https://archive.org/details/dlihttps://archive.org/details/dli.osmania.4196
ಇದರಲ್ಲಿ ಮೂರು
ಉತ್ತಮ ಗ್ರಂಥಗಳಿರುವುವು.
ನನ್ನ ಸಂಸಾರ,. ಲಲಿತೆಯ ಪಾತಿವ್ರತ್ಯ ರಕ್ಷಣೆ, ಮಧುಸೂದನ, ಶಂಕರಕಥಾಸಾರ,
ರೋಹಿಣಿ, ವಿನಾಯಕವಿಜಯ
----------------------------------------------------------------------------------------------------------------------------
ಮಧುಸೂದನ.
ಒಂದನೆಯ ಅಧ್ಯಾಯ
(ಮದವಣಿಗನೆಲ್ಲಿ ?)
ಈ ದಿವಸದ ವಾಸವಪುರದ . ಜಹೆಗೀರ್ದಾರ್. ಸೋಮಸುಂದರನ ಮನೆಯಲ್ಲಿ
ಬಹುಳಲಕಲ. ಮನೆಯು ತಳಿರ್ದೋರಣಗಳಿಂದಲೂ ಬಾಳೆಯಕಂಬಗಳಿಂದಲೂ ವಿವಿಧ
ವಾಗಿ. ಆಲಂಕೃತನಾಗಿರುವುದು. . ಜನಗಳು ವಿವಿಧವೇಸಭೂಸಾದಿಗಳನ್ನು ಧರಿಸಿ
ಕೊಂಡು ಬರುತ್ತಿರುವರು. . ಅಧಿಕಾರಿಗಳನೇಕರು. ಕುದುರೇಗಾಡಿಗಳಲ್ಲಿ ಕುಳಿತುಬಂದು
ಈ ಸೋಮಸುಂದರನ ಮನೇಬಾಗಿಳಲ್ಲಿ ಶಳಗಿಳಿದು ಒಳಹೊಗುತ್ತಿದಾರೆ. ಸೇವಕರ
ಸಡಗರವೂ ವೈದಿಕರ ಪ್ರೌಢಾವಿವಾಹ, ಸಮುದ್ರಯಾನಗಳ ಖಂಡನರೂಪವಾದ
ಮಾತುಗಳೂ ಮಂಗಳವಾದ್ಯಗಳ ರವವೂ ಎಲ್ಲೆಲ್ಲಿಯೂ ಕೇಳಿಬರುತ್ತಲಿದೆ. ಈ ಸಂಭ್ರ
ಮಕ್ಕೆ ಕಾರಣವೇನೆಂದು ನಾವು ವಿಚಾರಿಸಿದಾಗ ಸೊಮಸುಮದರನ ಏಕಮಾತ್ರ ಪುತ್ರ
ನಾದ ಮಧುಸೂದನನಿಗೆ ಮಹೋಪಾಧ್ಯಾಯ ತ್ರಿಯಂಬಕ ಶಾಸ್ತ್ರಿಗಳ ಮಗಳು ಸರಳ
ಬಾಲೆಯನ್ನು ಕೊಟು, ವಿವಾಹವೆಂದು ತಿಳಿದುಬಂದಿತು.
ಸೋಮಸುಂದರನು ಶುದ, ಲೌಕಿಕನಾಗಿದ್ದಾಗ್ಗು ವೈದಿಕರಲ್ಲೂ , ವೇದಶಾಸ್ತ್ರ
ಗಳಲ್ಲಿಯೂ ಅಕೃತ್ರಿಮೆವಾದ ಭಕ್ತಿಯನ್ನಿಟ್ಟಿದ್ದನು. ಆಧುನಿಕರ ಸಂಘಸಂಸ್ಕಾರ
ಗಳನ್ನು (ಪ್ರೌಢಾ ವಿವಾಹಾದಿಗಳನ್ನು) ಇವನು. ಅನುಮೋದಿಸದೆ, ತನ್ನ ಮಗನಿಗೆ
೯ ವರ್ಷ ವಯಸ್ಗಿನ ಸರಳಬಾಲೆಯನ್ನು ತಂದುಕೊಂಡನು.
ಬೆಳೆಗ್ಗೆ. ಹತ್ತುಗಂಟಿಗೆ ಸರಿಯಾಗಿ ವಿವಾಹ ಲಗ್ನವು ನಿಷ್ಕರ್ಷಿಸಲ್ಪಟ್ಟಿದ್ದಿತು.
ಒಂಭತ್ತು ಗಂಟಿಗೆ ಕಾಶೀಯಾತ್ರಾ, ಮಹೋತ್ಸವವು ನಡೆದು ಅನುಕ್ರಮವಾಗಿ, ಪ್ರವರ
ಪಾರಾಯಣ, ವಮಧುಪರ್ಕ, ವಾಗ್ದಾನಗಳೇ ಮೊದಲಾದ ಶಾಸ್ತ್ರಗಳು ನೆರವೇರಿದ್ದುವು.
ಮಾಂಗಲ್ಯ ಧಾರಣವು ಬೆಳೆಯುವದಕ್ಕೆ ಮೂರು ನಿವಿಷ ವಿದೆಯೆನ್ನು ವಾಗ ಯುವಕನೊ
೨--------------------------------------------------------------
ಕಾದಂಬರಿ ಸಂಗ್ರಹ
ಬ್ಬನು ಆ ಜನಗಳ ಗುಂನಿನಲ್ಲಿ ನುಗ್ಗಿ ಬಂದು ವರನ ಕಿವಿಯಲ್ಲಿ ಏನೋ ಹೇಳಿ ತಕ್ಷಣ
ಅದೃಶ್ಯನಾದನು. ಮಧುಸೂದನನು ಆತನಮಾತನ್ನು ಕೇಳಿ ವಿಷಣ್ಣತೆಯನ್ನು ಹೊಂದಿ
ದನಾದರೂ ಕೂಡಲೇ ಗಾಂಭೀರ್ಯವನ್ನು ಹೊಂದಿ ಪುರೋಹಿತನ ಕಡೆ ತಿರುಗಿ
ಮೂರು ನಿಮಿಷ ವಿರಾಮಬೇಕೆಂದು ಕೇಳಿದನು. ಪುರೋಹಿತನು ಒಡಂಬಡಲು ವರನು
ತನ್ನ ಚಿಕ್ಕ ಮನೆಗೆ ಪ್ರವೇಶಮಾಡಿದನು.
ಮೂರು ನಿಮಿಷ ಕಳೆಯಿತು. ಐದು-ಹತ್ತು-ಹದಿನೈದು ನಿಮಿಷಗಳೂ ಕಳೆ
ದುವು. ಕಡೆಗೆ ಅರ್ಧಗಂಟೆ ಹೊತ್ತಾಯಿತು. ಮದವಳಿಗನು ಈಕಿಗೆ ಬಾರಲೇ ಇಲ್ಲ.
ಕೂಡಲೇ ಎಲ್ಲರೂ ವರನನ್ನು ಹುಡುಕ ತೊಡಗಿದರು. ಮನೆಯಲ್ಲೆಲ್ಲಿಯ ವರನಿಲ್ಲ.
ಎಲ್ಲರೂ ಭಯಭ್ರಾಂತರಾಗಿ ಮೂಲೆ ಮೂಲೆಯಲ್ಲಿ ಹುಡುಕಿದರು. ಎಲ್ಲಿಯೂ ಇಲ್ಲ.
ಬೀದಿಯ ಕಡೆ ಹೋಗಿರಬಹುದೇ ಎಂದು ವಿಚಾರಿಸಲು ದ್ವಾರಪಾಲಕರು ಈಚೆಗೆ
ಬರಲೇ ಇಲ್ಲವೆಂದು ಹೇಳಿಬಿಟ್ಟರು ಈಗ ಮಾಡುವುದೇನು? ಸರ್ವತ್ರ ಹಾ-ಹಾ-ಕಾರ!
ಇಂತಹ ವೇಳೆಯಲ್ಲಿ ಮದವಣಿಗನು ಮಾಯವಾದರೆ ಹಾಹಾಕಾರವಲ್ಲದೆ ಮತ್ತೇನು?
ಸೋಮಸುಂದರನಿಗೆ ಏನೂ ತೋರಲಿಲ್ಲ. ತ್ರಿಯಂಬಕ ಶಾಸ್ತ್ರಿಯು ಲಗ್ನ ಸಮಯ
ಕಳೆದುದಕ್ಕಾಗಿ ವ್ಯಸನಪಡುತ್ತಾ ಒಂದು ಮೂಲೆಯಲ್ಲಿ ಕುಳಿತಿದ್ದನು. ಆದರೆ ಆಗ
ಒಂದು ಚಮತ್ಕಾರ ನಡೆದಿದ್ದಿತು, ಮಧುಸೂದನನ ಕಿರುಮನೆಯ ಒಳಗಡೆ
ಬಂಧಿತವಾಗಿದ್ದಿತು. ಯಾರೆಷ್ಟು ಕೂಗಿದರೂ ಬಾಗಿಲು ತೆರೆಯಲ್ಪಡಲಿಲ್ಲ. ಎಲ್ಲರೂ
ವಿಷಾದದಿಂದ ಕುಳಿತುಬಿಟ್ಟರು. ಸೋಮಸುಂದರನು ಕೆಲವು ಮಂದಿ ಸೇವಕರನ್ನು
ಗುದ್ದಲಿ, ಹಾರೆಗಳೊಡನೆ ಕರೆತಂದು ಬಾಗಿಲನ್ನು ಇಡಿರೆತ್ತಿಸಿ ಒಳಹೊಕ್ಕನು. ಒಳಗೆ
ಮಧುಸೂದನನಿರಲಿಲ್ಲ. ಆದರೆ ವರನ ಅಶಿನದ ಪಂಚೆಯು ಮಾತ್ರ ಅಲ್ಲಿ ಬಿದ್ದಿದ್ದಿತು.
ವರನಾಗಲೀ ವರನು ಹೋದ ದಾರಿಯಾಗಲೀ ಗೊತ್ತಾಗಲಿಲ್ಲ. ಸೋಮಸುಂದರನು
ವ್ಯಸನದಿಂದ ಮೂರ್ಛಿತನಾದನು. ತಕ್ಷಣವೇ ಎಲ್ಲೆಲ್ಲಿಯ ಮದುವಣಿಗನೆಲ್ಲಿ ?
ಎಂಬ ಕೂಗು ಕಟ್ಟುವುದಕ್ಕೆ ಆರಂಭವಾಯಿತು. ಊರಲ್ಲೆಲ್ಲಾ ಹುಡುಕಿದರೂ
ವರನು ಸಿಕ್ಕಲಿಲ್ಲ. ಮದುವೆ ಮನೆಗೆ ಬಂದಿದ್ದವರೆಲ್ಲರೂ ವಿವಾದವನ್ನು ಪ್ರದರ್ಶಿ
ಸುತ್ತಾ ಮನೆಗೆ ಹೊರಟು ಹೋದರು. ವಿವಾಹ ಸಂಭ್ರಮಗಳೆಲ್ಲವೂ ಕ್ಷಣಕಾಲದಲ್ಲಿ
ತಿರೋಹಿತವಾದುವು. ಸ್ವಲ್ಪ ಹೊತ್ತಿಗೆ ಮುಂಚೆ ಆನಂದ ಕೋಲಾಹಲದಿಂದ ತುಂಬಿದ್ದ
ವಿವಾಹ ಮಂಟಪವು ಈಗ ರೋದನಧ್ವನಿಯಿಂದ ಕೂಡಿ ಭಯಂಕರವಾಗಿ ಕಾಣು
ತಿತ್ತು.
ಮೂರ್ಛಿತನಾಗಿ ಬಿದ್ದಿದ್ದ ಸೋಮಸುಂದರನನ್ನು ಆತನ ಪತ್ನಿ ತಾರಾಸುಂದ
ರಿಯು ವ್ಯಸನದಿಂದ ಶೈತ್ಯೋಪಕಾರಮಾಡಿಸಿ ತನ್ನ ಶಯನ ಗೃಹಕ್ಕೆ ಕರೆದುಕೊಂಡು
೩----------------------------------------------
ಮಧುಸೂದನ ೩
ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬಿ ಎಲ್ಲರೂ ಇದೇ
ವಿಷಯವನ್ನೇ ಮಾತಾಡುತ್ತಿದ್ದರು.
ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ
ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು ? ಬಲ್ಲಿರಾ ? ಸುಶಿಕ್ಷಿತಳೂ
ವಿವೇಕಿಯೂ ಆದ ಆ ಕನೈಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ
ಕೂಡಲೆ ದೇವರ ಮನೆಗೆ ಹೋಗಿ ತನ್ನ ಗಂಡನಿಗೆ ಶುಭವಾಗಲೆಂದು " ಗೌರೀ
ಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧು
ಸೂದನನೇ ತನ್ನ ಯಾವಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ
ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು.
ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು.
ಅವರೂ ಹುಡುಕುವುದಕ್ಕೆ ಆರಂಭಿಸಿದರು. ಬಳಿಕ ಸೋಮಸುಂದರನು ತ್ರಿಯಂಬಕ
ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ !
ಈಗ ನನಗೇನೂ ತೋರದು. ಮಾಂಗಲ್ಯ ಧಾರಣೆಯು ಆಗದಿದ್ದರೂ ವಿವಾಹವು ನಡೆ
ಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು
ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನ್ನು,
ಸ್ವಾಮಿ ! ನಿಮ್ಮ ಮಗಳು ನನ್ನ ಸೊಸೆಯೇ ಸುರಿ! ಆದರೆ ಆ ಕನ್ಯೆಯು ನನ್ನ
ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರು
ವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ
ಇರಲಿ, ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂದಿಸೋಣ
ವೆಂದು ಹೇಳಲು ಇಬ್ಬರೂ ಸುಮ್ಮನಾದರು.
ಎ ರ ಡ ನೆ ಯ ಆ ಧ್ಯಾ ಯ.
(ಭಾಸ್ಕರ)
ಮೇಲೆಕಂಡ ವಿಷಯಗಳು ನಡೆದು ಹತ್ತು ದಿನಗಳಾದವು. ಪೋಲೀಸ್ ಆಫೀಸ
ರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನ ವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ
೪-------------------------------------------------
೪ ಕಾದಂಬರಿ ಸಂಗ್ರಹ
ನವೂ ಆಗಲಿಲ್ಲ. ಬಹಳ ಕಾತರನಾದ ಸೋಮಸುಂದರನು ಪತ್ರಿಕೆಗಳಲ್ಲೇನಾದರೂ
ತನ್ನ ಮಗನ ವಿಷಯವನ್ನು ತಿಳಿಯಬಹುದೆಂದು ಒಂದು ವಾರ ಪತ್ರಿಕೆಯನ್ನು ಓದು
ತಿದ್ದನು. ಅದರ ಒಂದು ಭಾಗದಲ್ಲಿ ಘೋರವಾದ ಕೊಲೆಯ ಅದರ ಪರ್ಯವಸಾನ
ವೂ'' ಎಂದು ಬರೆಯಲ್ಪಟ್ಟಿದ್ದ ಲೇಖನವನ್ನು ಓದತೊಡಗಿದನು. ಈಗ್ಗೆ ಸುಮಾರು
ಹತ್ತು ದಿವಸಗಳ ಕೆಳಗೆ ರಾಣೀಗಂಚಿನಲ್ಲಿ ಒಂದು ಮನೆಯಲ್ಲಿ ಒಂದೇರಾತ್ರಿಯಲ್ಲಿ
ಮೂರು ಜನಗಳು ಕೊಲ್ಲಲ್ಪಟ್ಟರು. ಆ ವಿಷಯದಲ್ಲಿ ಪೋಲೀಸಿನವರು ತಮ್ಮ
ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಕಂಡುಹಿಡಿಯಲು ಪ್ರಯತ್ನ ಪಟ್ಟರೂ ಯಾವ
ಪ್ರಯೋಜನವನ್ನೂ ಹೊಂದದೇಹೋದರು. ಆಗ ಪೋಲೀಸ್ ಮುಖ್ಯಾಧಿಕಾರಿಯೇ
ಬೊಂಬಾಯಿಯಲ್ಲಿದ್ದ ಪ್ರಸಿದ್ದ ಪತ್ತೇದಾರರಾದ ಭಾಸ್ಕರ ಎಂಬುವರನ್ನು ಕರತರಿಸಿ
ಅವರಿಗೆ ಈ ವಿಷಯವನ್ನು ಒಪ್ಪಿಸಿದರು. ಅವರು ನಾಲ್ಕು ದಿವಸಗಳೊಳಗಾಗಿ ಕಷ್ಟಪ
ಟ್ಟು ಕೊಲೆಪಾತಕನನ್ನು ಪತ್ತೆ ಮಾಡಿದರು. ಆ ಕೊಲೆಪಾತಕನು ಎಲ್ಲವನ್ನೂ ಒಪ್ಪಿ
ಕೊಂಡು ಈ ದಿನ ಮಧ್ಯಾಹ್ನ ಯಾರಿಗೂ ಅಯದ ರೀತಿ ತನ್ನನ್ನು ಕೂಡಿದ್ದ ಕೊಠ
ಡಿಯ ಬಾಗಲಿನ ಕಂಬಿಗಳಿಗೆ ನೇಣುಹಾಕಿಕೊಂಡು ಸತ್ತನು.
ಸೋಮಸುಂದರನು ಇದನ್ನೋದಿ ಸ್ವಲ್ಪ ಹೊತ್ತು ಏನೋ ಯೋಚಿಸಿ ತನ್ನ
ಗುಮಾಸ್ತೆಯನ್ನು ಕರಸಿ ರಾಣೇಗಂಟಿನ ಪೋಲೀಸ್ ಅಧಿಕಾರಿಗೆ ತಕ್ಷಣವೇ ಭಾಸ್ಕರನ
ನ್ನು ಕಳುಹಿಸುವ ಹಾಗೆ ತಂತಿಯನ್ನು ಕೊಡುವಂತೆ ಆಜ್ಞಾಪಿಸಿದನು.
ಮಾರನೇದಿನ ಒಂಭತ್ತು ಗಂಟೆಯ ಸಮಯದಲ್ಲಿ ಸುಮಾರು ಇಪ್ಪತ್ತೈದು
ವರ್ಷ ಪ್ರಾಯದ ಮನುಷ್ಯನೊಬ್ಬನು ಬಂದು ಸೋಮಸುಂದರನನ್ನು ನೋಡಲಪೇಕ್ಷಿ
ಸಿದನು. ಸೋಮಸುಂದರನು ಅವನನ್ನು ಒಳಕ್ಕೆ ಬರುಹಾಗೆ ಹೇಳಿ ತನ್ನ ಬೈತಕಖಾ
ನೆಯಲ್ಲಿ ಕಾದಿದ್ದನು. ಬಂದ ಮನುಷ್ಯನು ಸೋಮಸುಂದರನಿಗೆ ವಂದಿಸಿ ಅಲ್ಲೇ
ಇದ್ದ ಒಂದು ವೇತ್ರಾಸನದಮೇಲೆ ಕುಳಿತುಕೊಂಡನು. ಸೋಮಸುಂದರನು ಅವನೇ
ಭಾಸ್ಕರನಿರಬಹುದೆಂದು ಯೋಚಿಸಿ ಸ್ವಾಮೀ ನೀವೇನೋ ಭಾಸ್ಕರರೆಂಬುವರು, ಎಂದು
ಕೇಳಿದನು.
ಹೊಸಮನುಷ್ಯ-ಹೌದು. ನಿಮ್ಮ ತಂತಿಯನ್ನು ನೋಡಿ ನನ್ನನ್ನು ಪೊಲೀಸ್
ಸೂಪರಿಂಟೆಂಡೆಂಟರು ಕಳುಹಿಸಿರುವರು. ನನ್ನನ್ನು ಕರೆಯಕಳುಹಿಸಿದ ಕಾರಣವೇನು?
ಸೋಮಸುಂದರ-ಸ್ವಾಮೀ !ನಾನು ಏನು ಹೇಳಲಿ ಎಂದು ಕಣ್ಣೀರು
ಸುರಿಸುತ್ತಾ ತನ್ನ ಮಗನು ಕೌಣದೇಹೋದ ವಿಷಯವನ್ನೆಲ್ಲಾ ಕ್ರಮವಾಗಿ ತಿಳಿ
ಸಿದನು,
೫-------------------------------------------
ಮಧುಸೂದನ ೫
ಭಾಸ್ಕರನು ಸ್ವಲ್ಪಹೊತ್ತು ಹಾಗೇ ಯೋಚಿಸಿ ಮಧ್ಯಾಹ್ನದಮೇಲೆ ಎಲ್ಲಾ
ವಿಷಯಗಳನ್ನೂ ಪರೀಕ್ಷಿಸುವುದಾಗಿಯೂ ಈಗ ಹೊತ್ತಾದ್ದರಿಂದ ಭೋಜನಾದಿಗಳನ್ನು
ಮುಗಿಸಿಕೊಳ್ಳುವುದು ಒಳ್ಳೆಯದೆಂದೂ ತಿಳಿಸಿದನು. ಸೋಮಸುಂದರನೂ ಒಪ್ಪಿ ಅವ
ನನ್ನು ಸ್ನಾನಾದಿಗಳನ್ನು ಮಾಡುವಂತೆ ಹೇಳಿ ಹೊರಟುಹೋದನು.
ಮೂ ರ ನೆ ಯ ಅ ಧ್ಯಾಯ.
(ಭಾಸ್ಕರನು ಏನು ಯೋಚಿಸಿದನು?)
ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಸೋಮಸುಂದರನೂ
ಭಾಸ್ಕರನೂ ಮಧುಸೂದನನ ಕೊಠಡಿಗೆ ಬಂದು ಸೇರಿದರು. ಭಾಸ್ಕರನು ಸೋಮಸುಂ
ದರನನ್ನು ಕುರಿತು "ನೀವು ಈ ಕೊಠಡಿಯ ಸಮೀಪಕ್ಕೆ ಬಂದಾಗ ಒಳಗೆ ಅಗಣಿ
ಹಾಕಿತ್ತೆಂದು ಹೇಳಿದಿರಲ್ಲವೆ? ಹಾಗಾದರೆ ಒಳಗಿನಿಂದ ಹೋಗಲು ಬೇರೇ ಮಾರ್ಗ
ವಾವದಾದರೂ ಇರುವುದೊ ? ಇಲ್ಲದಿದ್ದರೆ ಹಾಗೆ ಒಳಗಿನಿಂದ ಅಗಣೀ ಹಾಕಿರಲು
ಅದು ಹೇಗೆ ಸಾಧ್ಯವು? ಆದ್ದರಿಂದ ನಿಮಗೆ ತಿಳಿಯದ ಯಾವದೋ ಒಂದು ಮಾರ್ಗ
ವು ಇರಲೇಬೇಕು'' ಎಂಬದಾಗಿ ಹೇಳಿದನು.
ಸೋಮಸುಂದರ-- " ಸ್ವಾಮಿ, ನನಗೆ ತಿಳಿದಮಟ್ಟಗೆ ಇಲ್ಲಿ ಯಾವ ಗುಪ್ತ
ಮಾರ್ಗವೂ ಇಲ್ಲವು. ಇದೇ ಪ್ರಶ್ನೆಯನ್ನು ಪೊಲೀಸ್ ಮುಖ್ಯಾಧಿಕಾರಿಯ ನನ್ನ
ನ್ನು ಕೇಳಿದನು. ಈ ಮನೆಯು ನನ್ನ ಪಿತ್ರಾರ್ಜಿತವಾದುದು. ಇದರಲ್ಲಿ ಯಾವ ಗೂಢ
ಮಾರ್ಗವಿದ್ದರೂ ನನಗೆ ತಿಳಿದಿರಬೇಕು. ಆದರೂ ನನ್ನ ಪುತ್ರನನ್ನು ಹ್ಯಾಗೆ ಎತ್ತಿಕೊಂ
ಡು ಹೋಗಿರಬೇಕೆಂಬುವುದೂ ಒಳಗೆ ಅರ್ಗಹಾಕಿದ ನನಗೆ ತಿಳಿಯಲಸಾಧ್ಯವಾದ
ಒಗಟಾಗಿದೆ.
ಭಾಸ್ಕರನು ತನ್ನ ಪತ್ತೇದಾರಿ ಮಾರ್ಗದ ಹುಡುಕುವಿಕೆಯನ್ನು ಪ್ರಾರಂಭಿಸಿದನು.
ಅವನು ಸೋಮಸುಂದರನನ್ನು ಕುರಿತು ಅಲ್ಲಿ ಎಲ್ಲಾ ಸಾಮಾನುಗಳೂ ಮಧುಸೂದ
ನನು ಕಾಣದೇ ಹೋದ ದಿನ ಇದ್ದ ಹಾಗೆಯೇ ಇದೆಯೋ ಎಂದು ಕೇಳಲು, ಅವನು
ಪೊಲೀಸಿನವರು ತಿರುಗಿ ಹಾಕಿದ ಪದಾರ್ಥಗಳು ವಿನಹಾ ಉಳಿದವುಗಳೆಲ್ಲಾ ಹಾಗೆಯೇ
ಇರುವುದೆಂದು ತಿಳಿಸಿದನು. ಭಾಸ್ಕರನು ಹಾಗೇ ಸ್ವಲ್ಪ ಹೊತ್ತು ಆ ಕೊಠಡಿಯ
ಆಕಾರ ಮತ್ತು ಅದರ ರಚನೆ ಇವುಗಳನ್ನು ನೋಡುತ್ತಿದ್ದನು. ಅವನಿಗೆ ಯಾವ ವಿಧ
೬------------------------------------------------------
೬ ಕಾದಂಬರಿ ಸಂಗ್ರಹ
ವಾದ ಸುಳಿವಾದರೂ ಸಿಗಲಿಲ್ಲವು. ಕೊಠಡಿಯ ಒಂದು ಭಾಗದಲ್ಲಿ ಒಂದು ದೊಡ್ಡ
ಮಂಚವು ಹಾಕಲ್ಪಟ್ಟು, ಭಾಸ್ಕರನ ಸೂಕ್ಷ್ಮವಾದ ಕಣ್ಣಿಗೆ ಆ ಮಂಚದ ಒಂದು
ಭಾಗದಲ್ಲಿ ಸ್ವಲ್ಪ ಅರಿಶಿನವು ಕಾಣಬಂದಿತು. ಭಾಸ್ಕರನು ಅದನ್ನು ತನ್ನ ಬುಕ್ಕಿನಲ್ಲಿ
ಬರೆದುಕೊಂಡನು. ಕೊಠಡಿಗೆಲ್ಲಾ ಮೆತ್ತನಾದ ಜಮಖಾನವನ್ನು ಹಾಸಿದ್ದರು.
ಅದರ ಮೇಲೇನಾದರೂ ಕಾಲಿನ ಗುರುತುಗಳು ಕಾಣುವುವೋ ಎಂದು ಬಹಳ
ಹೊತ್ತು ದೃಷ್ಟಿಸಿ ನೋಡಿದನು. ಏನೂ ಪ್ರಯೋಜನ ಕಂಡು ಬರಲಿಲ್ಲ. ಹಾಗೇ
ಮಲಗಿಕೊಂಡು ಪರೀಕ್ಷಿಸುತ್ತಾ ಬಂದನು. ಮಂಚದ ಸಮೀಪದಲ್ಲಿ ಸ್ವಲ್ಪ ಮಂಕು
ಮಂಕಾಗಿ ಎರಡು ಮೂರು ಕಾಲಿನ ಗುರುಗಳು ಮಂಚದ ಕಡೆಗೆ ತೋರಿಸು
ತಿದ್ದವು. ಅದನ್ನೂ ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಅನಂತರ ಅವನಿಗೆ ಯಾವ
ಸುಳಿವಾದರೂ ಶಿಗಲಿಲ್ಲವು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ
ಸೋಮಸುಂದರನನ್ನೂ ಸಹಾ ಹಿಂದಕ್ಕೆ ಕರೆದುಕೊಂಡು ಬಂದು ಮಾರನೆ ದಿವಸ
ಬೆಳಿಗ್ಗೆ ಒಂದು ಮಾತನಾಡುವದಾಗಿ ಹೇಳಿ ಹೊರಟು ತನಗಾಗಿ ಕೊಟ್ಟಿದ್ದ ಕೊಠಡಿ
ಯನ್ನು ಸೇರಿ ಅಲ್ಲಿ ಒಂದು ವೇತ್ರಾಸನದ ಮೇಲೆ ಕುತುಕೊಂಡು ಯೋಚಿಸಲಾ
ರಂಭಿಸಿದನು.
ಭಾಸ್ಕರನು ಯೋಜನೆಯಲ್ಲಿ ರಾತ್ರಿ ಎಂಟು ಗಂಟೆಗಳವರೆಗೆ ಕುಳಿತಿದ್ದನು.
ಆಗ ಹಠಾತ್ತಾಗಿ ಅವನು ಆಹಾ ! ಗೊತ್ತಾಯಿತು. ನಾನು ಈಗ ಯೋಚಿಸಿದ್ದೇ ಸರಿ
ಯಾಗಿರಬೇಕು. ಇರಲಿ. ಎಲ್ಲವನ್ನೂ ವಿಚಾರಿಸಿದರೆ ತಿಳಿಯುವುದು ಎಂದು ಹೇಳಿ
ಕೊಂಡು ಊಟಕ್ಕೆ ಹೊತ್ತಾದ್ದರಿಂದ ಎದ್ದು ಊಟಮಾಡಿ ಪುನಃ ಬಂದು ಕುಳಿತನು.
ಆಗ ಅವನು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು ತನ್ನ ಪುಸ್ತಕದಲ್ಲಿ ಏನನ್ನೋ
ಬರೆದುಕೊಂಡು ಮಲಗಿ ನಿದ್ರೆಹೋದನು.
ಮಾರನೇ ದಿನ ಬಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಭಾಸ್ಕರನು ಸೋಮ
ಸುಂದರನ ಕೊಠಡಿಗೆ ಹೋಗಿ ಅಲ್ಲಿದ್ದ ವೇತ್ರಾಸನದ ಮೇಲೆ ಕುಳಿತುಕೊಂಡು ಅವನು
ಕೊಟ್ಟ ಕಾಫಿಯನ್ನು ಕುಡಿದನು.
ಭಾಸ್ಕರ:-ಸ್ವಾಮೀ, ನಿಮ್ಮ ಮನೆಯಲ್ಲಿ ಬಹಳ ಹಳೆಯ ಸೇವಕರಾರಾ
ದರೂ ಇರುವರೋ ?
ಸೋಮಸುಂದರ :-ಆಹಾ ! ಇರುವರು. ನಮ್ಮ ತಾತನ ಕಾಲದಿಂದಲೂ ಬಂದ
ಮುದುಕನಾದ ಕೃಷ್ಣನೆಂಬುವನೊಬ್ಬನೂ ನಮ್ಮ ತಂದೆಯ ಕಾಲದಿಂದ ಬಂದ ಹೀರಣ್ಣ
ನೆಂಬುವನೂ ಇರುವರು.
೭-----------------------------------------------------------------------------------
ಮಧುಸೂದನ ೭
ಭಾಸ್ಕರ:-...ಅನುಬ್ಬರಿಗೂ ಮನೆಯ ಪ್ರತಿಯೊಂದು ಭಾಗವೂ ತನ್ನಾಗಿ ತಿಳಿದಿ
ದೆಯೋ?
ಸೋಮಸುಂದರ ಅವರಿಬ್ಬರಲ್ಲಿ ಮುದುಕನಾದ ಕೃಷ್ಣನಿಗೆ ಅನೇಕ ವಿಷಯಗಳು
ತಿಳಿದಿರುತ್ತವೆ. ಈಗ ತಾನೇ ಸ್ವಲ್ಪ ದಿವಸಗಳ ಕೆಳಗೆ ಅವನು ನನಗೊಂದು ಗುಪ್ತ ಮಾರ್ಗ
ವನ್ನು ತೋರಿಸಿದನು. ಅಲ್ಲಿಯಮಗೂ ಅದು ಇರುವುದಾಗಿ ನನಗೆ ತಿಳಿದೇ ಇರಲಿಲ್ಲ.
ಆ ಗುಪ್ತ ಮಾರ್ಗವು ನನ್ನ ಕೊಠಡಿಯಿಂದ ಅದೋ ಅಲ್ಲಿರುವ ಕೊಠಡಿಗೆ ಭೂಮಿಯೊಳ
ಗಿಂದ ದಾರಿಮಾಡಿಕೊಂಡು ಹೋಗುತ್ತದೆ. ಎನಲು ಎಲ್ಲಿ ನೋಡೋಣ ನೀವು ಆ
ಗುಪ್ತಮಾರ್ಗವಿರುವ ಸ್ಥಳವನ್ನು ತೋರಿಸಿರಿ. ಎಂದುಹೇಳಿ ಭಾಸ್ಕರನು ಮತ್ತೊಂದು
ಕೊಠಡಿಯಿರುವ ದಿಕ್ಕನ್ನು ನೋಡಿಕೊಂಡು ಅದಕ್ಕೆ ಸರಿಯಾಗಿ ತಾನು ಕುಳಿತಿದ್ದ
ಕೊಠಡಿಯ ಬಾಗನ್ನು ತನ್ನ ಸೂಕ್ಷ್ಮವಾದ ಕಣ್ಣಿನಿಂದ ನೋಡಿದನು. ಅಲ್ಲೊಂದು
ದೊಡ್ಡದಾದ ಗುಂಡಾದ ಮೇಜು ಹಾಕಿತ್ತು. ಇಂತಾ ಗುಪ್ತ ಮಾರ್ಗಗಳ ವಿಷಯವ
ನ್ನರಿತಿದ್ದ ಭಾಸ್ಕರನು ಅಲ್ಲೇ ಏನೋ ಗುಟ್ಟದೆಯೆಂದು ಯೋಚಿಸಿ ಆ ಗುಪ್ತ ಮಾರ್ಗದ
ದಾರಿಯು ಆ ಗುಂಡಾದ ಮೇಜಿನಡಿಂದ ಪ್ರಾರಂಭವಾಗುತ್ತದೆಂದು ತಿಳಿಸಿದನು.
ಸೋಮಸುಂದರನು ನಕ್ಕು, ಅದು ಅದು ಅಲ್ಲೇರುವುದು. ಆದರೆ ನಾನು ಹೇಳದೇ
ಇದ್ದರೆ ಪತ್ತೆಯಾಗುವದು ಅಸಾಧ್ಯವಲ್ಲವೇ' ಎಂದು ಕೇಳಿದನು.
ಭಾಸ್ಕರ : --- ದಯವಿಟ್ಟು ಆ ಕೃಷ್ಣನೆಂಬ ಸೇವಕರನ್ನು ನನ್ನ ಕೊಠಡಿಗೆ ಕಳುಹಿ
ಸಿರಿ. ಮತ್ತು ನಾನು ಕೇಳುವ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ಕೊಡುವಂತೆ
ಹೇಳಿ ಕಳುಹಿಸಿ, ಎಂದು ಹೇಳಿ ತನ್ನ ಕೊಠಡಿಗೆ ಹೋದನು. ಸ್ವಲ್ಪ ಹೊತ್ತಿಗೆ ಎಂಭತ್ತು
ವರ್ಷ ವಯಸ್ಸಿನ ಅತಿವೃದ್ಧನೊಬ್ಬನು ಕೋಲೂಕೊಂಡು ಕೆಮ್ಮುತ್ತಾ
ಬಂದು ಭಾಸ್ಕರನಿತ್ತ, ಆಸನದ ಮೇಲೆ ಕುಳಿತುಕೊಂಡು ತನ್ನನ್ನು ಕರೆಯ ಕಳುಹಿಸಿದ
ಕಾರಣವೇನೆಂದು ಕೇಳಿದನು.
ಭಾಸ್ಕರ :---ಅಯ್ಯಾ, ನೀನು ಈ ಮನೆಯಲ್ಲಿ ಎಷ್ಟು ವರ್ಷಗಳಿಂದ ಇರುವಿ.
ಕೃಷ್ಣ:-ಸ್ವಾಮಿ ನಾನು ಈ ಮನೆಯನ್ನು ನನ್ನ ಇಪ್ಪತ್ತನೇ ವರ್ಷದಲ್ಲಿ
ಸೇರಿದೆನು. ಈಗ ನನಗೆ ಎಂಭತ್ತೆರಡು ವರ್ಷ ವಯಸ್ಸು. ಆದ್ದರಿಂದ ನಾನು ಇಲ್ಲಿ
ಅರವತ್ತೆರಡು ವರ್ಷಗಳಿಂದಿರುವೆನು. ನಾನು ಕೆಲಸಕ್ಕೆ ಸೇರಿದಾಗ ಸೋಮಸುಂದರರ
ತಾತಂದಿದ್ದರು. ಆಗಿನಿಂದಲೂ ನಾನು ನಂಬಿಗಸ್ತನಾಗಿ ಕೆಲಸಮಾಡುತ್ತಾ ಬಂದೆನು,
ನನ್ನ ವೃದ್ಧಾದಲ್ಲಿ ಇವರು ನನ್ನನ್ನು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಿದ್ದಾರೆ.
ಎಲ್ಲಾ ವಿಷಯಗಳೂ ನನ್ನ ಮೂಲಕವೇ ನಡೆಯಬೇಕಾಗಿದೆ. ನಮ್ಮ ಯಜಮೀನರಿ
೮-------------------------------------------------------
೮ ಕಾದಂಬರಿ ಸಂಗ್ರಹ
ಗುಂಟಾದ ಕಷ್ಟದಿಂದ ನನ್ನ ಹೃದಯವು ಒಡದುಹೋಗುವ ಹಾಗಾಗಿದೆ. ನಮ್ಮ
ಮಧುಸೂದನನನ್ನು ಮಗುವಾಗಿದ್ದಾಗಲಿಂದಲೂ ನಾನೇ ಎತ್ತಿ ಲಾಲನೆ ಪಾಲನೆ ಮಾಡಿ
ದವನು. ನನಗೆ ಸಂಸಾರವೇ ಇಲ್ಲದಿದ್ದರಿಂದ ಮಧುಸೂದನನನ್ನು ನನ್ನ ಮಗನೆಂದೇ
ತಿಳಿದುಕೊಂಡಿದ್ದನು. ಅವನೂ ಸಹಾ ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಾ ನನ್ನ
ಮಾತುಗಳನ್ನು ಮೀರಿ ನಡೆಯದೆ ಇದ್ದನು. ಅವನು ತಂದೆಗೆ ತಿಳಿಸದ ಅನೇಕ ವಿಷಯ
ಗಳನ್ನು ನನಗೆ ಹೇಳಿದ್ದನು. ಅವುಗಳಲ್ಲಿ ಒಂದನ್ನೂ ಇದುವರೆಗೂ ನಾನು ಯಾರ
ಸಂಗಡಲೂ ಹೇಳಿದ್ದವು. ಅದು ಯಾವುದೆಂದರೆ ಅವನು ಕಲ್ಕತ್ತಾ ನಗರದಲ್ಲಿದ್ದಾಗ
ಕೆಲವು ದುರ್ಮಾರ್ಗಪ್ರವರ್ತಕರು ಅವನು ಬಹಳ ಐಶ್ವರಕ್ಕೆ ಯಜಮಾನನೆಂದು
ತಿಳಿದು ಅವನನ್ನು ಕೆಡಿಸುವುದಾಗಿ ನಿಷ್ಕರ್ಷೆಮಾಡಿಕೊಂಡು ಅವನ ಸ್ನೇಹವನ್ನು ಬೆಳಸಿ
ದರು. ಅವನು ಅವರ ಮೋಸವನ್ನಯದೆ ಅವರ ಕಪಟಸ್ನೇಹಕ್ಕೆ ಮರುಳಾಗಿ ಅವರ
ಸಂಗಡವೇ ಕಾಲಕಳೆಯಲು ಪ್ರಾರಂಭಮಾಡಿದರು. ಆ ದುಮ್ಮಾರ್ಗಿಗಳೆಲ್ಲರೂ ಜನಗ
ಳನ್ನು ಮೋಸಮಾಡಿ ತಮ್ಮ ಜೀವನವನ್ನು ಮಾಡಿಕೊಳ್ಳತಕ್ಕಂಥಾ ಒಂದು ಕಳ್ಳ
ಸಂಘಸಂಸ್ಕರಣ ಪಂಗಡಕ್ಕೆ ಸೇರಿದವರು. ಈ ಸಂಘದವರನ್ನು ಕಂಡರೆ ಇತರ ಸಂಘ
ದವರೆಲ್ಲಾ ರಹಸ್ಯದಿಂದ ತಮ್ಮ ಕೂಟಕ್ಕೆ ಕೆಟ್ಟ ಹೆಸರು ತರುವವರೆಂದು ಅವರನ್ನು
ಜರೆಯುತ್ತಿದ್ದರು. ಇವರಿಗೆಲ್ಲಾ ಮುಖಂಡನಾಗಿ ಒಬ್ಬ ಬಿ. ಎ. ಬಿ.ಎಲ್. ಪರೀಕ್ಷೆ
ಮಾಡಿದ ನೀಚನೊಬ್ಬನಿದ್ದನು. ಈ ದುರ್ಮಾರ್ಗಿಗಳು ತಾವು ಮಹಾ ಸುಗುಣಿಗಳಂತೆ
ತೋರ್ಪಡಿಸಿಕೊಳ್ಳುತ್ತಾ ತಮ್ಮ ಕೆಲ ಉಡುಪುಗಳನ್ನು ಧರಿಸಿಕೊಂಡು ಎಲ್ಲಾ ಸಂಘ
ಸಂಸ್ಕರಣ ಸಂಬಂಧವಾದ ಮೀಟಿಂಗಿಗೆ ನಿಲ್ಲುತ್ತಲೂ, ಋತುವಾದ ಕನ್ನೆಗಳನ್ನು ವಿವಾಹ
ಮಾಡಿಕೊಳ್ಳುವುದಾಗಿ ಬರೆದು ಕೊಡುತ್ತಲೂ ಜಾತಿ ಭೇದವಿಲ್ಲವೆಂದು ಹೇಳಿ ಎಲ್ಲ
ರೊಡನೆಯೂ ಸೇರಿ ಮಾದಕ ಪದಾರ್ಥಗಳನ್ನು ಸೇವಿಸುತ್ತಲೂ ಯಾವಾಗಲೂ ಸಿಗ
ರೇಟ್ ಮುಂತಾದವುಗಳನ್ನು ಬಾಯಲ್ಲಿ ಕಟ್ಟಿಕೊಂಡೇ ಅಲೆಯುತ್ತ, ವೈದೀಕರನ್ನು
ಕಂಡರೆ ಜರಿಯುತ್ತಲೂ ಇದ್ದರು. ಇಂಥಾ ನೀಚರು ತಮ್ಮ ಪಂಗಡಕ್ಕೆ ಏನೂ
ಅರಿಯದ ಹೊಸಮನುಷ್ಟ ರನ್ನೆಲ್ಲಾ ಸೇರಿಸಿಕೊಂಡು ಅವರನ್ನೂ ಹಾಳುಮಾಡುತ್ತಿ
ದ್ದರು. ಇವರ ಮೇಲೆಲ್ಲಾ ಪೋಲೀಸಿನವರಿಗೆ ಕಣ್ಣು ಇದ್ದೇ ಇತ್ತು. ಈ ಮಹಾತ್ಮರು
ಗಳು ಅನ್ಯಾಯವಾಗಿ ದೇಶವತ್ಸಲರಾದ ನಿರ್ಮಲ ಹೃದಯರಾದ ಸಂಘಸಂಸ್ಕರಣ
ಕರ್ತರ ಹೆಸರನ್ನು ಹಾಳುಮಾಡುತ್ತಿದ್ದರು. ಇಂಥಾ ನೀಚರ ಗುಣವನ್ನರಿಯದೆ
ನಮ್ಮ ಮಧುಸೂದನನು ಅವರ ಸ್ನೇಹವನ್ನು ಮಾಡಿದನು ಸ್ವಲ್ಪ ಕಾಲದಲ್ಲೇ ಈ
ನೀಚರು ಇವನನ್ನು ದುರಾರ್ಗಕ್ಕೆಳೆಯಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲೇ
೯---------------------------------------------------
ಮಧುಸೂದನ 9
ಅವನೂ ಅವರ ಹಾಗೆ ಜೂಜಾಟಗಳನ್ನು ಕಲಿತನು. ಯಾವಾಗ ಜೂಜಾಟವು
ಬಂದಿತೋ ಆಗಲೇ ಕುಡುಕತನ ಮುಂತಾದ ದುರ್ನಡತೆಗಳು ಒಂದರ ಹಿಂದೆ ಒಂದಾಗಿ
ಬಂದು ಒಟ್ಟವು. ತಂದೆಯು ಕಳುಹಿಸುತ್ತಿದ್ದ ಹಣವು ಸಾಲದೆ ಸ್ವಲ್ಪ ಕಾಲದಲ್ಲೇ
ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ಆ ಸಂಘದ ಯಜಮಾನನಿಂದ ತರಬೇ
ಕಾಗಿ ಬಂದಿತು. ಈ ವಿಷಯಗಳಾವುವೂ ನನ್ನ ಯಜಮಾನನಿಗೆ ತಿಳಿಯದು. ಮಧು
ಸೂದನನು ಇಷ್ಟು ಕೆಟ್ಟ ಹೋಗಿದ್ದರೂ ವಿದ್ಯೆಯನ್ನು ಹಾಳು ಮಾಡಿಕೊಳ್ಳದೆ ಎಫ್.ಎ
ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿದನು. ಅಷ್ಟಕ್ಕೆ ಅವನ ಇಂಗ್ಲೀಷ್ ವಿದ್ಯಾ
ಭ್ಯಾಸವು ಸಾಕೆಂದು ಸೋಮಸುಂದರನು ಅವನನ್ನು ಕರತರಿಸಿ ಸಂಸ್ಕೃತವನ್ನು ಕಲಿ
ಯುವಹಾಗೆ ವಿದ್ವಾಂಸರ ಕೈಕೆಳಗೆ ಬಿಟ್ಟನು. ಮಧುಸೂದನನು ಸಕಲ ವಿದ್ಯದಲ್ಲಿಯೂ
ನೈಪುಣ್ಯವನ್ನು ಹೊಂದಿದನು. ಇಲ್ಲಿಗೆ ಬಂದ ಮೇಲೆ ಅವನಿಗೆ ತಾನು ಕಲ್ಕತ್ತಾ ನಗ
ರದಲ್ಲಿ ನಡೆಸಿದ ಅಕೃತ್ಯಗಳೆಲ್ಲಾ ಮನಸ್ಸಿಗೆ ಹೊಳೆದು ಬಹಳ ಪಶ್ಚಾತ್ತಾಪಪಟ್ಟು
ಕೊಂಡು ತಂದೆಯ ಬಳಿ ತನ್ನ ಸಾಲದ ವಿಷಯವನ್ನು ಹೇಳುವುದಕ್ಕೆ ಹೆದರಿ ನನಗೆ
ಎಲ್ಲವನ್ನೂ ತಿಳಿಯಪಡಿಸಿದನು. ಆ ಸಾಲದ ವಿಷಯವಾಗಿ ಅವನಿಗೆ ಆಗಾಗ್ಗೆ ಕಾಗದ
ಗಳು ಬರುತ್ತಿದ್ದಾರೆ ಕಂಡು ಬರುತ್ತದೆ. ಒಂದುದಿವಸ ಅಂದರೆ ಈಗ ಹತ್ತು ದಿವಸ
ಗಳ ಕೆಳಗೆ ಒಂದು ಕಾಗದವು ಒಂದಿತು. ಆ ಕಾಗದವ ಬಂದಾಗ ನಾನು ಅವನ ಕೊಠ
ಡಿಯಲ್ಲೇ ಕುಳಿತಿದ್ದೆನು, ಅದು ಅವನಿಗೆ ತಿಳಿದಿರಲಿಲ್ಲ. ಅವನು ಕಾಗದವನ್ನು ಓದುತ್ತಾ
ಓದುತ್ತಾ ಏನೇನೋಹೇಳಿಕೊಂಡನು. ಅವುಗಳಲ್ಲಿ ನನಗೆ ಕೇಳಿ ಬಂದವುಗಳು ಇಷ್ಟು
ಮಾತ್ರ "ಅಯ್ಯೋ ನಾನು ಇನ್ನೇನು ಮಾಡಲಿ. ನಮ್ಮ ತಂದೆಗೆ ತಿಳಿದು ಬಂದರೆ ಅವನೇ
ನನ್ನುವನು. ನನ್ನ ವಿವಾಹಕಾಲವು ಸಮೀಪಿಸುತ್ತಾ ಬಂದಿತಲ್ಲಾ.. ಅವರೇನಾದರೂ,”
ಎಂದುಹೇಳಿ ನನ್ನ ಕಡೆ ತಿರುಗಿ ನನ್ನ ಮುಖವನ್ನು ನೋಡಿದನು. ತಕ್ಷಣವೆ: ಅವನು ಕಾಗ
ದವನ್ನು ಬಚ್ಚಿಟ್ಟು ನನ್ನನ್ನು ಯಾವಾಗಬಂದೆ'' ಎಂದು ಕೇಳಿದನು.
ಈ ರೀತಿಯಾಗಿ ಆ ಮುದುಕನು ತನ್ನನ್ನು ಕೇಳದೆ ಇದ್ದರೂ ಈವಿಷಯಗಳನ್ನೆಲ್ಲಾ
ಹೇಳಿದನು. ಭಾಸ್ಕರನು ನಡುವೆ ಮಾತನಾಡದೆ ಆಗಾಗ್ಗೆ ತನ್ನ ಬುಕ್ಕಿನಲ್ಲಿ ಏನೇನೋ
ಬರೆದುಕೊಳ್ಳುತ್ತಿದ್ದನು. ಕೃಷ್ಣನು ಮಾತನಾಡಿ ನಿಲ್ಲಿಸಿದ ಮೇಲೆ ನಗುಮುಖದಿಂದ
ಅವನ ಕಡೆಗೆ ತಿರುಗಿ " ಅಯ್ಯಾ ನೀನು ಈಗ ಹೇಳಿದ ವಿಷಯಗಲ್ಲಾ ಬಹಳಸಹಾಯ
ಮಾಡಿದವು. ನಿನಗೆ ಮಧುಸೂದನನು ಕಾಗದಗಳನ್ನಿಟ್ಟಿದ್ದ ಸ್ಥಳವು ಗೊತ್ತಿದೆಯೋ"
ಎಂದು ಕೇಳಿದನು.
೧೦------------------------------------------------------
10 ಕಾದಂಬರಿ ಸಂಗ್ರಹ
ಕೃಷ್ಣ:-.ಆಹಾ ಗೊತ್ತಿದೆ. ಅವನು ಬಹಳ ದಿವಸದಿಂದ ಕಾಗದಗಳನ್ನಿಡುತ್ತಿದ್ದ
ಸ್ಥಳವು ನನಗೆಗೊತ್ತಿದೆ. ಬೇಕಾಗಿದ್ದರೆ ಈಗಲೇ ತೋರಿಸುವೆನು.
ಭಾಸ್ಕರ: --ಆಗಲಿ. ಮೊದಲು ಈ ಒಂದುಪ್ರಶ್ನೆಗೆ ಉತ್ತರಕೊಡು. ಈ ನಿಮ್ಮ
ಮಧುಸೂದನನಿ ಕೊಠಡಿಗೆ ಯಾವುದಾದರೂ ಗುಪ್ತ ಮಾರ್ಗವಿರುವುದೋ ?
ಕೃಷ್ಣ:- (ಸ್ವಲ್ಪಹೊತ್ತು ಯೋಚಿಸಿ) ಆಹಾ! ಈಗ ಜ್ಞಾಪಕಕ್ಕೆ ಬಂದಿತು. ಈಗ
ಒಂದು ತಿಂಗಳ ಕೆಳಗೆ ಮಧುಸೂದನನಿಗೆ ಅವನ ಕೊಠಡಿಯಲ್ಲಿ ಗುಮಾರ್ಗದ ವಿಷ
ಯವನ್ನು ತಿಳಿಸಿದ್ದೆನು. ಈಗ ನೀವು ಕೇಳದಿದ್ದರೆ ಅದರ ವಿಷಯವು ನನಗೆ ಜ್ಞಾಪಕವೇ
ಬರುತ್ತಿರಲಿಲ್ಲ. ಆ ಗುಪ್ತನೂರ್ಗವ ಬಹಳ ವಿಚಿತ್ರವಾದದ್ದು. ಮೇಲಿನಿಂದ ನೋಡುವು
ದಕ್ಕೆ ಏನೂ ತಿಳಿಯುವುದಿಲ್ಲ. ಎಲ್ಲಾ ಗುಪ್ತ ಮಾರ್ಗಗಳಿಗೂ ಇರುವಹಾಗೆ ಮೇಲುಗಡೆ
ಯಾವವಿಧವಾದ ಕೀಲಾಗಲೀ ಮೊಳೆಯಾಗಲೇ ಇಲ್ಲ. ಆದ್ದರಿಂದ ನೀವು ಒಂದುವರ್ಷ
ವೆಲ್ಲಾ ಹುಡುಕಿದರೂ ಏನೂ ತಿಳಿದುಬರುವುದಿಲ್ಲ. ಆ ಗುಪ್ತಮಾರ್ಗವು ಆ ಕೊಠಡಿಯಲ್ಲಿ
ರುವ ಮಂಚದ ಕೆಳಗಿದೆ. (ಭಾಸ್ಕರನು ತಾನು ಸಂದೇಹಪಟ್ಟಿದ್ದು ನಿಜವಾಯಿತೆಂದು
ಯೋಚಿಸಿದನು.) ಅದನ್ನು ತೆರೆಯುವುದು ಹೇಗೆಂದು ನೀವು ಯೋಚಿಸಬಹುದು. ಆ ನಮ್ಮ
ಮನೆಗೆ ಅರ್ಧ ಫರಲಾಂಗ್ ದೂರದಲ್ಲೊಂದು ಪುರಾತನ ಮನೆಯಿರುವುದು. ಆ ಮನೆ
ಯಲ್ಲಿ ಎರಡು ಕೊಠಡಿಗಳಿರುವುವು. ಅವುಗಳಲ್ಲಿ ಮೊದಲನೇ ಕೊಠಡಿಯಲ್ಲಿ ಮಹಡಿ
ಹತ್ತುವುದಕ್ಕೆ ಮೆಟ್ಟಿಲುಗಳಿರುವವು. ಆ ಮೆಟ್ಟಿಲುಗಳ ತಳದಲ್ಲಿ ಒಂದು ಗುಪ್ತ ಮಾರ್ಗ
ವಿರುವುದು. ಅದನ್ನು ಸುಲಭವಾಗಿ ಒಂದು ಹಾರೆಯ ಸಹಾಯದಿಂದ ಮೀಟಿ ತೆಗೆಯ
ಬಹುದು. ಅಲ್ಲಿಂದ ಮಧುಸೂದನನ ಕೊಠಡಿಯೊಳಕ್ಕೂ ಒಂದು ಸುರಂಗ ಮಾರ್ಗವಿರು
ವುದು. ಈ ಮಧುಸೂದನನ ಕೊಠಡಿಯಲ್ಲಿರುವ ಗುಪ್ತ ಮಾರ್ಗದ ಬಾಗಲು ದುಂಡಾಗಿ
ರುವದು. ಅದರಮೇಲೆ ಮಣ್ಣು ಮೆತ್ತಲ್ಪಟ್ಟಿರುವರು. ಅದಕ್ಕೆ ಅಡಿಯಲ್ಲಿ ಚಲುಕವಿರು
ವುದು. ಆ ಚಿಲಕವನ್ನು ತೆಗೆದು ಅಡಿಯಲ್ಲಿರುವ ಪಿಡಿಯನ್ನು ಹಿಡಿದು ಆ ಬಾಗಿಲನ್ನು
ಎತ್ತಿದರೆ ಅದು ಮೇಲಕ್ಕೆ ಬಂದು ಒಂದುಗುಂದಾದ ಮಾರ್ಗವು ಕಾಣುವುದು. ಈ ವಿಧ
ವಾದ ಸುರಂಗಮಾರ್ಗವು ಈ ಇನ್ನೂರು ವರ್ಷಗಳ ಹಿಂದೆ ಮಾಡಲ್ಪಟ್ಟಿತು. ಆ ಕಾಲ
ದಲ್ಲಿ ಪಿಂಡಾರಿಗಳು ಪಂಜು ಕಳ್ಳರು ಇವರುಗಳ ಹಾವಳಿಯಿಂದ ಮತ್ತು ಅನೇಕ ಪರ
ದೇಶೀಯರು ದಂಡೆತ್ತಿಬಂದು ಎತ್ತರವನ್ನು ಕೊಳ್ಳೆಹೊಡೆದುಕೊಂಡು ಹೋಗುತ್ತಿದ್ದ
ರಿಂದಲೂ ಐಶ್ವರ್ಯವಂತರು ತಮ್ಮ ಹಣದ ವಿಷಯವಾಗಿ ಯಾವಾಗಲೂ ಹೆದುಕೆಯಿಂದಲೇ
ಇರುತ್ತಿದ್ದರು. ಆಗ ವಾಸವಪುರದ ಜಹಗೀರ್‌ದಾರರೊಬ್ಬರು ಯಾರಿಗೂ ತಿಳಿಯದ
ರೀತಿ ಈ ರೀತಿ ಸುರಂಗ ಮಾರ್ಗವನ್ನೂ ಗುಪ್ತ ಮಾರ್ಗಗಳನ್ನೂ ರಚಿಸಿ ಅದರಲ್ಲಿ ತಮ್ಮ
೧೧----------------------------------------
ಮಧುಸೂದನ ೧೧
ಐಶ್ವವನ್ನೆಲ್ಲಾ ಇಟ್ಟಿದ್ದರು. ಕಳ್ಳರಾಗಲೀ ಅಥವಾ ಲೂಟಿಹೊಡೆಯುವ ಸೈನ್ಯವಾಗಲಿ
ಬರುತ್ತೆಂದು ತಿಳಿದ ಕೂಡಲೇ ಅವರು ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು
ಈ ಗುಪ್ತ ಮಾರ್ಗದೊಳಕ್ಕೆ ಹೋಗಿ ಹತ್ತಿಪ್ಪತ್ತು ದಿವಸಗಳು ವಾಸಮಾಡುತ್ತಿದ್ದರು.
ಅದು ಕತ್ತಲೆಯ ಮತ್ತು ಅಸಹ್ಯಕರವೂ ಆದ ಪ್ರದೇಶವಾಗಿದ್ದರೂ ಪ್ರಾಣಭಯ
ದಿಂದಲೂ ಧನದಾಶೆಯಿಂದಲೂ ಅವರು ಎಲ್ಲವನ್ನೂ ಸಹನೆಯಿಂದ ಅನುಭವಿಸುತ್ತಿ
ದ್ದರು. ಆದ್ದರಿಂದಲೇ ವಾಸವಪುರದ ಜಹಗೀರ್‌ದಾರರು ಪುರಾತನ ಕಾಲದಿಂದಲೂ
ಅತುಲೈಶ್ವರಸಂಪನ್ನರಾಗಿರುತ್ತಾರೆ. ಇದರ ವಿಷಯವು ಈಗಲೂ ಯಾರಿಗೂ ತಿಳಿಯದು.
ನನಗೆ ಮಾತ್ರ ಇದು ಮೊದಲಿಂದ ತಿಳಿದಿತ್ತು. ನಮ್ಮಯಮಾನರಾದ ಸೋಮಸುಂದರ
ರಾಯರಿಗೆ ಈ ವಿಷಯ ತಿಳಿದಿಲ್ಲ.
ಭಾಸ್ಕರ: ಈಗಲೀಗನೀವು ನನಗೆ ಬಹಳ ಸಹಾಯ ಮಾಡಿದಿರಿ, ಮಧುಸೂದ
ನನು ಹೋದ ಮಾರ್ಗವು ನನಗೆ ತಿಳಿಯಿತು.
ಕೃಷ್ಣ ....ಏನು ? ಮಧುಸೂದನನೂ ಆ ಮಾರ್ಗದಲ್ಲಿ ಹೋದನೇ ? ಎಲ್ಲಿಗೆ
ಹೋದನು ? ಅಯ್ಯೋ ! ಅದರ ವಿಷಯವನ್ನು ಅವನಿಗೇಕೆ ನಾನು ತಿಳಿಸಿದೆನು? ಎಂದು
ಪೇಚಾಡಿದನು.
ಭಾಸ್ಕರ-ಅಯ್ಯಾ ಸಮಾಧಾನವನ್ನು ತಂದುಕೊಳ್ಳಿ. ನೀವು ಹೇಳಿದ್ದರಿಂದ
ಅಷ್ಟೇನೂ ಕೆಡಕಾಗಲಿಲ್ಲ. ಈಗ ದಯವಿಟ್ಟು ಮಧುಸೂದನನು ಇಟ್ಟಿರುವ ಕಾಗದ
ಗಳನ್ನು ತಂದು ಕೊಡಿ.
ಮುದುಕನು ಏನೇನೋ ಗೊಣಗುತ್ತಾ ಹೊರಟುಹೋದನು. ಭಾಸ್ಕರನು
ಅವನು ಹೇಳಿದ ಎಲ್ಲಾ ವಿಷಯಗಳನ್ನೂ ಯೋಚಸುತ್ತಾ ಕುಳಿತಿದ್ದನು. ಅವನ ಮನ
ಸ್ಸಿಗೆ ನಾನಾಬಗೆಯ ಯೋನೆಗಳು ಹೊಳೆದವು. ಒಂದು ವೇಳೆ ಮಧುಸೂದನನ
ಕಲ್ಕತ್ತಾ ಸ್ನೇಹಿತರೇನಾದರೂ ಕೆಡಕನ್ನು ಮಾಡಿರಬಹುದೇ ಎಂದು ಯೋಚಿಸಿದನು.
ಇಲ್ಲಿ ಮಧುಸೂದನನೇ ಮದುವೆಯಮೇಲೆ ಅಪೇಕ್ಷೆಯಿಲ್ಲದೆ ಆಗುಪ್ತ ಮಾರ್ಗದಲ್ಲೇ
ನಾದರೂ ಅಡಗಿರಬಹುದೋ ಎಂದೂ ಯೋಚಿಸಿದನು. ಆದರೆ ಆಗಲೇ ಯಾವುದೂ
ಸರಿಯಾಗಿ ತೋರಿಬರಲಿಲ್ಲ. ಅಷ್ಟು ಹೊತ್ತಿಗೆ ಕೃಷ್ಣನು ಒಂದು ಕಂತೆ ಕಾಗದಗಳನ್ನು
ತೆಗೆದುಕೊಂಡು ಬಂದು ಮೇಜಿನಮೇಲೆಹಾಕಿ ಬಿಟ್ಟು ಹೊರಟುಹೋದನು.
ಭಾಸ್ಕರನು ಎಲ್ಲಾ ಕಾಗದಗಳನ್ನೂ ಒಂದೊಂದಾಗಿ ಓದುತ್ತಾ ಬಂದನು.
ಯಾವಕಾಗದದಿಂದ ಉಪಯೋಗವಾಗಲಿಲ್ಲ. ಕೊನೆಗೆ ನೆಲದಮೇಲೆ ಒಂದು ಚೂರುಕಾಗದವು ಬಿದ್ದಿರುವುದನ್ನು ನೋಡಿ ಅದನ್ನು ತೆಗೆದು ಓದಿದನು. ತಕ್ಷಣವೇ
೧೨-------------------------------------
12 ಕಾದಂಬರಿ ಸಂಗ್ರಹ
ಭಾಸ್ಕರನ ಮುಖವ ಕೆಂಪಡರಿತು, ಕುಳಿತಿದ್ದ ಆಸನದಿಂದೆದ್ದು ಪುನಹ ಆ ಕಾಗದವ
ನ್ನೋದಿದನು. ಅದರಲ್ಲಿ ಬರೆದಿದ್ದಿತು " ಮಾರ್ಗದ ವಿಷಯ ತಿಳಿಯಿತು. ಅದು
ಇನ್ನಾರಿಗಾದರೂ ಗೊತ್ತೋ? ನೀನುಮಾಡಿದ ಶಪಥವನ್ನು ಜ್ಞಾಪಿಸಿಕೋ. ಅದಕ್ಕೆ
ಮೀರಿ ಮದುವೆ ಮಾಡಿಕೊಳ್ಳಲು ಹೋದತಿ ಅನಿಷ್ಟ ಸಂಘಟನೆಯಗುವುದು.
ಹುಷಾರ್ ” ಭಾಸ್ಕರನು ಆ ಕಾಗದವನ್ನು ತನ್ನ ಬುಕ್ಕಿನಲ್ಲಿಟ್ಟು ಕೊಂಡು ಉಳಿದ ಕಾಗದ
ಗಳನ್ನೆಲ್ಲಾ ಕಟ್ಟಿ ಮೇಟಿನಲ್ಲಿಟ್ಟನು.
ಅಷ್ಟು ಹೊತ್ತಿಗೆ ಭೋಜನಕಾಲವಾದ್ದರಿಂದ ಎದ್ದು ಹೋಗಿ ಸ್ನಾನಾದಿಗಳನ್ನು
ಮಾಡಿ ಭೋಜನವನ್ನು ಮುಗಿಸಿಕೊಂಡು ಪ್ರನೆ ತನ್ನ ಕೊಠಡಿಗೆ ಬಂದು ಕುಳಿತು
ಯೋಚಿಸಲಾರಂಭಿಸಿದನು. ಸ್ವಲ್ಪ ಹೊತ್ತು "ಇನ್ನೇನು ನಾನುಯೋಚಿಸಿದ್ದೆಲ್ಲಾ ಅವರ
ಮೇಲೆ ಸಂಶಯವನ್ನು ತೋರಿಸುತ್ತಿವೆ. ಆದರೆ ಅವರು ಏತಕ್ಕೋಸ್ಕರ ಈ ಕೆಲಸವನ್ನು
ಮಾಡಿದರೋ ತಿಳಿದುಬರುವದಿಲ್ಲ. ಏನೇ ಆಗಲಿ, ಮಧುಸೂದನನ ಕಲ್ಕತ್ತಾ ನಗರದ
ಸ್ನೇಹಿತರೇ ಈ ಕೆಲಸವನ್ನು ಮಾಡಿರುವರೆಂದು ನಾನು ಯೋಚಿಸುತ್ತೇನೆ'' ಎಂದು
ಹೇಳಿಕೊಂಡನು.
...
ನಾ ಲ್ಕ, ನೆ ಯ ಅ ಧ್ಯಾ ಯ.
(ಭಾಸ್ಕರನೂ ಮತ್ತು ಸುಳಿವುಗಳೂ)
ಮಾರನೇ ದಿವಸ ಭಾಸ್ಕರನು ಒಂದು ದೀಪವನ್ನೂ ಕೆಲವು ಬೆಂಕಿಕಡ್ಡಿ ಪೆಟ್ಟಿಗೆ
ಗಳನ್ನೂ ಎರಡು ರಿವಾಲ್ವರಗಳನ್ನೂ ಮತ್ತು ಒಂದು ಸಣ್ಣ ಹಾರೆಯನ್ನ ತೆಗೆದು
ಕೊಂಡು ಹೊರಟು ಸೋಮಸುಂದರನಿಗೆ ಸೇರಿದ ಹಳೆಯ ಮನೆಯನ್ನು ಸೇರಿದನು. ಆ
ಮನೆಯು ಬಹಳ ಪುರಾತನ ಕಾಲದಾದ್ದರಿಂದ ಅದು ಬಹಳ ಜೀರ್ಣಸ್ಥಿತಿಗೆ ಬಂದಿ
ದ್ದಿತು. ಮಲೆಮೂಲೆಯಲ್ಲಿಯೂ ಧೂಳು ರಾಶಿರಾಶಿಯಾಗಿ ಬಿದ್ದಿದ್ದಿತು. ಭಾಸ್ಕರನು
ನೆಟ್ಟಗೆ ಅಲ್ಲಿದ್ದ ಎರಡು ಕೊಠಡಿಗಳಲ್ಲಿ ಮೊದಲನೆಯದರೊಳಕ್ಕೆ ಹೋಗಿ ಅಲ್ಲಿದ್ದ
ಮೆಟ್ಟಲನ ಸಮೀಪಕ್ಕೆ ಹೋಗಿ ಅಗರ ಬುಡದಸುತ್ತಲೂ ನೋಡಿದನು. ಅಲ್ಲಿ ಬಿದ್ದಿದ್ದ
ಧೂಳಿನ ರಾಶಿಯ ಮೇಲೆ ಅನೇಕ "ಬೂಟ್ಸ್" ಕಾಲಿನ ಗುರುತುಗಳು ಕಾಣಬಂದವು.
ಭಾಸ್ಕರನು ಅಪ್ಪಿ ಒಂದು ಹಲಗೆನ್ನು ಸ್ವಲ್ಪ ಮೇಲಕ್ಕೆ ಎತ್ತಿ ನೋಡಲು ಅಡಿ
ಯಲ್ಲಿ ಗುಂಡಾದ ಒಂದು ಮರದ ಬಾಗಿಲು ಕಾಣಬಂದಿತು. ತಾನು ತಂದಿದ್ದ ಸಣ್ಣ
೧೩----------------------------------------------------------
ಮಧುಸೂದನ
13
ಹಾರೆಯಿಂದ ಅದನ್ನು ಮಾತು ಅದು ಸುಲಭವಾಗಿ ಹೊರಕ್ಕೆ ಬಂದಿತು. ಆದ್ದರಿಂದ
ಅದು ಸ್ವಲ್ಪ ದಿವಸಗಳ ಕೆಳಗೆ ತೆರೆಯಲ್ಪಟ್ಟಿತ್ತು ಎಂದು ತಿಳಿದು ಕೊಂಡನು. ಅಲ್ಲೊಂದು
ಗುಂಡಾದಮಾರ್ಗವು ಕಂಡುಬಂದಿತು, ಗಾಳಿಯು ಪ್ರವೇಶವಾಗಲೆಂದು ಸ್ವಲ್ಪಹೊತ್ತು
ಕಾದಿದ್ದು ಭಾಸ್ಕರನು ಆ ಮಾರ್ಗವಾಗಿ ಒಳಕ್ಕಿಳಿದು ಹೋದನು. ಒಳಗೆ ವಿಶಾಲ
ವಾದ ಮಾರ್ಗವೆಂದು ಕಾಣಬಂತು. ಎಲ್ಲಿಂದಲೋ ತಣ್ಣನೆ ಗಾಳಿಯು ಬೀಸು
ತಿತ್ತು. ಮುಂದಕ್ಕೆ ಹೋಗುತ್ತಾ ಹೋಗುತ್ತ ಕತ್ತಲೆಯು ಹೆಚ್ಚಾದ್ದರಿಂದ ತಾನು
ತಂದಿದ್ದ ದೀಪವನ್ನು ಹತ್ತಿಸಿಕೊಂಡು ಮುಂದಕ್ಕೆ ಹೊರಟನು. ಅವನು ಬಹಳ ಸೂಕ್ಷ್ಮ
ವಾಗಿ ನೆಲವನ್ನು ಪರೀಕ್ಷಿಸುತ್ತಾ ಹೋಗುತ್ತಿರಲು ಅಲ್ಲೊಂದು ಸ್ಥಳದಲ್ಲಿ ಒಂದು ಗಡಿ
ಯಾರದ ಸರಪಣಿಯು ಬಿದ್ದಿದ್ದಿತು. ಅದರ ಹಿಂಭಾಗದಲ್ಲಿ ಇಂಗ್ಲೀಷಿನ "ಎಂ”
(M) ಎಂಬಕ್ಷರವು ಕೆತ್ತಲ್ಪಟ್ಟಿತ್ತು. ಅದನ್ನು ತೆಗೆದುಕೊಂಡು ತನ್ನ ಕಿಸೆಯಲ್ಲಿ ಭದ್ರ
ವಾಗಿಟ್ಟುಕೊಂಡು ಮುಂದಕ್ಕೆ ಹೋದನು. ಅಲ್ಲೆಲ್ಲ ಬಟ್ಟೆಯ ಚೂರುಗಳೂ, ಹಗ್ಗದ
ಚೂರುಗಳೂ ಬಿದ್ದಿದ್ದವು. ಅದನ್ನೂ ತೆಗೆದುಕೊಂಡು ಮುಂದಕ್ಕೆ ಹೊರ
ಟನು. ಸ್ವಲ್ಪ ಹೊತ್ತಿಗೆಲ್ಲಾ ಒಂದು ಅಡ್ಡ ಗೋಡೆಯ ಬಳಿಗೆ ಬಂದನು. ಅಲ್ಲೇ
ಸ್ವಲ್ಪ ಹೊತ್ತು ದೃಷ್ಟಿಸಿನೋಡಲು ಒಂದು ಗುಂಡಾದ ಬಾಗಿಲೂ ಅದರ ಹಿಡಿಯೂ
ಕಾಣಬಂದಿತು. ಆ ಬಾಗಿಲು ಒಳಗರ ಚಿಲುಕ ಹಾಕಲ್ಪಟ್ಟಿತ್ತು. ಇನ್ನು ತಾನು ತಿಳಿದು
ಕೊಳ್ಳಬೇಕಾದ ವಿಷಯಗಳೆಲ್ಲವೂ ತಿಳಿದುಕೊಂಡದ್ದಾಯಿತೆಂದು ಹಿಂದಕ್ಕೆ ಹೊರಟು ತಾನು ಪ್ರವೇಶಮಾಡಿದ ಬಾಗಲಿನ ಮೂಲಕವೆ ಹೊರಕ್ಕೆ ಬಂದು ಅದನ್ನು ಮುಚ್ಚಿ
ಬಿಟ್ಟು ಅದರ ಮೇಲೆ ಹಲಗೆಯನ್ನಿಟ್ಟು ಮನೆಯ ಸುತ್ತಲೂ ಪರೀಕ್ಷಿಸುತ್ತಾ
ಬಂದನು. ಅಲ್ಲಲ್ಲಿ ಚಕ್ರದ ಗುರ್ತುಗಳನ್ನು ಕಂಡು ಬಂದಿದ್ದವರು ಗಾಡಿಯಲ್ಲಿ ಬಂದಿ
ದ್ದರೆಂದು ಯೋಚಿಸಿಕೊಂಡು ಇನ್ನೇನು ನೊಡಲಿಕ್ಕಿಲ್ಲವೆಂದು ತೀರ್ಮಾನಿಸಿ
ಕ್ಕೊಂಡು ಸೋಮಸುಂದರನ ಮನೆಗೆ ಹಿಂದಿರುಗಿ ಬಂದು ಊಟಮಾಡಿ ತನಗೆ ಸಿಕ್ಕಿದ
ಸುಳುವುಗಳನ್ನೆಲ್ಲಾ ಪರೀಕ್ಷಿಸುತ್ತಾ ಕುಳಿತಿದ್ದನು. ಅಷ್ಟು ಹೊತ್ತಿಗೆ ಸೋಮಸುಂದ ರನೂ ಅಲ್ಲಿಗೆ ಒಂದು ಸೇರಿದನು.
ಸೋಮಸುಂದರ ಸ್ವಾಮೀ ಇಲ್ಲಿಯ ವರಿಗೆ ಏನು ಪತ್ತೆಮಾಡಿರುಮರಿ? ನನ್ನ ಮಗನು
ಜೀವದಿಂದಿರುತ್ತಾನೋ ಇಲ್ಲವೋ?
೧೪--------------------------------------------------
14 ಕಾದಂಬರಿ ಸಂಗ್ರಹ
ಭಾಸ್ಕರ-ನಾನು ಈಗ ಏನೂ ಹೇಳಲಾರೆನು, ಆದರೆ ಇಷ್ಟು ಮಾತ್ರ ಹೇಳ
ಬಲ್ಲೆನು: ನಿಮ್ಮ ಪುತ್ರನು ಜೀವವಂತನಾಗಿಯೇ ಇರುತ್ತಾನೆ. ಅವನನ್ನು ತಿಳಿದವರೇ
ಯಾರೋ ಅವನನ್ನು ಬಲವಂತದಿಂದ ಎತ್ತಿಕೊಂಡು ಹೋಗಿರುತ್ತಾರೆ.
ಸೋಮಸುಂದರ-ಹಾಗೆ ಅವನನ್ನು ಎತ್ತಿಕೊಂಡು ಹೋಗಲು ಕಾರಣವೇ
ನು? ಧನದಾಶೆಯಿಂದ ಮಾಡಿದ್ದರೆ ಇಲ್ಲಿಯವರೆಗೂ ಏನನ್ನೂ ಕೇಳದೇ ಇರಲು ಕಾರ
ಣವೇನು?
ಭಾಸ್ಕರ:-ಅವರು ಧನಾಪೇಕ್ಷೆಯಿಂದ ಈ ಕೆಲಸವನ್ನು ಮಾಡಿರುವಹಾಗೆ
ಕಂಡುಬರುವುದಿಲ್ಲ. ಮಧುಸೂದನನ ವಿವಾಹವಿಷಯದಲ್ಲೇ ಏನೋ ಬಹಳ ಒಳಸಂಚು
ನಡೆದಿರುವಹಾಗೆ ನನಗೆ ಸಿಕ್ಕಿದ ಒಂದು ಕಾಗದದಿಂದ ತಿಳಿದುಬರುತ್ತದೆ. ಆದರೆ
ಈಗ ನಾವು ಯಾವುದನ್ನೂ ಸರಿಯಾಗಿ ತೀರ್ಮಾನಿಸುವುದಕ್ಕಾಗುವುದಿಲ್ಲ.
ಸೋಮಸುಂದರ:-ನನ್ನ ಪುತ್ರನಿಗೇನಾದರೂ ಅಪಾಯ ಸಂಭವಿಸಿರಬಹುದೋ
ಎಂದು ನನ್ನ ಮನಸ್ಸು ಕಳವಳ ಪಡುತ್ತಿದೆ. ನೀವು ಇದರ ಮೂಲವನ್ನೆಲ್ಲಾ ಬೇಗ
ಕಂಡು ಹಿಡಿದು ನನ್ನ ಪುತ್ರನನ್ನು ಬಿಡಿಸಿಕೊಟ್ಟರೆ ಬಹಳ ಒಳ್ಳೇದು. ಅದಕ್ಕಾಗಿ ಎಷ್ಟೇ ಖರ್ಚಾಗಲಿ ನಾನು ಕೊಡಲು ಸಿದ್ಧನಾಗಿದ್ದೇನೆ.
ಭಾಸ್ಕರ:-ನಿಮ್ಮ ಪುತ್ರನಿಗೇನೂ ಅಪಾಯಸಂಭವಿಸಿರಲಾರದೆಂದು ನಾನು
ಯೋಚಿಸುತ್ತೇನೆ. ಇದೆಲ್ಲ ಇರಲಿ, ತಮಗೆ ಅವನು ಕಲ್ಕತ್ತಾ ನಗರದಲ್ಲಿದ್ದಾಗ ವಾಸ
ವಿದ್ದ ಮನೆಯ ವಿಳಾಸ ಗೊತ್ತಿದೆಯೋ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ಸೋಮಸುಂದರ:--ತಿಳಿಯದೇ ಏನು, ಅವನು ತನ್ನ ಸ್ನೇಹಿತ ರೊಡನೆ ಬೋ
ಬಜಾರ್ ಬೀದಿಯಲ್ಲಿ ೩೦ನೇ ನಂಬರ್ ಮನೆಯಲ್ಲಿ ವಾಸ ಮಾಡುತ್ತಿದ್ದನು. ಅವನು
ಊಟವನ್ನು ಕಾಳಿ ಬೀದಿಯಲ್ಲಿರುವ ವೈದೀಕರಹೋಟೆಲ್ ಎಂಬುವುದರಲ್ಲಿ ಮಾಡು
ತಿದ್ದನು.
ಭಾಸ್ಕರ:-ನಾನು ಈ ದಿವಸವೇ ಕಲ್ಕತ್ತೆಗೆ ಹೊರಡುತ್ತೇನೆ. ನೀವು ನನ
ಗಾಗಿ ಮಾಡತಕ್ಕ ಒಂದು ಕೆಲಸವಿದೆ. ಅದೇನಂದರೆ ನಾನು ಈ ವಿಷಯದಲ್ಲಿ ಪ್ರವೇ
ಶಮಾಡಿರುವುದನ್ನು ಯಾರಸಂಗಡ ತಿಳಿಸಕೂಡದು. ನನಗೇನಾದರೂ ಕಾಗದಗಳನ್ನು
ಬರೆಯಬೇಕಾಗಿದ್ದರೆ ನನ್ನ ಸ್ನೇಹಿತನಾದ ಗೋವಿಂದನೆಂಬುವನ ಅಡ್ರೆಸ್ಸಿಗೆ ಬರೆಯಿರಿ.
ಇದೋ ಇದೇ ಅವನವಿಳಾಸ, ಈಗ ಸದ್ಯಕ್ಕೆ ಖರ್ಚಿಗಾಗಿ ಒಂದು ಸಾವಿರ ರೂಪಾಯಿ
ಗಳನ್ನು ಕೊಟ್ಟರೆ ನಾನು ಕಲ್ಕತ್ತೆಯಿಂದ ಒಂದುವೇಳೆ ಕಾಗದವನ್ನು ಬರೆದರೂ ಬರೆದೆ.
ಇಲ್ಲದಿದ್ದರೂ ಇಲ್ಲ. ಆದರೆ ತಾವು ಯಾವುದಕ್ಕೂ ಯೋಚಿಸಕೂಡದು.
೧೫----------------------------------------------
ಮಧುಸೂದನ. 15
ಸೋಮಸುಂದರನು ಭಾಸ್ಕರನ ಅಪ್ಪಣೆಯನ್ನು ಹೊಂದಿ ಒಳಕ್ಕೆ ಹೋಗಿ ಸಾವಿ
ರದ ಐನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸಿದನು.
ಭಾಸ್ಕರನು ಭೋಜನವಾದಮೇಲೆ ತನ್ನ ಆಕಾರವನ್ನು ಬದಲಾಯಿಸಲು ಕೂತ
ನು, ಯಾತಕ್ಕಂದರೆ ಕಲ್ಕತ್ತದಲ್ಲಿ ಎದುರಿಗೆ ಅನೇಕರು ಇವನನ್ನು ನೋಡಿಯೂ ಮತ್ತು
ಫೋಟೋಗಳ ಮೂಲಕ ನೋಡಿಯೂ ಬಲ್ಲರು. ಈಗ ನಿಜರೂಪದಿಂದ ಹೋದರೆ ಸಂಶ
ಯಾಸ್ಪದವಾಗಬಹುದು-ಆದ್ದರಿಂದ ಕೃತ್ರಿಮವಾದ ಬಿಳೀದಾಡೀ ಮೀಶೆಗಳನ್ನೂ
ಕೂದಲನ್ನೂ ಕಟ್ಟಿ ಕೊಂಡು ಶರಿರಕ್ಕೆಲ್ಲಾ ಯಾವುದೋ ಒಂದು ವಿಧವಾದ ದ್ರಾವಕ
ವನ್ನು ಬಳಿದುಕೊಳ್ಳಲು ದೇಹವೆಲ್ಲಾ ಮುದುಕರ ದೇಹದಂತೆ ಸುಕ್ಕು ಬಿದ್ದಿರುವ
ಹಾಗೆ ಕಾಣಬಂದಿತು. ಹೀಗೆ ಕಂಡುಹಿಡಿಯಸಾಧ್ಯವಾದ ಮುದುಕವೇಷವನ್ನು
ಧರಿಸಿ ತನ್ನ ಸಾಮಗ್ರಿಗಳನ್ನೆಲ್ಲಾ ತೆಗೆಸಿಕೊಂಡು ಸೋಮಸುಂದರನ ಗಾಡಿಯಲ್ಲಿ
ಸಮೀಪದ ರೈಲ್ವೇ ಸ್ಟೇಷನನ್ನು ತಲಪಿ ರೈಲುಗಾಡಿಯ ಮುಖಾಂತರ ಅದೇ ದಿವಸ
ಕಲ್ಕತ್ತಾ ಮಹಾನಗರವನ್ನು ತಲಪಿ ತನ್ನ ಸ್ನೇಹಿತನ ದ ಗೋವಿಂದನ ಮನೆಯನ್ನು
ಸೇರಿದನು.
-----
ಐ ದ ನೆ ಯ ಅ ಧ್ಯಾಯ,
---
(ಸೋಮಾರಿಗಳ ಗುಹೆ.)
ಕಲ್ಕತ್ತಾ ನಗರವು ಇಂಗ್ಲೀಷರು ಇಂಡಿಯಾ ದೇಶಕ್ಕೆ ಬಂದು ನೆಲಸಿದಾಗಲಿಂ
ದ ದಿನೇದಿನೇ ವೃದ್ಧಿಯನ್ನು ಹೊಂದಿ ಈಗ ಇಂಡಿಯಾದಲ್ಲೆಲ್ಲಾ ಜನಸಂಖ್ಯೆಯಲ್ಲಿ
ಎರಡನೆಯದೆನಿಸಿಕೊಂಡಿರುವದು ಸಕಲರಿಗೂ ತಿಳಿದ ವಿಷಯವಾಗಿದೆ. ಪುರಾತನಕಾಲ
ದಿಂದಲೂ ಈ ನಗರವು ಸಂಪತ್ತುಳ್ಳದ್ದಾಗಿರುವುದು. ಇಂಗ್ಲೀಷರು ಇಲ್ಲಿ ನೆಲಸಿದಮೇಲೆ
ಇದರ ಪ್ರಾಮುಖ್ಯತೆಯು ಮತ್ತೂ ಹೆಚ್ಚಿತು. ಸುತ್ತುಮುತ್ತಲೂ ಇರುವ ರಾಜ್ಯಗಳು
ಗಂಗಾ ಮತ್ತು ಹೂಗ್ಲಿ ಈ ನದಿಗಳ ಸಹಾಯದಿಂದ ಇಂಡಿಯದಲ್ಲೆಲ್ಲಾ ಅತ್ಯಂತ
ಫಲವತ್ತಾದ ಪ್ರದೇಶಗಳಾಗಿ, ಅಲ್ಲಿನ ಜನಗಳು ಅತ್ಯಂತ ಧನಿಕರಾಗಲು ಕಾರಣವಾ
ದವು. ವ್ಯಾಪಾರಾದಿಗಳಿಗೆ ಮಧ್ಯಭಾಗವಾಗಿಯೂ, ಇಂಡಿಯಾ ದೇಶಕ್ಕೇ ರಾಜಧಾನಿ
ಯಾಗಿಯೂ ಇದ್ದದ್ದರಿಂದ ಕಲ್ಕತ್ತಾ ಪಟ್ಟಣವು ಜನಸಂಖ್ಯೆಯಲ್ಲಿಯೂ ಐಶ್ವರದಲ್ಲಿ
ಯ ಬಹಳ ಮುಂದಕ್ಕೆ ಬಂದಿತು. ಇಲ್ಲಿನ ಜನಗಳು ಅಧಿಕ ಕಷ್ಟವಿಲ್ಲದೇ ತಮ್ಮ ಆಹಾರ ಸಾಮಗ್ರಿಗಳನ್ನು ಹೊಂದುವರಾದ್ದರಿಂದ ಜೀವನಕ್ಕೆ ಕಷ್ಟ ಪಡದೆ ತಮ್ಮ
೧೬-------------------------------------
16 ಕಾದಂಬರೀ ಸಂಗ್ರಹ
ಕಾಲವನ್ನೆಲ್ಲಾ ವಿದ್ಯೆಯಲ್ಲಿಯ, ದೇಶಕ್ಕೆ ಒಳ್ಳೆಯದಾಗುವ ಕಾರ್ಯಗಳಲ್ಲಿಯೂ
ಮತ್ತೆ ಕೆಲವರು ಸೋಮಾರಿಗಳಾಗಿ ಕಳ್ಳತನ, ಕುಡಿತ, ಅರಾಜಕತ್ವ ಇವುಗಳಲ್ಲೂ ಕಳೆ
ಯುತ್ತಾ ಬಂದರು. ಇಲ್ಲಿ ಎಲ್ಲೆಲ್ಲಿ ನೋಡಿದರೂ ಸಂಘಗಳೂ, ಪ್ರತಿ ದಿವಸವೂ
ಉಪನ್ಯಾಸಗಳೂ ತುಂಬಿಹೋಗಿರುವುವು. ಅತ್ಯಂತ ವಿದ್ಯಾವಂತರಾದ ಇಲ್ಲಿಯ ಜನ
ಗಳು ಇಂಡಿಯಾ ದೇಶಕ್ಕೆ ಬಹಳ ಒಳ್ಳೆಯ ಹೆಸರನ್ನು ತಂದಿರುವರು. ಇಲ್ಲೇ ಸಂಘ
ಸಂಸ್ಕರಣದಕ್ಷರೂ, ದೇಶಸುಧಾರಕರೂ ಮೊಟ್ಟಮೊದಲು ತಲೆಯನ್ನೆತ್ತಿ ಜಯವನ್ನು
ಹೊಂದುತ್ತಿದಾರೆ. ಇಲ್ಲೇ ಕ್ರೂರವಾದ ಸಹಗಮನ ಪದ್ದತಿಯನ್ನು ನಿಲ್ಲಿಸಲು ಮೊಟ್ಟ
ಮೊದಲಿನ ಪ್ರಯತ್ನ ನಡೆಯಿತು.
ಇಂತಹ ಮಹಾ ಪಟ್ಟಣದಲ್ಲೂ ಕೆಲವು ಮಂದಿ ದುಷ್ಟರು ಅನೇಕ ಪಂಗಡ
ಗಳನ್ನು ಮಾಡಿಕೊಂಡಿದ್ದರು. ಪ್ರತಿಯೊಂದು ಪಂಗಡವೂ ಇಂಗ್ಲೀಷ್ ಅಕ್ಷರಗಳನ್ನು
ತಮ್ಮ ಪ್ರತ್ಯೇಕ ಭಾಗಗಳಿಗೊಂದೊಂದಾಗಿ ಒಂದೊಂದು ವಿಧವಾದ ಗುಂಡಿಗಳ
ಮೇಲೆ ಕೆತ್ತಿಸಿ ತಮ್ಮ ಉಡುಪಿನ ಯಾವದಾದರೂ ಒಂದು ಭಾಗದಲ್ಲಿಟ್ಟುಕೊಂಡಿರು
ತ್ತಿದ್ದರು. ಇವರುಗಳ ಕೆಲಸವು ಕದಿಯುವುದು ರಾಜದ್ರೋಪಕರವಾದ ಬರವಣಿಗೆಗೆ
ಳನ್ನು ಬರೆಯುವುದು ; ಹೊರಗೆ ಮಹಾ ಸತ್ಪುರುಷರಂತೆಯ, ಸಾತ್ವಿಕ ಶಿಖಾಮಣಿ
ಗಳಂತೆಯೂ ಕಾಣಿಸಿಕೊಳ್ಳುತ್ತಲೂ, ಸುಗುಣಿಗಳೂ ದೇಶಹಿತವನ್ನೇ ವ್ರತವಾಗುಳ್ಳ
ವರೂ ಆದ ಸಂಘಸಂಸ್ಕರಣಕರ್ತರ ಸಭೆಗೆ ಹೋಗಿ ಅಲ್ಲಿ ಮನಸ್ಸಿನಲ್ಲಿ ಏನಿಲ್ಲದಿದ್ದರೂ
ಮಹಾ ತಿಳಿದವರಂತೆ ತಲೆಯಾಡಿಸುತ್ತಲೂ, ಶಾಭಾಸ್, ವೆರಿಗುಡ್ (very good)
ಇದಕ್ಕೆ ವೈದೀಕ ಮೂಢರುಗಳೇನು ಹೇಳುವರು (what Can the orthodox
people say to this) ಎಂದು ಕೂಗುತ್ತಲೂ, ಸಭೆಯು ಮುಗಿದಮೇಲೆ ಎಲ್ಲರಿ
ಗಿಂತಲೂ ಗಟ್ಟಿಯಾಗಿ ಕೈ ಚಪ್ಪಾಳೆ ತಟ್ಟಿ, ವಯಸ್ಕರಾದ ಕನ್ಯೆಗಳನ್ನು ಲಗ್ನ ಮಾಡಿ
ಕೊಳ್ಳುವುದಕ್ಕೆ ಒಪ್ಪುವವರು ತಮ್ಮ ನಾಮಧೇಯಗಳನ್ನು ಬರೆಯಿರೆಂದು ಹೇಳಿದರೆ
ತಾವು ಮೊದಲೆಂದು ನುಗ್ಗಿ ತಮ್ಮ ಹೆಸರುಗಳನ್ನು ಬರೆಯುತ್ತಲೂ, ಸಂಘಕೂಟಗ
ಳೆಂದು ಹೇಳಿ (Social gatherings) ತಮ್ಮಂತಹ ನೀಚರನ್ನೇ ಸೇರಿಸಿಕೊಂಡು
ದ್ರಾಕ್ಷಾರಸ ಮುಂತಾದವುಗಳನ್ನು ಕುಡಿದು ಮನಸ್ಸಿಗೆ ಬಂದಹಾಗೆ ಕುಣಿಯುತ್ತಲೂ
ಇರುತ್ತಿದ್ದರು. ಇವರ ವಿಷಯವನ್ನೇ ಬರೆಯುತ್ತಾ ಹೋದರೆ ಎಷ್ಟು ಪುಸ್ತಕಗಳನ್ನು
ಬರೆದರೂ ಮುಗಿಯುವುದಿಲ್ಲವು.
ಈ ದಿವಸ ಮೇಲೆ ಹೇಳಿದಂಥಾ ಪಂಗಡಗಳಲ್ಲೊಂದಾದ ಎಂ(M) ಕೂಟದವರ ವಾರ್ಷಿಕ ಕೂಟವು. ಆದ್ದರಿಂದ ಇವರು ತಮ್ಮ ಕಾಳೀ ಬೀದಿಯಲ್ಲಿರುವ ತಮ್ಮ
೧೭----------------------------------------------
17 ಮಧುಸೂದನ
ಸ್ನೇಹಿತರನ್ನೆಲ್ಲಾ ಮನೆಗೆ ಸಂಘಕೂಟಕ್ಕಾಗಿ (Social gathering) ಕರೆದಿರುವರು.
ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಆ ಮನೆಯು ಅನೇಕ ಐರೋಪ್ಯರ ಟೊಪ್ಪಿಗ
ಳನ್ನು ಧರಿಸಿರತಕ್ಕಂಥಾ ತರುಣರಿಂದ ತುಂಬಿಹೋಯಿತು. ಆ ತರುಣರು ಆ ಟೊಪ್ಪಿಗ
ಳನ್ನು ಧರಿಸಿದ್ದರೂ ಅವರ ಮುಖವು ವಿಕಾರವಾಗಿ ಕಪ್ಪು ಬಣ್ಣದಿಂದಿತ್ತೇ ವಿನಹಾ
ಅವರು ಬೇರೆ ಐರೋಪ್ಯರಂತೆ ಕಂಡುಬರುತ್ತಿರಲಿಲ್ಲ. ಏನೂ ಅರಿಯದ ಹೊಸಬನೊ
ಬ್ಬನು ಆ ದಿನ ಅಲ್ಲಿಗೆ ಪ್ರವೇಶಮಾಡಿದ್ದರೆ ಅಲ್ಲಿ ನೆರದಿದ್ದ ಜನಗಳೆಲ್ಲರೂ ಕ್ರಿಸ್ತಮ
ತಾವಲಂಬಿಗಳಾದವರೆಂದು ಹೇಳುತ್ತಿದ್ದನು. ಏಕಂದರೆ ಎಲ್ಲರೂ ತಲೆಯ ಕೂದಲನ್ನು
ವಿಧವಿಧವಾಗಿ ಕತ್ತರಿಸಿಕೊಂಡು, ಟೊಪ್ಪಿಗಳನ್ನು ಹಾಕಿಕೊಂಡು, ಬಾಯಲ್ಲಿ ಚುಟ್ಟಾ
ಗಳನ್ನು ಕಚ್ಚಿಕೊಂಡು ಕಚ್ಚಿ ಕಚ್ಚಿ ಮಾತನಾಡುತಿದ್ದರು. ಒಬ್ಬನ ಹಣೆಯಲ್ಲಾದರೂ
ಮತಸಂಬಂಧವಾದ ಗುರುತುಗಳೇ ಇರಲಿಲ್ಲ. ಕ್ರಿಸ್ತಪಾದ್ರಿಗಳು ಹಣವನ್ನೂ, ತಮ್ಮ
ಸಾಮರ್ಥ್ಯವನ್ನೂ ಮತ್ತು ತಮ್ಮ ಜೀವಮಾನವನ್ನೆಲ್ಲಾ ಖರ್ಚು ಮಾಡಿದರೂ ಈಚಿಗೆ
ಕ್ರಿಸ್ತಮತವನ್ನವಲಂಬಿಸತಕ್ಕವರು ಎಲ್ಲೋ ಸಾವಿರಕ್ಕೊಬ್ಬನು. ಆದರೆ ಮೇಲೆ ಕಂಡ
ಹಿಂದುಗಳೂ ಅಲ್ಲದ, ಕ್ರಿಸ್ತರೂ ಅಲ್ಲದ ಜನಗಳ ಹಾಗೆ ಎಲ್ಲರೂ ಆಗುತ್ತಾ ಬಂದರೆ
ಪಾದ್ರಿಗಳು ಕಷ್ಟ ಪಡದೇನೇ ಸ್ವಲ್ಪ ಕಾಲದಲ್ಲೇ ಅನೇಕರು ಕ್ರಿಸ್ತಮತವನ್ನ ವಲಂಬಿಸು
ವುದನ್ನು ನೋಡಿ ಆಶ್ಚರ್ಯ ಪಡುವ ಕಾಲವುಬಂದೇ ಬರುವುದು. ಈ ವಿಷಯವು ಈಗ
ಎಲ್ಲೆಲ್ಲಿಯೂ ನಡೆಯುತ್ತಿರುವುದನ್ನು ಘಂಟಾಘೋಷವಾಗಿ ಹೇಳಬಹುದು. ಸಂಘ
ಸಂಸ್ಕರಣ ಧುರೀಣರು ಇತರ ವಿಷಯಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿ ಅನ್ಯಾ
ಯವಾಗಿ ಹಾಳಾಗುತ್ತಿರುವ ತಮ್ಮ ತರುಣರನ್ನು ಸರಿಪಡಿಸುವುದಕ್ಕೆ ಪ್ರಯತ್ನ ಪಟ್ಟರೆ
ದೇಶಕ್ಕೆ ಎಷ್ಟು ದೊಡ್ಡ ಸಹಾಯಮಾಡಿದಂತಾಗುವುದು ?
ಮನೆಯ ಬಾಗಿಲಿನಲ್ಲಿ ಇಬ್ಬರು ತರುಣರು ನಿಂತುಕೊಂಡು ಬಂದಂಥ ಅತಿಥಿಗ
ಇನ್ನೆಲ್ಲಾ ಒಳಕ್ಕೆ ಬಿಡುತ್ತಿದ್ದರು. ಪ್ರತಿಯೊಬ್ಬ ಅತಿಥಿಯೂ ತನ್ನ ಸಂಗಡದ ಗುಂಡಿ
ಯನ್ನು ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದನು. ಸುಮಾರು ಐದೂವರೆ ಗಂಟೆಯ
ಹೊತ್ತಿಗೆ ಬಾಗಿಲು ಹಾಕಲ್ಪಟ್ಟಿತು. ಈ ವಿಷಯಗಳೆಲ್ಲಾ ನಡೆದು ಹದಿನೈದು ವರ್ಷಗ
ಳಾದ್ದರಿಂದ ಆಗ ಪೊಲೀಸಿನವರ ಕಾಟವೇನೂ ಇರಲಿಲ್ಲ. ಆಗ ಯಾರು ಬೇಕಾದರೂ
ಯಾವ ಬಗೆಯ ಮೀಟಿಂಗುಗಳನ್ನಾದರೂ ಹೂಡಬಹುದಾಗಿತ್ತು. ಈಗಿನ ಕಾಲವಾಗಿ
ದ್ದರೆ ತಕ್ಷಣವೇ ದಂಡಪಾಣಿಯಾದ ಪೊಲೀಸಿನವನು ಬಂದು ಗುಂಪನ್ನು ಚದರಿಸಿ
ಮುಖ್ಯಸ್ಥರನ್ನು ಅನುಮಾನಾಸ್ಪದರೆಂದು ಸೆರೆ ಹಿಡಿಯುತ್ತಿದ್ದನು. ಮನೆಯೊಳಗೆಲ್ಲಾ ಅನೇಕ ಮೇಜುಗಳೂ, ವೇತ್ರಾಸನಗಳೂ ಇಡಲ್ಪಟ್ಟಿದ್ದವು. ಅಲ್ಲಲ್ಲಿ ಗುಂಡಾದ
೧೮----------------------------------------
18 ಕಾದಂಬರೀ ಸಂಗ್ರಹ
ಮೇಜು (Round Tables) ಗಳ ಮೇಲೆ ಬ್ರಾಂದಿ, ವೈನು ಮುಂತಾದವುಗಳೂ,
ಗಾಜಿನ ಬಟ್ಟಳುಗಳೂ ಇಡಲ್ಪಟ್ಟಿದ್ದವು. ಮನೆಯ ತುಂಬ ಹೊಗೆಯ ಬತ್ತಿಯ
ಧೂಮ್ರವು ತುಂಬಿಕೊಂಡಿದ್ದಿತು. ಒಂದೊಂದು ಕಡೆಯಲ್ಲಿ ಐದಾರು ಜನಗಳಾಗಿ
ಗುಂಪು ಕೂಡಿಕೊಂಡು ಇಸ್ಪೀಟುಗಳನ್ನಾಡುತ್ತಲೂ, ಇಲ್ಲವೆ ನಾನಾವಿಧವಾದ ಜೂಜಾ
ಟಗಳನ್ನಾಡುತ್ತಲೂ ಇದ್ದರು. ಜೂಜಾಡುತ್ತಿದ್ದ ಜನಗಳ ಕೂಗೂ, ಅವರು ಎಸೆದಾ
ಡುತ್ತಿದ್ದ ಹಣಗಳ ಧಣ್ ಧಣ್ ನಾದವೂ, ಮದ್ಯಪಾಯಿಗಳ ( ಎಲ್ಲಿ ಆ ಓಲ್ಡು
ವೈನ್ (Old Wine) ಕೊಡು, ಈ ಬಟ್ಟಲಿಗೆ ಇನ್ನಿಷ್ಟುಹಾಕು” ಎಂಬ ಆರ್ಭಟವೂ,
ಮತ್ತೆ ಕೆಲವರ, ವೈದೀಕರನ್ನು ಹೇಳನಮಾಡತಕ್ಕಂಥಾ ನಿಂದನಾ ವಾಕ್ಯಗಳೂ
ಕೇಳಿಬಂದು ಆ ಮನೆಯ ಮದ್ಯಪಾಯಿಗಳೂ ಮತ್ತು ಸೋಮಾರಿಗಳೂ ಆದವರ
ದೊಡ್ಡಗುಹೆಯಂತೆ ಕಂಡುಬರುತ್ತಿತ್ತು. ಇವರನ್ನೆಲ್ಲಾ ಬಿಟ್ಟು ಒಬ್ಬ ಯೌವನಸ್ಥನು
ಸ್ವಲ್ಪ ದೂರದಲ್ಲೇ ಇದ್ದ ಒಂದು ಆಸನದ ಮೇಲೆ ಕುಳಿತುಕೊಂಡು ತಲೆಯನ್ನು ಬಗ್ಗಿ
ಸಿಕೊಂಡು ಏನೇನೋ ಯೋಚಿಸುತ್ತಿದ್ದನು. ಅವನು ಸುಮಾರು ಮೂವತ್ತೈದುವರ್ಷ
ವಯಸ್ಸಿನಂತೆ ಕಾಣಬಂದನು. ಆಗ್ಗೆ ಯಾರಾದರೂ ಬಂದು ಕರೆದರೆ ಆಮೇಲೆ
ಬರುವೆನೆಂದು ಹೇಳುತ್ತಿದ್ದನು. ಅವನು ಯಾರೆಂಬುದಾಗಲೀ, ಯಾಕೆ ಹಾಗೆ ಕುಳಿತಿರು
ತಾನೆಂಬುದಾಗಲೀ ಯಾರಿಗೂ ತಿಳಿಯದು.
ಸುಮಾರು ರಾತ್ರಿ ಏಳುವರೆಗಂಟೆಯ ಹೊತ್ತಿಗೆ ಆಟಗಳೆಲ್ಲವೂ ಮುಗಿದವು.
ಅನೇಕರು ತಮ್ಮ ಹಣವೆಲ್ಲಾ ಹೋಯಿತೆಂದು ಗೊಣಗುಟ್ಟಿಕೊಳ್ಳುತ್ತಿದ್ದರು. ಮದ್ಯವೂ
ಮುಗಿದುಹೋಗಿದ್ದಿತು. ಹೊಸಮದ್ಯವು ತರಲ್ಪಟ್ಟಿತು. ಎಲ್ಲರೂ ಮದ್ಯವನ್ನು ಪಾನ
ಮಾಡಿದರು. ವ್ಯಸನಾಕ್ರಾಂತನಾದ ಮನುಷ್ಯನೂ ಅಲ್ಲಿದ್ದವನೊಬ್ಬನ ಬಲವಂತ
ದಿಂದ ಎರಡು ಮೂರು ಬಟ್ಟಲು ದ್ರಾಕ್ಷಾರಸವನ್ನು ಕುಡಿದನು. ಕ್ಷಣಮಾತ್ರ
ದಲ್ಲೇ ಗುಂಡಾದ ಮೇಜುಗಳೆಲ್ಲಾ ತೆಗೆಯಲ್ಪಟ್ಟು ಕುರ್ಚಿಗಳು ಸಾಲುಸಾಲಾಗಿ
ಇಡಲ್ಪಟ್ಟವು. ಒಂದುಭಾಗದಲ್ಲಿ ಒಂದು ಎತ್ತರವಾದಸ್ಥಳದಲ್ಲಿ ಮೂರುಕುರ್ಚಿಗಳಿ
ದ್ದವು. ಎಲ್ಲರೂ ಕುರ್ಚಿಗಳ ಮೇಲೆ ಕುಳಿತುಕೊಂಡರು. ಆಗ ಒಬ್ಬ ತರುಣನೆದ್ದು
ಈ ದಿವಸದ ಸಂತೋಷ ಕೂಟಕ್ಕೆ ನಮ್ಮ ಸಹೋದರರಾದ ಬಿ. (B) ಕೂಟದ ಮುಖ್ಯ
ಸ್ಥರನ್ನು ಅಧಿಪತಿಗಳಾಗಿರಬೇಕೆಂದು ನಾನು ಕೋರುತ್ತೇನೆ ಎನಲು ಎಲ್ಲರೂ ಹಾಗೇ
ಆಗಬೇಕೆಂದು ಒಪ್ಪಿದರು. ಆಗ ಸುಮಾರು ಮುವ್ವತ್ತು ವಯಸ್ಸಿನ ಮನುಷ್ಯನೊಬ್ಬನು
ಎದ್ದು ಹೋಗಿ ಎತ್ತರವಾದ ಸ್ಥಳದಲ್ಲಿ ಕುಳಿತನು. ಕೂಡಲೇ ಈ ಯಂ (M) ಕೂಟದ
ಮುಖ್ಯಸ್ಥನು ವ್ಯಸನಾಕ್ರಾಂತನಾಗಿ ಕುಳಿತಿದ್ದ ಮನುಷ್ಯನನ್ನೂ ಸಂಗಡ ಕರೆದು
೧೯-----------------------------------------------
19 ಮಧುಸೂದನ
ಕೊಂಡು ಉಳಿದಿದ್ದ ಕುರ್ಚಿಗಳಲ್ಲಿ ಅವರನ್ನೂ ಕೂರಿಸಿ ತಾನೂ ಕುಳಿತನು. ಅಗ್ರಾಸ
ನಾಧಿಪತಿಯು 'ಎಂ' ಕೂಟದ ಮುಖ್ಯಸ್ಪನನ್ನು ಕಳೆದ ವರ್ಷದ ರಿಪೋರ್ಟನ್ನು ಓದು
ವಹಾಗೆ ಕೇಳಿದನು. ಅವನು ತನ್ನಾಸನದಿಂದ ಎದ್ದು ನಿಂತು ಈ ರೀತಿಯಾಗಿ ಹೇಳತೊ
ಡಗಿದನು.
ಸಹೋದರರೇ!
ನಮ್ಮ ಸಂಘವು ಸ್ಥಾಪಿಸಲ್ಪಟ್ಟು ಇಂದಿಗೆ ಐದುವರ್ಷಗಳಾದುವು. ಈ ಐದು
ವರ್ಷಗಳಲ್ಲಿ ನಾವು ಎಷ್ಟೋ ಕೆಲಸವನ್ನು ಮಾಡಿರುವೆವು. ಮುಖ್ಯವಾಗಿ ಹೋದ
ವರ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಿರುವೆವು. ಅವುಗಳಲ್ಲಿ ಮುಖ್ಯವಾದವುಗಳಾ
ವುವೆಂದರೆ:-ನಮ್ಮ ಸಂಘದಲ್ಲಿ ನಾಲ್ವರು, ವಿಧವೆಗಳನ್ನು ವಿವಾಹಮಾಡಿಕೊಂಡರು.
ದೇಶೋನ್ನತಿಗಾಗಿ ಯಾವ ಸಹಾಯವನ್ನೂ ಮಾಡದೇ ಇದ್ದ ಶುದ್ಧಲೋಭಿಯಾದ
ಚರ್ಮದ ವ್ಯಾಪಾರಿಯೊಬ್ಬನನ್ನು ಸೂರೆಗೊಂಡೆವು. ನಮ್ಮವರಿಗೆ ರಿವಾಲ್ವರುಗಳು
ಸಾಲದೇ ಇದ್ದದ್ದರಿಂದ ಒಂದು ಕಂಪನಿಯನ್ನು ಲೂಟಿಮಾಡಿ ಐವತ್ತು ರಿವಾಲ್ವರುಗ
ಇನ್ನೂ ಅನೇಕ ತೋಟಾಗಳನ್ನೂ ಕದ್ದು ತಂದೆವು. ನಮ್ಮ ಮೆಂಬರ್‌ಗಳು ಇಪ್ಪತ್ತರಿಂದ
ಇಪ್ಪತ್ತೈದಕ್ಕೇರಲ್ಪಟ್ಟರು. ಖರು ಕಳೆದ. ಈಗ ೧ಂಸಾವಿರ ರೂಪಾಯಿ ಉಳಿದಿರುವುದು,
ಇದೋ ನನ್ನ ಪಕ್ಕದಲ್ಲಿ ಕುಳಿತಿರುವವರೊಬ್ಬರು ನಮ್ಮ ಸಂಘಕ್ಕೆ ಹೊಸಬರು. ಇವರು
ಮಹದೈಶ್ವರ್ಯ ಸಂಪನ್ನರು. ಇವರು ಸ್ವಲ್ಪ ಕಾಲದಲ್ಲೇ ನನ್ನ ಮಗಳನ್ನು ವಿವಾಹಮಾಡಿ
ಕೊಳ್ಳುವುದಾಗಿ ಒಪ್ಪಿರುತ್ತಾರೆ. ಅವರ ಈಗಿರುವ ಆಕಾರವು ನಿಜವಾದದ್ದಲ್ಲ.
ಇನ್ನೂ ಸ್ವಲ್ಪ ಕಾಲ ಹೀಗಿದ್ದು ಆ ಮೇಲೆ ತಮ್ಮ ನಿಜರೂಪವನ್ನು ಧರಿಸುವರು.
ಮುಂದೆ ನಮ್ಮ ಸಂಘವನ್ನು ಕಾಪಾಡುವುದಾಗಿ ವಾಗ್ದಾನಮಾಡಿರುತ್ತಾರೆ. ಅವರು
ಯಾರೆಂಬುದಾಗಲೀ, ಅವರ ಹೆಸರೇನೆಂಬುದಾಗಲೀ ಇನ್ನೂ ಸ್ವಲ್ಪಕಾಲ ಯಾರಿಗೂ
ತಿಳಿಯದೇ ಇರುವುದೇ ಒಳ್ಳೇದು. ಈಗ ನಿಮ್ಮನ್ನು ನಾನು ಒಂದು ಪ್ರಶ್ನೆಯನ್ನು
ಕೇಳಬೇಕೆಂದಿರುತ್ತೇನೆ. ಅದಕ್ಕೆ ದಯವಿಟ್ಟು ಸರಿಯಾದ ಉತ್ತರವನ್ನು ಕೊಡಿರಿ.
ಒಂದು ಮದುವೆಯು ಮಾಂಗಲ್ಯ ಸೂತ್ರಧಾರಣಕ್ಕೆ ಮುಂಚೆ ನಿಂತು ಹೋದರೆ ಆಗ
ಆ ಹುಡುಗಿಯು ವಿವಾಹಿತಳೇ, ಅಥವಾ, ಅವಿವಾಹಿತಳೇ? ಒಂದುವೇಳೆ ಹಾಗೆ ವಿವಾಹ
ಭಂಗವಾದ ಮೇಲೆ ಆ ಕನೈಯು ಋತುವಾದರೆ ಏನುಮಾಡುವುದು ?
ಆಗ ಅನೇಕರು ಎದ್ದು ನಿಂತು ಹಾಗೆ ನಿಂತುಹೋದ ಮದುವೆಯು ಶಾಸ್ತ್ರಗಳಲ್ಲಿ
ವಿವಸಿರುವ ಹಾಗೂ ಮಾಂಗಲ್ಯಸೂತ್ರ ಕಟ್ಟದೇ ಇದ್ದದ್ದರಿಂದ ವಧೂವರರಿಗೇನೂ
ಸಂಬಂಧವೇ ಇಲ್ಲವೆಂತಲೂ ಹಾಗೆ ಕನೈಯ ಋತುವಾದರೆ ಅವಳು ಹಿಂದುಗಳ
೨೦--------------------------------------
೨೦ ಕಾದಂಬರೀ ಸಂಗ್ರಹ
ಗೊಡ್ಡು ಶಾಸ್ತ್ರದಂತೆ ಬಹಿಷ್ಕಾರಕ್ಕೆ ಯೋಗ್ಯಳೆಂದೂ ಆದರೆ ತಾವೆಲ್ಲರೂ ಔನ್ನತ್ಯ
ವನ್ನು (Reform) ಪಡೆದವರಾದ್ದರಿಂದ ಹುಡುಗಿಯು ಋತುವಾದರೂ
ಲಕ್ಷ್ಯಮಾಡು ವುದಿಲ್ಲವೆಂತಲೂ ತಿಳಿಸಿದರು.
ಆಗ ಮುಖ್ಯಸ್ಥನು "ಸರಿ, ನೀವು ಹೇಳಿದ ರೀತಿಯೇ ನಡೆದುಕೊಳ್ಳೋಣ ''
ಎಂದು ತನ್ನ ಬಳಿ ಕುಳಿತಿದ್ದವನ ಮುಖವನ್ನು ನೋಡಿಬಿಟ್ಟು ಪುನಹಾ ಹೇಳತೊಡಗಿ
ದನು. ಸಹೋದರರೇ, ನಾನು ಹೇಳಿದ ರೀತಿ ಒಂದು ವಿವಾಹವು ನಿಂತುಹೋಯಿತು.
ವರನ ತಂದೆಯೂ ವಧುವಿನ ತಂದೆಯ ವಿವಾಹವು ಸಂಪೂರ್ಣವಾಗಿ ನೆರವೇರಿದ
ಹಾಗೆಯೇ ತೀರ್ಮಾನಿಸಿರುತ್ತಾರೆ. ನಿಮ್ಮ ಅಭಿಪ್ರಾಯವನ್ನು ವರನ ತಂದೆಗೆ ತಿಳಿಯ
ಪಡಿಸಬೇಕು. ನನ್ನ ಪುತ್ರಿಯು ಋತುಮತಿಯಾದವಳು. ಅವಳನ್ನು ಇವರಿಗೆ ಕೊಡು
ತ್ತೇನೆ. ನೀವೆಲ್ಲರೂ ಬಂದು ಈ ಕೂಟವನ್ನು ಸಾಂಗವಾಗಿ ನೆರವೇರುವ ಹಾಗೆ ಮಾಡಿ
ದಕ್ಕೆ ನಿಮ್ಮನ್ನೆಲ್ಲಾ ವಂದಿಸುತ್ತೇನೆ. ಈ ಹೊಸ ಮೆಂಬರಿನ ವಿಷಯವಾಗಿ ಜಯ
ವನ್ನು ಮಾಡಿ ಅವನ ಆರೋಗ್ಯ ಲಾಭಕ್ಕಾಗಿ ಎಲ್ಲರೂ ಮದ್ಯವನ್ನು ಕುಡಿಯೋಣ
ಕ್ಷಣಮಾತ್ರದಲ್ಲೇ ಎಲ್ಲರ ಕೈಗೂ ಮದ್ಯ ತುಂಬಿದ ಬಟ್ಟಲುಗಳು ಬಂದವು.
ಎಲ್ಲರೂ ಜಯನಾದವನ್ನು ಮಾಡುತ್ತಾ ಮದ್ಯವನ್ನು ಪಾನಮಾಡಿದರು, ಅಗ್ರಾಸನಾಧಿ
ಪತಿಯು ಎದ್ದು ಎಲ್ಲರಿಗೂ ಆರೋಗ್ಯವೂ ಲಾಭವೂ ಉಂಟಾಗಲೆಂದೂ ಎಲ್ಲರೂ
ಜಾಗರೂಕರಾಗಿರಬೇಕೆಂದೂ ಹೇಳಿ ಸಭೆಯನ್ನು ಮುಗಿಸಿದನು. ಎಲ್ಲರೂ ಕೈ ಚಪ್ಪಾಳೆ
ತಟ್ಟುತ್ತ ವ್ಯಸನಾಕ್ರಾಂತನಾದ ಹೊಸ ಮೆಂಬರನ ಕೈ ಹಿಡಿದು ಆಡಿಸುತ್ತಾ ಎಂ (M)
ಸಂಘದ ಅಧಿಕಾರಿಯಿಂದ ಅಪ್ಪಣೆಯನ್ನು ಪಡೆದು ಒಬ್ಬೊಬ್ಬರಾಗಿ ಹೊರಕ್ಕೆ ಹೊರಟು
ಬಂದರು. ಸ್ವಲ್ಪ ಕಾಲದಲ್ಲೆ ಆ ಸೋಮಾರಿಗಳ ಗುಹೆಯಲ್ಲಿ ಐದಾರು ಜನಗಳು
ವಿನಹಾ ಮತ್ತಾರೂ ಇಲ್ಲದ ಹಾಗಾಯಿತು.
----
ಆ ರ ನೇ ಅ ಧ್ಯಾ ಯ.
(ಏಳುಬಣ್ಣದ ಕರವಸ್ತ್ರ.)
ಭಾಸ್ಕರನು ಕಲ್ಕತ್ತಾ ನಗರವನ್ನು ತಲಪಿ ಗೋವಿಂದನ ಮನೆಯನ್ನು ತಲಪಿದ
ನೆಂದು ಹಿಂದೆಯೇ ತಿಳಿಸಿದ್ದೇವಷ್ಟೆ. ಅಲ್ಲಿ ಅವನು ಗೋವಿಂದನಿಗೆ ಎಲ್ಲಾ ವಿಷಯ
ಗಳನ್ನೂ ತಿಳಿಸಿ ತನ್ನನ್ನು ಇನ್ನು ಮುಂದೆ ಸತ್ಯಚಂದನೆಂದು ಕರೆಯಬೇಕೆಂದು ಹೇಳಿದನು.
೨೧------------------------------------
ಮಧುಸೂದನ 21
ಮಾರನೇ ದಿವಸವೇ ಚೊ ಬಜಾರ್ ಬೀದಿಗೆ ಹೋಗಿ ಅಲ್ಲಿನ 29 ನೇ ನಂಬರ್ ಮನೆಯ
ಯಜಮಾನನನ್ನು ಹುಡುಕಿಕೊಂಡು ಹೋದನು. ಅವನನ್ನು ಕಂಡು ಹಿಡಿದು ಅವನನ್ನು
ಮಧುಸೂದನನ ವಿಷಯವೇನಾದರೂ ಗೊತ್ತೋ ಎಂದು ಕೇಳಿದನು.
ಯಜಮಾನ:-ಮಧುಸೂದನನೆಂಬುವನು ಈಗ ನಮ್ಮ ಮನೆಯಲ್ಲಿ ಇಲ್ಲ.
ಭಾಸ್ಕರ- ಈಗ್ಗೆ ಎರಡು ವರ್ಷಗಳ ಹಿಂದೆ ಇಲ್ಲಿ ಇದ್ದನು. ಅವನನ್ನೇ ನಾ
ದರೂ ಈಚೆಗೆ ನೋಡಿದ್ದೀರಾ ?
ಯಜಮಾನ: --ಆಹಾ ! ಈಗ ಜ್ಞಾಪಕಕ್ಕೆ ಬಂದಿತು. ಈಗ ಎರಡು ವರ್ಷ ಗಳಲ್ಲಿ ಮಧುಸೂದನನೆಂಬೊಬ್ಬ ಜಮೀನ್ದಾರನಿದ್ದನು. ಅವನು ನನ್ನ ಮನೆಯನ್ನು
ಬಿಟ್ಟ ಮೇಲೆ ಏನಾದನೋ ನನಗೆ ಗೊತ್ತಿಲ್ಲ.
ಭಾಸ್ಕರ :----ಅವನ ಸಂಗಡ ಅನೇಕ ಸ್ನೇಹಿತರಿದ್ದರು. ಅವರ ವಿಷಯವೇನಾ
ದರೂ ನಿಮಗೆ ಗೊತ್ತಿದೆಯೋ ?
ಯಜಮಾನ: ಸ್ವಾಮಿಾ, ನನಗಾವುದೂ ತಿಳಿಯದು. ಆ ಮಧುಸೂದನ
ನೆಂಬುವನು ಹೊರಟು ಹೋದ ಮೇಲೆ ಅವರೆಲ್ಲರೂ ಹೊರಟು ಹೋದರು. ಅಷ್ಟೇ
ನನಗೆ ಗೊತ್ತಿರುವುದು.
ಭಾಸ್ಕರನು ಇನ್ನು ಇವನನ್ನು ಕೇಳಿ ಪ್ರಯೋಜನವಿಲ್ಲವೆಂದು ಅವನಿಂದಪ್ಪಣೆ
ಯನ್ನು ಪಡೆದುಕೊಂಡು ಕಾಳಿಬೀದಿಯಲ್ಲಿ ವೈದಿಕರ ಹೋಟಲಿಗೆ ಹೋದನು.
ಆ ಹೋಟಲು ಮೈಸೂರು ದೇಶಸ್ಥನಾದ ಸುಬ್ರಹ್ಮಣ್ಯಶಾಸ್ತ್ರಿಯೆಂಬುವವನಿಂದ ನಡೆಸ
ಲ್ಪಡುತ್ತಿತ್ತು. ಅಲ್ಲಿ ವೈದೀಕರಿಗೆ ಮಾತ್ರ ಭೋಜನವನ್ನು ಹಾಕುತ್ತಿದ್ದರು. ಪ್ರತಿ
ಯೊಬ್ಬನೂ ಸ್ನಾನಾದಿಗಳನ್ನೂ ಅಲ್ಲೇ ಮಾಡಿಕೊಂಡು ಜಪ ತಪಗಳನ್ನೂ ಮಾಡಿ
ಅಲ್ಲಿದ್ದ ವಿಗ್ರಹಗಳ ಪೂಜೆಯನ್ನು ನೋಡಿಬಿಟ್ಟು ಅಭಿಷೇಕ ಜಲವನ್ನು ಸ್ವೀಕರಿಸಿ
ಸಾಲುಸಾಲಾಗಿ ಹಾಕಿದ್ದ ಎಲೆಗಳ ಬಳಿ ಕುಳಿತು ಭೋಜನಮಾಡುತ್ತಿದ್ದರು. ನೆಲವೆಲ್ಲಾ
ಚನ್ನಾಗಿ ಸಾರಿಸಲ್ಪಟ್ಟು ರಂಗವಲ್ಲಿಗಳಿಂದಲಂಕರಿಸಲ್ಪಟ್ಟಿರುತ್ತಿದ್ದವು. ಅಡಿಗೆ ಮುಂತಾದ
ವೆಲ್ಲವೂ ವಯಸ್ಕರಾದ ಮತ್ತು ಆಚಾರ ಸಂಪನ್ನರಾದ ವಿಧವೆಗಳಿಂದ ನಡೆಯುತ್ತಿ
ದ್ದವು. ಬಡಿಸುವವರೂ ಅವರೇ ಆಗಿದ್ದರು. ಇತರ ಹೋಟಗಳಹಾಗೆ ಅಲ್ಲಿ
ಯಾರೂ ತಮ್ಮ ಅಂಗಿ ಮುಂತಾದವುಗಳೊಡನೆ ಕುಳಿತು ಭೋಜನ ಮಾಡುವುದಕ್ಕೆ
ಆಗುತ್ತಿರಲಿಲ್ಲ. ಮಧ್ಯದಲ್ಲಿ ಯಾರೂ ಎದ್ದು ಹೊಗಕೂಡದು, ಭೋಜನವು ನಡೆಯು
ತಿರುವಾಗ ಇಬ್ಬರು ಬ್ರಾಹ್ಮಣರು ವೇದ ಮಂತ್ರಗಳನ್ನು ಹೇಳುತ್ತಿದ್ದರು. ಹೆಚ್ಚಿನ
೨೨------------------------------------------
ಕಾದಂಬರಿ ಸಂಗ್ರಹ ೨೨
ಮಾತೇನು ? ಆಚಾರ ರುಚಿ ಇವುಗಳಿಗೆ ಆ ಭೋಜನಶಾಲೆಯು ತವುರು ಮನೆಯಾ
ಗಿತ್ತು. ಇತರ ಹೋಟಲುಗಳಿಗಿಂತಲೂ ಇಲ್ಲಿನ ದರವು ಸ್ವಲ್ಪ ಜಾಸ್ತಿಯಾಗಿತ್ತು.
ಆದರೂ ಇಲ್ಲಿಗೆ ಎಲ್ಲಾ ಹೋಟಲಿಗಿಂತಲೂ ಹೆಚ್ಚಾಗಿ ಜನಗಳು ಬರುತ್ತಿದ್ದರು.
ಅನೇಕರು ಹೋಟಲುಗಳಲ್ಲಿರುವುದರಿಂದ ಹಾಳಾಗಿ ಹೋಗಿ ದುಮ್ಮಾರ್ಗಿಗಳಾಗಿ
ರುವರೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ. ಹೋಟಲುಗಳಲ್ಲಿ ಯಾವ ಆಚಾ
ರವೂ ಇಲ್ಲದೆ ಮನಸ್ಸಿಗೆ ಬಂದಹಾಗೆ ನಡೆಯುವುದರಿಂದ ಕೆಟ್ಟ ನಡತೆಗಳಿಗೆ ತವರು
ಮನೆಗಳಾಗಿವೆ. ಆಚಾರ ಸಂಪನ್ನರಾದವರು ವಿಧಿಯಿಲ್ಲದೆ ಹೋಟಲುಗಳಿಗೆ ಸೇರಿ
ಸ್ವಲ್ಪ ಕಾಲದಲ್ಲೇ ಆಚಾರಾದಿಗಳನ್ನು ಮರೆತು ನಾಸ್ತಿಕರಾಗುತ್ತಾರೆ. ನಾವು ಮೇಲೆ
ವಿವರಿಸಿರುವ ಕಲ್ಕತ್ತಾ ನಗರದ ವೈದೀಕ ಹೋಟಲಿನ ನೇಮನಿಷ್ಟೆಗಳಲ್ಲಿ ಹತ್ತರ
ತ್ತೊಂದು ಭಾಗವು ಇತರ ಹೋಟಲುಗಳಲ್ಲಿ ನಡದರೂ ಸಹಾ ಸಾಕಾಗಿದೆ. ಅನೇಕರು
ಅಲ್ಲಿಗೆ ಸೇರಿ ತಮ್ಮ ಆಚಾರಾದಿಗಳನ್ನುಳಿಸಿಕೊಳ್ಳುವರು.
ಭಾಸ್ಕರನು ಮೇಲೆ ಕಂಡ ವೈದಿಕರ ಹೋಟಲಿಗೆ ಹೋಗಿ ಅಲ್ಲಿನ ಯಜಮಾನ
ನೊಡನೆ ಸ್ವಲ್ಪ ಹೊತ್ತು ಮಾತನಾಡಲಪೇಕ್ಷಿಸಿದನು. ಲೌಕಿಕರನ್ನು ನೋಡುವುದಕ್ಕಾ
ಗಿಯೇ ಪ್ರತ್ಯೇಕವಾಗಿ ನಿರ್ಮಾಣವಾಗಿದ್ದ ಕೊಠಡಿಗೆ ಭಾಸ್ಕರನು ಹೋಗಿ ಕಾದಿರಲು
ಸ್ವಲ್ಪ ಹೊತ್ತಾದ ಮೇಲೆ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಭೂತಿಯನ್ನು ಧರಿಸಿದ್ದ
ಬ್ರಾಹ್ಮಣನೊಬ್ಬನು ಬಂದು ತನ್ನನ್ನು ಕರೆಯ ಕಳುಹಲು ಕಾರಣವೇನೆಂದು ಕೇಳಿ
ದನು. ತನ್ನ ದೇಶದವನಾದ ಆ ಬ್ರಾಹ್ಮಣನು ತನ್ನನ್ನು ಸ್ವ ಭಾಷೆಯಲ್ಲಿ ಮಾತನಾಡಿ
ಸಲು ಭಾಸ್ಕರನು ಸಂತೋಷಪಟ್ಟವನಾಗಿ ಅವನಿಗೆ ವಂದಿಸಿ, ಅಯಾ ತಮ್ಮ ಗೃಹ
ದಲ್ಲಿ ಈಗೆರಡು ವರ್ಷಗಳ ಹಿಂದೆ ಭೋಜನಮಾಡುತ್ತಿದ್ದ ಮಧುಸೂದನನೆಂಬುವನನ್ನು
ಬಲ್ಲಿರಾ? ”
ಬ್ರಾಹ್ಮಣ:-ಚೆನ್ನಾಗಿ ಬಲ್ಲೆನು, ಅವನಸಂಗಡ ಅವನ ಸಹಪಾಠಿಗಳಾದವರು
ಅನೇಕರು ಬರುತ್ತಿದ್ದರು. ಅವರಿಗೆಲ್ಲಾ ಅವನೇ ದುಡ್ಡು ಕೊಡುತ್ತಿದ್ದನು. ನಾನು ಅಲ್ಲಲ್ಲಿ
ಜನಗಳ ಆಚಾರಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಗೂಢಚಾರರನ್ನಿಟ್ಟಿರುವೆನು.
ಒಂದು ದಿವಸ ನನ್ನ ಗೂಢಚಾರರಲ್ಲೊಬ್ಬನು, ಮಧುಸೂದನನ ಸ್ನೇಹಿತನೊಬ್ಬನು ರಾತ್ರೀ
ಕಾಲದಲ್ಲಿ ಇಲ್ಲೇ ಸಮೀಪದಲ್ಲಿರುವ ಮದ್ಯದಂಗಡಿಯಿಂದ ಹೊರಕ್ಕೆ ಬರುವುದನ್ನು
ನೋಡಿ ನನಗೆ ತಿಳಿಸಿದನು. ನಾನು ಆ ವಿಷಯವನ್ನು ಸರಿಯಾಗಿ ವಿಚಾರಿಸಲು ಅವನು
ಮದ್ಯಪಾಯಿಯೆಂದು ತಿಳಿಯಬಂದಿತು. ಅವನನ್ನು ಇಲ್ಲಿಗೆ ಇನ್ನು ಮುಂದೆ ಬರಕೂಡ
ದೆಂದು ಕಟ್ಟಳೇಮಾಡಿದೆನು. ಮಧುಸೂದನನು ಅವನ ಪರವಾಗಿ ಮಾತನಾಡಿದನು. ನಾನು
೨೩------------------------------------
ಮಧುಸೂದನ 23
ಅದನ್ನು ಕೇಳದೇಹೋಗಲು ಮಾರನೇ ದಿವಸದಿಂದ ಮಧುಸೂದನನೂ ಅವನ ಸ್ನೇಹಿ
ತರೂ ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಆ ಮೇಲೆ ಅವರೆಲ್ಲಾ ಏನಾದರೋ
ನನಗೆ ತಿಳಿಯದು. ಆದರೆ ಅವರಲ್ಲಿ ಕೆಲವರು ಈಗಲೂ ಅದೋ ಅಲ್ಲಿ ಕಾಣುವ
ಮದ್ಯದಂಗಡಿಗೆ ರಾತ್ರಿ ಕಾಲದಲ್ಲಿ ಬರುತ್ತಾರೆಂದು ಕೇಳಿ ಬಲ್ಲೆನು.
ಭಾಸ್ಕರ:-ನಾನು ಇಷ್ಟೇ ತಿಳಿದುಕೊಳ್ಳಬೇಕಾಗಿದ್ದದ್ದು ಎಂದು ಯೋಚಿಸಿ
ನಾನು ಹೋಗಿ ಬರುವೆನು ಎಂದು ಆತನ ಅಪ್ಪಣೆಪಡೆದು ಹೊರಟು ಹೋದನು.
ಭಾಸ್ಕರನು ನೆಟ್ಟಗೆ ಮನೆಗೆ ಬಂದು ಗೋವಿಂದನನ್ನು ಒಬ್ಬ ಕುಡುಕನ ಉಡು
ಪನ್ನು ತರುವಂತೆ ಕೇಳಿಕೊಂಡನು. ಅದರಂತೆ ಮಾರನೇ ದಿವಸ ಗೋವಿಂದನು ಒಂದು
ಹಳೆಯ ಉಡುಪನ್ನು ತಂದು ಕೊಟ್ಟನು. ಭಾಸ್ಕರನು ತನ್ನ ರೂಪವನ್ನು ಬದಲಾಯಿಸಿ
ಕೊಂಡು ಉದ್ದವಾದ ಕೃತಕದಾಡಿಗಳನ್ನೂ ಮೀಶೆಗಳನ್ನೂ ಕಟ್ಟಿಕೊಂಡು ಮುಖ
ಕ್ಕೆಲ್ಲಾ ಯಾವದೋ ಒಂದು ವಿಧವಾದ ಬಣ್ಣವನ್ನು ಬಳಿದು ಕೊಳ್ಳಲು ಮುಖವು
ಘೋರವಾಗಿ ಕಾಣುತ್ತಾ ನೋಡುವುದಕ್ಕೆ ಠಕ್ಕನ ಮುಖದಂತೆ ಕಾಣುವಂತೆಮಾಡಿ
ಕೊಂಡು ಗೋವಿಂದನು ತಂದು ಕೊಟ್ಟ ಉಡುಪನ್ನು ಧರಿಸಿದನು. ಆಗ ಅವನನ್ನು
ನೋಡಿದ್ದೇ ಆದರೆ ಯಾರೇ ಆಗಲಿ ಅವನನ್ನು ಒಬ್ಬ ಕಳ್ಳನೆಂದು ಹೇಳುತ್ತಿದ್ದರು.
ಸಾಯಂಕಾಲ ಏಳುಘಂಟೆಯವರಿಗೂ ಕಾದಿದ್ದು ಆ ಮೇಲೆ ಇನ್ನೂರು ಮುನ್ನೂರು
ರೂಪಾಯಿಗಳನ್ನು ತೆಗೆದುಕೊಂಡು ತನ್ನ ಒಳಜೋಬಿನಲ್ಲಿ ಭದ್ರಪಡಿಸಿಕೊಂಡು ಎರಡು
ರಿವಾಲ್ವರುಗಳನ್ನೂ ಒಳಗಿಟ್ಟು ಕೊಂಡು ಹೊರಕ್ಕೆ ಹೊರಟು ನೆಟ್ಟಗೆ ಕಾಳೀಬೀದಿಗೆ
ಹೋದನು. ಅಲ್ಲಿಗೆ ಹೋಗುವಹೊತ್ತಿಗೆ ಎಂಟುಗಂಟೆಯ ಸಮಯವಾಗಿದ್ದಿತು.
ಅಲ್ಲಿಂದ ಭಾಸ್ಕರನು ಕೂಗಾಡುತ್ತಲೂ ಕುಣಿಯುತ್ತ, ಹಾಡುತ್ತಲೂ, ಬಾಯಿಗೆ
ಬಂದಹಾಗೆಲ್ಲಾ ಮಾತನಾಡುತ್ತಲೂ ಸಂಪೂರ್ಣವಾಗಿ ಕುಡಿದವನಂತೆ ನಟಿಸುತ್ತಾ
ಅಲ್ಲಲ್ಲಿ ಬಿದ್ದೇಳುತ್ತಾ ಕೊನೆಗೆ ಆ ಬೀದಿಯಲ್ಲಿದ್ದ ಮದ್ಯದಂಗಡಿಯನ್ನು ಪ್ರವೇಶ
ಮಾಡಿದನು. ಮದ್ಯಪಾಯಿಗಳಿಗಾಗಿಯೇ ಕಾದಿರತಕ್ಕಂಥಾ ಅಲ್ಲಿಯ ಜನಗಳು
ಇವನನ್ನು ಎದುರುಗೊಂಡು ಬಂದು ಒಳಕ್ಕೆ ಕರೆದುಕೊಂಡು ಹೋದರು.
ಸಂಘಸಂಸ್ಕರಣ ಕರ್ತರೂ ಇತರರೂ ಸೇರಿ ಬಾಲ್ಯ ವಿವಾಹದಿಂದಲೂ ಮತ್ತು
ಇತರ ಆಚಾರಗಳಿಂದಲೂ ಇಂಡಿಯಾ ದೇಶದ ಮರಣವು ಹೆಚ್ಚಾಗಿದೆಯೆಂದು ಅನ್ಯಾ
ಯವಾಗಿ ಸರಿಯಾದ ಕಾರಣಗಳಿಲ್ಲದೇನೇ ಹೇಳುತ್ತಾರೆ. ಸರಿಯಾಗಿ ಯೋಚಿಸಿ
ನೋಡುವಲ್ಲಿ ಬಾಲ್ಯ ವಿವಾಹದಿಂದ ಮರಣಗಳೇನೂ ಹೆಚ್ಚಿಲ್ಲವು. ಮದುವೆಯಾಗ
ತಕ್ಕಂಥಾ ಹೆಣ್ಣೆನೂ ತನ್ನ ಗಂಡನನ್ನು ಕಚ್ಚಿ ಕೊಲ್ಲುವುದಕ್ಕೆ ಸರ್ಪವವು. ವಿವಾಹ
೨೪------------------------------------------
24 ಕಾದಂಬರೀ ಸಂಗ್ರಹ
ವಾದ ಕೂಡಲೇ ಗಂಡನಾದವನು ಸಾಯ ಬೇಕೆಂದು ಯಾವಶಾಸ್ತ್ರದಲ್ಲಿಯೂ, ಯಾವ
ಆರೋಗ್ಯ ಸೂತ್ರಗಳಲ್ಲಿಯೂ ಹೇಳಿಲ್ಲವು. ವಿವಾಹ ಮಾಡಿಕೊಳ್ಳತಕ್ಕಂಥಾ ಹುಡುಗ
ನಾದವನು ತನ್ನ ದೇಹವನ್ನು ಸರಿಯಾಗಿಟ್ಟು ಕೊಂಡಿದ್ದು ತನ್ನ ಬ್ರಹ್ಮಚರ್ಯವನ್ನು
ಕಾಪಾಡಿ ಕೊಂಡಿದ್ದರೆ ಅವನು ವಿವಾಹವಾದಕೂಡಲೇ ಹೇಗೆ ಸಾಯುವನು? ಇದನ್ನು
ಯೋಚಿಸದೆ ಬಾಲ್ಯ ವಿವಾಹವು ಮರಣಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಹೇಗೆ
ಅದನ್ನು ನಂಬಬಹುದು. ಬಾಲ್ಯ ವಿವಾಹವನ್ನು ಬಿಟ್ಟು ಪ್ರೌಢಾವಿವಾಹ ಮಾಡಬೇ
ಕೆಂಬುವರ ಸಂಖ್ಯೆಯು ಈಗ ಅಧಿಕವಾಗಿರುವದು. ಒಂದು ಭಾಗವಾದ ಬ್ರಾಹ್ಮ
ಣರಲ್ಲೂ ವೈಶ್ಯರಲ್ಲೂ ಬಾಲ್ಯ ವಿವಾಹವು ಕಂಡುಬರುವುದು. ಆದರೆ ಸರಿಯಾಗಿ
ವಿಚಾರಿಸಿ ನೋಡಿದ್ದರಲ್ಲಿ ಇತರ ಜಾತಿಯವರಲ್ಲಾಗುವಷ್ಟು ಮರಣವು ಇವರಲ್ಲಾ
ಗುವುದಿಲ್ಲವೆಂದು ತಿಳಿದು ಬಂದಿದೆ. ಹಾಗಾದರೆ ಚಿಕ್ಕ ವಯಸ್ಸಿನ ಮರಣಕ್ಕೇನು ಕಾರಣ?
ಸ್ವಲ್ಪ ಯೋಚಿಸಿನೋಡಿದರೆ ತಿಳಿಯುವುದು. ಇತರ ಜಾತಿಯವರು ಅಧಿಕ ವಾಗಿ
ಮದ್ಯವನ್ನು ಪಾನಮಾಡುವುದರಿಂದಲೂ ಮಾದಕ ಪದಾರ್ಥಗಳನ್ನು ತಿನ್ನುವು
ದರಿಂದಲೂ ಬಾಲಾದಿಗಳೂ ಕೂಡ ದೇಹವನ್ನು ಹಾಳುಮಾಡಿಕೊಳ್ಳುತ್ತಾರೆ. ಈ
ಮದ್ಯದಂಗಡಿಗಳು ಜನನಿಬಿಡವಾದ ಸ್ಥಳಗಳಲ್ಲಿರುವುದರಿಂದ ಅನೇಕರು ಅವುಗಳ
ಆಶೆಯೆಂಬ ಬಲೆಗೆ ತುತ್ತಾಗುತ್ತಾರೆ. ಸಂಘಸಂಸ್ಕರಣ ಕರ್ತರು ಯಾವ ಕೆಡು
ಕನ್ನೂ ಮಾಡದ ಬಾಲ್ಯ ವಿವಾಹಾದಿಗಳ ವಿಷಯವನ್ನು ಬಿಟ್ಟು ಕಣ್ಣೆದುರಿಗೇ ಕಾಣು
ತ್ತಿರುವ ಈ ಕೆಟ್ಟ ಕುಡಿತವನ್ನೂ, ಮದ್ಯದಂಗಡಿಗಳನ್ನೂ ನಾಶಪಡಿಸುವುದಕ್ಕೆ
ಪ್ರಯತ್ನ ಪಡಲಿ! ಆದರೆ ಇದು ಸರ್ಕಾರದವರಿಗೆ ಸೇರಿದ ವಿಷಯ. ಅವರೊಡನೆ ಹೆಣ
ಗಾಡಲು ನಿಮಗೆ ಧೈರ್ಯಸಾಲದು.
ಭಾಸ್ಕರನು ಒಳಕ್ಕೆ ಹೋಗಿ ಸುತ್ತಲೂ ನೋಡಿದನು. ಒಂದು ಮೂಲೆಯಲ್ಲಿ
ಗೌರವಸ್ಥನಂತೆ ಕಂಡು ಬರುತ್ತಿದ್ದವನೊಬ್ಬನು ಕುಳಿತಿರುವುದನ್ನು ನೋಡಿ ತೂರಾಡಿ
ಕೊಂಡು ಅವನಬಳಿ ಹೋಗಿ ಕುಳಿತುಕೊಂಡು ಏನೇನೋ ಮಾತನಾಡ ತೊಡಗಿದನು.
ಅಲ್ಲಿ ಕುಳಿತಿದ್ದ ಮನುಷ್ಯನು ಇವನನ್ನು ನೋಡಿ ಇಂಗ್ಲೀಷಿನಲ್ಲಿ ನೀನು ಯಾರು
who are you) ಎಂದು ಕೇಳಿದನು. ಅದಕ್ಕೆ ಭಾಸ್ಕರನು ಅರ್ಧ ಇಂಗ್ಲೀಷಿನಿಂದಲೂ
ಅರ್ದ ಹಿಂದೂಸ್ಥಾನದಿಂದಲೂ ಅರ್ಧರ್ಧ ಮಾತುಗಳಾಗಿ "ನಾನೇ ". "ನಾನು ನಾನೇ
ಗೊತ್ತಿಲ್ಲವೇ ನನ್ನ ಹೆಸರು. "ನಾನು" "ನಾನೇ ನೀಲಕಂಠಬಾಬು, ನೀನ್ಯಾರು ನಿನ್ನಲ್ಲಿ
ದುಡ್ಡಿದೆಯೋ ಎಲ್ಲಿ. ದಾಹವಾಗುತ್ತೆ. ಮದ್ಯವನ್ನು ಕೊಡಿಸು ನೋಡೋಣ" ಎಂದನು.
ಮನುಷ್ಯ:-ಅಯ್ಯಾ ನೀಲಕಂಠ ಬಾಬು ಆಗಲೇ ಅತಿಯಾಗಿ ಕುಡಿದಿರುವೆ.
ಇನ್ನೂ ಬೇಕೇ? ನಾನು ಯಾರಾದರೆ ನಿನಗೇನು ? ಬೇಕಾಗಿದ್ದರೆ ನಿನಗೆ ಕುಡಿಯುವು
೨೫----------------------------------------
ಮಧುಸೂದನ 25
ದಕ್ಕೆ ಸ್ವಲ್ಪ ನೀರು ತರಿಸಿಕೊಡುತ್ತೇನೆ.
ನಾನು-ಏನು-ನಾನು-ಕುಡಿದಿರುವೆನೋ ನಿನಗೇನು ತಲೆತಿರುಗು
ತ್ತದೋ ನಾನೆಂದಿಗೂ ಕುಡಿಯುವುದಿಲ್ಲ. ನೀನು-ನಿನಗೆ ದುಡ್ಡಿಲ್ಲವೇ ನೀರು ನನಗೆ
ಬೇಡಾ ಇಕೋ ತಕೋ ಈ ಹತ್ತು ರೂಪಾಯಿಗಳಿಗೆ ಮದ್ಯ ತರಿಸು ಕುಡಿಯೋಣ ನಾನು
ನಾನು ನಾನೇನು ಬಡವನಾ ಇದೋ ನೋಡು ಇನ್ನೂ ಹಣವಿದೆ ಎಲೋ ಯಾರೋ
ಅಲ್ಲಿ ಮರುಶೀಸೆ ಬರಾಂದಿ ತೆಗೆದುಕೊಂಡುಬಾರೋ.
ಅಲ್ಲಿದ್ದ ಸೇವಕನು ನಗುತ್ತಾ ಮೂರುಶೀಸೆ ಬ್ರಾಂದಿಯನ್ನೂ ಬಟ್ಟಲುಗಳನ್ನೂ
ತಂದಿಟ್ಟು ಹೋದನು. ಭಾಸ್ಕರನು ಬಟ್ಟಲುಗಳನ್ನು ತುಂಬಿ ಅಲ್ಲಿದ್ದ ಮನುಷ್ಯನಿಗೆ
ಕೊಟ್ಟು ತಾನೂ ಕುಡಿಯುವಂತೆ ನಟಿಸುತ್ತಾ ಎಲ್ಲವನ್ನೂ ತಾನು ಉಡುವಿನಹಿಂದೆ
ಬಚ್ಚಿಟ್ಟು ಕೊಂಡಿದ್ದ ಚೀಲದೊಳಕ್ಕೆ ಪತ್ತೇದಾರರಿಗೇನೆ ತಿಳಿಯದ ರೀತಿಯಿಂದ ತುಂಬಿ
ಕೊಳ್ಳುತ್ತಿದ್ದನು. ಈ ವಿಧವಾದ ಮೋಸಮಾಡುವಿಕೆಯು ಅಕ್ಬರಿನ ಕಾಲದಿಂದಲೂ ಬಂದಿ
ದೆಯೆಂದು ಅನೇಕ ವಿಷಯಗಳಿಂದ ತಿಳಿದುಬರುತ್ತದೆ. ಇವನು ಹೀಗೆ ಬಹಳ ಬೆಲೆ
ಯುಳ್ಳ ಮದ್ಯವನ್ನು ಕೊಡುವುದನ್ನು ನೋಡಿದ ಅಲ್ಲಿದ್ದ ಒಬ್ಬ ಮನುಷ್ಯನು ನಗುತ್ತಾ
ಅವನು ಕೊಟ್ಟಿದ್ದನ್ನೆಲ್ಲಾ ಕುಡಿಯುತ್ತಾ ಬಂದನು. ಮದ್ಯವು ಬಹಳ ಖಾರವುಳ್ಳುದಾ
ದ್ದರಿಂದ ಬಹಳಬೇಗ ಮತ್ತನ್ನುಂಟುಮಾಡತಕ್ಕುದಾಗಿತ್ತು. ಮತತ್ತೇರಿದಹಾಗೆಲ್ಲಾ
ಇನ್ನೂ ಕುಡಿಯಬೇಕೆಂಬಭಿಲಾಷೆಯು ಅಂಕುರಿಸಿತು, ಇದನ್ನರಿತ ಭಾಸ್ಕರನು " ಛೇ !
ಬಿಡಯ್ಯಾ ! ಏನು ಕುಡಿದೆ ನೀನು-ನಾನು ಇಲ್ಲ ನೀನು ಮನುಷ್ಯನೇ ಏನೂ ಕುಡಿಯ
ಅಲ್ಲಾ. ಎಲ್ಲವನ್ನೂ ನಾನೇ ಕುಡಿದುಬಿಟ್ಟೆನು. (ಕುಣಿದಾಡತೊಡಗಿದನು) ಆಹಹ !
ಮದ್ಯವು ಬಹಳ ಸೊಗಸಾಗಿದೆಯಪ್ಪ ! ಅಯ್ಯೋ ಎಲ್ಲಾ ಆಗಿಹೋಯಿತು, ? ಓಹೋ
ನಾನೇನು ಬಡವನಾ ? ಎಲೋ ಆಳು ಇಲ್ಲಿ ಬಾರೋ ಇಕೋ ತಕೊ ತಕ್ಕೊಂಡು ಬಾರೋ
ಇನ್ನಿಷ್ಟು ಬರಾಂದಿ-ಒಳ್ಳೇದಾಗಿರಬೇಕು. ಗೊತ್ತಿದೆಯೋ ನಾನು ಯಾರು ?
ನೀಲಕಂಠಬಾಬು ಈಗ ಹೋಗು ಇದೋ ರೂಪಾಯಿ (ಎಂದು ಹೇಳಿ ತೂರಾಡುತ್ತಾ
ಎದ್ದು ನಿಂತುಕೊಂಡು) ಇನ್ನಿ ಪ್ಪತ್ತು ರೂಪಾಯಿಗಳನ್ನು ಧಣಧಣವೆಂದು ಮೇಜಿನಮೇಲೆ
ಹಾಕಿದನು. ಅಲ್ಲಿದ್ದ ಮನುಷ್ಯನು ಇನ್ನೂ ಸಂಪೂರ್ಣವಾಗಿ ಮತ್ತೇರಲ್ಪಟ್ಟವನಾಗಿರ
ಲಿಲ್ಲವಾಗಿ ಇದೆಲ್ಲವನ್ನೂ ನೋಡಿ ಇವನು ಯಾರೋ ಮಹದೈಶ್ವರವಂತನು. ಹೀಗೆ
ಧನವನ್ನು ಖರ್ಚುಮಾಡುತ್ತಿದ್ದಾನೆಂದು ಯೋಚಿಸಿ ನಗುತ್ತಾ ಕುಳಿತಿದ್ದನು. ಸ್ವಲ್ಪ
ಹೊತ್ತಿಗೆಲ್ಲಾ ಮದ್ಯವೂ ಬಂದಿತು. ಪುನಹಾ ಭಾಸ್ಕರನು ಬಟ್ಟಲುಗಳಲ್ಲಿ ತುಂಬಿತುಂಬ
ಆ ಮನುಷ್ಯನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿಸಿದನು. ಸಂಶಯಕ್ಕಾಸ್ಪದವಾ
೨೬-------------------------------------------
26 ಕಾದಂಬರಿಕ ಸಂಗ್ರಹ
ಗದಿರಲೆಂದು ಒಂದು ಬಟ್ಟಲು ಮದ್ಯವನ್ನು ಕೈನಡುಗುವಹಾಗೆ ತೋರ್ಪಡಿಸಿ ಎತ್ತಿ
ಹಾಕಿದನು. ಸುರಾದೇವತೆಯು ಅಲ್ಲಿದ್ದ ಮನುಷ್ಯನನ್ನು ಸ್ವಲ್ಪಸ್ವಲ್ಪವಾಗಿ ಆಕ್ರಮಣ
ಮಾಡಲಾರಂಭಿಸಿದಳು. ಸ್ವಲ್ಪ ಕಾಲದಲ್ಲೇ ಅವನ ಜ್ಞಾನವು ಅವನ ತಲೆಯನ್ನು
ಬಿಟ್ಟೋಡಿತು.
ಭಾಸ್ಕರನು ಆ ಮನುಷ್ಯನು ತನ್ನ ಬಲೆಗೆ ಶಿಕ್ಕಿ ಬಿದ್ದನೆಂದು ಮನಸ್ಸಿನಲ್ಲೇ
ಸಂತೋಷಪಟ್ಟು ಕೊಂಡು ಇನ್ನೂ ಉಳಿದಿದ್ದ ಒಂದು ಶೀಸೆ ಬ್ರಾಂದಿಯನ್ನು ಬಟ್ಟ
ಲಲ್ಲಿ ಸುರಿದು ಕೊಡುತ್ತಾ ಬಂದನು. ಆ ಮನುಷ್ಯನು "ಆಹಾ ! ಭಲೇ! ಶಾಬಾಸ್
ಕೊಡು ಕೊಡು ! ಎಲ್ಲಿ. ಮದ್ಯ ! ಆಹಾ ! ಅಮೃತದಂತಿರುವ ಮದ್ಯವೇ !ನಿನ್ನ ಸಮಾನ
ರಾರು ? ಭಲೆ ! ಭಲೆ ! ಈಗ ನಾನೆ ಚಂದ್ರ ನೀನೆ ರೆವತಿ ಎಲೇ ಎಲ್ಲಿದ್ದೀ ನೋಡಿದಿಯಾ
ದೂರ ಓಡಿಹೋಗುತ್ತೀ ಹತ್ತಿರ ಬಾ ಬಾ ಎಂದು (ಕುಣಿಯಲಾರಂಭಿಸಿದನು) ಎಲೋ
ಯಾರೋ ಅಲ್ಲಿ ? ಸಂ ಗೀತ ಹಾಡೋ ಎಲ್ಲಿ ಸಾ ಗಾ ರಿ ಮಾ ತೈ ತೈ ಭಲಾ ಶಾಬಾಸ್
ಚೆನ್ನಾಗಿದೆ ನಿನಗೆ ನಮ್ಮ ಸಂಘದ ಯಜಮಾನನಿಂದ ಬಹುಮಾನ-ಊ-ರೂಪಾಯಿ
ಕೊಡಿಸುತ್ತೇನೆ ಬಾ ಇದೇ ಬೀದಿಯಲ್ಲಿ ನಮ್ಮ ಮನೆಯಿದೆ" ಎಂದು ವದರಿದನು.
ಭಾಸ್ಕರನು ಇದೇಸಮಯವೆಂದು ಯೋಚಿಸಿದನು. ಆದರೂ ಸಮಾಸದಲ್ಲೇ
ಯಾರಾದರೂ ಆ ಮನುಷ್ಯನಿಗೆ ತಿಳಿದ ಮನುಷ್ಯರಿರಬಹುದೆಂಬ ಹೆದರಿಕೆಯಿಂದ ಸರಿ
ಯಾಗಿ ಮಾತನಾಡದೆ ಮತ್ತೇರಿದವನಂತೆಯೇ ಮಾತನಾಡುತ್ತಾ ಬಂದನು.
ಭಾಸ್ಕರ:-ಅಣ್ಣಾ ಶಾಭಾಸ್! ಮದ್ಯವು ಬಹಳ ಪಸಂದಾಗಿದೆ. ನೀನು ಹಾಡು.
ನಾನು ಕುಣಿಯುತ್ತೇನೆ (ಕುಣಿಯುತ್ತಾನೆ ನಾನು ನೀಲಕಂಠಬಾಬುವಲ್ಲವಾ ? ನಾನಿರು
ವದು ಬ್ಲಾಕ್ ಬೀದಿ ಅಹಹ ! ನೀನ್ಯಾರಣ್ಯ ! ಮಂಗನಂತೆ ಇಲ್ಲಿ ಬಂದಿದ್ದೀ ನೀನೆಲ್ಲಿರು
ವುದು ಹೇಳಣ್ಣಾ.
ಮನುಷ್ಯ:-ಸೈ ಸೈ ನೀನು ಬಾಬುವಾ-ಪಾಗಾದರೆ ನಾನು ಹರಿಚಂದ್ರ-ನಾನಿ
ರುವುದು ಅದೆಲ್ಲಾ ಹಾಳುಹೆಸರು ಸ್ಪ್ರಿಂಗ್ ಬೀದಿ-ಮರೆತುಹೋಯಿತು. ಹೋಗಲಿ
ನನಗೇನಪ್ಪಾ ಕಡಮೇ ನನ್ನ ಸಹೋದರರಿದ್ದಾರೆ. ಬೇಕಾದ್ದು ಕೊಡುತ್ತಾರೆ. ಹೊಸಬ-
ಜಮಿನ್ಸಾರ-ಯಜಮಾನರ-ಮಗಳನ್ನು ಅದೇನೋ ಅಲ್ಲಿ ಮದುವೆಯಾಗುತ್ತಾನೆ
ನಮಗೆಲ್ಲಾ ಬೇಕಾದಷ್ಟು -ಥೂಥೂ-ಕಣ್ಣೊಳಗೆ ದೆವ್ವ ಮಾರಿ ಸೇರಿಕೊಂಡಿದ್ದಾಳೆ.
ಅದೆಲ್ಲೋ ನನ್ನ ಕರವಸ್ತ್ರ, ನಮ್ಮ ಸಂಗಡದವರ ಗುರುತು ಕಾಣಣ್ಣಾ (ಎಂದು
ಹೇಳುತ್ತಾ, ತನ್ನ ಒಳಜೋಬಿನಿಂದ ಒಂದು ಕರವಸ್ತ್ರವನ್ನು ತೆಗೆದನು. ಭಾಸ್ಕರನು
೨೭-------------------------------------------------
ಮಧುಸೂದನ 27
ನೋಡಲು ಅದು ತಾನು ಕಂಡುಹಿಡಿದ ಹರಿದುಹೋದ ಏಳುಬಣ್ಣದ ಕರವಸ್ತ್ರದಹಾ
ಗಿತ್ತು. ಅದನ್ನು ನೋಡಿ ಅವನಿಗಿದ್ದ ಸಂಶಯಗಳೆಲ್ಲಾ ಅಡಗಿಹೋದವು. ಇವನೇ ಸರಿ
ಯಾದಮನುಷ್ಯನೆಂದು ಯೋಚಿಸಿದನು. (ಇನ್ನೂ ಇವನಿಂದೇನಾದರೂ ಗುಟ್ಟುಗಳನ್ನು
ಹೊರಪಡಿಸಬೇಕೆಂದು ಯೋಚಿಸಿ)
ಭಾಸ್ಕರ:-ಆದರೆ ಅಣ್ಣಾ ಅದೇನೋ ಹಾಂಗಿದೆ-ಕರವಸ್ತ್ರ-ಹೊತ್ತಾಯಿತು
ಗಂಟೆನೋಡಣ್ಣ ಹೋಗೋಣ.
ಹರಿಚಂದ್ರ:-ಅದಾ ನಮ್ಮ ಸಂಘದ ಕರವಸ್ತ್ರ-ಅದ್ಯಾರೋ ನನ್ನನ್ನು ಕೇಳು
ವದು-ಹೋಗು-ನಾನು ಹೇಳುವುದಿಲ್ಲ. ನಿನಾ ನಮ್ಮಣ್ಣ ಗಂಟೆನೋಡಾಲಾ (ಗಡಿಯಾರ
ವನ್ನು ಹೊರಗೆ ತೆಗೆಯಲು ಭಾಸ್ಕರನು ಅವನಿಗೆ ತಿಳಿಯದಹಾಗೆ ಸರಪಣಿಯ ಕೊನೆ
ಯಲ್ಲಿ ಎಂ (M) ಎಂಬಕ್ಷರದ ಗುಂಡಿಯನ್ನು ಕಿತ್ತುಕೊಂಡು ತನ್ನ ಜೋಬಿನಲ್ಲಿ
ಭದ್ರಪಡಿಸುವನು) ಗಂಟೆ ಹದಿಮೂರಾಯಿತು. ಅಯ್ಯಯ್ಯೋ ಹೊತ್ತಾಯಿತಪ್ಪಾ
ನಾನು ಹೋಗುತ್ತೇನೆ. ನಾಳೇದಿವಸ ನಮ್ಮ ಸಂಘದ ಮಾಟಿಂಗಿದೆ ಸೈ ರಾಜ ಅದೆ
ಲ್ಲೋದಾರಿ (ಎದ್ದು ತಡವರಿಸುತ್ತಾ ಹೋಗುವನು)
ಭಾಸ್ಕರ:- ಅದೇನಪ್ಪಾ ನಿಮ್ಮ ಸಂಘದ ಮಾಟಿಂಗ್ ನಾನ್ ಬರಬಾರದಾ
ನಾನೂ ಬರುತ್ತೇನೆ ನಡಿಯಪ್ಪಾ.
ಹರಿಚಂದ್ರ:-ಮಾಟಿಂಗಾ ಹೂ ಮಾಟಿಂಗ್ ಉಂಟು. ನಾಳೆರಾತ್ರಿ ಹತ್ತು
ಗಂಟೆಗೆ ಸರಿಯಾಗಿ ನಿನಾ ನೀನ ಯಾರೋ ಎಲ್ಲೋ ನಿನ್ನ ಗುಂಡಿ (ಅಷ್ಟರಲ್ಲೇ ದಾರಿ
ಯನ್ನು ಕಂಡು ಹೊರಕ್ಕೆ ಬಂದು ಚರಂಡಿಯಲ್ಲಿ ಬಿದ್ದು ಕೊಳ್ಳುವನು.) ಭಾಸ್ಕರನು
ಎಷ್ಟು ಪ್ರಯತ್ನ ಮಾಡಿದರೂ ಅವನು ಏಳಲಿಲ್ಲಾ, ಜೋಬಿನಲ್ಲೇನಾದರೂ ಕಾಗದಗಳಿ
ವೆಯೋ ಎಂದು ನೋಡಲು ಒಂದುಚೂರು ಕಾಗದವಿನಹಾ ಮತ್ತೇನೂ ಸಿಗಲಿಲ್ಲ. ಆ
ಚೂರಿನಲ್ಲಿ "ಎಂ ಸಂಘದವರೆಲ್ಲಾ ನಾಳೇದಿವಸ ರಾತ್ರಿ ಹತ್ತು ಗಂಟೆಗೆ ಸರಿಯಾಗಿ
ಗುಪ್ತಗೃಹಕ್ಕೆ ಬರಬೇಕು” ಎಂದು ಮಾತ್ರ ಬರೆದಿತ್ತು. ಅದನ್ನು ಜೋಬಿನಲ್ಲಿ ಹಾಕಿ
ಕೊಂಡು ಸುತ್ತುಮುತ್ತಾ ನೋಡುತ್ತಾ ತನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲವೆಂದು
ತಿಳಿದಮೇಲೆ ವೇಗವಾಗಿ ನಡೆದು ಅಲ್ಲೊಂದು ಸ್ಥಳದಲ್ಲಿ ತಾನು ಚೀಲದಲ್ಲಿ ತುಂಬಿ
ಟ್ಟು ಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು ಗೋವಿಂದನ ಮನೆಯನ್ನು ಸೇರಿ
ಸ್ನಾನವನ್ನು ಮಾಡಿ ಶುಭ್ರವಸ್ತ್ರವನ್ನು ಧರಿಸಿ ಊಟಮಾಡಿಕೊಂಡು ಮಲಗಿ ನಿದ್ರೆ
ಹೋದನು.
೨೮-------------------------------
28 ಕಾದಂಬರಿ ಸಂಗ್ರಹ
ಏಳನೇ ಅಧ್ಯಾಯ
(ಹರಿಚಂದ್ರ.)
ಮಾರನೇದಿನ ಪ್ರಾತಃಕಾಲದಲ್ಲೇ ಭಾಸ್ಕರನೆದ್ದು ಕಾಳೀಬೀದಿಗೆ ಹೋಗಿ ಅಲ್ಲಿ
ಹರಿಚಂದ್ರನು ಹೇಳಿದ ಮನೆ ಯಾವುದೆಂದು ಹುಡುಕಿದನು, ಯಾವುದೂ ಅವನಿಗೆ ಸರಿ
ಬೀಳಲಿಲ್ಲ. ಒಂದು ಸಂದಿಯಲ್ಲಿ ನುಗ್ಗಿ ಬರುತ್ತಿರುವಾಗಲೊಂದುಮನೆಯ ಗೋಡೆಯ
ಮೇಲೆ ಈ ದಿವಸ ಮದ್ಯವಿಸರ್ಜನೆ ವಿಷಯದಲ್ಲಿ ರಾತ್ರಿ ಉಪನ್ಯಾಸ, ಟಿಕೀಟುಗಳನ್ನು
ಕೋರತಕ್ಕಂತಾ ಮೆಂಬರುಗಳು ಒಳಕ್ಕೆ ಬಿಡಲ್ಪಡುವರು” ಎಂದು ಬರೆದಿರುವುದನ್ನೂ
ದಿನೋಡಿ ಒಂದುವೇಳೆ ಈ ಮನೆಯೇ ಆಗಿರಬಹುದೋ ಎಂದು ಯೋಚಿಸಿ ಏನೇ ಆಗಲಿ
ಈ ರಾತ್ರಿ ಇಲ್ಲಿಗೇ ಬಂದು ಪರೀಕ್ಷೆ ಮಾಡೋಣವೆಂದು ಹೇಳಿಕೊಂಡು ಗೋವಿಂದನ
ಮನೆಗೆ ಹಿಂದಿರುಗಿ ಬಂದನು.
ಅಲ್ಲಿಗೆ ಬಂದಕೂಡಲೇ ಗೋವಿಂದನು ಒಂದು ಕಾಗದವನ್ನು ತಂದುಕೊ
ಟ್ಟನು, ಅದು ವಸಂತಪುರದಿಂದ ಬಂದಿದ್ದಿತು. ಒಡೆದು ನೋಡಲು ಸೋಮಸುಂದರನು
ಬರೆದದ್ದಾಗಿತ್ತು. ಅದರಲ್ಲಿದ್ದದ್ದೇನಂದರೆ,
" ಅಯ್ಯಾ, ಇದರ ಸಂಗಡಲೇ ಮತ್ತೊಂದು ಕಾಗದವನ್ನೂ ಕಳುಹಿಸಿರುವೆನು.
ನನಗೇನೂ ತೋಚುವುದಿಲ್ಲವು. ನೀವೇ ನನ್ನನ್ನು ಕಾಪಾಡಬೇಕು. ನಾನು ಏನು ಬದಲು
ಬರೆಯಲಿ ? ನನ್ನ ಮಗನ ವಿಷಯವೇನಾದರೂ ತಿಳಿಯಬಂದಿದೆಯೋ ? ಯಾವದಕ್ಕೂ
ಕೂಡಲೇ ಜವಾಬು ಬರೆಯಿರಿ.
ಇತಿ ಸೋಮಸುಂದರ.
ಭಾಸ್ಕರನು, ಮತ್ತೊಂದು ಕಾಗದವನ್ನು ತೆಗೆದುಕೊಂಡು ಓದಲಾರಂಭಿಸಿದನು
ಸೋಮಸುಂದರರಾಯರಿಗೆ:
ಅಯ್ಯಾ !
ನಾವುಗಳು ಈ ಕಾಗದದಮೂಲಕ ನಿಮಗೆ ತಿಳಿಯಪಡಿಸುವುದೇನಂದರೆ, ನಿಮ್ಮ
ಪುತ್ರನು ಜೀವಂತನಾಗಿರುವನು. ಇನ್ನೇನು ಸ್ವಲ್ಪ ದಿವಸದಲ್ಲೇ ಅವನು ಒಬ್ಬ
ಋತುಮತಿಯಾದ ಕನೈಯನ್ನು ವಿವಾಹ ಮಾಡಿಕೊಳ್ಳಲು ಕಾದಿರುತ್ತಾನೆ. ನಾವು
ಗಳು ಶಾಸ್ತ್ರಕಾರರನ್ನು ವಿಚಾರಿಸಿನೋಡುವಲ್ಲಿ ಅರ್ಧದಲ್ಲಿ ನಿಂತುಹೋದ ಮದುವೆಯು,
ಮದುವೆಯು ನಡೆಯದಹಾಗೇ ಆಯಿತೆಂದು ತಿಳಿದುಬರುತ್ತದೆ. ಆದ್ದರಿಂದ ನಿಮ್ಮ
೨೯---------------------------------------------------------------------
ಮಧುಸೂದನ 29
ಮಗನಿಗೂ ತ್ರಿಯಂಬಕಶಾಸ್ತ್ರಿಗಳ ಪುತ್ರಿಗೂ ಸಂಬಂಧವೇನೂ ಇಲ್ಲವು. ಆದರೆ
ನೀವು ವಿವಾಹವು ಸಂಪೂರ್ಣವಾಗಿ ನೆರವೇರಿತೆಂದೇ ಹೇಳಿದಾಗ ತಿಳಿಯಬಂದಿತು.
ಅದು ತಪ್ಪು. ನಿಮ್ಮ ಪುತ್ರನೂ ಅದಕ್ಕೆ ಒಪ್ಪುವುದಿಲ್ಲ. ಆದ್ದರಿಂದ ಕೂಡಲೇ ತ್ರಿಯಂ
ಬಕಶಾಸ್ತ್ರಿಗಳಿಗೆ ಕಾಗದಾಬರದು ಅವರ ಮಗಳು ಮತ್ಯಾರಿಗಾದರೂ ಮದುವೆ
ಮಾಡಿಕೊಡುವಂತೆ ತಿಳಿಸಿರಿ. ನಾವು ಕೇಳದಿದ್ದರೂ ನಿಮ್ಮ ಪುತ್ರನು ತಾನಾಗಿಯೇ
ಒಬ್ಬ ಋತುಮತಿಯಾದ ಕನೈಯನ್ನು ಇನ್ನು ಕೆಲವು ದಿವಸಗಳಲ್ಲಿ ವಿವಾಹವಾಗಬೇ
ಕೆಂದಿರುತ್ತಾನೆ. ನೀವು ಇದನ್ನು ತಪ್ಪಿಸಲಾರಿರಿ, ನೀವು ನಿಮ್ಮ ಪುತ್ರನನ್ನು ಕಂಡುಹಿ
ಡಿಯಲು ಏನು ಪ್ರಯತ್ನ ಮಾಡಿದರೂ ಸಾರ್ಧಕವಾಗಲಾರದು. ನೀವು ಪೋಲಿಸಿನವರಿಗೆ
ಹೇಳಿ ಮಾಡಿದ್ದೇನು ? ಇನ್ನೂ ಪ್ರಯತ್ನ ಮಾಡಬೇಕೆಂದಿದ್ದರೆ ಆ ಆಲೋಚನೆಯನ್ನು
ತ್ಯಜಿಸಿರಿ. ಹಾಗೇನಾದರೂ ಪತ್ತೇದಾರರನ್ನು ಕರಿಸಿ ಪ್ರಯತ್ನ ಮಾಡಿದ್ದೇಆದರೆ
" ಹುಷಾರ್ "ನಿಮ್ಮ ಪುತ್ರನ ಸೌಖ್ಯಕ್ಕೆ ಕುಂದು ಬರುವುದು. ಎಚ್ಚರಿಕೆ.
ಇತಿ, ನಾವುಗಳು.
ಈ ರೀತಿಯಾಗಿ ಬರೆದಿದ್ದ ಕಾಗದವನ್ನು ಓದಿ ಮುಗಿಸಿದನಂತರ ಭಾಸ್ಕರನು ನಗುತ್ತಾ
ಸೋಮಸುಂದರನು ಈ ಕಾಗದವನ್ನು ನೋಡಿ ಬಹಳ ಭಯಪಟ್ಟರಬೇ
ಕೆಂದು ಯೋಚಿಸಿ ತಕ್ಷಣವೇ ಸೋಮಸುಂದರನಿಗೆ " ಭಯಪಡಬೇಡಿ ಸ್ವಲ್ಪ
ಕಾಲ ದಲ್ಲೇ ಎಲ್ಲಾ ವಿಷಯಗಳೂ ಹೊರಕ್ಕೆ ಬರುವವು. ತ್ರಿಯಂಬಕರಾಗಳಿಗೇನೂ
ಕಾಗದ ಬರೆಯಬೇಡಿ" ಎಂದು ಒಂದು ಕಾಗದವನ್ನು ಬರೆದು ಆ ದಿವಸದ ಟಪ್ಪಾ
ಲಿಗೇ ಹಾಕಿಬಿಟ್ಟನು.
ಸಾಯಂಕಾಲವಾದಮೇಲೆ ಭಾಸ್ಕರನು ಹಿಂದಲದಿವಸದಾಗೆಯೇ ಉಡು
ಪನ್ನು ಧರಿಸಿ ಗೋವಿಂದನಿಗೆ ಹೇಳಬೇಕಾದ ವಿಷಯಗಳನ್ನೆಲ್ಲಾ ಹೇಳಿಬಿಟ್ಟು ಒಂದು
ಗಾಡಿಯನ್ನು ಬಾಡಿಗೆಗೆ ಮಾಡಿಕೊಂಡು ಕಾಳೀಬೀದಿಗೆ ಹೋಗಿ ಅಲ್ಲಿ ಆ ಗಾಡಿಯನ್ನು
ಅಲ್ಲೇ ಕಾದಿರುವಹಾಗೂ ಸ್ವಲ್ಪ ಹೊತ್ತಾದಮೇಲೆ ತಾನು ಒಬ್ಬ ಕುಡುಕನನ್ನು ಕರ
ದುಕೊಂಡು ಬಂದು ಗಾಡಿಯಲ್ಲಿ ಕೂರಿಸುವಹಾಗೂ, ಅವನನ್ನು ಗೋವಿಂದನ ಮನೆಗೆ
ಕರೆದುಕೊಂಡುಹೋಗಿ ಅಲ್ಲೇ ಕಾದಿರುವಹಾಗೂ ಆಮೇಲೆ ಪ್ರನಾ ಕಾಳೀಬೀದಿಗೆ
ಬರಬೇಕಾಗುವುದೆಂದೂ ಹೇಳಲು ಆ ಗಾಡಿಯವನು ಇಷ್ಟಈ ಹತ್ತು ರೂಪಾಯಿ
ಬಾಡಿಗೇ ಕೇಳಲು ಅದನ್ನು ಕೊಡುವುದಾಗಿಯೂ ಅದರಮೇಲೆ ಇನ್ನೂ ಇನಾಮನ್ನು
ಕೊಡುವುದಾಗಿಯೂ ಹೇಳಿ ಈ ವಿಷಯಗಳನ್ನು ಯಾರಿಗೂ ಹೇಳಕೂಡದಂತಲೂ
ನಾನು ಒಬ್ಬ ಪತ್ತೇದಾರನೆಂದೂ ಹೇಳಿ ಆ ಗಾಡಿಯ ನಂಬರು ಮುಂತಾದ್ದನ್ನು ತೆಗೆ
೩೦---------------------------------------------------------------
30 ಕಾದಂಬರಿ ಸಂಗ್ರಹ
ದುಕೊಂಡು ಪುನಹಾ ಅವನನನ್ನು ಎಚ್ಚರಿಸಿಬಿಟ್ಟು ಮದ್ಯದಂಗಡಿಯನ್ನು ಹೊಕ್ಕನು.
ಈ ದಿವಸ ಭಾಸ್ಕರನು ಕುಡಿದವನಂತೆ ನಟಿಸದೆ ನೆಟ್ಟಗೆ ಒಳಕ್ಕೆ ಹೋಗಿ
ಸುತ್ತಲೂ ನೋಡಲು ಹರಿಚಂದ್ರನು ಮೊದಲನೇದಿವಸದಲ್ಲಿ ಕುಳಿತಿದ್ದ ಸ್ಥಳದಲ್ಲೇ
ಕುಳಿತಿರುವುದನ್ನು ನೋಡಿಕೊಂಡು ಅವನನ್ನರಿಯದವನಹಾಗೆ ಬೇರೇ ಒಂದು ಕಡೆ ಕುಳಿ
ತುಕೊಂಡನು. ಇವನು ಬಂದದ್ದನ್ನು ನೋಡಿದ ಹರಿಚಂದ್ರನು ನಿನ್ನೆ ದಿವಸ ಬಂದಿದ್ದ
ಮನುಷ್ಯನು ಇವನೇ ಎಂದು ತಿಳಿದು ಅವನನ್ನು ಬರುವಹಾಗೆ ಕರೆದನು, ಭಾಸ್ಕರನು
ಸಮೀಪಕ್ಕೆ ಹೋಗಿ ಕರೆಯಲು ಕಾರಣವೇನೆಂದು ಕೇಳಿದನು. ಅದಕ್ಕೆ ಹರಿಚಂದ್ರನು
ಇವನು ಎಲ್ಲಾ ವಿಷಯಗಳನ್ನೂ ಮರೆತುಬಿಟ್ಟಿದ್ದಾನೆಂದು ತಿಳಿದು ಅಯ್ಯಾ ನೀನು
ನೀಲಕಂಠಬಾಬುವಲ್ಲವೇ ?” ಎಂದು ಕೇಳಿದನು.
ಭಾಸ್ಕರ: -ಹೌದು ನನ್ನ ಹೆಸರು ನೀಲಕಂಠಬಾಬು-ಆದರೆ ನನ್ನ ಹೆಸರು
ನಿನಗೆ ಹೇಗೆ ತಿಳಿಯಿತು ?
ಹರಿಚಂದ್ರ:-ನಿನ್ನೆ ದಿವಸ ನೀನು ಇಲ್ಲಿಗೆ ಬಂದು ಕುಡಿದು ನಿನ್ನ ಹೆಸರನ್ನು
ಹೇಳಲಿಲ್ಲವೇ ? ಮತ್ತೇರಿತ್ತಾದ್ದರಿಂದ ಆಗ ನಡೆದ ವಿಷಯಗಳನ್ನು ಮರೆತುಬಿಟ್ಟಿರುವಿ.
ನೀನು ನಿನ್ನೆ ದಿವಸ ನನಗೆ ಕೊಡಿಸಿದ ಮದ್ಯಕ್ಕಾಗಿ ನಿನಗೆ ವಂದನೆಯನ್ನು ಸಮ
ರ್ಪಿಸುತ್ತೇನೆ.
ಭಾಸ್ಕರ:-ಏನೋ ಸ್ವಾಮಿ ! ನನಗೇನೂ ಜ್ಞಾಪಕವಿಲ್ಲವು. ನಾನು ಇಲ್ಲೇ
ಇರುವ ಮೈದಾನದಲ್ಲಿ ಬಿದ್ದಿದ್ದು ಜ್ಞಾನಬಂದಮೇಲೆ ಎದ್ದು ಹೋದದ್ದು ಮಾತ್ರ
ಜ್ಞಾಪಕವಿದೆ. ನಾನು ನನ್ನ ಹೆಸರನ್ನು ಹೇಳಿದ್ದ ಮೇಲೆ ನಿಮ್ಮ ಹೆಸರನ್ನು ನೀವು ಹೇಳಿದ
ಜ್ಞಾಪಕವಿಲ್ಲವಲ್ಲಾ. ಬೇಕಾಗಿದ್ದರೆ ಈ ದಿವಸವೂ ಬೇಕಾದಷ್ಟು ಮದ್ಯವನ್ನು ಕುಡಿ
ಡಿಸುತ್ತೇನೆ.
ಹರಿಚಂದ್ರ:-ನನ್ನ ಹೆಸರನ್ನು ಹೇಳಲು ನನಗಿಷ್ಟವಿಲ್ಲ. ಮದ್ಯವನ್ನು
ಕುಡಿಯೋಣ, ನನಗೆ ಬಹಳ ಅವಸರವಾದ ಕೆಲಸವೊಂದಿದೆ. ಆಗಲೇ ಎಂಟು ಗಂಟೆಯಾ
ಯಿತು. ನಾನು ಹೋಗಬೇಕು.
ಭಾಸ್ಕರನು:-ಮದ್ಯವನ್ನು ತಾನೇ ತರುವುದಾಗಿ ಹೇಳಿ ಮದ್ಯವನ್ನು ಮಾರು
ವನ ಬಳಿಗೆ ಹೋಗಿ " ಅಯ್ಯ ! ಆಗಾಗ್ಗೆ ನಾನಾ ವಿಧವಾದ ಮದ್ಯಗಳ ಹೆಸರನ್ನು
ಹೇಳಿ ಅವುಗಳ ಗುಣವನ್ನು ಹೊಗಳುತ್ತಾ ಇರು. ನಾನು ಕರೆದಾಗಲೆಲ್ಲಾ ಬೇರೆಬೇರೆ
ವಿಧದ ಮದ್ಯಗಳನ್ನು ತೆಗೆದುಕೊಂಡುಬಾ, ಇದೋ ಇಲ್ಲಿ ಐವತ್ತು ರೂಪಾಯಿಗಳಿವೆ”
ಎಂದು ಹೇಳಿ ಮೂರು ಶೀಸೆ ವ್ಹಿಸ್ಕಿ ಎಂಬುದನ್ನು ತೆಗೆದುಕೊಂಡುಬಂದು ಬಟ್ಟಲುಗ
೩೧----------------------------------------------
ಮಧುಸೂದನ 31
ಳಲ್ಲಿ ಸುರಿದು ಕೊಟ್ಟು ತಾನೂ ಕುಡಿಯುವವನಂತೆ ನಟಿಸಿದನು. ಹರಿಚಂದ್ರನು ಭಾಸ್ಕ
ರನ ಉದಾರತ್ವಕ್ಕಾಗಿ ಅವನನ್ನು ವಂದಿಸುತ್ತಾ ಕೊಟ್ಟಿದ್ದನ್ನೆಲ್ಲಾ ಕುಡಿದು ಇನ್ನು ಸಾಕು
ಹೋಗೋಣವೆಂದು ಹೇಳಿದನು.
ಅಷ್ಟು ಹೊತ್ತಿಗೆ ಆ ಮದ್ಯದಂಗಡಿಯ ಯಜಮಾನನು ಅಲ್ಲಿಗೆ ಬಂದು ಭಾಸಸ್ಕ
ರನನ್ನು ಕುರಿತು ( ಅಯ್ಯಾ ಈಗತಾನೇ ನನ್ನ ಸೇವಕನು ಹೊಸದಾಗಿ ಬಂದ ಪ್ರಾಂಸ್
ದೇಶದ ಹಳೆಯ ದ್ರಾಕ್ಷಾರಸವನ್ನು ತಂದಿರುತ್ತಾನೆ. ಅದರ ಗುಣವನ್ನು ನಾನು
ಇಷ್ಟೆಂದು ಹೇಳಲಾರೆನು. ಬಹಳ ದೊಡ್ಡ ಮನುಷ್ಯರೆಲ್ಲರೂ ಅದನ್ನು ನನ್ನಿಂದ ತರಿಸಿ
ಕುಡಿಯುತ್ತಾರೆ. ನಿಮಗಾಗಿ ಮೂರು ಶೀಸೆಗಳನ್ನು ತಂದು ಕೊಡಲಾ” ಎಂದು
ಕೇಳಿದನು. ಭಾಸ್ಕರನ ಹರಿಚಂದ್ರನ ಮುಖವನ್ನು ನೋಡಲು ಅವನು ತರಿಸೆಂದು ತಲೆ
ಯನ್ನಲ್ಲಾಡಿಸಿದನು. ಭಾಸ್ಕರನು ಮದ್ಯದಂಗಡಿಯವನನ್ನು ಮೂರು ಶೀಸೆಗಳನ್ನು ತರು
ವಹಾಗೆ ಹೇಳಿದನು. ಅವನು ತರುವುದಕ್ಕೆ ಹೋದನು. ಅಷ್ಟರಲ್ಲೇ ಭಾಸ್ಕರನು ತನ್ನ
ಬಳಿಯಲ್ಲಿಟ್ಟು ಕೊಂಡಿದ್ದ ಒಂದು ಪುಡಿಯನ್ನು ತೆಗೆದು ಯಾರೂ ಕಾಣದಹಾಗೆ ಒಂದು
ಬಟ್ಟಲಿಗೆ ಹಾಕಿ ಸಿದ್ಧವಾಗಿಟ್ಟುಕೊಂಡಿದ್ದನು. ಮದ್ಯದ ಶೀಸೆಗಳು ಬಂದಕೂಡಲೇ
ಆ ಬಟ್ಟಲಿಗೆ ಅದನ್ನು ಸುರಿದು ಹರಿಚಂದ್ರನಿಗೆ ಕೊಟ್ಟು ತಾನೂ ಕುಡಿಯುವಂತೆ ನಟಿ
ಸುತ್ತಾ ಆಹಾ! ಎಷ್ಟು ರುಚಿಯಾಗಿದೆ. ಎಂದು ಕೂಗುತ್ತಾ ಬಟ್ಟಲುಗಳಾದಮೇಲೆ ಬಟ್ಟ
ಲುಗಳನ್ನು ತುಂಬಿ ಹರಿಚಂದ್ರನಿಗೂ ಕೊಡುತ್ತಾ ತಾನು ಕುಡಿಯುವಂತೆ ನಟಿಸುತ್ತಾ
ಬಂದನು. ಮದ್ಯದ ವೇಗವು ಹರಿಚಂದ್ರನ ತಲೆಯನ್ನೇರಿತು. ಉನ್ಮಾದಾವಸ್ಥೆಯು ಬಂದಿತು,
ಅದನ್ನರಿತ ಭಾಸ್ಕರನು ತಾನೂ ಮತ್ತೇರಲ್ಪಟ್ಟವನಹಾಗೆ ಮಾತನಾ
ಡುತ್ತಾ ಮದ್ಯವು ಮುಗಿದುಹೋಗಲು ಇನ್ನೂ ಮದ್ಯ ಎಂದು ಕೂಗಿದನು. ಕಾದು
ಕೊಂಡಿದ್ದ ಮದ್ಯದಂಗಡಿಯವನು ಇನ್ನೆರಡು ಶೀಸೆಗಳನ್ನು ತಂದಿಟ್ಟನು. ಹರಿಚಂದ್ರನು
ಅವುಗಳನ್ನೂ ಕುಡಿದುಬಿಟ್ಟು ಕುಣಿಯತೊಡಗಿದನು. ಆಗ ಭಾಸ್ಕರನು " ವಹವಾ ! ಇದೀಗ ಒಳ್ಳೆಯಮದ್ಯ !! ಅಲ್ಲವೇ? ಅಣ್ಣಾ ನೀನೇಹೇಳು ಹೊತ್ತಾಗಲಿಲ್ಲವೆ? ಹೋಗೋಣ
ನೀನು-ನೀನೆಲ್ಲಿಗೋ ಹೋಗಬೇಕೆಂದೆಯಲ್ಲಾ? ಆಗಲಿ ಹೋಗೋಣ. ಎಲ್ಲಿ ಗಣ್ಣಾ
ಹೋಗುವುದು ?
ಹರಿಚಂದ್ರ;-ಅಹಹ ! ಹಿ ! ಹಿ! ಓಹೋ ಹೊತ್ತಾಯಿತೆ ? ಹತ್ತು ಗಂಟೆಗೆ ಸರಿ
ಯಾಗಿ ಮೀಟಿಂಗ್, ನಾನು ಆಹಾ ಹವುದು ನಾನು ಬಿ. ಎ. ಪರೀಕ್ಷೆ ಕೊಟ್ಟಿಲ್ಲವೇ ?
ನಾನು ನಾಳೇದಿವಸ ಒಬ್ಬ ವಿಧವೆಯನ್ನು ಮದುವೆಯಾಗುತ್ತೇನೆ. ನೀವೆಲ್ಲಾ ಮೂಢರು-ಆಹಾ ! ನಾವು ಪೋಲೀಸಿನವರನ್ನೆಲ್ಲಾ ಶಿಕ್ಷಿಸಬೇಕು. ಸರ್ಕಾರವಂತೆ--
೩೨----------------------------------------------
32 ಈ ಕಾದಂಬರಿ ಸಂಗ್ರಹ
ಎಲ್ಲಿಯ ಸರ್ಕಾರ-ಬನ್ನಿ -ನಾವೆಲ್ಲಾ ಸರ್ಕಾರವನ್ನೇ ತಲೆಕೆಳಗುಮಾಡೋಣ, ಓಹೋ
ನಮ್ಮ ಹೊಸ ಮನುಷ್ಯನಲ್ಲಿ ಎಂದು ಹೇಳುವನು'' ಎಲ್ಲಿ ಇನ್ನಿ ಷ್ಟು ಮದ್ಯ ಕೊಡು
ಹೊತ್ತಾಯಿತಾ ನಾನು ಹೊರಡುತ್ತೇನೆ (ಎಂದು ಬೀದಿಗೆ ಬಂದು ಭಾಸ್ಕರನು
ಕೊಟ್ಟಿದ್ದ ಪುಡಿಯ ಮಾತ್ರೆಯಿಂದ ಜ್ಞಾನ ಹೊಗಿ ನೆಲದಮೇಲೆ ಉರುಳಿದನು.)
ಭಾಸ್ಕರನು:- ಸುತ್ತಲೂ ನೋಡಿ ಯಾರೂ ಇಲ್ಲದಿರುವುದನ್ನು ತಿಳಿದು ದೂರ
ದಲ್ಲಿ ನಿಂತುಕೊಂಡಿದ್ದ ಗಾಡಿಯನ್ನು ಬರುವಂತೆ ಸನ್ನೆ ಮಾಡಿದನು. ಅವನು ಗಾಡಿ
ಯೊಡನೆ ಬಂದಕೂಡಲೇ ಇಬ್ಬರೂ ಸೇರಿ ಹರಿಚಂದ್ರನನ್ನು ಗಾಡಿಯೊಳಕ್ಕೆ ಎತ್ತಿ
ಕೂರಿಸಿ ಭಾಸ್ಕರನು ತಾನೂ ಕುಳಿತುಕೊಂಡು ಬಾಗಿಲನ್ನೂ ಕಿಟಕಿಗಳನ್ನೂ ಮುಚ್ಚಿ
ಗಾಡಿಯನ್ನು ಮೆಲ್ಲಗೆ ಹೊಡೆಯುವಹಾಗೆ ಹೇಳಿದನು. ಗಾಡಿಯು ಹೋಗುತ್ತಿದ್ದ
ಹಾಗೆಯೇ ಭಾಸ್ಕರನು ಹರಿಚಂದ್ರನ ಮೇಲಿನ ಉಡುಪುಗಳನ್ನು ಕಳಚಿಕೊಂಡು ತಾನು
ಧರಿಸಿ ತನ್ನ ಮೀಶೆ ಮುಂತಾದವುಗಳನ್ನು ಅವನದರಹಾಗೇ ಮಾಡಿಕೊಂಡು ಗಾಡಿ
ಯನ್ನು ನಿಲ್ಲಿಸುವಹಾಗೆ ಹೇಳಿ ತಾನು ಕೆಳಕ್ಕಿಳಿದು ಗಾಡಿಯನ್ನು ಗೋವಿಂದನಮನೆಗೆ
ತೆಗೆದುಕೊಂಡುಹೋಗುವಹಾಗೆ ಹೇಳಿದನು. ಗಾಡಿಯು ಸ್ವಲ್ಪ ಹೊತ್ತಿಗೆಲ್ಲಾ ಗೋವಿಂ
ದನ ಮನೆಯನ್ನು ಸೇರಿತು. ಅದನ್ನೇ ಕಾದಿದ್ದ ಗೋವಿಂದನು ತನ್ನ ಸೇವಕನ ಸಹಾಯ
ದಿಂದ ಹರಿಚಂದ್ರನನ್ನು ಒಳಕ್ಕೆ ಸಾಗಿಸಿ ಅವನನ್ನೊಂದುಕಡೆ ಮಲಗಿಸಿ ಗಾಡಿಯವ
ನನ್ನು ಕಾದಿರುವಹಾಗೆ ಅಪ್ಪಣೆಮಾಡಿದನು.
ಇತ್ತ ಗಾಡಿಯಿಂದಿಳದ ಭಾಸ್ಕರನು ಗೋಪ್ಯವಾದೊಂದು ಸ್ಥಳಕ್ಕೆ ಹೋಗಿ
ಅಲ್ಲಿ ತನ್ನ ಚೀಲದಲ್ಲಿ ತುಂಬಿಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು ಒಂದು ಕನ್ನ
ಡಿಯಿಂದ ದೀಪದ ಬೆಳಕಿನಲ್ಲಿ ತನ್ನ ಆಕಾರವನ್ನು ನೋಡಿಕೊಳ್ಳಲು ಹುಕಂದ್ರನಹಾಗೇ
ಕಂಡುಬರಲು ಇನ್ನು ಭಯವಿಲ್ಲ ಎಂದು ಯೋಚಿಸಿ ನೆಟ್ಟಗೆ ತಾನು ಬೆಳಗ್ಗೆ ನೋಡಿ
ಕೊಂಡು ಬಂದಿದ್ದ ಮನೆಯ ಬಳಿಗೆ ಹೋದನು. ಆಗಲೇ ಅನೇಕರು ಆ ಮನೆಯನ್ನು
ಹೊಗುತ್ತಿದ್ದರು. ಭಾಸ್ಕರನು ತಾನೂ ಸಹಾ ಹಳಬನಂತೆ ಬಾಗಿಲಿಗೆ ಬರಲು ಅಲ್ಲಿದ್ದ
ತರುಣರಿಬ್ಬರು ಹರಿಚಂದ್ರಾ! ಗುಂಡಿಯೆಲ್ಲಿ? ನಿನಗೆಷ್ಟು ದಿವಸ ಹೇಳುವುದು' ಎಂದರು.
ಕೂಡಲೇ ಭಾಸ್ಕರನು ತನ್ನ ಕಿಸೆಯಲ್ಲಿಟ್ಟುಕೊಂಡಿದ್ದ ಗುಂಡಿಯನ್ನು ತೋರಿಸಲು
ಅವರು ಇವನನ್ನು ಒಳಕ್ಕೆ ಬಿಟ್ಟು ಬಿಟ್ಟರು.
ಆಗಲೇ ಹತ್ತು ಗಂಟೆಯಾಗಿತ್ತು. ಮೆಂಬರುಗಳೆಲ್ಲಾ ಬಂದು ಸೇರಿದ್ದರು. ಇನ್ನು
ಬರುವವರಾರೂ ಇಲ್ಲವೆಂದು ಹೊರಬಾಗಲು ಹಾಕಲ್ಪಟ್ಟಿತು. ನಮ್ಮ ಪಾಠಕರಿಗೆ ಈ
ಮನೆಯು ಹೊಸದಲ್ಲ ವಾದ್ದರಿಂದ ಅದರ ವಿಷಯವಾಗಿ ಹೆಚ್ಚೇನೂ ಬರೆಯಬೇಕಾ
೩೩------------------------------------------------
ಮಧುಸೂದನ 33
ದದ್ದಿಲ್ಲ. ಇಲ್ಲಿ ನಡೆಯುವ ವಿಷಯಗಳು ಸ್ವಲ್ಪ ಮಾತ್ರವೂ ಹೊರಗೆ ಕೇಳಿಸುತ್ತಿರ
ಲಿಲ್ಲ. ಎಲ್ಲರೂ ಮದ್ಯಪಾನನಿಷೇಧಸಂಬಂಧವಾದ ಉಪನ್ಯಾಸವೆಂದೇ ತಿಳಿದುಕೊಂಡಿ
ದ್ದರು, ಎಂ ಸಂಘದ ಮುಖ್ಯಸ್ಥನು ಅಗಾಸನಾಧಿಪತಿಯಾಗಿದ್ದನು, ಸಭೆಯ ಪ್ರಾರಂ
ಭದಲ್ಲಿ ಅವನು ಅಲ್ಲಿದ್ದವರನ್ನು ಕುರಿತು " ಸಹೋದರಿರಾ ! ಈ ದಿವಸದ ಮಾಟಿಂಗ್
ಯಾವಕಾರಣಕ್ಕಾಗೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ನಮ್ಮ ಮೇಲೆ ಪೊಲೀಸಿನವ
ರಿಗೂ, ಸರ್ಕಾರದವರಿಗೂ ಯಾವದೋ ಒಂದು ವಿಧವಾದ ಸಂದೇಹವುಂಟಾಗಿರುವು
ದಾಗಿ ತಿಳಿಯಬಂದಿದೆ. ಅದಕ್ಕೇನುಕಾರಣವೋ ತಿಳಿಯದು. ಸುಮಾರು ನಾವು ಈಗ
ಒಂದು ತಿಂಗಳ ಹಿಂದೆ ನಡೆಸಿದ್ದ ದರೋಡೆಯ ವಿಷಯದಲ್ಲೇನಾದರೂ ಅವರಿಗೆ ಸಂಶ
ಯವಿದೆಯೋ ಏನೋ ತಿಳಿಯದು? ನಾವು ಹೇಗಾದರೂ ಮಾಡಿ ಇನ್ನೊಂದು ತಿಂಗಳ
ಕಾಲ ಕಳೆಯಬೇಕಾಗಿದೆ. ಆದ್ದರಿಂದ ನೀವೆಲ್ಲಾ ಹೆಚ್ಚಾಗಿ ಬೀದಿಯಲ್ಲಿ ತಿರುಗಾಡ
ಬೇಡಿ : ಮತ್ತು ಹಾಗೆ ಬೀದಿಯಲ್ಲಿ ಹೋದರೂ ಜೊತೆಯಲ್ಲಿ ರಿವಾಲ್ವರುಗಳನ್ನು
ತೆಗೆದುಕೊಂಡು ಹೋಗಬೇಡಿ. ಮದುವೆಯು ನೆರವೇರಿ ನಮ್ಮಿಷ್ಟವು ಕೈಗೂಡಿಬಿಟ್ಟರೆ
ಸಾಕು.” ಎಂದು ಹೇಳಿ ಕುಳಿತುಕೊಂಡನು.
ಆಗ ಸಮೀಪದಲ್ಲೇ ಕುಳಿತಿದ್ದ ಈಶ್ವರಲಾಲನೆಂಬವನೊಬ್ಬನು ಮಾತನಾಡುವು
ದಕ್ಕಾಗಿ ಎದ್ದು ನಿಂತನು. ಇವನು ಸರಿಯಾಗಿ ಆರುವರಡಿಗಳ ಎತ್ತರವೂ ಅದಕ್ಕೆ ತಕ್ಕ
ಗಾತ್ರವೂ ಉಳ್ಳ ರಾಕ್ಷಸನಾಗಿದ್ದನು. ಅವನು ಅಲ್ಲಿದ್ದವರನ್ನು ಕುರಿತು " ಸಹೋದ
ರರಾ! ನೀವೆಲ್ಲಾ ನಮ್ಮ ಪ್ರೀತಿಪಾತ್ರರಾದ ಯಜಮಾನರ ಮಾತನ್ನು ಕೇಳಿರುವಿರಿ.
ಇಷ್ಟು ದಿವಸವೂ ಹೆದರದಿದ್ದ ನಾವು ಈಗತಾನೇ ಯಾಕೆ ಹೆದರಬೇಕು. ಸರ್ಕಾರದ
ವರೂ ನಮ್ಮನ್ನೇನೂ ಮಾಡಲಾರರು. ನಿಮ್ಮಲ್ಲಿ ಹಾಗೇನಾದರೂ ಬಹಳ ಹೆದರಿಕೊಂ
ಡಿರತಕ್ಕವರಿದ್ದರೆ ನಮ್ಮ ಗುಪ್ತಗೃಹದಲ್ಲಿ ಸ್ವಲ್ಪ ದಿವಸಗಳ ಮಟ್ಟಿಗೆ ವಾಸಮಾಡುತ್ತಿರಿ.
ಅದರೊಳಗಾಗಿಮತ್ತೆರಡು ಮಂದಿ ಸಾಹುಕಾರರನ್ನು ಲೂಟಿಮಾಡಿಕೊಂಡು ಆ ಹಣ
ದಿಂದ ಬೇರೆ ಬೇರೆ ಕಡೆ ಸುಖವಾಗಿ ಆ ಮೇಲೆ ವಾಸಮಾಡುತ್ತಿರಬಹುದು,'' ಎಂದು
ಹೇಳಿ ಕುಳಿತನು, ಅಗ್ರಾಸನಾಧಿಪತಿಯು " ಹರಿಚಂದ್ರ! ನೀನೇನು ಹೇಳುವಿ! ಎಂದು
ಕೂಗಿದನು.” ಭಾಸ್ಕರನು ಥಟ್ಟನೆ ಭಯಪಟ್ಟರೂ ಧೈರ್ಯವನ್ನು ತಂದುಕೊಂಡು
" ಸಹೋದರರಾ! ನಾನು ಇನ್ನು ಹೆಚ್ಚಾಗಿ ಏನು ಹೇಳಲಿ? ಆದರೆ ನಮ್ಮ ಸಂಘವು
ಜಯವನ್ನು ಹೊಂದಬೇಕಾಗಿದ್ದರೆ ದೊಡ್ಡ ಮನುಷ್ಯರ ಸಹಾಯವಿರಬೇಕು. ಇನ್ನು
ಸ್ವಲ್ಪ ದಿವಸಗಳಲ್ಲೇ ಲಾಯರ್ ಕಾಳಿಕಿಶೋರರು ತಮ್ಮ ಮಗಳಾದ ಆನಂದಿಯೆಂಬ
ವಿಧವೆಯನ್ನು ನನಗೆ ಮದುವೆ ಮಾಡಿಕೊಡುತ್ತಾರೆ, ಆ ಮೇಲೆ ನಮಗೆ ಅವರ ಸಹಾ
೩೪------------------------------------------------
34 ಕಾದಂಬರಿ ಸಂಗ್ರಹ
ಯವು ಸಿಕ್ಕುತ್ತದೆ. ಇದೆಲ್ಲಾ ಇರಲಿ, ಸರ್ಕಾರದವರಿಂದಲೂ ಪೊಲೀಸಿನವರಿಂದಲೂ
ನಮಗೇನು ಅಪಾಯಬರಬಲ್ಲದು ? ನಾವು ಪ್ರಯತ್ನ ಮಾಡಿದರೆ ಸರ್ಕಾರದವರನ್ನು
ತಲೆಕೆಳಗು ಮಾಡಬಹುದು. ಪೊಲೀಸಿನವರನ್ನೆಲ್ಲಾ ಕೊಲ್ಲಬಹುದು (ಆಗ ಅಲ್ಲಿದ್ದ
ವರು ಹರಿಚಂದ್ರಾ ! ಇದೇನು ವಿಪರೀತ ? ಕುಡಿದಿದ್ದೀಯೋ? ಎಂದು ಕೂಗಿದರು).
ಆಗ ಹರಿಚಂದ್ರನು (ಭಾಸ್ಕರ) ಇಲ್ಲ. ಇಲ್ಲ, ನಾನು ಕುಡಿದಿಲ್ಲ. ನಾವೇನು ಕೈಲಾಗ
ದವರೋ ? ನಾನೇನೋ ಕಲ್ಕತ್ತಾವನ್ನೇ ಬಿಟ್ಟು ಮತ್ತೆಲ್ಲಾದರೂ ಹೋಗಿ ನಮಗೆ
ಮಧುಸೂದನನು ಕೊಡುವ ಹಣದಿಂದ ಜೀವನ ಮಾಡಬೇಕೆಂದಿರುತ್ತೇನೆ. (ಅಗ್ರಾಸ
ನಾಧಿಪತಿಯು ಬಾಯಿನಮೇಲೆ ಬೆರಳಿಟ್ಟು ಹುಷಾರ್ ಎಂದು ಸನ್ನೆ ಮಾಡಿದನು.)
ಎಲ್ಲರೂ ಭಾಸ್ಕರನ ಉಪನ್ಯಾಸವು ಮುಗಿದ ಕೂಡಲೇ ಕೈತಟ್ಟಿ " ಬೇಷ್ ?”
ಇಂದು ಹರಿಚಂದ್ರನು ಕಷ್ಟಪಟ್ಟಿದ್ದಾನೆಂದು ಅವನ ಬೆನ್ನನ್ನು ಕೆಲವರು ತಟ್ಟಿದರು.
ಮತ್ತೆ ಕೆಲವರು (ಹರಿಚಂದ್ರಾ ! ಬೀದಿಯಲ್ಲೆಲ್ಲಾದರೂ ಈ ರೀತಿ ಮಾತನಾಡಿಯೇ)
ಕಾರಾಗೃಹವಾಸವು ಬರುವುದು ! ಎಂದು ಹೇಳಿದರು. ಆಗ ಅಗ್ರಾಸನಾಧಿಪತಿಯು
ಎದ್ದು ನಿಂತು ಮದುವೆಯು ಎಂಟುದಿವಸದಲ್ಲಿ ನಡೆಯುವುದು, ಹೆದರಿಕೆಯುಳ್ಳವರೆಲ್ಲಾ
ನಾಳೇದಿವಸದಿಂದ ಗುಪ್ತ ಗೃಹದಲ್ಲಿ ವಾಸಮಾಡಿ ! ಎಂದು ಹೇಳಿ ಸಭೆಯನ್ನು ಮುಗಿ
ಸಿದನು. ಎಲ್ಲರೂ ಹರಿಚಂದ್ರನನ್ನು ಹೊಗಳುತ್ತಾ ಬೀದಿಗೆ ಬಂದರು. ಅಲ್ಲಿ ಎಲ್ಲರ
ಕತ್ತಿಗೂ ಹೂವಿನ ಮಾಲೆಗಳು ಹಾಕಲ್ಪಟ್ಟವು. ಭಾಸ್ಕರನೂ ಹೊರಕ್ಕೆ ಬಂದು ವೇಗ
ವಾಗಿ ನಡೆದು ಗೋವಿಂದನ ಮನೆಯನ್ನು ಸೇರಿದನು. ಇವನನ್ನೇ ಎದುರುನೋಡು
ತಿದ್ದ ಗೋವಿಂದನು ಇವನನ್ನು ಕರೆದುಕೊಂಡು 'ರಿಚಂದ್ರನು ಮಲಗಿದ್ದ ಕೊಠಡಿಗೆ
ಹೋದನು. ಅಲ್ಲಿ ಭಾಸ್ಕರನು ಅವನ ಉಡುಪನ್ನು ಅವನಿಗೇನೆ ಹಾಕಿ ಕತ್ತಿಗೆ ಹೂವಿನ
ಮಾಲೆಯನ್ನೂ ಹಾಕಿ ಅವನನ್ನೆತ್ತಿಕೊಂಡು ಬಂದು ಗಾಡಿಯಲ್ಲಿ ಹಾಕಿಕೊಂಡು
ಕಾಳೀಬೀದಿಯ ಎಂಕೂಟದವರ ಮನೆಯ ಬಳಿ ಒಂದು ಮೂಲೆಯಲ್ಲಿ ಹಾಕಿಬಿಟ್ಟು
ಪುನಃ ಗೋವಿಂದನ ಮನೆಯನ್ನು ತಲಸಿ ಮಲಗಿ ನಿದ್ರೆಹೋದನು.
------
ಎಂಟನೆಯ ಅಧ್ಯಾಯ.
(ಪೋಲೀಸ್ ಅಧಿಕಾರಿಯ ಕೊಲೆ)
ಮಾರನೇದಿವಸ ಬೆಳಗ್ಗೆ ಹರಿಚಂದ್ರನು ಕಣ್ಣು ತೆರೆದು ನೋಡಲು ತಾನು
ಯಾವದೋ ಒಂದು ಮೂಲೆಯಲ್ಲಿ ಮಲಗಿರುವ ಹಾಗೆ ಕಾಣಬಂದಿತು. ಅಲ್ಲಿಗೆ
೩೫------------------------------------------------------
ಮಧುಸೂದನ 35
ತಾನು ಹೇಗೆ ಬಂದನೆಂಬುವುದು ಅವನಿಗೆ ಗೊತ್ತಾಗಲಿಲ್ಲ. ಕತ್ತಿನಲ್ಲಿ ಹೂವಿನ
ಮಾಲೆ ಇರಲು ಅದು ಹೇಗೆ ಬಂದಿತೆಂದು ಯೋಚಿಸಿದನು. ಅವನಿಗೆ ಯಾವದೂ
ಬಗೆ ಹರಿಯಲಿಲ್ಲ. ಮೆಲ್ಲಗೆ ಎದ್ದು ತಮ್ಮ ಸಂಘದ ಮನೆಯ ಬಳಿಗೆ ಹೋದನು.
ಅಲ್ಲಿದ್ದ ಇಬ್ಬರು ಮೆಂಬರುಗಳು “ ಹರಿಚಂದ್ರಾ ಇದೇನು ಬಂದದ್ದು, ರಾತ್ರಿ ನೀನು
ಮಾತನಾಡಿದ್ದನ್ನು ನೋಡಿ ನೀನು ಕುಡಿದಿದ್ದೀ ಎಂದೇ ಯೋಚಿಸಿದ್ದೆವು" ಎಂದು
ಹೇಳಿದರು.
ಹರಿಚಂದ್ರ:-ಏನು ? ರಾತ್ರಿ ಇಲ್ಲಿ ಮಾತನಾಡಿದೆನೇ ? ಏನೇನು ಹೇಳಿದನು ?
ನನಗಾವುದೂ ಜ್ಞಾಪಕವಿಲ್ಲವಲ್ಲ.
ಮೆಂಬರುಗಳು:- ಚೆನ್ನಾಗಿ ಹೇಳಿದೆ. ಹಾಗಾದರೆ ಖಂಡಿತವಾಗಿಯೂ ನೀನು
ಕುಡಿದಿದ್ದೀ, ಸರ್ಕಾರದವರಮೇಲೇ ತಿರಿಗಿಬೀಳಬೇಕೆಂದು ಹೇಳಿದೆಯಲ್ಲಾ ! ಕುಡಿದು
ಬೀದಿಯಲ್ಲೇನಾದರೂ ಹೇಳೀಯಾ ? ಹುಷಾರ್.
ಇತ್ತ ಭಾಸ್ಕರನು ಬೆಳಗಾದಕೂಡಲೇ ಎದ್ದು ಕಾಳಿಕೀಶೋರನೆಂಬ ಲಾಯರಿಗೆ
ಇಂತು ಕಾಗದ ಬರೆದನು, ನಿಮ್ಮ ಮಗಳನ್ನು ಹರಿಚಂದ್ರನಿಗೆ ಕೊಡಬೇಡಿ. ಏನಾದರೂ
ಕಾರಣ ಹೇಳುತ್ತಾ ನಿಧನಿಸುತ್ತಾ ಇರಿ. ಮುಂದಲಿಂದ ಎಲ್ಲಾ ವಿಷಯಗಳನ್ನೂ
ತಿಳಿಸುತ್ತೇನೆ. ಪತ್ತೇದಾರ ಭಾಸ್ಕರ
ಕಾಗದವನ್ನು ಬರೆದು ತಪ್ಪಾಲಿಗೆ ಹಾಕಿಬಿಟ್ಟು ತನ್ನ ಕೊಟಡಿಯಲ್ಲಿ
ಕುಳಿತುಕೊಂಡು ಯೋಚಿಸಲಾರಂಭಿಸಿದನು. " ಮಧುಸೂದನನೇನೋ - ಅವರ
ಕೈಯಲ್ಲಿ ಶಿಕ್ಕಿಬಿದ್ದಿದ್ದಾನೆ. ಆದರೆ ಅವನು ಎಲ್ಲಿದ್ದಾನೆಂಬುದೂ, ಏನುಮಾಡು
ತಿರುವನೆಂಬದೂ ತಿಳಿಯದು. ಎಲ್ಲವನ್ನೂ ತಿಳಿಯುವುದಕ್ಕೆ ಅವರ ಗುಪ್ತಗೃಹವನ್ನು
ಪ್ರವೇಶಮಾಡಲೇಬೇಕು. ಅಲ್ಲಿಗೆ ಹೇಗೆ ಹೋಗುವುದು. ? ಆದದ್ದಾಗಲಿ ! ನಮ್ಮ
ಹರಿಚಂದ್ರನಿದ್ದಾನೆ.
ಭಾಸ್ಕರನು ಆ ದಿವಸ ಸಾಯಂಕಾಲ ಹಿಂದಿನದಿನಗಳ ಹಾಗೆಯೇ ಮದ್ಯದಂಗ
ಡಿಗೆ ಹೋಗಿ ಹರಿಚಂದ್ರನನ್ನು ಮರಳುಮಾಡಿ ಅವನನ್ನು ಗೋವಿಂದನ ಮನೆಗೆ ಕರದು
ಕೊಂಡು ಬಂದು ಒಂದು ಕೊಠಡಿಯಲ್ಲಿ ಶೆರೆಹಾಕಿಬಿಟ್ಟು ತಾನು ಅವನ ಉಡುಪನ್ನು
ಧರಿಸಿಕೊಂಡು ಸಂಘದ ಗೃಹದ ಬಳಿಗೆ ಹೋಗಿ, ತಾನು ಗುಪ್ತಗೃಹದೊಳಕ್ಕೆ ಹೋಗ
ಬೇಕೆಂದು ಹೇಳಿದನು. ತಕ್ಷಣವೇ ಇವನನ್ನು ಕರೆದುಕೊಂಡುಹೋಗಿ ಅಲ್ಲಿದ್ದ ಒಂದು
ಕೊಠಡಿಯಲ್ಲಿ ಕೆಳಕ್ಕೆ ಹಾಸಿದ್ದ ಜಮಖಾನವನ್ನು ತೆಗೆದು ನೆಲದಮೇಲೆ ಇದ್ದ ಒಂದು
೩೬------------------------------------------------------
36 ಕಾದಂಬರಿ: ಸಂಗ್ರಹ
ಮೊಳೆಯನ್ನು ಅದುಮಿದರು. ಸ್ವಲ್ಪ ಹೊತ್ತಿಗೆಲ್ಲಾ ಎಲ್ಲೊ ಗಂಟೆಯ ಶಬ್ದವಾಗಿ
ಒಂದು ಸಣ್ಣ ಬಾಗಲು ನೆಲದಲ್ಲಿ ತೆರೆಯಲ್ಪಟ್ಟಿತು. ಭಾಸ್ಕರನು ಧೈರ್ಯವಾಗಿ ಒಳಕ್ಕೆ
ಮೆಟ್ಟಿಲುಗಳನ್ನು ಇಳಿದುಹೋಗಲು ಬಾಗಲನ್ನು ತೆರೆದ ಮನುಷ್ಯನು ' ಹರಿಚಂದ್ರಾ,
ಈ ದಿನದ ಕೊಳ್ಳೆಗೆ ನೀನೇಕೆ ಹೋಗಲಿಲ್ಲ' ಎಂದು ಹೇಳಿದನು.
ಹರಿಚಂದ್ರ (ಭಾಸ್ಕರು--ನನಗೆ ಅದರ ವಿಷಯವೇನೂ ಗೊತ್ತಿಲ್ಲವು. ನಾನು
ಹಗಲೆಲ್ಲಾ ಅಡಗಿಕೊಂಡಿದ್ದೆನು. ನನ್ನ ಮೇಲೆ ಪೊಲೀಸಿನವರಿಗೆ ಕಣ್ಣು ಇರುವಹಾಗೆ ಕಾಣುತ್ತೆ, ಈ ದಿನದ ಕೊಳೆ ಎಲ್ಲಿ ?
ಮನುಷ್ಯ :-ಈ ದಿವಸ ನನ್ನವರು ಹದಿನೆಂಟು ಜನಗಳು ಸೇರಿ ಸುರತಸರದ
ಜಹಗೀರದಾರನನ್ನು ಕೊಳ್ಳೆಹೊಡೆಯಲು ಹೋಗಿರುತ್ತಾರೆ. ಏನಿದ್ದರೂ ಹತ್ತು ಲಕ್ಷ
ರೂಪಾಯಿಗಳಿಗೆ ಕಮ್ಮಿ ಇಲ್ಲ. ಅದೋ ಆ ಕೊಠಡಿಯಲ್ಲಿ ನೀನಿರು. ಇದೋ ಈ
ಕೊಠಡಿಯ ಸಮೀಪಕ್ಕೆ ಮಾತ್ರ ಬರಬೇಡ.
ಭಾಸ್ಕರನು, ಬರಬೇಡವೆಂದು ಹೇಳಿದ ಕೊಠಡಿಯಲ್ಲಿಯೇ ಏನೋ ಇದೆಯೆಂದು
ತಿಳಿದುಕೊಂಡನು. ಆ ಗುಪ್ತ ಗೃಹವು ಭೂಮಿಯೊಳಗಿದ್ದರೂ ಮನೆಯಹಾಗೇ
ಇದ್ದಿತು. ಉದ್ದವಾದ ಕೊಳವಿಗಳನ್ನು ನೆಟ್ಟು ಅವುಗಳ ಮೂಲಕ ಯಂತ್ರಗಳ
ಸಹಾಯದಿಂದ ಗಾಳಿಯನ್ನು ಎಳೆದುಬಿಡುತ್ತಿದ್ದರು. ಅನೇಕ ದೀಪಗಳು ಉರಿಯು
ತಿದ್ದವು. ಹೊರಗಿನ ಪ್ರಪಂಚದ ವಿಷಯವು ಸ್ವಲ್ಪವಾದರೂ ಕೇಳಿಬರುತ್ತಿರಲಿಲ್ಲ.
ಮೂರನೇದಿವಸ ಬೆಳಗ್ಗೆ ಕಲ್ಕತ್ತಾ ನಗರವೆಲ್ಲಾ ಒಂದು ಘೋರವಾದ ಡಕಾ
ಯಿತಿ ಮತ್ತು ಕೊಲೆ ಇವುಗಳ ವಿಷಯವನ್ನು ಕೇಳಿ ಭಯವನ್ನೂ ಆಶ್ಚರ್ಯವನ್ನೂ
ಹೊಂದಿತು. ಸುರತಪುರದ ಜಹಗಿರಿಗಾರನ ಮನೆಯನ್ನು ಅನೇಕ ಡಕಾಯಿತಿ
ಕಳ್ಳರು ಆಯುಧಪಾಣಿಗಳಾಗಿ ನುಗ್ಗಿ, ತಡೆಯಲು ಬಂದ ಹತ್ತು ಜನ ಸೇವಕರಲ್ಲಿ
ಆರುಜನರನ್ನು ಕೊಂದು ಉಳಿದ ನಾಲ್ವರನ್ನು ಬಹಳ ಘಾಯಮಾಡಿ ಜಮೀನ್ದಾರ
ನನ್ನೂ ಅವನ ಹೆಂಡತೀಮಕ್ಕಳನ್ನೂ ಕಂಬಗಳಿಗೆ ಕಟ್ಟಿಹಾಕಿಬಿಟ್ಟು ಐದಾರು ಲಕ್ಷ
ರೂಪಾಯಿಬಾಳುವ ಜವಾರಿಯನ್ನೂ ಮೂರು ಲಕ್ಷ ರೂಪಾಯನ್ನೂ ಹೊತ್ತು
ಕೊಂಡು ಹೋದರೆಂದು ಕೇಳಲು ಯಾರಿಗೆ ತಾನೇ ಭಯವಾಗಲಾರದು ? ಆ ದಿವಸದ
ವೃತ್ತ ಪತ್ರಿಕೆಗಳೂ ಆ ವಿಷಯವನ್ನೇ ಕುರಿತು ಮಾತನಾಡುತ್ತಿದ್ದವು. ಒಂದು
ಪತ್ರಿಕೆಯು ( ಬಂದಿದ್ದ ಕಳ್ಳರೆಲ್ಲಾ ಮುಖಕ್ಕೆ ಗುರುತು (Mark) ಹಾಕಿಕೊಂಡು
ಕೈಗಳಲ್ಲಿ ರಿವಾಲ್ವರುಗಳನ್ನು ಹಿಡಿದುಕೊಂಡಿದ್ದರೆಂತಲೂ, ಅವರಲ್ಲನೇಕರು ಇನ್ನೂ
೩೭-------------------------------------------
ಮಧುಸೂದನ 37
ತರುಣರಾಗಿಯೇ ಕಂಡುಬಂದರೆಂದೂ ” ತಿಳಿಸಿತ್ತು. ಪೋಲೀಸಿನವರು ಅನೇಕ ತರುಣ
ರನ್ನು ಸಂಶಯದಮೇಲೆ ಹಿಡಿದು ಸೆರೆಮನೆಗೆ ಕೊಂಡೊಯ್ದರು. ಕಳ್ಳರನ್ನು ಪತ್ತೆ
ಮಾಡಿಕೊಟ್ಟವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ
ಪ್ರಸಿದ್ಧ ಪಡಿಸಿದರು.
ಅದೇ ದಿವಸ ಎಂ ಸಂಘದ ಬೆಂಬರುಗಳಲ್ಲನೇಕರು, ಗುಪ್ತಗೃಹಕ್ಕೆ ಬಂದು
ವಾಸಮಾಡಲಾರಂಭಿಸಿದರು. ಅವರ ಮುಖ್ಯಸ್ಥನು ಏನನ್ನೋ ಅನೇಕರ ಕೈಲಿ ಹೊರಿಸಿ
ಕಂಡುಬಂದು ಸಿದ್ದವಾಗಿದ್ದ ಗುಳಿಯಲ್ಲಿ ಹೂಳಿಬಿಟ್ಟು ಹೊರಟುಹೋದನು.
ಭಾಸ್ಕರನು ಅದೇನೆಂಬುದನ್ನು ತಿಳಿದುಕೊಂಡನು. ಆದರೆ ಅವನಿಗೆ ಕೊಲೆಗಳ ವಿಷ
ಯವೂ ದರೋಡೆಯ ವಿಷಯವೂ ಏನೂ ತಿಳಿಯದು. ಅಲ್ಲಿದ್ದವರೂ ಸಹ ಯಾವ
ಮಾತನ್ನೂ ಆಡಲಿಲ್ಲ. ಭಾಸ್ಕರನು ಅನೇಕಸ ಹೋಗಕೂಡದೆಂದು ಹೇಳಲ್ಪಟ್ಟಿದ್ದ
ಕೊಠಡಿಯ ಕಡೆಗೆ ಹೋಗಿ ಹಿಂದಕ್ಕೆ ಕಳುಹಲ್ಪಟ್ಟಿದ್ದನು. ಆದರೆ ಎಲ್ಲಾ ವಿಷಯ
ಗಳಲ್ಲಿಯೂ ಹರಿಚಂದ್ರನಂತೆ ನಟಿಸುತ್ತಿದ್ದ ಭಾಸ್ಕರನ ವಿಷಯವಾಗಿ ಯಾರೂ ಸಂಶ
ಯಪಡಲಿಲ್ಲ. ಅದೇ ದಿವಸ ಮಧ್ಯಾನ್ನ ಭಾಸ್ಕರನು ನೀರು ಕುಡಿಯುತ್ತಿರುವಾಗ
ಆ ಕೊಠಡಿಯಿಂದ ಒಬ್ಬ ಮನುಷ್ಯನು ಹೊರಕ್ಕೆ ಬಂದನು. ಭಾಸ್ಕರನು ಓರೆಕಣ್ಣಿನಿಂದ
ಅವನನ್ನು ನೋಡಲು ತಕ್ಷಣವೇ ಅವನಾರೆಂಬುದು ತಿಳಿಯಬಂತು. ಆ ಮನುಷ್ಯನ
ಮುಖವು ಬಾಡಿಹೋಗಿ ಬೆಳಿತುಕೊಂಡಿದ್ದರೂ, ಅವನು ಕುಡುಕನಂತೆ ನಡದರೂ,
ಸೂಕ್ಷ್ಮದೃಷ್ಟಿಯುಳ್ಳ ಭಾಸ್ಕರನು ತಾನು ಫೋಟೋ (Photo) ವಿನಲ್ಲಿ ನೋಡಿದ
ಮಧುಸೂದನನು ಅವನೇ ಎಂದು ತಿಳಿದುಕೊಂಡನು. ಆದರೆ ಅವನ ಕೂಡ ಮಾತನಾ
ಡಲು ಆಗಲಿಲ್ಲವು. ಭಾಸ್ಕರನು ತಾನು ಬಂದಾರ್ಯವು ಮುಗಿಯಿತೆಂದು ತಿಳಿದು
ಕೊಂಡನು.
ಕಲ್ಕತ್ತಾ ಪಟ್ಟಣದ ಪೊಲೀಸ್ ರ್ಇಸ್ಪೆಕ್ಟರ್‌ಗಳಲ್ಲೊಬ್ಬನಾದ ಮೋಸೆಸ್
ಎಂಬುವನು ಅನೇಕ ದಿವಸಗಳಿಂದಲೂ, ಎಂ' ಪಂಗಡದವರ ಮೇಲೆ ಕಣ್ಣಿಟ್ಟಿದ್ದನು.
ಅವರು ಚರ್ಮದ ವ್ಯಾಪಾರಿಯನ್ನು ಲೂಟಿಮಾಡಿದಾಗ ಅವನು ಕೆಲವರನ್ನು ಹಿಂಬಾ
ಲಿಸಿ ಪತ್ತೇಮಾಡುವುದರಲ್ಲಿದ್ದನು. ಆದರೆ ಅವರು ಅವನಿಗಿಂತಲೂ ಚುರುಕಾಗಿದ್ದದ್ದ
ರಿಂದ ತಪ್ಪಿಸಿಕೊಂಡರು. ಅದರ ವಿಷಯವಾಗಿಯೇ ಅವನು ಹಗಲೂ ರಾತ್ರಿಯ
ಕಷ್ಟಪಡುತ್ತಿದ್ದನು. ಈ ವಿಷಯವು ಎಂ' ಪಂಗಡದ ಮುಖ್ಯಸ್ಥನಾದ ವಿಶ್ವನಾಥ
ನೆಂಬ ಒಬ್ಬ ಬಿ.ಎ. ಬಿ.ಎಲ್. ಪರೀಕ್ಷೆಯನ್ನು ಕೊಟ್ಟಿದ್ದವನಿಗೆ ತಿಳಿದಿದ್ದಿತು. ಅದೇ
ವಿಷಯವಾಗಿಯೇ ಅವನು ಸ್ವಲ್ಪ ದಿವಸಗಳ ಹಿಂದೆ ನಡೆದ ವಿಾಟಿಂಗಿನಲ್ಲಿ ಸೂಚಿಸಿ
೩೮-------------------------------------
38 ಕಾದಂಬರೀ ಸಂಗ್ರಹ
ದ್ದನು. ವಿಶ್ವನಾಥನು ಮೋಸೆಸ್ಸನ್ನು ಹಿಂಬಾಲಿಸುತ್ತಲೂ ಅವನು ಇವನನ್ನು ಹಿಂಬಾಲಿ
ಸುತ್ತಲೂ ಇದ್ದರು. ಈ ದಿವಸ ನಡೆದ ಸುರತಪುರದ ಡಕಾಯತಿ ವಿಷಯವನ್ನು ಕೇಳಿದ
ಕೂಡಲೇ ಅವನಿಗೆ 'ಎಂ' ಕೂಟದವರ ಮೇಲೆ ಸಂದೇಹವುಂಟಾಯಿತು. ಅವನು
ಇದಕ್ಕೆ ಮೊದಲೇ ಅವರ ಕಾಳೀಬೀದಿಯಲ್ಲಿದ್ದ ಮನೆಯನ್ನು ನೋಡಿ ತಿಳಿದುಕೊಂಡಿ
ದ್ದನು. ಆದ್ದರಿಂದ ಈ ದಿನ ಸಾಯಂಕಾಲ ಆರುಗಂಟೆಗೆ ಸರಿಯಾಗಿ ಸಂಗಡ ಒಬ್ಬ
ಪೊಲೀಸ್ ಜವಾನನನ್ನೂ ಕರೆದುಕೊಂಡು ಕಾಳಿಬೀದಿಯ ಮನೆಗೆ ಬಂದು ಬೀದಿಯ
ಲ್ಲಿದ್ದ ಗಂಟೆಯ ದಾರವನ್ನು ಹಿಡಿದೆಳದನು. ಸ್ವಲ್ಪಹೊತ್ತಿಗೆಲ್ಲಾ ಒಬ್ಬ ತರುಣನು
ಬಂದು ಕರೆಯಲು ಕಾರಣವೇನೆಂದು ಕೇಳಿದನು.
ಮೋಸೆಸ್ :-ಅಯ್ಯಾ ನಾನು ನಿಮ್ಮ ಕೂಟದ ಯಜಮಾನನನ್ನು ನೋಡ
ಬೇಕು. ನಾನು ಸರ್ಕಾರದ ಪರವಾಗಿ ಬಂದಿರುತ್ತೇನೆ.
ತರುಣ :--ತಾವು ಸರ್ಕಾರದ ಪರವಾಗಿ ಬಂದಿದ್ದರೆ ತಕ್ಷಣವೇ ಒಳಕ್ಕೆ
ಬರಬಹುದು. ನಮ್ಮ ಯಜಮಾನರು ಓದುತ್ತಾ ಕುಳಿತಿರುವರು.
ಮೋಸೆಸ್ಸನು ತಾನು ಬರುವಾಗ ತನ್ನನ್ನು ತಡೆಯುವರೆಂದೂ, ಅದಕ್ಕಾಗಿ
ಎರಡು ರಿವಾಲ್ವರುಗಳನ್ನು ತೆಗೆದುಕೊಂಡು ತನ್ನ ಸಂಗಡ ಕರತಂದಿದ್ದ ಸೇವಕರಿಗೆ
ಏನಾದರೂ ಜಗಳವಾಗುವಹಾಗೆ ಕಂಡುಬಂದರೆ ತಕ್ಷಣವೇ ಸಮಾಜದಲ್ಲಿದ್ದ ಪೊಲೀ
ಸ್‌ಸ್ಟೇಷನ್ನಿಗೆ ಹೋಗಿ ಅಲ್ಲಿಂದ ಸಹಾಯವನ್ನು ತರಬೇಕೆಂದೂ ಹೇಳಿಕೊಟ್ಟಿದ್ದನು.
ಆದರೆ ಅವನು ಇದನ್ನೆಲ್ಲಾ ಅರಿತ ವಿಶ್ವನಾಧನ ಬುದ್ದಿಯನ್ನು ಇನ್ನೂ ಅರಿತಿರಲಿಲ್ಲ.
ಇವನು ಬರುವನೆಂದು ತಿಳಿದೇ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಂಡಿದ್ದನು. ತನ್ನನ್ನು
ಯಾವ ವಿಧವಾದ ಅಡಚನೆಯನ್ನೂ ಮಾಡದೆ ಒಳಕ್ಕೆ ಬಿಟ್ಟು ದನ್ನು ನೋಡಿ ಮೋಸೆ
ಸ್ಸನು ಆಶ್ಚರ ಪಡುತ್ತಾ ಒಳಕ್ಕೆ ಪ್ರವೇಶಮಾಡಿದನು. ಅಲ್ಲಿ ಹಾಲಿನ (Ha11)
ಮಧ್ಯದಲ್ಲಿ ಎರಡು ಮೂರು ಕುರ್ಚಿಗಳೂ ಒಂದು ದೊಡ್ಡ ಮೇಜೂ ಇಡಲ್ಪಟ್ಟಿದ್ದವು.
ಒಂದು ಸುಖಾಸನ (Easy chair) ದಮೇಲೆ ವಿಶ್ವನಾಥನು ಕುಳಿತುಕೊಂಡು
ಏನನ್ನೋ ಓದುತ್ತಿದ್ದನು. ಮೋಸೆಸ್ಸನು ಒಳಕ್ಕೆ ಬಂದುದನ್ನು ನೋಡಿ ಓದುತ್ತಿದ್ದ
ಪುಸ್ತಕವನ್ನು ಮುಚ್ಚಿಟ್ಟು ಬಂದಂಥಾವನಿಗೆ ವಂದಿಸಿ ಒಂದು ಕುರ್ಚಿಯಮೇಲೆ ಕುಳಿ
ತುಕೊಳ್ಳುವಹಾಗೆ ಹೇಳಿ, ಬಂದ ಕೆಲಸವೇನೆಂದು ಕೇಳಿದನು, ಮೊಸೆಸ್ಸು (ನಗುತ್ತಾ)
ನಿಮಗೇ ತಿಳಿದಿರಬಹುದು. ನೀವು ನನ್ನನ್ನು ಮೋಸಪಡಿಸುವುದಕ್ಕೆ ಪ್ರಯತ್ನ ಪಟ್ಟರೆ
ಅದು ಸಾಗಲಾರದು,
೩೯----------------------------------------------
ಮಧುಸೂದನ ೩೯
ವಿಶ್ವನಾಥ:-ಸ್ವಾಮಿಾ ! ನೀವೇನು ಹೇಳುತ್ತಿರುವಿ ? ನೀವು ಹೇಳುವದೊಂದೂ
ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ
ತಿಳಿದುಕೊಳ್ಳಲಿ. ?
ಮೋಸೆಸ್:-ಅಯ್ಯ ! ಸಾಕು !!! ವೃಥಾ ಏಕೆ, ನನ್ನನ್ನು ಮೋಸಗೊಳಿ
ಸಲು ಪ್ರಯತ್ನ ಮಾಡುವಿರಿ, ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ
ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟಿಮಾಡಲಿಲ್ಲವೆಂದೂ ನಿನ್ನೆ ದಿವಸ
ನೀವು ದರೋಡೆಯನ್ನು ನಡಿಸಲಿಲ್ಲ ವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
ವಿಶ್ವನಾಥ:-ಇದೀಗ ಸರಿಯಾದ ಮಾತು. ಏನು ? ನಾನು ದರೋಡೇ ಮಾಡ
ತಕ್ಕ ಕಳ್ಳನೋ ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದ
ಕ್ಕಾಗಿ ಬಂದಿರುವಿರಲ್ಲವೇ ? ವಾರಂಟನ್ನು ಸ್ವಲ್ಪ ತೋರಿಸಿ! ನೋಡೋಣ! ಯಾರಾರನ್ನು
ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ ? ಸ್ವಾಮಿಾ ! ನಿಶ್ಚಯವಾಗಿಯೂ ತಮ್ಮ ಮಾತುಗಳು
ನನಗೆ ಆಶ್ಚರವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ
ಕಷ್ಟ ಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ
ಕೊಲೆಪಾತಕನೆಂದ !! ಅಪರಾಧವನ್ನು ಹೊರಿಸುವಿರಾ ? ನೀವು ಪೋಲೀಸ್ ಇಲಾ
ಖೆಗೇ ಗೌರವವನ್ನು ತರತಕ್ಕವರಲ್ಲವೇ !!!
ಮೋಸೆಸ್ :-(ಆಶ್ವರದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗ
ಳೆಲ್ಲಾ ಹಾಳಾದವೆಂದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲ
ದಿದ್ದರೆ ನೀವು ಇಷ್ಟು ದಿವಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ. ಈಗತಾನೆ
ಏನು ? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ ?
ವಿಶ್ವನಾಥ :-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕು
ವಿರಿ ? ಒಂದುವೇಳೆ ನಾನು ನಿಮ್ಮನ್ನು ತಡೆದರೋ ? ಪೋಲೀಸ್-(ಆಹಾ ಈಗಲೀಗ
ಸಿಕ್ಕಿ ಬಿದ್ದನೆಂದು ಯೋಚಿಸಿ, ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮಯಿಂ
ದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮಿಯಿಂದಲೂ ನಾನು
ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ
ಕ್ಷಣದಲ್ಲಿ ಕೈದಿಯನ್ನಾಗಿಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ
ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
ವಿಶ್ವನಾಥ :-ಸ್ವಾಮಿ ನೀವು ಅಷ್ಟು ಆಗ್ರಹಮಾಡಿದಮೇಲೆ ನಾನೇನು ಮಾಡು
ವದು ? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ
೪೦-----------------------------------------------------
40 ಕಾದಂಬರೀ ಸಂಗ್ರಹ
ವಿಲ್ಲವೆಂದು ಕಾಣುತ್ತೆ. ಇನ್ನು ನೀವು ಹುಡುಕಬಹುದು. ನಾನು ತಮ್ಮ ಸಂಗ
ಡಲೇ ಬರಲೋ, ಇಲ್ಲ ಹೊರಕ್ಕೆ ಹೋಗಲೋ ?
ಮೋಸೆಸ್ಸನು ವಿಶ್ವನಾಥನನ್ನೂ ಸಂಗಡಲೇ ಬರುವಂತೆ ಹೇಳಿ ತನ್ನ ಸಂಗಡ
ಬಂದಿದ್ದ ಪೋಲೀಸ್ ಸೇವಕನನ್ನು ತನ್ನ ರಿವಾಲ್ವರು ಗಳನ್ನು ಕೈಲಿ ಹಿಡಿದು
ಕೊಂಡು ಬಾಗಿಲಲ್ಲಿ ಕಾದಿರಬೇಕೆಂದು ಅಪ್ಪಣೆಯನ್ನು ಮಾಡಿ ತಾನೂ
ತನ್ನ ರಿವಾಲ್ವರುಗಳನ್ನು ಕೈಯಲ್ಲಿಟ್ಟು ಕೊಂಡು ಒಂದೊಂದು ಕೊಠಡಿಗಳ
ನ್ನಾಗಿ ಪರೀಕ್ಷಿಸುತ್ತಾ ಹೊರಟನು. ಅವನು ನೋಡಿದ ಸ್ಥಳದಲ್ಲೆಲ್ಲಾ ಒಬ್ಬ
ಸಭ್ಯರು ವಾಸಮಾಡುವುದಕ್ಕೆ ಬೇಕಾದ ಸಾಮಗ್ರಿಗಳಿದ್ದಿತೇ ವಿನಹಾ ಮತ್ತೇನೂ ಇರ
ಲಿಲ್ಲವು. ಮೋಸೆಸ್ಸನು ತನ್ನನ್ನು ತನ್ನ ಶತ್ರುವು ಸೋಲಿಸಿದನೆಂದು ಯೋಚಿಸುತ್ತಾ
ಬರುತ್ತಿರಲು ಒಂದು ಕೊಠಡಿಯಲ್ಲಿ ನೆಲಕ್ಕೆ ಜಮಖಾನವನ್ನು ಹಾಕಿರುವುದನ್ನು
ನೋಡಿ ಅದನ್ನು ತೆಗೆದು ನೋಡಲು ಒಂದು ಮೊಳೆಯು ಕಾಣಿಸಿತು. ಅದನ್ನು
ಹಿಡಿದು ಹಿಂದಕ್ಕೂ ಮುಂದಕ್ಕೂ, ಕೆಳಕ್ಕೂ ಮೇಲಕ್ಕೂ ಆಡಿಸಿದರೂ ಏನೂ ಪ್ರಯೋ
ಜನ ವಿಲ್ಲದಿರುವುದನ್ನು ನೋಡಿ ಅದರಲ್ಲೇನೂ ಇಲ್ಲವೆಂದು ತಿಳಿದು ಅದನ್ನು ಬಿಟ್ಟು
ಮುಂದಕ್ಕೆ ಹೊರಟನು. ಕೊನೆಗೂ ಅವನಿಗೆ ಸಂಶಯಾಸ್ಪದವಾದ ಪದಾರ್ಥ
ವೊಂದೂ ಸಿಗಲಿಲ್ಲ. ವಿಶ್ವನಾಥನು ನಗುತ್ತಾ ಸ್ವಾಮೀ ! ಮತ್ತೊಂದುಸಲ ಬೇಕಾ
ದರೂ ಹುಡುಕಿರಿ ” ಎಂದನು.
ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಕೋಪವನ್ನು ತೋರ್ಪಡಿಸದೆ, ಮೋಸೆಸ್ಸನು
ವಿಶ್ವನಾಥನನ್ನು ಕುರಿತು “ ಅಯ್ಯಾ, ನೀನು ಈ ದಿವಸ ನನ್ನನ್ನು ಸೋಲಿಸಿರುವಿ. ಆದರೆ
ಒಂದು ಕುರಿಯು ಒಂದುಸಲ ಬಿದ್ದ ಹಳ್ಳಕ್ಕೆ ಮತ್ತೊಂದುಸಲ ಬೀಳುವುದಿಲ್ಲವು.
ನೀನು ನನ್ನನ್ನು ಜಯಿಸಿದೆನೆಂದು ಸಂತೋಷಪಡದಿರು. ಅಲ್ಪಕಾಲದಲ್ಲೇ ನಿನ್ನನ್ನು
ಪೋಲೀಸಿಗೆ ಹಿಡಿದುಕೊಡುವೆನು. ನಿನ್ನ ವಿಷಯವೆಲ್ಲಾ ನನಗೆ ತಿಳದಿದೆ. ” ಎಂದು
ಹೇಳಿ ತನ್ನ ಸೇವಕನನ್ನೂ ಕರೆದುಕೊಂಡು ಹೊರಟನು.
ವಿಶ್ವನಾಥನು ಮೋಸೆಸ್ಸೆನು ಹೊರಟುಹೋದ ಕೂಡಲೇ ಗುಪ್ತಗೃಹವನ್ನು
ಹೊಕ್ಕು ಅಲ್ಲಿದ್ದವರಿಗೆಲ್ಲಾ ಮೋಸೆಸ್ಸನ ವಿಷಯವನ್ನು ತಿಳಿಸಿ ಮದುವೆಯು ಇನ್ನು
ಮರುದಿವಸಗಳಲ್ಲಿ ಅದೇ ಮನೆಯಲ್ಲಿ ನಡೆಯುವುದೆಂದು ಹೇಳಿ ಪುನಃ ಮೇಲಕ್ಕೆ
ಹೊರಟುಹೋದನು. ಭಾಸ್ಕರನು ಅವನು ಹೋಗುವುದನ್ನೇ ನೋಡಿಕೊಂಡಿದ್ದು
ತಾನೂ ಮೇಲಕ್ಕೆ ಬಂದು ಸ್ವಲ್ಪ ಹೊರಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ
ಹೊರಟು ಯಾರಿಗೂ ತಿಳಿಯದ ರೀತಿ ಗೋವಿಂದನ ಮನೆಯನ್ನು ಸೇರಿ ತನ್ನ ಉಡು
ಪನ್ನು ಬದಲಾಯಿಸಿಕೊಂಡು ವೃತ್ತ ಪತ್ರಿಕೆಗಳನ್ನು ನೋಡುತ್ತ ಕುಳಿತನು.
೪೧------------------------------------------------
ಮಧುಸೂದನ ೪೧
ಒಂಭತ್ತನೇ ಅಧ್ಯಾಯ.
(ವಿವಾಹಭಂಗ ಮತ್ತು “ ಎಂ ” ಸಂಘದ ಮುಕ್ತಾಯ.)
ಮಾರನೇ ದಿವಸ ಪೊಲೀಸ್ ಕಮಿಷನ್‌ರು ತಮ್ಮ ಆಫೀಸಿನಲ್ಲಿ ಕುಳಿತಿರುವಾಗ
ಒಬ್ಬ ಸೇವಕನು ಬಂದು ಚೀಟಿಯೊಂದನ್ನು ಕೊಟ್ಟನು. ಅದರಲ್ಲಿ " ಪತ್ತೇದಾರಿ
ಇಲಾಖೆಗೆ ಸೇರಿದ ಭಾಸ್ಕರ” ಎಂದಿದ್ದಿತು. ಕೂಡಲೇ ಕಳೆಗುಂದಿದ್ದ ಕಮಾಷನ್‌ರ
ಮುಖವು ಕಾಂತಿಯನ್ನು ಹೊಂದಿತು. ' ತಕ್ಷಣವೇ ಅವರನ್ನು ಕರೆದುಕೊಂಡು ಬಾ'
ಎಂದು ಕಟ್ಟಳೇಮಾಡಿ ಕಳುಹಿಸಿದನು. ಭಾಸ್ಕರನು ಅವನಿಗೆ ಹೊಸಬನಲ್ಲವು. ಭಾಸ್ಕ
ರನೂ ಅವನೂ ಸ್ನೇಹಿತರಾಗಿದ್ದರು. ಹಿಂದಲ ದಿವಸಗಳಲ್ಲಿ ನಡೆದ ವಿಷಯಗಳ ವಿಷ
ಯವಾಗಿ ಯೋಚಿಸುತ್ತಾ ಭಾಸ್ಕರನಿಗೆ ಈ ವಿಷಯಗಳನ್ನೆಲ್ಲಾ ತಿಳಿಯಪಡಿಸಬೇಕೆಂ
ದಿದ್ದನು, ಅಷ್ಟರಲ್ಲೇ ಭಾಸ್ಕರನೇ ತನ್ನನ್ನು ನೋಡಲು ಬರಲು ಅತ್ಯಂತ ಸಂತೋಷ
ದಿಂದ ಅವನನ್ನು ಬರುವಹಾಗೆ ಹೇಳಿಕಳುಹಿಸಿದನು.
ಸ್ವಲ್ಪ ಹೊತ್ತಿಗೆ ಭಾಸ್ಕರನು ಪೊಲೀಸ್ ಕಮಿರ್ಷರ ಕೊಠಡಿಗೆ ಬಂದು ಅವ
ನನ್ನು ಕಾಣಿಸಿಕೊಂಡನು. ಆತನು ಇವನ ಕೈಹಿಡಿದು ಆಡಿಸಿ : ಭಾಸ್ಕರಾ ! ನೀನು ಈ
ಸಮಯದಲ್ಲಿ ಬಂದದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನೀನು ನಿನ್ನೇ
ಮೊನ್ನೆ ನಡೆದ ಡಕಾಯಿತಿಗಳನ್ನೂ ಮತ್ತು ಕೊಲೆಗಳನ್ನೂ ಕೇಳಿರುವಿಯೆಂದು ನಂಬು
ತೇನೆ. ನೀನು ಈ ವಿಷಯಗಳಲ್ಲಿ ಪ್ರವೇಶಮಾಡಿ ಈ ಕೊಲೆಪಾತಕರನ್ನು ಪತ್ತೆಮಾ
ಡುವಿಯೆಂದು ನಂಬಿರುತ್ತೇನೆ. ನೀನು ಪತ್ತೆಮಾಡಿಕೊಟ್ಟರೆ ನಿನಗೆ ಬಹುಮಾನವೂ
ಮತ್ತು ಯಶಸ್ಫೂ ಬರುವುವು ಮತ್ತು ನನಗೂ ಬಹಳ ಸಹಾಯಮಾಡಿದಂತಾಗು
ವುದು.' ಎಂದು ಹೇಳಿದನು.
ಭಾಸ್ಕರ :-ಸ್ವಾಮಿಾ ! ನಾನು ಆಗಲೇ ಎಲ್ಲವನ್ನೂ ಪತ್ತೆಮಾಡಿರುತ್ತೇನೆ
ಈ ಎರಡು ದಿವಸಗಳಲ್ಲಿ ನಡೆದ ವಿಷಯಗಳಲ್ಲದೆ ಕೆಲವು ದಿವಸಗಳ ಹಿಂದೆ ವಾಸವ
ಪುರದ ಜಮಾನ್ದಾರರ ಮಗನು ಕಾಣದೇಹೋದ ವಿಷಯವನ್ನೂ ಸಹಾ ಪತ್ತೆಮಾಡಿ
ರುತ್ತೇನೆ.
ಕಮಿಷನರು :-ಏನು ? ಆಗಲೇ ಎಲ್ಲವನ್ನೂ ಪತ್ತೆಮಾಡಿರುವೆಯಾ ?
ನೀನೀಗ ನಿಜವಾದ ಪತ್ತೇದಾರನು. ಈ ವಿಷಯಗಳೆಲ್ಲಾ ಪತ್ತೆಯಾಗಲು ಇನ್ನೂ
ಅನೇಕ ತಿಂಗಳುಗಳಾಗುವವೆಂದು ನಾನು ಯೋಚಿಸಿದ್ದೆನು. ಆದರೆ ನೀನು ಆಗಲೇ
೪೨------------------------------------------------
೪೨ ಕಾದಂಬರಿ ಸಂಗ್ರಹ
ಎಲ್ಲವನ್ನೂ ಪತ್ತೆಮಾಡಿರುವ ವಿಷಯವನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ.
ಕಳ್ಳರನ್ನು ಯಾವಾಗ ಹಿಡಿಯೋಣ ?
ಭಾಸ್ಕರ :-ನಾನು ವಾಸವಪುರದ ಜಮೀನ್ದಾರನ ಪರವಾಗಿ ಇಲ್ಲಿಗೆ ಬಂದು ಅವನ
ಮಗನ ವಿಷಯವಾಗಿ ಪತ್ತೆಮಾಡುತ್ತಿರಲು ಇತರ ವಿಷಯಗಳೂ ನನ್ನ ಮಾರ್ಗ
ದಲ್ಲಿ ತಾವಾಗಿಯೇ ಬಂದವು.
ಭಾಸ್ಕರನೂ ಪೊಲೀಸ್ ಕಮಿಷನರೂ ಬಹಳಹೊತ್ತು ಮಾತನಾಡುತ್ತಿದ್ದು
ಎಲ್ಲಾ ವಿಷಯಗಳನ್ನೂ ಕ್ರಮವಾಗಿ ತೀರ್ಮಾನಮಾಡಿಕೊಂಡ ಮೇಲೆ ಭಾಸ್ಕರನು
ಅಪ್ಪಣೆಯನ್ನು ಪಡೆದು ಗೋವಿಂದನ ಮನೆಗೆ ಹೋದನು. ಅದೇ ದಿವಸ ಮಧ್ಯಾಹ್ನ
ಹರಿಚಂದ್ರನು ಭಾಸ್ಕರನ ನಯಭಯಗಳಿಗೊಳಪಟ್ಟು ತಮ್ಮ ಸಂಘಕ್ಕೆ ಸಂಬಂಧವಾದ
ಎಲ್ಲಾ ವಿಷಯಗಳನ್ನೂ ಅಂದರೆ (1) ಮಧುಸೂದನನನ್ನು ವಿಶ್ವನಾಥನು ಎತ್ತಿಕೊಂಡು
ಹೋದ ವಿಷಯವನ್ನೂ, (೨)ವಿವಾಹದ ದಿವಸ ತಾನು ಜನಗಳ ಮಧ್ಯದಲ್ಲಿ ನುಗ್ಗಿ ತಮ್ಮ
ಯಜಮಾನನಾದ ವಿಶ್ವನಾಥನು ಬಂದು ಮಧುಸೂದನನ ಕೊಠಡಿಯಲ್ಲಿ ಕಾದಿರುವ
ಹಾಗೂ ತಕ್ಷಣವೇ ಬಾರದಿದ್ದರೆ ಮಧುಸೂದನನು ತನಗೆ ಕೊಡಬೇಕಾದ ಇಪ್ಪತ್ತು
ಸಾವಿರ ರೂಪಾಯಿಗಳ ವಿಷಯವನ್ನೂ ಮತ್ತು ಅವನು ತನ್ನ ಮಗಳನ್ನು ಮದುವೆ
ಯಾಗುವೆನೆಂದು ಮಾತು ಕೊಟ್ಟಿದ್ದ ವಿಷಯವನ್ನೂ ತಿಳಿಸುವುದಾಗಿ ಹೇಳಿರುವನೆಂಬ
ವಿಷಯಗಳನ್ನೆಲ್ಲಾ ಅವನೊಡನೆ ಹೇಳಿದನು. ಭಾಸ್ಕರನು ಅವನನ್ನು ಸರ್ಕಾರದ
ವರ ಪಕ್ಷದ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿ ಅವನನ್ನು ಪುನಃ ಕೊಠಡಿ
ಯಲ್ಲಿ ಕೂಡಿಟ್ಟನು.
ಅದೇ ದಿವಸ ಮಧ್ಯಾಹ್ನ ' ಎಂ' ಸಂಘದವರ ಗುಪ್ತಗೃಹದಲ್ಲಿ ಮಾರನೇದಿವ
ಸದ ವಿವಾಹಕ್ಕಾಗಿ ಎಲ್ಲವನ್ನೂ ಸಿದ್ಧ ಪಡಿಸಿಟ್ಟುಕೊಳ್ಳುತ್ತಿದ್ದರು. ಒಂದು ಕಡೆಯಲ್ಲಿ
ಮಧುಸೂದನನೂ ವಿಶ್ವನಾಥನ ಕುಳಿತುಕೊಂಡು ಮಾತನಾಡುತ್ತಿದ್ದರು. ಅವರ
ಮುಂದುಗಡೆ ಮೇಜಿನಮೇಲೆ ಮೂರು ಶೀಸೆಗಳ ವಿಸ್ಕಿಯೂ, ಒಂದು ತಟ್ಟೆಯಲ್ಲಿ
ಕೆಲವು ಫಲಹಾರ ಸಾಮಗ್ರಿಗಳೂ ಮತ್ತೊಂದುಕಡೆ ಕೆಲವು ಹೊಗೆಯಬತ್ತಿಗಳೂ
ಇದ್ದವು. ವಿಶ್ವನಾಥನು ಬಟ್ಟಲುಗಳಲ್ಲಿ ಮದ್ಯವನ್ನು ತುಂಬಿತುಂಬಿ ಮದುಸೂದನನಿಗೆ
ಕುಡಿಸುತ್ತಿದ್ದನು. ಅಯ್ಯೋ ! ಅತ್ಯಂತ ಆಚಾರಸಂಪನ್ನನಾದವನ ಪುತ್ರನಾಗಿ ಹುಟ್ಟಿ
ತಾನೂ ಆಚಾರಸಂನ್ನನಾಗಿದ್ದು ಈಗ ಸಹವಾಸದೋಷದಿಂದ ಒಂದೇಸಲಕ್ಕೆ ತನ್ನ
ಆಚಾರವನ್ನೂ, ಶೀಲವನ್ನೂ, ಜಾತಿಯನ್ನೂ ಮರೆತು ಮದ್ಯಪಾನ ಮಾಡುತ್ತಿರು
೪೩-------------------------------------------------
ಮಧುಸೂದನ ೪3
ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರವಿಷಯದಲ್ಲಿ ಎಚ್ಚ
ರವಾಗಿರಲಿ ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲ ಎಂದು ಹೇಳಿಕೊಂಡು
ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ
ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನ ಪಡಲಿ !!
ವಿಶ್ವನಾಥ:-ಮಧುಸೂದನಾ ! ನಾಳೆದಿವಸ ನೀನು ನನ್ನ ಅಳಿಯನಾಗುವಿ.
ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊ
ಡೆದು ಬೇರೆಸ್ಥಳಕ್ಕೆ ಹೋಗುವೆನು.
ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು ! ನಾನು
ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವನು. ನನ್ನ ಸಂಗಡಲೇ ನಿಮ್ಮ ಪುತ್ರಿ
ಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು
ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು. (ಸ್ವಲ್ಪ ಶಾಂತ
ನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ ? ನನ್ನ ತಂದೆ ಯೇನು ಹೇಳು
ವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು.
ವಿಶ್ವನಾಥನು ಅವನಿಗೆ ಮತ್ತಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು
ಒಪ್ಪದೇ ಏನುಮಾಡುವನು ? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ
ನಿಮ್ಮ ತಂದೆ ಯೇನುಮಾಡುವನು ? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು.
ನಾನು ಹೇಳಿದ ವಿಷಯಗಳು •ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ
ಒಂದು ಲಕ್ಷ ರೂಪಾಯನ್ನು ಕಳುಹು ಮರೆತುಬಿಡಬೇಡ'' ಎಂದು ಹೇಳಿ ಹೊರಟು
ಹೋದನು.
ಈದಿವಸ ಕಾಳಿಬೀದಿಯಲ್ಲಿರುವ "ಎಂ” ಸಂಘದವರ ಮನೆಯಲ್ಲಿ ಅತ್ಯಂತ
ಕೋಲಾಹಲ. ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ
ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ
ಕಡೆಗೂ ಕಳುಹಿಸುತ್ತಿದ್ಧವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ
ಸುಂದರಿಯೆಂಬ ಋತುಮತಿಯಾದ ಕನೈಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾ
ಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ
ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದುಮ.ದಿ ವೈದಿಕಬ್ರಾಹ್ಮಣರುಗಳು
ವಿಭೂತಿ ರುದ್ರಾಕ್ಷಿ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ
೪೪-----------------------------------------
44 ಕಾದಂಬರೀ ಸಂಗ್ರಹ
ನಿಂತಿದ್ದ ಇಬ್ಬರು ಬ್ರಾಹ್ಮಣ ತರುಣರಿಗೆ ಏನನ್ನೋ ತೋರಿಸುತ್ತಾ ಒಳಕ್ಕೆ ಹೋಗು
ತಿದ್ದರು. ಈ ಬ್ರಾಹ್ಮಣರುಗಳನ್ನು ಯಾರಾದರೂ ಶೋಧನೆಮಾಡಿದ್ದರೆ ಪ್ರತಿಯೊ
ಬ್ಬನ ಮಡಿಲಿಯಲ್ಲಿಯೂ ಒಂದೊಂದು ರಿವಾಲ್ವರುಗಳನ್ನು ನೋಡಬಹುದಾಗಿತ್ತು.
ಈ ವಿವಾಹಮಂಟಪದಲ್ಲಿ ಮತ್ತೊಂದು ವಿಶೇಷವೇನೆಂದರೆ, ಆ ಸ್ಥಳದಲ್ಲಿ ಒಬ್ಬ
ಸ್ತ್ರೀಯಾದರೂ ಇರಲಿಲ್ಲ. ಸುಂದರಿ ಯೆಂಬ ಋತುಮತಿಯಾದ ಕನೈಯು ಸರ್ವಾಭ
ರಣಗಳಿಂದಲಂಕೃತಳಾಗಿದ್ದಳು. ಅವಳು ಅತ್ಯಂತ ಸುಂದರಿಯಾಗಿದ್ದರಿಂದ ಬಂದವರೆ
ಲ್ಲರೂ ಅವಳನ್ನೇ ಅವಾಕ್ಕಾಗಿ ನೋಡುತ್ತಿದ್ದರು. ಇಂಥಾ ನಾರೀರತ್ನವು ನೀಚನಾದ
ವಿಶ್ವನಾಥನಿಗೆ ಮಗಳಾಗಿ ಹುಟ್ಟಿದ್ದು ಆಶ್ಚರೈವಾಗಿರುವದು. ಆಕೆಗೆ ತನ್ನ ತಂದೆಯ
ದುರ್ವ್ಯಾಪಾರದ ವಿಷಯವು ಸ್ವಲ್ಪವಾದರೂ ತಿಳಿಯದು. ಆಕೆಗೆ ತಾನು ಋತುಮತಿಯಾ
ದಮೇಲೆ ವಿವಾಹವಾಗುವ ವಿಷಯದಲ್ಲಿ ಸ್ವಲ್ಪವಾದರೂ ಮನವಿಲ್ಲವು. ವಿಶ್ವನಾಥನು
ಅವಳನ್ನು ಸೋಮೇಂದ್ರನೆಂಬ ಅತುಲೈಶ್ವರ ಸಂಪನ್ನನಿಗೆ ವಿವಾಹ ಮಾಡಿಕೊಡುವು
ದಾಗಿಯೂ, ಮದುವೆಯಾದಮೇಲೆ ಆ ಸೋಮೇಂದ್ರನ ನಿಜವಾದ ಹೆಸರು ತಿಳಿಯುವು
ದೆಂದೂ ಅವನು ಈಗ ಯಾವುದೋ ಒಂದು ಕಾರಣದಿಂದ ಛದ್ಮವೇಷದಲ್ಲಿರುತಾ
ನೆಂದೂ ಹೇಳಿ, ಅವಳನ್ನು ಈ ವಿವಾಹವನ್ನು ಮಾಡಿ ಕೊಳ್ಳುವ ಹಾಗೆ ಒಪ್ಪಿಸಿದನು.
ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲೆಯು ತನ್ನ ತಂದೆ
ಯನ್ನು ತನ್ನ ಸರ್ವಸ್ವವೆಂದು ನಂಬಿ ಅವನ ಮಾತಿಗೆ ವ್ಯತಿರಿಕ್ತವಾಗಿ ನಡೆಯದೆ ಅವನ
ಮಾತಿಗೊಪ್ಪಿದಳು. ಇಂಥಾ ನವಕೋಮಲಾಂಗಿಯ, ಕೊನೆಗೆ ಧೂರ್ತನಾದ
ತಂದೆಯ ದೆಸೆಯಿಂದಲೇ ಪ್ರಾಣಬಿಡುವ ಕಾಲವು ಬಂದಿತು.
ವಿವಾಹ ಮುಹೂರ್ತವು ಹತ್ತು ಗಂಟೆಗೆ ಸರಿಯಾಗಿಡಲ್ಪಟ್ಟಿತ್ತು. ' ನನಗೆ
ಹೆಂಡತಿ ಯಿಲ್ಲವಾದ್ದರಿಂದ ಪತ್ನಿ ಯಿಲ್ಲದೇನೇ ಮದುವೆ ಮಾಡಿಕೊಡುತ್ತೇನೆಂದು ವಿಶ್ವ
ನಾಥನು ಹೇಳಿದನು.' ಇಬ್ಬರು ವೈದಿಕ ಬ್ರಾಹ್ಮಣರು ದುಡ್ಡಿನಾಶೆಗಾಗಿ ವಿಶ್ವನಾಥನು
ಹೇಳಿದ ಹಾಗೇ ವಿವಾಹ ಮಾಡಿಸುವುದಾಗಿ ಹೇಳಿ ಬಂದಿದ್ದರು. ಸೋಮೇಂದ್ರನೆಂದು
ಕರೆಯಲ್ಪಟ್ಟ ಮದವಣಿಗನು ಅಲಂಕರಿಸಲ್ಪಟ್ಟು ಕರತರಲ್ಪಟ್ಟನು. ಅವನಿಗೆ ಸುಮಾರು
ಮೂವತ್ತು ವರ್ಷ ವಯಸ್ಸಾಗಿರಬಹುದೆಂದು ಕಾಣಬಂದಿತು. ಮುಖದಲ್ಲಿ ಮಿಶೆ
ಯೂ ದಾಡಿಯೂ ಇದ್ದವು. ಅವನು ಸುಂದರಿಯನ್ನು ನೋಡಿ ನಗುತ್ತಾ ಬಂದನು.
ಮನೆಗೆ ಸೇರಿದ ಆವರಣದಲ್ಲೇ ಕಾಶೀಯಾತ್ರೆಯು ನಡೆಸಲ್ಪಟ್ಟಿತು. ವಧೂವರರು
ಮಣೆಯಮೇಲೆ ಕುಳಿತುಕೊಂಡು ಹೋಮಾದಿಗಳನ್ನು ಮಾಡಿದರು. ಇನ್ನೇನು ಧಾರೆ
೪೫---------------------------------
45 ಮಧುಸೂದನ
ಯೆರೆಯುವದೂ ಮಾಂಗಲ್ಯ ಸೂತ್ರಧಾರಣೆಯ ಉಳಿದಿದ್ದವು. ಪುರೋಹಿತರುಗಳು
ವೇದಮಂತ್ರವನ್ನು ಘಟ್ಟಿಯಾಗಿ ಹೇಳುತ್ತಿದ್ದರು. ಮಧುಸೂದನನ ಕೈಗೆ ಮಾಂಗಲ್ಯ
ಸೂತ್ರವು ಕೊಡಲ್ಪಟ್ಟಿತು. ಅವನು ಅದನ್ನು ಸುಂದರಿಯ ಕತ್ತಿಗೆ ಕಟ್ಟುವುದಕ್ಕೆ
ಹೋದನು.
ಇದೇನು ಕೂಗಾಟ ? ತೆರದಿದ್ದ ಬಾಗಲಿನ ಮೂಲಕ ಏಕಕಾಲದಲ್ಲಿ ಆಯುಧ
ಪಾಣಿಗಳಾದ ಐವತ್ತು ಜನ ಪೋಲೀಸಿನವರೂ ಅವರ ಮುಂದುಗಡೆ ಭಾಸ್ಕರನೂ
ಮತ್ತು ಪೊಲೀಸ್ ಕಮಿಷನರೂ ಎರಡೆರಡ: ರಿವಾಲ್ವರುಗಳನ್ನು ಹಿಡಿದುಕೊಂಡು
ನುಗ್ಗಿ ಬಂದರು ! ಭಾಸ್ಕರನು, ಮಧುಸೂದನ ! ನಿಧಾನಿಸು. ಮಾಂಗಲ್ಯವನ್ನು ಕಟ್ಟಬೇಡ
ಎಂದು ಕೂಗಿದನು. ಅಲ್ಲಿ ನೆರೆದಿದ್ದವರೆಲ್ಲಾ ಎದ್ದುನಿಂತು ವಿಶ್ವನಾಥನ ಮುಖವನ್ನು
ನೋಡಿದರು, ಇಂಥಾ ಸಮಯದಲ್ಲಿಯೂ ಕೂಡಾ ಅವನು ನಗುತ್ತಾ ನೀವು ನನ್ನ
ಮನೆಯೊಳಕ್ಕೆ ನುಗ್ಗಲು ಕಾರಣವೇನು ? ಎಂದು ಕೇಳಿದನು. ಭಾಸ್ಕರನು ಇದೇ
ಇದೇ ಕಾರಣ ಎಂದು ಹೇಳಿ ಸೋಮೇಂದ್ರನ ಬಳಿಗೆ ನುಗ್ಗಿ ಅವನ ದಾಡಿಯನ್ನೂ
ಮೀಶೆಯನ್ನೂ ಹಿಡಿದೆಳೆಯಲು ಅವೆರಡೂ ಬಂದುಬಿಟ್ಟವು. ಕೂಡಲೇ ಭಾಸ್ಕರನು
ವಿಶ್ವನಾಥ ! ನಿನ್ನನ್ನು , ಮಧುಸೂದನನನ್ನು ಕದ್ದದ್ದಕ್ಕೂ ಸುರತಸರದ ಜಹಗೀರ್‌ದಾ
ರನ ಮನೆಯಲ್ಲಿ ಡಕಾಯತಿ ಮತ್ತು ಕೊಲೆಯ ನಡಿಸಿದ್ದಕ್ಕಾಗಿಯೂ, ಮೋಸೆಸ್ಸನನ್ನು
ಕೊಂದದ್ದಕ್ಕಾಗಿಯೂ ಸೆರೆಹಿಡಿಯುವೆನು ಎಂದು ಹೇಳಿದ ಕೂಡಲೆ ಸುಂದರಿಯು,
' ಅಯ್ಯೋ' ಎಂದು ಕೂಗಿ ಕೆಳಕ್ಕೆ ಬಿದ್ದಳು. ಕೂಡಲೇ ವಿಶ್ವನಾಥನು ತನ್ನ ರಿವಾಲ್ವ
ರುಗಳನ್ನು ಎಳೆದುಕೊಂಡು ” ನಾವು ನಿಮ್ಮ ಕೈಗೆ ಸುಲಭವಾಗಿ ಶಿಗತಕ್ಕವರಲ್ಲವೆಂದು
ಘರ್ಜಿಸಿ ಭಾಸ್ಕರನ ಮೇಲೆ ಹೊಡೆದನು, ಕೂಡಲೇ ಎಂ' ಸಂಘದ ಮೆಂಬರುಗಳೆಲ್ಲರೂ
ತಮ್ಮ ತಮ್ಮ ರಿವಾಲ್ವರುಗಳನ್ನು ಎಳೆದು ಗುಂಡುಗಳನ್ನು ಹೊಡೆಯಲು ಪ್ರಾರಂಭಿಸಿ
ದರು. ಪೋಲೀಸಿನವರಲ್ಲಿಯೂ ಅನೇಕರು ಗತಾಸುಗಳಾಗಿ ಉರುಳಿದರು. ಆದರೆ
" ಎಂ" ಸಂಘದ ಮೆಂಬರುಗಳಲ್ಲಿ ಆಗಲೇ ಹದಿನೆಂಟು ಜನಗಳು, ಕೆಲವರು ಪ್ರಾಣ
ಬಿಟ್ಟೂ ಮತ್ತೆ ಕೆಲವರು ಪ್ರಾಣಾಪಾಯವಾದ ಘಾಯಗಳನ್ನು ಹೊಂದಿಯ ನೆಲದ
ಮೇಲೆ ಉರುಳಿದ್ದರು. ಉಳಿದ ಏಳು ಜನಗಳನ್ನು ಸೆರೆಹಿಡಿದುಕೊಂಡರು. ಇಷ್ಟು
ಹೊತ್ತಿನವರಿಗೂ ಘೋರವಾಗಿ ಜಗಳವಾಡುತ್ತಿದ್ದ ವಿಶ್ವನಾಥನು ಇನ್ನು ಪ್ರಯೋಜನ
ವಿಲ್ಲ ಎಂದು ಯೋಚಿಸಿ ಭಾಸ್ಕರನಮೇಲೂ ಬಂದೂಕ ಹೊಡೆಯಲು ಅದು ತಪ್ಪಿಹೋಗಿ
ಇಬ್ಬರ, ಪೋಲೀಸಿನವರನ್ನು ಘಾಯ ಪಡಿಸಿದವು. ಇನ್ನು ಎರಡೇ ಗೋಲಿಗಳು ಉಳಿದಿ
ರುವುದನ್ನು ನೋಡಿ ಅಯ್ಯೋ ! ಪುತ್ರಿ, ನನ್ನನ್ನು ಕ್ಷಮಿಸು. ನಿನ್ನ ನ್ನೊಬ್ಬಳನ್ನೇ ಬಿಟ್ಟು
೪೬----------------------------------
೪೬ ಕಾದಂಬರಿ ಸಂಗ್ರಹ
ಹೋಗಲಾರೆನೆಂದು ಕೂಗಿ ಆ ನೀಚನು ಮೇಲಕ್ಕೇಳುತ್ತಿದ್ದ ಸುಂದರಿಯ ಹೃದಯ
ಕೊಂದು ಗೋಲಿಯನ್ನು ಕಳುಹಿಸಿ ತಾನೂ ಉಳಿದಿದ್ದ ಗೋಲಿಯಿಂದ ಭಾಸ್ಕರನು
ತಡೆಯುವುದರೊಳಗಾಗಿ, ತಲೆ ಹೊಡೆದುಕೊಂಡು ಕೆಳಕ್ಕುರುಳಿದನು. ಭಾಸ್ಕ
ರನು ಸುಂದರಿಯ ಸಮಾಸಕ್ಕೆ ಬಂದು ನೋಡುವಲ್ಲಿ ಪ್ರಾಣವು ಅವಳ ದೇಹವನ್ನು
ಬಿಟ್ಟು ನೀಗಿತ್ತು. !!
ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಮೊದಲೇ ಒಂದು ಕೊಠಡಿಗೆ ಕರೆದು
ಕೊಂಡುಹೋಗಿಟ್ಟು ಕೊಂಡಿದ್ದರು. ಪೋಲಿಸಿನವರ ಕಡೆಯ ಹತ್ತು ಜನಗಳು ಸತ್ತುಹೋ
ಗಿದ್ದರು. ಮತ್ತಾರು ಜನಗಳಿಗೆ ಬಹಳ ಘಾಯವಾಗಿದ್ದಿತು. ' ಎಂ' ಕೂಟದವರಲ್ಲಿ
ಕೈಶರೇ ಸಿಕ್ಕಿದ ಏಳು ಜನಗಳನ್ನೂ ತನ್ನ ಪೋಲೀಸ್ ಸೇವಕರನ್ನೂ ಕರೆದುಕೊಂಡು
ಮನೆಯಲ್ಲಿ ಬಿದ್ದಿದ್ದ ಹೆಣಗಳನ್ನೆಲ್ಲಾ ಸಾಗಿಸುವಂತೆ ಅಪ್ಪಣೆ ಮಾಡಿ ಮನೆಯ ಬಳಿ
ಹತ್ತು ಜನರನ್ನು ಕಾವಲಿಟ್ಟು, ಕಮೀಷನರು ಹೊರಟುಹೋದರು. ಭಾಸ್ಕರನು ಮಧು
ಸೂದನನನ್ನೂ ಬ್ರಾಹ್ಮಣುಬ್ಬರನ್ನೂ ಕರೆದುಕೊಂಡು ಬೀದಿಗೆ ಬಂದು ಅಲ್ಲಿ ಬ್ರಾಹ್ಮಣ
ರನ್ನು ಕಳುಹಿಸಿಬಿಟ್ಟು ಗೋವಿಂದನ ಮನೆಗೆ ಬಂದು ಅಲ್ಲಿ ಮಧುಸೂದನನನ್ನು ಬಿಟ್ಟು
ತಾನು ಕಮಿಷನರ ಆಫೀಸಿಗೆ ಬಂದನು.
ಇತ್ತ ಕಲ್ಕತ್ತಾ ನಗರದಲ್ಲೆಲ್ಲಾ ಈ ಸಂಗತಿಗಳು ಹರಡಿದವು. ಕೂಡಲೇ
ಅನೇಕ ಸಂಘದವರು ಕಲ್ಕತ್ತಾವನ್ನು ಬಿಟ್ಟೋಡಿದರು. ಎಲ್ಲರೂ ಇವುಗಳನ್ನೆಲ್ಲಾ
ಪತ್ತೇಮಾಡಿದ ಭಾಸ್ಕರನನ್ನು ಹೊಗಳಲಾರಂಭಿಸಿದರು. ಅನೇಕರು : ಎಂ' ಸಂಘದ
ಮುಕ್ತಾಯವನ್ನು ಕೇಳಿ " ಸತ್ಪುರುಷರಂತೆ ಕಾಣಬಂದ ಆ ನೀಚರುಗಳ ಹಾಗೆ
ಇನ್ನೆಷ್ಟು ಜನಗಳಿದ್ದಾರೋ ” ಎಂದು ಮಾತನಾಡಿದರು. ಅನೇಕರು ಸುಂದರಿಗಾದ
ಗತಿಯನ್ನು ಕೇಳಿ ಮರುಗಿದರು.
ಹತ್ತನೇ ಅಧ್ಯಾಯ.
ಭಾಸ್ಕರನ ಹೇಳಿಕೆ-ಮುಕ್ತಾಯ.
ವಾಸವವುರದಿಂದ ಸೋಮಸುಂದರನೂ ತ್ರಿಯಂಬಕ ಶಾಸ್ತ್ರೀಯೂ ಕಲ್ಕತ್ತೆಗೆ
ಬಂದು ಭಾಸ್ಕರನನ್ನೂ ಮಧುಸೂದನನನ್ನೂ ಕಾಣಿಸಿಕೊಂಡರು. ಮಧುಸೂದನನು
ತನ್ನ ಸ್ನೇಹಿತರಿಂದ ತಾನು ಕೆಟ್ಟು ಹೋದ ವಿಷಯಗಳನ್ನೆಲ್ಲಾ ತನ್ನ ತಂದೆಗೆ ತಿಳಿಸಿ
೪೭-------------------------------------
ಮಧುಸೂದನ 47
ಅವನ ಕ್ಷಮಾಪಣೆಯನ್ನು ಕೇಳಿದನು, ಕರುಣಾಶಾಲಿಯಾದ ಸೋಮಸುಂದರನು
ತನ್ನ ಮಗನನ್ನು ಕ್ಷಮಿಸಿ ಅವನಿಗೆ ಪ್ರಾಯಶ್ಚಿತ್ತ ಮಾಡಿಸಿ ಅನೇಕ ಬ್ರಾಹ್ಮಣರಿಗೆ
ದಾನಾದಿಗಳನ್ನು ಕೊಟ್ಟನು. ಭಾಸ್ಕರನನ್ನು ಆಗ ಅವನು ಯಾವ ರೀತಿಯಲ್ಲಿ
ಮಾತನಾಡಿಸಿದನೆಂಬುದನ್ನು ಹೇಳಬೇಕಾಗಿಲ್ಲ.
ಸೆರೆ ಸಿಕ್ಕಿದ ಏಳುಮಂದಿಯನ್ನೂ ವಿಚಾರಣೆ ಮಾಡುವುದಕ್ಕಾಗಿ ಬೇರೆ ಒಂದು
ನ್ಯಾಯಸ್ಥಾನವು ಏರ್ಪಾಡಾಯಿತು. ವಿಚಾರಣೆಯ ದಿವಸ ನ್ಯಾಯಸ್ಥಾನವೆಲ್ಲಾ
ಜನಗಳಿಂದ ಕಿಕ್ಕಿರಿದು ಹೋಗಿತ್ತು. ಒಂದು ಬೆಂಚಿನ ಮೇಲೆ ಮಧುಸೂದನ, ಸೋಮ
ಸುಂದರ, ತ್ರಿಯಂಬಕಶಾಸ್ತ್ರಿ ಗೋವಿಂದ ಮೊದಲಾದವರು ಕುಳಿತಿದ್ದರು. ಅಪರಾಧಿ
ಗಳ ಪಕ್ಷ ಯಾವ ಲಾಯರೂ ಬಂದಿರಲಿಲ್ಲ. ಸರ್ಕಾರದ ಕಡೆ ಸಾಕ್ಷಿ ಹೇಳುವು
ದಕ್ಕಾಗಿ ಬಂದಿದ್ದ ಹರಿಚಂದ್ರನು ಅಪರಾಧಿಗಳ ಪಕ್ಕದಲ್ಲಿ ನಿಂತಿದ್ದನು. ಭಾಸ್ಕರನೂ
ಇತರ ಪೋಲೀಸ್ ಅಧಿಕಾರಿಗಳ ಕುರ್ಚಿಗಳ ಮೇಲೆ ಕುಳಿತಿದ್ದರು. ಜನಗಳೆಲ್ಲರೂ
ಭಾಸ್ಕರನನ್ನೇ ನೋಡುತ್ತಿದ್ದರು. ನ್ಯಾಯಾಧಿಪತಿಯು ಬಂದು ತನ್ನಾಸನದಲ್ಲಿ
ಕುಳಿತು ಮಧುಸೂದನ, ಹರಿಚಂದ್ರ ಅವರ ಹೇಳಿಕೆಗಳನ್ನು ತೆಗೆದುಕೊಂಡನು. ಮಧು
ಸೂದನನ ಹೇಳಿಕೆಯಿಂದ ಅವನು ತಾನು ಮಾಡಿದ್ದ ಸಾಲದ ಭಯಕ್ಕಾಗಿ ವಿಶ್ವನಾಥನ
ಮಗಳನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಹಾಗೂ, ತನ್ನ ತಂದೆಯ
ಬಳಿ ಅದನ್ನು ಹೇಳುವುದಕ್ಕೆ ಹೆದರಿ, ಅವನ ಮಾತಿನಂತೆ ಸರಳಬಾಲೆಯನ್ನು ವಿವಾಹ
ಮಾಡಿಕೊಳ್ಳುವುದಕ್ಕೆ ಪ್ಪಿದ ವಿಷಯವು ವಿಶ್ವನಾಥನಿಗೆ ತಿಳಿದು ಮದುವೆಯ ದಿನ
ಸವೇ ಬಂದು ಎಲ್ಲಾ ಸಂಗತಿಗಳನ್ನೂ ಬಹಿರಂಗಪಡಿಸುವುದಾಗಿ ಹೇಳಿ ಕಳುಹಲು,
ತಾನು ಹೋಗಿ ತನ್ನ ಕೊಠಡಿಯಲ್ಲಿ ಆರು ಜನಗಳೊಡನೆ ಬಂದಿದ್ದ ವಿಶ್ವನಾಥನನ್ನು
ಕಂಡಹಾಗೂ ಅವನು ಕೂಡಲೇ ತನ್ನನ್ನು ಹಿಡಿದು ಕೈಕಾಲುಕಟ್ಟಿ ಅವರಿಗೆ ತಾನೇ
ಹೇಳಿದ್ದ ಸುರಂಗ ಮಾರ್ಗವಾಗಿ ಸಾಗಿಸಿಕೊಂಡು ಹೋಗಿ ಕಲ್ಕತ್ತೆಗೆ ಕರೆದುತಂದು
ಅಲ್ಲಿ ಗುಪ್ತಗೃಹದಲ್ಲಿ ಶೆರೇ ಇಟ್ಟಹಾಗೂ ಬಲವಂತದಿಂದಲೂ, ಹೆದರಿಕೆಯಿಂದಲೂ
ಅವರ ಮಾತಿಗೊಪ್ಪಿ ವಿಶ್ವನಾಥನ ಕನ್ಯೆಯನ್ನು ವಿವಾಹಮಾಡಿಕೊಳ್ಳುವುದರಲ್ಲಿದ್ದೆ
ನೆಂದೂ, ಮಧುಸೂದನನು ತಿಳಿಸಿದನು.
ಹರಿಚಂದ್ರನು ಅಲ್ಲಿದ್ದ ಏಳು ಅಪರಾಧಿಗಳನ್ನೂ ತೋರಿಸಿ ಅವರೆಲ್ಲರೊಡನೆ
ತಾನೂ ಚರ್ಮದ ವ್ಯಾಪಾರಿಯನ್ನು ಸುಲಿಗೇ ಮಾಡಿದಹಾಗೂ ಆ ಮೇಲೆ ನಡೆದ
ಕೃತ್ಯಗಳಲ್ಲಿ ಭಾಸ್ಕರನ ದೆಶೆಯಿಂದ ತಾನು ಸೇರಿರಲಿಲ್ಲವೆಂದೂ ತಿಳಿಸಿದನು.
೪೮-----------------------------------------------
೪೮ ಕಾದಂಬರಿ ಸಂಗ್ರಹ
ಭಾಸ್ಕರನು, ತನ್ನ ಸರದಿಯು ಬರಲು ಎದ್ದು ನಿಂತು ' ಧರ್ಮಾವತಾರನೇ
(Judge) ನಾನು ಮಧುಸೂದನನನ್ನು ಪತ್ತೆಮಾಡುವುದಕ್ಕಾಗಿ ಕರೆಸಲ್ಪಟ್ಟೆನು.
ನಾನು ವಿಚಾರಿಸಿದ್ದರಲ್ಲಿ ಮಧುಸೂದನನ ಕೊಠಡಿಯಿಂದ ಸುರಂಗಮಾರ್ಗ ವೊಂದಿರು
ವುದೆಂದೂ ಮಧುಸೂದನನು ತನ್ನ ಸ್ನೇಹಿತರಿಂದ ಪೀಡಿಸಲ್ಪಡುತ್ತಿದ್ದನೆಂದೂ ತಿಳಿಯ
ಬಂತು. ನಾನು ಅಲ್ಲಿನ ಸುರಂಗಮಾರ್ಗವನ್ನು ಪರೀಕ್ಷೆ ಮಾಡುವಲ್ಲಿ ಇದೋ ಈ
ಗುಂಡಿಯ, ಈ ಹರಿದು ಹೋದ ಏಳು ಬಣ್ಣದ ಕರವಸ್ತ್ರವೂ ಸಿಕ್ಕಿದವು. ಅವುಗಳನ್ನು
ತೆಗೆದುಕೊಂಡುಬಂದು ಕಲ್ಕತ್ತೆಯಲ್ಲಿ ಮಧುಸೂದನನ ಸ್ನೇಹಿತನ ವಿಷಯವಾಗಿ ವಿಚಾ
ರಿಸುವಲ್ಲಿ ಅವರಿಬ್ಬನು ಮದ್ಯದಂಗಡಿಗೆ ಬರುವುದಾಗಿ ತಿಳಿಯಬಂದಿತು. ಹಾಗೆ
ಬರುತಿದ್ದವನೇ ಈ ಹರಿಚಂದ್ರನು.
ಅವನಿಗೆ ಮದ್ಯವನ್ನು ಹೆಚ್ಚಾಗಿ ಕುಡಿಸಿ ಅವನು ತನ್ನ ಏಳು ಬಣ್ಣದ ಕರವ
ಸ್ತ್ರವನ್ನು ಹೊರಕ್ಕೆ ತೆಗೆದುದನ್ನು ನೋಡಿ ಅವನೇ ನನಗೆ ಬೇಕಾದ ಮನುಷ್ಯನೆಂದು
ತಿಳಿದು ಅವನ ಮೂಲಕ ಅವನ ಸಂಘದ ವಿಷಯವನ್ನೂ ಅವರ ಮನೆಯನ್ನೂ ಅರಿತು,
ಎರಡನೇದಿವಸ ರಾತ್ರಿ ಅವನನ್ನು ನನ್ನ ಸ್ನೇಹಿತನ ಮನೆಗೆ ಕೊಂಡೊಯ್ದು ಅಲ್ಲಿ ಅವನನ್ನು
ಬಿಟ್ಟು ಅವನ ಉಡುಪುಗಳನ್ನು ನಾನು ಧರಿಸಿ ಆ ಸಂಘದ ಮನೆಗೆ ಹೋಗಿ ಅಲ್ಲಿ
ಹರಿಚಂದ್ರನಹಾಗೇ ಮಾತನಾಡಿ ಬಂದೆನು. ಪುನಃ ಹರಿಚಂದ್ರನ ವೇಷದಲ್ಲಿ ಅವರ
ಗುಪ್ತಗೃಹವನ್ನು ಹೊಕ್ಕು ಅಲ್ಲಿ ಎರಡು ದಿವಸಗಳು ವಾಸಮಾಡಿದೆನು, ಈಗಲೀಗ
ಆ ಕಳ್ಳರ ಸಂಗತಿಯನ್ನು ಹೇಳಬೇಕಾಗಿದೆ. ಈ ನೀಚರುಗಳೆಲ್ಲರೂ ವಿದ್ಯಾವಂತರಾ
ಗಿದ್ದರೂ ಕೆಟ್ಟತನಕ್ಕೆ ಬಿದ್ದು ಸಂಘವನ್ನೇರ್ಪಡಿಸಿಕೊಂಡು ಹೊರಕ್ಕೆ ಮಹಾ ಸಭ್ಯ
ರಂತೆ ತೋರ್ಪಡಿಸಿಕೊಳ್ಳುತ್ತಾ ಒಳಗೊಳಗೇ ಕಳ್ಳತನಗಳನ್ನೂ ಕೊಲೆಗಳನ್ನೂ ನಡಿಸಿ
ಆ ಹಣದಿಂದ ಜೀವನ ಮಾಡುತ್ತಿದ್ದರು. ಇವರುಗಳು ತಾವು ಮಹಾ ಶ್ರೇಷ್ಠರಾದ
ಸಂಘಸಂಸ್ಕರಣಕರ್ತರಂತೆ ತೋರ್ಪಡಿಸಿಕೊಳ್ಳುತ್ತಾ ಜನಗಳನ್ನೂ ಇತರ ಸಂಘಸಂಸ್ಕ
ರಣಿಗಳನ್ನೂ ಮರುಳುಮಾಡುತ್ತಿದ್ದರು. ಈ ನೀಚರುಗಳು ಒಂದು ತಿಂಗಳಿನ ಕೆಳಗೆ ಒಬ್ಬ
ಚರ್ಮವ್ಯಾಪಾರಿಯನ್ನು ಲೂಟಿಮಾಡಿ ಅವನ ಹಣವನ್ನೆಲ್ಲಾ ತಿಂದುಹಾಕಿರುವರು.
ಈ ನೀಚರುಗಳೇ ಒಂದು ಕಂಪನಿಯಿಂದ ರಿವಾಲ್ವರುಗಳನ್ನು ಕದ್ದವರು. ಆ ರಿವಾಲ್ವ
ರುಗಳೆಲ್ಲಾ ಈಗ ಅವರ ಗುಪ್ತಗೃಹದಲ್ಲಿರುವುದು. ಇವರ ಮುಖ್ಯಸ್ಥನಾದ ವಿಶ್ವನಾ
ಥನೆಂಬುವನು ತನ್ನ ಮಗಳನ್ನು ಯಾರಾದರೂ ಧನವಂತನಿಗೆ ಮದುವೆ ಮಾಡಬೇಕೆಂಬ
ಭಿಲಾಷೆಯಿಂದಲೇ ಮಧುಸೂದನನನ್ನು ಕದ್ದು ತಂದು ಅವನಿಗೆ ಮದ್ಯಾದಿಗಳನ್ನು
ಕುಡಿಸಿ ತನ್ನ ಮಾತಿಗೊಪ್ಪುವಂತೆ ಮಾಡಿಕೊಂಡನು. ಅನ್ಯಾಯವಾಗಿ ಆ ನೀಚನ ಕಾ
ರ್ಯಕ್ಕಾಗಿ ಪ್ರಾಣ ಕೊಟ್ಟ ಅವನ ಪುತ್ರಿಯ ವಿಷಯದಲ್ಲಿ ನಾವು ಮರುಗಬೇಕಾಗಿದೆ.
೪೯----------------------------------------------
ಮಧುಸೂದನ ೪೯
" ಈಗ ಎರಡು ಮೂರು ದಿವಸಗಳಹಿಂದೆ ನಡೆದ ವಿಷಯಗಳನ್ನು ತಿಳಿಸುತ್ತೇನೆ.
ಈ ಗುಂಪಿನವರಿಗೆ ತಮ್ಮ ಮೇಲೆ ಪೊಲೀಸಿನವರಿಗೆ ಕಣ್ಣಿದೆಯೆಂದು ತಿಳಿಯಬಂತು.
ಆದ್ದರಿಂದ ಬೇಕಾದಷ್ಟು ಧನವನ್ನು ಸೇರಿಸಿಕೊಂಡು ಎಲ್ಲಾದರೂ ಬೇರೆಕಡೆಗೆ ಹೋಗಿ
ಜೀವಿಸುತ್ತಿರಬೇಕೆಂಬಭಿಪ್ರಾಯದಿಂದ ವಿಶ್ವನಾಥನು ಹದಿನೆಂಟು ಜನಗಳೊಡನೆ ಸುರತ
ಪುರಿಯ ಜಮೀನ್ದಾರನ ಮನೆಯನ್ನು ಹೊಕ್ಕು ಸೇವಕರನ್ನು ಕೊಂದು ಸುಮಾರು
ಹತ್ತು ಲಕ್ಷ ರೂಪಾಯಿ ಬಾಳುವ ಪದಾರ್ಥಗಳನ್ನೂ ಹಣವನ್ನೂ ತಂದು ಅವರ ಗುಪ್ತ
ಗೃಹದಲ್ಲಿ ಹೂತಿರುವರು (ಜನಗಳು ತಮ್ಮಲ್ಲೇ ಮಾತನಾಡ ತೊಡಗಲು, ಆಳುಗಳು
ಸದ್ದು ಎಂದು ಕೂಗಿದರು. ಇದಾದ ಮಾರನೇ ದಿವಸ ಪೊಲೀಸ್ ರ್ಇಸ್ಪೆಕ್ಟರ್
ಮೋಸಸ್ ಎಂಬುವನಿಗೆ ವಿಶ್ವನಾಥನ ಮೇಲೆ ಸಂಶಯಹುಟ್ಟಿ ಆ ಮನೆಯನ್ನು ಹೊಕ್ಕು
ಪರೀಕ್ಷೆ ಮಾಡಿದನು. ಆದರೆ ಅಲ್ಲಿ ಅವನಿಗೇನೂ ಸಂಶಯಾಸ್ಪದವಾದ ವಸ್ತುಗಳು
ಸಿಕ್ಕಲಿಲ್ಲ. ಆದರೂ ಅವನಿಗೆ ಸಂಶಯವಿದ್ದದ್ದರಿಂದ ಹೊರಟುಹೋಗುವಾಗ ಅದೇ
ವಿಷಯವನ್ನು ತಿಳಿಸಿ ಹೊರಟುಹೋದನು. ವಿಶ್ವನಾಥನು ಆ ಮೋಸಸ್ಸನಿಂದ ತನಗೆ
ಕೆಡಕು ಬರುವುದೆಂದು ಯೋಚಿಸಿದನು. ಆದ್ದರಿಂದ ಅವನನ್ನು ಹಿಂಬಾಲಿಸಿ ಮೋಸೆಸ್ಸ
ನನ್ನೂ ಅವನ ಸೇವಕನನ್ನೂ ರಿವಾಲ್ವರಿನ ಗುಂಡುಗಳಿಂದ ಕೊಂದು ಮನೆಯನ್ನು ಸೇರಿ
ದನು. ಇವನು ಹೀಗೆ ಮಾಡುವನೆಂದು ತಿಳಿದಿದ್ದರೆ ಅದನ್ನು ತಡೆಯುತ್ತಿದ್ದನು.
ಆದರೆ ಅವನು ಆ ವಿಷಯವನ್ನೆ ಹೇಳಲಿಲ್ಲವು. ಆದ್ದರಿಂದ ನಾನೂ ಸಂಶಯಪಡಲಿಲ್ಲ.
ಇನ್ನು ತನ್ನ ಮಗಳ ಮದುವೆಯೊಂದೇ ಉಳಿದಿತ್ತು. ಅದರೊಳಗಾಗಿ ನಾನು ನನ್ನ
ಸ್ನೇಹಿತರಾದ ಪೊಲೀಸ್ ಕಮಿಷನರ ಬಳಿಗೆ ಬಂದು ಅವರಿಗೆ ಸಕಲ ವಿಷಯಗಳನ್ನೂ
ತಿಳಿಸಿದೆನು. ಮಾರನೇ ದಿವಸ ವಿವಾಹವು ನಡೆಯುವುದೆಂದೂ ಆಗ ಅಲ್ಲಿ ಎಲ್ಲಾ
ಮೆಂಬರುಗಳೂ ಸೇರುವರೆಂದೂ ನನಗೆ ತಿಳಿದಿದ್ದದ್ದರಿಂದ ಮಾರನೇ ದಿವಸ ಅನೇಕ
ಪೊಲೀಸಿನವರೊಡನೆ ಹೋಗಿ ಅವರನ್ನು ಸೆರೆಹಿಡಿಯಬೇಕೆಂದು ಹೇಳಿದೆನು. ಅದರಂತೆ
ನಾವು ಸರಿಯಾದ ಸಮಯಕ್ಕೆ ಹೋಗಿ ಆ ವಿವಾಹವನ್ನು ನಿಲ್ಲಿಸಿ ಸತ್ತುಳಿದ ಈ ಏಳು
ಮಂದಿಗಳನ್ನೂ ಹಿಡಿದುತಂದಿರುವೆವು. ಇವರನ್ನೆಲ್ಲಾ ಸುರತಪುರಿಯ ಕೊಲೇ ಮತ್ತು
ಡಕಾಯಿತಿಗಳಲ್ಲೂ ಮತ್ತು ಹಿಂದ ಅನೇಕ ಕಟ್ಟ ಕೃತ್ಯಗಳಲ್ಲಿ ಭಾಗಿಗಳಾಗಿದ್ದ .
ರೆಂದೂ ನಾನು ಅವರ ಮೇಲೆ ಅಪರಾಧವನ್ನು ಹೊರಿಸುತ್ತೇನೆ. ಇದೋ ಈ ಹರಿಚಂ
ದ್ರನು ಚರ್ಮದ ವ್ಯಾಪಾರಿಯನ್ನು ಸುಲಿಗೇವಾಡಿದ್ದಾಗ ಸೇರಿದ್ದರೂ ಆ ಮೇಲೆ
ನಡೆದ ಕೃತ್ಯಗಳಲ್ಲಿ ಸೇರಲಿಲ್ಲವು. ಅವನು ಎಲ್ಲಾ ವಿಷಯಗಳನ್ನೂ ನನಗೆ ತಿಳಿಯ
೫೦--------------------------------------------
50 ಕಾದಂಬರಿ: ಸಂಗ್ರಹ
ಪಡಿಸಿದನು. ಆದ್ದರಿಂದ ಧರ್ಮಾವತಾರನು ಅವನ ಮೇಲೆ ಕರುಣೆಯನ್ನು ತೋರಬೇ
ಕೆಂದು ಬೇಡುತ್ತೇನೆ. ಸುರತಪುರಿಯ ಜನ್ಮಾರನ ಆಸ್ತಿಯೆಲ್ಲ ವೂ ಮತ್ತು ಕಳು
ವಾದ ರಿವಾಲ್ವರುಗಳೂ ಮತ್ತು ಚರ್ಮದ ವ್ಯಾಪಾರಿಯ ಸ್ವಲ್ಪ ಭಾಗ ಧನವೂ ಈ
ಅನಾಯಕ ಪಾಳಯದವರ ಗುಪ್ತಗೃಹದಲ್ಲಿರುವದು ” ಎಂದು ಹೇಳಿ ಧರ್ಮಾವತಾರ
ನಿಗೆ ವಂದಿಸಿ ಕುಳಿತುಕೊಂಡನು. ಕೂಡಲೇ ಜನಗಳೆಲ್ಲಾ ಕೈತಟ್ಟಿ ತಮ್ಮ ಸಂತೋಷ
ವನ್ನು ತೋರ್ಪಡಿಸಿದರು. ಆಗ ನ್ಯಾಯಾಧಿಪತಿಯು ಆ ಏಳುಜನ ಅಪರಾಧಿಗಳನ್ನೂ
ಏನು ಹೇಳುವಿರೆಂದು ಕೇಳಲು ಅದಕ್ಕವರು “ ನಾವು ಹೇಳತಕ್ಕುದೇನೂ ಇಲ್ಲವು
ಭಾಸ್ಕರನು ಹೇಳಿದ್ದೆಲ್ಲಾ ನಿಜವು. ತಮ್ಮ ವಿಷಯದಲ್ಲಿ ಕರುಣೆಯನ್ನು ತೋರಿಸಬೇ
ಕೆಂದು ” ಬೇಡಿದರು.
ಜನಗಳ ಕೋಲಾಹಲವು ನಿಲ್ಲಿಸಲ್ಪಟ್ಟ ಮೇಲೆ ಪಂಚಾಯಿತರ ಅಭಿಪ್ರಾಯ
ವನ್ನು ಹೊಂದಿ ಧರ್ಮಾವತಾರನು ಎದ್ದು ನಿಂತುಕೊಂಡು ಈ ರೀತಿಯಾದ ತೀರ್ಪ
ನ್ನೋದಿದನು. " ನಮ್ಮ ಮುಂದೆ ನಿಂತಿರುವ ಅಪರಾಧಿಗಳ ಕೃತ್ಯಗಳು ಬಹಳವಾಗಿವೆ.
ನಮ್ಮ ಪಂಚಾಯಿತರು ಅವರುಗಳನ್ನೆಲ್ಲಾ ತಪ್ಪಿತಸ್ಥರೆಂದು ಹೇಳಿರುತ್ತಾರೆ. ಇವರು
ಗಳು ಕೊಲೇ ಡಕಾಯಿತಿ ಮುಂತಾದವುಗಳನ್ನು ಮಾಡಿರುವದು ರುಜುವಾತಾಗಿದೆ.
ಆದರೆ ಇವರಲ್ಲಿ ಮೂವರು ಇನ್ನೂ ಬಹಳ ಚಿಕ್ಕ ವಯಸ್ಕರಾದ್ದರಿಂದ ನಾವು ಅವರಿಗೆ
ಕರುಣೆಯನ್ನು ತೋರಿ ತಲಾ ಏಳು ವರುಷಗಳ ಕಠಿನ ಸಜಾವನ್ನೂ , ಉಳಿದ ನಾಲ್ವರೂ
ದೊಡ್ಡವರೂ ವಿದ್ಯಾವಂತರೂ, ತಿಳಿದವರೂ ಆಗಿ ಈರೀತಿಯಾದ ಕೆಟ್ಟ ಕೆಲಸಗಳನ್ನು
ಮಾಡಿರುವುದರಿಂದ ನಾವು ಅವರಿಗೆ ಜೀವಾವಧಿದ್ವೀಪಾಂತರವಾಸವನ್ನೂ ವಿಧಿಸಿರುತ್ತೇವೆ.
ನಾವೆಲ್ಲರೂ ಈ ಪತ್ತೇದಾರೀ ಭಾಸ್ಕರರ ಘಟ್ಟಿಗತನವನ್ನು ಹೊಗಳುತ್ತೇವೆ. ಈ ನೀಚ
ರುಗಳು ಕದ್ದಿದ್ದ ಪದಾರ್ಥಗಳೆಲ್ಲಾ ಆಯಾಮಾಲೀಕರಿಗೆ ಕೊಡಲ್ಪಡಬೇಕು, ಇನ್ನು
ಮುಂದೆ ಇಂಥಾ ಸಂಘಗಳಮೇಲೆ ಪೋಲೀಸಿನವರು ಕಣ್ಣಿಟ್ಟಿರುವರೆಂದು ನಾವು ನಂಬು
ತೇವೆ. ಇದಕ್ಕೆ ನಮ್ಮ ವಿದ್ಯಾವಂತರಾದ ಪಂಚಾಯಿತರೂ ಒಪ್ಪುತ್ತಾರೆಂದು ನಂಬು
ತೇವೆ ಈ ಹರಿಚಂದ್ರನೆಂಬುವನು ಕೊಲೆ ಮುಂತಾದವುಗಳನ್ನು ಮಾಡದೇ ಇದ್ದದ್ದ
ರಿಂದಲೂ ಸರ್ಕಾರದ ಪಕ್ಷವಾಗಿ ಸಾಕ್ಷಿ ಕೊಟ್ಟಿದ್ದರಿಂದ ಅವನಿಗೆ ಅಧಿಕ ಶಿಕ್ಷೆ
ಯನ್ನು ಕೊಡದೆ ಒಂದು ವರ್ಷ ಕಠಿಣಸಜಾವನ್ನು ವಿಧಿಸಿರುತ್ತೇವೆ. ” ಎಂದು ಮುಗಿ
ಸಿದಕೂಡಲೆ ಅಪರಾಧಿಗಳೆಲ್ಲಾ ಕಾರಾಗೃಹಕ್ಕೆ ಒಯ್ಯಲ್ಪಟ್ಟರು. ಜನಗಳ ಗುಂಪಿನ
ಲ್ಲಿದ್ದ ಸುರತಪುರಿಯ ಜಹಗೀರ್‌ದಾರನೂ, ಚರ್ಮವ್ಯಾಪಾರಿಯೂ ಎದ್ದು ಬಂದು ಭಾಸ್ಕ
೫೧-------------------------------------------------
ಮಧುಸೂದನ 51
ಕನಿಗೆ ಹಸ್ತಲಾಘವವನ್ನು ಕೊಟ್ಟು ಅವನನ್ನು ಹೊಗಳಿ ದಯವಿಟ್ಟು "ತಮ್ಮನ್ನು
ಬಂದುಕಾಣಬೇಕೆಂದು ” ಹೇಳಿ ಹೊರಟುಹೋದರು.
ವಾಸವಪುರದಲ್ಲಿ ಮಧುಸೂದನ ಮತ್ತು ಸರಳಬಾಲೆ ಇವರುಗಳ ವಿವಾಹವು
ನೆರವೇರಿತು. ಆ ಸಮಯದಲ್ಲಿ ಸುರತಪುರಿಯ ಜಮೀನ್ದಾರನೂ, ಚರ್ಮವ್ಯಾಪಾ
ರಿಯೂ ಬಂದಿದ್ದು ಅಲ್ಲಿದ್ದ ಭಾಸ್ಕರನನ್ನು ಕಾಣಿಸಿಕೊಂಡು ತಮಗೆ ತೋಚಿದ ರೀತಿ
ಯಲ್ಲಿ ಅವನಿಗೆ ಪಾರಿತೋಷಕವನ್ನು ಕೊಟ್ಟರು. ಸರ್ಕಾರದಿಂದ ಬರಬೇಕಾಗಿದ್ದ ಬಹು
ಮಾನವೂ ಬಂದಿತು. ಸೋಮಸುಂದರನೂ ತನಗೆ ತೋರಿದ್ದನ್ನೆಲ್ಲಾ ಕೊಟ್ಟನು. ಸ್ವಲ್ಪ
ಕಾಲದಲ್ಲೇ ಭಾಸ್ಕರನು ಅರವತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸಿಬಿಟ್ಟನು.
ಆದರೂ ಅವನು ಆಗಾಗ್ಗೆ ಸುಂದರಿಗಾದ ಗತಿಯನ್ನು ಕುರಿತು ವ್ಯಸನಪಡುತ್ತಿದ್ದನು.
ವಿವಾಹವಾದಮೇಲೆ ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೋದರು. ಭಾಸ್ಕರನು
ಮಾತ್ರ ಮಧುಸೂದನನ ಸಂಗಡ ಒಂದೆರಡು ತಿಂಗಳು ಇರುವುದಾಗಿ ಒಪ್ಪಿ ನಿಂತನು.
ಪಾಠಕಮಹಾಶಯ ! ಸದ್ಯದಲ್ಲಿ ಭಾಸ್ಕರನನ್ನು ವಾಸವಪುರದಲ್ಲಿ ಬಿಟ್ಟಿರು
ವವು. ಮುಂದಕ್ಕೆ ಅವನ ವಿಷಯವಾಗಿ ನೀವು ಕೇಳಬೇಕೆಂದಿದ್ದರೆ ಶ್ಯಾಮಲಾಂಗಿ
ಯೆಂಬ ಪುಸ್ತಕವನ್ನು ಓದಿನೋಡಿರಿ.
ಸಂಪೂರ್ಣಂ.
=======================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ