ ವಿಶದವಾಗಿ ತಿಳಿದಿರ ಬೇಕು. ಆ ಇಂದ್ರರಾಜನ ತಂದೆ ಬರಿಯ ರಟ್ಟನಾಗಿದ್ದನು; ಮಗನಂತೆ ( ರಾಷ್ಟ್ರಕೂಟ' ಪದವಿಯನ್ನೊಂದಿರಲಿಲ್ಲ. ರಟ್ಟ ಎಂದರೆ ಬಲಿಷ್ಠವಾದ ಬಾಹು ಮೂಲ ಎಂಬರ್ಥವಿದೆ. ಅದಕ್ಕನುವಾಗಿ ರಟ್ಟ ಎಂದರೆ ದಾಂಡಿಗ (ಬಲಿಷ್ಠ) ಎಂಬ ಅರ್ಥವೂ ಒದಗಬಹುದು. ಮಾತ್ರವಲ್ಲ, ಆ ರಟ್ಟ ಪದವು ಲಟ್ಟ ಎಂದೂ ಅಲ್ಲಲ್ಲಿ ಉಪಯುಕ್ತವಾಗಿದೆ. ಈ ಲಟ್ಟರು, ಅಥವಾ ಹಿಂದಣ ರಾಷ್ಟ್ರಕೂಟರು ಮಾನ್ಯ ಖೇಟ ರಾಜಧಾನಿಗಿಂತ ಮೊದಲಿದ್ದುದು ಲಟ್ಟ ಲೂರ ನಗರದಲ್ಲಿ ಎಂದು ಮೊದಲೊಮ್ಮೆ - ಕನ್ನಡ ಪರಿಷತ್ಪತ್ರಿಕೆ'ಯಲ್ಲಿ ಸಾಧಾರವಾಗಿ ಸೂಚಿತವಾಗಿದೆ. ಹೇಗೂ ಇರಲಿ, (ರಟ್ಟ' ಎಂಬ ಪದವೇ ರಾಷ್ಟ್ರಕೂಟ
ಪದಕ್ಕೆ ಆಶ್ರಯವೆಂಬಲ್ಲಿ ಸಂಶಯವಿಲ್ಲ. ಒಂದು ವೇಳೆ ನಿಜವಾಗಿ ರಾಷ್ಟ್ರಕೂಟ ವಂಶವನ್ನು ಸ್ಥಾಪಿಸಿದವನು ದಂತಿದುರ್ಗನೇ ಆಗಿದ್ದಿರಬಹುದಾದರೂ “ರಾಷ್ಟ ಕೂಟ ಕನಕಾದ್ರಿ” ಎಂದು ತನ್ನ ತಂದೆಯಾದ ಇಂದ್ರರಾಜನನ್ನು ಬಣ್ಣಿಸಿದುದು ವೀರ ಕುಮಾರನಾದ ಆ ದಂತಿಗನ ಪಿತೃಭಕ್ತಿಗೆ ತಕ್ಕ ಗುಣವೇ ಸರಿ.
ರಾಷ್ಟ್ರಕೂಟ - ತ್ರಿಮೂರ್ತಿಗಳು
ರಾಷ್ಟ್ರಕೂಟ ಕುಲದ ತ್ರಿಮೂರ್ತಿಗಳೆಂದು ನಾವು ಹೆಸರಿಸುವುದು ಕ್ರಮವಾಗಿ ದಂತಿದುರ್ಗ - ಶುಭತುಂಗ ಕೃಷ್ಣರಾಜ - ನಿರುಪಮ ಧ್ರುವರನ್ನು.
ಹಿಂದೆ ಸೂಚಿಸಿದ ಸಾಮನ್‌ಗಡದ ಶಾಸನದಲ್ಲಿ ಸ್ತ್ರೀಯೋ ದಂತಿದುರ್ಗನೂ
ವಲ್ಲಭಂ ಸಪದಿ ದಂಡಕಲೇನ ಜಿತ್ಸಾ ರಾಜಾಧಿರಾಜ ಅವನ ರಾಜಧಾನಿಯ ಪರಮೇಶ್ವರತಾಮವಾಪ” ಎಂದುತೋರುತ್ತಿದೆ. ಇಲ್ಲಿ
ತೋರುವಂತೆ ದಂತಿದುರ್ಗನು ಗೆದ್ದ 'ವಲ್ಲಭ'ನೆಂದರೆ, ಆ ವರೆಗೆ ಪರಂಪರಾಯಾತ ರೀತಿಗನುವಾಗಿ ಕನ್ನಡದಲ್ಲಿ ರಾಜಾಧಿರಾಜನಾಗಿದ್ದ ಚಾಲುಕ್ಯ ಕೀರ್ತಿವರ್ಮನೇ ಆಗಿದ್ದಿರಬೇಕೆಂದು ಭಾವಿಸಲೇಬೇಕು. ಅವನನ್ನು ಗೆದ್ದುದರಿಂದಲೆ ದಂತಿದುರ್ಗನು ರಾಜಾಧಿರಾಜ ಪರಮೇಶ್ವರ ಎಂಬ ಬಿರುದಿಗೆ ಪಾತ್ರನಾಗಿರಬೇಕು, ಆ ಕೀರ್ತಿವರ್ಮನು ಪಟ್ಟವನ್ನೇರಿದುದು ಕ್ರಿ. ಶ. ೭೪೭ರಲ್ಲಾದರೆ ದಂತಿದುರ್ಗನ ಈ ಶಾಸನ ಕಾಲ ಕ್ರಿ. ಶ. ೭೫೪. ಅದರಿಂದ, ದಂತಿಗನು ಕೀರ್ತಿವರ್ಮನನ್ನು 'ದಂಡ'ದಿಂದ ಗೆದ್ದ ನಿರ್ದಿಷ್ಟ ಸಮಯದ ಗುರಿ ಸರಿಯಾಗಿ ಗೊತ್ತಾಗದಿದ್ದರೂ ಅದು ಪೂರ್ವೋಕ್ತ ಉಭಯ ಕಾಲ ಗಳ ಅಂತರದಲ್ಲಿ ಎಂಬಲ್ಲಿ ಸಂಶಯವಿಲ್ಲ. ತಂದೆಯಾದ ಇಂದ್ರ ರಾಜನು ಚಾಲುಕ್ಯ ರಾಜ ಪುತ್ರಿಯನ್ನು ರಾಕ್ಷಸೀ ವಿವಾಹದಿಂದ ವರಿಸಿದರೆ, ಮಗನಾದ ಈ ದಂತಿಗನು ಜಿತನಾದ ಆ ಚಾಲುಕ್ಯ ಕೀರ್ತಿವರ್ಮನ ಕುಮಾರಿಯನ್ನು ವರಿಸಿದ್ದನೆಂಬುದು ನಿಶ್ಚಿತವಾಗಿದೆ. ಕೀರ್ತಿವರ್ಮನು ಎರಡನೆ ಪುಲಿಕೇಶಿ ಯಿಂದ ಸ್ಥಾಪಿತವಾದ ಬಾದಾಮಿಯ ರಾಜಧಾನಿಯಲ್ಲಾಳುತ್ತಿದ್ದನಷ್ಟೆ. ಗೆದ್ದ ವನಾದರೂ ದಂತಿದುರ್ಗನು, ತನಗೆ ಮಾವನಾದ ಕೀರ್ತಿವರ್ಮನನ್ನು ಆ ರಾಜ ಧಾನಿಯಿಂದ ಹೊರಡಿಸಲಿಲ್ಲ. ಅದು ವೀರಜಾವಾತನ ವಿನಯಕೊಪ್ಪುವ ಗುಣವೇ ಎನ್ನುವ ಮಾತ್ರವಲ್ಲ, ತಂದೆಯಾದ ಇಂದ್ರನು ಚಾಲುಕ್ಯರನ್ನು ವಿರೋಧಿಸುತ್ತಲೆ ಇದ್ದರೆ, ಮಗನಾದ ರಾಜಾಧಿರಾಜ ದಂತಿಗನು ಚಾಲುಕ್ಯರ ಪ್ರೀತಿಯನ್ನು ಬಯಸುತ್ತಿದ್ದನೆಂಬುದು ಇದರಿಂದ ಗೊತ್ತಾಗುತ್ತಿದೆ. ರಾಷ್ಟ್ರ
*Souroos of Karnataka History Page 58.
-
೧೨ -
ಕೂಟ ಮೂರನೆಯ ಕೃಷ್ಣರಾಜನ ನವಸಾರಿ ಶಾಸನದಲ್ಲಿ ಚಾಲುಕ್ಯವಂಶ ಜಲಧೇಃ ಸ್ವಯಮೇವ ಲಕ್ಕಿರ್ಯಃ ಶಂಖಚಕ್ರಕರಲಾಂಛನ ಮಾಜಗಮ” ಎಂಬ ಈ ಶ್ಲೋಕ ಭಾಗವನ್ನು ಪರಾಂಬರಿಸಿರಿ. ಸಮುದ್ರಮಥನಕ್ಕೆ ಪ್ರಮುಖ ಸೂತ್ರಧಾರಿ ಎಂದರೆ ಶ್ರೀ ವಿಷ್ಣುವೇ ಅಲ್ಲವೆ? ಹಾಗೆ ತನ್ನ ತಂದೆಯಾದ
ಸಮುದ್ರರಾಜನನ್ನು ಪರಾಜಿತನನ್ನಾಗಿ ಮಾಡಿದ ಶ್ರೀ ವಿಷ್ಣುವನ್ನು ಲಕ್ಷ್ಮೀ ದೇವಿ ಸ್ವಯಂವರಿಸಿದಳು; ಚಾಲುಕ್ಯವಂತ ಜಲಧಿಯಿಂದುದ್ಭವಿಸಿದ ಆ ಲಕ್ಕಿ ನಾಮಕ ರಾಜಕುಮಾರಿ (ಸ್ವಯಮೇವ ಲಕ್ಷ8) ಶಂಖಚಕ್ರ ಕರ ಲಾಂಛನನಾದ ದಂತಿದುರ್ಗನನ್ನು ಸ್ವಯಂವರಿಸಿದಳು. ಆ ಕುಮಾರಿಯ ಹೆಸರು ಲಕ್ಷ್ಮಿದೇವಿ ಎಂಬುದೊಂದು, ಆ ವಿವಾಹವೆಂದರೆ ಪ್ರೇಮಬದ್ದ ವಾದುದು ಎಂಬುದನೆಂದು, ಹೀಗೆ ಎರಡು ವಿಷಯಗಳು ಈ ಹೇಳಿಕೆಯಿಂದ ಧ್ವನಿತವಾಗುತ್ತಿವೆ. ಅಂತೂ ದಂತಿದುರ್ಗನು ಕೀರ್ತಿವರ್ಮನನ್ನು ಗೆದ್ದು , ತಂದೆಯಂತೆ ರಾಕ್ಷಸೀ ವಿವಾಹಕ್ಕೆ ಕೈನೀಡಿದವನಲ್ಲ. ಅದರಿಂದಲೇ ಮೇಲೆ ಸೂಚಿಸಿದಂತೆ ಕೀರ್ತಿವರ್ಮನಲ್ಲಾ ತನಿಗಿದ್ದ ವಿನಯವೂ ವಿಶದವಾಗುತ್ತಿದೆ. ಆತನ ಸೇನಾಬಲವೆಂದರೆ ನಮ್ಮ ಕನ್ನಡ ಜನಾಂಗಕ್ಕೆ ಕೀರ್ತಿಯನ್ನೊದಗಿಸಿ ದಂತೆ ತೋರುತ್ತಿದೆ. ಅವನದೆ ಆದ ಸಾಮನ” ಗಡ ಶಾಸನದ ಇನ್ನೊಂದು ಶ್ಲೋಕ ಭಾಗವಹಿಸಿರಿ:
“ಕಾಂಚೀಶ ಕೆರಳನರಾಧಿಪ ಚೋಳ ವಾಂಡ್ಯ ಶ್ರೀ ಹರ್ಷವಜ್ರಟವಿಭೇದ ವಿಧಾನದಕ್ಷ | ಕರ್ಣಾಟಕ೦ಬಲನಚಿಂತ್ಯ ಮರ್ಜೆಯಮ . . . ”
ಈ ದಂತಿದುರ್ಗಸಿಂದ ಸ್ಥಾಪಿತವಾದ ಕರ್ಣಾಟಕ೦ಬಲ' ವು ಹಗೆಗಳ ಭಾವನೆಗೆ ಮಾರಿದ.ದೂ ಗಣಕರ ಲೆಕ್ಕಕ್ಕೆ ಸಿಕ್ಕದುದೂ ಆಗಿತ್ತಂತೆ. ಈ ಬಲದಿಂದಲೇ ಆತನು ಕಾಂಚಿ ಕೇರಳ ಚೋಳ ಪಾಂಡ್ಯರೆಂಬ ದಕ್ಷಿಣ ರಾಜ ರನೂ, ಶ್ರೀ ಹರ್ಷವಜ್ರಟರೆಂಬ ಔತ್ತರೇಯರನ್ನೂ ಸಂಪುಟದೊಳಗಿಟ್ಟುದಂತೆ. ಈ ಶಾಸನದಲ್ಲಿ ದಂತಿದುರ್ಗನ ದಕ್ಷಿಣದೇಶ ವಿಜಯವೇನೋ ಸೂಚಿತವಾಗು ತಿದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ವಿಶಿಷ್ಟಾರ್ಥದಾಯಕವಾಗಿ, ಮೇಲೆ ಸೂಚಿಸಿದ ರಾ. ಕೂಟ ಕೃಷ್ಣನ (ಕನ್ನರನ) ನವಸಾರಿಯ ಶಾಸನ ಭಾಗದಲ್ಲಿ
ಇದೇ ಸಂಗತಿ ನಿರ್ದಿಷ್ಟವಾಗಿದೆ:
* Collected works of Sir R. G. Bhandarkar Vol III Page 322 A, D. 1927.
ಕೃತ್ಯಾಗ್ರದಂ ಹೃದಯಹಾರಿ ಜಘನ್ಯದೇಶೇ ಸೈರಂ ಪುನನ್ನದು ವಿಮರ್ದಚ ಮಧ್ಯದೇಶ : ಯಸ್ಯಾ ಸಮಸ್ಯ ಸಮರೆ: ವಸುಧಾಂಗ ನಾಯಾಃ ಕಾಂಚಿ: ಪದೇ ಪದನಕಾರಿ ಕರೆಣ ಭಯಃ :
ಇಲ್ಲಿ, ಭೂಮಿಯನ್ನೇ ನಾಯಿಕೆಯನ್ನಾಗಿಯ ದಂತಿದುರ್ಗನನ್ನೇ ನಾಯಕನನ್ನಾಗಿಯೂ ಮಾರ್ಪಡಿಸಿಕೊಂಡು ಶಾಸನಕವಿ.ಎಸಗಿದ ಕೃತಕ ಶೃಂಗಾರ ವರ್ಣನೆ ಚಾರಿತ್ರಿಕ ವಿಮರ್ಶಕರಿಗೆ ಅನಾವಶ್ಯಕ. ಆದರೆ ಆ ವರ್ಣನೆಗೂ ಸರಿಯಾಗುವಂತೆ ಇಲ್ಲಿ ಸೂಚಿಸಿದ, ವಸುಧಾ೦ಗನೆಯನ್ನೂಂದಿ ಉಪಯುಕ್ತ ಗಳಾದ ಜಘನ್ಯದೇಶ - ಮಧ್ಯದೇಶ - ಕಾಂಚಿಪದ ಎಂಬ ಪದಗಳ ಅರ್ಥವನ್ನು ವಿಮರ್ಶಕರು ಪರಾಂಬರಿಸಿ ನೋಡಲೇಬೇಕು ಎಂದು ನಮ್ಮ ಸೂಚನೆ. ದಂತಿ ದುರ್ಗನು ತನ್ನ ಹೃದಯವನ್ನು ಸೆಳೆವ ವಸುಧಾಂಗನೆಯ *ಜಘನ ದೇಶದಲ್ಲಿ ನೆಲೆಗೊಂಡನಂತೆ. ಅದಕ್ಕಿಂತ ಒಂದಿಷ್ಟು ಮೇಲಣ, ಅಥವಾ ಉತ್ತರದ + ಮಧ್ಯದೇಶದಲ್ಲಿ ಯಥೇಚ್ಛವಾಗಿಯಾದರೂ ಮೆದುವಾಗಿ ಮರ್ದಿಸಿದನಂತೆ. ಆ ಮೇಲೆ, ಆ ವಸುಧಾಂಗನೆಯ • ಕಾಂಚೀಪದಲ್ಲಿ ಮಾಡಿದನಂತೆ. ಕವಿಯ ಶೃಂಗಾರ ವರ್ಣನೆಯನ್ನು ಬಿಟ್ಟು ಬಿಡುವ; ಆತನ ದಿಗ್ವಿಜಯ ಪ್ರದೇಶಗಳನ್ನೂ, ಈ ವರೆಗೆ ಚಾರಿತ್ರಿಕರಿಗೆ ಮರೆಯಾಗಿದ್ದ ಆಗಿನ ರಾಷ್ಟ್ರಕೂಟ ರಾಜಧಾನಿ ಯಾವುದು ಎಂಬುದನ, ಇಲ್ಲಿ ಒಂದಿಷ್ಟು ವಿವೇಚಿಸಲಾಗು ವುದೊ ನೋಡುವ, ವಿಜಯ ಪ್ರದೇಶಗಳೊಳಗಿನ ಮಧದೇಶ ಎಂದರೆ ವಿಂಧ್ಯಾದುತ್ತರ ಭಾಗವೆಂದೂ, ಕಾಂಚೀಪದ :Jಂದರ ತಮಿಳುನಾಡಿನೊಳಗಿನ ದೆಂದೂ ಮೇಲಿನಿಂದಲೇ ನಿಶದವಾಗುತ್ತಿದೆಯಷೆ. ಆದರೆ, ಅವನು ತನಗೆ (ಆಸ್ಪದ'ವಾಗಿ ಅಥವಾ ರಾಜಧಾನಿಯಾಗಿ ಮಾಡಿಕೊಂಡ ಆ ಭೂಭಾಗವಿದ್ದ (ಜಘನ್ಯದೇಶ' ಎಂದರೆ ಯಾವುದು? ಎಂಬುದನ್ನು ಪರಾಂಬರಿಸುವ.
- ಜಘನದೇಶ ಎಂದರೆ ಮಧ್ಯ ಭಾಗದಿಂದ ಒಂದಿಷ್ಟು ಕೆಳಗಿನ ಜಘನ
* ಜಘನ್ಯದೇಶ = (೧) ಪುರಾತನ ಕಾಲದ ಆರ್ಯುರಿ೦ದ ನೀಚ ದೇಶವಾಗಿ ಭಾವಿಸಲ್ಪಡುತ್ತಿದ್ದ ವಿಂಧ್ಯಾ ದ ಕೀಣ ಭಾಗದ ದೇಶ, (೨) ನಿತ೦ಬ ಸ೦ಬದ್ದವಾದ ಸ್ಥಾನ.
+ ಮಧ್ಯದೇಶ - (೧) ಹಿಮವದ್ ವಿಂಧ್ಯಗಳ ಮಧ್ಯ ಭಾಗ. (೨) ಶರೀರ ಮಧ್ಯಭಾಗ.
• ಕಾಂಚೀಪದ = (೧) ದ್ರಾವಿಡ ದೇಶಗತವಾದ ಕಾಂಚೀದೇಶ (೨) ಮೇಖಲೆ ಅಥವಾ ಡಾಬಿಗೆ ಆಶ್ರಯವಾದ ಸೊಂಟ.
-
೧೪ -
ಅಥವಾ ನಿತಂಬ ಪ್ರದೇಶವೆಂಬ ಅರ್ಥವು. ನಿತಂಬ ಎಂದರೆ ಪರ್ವತದ ತಪ್ಪಲು ಎಂದೂ ಅರ್ಥವಿದೆ. ಆದ್ದರಿಂದ ವಿಂಧ್ಯಾದ್ರಿಯ ತಪ್ಪಲನ್ನೆ ಮನಸ್ಸಿ ನಲ್ಲಿರಿಸಿಕೊಂಡು ಶಾಸನ ಕವಿ ಹಾಗೆ ಬರೆದಿರಬೇಕು. ಈ ಸಂದರ್ಭದಲ್ಲಿ (ಜಘನ್ಯದೇಶೀ' ಎಂಬುದಕ್ಕೆ ಬದಲಾಗಿ *ನಿತಂಬದೇಶೀ' ಎಂದು ಮಾರ್ಪಡಿಸು ತಿದ್ದರೆ ಇನ್ನಷ್ಟು ವಿಶದವಾಗಿ ಉಭಯಾರ್ಥಗಳೂ ಭಾಸವಾಗುತ್ತಿದ್ದು ವಲ್ಲವೇ ಎಂದು ಕೇಳಬಹುದು. ಹೌದು; ಆದರೆ ಪೌರಾಣಿಕ ರೂಢಿಗನುವಾಗಿ ಬಂದ, ವಿಂಧ್ಯದಿಂದ ತೆಂಕಣ ಭಾಗವು ಮೈಚ (ಜಘನ್ಯ ಪ್ರದೇಶ ಎಂಬ ಭಾವನೆ ಆ “ನಿತಂಬ” ಪದದಿಂದ ಒದಗಲಾರದು. ಈ ಶಾಸನ ಕಾಲವೆಂದರೆ ಪೌರಾಣಿಕ ವಿಚಾರಕ್ಕೆ ಹೆಚ್ಚಿನ ಪ್ರವಣತೆಯನ್ನೀಯುತ್ತಿದ್ದ ಕಾಲವಲ್ಲವೆ? ಅದರಿಂದಲೇ ಕವಿ ಆ ಜಘನ ಪದವನ್ನೇ ಉಪಯೋಗಿಸಿರಬೇಕು. ಈ ವಿವೇಚನೆ ಗನುವಾಗಿ ಪರಾಂಬರಿಸಿದಲ್ಲಿ ಕೃತಾಸ್ವದಂ ಹೃದಯಹಾರಿಜಜಘನ್ಯದೇಶೇ” ಎಂಬ ಭಾಗಕ್ಕೆ ದಂತಿದುರ್ಗನ ಆಳಿಕೆಗೆ ಆಸ್ಪದವಾದ ರಾಜಧಾನಿ, ವಿಂಧ್ಯಾದ್ರಿಯ ತಪ್ಪಲಿನಲ್ಲೇ ಇದ್ದಿರಬೇಕೆಂದು ತೋರುತ್ತಿದೆ. ಅಷ್ಟೇ ಅಲ್ಲ; ಹಿಂದೆ ಸೂಚಿಸಿದ ದಂತಿದುರ್ಗನ ಸಾಮನ್‌ಗಡದ ಶಾಸನದೊಳಗಿನ ಇನ್ನೊಂದು ಶ್ಲೋಕ ವಕ್ಷಿಸಿರಿ:
+ಮಹೀ ಮಹಾನದೀರೇವಾರೋಥೋ ಭಿತ್ತಿವಿದಾರಣಂ | ಲೋಕಾ ವಿಲೋಕಯಂತ್ಯುಚ್ಚೆ: ಕೃತಯಜ್ಜಯಕುಂಜರೈ: !!
ದಂತಿದುರ್ಗನ ವಿಜಯ ಯಾತ್ರಾವಸರದಲ್ಲಿ ದಂತಿಗಳಿಂದ ಮಾಡಲ್ಪಡುವ ಜಲ ಕ್ರೀಡೆಯನ್ನು ಬಣ್ಣಿಸುವ ಶ್ಲೋಕವಿದು. ಇಲ್ಲಿ ತೋರುವ ಮಹೀ-ಮಹಾ ನದೀ - ರೇವಾ (ನರ್ಮದಾ ನದಿ) ಎಂಬವುಗಳೊಳಗೆ ಮೊದಲಿನದು ಮಾಳವ ದೇಶದ ಪ್ರಾಂತಕ್ಕೆ ಹೊದ್ದಿಕೆಯಾಗಿ ಉಳಿದುವು ಒಂದಿಷ್ಟು ಮೂಡಣ ಪ್ರಾಂತಕ್ಕೆ ಸೇರಿ, ವಿಂಧ್ಯಪರ್ವತದ ಸಾಲಿನಿಂದಲೇ ಉಕ್ಕಿ ಹರಿವವುಗಳು ಎಂಬುದನ್ನು ಮರೆಯಬಾರದು. ಆ ಮೇಲೆಯೇ ಅವನು (ಚಾಲುಕ್ಯ) ವಲ್ಲಭನನ್ನು ಜಯಿಸಿ (ರಾಜಾಧಿರಾಜ ಪರಮೇಶ್ವರ' ಎಂಬ ಬಿರುದನ್ನು ಪಡೆದಂತೆ ವರ್ಣಿತ ವಾದುದು. ವಿಂಧ್ಯಾದ್ರಿಯ ನಿತಂಬ ಪ್ರದೇಶದಲ್ಲಿದ್ದ ತನ್ನ ರಾಜಧಾನಿಯಿಂದ ಸೇನಾಸಮೇತನಾಗಿ ಹೊರಟು ಚಾಲುಕ್ಯ ಕೀರ್ತಿವರ್ಮನ ಬಾದಾಮಿ ರಾಜ
*ನಿತಂಬ - (೧) ಪರ್ವತದ ತಪ್ಪಲು (೨) ಉಬ್ಬಿದ ನಿತಂಬ ಭಾಗ, +sources of Karnataka History Page 57
ಧಾನಿಯತ್ತ ಹರಿವಲ್ಲಿ ಈ ನದಿಗಳನ್ನು ದಾಟಿಕೊಂಡೇ ಬರಬೇಕಾಗುತ್ತಿದೆ ಎಂಬು ದನ್ನು ಭಾವಿಸಿಕೊಳ್ಳಬೇಕು. ಮಾನ್ಯ ಖೇಟಕ್ಕಿಂತ ಹಿಂದಿನ ರಾಷ್ಟ್ರ ಕೂಟರ ರಾಜ ಧಾನಿಯಾವುದಾಗಿತ್ತು ಎಂಬುದರ ವಿವೇಚನೆ ಇಷ್ಟರಿಂದಲೆ ನಿರ್ಧಾರವಾಗು ವಂತಿಲ್ಲ. ಆದರೆ ಅದರ ಗುರಿಯನ್ನು ಸರಿಯಾಗಿ ಮುಂದೆ ಕಂಡುಹಿಡಿ ಯುವುದಕ್ಕೆ ಇದೊಂದು ಪೀಠಿಕೆ ಎಂದು ಮಾತ್ರವೆ ಭಾವಿಸಬೇಕು.
- ದಂತಿದುರ್ಗನು ಕ್ರಿ. ಶ. ೭೫೪ರ ವರೆಗೆ ಆಳುತ್ತಿದ್ದುದು ಅದೇ ವರ್ಷ ದಲ್ಲಿ ನೆಲೆಗೊಂಡ ಅವನ ಸಾಮನ್‌ಗಡದ ಶಾಸನದಿಂದ ತಿಳಿದುಬರುತ್ತಿದೆ.
ಆದರೆ ಅವನು ಸ್ವರ್ಗ೦ಗತನಾದ, ಮತ್ತು ಶುಭತುಂಗ ಅಕಾಲವರ್ಷ
* ಕೃಷ್ಣರಾಜನು ಪಟ್ಟವನ್ನೇರಿದ ನಿರ್ದಿಷ್ಟ ಕಾಲವಾವುದು ಕೃಷ್ಣರಾಜ
* ಎಂದು ಇನ್ನೂ ಗೊತ್ತಾಗಿಲ್ಲ. ಅದರಂತೆ, ಶುಭತುಂಗ ಕೃಷ್ಣನು ಆಳಿದ ಕಾಲಾವಧಿಯೂ ವಿಶದವಾಗಲಿಲ್ಲ. ಆದರೆ ಶುಭತುಂಗ ಕೃಷ್ಣನು ದಂತಿದುರ್ಗನ ಮಗನಲ್ಲ, ಸಹೋದರನೂ ಅಲ್ಲ. ಅವನ ಚಿಕ್ಕಪ್ಪ ನೆಂಬುದು ಮೇಲೆ ಕಾಣಿಸಿದ ನವಸಾರಿಯ ಶಾಸನಭಾಗದಿಂದ ವ್ಯಕ್ತವಾಗಿದೆ. “ತತ್ರಾಭವತ್ ಪರಮಧಾಮಿ ಪದೇ ಪಿತ್ರವ್ಯ: ಶ್ರೀ ಕೃಷ್ಣ ರಾಜನೃಪತಿ;” ಎಂಬುದೇ ಶಾಸನಾಂಶವು. (ಪಿತೃವಃ' ಎಂದರೆ ಚಿಕ್ಕಪ್ಪ ಎಂಬಲ್ಲಿ ಸಂದೇಹವಿಲ್ಲವಷ್ಟೆ
ಈ ಕೃಷ್ಣರಾಜನೆಂದರೆ ಹಿಂದೆ ತೋರುವ ಕರ್ಕ (ರಟ್ಟ)ರಾಜನ ಎರಡನೆಯ ಮಗನು; ದಂತಿದುರ್ಗನ ತಂದೆಯಾದ ಇಂದ್ರರಾಜನ ತಮ್ಮನು ಎಂದು ಸೂಚಿತವಾಗುತ್ತಿದೆ. ಇದರಿಂದ ದಂತಿದುರ್ಗನಿಗೆ ರಾಜ್ಯಭಾರ ಸಮರ್ಥ
ನಾಗಿದ್ದ ಮಗನಾಗಲಿ ಸೋದರನಾಗಲಿ ಇದ್ದಿಲ್ಲವೆಂದೂ ಭಾಸವಾಗುತ್ತಿದೆ.
ಇಂಥ ಉಚ್ಛಾಧಿಕಾರ ಪ್ರಾಪ್ತಿಯ ಸಂದಿನಲ್ಲಿ ಕೆಲಕೆಲ ಸಂಚುಹೊಂಚು ಗಳ ಒಳಗೈಯ ಸುಳಿದಾಟವಾಗುವುದುಂಟಷ್ಟೆ, ಅವುಗಳ ಬಲದಿಂದ ದಂತಿ ದುರ್ಗನ ಮಗನೇ ಮೊದಲಾದವರ ಅಧಿಕಾರಕ್ಕೆ ತಿಲಾಂಜಲಿ ಒದಗಿರಬಹುದೇ ಎಂದು ಕೆಲವರು ಊಹಿಸಿದುದುಂಟು. ಆದರೆ ಅದು ಸಂಶೋಧನಸಾರ ಎಂದು ನಮಗೆ ತೋರುವುದಿಲ್ಲ. ಶುಭತುಂಗ ಕೃಷ್ಣನ ಪ್ರತಾಪದ ಮೇಲೆ ಹಾಗಿರಲಿ; ದೈವಭಕ್ತಿ ವ್ಯಾವಹಾರಿಕ ಮಾರ್ಗ, ಇವೆಲ್ಲವೂ ಅವನ ನಡವಳಿ ಯಲ್ಲಿ ಅಜ್ಯೋತಿ ಲೋಕವನ್ನು ಆಕರ್ಷಿಸಿದ ಧಾರ್ಮಿಕ ಕ್ರಿಯಾಕಲಾಪಗಳು ಅಂಥ ಸಂಶಯವನೆಲ್ಲ ತೊಳೆದು ಒರಸಿ ಬಿಡುತ್ತಿವೆ, ಏಲೂರು ಅಲ್ಲವೆ ಏಲಾಪುರ ಎಂಬುದು ಕನ್ನಡಿಗರ ಶಿಲ್ಪಕಲಾಮಹಿಮೆಗೆ - ವಿಶೇಷವಾಗಿ ಈ
-
೧೬
-
ಶುಭತುಂಗನ ಭಕ್ತಿ ಶೀಲಗಳಿಗೆ - ಆದರ್ಶವೆನ್ನಿಸಿ ಇಂದಿಗೂ ಹೊಳೆಯುತ್ತಿದೆ. ಅಲ್ಲಿ ಒಂದೇ ಬಂಡೆಗಲ್ಲಿನಲ್ಲಿ ಕೊರೆದ ಕೈಲಾಸ ಎಂಬ ದೇವಾಲಯವನ್ನು ಈ ಮಹಾರಾಜನೇ ಕಟ್ಟಿಸಿದಾತನು. ರಚನಾನಂತರದಲ್ಲಿ ಆ ದೇವಾಲಯದ ಗೈಮೆಯ ಜಾಣ್ನೆ ಚೆಲುವಿನ ಮೇಲ್ಮ- ಸೋಂಪು ಗುಂಪುಗಳ ಬಲೆಗಳನ್ನು ಪರಾಂಬರಿಸಿದ ಪ್ರಮುಖ ಶಿಲ್ಪಿಯೇ ಬೆರಗಾಗಿ ಹೋದನಂತೆ. ಆ ಶುಭತುಂಗನ ಪ್ರತಾಪವನ್ನೆಲ್ಲ ನಾವಿಲ್ಲಿ ವಿಸ್ತರಿಸುವುದಿಲ್ಲ. ಆತನ ರಾಜಧಾನಿ ಎಲ್ಲಿ ಇದ್ದಿರ ಬೇಕು ಎಂಬುದು ಇನ ಗೊತ್ತಾಗಲಿಲ್ಲ. ಮೇಲೆ ಸೂಚಿಸಿ ದೇವಾಲಯಕ್ಕೆ ಆಸರೆಯಾದ ಏಲೋರವು, ಹಿಂದೆ ಕಾಣಿಸಿದ ಲಟ್ಟರೆಂಬ ಲ್ಲಿಗೆ ಅನತಿ ದೂರದಲ್ಲಿರುವಂತೆ ತಿಳಿದುಬರುತ್ತಿದೆ. ಶುಭತುಂಗನು ಸುಮಾರು *ಕ್ರಿ. ಶ. ೭೭೨ ಕ್ಕಿಂತ ಮೇಲೆ ರಾಜ್ಯವನ್ನಾಳುತ್ತಿದ್ದಂತೆ ಗೊತ್ತಾಗಿದೆ.
ಅಕಾಲವರ್ಷ ಶುಭತುಂಗ ಕೃಷ್ಣನಿಗೆ ಗೋವಿಂದ ಧುವರೆಂಬ ಇಬ್ಬರು ಕುಮಾರಕದ ರು. ಹಿರಿಯನಾದ ಎರಡನೆ ಗೋವಿಂದನ ಆಳಿಕೆಯ ಮೊದಲಾದ ಚಾರಿತಿ ಕ ವಿಚಾರಗಳೆಲ್ಲ ಅಲ್ಲಿಂದಲ್ಲಿಗೆ ಸಂಪುಟದೊಳಗೇ ಅಣಗಿಸಿ
ಬಿಟ್ಟಂತೆ ತೋರುತ್ತಿವೆ. ಹೇಗೂ ಇರಲಿ, ತಂದೆಯ ಧ್ರುವ-ನಿರುಪನು ಅನಂತರ ಕ ವದಂತೆ ಎರಡನೆ ಗೋವಿಂದನೆ ಪಟ್ಟವನ್ನೇ ರಿರಬೇಕು. ಆ ಮೇಲೆ ಅಣ್ಣ ತಮ್ಮಂದಿರ ಒಳಗನಲು ಹೊರಜಗಳವಾಗಿ ಮಾರ್ಪಟು, ಧ್ರುವನು ಪಟಾ ಫರೂಢನಾದಂತಿ ಆ ಧುವನ ಹಿರಿಯ ಮಗನಾದ (ಕಂಬದೇವನ' ಬಾದನಗುಪ್ಪೆಯ ಶಾಸನಭಾಗದಿಂದ ತಿಳಿದುಬರುತ್ತಿದೆ:
+ “ಚೈಟ್ರೋಲ್ಲಂಘನ ಜಾತಾಸ್ಯಮಲಯಾ ಲಕ್ವಾ ಸಮೇತೋಪಿ ಸನ್ ಯೋ ಭೂರ್ಮಲ ಮಂಡಲ ಸ್ಥಿತಿಯು ದೋಷಾ ಕರೋನಕ್ಕ ಚಿರ್ತ ”
* Collected works of R. G. Bhandarkar P. 89 & The Rashtra kutas & their times 9 45.
+Sources of Karnataka History 7. 62. - ಲಕ್ಷ್ಮಿ ದೇವಿ ತನ್ನ ಅಕ್ಕನಾದ ಜೈಪೈ (ದಾರಿದ ಲಕ್ಷ್ಮಿಯನ್ನು ಉಲ್ಲಂಘಿಸಿ ದಾಕೆಯಾದರೂ ನಿರ್ಮಲ ಸ್ವಭಾವದಾಕೆ. ಈ ಧು ವನು ಜೈಷ್ಣನನ್ನು ಉಲ್ಲಂಘಿಸಿ ದರೂ ನಿರ್ಮಲ ಲಕ್ಷ್ಮೀ ಸಮೇತನು, ಮತ್ತು ನಿರ್ಮಲ ಮಂಡಲ (೧. ಮಂಡಲ = ಸಾಮಂತಮಂಡಲ; ೨. ಮಂಡಲ - ಚಂದ್ರಬಿಂಬ) ನಾದರೂ ದೋಷಾಕರ (೧. ದೋಷಯುತನು; ೨. ರಾತ್ರಿಯಲ್ಲಿ ಕಿರಣವುಳ್ಳ ಚಂದ್ರ.)
ಶ್ಲೇಷಾಲಂಕಾರರಂಜಿತವಾದ ಪದ್ಯವಿದು ಧ್ರುವನು ತನ್ನ ಜೈಷ್ಠ (ಅಣ್ಣ) ನಾದ ಗೋವಿಂದನನ್ನು ಉಲ್ಲಂಘಿಸಿದಾತನು ಎಂಬುದನ್ನು ಸೂಚಿಸುತ್ತಿದೆ. ಅಣ್ಣನನ್ನು ಹಾಗೆ ತಳ್ಳಿದುದು ನಿರುಪಮನ ಕೀರ್ತಿಗೆ ಕಳಂಕವಲ್ಲ ಎಂದು ಆ ಕಾಲದ ಶಾಸನಕಾರರು ವರ್ಣಿಸಿದರೂ ಈಗಿನ ಸಹೃದಯರು ಅದಕ್ಕೆ ಅಸ್ತುಗೊಡುವರೋ ಎಂಬಲ್ಲಿ ಸಂಶಯವಾಗುವುದು. ಆದರೆ, ಆ ರಾಜ ಕುಮಾರರಿಬ್ಬರ ತಂದೆಯಾದ ಶುಭತುಂಗನು ಕೀರ್ತಿಶೇಷನಾದ ಸಮಯವದು. ಆ ವರೆಗೆ ರಾಷ್ಟ್ರಕೂಟರಿಂದ ಸೋತು ಸುಣ್ಣವಾದುದರಿಂದ ತಮಗೆ ಅನುಕೂಲ ಸಮಯದ ಛಿದ್ರವನ್ನು ಪ್ರತೀಕ್ಷಿಸುತ್ತಲೇ ಇದ್ದ ಚಾಳುಕ್ಯ ವಂಶೀಯರೇ ಮೊದಲಾದ ಮಾಂಡಳಿಕರು ಮೆಲ್ಲನೆ ಪ್ರಯೋಗಿಸುತ್ತಿದ್ದ ತಂತ್ರಕ್ಕೆ ಧುವನ ಅಣ ನಾದ ಗೋವಿಂದನು ಸಿಲುಕಿರಲೂಬಹುದು. ಅದನ್ನು ಪರಾಂಬರಿಸಿದ ಧ್ರುವನು ಅಣ್ಣನನ್ನು ಉಲ್ಲಂಘಿಸಿದುದಾಗಿರಲೂಬಹುದು. ಇರಲಿ, ಧ್ರುವನ ಸಮರಾಂಗಣಸಾಹಸವೆಂಬುದು ಶಾಸನ ಪ್ರಸಿದ್ಧವಾದ ಸಂಗತಿ. ಅವನು ವಿಂಧ್ಯಾದ ಕಿಣದ ಅನೇಕಾನೇಕ ಪ್ರಾಂತಗಳ ಅರಸರನ್ನು ಗದ್ದುದಷ್ಟೇ ಅಲ್ಲ; ಉತ್ತರದ ರಾಜರೊಳಗೆ ಹಲವರನ್ನು ಸೋಲಿಸಿದನು; *ಗೌಡರಾಜ್ಯ – ವತ್ವ ರಾಜ್ಯ – ಮರು - ಮಧ್ಯದೇಶಗಳನ್ನು ಜಯಿಸಿದನೆಂಬುದೂ ವಿಸ್ತ್ರತವಾಗಿದೆ.
ನಿರುಪಮಧ್ರುವನು ಅಂಥ ಅಪ್ರತಿ ಪರಾಕ್ರಮಿ, ವಿಂಧ್ಯಾಚಲದ ದಕ್ಷಿ ಣೋತ್ತರ ಭೂಭಾಗಗಳನ್ನು ತನ್ನ ದಾಳಿಯಿಂದ ನಡುಗಿಸಿದಾತನು, ಎಂಬದನ್ನು ಒಪ್ಪಿಕೊಳ್ಳುವ, ಅದರಿಂದ ಹಿಂದೆ ಸೋತು ಸೊರಗಿ ಹೋಗಿದ್ದ ಚಾಲುಕ್ಯ ವಂಶದವರೋಳಗೆ ಒಬ್ರನಾದ ಒಂದನೆ ಅರಿಕೇಸರಿ ಆತನನ್ನು ಹೇಗೆ ಅತಿಕ್ರಮಿಸಿ ದನು? ಈ ಸಂಗತಿ ಪಂಪಭಾರತದ ಪ್ರಥಮಾಶ್ವಾಸದಲ್ಲಿ ಹೀಗೆ ನಿರೂಪಿತವಾಗಿದೆ:
ನಿರುಪಮದೇವನ ರಾಜ್ಯದೊ ಳರಿಕೇಸರಿ ವೆಂಗಿವಿಷಯಮಂತ್ರಿ ಕಳಿಂಗಂ : ಬೆರಸೊತ್ತಿಕೊಂಡು ಗರ್ವದೆ ಬರೆಯಿಸಿದಂ ಪೆಸರನಖಿಳದಿಗ್ವಿತಿಗಳೊಳ್ || ೨೦ !! ಆ ೧.
ಈ ನಿರುಪಮದೇವನೆಂದರೆ ರಾ. ಕೂಟ ಧ್ರುವನೇ ಎಂಬುದನ್ನು ಆ ರಾಜರೊಳಗಿನ ಕಾಲಮಾನಾದಿಗಳನ್ನು ಪರಾಮರ್ಶಿಸಿ ಕೈ. ವಾ. ಶ್ರೀ. ಕೆ. ಬಿ.
* Badanaguppo Granto of Kambadova - Sources of Karnataka History P, 62.
ಪಾಠಕರೇ ಮೊದಲಾದ ವಿದ್ವಾಂಸರು ಒಪ್ಪಿದ್ದಾರೆ. ಈ ಸಂಗತಿ ವಾಸ್ತವವೇ ಎನ್ನುವ. ಆದರೂ ಇದು ಧುವನ ನಿರುಪಮತಾಭಂಗವನ್ನೊದಗಿಸಲಾರದು. ಆತನು ತಂದೆಯ ಮರಣಾನಂತರ ಅಣ್ಣನ ಹಗೆತನಕ್ಕೂ ಆಸ್ಪದನಾಗಿ ರಾಷ್ಟ್ರ ಕೂಟ ರಾಜ್ಯವನ್ನು ಹರಡಿಸುತಿದ್ದ ಕಾಲವದು. ಒಂದೆಡೆ ಹೋಲಿನಲ್ಲಿ ಇನ್ನೊಂದೆಡೆ ಹರಿದುಹೋಗುವ ಅವಸ್ತೆ ಹಳೆಯ ಬಟ್ಟೆಗೂ ಚಕ್ರಾಧಿಪತ್ಯಕ್ಕೂ ತಪ್ಪಿದುದಲ್ಲ. ಜಾಣನಾಗಿದ್ದ ಒಂದನೆ ಅರಿಕೇಸರಿ, ಈ ಧ್ರುವನ ಅಣ್ಣನಾದ ಗೋವಿಂದನ ನೆರವನ್ನು ಪಡೆದುಕೊಂಡಿರಲೂಬಹುದು; ಅಂತೂ ಸೆರೆ ನೋಡಿ ಉಳಿಹೊಡೆದು ಎಂದರೆ - ಧ್ರುವನು ನಾನಾ ಕಾರ್ಯಗಳಲ್ಲಿ ಪ್ರವೃತ್ತನಾಗಿರ ಬೇಕಾದ ಸಂದರ್ಭವನ್ನರಿತು, ಅವನು ಸ್ವಕಾರ್ಯವನ್ನು ಸಾಧಿಸಿಕೊಂಡಿರ ಬಹುದು. ಆ ಸದ್ಯದಲ್ಲಿ ಹೊಳೆಯುವ ಭಾವನೆಯನ್ನು ಪರಿಶೀಲಿಸಿರಿ: “ವೆಂಗಿ ವಿಷಯಮಂ. . . . ಒತ್ತಿಕೊಂಡು” ಎಂದಲ್ಲವೆ ಆ ಮಾತಿನ ಮಟ್ಟ ? ಅವನು ನಿರುಪಮ ದೇವನ ರಾಜ್ಯದೊಳಗಿನ ಆ ವಿಶಿಷ್ಟ ಭಾಗವನ್ನು ಒತ್ತಿಕೊಂಡು ದಲ್ಲದೆ, ಆ ಮಹಾಪ್ರತಾಪಿಯನ್ನು ರಣರಂಗದಲ್ಲಿ ಇದಿರಿಸಿ ಗೆದ್ದು ಆಕ್ರಮಿಸಿದು ದಲ್ಲ, ನಡೆವಾತನು ಎಡಹುವಂತೆ, ವೀರನಾದವನಿಗೆ ಈ ಬಗೆಯ ಸೋಲವೂ ಸ್ವಾಭಾವಿಕವೇ ಸರಿ. ಈತನು ಆಳುತ್ತಿದ್ದ ರಾಜಧಾನಿ ಯಾವುದು ಎಂಬ ಗುಟ್ಟು ಇವನ ಹಿರಿಯರ ರಾಜಧಾನಿಯಂತೆ ಇನ್ನೂ ತೆರೆಯ ಮರೆಯಲ್ಲೇ ಇದೆ. ಆದರೂ ಹಿಂದಿನ ಇಬ್ಬರ ರಾಜಧಾನಿ ಎಲ್ಲಿ ಇದ್ದಿರಬಹುದು ಎಂಬುದನ್ನು ನಾವು ಸಾಧಾರವಾಗಿ ಊಹಿಸಿದಂತೆ ಈತನದನ್ನೂ ಪರಾಂಬರಿಸಲು ಆಧಾರ ವಿಲ್ಲವೆಂದಲ್ಲ. ಅದರೆ, ಅದನ್ನು ಈತನ ಮಗನಾದ ಜಗತ್ತುಂಗ ಗೋವಿಂದ ರಾಜನ ಚಾರಿತ್ರಿಕ ವಿವೇಚನಾವಸರದಲ್ಲಿ ಸೂಚಿಸುವುದೇ ಉತ್ತಮವೆಂದು ಭಾವಿಸುತ್ತೇವೆ. ಧ್ರುವನ ಆಳಿಕೆ ಸುಮಾರು ಕ್ರಿ. ಶ. ೭೯೨-೩ರ ವರೆಗೆ ಸಾಗಿರಬಹುದು.
ಪ್ರಭೂತವರ್ಷ- ಗೋವಿಂದ
ಅಕಾಲವರ್ಷ ಧುವನಿಗೆ ಗೋವಿಂದ - ಇಂದ್ರರೆಂಬ ಇಬ್ಬರು ಕುಮಾರ ರಿದ್ದಂತೆ ಹಿಂದಿನ ಚಾರಿತ್ರಿಕರಿಗೆ ತಿಳಿದು ಬಂದ ಸಂಗತಿ. ಆದರೆ, ಇವರಲ್ಲದೆ ಕಂಬ * (ಸ್ತಂಭ – ರಣಾವಲೋಕ) ಕರ್ಕ (ಸುವರ್ಣವರ್ಷ ರೆಂಬ ಮತ್ತಿಬ್ಬರು
- ಪುತ್ರರೂ ಇದ್ದಂತೆ ಇಂದಿನವರಿಗೆ ಸಾಧಾರವಾಗಿ ಗೊತ್ತಾ ಜಗತ್ತುಂಗನ
| ಗಿದೆ. ರಣಾವಲೋಕ-ಕಂಬನೆಂದರೆ ಎಲ್ಲರಿಗೂ ಹಿರಿ ವಿನಯೋದಾತ್ತತಾ
ಪ ತಾಪಗಳು ಯನು. ಆ ಹಂತಿಯಲ್ಲಿ ಗೋವಿಂದನು ದ್ವಿತೀಯನೆನ್ನಿಸಿ
ದಲ್ಲಿ ತೃತೀಯತೆ ಕರ್ಕನಿಗೊದಗಿ, ಇಂದ್ರನು ಚತುರ್ಥ ಸ್ಥಾನವನ್ನೊಂದುತ್ತಾನೆ. ಆದರೇನು? ಸರ್ವಗುಣಸಂಪನ್ನತೆಯಿಂದಾಗಿ ತಂದೆಯ ಎದೆಗೊಪ್ಪಿದ ನಂಬುಗೆಗಿಂಬಾದ ಕುಮಾರನೆಂದರೆ ಗೋವಿಂದರಾಜನೇ ಆಗಿ ದ್ದನು. ಅಜ್ಜನಾದ ಶುಭತುಂಗನ ಉದಾತ್ತವೃತ್ತಿ, ಅಯ್ಯ - ಹಿರಿಯಯ್ಯಂದಿ ರಾದ ನಿರುಪಮ - ದಂತಿದುರ್ಗರ ಅಸಾಮಾನ್ಯ ಪ್ರತಾಪ, ತನ್ನದೇ ಆದ ನಡವಳಿ ಜಾಗೆಯ್ಕೆಗಳು, ಆತನಲ್ಲಿ ಮುಪ್ಪುರಿವಡೆದು ಹೆಣೆದುಕೊಂಡಿದ್ದು ವು. ಗೋವಿಂದನು ಪಿತೃಭಕ್ತನು; ತಂದೆ ಜೀವಂತನಾಗಿದ್ದಾಗಲೆ ತನ್ನ ತೇಜಸ್ವಿತೆ ಯನ್ನು ಲೋಕದಲ್ಲಿ ಹೊಳೆಯಿಸಿದಾತನು. ಮಗನ ಅಸಮಾನ ಗುಣ ಪ್ರತಾ ಪಾದಿಗಳನ್ನೆಲ್ಲ ಪರಿಭಾವಿಸಿದ ತಂದೆ, ಈತನು ಕ್ರಮಕ್ಕನುವಾಗಿ ಪಟ್ಟಾಧಿಕಾರಿ ಯಾದುದರಿಂದ ತನ್ನ ಪರೋಕ್ಷದಲ್ಲಿ ಅಧಿಕಾರವು ಅಸ್ಥಾನವನ್ನೊಂದಿ ದೇಶವು ಕೋಭೆಗೊಳ್ಳಬಹುದು ಎಂದು ಶಂಕಿಸಿ ಗೋವಿಂದನಿಗೆ ಅಭಿಷೇಕವೆಸಗುವು ದಕ್ಕೆ ಸಿದ್ಧನಾದನಂತೆ; ತತ್ತೂಚಕವಾಗಿ ತನ್ನ ಕೊರಳಿನ ಪಟ್ಟಮಾಲಿಕೆಯನ್ನೆತ್ತಿ ಮಗನ ಕೊರಳಿಗೆ ತೊಡಿಸಲಿಕ್ಕೆ ಅನುವಾದನಂತೆ. ಆಗ ಮಗನು ವಿನಯ ಪೂರ್ವಕವಾಗಿ ಹಿಂಜರಿದು + ಆಸ್ತಾಂತಾತ” ಎಂದರೆ-ತಂದೆಯೆ, ಅದು ಹಾಗಿ
*R. Kutas and their times P. 59
+ಯಸ್ಕಾ ಕಾರನಮಾನುಷಂ ತ್ರಿಭುವನ ವ್ಯಾಪರಕ್ಕಚಿತಂ ಕೃಷ್ಣ ಸೈವ ನಿರೀಕ್ಷ ಯಚ್ಛತಿ ಏತರ್ಯೇಕಾಧಿಪತ್ಯಂ ಭುವಃ || ಆಸ್ತಾಂತಾತ ತವೈತದ ಪ್ರತಿಹತಾದತ್ತಾ ಸ್ವಯಂಕಂಠಿಕಾ | ಕಿಂ ನಾಚ್ಛೇವ ಮಯಾ ಧೃತೇತಿ ಪಿತರಂ ಯುಕ್ತಂಚೊ
ಯೋಭ್ಯ ಧಾತ್ || ೧೧ ||
-
೨೦
-
ರಲಿ, ತಾವು ಪಟ್ಟಮಾಲಿಕೆಯನ್ನು ಈಗಲೆ ತೊಡಿಸಿದರೇನು ತೊಡಿಸದಿದ್ದ ರೇನು? ಪರಮಾತ್ಮನ ದಯದಿಂದ ಎಲ್ಲವೂ ಸುಗಮವಾಗಿಯೇ ಸಾಗುವುದು, ಎಂದು ತಂದೆಯನ್ನು ಸಂತಯಿಸಿದನು, ಎಂದು ಶಾಸನವೇ ಸಾರುತ್ತಿದೆ, ತಂದೆ ಅಸ್ತಂಗತನಾದನು. ಪ್ರಥಮ ಕುಮಾರನಾಗಿದ್ದ ಕಂಬನು ಕ್ರಮಪ್ರಾಪ್ತ ನಾಗಿದ್ದರೂ ಆತನನ್ನು ಅಧಿಕಾರಕ್ಕೇರಿಸಲು ಮಂತ್ರಿ - ಮಹಾಜನಾದಿಗಳಾರೂ ಅನುಮೋದಿಸಲಿಲ್ಲ ಎಂದು ತೋರುತ್ತಿದೆ. ಸರ್ವಾನುಮತದಿಂದ ಜಗತ್ತುಂಗ ಗೋವಿಂದಸಿಗೆ ಪಟ್ಟಾಭಿಷೇಕವಾಯಿತು. ಸಾಮಂತರಾಜರಲ್ಲಿ ತಂದೆ ವರ್ತಿಸು ತಿದ್ದ ನಡವಳಿ ಅತಿ ಕಠಿನವಾಗಿ ತೋರಿದ ಮಗನಿಗೆ, ತಂದೆ ಇದ್ದಾಗಲೆ ಅಂತ ರಂಗನನ್ನದು ಕಲಕುತ್ತಿದ್ದಿರಬೇಕೆಂದು ಮುತ್ತಿನ ಪ್ರಥಮ ಕಾರ್ಯದಿಂದ ವಿಶದ ವಾಗುತ್ತಿದೆ:- +“ಸಿಂಹಸಾನಾರೋಹಣವೆಸಗಿದ ಕೂಡಲೆ ನಿರುಪಮ ಕುಮಾರ ಗೋವಿಂದರಾಜನು ತನ್ನ ಮಂತ್ರಿ ವರ್ಗದೊಡನೆ ಮತ್ತು ಶಕ್ತಿ ತಯಾಧಿಕಾರಿ ಗಳೊಡನೆ ಆಲೋಚಿಸಿದನು. ರಾಜ್ಯಭ್ರಷ್ಟರಾಗಿದ್ದ ಸಾಮಂತ ಸಮುದಾಯ ನನ್ನೆಲ್ಲ ಅನುನಯದಿಂದ ಕರೆಸಿದನು. “ನೀವೆಂದರೆ ನನಗೆ ಪಿತೃಸಮಾನರಾದ ಹಿರಿಯರು. ಅದರಿಂದ ನಿಂಸಿಮ್ಮ ಪದವಿಗಳಲ್ಲಿ ಪುನಃ ನಿಮ್ಮನ್ನು ಸ್ಥಾಪಿಸುತ್ತೇನೆ, ಎಂದು ಸಾರಿದನು. ಮಾತನ್ನು ಕಾರ್ಯದಲ್ಲಿ ಕಾಣಿಸಿದನು. ರಾಜಕಾರ್ಯ ದಕ್ಷನಾದ ಜಗತ್ತುಂಗನು, ಆ ವರೆಗೂ ಬದ್ದನಾಗಿ ಸೆರೆಮನೆಯಲ್ಲಿದ್ದ ಗಂಗ ರಾಜನನ್ನು ಬಿಡಿಸಿದನು.” ಇದೀಗ ಗೋವಿಂದನ ಪ್ರಥಮ ವಿನಯೋದಾತ್ತತೆ. ಆ ವಿನಯೋದಾತ್ತತೆಯನ್ನುಣ್ಣುವ, ಉಂಡರಗಿಸುವ ಅಂತಶ್ಯಕ್ತಿ ಕೃತಘ್ನಗಂಗ' ನಿಗೆ ಎಲ್ಲಿಂದ ಬರಬೇಕು? ಕುದಿವ ಎಣ್ಣೆಗೆ ನೀರನ್ನೆರೆದಂತೆ ಆತನ ವಿಕೃತಿ ಉಕ್ಕಿ ಹಾರಲಾರಂಭಿಸಿತು. ಅಂಥವರಲ್ಲಿ ಕಾಣಿಸಿದ ಸಾಂತ್ವನ ಗುರಿಗೊಳ್ಳಲಾರದು; ಒಲೆಯಂತಿರುವ ಅಧಿಕಾರದಿಂದ ತಪ್ಪಿಸುವುದೇ ಸಾಧು, ಎಂದು ಭಾವಿಸಿ ಅವ ನೊಬ್ಬನನ್ನು ಪುನಃ ಕಾರಾಗೃಹದಲ್ಲಿರಿಸಿದನು. ಇದಕ್ಕೆ ಕಾರಣ ಹೀಗಿದೆ: ಮಾಳವದಿಂದ ಕಾಂಚಿಯ ವರೆಗಿನ ಹನ್ನೆರಡು ಮಂದಿ ಸಾಮಂತರು ಮತ್ತೊಮ್ಮೆ
+ಪ್ರಾಬ್ಲೊ ರಾಜ್ಯಾಭಿಷೇಕಂ ನಿರುಪಯುತನಯೇಯಃ ಸ್ವಸಾಮಂತ ವರ್ಗಾನ್ | ಸ್ಟೇಷಾಂ ಸ್ಟೇಷಾಂಸದೇಷು ಪ್ರಕಟ ಮುನುನಯ್ : ಸ್ಟಾಪಯಿಷ್ಯಾಮ್ಯಶೇಷಾನ್ | ಪಿತ್ರಾಯಯಂ ಸಮಾನಾ ಇತಿ ಗಿರಮರಣೋನ್ಮಂತ್ರ ವರ್ಗ ತ್ರಿವರ್ಗೋ ||
ದ್ಯು: ಕ್ರತ್ಯೇಷುದಕ್ಷ: ಕ್ರಿತಿಯುವತಿ ಪತಿಮೊ೯ಚಯದ್ದದ್ದಗಂಗಂ || ೧೬ ||
E. P. Ind. Vol. XVIII, Sanjan Plates
೬ ೨೧ - ಗುಟ್ಟಾಗಿ ಕೂಟಗೂಡಿದರು. ರಾಜ್ಯಾಧಿಕಾರದಲ್ಲಿ ನಿರಾಶನಾದ ಗೋವಿಂದನ ಅಣ್ಣ ಕಂಬನೇ ಈ ಕೂಟರಚನೆಗೆ ಸ್ವಂಭವಾದರೆ, ಕೃತಘ್ನನಾದ ಗಂಗರಾಜನೇ ಮಾಡವಾದನು. ಉಳಿದವರು ಅನ್ಯ ಸಾಧನಗಳಾದರು. ಹಂಚಿಕೆಯದು ಗೋವಿಂದರಾಜನ ಚತುರ ದೃಷ್ಟಿಗೆ ಕಾಣದಿರಲಿಲ್ಲ. ಮೆದುಬೆಣ್ಣೆಯೆನ್ನಿಸಿದ್ದ ಅವನೆದೆ ಕಗ್ಗಲ್ಲಾ೦ತು. ಅವನ ಹುರುಪಿನ ಕೈವಾಡಕ್ಕಂಜಿ ಹನ್ನೊಂದು ಮಂದಿ ಸಾಮಂತರು ತಂತಮ್ಮ ತಪ್ಪುಗಳನ್ನೂ ಮುಂದೆ ಅಂಥ ಕೂಟಗುಳಿತನ ಕ್ಕಿಳಿಯಲಾರೆವು ಎಂದು ಮಾತುಗೊಟ್ಟು ವಿಮುಕ್ತರಾದರು. ಆದರೆ ಅವರೆಲ್ಲ ರನ್ನೂ ಹುರಿದುಂಬಿಸಿದ ಗಂಗಸಿಗೆ ಕೆಟ್ಟ ಮೇಲಾದರೂ ಬುದ್ದಿ ಹೇಗೆ ಬರಬೇಕು?
* ಉಪಗತವಿಕೃತಿ: ಕೃತಘ್ನಗಂಗೋ ಯದುದಿತ ದಂಡಪಲಾಯನೋನು ಬಂಧಾತ | ಅಪಗತಸದಶೃಂಖಲೋಖಲೋಯ: ಸಸಿಗಲ ಬಂಧಗಲ: ಕೃತಸ್ಸಯನ !!
ಗೋವಿಂದರಾಜನ ಉಪಕಾರದಿಂದಲೂ ಕೃತಷ್ಟನಾದ ಗಂಗನು ವಿಕಾರ ಪರವಶನಾದನು. ಹೌದು, ಕುಡಿದುದು ಹಾಲಾದರೂ ಹಾವಿನ ಮುಖದಲ್ಲಿ ವಿಷವಾಗಿ ಮಾರ್ಪಡುತ್ತಿದೆ. ಕ್ರುದ್ಧನಾದ ಗೋವಿಂದನು ದಂಡಿಸಲು ಸಿದ್ದ ನಾದಾಗ ಹೇಡಿ ಗಂಗನು ಪಲಾಯನಕ್ಕನುವಾದನು. ಅಂಥ ಗೋವಿಂದನ ಅಂಕೆ ಯನ್ನಗಲಿ ಓಡುವುದಾದರೂ ಎಲ್ಲಿಗೆ? ಎಂಬ ಪ್ರಶ್ನೆ ಆ ಮೂಢ ಗಂಗನ ಎದೆ ಯಲ್ಲಿ ಏಳಲಿಲ್ಲ. ಮೊದಲು ಕಾಲಿನಿಂದ ಕಳಚಿದ ಸಂಕಲೆ ಮತ್ತೆ ಕೊರಳಿಗೂ ಸುತ್ತಿತು, ಆ ಅಪರಾಧಿಗಳಿಗೆಲ್ಲ ತಕ್ಕ ಶಾಸ್ತಿಯಾಯಿತು ಎನ್ನುವ. ಆದರೆ, ಅಪರಾಧವೆಂಬುದು ಯಾರೆಸಗಿದರೂ ಅಪರಾಧವೆ ಅಲ್ಲವೆ? ತನ್ನಣ್ಣನಾದ ಕಂಭನೂ ಮರಗಸನಾಗಿ ಆ ಅಪರಾಧದಲ್ಲಿ ಸೇರಿದವನಾದುದರಿಂದ ಅವ ನನ್ನು ಏಕಾಂತದಲ್ಲಿ ಕರೆದು ವಿಚಾರಿಸಿರಬೇಕು. ಆ ಮೇಲೆ ಅವನ ಒಪ್ಪುಗೆ ಯಂತೆ, ಆತನನ್ನು ರಾಷ್ಟ್ರಕೂಟ ಪ್ರತಿನಿಧಿಯನ್ನಾಗಿ ಗಂಗರಾಜ್ಯದಲ್ಲಿ ನೆಲೆಗೊಳಿಸಿ ದಂತೆ ತಿಳಿದುಬರುತ್ತಿದೆ. ಈ ಸಂಗತಿ ಮೇಲೆ ಸೂಚಿಸಿದ ಕಂಭದೇವನ ಬಾದನ ಗುಪ್ತ ಶಾಸನದ ಕಡೆಯ ವಾಕ್ಯದಲ್ಲಿ ಶಬ್ದ ಪೂರ್ವಕವಲ್ಲದಿದ್ದರೂ ತಾತ್ವರ್ಯಾ ರ್ಥದಿಂದ ತಿಳಿದುಬರುತ್ತಿದೆ. ಆ ವಾಕ್ಯಾಂಶ ಹೀಗಿದೆ:
* . . . . ರಣಾವಲೋಕ ಶ್ರೀ ಕಂಭರಾಜ: ಪುನ್ನಾಡ ಏಡೆನಾಡುವಿ
*Sanjan Plate Verse 18
ಪಯೇ . . . . ತಳವನನಗರ ಮಧಿವಸತಿ ವಿಜಯ ಸಂಧಾನಾರೇ . . . .” ಇದರಿಂದ ಕಂಭದೇವನು ತಳವನನಗರ (ಆಗಿನ ಗಂಗರಾಜಧಾನಿ)ದೊಳಗಿನ ತನ್ನ ವಿಜಯ ಸ್ಕಂಧಾನಾರ (ಜಯಿಸಿದ ಸೇನೆ ನೆಲೆವಡೆವ ಬೀಡು)ದಲ್ಲಿ ಇದ್ದು ಆ ರಾಜ್ಯವನ್ನು ಪರಿಪಾಲಿಸುತ್ತಾ ಈ ದಾನ ಶಾಸನವನ್ನೆಸಗಿದುದೆಂದು ಸಿದ್ದ ವಾಗುತ್ತಿದೆ. ಗಂಗರಾಜನು ಬದ್ಧನಾಗಿದ್ದುದರಿಂದ ಗೋವಿಂದನೂ ಆ ತನ್ನ ಪ್ರತಿ ನಿಧಿಯನ್ನು ಅಲ್ಲಿರಿಸಿ ರಾಜ್ಯ ರಕ್ಷಣವನ್ನೆಸಗುತ್ತಿದ್ದನೆಂದು ಇದರಿಂದ ವಿಶದವಾಗು ತಿದೆ. ಈ ಶಾಸನವು (ತ್ರಿಂಶದುತ್ತರೇಷ್ಟತೀತೇಷು [ಸಪ್ತಶತೇಷು] ಶಕವರ್ಷೇಷು? ಎಂದರೆ ಶಾ. ಶ. ೭೩೦ (ಕ್ರಿ.ಶ. ೮೦೮) ರಲ್ಲಿ ಸಾಂಗವಾಯಿತು. ಆ ಮೊದಲೆ ತನ್ನ ತಮ್ಮಂದಿರಾದ ಸುವರ್ಣವರ್ಷ ಕರ್ಕರಾಜ - ಇಂದ್ರರಾಜರನ್ನು, ಗೋವಿಂದನು ಗುರ್ಜರ ಪ್ರಾಂತದ ತಮ್ಮ ಉಪರಾಜಧಾನಿಯಲ್ಲಿ ನೆಲೆಗೊಳಿಸಿದ್ದನು. ಸುವರ್ಣ ವರ್ಷನೆಂದರೆ ಎಲ್ಲ ವಿಚಾರದಲ್ಲಿಯೂ ಆ ಅಣ್ಣನಿಗೆ ತಕ್ಕ ತಮ್ಮನೇ ಆಗಿದ್ದನು; ಒಂದಿಷ್ಟು ದೂರದಲ್ಲಿದ್ದರೂ ಶ್ರೀರಾಮನಿಗೆ ಲಕ್ಷ್ಮಣನಂತಾಗಿದ್ದನು.
ಈ ಜಗತ್ತುಂಗ-ಗೋವಿಂದರಾಜನೆಂದರೆ, ನಮ್ಮ ಅಖಂಡ ಕರ್ಣಾಟಕಕ್ಕೆ ಮಾತ್ರವಲ್ಲ; ಅಥವಾ ಮತ್ತಿನ ವಿಜಯನಗರದ ಅರಸರಂತೆ ದಕ್ಷಿಣಾ ಪಥಕ್ಕೆ
ಮಾತ್ರವೂ ಅಲ್ಲ; ಇಡಿ ಭಾರತ ಭೂಮಿಗೇ ಒಕ್ಕೊಡೆಯ ಗೋವಿಂದರಾಜನು
* ಚಕ್ರವರ್ತಿಯಾಗಿದ್ದನು. ಭಾರತ ಭೂಮಿಗೆ ಚಕ್ರವರ್ತಿ ಭಾರತ ಚಕ್ರವರ್ತಿ ಗಳೆನ್ನಿಸಿದ ಕೆಲಮಂದಿ ರಾಜರ ಹೆಸರನ್ನು ನಾವು ಪುರಾಣ
ಗಳಲ್ಲಿ ಕಾಣುತ್ತೇವೆ. ಶಕ ಪುರುಷನಾದ ವಿಕ್ರಮಾ ದಿತ್ಯನು ಅಂಥವನೆಂದು ಹೇಳುತ್ತಾರಾದರೂ, ಪುರಾಣಾಯಾಗ್ರಸ್ತವಾಗಿ ತೋರುವ ಅವನ ಚರಿತ್ರೆ ಇನ್ನೂ ಬೆಸುಗೆಯನ್ನುಳಿದ ಬಂಗಾರವಾಗಲಿಲ್ಲ. ಕುಂತಳದೇಶದ ಶಾಲಿವಾಹನದಾದರೂ ಹಾಗೆಯೇ. ಅಶೋಕನನ್ನಾದರೂ ತಾತ್ತಿಕ ಚಕ್ರವರ್ತಿ ಎನ್ನಬೇಕಲ್ಲದೆ ರಾಜ್ಯಾಧಿಕಾರ ದೃಷ್ಟಿಯಿಂದಲ್ಲ. ಆದುದ ರಿಂದ ಭಾರತಭೂಮಿಯ ಈ ವರೆಗಿನ ಚಾರಿತ್ರಿಕ ಚಕ್ರವರ್ತಿ ಎಂಬ ಹೆಸರು ಸಾರ್ಥಕವಾಗಿ ಒದಗಿದವನೆಂದರೆ ರಾಷ್ಟ್ರಕೂಟ ವಂಶದ ಈ ಮೂರನೆ ಗೋವಿಂದ ರಾಜನಲ್ಲದೆ ಇನ್ನೊಬ್ಬನಿಲ್ಲ. ಇದನ್ನು ನಾವಾಡುವುದು ಮಾತ್ರವಲ್ಲ; ಶ್ರೀ.. ಎ. ಎಸ್. ಅಳೇಕರರೂ ತಮ್ಮ * ಚಾರಿತ್ರಿಕ ಗ್ರಂಥದಲ್ಲಿ ಸಂದೇಹವಿಲ್ಲದಂತೆ
* Rashtra-kutas & their times Govinda III Pages 59-71
- ೨೩ - ವಿಸ್ತರಿಸಿ ತೋರಿದ್ದಾರೆ. ಆದರೆ, ಅವರ ಆ ಗ್ರಂಥದಲ್ಲಿಯೂ ಈ ರಾಷ್ಟ್ರ ಕೂಟರ ಮಾನ್ಯಖೇಟಾತ್ತೂರ್ವದ ರಾಜಧಾನಿ ಯಾವುದೆಂಬುದು ಸಂದಿಗ್ಗ ವಾಗಿಯೇ ಉಳಿದಿದೆ. ಅದರಿಂದ, ಈ ಜಗತ್ತುಂಗ – ಗೋವಿಂದ ಚಕ್ರ ವರ್ತಿಯ ಪ್ರತಾಪಾದಿಗಳನ್ನು ಅತಿ ಸಂಗ್ರಹವಾಗಿಯಾದರೂ ಒಂದಿಷ್ಟು ಸೂಚಿಸಬೇಕು. ಈ ಸೂಚನೆಯಿಂದ ಕನ್ನಡನಾಡಿನ ವಿಸ್ತಾರದ ಮತ್ತು ಕನ್ನಡ ಸಾಹಿತ್ಯದ ಮಾರ್ಗಭೇದಾದಿಗಳ ವಿವೇಚನೆಗೂ ಸುಗಮವಾದೀತು.
ಆಗ ಉತ್ತರ ಪ್ರಾಂತದಲ್ಲಿ ಬಂಗಾಲದ ಧರ್ಮಪಾಲನೆಂಬ ಅರಸನು ಪ್ರಬಲನಾಗಿದ್ದನು. ಇವನು ಕನೋಜದ ವತ್ಸರಾಜನನ್ನು ಗೆದ್ದು ತನ್ನವನಾದ ಚಕ್ರಾಯುಧನೆಂಬಾತನನ್ನು ಆ ಪ್ರತೀಹಾರ ಸಿಂಹಾಸನಕ್ಕೇರಿಸಿದ್ದನು. ಇದನ್ನ ವಲೋಕಿಸಿ, ಆ ಸಿಂಹಾಸನಕ್ಕೆ ದ್ವಿತೀಯ ದಾಯಾದಿ ಎಂದೆನ್ನಿಸಿದ (ಎರಡನೆಯ ನಾಗ ಭಟ' ಎಂಬಾತನು ಉಕ್ಕುವ ಪರಾಕ್ರಮದಿಂದ ಹುರುಸೇರಿದನು. ಸಿಂಧು ದೇಶದ ರಾಜನ ಎಂದರೆ-ಬಹುಶಃ ಹೊಸತಾಗಿ ಹೊರಗಣಿಂದ ಬಂದು
ಅಲ್ಲಿ ನೆಲಸಿದ್ದ ಮುಸಲ್ಮಾನ ರಾಜನ, ಮತ್ತು ವೆಂಗಿಯ ಚಾಳುಕ್ಯರೇ ಮೊದ ಲಾದವರ ನೆರವನ್ನೊಂದಿದ ನಾಗಭಟನು, ಆ ಧರ್ಮಪಾಲ ಚಕ್ರಾಯುಧರನ್ನು ಸೋಲಿಸಿದನು. ಅರಸಾಳಿಕೆ ಎಂಬುದು ಧರ್ಮವರ್ಗದಲ್ಲಿ ನಡೆದರೆ ಲೋಕಕ್ಕೆ ಅಮೃತವಾಗುವುದು, ಅದು ತಪ್ತಿ ವ್ಯಕ್ತಿಗಳ ಹೆಮ್ಮೆಯ ನರಗಳಲ್ಲಿ ತುಂಬಿ ತುಳುಕಿ ಚಿಮ್ಮಿದರೆ ನಂಜಾಗಿ ಪರಿಣಮಿಸುವುದು. ಉತ್ತರಾಪಥದಲ್ಲಿ ಸಾಗುತ್ತಿದ್ದ ಈ ಅಧಿಕಾರಲಾಲಸೆಯ ಗೊಂದಲವನ್ನು, ನಮ್ಮ ಗೋವಿಂದ ರಾಜನು ಅವಲೋಕಿಸಿದನು; ಇದಮಿತ್ಥಂ ಎಂದು ನಿರ್ಧರಿಸಿದನು. ಆ ಮೇಲೆ ಸುಸ ಜ್ಜಿತವಾದ ಸೇನಾಬಲದೊಡನೆ ಅತ್ತ ದಾಳಿವರಿದನು. ಅದನ್ನೇ ಸಂಜನ ಶಾಸನ ಕಾರನು, “+ಮಾರ್ತಂಡಃ ಸ್ವಯಮುತ್ತರಾಯಣ ಗತಸ್ತೇಜೋನಿಧಿರ್ದುಗೃಹಃ” ಎಂದು ಬಣ್ಣಿಸುತ್ತಾನೆ. ಮಾತ್ರವಲ್ಲ, ನಾಗಭಟ - ಚಂದ್ರಗುಪ್ತ - ಧರ್ಮಪಾಲ
+ಭೂಭ್ಯರ್ಧಿ ಸುನೀತಪಾದವಿಶರಃ ಪುಣೋದಯಸ್ತ್ರಜಸಾ ! ಕ್ರಾ೦ತಾಶೇಷದಿಗಂತರಃ ಪ್ರತಿಪದಂ ಪ್ರಾಪ್ತ ಪ್ರತಾಪೋನ್ನತಿಃ | ಭೂಯೋಯೋ ಹೈನುರಕ್ತ ಮಂಡಲಯುತಃ ಪದ್ಮಾಕರಾನಂದಿತಃ |
ಮಾರ್ತಂಡಃ ಸ್ವಯಮುಕ್ತರಾಯಣ ಗತಸ್ತೇಜೋನಿಧಿರ್ದು ಸೃಹಃ & ೨೧ || Sanjan Hate.
ಚಕ್ರಾಯುಧರೆಂಬ, ಆಗಿನ ಕಾಲದಲ್ಲಿ ಇಡಿ ಉತ್ತರಾಪಥದಲ್ಲಿ ಪ್ರಬಲತೆಗೇರಿ ಕೈವೀಸುತ್ತಿದ್ದ ಪ್ರತಾಪಿಗಳೆಲ್ಲರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ಆ ಮೇಲೆ ಅವರವರನ್ನು ಅಲ್ಲಲ್ಲಿ ತನ್ನ ರಾಷ್ಟಕಟ ಪೀಠಕ್ಕೆ ಬಾಗಿದ ಸಾಮಂತರ ನ್ಯಾಗಿನೆಲೆಗೊಳಿಸಿ ಹಿಂದಿರುಗಿದ ದಿಗ್ವಿಜಯ ಕ್ರಮವು ಸಂದೇಹಕ್ಕೆಡೆ ಇಲ್ಲದಂತೆ * ವರ್ಣಿತವಾಗಿದೆ. ಕೀರ್ತಿನಾರಾಯಣನೆಂಬುದು ಜಗತ್ತುಂಗ ಗೋವಿಂದ ರಾಜನ ಬಿರುದುಗಳೊಳಗೊಂದು ಎಂಬ ಸಂಗತಿಯನ್ನು ಮರೆಯಬಾರದು. ಈ ಗೊವಿಂದನನ್ನು ಮಾರ್ತಂಡನೊಡನೆ ಒಂದುಗೂಡಿಸಿದ ಎಂದರೆ ರೂಪಕಾ ಲಂಕಾರದಿಂದ ಬೆರಸಿದ ಶಾಸನಕವಿ, ಹಿಂದಣ ೨೧ನೇ ಶ್ಲೋಕದಲ್ಲಿ “ಸ್ವಯನು ತರಾಯಣಗತಃ” ಎಂದು ಬಣ್ಣಿಸಿದ ಪದಯೋಜನೆಯನ್ನು ಭಾವಿಸಿರಿ. ಇದರಿಂದ ಗೋವಿಂದರಾಜನ ರಾಜಧಾನಿ ಪ್ರದೇಶವು ವಿಂಧ್ಯಾದುತ್ತರ ಭಾಗ ದಲ್ಲಲ್ಲ ಎಂಬುದು ಹೊಳೆಯುತ್ತಿದೆಯಲ್ಲವೆ? ಈ ವಿಷಯವನ್ನು ಯಾರೂ ಅಲ್ಲಗಳೆಯಲಿಕ್ಕಿಲ್ಲ ಎಂದು ನಂಬಿ ಮುಂದುವರಿಯುವ,
ತೆಂಕಣ ಪಾ೦ತದ ಹಲವರಸರು ಗೋವಿಂದನ ಆಳಿಕೆಗೆ ಆ ಮೊದಲೇ ಬಾಗಿದ್ದರು. ಆದರೂ ಹೊರಗೆ ಬಾಗಿ ಒಳಗೆ ನಿಗುಚಿದವರು ಕೆಲವರಿರ ಬೇಕೆಂದು ತೋರಿತು. ಅದರಿಂದ ಆ ಕಡೆಗೆ ದಾಳಿನರಿದನು. ಮುಂಬರಿದು ಕೇರಳ ಪಾಂಡ್ಯ ಚೋಳಾ 'ದಿ ದ್ರವಿಡ ಮಂಡಲದ ಅರಸರನ್ನೂ, ಆಂಧ್ರರನ್ನೂ ಪಾದಾಕ್ರಾಂತರನ್ನಾಗಿ ಮಾಡಿದ ಚಕ್ರವರ್ತಿಯ ಮನಸ್ಸು ಸಿಂಹಳದ ಕಡೆಗೆ ಧಾವಿಸಿತು. ಆ ಧಾಟಿ ಕ್ರಮವನ್ನು ಶಾಸನಕವಿ ಹೀಗೆ ನಿರೂಪಿಸುತ್ತಾನೆ:
* ಸನಾಗಭಟ ಚಂದ್ರಗುಪ್ತನೃಪಯೋರ್ಯ ಶೌರ್ಯ೦ರಣೆ !
ಹಾರ್ಯವು ಸಹಾಯ ಧೈರ್ಯವಿಕಲಾನಥೆನೂಲಯನ್ || ಯಶೋರ್ಜನಪರೋ ನೃಪಾನ್ಮಭುವಿ ಶಾಲಿಸಸ್ಯಾನಿನ | ಪುನಃ ಪುನರತಿಷ್ಟಿ ಪರ್ತ ಸ್ವಪದಏವಚಾನ್ಯಾನಪಿ || ೨೨ || ಹಿಮವತ್ರರ್ವತ ನಿರ್ರುರಾಂಬುತುರಗೈಃ ಪೀತಂಚ ಗಾಂಗಂಗಜೈಃ | ಧ್ವನಿತಂ ಮಚ್ಚನರ್ಯಕೈರ್ದೈಗುಣಿತಂ ಭೂಯೋಪಿ ತಂದರೇ {i ಸ್ವಯಮೇವೋ ಸನತ್ ಚಯಸ್ಯ ಮಹತ ಸೌ ಧರ್ಮಚಕ್ರಾಯುಧೇ | ಹಿಮವರ್ತಿ ಸರೂಪತಾನುಪಗತಸ್ತರ್ತಿ ನಾರಾಯಣ ? || ೨೩ {{ Sanjan Plate.
- ೨೫ - + ರಾಜಾಮಾತ್ಯನರಾವಿನ ಸ್ವಹಿತ ಕಾರ್ಯಾಲಸ್ಯನಷ್ಟೇ ಹಠಾ || ದಂಡೇನೈವ ನಿರಸ್ಯ ಮೂಕಬಧಿರಾವಾನೀಯಹೇಲಾಪುರೇ | ಲ೦ಕಾತಃ ಕಿಲ ತತ್ಪಭುಪ್ರತಿಕೃತಿ ಕಾಂಚೀಮುಸೇತೌ ತತಃ | ಕೀರ್ತಿಸ್ತಂಭಸಿಭೀ ಶಿವಾಯತನಕೇ ಯೇನೇಹ ಸಂಸ್ಥಾಪಿತೌ || ೩೪ .
ಈ ಶ್ಲೋಕದ ಅರ್ಥವನ್ನು ವಿವೇಚಕ ದೃಷ್ಟಿಯಿಂದ ಪರಾಂಬರಿಸಿರಿ: ಧಾರ್ಮಿಕವೆನ್ನಿಸಿದ ರಾಜಕೀಯ ಕಾರ್ಯದಲ್ಲಿ ಆಲಸ್ಯವೆಸಗಿ, ಪ್ರಜಾವರ್ಗದ ಯಾವ ಪ್ರಾರ್ಥನೆಗೂ ಮಕರಾದ ಬಧಿರ (ಕಿವುಡ) ರಾದ ಲಂಕಾ ನಗರದ ರಾಜಾಮಾತ್ಯರನ್ನು ದಂಡಿಸಿದ ಮೇಲೆ ತತ್ಸಮಾನಗಳಾದ ಅವರ ಪ್ರತಿಕೃತಿ'ಗಳು (ಪ್ರತಿಮಾದ್ವಯ) ಮೊದಲು ಕಾಂಚೀ ನಗರಕ್ಕೆ ತರಲ್ಲಟ್ಟುವು. ಆ ಮೇಲೆ (ತನ್ನ) ಕೀರ್ತಿಸ್ತಂಭ ಸಮಾನಗಳಾಗಿ (ಇಹ ಹೇಲಾಪುರೇ' -ಎಂದರೆ (ಈ ವಿಲಾಸ ನಗರಿಯಲ್ಲಿ ಸಾಗಿಸಲ್ಪಟ್ಟು ಸಾ ಪಿತಗಳಾದುವು.
ಇದರಿಂದ ನಮ್ಮ ಜಗತ್ತುಂಗನು ಹಿಮಗಿರಿಯಿಂದ ಲಂಕಾಂತವಾದ ಭಾರತಭೂಮಿಗೆ ಚಕ್ರವರ್ತಿಯಾದನೆಂಬುದು ನಿಸ್ಸಂಶಯವಾಗಿ ವಿಶದವಾಗು ತಿದೆ. ಇದನ್ನು ಶ್ರೀ. ಎ. ಎಸ್, ಅಳೇಕರರೂ ಸಾರಿರುವುದರಿಂದ, ನಾವು ಹೆಚ್ಚಾಗಿ ಹೇಳಬೇಕಾಗಿಲ್ಲ. ಆದರೆ ಇಂಥ ಚಕ್ರವರ್ತಿಯ, ಮತ್ತು ಅವನ ಹಿಂದಿನವರ ರಾಜಧಾನಿ ಯಾವುದಾಗಿತ್ತು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದನ್ನು ಹಿಂದೆಯೂ ಒಂದಿಷ್ಟು ಸೂಚಿಸಿದ್ದೆವಷ್ಟೆ; ಇಲ್ಲಿಯೂ ಒಂದಿಷ್ಟು
ಪರಾಂಬರಿಸುವ:- ಹಿಂದೆ ವಿಸ್ತರಿಸಿದ ನೃಪತುಂಗನ ಗೋವಿಂದನ
ದನ ಸಂಜನ ಶ್ಲೋಕದಲ್ಲಿ ಲಂಕಾನಗರದ ರಾಜಾಮಾತ್ಯರ ಪ್ರತಿ ರಾಜಧಾನಿ
ಈ ಕೃತಿ (ಪ್ರತಿಬಿ೦ ಬ) ಗಳೆರಡು “ಹೆ ಹೇಲಾಪುರೇ ಸಂಸ್ಥಾಪಿತೌ” ಎಂದರೆ “ಈ ವಿಲಾಸ ನಗರಿಯಲ್ಲಿ ಸ್ಥಾಪಿತಗಳಾದುವು" ಎಂದು ಹೇಳಿದೆ. ಗೋವಿಂದರಾಜನ (ಈ ಹೇಲಾಪುರ' ಎಂದರಾವುದು? ಈ ಶಾಸನದ ೫೪ನೆಯ ದೀರ್ಘವಾದ ಗದ್ಯಭಾಗದಲ್ಲಿ ಶಾಸನಕಾರನಾದ ನೃಪತುಂಗ ದೇವನು ತನ್ನ ರಾಜ್ಯಾಧಿಕಾರಿಗಳಾದ ರಾಷ್ಟ್ರಪತಿ - ವಿಷಯಪತಿ ಮೊದಲಾದವ ರನ್ನು ಉದ್ದೇಶಿಸಿ ಆಡುವ ಈ ಮಾತನ್ನು ಅವಗಾಹಿಸಿರಿ: ಇಲ್ಲಿ “ ಅಸ್ತುವಃ ಸಂವಿದಿತಂ ಯಥಾ ಮಾನ್ಯಖೇಟರಾಜಧಾನ್ಯವಸ್ತಿತೇನ ಮಯಾ” ಎಂದು
+Sanjan Plate.
-
೨೬
-
ಸ್ಥಾನ ಸೂಚನೆ ಇದೆ, ಅದು ಈ ಇಹ” (ಇಲ್ಲಿ) ಎಂಬುದಕ್ಕೆ ಹೊದ್ದಿಕೆಯಾಗು ತಿದೆ. ಹಾಗಿದ್ದರೆ, ಗೋವಿಂದ ಚಕ್ರವರ್ತಿಯ ಕಾಲದಲ್ಲಿ ಆತನ ಹೇಲಾಪುರ' ವಾಗಿದ್ದುದನ್ನು, ಆ ಮೇಲೆ ತುತ್ರನಾದ ನೃಪತುಂಗನು ತನ್ನ ಪ್ರಧಾನ ರಾಜ ಧಾನಿಯನ್ನಾಗಿ ಮಾರ್ಪಡಿಸಿಕೊಂಡನು ಎಂದು ಭಾವಿಸುವಂತಿದೆಯಲ್ಲವೆ? ಅವನು ಈ ತೆಂಕನಾಡಿಗೆ ಬಂದಲ್ಲಿ, ತಾತ್ಕಾಲಿಕವಾಗಿ ವಾಸಿಸುವ ವಿಲಾಸ ನಗರಿ ಗಳು ಬೇರೆಯ ಇದ್ದಂತೆ ಆತನ “ಮಂಡಲ-ತಾಮ್ರಶಾಸನ” (ಶಾ. ಶ. ೭೩೨= ಕ್ರಿ. ಶ. ೮೧)ದ “ಶ್ರೀ ಮಯೂರಖಂಡೀ ಸಮಾವಾಸಿತೇನ ಮಯಾ ...” ಎನ್ನುವ ಭಾಗದಿಂದಲೂ ಗೊತ್ತಾಗುತ್ತಿದೆ. ಮಯೂರ ಖಂಡೀ ಎಂದರೆ ನಾಸಿಕದ ಹತ್ತಿರದಲ್ಲಿರುವ, ಈಗ “ಮೋರ್ಖಂಡಿ” ಎಂದು ಪ್ರಸಿದ್ದವಾದ ಭಾಗ ಎಂಬಲ್ಲಿ ಸಂಶಯವಿಲ್ಲ. “ಸಮಾವಾಸಿತೇನ ಮಯಾ' ಎಂದರೆ, ಪ್ರಕೃತ ಬಂದು ಬೀಡುಗೊಂಡ ನನ್ನಿಂದ, ಎಂಬ ಅರ್ಥವಲ್ಲದೆ, “ಅದೇ ರಾಜಧಾನಿಯಾಗಿ ರುವ ನನ್ನಿಂದ” ಎಂಬ ಅರ್ಥವಾಗಲಾರದು. ಈ ಕಾರಣದಿಂದ ಸಂಜನ ಶಾಸನದಲ್ಲಿ ತೋರುವ ಗೋವಿಂದರಾಜನ ಹೇಲಾಪುರವೇ ಮತ್ತೆ ಮಾನ್ಯಖೇಟ (ಮಲಖೇಡ) ವಾಗಿ ಮಾರ್ಪಟ್ಟಿತೆಂದು ಭಾಸವಾಗುತ್ತಿದೆ. ಮಾನ್ಯಖೇಟ ಎಂದರೆ ಮಾನಾರ್ಹರಾದ ರಾಜರೂ ರಾಜಬಂಧುಗಳೂ ಬಂದು ಖೇಲನ (ವಿಹಾರ) ಗೊಳ್ಳುವ ಪುರ, ಎಂಬ ಅರ್ಥವಾಗುವುದರಿಂದ ಹೇಲಾಪುರ' ಎಂಬುದರೊಡನೆ ಸಮಾನಾರ್ಥಕವೇ ಆಗುತ್ತಿದೆ. ಈ ಅಭಿಪ್ರಾಯವನ್ನು ಕರಹಾಡದಲ್ಲೊದಗಿದ ಕೆಳಗೆ ದೃಷ್ಟಾಂತಿಸುವ ರಾಷ್ಟ್ರಕೂಟ ಶಾಸನ ಭಾಗವನ್ನು ಸರಿಯಾಗಿ ವಿವೇಚಿಸಿದಲ್ಲಿಯೂ ಹೊಳೆಯುವುದು:
* ತಸ್ಯ ಶ್ರೀಮದಮೋಘವರ್ಷ ನೃಪತಿಶ್ಚಾಲುಕ್ಯ ಕಾಲಾನಲಃ | ಸೂನುರ್ಭೂಪತಿರೂರ್ಜಿತಾಹಿತ ವಧೂವೈಧವ್ಯದೀಕ್ಷಾಗುರುಃ | ಆಸೀದಿಂದ್ರ ಪುರಾಧಿಕಂ ಪುರಮಿದಂ ಶ್ರೀ ಮಾನ್ಯಖೇಟಾಭಿಧಂ | ಯೇನೇದಂಚ ಸರಕೃತಂ ಗುರುಕರು ಪ್ರಾಸಾದಮಂತಃ ಪುರಂ !
ಇದರ ಅರ್ಥವನ್ನು ವಿವೇಚಿಸಿರಿ:- “ಆ ಗೋವಿಂದರಾಜನಿಗೆ ಚಾಲುಕ್ಯ ಕಾಲಾಗ್ನಿ ಸ್ವರೂಪನೂ, ನೆಲೆಗೊಂಡ ಹಗರಾಯರ ಕುಲವನ್ನು ನಿರ್ಮೂಲಿಸಿ ದವನೂ ಆದ ನೃಪತುಂಗ ರಾಜನು ಜನಿಸಿದನು. ಇಂದ್ರ ರಾಜಧಾನಿಗಿಂತಲೂ
* ಎರಡನೆ ಕರ್ಕನ ಕರ್ಹಾಡ ಶಾಸನ - ಕನ್ನಡ ಸಾ. ಪರಿಷತ್ಪತ್ರಿಕೆ.
-
೨೬ -
ಮೇಲಾದ ಈ ಮಾನ್ಯ ಗೇಟನಾನಕ ರಾಜಧಾನಿಯೂ ನೆಲೆಗೊಂಡಿತ್ತು. ಜಗತ್ತುಂಗಸೂನುವಾದ ನೃಪತುಂಗನಿಂದ (ಯೇನ) ಈ ಕೆರೆಯ, ಎತ್ತರ ವಾದ ಮಾಳಿಗೆಯಿಂದೊಡಗೂಡಿದ ಅಂತಃಪುರವೂ ರಚಿತವಾಯಿತು. ಇಲ್ಲಿಯ ವಾಕ್ಯ ಸ್ವರೂಪಗಳನ್ನು ಸರಿಯಾಗಿ ಪರಾಂಬರಿಸಬೇಕು. ಮೊದಲನೆಯ ವಾಕ್ಯಗಳು ಅಕರ್ಮಕ ಕರ್ತರಿ ಪ್ರಯೋಗಗಳಾಗಿಯೂ, ಮನದು (ಕರ್ಮಣಿ'ಯಾಗಿಯೂ ರಚಿತಗಳಾಗಿವೆ. (ಆಸೀದಿಂದ್ರಪುರಾಧಿಕಂ ಪುರಮಿದಂ . . . . ” ಎಂಬ ಅಕರ್ಮಕ ವಾಕ್ಯದಲ್ಲಿ ಮಾನ್ಯಖೇಟ ನಗರ ನಿರ್ಮಾಪಕನು ಯಾರೆಂದು ಗೊತ್ತಾಗುವುದಿಲ್ಲ. ಬಹುಶಃ ಅದು ಹಿಂದೆಯೇ ರಚಿತವಾದುದಿರ ಬೇಕು. “ಯೆನೇದಂಚ ಸರಃ ಕೃತಂ . . . . ” ಎಂಬ ಮನ ಭಿನ್ನ ಪ್ರಯೋಗ ವಾಕ್ಯದಲ್ಲಿ ನೃಪತುಂಗಕೃತವಾದುದು ಆ ಕೆರೆಯ ಅಂತಃಪುರವೂ ಎಂದು ವಿಶದವಾಗುತ್ತಿದೆ. ಭಿನ್ನ ಪ್ರಯೋಗಗಳ ಭಿನ್ನ ವಾಕ್ಯಗಳಿಗೆ ಒಂದೆ ಕರ್ತೃಪದವನ್ನು ಪ್ರಯೋಗಿಸುವುದು ವ್ಯಾಕರಣ ಮಾರ್ಗವಲ್ಲ ಎಂಬುದನ್ನು ಮರೆಯಲಾಗದು. ಆದರೆ “ಹೇಲಾ ಪುರೇ ... ಇಹ” ಎಂದು ಸಂಜನ ಶಾಸನ ದಲ್ಲಿ ತೋರುವುದರಿಂದ ಆ ಹೇಲಾಪುರ (ವಿಲಾಸಪುರ) ವೇ ಆ ಗೋವಿಂದರಾಜನ ರಾಜಧಾನಿಯಾಗಿತ್ತು ಎಂದು ಭಾವಿಸಲಿಕ್ಕೆಡೆಯೇ ಇಲ್ಲ. ಅದಕ್ಕೆ ಬದಲಾಗಿ ಆತನ ರಾಜಧಾನಿ ಯಾವುದೆಂದು ವಿಶದವಾಗಿ ಗೊತ್ತಾಗುವುದೋ ನೋಡುವ. ಗೋವಿಂದನು ವಿಂಧ್ಯಾದುತ್ತರಭಾಗದ ದಿಗ್ವಿಜಯವನ್ನೆಸಗಿ ಹಿಂದಿರುಗಿದುದನ್ನು
ಸಂಜನ ಶಾಸನಕಾರನು ವಿವರಿಸಿದುದಕ್ಷಿಸಿರಿ:
ಪ್ರತ್ಯಾವೃತ್ತ ಪ್ರಾತಿರಾಜ್ಯಂ ವಿಧೇಯಂ |
ಕ್ರತ್ಯಾರೇನಾಮುತ್ತರಾಂ ವಿಂಧ್ಯಪಾದೇ | ಕುರ್ವನ್ ಧರ್ಮಾನ್ ಕೀರ್ತ ನೈ: ಪುಣ್ಯವೃಂದೈ |
ರಧ್ಯಷ್ಠಾತಾಂ ಸ್ಫೋಚಿತಾಂ ರಾಜಧಾನೀಂ || ೨೪ || ಈ ಶ್ಲೋಕದ ಅನ್ವಯಾನುಸಾರವಾದ ತಾತ್ಪರ್ಯಾರ್ಥವನ್ನು ವಿದ್ವಾಂಸ ರಾರೂ ಈ ವರೆಗೆ ಸರಿಯಾಗಿ ಲಕ್ಷಿಸಿದಂತೆ ತೋರುವುದಿಲ್ಲ. ಗೋವಿಂದರಸನು ವಿಂಧ್ಯಾದುತ್ತರದ ಪ್ರತಿರಾಜರೆಲ್ಲರನ್ನೂ ವಿಧೇಯರನ್ನಾಗಿ ಮಾಡಿ ಹಿಂದಿರುಗಿ ದನು. ಹಾಗೆ ಹಿಂದಿರುಗಿದುದು ಎಲ್ಲಿಗೆ ಎಂಬುದು ಇದಕ್ಕಿಂತ ಮೊದಲಿನ ದಾದ ೨೩ನೆಯ ಶ್ಲೋಕಭಾಗದಲ್ಲಿ “ಪ್ರತಾಪಮೀವ ನರ್ಮದಾ ತಟಮನು
- ೨೮ - ಪ್ರಯಾತಃ ಪುನಃ” ಎಂದು ಸ್ಪುಟವಾಗಿದೆ. ತನ್ನ ಪ್ರತಾಪವೋ ಎಂಬಂತೆ ಪುನಃ ನರ್ಮದಾ ನದಿಯ ತಟವನ್ನು ಕುರಿತು ಬಂದನು, ಎಂಬುದೇ ಇದರ ಅರ್ಥ. ಇಲ್ಲಿ “ಪುನಃ” ಎಂದಿರುವುದರಿಂದ ಮೊದಲು ದಿಗ್ವಿಜಯಕ್ಕೆ ಹೊರ ಟುದು ಇಲ್ಲಿಂದಲೇ ಎಂದು ಸರಿಯಾಗಿ ಹೊಳೆಯುತ್ತಿದೆ. ಮೇಲೆ ದೃಷ್ಟಾಂತಿಸಿದ ೨೪ನೆಯ ಶ್ಲೋಕದ ಅರ್ಥದಲ್ಲಿ ಕಣ್ಣಿಡಿರಿ:- “ಹಿಂದುರುಗಿದ ಗೋವಿಂದನು ವಿಂಧ್ಯಪಾದ (ಶಿಖರ)ದಲ್ಲಿ ಉತ್ತರ' (ಉತ್+ತರ) ಎಂದರೆ ಎತ್ತರವಾಗಿ ನೆಲೆ ಗೊಂಡ “ರೇವೆ” (ರೇವಾಂ)ಯನ್ನೊಂದಿ ದೇವತಾ ಕೀರ್ತನ – ಪುಣ್ಯಾಚಾರಾದಿ ಗಳಿಂದ ಧರ್ಮಕಾರ್ಯಗಳನ್ನೆಸಗುತ್ತ ಆಕ್ರೋಚಿತ ರಾಜಧಾನಿಯಲ್ಲಿ ಅಧಿ ಜ್ಞಾನವೆಸಗಿದನು.” ಇಲ್ಲಿ ಕಾಣುವ ಆ ತಾಂ' ಎಂಬ ಪದವು ಪೂರ್ವಾರ್ಧದ (ರೇವಾಂ' ಎಂಬ ರಾಜಧಾನಿಯನ್ನೇ ಸೂಚಿಸುವುದು ವ್ಯಾಕರಣಮಾರ್ಗಕ್ಕೆ ಬದ್ದವಾಗಿದೆ. ಹಾಗಲ್ಲವಾಗಿದ್ದರೆ ತಾಂ' (ಆ) ಎಂಬುದು ನಿರರ್ಥಕವೇ ಸರಿ. ಇದರಿಂದ ಗೋವಿಂದನು ವಿಂಧ್ಯ ಶಿಖರದ ರೇವಾನಾಮುಕ ರಾಜಧಾನಿಯಲ್ಲಿ ನೆಲ ಸಿದ್ದನೆಂದು ಸ್ಪುಟವಾಗುತ್ತಿದೆ. ಈ ಉತ್ತರಾಂ' ಎಂಬುದಕ್ಕೆ ದಿಗ್ವಾಚಕಾರ್ಥವೂ, (ರೇವಾಂ' ಎಂಬುದಕ್ಕೆ ನರ್ಮದಾನದಿ ವಾಚಕಾರ್ಥವೂ ಹೊಳೆದುದರಿಂದಲೇ ವಿದ್ವಾಂಸರಿಗೆ ಈ ಶ್ಲೋಕವು ಭ್ರಮೆಯನ್ನುಂಟುಮಾಡಿದಂತೆ ತೋರುತ್ತಿದೆ.
ಈ ಹೇಳಿಕೆಯೇ ನಿಜಸ್ಥಿತಿ ಎಂಬಂಶವನ್ನು ಸ್ವತಃ ಗೋವಿಂದರಾಜನದೇ ಆದ ಮಂಡಳಶಾಸನ ಶ್ಲೋಕವೂ, ಅದರೊಡನೆ ಅಭಿನ್ನವಾದ ಅವನಣ್ಣ ಕಂಬ ರಾಜನ ಬಾದನಗುಪ್ಪೆ ಶಾಸನ ಶ್ಲೋಕವೂ ಏಕಸ್ವರೂಪವಾಗಿ ತಿಳಿಸುತ್ತಿವೆ.
ವಿಂಧ್ಯಾದ್ರೆ: ಕಟಕೇ ನಿವಿಷ್ಟಕಟಕಂ ಶ್ರುತ್ವಾ ಚಿರ್ಮ್ಮೇನಿ್ರಚೈಃ | ಸಂದೇಶಂ ಸಮುಪಾಗತಂ ಧ್ರುವಮಿತಿ ಜ್ಞಾತ್ವಾ ಭಿಯಾ ಪ್ರೇರಿತಃ | ಮಾರಾಶರ್ವಮಹೀಪತಿಃ ದ್ರು ತಮಗಾದ ಪ್ರಾಪ್ತ ಪೂರ್ವೈಃ ಪರೈಃ | ಯಸ್ಕೇಚ್ಛಾಮನುಕೂಲಯನ್ ಕುಲಧನೈ: ವಾದಪ್ರಣಾಮೈರಪಿ ।
ತಾತ್ಪರ್ಯವಸೀಕ್ಷಿಸಿರಿ:- “ವಿಂಧ್ಯಾಚಲದಲ್ಲಿ ನೆಲೆಗೊಂಡ * ಕಟಕ' (ರಾಜಧಾನಿ)ದಲ್ಲಿ, ಉತ್ತರ ಭಾಗದ ದಿಗ್ವಿಜಯದಿಂದ ತಿರುಗಿದ ಗೋವಿಂದ
* ಕಟಕ' ಎಂಬುದಕ್ಕೆ ಸೇನಾನಿವೇಶ - ರಾಜಧಾನಿಗಳೆ ಮೊದಲಾದ ಹಲವು ಅರ್ಥಗಳಿವೆ. ಇಲ್ಲಿ ರಾಜಧಾನಿ' ಎಂದೇ ಅರ್ಥವಾಗಿರಬೇಕು.
-
೨೯
-
ರಾಜನು ಪ್ರವೇಶಿಸಿದುದನ್ನು ಮಾರಾಶರ್ವನೆಂಬ ಮಾಂಡಲಿಕರಾಜನು ತನ್ನ ಗೂಢಚಾರಕರ ಮೂಲಕವಾಗಿ ತಿಳಿದನು. ಒಡನೆ, ಸ್ವದೇಶವನ್ನು ಕುರಿತು ಪುನಃ ನಿರುಪಮ ಧು ವನೇ ಬಂದನೋ ಎಂದು, ಆತನು ಭಯದಿಂದ ಭಮೆವಡೆದನಂತೆ. ಆ ಹೆದರಿಕೆಯಿಂದಾಗಿ ಬೇಗನೆ ಬಂದು, ಇತರರಾರಿಗೂ ದೊರಕದ ಅಮೌಲ್ಯಗಳಾದ ಕುಲಧನಗಳಿಂದಲೂ ವಂದನೆಗಳಿಂದಲೂ ಆ ಮಾರಾಶರ್ವನು ಗೋವಿಂದರಾಜನನ್ನು ತೃಪ್ತಿಗೊಳಿಸಿದನು.” ಇಲ್ಲಿಯ ಕಟಕೇ? ಎಂಬ ಪದವು, ವಿದ್ವಾಂಸರಿಗೆ ಉತ್ತರಾಪಥದಿಂದ ಹಿಂದಿರುಗಿ ಗೋವಿಂದ ರಾಜನು - ಬೀಡುಬಿಟ್ಟ ಸ್ಥಾನ' ಎಂಬ ಭ್ರಮವನ್ನುಂಟುಮಾಡಿತಾಗಿ ತೋರುತ್ತಿದೆ. ಆದರೆ “ಸ್ವಂದೇಶಂ ಪುನರಾಗತಂ ಧ್ರುವಮಿವ ಜ್ಞಾತ್ವಾ . . .” ಎಂಬ ಆಲಂಕಾರಿಕವಾದ ಹೇಳಿಕೆಯನ್ನು ಸರಿಯಾಗಿ ಪರಾಂಬರಿಸಿದಲ್ಲಿ, ಆ ಭ್ರಮೆ ತೊಲಗುವಂತಿದೆ. ಆ ಮಾತಿನಿಂದ ಗೋವಿಂದನ ತಂದೆಯಾದ ನಿರುಪಮ
ಧ್ರುವನ ಸ್ವದೇಶವು ಅಥವಾ ರಾಜಧಾನಿ ಪ್ರದೇಶವು, ಅದೇ ಆಗಿತ್ತೆಂಬುದು ಹೊಳೆಯುತ್ತಿದೆ. ಇದರಿಂದ ಆ ಮಾರಾಶರ್ವನೆಂಬವನು ಹಿಂದಿನ ಧ್ರುವನ ಪ್ರತಾಪಕ್ಕೊಮ್ಮೆ ಆಹುತಿಯಾದವನು, ಅವನು ಸ್ವರ್ಗ೦ಗತನಾದ ಮೇಲೆ ರಾಷ್ಟ್ರಕೂಟ ಸಿಂಹಾಸನವನ್ನು ಗರ್ವದಿಂದ ಅಲಕ್ಷಿಸುತ್ತಿದ್ದವನು ಎಂಬುದೂ ವಿಶದವಾಗುತ್ತಿದೆ. ಶ್ರೀ. ಎ. ಎಸ್. ಅಳೇಕರರು ತಮ್ಮ ಗ್ರಂಥದಲ್ಲಿ “ಮಾರಾ ಶರ್ವನೆಂದರೆ ಆ ವರೆಗೂ ರಾಷ್ಟ್ರಕೂಟ ರಾಜರಿಗೆ ಬಾಗದ ಸ್ವತಂತ್ರ ವ್ಯಕ್ತಿ” ಎಂದು ಭಾವಿಸಿದುದು, ಈ ಶಾಸನೋಕ್ತಿಯಿಂದ ಸಡಿಲಾಗುತ್ತಿದೆ. ಧುವನು ಸ್ವರ್ಗಂಗತನಾದ ಮೇಲೆ ತಾನು ಸ್ವತಂತ್ರನೆಂದೆಣಿಸುತ್ತಿದ್ದ ಆ ಮಾರಾಶರ್ವನ ಭ್ರಮೆ, ಗೋವಿಂದನ ದಿಗ್ವಿಜಯ ಪ್ರತಾಪವನ್ನರಿತು ಮಾಯವಾಯಿತೆಂಬುದೇ ಆ ಮಾತಿನ ತಾತ್ಪರ್ಯ. ಮುಂದೆ ದೃಷ್ಟಾಂತಿಸುವ ಇನ್ನೊಂದು ಶ್ಲೋಕವು, ಗೋವಿಂದನ ಮಂಡಲದ ಶಾಸನ - ಕಂಬದೇವನ ಬಾದನಗುಪ್ಪೆಯ ಶಾಸನಗ ಳೆರಡರಲ್ಲಿಯೂ ತೋರುತ್ತಿದೆ. ಇದನ್ನೂ ಅತ್ಯಾವಶ್ಯಕವಾಗಿ ಪರಿಭಾವಿಸಬೇಕು.
ನೀತ್ಯಾ ಶಿಭವನೇ ಘನಾಘನ ಘನವ್ಯಾ ಪ್ರಾಂಬರಾಂ ಪ್ರಾವೃಷಂ | ತಸ್ಮಾದಾಗತವಾನ್ ಸವ:೦ನಿಜಬಿರಾತುಂಗಭದ್ರಾ ತಟಂ ||
“ಜಡಿ ಮುಗಿಲು ಮುಚ್ಚಿ ಮಸುಕಾದ ಬಾಂದಳದಿಂದ ಕೂಡಿದ ಮಳೆ ಗಾಲವನ್ನು 'ಶ್ರೀಭವನ'ದಲ್ಲಿ ಕಳೆದನು, ಆ ಮೇಲೆ ಸೇನಾಸಮೇತನಾಗಿ
- ೩೦
-
(ದಕ್ಷಿಣ ದಿಗ್ವಿಜಯ ಮಾನಸನಾಗಿ) ತುಂಗಭದ್ರಾ ತಟದತ್ತ ಹರಿದನು.” ಈ ಶ್ರೀಭವನ ಎಂದರೆ ಬೇರಾವುದೂ ಅಲ್ಲ; ಅವನ ಸ್ಕೋಚಿತ ರಾಜಧಾನಿಯಾದ, ರೇವಾನಗರಿಯೊಳಗಣ ಅರಮನೆಯ ಹೆಸರೇ ಇದು. ಈ ಶ್ಲೋಕ ಭಾಗಗಳನ್ನೇ ಆಧರಿಸಿ ಶ್ರೀ. ಅಳೇಕರರು ತಮ್ಮ ಗ್ರಂಥದಲ್ಲಿ ಹೀಗೆನ್ನುತ್ತಾರೆ: – “ಆಗ ಭರೋಚ ಪ್ರಾಂತದ ದೊರೆಯಾದ ಮಾರಾಶರ್ವನು ಬಂದು ಗೋವಿಂದನನ್ನು ನಯವಿನಯಗಳಿಂದ ಪೂಜಿಸಿ ತನ್ನ- ಎಂದರೆ ಮಾರಾಶರ್ವನ 'ಶ್ರೀಭವನ'ಕ್ಕೆ, ಅಥವಾ ಈಗಿನ ಕಾಲದಲ್ಲಿ ಸರ್ಭೆ ನ್ ' (Sarbhon) ಎಂದು ಹೆಸರಾದ ತನ್ನ ಆ ರಾಜಧಾನಿ ಪ್ರದೇಶಕ್ಕೆ ಕರಕೊಂಡು ಹೋಗಿ ಸತ್ಕರಿಸಿದನು. ಗೋವಿಂದನು ಮಾರಾಶರ್ವನ ಆ ಶ್ರೀಭವನದಲ್ಲಿ ಆ ಮಳೆಗಾಲವನ್ನು - ಎಂದರೆ ಕ್ರಿ. ಶ. ೮೦೮ನೆ ಇಸವಿಯ ಮಳೆಗಾಲವನ್ನೆಲ್ಲ ಕಳೆದನು. ಅವನ ಮಗನಾದ ನೃಪತುಂಗನು ಆಗ ಅಲ್ಲಿ ಜನಿಸಿದುದಾಗಿ ತೋರುತ್ತಿದೆ.” ಈ (ಶ್ರೀಭವನ'ವೆಂದರೆ ಮಾರಾಶರ್ವನ ರಾಜಧಾನಿ ಎಂದು ಅವರು ಭಾವಿಸಿದುದು ಸರಿಯಲ್ಲವೆಂದೇ ನಮ್ಮ ವಿಶ್ವಾಸಪೂರ್ವಕ ಸೂಚನೆ. ಗರ್ಭಿಣಿಯಾಗಿದ್ದ ರಾಣಿಯನ್ನು ದಿಗ್ವಿಜಯಾವಸರದಲ್ಲಿ ಮಹಾ ಪ್ರತಾಪಿ ರಾಜರಾರೂ ಕರ ಕೊಂಡು ಹೋಗುವರೆ? ಹೋದರೂ, ಆ ವರೆಗೂ ಹಗೆತನದಲ್ಲಿದ್ದ ಮಾರಾ ಶರ್ವನ ಅರಮನೆಯಲ್ಲಿ ಆ ಮಹಾರಾಣಿ ಹೆರುವುದು ಎಂದರೇನು? ಅಲ್ಲಿ ಮಳೆ ಗಾಲವೆಲ್ಲವನ್ನೂ ಕಳೆವುದು ಎಂದರೇನು? ಈ ಕಾರ್ಯವನ್ನು, ಶ್ರೀ. ಅಳೆ. ಕರರೇ ಸಾರುವಂತೆ ಭಾರತ ಚಕ್ರವರ್ತಿ ಗೋವಿಂದನು ಅನುಮತಿಸುವುದು ಎಂಬುದನ್ನು ಕೇಳಿ ಭಾವಿಸಿ ನಮಗಂತೂ ನೀರಿನಲ್ಲಿ ಕಂದೆರೆದಂತಾಗುತ್ತಿದೆ. ನಾವು ಮೇಲೆ ಸಾಧಾರವಾಗಿ ಚರ್ಚಿಸಿ ನಿರ್ಧರಿಸಿದ ಅಂಶವನ್ನು ಪರಾಂಬರಿಸಿ ದಲ್ಲಿ ಆ ತಾತ್ಕಾಲಿಕ ಭ್ರಮೆಯ ಮಂಜೆಲ್ಲವೂ ಮಾಸಿಹೋಗುವುದು; ದಂತಿ ದುರ್ಗಾದಿಗಳಾಗಿ ಗೋವಿಂದನ ವರೆಗಿನ ರಾಷ್ಟ್ರಕೂಟ ರಾಜರ ರಾಜಧಾನಿ ವಿಂಧ್ಯಾದ್ರಿ ಪಾದದಲ್ಲಿ ರೇವಾನದಿಯ ಹತ್ತಿರದಲ್ಲಿ ನೆಲೆವಡೆದು ಆ ಹೆಸರ ನೊಂದಿದ ರೇವಾನಗರಿಯೇ ಆಗಿತ್ತು; ಅವರೆಲ್ಲರ ಅಥವಾ ಗೋವಿಂದರಾಜನ ಅರಮನೆಯ ಹೆಸರು : ಶ್ರೀಭವನ' ಎಂದಾಗಿತ್ತು ಎಂದು ಸಿದ್ದಿಸುವುದು,
ಇನ್ನೂ ಒಂದು ವಿಶೇಷವಾದ ಪೋಷಕಾಧಾರವಾಗಿರುವ ಅದೇ ಗೋವಿಂದನ ಮಂಡಲ ದಾನ ಶಾಸನದೊಳಗಿನ ಈ ವಾಕ್ಯಗಳನ್ನು ಪರಾಂಬರಿಸಿ ನೋಡಿರಿ:
. . . . .. ಶ್ರೀ ಮಯೂರ ಖಂಡೀಸಮಾವಾಸಿ | ತೇನ ಮಯಾ
ಮಾತಾಪಿತ್ರೋರಾತ್ಮನ ಶೈಹಿಕಾಮುಸ್ಮಿಕ ಪುಣ್ಯಯಶೋಭಿ
- ವೃದ್ದಯೇ ವಾ (ಧಾ?) ರಾಶಿ ವಾಸ್ತವ್ಯತ ಡ್ರೈವಿದ್ಯ ! ಪೋಷಕಾಧಾರ
ಧಾರ ಸಾಮಾನ್ಯ ಕಾಶ್ಯಪ ಗೋ (೩] ಬಹ್ಮಚ ಸಬ್ರಹ್ಮಚಾರಿ
ಮಾಸೋ ಪವಾಸಿಯ ಪೌತ್ರಾಯ ಸಣ್ಣ ಸಾವಿಭಟ್ಟ ಪುತ್ರಾಯ ರಿಸಿಯ | ಪ್ರಭಟ್ಟಾಯ ತಥಾ ರಿಸಿಯಪ್ಪಭಟ್ಟನ ಏರಂಡನಲ್ಲಿ ವಾಸ್ತವ್ಯ
[ತ] ಗೌತಮಗೋತ್ರ ಮಹಿ (ಹಿ) ಧರಭಟ್ಟಾಯ ಭೂಮೇ:
ನಿವರ್ತನ | ಶತಂದಂ ತಥಾ ಕರಹಾಡ ವಾಸ್ತವ್ಯತ ಚಾತುರ್ವಿದ್ಯ ಸಾಮಾನ್ಯ
- ಕಾಶ್ಯಪ ಸಗೋತ್ರ ವಿಂ ಕ. ಸಬ್ರಹ್ಮಚಾರಿಣೇ ವ್ಯಾಸ ಭಟ್ಟಾಯ ಅಶೀತಿನಿವರ್ತನಾನಿ ಸುಭಮೇಃ ದತ್ತಾನಿ ಖೇಡ ವಿಷ
ಯಾಂತರ್ಗತಃ ದಶಪುರ ಗ್ರಾಮಃ ತಥಾ ಸುಕಲೀನಾ ಮ ಗ್ರಾಮಧಾನಂ ವಿಪ್ರರಿಕಾದ್ವಯಂ ತಿಯಡಿ ಗ್ರಾಮಧಾನಂ ಭಗಾಲ
(ಗ್ಗಲಿ) ಗ್ರಾಮಧಾನಂ ಗ್ರಾಮಧಾನ ಪಂಚಕ ಸಮನ್ವಿತಃ ತಸ್ಯ | ಚಾಘಾಟನಾನಿ ಪೂರ್ವತಃ ಇಂದವುರಿಕಾಗ್ರಾಮಃ ದಕ್ಷಿಣತಃ ದೇವ
ಭೋಗ ತಿಯಡಿ ಗಾಮಃ ಪಶ್ಚಿಮತಃ ಲಾಡಾವಲ್ಲಿಕಾಗ್ರಾಮಃ ಪಶ್ಚಿಮೋತ್ತರತಃ ಪಿಟ್ಟ . . . .
ಕಾಗ್ರಾಮಃ ಉತ್ತರತಃ ವಿಂಧ್ಯಪರ್ವತಃ ಏವಮಯಂ ಚತುರಾಘಾಟನೋಪಲಕ್ಸಿತೋ ಗ್ರಾಮಃ
- ಸೋದ್ರಂಗಃ ಸಪರಿಕರಃ ಆಗಿನ ಕಾಲದ ಕನ್ನಡನಾಡಿನ ವಿಸ್ಕೃತಿಯನ್ನು ವಿವೇಚಿಸಲು ಈ ಶಾಸನ ಭಾಗವು ಹೆಚ್ಚಿನ ನೆರವಾಗುವುದೆಂಬಲ್ಲಿ ಸಂಶಯವಿಲ್ಲ. ಗೋವಿಂದರಾಜನ ರಾಜಧಾನಿ, ವಿಂಧ್ಯಪಾದದ ರೇವಾ ನ ಗ ರಿ ಯೇ ಎಂದು ಸಾಧಾರವಾಗಿ ಸೂಚಿಸಿದೆವಷ್ಟೆ. ಇಲ್ಲಿ ತನ್ನೋಷಕಾಧಾರವೇನಿದೆ? ಎಂಬುದಕ್ಷಿಸುವ: ದಾನ ಶಾಸನಭೂಮಿಯ ಬಡಗಣ ಗಡಿ, “ಉತ್ತರತಃ ವಿಂಧ್ಯ ಪರ್ವತಃ” ಎಂಬ ಹೇಳಿಕೆಯಿಂದ ಸ್ಪುಟವಾಗುತ್ತಿದೆ. ಈ ದಾನಶಾಸನವು ದಕ್ಷಿಣಭಾಗದ ಮಯೂರಖಂಡಿಯ ಶಿಬಿರದಲ್ಲಿ ಅರಸನು ನೆಲಸಿದ್ದಾಗ ನಡೆದುದು ಎಂಬುದನ್ನು
ಮರೆಯಬಾರದು. ದಕ್ಷಿಣ ಪ್ರಾಂತದೊಳಗೆ ನೆಲಸಿದ್ದ ಸ್ವಾಧ್ಯಾಯನಿರತರೆನ್ನಿಸಿ ಉತ್ತಮರಾದ ಕನ್ನಡಿಗ ಬ್ರಾಹ್ಮಣರನ್ನೇ ಆರಿಸಿ, ತನ್ನ ರಾಜಧಾನಿ ಇದ್ದ ಕನ್ನಡ ನಾಡಿನ “ಉತ್ತರೋತ್ತರ” ಪ್ರಾಂತಕ್ಕೆ ಕರಕೊಂಡು ಹೋಗುವ ನಿರ್ಣಯ ದಿಂದಲೇ ಈ ದಾನ ಶಾಸನವನ್ನು ಅಲ್ಲಿ ಮಾಡಿದುದೆಂದು ಭಾವಿಸುವಂತಿದೆ. ದಾನ ಪಾತ್ರರಾದವರೊಳಗೆ ಒಬ್ಬನ ಹೆಸರು ರಿಸಿಯಪ್ಪ ಭಟ್ಟ' ಎಂದೂ ಅವನ ತಂದೆಯದು 'ಸಣ್ಣ ಸಾನಿ ಭಟ್ಟ' ಎಂದೂ ತೋರುವುದರಿಂದ ಅವನಂತೂ ಕನ್ನಡಿಗ (ಕರ್ಣಾಟಕ) ಬ್ರಾಹ್ಮಣನೆಂಬಲ್ಲಿ ಸಂಶಯವಿಲ್ಲವಷ್ಟೆ. ಉಳಿದ ಮಹೀಧರ ಭಟ್ಟ - ವ್ಯಾಸ ಭಟ್ಟ ಎಂಬ ಹೆಸರುಗಳು ಶುದ್ದ ಸಂಸ್ಕೃತಗಳಾ ಗಿದ್ದರೂ ಅವರೂ ಕನ್ನಡಿಗರೇ ಆಗಿದ್ದಿರಬೇಕೆಂದು ನಮ್ಮಣಿಕೆ. ಈ ಶಾಸನ ವಾಕ್ಯ ಭಾಗದ ಭಾಷೆಯನ್ನೀಕ್ಷಿಸಿರಿ:- ಮೂರನೆಯ ಹಂತಿಯಲ್ಲಿ “ಮಾಸೋಪ ವಾಸಿಯ . . . .” ಎಂಬ ಪದವು ಕನ್ನಡದ ಷಷ್ಠಿ ವಿಭಕ್ತಿ ಪ್ರತ್ಯಯ ಸಹಿತ ವಾಗಿರುವುದೂ, ಎರಡನೆ ಮತ್ತು ನಾಲ್ಕನೇ ಹಂತಿಗಳ ಆ, ... ವಾಸ್ತವ್ಯತ” ಎಂಬುವುಗಳ ಕಡೆಯ ತ' ಕಾರವು 'ದ' ಕಾರವಾಗಿದ್ದು ಕರದೋಷದಿಂದಲೇ (ತ' ಕಾರವಾಗಿರುವುದೆಂಬುದೂ ಭಾವಿಸಬೇಕಾದ ಸಂಗತಿ. (ವಾಸ್ತವ್ಯದ' ಎಂಬ ಕನ್ನಡ ವಿಶೇಷಣ ಪದಸ್ವರೂಪಗಳೇ ಅವುಗಳೆಂಬಲ್ಲಿ ಯಾವ ಸಂದೇಹವೂ ಇಲ್ಲ. ಇದು ಹಾಗಿರಲಿ, ಶಾಸನಭಾಗದೊಳಗೆ ತೋರುವ ಇಂದನುರಿಕಾ (ಇಂದೂರು) - ಸಿಪ್ಪರಿಕಾ (ಸಿಪ್ಪರಿಗೆ) ತಿಯಡಿ – ಭಗ್ಗಲಿ - ಪಿಟ್ಟ ... (ಸಿಟ್ಟಿಗೆ) ಮೊದಲಾದ ವಿಂಧ್ಯ ಪರ್ವತ ಪ್ರಾಂತದ ಆಗಿನ ಗ್ರಾಮಗಳ ಹೆಸರುಗಳೆಲ್ಲ ಕನ್ನಡಗಳಾಗಿಯೇ ತೋರುವುದರಿಂದ, ಅಂದಿನ ಆ ನಾಡುಗಳೆಲ್ಲ ಕನ್ನಡಗಳಾಗಿ ಇದ್ದುವೆಂದು ಪ್ರತೀತವಾಗುತ್ತಿವೆ. ಈ ಹೊತ್ತು ಆ ನಾಡುಗಳ ಹೆಸರುಗಳೆಲ್ಲ ಕಾಲಾನುಸಾರವಾಗಿ ಅಷ್ಟಿಷ್ಟು ರೂಪಾಂತರಗೊಂಡಿರಬಹುದಾದರೂ ಅಂದು ಹಾಗೆಯೇ ಇದ್ದುವು ಎಂಬುದನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ಇನ್ನೂ ಒಂದು ವಿಷಯವನ್ನು ಸೂಚಿಸದಿರಲಾರೆವು. ಈ ರಾಷ್ಟ್ರಕೂಟವಂಶದ ರಾಜಕುಮಾರಿಯರೊಳಗೆ ಕೆಲವರಿಗೆ ರೇವಕನಿರ್ಮಡಿ' ಎಂಬ ಒಳ ಹೆಸರಿ ದ್ದಂತೆ ಶಾಸನಗಳಿಂದ ಗೊತ್ತಾಗುತ್ತಿದೆ. ಪಂಪಭಾರತಕ್ಕೆ ಆಶ್ರಯದಾತನಾದ
ರಾಜ ಎರಡನೆಯ ಅರಿಕೇಸರಿಯ ರಾಣಿಯ, ಮೂರನೆಯ ರಾಷ್ಟ್ರಕೂಟ ಇಂದ್ರರಾಜನ ಪುತ್ರಿಯೂ ಆದ ಲೋಕಾಂಬಿಕೆಗೆ ರೇವಕ ನಿರ್ಮಡಿ? ಎಂಬ ಹೆಸರಿದ್ದುದು ವೇಮುಲವಾಡ ಶಾಸನದಲ್ಲಿದೆ. (ದೇವೀಂ ರೇವಕ
-
೩.೩
-
ನಿರ್ಮಡಿಂ' ಎಂದು ಪ್ರಾರಂಭವಾಗುವ ಆ ಶ್ಲೋಕವನ್ನು ನಾವು ನಾಡೋಜ ಪಂಪದ ೫೨ನೆ ಪುಟದಲ್ಲಿ ಕಾಣಿಸಿದ್ದೇವೆ. ರೇವಕ ನಿರ್ಮಡಿ' ಎಂದರೆ (ರೇವಕನ ಇರ್ಮಡಿ' ಎಂಬುದರ ರೂಪಾಂತರ, ರೇವಕ (ಕ) ಎಂದರೆ, ರೇವಾ ನದಿಯ, ಮತ್ತು ಆ ವಂಶದವರ ಹಿಂದಿನ ರಾಜಧಾನಿಯಾಗಿದ್ದ ರೇವಾನಗರಿಯ, ಅಭಿನ್ನವಾದ ಹೆಸರಿಗೆ ಪೂಜ್ಯಾರ್ಥಕವಾದ (ಅಕ್ಕ' ಪದವನ್ನು ಮುಂದಿರಿಸಿ ರೂಪಿ ಸಿದ ಪದವು. ರೇವಾದೇವಿ' ಎಂಬುದೇ ಅದರ ಅರ್ಥವು. ಆ ಹಿಂದಿನ ರಾಜ ಧಾನಿಯ ಹೆಸರನ್ನೇ ತಮ್ಮ ಕುಲಬಾಲಿಕೆಯರಿಗಿಡುವ ರಾಷ್ಟ್ರಕೂಟ ರಾಜರ ಪದ್ದತಿ ನಿಜವಾಗಿಯೂ ಆಕರ್ಷಕವಾಗಿದೆ. ನಾಡೋಜ ಪಂಪವನ್ನು ಬರೆದಲ್ಲಿ, ಆ ಹೆಸರಿನ ಸಾರ್ಥಕತೆ ಏನು ಎಂಬ ವಿಷಯವು, ನಮಗೆ ಈಗಿನಷ್ಟು ಸ್ಪುಟವಾಗಿ ಹೊಳೆದಿಲ್ಲ. ಇವೆಲ್ಲ ಒಟ್ಟುಗೂಡಿದಲ್ಲಿ ರಾಷ್ಟ್ರಕೂಟರ, ಮಾನ್ಯಖೇಟಾತ್ತೂರ್ವದ ರಾಜಧಾನಿ, ವಿಂಧ್ಯಾದ್ರಿಯ ರೇವಾನಗರಿಯೇ ಎಂದು ಮತ್ತಿಷ್ಟು ಸಿದ್ದವಾಗುತ್ತಿದೆ.
ಗೋವಿಂದನು ಸು. ಕ್ರಿ. ಶ. ೭೯೩-೯೪ರಿಂದ ೮೧೨-೧೩ರ ವರೆಗೆ ರಾಜ್ಯ ಭಾರವನ್ನೆಸಗಿದ್ದನು. ದಿಗ್ವಿಜಯಗಳನ್ನೆಸಗಿ ಹಗೆಗಳ ಹುಟ್ಟನ್ನಡಗಿಸುವ, ಸಾರ್ವಭೌಮತ್ವವನ್ನು ಸಂಪಾದಿಸುವ, ಪ್ರಜಾವರ್ಗವನ್ನು ಪಾಲಿಸುವ, ಕರ್ತವ್ಯಗಳಲ್ಲಿ ಪ್ರವಣನಾಗಿದ್ದ ಆತನಿಗೆ ಸ್ವಸುಖಸಾಧನಾದಿಗಳಿಗೆ ಎಡೆಯೇ
ಇರಲಿಲ್ಲ. ಅವನಿಗೆ ಅದರಲ್ಲಿ ಆಸಕ್ತಿಯೂ ಇದ್ದಿಲ್ಲವಾಗಿ ಗೋವಿಂದನ ಕಾಲದ ತೋರುತ್ತಿದೆ. ಅವನ ಕಾಲದಲ್ಲಿ ಉಂಟಾದ ಕೆಲವು
ಕನ್ನಡ ಸಾಹಿತ್ಯದ
ದ ಸಂಸ್ಕೃತಭಾಷಾ ಶಾಸನಗಳು ಸಿಕ್ಕಿವೆ. ಆದರೆ, ಅವನ ಸೂಚನೆ
ಕಾಲದ ಕನ್ನಡಶಾಸನ ಮತ್ತು ಕನ್ನಡ ಸಾಹಿತ್ಯಗಳು ಈ ವರೆಗೂ ತಿಳಿದುಬಂದಿಲ್ಲ ಎಂದೇ ಹೇಳಬೇಕು. ಆದರೂ, ನಮಗೊದಗಿದ ಒಂದು ಚಿಕ್ಕುದಾದ ಗದ್ಯ ಶಾಸನದ ಪ್ರಮುಖ ಭಾಗವನ್ನು ಕೆಳಗೆ ಕಾಣಿಸುತ್ತೇವೆ:
*ಸ್ವಸ್ತಿ ಶ್ರೀ ಶಕನೃಪಕಾಲಾತೀತ ಸಮ್ವ ರಂಗಳ್
ಏಲ್ಲೂ ರ್ಪತ್ಯಾ ಅನೆ ಯಾ ಸುಭಾನು ಎಮ್ಯಾನಷ (೯)ದ ವೈಸಾಖಮಾಸ ಕೃಷ್ಣಪ ಕ್ಷ ಪಞ್ಚಮಿ ಬೃಹಸ್ಪತಿವಾರವಾಗಿ ಸ್ವಸ್ತಿ. ಪ್ರಭೂ
* Elements of South-Indian Paliography - 1878 Page 137. ಈ ಗ್ರಂಥದೊಳಗಿನ ಅನುಬಂಧದಲ್ಲಿಯ ೩ನೆಯ ಶಾಸನ P. XXVI.
-
೩೪ -
ತವರ್ಷ ಶ್ರೀ ಪ್ರಭುವೀವಲ್ಲಭ ಮಹಾರಾಜಾಧಿರಾಜ ಪ (ರ) ಮೇ ಶ್ವರ ಗೋಯಿಂದರ ಭಟಾರರಾ ಗಾಮುಣ್ಣಿಗಳ ಮಹಾದೇ ವಿಯಾರಾಗಿ ರಾಜ್ಯಾಪ್ರವರ್ಧಮಾನ ಕಾಲದೊಳ್ ... .
ಈ ಶಾಸನದೊಳಗೆ ಇದರ ಕಾಲ ಸ್ಪುಟವಾಗಿದೆ. ಶಾ. ಶ. ೭೨೬ ಎಂದರೆ ಕ್ರಿ. ಶ. ೮೦೪ನೆ ಇಸವಿಯಾಗುತ್ತಿದೆ. ಇದನ್ನು ರಾಜಾದೇಶದಂತೆ ಬರೆಯಿಸಿ ದಾತನು, ಕಡೆಯ “ಮಹಾಸಂಧಿ ವಿಗ್ರಹಾಧಿಪತೇಃ ಶ್ರೀಧರಸ್ಯ ಜೀಶಿತಃ” ಎಂಬುದರಿಂದ, ಮಹಾ ಸಂಧಿವಿಗ್ರಹಾಧಿಪತಿಯಾಗಿದ್ದ ಶ್ರೀಧರನೆಂಬ ಪ್ರಧಾನ ನೆಂಬುದೂ ಗೊತ್ತಾಗುತ್ತಿದೆ. ಅರಸನ ಮಹಾರಾಣಿಯ ಹೆಸರು ಗಾಮುಂಡಬ್ಬೆ ಎಂದೂ ಕಾಣುತ್ತದೆ. ಆಕೆಯಲ್ಲಿ ಉದಯಿಸಿದ ರಾಜನ ಏಕಮಾತ್ರ ಕುಮಾ ರಕನೇ ಅಮೋಘವರ್ಷ ನೃಪತುಂಗನೆಂಬಲ್ಲಿ ಸಂಶಯವಿಲ್ಲ. ಈ ಶಾಸನ ದೊಳಗೆ, ರಾಮೇಶ್ವರ ತೀರ್ಥದಲ್ಲಿಯ ಕೆಲಮಂದಿ ಗೊರವರ ಸ್ಥಾನಮಾನಾ ದ್ಯನುಕೂಲತೆಗಳನ್ನು ನೆಲೆಗೊಳಿಸಿದ ವಿಷಯವು ನಿರೂಪಿತವಾಗಿದೆ. ಗೊರವ ರೆಂದರೆ, ಆಗಿನ ಕಾಲದಲ್ಲಿ ಅತಿ ಪೂಜ್ಯರಾದ ಪುರೋಹಿತರ ಪಂಗಡಕ್ಕೆ ಸೇರಿದವ ರೆಂಬುದು ಕವಿರಾಜ ಮಾರ್ಗದೊಳಗಿನಿಂದಲೂ ಗೊತ್ತಾಗುತ್ತಿದೆ. ಇಲ್ಲಿ ತೋರುವ ರಾಮೇಶ್ವರ ತೀರ್ಥವೆಂದರೆ, ಭರತಭೂಮಿಯ ಅತಿ ದಕ್ಷಿಣ ಭಾಗದ ರಾಮೇಶ್ವರವೋ ಬೇರೆಯೋ ಎಂಬುದು ಗೊತ್ತಾಗಿಲ್ಲ. ಆದಿಯದೇ ಆಗಿದ್ದರೆ ಗೋವಿಂದನು ದಕ್ಷಿಣ ದಿಗ್ವಿಜಯಕ್ಕೆ ದಾಳಿಯಿಟ್ಟ ಕಾಲದಲ್ಲೇ ಈ ಶಾಸನವು
ನೆಲೆಗೊಂಡುದಾಗಿರಬಹುದು,
ಜಗತ್ತುಂಗನವು, ಅಂಥ ಧರ್ಮವೀರತೆಯನ್ನು ಪ್ರಕಾಶಪಡಿಸುವ ಶೀಲ ಕಾಲಗಳು, ಅವನ ಕಾಲದಲ್ಲಿ ಕೆಲವಾದರೂ ಕನ್ನಡ ಸಾಹಿತ್ಯದ ಉದ್ಧಂಥ ಗಳು ತಲೆದೋರಿ ಇರಬೇಕಲ್ಲವೆ? ನಾಗವರ್ಮನ ಕಾವ್ಯಾವಲೋಕನದೊಳಗೆ ಒದಗುವ ಈ ದೃಷ್ಟಾಂತ ಪದ್ಯವನ್ನು ಪರಿಶೀಲಿಸಿರಿ:
*ಕಾಯಲುಂಬಲಗರ್ವದಿಂ ನೆಲನೆಲ್ಲಮಂ ನೆಲಕೆಲ್ಲಮಾ | ತಿ೯ಯಲುಂ ತನಗಾಚತುರ್ಭುಜಮುಂ ಭುಜದ್ವಯಮಾದನಿ | ತಾಯದಾಯತಿ ತೋಳೊಳೊಪ್ರಿರೆ ಮಿಕ್ಕ ಪೆಂಪಿನ ಕೀರ್ತಿನಾ | ರಾಯಣಂ ದಯೆಗೆಯ್ದೆ ಚಾಗಚತುರ್ಭುಜಂಗರುಡ ಧ್ವಜಂ !
*ಕರ್ಣಾಟಕ ಕಾವ್ಯಾವಲೋಕನ ದ್ವಿತೀಯ ಮುದ್ರಣ ಮೈಸೂರು ಓರಿ ಯಂಟಲ್ ಲೈಬ್ರರಿ ಕನ್ನಡ ಗ್ರಂಥಮಾಲೆ ನಂ, ೨೨; ಪುಟ ೯೨, ಪದ್ಯ ೩೫೮,
-
೩೫
-
ಹಿಂದೆ ದೃಷ್ಟಾಂತಿಸಿದ ಸಂಜನ ಶಾಸನಭಾಗದಲ್ಲಿಯೂ ತೋರುವ ಈ 4 ಕೀರ್ತಿನಾರಾಯಣ' ಎಂಬ ಬಿರುದು, ಈ ಜಗತ್ತುಂಗ ಗೋವಿಂದರಾಜನದು ಎಂಬಲ್ಲಿ ಸಂಶಯವಿಲ್ಲ, ಚಾಗ ಚತುರ್ಭುಜ' ಎಂಬುದು ಈತನ ಇನ್ನೊಂದು ಬಿರುದಾದರೆ 'ಗರುಡಧ್ವಜ' ಎಂಬುದು ರಾಷ್ಟ್ರಕೂಟ ರಾಜರಿಗೆಲ್ಲ ಸಾಮಾನ್ಯ ವಾದುದು. ಈ ಪದ್ಯಾರ್ಥವು ಆಲಂಕಾರಿಕ ಕ್ರಮಬದ್ಧವಾಗಿದ್ದರೂ ಲಲಿತ ವಾಗಿದೆ. ಆದರೂ ವಾಚಕರೆಲ್ಲರ ಅವಗಾಹನೆಗಾಗಿ ವಿಸ್ತರಿಸುತ್ತೇವೆ: - ಬಲಗರ್ವದಿಂದ ನೆಲವೆಲ್ಲವನ್ನು ಕಾಯುವುದು, ಸಾಮರ್ಥಪೂರ್ವಕವಾಗಿ ನೆಲ ಕ್ಕೆಲ್ಲ ದಾನಮಾಡುವುದು ಎಂಬ ಎರಡು ಧಾರ್ಮಿಕ ಕಾರ್ಯಗಳೇ ಗೋವಿಂದ ರಾಜನ ಪ್ರಮುಖೋದ್ಯೋಗಗಳಾಗಿ ಪರಿಣಮಿಸಿದ್ದು ವು. ಅದರಿಂದ, ಆ ಚಾಗ. ಚತುರ್ಭುಜನ ಚತುರ್ಭುಜಗಳು ಕಾರ್ಯಗಳಿಗೆ ತಕ್ಕಂತೆ ಭುಜದ್ವಯವಾಗಿ ತೋರಿದುವು. ಅದರಿಂದ • ಅನಿತ್ಯಾಯದ ಆಯತಿ' ಆ ಎರಡೇ ತೋಳುಗಳೊಳಗೆ ಒಪ್ಪಿರುವಲ್ಲಿ, ಚಾಗಚತುರ್ಭುಜನೂ ಗರುಡಧ್ವಜನೂ ಆದ ಕೀರ್ತಿನಾರಾಯಣನು ಲೋಕಕ್ಕೆ ದಯೆಗೆಯ್ಯಲಿ.” ಪರಾಂಬರಿಸಿದಲ್ಲಿ, ಆತನ ಕಾಲದಲ್ಲಿ ರಚಿತವಾದ ಯಾವುದೋ ಒಂದು ಮಹಾಕಾವ್ಯದ ಆದಿಯ ಮಂಗಲ ಶ್ಲೋಕವಿದು ಎಂದು ಭಾಸವಾಗುತ್ತಿದೆ. ಇದನ್ನು ಎಲ್ಲರೂ ಒಪ್ಪಬಹುದು. ಕಾವ್ಯಾವಲೋಕನದಲ್ಲಿ ಹಿಂದಿನ ಮಹಾಪ್ರಬಂಧಗಳಿಂದ, ಆಕರ ಗೊತ್ತಾಗದ ಅನೇಕ ಪದ್ಯಗಳು ದೊರಕುತ್ತಿವೆ. ಅವುಗಳೊಳಗೆ ೧೩-೧೪ ಪದ್ಯಗಳು ಹಿಂದಿನ ವಿಶಿಷ್ಟವಾ ದೊಂದು ಭಾರತದಿಂದ ಎತ್ತಿಕೊಂಡುದು ಎಂಬಲ್ಲಿ ಸಂಶಯವಿಲ್ಲ. ಶ್ರೀಕೃಷ್ಣನು ಭಾರತ ಕಥಾನಕದಲ್ಲಿ ಅತಿ ಪ್ರಮುಖನಷ್ಟೆ, ಅದರಿಂದ ಈ ಕೀರ್ತಿನಾರಾಯಣ ಗೋವಿಂದನನ್ನೆ ಗರುಡಧ್ವಜ ಶ್ರೀಕೃಷ್ಣನೊಡನೆ ಅಭಿನ್ನನನ್ನಾಗಿ ಮಾಡಿ ಬಣ್ಣಿಸಿದ ಆ ಭಾರತ ಕಾವ್ಯದ ಆದಿಯ ಶ್ಲೋಕವೇ ಇದಾಗಿರಬಹುದೆಂದು ನಮ್ಮ ಭಾವನೆ.
ಈ ಗೋವಿಂದರಾಜನು ಬಹುಶಃ ಕ್ರಿ. ಶ. ೮೧೩-೧೪ರ ಮಧ್ಯದಲ್ಲಿ ಅಥವಾ ಒಂದಿಷ್ಟು ಹಿಂದೆ ಮುಂದೆ ಕೀರ್ತಿ ಶರೀರನಾಗಿರಬೇಕು. ಯಾಕೆಂದರೆ ನೃಪತುಂಗನು ಪಟ್ಟವನ್ನೇರಿದುದು ಸುಮಾರು ಅದೇ ಕಾಲದಲ್ಲೆಂದು ಊಹಿಸ ಲ್ಪಟ್ಟಿದೆ. ಹಿಂದೆ ವಿಸ್ತರಿಸಿದ 'ಹೇಲಾಪುರ'ದ ಸಂಗತಿ, ಸಂಜನ ಶಾಸನದ ೩೪ನೆ ಪದ್ಯದಲ್ಲಿ ತೋರಿದರೆ, ಮತ್ತಿನ ೩೫ನೆಯದರಲ್ಲಿ ಗೋವಿಂದರಾಜನು ಸರ್ಗಂಗತನಾದನೆಂಬುದು ನಿರೂಪಿತವಾಗಿದೆ. ತಂದೆ ಗೋವಿಂದನಿಗೆ ಬೀಡು ದಾಣಗಳು ಅಲ್ಲಲ್ಲಿ ಹಲವಿದ್ದರೂ, ಮತ್ತಿನ ಸಂದರ್ಭಕ್ಕನುವಾಗಿ ಪುತ್ರ ನೃಪ
ತುಂಗನು ಆ ಹೇಲಾಪುರವನ್ನೆ ಮಾನ್ಯಖೇಟವೆಂಬ ನಾಮಾಂತರವೆಸಗಿ ತನ್ನ. ರಾಜಧಾನಿಯನ್ನಾಗಿ ಮಾರ್ಪಡಿಸಿ ಕೊ೦ಡ ನು , ಅದಕ್ಕೆ ತಂದೆ ಅಲ್ಲಿಯೇ ಸ್ವರ್ಗಂಗತನಾದುದೆಂಬ ಸ್ಮಾರಕ ಭಾವನೆಯೂ ಪ್ರಮುಖ ಕಾರಣವಾಗಿ ಇದ್ದಿರ ಬಹುದು. ಆ ೩೫ನೆ ಶ್ಲೋಕದಲ್ಲಿ 'ಪುತ್ರ ಶ್ಲಾಸ್ಮಾಕಮೇಕಃ' ಎಂದು ಕಾಣುವುದ ರಿಂದ ನೃಪತುಂಗನೊಬ್ಬನೇ ಅವನ ಮಗನೆಂಬಲ್ಲಿ ಸಂಶಯವಿಲ್ಲ.
ಈ ವಿಷಯಗಳನ್ನೆಲ್ಲ ಪರಿಭಾವಿಸಿದಲ್ಲಿ ನಮಗೆ ಹೀಗೆ ತೋರುತ್ತಿದೆ: ದಂತಿದುರ್ಗನಿಗಿಂತಲೂ ಹಿಂದಿನವರ ರಾಜಧಾನಿ ಎಲ್ಲಿತ್ತೆಂಬುದು ಇನ್ನೂ ತಿಳಿದಿಲ್ಲ. ಆದರೆ, ದಂತಿದುರ್ಗ-ಶುಭತುಂಗ ಕೃಷ್ಣರಾಜ-ಧ್ರುವ ನಿರುಪಮ ಜಗತ್ತುಂಗ ಗೋವಿಂದ ಎಂಬ ನಾಲ್ಕು ಮಂದಿ ಪ್ರಮುಖ ರಾಜರ-ಎಂದರೆ ರಾಷ್ಟ್ರಕೂಟ ಸಿಂಹಾಸನ ಸ್ಥಾಪನಾಚಾರ್ಯರ ಅರಮನೆ ಇದ್ದುದು, ವಿಂಧ್ಯಾ ದ್ರಿಯನ್ನೊಂದಿದ ರೇವಾ ರಾಜಧಾನಿಯಲ್ಲೇ. ಉಳಿದವರ ಅರಮನೆಯ ಹೆಸರು ಆಗಾಗ ಭಿನ್ನರೂಪವನ್ನೊಂದಿರಲೂಬಹುದು. ಜಗತ್ತುಂಗನದಕ್ಕೆ ಶ್ರೀಭವನ ಎಂದೇ ಹೆಸರಾಗಿತ್ತು. ಈ ಸಂದರ್ಭದಲ್ಲಿ ಶ್ರೀ. ಅಳೇಕರರು ತಮ್ಮ ಗ್ರಂಥದೊಳಗೆ, ಶ್ರೀ. ಕಸಿನ್ಸ್ ಅವರ ಅಭಿಪ್ರಾಯವನ್ನೆತ್ತಿಕೊಂಡು ವಿಸ್ತರಿಸಿದ ಅಂಶವನ್ನು ಸೂಚಿಸಿದರೆ ಉಚಿತವಾದೀತೆಂದು ಭಾವಿಸುತ್ತೇವೆ: . * ನೃಪತುಂಗನಿಂದ ಹಿಂದಿನವರಾದ ದಂತಿದುರ್ಗಾದಿಗಳ ಕಾಲದ ರಾಷ್ಟ್ರಕೂಟ ರಾಜರ ರಾಜಧಾನಿ ಏಲೋರಗವಿಗಳ ಹತ್ತಿರ ಇದ್ದಿರಬೇಕೆಂದು ಶ್ರೀ, ಡಾ. ಕಸಿನ್ಸ್ ರವರು ಸೂಚಿಸುತ್ತಾರೆ. ಇಂಡಿಯ ಎಪ್ಲಾಸಿನಲ್ಲಿ ತೋರುವ, ಏಲೋರ ಗವಿಗಳಿಂದ ಮೇಲಿರುವ ಸೂಲಭಂಜನ್ ಎಂಬ ಸ್ಥಳವೆ ಆ ಸ್ಥಳವಾಗಿದ್ದಿರ ಬೇಕು. ಅಲ್ಲಿ ಪ್ರಾಚೀನಕಾಲದ ಒಂದು ಮಹಾನಗರದ ಅವಶೇಷಗಳೂ, ಬಲು ದೊಡ್ಡದಾದ ಒಂದು ಕೆರೆಯೂ ತೋರುತ್ತಿರುವುದೇ ಅವರ ಈ ಭಾವನೆಗೆ ಕಾರಣ. ಅಭಿಪ್ರಾಯವಿದು ಬಹುಶಃ ಸರಿಯಾಗಿರಲೂಬಹುದು. ಆದರೆ ಮಲ್ಲೇಡಕ್ಕಿಂತ ಹಿಂದಿನ ರಾಜಧಾನಿ, ಈ ಸೂಲಭಂಜನ್ ಎಂಬ ಪ್ರದೇಶದಲ್ಲಿ ಇದ್ದಿರಬೇ ಕೆಂದು, ಇದಕ್ಕಿಂತಲೂ ಹೆಚ್ಚಿನ ಸಾಧನಗಳಿಲ್ಲದೆ ಸ್ವೀಕರಿಸಲಾರೆವು. ಪ್ರಕೃತ ಆ ಹಿಂದಿನ ರಾಜಧಾನಿ ಯಾವುದು ಎಂಬಲ್ಲಿ ನಮಗೆ ನಿಶ್ಚಿತವಾದ ತಿಳುವಳಿಕೆ ಇಲ್ಲ.”
ಶ್ರೀ. ಅಳೇಕರರು ನಮ್ಮ ಈ ಸಾಧನಗಳನ್ನೂ ಸಿದ್ದಾಂತವನ್ನೂ ವಿವೇಚಿ ಸುವರಾಗಿ ನಂಬುತ್ತೇವೆ.
|
* R. Kutas & their times P. 48.
ಅಮೋಘವರ್ಷ ನೃಪತುಂಗ
ರಾಷ್ಟ್ರಕೂಟರ ಕುಲವಿರೋಧಿಗಳಾಗಿದ್ದ ಕೆಲಮಂದಿ ಮಾಂಡಲಿಕರಿಗೆ ಗೋವಿಂದನು ಕೀರ್ತಿಶೇಷನಾದುದೆಂದರೆ ಅದೊಂದು ಹಬ್ಬವೇ ಆಯಿತು. ಇವರೊಳಗೆ, ವೆಂಗಿಯ ಅಥವಾ ಮೂಡಣ ಚಾಲುಕ್ಯವಂಶದ ಎರಡನೆ ವಿಜಯಾ ದಿತ್ಯನೆಂದರೆ ಮೇಲುಗೈಯವನು. ಇವನು ಸುಮಾರು ಕ್ರಿ. ಶ. ೭೯೩ರಲ್ಲಿ ಪಟ್ಟವನ್ನೇರಿ ಆ ಮೇಲೆ * ೪೮ ವರ್ಷ ದೊರೆಯಾಗಿದ್ದನು ಎಂದು ಗೊತ್ತಾಗಿದೆ.
ಇದರಿಂದ ಕ್ರಿ. ಶ. ೮೪೧ರ ವರೆಗೂ ಈತನು ಜೀವಂತ ರಾಜ್ಯ ವಿಸ್ಥವ ನಾಗಿದ ನೆಂದೂ, ಜಗತುಂಗ ಗೋವಿಂದನ ಸಮಕಾಲ ದಲ್ಲೇ ತನ್ನ ಪಟ್ಟವನ್ನೇರಿದವನೆಂದೂ ಸಿದ್ಧವಾಗುತ್ತಿದೆ. ಈ ವಿಜಯಾದಿತ್ಯ ನರೇಂದ್ರನಿಗೆ (ಮೃಗರಾಜ' ಎಂಬ ಬಿರುದಿದ್ದಂತೆ ನಮ್ಮ ನಾಡೋಜ ಪಂಪದಲ್ಲಿ ಕೊಟ್ಟ ಕುಲಚಿತ್ರಕ್ಕಾಧಾರವಾದ ಶಾಸನದಿಂದ ಗೊತ್ತಾಗಿದೆ. ಈತನು ಮಹಾ ಪರಾಕ್ರಮಿ, ಜಗತ್ತುಂಗ ಗೋವಿಂದನೊಡನೆ ಬಲುಬಾರಿ ಹೋರಾಡಿ ಸೋತು ಸೊರಗಿ ಸೊಪ್ಪಾದವನು. ಗೋವಿಂದನು ಅಸ್ತಂಗತನಾದನೆಂಬುದನ್ನರಿತೊಡನೆ ಸೇನಾಸಮೇತನಾಗಿ ರಾಷ್ಟ್ರಕೂಟ ರಾಜಧಾನಿಗೆ ದಾಳಿಯಿಟ್ಟು ಅದನ್ನು ಸೂರೆ ಮಾಡಿದನಂತೆ; +1 ರಾಜಾಧಿರಾಜ - ರಾಜಪರಮೇಶ್ವರ' ಮೊದಲಾದ ಚಕ್ರವರ್ತಿ ತ್ವದ ಬಿರುದುಗಳನ್ನು ಧರಿಸಿಕೊಂಡನಂತೆ.
* (ಮೂಡಣ ಚಾಲುಕ್ಯರು' (Eastern Chalukyas) ಎಂಬ ತಮ, ಇಂಗ್ಲಿಷು ಭಾಷೆಯಲ್ಲಿ ಬರೆದ ಚಾರಿತ್ರಿಕ ಪ್ರಬಂಧದಲ್ಲಿ ಶ್ರೀ. ಡಿ. ಸಿ. ಗಂಗುಲಿ ಯವರು, ಆ ಎರಡನೆ ವಿಜಯಾದಿತ್ಯನು ಆಕ್ರಮಿಸಿದ ರಾಷ್ಟ್ರಕೂಟ ರಾಜ ಧಾನಿಯ ಹೆಸರೇನೆಂದು ಸೂಚಿಸುವುದಿಲ್ಲ. ಬಹುಶಃ ಅದು ಮಾನ್ಯಖೇಟನೇ ಎಂಬುದು ಅವರ ಭಾವನೆಯಾಗಿದ್ದಿರಬೇಕು. ಗೋವಿಂದರಾಜನು ಕೀರ್ತಿ ಶರೀರನಾದುದು ತನ್ನ ಹೇಲಾಪುರದಲ್ಲೇ ಆಗಿರಬೇಕೆಂಬುದನ್ನು ಹಿಂದೆ ಸೂಚಿ ಸಿದೆವಷ್ಟೆ, ಆಗ ಮಹಾರಾಣಿ-ಗಾಮುಂಡಜ್ಜೆ, ರಾಜಕುಮಾರ ನೃಪತುಂಗ
* ನಾಡೋಜಪಂಪದಲ್ಲಿ ಕೊಟ್ಟ ವೆಂಗಿಯ ಚಾಲುಕ್ಯರ ವಂಶಚಿತ್ರವನ್ನೀಕ್ಷಿಸಿರಿ. ಪುಟ ೧೭೩.
+Eastern Chalukyas by D. C. Ganguly P. P. 57-64.
೩೮ --
ಮೊದಲಾದ ರಾಜಬಂಧುಗಳೂ ಬಹುಶಃ ಅಲ್ಲೆ ಇದ್ದಿರಬೇಕು. ರೇವಾ ರಾಜ ಧಾನಿಯಲ್ಲಿ ಮಂತ್ರಿ ಪ್ರಮುಖರಾದ ಅಧಿಕಾರಿಗಳೂ ಸೈನಿಕರೂ ಇದ್ದಿರಬಹುದು. ಅವರೆದೆಯ ಚಕ್ರವರ್ತಿಯ ಮರಣವಾರ್ತೆಯಿಂದ ಅಸ್ತವ್ಯಸ್ತವಾಗಿದ್ದಿರ ಬೇಕು. ವಿಜಯಾದಿತ್ಯನಿಗೆ ಅದು ಸುಸಂಧಿಯೇ ಆಯಿತು. ಈ ಮೂಡಣ ಚಾಲುಕ್ಯ ರಾಜನೇ ಆಕ್ರಮಿಸಿದುದೆಂದು ಹೇಳದಿದ್ದರೂ ಸಂಜನಶಾಸನಕಾರನು ವಿಸ್ತರಿಸಿದ ಆ ಸಂಗತಿಯನ್ನು ಮನನಮಾಡಲೇಬೇಕು. ಈ ಶ್ಲೋಕದಲ್ಲಿ ಪ್ರತಿಮಾಡಿದವನ ಕರದೋಷದಿಂದಾಗಿ ಬಹಳ ಅಕ್ಷರ ದೋಷಗಳಿದ್ದರೂ ತಾತ್ಪರ್ಯವು ಸುಗಮವಾಗಿದೆ.
ದೃಷ್ಟಾತನ್ನವ ರಾಜ್ಯವರ್ಜಿತ ಬೃಹದ್ಧರ್ಮಪ್ರಭಾವಂ ನೃಪಂ | ಭೂಯಃ ಷೋಡಶರಾಜ್ಯವತಯುಗ ಪ್ರಾರಂಭ ಇತ್ಯಾಕುಲಃ | ನಶ್ಯಂತರನುಪ್ರವಿಶ್ಯ ವಿಷಮೋಮಾಯಾಮಯೋಸ್ ಕಲಿ | ಸಾಮಂತಾನ್ ಸಚಿವಾನ್ ಸಬಾಂಧವಜನಾನಭಯತ್
ಸ್ವೀಕೃತಾನ್ $ ೩೮ ? ಶಠಮಂತ್ರಂ ಪ್ರವಿಧಾಯ ಕೂಟಶಪಥೈರೀಶ ಸ್ವತಂತ್ರಾಃ ಸ್ವಯಂ | ವಿನಿಹತ್ಕಚಿತಯುಕ್ತಕಾರಿ (ದಿ) ಪುರುಷಾನ್ ಸರ್ವೆಸ್ವಯಂ
ಗ್ರಾಹಿಣಃ | ಪರಯೋಸಿದ್ದು ಹಿತಾಸ್ವಸೇತಿ ನಪುನರ್ಭದಃ ಪಶೂನಾಮಿವ | ಪ್ರಭುದೇವಂ ಕಲಿಕಾಲ ಇತ್ಯವಸಿತಂ ಸಮುದ್ವತಃ : ೩೯ if
ಈ ಶ್ಲೋಕಗಳೆರಡರ ತಾತ್ಪರ್ಯಗಳನ್ನೇ ಸಂಗ್ರಹಿಸಿ ಕೆಳಗೆ ಕಾಣಿಸು ತೇವೆ:-(೩೮) ಈ ನೂತನ ರಾಜ್ಯಾಧಿಕಾರವನ್ನೊಂದಿದ ನೃಪತುಂಗನನ್ನೂ
ಅವನ ಧಾರ್ಮಿಕ ನರ್ತನವನ್ನೂ ನೋಡಿ, ಧಾರ್ಮಿಕವಾದ ಕೃತಯುಗವೇ ತಲೆದೋರಿತೆಂದು ವ್ಯಾಕುಲನಾದ ಈ ಕಲಿ' (ಅಸೌಕಲಿ:) ಅಶಕ್ತನಾದರೂ ಮೆಲ್ಲನೆ ಒಳಹೊಕ್ಕು ಸಾಮಂತ-ಮಂತ್ರಿ-ಬಾಂಧವರನ್ನು ಕ್ರೋಭೆಗೊಳಿಸಿದನು. (೩೯) ಈ ಕಲಿ ಕಪಟೋಪಾಯದಿಂದ ಪ್ರಜಾವರ್ಗವನ್ನು ಯುಕ್ತಕ ನಿಯುಕ್ತ ಕಾದ್ಯಧಿಕಾರಿಗಳನ್ನು ಭೇದಗೊಳಿಸಿದನು. ಪ್ರಜೆಗಳಲ್ಲಿ ನೆಲೆಗೊಂಡ ಪುರುಷಾರ್ಥ ಭಾವನೆ ಕೆಟ್ಟು ಹೋದರೆ ಮತ್ತೇನು? ಎಲ್ಲರೂ ಪಶುಸಮಾನರಾಗುತ್ತಾರೆ. ಅಂಥ ಪಶುಪ್ರಾಯರಿಗೆ ಪರಸ್ತ್ರೀ-ಪುತ್ರಿ-ಸೊಸೆ ಎಂಬ ವಿಚಾರವಾದರೂ ಇದೆಯೆ?
-
೩೯
-
ಇಲ್ಲ. ಕಲಿಕಾಲವೇ ಹೀಗೆ ಪ್ರಭು ಎನ್ನಿಸಿತು. ಹಿಂದಿನ ಸತಿಯೇ ದುರ್ವತ್ತಿಯಾಗಿ ಮಾರ್ಪುಗೊಂಡಿತು.”
ಇದರಿಂದ ಆ ಕೊಳ್ಳೆಗಾರರೆಸಗಿದ ಅತಿಕ್ರಮದ ಪರಿಮಿತಿ ಎಷ್ಟೊಂದು ಹೊಳೆದು ತೋರುತ್ತಿದೆ. ವಿಪ್ಲವಕ್ಕೆ ನಾಯಕನಾದವನ ಹೆಸರು ಇಲ್ಲಿ ತೋರ ಲಿಲ್ಲ. ಆದರೂ “ಮಾಯಾಮಯಃ ಅಸೌಕಲಿಃ” ಎಂದು ಬೆರಳೆತ್ತಿ ತೋರಿ ಸುವ ಮಾತಿನಿಂದ (ಈ ಕಲಿ' ಎಂದರೆ ಯಾರೋ ಒಬ್ಬ ವಿರೋಧಿ ನಾಯಕನು ಎಂದು ಭಾಸವಾಗುತ್ತಿದೆ. ಆ ಮೂಡಣ ಚಾಳುಕ್ಯ ರಾಜನಾದ ಎರಡನೆಯ ವಿಜಯಾದಿತ್ಯನಿಗೆ “ಕಲಿ ವಿಷ್ಣುವರ್ಧನ' ಎಂಬ ಮಗನೊಬ್ಬನಿದ್ದುದು ನಮ್ಮ 'ನಾಡೋಜ ಪಂಪ'ದ ಆ ವಂಶಾವಳಿಯಲ್ಲೇ ತೋರುತ್ತಿದೆ. ಅಲ್ಲಿಯ 'ಕಲಿ' (ಪರಾಕ್ರಮಿ) ಎಂಬ ಕನ್ನಡದ ವಿಶೇಷಣ ಪದವು ಆತನ ಪರಾಕ್ರಮದ್ಯೋತಕವೇ
ಆಗಿರಬೇಕು. ಆದರೆ, ಸಂಸ್ಕೃತ ಭಾಷೆಯಲ್ಲಿ ಅದೇ ಪದವು (ಕಲಿ ಪುರುಷ' ಎಂಬ ಅರ್ಥದ ನೀಚಾರ್ಥದಲ್ಲಿ ಉಪಯುಕ್ತವಾಗಿದೆ. ಎರಡನೆ ವಿಜಯಾದಿತ್ಯ ನಾಗಲಿ ಅಥವಾ ಅವನ ಮಗನಾದ ಆ ಕಲಿ ವಿಷ್ಣುವರ್ಧನನಾಗಲಿ ರೇವಾ ನಗರಿಯನ್ನೇ ಕೊಳ್ಳೆ ಹೊಡೆದಿರಬೇಕೆಂದು ನಮ್ಮ ಭಾವನೆ. ಅದರಿಂದಲೇ ಮತ್ತಿನ ಪದ್ಯದಲ್ಲಿ “ಪ್ರಭುದೇವಂ ಕಲಿಕಾಲ ಇತ್ಯವಸಿತಂ” ಎಂದರೆ “ಹೀಗೆ ಕಲಿಕಾಲವೇ ಪ್ರಭು (ದೊರೆ) ವಾಗಿ ಮಾರ್ಪಟ್ಟುದು” ಎಂದು ಬಣ್ಣಿಸಿದ್ದಾನೆ.
- “ಹೇಲಾಪುರ'ದಲ್ಲಿ ಗೋವಿಂದನು ದಿವಂಗತನಾಗಿರಬೇಕು; ಆಗ ರಾಜ ಬಂಧುಗಳೆಲ್ಲ ಅಲ್ಲಿಗೆ ಬಂದಿರಬೇಕು ಎಂಬುದು ನಮ್ಮ ಊಹೆ ಮಾತ್ರವೇ. ಅದು ಹೇಗೂ ಇರಲಿ; ನೃಪತುಂಗನು ರೇವಾ ರಾಜಧಾನಿಯಲ್ಲಿ ಪಟ್ಟಾಭಿ ಸಿಕ್ತನಾದುದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಸರಿಯಾದ ಆಧಾರ ವಿನ್ನೂ ನಮಗೆ ದೊರೆತಿಲ್ಲ. ಆದರೆ, ಹಿಂದೆ ವಿಸ್ತರಿಸಿದ ಸಂಜನ ಶಾಸನದ ೩೮ನೇ ಪದ್ಯದೊಳಗಿನ ದೃಷ್ಯಾ, ತನ್ನವರಾಜ್ಯಂ ಊರ್ಜಿತ ಬೃಹದ್ಧರ್ಮ ಪ್ರಭಾವಂ ನೃಪಂ ।” ಎಂಬ ಆದಿಯ ಪಾದವನ್ನೀಕ್ಷಿಸಿರಿ. ಇದರಿಂದ ಧಾರ್ಮಿಕ ಪ್ರಭಾವನಾದ ನೃಪತುಂಗನು ತನ್ನ 'ನವರಾಜ್ಯ'ವನ್ನು ಏಳಿಗೆಗೇರಿಸುತ್ತಿದ್ದ ಕಾಲವದು ಎಂಬ ಅರ್ಥವಾಗುತ್ತಿದೆ. ಈ ಭಾವನಾನುಸಾರವಾಗಿ ನೋಡಿದರೆ ಪರಂಪರಾನುಗತವಾದ “ ರೇವೆ'ಯಲ್ಲೇ ಆತನ ಪಟ್ಟಾಭಿಷೇಕವಾಗಿರಬೇಕು ಎಂದು ಭಾಸವಾಗುತ್ತಿದೆ. ಅದು ಹಾಗಿರಲಿ; ಅಂಥ ಭಾರತ ಚಕ್ರ ವರ್ತಿಯಾಗಿದ್ದ ತಂದೆಯನ್ನು ಕಳಕೊಂಡ ಪುತ್ರನಿಗೆ, ಪಟ್ಟವನ್ನೇರಿದೊಡನೆ,
- ೪೦ - ಅಥವಾ ಸ್ವಲ್ಪವೆ ಕಾಲದಲ್ಲಿ ರಾಜ್ಯಭ್ರಷ್ಟನಾಗಬೇಕಾದ ದುರವಸ್ಥೆ ಒದಗಿತು.
- ಕವಿರಾಜ ಮಾರ್ಗದೊಳಗೆ ದೃಷ್ಟಾಂತಿಸಿದ ಹಲವು ಪದ್ಯಗಳು ಹಿಂದಿನ ಮತ್ತು ಸಮಕಾಲದ ಪ್ರಬಂಧಗಳಿಂದ ಎತ್ತಿದುವಾಗಿರಲೇ ಬೇಕು. ಅವುಗ
ಳೊಳಗೆ ಹಲವು ಸ್ವತಃ ನೃಪತುಂಗನ ಜೀವನವನ್ನೆ ವಾಚ್ಯ ವಿಪ್ಲವವೂ
* ವಾಗಿಯೋ, ವ್ಯಂಗ್ಯವಾಗಿಯೋ ಚಿತ್ರಿಸಿದ ಯಾವುದೋ ಸಾಯನ ಪ್ರಬಂಧದಿಂದ ಆರಿಸಿಕೊಂಡವುಗಳು ಆಗಿರಬಹುದು.
ಹೀಗೆ ರಾಜ್ಯವಿಪ್ಲವದಿಂದ ದುರವಸ್ಥೆಗೀಡಾದ ಉತ್ತಮ ವಂಶದ ರಾಜಕುಮಾರನ ಸ್ಥಿತಿಯನ್ನೆ ವರ್ಣಿಸಿ ಸಮಾಸೋಕ್ರಲಂಕಾರಕ್ಕೆ ಕೊಟ್ಟ ದೃಷ್ಟಾಂತ ಪದ್ಯವನ್ನೀಕ್ಷಿಸಿರಿ
ದಾನಪರನಂ ನಿಜೋನ್ನತ ಮಾನನ ನಾರೂಢ ವಿಪುಳವಂಶನನಂತೋಂ !!
ದಾನೆಯನಪಾಯಪಂಕದೊ ಲೇನುಂತಳ್ಳಿಲ್ಲದಿರ್ದ್ದುದಂ ಕಾಣಿಸಿದಂ i ೧೩೦ 3 ಪರಿ-೩ !!
ಬೇಟೆಗಾರನೊಬ್ಬನಿಂದ ರಚಿತವಾದ ಒಂದು ಅಪಾಯಪಂಕ' (ಕಪ್ಪಿನಲ್ಲಿ) ದಲ್ಲಿ ಸಿಲುಕಿ ಕಷ್ಟ ಪಡುವ (೧. ಮದ ಸುರಿಯುತ್ತಿರುವ ೨. ದಾನವೀಯುವುದ ರಲ್ಲಿ ಆಸಕ್ತನಾದ) ಉನ್ನತಮಾನ (೧ ಮದವೇರಿದ, ೨ ಅಭಿಮಾನಿಯಾದ) ವಿಪುಳ ವಂಶನಂ (೧. ಬಿದಿರುಹಿಂಡುಗಳ ಮಧ್ಯದಲ್ಲಿರುವ, ೨. ಉತ್ತಮ ವಂಶಜನಾದ) ಒಂದಾನೆಯನ್ನು ಕಾಣಿಸಿದನು; ಎಂಬುದೆ ಇದರ ಅರ್ಥ: ಅಂಥ ಆನೆಯನ್ನೆ ಪ್ರಮುಖಾರ್ಥದಿಂದ ಸೂಚಿಸಿದುದಾದರೂ, ಇದರಲ್ಲಿ ಹೊಳೆವ ದ್ವಿತೀಯಾರ್ಥವನ್ನು ಮುಂದಿನ ಪದ್ಯದಲ್ಲಿ ಕವಿಯೇ ವಿಸ್ತರಿಸಿದ್ದಾನೆ:
ತ್ಯಾಗಾದಿಗುಣಗಣೋನ್ನತ ಭಾಗಿಯ ನೇನಾನುಮೊಂದು ಪಾಯಾಂತರದಿಂ 18,
ನೀಗಲ್ನೆಯದೆ ಯನುಪಮ ನೀಗಣಿದದಿನಾನೆ ಮಾಡಿ ನುಡಿದಂ ಬಗೆಯಂ ! ೧೩೧ !
ಇಲ್ಲಿ ವಿಸ್ತರಿಸಿದಂತೆ (ಈಗಣಿದದಿಂ ಆನೆಮಾಡಿ' ನುಡಿದುದೆಂದರೆ, ಇಂಥ ಅವಸ್ಥೆಯಲ್ಲಿ ಹಗೆಗಳ ಬಲೆಗೆ ಸಿಲುಕಿಹೋದ ನೃಪತುಂಗರಾಜನ ಅವಸ್ಥೆಯನ್ನೆ ಸೂಚಿಸಿದುದಾಗಿ ತೋರುತ್ತಿದೆ. ಈ ರೀತಿಯಲ್ಲಿ ಹೊಳೆಯುವ ನೃಪತುಂಗ
ರಾಜನ ಭಿನ್ನಭಿನ್ನಾವಸ್ಥೆಗಳು ಅನೇಕ ದೃಷ್ಟಾಂತ ಪದ್ಯಗಳಲ್ಲಿ ಅಲ್ಲಲ್ಲಿ ದೊರೆಯು ತಿವೆ. ಪ್ರಬಲರಾದ ಹಗೆಗಳನ್ನು ಗೆಲ್ಲಬೇಕಾದರೆ ಯಾವ ರೀತಿಯ ಮಂತ್ರೋ ತ್ಸಾಹ ಕಾಲನಿರೀಕ್ಷಣೆಗಳೊಡನೆ ಕಾರ್ಯವೆಸಗಬೇಕು ಎಂಬುದನ್ನು ನಿದರ್ಶನಾ ಲಂಕಾರದ ದೃಷ್ಟಾಂತ ಪದ್ಯಗಳಲ್ಲಿ ಸೂಚಿಸುತ್ತಾನೆ, ಅವುಗಳೊಳಗೆ ಕೆಲ ವನ್ನು ಕೆಳಗೆ ಸೂಚಿಸುತ್ತೇವೆ
ಪ್ರತಿಕೂಲನಾಗಿ ನಿಲೆ ವಿಧಿ ಮತನಯಮನುಕೂಲವಾಗಿ ನಿಲೆಯುಂ ಕಾರ್ಯ | ಸ್ಥಿತಿಯಂ ಸಾಧಿಸಲಾಗದು *ಮೃತಕಕೃತೋಪಕೃತಿಯ ವೊಲನರ್ಥಾಯಾಸಂ || ೧೪೬ ti ಪದೆದುದಯಿಸಲೆಂದುಂ ಕಾ ಲದೊಳಲ್ಲದುದಾರತೇಜನರ್ಕನು ಮಲ್ಲಂ ಸದುದಿತ ಗುಣನದಂನಯ ವಿದನಪ್ಪಂ ಕಾಲಮಂನೆರ೦ತೋರ್ಕೆ ನೃಪಂ ॥ ೧೪೭ ii ಪಡೆಯಲಿಯಲಾದೊಡ ಜಯಂ ಕಿಡಿಸುಗುಮಂತ: ಕಳಂಕ ನೃಪಮಂಡಳಮಂ !! ತಡೆಯದೆ ತನಸ್ಸಭಾವಂ ಕಿಡಿಸುವ ವೋಲದು ರಾಹು ಶಶಿಮಂಡಲಮಂ : ೧೪೮ !! ಕಿ ಆದೆಂದೇ ಆ ಸಗೆಯಂ ಪದೇ ಪದೆ ಕಿಡಿಸದೆಡೆ ಸೆತ್ತು ಕಾಲದ ಬಲಮಂ ನೆರೆದಿಆಗುಂನೆದನುವಿಂ ಮಣಿಸುವವೋಲ್ ದಿವಸಕರನನಂಬುದ ನಿಕರಂ !೧೪೯ H ಒಳಗಿರ್ದ್ದ ವೈರಿಗಳ ಮೊ ಕಳಮೀಯರ್ ಪೆರ್ಚ್ಚಲಧಿಕ ವಿಭವರ್ಕ್ಕಳುಮಂ |
* “ನ ಮೃತಸ್ಯ ಔಷಧಂ ಪ್ರಯೋಜನಂ ೨೭೨ 3” ೧೯೨೪ನೆ ಇಸವಿ ಯೊಳಗೆ ಮೈಸೂರಿನ ಗವರ್ನ್‌ಮೆಂಟು ಪ್ರೆಸ್ಸಿನಲ್ಲಿ ಅಚ್ಚಾದ ಕೌಟಿಲಿಯಂ ಅರ್ಥ ಶಾಸ್ತ್ರಂ' ಎಂಬ ಗ್ರಂಥದ ಅನುಬಂಧ ರೂಪದ (ಚಾಣಕ್ಯ ಸೂತ್ರ'ದಲ್ಲಿರುವ ಈ ಸೂತ್ರಾರ್ಥವನ್ನೊ೦ದಿ ಈ ಹೋಲಿಕೆ ಬಂದಂತಿದೆ.
2-------------------------------------------
-
೪೨ -
ತಳರದೊಡನಿದ್ದು ಬಡಬಾ ನಳನೆಂದುಂ ಪೆರ್ಚ್ಚಲೀಯದಂತಂಬುಧಿಯಂ # ೧೫೦ !! ಸರಪಕ್ಷ ಮುಳ್ಳಿನಂ ತನ ಗಿರವುಬ್ಬಸ ಮದಜಿನ ಆವುದದನೇಗೆಯುಂ || ಪರೆದ ಪುಡಿಯೆಲ್ಲಮಂ ನೀರ್ ನೆರೆದು ಕೆಸರ್ವಾಡದನ್ನೆಗಂ ನೆಲಸುಗುಮೇ || ೧೫೧ ||
ಇವೆಲ್ಲವೂ ರಾಜನೀತಿ ತತ್ವವನ್ನೂ, ಹಿಂದೆ ಕಾಣಿಸಿದಂತೆ ನೃಪತುಂಗನು. ಅನುಭವಿಸಿದ ಅವಸ್ಥೆಗಳನ್ನೂ ತನ್ನಿವಾರಣೋಪಾಯವನ್ನೂ ಹೊಳೆಯಿಸುವ ಮಾತುಗಳು.
ಅಂಥ ಅಪಾಯಪಂಕದಿಂದ ನೃಪತುಂಗನು ಹೇಗೆ ಪುನರುದಯ ಮೇಲೇರಿದನೆಂಬ ವಿಷಯವು ಸಂಜನ ಶಾಸನ ಭಾಗದಲ್ಲಿ ಸರಿಯಾಗಿ ತೋರುತ್ತಿದೆ:
ಗುರುಬುಧನನುಯಾತಸ್ಸಾ? (ಶಾ)ರ್ಯಪಾತಾಳ ? (ದಾಳ್ಯ) ಮುಲ್ಲಾ ! ದುದಯಗಿರಿಮಹಿ ರಟ್ಟ ಮಾರ್ತಂಡದೇವ: |
ಪುನರುದಯ ಮುಪೇದ್ರ ತೇಜಸ್ವಿ ಚಕ್ರಂ || ಪ್ರತಿಹತವಥ ಕೃತ್ವಾಲೋಕಮೇಕ: ಪುನಾತಿ || ೪೧ ||
ಇಲ್ಲಿ ತೋರುವಂತೆ ರಟ್ಟಿವಾರ್ತಂಡ ದೇವನೆನ್ನಿಸಿದ ನೃಪತುಂಗನು ಪುನರುದಯವನ್ನೊಂದಲು (ಆರ್ಯ - ಪಾತಾಳಮಲ್ಲ'ನೇ ಉದಯಗಿರಿಯಂತೆ ಆಧಾರಭೂತನಾದನೆಂದು ನಿರ್ಧಾರವಾಗುತ್ತಿದೆ. ಈ ಪೂಜ್ಯಾರ್ಥಕವಾದ ( ಆರ್ಯ' ಎಂಬ ವಿಶೇಷಣಕ್ಕೆ ಪಾತ್ರನಾದ ಆ ಪಾತಾಳಮಲ್ಲ' ಎಂದರೆ ಯಾರು? ಎಂಬುದು ಶ್ರೀ. ಎ. ಎಸ್. ಅಳೇಕರರಿಗೂ ನಿಸ್ಸಂದೇಹವಾಗಿ ಗೊತ್ತಾಗಿಲ್ಲ. ಅವರು ಅದು ನೃಪತುಂಗನ ಚಿಕ್ಕಪ್ಪನಾದ ಗುಜರಾತಿನ ಸುವರ್ಣವರ್ಷ ಕರ್ಕನೇ ಆಗಿರಬೇಕೆಂದು * ಊಹಿಸುತ್ತಾರೆ. ಆದರೆ, ಅವ ನಿಗೆ ಪಾತಾಳವಲ್ಲ ಎಂಬ ಬಿರುದಾದರೂ ಇದ್ದಂತೆ ಬೇರಾವ ಆಧಾರವೂ ತೋರುವುದಿಲ್ಲ. ನಮ್ಮಣಿಕೆಯಂತೆ ಈ ಶ್ಲೋಕದ ಆ ಭಾಗದಲ್ಲಿ ಒಂದಿಷ್ಟು ತಪ್ಪು ಬಿದ್ದಿರುವಂತೆಯೂ, ಮೂಲದಲ್ಲಿ ಅದು ಶೈಾರ್ಯಪಾದಾಳ್ಮಾತ್
* The R Kutas & times Ps 72-73
-
೪೩
-
ಎಂದು ಇದ್ದಿರಬೇಕಾಗಿಯೂ ತೋರುತ್ತಿದೆ. ಈ ಭಾವನೆಗೆ ಕಾರಣವೇನೆಂಬು ದನ್ನು ಮುಂದೆ (ಕವಿರಾಜಮಾರ್ಗಕಾರನಾರು?' ಎಂಬ ಪರಿಚ್ಛೇದದಲ್ಲಿ ಸರಿ ಯಾಗಿ ವಿಸ್ತರಿಸುತ್ತೇವೆ. ಅಂತೂ ರಟ್ಟ ಮಾರ್ತಾಂಡದೇವನು ಪುನರುದಯ ನನ್ನೊಂದಿದ, ಅಥವಾ ನೃಪತುಂಗನು ಹಗೆಗಳನ್ನು ಗೆದ್ದು ತನ್ನ ರಾಜ್ಯಾಧಿಕಾರ ವನ್ನು ನೆಲೆಗೊಳಿಸಿದ ಸಂಗತಿ ಇಲ್ಲಿ ವಿಶದವಾಗಿದೆ. ಮತ್ತಿನ ಶಾಸನ ಪದ್ಯವು ನೃಪತುಂಗನ ಸ್ವಭಾವವನ್ನೂ ಅದಕ್ಕನುವಾಗಿಯೇ ಆತನು ಮೇಗೇರಿದ ಸಂಗತಿಯನ್ನೂ ವಿಸ್ತರಿಸುತ್ತಿದೆ
ರಾಜಾತ್ರಾ ಮನ ಏವ ತಸ್ಯ ಸಚಿವ: ಸಾಮಂತಚಕ್ರಂ ಪುನ: | ತನ್ನಿತೇಂದ್ರಿಯ ವರ್ಗ ಏಷ ವಿಧಿವದ್ಯಾಗಾದಯಸ್ಸವಕಾಃ | ದೇಹಸ್ಥಾನಮಧಿಷ್ಠಿತ: ಸ್ವವಿಷಯಂ ಭೋಕ್ತುಂ ಸ್ವತಂತ್ರ: ಕ್ಷಮಃ | ತಸ್ಮಿನ್ ಭೋಕ್ತರಿ ಸನ್ನಿಪಾತ ವಿವಶೇ ಸರ್ವೇಪಿನಶ್ಯಂತಿತೇ || ೪೨ 11
ಈ ಪದ್ಯದಲ್ಲಿ ಶಾಸನಕವಿ ಆಲಂಕಾರಿಕವಾಗಿ ನೃಪತುಂಗನ ತಾತ್ವಿಕ ವಾದ ರಾಜಕೀಯ ಚಾತುರ್ಯ ಭಾವನೆಯನ್ನು ವಿಸ್ತರಿಸಿದ್ದಾನೆ:- ಆತ್ಮವೇ ರಾಜನು, ಮನಸ್ಸೇ ಅವನ ಮಂತ್ರಿ, ಆ ಇಂದ್ರಿಯವರ್ಗವೇ ಸಾಮಂತ ಚಕ್ರವು, ಶುದ್ಧ ಜೀವನವಿಧಾನಕ್ಕನುವಾದ ವಾಗಾದಿಗಳೇ ಸೇವಕರಾಗಿ (ಆತ್ಮ ರಾಜನು) ದೇಹವೆಂಬ ಆಸ್ಥಾನಪೀಠವನ್ನಧಿಷ್ಠಾನವೆಸಗಿದಲ್ಲಿ, ತನ್ನ ವಿಷಯ'ವನ್ನು (೧. ಇಂದ್ರಿಯಗ್ರಾಹ್ಯ ರೂಪ ರಸಾದಿಗಳನ್ನು; ೨. ದೇಶವನ್ನು ಅನುಭವಿಸಲು ಸ್ವತಂತ್ರನೂ ಸಮರ್ಥನೂ ಆಗುತ್ತಾನೆ. 'ಸನ್ನಿ ವಾತ' (೧. ಸನ್ನಿಪಾತರೋಗ; ೨. ಸಜ್ಜನ ಸಂಕಷ್ಟ) ದಿಂದ ವಿವಶನಾದ ಅವನು ಹಾಗೆ ಪಥ್ಯಸೇವನೆಗೆಯು ತಿರುವಲ್ಲಿ ನಾನಾಬಗೆಯ ಆ ಸನ್ನಿಪಾತ'ರೂಪದ ಲೋಕಭೆಗಳು ತಾವಾಗಿ ಶಾಂತತೆಯನ್ನೊಂದುತ್ತಿವೆ.
ಆಧುನಿಕ ವೈದ್ಯಕೀಯ ಸಂಶೋಧನೆಗನುವಾಗಿ ನೋಡಿದರೂ ಸನ್ನಿಪಾತ ರೋಗದ ನಿವಾರಕೌಷಧವೆಂದರೆ ಅಂಥ ಪಥ್ಯವೊಂದೇ ಎಂದು ಸಿದ್ದವಾಗಿದೆ ಯಲ್ಲವೆ? ಇದರಿಂದ ಅಮೋಘವರ್ಷನು ಎಷ್ಟು ಜಾಣ್ಮಯಿಂದ, ರಾಜನೀತಿಯ ಶುದ್ಧ ಧರ್ಮಕ್ಕನುಸಾರವಾಗಿ ವರ್ತಿಸಿ ಶತ್ರುನಿವಾರಣವೆಸಗಿದನೆಂಬುದು ವ್ಯಕ್ತ ವಾಗುತ್ತಿದೆ. ಈ ಸಂದರ್ಭದಲ್ಲಿ ಶಾಸನಕವಿ ವೈದ್ಯಶಾಸ್ತ್ರಕ್ಕನುವಾಗಿ ಬಣ್ಣಿಸಿದರೆ, ಕವಿರಾಜ ಮಾರ್ಗಕಾರನೂ ನಿದರ್ಶನಾಲಂಕೃತಿಯ ಮತ್ತಿನ ಉದಾಹರಣಗಳಲ್ಲಿ ಅದೇ ವೈದ್ಯಮಾರ್ಗವಿಡಿದು ವಿಸ್ತರಿಸಿದುದಕ್ಷಿಸಿರಿ:
-
೪೪
-
ಕುಜಗೊಂಡು ನೆಗಟ್ಟಿನಿಚ್ಚೆಯ ನಜಿಯದೆ ತನ್ನಿಚ್ಚೆಯಿಂದ ಕಜ್ಜಂಬೇಡ್ವಂ | ತಣ ಸಲಿಸಲಾಟಿನಾ ರ್ತನ ತೆ ಅನಜಿಯದೆ ಮರ್ದುವೇ ಬೆನತೆ ಆದಿಂ l ೧೫೨ ii ಪರಿಣಾಮ ಪಥ್ಯಮಂ ಸುಖ ಪರಿಕರನಂ ಮೆಚ್ಚದನ್ನರಾರಿ ಮಾತಂ 3 ನಿರತಿಶಯರಸಸಮೇತನ
ನರೋಚಕಂ ಮೆಚ್ಚದಂತೆ ಸೊಗಯಿಸುವುಣಿಸಂ : ೧೫೩ | ಇಲ್ಲಿ ನೆಗಟ್ಟಿ -ನ' ಎಂದರೆ ರಾಜಕಾರ್ಯ ಧುರಂಧರನಾದ ಅರಸನ, 'ಬುದ್ದಿ ಪೂರ್ವಕವಾದ ಸೂಚನೆಯನ್ನರಿಯದೆ ಕಂಡ ಬಟ್ಟೆಯಲ್ಲಿ ಕಾಲಿಡುವ ಮಂತ್ರಿಯೇ ಮೊದಲಾದ ಅಧಿಕಾರಿಗಳನ್ನು, ರೋಗಿಯ ರೋಗ ವಿಧಾನವನ್ನರಿ ಯದೆ ಮದ್ದುಗೊಡುವ ವೈದ್ಯರೆಂಬವರೊಡನೆ ಹೋಲಿಸಿದ್ದಾನೆ. ಅದರಿಂದ ಕೂಡಲೆ ಪಥ್ಯ (ಹಿತ) ವಾಗಿ ತೋರದಿದ್ದರೂ ಪರಿಣಾಮದಲ್ಲಿ ಹಿತಕಾರಿಯಾದ ಈ ಮಾತನ್ನು ಎಲ್ಲರೂ ಸ್ವೀಕರಿಸುವರೆಂದು ನಂಬುತ್ತಾನೆ. ಹಾಗೆ ನಂಬದವ ರನ್ನು ಆರೋಗ್ಯಕಾರಿಯಾದ, ಹಿತಮಿತವಾದ ಪಥ್ಯ ಭೋಜನವನ್ನು ಮೆಚ್ಚದ, (ಅರೋಚಕಿ'ಗಳೊಡನೆ ಹೋಲಿಸುತ್ತಾನೆ. (ಸೊಗಯಿಸುವ ಉಣಿಸು' ಎಂದರೆ, ಹಿಂದೆ ವರ್ಣಿಸಿದ ಸನ್ನಿಪಾತ ರೋಗಕ್ಕೆ ಔಷಧ ಸಮಾನವಾದ (ಪರಿಣಾಮ ಪಥ್ಯ'ವಾದ ಆಹಾರವೇ. ಅದನ್ನು ಹಿತ ಮಿತವಾಗಿ ಸೇವಿಸಿದಲ್ಲಿ ವಾಸಿಯಾಗುವ ರೋಗವೆಂದರೆ ಸನ್ನಿಪಾತವೇ ಸರಿ. ಅದರಿಂದ ಹಿಂದೆ ದೃಷ್ಟಾಂತಿಸಿದ ಶಾಸನ ಶ್ಲೋಕವೂ, ಕವಿರಾಜ ಮಾರ್ಗದ ಈ ದೃಷ್ಟಾಂತ ಪದ್ಯಗಳೂ, ಏಕಾರ್ಥಕಗಳೂ ಏಕ ಸಂದರ್ಭವನ್ನೆ ಸೂಚಿಸುವವುಗಳೂ ಎಂಬಲ್ಲಿ ಸಂಶಯವಿಲ್ಲ. ಈ ಪದ್ಯಗಳೂ, ಇನ್ನೂ ಕವಿರಾಜ ಮಾರ್ಗದೊಳಗೆ ಅಲ್ಲಲ್ಲಿ ತೋರುವ ಈ ರೀತಿಯ ಸಂದರ್ಭವನ್ನೇ ಹೊಳೆಯಿಸುವ ಹಲವು ಪದ್ಯಗಳೂ, ಯಾವ ಗ್ರಂಥಗಳಿಂದ ಎತ್ತಿಕೊಂಡವುಗಳೆಂಬುದು ಗೊತ್ತಾಗಿಲ್ಲ. ಬಹುಶಃ ನೃಪತುಂಗನ ಕಾಲದಲ್ಲಿ ಪ್ರಕಟಿತವಾದ - ಅಮೋಘ ವರ್ಷ ಯಶಸ್ಸನ್ನು ಮಿರುಗಿಸುವ ಯಾವುದೋ ಒಂದು ಪ್ರಬಂಧದಿಂದ ಎತ್ತಿಕೊಂಡವುಗಳಾಗಿರ ಬೇಕು ಎಂದು ಭಾವಿಸುತ್ತೇವೆ. ಅದಂತಿರಲಿ; ಪ್ರಥಮತಃ ಅವನು ಪಟ್ಟಾಭಿ ಸಿಕ್ತನಾದುದು ರೇವಾ ರಾಜಧಾನಿಯಲ್ಲೇ ಆಗಿರಬೇಕು ಎಂಬ ನಮ್ಮ ಸಂದೇಹ
-
೪೫
-
ವನ್ನು ಹಿಂದೆ ಸೂಚಿಸಿದ್ದೆವಷ್ಟೆ; (ಪುನರುದಯ'ವನ್ನೊಂದಿದ ಮೇಲಂತೂ ಮಾನ್ಯಖೇಟವನ್ನೇ ರಾಜಧಾನಿಯನ್ನಾಗಿ ಮಾಡಿದನು, ಎಂಬಲ್ಲಿ ಸಂದೇಹವಿಲ್ಲ. ಅದೇ ಸಂಜನ ಶಾಸನದೊಳಗೆ ಮುಂದಿನ ೫೪ನೇ ಗದ್ಯ ಭಾಗದಲ್ಲಿ ತೋರುವ ಮಾನ್ಯಖೇಟ ರಾಜಧಾನ್ಯವಸ್ಥಿತೇನ ಮಯಾ' ಎಂಬ ನೃಪತುಂಗನ ಮಾತೇ ಆ ಸಂಗತಿಯನ್ನು ನಿರ್ಧರಿಸುತ್ತಿದೆ.
ನೃ ಸ ತು೦ಗ ನು ಬಲು ಚಿಕ್ಕವನಾಗಿದ್ದಾಗಲೇ ಪಟ್ಟವನ್ನೇರಿದ್ದನು; ಎಂದು ಶ್ರೀ. ಅಳೇಕರರು ತಮ್ಮ ಗ್ರಂಥದಲ್ಲಿ ವಿಸ್ತರಿಸಿದ್ದಾರೆ. ಅದು ಹೇಗೂ
ಇರಲಿ, ಆದಿಯ ವಿಪ್ಲವಕಾರಿಗಳೇ ಮೊದಲಾದ ಹಗೆ ಮುತ್ತಿನ
' ಗಳನ್ನಡಗಿಸಿ ಮಾನ್ಯಖೇಟ ರಾಜಧಾನಿಯಲ್ಲಿ ಪಟ್ಟವೇರಿ ಸಂಕಟ
ತನ್ನ ರಾಜ್ಯವನ್ನು ಒಂದು ನೆಲೆಗೆ ತರುವಲ್ಲಿ ಕೆಲಗಾಲ ದಾಟಿರಲೇ ಬೇಕು. ಆ ಬಗೆಯ ರಾಜ ಕಾರ್ಯವನ್ನು ಕೈಕೊಂಡು ನಡೆ ಯಿಸಲು ಪ್ರಾಯಸ್ಥರಲ್ಲದ ಕಿರಿಯರಿಗೆ ಸಾಧ್ಯವೂ ಆಗದಲ್ಲವೆ? ನೃಪತುಂಗ ನಿಗೆ ವಿರೋಧಿಗಳಿಂದೊದಗಿದ ಮತ್ತಿನ ಸಂಕಟವೆಂದರೆ, ಅವನ ಮಗನಾದ ಎರಡನೆಯ ಕೃಷ್ಣ ರಾಜನು ಯುವರಾಜನಾಗಿದ್ದ ಸಮಯದಲ್ಲಿ. ಈ ಮತ್ತಿನ ಸಂಕಟದ ಸಂಗತಿ ಶಾ, ಶ. ೭೮೩ರಲ್ಲಿ ಎಂದರೆ ಕ್ರಿ. ಶ. ೮೬೧ರಲ್ಲಿ ಕೊರೆ ಯಲ್ಪಟ್ಟ ನೃಪತುಂಗನ * ಕೊಣ್ಣೂರ ಶಾಸನದಿಂದ ತಿಳಿದು ಬರುತ್ತದೆ. ಈ ಸಂಕಷ್ಟದ ವಿಷಯವೆಂದರೆ ಮುಂದಿನದು:
ಕಾವೇರಿ ತೀರದಲ್ಲಿರುವ ಕೇದಲ “ ಎಂಬ ದುರ್ಗದಲ್ಲಿ ಗಂಗರಾಜನು ನೃಪತುಂಗನ ಸಾಮಂತನಾಗಿ ಆಳುತ್ತಿದ್ದನು. ಈ ಗಂಗರಾಜರು ಮೊದಲಿ ನಿಂದಲೂ ರಾಷ್ಟ್ರಕೂಟ ಕುಲ ವಿರೋಧಿಗಳು ಎಂಬುದು ಹಿಂದೆಯೇ ಗೊತ್ತಾಗಿ ದೆಯಷ್ಟೆ. ಆಗ ಗುಜರಾತಿನಲ್ಲಾಳುತ್ತಿದ್ದ ರಾ. ಕೂಟ, ಧುವನೆಂಬವನೂ ನೃಪತುಂಗನನ್ನು ವಿರೋಧಿಸುತ್ತಿದ್ದು ಸಂಭವಿಸಿದ ಯುದ್ಧದಲ್ಲಿ ಮಡಿದು ಹೋಗಿದ್ದನು. ಅದರಿಂದ ಮತ್ತಿನ ಅಲ್ಲಿಯ ರಾಷ್ಟ್ರಕೂಟರೂ ನೃಪತುಂಗನ ಪತನ ವನ್ನೇ ಹಾರಯಿಸುತ್ತಿದ್ದರು ಎನ್ನಬಹುದು. ಹಿಂದೆ ಸೂಚಿಸಿದಂತೆ ಕವಿರಾಜ ಮಾರ್ಗದ ದೃಷ್ಟಾಂತ ಪದ್ಯದೊಳಗೊಂದರಲ್ಲಿ ತೋರುವ “ಒಳಗಿರ್ದ್ದ ವೈರಿ ಗಳ್” . . .. . (ಪ, ೧೫೦- ಪಂ. ೩) ಎಂಬುದು ಅಂಥ ಅಂತಶ್ಯತುಗಳನ್ನೇ ಸೂಚಿಸಿದುದಾಗಿರಬೇಕು. ಆಗ, ಹಿಂದೆ ಸೂಚಿಸಿದಂತೆ ಕ್ರಿ. ಶ. ೮೪೧ರ ವರೆಗೆ
* Epigraphia Indica Vol II No 4.
-
೪೬
-
ಆಳಿದ ವೆಂಗಿಯ ಚಾಲುಕ್ಯ ವಿಜಯಾದಿತ್ಯನೂ, ಅವನ ಮಗ ಕಲಿ ವಿಷ್ಣು ವರ್ಧ ನನೂ ತೀರಿಹೋಗಿದ್ದರು. ಆ ವಿಷ್ಣುವರ್ಧನನು ಬರಿಯ ಎರಡುವರೆ ವರ್ಷವೇ ಆಳಿದುದೆಂದು ನಾಡೋಜಸಂಪದ ಆ ವಂಶ ಚಿತ್ರದಿಂದಲೂ ಅಲ್ಲಿಯೇ ಸೂಚಿ ಸಿದ “ತುತಃ ಕಲಿ ವಿಷ್ಣುವರ್ಧನೋ ದ್ವ (ರ್ಧ) ವಷ (ರ್ಷಾ) ಣಿ” ಎಂಬ ಶಾಸನ ಭಾಗದಿಂದಲೂ ಸ್ಪಷ್ಟವಾಗುತ್ತಿದೆ. ಆ ವಿಷ್ಣುವರ್ಧನನ ಮಗನಾದ ಗುಣಗಾಂಕ ವಿಜಯಾದಿತ್ಯನು ಆಗ ಆಳುತ್ತಿದ್ದನು. ಆತನು ಮತ್ತೆ ೪೪ ವರ್ಷ ಆಳಿದನೆಂಬುದೂ ಆ ಶಾಸನದಿಂದಲೇ ತಿಳಿದುಬರುತ್ತಿದೆ. ಆದಿಯಲ್ಲಿ ಸೂಚಿ ಸಿದ ಕೇದಲದುರ್ಗದ ಗಂಗರಾಜನೆ ಮತ್ತಿನವರೆಲ್ಲರ ನೆರವನ್ನೂ ಪಡೆದು ನೃಪತುಂಗನಿಗೆ ಕರುಳು ಕೊರೆಯುವ ದುಃಖ ಸಂಕಷ್ಟಗಳನ್ನೊದಗಿಸಿದಾತನು. ಸ್ವತಃ ನೃಪತುಂಗನ ಮಗನಾದ ಎರಡನೆಯ ಕೃಷ್ಣರಾಜನನ್ನೇ ಗಂಗರಾಜನು ಆಕರ್ಷಿಸಿದ್ದನು. ಅದೇ, ನೃಪತುಂಗನ ಆ ಮರುಕಕ್ಕೆ ಕಾರಣ.
- ಒಂದು ರೀತಿಯಲ್ಲಿ ನೋಡಿದರೆ ಅಮೋಘವರ್ಷನ ಬಾಲ್ಯದಲ್ಲೋಗಿದ ರಾಜ್ಯ ವಿಪ್ಲವವು ಇದಕ್ಕಿಂತಲೂ ಭಯಂಕರವಾಗಿ ತೋರಬಹುದು. ಆದರೂ ಇದರೊಳಗೆ ತನ್ನ ಏಕಮಾತ್ರ ಕುಮಾರನೇ ವೈರಿವರ್ಗದೊಳಗಾದುದರಿಂದ ಅವನ ಅಂತರಂಗದಲ್ಲಿ ಮೊದಲಿನದಕ್ಕಿಂತಲೂ ಇದು ಹೆಚ್ಚು ದುಃಖದಾಯಕ ವಾಗಿ ಇದ್ದಿರಬೇಕು. ಹೊರಗಣ ಹೋರಾಟವು ಅವನನ್ನು ಬಗ್ಗಿಸಲಾರಲಿಲ್ಲ. ಆದರೆ ಒಡಲುರಿ ಏರಿ ಆತನೆದೆಯನ್ನು ಕುಗ್ಗಿಸಿತು.
ಹೀಗೆ ಸಂಗ್ರಹವಾಗಿ ಸೂಚಿಸಿದ ಸಂಗತಿಯನ್ನು ಸಾಧಾರವಾಗಿ ಒಂದಿಷ್ಟು ವಿಸ್ತರಿಸದಿದ್ದರೆ ಚಾರಿತ್ರಿಕ ಪದ್ದತಿ ನೇರವಾಗಿ ಸಾಗಲಾರದು. ಅದರಿಂದ ಒಂದಿಷ್ಟು ವಿವೇಚಿಸುವ:- ಮುಗಿಲೊಡ್ಡಿದಂತೆ ಮುಸುಕುತ್ತಾ ಬರುವ ಹಗೆಗಳ
ಸಂಚು ವಿವೇಕಿಯಾದ ಅಮೋಘವರ್ಷನಿಗೆ ಹೊಳೆಯ ಸಂಕಟದ
ಲಾರಂಭಿಸಿತು. ಹಿಂದೆ "ಹಗೆ ಕಿರಿದು ಎಂದು ತಾನು ನಿವೃತ್ತಿಯ ರಾಜ ಶಾಂತಿಯ ಅಲಕ್ಷಿಸುತ್ತಿದ್ದುದು ತಪ್ಪಾಯಿತು” ಎಂದಾತನಿಗೆ ಮಂದ
ಬ್ಲಾಯಿತು. ಅದರಿಂದ ತನ್ನ ಸಾಮಂತನೂ ತಮ್ಮ ರಾಷ್ಟ್ರ ಕೂಟ ರಾಜಧಾನಿಗೆ ವಂಶಾನುಕ್ರಮವಾಗಿ ಬಾಗಿದ ಬಂಟನೂ ಆದ ವೀರ ಬಂಕೆಯನನ್ನು ಸೇನೆಯಿಂದ ಸಜ್ಜುಗೊಳಿಸಿ ಆ ಗಂಗವಾಡಿಯನ್ನು ಸಂಪೂರ್ಣ ವಾಗಿ ಹದಗೊಳಿಸಲೆಂದು ಆಜ್ಞಾಪಿಸಿದನು. ಈ ಸಂಗತಿ ಸ್ವತಃ ನೃಪತುಂಗನ ಮಾತಿನಿಂದಲೆ ಕೊಣ್ಣೂರ ಶಾಸನದಲ್ಲಿ ವರ್ಣಿತವಾಗಿದೆ:
-
೪೭
-
- - - - - - - ಬಂಕೇಶಃ ಸೆಲ್ಲಕೇತನಃ || ೧೯ !! “ಮದೀಯೋ ವಿತ ತಜ್ಯೋತಿರ್ನಿಶಿತಾಸಿರಿನಾಪರಃ | ಉನ್ಮೂಲಿತದ್ವಿಷತ ಕ್ಷಮೂಲೋ ಮೌಲಬಲಪ್ರಭುಃ || ೨೦ || ಮತ್ರಸಾದೇನ ಸಂಲಬ್ದ ವನವಾಸಿ ಪುರಸ್ಪರಾನ್ | ಗ್ರಾಮಾದ್ ತ್ರಿಂಶತೃಹಸ್ರಾಣಿ ಭುನವಿರತೋದಯಃ || ೨೧ : ಮಹಾಪ್ರತಾಪಾದುಚ್ಛೇದ ಮುಚ್ಚನ್ಮದಿಚ್ಛಯಾ | ಮೂಲಾದುಚೇತ್ತುಮುತ್ತುಂಗಾಂ ಗಂಗವಾಡಿವಟಾಟಿವೀಂ : ೨೨ !!
ಈ ಶಾಸನ ಭಾಗಾರ್ಥವು ಸುಲಭವಾಗಿಯೇ ಗೊತ್ತಾಗುವಂತಿದ್ದರೂ ಸಂಸ್ಕೃತ ಭಾಷೆಯಲ್ಲಿರುವುದರಿಂದಾಗಿ ಮೇಲಿಂದ ಮೇಲೆ ವಿಸ್ತರಿಸುತ್ತೇವೆ:
“ಸೆಲ್ಲಕೇತನನಾದ ಬಂಕೆಯನೆಂದರೆ ನನ್ನ ಕೈಯನ್ನೊಂದಿ ಪ್ರಜ್ವಲಿಸುವ ಬೇರೊಂದು ನಿಶಿತಾಸಿಯೊ ಎಂಬಂತಿರುವವನು; ಅಗಣಿತವಾದ ಹಗೆಗಳ ಸಂದಣಿಯನ್ನು ನಿರ್ಮೂಲಿಸಿ ಹೆಸರುಗೊಂಡು ಮೂಲಬಲದಿಂದ ಯುಕ್ತನಾದ ವನು; ಮತ್ತು ನನ್ನ ದಯೆಗೆ ಪಾತ್ರನಾಗಿ ಬನವಾಸಿಯೇ ಮೊದಲಾದ ಮೂವತ್ತು ಸಾವಿರ ಗ್ರಾಮಗಳಿಗೆ ಒಡೆಯನಾಗಿರುವವನು. ಅಂಥ ವೀರ ಬಂಕೆಯನು, ಗಂಗವಾಡಿ ಎಂಬ ವಟಾಟವಿ (ಗೋಳಿ ಮರಗಳ ಕಾಡು) ಯ ಮೂಲಚ್ಛೇದವನ್ನೆಸಗಲು ನನ್ನ ಇಚ್ಛೆಗನುವಾಗಿ ದಾಳಿವರಿದನು.”
ಈ ಹೇಳಿಕೆಯಿಂದ ಆಗ ನೃಪತುಂಗನ ಮನಸ್ಸು ಎಷ್ಟು ಉದ್ರೇಕ ನಡೆದಿತ್ತು ಎಂಬುದು ವಿದಿತವಾಗುತ್ತಿದೆ. ಬಂಕೆಯನು ಹಾಗೆ ಗಂಗವಾಡಿಯ ಕೇದಲ ದುರ್ಗವನ್ನು ಸೇನಾಸಮೇತನಾಗಿ ಮುಂದುವರಿಯುತ್ತಿರುವಲ್ಲಿ ಹಗೆ ಗಳಾದ ಉಳಿದ ಸಾಮಂತ ವರ್ಗದವರು ಮಾಡಲಾರಂಭಿಸಿದ ಕಿರುಕುಳಗಳನ್ನು ನೃಪತುಂಗನ ಮಾತಿನಿಂದಲೇ ಕವಿ ಬಣ್ಣಿಸುತ್ತಾನೆ:
ತತ್ರಾಂತರೇಸ್ಮತ್ತಾನಂತೆ ರ್ಮಾತೃ ರ್ಯಾಹಿತಮಾನಸೈಃ | ಉಪದುತೋಪಿ ಕೋಪೋದ್ಯಾಹಸೈಕಸಖಃ ಸ್ವಯಂ : ೨೩
ಮಾತ್ಸರ್ಯದಿಂದುಕ್ಕಿದ ಇತರ ಸಾಮಂತರು ಬಂಕೆಯನಿಗೆ ತರತರವಾಗಿ ಉಪದ್ರವಿಸಿದರು. ಉತ್ಸಾಹಶಕ್ತಿಯ ಪ್ರತಿಬಿಂಬವೋ ಎಂಬಂತಿರುವ ಬಂಕೆ ಯನು ಅದನ್ನು ಲೆಕ್ಕಿಸುವನೆ? ಅವರ ಕಾಟವೆಲ್ಲ ಬಿರುಗಾಳಿಗಿದಿರಾದ ಹತ್ತಿ ಯಂತಾಯಿತು. ಆತನು ಮುಂಬರಿದು ಗಂಗರಾಜರ ಕಾವೇರೀ ತಟದಲ್ಲಿದ್ದ
- ೪೮ -
ಕೇದಲ ದುರ್ಗವನ್ನಾಕ್ರಮಿಸಿದನು; ವೈರಿವರ್ಗವನ್ನು ಅಸ್ತವ್ಯಸ್ತವಾಗಿ ಸದೆ ಬಡಿಯಲಾರಂಭಿಸಿದನು.
ಆ ಸಮಯಕ್ಕೆ ಸರಿಯಾಗಿ ಅತ್ತ ಮಾನ್ಯಖೇಟ ನಗರದಲ್ಲಿಯೂ ಗೊಂದಲಕ್ಕಾರಂಭವಾಯಿತೆಂಬುದು ಮುಂದಿನ ಪದ್ಯದಿಂದ ವಿಶದವಾಗುತ್ತಿದೆ:
ತತ್ರಾಂತರೇ ವದಂತಿಕಮಂರ್ತದೇವಜಾತ ಸಂಭೇ | ಪ್ರತ್ಯಾಗಂತವ್ವಮಿತಿ ತ್ವಯೆತಿ ಮದ್ವಚನ ಮಾತ್ರೇಣ | • ೨೮ :
ಅದೇ ಸಮಯಕ್ಕೆ ಸರಿಯಾಗಿ ಅತ್ರ ಮಾನ್ಯಖೇಟ ನಗರಿಯೊಳಗೂ ಗೊಂದಲವೆದ್ದಿತು. ಮಂತ್ರಿ ಪ್ರಮುಖಾಧಿಕಾರಿಗಳಲ್ಲಿ, ಪರಿವಾರ ಪ್ರಜೆಗಳಲ್ಲಿ ಪಟ್ಟಣಿಗರಲ್ಲಿ ಉಂಟಾದ ವೈಮನಸ್ಯವನ್ನೂ, ಅದರ ಫಲವಾದ ಗಲಬೆಯನ್ನೂ ಸಂಕೋಭ ಎಂಬ ಪದವೇ ಸೂಚಿಸುತ್ತಿದೆ. ಇಂಥ ಅಂತರ್ಭೇದ ಸಂಕೋ ಭವು ಬರಿಯ ಹೊರಗಣ ಹಗೆಗಳಿಂದ ಸಾಗುವುದೆ? ಹಾಗೆ ರಾಜಧಾನಿ ಯೋಳಗೆ ಗಲಬೆ ತಲೆಯೆತ್ತಿದಲ್ಲಿ ಕುಮಾರಕನೂ ಯುವರಾಜನೂ ಆಗಿದ ಕೃಷ್ಣನು ಅಲ್ಲಿರಲಿಲ್ಲ. ಆತನ ಹಿಂದಿನ ಕೆಲಕೆಲವು ವರ್ತನೆಗಳಲ್ಲಿಯೂ ಮಹಾ ರಾಜನಿಗೆ ಸಂದೇಹ ತೋರಿರಬೇಕು. ಅದರಿಂದಲೇ “ನೀನು ಕೂಡಲೆ ನನ್ನ ಹತ್ತಿರಕ್ಕೆ ಬರಬೇಕು' ಎಂಬ ನಿರೂಪದೊಡನೆ ಬಂಕೆಯನಿದ್ದಲ್ಲಿಗೆ ದೂತನೊಬ್ಬ ರನ್ನು ಕಳುಹಿದನು. ಬಾಹ್ಯ ಶತ್ರುಗಳಿಂದ ತಾತ್ಕಾಲಿಕವಾಗಿ ತಲೆದೋರಿದ ಕೋಭ ಮಾತ್ರವೇ ಅದಾಗುತ್ತಿದ್ದರೆ, ತಾನೇ ಕಳುಹಿದ ಬಂಕೆಯನನ್ನು ಅಷ್ಟು
ವೇಗನೇ ಹಿಂದಕ್ಕೆ ಕರೆಯುತ್ತಿರಲಿಲ್ಲ. ಬಂಕೆಯನಿಲ್ಲದೆ ಯಾವುದೊಂದು ರಾಜ ಕಾರ್ಯವನ್ನೂ ನಡೆಯಿಸಲಾರದವನು ನೃಪತುಂಗನಲ್ಲ. ತನ್ನ ಮಗನೇ 'ಗಂಗ ರಾಡಿಯ ಶತ್ರುಗಳ ಬಲೆಗೆ ಸಿಲುಕಿ ಅಲ್ಲಿದ್ದಾನೆ' ಎಂಬುದು ಬಹುಶಃ ಗುಪ್ತ ರೂತರ ಮುಖದಿಂದ ಅವನಿಗೆ ಮತ್ತೆ ಗೊತ್ತಾಗಿರಬೇಕು. ಹಾಗಿದ್ದ ಸಂದರ್ಭ ರಲ್ಲಿ ಗಂಗವಾಡಿಯವರೊಡನೆ ಹೋರಾಟವೆಸಗುವುದು ಬೇಡ, ಎಂಬುದಕ್ಕಾ
ಯೇ ದೂತನನ್ನು ಬಂಕೆಯನಲ್ಲಿಗೆ ಕಳುಹಿಸಿದುದೂ ಆಗಿರಬೇಕು. ಶಾಸನ ರಲ್ಲಿರುವ ದೂತೋಕ್ತಿಯಲ್ಲಿ ಆ ವಿಷಯವೇ ತೋರುವುದಿಲ್ಲ. ಆದರೆ, ಆ ಮೇಲೆ ಬಂಕೆಯನು ಭಾವಿಸುವ ಮಾತಿನಲ್ಲಿ ಅದು ಹೊಳೆಯುತ್ತಿದೆ. ಬಹುಶಃ ಅದನ್ನು ಬಾಯಿಮಾತಾಗಿ ಆಡಿರಲೂಬಹುದು. ಬಂಕೆಯನ ಭಾವನಾತ್ಮಕ ತಳಾದ ಮುಂದಿನ ಶ್ಲೋಕಗಳನ್ನು ಪರಿಭಾವಿಸಿರಿ:
-
೪೯
-
ಅಪ್ರಾಪ್ತ ವಲ್ಲಭೇಂದ್ರ ಮಯಿ ಜಯತಿಯದಾ ವಿದ್ವಿಷಃ ಸ್ವಾಂತದಾಹಂ। ಸನ್ಯಸ್ವಾಶೇಷಸಂಗೋ ಮುನಿರಥ ವಿಧಿನಾ ವಿದ್ವಿಷಾಂಸ್ಯಾಜ್ಯ ಯಃ | ತತ್ರಾಸ್ಯಾಮಧೂಮ ಧ್ವಜವಿತತಶಿಖಾಸೂತ್ರತಾಮಿ ಪ್ರತಾಪಾತ್ | ಇತ್ಯಾರೂಢ ಪ್ರತಿಜ್ಞಃ ಕತಿಷಯದಿವಸೈಃ ಪ್ರಾಪದತ್ಸವಿಾಪಂ || ೨೯ ಮಾಸತ್ರಯಸ್ಯ ಮಧ್ಯೆ ಯದಿ ಭೋಜಯಿತುಂ ನಶಕ್ಯತೇ ಸ್ವಾಮೀ | ಕ್ರೀರ೦ವಿಜಿತ್ಯ ಶತ್ರನೆ ತಥಾಸಿ ವಂ ವಿಶಾಮೈವ 11 ೩೦ |
ಈ ಶ್ಲೋಕಗಳೆರಡರಲ್ಲಿ ನೃಪತುಂಗನು ಹೇಳಿ ಕಳುಹಿದ, ಅದಕ್ಕುತ್ತರ - ವಾಗಿ ಬಂಡೆಯನ್ನು ನಿರ್ಧರಿಸಿ ಪ್ರತ್ಯುತ್ತರಿಸಿದ, ವಿಷಯಗಳೆರಡೂ ಹೊಳೆದು ತೋರುತ್ತವೆ. ಅದರಿಂದ ಈ ಶ್ಲೋಕಾರ್ಥವನ್ನು ಸರಿಯಾಗಿ ಪರಾಂಬರಿಸಲೇ
ಬೇಕು. ಮೊದಲಿನ ಶ್ಲೋಕದ ಪ್ರಥಮ ಪಾದದಲ್ಲಿ ಒಂದಿಷ್ಟು ಕರದೋಷ ವಿರುವಂತೆ ತೋರಿದರೂ ತಾತ್ಪರ್ಯಕ್ಕೆ ಭಂಗವಾಗುವಂತಿಲ್ಲ:
“ನಾನು ವಿರೋಧಿಗಳನ್ನು ನಾಶಿಸಿ ಹಿಂದಿರುಗುವಲ್ಲಿ ಸ್ವಾಮಿಯಾದ ವಲ್ಲಭೇಂದ್ರನ ದರ್ಶನ ದೊರೆಯದಂತಾದರೆ ಸರ್ವಸಂಗ ಪರಿತ್ಯಾಗವೆಸಗಿ ಮುನಿಯಾಗುವೆನು; ಅಥವಾ ವಿಧಿವಶದಿಂದ ವಿರೋಧಿಗಳಿಗೆ ಜಯವಾದಲ್ಲಿ ಉರಿಯುವ ಬಿರುಬೆಂಕಿಯ ನಾಲಗೆಗೆ ಆಹುತಿಯನ್ನಾಗಿ ಈ ಸೋತ ಮೆಯ್ಯನ್ನು ಸಮರ್ಪಿಸುವೆನು, ಎಂದು ಬಂಕೆಯನು ಆರೂಢ ಪ್ರತಿಜ್ಞನಾದನು. ಮೂರು ತಿಂಗಳ ಮಧ್ಯದಲ್ಲಿ ಸ್ವಾಮಿಯು ಹಾಲನ್ನು ಸೇವಿಸುವಂತೆ ಮಾಡದಿದ್ದಲ್ಲಿ, ಶತ್ರುಗಳನ್ನು ಜಯಿಸಿದರೂ ಅಗ್ನಿಯನ್ನು ಪ್ರವೇಶಿಸುವೆನು, ಎಂದು ಹೇಳಿ ಹಿಂದಿರುಗಿಸಿದ ದೂತನು ಕೆಲದಿನಗಳಲ್ಲಿ ನಮ್ಮ ಸಮಾಜವನ್ನೊಂದಿದನು.”
ಇದರಿಂದ ನೃಪತುಂಗನು ಬಂಕೆಯನಿಗೆ ಹೇಳಿ ಕಳುಹಿದುದು ಹೀಗೆಂದು ಭಾಸವಾಗುತ್ತಿದೆ:- “ ಈ ನಮ್ಮ ರಾಜಧಾನಿ ಯೋ ಳ ಗೆ ಕಠಿಣವಾದ ಅಂತಃ ಕೋಭವು ಪ್ರಾಪ್ತವಾಗಿದೆ. ಅದರ ಪರಿಣಾಮವು ಹೇಗಾಗುವುದೋ ಊಹಿಸು ವಂತಿಲ್ಲ. ಅದರಿಂದ ಮಾಸತ್ರಯದ ವರೆಗೆ ಶ್ರೀರವನ್ನು ತ್ಯಜಿಸುವ ವ್ರತವನ್ನು ಕೈಕೊಂಡಿರುತ್ತೇನೆ. ಇದನ್ನರಿತ ಕೂಡಲೆ ನೀನು ಹಿಂದಿರುಗಿ ಬರಬೇಕು.” ಯುವರಾಜ ಕೃಷ್ಣನು ವೈರಿಗಳ ಕುತಂತ್ರಕ್ಕೆ ಸಿಲುಕಿದನೆಂದು ತನಗೆ ಗೊತ್ತಾ ದುದು ಮೊದಲಾದ ಸಂಗತಿ, ಇಲ್ಲಿ ಅಕ್ಷರಶಃ ಸೂಚಿತವಾಗಲಿಲ್ಲ. ಆದರೂ, ರಾಜನು ಕ್ಷೀರತ್ಯಾಗ ವ್ರತವನ್ನು ಕೈಕೊಂಡುದು ಬರಿಯ ಅಂತಃಕ್ಟೋಭದ
-
೫೦
-
ನಿವೃತ್ತಿಗಾಗಿ ಆಗಿರಲಿಕ್ಕಿಲ್ಲ ಎಂಬುದು ಬಂಕೆಯನಿಗೂ ಗೊತ್ತಾಗಿರಬೇಕು.
ದೂತನನ್ನು ಹಿಂದಿರುಗಿಸಿದ ವೀರ ಬಿಂಕೆಯನು, ಗಂಗವಾಡಿಯ ದುರ್ಗ ವನ್ನು ಪ್ರಬಲ ಸೈನಿಕರೊಡನೆ ಪ್ರವೇಶಿಸಿದನು. ಕೋಟೆಯನ್ನು ಧೂಳೀಪಟ ವೆಸಗಿ ವೈರಿ ಸೇನಾಸಮುದಾಯವನ್ನು ಅಸ್ತವ್ಯಸ್ತವನ್ನಾಗಿ ಮಾಡಿದನು. ಆ ಸಂದರ್ಭದಲ್ಲಿ ಬಂಕೆಯನ ಕಣ್ಣಿಗೆ ತೋರಿದ ದೃಶ್ಯವನ್ನು ನೃಪತುಂಗನ ಮಾತಿ ನಿಂದಲೇ ಶಾಸನಕವಿ ಬಣ್ಣಿಸುವುದಕ್ಷಿಸಿರಿ
ಇತ್ಯುಕ್ಯಾ ಕ್ರಮವಿಕ್ರಮೋಚ್ಛಿ ಖಶಿಬಿಜ್ವಾಲಾವಲೀಢ ವ್ರಜೇ | ಧೂಮಶ್ಯಾಮಲಿತೇ ತಿರೋಹಿತತನೌ ಪ್ರಾಯಃ ಪರಪ್ರೇಷಿತೇ ?
ಯಾತೇ ಮುತ್ತನಯೇ ಸ್ಥಿ ತಾನ್ಯನೃಪತೀನ್ ನಿರ್ಜಿತ ಯೋಜಿರೋ | ನಂದೀಕೃತ್ಯರಿಪೂನ್ ನಿಹತ್ಯಚತದಾ ತೀರ್ಣ ಪ್ರತಿಜ್ಯೋಭವತ್ : ೩೧ H
ಬಂಕೆಯನ ವೀರ ಸೈನಿಕರು ಮುಂಬರಿದು ಅಲ್ಲಿಯ ಗೊಲ್ಲಗೇರಿಗೆ ಬೆಂಕಿಯಿತ್ತರು. ಆ ಬೆಂಕಿಯ ಹೊಗೆ ಎತ್ತೆತ್ತಲೂ ವ್ಯಾಪಿಸಿತು. ಮುಂದಿನ “ಧೂಮಶ್ಯಾಮಲಿತೇ ತಿರೋಹಿತತ ಪ್ರಾಯಃ ಪರಪ್ರೇಷಿತೇ ಯಾತೇ ಮತ್ಯ ನಯೇ” ಎಂಬ ಭಾಗವನ್ನಿಕ್ಕಿಸಿರಿ:- ಹೊಗೆಯಿಂದ ಆವೃತವಾಗಿ ಕಪ್ಪಾದ ಮೈಯುಳ್ಳ, ಬಹುಶಃ (ಸರಪ್ರೇಷಿತ'ನಾದ ಎಂದರೆ ವಿರೋಧಿಗಳಿಂದ ಪ್ರೇರಿತ ನಾಗಿ ಬಂದ, ನನ್ನ ತನಯ (ಕುಮಾರ ಕೃಷ್ಣನು ಅಲ್ಲಿಂದ ಹೊರಟುಹೋದನು? ಎಂಬುದು ಆ ಮಾತಿನ ಅರ್ಥ. ಇದರಿಂದ, ನೃಪತುಂಗನು ಚಕಿತಚಿತ್ತ ನಾದುದಕ್ಕೂ ಕ್ಷೀರತ್ಯಾಗ ವ್ರತವನ್ನಾರಂಭಿಸಿದುದಕ್ಕೂ ಇದ್ದ ಕಾರಣವು ವ್ಯಕ್ತ ವಾಗುತ್ತಿದೆ. ಆ ಮೇಲೆ (ತೀರ್ಣಪ್ರತಿಜ್ಞ'ನಾದ ಬಂಕೆಯನು ವೈರಿಗಳನ್ನೆಲ್ಲ ಗೆದ್ದು ಜಯಶಾಲಿಯಾಗಿ ಹಿಂದಿರುಗಿ ದೊರೆಯನ್ನು ಸಂದರ್ಶಿಸಿದನು.
- ನೃಪತುಂಗನಿಗೆ ಅಕಾಲವರ್ಷ-ಕೃಷ್ಣ ಎಂಬೊಬ್ಬನೇ ಕುಮಾರಕನೂ ಚಂದ್ರಲಬೈ-ಶಂಖಾದೇವಿ ಎಂಬ ಇಬ್ಬರು ಕುಮಾರಿಕೆಯರೂ ಇದ್ದರೆಂಬುದು ಚಾರಿತ್ರಿಕರಿಗೆಲ್ಲ ಗೊತ್ತಿರುವ ಸಂಗತಿ. ಮೊದಲನೆಯವಳನ್ನು ಗಂಗರಾಜನಾದ ಒಂದನೆಯ ಬೂತುಗನಿಗೂ, ಮತ್ತಿನಾಕೆಯನ್ನು ಪಲ್ಲವ ರಾಜಕುಮಾರನಾದ ಪಲ್ಲವ ನಂದಿ ಎಂಬವನಿಗೂ ವಿವಾಹವಾದಂತೆ ಗೊತ್ತಾಗಿದೆ. ಇಂಥ ವಿರೋಧಿ ರಾಜರು, ಯುವರಾಜ ಅಕಾಲವರ್ಷ ಕೃಷ್ಣನನ್ನು ಹಿಂದೆ ವಶೀಕರಿಸಿದುದು ನಿರರ್ಥಕವಾದರೂ ಮುಂದಿನ ಬಂಧುತ್ವಕ್ಕೆ ಆ ಹಿಂದಿನ ಸ್ನೇಹವೇ ಕಾರಣವಾಗಿ ಪರಿಣಮಿಸಿರಬೇಕೆಂದು ತೋರುತ್ತಿದೆ. ಅಮೋಘವರ್ಷನು ಧಾರ್ಮಿಕ ರಾಜ
ನೀತಿಯಲ್ಲಿ ಆಚಾರ ಪುರುಷನಷ್ಟೆ, ತನಗೆ ಪ್ರಾಯವೇರುತ್ತಾ ಬಂದುದನ್ನೂ, ಚಂಚಲಚಿತ್ತನಾದ ಕುಮಾರನ ರಾಜ್ಯಭಾರಕ್ರಮವು ನಿರಾಬಾಧವಾಗಿ ನಡೆಯ ಬೇಕು ಎಂಬುದನ್ನೂ, ಮನನವೆಸಗಿ ಪೂರ್ವ ವಿರೋಧಿಗಳಾಗಿದ್ದರೂ ಮಗನ ಮಿತ್ರರಾದ ಗಂಗ-ಪಲ್ಲವರನ್ನು ಈ ಬಗೆಯ ಭಾಂಧವ್ಯದಿಂದ ತನ್ನವರನ್ನಾಗಿ ಮಾರ್ಪಡಿಸಿಕೊಂಡನು ಎಂದು ಭಾವಿಸಬೇಕು.
- ಸಂಜನ ಶಾಸನದ ೪೮ನೆಯ ಪದ್ಯದಲ್ಲಿ “ಯೇನಾತ್ಯಾಜಿ ತನುಃ ಸ್ವರಾಜ್ಯ ಮಸಕೃತ್” ಎಂಬುದಾಗಿ ನೃಪತುಂಗನು ವರ್ಣಿತನಾಗಿದ್ದಾನೆ. 'ನೃಪತುಂಗ ನಿಂದ ಬಲುಬಾರಿ ತನ್ನ ಶರೀರವೂ ಸ್ವರಾಜ್ಯವೂ ತ್ಯಜಿಸಲ್ಪಟ್ಟಿದೆ' ಎಂದು ಅದರ ತಾತ್ಪರ್ಯವು. ಇದರಿಂದ ಅವನಿಗೆ ಹಲಬಾರಿ ಒದಗಿದ ರಾಜ್ಯಭ್ರಂಶವೂ, ಧಾರ್ಮಿಕ ರಾಜಮಾರ್ಗವನ್ನೇನಾದರೂ ಬಿಡದೆ ಕಷ್ಟಗಳನ್ನು ಬಗೆಹರಿಸಿದ ಸಂಗತಿಯ ವಿದಿತವಾಗುತ್ತಿದೆ.
ಇಲ್ಲಿಗೆ ನೃಪತುಂಗನ ರಾಜ್ಯಕ್ಕೊಭದ ಗೊಂದಲಗಳೆಲ್ಲ ಕೊನೆಗೊಂಡಂ ತಾಯಿತು, ಮತ್ತೆ ಹಗೆಗಳಾರೂ ತಲೆಯೆತ್ತಲಿಲ್ಲ. ಯುವರಾಜ ಕೃಷ್ಣನಾದರೂ ತನ್ನ ತಪ್ಪನ್ನೊಪ್ಪಿ ತಂದೆಯಿಂದ ಕ್ಷಮಾಪಣೆಗೊಂಡಿರಬೇಕು. ಅದಂತಿರಲಿ; ತನ್ನ ಏಕಮಾತ್ರ ಕುಮಾರಕನೂ ಮುಂದಿನ ರಾಜ್ಯಾಧಿಪತಿಯೂ ಆದ ಅಕಾಲ ವರ್ಷ ಕೃಷ್ಣನ ಅಪರಾಧಕ್ಕಾಗಿ ಅಮೋಘವರ್ಷ ನೃಪತುಂಗನು ಈ ಕ್ಷೀರ ತ್ಯಾಗ ವ್ರತವನ್ನು ಸ್ವೀಕರಿಸಿದುದೂ, ಅವನ ಅಪರಾಧವನ್ನು ಶಾಸನಪೂರ್ವಕ ವಾಗಿ ಪ್ರಪಂಚಕ್ಕೆಲ್ಲ ಸಾರಿದುದೂ ಆತನ ನಿಷ್ಕಲಂಕ ಧಾರ್ಮಿಕ ಶೀಲವನ್ನು ಲೋಕಕ್ಕೆ ಸೂಚಿಸುತ್ತಿದೆ. ಈ ಶಾಸನಭಾಗದಿಂದ ಅಂಥ ಅಸಾಮಾನ್ಯ ಗುಣ ವೇನು ನೃಪತುಂಗನಲ್ಲಿ ಕಂಡುಬರುತ್ತಿದೆ? ಎಂದು ಯಾರಾದರೂ ಸಂಶಯಿಸಿ ದಲ್ಲಿ ಅವರು ಇದನ್ನು ಭಾವಿಸಬೇಕು. ತಮ್ಮ ಮತ್ತು ತಮ್ಮವರ ಅಪರಾಧ ಗಳನ್ನು ಲೋಕದ ಮುಂದೆ ಒಪ್ಪಿಕೊಳ್ಳಲಿಕ್ಕೆ ಅಲ್ಪನಾದರೂ ಹಿಂಜರಿಯುತ್ತಾನೆ. ತಮ್ಮ ಮನ್ನಣೆಗೆ ಕರೆಯುಂಟಾಗುವುದೆಂಬ ಭೀತಿಯೇ ಅದಕ್ಕೆ ಕಾರಣ. ಲೋಕ ಸ್ಥಿತಿ ಹಾಗಿರುವಲ್ಲಿ, ನಮ್ಮ ಈ ಕನ್ನಡ ಚಕ್ರವರ್ತಿ ಘಂಟಾಘೋಷವಾಗಿ ಅದನ್ನು
ಸಾರಿ ಹೇಳಿದುದೆಂದರೆ ಸಾಮಾನ್ಯವೆ? ನಡವಳಿಯ ಆಣಿಮುತ್ತಿದು ಆತನೊಬ್ಬನ ಎದೆಯ ಚಿಪ್ಪಿನಿಂದಲೇ ಉದಯಿಸಿತು. ಬೇರೆಲ್ಲಿ ಹುಡುಕಿದರೂ ದೊರೆಯ ಲಾರದ ರತ್ನವಿದು. ಇದನ್ನು ಕನ್ನಡಿಗರು - ಯಾಕೆ? ಭಾರತಭೂಮಿಯೇ ಮರೆಯದಿರಬೇಕು.
ನೃಪತುಂಗನ ಆಳಿಕೆ
ಸಾಮಾನ್ಯವಾಗಿ ನೋಡಿದರೆ ಹಿಂದುಸ್ಥಾನದ ಹಿಂದಿನ ರಾಜರ ರಾಜ್ಯ ಪದ್ದತಿಗಳೆಲ್ಲ ಪುರಾತನ ಧರ್ಮಶಾಸ್ತ್ರಕ್ಕನುವಾಗಿ ನಡೆದವುಗಳು. ಅವುಗ ಳೊಳಗೂ ರಾಷ್ಟ್ರಕೂಟ ವಂಶೀಯರ ಆ ಕಟ್ಟುಪಾಡಿನ ರಚನೆ ಅದೊಂದು ವಿಶಿಷ್ಟ
ವಾದ ಹಜ್ಜೆಯಿಟ್ಟಂತೆ ತೋರುತ್ತಿದೆ. ಆ ವಂಶದ ಪ್ರಮುಖರಾದ ದಂತಿದುರ್ಗಾ ದಿಗಳೆಲ್ಲರ ಪದ್ದತಿಗಳನ್ನೂ ಬೇರೆ ಬೇರೆಯಾಗಿ ವಿಸ್ತರಿಸದೆ ಗ್ರಂಥನಾಯಕನಾದ
* ಈ ನೃಪತುಂಗನದನ್ನು ಮಾತ್ರವೇ ಮೇಲಿಂದ ಮೇಲೆ ಅಧಿಕಾರಿಗಳ
* ಅತಿಸಂಗ್ರಹವಾಗಿ ಕಾಣಿಸುತ್ತೇವೆ. ಅದರಿಂದ ಉಳಿದವರ ಸ್ವರೂಪ
* ಆ ರಾಜ್ಯ ಪದ್ದತಿಯ ಹೊಲಬನ್ನೂ ಭಾವಿಸಿಕೊಳ್ಳ ಬಹುದು, ಇದರಿಂದ, ಹಿಂದಿನ ನಮ್ಮ ಕನ್ನಡನಾಡು ಹಿಂದೆ ಯಾವ ರೀತಿಯಲ್ಲಿ ಪಾಲಿಸಲ್ಪಡುತ್ತಿತ್ತು? ಅದೇ ಆದರ್ಶವು, ಮುತ್ತಿನ ಭಿನ್ನ ಪದ್ಧತಿಯಿಂದ ಎಂದರೆ ಈಗಿನದಕ್ಕಿಂತ ಕೀಳೋ ಮೇಲೋ? ಎಂಬ ಪರಾಂಬರಿಕೆಯನ್ನೂ ಮಾಡಿಕೊಳ್ಳಬಹುದೆಂದು ಭಾವಿಸುತ್ತೇವೆ, ನೃಪತುಂಗನ ಅಳಿಕೆಯಲ್ಲಿ ಕನ್ನಡ ನಾಡು ಮಾತ್ರವೇ ಅಡಕವಾಗಿದ್ದುದಲ್ಲ. ಅವನು ಯಾವ ಪಜಿಭೇದವೂ ಇಲ್ಲದೆ ಅವುಗಳೊಳಗಿನ ಸರ್ವಮತೀಯ ಪ್ರಜಾವರ್ಗವನ್ನೂ ತನ್ನಾಳಿಕೆಯ ಎಲ್ಲ ಪ್ರಾಂತಗಳನ್ನೂ ಏಕ ರೀತಿಯಲ್ಲಿ ಪಾಲಿಸುತ್ತಿದ್ದನು. ಆದರೂ ನಾವಿಲ್ಲಿ ಪ್ರಕೃತ ಸಂದರ್ಭಕ್ಕನುವಾಗಿ ಕನ್ನಡನಾಡಿನ ರಾಜ್ಯಭರಣ ಕ್ರಮವನ್ನು ಮಾತ್ರವೇ ಗುರಿಯಲ್ಲಿರಸಿಕೊಂಡಿದ್ದೇವೆ. ಪರಂಪರಾಯತ ಕ್ರಮಕ್ಕನುವಾಗಿ ಪ್ರಮುಖ ರಾಜ್ಯಾಧಿಕಾರಿಗಳನ್ನು ಭಿನ್ನ ಭಿನ್ನ ಶಾಸನಗಳಿಂದ ತಿಳಿದುಕೊಳ್ಳಬಹುದು,
ಶ್ರೀಮದಮೋಘ ವರ್ಷ ಶ್ರೀ ವಲ್ಲಭನರೇಂದ್ರ ದೇವಃ ಸರ್ವಾನೇವ
ಯಥಾ ಸಂಬಧ್ಯಮಾನಕಾನ್ ರಾಷ್ಟ್ರಪತಿ ವಿಷಯಪತಿ ಕ್ರಿ. ಶ. ೮೬೧ ಕೋಳಕೂರ ಶಾಸನ ಗತ*
ಆ ಗ್ರಾಮಕೂಟ ಯುಕ್ತಕ ನಿಯುಕ್ತಕಾಧಿಕಾರಿಕ ಮಹತ್ವ
ರಾದೀನ್ ಸಮಾದಿಶತಿ ಅಸ್ತುವಃ ಸಂವಿಂದಿತಂ , . . .
• • • • • • •
• • • • • , , , , , , , ರಾಷ್ಟಪತಿ ವಿಷಯ ಕ್ರಿ.ಶ. ೮೭೧
, ಪತಿ ಗ್ರಾಮಕೂಟ ಯುಕ್ತಕ ನಿಯು ಕ ಕಾ ಧಿ ಕಾರಿಕ
. ಸಂಜನ ಶಾಸನ
ಮಹತ್ತರಾದೀನ್ ಸಮಾದಿಶತಿ . . . .
-
೫a
-
ಇದು ಪರಂಪರಾಯಾತವಾದ ರಾಜ್ಯಾಧಿಕಾರ ಕ್ರಮವೇ ಎಂಬುದನ್ನು ನಿರ್ಧರಿಸಿಕೊಳ್ಳಲಿಕ್ಕೆ ಆತನ ತಂದೆಯಾದ ಗೋವಿಂದರಾಜನ ರಾಧನಪುರ ಶಾಸನದೊಳಗಿನ ಆ ವಿಶಿಷ್ಟಾಂಶವನ್ನು ಕೆಳಗೆ ಕಾಣಿಸುತ್ತೇವೆ,
ಶ್ರೀಮತ್ ಪ್ರಭೂತ ವರ್ಷ: ಶ್ರೀ ವಲ್ಲಭನರೇಂದ್ರ ದೇವಃ ಕುಶಲೀ ಕ್ರಿ. ಶ. ೮೦೯ ಸರ್ವಾನೇವ ಯಥಾ ಸಂಬಧ್ಯಮಾನಕಾನ್ ರಾಷ್ಟ್ರಪತಿ ಗೋವಿಂದರಾಜನ ವಿಷಯಪತಿ ಗ್ರಾಮಕೂಟಾಯುಕ್ತಕ ನಿಯುಕ್ತಕಾಧಿ ರಾಧನಪುರದ ಶಾಸನ ಕಾರಿಕ ಮಹತರಾದೀನ್ ಸಮಾದಿಶತಿ , , , ,
ಈ ಮೂರರಲ್ಲಿಯೂ ಕ್ರಮವಾಗಿ ತೋರುವ ರಾಜ್ಯ ಪರಿಪಾಲನಾಧಿಕಾರಿ ಗಳ ಹೆಸರುಗಳೆಂದರೆ, ರಾಷ್ಟ್ರಪತಿ ವಿಷಯಪತಿ ಗ್ರಾಮಕೂಟ ಆಯುಕ್ತಕ ನಿಯುಕ್ತಕ ಎಂಬ ಐದು, ಇವರು ( ಅಧಿಕಾರಿಕ ಮಹತ್ತರ'ರೆಂದರೆ ಅಧಿಕಾರಿ ಗಳೊಳಗೆ ಮೇಲು ತರಗತಿಯವರೆಂದು ತಾತ್ಪರ್ಯ. ( ಆದೀನ್' ಎಂದು ಮುಂದೆಯೇ ತೋರುವುದರಿಂದ ಅವರೊಳಗೆ ಇನ್ನೂ ಹಲಮಂದಿ ಇದ್ದ ರೆಂಬುದು ವಿದಿತವಾಗುತ್ತಿದೆ. ಮಾತ್ರವಲ್ಲ; ಈ ಐದು ಮಂದಿ 'ಯಥಾ ಸಂಬಧ್ಯಮಾನ'ರು ಎಂದರೆ ನಿರಂತರವಾದ ಅನ್ನೋನ್ಯ ಸಂಬಂಧವುಳ್ಳವರು ಎಂದು ಅರ್ಥ. ಭೂಮಿಯ ಕಂದಾಯ ಸುಂಕ ಮೊದಲಾದ ತೆರಿಗೆಗಳನ್ನು ಇವರೇ ಪ್ರಜೆಗಳಿಂದ ಪಡಕೊಳ್ಳುವವರು. ಆದರೆ, ಈ ದಾನಶಾಸನಗಳನ್ನು ಪಡೆದವರಿಂದ ಅವುಗಳನ್ನು ಸ್ವೀಕರಿಸಬಾರದು ಎಂಬ ಅಂಶವು ಎಲ್ಲ ಶಾಸನ ಗಳಲ್ಲಿಯೂ ಸ್ಪಷ್ಟವಾಗಿ ತೋರುತ್ತಿವೆ. ಅಧಿಕಾರಿಗಳನ್ನುದ್ದೇಶಿಸಿ ಆಡುವ ಈ ಸೂಚನೆ ಸಂಜನ ಶಾಸನದ ಕಡೆಯ ಗದ್ಯಭಾಗದಲ್ಲಿ ಸ್ಪುಟವಾಗಿದೆ:
“ಶುಂಕಂ ನ ಶುಷ್ಣಯಾಮಿ , , , , ಸರ್ವರಾಜಕೀಯಾನಾಮಹಸ್ಯ ಪ್ರಕ್ಷೇಪಣೀಯಃ ಆಚಂದ್ರಾರ್ಕಾರ್ಣವತಿ ಸರಿತ್ಪರ್ವತಕಾಲೀನಃ ಪುತ್ರ ಪೌತ್ರಾನ್ವಯ ಕ್ರಮೋಪಭೋಗ್ಯಃ , , , , , , , , , , .” – ಇದರ ಅರ್ಥವನ್ನವಧರಿಸಿರಿ:
“ಈ ಸ್ಥಳದಿಂದ ನಾನು ಸುಂಕವನ್ನು ಸ್ವೀಕರಿಸುವುದಿಲ್ಲ. ಇದರೊಳಗೆ ಯಾವ ರಾಜಾಧಿಕಾರಿಗಳೂ ಕೈಹಾಕಬಾರದು. ದಾನ ಪಾತ್ರನಾದವನು ತನ್ನ ಪುತ್ರ ಪೌತ್ರಾದಿವಂಶ ಕ್ರಮವಿಡಿದು ಚಂದ್ರ ಸಮುದ್ರಾದಿಗಳಿರುವ ವರೆಗೆ ಈ ಭಾಗದಿಂದ ತರಲಿಕ್ಕಿದ್ದ ಬ್ರಹ್ಮದಾಯ ದೇವದಾಯಗಳನ್ನು ಸಲ್ಲಿಸುತ್ತಾ ಈ ದತ್ತಭಾಗವನ್ನು ಅನುಭವಿಸತಕ್ಕುದು.” ಇದರಿಂದ ರಾಷ್ಟ್ರಪತ್ಯಾದಿ ಅಧಿಕಾರಿ
ರಾಷ್ಟ್ರಪತಿ
C
೧
9
ದ
ರ
೧
|
ಗಳನ್ನು ಬೋಧಿಸಿದುದರ ಉದ್ದೇಶ ವಿದಿತವಾಗುತ್ತಿದೆ. ಸುಂಕವೇ ಮೊದಲಾದ ಯಾವ ಬಗೆಯ ತೆರಿಗೆಗಳನ್ನೂ ಅಜ್ಞಾನದಿಂದಾಗಿ ಈ ದಾನ ಭೂಮಿಯಿಂದ ಸ್ವೀಕರಿಸಬಾರದು ಎಂಬುದನ್ನು ಎಚ್ಚರಿಸುವುದೇ ಆ ಉದ್ದೇಶವು,
ಅದರಿಂದಲೆ “ಅಸ್ತುವಃ ಸಂವಿದಿತಂ” ಎಂದು ಅವರನ್ನುದ್ದೇಶಿಸಿ ಸೂಚಿ ಸಿದುದು. ಇರಲಿ, ಈ ರಾಷ್ಟ್ರಪತಿ ಮೊದಲಾದವರನ್ನು ಈಗಿನ ಅಧಿಕಾರಿಗಳೊಡನೆ ಸಾಮಾನ್ಯವಾಗಿ ಹೀಗೆ ಹೋಲಿಸಬಹುದು:
೧. ರಾ. ಕೂಟ ರಾಜ್ಯಾಧಿಕಾರ
೨. ಆಧುನಿಕ ರಾಜ್ಯಾಧಿಕಾರ ಸಂಸ್ಥಾ ಕ್ರಮ
ಸಂಸ್ಕಾಕ್ರಮ
ಗವರ್ನ‌್ರ ಅಥವಾ ವೈಸರಾಯಿ ೧ ವಿಷಯಪತಿ
ಕಲೆಕ್ಟರ್ ಗ್ರಾಮಕೂಟ
ತಹಶಿಲ್ದಾರ ಯುಕ್ತಕ
ಶ್ಯಾನಭೋಗ ಅಥವಾ ಮಣೆಗಾರ ೪ ನಿಯುಕ್ತಕ
ಪಟೇಲ ಇದು ಸಾಮಾನ್ಯವಾಗಿ ಹೋಲಿಸಿಕೊಳ್ಳುವುದಕ್ಕಾಗಿ ತೋರಿಸಿದುದು. ಆದರೆ ಈ ಉಭಯ ಸಂಸ್ಥೆಗಳೊಳಗಿನ ಅಧಿಕಾರಗಳೂ ಏಕರೀತಿಯವುಗಳು ಎಂದು ಭಾವಿಸಬಾರದು. ಈ ಎರಡು ಪುರಾತನಾಧುನಿಕ ಪದ್ದತಿಗಳು ಭಿನ್ನ ಭಿನ್ನೋದ್ದೇಶಗಳಿಗನುವಾಗಿ ಸಾಗುವವುಗಳಾದುದರಿಂದ, ಆಯಾ ಅಧಿಕಾರಗಳ ಇತಿಮಿತಿ ಸ್ವರೂಪಾದಿಗಳೂ ಕೆಲಮಟ್ಟಿಗೆ ಭಿನ್ನಭಿನ್ನಗಳಾಗಿರಬಹುದು. ಆದರೂ ಬಾಹ್ಯ ಕ್ರಮಗಳ ಹೋಲಿಕೆಯನ್ನು ಮಾತ್ರವೆ ಇಲ್ಲಿ ತೋರಿದುದಾಗಿದೆ.
ಇನ್ನು ಆ ಹಿಂದಿನ ಕ್ರಮದಂತೆ ಈ ಐದು ಮಂದಿ ಅಧಿಕಾರಿಗಳ ಉದೋಗ ರೀತಿ ಹೇಗೆ ಇದ್ದಿರಬಹುದು ಎಂಬುದಕ್ಕಿಸುವ, ಈ ನಿರೀಕ್ಷಣೆ
ಎಂದರೆ ಹಿಂದಣ ಧರ್ಮಶಾಸ್ತ್ರದ ಆಧಾರವನ್ನಿಟ್ಟುಕೊಂಡು ರಾಷ್ಟ್ರಪತಿ
* ವಿಸ್ತರಿಸುವುದಲ್ಲ. ಹಾಗೆ ಮಾಡಿದರೆ “ತಲೆಗಿಂತ ದೊಡ್ಡ ಮುಂಡಾಸು” ಎಂಬಂತಾಗುವುದು. ಮೇಲಿಂದ ಮೇಲೆ ಮಾತ್ರವೆ ಅವನ್ನು ಸಂಗ್ರಹವಾಗಿ ಪರಾಂಬರಿಸುತ್ತೇವೆ:-(ರಾಷ್ಟ' ಎಂದರೆ, ಸಮಾಟ (ಚಕ್ರವರ್ತಿ) ನಾದವನ ಆಳಿಕೆಗೊಳಪಟ್ಟ ಇಡಿ ಭೂಭಾಗ. ಆ ಚಕ್ರಾಧಿಪತ್ಯ-ಭೂಭಾಗ ವನ್ನು ಪ್ರಜಾವರ್ಗದವರೆಲ್ಲರ ಆನುಕೂಲ್ಯ-ಪ್ರಾತಿಕೂಲ್ಯಗಳನ್ನರಿತು ಧಾರ್ಮಿಕ ತತ್ವಕ್ಕನುವಾಗಿ ರಾಜಪ್ರತಿನಿಧಿ ಎನ್ನಿಸಿ ಪಾಲಿಸುವಾತನೇ ರಾಷ್ಟ್ರಪತಿ, ಈ
ಉದ್ಯೋಗ ರೀತಿ ಹೇಗೆ ಇದ್ದಿದ
ಹೆಸರು ಆ ಅಧಿಕಾರಕ್ಕೆ ನಮ್ಮ ಹಿಂದಿನ ಅನೇಕ ಧರ್ಮಶಾಸ್ತ್ರ ಗ್ರಂಥಗಳಲ್ಲಿಯೂ ಏಕರೀತಿಯಾಗಿ ತೋರುವುದು. ಸ್ವತಃ ಚಕ್ರವರ್ತಿಯೇ ಈ ಅಧಿಕಾರವನ್ನು ನಡೆಯಿಸಬೇಕು. ನಿರಂತರವಾಗಿ ಈ ಅಧಿಕಾರ ಪ್ರವಣನಾಗಿರುವುದು, ಸಾವಿರದೊಳಗೊಬ್ಬ ವಿಶಿಷ್ಟ ವ್ಯಕ್ತಿಗೆ ಒಂದು ವೇಳೆ ಸಾಧ್ಯವಾದರೂ ಅರಸರೆಲ್ಲ ರಿಗೂ ಸಾಧ್ಯವಾಗದು. ದೇವ ಯಜ್ಞ-ಪಿತೃ ಯಜ್ಞಾ (ಶ್ರಾದ್ಧಾದಿಗಳನ್ನು ಮನೆಯ ಹಿರಿಯನಾದವನೇ ಸ್ವತಃ ನಡೆಯಿಸಬೇಕು. ಅದರಿಂದಲೆ ಮನೆಯ ಮೇಲಾಳಿಗೆ 'ಯಜಮಾನ' ಎಂಬ ಹೆಸರು, ರೂಢವಾಗಿದೆಯಲ್ಲವೆ? ಅದು ಹಿಂದಿನ ಕಾಲದಲ್ಲಿಯೂ ಕೆಲವರಿಗೆ ಮಾತ್ರ ಸಾಧ್ಯವಾಗಿದ್ದರೂ ಇಂದು ಬರಿಯ ಗೊಡ್ಡು ಹೆಸರಾಗಿಬಿಟ್ಟಿದೆ ಎನ್ನುವ. ಹೇಗೂ ಇರಲಿ, ಹೇಗೆ ಆ ಯಜ್ಞಾದಿ ಗಳನ್ನು ಮಾಡಿಸಲು ಪುರೋಹಿತನು ನಿಯಮಿತನಾದನೋ ಹಾಗೆ, ಈ ಸಾಮಾಜ್ಯ ಕಾರ್ಯಗಳನ್ನು ನಡೆಯಿಸುವ ರಾಜನ ಪ್ರತಿನಿಧಿಯಾದ ರಾಷ್ಟ್ರಪತಿ ಎಂಬ ಪ್ರಮುಖಾಧಿಕಾರಿ ನೆಲೆಗೊಂಡನು. ಅವನ ಅಧಿಕಾರಸ್ಥಾನ ರಾಜ ಧಾನಿಯ ಸಮೀಪದಲ್ಲೇ ಇದ್ದಿರಬೇಕೆಂದು ತೋರುತ್ತದೆ. ಈಗಿನ ಕಾಲದ ನಮ್ಮ ರಾಷ್ಟ್ರ ಸಭೆ (National Congress)ಯವರು ತಮ್ಮ ಅಧ್ಯಕ್ಷ ಪದವಿಗೇರಿದವನನ್ನು, ನಮ್ಮ ಧರ್ಮಶಾಸ್ವಾನುಸಾರವಾಗಿ ಬಂದ ಈಸರ್ವಾಧಿ ಕಾರಿಯ ಹೆಸರಾದ (ರಾಷ್ಟ್ರಪತಿ' ಎಂಬ ಹೆಸರಿನಿಂದ ಕರೆವುದು ಈ ತತ್ವಾನು ಸಾರವಾಗಿಯೇ ಇರಬೇಕೆಂದು ತೋರುತ್ತಿದೆ. ಇದು ಮತಾನುಸಾರವಾಗಿ ಬಂದ ಹೆಸರಲ್ಲ. ಇಡಿ ರಾಷ್ಟ'ಕ್ಕೆ ವಿಶಿಷ್ಟವಾದ ಒಂದು ಮತವಿಲ್ಲ. ಅದರೊಳ ಗಿನ ಭಿನ್ನಭಿನ್ನ ವಿಷಯಗಳ ಮತಸಮೂಹವೇ ರಾಷ್ಟಮತ. ಇಂಥ ರಾಷ್ಟ್ರದ ಪಾಲನಾಧಿಕಾರಿಯೇ ರಾಷ್ಟ್ರಪತಿ,
ವಿಷಯ ಎಂದರೆ ದೇಶ ಎಂದು ಸಾಮಾನ್ಯವಾದ ಅರ್ಥ, ಆಚಾರ ವ್ಯವ ಹಾರಾದಿಗಳೆಲ್ಲ ಪ್ರಮುಖವಾಗಿ ಒಂದೆ ಭಾಷೆಯಿಂದ ನಡೆಯುವ ಒಂದೊಂದು
ವಿಶಿಷ್ಟ ಭೂಭಾಗಕ್ಕೆ ವಿಷಯ ಎಂಬ ಹೆಸರಾಗಿ ತೋರು ವಿಷಯಪತಿ
* ತ್ತಿದೆ. ಅದರಿಂದಲೆ ಇರಬೇಕು, ಕವಿರಾಜ ಮಾರ್ಗ ಕಾರನು ಕನ್ನಡ ನಾಡಿನ ಪ್ರಮಾಣವನ್ನು ವಿಸ್ತರಿಸುವಲ್ಲಿ “ . . . . . . “ಕನ್ನಡದೊಳ್ ಭಾವಿಸಿದ ಜನಪದಂ ಎಸುಧಾವಳಯ . . . . .ವಿಷಯ ವಿಶೇಷಂ” ಎಂದು ಕನ್ನಡ ನಾಡನ್ನು ಗಡಿಯೊಡನೆ ವಿಭಾಗಿಸಿ ಕಾಣಿಸುತ್ತಾನೆ. 'ಇದರಿಂದ ವಿಷಯ - ಜನಪದ' ಎಂದರೆ ಏಕಾರ್ಥಕಗಳಾಗಿ ಕಾಣುತ್ತಿವೆ,
ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಕನ್ನಡಕ್ಕೆ ಮೀಸಲಾದ ಛಂದ ಸ್ಪನ್ನು “ಕರ್ಣಾಟಕ ವಿಷಯ ಜಾತಿ” ಎನ್ನುತ್ತಾನಲ್ಲದೆ 'ಕರ್ಣಾಟಕ ರಾಷ್ಟಜಾತಿ' ಎಂದಲ್ಲ. ನಾಗವರ್ಮನ ಈ ಹೇಳಿಕೆ, ವಿಶಿಷ್ಟ ಭಾಷಾಪ್ರಾಂತಕ್ಕೇ 'ವಿಷಯ' ಎಂಬ ಹೆಸರಾಗಿರಬೇಕು ಎಂಬ ನಮ್ಮ ಆಶಯವನ್ನು ಮತ್ತಿಷ್ಟು ಸಮರ್ಥಿಸು ತಿದೆ. ಅಂಥ ಇಡಿ ವಿಷಯಕ್ಕೆ ಪತಿಯಾಗಿರುವ, ಮತ್ತು ರಾಷ್ಟ್ರಪತಿಗೆ ದ್ವಿತೀಯ
ನಾಗಿರುವ ಅಧಿಕಾರಿಯ ಹೆಸರು ವಿಷಯಪತಿ' ಎಂದು.
ಇದರಿಂದ “ಕರ್ಣಾಟಕ-ದ್ರಾವಿಡ-ಆಂಧ್ರ-ಗುರ್ಜರ-ವಂಗ” ಮೊದ ಲಾಗಿ ವಿಶಿಷ್ಟ ಭಾಷಾ-ಸಾಹಿತ್ಯಗಳುಳ್ಳ ನಾಡುಗಳಿಗೆ 'ರಾಷ್ಟ' ಎಂಬ ಹೆಸರಲ್ಲ; ಕರ್ಣಾಟಕ ವಿಷಯ - ದ್ರಾವಿಡ ವಿಷಯ ಮೊದಲಾಗಿ ಶಾಸ್ತ್ರೀಯ ನಾಮ ಗಳಿದ್ದುವು ಎಂದು ಗೊತ್ತಾಗುತ್ತಿದೆ. ಅದರಿಂದ, ಇಂಥ ಆಯಾ ಭಾಷಾಸಂಘ ಟಿತಗಳಾದ 'ವಿಷಯ'ಗಳವರಾರೂ ತಂತಮ್ಮದು ಭಾರತ ಭೂಮಿಯೊಳಗೆ ಭಿನ್ನ ಭಿನ್ನ ರಾಷ್ಟ್ರ ಎನ್ನುವ ಹವ್ಯಾಸಕ್ಕೊಳಗಾಗಬಾರದು ಎಂದು ಪ್ರಾರ್ಥಿಸು ತೇವೆ.
'ಗ್ರಾಮಕೂಟ' ಎಂಬ ಪುರಾತನ ನಾಮದ ಅಧಿಕಾರಿ, ವಿಷಯಪತಿ ಯಿಂದಲೇ ಕೆಳಗಿನವನು. “ಗ್ರಾಮಗಳ ಶಿಖರ ಕೂಟ)ಪ್ರಾಯನಾದ ಮೇಲಾಳು
ಎಂಬುದನ್ನಿದು ವ್ಯಕ್ತವಾಗಿ ಸೂಚಿಸುತ್ತಿದೆ. ಆಯಾ ಗ್ರಾಮ ಗ್ರಾಮಕೊಲೆ ಗಳ ಪ್ರಮಾಣಾನುಸಾರವಾಗಿ ಒಬ್ಬನೋ ಹೆಚೋ 'ಗ್ರಾಮ ಕೂಟ'ರು ಇದ್ದಿರಬಹುದು; ಅಥವಾ ಹೇಗಿದ್ದರೂ ಪ್ರತಿಯೊಂದು ಗ್ರಾಮಕ್ಕೆ ಒಬ್ಬ ನಂತೆ ಗ್ರಾಮಕೂಟನನ್ನು ನಿಯಮಿಸುವ ಪದ್ಧತಿಯಾಗಿದ್ದಿರಲೂಬಹುದು. ಈ 'ಗ್ರಾಮಕೂಟ' ಎಂಬ ಅಧಿಕಾರಿಯ ಹೆಸರೇ, ಹಿಂದಣ ಕನ್ನಡ ಶಾಸನ-ಸಾಹಿ ತ್ಯಾದಿಗಳಲ್ಲಿ 'ಗಾವುಂಡ' ಎಂಬ ತದ್ಭವರೂಪವನ್ನೊಂದಿತ್ತು. ಆ (ಗಾವುಂಡ' ಗೌಡ ಪದಗಳಿಗೆ ಪರಸ್ಪರ ಸಂಬಂಧವಿಲ್ಲವೆಂದೇ ನಮ್ಮ ಭಾವನೆ. ಯಾಕೆಂದರೆ, ಈ ಜಾತೀಯ ಸಂಬಂಧವಿಲ್ಲದ, ಹಿಂದಿನ ಆ ಗಾವುಂಡ ಎಂಬ ಮನೆತನ ಹಿಡಿದು ಬಂದ ಹೆಸರುಳ್ಳವರು, ಕನ್ನಡನಾಡಿನೊಳಗೆ ಬ್ರಾಹ್ಮಣಾದಿಗಳಾದ ಎಲ್ಲಾ ಜಾತಿ ಯವರೊಳಗೂ ಇರುತ್ತಾರೆ. ಅದರಿಂದ, ಆ ಜಾತಿ-ವಾಚಕ ಗೌಡ ಪದಕ್ಕೂ, ಈ 'ಗಾವುಂಡ' (ಗಾವುಂಡ ಅಥವಾ ಗ್ರಾಮಕೂಟ) ಪದಕ್ಕೂ ಏನೇನೂ ಸಂಬಂಧವಿಲ್ಲ. ಅದರಂತೆ ದೇಶಸಂಬಂಧವಿಡಿದು ಬಂದ ಸಂಸ್ಕೃತ ಭಾಷೆಯ ಗೌಡ ದೇಶ (ಬಂಗಾಳ ದೇಶ) ಮತ್ತು ಗೌಡ ಭಾಷೆ ಎಂಬವುಗಳೊಳಗಿನ,
-
೫೭ -
'ಗೌಡ' ಪದಕ್ಕೂ ಇದಕ್ಕೂ ಸಂಬಂಧವಿಲ್ಲ. ಅವುಗಳನ್ನು ವಿವೇಚಿಸುವುದಕ್ಕೆ, ಇದು ಅಪ್ರಕೃತ ಸಂದರ್ಭವಾದುದರಿಂದ ಪ್ರಕೃತವನನ್ನುಸರಿಸುವ,
ಈ (ಗಾವುಂಡ' (ಗ್ರಾಮಕೂಟ) ಎಂಬ ಅಧಿಕಾರದೊಳಗೆ ( ಉರ್ಗಾ ವುಂಡ' ಎಂದೂ (ನಾಟಾವುಂಡ' ಎಂದೂ ಶಾಸನಾನುಸಾರವಾಗಿರುವ ಒಳ ಗವಲುಗಳು ಗೊತ್ತಾಗಿವೆ. ( ಊರ್ಗಾವುಂಡ' ಎಂದರೆ 'ಪುರ ಗ್ರಾಮಕೂಟ? ಎಂಬುದರ ತದ್ಭವವಾದರೆ 'ನಾಟ್ಯವುಂಡ' ಎಂಬುದು 'ನಾಟ ಗ್ರಾಮಕೂಟ' ಎಂಬುದರ ರೂಪಾಂತರವು. 'ಪುರ' ಪದವು ಪಟ್ಟಣವನ್ನು ಸೂಚಿಸಿದರೆ 'ನಾಟ'ವು ಜನಪದ ಅಥವಾ ವಿಷಯ ಎಂಬ ಅರ್ಥವನ್ನು ಬೋಧಿಸುತ್ತಿದೆ. ಅದರಿಂದ ( ಊರ್ಗಾವುಂಡ' ಪದವು, ಪುರವು ಯಾವ ಗ್ರಾಮದೊಳಗಿದೆಯೋ ಆ ಗ್ರಾಮದ ಗಾವುಂಡನನ್ನೂ, ನಾವುಂಡ ಪದವು ಜನ ಪದದೊಳಗಿನ ಎಷ್ಟು ಗ್ರಾಮ ಗಳು ಆತನ ಆಳಿಕೆಗೊಳಪಟ್ಟಿವೆಯೋ ಅಷ್ಟು ಗ್ರಾಮಗಳ ಗಾವುಂಡನನ್ನೂ ಸೂಚಿಸುವುದು ಎಂದು ಗೊತ್ತಾಗುತ್ತಿದೆ. ಅದರಿಂದಲೇ ಹಿಂದೆ ಈ ಗ್ರಾಮ ಕೂಟನ ಅಧಿಕಾರದೊಳಗೆ ಒಂದೇ ಅಲ್ಲದೆ ಹೆಚ್ಚು ಗ್ರಾಮಗಳೂ ಸೇರಿದ್ದಿರ
ಬಹುದು ಎಂದು ಶಂಕಿಸಿದುದು.
ಹಿಂದಿನ ನಮ್ಮ ಧರ್ಮಶಾಸ್ತ್ರಗಳ ಹಜ್ಜೆವಿಡಿದು ರೂಪಿಸಿದ ಈ ಮೂರು ಅಧಿಕಾರವಾಚಕ ಪದಗಳೂ ಕ್ರಮವಾಗಿ ರಾಷ್ಟ್ರ - ವಿಷಯ - ಗ್ರಾಮ' ಎಂಬ ದೇಶಸಂಬದ್ದಗಳಾದ ಪದಗಳನ್ನೊಂದಿಯೇ ರೂಪಿಸಿರುವುದನ್ನು ಭಾವಿಸಬೇಕು. ಉಳಿದ ಆಯುಕ್ತಕ-ನಿಯುಕ್ತಕ' ಎಂಬವರು ಇವರೊಡನೆ ಯೋಜನೆ (ಕೂಟ), ಗೊಂಡು ಮತ್ತು ನಿಯೋಜನೆ( ಅಪ್ರಣೆಗೊಂಡು ವರ್ತಿಸುವ ಅಧಿಕಾರಿಗಳು ಎಂದು ಭಾಸವಾಗುತ್ತಿದೆ. ಆ ಹೆಸರುಗಳಲ್ಲಿ ವ್ಯಕ್ತವಾಗಿ ದೇಶವಾಚಕ ಪದ ಗಳು ಸೇರಿಲ್ಲ. ಅದರಿಂದ, ಕಡೆಯ ಅವರು ಹಿಂದಿನ ಪ್ರಮುಖರಾದ ದೇಶ ಸಂಬದ್ಲಾಧಿಕಾರಿಗಳಿಗೆ ಆಯಾ ಸಂದರ್ಭಗಳಲ್ಲಿ ನೆರವಾಗುವ ಅಧಿಕಾರಿಗ ಳೆಂಬುದು ವಿದಿತವಾಗುತ್ತಿದೆ. ಈ ಸಂಗತಿ ಹಾಗಿರಲಿ, ಹಿಂದಿನ ಮರುಮಂದಿ ಅಧಿಕಾರಿಗಳ ಕಡೆಯ ಪದಗಳು ಕ್ರಮವಾಗಿ 4 . . ಪತಿ - , , , ಪತಿ ~ , , , ಕೂಟ” ಎಂದರೆ “ಮೇಲಾಳು” ಎಂಬ ಅರ್ಥದಾಯಕವಾಗಿರುವುದರಿಂದ, ತಂತಮ್ಮ ಆಳಿಕೆಯ ಕಾರ್ಯಗಳಲ್ಲಿ ಅವರೇ (ಪತಿ'ಗಳು ಅಥವಾ ಕೂಟಪುರು ಷರು ಎಂಬ ತಾತ್ಪರ್ಯವು ಸೂಚಿತವಾಗುತ್ತಿದೆ. ಈ ವಿಷಯವನ್ನು ಪರಿಭಾವಿ ಸಿದಲ್ಲಿ 'ಗ್ರಾಮಕೂಟ' ಎಂಬುದರ ತುದಿಯ ಪದವನ್ನು ಎತ್ತಿಕೊಂಡೇ ಆದಿಯಲ್ಲಿ
- ೫೮ -
4ರಾಷ್ಟಕೂಟ' ಎಂಬ ಈ ರಾಜಕುಲ ನಾಮವು ರೂಪಿತವಾಗಿರಬಹುದೆಂದು
ಭಾವಿಸಬಹುದು.
ಯುಕ್ತಕ-ನಿಯುಕ್ತಕ ಎಂಬ ಪದಗಳಿಂದ ಅವರ ಉದ್ಯೋಗ ಪದ್ದತಿ ಯಾವುದೆಂದು ವಿಶದವಾಗುವುದಿಲ್ಲ. ಆದರೂ ಕಡೆಯಲ್ಲಿಯೇ ಅವರ ಹೆಸರು ಗಳಿರುವುದರಿಂದ, ಮತ್ತು 'ಯಥಾ ಸಂಬಂಧ್ಯಮಾನಾನ್' ಎಂದು ವಿಶದವಾಗಿ ತೋರುವುದರಿಂದ ಆ ರಾಷ್ಟ್ರಪತಿ' ಮುಂತಾದವರ ವರ್ಗದಲ್ಲಿ ಅವರು ತುದಿ
ಯವರೆಂಬುದು ನಿಶ್ಚಿತ ವಾ ಗುತ್ತಿದೆ. “ಸಿಯುಕ್ತಕ' ಯುಕ್ತಕ- ಎಂಬುದು ನೀತಿಶಾಸ್ತ್ರದಲ್ಲಿ ನಿಪುಣರಾಗಿದ್ದು ಇತರ ನಿಯುಕ್ಕರು
* ರಾಜ್ಯಗಳಲ್ಲಿ ರಾಯಭಾರಿಗಳಾಗಿ ನಿಯೋಜಿಸಲ್ಪಡುವ * ನಿಯೋಗಿ'ಗಳಾಗಿರಬಹುದೋ ಎಂದು ತೋರುತ್ತಿದೆ. ಹೇಗೂ ಇರಲಿ, ಈ ಐವರನ್ನೂ ಹಿಂದೆ ದೃಷ್ಟಾಂತಿಸಿದ ಮೂರು ಶಾಸನಗಳ ಗದ್ಯಭಾಗದಲ್ಲಿಯೂ “ಆಧಿಕಾರಿಕ ಮಹತ್ತರ” ಎಂದು ಕರೆದುದರಿಂದ ಇವರು ಪ್ರಮುಖರಾಗಿದ್ದ ಅಧಿಕಾರಿಗಳೆಂಬಲ್ಲಿ ಸಂಶಯವಿಲ್ಲ. ಆ ಮಹತ್ತರ' ಪದದ ಮುಂದೆ ಎಲ್ಲವು ಗಳಲ್ಲಿಯೂ ಆದೀನ್ ಎಂದಿರುವುದರಿಂದ, ಇನ್ನೂ ಹಲವು ಅಧಿಕಾರಿಗಳು ಆ ಸಾಲಿನಲ್ಲಿದ್ದರೆಂಬುದು ಗೊತ್ತಾಗುತ್ತಿದೆ. ಕೆಲವು ಕನ್ನಡ ಶಾಸನಗಳಲ್ಲಿ “ನಾಲಿರ್ಗಡೆ' (ನಾಡಿನ ಹೆಗ್ಗಡೆ) ಎಂದೂ 'ನಾನು' ಎಂದೂ ಕಾಣುತ್ತಿದೆ. ಇವು ಚಿಕ್ಕ ಚಿಕ್ಕ ಸಾಮಂತ ಸಮಾನರಾದ ಪಾಳಯಗಾರರ ಅಧಿಕಾರನಾಮ ಗಳಾಗಿದ್ದರೂ ಇರಬಹುದು. ಅಥವಾ ಹಿಂದೆ ಸೂಚಿಸಿದ “
ನಾವುಂಡ' ಎಂಬುದರ ನಾಮಾಂತರಗಳಿರಲೂಬಹುದು.
ಇಡೀ ದೇಶದ ಅಧಿಕಾರ ಸಂಸ್ಥೆ ಸಾಂಗವಾಗಿ ತಡೆತೊಡಕುಗಳಿಲ್ಲದೆ ಸಾಗಬೇಕಾದರೆ ಬರಿಯ ಅಧಿಕಾರಿವರ್ಗ ಮಾತ್ರದಿಂದ ಸಾಧ್ಯವಲ್ಲ; ಹಳ್ಳಿ ಹಳ್ಳಿಗಳಲ್ಲಿ ಊರೂರುಗಳಲ್ಲಿ ಹಬ್ಬಿ ಹರಡಿದ ಪ್ರಜಾ ಸಮೂಹವು ಸುಸಂಸ್ಕೃತ
ವಾಗಿರಬೇಕು. ನೃಪತುಂಗನ ಆಳಿಕೆಯಲ್ಲಿ ಆ ಪ್ರಜಾ ಮಹಾಜನವೂ
ಸಮೂಹವು ಯಾವ ಬಗೆಯ ಆಂತರಿಕ ಶಕ್ತಿಯುಳ್ಳು ಅದರ ಅಧಿಕಾರ ಸ್ವರೂಪಗಳೂ ದಾಗಿತ್ತು ಎಂಬುದನ್ನು ಕವಿರಾಜ ಮಾರ್ಗಕಾರನು ಸಂಗ್ರಹ
ವಾಗಿಯಾದರೂ ಮಂದಟ್ಟಾಗುವಂತೆ ವಿಸ್ತರಿಸಿದ್ದಾನೆ. ಅದನ್ನು ಮುಂದಿನ ಭಾಗದಲ್ಲಿ ಸೂಚಿಸುತ್ತೇವೆ. ಹಾಗೆ ಸುಸಂಸ್ಕೃತವಾಗಿದ್ದ ಪ್ರಜಾವರ್ಗವು ಗ್ರಾಮ ಗ್ರಾಮಗಳಲ್ಲಿ ತಮ್ಮದೇ ಆದ ಒಂದೊಂದು ಸ್ವತಂತ್ರ
ಸಂಸ್ಥೆಯನ್ನು ನೆಲೆಗೊಳಿಸುತ್ತಿದ್ದುದು ಶಾಸನಗಳಿಂದ ಗೊತ್ತಾಗುತ್ತಿದೆ. ಆ ಸಂಸ್ಥೆಗೆ “ಮಹಾಜನ' ಎಂಬ ಹೆಸರು. ಹೆಸರಿನಿಂದಲೇ ಅದು ಪ್ರಜಾಸಂಸ್ಥೆ ಎಂದು ಸೂಚಿತವಾಗುತ್ತಿದೆ. ಅದಕ್ಕೆ ಆಗಿನ ಸರಕಾರದ ಸಹಾಯವೂ ಇದ್ದಂತೆ ತಿಳಿದುಬರುತ್ತಿದೆ. ಎಲ್ಲದಕ್ಕೂ ಹೆಚ್ಚಿನದೆಂದರೆ, ಆ ಸಂಸ್ಥೆಯಲ್ಲಿ ನಿಯಮಿತ ಸದಸ್ಯರಿದ್ದು ಅವರ ಒಪ್ಪುಗೆಯಂತೆ ಕಾರ್ಯಕಲಾಪಗಳು ಸಾಗಿಸಲ್ಪಡುತ್ತಿದ್ದು ವೆಂಬುದು. ಈ ಹೇಳಿಕೆಯನ್ನು, ಭಿನ್ನ ಭಿನ್ನ ಶಾಸನೋಕ್ತಿಗಳನ್ನು ಮುಂದಿಟ್ಟು ಕೊಂಡೇ ಪರಾಂಬರಿಸಿರಿ:
*
ಎಣಿಸೆಯ ನಾಲ್ವದಿಂಬರ್ ಮಹಾಜನಮುಂ ಮೋನಿಗೊರವರುಂ (ಸಿಗ್ಗಾಮೆ - ಕ್ರಿ. ಶ. ೮೬೫)
+ನೀರ್ಗುಂಡದ ನೂಆ ರ್ಪದಿಂಬರುಂ ಮಹಾಜನದ ಕಾಲಂ ಕಳ್ಳ (ನಿಲ್ಲುಂಡ - ಕ್ರಿ. ಶ. ೮೬೬)
* ಶ್ರೀವೂರದ ರವಿಕಯ್ಯಂ ಮೊದಲಾಗೆ ಇರ್ವೊರುಂ ಮಹಾಜನದ ಕಾಲಂಕ (ಸಿರೂರು - ಕ್ರಿ. ಶ. ೮೬೬) .
ಬಲ್ಲವರಸರ್ ರೋಣದ ಮಹಾಜನಕೆ . . . . . ನ ಪು (ಪೂಜ್ಯನಂ ಕೊಟ್ಟು (ರೋಣ - ಕ್ರಿ. ಶ. ೮೭೪)
ಇವುಗಳೊಳಗೆ ಆದಿಯ ಮೂರು ಶಾಸನಗಳಲ್ಲಿ ಕ್ರಮವಾಗಿ ನಲುವತ್ತು - ನೂರಿಪ್ಪತ್ತು - ಇನ್ನೂರು ಮಂದಿ ಆಯಾ ಮಹಾಜನದ ಸದಸ್ಯ ರಿದ್ದುದು ವ್ಯಕ್ತವಾಗಿದೆ. ಮೂರನೆಯದರಲ್ಲಿ '
ಶ್ರೀರದ ರವಿಕಯ್ಯಂ ಮೊದ ಲಾಗೆ . . . .' ಎಂದರೆ ಶ್ರೀಪುರದ (ಸಿರೂರು)ರವಿಕಯ್ಯನೇ ಪ್ರಥಮ ಸದಸ್ಯನು ಅಥವಾ ಅಧ್ಯಕ್ಷನಾಗಿ ಇದ್ದಿರಬೇಕೆಂಬಲ್ಲಿ ಸಂಶಯವಿಲ್ಲ. ಇದರಿಂದ ಮಹಾ ಜನ'ದ ಕಾರ್ಯಕಲಾಪಗಳೆಲ್ಲವೂ ಅದರ ಸದಸ್ಯರ ಒಪ್ಪುಗೆಯಂತೆ ನಡೆಯು ತಿದ್ದುವು ಎಂದು ಭಾಸವಾಗುತ್ತಿದೆ. ಬಹುಶಃ ಮಹಾಜನ ಸದಸ್ಯರೊಳಗೆ ಬಹಳ ಮಂದಿಯ ಅನುಮತಿಯ ಸರ್ವಾನುಮತವಾಗಿ ನಿರ್ಣಿತವಾಗುತ್ತಿತ್ತು. ಆ ನಿರ್ಣಯವನ್ನು, ರಾಜನ ಅಥವಾ ರಾಜಪ್ರತಿನಿಧಿಯಾದ ಅಧಿಕಾರಿಯ ಒಪ್ಪು .ಗೆಯನ್ನು ಪಡೆದು ಅಧ್ಯಕ್ಷನು ಕಾರ್ಯರೂಪವಾಗಿ ನಡೆಯಿಸುತ್ತಿದ್ದಿರಬೇಕು.
+
* Apigraphia Indica Vol. VII P. P. 201 * _? , Vol. VI ,, 98 * ,, ,, Vol, VII ,, 202
-
೬೦
-
ಮೇಲೆ ದೃಷ್ಟಾಂತಿಸಿದ ಆದಿಯ ಶಾಸನದಲ್ಲಿ ತೋರುವ 'ಮಹಾಜನವೂ ಮೋನಿ (ಮೌನಿ) ಗೊರವರೂ? ಒಟ್ಟುಗೂಡಿ ಅಲ್ಲಿಯ (ಆದಿತ್ಯ ಭಟರರ ಸ್ಥಾನ'ವನ್ನು - ಎಂದರೆ ಆದಿತ್ಯ ದೇವಾಲಯವನ್ನು - “ರಕ್ಷಿಸಲ್ ಸೆಟ್ಟಳ್ಳಿ (ರ್ಚಿ) ಸಲ್ ಇವರೆ ಸಮರ್ಥರೆಂದು ಗೋಕರ್ಣ ಪಂಡಿತ ಭಟರರ್ಗೆ . . . . ಕಾಲಂ ಕ' (ಕಾಲುದೊಳೆದು) ಕೊಟ್ಟರ್ ಎಂದು ತೋರುತ್ತಿದೆ.
ಮಹಾಜನ' ಎಂದರೆ ನಾಡಿನ ನಾನಾ ಬಗೆಯ ಉದ್ದಾರಕಾರ್ಯದಲ್ಲಿ ನೆರವಾಗುವ ಸಂಸ್ಥೆ, ಅದರೊಡನೆ ನೆರವಾಗಬೇಕಾದ ಈ ಮೋನಿಗೊರವರು ಲೋಕಪೂಜ್ಯರಾಗಿರಬೇಕೆಂದೂ ಅವರದೂ ವಿಶಿಷ್ಟವಾದೊಂದು ಸಂಸ್ಥೆ ಇರ ಬೇಕೆಂದೂ ಭಾವಿಸಬಹುದು. ಸಿಗ್ಲಾಮೆಯ ಶಾಸನದ ಕಡೆಯ ಭಾಗವ ಶ್ರೀಕ್ಷಿಸಿರಿ
ಈ ಸ್ಥಾನಮನಾಳ್ಯ, ಗೊರವರಖಂಡಿತ ಬ್ರಹ್ಮಚಾರಿಯ ಪುದು ಬ್ರಹ್ಮ ಚರ್ಯ ಹೀನರನೀಸಮಯದ ಗೊರವರ್ಕಳೆವೊರ್ ಈ ಪದ್ದತಿಯಂ ಶಿಲಾಲೇಖೆ ಮಾಡಿ ನಿಲಿಸಿದ ಪಂಡಿತ ಭಟಾರರ್'
ಇದರಿಂದ ಆಗಿನ ಗೊರವರೆಂಬವರ ಅಧಿಕಾರವೇನೆಂಬುದು ಸ್ಪುಟವಾಗು. ತಿದ. “ಸ್ವಾನ' ಎಂದರೆ ದೇವಾಲಯ ಎಂಬುದೇ ರೂಢವಾದ ಅರ್ಥ, ದೇವ. ಸ್ಥಾನ ಎಂದು ಹೇಳಬೇಕಾದ ಆವಶ್ಯಕವಿದ್ದಿಲ್ಲ.
ಈ ಎಣಿಸೆಯ ದೇವಾಲಯವನ್ನಾಳುವ ಮೋನಿಗೊರವರು ಅಖಂಡಿತ ಬ್ರಹ್ಮಚಾರಿಗಳು, ತಮ್ಮಂತೆ ಬ್ರಹ್ಮಚರ್ಯವನ್ನಾಚರಿಸುವವರನ್ನೇ ಎಂದರೆ ಅಂಥ ಗೊರವ ವರ್ಗದ ವಿಶಿಷ್ಟ ವ್ಯಕ್ತಿಗಳನ್ನೆ – ದೇವಾಲಯವನ್ನಾಳುವ ಅಧಿ ಕಾರಿಗಳನ್ನಾಗಿ ಆರಿಸುವುದು ಅವರ ಪದ್ದತಿ. ಅದಕ್ಕೆ ವಿರುದ್ಧವಾಗಿ, ಅಖಂಡಿತ ಬ್ರಹ್ಮಚರ್ಯರಹಿತರಾಗಿದ್ದವರನ್ನು ಈ ಸಮಯದ ಗೊರವರು ಕಳೆದುಬಿಡುತ್ತಿ ದ್ದರು. ಅದನ್ನು, ಈ ಗೋಕರ್ಣ ಪಂಡಿತ ಭಟಾರರು ತಮ್ಮ ವರ್ತನೆಯಿಂದ ನೆಲೆಗೊಳಿಸಿದರು.” ಮಾತಿದು, ಗೊರವ ಸದಸ್ಯರ ಮತವೇ ದೇವಾಲಯಾಚಾರ ವಿಚಾರದಲ್ಲಿ ಪ್ರಧಾನವಾಗಿತ್ತು ಎಂಬುದನ್ನು ನಿಸ್ಸಂಶಯವಾಗಿ ಸ್ಥಾಪಿಸುತ್ತಿದೆ. ಮೇಲೆ ದೃಷ್ಟಾಂತಿಸಿದ ನಾಲ್ಕರೊಳಗೆ ಮೊದಲಿನ ಶಾಸನದಲ್ಲಿಯ ಮಹಾಜನವು. ದಾನಕರ್ತೃವೆಂದರೆ ಮತ್ತಿನ ಮೂರರದಲ್ಲಿ ಆಯಾ ಮಹಾಜನಗಳು ದಾನ ಗಳನ್ನು ಪಡೆದುಕೊಂಡವುಗಳು. ಇದರಿಂದ, ಭೂಮ್ಯಾದಿ ದಾನವನ್ನೆಸಗಿ ಆಯಾ ಉತ್ತಮ ಕಾರ್ಯಗಳನ್ನು ಅವರಿಂದ ಮಾಡಿಸುವ ಮತ್ತು ಹೊರಗಣ
“ಶ್ರೀಮಂತರಿಂದ ದಾನಗಳನ್ನು ಪಡೆದು ಆ ಸೊತ್ತನ್ನು ಆಯಾ ಕಾರ್ಯಗಳಲ್ಲಿ ವಿನಿಯೋಗಿಸುವ ಎರಡೂ ಅಧಿಕಾರವು ಆ ಮಹಾಜನ'ಕ್ಕೆ ಇದ್ದುದೆಂದು ಸಿದ್ದ ನಾಗುತ್ತಿದೆ. ಆ ಮಹಾಜನ'ವೂ 'ಮೋನಿಗೊರವ'ರೂ ಗೋಕರ್ಣ ಭಟಾ ರರ (ಕಾಲಂಕ' ಎಂದರೆ ಕಾಲನ್ನು ತೊಳೆದು ದಾನಕೊಟ್ಟಿದೆಯಷ್ಟೆ. ಇಲ್ಲಿ ಗೋಕರ್ಣಪಂಡಿತನೆಂದರೆ ಬ್ರಾಹ್ಮಣ ವರ್ಣದವನು, ಮಹಾ ವಿದ್ವಾಂಸನು; ಅಂಥ ಪೂಜ್ಯವ್ಯಕ್ತಿಯನ್ನು ಹಾಗೆ ಮನ್ನಿಸಿದುದು ತಕ್ಕುದೇ ಎನ್ನುವೆ. ಆದರೆ, ಮತ್ತಿನ ಎರಡು ಶಾಸನಗಳಲ್ಲಿ, ಕ್ರಮವಾಗಿ ನೂರಿಪ್ಪತ್ತು ಮಂದಿ ಮತ್ತು ಇನ್ನೂರು ಮಂದಿ ಮಹಾಜನದ 'ಕಾಲಂಕಬ್ಬಿ' ಮನ್ನಿಸಿ ಭೂಮಿಗಳನ್ನು ಧಾರೆ ಯೆರೆದುಕೊಟ್ಟಂತೆ ತೋರುತ್ತಿದೆ. ಹೀಗೆ ಎರಡೂ ಮಹಾಜನದೊಳಗಿನ ಮುನ್ನೂರ ಇಪ್ಪತ್ತು ಮಂದಿ ಮಹಾಜನ ಸದಸ್ಯರಲ್ಲಿ, ಬ್ರಹ್ಮ ಕ್ಷೇತ್ರ ವೈಶ್ಯರೆಂಬ ತ್ರಿವರ್ಣದವರೂ ಸೇರಿದ್ದರೆಂದೇ ನಮ್ಮ ಭಾವನೆ. ನಮ್ಮ ಈ ಭಾವನೆಯೇ ಸರಿ ಯಾಗಿದ್ದರೆ, (ಕಾಲಂಕಟ್ 'ಸಿಕೊಳ್ಳುವ, ಎಂದರೆ ಕಾಲನ್ನು ತೊಳೆಯಿಸಿ ಕೊಳ್ಳುವ ಅಧಿಕಾರವು, ವರ್ಣಭೇದದ ತೊಡಕಿಲ್ಲದೆ ಆ ಮಹಾಜನ ಸಂಸ್ಥೆ
ಯವರಿಗೆಲ್ಲ ಮೀಸಲಾಗಿದಂತೆ ಭಾಸವಾಗುತ್ತಿದೆ. ಹಾಗೆ ಮಹಾಜನದ ಕಾಲ್ಗೊಳೆದು ದಾನಮಾಡುವವರಲ್ಲಿ ಮೇಲಿನ ಬ್ರಾಹ್ಮಣಾದಿ ವರ್ಣತ್ರಯವೂ ಇದ್ದಂತೆ ತೋರುತ್ತಿದೆ. ಈಗ ಬೇರೂರಿಹೋದ ಜಾತಿಭೇದವನ್ನೆ ಮುಂದು ಮಾಡಿ ಮತ್ಸರಾಗ್ನಿಗೆ ತುತ್ತಾಗುವವರು, ಮೊದಲು ಈ ಮಹಾಜನ ಸಂಸ್ಥೆ' ಯನ್ನು ಪೂರ್ವಚಾರಿತ್ರಿಕ ದೃಷ್ಟಿಯಿಂದ ಕೂಲಂಕಷವಾಗಿ ಪರಾಂಬರಿಸ ಬೇಕೆಂದು ಪ್ರಾರ್ಥಿಸುತ್ತೇವೆ. ಈ ಮಹಾಜನ'ದ ಹೆಚ್ಚಿನ ವಿವೇಚನೆ ನಮ್ಮ ಪ್ರಕೃತ ಸಂದರ್ಭಕ್ಕೆ ಮಾರಿದುದಾದ ಕಾರಣ ಮುಂದುವರಿಯುವ.
ಈ ಗೊರವ'ರೆಂದರೆ ಯಾರು? ಈ ಸ್ಥಾನಮನಾಳ ಗೊರವರ್' ಎಂಬ ಹಿಂದಿನ ಶಾಸನಸ್ಥವಾದ ಮಾತಿನಿಂದ ಇದರ ಪರಿಚಯ ಒಂದಿಷ್ಟು ಹೊಳೆಯು
ತ್ತಿದೆ. ಇವರು ದೇವಾಲಯಗಳನ್ನು ಮತಮಾರ್ಗಕ್ಕನು
ವಾಗಿ ನಡೆಯಿಸುವವರೆಂಬುದು ಇಲ್ಲಿ ವಿಶದವಾಗುವುದು. ದೇಶಕ್ಕೂ, ವಿಶೇಷವಾಗಿ ಆಳುವ ಅರಸನಿಗೂ ಮತವಿಚಾರವನ್ನು ಬೋಧಿಸಿ ನಡೆಯಿಸುವ ಗುರುಗಳೇ ಇವರು. ಈ ಗುರುಪದ ಎಗಿ ಗೊರವ' ಎಂದಾಗಿರಬೇಕು. ಈ ಭಾವನೆ ಕವಿರಾಜಮಾರ್ಗದ ಈ ಪದ್ಯದಿಂದ ಮತ್ತಿಷ್ಟು ದೃಢವಾಗುತ್ತಿದೆ.
ಗೊರವರು
- ೬೨ -
ನೃಪನುಮಂ ಪ್ರಜೆಯುಮಂ ಪರಿವಾರಮುಮಂ ಮಹಾ । ಕೃಪೆಯಿನಾ ಗೊರವರುಂ ಸುರರುಂ ಗುಣವೃದ್ಧರುಂ | ವಿಪುಳ ರಾಗ ಪರರಾಗಿಸುಗೆಂದು ಸಮುಚ್ಚಯ || ಕುಸಚಿತೋರು ಗುಣಮುಂ ಮಿಗೆಸೇಜ್ ಕವೀಶ್ವರರ್ !! ೧೩೩ ! (ಪರಿ.೧)
ಇದು ಕ್ರಮವಾಗಿ ವಿಕಲ್ಪ ಸಮುಚ್ಚಯಯುಗಳ ಕ್ರಮದೋಷಗಳನ್ನು ತಿದ್ದಿ ಶುದ್ದವಾಗಿ ಮಾರ್ಪಡಿಸಿದ ಪದ್ಯ. ಆ ದೋಷಯುಕ್ತವಾದ ಪದ್ಯಭಾಗ ಹೀಗಿದೆ:
ದೇವರುಂ ಗೊರವರುಂ ಗುಣವಡ್ಡರ ನಾರತಂ | ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ # ೧೨೨ 11 (ಸರಿ. ೧)
ಹೀಗೆ ಬರೆದಲ್ಲಿ “
ದೋಷವಿದಗ್ಗಳಂ” ಎನ್ನುತ್ತಾನೆ. ಇಲ್ಲಿಯ ಕ್ರಮ ದೋಷಕ್ಕನುವಾಗಿ ದೇವ (ಸುರ) ರು ಅರಸನನ್ನೂ, ಗೊರವರು ಪ್ರಜೆಯನ್ನೂ, ಗುಣವೃದ್ದರು ಪರಿವಾರವನ್ನೂ ನೀತಿಬೋಧೆಯಿಂದ ಕಾಯುವವರು ಎಂಬ ಅರ್ಥವಾಗಿಬಿಡುತ್ತಿದೆ. ಪದ್ದತಿ ಹಾಗಲ್ಲವೆಂಬುದನ್ನು ತಿದ್ದಿ ಕಾಣಿಸಿದುದೇ ಹಿಂದಿನ ಪದ್ಯವು. ಅದಕ್ಕನುವಾಗಿ “ನೃಸನನ್ನು ಗೊರವರು, ಪ್ರಜಾ ವರ್ಗ ವನ್ನು ಸುರರು, ಪರಿವಾರವನ್ನು ಗುಣವೃದ್ದರು 'ವಿಪುಳರಾಗಪರರಾಗಿಸುಗೆ' ಎಂದರೆ ಆನಂದಯುತರನ್ನಾಗಿ ಮಾಡಲಿ ಎಂಬ ಅರ್ಥ. ಇದರಿಂದ ಆಳುವ ರಾಜನಿಗೂ ಅವನ ಮನೆತನಕ್ಕೂ ಮತಾಚಾರಗಳನ್ನು ಬೋಧಿಸುವ ಕುಲ ಗುರುಗಳೇ ಈ ಗೊರವರು ಎಂಬುದು ತಾತ್ಪರ್ಯವಾಗುತ್ತಿದೆ.
ಈ ಸಂದರ್ಭದಲ್ಲಿ ಚಾರಿತ್ರಿಕದೃಷ್ಟಿಗನುವಾಗಿ ಇದೊಂದು ಸಂಗತಿಯನ್ನು ಭಾವಿಸಬೇಕು. ಈಗ ತಿಳಿದು ಬಂದಂತೆ ರಾಷ್ಟ್ರಕೂಟ ಮೂರನೆಯ ಗೋವಿಂದ ರಾಜನ ಅಥವಾ ಮಗನಾದ ನೃಪತುಂಗನ ಕಾಲದಲ್ಲಿ, ಎಂದರೆ ಕ್ರಿ. ಶ. ೮. ಅಥವಾ ೯ನೆಯ ಶತಮಾನಗಳ ಮಧ್ಯದಲ್ಲಿ, ಶ್ರೀ ಶಂಕರಾಚಾದ್ಯರು ಸನ್ಯಾಸ ವನ್ನು ಸ್ವೀಕರಿಸಿ ಶೃಂಗೇರಿಯೇ ಮೊದಲಾದೆಡೆಗಳಲ್ಲಿ ಮಠಗಳನ್ನು ಸ್ಥಾಪಿಸಿ ಜಗದ್ಗುರುವನ್ನು ಕೈಕೊಂಡರು. ಹಲಮಂದಿ ರಾಜಾಧಿರಾಜರೂ ಅವರ ಶಿಷ್ಯರಾಗಿದ್ದರು. ಆ ಪೂರ್ವದಲ್ಲಿ ಮತ್ತು ಸಂಧಿಕಾಲದಲ್ಲಿ ಸನ್ಯಾಸಿಗಳಿಗೆ ಅದೊಂದು 'ಪೀಠ'ವಿದ್ದಿಲ್ಲ. ಅರಸರಿಗೆ ಕುಲಗುರುಗಳಾಗಿ ದೇವಾಲಯಾದಿ ಗಳಿಗೆ ಮಾರ್ಗದರ್ಶಕರಾಗಿ, ನಾಡು ನಾಡುಗಳಲ್ಲಿ ಹರಿದಾಡಿ ಮತಪ್ರಚಾರಕ ರಾಗಿದ್ದ ಹಿಂದಣ ಆ ಸನ್ಯಾಸಿಗಳಿಗೆ ಅಥವಾ ಮತಪ್ರಚಾರಕ ಗುರುಗಳಿಗೆ ಈ
-
೬೩
–
ಗೊರವರು ಎಂಬ ಹೆಸರು ಪ್ರಸಿದ್ದವಾಗಿದ್ದಂತೆ ತೋರುತ್ತಿದೆ. ಆ ಹಿಂದಿನ ಗೊರವರಲ್ಲಿ ಸಾಂಸಾರಿಕರೂ ಇದ್ದರೆಂಬುದು ಹಿಂದೆ ದೃಷ್ಟಾಂತಿಸಿದ “ಬ್ರಹ್ಮ ಚರ್ಯ ಹೀನರಂ ಈ ಸಮಯದ ಗೊರವರ್ ಕಳೆವೊರ್” ಎಂಬ ಮಾತಿನಿಂದ ಸಿದ್ದವಾಗು ವುದು, ಪರಿವ್ರಾಜಕಾಚಾದ್ಯರಾಗಿ ಗುರುಪೀಠವನ್ನೇರುವವರು ಗೃಹಸ್ಥಾಶ್ರಮವನ್ನೊಂದಿರಬಾರದು ಎಂಬ ಪದ್ದತಿಯನ್ನು ಮೊತ್ತಮೊದಲು ಶ್ರೀ ಶಂಕರಾಚಾದ್ಯರೇ ಸ್ಥಾಪಿಸಿದುದೆಂದು ಹೇಳುತ್ತಾರೆ. ಆ ಹೇಳಿಕೆ ಯಥಾ ರ್ಥವೇ ಆಗಿರಬೇಕು ಎಂಬುದನ್ನು ದೃಷ್ಟಾಂತ ವಾಕ್ಯದೊಳಗಿನ . . . . ಈ ಸಮಯದ . . . .” ಎಂಬ ಗೊರವ ವಿಶೇಷಣ ಪದವು ನೆಲೆಗೊಳಿಸು ತಿದೆ. ಈ 'ಮೋನಿ (ಮೌನಿ) ಗೊರವ'ರೆಂದರೆ, ಬಹುಶಃ ಶ್ರೀ ಶಂಕರಾಚಾದ್ಯರ ಮಾರ್ಗವನ್ನನುಸರಿಸಿ ( ಅಖಂಡಿತ ಬ್ರಹ್ಮಚಾರಿತ್ರ್ಯವನ್ನು ತಮ್ಮಲ್ಲಿ ನೆಲೆ ಗೊಳಿಸುತ್ತಿದ್ದ ಸನ್ಯಾಸಿಗಳ ವರ್ಗದವರೆಂದು ತೋರುತ್ತಿದೆ.
ಈ ಗೊರವಪದವು ಕ್ರಿ. ಶ. ೮ನೆ ಶತಮಾನದ ಚಾಲುಕ್ಯ ಕೀರ್ತಿವರ್ಮನ ಅಡೂರು ಹಾನಗಲ್ಲಿನ ಶಾಸನ ಮೊದಲಾದವುಗಳಲ್ಲಿ “ಗುರು:-ಗುರುವರ್ ಗೊರವಡಿ - ಗುರುವಿ” ಮೊದಲಾದ ನಾನಾ ರೂಪಗಳಿಂದ ತೋರುತ್ತಿದೆ. ಇದ ರಿಂದ ಸಂಸ್ಕೃತ ಭಾಷೆಯ 'ಗುರು'ಪದವೇ ಹಾಗೆ ಕನ್ನಡದಲ್ಲಿ ರೂಪಾಂತರ ಗೊಂಡುದು ಎಂಬಲ್ಲಿ ಸಂದೇಹವಿಲ್ಲ. ಗೊರವರ ವರ್ಗ ದೊಳಗೆ ಹಿಂದು-ಜೈನ ಬೌದ್ದ ಮತೀಯರೂ, ಪುರುಷರಂತೆ ಸ್ತ್ರೀಯರೂ ಸೇರುತ್ತಿದ್ದರು. ಗೊರವರು ರಾಜಬೋಧಕರಾಗಿದ್ದು ದೇವಾಲಯಾಧಿಕಾರಗಳನ್ನು ನಡೆಯಿಸುತ್ತಿದ್ದರಲ್ಲದೆ, ಮತ್ತಿನ ಸನ್ಯಾಸಿಗಳಂತೆ ಅವರಿಗೆ ವಿಶಿಷ್ಟ 'ಮಠ' ಎಂಬುದು ಇದ್ದಂತೆ ತೋರು ವುದಿಲ್ಲ. ಇವರು ಹಿಂದಿನ ಕಾಲದಲ್ಲಿ ರಾಜರಿಗೆ ಕುಲಗುರುಗಳೂ ಆಗಿದ್ದ ರೆಂಬುದು ಮೇಲಿನ ದೃಷ್ಟಾಂತಗಳಿಂದ ಸಿದ್ಧವಾಗುತ್ತಿದೆ.
ಇದರಿಂದ ನೃಪತುಂಗನ ಆಳಿಕೆ ಎಷ್ಟು ಪ್ರಜಾರಂಜಕವಾಗಿ ನೆಲೆಗೊಂಡಿತ್ತು ಎಂಬುದು ಗೊತ್ತಾಗುತ್ತಿದೆ. ಆಗ ಅವನ ರಾಜ್ಯದಲ್ಲಿ ಪ್ರಬಲವಾಗಿದ್ದ ಮತ
ಗಳೆಂದರೆ ಹಿಂದೂ – ಜೈನ ಸಂಪ್ರದಾಯಕ್ಕನುವಾಗಿ ನೆಲೆ ನೃಪತುಂಗನ ಗೊಂಡುವುಗಳು, ಅವುಗಳೊಡನೆ ಬೌದ್ಧ ಮತವೂ ಅಲ್ಲಲ್ಲಿ ಉದಾತ್ತ ಧರ್ಮ
* ತಲೆದೋರಿದ್ದುವು. ವೈಯಕ್ತಿಕವಾಗಿ ಅರಸನು ಯಾವ ವಿಶಿಷ್ಟ ಮತವನ್ನೇ ಅನುಸರಿಸುತ್ತಿರಲಿ; ಇಡೀ ದೇಶಕ್ಕೆ ವಿಶಿಷ್ಟವಾದ ಒಂದೇ ಮತ ವಿರಲಿಲ್ಲ. ಕವಿರಾಜ ಮಾರ್ಗಕಾರನು “ದೇಶಂ ವರರಾಷ್ಟ್ರಾದಿ ನಿವೇಶಾಂತಂ*
- ೬೪
-
(ಪದ್ಯ ೧೯; ಪರಿ. ೧) ಎಂದು ವಿಸ್ತರಿಸುವಂತೆ, ಎಂದರೆ - ಅಖಂಡ ರಾಷ್ಟ ಮೊದಲಾಗಿ ಪ್ರತಿಯೊಂದು ವಿಶಿಷ್ಟವಾದ ಮನೆಯ ವರೆಗಿನ ಭೂಭಾಗಕ್ಕೆ, ದೇಶ ಎಂಬ ಹೆಸರು. ದೇಶದೊಳಗೆ ನಾನಾ ಮತಗಳಿರಬಹುದು, ಎಂದಲ್ಲ, ಇರಬೇಕು ಎಂಬುದೇ ನಮ್ಮ ಹಿಂದೂ ಮತೀಯರ ಅಭಿಪ್ರಾಯ. ಅದನ್ನು ಈಗಿನ ಕೆಲ ಮಂದಿ ಸಂಕುಚಿತಚಿತ್ತರು ಏನೆಂದು ಬೇಕಾದರೂ ವ್ಯಾಖ್ಯಾನಿಸಿಕೊಳ್ಳಲಿ. ದೇಶದ ಅಂಥ ಸರ್ವಮತ ಪ್ರಜಾರಂಜಕನಾಗಿ ಆಳುವ, ಆರಾಜವ್ಯಕ್ತಿ ದೇಶದ ಮತಗಳನ್ನೆಲ್ಲ ಮನ್ನಿಸಬೇಕು. ಆತನು ತನ್ನ ವೈಯಕ್ತಿಕ ಮತಕ್ಕೆ ಬಾಗಿ ಪ್ರಜಾಸಂಕುಲದ ಧಾರ್ಮಿಕವಾದ ಆಚಾರಕ್ಕೆ ಅಡ್ಡಿಯನ್ನೆಸಗಬಾರದು. ನೃಪ ತುಂಗನಿಗೆ ಅನೇಕ ಬಿರುದುಗಳಿದ್ದರೂ ಅವನ ಉದಾರ' ಎಂಬ ಬಿರುದಿನಲ್ಲಿ ಸರ್ವಮತ ಸಮಾನತೆಯನ್ನು ಆಚರಿಸುತ್ತಿದ್ದುದು ಸಾರ್ಥಕವಾಗಿ ಹೊಳೆಯು ತಿದೆ ಎಂದು ನನ್ನ ಭಾವನೆ. ಅವನ ಈ ಉದಾತ್ತ ರಾಜಧರ್ಮ ಸ್ವರೂಪವು ಸಂಜನ ಶಾಸನದಲ್ಲಿಯೂ ಕವಿರಾಜ ಮಾರ್ಗದಲ್ಲಿಯೂ ಹೊಳೆಯುವುದ ಗ್ರೀಕ್ಷಿಸಿರಿ -
ಭುಕ್ತಂ ಕೈಮೈಕ್ರಮೇಣಾಪರೇಭ್ಯ ದyಂಚಾನೈಕಮೇ ವಾಪರೈರ್ಯತೆ ಕಾಸ್ಥಾsನಿತೇ ತತ್ರ ರಾಜೈ ಮಹದ್ವಿ; ಕೀರ್ತಾ ಧರ್ಮ: ಕೇವಲಂ ಪಾಲನೀಯಃ । ೫೨ # (ಸಂ. ಶಾಸನ)
“ಕೆಲಮಂದಿ ರಾಜರು ಪರಾಕ್ರಮದಿಂದ ರಾಜ್ಯವನ್ನಾಳಿ ಐಶ್ವರ್ಯವನ್ನು ಭೋಗಿಸಿದರು, ಕೆಲವರು ಇತರರಿಗೆ ದಾನಗೈದರು; ಇನ್ನೂ ಕೆಲವರು ಎಲ್ಲವನ್ನೂ ತ್ಯಾಗವೆಸಗಿದರು. ಏನಾದರೇನು? ಅನಿತ್ಯವಾದೀ ರಾಜ್ಯದಲ್ಲಿ ಯಾವುದು ನಿತ್ಯ ವಾಗಿದೆ? ಈ ಸ್ವಾರ್ಥಾನುಭವ - ದಾನ – ತ್ಯಾಗಗಳೆಂಬ ಮೂರೂ ಅನಿತ್ಯ ಗಳೆಂದು ತಾತ್ಪರ್ಯ. ಅದರಿಂದ ಕೀರ್ತಿಯೊಡನೆ ಧರ್ಮವೊಂದೇ ರಕ್ಷಣೀ ಯವೆಂದೂ, ಅದೊಂದೇ ಈ ಅನಿತ್ಯ ರಾಜ್ಯದಲ್ಲಿ ನಿತ್ಯವೆಂದೂ ನೃಪತುಂಗನ ಅಭಿಪ್ರಾಯ, ನೃಪತುಂಗನ ಧಾರ್ಮಿಕವಾದ ಎದೆಯ ನೆಲೆಗಟ್ಟು ಎಷ್ಟು ಬಿಗಿ ಯಾಗಿ ಬಲಿದು ಹೆಣೆದುಕೊಂಡಿತ್ತು ಎಂಬುದು ಇಲ್ಲಿ ಹೊಳೆಯುತ್ತಿದೆ. ಇಲ್ಲಿ ವಿಕ್ರಮವನ್ನು ಮುಂದುಮಾಡಿ ರಾಜ್ಯವನ್ನು ಭೋಗಿಸುವುದು, ಪರರಿಗೆ ದಾನ ಮಾಡುವುದು, ಮತ್ತು ಎಲ್ಲವನ್ನೂ ತ್ಯಾಗವೆಸಗುವುದು ಎಂಬ ಅನಿತ್ಯವಾದ ಈ ಮೂರೂ ನೃಪತುಂಗನೆಣಿಕೆಯಲ್ಲಿ 'ಧರ್ಮ'ವಾಗಿರುವಂತೆ ತೋರುವುದಿಲ್ಲ.
- ೬೫
–
ಹಾಗಿದ್ದರೆ ಅವನೆಣಿಕೆಯ ಉದಾರವಾದ ಧರ್ಮವಾವುದು? ಮತ್ತಿನ ಶಾಸನ ಪದ್ಯವನ್ನೀಕ್ಷಿಸಿರಿ: -
ತೇನೇದಮನಿಲ ವಿದ್ಯುಚಂಚಲಮವ ಲೋಕ್ಯ ಜೀವಿತಮ ಸಾರಂ !! ಕೃತಿದಾನ ಪರಮಪುಣ್ಯಂ ಪ್ರವರ್ತಿತೋ ಬ್ರಹ್ಮದಾಬೋಯಂ || ೫೩ ||
“ಅದರಿಂದ ಗಾಳಿ ಮಿಂಚುಗಳಂತೆ ಚಲವಾದ ಈ ಜೀವಿತವೆಂಬುದು ಅಸಾರವು. ಹೀಗೆ ನಿರ್ಧರಿಸಿ, ಪರಮ ಪುಣ್ಯ ಸ್ವರೂಪವಾದ ಈ ಬ್ರಹ್ಮದಾಯವು ಆಚರಿಸಲ್ಪಟ್ಟಿತು.
ಧಾರಣಾಯಾಃ ಧರ್ಮಃ ಎಂಬ ವ್ಯುತ್ಪತ್ತಿಗನುವಾಗಿ, ಯಾವುದು, ಸರ್ವ ಸಂಸಾರವು ಸುಖವಾಗಿ ನೆಲೆಗೊಳ್ಳುವಂತೆ ಧಾರಣೆಮಾಡುವುದೊ - ಅಥವಾ ಪಾಲಿಸುತ್ತಿದೆಯೋ, ಅದೇ ಧರ್ಮವು, ಅತಿ ಭೋಜನ - ಅನುಚಿತ ಭೋಜ ನಾದಿಗಳನ್ನಲ್ಲಗಳೆದು ಆಹಾರ ವ್ಯವಹಾರಗಳನ್ನು ನಿಯಮಕ್ಕೊಳಗಾಗಿಸುವು ದೆಂದರೆ ಆರೋಗ್ಯ ಜೀವನದ ಧರ್ಮವು. ಅದರಂತೆ, ಇಡಿ ಸಂಸಾರವನ್ನು ಪೋಷಿಸುವ ಮನೋವಾಕ್ಕಾಯಗಳ ವಿವೇಚನಾತ್ಮಕ ವರ್ತನೆಯನ್ನೆ ಸಂಸಾರ ಧರ್ಮ ಅಥವಾ ಎಲ್ಲ ಮತಗಳಿಗೂ ಮೇಲಾದ ಮತ, ಎನ್ನಬೇಕು. ಉದಾರ ನೃಪತುಂಗನು ಅಂಥ ಧರ್ಮವನ್ನೇ ಆಚರಿಸುತ್ತಿದ್ದಂತೆ ಭಾಸವಾಗುತ್ತಿದೆ. ಅವನ ಉದಾತ್ತ ಭಾವನೆ, ಹಿಂದುಮುಂದಿನ ಮತ್ತು ವರ್ತಮಾನಕಾಲದ ಸರ್ವಧರ್ಮ ಗಳನ್ನೂ ಎಷ್ಟು ಬಹುಮಾನಿಸುತ್ತಿತ್ತು ಎಂಬುದನ್ನು ಶಾಸನದ ಹೇಳಿಕೆಯಿಂದಲೆ ಪರಾಂಬರಿಸಿರಿ
ರಾಜೇಂದ್ರಾಸ್ತೆ ವಂದನೀಯಾಸ್ತು ಪೂರ್ವ ಯೇಷಾಂ ಧರ್ಮ: ಪಾಲನೀಯೋಸ್ಮದಾ || ಧ್ವಸ್ತಾ ದುಷ್ಟಾ ವರ್ತಮಾನಾಃ ಸ್ವಧರ್ಮೇ ಪ್ರಾರ್ಥ್ಯಾ ಯೇತೇ ಭಾವಿನಃ ಪ್ರಾರ್ಥಿವೇಂದ್ರಾ: ki ೫೫ i (ಸಂ. ಶಾ.)
“ಪೂರ್ವಿಕರಾದ ರಾಜೇಂದ್ರರೆಂದರೆ ನಮಗೆ ವಂದನೀಯರು. ಅವರು ಸ್ಥಾಪಿಸಿದ ಧರ್ಮಪದ್ದತಿ ನಾವೇ ಮೊದಲಾದವರಿಂದ ಪಾನೀಯವು, ಆದ ರಿಂದಲೆ ಅಧರ್ಮಮಾರ್ಗದ ವಿರೋಧಿಗಳೆಲ್ಲ ಧ್ಯಸ್ತರಾದರು. ನಾವು ಸ್ಥಾಪಿಸಿದ ಈ ಸ್ವಧರ್ಮವನ್ನು ಪಾಲಿಸುವ ಅಧಿಕಾರಿಗಳು ಮುಂದೆ ನೀವಾಗಬೇಕು ಎಂದು ಭಾವಿ ಪಾರ್ಥಿವೇಂದ್ರರನ್ನು ಪ್ರಾರ್ಥಿಸುತ್ತೇವೆ.” ಈ ಶ್ಲೋಕವು ರಾಷ್ಟ್ರ
-
೬೬
-
ಕೂಟ ವಂಶದ ಮುಂದಿನ ರಾಜರನ್ನು ಮಾತ್ರವೆ ಪ್ರಾರ್ಥಿಸುವುದಲ್ಲ; ಯಾವ ಕುಲವೆ ಆಗಲಿ, ಉತ್ತಮರಾದ ಭಾವಿಕಾಲದ ರಾಜರನ್ನು ಕುರಿತು ಪ್ರಾರ್ಥಿಸಿದ ಮಾತಿದು. ಇದರಿಂದ ನೃಪತುಂಗನು ಸ್ವವಂಶಕ್ಕಿಂತಲೂ ಹೆಚ್ಚಾಗಿ ಸ್ವಧರ್ಮ ವನ್ನೇ ಬಹುಮತಿಸಿದ ಉದಾತ್ತತೆ ಭಾಸವಾಗುವುದು, ಇಲ್ಲಿ ಭೂದಾನವೆ ಮೊದಲಾಗಿ ಸ್ಥಾಯಿಯಾಗಿ ನೆಲೆಗೊಳಿಸಿದ ಕಾರ್ಯರೂಪದ ಧಾರ್ಮಿಕ ವ್ಯವಸ್ಥೆಯನ್ನೆ ರಕ್ಷಿಸಬೇಕೆಂದು ಮುಂದಿನವರಲ್ಲಿ ಪ್ರಾರ್ಥಿಸಿದುದು, ಬರಿಯ ತನ್ನ ವೈಯಕ್ತಿಕ ಧರ್ಮವನ್ನಾಗುತ್ತಿದ್ದರೆ, ಇದನ್ನು ನಡೆಯಿಸಬೇಕೆಂದು ಮುಂದಿನವರನ್ನು ಪ್ರಾರ್ಥಿಸುವ ಸಂದರ್ಭವೇ ಇರುತ್ತಿರಲಿಲ್ಲ. ವೈಯುಕ್ತಿಕ ವಾದ ಅಥವಾ ವಾಂಶಿಕವಾದ ಭಿನ್ನಮತ ಭಾವನೆಯನ್ನು ಇಂಥ ಧಾರ್ಮಿಕ ಕಾರ್ಯಗಳಲ್ಲಿ ಮುಂದಿನ ಚಿರಂಜೀವಿ ರಾಜಕುಮಾರರು ಯಾರೂ ಬೆರಸ ಲಾಗದು ಎಂಬ ತಾತ್ಪರ್ಯವು, ಕವಿರಾಜ ಮಾರ್ಗದೊಳಗಿನಿಂದಲೇ ಎತ್ತಿ ಮುಂದೆ ದೃಷ್ಟಾಂತಿಸುವ ಪದ್ಯದಲ್ಲಿ ವಿಶದವಾಗಿ ನೃಪತುಂಗನ ಧಾರ್ಮಿಕ ಭಾವನೆ ಮತ್ತೂ ಹೆಚ್ಚು ವ್ಯಕ್ತವಾಗಿ ಹೊಳೆಯುತ್ತಿದೆ.
ಕಸವರಮೆಂಬುದು ಮಗೆಕ್ಕೆ ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ !! ಕಸವೇಂ ಕಸವರಮೆನು ಬೃಸನಂ ಬಸವಿಲ್ಲದಿರ್ದ್ದು ಮಾಡುವರೆಲ್ಲಂ i ೧೭೭ !! (ಪ. ೩)
ಇದು ಉದಾತ್ತಾಲಂಕಾರದ ಲಕ್ಷಗಳೊಳಗೇ ಒಂದಾದ ಪದ್ಯವೆಂಬು ದನ್ನು ಮರೆಯಲಾಗದು:- “ಪರ ಧರ್ಮಿಯರ ವಿಚಾರ ಮಾರ್ಗವನ್ನೂ, ಅವರ ಧರ್ಮಾಚಾರವನ್ನೂ ಸೈರಿಸುವಷ್ಟು - ಸೈರಿಸಿ ಅವರಿಗೂ ನೆರವಾಗು ವಷ್ಟು ಅಂತಶ್ಯಕ್ತಿ ಇದ್ದರೆ ಮಾತ್ರವೇ 'ಕಸವರ' (ಐಶ್ವರ್ಯ) ಸಫಲವಾಗು ವುದು, ಹಾಗಿಲ್ಲವಾದರೆ ಕಸವರವೇನು, ಕಸವೇನು? ಎರಡೂ ಒಂದೇ ಎಂದು ತಾತ್ಪರ್ಯ - ಈ ಐಶ್ವರ್ಯದ ಮದದಿಂದಾಗಿ ಹಲವರು ಲೋಕಕ್ಕೇ ಉಬ್ಬಸ ವನ್ನೊದಗಿಸಿ ಬಿಡುತ್ತಾರೆ.” ನೃಪತುಂಗನ ಸರ್ವಮತ ಸಮಾನತಾಬುದ್ದಿ ಹೇಗೆ ಸಮರಸವಾಗಿ ಪಸರಿಸಿಕೊಂಡಿದ್ದುದೆಂಬುದು ಈ ಪದ್ಯದಿಂದ ಹೊಳೆದು ತೋರುತ್ತಿದೆ. ಇದನ್ನು ಪರಾಂಬರಿಸಿದ ಮೇಲೆ ನೃಪತುಂಗನ ಧರ್ಮ ವಾವುದು ಎಂದು ಪ್ರಶ್ನಿಸುವ ಸಂದರ್ಭವೂ ತಲೆದೋರಲಾರದೆಂದು ನಮ್ಮ
-
೬೭
-
ಭಾವನೆ, ಸರ್ವಮತಗಳನ್ನೂ ಸಹಿಷ್ಣುತೆಯಿಂದ ನೋಡಿದ, ಆ ಎಲ್ಲ ಮತ ಗಳೊಳಗಿನ ಸಾರವೆನ್ನಿಸಿ ಅವನೆದೆಗೆ ಹರಿದ, ಉದಾರವಾದ ಮತವೇ ಅವನ ಮತವೆಂಬುದು ಇಲ್ಲಿ ವ್ಯಕ್ತವಾಗುತ್ತಿದೆ.
ನೃಪತುಂಗನು ಬಲು ಚಿಕ್ಕ ವಯಸ್ಸಿನಲ್ಲಿ ಪಟ್ಟವನ್ನೇರಬೇಕಾಗಿ ಬಂತು. ಅದು ಅವನಿಗೆ ಮಾತ್ರವಲ್ಲ, ಆಗಿನ ಲೋಕಕ್ಕೆ ಅಪಾರ ದುಃಖದಾಯಕ ವಾಯಿತು. “ಯೇನಾತ್ಯಾಜಿ ತನುಃ ಸ್ವರಾಜ್ಯ ಮಸಕೃತ” (ಶಾ. ಪದ್ಯ ೪೮) ಎಂದು ಸಂಜನ ಶಾಸನದಲ್ಲೇ ತೋರುತ್ತಿದೆ, ನೃಪತುಂಗನು ತನ್ನ ಶರೀರವನ್ನೇ ತ್ಯಾಗವೆಸಗಿದನು; ಬಲು ಬಾರಿ ಸ್ವರಾಜ್ಯವನ್ನು ಕಳಕೊಂಡನು. ಎಂಬುದೇ ಆ ಮಾತಿನ ಸಾರ. ಅದು ಅಂಥ ರಾಜನ ಶೋಚನೀಯಾವಸ್ತೆಯಾದರೂ ಧಾರ್ಮಿಕ ಹೃದಯ ಶಕ್ತಿಯುಳ್ಳ ಆತನಿಗೆ ಅದೊಂದು ಉತ್ತಮ ಪಾಠ ವಾಗಿಯೇ ಪರಿಣಮಿಸಿದಂತೆ ತೋರುತ್ತಿದೆ, ಧಾರ್ಮಿಕ ರಾಜಮಾರ್ಗದಲ್ಲಿ ಹಜ್ಜೆಯಿಟ್ಟ ಆತನು ಕಷ್ಟ ಪರಂಪರೆಗಳನ್ನೆಲ್ಲ ದಾಟಿ ಆದರ್ಶ ಚಕ್ರವರ್ತಿ ಎಂದೆನಿಸಿದನು. ಅವನ ಆಸ್ಥಾನದಲ್ಲಿ ಅರೇಬಿಯಾ ಮೊದಲಾದ ಪಶ್ಚಿಮ - ಪೂರ್ವ ದೇಶಗಳ ರಾಜಧಾನಿಗಳಿಂದ ರಾಯಭಾರಿಗಳು ಬರುತ್ತಿದ್ದರೆಂಬು ದನ್ನು ಚಾರಿತ್ರಿಕರು ಅನುಮೋದಿಸಿದ್ದಾರೆ. ಆ ಹೇಳಿಕೆಯನ್ನು “ಯಸ್ಯಾಹ್ಲಾಂ ಪರಚಕ್ರಿಣಃ ಸೃಜಮಿವಾಜಸ್ತಂ ಶಿರೋಭಿರ್ವಹಂತಿ” ಎಂದೂ “ಯದ್ದಾರೇ ಪರಮಂಡಲಾಧಿಪತಯ:- ... ” ಎಂದೂ ೪೫ ೪೬ನೆಯ ಶ್ಲೋಕಗಳಲ್ಲಿ ಸಂಜನ ಶಾಸನವು ಸೂಚಿಸುತ್ತಿದೆ. ಇಲ್ಲಿ ತೋರುವ “ಪರಚಕ್ರಿಣಃ” ಮತ್ತು “ಪರಮಂಡಲಾಧಿಪತಯಃ” ಎಂಬ ವಿಶಿಷ್ಟ ಪದಗಳನ್ನು ಅವಲೋಕಿಸಿರಿ. ಮೊದ ಲಿನದು ನೃಪತುಂಗನಂತೆ ಚಕ್ರವರ್ತಿ ಪದವಿಗೇರಿದ ಬಾಹ್ಯಖಂಡದ ಚೈನಾದಿ ಚಕ್ರವರ್ತಿಗಳ, ಮತ್ತಿನದು ಮಂಡಲಾಧೀಶ್ವರರಾಗಿ ತನ್ನೊಳಗಿನ ಮಿತ್ರರಾದ ರಾಜರನ್ನೇ ಹೊಳೆಯಿಸುತ್ತಿದೆ. ಇವಕ್ಕೆ ಸರಿಯಾದ ಹೇಳಿಕೆ ಕವಿರಾಜ .ಮಾರ್ಗದ ದೃಷ್ಟಾಂತ ಪದ್ಯಗಳಲ್ಲೂ ಹೊಳೆಯುತ್ತಿದೆ:
ಪ್ರಣತಾರಿ ತುಟಿತಮುಕ್ಕಾ ಮಣಿಗಳ್ ಮಾರ್ತಾಂಕದಿಂ ಕಲ್ಲು ದಿರೆ ಸಭಾಂ | ಗಣತೊಪ್ಪೆ ವೀರ ನಾರಾ ಯಣನಾತಾರಕಿತನಭದವೋಲ್ ಸೊಗಯಿಸುಗುಂ ॥ ೧೮೧ i
- ೬೮ -
ಪರಚಕ್ರಭೂಪರಟ್ಟಿದ ಕರಿಗಳ್ ಬಿಡುತರ್ಪ ಮದದ ಪೊನಲಿಂದೆತ್ತಂ | ನರಲೋಕಚಂದ್ರನಾಮಂ ದಿರದೊಳಗೊಳಗೆಲ್ಲ ಕಾಲಮುಂಕೆಸಲಿಕ್ಕುಂ || ೧೮೨ || (ಪರಿ. ೩.)
ರೇವಾ ನಗರಿಯ ಜಗತ್ತುಂಗನ ಪರಾಕ್ರಮವು ಮಗನಾದ ಅಮೋಘ ವರ್ಷನಲ್ಲಿ ಹಾಗೇ ಅಚೈತ್ತಿರಲಿಲ್ಲ ಎಂಬುದನ್ನು ಹಿಂದೆಯೇ ನಿವೇದಿಸಿದ್ದೇವೆ. ಇರಲಿ, ಅವನು ದಯಾ ಪರಾಕ್ರಮಗಳಲ್ಲಿ ಬಿಯಾದರೆ, ಈತನು ದಯಾ ಧರ್ಮಗಳಲ್ಲಿ ಮೇಲೆ ಪ್ರತಾಪ ಅಥವಾ ವಿಕ್ರಮಕ್ಕಿಂತಲೂ ಧರ್ಮವೇ ನೃಪತುಂಗನ ಎದೆಗೆ ಮೆಚ್ಚುಗೆಯಾದುದು ಎಂಬುದು ಹಿಂದಿನ ಶಾಸನ ಭಾಗ ದಿಂದಲೇ ಗೊತ್ತಾಗುತ್ತಿದೆ. ಅಷ್ಟು ಪ್ರಬಲನಾಗಿದ್ದ ತಂದೆಗಿಂತಲೂ ಅಧಿಕ ವಾಗಿ ಮಗನ ಕೀರ್ತಿಯೇ ಕನ್ನಡ ನಾಡಿನಲ್ಲಿ ನೆಲೆಗೊಂಡುದರಿಂದ ಆ ನೃಪ ತುಂಗನ ಧಾರ್ಮಿಕ ಭಾವನೆ ಎಷ್ಟು ಅಮೌಲ್ಯವಾದುದೆಂಬುದೂ ಹೊಳೆಯು. ತಿದೆ. ಆ ತಂದೆ ಮಕ್ಕಳ ನಾಡಿನಲ್ಲೇ ಪರಂಪರಾನುಗತವಾಗಿ ಬಳೆದು ಬಂದ ಕನ್ನಡ ಕುಲದವರೆಂಬುದನ್ನು ನಾವು ಮರೆಯಬಾರದು.
ನೃಪತುಂಗನ ಮುತವಾವುದು?
ಹೀಗಿದ್ದರೂ ಅಮೋಘವರ್ಷ ನೃಪತುಂಗನು ತನ್ನ ವೈಯಕ್ತಿಕ ಜೀವನ ದಲ್ಲಿ ಅನುಸರಿಸುತ್ತಿದ್ದ ವಿಶಿಷ್ಟವಾದ ಮತವಾವುದು ಎಂಬ ವಿಷಯವಾಗಿ ಅಂದಿ
ನಿಂದಿಂದಿನವರೆಗೂ ವಾದ ವಿವಾದಗಳು ನಡೆಯುತ್ತಲೇ - ನೃಪತುಂಗನು
, ಇವೆ. ಒಮ್ಮೆ ಆ ವಾದ ಪ್ರತಿವಾದಗಳ ಹುರಿ ಏರಿ ಜೈನನಾಗಿರಬಹುದೆ?
ಈ ಧ್ವರೂ ಈಗ ಒಂದಿಷ್ಟು ಸಡಿಲಾಗಿದೆ. ಆದರೂ ಅವನ ಮತವಾವುದು ಎಂಬ ವಿಚಾರವೆದ್ದಲ್ಲಿ, ಕೆಲವರು ಜೈನನೆಂದೂ ಕೆಲವರು ವೈಷ್ಣವ ನೆಂದೂ ಆಡಿಕೊಳ್ಳುತ್ತಾರಲ್ಲದೆ ಇದಮಿತ್ಥಂ ಎಂಬ ಸಿದ್ದಾಂತವೇನೂ ಆಗಿಲ್ಲ. ಆದರೆ ಜೈನಮತಾನುಯಾಯಿಗಳು ಈತನು ಜೈನನಾಗಿದ್ದಿರಬೇಕೆಂದೇ ನೆರೆ ನಂಬಿದ್ದಾರೆ. ಹಾಗೆ ನಂಬಿದ ನಂಬುಗೆ ನಿರಾಧಾರವಾದುದಲ್ಲ. ನೃಪತುಂಗನ ಆಸ್ಥಾನದಲ್ಲಿದ್ದ ಮಹಾ ವೀರಾಚಾರ್ಯನೆಂಬ ವಿದ್ವಾಂಸನು ಗಣಿತಸಾರ ಸಂಗ್ರಹ' ಎಂಬ ಶಾಸ್ತ್ರಗ್ರಂಥವನ್ನು ಬರೆದಿದ್ದಾನೆ. ಅದರೊಳಗಿನ ಈ ಶ್ಲೋಕ ನನ್ನೀಕ್ಷಿಸಿರಿ
* ವಿಧ್ಯ ಕಾಂತಪಕ್ಷಸ್ಯ ಸ್ಯಾದ್ವಾದ ನ್ಯಾಯವೇದಿನಃ | ದೇವಸ್ಯ ನೃಪತುಂಗಸ್ಯ ವರ್ಧತಾಂ ತಸ್ಯ ಶಾಸನಂ ||
“ಏಕಾಂತಪಕ್ಷ (ಅದೈತ ಪ್ರವಣವಾದ ವೈಷ್ಣವಮತವನ್ನು ನಿರ್ಮೂಲ ವೆಸಗಿದ, ಜೈನಮತವನ್ನರಿತವನಾದ ನೃಪತುಂಗನ ಶಾಸನವು ವೃದ್ದಿ ನಡೆಯಲಿ” ಎಂದು ಈ ಶ್ಲೋಕಾರ್ಥ, ಪಾಠಾಂತರದಲ್ಲಿ, “ಸ್ಯಾದ್ಯಾದ ನ್ಯಾಯವಾದಿನ:” ಎಂದಿದೆ. ಅದೇ ಶುದ್ಧವಾದರೆ, ನೃಪತುಂಗನು ಜೈನಮತವನ್ನೆ ವಾದಿಸುವವ ನೆಂದೂ ಜೈನನೆಂದೂ ನಿರ್ಧಾರವೆಸಗಲು ಹೆಚ್ಚಿನ ನೆರವಾಗಬಹುದು.
“ ಪ್ರಶೋತ್ತರಮಾಲಾ' ಎಂಬ ಒಂದು ಚಿಕ್ಕುದಾದರೂ ಸಾರವತ್ತಾದ ಜೈನಮತೀಯವಾದ ಗ್ರಂಥವಿದೆ. ಅದನ್ನು ನೃಪತುಂಗನೇ ಬರೆದುದಾಗಿ ಶ್ರೀ. ಕೆ. ಬಿ. ಪಾಠಕರ ಕವಿರಾಜ ಮಾರ್ಗ'ದ ಇಂಗ್ಲಿಷ್ ಭಾಷೆಯ ಮುನ್ನುಡಿ ಯಿಂದ ಗೊತ್ತಾಗುತ್ತಿದೆ.
* Sources of Karnataka History P. 71
8 Shrikanta Shastri M. A. Mysore Uni. 1940.
- ೭೦ - ಆ ಶ್ಲೋಕ ಹೀಗಿದೆ:
ವಿವೇಕಾತ್ಯಕ್ತರಾಜೈನ ರಾಜೇಯಂ ರತ್ನಮಾಲಿಕಾ | ರಚಿತಾಮೋಘವರ್ಷೇಣ ಸುಧಿಯಾ ಸದಲಂಕೃತಿಃ |
ಇದರಿಂದ ಈ ಗ್ರಂಥ ನಿರ್ಮಾಣಕಾಲದಲ್ಲಿ ಅಮೋಘವರ್ಷನು ವಿವೇಕ ದಿಂದ ರಾಜ್ಯವನ್ನು ತ್ಯಜಿಸಿದ್ದನೆಂದೂ, ಜೈನ ಮತೀಯನಾಗಿದ್ದನೆಂದೂ ಗೊತ್ತಾಗುತ್ತಿದೆ. ಇರಲಿ; ನೃಪತುಂಗನು ಜೈನನಾಗಿದ್ದನೆಂದು ಭಾವಿಸುವಲ್ಲಿ ಇವಲ್ಲದೆ ಅಷ್ಟಿಷ್ಟು ಬೇರೆ ಆನುಮಾನಿಕ ಸಾಧನಗಳೂ ಇರಬಹುದು. ಆದರೆ, ಇವುಗಳೇ ಪ್ರಬಲಗಳಾದುವು.
ಯಾವುವೇ ಆಗಲಿ; ಇವು ಚಾರಿತ್ರಿಕಗಳು ಎಂದು ಸಿದ್ದಾಂತಿಸಲು ಆಧಾರ ಗಳನ್ನಿನಲ್ಲಿ ಪ್ರಮುಖವಾದ ಲೇಖನಾಧಾರಗಳು ಎರಡು ಎನ್ನಬಹುದು. ಗ್ರಂಥ ಗತವಾದವುಗಳು ಒಂದಾದರೆ, ಶಾಸನಾತ್ಮಕವಾದುವು ಇನ್ನೊಂದು ಗ್ರಂಥ
. ಗಳು, ಕಾಲಕಾಲದ ಮಾತೃಕಾವ್ಯತ್ಯಾಸದಿಂದ, ಆಯಾ ಆಧಾರಗಳ ವಿವೇಚನೆ ಲೇಖಕರ ಕೈಯ ಮನಸ್ಸಿನ ಸ್ಟಾಲಿತ್ಯದಿಂದ ಆಗಾಗ ಅಷ್ಟಿಷ್ಟು ಬದಲಾವಣೆಯನ್ನು ಹೊಂದುತ್ತಾ ಹೋಗಬಹುದು. ಶಾಸನಗಳು ಹಾಗಲ್ಲ; ಏಕರೂಪವಾಗಿಯೇ ಇರುತ್ತಿವೆ. ಮಾತ್ರವಲ್ಲ; ಶಾಸನವೆಂದರೆ ಚಾರಿತ್ರಿಕ ಸತ್ಯವು ಮಾಸಿಹೋಗದೆ ಶಾಶ್ವತವಾಗಿ ನೆಲೆಗೊಳ್ಳಬೇಕು ಎಂಬ ಗುರಿಯನ್ನು ಬಿಗಿವಿಡಿದೇ ನೆಲೆಗೊಂಡುದಾಗಿದೆ, ಇತರ ಗ್ರಂಥ ಲೇಖಗಳಲ್ಲಿ ಅಂಥ ಚಾರಿತ್ರಿಕ ಸತ್ಯಕ್ಕೆ ಪ್ರಮುಖ ಸ್ಥಾನವಿಲ್ಲ. ಅದರಿಂದ ವಿಶ್ವಾಸಾರ್ಹ ಶಾಸನಗಳೇ ಉಳಿದ ಗ್ರಂಥಗಳಿಗಿಂತಲೂ, ಇಂಥ ಚಾರಿತ್ರಿಕ ವಿಷಯಗಳಲ್ಲಿ ಪ್ರಬಲತರಾಧಾರಗಳೆಂಬುದನ್ನು ಮರೆಯಲಾಗದು. ಇದನ್ನು ಮರೆಯದೆ ಮೇಲೆ ಕಾಣಿಸಿದ ಎರಡು ಗ್ರಂಥಗತಗಳಾಗಿ ತೋರುವ ಆಧಾರಗಳನ್ನು ಒಂದಿಷ್ಟು ವಿಚಾರಿಸುವ:- ರತ್ನಮಾಲೆಯದು ಎಂದು ಕಾಣುವ ದೃಷ್ಟಾಂತ ಶ್ಲೋಕದಲ್ಲಿ ಅದನ್ನು ಬರೆದವನು ಅಮೋಘವರ್ಷನೆಂದೇನೋ ತೋರುವುದು ನಿಜ. ಆದರೆ ಅದಕ್ಕಿಂತ ಹಿಂದಿನ ಆರ್ಯಾ ಹೀಗಿದೆ:
ರಚಿತಾ ಒತಪಟಗುರುಣಾ ವಿಮಲಾ ವಿಮಲೇನ ರತ್ನಮಾಲೇವ | ಪ್ರಶೋತ್ತರ ಮಾಲೀಯಂ ಕಂಠಗತಾ ಕಂನ ಭೂಷಯತಿ | ೨೯೦ !
“ಶ್ವೇತಾಂಬರ ಗುರುವಾದ ವಿಮಲನಿಂದ ವಿಮಲವಾದ ರತ್ನಮಾಲೆ ಯಂತಿರುವ ಈ ಪ್ರಶೋತ್ತರ ಮಾಲೆ ರಚಿತವಾಯಿತು. ಕಂಠಗತವಾದ
-
೭೧
-
ಇದು ಯಾವಾತನನ್ನು ಅಲಂಕರಿಸುವುದಿಲ್ಲ?” ಆದಿಮೊದಲ್ಗೊಂಡು ಮೇಲಿನ ಇಪ್ಪತ್ತೊಂಬತ್ತನೆಯದರಲ್ಲಿ ಕಡೆಗೊಳ್ಳುವ ವೃತ್ತಗಳೆಲ್ಲವೂ ಆರ್ಯಾವೃತ್ತ ಗಳು. . ಇದರಲ್ಲಿ ಈ ವಿಮಲನೆಂಬ ಶ್ವೇತಾಂಬರ ಯತಿಯೇ ಇದನ್ನು ಬರೆದಾತ ನೆಂಬುದೂ ಸೂಚಿತವಾಗಿದೆ. ಅದರಿಂದ ನೃಪತುಂಗನು ಇದನ್ನು ಬರೆದಾತ ನೆಂದು ತೋರುವ ಅನುಷ್ಟುಪ್ ಶ್ಲೋಕವೂ ಈ ಪುಸ್ತಕದೊಳಗಿನದೇ ಎಂದು ಹೇಳುವುದಾದರೂ ಹೇಗೆ? ಏನು ಇಬ್ಬರೂ ಸೇರಿ ಈ ಚಿಕ್ಕ ಪುಸ್ತಕವನ್ನು ಬರೆದರೆನ್ನುವುದೆ? ಎರಡೂ ಭಿನ್ನ ಭಿನ್ನ ಕರ್ತೃಕಗಳೆಂದೇ ಸೂಚಿಸುವುದರಿಂದ ಒಂದು ನೀರಿಗೆ ಸೆಳೆದರೆ, ಇನ್ನೊಂದು ಗುಡ್ಡಕ್ಕೆಳೆವಂತಿದೆಯಲ್ಲದೆ ಉಭಯ ಕರ್ತೃಕತ್ವವನ್ನು ಹೊಳೆಯಿಸುವುದೇ ಇಲ್ಲ. ಮಾತ್ರವಲ್ಲ; ಅಮೋಘವರ್ಷ ಕರ್ತೃಕವೆನ್ನುವ, ಕಡೆಯದಾಗಿ ತೋರುವ ಆ ಶ್ಲೋಕವೊಂದೇ ಅನುಷ್ಟುಪ್ ಶ್ಲೋಕದಲ್ಲಿದೆಯಲ್ಲದೆ ಆದ್ಯಂತವಾದ ಇಪ್ಪತ್ತೊಂಬತ್ತೂ ಆರ್ಯಾವೃತ್ತದಲ್ಲಿ ಇವೆ ಎಂಬುದನ್ನು ಮರೆಯಬಾರದು. ಇದರೊಳಗಿನ ಎಲ್ಲ ಆರ್ಯಾವೃತ್ತ ಗಳೂ ಹೃದಯಂಗಮವಾಗಿದ್ದರೆ, ಮೂವತ್ತನೆಯದಾದ ನೃಪತುಂಗ ಕರ್ತೃ ಕತ್ವವನ್ನು ಸೂಚಿಸುವ ಆ ಭಿನ್ನ ವೃತ್ತದ ಶ್ಲೋಕವೊಂದೇ ನಿಷ್ಟಾಯವಾಗಿದೆ. ಅಷ್ಟೆ ಅಲ್ಲ; ಆದಿಯ ವೃತ್ತದಲ್ಲಿ 'ಪ್ರಶೋತ್ತರ ಮಾಲಿಕಾಂವಕ್ಷೆ” ಎಂದು ಪ್ರಾರಂಭವಾಗಿ ಕಡೆಯ ವೃತ್ತದಲ್ಲಿ “ರತ್ನಮಾಲೇವ ಪ್ರಶೋತ್ತರ ಮಾಲೇ
ಯಂ , , , .” ಎಂದೇ ಇದರ ಹೆಸರು, 'ರತ್ನಮಾಲೆ'ಯೊಡನೆ ಹೋಲಿಕೆ ಗೊಂಡು ಸೂಚಿತವಾಗಿ, ಕಡೆಯದರಲ್ಲಿ ಮಾತ್ರ 'ರತ್ನಮಾಲಿಕಾ' ಎಂಬುದೇ ಹೆಸರಾಗಿ ಕಾಣುತ್ತಿದೆ. ಅದರಿಂದಲೂ ಈ ಅನುಷ್ಟುಪ್ ಪ್ರಕ್ಷಿಪ್ತವಾಗಿಯೇ ಭಾಸವಾಗುವುದಲ್ಲವೆ?
ಮಾತ್ರವಲ್ಲ; ಚಾರಿತ್ರಿಕ ವಿದ್ವಾಂಸರು ಪರಾಂಬರಿಸಲೇ ಬೇಕಾದ ಇನ್ನೊಂದು ವಿಷಯವೂ ಈ ಸಂದರ್ಭದಲ್ಲಿದೆ. ಕೈ. ವಾಸಿ. ಕೆ. ಬಿ. ಪಾಠಕರು, ತಮ್ಮ ಕ್ರಿ. ಶ. ೧೮೯೮ರಲ್ಲಿ ಅಚ್ಚಾದ ಕವಿರಾಜ ಮಾರ್ಗದ ಮುನ್ನುಡಿಯ ೯ನೆ ಪುಟದಲ್ಲಿ ಹೀಗೆನ್ನುತ್ತಾರೆ:-ಶ್ರೀ ಶೈಘ್ನರು Sri Schiefner ಸಂಸ್ಕೃತ ದಿಂದ ತಿಬೇತ್ ಭಾಷೆಯಲ್ಲಿ ಭಾಷಾಂತರಿಸಿದ ಈ ಪುಸ್ತಕವು ನನಗೊದಗಿತು. ತನ್ನ ಮಗನಾದ ಅಕಾಲವರ್ಷ ಕೃಷ್ಣನನ್ನು ಪಟ್ಟಕ್ಕೇರಿಸಿದುದಕ್ಕಿಂತ ಒಂದು ವರ್ಷಕ್ಕೆ ಹಿಂದೆಯೇ-ಎಂದರೆ ಶಾ, ಶ, ೭೯೭-೭೯೯ (ಕ್ರಿ. ಶ. ೮೭೫-೮೭೭) ರಲ್ಲಿ ಇದು ನೃಪತುಂಗನಿಂದ ರಚಿತವಾಗಿರಬೇಕು ಎಂದು ಅವರು ಹೇಳುತ್ತಾರೆ.
-
೭೨
-
ಆದರೆ ಮುಂದೆ ದೃಷ್ಟಾಂತಿಸುವ ಎರಡೂ ಶಾಸನ ಭಾಗಗಳು ನೃಪ ತುಂಗನು ಕ್ರಿ.ಶ. ೮೭೭ (ಶಾ, ಶ. ೭೯೯)ರಲ್ಲಿಯೂ ಸಿಂಹಾಸನಾರೂಢನಾಗಿದ್ದು ದನ್ನು ಸೂಚಿಸುತ್ತಿವೆ. ಸೊರಬ ಶಾಸನ ಭಾಗ:
*ಸ್ವಸ್ಮ ಮೋಘವರ್ಷವಲ್ಲಭ ಮಹಾರಾಜಾಧಿರಾಜ ಪರಮೇಶ್ವ]ರ ಭಟಾರಕಾ ಪೃಥುವೀರಾಜ್ಯಂಗೆಯ ಬನವಾಸಿ ಸನ್ನಿರ್ಚ್ಛಾಸಿರ ಮುಮಾನಿಸ್ಟರಗೊಳೆ ಸಕವರ್ಷಮೇಟ್ರೋಜ ತೊನ್ನ ತೊನ್ನ
ತನೆಯ ಸಂವತ್ಸರಂ ಪ್ರವರ್ತಿಸೆ . . . . . ಕನ್ಹೇರಿ ಶಾಸನ ಭಾಗ:
+ಓಂಸ್ವಸ್ತಿ ಶಕನೃಪಕಾಲಾತೀತ ಸಮ್ವರ ಶತೇಷು ಸಪ್ರಸು ನವ ನವತ್ಯಧಿಕೇಷು ಅಂಕತಃ ೭೯೯ ಮಹಾರಾಜಾಧಿರಾಜ ಪರಮೇಶ್ವರ ಶ್ರೀಮದಮೊಘವರ್ಷದೇವ ಪ್ರವರ್ಧಮಾನ ವಿಜಯರಾಜೇ ತತ್ವಸಾ ದೀಕೃತ ಕೋಂಕಣವಲ್ಲಭ ಮಹಾಸಾಮಂತ ಶೇಖರ ಶ್ರೀಕಪರ್ದಿ ಪ್ರವರ್ಧಮಾನಾಧಿಪತ್ಯೇ . . • •
ಈ ಎರಡೂ ಶಾಸನಗಳಿಂದಾಗಿ ಕ್ರಿ. ಶ. ೮೭೭ (ಶಾ. ಶ. ೭೯೯)ರಲ್ಲಿಯೂ ನೃಪತುಂಗನು ವಿವೇಕಾತ್ಯಕ್ತರಾಜ್ಯ' ನಾಗಿಲ್ಲ, ರಾಜ್ಯಾಧಿ ರೂಢನಾಗಿಯೇ ಇದ್ದನು ಎಂಬುದು ಸಿದ್ದವಾಗುತ್ತಿದೆ. ಇದರಿಂದ ಈ ಪ್ರಶೋತ್ತರಮಾಲಿಕೆ ಎಂಬ ಮತಗ್ರಂಥದ ಕರ್ತೃತ್ವವು ನೃಪತುಂಗನಿಂದ ಕಳಚಿಹೋಗಿ ತನ್ಮೂಲಕ ವಾಗಿ ಆತನು ಜೈನಮತೀಯನು ಎನ್ನುವ ಹೇಳಿಕೆಯ ಮಾಸಿ ಹೋಗುತ್ತಿದೆ.
'ಗಣಿತಸಾರ ಸಂಗ್ರಹ'ದೊಳಗಿನ ಆ ಹೇಳಿಕೆಯನ್ನು ಪರಾಂಬರಿಸುವ. ಮಹಾವೀರಾಚಾರ್ಯನೇನೋ ನೃಪತುಂಗನ ಆಸ್ಥಾನದಲ್ಲೇ ಇದ್ದವನು; ಆದರೂ ಅವನದೆಂದು ತೋರುವ ಆ ಶ್ಲೋಕದ ಅಕ್ಕರ ರಚನೆಯನ್ನು ಯಥಾ ಸ್ಥಿತವಾಗಿ ಹೇಗೆ ನಂಬುವುದು ? ಅರಸನ ಮತಭಾವನೆ ಎಷ್ಟು ಉದಾತ್ತವಾ ಗಿದ್ದುದು ಎಂಬುದು ಹಿಂದೆ ಸಂದರ್ಭಾನುಸಾರವಾಗಿ ಸೂಚಿತವಾಗಿದೆ. ಅವೆಲ್ಲ
* Epi. Carna. VIII How 30. esas
+Indi Anti. Vol VIII P. 133-Kanheri Inscrip. of the time of Amogha-varsha I
-
೭೩
°
ವನ್ನೂ ಕ್ರೋಡೀಕರಿಸಿ ಮನಸ್ಸಂಪುಟದಲ್ಲಿರಿಸಿಕೊಳ್ಳಿರಿ. ಆ ಮೇಲೆ “ವಿಧ್ಯ ಕಾಂತ ಪಕ್ಷಸ್ಯ” ಅಥವಾ ಏಕಾಂತ ಮತವಾದಿಗಳಾದ ವೈಷ್ಣವ ಪಕ್ಷವನ್ನು ಧ್ವಂಸವೆಸಗಿದಾತನ-ಎಂಬ ಅರ್ಥದ ರಚನೆಯನ್ನೀಕ್ಷಿಸಿರಿ. ಹಿಂದೆ ದೃಷ್ಟಾ೦ತಿಸಿದ -ಕಸವರವೆಂಬುದು ಮಿಗೆಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ"
ಎಂಬ ಉದಾತ್ತತೆಯ ಶಿಖರಕ್ಕೇರಿದ ಆ ಮಾತೆಲ್ಲಿ? ಸಂಕುಚಿತತೆ ಮೊನೆಯೂರಿ ಕರುಳನ್ನು ಕುಕ್ಕುವ ಈ “ವಿಧ್ಯಕಾಂತ ಪಕ್ಷ ಸ್ಯ” ಎಂಬ ಮಾತೆಲ್ಲಿ? ಅಜ ಗಜಾಂತರದ ಮಾತುಗಳಿವು. ಅವನು “ಸ್ಯಾದ್ವಾದ ನ್ಯಾಯವೇದಿ”ಯ ಆಗಿರ ಬಹುದು. ಸರ್ವ ಮತಗಳಲ್ಲಿಯೂ ಸಮದೃಷ್ಟಿಯನ್ನಿಡಬೇಕಾದರೆ ಅಂಥವನೇ ಆಗಬೇಕು. ಆದರೆ “ .... ವಾದಿ” ಎಂದಾಗಿರಲಿಕ್ಕಿಲ್ಲ. ಅದರಿಂದ, ಆ ಪದ್ಯ ಭಾಗವು “ವಿಜ್ಞಾತೈಕಾಂತ ಸಕ್ಸಸ್ಯ ಸ್ಯಾದ್ಯಾದನ್ಯಾಯವೇದಿನಃ” ಎಂದೇ ಇದ್ದಿರ ಬೇಕು. ಮತ್ತಿನ ಲೇಖಕರ ಕರದೋಷದಿಂದಲೋ, ಅಥವಾ ಅಂಥೋತ್ಸಾಹ ದಿಂದಲೋ, ಹಾಗೆ ಮಾರ್ಪಟ್ಟಿರಬೇಕು. ನಾವು ಜೈನಮತದಲ್ಲಿ ವಿಶ್ವಾಸ ಭಕ್ತಿ ಗಳುಳ್ಳವರಷ್ಟೇ ಅಲ್ಲ; ಹಲಮಂದಿ ಜೈನಮತೀಯರ ಜೈನಾಚಾರ್ಯರ ಪ್ರೇಮಾ ಶೀರ್ವಾದಗಳಿಗೂ ಪಾತ್ರರಾದವರು. ಆ ಧೈರ್ಯದಿಂದಲೇ ಇಂಥ ಹೇಳಿಕೆ ಗಳಿಂದ ದಾರಿದಪ್ಪಬಾರದು ಎಂದು ಪ್ರಾರ್ಥಿಸುತ್ತೇವೆ.
. ಈ ಸಂದರ್ಭದಲ್ಲಿ ಇನ್ನೊಂದು ಆಕ್ಷೇಪವು ತಲೆ ಇನ್ನೊಂದು ಆಕ್ಷೇಪ ದೋರಬಹುದು. ಹಿಂದೆ ದೃಷ್ಟಾಂತಿಸಿದ ಕೊಟ್ಟೂರು ಶಾಸನದೊಳಗಿನ ೩೪ನೆ ಶ್ಲೋಕದಿಂದ ಮೇಲಿನ ಗದ್ಯಭಾಗ ಹೀಗಿದೆ:
“ತೇನ ಏವಂ ಭೂತೇನ ಬಂಕೆಯಾಭಿಧಾನೇನ ಮದಿಷ್ಟಭತ್ಯೇನ ಪ್ರಾರ್ಥಿ ತಸ್ಸನ್ ತತ್ವಾರ್ಥನಯಾ ಮಾನ್ಯ ಖೇಟ ರಾಜಧಾನ್ಯಾಮವಸ್ಥಿತೇನ ಮಯಾ ಮಾತಾಪಿತ್ರೋರಾತ್ಮನಶೈಹಿಕಾಮುಕ ಪುಣ್ಯಯಶೋಭಿ ವೃದ್ದಯೇ ಕೋಲನೂರೇ ತದ್ದಂಕೆಯನಿರ್ಮಾಪಿತ ಜಿನಾಲಯ ಪರಿ ಪಾಲನ ನಿಯುಕ್ಸಾಯ . • • . ” ”
ಹೀಗಿರುವ ನನ್ನ ಆಪ್ತಭತ್ಯನಾದ ಬಂಕೆಯನಿಂದ ಪ್ರಾರ್ಥಿಸಲ್ಪಟ್ಟವ 'ನಾದೆನು. ಅದಕ್ಕನುವಾಗಿ ಮಾನ್ಯಖೇಟ ರಾಜಧಾನ್ಯವಸ್ಥಿತನಾದ ನನ್ನಿಂದ
ಮಾತಾಪಿತೃಗಳಿಗೂ ನನಗೂ ಇಹಪರಗಳ ಪುಣ್ಯ ಕೀರ್ತ್ಯಭಿವೃದ್ಧಿಗಾಗಿ ಕೋಲ ನೂರಿನಲ್ಲಿ ಆ ಬಂಕೆಯನು ಕಟ್ಟಿಸಿದ ಜಿನಾಲಯದ ಪರಿಪಾಲನ ಕಾರ್ಯದಲ್ಲಿ
-
೭೪
-
ನಿಯುಕ್ತನಾದ ದೇವೇಂದ್ರ ಮುನೀಶ್ವರನಿಗೆ ಈ ದಾನಶಾಸನವನ್ನು ಬಂಕೆಯನೇ ನನ್ನಿಂದ ಮಾಡಿಸಿದನು. ಇದು ಮೇಲಿನ ಶಾಸನಭಾಗದ ತಾತ್ಪರ್ಯಾರ್ಥವು.
ನೃಪತುಂಗನು ಜೈನಮತಾನುಯಾಯಿ ಅಲ್ಲದಿರುತಿದ್ದರೆ, ಜೈನಬಸದಿಯ ಪಾಲಕನಾದ ದೇವೇಂದ್ರ ಮುನಿಗೆ ಕೊಡುವ ದಾನ ಶಾಸನದಲ್ಲಿ “ . . . . . ಐಹಿಕಾಮುಕ ಪುಣ್ಯಯಶೋಭಿವೃದ್ಧಿ” ರೂಪವಾದ ಫಲಾಕಾಂಕ್ಷೆಯನ್ನು, ಸೂಚಿಸುತ್ತಿದ್ದನೆ?
ಪ್ರಶ್ನೆ ಇದು ಸಕಾರಣವಲ್ಲವೆಂದೇ ಹೇಳಿಬಿಡುವಂತಿಲ್ಲ. ಆದರೆ, ಈ ಪ್ರಶ್ನಕಾರರು, ಕೇಳಿದಷ್ಟೇ ಸಾವಧಾನತೆಯಿಂದ ಉತ್ತರವನ್ನೂ ಮಥಿಸಿ ಭಾವಿಸು. ವಷ್ಟು ಸೈರಣೆಯುಳ್ಳವರಾಗಬೇಕು ಎಂದು ಪ್ರಾರ್ಥಿಸುತ್ತೇವೆ. ಈ ಕೊಳ ನೂರ ದಾನಶಾಸನದ ಕಾಲವು ಕ್ರಿ. ಶ. ೮೬೧ರಲ್ಲಾದರೆ ಸಂಜನ ಶಾಸನದ ಸಮಯವೆಂಬುದು ಕ್ರಿ. ಶ. ೮೭೧ರಲ್ಲಿ, ಎಂದರೆ ಮತ್ತಿನದು ಹತ್ತು ವರ್ಷಾ ನಂತರ ನಡೆದುದು. “ಬಂಕೆಯೊಯಮದಾಪಯತ್” - ಬಂಕೆಯನು ಈ ದಾನಶಾಸನವನ್ನು ನನ್ನಿಂದ ಕೊಡಿಸಿದನು ಎಂದು ಕಾಣುವುದರಿಂದ, ಕೊಳ ನೂರ ಶಾಸನವು ಪ್ರಸಿದ್ಧ ಜೈನವೀರನಾದ ಬಂಕೆಯನ ಇಷ್ಟಾರ್ಥ ತೃಪ್ತಿಗಾಗಿ ಮಾಡಿದುದಾದರೆ, ಸಂಜನ ಶಾಸನವು ಸೈಷ್ಟ ಪೂರ್ತಿಗಾಗಿಯೇ ಸಾಗಿತು ಎಂಬುದನ್ನು ಮರೆಯಲಾಗದು. ವೈದಿಕ ಬ್ರಾಹ್ಮಣರಿಗೆ ಸಮರ್ಪಿತವಾದ ಆ ಸಂಜನ ಶಾಸನದೊಳಗಿನ ೫೩ನೆಯ ಶ್ಲೋಕದಿಂದ ಮುಂದಿನ ಗದ್ಯಭಾಗ ವನ್ನು ವಿವೇಚಿಸಿರಿ
“ಮಾನ್ಯಖೇಟ ರಾಜಧಾನ್ಯವಸ್ಥಿತೇನ ಮಯಾ ಮಾತಾಪಿತ್ರೋರಾತ್ಮನಶ್ಚ ಐಹಿಕಾಮುಕ ಪುಣ್ಯಯಶೋಭಿವೃದ್ದ ಯೇ ಕರಹಡ ವಿನಿರ್ಗತ ಭರ ದ್ವಾಜಾಗ್ನಿವೇಶ್ಯಾಂಗಿರಸ ಬಾರ್ಹಸ್ವತ್ಯಾನಾಂ . . . . . ಬ್ರಾಹ್ಮಣಾನಾಂ ಗ್ರಾಮೋ ದತ್ತ: . . . . ”
ಕೊಳವೂರು ಶಾಸನದೊಳಗಿನ ಒಕ್ಕಣೆ - ಅರ್ಥತಾತ್ಸರ್ಯಗಳು ಇಲ್ಲಿಯ ತೋರುತ್ತಿವೆ. ಏನು ನೃಪತುಂಗನು ಹಿಂದೆ ಜೈನನಾಗಿದ್ದರೆ ಹತ್ತು ವರ್ಷ ಕಳೆದ ಮೇಲೆ ಸ್ಮಾರ್ತವೈದಿಕ ಮತವನ್ನು ಪುನಃ ಅಂಗೀಕರಿಸಿದನೆ? ಹಾಗಲ್ಲ ವಾದರೆ ಜೈನನಾಗಿದ್ದ ಆತನು ಈ ವೈದಿಕ ಬ್ರಾಹ್ಮಣರಿಗೆ ದಾನವಿತ್ತಲ್ಲಿ . . . . ಐಹಿಕಾಮುಕ ಪುಣ್ಯ ಯಶೋಭಿವೃದ್ಧಿಯನ್ನು ಪ್ರಾರ್ಥಿಸುವುದಾದರೂ,
-
೭೫
-
ಹೇಗೆ? ಆ ಹಿಂದಣ ಪ್ರಶ್ನೆ ಇಲ್ಲಿಯೂ ಸಂಕಲೆಯಾಗಿ ಬಂಧಿಸುತ್ತಿದೆ. ನಿಜವಾಗಿ, ಪರಾಂಬರಿಸಿದಲ್ಲಿ ನೃಪತುಂಗನ ಮತವೆಂದರೆ ಅಂಥ ಸಂಕುಚಿತವಲ್ಲ, ( ಉದಾರ' ವ್ಯಕ್ತಿಯ ಅತ್ಯುದಾತ್ತ ಮತವದು.
ನೃಪತುಂಗನು ನಾನಾ ಮತೀಯರಿಗೆ ಬಿಟ್ಟ ಶಾಸನಗಳು ಕೆಲವು ದೊರ ಕುತ್ತಿವೆ. ಬಂಕೆಯನಿಗಾಗಿ ದೇವೇಂದ್ರ ಮುನೀಂದ್ರನಿಗೆ ದಾನ ಮಾಡಿದ ಕೊಳವೂರ ಶಾಸನದಲ್ಲಿ ಮಾತ್ರ ಆದಿಯಲ್ಲಿ ಜಿನೇಂದ್ರ ಸ್ತುತಿ ಇದೆಯಲ್ಲದೆ ಉಳಿದ ಎಲ್ಲ ಶಾಸನಗಳಲ್ಲಿಯೂ ವಿಶೇಷವಾಗಿ ಸಂಜನ ಶಾಸನದಲ್ಲಿಯೂ ಶಿವ ಸ್ತುತಿಯೇ ಇರುವುದು, ಅವನ ಆಸ್ಥಾನದಲ್ಲಿ ರಚಿತವಾದ ಕವಿರಾಜ ಮಾರ್ಗದ ಮಂಗಳಾಚರಣೆ, ಶ್ರೀ ವಿಷ್ಣು -ನೃಪತುಂಗರನ್ನು ಅಭಿನ್ನವಾಗಿ ಬಣ್ಣಿಸುವ ಕಂದ ರೂಪದಲ್ಲಿದೆ. ಈ ಎಲ್ಲ ಕಾರಣಗಳನ್ನು ಒಟ್ಟುಗೂಡಿ ನೋಡಿದಲ್ಲಿ ನೃಪತುಂಗನು ಅತ್ಯುದಾತ್ರನಾಗಿದ್ದು ಸರ್ವಮತ ಸಹಿಷ್ಣುವಾ ಗಿದ್ದನೆಂಬಲ್ಲಿ ಸಂದೇಹವಿಲ್ಲ. ಆತನು ಲಕ್ಷ್ಮೀ ಭಕ್ತನೂ.ವೀರ ನಾರಾಯಣ ಎಂಬ ಬಿರುದುಳ್ಳವನೂ ಆದುದರಿಂದ ವೈಷ್ಣವನೆಂದು ಭಾವಿಸುವುದು ಉಚಿತ ವಾಗಿದೆ. ಅವನ ಈ ಮತದಾರತೆ ಸಂಜನ ಶಾಸನದಲ್ಲಿಯೂ ಕವಿರಾಜ ಮಾರ್ಗದಲ್ಲಿಯೂ ವಿಶದವಾಗುತ್ತಿದೆ. ಆ ಮತೋದಾರತೆಯಿಂದಲೇ ಅವನಿಗೆ ಉದಾರ' ಎಂಬ ಬಿರುದು ಒದಗಿರಬೇಕೆಂದು ನಮ್ಮ ಭಾವನೆ. ಈ ಬಿರುದೇ ಕವಿರಾಜ ಮಾರ್ಗದ ಆದಿಯ ಮಂಗಳ ಶ್ಲೋಕದಲ್ಲಿ “ನೀತಿನಿರಂತರ'ನುದಾರನಾ ನೃಪತುಂಗಂ” ಎಂದು ಬಂದಿರುವುದನ್ನೂ ಪರಾಂಬರಿಸಿರಿ.
ಕವಿರಾಜ ಮಾರ್ಗಕಾರನಾರು?
ನೃಪತುಂಗನೇ ಕವಿರಾಜ ಮಾರ್ಗವನ್ನು ಬರೆದುದು ಎನ್ನುವ ವಿದ್ವಾಂಸರ ವರ್ಗ ಒಂದಾದರೆ, ಅವನ ಸಭಾಸದನಾದೊಬ್ಬ ಕವೀಶ್ವರನು ಬರೆದುದು
ಎನ್ನುವ ವರ್ಗವಿನ್ನೊಂದು. ಈ ಎರಡು ಪಂಗಡಗಳ ನೃಪತುಂಗನೇ ವಾದವು ಅವನ ಮತ ವಿಷಯಕವಾದದಂತೆ, ಅಂದಿ ಗ್ರಂಥಕಾರನು ಎಂಬ
ಬ ನಿಂದಿಂದಿನ ವರೆಗೂ ನಡೆಯುತ್ತಲೆ ಇದೆ. ಇಕ್ಕಡೆಗೂ ಹೇಳಿಕೆಯ ತ೩ರಾಸವೂ ಆಧಾರಗಳಿವೆ. ಈ ಆಧಾರಗಳು ಹೆಚ್ಚಾಗಿ ಕವಿರಾಜ
ಮಾರ್ಗದಿಂದಲೆ ಎತ್ತಿ ಕೊ೦ಡವು ಗಳು. ಕವಿರಾಜ ಮಾರ್ಗದೊಳಗೆ ನೃಪತುಂಗನೇ ಈ ಗ್ರಂಥಕಾರನಾಗಿರಬಹುದೇ ಎಂಬ ಸಂದೇ ಹವನ್ನುಂಟುಮಾಡುವ ಕೆಲವೆಡೆಗಳಿವೆ. ಅದೇ ರೀತಿಯಲ್ಲಿ ಗ್ರಂಥಕಾರನು ತದ್ವಿನ್ನನಾಗಿರಬೇಕು ಎಂದು ಸೂಚಿಸುವ ಹಲವು ದೃಷ್ಟಾಂತಗಳೂ ಇವೆ. ಅವು ಗಳೊಳಗೆ ಮೂರೂ ಪರಿಚ್ಛೇದಗಳಲ್ಲಿ ತೋರುವಂತೆ, ನೃಪತುಂಗನು ಕವಿರಾಜ ಮಾರ್ಗಕಾರನೋ ಎಂಬ ಸಂದೇಹವನ್ನುಂಟುಮಾಡುವ ಭಾಗಗಳು ಕೆಳಗಿ ನವುಗಳು:
ಪ್ರಥಮ ಪರಿಚ್ಛೇದ ೧. ನರಲೋಕಚಂದ್ರ ಮತದಿಂ
(ಪದ್ಯ ೨೩) ೨. ಅತಿಶಯಧವಳೊಕ್ತ ಕ್ರಮದೆ ೩. ಉದಾರ ನೃಪತುಂಗದೇವ ವಿದಿತ ಕ್ರಮದಿಂ ೪. ಕೃತಕೃತ್ಯನಲ್ಲವಲ್ಲಭ ಮತದಿಂ ೫. ನೃಪತುಂಗದೇವ ಮಾರ್ಗಕ್ರಮ ೬, ಅತಿಶಯಧವಳೊರ್ವಿ ಪೋ ದಿತಾಳಂಕೃತಿ
ಇದು ನೀತಿನಿರಂತರ ಕ್ರಮಂ
ದ್ವಿತೀಯ ಪರಿಚ್ಛೇದ | ೮, ನೃಪತುಂಗವಿಚಾರಕ್ರಮಗಣನ ಮಾರ್ಗದೊಳ್ ೯. ಮಾರ್ಗ೦ ನಿತ್ಯ ಮಲ್ಲವಲ್ಲಭ ಮತದಿಂ ೧೦. ಎಂದನತಿಶಯಧವಳಂ
-
೭೭
-
೪೫
೫೫
೧೧, ಕೃತಕೃತ್ಯ ಮಲ್ಲವಲ್ಲಭ ಮತದಿಂ ೧೨. ಭಾಸುರ ನೃಪತುಂಗ ದೇವವಿದಿತ ಕ್ರಮದಿಂ ೧೩. ಅತಿಶಯಧವಳೋಕ್ಕೆ ಕ್ರಮದಿ ನ ಆ ಪುವೆಂ ೧೪. ನೃಪತುಂಗ ಮಾರ್ಗೊತ್ಸವಂ ೧೫. ಮಹಾ ನೃಪತುಂಗ ದೇವನಾ | ದರದೊಳೆ ಪೇಳಮಾರ್ಗಗತಿಯಿಂ ೧೦೭ ೧೬. ಅತಿಶಯಧವಳೊರ್ವಿ ಪೋಕ್ತ ಮಾರ್ಗೋಚಿತಗತಿ
೧೫೩
೧೦೦
-
V
೨೦೮
ತೃತೀಯ ಪರಿಚ್ಛೇದ ೧೭. ಬೆಸಸಿದನಖಿಳಧರಾವಲ್ಲಭನಿಂ ತಮೋಘವರ್ಷನೃಪೇಂದ್ರಂ
ಅತಿಶಯಧವಳಧರಾಧಿಪಮತದಿಂದಂ ೧೯, ನೃಪತುಂಗದೇವ ಮತದಿಂ ೨೦. ನೃಪತುಂಗದೇವ ಮಾರ್ಗದೊಳ್
೧೦೮ ೨೧. ನೃಪತುಂಗದೇವಮತದಿಂ ೨೨. ನುತಸರಸ್ವತೀ ತೀರ್ಥಾವತಾರ ಮಾರ್ಗನೆಸಕಂ
೨೨೬ ೨೩. ನೃಪತುಂಗದೇವಮಾರ್ಗಾಂತರ ಗತಬೋಧವಿಶೇಷಯಾನಪಾತ್ರಂ ೨೩೧
ಮೇಲೆ ತೋರುವ “ನರಲೋಕಚಂದ್ರ - ಅತಿಶಯಧವಳ - ಉದಾರ - ಕೃತಕೃತ್ಯಮಲ್ಲ - ವಲ್ಲಭ - ನೀತಿ ನಿರ೦ತರ - ನಿತ್ಯ ಮಲ್ಲವಲ್ಲಭ - ಅಮೋಘ ವರ್ಷ - ಸರಸ್ವತೀತೀರ್ಥಾವತಾರ -' ಎಂಬವುಗಳು ನೃಪತುಂಗನ ಬಿರುದು ಗಳು. ಅವನ ಹುಟ್ಟು ಹೆಸರು ಶರ್ವನೆಂದೂ, ನೃಪತುಂಗ ಎಂಬುದು ಬಿರುದು, ಗಳೊಳಗೆ ಒಂದೆಂದೂ ತಿಳಿದುಬರುತ್ತಿದೆ. ಇವಲ್ಲದೆ “ಅಣ್ಣ - ದೇವ -ಗುಣೋ ದಯ” ಮೊದಲಾದುವೂ ಅವನ ನಾಮಧೇಯಗಳಾಗಿದ್ದುವು ಎಂಬುದಕ್ಕೆ ಬೇಕಾದಷ್ಟು ಆಧಾರಗಳಿವೆ. ಹಿಂದಿನ ಗ್ರಂಥಸ್ಥ ವಾಕ್ಯಗಳೊಳಗೆ ('ನರಲೋಕ ಚಂದ್ರಮತ - . . . . ಉಕ್ತಕ್ರಮ - . . . . ವಿದಿತಕ್ರಮ-. . . . . . . ಮಾರ್ಗಕ್ರಮ - . . . . ಉದಿತಾಳಂಕೃತಿ - . . . . ಕ್ರಮಗಣನಮಾರ್ಗ - ... ಎಂದನತಿಶಯದವಳಂ-ನೃಪತುಂಗ ದೇವನಾದರದೊಳೆ ಪೇಳ ಮಾರ್ಗ ಗತಿ - . . . . ಬೆಸಸಿದನಖಿಳಧ ರಾವಲ್ಲಭ - . . . . ಸರಸ್ವತೀತೀರ್ಥಾವತಾರ ಮಾರ್ಗನೆಸಕಂಎಂಬ ಮಾತುಗಳು ನೃಪತುಂಗನೇ ಗ್ರಂಥಕಾರನೆಂಬ ಭಾವನೆಯನ್ನೊದಗಿಸುತ್ತಿವೆ. ಆದರೆ, ಈ ಸಂದರ್ಭದಲ್ಲಿ ಇನ್ನೊಂದು ವಿಷಯ
- ೭೮ - ವನ್ನು ಮರೆಯಬಾರದು. ನೃಪತುಂಗನ ಆಸ್ಥಾನವನ್ನೊ೦ದಿ ಒಂದು ಮಹಾ ವಿದ್ವಾಂಸರ ಸಭೆ ಇತ್ತು; ಅದಕ್ಕೆ ಬಹುಶಃ “ನೃಪತುಂಗ ಸಭೆ” ಎಂಬ ಹೆಸ ರಾಗಿತ್ತು. “ಆಶ್ರಿತ ಮಹಾ ನೃಪತುಂಗ ಸಭಾಸದಂ” (ಪದ್ಯ ೨೧೯ - ಪರಿ ೩) ಎಂಬ ಕವಿರಾಜ ಮಾರ್ಗದ ಪದ್ಯದಿಂದ ಈ ಸಂಗತಿ ಎಲ್ಲ ತಿಳಿದುಬರುತ್ತಿದೆ. ಮಾತ್ರವಲ್ಲ; ಕನ್ನಡ ಸಾಹಿತ್ಯಕ್ಕೆ ಆ ವರೆಗೆ ಈ ಬಗೆಯ ಲಕ್ಷಣ ಗ್ರಂಥವು ಅಪೂರ್ವವಾಗಿದ್ದುದರಿಂದ, ಮುಂದಿನ ಸಾಹಿತ್ಯಕ್ಕಿದು ಆದರ್ಶವಾಗಿರಬೇಕು ಎಂಬ ಉದ್ದೇಶದಿಂದ, ಸ್ವತಃ ಸುಸಂಸ್ಕೃತನಾದ ನೃಪತುಂಗನ ನಾಯಕತ್ಯದಿಂದ ಸಭಾಸದರಾದ ವಿದ್ವಾಂಸರೆಲ್ಲರೂ ಈ ಗ್ರಂಥರಚನೆಯಲ್ಲಿ ನೆರವಾಗಿದ್ದರೆಂಬುದೂ ಕವಿರಾಜ ಮಾರ್ಗದ ಆದ್ಯಂತ ಪದ್ಯಗಳಲ್ಲಿ ಹೊಳೆಯುತ್ತಿದೆ. ಮೂರೂ ಪರಿಚ್ಛೇದಗಳ ಕಡೆಯ ಗದ್ಯಗಳನ್ನು ಭಾವಿಸಿರಿ:
೧. ಇದು ಪರಮ ಶ್ರೀ ನೃಪತುಂಗದೇವಾನುಮತಮಪ್ಪ ಕವಿರಾಜ
ಮಾರ್ಗದೊಳ್ . . . . ೨. ಇದು ಶ್ರೀ ನೃಪತುಂಗದೇವಾನುಮತಮಪ್ಪ . . . . ೩. ಇದು ಪರಮ ಸರಸ್ವತೀ ತೀರ್ಥಾವತಾರ ನೃಪತುಂಗದೇವಾನು
ಮತಮಪ್ಪ . . . . ಇಲ್ಲಿಯ ಅನುಮತ ಪದದಿಂದಲೆ ನೃಪತುಂಗನಿಗೂ ಗ್ರಂಥಕ್ಕೂ ಇರುವ ಸಂಬಂಧವು ಸ್ಪುಟವಾಗಿ ಸೂಚಿತವಾಗಿದೆ. ಅನುಮತ - ವಿರಚಿತ” ಪದಗಳು ಸಂಪೂರ್ಣ ಭಿನ್ನಾರ್ಥಕಗಳಲ್ಲವೆ? ನೃಪತುಂಗನೂ ಸಭಾವಿದ್ವಾಂಸರೂ ಕನ್ನಡ ಸಾಹಿತ್ಯ ಮಾರ್ಗವಿವೇಚನೆಯನ್ನು ಅಲ್ಲಲ್ಲಿ ಸೂಚಿಸಿರಬೇಕು. ವಿಶೇಷವಾಗಿ ನೃಪತುಂಗನು ಗ್ರಂಥಕ್ಕೆ ಆಶ್ರಯದಾತನೂ ಮಹಾಸಭೆಯ ವಿಶಿಷ್ಟ ನಾಯಕನೂ ಆದುದರಿಂದ ಅವನನ್ನು ಪರಿಚ್ಛೇದಗಳ ಆದಿಪದ್ಯಗಳಲ್ಲೂ ಅಂತ್ಯಗದ್ಯಗಳಲ್ಲೂ ಹಾಗೆ ಸ್ತುತಿಸಿದ್ದಾನೆ. ಅಲ್ಲಲ್ಲಿ ತಲೆಮರಸಿ ನುಸುಳಿಹೋದ ತಪ್ಪುಗಳನ್ನು ತಿದ್ದಿ ಒಪ್ಪುಗಳನ್ನು ಬೆಳಗಿದ ಸಭಾಸದರಾದ ವಿದ್ವಾಂಸರನ್ನೂ ಆದ್ಯಂತ ಭಾಗ -ಗಳೊಳಗಿನ ಅಂಥ ಎರಡು ಪದ್ಯಗಳಲ್ಲಿ ಸ್ಮರಿಸಿದುದಕ್ಷಿಸಿರಿ:
ಶ್ರುತದೊಳ್ ಭಾವಿಸಿ ನೋಡೆ ಸತತಂ ಕವಿವೃಷಭರಾ ಪ್ರಯೋಗಂಗಳೊಳಂ | ಕೃತಪರಿಚಯಬಲನಪ್ಪನ ನತಿಶಯಧವಳನ ಸಭಾಸದರ್ ಮನ್ನಿಸುವರ್ 5 ೫ (ಪಂ. ೧)
-
೭"
-
ಅಂತು ಬಿಟ್ಟಿ ತಜದಿಂ ನರಗೀತಗುಣೋದಯ್ಕೆ | ಕಾಂತ *[ಕಾಂತ] ವಿಷಯಾಶಯರಾಗಿ ನಿರಾಕುಳಂ ! ಸಂತತಂ ನುಡಿಗಳೊಳ್ ಬಗೆ ಹೆಚ್ಚಿರೆ ಪೇವರ್
ಸಂತಸಂ ಬಡಿಸುವರ್ ನೃಪತುಂಗ ಸಭಾಸದರ್ : ೨೨೪ 11 (ಸಂ. ೩) ಕಡೆಯ ಈ ಪದ್ಯದ ತಾತ್ಪರ್ಯಾರ್ಥವನ್ನೂ ಒಂದಿಷ್ಟು ಭಾವಿಸಿರಿ:
- “ಗುಣೋದಯನಾದ ನೃಪತುಂಗನ ಏಕಾಂತವಾಗಿ ಹೊಳೆಯುವ ವಿಷಯ ವೆಂದರೆ ಸಾಹಿತ್ಯಧರ್ಮವಾದ ಗುಣದೋಷ ವರ್ಗವನ್ನು ವಿವೇಚಿಸಿ ನಿರ್ಧರಿಸು ವುದೇ. ಅದರಿಂದ, ಅದರೊಳಗೇ ಮಗ್ರವಾಗಿ ಲಕ್ಷ-ಲಕ್ಷಣಗಳನ್ನು ನಿರೂ ಪಿಸುವ ಮಾತುಗಳಲ್ಲಿ, ಮನಸ್ಸು ಅಷ್ಟಿಷ್ಟು ಗುರಿದಪ್ಪಿಹೋದಾಗ ನೃಪತುಂಗ ಸಭಾಸದರು-ಪರಾಂಬರಿಸಯಾ, ಇಲ್ಲಿ ಈ ರೀತಿಯಾದರೆ ಹೆಚ್ಚಿನ ಅರ್ಥಭಾವ ಗಳ ಪುಷ್ಟಿಯಾಗಬಹುದು; ಅಲ್ಲಿ ಆ ರೀತಿಯಾದರೆ ವಿಶೇಷವಾದ ತಾತರ್ಯ ಪೊಷಣೆಯಾಗಬಹುದು ಎಂದು ಮೊದಲಾಗಿ ಬೋಧಿಸಿ ಸಮಾಧಾನಪಡಿಸಿ
ಗುರಿಗೊಳಿಸುತ್ತಿದ್ದರು.” ಎಂದು ತನ್ನ ಗ್ರಂಥವನ್ನು ಅಲ್ಲಲ್ಲಿ ತಿದ್ದಿದ ನೃಪ ತುಂಗ ಸಭಾಸದರಲ್ಲಿರುವ ಕೃತಜ್ಞತೆಯನ್ನು, ಗ್ರಂಥಕಾರನು ಸ್ಮರಿಸಿದ ಪದ್ಯ ವಿದು. ಇದೇ ಪದ್ಯದಿಂದ 'ಗುಣೋದಯ'ನಾದ ನೃಪತುಂಗನ ಹೃದಯದಲ್ಲಿ ಕನ್ನಡ ಸಾಹಿತ್ಯಾಭಿವೃದ್ಧಿ ವಿಷಯಕವಾದ ಉದ್ದೇಶವು ನೆಲೆಗೊಂಡಿತ್ತೆಂಬುದೂ ಖಚಿತವಾಗುತ್ತಿದೆ. ವಿಶೇಷವಾಗಿ ಅಂತ್ಯಗದ್ಯಗಳಲ್ಲಿ “ನೃಪತುಂಗದೇವಾನು ಮತ” ಎಂದೇ ಇರುವುದರಿಂದ, ಮೇಲೆ ದೃಷ್ಟಾಂತಿಸಿದ ಪದ್ಯಭಾಗಗಳಲ್ಲಿ ತೋರುವ “ಉಕ್ತ ಕ್ರಮ - ಎಂದನತಿಶಯದವಳಂ - ಬೆಸಸಿದಂ” ಎಂಬ ಮಾತುಗಳೂ ನೃಪತುಂಗನು ತನ್ನ ಸಮ್ಮತಿಯನ್ನಿತ್ತುದನ್ನೇ ಸೂಚಿಸುತ್ತಿವೆ. ಈ ಎಲ್ಲ ಭಾಗಗಳಲ್ಲಿಯೂ ಪ್ರಥಮ ಪುರುಷಕ್ರಿಯಾಪದ - ನಾಮಪದ ಗಳಿಂದಲೆ ನೃಪತುಂಗನನ್ನು ಸೂಚಿಸುವುದೂ ಆತನು ಗ್ರಂಥಕಾರನಲ್ಲವೆಂಬು ದನ್ನೆ ಪೋಷಿಸುತ್ತಿದೆ.
ಈ ಸಂದರ್ಭದಲ್ಲಿ ನೃಪತುಂಗನೇ ಈ ಗ್ರಂಥಕಾರನೆಂಬುದನ್ನು ವಾದಿ ಸುವವರು ಇನ್ನೊಂದು ಆಧಾರವನ್ನು ಕೊಡುತ್ತಾರೆ:-ಭಟ್ಟಾಕಳಂಕ (ಕ್ರಿ. ಶ.
* ಕಂಸದೊಳಗೆ [ಕಾಂತ? ಎಂಬುದನ್ನು ನಾವು ಸೇರಿಸಿ ಗ್ರಂಥಪಾತವನ್ನು ಸರಿಗೊಳಿಸಿದುದು, ಅಚ್ಚಾದ ಗ್ರಂಥಗಳರಡರಲ್ಲಿಯೂ ಅದಿಲ್ಲ.
-
೮೦
-
೬೦೪)ನ ಶಬ್ದಾನುಶಾಸನದೊಳಗೆ (ಆದೆನ:” ಎಂದು ೨೮೮ನೆಯ ಸೂತ್ರವಿದೆ. ಅದನ್ನು ವಿಸ್ತರಿಸುವಲ್ಲಿ “ಮಂಜರೀಮಕರಂದ” ಎಂಬ ಆ ಗ್ರಂಥದ ವ್ಯಾಖ್ಯಾನ ದೊಳಗೆ “ದಕ್ಷಿಣೋತ್ತರ ಮಾರ್ಗಭೇದಭಿನ್ನ ಪ್ರಯೋಗ ಚಾತುರೀ ಪ್ರಪಂಚೋ ನೃಪತುಂಗಗ್ರಂಥೇ ದ್ರಷ್ಟವೆ;” ಎಂದು ತೋರುತ್ತಿದೆ. ಈ ಗ್ರಂಥಕಾರನು ಮಹಾ ವಿದ್ಯಾಂಸನೇನೋ ಸರಿ, ಆದರೂ ಬಹಳ ಮಟ್ಟಿಗೆ ಆಧುನಿಕನಾದುದ ರಿಂದ ನಿಷ್ಕೃಷ್ಟವಾದ ಆ ಹಿಂದಿನ ಚಾರಿತ್ರಿಕ ವಿಚಾರ ನಿರ್ಧಾರವನ್ನು ಈತನ ಈ ಒಂದು ಹೇಳಿಕೆಯಿಂದಲೇ ಇದಮಿತ್ಥಂ' ಎನ್ನುವುದು ಸರಿಯಲ್ಲ. ಮಾತ್ರ ವಲ್ಲ; ಇವನ ಹೇಳಿಕೆಯಾದರೂ ಏನು? 'ನೃಪತುಂಗಗ್ರಂಥ' ಎಂದು. ನೃಪ ತುಂಗದೇವಾನುಮತ-ಗ್ರಂಥ'ವನ್ನು ಹಾಗೆ ಕರೆದಲ್ಲಿ ದೋಷವೇನೂ ಭಾವನಾ ದೃಷ್ಟಿಗೆ ತೋರಲಾರದು. ಚಿಕ್ಕದೇವರಾಜನ ಆಶ್ರಯದಲ್ಲಿಯೂ ಮುಮ್ಮಡಿ ಕೃಷ್ಣರಾಜನ ಆಶ್ರಯದಲ್ಲಿಯೂ ಆಯಾ ರಾಜಕರ್ತೃಕಗಳೆಂದು ತೋರುವ ಹಲವು ಗ್ರಂಥಗಳನ್ನು ಆಯಾ ಆಸ್ಥಾನದ ವಿದ್ವಾಂಸರು ಬರೆದುದೆಂದು ನಿರ್ಧಾರ ವಾಗಿದೆ. ಅದರಿಂದ ಇಲ್ಲಿ 'ನೃಪತುಂಗದೇವಾನುಮತ' ಗ್ರಂಥವನ್ನೇ ಈ ವ್ಯಾಖ್ಯಾಕಾರನು 'ನೃಪತುಂಗಗ್ರಂಥ' ಎಂದುದರಲ್ಲಿ ಆಶ್ಚರ್ಯವೇನೂ ಇಲ್ಲ. ಮಾತ್ರವಲ್ಲ; ಈ ಕವಿರಾಜ ಮಾರ್ಗದೊಳಗಿನದೇ ಆದ ಇನ್ನೊಂದು ಪದ್ಯವನ್ನು ಈ ಸಂದರ್ಭದಲ್ಲಿ ಪರಿಶೀಲಿಸುವ:
ಅವಕವಿಪರ್ಯಯ ವೃತ್ತಿ ಪ್ರವಿಭಕ್ತ ವಿಕಲ್ಪಮಕ್ಕು ಮುತ್ತರಮಾರ್ಗಂ | ಸವಿಶೇಷಗುಣಮನತಿಶಯ ಧವಳೊಕ್ಕಿ ಕ್ರಮದಿನಚಿಪುವಂತದ್ಭವದೊಳ್ i ೫೩ ! ಸಂ. ೨
ವೈದರ್ಭ ಮಾರ್ಗಭಿನ್ನವಾದ ಗೌಡಮಾರ್ಗದೊಳಗಿನ ಅಥವಾ ಉತ್ತರ ಮಾರ್ಗದೊಳಗಿನ ಗುಣಗಳನ್ನು ಮೇಲಿಂದ ಮೇಲೆ ನಿರೂಪಿಸುವ ಪದ್ಯವಿದು. ಅವುಗಳನ್ನು ಅತಿಶಯಧವಳೊಕ್ತ ಕ್ರಮದಿಂ ತದ್ಭವದೊಳ್ ಅಲಿಪುವೆಂ” ಎನ್ನುತ್ತಾನೆ. ಇಲ್ಲಿ ತೋರುವ ತದ್ಭವದೊಳ್ ಎಂಬ ಪದಕ್ಕೆ ಅವನ ಆಶ್ರಯ ದಿಂದ ಸಂಭವಿಸಿದ ಗ್ರಂಥವೆಂದೇ ಅರ್ಥ. ಹಾಗಲ್ಲದೆ ಅವನಿಂದ ರಚಿತವಾದ ಗ್ರಂಥದಲ್ಲಿ ಎಂದು ಅರ್ಥವಾಗುತ್ತಿದ್ದರೆ, ಮುಂದೆಯೇ “ಅಜಪುವೆಂ” ಎಂದು ಗ್ರಂಥಕಾರನು ತನ್ನನ್ನೇ ಸೂಚಿಸುವುದು ಹೇಗೆ? ಗ್ರಂಥಕ್ಕಾಶ್ರಯವಿತ್ತುದಲ್ಲದೆ.
ಪ
- ೮೧ , ಅಲ್ಲಲ್ಲಿ ತನ್ನ ಸುಸಂಸ್ಕೃತ ಸಾಹಿತ್ಯ ವಿಚಾರಗಳನ್ನು ಸೂಚಿಸಿದ ನೃಪತುಂಗ ನನ್ನು ಪ್ರಥಮ ಪುರುಷನಾಮಪದದಿಂದಲೂ, ತನ್ನನ್ನು ಉತ್ತಮ ಪುರುಷ ಕ್ರಿಯಾಪದದಿಂದಲೂ ಕವಿ, ಈ ಒಂದೇ ಪದ್ಯದಲ್ಲಿ ಕಾಣಿಸಿದುದರಿಂದ ನೃಸ ತುಂಗನು ಗ್ರಂಥಕಾರನಲ್ಲ ಎಂಬಲ್ಲಿ ಸಂದೇಹವೇ ಇಲ್ಲವಾಗುತ್ತಿದೆ,
ಕವಿರಾಜ
ಉತ್ತಮ ಪುರುಷ ಸರ್ವನಾಮ ಕ್ರಿಯಾಪದ ಮಾರ್ಗಕಾರನು ಗಳಿಂದ ಕವಿ ತನ್ನನ್ನು ಸೂಚಿಸಿಕೊಳ್ಳುವ ಸಂದರ್ಭ ನೃಪತುಂಗ ಇದೊಂದೇ ಅಲ್ಲ; ಇನ್ನೂ ಹಲವಿದೆ. ಆಯಾ ದೃಷ್ಟಾಂತ ಸಭಾಸದನು
ಭಾಗಗಳನ್ನೇಕ್ಷಿಸಿರಿ.
ಪ್ರಥಮ ಪರಿಚ್ಛೇದ ೧. ಅತಿಶಯಧವಳಂ ನಮಗೀಗೆ
ಪದ್ಯ - ೨ ೨. ನೆಲೆಗೊಳೆ ಕೂರ್ತು ಮನ್ಮಾನಸದೊಳ್ ೩. ಚಿಂತಿಸಿ ಮತ್ತೆ ಅವುದುಮಂತಸಲೆ ಬುಧಜನಕ್ಕೆ ಕೆಲವು
ಸೇಲಂ ೪. ಪೇಳ್ವೆನುದಾಹರಣಂಗಳಂ
೧೨೬ ೫. ತೋಯಿವೆಂ ಕ್ರಮವಿಕಲ್ಪನೆಯಂ ೬. ಕಿ ಅದರೊಳೆನೆಯೆ ಪೇಳ್ವೆಂ
೧೩೭
ದ್ವಿತೀಯ ಪರಿಚ್ಛೇದ ೭. ನಿಶ್ಚಿತನಕ್ಕೆ ಸೇಮಾಯೊಳೆನ್ನಾ ೮. ಪೇನಿನಿಸಂ ಕನ್ನಡದೊಳ್ ೯. ಪೇಳ್ವೆನಲಿವ ಮಾತ್ರೆಯೊಳೆನ್ನಾ ೧೦. . . . . ಕ್ರಮದಿನಜಿಪುವೆಂ ತದ್ಭವದೊಳ್
೫೫ ೧೧. ಸುವಿಚಾರಿತಮಿತೋರ್ಪೆಂ
೧೧೩ ೧೨. ಸೇಂ ದುಷ್ಕರೋಕ್ತಿಯಂ
ತೃತೀಯ ಪರಿಚ್ಛೇದ ೧೩. ಅನುಕ್ರಮೋಕ್ಕಿಯ ಪೇಳ್ವೆಂ ೧೪. ಅತಿನಿಪುಣರಹಿಗೆ ತೋರ್ಸೆಂ
೪೭
೧೩೧
4
*
2
೧೪೩
ಅ
.
೪೯
- ೮೨ - ೧೫. ತೋರ್ಪೆನರ್ಥಾಂತರ ವಿನ್ಯಾಸಕ್ಕೆ ೧೬. ತೋರ್ಪೆನನ್ವಿತಾನನ್ವಿತಮಂ ೧೭. ಪ್ರಯೋಗಿಸಿ ತೋರ್ಪೆ೦
೧೦೦ ೧೮. ವಿರೋಧಿಗತಭೇದಮಂ ತೋಱದೆಂ
೧೩೯ ೧೯. ತೋರ್ಪೆನದಲ್ಲಿ ಲಕ್ಷ್ಮಕ್ರಮನಂ
೧೮೮ ಹಿಂದೆ ಕಾಣಿಸಿದ ದೃಷ್ಟಾಂತಗಳ ಸಾಲಿನಲ್ಲಿ ನೃಪತುಂಗನನ್ನು ಪ್ರಥಮ ಪುರುಷನಾಮಪದದಲ್ಲಿಯೂ, ಈ ಸಾಲಿನಲ್ಲಿ ಗ್ರಂಥಕಾರನು ತನ್ನನ್ನು ಉತ್ತಮ ಪುರುಷ ಸರ್ವನಾಮ-ಕ್ರಿಯಾಪದಗಳಿಂದಲೂ ಸೂಚಸಿದುದೇ, ನೃಪತುಂಗ ಗ್ರಂಥಕಾರರು ಭಿನ್ನ ವ್ಯಕ್ತಿಗಳು ಎಂಬುದನ್ನು ನಿರ್ಧರಿಸಲು ಸಾಕಾಗಿವೆ. ಮಾತ್ರವಲ್ಲ; ಹಿಂದೆ ಕಾಣಿಸಿದಂತೆ ಕೆಲವು ದೃಷ್ಟಾಂತ ಭಾಗಗಳು ಏಕೈಕ ಪದ್ಯ ಗಳಲ್ಲೇ ಅವರಿಬ್ಬರೂ ಭಿನ್ನ ವ್ಯಕ್ತಿಗಳೆಂಬುದನ್ನು ಅಲ್ಲಲ್ಲಿಯೇ ಸ್ಪುಟವಾಗಿ ಹೊಳೆ ಯಿಸುತ್ತಿವೆ. ಬೇಕಾದರೆ ಆ ಭಾಗಗಳನ್ನೆಲ್ಲ ಪರಾಂಬರಿಸಿರಿ:
ಅತಿಶಯಧವಳಂ ನಮಗೆ ಸವಿಶೇಷ ಗುಣವನತಿಶಯ ಧವಳೊಕ್ಕಿ ಕ್ರಮದಿನ ಅಪುವೆಂ , , ,
(ಪರಿ. ೨) ೩. ಅತಿಶಯಧವಳೊರ್ವಿ ಪೋಕ್ತ ಮಾರ್ಗೋಚಿತ ಗತಿನೀತಿ
ನಿರಂತರ ಪ್ರತೀತಂ
(ಪರಿ. ೨) ಇದರಿಂದ ಈ ಗ್ರಂಥ ರಚನೆಯಲ್ಲಿ, ಅಥವಾ ಈ ಮೂಲಕವಾಗಿ ಕನ್ನಡ ಸಾಹಿತ್ಯ ಮಾರ್ಗವನ್ನು ವಿಸ್ತರಿಸುವಲ್ಲಿ ನೃಪತುಂಗನ ಸಾಹಿತ್ಯ ಪರಿಭಾವನಾ ಪರಿಪಕ್ಕ ಬುದ್ದಿ ಬಹಳವಾಗಿ ನೆರವಾಗಿತ್ತೆಂದು ವ್ಯಕ್ತವಾಗುತ್ತಿದೆ. ಅದೇ ಸಮಯದಲ್ಲಿ ಈ ಪ್ರಕೃತ ಗ್ರಂಥವನ್ನು ಈ ರೂಪಕ್ಕೆ ತಂದ ಕವಿ ಇನ್ನೊಬ್ಬ ನೆಂಬುದೂ ಅದರಂತೆ ವಿಶದವಾಗುತ್ತಿದೆ. ಮೇಲಿನ ಮೂರನೇ ದೃಷ್ಟಾಂತದಲ್ಲಿ ಅತಿಶಯಧವಳ”ನು ಸೂಚಿಸಿದ ಈ ಮಾರ್ಗ ಭೇದದ ಗತಿಯನ್ನು ನೀತಿ ನಿರಂತರ'ನೆಂಬ ಬಿರುದುಳ್ಳ ವಿದ್ವಾಂಸನು ಈ ಗ್ರಂಥ ರೂಪದಲ್ಲಿ ಪ್ರತೀತಿ ಗೊಳಿಸಿದುದು ಎಂಬುದೂ ಸ್ಪುಟವಾಗುತ್ತಿದೆ, “ನೀತಿ ನಿರಂತರ' ಎಂದು ನೃಪತುಂಗನಿಗೆ ಮಾತ್ರ ಇದ್ದ ಬಿರುದೆಂದು ಕೆಲವರ ಭಾವನೆಯಾಗಿತ್ತು. ಆದರೆ, ಈ ಪದ್ಯದಲ್ಲಿ ಎರಡು ಬಿರುದುಗಳೂ ತೋರಿ ಅತಿಶಯಧವಳನು ಈ ಮಾರ್ಗ
೧.
ಅà3
(ಪರಿ ೧)
೧
- ೮೩ - ವನ್ನು ಮೊದಲು ಸೂಚಿಸಿದವನೆಂದೂ ನೀತಿ ನಿರಂತರನು ಇದನ್ನು ವಿಸ್ತರಿಸಿದ ನೆಂದೂ ಕಾಣುವುದರಿಂದ ಇಲ್ಲಿ ತೋರುವ ನೀತಿನಿರಂತರನೆಂಬ ಮತ್ತಿನ ಬಿರುದು ಗ್ರಂಥಕಾರನಿಗೇ ಸಂಬಂಧಿಸಿದುದಾಗಿರಬೇಕು. ಕವಿರಾಜ ಮಾರ್ಗದ ಮೊದಲನೆ ಪದ್ಯದಲ್ಲಿ 'ನೀತಿನಿರಂತರನುದಾರನಾನೃಪತುಂಗಂ' ಎಂದಿರು ವುದರಿಂದ ಆ ನೀತಿನಿರಂತರ ಬಿರುದು ನೃಪತುಂಗನಿಗೂ ಇದ್ದು ದೇನೋ ಸರಿ. ಆದರೂ, ಮೇಲಿನ ಮೂರನೆ ದೃಷ್ಟಾಂತದ ಹೇಳಿಕೆಯ ಆ ಬಿರುದು ಈ ಗ್ರಂಥ ರಚಕ ವ್ಯಕ್ತಿಗೆ ಸಂಬಂಧಿಸಿದುದು ಎಂದು ಭಾವಿಸಬೇಕು. ಈ ಭಾವನೆ ದ್ವಿತೀಯ ಪರಿಚ್ಛೇದದೊಳಗೆ ಮಾರ್ಗ ಸಂದರ್ಭಾನುಸಾರವಾಗಿ ರಸಯೋಜನೆ ಗೆಯ್ಯಬೇಕು ಎಂಬುದನ್ನು ವಿಸ್ತರಿಸುವಲ್ಲಿಯೂ ತೋರುವುದಕ್ಕಿಸಿರಿ:
* . . . . . . ನೃಪತುಂಗದೇವನಾ || ರ್ಗೊತ್ಸವ ಮೂರ್ಜಿತೋಕ್ತಿಗಳಿನಕ್ಕತಿ ರೌದ್ರರಸಂರಸಾವಹಂ || ೯೮
• • • • • • • • • • • •
• • • • • • • • • • • • ನೀತಿನಿರಂತರಾನುಗತ ವ್ಯಕ್ತಿ ವಿಕಲ್ಪಿತಮಂ ತದೀಯ ನಿ ರ್ಣಿತಿಯ ನೀತೆ ಅತ್ತು ತಆಸಲ್ಲೆ ಬುಧೋತ್ತಮರುಕ್ತ ಪೂರ್ವಕಂ || ೯೯ 15
ಈ ಹೇಳಿಕೆಯಿಂದ ನೃಪತುಂಗದೇವನ ಆಶ್ರಯದ ಕನ್ನಡ ಸಾಹಿತ್ಯ ಮಾರ್ಗವು ಸೂತ್ರ ರೂಪವಾಗಿ -- ಎಂದರೆ ಅತಿ ಸಂಕ್ಷಿಪ್ತವಾಗಿದ್ದುದೆಂದೂ, ಅದನ್ನು ಅನುಗಮಿಸಿ ಬರೆದ ಈ 'ನೀತಿನಿರಂತರ'ನ (ವತ್ತಿನಿಕಲ್ಪಿತ'ವು - ಅಲ್ಲವೆ ವ್ಯಾಖ್ಯಾನ ವಿವರಣೆ ವಿಸ್ತರವಾಗಿರುವುದೆಂದೂ, ಆ ವೃತ್ತಿ ವಿಕಲ್ಪಿತರೂಪ ಗ್ರಂಥವೇ ಈ ಕವಿರಾಜ ಮಾರ್ಗವೆಂದೂ ಈತೆ ಅತ್ತು ತ ಅಸಲ್ಲೆ” (ಈ ರೀತಿ ಯಲ್ಲಿ ನಿರ್ಣಯಿಸಲಿ) ಎಂಬೀ ಹೇಳಿಕೆಯಿಂದ ನಿಶ್ಚಿತವಾಗುತ್ತಿದೆ. ವೃತ್ತಿ' ಎಂದರೆ ಹಿಂದಣ 'ಸೂತ್ರ'ದ ವ್ಯಾಖ್ಯಾನವೆಂಬುದು ವಿದ್ವಾಂಸರಿಗೆ ಗೊತ್ತಿರುವ ಸಂಗತಿ. ಇದರಿಂದ, ಈ ವೃತ್ತಿ ರೂಪದ ಗ್ರಂಥಕ್ಕಾಧಾರವಾಗಿ ಹಿಂದೆ ನೃಪ ತುಂಗನು ಬರೆದ ಅಥವಾ ಸ್ನಾಭಿಪ್ರಾಯಸೂಚಕ ಸೂತ್ರಾತ್ಮಕ ಗ್ರಂಥವಿತ್ತು ಎಂದು ಭಾವಿಸಬೇಕಾಗಿಲ್ಲ. ಈ ಗ್ರಂಥ ನಿರ್ಮಾಣಕ್ಕೆ ನೆರವಾಗಿ ನೃಪತುಂಗ ಸಭಾಸದರಾದ ಹಲಮಂದಿ ವಿದ್ವಾಂಸರು ಹಿತ ಸೂಚನೆಗೆಯುತ್ತಿದ್ದರೆಂಬುದು ಗೊತ್ತಾಗಿದೆಯಷ್ಟೆ. ಅದರಂತೆ, ಅಲ್ಲಲ್ಲಿ ನೃಪತುಂಗನೂ ಮಾರ್ಗಭೇದ ಸೂಚನೆ ಯನ್ನೆಸಗುತ್ತಿದ್ದನೆಂದೂ ವಿಶದವೇ ಆಗಿದೆ. ಅಂಥ ನೃಪತುಂಗನ ಸೂಚನೆ
-
೮೪
-
ಯನ್ನೇ ಈ ವೃತ್ತಿರೂಪ ಗ್ರಂಥಕ್ಕೆ ಸೂತ್ರವೆಂದು ಗ್ರಂಥಕಾರನು ಆಡಿದುದಾಗಿರ ಬಹುದು. ಈ ಹೇಳಿಕೆಯನ್ನು ಇನ್ನಷ್ಟು ಬೇರೂರಿಸಲು ಹಿಂದೆ ದೃಷ್ಟಾಂತಿ ಸಿದ ಪದ್ಯ ಭಾಗವೆ ಸಾಕಾಗಿದೆ - ಅದನ್ನು ಇನ್ನೊಮ್ಮೆ ಪರಾಂಬರಿಸಿರಿ:
“ವಿಪುಳವೃತ್ತಿಯೊಳೊಂದಿರೆ ಪೇಲಿನ ಬ್ಯುಪಮಿತೋಕ್ತಿ ಗುಣಾವಗುಣಂಗಳಂ ೧೪೩ | ಸರಿ. ೧೫
ಇಲ್ಲಿಯೂ ತನ್ನ ಈ ಗ್ರಂಥವೆಂದರೆ ಯಾವುದೋ ಸೂತ್ರಕ್ಕೆ ವಿಪುಲ ವೃತ್ತಿ' ಎಂದುದನ್ನು ಪರಾಂಬರಿಸಿರಿ. ಇದರಿಂದ, ಈ ವೃತ್ತಿರೂಪದ ಕವಿರಾಜ ಮಾರ್ಗವನ್ನು ಬರೆದಾತನು ನೃಪತುಂಗ ಸಭಾಸದನಾದ ಬೇರೊಬ್ಬ ವಿದ್ವಾಂಸ ನಂಬಲ್ಲಿ ಸಂಶಯವೇ ಇಲ್ಲದಂತಾಗುತ್ತದೆ.
ಹಾಗಿದ್ದರೆ ಈ ಗ್ರಂಥಕಾರನ ಹೆಸರೇ ಮೊದಲಾದ ಹೊಲಬುಗಳಾವುವು?
. ಎಂಬ ಪ್ರಶ್ನೆ ತಲೆದೋರುತ್ತಿದೆ. ಮೂರೂ ಪರಿಚ್ಛೇದಗಳ ಶ್ರೀ ವಿಜಯನೇ
ಕಡೆಯ ಪದ್ಯಗಳಲ್ಲಿ ಕ್ರಮವಾಗಿ ಗ್ರಂಥಕಾರನ ಹೆಸರೇ ಗ್ರಂಥಕಾರನು
* ತೋರುವುದನ್ನೆಣಿಸಿರಿ: ೧. ಕವಿಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ |
ಮಾಯಿಂ ! ೧೪೯ 11 (ಪರಿ. ೧) ೨. ಶ್ರೀವಿಜಯ ಪ್ರಭೂತಮುದಮಂತನಗಾಗಿಸಿದೊಂ ಕವೀಶ್ವರಂ
i ೧೫೩ H (ಪರಿ, ೨) ೩. ಪರಮ ಶ್ರೀವಿಜಯ ಪ್ರಭೂತಿಜಯಶಂಬಾಲವೃದ್ದಾ ಹಿತಂ !
ಪರಮಾನಂದಿತ ಲೋಕಮೊದ್ರೆ ನೆಲೆಗೊಳ್ಳಿ : ೨೫೫ || (ಪರಿ, ೩) ಈ ಹೇಳಿಕೆಗಳೊಳಗೆ ಮೊದಲಿನದು (ಕವಿ ಸಮೂಹವನ್ನು ಕುರಿತು ಗ್ರಂಥಕಾರನೇ “ಇದಂ”-ಎಂದರೆ ಈ ಕವಿರಾಜ ಮಾರ್ಗನಾಮಕ ಗ್ರಂಥವನ್ನು “ಕೈಕೊಳ್ಳುದು” ಎಂದು ಪ್ರಾರ್ಥಿಸುವ ಮಾತು. ಶ್ರೀ - ವಿಜಯ ಪ್ರಭೂತ ಮನಿದಂ' ಎಂದರೆ-ಶ್ರೀ ವಿಜಯನೆಂಬಾತನಿಂ ಉತ್ಪನ್ನವಾದ ಈ ಗ್ರಂಥವನ್ನು ಎಂಬ ಅರ್ಥ. ಇದರಿಂದ ಗ್ರಂಥಕಾರನ ಹೆಸರು ಇಲ್ಲಿ ಅತಿ ಸ್ಪುಟವಾಗಿದೆ. ಹೀಗಿರುವಲ್ಲಿ ಕವಿರಾಜ ಮಾರ್ಗವನ್ನು ರಚಿಸಿದಾತನು ಯಾರು? ಎಂಬ ವಿಷಯದಲ್ಲಿ ವಿದ್ವಾಂಸರೊಳಗೆ ಯಾಕೆ ವಿವಾದವೆದ್ದು ದೋ ತಿಳಿಯದಾಗಿದೆ. ಆದರೆ, ಮತ್ತಿನ ಎರಡೂ ಪರಿಚ್ಛೇದಗಳ ಕಡೆಯ ತಾತ್ಸರ್ಯಗಳು ಅಷ್ಟು ವಿಶದ
-
೮೫
-
ನಾಗದುದರಿಂದಲೇ ವಿದ್ವಾಂಸರೊಳಗೆ ವಾದವೆದ್ದಿರಬೇಕೆಂದು ಭಾವಿಸಬಹುದೆ?
ಈ ಗ್ರಂಥವನ್ನು ನಿರ್ಮಿಸಿದುದು ಮಾರ್ಗಿಯ ವಿವಿಗಳ ಮಾಸ ಲಾದ ಪ್ರಯೋಜನಕ್ಕಾಗಿ, ಆ ಮಟ್ಟಕ್ಕೇರದ ಕೆಳಗಿನ ತರಗತಿಯ ದೇಸಿಗಬ್ಬಿಗೆ ರನ್ನು ಗುರಿಯಿಟ್ಟು ಇದು ರಚಿತವಾದುದಲ್ಲ. ಈ ಭಾವನೆ ಗ್ರಂಥದೊಳಗೆ ಅಲ್ಲಲ್ಲಿ ಶಬ್ದ ತಃ ತೋರುತ್ತಿದೆ. ಹಿಂದೆ ದೃಷ್ಟಾಂತಿಸಿದ “ಬುಧಜನಕ್ಕೆ ಕೆಲವು ಸೇಲಂ- ಅತಿ ನಿಪುಣರಅಗೆ ತೋರ್ಪೆಂ ” – ಇತ್ಯಾದಿ ಪದ್ಯಭಾಗಗಳಿಂದಲೂ ಆ ಭಾವನೆ ನಿಶ್ಚಿತವಾಗುತ್ತಿದೆ. ಅದಕ್ಕನುವಾಗಿಯೇ ಗ್ರಂಥಕಾರನು ಪ್ರಥಮ ಪರಿಚ್ಛೇದಾಂತ್ಯದಲ್ಲಿ ಈ ಕವಿರಾಜಮಾರ್ಗವನ್ನು ಕವಿ ಪ್ರಕರ ಸಾಮಾನ್ಯಕ್ಕೆ ಕಾಣಿಕೆಯಾಗಿ ಒಪ್ಪಿಸಿದ್ದಾನೆ. ದ್ವಿತೀಯ ಪರಿಚ್ಛೇದಾಂತ್ಯದಲ್ಲಿ ಆ ಕವಿಪ್ರಕರ' ದೊಳಗೆ ವಿಶಿಷ್ಟವಾದ ಆಗಿನ ಕಾಲದ ಯಾರೋ ಒಬ್ಬ ಕವೀಶ್ವರನು, ಈ ಶ್ರೀ ವಿಜಯ ಗ್ರಂಥದಿಂದೊದಗಿದ ಆನಂದವನ್ನು ಸ್ವೀಕರಿಸಿದನು ಎಂಬ ಅಂಶವನ್ನು “ಶ್ರೀ ವಿಜಯ ಪ್ರಭೂತಮುದಮಂತನಗಾಗಿಸಿದೊಂ ಕವೀಶ್ವರಂ" " ಎಂದು ಸಾರಿದ್ದಾನೆ. ಬಹುಶಃ ನೃಪತುಂಗನ ಮಹಾಸಭೆಯೊಳಗಿನ ಕವೀಶ್ವರ ನೊಬ್ಬನು ಈ ಲಕ್ಷಣ ಗ್ರಂಥದಿಂದ ವಿಶೇಷವಾಗಿ ಆನಂದಗೊಂಡು ತದನು ಸಾರವಾಗಿ ಒಂದು ಕಾವ್ಯವನ್ನು ಬರೆದಿರಬೇಕು. ಪ್ರಥಮ ಪರಿಚ್ಛೇದಾಂತ್ಯದಲ್ಲಿ ಗ್ರಂಥಕಾರನು ತಾನೆಸಗಿದ ಪ್ರಾರ್ಥನೆ ಸಫಲವಾಗಲಾರಂಭಿಸಿತು, ಎಂಬುದನ್ನೆ ದ್ವಿತೀಯ ಪರಿಚ್ಛೇದಾಂತ್ಯದಲ್ಲಿ ಈ ರೀತಿಯಲ್ಲಿ ಸೂಚಿಸಿರಲೂಬಹುದು. ಹೀಗೆ ಕವಿಸಾಮಾನ್ಯಕ್ಕೆ ಸಮರ್ಪಿತವಾಗಿ, ಕವಿವಿಶೇಷದಿಂದ ಅಂಗೀಕೃತವಾದ ಈ ಗ್ರಂಥದ ಕೀರ್ತಿ- ಅಥವಾ * ಶ್ರೀ ವಿಜಯ ಪ್ರಭೂತಿಜಯಶಸ್ಸು . +“ಸ್ತ್ರೀ ಬಾಲವೃದ್ದಾಂತ'ವಾಗಿ ಆಚ೦ದ್ರತಾರ' ಪರ್ಯಂತವಾಗಿ ನೆಲೆಗೊಳ್ಳಲಿ ಎಂದು ತೃತೀಯ ಪರಿಚ್ಛೇದಾಂತದಲ್ಲಿ ಪ್ರಾರ್ಥಿಸುತ್ತಾನೆ. ಹೀಗೆ ತಾತ್ಪರ್ಯಾರ್ಥ
* ಶ್ರೀ ವಿಜಯನಿಂದ ನಿರ್ಮಿತವಾದ ಕವಿರಾಜ ಮಾರ್ಗವೇ ಶ್ರೀ ವಿಜಯ ಪ್ರಭೂತಿ, ಅದರಿಂದ ಉತ್ಪನ್ನವಾದ ಕೀರ್ತಿಯೇ ಶ್ರೀ ವಿಜಯ ಪ್ರಭೂತಿಜಯಶಂ.
ಇಲ್ಲಿ ಬಹುಶಃ . . . . ಪ್ರಭೂತಿ . . . . .” ಎಂದಲ್ಲ; ಹಿಂದಿನವುಗಳಂತೆ “ಪ್ರಭೂತಜಯಶಂ” ಎಂದೇ ಮೂಲದಲ್ಲಿದ್ದಿರಬೇಕು ಎಂದು ಸೂಚಿಸುತ್ತೇವೆ.
+ಸೀ-ಬಾಲ-ವೃದ್ದರಲ್ಲಿ ಆಹಿತವಾಗಿ, ಎಂದರೆ ಆರೋಪಿಸಲ್ಪಟ್ಟುದಾಗಿ ಎಂದು ತಾತ್ಪರ್ಯ. ಅಷ್ಟೊಂದು ಸಂಸ್ಕೃತಿಯನ್ನೊಂದದ, ದೇಸಿಯಲ್ಲೇ ಬಳಕೆವಡೆದ ಸ್ತ್ರೀಬಾಲ ವೃದ್ದರಲ್ಲಿಯ ಈ ಗ್ರಂಥದ ಕೀರ್ತಿ ನೆಲೆಗೊಳ್ಳಲಿ, ಎಂಬುದೇ ಈ ಪ್ರಾರ್ಥನಾಭಾಗದ ಅರ್ಥ. ಇಲ್ಲಿ “ವೃದ್ಧ+ಆಹಿತ” ಎಂದು ಪದಚ್ಛೇದವೆಂಬುದನ್ನು ಮರೆಯಬಾರದು.
-
೮೬
-
ವನ್ನು ಮನನಮಾಡಿಕೊಂಡಲ್ಲಿ ಗ್ರಂಥಕಾರನ ಉದ್ದೇಶವೂ ಗುರಿಗೊಂಡಂತಾ ಗುವುದು; ವಿದ್ವಾಂಸರೊಳಗೆ ಒದಗಿದ ವಾದವೂ ನಿವೃತ್ತವಾಗುವುದು ಎಂದು ಸೂಚಿಸುತ್ತೇವೆ. ಇದೆ ಗ್ರಂಥದ ಪ್ರಥಮ ಪರಿಚ್ಛೇದದೊಳಗೆ “ಪರಮ ಶ್ರೀ
ವಿಜಯ ಕವೀಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ (ಪದ್ಯ ೩೩) ಎಂದು ಮುಂತಾಗಿ ಸ್ತುತಿಸುವ ಕನ್ನಡ ಕವಿಗಳ ಸಾಲಿನಲ್ಲಿ ಮೊದಲಿನವನಾಗಿ ಒಬ್ಬ “ಶ್ರೀ ವಿಜಯ”ನ ಹೆಸರು ತೋರುತ್ತಿದೆ, ಅದು ಪ್ರಕೃತ ಗ್ರಂಥಕಾರನಾದ ಶ್ರೀ ವಿಜಯನ ಹೆಸರಲ್ಲ ಎಂದು ತಾನಾಗಿ ಗೊತ್ತಾಗುವ ಸಂಗತಿ. ತಾನೇ ತನ್ನನ್ನು ಸ್ತುತಿಸುತ್ತಾನೇನು? ಮಾತ್ರವಲ್ಲ; ಆ ಪದ್ಯದ ಮುಂದಿನ ಭಾಗದಲ್ಲಿ ಆ ಕವಿಗಳ 'ನಿರತಿಶಯ ವಸ್ತು ವಿಸ್ತರವಿರಚನೆ' -ಎಂದರೆ ವಸ್ತುಕ ಕಾವ್ಯಗಳು ಅಥವಾ ಅರ್ಥವೇ ಪ್ರಧಾನವಾಗಿರುವ ಅರ್ಥಕೃತಿಗಳು (ಆದ್ಯ ಕಾವ್ಯಕ್ಕೆ ಎಂದುಂ ಲಕ್ಷಗಳ್” ಎನ್ನುತ್ತಾನೆ. ಅದರಿಂದ ಆ ಶ್ರೀ ವಿಜಯನೆಂದರೆ ಕನ್ನಡದ ಪುರಾತನ ಕವಿಗಳೊಳಗೆ ಪ್ರಮುಖನಾದ ಕವಿಯೊಬ್ಬನು ಎಂಬುದು ಅವನ ಹೇಳಿಕೆಯಿಂದಲೇ ವಿದಿತವಾಗುತ್ತಿದೆ.
ಮತ್ತಿನ ಕನ್ನಡ ಸಾಹಿತ್ಯದಲ್ಲಿ ಪಂಪರನ್ನಾದಿಗಳನ್ನು ಹಲ ಮಂದಿ ಶ್ರೀ ವಿಜಯನು ಕನ್ನಡ ಕವಿಗಳು ಕೊಂಡಾಡಿದ್ದಾರೆ. ಹಾಗೆಯೇ ಕನ್ನಡ ಹಲಮಂದಿ ಪ್ರಸಿದ್ಧ ಸಾಹಿತ್ಯ ಲಕ್ಷಣ ಶಾಸ್ತ್ರಕ್ಕೆ ಮೊತ್ತಮೊದಲು ತಳಹದಿ
ಕವಿಗಳಿಂದ ಯನ್ನೆ ಕಟ್ಟಿದಂತೆ ತೋರುವ ಈ ಶ್ರೀ ವಿಜಯನನ್ನು ಸ್ತುತನಾದವನು
ವನು ಹೆಸರೆತ್ತಿ ಹೊಗಳಿದವರೂ ಇದ್ದಾರೆ. ಅವರೊಳಗೆ ದುರ್ಗಸಿಂಹನು (ಕ್ರಿ. ಶ. ಸು. ೧೧೪೫) ತನ್ನ ಪಂಚತಂತ್ರದಲ್ಲಿ ಹೀಗೆನ್ನುತ್ತಾನೆ:
“ಶ್ರೀವಿಜಯರ ಕವಿಮಾರ್ಗಂ | ಭಾವಿಪ ಕವಿಜನದ ಮನಕೆ ಕನ್ನಡಿಯುಂ ಕೆ | @ಾವಿಗೆಯುವಾದುದದಂ | ಶ್ರೀ ವಿಜಯರ್ ದೇವರವರನೇವಣ್ಣ ಪುದೋ ಎಂಬ ಇಲ್ಲಿಯ ಕವಿವಾರ್ಗ೦ ಎಂದರೆ ಈ ಪ್ರಕೃತದ ಕವಿರಾಜ ಮಾರ್ಗವಲ್ಲ, ಎಂದು ಕೆಲವರು ಸಂದೇಹಿಸಿದಂತೆ ತೋರುತ್ತಿದೆ. ಸದ್ಯದ ಪಾದರಚನೆಗನುವಾಗಿ (ರಾಜ'ಪದವನ್ನು ಲೇಪಿಸಿದರೂ ಅರ್ಥದಲ್ಲಿ ಲೋಪ ವಾದಂತಿಲ್ಲ. ಈ ಗ್ರಂಥವನ್ನು ಆತನು ಕವಿಜನರ ಹಿತಾರ್ಥವಾಗಿ ಬರೆದು ದೆಂದು ಅಲ್ಲಲ್ಲಿ ತೋರುತ್ತಿದೆ. ದುರ್ಗಸಿಂಹನು ಅದನ್ನೆ (ಭಾವಿಪ ಕವಿಜನದ ಮನಕೆಕನ್ನಡಿಯುಂ ಕೈದೀವಿಗೆಯುವಾದುದು' - ಎಂದರೆ ಕವಿತಾ ಸಂಸ್ಕಾರ ಪ್ರದವಾಗಿ ಕವಿಹೃದಯಕ್ಕೂ ಕಾವ್ಯ ಲೇಖನಕ್ಕೂ ನೆರವಾಗುತ್ತಿದೆ ಎಂದರ್ಥ.
-
೮೭
-
ಇಂಥ ಗ್ರಂಥವೆಂದರೆ ಕವಿರಾಜಮಾರ್ಗವೇ ಸರಿ, ಮಾತ್ರವಲ್ಲ - ಶ್ರೀ ವಿಜಯರ' ಎಂದು ದುರ್ಗಸಿಂಹನಿಂದ ಬಹುವಚನವನ್ನೊಂದಬೇಕಾದರೆ ಗ್ರಂಥಕಾರನು ಲೋಕಮಾನ್ಯನೇ ಆಗಿರಬೇಕು. “ಚಂದ್ರಭಟ್ಟ ಗುಣವರ್ಮ ಶ್ರೀ ವಿಜಯರ
• . . . ಸುಮಾರ್ಗಮಿದಮೊಳೆ ಲಕ್ಷ” ಎಂದು ಶಬ್ದ ಶಾಸ್ತ್ರಜ್ಞನಾದ ಕೇಶಿ ರಾಜನು ಸ್ತುತಿಸುವ ಶ್ರೀವಿಜಯನೂ ಈತನೇ ಆಗಿರಬೇಕು. ಇವರಂತೆ ಮಂಗರಸನೂ ತನ್ನ ನೇಮಿಜಿನೇಶ ಸಾಂಗತ್ಯದಲ್ಲಿ “ದೇವಚಂದ್ರ ಪ್ರಭರನು ಕೊಂಡಾಡಿದ ಶ್ರೀವಿಜಯರ ಬಲಗೊಂಬೆ” ಎಂದು ಬಹುವಚನದಿಂದಲೇ ಸೂಚಿಸುವುದರಿಂದ ಈತನು ಲೋಕಪೂಜ್ಯನಾಗಿರಬೇಕು. ಅಂತೂ ಈತನ ಹೆಸರು ಶ್ರೀ ವಿಜಯನೆಂದಾಗಿತ್ತೆಂಬಲ್ಲಿ ಸಂಶಯವೇನೂ ತೋರುವುದಿಲ್ಲ. ಮಾತ್ರವೇ ಅಲ್ಲ; ವೈದಿಕಮತಾನುಯಾಯಿ ದುರ್ಗಸಿಂಹ ಕವೀಶ್ವರನಿಂದಲೂ - “ಶ್ರೀ ವಿಜಯರ . . . .” ಎಂದು ಬಹುವಚನವನ್ನೊಂದಬೇಕಾದರೆ ಈತನಲ್ಲಿ ಅಂಥದೊಂದು ಮಹಿಮೆಯೂ ಇದ್ದಿರಲೇ ಬೇಕು. ಆದರೆ ಈತನು ಕನ್ನಡ ನಾಡಿನೊಳಗೆ ಯಾವ ಪ್ರಾಂತದವನು ಯಾವ ಮತದವನು ಮೊದಲಾದು ವನ್ನು ಸರಿಯಾಗಿ ಗುರಿಗೊಳಿಸುವ ಹೊಲಬುಗಳು ತಿಳಿಯಲಿಲ್ಲ. ಅಂಥವು ಗಳೇನಾದರೂ ಗೊತ್ತಾಗುವಂತಿವೆಯೊ ನೋಡುವ.
ಕವಿರಾಜಮಾರ್ಗದ ದ್ವಿತೀಯ ಪರಿಚ್ಛೇದದೊಳಗೆ ಅನೇಕ ಚಿತ್ರಬಂಧ ಗಳನ್ನು ನಿರೂಪಿಸುವ ಸಂದರ್ಭದಲ್ಲಿ ಒಂದು ಚಕ್ರಬಂಧ ಶ್ಲೋಕವೂ ತೋರು ಜಯಿ ಅಥವಾ ತ್ತಿದೆ. ಚಕ್ರಬಂಧದೊಳಗೆ ಬಲುಬಗೆಯ ಭೇದಗಳಿವೆ. ಜಯ - ಎಂಬುದು ಇದು ಅವುಗಳೊಳಗೆ ಒಂದಾದ ಷಡರ ಚಕ್ರಬಂಧ.
ಗ್ರಂಥಕಾರನ ಗಾಡಿಯ ಚಕ್ರವನ್ನು ನಿರ್ಮಿಸುವುದಕ್ಕೆ ಸಾಧಕಗಳಾ ಮೂಲನಾಮ
ಗುವ ಅಡ್ಡ ಕೋಲುಗಳಿಗೆ (ಅರ' ಎಂದು ಹೆಸರು. ಇದ ರೊಳಗೆ ಅಂಥ ಆರು ( ಅರ'ಗಳಿರುವುದರಿಂದ ಇದು ಷಡರ ಚಕ್ರಬಂಧ ಎನ್ನಿಸು
ವುದು.
ಈ ಚಕ್ರಬಂಧ ಶೋಕವು ಈ ವರೆಗೆ ಅಚ್ಚಾದ ಕವಿರಾಜ ಮಾರ್ಗದ ಎರಡು ಪ್ರತಿಗಳಲ್ಲೂ ಇದೆ. ಪ್ರಥಮ ಪ್ರತಿಯಲ್ಲಿ ಸಂಪಾದಕರಾಗಿದ್ದ ಕೈ, ವಾಸಿ ಶ್ರೀ. ಕೆ. ಬಿ. ಪಾಠಕರು ಈ ಚಕ್ರಬಂಧದ ವಿಷಯವಾಗಿ ಏನೂ `ಹೇಳಿಲ್ಲ. ಆದರೆ, ಮದರಾಸಿನ ಪ್ರತಿಯನ್ನು ಪ್ರಕಟಿಸಿದ ವಿದ್ವಾಂಸರು ತಮ್ಮ
ಗ್ರಂಥದ ೭ನೆ ಪರಿಶಿಷ್ಟದಲ್ಲಿ (ಪುಟ ೧೭೬) “ಈ ಬಂಧದಲ್ಲಿ ಅಂತಹ ವಿಷಯವು
-
೮೮
-
ತಿಳಿಯುವಂತಿಲ್ಲ” ಎಂದು ಹೇಳಿಬಿಟ್ಟಿದ್ದಾರೆ. ಆದರೆ, ಅಂಥ ವಿಶಿಷ್ಟ ಲಕ್ಷಣವು . ಇಲ್ಲವಾದರೆ ಇದು ಚಕ್ರಬಂಧವೆನ್ನಿಸುವುದಾದರೂ ಹೇಗೆ? ಆ ವಿಷಯವಂತಿ ರಲಿ; ಈ ಪದ್ಯವನ್ನು ಕೆಳಗೆ ಸಾಮಾನ್ಯವಾಗಿ ದೃಷ್ಟಾಂತಿಸಿ ಆ ಮೇಲೆ ವಿಶೇಷ ವಾಗಿ ಚಕ್ರಾಕಾರದ ಬಂಧದಲ್ಲಿರಿಸಿ ಪರಾಂಬರಿಸುವ:
ಸಂತಂ ಬಾಲ್ಕುದು ಮೀಟಿದಾನ ರ ಪನೊಳ್ ಸೌಜನ್ಯ ಲಕ್ಷ್ಮೀ ಮದಾಂ ಧಂತನ್ನಿಶ್ಚಯಮಚ್ಚಿನಿಂ ಸ ರ ಗುಹೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾಲಿಗೆಟ್ಟ ಅಪಿನಿಂ ಬಾಳ್ವಿಂತೆ ಬಾಯ್ಯನಾ ಸಂತಂತಾಂ ಪತಂದನು ಸೆಗುಂದಾನಂಗಳಂ ಭೂಪನಾ
- ಪಂ. ೨. ಪದ್ಯ ೧೪೨.
ಚಂದ್ರಬಂಧ ಈ ಬಂಧವನ್ನೀಕ್ಷಿಸಿದಲ್ಲಿ ಷಡರ' ಎಂದರೇನೆಂಬುದು ಗೊತ್ತಾಗುವುದು, ಚಕ್ರರೇಖಾನುಸಾರವಾದ ಬಂಧದಲ್ಲಿ ಸಂಖ್ಯಾಸಂಜ್ಞೆಗಳಿಂದ ಅಂಕಿತಗಳಾದ ಆರು ಅರ (ಕೋಲು)ಗಳನ್ನು ಕಾಣಬಹುದು. ವಿವೇಚಿಸಿದಲ್ಲಿ, ಮೂರು ಅರ ಗಳೇ, ಎಲ್ಲವಕ್ಕೂ ಸಾಮಾನ್ಯವಾದ ನಡುವಣ ಅಕ್ಷ (ಅಚ್ಚು)ದಲ್ಲಿ ಹಾಯ್ದು ಮುಂದೈದಿ ಕೊನೆಗೊಂಡುದರಿಂದ, ಹಿಂದಣ ಆ ಮೂರು ಅರಗಳೇ ಮತ್ತಿನ ಮೂರು ಅರಗಳಾಗಿ ಕೂಡಿ ಷಡರಗಳಾದವು ಎಂಬುದೂ ಸ್ಪುಟವಾಗುತ್ತಿದೆ. ಅದರಿಂದ, ನಿಜವಾಗಿ ಪರಾಂಬರಿಸಿದರೆ ಇಲ್ಲಿರುವುದು ಮೂರೇ ಅರಗಳು. ಈ ಅರಗಳೊಳಗೆ ಪ್ರತಿಯೊಂದರಲ್ಲಿಯೂ ಹತ್ತೊಂಬತ್ತು ಅಕ್ಷರಗಳು ನೆಲಸುವಂತೆ ಹತ್ತೊಂಬತ್ತು ಸಂಪುಟಗಳಿವೆ. ಅಕ್ಷ ಸಂಪುಟವು ಒಂದೇ ಆದರೂ ಅದರೊಳ ಗಿನ ಅಭಿನ್ನಾಕ್ಷರವು ಮೂರೂ ಅರಗಳಲ್ಲಿರುವ ಪಾದಗಳಿಗೆ ಬೇರೆಬೇರಾಗಿ ಸೇರುತ್ತಿವೆ. ಮೂರನೆಯ ಪಾದದ ಕಡೆಯ ಅಕ್ಷರವೇ ನಾಲ್ಕನೆಯ ಪಾದದ ಆದ್ಯಂತಾಕ್ರರಗಳಾಗಿದ್ದು, ಆ ಕರೆಯ-ಎಂದರೆ, ಸುತ್ತುಗೊಳ್ಳುವ ರೇಖೆಯ ಲ್ಲಿಯೇ ಕ್ರಮಬದ್ಧವಾಗಿ ಸುತ್ತುವರಿದು, ಎತ್ತಿದ ಅಕ್ಷರದಲ್ಲೇ ಅಂತ್ಯವಾಗುತ್ತಿದೆ. ಈ ಬಂಧಕ್ರಮಕ್ಕನುವಾಗಿ ಶ್ಲೋಕಾಕ್ಷರಗಳು ಅಲ್ಲಲ್ಲಿ ನಿಬದ್ದಗಳಾಗಿರಬೇಕು. ಈ ನಿಯಮಕ್ಕೆ ಶ್ಲೋಕಾಕ್ಷರಗಳು ಸರಿಗೂಡದಿದ್ದಲ್ಲಿ, ಚಕ್ರಬಂಧವೇ ಸರಿಯಾ ಗಿಲ್ಲವೆಂದು ಅಥವಾ ಮಾತೃಕೆಯಲ್ಲಿ ತಪ್ಪುಬಿದ್ದಿದೆ ಎಂದು ಭಾವಿಸಬೇಕು. ಪ್ರಕೃತ ಶ್ಲೋಕದ ಎರಡೂ ಪಾದಗಳ ಹತ್ತನೆ ಅಕ್ಷರಗಳು (ರ' ಆಗಿರುವುದರಿಂದ
1
ತ | ತಾಂ
ತೆ೦
A
*
O
B
| Ut
منه
5 ER/
rGo
O
-
೮೯
.
ಅಕ್ಷಸ್ಥಾನವುಸರಿಗೊಂಡರೂ ಮೂರನೆ ಪಾದದ ಆ ಸ್ಥಾನಾಕ್ಷರವು “ಎ” ಎಂದು ತೋರಿ ಸಂಗಮಿಸುವುದಿಲ್ಲ. ಇಂಥ ಉದ್ಧಂಥಕಾರನು ತಪ್ಪಿಹೋಗಿದ್ದಾನೆ ಎನ್ನುವುದಕ್ಕಿಂತಲೂ ಇದು ಮುತ್ತಿನ ಮಾತೃಕಾಕಾರರ ಹಸ್ತದೋಷವೆಂದೇ ಹೇಳಬೇಕು. ಮೂರನೆ ಪಾದದ ಆ ಅಕ್ಷರವು “ಅ”ಕಾರವಾಗಿ ಇದ್ದಿರಬೇಕು. ಇಂಥ ದುಷ್ಕರ ಕಾವ್ಯ ಬಂಧಗಳಲ್ಲಿ ರ– ಆ ಕಾರಭೇದಗಳನ್ನಷ್ಟೇ ಅಲ್ಲ; ಕ ಖ ದ ಧ' ಮೊದಲಾದ ಏಕ ಜಾತೀಯಗಳಾದ ಅಲ್ಲ ಮಹಾ ಪ್ರಾಣಾಕ್ಷರಗಳೊಳ ಗಿನ ಭೇದವೂ ಪರಿಗಣಿಸಲ್ಪಡುವುದಿಲ್ಲ. ಮಾತ್ರವಲ್ಲ; ಬಿಂದು ಒತ್ತು ವ್ಯಂಜನ ಮೊದಲಾದುವುಗಳು ಮಾತೃಕೆಯಲ್ಲಿ ಹೆಚ್ಚಾಗಿದ್ದರೆ ಬಿಡಲೂಬಹುದು; ಇಲ್ಲವೆ ಸಂದರ್ಭಕ್ಕೆ ನ್ಯೂನವಾದಲ್ಲಿ ಸೇರಿಸಿಕೊಳ್ಳಲೂಬಹುದು, ಎಂದು ಮುಂತಾಗಿ ಲಕ್ಷಣವೇ ಸೂಚಿಸುತ್ತಿದೆ. ನಾಲ್ಕನೆಯ ಮತ್ತು ಆರನೆಯ ಸುತ್ತಣ ಅರ ಸಂಪುಟಾಕ್ಷರಗಳ ಕೂಟದ ವಾಕ್ಯಗಳಿಂದ ಕವಿ ಕಾವ್ಯಗಳ ವಿಚಾರವು ಗೊತ್ತಾಗು ವಂತಿರಬೇಕೆಂಬುದಿದು ೧೫ನೇ ಶತಮಾನದಲ್ಲಿ ಹುಟ್ಟಿದ ಪ್ರತಾಪರುದ್ರೀಯ' ಎಂಬ ಲಕ್ಷಣ ಗ್ರಂಥದ ಸೂಚನೆ. ಆ ಹೇಳಿಕೆ, ಎಷ್ಟೋ ಹಿಂದಿನದಾದ ೯ನೆಯ ಶತಮಾನದ ಈ ಕವಿರಾಜ ಮಾರ್ಗಕ್ಕೆ ಅಕ್ಷರಶಃ ಅನ್ವಯಿಸಬೇಕೆಂದು ಭಾವಿಸಿದರೆ ಅಪರಾಧವೇ ಆದೀತು. ಹಿಂದಿನವನಾದ ಕವಿರಾಜ ಮಾರ್ಗ ಕಾರನು ಬಹುಶಃ ದಂಡಿ – ರುದ್ರವಾದಿಗಳನ್ನೋ, ಅಲ್ಲವೆ ಇತರ ಲಾಕ್ಷಣಿಕ ರನ್ನೋ ಈ ವಿಷಯದಲ್ಲಿ ಅನುಸರಿಸಿರಬಹುದು ಪಕೃತ ಈ ಚಕ್ರ ಶ್ಲೋಕ ದೊಳಗಿನ ತಪ್ಪೋಪುಗಳನ್ನು ಬದಿಯಲ್ಲಿರಿಸುವ, ಪರಾಂಬರಿಸಿ ನೋಡಿದಲ್ಲಿ ಬಂಧದ ಆರನೆಯ ಅಕ್ಷರಗಳ ಅರಸಂಪುಟಾಕ್ಷರಗಳನ್ನು ಪೂರ್ವೋಕ್ತ ಲಕ್ಷಣ ದಂತೆ ಕ್ರಮವಾಗಿ ಕೂಡಿಸಿದಲ್ಲಿ “ಮಾಮಪಾ - ಜಯಾಬಿ” ಎಂದಾಗು ತಿದೆ. ಆದಿಯ ಮೂರು ಅಕ್ಷರಗಳ ಕೂಟದ-ಎಂದರೆ - ಮಾಮಪಾ ಎಂಬು ದರ ಹೊಲಬಾದರೂ ಆಗುವಂತಿಲ್ಲ. ಆದರೆ ಮುತ್ತಿನ 'ಜಯಾ ಬೈಂ' ಎಂಬುದು ವ್ಯಕ್ತಿಯೊಬ್ಬನ ಹೆಸರಾಗಿ ತೋರುವಲ್ಲಿಯೂ ಸಂಶಯವಿದೆಯೆ? ಬಹುಶಃ “ಮಾಮಪಾ” ಎಂಬ ಅಕ್ಷರ ಕೂಟವನ್ನೀಕ್ಷಿಸಿದ ಮಾತ್ರದಿಂದಲೇ ಮದರಾಸು ಪ್ರತಿಯ ಸಂಪಾದಕರು ನಿರಾಶರಾಗಿ ಹಾಗೆ ಬರೆದರೆಂದು ಭಾವಿಸಬೇಕಾಗಿದೆ.
ಈ ಗ್ರಂಥಕಾರನೇ ಈ ಚಿತ್ರಶ್ಲೋಕವನ್ನು ಬರೆದಿರಬೇಕೆಂದು ಹೇಗೆ ನಿರ್ಧರಿಸುವುದು? ಇತರರ ಗ್ರಂಥಗಳಿಂದ ದೃಷ್ಟಾಂತ ಪದ್ಯಗಳನ್ನು ಆರಿಸಿ ಕೊಳ್ಳುವುದೂ ಪದ್ಧತಿಯಲ್ಲವೆ? ಎಂದು ಕೇಳಬಹುದು, ಆದರೆ, ಈ ಕವಿರಾಜ
3-----------------------------------------
ಮಾರ್ಗಕಾರನಿಗಿಂತಲೂ ಹಿಂದಿನ ರುದ್ರಟನು, ಹಲವು ದೃಷ್ಟಾಂತಗಳನ್ನು ಇತರ ಗ್ರಂಥಗಳಿಂದ ಆರಿಸಿಕೊಂಡಿದ್ದರೂ ಕವಿವಿಚಾರವನ್ನು ಹೊಳೆಯಿಸುವ ಚಕ್ರ ಬಂಧ ಶ್ಲೋಕವನ್ನು ತಾನೇ ಬರೆದಿದ್ದಾನೆ. ಮತ್ತಿನ ಪ್ರತಾಪರುದ್ರೀಯಕಾರ ನಾದರೂ ಹಾಗೆಯೇ ಮಾಡಿರುತ್ತಾನೆ. ಯಾವ ಕವಿಗಳೂ ಇಂಥ ಸಂದರ್ಭ ದಲ್ಲಿ ಅನ್ಯ ಕವಿಗಳ ಹೊಲಬನ್ನು ತಿಳಿಸುವ ದೃಷ್ಟಾಂತವನ್ನು ಸೂಚಿಸುವುದು ಅಸಂಭವವಾಗಿ ತೋರುತ್ತಿದೆ. ಹಾಗಿದ್ದರೆ, ಗ್ರಂಥಕಾರನ ಹೆಸರು ಶ್ರೀವಿಜಯ? ಎಂದು ಹಿಂದೆ ಸಾಧಾರವಾಗಿ ತೋರಿದುದಕ್ಕೆ ಈ “ಜಯಾ” ಎಂಬುದು ವಿರುದ್ದವಾಯಿತಲ್ಲವೆ? ಎನ್ನಬಾರದು. “ಜಯ ಅಥವಾ ಜಯಾ” ಎಂಬುದು ಹುಟ್ಟು ಹೆಸರಾದರೆ, ನೃಪತುಂಗನ ಪ್ರೀತಿ ವಿಶ್ವಾಸಪಾತ್ರನಾಗಿ ಅವನ ವಿದ್ವತ್ಸ ಭೆಯ ಸದಸ್ಯನಾದ ಮೇಲೆ ಪೂಜ್ಯಾರ್ಥಕಗಳಾದ ಶ್ರೀ ವಿ' ಎಂಬ ಎರಡು ಅಕ್ಷರಗಳಿಂದೊಡವೆರೆದು “ಶ್ರೀ ವಿಜಯ' ಎಂಬ ಅಭಿಧಾನವೊದಗಿದುದಾಗಿರ ಬಹುದು. ಮೂರನೆಯ ಪರಿಚ್ಛೇದಾಂತ್ಯದಲ್ಲಿ ಗ್ರಂಥಕಾರನು ತನ್ನ ಹೊಲಬನ್ನರಿ ಯಿಸುವ ಕೆಲವು ಪದ್ಯಗಳಿವೆ. ಅವುಗಳೊಳಗಿನ ಈಯೊಂದು ಪದ್ಯವನ್ನಿಕ್ಕಿಸಿರಿ:
ಮದಮಾನಮಾಯ ಭಯಲೋಭ ವಿಷಾದ ಹರ್ಷಾ | ಭ್ಯುದಿತಾಂತ ರಂಗರಿಸು ವರ್ಗಜಯಾವತಾರಂ | ವಿದಿತ [ಸ್ವಧೀ*] ವಿಭವಭಾವಿತ ವಿಶ್ವಕಂ | ಬುಧರ್ಗೊತು ಕಾವನನುನೀತ ಗೃಹೀತವಾಕ್ಯಂ | ೨೨೮ !
ಈ ಸಂದರ್ಭದಲ್ಲಿ ಕವಿ ಹಲವು ಪದ್ಯಗಳಿಂದ ತನ್ನನ್ನು ವರ್ಣಿಸುತ್ತಾನೆ. ಅವನ್ನು ನೋಡಿದರೆ ಈತನ ಮಹಿಮೆ ಬಲು ಮೇಲಿನ ಮಟ್ಟವನ್ನೇರಿದುದು ಭಾಸವಾಗುತ್ತಿದೆ. ಅವನ್ನೆಲ್ಲ ಕ್ರಮವಾಗಿ ಮುಂದೆ ವಿಸ್ತರಿಸಲಿರುತ್ತೇವೆ. ಈಗ ಈ ಪದ್ಯದೊಳಗಿನ ಸಾರ ಮಾತ್ರವನ್ನೆ ಭಾವಿಸಿರಿ:- ಮದನಾನ ಮಾಯಾದಿ ಗಳಾದ ಅಂತರಂಗ ರಿಪುನರ್ಗಗಳ (ಜಯ'ವೇ ಅವತರಿಸಿದಂತೆ ತೋರುವವನು; ತನ್ನ ಬುದ್ದಿ ವೈಭವದಿಂದ ವಿಶ್ವ ಪ್ರಪಂಚದ ತತ್ವಸ್ವರೂಪವನ್ನು ಭಾವಿಸಿದಾತನು; ಅನುನೀತರಾದ ವಿದ್ವಾಂಸರಿಂದ ಗೃಹೀತವಾಕ್ಯನಾಗಿ ಅಂಥ ಬುಧರನ್ನು ಕಾಯು ವಾತನು.” ಇಲ್ಲಿ ತೋರುವ “ . . . . ಜಯಾವತಾರಂ” ಎಂಬುದರಿಂದ ಅಂತ ರಂಗ ರಿಪುವರ್ಗಗಳ ಜಯವೇ 'ಜಯ' ಎಂಬ ಹೆಸರ್ಗೊಂಡು ಅವತರಿಸಿದವನು
*ಸ್ವಧೀ' ಎಂದು ಕಂಸದೊಳಗೆ ಸೇರಿಸಿ ಗ್ರಂಥಪಾತವನ್ನು ಸರಿಗೊಳಿಸಿದುದು ನಾವು.
-
೯೧ -
ಎಂದು ಅರ್ಥವಾಗಬಹುದು, ಅದರಿಂದ (ಜಯ' ಎಂಬುದು ಈತನ ಹುಟ್ಟು ಹೆಸರೆಂದೂ, ಚಕ್ರಶ್ಲೋಕದ (ಜಯಾ' ಎಂಬಲ್ಲಿ ತೋರುವ ಆಲ್ಕ' ಪದ ಯುಕ್ತರೂಪವು ಮನೆತನವನ್ನು ಹಿಡಿದು ಬಂದ, ಅಥವಾ ಸಂಸ್ಕೃತಿಯನ್ನೊಂದಿ ನೆಲೆಗೊಂಡ ನಾಮವೆಂದೂ ಭಾವಿಸಬೇಕು. ಮನೆತನವನ್ನೊಂದಿದ ಅಲ್ಲವೆ ಕುಲನಾಮವಾದರೆ ಆಲ್ಯ' ಎಂದು ಕುಳ' ಳ ಕಾರವಾ ಗಬೇಕು . ( ' ಕಾರಯುತವಾದ ( ಆ ' ಪದಕ್ಕೆ ತಾತ್ತಿಕ ವಿವೇಕನಗ್ನನಾದವನು ಅಥವಾ ಯೋಗಿಸನ್ನಿಭನು ಎಂಬ ಅರ್ಥವೇ ಆಗುವುದು. ಮಾತ್ರವಲ್ಲ, “ಮದಮಾನ ಮಾಯ , , , , ರಿಪುವರ್ಗ ಜಯಾವತಾರಂ | ವಿದಿತ . . . . . ಭಾವಿತ ವಿಶ್ವಲೋಕಂ” ಎಂಬ ಶ್ಲೋಕದಲ್ಲಿಯೂ, ಮುಂದೆ ವಿಸ್ತರಿಸಲಿರುವ ಅದೇ ಸಂದರ್ಭದ ಕವಿಮಹಿಮಾ ವರ್ಣನಾತ್ಮಕವಾದ ಬೇರೆ ಶ್ಲೋಕಗಳಲ್ಲಿಯೂ ಗ್ರಂಥಕಾರನು ಅಂಥ ಅರಿವಿನ ಮೇಲೆಯ ತುತ್ತ ತುದಿಯನ್ನಡರಿದವನೆಂಬುದು ಸಿದ್ದವಾಗುತ್ತಿದೆ. ಗ್ರಂಥಕಾರನ ಸ್ವವಚನವನ್ನು ಬೇಕಾದರೆ ಬಿಟ್ಟುಬಿಡುವ. ಕೇಶಿರಾಜ ಮಂಗರಸರ ಮಾತುಗಳೂ ಹಾಗಿರಲಿ; ಶುದ್ಧ ವೈದಿಕ ಮತೀಯ -ನಾದ ದುರ್ಗಸಿಂಹನೂ “ಶ್ರೀ ವಿಜಯರ ಕವಿಮಾರ್ಗ೦....” ಎಂದು ಪೂಜ್ಯತಾ ಬಹುವಚನವನ್ನುಪಯೋಗಿಸಿದುದರಿಂದ ಆಳ್ವಿ' ಪದವದು ಕವಿಯ ತಾತ್ವಿಕ ಸಂಸ್ಕೃತಿಯನ್ನೆ ಸೂಚಿಸುತ್ತಿದೆ ಎಂದು ನನ್ನ ಭಾವನೆ.
ಆರನೆಯ ಅರಸಂಪುಟಗಳ ಅಕ್ಷರಗಳು ಕೂಡಿದಲ್ಲಿ ಮೀಮಪಾ – ಜಯಾಂ ” ಎಂದಾಗುತ್ತಿದೆ. ಈ ಸಂದರ್ಭದಲ್ಲಿ 'ಜಯಾಲ್ವಂ' ಎಂಬುದು, ಬಂಧಸ್ತಾನದಲ್ಲಿ ತೋರುವುದರಿಂದ ಕವಿಯ ಹೆಸರೆಂಬುದನ್ನು ವಿಚಾರಿಗಳಾರೂ 'ಒಪ್ಪದಿರಲಿಕ್ಕಿಲ್ಲ. ಹಿಂದಿನ ಭಾಗದ ಆ ಅಕ್ಷರಗಳು ಹೇಗಿದ್ದಿರಬಹುದು ಎಂಬುದನ್ನು ಇಲ್ಲಿ ಪರಿಶೀಲಿಸುವುದು ಕರ್ತವ್ಯವಾಗಿ ತೋರುತ್ತಿದೆ. ಹಾಗೆ ಪರಿಶೀಲನೆಗೂ ಆಧಾರವಾಗಿ ಆ ಶ್ಲೋಕದ ತಾತ್ಪರ್ಯವೇನು ಎಂಬುದನ್ನು ಮೊದಲು ವಿವೇಚಿಸುವ: -
ಕುಮಾರನೂ ಹೊಸದಾಗಿ ಅಧಿಕಾರವನ್ನೇರಿದವನೂ ಆದ, ಯಾರೋ ಒಬ್ಬ ವಿರೋಧಿ ರಾಜಪುತ್ರನಿಗೆ, ಬಲ್ಲವನಾದ ಹಿರಿಯನೊಬ್ಬನು, ಚಕ್ರಾಧಿಪತಿ ಯಾದ ಭೂಪನಲ್ಲಿ - ಬಹುಶಃ ಅಮೋಘ ವರ್ಷನಲ್ಲಿ - ಹೇಗೆ ವರ್ತಿಸತಕ್ಕುದು ಎಂಬುದನ್ನು ಬೋಧಿಸಿದ ಹಿತಸೂಚನೆ, ಈ ಪದ್ಯದೊಳಗೆ ಅಡಕವಾಗಿರುವಂತೆ ತೋರುತ್ತಿದೆ. ಬೇಕಾದರೆ ಪದ್ಯದ ತಾತ್ಪರ್ಯಾರ್ಥವನ್ನೇ ಭಾವಿಸುವ: -
VಳW
“ಸೌಜನ್ಯವನ್ನೊಂದಿದವನಾದ (ನೀನು), ಪರಗುಣದ ಉದಾರತೆಯಲ್ಲಿ (ಬಹುಶಃ ( ಉದಾರ'ನೆಂಬ ಸಾರ್ಥಕ ಬಿರುದಾಂಕಿತ ನೃಪತುಂಗನ ಔದಾರ್ಯದಲ್ಲಿ) ಅಭಿ ಮಾನವನ್ನಿರಿಸಿ ಆ ನರಪಾಲಕನಲ್ಲಿ ಸಾಮದಿಂದ ಬಾಳುವುದೇ ಉತ್ತಮ. ಹಿಂದಿನ ಹಗೆತನವನ್ನು ನೋಡದೆ, ಹಗೆತನದಿಂದ ಬಾಳುತ್ತಿದ್ದ ನಿನ್ನ ಅಯ್ಯನ (ತಂದೆಯ) ಆ ಹಿಂದಣ ವಿಚಾರವನ್ನು ಭಾವಿಸದೆ, ಶಾಂತತೆಯಿಂದ ವರ್ತಿಸು. ಹಾಗಿದ್ದರೆ ಉದಾರನಾದ ಭೂಪನ ಪ್ರೇಮವು ನಿನ್ನಲ್ಲಿ ಸುರಿವುದು.” ಎಂಬುದೇ ಈ ಬಂಧದ ತಾತ್ಪರ್ಯಾರ್ಥವು. ಈ ಬಂಧದೊಳಗೆ ಮಾತೃಕಾಕಾರರ ಭಾವನಾನ್ಯೂನತೆಯಿಂದ ಅಲ್ಲಲ್ಲಿ ಕೆಲವು ಅಕ್ಷರಗಳು ಅಸ್ತವ್ಯಸ್ತಗಳಾಗಿವೆ ಎಂಬುದು ನಿಜ. ಆದರೂ ಶ್ಲೋಕದ ಅರ್ಥವು ಇದೇ ತಾತ್ಪರ್ಯವನ್ನೊಂದಿದೆ ಎಂಬುದನ್ನು ವಿದ್ವಾಂಸರಾರೂ ಅಲ್ಲಗಳೆಯಲೊಲ್ಲರು ಎಂದು ನಂಬುತ್ತೇವೆ.
ಮೇಲಿನ ಬಂಧವು ಅಕ್ಕಣಬದ್ಧವಾಗಬೇಕಾದರೆ ಮೂರು ನಾಲ್ಕು ಎಡೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗಲೇಬೇಕು. ಅಲ್ಲವಾದರೆ ಗ್ರಂಥಕಾರನ ವಿಚಾರವಂತಿರಲಿ; ಈ ಶ್ಲೋಕವು ಚಿತ್ರದೊಳಗೆ ನೆಲಸವುದೇ ಅಸಾಧ್ಯವಾಗು
ವುದು. ಎಷ್ಟು ಭಾವಿಸಿದರೂ, ಕೆಲವು ಭಾಗಗಳಿಗೆ ಈ ವಿಜಯಾನೆಂದರೆ ಅರ್ಥವೆ ಹೊಳೆಯದಿರುವುದು ಈ ಬಂಧದೊಳಗೆ ತಪ್ಪು
ನೃಪತುಂಗನ ಸೇರಿರುವುದರಿಂದಲೇ. “ಸೌಜನ್ಯ ಲಕ್ಷ್ಮೀ ಮದಾಂಧಂ” (ಸಂದಪಿಂದಾ೪೯?
ಎಂಬ ಸಮಸ್ತಪದವೇ ಪೂರ್ವಾಪರ ವಿರುದ್ದಾರ್ಥಕ ವಲ್ಲವೆ? (ಮಿಾಮಪಾ' ಎಂಬಲ್ಲಿ ಆದಿಯ ಅಕ್ಷರವು ನಿರರ್ಥಕವಾಗಿ ತೋರುವು ದಿನ್ನೊಂದು; ಮೂರನೇ ಪಾದದ ಹತ್ತನೆ ಅಕ್ಷರವು ಭಿನ್ನವಾಗಿದ್ದು ಹಿಂದಿನವು ಗಳಂತೆ ಅಕ್ರಸಂಪುಟದಲ್ಲಿ ಸೇರದಿರುವುದು ಬದಲೊಂದು; ಆ ಪಾದದ ಕಡೆಯ “ನಾ' ಎಂಬ ಅಕ್ಷರವೇ ನಾಲ್ಕನೆ ಪಾದದ ಆದ್ಯಕರವಾಗಬೇಕಾದುದು ಬೇರೊಂದು; ಅದರಂತೆ ಸುತ್ತಣ ಅರಸಂಪುಟದ ಕೆಲವು ಅಕ್ಷರಗಳು ಕೂಟ ವಡೆಯದಿರುವುದು ಮತ್ತೊಂದು. ಮತ್ತಿನವೆಲ್ಲ ಸರಿಯಾಗಿಯೇ ಇರುವುದ ರಿಂದ ಈ ಶ್ಲೋಕವು ತಪ್ಪಾಗಿ ಮಾರ್ಪಟ್ಟಿದೆ ಎಂಬುದು ಸ್ಪುಟವಾಗಿ ಕಾಣಿಸು. ಆದೆ. ಅದರಿಂದ ಇದನ್ನು ಅಲ್ಲಲ್ಲಿಗೆ ತಿದ್ದಿ ತೋರಿಸುತ್ತೇವೆ -
ಸಂತಂ ಬಾಲ್ಕುದು ಸಾಮದಾ ನರಪನೊಳ್ ಸೌಜನ್ಯಲಕ್ಷ್ಮಿಪದಾ ಸ್ವಾಂತಂ ನಿಶ್ಚಯಮಚ್ಚಿನಿಂ ಪರಗುಹೌದಾರ್ಯಾಭಿಮಾನಂಗಳಾನ್ ಪಿಂತಂ ನೋಡದೆ ಪಾಲಿಗೆಟ್ಟ ಜಿವಿನಿಂ ಬಾಲ್ವಂತೆ ಬಾಯ್ಯನಾ
ಪ |
ಭಣ |
* ನಾ೦ | ತಮ್ಮ
*
ಸಂ
ಮ
ನಂ
| ದುಂದ
ಣ
-
೯೩
-
ನಾಂತಂತಾನ್ ಸಮಸಂದನು ಪಿರಿದುಂದಾನಂಗಳಾನ್ ಭೂಪನಾ 13
(ಇದನ್ನು ಪಕ್ಕದ ಬಂಧದಲ್ಲಿ ನೆಲೆಗೊಳಿಸಿ ಪರಾಂಬರಿಸಿರಿ) . . . . . .
• • • • • • • • • •
ಹೀಗೆ ಬಂಧಗತವನ್ನಾಗಿ ಮಾಡಿ ಓದಿದ ಶ್ಲೋಕದ ಆರನೆಯ ಅರಸಂಪುಟ ಗಳ ಅಕ್ಷರಕೂಟವು “ಸಾಮಪಾ - ಜಯಾಂ ' ಎಂದಾಗುತ್ತಿದೆ. ನಾಲ್ಕನೆಯ ಸಂಪುಟಗಳಿಂದ ಕವಿ ವಿಚಾರ ಏನೇನೂ ಗೊತ್ತಾಗುವುದಿಲ್ಲ. ಆದರೆ ಒಂದನೆಯ ಆರು ಅರ ಸಂಪುಟಾಕ್ಷರಗಳು (ಸಂದ ಪಿಂದಾಳಾ ನಾ' ಎಂದು ರೂಪಿತಗಳಾ ಗುತ್ತಿವೆ. ಎರಡನ್ನೂ ಒಟ್ಟುಗೂಡಿ ಓದಿದಲ್ಲಿ “ಸಂದ ಪಿಂದಾಳಾ ನಾ-ಸಾಮವಾ ಜಯಾಂ ” ಎಂದಾಗುವುದು. ಪ್ರಸಿದ್ದಿ ವಡೆದ ನೃಪತುಂಗ ಚಕ್ರವರ್ತಿಯ ಹಿಂದಾಳಾದ ನಾನು ಸಾಮಪನಾದ (ಸಂಧಾನಮಂತ್ರಿ) ಜಯಾನು ಎಂಬುದು ಆ ವಾಕ್ಯಾರ್ಥವು.
ಈ ವಿಷಯವನ್ನು ಪರಾಂಬರಿಸಿದಲ್ಲಿ ಗ್ರಂಥಕಾರನೆಂದರೆ ಬರಿಯ ವಿದ್ವತ್ಕವಿ ಮಾತ್ರವಲ್ಲ; ರಾಜಕಾರ್ಯಧುರಂಧರರೊಳಗೆ ಗಣನೀಯವಾಗಿ ನೃಪ ತುಂಗನ ಮಂತ್ರಿಗಳೊಳಗೆ ಒಬ್ಬನಾಗಿದ್ದವನೆಂದೂ ಬಲುಮಟ್ಟಿಗೆ ವಿದಿತವಾಗು ತ್ತಿದೆ. ಆರನೆಯ ಅರಸಂಪುಟದೊಳಗೆ 'ಮಾ' ಎಂದಿದ್ದುದನ್ನು ನಾವು ( ಸಾ' ಎಂದು ಬದಲಿಸಿದುದೇನೋ ಸರಿ. ಆದರೆ, ಒಂದನೆಯ ಅರಸಂಪುಟಗಳೊಳಗಿನ ಅಕ್ಷರಕೂಟವನ್ನು ನಾವು ವಿಶೇಷವಾಗಿ ತಿದ್ದಿಲ್ಲ. ಮಾತ್ರವಲ್ಲ; ಗ್ರಂಥಕಾರನಿಗೂ ನೃಪತುಂಗನಿಗೂ ಸಲುವಳಿಯಾಗಿ ನೀತಿ ನಿರಂತರ' ಎಂಬ ಒಂದೇ ಬಿರುದಿದ್ದುದು ಗ್ರಂಥದಿಂದ ಹಿಂದೆ ದೃಷ್ಟಾಂತಿಸಿದ ಪದ್ಯಗಳಿಂದಲೆ ವ್ಯಕ್ತವಾಗಿದೆಯಲ್ಲವೆ? ಹಾಗೆ “ ನೀತಿ ನಿರಂತರ 'ನು ಅಥವಾ (ರಾಜನೀತಿ ನಿಪುಣ 'ನಾಗಿದ್ದುದರಿಂದಲೇ ಆತನನ್ನು ಅರಸನು (ಸಾಮಪಾ'ಧಿಕಾರಕ್ಕೇರಿಸಿದುದಿರಬೇಕೆಂದು ಭಾವಿಸಿಯೇ ನಾವು ಅಕ್ಷರ ಪರಿವರ್ತನವನ್ನೆಸಗಿದುದು. ಮಾತ್ರವೇ ಅಲ್ಲ; ಹಿಂದೆ ಒಮ್ಮೆ ಭಿನ್ನ ಸಂದರ್ಭದಲ್ಲಿ ದೃಷ್ಟಾಂತಿಸಿದ ಸಂಜನ ಶಾಸನದ ೪೧ನೆಯ ಶ್ಲೋಕವನ್ನು ಇನ್ನೊಮ್ಮೆ ಪರಾಂಬರಿಸಿರಿ:- “ಗುರು ಬುಧನನುಯಾತಸ್ಸಾ (ಶಾ) ರ್ಯ ಪಾತಾಳಮಲ್ಲಾದುದಯಗಿರಿ ಮಹಿಮೋ ರಟ್ಟ ಮಾರ್ತಂಡದೇವಃ |... ಎಂಬ ಶ್ಲೋಕವನ್ನು ವಿಸ್ತರಿಸುತ್ತಾ ಶ್ರೀ. ಎ. ಎಸ್, ಅಳೇಕರರು ( ಉದಯಾದ್ರಿ ಸನ್ನಿಭ'ನಾಗಿ, ರಟ್ಟ ಮಾರ್ತಾಂಡ ನೃಪತುಂಗನ ಪುನರುದಯಕ್ಕೆ ಆಧಾರಭೂತ ನಾದ ಪಾತಾಳ ಮಲ್ಲನೆಂಬ ಬಿರುದಿನ ಪೂಜ್ಯ ರಾಜನೀತಿ ನಿಪುಣನಾದ ವ್ಯಕ್ತಿ
ಯೊಬ್ಬನಿದ್ದನೆಂದೂ ಅಂಥ ಪಾತಾಳಮಲ್ಲನೆಂದರೆ, ನೃಪತುಂಗನ ಚಿಕ್ಕಪ್ಪನೂ ಗುಜರಾತ ಶಾಖೆಯ ರಾಷ್ಟ್ರಕೂಟ ರಾಜನೂ ಆಗಿದ್ದ ಸುವರ್ಣವರ್ಷನ ಬಿರುದಾಗಿರಬೇಕೆಂದೂ ಸಂದೇಹಪಡುತ್ತಾರೆ. ಆದರೆ ಅಶ್ರುತಪೂರ್ವವಾದ (ಪಾತಾಳಮಲ್ಲ' ಎಂಬ ಬಿರುದಿನ ವಿಷಯದಲ್ಲಿ ಅವರಿಗೂ ಒಂದು ರೀತಿಯ ಸಂಶಯವೇ ಉಂಟಾದಂತಿದೆ. ಮಾತ್ರವಲ್ಲ, ಆ ಶ್ಲೋಕ ಪಾದದ ರಚನೆ ಯಲ್ಲಿಯೂ ಒಂದಿಷ್ಟು ತಪ್ಪು ಸೇರಿಕೆಯಾದಂತೆ ತೋರುತ್ತಿದೆ. ಅದರಿಂದ ನಮಗೆ ಆ ಪಾದವೇ “ಗುರುಬುಧ ಮನುಯಾತಸ್ನಾನ ಪಾದಾಮಲ್ಲಾತ್ ? ಎಂದಿದ್ದಿರಬೇಕೆಂದು ತೋರುತ್ತಿದೆ. ಮ - ಯ' ಕಾರಗಳು ಕ್ರಮವಾಗಿ ಸಂಸ್ಕೃತಾಕ್ಷರದಲ್ಲಿ ಸಾಮಾನ್ಯವಾಗಿ ಏಕರೂಪದಿಂದಿರುವುದರಿಂದ ಪಲ್ಲಟವಾಗಿ ಪರಿಗಣಿಸಲ್ಪಟ್ಟಲ್ಲಿ ಆಶ್ಚರ್ಯವಿಲ್ಲ. ಅದೇ ರೀತಿಯಲ್ಲಿ 'ಪಾದಾಳ್' ಎಂಬ ಭಾಗವು 'ಪಾದಾ(ತಾ)ಳ' ಎಂದು ವ್ಯತ್ಯಸ್ತವಾಗಲಿಕ್ಕೂ ಎಡೆ ಇದೆ. ಈ ಗ್ರಂಥಕಾರನಾದ ಜಯಾ (ಶ್ರೀ ವಿಜಯ)ನೇ ಹಾಗೆ ನೃಪತುಂಗನಿಗೆ, ಹಿಂದೆ ನೆರವಾದ, ಮತ್ತು ಅವನ ಪುನರುದಯಕ್ಕೆ ಕಾರಣಪುರುಷನಾದ ( ಆಳ್ವ ಮಲ್ಲ'ನಾಗಿರಬೇಕೆಂದು ನಮ್ಮ ವೈಯಕ್ತಿಕಾಭಿಪ್ರಾಯ. ಹೇಗೆ ನೀತಿ ನಿರಂತರ' ಎಂಬ ಬಿರುದು ನೃಪತುಂಗನಂತೆ ಗ್ರಂಥಕಾರನಿಗೂ ಸಲುವಳಿ ಯಾಗಿದ್ದುದೆಂದು ಸಾಧಾರವಾಗಿ ಭಾವಿಸಿದೆವೋ ಅದರಂತೆ “ಕೃತಕೃತ್ಯ ಮಲ್ಲ ನಿತ್ಯ ಮಲ್ಲ” ಎಂಬವುಗಳು ಈ ಜಯಾ' ಅಥವಾ 'ಶ್ರೀ ವಿಜಯ'ನಿಗೂ ಹೊದ್ದಿಕೊಂಡಿದ್ದಿರಲೂಬಹುದು. ಮೂರನೇ ಪರಿಚ್ಛೇದದ ಕಡೆಯ ಪದ್ಯ ಗಳೊಳಗೊಂದರಲ್ಲಿ ಆತ್ಮ- ಗುಣೋದಯಾಂತರ ಸರೂಪಂ” (ಪದ್ಯ ೨೨೦) - ಎಂದರೆ “ತನ್ನ ಮತ್ತು ಗುಣೋದಯ ನೃಪತುಂಗನ ಗುಣಪರಂಪರೆಗಳಿಂದಾಗಿ ಅವನೊಡನೆ ಸಮಾನರೂಪನಾದವನು” ಎಂಬ ಮಾತೂ ಈ ಹೇಳಿಕೆಯನ್ನು ಘೋಷಿಸುತ್ತಿದೆ. ಹೀಗೆ ಸರ್ವ ವಿಷಯಗಳಲ್ಲಿಯೂ ಗ್ರಂಥಕಾರನು ಮೇಲಿನ ಮಟ್ಟವನ್ನೊ೦ದಿದವನಾದುದರಿಂದಲೇ ದು ರ್ಗ ಸಿ೦ ಹಾ ದಿ ಗಳು ಆತನನ್ನು ಪೂಜ್ಯತಾ ಬಹುವಚನದಿಂದ ಕರೆದುದು ಎಂಬುದನ್ನು ಮರೆಯಬಾರದು,
ಈ ಗ್ರಂಥಕಾರನಿಗೂ ನೃಪತುಂಗ ಸಭೆಗೂ ಇದ್ದ ಪರಸ್ಪರ ಸಂಬಂಧ ವೆಂದರೆ ಬರಿಯ ಆಶ್ರಯಾಶ್ರಯಿ ಭಾವ ಸಂಬಂಧವಲ್ಲ; ಅದಕ್ಕಿಂತಲೂ ಮೇಲಾದ ರಾಜಕೀಯ- ಧಾರ್ಮಿಕಾದಿ ಸಂಬಂಧಗಳೂ ಇದ್ದಿರಬೇಕು ಎಂಬು ದನ್ನು ಮೇಲಿನ ಚರ್ಚೆಯಿಂದಕಾಣಿಸಿದೆವು. ಅದಕ್ಕಿಂತಲೂ ಸ್ಪುಟವಾಗಿ ಆತನ
-
೯೫ -
ಯೋಗ್ಯತಾ ಚಿತ್ರವನ್ನೂ ಹೊಲಬನ್ನೂ ಭಾವಿಸಬೇಕಾದರೆ ಈ ಗ್ರಂಥಾಂತ್ಯದ ಶ್ಲೋಕಾರ್ಥಗಳನ್ನು ಸರಿಯಾಗಿ ಮನಗಾಣಬೇಕು, ಆ ಪದ್ಯಗಳೆಲ್ಲವೂ
ನೃಪತುಂಗ ಸಭಾಸದನಾದ ಗ್ರಂಥಕಾರನನ್ನು ಏಕ ನೃಪತುಂಗ-ಜಯಾ - ವಚನದಿಂದಲೆ ಸೂಚಿಸುತ್ತಿವೆ. ಗ್ರಂಥಾಂತ್ಯದ ಆ ಸಭಾಸದರ ಸಂಬಂಧ
* ಸೂಚನೆಗನುವಾಗಿ ಗ್ರಂಥಾದಿಯಲ್ಲಿಯೂ ಎರಡು ಕಂದ ಪದ್ಯಗಳು ಏಕ ವಚನದಿಂದಲೆ ಕೃತಿಕಾರನನ್ನು ನಿರೂಪಿಸುತ್ತಿವೆ. ಅದರಿಂದ ಮೊದಲು ಆದಿಯ ಪದ್ಯಾರ್ಥಗಳನ್ನೂ ಮತ್ತೆ ಕಡೆಯವನ್ನೂ ವಿಸ್ತರಿಸುತ್ತೇವೆ. ಮೇಲಿಂದ ಮೇಲೆ ಓದಿಕೊಂಡು ಹೋದರೆ ವಿದ್ಯಾ೦ಸರಿಗಾದರೂ, ಆ ಸದ್ಯ ಗಳಲ್ಲಿ ಬೇರು ಬಿಟ್ಟು ಹರಿದು ಹಸರಿಸಿದ ಒಳನೇಣುಗಳ ಹೆಣೆತದ ರೀತಿ ಸ್ಪುರಿಸ ಲಾರದು. ಅದರಿಂದ ಆಯಾ ಪದ್ಯಾರ್ಥಗಳನ್ನು ಗದ್ಯ ರೂಪದಲ್ಲಿ ವಿಸ್ತರಿಸುತ್ತಾ, ಪದ್ಯಗಳನ್ನು ಅಡಿಟಿಪ್ಪಣದ ಭಾಗದಲ್ಲಿ ಕೊಡುತ್ತಾ ಹೋಗುತ್ತೇವೆ.
* “ಶಾಸ್ತ್ರೀಯ ವಿಚಾರವಿಡಿದು ಭಾವಿಸಿದಲ್ಲಿ ಪುರಾತನ ಕವಿ ವೃಷಭರ ಪ್ರಯೋಗ ಮಾರ್ಗದಲ್ಲಿ ಪಳಗಿದ ಪ್ರತಿಭೆಯುಳ್ಳಾತ (ಈ ಗ್ರಂಥಕಾರ) ನನ್ನು ಅತಿಶಯಧವಳನ ಸಭಾಸದರು ಮನ್ನಿಸುವರು. (ಸರಿ. ೧ ಪದ್ಯ ೫)
+ “ವ್ಯಾಕರಣ - ಕಾವ್ಯ – ನಾಟಕಗಳಲ್ಲಿ ಲೌಕಿಕ ವ್ಯವಹಾರ ಕಲಾ ಚಾತುಗಳಲ್ಲಿ, ಕವಿ ಸಮಯದಲ್ಲಿ ಮತ್ತು ಅಲಂಕಾರ ಪ್ರಪಂಚದಲ್ಲಿಯೂ ಕೃತ ಪರಿಶ್ರಮನಲ್ಲದವನು, ಈ ವಿವೇಕ ಬೃಹಸ್ಪತಿ' ಎಂದೆನಿಸಿದ ನೃಪತುಂಗನ ನಗರವನ್ನು ಯಾಕೆ ಪ್ರವೇಶಿಸುವನು?” (ಪರಿ, ೧ ಪದ್ಯ ೬)
ತಾನು ವ್ಯಾಕರಣ ಕಾವ್ಯ ನಾಟಕಾದಿಗಳಲ್ಲಿ ಪಳಗಿದ ವಿದ್ವಾಂಸನಾಗಿ ದ್ದುದೂ, ಅದರಿಂದಲೆ “ವಿವೇಕ ಬೃಹಸ್ಪತಿ” ಎಂಬ ಬಿರುದನ್ನೊಂದಿದ ನೃಪ
* ಶ್ರುತದೊಳ್ ಭಾವಿಸಿ
ನೋಡ ಸತತಂ ಕಏವೃಷಭರಾ ಪ್ರಯೋಗಂಗಳೊಳಂ | ಕೃತ ಪರಿಚಯ ಬಲನಪ್ಪನ ನತಿಶಯಧವಳನ ಸಭಾಸದರ್ ಮನ್ನಿಸುವರ್_{ ೫ | ಪಂ. ೧ { +ವ್ಯಾಕರಣ ಕಾವ್ಯ ನಾಟಕ ಲೋಕಕಳಾಸಮಯವಾದಳಂ ಕೃತಿಗಳೊಳಂ | ವ್ಯಾಕುಳನಲ್ಲದನೇಕ ವಿ ವೇಕಬೃಹಸ್ಪತಿಯ ನಗರಮಂ ಪುಗುತರ್ಪ೦ ki ೬ !!
-
೯೬
-
ತುಂಗನ ನಗರವನ್ನು ಪ್ರವೇಶಿಸಿದುದೂ ಇಲ್ಲಿ ಭಾಸವಾಗುತ್ತಿದೆ. ಇಲ್ಲಿ “ನಗರಮಂ” ಎಂದಿದೆಯಲ್ಲದೆ “ಮಹಾಸಭೆಯಂ” ಎಂದಲ್ಲ. ಇದರಿಂದ ಆತನು ಬರಿಯ ವಿದ್ವತ್ತಿನ ಮಹತ್ತಿನಿಂದಾಗಿ ಮಾತ್ರವೇ ಕರೆಯಿಸಲ್ಪಟ್ಟವನಲ್ಲ ಎಂಬ ಭಾವನೆಯೂ ಮಿರುಗುವಂತಿದೆ.
- ಹಿಂದಿನ ಪದ್ಯದಲ್ಲಿ ತೋರುವಂತೆ ( ಅತಿಶಯ ಧವಳನ ಸಭಾಸದರಿಂದ ಮನ್ನಣೆವಡೆದ ಈ ಗ್ರಂಥಕಾರನು ಕಡೆಯ ಪರಿಚ್ಛೇದಾಂತ್ಯದಲ್ಲಿ ತನ್ನ ವಿಚಾರ ವಾಗಿ ವಿಸ್ತರಿಸುವುದನ್ನು ಭಾವಿಸಿರಿ:
* ಈ ಮಹಾ ನೃಪತುಂಗ ಸಭಾಸದನೆಂದರೆ ಸಕಲವಾದ ಲೌಕಿಕ ಸಾವು ಯಿಕ ವೈದಿಕ ವಿವೇಕಗಳಲ್ಲಿ ಪಾರಂಗತನು ಮತ್ತು ಸಾಹಿತ್ಯ ವಿದ್ಯಾಚಾತುರಿ ಯನ್ನು ತನ್ನ ಉಕ್ತಿವಿವೇಕದಿಂದ ಕಂದರೆಯಿಸಿದಾತನು, (೨೧೯)
{} ೨೧
:
Sj ೨೨೦ !!
* ಸಕಲಲೌಕಿಕ ಸಾಮಯಿ ಕೋರುವೆ ! ದಿಕ ವಿಶೇಷವಿವೇಕ ಪರಾಯಣಂ | ಪ ಕಟಿತೋಕ್ತಿ ವಿವಿಕ್ತ ಕಳಾಕಳಾ | ಪಕನುಸಾಹಿತಸಾಹಿತ ವಿದ್ಯೆಯೊಳ್ ಅತಿಶಯ ಪ್ರತಿಭಾವಿಭವಂ ಮಹಾ ! ಚತುರವೃತ್ತಿ ನಿತಾಂತವನಾಕುಳಂ | ಪ್ರತಿವಿತರ್ಕಿತ ಲಕ್ಷಣ ಲಕ್ಷ್ಮನಾ | ಶ್ರಿತ ಮಹಾ ನೃಪತುಂಗ ಸಭಾಸದಂ ಭಾವಿಸಲ್ ಬಗೆದವಂ ಮಿಗೆ ಜಾಣನಶೇಷ ಭಾ | ಪಾ ವಿಶೇಷ ವಿಷಯಾತಿಶಯಾನಳ ಕೌಶಳಂ | ದೇವತಾಗುರು ಗುಣೋದಯ ವೃದ್ದ ಜನೋಪ ಸಂ | ಸೇವನಾಪರನಪಾಕೃತ ವೈಕೃತಚಾಪಳಂ
ಪರವಕಾರುಣಿಕ ನಪ್ಪನಪಾಕೃತ ದೋಷನಾ | ದರಮನಾಗಿಸುವನಪ್ಪನಶೇಷಜನಂಗಳೊಳ್ || ಪರಗುಣಾ [ಸ] ಹನ ನಲ್ಲದನಾತ್ಮ-ಗುಣೋದಯಾಂ | ತರಸರೂಪ (ನಖಿಲಾಗಮ] ಪಾರಪರಾಯಣಂ ಬಗೆದು ಮೇಣ್ ಪರಮಧರ್ಮವನ©ಯಿನನ್ವಯ | ಪ್ರಗಣಿತಾಭ್ಯುದಯ ಮೋಕ್ಷಸುಖಾಶ್ರಯ ಹೇತುವಂ | ನೆಗಟಿಮೇಣದಿತ ನಿರ್ವಳ ಕೀರ್ತಿವಿತಾನನಂ | ಜಗದಗಾಧ ವಿವರೊದರದೀಪ ವಿಕಲ್ಪ ಮಂ
S$ ೨೨೧ {
೨೨೨ !
{ ೨೨೩ ||
- ೯೭
-
ಅತಿಶಯವಾದ ಪ್ರತಿಭಾವೈಭವನು; ಬಲು ಚತುರನಾದ ವೃತ್ತಿ (ಪ್ರಕೃತ ಗ೦ಧವು ವೃತ್ತಿರೂಪವಾದುದು) ಯುಕ್ತನು; ಅಕ್ಷಣಕ್ಕನುವಾಗಿ ಲಕ್ಷ ವನ್ನು ರೂಪಿಸಿದವನು. (೨೨೦)
ಹಲವು ಭಾಷಾ ಸಾಹಿತ್ಯಗಳಲ್ಲಿ ಕುಶಲನಾದವನು; ಆಯಾ ವಿಷಯ ಗಳನ್ನು ಭಾವಿಸಬಲ್ಲವನು; ದೇವತಾ ಗುರು (ಗೊರವ) ಗುಣೋದಯ (ನೃಪತುಂಗ) - ವೃದ್ದ ಜನರನ್ನು ತಕ್ಕಂತೆ ಸೇವಿಸಬಲ್ಲವನು; ವಿಕಾರಚಾಪಲ್ಯ
ರಹಿತನು. (೨೨೧)
(ಅತಿ ದಯಾಳು, ದೋಷದೂರನು, ಅಶೇಷ ಜನಸಮಾಜದಲ್ಲಿ ಅದರ ವುಳ್ಳವನು, ಪರಗುಣದಲ್ಲಿ ಅಸಹನೆ ಇಲ್ಲದಾತನು, ತನ್ನ ಮತ್ತು ಗುಣೋ ದಯ' (ನೃಪತುಂಗ) ನ ಮಧ್ಯದಲ್ಲಿ ಭೇದರಹಿತನು (ಸರೂಪನು) - ಅಖಿಲಾ ಗಮ ವಾರಪರಾಯಣನು. (೨೨೨) - “ಭಕ್ತಿಯಿಂದ ವರನು ಧರ್ಮವನ್ನೂ ಕುಲದ ಅಭ್ಯುದಯ - ಮೋಕ್ಕೆ ಹೇತುವನ ಭಾವಿಸಿ, ಕೀರ್ತಿ ವಿತಾನವನ್ನು ಹಬ್ಬಿಸಲಿಕ್ಕಾಗಿ ಪ್ರಪಂಚದೊಳ ಗಿನ ಪೂಜ್ಯಗಳಾದ ನಾನಾ ಧರ್ಮಗಳನ್ನರಸುವ ದೀಪವಾದ ಮಹಾಜ್ಞಾನ ವನ್ನು ಬಗೆಗೊಂಡು “ ಮಹಾಪುರುಷ ವ್ರತನಾದ ಅಭಿಮಾನಿಯಾದ ಈತನು ಯಾವ ಬಗೆಯ ನಿಂದಾಸ್ತುತಿಗಳಿಗೂ ಒಳಗಾಗದೆ 'ನುತಕಾವ್ಯ' ನಿಬಂಧರೂಪವಾದ ಈ ಲಕ್ಷಣಗ್ರಂಧವನ್ನು ರಚಿಸಿದನು. (೨೨೩ - ೨೬) - ಗುದಯ ನೃಪತುಂಗನ ಉದ್ದೇಶಕ್ಕನುವಾಗಿ ಬರೆದ ಈ ಗ್ರಂಥದ ನುಡಿಗಳಲ್ಲಿ ಒದಗಬಹುದಾದ ನ್ಯೂನತೆಗಳನ್ನು ನೃಪತುಂಗ ಸಭಾಸದರು ಸೂಚಿಸಿ ಸಂತಸಗೊಳಿಸುತ್ತಿದ್ದರೆ
೨)
* ಗೀತಿಕೆ . ಕಡೆಪೇ ನುತಕಾವ್ಯಮನಿಂ ತಭಿಮಾನಿ ತಾ(°ಸಿರ | ಗೀಡಿತ ಮಹಾ ಪುರುಷವ್ರತ ನಿಶ್ಚಿತಂ || ಕೂಡದಂತ ಪೆರೋಲ್ ಮೆಚ್ಚಿನೊಳೇತೆ ಅನಸೊಡಂ | ನೋಡದಂ ಕುಜಿತಾವನನೇನುನುಂ
| ೨೨೪ . ಅಂತು ಬಿಲ್ಲಿ ತ ಅದಿ೦ ನರಗೀತ ಗುಣೋದಯ್ಕೆ | ಕಾಂತ (ಕಾಂತಿ ವಿಷಯಾಶಯರಾಗಿ ನಿರಾಕುಳಂ | ಸಂತತಂ ನುಡಿಗಳೊ೪ ಬಗೆಬೆರ್ಚಿರ ಪೇಲ್ಲಿ ನಮ್ | ಸಂತಸಂ ಬಡಿಸುವರ್ ನೃಪತುಂಗ ಸಭಾಸದರ್
! ೨೨೫ !
-
೯೮
-
ಈ ಮಾತುಗಳಿಂದ ಗ್ರಂಥಕಾರನ ಕೀರ್ತಿ ಇಡಿ ನಾಡಿನಲ್ಲಿ ಹೇಗೆ ಹಬ್ಬಿ ಕೊಂಡಿತ್ತು, ನೃಪತುಂಗನು ಈತನಲ್ಲಿ ಹೇಗೆ ಅಭಿನ್ನಭಾವದಿಂದಿದ್ದನು (ಆತ್ಮ ಗುಣೋದಯಾಂತರ ಸರೂಪಂ) ಎಂಬುದು ವಿಶದವಾಗುತ್ತಿದೆ. ಈತನು ನೃಪತುಂಗನಂತೆ ಸ್ವಧರ್ಮವನ್ನು ಬಿಗಿವಿಡಿದು ಹೇಗೆ ಪರಧರ್ಮಗಳಲ್ಲೆಲ್ಲ ಉದಾರನಾಗಿದ್ದನೆಂಬುದೂ ಗೊತ್ತಾಗುತ್ತಿದೆ. ಮಾತ್ರವಲ್ಲ; ಈ ಸಾಹಿತ್ಯ ಲಕ್ಷಣ ಗ್ರಂಥಕ್ಕೆ ನೃಪತುಂಗನ ಭಾವನೆಯೇ ಸೂತ್ರ, ಗ್ರಂಥಕಾರನ ಈ ಗ್ರಂಥವೇ ವೃತ್ತಿ, ಇದರೊಳಗಿನ ಗುಣದೋಷಗಳನ್ನು ಅವಲೋಕಿಸಿ ಮಹಾ ಸಭಾಸದರು ಅಲ್ಲಲ್ಲಿಯ ನ್ಯೂನತೆಗಳನ್ನು ತಿದ್ದುತ್ತಿದ್ದರು ಎಂಬುದೆ ಮೊದಲಾದ ಹಲ ಸಂಗತಿಗಳು ಮೇಲಿನ ಪದ್ಯಗಳಿಂದ ವಿಶದವಾಗುತ್ತಿವೆ.
ಗ್ರಂಥಕಾರನ ಮತ ಜಾತಿ ದೇಶ ಮೊದಲಾದುವುಗಳೊಳಗೆ ಒಂದೂ ಹಿಂದಿನ ವಿವೇಚನೆಯಲ್ಲಿ ತಲೆದೋರಲಿಲ್ಲ. ಆದರೂ ಅವನು ಸಾಮಾನ್ಯ ನಾದೊಬ್ಬ ವ್ಯಕ್ತಿಯಲ್ಲ; ಚಕ್ರವರ್ತಿ ನೃಪತುಂಗನಿಗೂ ನೃಪತುಂಗ ಮಹಾ
..ಸಭೆಗೂ ಅತಿ ಪ್ರೇಮನಾತ್ರನಾದವನು ಎಂಬುದು ಗೊತ್ತಾ ಇನ್ನೂ ಹೆಚ್ಚಿನ ಹಲಬುಗಳು ,
ಜೈನ ದಂತಾಯಿತು. ಚಕ್ರಬಂಧದಲ್ಲಿ ತೋರುವ (ಜಯಾಂ '
ಎಂಬ ಸಮಸ್ತಪದದ ಮುಂದಿನ ( ಆಲ್ಕ' ಪದದಿಂದ ಆತನು ತಾತ್ವಿಕ ಮಹಾಪುರುಷನೆಂದು ತೋರುತ್ತಿದೆ. ದೇಶವನ್ನು ಆಳುತ್ತಿದ್ದ ರಾಜವಂಶೀಯನು ಅಥವಾ ರಾಜಕುಲಕ್ಕೆ ಸೇರಿದವನು ಎಂದು ಊಹಿಸಬೇಕಾ ಗಿದ್ದರೆ (ಆಳ' ಎಂದಿರಬೇಕಾಗಿದ್ದುದು. ಅದರಿಂದ ಗ್ರಂಥಕಾರನು ಯಾವ ವರ್ಣಕ್ಕೆ ಅಲ್ಲವೆ ಜಾತಿಗೆ ಸೇರಿದವನೆಂಬುದು ವಿದಿತವಾಗಲಿಲ್ಲ. ಆದರೆ, ಹಿಂದೆ ದೃಷ್ಟಾಂತಿಸಿದ ೨೧೮ನೆ ಪದ್ಯದಲ್ಲಿ “ಸಕಲ . . . . . ವೈದಿಕ ವಿಶೇಷ ವಿವೇಕಪರಾಯಣಂ” ಎಂದಿರುವುದರಿಂದ ವೇದಾಧಿಕಾರವುಳ್ಳ ಉತ್ತಮ ವರ್ಣ ದವನೆಂದು ಸೂಚಿತವಾಗುತ್ತಿದೆ. ಇದರಿಂದ ಆತನು ಜೈನನಲ್ಲ ಬ್ರಾಹ್ಮಣನೆಂದಾ ಗಲಿ, ಅಥವಾ ಬ್ರಾಹ್ಮಣನಲ್ಲ ಜೈನನೆಂದಾಗಲಿ, ಸಿದ್ದಾಂತಿಸಲಾಗುವುದಿಲ್ಲ. ಜೈನ ಮತೀಯವಾದ ಆಗಮಗ್ರಂಥ ಸಮೂಹಕ್ಕೂ (ವೇದ' ಎಂಬ ಹೆಸರಿದೆ. ಹಿಂದೆ ದೃಷ್ಟಾಂತಿಸಿದ ಪದ್ಯಾವಳಿಯ ಕಡೆಯ ಪದ್ಯಕ್ಕಿಂತ ಮತ್ತಿನದಾದ 'ಗೀತಿಕೆ' ಎಂಬ ವೃತ್ತದ ಅಪೂರ್ಣವಾದ ಒಂದು ಪದ್ಯ ಹೀಗಿದೆ. ಅದನ್ನೀಕ್ಷಿಸುವ :
“ಪಾರ್ಥಿವಲೋಕನಪ್ರನೆಂದುಂ ಕವಿ ವರ್ಣಿ ಕುಂ ||
ಸ್ವಾ[ಸಾ]ರ್ಥಚಯಂ ನುತಸರಸ್ವತಿ
-
೯೯
-
ತೀರ್ಥಾವತಾರಮಾರ್ಗನೆಸಕಂ |
• • • • • • • • • • • • • • • • • • || ೨೨ ||
ಈ ಪದ್ಯದ ನಾಲ್ಕನೆಯ ಇಡಿ ನಾದವೇ ಲುಪ್ತವಾಗಿದೆ. ಆದರೂ ಹಿಂದಿನ ಮತ್ತು ಮುಂದಿನ ಪದ್ಯಗಳು ಗ್ರಂಥಕಾರನ ಮಹಿಮೆಯನ್ನೆ ವಿಸ್ತರಿಸು ನವುಗಳಾದುದರಿಂದ ಇದೂ ಅಂಥದೇ ಎಂದು ಸಿದ್ದವಾಗುತ್ತಿದೆ, ಎರಡನೆ ವಾದದ “ಸ್ವಾರ್ಥಚಯಂ” ಎಂಬುದು ಬಹುಶಃ “ಸಾರ್ಥಚಯಂ” ಎಂದು ಇದ್ದಿರಬೇಕು. ಈ ಪದ್ಯದ ನಿಷ್ಕೃಷ್ಟಾರ್ಥವು ಗುರಿಗೊಳ್ಳುವಂತಿಲ್ಲವಾದರೂ ನಮಗೆ ಆವಶ್ಯಕವಾದ ಒಂದು ಸಂಗತಿ ಮಂದಟ್ಟಾಗುವಂತೆ ತೋರುತ್ತಿದೆ, “ಲೋಕಂ” ಎಂಬುದು ವ್ಯಸ್ತಪದವಾಗಿದ್ದರೆ, “ದೇಶ ಅಥವಾ ಜನ” ಎಂಬ ಅರ್ಥವನ್ನೊದಗಿಸುತ್ತಿದೆ. ಆದರೆ, ಇಲ್ಲಿ ಅದು “ಪಾರ್ಥಿವ” ಎಂಬ ಹಿಂದಿನ ಪದದೊಡನೆ ಸಮಾಸವಡೆದು ಮುಂದಿನ (ಕವಿ' ಪದಕ್ಕೆ ವಿಶೇಷಣವಾಗಿರುವುದು ವ್ಯಕ್ತವಾಗಿದೆ, ಅದರಿಂದ ಪಾರ್ಥಿವ ಲೋಕನಾದ ಕವಿ' ಎಂದರೆ ಈ ಕವಿ? ಕ್ಷತ್ರಿಯರ ಸಮಾಜಕ್ಕೆ ಸೇರಿದವನು, ಎಂದು ನಿರ್ಧಾರವಾಗುವುದಲ್ಲವೆ? ಈ ಪದ್ಯವು ಅಪೂರ್ಣವಾಗಿರುವುದರಿಂದ ವಿದ್ವಾಂಸರ ಪರಾಂಬರಿಕೆಯು ಇದ ರೊಳಗೆ ನುಸುಳಿ ಗುರಿಗೊಳ್ಳಲಿಲ್ಲವಾಗಿ ತೋರುತ್ತಿದೆ. ಹೇಗೂ ಇರಲಿ, ಕ್ಷತ್ರಿಯ ಸಮಾಜಕ್ಕೆ ಸೇರಿದವನಾದ ಈ ಕವಿ, ಸರಸ್ವತೀ ತೀರ್ಥಾವತಾರನೆಂಬ ಬಿರುದನ್ನೊಂದಿದ ನೃಪತುಂಗನ ಕಾರ್ಯ (ಎಸಕ೦) ನೆಲ್ಲ ಪುರುಷಾರ್ಥ ಸಹಿತ ವಾದುದು ಅಥವಾ 'ಸಾರ್ಥಚಯಂ' ಎಂದು ಬಣ್ಣಿಸುತ್ತಾನೆ. ಈ ಹೇಳಿಕೆ ಯಿಂದ ಕವಿ ಕೃತಿಯ ವಂಶೀಯನೆಂಬುದು ನೆಲೆಗೊಂಡಂತಾಗುತ್ತಿದೆ. ಇದ ಕ್ಕಿಂತ ಮುಂದಿನ ಶ್ಲೋಕಗಳು ಈ ನಿರ್ಧಾರಕ್ಕೆ ಇನ್ನಷ್ಟು ಪೋಷಕಗಳಾಗಿವೆ:
ಕುಲಜಾತಿ ದೇಶ ವಿಭವಂ ವಿನಯೋಪಚಾರಂ ನಿಲಯೇಕ ವೃತ್ತಿ [ಕೃತಿ ಬಿಂಬಿತಸತ್ಯಸಾರಂ] ನಿಲ ಸದ್ಗುಣಾಗುಣ ವಿವರ್ತಿಗುರೂಪದೇಶಾ ಮಲಿನಾವಬೋಧ ವಿದಿತಾಖಿಳ ಚೋದ್ಯ [ವೃಂದಂ] : ೨೨೬ ||
ಹಿಂದಿನ ಅಪೂರ್ಣ ಸದ್ಯದಿಂದ ಈತನ (ಕುಲಜಾತಿ'ಗಳ ಹೊಳಪು ಹೊಳೆ ದಿದೆಯಷ್ಟೆ. ವಿನಯ ಶಾಲಿಯಾಗಿ ನಿಲಯ್ಕೆಕ ವೃತ್ತಿಯಾಗಿ ಎಂದರೆ ಹೆಚ್ಚಾಗಿ ಏಕಾಂತ ವಾಸಿಯಾಗಿರುವವನೆಂಬುದು ಇಲ್ಲಿ ವ್ಯಕ್ತವಾಗಿದೆ. “ಸಾಮಸನೂ
ಸಂದಪಿಂದಾಳೂ” ಆದವನು ಹಾಗೆ ಏಕಾಂತ ವಾಸದಲ್ಲಿ ಹೆಚ್ಚಾಗಿ ಪ್ರವಣ ನಾಗುವುದೆಂದರೆ ಪ್ರಕೃತಿಗೊಪ್ಪುವುದೇ ಸರಿ,
* ವಿಲಸದ್ಗುಣನಾಗಿ ಮತ್ತು ದೋಷಕ್ಕೆ ವಿಮುಖ (ಅಗುಣವಿವರ್ತಿ) ನಾಗಿ, ಗುರೂಪದೇಶದ ನಿರ್ಮಲಜ್ಞಾನದಿಂದಾಗಿ ಪ್ರಪಂಚದ ಸಮಸ್ತ ಚೋದ್ಯ ವೃಂದಗಳನ್ನೂ ತಿಳಿದಾತನು' ಎಂಬ ಹೇಳಿಕೆ, ಗ್ರಂಥಕಾರನನ್ನು ತಾತ್ವಿಕ ರಾಜಕೀಯಾದಿ ವಿಚಾರದಲ್ಲಿ ಎಷ್ಟರ ಮೇಗೇರಿಸುವುದು ಎಂಬುದನ್ನು ಭಾವಿಸಿರಿ. ಮತ್ತಿನದಾದ “ಮದಮಾನಮಾಯ . . . . ” ಎಂಬ ಪದ್ಯವನ್ನು ಹಿಂದೆ ದೃಷ್ಟಾಂತಿಸಿದುದರಿಂದ ಆ ಪದ್ಯವನ್ನೆ ಬೇಕಾದರೆ ಇಲ್ಲಿಯೂ ಹಂತಿ ಗೊಳಿಸಿ ನೋಡಿಕೊಳ್ಳಿರಿ. ಅದರೊಳಗೆ “ . . . . . ಜಯಾವತಾರ'ನಾದ ಈ ಗ್ರಂಥಕಾರನು “ವಿದಿತ (ಸ್ವಧೀ) ವಿಭವಭಾವಿತ ವಿಶ್ವಲೋಕ”ನೂ ಬುಧರ್ಗೆ ಓತುಕಾವ'ವನೂ ಆದ ಮಹಾವ್ಯಕ್ತಿ ಎಂದಿರುವುದರಿಂದ, ಈತನು ಬರಿಯ ಕನ್ನಡ ನಾಡಿನೊಳಗಿನ ಮಹಾಪುರುಷನಷ್ಟೇ ಅಲ್ಲ; ವಿಶ್ವಲೋಕ ಪ್ರಸಿದ್ಧನೂ ಆಗಿದ್ದನೆಂದು ಸೂಚಿತವಾಗುತ್ತಿದೆ. ಆಗಿನ ಪ್ರಪಂಚದೊಳಗೆ ಕೀರ್ತಿನಡೆದ, ಅರೇಬಿಯಾ ಚೈನಾ ಮೊದಲಾದ ದೇಶಗಳಿಂದ ಬಂದ ರಾಯ ಭಾರಿಗಳಿಂದ ಬಲು ಸುಸಂಸ್ಕೃತ ಚಕ್ರವರ್ತಿ ಎಂಬ ಪ್ರಖ್ಯಾತಿಯನ್ನೊಂದಿದ ನೃಪತುಂಗನು ತನ್ನ ಮಹಾಸಭೆಯ ಕನ್ನಡ ಲಕ್ಷಣ ಸಾಹಿತ್ಯಕ್ಕೆ ಪ್ರಮುಖ ನಾಗಿ ಆರಿಸಬೇಕಾದ ಮಹಾವ್ಯಕ್ತಿ ಎಂದರೆ ಸಾಮಾನ್ಯವಾಗಿರಲು ಸಾಧ್ಯ ವಿದೆಯೆ? ಮನ ಪದ್ಯವನ್ನು ಪರಿಭಾವಿಸಿರಿ
ಪರಮಾನುಭಾವನಭಿಮಾನಿ ವಿನೋದಶೀಲಂ | ಪರನತ್ತುದಾರ ಚರಿತೋದರನೇಕರೂ | ಪ | ಸರಸಾಶ್ರಯವರ ಮೂರ್ತಿ ಪರೊ [ಸಕಾರ]• | ನಿರತಂ ಗುಣೋದಯನ ಕಾರಣ ಮಿತ್ರ *ಧುರ್ಯ೦ | ೨೨೮ 11
ಈ ಪದ್ಯಸಾರವನ್ನು ಇನ್ನಷ್ಟು ಜಾಗರೂಕತೆಯಿಂದ ಹೀರಬೇಕು. ಗ್ರಂಥ ಕಾರನ (ಪರಮಾನುಭಾವ'ತೆಯೇ ಮೊದಲಾದ ಒಂದನೆಯ ಪಾದದ ವಿಶೇಷಣ
* ಪ್ರತಿಗಳೆರಡರಲ್ಲಿಯೂ .........ಧುರ್ಯ ಮಿತ್ರಂ' ಎಂದಿದೆ. ಇಲ್ಲಿ 'ಮಿತ್ರ ಧುರ್ಯಂ' ಎಂದೇ ಮೂಲದಲ್ಲಿದ್ದಿರಬೇಕೆಂದು ನಮ್ಮೊಣಿಕೆ, ಹೇಗಿದ್ದರೂ ತಾತ್ಪರ್ಯಕ್ಕೆ. ಭಗವಿಲ್ಲ.
- ೧೧ -
ಗಳು ಅತಿ ಧೀರತಾದಿ ಗುಣಗಳನ್ನು ಸೂಚಿಸುತ್ತಿವೆ. ಎರಡನೆಯ ಪಾದದ ಉದಾರ ಚರಿತೋದಯಂ ಏಕರೂಪಂ” ಎಂಬುದಕ್ಷಿಸಿರಿ. ( ಉದಾರ - ಚರಿತ' ಎಂಬುದು ನೃಪತುಂಗನ ಬಿರುದೆಂದು ಗೊತ್ತಿರುವ ಸಂಗತಿಯಷ್ಟೆ. ಉದಾರಚರಿತನಾದ ನೃಪತುಂಗನ 'ಉದಯ'ದಲ್ಲಿ (ಏಕರೂಪನು' ಎಂಬ ಈ ಹೇಳಿಕೆಯ ಪಾದದೊಡನೆ, ನಾವು ತಿದ್ದಿದ ಸಂಜನ ಶಾಸನದ “ಸಾಮಪಾದಾಳ್ ಮಲ್ಲಾ ದುದಯಗಿರಿಮಹಿಮ್ಮ:” ಎಂಬ ಭಾಗವನೂ, ಮಶಿನ ರಟಮಾರ್ತಂಡ ದೇವಃ | ಪುನರುದಯಮುಪೇತ್ಯ” ಎಂಬ ಅಂಶವನ್ನೂ ಸಾಲಾಗಿ ಇರಿಸಿಕೊಂಡು ನೋಡಿರಿ. ಹೀಗೆ ಪರಾಂಬರಿಸಿದಲ್ಲಿ ಉದಯಗಿರಿ' ಸನ್ನಿಭನಾಗಿ ರಟ್ಟಮಾರ್ತಾಂಡ
ದೇವನ ಪುನರುದಯಕ್ಕೆ ಆಸ್ಪದನಾದ ಆ ಆಮಲ್ಲನೇ ಈ ಉದಾರ ಚರಿತೋ ದಯಂ' ಎನ್ನಿಸಿದ ಗ್ರಂಥಕಾರ ಶ್ರೀ ವಿಜಯನು ಅಥವಾ ಜಯಾನು ಎಂದು ಮತ್ತಿಷ್ಟು ದೃಢಮೂಲವಾಗುತ್ತಿದೆ. ಮಾತ್ರವಲ್ಲ; ನಾಲ್ಕನೆಯ ಪಾದದಲ್ಲಿಯ `ಗುಣೋದಯನ ಅಕಾರಣ ಮಿತ್ರಧುರ್ಯಂ ' ಎಂಬುದನ್ನು ಭಾವಿಸಿರಿ. ಮಿತ್ರ ರೊಳಗೆ “ಸಹಜ ಮಿತ್ರ, ಕೃತ್ರಿಮ ಮಿತ್ರ” ಎಂಬ ಭೇದವ್ವಯವನ್ನು ರಾಜನೀತಿ ಗ್ರಂಥಗಳು ನಿರೂಪಿಸುತ್ತಿವೆ. 'ಸಹಜ ಮಿತ್ರ'ರೆಂದರೆ ಮಾತೃಪಕ್ಷದವರಾದ “ಸೋದರಮಾವ ಅವನ ಮಕ್ಕಳು ಮೊದಲಾದವರಾದರೆ, ಚಿಕ್ಕಪ್ಪ ಅವನ ಮಕ್ಕಳೇ
ಮುಂತಾದ ದಾಯಾದ ವರ್ಗದವರು “ಸಹಜ ಶತ್ರು'ಗಳೆನ್ನಿಸುತ್ತಾರೆ. ಅದರಂತೆ, ಪೂರ್ವ ಕೃತೋಪಕಾರವೇ ಮೊದಲಾದ ಕಾರಣಗಳಿಂದ, ಕೆಳೆತನಕ್ಕಾಸರೆಯಾ ದವರು ಕೃತ್ರಿಮ ಮಿತ್ರರಾದರೆ, ಪೂರ್ವಾಪಕಾರವನ್ನೆಸಗಿದವರು ಕೃತ್ರಿಮ ಶತ್ರು ಗಳೆನ್ನಿಸುತ್ತಾರೆ. ಇಲ್ಲಿ ತೋರುವ ಅಕಾರಣಮಿತ್ರ' ಎಂದರೆ 'ಸಹಜಮಿತ್ರ' ಎಂಬ ಅರ್ಥವನ್ನೇ ಹೊಳೆಯಿಸುವಂತಿದೆಯಲ್ಲವೆ? ಗ್ರಂಥಕಾರನು 'ಪಾರ್ಥಿವಿಕಂ' ಅಥವಾ ಕ್ಷತ್ರಿಯ ಕುಲೋತ್ಪನ್ನನು ಎಂದುದೇನೋ ವ್ಯಕ್ತವಾಗಿಯೇ ಇದೆ. ಹಿಂದೆ ಶಾಸನದಿಂದ ದೃಷ್ಟಾಂತಿಸಿದ ನೃಪತುಂಗನ ತಾಯಿಯ “ಗಾಮುಂಡಜ್ಜೆ” ಎಂಬ ಹೆಸರಾದರೂ ಆಕೆ ಕೃತಿಯ ವಂಶೀಯಳೆಂಬುದನ್ನೇ ಬಿಗಿಹಿಡಿಯುತ್ತಿದೆ, ಅದರಿಂದ, ಈತನು ಒಂದು ವೇಳೆಗೆ ನೃಪತುಂಗನ ಸೋದರಮಾವನ ಅಥವಾ ಸೋದರ ಭಾವನ ಸಾಲಿನ ಬಂಧುವರ್ಗದಲ್ಲಿ ಸೇರಿದವನಾಗಿದ್ದಿರಲೂಬಹುದು. ಆ ಅರ್ಥವನ್ನೇ “ಗುಣೋದಯನ ಅಕಾರಣ ಮಿತ್ರಧುರ್ಯಂ" ಎಂಬ ಮಾತು ಸೂಚಿಸುತ್ತಿದೆ. ಅಸಮಾನವಾದ ವಿದ್ಯಾ ಸಂಸ್ಕೃತಿಗಳಿಂದೊಡನೆರೆದ ಈ ರಾಜಕೀಯ ಮಹಾವ್ಯಕ್ತಿ, ನೃಪತುಂಗನ ವಿದ್ವತ್ಸಭೆಯಲ್ಲಿ ಬರಿಯ ಒಬ್ಬ ಸದಸ್ಯ
- ೧೦೨ - ನಷ್ಟೇ ಆಗಿದ್ದಿರಲಿಕ್ಕಿಲ್ಲ. ಹಿಂದಿನ ೨೧೯ನೆಯ ಪದ್ಯದಲ್ಲಿ ಆಶ್ರಿತ ಮಹಾ ನೃಪತುಂಗ ಸಭಾಸದಂ” ಎಂದು ತೋರುವುದಲ್ಲವೆ? ಅಲ್ಲಿ ಛಂದಸ್ಸಿಗನುವಾಗಿ “ಮಹಾ” ಪದವು ಹಿಂದೆ ಸೇರಿದುದಾಗಿರಬೇಕು. ಆ ಸಮಾಸಪದವು, “ನೃಪ ತುಂಗ ಸಭೆಯ ಮಹಾಸಭಾಸದನು” ಎಂಬುದೇ ತಾತ್ಸರ್ಯದಿಂದ ರೂಪಿತ ವಾದುದಿರಬೇಕು. ಇದೇ ಪದ್ಯದ ಮೂರನೆಯ ಪಾದದ “ಸರಸಾಶ್ರಯ ಪ್ರವರ ಮೂರ್ತಿ ಪರೋಪಕಾರಂ” ಎಂಬ ವಿಶೇಷಣ ಪದಗಳನ್ನೀಕ್ಷಿಸಿರಿ, ಸರಸರಾದ ಬಲುಮಂದಿ ವಿದ್ವಾಂಸರಿಗೆ “ಪ್ರವರಮೂರ್ತಿ ” ಎಂಬ ಈ ಹೇಳಿಕೆಯಿಂದ ಗ್ರಂಥ ಕಾರನಿವನು ಆ ನೃಪತುಂಗ ಸಭೆಯಲ್ಲಿ ಮಹಾ ಸಭಾಸದನು ಅಥವಾ ಅಧ್ಯಕ್ಷ ನಾಗಿದ್ದನೆಂದು ಭಾವಿಸಿದಲ್ಲಿ ಏನೇನೂ ತಪ್ಪಾಗದು. ಮುಂದಿನ ಇನ್ನೊಂದು. ಪದ್ಯವನ್ನೂ ಇಲ್ಲಿ ಭಾವಿಸಿರಿ:
ಅಸಹಾಯ ಸಾಹಸವಿನೋದಿ ವಿವಿಕ್ತ ಚಿತ್ರ ಪ್ರಸವಪ್ರಕಾಶಿತ ಮಹೋದಯ ತತ್ತ್ವಸಮ್ಮ [] 1 ವ್ಯಸನವ್ಯಸೇತನುಪನೀತ ಕಲಾಕಲಾಸಂ | ಶಶಿಖಂಡ ನಿರ್ಮಲಯಶೋ ವಿವಿಧಾವತಂಸಂ 31 ೨೨೯ :
ಇಲ್ಲಿ ಮುಂದಿನ ಮೂರು ಪಾದಗಳ ವಿಶೇಷಣ ಪದಗಳು ಗ್ರಂಥಕಾರನ ಸಂಸ್ಕೃತಿಯ ಮತ್ತು ನಡವಳಿಯ ಮಹಿಮೆಯನ್ನು ನಿರೂಪಿಸುತ್ತಿವೆ. ಅವು ಗಳು ಹಾಗಿರಲಿ; ಆದಿಪಾದದ ( ಅಸಹಾಯ ಸಾಹಸವಿನೋದಿ' ಎಂಬ ಒಂದೇ ಒಂದು ಪದವನ್ನೆ ನಾವಿಲ್ಲಿ ಪರಾಂಬರಿಸಬೇಕಾದುದು. ( ಅಸಹಾಯ ಸಾಹಸಿ? ಎಂದರೆ ಏಕಾಂಗ ನೀರನು ಎಂಬರ್ಥ, ಸಾಹಸ (ಸಹಸಾ ಕ್ರಿಯಮಾಣಂ ಕರ್ಮ) ಎಂದರೆ ರಾಜಕೀಯವಾದ ಗುರಿಯನ್ನೊಂದಲಿಕ್ಕೆ ಕೂಡಲೇ ಮಾಡ ಬೇಕಾದ ಉದ್ಯೋಗ, ಈ ಉದ್ಯೋಗವೆಂದರೆ, ರಾಜನೀತಿ ಪ್ರಪಂಚದ ಜೀವಾಳಗಳೆನ್ನಿಸಿದ ಪ್ರಭುಶಕ್ತಿ ಮಂತ್ರ ಶಕ್ತಿಗಳಿಂದ ಹೆಣೆದ ಉತ್ಸಾಹಶಕ್ತಿಯ ಕಾರ್ಯಸ್ವರೂಪವು. ಈ ಪ್ರಭುಶಕ್ತಿಗೆ ಸರ್ವತಂತ್ರ ಸ್ವತಂತ್ರನಾಗಿದ್ದ ಅರಸನೇ ಆಧಾರ, ಮಂತ್ರ ಶಕ್ತಿರೂಪವಾದ ರಾಜನೀತಿ ವಿಚಾರಕ್ಕೆ ಮುಖ್ಯಾಮಾತ್ಯನೆ ಮೊದಲಾದ ಮಂತ್ರಿಮಂಡಲವೇ ಆಶ್ರಯ, ಉತ್ಸಾಹ ಶಕ್ತಿರೂಪವಾದ ಹುರುಪಿಗೆ ಪ್ರಜಾಮಂಡಲ - ಅಧಿಕಾರಿ ವರ್ಗಗಳೆ ಪಂಚಾಂಗ. ಈ ಮೂರು ಶಕ್ತಿಗಳಿಂದೊಡವೆರೆದ ರಾಜಕೀಯೋದ್ಯೋಗವನ್ನು, ಅಸಹಾಯನಾಗಿ ಸಾಗಿಸು
-
೧೦೩
-
ತಿರಬೇಕಾದರೆ ಆ ಶಕ್ತಿತಯವು ಈತನಲ್ಲಿ ಕೇಂದ್ರೀಕೃತವಾಗಿದ್ದುದು ಎಂದಲ್ಲವೇ ಸೂಚಿತವಾಗುವುದು? ಈತನು ( ಅಸಹಾಯ ಸಾಹಸ'ವುಳ್ಳಾತನಷ್ಟೇ ಅಲ್ಲ; ಅಂಥ ಸಾಹಸದಲ್ಲಿ ವಿನೋದಿಸುವಾತನೂ ಆಗಿದ್ದನಂತೆ. ಇದು ಬರಿಯ ಅತಿ ಶಯೋಕ್ತಿಯಲ್ಲ ಎಂಬುದು ಈ ಸಂದರ್ಭದ ಆದಿಯಿಂದ ಈ ವರೆಗಿನ ಎಲ್ಲ ಪದ್ಯಗಳನ್ನು ವಿವೇಚಿಸಿದಲ್ಲಿ ಮಂದಟ್ಟಾಗುವುದು. ಈ ಪದ್ಯದಲ್ಲೇ ತೋರು ವಂತೆ ಮಹೋದಯತ ಸತ್ವ 'ನಾದುದರಿಂದಲೇ ಈತನಲ್ಲಿ ಅಷ್ಟೊಂದು ಧೈರ್ಯವೂ ಸೆರ್ಯವೂ ನೆಲೆವಡೆದುದಾಗಿರಬೇಕು. ಈ ಎಲ್ಲವನ್ನೂ ವಿವೇಚಿಸಿದಲ್ಲಿ ಈತನು ನೃಪತುಂಗನ ವಿದ್ವತ್ಸಭೆಯೊಳಗಿನ ಮಹಾ ಸಭಾ ಸದನು ಮಾತ್ರವೇ ಅಲ್ಲ; ರಾಜವಂಶೀಯನೂ ರಾಜನ ಮಾತೃಪಕ್ಷವನೊಂದಿದ ಬಂಧುವೂ ಅಸಮಾನ ವಿದ್ವಾಂಸನೂ ಆಗಿದ್ದನು. ಹಿಂದೆ ಗೋವಿಂದರಾಜನ ಮರಣಾನಂತರ ರಾಜ್ಯಭ್ರಂಶವನ್ನೊಂದಿದ್ದ ನೃಪತುಂಗನ ಪುನರುದಯಕ್ಕೆ ಕಾರಣ ಪುರುಷನೂ ಈತನೆ ಆಗಿದ್ದನೆಂದು ಭಾಸವಾಗುತ್ತಿದೆ. ಆ ಭಾವನೆಯೇ ಹಿಂದಣ ದೃಷ್ಟಾಂತಗಳಲ್ಲಿಯ “ಉದಾರ ಚರಿತೋದಯನೇಕರೂಪಂ - ಗುಣೋದಯನ ಕಾರಣ ಮಿತ್ರಧುರ್ಯ೦-” ಮೊದಲಾದ ಮಾತುಗಳಲ್ಲಿಯೂ ಹೊಳೆಯುತ್ತಿದೆ. ಗ್ರಂಥಕಾರನು ಹೀಗೆ ತನ್ನ ಹೊಲಬನ್ನೆ ವಿಸ್ತರಿಸುವ ಪದ್ಯಗಳೊಳಗೆ
ಹಿಂದಿನ ಪದ್ಯವೆ ಕಡೆಯದು. ಮುಂದಿನದೂ ಆ ಸಾಲಿ ಭ್ರಮ ನಿವೃತ್ತಿ
* ನಲ್ಲೆ ಸೇರಿದುದೆಂದು ಕಲವರು ಭ್ರಮೆಗೊಳ್ಳಬಹುದು. ಅದರಿಂದ, ಮುಂದಿನ ಪದ್ಯವನ್ನೂ ಭಾವಿಸಿರಿ:
ಪರಿವೃತ ನೃಪತುಂಗದೇವ ಮಾರ್ಗಾ೦ ! ತರಗತ ಬೇಧವಿಷಯಾನ ವಾತ್ರಂ 11 ಪರಮಗುಣಪರೀತ ಕಾವ್ಯರತ್ನಾ | ಕರದುರು ಪಾರಮನೆಯುಗುಂ ಮಹಾತ್ಮಂ ! ೨೩೦ H
ಈ - ಕವಿರಾಜಮಾರ್ಗ'ಕ್ಕೆ “ನೃಪತುಂಗದೇವ ಮಾರ್ಗ” ಎಂಬ ಹೆಸರೂ ಇದೆ. ನಾನಾ ಬಗೆಯ ಲಕ್ಷಣ ಭೇದಗಳಿಂದ ನಿಕಲ್ಲಾದಿಗಳಿಂದ ಸುತ್ತಿ ಕೊಂಡಿರುವ (ಪರಿವೃತವಾದ) ಕನ್ನಡ ಸಾಹಿತ್ಯ ಲಕ್ಷಣಸ್ವರೂಪದ ಬೋಧ ವಿಶೇಷವು 'ನೃಪತುಂಗದೇವ ಮಾರ್ಗ'ದ ಅಲ್ಲವೆ ಈ ಕವಿರಾಜ ಮಾರ್ಗದ ಒಳಗೆ ಅಡಕವಾಗಿದೆ. ಈ “ಬೋಧವಿಶೇಷ'ವೆಂಬುದೇ “ಯಾನಪಾತ್ರ ಅಥವಾ
-
೧೦೪ -
ಹಡಗು, ಈ ಯಾನಪಾತ್ರವನ್ನೇರಿ ಇದನ್ನು ನಡೆಯಿಸುವ ಮಹಾತ್ಮನು ಪರಮ ಗುಣಸ್ವರೂಪದ ಕಾವ್ಯ ಧರ್ಮಗಳಿಂದ ಕೂಡಿದ ಕಾವ್ಯರತ್ನಾಕರದ ಅಲ್ಲದೆ ಕಾವ್ಯವೆಂಬ ಸಾಗರದ ಸಾರವನ್ನೊಂದುವನು, ಗ್ರಂಥಕಾರನಾದ ತನ್ನ ಪರ ವಾದ ವೈಶಿಷ್ಟ್ಯಗಳನ್ನು ಸೂಚಿಸುವವುಗಳಲ್ಲಿ ಇದು ಕಡೆಯ ಪದ್ಯ. ಅದ ರಿಂದ, ಇಲ್ಲಿ ತೋರುವ 'ಮಹಾತ್ಮಂ' ಎಂಬ ಪದವು ಗ್ರಂಥಕಾರನನ್ನೆ ಸೂಚಿಸು ವುದಲ್ಲವೆ? ಹಾಗಿದ್ದರೆ ಅವನು ತನ್ನನ್ನೆ 'ಮಹಾತ್ಮ' ಎಂಬ ಪದದಿಂದ ಕರೆದು ಕೊಳ್ಳುವಷ್ಟು ಉದ್ದ ತನೆ? ಎಂದು ಕೇಳಬಹುದು.
ನಮ್ಮಣಿಕೆ ಹಾಗಿಲ್ಲ. ಗ್ರಂಥಕಾರನು ಉದ್ಧತ ವೃತ್ತಿಯವನೆಂಬುದಕ್ಕೆ ಗ್ರಂಥದೊಳಗೆ ಯಾವ ಆಧಾರವೂ ಇಲ್ಲ. ನಿಜವಾಗಿ ಆತನು ಮೇಲೆಗೇರಿ ದವನಾಗಿ ಸ್ವಾಭಿಮಾನಿಯೆಂದೆನಿಸಿದ್ದರೂ ವಿನಯಶಾಲಿ ಎಂಬುದಕ್ಕೆ ಗ್ರಂಥದು ದ್ದಕ್ಕೂ ನಿದರ್ಶನಗಳೊದಗುತ್ತಿವೆ. ಅದರಿಂದ, ಹಿಂದಿನ ಪದ್ಯದ ವರೆಗಿನವೇ ಗ್ರಂಥಕಾರನ ಪರಿಚಯವೆಸಗುವವುಗಳೆಂದು ನಿರ್ಧರಿಸತಕ್ಕುದು. ಈ ಪದ್ಯವು ಈ ಗ್ರಂಥವನ್ನೋದಿ ಲಕ್ಷಣ-ಲಕ್ಷ್ಮಗಳನ್ನು ಉಂಡರಗಿಸಿ ಮನಗೂಡಿಸುವ ಭಾವಿ ರಸವತ್ಕವಿಯನ್ನೇ “ಮಹಾತ್ಮಂ” ಎಂಬ ಪದದಿಂದ ಸೂಚಿಸುತ್ತಿದೆ. ಯಾಕೆಂದರೆ, ಕನ್ನಡ ರಾಜ್ಯದೊಳಗೆ ಆ ವರೆಗೆ ಸಾಗಿ ಬಂದ ಮಾರ್ಗಿಯ ಪದ್ಯ ಕಾವ್ಯ ದಲ್ಲಿ “ಕಾವ್ಯರತ್ನಾಕರ ದುರುಪಾರಮ”ನೈದಿದ ಮಹಾತ್ಮನನ್ನಿಸಿದಾತನು ಆಗಿಲ್ಲ ವೆಂದೇ ಆತನ ಅಭಿಪ್ರಾಯ. ಈ ವಿಷಯವನ್ನು ಮುಂದೆ ಸಾಧಾರವಾಗಿ ಸೂಚಿಸುತ್ತೇವೆ.
ಜಯ - ಜಯಾ - ಶ್ರೀ ವಿಜಯ ಎಂಬವುಗಳು ಗ್ರಂಥಕಾರನ ಒಂದೇ ಹೆಸರಿನ ರೂಪ ಭೇದಗಳಾದರೆ, ಆತನ ಪ್ರಮುಖ ಬಿರುದುಗಳು ಅಥವಾ
ಉದ್ಯೋಗ ಸೂಚಕ ನಾಮಗಳು ಕೆಲವಿದ್ದಂತೆ ತಿಳಿದು ಗ್ರಂಥಕಾರನ
ಬರುತ್ತಿವೆ. 'ಸಾಮಪ' ಎಂಬುದು ಅವುಗಳೊಳಗೊಂದು. ಬಿರುದುಗಳು
ಇದಲ್ಲದೆ ವಾಗಧಿಪ' ಎಂಬ ಇನ್ನೊಂದು ವಿಶಿಷ್ಟವಾದ ಬಿರುದೂ ಆತನಿಗಿದ್ದಂತೆ ಎರಡನೆ ಪರಿಚ್ಛೇದದ ಕಡೆಯ ಪದ್ಯಗಳೊಳಗೊಂದ ರಲ್ಲಿ ವ್ಯಕ್ತವಾಗುವುದು:
ಬುಧಗುಣ ಗಣನಾತೀತಾಂತರಂ ಶಬ್ದ ತತ್ಕಾಲ ಬುಧಿ ವಿವಿಧ ವಿತಾನಾಲಂಕ್ರಿಯಾ ವೀಥಿ (ಚಿ) ಮಾಲಂ |
-
೧೨೫
-
ವಿಧುರಗತಿವಿಲೋಡ್ಕಂ ತಳ್ಳು ನಿಲ್ಲಪ್ಪುದಾವಾ | ಗಧಿಪವಚನಮಾಲಾ ಪಾವನೀಯಂ ಗಭೀರ೦] 1 ೧೫೨ ||
“ಇದು ನೀತಿನಿರಂತರ ಕ್ರನಂ” ಎಂದು ಹಿಂದಿನ ಆಶ್ವಾಸಾಂತ್ಯದಲ್ಲಿ ಗ್ರಂಥಕಾರನು ತನ್ನ ಶೈಲಿಯ ಬಾಹ್ಯ ಸ್ವರೂಪವನ್ನು ವಿಸ್ತರಿಸಿದ್ದಾನಷ್ಟೆ. ಅದರಂತೆ ಇಲ್ಲಿ ಶೈಲಿಯ ಆಂತರಂಗಿಕ ಸ್ವರೂಪವನ್ನು ಚಿತ್ರಿಸಿದ್ದಾನೆ ಎಂಬಲ್ಲಿ ಸಂಶಯವಿಲ್ಲ. ಇಲ್ಲಿ ತೋರುವ “ವಾಗಧಿಪವಚನಮಾಲಾ . . . .” ಎನ್ನು ವುದನ್ನು ವಿಶೇಷವಾಗಿ ಪರಾಂಬರಿಸಿರಿ. ಈ ವಾಗಧಿಪ' ಎಂಬುದು ಗ್ರಂಥ ಕಾರನ ಬಿರುದು, ನೃಪತುಂಗನ ವಿದ್ವನ್ ಮಹಾಸಭೆಯಲ್ಲಿ ಈತನು ನಾಯಕ ನಾಗಿದ್ದುದರಿಂದಲೆ ಈ ಬಿರುದು ಒದಗಿರಬೇಕು ವಾಕೃತಿ'ಯೇ ಮೊದಲಾದ ಇದೆ ಅರ್ಥದ ಬಿರುದುಗಳುಳ್ಳ, ಹಿಂದಿನ ಹಲಮಂದಿ ಮಹಾ ವಿದ್ಯಾಂಸರು ಆಯಾ ರಾಜ ಸಭೆಗಳಲ್ಲಿ ವಾಜಾರ್ಗ ದರ್ಶಕರಾಗಿದ್ದಂತೆ ತಿಳಿದುಬರುತ್ತಿದೆ. ಈತನು ನೃಪತುಂಗ ಮಹಾಸಭೆಯಲ್ಲಿ ಅಂಥ ನಾಯಕನಾಗಿದ್ದುದರಿಂದಲೇ ಈ ಬಿರುದು ಚಕ್ರವರ್ತಿಯಿಂದ ಒ ದ ಗಿ ದು ದಾ ಗಿ ರ ಬೇಕು. ಈ ಶ್ಲೋಕದ ತಾತ್ಪರ್ಯವನ್ನು ಸರಿಯಾಗಿ ಭಾವಿಸಿ, ಹಿಂದೆ ದೃಷ್ಟಾಂತಿಸಿದ ಹಲವು ಪದ್ಯಾರ್ಥ ಗಳನ್ನು ಇದರೊಡನೆ ಸಾಲುಗೊಳಿಸಿ ನೋಡಿದಲ್ಲಿ ಈತನ ಸಾರ್ಥಕವಾದ “ವಾಗಧಿಪತ್ಯವು ಹೊಳೆಯುತ್ತಿದೆ. ಇದರಿಂದ ಗ್ರಂಥಕಾರನಿಗೆ (ಸಾಮಪ ನೀತಿನಿರಂತರ - ವಾಗಧಿಪ' ಎಂಬ ಬಿರುದುಗಳು ಇದ್ದುವೆಂಬುದು ನಿಶ್ಚಿತ
ನಾಗುತ್ತಿದೆ.
ಗ್ರಂಥಕಾರನು “ಪಾರ್ಥಿವಲೋಕ” ಅಥವಾ ಕ್ಷತ್ರಿಯ ಸಮಾಜಕ್ಕೆ ಸೇರಿದವನು ಎಂಬುದು ಹಿಂದಿನ ಹೇಳಿಕೆಯಲ್ಲಿ ಗೊತ್ತಾಗಿದೆ. ಅವನು ಕ್ರಿ.
ಯನು ಮಾತ್ರವೇ ಅಲ್ಲ, ನೃಪತುಂಗನ ರಾಜ್ಯಭಾರ ಗ್ರಂಥಕಾರನ ವನ್ನು ನೆಲೆಗೊಳಿಸುವುದರಲ್ಲಿ ಪ್ರಯತ್ನಿಸಿ ಕೃತಾರ್ಥ ಹುಟ್ಟೂರು ಒ೦ಕುಂದ
ನಾದ ಮಹಾ ವ್ಯಕ್ತಿ ಎಂಬುದನ್ನೂ ಆಧಾರಪೂರ್ವಕ ವಿರಬಹುದೆ?
ವಾಗಿ ಬಲು ಮಟ್ಟಿಗೆ ನಿರ್ಧರಿಸಿದ್ದೇವೆ. ಆತನ ಹುಟ್ಟೂರು ಯಾವುದಾಗಿರಬಹುದು ಎಂಬುದನ್ನು ನಿರ್ಧರಿಸುವಷ್ಟು ಪೂರ್ಣಾ ಧಾರ ದೊರಕದಿದ್ದರೂ, ಅದರ ಹೊಲಬಾದರೂ ಆಗಬಹುದೋ ನೋಡುವ: ಪ್ರಥಮ ಪರಿಚ್ಛೇದದ ಆರನೆ ಪದ್ಯದಲ್ಲಿ “ಏಕೆ ವಿವೇಕ ಬೃಹಸ್ಪತಿಯ ನಗರಮಂ ಪುಗುತರ್ಪಂ” ಎಂದು ಈತನಾಡುವುದು, ಸಾಮಾನ್ಯವಾಗಿ ವಿದ್ವದ್ವರ್ಗಕ್ಕೆ
–
೧೦೬
-
ಸಂಬಂಧಿಸಿದಂತೆ ಭಾಸವಾಗುತ್ತಿದೆ. ಆದರೂ ಇದು ಏಕ ವಚನದಲ್ಲಿದ್ದು ಮುಂದೆ ಅಲ್ಲಲ್ಲಿ ತೋರುವ (ಅನಅವಮಾಚಿಯೊಳೆನ್ನಾ - ಸೇನು ದಾಹರಣಂಗಳಂ' ಮೊದಲಾಗಿ ತನ್ನನ್ನೇ ಸೂಚಿಸುವ ಉತ್ತಮ ಪುರುಷನಾನು ಪದದೊಡನೆಯೇ ಸಂದುಗೂಡಿ ಕಾಣುತ್ತಿದೆ. ಮಾತ್ರವಲ್ಲ, ಇದೇ ಮುಂದೆ ಮೂರನೇ ಪರಿಚ್ಛೇದಾಂತದಲ್ಲಿ ತನ್ನನ್ನು ಚಿತ್ರಿಸುವ “ಮಹಾ ನೃಪತುಂಗ ಸಭಾ ಸದಂ' ಮೊದಲಾದ ಏಕ ವಚನದ ಆಯಾ ಪದಗಳಲ್ಲಿಯೂ ಬೆಸುಗೆನಡೆಯು ತಿದೆ. ಈತನು ಕನ್ನಡ ನಾಡಿನವನು ಮಾತ್ರವೇ ಅಲ್ಲ, ಜನ್ಮತಃ ಕನ್ನಡಿಗನೇ ಇದ್ದಿರಬೇಕೆಂಬಲ್ಲಿ ಸಂಶಯವಿಲ್ಲ. ಇರಲಿ, ಈ ತನು ವಿವೇಕ ಬೃಹಸ್ಪತಿ'ಯ ನಗರವಾದ ಮಾನ್ಯ ಶೇಟ ರಾಜಧಾನಿಯನ್ನು ಬಹುಶಃ ವಿಶಿಷ್ಠಾಧಿಕಾರಿಯಾಗಿ ಮಾತ್ರ ಮೊದಲು ಪ್ರವೇಶಿಸಿದ ಸಂಗತಿಯೇ ಹಿಂದಿನ ಪದ್ಯಭಾಗದಲ್ಲಿ ಕಾಣುವು ದೆಂದು ನನ್ನ ಭಾವನೆ. ಅದಕ್ಕಿಂತಲೂ ಹಿಂದಿನ ಪದ್ಯವು “ಅತಿಶಯಧವಳನ ಸಭಾಸದರ್ ” ತನ್ನನ್ನು ಮನ್ನಿಸುವರ್ ” ಎಂದು ಕಾಣುವುದರಿಂದ ತಾನು ಆ ವಿವೇಕ ಬೃಹಸ್ಪತಿಯ ನಗರದ ಮಹಾಸಭೆಯಲ್ಲಿ ವಾಗಧಿಪನಾಗಿ ಸಭಾಸದ ರಿಂದ ಮನ್ನಣೆಗೊಂಡುದನ್ನೇ ಅಲ್ಲಿ ಸೂಚಿಸುವುದಾಗಿರಬೇಕು.
ಕಾವೇರಿಯಿಂದ ಆ ಗೋದಾವರಿವರ ಇರ್ದನಾಡು' ಕನ್ನಡದೊಳಗೆ ಉದಾವಿಸಿದ ಜನಪದಂ” ಎಂದು ಮೂವತ್ತಾರನೆಯ ಪದ್ಯದಲ್ಲಿ ಸೂಚಿಸಿ ತನ್ಮಧ್ಯ ಗತವಾದ ತಿರುಳುಗನ್ನಡ ಪ್ರದೇಶವನ್ನು ಮತ್ತಿನ ಈ ಪದ್ಯದಿಂದ ವಿಸ್ತರಿಸುತ್ತಾನೆ:
ಅದಳಗಂ ಕಿಸುವೊಲೀಲಾ ವಿದಿತಮಹಾ ಕೊಪಣ ನಗರದಾ ಪುಲಿಗೆ ಆಯಾ : ಸದಭಿಸ್ತುತಮತ್ತೊಂಕು ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್, ೩೬ il (ಪರಿ. ೧)
ಆ ಕನ್ನಡ ಜನಪದದೊಳಗಿನದಾದ, ಕಿಸುವೊಲು ಕೊಪಣನಗರ ವುರಿ (ಲಿ) ಗೆರೆ ಒಂಕುಂದ (ಒಕ್ಕುಂದ) ಎಂಬವುಗಳ ನಡುವಣ ನಾಡೇ ಕನ್ನಡದ ತಿರುಳ್ಳಾಡು; ಎಂದರೆ ಸ್ನಾನದಿಂದ ಮಧ್ಯಗತವಾದುದಷ್ಟೇ ಅಲ್ಲ, ಅಚ್ಚಗನ್ನಡದ ಸಂಸ್ಕೃತಿ ಭಾಷಾ ಶೈಲಿಗಳಲ್ಲಿ ಕನ್ನಡದ ತಿರುಳಾಗಿರುವ ನಾಡದು ಎಂದು ತಾತ್ಪರ್ಯ. ಈ ಭಾವನೆ ಮನ ಪದ್ಯದಲ್ಲಿಯೂ ಸೂಚಿತವಾಗಿದೆ
ಪದನ ಆದು ನುಡಿಯಲುಂ ನುಡಿ ದುದನರಿದಾರಯಲುಮಾರ್ಪರಾನಾಡವರ್ಗಳ್ !
ಚದುರರ್ ನಿಜದಿಂಕುಚಿತೋ ದದೆಯುಂ ಕಾವ್ಯಪ್ರಯೋಗಪರಿಣತ ಮತಿಗಳ { ೩೮ !
ಆ ನಾಡವರ್ಗಳ್' ಎಂದುದು ಆ ' . . . . ನಡುವಣ ನಾಡವರನ್ನೇ | ಅಲ್ಲದೆ ಅಖಂಡವಾದ ಕನ್ನಡ ನಾಡವರನ್ನಲ್ಲ. ಆ ತಿರುಳುಗನ್ನಡಕ್ಕಿಂತ ತೆಂಕಣ ಕಾವೇರಿಯ ವರೆಗಿನ ಕನ್ನಡ ಸಾಹಿತ್ಯ ಶೈಲಿಯನ್ನೆ ದಕ್ಷಿಣ ಮಾರ್ಗ' ಎಂದೂ, . ಅದಕ್ಕಿಂತ ಬಡಗಣ ಗೋದಾವರಿ ವರೆಗಿನದನ್ನೇ ( ಉತ್ತರಮಾರ್ಗ' ಎಂದೂ ಮುಂದೆ ನಿರ್ದೆಶಿಸಿ ಅವುಗಳ ವಿಶಿಷ್ಟ ಲಕ್ಷಣ-ಲಕ್ಷ್ಮಗಳನ್ನೂ ವಿಸ್ತರಿಸುತ್ತಾನೆ. ಮಾತ್ರವಲ್ಲ; ಆ ಭಿನ್ನಭಿನ್ನ ಪ್ರಾಂತಗಳ ಕನ್ನಡಸಾಹಿತ್ಯ ಭಾಷೆ ದೋಷಯುತ ವಾಗಿರುವುದರಿಂದ ( ಕನ್ನಡ'ವಾಗಿ ಅಲ್ಲ, ಕನ್ನಡಗಳಾಗಿ ತೋರುತ್ತಿವೆ ಎಂಬು ದನ್ನು (ಕನ್ನಡಂಗಳೆಂದುಂ 1 ವಾಸುಗಿಯುಮ ಅಳಿಯ ಲಾಗಿದೆ ಬೇಸ ಆಗುಂ ದೇಸಿ ದೇಅಬೇ ಅಪ್ಪುದಂ ' (೪೬-ಪರಿ. ೧) ಎನ್ನಾತ್ತಾನೆ. ಇದ ರಿಂದ ಆ ತಿರುಳುಗನ್ನಡನಾಡಿನ ಭಾಷಾರೂಪವು ಸುಸಂಸ್ಕೃತವಾಗಿ ಅಭಿನ್ನ ವಾಗಿತ್ತು ಎಂದು ಭಾಸವಾಗುವುದು.
ಇಷ್ಟೆಲ್ಲ ಹೇಳಿದುದೇಕೆಂದರೆ, ಬಹುಶಃ ಗ್ರಂಥಕಾರನು ಆ ತಿರುಳ್ಗನ್ನಡ ಪ್ರಾಂತದೊಳಗಿನವನೇ ಆಗಿರಬೇಕು ಎಂಬುದನ್ನು ಹೊಳೆಯಿಸಲಿಕ್ಕಾಗಿ, ತನ್ನ ದಾದ ಈ ಕವಿರಾಜ ಮಾರ್ಗದ ಶೈಲಿಯನ್ನಾತನೇ ವಿಸ್ತರಿಸುವುದಕ್ಕಿಸಿರಿ:
ನುಡಿಗಳೊಡಂಬಡಲ್ಪಗೆದ ವೊಗೆಯಂ ಮಿಗಲೀಯದೊಂದೆ ನಾ ! ಣುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ : ತೊಡರದೆ ಸಕ್ಕದಂಗಳ ಪದಂ ಸವಣಾಗಿರೆ ಮೆಲ್ಪುವೆತ್ತು ದಾಂ | ಗುಡಿವಿಡುವಂತೆ ಸೀಳು ನಿಲೆಸೇದು ನೀತಿನಿರಂತರಕ್ರಮಂ Si
- (ಪರಿ. ೧) ti ೧೮೮ ! ಈ ಪದ್ಯಾರ್ಥವೇನೆ ಲಲಿತವಾಗಿದೆ. ಆದರೂ ಇದರ ತಾತ್ಪರ್ಯ ವನ್ನು ಇಂದಿನ ಹೊಸಗನ್ನಡದ ಬಿಡುನುಡಿಗಳಲ್ಲಿ ಸೂಚಿಸಿದರೆ ಸಾಮಾನ್ಯರಾದ ವಾಚಕರಿಗೂ ಮುಂದಾಗಲು ಅನುಕೂಲವಾದೀತೆಂದು ನೆರೆನಂಬಿ ಚಿತ್ರಿಸು ತೇವೆ: --
ಹಲಮಂದಿ ಕವಿಗಳೆಂಬವರು, ತಾವು ಮುಂದೆ ಬಣ್ಣ ಸಲಿಕ್ಕಿರುವ ವಿಷಯ ಗಳನ್ನು ಭಾವಿಸಿ ಮುಂದಾಗಿಸಿಕೊಂಡ ಮೇಲೆ ಅವುಗಳ ಮೆಯಾಗಿರಬೇಕಾದ ನುಡಿಯನ್ನೂ ನುಡಿಗಟ್ಟುಗಳನ್ನ ಹುಡುಕುತ್ತಾರೆ. ಹುಡುಕಿ ಸರಿಯಾಗಿ .
-
೧೦೮
-
ದೊರಕದಲ್ಲಿ, ಪದಗಳನ್ನು ಸೆಳೆದೂಯು , ಅವುಗಳಲ್ಲಿ ವಿಷಯಗಳನ್ನು ತುರುಕಿ ನುಲಿದು ಹೊಲಿದು ಹೇಗಾದರೂ ಕಾವ್ಯವನ್ನು ರೂಪಿಸುತ್ತಾರೆ. ಈ ನೀತಿ ನಿರಂತರನೆನ್ನಿಸಿದ ಗ್ರಂಥಕಾರನ ಶೈಲಿ ಅಂಥದಲ್ಲ. ವಿಷಯವನ್ನು ಭಾವಿಸಿ ದಾಗಲೆ ಅದರೊಡನೆ ಪಡುವ – ಎಂದರೆ ಆ ವಿಷಯವನ್ನು ತುಂಬಿಕೊಂಡು ಮಿರುಗಬೇಕಾದ-ನುಡಿಗಳು ಸ್ವಾಭಾವಿಕವಾಗಿ ಮೂಡುತ್ತಿವೆ. ಭಾವನೆಯನ್ನು ವಿರಲಿಕ್ಕೆಡೆಗೊಡದೆ ಬೆಡಗನ್ನೊಂದಿದ ನಾಣ್ಣುಡಿಗಳು ಅಲ್ಲಲ್ಲಿ ತಾವಾಗಿ ಹೆಣೆ ಯುತ್ತಿವೆ. ಇವನ ಕನ್ನಡದ ಮೆದುನುಡಿಗಳಲ್ಲಿ ಅನ್ನವನ್ನೋಂದಿದ ಕಲ್ಲಹರಳಿ ನಂತಿರುವ ವಿಕಟಾಕ್ಷರಗಳು ತೊಡಕುವುದೇ ಇಲ್ಲ. ಸಂಸ್ಕೃತ ಪದಗಳಾದರೂ ಹದಮಿರಿ ನುಸುಳುವುದಿಲ್ಲ. ಹೀಗೆ ಮೆಲ್ಪುವೆತ್ತು ಅಥವಾ ಮೃದುಬಂಧ' ನನ್ನೊಂದಿ, ಹೂವಿನ ಬಳ್ಳಿ ಹಬ್ಬಿ ಗೊಂಚಲಿಡುವಂತೆ ಬಣ್ಣಿಸುವ ಈ ಶೈಲಿಯೇ ನೀತಿನಿರಂತರನ ಶೈಲಿ.”
ಇದರಿಂದ ಇದು ಮೃದುಬಂಧ' ಎಂಬುದು ಸಿದ್ದವಾಗುತ್ತಿದೆ. ಈ ಮೃದುಬಂಧವೇ ಮೊದಲಾದ ನಾನಾ ಬಂಧಗಳ ಸ್ವರೂಪಗಳನ್ನೆಲ್ಲ ಮುಂದಿನ ಭಾಗದಲ್ಲಿ ವಿಸ್ತರಿಸಲಿಕ್ಕಿರುತ್ತೇವೆ. ಈ ಪದ್ಯದ ಮತ್ತು ಈ ವರೆಗೆ ದೃಷ್ಟಾಂತಿ ಸಿದ ಈ ಗ್ರಂಥಗತಗಳಾದ ಬೇರೆ ಸದ್ಯಗಳ ಸ್ವರೂಪಗಳನ್ನು ಪರಾಂಬರಿಸಿದಲ್ಲಿ ಗ್ರಂಥಕಾರನ ಶೈಲಿ ಈ ಲಕ್ಷಣವನ್ನನುಸರಿಸಿರುವುದು ಸ್ಪುಟವಾಗುತ್ತಿದೆ. ಅಂತ್ಯದ ಕೆಲಕೆಲವು ಪದ್ಯಗಳಲ್ಲಿ ಸಂಸ್ಕೃತ ಪದಗಳೇ ಹೆಚ್ಚಾಗಿರುವುದಾಗಿ ಕೆಲ ವರು ಆಕ್ಷೇಪಿಸಬಹುದು. ಅವನಾಡಿದುದು ತನ್ನ ಶೈಲಿಯಲ್ಲಿ ಸಂಸ್ಕೃತ ಪದ ಗಳು ಕಡಿಮೆಯಾಗಿ ಅಥವಾ ಹೆಚ್ಚಾಗಿ ಇದ್ದಾನೆ ಎಂದಲ್ಲ; . . . . ಸವ ಣಾಗಿರೆ” ಎಂದು. ಆಕ್ಷೇಪಿಸುವ ಆ ಪದ್ಯಗಳ ಸಂಸ್ಕೃತ ಪದಗಳೊಳಗಿನ ಒಂದೇ ಒಂದು ಪದವನ್ನು ಕನ್ನಡವಾಗಿ ಮಾರ್ಪಡಿಸಿದಲ್ಲಿ ಆ ರಚನೆಯೇ ಗುರಿಗೆಟ್ಟು ಹೋದೀತು ಎಂಬುದನ್ನು ಮರೆಯಲಾಗದು. ಆ ಸಂದರ್ಭಗಳನ್ನೊಂದಿದ
ಆ “ಸಕ್ಕದಂಗಳ ಪದಂ ಸವಣಾಗಿಯೇ ಇದ್ದಾನೆ ಎಂದು ನಮಗಂತೂ ಮನಃ ಪೂರ್ತಿಯಾಗಿ ತೋರುತ್ತಿದೆ. ಈ ಮೃದುಬಂಧವೆಂಬುದು ತಿರುಳನ್ನಡ ಶೈಲಿಗೇ ಮೀಸಲಾದುದು. ಆ ಸಂಗತಿಯನ್ನು, ಸುಮಾರು ನೂರು ವರ್ಷಕ್ಕೆ ಮನವ ನಾದ ಮಹಾಕವಿ ಪಂಪನೂ “ಪುಲಿಗೆರೆಯ ತಿರುಳ ಕನ್ನಡದೊಳ್ – ” ತನ್ನ ಗ್ರಂಥವನ್ನು ಬರೆವಲ್ಲಿ ಈ ಗ್ರಂಥಕಾರನು ಲಕ್ಷಿಸಿದ ರೀತಿಯಲ್ಲೇ ರೂಪಾಂತರ -ದಿಂದ ಒಪ್ಪಿಕೊಂಡಿದ್ದಾನೆ. ಆದರೆ, ಈ ಗ್ರಂಥಕಾರನು ಪಂಪನಂತೆ ತಾನು
-
೧೦೯
-
ನಡುವಣ ನಾಡಿನ ಯಾವ ತಿರುಳನ್ನಡದ ಭಾಗಕ್ಕೆ ಸೇರಿದವನೆಂಬುದನ್ನು ಸೂಚಿ ಸಿಲ್ಲ. ಮೇಲಿನ ಪದ್ಯದಲ್ಲಿ ತೋರುವ “ಕೊಪಣ ನಗರ” ಎಂದರೆ ಅಂದಿನ ಮಾನ್ಯಖೇಟ ರಾಜಧಾನಿಗೆ ಹತ್ತಿರದಲ್ಲಿದ್ದ, ಅಥವಾ ಈಗಿನ ಹೈದರಾಬಾದಿನ ಒಳಗಿನ ಕೊಪ್ಪಳ ಎಂಬುದು ಗೊತ್ತಾಗಿದೆ. (ಒಂಕುಂದ' ಎಂಬುದು ಈಗಿನ ಬೆಳ್ಳಾವಿನ ಪ್ರಾಂತದೊಳಗೆ ಇಂದಿಗೂ (ಒಕ್ಕುಂದ' ಎನ್ನುವ ಹೆಸರಿನಿಂದಲೆ ಇರುವ ನಾಡು. ಮೇಲಿನ ಪದ್ಯದೊಳಗಿನ ನಾಲ್ಕು ತಿರುಳನ್ನಡ ನಾಡುಗ ಳೊಳಗಿನ “ಕಿಸುವೊಲು-ಪುಲಿಗೆ ' ಗಳನ್ನು ಗ್ರಂಥಕಾರನು ಯಾವ ವಿಶಿಷ್ಟ ವಿಶೇಷಣಗಳೂ ಇಲ್ಲದೆ ಸೂಚಿಸಿದುದಕ್ಷಿಸಿರಿ, ವಿದಿತ ಮಹಾ....'ಎಂದೂ “ಸದಭಿಸುತ” ಎಂದೂ ವಿಶಿಷ್ಟ ವಿಶೇಷಣ ಯುತವಾಗಿ ನಿರ್ದೆಶಿಸಿದುದು ಕ್ರಮ ವಾಗಿ ಕೊಪಣನಗರ - ಒಂಕುಂದಗಳನ್ನೇ. ರಾಜಧಾಸಿಗೆ ಹತ್ತಿರವಾದುದರಿಂದ ಕೊಪಣ ನಗರವು ಬಾ ಹ್ಯ ರಚನೆ ಯ ಮಹಿಮೆಯಿಂದೊಡಗೂಡಿ ಇದ್ದಿರ ಬಹುದು. ಆದರೆ ಒಂಕುಂದ'ದ ವಿಶೇಷಣವಸೀಕ್ಷಿಸಿರಿ. “ಸದಭಿಸ್ತು ತಮಪ್ಪ' ಎಂದರೆ ಸಜ್ಜನರಾದ ವಿದ್ಯಾಂಸರಿಂದ ಹೊಗಳಲ್ಪಟ್ಟ, ಎಂದರ್ಥ. ಇದೇ ಪದವು ಈ ಗ್ರಂಥದೊಳಗೆ ಭಿನ್ನ ಸಂದರ್ಭದಲ್ಲಿಯೂ ಕೆಲವೆಡೆ ಬಂದಿರುವು ದನ್ನು ನೋಡಿರಿ: - (೧) ಸದಭಿಮತವಪ್ಪ ಕಾವ್ಯದ ಪದವಿಧಿ .... (ಪರಿ. ೧. ಪದ್ಯ ೮೩) - (೨) ಸದಭಿಮತವಾಗಿನಿಲೆ ಸೇಲ್ಕದು ಮಾರ್ಗ೦ (ಪು. ೨ - ಪ. ೧೧.) - (೩) ಸದಭಿಕಮನೀಯ ಗುಣಮಸ್ತುದು ನಿಯತಕಾಂತಂ (ಸರಿ. ೨-ಪ. ೬೬) - (೪) ಸರಹಿತ ಪ್ರಯೋಗಾನುಗತಂ..... (ಸಂ. ೨ ಪ. ೮೬) (೫) ಸರಹಿತಗುಣನದ೦ನಯವಿದನಪ್ರಂ........ (ಪರಿ. ೩ ಪ. ೧೪೬). ಇವೆಲ್ಲವೂ “ಸಜ್ಜನರೂ ಸಹೃದಯರೂ ಆದ ವಿದ್ವಾಂಸರಿಗೆ ಅಭಿ ಮತವಾದ ಎಂಬ ಅರ್ಥವುಳ್ಳವು. ಅದಕ್ಕೆ ಬದಲಾಗಿ 'ಸತ್' ಪದಕ್ಕೆ 'ಬರಿಯ ಸಾಧು' ಎಂಬ ಅರ್ಥವಷ್ಟನ್ನೆ ಕಲ್ಪಿಸಬಾರದು. ಸಜ್ಜನತೆಯೊಡನೆ ರಸಿಕತೆಯ ಬೆರಸದಿದ್ದಾತನು ಕಾವ್ಯಲಕ್ಷಣಾದಿಗಳನ್ನು ಹೇಗೆ ಸೇವಿಸುವನು. ಮೈಗೂಡಿ ಸುವನು ? ಇವುಗಳಂತೆ (ಸದಭಿಸ್ತು ತಮಪ್ಪ ಒಂಕುಂದ' ಎಂದರೆ ಸಜ್ಜನರಾದ ಸಹೃದಯ ವಿದ್ವಾಂಸರಿಂದ ಅಲಂಕೃತವಾದ ಒಂಕುಂದ” ಎಂದೇ ತಾತ್ವರ್ಯ. ಈ ವಿಶಿಷ್ಟವಿಶೇಷಣವು ಬೇರೆ ಮೂರು ಭಾಗಗಳಿಗೂ ತೋರದೆ ಒಂಕುಂದ ಮಾತ್ರಕ್ಕೆ ಮೀಸಲಾಗಿ ತೋರುವುದರಿಂದ ಗ್ರಂಥಕಾರನು ತನ್ನ ಹುಟ್ಟೂರಿನ ಮಹಿಮೆಯನ್ನೆ ಆ ಸದ್ಯದಿಂದ ಬೆರಳೆತ್ತಿ ಸೂಚಿಸಿದಂತೆ ಭಾವಿಸುತ್ತೇವೆ.
ಛಂದೋರಚನೆಗಾಗಿ ಕೆಲವೆಡೆಯಲ್ಲಿ ಹೆಚ್ಚಿನ ವಿಶೇಷಣಗಳನ್ನು ಸೇರಿಸ ಬೇಕಾಗುತ್ತಿದೆ. ಕೆಲವೆಡೆ ಯಲ್ಲಿ ಬೇಕಾಗಿದ್ದರೂ ಕಳೆಯಬೇಕಾಗುತ್ತಿದೆ. ಹೀಗಿರುವಲ್ಲಿ ಒಂಕುಂದ'ದ ಆ “ಸದಭಿಸ್ತು ತಮಪ್ಪ' ಎಂಬ ವಿಶೇಷಣಕ್ಕೆ ಇಷ್ಟೊಂದು ಅರ್ಥವನ್ನು ಕಟ್ಟಿಕೊಂಡು ಎಳೆಯಬಹುದೆ? ಎಂದು ಆಕ್ಷೇಪಿಸು ವವರೂ ಇರಬಹುದು. ಇದಕ್ಕೆ ನಮ್ಮದು ಇಷ್ಟೇ ಉತ್ತರ. ಈಗ ಬಹುಶಃ ಪ್ರಪಂಚಾವಸ್ಥೆಗನುವಾಗಿ ನಮ್ಮ ಕನ್ನಡಿಗರಲ್ಲಿಯೂ ಅಭಿಮಾನವೆಂಬುದು ಸಂಕುಚಿತವಾಗಿ ಹರಿವುದು ಅಲ್ಲಲ್ಲಿ ಹೊಳೆಯುತ್ತಿದೆ. ಮೇಲಿಂದ ಮೇಲೆ “ನಮ್ಮ ಕನ್ನಡ ನಾಡು” ಎಂಬ ವಿಶಾಲವಾದ ಪರದೆಯನ್ನು ಹೊದೆಯಿಸಿದರೂ ಒಳಗಿಂದೊಳಗೆ ಚಿಕ್ಕ ಚಿಕ್ಕ ಹರುಕು ಹೊಲಸು ಬಟ್ಟೆಗಳನ್ನೇ ಮುಸುಕಿ ಕೊಳ್ಳುವಂತೆ, 'ತಮ್ಮ ಸೀಮೆ - ತಮ್ಮ ಹಳ್ಳಿ - ತಮ್ಮ ಮನೆ” ಎಂಬ ಅಹಂ ಮಮತೆಗೇ ಗುರಿಯಾಗುತ್ತಿರುವುದು, ಹಲಮಂದಿ ಮುಂದಾಳುಗಳೆಂಬವರ ಲ್ಲಿಯೂ ಹೊಳೆಯುತ್ತಿದೆ. ಆ ಬಳಕೆಯಿಂದಲೇ ಪ್ರಕೃತ ಅಪ್ರಸಿದ್ದವಾಗಿಬಿಟ್ಟ ತಮೂರಿಗೆ ಬಲು ದೂರವಾದ ಯಾವುದಾದರೊಂದು ಚಿಕ್ಕೂರು, ಹಿಂದಣ ಮಹಾ ಪ್ರಸಿದ್ದಿಗೊಂಡ ವ್ಯಕ್ತಿಯೊಂದಕ್ಕೆ ಹುಟ್ಟೂರಾಗಿತ್ತು ಎಂದು ಸೂಚಿಸಿದ ಕೂಡಲೆ ಕೆಲವರಿಗೆ ತಲೆ ನೋವಾಗುವುದಿದೆ. ನಮಗೂ ಈ ಒಂಕುಂದಕ್ಕೂ ಬರಿಯ ಕನ್ನಡದ ಸಂಬಂಧವಲ್ಲದೆ ಬೇರೇನೂ ಇಲ್ಲ. ಅದೊಂದು ಭಾವನಾತ್ಮಕ ವಾದ ಆಧಾರ ಹೊಳೆದುದನ್ನಷ್ಟೇ ಹಾಗೆ ಚಿತ್ರಿಸಿದ್ದೇವೆ. ಈ ಗ್ರಂಥಕಾರ ನೆಂದರೆ ಛಂದಸ್ಸಿನ ಕೂಟಕ್ಕಾಗಿ ಹಾಗೆಲ್ಲ ಅನಾವಶ್ಯಕ ಪದಗಳನ್ನು ಎತ್ತಿ ಕಟ್ಟು ವವನಲ್ಲ ಎಂಬುದು ಆತನ ಶೈಲಿಯನ್ನು ವಿಸ್ತರಿಸಿದ ಹಿಂದಿನ ಪದ್ಯದಿಂದಲೇ ವಿದಿತವಾಗುತ್ತಿದೆ. ಬೇಕಾದರೆ ಹಿಂದಿನ ನುಡಿಗಳೊಡಂಬಡಲ್ ಬಗೆದ ವೊಲ್' ಎಂಬ ಪದ್ಯವನ್ನೊಮ್ಮೆ ಭಾವಿಸಿರಿ, ನುಡಿಗಳು ಆತನ ಬಗೆಯ ಕೈಯಾಗಿ ಮೈಯಾಗಿ ಬೇಕಾದಂತೆ ಚಿಗುರುತ್ತಿದ್ದು ವು. ಇದಕ್ಕಾಗಿ ಆತನು ಬಗೆಯನ್ನು ಬಾಗಿಸುವ ಕೈಯನ್ನು ಬಳುಕಿಸುವ ಕವಿನಾಮಧೇಯನಾಗಿದ್ದಿಲ್ಲ. ಈ ಮಾತು ಸಾಲದಿದ್ದರೆ ಸುಸ್ವಷ್ಟವಾದ ಇನ್ನೊಂದು ಪದ್ಯವನ್ನು ಅವಗಾಹಿಸಿರಿ:
ಇಲ್ಲಿಗಿದು ತಕ್ಕು ದಿಲ್ಲಿಗೆ ಪೊಲ್ಲದಿದೆಂದಅದು ಸಮಜ ಬಲ್ಲಂತೆಲ್ಲಂ it ನೆಲ್ಲುಂ ಮೊಸರುಂ ಗುಡಿದಂ ತಲ್ಲದೆ ತಲ್ಲಣಿಸದಲಸದಿಡು ಮೃದುಪದನಂ 1 ೪ if (ಪರಿ, ೨)
ಇತರರಿಗೆ ಹೀಗೆ ಬೋಧಿಸಿದಾತನು ತನ್ನ ಕಾವ್ಯದಲ್ಲಿ ಅನಾವಶ್ಯಕ ಪದ .ಗಳನ್ನು ಪ್ರಯೋಗಿಸುವನೆ? ಕಣ್ಣು ಮುಚ್ಚಿ “ನೆಲ್ಲುಂ ಮೊಸರುಂ ಗುಡಿ'ದಾನೆ? ಇದರಿಂದ ಬಹುಶಃ ಆತನ ಹುಟ್ಟೂರು ಒಂಕುಂದವೇ ಆಗಿ ಇದ್ದಿರಬೇಕೆಂದು ನನ್ನ ಭಾವನೆ. ಹಾಗೆ ಒಂಕುಂದವೇ ಹುಟ್ಟೂರಾದ, ರಾಜನಿಗೆ ಗುರುಬುಧನಾದ ಈ ಜಯಾಳ್ವನು ಅಥವಾ ಆಲ್ಬಮಲ್ಲನು ಅಲ್ಲಿಂದ ಬಂದು ವಿವೇಕ ಬೃಹಸ್ಪತಿ ಯಾದ ಈ ನೃಪತುಂಗನ ಆಸ್ಥಾನದಲ್ಲಿ ಸಾಮಸನಾಗಿ, ವಿದ್ವತ್ಸಭೆಯಲ್ಲಿ ವಾಗಧಿಪನಾಗಿ ನೆಲಸಿ ಈ ಗ್ರಂಥವನ್ನು ಬರೆದಿರಬೇಕು. ಈಭಾವನೆ ಕಡೆಯ ಪ್ರಿಯತರ-ಆಶೀಃ ಎಂಬ ಎರಡು ಅಲಂಕಾರಗಳ ದೃಷ್ಟಾಂತಗಳಿಂದಲೂ ಧ್ವಸಿತ ವಾಗುತ್ತಿದೆ. ಮೊದಲಿನದರಲ್ಲಿ ಆ ವಿದ್ವತ್ಕವೀಶ್ವರನು ರಾಜಧಾನಿಗೆ ದಯಮಾಡಿಸಿ, ತನ್ನ ರಾಜಧಾನಿಗೆ ಒದಗಿಸಿದ ಅಗಣಿತ ಪ್ರಿಯ ಕಾರ್ಯಗಳು ಮಾತ್ರವಲ್ಲ, ಅವುಗಳಿಗಿಂದಲೂ ಪ್ರಿಯತರವಾದ ಈ ಗ್ರಂಥ ರಚನೆಯನ್ನೆಸಗಿದುದಕ್ಕಾಗಿ ನೃಪ ತುಂಗನು ಆ ಗುರುಸನ್ನಿಭಸಿಗೆಸಗಿದ ಹೃತೂರ್ವಕ ವಂದನೆ ಹೊಳೆಯುತ್ತಿದೆ. ಮನದರಲ್ಲಿ ಆ ವಾಗಧಿಪನು ಅರಸನನ್ನು ಆಶೀರ್ವದಿಸಿದುದು ವ್ಯಕ್ತವಾಗು
ತಿದೆ. ಅವುಗಳನ್ನು ಪರಾಂಬರಿಸಿರಿ: -
ನೃಪತುಂಗನ ಕೃತಜ್ಞತಾ ಸಮರ್ಪಣೆ ಗುರುಜನದ ಪರಕೆಯು ಬಂ ಧುರಪುಣ್ಯಫಳಾನುಬಂಧಮುಂ ನೆರೆದೆನ್ನೋಲ್ ಪರಮಾನುಭಾವ ಭರವುಂ ದೊರೆಕೊಂಡುವದಿಂದು ಬರವಿನೊಳ್ಳಿಮ್ಮಡಿಯಾ . ೨೦೮ - ಸರಿ. ೩
ನೃಪತುಂಗನಿಗೆ ಗ್ರಂಥಕಾರನ ಆಶೀರ್ವಾದ ಆಯುಂ ಶ್ರೀಯುಂ ಏಜಯನು ಮಾಯತಿಯುಂ ನೃಪತಿ ನಿನಗೆ ನಿಜಸಂತತಿಯುಂ ಚ ನ್ಯಾಯದೆ ಹೆಚ್ಚುವುದಕ್ಕಿ ತೋಯಧಿ ಧರಣೀ ಧರಾಧರಸ್ಥಿತಿವರೆಗಂ : ೨೦೭ ।
ಇದು ಅರಸನನ್ನು ಪ್ರೇಮ ಪೂರ್ವಕವಾಗಿ ಗ್ರಂಥಾಂತದಲ್ಲಿ ವಾಗಧಿಪ ಶ್ರೀ ವಿಜಯನು ಆಶೀರ್ವದಿಸಿದ ಮಾತು. ಇಲ್ಲಿ ತೋರುವ ಶ್ರೀಯುಂ
ವಿಜಯಮುಂ' ಅಂದಿನಿಂದ ನಿರ್ಭಾಧವಾಗಿ ನೃಪತುಂಗನಲ್ಲಿ ನೆಲಸಿದಂತೆ ಭಾವಿಸಬೇಕು. ಮಾತ್ರವಲ್ಲ “ಶ್ರೀಯುಂ ವಿಜಯಮುಂ ” ಎಂಬ ಪದಗಳಲ್ಲಿ ಅಡಕವಾಗಿ ಹೊಳೆಯುವ 'ಶ್ರೀ ವಿಜಯ ನಾಮಕನಾದ ಈ ಕವಿ ವ್ಯಕ್ತಿಯ ನಿನಗೇ ಸಂಬಂಧಿಸಿದುದು ಎಂಬುದೂ ಪದ ಶಕ್ತಿಯಿಂದ ಧ್ವನಿತವಾಗುತ್ತಿದೆ ಯಲ್ಲವೆ?
ಇನ್ನು ಈತನ ಮತವಿಚಾರವಾಗಿ ಪ್ರಕೃತ ಯಾವ ಸಿದ್ದಾಂತವನ್ನೂ ಸೂಚಿಸುವಂತಿಲ್ಲ. ಈ ಗ್ರಂಥದ ಆದ್ಯಂತ ಭಾಗಗಳ ಮಂಗಲಾದಿ ಪದ್ಯ ಗಳಿಂದ ಇವನು ಜೈನನಾಗಿರಬಹುದೇ ಎಂದು ಭಾವಿಸಲಿಕ್ಕೆ ಸ್ವಲ್ಪವಾದರೂ ಆಸ್ಪದವಿಲ್ಲ. ಆದರೆ, ಕೆಲವು ದೃಷ್ಟಾಂತ ಪದ್ಯಗಳಲ್ಲಿ ಜೈನ ಗುರುಗಳ ವರ್ಣನೆ.
ಯಾವುದೋ ಒಂದು ರಾಮಾಯಣದಿಂದ ಎತ್ತಿಕೊಂಡ
ಮತ-ಕಾಲಗಳು
ಹಲವು ದೃಷ್ಟಾಂತಗಳಲ್ಲಿ ಜೈನ ರಾಮಾಯಣದ ಕಥಾ
* ಪದ್ದತಿ ಹೊಳೆಯುತ್ತಿದೆ. ಅವು ಇತರ ಗ್ರಂಥಗಳಿಂದ ಎತ್ತಿಕೊಂಡುವುಗಳಿರಲಿಕ್ಕಿಲ್ಲವೆ? ಎನ್ನಬಹುದು. ಆದರೆ, ಹಿಂದೆ ದೃಷ್ಟಾಂತಿಸಿದ ತನ್ನ ಸ್ವಭಾವವನ್ನು ಸೂಚಿಸುವ “ಮದ ಮಾನ ಮಾಯ ಭಯ ಲೋಭ ವಿಷಾದ ಹರ್ಷಾಭು ದಿತಾಂತರಂಗ ರಿಪುವರ್ಗ . . . . ” ಎಂಬ ಪದ್ಯದಲ್ಲಿ ಅಂತಶತ್ರುಗಳೆಂದರೆ “ಮದ ಮಾನ ಮಾಯ ಭಯ ಲೋಭ ವಿಷಾದ ಹರ್ಷ” ಎಂಬ ಏಳು ಭೇದಗಳಿಂದ ಕೂಡಿದುವು ಎನ್ನುತ್ತಾನೆ. ವೈಷ್ಣವಾದಿ ಮತ ಪ್ರಕ್ರಿಯೆಗಳಲ್ಲಿ ಈ ಅಂತಶತ್ರುಗಳು ಆರು. ಅವುಗಳು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಂಬ ಹೆಸರುಗಳಿಂದ ಕರೆಯಲ್ಪಡುವುವು. ಮೇಲೆ ಕಾಣುವ ಅಂತರಂಗ ರಿಪುವರ್ಗ'ದ ನಾಮಗಳು ಜೈನ ವಾರ್ಗಿಯ ಗಳೇ ಎಂಬಲ್ಲಿ ಸಂಶಯವಿಲ್ಲ. ಅದು ಹೇಗೂ ಇರಲಿ, ನೃಪತುಂಗ ಸಭೆಯ “ವಾಗಧಿಪ'ನಾಗಿದ್ದ ಈ ಶ್ರೀ ವಿಜಯನು ಮತದಲ್ಲಿ ಜೈನನಾಗಿದ್ದರೂ ಸಾಮಾನ್ಯ ವಾಗಿ, ನೃಪತುಂಗನಂತೆ ( ಉದಾರ ಮತ'ನೇ ಆಗಿದ್ದನೆಂದು ಭಾವಿಸಿದಲ್ಲಿ ತಪ್ಪಾಗದು. ಈ ಗ್ರಂಥದಲ್ಲಿ ಸಂಜನ ಶಾಸನ ಶ್ಲೋಕಗಳೊಡನೆ ಹೋಲಿಕೆ ಗೊಳ್ಳುವ ಅನೇಕ ಪದ್ಯಗಳೂ ವಿಷಯಗಳೂ ತೋರುತ್ತಿವೆ. ಆ ಶಾಸನವು ಕ್ರಿ. ಶ. ೮೭೧ರಲ್ಲಿ ತಲೆದೋರಿತೆಂಬುದು ಸಿದ್ದವಷ್ಟೆ. ಸುಮಾರು ಅದೇ ಕಾಲ ದಲ್ಲಿ ಎಂದರೆ ಸುಮಾರು ಕ್ರಿ. ಶ. ೮೭೫ರೊಳಗೆ ಈ ಗ್ರಂಥದ ನಿರ್ಮಾಣ ವಾಗಿರಬೇಕೆಂದು ನಮ್ಮ ಭಾವನೆ.
ಆಗಿನ ಕನ್ನಡದ ಸ್ವರೂಪವೂ ಗ್ರಂಥಕಾರನ
ಗುರಿಯ
ತಿರುಳನ್ನಡದ ಸಂಸ್ಕೃತಿಯ ಕನ್ನಡ ನಾಡಿನ ಬಾಹ್ಯ ಆಂತರಂಗಿಕ - ಸ್ವರೂಪಗಳೂ ಆ ಕಾಲದಲ್ಲಿ ಹೇಗಿದ್ದುವು ಎಂಬುದನ್ನು ಒಂದಿಷ್ಟು ವಿವೇಚಿಸುವ. ಕಿಸುವೊಳಲೇ ಮೊದಲಾದ ನಾಲ್ಲೂರುಗಳಿಂದ ಕಾವೇರಿ ನದಿಯ ವರೆಗಿನ ನಾಡಿಗೆ ತೆಂಕನಾಡು ಎಂಬ ಹೆಸರು. ಗೋದಾವರಿ ಪರ್ಯ೦ತದ ಊರಿಗೆ ಬಡಗನಾಡೆಂದೂ, ಅದಕ್ಕಿಂತ ಉತ್ತರಕ್ಕೆ ವಿಂಧ್ಯಾಚಲದ ತಪ್ಪಲಿನ ರೇವಾನದಿಯ ವರೆಗಿನ ದೇಶಕ್ಕೆ ಬಡ-ಬಡಗನಾಡು - ಅಲ್ಲವೆ ಉತ್ತರೋತ್ತರ ಕನ್ನಡವೆಂದೂ ಹೆಸರು. ಈ ಉತ್ತರೋತ್ತರ ಕನ್ನಡನಾಡಿನ ಭಾಷಾ ಸಾಹಿತ್ಯವು ಮೆಲ್ಲಮೆಲ್ಲನೆ ಮೈಸವೆಯುತ್ತಾ ಬರುತ್ತಿದ್ದ ಕಾಲವದು ಎಂದು ತೋರುತ್ತಿದೆ. ಅಂತೂ ಅಖಂಡ ಕನ್ನಡದೊಳಗೆ, ತಿರುಳನ್ನಡ ನಾಡು - ತೆಂಕನಾಡು - ಬಡಗನಾಡು - ಬಡ - ಬಡಗನಾಡು, ಎಂದು, ಅಂದು ಕನ್ನಡದಲ್ಲಿ ನಾಲ್ಕು ಕವಲುಗಳಿದ್ದಂತೆ ವಿಶದ ವಾಗುತ್ತಿದೆ. ಅವುಗಳಲ್ಲಿ ಒಳಮ್ಮೆ ಎಂದರೆ ತಿರುಳನಡನಾಡು, ತೆಂಕ ಬಡಗ ಪ್ರಾಂತಗಳ ಕನ್ನಡ ನುಡಿ, ನೆರೆಹೊರೆಯ ದೇಸಿಗವಲುಗಳ ಮತ್ತು ಹೊರನಾಡು ನುಡಿಗಳ ಸಂಪರ್ಕದಿಂದಲೂ ಅಲ್ಲಲ್ಲಿಯ ಉಚ್ಚಾರಣಾದಿಗಳ ವೈವಿಧ್ಯದಿಂದಲೂ ಮಾರ್ಪುಗೊಂಡು ಕನ್ನಡದ ಹೊಲಬೇ ಆಗದಷ್ಟು ರೂಪಾಂತರವಡೆದಿದ್ದು ವಂತೆ. ಆ ಬಗೆಯ ನುಡಿಗಳಿಂದಲೇ ಅಲ್ಲಲ್ಲಿಯ ಕವಿತೆಗಳೂ ತಡೆಯಿಲ್ಲದೆ ಸಾಗುತ್ತಿದ್ದುವು. ಕವಿಗಳ ಕಾವ್ಯಗಳಲ್ಲಿ “ದೋಷಂ ಇನಿತೆಂದು ಬಗೆ'ಯು ವುದು ವಿದ್ವಾಂಸರಿಗೂ ಅಸಾಧ್ಯವಾಯಿತು. ವಿಶೇಷವಾಗಿ ಆ ಶಬ್ದ ಸ್ವರೂಪ ಗಳು ನಾನಾಮುಖವಾಗಿ ಹರಡಿದ ಕಾರಣ, ಒಂದು ಪ್ರಾಂತದವರಿಗೆ ಇನ್ನೊಂದು ಪ್ರಾಂತದಲ್ಲಿ ತಲೆದೋರಿದ ಕಾವ್ಯವೆಂದರೆ ಬೇರೊಂದು ಕನ್ನಡ ನುಡಿಯ ದಾಗಿ ಹೋಯಿತು. ಇದರ ಪರಿಣತಿ ಏನು? ಅಖಂಡವಾಗಿರಬೇಕಾಗಿದ್ದ ಕನ್ನಡನುಡಿ (ಕನ್ನಡಂಗಳ್ ) ಎಂಬ ಬಹುತ್ತಕ್ಕೀಡಾಯಿತೆಂದು ಗ್ರಂಥಕಾರನೇ ಸಾರುತ್ತಾನೆ. ದೇಸಿ ಬೇರೆ ಬೇವಿಪ್ಪುದeo' ಅಂಥ ಕಾವ್ಯಗಳೊಳಗಿನ ಗುಣಾದಿಗಳು ಹಾಗಿರಲಿ, 'ಎಲ್ಲ ಬಣ್ಣವನ್ನೂ ಮಸಿ ನುಂಗಿತು' ಎಂಬ ಮಾತಿ ಗನುವಾಗಿ ಈ ಕನ್ನಡ ಕಾವ್ಯಗಳನ್ನೋದಿ ಮನನಮಾಡುವ ಮಂದಿಯೇ ಕುಗ್ಗುತ್ತಾ ಹೋಯಿತು.
. ೧೧೪
-
ತಿರುಳನ್ನಡನಾಡಿನ ಕನ್ನಡ ಭಾಷಾ ಸಂಸ್ಕೃತಿಯ ಮಟ್ಟವೇನೋ ಹಾಗಿಸಿ ದಿಲ್ಲ. ಗ್ರಂಥಕಾರನು ಅದನ್ನು ಪ್ರಥಮ ಪರಿಚ್ಛೇದದ ಆದಿಭಾಗದಲ್ಲೇ ಬಣ್ಣಿ ಸುವ ಕೆಲವಂಶವನ್ನು ಹಿಂದೆ ಕಾಣಿಸಿದ್ದೇವೆ, ಮನದನ್ನು ಪರಾಂಬರಿಸಿರಿ:
ಆ ತಿರುಳುಗನ್ನಡನಾಡಿನವರು ಹದವನ್ನರಿತು ಎದೆಗೊಂಡ ಪದಗಳ ನಾಡುತ್ತಿದ್ದರು. ಅನ್ಯರು ಆಡಿದ ನುಡಿಗಳನ್ನು ಭಾವಿಸುತ್ತಿದ್ದರು. ಕುರಿತು ಓದದವರಾಗಿದ್ದರೂ ಹುಟ್ಟುಗುಣದಿಂದಲೇ ಚದುರರಾಗಿ ಮಾತುಬಲ್ಲವರಾಗಿ, ಸಮಾಜದೊಳಗೆ ಹೆಸರುಗೊಂಡಿದ್ದರು. ತಾವು ಕುರಿತೋದದಿದ್ದರೂ ಉತ್ತಮ ಕಾವ್ಯಪ್ರಯೋಗದಲ್ಲೆಡೆಗೊಂಡ ಪದಗಳ ಸವಿ ಏನು, ಅಂಥವಲ್ಲದ ಪದಗಳ ಸಪ್ಪೆ ಏನು? ಎಂಬುದನ್ನು ಸ್ವಾಭಾವಿಕವಾಗಿ ತಿಳಿಯಬಲ್ಲವರಿದ್ದರು. ಈ ಹಿಂದೆ ವಿಸ್ತರಿಸಿದುದು, ವಿಶೇಷವಾಗಿ ಕುರಿತೋದಿದವರ ಸಂಗತಿಯನ್ನಲ್ಲವಾದರೂ ಸಾಹಿತ್ಯವಿಚಾರದಲ್ಲಿ ಒಂದಿಷ್ಟು ನುರಿತವರ ಅಥವಾ ಆದರವುಳ್ಳವರ ವಿಷಯ ವನ್ನು, ಮುಂದೆ ಸೂಚಿಸುವುದು ಹಾಗೆ ಒಂದಿಷ್ಟು ನುರಿತವರನ್ನೂ ಅಲ್ಲ ವಾಗಿದ್ದರೂ ಏನು? ಬಲ್ಲವರ ಭಾವನೆಯನ್ನು ಬಗೆಗೊಳ್ಳುವಷ್ಟು ಹದವಾದೆದೆ ಅವರಿಗಿಲ್ಲದಿದ್ದರೂ ತಂತಮ್ಮ ನುಡಿಗಳನ್ನು ಪೋಣಿಸುವುದರಲ್ಲಿ ಎಲ್ಲರೂ ಜಾಣರು, ಕಿರುಮಕ್ಕಳಾದರೂ ಸರಿ, ಮೂಕರಾದರೂ ಸರಿ, ತಮ್ಮೆದೆಯ ವಿವೇಕ ಭಾವನೆಗಳನ್ನು ಅರುಹಲು ಬಲ್ಲವರಿದ್ದರು.
* ಅಂಥ ಜಾಣರಲ್ಲದವರಾದರೂ ಕೆಲವರು ವಿಷಯದ ಗುರಿಯನ್ನೇ ಬಿಗಿವಿಡಿದು ತಾತ್ಪರ್ಯವನ್ನು ಹೀರುತ್ತಿದ್ದರು. ಸದ್ಯದೊಳಗೆ ಅವಗುಣದ ಹೊಲಬಾದರೂ ತಲೆದೋರಿದಲ್ಲಿ ಅದನ್ನೇ ಹಿಡಿದೆತ್ತಿ ಕವಿಗಳ ದೋಷವನ್ನು ಬಯಲಾಗಿಸುವವರು.
* ಕುಳಿತವರಲ್ಲದೆ ಮತ್ತ೦ ಪೆಅರುಂ ತಂತಮ್ಮ ನುಡಿಯೊಳೆಲ್ಲಂ ಜಾಣರ್ ii ಕಿಮೀವಕ್ಕಳುಮಾಮಗರು | ಮಯಿ ಪಲ್ಯ ಅವರ್ ವಿವೇಕನಂ ಮಾತುಗಳಂ : ೩೯ ! ಸರಿ, ೧ :1 * ಚಾಣರ್ಕಳಲ್ಲದವರುಂ ಪೂಣಿಗರ ಆಿಯದೆಯುಮ ಜೀವ ವೋಲವಗುಣದಾ !! ತಾಣವದಿನಿಸೆಡೆವೆಡೆ ಮಾಣದ ಸಿಡಿದದನೆ ಕೃತಿಗಳಂ ಕೆಡನುಡಿವರ್ || ೪೦ || ಪರಿ ೧ ||
-
೧೧೫,
*ಸಂಸ್ಕೃತ ಪ್ರಾಕೃತ ಸಾಹಿತ್ಯಗಳಲ್ಲಾದರೆ ಆ ಬಗೆಯೇ ಬೇರೆ. ಅವು ಗಳಲ್ಲಿ ಲಕ್ಷ್ಯ ಗ್ರಂಥಗಳಂತೆ ಲಕ್ಷಣ ಗ್ರಂಥಗಳೂ ಬೇಕಾದಷ್ಟಿವೆ. ಪರಮಾ ಚಾತ್ಯರಿಂದ ರಚಿತಗಳಾದ ಆ ಲಕ್ಷ ಲಕ್ಷಣ ಪ್ರಬಂಧಗಳಿಂದಾಗಿ ಸಂಸ್ಕೃತ ಪ್ರಾಕೃತ ಸಾಹಿತ್ಯ ಸ್ವರೂಪವು ಸುಗಮವಾಗಿದ್ದು ದು.
* ಕನ್ನಡದಲ್ಲಾದರೆ ಹಾಗಲ್ಲ. ಲಕ್ಷಣರೂಪವಾದ ಕಾವ್ಯರಚನಾ ಪದ್ಧತಿ ಯನ್ನು, ಇಷ್ಟಷ್ಟಾಗಿ ಬಲ್ಲವರೆಂಬವರಲ್ಲಿ ಕೇಳಿಯೇ ತಿಳಿದುಕೊಳ್ಳಬೇಕಾಗಿತ್ತು ಎಂದರೆ 'ತಿರಿಕೊತೆ'ಗೊಳ್ಳಬೇಕಾಗಿದ್ದುದು. ಹಾಗೆ ತಿರಿಕೊಅಲೆಗೊಂಡುದ ರೊಳಗೆ ಒಪ್ಪುತಪ್ಪುಗಳೆಪ್ಟೆಂಬ ಒಳಗಿನ ಗುಟ್ಟು ಶಿವನಿಗೂ ಗೊತ್ತಿಲ್ಲ. ಅದರಿಂದ, ಲಕ್ಷಣ ಗ್ರಂಥಗಳು ಮುಖೋದ್ಗೀತಗಳಾಗಿರುವ ಸಂಸ್ಕೃತ ಪ್ರಾಕೃತಗಳ ಪರಮಾಚಾತ್ಯರಂತೆ “ಇದಮಿತ್ಥಂ” ಎಂಬ ನಿರೂಪವನ್ನು ಈ ಕನ್ನಡ ಕವಿ ಗಳಿಗೆ ಯಾರೀಯಬೇಕು? ಕನ್ನಡಕ್ಕೆ ಓಜರೆನಿಸಿದ ನಾಡವರು ಅಂಥ ಪರಮಾ ಚಾಲ್ಯಸಭರಲ್ಲ.
ಕನ್ನಡದಲ್ಲಿ ಆ ವರೆಗೆ ಲಕ್ಷಣ ಗ್ರಂಥಗಳೇ ಇದ್ದಿಲ್ಲ ಎಂಬುದನ್ನಾತನು ಆ ಮೇಲೆ ಶಬ್ದ ತಃ ನಿರೂಪಿಸುತ್ತಾನೆ
ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಕಣಂ ಸತತವೆಂದೆ ಸಂಗನ್ನಡಂ : ಪೊಲಗಿಡಿಸಿ ನುಡಿವರಾಗಮ
ಬಲಹೀನರ್ದೆಸಿಯಲ್ಲದೆಂದ ಅರಿದಿರ್ದ್ದು೦ : ೪೮ (ಪರಿ. ೧) ಹಿಂದಿನ ಕನ್ನಡ ಕಾವ್ಯವೇ ಮುಂದಿನದಕ್ಕೆ ಲಕ್ಷಣವೆಂದು ಭಾವಿಸಿಕೊಂಡು ಕೆಲವರು ಕಾವ್ಯವನ್ನು ರಚಿಸುತ್ತಾರೆ. ಕೆಲಸಂದರ್ಭಕ್ಕೆ, ಕೆಲಸಮಯಕ್ಕೆ ಅದು
* ಸಕ್ಕದಮುಂ ಪಾಗದಮುಮ ದಕ್ಕುಂ ಬಗೆದಂತೆ ಸಮ ಜಿ ಪೇಲಿಲ್ ಮುನ್ನಂ : ನಿಕ್ಕುವಮೊಳವಪ್ಪುದ ಅ೦ ತಕ್ಕ೦ತವ ಜೀವ ಜಿ ಲಕ್ಷ್ಮಮುಂ ಲಕ್ಷಣಮುಂ || ೪೧ |ಪ. ೧೪ ! * ಅರಿದಾದಂ ಕನ್ನಡದೊಳ್ ತಿರಿಕೊಆ ಗೊಂಡ ಆಯೆಪೇ ಅನೆಂಬುದಿದಾರ್ಗ೦ | ಪರಮಾಚಾರ್ಯರ ವೋಲ್ ಸೈ ೩ರಲ ಲಿಯರ್ ಕನ್ನಡಕ್ಕೆ ನಾಡವರೊವಜರ್ 11 ೪೨ ಪ, ೧ ||
-
೧೧೬
-
ಒಪ್ಪಲೂ ಬಹುದು. ಆದರೆ, ಯಾವಾಗಲೂ ಅದು ಸಲುವಳಿಯಾಗುವುದೆ? ವಿಶೇಷವಾಗಿ ಆ ಪದ್ಧತಿ ಹಿಂದಿನ ದೇಸಿಯಾಗಿದ್ದ ಹಳೆಗನ್ನಡದಲ್ಲಿ ಕಾವ್ಯ ರಚನೆಗೈವುದಾದರೆ ಒಪ್ಪಬಹುದು; ಇಂದಿನ ದೇಸಿಗೆ- ಅಥವಾ ಹೊಸಗನ್ನಡ ಕಾವ್ಯರಚನೆಗೆ ಆ ಪದ್ಧತಿ ವಿರಸವೇ ಸರಿ.
- ಆಗಿನ ತಿರುಳನ್ನಡ ನಾಡಿನಲ್ಲಿ ಇಂಥವರಲ್ಲದೆ ಮೇಲ್ಮೀಯ ಸಂಸ್ಕೃತಿಯ ನ್ನೊಂದಿದ ಕೆಲವ್ಯಕ್ತಿಗಳಿದ್ದಿರಲೂಬಹುದು. ಆದರೂ ಸಾಮಾನ್ಯವಾಗಿರುವ ನಾಡವರೆದೆಯ ಮಟ್ಟವನ್ನು ಗ್ರಂಥಕಾರನು ಚಿತ್ರಿಸಿದ್ದಾನೆ. ಇದರಿಂದ ಆಗ ಕನ್ನಡ ಸಾಹಿತ್ಯದಲ್ಲಿ ಲಕ್ಷಣಗ್ರಂಥದ ಅಭಾವವೇ ಹೊಳೆಯುತ್ತಿದ್ದುದು ವಿಶದ ವಾಗುತ್ತಿದೆ. ಧಾನ್ಯಾದಿಗಳ ಕೊಳುಕಡೆಯ ವ್ಯವಹಾರವು, ಮಾನಪಾತ್ರ ವಿಲ್ಲದೆ, ಕೈಸೆರೆಯಿಂದಲೆ ಎಷ್ಟು ಕಾಲ ನಡೆದೀತು?
ಆಗಿನ ಕವಿಗಳು “ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ” ಎಂದು ಬಗೆದು ಬಳಸುತ್ತಿದ್ದವರೆಂದು ಗೊತ್ತಾಯಿತಷ್ಟೆ. ಹಾಗಿದ್ದರೆ, ಆಗ ಯಾವ
ಬಗೆಯ ಕಾವ್ಯಗಳು ರೂಢಿಗೊಂಡಿದ್ದು ವು? ಎಂಥ ಆಗಿನ ಕಾಲದ
ದ ಕವಿಗಳಿದ್ದರು? ಎಂಬುದನ್ನು ಒಂದಿಷ್ಟು ಭಾವಿಸುವ: ಗದ್ಯ ಸಾಹಿತ್ಯ
* ಕನ್ನಡದಲ್ಲಿ ಗದ್ಯ - ಪದ್ಯಗಳೆಂಬ ಎರಡು ಬಗೆಯ ಕಾವ್ಯ ಗಳೇ ಪ್ರಸಿದ್ದ ಗಳೆಂದಾಡಿದ ಗ್ರಂಥಕಾರನು, ತಸ್ಮಿಶ್ರವಾದೊಂದು ಬಗೆಯ ಕಾವ್ಯವೂ ಇದ್ದಂತೆ ಸೂಚಿಸುತ್ತಾನೆ. ಆದರೆ ಮತ್ತೆ ಹೆಸರು ಗೊಂಡಿರುವ ಚಂಪೂಕಾವ್ಯವೇ ಅದು ಎಂದು ಹೇಳಿಲ್ಲ. ಆ ಮಿಶ್ರ ಕಾವ್ಯವೆಂದರೆ, ಗದ್ಯರೂಪ ವಾದ ಕಥೆ, ಮತ್ತು ಪ್ರಗತಿ' ಎನ್ನುವ ಹಾಡು ಇವುಗಳಿಂದ ಬೆರಸಿಕೊಂಡಿತ್ತು ಎನ್ನುತ್ತಾನೆ. ಮತ್ತಿನ ಚಂಪೂ ಕಾವ್ಯಗಳಲ್ಲಿ ಗದ್ಯವಿದ್ದರೂ ವಿಶೇಷವಾಗಿ ವೃತ್ತ ಕಂದಾದಿಗಳೇ ಅಧಿಕವಾಗಿರುವುದು. ಅಲ್ಲಲ್ಲಿ ತೋರುವ 'ರಗಳೆ'ಗಳು ಹಾಡಿನಲ್ಲಿಯೇ ಅಡಕವಾದುವು. ಆದರೂ ಕಂದ ವೃತ್ತಗಳನ್ನೇನೇನೂ ಸೂಚಿ ಸದ ಕಾರಣ ಇಲ್ಲಿ ತೋರುವ 'ಸಮ್ಮಿಶ್ರಿತ' ಕಾವ್ಯವೆಂದರೆ, ಆ ಮೇಲೆ ಪ್ರಸಿದ್ದ ವಾದ ಚಂಪೂ ಕಾವ್ಯವಾಗಿದ್ದಂತೆ ತೋರುವುದಿಲ್ಲ. ಇರಲಿ, ಆಗಿನ ಕಾಲದಲ್ಲಿ ಗದ್ಯಕಾವ್ಯವು ಮೇಲ್ಮಗಡರಿಕೊಂಡಿತ್ತು ಎಂದು ಸೂಚಿಸುವುದಕ್ಕಿಸಿರಿ:
ವಿಮಲೋದಯನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೀ H,
- ೧೧೭ - ಕ್ರಮದೊಳ್ಳೆಗಲ ಗದ್ಯಾ ಶ್ರಮಗುರುಪದತಾ ಪ್ರತೀತಿಯಂ ಕೆಯ್ಯೋಂಡರ್ !! ೨೯ 4 (ಸರಿ. ೧)
ವಿಮಳ ಉದಯ (ಅಥವಾ ವಿಮಲೋದಯ) ನಾಗಾರ್ಜುನ - ಜಯ ಬಂಧು, ದುರ್ವಿನೀತ ಮೊದಲಾದವರು ಈ ರೀತಿಯಲ್ಲಿ ರಚಿಸಿ (ಗದ್ಯಾಶ್ರಮ ಗುರು'ಗಳು ಎಂಬ ಪ್ರಸಿದ್ದಿಯನೊಂದಿದರು ಎನ್ನುತ್ತಾನೆ. ಈ ಕನ್ನಡ ಗದ್ಯ ಪ್ರಬಂಧಗಳು ಇನ್ನೂ ಪ್ರಕಾಶವಡೆಯಲಿಲ್ಲ. ಆದರೆ ಆಯಾ ಗದ ಮಹಾ ಕವಿನಾಯಕರೊಳಗೆ ಕೆಲಮಂದಿಯ ಹೆಸರು ಗೊತ್ತಾಗುತ್ತಿದೆ. ಆ ಸಾಲಿನಲ್ಲಿ ಕಡೆಯವನಾದ ದುರ್ವಿನೀತ' ಎಂದರೆ ಬಹುಶಃ ಕ್ರಿ. ಶ. ೫ನೆ ಶತಕದವನೂ ಗಂಗ ವಂಶೀಯನೂ ಆದ ಅವಿನೀತರಾಜನ ಕುಮಾರಕನಾದ ದುರ್ವಿನೀತನೆಂದೇ ತೋರುತ್ತಿದೆ. ಆ ದುರ್ವಿನೀತನ ಆನೆ ಶತಕದ ಕನ್ನಡ ಗದ್ಯ ಶಾಸನ ವೊಂದು ಪ್ರಕಟವಾಗಿದೆಯಲ್ಲದೆ, ಭಾರವಿಯ ಕಿರಾತಾರ್ಜುನೀಯ ಕಾವ್ಯದ ೧೫ನೆ ಸರ್ರಕ್ಕೆ ಆತನು ಕನ್ನಡ ವ್ಯಾಖ್ಯಾನವನ್ನು ಬರೆದುದಾಗಿಯೂ ಹೇಳಿಕೆ ಯುಂಟು. ಅಷ್ಟು ಹಿಂದಿನ ಕಾಲದಲ್ಲಿಯೇ ಕನ್ನಡದಲ್ಲಿ ಕಾವ್ಯ ಪ್ರಬಂಧಗಳು ನೆಲೆಗೊಂಡುದಷ್ಟೇ ಅಲ್ಲ. ಮೇಲೆ ಸೂಚಿತರಾದವರು ಗದ್ಯ ಶೈಲಿಯ ಶಿಖರ ಕ್ಕೇರಿದವರೂ ಆಗಿದ್ದರೆಂದು ತಿಳಿದಂತಾಗುತ್ತಿದೆ. “ಗದ್ಯಾಶ್ರಮಗುರು” ಎಂಬ ಬಿರುದು ಅಸಾಮಾನ್ಯವಾದುದೇ ಸರಿ. ಇಂಥ ಬಿರುದು,' ಆಗಿನ ಪದ್ಯ ಕವಿ ಗಳಿಗೆ ಒದಗಿದ್ದಂತೆ ತೋರುವುದಿಲ್ಲ. ಮಾತ್ರವಲ್ಲ; ಹಾಗೆ ಪದ್ಯಾಚಾರ್ಯ ರೆನ್ನಿಸಬೇಕಾದರೆ ಈ ಲಕ್ಷಣ ಗ್ರಂಥವನ್ನು ಸರಿಯಾಗಿ ಮನನ ಮಾಡಬೇಕು ಎಂದು ಗ್ರಂಥಕಾರನು ಕವಿಗಳಿಗೆ ಬೋಧಿಸುವುದನ್ನು ಭಾವಿಸಿರಿ:
ಸಮುಚಿತ ನೃಪತುಂಗದೇವಮಾರ್ಗ | ಕ್ರಮನಮನಾಭಿಮುಖರ್ಕ್ಕಳಪ್ಪರೆ೦] ! ಕ್ರಮಸಹಿತ ಮಗಮ್ಯರೂಪಕಾವ್ಯಾ ಶ್ರಮಪದಮಂ ನಿರಪಾಯಮೆಯ್ದ ಲಾರ್ಪರ್ ti ೧೮೬ ಕಿ (ಪರಿ. ೧)
ಈ ಕವಿರಾಜ ಮಾರ್ಗ'ವನ್ನೋದಿ ಮನನಪೂರ್ವಕವಾಗಿ ಅರಿತ ನುರಿತ ಪ್ರತಿಭಾಶಾಲಿಗಳು, ಮುಂದೆ ಇತರರಾರಿಗೂ ಅಗತ್ಯವಾದ “ಕಾವ್ಯಾಶ್ರಮ ಪದಮಂ” ಹೊಂದಲಾದರು, ಎಂಬ ಈ ಮಾತನ್ನವಧರಿಸಿರಿ, ಇಲ್ಲಿ ಸೂಚಿತ ವಾದ “ಕಾವ್ಯಾಶ್ರಮ . . .. . . . . . . .” ಎಂಬುದರೊಳಗಣ (ಕಾವ್ಯ'
-
೧೧೮ -
ಪದಕ್ಕೆ (ಪದ್ಯ ಕಾವ್ಯ' ಎಂದೇ ಅರ್ಥವೆಂಬುದು ಸಂದರ್ಭದಿಂದಲೆ ವಿಶದವಾಗು ವುದು, ಈ “ನೃಪತುಂಗದೇವ ಮಾರ್ಗ”ವು ಪದ್ಯ ಕಾವ್ಯ ಲಕ್ಷಣ ಗ್ರಂಥವೇ ಹೊರತು ಗದ್ಯ ಕಾವ್ಯ ಲಕ್ಷಣವಲ್ಲವಷ್ಟೆ.
ಈ ವಿವೇಚನೆಯಿಂದ ಕನ್ನಡ ಸಾಹಿತ್ಯದೊಳಗೆ ಆ ಮೊದಲೆ “ಗದ್ಯಾ ಶ್ರಮಗುರು”ಗಳಾದವರು, ಎಂದರೆ ಗದ್ಯಾಚಾರ್ಯರು ಆಗಿ ಹೋಗಿದ್ದರು; ಈ ಗ್ರಂಥವನ್ನು ಮನನವೆಸಗಿದರೂ “ಕಾವ್ಯಾಶ್ರಮಗುರುಪದ'ವನ್ನೊಂದುವುದು ಸಾಧ್ಯವಲ್ಲ. ಆದರೆ ಕಾವ್ಯಾಶ್ರಮವನ್ನೋಂದಿ ವಿದ್ಯಾರ್ಥಿಗಳಾಗಬಹುದು ಎಂದು ಈ ಪದ್ಯ ತಾತ್ಪರ್ಯ. ಇದರಿಂದ, ಆಗಿನ ಗದ್ಯಸಂಸ್ಕೃತಿಯ ಮಹತ್ವವೂ ಪದ್ಯ ಸಂಸ್ಕೃತಿಯ ನ್ಯೂನತೆಯೂ ಭಾಸವಾಗುತ್ತಿದೆ.
ಇಂಥ ಮಾರ್ಗಿಯವೆನ್ನಿಸಿದ ಗದ್ಯ ಸಾಹಿತ್ಯವು ಆಗ ಶಿಖರವನ್ನೇರಿದ್ದರೂ, ಅದರೊಳಗೆ ಯಾವ ವಿಶಿಷ್ಟ ಗ್ರಂಥವೂ ಈಗಿನವರಿಗೆ ದೊರಕದಿರುವುದು ವ್ಯಸ ನಾಸ್ಪದವೆನ್ನಬೇಕು. ಈಚೆಗೆ ಪ್ರಕಾಶವಾದ 'ವಡ್ಡಾರಾಧಣ' ಎಂಬ ಗದ್ಯ ಪ್ರಬಂಧವು, ಕವಿರಾಜ ಮಾರ್ಗಕಾರನಾಡುವ ಗದ್ಯಾಶ್ರಮ ಗುರುಗಳೊಳಗೆ ಯಾರದೂ ಅಲ್ಲವಾದರೂ ಆ ಸಾಲಿನಲ್ಲಿಯೇ ಸೇರಿದುದಾಗಿರಬೇಕೆಂದು ನಮ್ಮ ಭಾವನೆ.
ಈ ಭಾಷೆಯಲ್ಲಿ ಪಾಕವಡೆದ ಸಂಸ್ಕೃತಿಯೊದಗಬೇಕಾದಲ್ಲಿ ಬರಿಯ ಗದ್ಯ ಪ್ರಬಂಧ ಚಾತುರ್ಯವೇ ಸಾಲದು, (ಸಮಸ್ತ ಜನತಾ ಹೃದ್ಯ'ವಾದ ಪದ್ಯದಲ್ಲಿ
ಹದವಡೆದ ಚದುರು ಬಗೆಗೊದಗಬೇಕು. ಪದ್ಯರಚನಾ ಕನ್ನಡದ ಪುರಾತನ
ಚಾತುರ್ಯವೆಂದರೆ, ಸಾಹಿತ್ಯ ಸಂಸ್ಕೃತಿ ಸಾಧನೆಯಲ್ಲಿ ಪದ್ಯಕಾವ್ಯ ಸ್ವರೂಪ |
* ಪಳಗಿ ನುರಿತ ತಪೋಬಲ ಎನ್ನಬಹುದು. ಬರಿಯ ಗದ್ಯ ಸಾಹಿತ್ಯದ ಜಾಣೆ ಜನತೆಯ ಹೃದಯದಲ್ಲಿ ಬೇರೂರಿ ಚಿಗುರಲಾರದು. ಈಗ ಬುಟ್ಟಿಗಳಲ್ಲಿ ನೀರೆರೆದು ಹೂಗಿಡಗಳನ್ನು ಬೆಳೆಯಿಸುತ್ತಾರಲ್ಲ. ಅಂಥ ಆರಾಮ ವದು. ಕೆಲಸಮಯದ ವರೆಗೆ ಚಿಗುರೆಲೆ ಹೂಗಳಿಂದ ಅಲಂಕೃತವಾದ ಗಿಡ ಬಳ್ಳಿಗಳು ನಲಿದಾಡಬಹುದು; ಪರಿಮಳಿಸಬಹುದು. ಹಣ್ಣು ಹಂಪಲುಗಳನ್ನು ಧಾರಾಳವಾಗಿ ಒದಗಿಸಿ ಜನತೆಯ ಆರೋಗ್ಯಕ್ಕೆ, ಸಂಸ್ಕೃತಿಗೆ ಅದು ಸಾಧಕ ವಾಗಲಾರದು. ಅದಕ್ಕೆ ವಿದ್ಯಾಪಾರಪರಾಯಣ'ವಾದ ಪದ್ಯ ಸಂಸ್ಕೃತಿಯೇ ಬೇಕು. ಅಂಥ ಪದ್ಯ ಪ್ರಬಂಧಗಳು ಆ ಹಿಂದಿನ ಕನ್ನಡ ಸಾಹಿತ್ಯದೊಳಗೆ ಬೇಕಾದಷ್ಟಲ್ಲವಾದರೆ ಕೆಲವಾದರೂ ಇದ್ದವೆಂಬುದನ್ನು ಹಿಂದೆಯೇ ಸದೃಷ್ಟಾಂತ
-
೧೧೯
-
ವಾಗಿ ಕಾಣಿಸಿದ್ದೇವೆ. ಕನ್ನಡದ ಆ ಆದ್ಯ ಕವಿಗಳೊಳಗಿನ ಶ್ರೀ ವಿಜಯನೆಂದರೆ, ಪ್ರಕೃತ ಗ್ರಂಥಕಾರನಾದ ಶ್ರೀ ವಿಜಯನಿಗಿಂತ ಎಷ್ಟೋ ಹಿಂದಿನವನು ಎಂಬು ದನ್ನೂ ಅಲ್ಲೇ ಸೂಚಿಸಿದ್ದೇವೆ. ಆ ಆದ್ಯ ಕಾವ್ಯದ ಸ್ವರೂಪ ಹೇಗೆ ಎಂಬುದು ಮುಂದಿನ ಪದ್ಯಾರ್ಥದಿಂದ ವ್ಯಕ್ತವಾಗುವುದು,
*ಕಂದವೂ ನಿರ್ದುಷ್ಟವಾದ ವೃತ್ತವೂ ಒಂದೊಂದೆಡೆಗೆ ಒಂದೊಂದಾಗಿ ಕೂಡಬೇಕು. ಆ ಮೇಲೆ ಜಾಣ್ಮಯಿಂದೊಡವೆರೆದ ಜಾತಿ ಬೆಡಗಿನಿಂದ ಇವುಗಳ ಮರಬೇಕು. ಹಾಗಿದ್ದ ವಸ್ತು ವಿಸ್ತರ ವಿರಚನೆಗೆ ಬೆದಂಡೆ ಎಂದು ಹೆಸರು ”
ಕಂದಗಳು ಹಲವು, ಸುಂದರಗಳಾದ ವೃತ್ತ - ಅಕ್ಕರ - ಚೌಪದಿ - ಗೀತಿಕೆ - ತ್ರಿಪದಿಗಳು ಕೆಲವು, ಹೀಗೆ ಬರೆದ 'ವಸ್ತು ವಿಸ್ತರ ವಿರಚನೆ'ಯೇ
ಚತ್ತಾಣವೆಂಬುದು,
ಮೇಲೆ ತೋರುವ "ಬೆದಂಡೆ - ಚತ್ತಾಣ' ಎಂದು ಆ ಹಿಂದಿನ ದೇಸಿ ಗಬ್ಬದ ವಿಶಿಷ್ಟನಾಮಗಳಾಗಿ ತೋರುತ್ತಿವೆ. ಅವುಗಳ ಒಳಮೈಯನ್ನು ಪರಾಂಬರಿಸಲಿಕ್ಕೆ, ಅಂಥ ಒಂದು ಕಾವ್ಯವಾದರೂ ಈ ವರೆಗೆ ಪ್ರಕಟವಾಗದುದ ರಿಂದಲೂ ಅವುಗಳ ಲಕ್ಷಣ ಗ್ರಂಥಗಳು ತಲೆದೋರಲೇ ಇಲ್ಲವೆಂಬುದು ಹಿಂದೆ ಸೂಚಿಸಲ್ಪಟ್ಟುದರಿಂದಲೂ, ಅಸಾಧ್ಯವಾಗಿದೆ. ಆದರೆ, ಈ ದೇಸಿಗಬ್ಬಗಳ ಸ್ವರೂಪವು, ಕವಿರಾಜ ಮಾರ್ಗದಿಂದ ಇತ್ತಣದಾದ, ಎರಡನೆ ನಾಗವರ್ಮ (ಸು. ಕ್ರಿ. ಶ. ೧೧೪೫) ನ (ಕಾವ್ಯಾವಲೋಕನ'ದ ಕಡೆಯ ಭಾಗದಲ್ಲಿ ಒಂದಷ್ಟು ಹೆಚ್ಚಾಗಿ ನಿವೃತವಾಗಿದೆ. ಅದರೊಳಗೆ 1 ಚತ್ತಾಣ'ದ ಹೆಸರಿಲ್ಲವಾದರೂ 4 ಬಾಜನೆಗಬ್ಬ' ಎಂಬುದು ತೋರುತ್ತಿದೆ. ಅದು ಚತ್ತಾಣವೆಂಬುದರ ನಾಮಾಂ ತರವಾಗಿರಲೂಬಹುದು. ಆದರೆ ಈ ಭೇದ ವಿಶಿಷ್ಟವಾದ ಕನ್ನಡದ ಆ ಪುರಾತನ ಕಾವ್ಯವನ್ನವನು (ಪಾಡುಗಬ್ಬ' ಎಂಬ ಒಂದೇ ಹೆಸರಿನಿಂದ ಕರೆವಂತೆ ಭಾಸ
*ಕಂದನು ಮಮಳಿನ ವೃತ್ತವು ಮೊಂದೊಂದಡೆಗೊಂದು ಜಾತಿ ಜಾಣೆಸೆಯೆ ಬೆಡಂ | ಗೊಂದಿವಳವರ ಪೇಟಿ qುಂದರ ರೂಪಿಂಬೆದಂಡೆಗಬ್ಬಮದಕ್ಕುಂ || ೩೪ || ಪರಿ, ೧. * ಕಂದಂಗಭ್ರಲವಾಗಿರೆ | ಸುಂದರ ವೃತ್ತಂಗಳಕ್ಕರಂ ಚವುಪದಿ ಮ || ಇಂದಲ್ಲಿ ತಿಕ ತಿವದಿಗ ಚಂದಂ ಬೆಸೆಯೆ ಪೇ ಆಡದು ಚತ್ತಾಣಂ || ೩೧೪ 33 ಪರಿ. ೧.
-
೧೨೦
-
ವಾಗುತ್ತಿದೆ. ಅಲ್ಲಿ ನಿವೃತವಾದ ಪಾಡುಗಬ್ಬದ ಸ್ವರೂಪವನ್ನು, ಸಂಗ್ರಹವಾಗಿ ಯಾದರೂ ಸ್ಪುಟವಾಗಿ ಮುಂದೆ ಚಿತ್ರಿಸಿದರೆ ವಾಚಕರ ಅವಗಾಹನೆಗೆ ಹೆಚ್ಚಿನ ನೆರವಾದೀತೆಂದು ಭಾವಿಸುತ್ತೇವೆ.
ನಾಗವರ್ಮನು ತನ್ನ ಕಾವ್ಯಾವಲೋಕನದ ೨೪೧ನೆ ಸೂತ್ರ ಮೊದ ಲ್ಗೊಂಡು-೨೪೫ರ ವರೆಗಿನ, ಗ್ರ೦ ಥಾ೦ ತ್ಯ ಭಾಗದಲ್ಲಿ ನಿರೂಪಿಸಿದ (ಪಾಡು. ಗಬ್ಬ'ದ, ಅಥವಾ ಕನ್ನಡ ಪುರಾತನ ಕಾವ್ಯದ ಸ್ವರೂಪ ಹೀಗಿದೆ:
ಪದ (೧) “ಕಂದವೂ * ಬೇರೊಂದು ಪ್ರಸಿದ್ಧವಾದ ವೃತ ಜಾತಿ ಯೂ ಸೇರಿದ ಕೂಟಕ್ಕೆ (ಪದ' ಎಂಬ ಹೆಸರು. ಇಲ್ಲಿ ತೋರುವ ವೃತ್ತಜಾತಿ” ಎಂಬುದಕ್ಕೆ ನೃತ್ಯ ಸ್ವರೂಪವೂ ಮಾತ್ರಾಗಣಬದ್ಧವೂ ಆದ 'ಜಾತಿ' ಎಂಬ ಛಂದಸ್ಸಿಗೆ ಸೇರಿದ ಮದನವತಿ-ಅಕ್ಕರಂ-ಚೌಪದಿ-ಗೀತಿಕೆ - ಏಳೆ- ತಿವದಿ-ಉತ್ಸಾಹಂ-ಅಕ್ಕರಿಕೆ ಛಂದೋವತಂಸ ಎಂಬ ಜಾತಿನಾಯಕ ಪದ್ಯಗಳಲ್ಲಿ ಸೇರಿದುದು ಎಂಬುದೇ ಅರ್ಥವಾಗಿರಬೇಕು. ಅಕ್ಷರಗಣಬದ್ಧವಾದ ವೃತ್ತ ಮತ್ತು ಮಾತ್ರಾ ಗಣಾತ್ಮಕ ವಾದ ಜಾತಿ ಇವುಗಳ ಕೂಟ ಎಂಬ ಅರ್ಥವಾಗಿರಲಾರದು. ಹಾಗೆಯೇ ಆಗಿದ್ದರೆ, ಆ ವೃತ್ತ-ಜಾತಿಗಳು ಭಿನ್ನಸ್ವರೂಪದವುಗಳಾಗುವುದರಿಂದ, “ಸೆಯ ತೊಂದು ಅಕೆಯ ವೃತ್ತಜಾತಿಯುಂ” ಎಂದು ಏಕಸಂಖ್ಯಾ ವಾಚಕವಾಗಿ ಹೇಳಿದ ರೀತಿಗೆ ಭಂಗವಾಗುತ್ತಿದೆಯಲ್ಲವೆ? ಅಂತೂ ಒಂದು ಕಂದ ಇನ್ನೊಂದು ವೃತ್ತಜಾತಿ ಈ ಯೆರಡರ ಕೂಟಕ್ಕೆ (ಪದ' ಎಂಬ ಹೆಸರು, ಎಂದು ತೋರುತ್ತಿದೆ. ಈಗ 'ಪದ' ಎಂಬುದಕ್ಕೆ ಸಾಮಾನ್ಯವಾಗಿ 'ಹಾಡು' ಎಂಬರ್ಥವು ರೂಢವಾ ಗಲು ಇದೇ ಕಾರಣವಾಗಿರಬಹುದೋ ಏನೊ?
ಮೆಲ್ವಾಡು (೨) ಅಂಥ 'ಪದ'ಗಳು ಹನ್ನೆರಡರ ವರೆಗೆ ಸಂಧಿಸಿದುದು ಮೆಲ್ಯಾಡು. ಈ ಹೇಳಿಕೆಯಿಂದ, ಎರಡು (ಪದ'ಗಳು ಮೊದಲಾಗಿ ಹನ್ನೆರಡು ಪದ'ಗಳ ವರೆಗಿ
* ಸಂದಿಸಿರೆ ಕಂದಮುಂ ಪೆ ತೋಂದಣಿಕೆಯ ವೃತ್ತಜಾತಿಯುಂ ಪದಮವು ತ |
ಅಂದಿರೆ ಪನ್ನೆರಡುವರಂ | ಸಂದುದು ಮೆಲ್ಯಾಡೆನಿಕ್ಕುವುದು ಕನ್ನಡದೊಳ್ ! ಕಾವ್ಯಾವಲೋಕನ
ಸೂ, ೨೪೧ !!
-
೧೨೧ -
ನವುಗಳಿಗೆ, ಅಥವಾ ಹಾಗೆ ಎರಡೆರಡಾಗಿ ಹೆಚ್ಚಾಗಿ ಇಪ್ಪತ್ತುನಾಲ್ಕರ ವರೆಗೆ ಬೆರಸಿ ರೂಪಿಸಿದ ಪದ್ಯಗಳ ಕೂಟಕ್ಕೆ ಮೆಲ್ಯಾಡು ಎಂಬ ಹೆಸರಾಗುತ್ತಿದೆ.
ಪಾಡು (೩) | * ಹದಿನಯಾಗಲಿ ಇಪ್ಪತ್ತಯಾಗಲಿ ಪದಗಳು ಬೆರಸಿ ರೂಪಿಸಿ ಸದ ಲಂಕಾರವಾಗಿ ರಸಾಸ್ಪದವೆನಿಸಿದ ಪ್ರಬಂಧಕ್ಕೆ ಪಾಡು ಎಂಬ ಹೆಸರು.
ಪಾಡುಗಬ್ಬದಿಂದಲೇ ಮೇಲ್ವಾಡು+ ಮತ್ತು ಬೆದಂಡೆಗಬ್ಬಗಳು (೪)
ಹಾಡು (ರಾಗ ತಾಳಬದ್ದವಾದ ಪದ್ಯ) ಗಳಿಂದ ಅಥವಾ ಹಿಂದೆ ಸೂಚಿ ಸಿದ ಪಾಡು'ಗಳಿಂದ ರಚಿತವಾದುದನ್ನು ಪಾಡುಗಬ್ಬ' ಎಂದು ವಿದ್ವಾಂಸರು ಕೊಂಡಾಡುವರು. ಅದರೊಳಗಿನ ಭೇದಗಳನ್ನು ಮೇಲ್ನಾಡು ಎಂದೂ ಬೆದಂಡೆ ಗಬ್ಬವೆಂದೂ ಆಡುವರು. ಈ ಹೇಳಿಕೆಯಿಂದ ಪಾಡುಗಬ್ಬದೊಳಗೆ ಮೇಲ್ವಾಡು ಬೆದಂಡೆಗಬ್ಬ ಎಂಬ ಭೇದಗಳಿದ್ದಂತೆ ತೋರುತ್ತಿದೆ.
•ಬಾಜನೆಗಬ್ಬ (೫) ಹಲದೆರದ ಪದ್ಯಗಳಿಂದಲೂ ಸವಿ ನುಡಿಗಳಿಂದ ರಚಿತವಾದ ಪದ್ಧತಿಕೆ (ಸದ್ದಲ್ಲಿ - ಅಥವಾ ಪ್ರೋಟಿಕೆ) ಎಂಬ ಹಾಡುಗಳಿಂದಲೂ ವಿರಚಿತವಾದುದು
* ಪದಿನನ್ನು ಮಿರ್ಪತಯು೦ ಪದಂಯಥಾಸಂಭವಂ ಪ್ರಬಂಧದ ಮೆಯಾ೪೯ : ಪುದಿದೋದವಿ ನೆಗಡ೦ತದು ಸದಲಂಕಾರಂ ರಸಾಸ್ಪದಂ ಪಾಡಕ್ಕು೦i ಕಾ. ಅವಲೋಕನ ಸ !!೨೪೨ { - +ಪಾಡುಗಳಿಂದಂ ತ ಅ ಸಲೆ ಮಾಡಿದುದಂ ಪಾಡುಗಬ್ಬವೆಂದು ಬುಧರ್ ಕೋಂ | ಡಾಡುವರದ೦ದ೦ ಮೇ ಲ್ಯಾಡುಂ ರೂಢಿಯ ಬೆದಂಡೆಗಬ್ಬ ಮುಮುಕ್ಕುಂ 11 ಸ. i ೨೪೩ !
•ಪಲತ ಬಿದ ಪದ್ಯದಿಂದಂ ಲಲಿತವಚೋರಚನನಿಚಯ ಪದ್ದ ಶಿಕೆಗಳಿ೦ || ಸಲೆ ನಿಲೆ ಸಮೆದುದು ಸರಸಾ ಖಿಲ ವರ್ಣನನಾದೊಡದುವೆ ಬಾಜನೆಗಬ್ಬಂ : ೨೪೪ !!
[ಕಾವ್ಯಾವಲೋಕನ]
- ೧೨೨ - ಬಾಜನೆಗಬ್ಬ (ವಾದನಕಾವ್ಯ) - ಎಂದರೆ ಹಿಮ್ಮೇಳದೊಡನೆ ಹಾಡುವ ಕಾವ್ಯ, ಇದರಲ್ಲಿ ನಗರ-ಸಾಗರ- ಹೊಳೆ-ಕಾಡು - ಗುಡ್ಡ- ಚಂದ್ರಾರ್ಕರ ಉದಯ~ ಋತು-ಜಲಕ್ರೀಡಾದಿಗಳನ್ನು ಹಾಡು (ವರ್ಣಕ) ಗಳಿಂದ ಕವಿ ಬಣ್ಣಿಸುತ್ತಾನೆ.
ನಾಗವರ್ಮನ ಈ ಹೇಳಿಕೆಯಲ್ಲಿ ಚತ್ತಾಣದ ಹೆಸರು ತೋರದಿದ್ದರೂ ಬೆದಂಡೆಯದು ವ್ಯಕ್ತವಾಗಿದೆ. ಇದರಿಂದ, ಬಾಜನೆಗಬ್ಬ' ಎಂಬುದಕ್ಕೆ ಆಗಿನ ಕಾಲದಲ್ಲಿ ಚತ್ತಾಣ ಎಂಬ ಹೆಸರೂ ಇದ್ದುದೆಂದು ಸಂದೇಹಪಟ್ಟರೂ ತಪ್ಪಲ್ಲ. ವಾಗಿ ಭಾವಿಸಬಹುದು: ಕವಿರಾಜ ಮಾರ್ಗ - ಕಾವ್ಯಾವಲೋಕನಗಳಲ್ಲಿ ತೋರುವ ಈ ದೇಸಿಗಬ್ಬಗಳ ಲಕ್ಷಣಗಳನ್ನು ಹೋಲಿಸಿದರೆ ಇಷ್ಟಷ್ಟು ವ್ಯತ್ಯಾಸ ವೇನೋ ತೋರಬಹುದು. ಆದರೂ, ಇಬ್ಬರೂ ನಿರೂಪಿಸಿದ ಗುರಿ ಒಂದೇ ಎಂಬಲ್ಲಿ ಸಂಶಯವಿಲ್ಲ.
- ನಾಗವರ್ಮನು ತನ್ನ ಕಾವ್ಯಾವಲೋಕನದಲ್ಲಿ ಸಂಸ್ಕೃತ ಸಾಹಿತ್ಯದ ಮಾರ್ಗಾನುಸಾರವಾಗಿ ಬಂದ ಸರ್ಗಬಂಧ ಕಾವ್ಯವನ್ನೂ, ಪದ್ಯ - ಗದ್ಯ ಚಂಪುಗಳನ್ನೂ ಸೂಚಿಸುತ್ತಾನೆ. ಆ ನಾಗವರ್ಮನಿಗಿಂತ ಪೂರ್ವದಲ್ಲೇ, ಎಂದರೆ ಕವಿರಾಜ ಮಾರ್ಗಕಾರನಿಗೆ ಸುಮಾರು ನೂರು ವರ್ಷಗಳ ಅನಂತರ ದಲ್ಲಿ ಮಹಾಕವಿ ಪಂಪಾದಿಗಳಿಂದ ಅಂಥ ಮಾರ್ಗಿಯ ಕಾವ್ಯವರ್ಗವು ತಲೆ ದೊರಿದುದು ಗೊತ್ತಿರುವ ಸಂಗತಿಯಷ್ಟೆ. ಆದರೆ, ಕವಿರಾಜ ಮಾರ್ಗಕಾರನ ಕಾಲದಲ್ಲಿ ಮಾರ್ಗಕಾವ್ಯಗಳು ನೆಲಸಿದ್ದಂತೆ ತೋರುವುದೇ ಇಲ್ಲ. ಅವನಾ ಡುವ ಕನ್ನಡ ಕಾವ್ಯಗಳೆಂದರೆ, ಹಿಂದಿನ ಶ್ರೀ ವಿಜಯಾದಿಗಳಿಂದ ರಚಿತವಾದ ಬೆದಂಡೆ ಚತ್ತಾಣ' ಎಂಬ ಭೇದದ ದೇಸಿಗಬ್ಬಗಳು ಮಾತ್ರವೆ. ನಾಗವರ್ಮನು ಸೂಚಿಸುವ (ಬಾಜನೆಗಬ್ಬ' ಮೊದಲಾದುವೂ ಆ ಜಾತೀಯವಾದ ದೇಶೀಯ ಸಾಹಿತ್ಯ ವರ್ಗದವುಗಳಲ್ಲದೆ ಸರ್ಗಬಂಧದಲ್ಲಿ ರಚಿತವಾದ ಪದ್ಯ - ಗದ್ಯ - ತನ್ನಿಶ್ರವಾದ ಚಂಪು ಎಂಬ ಭೇದದ ಮಾರ್ಗಿಯ ಕಾವ್ಯಗಳಲ್ಲ. ಆ ಬಾಜನೆ ಗಬ್ಬವೆ ಮೊದಲಾದ ಪುರಾತನ ದೇಶಿ – ಕಾವ್ಯವರ್ಗದ ಸಂತತಿಯಲ್ಲಿಯೇ ಇಂದಿನ ಯಕ್ಷಗಾನ ಪ್ರಬಂಧ' ಅಲ್ಲವೆ ಬಯಲಾಟದ ಪ್ರಬಂಧವು ತಲೆದೋರಿದು ದಾಗಿ ನಮ್ಮ ನಂಬುಗೆ, ಬಾಜನೆ' ಅಥವಾ ಹಿಮ್ಮೇಳ ರೂಪದ ವಾದನ ಸಹಿತವಾಗಿ ಯಕ್ಷಗಾನ ಪ್ರಬಂಧವನ್ನು ಹಾಡಬೇಕಾದುದರಿಂದ ಅದಕ್ಕೆ ಆ ಹೆಸರು ಸಾರ್ಥವಾಗಿ ನೆಲಸಿದ್ದಿರಲೂ ಬಹುದು. ಯಕ್ಷಗಾನ ಪ್ರಬಂಧ ಅಥವಾ ದಶಾವತಾರ ಪ್ರಬಂಧ ಎಂದರೆ ದೇಸಿಯಾದ ನಾಟಕವೇ ಎಂಬುದನ್ನು ಮರೆಯ
-
೧೨೩
-
'ಬಾರದು. ಅದರಿಂದಲೆ ನಾಗವರ್ಮನು ಮನ – ಎಂದರೆ ತನ್ನ ಗ್ರಂಥಾಂತ್ಯದ ೨೪೬ - ೨೪೭ನೆಯ ಎರಡು *ಸೂತ್ರಗಳಲ್ಲಿ, ನಾಟಕ ರಚನೆಗೆ ಜೀವಾಳವಾದ (ಮುಖ - ಪ್ರತಿಮುಖ - ಅವಮರ್ಶ - ಗರ್ಭ - ನಿರ್ವಹಣ' ಎಂಬ ಐದು ಸಂಧಿಗಳನ್ನೂ, “ಬೀಜ – ಬಿಂದು- ಪತಾಕೆ – ಪ್ರಕರಿ~ ಕಾರ್ಯ' ಎಂಬ ಐದು ಸಂಧ್ಯಂಗಗಳನ್ನೂ ಕಡೆಗೆ ನಿರೂಪಿಸಿದ್ದಾನೆ. ಈ ಬಾಜನೆಗಬ್ಬವನ್ನೇ ವಿಸ್ತರಿಸಿದ ಮೇಲೆ, ಗ್ರಂಥಾಂತ್ಯದ ಎರಡು ಪದ್ಯಗಳಲ್ಲಿ ನಾಟಕದ ಈ ವಿಶಿಷ್ಟ ಲಕ್ಷಣಗಳನ್ನು ಸೂಚಿಸಿ ಕೊನೆಗೊಳಿಸಬೇಕಾದರೆ, ಆ ಹಿಂದಿನ ದೇಸಿಗಬ್ಬವು, ದೇಶೀಯ ನಾಟಕ ಸ್ವರೂಪವಾಗಿ ಇರಬೇಕೆಂದಲ್ಲವೆ ಸೂಚಿತವಾಗುವುದು? ಅಂತೂ ಕವಿರಾಜ ಮಾರ್ಗಕಾರನು ಸೂಚಿಸುವ ಆ ದೇಸಿಗಬ್ಬದಲ್ಲಿ ನಿರೂಪಿತವಾದ ಬೆದಂಡೆ - ಚತ್ತಾಣ'ಗಳೆಂದರೆ, ಹಿಂದಣ ದೇಸಿಯಾದ ದ್ರಶ್ಯ - ಶ್ರವ್ಯಗಳೆಂಬ ಎರಡೂ ಬಗೆಯ ಕಾವ್ಯಭೇದಗಳಾಗಿ ಇರಬೇಕು.
ಈ ವಿವೇಚನೆಯಿಂದ ಕನ್ನಡದ ಮಾರ್ಗಸಾಹಿತ್ಯ ಸಂಸ್ಕೃತಿಗೆ ಆಧಾರ ವಾದ ಮೇರಗತಿಯ ಲಕ್ಷಣ ಗ್ರಂಥಗಳು ಆಗ ಇದ್ದಿಲ್ಲವೆಂಬುದು ವಿದಿತ
ವಾಗುತ್ತಿದೆಯಷ್ಟೆ. ಲಕ್ಷ್ಯ ಗ್ರಂಥಗಳಾದರೂ ಇದ್ದವು ಪ್ರಕೃತ ಗ್ರಂಥದ ಗಳೆಂದರೆ ದೇಸಿಗಬಕ್ಕೆ ಸೇರಿದುವುಗಳು. ಈ ಸಂದರ್ಭ
* ಉದ್ದೇಶ
" ದಲ್ಲಿ ದೇಸಿ-ಮಾರ್ಗ ಎಂಬ ಕಾವ್ಯಭೇದಗಳ ಸ್ವರೂಪ ವನ್ನು ಒಂದಿಷ್ಟಾದರೂ ಸೂಚಿಸಿಯೇ ಮುಂಬರಿಯಬೇಕಾಗಿದೆ.
ದೇಶ್ಯ ಅಥವಾ ದೇಶಿ ಎಂಬ ಪದವೆ ದೇಸಿ' ಎಂದಾಗಿದೆ. ಯಾವ ಲಕ್ಷಣಕ್ಕೂ ಒಳಗಾಗದೆ, ದೇಸಿ-ಗಬ್ಬಿಗರ ಪ್ರತಿಭಾಬಲ ಮಾತ್ರದಿಂದ ಪದ ಹಾಡುಗಳ ರೂಪದಲ್ಲಿ ಉದಯಿಸಿದುದು ಎಂದು ಇದರ ತಾತ್ಪರ್ಯವಿರಬೇಕು.
* ಸವಸಂದಮುಖಂ ಪ್ರತಿಮುಖ ಮನಮರ್ಶ೦ ಗರ್ಭನಂತೆ ನಿರ್ವಹಣಮೆನಿ | ಪುನವೆಯೆ ಸಂಧಿಯಕ್ಕುಂ ಸುವಿಹಿತ ಕವಿನಹಿತವಿತತ ಕೃತಿ ಪದ್ದತಿಯೊಳ್ ಸೂ. : ೨೪೬ | ಉಪಯೋಗದ ಬೀಜ೦ ಬಿಂ
ದು ಪತಾಕೆ ಪ್ರಕರಿ ಕಾರ್ಯಮೆನೆ ಪಂಚಣಧಂ | ನಿಪುಣ ಕವಿ ರಚನೆಯೊಳ್ ಸ ಪ್ರಪಂಚದಿ೦ದೊ೦ದಿ ತಯಿಗುಂ ಸಂಧ್ಯಂಗರಂ | ಸ. !! ೨೪೭ !!
[ಕಾವ್ಯಾವಲೋಕನ]
ಗಿ
- ೧೨೪ - ಛಂದಸ್ಸು - ಗುಣಾಲಂಕಾರಾದಿ ಲಕ್ಷಣ ಸಂಸ್ಕಾರವನ್ನೊಳಕೊಂಡ ಕವಿಗಳ ಪ್ರತಿಭೆಯಿಂದುಕ್ಕಿದುದು ಮಾರ್ಗ ಸಾಹಿತ್ಯವು. ಈ ಮಾರ್ಗ ಸಾಹಿತ್ಯಕ್ಕಾದರೂ ಮೊತ್ತಮೊದಲು, ಇತರ ಲಾಕ್ಷಣಿಕರು ಬರೆದ ಲಕ್ಷಣ ಗ್ರಂಥಗಳ ಆಧಾರವಿರ ಲಿಲ್ಲ. ಆ ಆದಿ ಮಹಾಕವಿಗಳ ಹೃದಯಗತಾಧಾರವನ್ನೇ ಮತ್ತಿನವರು (ಕವಿ ಸಮಯ' ಎನ್ನುವುದು. ದೇಸಿಯಲ್ಲಿ ಹಾಗಲ್ಲ. ಪ್ರತಿ ಕವಿಯಲ್ಲಿಯೂ ಭಿನ್ನವಾದ ಎಂದೆಂದೂ ಒಗ್ಗುರಿಗೆ ಬಾರದ, ಕ್ಷಣಭಿನ್ನವಾದ ಭಾವನೆಗಳನ್ನೇ ಆ ದೇಸಿಗಬ್ಬ' ಗಳನ್ನು ಚದರಿಸಿ ನಾನಾರೂಪವಾಗಿ ಮಾಡಿದುದು. ಮತ್ತಿನ ಲಾಕ್ಷಣಿಕರು ಎಷ್ಟೊಂದು ಯತ್ನಿಸಿದರೂ ಅವುಗಳು ನಿಯಮಕ್ಕೊಳಗಾಗಲಿಲ್ಲ. ಹಿಂದೆ ವಿಸ್ತರಿಸಿದ ಕವಿರಾಜ ಮಾರ್ಗಕಾರ ಕಾವ್ಯಾವಲೋಕನ ಕರ್ತೃಗಳು ಲಕ್ಷಿಸಿದ (ಬೆದಂಡೆ'ಯ ಸ್ವರೂಪ ನಿರೂಪಣದಲ್ಲೇ ಅನ್ನೋನ್ಯವಾಗಿ ಅಲ್ಪಸ್ವಲ್ಪ ವ್ಯತ್ಯಾಸ ತೋರುವುದನ್ನು ಭಾವಿಸಿರಿ. ಶುದ್ದೀಕೃತವಾದ ಪಾದರಸವೆಂದರೆ ಅಮೃತ; ಶುದ್ದವಾಗದುದೆಂದರೆ ವಿಷವೆಂಬುದನ್ನು ವಿವೇಕಿಗಳು ಮನಗಂಡರು. ಅದ ರಿಂದಲೇ ನಿಯಮಕ್ಕೊಳಗಾಗುವ ಮಾರ್ಗಸಾಹಿತ್ಯವೇ ಆವಶ್ಯಕವೆಂದು ನಮ್ಮ ನೃಪತುಂಗ ಮಹಾ ಸಭಾನುಮತವಾದ ಕವಿರಾಜ ಮಾರ್ಗವೂ ನಿರ್ಧರಿಸಿತು.
ಗ್ರಂಥವಿದು ಬರಿಯ ವಿದ್ಯಾರ್ಥಿವರ್ಗಕ್ಕೆ ಬೋಧಿಸುವುದಲ್ಲ; ಕವಿಗಳೆ ನ್ನಿಸಿದವರ ಹಂತಿಯನ್ನೂಂದಿ ಲೆಕ್ಕಣಿಯನ್ನೆತ್ತಿದವರನ್ನೇ ಕುರಿತಾಡುವುದು. ಅವರೆಲ್ಲ ನಿಜವಾಗಿ ಸಂಸ್ಕೃತ ಪ್ರಾಕೃತಾದಿ ಸಾಹಿತ್ಯಗಳಲ್ಲಿ ಪಳಗಿದ ಕನ್ನಡಿ ಗರೂ ಅಲ್ಲ; ಏನನ್ನೂ ತಿಳಿಯದ ಮೂಢರೂ ಅಲ್ಲ. ಒಂದೆಂದರೆ ಕಡಿಮೆ, ಎರಡೆಂದರೆ ಹೆಚ್ಚು, ಎಂಬಂತಾಗಿ ಆಗಿನ ಕನ್ನಡಕೋಜರೆನ್ನಿಸಿದ ನಾಡವರು ಫಕ್ಕನೆ ಕ್ಷುಬ್ಬರಾಗುತ್ತಿದ್ದರು. ಅವರ ಕೈಯಲ್ಲೇ ಆಗಿನ ಕಾಲದ ಕನ್ನಡ ಸಾಹಿತ್ಯವು ವಿಶೇಷವಾಗಿ ನೆಲೆಗೊಂಡಿದ್ದುದು. ಅದರಿಂದ, ಬಲು ಎಚ್ಚರಿಕೆ ಯೊಡನೆ ಗ್ರಂಥಕಾರನು ಅವರನ್ನು ದಾರಿಗೆಳೆದು ಪಳಗಿಸುವ ಮಾತುಗಳನ್ನು ಗ್ರಂಥದುದ್ದಕ್ಕೂ ಕಾಣಬಹುದು.
ಪರಿಚ್ಛೇದ ೧. ೧. . . . . ಪೂರ್ವಕಾವ್ಯರಚನೆಗಳಂತಾಂ ||
ಮೊದಲೊಳ್ ಕಲ್ಲಂಗಲ್ಲದೆ ಪದದೊಳ್ಳಾಣುಂ ಬೆಡಂಗುಮಪ್ಪುದೆ ಕೃತಿಯೊಳ್
{} ೯ it ,
೨. ನುಡಿವಿಯಲ್ಲದೇಂ ಕ !
ಲೋಡನೋದುವುವಲೆ ಗಿಳಿಗಳುಂ ಪುರುಳಿಗಳುಂ ೩. ತನಗಿನಿತರ ಬೇ |
ವಸಮೇಂ ಕವರ್ದವರು ಮೊಳರೆ ಕವಿಯಲ್ಲದರಂ ೪. . . . . ಸೆಪರ ಮಾತುಗ.
ಳನೆ . . . . ಕೃತಿಯೊಳಿಡುವವಂ ನಗದ ಗುಹಾ | ಧ್ವನಿಯಿಲನರ್ಥವಚನಂ
is ೧೪ is ೫. ವಸ್ತುವಿಸ್ತರವಿಕಲ್ಪ ವಿದನಲ್ಲದಾಗದಾಗದು ಸೇಬಲ್ {} ೨೮ ii ೬. ಪೆರಿಂ ಜಾಣರಿನೊದಿಸಿ ಸೇದು ಕಬ್ಬಮಂ
{$ ೪೫ !! ೭. ಭಾಷಾವಿದರದ ದೆಸೆಯನು೦ಗೀತೆ ಅದಿಂ
fj ೧೧೦ ti ೮. ದೋಷ | ಕ್ಯಾಲಯ ಮದನ ಅದು ಕೃತಿಯೊ
ಆಡದಿರ್ಕ್ಕೆ ಬುಧರ್ & ೧೦೮ || ೯. ವಿವೇಕಿ ಲೋಕಗರ್ಹಿತನಾರ್ಗ೦
: ೧೦೯ ii ೧೦. ಭ್ರಾಂತಿಲ್ಲದ ಅದುಕೊಳ್ಳೆ ಕವಿಗಳ ಕೃತಿಗಳೊಳ್ !! ೧೨೫ .
ಪ್ರಥಮ ಪರಿಚ್ಛೇದದೊಳಗಿನ ಈ ಬಗೆಯ ಬೋಧನೆಗಳೊಳಗಿನಿಂದ ನಾವಿಲ್ಲಿ ಕೆಲವನ್ನೇ ಎತ್ತಿಕೊಂಡುದು. ಕಾವ್ಯದ ಸೌಂದರ್ಯವನ್ನು, ಪ್ರಮುಖ ವಾಗಿ ಕೆಡಿಸುವುದೆಂದರೆ ದೋಷ, ಆ ದೋಷವು ಚತುರನೆನ್ನಿಸಿದ ಕವಿಯ ಕೃತಿ ಯಲ್ಲಾದರೂ, ಅವನಿಗೆ ತಿಳಿಯದಂತೆಯೇ ನುಸುಳಿ ಬಿಡುತ್ತಿದೆ. ದೀಪದ ಅಡಿ ಕತ್ತಲೆಯಾದಂತೆ, ತನ್ನ ನ್ಯೂನತೆ ತನಗೆ ತೋರದಿರುವುದು ಪ್ರಕೃತಿ. ಅದ ರಿಂದಲೇ ಹಿಂದಿನ ಆರನೆ ದೃಷ್ಟಾಂತದಲ್ಲಿ “ಸೆಲರಿಂ ಜಾಣರಿಂ ಓದಿಸಿ” ತಿದ್ದಿಸಿ ಕೊಳ್ಳಬೇಕೆಂದು ಸೂಚಿಸುತ್ತಾನೆ. ವಿದ್ವತ್ಕವಿಯ ಕೃತಿಯಲ್ಲಾದರೂ ದೋಷವು ಹೇಗೆ ಮೈಮರಸಿ ಹೊಕ್ಕು ಬಿಡುತ್ತಿದೆ ಎಂಬುದನ್ನು ಅತ್ಯಾಕರ್ಷಕವಾಗಿ ನಿರೂಪಿಸುತ್ತಾನೆ.
ಗೀತಿಕೆ ದೋಷಮೇನಾನು ಸ್ವಲ್ಪವಾದೊಡಂ
ಮಾಸಿಸಿರ್ಕ್ಕುಮಣಂ ಕೃತಿವಧುವಂ || ಪೇಸದೆ ದುರ್ಜನದೊಳಾದ ಪರಿಚಯಂ ಮಾಸಿಸಿ ಕಿಡಿಸುವ ವೊಲೊಪ್ಪುವ ಕುಲವಧುವಂii ೧೧೨ ||
-
೧೨೬
-
ಇಲ್ಲಿ “ದುರ್ಜನದೊಳ್” ಎಂಬ ನಾ ಮ ಪ ದ ದ ವಿಶಿಷ್ಟಾರ್ಥವನ್ನು, ಸರಿಯಾಗಿ ಗಮನಿಸಿಕೊಳ್ಳಬೇಕು. “ಸಜ್ಜನ' ಎಂದರೆ ಕುಲಸೀ ಎಂದು ಪ್ರಸಿ, ದ್ವಾರ್ಥ, ಈ ದುರ್ಜನ' ಪದಕ್ಕೆ ತದ್ವಿರುದ್ದಾರ್ಥಕವಾದ ಅಕುಲೀನ ಸ್ತ್ರೀ ಎಂಬುದು ಕವಿಯ ಭಾವನೆ. ಕುಲ ಸ್ತ್ರೀಯರಲ್ಲಿ ಹೊಕ್ಕು ಬಳಸುವ ಮನೆ ಗೆಲಸದ ಚೀಟಿಯರೊಳಗೆ, ಅಪ್ಪಿತಪ್ಪಿ ನಡವಳಿ ಮಾಸಿಹೋದ ಹೆಂಗುಸರೂ ಸೇರಿ ಬಿಡುವುದಿದೆ. ಅದನ್ನು ಹೋಲಬರಿದ ಕೂಡಲೆ ತಡೆದು ಬಿಡದಿದ್ದರೆ, ಕ್ರಮೇಣ ಕುಲವಧುವಾದವಳ ನಡವಳಿಯ ಮಾಸಿಬಿಡಬಹುದು. ಅದರಂತೆ ಸುಸಂಸ್ಕೃತ ಕವಿಯ ಕಣ್ಮನಗಳಿಗೂ ಮರೆಯಾದ ಗುಪ್ತ ದೋಷದ ಬಳಕೆ ಯಿಂದಾಗಿ ಕೆಲವೇಳೆ ಕೃತಿವಧುವಾದರೂ ಗತಿಗೆಡುವುದಿದೆ ಎಂಬುದಕ್ಕೆ ಇದ ಕ್ಕಿಂತಲೂ ಅಂದವಾದ ದೃಷ್ಟಾಂತವಾವುದು? ನಿಯಮಿತ ಲಕ್ಷಣ ರಹಿತವಾಗಿರು ವುದರಿಂದಲೇ ದೇಸಿ ಅಷ್ಟೊಂದು ದೋಷ ನಿಬಿಡವಾಗಿರುವುದು. ಅದರಿಂದಲೆ, “ಕಾವ್ಯ ಕಾವ್ಯಕ್ಕೆ ಲಕ್ಷಣಂ' ಎಂದು ಮೇಲಿಂದ ಮೇಲೆ ಭಾವಿಸಿದರೆ ಸಾಲದು; ಪೂರ್ವ ಕಾವ್ಯರಚನೆಗಳಂತಾಂ | ಮೊದಲೊಳ್ ಕಲಿತಿರಬೇಕು; ಅಂಥವನಿಗೇ (ಪದದೊಳ್ ಜಾಣುಂ ಬೆಡಂಗುಂ ಅಪ್ಪುದು' ಎಂದು ಬೋಧಿಸುವುದಕ್ಷಿಸಿರಿ. ಸುಮ್ಮನೆ ಮುಖಪಾಠದ ಕವಿತೆ ಸಾಲದು; ಕಲಿತೋದಿದ ಗಿಳಿಗಳೂ ಕವಿಗ ಳೆನ್ನಿಸುವರೆ? ಎಂಬ ಎರಡನೆಯ ಮಾತಿನಿಂದ ಕವಿಗಳಲ್ಲಿ ಪ್ರತಿಭೆಯ ಆವಶ್ಯ ಕತೆಯನ್ನು ಹೊಳೆಯಿಸಿದ್ದಾನೆ. ಹಾಗೆ ಪ್ರತಿಭೆಯಿಲ್ಲದವರು ಓದಿ ರಸಿಕ ವಿದ್ವಾಂಸರೆನ್ನಿಸಿ ತಾವು ಕೃತಾರ್ಥರಾಗುವುದಲ್ಲದೆ, ವಿದ್ಯಾರ್ಥಿಗಳಿಗೆ ಬೋಧಿಸಿ ಸಮಾಜೋದ್ಧಾರವನ್ನೂ ಮಾಡಬಹುದು. ಹಾಗೆಸಗದೆ ಪ್ರತಿಭಾ ರಹಿತರಾ ದವರು, ತಾವೂ ಕವಿಗಳಾಗಬೇಕೆಂಬ ದುರಾಶೆಗಿಳಿದು ಓದುಗರಿಗೂ ತಲೆನೋವ ನೈಕೆ ಒದಗಿಸುವುದು? ಎಂಬುದನ್ನು (ತನಗಿನಿತರ ಬೇ ! ನಸಮೇಂ ಕವರ್ದ ವರುಮೊಳರೆ ಕವಿಯಲ್ಲದರಂ' ಎಂಬ ಮಾತಿನಿಂದ ಬಲು ಚಂದವಾಗಿ ವರ್ಣಿಸಿ ದ್ದಾನೆ. ಈಗ ಅಧಿಕ ಶ್ರೀಮಂತರಾದವರು ಆಭರಣಗಳನ್ನು ತಮ್ಮ ಮನೆಯೊಳಗೆ ಇಟ್ಟುಕೊಂಡರೆ ಕಳ್ಳರ ಬಾಧೆಯೊದಗಬಹುದು ಎಂದು ಶಂಕಿಸಿ-ಕೋಶಗೃಹ (ಬೇಂಕುಗಳಲ್ಲಿರಿಸುವುದುಂಟು. ಕಾವ್ಯವನ್ನು ಬರೆಯದಿದ್ದರೆ ಅವರ ವಿದ್ಯಾ ಧನವನ್ನು ಯಾವ ಕಳ್ಳನಾದರೂ ಅಪಹಾರವೆಸಗುವನೆ? ಎಂಬ ಮಾತನ್ನು ಕೇಳುವಲ್ಲಿ ಈ ಮೇಲೆ ಸೂಚಿಸಿದ ಹೋಲಿಕೆ ನೆನಪಾಗುತ್ತಿದೆ. ಇಂಥ ದೋಷ ಗಳೆಲ್ಲವೂ ದೇಸಿಗಬ್ಬಗಳಲ್ಲಿಯೇ ಹೆಚ್ಚಾಗಿ ತಲೆದೋರುವುದು, ಅದರಿಂದಲೆ,
- ೧೨೭ - ಕಾವ್ಯರಚನೆಗಳನ್ನು ಅಥವಾ ಕಾವ್ಯಮಾರ್ಗವನ್ನು ಸರಿಯಾಗಿ ಪರಾಂಬರಿಸಿ , ಭ್ರಾಂತಿಗೊಳ್ಳದೆ ದೋಷವನ್ನುಳಿದು ಕೃತಿಯ ರಚನೆಯಲ್ಲಿ ಪಳಗಬೇಕು. ಅದ ರಿಂದ, ದೋಷವನ್ನಲ್ಲಗಳೆವ ಗುಣಾಲಂಕಾರಗಳನ್ನು ಒಳಗೊಳ್ಳುವ ಸಾಮರ್ಥ್ಯ ವುಂಟಾಗುವುದು. ಅಲ್ಲಿಯ ಜಾಣೆ ಹೇಗೆ ಆವಶ್ಯಕವೆಂಬುದನ್ನು ಮುಂದೆ , ಕಾಣಿಸಿದ ಎರಡು ಮೂರನೆಯ ಪರಿಚ್ಛೇದಗಳೊಳಗಿನ ಎಚ್ಚರಿಕೆಯ ಮಾತು -
ಗಳಿಂದ ಭಾವಿಸಿರಿ.
ಪರಿಚ್ಛೇದ ೨ ೧. ನೆಲ್ಲುಂ ಮೊಸರುಂ ಗುಡಿದಂ |
ತಲ್ಲದೆ ತಲ್ಲಣಿಸದಲಸದಿಡು ಮೃದುಪದನಂ
11 ಪ. ೪ 18 ೨. ಮುತ್ತುಂ ಮೇಲಿಸುಂಕೊದಂತಕ್ಕುಂ | ಕಬಳ್ಳಿ ಕಟ್ಟೆ
ಗೊಂದಿ ಮುಂದೆ ಬಾರದ ಪದನಂ
3 ೫ { ೩. ಕೂಸಿನ ತಲೆಯೊಳ್ ಬಿಡೋಯನಿಟ್ಟವೋಲಸುಖಕರಂti ೬ ! ೪. ಎಂದುಂ ನಿಅಸಲ್ಯಲ್ಲದೆಡೆಗಳೊಳ್ ಕಲ್ಲದಿರಿಂ
{{ ೧೩ !! ೫. ಎಂದುಂ ಬಲ್ಲವರಿಡದಿರ್ಕ್ಕಾ
ದಂಬಾಯಲದೂವೊಲ್ಕರಂ ವಿರಸಕರಂ
{! ೨೩ || ೬, ಕರ್ವಿನ' ತುದಿಯಂತಿರೆ ವಿರಸವಕ್ಕುವುದು
& ೮೮
ಪರಿಚ್ಛೇದ ೩ ೧. ಅಲಸದೆ ಸೇಲಂತು ಹೇತುರೂಪಕವಿಧಿಯಂ ೨. ಅತಿನಿಪುಣರಳಿದುಕೊಳ್ಳಿ ನುಮತಿಯಿಂ
_si ೧೦೭ 11 - ೩. ಗುಣಮಂ ಕೈಕೊಳ್ವಂತಾಗಿರೆ ಬಗೆದುಪೇ
« ೧೫೪ !! ೪, ಅದಂ ಕಾವ್ಯದೊಳಿಂತು ಸೇವಿ
Bi ೧೫೭ !! ಮೇಲೆ ಕಾಣಿಸಿದುದು “ಸ್ಥಾಲೀಪುಲಾಕ ನ್ಯಾಯದಿಂದ; ಎಂದರೆ ಒಲೆ ಯೊಳಗೆ ಪಾತ್ರದಲ್ಲಿಟ್ಟು ಬೇಯಿಸುವ ಅನ್ನದಿಂದ ಒಂದಿಷ್ಟನ್ನು ಸವುಟಿನಿಂದ “ಇದು ಬೆಂದಿದೆಯೋ ಇಲ್ಲವೋ?' ಎಂದು ಪರಾಂಬರಿಸುವಂತೆ, ಇದಕ್ಕಿಂತಲೂ ಹೆಚ್ಚಿನ ಭಾಗವನ್ನೆಲ್ಲ ವಾಚಕರು ಗ್ರಂಥವನ್ನೇ ಓದಿಕೊಂಡು ನಿರ್ಧರಿಸಿಕೊಳ್ಳ ಬೇಕು. ಈ ಬಗೆಯಲ್ಲಿ ವಿಶಿಷ್ಟವಾಗಿ, ಕವಿಗಳೆಂಬವರ ಎದೆಯನ್ನೇ ಕುರಿತ ಬಲು ಅಂದವಾದ ಬೋಧನೆಗಳು, ಹಿಂದಿನ ಸಂಸ್ಕೃತ ಲಕ್ಷಣ ಗ್ರಂಥಗಳಲ್ಲಿಯೂ ,
-
೧೨೮
-
ಮತ್ತಿನ ಕನ್ನಡದ ಕಾವ್ಯಾವಲೋಕನಾದಿಗಳಲ್ಲಿಯೂ ತೋರುವುದಿಲ್ಲ, ಆಯಾ ಗ್ರಂಥಕಾರರಿಗೆ ಈ ಬಗೆಯಲ್ಲಿ ಬೋಧಿಸಬೇಕಾದ ಸಂದರ್ಭವೇ ಒದಗಲಿಲ್ಲ ಎಂಬುದೇ ಅದರ ತಾತ್ಪರ್ಯವು. ಈ ಮಾತುಗಳನ್ನಾಲಿಸಿದಲ್ಲಿ, ಈಗಿನ ಉಪಾಧ್ಯಾಯ ವೃತ್ತಿಯನ್ನು ಕಲಿಸುವ ಚತುರನಾದ ಆಚಾರ್ಯ (Professor of the Training College) ನು ತನ್ನ ಶಿಷ್ಯರಾದ ಉಪಾಧ್ಯಾಯರಿಗೆ ಹೇಗೆ ಆಯಾ ವಿಷಯಗಳನ್ನು ಬಿಡಿಸಿ ಬಿಡಿಸಿ ಮಂದಟ್ಟಾಗುವಂತೆ ನಿರೂಪಿಸು ತ್ಯಾನೋ ಹಾಗೆ ಗ್ರಂಥಕಾರನು ಆಗಿನ ಕನ್ನಡ ಕವಿ ವರ್ಗಕ್ಕೆ ಬೋಧಿಸುವಂತೆ ತೋರುತ್ತಿದೆಯಲ್ಲವೆ? ಮಹಾಕವಿಯ ಪದವಿಗೆ ಏರಬೇಕಾದವನ ಸ್ವಭಾವ, ಆತನ ಅಭ್ಯಾಸ ಕ್ರಮ ಮೊದಲಾದವುಗಳೆಲ್ಲ ಹೇಗಿರತಕ್ಕುವುಗಳೆಂಬುದನ್ನು, ತರುಣರಾಗಿ ಮುಂದೆ ಪಳಗಲಿರುವ ಕವಿಗಳ ಎದೆ ಹಲಗೆಯಲ್ಲಿ ಗ್ರಂಥಕಾರನು ಚಿತ್ರಿಸುವುದನ್ನೇ ಕಾಣುತ್ತೇವೆ. ಅವುಗಳನ್ನು ಇಂದಿನ ಕವಿಗಳು ಮಾತ್ರವೇ ಅಲ್ಲ; ಎಲ್ಲರೂ ಮರೆಯದೆ ಹೃದಯಲ್ಲಿ ಅಚೋತ್ತಿಕೊಳ್ಳತಕ್ಕುದು ಎಂದೆಣಿಕೆ ಯಿಂದ ಅವುಗಳೊಳಗೆ ಕೆಲವಾದ ಆದಿಯ ಪದ್ಯಗಳನ್ನು ಕೆಳಗೆ ದೃಷ್ಟಾಂತಿ ಸುತ್ತೇವೆ.
ಪ್ರಥನು ಪರಿಚ್ಛೇದ ಗುಣಮಿದು ದೋಷವಿದೆಂಬೀ ಗಣಿದಮನೆ ಆಗುಮಶ್ರುತ ಪ್ರಕೃತಿಜನಂ : ತೃಣಸಸ್ಯಘಾಸ ವಿಷಯ ಪ್ರಣಯಂ ಸಮವೃತ್ತಿಯಪ್ರಿಲ್ ಮೃಗಗಣದೊಳ್ li ೮ ti ಅದeಂ ಪರಮಾಗಮ ಕೋ ವಿದನಪ್ಪುದು ಪೂರ್ವಕಾವ್ಯ ರಚನೆಗಳಂತಾಂ : ಮೊದಲೊಂಗಲ್ಲದೆ ಪದದೊಳ್ ಜಾಣುಂ ಬೆಡಂಗುಮಪ್ಪುದೆ ಕೃತಿಯೊಳ್ || ೯ || ಜಡಜನವು ಮೆಲ್ಲಮೋದಂ ತಡೆಯದೆ ಕಲ್ಲುಂ ಗುರೂಪದೇಶ ಕ್ರಮದಿಂ | ನುಡಿವಿಯಲ್ಲದೇಂ ಕ ಲೈಡನೋದುವುವ ಗಿಳಿಗಳುಂ ಪುರುಳಿಗಳುಂ ii to ki
{} ೧೧ 83
_{{೧೨ {
1೧೩ 15
- ೧೨೯ - ಪ್ರತಿಭಾವತ್ವಮುಮ ಕೃತಕ ಚತುರತೆಯುಂ ಪರಮಬುಧ ಜನೋಪಾಸನಮುಂ | ಕೃತಿ ಪರಿಚಯಮುಂ ತರ್ಕ್ಕು೦ ಪ್ರತೀತಿಯಂ ವಾದಗ್ಗತಾ ನಿಪುಣತೆಯೊಳ್ ಪಸರಿಸಿದಾಬಗೆ ಮನಮಂ ಪೊಸತಾಗೆ ನೆಗಟ್ಟಲಅಯನಾ ರಚನೆಯೊಳೇಂ !
ಬೆಸನಂ ತನಗಿನಿತು ಬೇ ವಸಮೇಂ ಕವರ್ದವರು ಮೊಳರೆ ಕವಿಯಲ್ಲದಂ ಬಗೆಬಗೆದು ಕೇಳು ಬುಧರೊಲ ವೊಗೆದಿರೆ ಹೃದಯದೊಳೆ ತಾಳಿ ಮಣಿ ಹಾರಂಬೊಲ್ 13 ಸೊಗಯಿಸುವ ವಚನವಿರಚನೆ | ನೆಗಟ್ಟುಂ ಭಾವಿಸುವೊಡದಅಪೆಂಪತಿ ಸುಲಭಂ ನೆನೆನೆನೆದು ಪೆಜರ ಮಾತುಗ ಆನೆ ನೆಗರೆ ಕೃತಿಯೊಳಿಡುವವಂ ನಗದ ಗುಹಾ | ಧ್ವನಿಯ ವೋಲನರ್ಥವಚನಂ ತನಗಾಗಿಸಲಜಿಯನುಚಿತ ವಾಕ್ಚತುರತೆಯಂ ಕುಳಿತಂತು ಪೆಅರ ಬಗೆಯಂ ತೆರೆದಿರೆ ಪೊಅರ್ಗ ಅಪಲಾರ್ಪವಂ ಮಾತಆವಂ | ಕಿಅರಿದ ತೊಳೆ ಪಿರಿದುಮರ್ಥಮ ನಅಪಿಆಿವಾತ ನಾತನಿಂದಂ ನಿಪುಣಂ ನುಡಿಯಂ ಛಂದದೊಳೊಂದಿರೆ ತೊಡರ್ಚಲ ಆವಾತನಾತನಿಂದಂ ಜಾಣಂ !! ತಡೆಯದೆ ಮಹಾಧ್ಯ ಕೃತಿಗಳ ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ
ಮಾತಆವರ್ ಕೆಲಬರ್ ಜಗ ತೀ ತಳಗತ ಮನುಜರೊಳಗೆ ಮಾತವವರೊಳ್ 8 ನೀತಿಯುತರನಳ ಕವಿತಾ ನೀತಿಯುತರ ಕೆಲರೆ ಪರಮ ಕವಿವೃಷಭರ್ಕಳ್
} ೧೪ }
{{ ೧೫ }
11 ೧೬ ||
}} ೧೭ }
-
೧೩೦
-
ಕನ್ನಡ ವಾಹ್ಮಯದೊಳಗೆ ಆಗಿನ ಕಾಲದಲ್ಲಿ ಗದ್ಯಭಾಗವು ಬಹುಶಃ ಮಾರ್ಗಾನುಸಾರವಾಗಿ ವೃದ್ದಿಂಗತವಾಗಿತ್ತೆಂಬ ಗ್ರಂಥಕಾರನ ಭಾವನೆಯನ್ನು ಹಿಂದೆಯೇ ಸೂಚಿಸಿದ್ದೇವೆ. ಆದರೂ ಕನ್ನಡ ಸಾಹಿತ್ಯವು ಸರ್ವಾತ್ಮನಾ ಏಳಿಗೆ ಗೊಳ್ಳಬೇಕಾದರೆ ಮಾರ್ಗಾನುಸಾರವಾಗಿ ಕನ್ನಡ ಪದ್ಯ ಕಾವ್ಯ ಸಂಸ್ಕೃತಿ ನಾಡಿ ನಲ್ಲಿ ಬೇರೂರಬೇಕಾಯಿತು. ಅದಕ್ಕಾಗಿಯೇ ಈ ಲಕ್ಷಣ ಗ್ರಂಥದ ಉದಯ ವಾದುದು. ಅಂಥ ಪದ್ಯ ಕಾವ್ಯದ ಉತ್ತಮತೆಯ ಸ್ವರೂಪವೆಂಥದು ಎಂಬು ದನ್ನು ಗ್ರಂಥಕಾರನೇ ಸೂಚಿಸುವ ಮುಂದಿನ ಪದ್ಯವನ್ನೀಕ್ಷಿಸಿರಿ:
ಪಾಪವಿದು ಪುಣ್ಯ ಮಿದು ಹಿತ ರೂಪಮಿದಹಿತ ಪ್ರಕಾರವಿದು ಸುಖಮಿದು ದುಃ | ಖೋಪಾತ್ರವಿದೆಂದಱ ಪುಗು
ಮಾಪರಮಕವಿ ಪ್ರಧಾನರಾಕಾವ್ಯಂಗಲ್ t ೧೮ || ಪರಿ. ೧.
ಅಂಥ ಮಾರ್ಗ ಕಾವ್ಯರಚನೆಗೆ ಶಿಲ್ಪಶಾಸ್ತ್ರಸಮಾನವಾದ ಈ ಲಕ್ಷಣ ಗ್ರಂಥವನ್ನು ಮೊತ್ತಮೊದಲು ನಿರ್ಮಿಸಿದ ನಮ್ಮ ಕನ್ನಡದ ವಾಗಧಿಪನನ್ನೂ, ಅಂಥವನನ್ನೇ ಈ ಮಹಾಕಾರ್ಯಕ್ಕೆ ಆರಿಸಿ ಕನ್ನಡ ಸಾಹಿತ್ಯೋದ್ದಾರಕನಾದ ವಿವೇಕ ಬೃಹಸ್ಪತಿ ಉದಾರ - ನೃಪತುಂಗ ದೇವನನ್ನೂ ಕನ್ನಡ ಸಾಹಿತ್ಯವು ಮರೆಯಲಾದೀತೆ? ಒಂದು ವೇಳೆ ಮರೆತುಬಿಟ್ಟರೆ ನೆನೆವುದಾದರೂ ಯಾರನ್ನು?
ಹಿನ್ನೋಟ
ಪರಾಂಬರಿಸಿದಲ್ಲಿ ಲೇಖವಿದು ಮುಂದಿನ ಕವಿರಾಜಮಾರ್ಗ ವಿವೇಕ'ಕ್ಕೆ ಮುನ್ನುಡಿಯಾಗಿದ್ದರೂ, ವಿಷಯ ಪ್ರಮಾಣ ಬಾಹುಳ್ಯದಿಂದಾಗಿ ಒಂದು ಸ್ವತಂತ್ರ ಗ್ರಂಥರೂಪವಾಗಿಯೇ ಮಾರ್ಪಟ್ಟಿತು, ಆಯಾ ವಿಷಯಗಳನ್ನೊಮ್ಮೆ ಹಿನ್ನೋಟದಿಂದ ಪರಾಂಬರಿಸುತ್ತೇವೆ. ಹಾಗೆ ಪರಾಂಬರಿಸುವಲ್ಲಿ ಭಾವನೆಗಿದಿ ರಾಗುವ ಹೆಗ್ಗುರಿಗಳನ್ನು ಇಷ್ಟಷ್ಟು ಮನನಮಾಡಿಕೊಂಡು ಸಾಗುವ ಓದಾಳಿ ಗಳಿಗೆ ಒಂದಿಷ್ಟು ಕೈಗೊಟ್ಟಂತಾಗುವುದು ಎಂದು ನಂಬಿರುತ್ತವೆ,
ಆದಿಯ ರಾಷ್ಟ್ರಕೂಟ ವಂಶ' ಎಂಬ ಭಾಗದಲ್ಲಿ, ಕವಿರಾಜ ಮಾರ್ಗಕ್ಕೆ ಆಶ್ರಯದಾತನಾದ ನಮ್ಮ ಅಮೋಘವರ್ಷ ನೃಪತುಂಗನ ವಂಶವು, ಹಿಂದಿನ ಯಾವ ಕಾಲದಿಂದ - ರಾಷ್ಟ್ರಕೂಟ' ಎಂಬ ಹೆಸರನ್ನೊ೦ದಿತು? ಆ ಮೊದಲು ಅದಕ್ಕೆ ಯಾವ ಹೆಸರಿದ್ದಿರಬೇಕು? ಎಂಬುದೆ ಮೊದಲಾದ ಸಂಗತಿಗಳನ್ನು ಸಾಧಾರವಾಗಿ ಚಿತ್ರಿಸಿದೆವು. ರಾಷ್ಟ್ರಕೂಟ ಸಿಂಹಾಸನ ಸ್ಥಾಪನಾಚಾರ್ಯ ನೆನ್ನಿಸಿ ಈಗ ಚರಿತ್ರ ಪ್ರಸಿದ್ಧನಾದ ದಂತಿದುರ್ಗನೇ ಆಕುಲಸ್ಥಾಪಕನಲ್ಲ; ಅವನಜ್ಜನಾಗಿದ್ದ ಒಂದನೆ ಕರ್ಕ (ರಟ್ಟ) ನೇ ಅದಕ್ಕೆ ಅಡಿಗಲ್ಲನ್ನು ತಯಾರಿಸಿದರೆ, ಆಕರ್ಕನ ಮಗನೂ ದಂತಿಗನ ತಂದೆಯೂ ಆದ ಎರಡನೆಯ ಇಂದ್ರರಾಜನೆ ಅದನ್ನು ಹೂಡಿ ನೆಲೆಗೊಳಿಸಿದವನು. ಆ ರಾಷ್ಟ್ರಕೂಟ ವಂಶದ ಹಿಂದಿನ ಹೆಸರು ಆಭೀರ ವಂಶವೆಂದೇ ಆಗಿರಬೇಕು. ಆಭೀರವಂಶದ ಹಲವು ಮನೆತನದವರು ಬಹುಶಃ ಕ್ರಿ. ಶಕದ ಆದಿಯಿಂದಲೇ ವಿಂಧ್ಯಾದ್ರಿಯ ಪ್ರದೇಶದಲ್ಲಿ ರೇವಾ ಗೋದಾವರೀ ನದಿಗಳ ಅಕ್ಕಪಕ್ಕಗಳಲ್ಲಿ ನೆಲಸಿಕೊಂಡಿದ್ದರು. ಈ ಅಂಶವು * ಗಾಥಾಸಪ್ತಶತಿ' ಎಂಬ ಅತಿ ಪುರಾತನವಾದ ಪ್ರಾಕೃತ ಭಾಷೆಯ ಕಾವ್ಯ
ದಿಂದಲೂ ಹೊಳೆಯುತ್ತಿದೆ. ಹಲಮಂದಿ ಕವಿಗಳಿಂದ ಬರೆಯಲ್ಪಟ್ಟ ಆ ಕಾವ್ಯದ ಪ್ರಮುಖ ಸಂಪಾದಕನಾದ ಹಾಲರಾಜನೂ, ನೆರವಾಗಿ ಬರೆದ ಕವಿಗಳೂ ಬಹುಶಃ ಈ ಆಭೀರ ವಂಶದವರೆಂದೇ ಭಾಸವಾಗುತ್ತಿದೆ. ವಿಂಧ್ಯದಿಂದ ಗೋದಾ ವರಿ ವರೆಗಿನ ಪ್ರಾಂತದ ಪ್ರಕೃತಿ ಸೌಂದರ್ಯವನ್ನೂ, ಅಲ್ಲಿಯ ಆಭೀರ ಸಮಾ ಜದ ಯುವಕ-ಯುವತಿಯರ ವಿಲಾಸಗಳನ್ನೂ ಮೀಸಲಾಗಿಟ್ಟು ವಿಸ್ತರಿಸುವ
-
೧೩೨ -
ಕಾವ್ಯವೇ ಗಾಥಾಸಪ್ತಶತಿ, ಆಭೀರರೆಂದರೆ, ಪಶುಪಾಲನ-ಕೃಷಿಗಳೇ ಪ್ರಮುಖ ವೃತ್ತಿಯಾಗಿರುವ ಗೊಲ್ಲರು; ಅವರಿಗೇ ರಟ್ಟರು ಎಂಬ ನಾಮಾಂತರವು. ಆ ಅಭೀರ ವಂಶದ ರಟ್ಟರ ಭಿನ್ನಭಿನ್ನ ವರ್ಗಗಳೇ ಕೂಟವಡೆದು ಒಂದಷ್ಟು ಪ್ರಬಲ ವಾದ ಮೇಲೆ ರಾಷ್ಟ್ರಕೂಟ ಕುಲವೆಂದು ಹೆಸರುಗೊಂಡಿತು. ಆ ಮೇಲೆ ದಂತಿ ದುರ್ಗಾದಿಗಳ ಪ್ರತಾಪಗಳಿಂದ ಕೀರ್ತಿಗೊಂಡ ಆ ಕುಲಕ್ಕೆ (ಯಾದವವಂಶ? ಎಂಬ ನಾಮಾಂತರವೂ ಆಯಿತು. ಪೌರಾಣಿಕ ಯಾದವರಾದ ಶ್ರೀಕೃಷ್ಣ -ಬಲ ಭದ್ರರ ಸಂಬಂಧದಿಂದ ಕೂಡಿ ಹೆಣೆದುದಲ್ಲವೆ ಆ ಗೊಲ್ಲರ ವಂಶವು?
ಆ ಮೇಲೆ ಕ್ರಮವಾಗಿ ದಂತಿದುರ್ಗ - ಶುಭತುಂಗ ಕೃಷ್ಣರಾಜ - ನಿರು ಪಮಧುವರನ್ನು ವರ್ಣಿಸಿರುತ್ತೇವೆ. ಈ ಮೂವರೂ ಅಸಮಾನ ಪರಾಕ್ರಮಿ ಗಳಷ್ಟೇ ಅಲ್ಲ; ಆ ಕುಲದ ಗೌರವವನ್ನು ಪ್ರಪಂಚದಿದಿರಿನಲ್ಲಿ ಎತ್ತಿಹಿಡಿದವರು. ಚಾಲುಕ್ಯ ಕೀರ್ತಿವರ್ಮನನ್ನು ಗೆದ್ದು ಅವನ ಮಗಳನ್ನು ಪಟ್ಟದರಸಿಯನ್ನಾಗಿ ಕೈವಿಡಿದ ದಂತಿದುರ್ಗನ ಆಳಿಕೆ, ಸುಮಾರು ಕ್ರಿ.ಶ. ೭೪೭ರಿಂದ ೭೫೩ರ ವರೆಗೆ ಸಾಗಿತು. ಈ ಮೂವರೊಳಗೆ ಒಬ್ಬನಲ್ಲಿ ಒಂದು ಗುಣ ಹೆಚ್ಚಾದರೆ, ಇನ್ನೊಬ್ಬ ನಲ್ಲಿ ಬೇರೊಂದು ಗುಣ ಅಧಿಕವಾಗಿರಬಹುದು. ಅಂತೂ ಮೂವರೂ ಒಂದೇ ಸಾಲಿನ ವೀರಚೂಡಾಮಣಿಗಳೆಂದು ನಮ್ಮ ಭಾವನೆ. ಆದರೆ ಇವರೊಳಗೆ ಕಡೆ ಯವನಾದ ನಿರುಪಮ ಧ್ರುವನ ಮಗ ಜಗತ್ತುಂಗ ಗೋವಿಂದರಸನೆಂದರೆ ಎಲ್ಲ ವಿಷಯಗಳಲ್ಲಿಯೂ ಅಸಾಮಾನ್ಯನು. ಹಿಂದಿನ ಮೂವರ ಸದ್ಗುಣಗಳೆಲ್ಲವೂ ಆತನಲ್ಲಿ ಮೂರ್ತಿಗೊಂಡಿದ್ದುವು ಎಂದರೂ ಒಂದಿಷ್ಟು ಕಡಿಮೆಯೇ ಆದೀತು. ಕ್ರಿ. ಶ. ೭೯೩ರಿಂದ ೮೧೩ರ ವರೆಗೆ ಅವನ ಆಳಿಕೆ ಉತ್ತರೋತ್ತರಾಭಿವೃದ್ದವಾಗಿ ಸಾಗಿತು. ಸುಮಾರು ಒಂಬತ್ತನೆಯ ಶತಮಾನದಾದಿಯಿಂದ ತನ್ನಾಳಿಕೆಯ ಕಡೆಯ ವರೆಗೆ ಹಿಮಗಿರಿಯಿಂದ ಹಿಡಿದು ಲಂಕಾಂತವಾದ ಭಾರತಭೂಮಿಗೆ ಚಕ್ರವರ್ತಿಯಾಗಿದ್ದನು. ಆ ಮೊದಲಿನ ಶಕಪುರುಷರೆನ್ನಿಸಿದ ವಿಕ್ರಮಾದಿತ್ಯ - ಶಾಲಿವಾಹನರು ಚಕ್ರವರ್ತಿಗಳಾಗಿದ್ದರು ಎನ್ನುತ್ತಾರೆ. ಆದರೆ, ಅದರ ಸಿದ್ಧಾಂತ ವಿನ್ನೂ ಚಾರಿತ್ರಿಕ ದೃಷ್ಟಿಯಿಂದ ನೆಲೆಗೊಳ್ಳಲಿಲ್ಲ. ಮೌಲ್ಯಕುಲದ ಅಶೋಕನನ್ನು ಚಕ್ರವರ್ತಿ ಎನ್ನುತ್ತಾರೆ. ಅವನು ಮಹಾ ಪರಾಕ್ರಮಿಯೂ ಹೌದು. ಆದರೆ, ಅವನ ಸಾರ್ವಭೌಮತೆ, ಅಹಿಂಸಾತತ್ಯಪ್ರಸಾರಕ ಮಾರ್ಗದಿಂದ ಪ್ರಾಪ್ತ
-
೧೩೩ -
ವಾದುದಲ್ಲದೆ ಭುಜಬಲದಿಂದಲ್ಲ. ನಮ್ಮ ಗೋವಿಂದರಾಜನ ಸರ್ವಾಧಿಪತ್ಯ ವೆಂದರೆ ಅಂಥದಲ್ಲ; ತನ್ನ ಬಾಹುಬಲದಿಂದಲೇ ಒದಗಿದುದೆಂಬುದನ್ನು ಈ ಗ್ರಂಥದಲ್ಲಿ ಶಾಸನಾದಿಗಳ ಆಧಾರದಿಂದಲೇ ಕಾಣಿಸಿದ್ದೇವೆ. ಈ ವಿಷಯವೆಂದರೆ ನಮ್ಮದೇ ಆದ ನೂತನ ಸಿದ್ದಾಂತವಲ್ಲ. ಶ್ರೀ. ಎ. ಎಸ್. ಅಳೇಕರರು ತಮ್ಮ “ರಾಷ್ಟ್ರಕೂಟರೂ ಅವರ ಕಾಲವೂ” (Rashtra Kutas and Their Times) ಎಂಬ ಚಾರಿತ್ರಿಕ ಗ್ರಂಥದಲ್ಲಿ ಸಂಪೂರ್ಣವಾಗಿ ವಿಷಯವಿದನ್ನು ಒಪ್ಪಿಕೊಂಡು ಸಾಧಾರವಾಗಿ ನಿರೂಪಿಸಿದ್ದಾರೆ. ಹೀಗೆ ಚಾರಿತ್ರಿಕವೆನ್ನಿಸಿ ಸಿದ್ದ ವಾದ ಅಖಂಡ ಹಿಂದುಸ್ಥಾನದ ಚಕ್ರವರ್ತಿವು ನಮ್ಮ ಕನ್ನಡ ವೀರ ಜಗತ್ತುಂಗನೊಬ್ಬನಿಗೇ ಸ್ವಸಾಹಸ ಫಲವಾಗಿ ಲಭಿಸಿದುದು ಎಂಬುದನ್ನು ಕನ್ನಡಿಗರು ಕೇಳಿ ಹುರುಸೇರಬೇಡವೆ?
ಆ ಜಗತ್ತುಂಗನ ಏಕಮಾತ್ರ ಕುಮಾರನಾದ ನೃಪತುಂಗನು, ಶಾಸನ ಚರಿತ್ರಗಳಲ್ಲಿ ಸಿದ್ಧವಾಗಿರುವಂತೆ ಅಳುತ್ತಿದ್ದುದು ಮಾನ್ಯಖೇಟ (ಮಳಖೇಡ) ರಾಜಧಾನಿಯಲ್ಲಿ. ಅದು, ಈಗಿನ ಹೈದರಾಬಾದಿನೊಳಗಿನ ಪಟ್ಟದ ಕಲ್ಲು ಎಂಬಲ್ಲಿಗೆ ಹತ್ತಿರದಲ್ಲಿರುವ ಮಳಖೇಡವು. ಅದಿರಲಿ, ಇಂಥ ದಂತಿದುರ್ಗಾದಿ ಪ್ರಮುಖ ರಾಜರ, ಅವರೊಳಗೂ ಚಕ್ರವರ್ತಿ ಗೋವಿಂದನ ರಾಜಧಾನಿ ಎಲ್ಲಿ? ಯಾವುದು? ಎಂಬ ವಿಚಾರವು ಈ ವರೆಗೆ, ಸಿದ್ಧಾಂತದಲ್ಲಿ ಕೊನೆಗೊಳ್ಳದಿದ್ದುದು ಆಶ್ಚಯ್ಯ ಮತ್ತು ವ್ಯಸನಾಸ್ಪದ. ಆ ರಾಜಧಾನಿ ವಿಂಧ್ಯಾದ್ರಿಯ ಒಂದು ಶಿಖರದ ಮೇಲೆ ನೆಲಸಿತ್ತು; ರೇವಾ' ಎಂಬುದೇ ಅದರ ಹೆಸರು; ರೇವಾ (ನರ್ಮದಾ) ನದಿಯ ಪಕ್ಕದಲ್ಲೇ ನೆಲೆಗೊಂಡುದರಿಂದ ಅದಕ್ಕೆ ಆ ಹೆಸರಾಯಿತು; ಮೊದ ಲಾದ ಅಂಶಗಳನ್ನು ಸಾಧಾರವಾಗಿ ವಿಸ್ತರಿಸುವ ಪುಣ್ಯವು ಮೀಸಲಾಗಿ ನಮಗೆ ಒದಗಿದುದಕ್ಕೆ ಆನಂದಪಡಬೇಕಾಗಿದೆ. ಬಹುಶಃ ಆ ಹಿಂದಿನ ಅರಸರೂ ಅದೇ ರಾಜಧಾನಿಯಲ್ಲಿ ಆಳುತ್ತಿದ್ದ ರಾಗಿ ಭಾವಿಸಲಿಕ್ಕೆ ಆಸ್ಪದವಿದೆ. ಆ ವಿಂಧ್ಯಾದಿ ಪಾದದ ರೇವಾ ರಾಜಧಾನಿಯಲ್ಲಿ ನೆಲಸಿ ಚಕ್ರವರ್ತಿ ಎನ್ನಿಸಿ ಆಳುತ್ತಿದ್ದವನಾದ ಗೋವಿಂದರಾಜನ ಬಿರುದು ಜಗತ್ತುಂಗ ಎಂದಿದ್ದುದು ಸಾರ್ಥಕವಲ್ಲವೆ?
ಆ ಭಾರತ ಚಕ್ರವರ್ತಿಯ ಏಕಮಾತ್ರ ಕುಮಾರಕನಾದ ಅಮೋಘ ವರ್ಷ ನೃಪತುಂಗನೇ ನಮ್ಮ ಕವಿರಾಜ ಮಾರ್ಗಕ್ಕೆ ಆಶ್ರಯದಾತನು, ಅವನು
-
೧೩೪
-
ಕ್ರಿ. ಶ. ೮೧೪ರಿಂದ ೮೭೭ರ ವರೆಗೆ ರಾಜ್ಯವನ್ನಾಳಿಕೊಂಡಿದ್ದನೆಂಬುದು ಶಾಸನಾ ಧಾರಗಳಿಂದ ವ್ಯಕ್ತವಾಗಿದೆ. ಅವನೇ ತನ್ನ ತಂದೆಯಾದ ಗೋವಿಂದರಾಜನ (ಹೇಲಾಪುರ' (ವಿಲಾಸ ನಗರ)ವನ್ನು ಮಾ ನ್ಯಖೇಟ ರಾಜಧಾನಿಯನ್ನಾಗಿ
ಮಾರ್ಪಡಿಸಿದುದು. ತಂದೆ ದಿವಂಗತನಾದ ಕೂಡಲೆ ಹಲಮಂದಿ ವಿರೋಧಿ. ಸಾಮಂತರ ಕೈವಾಡದಿಂದ ರಾಜ್ಯ ಕೋಶವು ತಲೆದೋರಿತು. ತರುಣನಾಗಿದ್ದ ನೃಪತುಂಗನ ಕೈಯಿಂದ ತಪ್ಪಿ ಹೋದ ರೇವಾ ರಾಜಧಾನಿ ಕಡೆವರೆಗೂ ಲಭಿಸ ಲಿಲ್ಲ. ಹಿಂದೆ ರಾಷ್ಟ್ರಕೂಟ ಸಿಂಹಾಸನಕ್ಕೆ ವಿಧೇಯರಾಗಿದ್ದ ಗುಜರಾತಿನ ರಾಷ್ಟ್ರಕೂಟರೂ ತನಗೆ ವಿಮುಖರಾದರು. ಅ ದರಿ೦ದಲೆ ನೃಪತುಂಗನು ತೆಂಕಣ ಮಾನ್ಯಖೇಟದಲ್ಲಿ ನೆಲೆಗೊಳ್ಳಬೇಕಾಯಿತು. ಆ ಮೊದಲು ಕಾವೇರಿ ಯಿಂದ ರೇವಾ ನದಿಯ ವರೆಗೆ ಹಬ್ಬಿಕೊಂಡಿದ್ದ ಬೃಹತ್ಕರ್ಣಾಟಕವು “ಕಾವೇರಿ ಯಿಂದ ಗೋದಾವರಿ ವರೆಗಿನ ಸಂಪುಟದಲ್ಲಿ ಅಡಕವಾಗಬೇಕಾಯಿತು. ಅಷ್ಟು ಎಡರುಗಳು ತೊಡರಿಕೊಂಡಿದ್ದರೂ ನೃಪತುಂಗನ ಧಾರ್ಮಿಕ ರಾಜನೀತಿ ಗುರಿಗೆಡಲಿಲ್ಲ. ಬನವಾಸಿ ಪ್ರಾಂತದಲ್ಲಿ ಸಾಮಂತನಾಗಿದ್ದ ಬಂಕೆಯನೆಂಬಾ ತನು ಅರಸನ ಬಲಗೈಯ ಖಡ್ಗವಾಗಿದ್ದನು. ಅವನ ಪ್ರತಾಪದ ಫಲವಾಗಿಯೇ ಉದ್ಯರಾಗಿದ್ದ ತಲಕಾಡಿನ ಗಂಗರಾಜರು ಹದಕ್ಕಿಳಿದರು. ನೃಪತುಂಗನು. ಅತಿ ದೀರ್ಘಕಾಲ ರಾಜ್ಯವನ್ನಾಳಿದವನೇನೋ ಸರಿ. ಆದರೆ, ನಾನಾ ಬಗೆಯ ರಾಜಕೀಯ ಸಂಬಂಧದ ಸಂಕಟಗಳು ಅವನನ್ನು ಪೀಡಿಸುತ್ತಿದ್ದುವು. ಏನಾ ದರೂ ತನ್ನ ಧರ್ಮ ಮಾರ್ಗದಿಂದ ತೊಲಗದ ಧಾರ್ಮಿಕ ವೀರನೆಂದರೆ ನೃಪತುಂಗನೆಂಬುದನ್ನು ವಿಸ್ತರಿಸಿ ಕಾಣಿಸಿದ್ದೇವೆ. ಆ ಮೇಲೆ ಆತನ ರಾಜ್ಯ ಪದ್ದತಿ, ವೈಯಕ್ತಿಕವಾದ ಅವನ ಸರ್ವಮತ ಸಹಿಷ್ಣುತೆ ಮೊದಲಾದ ಉದಾತ್ತ ಗುಣಗಳನ್ನು ಸಾಧಾರವಾಗಿ ವಿವೇಚಿಸಿದ್ದೇವೆ.
ಕವಿರಾಜ ಮಾರ್ಗವನ್ನು ಬರೆದಾತನು ನೃಪತುಂಗನೋ, ಅವನ ಆ ಸ್ಥಾನದ ವಿದ್ವಾಂಸರೊಳಗೊಬ್ಬನಾದ ಶ್ರೀ ವಿಜಯನೋ ಎಂಬ ವಿಷಯದಲ್ಲಿ ತಲೆದೋರಿದ ಅಭಿಪ್ರಾಯ ಭೇದವು ಇನ್ನೂ ಬಗೆಹರಿಯಲಿಲ್ಲ, ಅದನ್ನು ಸಂಶಯಕ್ಕೆಡೆಯಿಲ್ಲದಂತೆ ಸಾಧಾರವಾಗಿ ಸೂಚಿಸಿದ್ದೇವೆ. ಗ್ರಂಥಕಾರನ ಹುಟ್ಟು ಹೆಸರು 'ಜಯಾ' ಎಂಬುದನ್ನು ಕವಿರಾಜ ಮಾರ್ಗದಲ್ಲಿರುವ ಚಕ್ರಬಂಧ
-
೧೩೫
–
ದೊಳಗಿನ ನಿರ್ದಿಷ್ಟ ಸ್ಥಳಾಕೃರಗಳಿಂದಲೇ ತೋರಿಸಿ ಅವನಿಗೇ ಮತ್ತಿನ 'ಶ್ರೀ ವಿಜಯ' ಎಂಬ ಹೆಸರೊದಗಿತು ಎಂಬುದನ್ನೂ ವಿಸ್ತರಿಸಿದ್ದೇವೆ. ನೃಪತುಂಗ ಮಹಾಸಭೆಯಲ್ಲಿ ವಾಗಧಿಪ' ಎಂಬ ಅಧಿಕಾರ ನಾಮವೂ ಅವನಿಗೆ ಒದಗಿತ್ತು. ಮಾತ್ರವಲ್ಲ; ಈ ವಾಗಧಿಪ- ಶ್ರೀ ವಿಜಯನು “ಅಸಹಾಯ ಸಾಹಸ ವಿನೋದಿ ಕ್ಷತ್ರಿಯನಾಗಿದ್ದು ನೃಪತುಂಗನಿಗೆ ಸವಿಾಪ ಬಂಧುವೂ ಆಗಿರಬೇಕು ಎಂಬು ದನ್ನು ಗ್ರಂಥಾಧಾರದಿಂದಲೆ ಹೊಳೆಯಿಸಿರುತ್ತೇವೆ. ವಾಚಕರು ನಾವು ಒಪ್ಪಿಸಿದ ಆಧಾರ ಸಿದ್ಧಾಂತಗಳನ್ನು ಶಾಂತವಾಗಿ ಪರಾಂಬರಿಸಿದಲ್ಲಿ ನಮ್ಮ ಅಭಿಪ್ರಾಯವು ಅವರಿಗೆ ಕಾರ್ಯವಾಗಿ ತೋರದಿರಲಾರದು ಎಂದು ನಂಬುತ್ತೇವೆ.
- ಆ ಮೇಲೆ, ಆಗಿನ ಕನ್ನಡನಾಡಿನ ಮತ್ತು ಕನ್ನಡ ಸಾಹಿತ್ಯದ ಸ್ವರೂಪ ಗಳನ್ನು ಸಕಾರಣವಾಗಿ ಪರಾಮರ್ಶಿಸಿದ್ದೇವೆ. ಮತ್ತಿನವನಾದ ಎರಡನೆಯ ನಾಗವರ್ಮ (ಕ್ರಿ.ಶ. ಸು. ೧೧೪೫)ನ ಕಾವ್ಯಾವಲೋಕನದಲ್ಲಿ ತೋರುವ ಆಧಾರ ಪದ್ಯಗಳನ್ನು ಒಡನಿರಿಸಿ ಕವಿರಾಜ ಮಾರ್ಗದೊಳಗೆ ತೋರುವ ಬೆದಂಡೆ - ಚತ್ತಾಣ ಎಂಬ ದೇಸಿಗಬ್ಬಗಳ ಸ್ವರೂಪಗಳನ್ನು ಪರಾಮರ್ಶಿಸಿದ್ದೇವೆ. ಇವು ಗಳೇ ಹಿಂದಿನ ಕಾಲದ ದೇಸಿಗಳಾದ ಶ್ರವ್ಯ-ದೃಶ್ಯ ಕಾವ್ಯಗಳಾಗಿರಬಹುದು, ಈಗಿನ ದೇಸಿಯಾದ ಯಕ್ಷಗಾನ ಎಂಬ ದೃಶ್ಯ ಕಾವ್ಯ (ನಾಟಕ) ವು ಹಿಂದಿನ 4 ಬಾಜನೆಗಬ್ಬ' ಅಥವಾ 'ಚತ್ತಾಣ'ದ ರೂಪಾಂತರವಾಗಿರಬೇಕೆಂದೇ ನಮ್ಮಣಿಕೆ. ನಮ್ಮ ಈ ಪ್ರಯತ್ನವೆಂದರೆ ಭಕ್ತಿ ಪೂರ್ವಕವಾದ ಕನ್ನಡ ಮಾತೆಯ ಸೇವೆ ಮಾತ್ರವೇ. ಇದು ಎಷ್ಟರಮಟ್ಟಿಗೆ ಗುರಿಗೊಂಡಿದೆ ಎಂಬುದಕ್ಕೆ ವಿವೇಕಿಗಳಾದ ಕನ್ನಡಿಗರ ಎದೆಯೇ ಪ್ರಮಾಣವು.
ಗ್ರಂಥಕಾರನ ಇತರ ಕೆಲವು ಗ್ರಂಥಗಳು, ೧. ನಾಡೋಜ ಪಂಪ
[ಸಂಶೋಧನಾತ್ಮಕ ರೂ. ೪-೦-೦. ೨. ಸಮಸ್ತ ಭಾರತಸಾರ
(ಪಂಪ ಭಾರತದ ಗದ್ಯಾನುವಾದ) ರೂ. ೨-೦-೦. ೩. ನವನೀತ ರಾಮಾಯಣ
[ಪ್ರಥಮ ಭಾಂಡ] ಪದ್ಯ ರೂ. ೧-೦-೦. ೪. ಪಾರ್ತಿ ಸುಬ್ಬ
[ಯಕ್ಷಗಾನದ ವಿಷಯ] ರೂ. 4-0-0.
ಪ್ರಕಾಶಕ: ಮುಳಿಯ್ಯ ತಿಮ್ಮಪ್ಪಯ್ಯ
ಕರಂಗಲಪಾಡಿ
ಮಂಗಳೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ