https://archive.org/details/dli.osmania.4396 (PDF available here along with some other books)
ಅಂಬಾಲಿಕೆ
ಪಾಠಕವರ್ಗ !
ಇದು ' ರಾಜಾಸ್ಥಾನದ ಇತಿಹಾಸ ಮಂಜರಿ' ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು. ಗ್ರಂಥವು ಚಿಕ್ಕುದಾದರೂ ಹಲವು ನೀತಿಗಳು ಅಡಕವಾಗಿ
ರುವುವು. ವಿದ್ಯಾರ್ಥಿಯಾದ ನನ್ನ ಈ ಅಲ್ಪ ಲೇಖನವು ಪಾಠಕ ಪಾಠಕಿಯರೆಲ್ಲರಿಂದ
ಸಮಾವೃತವಾದುದಾದರೆ ನಾನು ಕೃತಾರ್ಥನೇ ಸರಿ. ಇದರಲ್ಲಿನ ಸ್ಖಾಲಿತ್ಯಗಳನ್ನು ಆರಾದರೂ ತಿಳಿಯಪಡಿಸುವುದಾದರೆ ಅವುಗಳನ್ನು ಮುಂದಣ ಮುದ್ರಣದಲ್ಲಿ ಸರಿ ಪಡಿಸುವೆನು.
ಇದನ್ನು ಅನತಿಕಾಲದಲ್ಲೇ ಪ್ರಚುರಗೊಳಿಸಿದ ವೇ|| ಬ್ರ|| ಚಾಮರಾಜನಗರದ ವೆಂಕಟರಮಣ ಶಾಸ್ತ್ರಿಗಳವರ ಮಹೋಪಕಾರವು ನನ್ನ ಹೃದಯದಲ್ಲಿ ಚಿರಸ್ಥಾಯಿ ಯಾಗಿರುವುದು.
ಇದರಂತೆಯೇ ಎಲ್ಲರೂ ನನ್ನ ಇತರ ಗ್ರಂಥಗಳಿಗೂ ಉತ್ತೇಜನ ಕೊಡುವರೆಂ
ಬುದೇ ನನ್ನ ನಂಬುಗೆ, ಮತ್ತು
ಕಂ|| ಸದಯೇ ಭಕುತರ ಸಿರಿಯೇ |
ಸದಮಲ ಹೃದಯೇ ಸಮನ್ವಿತತುಲ ಸಹಾಯೇ ||
ಹದುಳಿ ನನಿಲಯ, ವಿನಯೇ |
ಮುದದಿಂ ಪೊರೆಯುವುದು ಸಂಗ್ರಹನ ವಿಧಿಜಾಯೇ ||
ಇತಿ
ಬೆಂಗಳೂರು ೧-೧೦-೧೯೧೬ || ಜೆ ಕೃಷ್ಣಮೂರ್ತಿ,
----------------------------------------------------------
|| ಶ್ರೀ || ಅಂಬಾಲಿಕೆ.
ಒಂದನೆಯ ಅಧ್ಯಾಯ.
ಒಂದು ದಿವಸ ದುರ್ಗದ ರಾಜೋದ್ಯಾನದಲ್ಲಿ ರಾಜಾ ಭಗವತೀದಾಸನ ಏಕ ಮಾತ್ರ ಪುತ್ರಿಯಾದ ಅಂಬಾಲಿಕೆಯು ವಿಹರಿಸುತ್ತಿದ್ದಳು, ಆಗ ಸಂಧ್ಯಾಕಾಲವಾಗಿತ್ತು. ಭಗರ್ವಾ ಪ್ರಭಾಕರನು ಕ್ಷೀಣತೇಜನಾಗಿ ಅಸ್ತಮಿಸುತ್ತಿದ್ದನು. ರಾಜಪುತ್ರಿಯಾದ ಅಂಬಾಲಿಕೆಯು ಅಸೀಮ ಸೌಂದಯ್ಯ ಮಯಿ. ಪೂರ್ಣಚಂದ್ರನಂತಹ ಮುಖ, ಅಂದ ವಾದ ಹುಬ್ಬುಗಳು, ಕಪ್ಪಾದ ಮುಂಗುರುಳು, ತೊಂಡೇಹಣ್ಣಿನಂತಹ ಕೆಂದುಟಿಗಳು, ವಿಶಾಲವಾದ ಕಣ್ಣುಗಳು. ಇವುಗಳಿಂದ ಕೂಡಿ ಸರ್ವರ ಪ್ರೀತಿಗೂ ಪಾತ್ರಳಾಗಿದ್ದ ಈ ರಾಜಕುಮಾರಿಗೆ ವಿವಾಹವಾಗುವ ವಯಸ್ಸು ಬಂದೊದಗಿದ್ದರೂ, ಅದಾವಕಾರಣಗಳ ದೆಸೆಯಿಂದಲೋ ಇನ್ನೂ ವಿವಾಹವಾಗಿರಲಿಲ್ಲ. ಕಾಯಗುವರಿಗೆ ಪ್ರಕೃತಿಯ ಸೌಂದ ರ್ಯದ ಮೇಲೆ ಬಹಳ ಇಷ್ಟ. ಉದ್ಯಾನವು ಹೂವುಗಳನ್ನು ಹೊಮ್ಮಿಸುತ್ತಿರುವ ಚಂಪಕವೃಕ್ಷಗಳಿಂದಲೂ, ಚಿಗುರಿದ ಅಶೋಕವೃಕ್ಷಗಳಿಂದಲೂ ಮತ್ತು ಅನೇಕ ತರ ಹದ ಲತಾವೃಕ್ಷಗಳಿಂದಲಂಕೃತವಾಗಿತ್ತು. ತಂಗಾಳಿಯು ಬಹಳ ಮನೋಹರವಾಗಿ ಬೀಸುತ್ತಿದ್ದುದು, ಹೂವುಗಳಲ್ಲಿನ ಮಕರಂದವನ್ನು ಪಾನಮಾಡುವುದರ ಸಲುವಾಗಿ ಭ್ರಮರಗಳು ತಂಡತಂಡವಾಗಿ ಬಂದು ಬಹಳ ಆನಂದದಿಂದ ಗಾನಮಾಡುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿಯೇ, ತೇಜೋನಿಧಿಯಾದ ಸೂರ್ಯಬಿಂಬವು ಅಸ್ತಾಚಲದ ಹಿಂದೆ ಸಂಪೂರ್ಣವಾಗಿ ಮರೆಯಾಗಲು ಕಳಲೆಯು ಪ್ರಪಂಚವನ್ನು ಪರಿವೇಷ್ಟಿಸಿದುದು. ದನ್ನು ಕಂಡು, ಕತ್ತಲಾದಮೇಲೆ ಸ್ತ್ರೀಯರು ಹೊರಗೆ ಸಂಚರಿಸುವುದು ಸರಿಯಲ್ಲ ಬುವುದನ್ನು ಚೆನ್ನಾಗಿ ತಿಳಿದಿದ್ದ ಅಂಬಾಲಿಕೆಯು ಅರಮನೆಯನ್ನು ಕುರಿತು ಹೊರ ವಿದ್ಯುಕ್ತಳಾದಳು.
ಅಂಬಾಲಿಕೆಯು ಒಂದೆರಡು ಹೆಜ್ಜೆಗಳಷ್ಟು ದೂರ ಮುಂದುವರಿಯುವಷ್ಟರ
ಲ್ಲಿಯೇ, ಆರೋ ಅವಳ ಹಿಂದಣಿಂದ, " ರಾಜಕುಮಾರಿ ! ಸ್ವಲ್ಪ ನಿಲ್ಲು. ಅನಂತರ ಅರಮನೆಗೆ ಹೋಗುವೆಯಂತೆ ! ?” ಎಂದು ಸಣ್ಣ ಧ್ವನಿಯಲ್ಲಿ ಕೂಗಿದರು. ರಾಜ
-----------------------------------------------------------------------
೨ ಕಾದಂಬರಿ ಸಂಗ್ರಹ
ಕುಮಾರಿಯು ಇದನ್ನು ಕೇಳಿ ಚಮಕಿತಳಾಗಿ ಹಿಂದಿರುಗಿ ನೋಡಿ ಮಂತ್ರಿಸುತನಾದ ಮೋಹನಸಿಂಹನನ್ನು ಕಂಡಳು. ಆದರೆ ಅವನ ಮನದಲ್ಲಿ ಆವುದೋ ಒಂದು ದುರಭಿ ಪ್ರಾಯವಿರಬೇಕೆಂದುಕೊಂಡು ಪುನಃ ಮುಂದುವರಿಯಲುಜ್ಜುಗಿಸಿದಳು. ಇದನ್ನು ಕಂಡು ಮೋಹನಸಿಂಹನು, ಅಂಬಾಲಿಕೆ ! ಇಷ್ಟು ಬೇಗ ಈ ನಿರ್ಭಾಗ್ಯನನ್ನು ಮರೆಯಲು ಯೋಚಿಸಿರುವಿಯೇನು ?” ಎಂದನು. ಅದಕ್ಕೆ ಅಂಬಾಲಿಕೆಯು, ಮೋಹನಸಿಂಹ ! ಇಂತಹ ಅವೇಳೆಯಲ್ಲಿ ನೀನು ರಾಣೀವಾಸದ ಉಪವನವನ್ನು ಪ್ರವೇಶಮಾಡಿದುದು ಒಳ್ಳೆಯದಲ್ಲ. ಅದು ಹಾಗಿರಲಿ ನೀನು ಇಲ್ಲಿಗೆ ಬಂದುದಕ್ಕೆ ಸರಿಯಾದ ಕಾರಣ ವೇನಾದರೂ ಇರುವುದೋ?'' ಎಂದಳು.
ಮೋಹನ.--" ಕಾರಣವಿಲ್ಲದೆ ಎಂದಿಗಾದರೂ ಬರುವೆನೆ ? ಅದಕ್ಕೆ ತಕ್ಕ ಕಾರಣವಿದ್ದೇ ಇರುವುದು.”
ಅಂಬಾಲಿಕೆ ಹಾಗಾದರೆ ಅಂತಹ ಕಾರಣವಾವುದು ?' ಮೋಹನಸಿಂಹನು ರಾಜಕುಮಾರಿಯನ್ನು ಚಪಲದೃಷ್ಟಿಯಿಂದ ನೋಡುತ್ತ, “ ರಾಯಗುವರಿ ! ಅದರ ಕಾರಣವು ನೀನೇ'' ಎಂದು ಹೇಳಿದನು.
ಇದನ್ನು ಕೇಳಿ ಅಂಬಾಲಿಕೆಯು ಆಪಾದಮಸ್ತಕಪರ್ಯಂತವೂ ತರಗೆಲೆಯಂತೆ ನಡುಗಿದಳು. ಆದರೂ ಧೈರವನ್ನವಲಂಬಿಸಿ, 1 ಎಲಾ ! ನೀಚನೇ ! ಈ ಕ್ಷಣವೇ ಇಲ್ಲಿ ನಿಲ್ಲದೆ ಹೊರಟುಹೋಗು. ಇಲ್ಲದಿದ್ದರೆ ನಿನಗೆ ಒಳ್ಳೆಯದಾಗುವುದಿಲ್ಲ.
ಮೋಹನಸಿಂಹನು ಈ ಹೆದರಿಕೆಯನ್ನು ಸ್ವಲ್ಪವೂ ಲಕ್ಷಿಸದೆಯೇ, " ಅಂಬಾ
ಲಿಕೆ ! ಈಗ ನೀನು ನನ್ನನ್ನು ವಿವಾಹವಾಗುವುದಕ್ಕೆ ಸಮ್ಮತಿಸಿದರೆ ಸರಿ. ಇಲ್ಲ ವಾದರೆ,-ಇಗೋ ! ನೋಡು. ನಾಳೆ, ನಿಮ್ಮ ತಂದೆ, ನಿಮ್ಮ ರಾಜ್ಯವಾವುದೂ ಇರುವುದಿಲ್ಲ. ಹಾಗೆ ಮಾಡುವಷ್ಟು ಅಪಾರವಾದ ಶಕ್ತಿಯು ನನ್ನಲ್ಲಿದೆ.” ಎಂದನು.
ಅಂಬಾಲಿಕೆಯು ಈ ಅಹಿತಸೂಚಕವಾದ ಮಾತುಗಳನ್ನು ಕೇಳಲಿಚ್ಚಿಸದೆ,
ಬಹಳ ಘಟ್ಟಿಯಾದ ಸ್ವರದಿಂದ ರಾಜದೂತರನ್ನು ಕೂಗಿದಳು, ತಕ್ಷಣವೇ ಮಂತ್ರಿ ಸುತನಾದ ಮೋಹನಸಿಂಹನು ಆ ವೃಕ್ಷಸಂದಣಿಯಲ್ಲಿ ಮಾಯವಾಗಿಬಿಟ್ಟನು, ಸ್ವಲ್ಪ ಹೊತ್ತಿನಲ್ಲಿಯೇ ಕೆಲವು ರಾಜದೂತರು ಬಂದು ರಾಜಪುತ್ರಿಯನ್ನು ಸುರಕ್ಷಿತವಾಗಿ ಅರಮನೆಗೆ ಕರೆದೊಯ್ದರು. ಅಲ್ಲಿ ಅವಳು ರಾಜೋದ್ಯಾನದಲ್ಲಿ ನಡೆದ ಸಮಾಚಾರವನ್ನು
------------------------------------
ಅಂಬಾಲಿಕೆ ೩
ತನ್ನ ಮಾತಿಗೆ ತಿಳುಹಿದಳು. ಆಗ ರಾಣಿಯು ಕುಪಿತಳಾಗಿ, ಎಲ್ಲವನ್ನೂ ಭಗವತಿ
ದಾಸನಿಗೆ ತಿಳುಹಿದಳು. ಅದಕ್ಕೆ ಅವನಾವ ಉತ್ತರವನ್ನೂ ಕೊಡಲಿಲ್ಲ ; ಆದರೆ,
ಬಹಳ ಆಲೋಚನಾಮಗ್ನನಾದನು.
......
ಎರಡನೆಯ ಅಧ್ಯಾಯ.
ಮಾರನೇ ದಿವಸ ಪ್ರಾತಃಕಾಲದಲ್ಲಿ ಮೋಹನ ಸಿಂಹನು ಅರಮನೆಯನ್ನು
ಪ್ರವೇಶಿಸಿ ರಾಚಾ ಭಗವತೀ ದಾಸನನ್ನು ಕಂಡನು, ಮಂತ್ರಿ ಪುತ್ರನಿಗೆ ಅರಮನೆ
ಯನ್ನು ಪ್ರವೇಶಿಸಲು ಅಧಿಕಾರವನ್ನು ಸ್ವಯಂ ಭಗವತೀದಾಸನೇ ಕೊಟ್ಟಿದ್ದನು,
ಅದು ಕಾರಣ ಮೋಹನನು ಆರ ಆತಂಕವೂ ಇಲ್ಲದೆ ರಾಜನ ಇದಿರಿಗೆ ಬಂದು ನಿಂತನು. ಕುಶಲಪ್ರಶ್ನೆ ಗಳಾದನಂತರ ರಾಜನು, ಮೋಹನನು ಅರಮನೆಗೆ ಬಂದದರ ಕಾರಣ ವನ್ನು ವಿಚಾರಿಸಿದನು. ಮೋಹನಸಿಂಹನು ಅದಕ್ಕೆ ಯಾವ ಪ್ರತ್ಯುತ್ತರವನ್ನೂ ಕೊಡದೆ ಮೌನವಾಗಿದ್ದನು.
ಭಗವತಿ ದಾಸ :- ಮೋಹನಸಿಂಹ ! ನಿನ್ನೆಯದಿವಸದ ನಿನ್ನ ವರ್ತನವೆಲ್ಲವೂ ನನಗೆ ತಿಳಿಯಿತು. ಸಂಧ್ಯಾಕಾಲದಲ್ಲಿ ನೀನು ರಾಣೀವಾಸದ ಉಪನವನವನ್ನು ಏಕಾಕಿ ಯಾಗಿ ಒಳಹೊಕ್ಕುದು ಬಹಳ ತಪ್ಪು.”
ಮೋಹನಸಿಂಹ-(ನಿರುತ್ತರ).
ಭಗವತೀದಾಸ-ಮಂತ್ರಿ ಕುಮಾರ ! ನಿನ್ನ ಅಪರಾಧವನ್ನು ಪ್ರಚ್ಛನ್ನವಾಗಿಟ್ಟು
ಕೊಂಡು ಮರೆತುಬಿಡುವೆನೆಂದು ತಿಳಿಯಬೇಡ : ಶೀಘ್ರದಲ್ಲಿ ಅದಕ್ಕೆ ತಕ್ಕ ಶಿಕ್ಷೆ
ಯನ್ನು ವಿಧಿಸುವೆನು.
ಮೋಹನಸಿಂಹ-ಮಹಾರಾಜ! ದುಡುಕಬೇಡಿರಿ, ನಿಮ್ಮ ಮಗಳ ಮತ್ತು
ನಿಮ್ಮ ರಾಜ್ಯದ ಮಂಗಳದ ಮೇಲೆ ದೃಷ್ಟಿಯನ್ನಿಟ್ಟು ಚೆನ್ನಾಗಿ ಆಲೋಚಿಸಿ ಮಾತ
ನಾಡಿರಿ. ಇಲ್ಲವಾದರೆ ಬಹಳ ವ್ಯಥೆಗೀಡಾಗುವಿರಿ.
ಭಗವತೀದಾಸ-ಎಲಾ, ಪಾಪಿ! ಅಧಮ !! ಇಂದು ನೀನು ನನ್ನ ಪವಿತ್ರ
ವಾದ ಕುಲಕ್ಕೇ ಕಳಂಕವನ್ನು ತಂದೊಡ್ಡಿರುವಿ. ಈ ಉಪಕಾರಕ್ಕಾಗಿ ನಿನಗೆ ನನ್ನ
--------------------------------
೪ ಕಾದಂಬರೀ ಸಂಗ್ರಹ,
ಏಕಮಾತ್ರ ಪುತ್ರಿಯನ್ನು ವಿವಾಹಮಾಡಿಕೊಟ್ಟು ನಿನ್ನನ್ನು ನನ್ನ ರಾಜ್ಯಕ್ಕೆ ಹಕ್ಕುದಾ ರನನಾಗಿ ಮಾಡಿಕೊಳ್ಳಬೇಕೆಂದು ಬೊಗಳುವಿಯೋ ? ಥು ! ನೀಚಾ !! ನನ್ನಿದಿರಿನಿಂದ ಆಚೆಗೆ ತೊಲಗಿ ಹೋಗು : ಒಂದು ಕ್ಷಣವಾದರೂ ನನ್ನಿದಿರಿನಲ್ಲಿ ನಿಲ್ಲಬೇಡ. ಹಾಗೆ ನಿಂತರೆ ನಿನಗೆ ನಿಸ್ವಾರವಿಲ್ಲ ಎಂದು ಗದರಿಸಿಕೊಂಡನು.
" ಮಹಾರಾಜ! ಇಂದು, ನೀವು ನನಗೆ ಯಾವ ರಜಪೂತನೂ ಸಹಿಸಲಾರ
ದಷ್ಟು ಅಪಮಾನವನ್ನು ಮಾಡಿರುವಿರಿ, ಅದಕ್ಕಾಗಿ ನಾನು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳದೆಬಿಡೆನು. ಮಹಾರಾಜ ! ಈ ವಿಷಯವನ್ನು ಮಾತ್ರ ಚೆನ್ನಾಗಿ ಜ್ಞಾಪಕ ದಲ್ಲಿಟ್ಟಿರಿ, ಮರೆಯ ಬೇಡಿರಿ'' ಎಂದು ಹೇಳುತ್ತ ಮೋಹನಸಿಂಹನು ಅರಮನೆಯನ್ನು ಬಿಟ್ಟು ಸ್ವಗೃಹಾಭಿಮುಖನಾದನು.
ಮೋಹನಸಿಂಹನು ಹೊರಟುಹೋಗುತ್ತಲೇ ರಾಜನು ತನ್ನ ಮಂತ್ರಿಯಾದ ವಿಕ್ರಮಸಿಂಹನನ್ನು ಕರೆಯಿಸಿ ಮೋಹನನ ದುರಾಪಾರವನ್ನು ಅವನಿಗೆ ತಿಳುಹಿದನು. ಇದನ್ನು ಕೇಳುತ್ತಲೇ ವಿಕ್ರಮಸಿಂಹನ ಮುಖವು ಕೆಂಪಗಾಯಿತು. ಭ್ರೂಗಳು ಕೃಷ್ಣಸರ್ಪಗಳನ್ನು ಹೋಲಿದುವು. ತುಟಿಗಳು ಅದುರಿದುವು. ಅವನ ನೇತ್ರಗಳಲ್ಲಿ ಕ್ರೋಧಾನಲವು ಪ್ರಜ್ವಲಿಸಲಾರಂಭವಾಯಿತು. ತಕ್ಷಣವೇ ಅವನು ಒಬ್ಬ ಸೇವಕ
ನನ್ನು ಕೂಗಿ, ಮೋಹನನನ್ನು ಕರೆದುಕೊಂಡು ಬಾರೆಂದು ಆಜ್ಞಾಪಿಸಿದನು. ಸ್ವಲ್ಪ ಹೊತ್ತಿನಲ್ಲಿಯೇ ಆ ಸೇವಕನು ಹಿಂತಿರುಗಿ ಬಂದು ಉತ್ತಮಾಶ್ವವೊಂದನ್ನು ಆರೋಪಿಸಿ ನಾಗೂರಿಗೆ ಅಭಿಮುಖನಾಗಿ ಪ್ರಯಾಣಮಾಡಿದನೆಂದು ಬಿನ್ನವಿಸಿದನು. ಆಗ, ವಿಕ್ರ ಮಸಿಂಹನು ಅತಿಪ್ರಯಾಸದಿಂದ ತನ್ನ ಕೋಪವನ್ನು ತನ್ನಲ್ಲಿಯೇ ಅಡಗಿಸಿಕೊಂಡು, "ಮಹಾರಾಜ! ಸಮಾಧಾನಚಿತ್ತರಾಗಿರಿ. ಆ ಪರಮಪಾಪಿ-ಆಚಂಡಾಲನನ್ನು ಸ್ಮರಿಸಬೇಡಿ. ಇಂದಿನಿಂದ ಅವನು ನನಗೆ ತ್ಯಾಜ್ಯನಾದ ಪುತ್ರನಾಗಿರುವನು. ಆ ಅಧ
ಮಾಧವನ ಗೊಡ್ಡು ಬೆದರಿಕೆಗೆ ತಾವು ಭಯಪಡಬೇಕಾದುದರವಶ್ಯವಿಲ್ಲ” ಎಂದನು.
........
ಮೂರನೆಯ ಅಧ್ಯಾಯ.
ಪಾಠಕಮಹಾಶಯ ! ಪಿತನ ಗೃಹವನ್ನು ಪರಿತ್ಯಜಿಸಿದ ಬಳಿಕ ಮೋಹನನು
ನಾಗೂರನ್ನು ಕುರಿತು ಹೊರಟುದು ಸರಿಯಷ್ಟೆ ? ಈಗ ಅವನೇನಾದನೆಂಬುದನ್ನು ವಿಚಾರಿಸಿಕೊಳ್ಳುವವು.
---------------------------------------
ಅಂಬಾಲಿಕೆ.
ದುರ್ಗದಿಂದ ನಾಗೂರು ಸುಮಾರು ಹದಿನೈದು ಕ್ರೋಶಗಳಷ್ಟು ದೂರದಲ್ಲಿ
ದ್ವಿತು. ನಾವು ಆವಕಾಲದ ಚರಿತ್ರೆಯನ್ನು ವಿವರಿಸಲೆಳಸಿರುವೆವೋ, ಆಕಾಲದಲ್ಲಿ ಮುಜ ಫರಖಾನನೆಂಬುವನು ನಾಗೂರಿನ ಅಧಿಪತಿಯಾಗಿದ್ದನು. ಮುಜಫರನು ವಿನಯ, ಪಾಪ ಭೀತಿ, ಮುಂತಾದ ಸನ್ಮಾರ್ಗಗಳ ವಾಸನೆಯನ್ನೇ ತಿಳಿಯದ ಮತ್ತು, ಆಪ್ರಮಾಣಿಕತೆ, ಇಂದ್ರಿಯ ಪಾರವಶ್ಯ, ವ್ಯಭಿಚಾರ, ವಂಚನೆ, ಇತ್ಯಾದಿ ದುರಾಚಾರಗಳಿಂದ ಕೂಡಿದ ಅಧರ್ಮೈಕನಿರತನಾಗಿದ್ದನೆಂದರೆ ಸದ್ಯಃ ಸಾಕಾಗಿರುವುದು. ಪ್ರದೋಷಕಾಲದ ಹೊತ್ತಿಗೆ ಮೋಹನಸಿಂಹನು, ಅರಮನೆಯ ಮುಂದೆ ಬಂದು ನಿಂತು,--ಒಬ್ಬ ಚಿತ್ರಗಾರನು ತನ್ನ ಚಿತ್ರಪಠಗಳೊಂದಿಗೆ ಬಂದಿರುವನೆಂದು ಹೇಳಿ ಕಳುಹಿಸಿದನು. ನಿರಂತರವೂ ಸ್ವಾರ್ಥ
ದಲ್ಲಿಯೇ ಆಸಕ್ತನಾಗಿರುತ್ತಿದ್ದ ಆ ರಾಜನಿಗೆ ಮತ್ತಾವ ಕೆಲಸವೂ ಇಲ್ಲದಿದ್ದುದರಿಂದ, ಅಂದು ಅವನು ಪ್ರಮೋದದ ಉದ್ಯಾನದಲ್ಲಿ ಕುಳಿತು ಸುರೆಯನ್ನು ಸೇವಿಸುತಲಿದ್ದನು. ಮೋಹನನ ಬರುವಿಕೆಯನ್ನು ತಿಳಿದೊಡನೆಯೇ ಅವನಿದ್ದೆಡೆಗೆ ಬಂದು, " ಎಲ್ಲಿ ?-
ನಿನ್ನ ಚಿತ್ರಪಟಗಳನ್ನು ತೆಗೆದು ತೋರಿಸು.” ಎಂದನು.
ಆಗ ಮೋಹನನು ತನ್ನ ಕಂಕುಳಿನಲ್ಲಿದ್ದ ಗಂಟನ್ನು ಬಿಚ್ಚಿ ಚಿತ್ರ ಪಠಗಳನ್ನು
ಒಂದೊಂದಾಗಿ ತೆಗೆದು ತೋರಿಸುತ್ತೆ, “ ಮಹಾಪ್ರಭು ! ನಾನೊಬ್ಬ ಪ್ರಸಿದ್ಧನಾದ ಚಿತ್ರಗಾರನು, ರಾಜಾಸ್ಥಾನದ ರಾಜರುಗಳೆಲ್ಲರೂ ತಂತಮ್ಮ ಮತ್ತು ತಂತಮ್ಮ
ಮನೆಯವರ ಚಿತ್ರಗಳನ್ನು ಬರೆಯಿಸಿಕೊಳ್ಳುವುದಕ್ಕೆ ನನ್ನನ್ನೇ ಕರೆಸುವರು. ನನ್ನಲ್ಲಿರುವ ಚಿತ್ರಗಳಲ್ಲಿನ ಎಲ್ಲಾ ಮನುಷ್ಯರನ್ನೂ ನಾನೇ ಸ್ವತಃ ನೋಡಿ ಬಂದಿರುತ್ತೇನೆ. ಈಗೈ, ಸುಮಾರು ಎರಡು ತಿಂಗಳುಗಳ ಕೆಳಗೆ ಮೇವಾರದ ರಾಣಾರವರು ತಮ್ಮ ಚಿತ್ರಪಠ
ವನ್ನು ತಯಾರುಮಾಡುವುದಕ್ಕಾಗಿ ನನ್ನನ್ನು ಕಳುಹಿದ್ದರು. ಆಗ ಅವರು ನನ್ನ ಬುದ್ದಿ ಕುಶಲತೆಗೆ ಮೆಚ್ಚಿ ಒಂದು ಸಹಸ್ರ ವರಹಗಳನ್ನು ಪಾರಿತೋಷಿಕವಾಗಿ ಕೊಟ್ಟರು.
ಅನಂತರ ನಾನು ಯೋಧಪುರದ ರಾಯರವರ ಚಿತ್ರವನ್ನು ತಯಾರುಮಾಡಿ ಅವರಿಂದ
ದೊಡ್ಡ ಬಹುಮಾನವನ್ನು ಪಡೆದೆನು. ಮೊನ್ನೆ ತಾನೆ ದುರ್ಗದ ಭಗವತೀದಾಸರವರು
ತಮ್ಮ ಕುವರಿಯ ರೂಪನ್ನು ಚಿತ್ರಿಸುವುದಕ್ಕಾಗಿ ನನ್ನನ್ನು ತಮ್ಮ ಬಳಿಗೆ ಕರೆಯಿಸಿ
ದ್ದರು. ಸ್ವಲ್ಪ ಕಾಲದಲ್ಲಿಯೇ ನಾನು ಆ ರಾಜಕುಮಾರಿಯ ಅಸಮಾನವಾದ ರೂಪನ್ನು ಬಹಳ ಅಂದವಾಗಿ ಚಿತ್ರಿಸಿದೆನು. ಅದಕ್ಕಾಗಿ ಅವರು ಪಾರಿತೋಷಿಕವಾಗಿ ಒಂದು ಅಮೂಲ್ಯವಾದ ಮುತ್ತಿನ ಹಾರವನ್ನು ಕೊಟ್ಟು ದೂ ಅಲ್ಲದೆ, ನನಗೆ ಕಷ್ಟ ಕಾಲವು ಸಂಪ್ರಾಪ್ತವಾದಾಗ ತಮ್ಮ ಬಳಿಗೆ ಬರಬಹುದೆಂದು ತಮ್ಮ ಅನುಜ್ಞೆಯನ್ನಿತ್ತಿರುತ್ತಾರೆ.
----------------------------------------
೬ ಕಾದಂಬರೀ ಸಂಗ್ರಹ
ಅದಕ್ಕಾಗಿ ನಾನು ಅವರಿಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದಾಗಿರುವುದು, ಪ್ರಭು
ಗಳೇ ! ಇತ್ತ ನೋಡಿ, ಆ ರಾಜಕುಮಾರಿಯ ಚಿತ್ರಪಠದ ಪ್ರತಿಯೊಂದು ಇಲ್ಲಿಯೇ ಇರುವುದು. ತಾವು ಈ ಗರೀಬನಮೇಲೆ ದಯವಿಟ್ಟು ಅದನ್ನು ಪರಿಕಿಸಿ ತಮ್ಮ ಅಭಿ ಪ್ರಾಯವನ್ನು ತಿಳುಹೋಣಾಗಲಿ'' ಎಂದು ಹೇಳಿ, ಅಂಬಾಲಿಕೆಯ ಚಿತ್ರಪಠವೊಂದನ್ನು ಮುಜಫರಖಾನನ ಹಸ್ತದಲ್ಲಿಟ್ಟು, ನಮ್ರಭಾವದಿಂದ ದೂರದಲ್ಲಿ ನಿಂತುಕೊಂಡು, ಖಾನನ ಉತ್ತರಾಪೇಕ್ಷಿಯಾಗಿ, ತನ್ನ ತಾನೇ, ಭಗವತೀದಾಸನ ಮೇಲಿನ ಸೂಡನ್ನು ತೀರಿಸಿ ಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗವು ಸಮಾಗತವಾಯಿತೆಂದುಕೊಂಡು ಆನಂದಿಸುತ್ತಿದ್ದನು.
ಆ ಚಿತ್ರವನವನ್ನು ನೋಡಿದ ಕೂಡಲೇ ಮುಜಫರನ ಮನಸ್ಸು ಅನೇಕ ವಿಕಾರ ಗಳಿಗೊಳಗಾಯಿತು. ಅವನ ಮನದಲ್ಲಿ ಏನೇನೋ ಭಾವನೆಗಳುಂಟಾದುವು. ಹಾಗೆಯೇ ಸ್ವಲ್ಪಹೊತ್ತಿನವರೆಗೂ ಚಿತ್ರಾಪಿತಳಾದ ಆ ರಮಣಿಯ ಸೌಂದರ್ಯವನ್ನು ಚಂಚಲ ದೃಷ್ಟಿಯಿಂದ ನೋಡುತ್ತಿದ್ದನು. ಆಗ, ಮುಜಫರನು, ಚಿತ್ರಗತಳಾದ ರಾಜಕುಮಾರಿ
ಯನ್ನು ವಿವಾಹಮಾಡಿಕೊಂಡು ಸುಖಿಸಬೇಕೆಂಬ ಉತ್ಕಟವಾದ ಇಚ್ಛೆಯುಳ್ಳವನಾ
ದನು. ಅನಂತರ ಅವನು ಮೋಹನನನ್ನು ಕುರಿತು, ಆಯಾ ! ಚಿತ್ರಗಾರ, ನಿನ್ನ
ನಾಮಧೇಯವೇನು ? '' ಎಂದು ಪ್ರಶ್ನಿಸಿದನು.
ಮೋಹನ:- ಮಹಾಪ್ರಭು ! ನನ್ನ ಹೆಸರು-ಮೋಹನಸಿಂಹ-ನೆಂದಿರುವುದು.”
ಮುಜಫರಖಾನ್ :-ಒಳ್ಳಿತು ಮೋಹನಸಿಂಹ; ನಾನು ಈ ಚಿತ್ರಪಠವನ್ನು ಕ್ರಯಕ್ಕೆ ತೆಗೆದುಕೊಳ್ಳುವೆನು. ಇದರ ಬೆಲೆಯೇನು ?-ಹೇಳು.
ಮೋಹನಸಿಂಹ :-ಹುಜೂರ್' ! ಅದಕ್ಕೆ ಪ್ರತಿಫಲವಾಗಿ ನನಗೇನೂ ಬೇಡ.
ನನ್ನನ್ನು ತಮ್ಮ ಬಳಿ ಆವುದಾದರೊಂದು ಚಾಕರಿಯಲ್ಲಿಟ್ಟುಕೊಂಡರೆ ಸಾಕು.
ಮುಜಫರ:-ಒಳ್ಳೆಯದು. ಇಂದಿನಿಂದಲೇ ನೀನು ನನ್ನ ಅಂಗರಕ್ಷಕಲ್ಲೋರ್ವ
ನಾಗಿರು.
ಇದನ್ನು ಕೇಳಿ ಅಲ್ಲಿದ್ದ ಒಬ್ಬ ಯವನ ಚಾಕರನು, " ಹುಜೂರ್ ! ನನ್ನ ಮನ
ವಿಯನ್ನು ಪಾಲಿಸಬೇಕು,'' ಎಂದನು.
ಮುಜಫರ :----ಅದೇನೋ ? ಗುಲಾಮ ! ಬೇಗ ಹೇಳು.
----------------------------------------------------------------------
ಅಂಬಾಲಿಕ ೭
ಚಾಕರನು :- ಹುಜೂರ್ ! ಈ ಮನುಷ್ಕನು ರಜಪೂತನು, ಬಹಳ ಕೆಟ್ಟ
ವಿಧರ್ಮಿಗಳ ಜಾತಿಗೆ ಸೇರಿದವನು. ಇವನು ಗೂಢಚಾರನಿರಬಹುದು. ಈ ಕಾಫರ
ರನ್ನು ನಂಬುವುದಕ್ಕಾಗುವುದಿಲ್ಲವಾದುದರಿಂದ ಇವನನ್ನು ತಟ್ಟನೆ ಅಂಥಾ ಭಾರೀ ಚಾಕರಿಯಲ್ಲಿಟ್ಟು ಕೊಳ್ಳುವುದು ಬಹಳ ಅಪಾಯಕರವು.
ಅದಕ್ಕೆ ಮುಜಫರನು, “ ನೀನು ಹೇಳಿದುದೂ ಉಚಿತವಾಗಿ ತೋರುತ್ತದೆ
(ಮೋಹನನ ಕಡೆ ತಿರುಗಿ), ಅಯ್ಯಾ ! ಚಿತ್ರಗಾರ ! ನೀನು ನನ್ನ ಚಿತ್ರಪಠವೊಂದನ್ನು
ಬರೆ. ಅದನ್ನು ನೋಡಿ ನಂಬುಗೆಯುಂಟಾದರೆ ನಿನ್ನನ್ನು ಚಾಕರಿಯಲ್ಲಿ ನಿಯಮಿಸುವೆವು.
ಅದಕ್ಕೆ ಸಮ್ಮತಿಸಿ, ಮೋಹನಸಿಂಹನು ಮಾರನೇ ದಿನ ಮುಜಫರನ ಚಿತ್ರಪಠ
ವೊಂದನ್ನು ಬಹಳ ಸುಂದರವಾಗಿ ತಯಾರುಮಾಡಿಕೊಟ್ಟನು, ಚಿಕ್ಕಂದಿನಿಂದಲೂ
ಚಿತ್ರಬರೆವ ವಿದ್ಯೆಯನ್ನು ಬಹಳ ಶ್ರಮದಿಂದ ಅಭ್ಯಾಸಮಾಡಿದ್ದನಾದುದುಂದ ಅವನಿಗೆ
ಅದು ಕಷ್ಟಕರವಾಗಿ ತೋರಿಬರಲಿಲ್ಲ. ಮುಜಫರನು ಮೋಹನನ ಕೌಶಲಕ್ಕೆ ಮೆಚ್ಚಿ ಅವನನ್ನು ತನ್ನ ಅಂಗರಕ್ಷಕರಲ್ಲೋರ್ವನನ್ನಾಗಿ ನಿಯಮಿಸಿದನು.
ಮೋಹನಸಿಂಹನಿಗೆ ತನ್ನ ಇಷ್ಟ ಪೂರ್ತಿಯಾದುದಕ್ಕೋಸ್ಕರ ಬಹಳ ಆಮೋದ ವುಂಟಾಯಿತು.
...................
ನಾಲ್ಕನೆಯ ಅಧ್ಯಾಯ.
ಮುಜಫರನು ಕಾಮಾಂಧನಾದನು. ನಮ್ಮ ಪ್ರಿಯ ಪಾಠಕ ಪಾಠಕಿಯರಿಗೆ
ಚಿರಪರಿಚಿತನಾದ ಪುಷ್ಪಶರನ ಪ್ರಬಲಾವೇಶಕ್ಕೆ ಮುಜನರನು ಸಿಕ್ಕಿ ಬಿದ್ದನು. ಅಂಬಾಲಿ
ಕೆಯ ಚಿತ್ರ ಪಠವನ್ನು ನೋಡಿದಂದಿನಿಂದ ಅವನ ಮನಸ್ಸೇ ಬೇರೇ ಕಡೆಗೆ ತಿರುಗಿತು. ತನ್ನ ರಾಣೀವಾಸದ ಮುಸಲ್ಮಾನ ಬೇಗಮುಗಳನ್ನು ಕಂಡರೆ ಆಲಸ್ಯವನ್ನು ತೋರ್ಪಡಿ ಸಲಾರಂಭಿಸಿದನು. ಸುರೆಯನ್ನು ಪಾನಮಾಡಿದಾಗಲಂತೂ ಉನ್ಮತ್ತನಾಗಿ ಜ್ಞಾನರಹಿತ ನಾಗುತ್ತಿದ್ದನು. ಕೊನೆಗೆ ಮೋಹನಸಿಂಹನ ಹೇಳಿಕೆಯಪ್ರಕಾರ ಅಂಬಾಲಿಕೆಯನ್ನು
ತನಗೇ ವಿವಾಹಮಾಡಿಕೊಡಬೇಕೆಂದು ಭಗವತೀದಾಸನಿಗೆ ಆಜ್ಞಾಪಿಸಿದನು.
ರಜಪೂತರು ಉತ್ತಮಜಾತಿಯವರು. ಯುದ್ಧ ಮಾಡಬಲ್ಲರು, ದೇಶಹಿತಕ್ಕಾಗಿ
ತಮ್ಮ ಪ್ರಾಣಗಳನ್ನಾದರೂ ಅರ್ಪಿಸಬಲ್ಲರು, ಆದರೆ, ಅವರು ಅಪಮಾನವನ್ನು
-----------------------------------------
೮ ಕಾದಂಬರೀ ಸಂಗ್ರಹ
ಮಾತ್ರ ಸೈರಿಸಲಾರರು. ಈ ಸಮಾಚಾರವನ್ನು ಕೇಳಿದೊಡನೆಯೇ ಭಗವತೀದಾಸನ ನೇತ್ರಗಳಲ್ಲಿ ದ್ವೇಷಾನಲವು ಪ್ರಕಾಶಿಸಲಾರಂಭವಾಯಿತು ; ಹುಬ್ಬು ಗಂಟಿಕ್ಕಿದನು, ಮುಖವು ರೌದ್ರಾಕಾರವನ್ನು ತಾಳಿದುದು, ಶರೀರದಲ್ಲಿ ರೋಮೋದ್ಗಮವಾದುದು,
ಅವನ ಹಸ್ತವು ಸಮೀಪದಲ್ಲಿದ್ದ ಕಬ್ಬುನದ ಅಸಿಯನ್ನೆಳೆಯಿತು. ರಾಜನು ಈ ಸಮಾಚಾರವನ್ನು ತಂದ ದೂತನನ್ನು ಸಮಾಪ್ತಿಗೊಳಿಸುವುದರಲ್ಲಿದ್ದನು, ಅಷ್ಟ
ರಲ್ಲಿಯೇ ವಿಕ್ರಮಸಿಂಹನೇ ಮುಂತಾದವರು ಬಂದು ರಾಜನಿಗೆ ಬುದ್ದಿವಾದವನ್ನು
ಹೇಳಿ ತಡೆದರು. ಆದರೆ ಭಗವತೀದಾಸನ ಕ್ರೋಧವು ತೃಣಮಾತ್ರವೂ ಕುಂದಲಿಲ್ಲ: ಕ್ಷಣೇಕ್ಷಣೇ ಆಧಿಕ್ಯವನ್ನು ತಳೆಯಲಾರಂಭವಾಯಿತು, ಭಗವತೀವಾಸನಿಗೆ, ಈ ಹಾಳು ಯವನರಾಜ್ಯ ವೃಕ್ಷದ ಬೇರನ್ನೆ ಕಿತ್ತು ಬಿಸುಟು, ಅವರನ್ನು ಭಾರತ ವರ್ಷ
ದಿಂದಲೇ ಹೊರದೂಡಬೇಕೆಂಬುವಷ್ಟರಮಟ್ಟಿಗೆ ಕೋಪಬಂದಿತು. ಆದರೆ, ರಾಜ
ಧರ್ಮದ ಮೇಲೆ ದೃಷ್ಟಿಯನ್ನಿಟ್ಟು ಮುಜಫರನ ದೂತನನ್ನು ಸಂಹರಿಸಲಿಲ್ಲವಾದರೂ ಅವನನ್ನು ಚೆನ್ನಾಗಿ ಬಯ್ದು ಅಪಮಾನಗೊಳಿಸಿ ಕಳುಹಿಸಿದನು.
ಇದಾದ ಕೆಲವು ದಿನಗಳ ಬಳಿಕ ಒಂದು ದಿವಸ ಮಂತ್ರಿಯಾದ ವಿಕ್ರಮ
ಸಿಂಹನು ಬಂದು ರಾಜನನ್ನು ಕಂಡು ಮಾತನಾಡಿದನು.
ವಿಕ್ರಮಸಿಂಹ-ಮಹಾರಾಜ ! ಆ ವಿಷಯವನ್ನು ಆಗಲೇ ಮರೆತುಬಿಟ್ಟಿರು
ವಂತೆ ಕಾಣುತ್ತದೆ.
ಭಗವತೀದಾಸ ...ಅದಾವುದು, ಅಂತಹ ವಿಷಯ ?
ವಿಕ್ರಮಸಿಂಹ-ಮುಜಫರನ ವಿಷಯ.
ಭಗವತೀದಾಸ-ಅದನ್ನೇ ? ಅದನ್ನು ಮರೆಯುವುದೆಂದರೇನು ? ಅದು
ಈಗಲೂ ನನ್ನ ಸ್ಮತಿಪಥದಲ್ಲಿರುವುದು. ಅದು ಹಾಗಿರಲಿ, ಈಗ ಅವನ ಸಮಾಚಾರ
ವೇನು ?
ವಿಕ್ರಮಸಿಂಹ :-ಮಹಾರಾಜ ! ತಾವು ಅವನ ದೂತನನ್ನು ತಿರಸ್ಕರಿಸಿದು
ದರಿಂದ ಕುಪಿತನಾದ ಮುಜಫರನು, ನನ್ನ ಪುತ್ರನಾಗಿದ್ದ ಮೋಹನಸಿಂಹನ ಹೇಳಿಕೆಯ
ಪ್ರಕಾರ ನಮ್ಮ ಮೇಲೆ ದಂಡೆತ್ತಿ ಬರುತ್ತಿರುವನು.
ಭಗವತೀದಾಸ :-ಇದು ನಿಜವೆ ? ವಿಕ್ರಮಸಿಂಹ : ಅಹುದು, ನನ್ನ ಗುಪ್ತಚರರಲ್ಲೋರ್ವನು ಬಂದು ಹೇಳಿದನು.
-----------------------------------------
ಆಂಬಾಲಿಕೆ ೯
ಭಗವತೀದಾಸ :-ಮಂತ್ರಿವರ್ಯನೆ ! ಅದಕ್ಕೇತಕ್ಕೆ ಚಿಂತಿಸಬೇಕು ? ಬಹಳ
ಕಾಲದಿಂದಲೂ, ನಮ್ಮ ರಜಪೂತಯೋಧಗಣವು ರಣಸಮುದ್ರದಲ್ಲಿ ಧುಮಿಕಿ ಯವನರ ಎದೆಯ ರುಧಿರವನ್ನು ಹೀರಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ಬಹಳ ಆತುರಪಡು ತ್ತಿರುವುದು, ಆ ನೀಚನಾದ ಮುಜಫರನ ಯವನ ಸೈನ್ಯವು ನಮ್ಮ ದುರ್ಗವನ್ನು ಸಮೀಪಿಸಿದುದೇ ಆದರೆ ನಮ್ಮ ಸುಶಿಕ್ಷಿತವಾದ ಸೇನೆಯು ಅದನ್ನು ನಿರ್ಮೂಲಮಾಡಿ ಮುಜಫರನ ಹೆಸರನ್ನು ಪ್ರಪಂಚದಿಂದಲೇ ಅಳಿಸಿ ಬಿಡುವುದರಲ್ಲಿ ದೇಶಮಾತ್ರವೂ ಸಂದೆ ಗವಿರಲಾರದು. ಹೀಗಿರುವಲ್ಲಿ ನಾವು ಆ ತುಷ್ಟನಾದ ಯವನನಿಗೆ ಏತಕ್ಕಾಗಿ ಭಯಪ
ಡಬೇಕು ? ಅ ಮನು ನಮ್ಮ ಸೈನ್ಯದ ಬಳಿ ಬರಲಿ ! ಆಗ ರಾಜ ಪುತ್ರ ಕನ್ಯೆಯನ್ನು ಹಿನ ಜಾತಿಯವನು ಅಪೇಕ್ಷಿಸುವುದರ ಪರಿಣಾಮವೇನಾಗುವುದೆಂಬುದನ್ನು ಅವನಿಗೆ ಚೆನ್ನಾಗಿ ತಿಳುಹಿಸಿ ಬುದ್ದಿಗಲಿಸುವೆನು.
ವಿಕ್ರಮಸಿಂಹ :-ಮಹಾರಾಜ ! ಸಾವಧಾನದಿಂದ ಚಿತ್ತೈಸಿ, ಕೋಪೋ
ದ್ರೇಕದಿಂದ ಸಿಕ್ಕಿದಹಾಗೆಲ್ಲ ಪ್ರವರ್ತಿಸುವುದು ಶ್ರೇಯಸ್ಕರವಾದುದು. ಚೆನ್ನಾಗಿ ಪರ್ಯಾಲೋಚಿಸಿ ನೋಡಿ-ನಮ್ಮ ಸೇನೆಯಿರುವುದು ? ಅವರ ಬಲವೆಷ್ಟಿರುವುದು ?
ಅವರ ಅಗಾಧವಾದ ಸೇನೆಯನ್ನು ಇರಿಸಿದರೆ ನಮ್ಮ ಗತಿಯೇನಾಗುವುದು ? -
ಭಗವತೀದಾಸ :----ವಿಕ್ರಮಸಿಂಹ ! ಏನು ಹೇಳುತ್ತಿರ.ವಿ ? ಒಂದೂವರೆ ಸಹಸ್ರ ಸುಶಿಕ್ಷಿತರಾದ ಯೋದ್ಧೃಗಳು ನಮ್ಮ ಆಜ್ಞಾಬದ್ಧರಾಗಿಲ್ಲವೆ?
ವಿಕ್ರಮಸಿಂಹ-ನಮ್ಮ ಬಳಿ ಇರುವವರಾದರೋ ಒಂದೂವರೆಸಹಸ್ತ್ರ ಸವಾ
ರರು-ಆದರೆ, ಅವರ ಬಳಿ ಐದುಸಹಸ್ರ ರಾಹುಕರಿರುವರಲ್ಲ !
ಭಗವತೀದಾಸ-ವಂತ್ರಿವರ್ಯನೆ ! ಹಾಗಾದರೆ ನಮ್ಮ ಸೈನ್ಯವು ಅವರ
ಸೈನ್ಯವನ್ನಿದಿರಿಸಿ ಯುದ್ದ ಮಾಡಲಾರದೆ ? ನಮ್ಮ ಸೈನಿಕರ ನರಗಳಲ್ಲಿಯೂ ದುರ್ಬಲ ತೆಯು ವ್ಯಾಪಿಸಿರುವುದೇನು ? ನಮ್ಮವರೆಲ್ಲರೂ ಹೆಂಗಸರಾದರೋ ? ನಮ್ಮ ಸೈನಿಕರಲ್ಲಿನ ರಜಪೂತರಕ್ತವು ಇಂಗಿಹೋಯಿತೆ ? ನಮ್ಮವರು ತಮ್ಮ ಪೂರ್ವ ಪುರುಷರ ಶೌರ್ಯ,
ಸ್ಥೈರ್ಯ, ಸಾಹಸಾದಿ ಸತ್ವಗುಣಗಳನ್ನು ಮರೆತುಬಿಟ್ಟರೆ ? ಅವರ ಜ್ಞಾಪಕಶಕ್ತಿಯು
ಹಾಳಾಗಿ ಹೋಯಿತೆ ? ನಮ್ಮವರು, ಭರತಖಂಡಕ್ಕೆ ರತ್ನ ಪ್ರಾಯವಾದ ರಾಜಸ್ಥಾನ
ದಲ್ಲಿ ಆರ್ಯವೀರದಂಪತಿಗಳಿಗೆ ಜನ್ಮಗ್ರಹಣಮಾಡಲಿಲ್ಲವೆ ? ನಮ್ಮವರು ರಜಪೂತಜನ ನಿಯ ಸ್ತನ್ಯಪಾನವನ್ನು ಮಾಡಲಿಲ್ಲವೇನು ? ನಮ್ಮವರೆಲ್ಲರಲ್ಲಿಯೂ ಕ್ಷಾತ್ರಧರ್ಮವು ತಿಲಮಾತ್ರವಾದರೂ ಉಳಿದುಕೊಳ್ಳದೆ ಲುಪ್ತವಾಗಿ ಹೋಯಿತೆ ?-ಎಲೈ, ವಿಕ್ರಮ
-----------------------------------
೧೦ ಕಾದಂಬರೀ ಸಂಗ್ರಹ
ಸಿಂಹ! ನಮ್ಮ ರಜಪೂತರ ವೀರ್ಯಾದಿಗುಣಗಳನ್ನು ಹೀಗೆ ತೃಣೀಕರಿಸಿ ಮಾತನಾಡುವುದು ನಿನಗೆ,-ರಾಜಕಾರ್ಯಪ್ರವೀಣನಿಗೆ,ದೇಶಪಿತೈಷಿಗೆ, ದೀರ್ಘದರ್ಶಿಗೆ ಉಚಿತವಾ
ದುದೆ ? ಹಾ! ಹಾ!! ? !!! ಭಾರತೀಯರ ಗತಿಬಂತಾದುದು ಅತೀವ ಶೋಚನೀಯ !
ವಿಕ್ರಮಸಿಂಹ- ಮಹಾರಾಜ ! ನಮ್ಮವರಲ್ಲಿ ವೀರ್ಯವಿಲ್ಲ ಎಂದು ನಾನು
ಹೇಳಲಿಲ್ಲ. ನಮ್ಮವರು ಯುದ್ಧದಲ್ಲಿ ಇತರರೆಲ್ಲರನ್ನೂ ಹೊಡೆದಟ್ಟು ವರು. ಸಮರ ಸಮುದ್ರದಲ್ಲಿ ನಮ್ಮ ಸೈನ್ಯದ ತರಂಗಗಳಿ೦ದ ತಾಡಿತವಾಗಿ ಬದುಕಿಬರುವವರಾರಿವರು ? ಆದರೆ ಈಗ ನಾವು ಯುದ್ಧ ಮಾಡಿದರೆ ಅನೇಕ ಸ್ವಾಮಿ ಭಕ್ತರಾದ ರಜಪೂತಯೋ
ಧರ ಪ್ರಾಣಗಳನ್ನು ವ್ಯರ್ಥವಾಗಿ ನಷ್ಟಗೊಳಿಸಬೇಕಾಗುವುದು. ಹಾಗೆ ನಷ್ಟಗೊಳಿಸಿ
ದರೂ ಚಿಂತೆಯಿಲ್ಲ, ನಮಗೇನಾದರೂ ಲಾಭವುಂಟಾಗುವುದೋ...ಎಂದೆಂದುಕೊಂ
ಡರೆ ನಮಗೆ ಅದರಿಂದ ಬರುವ ಪ್ರತಿಫಲವಾವುದೂ ಇಲ್ಲ. ಹೀಗಿರುವಲ್ಲಿ ಅನೇಕ ಪ್ರಾಣಗಳನ್ನು ಅನ್ನೆಯವಾಗಿ ಬಲಿಗೊಡುವುದು ಒಳ್ಳೆಯದಲ್ಲ.
ಭಗವತೀದಾಸ.---ಎಲೈ, ಸಚಿವಪುಂಗವನೆ ! ನಾನು ಮೊದಲು ದುಡುಕಿ
ಮಾತನಾಡಿದುದನ್ನು ಮನ್ನಿಸು, ನೀನು ಹೇಳುವುದೂ ಅಲೋಚನಾರ್ಹವಾದುದು.
ಈಗ ನನಗೆ ಈ ಕಷ್ಟದಿಂದ ಪಾರಾಗುವ ವಿಧವಾವುದೂ ತಿಳಿಯುವುದಿಲ್ಲ. ಆದುದ
ರಿಂದ ನೀನೇ ಯೋಚಿಸಿಹೇಳಬೇಕು.
ವಿಕ್ರಮಸಿಂಹ...ರಾಜನೆ ! ಇಂತಹ ಸಂದರ್ಭಗಳಲ್ಲಿ ಅನ್ಯರಾಜರ ಸಾಹಯ್ಯ
ವಿಲ್ಲದೆ ಸ್ವತಂತ್ರವಾಗಿ ಪ್ರವರ್ತಿಸುವುದು ಬಹಳ ಅಪಾಯಕರವಾದುದು. ಅದುಕಾರಣ
ಈಗ ನಾವು ಜಸಲಮೇರದಧಿಪತಿಯಾದ ಕರ್ಣರಾಯನ ಸಹಾಯ್ಯವನ್ನು ತೆಗೆದು ಕೊಳ್ಳುವುದು ಒಳ್ಳೆಯದೆಂದು ತೋರುತ್ತಿದೆ. ಅವರು ನಮ್ಮ ಪಕ್ಷವನ್ನು ವಹಿಸಿದರೆ, ನಿಸ್ಸಂಶಯವಾಗಿಯ ಸವಗೇ ಜಯವು ಲಭ್ಯವಾಗುವುದು.
ಭಗವತೀದಾಸ ಒಳ್ಳೆಯದು, ವಿಕ್ರಮಸಿಂಹ ! ನಾಳೆಯೇ ನಾನು, ಪತ್ನಿ
ಪುತ್ರಿಯರನ್ನು ಕರೆದುಕೊಂಡು ಸ್ವಲ್ಪ ಸೇನಾಸಮೇತನಾಗಿ ಜಸಲಮೀರಕ್ಕೆ ತೆರಳು
ವೆನು. ನಾನು ಹಿಂದಿರುಗಿ ಬರುವವರೆಗೂ ನೀನು ಇಲ್ಲಿನ ಕಾರ್ಯಭಾಗಗಳನ್ನು ನೋಡಿಕೊಂಡಿರು.
ವಿಕ್ರಮಸಿಂಹ-ಅಪ್ಪಣೆ
ಭಗವತೀದಾಸ-ಆದರೆ ಈ ವಿಷಯವು ಮಾತ್ರ ಗುಪ್ತವಾಗಿರಲಿ.
ಮೋಹನಸಿಂಹನು ಮುಜಫರನ ಸೇವೆಯಲ್ಲಿ ನಿರತನಾದುದನ್ನು ನಮ್ಮ ಪಾಠಕ
ಸದಾಶಯರು ಇಷ್ಟು ಬೇಗಾಗಲೇ ಮರೆತುಬಿಟ್ಟಿರಲಾರರು. ಹಾಗೆ ಯವನರಾಜನ
--------------------------------------------
ಅಂಬಾಲಿಕೆ ೧೧
ಚಾಕರಿಯಲ್ಲಿ ನಿಂತಬಳಿಕ ಮೋಹನನ ಹಲವು ಗೂಢಚಾರರನ್ನು ದುರ್ಗಕ್ಕೆ ಕಳುಹಿ,
ಅಲ್ಲಿ ನಡೆಯುವ ಸಂಗತಿಗಳೆಲ್ಲವನ್ನೂ ತನಗೆ ತಿಳುಹಿಸಬೇಕೆಂದು ಅಜ್ಞಾಪಿಸಿದ್ದನು. ಅವರಲ್ಲೋರ್ವನು, ರಾಜಸಚಿವರ ಸಂಭಾಷಣೆಯನ್ನೂ ಮತ್ತು ಅವರ ತೀರ್ಮಾನ
ವನ್ನೂ ಹೇಗೆ ತಿಳಿದು ಕೊಂಡುಬಂದು ಅದನ್ನು ಮೋಹನನಿಗೆ ಹೇಳಿಬಿಟ್ಟನು.
ಇದನ್ನು ಮೋಹನನು ಮುಘರಸಿಗೆ ತಿಳುಹಿಸಿದನು. ಆಗ ಮುಜನರನು ಸೇನಾಸಮೇ
ತನಾಗಿ, ಪ್ರಯಾಣ ಸನ್ನದ್ದನಾಗಿದ್ದ ರಾಜಾ ಭಗವತೀದಾಸನನ್ನು ಇದಿರಿಸಿ ಅವನ ಪುತ್ರಿಯನ್ನು ಬಲಾತ್ಕಾರವಾಗಿ ಕರೆದೊಯ್ಯುವೆನೆಂದು ಶಪಥಮಾಡಿಕೊಂಡು ಜಸಲ
ಮೀರದ ಮಾರ್ಗದಲ್ಲಿದೆ. ಪ್ರಯಾಣವನ್ನು ಬೆಳೆಸಿದನು. ಮೋಹನಸಿಂಹನೂ ಅವ
ನನ್ನ ನುಸರಿಸಿದನೆಂಬುದನ್ನು ಬರೆಯಬೇಕಾದುದರ ಆವಶ್ಯಕವೇ ಇಲ್ಲವು.
......................
ಐದನೆಯ ಅಧ್ಯಾಯ.
ಸಂಜೆಯಾಯಿತು, ಹಾಲುತಿಲ್ಲದಹಾಗೆ ಬೆಳದಿಂಗಳು ಬಂದಿತು, ಕಳೆಯಾಣ್ಮ
ನಿಂದ ಹೊರಸೂಸುವ ಅಮೃತವಳ್ಳಿಗಳು ಸರ್ವರಿಗೂ ಅತ್ಯುತ್ಸಾಹವನ್ನು ಉಂಟು ಮಾಡಿದುವು
- ಇಂದು ದುರ್ಗದ ಸೈನಿಕರಲ್ಲಿ ದೊಡ್ಡ ಕೋಲಾಹಲವೆದ್ದಿರುವುದು. ಎಲ್ಲರಿಗೂ ಆಶ್ಚರ್ಯದ ಮೇಲಾಶ್ಚರ್ಯ ! ಆ ರಾತ್ರಿಯೇ ಪ್ರಯಾಣಮಾಡುವುದಕ್ಕೆ ಸಿದ್ಧರಾಗಿರ ಬೇಕೆಂದು ವಿಕ್ರಮಸಿಂಹ ಮಂತ್ರಿಮಂಗವನು ಕಟ್ಟಲಾ.ವೆ. ಸೈನಿಕರಿಗೆ ತಿಳಿಯಿಸಿ ದನು. ಆ ಸಮಾಚಾರವು ಒಂದೆರಡು ನಿಮಿಷಗಳಲ್ಲಿಯೇ ಊರಲ್ಲೆಲ್ಲಾ ಪಸರಿಸಿತು, ಅನಂತರ, ಎಲ್ಲಿ ನೋಡಿದರಲ್ಲಿ ಜನಸಮೂಹಗಳೆ ಕಾಣಬರುತ್ತಿದ್ದುವು. ಒಂದೆಡೆಸೇರಿ ಕೌತುಕದಿಂದ ಮಂತ್ರಿಯ ಆಜ್ಞೆಯ ಕಾರಣವನ್ನು ಚರ್ಚಿಸುತ್ತಿರುವವರು ಕೆಲವರು. ಕರ್ತವ್ಯದಮೇಲೆ ಹೋಗಲು ಸ೦ಸಿಸ್ಟೆರಾಗುತ್ತಿರುವ ಸೈನಿಕರು ಕೆಲವರು, ಯುದ್ಧ ಭೂಮಿಯ ನೋಟವನ್ನು ಹೃದಯಂಗಮವಾಗುವಂತೆ ತಮ್ಮ ಜತೆಗಾರರಿಗೆ ತಿಳಿಸುತ್ತಿ ರುವ ಸೈನಿಕರು ಕೆಲವರು. ಹಿಂದೆ ನಡೆದ ಯುದ್ಧಗಳಲ್ಲಿ ತಾವು ಪ್ರದರ್ಶಿಸಿದ ಧೈರ್ಯ ಶೌರ್ಯಗಳನ್ನು ಒಸಗಳಿಗೆ ಎದುರಾದ ತವಾದ ಸೈನಿಕರು ಕೆಲವರು. ಮುಂದೆ ನಡೆದ ಯುದ್ಧದಲ್ಲಿ ಎಷ್ಟು ಭಯಂಕರವಾಗಿ ತಮ್ಮ ಶತ್ರಗಳನ್ನು ಹೊಡೆದಟ್ಟುವೆ ವೆಂದು ತಮ್ಮ ಪರಾಕ್ರಮವನ್ನು ತಾವೇ ಪ್ರಶಂಸಿಸುತ್ತಿರುವ ಸೈನಿಕರು ಹಲವರು. ತಮ್ಮ ಆಯುಧಗಳನ್ನು ತೊಳೆದು ಶುಭ್ರಪಡಿಸುತ್ತಿರುವವರು ಕೆಲವರು, ತಮ್ಮ ಅಶ್ವಗ
--------------------------------------------------
೧೨
ಕಾದಂಬರೀ ಸಂಗ್ರಹ
ಇನ್ನು ಉಜ್ಜಿ ತೊಳೆಯುತ್ತಿರುವವರು ಕೆಲವರು. ಹಳೆಯ ಸಾಧಕಗಳನ್ನು ಜ್ಞಾಪಿಸಿ
ಕೊಳ್ಳುತ್ತೆ ಆಸಿಗಳನ್ನು ಝಳಪಿಸುತ್ತಿರುವವರು ಹಲವರು. ಅನತಿಕಾಲದಲ್ಲಿಯೇ ಯೋದ್ದರುಗಳೆಲ್ಲರೂ ಸುಸಜ್ಜಿತರಾಗಿ ಸಾಲುಸಾಲಾಗಿ ನಿಂತು ಮುಂದು ಅಪ್ಪಣೆ
ಯನ್ನು ನೆರವೇರಿಸುವುದಕ್ಕಾಗಿ ಕಾಲನಿರೀಕ್ಷಣೆಮಾಡುತ್ತಿದ್ದರು.
ಊರಿನ ಜನಗಳಲ್ಲಿಯೂ ದೊಡ್ಡ ಗದ್ದಲವೆದ್ದುದು, ಸಮಾಚಾರವನ್ನು ಕೇಳಿ
ದೊಡನೆಯೇ ಎಲ್ಲೆಲ್ಲಿದ್ದವರು ಅಲ್ಲಿಯೇ ನಿಂತುಬಿಟ್ಟರು. ಎಲ್ಲರಲ್ಲಿಯೂ ಆಶ್ಚರ್ಯವು ತಾನಾಗಿ ತಾನೇ ಆಕ್ರಮಿಸಿಕೊಂಡುದು. ಬೀದಿಯಲ್ಲಿ ಆಟವಾಡುತಲಿದ್ದ ಬಾಲಕರೆ
ಲ್ಲರೂ, " ಎಲೋ ! ಬನ್ನಿ ರೋ ! ಯುದ್ಧಕ್ಕೆ ಹೋಗುವಂತಿದೆ. ನಾವೂ ಸಹ ಪೊರ ಮಟ್ಟು ಅರಿಗಳನ್ನು ಹೊಡೆದಟ್ಟುವ!” ಎಂದನ್ನಲಾರಂಭ ಮಾಡಿದರು, ವೃದ್ಧರೆಲ್ಲರೂ, ಆವುದೋ ಒಂದು ಮಹೋತ್ಸವವು ಸಮೀಪಗತವಾಯಿತೆಂದುಕೊಂಡರು. ಧನಾರ್ಥಿಗ ಳೆಲ್ಲರೂ, ತಾವು ಗಳಿಸಿದ ಸಂಪತ್ತನ್ನು ಭೂಗರ್ಭ ಮಾಡುವುದಕ್ಕೆ ಹೊರಟರು, ಯುವ
ಕರೆಲ್ಲರೂ ಯುದ್ಧಾಪೇಕ್ಷಿಗಳಾಗಿ ಸೇನೆಯ ಹಿಂದೆ ಹೊರಡಲು ಅನುವಾದರು. ವೀರ ಮಾತೆಯರೆಲ್ಲರೂ ರಾಜನಿಗೆ ಸಾಹಾಯ್ಯ ಮಾಡುವಂತೆ ತಂತಮ್ಮ ಪುತ್ರರನ್ನು ಪ್ರೇರೇ ಸಿದರು. ವರ್ತಕರೆಲ್ಲರೂ ತಮ್ಮ ವ್ಯಾಪಾರಕ್ಕೆ ಎಲ್ಲಿಯಾದರೂ ಕುಂದುಬಂದಿತೆಂದು ಯೋಚಿಸುತ್ತಾ ಕುಳಿತುಬಿಟ್ಟರು. ಊರಲ್ಲಿ ಎಲ್ಲೆಲ್ಲಿ ನೋಡಿದರೂ ಗಲಭೆಯೇ ಕಂಡು ಬರುತ್ತಿದ್ದಿತು.
ಅರಮನೆಯಲ್ಲೂ ಸೇವಕ ಸೇವಕಿಯರ ಕೂಗಾಟ! ಹುಚು ಸಂಭ್ರಮ !!
ರಾಣಿಯು ತಾನೇ ಸ್ವಂತವಾಗಿ ಪ್ರಯಾಣಕ್ಕೆ ಎಲ್ಲವನ್ನೂ ಅಣಿಮಾಡತೊಡಗಿರುವಳು. ಅರಮನೆಯ ಧನವನ್ನೆಲ್ಲ ಒಂದು ಕಡೆ ಹೂಳಿಟ್ಟು ಅದನ್ನು ವಿಕ್ರಮಸಿಂಹನಿಗೆ ತಿಳಿಸಿ ದುದಾಯ್ತು. ಇಷ್ಟೆಲ್ಲಾ ನಡೆದರೂ ಎಲ್ಲಿಗೆ ಹೋಗುವುದೆಂಬುದು ಮಾತ್ರ ರಾಜಾ,
ಮಂತ್ರಿ, ಮೋಹನನ ಗುಪ್ತಚರನೋರ್ವ, ಇವರಿಗಲ್ಲದೆ ಮತ್ಯಾವಪ್ರಾಣಿಗೂ ತಿಳಿ
ಯದು. ಆದರೂ ಜನರ ಮಾತ್ರ ತಮ್ಮ ಮನಸ್ಸಿಗೆ ಬಂದಂತೆಲ್ಲಾ ಹೇಳಿಕೊಳ್ಳುತ್ತಿ
ದ್ದರು. ಹೊರಡುವುದಕ್ಕೆ ಮುಂಚಿತವಾಗಿ ಊರು ಮತ್ತು ಅರಮನೆಗಳನ್ನು ಕಾಯು ವುದಕ್ಕಾಗಿ ಸ್ವಲ್ಪ ಸೇನೆಯು ವಿಕ್ರಮಸಿಂಹಮಂತ್ರಿಯ ಅಧೀನಮಾಡಲ್ಪಟ್ಟುದು.
ಇಷ್ಟು ಹೊತ್ತಿಗೆ ಸೈನಿಕರು ತಮ್ಮ ತಮ್ಮ ನಾಯಕರ ಅಧೀನದಲ್ಲಿ ರಣಘೋಷ ವಂಗೈಯುತ್ತ ಅರಮನೆಯ ಮುಂದೆ ಬಂದು ನಿಂತರು. ಯೋದ್ಧರೆಲ್ಲರೂ
ಆಗಸ ವನ್ನು ಭೇದಿಸುವ ಹಾಗೆ ಧ್ವನಿಮಾಡಿದರು.
"ಜಯ | ಭಗವತೀದಾಸನಿಗೆ ಜಯವಾಗಲಿ!"
-----------------------------------------------------------
ಅಂಬಾಲಿಕೆ ೧೩
ಅನಂತರ ರಾಣಿಯೂ ರಾಯಗುವರಿ ಅಂಬಾಲಿಕೆಯೂ ಅವರವರ ಪಾಲ್ಕಿಗಳಲ್ಲಿ
ಕುಳಿತರು. ರಾಜನು ಉತ್ತಮಾಶ್ವವೊಂದನ್ನಡರಿದನು, ಸೈನಿಕರೂ ತಂತಮ್ಮ ಅಶ್ವಗಳ
ನ್ನಾರೋಹಿಸಿದರು. ರಣಭೇರಿಯು ಧ್ವನಿತವಾಯ್ತು, ಬಳಿಕ ಇನ್ನೊಂದುತಡವೆ ಸೈನಿಕ ಸೇನಾನಿಗಳೆಲ್ಲರೂ ಇಂತೆಂದು ಉರ್ಘೋಷವನ್ನು ಮಾಡಿದರು.
"ಜಯ ! ರಾಜಾ ಭಗವತೀದಾಸನಿಗೆ ಜಯ!!”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ