ಬುಧವಾರ, ಸೆಪ್ಟೆಂಬರ್ 9, 2020

ಆನಂದ

https://archive.org/details/dli.osmania.4004

TEXT FLY WITHIN THE BOOK ONLY

UNIVERSAL LIBRARY

0030

LIBRARY UNIVERSAL

ಆನಂದ

ಅಥವಾ

ಮ ನೆ ಯ ಅಳಿಯ

ಎಂಬ ಸಾ ಮಾ ಜಿಕ ಕಾದಂಬರಿ.

ಬಸರೂರು ಹಿಂದೂ ಹಾಯರ್ ಎಲಿಮೆಂಟರಿ ಶಾಲೆಯ ಅಧ್ಯಾಪಕರಾದ

ಎಚ್, ಕೋಟಯಣ್ಣ ಶೆಟ್ಟರವರಿಂದ

ರಚಿಸಿ ಪ್ರಕಟಿಸಲ್ಪಟ್ಟಿತು.

ಮಂಗಳೂರು ಕೆನರಾ ಛಾಪಖಾನೆಯಲ್ಲಿ ಮುದ್ರಿಸಲ್ಪಟ್ಟಿತು.

1922,

All rights Reserved. ಬೆಲೆ 3ಆಣೆ.]

-----------------------------------------------------------------------

ವಿಜ್ಞಾಪನೆಗಳು.

ದೇಶ ಹಿತೈಷಿಗಳಾದ ಪ್ರಾಜ್ಞರು ಧಾರ್ಮಿಕ, ಸಾಮಾಜಿಕ, ರಾಜ

ಕೀಯ ವಿಷಯಗಳಲ್ಲಿ ಉತ್ತಮವಾದ ಗ್ರಂಥಗಳನ್ನು ರಚಿಸಿ ಹಾಗೂ

ಯೋಗ್ಯ ಲೇಖನಗಳನ್ನೂ ಪತ್ರಿಕೆಗಳಲ್ಲಿ ಪ್ರಕ ಶಿಸಿ ಆ ಮೂಲಕ ದೇಶಾಭಿ

ವೃದ್ಧಿ, ಭಾಷಾ ಸೇವೆಯೇ ಮೊದಲಾದ ಸತ್ಕಾರ್ಯಗಳನ್ನು ಮಾಡುತ್ತಿರು

ವರು. ಅವರಾ ಪ್ರಯತ್ನಗಳಲ್ಲಿ ಅಳಿಲು ಭಕ್ತಿಯಂತೆ ಯಥಾನುಶಕ್ತಿ ಸೇವೆ

ಮಾಡ ಬೇಕೆಂಬ ಅತ್ಯುತ್ಕಟಾಪೇಕ್ಷೆಯಿಂದ ನಾನೀಕೆಲಸದಲ್ಲಿ ತೊಡಗಿದೆನು.


ಕೇವಲ ಪಂಡಿತರಿಗೂ ಭಾಷಾ ವಿಶಾರದರಿಗೂ ಸಾಧ್ಯವಾದ ಈ ಪ್ರಯ

ತ್ನವು ನನ್ನಿಂದ ಸಾರ್ಥಕ್ಯವನ್ನು ಹೊಂದುವುದೋ ಏನೋ ಎಂಬ ಭಯವು

ಒಂದೆಡೆ ನನ್ನನ್ನು ಪೀಡಿಸುತ್ತಿದ್ದರೂ, ವಿದ್ಯಾವಂತರಾದ ಸುಹೃದಯ ಪಾಠಕ

ವರ್ಗವು ಸಹಾಯ ಸಂಪತ್ತಿಯವಲಕ ಪ್ರೋತ್ಸಾಹಿಸುವದೆಂಬ ನಂಬುಗೆ

ಯಿಂದ ಏತತ್ಕಾರ್ಯತತ್ಪರನಾದೆನು.


ಈ ಸಂಸಾರಿಕ ಕ ಥೆಯು ಹಳ್ಳಿ ಯ ಉಪಾಧ್ಯಾಯನಾದ ನನ್ನ ಸ್ವ

ಕ ಫೋಲ ಕಲ್ಪಿತವು. ಹಿಂದೂ ಸಮಾಜದಲ್ಲಿ ಮುಖ್ಯವಾಗಿ ಅಳಿಯಕಟ್ಟಿನವ

ರಲ್ಲಿ ರೂಢಮೂಲವಾಗಿರುವ ಹಲವು ದೋಷಗಳನ್ನು ಈ ಕಥೆಯಲ್ಲಿ

ಬರೆದಿದೆ. ಇಂಥ ಪದ್ದತಿಗಳು ಸರ್ವಸಾಮಾನ್ಯವಾಗಿ ಕಂಡುಬರುವಷ್ಟು

ದುರವಸ್ಥೆಗೆ ನಮ್ಮ ಸಮಾಜವು ಇಳಿದಿಲ್ಲವಾದರೂ, ಅ ಪ ರೂಪವಾಗಿ ಅಲ್ಲಲ್ಲಿ

ಎಲ್ಲಾದರೊಂದು ಕಡೆ ಇಂಥ ಸಂಗತಿಗಳು ನಡೆಯುವುದೂ ಉಂಟೆಂದು

ಸಮಸ್ತರೂ ಒಪ್ಪದಿರಲಾರರೆಂದು ನಂಬುವೆನು.


ಈ ಚಿಕ್ಕ ವಹಿಯಲ್ಲಿ ನೀತಿಬೋಧಕ ವಾದ ಕೆಲವು ವಿಷಯಗಳನ್ನೂ

ಸ್ತ್ರೀ ಪುರುಷರ ವಿದ್ಯೆಯ ಆವಶ್ಯಕತೆಯನ್ನೂ ಸವಿಸ್ತರವಾಗಿ ವಿವರಿಸಿಯದೆ.

ಈ ಗ್ರಂಥದಲ್ಲಿ ಆದರ್ಶ ಪುರುಷನಾದ "ಆನಂದ" ನನ್ನೂ ಆದರ್ಶ

ರಮಣಿಯಾದ " ಸುಶೀಲೆ" ಯನ್ನೂ ಪಾಠ ಕಮಹಾಶಯರಾದ ಬಂಧು

ಭಗಿನಿಯರ ಮುಂದ ತಂದು ತೋರಿಸಿರುವನು. ಆ ದಂಪತಿಗಳೀರ್ವ ರೂ

ತಮ್ಮೆಲ್ಲರಮತಿ ಯಿಂದಲೂ ಯೋಗ್ಯರೆಂದು ಪುರಸ್ಕೃತರಾದರೆ, ಅಲ್ಪಮತಿ

ಯ ಅಭಿನಂದನವು ಅಯೋಗ್ಯ ವಾದುದಲ್ಲವೆಂದೂ, ನ ಪ್ರಥಮ ಪ್ರಯ

ತ್ನವು ಸಾರ್ಥಕವಾಯಿತೆಂದೂ ಭಾವಿಸುವೆನು.

------------------------------------------------


ಭಾಷಾ ಶೈಲಿಯ ಸೌಲಭ್ಯತೆಗೆ ವಿಶೇಷ ಗಮನ ಕೊಟ್ಟಿರುವೆನೆಂದು

ಬರೇ ನಾಗಾಡಂಬರದಿಂದ ಹೇಳಿಕೊಳ್ಳುವುದಕ್ಕಿಂತ, ಆದರ ನಿಜತ್ವವನ್ನು

ಪರಿಶೀಲಿಸುವ ಸಲುವಾಗಿ ಗುಣಗ್ರಾಹಿಗಳಾದ ವಾಚಕರ ಪಾಲಿಗೆ ನೇ ಆ

ಕಾರ್ಯವನ್ನು ಒಪ್ಪಿಸುವುದು ತಕ್ಕು ದೆಂದು ಹಾಗೆಯೇ ಮಾಡಿರುವೆನು.


ಈ ಪುಸ್ತಕವನ್ನು ಸಿದ್ಧಗೊಳಿಸುವಾಗ ನನಗೆ ಸಹಾಯ ಮಾಡಿದ ಮಹ

ನೀಯರಿಗೆ ನನ್ನ ಮನಃ ಪೂರ್ವಕವಾದ ಕೃತಜ್ಞತೆಯನ್ನು ಸಮರ್ಪಿಸುವುದು

ಮುಖ್ಯ ಕರ್ತವ್ಯವಾಗಿರುವುದು. ನನ್ನ ಹಸ್ತ ಲೇಖನವನ್ನು ಓದಿ ನೋಡಿ

ಆ ಮೂಲ ಪ್ರತಿಯಲ್ಲಿರುವ ಕೆಲವು ತಪ್ಪುಗಳನ್ನು ತಿದ್ದಿ ಕೊಟ್ಟ ಕುಂದಾ

ಪುರ ಬೋರ್ಡ್ ಹೈಸ್ಕೂಲಿನ ಕಣಾ೯ಟಕ ಪಂಡಿತರಾದ ವೇ. ಮೂ.

ಐ. ಶಿವರಾಮ ಉಡುಪ ರವರಿಗೆ ಕೃತಜ್ಞತಾಪೂರ್ವಕ ವಂದಿಸುತ್ತೇನೆ. ಇದ

ನ್ನು ಅಚ್ಚಿಗಾಗಿ ಸ್ವಚ್ಛ ಪ್ರತಿಯಿಂದ ಬರೆದುಕೊಟ್ಟ ಚಿ. ಕುಪಯ್ಯನ ಉಪ

ಕಾರವನ್ನು ಸದಾ ಸ್ಮರಿಸುವೆನು. ಇದನ್ನು ಛಾಪಾ ದೋಷಗಳಿಲ್ಲದೆ ದಿವ್ಯ

ವಾಗಿ ಮುದ್ರಿಸಿ ಪ್ರಚುರಗೊಳಿಸಲು ಸಹಾಯಮಾಡಿದ ಮಂಗಳೂರು

ಕೆನರಾ ಛಾಪಖಾನೆಯ ಮನೇಜರರಿಗೆ ನನ್ನ ಹೃತರ್ವಕ ವಂದನೆಗಳ

ನ್ನು ಅರ್ಪಿಸುತ್ತೇನೆ.


ಇದರಲ್ಲಿ ರೂಪಗಳೆಂದು ಹೇಳಿತು. ಅದನ್ನು ತೋರಿಸಿಕೊಟ್ಟವ

ರಿಗೆ ಕೃತಜ್ಞನಾಗಿರುವುದಲ್ಲದೆ ಇದನ್ನು ಪುನಃ ಮುದ್ರಿಸುವ ಪ್ರಸಂಗ ಒದಗಿ

ವಾಗ ಅವುಗಳನ್ನು ಜ್ಞಾಪಕಕ್ಕೆ ತಂದು ಅಂಥಾ ದೋಷಗಳನ್ನು ಸರಿಪಡಿಸಿ

ಕೊಳ್ಳುವೆನು.

ಿತಿ

ಬಸರೂರು, 1. ಕನ್ನಡಿಗರ ಸೇವಕ,

ನವಬರ 1922, || ಎಚ್. ಕೋಟಿಯಣ್ಣ ಶೆಟ್ಟಿ,

------------------------------------------------


ಆನಂದ

ಆ ಥ ವಾ

ಮನೆ ಯ ಅಳಿಯ.

----

ಮೊದಲನೆಯ ಅಧ್ಯಾಯ.

ಈದಿನ ಊರಜಾತ್ರೆ, ತೇರುಹಬ್ಬದ ಕೋಲಾಹಲ, ಎಲ್ಲೆಲ್ಲ

ರಥೋತ್ಸವದ ಗದ್ದಲ, ಎಲ್ಲರೂ ಗೆಲಮೊಗವಾಗಿರುವರು; ಸಂತೋಷದ

ಕಲೆಗಳು ಬಾಲಕ ಬಾಲಕಿಯರ ಮುಖದಲ್ಲಿ ಉಕ್ಕುತ್ತಿದ್ದುವು. ಎಲ್ಲರ

ಮನೆಯಲ್ಲೂ ಬಂಧುಮಿತ್ರರು ತುಂಬಿರುವರು, ಸ್ತ್ರೀಪುರುಷರೆಲ್ಲರೂ ನವೀನ

ವಸ್ತ್ರಾಭರಣಗಳಿಂದಲಂಕೃತರಾಗಿರುವರು.


ಪುಟ್ಟಮ್ಮನು ಮಾತ್ರ ಮಲಿನವಸ್ತ್ರಧಾರಿಣಿಯಾಗಿರುವಳು.

ಊರಮಕ್ಕಳು ವಿಚಿತ್ರಾಲಂಕಾರದಿಂದ ಕುಣಿದಾಡುತ್ತಿರಲು ಪಟ್ಟಮ್ಮನ

ಮಕ್ಕಳು ಅಳುತ್ತಿದ್ದರು. ಇದೇನಿರಬಹುದು? ಊರೇ ಆನಂದಮಯ

ವಾಗಿರುವಾಗ ಪುಟ್ಟಮ್ಮನೂ ಅವಳ ಮಕ್ಕಳೂ ದುಃಖಮಯವಾಗಿರು

ವರು. ಕಣ್ಣುಗಳಿಂದ ಅಶ್ರುಪೂರವು ತುಳುಕುತ್ತಿದೆ, ಅವರು ರೋಧಿಸು

ತ್ತಿರುವರು, ಇದರಿಂದ ಪಟ್ಟಮ್ಮನ ಸಂಸಾರಚಕ್ರವು ಕ್ರಮವಾಗಿ ಪರಿ

ವರ್ತನೆಯಾಗುತ್ತಿರಲಿಲ್ಲವೆಂಬುದು ಚೆನ್ನಾಗಿ ಬೋಧೆಯಾಗುತ್ತಿದ್ದಿತು.


ಪುಟ್ಟಮ್ಮ ಹೆಗ್ಗಡತಿಯು ಶ್ರೀನಿವಾಸ ಹೆಗ್ಗಡೆಯ ಧರ್ಮಪತ್ನಿ,

ಇವರಿಗೆ ಒಂದಲ್ಲ, ಎರಡಲ್ಲ ಐದು ಹೆಣ್ಣು ಮಕ್ಕಳು, ಒಂದೇ ಒಂದು

2--------------------------------------------------------


ಗಂಡು ಮಗನೂ, ಇರುವರು. ಶ್ರೀನಿವಾಸ ಹೆಗ್ಗಡೆಯು ಒಂದು ದೊಡ್ಡ

ಮನೆತನಕ್ಕೆ ಸೇರಿದವನು. ಕುಟುಂಬದ ಗೌರವವು ಬಲು ಹೆಚ್ಚಿನದು.

ತಲತಲಾಂತರಗಳಿಂದ ನಡೆದುಬಂದ ಮರ್ಯಾದೆಗೆ ಕುಂದುಬಾರದಂತೆ

ತನ್ನ ಸಂಸಾರವನ್ನು ನಡೆಸಿಕೊಂಡು ಹೋಗಬೇಕೆಂದು ಪೇಚಾಡುತ್ತಿರು

ವನು. ಆದರೂ ಕಾಲವು ಹೋಗುತ್ತಾ ಆದಾಯ ನಾಸ್ತಿ, ಖರ್ಚು

ಜಾಸ್ತಿ ಆಗುತ್ತಾ ಬರಹತ್ತಿತು. ಕುಟುಂಬದ ಆಸ್ತಿಯ ಉತ್ಪತ್ತಿ

ಯಿಂದಲೂ, ತನ್ನ ವ್ಯಾಪಾರ ವಹಿವಾಟದ ಸಂಪಾದನೆಯಿಂದಲೂ,

ಸಂಸಾರದ ಪೋಷಣೆಗೆ ಸಾಲದಿದ್ದರೂ ಮಿತವ್ಯಯಿಯಾದ್ದರಿಂದ ಹೆಚ್ಚು

ಆಡಂಬರಕ್ಕೆ ಅವಕಾಶಕೊಡದೆ ಕಾಲಯಾಪನೆಮಾಡುತ್ತಿದ್ದನು. ಸಮಾನ

ಮಿತ್ರ ಮಂಡಳಿಯಲ್ಲಿ ಗಣ್ಯನಾದ ಮನುಷ್ಯನಾಗಿದ್ದು ಸಂಸಾರದ ಗುಟ್ಟನ್ನು

ಹೊರಗೆಡವದೆ ಅತ್ಯಂತ ಜಾಗ್ರತೆಯಲ್ಲಿದ್ದನು.


ಪುಟ್ಟಮ್ಮನಾದರೊ ಶ್ರೀನಿವಾಸ ಹೆಗ್ಗಡೆಗೆ ತಕ್ಕ ಪತ್ನಿಯಾದರೂ

ಇವಳಲ್ಲಿ, ಮೂರ್ಖತ್ವ, ಹೆಮ್ಮೆ, ದುಂದು ಇವುಗಳಿಲ್ಲದಿದ್ದರೆ ಈ ಸಂಸಾರಕ್ಕೆ

ರತ್ನ ಪ್ರಯಳೇ ಸರಿ, ತಾನೂ ತನ್ನ ಮಕ್ಕಳೂ ನೆರೆ ಹೊರೆಯವರಂತೆ

ಇರಬೇಕೆಂಬ ದುರಾಶೆಯು ಇವಳಲ್ಲಿ ತುಂಬಿದ್ದಿತು. ಆಡಂಬರವನ್ನು

ತೋರುವುದರಲ್ಲಿ ಅಗ್ರಗಣ್ಯಳು. ಆದ್ವಿತೀಯ ಶಿಖಾಮಣಿ,


ಶ್ರೀನಿವಾಸ ಹೆಗ್ಗಡೆಯ ಐದುಮಂದಿ ಹೆಣ್ಣು ಮಕ್ಕಳಲ್ಲಿ ಮೊದಲನೆ

ಯವಳು ಹದಿನೆಂಟು ವಯಸ್ಸಿನ ಜವ್ವನೆ. ಎರಡನೆಯವಳಿಗೆ ಹದಿನಾರು

ವಯಸ್ಸು ತುಂಬಿದೆ. ಮೂರನೆಯವಳು ದೇಹದಾರ್ಡ್ಯದಲ್ಲಿ ತನ್ನ

ಅಕ್ಕಂದಿಯರಿಗಿಂತ ಮಿಕ್ಕಿ ದವಳಾಗಿ ನೋಡುವವರಿಗೆ ಇವಳೇ ಜೇಷ್ಟಳೋ

ಎಂಬಂತೆ ಅವಳ ಸರ್ವಾಂಗಗಳೂ ಸೂಚಿಸುತ್ತಿದ್ದುವು. ಆದರೂ ವಯಸ್ಸು

ಹದಿನಾಲ್ಕಕ್ಕೆ ಮಿಕ್ಕಿರಲಿಲ್ಲ. ಉಳಿದ ಹೆಣ್ಣು ಮಕ್ಕಳು ಹುಡುಗನಿಗಿಂತ

ಚಿಕ್ಕವರು.


ಕನ್ಯಾ ಪಿತೃತ್ವದಿಂದ ಶ್ರೀನಿವಾಸ ಹೆಗ್ಗಡೆಯು ಮಹತ್ತರವಾದ

ಚಿಂತೆಯಲ್ಲಿ ಬಿದ್ದಿದ್ದನು. ಮದುವೆಗೆ ಒದಗಿದ ಮೂವರು ಪುತ್ರಿಯರಿಗಾಗಿ

3-----------------------------------------------------


ಬಲು ನೊಂದನು. ಸಂಸಾರ ಭಾರವನ್ನು ನಿರ್ವಹಿಸುವುದರಲ್ಲಿ ತನಗಿದ್ದ

ಶ್ರಮವನ್ನು ಸಹಿಸುವುದೇ ಕಷ್ಟವಾಗಿರುವಾಗ ಈ ಮದುವೆಯ ಚಿಂತೆ

ಯಿಂದ ಕೊರಗಿ ಹೋಗಿದ್ದನು. ಹೇಗೆ ಹೇಗೋ ಈ ಕಾಲದ ಅಕ್ಕಿಯ

ದರದ ವಾಸಿಯ ಮೇಲೆ, ಹುಟ್ಟುವಳಿಯ ಉತ್ಪತ್ತಿಯಲ್ಲಿ ಮಿಗಿಸಿ ಇಟ್ಟಿ

ದ್ದರೂ, ಆಗಾಗ ಕುಟುಂಬದಲ್ಲಿ ಒದಗುವ ಕಟ್ಟಳೆಪ್ರವಾರ ನಡಿಯತಕ್ಕ

ವಿನಿಯೋಗಗಳಿಗಾಗಿಯೂ, ದೇವತಾ ಸೇವೆಗಳಿಗಾಗಿಯೂ ಚಿಕ್ಕ ಪುಟ್ಟ

ಶುಭಶೋಭನಾದಿಗಳಿಗಾಗಿಯೂ, ಖರ್ಚಾಗಿ ಹೋಗುತ್ತಿದ್ದಿತು. ಇಂತಹ

ಸಂದರ್ಭದಲ್ಲಿ ಮದುವೆಯ ಖರ್ಚಿಗೆ ಹಣ ಕೂಡಿಡುವ ಸಂಭವವೇ ಇದ್ದಿಲ್ಲ.


ಶ್ರೀನಿವಾಸ ಹೆಗ್ಗಡೆಯು ಈ ದಿನ ಬೆಳಿಗ್ಗೆ ಬೇಗ ಎದ್ದಿದ್ದನು.

ಕೋಳಿ ಕೂಗುತ್ತಲೇ ಎಚ್ಚರವಾಯಿತು. ಸುಮಾರು ನಾಲ್ಕು ಘಂಟೆ ಇರ

ಬಹುದು. ಸ್ವಲ್ಪ ಹೊತ್ತು ಹಾಸಿಗೆಯಲ್ಲೇ ಹೊರಳಿದನು. ನಿದ್ದೆ ಬರ

ಲಿಲ್ಲ; ತುಸುಗ್ಗಿ ಹೊರಗೆ ನೋಡಿದನು, ಕತ್ತಲು ಕವಿದು ಇದ್ದಿತು.

ಮಹಡಿಯ ತನ್ನ ಏಕಾಂತ ಕೊಠಡಿಯಲ್ಲಿ ಕುಳಿತು ತಾನು ಬೆಳಿಗ್ಗೆ ಮಾಡ

ಲಿಕ್ಕಿರುವ ಕೆಲಸಗಳನ್ನು ಒಂದೊಂದಾಗಿ ಮನಸ್ಸಿಗೆ ತಂದನು. ತೇರು

ಹಬ್ಬದ ನೆನಪೂ ಆಯಿತು. ಅದಕ್ಕೆ ಬೇಕಾದ ಖರ್ಚಿನ ಸಂಗತಿಯೂ

ಜ್ಞಾಪಕಕ್ಕೆ ಬಂತು. ತನ್ನ ಹೆಣ್ಣು ಮಕ್ಕಳ ಮದುವೆಯ ಸಂಗತಿಯೂ

ಮನಸ್ಸಿನಲ್ಲಿ ಹೊಳೆಯಿತು. ವರಾನ್ವೇಷಣದ ತೊಂದರೆ, ವರದಕ್ಷಿಣೆಯ

ಅಡಚಣೆ, ತನ್ನಲ್ಲಿ ಧನಾಭಾವದಿಂದ ಆಗಾಗ್ಗೆ ಬರುವ ವಿಪತ್ತು, ಇವು

ಗಳೆಲ್ಲಾ ತರಂಗರೂಪವಾಗಿ ಒಂದರ ಹಿಂದೆ ಮತ್ತೊಂದು ಮನೋಪಥ

ದಲ್ಲಿ ಹೊರಟವು. ಆಗಾಗ್ಗೆ ನಿಟ್ಟುಸುರು ಬಿಟ್ಟನು; ತನ್ನ ಅದೃಷ್ಟ

ವನ್ನು ದೂಷಿಸಿದನು. ಅಷ್ಟರಲ್ಲಿ ಮಹಡಿಯ ಮೆಟ್ಟಲಿನಲ್ಲಿ ಯಾರೋ

ಬರುವ ಸಪ್ಪಳವು ಕೇಳಿಸಿತು. ಕೂಡಲೇ ಯಾರಿರಬಹುದೆಂದು ನೋಡು

ವಾಗ ತುಸುಕತ್ತಲು ಇದ್ದುದರಿಂದ ಯಾರೋ ಒಂದು ವ್ಯಕ್ತಿ ಎಂದು

ಭಾಸವಾಯಿತು. ಸಮೀಪಿಸುವಷ್ಟಕ್ಕೆ ಅದು ಅಪರಿಚಿತ ವ್ಯಕ್ತಿಯಾಗಿ

ದಿಲ್ಲ. ತನ್ನ ಹೆಂಡತಿ ಪುಟ್ಟಮ್ಮನೆಂದು ತಿಳಿಯಿತು.

4------------------------------------------------

ಶ್ರೀನಿವಾಸ ಹೆಗ್ಗಡೆ-ಏನು ಬಂದೆ ?

ಪುಟ್ಟಮ್ಮ - ನಿಮ್ಮೊಡನೆ ಮಾತನಾಡಲು ಬಂದೆನು.

ಶ್ರೀ.- ಏನು ಮಾತು ?

ಪು.~ ಊರ ಜಾತ್ರೆ, ಎಲ್ಲರೂ ಹೋಗುತ್ತಾರೆ. ನಾನೂ ನನ್ನ

ಮಕ್ಕಳೂ ಹೋಗಬೇಕೆಂದಿದ್ದೇವೆ; ಮೂರು ಕೋರ್ನಾಡು ಶೀರೆಗಳು

ಬೇಕು, ಬೇಗ ತರಿಸಿಕೊಡಿರಿ,

ಶ್ರೀ--- (ನಿರುತ್ತರ.)

ಪು, ರಥಾರೋಹಣವು ಐದು ಘಳಿಗೆಗೆ ಇಟ್ಟಿದ್ದಾರಂತೆ; ತಡ

ಮಾಡಬೇಡಿರಿ,

ಶ್ರೀ-- ನೀನು ಜಾತ್ರೆಗೆ ಹೋಗುವುದು ಬೇಡ.

ಪು. ನಮ್ಮ ನೆರೆಕರೆಯವರೆಲ್ಲರೂ ಹೋಗುವರು ನಾನು

ಮಾತ್ರ ಹೋಗದೆ ನಿಲ್ಲಬೇಕೇ ?

ಶ್ರೀ- ನೀನು ಹೊರಟರೆ ನಿನ್ನ ಮಕ್ಕಳೂ ಬರುವರು. ಜವ್ವನೆ

ಯರಾದ ಆ ಮಕ್ಕಳು ಇನ್ನೂ ಮದುವೆಯಾಗದಿರುವದು ಕೇಳಿ ನೋಡಿ

ದವರೆಲ್ಲಾ ಹೀಯಾಳಿಸುವರು ಆದುದರಿಂದ ನೀವು ಹೋಗುವದೇ ಬೇಡ.

ಪು.- ಹೀಯಾಳಿಸಿದರೆ ಅದರಿಂದ ನನಗೇನು ಕುಂದು ಅವರು

ತಂದೆ ಇಲ್ಲದ ಮಕ್ಕಳೇ ?

ಶ್ರೀ-(ಈ ಮಾತುಕೇಳಿ ಬಲು ಸಿಟ್ಟು ಬಂತು. ಸ್ವಲ್ಪ ಕಾಲ ಸುಮ್ಮ

ನಿದ್ದು) ನಿನ್ನ ಚಂಡಿತನವನ್ನು ನಾನು ಮೊದಲೇ ಬಲ್ಲೆನು, ನೀನಾಗಲೀ

ನಿನ್ನ ಮಕ್ಕಳಾಗಲೀ ಜಾತ್ರೆಗೆ ಹೋದರೆ ಜಾಗ್ರತೆ, ತಿಳಿಯಿತೇ ?

ಪುಟ್ಟಮ್ಮನು ಹಟಮಾರಿ, ಊರಲ್ಲಿದ್ದು ಜಾತ್ರೆಗೆ ಹೋಗದೆ ಹೇಗೆ

ಇರಲಿ. ಊರಿನ ಎಲ್ಲಾ ಹೆಂಗುಸರೂ, ತೇರುಹಬ್ಬಕ್ಕೆ ಹೋಗುವಾಗ

ನಾನೆಂತು ಮನೆಯಲ್ಲಿರಲಿ, (ಎಂದು ಅಂದುಕೊಂಡು)

5------------------------------------------------------


ಪು.-(ಪ್ರಕಾಶವಾಗಿ) ಜಾತ್ರೆಗೆ ಹೋಗದಂತೆ ತಡಿಸುವ ಸಂಗತಿ

ಯನ್ನು ನಾನು ಮೊದಲೇ ತಿಳಿದಿದ್ದರೆ ತಾರಾನಾಥಪ್ರರಕ್ಕಾದರೂ

ಹೋಗುತ್ತಿದ್ದೆನು. (ತಾರಾನಾಥಪುರವು ಪುಟ್ಟಮ್ಮನ ತವರುಮನೆ ಇರುವ

ಊರಿನ ಹೆಸರು )


ಶ್ರೀನಿವಾಸ ಹೆಗ್ಗಡೆಗೆ ತಡಿಯಲಾರದಷ್ಟು ಕೋಪಬಂತು. “ನೀನು

ಈಗಲೇ ಈ ಕ್ಷಣವೇ ಹೊರಡು, ಇಲ್ಲಿರಬೇಡ. ನಿನಗೆ ಮತ್ತೊಂದು

ಮನೆ ಇದೆ ಎಂಬುದನ್ನು ಬಲ್ಲೆನು. ನಿನ್ನ ಮೂರ್ಖತನವನ್ನು ಎಂದೂ

ಬಿಡುವವಳಲ್ಲ. ನೀನು ಈ ಮನೆಯಿಂದ ಹೊರಟುಹೋದ ಹೊರತು

ಪುನಹ ನಾನು ಮನೆಯನ್ನು ಸೇರಲೊಲ್ಲೆನು. ನಿನ್ನಿಂದ ನನಗೆ ಸುಖವಿಲ್ಲ;

ಮರ್ಯಾದೆ ಇಲ್ಲ" ಎಂದು ಹೇಳುತ್ತಾ ಸಿಟ್ಟಿನಿಂದ ತನ್ನ ಬಟ್ಟೆಗಳನ್ನು

ತೊಟ್ಟುಕೊಂಡು ದೇವಸ್ಥಾನದ ಕಡೆಗೆ ಹೊರಟನು.

ಶ್ರೀನಿವಾಸ ಹೆಗ್ಗಡೆಯು ಸಹನಶೀಲನು, ಮರ್ಯಾದಸ್ಥನು

ಸಂಸಾರ ಧರ್ಮವನ್ನು ಪೂರ್ಣ ತಿಳಿದವನು. ಇದೂ ವರೆಗೆ ಇಂಥಾ

ಮಾತನ್ನು ಎಂದೆಂದೂ ಆಡಿದವನಲ್ಲ. ಇವರೊಳಗಿನ ಸಂಭಾಷಣೆಯನ್ನು

ಶ್ರೀನಿವಾಸ ಹೆಗ್ಗಡೆಯ ತಂಗಿಯಾದ ಅಕ್ಕಣಿಯು ಮರೆಯಲ್ಲಿ ನಿಂತು

ಕೇಳಿದ್ದಳು. ಅಣ್ಣನು ಕೊನೆಯ ಸಲ ಹೇಳಿದ “ನೀನು ಮನೆಯಿಂದ

ಹೊರಟ ಹೊರತು ನಾನು ಮನೆಯನ್ನು ಸೇರಲೊಲ್ಲೆನು” ಎಂಬ ಮಾತನ್ನು

ಕೇಳಿ ಬಲು ದುಃಖಪಟ್ಟಳು. ಮತ್ತು ಅಣ್ಣನು ಸಿಟ್ಟಿನಿಂದ ಹೇಳಿದ ಈ

ಮಾತನ್ನು ಮನೆಮಂದಿಗೆಲ್ಲಾ ಪ್ರಕಾಶಪಡಿಸಿದಳು. ಅವರೆಲ್ಲರೂ ಬಹಳ

ಖರಖರಿಪಟ್ಟರು, ನೊಂದರು, ಹೆಗ್ಗಡೆಯ ಮಕ್ಕಳಂತೂ ಗೋಳೆಂದು

ಅತ್ತು ಬಿಟ್ಟರು. ಹೀಗಾಗಿ ಮನೆಯು ರೋದನಧ್ವನಿಯಿಂದ ಆಪೂರಿತ

ವಾಯಿತು,


ಇತ್ತ ದೇವಸ್ಥಾನದ ಕಡೆಗೆ ಹೊರಟ ಶ್ರೀನಿವಾಸ ಹೆಗ್ಗಡೆಯು

ದಾರಿಯಲ್ಲಿ ಹೋಗುತ್ತಿರುವಾಗ ದೇವಸ್ಥಾನದ ಬಳಿಯಲ್ಲಿ ಆ ಮಾರ್ಗವಾಗಿ ಬ

ರುವ ಟಪ್ಪಾಲು ಪೇದೆಯು ಎದುರಿನಲ್ಲಿ ಸಿಕ್ಕಿದನು; ಆತನೊಂದು

6----------------------------------------------------


ಲಕೋಟಿಯನ್ನು ಹೆಗ್ಗಡೆಯ ಕೈಯಲ್ಲಿ ಕೊಟ್ಟನು. ಅದು ತಾರಾನಾಥ

ಫುರದಿಂದ ಬಂದುದಾಗಿತ್ತು. ನೋಡಿದೊಡನೆ ಹಸ್ತಾಕ್ಷರವು ತನ್ನ

ಭಾವಮೈದುನನಾದ ಸಂಜೀವ ಶೆಟ್ಟರದೆಂದು ಭಾಸವಾಯಿತು. ಕಾಗದ

ವನ್ನು ಮನಸ್ಸಿನಲ್ಲೇ ಓದಿದನು; ಪತ್ರವು ದೀರ್ಘವಾಗಿಯೂ, ತನ್ನ ನ್ಯೂ

ಮತ್ತು ತಮ್ಮ ಮನೆತನವನ್ನೂ ಶ್ಲಾಘಿಸಿಕೊಂಡು ಶ್ರೀನಿವಾಸ ಹೆಗ್ಗಡೆ

ಯನ್ನು ನಿಂದಿಸುವ ರೀತಿಯಲ್ಲಿದ್ದಿತು. ಆದರೂ ಅದೊಂದನ್ನೂ ಎಣಿಸ

ಲಿಲ್ಲ, ಆದರೆ ಕೊನೆಯಲ್ಲಿ ಮಾತ್ರ ಹೀಗೆ ಬರೆದಿತ್ತು; ಮುಂದಿನ ಚೈತ್ರ ದಲ್ಲಿ

ಮದುವೆಮಾಡುವ, ಬರುವ ಚೈತ್ರದಲ್ಲಿ ಲಗ್ನ ಮಾಡುವ ಎಂದು

ನಾಲ್ಕಾರು ಚೈತ್ರಗಳು ಕಳೆದುದಾಯಿತು. ಈ ವರುಷ ವಿವಾಹವಾಗ

ದಿದ್ದರೆ ಉಪಾಯವೇ ಇಲ್ಲ, ನೀವು ಮಾಡುವ ಹಾಗಿದ್ದರೆ ಸ್ಪಷ್ಟ ತಿಳಿಸಿರಿ;

ಇಲ್ಲವಾದರೆ ನಾವಾದರೂ ಮಾಡದೆ ತೀರೀತೇ ? ನಮ್ಮ ಅಕ್ಕ ನನ್ನೂ,

ಅವಳ ಮಕ್ಕಳನ್ನೂ ಕಳುಹಿಸಿಕೊಡಿರಿ. ನಿಮ್ಮಿಂದ ಇಷ್ಟೇ ಆದೀತೆಂದು

ಮೊದಲೇ ಬಲ್ಲೆವು, ನಮಗಿರುವುದು ಹತ್ತಲ್ಲ, ಹಲವಲ್ಲ, ಮೂವರೇ

ಸಹೋದರಿಯರು, ಅದೂ ನನ್ನ ಕುಟುಂಬದ ಮಟ್ಟಿಗೆ ಹೆಚ್ಚಲ್ಲ.

ಹೇಗೂ ನಮ್ಮ ಯೋಗ್ಯತೆಯಲ್ಲಿ ಇದ್ದುದಾಗುತ್ತದೆ. ಇವೇ ಮೊದಲಾದ

ಒಕ್ಕಣೆಗಳಿಂದ ಗರ್ಭಿತವಾದ ಕಾಗದವನ್ನು ಮೂರು ನಾಲ್ಕು ಬಾರಿ ಪುನಃ

ಪುನಃ ಓದಿ ನೋಡಿದನು. ಕಾಗದದಲ್ಲಿರುವ ಒಂದೊಂದು ಮಾತೂ

ಕೂರಲಗಿನಂತೆ ಶ್ರೀನಿವಾಸ ಹೆಗ್ಗಡೆಯ ಮನಸ್ಸಿಗೆ ಚುಚ್ಚಿತು, ಬಲು

ವ್ಯಸನಕ್ಕೊಳಗಾದನು. "ಐದು ವರುಷಗಳಿಂದ ತವರುಮನೆಗೆ ಹೋಗದೆ

ನನ್ನ ಒಟ್ಟಿಗಿದ್ದ ಹೆಂಡತಿಯನ್ನು ಈದಿನ ತಾಯಿ ಮನೆಗೆ ಹೋಗೆಂದು

ಬೈದಿದ್ದೆನು, ಸಾಲದುದಕ್ಕೆ ಕಾಗದವೂ ಬಂದಿದೆ. ಕಳುಹಿಸಿದರೆ ಮಕ್ಕಳ

ವಿವಾಹಕ್ಕೆ ಕೈಲಾಗದೆ ಕಳುಹಿಸಿದನೆಂಬ ಅಪಕೀರ್ತಿಗೆ ಒಳಗಾಗುವುದೇ

ಸರಿ, ಏನು ಮಾಡಲಿ?” ಎಂದು ಆಲೋಚಿಸಿದನು, ಮರುಗಿದನ್ನು, ತನ್ನ

ವಿಧಿಯನ್ನು ಬೈದುಕೊಂಡನು.


ಕೂಡಲೇ ಒಬ್ಬ ಆಳನ್ನು ಕರೆದು ನೀನು ಈಗಲೇ ನಮ್ಮ ಮನೆಗೆ

ಹೋಗು ಅಲ್ಲಿ ನನ್ನ ಮಕ್ಕಳೂ, ಅವರ ತಾಯಿಯೂ ತಾರಾನಾಥಪುರಕ್ಕೆ

7-------------------------------------------------

ಹೊರಟಿರಬಹುದು. ಪ್ರಕೃತಕ್ಕೆ ಪ್ರಯಾಣವನ್ನು ನಿಲ್ಲಿಸುವಂತೆ ತಿಳಿಸು;

ಓಡಿಹೋಗು ಸಾವಕಾಶಮಾಡಬೇಡ ಎಂದು ಹೇಳಿ ಕಳುಹಿಸಿದನು.


ಆಳು ಓಡಿದನು; ದಾರಿಯಲ್ಲಿ ಎಡವಿ ತಡವಿ ಹೋಗಿ ಹೆಗ್ಗಡೆಯರ

ಮನೆಗೆ ಸಮೀಪಿಸಿದನು. ಇವನು ಮುಟ್ಟುವ ಹೊತ್ತಿಗೆ ಪುಟ್ಟಮ್ಮನೂ,

ಅವಳ ಮಕ್ಕಳೂ ಪ್ರಯಾಣಕ್ಕೆ ಸಿದ್ದರಾಗಿದ್ದರು; ಮನೆಯವರೆಲ್ಲರೂ ಎರಡು

ವಿಧದ ಸಂಕಟಕ್ಕೆ ಸಿಕ್ಕಿ ಬಿದ್ದಿದ್ದರು. ಒಂದು ಯಜಮಾನರು ಮನೆಗೆ

ಬರುವುದಿಲ್ಲವೆಂದು ಶಪಥಮಾಡಿದ್ದು; ಇನ್ನೊಂದು ಪುಟ್ಟಮ್ಮನೂ,

ಮದುವೆಗೆ ಒದಗಿದ ಅವಳ ಮಕ್ಕಳೂ ಹೆಗ್ಗಡೆಯರ ಮುನಿಸಿನಿಂದ ತವರು

ಮನೆಗೆ ಹೋಗುವುದು. ಈ ಎರಡು ಸಂಗತಿಗಳೂ ಬಲು ಸಂಕಟಕ್ಕಿ

ಟ್ಟಿತ್ತು, ಏನು ಮಾಡುವರು! ಹೆಗ್ಗಡೆಯರ ಅಪ್ಪಣೆಗೆ ಅಭ್ಯಂತರ ತರಲು

ಯಾರಿಗೆ ಧೈರ್ಯ, ಅವರು ಹೇಳಿದಂತೆ ನಡೆಯಬೇಕಲ್ಲದೆ ಅದಕ್ಕೆ

ಮರುತ್ತರಕೊಡಲು ಯಾರಿಗೆ ಎದೆ ಇದ್ದೀತು!


ಆಳು ಓಡಿಬಂದನು; ಉಸುರಾಟದ ಭರದಲ್ಲಿ ಮಾತನಾಡುವುದು

ಕಷ್ಟವಾದರೂ, ಅಮ್ಮನೂ ಅಮ್ಮನ ಮಕ್ಕಳೂ, ತಾರಾನಾಥಪುರಕ್ಕೆ

ಹೋಗುವದು ಬೇಡಂತೆ, ಅಯ್ಯ ಹೇಳಿದರು, ದೇವಸ್ಥಾನದಲ್ಲಿ.” ಹೆಂಗುಸ

ರೆಲ್ಲಾ ಬಂದು ಸುತ್ತಮುತ್ತಲೂ ನಿಂತರು, ಪುನಃ ಪುನಃ ಕೇಳಿದರು.

ನಿಜವೆಂದು ಸಮಾಧಾನವಾಯಿತು, ಪ್ರಯಾಣವನ್ನು ನಿಲ್ಲಿಸಿದರು. ಇದ

ರಿಂದ ಪುಟ್ಟಮ್ಮ ನಿಗೂ, ಅವಳ ಮಕ್ಕಳಿಗೂ ಬಲು ಸಂತೋಷವಾಯಿತು

ಹೆಗ್ಗಡೆಯರ ಸಹೋದರಿಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈದಿನ

ಹೆಗ್ಗಡೆಯ ಮನೆಯಲ್ಲಿ ಇದೇ ದೊಡ್ಡ ಹಬ್ಬವಾಯಿತು.

--------------

ಎರಡನೆಯ ಅಧ್ಯಾಯ.

ಸೌಖ್ಯಪುರವೆಂಬ ಗ್ರಾಮ ಜಲಸಮೃದ್ದವಾದ ವಾಪಿಕೂಪ ತಟಾಕ

ಗಳಿಂದ ತುಂಬಿರುವ ಆ ಊರಿನಲ್ಲಿ ಪೈರು ಪಚ್ಚೆಗಳು ಎಲ್ಲಾ ಋತುಗಳಲ್ಲೂ

8----------------------------------------------


ಹುಲುಸಾಗಿ ಬೆಳೆಯುತ್ತಿದ್ದುವು. ಊರಿನ ಬಡಬಗ್ಗರೂ, ತಾವು ಬೆಳಿಸಿದ

ದವಸಧಾನ್ಯದಲ್ಲಿ ಧನಿಗೆ ಕೊಟ್ಟು ತಾವೂ ಉಂಡು ಇನ್ನೂ ಒಂದಿಷ್ಟು

ಮಾರಿ ಸುಖವಾಗಿದ್ದರು. ಊರಿನಲ್ಲಿರುವ ಬಾಲಕರಿಂದ ಮುದುಕರ

ವರೆಗಿನ ಎಲ್ಲರೂ ಒಂದಲ್ಲದೊಂದು ಕೆಲಸದಲ್ಲಿ ಅವರಿರುವರು. ಹೀಗಾಗಿ

ಕ್ಷಾಮದೇವತೆಗೆ ಅಲ್ಲಿ ಕಾಲಿಡಲು ಸ್ಥಳವಿರಲಿಲ್ಲ. ಆ ಊರಿನ ಧನಿಕರಾದಿ

ಯಾಗಿ ದರಿದ್ರರ ವರೆಗಿನ ಸರ್ವರೂ ಸುಖಸಂಪತ್ತಿನಲ್ಲಿ ಇರುವದು

ನೋಡಿದರೆ ಆ ಗ್ರಾಮದ ಹೆಸರು ಯಥಾರ್ಥನಾಮವೆಂಬುದು ಬೋಧೆ

ಯಾಗದಿರದು.


ಗೋಪಾಲ ಹೆಗ್ಗಡೆಯು ಆ ಗ್ರಾಮದ ಮುಖಂಡನು; ಅವನ

ಮನೆಯು ಗುತ್ತಿನಮನೆ, ಪ್ರಖ್ಯಾತವಾದ ದುರ್ಗಾಪರಮೇಶ್ವರಿ ದೇವಾ

ಲಯದ ಆಡಳಿತ ಮೊಕ್ತಸರಿಯೂ, ಗ್ರಾಮದ ಪಠೇಲಿ ಉದ್ಯೋಗವೂ,

ಗೋಪಾಲ ಹೆಗ್ಗಡೆಯ ಪಾಲಿಗೆನೇ ಸೇರಿದೆ. ಗ್ರಾಮದ ಎಲ್ಲಾ ಜಾತಿ

ಯವರ ಮತಸಂಬಂಧವಾದ ಹಾಗೂ ಹಕ್ಕು ಲೇವಾದೇವಿ ಬಾಬಿನ

ವಿಶಿಷ್ಟ ವಿವಾದಗಳೂ, ಅವುಗಳ ಪಂಚಾಯಿತಿ ತೀರ್ಮಾನವೂ ಗೋಪಾಲ

ಹೆಗ್ಗಡೆ ಮನೆಯ ಚಾವಡಿಯಲ್ಲಿ ಇತ್ಯರ್ಥಕ್ಕೆ ಬರಬೇಕಾಗಿತ್ತು. ಆ

ಕಾಲದಲ್ಲಿ ಅವರ ಮನೆಯ ಹೆಬ್ಬಾಗಲೇ ನ್ಯಾಯಸ್ಥಾನದಂತೆಯೂ,

ಅವರೇ ನ್ಯಾಯಾಧಿಪತಿಯಂತೆಯೂ ಇದ್ದುದರಿಂದ ಯಾವ ಸಮಯದಲ್ಲಿ

ನೋಡಿದರೂ, ಜನರ ಕಲಕಲ್ಲ ಧ್ವನಿಯು ಅವರ ಹೆಬ್ಬಾಗಲಲ್ಲಿ ವಸ್ತಿ

ಯಾಗಿದ್ದಿತು. ಅಲ್ಲಿ ನೆರೆದ ಜನರಲ್ಲಿ ಕೆಲವರು ಪಠೇಲಿ ಬಾಬಿನ ಹಾಗೂ

ಗ್ರಾಮ ಕೋರ್ಟಿನ ಸಲುವಾಗಿಯೂ, ಹಲವರು ಇತರ ವಿವಾದಗಳ

ಪಂಚಾಯಿತಿಯ ಬಗ್ಯೂ, ಅನೇಕರು ದೇಗುಲದ ಕೆಲಸದಗೋಸ್ಕರವೂ,

ಬಂದಿರುವವರಾಗಿದ್ದರು. ನಾವು ಹೇಳುವ ಕಾಲದಲ್ಲಿ ಗೋಪಾಲ ಹೆಗ್ಗ

ಡೆಯ ಕುಟುಂಬದಲ್ಲಿ ಇಪ್ಪತ್ತೈದು ಕೋರ್ಜಿ ಅಕ್ಕಿಯೂ, ಕಂದಾಯ

ಹೋಗಿ ಎಂಟುನೂರು ರೂಪಾಯಿ ಮುನಾಫೆಯ, ಉಳಿಯುತ್ತಿತ್ತು.

ದುನೆ ಸಾಗುವಳ್ಳಿಯ ಉತ್ಪತ್ತಿಯು ಕುಟುಂಬದ ಜೀವನಕ್ಕೆ ಸಾಕಷ್ಟು

9-------------------------------------------


ಇದ್ದುದಲ್ಲದೆ, ಮನೆಯ ತೋಟದಿಂದ ತೆಂಗು, ಅಡಿಕೆ, ಮೆಣಸು ಉತ್ಪತ್ತಿ

ಯಲ್ಲಿ ವರುಷಕ್ಕೆ ಇನ್ನೂ ರು ಮುನ್ನೂರು ರೂಪಾಯಿ ಉಳಿಸಬಹುದಾಗಿ

ದ್ದಿತು.


ಸಂಪತ್ತು, ಗೌರವ, ಮರ್ಯಾದೆ, ಮೊದಲಾದ ಯೋಗ್ಯತೆಗಳಿಂ

ದಲೂ; ನೀತಿ, ಧರ್ಮ, ಸತ್ಯ, ನಿಷ್ಪಕ್ಷಪಾತವೇ ಮೊದಲಾದ ಶ್ಲಾಘ

ನೀಯವಾದ ಗುಣಗಳಿಂದಲೂ ಗೋಪಾಲ ಹೆಗ್ಗಡೆಯು ಆಕಾಲದ ಗಣ್ಯ

ಮುಖಂಡರುಗಳಲ್ಲಿ ಒಬ್ಬನಾಗಿದ್ದನು. ಅವನನ್ನು ಹೆಸರೆ ಯಾರೂ

ಕರೆಯುತ್ತಿರಲಿಲ್ಲ ಆ ಊರಿನಲ್ಲಿ ಬೇರೆ ಅನೇಕ ಮಂದಿ ಹೆಗ್ಗಡೆಯ

ರಿದ್ದರೂ, ಹೆಗ್ಗಡೆಯರ ಮನೆಯೆಂದರೆ ಗೋಪಾಲಹೆಗ್ಗಡೆಯ ಮನೆಯೇ

ಎಂತಲೂ ಹೆಗ್ಗಡೆಯರು ಎಂದರೆ ಗೋಪಾಲ ಹೆಗ್ಗಡೆಯೇ ಎಂತಲೂ,

ಆ ಪ್ರಾಂತದ ಆಬಾಲ ವೃದ್ದ ರೂ ತಿಳಿದಿದ್ದರು. ನಾವೂ ಇನ್ನು ಮುಂದೆ

ಇವರನ್ನು ಹೆಗ್ಗಡೆಯರೆಂದೇ ಕರೆಯುವೆವು.


ಹೆಗ್ಗಡೆಯು ಕುಟುಂಬದ ಯಜಮಾನನಾಗಿದ್ದು ಆಸ್ತಿ ಸಂಪಾದಿಸಿ

ದನು. ಹೊಸಮನೆ ಕಟ್ಟಿಸಿದನು. ತನ್ನ ಮಕ್ಕಳಿಗೂ ಸಾಕಷ್ಟು ಸಹಾ

ಯ ಮಾಡಿದನು. ಹೀಗಾಗಿ ಎಲ್ಲರ ಪ್ರೀತಿಗೂ ಪಾತ್ರನಾಗಿದ್ದನು.

ಹೆಗ್ಗಡೆಯ ಕೀರ್ತಿಯು ನಾಲ್ಕೂ ಕಡೆಗಳಲ್ಲಿಯೂ ಪಸರಿಸಿತು. ಅವನ

ಮಾತುಬಾರಿತನ, ಸತ್ಯಸಂಧತೆಯ ಹೆಸರು ಎಲ್ಲೆಲ್ಲೂ ವಿಸ್ತರಿಸಿತ್ತು.

ಹೆಗ್ಗಡೆಗೆ ಮೂವರು ಅಕ್ಕಂದಿಯರು, ಒಬ್ಬಳು ತಂಗಿ, ಹೀಗೆ ನಾಲ್ಕು

ಮಂದಿ ಸಹೋದರಿಯರಿದ್ದರು. ಈ ನಾಲ್ವರಿಗೂ ಗಂಡುಮಕ್ಕಳಿರು

ವರು. ಅವರ ಆರು ಮಂದಿ ಅಳಿಯಂದಿರಲ್ಲಿ ನಮ್ಮ ಪೂರ್ವ ಪರಿಚಿತ

ನಾದ ಶ್ರೀನಿವಾಸ ಹೆಗ್ಗಡೆಯೇ ಎಲ್ಲಾ ಕೆಲಸಗಳಲ್ಲಿಯೂ ಸಮರ್ಥನಾಗಿ

ದ್ದನು. ಮಾವನ ಸರ್ವ ಕೆಲಸಗಳಲ್ಲಿಯೂ, ಇವನೇ ಮುಂದಾಳಾಗಿ

ಇದ್ದುದರಿಂದ ಗೋಪಾಲ ಹೆಗ್ಗಡೆಯ ಪ್ರೀತಿಗೆ ಪಾತ್ರನಾಗಿದ್ದನು. ತನ್ನ

ಪಠೇಲಿ ಕೆಲಸವನ್ನೂ, ದೇಗುಲದ ಕಾರ್ಯವನ್ನೋ, ಸಣ್ಣ ಸಣ್ಣ ವಿವಾದ

ಗಳ ತಿರ್ಮಾನಗಳ ಕೆಲಸವನ್ನೋ ಆಗಾಗ್ಗೆ ಶ್ರೀನಿವಾಸ ಹೆಗ್ಗಡೆಗೆನೇ

10--------------------------------------------


ಒಪ್ಪಿಸಿಬಿಡುತ್ತಿದ್ದನು. ನ್ಯಾಯಸೂಕ್ಷ್ಮವನ್ನು ಬಲ್ಲ ಈ ಅಳಿಯನ

ಮೇಲೆ ಗೋಪಾಲ ಹೆಗ್ಗಡೆಗೆ ಬಲು ಪ್ರೀತಿ, ಮತ್ತು ತುಂಬಾ ಭರವ

ಸೆಯೂ ಇದ್ದಿತು. ಇದರಿಂದ ಗೋಪಾಲ ಹೆಗ್ಗಡೆಯ ಪರಿಚಿತರಾದವರೆ

ಲ್ಲರೂ ಇವರ ಅಳಿಯ ಶ್ರೀನಿವಾಸ ಹೆಗ್ಗಡೆಯನ್ನು ಸಣ್ಣ ಹೆಗ್ಗಡೆಯರೆಂದು

ಕರೆಯುವ ರೂಢಿಯಾಯಿತು. ಈತನು ಪ್ರಬಲಕ್ಕೆ ಬಂದನಂತರ ಗೋ

ಪಾಲ ಹೆಗ್ಗಡೆಯನ್ನು ದೊಡ್ಡ ಹೆಗ್ಗಡೆಯರೆಂದು ಕರೆಯತೊಡಗಿದರು.

ಇನ್ನು ಮುಂದೆ ನಾವೂ ಹಾಗೆಯೇ ಕರೆಯುವೆವು.


ದೊಡ್ಡ ಹೆಗ್ಗಡೆಯ ಆಡಳಿತೆಯಲ್ಲಿ ತಮ್ಮ ಅಳಿಯಂದಿರಿಗೆಲ್ಲಾ

ಮದುವೆ ಮಾಡಿಸಬೇಕಾಗಿ ಸಂಕಲ್ಪಿಸಿದರು, ಈ ವರ್ತಮಾನವು ಊರ

ಲ್ಲೆಲ್ಲಾ ಹಬ್ಬಿತು. ಆ ಕಾಲದ ಐಶ್ವರ್ಯವಂತರಲ್ಲನೇಕರು ದೊಡ್ಡ

ಹೆಗ್ಗಡೆಯ ಕೀರ್ತಿಯನ್ನು ಕೇಳಿದವರಾದುದರಿಂದ ಅವರ ಅಳಿಯಂದಿರಿಗೆ

ತಮ್ಮಲ್ಲಿಯ ಹೆಣ್ಣು ಕೊಡಬೇಕು, ತಾವು ಹೆಣ್ಣು ಕೊಡಬೇಕು, ಎಂದು

ನೆಂಟುತನದ ಮೇಲಾಟಕ್ಕೆ ಮೊದಲು ಮಾಡಿದರು. ಕುಲೀನ ಕುಟುಂ

ಬದವರೂ, ಹಾಗೂ ತಾವು ಮೆಚ್ಚುವ ಒಳ್ಳೆಯ ನೆಂಟಸ್ತಿಕೆಯನ್ನು

ನೋಡಿ ಕನೈಯರನ್ನು ತರುವುದಾಗಿ ನಿಶ್ಚಯಮಾಡಿಕೊಂಡು ದೊಡ್ಡ

ಹೆಗ್ಗಡೆಯ ಹಿರಿಯಕ್ಕನ ಮಗನಾದ ಶ್ರೀನಿವಾಸ ಹೆಗ್ಗಡೆಗೆ ನಾವು ಮೊದ

ಲೇ ನೋಡಿದ ತಾರನಾಥಪುರದಿಂದ ಹೆಣ್ಣು ತರುವುದಾಗಿ ನಿಶ್ಚಯವಾ

ಯಿತು. ತಾರನಾಥಪುರದವರು ಧನಸಂಪತ್ತಿಯಲ್ಲಿ ಮೇಲಾದವರಾಗಿ

ದ್ದರು. ಮಿಕ್ಕ ಅಳಿಯಂದಿರ ನೆಂಟಸ್ತಿಕೆಯ ಸಂಗತಿಯನ್ನು ಸ್ಥಳಾಭಾ

ವದಿಂದ ಇಲ್ಲಿ ಪ್ರಸ್ತಾಪಿಸಲಿಲ್ಲ. ಮದುವೆಯ ಕೆಲಸವು ಬಹು ವಿಜ್ರಂಭ

ಣೆಯಿಂದ ನಡೆದುಹೋಯಿತು. ದೊಡ್ಡ ಹೆಗ್ಗಡೆರ ಕಾರುಬಾರಿನಲ್ಲಿ

ಯಾವುದಕ್ಕೆ ಕಡಿಮೆ. ಅವರ ದರ್ಬಾರಿನಲ್ಲಿ ಯಾವುದಕ್ಕೆ ಕೊರತೆ.

ಊರಿನ ಜನರೆಲ್ಲರೂ ತಮ್ಮ ತಮ್ಮ ಶಕ್ತಿ ಮೀರಿ ಸಹಾಯಮಾಡಿದ್ದರು.

ಯಾವ ಕಾಲದಲ್ಲಿ ಏನು ಕೆಲಸವಾಗಬೇಕಾದರೂ, ನಾನು ಮುಂದೆ

ತಾನು ಮುಂದೆ ಎಂದು ಎದುರುನೋಡುತ್ತಿದ್ದರು. ಮದುವೆಯ ಕೆಲ

11----------------------------------------------


ಸಕ್ಕೆ ಬಂದ ಮಹನೀಯರೆಲ್ಲಾ ದೊಡ್ಡ ಹೆಗ್ಗಡೆರ ಗೌರವಕ್ಕೂ, ಅವರ

ಅಸಾಧಾರಣ ಕಾರ್ಯಕೌಶಲಕ್ಕೂ, ನಿಷ್ಕಳಂಕವಾದ ಸತ್ಕಾರಗಳಿಗೂ,

ಮನದಣಿಯೆ ಮೆಚ್ಚಿ, ಬಾಯಿದಣಿಯೆ ಹೊಗಳಿ ಹೋದರು. ಎಂದೋ

ನಡೆದುಹೋದ ಆ ಮದುವೆಯ ನೆನಪು ಇಂದಿನವರೆಗೂ ಜನರ ಬಾಯಿ

ಯಿಂದ ಕಥಾರೂಪವಾಗಿ ಹೊರಡುತ್ತಿರುವುದು.

ಮದುವೆಯಾಗಿ ನಾಲ್ಕಾರು ವರುಷಗಳು ಸಂದವು. ಏಳೆಂಟು

ವರುಷವೂ ಕಳೆಯಿತು, ಆ ದುಷ್ಠಾಲವಾದ ಒಂಭತ್ತನೆಯ ವರುಷವೂ

ಬಂತು. ಬೇಸಿಗೆ ಕಳೆಯಿತು, ಮಳೆಗಾಲ ತೊಡಗಿತು, ಮುಂಗಾರು

ಮಳೆ ಸುರಿಯುತ್ತಿತ್ತು. ರೈತರು ಕಾರ್ತಿಕದ ಪೈರಿಗೆ ನೆಲವನ್ನು ಹಸನು

ಪಡಿಸುವ ಕೋಲಾಹಲದಲ್ಲಿದ್ದರು. ಆ ದುಷ್ಟ ಜ್ವರವು ದೊಡ್ಡ ಹೆಗ್ಗಡೆಗೆ

ತಗಲಿತು. ಸಾಲದುದಕ್ಕೆ ಕೆಮ್ಮು ಕಫವೂ ಜೊತೆಯಲ್ಲಿತ್ತು. ಊರ

ಪಂಡಿತರೂ, ಇಂಗ್ಲಿಷ ವೈದ್ಯರೂ, ಬಲು ಪ್ರಯತ್ನಿಸಿದರು. ಜಾಡ್ಯವು

ಜಾಸ್ತಿಯಾಯಿತು. ಎಷ್ಟೆಷ್ಟೋ ಹರಿಕೆಗಳೂ ನಡೆದುವು. ಯಾವುದೂ

ಉಪಯೋಗಕ್ಕೆ ಬೀಳಲಿಲ್ಲ. ರೋಗದ ವೇಧನೆಯೂ ಬಲು ಹೆಚ್ಚಾಯಿತು.

ನಿಷ್ಪಕ್ಷಪಾತಿಯಾದ ಯಮನು, ಆ ಪ್ರಾಂತದ ಪಂಚಾಯಿತನೂ,

ಮುಖಂಡನೂ ಆದ ದೊಡ್ಡ ಹೆಗ್ಗಡೆಯನ್ನು ತನ್ನ ಕಡೆಗೆ ಸೆಳೆದು

ಕೊಂಡನು. ಇದರಿಂದ ಆ ಊರಿನ ಆಬಾಲವೃದ್ದರೂ ಗೋಳಾಡಿದರು.

ಅವರ ಪರಿಚಿತರಾದವರೆಲ್ಲರೂ ಆ ಮಹನೀಯರ ಮೃತ್ಯು ವಾರ್ತೆಯನ್ನು

ಕೇಳಿ ವಿಷಾದಿಸಿದರು. ಇವರ ನಿಧನದಿಂದ ಆ ಕಾಲದಲ್ಲಿ ಆ ಸಮಾಜಕ್ಕೆ

ಪೆಟ್ಟು ತಗಲಿದಂತಾಯಿತು.


ದೊಡ್ಡ ಹೆಗ್ಗಡೆಯರು ದಿವಂಗತರಾಗಿ ಒಂದು ವರ್ಷ ಕಳಿಯಲಿಲ್ಲ.

ಆರು ತಿಂಗಳು ದಾಟಲಿಲ್ಲ. ಅವರ ಮನೆಯಲ್ಲಿ ಹಿಸೆಯ ಪಂಚಾಯತಿಗೆ

ಪ್ರಾರಂಭವಾಯಿತು. ಕುಟುಂಬದ ಗೌರವಕ್ಕೆ ಕಳಂಕ ತರುವ ವಿಭಾಗದ

ಸಂಗತಿಯು ಎಲ್ಲರಿಗೂ ಬೇಸರ ಕಂಡರೂ, ದೊಡ್ಡ ಹೆಗ್ಗಡೆರ ಬಾವಂದ್ಯರಿಗೆ

(ಸಹೋದರಿಯರ ಗಂಡಂದ್ಯರಿಗೆ) ಹಿಸೆಯಾಗುವುದೇ ತಕ್ಕುದೆಂದು ಕಂಡಿತು.

ಅದೇ ಬಹುಪಕ್ಷ ತೀರ್ಮಾನವಾಯಿತು.

12----------------------------------------------------

ನಾವು ಮೊದಲೇ ನೋಡಿದ ಮೇರೆಗೆ ನಾಲ್ಕು ಮಂದಿ ಸಹೋದರಿ

ಯರಿಗೆ ನಾಲ್ಕು ಪಾಲು ಮಾಡಬೇಕಾಯಿತು. ಒಂದೊಂದು ಪಾಲಿಗೆ

ಏಳು ಕೋರ್ಜಿ ಅಕ್ಕಿ, ಮುನ್ನೂರು ರೂಪಾಯಿ ಮುನಾಫೆ ಸಿಕ್ಕುವ

ಆಸ್ತಿಯೂ, ಮೂರು ಮೂರು ಸಾವಿರ ನಗದು ರೂಪಾಯಿಗಳೂ

ಬಂದುವು. ಆದರೆ ಕುಟುಂಬದ ಗೌರವದ ಹುದ್ದೆಗಳಾದ ಪಠೇಲಿ,

ದೇಗುಲದ ಮೊಗತೇಸರಿ, ಇವು ನಮ್ಮ ಸಣ್ಣ ಹೆಗ್ಗಡೆರ ಪಾಲಿಗೆ ಸೇರಿ

ದುವು. ಇವರು ಬಡಜನರ ಮೇಲೆ ತುಂಬಾ ಪ್ರೀತಿಯುಳ್ಳವರಾಗಿದ್ದರು.

ಇದರಿಂದ ಊರ ಮಂದಿಗೆಲ್ಲಾ ಇವರಲ್ಲಿ ಹೆಚ್ಚಿನ ವಿಶ್ವಾಸವಿದ್ದಿತು.

ಇವರು ಒಂದು ವೇಳೆಯಾದರೂ ಆಡಿದ ಮಾತಿಗೆ ತಪ್ಪಿದರೆಂದಾಗಲೀ,

ಸುಳ್ಳು ಹೇಳಿದರೆಂದಾಗಲೀ, ಮೋಸ ಮಾಡಿದರೆಂದಾಗಲೀ, ಹೇಳಿದವರೇ

ಇಲ್ಲ. ತನ್ನ ಹಿರಿಯರಂತೆ ಮರ್ಯಾದೆಯಲ್ಲಿದ್ದು ಅವರ ಕೀರ್ತಿಗೆ

ಕುಂದು ಬಾರದಂತೆ ನಡಿಯ ಬೇಕೆಂಬುದೇ ಇವರ ಪ್ರಥಮ ಪಾಠವಾಗಿತ್ತು.

ಅತಿಥಿಗಳಿಗೆ ಊಟ, ಅನಾಥರಿಗೆ ದಾನ, ಪರಸ್ಥಳದವರಿಗೆ ಆಶ್ರಯ,

ಇವೆಲ್ಲವೂ ಸಣ್ಣ ಹೆಗ್ಗಡೆಯರಲ್ಲಿ ಅಲ್ಲದೆ ಆ ಊರಲ್ಲಿ ಮತ್ತೆಲ್ಲಿಯೂ ದೊರ

ಕದು. ವಿಭಾಗದ ಮೊದಲು ದೊಡ್ಡ ಮನೆಯಲ್ಲಿ ನಡೆಯುವ ಈ

ವೆಚ್ಚಗಳೆಲ್ಲಾ ಈಗ ಸಣ್ಣ ಹೆಗ್ಗಡೆಯ ಸಾಲಿನಲ್ಲಿಯೇ ನಡಿಯಹತ್ತಿತು.

ಇದರಿಂದಲೂ, ಒಂದು ಹೊಸ ಮನೆ ಕಟ್ಟಿಸಿದ್ದರಿಂದಲೂ, ಪಾಲಿಗೆ ಬಂದ

ನಗದು ಮೂರುಸಾವಿರ ರೂಪಾ ಗಳೆಲ್ಲವೂ ವೆಚ್ಚ ವಾದದ್ದಲ್ಲದೆ ಎರಡು

ಸಾವಿರ ರೂಪಾಯಿ ಸಾಲವೂ ಆಯಿತು. ಸಾಲಕ್ಕೆ ಬಲು ಭೀತರಾದ

ಸಣ್ಣ ಹೆಗ್ಗಡೆರು ಏನೇನೋ ಪ್ರಯತ್ನದಿಂದ ಆ ಎರಡುಸಾವಿರ ಸಾಲ

ತೀರಿಸಲು ಐದು ವರುಷ ಸಂದು ಹೋಯಿತು. ಆಮೇಲೆ ಕುಟುಂಬದ

ವೆಚ್ಚ ವು ವರ್ಷ ವರ್ಷವೂ ಬೆಳೆಯುತ್ತ ಬಂದುದರಿಂದಲೂ, ಅನಾವೃಷ್ಟಿ

ಯಿಂದ ಬೆಳೆ ಕೆಟ್ಟು ಹೋಗಿ ಒಕ್ಕಲು ಹುಟ್ಟುವಳಿ ವಸೂಲಿಗೆ ಅಭ್ಯಂತರ

ಉಂಟಾದುದರಿಂದಲೂ, ಆಗಾಗ್ಗೆ ಜಾನುವಾರುಗಳಿಗೆ ತಟ್ಟುವ ರೋಗ

ರುಜಿನಗಳಿಂದಲೂ ಕುಟುಂಬದ ಸೌಕರ್ಯಕ್ಕೆ ಬೇಕಾದ ಇತರ ಕಾರ್ಯ

13---------------------------------------------


ಗಳ ಸಲುವಾಗಿ ವೆಚ್ಚವಾದುದರಿಂದಲೂ ಏನೇನೂ ಉಳಿಯುತ್ತಿರಲಿಲ್ಲ.

ಆದರೂ ಸಾಲಸೋಲಗಳಿಗೆ ಎಡೆ ಉಂಟಾಗದಂತೆ ಬಲು ಎಚ್ಚರಿಕೆ

ಯಲ್ಲಿದ್ದನು.

wwwwwwwww

ಮೂರನೆ ಅಧ್ಯಾಯ.

ಪ್ರೀಯ ವಾಚಕರೇ ! ದೇವಸ್ಥಾನದ ಕಡೆಗೆ ಹೊರಟ ಶ್ರೀನಿವಾಸ

ಹೆಗ್ಗಡೆಯು ಎಲ್ಲಿ ಹೋದನು ? ಮುಂದೇನು ನಡೆಯಿತು? ಎಂಬುದನ್ನು

ಅರಿತುಕೊಳ್ಳುವ ಇಚ್ಛೆಯು ನಿಮಗಿರಬಹುದು. ಅವನ್ನು ಇಲ್ಲಿ ಹೇಳು

ವೆವು. ದೊಡ್ಡ ಹೆಗ್ಗಡೆಯರ ಕಾಲಾನಂತರ ದೇವಲಾಯದ ಮೊಕ್ತೇಸರಿ,

ಮುಂತಾದ ಗೌರವದ ಹುದ್ದೆಗಳೆಲ್ಲಾ ಶ್ರೀನಿವಾಸ ಹೆಗ್ಗಡೆರ ಪಾಲಿನಲ್ಲಿ

ವಸ್ತಿಯಾದುವುವೆಂದು ಮೊದಲೇ ಹೇಳಿರುವೆವಷ್ಟೆ ಆಡಳಿತ ಮೊಕ್ತೇ

ಸರನಾದ ಶ್ರೀನಿವಾಸ ಹೆಗ್ಗಡೆಯು ದೇಗುಲದ ಉಗ್ರಾಣದಲ್ಲಿ ಆಸೀನನಾಗಿ

ಎಂದಿನಂತೆ ರಥೋತ್ಸವದಲ್ಲಿ ನಡಿಯ ಬೇಕಾದ ಕೆಲಸಗಳೆಲ್ಲವೂ ಸುಸೂತ್ರ

ವಾಗಿ ಸಕಾಲದಲ್ಲಿ ಸಾಗುವಂತೆ ಏರ್ಪಾಡು ಮಾಡಿದನು. ತೇರುಹಬ್ಬದ

ಕಾರ್ಯವು ಬಲು ವಿಜೃಂಭಣೆಯಿಂದ ಸಾಗಿ ಹೋಯಿತು. ಅವಭೃರತವೂ

ಮುಗಿಯಿತು. ಆದರೂ ಸ್ವಗೃಹಕ್ಕೆ ಹೋಗಲೇ ಇಲ್ಲ. ಮನೆ ಬಿಟ್ಟು

ಇಂದಿಗೆ ಮೂರುದಿನವಾಯಿತು.


ಇದರಿಂದ ಹೆಗ್ಗಡೆಯರ ಸಹೋದರಿಯರಿಗೂ, ಅಳಿಯಂದ್ಯರಿಗೂ,

ಹೆಂಡತಿಮಕ್ಕಳಿಗೂ ದುಃಖವಾಯಿತು, ಬಲು ನೋಂದರು. ಎಷ್ಟೇ ಕೆಲಸ

ವಿದ್ದರೂ ಮನೆಬಿಟ್ಟು ಇತರರಲ್ಲಿ ಒಂದು ದಿನವಾದರೂ ನಿಲ್ಲದ ಯಜ

ಮಾನರು ಮೂರುದಿನ ಮನೆಯ ಬಳಿ ಬರಲಿಲ್ಲವೆಂದರೆ ಎಷ್ಟು ದುಃಖ

ವಾಗಬೇಡ? ಹಾಗೂ ಸಿಟ್ಟಿನಿಂದ ಹೋದದ್ದು. ಆದುದರಿಂದ ಮನೆ

ಮಂದಿಗೆಲ್ಲಾ ವ್ಯಸನವಾಯಿತು.

14---------------------------------------------------


ಶ್ರೀನಿವಾಸ ಹೆಗ್ಗಡೆಯು ಸಿಟ್ಟಿನಲ್ಲಿರುವುದೂ, ಮನೆ ಬಿಟ್ಟು ಇದ್ದು

ಮೂರು ದಿನವಾದ ಸಂಗತಿಯೂ ಸಮೀಪದ ನೆಂಟರಿಸ್ಟರಲ್ಲರಲ್ಲೂ, ಬಂಧು

ಮಿತ್ರರಲ್ಲ ಹಬ್ಬಿತು. ಅವನ ಬಾವಂದ್ಯರೂ, (ಸಹೋದರಿಯರ ಪತಿ

ಯರು) ಇತರ ಸಂಬಂಧಿಕರೂ, ಸೌಖ್ಯಪುರಕ್ಕೆ ಬಂದರು. ಹೆಗ್ಗಡೆ

ಯರ ಮನೆಯನ್ನು ಸೇರಿ ಕೋಪದ ಕಾರಣವನ್ನು ಇತರರಿಂದ ತಿಳಿದರು.

ಅವರ ಸಹೋದರಿಯರನ್ನೂ ವಿಚಾರಿಸಿದರು. ಇಷ್ಟೆಲ್ಲಾ ತೊಂದರೆಗಳಿಗೆ

ವರಮಾನದ ಅಭಾವವೆಂದು ತಿಳಿಯದೆ ಇರಲಿಲ್ಲ. ಮದುವೆಯಸುದ್ದಿಯೂ

ಬಂತು. ಇದೇ ವರುಷ ಬರುವ ಮಾಸದಲ್ಲಿ-ಚೈತ್ರದಲ್ಲಿ ಮನೆಯಲ್ಲಿ

ಮದುವೆ ಮಾಡಲೇ ಬೇಕೆಂದು ನಿರ್ಣಯವೂ ಆಯಿತು. ಅದಕ್ಕೆ

ಬೇಕಾದ ಖರ್ಚಿನ ಪ್ರಸ್ತಾಪವೂ ಬಂತು. ಹಣದ ತಯ್ಯಾರಿಗೆ ಉಪಾಯ

ವೇನೆಂದೂ ಆಲೋಚನೆ ನಡಿಯದೆ ಇರಲಿಲ್ಲ.


ಅಲ್ಲಿ ನೆರೆದಿದ್ದ ಹೆಗ್ಗಡೆಯರ ಸಹೋದರಿಯರೂ, ಅವರ ಮಕ್ಕಳೂ

ಒಮ್ಮನಸ್ಸಿನಿಂದ ಅಂದದ್ದೇನೆಂದರೆ, ನಮ್ಮ ಯಜಮಾನರ ಮರ್ಯಾದೆಯೇ

ನಮ್ಮ ಹಾಗೂ ನಮ್ಮ ಮನೆತನದ ಮರ್ಯಾದೆ. ಅವರ ಸಂಕಷ್ಟಕಲ್ಲದ

ಈ ಆಸ್ತಿ, ಈ ಮನೆ, ಈ ಸೊತ್ತು ಯಾರಿಗೆಬೇಕು. ಈ ಚೈತ್ರದಲ್ಲಿ

ಅವರ ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಲೇ ಬೇಕು. ಇನ್ನೂ

ಅವಿವಾಹಿತರಾಗಿಯೇ ಇರಗೊಡಿಸಿದರೆ ನಮ್ಮ ಮರ್ಯಾದೆಗೆನೇ ಕುಂದು.

ಮದುವೆಯ ವೆಚ್ಚ ಕ್ಕೂ, ವರದಕ್ಷಿಣೆಯ ಸಲುವಾಗಿಯೂ ನಾಲ್ಕು

ಸಾವಿರವಾದರೂ ಬೇಕು. ಆದರೆ ಸುಶೀಲೆಯನ್ನು (ಹೆಗ್ಗಡೆಯರ ದ್ವಿತಿಯ

ಪುತ್ರಿ) ನಮ್ಮ ಆನಂದನಿಗೆ (ಹೆಗ್ಗಡೆಯರ ತಂಗಿಯ ಮಗ) ಮದುವೆ

ಮಾಡಿಕೊಳ್ಳುವ, ವರದಕ್ಷಿಣೆಯೇ ಬೇಡ. ಇಬ್ಬರು ಹುಡುಗಿಯರ

ವರದಕ್ಷಿಣೆಗೂ, ಮದುವೆಯ ವೆಚ್ಚ ಕ್ಕೂ ನಾಲ್ಕು ಸಾವಿರ ಇದ್ದರೆ ಸಾಕು.

ಇದಕ್ಕಾಗಿ ನಮ್ಮ ಚಿಟಪಾಡಿ ಆಸ್ತಿಯನ್ನು ಮಾರಿಬಿಡೋಣ. (ಇದು

ಮನೆಯಿಂದ ದೂರವಿರುವ ಸಣ್ಣ ಆಸ್ತಿ) ಎಂಬುದಾಗಿ ಮನೆಮಂದಿ ಎಲ್ಲಾ

ಸಂತೋಷದಿಂದ ಸಮ್ಮತಿಸಿ ಹೇಳಿದರು. ಇದರಿಂದ ಹೆಗ್ಗಡೆಯರನ್ನು

15---------------------------------------------


- ೧೫ -


ಸಮಾಧಾನ ಪಡಿಸಲಿಕ್ಕೆ ಬಂದಿರುವ ಗೃಹಸ್ಥರಿಗೆ ಸುಲಭವಾಯಿತು.

ಇದು ಒಳ್ಳೆಯ ಆಲೋಚನೆಯೆಂದು ಎಲ್ಲರೂ ತಲೆದೂಗಿದರು, ಯಜ

ಮಾನರ ಮಕ್ಕಳ ಮದುವೆಯಗೋಸ್ಕರ ಕುಟುಂಬದ ಆಸ್ತಿಯನ್ನು

ಮಾರಲು ತಾವಾಗಿ ಒಪ್ಪಿಗೆ ಕೊಟ್ಟ ಅವರ ಸಹೋದರಿಯರ ಅಸಾಧಾರಣ

ವಾದ ಉದಾರತನವನ್ನು ಕಂಡು ಕೆಲವರ ಕೈ ಬೆರಳು ಮೂಗಿಗೆ ಹೋಯಿತು.

ವರದಕ್ಷಿಣೆ ಇಲ್ಲದೆ ಅಣ್ಣನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿ

ಕೊಳ್ಳುತ್ತೇನೆಂದು ಹೇಳಿದ ಅವರ ತಂಗಿಯ ಮಾತಿಗಾಗಿ ಸಂತೋಷ

ಪಟ್ಟರು.


ಪಾಠಕರೇ ತಾನು ಒಳ್ಳೆಯವನಿದ್ದರೆ ಮೂರು ಲೋಕ ಒಳ್ಳೆಯ

ದೆಂಬ ಮಾತು ಇಲ್ಲಿ ಪ್ರತ್ಯಕ್ಷವಾಯಿತು. ಹೆಗ್ಗಡೆಯರ ಆಡಳಿತೆಯಲ್ಲಿ

ಊರಮಂದಿಯೆಲ್ಲಾ ಅವರ ಸದ್ದು ಣಗಳಿಗೆ ಮೆಚ್ಚಿ ಶ್ಲಾಘಿಸುತ್ತಿರುವಾಗ,

ಮನೆಯಲ್ಲಿರುವ ಸಹೋದರಿಯರೂ, ಅವರ ಮಕ್ಕಳೂ, ವಾತ್ಸಲ್ಯವಿಟ್ಟು

ಏನು ಬೇಕಾದರೂ ಸಹಾಯಮಾಡುವುದರಲ್ಲಿ ಆಶ್ಚರ್ಯವೇನು? ಇದಲ್ಲವೇ

ಸದ್ಗುಣದ ಮಹತ್ತು !


ಕೂಡಿದ ಗೃಹಸ್ಥರೂ, ನೆಂಟರಿಷ್ಟರೂ, ಒಟ್ಟಿಗೆ ಸೇರಿ ಹೆಗ್ಗಡೆಯ

ರನ್ನು ಸಮಾಧಾನ ಪಡಿಸಿ ಮನೆಗೆ ಕರತರುವದಕ್ಕಾಗಿ ದೇವಸ್ಥಾನದ

ದಾರಿಹಿಡಿದರು. ದೇವಸ್ಥಾನವು ಮನೆಗೆ ಸಮೀಪ ಇದ್ದುದರಿಂದ ಹೆಗ್ಗಡೆ

ಯರ ಇಬ್ಬರು ಅಕ್ಕಂದ್ಯರೂ, ಒಬ್ಬಳು ತಂಗಿಯೂ, ಅಳಿಯಂದಿರೂ,

ಹಿಂದಿನಿಂದ ತುಸು ಸಾವಕಾಶ ಮಾಡಿ ಹೊರಟರು.


ಇತ್ತ ಶ್ರೀನಿವಾಸ ಹೆಗ್ಗಡೆಯು ತೇರುಹಬ್ಬದ ದಿನ ಮನೆಯನ್ನು

ಬಿಟ್ಟವನು ಪುನಹ ಮನೆಗೆ ಸೇರಲೇ ಇಲ್ಲ. ಇಂದಿಗೆ ನಾಲ್ಕು ದಿನ

ವಾಯಿತು. ಆದರೆ ಅಲ್ಲಿಯೇ ದೇಗುಲದ ಸಮೀಪದಲ್ಲಿರುವ ಸದಾಶಿವ

ಅಡಿಗಳ ಮನೆಯಲ್ಲಿ ಊಟಮಾಡಿಕೊಂಡು ದೇವಾಲಯದ ಕಾರ್ಯವನ್ನು

ನಡಿಸುತ್ತಿದ್ದನು. ರಥೋತ್ಸವದ ಕೆಲಸವೆಲ್ಲ ನಿನ್ನೆ ಗೇನೇ ಮುಗಿದಿರು

18-----------------------------------------------

ಹೋದ ವರುಷ ಬಂದ ಪೋ. ಸಬ್ ಇನ್ಸ್ ಪೆಕ್ಟರರು ತನಗೆ

ಮರ್ಯಾದೆ ಮಾಡಿದ್ದು ಸಾಕಾಗಲಿಲ್ಲೆಂದು ದೂರಿಹೋದರು. ಈ

ವರುಷದ ಉಪಚಾರ ಅವರಿಗೆ ಬಿಟ್ಟು ಅವರ...............ಸಾಕು ಕಳೆದ

ವರುಷ ಹೆಗ್ಗಡೆಯರ ಸವಾರಿ ಎಲ್ಲಿ ಹೋಗಿತ್ತು.


ಶ್ರೀ.-ನಾನು ಜಮಾಮಂದಿ ಲೆಕ್ಕ ತನಿಕಿಗೆ ಹೋಗಿದ್ದೆನು.

ಆದುದರಿಂದ ನಮ್ಮಲ್ಲಿಯ ಹುಡುಗರ ದರ್ಬಾರು, ಅವರಿಗೆ ಯಾರೂ

ಬೇಡ.


ವೀ.-ಪಠೇಲಿಯು ಆ ಹುಡುಗರ ಹತ್ತಿರ ಇರುವುದೇ ಚಂದ.

ಅವರಿಗೆ ಜನರ ತಾರತಮ್ಯ ತಿಳಿಯುತ್ತದೆ.


ಶ್ರೀ.-ನಿಜ, ನಿಜ. ನಾನೂ ಯೋಚಿಸಿದ್ದೆ. ಆ ಪಠೇಲಿ ಸಂಬಂಧ

ಎಲ್ಲಾ ತೊಂದರೆ.


ವೀ.-ಆ ಪರೇಲಿಯನ್ನು ನಿಮ್ಮ ಅಳಿಯಂದ್ಯರಲ್ಲಿ ಒಬ್ಬನ ಹೆಸರಿಗೆ ಬರೆದು

ಹಾಕಿ ಬಿಡಿರಿ. ಇರಲಿ! ಮತ್ತೊಂದು ಸಂಗತಿಯನ್ನು ನಿಮ್ಮೊಡನೆ

ಕೇಳ ಬೇಕೆಂದಿದ್ದೇನೆ. ತಾವು ತಿಳಿದವರು. ತಮಗೆ ಹೇಳಲಿಕ್ಕೆ ನಾನು

ಶಕ್ತನಲ್ಲ. ಆದರೆ....

ಶ್ರೀ. ಆದರೆ ಏನು ?


ವೀ.-ತಾವು ಮನೆಗೆ ಹೋಗದೆ ನಾಲ್ಕು ದಿನವಾಯಿತಂತೆ.


ಶ್ರೀ-(ನಿರುತ್ತರ.)


ಅಕ್ಟಣಿ-(ಹೆಗ್ಗಡೆಯರ ತಂಗಿ) ಕಣ್ಣೀರು ಸುರಿಸುತ್ತಾ,

ನಮ್ಮ ಗ್ರಹಚಾರ, ಅದನ್ನೇನು ಹೇಳಲಿ, ವರ್ಷಾವದಿ ಹಬ್ಬ, ಮನೆಬಿಟ್ಟು ದೂರ

ಕೂತರು. ಎಷ್ಟೋ ಮಂದಿ ನೆಂಟರಿಷ್ಟರು ಸೇರುವ ಮನೆ ಇದ್ದೊಬ್ಬ

ಅಣ್ಣನೂ ಹೆಚ್ಚಾಗಲಲ್ಲಿಲ್ಲ. ಊರಿಗೆಲ್ಲಾ ಹಬ್ಬ, ನನಗೆ ಮಾತ್ರ..

..(ಅಳು ಬಂತು.)

19----------------------------------------------------


ಇದನ್ನು ನೋಡಿ ಮಿಕ್ಕವರೆಲ್ಲಾ ನೀನು ಅಳಬೇಡ ಅಮ್ಮಾ, ಅವ

ರೇನೋ ಬೇಸರಿಕೆಗೆ ಮನಸ್ಸು ಕೊಟ್ಟರು. ಈ ದಿನ-ಈಗಲೇ-ಮನೆಗೆ

ಬರುತ್ತಾರೆ. ನೀವು ಚಿಂತಿಸ ಬೇಡಿರಮ್ಮಾ.

ಅ.-ಇಂದು ಅಣ್ಣನು ಮನೆಗೆ ಬಾರದಿದ್ದರೆ ನಾವೂ, ನಮ್ಮ

ಮಕ್ಕಳೂ, ಇಲ್ಲಿ ಬಂದು ಸೇರುವೆವು. ನಮಗೇಕೆ ಮನೆ ? ಅತ್ತಿಗೆಯೂ

ಅವಳ ಮಕ್ಕಳೂ, ಊಟವನ್ನೇ ಮಾಡಲೊಲ್ಲರು.


ಮುತೈಯ್ಯ ಶೆಟ್ಟರು-(ಶಿವಪುರದ ಬಾವ.) ಬಾವ ನೀವು ಈಗಲೇ

ಮನೆಗೆ ಬನ್ನಿರಿ, ನಿಮ್ಮ ಮನಸ್ಸಿಗೆ ಯಾವಯಾವ ವ್ಯಸನಗಳನ್ನು ಹಚ್ಚಿ

ಕೊಂಡಿರುವಿರೋ ಅವಕ್ಕೆಲ್ಲಾ ತಕ್ಕಮಟ್ಟಿನ ಏರ್ಪಾಡು ಮಾಡಿದ್ದೇವೆ.

ನಾಳದು ಚೈತ್ರದಲ್ಲಿ ಮದುವೆ ಮಾಡಿಸುವ, ಹಣದ ಅಡಚಣಿಗೆ ಗಾಬರಿ

ಬೇಡ, ನಿಮ್ಮ ಕುಟುಂಬದ ದೂರದ ಆಸ್ತಿ-ಚಿಟಪಾಡಿ ಆಸ್ತಿ ಮಾರಿ

ಬಿಡೋಣ ಎಂದು ಹೇಳಿದುದಲ್ಲದೆ ಆನಂದನಿಗೆ ಸುಶೀಲೆಯನ್ನು ಮದುವೆ

ಮಾಡುವ ಪ್ರಸ್ತಾಪವನ್ನೂ ಹೇಳದೆ ಇರಲಿಲ್ಲ.


ಶ್ರೀ-(ಸ್ವಗತ) ತನ್ನ ಆಲೋಚನೆಯಂತೆ ಕಾರ್ಯಸಾಗಿಸಲು ಯಾ

ರಿಂದ ತೊಂದರೆ ಉಂಟಾದೀತೆಂದು ನೆನಸಿದ್ದೆನೋ, ಆ ಬಾವನೇ ತನ್ನೆ ದು

ರಿಗೆ ಕುಳಿತುಕೊಂಡು ಸಂತೈಸುತ್ತಿರುವನು, ಎಂದು ಬಹಳೇ ಆನಂದ

ಪಟ್ಟನು. (ಆದರೆ ಯಾವ ಉತ್ತರ ಕೊಡಲೂ ಇಲ್ಲ.)


ಕೂಡಿದ ಗೃಹಸ್ಥ ರೆಲ್ಲಾ ಮನೆಗೆ ಬರಬೇಕಾಗಿ ತಮ್ಮಿಂದಾದಷ್ಟು

ಸಮಾಧಾನ ಹೇಳಿದರು. ಮತ್ತು ಮದುವೆಯೇ ಮುಂತಾದ

ಮುಂದಿನ ಕೆಲಸಗಳು ಸುಸೂತ್ರವಾಗಿ ಸಾಗುವಂತೆ ತಾವೆಲ್ಲರೂ ಪ್ರಯತ್ನ

ಮಾಡು ತೇವೆಂದು ಎದೆತಟ್ಟಿ ದೈರ್ಯ ಹೇಳಿದರು.


ಒಳ್ಳೇದು ಈಗಲೇ ನಿಮ್ಮ ಒಟ್ಟಿಗೆ ಬರುತ್ತೇನೆಂದು ಹೆಗ್ಗಡೆಯರು

ಸ್ವತಹ ಹೇಳಿದ್ದರಿಂದ ಎಲ್ಲರಿಗೂ ಸಂತೋಷವಾಯಿತು.

---------------

20-------------------------------------------------


ನಾಲ್ಕನೆಯ ಅಧ್ಯಾಯ.


ಮರುದಿನ ಮಧ್ಯಾಹ್ನ ಹೆಗ್ಗಡೆಯರ ಮನೆಯ ಹೆಬ್ಬಾಗಲಲ್ಲಿ ಹೆಚ್ಚು

ಮಂದಿ ನೆರೆದಿದ್ದರು. ಬಂಧು ಮಿತ್ರರೂ, ನೆಂಟರಿಷ್ಟ ರೂ ಅಲ್ಲಲ್ಲಿ ಕುಳಿ

ತಿದ್ದರು. ಹೆಗ್ಗಡೆಯರ ಬಾವಮೈದುನರಾದ ಸಂಜೀವ ಶೆಟ್ಟರು ಬಂದಿ

ದ್ದರು. ನೆರೆಕರೆಯವರೂ, ಅವರ ಕುಟುಂಬದವರೂ (ವಿಭಕ್ತದಾ

ಯಾದಿರು) ಅಲ್ಲಲ್ಲಿ ನಿಂತಿದ್ದರು. ಒಂದೆಡೆ ಕೆಲವರು ತಾಂಬೂಲಚರ್ವಣ

ಮಾಡುತ್ತಿದ್ದರು. ಮುದುಕರು ಎಲೆಅಡಿಕೆಗಳನ್ನು (ಕುಟ್ಟಾಣೆಯಲ್ಲಿ)

ಜಜ್ಜುತ್ತಿದ್ದರು. ಇಬ್ಬರು ಒಕ್ಕಲಿನವರಿಗಂತೂ ಅಡಿಕೆ ಒಡಿಯುವುದೇ

ಕೆಲಸ, ಎಲ್ಲರೂ ಸರಸಪರಿಹಾಸಗಳಿಂದ ನಗೆಮೊಗವಾಗಿದ್ದರು.


ತಾಂಬೂಲ ಸೇವನಾನಂತರ ಮದುವೆಯ ಪ್ರಸ್ತಾಪಕ್ಕೆ ತೊಡ

ಗಿತು. ಚೈತ್ರ ಶು! ೫ ಯು ಮದುವೆಯ ಲಗ್ನಕ್ಕೆ ಈ ವರುಷದ ಮಟ್ಟಿಗೆ

ಪ್ರಶಸ್ತವಾದ ದಿನವೆಂತಲೂ, ಆ ದಿನವೇ ಯೋಗ್ಯವೆಂದು ತಾನು ನಿಡಂ

ಬೂರು ಭಟ್ಟರಲ್ಲಿ (ಜೋತಿಷ್ಯದಲ್ಲಿ ಪ್ರಖ್ಯಾತಿಪಟ್ಟವರು) ಪಂಚಾಗ ನೋ

ಡಿಸಿ ಪರಿಶೋಧನೆಯಿಂದ ತಿಳಿದುಬಂದಿದ್ದೇನೆಂತಲೂ ಸಂಜೀವ ಶೆಟ್ಟರು

ಹೇಳಿದರು. ಆ ದಿವಸಕ್ಕೇನೇ ಮದುವೆಯ ಕಾರ್ಯ ಸಾಗುವಂತೆ ಪ್ರಯ

ತ್ನಿಸಬೇಕಾಗಿ ಕೂಡಿದ ಗೃಹಸ್ಥರೆಲ್ಲರೂ ಒಪ್ಪಿದರು. ಹೆಗ್ಗಡೆಯವರು

ಸಮ್ಮತಿಸಿದರು. ಆದರೆ, ಅಷ್ಟರ ಒಳಗೆ ಇತರ ಸಿದ್ದತೆಗಳೆಲ್ಲಾ ಆಗಬೇಕಾ

ಗಿದೆ. ಮದುವೆಗೆ ಒದಗಿದ ಆ ಯುವತಿಯರಿಗೆ ತಕ್ಕ ವರರನ್ನು ಆರಿಸಿ

ಮನಸ್ಸಿಗೆ ಮೆಚ್ಚುವ ನೆಂಟಸ್ತಿಕೆಯನ್ನು ನಿಶ್ಚಯಿಸಿಡುವುದೇ ಪ್ರಯಾಸದ

ಸಂಗತಿಯಾಗಿದೆ. ಈ ಕಾರಣದಿಂದಲೋ ಏನೋ? ಮದುವೆ ಮಾಡಿದ

ವನೇ ಬಲ್ಲ ............... ಎಂಬ ನಾಣ್ಣುಡಿ ಉಂಟಾಗಿರುವುದು.

ಕೆಲವರು ವರನರೂಪು, ಗುಣ, ವಿದ್ಯೆ, ಇವುಗಳೆಲ್ಲಾ ಯೋಗ್ಯವಿದ್ದರೂ

ವರನ ಕುಟುಂಬದ ಗೌರವ ಹಾಗೂ ಕುಲಮರ್ಯಾದೆ ಅಷ್ಟ ಯೋಗ್ಯ

ವಲ್ಲವಾದರೆ ಅಂಥವರ ನೆಂಟಸ್ತಿಕೆಗೆ ಮೆಚ್ಚರು. ಕುಲಮರ್ಯಾದೆ

21----------------------------------------------


ಯನ್ನು ಸ್ತ್ರೀಯರ ನಡತೆ ಹಾಗೂ ಪುರುಷರ ಗೌರವ ಇವುಗಳಿಂದ ಚುನಾ

ಯಿಸುವರು. ಅನೇಕ ಕುಲಮರ್ಯಾದೆ, ಗೌರವ, ಧನಸಂಪತ್ತುಗ

ಳಿಗೆ ಅಷ್ಟೊಂದು ಗಮನಕೊಡದೆ, ಅದು ಒಂದೊಂದು ಕಾಲದ ಜನರ

ಗುಣನಡತೆ ಯೋಗ್ಯತೆಗಳನ್ನು ಹೊಂದಿ ಇದ್ದು, ಒಬ್ಬನ ಕಾಲದಲ್ಲಿ

ನೀಚವಾಗಿ ಇದ್ದದ್ದು ಇನ್ನೊಬ್ಬನ ಯೋಗ್ಯತೆಯಲ್ಲಿ ಅದೆಲ್ಲಾ ಮಾಜಿ

ಹೋಗಿ ಅದೇ ಊಚಾಗಬಹುದು. ಕೀಳುಮೇಲಾಗಬಹುದು. ಆದುದರಿಂದ

ವರನು ಧನಿಕನಿರಲಿ, ಬಡವನಿರಲಿ, ಆತನು ವಿದ್ಯಾವಂತನಿದ್ದು, ಶೀಲ

ನಂತನಿದ್ದು, ಹಾಗೂ ರೂಪವಂತನಿದ್ದರೆ, ಆತನಿಗೆ ತಮ್ಮ ಕನ್ನೆಯನ್ನು

ಕೊಟ್ಟು ಪಾಣಿಗ್ರಹಣ ಕಾರ್ಯವನ್ನು ಬೆಳಿಸಿಬಿಡುವರು. ಇದು ಸುಧಾ

ರಣೆ ಹೊಂದಿದ ಪುರುಷರ ಚುನಾವಣೆ, ಸ್ತ್ರೀಯರ ಆರಿಸುವಿಕೆಯ ವಿಧಾ

ನವು ಇದಲ್ಲ. ಅದು ಬೇರೆ. ಅವರು ಬಣ್ಣಿಸುವ ವರನನ್ನು ಆರಿಸಿ

ತರುವ ಪುರುಷನು ಮತ್ತೆ ಹುಟ್ಟಿ ಬರಬೇಕು. ವರನ ಕಣ್ಣು, ಕಿವಿ, ಕಾಲು

ಕೆನ್ನೆ, ಹಲ್ಲು, ಬಾಯಿ, ಮೂಗು, ಇವೆಲ್ಲಾ ಲಕ್ಷಣವಿದ್ದು ವರನು ಧನ

ವಂತನೂ, ರೂಪವಂತನೂ, ಉಡುಗೆತೊಡುಗೆಗಳಲ್ಲಿ ಆಡಂಬರದವನೂ,

ಆಗಿರಬೇಕು. ವರನ ಯೋಗ್ಯತೆಗಳೆಲ್ಲಾ ಉತ್ತಮವಿದ್ದರೂ ಸಾಲದು

ಅವನ ಅಕ್ಕ ತಂಗಿಯರೂ, ತಾಯಿ ಮುಂತಾದವರೂ ಇವರು ಮೆಚ್ಚುವ

ಗುಣಗಳುಳ್ಳವರಾಗಿರಬೇಕು. ಹಾಗಿಲ್ಲದಿದ್ದರೆ ತಮ್ಮ ಹುಡುಗಿಗೆ ಸುಖವೇ

ಸಿಕ್ಕದೆಂದು ನೆನಸುವರು.


ಈಗ ಹೆಗ್ಗಡೆಯರ ಸೋದರಅಳಿಯ ಆನಂದನಿಗೆ ಅವರ ಎರಡನೇ

ಮಗಳು ಸುಶೀಲೆಯನ್ನು ಕೊಟ್ಟು ಮದುವೆ ಮಾಡುವ ಸಂಗತಿಯಲ್ಲಿ ನಿಶ್ಚ

ಯದ ಪ್ರಸ್ತಾಪ ಬಂದಿತು. ಆನಂದನ ತಂದೆ, ತಾಯಿ, ದೊಡ್ಡ ತಾಯಿ,

ಮುಂತಾದವರೆಲ್ಲಾ ತಮ್ಮ ತಮ್ಮ ಸಮ್ಮತಿಯನ್ನು ಕೊಟ್ಟರು. ಇತರೆ

ಬಂಧುಮಿತ್ರರು ಇದು ಚಲೋದು, ಇದು ಒಳ್ಳೇದು, ಇದರಿಂದ ನನಗೆ

ಖುಸಿಯಾಯಿತು. ಇದು ಬಹಳೇ ಉತ್ತಮ ಎಂದು ಹೇಳಿ ತಂತಮ್ಮ

ಅನುಮೋದನೆಯನ್ನಿತ್ತರು.

22-----------------------------------------------

ಪಾಠಕರೇ! ನಮ್ಮ ಕಥಾನಾಯಕನಾದ ಮನೆಯ ಅಳಿಯ

"ಆನಂದ" ನ ಪರಿಚಯವನ್ನು ನಿಮಗೆ ಮಾಡಿಕೊಡುವೆವು, ಆನಂದನು

ಈ ವರುಷ ಮೆಟ್ರಿಕ್ ಪರೀಕ್ಷೆಗೆ ನಿಂತಿದ್ದನು. ಫಲಿತಾಂಶವು ಇನ್ನೂ

ಹೊರಬೀಳಲಿಲ್ಲ. ಅವನ ಪ್ರಾಯ ಇಪ್ಪತ್ತೆರಡು ವರುಷ. ಆತನು

ರೂಪವಂತನು. ದೇಹದಲ್ಲಿ ತೆಳುವಾಗಿಯೂ, ನಿರೋಗಿಯಾಗಿಯೂ

ಇದ್ದನು. ಮುಖದಲ್ಲಿ ಮುಗುಳ್ಳಗೆ ತೇಲುತ್ತಿದ್ದಿತು. ನಡತೆಯಲ್ಲಿ

ನಮ್ರನೂ, ವಿನಯಶೀಲನೂ ಆಗಿದ್ದನು, ನಡೆನುಡಿಗಳಲ್ಲಿ ಅಹಂಕಾರ

ವಿಲ್ಲದೆಯೂ, ಉಡುಗೆತೊಡುಗೆಗಳಲ್ಲಿ ಆಡಂಬರವಿಲ್ಲದೆಯೂ, ನಿಗರ್ವಿ

ಯಾಗಿದ್ದನು. ವಿದ್ಯೆಗಾಗಿ ಪಟ್ಟಣದಲ್ಲಿ ವಾಸಿಸಿದರೂ, ಪಟ್ಟಣದ

ದುಸ್ಸಂಗ, ದುರ್ನಡತೆ, ದುವ್ರ್ರಯಗಳಲ್ಲಿ ಸೇರದೆ, ಮಿತವ್ಯಯಿಯಾಗಿ

ತನ್ನ ಕೆಲಸವನ್ನು ಸಕಾಲದಲ್ಲಿ ಮಾಡಿಕೊಳ್ಳುತ್ತಿದ್ದನು. ಈತನ ಸದ್ಗು

ಣಗಳನ್ನು ನೋಡಿದರೆ ಇವನನ್ನು ಇವನಿಗೇನೇ ಹೋಲಿಸಬೇಕಲ್ಲದೆ ಇವ

ನಂಥ ಸುಗುಣಿಯು ದೊರೆಯುವುದೇ ದುಸ್ತರವಾಗಿದ್ದಿತು, ಆನಂದನು

ಸುಶೀಲೆಯನ್ನು ಪಾಣಿಗ್ರಹಣಮಾಡಿಕೊಳ್ಳುವುದರಲ್ಲಿ ನಮಗೂ ಹಿಡಿಯ

ಲಾರದಷ್ಟು ಆನಂದವೆಂಬುದನ್ನು ಇಲ್ಲಿ ಪುನಹ ಹೇಳಿಬಿಡುವೆವು.


ಇನ್ನುಳಿದ ಹೆಗ್ಗಡೆಯರ ಶೀಮಂತ ಪ್ರತ್ರಿ, ತೃತೀಯ ಪುತ್ರಿ, ಇವ

ರಿಗೆ ತಕ್ಕವರನ್ನು ಆರಿಸಿ ನಿಶ್ಚಯವಾಯಿತೆಂದರೆ ಮದುವೆಯು ಜೈತ್ರ ಶು|

೫ರಲ್ಲಿ ನಡೆಯುವುದಕ್ಕೆ ಯಾವ ತೊಂದರೆಯೂ ಇಲ್ಲ, ಆದ್ದರಿಂದ ವರಾ

ನ್ವೇಷಣದ ಕಾರ್ಯವನ್ನು ಸಂಜೀವ ಶೆಟ್ಟರೂ ಹೆಗ್ಗಡೆಯರ ಬಾವಂದ್ಯ

ರೂ (ಸಹೋದರಿಯರ ಪತಿಯರು) ಇಂದಿನಿಂದ ಪ್ರಾರಂಭಿಸಬೇಕಾಗಿ

ನಿರ್ಣಯವಾಯಿತು. ಹೆಗ್ಗಡೆಯರು ಮಾತ್ರ ಮದುವೆಯ ಚಪ್ಪರ

ಧಾರಾಮಂಟಪ, ಪ್ರಸ್ತದ ಊಟ, ಇವಕ್ಕೆ ಬೇಕಾದ ಸಿದ್ಧತೆಗಳನ್ನು ಮಾ

ಡುವುದರಲ್ಲಿ ಅವರಿರಬೇಕೆಂದೂ ನಿಶ್ಚಯಮಾಡಿಕೊಂಡರು. ಆನಂತರ

ಸಭೆಯು ಚದರಿತು. ನೆರೆಕರೆಯವರು ತಂತಮ್ಮ ಮನೆಯ ದಾರಿಹಿಡಿ

ದರು, ನೆಂಟರಿಷ್ಟರು ಮಾತ್ರ ಸಾಯಂಕಾಲವಾದುದರಿಂದ ಉಳಕೊಂ

೨೩--------------------------------------------


ಡರು. ರಾತ್ರೆ ಮಹಾಭಾರತ ಓದಿಸಿ ಅರ್ಥ ಹೇಳುವ ಏರ್ಪಾಡೂ

ನಡಿಯಿತು.


ಆನಂದನ ಸುಶೀಲತೆ, ನಮ್ರತೆ, ವಿದ್ವತ್ವ, ಚಾತುರ್ಯಾದಿಗಳನ್ನು

ಕಂಡು ಈತನೇ ತನಗಳಿಯನಾಗಿ ದೊರೆತರೆ ಆಗುತ್ತಿತ್ತು ಎಂದು ಶ್ರೀನಿ

ವಾಸ ಹೆಗ್ಗಡೆಯು ಮೊದಲೇ ನೆನಸಿದ್ದನು. ಈದಿನ ಅದು ನಿಶ್ಚಯಕ್ಕೆ

ಬಂದುದನ್ನು ಕಂಡು ಬಹಳ ಸಂತೋಷವಾದರೂ ಅವನ ಹೆಂಡತಿ ಪುಟ್ಟ

ಮ್ಮನಿಗೆ ಸುಖವಿಲ್ಲ. ಮನೆಯ ಅಳಿಯನಿಗೆ ಮಗಳನ್ನು ಕೊಡುವುದರಲ್ಲಿ

ಮನಸ್ಸೇ ಇಲ್ಲ. ಆ ಅಳಿಯ- ಆನಂದನು ಪುಟ್ಟಮ್ಮನ ಕಣ್ಣಿಗೆನೇ

ಬೀಳನು. ಇದೇನು? ಊರೇ ಆನಂದನಿಗಾಗಿ ಆನಂದಪಡುವಾಗ

ಹೆಗ್ಗಡತಿಗೆ ಮಾತ್ರ ಏಕೆ ನಿರಾನಂದ? ತಿಳಿಯದೇ? ತಿಳಿಯದೆ ಏನು?

ಅವಳ ಹೆಮ್ಮೆ, ಆಡಂಭರಕ್ಕೆ ನಮ್ಮ ಮನೆಯ ಅಳಿಯನು ತಕ್ಕವನಾಗಿರ

ಲಿಲ್ಲ. ನಿತ್ಯವೂ ನೋಡಿ, ನೋಡಿ, ಈ ಅಳಿಯನು ಸದರವಾಗಿ ಹೋಗಿ

ದ್ದನು. ಈ ವಿನಹ ಮನೆಯೊಳಗೆ ಹೆಗ್ಗಡೆಯರ ಸಹೋದರಿಯರ ಮುಂದೆ

ಬಲು ಗರ್ವದಿಂದ ಕಳೆದವಳು. ಒಳಗಿನ ಎಲ್ಲಾ ಕಾರ್ಯಗಳಲ್ಲೂ ತನ್ನ

ಯಜಮಾನ್ಯವನ್ನು ತೋರಿಸುತ್ತಿದ್ದಳು. ಅತ್ತಿಗೆನಾದಿನಿಯರನ್ನು ನಾನಾ

ಬಗೆಯಿಂದ ಉಪದ್ರವಿಸುತ್ತಿದ್ದಳು ಎಂದು ಇಷ್ಟರಲ್ಲೇ ಮುಗಿಸುವೆವು.

ಅವರ ಗ್ರಹಚ್ಚಿದ್ರವನ್ನು ನಾವೇಕೆ ಬಿಚ್ಚಬೇಕು? ಪುಟ್ಟಮ್ಮ ಹೆಗ್ಗಡ

ತಿಯ ಅತ್ತಿಗೆನಾದಿನಿಯರು ಸಜ್ಜನಸ್ವಭಾವದವರಾದುದರಿಂದ ತಮ್ಮ

ಸಹೋದರನ ಮನಸ್ಸಿಗೆ ಬೇಸರಿಕೆ ಉಂಟುಮಾಡಬಾರದೆಂಬುದರಿಂದಲೂ,

ಸಂಭವಿಸಿದುದನ್ನೆಲ್ಲಾ ಸಹನೆಯಿಂದ ನುಂಗಿಕೊಳ್ಳುತ್ತಿದ್ದರು.


ಈಗ ಈ ನೆಂಟುತನದಿಂದ ತನ್ನ ಗೃಹರಾಜ್ಯದ ದರ್ಬಾರಕ್ಕೆ ಹಾನಿ

ಯುಂಟಾದೀತೆಂಬುದರಿಂದಲೋ? ಇಲ್ಲವೆ ಅತ್ತಿಗೆನಾದಿನಿಯರನ್ನು ಮೊದ

ಲಿನಂತೆ ನೋಡಲು ಎಡೆಯಾಗಲಾರದೆಂಬುದರಿಂದಲೋ? ಈ ಸಂಬಂಧಕ್ಕೆ

ಖುಶಿಯಿಲ್ಲ. ಈವಿನಹ ಹೆಗ್ಗಡೆಯರ ಮನೆಯ ಧನಸಂಪತ್ತಿಯು ಇವಳ ಕ

ಣ್ಣಿಗೆನೇ ಬೀಳದು, ಇವರನ್ನು ಬಡವರ ತರಗತಿಗೆ ಸೇರಿಸಿಬಿಟ್ಟಿದ್ದಳು.

೨೪----------------------------------------------------


ಆದ್ದರಿಂದ ಅನಂದನನ್ನು ಅಳಿಯನಾಗಿ ಮಾಡಿಕೊಳ್ಳುವುದರಲ್ಲಿ ಪುಟ್ಟ

ಮ್ಮನ ಮನಸೂ ಅಷ್ಟಷ್ಟೆ. ಆದರೆ ಹೆಗ್ಗಡೆಯರೂ ಸಂಜೀವ ಶೆಟ್ಟಿ ರೂ

ಮಾತುಕೊಟ್ಟ ಮೇಲೆ ಅದಕ್ಕೆ ಅಭ್ಯಂತರತರಲು ಯಾರಿಗೆ ಧೈರ್ಯ?

ಅವಳಿಗೆಲ್ಲಿ ಎದೆಇದ್ದೀತು? ಹೀಗೆ ನಿರುಪಾಯಳಾಗಿ ಒಂದು ವಿಧದ

ಸಮ್ಮತಿ ತನಗೂ ಇದೆ ಎಂಬಂತೆ ನಟಿಸುತ್ತಿದ್ದಳು. ತನ್ನ ಮಗಳು ಸುಶೀ

ಲೆಯನ್ನು ನೋಡಿದಾಗಲೆಲ್ಲಾ ಅವಳ ಅದೃಷ್ಟವನ್ನು ತೆಗಳುವದು ಅಂದಿ

ನಿಂದ ರೂಢಿಯಾಯಿತು.


ಪಟ್ಟಮ್ಮ ಹೆಗ್ಗಡತಿಗೆ ಇದೊಂದು ಧೈರ್ಯ, ಈಗ ಮದುವೆಗೆ

ಒದಗಿದ ಮೂವರು ಪುತ್ರಿಯರಲ್ಲಿ ಒಬ್ಬಳಿಗೆ ದೊರೆತ ವರನು ಅಷ್ಟು ಸ್ವಾರ

ಸೃದವನಲ್ಲ. ಮಿಕ್ಕ ಇಬ್ಬರಿಗೆ ಚಲೋ ಯುವಕರನ್ನು ಆರಿಸಬೇಕು.

ಈ ಕೆಲಸದಲ್ಲಿ ನನ್ನ ಪ್ರಯತ್ನ ಹೆಚ್ಚಿಗೆ ಇಡಬೇಕು. ವರಾನ್ವೇಷಣ

ದಲ್ಲಿ ನನಗಿರುವಷ್ಟು ಅನುಭವವು ನಮ್ಮ ಸಂಜೀವನಿಗಾಗಲೀ (ಪುಟ್ಟ

ಮ್ಮನ ತಮ್ಮ) ಅವನ ಬಾವನಿಗಾಗಲಿ (ಶ್ರೀನಿವಾಸ ಹೆಗ್ಗಡೆ )ಇಲ್ಲ.

ಎಂದು ಅಂದುಕೊಂಡು ತನ್ನ ದೂರದ ಕುಟಂಬಿಕರಾದ ಚಂದು ಮತ್ತು

ರಘ ಎಂಬ ಇಬ್ಬರು ಯುವಕರ ಸಹಾಯದಿಂದ ವರಾನೇಶ್ವಣದ ಪ್ರಯ

ತ್ನವನ್ನು ನಡೆಸುತ್ತಿದ್ದಳು.

--------------

ಐದನೆಯ ಅಧ್ಯಾಯ.


ಈಗ ಮದುವೆಗೆ ಒದಗಿರುವ ಮೂವರು ಪುತ್ರಿಯರಲ್ಲಿ ಹಿರೇಯ

ಳಾದ ರುದ್ರಮ್ಮನ ಮೇಲೆ ಹೆಗ್ಗಡತಿಗೆ ಬಲುಪ್ರೀತಿ. ಎರಡನೆಯವಳು

ಸುಶೀಲೆ, ಕಿರಿಯವಳ ಹೆಸರು ಭವಾನಿ, ಇವರು ಓದುಬರಹ ಕಲಿತವರು. ಆ

ದರೆ, ಸುಶೀಲೆಯು ಮಾತ್ರ ದೇಶಭಾಷೆಯ ಐದು ಪುಸ್ತಕಗಳನ್ನು ಕ

ಲಿತು ಮುಗಿಸಿದ್ದಳು. ಆ ಕಾಲದಲ್ಲಿ ಅಷ್ಟು ಓದಿದವರು ಬಲು

ಕಡಿಮೆ. ಕಿರಿಯವಳು ಮೂರನೆ ತರಗತಿಯಲ್ಲಿಯೇ ತನ್ನ ಕಲಿಯು

25-----------------------------------------


ವಿಕೆಯನ್ನು ಸಮಾಪ್ತಿ ಮಾಡಿದ್ದಳು. ಹಿರೀಯಳು ಎನೆಡನೆ ತರಗತಿ

ಯಲ್ಲಿಯೇ ಮುಗಿಸಿದ್ದರಿಂದ ಅಕ್ಷರದ ಪರಿಚಯ ಮಾತ್ರ ಇದ್ದಿತು.

ಇವರೆಲ್ಲ ಚೆನ್ನಾಗಿ ಹಾಡುತ್ತಿದ್ದರು, ಹೊಲಿಯುತ್ತಿದ್ದರು. ರೂಪದಲ್ಲಿ

ಮೂವರೂ ತಕ್ಕ ಸೌಂದರ್ಯಶಾಲಿಗಳಾದ ಸುಂದರಿಮಣಿಗಳಾಗಿದ್ದರು.

ಈ ಕಾಲದಲ್ಲಿ ರೂಪವತಿಯರೆಂದು ಹೊಗಳಿಸಿಕೊಳ್ಳುವ ಸ್ತ್ರೀರತ್ನಗ

ಳ್ಯಾವುದಕ್ಕೂ ಕಡಿಮೆಯವರಾಗಿರಲಿಲ್ಲವೆಂದು ಇಷ್ಟು ಹೇಳಬಲ್ಲೆವು.

ಇನ್ನುಳಿದುದು ಗುಣನಡತೆ, ಇದು ಸ್ತ್ರೀಯರಿಗೆ ಮಾತ್ರವಲ್ಲ, ಜೀವಿ

ಸಿರುವ ಆಬಾಲವೃದ್ಧರಿಗೆಲ್ಲಾ ಅತೀ ಅವಶ್ಯವಾದುದು.


ಹೆಗ್ಗಡೆಯರ ಶೀಮಂತ ಪುತ್ರಿ ರುದ್ರಮ್ಮನು ಗರ್ವಿಷ್ಟಳೂ,

ಆಡಂಬರದವಳೂ ಆಗಿದ್ದು ಬಲುಮಟ್ಟಿಗೆ ತನ್ನ ತಾಯಿಯಾದ ಪುಟ್ಟಮ್ಮ

ನನ್ನು ಹೋಲುತ್ತಿದ್ದಳೆಂದು ಇಷ್ಟರಲ್ಲೇ ಮುಗಿಸಿದರೆ ತಪ್ಪಾಗದು.


ಸುಶೀಲೆಯಾದರೋ? ತನಗಿಟ್ಟ ಹೆಸರು ಯಥಾರ್ಥನಾಮ ಎನ್ನಿಸು

ವಷ್ಟು ಶೀಲವತಿ, ವಿದ್ಯಾವತಿ, ಗುಣವತಿ, ಬುದ್ಧಿಮತಿ, ಹೆಚ್ಚೇಕೆ!

ಎಲ್ಲಾ ಸದ್ಗುಣಗಳಿಗೂ ಇವಳೇ ತೌರುಮನೆಯಾಗಿದ್ದಳು. ಇವಳಿಗೆ

ತನ್ನ ತಾಯಿಯ ಹಾಗೂ ಅಕ್ಕ ರುದ್ರಮ್ಮನ ಮರ್ಜಿಯು ಎಂದೂ

ಸರಿಬೀಳುತ್ತಿರಲಿಲ್ಲ. ಅವರ ನಡತೆ ತಿದ್ದಿಕೊಳ್ಳುವಂತೆ ಆಗಾಗ್ಗೆ ಎಚ್ಚರಿಸು

ತ್ತಿದ್ದಳು. ಆದರೂ ಅದು ಅವರ ಹುಟ್ಟುಗುಣ, ಅಲ್ಲದೆ "ನಮಗೆ

ಬುದ್ಧಿ ಕಲಿಸುವವಳು ನೀನೋ?” ಎಂದು ಕೆಟ್ಟ ಕಣ್ಣಿನಿಂದ ನೋಡುತ್ತಿ

ದ್ದರು. ಆದುದರಿಂದ ಅವರ ಗೋಜಿಗೆ ಹೋಗದೆ ತನ್ನ ಕೆಲಸವನ್ನು

ಮಾತ್ರ ವಿಚಾರದಿಂದ ಮಾಡುತ್ತಿದ್ದಳು.


ಭವಾನಿಯು ಸಜ್ಜನೆ, ಸಾತ್ರಿ ಕಳು, ಸಭ್ಯಳು, ಇತರರ ಗೋಜಿಗೆ

ಹೋಗದೆ ತಂದೆತಾಯಿಗಳ ಹಾಗೂ ಅಕ್ಕಂದ್ಯರ ಅಪ್ಪಣೆಯಂತ ನಡ

ಕೊಂಡಿದ್ದಳು. ಅವಳ ಸಾಧುತ್ವವನ್ನು ಅವಳ ಮುಖಭಾವವೇ ಸೂಚಿ

ಸುತ್ತಿತ್ತು.

26---------------------------------------------

ಎಂದಿನಂತೆ ಇಂದು ಮಧ್ಯಾಹ್ನ ಹೆಗ್ಗಡೆಯರ ಮನೆಯ ಒಳ

ರಾಜಾಂಗಣದಲ್ಲಿ ಹೆಂಗಸರ ಸಭೆಸೇರಿತ್ತು. ಆಜುಬಾಜಿನ ಅನೇಕ

ಮಂದಿಯ ನೆರೆದಿದ್ದರು. ಆ ಸಭೆಗೆ ಬಾರದ ಸುದ್ದಿ ಇಲ್ಲ, ಅಲ್ಲಿ

ಚರ್ಚಿಸದ ವಿಷಯವಿಲ್ಲ.


ನಾಗಮ್ಮ-ಏನೇ ಲಕ್ಷ್ಮಿ? ಈ ದಿನ ನಿಮ್ಮಲ್ಲಿ ಮೇಲೋಗರ

ಏನಮ್ಮಾ?

ಲಕ್ಷ್ಮಿ-ಅಕ್ಕಾ! ನನ್ನ ಸಂಜುನ ಅಪ್ಪ ಎರಡು ದೀವಿಹಲಸು

ತಂದಿದ್ದರು. ಅದನ್ನೇ ಮೇಲೋಗರ ಮಾಡಿದೆ. ಬೇರೇನೂ ಇಲ್ಲ.


ದಾರಮ್ಮ-ಸಂಜು ಅಪ್ಪನು ನಿನಗೇನು ಆಗಬೇಕೇ ?


ಲ-ರಾದು ಅಪ್ಪನು ನಿನಗೇನು ಆಗಬೇಕೋ? ಅದೇ ಆಗಬೇಕು.


ಸುಬ್ಬಕ್ಕೆ-ಬೀಡಿನ ಮನೆ ಕಮಲನು ನಿನ್ನೆ ಹೆತ್ತಳಂತೆ.


ಕಾವೇರಿ-ಮಗು ಏನೇ ? ಹೆಣ್ಣೋ?


ಸು.-ಹೌದು! ಹೌದು! ಹೆಣ್ಣು.


ಕಾ-ನಾನೂ ಎಣಿಸಿದ್ದೆ, ಅವಳ ಮುಖ, ಆ ಹೊಟ್ಟೆ, ಇವು

ಗಳನ್ನು ನೋಡಿ ಅವಳು ಹೆರುವದು ಹೆಣ್ಣೆಂದು ಮೊದಲೇ ತಿಳಿದಿದ್ದೇನು?


ಗೌರಿ-ಹಾಗಾಗಬೇಕು, ಅವಳ ಗಂಡನಿಗೆ ಬಲು ಹಮ್ಮು.

ಅವನ ದುಸ್ತು ಏನು ! ಆ ನಡಿಯುವ ನಮೂನೆ ಏನು ! ಕೊಡೆಹಾರಿಸು

ವದೇನು! ಬಾರಿ ಜೋಕು. ಈಗ ಹುಟ್ಟಿದ್ದು ಕೂಡಿ ಹೆಣ್ಣು ನಾಲ್ಕರ

ಮೇಲೆ ಮತ್ತು ಒಂದೇ, ಶಿಕ್ಕಿ ಬಿದ್ದ ಅಣ್ಣ.


ಸೂರಮ್ಮ-ಏನೇ ಗೌರಿ! ಕಮಲನ ಗಂಡನ ಸುದ್ದಿ ನಿನಗೇಕೆ ?

ಅವನು ಹೇಗಿದ್ದರೇನು?


ಗೌರಿ-ಸೂರಕ್ಕಾ! ನೀನು ನಿನ್ನೆದಿನ ಮಾದಮ್ಮನ ಗಂಡನ ಸುದ್ದಿ

ಏಕೆ ಎತ್ತಿದಿ?

27---------------------------------------------


ಸೂ-ಈಗಿನ ಹಣ್ಣು ಮಕ್ಕಳ ಹತ್ತಿರ ಮಾತಾಡುವುದೇ ಕಷ್ಟ

ವಪ್ಪಾ! ಅವರು ಹಿರಿಯರೆಂತ ನೋಡುವವರಲ್ಲ. ನಾವು ಹಾಗಲ್ಲ,

ಹಿರಿಯರೇನೆಂದರೂ ಕೇ.......ಳು......ವ.........ದು.


ಗೌ.-ಹೌದು! ಹೌದು! ನೀನು ನಿನ್ನೆದಿನ ನಿನ್ನ ತಾಯಿಗೆ

ಏನಂದೆ?


ಸೂ, ನನ್ನ ತಾಯಿಗೆ ನಾನು ಏನಂದರೂ ಅದರಿಂದ ನಿನಗೇನು?


ಗೌ-- ಅವಳು ನಿನಗಿಂತ ಹಿರಿಯಳಲ್ಲವೋ ?


ಸೂ-ಆ ಸಂಗತಿ ಬಿಡು. ಒಂದು ಮಾತು ಹಿಡಕೊಂಡು

ನೇತಾಡಬಾರದು. ನಿಮ್ಮ ಅಕ್ಕ ಈ ದಿನ ಬರಲಿಲ್ಲ ಏಕೆ ?


ಗೌ- ಅದನ್ನು ಬಿಡಬೇಕೇ ? ನಿನ್ನ ಕಾಲಡಿಯ ಕುಂಬಳ ತೋರು

ವುದಿಲ್ಲ; ಹೆರವರಡಿಯ ಸಾಸಿವೆ ತೋರುತ್ತಿದೆಯೇ ?


ಸದಿಯಮ್ಮ-ನಾಗಕ್ಕಾ ! ಈಗಿನವರ ಬೊಟ್ಟು ನೋಡಿದಿಯೇ ?

ಅದನ್ನು ಕಾಣಲಿಕ್ಕೆ ಬೂತಗನ್ನಡಿ ಬೇಕು.


ನಾಗಮ್ಮ ಬೊಟ್ಟೆನೇ ! ಆ ಜುಟ್ಟು, ಉಡಿಗೆ ತೊಡಿಗೆ, ಅವರ

ನೋಟ, ಎಲ್ಲಾ ಹೊಸತು. ಹಣೆತುಂಬಾ ಬೊಟ್ಟು ಹಾಕಿ, ತುರುಬು

ತುಂಬಾ ಹೂ ಮುಡಕೊಂಡು ಶಿರಿದೇವಿಯರಂತೆ ನಡಿಯುವವರೇ

ಕಮ್ಮಿ, ಈಗ ಎಲ್ಲಾ ಬೇರೆ.


ಸದಿಯಮ್ಮ- ಪಲ್ಕ ಅಂತೆ, ಜಕೇಟಂತೆ, ವ್ಯಾಸ್ಲಿನಂತೆ ಹೆಂಗುಸ

ರಿಗೂ "ಕುರೂಪು" ಅಂತೆ, ಶಿಲ್ಕಿನ ಶೀರೆಯಂತೆ, ಏನೋನೋ ಅಂತೆ,

ಅವರ ಜೋಕು ಕಂಡರೆ ಸೂ.......ಹಾಗೆ ಕಾಣುತ್ತದೆ.

ನಾ-ಹ್ಯಾಗೂ ಇರಲಿ! ದೊಡ್ಡವರ ಮಕ್ಕಳು, ಏನು ಮಾಡಿ

ದರೂ ಆಗುತ್ತದೆ, ಬಡವರ ಮಕ್ಕಳಾಗಿದ್ದರೆ.......?


ಶೇಸಮ್ಮ-ಅದೆಲ್ಲಾ ಇರಲಿ! ಈಗಿನ ಹೆಣ್ಣು ಮಕ್ಕಳಿಗೆ ಓದುಬರಹ

ಅಂತೆ, ಮಡಿಕೇವಶಿ ತೊಳೆಯುವವರಿಗೆ ಬರಹ ಏಕೋ ದೇವರೇ ಬಲ್ಲ.

28---------------------------------------------


ಗಿರಿಯಮ್ಮ-ನಾನೂ ಅದನ್ನೇ ಕೇಳುವೆನು. ಪೇಟೆಯ ಅಂಕೆ

ಇಲ್ಲದ ಹೆಣ್ಣುಗಳಂತೆ ಬೀದಿ ಬೀದಿ ಅಲೆದು ನಿರ್ಲಜ್ಜೆಯರಾಗಿ ಕೊನೆಗೆ

ಯಾರೇನಂದರೂ ಮಾರುತ್ತರ.


ಶೇ.-ನಾನು ಸವರೂರು ಜಾತ್ರೆಗೆ ಹೋಗಿದ್ದೆ. ಹೆಣ್ಣು ಮಕ್ಕಳ

ಸಾಲೆ ಅಂತ, ಅಲ್ಲಿ ನಾಚಿಕೆ ಬಿಟ್ಟ ನಾಲ್ಕಾರು ಮಂದಿ ಜಕ್ಕಜವ್ವನಿಯರು

ಗಂಡಸರಂತೆ ಕುರ್ಚಿಯಲ್ಲಿ ಕೂತು ಚಿಕ್ಕ ಬಾಲಿಕೆಯರಿಗೆ ಹೇಳಿಕೊಡುತ್ತಾ,

ಅಟ್ಟಹಾಸಮಾಡುವುದು ನೋಡಿ ನನಗೇನೇ ನಾಚಿಕೆಯಾಗಿ ಸಂಕಟ

ವಾಯಿತು. ಅವರಿಗೆ ಒಂದಿಷ್ಟೂ ಮರ್ಯಾದೆ ಇಲ್ಲ.


ಮುತ್ತಮ್ಮ-ಅದನ್ನು ಹೇಳುವದೇ ಬೇಡಪ್ಪಾ! ಈಗಿನ ಹೆಣ್ಣು

ಗಳು ಸೂಳೇರಂತೆ ಹಾಡುವುದೂ, ಅವರ ನಡೆ, ನುಡಿ, ಇವನ್ನು ಕಂಡರೆ,

ಹೋದ ಮನೆಗೆ ಮಣ್ಣು ಹಾಕುವವರೆಂತ ಹೆಡ್ಡ ರೂ ಹೇಳದಿರರು. ಅವ

ರಲ್ಲಿ ಗರತಿ ಲಕ್ಷಣವೇ ಇಲ್ಲ. ಇದೆಲ್ಲಾ ಆ ಓದಿನ ಫಲ.


ಶೇ.-ಅಕ್ಕಾ! ಅದೇನು ಕೇಳುಏ! ಅವರ ಪೆಟ್ಟಿಗೆ ಏನು !

ಅದರ ತುಂಬಾ ಪುಸ್ತಕಗಳೇನು! ಹಾಡುವದೇನು ! ಹೊಲಿಯುವದೇನು.

ಒಬ್ಬೊಬ್ಬರೇ ಕುಳಿತು ಗೊಣಗೊಣ ಓದುವದೇನು! ಗಂಡನಿಗೋ

ಮಿ........ಕಾಗದ ಬರಿಯುವದೇನು ! ಇದನ್ನು ಹೇಳಲಿಕ್ಕೇನೇ ಲಜ್ಜೆ!

ಆ ಜವ್ವನಿಗಿತ್ತಿಯರಿಗೆ ಮರಿಯಾದೆ ಯಾಕಿಲ್ಲವೋ ಕಾಣೆ ! ಊರೇ

ಹಾಳಾಯಿತು. ಮೊದಲು ಮಿಶ್ಯನವರ (ಕ್ರೈಸ್ತರ) ಹೆಂಗಸರಲ್ಲಿದ್ದ

ಈ ರೋಗವು ಸಾರಸ್ವತ, ಕೊಂಕಣಿ ಮುಂತಾದ ಬ್ರಾಹ್ಮಣರಲ್ಲಿ ಬಂದು

ಪೇಟೆಯಲ್ಲೆಲ್ಲಾ ತುಂಬಿ, ಈಗ ಹಳ್ಳಿಗೂ ಬಂತಕ್ಕಾ, ಊರೇ ಹೊಲ

ಸಾಯಿತು.


ಮು-ತಂಗಿ! ನೀನಂಬುದೆಲ್ಲಾ ನಿಜ. ನಮಗೆ ಗಂಡುಸರ

ಮುಂದೆ ಹೋಗುವುದೆಂದರೇ ಲಜ್ಜೆ, ಅವರು ಗಂಡನ ಮುಂದೆ ಕುಳಿತು

ಓದುವುದೂ, ಹಾಡುವುದೂ, ಇದೆಂಥಾ ಹೇಸಿಕೆಯೋ ತಿಳಿಯದು.

29----------------------------------------------

ಅಲ್ಲಿ ಸವಿಾಪದ ಮಗ್ಗು ಲು ಕೋಣೆಯಲ್ಲಿ ಕುಳಿತು "ಹದಿಬದೆಯ

ಧರ್ಮ"ವೆಂಬ ಗ್ರಂಥವನ್ನು ಓದುತ್ತಿದ್ದ ಸುಶೀಲೆ ಮತ್ತು ಅವಳ

ಗೆಳತಿಯರಾದ ಗಿರಿಜಾ ಕಲ್ಯಾಣಿ, ರಾಜೀವಿ, ಇವರೆಲ್ಲರೂ ಈ ಸಂಭಾಷಣೆ

ಯನ್ನು ಕೇಳಿ ಸ್ವಲ್ಪ ಸಿಟ್ಟು ಬಂದರೂ, ಅಜ್ಞಾನದಿಂದ ಹೇಳುವರು

ಎಂದು, ಅದನ್ನೆಲ್ಲಾ ಸಹಿಸಿಕೊಂಡು ಮೆಲ್ಲನೆ ಕೋಣೆಯಿಂದ ಹೊರಗೆ

ಬಂದರು. ಅವರಲ್ಲಿ ಒಬ್ಬಳ ಹತ್ತಿರ ಒಂದು ಪುಸ್ತಕವೂ, ಇನ್ನೊಬ್ಬಳ

ಕೈಯ್ಯಲ್ಲಿ ಒಂದು ಕಾಗದವೂ ಇದ್ದಿತು. ಇವರು ಹೊರಟುದನ್ನು

ಕಂಡು ಕೂಡಿದ ಸಭೆಯವರು ಒಬ್ಬರ ಮುಖವನ್ನು ಮತ್ತೊಬ್ಬರು

ನೋಡಿ, ನಗಹತ್ತಿದರು, ಕೆಲವರು ಶೀರೆಯ ಸೆರಗನ್ನು ಮರೆಮಾಡಿ

ಕೊಂಡು ನಕ್ಕರು. ಅವರು ತಮ್ಮ ಸಭೆಯ ಬಳಿಗೇನೇ ಬರುವದು

ನೋಡಿ, ನಗುವನ್ನು ತಡಿಸ ಪ್ರಯತ್ನಿಸಿದರು.


ಶೇ.-ಅಮ್ಮಾ, ಸುಶೀಲಾ! ಒಂದು ಕಥೆಹೇಳೇ! ನಾವು ಕೇಳುವೆವು.


ಸುಶೀಲ-ನನಗೆ ಕಥೆ ಹೇಳಲಿಕ್ಕೆ ಬರುವದಿಲ್ಲಮ್ಮ,


ಶೇ.-ಕೈಯಲ್ಲಿರುವ ಪುಸ್ತಕದಿಂದ ಓದಿ ಹೇಳಬಾರದೆ ?


ಸು. ಇಂದು ನಿಮ್ಮ ಕಚೇರಿಯಲ್ಲಿ ಓದಿಗೆ ಬಹಿಷ್ಕಾರ ಬಿದ್ದ

ಮೇಲೆ ಇನ್ನು ಲೋಕದಲ್ಲಿ ಹೆಂಗಸರು ಓದುವುದುಂಟೇ?


ಶೇ.-(ಮಿಕ್ಕವರನ್ನು ನೋಡಿ ಒಮ್ಮೆ ಕಣ್ಣು ಮುಚ್ಚಿ ತೆರೆದು)

ನಿಮಗಲ್ಲಮ್ಮ ಹೇಳಿದ್ದು,


ಸು-ಹೌದು, ಹೌದು, ನಮಗಲ್ಲ ಓದಿಗೆ, ಮತ್ತು ಓದುವವರಿಗೆ.

ಒಟ್ಟಿನಮೇಲೆ ಓದುಬರಹಕ್ಕೆಲ್ಲಾ ಬಹಿಷ್ಕಾರ.


ಶೇ-ಹಾಗಲ್ಲವಮ್ಮಾ, ಈಗ, ನಾವೇನಾದರೂ ಓದಿದವರೇ!

ಆದರೂ ಅಡಿಗೆಮಾಡಿಕೊಂಡು, ಮಕ್ಕಳುಮರಿ ಸಾಕಿಕೊಂಡು ನಮ್ಮ

ಯಜಮಾನರಿಗೆ (ಗಂಡನಿಗೆ) ಸರಿಯಾಗಿಲ್ಲವೇ ? ಆ ಓದುಬರಹದಿಂದೇನು?

30-----------------------------------------------


ಗಿರಿಜ- (ಮುಂದೆ ಬಂದು) ಶೇಸಮ್ಮಾ! ಅಡಿಗೆ ಮನೆವಾರ್ತೆ,

ಮಕ್ಕಳುಮರಿ ಆರೈಕೆ ಇವುಗಳನ್ನು ಯಾರೂ ಮಾಡುವರು. ಆದರೆ

ಚಲುವಾಗಿ, ಸ್ವಾರಸ್ಯವಾಗಿ ಮಾಡುವುದಕ್ಕೆ ವಿದ್ಯೆ ಬೇಕು. ನಿಮ್ಮ ಅಡಿಗೆ

ಸಂಗತಿ ನನಗೆ ಗೊತ್ತುಂಟು; ಆ ಅಡಿಗೆಯನ್ನು ನೀವೇ ತಿನ್ನ ಬೇಕು,

ಅಥವಾ ನಿಮ್ಮಂಥವರೇ ಉಣ್ಣಬೇಕು. ಮುತ್ತಜ್ಜಿ ಕಾಲದ ಆ ಅಡಿಗೆ

ಯನ್ನೇ ಈಗಲೂ ಮಾಡುವಿರಿ, ಅದು ಈಗಿನವರಿಗಾಗದು. ನೀವು

ಒಂದು ದಿನದಲ್ಲಿ ಖರ್ಚುಮಾಡುವ ಹುಳಿ, ಖಾರ ಇವು ನಮಗೆ ಒಂದು

ವಾರಕ್ಕೆ ಸಾಕಾಗಬಹುದು; ನಿಮ್ಮ ಮನೆವಾರ್ತೆಯನ್ನು ನಾನು ಬಲ್ಲೆನು;

ನಿಮ್ಮ ಶುಚಿತ್ವದ ಸಂಗತಿಯನ್ನು ನೀವು ಉಟ್ಟ ಬಟ್ಟೆಯೇ ಹೇಳು

ವುದು. ನಿಮ್ಮ ತಲೆಯಂತೂ ನೀರುಕಾಣದೆ ಎಷ್ಟು ತಿಂಗಳಾಯಿತೊ?

ಮತ್ತು ನಿಮ್ಮ ಮಕ್ಕಳು-ಮರಿ, ನಿಮ್ಮದು ಮಕ್ಕಳಲ್ಲ, ಅವಕ್ಕೆ ಮರಿ

ಎಂಬ ಮಾತೇ ಒಪ್ಪುವುದು. ಅವುಗಳ ರೂಪು, ಶುಚಿತ್ವ, ಮೈಕೈ

ಗಳಲ್ಲಿರುವ ಕಜ್ಜಿ, ಇವುಗಳಿಂದಲೇ ತಿಳಿಯಬಹುದು. ಆ ಮಕ್ಕಳಲ್ಲಿ

ಒಂದಕ್ಕೆ ನೆಗಡಿಯಾಗಿ ಮುಖತುಂಬಾ ಶಿಂಬಳ, ಮತ್ತೊಂದಕ್ಕೆ ಕೆಮ್ಮು,

ಇನ್ನೊಂದಕ್ಕೆ ಉಬ್ಬಸ, ಒಂದಕ್ಕೆ ಹೊರಕಡೆ, ಅವನ್ನು ಮುಟ್ಟಲಿಕ್ಕೇನೇ

ಹೇಸಿಕೆ. ಹೀಗೆಲ್ಲಾ ಅಂದೆನೆಂದು ಬೇಸರಿಸಬೇಡಿರಿ.


ಶೇ.-(ಸಿಟ್ಟಿನಿಂದ ಕಣ್ಣು ಕೆರಳಿಸಿಕೊಂಡು) ಆಗಲಿ! ನಮ್ಮ ದು

ಮಕ್ಕಳಲ್ಲ, ಮರಿಗಳು ನಿಮ್ಮದು ನೀವು ನೋಡಿಕೊಳ್ಳಿರಿ.


ಸು.-ಅಕ್ಕಾ ! ಸಿಟ್ಟು ಮಾಡಬಾರದು, ನೀವೆಲ್ಲಾ ಪ್ರತಿದಿನ

ಮಧ್ಯಾಹ್ನ ಇಲ್ಲಿ ಸೇರಿ ಮೊದಲು ಅಡಿಗೆಪ್ರಸ್ತಾಪ, ನಂತರ ಗೃಹಕೃತ್ಯದ

ಸುದ್ದಿ, ಕೊನೆಗೆ ಆತ್ಮಸ್ತುತಿ, ಮತ್ತೆ ಗುಣದೋಷ ವಿಮರ್ಶೆ, ಕಡೆಗೆ

ಪರನಿಂದೆ, ಇವೆಲ್ಲಾ ಹೇಳಿ ಮುಗಿಸಿ ಅಂತ್ಯದಲ್ಲಿ ಸಂಸಾರದ ಗುಟ್ಟು

ಹೊರಗೆ ಹಾಕಿ ಎಂತೆಂಥಾ ಅನಾಹುತ ಮಾಡುತಲಿದ್ದೀರಿ. ನಿಮ್ಮ

ಮಾತಿನ ಭರದಲ್ಲಿ ಏನೇನು ಬಯಲಿಗೆ ಬೀಳುವದೆಂಬುದು ನಿಮಗೇನೇ

ತಿಳಿಯುವುದಿಲ್ಲ. ನಿಮಗೆ ವಿದ್ಯೆ ಇರುತ್ತಿದ್ದರೆ ಇಂಥಾ ಗುಂಪಿನಲ್ಲಿ

31----------------------------------------------


ಸೇರಲಿಕ್ಕೇನೇ ಹೇಸುತ್ತಲಿದ್ದೀರಿ. ನಿಮಗೆ ಓದುಬರಹ ತಿಳಿದಿದ್ದರೆ ನಿಮ್ಮ

ವಿರಾಮಕಾಲವನ್ನು ನೀತಿಬೋಧಕವಾದ ಗ್ರಂಥಾವಲೋಕನದಿಂದ ಕಳಿ

ಯುತ್ತಿದ್ದಿರಿ. ಹೀಗೆ ಪರನಿಂದೆಗೆ ಎಡೆಯೇ ಇರುತ್ತಿರಲಿಲ್ಲ.


- ಮು-ಹೌದು! ಹೌದು! ಓದಿದ ಗಂಗಮ್ಮ ನ ಪರಿಚಯ ಉಂಟು.

(ಇವಳು ವಿಧವೆಯಾದ ಬ್ರಾಹ್ಮಣ ಹೆಂಗಸು. ಇವಳ ಮೇಲೆ ಸುಳ್ಳು

ಅಪವಾದ ಇದ್ದಿತ್ತು. ಈಗ ಹುಡುಗಿಯರ ಶಾಲೆಯ ಉಪಾಧ್ಯಾಯಿನಿ

ಯಾಗಿದ್ದಾಳೆ.)


ರಾಜೀವಿ-(ಸಿಟ್ಟಿನಿಂದ) ಮುತ್ತಕ್ಕಾ ದೂರು ಯಾರಿಗೂ ತಪ್ಪದು.

ಗಂಗಮ್ಮನ ಮೇಲೆ ಅಪವಾದ ಹೊರಿಸಿದವರು ನಿಮ್ಮಂಥ ಕೆಲಸವಿಲ್ಲದ

ಹೆಂಗಸರು, ಆ ಸಾದ್ವಿಯು ಇತರರೊಡನೆ ಸಹೋದರರಂತೆ ಮಾತಾ

ಡುವುದು ನೋಡಿ, ಇಲ್ಲದ ದೂರು ಹೊರಿಸಿದರು. ಸುಳ್ಳು ಸುದ್ದಿ

ಹುಟ್ಟಿಸಿದ ಅವಳ ನೆರೆಮನೆಯ ಪಾರ್ವತಿಗೆ ತಕ್ಕ ಶಿಕ್ಷೆಯಾಯಿತು.

ಇನ್ನು ನಿಮಗೆ ಆದರೆ ಸರಿ. ಈ ಸುದ್ದಿ ಯಾರಿಂದಾದರೂ ಅವಳ

ಅಣ್ಣ ರಂಗರಾಯರು ಕೇಳಿದರೆಂದರೆ ಕೂಡಲೇ ಬಂದಾರು; ಆಗ,

ನಿ.........ನ........ಗೆ.


ಮು.-(ಹೆದರಿ) ರಾಜೀವಿ! ನಾನು ಹೀಗೆ ಅಂದೆನೆಂದು ಯಾರೊ

ಡನೆಯೂ ಹೇಳಬೇಡ; ನನ್ನಾಣೆ ಹೇಳು.


ರಾ.-ಮಾತಿಗೆಲ್ಲಾ ಆಣೆ ಹೇಳಲಾರೆ. (ಅಲ್ಲಿ ನೆರೆದವರನ್ನು

ನೋಡಿ) ಅಕ್ಕಂದಿಯರಿರಾ! ನಿಮಗೆ ವಿದ್ಯೆಯ ಮಹತ್ತೇ ಗೊತ್ತಿಲ್ಲ.

ವಿದ್ಯೆ ಅಂದರೆ ಅರಿವು-ತಿಳುವಳಿಕೆ-ಜ್ಞಾನ, ಇತರ ಪ್ರಾಣಿಗಳಿಗೆಲ್ಲಾ

ತಿಳುವಳಿಕೆ ಇದ್ದರೆ ಚೆನ್ನಾಗಿತ್ತು ಎಂದು ಹೇಳುವಾಗ ಮನುಷ್ಯರಾದ-

ಸಂಸಾರಕ್ಕೆ ರತ್ನ ಪ್ರಾಯರಾದ- ಗೃಹಲಕ್ಷ್ಮಿಯರಂತಿರುವ ಹೆಂಗಸರಿಗೆ

ವಿದ್ಯೆ ಬೇಡವೆಂಬ ಆ ನರಾಧಮರಿಗೆ ಧಿಕ್ಕಾರವಿರಲಿ! ಆ ಕುಲಕಂಠಕರು

ಜನಿಸದೇ ಹೋಗಲಿ! ನೀವೆಲ್ಲರೂ ನನಗಿಂತ ಹಿರಿಯರು, ವಯಸ್ಸಾದವರು,

ನಿಮಗೆ ವಿದ್ಯೆಯ ಪ್ರಯೋಜನವನ್ನು ಈಗಲೇ ತೋರಿಸಿಕೊಡುವನು.

32-----------------------------------------------


- ೩೨ -

ಇಷ್ಟು ಹೊತ್ತು ಕೆಲಸಕ್ಕೆ ಬಾರದ ಹರಟೆಯಿಂದ ಸಮಯಕಳೆದ ನೀವು

ತಾಳ್ಮೆಯಿಂದ ಕೇಳಿರಿ.


ನಮ್ಮ ಶಿವರಾಮಯ್ಯನ ಹೆಂಡತಿಯನ್ನು ನೀವು ಬಲ್ಲಿರಷ್ಟೆ.

ಅವಳ ಮನೆಯನ್ನು ಒಮ್ಮೆ ನೋಡಿರಿ, ಎಷ್ಟು ಶುಚಿಯಾಗಿದೆ. ಅವಳ

ಮಕ್ಕಳು ಹ್ಯಾಗಿದ್ದಾರೆ. ನೋಡಿ, ಆ ಮನೆಯಲ್ಲಿ ರೋಗರುಜಿನಗಳ

ಸುದ್ದಿಯೇ ಇಲ್ಲ. ತನ್ನ ಮಕ್ಕಳನ್ನು ತಾನು ಕಾಪಾಡುವುದಲ್ಲದೆ,

ಊರಮಕ್ಕಳನ್ನೂ ಕಾಪಾಡುವಳು. ವೈದ್ಯರ ಹಂಗೇ ಅವಳಿಗಿಲ್ಲ.

ಹೋಮ್ಯೋಪೆತಿ, ಟಿಸ್ಯು, ಮುಂತಾದ ಮದ್ದುಗಳನ್ನು ಕೊಟ್ಟು, ಎಂಥಾ

ರೋಗಗಳನ್ನಾದರೂ ತೆಗೆದುಬಿಡುವಳು. ಅನೇಕ ಮಂದಿ ಬಾಟ್ಲಿ ಹಿಡ

ಕೊಂಡು ಸಂಜೆಮುಂಜಾನೆ ಅಲ್ಲಿ ಸೇರುವುದು ನೋಡಿದರೆ, ಅದೊಂದು

ಚಿಕ್ಕ ಆಸ್ಪತ್ರೆ ಎಂದೇ ಹೇಳಬೇಕು. ಆ ಗರತಿಯಿಂದ ಎಷ್ಟೋ ಮಕ್ಕಳು

ಬದುಕಿದರು. ಇದು ಅವಳ ವಿದ್ಯೆಯ ಫಲವಲ್ಲವೇ?


ಅಕ್ಕಂದಿಯರಿರಾ! ಇತರರ ಮಕ್ಕಳಿಗೆ ಮದ್ದು ಕೊಟ್ಟು ಹಣ

ಸಂಪಾದಿಸಬೇಕೆಂದು ನಾನು ಹೇಳುವುದಿಲ್ಲ. ಆರೋಗ್ಯದ ನಿಯಮ

ಗಳನ್ನು ತಿಳಿದು ಅದರಂತೆ ವರ್ತಿಸಲಿಕ್ಕೂ, ತನಗೂ, ತನ್ನ ಮಕ್ಕಳಿಗೂ,

ಆಗಾಗ್ಗೆ ತಗಲುವ ಸಾಮಾನ್ಯ ರೋಗಗಳಿಗೆ ಮದ್ದು ಕೊಡಲಿಕ್ಕೂ,

ತಿಳಿದುಕೊಂಡಿರುವುದು ಯೋಗ್ಯವಲ್ಲವೇ? ಭವಿಷ್ಯತ್ ಸಂತತಿಯಾದ

ತಮ್ಮ ಮಕ್ಕಳ ಆರೈಕೆಯಲ್ಲಿ ಎಚ್ಚರದಿಂದಿರುವುದೇ ಸ್ತ್ರೀಯರಿಗೆ ಮುಖ್ಯ

ವಾದದ್ದು. ಹಳ್ಳಿಯಲ್ಲಿ ಮಕ್ಕಳರೋಗಕ್ಕೆ ಒಬ್ಬೊಬ್ಬ ವಯಸ್ಸು ಸಂದ

ಮುದುಕಿಯು ಮದ್ದು ಕೊಡುವುದಿದೆ. ಅವಳ ಮುದ್ದಿನಲ್ಲಿ ಬುದುಕಿದರೆ

ಆ ಮಗು ಮತ್ತೆ ಸಾಯದು. ಮಗುವಿಗೆ ಶೀತವಾದರೆ ಅದು ಥಂಡಿ

ರೋಗವಂತೆ, ಅದಕ್ಕೆ ಮದ್ದು-ಮೈ, ಕೈ ಸುಡಬೇಕಂತೆ, ನೆಗಡಿಗೆ

ಮದ್ದು ಕೊಟ್ಟರೆ ಜ್ವರಬರುವುದು, ಅಜೀರ್ಣಕ್ಕೆ ಔಷಧಿ ಸೇವಿಸಿದರೆ

ರಕ್ತಾತಿಸಾರ ತೊಡಗುವುದು, ಹೀಗಾಗಿ ಒಂದು ರೋಗಕ್ಕೆ ಆವರಿಂದ

ದುದ್ದು ತಗೆದುಕೊಂಡರೆ ಮತ್ತೆರಡು ರೋಗವು ಆಮದ್ದಿನಿಂದ ಬರುವುದು.

33-----------------------------------------------

ಮದ್ದಿನ ಗುಣದೋಷಗಳನ್ನು ತಿಳಿಯದೆ, ರೋಗದ ಪ್ರಕೃತಿಯನ್ನು

ಕಂಡುಕೊಳ್ಳಲು ಸಾಧ್ಯವಿಲ್ಲದೆ, ಒಂದಕ್ಕೊಂದು ಕೊಟ್ಟು ಬಿಡುವರು.

ಆದ್ದರಿಂದ ಬಾಲಕಿಯರು ವಿದ್ಯೆಗಲಿತು ತನ್ನ ಹಾಗೂ ತನ್ನ ಪತಿಯ

ಮತ್ತು ಮಕ್ಕಳ ಆರೈಕೆಯಲ್ಲಿ ಅವಶ್ಯವುಳ್ಳ ಔಷಧಿಗಳನ್ನು ಕಲಿತಿರು

ವುದು ಮೇಲಲ್ಲವೇ? ಎಂದು ಉದ್ದ ಉಪನ್ಯಾಸಮಾಡಿದಳು.


ಕಲ್ಯಾಣಿ.-ಅಕ್ಕಂದಿಯರಿರಾ! ನಮ್ಮ ನೆರೆಮನೆಯ ಮಹಾಬಲನು

ಮೊದಲು ಎಷ್ಟು ಹಣ ಹಾಳುಮಾಡುತ್ತಿದ್ದನೆಂಬುದನ್ನು ನೀವು ಬಲ್ಲಿ

ರಷ್ಟೆ ? ಅವನ ಬೈಸಿಕಲ್ಲೇನು ! ಜರಿ ವೇಷ್ಟಿ ಯೇನು ! ರೇಷ್ಮೆ ಶಾಲೇನು !

ಕಾಫಿ ಏನು! ಚಾ ಏನು ! ಮತ್ತೆ ಕೆಲವು ಹೇಳಲಿಕ್ಕೆ ನೇ ನಾಚಿಕೆ

ಯಾಗುವುದು. ರಾತ್ರಿ ಮನೆಗೆನೇ ಸೇರಲೊಲ್ಲನು, ಯಾವಾಗಲೂ

ದುಷ್ಟರ ಸಂಗ, ಕೇಡಿ ರಿಜಿಸ್ತಿಗೂ ದಾಖಲಾಗುವ ರೀತಿಯಲ್ಲಿದ್ದಿದ್ದನು.

ಈಗ ಕಮಲಾಕ್ಷಿಯನ್ನು – ಆ ವಿದ್ಯಾವತಿಯನ್ನು ಮದುವೆಯಾದ

ಮೇಲೆ ಅವನ ಜೋಕು ಎಲ್ಲಿ ಹೋಯಿತು ? ಆ ದುಂದು, ಆ ಜೂಜು

ಈಗ ಎಲ್ಲಿ ಅಡಗಿತು? ಅವನೀಗ ಎಷ್ಟು ಸಭ್ಯ, ತನ್ನ ಕೆಲಸ, ತನ್ನ

ಉದ್ಯೋಗ, ತನ್ನ ಜಂಬರವಲ್ಲದೆ ಒಂದಿಷ್ಟಾದರೂ ಸಮಯ ಹಾಳು

ಮಾಡುವನೇ? ಈಗ ಸೋಮಾರಿತನ, ಮೈಗಳ್ಳತನ, ಎಂಬುದು ಅವನ

ಬಳಿ ಸೋಕೀತೇ? ಮಹಾಬಲನನ್ನು ಇಷ್ಟು ಬದಲಾಯಿಸಿದವರಾರೆಂದು

ನಿಮ್ಮೊಡನೆ ಕೇಳಿದರೆ ವಿದ್ಯಾವತಿಯಾದ-ಆ ಪತಿವ್ರತೆ ಕಮಲಾಕ್ಷಿ

ಎಂದು ನೀವೂ ಹೇಳದೆ ನಿಲ್ಲಲಿಕ್ಕಿಲ್ಲ. ಇದೇ ವಿದ್ಯೆಯ ಮಹತ್ತು.


ಗಿರಿಜ-ವಕೀಲ ರಾಮರಾಯರನ್ನು ನೀವು ಬಲ್ಲಿರಷ್ಟೆ. ಅವರು

ನಿನ್ನೆ ದಿನ ನಮ್ಮ ತಂದೆಯವರೊಡನೆ ಹೀಗೆ ಹೇಳಿದರು.


ಶೆಟ್ಟರೇ! ನನಗೆ ಪಿತರಾರ್ಜಿತವಾದ ಆಸ್ತಿ ಏನೂ ಇಲ್ಲ. ನನ್ನ

ಹೆಂಡತಿಯು ದೊಡ್ಡ ಮನೆತನಕ್ಕೆ ಸೇರಿದವಳು. ನಾನು ಕಲಿಯು

ವುದನ್ನು ಕಂಡು ನನಗೆ ಅವಳನ್ನು ಮದುವೆಮಾಡಿದರು. ನಾನು

ಶಾಲೆಯಲ್ಲಿ ಕಲಿಯುತ್ತಿರುವಾಗ ಹಣದ ಅಡಚಣಿಯಿಂದ ಬಡವರಂತೆ

34--------------------------------------------

ಇರಬೇಕಾಯಿತು. ಆಗ ನನ್ನ ಹೆಂಡತಿಯು ಅದು ಬೇಕು, ಇದು

ಬೇಕು, ಎಂದು ನನಗೆ ದುಃಖಉಂಟುಮಾಡದೆ, ಇದ್ದುದರಲ್ಲಿ ತೃಪ್ತಿ

ಪಟ್ಟು ಸಂಸಾರಸಾಗಿಸಿದಳು. ಅವಳಿಗೆ ಬೇಕಾದುದನ್ನು ನಾನೇ ತಂದು

ಕೊಡಬೇಕಲ್ಲದೆ, ಇತರರ ಬಟ್ಟೆ, ಚಿನ್ನ, ಸಂಪತ್ತು, ನೋಡಿ ತನಗೂ

ಬೇಕೆಂದು ಪೀಡಿಸಲಿಲ್ಲ. ಬಡತನದಲ್ಲಿ ಬಳಲಿರುವ ನನಗೆ ಅಂಥಾ

ಸುಗುಣಿಯನ್ನು ಕರುಣಿಸಿದುದಕ್ಕಾಗಿ ಸದಾ ದೇವರನ್ನು ನುತಿಸುತ್ತ

ಲಿದ್ದೇನೆ. ಈಗ ನಾನು ಈ ವಕೀಲಿ ಉದ್ಯೋಗ ನಡಿಸಹತ್ತಿದಂದಿನಿಂದ

ಯಾವಾಗಲೂ ನನ್ನ ಕೈಯಲ್ಲಿ ಹಣ ಓಡ್ಯಾಡುವುದಲ್ಲದೆ, ಇದೇ ಸಂಪಾ

ದನೆಯಿಂದ ಒಂದು ದೊಡ್ಡ ತೋಟ, ಭವ್ಯವಾದ ಮನೆ, ಸಹ ಕೊಂಡು

ಕೊಂಡೆನು. ನನಗೀಗ ಎಂಟು ಮಕ್ಕಳಿದ್ದಾರೆ. ಎಮ್ಮೆ ದನಗಳಿವೆ.

ಮನೆಯಲ್ಲಿ ಕೆಲಸಮಾಡುವ ಆಳುಗಳಿದ್ದಾರೆ. ಇಡೀ ಸಂಸಾರದ ಸಕಲ

ಕೆಲಸಗಳನ್ನೂ ಅವಳೇ ನಡಿಸುವಳು. ನನಗಂತೂ ಕೋರ್ಟು ಕೆಲ

ಸದ ಸಂಬಂಧ ಒಂದು ಕ್ಷಣ ಗಾಲವಾದರೂ ಬಿಡುವಾಗುವುದೇ ಇಲ್ಲ.

ಕುಟುಂಬದ ಆಯವ್ಯಯದ ಲೆವನ್ನು ಅವಳೇ ನೋಡುವಳು. ಪ್ರತಿ

ತಿಂಗಳ ಅಂತ್ಯಕ್ಕೆ ಆ ಲೆಖ್ಖವನ್ನು ನನಗೆ ಒಪ್ಪಿಸುವಳು. ವಿದ್ಯಾವತಿ

ಯಾದ ಇಂಥ ಹೆಂಡತಿ ಲಭಿಸಿದುದರಿಂದ ಸಂಸಾರದ ತೊಂದರೆಯೇ

ಇಲ್ಲದಂತಾಗಿದೆ, ಕೋರ್ಟು ಕೆಲಸದಿಂದ ದಣಿದುಬಂದ ನನಗೆ ಅವಳು

ಮನೆಕೆಲಸಗಳ ವ್ಯವಸ್ಥೆ ಮಾಡುತ್ತಿರುವುದನ್ನು ನೋಡಿ ಬಹಳೇ ಆನಂದ

ವಾಗುವುದು.

ಆದ್ದರಿಂದ ಶೆಟ್ಟರೇ! ನಿಮ್ಮ ಬಾಲಕಿಯರಿಗೆ ಚೆನ್ನಾಗಿ ವಿದ್ಯೆ ಕಲಿಸಿ

ಒಳ್ಳೆ ಸಹಧರ್ಮಿಣಿಯರಾಗುವಂತೆ ಮಾಡಿರಿ ಅಂದರು.


ಅವರು ಹಾಗೆ ಹೇಳಿದ್ದರಿಂದ ನಮ್ಮ ಅಪ್ಪನು ನನಗೆ ಎಂಟನೇ ತರ

ಗತಿಯ ವರೆಗೆ ಕಲಿಸಬೇಕೆಂದು ನಿಶ್ಚಯಿಸಿರುವರು, ಅಂದಳು.


ಆ ಮೇಲೆ ಅಲ್ಲಿ ನೆರದವರೆಲ್ಲಾ ಹೌದಪ್ಪಾ ವಿದ್ಯೆ ಬೇಕು.

೩೫---------------------------------------------

ಅದಿಲ್ಲದೆ ನಾವು ಕೆಟ್ಟೆವು, ನನ್ನ ಬಾಳು ಹಾಳಾಯಿತು, ನಾವಂತೂ

ಕೆಟ್ಟೆವು; ನಮ್ಮ ಮಕ್ಕಳಾದರೂ ಒಳ್ಳೆದಾಗಿ ಬಾಳಲಿ, ನನ್ನ ಮಗಳನ್ನು

ಸಾಲೆಗೆ ಕಳುಹಿಸಬೇಕು, ತನ್ನ ಮಗಳನ್ನು ಸಾಲೆಗೆ ಕಳುಹಿಸಬೇಕು,

ಎಂದು ಅಂದುಕೊಂಡರು. ಮತ್ತು ವಿದ್ಯೆಯನ್ನೂ ಅದನ್ನು ಕಲಿತವ

ರನ್ನೂ ನಿಂದಿಸಿ ಮಾತಾಡಿದುದಕ್ಕಾಗಿ ಕ್ಷಮೆ ಕೇಳಿದರು. ಮುಂದೆ

ಸಾಯಂಕಾಲವಾದುದರಿಂದ ಸಭೆಯು ಚದರಿತು, ನೆರೆದವರೆಲ್ಲಾ

ತಂತಮ್ಮ ಮನೆಗಳಿಗೆ ಸೇರಿದರು.


ಅಷ್ಟರಲ್ಲಿ ಹೊರಗಿನಿಂದ ಅಕ್ಕಾ ! ಅಕ್ಕಾ ! ಎಂದು ಕರೆಯುವುದು

ಕೇಳಿಸಿತು, ಕರೆದವರು ಅಪರಿಚಿತರಾಗಿರಲಿಲ್ಲ ನಮ್ಮ ಪೂರ್ವ ಪರಿಚಿತ

ರಾದ ಚಂದು ಮತ್ತು ರಘು ಎಂಬವರಾಗಿದ್ದರು. ಪುಟ್ಟಮ್ಮನನ್ನು

ಕರೆದು ಕಿವಿಯಲ್ಲೇ ಸ್ವಲ್ಪ ಸಮಯ ಮಾತನಾಡಿದರು. ಮೆಲ್ಲನೆ ಪಿಸು

ಮಾತಾಡಿದುದರಿಂದ ಒಂದೇ ಒಂದು ಮಾತೂ ಕೇಳಿಸಲಿಲ್ಲ, ಕೊನೆ

ಯಲ್ಲಿ ಮಾತ್ರ ಗಟ್ಟಿಯಾಗಿ ಹೀಗೆ ಹೇಳಿದರು, "ನಾಳೆ ನಾಲ್ಕು ಘಂಟೆಗೆ

ಖಂಡಿತ'' ಇದನ್ನು ನಾವು ಕೇಳಿರುವೆವು.

------------------

ಆರನೆಯ ಅಧ್ಯಾಯ.

ಮರುದಿನ ಬೆಳಿಗ್ಗೆ ಪಟ್ಟಮ್ಮನು ಒಂದಿಷ್ಟು ಬೇಗ ಎದ್ದಿದ್ದಳು.

ಹೂದೋಟಕ್ಕೆ ತಾನೇ ಹೋಗಿ ಗುಲಾಬಿ ಮಲ್ಲಿಗೆ ಮುಂತಾದ ಹೂಗ

ಳನ್ನು ಕೊಯ್ದುಕೊಂಡು ಬಂದಳು. ಮನೆಯ ಅಂಗಳಕ್ಕೆ ಬಿಸಿಲು ಬಿದ್ದ

ಮೇಲೆ ಏಳುವವಳು ಈ ದಿನ ತುಸ.ಕತ್ತಲೆ ಇರುವಾಗಲೇ ಎದ್ದು ಸ್ವತಹ

ಹೂದೋಟಕ್ಕೆ ಹೋದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು.

ಮಗಳು ರುದ್ರಮ್ಮನನ್ನು ಕರೆದು ಸ್ನಾನಮಾಡೆಂದಳು, ಹಾಲು, ತುಪ್ಪ,

ಸಕ್ಕರೆ ಮುಂತಾದುವುಗಳನ್ನು ಆಳುಗಳಿಂದ ಸಂಗ್ರಹಿಸಿದಳು. ಈ ಸಿದ್ದ

ತೆಗಳೆಲ್ಲಾ ಏಕೆಂದು ಯಾರಿಗೂ ತಿಳಿಯದು. ಊಟದ ಹೊತ್ತಿಗೆ

36-------------------------------------------


ಮಾತ್ರ ಅಡಿಗೆಮನೆಯನ್ನು ಸೇರುವ ಹೆಗ್ಗಡತಿಯು ಈ ದಿನ ಸ್ವತಹ ಬಗೆ

ಬಗೆಯ ತಿಂಡಿ ಸಾಮಾನುಗಳನ್ನು ತಯಾರಿಸುತ್ತಿದ್ದಳು. ಅವು ರುಚಿ

ರುಚಿಯಾದ ಭಕ್ಷಗಳೆಂದು ಪರಿಮಳದಿಂದಲೇ ನಿಶ್ಚಯಿಸಬಹುದಾಗಿತ್ತು.

ಹೀಗೆ ಬೆಳಗಿನ ಹೊತ್ತು ಕಳೆಯಿತು. ಮಧ್ಯಾಹ್ನ ಒದಗಿತು. ಹೆಗ್ಗಡೆ

ಯರೂ ಅವರ ಅಳಿಯಂದ್ಯರೂ, ಊಟಮುಗಿಸಿಕೊಂಡು ತಂತಮ್ಮ ಜಂ

ಬರಗಳಿಗೆ ನಡೆದರು. ಪುಟ್ಟಮ್ಮನು ರುದ್ರಮ್ಮನನ್ನು ಕರೆದು ತಾನೇ

ಸ್ವತಹ ತಲೆಬಾಚಿ, ಜಡೆಹಾಕತೊಡಗಿದಳು. ಮತ್ತು ತಾನು ಮುಂ

ಜಾನೆ ತಂದಿದ್ದ ಹೂ ಮುಡಿಸಿ, ಆಭರಣಗಳನ್ನು ತೊಡಿಸಿ, ಸಿಲ್ಕಿನ ಶೀರೆ

ಉಡಿಸಿ, ರೇಶ್ಮೆ ಪಲ್ಕಾ ಧರಿಸಿ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿ

ಸುವಂತೆ ಸಿಂಗರಿಸಿದಳು.

ಸುಮಾರು ನಾಲ್ಕು ಘಂಟಿ ಇರಬಹುದು. ಚಂದು ಮತ್ತು ರಘು

ಇವರು ಬಂದು ಪುಟ್ಟಮ್ಮನಿಗೆ ಕಾಣಿಸಿಕೊಂಡರು. ಬಳಿಕ ಚಾವಡಿ

ಯಲ್ಲಿ ಕುಳಿತು ಮಾತನಾಡುತ್ತಿದ್ದರು. ನಾಲೈದು ನಿಮಿಷ ಕಳೆಯು

ತ್ತಲೇ ಹೆಗ್ಗಡೆಯರ ಮನೆಯ ಎದುರಿಗಿರುವ ಬೀದಿಯಲ್ಲಿ ಒಂದು

ಕುದುರೆ ಗಾಡಿಯು ಸರನೆ ಬಂದು ನಿಂತುಬಿಟ್ಟಿತು. ಗಾಡಿಯ ಕುದು

ರೆಯೂ ಬಲು ಸೊಗಸಾಗಿದ್ದುವು. ಗಾಡಿಯ ಒಳಗಿನಿಂದ ನಾಲ್ಕು

ಮಂದಿ ಹೊರಗೆ ಬಂದರು. ಅವರಲ್ಲಿ ಮೂವರು ನಲ್ವತ್ತರಿಂದ ಐವತ್ತ

ರೊಳಗಿನ ವಯಸ್ಸಿನವರಾಗಿದ್ದರು. ಧರಿಸಿಕೊಂಡ ಉಡುಪೂ ಸಾಮಾನ್ಯ

ತರದ್ದಾಗಿದ್ದು ವು.


ಅವರಲ್ಲಿ ಒಬ್ಬನು ಮಾತ್ರ ಇಪ್ಪತ್ತೆಂಟು ವಯಸ್ಸಿನ ಯೌವನಸ್ಥನಾ

ಗಿದ್ದನು. ಆ ಯುವಕನು ಗೌರವರ್ಣದವನು, ಸುಂದರ ವಿಗ್ರಹನು,

ಒಳ್ಳೆ ದೇಹದಾರ್ಡ್ಯವುಳ್ಳವನು, ಅವನ ದಪ್ಪ ಇಷ್ಟವಾದ ಕೈಕಾಲುಗ

ಳನ್ನು ನೋಡಿದರೆ ಒಳ್ಳೆ ಮುದ್ದಿನಿಂದ ಬೆಳದವನೆಂದು ಯಾರೂ ಹೇಳ

ಬಹುದಾಗಿತ್ತು. ಅವನು ಉಟ್ಟ ಜರಿವೇಷ್ಟಿ, ತೊಟ್ಟ ಸಿಲ್ಲಿನ ಕೋಟು,

ತಲೆಗೆ ಸುತ್ತಿದ ಜರಿ ಅಂಚಿನಿಂದ ಕಂಗೊಳಿಸುವ ಗುಲಾಬಿ ಬಣ್ಣದ

37------------------------------------------------


ರುಮಾಲು ಮುಂತಾದ ಉಡುಗೆತೊಡುಗೆಗಳ ದಿವ್ಯ ಪೋಷಾಕೂ, ಕಿವಿ

ಯಲ್ಲಿ ಝಗರುಗಿಸುವ ಬಿಲಿಯನ್ ವಜ್ರದ ಒಂಟಿ, ಮೇಲ್ಕಿವಿಯಲ್ಲಿ

ಮಿನುಗುತ್ತಿರುವ ಕೆಂಪವಜ್ರ ಕೆತ್ತಿ ಮಾಡಿದ ಚಿಕ್ಕ ಪದಕ, (ಆಮ್ಲ) ಕುತ್ತಿ

ಗೆಯಲ್ಲಿ ಒಪ್ಪುವ ಕಂಠೀಸರ, ಆಂಗಿಯ ಮೇಲೆ ಥಳಥಳಿಸುವ ಆ ಚಂದ್ರ

ಹಾರ, ಕೈಬೆರಳುಗಳಲ್ಲೆಲ್ಲಾ ಹೊಳೆಯುತ್ತಿರುವ ಆ ಉಂಗುರಗಳೂ,

ನಡುವಿನಲ್ಲಿ ವಸ್ತ್ರದ ಮೇಲೆ ಮಿರುಗುವ ಚಿನ್ನದ ನೇವಾಳವೂ, ಇವುಗ

ಳನ್ನು ನೋಡಿದೊಡನೆ ಆ ತರುಣನು ಐಶ್ವರ್ಯವಂತನೆಂದು ತಿಳಿಗೇಡಿ

ಯೂ ಹೇಳಬಹುದಾಗಿದ್ದಿತು.


ಬಂದಿರುವ ಆ ನಾಲ್ಕು ಮಂದಿಯ ಚಾವಡಿಯಲ್ಲಿ ಹಾಸಿರುವ

ರತ್ನ ಗಂಬಳಿಯ ಮೇಲೆ ಕುಳಿತುಕೊಂಡು ಅಲ್ಲಿ ಮೊದಲೇ ಕುಳಿತಿದ್ದ

ಚಂದು ಮತ್ತು ರಘುವಿನೊಡನೆ ಮಾತನಾಡುತ್ತಿದ್ದರು. ಆಬಳಿಕ ಬಂದಿ

ರುವ ಹೊಸಬರಿಗೆ ಕಾಫಿ, ಫಲಹಾರಗಳನ್ನು ಕೊಡುವ ಏರ್ಪಾಡೂ ನಡಿ

ಯಿತು. ತಿಂಡಿಯನ್ನು ತಿನ್ನುತ್ತಿರುವಾಗ ಅಲ್ಲಿಯೇ ಸಮೀಪದಲ್ಲಿರುವ

ಕಿರುಮನೆಯಲ್ಲಿ ಮಂಜುಳವಾದ ವೀಣಾನಾದವು ಕೇಳಿಸಿತು. ಅದರ

ಹಿಂದೆ ವೀಣೆಯನ್ನು ನಾಚಿಸುವ ಮಧುರ ಕಂಠಧ್ವನಿಯೂ ಕೇಳಿಸಹ

ತ್ತಿತು. ಫಲಾಹಾರ ಮಾಡುವವರು ನಾದಲುಬ್ಬರಾಗಿ ತಮ್ಮ ಬಳಿಯಲ್ಲಿದ್ದ

ಗವಾಕ್ಷದ ಮೂಲಕ ಕೊಠಡಿಯ ಒಳಗೆ ನೋಡಿದರು. ಅಲ್ಲಿ ಸರ್ವಾಲಂ

ಕಾರ ಭೂಷಿತೆಯಾಗಿ ಒಂದು ಮಂಚದ ಮೇಲೆ ಕುಳಿತು, ಹಾಡುತ್ತಿರುವ

ತರುಣಿಯನ್ನು ನೋಡಿ ಗಾಯನವನ್ನು ಆಲಿಸುತ್ತಾ ಫಲಾಹಾರ ಮಾಡು

ತ್ತಿದ್ದರು.


ಆದರೆ ಆ ಯುವಕನು ಮಾತ್ರ ತಾನು ರಸಿಕಗಾಯನಪಟು

ವಾಗಿದ್ದರೂ, ಆ ತರುಣಿಯ ಗಾಯನದಲ್ಲಿ ವೀಣೆಯ ನಾದವಾವುದು,

ಆಕೆಯ ಮಧುರ ಕಂಠಧ್ವನಿಯಾವುದು ಎಂದು ತಿಳಿಯಲಾರದೆ ಆನಂದ

ಪರವಶನಾದನು, ಮತ್ತು ತಾನು ಎಂದೂ ನೋಡದಿದ್ದ ರೂಪರಾಶಿ

ಯಂತಿರುವ, ಹಾಗೂ ಸೌಂದರ್ಯದ ಖನಿಯಾಗಿರುವ ಆ ತರುಣಿಯನ್ನು

38------------------------------------------------


ನೋಡಿ ಬೆಕ್ಕಸಬೆರಗಾಗಿ ಹೋದನು. ಆ ಚಲುವೆಯನ್ನು ನೋಡಿದ

ಕೂಡಲೇ ಸಂಭ್ರಾಂತನಾಗಿ ಸುಮ್ಮನೆ ದೃಷ್ಟಿ ಸುತ್ತಾ ಕುಳಿತುಬಿಟ್ಟನು.

ಬಾಯಿಯಲ್ಲಿದ್ದ ಅಂತೂ ಕೈಯಲ್ಲಿ ಹಿಡಿದ ತಿಂಡಿಯು ಸ್ವಲ್ಪ ಸಮಯ

ಅಲ್ಲಲ್ಲೇ ನಿಲ್ಲಬೇಕಾಯಿತು. ಸಂಗಡಿಗರು ತಿನ್ನ ಬಾರದೇ ಸುಮ್ಮನೆ ಕುಳಿತು

ಬಿಟ್ಟೆ ಏನು? ಎಂದು ಕೇಳಿದ ಕೂಡಲೇ ಜ್ಞಾನೋದಯವಾಯಿತು.

ಆ ಸುಂದರೀಮಣಿಯನ್ನು ವಿಲೋಕಿಸಿದ ಮಾತ್ರದಲ್ಲಿ ಯುವಕನ ಮನ

ಸ್ಸೇ ವಿರೂಪವನ್ನು ಹೊಂದಿತು. ಸಂಗಡಿಗರು ಕೇಳುತ್ತಿದ್ದ ಮಾತುಗಳಿ

ಗೆಲ್ಲಾ ಏನೋ ಒಂದು ವಿಧದ ಉತ್ತರಕೊಡಲಾರಂಭಿಸಿದನು. ಹೌದು

ಎನಬೇಕಾದಲ್ಲಿ ಅಲ್ಲ ಎನ್ನು ತಲೂ, ಅಲ್ಲ ಎನಬೇಕಾದಲ್ಲಿ ನಿಜವಿಜಯೆಂ

ತಲೂ, ಎದ್ವಾತದ್ವಾ ಜವಾಬು ಕೊಡಲು ಮೊದಲು ಮಾಡಿದನು. ಸಂಗ

ಡಿಗರಲ್ಲಿ ಒಬ್ಬೊಬ್ಬರಿಗೆ ಇವನ ಮನಸ್ಸಿನ ಅಸ್ಥಿರತ್ನ ಮತ್ತು ಅದರ ಕಾರ

ಣವು ಹೊಳೆಯದೆ ಇಲ್ಲ. ಯುವಕನಿಗೆ ವೀಣಾಗಾಯನ ಮಾಡುತ್ತಿ

ರುವ ಆ ಸುಂದರಿಮಣಿಯ ಮುಂದೆ ಆ ಕಾಫಿ, ತಿಂಡಿಗಳಾವುವೂ ರುಚಿಸ

ಲಿಲ್ಲ. ಅವನ್ನೆಲ್ಲಾ ಬಿಟ್ಟು ಬಿಟ್ಟನು. ಆದರೆ ತನ್ನ ಮನಸ್ಸಿನ ವಿಕಾರ

ತೆಯು ಇತರರಿಗೆ ತಿಳಿಯಬಾರದೆಂದು ಎಚ್ಚರತೆಗೆದುಕೊಳ್ಳಲು ಪ್ರಯತ್ನಿ

ಸಿದನು. ಆದರೂ ಆ ಪ್ರಯತ್ನವು ಕ್ಷಣಿಕವಾಗಿದ್ದು ಆಗಾಗೈ ಮರತೇ

ಹೋಗುತ್ತಿತ್ತು. ಯುವಕನ ಮನಸ್ಸೆಲ್ಲಾ ರುದ್ರಮಯವಾಗಿದ್ದಿತ್ತು.


ರುದ್ರಮ್ಮನು ತಾನು ಗಾಯನ ಮಾಡುತ್ತಿರುವಾಗ ತನ್ನನ್ನೇ ದಿಟ್ಟ

ಸಿನೊಡುತ್ತಿರುವ ಆ ನವಯವನ ಸಂಪನ್ನನಾದ ತೇಜೋಮಯ ರೂಪ

ವನ್ನು ಕಂಡು ಏನೋ ಒಂದು ವಿಧದ ಭಾವನೆಯು ಉಂಟಾಯಿತು.

ಅದು ಇಂತಹುದೆಂದು ರುದ್ರಮ್ಮನಿಗೆನೇ ತಿಳಿಯಲಿಲ್ಲ. ಆದರೆ ಆ ವಿಧದ

ಭಾವನೆಯು ಮೊದಲೆಂದೆಂದಿಗೂ ಆಗಿರಲಿಲ್ಲವೆಂದು ಮಾತ್ರ ಗೊತ್ತಾ

ಗಿದ್ದಿತು.


ಬಂದವರು ಕಾಫಿ ಫಲಹಾರಗಳನ್ನು ಮುಗಿಸಿಕೊಂಡು ಗಾಡಿಹತ್ತಿ

ದರು. ಹೆಗ್ಗಡೆಯರ ಮನೆಯು ಕಣ್ಣಿಗೆ ಮರೆಯಾಗುವಷ್ಟು ದೂರ

39--------------------------------------------


– ೩೯ –

ಹೋಗುವವರೆಗೆ ಮನೆಯನ್ನೇ ದಿಟ್ಟಿಸಿ ನೋಡುತ್ತಿದ್ದನು. ಅದೂ ಕಣ್ಮ

ರೆಯಾದೊಡನೆ ಆ ಯುವಕನು ತಾನು ನೋಡಿ ಬಂದ ಆ ತರುಣಿಯ

ಸೌಂದರ್ಯ, ಮಂಜುಳಸ್ಸರ, ಇವನ್ನು ನೆನಸುತ್ತಾ ಹೋದನು.

" ಈ ಕಾಲದಲ್ಲಿ ವರದಕ್ಷಿಣೆಗಾಗಿ ಎಲ್ಲರೂ ಮೇಲಾಡುವರು. ಹಾಗೂ

ನನ್ನಂಥವರಿಗೆ ಎಷ್ಟು ಬೇಕಾದರೂ ದಕ್ಷಿಣಾದ್ರವ್ಯವನ್ನು ತೆರುವರು.

ಆದರೆ ನಾನೀಗ ನೋಡಿಬಂದಿರುವ ಆ ಸುಂದರಿಯು- ಆ ಕೋಮಲಾಂ

ಗಿಯು ನನಗೆ ಲಭ್ಯವಾದರೆ ಸಾಕು. ವರದಕ್ಷಿಣೆ ಗಿರದಕ್ಷಿಣೆಗೆ ಬೆಂಕಿ

ಬೀಳಲಿ, ಸ್ತ್ರೀಯರ ಸಂಬಂಧದ ಆ ದ್ರವ್ಯವು ನನಗೆ ಬೇಡ, ಅದೇ

ತನ್ನ ಮೂಲಧನವೆಂದು ನಂಬಿ ಬಾಯನ್ನು ಹಾಯೆಂದು ತೆರೆದುಕೊಂಡಿ

ರುವ ಆ ಕುಲಕಂಟಕರಿಗಿರಲಿ ಎಂದು ಅಂದುಕೊಂಡನು."

ಪಾಠಕರೇ! ನಿನ್ನೆ ಸಂಜೆ ಹೊತ್ತಿನಲ್ಲಿ ಪುಟ್ಟಮ್ಮನೊಡನೆ ಚಂದು

ಮತ್ತು ರಘು ಬಂದು ಗುಟ್ಟಾಗಿ ಮಾತನಾಡಿದ ವಿಷಯ ಏನೆಂಬು

ದನ್ನೂ ಈ ದಿನ ಕುದುರೆಗಾಡಿಯಲ್ಲಿ ಬಂದು, ಹೆಗ್ಗಡೆಯರ ಮನೆಯಲ್ಲಿ

ಇಳಿದು ಕಾಫಿಫಲಹಾರವನ್ನು ತೀರಿಸಿಕೊಂಡು ಹೋದವರ ಪರಿಚಯ

ವನ್ನೂ ಮಾಡಿಕೊಡುವೆವು. ಪುಟ್ಟಮ್ಮನ ಕುಟುಂಬಗರಾದ ಚಂದು

ಮತ್ತು ರಘು ಎಂಬವರು ರುದ್ರಮ್ಮನಿಗೆ ತಕ್ಕ ವರನನ್ನು ಹುಡುಕುವುದ

ಕ್ಕಾಗಿ ಸೊಂಟಕಟ್ಟಿ, ಹೊರಟ ಸಂಗತಿ ನಿಮಗೆ ತಿಳಿದೇ ಇದೆ. ಅವರು

ವರಾನ್ವೇಷಣದ ಸಲುವಾಗಿ ಅನೇಕ ಊರುಗಳನ್ನು ಸುತ್ತಿದರೂ ಪುಟ್ಟ

ಮ್ಮನು ಒಕ್ಕಣಿಸುವ ಯೋಗ್ಯತೆಯುಳ್ಳ ವರನು ದೊರಕುವುದು ಬಲು

ಕಷ್ಟ ಕಂಡಿತು. ಅವರು ಪರ್ಯಟನ ಮಾಡಿಮಾಡಿ ದಣಿದರು. ಕೊ

ನೆಗೆ ಮುತ್ತೂರಿಗಾಗಿ ಬಂದರು. ಅಲ್ಲಿ ಊರಿಗೊಂದು ದೊಡ್ಡವರ ಮನೆ,

ಆ ಮನೆಯಲ್ಲಿ ಒಬ್ಬನೇ ಒಬ್ಬ ಯುವಕ. ಇವನ ತಾಯಿಗೆ ಹೆಣ್ಣು

ಸಂತತಿಯೇ ಇಲ್ಲ, ಆ ಯುವಕನಿಗೆ ಒಬ್ಬ ಮಾವನು ಮಾತ್ರ ಇದ್ದಿದ್ದನು.

ಅವನೂ ಮೂರು ತಿಂಗಳ ಮೊದಲು ಕಾಲವಾಗಿ ಹೋಗಿದ್ದನು. ಈಗ

ಆ ಮನೆಯ ಯಜಮಾನ ಪಟ್ಟಾದಾರ, ಆಡಳಿತೆದಾರ, ಕುಡ್ತಲೆದಾರ,

40--------------------------------------------


ಹೆಚ್ಚೇಕೆ ಎಲ್ಲಾ ದಾರನೂ ಇವನೇ– ಈ ಯುವಕನೆ ಆಗಿದ್ದನು.

ಹಾಗೂ ಬಿಸಿಬಿಸಿ ಯಜಮಾನಿಕೆ, ನವಯವನದ ಭರ, ಇವನ ಆಡಳಿ

ತೆಯ ಒಳಗೆ ಇಪ್ಪತ್ತೆಂಟುವರೆ ಕೋರ್ಜಿ ಅಕ್ಕಿ ಹುಟ್ಟುವಳಿಯ ಆಸ್ತಿಯೂ

ನಗದು ಈಡು, ಅಡವು (ಆರವಾರು) ಗಳಿಂದ ಬರತಕ್ಕ ನಲ್ಪತ್ತೈದು

ಸಾವಿರ ರೂಪಾಯಿಗಳೂ, ಸುಮಾರು ಹನ್ನೆರಡು ಸಾವಿರ ರೂಪಾಯಿ

ಬೆಲೆಬಾಳುವ ನಗನಾಣ್ಯಗಳೂ ಇರುವವು; ಮತ್ತು ಸುಂದರವಾದ

ತೋಟ, ಭವ್ಯವಾದ ಮನೆ, ಸೊಗಸಾದ ಕುದುರೆಗಾಡಿ, ಅಂದವಾದ

ಎತ್ತು ನಡೆಗಳೂ, ಯೋಗ್ಯವಾದ ಓಟದ ಕೋಣಗಳೂ, ಉತ್ತಮ ತರದ

ಎಮ್ಮೆದನಗಳೂ, ಹುಲಿಯಂತಿರುವ ನಾಯಿಗಳೂ ಇರುವುವು, ಮನೆ

ಯಲ್ಲಿ ಎರಡು ಮೂರು ಮಂದಿ ದಾದಿಯರೂ, ಮೂರುನಾಲ್ಕು ಮಂದಿ

ಪರಿಚಾರಕರೂ, ಏಳೆಂಟು ಮಂದಿ ಅನುದಿನ ಗೇಯುವ ಅಳುಗಳೂ ಇರು

ವರು. - ಇವನ್ನೆಲ್ಲಾ ನೋಡಿದ ಚಂದು ಮತ್ತು ರಘುವು ಯಾವ ಭಾಗ

ದಲ್ಲೂ ಕೊರತೆ ಇಲ್ಲದ ಈ ಯುವಕನೇ ರುದ್ರಮ್ಮನಿಗೆ ತಕ್ಕ ವರನೆಂದು

ನಿಶ್ಚಯಿಸಿಕೊಂಡು ನೆಂಟುತನದ ಪ್ರಸ್ತಾಪವನ್ನು ಎತ್ತಿದರು. ಆ

ಯುವಕನು ಸೌಖ್ಯಪುರದ ಶ್ರೀನಿವಾಸ ಹೆಗ್ಗಡೆಯರ ಹಾಗೂ ತಾರಾನಾಥ

ಪುರದವರ ಕೀರ್ತಿಯನ್ನು ಮೊದಲೇ ಕೇಳಿ ತಿಳಿದಿರುವುದರಿಂದ ನೆಂಟರ

ಮನೆತನ, ಗೌರವ, ಗುಣನಡತೆಗಳನ್ನು ವಿಚಾರಿಸುವ ಅಗತ್ಯ ಇರಲಿಲ್ಲ.

ಆದರೂ ತಾನು ಒಮ್ಮೆ ಹುಡುಗಿಯನ್ನು ಸ್ವತಹ ನೋಡಿಕೊಳ್ಳಬೇಕು.

ಮಿಕ್ಕ ಸಂಗತಿಗಳನ್ನು ಆನಂತರ ಮಾತನಾಡುವ ಎಂದು ಹೇಳಿದ್ದನು.

ಅದಕ್ಕೆ ರಘುವು ಒಳ್ಳೇದು ನಾಳೆಯೇ ಬನ್ನಿರಿ ಎಂದು ಹೇಳಿದನು. ಆಗ

ಆ ಯುವಕನು ಆದೀತು ನಾಳೆಗೆನೇ ಬರುತ್ತೇನೆ. ಆದರೆ ನಾನು ಬರುವ

ಸುದ್ದಿಯನ್ನು ಯಾರೊಡನೆಯೂ ಹೇಳಬಾರದು, ಗುಟ್ಟಾಗಿರಲಿ. ಆದರೆ

ನಾನು ಬಂದಾಗ ಮಾತ್ರ ಹುಡುಗಿಯು ನನಗೆ ಕಾಣಸಿಕ್ಕುವಂತೆ ಏರ್ಪಾ

ಡು ಮಾಡಿಸಿರಿ. ಯಾರು ಬರುವುದು, ಯಾಕೆ ಬರುವುದು, ಎಂಬ

ಪ್ರಸ್ತಾಪವನ್ನು ಯಾರೊಡನೆಯೂ ಎತ್ತಬಾರದು. ನಾನು ನಾಳೆ

41---------------------------------------------------

ನಾಲ್ಕು ಘಂಟೆಗೆ ಖಂಡಿತ ಬರುತ್ತೇನೆ ಎಂದು ಹೇಳಿ ಚಂದು ಮತ್ತು

ರಘುವನ್ನು ಕಳುಹಿಸಿದ್ದನು. ಆದ್ದರಿಂದ ಆ ಗುಟ್ಟನ್ನು ನಾವೂ ಬಿಚ್ಚಲಿಲ್ಲ.


ನಿನ್ನೆ ದಿನ ಚಂದು ಮತ್ತು ರಘುವು ತಾವು ನೋಡಿ ಬಂದ ವರನ

ಯೋಗ್ಯತೆಗಳನ್ನೆಲ್ಲಾ ಹೇಳಲಾಗಿ ಅದನ್ನು ಕೇಳಿದ ಪುಟ್ಟಮ್ಮನು ಆನಂದ

ಪರವಶಳಾದಳು. ಆ ಮನೆಯಲ್ಲಿ ಗಂಡುಸೆಂದರೆ ಈ ಯುವಕ, ಹೆಂಗು

ಸೆಂದರೆ ಇವನ ತಾಯಿ. ಇವರಲ್ಲದೆ ಬೇರೆ ಯಾರೂ ಇಲ್ಲವೆಂದು ಕೇಳಿ

ಬಲು ಸಂತೋಷಪಟ್ಟಳು. ಮತ್ತು ಇವನೇ ಒಳ್ಳೆ ವರ -- ಯೋಗ್ಯ

ವರ, ಈ ಯುವಕನನ್ನು ಬಿಡಬಾರದು. ಇವನಿಗೆ ನನ್ನ ಪ್ರಿಯ ಪತ್ರಿ

ರುದ್ರಮ್ಮನನ್ನು ಕೊಟ್ಟು ವಿವಾಹ ಮಾಡಿಸಿಬಿಡಬೇಕು. ಆ ಯುವಕ

ನನ್ನು ನನ್ನ ಅಳಿಯನನ್ನಾಗಿ ಮಾಡಿಕೊಳ್ಳಬೇಕು. ಅಹಹ! ಎಂಥ

ಅಳಿಯ ಸಿಕ್ಕಿದ, ನಮ್ಮ ರುದ್ರು ಪುಣ್ಯವಂತಳು, ಭಾಗ್ಯವಂತಳು, ಒಳ್ಳೇ

ಲಕ್ಷಣದವಳು. ಆ ಅತ್ತೆ- ಆ ಮುದುಕಿ ಆ ಯುವಕನ ತಾಯಿ

ಕಣ್ಣು ಮುಚ್ಚಿದರೆ, ಇದ್ದ ಸಂಪತ್ತೆಲ್ಲಾ ನನ್ನ ಮುದ್ದು ಗಿಣಿ- ಅಮ್ಮಣ್ಣಿ

ರುದ್ರಮ್ಮನ ಪಾಲಿಗೆನೇ ಸೇರಿ ಬಿಡುವುದು ಎಂದು ಹಿರಿಹಿರಿ ಹಿಗ್ಗಿದಳು.

ಇದನ್ನೆಲ್ಲಾ ಆಲೋಚಿಸಿದ ಪಟ್ಟಮ್ಮನಿಗೆ ಪ್ರಪಂಚವೇ ಬೇರೆ ಆದಂತಾ

ಯಿತು. ಚಂದು ಮತ್ತು ರಘುವಿನಿಂದ ಈ ವರ್ತಮಾನ ಕೇಳಿದವಳಿಗೆ

ಆನಂದದಿಂದ ಆ ರಾತ್ರಿ ಕಣ್ಣಿಗೆ ನಿದ್ರೆಯೇ ಬಾರದು. ಎಷ್ಟು ಹೊತ್ತಿಗೆ

ಬೆಳಗಾದೀತು? ನಮ್ಮ ರುದ್ರನನ್ನು ಸಿಂಗರಿಸಬೇಕು, ಕಾಫಿ ಫಲಹಾರಕ್ಕೆ

ಒದಗಿಸಬೇಕು, ಬೆಳಗಾಗುವುದೇ ಇಲ್ಲವಲ್ಲ ಎಂದು ಆಗಾಗ್ಗೆ ಹೊರಗೆ

ಬಂದು ಇನ್ನೂ ಕತ್ತಲು ಕವಿದಿರುವುದು ನೋಡಿ! ಪುನಹ ಹಾಸಿಗೆಯಲ್ಲಿ

ಹೊರಳುವಳು. ಅಂದಿನ ರಾತ್ರಿ ಬಲು ದೀರ್ಘ ರಾತ್ರಿ ಎಂದು ನಿಶ್ಚ

ಯಿಸಿಬಿಟ್ಟಿದ್ದಳು. ಬೆಳಗಾದ ಮೇಲೆ ನಡೆದ ಸಂಗತಿಗಳೆಲ್ಲಾ ವಾಚಕ

ರಿಗೆ ತಿಳಿದೇ ಇದೆ.


ಪುಟ್ಟಮ್ಮನು ಈಗ ತನ್ನ ಭಾಏಜಾಮಾತನನ್ನು ಪ್ರತ್ಯಕ್ಷ ಕಂ

ಡಳು. ಅವನ ಸೌಂದರ್ಯ, ಪೋಷಾಕು, ಆ ಚಿನ್ನಾಭರಣ, ಇವುಗ

42--------------------------------------------------


ಳನ್ನು ಮನದಣಿಯೆ ಕಂಡು ಬಾಯಿದಣಿಯೆ ಹೊಗಳಿದಳು. ಆ ದಿನ

ಅವಳಿಗಾದ ಆನಂದವನ್ನು ಮನಸ್ಸಿನಲ್ಲೇ ಭಾವಿಸಬೇಕಲ್ಲದೆ ಶಬ್ದಗಳಿಂದ

ಬಣ್ಣಿಸಲು ನಮಗೆ ಭಾಷೆ ಸಾಲದು.


ಇತ್ತ ಮನೆಗೆ ಸೇರಿದ ಆ ಯುವಕನು ತಾನು ನೋಡಿ ಬಂದ

ತರುಣಿಯ ಸಂಗತಿಯನ್ನು ತನ್ನ ತಾಯಿಗೆ ತಿಳಿಸಿ ಆ ಸುಂದರಿಯನ್ನು

ಮದುವೆಮಾಡಿಕೊಳ್ಳಲು ತನ್ನ ತಾಯಿಯ ಸಮ್ಮತಿಯನ್ನು ಪಡೆದನು.

ಆ ಬಳಿಕ ತನಗೆ ಚೆನ್ನಾಗಿ ಪರಿಚಯವಿದ್ದ ರಘುನಾಥನಿಗೆ ಒಂದು ಕಾಗ

ದವನ್ನು ಬರೆದನು. ಆ ಪತ್ರದ ಒಕ್ಕಣಿಯು ಈ ಮೇರೆಗೆ ಇದ್ದಿತು.


ಮುತ್ತೂರು,

ಚಿತ್ರಭಾನು ಸಂ1 ಪಾಲ್ಗುಣ ಬ। ೫ ಯು

ಕುಶಲ.

ಪರಮ ಪ್ರಿಯ ರಘುನಾಥ ಶೆಟ್ಟರಿಗೆ,

ನಿಮ್ಮ ಪ್ರೀತಿಪಾತ್ರನಾದ ಮುತ್ತೂರು ಮುದ್ದಣ್ಣ ಬಲ್ಲಾಳನು

ಮಾಡುವ ಸಾ। ನಮಸ್ಕಾರ.

ಇಂದಿನ ವರೆಗೆ ನಾವೆಲ್ಲರೂ ಸುಕ್ಷೇಮಿಗಳು. ನಿಮ್ಮ ಸರ್ವರ

ಯೋಗಕ್ಷೇಮಂಗಳಿಗೆ ದಯವಿಟ್ಟು ಸದಾ ಕುಶಲಪತ್ರಿಕೆ ಬರಿಯುತ್ತಿರ

ಬೇಕಾಗಿ ಬಯಸುತ್ತೇನೆ.

ತರುವಾಯ ತಾವೂ ಚಂದಯ್ಯ ಶೆಟ್ಟರೂ, ನಮ್ಮಲ್ಲಿ ಬಂದು ಮೊಕ್ತಾ

ಮಾತನಾಡಿದ ನೆಂಟುತನದ ಸಂಗತಿಯಲ್ಲಿ ನಮ್ಮ ತಾಯಿಯು

ಸಂತೋಷದಿಂದ ಸಮ್ಮತಿಸಿರುವಳು. ಆದುದರಿಂದ ನೆಂಟಸ್ತಿಕೆಯ ನಿಶ್ಚ

ಯಕ್ಕೆ ಕೂಡಲೇ ಬರಬಹುದು. ಮದುವೆಯು ಶೀಘ್ರದಲ್ಲಿ ನಡಿಯು

ವಂತೆ ಏರ್ಪಾಡು ಮಾಡಿಸಿರಿ. ವರದಕ್ಷಿಣೆ ವಿಷಯದಲ್ಲಿ ಹೇಗೂ

ಮಾಡಿಕೊಳ್ಳುವ, ಮಿಕ್ಕ ವಿವರ ಮೊಕ್ತಾ,

ಇತಿ ನಮಸ್ಕಾರ,

ಮುದ್ದಣ್ಣ ಬಲ್ಲಾಳ,

43--------------------------------------------


ಮೇಲಿನ ಕಾಗದವನ್ನು ಓದಿದ ರಘುವು ಕೂಡಲೇ ಪುಟ್ಟಮ್ಮನಿಗೆ

ತಿಳಿಸಿದನು. ಅವಳು ತನ್ನ ಪ್ರಯತ್ನದಿಂದ ಲಭಿಸಿದ ವರನ ವಿಷಯವನ್ನು

ತನ್ನ ಗಂಡನೊಡನೆ ಹೇಳಿದಳು. ತನ್ನ ಪ್ರಿಯ ಪುತ್ರಿ ರುದ್ರಮ್ಮನಿಗೆ ಆ

ವರನೇ ಆಗಬೇಕೆಂದು ಚಂಡಿಹಿಡಿದಳು. ಮತ್ತು ನಿಶ್ಚಯಕ್ಕೆ ಕೂಡಲೇ

ಹೋಗಬೇಕಾಗಿ ಒತ್ತಾಯಪಡಿಸಿದಳು.


ಶ್ರೀನಿವಾಸ ಹೆಗ್ಗಡೆಗೆ ಆ ಯುವಕನ ಪರಿಚಯವು ಮೊದಲೇ

ಇದ್ದಿತು. ಆದ್ದರಿಂದ ತನ್ನ ಹೆಂಡತಿಯ ಹತ್ತಿರ ಹೀಗೆ ಹೇಳಿದನು.

ಆ ಹುಡುಗನು ಹೆಂಗಸರ ಒಟ್ಟಿಗೆ ಬೆಳದವನು. ವಿದ್ಯಾವಂತನಲ್ಲ,

ಮುದ್ದಿನಿಂದ ಸಾಕಲ್ಪಟ್ಟವನು, ಇತರರ ಅಂಕೆ ಎಂಬುದನ್ನು ಕಂಡರಿಯನು.

ಅಂಥವರಿಗೆ ನಮ್ಮ ಹುಡುಗಿಯರನ್ನು ಕೊಡುವುದರಲ್ಲಿ ನನಗೆ ಅಷ್ಟು

ಇಷ್ಟವಿಲ್ಲ. ವರನ ಸಂಪತ್ತು, ರೂಪು, ವಿಭವ, ಇವುಗಳನ್ನೇ ನೋಡ

ಬಾರದು. ಶೀಲ, ಶಿಕ್ಷಣ, ಇವನ್ನು ಪರಿಶೀಲಿಸಬೇಕು. ವಿದ್ಯೆ,

ಬುದ್ದಿ ಇಲ್ಲದ ಯುವಕರಿಗೆ ಸಂಸತ್ತಿದ್ದರೇನು! ರೂಪವಿದ್ದರೇನು ?

ಅಂಥವರು ಅವಿವೇಕದಿಂದ ಏನೇನೋ ಮಾಡಿಬಿಡುವರು.


ಇದನ್ನು ಕೇಳಿದ ಪುಟ್ಟಮ್ಮನಿಗೆ ಮನಸ್ಸಿನಲ್ಲೇ ಸಿಟ್ಟು ಬಂತು.

ನೀವು ಹೇಳುವ ವಿದ್ಯೆ ಬುದ್ದಿ ಕಲಿತ ವರರನ್ನು ಹುಡುಕಿ ನಿಮ್ಮ ಇತರ

ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿಬಿಡಿರಿ. ಇದೊಂದರಲ್ಲಿ ಮಾತ್ರ

ನನ್ನ ಮಾತು ನಡಿಸಿರಿ, ನಮ್ಮ ರುದ್ರು ಗೆ ಈ ವರನೇ ಸಾಕು, ನಿಮ್ಮ

ಬೇರೆ ಹುಡುಗಿಯರಿಗೆಲ್ಲಾ ವಕೀಲರು, ತಹಸಿಲ್ದಾರರು, ಡಾಕ್ಟರರು,

ಮುನಸೀಫರು, ಆಗುವಂಥ ವರರನ್ನೇ ಹುಡುಕಿಸಿ ಆ ವಿದ್ಯಾವಂತ ಯುವ ಕ

ರಿಗೆನೇ ಕೊಟ್ಟು ಮದುವೆ ಮಾಡಿಸಿರಿ. ನನ್ನ ಬಡಮಗಳಿಗೆ ಬಡಗಂಡ

ಸಾಕು ಎಂದು ಬಗೆಬಗೆಯಾಗಿ ಅಂಗಲಾಚಿ ಬೇಡಿಕೊಂಡಳು.


ಇದನ್ನೆಲ್ಲಾ ಕೇಳಿದ ಶ್ರೀನಿವಾಸ ಹೆಗ್ಗಡೆಯು ವಿದ್ಯೆ ಕಲಿಯುವುದು

ದೊಡ್ಡ ದೊಡ್ಡ ಹುದ್ದೆ ಸಂಪಾದಿಸುವುದಕ್ಕಲ್ಲ. ಅದು ಹೇಗೂ ಇರಲಿ !

ತಮ್ಮ ಹೊಟ್ಟೆಯ ಮಕ್ಕಳ ಒಳಿತವನ್ನು ಹಾರೈಸುವ ಜವಾಬುದಾರಿಯು

44-------------------------------------------


ತಂದೆಗೆ ಮಾತ್ರವಲ್ಲ, ಅವರ ತಾಯಿಗೂ ಅಷ್ಟೇ ಇರುವದು. ನಿನಗೆ

ಅಷ್ಟು ಅಪೇಕ್ಷೆ ಇದ್ದರೆ ಹಾಗೆಯೇ ಆಗಲಿ! ಎಂದು ಹೇಳಿ ತನ್ನ ಸಮ್ಮತಿ

ಯನ್ನು ಕೊಟ್ಟನು.


ಪಾಠಕರೇ ! ಈ ಕಾಲದಲ್ಲಿ ಹೆಚ್ಚು ಹೆಣ್ಣು ಸಂತತಿ ಇರುವವರು

ವರಾನ್ವೇಷಣದಲ್ಲಿ ಅಷ್ಟು ಯೋಗ್ಯ ಚುನಾವಣೆ ನಡಿಸುವುದು ಬಲು

ಕಷ್ಟದ ಸಂಗತಿಯಾಗಿದೆ. ಕೆಲವರು ಮೊದಲು ನೆಂಟುತನಕ್ಕೆ ಒಪ್ಪಿಗೆ

ಕೊಟ್ಟು, ವಧುವಿನ ಕಡೆಯವರು ವಿವಾಹಕ್ಕೆ ಅನುಕೂಲಿಸಿದ ನಂತರ

ಆಡಿದ ಮಾತಿಗೆ ತಪ್ಪಿ ಬಿಡುವರು. ಯೌವನಸ್ಥೆಯರಾದ ಯುವತಿಯ

ರನ್ನು ಮತ್ತೂ ಕಿರುಮನೆಯಲ್ಲೇ ಕುಳ್ಳಿರಿಸಿದರೆ ಅವಹೇಳನಕ್ಕೆ ಅವಕಾಶ

ವಾಗುವುದೆಂದು ಉಪಾಯ ತೋರದೆ ಸಿಕ್ಕ ಸಿಕ್ಕ ಯುವಕರಿಗೆ ಕಟ್ಟಿ ಬಿಡು

ವರು. ವರನು ಯೋಗ್ಯನಿದ್ದರೂ, ಕೆಲವರು ಹೇಳುವ ವರದಕ್ಷಿಣೆಯ

ಭಾರವನ್ನು ಹೊರುವವರಾರು? ನಮ್ಮ ಶ್ರೀನಿವಾಸ ಹೆಗ್ಗಡೆಯರಂಥವರು

ಧನಾಭಾವದಿಂದ ವರನ ಯೋಗ್ಯತೆಯನ್ನು ಚುನಾಯಿಸುವ ಕಾರ್ಯ

ವನ್ನು ಸ್ವಲ್ಪ ಸಡಿಲು ಮಾಡಿದುದರಲ್ಲಿ ಆಶ್ಚರ್ಯವೇನು?

----------

ಏಳನೆಯ ಅಧ್ಯಾಯ.

ಇಂದಿಗೆ ಶ್ರೀನಿವಾಸ ಹೆಗ್ಗಡೆಯರ ಮೂವರು ಪುತ್ರಿಯರಿಗೆ ನೆಂಟು

ತನ ನಿಶ್ಚಯಕ್ಕೆ ಬಂದಂತಾಯಿತು, ವರಾನ್ವೇಷಣದ ಕಾರ್ಯವು

ಮುಗಿಯಿತು. ಹೆಗ್ಗಡೆಯರ ತೃತೀಯ ಪುತ್ರಿ ಭವಾನಿಗೆ ಶಂಕರಪುರದ

ದೊಡ್ಡ ಮನೆ ಜಗನ್ನಾಥ ಹೆಗ್ಗಡೆಯರ ಅಳಿಯ ತಿಮ್ಮಪ್ಪ ಎಂಬ ವರನನ್ನು

ನಿಶ್ಚಯಮಾಡಿ ಸಂಜಿನ ಸೆಟ್ಟರು ಬರದ ಕಾಗದವು ಈಗ ತಾನೇ ಬಂದಿದೆ.

ಯುವಕನು ರೂಪವಂತನಿದ್ದು, ಈಗ ಒಂಭತ್ತನೇ ಕ್ಲಾಸಿನಲ್ಲಿ (ಫಿಪ್ಟ್

ಫೋರ್ಮ) ಓದುತ್ತಿದ್ದನೆಂತಲೂ, ಕಲಿಯುವಿಕೆಯನ್ನೆಲ್ಲಾ ಮುಗಿಸಿದ

ಬಳಿಕ ಮದುವೆ ಮಾಡಬೇಕೆಂತ ನಿಶ್ಚಯಿಸಿದ್ದರೂ, ಆ ಯುವಕನ

45----------------------------------------------


ತಂದೆಯ ಮತ್ತವನ ಮಾವನೂ, ಸಂಜೀವ ಶೆಟ್ಟರ ದಾಕ್ಷಿಣ್ಯವನ್ನು

ಮೀರಲಾರದೆ ಈಗಲೇ ಸಮ್ಮತಿಕೊಟ್ಟಿರುವರೆಂತಲೂ ಪತ್ರದಲ್ಲಿ ಬರೆ

ದಿತ್ತು. ಆದರೂ ಆ ವಿದ್ಯಾರ್ಥಿಯು ಶಿಕ್ಷಣವನ್ನು ಕೊನೆಗಾಣಿಸುವ

ಮೊದಲೇ ಲಗ್ನ ಮಾಡಿಸಿಕೊಳ್ಳುವುದಕ್ಕೆ ಇನ್ನೊಂದು ಬಲವಾದ ಕಾರ

ಣವು ಇದ್ದಿರುತ್ತದೆಂದೂ, ಈಚೆಗೆ ನಮ್ಮ ತಿಳುವಳಿಕೆಗೆ ಬಂತು. ಶ್ರೀನಿ

ವಾಸ ಹೆಗ್ಗಡೆಯರ ಪುತ್ರ ಅಂದರೆ ಭವಾನಿಯ ತಮ್ಮ, ಸುಮಾರು

ಹನ್ನೆರಡು ವಯಸ್ಸಿನ ಚಿಕ್ಕ ಹುಡುಗನೊಬ್ಬನಿದ್ದನೆಂಬುದು ವಾಚಕರಿಗೆ

ತಿಳಿದೇ ಇದೆ. ಅವನಿಗೆ ಈ ಯುವಕನ ತಂಗಿ ಏಳು ವಯಸ್ಸಿನ ಚಿಕ್ಕ

ಹುಡುಗಿಯನ್ನು ತರುವೆವೆಂದು ವಾಗ್ದಾನಮಾಡಿರುತ್ತಾರೆಂತಲೂ, ಆ

ಮದುವೆಯನ್ನು ಇನ್ನೆರಡು ವರುಷಗಳ ನಂತರ ನಡಿಸುವದಾಗಿ ಮಾತು

ಕತೆಗಳು ನಡೆದಿರುತ್ತದೆಂತಲೂ, ತನ್ನ ತಂಗಿಗೆ ಯೋಗ್ಯ ವರನು ಸಿಕ್ಕುವ

ಈ ಪ್ರಸಂಗವನ್ನು ಕಳಕೊಳ್ಳಬಾರದೆಂಬ ಕಾರಣದಿಂದ ತಿಮ್ಮಪ್ಪನು

ಮದುವೆಗೆ ಒಪ್ಪಿದನೆಂತಲೂ, ತಿಳಿದುಬಂತು. ತಿಮ್ಮಪ್ಪನ ಮನೆತನವು

ಒಳ್ಳೆ ಮರ್ಯಾದೆಯದಾಗಿದ್ದು, ಸಾಕಷ್ಟು ಆಸ್ತಿಪಾಸ್ತಿ ಮುಂತಾದ ಧನ

ಸಂಪತ್ತು ಮುಳ್ಳುದಾಗಿತ್ತು.


ಶ್ರೀನಿವಾಸ ಹೆಗ್ಗಡೆಯರ ಮನೆಯ ಮದುವೆಗೆ ಬರುವಂಥಾ ದಿಬ್ಬಣ

ಗಳು ಎರಡೆ. ಒಂದು ಮುತ್ತೂರಿಂದ ಹೊರಡುವುದು, ಇನ್ನೊಂದು

ಶಂಕರಪುರದಿಂದ ಬರುವುದು. ದಿಬ್ಬಣಗಳು ಚೈತ್ರ ಶು| ೪ಯು ಬೃಹ

ಸ್ಪತಿವಾರ ದಿವಸ ಸಂಜೆಗೆ ಬರಬೇಕಾಗಿ ಕಾಗದ ಪತ್ರಗಳೂ ನಡೆದಿರು

ತ್ತವೆ. ಮದುವೆಯ ಲಗ್ನದ ಶುಭಲೇಖನಗಳು ಎಲ್ಲಾ ಪ್ರಾಂತಗಳಿಗೆ

ಹೋಗಿರುವವು. ಎಲ್ಲೆಲ್ಲೂ ಲಗ್ನ ಪತ್ರದ ಸುದ್ದಿ, ಮದುವೆಯ ಪ್ರಸ್ತಾಪ,

ತಾನು ಹೋಗಬೇಕು, ನಾನು ಹೋಗಬೇಕು, ಎಂಬ ಆತುರವು ಎಲ್ಲ

ರಲ್ಲೂ ಹಬ್ಬಿದೆ. ಹೆಗ್ಗಡೆಯರ ಪರಿಚಿತರಾದ ಪುರಜನರೂ, ಪರಿಜನರೂ

ಅವರ ಪುತ್ರ, ಮಿತ್ರ, ಕಳತ್ರರೊಡನೆ ಬರುತ್ತಾರೆಂಬ ವರ್ತಮಾನವು

ವಿಸ್ತರಿಸಿದೆ. ಈಗ ಎಲ್ಲೆಲ್ಲೂ ಈ ಮದುವೆಯ ಕೋಲಾಹಲ.

46---------------------------------------------


ಇತ್ತ ಮುತ್ತೂರಿನಲ್ಲಿ ದಿಬ್ಬಣಕ್ಕೆ ಬೇಕಾದ ಸಿದ್ದತೆಯ ಗದ್ದಲ.

ದಿಬ್ಬಣವನ್ನು ಬಹಳೇ ವಿಜೃಂಭಣೆಯಿಂದ ಕೊಂಡು ಹೋಗಬೇಕೆಂದು

ಮದುಮಗ ಮುದ್ದಣ್ಣ ಬಲ್ಲಾಳನ ದೃಢಸಂಕಲ್ಪ, ಸಾಲದುದಕ್ಕೆ ಸುತ್ತ

ಮುತ್ತಲಿನ ಭೋಜನ ಬಂಧುಗಳ ಪ್ರೋತ್ಸಾಹ, ಉಗುಳಿದ ಎಂಜಲು

ನೆಲಕ್ಕೆ ಬೀಳದಂತೆ ಪೂಜಿಸುವ ಜನರ ಗುಂಪು, ಹಾಡಿದುದಕ್ಕೆ ತಾಳ

ಹಾಕುವವರ ಸಮೂಹ, ಏನು ಬೇಕಾದರೂ ತಾನು ಮಾಡಿಕೊಡುತ್ತೇ

ನೆಂದು ಎದೆಬಡಕೊಳ್ಳುವ ಅನ್ನ ಶತ್ರುಗಳ ಉತ್ತೇಜನ. ಅಂತೂ ಯಜ

ಮಾನನನ್ನು ಅಟ್ಟಕ್ಕೇರಿಸುವ ಆ ಶ್ವಾನವೃತ್ತಿಯ ಆಶ್ರಿತರ ಸ್ತುತಿ ಪಾಠ

ಗಳು ಇವೆಲ್ಲವೂ ಹೆಚ್ಚಾಗುತ್ತ ಹೋದುವು. ಸ್ಥೌತ್ಯಕ್ಕೆ ಮರುಳಾಗದ

ವರಾರು? ಹೀಗಾಗಿ ಯಜಮಾನನು ಮಂಕನಾಗಿ ಹೋಗಿದ್ದನು. ತನ್ನ

ಸುತ್ತ ಮುತ್ತಲಿನ ಹಿತಶತ್ರುಗಳ ದುರ್ಬೋಧನೆಯ ಪಾಶದಲ್ಲಿ ಶಿಕ್ಕಿ ಬಿದ್ದಿ

ದ್ದನು.


ತನ್ನ ಮಿತ್ರರನ್ನು ಕೂರಿಸಿಕೊಂಡು ಮುದ್ದಣ್ಣನು ಅಂದುದೇನೆಂ

ದರೆ, ದಿಬ್ಬಣವು ಬಲು ಠೀವಿಯಾಗಿ ಹೊರಡಬೇಕು, ವಿಜ್ರಂಭಣೆಯಾಗ

ಬೇಕು. ಇಂಥ ದಿಬ್ಬಣವು ಇನ್ನಿಲ್ಲ ಎಂಬಂತಿರಬೇಕು. ಖರ್ಚಿನ

ಮಟ್ಟಿಗೆ ಎಷ್ಟು ಬಿದ್ದರೂ ಬೀಳಲಿ ಅದಕ್ಕೆ ಹೆದರುವುದು ಬೇಡ ಎರಡು

ಸಾವಿರ ಹೋಗಲಿ ಮೂರು ಸಾವಿರ ಹೋಗಲಿ ಚಿಂತೆ ಇಲ್ಲ. ದಿಬ್ಬಣ

ಮಾತ್ರ ಹ್ಯಾಗಾಗಬೇಕು! ಹಾಗಂದ ಬಳಿಕ ಉತ್ತರ ಕ್ಷಣದಲ್ಲಿ ಎಲ್ಲರೂ

ಆ ವಿಷಯವನ್ನು ಅನುಮೋದಿಸಿದರು. ಸರಿ ಸರಿ ಹಣ ಕೊಡುವುದು

ನಿಮ್ಮಿಂದ, ಮತ್ತೆಲ್ಲಾ ನಮ್ಮಿಂದ ಎಂದು ಮಾತಾಡಿಕೊಂಡು ಒಬ್ಬೊ

ಬ್ಬರು ಒಂದೊಂದು ಕೆಲಸ ಮಾಡುವುದಾಗಿ ಹಂಚಿಕೊಂಡು ತಮ್ಮ ತಮ್ಮ

ಕೆಲಸಗಳ ಸಲುವಾಗಿ ನಡೆದುಬಿಟ್ಟರು. ಮುತ್ತೂರಿನ ದಿಬ್ಬಣವು ಬಲು

ಠೀವಿಯಿಂದ ಹೊರಡುವದೆಂಬ ಸುದ್ದಿಯು ಊರಲ್ಲೆಲ್ಲಾ ಹಬ್ಬಿತು. ಈ

ಗದ್ದಲವು ಸೌಖ್ಯಪುರಕ್ಕೂ ತಲಪದೆ ಇಲ್ಲ.


ಧನಸಂಪತ್ತಿ, ಯವನ, ಅವಿವೇಕ, ದುಸ್ಸಂಗ, ಇವು ಒಂದು

ಗೂಡಿ ಏಕರಾಶಿಯಲ್ಲಿ ಕೂತುಕೊಂಡಿವೆ. ಇವುಗಳ ನಾಯಕನಾದ

47---------------------------------------------


ಮುದ್ದಣ್ಣನು ಭೋಗಾಸಕ್ತನಾಗಿ ಒರಗಿರುವನು. ಯಜಮಾನನ ಮನ

ಸೃನ್ನು ಪ್ರಸನ್ನ ಪಡಿಸಿ ತಮ್ಮ ಬಲೆಗೆ ಸೇರಿಸಿಕೊಳ್ಳಬೇಕೆಂದು ಹೊಂಚುಹಾ

ಕುತ್ತಿರುವ ಆ ಮಾಯಾವಿಗಳು ಒಡ್ಡಿದ ಬಲೆಯಲ್ಲಿ ಈ ದಿನ ಕಾಲಿಟ್ಟಿ

ದ್ದನು. ಈ ಕಾಲದಲ್ಲಿ ಊಟಕ್ಕೆ ಅನ್ನ, ವೆಚ್ಚಕ್ಕೆ ಹಣ ಕೊಡುವವರಿ

ದ್ದರೆ ಎಷ್ಟು ಮಂದಿ ಸ್ನೇಹಿತರು ಬೇಕು, ಎಷ್ಟು ಮಂದಿ ಗೆಳೆಯರು

ಬೇಕು, ಎಷ್ಟು ಸೇವಕರು ಬೇಕು, ಹೀಗಾಗಿ ಮುದ್ದಣ್ಣನ ಮನೆಯ

ಹೆಬ್ಬಾಗಲಲ್ಲಿ ಎಷ್ಟು ಹೊತ್ತಿಗೆ ಬೇಕಾದರೂ ಗೆಳೆಯರಿಗೆ ಅಂತೂ ಸೇವಕ

ರಿಗೆ ಅಭಾವವೇ ಇದ್ದಿರಲಿಲ್ಲ. ದಿಬ್ಬಣದ ಖರ್ಚಿಗೆ ಬೇಕಾದ ಧನಸಂಪ

ಯೂ, ಒಡವೆವಸ್ತುಗಳೂ ಪಿತರಾರ್ಜಿತವಾದುವು. ಹಿರಿಯರು ಘಳಿಸಿ

ಇಟ್ಟದ್ದು! ಅವನ್ನು ವೆಚ್ಚ ಮಾಡುವುದರಲ್ಲಿ ಯಾರಿಗೆ ಬೇಸರಿಕೆ! ಯಾ

ರಿಗೆ ವ್ಯಸನ! ಯಾರಿಗೆ ದುಃಖ! ಸ್ವಂತದ್ದೆಂಬುದು ಪ್ರಕೃತ ಈ ದರ್ಬಾರೇ

ಹೊರತು ಬೇರೇನೂ ಇದ್ದಿಲ್ಲ. ಹೀಗಾಗಿ ಕಣ್ಣು ಮೇಲಾಗಿ ಹೋಗಿದೆ.

ಆ ಯುವಕನು ತಾನೇನು ಮಾಡಬೇಕು ತಾನು ಹ್ಯಾಗೆ ನಡಿಯಬೇಕು

ಎಂಬುದನ್ನು ಪೂರ್ಣ ಮರೆತಿದ್ದನು. ಅದರ ಅರಿವಿಲ್ಲದವನಾಗಿದ್ದನು.

ದಿಬ್ಬಣವನ್ನೇನೋ ಭಾರಿಗದ್ದಲದಿಂದ ಕೊಂಡು ಹೋಗಬೇಕೆಂದು ಅದರ

ಸಿದ್ದತೆಯ ಕೋಲಾಹಲವೇ ಕೋಲಾಹಲ.


ಶ್ರೀನಿವಾಸ ಹೆಗ್ಗಡೆ ಮನೆಯ ಮದುವೆಯು ಸಮೀಪಿಸಿತು. ದಿನ

ಗಳು ಒಂದೊಂದೇ ಕಳಿಯುತ್ತಾ ಬಂತು. ಮದುವೆಗೆ ಬೇಕಾದ ಸಿದ್ಧ

ತೆಯ ಕೆಲಸಗಳೆಲ್ಲಾ ಬಲು ರಭಸದಿಂದ ಸಾಗುತ್ತಿದ್ದುವು. ದಿನ ಒಂದರ

ನೂರಾರು ಮಂದಿ ಗೇಯುತ್ತಿದ್ದರು; ಅಡಿಗೆಯ ಚಪ್ಪರ, ಊಟದ ಚಪ್ಪರ

ಧಾರಾಮಂಟಪ ಇವನ್ನು ತಯಾರಿಸುವ ಗದ್ದಲ. ಅಲ್ಲಲ್ಲಿ ಅಂತರಂತರ

ಚಪ್ಪರಗಳೂ, ಚಪ್ಪರದ ಒಳಭಾಗವೆಲ್ಲಾ ಮೇಲ್ಗಟ್ಟು ತೆಗೆದು ಜಾಲರಿ

ಗಳನ್ನು ಇಟ್ಟು ಕೃತ್ರಿಮ ಲತಾಪುಷ್ಪಗಳಿಂದಲಂಕರಿಸಿಯದೆ, ಅಲ್ಲಲ್ಲಿ

ಮನೋಹರವಾದ ಚಿತ್ರಗಳಿಂದ ಶೋಭಿಸುತ್ತಿದೆ. ಚಪ್ಪರದ ಒಳಭಾಗ

ವನ್ನು ಪ್ರವೇಶಿಸಿದೊಡನೆ ಮನಸ್ಸಿನಲ್ಲಿ ಒಂದು ಬಗೆಯ ಗಾಂಭೀರ್ಯ

48-----------------------------------------------


ಹುಟ್ಟುತ್ತಿತ್ತು. ಅಷ್ಟು ಸೊಗಸಾದ ಚಪ್ಪರವನ್ನು ಆ ಕಾಲದಲ್ಲಿ ಮಾಡಿ

ದವರೇ ಇದ್ದಿಲ್ಲ. ಅಲ್ಲಲ್ಲಿ ರಸಬುರುಡೆಗಳೂ, ಅಂದಚಂದವಾದ ಬಣ್ಣ

ಗಳಿಂದ ಕಂಗೊಳಿಸುವ ಗ್ಲಾಸುಗಳೂ, ತೂಗಾಡುತ್ತಿರುವ ಬಾಳೆಯ

ಗೊನೆಯೇ ಮೊದಲಾದ ಫಲಾವಳಿಗಳೂ, ಚಪ್ಪರದ ಸೊಗಸನ್ನು ಮತ್ತಷ್ಟು

ಹೆಚ್ಚಿಸುತ್ತಿದ್ದವು. ಈ ಚಪ್ಪರದ ಸೊಗಸನ್ನು ಕೇಳಿ ದಿನ ಒಂದರ ನೂರಾರು

ಮಂದಿ ಇದನ್ನು ನೋಡಲಿಕ್ಕಾಗಿ ಬಂದು ಹೋಗುತ್ತಿದ್ದರು. ಚಪ್ಪರದ

ಸುತ್ತಮುತ್ತಲಿನ ಮೂಲೆಗಳನ್ನು ಶುಚಿಯಾಗಿಡುವುದು, ಎಲ್ಲೆಡೆಯಲ್ಲ

ನೀರು ಚುಮುಕಿಸಿ ದೂಳಡಗಿಸುವುದು; ಇದನ್ನು ನೋಡಿದರೆ ಮದುವೆಯ

ಕಾರ್ಯವು ವಿಜೃಂಭಣೆಯಿಂದ ಸಾಗುವಂತಿದೆ ಎಂದು ನಿಶ್ಚಯಿಸಬಹು

ದಾಗಿತ್ತು.


ಊರ ಮಂದಿ ಎಲ್ಲಾ ತಮ್ಮ ಸ್ವಂತ ಕೆಲಸದಂತೆ ಪ್ರಯತ್ನ

ಮಾಡುತ್ತಿದ್ದಾರೆ. ಮದುವೆಯ ನಿಮಿತ್ತ ಒಂದು ಹೊಸ ಕೆರೆಯೂ,

ಎರಡು ರಸ್ತೆಗಳೂ ತಯ್ಯಾರಾದವು. ಈ ಹೊಸ ಕೆರೆಯ ಏರ್ಪಾಡು

ನಡಿಸದಿದ್ದರೆ, ಬೇಸಿಗೆಯ ಕೊನೆಯ ಭಾಗವಾದ ಈ ಕಾಲದಲ್ಲಿ ನೀರಿನ

ಅಭಾವದಿಂದ ಮದುವೆಗೆ ಬಂದವರು ಬಲು ಬಳಲಬೇಕಾಗುವುದು, ತಾನು

ಮಾಡಿಸುವ ಈ ಶುಭಕಾರ್ಯದಲ್ಲಿ ಕುಡಿಯಲಿಕ್ಕೆ ನಿರ್ಮಲೋದಕವೂ

ಕೂತುಕೊಳ್ಳಲಿಕ್ಕೆ ಭವ್ಯ ಚಪ್ಪ ರವೂ ಸಕಾಲದಲ್ಲಿ ತಕ್ಕ ಭೋಜನವೂ

ಸಿಕ್ಕುವಂತೆ ಯೋಗ್ಯ ಏರ್ಪಾಡು ಮಾಡಿಸುವುದು ತನ್ನ ಆದ್ಯ ಕರ್ತವ್ಯ

ಎಂದು ಶ್ರೀನಿವಾಸ ಹೆಗ್ಗಡೆಯು ದೃಢ ಸಂಕಲ್ಪ ಮಾಡಿಕೊಂಡಿದ್ದನು.


ಮದುವೆಯ ದಿನವು ಸಮೀಪಿಸಿಬಂತು. ಇಂದಿಗೆ ಮೂರೇ ದಿನ

ಅವಶಿಷ್ಟವಾಯಿತು. ಮದುವೆಯ ಸಲುವಾಗಿ ಬರುವ ಹೊರೆಗಳಿಗೆ

ಮಿತಿಯೇ ಇರಲಿಲ್ಲ. ಕೆಲವು ಮಂದಿಗೆ ಇದೇ ಕೆಲಸ; ಹೊರೆಯನ್ನು

ಒಳಗೆ ಹಾಕುವುದು, ಹೊರೆತಂದ ಆಳುಗಳಿಗೆ ಕೂಲಿಕೊಡುವುದು, ಒಬ್ಬ

ಶ್ಯಾನುಭೋಗನಿಗೆ ಬಂದ ಹೊರೆಗಳನ್ನು ಬರಕೊಳ್ಳುವುದೇ ಕೆಲಸ.

ಹೊರೆ ಅಂದರೆ ಸುಮ್ಮನೆ ಹೊರೆ ಅಲ್ಲ; ಹೊರೆ ಮಾಡುವವರು ಸುಲಭ

49-------------------------------------------------


ಶ್ರಮವನ್ನೂ ಕ್ರಯದ ಚೌಕಶಿಯನ್ನೂ ಹುಡುಕಿ, ಹೆಸರಿಗೆ ಮಾತ್ರ

ಹೊರೆಯನ್ನು ತಯಾರಿಸದೆ, ಅವರು ಕಳುಹಿಸುವ ಹೊರೆಗಳು ತಮಗೆ

ಹೆಗ್ಗಡೆಯರ ಮೇಲಿರುವ ಪ್ರೀತಿಯನ್ನು ಪ್ರದರ್ಶಿಸುವ ನಮೂನೆಯಲ್ಲಿದ್ದಿ

ದ್ದುವು. ಕೆಲವರು ಅಕ್ಕಿ, ಬೆಲ್ಲ, ತೆಂಗಿನಕಾಯಿ, ತುಪ್ಪ, ಸಕ್ಕರೆ, ಧಾನ್ಯ

ಗಳನೂ ಅನೇಕರು ಬಾಳೆಹಣ್ಣು, ಮಾವಿನ ಹಣ್ಣು, ಮೊದಲಾದುವನ್ನೂ

ಹಲವರು ಬದನೆ, ಸವುತೆ, ಮರ್ಸಣಿ ಮುಂತಾದ ತರಕಾರಿಗಳನ್ನೂ ಕಳು

ಹಿಸಿದ್ದರು. ಶಾಯಿಪಲ್ಯದ ರಾಶಿಯಂತೂ ಇಂಥಾ ಎರಡು ಮದುವೆಗೆ

ಸಾಕಾಗುವಷ್ಟು ತುಂಬಿಹೋಗಿದ್ದವು. ಊರ ಮಂದಿಯಂತೂ ತಂಡ

ತಂಡವಾಗಿ ಬಂದು, ಯಾವ ಕಾಲದಲ್ಲಿ ಏನು ಕೆಲಸವನ್ನಾದರೂ ಮಾಡ

ಲಿಕ್ಕೆ ತಾನು ಮುಂದೆ, ತಾನು ಮುಂದೆ ಎಂದು ಎದುರುನೋಡುತ್ತಿದ್ದರು.


ಶ್ರೀನಿವಾಸ ಹೆಗ್ಗಡೆಯು ಊರ ಮಂದಿಗೆಲ್ಲಾ ಬೇಕಾದವನಾಗಿ

ದ್ದನು. ಯಾರಿಗೆ ಕಷ್ಟ ಬಂದರೂ ತನಗೆ ಬಂದ ಹಾಗೆ, ಎಂದು ಭಾವಿಸಿ

ಅದಕ್ಕೆ ಮೈಗೊಡುತ್ತಿದ್ದನು. ಯಾರಿಗೆ ನಷ್ಟ ಉಂಟಾದರೂ, ಅವರ

ದುಃಖದಲ್ಲಿ ತಾನೂ ಪಾಲುಗಾರನಾಗುತ್ತಿದ್ದನು. ಆ ಪ್ರಾಂತದಲ್ಲಿ ಯಾರ

ಲ್ಲಿಯೇ ಆಗಲಿ ನಡಿಯುವ ಶುಭಾಶುಭ ಕಾರ್ಯಗಳಲ್ಲಿ ಧನಿಕ, ದರಿದ್ರ

ರೆಂಬ ಭೇದವಿಡದೆ ತಾನೇ ಹೋಗಿ ನಿಂತು ಆ ಕಾರ್ಯಗಳನ್ನು ನಡಿಸು

ತಿದ್ದನು. ಹೀಗಿದ್ದುದರಿಂದ ಇವನ ಕೆಲಸದಲ್ಲಿ ಊರೇ ಒಂದುಗೂಡಿದುದ

ರಲ್ಲಿ ಆಶ್ಚರ್ಯವೇನು ? ಯಾವ ಹೊತ್ತಿಗೆ ಯಾರಿಂದ ಏನು ಕೆಲಸ ಆಗ

ಬೇಕಾಗಿದ್ದರೂ ಶ್ರೀನಿವಾಸ ಹೆಗ್ಗಡೆಯ ಮಟ್ಟಿಗೆ ಆ ಊರಿನಲ್ಲಿ ತೊಂದ

ರೆಯೇ ಇರಲಿಲ್ಲ. ಇದರಿಂದ ಮದುವೆಯ ಕಾರ್ಯಕ್ಕೆ ಬೇಕಾದ ವಿಶಿಷ್ಟ

ಸಿದ್ಧತೆಗಳೂ ಇಂದಿಗೆ ಸಂಪೂರ್ಣವಾದಂತಾದುವು.

------------------

50----------------------------------------------------


ಎಂಟನೆಯ ಅಧ್ಯಾಯ.

ಈ ದಿನ ಚೈತ್ರ ಶುದ್ಧ ೪ಯು ಬೃಹಸ್ಪತಿವಾರ, ಇಂದು ರಾತ್ರಿ ಶ್ರೀನಿ

ವಾಸ ಹೆಗ್ಗಡೆಯರ ಮನೆಗೆ ದಿಬ್ಬಣ ಬರುವುದು. ಮುತ್ತೂರಿನ ದಿಬ್ಬ

ಣವು ಬಲು ವಿಜೃಂಭಣೆಯಿಂದ ಹೊರಡುವದೆಂಬ ಸುದ್ದಿ. ಆ ದಿಬ್ಬಣವು

ಬಲು ಆಡಂಬರದಿಂದ ಬರುತ್ತದೆಂದು ಎಲ್ಲೆಲ್ಲೂ ಜನರ ಕಲಕಲ, ಆ

ವರ್ತಮಾನವು ನಾಲ್ಕು ದಿಕ್ಕಿನಲ್ಲಿ ಪಸರಿಸಿಕೊಂಡಿದೆ. ಬಾಲಕರಂತೂ

ಆ ದಿಬ್ಬಣವನ್ನು ನೋಡಬೇಕೆಂಬ ಹಿಗ್ಗಿನಿಂದ ತಮ್ಮಷ್ಟಕ್ಕೇನೇ ಕೇಕೆಹಾಕಿ

ಕೊಂಡು ಕುಣಿಯುತ್ತಿರುವರು. ಊರಿನ ಬಡಬಗ್ಗರು ಇಂದು ತಮ್ಮ

ಕೆಲಸಗಳನ್ನು ಒಂದಿಷ್ಟು ಬೇಗ ಮುಗಿಸಿ ತಮ್ಮ ತಮ್ಮ ಬಟ್ಟೆ ಬರೆಗಳನ್ನು

ಸುತ್ತಿಕೊಂಡು ಗೆಲಮೊಗವಾಗಿ ಹೊರಡುತ್ತಿರುವರು, ಪಾಠಕರೇ !

ಹೊರಡಿ, ಹೊರಡಿ, ನಾವೂ ನೋಡೋಣ! ಮುತ್ತೂರಿನ ಮದುಮಗ

ಆ ಮುದ್ದಣ್ಣನು ಬಲು ಠೀವಿಯಿಂದ ತರುವ ದಿಬ್ಬಣವನ್ನು ನಾವೆಲ್ಲರೂ

ನೋಡಿಬಿಡೋಣ ! ಅಪೂರ್ವ ಸಂದರ್ಭ ಕಳಕೊಳ್ಳಬೇಡಿರಿ! ಆ ದಿಬ್ಬಣದ

ಮೇಹನತೇನು! ಖರ್ಚನು! ಇಂಥಾ ಸಂಧಿಯನ್ನು ಬಿಡಬೇಡಿರಿ! ಅಗೋ

ನೋಡಿರಿ! ಆಕಾಶಕ್ಕೆ ನೆಗೆಯುವ ಆ ಬಾಣಗಳು ಗಗನ ಚುಂಬನ

ಮಾಡಲು ಏರುತ್ತಿವೆ. ಕೇಳಿರಿ! ಕೇಳಿರಿ! ಒಂದೇ ಸವನೆ ನೂರಾರು

ಕದನಿಗಳು ಹಾರುತ್ತಿವೆ. ಅತ್ತನೋಡಿ! ಸಾವಿರಾರು ಹಿಲಾಲುಗಳು

ರಸ್ತೆಯ ಮೇಲೆ ಸಾಲಾಗಿ ಒಂದರ ಹಿಂದೆ ಮತ್ತೊಂದು ಬರುವ ಆ

ದೀರ್ಘಪಂಗ್ತಿ ನೋಡಬಾರದೆ? ಇತ್ತ ನೋಡಿ! ಮನೆಯಂತಿರುವ ಆನೆಗಳು,

ಒಂದಲ್ಲ, ಎರಡಲ್ಲ, ನಾಲ್ಕು ಆನೆಗಳು; ಅಬ್ಬಬ್ಬ! ಎಷ್ಟು ದೊಡ್ಡ ಆನೆ

ಗಳು, ಅದರ ಹಿಂದೆ ಕುದುರೆಗಳೂ, ಅಸಂಖ್ಯ ಕೊಡೆಗಳೂ, ಮತ್ತಾ

ಸೂರಿಪಾನು, ನಡೆತೋರಣ, ಮುಂತಾದ ಬಿರುದಾವಳಿಗಳನ್ನು ಹೇಳುವ

ದೇನು? ಅಮ್ಮಮ್ಮ! ಇಷ್ಟು ಬಿರುದಾವಳಿಗಳನ್ನು ಎಲ್ಲಿಂದ ಸಂಗ್ರಹಿಸಿ

ದನೋ? ಅವೆಷ್ಟಿವೆ ನೋಡಿ, ದೊಡ್ಡದೊಂದು ಸೈನ್ಯವೇ ಬಂದು ನಿಂತಂತೆ

51---------------------------------------------------


ಮುಂದಿನ ಬಯಲುತುಂಬಾ ಸಾಲಾಗಿ ನಿಂತುಬಿಟ್ಟಿದೆ. ನೋಡಬಾ

ರದೇ! ಆಹಾ! ಊರವಾದ್ಯವೇನು! ಬೇಂಡು ವಾದ್ಯವೇನು! ಎಷ್ಟು

ಗದ್ದಲ! ಅಲ್ಲಿ ನೋಡಿ, ಒಂದೆಡೆ ದಶಾವತಾರ ಮೇಳದವರು ವೇಷಕಟ್ಟಿ

ಕುಣಿಯುವರು, ಇನ್ನೊಂದೆಡೆ ವೇಶೈಯರು ನರ್ತನಮಾಡುವರು.

ನೋಡಿ! ನೋಡಿ! ಚಲುವಾದ ಹುಡುಗಿಯರು, ಓಹೋ! ಗಣಿಕೆಯರ

ಮೇಳ ಅದೆಷ್ಟಿವೆ ನೋಡಿ! ಮೂರು ತಂಡ; ಎಲ್ಲಾ ತಂಡದ ಹುಡುಗಿ

ಯರೂ ತಮ್ಮ ಒಯ್ಯಾರತನವನ್ನು ತೋರಿಸಿ, ಬಲು ಬೆಡಗಿನಿಂದ ಕುಣಿ

ಯುವರು. ಅವರು ರೂಪವತಿಯರಾದರೂ ಲಜ್ಞೆ ಎಂಬುದು ಇಲ್ಲವೇ

ಇಲ್ಲ. ನಿರ್ಲಜ್ಜೆಯವರೆಂದರೆ ಇವರೇ ? ಆಕಡೆ ನೋಡಿ! ಹ್ಯಾಟ್,

ಬೂಟ್, ಕೋಟ್, ಧರಿಸಿ, ಕೈಯಲ್ಲಿ ಬೆತ್ತ ಹಿಡಿದು ಜನರನ್ನು ಸಾಲಾಗಿ

ನಿಲ್ಲಿಸುವ ದೊರೆಯ ವೇಷ ಹ್ಯಾಗೆ ಸಾಲಾಗಿ ನಿಲ್ಲಿಸುವುದು ಏಕೆಂದು

ನಿಮಗೆ ತಿಳಿಯದೇ ? ಈಗ ದಿಬ್ಬಣವನ್ನು ಎದುರುಗೊಂಡು ಒಳತಕ್ಕೊ

ಳ್ಳುವುದಕ್ಕಾಗಿ ಆ ಕಡೆ ಪಂಚದೀವಟಿಗೆ ಬಿರುದಾವಳಿಗಳಿಂದ ಯುಕ್ತರಾಗಿ

ಮದುವೆಯ ಮನೆಯವರು ಹೊರಟುಬರುವುದನ್ನು ನೋಡಿರಿ! ಈಗ

ಭಾರೀ ತಮಾಷೆ ಇದೆ. ದಿಬ್ಬಣದವರೂ ತಮ್ಮ ಬಿರುದಾವಳಿಗಳನ್ನೂ

ಗೃಹಸ್ಥರ ತಂಡಗಳನ್ನೂ ತಮ್ಮಲ್ಲಿರುವ ವಿಶಿಷ್ಟ ಆಡಂಬರಗಳನ್ನೂ ಪ್ರದ

ರ್ಶಿಸುವರು. ಮದ್ದುಸುಡುವ ಆ ಪ್ರೇಕ್ಷಣೀಯವಾದ ವಿನೋದವೂ

ಈಗ ನಡಿಯುವುದು, ನಾವು ತುಸುಮುಂದೆ ಹೋಗೋಣ, ಕಾಮನ

ಬಿಲ್ಲಿನ ಹಾಗೆ ನಿಂತಿರುವ ಆ ದಿಬ್ಬಣವನ್ನು ನೋಡಿರಿ! ತಲೆಗೆ ರುಮಾಲು

ಸುತ್ತಿಕೊಂಡು ನಿಂತಿರುವ ಆ ಮಹನೀಯರೂ, ಅವರ ಹಿಂದೆ ಅವರು

ಹತ್ತಿಕೊಂಡು ಬಂದ ಮಂಚಲುಗಳೂ, ಅದರ ಮಗ್ಗುಲಲ್ಲಿ ಮಾರಿಗೊಂದ

ರಂತೆ ಬಿರುದಾವಳಿಗಳೂ, ಹಿಲಾಲುಗಳೂ, ಅಲ್ಲಲ್ಲಿ ಆನೆ, ಕುದುರೆ,

ವೇಶ್ಯೆಯರು, ವೇಷ, ಎಷ್ಟು ವ್ಯವಸ್ಥೆ ಮಾಡಿ ನಿಲ್ಲಿಸಿರುವರು! ಆಹಾ!

ಎಷ್ಟು ಸೊಗಸು ! ಎಂಥಾ ಸಂಭ್ರಮ! ಭಾರೀ ದಿಬ್ಬಣವಪ್ಪಾ! ಈಗೇನು?

ಹಿಲಾಲು ಬೆಳಕನ್ನೆಲ್ಲಾ ಸಜ್ಜುಗೊಳಿಸುತ್ತಿದ್ದಾರೆ, ಓಹೋ! ತಿಳಿಯಿತು.

52------------------------------------------

ಜನರೆಲ್ಲರನ್ನೂ ಹಚ್ಚ ಹಗಲಂತೆ ತೋರಿಸುವ, ಹಗಲುಬತ್ತಿ, ಚಂದ್ರ

ವರ್ತಿ, ಬಿರ್ಸು, ಬಾಣ, ಎಷ್ಟು ಮದ್ದು! ಅ ಲಂಕಾಪಟ್ಟಣ, ಜೋಡು

ರಾಟೆ, ಚಕ್ರಬಾಣ, ನವಿಲು, ಹುಲಿ, ಸಿಂಹ, ಹಾರುವ ಗೂಡು,

ಬಿಗಿಲು; ಮುಂತಾದ ಒಜನೆಯಲ್ಲಿ ಏನೇನು ತೋರಿಸಬಹುದೋ ಅದೆಲ್ಲ

ವನ್ನೂ ಮಾಡಿರುವರಪ್ಪಾ! ಇದರಲ್ಲಿ ಅನೇಕ ಒಡವೆಗಳ ಹೆಸರೇ ತಿಳಿಯದು.

ಅವರೆಷ್ಟು ಜಾಣರು! ಚಪ್ಪರಮಂಚ, ರೈಲು, ಮೋಟಾರು, ಕುಣಿ

ಯುವ ದೊರೆ, ಹಾರುವ ಹಕ್ಕಿ, ಓಡುವ ಹಂದಿ, ಬಿತ್ತುವ ರೈತ, ಇವ

ನ್ನೆಲ್ಲಾ ಮದ್ದಿನಿಂದ ತೋರಿಸುವದೆಂದರೆ ಅವನ್ನು ತಯಾರಿಸಿದವರೆಷ್ಟು

ಜಾಣರಿರಬೇಡ! ಬುದ್ದಿವಂತರಿರಬೇಡ! ಇದೀಗ ಕೈಗಾರಿಕೆಯ ನೈಪುಣ್ಯ

ಈಗ ನೋಡಿ! ಕದನಿಯ ಸಾಲಿಗೇನೇ ಬೆಂಕಿ ಕೊಡುವರು. ಆ ಕಡೆ

ಸಣ್ಣ ಗರ್ಣಾಲು ಸುಡುವರು, ಈ ಕಡೆ ದೊಡ್ಡ ಗರ್ನಾಲು ಹೊರಳಿಸು

ವರು. ಈ ಶಬ್ದದೊಳಗೆ ಕಪಾಲವೇ ಕೆಡುವಂತಿದೆ, ರಣಕಣದ ಶಿಪಾಯ

ರಂತೆ ನಾವು ಕಿವುಡರಾದೆವು, ಆಹಾ! ರಾಶಿರಾಶಿ ಮದ್ದು ಸುಟ್ಟರು! ಪಾಠ

ಕರೇ ! ಈಗ ಹಿಂದೆ ಸರಿಯಿರಿ. ನಾವು ಹಿಂದೆ ಜಾರುವುದು ಒಳ್ಳೆಯದು,

ಈಗ ಆ ಮದ್ದಿನವನು ಬೆಂಕಿ ಕೊಡುವುದು ಚೇಳುಬಾಣ, ಅದು ಬಾಲಕೇ

ತುವಿನಂತೆ ಬಂದು ಬಟ್ಟೆಯೊಳಗೇನೇ ಸೇರಿಬಿಡುವುದು. ಎಚ್ಚರಿಕೆ!

ಇನ್ನು ಮುಗಿಯಿತು! ಮುಗಿಯಿತು! ಆ ಬಿಡಿಕಂಭಕ್ಕೆ ಬೆಂಕಿಕೊಟ್ಟರು.

ಮದ್ದು ಮುಗಿಯಿತು, ಇದಕ್ಕೆ ಬೆಂಕಿ ಕೊಡುವುದು ಕೊನೇಯಲ್ಲಿ,

ನಾವೆಲ್ಲರೂ ಒಂದೆಡೆ ಸೇರುವ ದಾರಿಬಿಟ್ಟು ನಿಲ್ಲುವ, ದಿಬ್ಬಣದ ಮಂಚಲಿ

ನವರೂ, ಪಾಲ್ಕಿಯನ್ನು ಹೊತ್ತವರೂ, ಬಿರುದಾವಳಿಗಳನ್ನು ಹಿಡಿದವರೂ,

ಬಲು ರಭಸದಿಂದ ಓಡಿಬರುವರು. ಹಾಗೆಬರುವುದು ಪದ್ಧತಿಯಂತೆ, ಜನ

ಸಂದಣಿಯಿಂದ ದಾರಿ ಬಿಡಿಸಿಕೊಂಡು ಹೋಗುವುದೇ ಕಷ್ಟವಪ್ಪಾ ! ಸ್ವಲ್ಪ

ನಿಲ್ಲಿರಿ.

ದಿಬ್ಬಣವನ್ನು ನೋಡಲು ಬಂದ ಬಡಬಗ್ಗರು ಆ ದಿಬ್ಬಣವನ್ನು

ಹೊಗಳುತ್ತಾ ಮನೆಯ ದಾರಿ ಹಿಡಿದರು. ಕೆಲವರು ಮದುಮಗ ಮುದ್ದ

೫೩----------------------------------------------------------------------


ಣ್ಣನನ್ನು ನೋಡಿ ಬೆಚ್ಚಿ ದರು. ಆಹಾ! ಆ ಮಹಾರಾಯನ ದಿಬ್ಬಣವನ್ನು

ಕಂಡು ತಮ್ಮ ಕಣ್ಣ ಪಾಪವೆಲ್ಲಾ ಹೋಯಿತೆಂದರು. ಹಲವರು ಇಂಥಾ

ದಿಬ್ಬಣವನ್ನು ನೋಡಿದ ತಾವು ಹುಟ್ಟಿದುದು ಸಾರ್ಥಕವಾಯಿತೆಂದು

ಹಿರಿ ಹಿರಿ ಹಿಗ್ಗಿದರು.


ಪಾಠಕರೇ ! ಮಿತವ್ಯಯದ ಮಹತ್ವವನ್ನು ಬಲ್ಲ ನೀವು ಇಂಥಾ

ದಿಬ್ಬಣವನ್ನು ಕಂಡು ಮೆಚ್ಚಲಾರಿರಿ ಎಂದು ನಾವು ಮೊದಲೇ ಬಲ್ಲೆವು.

ನಿಮಗೆ ಇಂಥಾ ದುಂದುವೆಚ್ಚವು ಒಗ್ಗದು. ವಿವೇಕಿಗಳಾದ ನೀವು ಇಂಥಾ

ಅನಾವಶ್ಯಕ ವೆಚ್ಚಗಳನ್ನು ಕಂಡು ನೊಂದುಕೊಳ್ಳುವಿರೆಂದು ನಾವು ತಿಳಿ

ಯದೆ ಇಲ್ಲ; ಆದರೂ ನಮ್ಮಲ್ಲಿ ಕೆಲವೆಡೆ ನಡೆಯುವ ದರ್ಬಾರುಗಳನ್ನೂ

ದುರ್ವ್ಯಯಗಳನ್ನೂ ನಿಮಗೆ ಒಮ್ಮೆ ತೋರಿಸಿಬಿಡಬೇಕೆಂದು ನಿಮ್ಮನ್ನೂ

ಕರೆದೆವು. ಇದನ್ನು ಕಂಡ ನೀವು ನಿಮ್ಮ ಬಂಧುಗಳ ಮುಂದೆ ಈ ಬಗೆಯ

ದುಂದುವೆಚ್ಚಗಳಿಗೆ ಅವಕಾಶ ಕೊಡದ ಹಾಗೆ ಬೋಧಿಸುವಿರೆಂದು ನಮ್ಮ

ದೃಢನಂಬಿಕೆ. ಇಂಥಾ ದುರ್ವಿನಿಯೋಗಗಳಿಗೆ ವೆಚ್ಚ ಮಾಡುವ ಹಣವ

ನ್ನು ನಮ್ಮ ನಮ್ಮ ಸಮಾಜೋನ್ನತಿಗೆ ಹಾಗೂ ದೇಶೋನ್ನತಿಗೆ ಅವಶ್ಯ

ವುಳ್ಳ ಸದ್ವಿನಿಯೋಗಗಳಲ್ಲಿ ಬಳಸುವಂತೆ ತಿಳಿಸುವಿರೆಂದು ಬಲ್ಲೆವು. ಈ ಕಾಲ

ದಲ್ಲಿ ಎಲ್ಲಾ ಸಮಾಜಗಳೂ, ತಂತಮ್ಮ ಉನ್ನತಿಗಾಗಿ ಸೊಂಟಕಟ್ಟಿ,

ಮುಂದೆ ಬಂದಿವೆ; ಹೆಚ್ಚೇಕೆ ! ಪಂಚಮರು, ಅಂತ್ಯಜರು, ಅಸ್ಪೃಶ್ಯರು,

ಕೀಳು, ಮೇಲು, ಉಚ್ಚ, ನೀಚ ಎಂಬ ಕಾಲವು ಮಾಯವಾಗಹತ್ತಿದೆ.

ಈ ನವಯುಗದಲ್ಲಿ ಪ್ರತಿಸಮಾಜವೂ ತಂತಮ್ಮ ಕರ್ತವ್ಯ ಕ್ಷೇತ್ರದಲ್ಲಿ

ಕಾಲಿಟ್ಟು ನವಸುಧಾರಣೆ ಎಂಬ ವಿಪುಲ ಬೆಳಕಿನಲ್ಲಿ ವಿಹರಿಸುವ ಸಮಯವು

ಸನ್ನಿಹಿತವಾಗಿದೆ. ಲೋಕವೇ ಜಾಗೃತಿಯನ್ನು ಹೊಂದಿ ಅವಿದ್ಯೆ, ಅನಾಗ

ರಿಕತೆಯಿಂದ ಬಳಲುವ ಬಂಧುಭಗಿನಿಯರನ್ನು ಉದ್ಧರಿಸುವುದಕ್ಕಾಗಿ

ಎಲ್ಲಾ ಸಮಾಜಸುಧಾರಕರೂ, ದೇಶಮುಖಂಡರೂ ಒಂದುಗೂಡಿ

ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಒತ್ತಟ್ಟಿಗೆ ತಳ್ಳಿ, ಒಂದೇ ಮನಸ್ಸಿ

ನಿಂದ ಮುಂದೆ ಬಂದು “ಸ್ವಾರ್ಥವನ್ನು ಸೀಳಿ! ಪರಹಿತಕ್ಕೆ ಏಳಿ!!

೫೪-----------------------------------------------------------------------


ಐಕ್ಯಮತ್ಯದಲ್ಲಿ ಬಾಳಿ!!!” ಎಂದು ಮರುಧ್ವನಿ ಹುಟ್ಟುವಂತೆ ಕೂಗಿ ಸಾರು

ತ್ತಿರುವಾಗ ಇಂಥಾ ದುಂದುವೆಚ್ಚ ದುರ್ವ್ಯಯಗಳಿಗೆ ಅವಕಾಶವೆಲ್ಲಿ? ಎಲ್ಲೆ

ಡೆಯಲ್ಲೂ ಆಡಂಬರ ದುರ್ವಿನಿಯೋಗಗಳಿಗೆ ತಿರಸ್ಕಾರ ಬಹಿಷ್ಕಾರಗಳಲ್ಲದೆ

ಪುರಸ್ಕಾರವೆಲ್ಲಿ?


ಇಂದು ಶಂಕರ ಪುರದಿಂದಲೂ ಒಂದು ದಿಬ್ಬಣವು ಬಂದಿದೆ. ಅದ

ರಲ್ಲಿ ವರ್ಣಿಸಿ ಹೇಳುವಷ್ಟು ಸಂಗತಿಗಳೇನೂ ನಮಗೆ ಕಂಡುಬರಲಿಲ್ಲ.

ಬರೇ ಹದಿನೈದು ಹಿಲಾಲುಗಳೂ, ಐದು ಛತ್ರಿಗಳೂ, ಬೇರೆ ನಾಲೈದು

ಬಿರುದಾವಳಿಗಳೂ ಇದ್ದಿದ್ದವು. ಊರ ವಾದ್ಯದ ಮೇಳಮದುಮಗನು

ಕೂತುಕೊಂಡ ಪಾಲಕಿ (ದಂಡಿಗೆ) ಇವಲ್ಲದೆ ಬೇರೇನೂ ಇರಲಿಲ್ಲ.

ಆದರೆ ಆ ದಿಬ್ಬಣದಲ್ಲಿ ಯೋಗ್ಯರಾದ ನೂರುಮಂದಿ ಸದ್ಗೃಹಸ್ಥರಿದ್ದರು.

ಒಟ್ಟಿನ ಮೇಲೆ ದಿಬ್ಬಣದಲ್ಲಿ ಬರೇ ನೂರಅರುವತ್ತು ಮಂದಿಗಿಂತ ಹೆಚ್ಚಿಗಿ

ರಲಿಲ್ಲ. ದಿಬ್ಬಣವು ಶಿಷ್ಟ ಸಂಪ್ರದಾಯವನ್ನು ಹೊಂದಿ ಇದ್ದಿತೆಂದು

ಧಾರಾ ಳವಾಗಿ ಹೇಳಬಹುದಾಗಿತ್ತು. ಅಷ್ಟು ಮಂದಿ ಮಾನ್ಯ ಗೃಹಸ್ಥರಿಂದ ನೆರೆ

ದುಬಂದ ದಿಬ್ಬಣವು ಬಲು ವಿರಳ. ಶಂಕರಪ್ಪರದವರು ಯೋಗ್ಯ ಮನೆತನದ

ವರಿದ್ದು, ಹೆಚ್ಚು ಮಂದಿ ಐಶ್ವರ್ಯವಂತರ ಹೊಕ್ಕುಬಳಿಕೆಯುಳ್ಳವರಿರು

ವುದರಿಂದ ಅವರ ದಿಬ್ಬಣದಲ್ಲಿ ಅನೇಕ ಸಭ್ಯಗೃಹಸ್ಥರು ಸೇರಿ ಬಂದುದ

ರಲ್ಲಿ ಆಶ್ಚರ್ಯವೇನು?


ದಿಬ್ಬಣಗಳೆರಡೂ ಬಂದ ಬಳಿಕ ನೆರೆದಿರುವ ಗೃಹಸ್ಥರಿಗೆ ಬಾಯಾ

ರಿಕೆಯ ವಿಚಾರವೇ ಮುಂತಾದ ಯಥಾಯೋಗ್ಯೋಪಚಾರಗಳು ನಡೆದುವು.

ಪಾಲಕಿ ಮಂಚಲುಗಳನ್ನು ಹೊತ್ತ ಬೋಯಿಗಳಿಗೂ, ಹಿಲಾಲು ದೀವ

ಟಿಗೆ ಮುಂತಾದ ಬಿರುದಾವಳಿಗಳನ್ನು ಹಿಡಿದ ಆಳುಗಳಿಗೂ, ವಾದ್ಯದವರೇ

ಮೊದಲಾದ ಮೇಳದವರಿಗೂ, ಊಟದ ಸಾಮಾನು (ಇದಕ್ಕೆ ಪಡಿ

ಎಂದು ಹೆಸರು) ಕೊಡುವ ಏರ್ಪಾಡೂ ನಡಿಯಿತು. ಈ ಬಗ್ಗೆ ಸಂದ

ತೆಂಗಿನಕಾಯಿ, ಎಣ್ಣೆ, ತರಕಾರಿ, ಸಂಬಾರಜೀನಸು, ಇವುಗಳನ್ನುಳಿದು

ಅಕ್ಕಿ ಒಂದೇನಂದರ ಖರ್ಚನ್ನು ಮಾತ್ರ ಹೇಳಬೇಕೆಂದಿದ್ದೇವೆ. ಆಳು

೫೫-------------------------------------------------------


ಒಂದಕ್ಕೆ ಒಂದುವರೆ ಸೇರಿನಂತೆ ಮುತ್ತೂರಿನ ದಿಬ್ಬಣದ ಸಲುವಾಗಿ ಸಂದ

ಅಕ್ಕಿಮುಡಿ ಅರುವತ್ತೈದು ಕಳಸಿಗೆ ಎರಡು ಮತ್ತು ಕೆಲವು ಸೇರು

ಆಗಿದ್ದಿತು. ಶಂಕರಪ್ಪರದ ದಿಬ್ಬಣದ ಬಗ್ಗೆ ಸಂದ ಅಕ್ಕಿ ಮುಡಿ ಬರೇ

ಒಂದುವರೆ ಮಾತ್ರ ಆಗಿದ್ದಿತು. ಈ ಮದುವೆಯ ಸಲುವಾಗಿ ಶ್ರೀನಿವಾಸ

ಹೆಗ್ಗಡೆಯರಿಗೆ ಪಡಿಯ ಬಗ್ಯೆ ಹೆಚ್ಚಿನ ನಷ್ಟ ಉಂಟಾಯಿತು. ಇದೊಂದೇ

ರಖಮಿನಿಂದ ಇಷ್ಟು ವೆಚ್ಚವನ್ನುಂಟುಮಾಡಿದ ಮುತ್ತೂರಿನ ದಿಬ್ಬಣದ

ವರ ಮೇಲೆ ಹೆಚ್ಚಿನ ಬೇಸರ ಹುಟ್ಟಿತು. ಆದರೂ ನೆಂಟರು; ಅದರಲ್ಲೂ

ಹೊಸ ನೆಂಟರು; ಆದುದರಿಂದ ಉಪಾಯವಿಲ್ಲದೆ ಸುಮ್ಮನಿರಬೇಕಾಯಿತು.


ಪರಂತು ಖರ್ಚು ವೆಚ್ಚದ ಸಂಗತಿ ಹೇಗೂ ಇರಲಿ. ಪುಟ್ಟಮ್ಮನಿಗೆ

ಮಾತ್ರ ಮುತ್ತೂರಿನ ದಿಬ್ಬಣದ ಸುದ್ದಿ ಕೇಳಿದ ಲಾಗಾಯಿತು ಹಿಡಿಯಲಾ

ರದಷ್ಟು ಆನಂದ. ಆ ದಿಬ್ಬಣದ ಪ್ರಸ್ತಾಪ ಮಾತಾಡುವಲ್ಲೆಲ್ಲಾ ಇವಳು

ಕಿವಿಗೊಟ್ಟು ಆಲಿಸದೆ ಇಲ್ಲ. ಅವಳ ಮುಖದಲ್ಲಿ ಮುಗುಳ್ಳಗೆ ಉಕ್ಕು

ತ್ತಿತ್ತು. ಮುತ್ತೂರಿನ ದಿಬ್ಬಣದವರಿಗೆ ಉಪಚಾರದ ಮೇಲೆ ಉಪಚಾರ.

ಕಾಫಿ ಬೇಕಾದರೆ ಕಾಫಿ, ಚಾ ಬೇಕಾದರೆ ಚಾ, ಶರ್ಬತು ಅವಶ್ಯವಿದ್ದರೆ

ಅದು, ಅಂತೂ ಹೆಗ್ಗಡತಿಯರಿಗೆ ತಾನೇ ನೆಂಟುತನಕ್ಕೆ ಗಂಟು ಮಾಡಿ

ಸಿದ ಮುತ್ತೂರಿನ ಅಳಿಯನ ಮೇಲೆ ಪ್ರೀತಿ ಎಂದರೆ ಅಷ್ಟಿಷ್ಟಲ್ಲ.

--------------

ಒಂಭತ್ತನೆಯ ಅಧ್ಯಾಯ.

ಮರುದಿನ ದಿವಾಘಟ ಐದಕ್ಕೆ ಧಾರಾಮುಹೂರ್ತ, ಈ ವೇಳೆಗೆ

ಸರಿಯಾಗಿ ಎಷ್ಟೋ ಗಾಡಿಗಳೂ, ಜಟ್ಕಾ ಬಂಡಿಗಳೂ, ಸಾರಟುಗಳೂ

ಹೆಗ್ಗಡೆಯರ ಮನೆಯ ಮುಂದಿನ ರಸ್ತೆಯ ಮೇಲೆ ಜಮೆಯಾಗಿ ನಿಂತಿ

ದ್ದುವು. ಅಲ್ಲಿ ನಿಂತ ಅಸಂಖ್ಯ ಗಾಡಿಗಳನ್ನು ನೋಡಿದರೆ ಅದೊಂದು

ಗಾಡಿಗಳ ನಿಲ್ದಾಣದಂತೆ ಒಪ್ಪುತ್ತಿತ್ತು. ಹೆಗ್ಗಡೆಯರ ಮನೆಯ ಲಗ್ನದ

ಮುಹೂರ್ತಕ್ಕೆ ಬಾರದವರಾರು ! ಆ ಮಹನೀಯರಿಗೆ ಬೇಡದವರಾರು !

೫೬-----------------------------------------------------------------------


ಮದುವೆಯ ಲಗ್ನ ದ ಆ ಶುಭ ಮುಹೂರ್ತವು ಸನ್ನಿಹಿತವಾದ ಕೂಡಲೇ

ತಂಡತಂಡವಾಗಿ ಬಂದು ಸೇರುವ ಧನಿಕರೂ, ದರಿದ್ರರೂ, ಸುಶಿಕ್ಷಿತರೂ,

ಅಶಿಕ್ಷಿತರೂ, ನಾಗರಿಕರೂ, ಅನಾಗರಿಕರೂ ಮುಂತಾದ ಜನಸಂದಣಿ

ಯಿಂದ ಆ ವಿಸ್ತಾರವಾದ ಆ ಭವ್ಯವಾದ ಧಾರಾಚಪ್ಪರವು ಕಿಕ್ಕಿರಿದು

ಹೋಯಿತು. ಅಷ್ಟು ಮಂದಿ ನೆರೆದಿದ್ದರೂ, ಬಂದವರಿಗೆಲ್ಲಾ ದೊಡ್ಡ

ವರು ಬಡವರೆಂಬ ಭೇದವಿಡದೆ ಯಥಾಯೋದ್ಯೋಪಚಾರಗಳು ಸಲ್ಲುತ್ತಿ

ದ್ದವು. ಸಭಿಕರಿಗೆಲ್ಲಾ ಸುಗಂಧ ದ್ರವ್ಯ, ಫಲ ಪ್ರಪ್ಪ, ಸಕ್ಕರೆ, ಮೊದ

ಲಾದುವುಗಳ ಹಂಚೋಣವೂ ಯೋಗ್ಯ ವ್ಯವಸ್ಥೆಯಿಂದ ಸಾಗಿತು.

ಅಂದು ನೆರೆದ ಆ ಮನೋಹರವಾದ ಸಭೆಯನ್ನು ಮನಸ್ಸಿನಲ್ಲೇ ಭಾವಿಸ

ಬೇಕಲ್ಲದೆ ವರ್ಣಿಸಲು ಅಸಾಧ್ಯವಾಗಿತ್ತು. ನೀಳವಾದ ಆ ಚಪ್ಪರದ

ಉಭಯ ಪಾರ್ಶ್ವಗಳಲ್ಲಿ ಒಂದು ಸಾಲು ಬೇಂಚಿನಿಂದಲೂ, ಇನ್ನೊಂದು

ಸಾಲು ಕುರ್ಚಿಯಿಂದಲೂವ್ಯವಸ್ಥೆಗೊಳಿಸಿಟ್ಟು, ಅವುಗಳ ಮೇಲೆ ಐಶ್ವ

ರ್ಯವಂತರೂ, ವಿದ್ಯಾವಂತರೂ, ಅಲಂಕರಿಸಿದ್ದರು. ಅವುಗಳ ಎದುರಿಗೆ

ಹಾಕಿದ ಚಾಪೆ, ಜಮಖಾನಗಳ ಮೇಲೆ ಇತರ ಮಹನೀಯರೂ, ಮಂಡಿ

ಸಿದ್ದರು. ಒಂದೆಡೆ ಪ್ರತ್ಯೇಕ ಏರ್ಪಡಿಸಿದ ಮಹಿಳಾ ಮಣಿಯರ ಸಭೆ

ಯಿಂದ ಅಂದಿನ ಮದುವೆಯ ಸಮಾರಂಭಕ್ಕೆ ಅನಿರ್ವಾಚ್ಛವಾದ ಸೊಬಗು

ಉಂಟಾಗಿತ್ತು. ಅಲ್ಲಿ ಕುಳಿತ ಸರ್ವಾಲಂಕಾರ ಭೂಷಿತರೂ, ಸರ್ವಾಂಗ

ಸುಂದರಿಯರೂ, ಆದ ತರುಣಿ ಮಂಡಲದ ಸೊಗಸನ್ನು ಏನೆಂದು ವರ್ಣಿ

ಸಲಿ! ಆ ಸಭೆಯಲ್ಲಿ ಆಗಾಗ ಕರ್ಣಾನಂದಕರವಾದ ಗಾಯನ, ವಾದ್ಯ

ಇವುಗಳು ನಡೆಯುತ್ತಿದ್ದುವು. ಬಂದಿರುವ ಸಭೆಯವರೆಲ್ಲಾ ಪ್ರೇಕ್ಷಣೀ

ಯವಾದ ಅಂದಿನ ಸಭೆಯನ್ನು ನೋಡಿ ಹೆಗ್ಗಡೆಯವರನ್ನು ಹೊಗಳಿದರು.


ಪೌರೋಹಿತರು ನಿಶ್ಚಯಿಸಿದ ಮೇರೆಗೆ ಮುಹೂರ್ತಕ್ಕೆ ಸರಿಯಾಗಿ

ಪಾಣಿಗ್ರಹಣ ಕಾರ್ಯವು ನಡೆಯಿತು. ನಾವು ತಿಳಿದ ಮೇರೆಗೆ ಹೆಗ್ಗಡೆ

ಯರ ಮೂವರು ಪುತ್ರಿಯರಿಗೆ ಮದುವೆಯಾಗುವುದಾಗಿದ್ದರೂ, ಇದೇ -

ಸಂದರ್ಭದಲ್ಲಿ ಆ ಊರಿನ ನಾಲೈದು ಮನೆಯವರು ತಮ್ಮ ತಮ್ಮ

೫೭------------------------------------------------------------------ →


ಬಾಲಕ ಬಾಲಕಿಯರಿಗೆ ಈ ಚಪ್ಪರದಲ್ಲೇ ಇದೇ ಮುಹೂರ್ತದಲ್ಲಿ ಪಾಣಿ

ಗ್ರಹಣ ಕಾರ್ಯವನ್ನು ನೆರವೇರಿಸಿಕೊಂಡರು. ಹೆಚ್ಚಿಗೆ ಸೇರಿದ ಐದು

ಜೋಡಿಯೂ ಸ್ವತಹ ಮದುವೆ ಮಾಡಿಸಲು ಅನುಕೂಲವಿಲ್ಲದ ಬಡವರ

ದಾಗಿದ್ದಿತು. ಅವರು ತಮ್ಮ ಗರೀಬತೆಯನ್ನು ಹೆಗ್ಗಡೆಯರೊಡನೆ ಹೇಳಿ

ಕೊಂಡುದರಿಂದ ಕರುಣೆಪಟ್ಟು ಈ ಲಗ್ನದಲ್ಲೇ ವಿವಾಹ ವಿಧಿಯನ್ನು ನೆರ

ವೇರಿಸಿಕೊಳ್ಳುವಂತೆ ಸಮ್ಮತಿಕೊಟ್ಟಿದ್ದರು.


ಅಂದು ಕೂಡಿದ ಮಹನೀಯರೆಲ್ಲಾ ವಧೂವರರಿಗೆ ಉಡುಗರೆ

ಕಾಣಿಕೆಗಳನ್ನು ಕೊಟ್ಟರು. ಬಂದ ಮಹನೀಯರೆಲ್ಲಾ ಯಥಾ ಯೋಗ್ಯೋ

ಪಚಾರಗಳನ್ನು ಹೊಂದಿ ತೆರಳುತ್ತಲಿದ್ದರು. ಕಾಲಕ್ಕೆ ಸರಿಯಾಗಿ ಕೊಟ್ಟ

ಆ ದಿವ್ಯ ಭೋಜನವನ್ನೂ, ತಾಂಬೂಲಾದ್ಯುಪಚಾರಗಳನ್ನೂ, ಸ್ವೀಕರಿಸಿದ

ಜನರೆಲ್ಲರೂ ಹೆಗ್ಗಡೆಯರ ಕಾರ್ಯಕೌಶಲಗಳಿಗೂ, ನಿಷ್ಕಳಂಕವಾದ

ಸತ್ಕಾರಗಳಿಗೂ ಮೆಚ್ಚಿ ಹೊಗಳಿದರು. ಎಷ್ಟೋ ವರುಷಗಳ ಹಿಂದೆ

ನಡೆದುಹೋದ ಆ ಮದುವೆಯ ಸುದ್ದಿಯನ್ನು ಈಗಲೂ ಅಲ್ಲಿ ನಡಿ

ಯುವ ಶುಭಕಾರ್ಯಗಳ ಸಂದರ್ಭಗಳಲ್ಲಿ ಎತ್ತಿ ಹೊಗಳದೆ ಇಲ್ಲ.


ಮದುವೆಯ ಆ ಶುಭಕಾರ್ಯ ನಡೆದು ಏಳೆಂಟುದಿನ ಸಂದಿದೆ

ಮಾತ್ರ. ಆನಂದನಿಗೆ ಆನಂದದ ಮೇಲೆ ಆನಂದ. ಅವನು ಆ ವರುಷ

ಕೊಟ್ಟ (ಮೆಟ್ರಿಕ್ಯುಲೇಷನ್'' ಪರೀಕ್ಷೆಯಲ್ಲಿ " ಫಸ್ಟ್ ಕ್ಲಾಸು'' ತೇರ್ಗಡೆ

ಹೊಂದಿರುತ್ತಾನೆಂದು ಹೆಡ್ಮಾಸ್ಟರರ ಕಾಗದ ಅದರಲ್ಲೂ ಪ್ರೆಸಿಡೆನ್ಸಿಗೆನೇ

ಫಸ್ಟ್'' ಬಂದಿದ್ದಾನೆಂದು ಬರೆದು ಆ ಪಂಗ್ತಿಯ ಅಡಿಯಲ್ಲಿ ಕೆಂಪು ಶಾಯಿ

ಯಿಂದ ಗೆರೆ ಎಳೆದು ಬಿಟ್ಟಿದ್ದರು. ಅದನ್ನು ನೋಡಿದೊಡನೆ ಆನಂದನು

ಆನಂದತುಂದಿಲಾಂತರಂಗನಾಗಿ ಈ ಸುದ್ದಿಯನ್ನು ತನ್ನ ಮಿತ್ರ ಮಂಡಳಿ

ಯಲ್ಲಿ ಪ್ರಕಾಶಪಡಿಸಿದನು.


ಆ ಕಾಲದಲ್ಲಿ ಈಗಿನಂತೆ ವಿದ್ಯೆಯ ಮಹತ್ತು ಬಲ್ಲವರು ಬಲು

ವಿರಳ, ಆ ಪ್ರಾಂತದಲ್ಲಿ ಒಂದಿಷ್ಟು ವಿದ್ಯೆ ಸಂಪಾದಿಸಿದವರು ನವ

58---------------------------------------------------

ಶ್ರೀನಿವಾಸ ಹೆಗ್ಗಡೆಯರ ಮನೆಯವರೇ ಎಂದರೆ ಅತಿಶಯೋಕ್ತಿಯಾಗಲಾ

ರದು. ಈ ವಿನಹ ಆನಂದನು ಇಂಗ್ಲಿಷು ವಿದ್ಯೆಗೆ ಸೇರಲಿಕ್ಕೆ ತಕ್ಕ ಅನು

ಕೂಲವೂ ಇದ್ದಿತು. ಇವನ ತಂದೆಯ ಮನೆಯಿಂದ ಒಂದು ಮೈಲಿಯ

ದೂರದೊಳಗೇನೇ ಪಟ್ಟಣವಿದ್ದುದರಿಂದ ಅಲ್ಲಿಯ ಮಿಶ್ಯನ್ ಅಪ್ಪರ್

ಸೆಕೆಂಡರಿ ಸ್ಕೂಲಿನಲ್ಲಿ ಕಲಿಯುತ್ತಿದ್ದನು. ಆ ಶಾಲೆಯ ಮುಖ್ಯ ಉಪಾ

ಧ್ಯಾಯರು ಆನಂದನ ಗುಣನಡತೆಗಳಿಗೆ ಮೆಚ್ಚಿದ್ದರು. ಆದುದರಿಂದ

ಅವನ ಪರೀಕ್ಷೆಯ ಫಲಿತಾಂಶವನ್ನು ಈದಿನ ತಾನೇ ಪತ್ರ ಬರೆದು ತಿಳಿಸಿ

ದ್ದರು.


ಶೆಕೆ ಕಾಲದ ರಜೆ ಕಳೆಯಿತು. ಸ್ಕೂಲು ಕಾಲೇಜುಗಳು ಪುನಃ

ಪ್ರಾರಂಭವಾಗುವ ಸಮಯವೊದಗಿತು. ಅನೇಕ ಮಂದಿ ಬಂಧುಮಿತ್ರರು

ಆನಂದನ ವಿದ್ಯೆಯನ್ನು ಮುಂದರಿಸುವ ವಿಷಯದಲ್ಲಿ ಸೂಚನೆಕೊಟ್ಟರು.

ಆನಂದನ ಪರಿಚಿ ತಿಯುಳ್ಳವರೆಲ್ಲರೂ ಅವನ ಕಲಿಯುವಿಕೆಯನ್ನು ಮುಂದ

ರಿಸದೆ ಬಿಡಬಾರದೆಂದು ಅವನ ತಂದೆಗೆ ತಿಳಿಸಿದರು. ಆನಂದನಿಗೆ ಮೆಟ್ರಿಕ್

ವರೆಗೆ ಶಿಕ್ಷಣವನ್ನು ಕೊಟ್ಟ ಮಿಶ್ಯನ್ ಅಪ್ಪರ್ ಸೆಕೆಂಡರಿ ಶಾಲೆಯ

ಮುಖ್ಯ ಉಪಾಧ್ಯಾಯರು ಆನಂದನ ಮನೆಗೆ ತಾನೇ ಸ್ವತಹಾ ಬಂದು

ಅವನ ತಂದೆಯನ್ನೂ ಮಾವನನ್ನೂ ನೋಡಿ ಹೀಗೆ ಹೇಳಿದರು.


"ನೀವು ನಿಮ್ಮ ಆನಂದನಿಗೆ ಮುಂದೆ ಕಲಿಸಲೇ ಬೇಕು. ಇವನಿಗೆ

ಹೆಚ್ಚು ಕಲಿಸಿದರೆ ನಮ್ಮ ಶಾಲೆಗೂ, ನಿಮ್ಮ ಮನೆತನಕ್ಕೂ ಒಳ್ಳೆ

ಯಶಸ್ಸು ಬರುವುದರಲ್ಲಿ ಸಂದೇಹವೇ ಇಲ್ಲ. ಆನಂದನಂಥ ಯುವಕರೇ

ಹೆಚ್ಚಿಗೆ ಕಲಿಯಲಿಕ್ಕೆ ತಕ್ಕವರಾದ ವಿದ್ಯಾರ್ಥಿಗಳು, ತಾವು ಯೋಗ್ಯ

ಮನೆತನದವರಿದ್ದು, ಐಶ್ವರ್ಯವಂತರಿದ್ದು, ತಮ್ಮಲ್ಲಿ ಹುಟ್ಟಿದ ಸಮರ್ಥ

ರಾದ ಯುವಕರಿಗೆ ವಿದ್ಯೆ ಕೊಡದಿದ್ದರೆ ತಮ್ಮ ಮನೆತನಕ್ಕೆನೇ ಒಂದು ಕ

ಳಂಕವೆಂದು ನಾನು ನೆನಸುತ್ತೇನೆ. ಇವನನ್ನು ಮಂಗಲಪ್ರರಕ್ಕೆ ಕಳು

ಹಿಸಿರಿ. ಅಲ್ಲಿ ಇವನಿಗೆ ಬೇಕಾದ ಸಹಾಯ ಸಿಕ್ಕುವಂತೆ ನನ್ನ ಸ್ನೇಹಿತ

ರಿಗೆ ಬರೆಯುತ್ತೇನೆ. ತಿಳಿಯಿತೋ? ಈ ಸಂಗತಿಯನ್ನು ಆಲೋಚಿಸಿ

59------------------------------------------------------


ಇಂದು ಸಾಯಂಕಾಲಕ್ಕೆ ನೇ ನನಗೆ ತಿಳಿಸಿರಿ. ಅಂತೂ ಕಲಿಯುವಿಕೆ

ಯನ್ನು ಮುಂದರಿಸಲೇ ಬೇಕು" ಎಂದು ಪ್ರನಃ ಇನಃ ಹೇಳಿ ಮನೆಯ

ದಾರಿ ಹಿಡಿದರು.


ಇತ್ತ ಹೆಗ್ಗಡೆಯರೂ, ಆನಂದನ ತಂದೆಯೂ, ಕುಳಿತುಕೊಂಡು

ಆನಂದನ ಕಲಿಯುವಿಕೆಯನ್ನು ಮುಂದರಿಸುವ ವಿಷಯದಲ್ಲಿ ಆಲೋಚಿ

ಸುತ್ತಿದ್ದರು. ಆ ವೇಳೆ ಆನಂದನ ತಾಯಿಯು ಬಂದು ಹೇಳಿದ್ದೇನಂದರೆ:


"ನನ್ನ ಮಗ ಆನಂದನ ವಿದ್ಯೆ ಮುಂದರಿಸುವುದೂ ಬೇಡ. ಅವನು

ಕಲಿತು ಅದರಿಂದ ಹೊಟ್ಟೆ ಹೊರಕೊಳ್ಳುವುದೂ ಬೇಡ. ಉಣಲಿಕ್ಕೇನೋ

ಹಿರಿಯರು ಮಾಡಿಟ್ಟ ದ್ದುಂಟು. ಈ ವರೆಗೆ ಓದಿದ್ದೇ ಸಾಕು. ನನ್ನ

ಮಗು ತಹಶಿಲ್ದಾರನಾಗುವದು ಬೇಡ. ವಿದ್ಯೆ ಕಲಿಸಬೇಕೆಂದು ಯಾ

ವುದೋ ಕಣ್ಣು ಕಾಣದ ಊರಿಗೆ ಕಳುಹಿಸಿಕೊಟ್ಟು, ವ್ಯಥೆಪಡುತ್ತಾ

ಇರಲಾರೆ. ಪರವೂರಿನಲ್ಲಿ ! ಪರರ ಮನೆಯಲ್ಲಿ !! ಪರಜನರ ಆರೈಕೆ

ಯಲ್ಲಿ !!! ಇಡಲಿಕ್ಕೆ ನಾನೆಂದೂ ಒಪ್ಪೆನು. ಆ ಹೊಟೇಲಿನ ಊಟ

ಉಂಡು ರೋಗರುಜಿನದಲ್ಲಿ ಬಿದ್ದುಕೊಂಡರೆ ನೋಡುವುದಕ್ಕೂ ಗತಿ ಇಲ್ಲ.

ದಿಕ್ಕಿಲ್ಲದವರ ಹಾಗೆ ಯಾವುದಾದರೂ ಊರಿನಲ್ಲಿ ಅಲೆಯುವುದಕ್ಕೆ

ಕಳುಹಿಸಲು ನನಗೆ ಮನಸ್ಸಿಲ್ಲ; ನನ್ನ ಮುದ್ದು ಮಗನು ನನ್ನ ಒಟ್ಟಿಗೇನೇ

ಇರಲಿ. ಬೇಡಪ್ಪಾ! ಆ ವಿದ್ಯೆ” ಅಂದು ಬಿಟ್ಟಳು.


ಆನಂದನ ಅಜ್ಜಿಯಂತೂ ಗೋಳೆಂದು ಅತ್ತಳು. (ಆ ವಿದ್ಯೆಗಿದ್ಯೆಗೆ

ಬೆಂಕಿ ಬೀಳಲಿ. ನಮ್ಮ ಕಂದಮ್ಮ, ಆನಂದು ಕಣ್ಣೆದುರಿಗೆ ಇದ್ದರೆ

ಸಾಕು, ನಾನಂತೂ ಸಾಯಲಿಕ್ಕೆ ಬಿದ್ದಿದ್ದೇನೆ. ಜೀವ ಬಿಡುವ ಹೊತ್ತಿಗೆ

ಕಣ್ಣು ತುಂಬಾ ನೋಡಿ ತೀರಿಕೊಂಡರೆ ಅದೇ ನನಗೆ ಸ್ವರ್ಗ, ಹಾಗೆ ನನ್ನ

ಅಂತಿಮ ಕಾಲದಲ್ಲಿ ನೋಡಲಿಕ್ಕೂ ಸಿಕ್ಕದಂತೆ ಮಾಡಿಕೊಳ್ಳುವ ಆ

ಹಾಳು ವಿದ್ಯೆ ಬೇಡಪ್ಪಾ ! ಬೇಡ !! ನನ್ನ ಮಗುವಿಗೆ ಈಗ ಈ ವರೆಗೆ ಕಲಿ

ಸಿದ್ದೇ ಸಾಕು, ನೀವೆಲ್ಲಾ ಹಟಮಾಡಿ ದೂರ ಊರಿಗೆ ಕಳುಹಿಸುವುದಿ

ದ್ದರೆ ನಾನೂ ಅವನೊಟ್ಟಿಗೆ ಹೊರಡುತ್ತೇನೆ' ಎಂದು ಅಳುತ್ತಾ ಕುಳಿತಳು.

60------------------------------------------------

ಇವರು ಒಬ್ಬೊಬ್ಬರಾಗಿ ಆನಂದನ ವಿದ್ಯೆಯನ್ನು ಮುಂದರಿಸಬಾರ

ದೆಂದು ಹೇಳುತ್ತಿರುವಾಗ ಆನಂದನ ತಂದೆಯು ಒಂದೆಡೆ ಕುಳಿತುಕೊಂಡು

ಒಬ್ಬ ವಿದ್ಯಾರ್ಥಿಯಿಂದ ವಿಚಾರಿಸಿಕೊಳ್ಳುತ್ತಾ ಆನಂದನ ಮುಂದಿನ

ವಿದ್ಯೆಗೆ ಬೇಕಾದ ಖರ್ಚಿನ ಲೆಕ್ಕ ಹಾಕುತ್ತಿದ್ದನು. ಕಾಗದಪೆನ್ಸಿಲು

ಹಿಡಿದು ಶಾಲಾಫೀಸು, ಊಟದ ಖರ್ಚು, ಪುಸ್ತಕದ ವೆಚ್ಚ ಮೊದಲಾದುವು

ಗಳಿಗೆ ಬೇಕಾದ ಐವಜನ್ನು ಲೆಕ್ಕಮಾಡಿ ನಾಲ್ಕಾರು ವರುಷಗಳ

ಖರ್ಚುಗಳನ್ನು ಒಟ್ಟು ಕೂಡಿಸಿ, ಅದಕ್ಕೆ ಬಡ್ಡಿ ಕಟ್ಟಿ, ಅವುಗಳ ಒಟ್ಟು

ಮೊತ್ತವನ್ನು ಎಣಿಸಿ ತಲೆದೂಗಿದನು. "ಅಬ್ಬಬ್ಬಾ! ಇಷ್ಟು ಬೇಕೇ ?

ವಿದ್ಯೆಯ ಮೇಲೆ ಇಷ್ಟು ಹಣ ಹಾಕಿಬಿಡುವುದಕ್ಕಿಂತ ಸಮೀಪದಲ್ಲಿರುವ

ಒಂದು ಆಸ್ತಿಯ ಮೇಲೆ ಕಣಾ ಹಾಕಿ ಸಾಲಿಯಾನು ನಾನ್ನೂರು,

ಐನೂರು ರೂಪಾಯಿ ಮುನಾಫೆಯನ್ನು ಚೀಲಕ್ಕೆ ಸೇರಿಸಿ ಬಿಡಬಹು

ದಲ್ಲವೇ? ವಿದ್ಯೆಯಿಂದ ಮುಂದೆ ಮಹತ್ತಾಗುತ್ತದೆಂದು ಇದ್ದ ಆಸ್ತಿ

ಯನ್ನೆಲ್ಲಾ ಮಾರಿ, ಕಳಕೊಂಡು ಕೊನೆಗೆ ಊಟಕ್ಕೂ ಗತಿಯಿಲ್ಲದೆ, ಅಲೆ

ಯುತ್ತಿರುವವರನ್ನು ನಾನು ನೋಡಿದ್ದುಂಟು. ಬೇಡಪ್ಪಾ! ನಮ್ಮಂಥವರಿಗೆ

ಈ ವಿದ್ಯೆ'' ಎಂದು ತಣ್ಣಗೆಮಾಡಿ ಕೂತನು!


ಆನಂದನ ತಂದೆಯು ಐಶ್ವರ್ಯವಂತನು, ಬಹಳ ಚಾಕಸಿಯ

ವನು, ಒಂದು ಕಾಸೆಂದರೆ ಜೀವಬಿಡುವನು. ಹಣದ ಮೇಲಿನ ಆಸೆ

ಯಿಂದ ಒಳ್ಳೆಯ ಬಟ್ಟೆಯನ್ನು ಸಹ ಕೊಂಡುಕೊಳ್ಳವು. ವಿದ್ಯೆಯ ಮಹತ್ತೇ

ತಿಳಿಯದು. ಅದರ ಗಂಧಗಾಳಿಯೇ ಅವನಿಗೆ ಇಲ್ಲ; ಆದರೆ ಲಾಭ ಸಿಕ್ಕು

ವಂತಿದ್ದರೆ ಏನುಬೇಕಾದರೂ ಮಾಡುವನು. ಬೈದರೆ ಕೇಳುವನು,

ಹೊಡೆದರೂ ತಿನ್ನುವನು, ಊಟಬಿಡವನು, ನಿದ್ರೆ ಬಿಡವನು; ಆದರೂ

ಒಂದು ಕಾಸನ್ನೂ ವೆಚ್ಚಮಾಡನು. ಅವನು ಮಾಡುವ ಕೆಲಸಗಳಿಗೆಲ್ಲಾ

ಖರ್ಚು ಹೊರಗಿನಿಂದ ಹೊರಗೆ ಆಗಬೇಕು, ಲಾಭ ಏನಾದರೂ ಇದ್ದರೆ

ತನಗಾಗಬೇಕು. ಯಾರೇನಂದರೂ ಸಿಟ್ಟು ಮಾಡನು, ಹೀಗೆ ಶುದ್ಧ

ಲೋಭಿಯಾಗಿದ್ದನು. ಆದರೆ ಮಗ ಆನಂದನಿಗಾಗಿ ಸ್ವಲ್ಪ ವೆಚ್ಚ ಮಾಡಿ

61-------------------------------------------------


ರುವನು. ಅವನ ನೆರೆಕರೆಯವರೆಲ್ಲಾ ಬಲುವತ್ತಾಯ ಮಾಡಿ ಹೇಳಿದ್ದ

ರಿಂದ ಅವನಿಗೆ ಮೆಟ್ರಿಕ್ ವರೆಗೆ ಕಲಿಸಿದ್ದನು. ಅವನು ಹುಟ್ಟಿದ ಮೇಲೆ

ಬಡ್ಡಿ ಯಿಲ್ಲದೆ ಹಣ ಖರ್ಚು ಮಾಡಿದ್ದೆಂದರೆ ಇದೇ-ಆನಂದನ ವಿದ್ಯೆಗ

ಲ್ಲದೆ ಬೇರಾವುದಕ್ಕೂ ಇಲ್ಲವೆಂದು ಹೇಳಿದರೆ ತಪ್ಪಾಗದು. ಇವನ ಜೀನ

ತನವನ್ನು ಕಂಡು ಎಲ್ಲರೂ ಹೀಯಾಳಿಸುತ್ತಿದ್ದರು. ಹಾಗೆ ಹೀಯಾಳಿಸಿ

ದಂತೆಲ್ಲಾ ಅದಕ್ಕೆ ಪ್ರತ್ಯುತ್ತರವೋ ಎಂಬಂತೆ ಹಿ-ಹಿ-ಹಿ-ಎಂದು ನಗುತ್ತಿದ್ದನು

ವಿನಹ ಖರ್ಚಿನ ಮುಖವನ್ನೇ ನೋಡನು.

ಶ್ರೀನಿವಾಸ ಹೆಗ್ಗಡೆಯು ಮಾತ್ರ ಏನೇ ಆಗಲಿ ಆನಂದನ ವಿದ್ಯೆ

ಮುಂದರಿಸಲೇಬೇಕೆಂದು ದೃಢಸಂಕಲ್ಪ ಮಾಡಿಕೊಂಡಿದ್ದನು. ಆನಂದನ

ತಂದೆಯನ್ನು ಕುರಿತು ಹೀಗೆ ಹೇಳಿದನು. “ಭಾವಯ್ಯ ! ಆನಂದನ ವಿದ್ಯೆ

ಯನ್ನು ಇಷ್ಟಕ್ಕೇನೇ ನಿಲ್ಲಿಸಲಿಕ್ಕಾಗುವುದಿಲ್ಲ. ನೀವಾದರೋ ಖರ್ಚಿಗೆ

ಬಲು ಭೀತಿಪಡುವವರೆಂಬುದನ್ನು ಬಲ್ಲೆನು. ವಿದ್ಯೆಗೆ ವೆಚ್ಚ ಮಾಡುವ

ಹಣವು ಅದೊಂದು ಅನಾವಶ್ಯಕ ವೆಚ್ಚ ವೆಂದು ಅದರ ಖಾತೆಗೆ ಸೇರಿಸಿ

ಬಿಟ್ಟಿದ್ದೀರಿ. ಮಕ್ಕಳಿಗೆ ಅನ್ನ ಬಟ್ಟೆ ಕೊಟ್ಟು ಸಾಕುವುದೆಂಬುದು ಹೇಗೆ

ಹಿರಿಯರ- ಹೆತ್ತವರ ಪಾಲಿಗೆ ಸೇರಿದೆಯೋ ಹಾಗೆ ಈ ವಿದ್ಯೆಯೂ ಹೆತ್ತವರ

ಪಾಲಿಗೇನೇ ಸೇರಿದೆ. ಆದುದರಿಂದ ವಿದ್ಯೆಗೆ ವೆಚ್ಚ ಮಾಡುವ ಹಣವು

ಸದ್ವಿನಿಯೋಗದ ರಿಖಾನೆಗೇನೇ ಸೇರುವುದು; ಮತ್ತು ಅದು ಹೆತ್ತವರು

ಮಾಡಬೇಕಾದ ಕರ್ತವ್ಯಗಳಲ್ಲಿ ಒಂದಾಗಿದೆ. ಆನಂದನ ವಿದ್ಯೆಯನ್ನು

ಮುಂದರಿಸಬೇಕೆಂದು ನಮ್ಮ ಹಿತಚಿಂತಕರೆಲ್ಲಾ ಹೇಳುತ್ತಿರುವಾಗ ನಾವು

ಮಾತ್ರ ವೆಚ್ಚಕ್ಕೆ ಭೀತರಾಗಿ ಕಲಿಯುವಿಕೆಯನ್ನು ಇಷ್ಟರಲ್ಲೇ ಸಮಾಪ್ತಿ

ಮಾಡಿದರೆ, ಜನರ ಅವಹೇಳನಕ್ಕೆ ಗುರಿಯಾಗುವೆವು. ಆದುದರಿಂದ

ಆನಂದನು ಮುಂದೆ ಎಷ್ಟೇ ಕಲಿಯಲಿ, ಆ ಬಗ್ಗೆ ತಗಲುವ ವೆಚ್ಚದಲ್ಲಿ

ಅರೆವಾಸಿಯನ್ನು ನಾನು ವಹಿಸಿಕೊಳ್ಳುತ್ತೇನೆ. ಮಿಕ್ಕ ಅರೆವಾಸಿಯನ್ನು

ನೀವು ನೋಡಿಕೊಂಡರಾಯಿತು. ಅಂತೂ ಕಲಿಯುವಿಕೆಯನ್ನು ಮುಂದ

ರಿಸದೆ ಬಿಡಲಿಕ್ಕಾಗುವುದಿಲ್ಲ' ಎಂದು ಖಂಡಿತ ಹೇಳಿಬಿಟ್ಟನು.

62-------------------------------------------------


ಆನಂದನ ವಿದ್ಯೆಯ ಬಗ್ಗೆ ತಗಲುವ ಖರ್ಚಿನಲ್ಲಿ ಅರೆವಾಸಿಯನ್ನು

ತಾನು ಕೊಡುತ್ತೇನೆಂದು ಶ್ರೀನಿವಾಸ ಹೆಗ್ಗಡೆಯ ಬಾಯಿಯಿಂದ ಹೊರ

ಬಿದ್ದ ಕೂಡಲೇ ಆನಂದನ ತಂದೆಗೆ ವ್ಯಸನವೂ ಸಂತೋಷವೂ ಒಂದೇ

ಕಾಲದಲ್ಲಿ ಉಂಟಾಯಿತು. ತನ್ನ ಮಗನ ವಿದ್ಯೆಯ ಖರ್ಚಿನಲ್ಲಿ ಅರೆ

ವಾಸಿ ತನಗೇನೇ ರಶೀದಿಯಾಗುವುದರಿಂದಲೂ, ಇದುವರೆಗೆ ಯಾವ

ವಿಷಯದಲ್ಲ, ಒಂದಿಷ್ಟಾದರೂ ಮೀರಿನಡಿಯದೆ ಇದ್ದ ಭಾವನ ಮಾತ

ನ್ನು ಈ ಸಂಗತಿಯಲ್ಲಿ ಮೀರಲು ಉಪಾಯ ಇಲ್ಲದುದರಿಂದಲೂ, ಸ್ವಲ್ಪ

ವ್ಯಸನಕ್ಕೀಡಾದನು. ಆದರೂ ತನ್ನ ಮಗನ ವಿದ್ಯೆಯ ಖರ್ಚಿನಲ್ಲಿ ಅರೆ

ವಾಸಿಯು ಹೊರಗಿಂದ ಹೊರಗೆ ಹೋಗುವುದರಿಂದ ಆ ಅರೆವಾಸಿಯು

ನಿರಾಯಾಸವಾಗಿ ತನಗೆ ಲಭ್ಯವಾದ ಲಾಭವೆಂದು ಹಿಗ್ಗಿದನು. ಕೊನೆಗೆ

ಉಪಾಯ ತೋರದೆ ನಿಮಗೆ ಮನಸ್ಸಿದ್ದರೆ ಹಾಗೆ ಮಾಡಿರಿ,"

ಎಂದು ಬಲುಪ್ರಯಾಸದಿಂದ ತನ್ನ ಸಮ್ಮತಿಯನ್ನು ಕೊಟ್ಟನು.


ಕೂಡಲೇ ಆನಂದನ ಹೆಣ್ಮಾಸ್ಟರರಿಗೆ ಒಂದು ಕಾಗದವನ್ನು ಬರೆದು

ವಿದ್ಯೆಯನ್ನು ಮುಂದರಿಸುವುದಾಗಿ ಖಂಡಿತ ಮಾಡಿದ್ದೇವೆಂತಲೂ, ನಮ್ಮ

ಹುಡುಗನಿಗೆ ಎಲ್ಲಾ ವಿಷಯಗಳಲ್ಲೂ ಸಹಾಯ ಸಿಕ್ಕುವಂತೆ ನಿಮ್ಮ ಸ್ನೇಹಿ

ತರಿಗೆ ದಯವಿಟ್ಟು ಬರಿಯಬೇಕೆಂತಲೂ ಕಾಗದ ಬರೆದರು.


ಮರುದಿನ ಆನಂದನು ಶುಭಮುಹೂರ್ತದಲ್ಲಿ ಮನೆಯಿಂದ ಹೊರ

ಟನು. ಹಾಗೆ ಹೊರಡುವಾಗಂತೂ ಆನಂದನ ಅಜ್ಜಿ, ತಾಯಿ ಮುಂತಾದವ

ರಿಗೆ ತಡಿಯಲಾರದಷ್ಟು ದುಃಖಬಂತು. ಆದರೂ ಹೆಗ್ಗಡೆಯರ ಇಷ್ಟ

ದಂತೆ ಮಾಡುವ ಕೆಲಸದಲ್ಲಿ ಉಸುರೆತ್ತಲು ಯಾರಿಗೆ ಧೈರ್ಯ ! ಆದುದ

ರಿಂದ ಬಂದ ದುಃಖವನ್ನೆಲ್ಲಾ ನುಂಗಿಕೊಂಡರು.


ಆನಂದನು ಮಂಗಲಪುರದಲ್ಲಿರುವ ಕ್ರೈಸ್ತ ಸಂಘದವರಿಂದ ನಡೆ

ಯಿಸಲ್ಪಡುವ (ಕಾಲೇಜಿನಲ್ಲಿ' ಎಫ್. ಎ. ಕ್ಲಾಸಿಗೆ ಸೇರಿ ಅಲ್ಲಿ ಕಲಿಯು

ದ್ಧನು. ಪಟ್ಟಣದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಈಗಿನಂತೆ ಸ್ವಗೃಹ

63-------------------------------------------------


ಸಮಾನವಾದ ಭವ್ಯಭವನಗಳಾಗಲೀ, ಓದುವುದಕ್ಕೂ ಮಲಗುವದಕ್ಕೂ

ತಕ್ಕ ಸ್ಥಳಗಳಾಗಲಿ ಆ ಕಾಲದಲ್ಲಿ ಇರಲಿಲ್ಲ. ಹಳ್ಳಿಯವರು ಪಟ್ಟಣದಲ್ಲಿ

ಉಳಕೊಂಡು ಕಲಿಯುವುದೆಂದರೆ, ಮನೆಯ ಹೆಂಗುಸರು ಎಣಿಸುವಷ್ಟು

ಕಷ್ಟವೆಂಬುದೇನೋ ನಿಜವಾಗಿದ್ದಿತು. ಆ ಕಾಲದಲ್ಲಿ ಪಟ್ಟಣವಾಸಕ್ಕೆ

ಬೇಕಾದ ಯಾವ ವಿಧದ ಸೌಕರ್ಯಗಳಾಗಲಿ, ಅಂಥಾ ಸೌಕರ್ಯಕ್ಕೆ

ಬೇಕಾದ ಏರ್ಪಾಡು ಮಾಡುವಂಥ ಸುಧಾರಕರಾಗಲಿ ನಮ್ಮಲ್ಲಿರಲಿಲ್ಲ.

ಆದುದರಿಂದ ಆ ಕಾಲದಲ್ಲಿ ವಿದ್ಯೆ ಎಂಬುದು ನಮ್ಮ ಭಾಗಕ್ಕೆ ಒಲಿಯದ

ದೇವತೆ ಎಂದು ಹೇಳುವ ಅಜ್ಜಿಯ ಮಾತು ನಿಜವೆಂದು ಒಪ್ಪುವಂತಿತ್ತು.

ಆದರೂ ವಿದ್ಯೆ ಕಲಿಯಬೇಕೆಂದು ಬಹುತರ ಆಶಿಸುತ್ತಿದ್ದ ಆನಂದನಿಗೆ

ತಾನು ಉಳುಕೊಂಡ ಅಜ್ಜಮ್ಮನ ಹೋಟೇಲೇ ಭವನಕ್ಕಿಂತಲೂ ಮೆಚ್ಚಿ

ರುಚಿಸಿತೆಂದರೆ ಅತಿಶಯೋಕ್ತಿಯಾಗದು. ಅಲ್ಲಿ ಚೆನ್ನಾಗಿ ಕಲಿತು ಸುಖ

ವಾಗಿ ಬೆಳೆದನು.

---

ಹತ್ತನೆಯ ಅಧ್ಯಾಯ.

ಇತ್ತ ಮುತ್ತೂರಿನಲ್ಲಿ ಮುದ್ದಣ್ಣನ ಕಾರುಬಾರವೇ ಕಾರುಬಾರ!

ಅವನ ದರ್ಬಾರವೇ ದರ್ಬಾರ! ಧನಸಂಪತ್ತಿಗಂತೂ ಅಭಾವವೇ ಇಲ್ಲ!

ಹಾಗೆ ಏಕೆ ಮಾಡುತ್ತೀ? ಅಷ್ಟು ಖರ್ಚು ಏಕೆ ಮಾಡುವಿ? ಎಂದು

ಕೇಳುವವರೂ ಮೊದಲೇ ಇಲ್ಲ. ಅದರಲ್ಲೂ ಮೊನ್ನೆ ತಾನೇ ಕರಗತವಾದ

ಯಜಮಾನಿಕೆ, ಆ ನವಯವನ ಭೋಜನ ಬಂಧುಗಳ ಮಂತ್ರಿತ್ವ.

ಇವುಗಳಿಂದ ತಾನು ಮಾಡಬೇಕಾದ ಕರ್ತವ್ಯ ಏನೆಂಬುದನ್ನು ಅರಿಯದ

ವನಾಗಿದ್ದನು. ಹಾಗೂ ಕೆಲವು ದಿನಗಳ ಹಿಂದೆ ನಡೆದುಹೋದ ಆ

ಮದುವೆಯ ನಂತರ ಅವನ ಬುದ್ದಿಯು ಪೂರ್ಣ ಬದಲಾಗಿ ಹೋಗಿತ್ತು.

ಅವನ ಜೋಕೇ ಬೇರೆ. ಮದುವೆಯ ಕಾಲದಲ್ಲಿ ಅವನೊಡನೆ ಸೇರಿದ

ಆ ಹೊಸಹೊಸ ಮಿತ್ರರೆಲ್ಲಾ ದಿವಸ ದಿವಸಕ್ಕೆ ಒಂದೊಂದು ಆಲೋಚನೆ

೬೪------------------------------------------------

ಗಳನ್ನು ಕೊಡುತ್ತಿದ್ದರು. ಮೊದಲು ಮನೆಯ ಬಳಿಯಲ್ಲೇ ಇದ್ದು ಮನೆ

ಗೆಲಸದ ನಿಗವಾನೆ ನೋಡುತಲಿದ್ದ ಮುದ್ದಣ್ಣನಿಗೆ ಈಗ ಕ್ಷಣಗಾಲ

ಮನೆಯಲ್ಲಿ ಕೂತುಕೊಳ್ಳಲು ಬಿಡುವಾಗುವುದಿಲ್ಲ. ಮಾಡುವ ಕೆಲಸ

ಏನಿಲ್ಲದಿದ್ದರೂ, ಯಾವಾಗಲೂ ಬಲು ಜಂಬರದವನಂತೆ ಸಿಕ್ಕ ಸಿಕ್ಕ

ಮನೆಗಳಿಗೆ ಅಲೆಯುವುದು, ತನಗೆ ಸಂಬಂಧ ಇಲ್ಲದ ಪಂಚಾಯತಿಕೆ

ಯಲ್ಲೆಲ್ಲಾ ತಾನೂ ನುಸುಳುವುದು, ಅಲ್ಲದಸಲ್ಲದ ಜಗಳದಲ್ಲಿ ತಾನೂ

ಸೇರುವುದು, ಈ ಬಗೆಯ ನಡತೆಯಿಂದ ಕೆಲವು ದಿನ ಊರಿನಲ್ಲಿಯೇ

ಕಳೆದನು. ಸ್ವಲ್ಪ ದಿನಗಳ ನಂತರ ಮುದ್ದಣ್ಣನಿಗೆ ತಾನು ವಾಸಿಸುತ್ತಿದ ಹಳ್ಳಿಯಲ್ಲಿ ಬೇಸರಿಕೆ ಕಂಡಿತು. ಸಕಲ ಸೌಕರ್ಯಗಳಿಂದ ಒಪ್ಪುವ ಪಟ್ಟಣವಾಸವೇ ತಕ್ಕು ದೆಂದು ಅದನ್ನೇ ಬಲು ಮೆಚ್ಚಿದನು. ಹಳ್ಳಿ

ಯಲ್ಲಿ ಮನೆಮಾಡಿಕೊಂಡು ವಾಸಿಸಿದ ತನ್ನ ಹಿರಿಯರನ್ನು ದೂಷಿಸತೊಡ ಗಿದನು. ಪಟ್ಟಣವು ಮನೆಯಿಂದ ಎರಡೇ ಮೈಲಿಯ ಒಳಗಿದ್ದರೂ

ಆದೂ ಅವನಿಗೆ ದೂರ ಕಂಡಿತು. ಇಡೀ ಹಗಲು ಪಟ್ಟಣದಲ್ಲೇ ಇರು

ವುದರಲ್ಲಿ ಆಸೆ. ಬೆಳಿಗ್ಗೆ ಹನ್ನೊಂದು ಘಂಟೆಗೆ ಊಟ ಮುಗಿಸಿ ಹೋದ

ವನು ರಾತ್ರಿ ಹನ್ನೊಂದು ಘಂಟೆಗೆ ಮನೆಯನ್ನು ಸೇರುತ್ತಿದ್ದನು. ಕೆಲವು

ದಿನ ರಾತ್ರಿ ಮನೆಗೆನೇ ಬರಲೊಲ್ಲನು. ಹೀಗೇಕೆ ಮಾಡುತ್ತೀ? ಎಂದು

ಅವನ ತಾಯಿ ಕೇಳಿದರೆ ನಿಮಗೆ ಹೆಂಗಸರಿಗೇನು ಗೊತ್ತುಂಟು?

ನೀವೇನು ಬಲ್ಲಿರಿ? ನಮ್ಮ ಕೆಲಸವೇನು? ನಮ್ಮ ತಾಪತ್ರಯವೇನು?

ಎಂದು ಏನೇನೋ ಹೇಳಿ ತಾಯಿಯ ಕಣ್ಣು ಕಟ್ಟುತ್ತಿದ್ದನು.

ಮುದ್ದಣ್ಣನು ಪಟ್ಟಣಕ್ಕೆ ಹೋಗಿಬರಲು ಪ್ರಾರಂಭಿಸಿದ ಮೇ

ಲಂತೂ ಅವನ ಸ್ನೇಹಿತರ ತಂಡವು ಇನ್ನೂ ಬಲವಾಯಿತು. ಇವನು ಕಾಫಿಹೊಟೇಲಿಗೆ ಹೊಕ್ಕಂತೆಲ್ಲಾ ಇವನೊಡನೆ ಹತ್ತಿಪ್ಪತ್ತು ಮಂದಿ

ನುಗ್ಗು ವರು. ಇವನ ಲೆಕ್ಕವಿಲ್ಲದ ಕಾಫಿ ಹೋಟೇಲೇ ಇಲ್ಲ. ಪೇಟೆಯ ಬೀದಿಯಲ್ಲಿ ತಿರುಗಾಡುವಾಗಲೆಲ್ಲಾ ಇವನ ಒಟ್ಟಿಗೆ ದೊಡ್ಡ ದೊಂದು

ತಂಡವೇ ಇರುತ್ತಿತ್ತು. ಪೇಟೆಯ ಯಾವ ಬೀದಿಯಲ್ಲಿ ಹೋದರೂ

೬೫ –------------------------------------------------------------


ಇವನ ಪರಿಚಿತಿ ಇಲ್ಲದವರೇ ಇರಲಿಲ್ಲ. ಪೇಟೆಯ ದೋಸ್ತಿ ಹೆಚ್ಚಿದಂ

ತೆಲ್ಲಾ ಇವನ ಕೌರ, ಉಡಿಗೆ ತೊಡಿಗೆ ಇವುಗಳಲ್ಲಿ ಬದಲಾವಣೆಯೂ ನಡಿಯಹತ್ತಿತು. ಬೆಳಗಿನ ಉಡುಪೇ ಬೇರೆ. ಮಧ್ಯಾಹ್ನದ ಡ್ರೆಸ್ಸೇ

ಬೇರೆ. ಸಂಜೆಯ ದುಸ್ತೇ ಬೇರೆ. ಕೆಲವು ವೇಳೆ ಹ್ಯಾಟ, ಬೂಟ್,

ಕೋಟ್ ಹಾಕಿಕೊಂಡ. ಸ್ವದೇಶೀ ದೊರೆಯಂತೆ ಒಪ್ಪುತ್ತಿದ್ದನು. ಒಂ

ದೊಂದು ವೇಳೆ ನೀವು ನೋಡಿದ ನಾಟಕದ ರಾಜಪಾರ್ಟನಂಥ ಡ್ರೆಸ್ಸಿ

ನಿಂದ ಅಲಂಕರಿಸಿಕೊಳ್ಳುವನು. ಹೀಗೆ ಜೋಕೆಂಬುದೆಲ್ಲಾ ಅವನಿಗೆನೇ ಕ್ರಯವಾದಂತೆ ಇದ್ದಿತ್ತು.


ಮುದ್ದಣ್ಣನ ಮನೆಯಲ್ಲಿ ಒಂದು ಕುದುರೆಗಾಡಿಯು ಮೊದಲೇ

ಇದ್ದರೂ ಪೇಟೆಯ ಸಂಚಾರಕ್ಕೆ ತೊಡಗಿದ ನಂತರ ಒಂದು ಡೋಕ್ಕಾರ್ಟೂ ತಕ್ಕೊಂಡನು. ತಾನು ಪೇಟೆಗೆ ಹೋಗುವಾಗಲೆಲ್ಲಾ ಒಮ್ಮೆ ಸಾರಟಿನ

ಮೇಲೂ, ಇನ್ನೊಮ್ಮೆ ಡೋಕ್ರಾರ್ಟಿನ ಮೇಲೂ ಹೋಗಹತ್ತಿದನು. ಇವೆರಡಿದ್ದರೂ ತೃಪ್ತಿ ಪಡದೆ ಉತ್ತಮ ತರದ ಒಂದು ಬೈಸಿಕಲ್ ಸಹ ಕೊಂಡುಕೊಂಡನು. ಈಗಿನಂಥ ಮೋಟಾರು ಸೈಕಲ್, ಮೋಟಾರ್ ಕಾರ್ ಮುಂತಾದುವೇನೂ ಆ ಕಾಲದಲ್ಲಿ ನಮ್ಮ ಕಡೆ ಪ್ರಚಾರಕ್ಕೆ ಬಂದಿ

ರಲಿಲ್ಲ. ಅವೂ ಇರುತ್ತಿದ್ದರೆ ತಕ್ಕೊಳ್ಳದೆ ಇದ್ದರೆ ಅವನು ಮುದ್ದಣ್ಣ ನಲ್ಲವೆಂದೇ ಭಾವಿಸಬೇಕಿತ್ತು.


ದಿವಸಕ್ಕೆ ಎರಡು ಮೂರು ಸರತಿ ಮನೆಗೂ, ಪೇಟೆಗೂ ತಿರುಗಿ, ತಿರುಗಿ,

ಬೇಸರಿಕೆ ಕಂಡಿತು. ಪಟ್ಟಣದಲ್ಲಿ ಒಂದು ಯೋಗ್ಯ ಸ್ಥಳ

ಪಡಕೊಂಡು ಒಂದು ಸ್ವಂತ ಬಂಗಲೆ ಕಟ್ಟುವುದಾಗಿ ಆಲೋಚಿಸಿ

ದನು. ಅದಕ್ಕೆ ಅವನ ಮಿತ್ರ ಮಂಡಳಿಯವರ ಅನುಮೋದನೆಯು

ಸಿಕ್ಕದೆ ಇರಲಿಲ್ಲ. ಬರೇ ಸ್ಥಳವನ್ನು ಮಾತ್ರ ರೂಪಾಯಿ ಐದುಸಾವಿರಕ್ಕೆ ಪಡಕೊಂಡನು. ಅದರಲ್ಲಿ ಮುದ್ದಣ್ಣನು ಹೇಳುವ ಮಾದರಿಯ ಬಂಗಲೆ, ಪಾಕಶಾಲೆ, ಬಚ್ಚಲು, ಪಾಯಖಾನೆ, ಬಾವಿ ಮತ್ತು (ಕಂಪೌಂಡ್) ಹೊರಪ್ರಾಕಾರದ ಗೋಡೆ, ಇವೆಲ್ಲಾ ಕಾಮಗಾರಿಗಳನ್ನು ಹನ್ನೆರಡು

೬೬----------------------------------------------------------

ಸಾವಿರ ರೂಪಾಯಿಗಳಿಗೆ ಕಂಟ್ರಾಕ್ಷಿಗೆ ಕೊಟ್ಟು ಬಿಟ್ಟನು. ಕಟ್ಟೋ

ಣದ ಕೆಲಸದಲ್ಲಿ ನೈಪ್ರಣ್ಯ ಹೊಂದಿದ ಕಂಟ್ರಾಕ್ಟುದಾರನು ತನ್ನ ಕೆಲಸ

ವನ್ನು ಬಲು ರಭಸದಲ್ಲಿ ಮಾಡುತ್ತಿದ್ದನು.


ಮದುವೆಯಾಗಿ ಎರಡೇ ವರುಷಗಳೊಳಗೆ ತನ್ನ ಹೆಂಡತಿಯ ಸಲುವಾಗಿ

ಮೂರು ಸಾವಿರ ರೂಪಾಯಿಯ ಆಭರಣಗಳನ್ನು ಮಾಡಿಸಿ

ಬಿಟ್ಟಿದ್ದನು. ವಜ್ರದ ಬೆಂಡೋಲೆ, ವಜ್ರಕೆಮಾಡಿದ ಬುಲಾಕು,

ಮುತ್ತಿನಹಾರ ಇವೇ ಮೊದಲಾದ ಬೆಲೆಯುಳ್ಳ ನಗಗಳನ್ನು ಮಾಡಿಸಿ

ಕೊಟ್ಟನು. ಅವನು ತನ್ನ ಹೆಂಡತಿಗಾಗಿ ತಕೊಂಡ ಬೇರೆ ಬೇರೆ

ರಂಗಿನ ಪೂನಾದ ಶೀರೆಗಳೂ, ರೇಷ್ಮೆ ಶೀರೆಗಳೂ, ಪಲ್ಕಾಜಕೇಟ್,

ಇವುಗಳನ್ನೇನು ಹೇಳಲಿ! ಹೆಂಗಸರ ಸಲುವಾಗಿ ತಯಾರಿಸಲ್ಪಡುವ

ಊಚಿ ಊಚಿ ಬಟ್ಟೆಗಳೇನಿವೆಯೋ, ಅವೆಲ್ಲಾ ಮುದ್ದಣ್ಣನ ಹೆಂಡತಿಯ ಟ್ರಂಕುಗಳಲ್ಲಿ ಸೇರಿಕೊಂಡಿವೆ. ಹೆಂಡತಿಯು ಯಾವ ಹೊತ್ತಿಗೆ ಏನು

ಬೇಕೆಂದರೂ ಮುದ್ದಣ್ಣನು ಅದರಲ್ಲಿ ಉಪೇಕ್ಷಿಸಿ ತಿರಸ್ಕರಿಸುತ್ತಿದ್ದಿಲ್ಲ. ಇದನ್ನೆಲ್ಲಾ ನೋಡಿ ತಿಳಿದಿದ್ದ ಪಟ್ಟಮ್ಮನಿಗೆ ಅಳಿಯನ ಮೇಲಿನ

ಪ್ರೀತಿಯು ದಿನೇ ದಿನೇ ಬೆಳೆಯುತ್ತಿತ್ತು. ಅಳಿಯ ಮುದ್ದಣ್ಣನು ತಾರಾ ನಾಥಪುರಕ್ಕೆ ಹತ್ತು ಹದಿನೈದುದಿವಸಕೊಮ್ಮೆ ಬಂದು ಹೋಗುತ್ತಿ

ದ್ದನು. ಹಾಗೆ ಬರುವುದು ಒಂದೆರಡು ದಿನ ಸಾವಕಾಶವಾದರೆ

ಪುಟ್ಟಮ್ಮನ ಜನ ಬಂದೇ ಬರುತ್ತಿತ್ತು. ಮುದ್ದಣ್ಣನ ಹೆಂಡತಿ

ಮನೆಗೆ ಬರುವಾಗಲೆಲ್ಲಾ ಒಂದಲ್ಲ ಒಂದು ಬಗೆಯ ಆಭರಣವನ್ನೋ ನೂತನವಾದ ಶೀರೆಯನ್ನೋ ನವೀನವಾದ ಕುಪ್ಪಸವನ್ನೊ ತರು

ತಿದ್ದನು. ಹೀಗೆ ಬಗೆಬಗೆಯ ಒಡವೆಗಳನ್ನು ತರುವುದು ಕಂಡು

ಅಳಿಯನನ್ನು ಬಲು ಮೆಚ್ಚಿದಳು. ಹೆಂಡತಿಯ ಮನೆಗೆ ಒಂದೊಂದು

ಸಾರಿ ಬರುವಾಗ ಒಂದೊಂದು ತರದ ಉಡುಪುಗಳಿಂದಲೂ, ಒಂದೊಂದು

ವಿಧದ ವಾಹನದ ಮೇಲೂ ಬರುತ್ತಿದ್ದನು. ಒಂದು ಸಲ ಬೈಸಿಕಲ್ಲಿನ

ಮೇಲೂ, ಇನ್ನೊಂದು ಬಾರಿ ಕುದುರೆ ಗಾಡಿಯ ಮೇಲೂ, ಮತ್ತೊಂದು

೬೭----------------------------------------------------------


ಸರ್ತಿ ಸಾರಟನ ಮೇಲೂ ಹೀಗೆ ಬದಲಾಯಿಸಿ ಬರುವನು. ಹಾಗೆ ಬರು

ವಾಗಲೆಲ್ಲಾ ತನ್ನೊಡನೆ ನಾಲ್ಕಾರು ಮಂದಿ ಸ್ನೇಹಿತರನ್ನೂ ಕರೆದು

ಕೊಂಡು ಬರುತ್ತಿದ್ದನು. ಬಂದಷ್ಟು ಸಲವೂ ಆ ಅತ್ತೆ-ಪ್ರಟ್ಟಮ್ಮನು ಅಳಿಯನಿಗಾಗಿ ಮಾಡುವ ಆ ಭಕ್ಷ ಭೋಜ್ಯಗಳನ್ನೂ , ಬಗೆಬಗೆಯ

ಔತಣಗಳನ್ನೂ ವರ್ಣಿಸಲಶಕ್ಯವು. ಒಂದು ಸಲ ಮಾಡಿದ ಸಮ್ಮಾನವನ್ನು ಇನ್ನೊಂದು ಸರತಿ ಬಂದಾಗ ಎಂದೂ ಮಾಡಳು. ಅವಳು ತಯಾರಿ

ಸುವ ನೂತನವಾದ ತಿಂಡಿಗಳ ಹೆಸರೇ ನಮಗೆ ಬಾರದು. ಸಂಕ್ಷೇಪಿಸಿ ಹೇಳುವುದಾದರೆ ತುಪ್ಪ, ಗೋಧಿ, ಸಕ್ಕರೆ ಸೇರಿಸಿ ಮಾಡಿದ ರುಚಿ

ರುಚಿಯಾದ ತಿಂಡಿ ಸಾಮಾನುಗಳೂ, ಬಗೆಬಗೆಯ ಮಾಂಸವೂ ಮುದ್ದ

ಣ್ಣನಿಗೆ ಸಿಕ್ಕಿ ದಷ್ಟು ಬೇರೆ ಎಲ್ಲೆಲ್ಲಿಯೂ ಯಾವ ಅಳಿಯನಿಗೂ, ಸಿಕ್ಕಿರಲಿ ಕ್ಕಿಲ್ಲವೆಂದರೆ ತಪ್ಪಾಗದು. ಮುದ್ದಣ್ಣನಾದರೂ ತಾನು ಬಂದಷ್ಟು

ಸಲವೂ, ತಾರಾನಾಥ ಪುರದವರ ಮನೆಯಲ್ಲಿ ಕೆಲಸ ಮಾಡುವ ಸೇವಕ

ರಿಗೂ, ಗೇಯುವ ಆಳುಗಳಿಗೂ, ಊಳಿಗದವರಿಗೂ, ಒಳ್ಳೇ ಇನಾಮು

ಕೊಟ್ಟು ಹೋಗುತ್ತಿದ್ದನು. ಆದುದರಿಂದ ಮುದ್ದಣ್ಣನು ಬಂದನೆಂದು ಕೇಳಿದೊಡನೆ ಆ ಜನರಿಗೆಲ್ಲಾ ಹಿಡಿಯಲಾರದಷ್ಟು ಆನಂದ; ಮತ್ತು ಅವನ ಬರುವಿಕೆಯನ್ನು ಯಾವಾಗಲೂ ಎದುರುನೋಡುತ್ತಿದ್ದರು.


ಮುದ್ದಣ್ಣನ ದರ್ಬಾರಕ್ಕೆ ಪಾರವೇ ಇರಲಿಲ್ಲ. ಅವನ ವೆಚ್ಚದ

ದಾರಿಗಳೆಲ್ಲಾ ದಿನದಿನಕ್ಕೆ ಬೆಳೆಯ ತೊಡಗಿದವು. ಮದುವೆಯ ಕಾಲದಲ್ಲಿ ಕರೆತಂದ ಆ ವೇಶೈಯರ ಗುರುತು ಮರೆಯಲಿಲ್ಲ. ಅಂದಿನಿಂದ ಆ

ಗಣಿಕೆಯರ ಮೋಹಕ್ಕೆ ಒಳಗಾಗಿ ಹೋಗಿದ್ದನು. ಆಗಾಗ ಪೇಟೆಗೆ

ಹೋಗುವುದೂ, ಅಲ್ಲಿಯೇ ಉಳಕೊಳ್ಳುವುದೂ, ಪಟ್ಟಣವಾಸದ ರುಚಿ ಹತ್ತಿದುದೂ, ಈ ನರ್ತಕಿಯರ ದೋಸ್ತಿಯ ಮೇಲಿನಿಂದ ಎಂದು ನಮ

ಗೀಗ ತಿಳಿಯಿತು. ಪೇಟೆಯಲ್ಲಿ ಇವನು ಸಂಪಾದಿಸಿಕೊಂಡ ಗೆಳೆಯರೆ

ಲ್ಲರೂ ಒಂದೊಂದು ಬಗೆಯ ದುರ್ನಡತೆಗೆ ಬಲಿಬಿದ್ದವರಾಗಿದ್ದರು. ಆದು ದರಿಂದ ಮುದ್ದಣ್ಣನು ಒಂದೊಂದೇಯಾಗಿ ಜಾರತನ, ಜೂಜುಗಾರಿಕೆ ಅಪೇಯಪಾನ, ಮುಂತಾದುವುಗಳನ್ನು ಅಭ್ಯಾಸಿಸಿದನು.

೬೮-----------------------------------------------------------

ಇವನಿಗೆ ಆಡಳಿತ ಬಂದು ಮೂರು ವರುಷ ಪೂರ್ಣ ದಾಟಿರಲಿಲ್ಲ.

ಆದರೂ ಪಿರ್ತಾರ್ಜಿತವಾದ ನಗದು ಭಂಡವಾಳವನ್ನೆಲ್ಲಾ ಪುಡಿಪುಡಿ ಮಾಡಿ ಬಿಟ್ಟಿದ್ದನು. ಅವರ ಮನೆಯಲ್ಲಿದ್ದ ಆಭರಣಗಳಲ್ಲಿ ಒಂದೆರಡು ಇತರರ ಮನೆಗಳನ್ನು ಸೇರಿಕೊಂಡಿದ್ದು ವು. ಆದರೂ ಆ ದರ್ಬಾರಕ್ಕೆ ತುದಿ

ಮೊದಲೇ ಇದ್ದಿಲ್ಲ.

ಪಾಠಕರೇ! ನಾವೀಗ ಆನಂದನನ್ನು ವಿಚಾರಿಸೋಣ. ಅವನು

ಕಾಲೇಜಿಗೆ ಸೇರಿದ ಸಂಗತಿಯನ್ನು ಮಾತ್ರ ಬಲ್ಲೆವು. ನಾವು ಅವನನ್ನು

ನೋಡದೆ ಮೂರು ವರುಷಗಳು ಸಂದುಹೋದುವು. ಈಗ ಅವನೇನು ಮಾಡುವನೆಂಬುದನ್ನು ನೋಡೋಣ. ಅವನಾದರೋ ಮಂಗಲಪ್ರರದ

ಸೆಂಟ್ ಎಲೋಸಿಯಸ್ ಕಾಲೇಜಿನಲ್ಲಿ ಎರಡು ವರುಷ ಕಲಿತು ಎಫ್. ಎ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನು. ಅವನ ವಿದ್ಯೆಗೆ ಬೇಕಾದ ವೆಚ್ಚದ ಭಾರವನ್ನು ವಹಿಸಿಕೊಂಡ ತಂದೆಗೂ, ಮಾವನಿಗೂ ಆನಂದನ ಮೇಲಿನ

ಪ್ರೀತಿಯು ಮತ್ತಷ್ಟೂ ಹೆಚ್ಚಿತು. ಅದರಿಂದ ಖರ್ಚಿಗೆ ಹೆದರಿ ಗೊಣ

ಗುಟ್ಟದೆ, ಕೂಡಲೇ ಅವನನ್ನು ಮದಾಸಿನ ರಾಜಕೀಯ ಕಲಾ ಶಾಲೆಗೆ

(ಪ್ರೆಸಿಡೆನ್ಸಿ ಕಾಲೇಜಿಗೆ.) ಕಳುಹಿಸಿದರು. ಅಲ್ಲಿ ಬಿ. ಎ. ಗೆ ಓದುತ್ತಿದ್ದು

ಹೋದ ಎಪ್ರೀಲಿನಲ್ಲಿ ಮೊದಲನೇ ವರುಷದ ಕಲಿಯುವಿಕೆಯನ್ನು ಪೂರೈಸಿ

ಈಗ ಬಿ. ಎ. ಕ್ಲಾಸಿನ ಎರಡನೆ ವರುಷದ ಕಲಿಯುವಿಕೆಯನ್ನು ಅಭ್ಯಾಸಿಸು ತಿದ್ದನು. ಆನಂದನ ನಡತೆ ಹಾಗೂ ಅವನ ಕಲಿಯುವಿಕೆಗೆ ಕಾಲೇಜಿನ ಪ್ರಿನ್ಸಿಪಾಲರೇ ಮುಂತಾದವರು ಬಲು ಮೆಚ್ಚಿರುವುದರಿಂದ ಅಲ್ಲಿಯ

ಬೋಧಕರ ಅಂತೂ ಮಿಕ್ಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರನಾಗಿ ಸುಖ

ದಿಂದ ಕಲಿಯುತ್ತಿದ್ದನು.


ಆನಂದನ ವಿದ್ವತ್ವ, ಸುಶೀಲತೆ, ನವತೆ ಮುಂತಾದ ಸುಗುಣ

ಗಳಿಂದ ಆಕಾಲದಲ್ಲಿ ಇವನಂಥಾ ಯುವಕರು ನಮ್ಮ ಸಮಾಜದಲ್ಲೇ

ಇಲ್ಲವೆಂದು ಎಲ್ಲರಿಂದಲೂ ಶ್ಲಾಘಿಸಿಕೊಳ್ಳುವಷ್ಟು ಅದ್ವಿತೀಯ ಶಿಖಾಮಣಿ ಯಾಗಿದ್ದನು. ಇವನಲ್ಲಿ ಕೆಟ್ಟುದೆಂದು ಹೇಳಿಸಿಕೊಳ್ಳುವ ಯಾವನಡತೆಯೂ

೬೯----------------------------------------------------------


ಇರಲಿಲ್ಲ. ಮಾತ್ರ ತನ್ನ ಸಂಗಡಿಗರಲ್ಲಿ ಅಂಥ ಕೆಟ್ಟ ಗುಣಗಳೇನನ್ನಾದರೂ ನೋಡಿದರೆ, ಆ ದುರ್ಗಣವನ್ನು ಬಿಟ್ಟು ಬಿಡುವಂತೆ ಹೇಳಿ ಅದನ್ನು

ಅವರಿಂದ ತೊಲಗಿಸುವುದಕ್ಕೆ ತನ್ನ ಯಾವತ್ತೂ ಪ್ರಯತ್ನ ಮಾಡಿ

ಬಿಡುವನು. ಹಾಗೆ ಅವರನ್ನು ಒಳ್ಳೆ ದಾರಿಗೆ ತರುವುದು ಅಸಾಧ್ಯವೆಂದು ಮನಗಂಡರೆ ಅಂಥವರ ಸಂಗವನ್ನೇ ಬಿಟ್ಟು ಬಿಡುವನು. ವಿದ್ಯಾರ್ಥಿಗಳ

ತಂಡದಲ್ಲಿ ಹುಟ್ಟುವ ಯಾವುದೊಂದು ಚಳವಳಿಗೂ ತಾನು ಸೇರದೆ

ಆ ಚಳವಳವನ್ನು ಸಮಾಧಾನ ಪಡಿಸಲಿಕ್ಕೆ ಏನು ಮಾಡುವದುತ್ತಮ

ವೆಂಬುದನ್ನು ವಿಚಾರಮಾಡುತ್ತಿರುವನು. : ವಿದ್ಯಾರ್ಥಿಗಳ ಸಲುವಾಗಿ

ಮಾಡುವ ಯಾವುದೊಂದು ಹೊಸ ಏರ್ಪಾಡು, ವ್ಯವಸ್ಥೆ ಗಳ ವಿಷಯದಲ್ಲೂ,

ಅವರೊಳಗಿನ ಯಾವುದೊಂದು ವಿವಾದದ ತೀರ್ಮಾನದಲ್ಲ, ಕಾಲೇಜಿನ

ಪ್ರಿನ್ಸ್ ಪಾಲರು ಆನಂದನ ಅಭಿಪ್ರಾಯವನ್ನು ತಿಳಿಯದೆ ಇಲ್ಲ. ಹಾಗೆ ಕೇಳಿದಾಗಲೆಲ್ಲಾ ಅದಕ್ಕೆ ಹಿಗ್ಗದೆ, ತನ್ನ ಮೇಲೆ ಬಿದ್ದ ಅದೊಂದು

ಜವಾಬ್ದಾರಿಯ ಕೆಲಸವೆಂದು ದೀರ್ಘಾಲೋಚನೆಯಿಂದ ಯೋಗ್ಯ ಮತ್ತು ಯುಕ್ತಿಯುಕ್ತವಾದ ಉತ್ತರವನ್ನು ಕೊಡುತ್ತಿದ್ದನು. ಇದರಿಂದ ಕಾ

ಲೇಜಿನಲ್ಲಿ ಎಲ್ಲರೂ ಆನಂದನನ್ನು ಗೌರವಿಸುತ್ತಿದ್ದರು.

------


ಹನ್ನೊಂದನೆಯ ಅಧ್ಯಾಯ.


ತಾರಾನಾಥಪುರದ ಪರಿಚಿತಿಯ ವಾಚಕರಿಗೆ ತಿಳಿದೇ ಇದೆ. ಪ್ರಟ್ಟ

ಮ್ಮನ ತವರುಮನೆಯು ಒಳ್ಳೆ ಸಂಪತ್ತುಳ್ಳದ್ದಾಗಿತ್ತು. ಆ ಮನೆ

ಯಲ್ಲಿ ಪುಟ್ಟಮ್ಮನ ಇಬ್ಬರು ಸಹೋದರಿಯರೂ ಒಬ್ಬ ಸಹೋದರನೂ ಇರುವರು. ಸಹೋದರ ಎಂದರೆ ನಮ್ಮ ಪೂರ್ವಪರಿಚಿತರಾದ ಸಂಜೀವ ಶೆಟ್ಟರಾಗಿದ್ದರು. ತಾರನಾಥಪುರದಲ್ಲಿ ಗಂಡುಸರ ಸಂಖ್ಯೆ ಬಲು

ಕಡಿಮೆ. ಸಂಜೀವ ಶೆಟ್ಟರಲ್ಲದೆ ಮತ್ತಾರೂ ಇರಲಿಲ್ಲ. ಇವರ ಸೋದ ರಳಿಯರೆಲ್ಲರೂ ಮೂಲಶಿಕ್ಷಣವನ್ನಭ್ಯಾಸಿಸುವ ವಿದ್ಯಾರ್ಥಿಗಳಾಗಿದ್ದರು.

೭೦----------------------------------------------------------


ತಾರಾನಾಥಪುರದವರ ಕುಟುಂಬದಲ್ಲಿ ಮಾಡಿಕೊಂಡಂತಹ ಕರಾರು ವಿಧಿ

ಯಂತೆ ಸಂಜೀವ ಶೆಟ್ಟರು ಆಡಳಿತೆದಾರರಾಗಿದ್ದರು. ಕುಟುಂಬಕ್ಕೆ

ಒಪ್ಪಿದ ಆಸ್ತಿ ತುಂಬಾ ಇದ್ದಿತು. ಬಲು ಕಾರುಬಾರಿನ ಮನೆತನ. ತಾವು ದೊಡ್ಡವರೆಂಬ ಅಹಂಕಾರವಂತೂ ಆ ಮನೆಯವರಿಗಿರುವಷ್ಟು ಬೇರೆ

ಯಾರಿಗೂ ಇರಲಿಕ್ಕಿಲ್ಲವೆಂದರೆ ಅತಿಶಯೋಕ್ತಿಯಾಗದು. ಮತ್ತು ಆ

ಮನೆಯ ಸ್ತ್ರೀಪರುಷರೆಲ್ಲರೂ ಬಲು ಗರ್ವದವರೆಂದು ಅವರ ಮುಖಭಾ

ವವೇ ಸೂಚಿಸುತ್ತಿತ್ತು.

ಕುಟುಂಬದ ಆಸ್ತಿಯು ಹುಟ್ಟುವಳಿಯಲ್ಲಿ ವರುಷ ಒಂದಕ್ಕೆ ಎಂಟು

ಹತ್ತು ಸಾವಿರ ಉಳಿಸಬಹುದಾದಷ್ಟಿತ್ತು. ಆಸ್ತಿಯೆಲ್ಲಾ ಮನೆಯ

ಸಮೀಪದಲ್ಲಿ ಒಮ್ಮುಖವಾಗಿ ಇದ್ದಿತು. ಒಕ್ಕಲುಗಳೆಲ್ಲಾ ಉಂಡುಟ್ಟು,

ಧನಿಗೆ ಕೊಟ್ಟು, ಬರಗಾಲದಲ್ಲಿ ತಮ್ಮ ಆಪತ್ತಿಗೆ ಎಂಬಂತೆ ಒಂದಿಷ್ಟು ಕೂಡಿಡುತ್ತಿದ್ದರು. ಯಾವ ಕಾಲಗಳಲ್ಲಿಯಾದರೂ ಏನು ಕೆಲಸ ಹೇಳಿ

ದರೂ ಅದನ್ನು ಭಕ್ತಿಯಿಂದ ಮಾಡುವಷ್ಟು ನೀತಿವಂತರಾಗಿದ್ದರು.

ಆಡಳಿತೆದಾರರಾದ ಸಂಜೀವ ಶೆಟ್ಟರಿಗೆ ಯಾವಾಗಲೂ ಕೆಲಸ ಇದ್ದೇ

ಇರುತ್ತಿತ್ತು. ಮನೆಸಾಗೃಳ್ಳಿಯ ಮೇಲ್ವಿಚಾರ, ಕುಟುಂಬದ ಆಸ್ತಿಗಳ

ಹುಟ್ಟುವಳ್ಳಿ ವಸೂಲಿಕೆಲಸ, ಇವರ ಮನೆತನದ ಆಸ್ತಿಗೆ ಸಂಬಂಧಪಟ್ಟ

ಸಿವಿಲ್‌ ರೆವಿನ್ಯು ವ್ಯವಹರಣೆಗಳೂ, ಮತ್ತು ಕುಟುಂಬದ ಹಾಗೂ ಒಕ್ಕ

ಲುಗಳ ಸೌಕರ್ಯಕ್ಕೆ ಬೇಕಾದ ಇತರ ಕಾಮಗಾರಿಗಳೂ, ಇವೆಲ್ಲವನ್ನೂ

ಸಂಜೀವ ಶೆಟ್ಟರೇ ನೋಡಬೇಕಾಗಿತ್ತು. ಇದರಿಂದ ಯಾವಾಗಲೂ ಕೈ

ತುಂಬಾ ಕೆಲಸ ಮೈತುಂಬಾ ದಣುವು ಇದ್ದೇ ಇರುತ್ತಿತ್ತು. ಕೋರ್ಟು

ಕಚೇರಿಗಳ ಬಳಿಯಲ್ಲಿ ಅಲೆಯುತ್ತಿರುವುದರಿಂದ ತಿಂಗಳಲ್ಲಿ ಎಂಟು ಹತ್ತು

ದಿನ ಮನೆಯಲ್ಲಿರುವುದೇ ದುಸ್ತರ. ಅವರು ಮನೆಯಲ್ಲಿಲ್ಲದಿರುವಾಗಲೆಲ್ಲಾ ಮನೆಗೆಲಸದ ಮೇಲ್ವಿಚಾರಗಳು ಅವರ ಸಹೋದರಿಯರಿಂದಲೇ ಸಾಗು

ತಿತ್ತು. ಪ್ರಟ್ಟ ಮೃನು ತವರುಮನೆಯಲ್ಲಿರುವಾಗಲೆಲ್ಲಾ ಮನೆವಾರ್ತೆ

ಕೆಲಸಗಳನ್ನು ತಾನೇ ನೋಡುತ್ತಿದ್ದಳು. ಅವಳಿಗೆ ಕಾರುಬಾರು ನಡಿಸು

೭೧----------------------------------------------------------


-೭೧ -

ವುದರಲ್ಲಿ ಬಲು ಪ್ರೀತಿ. ಅವಳ ಅನುಗ್ರಹಕ್ಕೆ ಪಾತ್ರರಾದ ಆಳು ಒಕ್ಕಲು

ಗಳು ಬದುಕಿದರು. ಎಂದಾದರೂ ಅವಳ ಕೋಪಕ್ಕೆ ಈಡಾದವರಿಗೆ

ಉಳಿಗಾಲವಿಲ್ಲ. ಒಂದಲ್ಲ ಒಂದು ಕಾಲದಲ್ಲಿ ಸೇಡನ್ನು ತೀರಿಸಿಕೊಳ್ಳದೆ

ಬಿಡಳು. ಇದರಿಂದ ಮನೆಯಲ್ಲಿರುವ ಸೇವಕರೂ ಆಳುಗಳೂ, ಒಕ್ಲ

ಲುಗಳೂ ಪುಟ್ಟಮ್ಮನ ಸುದ್ದಿ ಕೇಳಿದರೆ ಗಡಗಡ ನಡುಗುವರು. ಹೆಚ್ಚೇಕೆ? ತಾರಾನಾಥಪುರದವರ ಮನೆತನದವರಿಂದ ನಡೆಯಿಸಲ್ಪಡುವ ನಿಗ್ರಹಾನು ಗ್ರಹಗಳೆಲ್ಲಾ ಪುಟ್ಟ ಮ್ಮನಿಂದ ಅಂತೂ ಅವಳ ಅನುಮತಿಪಡೆದು ನಡೆಯಿಸ ಬೇಕಾಗಿತ್ತು. ಪಟ್ಟಮ್ಮ ನು ಯಾರನ್ನು ಪ್ರೀತಿಸುವಳೋ ಅವರನ್ನು ಮನೆಯಲ್ಲಿರುವ ದಾಸದಾಸೀ ಜನಗಳೂ ಪ್ರೀತಿಸುವರು. ಇವಳು ದೂಷಿ ಸುವವರನ್ನು ಆ ಸೇವಕ ಸೇವಕೀ ಜನಗಳೂ ತಾತ್ಸಾರದಿಂದ ಕಾಣುವರು.


ಪುಟ್ಟಮ್ಮನು ತನ್ನ ಅಳಿಯಂದಿರಲ್ಲಿ ರುದ್ರಮ್ಮನ ಗಂಡನನ್ನು

ಬಹಳೇ ಪ್ರೀತಿಸುತ್ತಿದ್ದಳೆಂಬುದನ್ನೂ, ಮಿಕ್ಕ ಅಳಿಯಂದಿರ ವಿಷಯದಲ್ಲಿ ಹಿತವೆಂದರೆ ಅಷ್ಟಷ್ಟೇ ಎಂಬುದನ್ನೂ ವಾಚಕರು ಮರೆತಿರಲಿಕ್ಕಿಲ್ಲ.

ತನ್ನ ಹೊಟ್ಟೆಯಲ್ಲಿ ಹುಟ್ಟಿದ ಬಾಲಕಿಯರ ಪತಿಗಳಲ್ಲಿ ಒಬ್ಬನು ಧನಿಕನಿ

ರಲಿ, ಇನ್ನೊಬ್ಬನು ದರಿದ್ರನಿರಲಿ, ಕುರೂಪಿ ಇರಲಿ, ಸುರೂಪಿ ಇರಲಿ,

ಶಿಕ್ಷಿತನಿರಲಿ, ಅಶಿಕ್ಷಿತನಿರಲಿ, ಅತ್ತೆಯಾಗಿರುವವಳು ಅವರನ್ನು ಭೇದ

ಬುದ್ದಿಯಿಂದ ಕಾಣುವುದು ನೀತಿಯೆ? ಅಳಿಯಂದಿರ ಚುನಾವಣೆಯ ಕೆಲ

ಸವನ್ನು ವಿವಾಹಕ್ಕೆ ಮೊದಲೇಮಾಡಿ ಮುಗಿಸಬೇಕಾದುದಲ್ಲದೆ, ವಿವಾಹದ

ನಂತರ ಎಲ್ಲರೂ ಅವಳಿಗೆ ಅಳಿಯಂದಿರೇ ಸರಿಯಷ್ಟೇ ? ಅತ್ತೆಯೇ

ತಾತ್ಸಾರದಿಂದ ನೋಡಿದರೆ ಮತ್ತವರನ್ನು ಸಮಾನತೆಯಿಂದ ನೋಡುವ

ವರಾರು? ಅವನು ಧನವಂತನಾದ ಅಳಿಯನು, ಇವನು ವಿದ್ಯಾವಂ

ತನು, ಅವನು ನಿರಕ್ಷರಕುಕ್ಷಿ ಎಂದು ಅತ್ತೆಯ ಪಕ್ಷಪಾತದಿಂದ

ನೋಡುವುದು ಹಲವೆಡೆ ಬಳಿಕೆಯಾಗಿದೆ. ಅಂಥವರಲ್ಲಿ ಪುಟ್ಟಮ್ಮನೂ ಒಬ್ಬಳಾಗಿದ್ದಳು. ಒಮ್ಮೆ ತಾರಾನಾಥಪುರದಲ್ಲಿ ನಡೆದುಹೋದ ಒಂದು ಸಂಗತಿಯಿಂದ ಪುಟ್ಟಮ್ಮನಿಗೆ ತನ್ನ ಅಳಿಯಂದಿರಲ್ಲಿರುವ ಭೇದಬುದ್ಧಿ

೭೨ ------------------------------------------------------------

ಯನ್ನು ಪ್ರದರ್ಶಿಸಿ ಬಿಟ್ಟಿದ್ದಳು. ಅಳಿಯಂದಿರೆಲ್ಲರೂ ಅತ್ತೆಯಾಗಿರುವವ

ಳಿಗೆ ಸರಿಸಮಾನರು ಎಂದು ನೋಡಬೇಕೆಂಬ ನೀತಿಯನ್ನು ಪೂರ್ಣ

ಮರೆತಿದ್ದಳು ಎಂಬುದು ಇದರಿಂದ ವ್ಯಕ್ತವಾಗುವುದು.


ಈ ದಿನ ಮುದ್ದಣ್ಣನು ತಾರಾನಾಥಪುರಕ್ಕೆ ಬರುತ್ತಾನೆಂಬ ಸುದ್ದಿ

ಯನ್ನು ಪ್ರಟ್ಟ ವನು ಕೇಳಿ ಮೊದಲೇ ತಿಳಿದುಕೊಂಡಿದ್ದಳು. ಆದುದ

ರಿಂದ ಇಂದು ಮನೆಮಂದಿಯೆಲ್ಲಾ ಆನಂದದಿಂದ ಅವನ ಬರುವಿಕೆ

ಯನ್ನು ಎದುರುನೋಡುತ್ತಿರುವರು. ಈ ಕಾಲದಲ್ಲಿ ದಸರಾ ಹಬ್ಬದ

ಸಲುವಾಗಿ ಸ್ಕೂಲು ಕಾಲೇಜುಗಳಿಗೆ ರಜೆ ಇದ್ದುದರಿಂದ ತನ್ನ ಬೇಸರಿಕೆ

ಯನ್ನು ಕಳೆಯುವುದಕ್ಕಾಗಿ ಆನಂದನೂ ಊರಿಗೆ ಬಂದಿದ್ದನು. ಮುದ್ದ

ಣ್ಣನು ಯಾವ ದಿನ ಬರುವನೆಂಬ ವರ್ತಮಾನ ಇದ್ದಿತೊ ಅದೇ ದಿನ

ಆನಂದನೂ ತಾರಾನಾಥಪುರಕ್ಕೆ ಬಂದುಬಿಟ್ಟನು. ಆ ಸಮಯ ಮುದ್ದ

ಣ್ಣನು ಬಂದಿರಲಿಲ್ಲ. ಆನಂದನು ಬಂದ ಸುದ್ದಿಯನ್ನು ಕೇಳಿ ಯಾರೋ

ಒಬ್ಬ ಕೆಲಸದವನು ಬಂದು ಹೆಬ್ಬಾಗಲಲ್ಲಿ ಒಂದು ಚಾಪೆ ಹಾಕಿದನು.

ಅಲ್ಲಿ ಕುಳಿತು ಸ್ವಲ್ಪ ಸಮಯ ಕಳೆದ ತರುವಾಯ ಯಾರೋ ಒಬ್ಬ ಹೆಂ

ಗುಸು ಒಳವೆಬ್ಬಾಗಿಲಲ್ಲಿ ನಿಂತುಕೊಂಡು ಬಾಯಾರಿಕೆಯನ್ನು ವಿಚಾರಿಸಿ

ದಳು. ಹಾಗೆ ವಿಚಾರಿಸಿದವಳು ಸುಶೀಲೆ (ಆನಂದನ ಹೆಂಡತಿ) ಯಿಂದ ಕಳುಹಿಸಲ್ಪಟ್ಟವಳಾಗಿದ್ದಳು. ಬಾಯಾರಿಕೆಯು ತನಗೀಗ ಅವಶ್ಯವಿಲ್ಲ

ಎಂದನು. ನಂತರ ಅಲ್ಲಿಯೇ ಚಪ್ಪರದಲ್ಲಿ ಇಟ್ಟಿದ್ದ ಮಲಗುವ ಕುರ್ಚಿ (ಇಜಿಚೆಯರ್) ಯಲ್ಲಿ ಕುಳಿತು ತಾನು ತಂದಿದ್ದ ಪತ್ರಿಕೆಯನ್ನು ಓದುತ್ತಾ ಮಲಗಿಕೊಂಡನು. ಮದುವೆ ಆದಮೇಲೆ ತನ್ನ ಹೆಂಡತಿಯ ತವರು

ಮನೆಗೆ ಆನಂದನು ಬಂದುದೆಂಬುದು ಇದು ಎರಡನೆಯ ಸಲವಾಗಿತ್ತು.


ಆನಂದನು ಬಂದು ಒಂದು ತಾಸಿನ ತರುವಾಯ ಮುದ್ದಣ್ಣನ

ಸಾರಟು ಬಂದೇ ಬಂತು. ಅವನು ಬಂದನೆಂದು ಕೇಳಿದೊಡನೆ ಒಂದೆಡೆ

ಮನೆಯ ಸೇವಕರ ಓಡಾಟ. ಪುಟ್ಟ ಮನಿಗಂತೂ ಹಿಡಿಯಲಾರದಷ್ಟು

ಸಂತೋಷ, ಮನೆಮಂದಿಯೆಲ್ಲಾ ಬಲು ಕೋಲಾಹಲದಲ್ಲಿದ್ದರು.

೭೩-----------------------------------------------------------

ಮುದ್ದಣ್ಣನೊಂದಿಗೆ ನಾಲ್ಕಾರು ಮಂದಿ ಸ್ನೇಹಿತರೂ ಬಂದಿದ್ದರು.

ಹೆಬ್ಬಾಗಲನ್ನು ಸೇರಿದೊಡನೆ ಕಾಲುತೊಳೆಯಲು ನೀರು ಬಂತು. ಆ

ಬಳಿಕ ಕುಳಿತುಕೊಳ್ಳಲು ಬಣ್ಣದಚಾಪೆ, ರತ್ನ ಗಂಬಳಿ, ಒರಗಣೆ (ಲೋಡು) ಮುಂತಾದ ಸಂಭ್ರಮದ ಉಪಚಾರಗಳು ನಡೆದ ತರುವಾಯ ಕಾಫಿ,

ಫಲಾಹಾರವೂ ಆಯಿತು. ಕೊನೆಯಲ್ಲಿ ತಾಂಬೂಲಸೇವನೆಯ ಉಪ

ಚಾರವೂ ನಡಿಯದೆ ಇಲ್ಲ. ಈ ಕೆಲಸಗಳನ್ನೆಲ್ಲಾ ಪಟ್ಟಮ್ಮನೇ ಒಳ

ಹೆಬ್ಬಾಗಲಲ್ಲಿ ಕುಳಿತುಕೊಂಡು ಮನೆಯ ಸೇವಕರಿಂದ ನಡಿಸುತ್ತಿದ್ದಳು.

ಆ ದಿನ ಸಂಜೀವ ಶೆಟ್ಟರು ಮನೆಯಲ್ಲಿರಲಿಲ್ಲ. ಬಂದಿರುವ ನೆಂಟರಿಗಾಗಿ

ಭಾರಿ ಔತಣದ ಸಿದ್ಧತೆಯ ಕಾರ್ಯವು ಸಾಗುತ್ತಿತ್ತು. ಸಂಜೆಯಾ

ಯಿತು, ಕತ್ತಲು ಕವಿಯಿತು, ದೀಪಹಚ್ಚಿದರು. ಆ ದೀಪದ ಬೆಳಕು

ಆನಂದನು ಕುಳಿತ ಕುರ್ಚಿಯ ಕಡೆಗೂ ಬೀಳುತ್ತಿದ್ದುದರಿಂದ ಪುನಃ

ಓದುತ್ತಾ ಕುಳಿತನು. ಮುದ್ದಣ್ಣನೂ ಅವನ ಗೆಳೆಯರೂ ಒಂದೆಡೆ

ಕುಳಿತು ಇಸ್ಪೀಟು ಆಟಕ್ಕೆ ಮೊದಲುಮಾಡಿದರು. ಆ ಇಸ್ಪೀಟಾಟ

ದಲ್ಲಿ ರೂಪಾಯಿ, ಅರ್ಧಪವನು, ಪವನು ಇವುಗಳ ವಹಿವಾಟವೂ ನಡಿ

ಯುತ್ತಿತ್ತು. ಮುದ್ದಣ್ಣನ ಮುಂದೆ ಪವನುಗಳ ಒಂದು ಚಿಕ್ಕ ರಾಶಿಯೇ

ಇದ್ದಿತು. ಆಟವು ಬಹಳ ಹೊತ್ತು ನಡೆಯಿತು. ನೆರೆಕರೆಯವರೆಲ್ಲಾ

ಬಂದು ಇವರ ಆಟದಲ್ಲಿ ರೂಪಾಯಿಗಳೂ, ಅರ್ಧಪವನೂ, ಪವನೂ, ಓಡ್ಯಾಡುವುದನ್ನು ಕಂಡು ಬೆರಗಾದರು. ಉಂಡುಡುವ ವೆಚ್ಚಕ್ಕೇ

ನೇ ಸಾಕಷ್ಟು ಹಣವಿಲ್ಲದವರು ಆಟದಲ್ಲಿ ಚಿನ್ನ, ಬೆಳ್ಳಿ ನಾಣ್ಯಗಳು ಓಡಾಡುವುದನ್ನು ಕಂಡಾಗ ಯಾರಿಗೆ ತಾನೇ ಆಶ್ಚರ್ಯವಾಗದು? ಇವರ

ಆಟದಲ್ಲಿ ನಾಣ್ಯಗಳನ್ನು ಚಲಾಯಿಸುವುದು ನೋಡಿ ಆನಂದನಿಗೆ ತುಂಬಾ ವ್ಯಸನವಾಯಿತು. ಈ ಎಲ್ಲಾ ದುರ್ನಡತೆಗಳು ದುಸ್ಸಂಗದ ಫಲಿತಾಂಶ

ವೆಂದೂ, ವಿದ್ಯಾಹೀನರಾದ ಜನರೇ ತಮ್ಮ ತಿಳುವಳಿಕೆಯ ಸಂಕೋಚತೆ

ಯಿಂದ ಇಂಥ ದುಷ್ಟ ಚಾಳಿಗಳಿಗೆ ಬಲಿಬೀಳುವರೆಂದೂ, ತನ್ನೊಳಗೆನೇ

ಮರುಗಿದನು. ನಡೆದು ಬಂದ ದಣುವಿನಿಂದಲೂ, ಮೌನವಾಗಿ ಓದಿ

೭೪ ------------------------------------------------------

ಓದಿ ಬೇಸರಿಕೆ ಹುಟ್ಟಿ ದುದರಿಂದಲೂ ಆ ಕುರ್ಚಿಯಲ್ಲೇ ಮಲಗಿಬಿಟ್ಟನು.

ಸ್ವಲ್ಪ ಸಮಯದ ತರುವಾಯ ನಿದ್ರೆಯೂ ಹತ್ತಿತು.


ಸುಮಾರು ಘಂಟೆ ಹತ್ತು ಹೊಡೆಯುವಾಗ ಊಟಕ್ಕೆ ಸಿದ್ದವಾ

ಯಿತು. ಸೇವಕರು ತಂಬಿಗೆಯಲ್ಲಿ ನೀರುಕೊಟ್ಟು ನೆಂಟರನ್ನು ಊಟಕ್ಕೆ

ಕರೆದರು. ಕೈಕಾಲು ತೊಳೆದು ಸಂಜೆಯ ಪ್ರಾರ್ಥನಾವಿಧಿಯನ್ನು

ಪೂರಯಿಸಿಕೊಂಡು ಊಟಕ್ಕಾಗಿ ಭೋಜನಸಾಲೆಗೆ ನಡೆದರು. ಅಲ್ಲಿ

ಮಣೆಯಿಟ್ಟು, ಎಲೆಹಾಕಿ ತೊಳೆದು ಒಳ್ಳೇ ವ್ಯವಸ್ಥೆ ಮಾಡಿದ್ದರು. ನೆಂಟ

ರೆಲ್ಲಾ ಕುಳಿತ ಬಳಿಕ ಒಂದು ಮಣೆಯೂ ಒಂದು ಎಲೆಯೂ ಹೆಚ್ಚಿಗೆ

ಉಳಿಯಿತು. ಅದೊಂದು ಇಟ್ಟಿದ್ದೇ ಜಾಸ್ತಿ ಎಂದು ಪುಟ್ಟಮ್ಮನು

ಸ್ವತಹ ತೆಗೆದುಬಿಟ್ಟಳು. ಆ ಬಳಿಕ ಸಾವಧಾನದಿಂದ ಭೋಜನವು

ನಡಿಯುತ್ತಿತ್ತು.


ಹೆಬ್ಬಾಗಲಲ್ಲಿ ಕುಳಿತಿರುವ ನೆಂಟರನ್ನು ಲೆಕ್ಕಿಸಿ ಆ ಸಂಖ್ಯೆಗೆ ಸರಿ

ಯಾಗಿ ಮಣೆ ಇಟ್ಟು ಎಲೆಹಾಕಿ ವ್ಯವಸ್ಥೆ ಮಾಡಿದವಳು ಸುಶೀಲೆಯಾ

ಗಿದ್ದಳು. “ಈಗ ಒಂದು ಎಲೆ ಜಾಸ್ತಿ ಎಂದರೇನು? ನನ್ನ ಲೆಕ್ಕ ತಪ್ಪಾ

ಯಿತೇ? ಒಂದಲ್ಲ, ಎರಡಲ್ಲ, ಮೂರುಸಾರಿ ಲೆಕ್ಕ ಮಾಡಿ ಎಲೆಹಾಕಿರು

ವಾಗ ತಪ್ಪಾಗುವದೆಂದರೇನು? ನೋಡಬೇಕು'' ಎಂದು ಕೋಣೆಯೊಳಗೆ

ನಿಂತವಳು ಕಿಟಕಿಯ ಮುಖಾಂತರ ಇತರರು ತನ್ನನ್ನು ಕಾಣದಂತೆ

ಕದ್ದು ನೋಡಿದಳು. ಊಟಕ್ಕೆ ಕುಳಿತಿರುವವರಲ್ಲಿ ತನ್ನ ಪತಿಯು

ಮಾತ್ರ ಕಾಣದಿರಲು ಬಹಳ ವ್ಯಸನಪಟ್ಟಳು, ಮರುಗಿದಳು, ಬಾಯಿ

ಬಿಟ್ಟು ಹೇಳಲು ಉಪಾಯವುಂಟೇ? ವಾಡಿಕೆಯಂತೆ ತನ್ನ ಸತೀತ್ವಕ್ಕೆ

ಸಹಜವಾದ, ಅಂತೂ ಭಾರತ ಮಹಿಳೆಯರಿಗೆ ಭೂಷಣ ಪ್ರಾಯವಾದ

ಲಜ್ಜೆಯಿಂದ ಬಾಯಿಬಿಡದೆ ಸುಮ್ಮನಿರಬೇಕಾಯಿತು. ಆದರೂ ದುಃಖ

ಮಾತ್ರ ತಡಿಯಲಿಲ್ಲ. ಮಾವನು (ಸಂಜೀವಶೆಟ್ಟರು) ಮನೆಯಲ್ಲಿಲ್ಲದಿರು

ವಾಗ ಎಲ್ಲಾ ಕಾರುಬಾರವನ್ನು ತಾನೇ ತಾನಾಗಿ ನಡಿಸುವ ತನ್ನ

ತಾಯಿಯೇ ಅಳಿಯನನ್ನು ಮರೆತಿರುವಾಗ ಇನ್ನು ಯಾರಿಗೆ ತಾನೆ ನೆನವು

೭೫----------------------------------------------------------


ಬರಬೇಕು? ನಿರ್ಭಾಗ್ಯಳಾದ ತನ್ನ ಕೈಹಿಡಿದುದರಿಂದ ಸ್ವಾಮಿಯು ಇಷ್ಟು ತಾತ್ಸಾರಕ್ಕೆ ಗುರಿಯಾದರು. ತಮಗೆ ಮದುವೆಯಾದಂದಿನಿಂದ ತಾಯಿ

ಯು ಅಕ್ಕ ರುದ್ರಮ್ಮನ ಗಂಡನನ್ನು ಪ್ರೀತಿಸುವುದೂ ಮಿಕ್ಕವರ ಪತಿಯ

ರನ್ನು ನಿರ್ಲಕ್ಷ್ಯದಿಂದ ನೋಡುವುದೂ ಇದನ್ನು ನೆನಸಿ ಪುನಃ ಪುನಃ ಹಂಬ

ಲಿಸಿದಳು. ಆದರೆ ಏನುಮಾಡಬಲ್ಲಳು ? ಅಬಲೆ-ಹೆಂಗುಸು, ಆದರೂ

ಸುಮ್ಮನೆ ಕುಳಿತಿರಲೂ ನಿಂತಿರಲೂ ಮನಸ್ಸೇ ಬಾರದು. ಏನೋ

ಒಂದು ನೆವಹಿಡಿದುಕೊಂಡು ಹೆಬ್ಬಾಗಲಿಗೆ ಬಂದಳು. ಅಲ್ಲಿ ಯಾರೂ

ಇರಲಿಲ್ಲ. ಕೆಳ ಚಪ್ಪರದ ಕುರ್ಚಿಯಲ್ಲಿ ಒಬ್ಬರು ಮಲಗಿದಂತೆ ಕಂಡಿತು.

ಅಲ್ಲಿ ಉರಿಯುತ್ತಿರುವ ದೀಪದ ಬೆಳಕಿನಿಂದ ಮೈಯೆಲ್ಲಾ ತೋರಿದರೂ

ಚಪ್ಪರದ ಕಂಭದ ನೆರಳು ಅಡ್ಡ ಬಂದಿರುವುದರಿಂದ ಮುಖ ಮಾತ್ರ

ಆ ನೆರಳಿನಿಂದ ಮರೆಯಾಗಿತ್ತು. ಕುರ್ಚಿಯಲ್ಲಿ ಮಲಗಿ ಸುಖನಿದ್ರೆ

ಗೈಯುತ್ತಿರುವ ತನ್ನ ಪತಿಯನ್ನು ಕಂಡು ತಡೆಯಲಾರದಷ್ಟು ದುಃಖ

ಬಂತು. ಅದನ್ನು ಸಹನೆಯಿಂದ ನುಂಗಿಕೊಂಡಳು; ಮತ್ತು ಆ ಲೇಂಪನ್ನು

ತಿರುಗಿಸಿ ಇಟ್ಟು, ದೀಪದ ಬೆಳಕು ಕುರ್ಚಿಯಲ್ಲಿ ಒರಗಿರುವ ತನ್ನ

ಪತಿಯ ಮೈಮೇಲೆಲ್ಲಾ ಚೆನ್ನಾಗಿ ಬೀಳುವಂತೆ ಮಾಡಿಟ್ಟಳು. ಹೀಗೆ ಮಾಡಿದುದರಿಂದ ಊಟಮುಗಿಸಿ ಬಂದವರಾದರೂ ಎಬ್ಬಿಸುವರೆಂದು

ನಂಬಿದ್ದಳು.


ಊಟವನ್ನು ತೀರಿಸಿಕೊಂಡು ಬಂದವರು ಸರಸಸಲ್ಲಾಪಗಳನ್ನಾ

ಡುತ್ತಾ ತಾಂಬೂಲ ಸವಿದು ಪುನಃ ಇಸ್ಪೀಟು ಆಟಕ್ಕೇನೇ ಕೈಹಚ್ಚಿದರು.

ಇದನ್ನು ಒಳಚಾವಡಿಯಲ್ಲಿ ನಿಂತು ನೋಡುತ್ತಿದ್ದ ಸುಶೀಲೆಗೆ ಮತ್ತಷ್ಟು

ವ್ಯಸನ ಹೆಚ್ಚಿತು. ಯಾರಿಗೂ ಆನಂದನ ನೆನಪೇ ಬರಲಿಲ್ಲ. ಮನೆಯ

ಹೆಂಗುಸರ ಊಟದ ಏರ್ಪಾಡೂ ನಡಿಯುತ್ತಿತ್ತು. ಸುಶೀಲೆಯು ಒಂದೆಡೆ ಕುಳಿತುಕೊಂಡು ಅಳುತ್ತಿದ್ದಳು. ಅವಳನ್ನು ಊಟಕ್ಕೆ ಕರೆದರು, ಉತ್ತರ

ವೇ ಇಲ್ಲ. ಆಗ ಮನೆಯ ಮುದಿ ದಾದಿಯೊಬ್ಬಳು ಭೋಜನಸಾಲೆ

ಯಲ್ಲಿ ಕುಳಿತು ಹೀಗೆ ಹೇಳಿದಳು.

“ನಮ್ಮ ಸುಶೀಲೆಯ ಗಂಡನು ಮೌನವಾಗಿ ಉಂಡನು. ಒಂದೇ

ಒಂದು ಮಾತನ್ನಾ ದರೂ ಆಡಲಿಲ್ಲ. ತುಟ ಎತ್ತಲಿಲ್ಲ. ಮಿಕ್ಕವರೆಲ್ಲಾ

ಊಟಕ್ಕೆ ಕುಳಿತವರು ಎಷ್ಟೋ ಹರಟೆಮಾತುಗಳನ್ನಾಡಿದರು” ಎಂದು

ಹೇಳಿದಳು. ಈ ಮುದುಕಿಯು ಎಪ್ಪತ್ತು ವಯಸ್ಸಿನವಳು. ಎರಡು

ಕಣ್ಣೂ ತೋರದು. ಜನರ ಪರಿಚಯವನ್ನೆಲ್ಲಾ ಬರೇ ಮಾತಿನ

ಸ್ವರದಿಂದಲೇ ನಿಶ್ಚಯಿಸುತ್ತಿದ್ದಳು. ಆನಂದನು ಬಂದಿರುವನೆಂಬ ಸುದ್ದಿ

ಯನು ಮೊದಲೇ ಹೇಳಿದ್ದಳು. ನೆಂಟರ ಊಟದ ವೇಳೆ ಈ ಮುದು

ಕಿಯು ಅಲ್ಲೇ ಸಮೀಪದ ಮಗ್ಗುಲು ಕೋಣೆಯ ಮೂಲೆಯಲ್ಲಿ ಕುಳಿತು ಅವರಾಡುವ ಮಾತುಗಳನ್ನು ಆಲಿಸುತ್ತಿದ್ದಳು. ಆದುದರಿಂದ ಆನಂ

ದನು ಮಾನವಾಗಿ ಉಂಡನೆಂದೂ ಹೇಳಿದಳು. ಹೀಗೆ ಹೇಳಿದುದರಿಂದ

ಉಳಿದವರಿಗೆ ಆನಂದನ ನೆನಪು ಹೊಳೆಯಿತು. ತಮ್ಮ ತಮ್ಮೊಳಗೆ ಪಿಸು

ಪಿಸು ಮಾತಾಡಿದರು. ಕೆಲವರು ಬಹಳೇ ವ್ಯಸನಪಟ್ಟ ರು. ಇನ್ನು

ಕೆಲವರು ಅವನನ್ನು ಎಬ್ಬಿಸದೆ ಮಿಕ್ಕವರಿಗೆ ಬಡಿಸಿದ್ದು ತಪ್ಪಾಯಿತೆಂದು ಮರುಗಿದರು. ಪಟ್ಟಮ್ಮ ನು ಮಾತ್ರ ತಪ್ಪೇನೇ? ಈ ಮನೆ, ಇದರಲ್ಲಿರುವ

ಎಲ್ಲಾ ವಸ್ತು ಒಡವೆಗಳೂ ಅವನ ಮಾವನದು ಮತ್ತು ಅವನದು. ಅವನು

ನನಗೆ ಈಗ ಮಾತ್ರ ಅಳಿಯನಲ್ಲ, ಮೊದಲೇ ಅಳಿಯನು. ಅವನಾದರೂ

ಈಗಿನ ಜನರಂತಲ್ಲ ಹಳೇ ಮರ್ಜಿಯವನು. ನಾವೂ ಹಳೆನೆಂಟುತನ

ವನ್ನೇ ಪ್ರಧಾನವಾಗಿಟ್ಟುಕೊಳ್ಳುವವರಲ್ಲದೆ ಈಗಿನ ಈ ಹೊಸ ನೆಂಟುತ

ನದ ಮೇಲೆಯೇ ಆಧರಿಸುವವರಲ್ಲ. ಆದುದರಿಂದ ಒಂದುವೇಳೆ ನಾವು

ತಪ್ಪಿ ನಡೆದರೂ ಅವನೇ ಸುಧಾರಿಸಿಕೊಂಡು ಹೋಗದೆ ನಿಲ್ಲಲಿಕ್ಕಿಲ್ಲ”

ಎಂದು ಹೇಳಿ ತನ್ನ ಮುಂದಿರುವವರನ್ನು ಕಂಡು ಕಣ್ಣು ಮುಚ್ಚಿ ತೆರೆದಳು.


ಕೂಡಲೇ ಒಬ್ಬ ಸೇವಕನನ್ನು ಕಳುಹಿಸಿ ಆನಂದನನ್ನು ಎಚ್ಚರಗೊ

ಳಿಸಿ ಊಟಕ್ಕೆ ಕರೆತರುವಂತೆ ಹೇಳಿದಳು. ನಿದ್ರೆಯಿಂದ ಎದ್ದ ಆನಂದನು

ಅಲ್ಲಿ ಕುಳಿತಿರುವವರಲ್ಲಿ ಒಬ್ಬನನ್ನೂ ಬಿಡದೆ ವಿಚಾರಿಸಿ, ಎಲ್ಲರೂ ಊಟ ಮಾಡಿದ್ದೇವೆಂದು ಹೇಳಿದುದರಿಂದ ತಾನು ಊಟಕ್ಕಾಗಿ ಭೋಜನಸಾ

೭೭ ------------------------------------------------------------


ಲೆಗೆ ಹೊರಟನು. ಮತ್ತು ಸೇವಕನನ್ನು ಕುರಿತು ಅವರೆಲ್ಲಾ ಊಟ

ಮಾಡಿ ಎಷ್ಟು ಹೊತ್ತಾಯಿತೆಂದು ಕೇಳಿದನು.


ಜಾಣನಾದ ಸೇವಕನು “ಅವರು ಊಟಮಾಡಿ ಒಂದು ಘಂಟೆ

ಕೂಡಾ ಆಗಿಲ್ಲ. ಅವರನ್ನು ಊಟಕ್ಕೆ ಕರೆದದ್ದು ನಾನೇ. ಆಗ ತಾವು ಘಡನಿದ್ರೆಯಲ್ಲಿರುವುದನ್ನು ನೋಡಿ ತನ್ನ ನಿದ್ರೆಗೆ ತೊಂದರೆಪಡಿಸಬಾರ

ದೆಂದು ನೆನಸಿ ತನ್ನನ್ನು ಮಾತ್ರ ನಾನು ಎಬ್ಬಿಸಲಿಲ್ಲ. ಇನ್ನೂ ಎಚ್ಚರ ವಾಗದಿರುವುದು ನೋಡಿ ಎಬ್ಬಿಸಿದೆನು, ಬೇಸರಿಸಬೇಡಿರಿ. ಈಗಲೇ

ಹನ್ನೊಂದು ಹೊಡೆಯಿತು. ಹೊತ್ತು ತಪ್ಪಿ ಊಟಮಾಡಿದರೆ ಆರೋ

ಗ್ಯಕ್ಕೆ ಹಾನಿಯೆಂಬುದನ್ನು ನಿಮ್ಮಂಥವರು ಹೇಳುವರು. ಆದುದರಿಂದ ಈಗ ಎಬ್ಬಿಸಿದೆ. ನಿದ್ರೆಗೆ ಭಂಗ ಉಂಟುಮಾಡಿದುದಕ್ಕಾಗಿ ಬಡವನ ಮೇಲೆ

ಕ್ಷಮೆಇಗಲಿ'' ಎಂದು ತುಸು ಬಣ್ಣ ಬಳಿದು ಹೇಳಿದನು. ಆನಂದನು

"ಚಿಂತೆ ಇಲ್ಲ, ಆಗಲೇ ಎಬ್ಬಿಸದಿದ್ದುದು ಚಲೋದಾಯಿತು" ಎಂದು

ಊಟತೀರಿಸಿ ಬಂದು ಮಲಗಿದನು. ಆದರೂ ಇಸ್ಪೀಟು ಆಟ ಮುಗಿಯ

ಲಿಲ್ಲ. ಬೆಳಗಾಗುವ ವೇಳೆ ಸ್ವಲ್ಪ ಸಮಯ ಮಲಗಿದರು. ಅವರ

ಆಟದ ಗೌಜಿಯಿಂದ ನಿದ್ರಿಸುವವರಿಗೆಲ್ಲಾ ತೊಂದರೆಯುಂಟಾಯಿತು.

ಮರುದಿನ ನೆಂಟರೆಲ್ಲರೂ ತಮ್ಮ ತಮ್ಮ ಊರಿಗೆ ತೆರಳಿದರು.

------


ಹನ್ನೆರಡನೆಯ ಅಧ್ಯಾಯ.


ಮುತ್ತೂರಿನ ಮುದ್ದಣ್ಣನಿಗೆ ಪಟ್ಟಣವಾಸದ ರುಚಿ ಹತ್ತಿದುದ

ರಿಂದ ತನ್ನ ಊರಿನಲ್ಲಿ ನಿಲ್ಲಲಿಕ್ಕೆ ಬಲು ಬೇಸರಪಡುತ್ತಿದ್ದನೆಂಬುದು ವಾಚ

ಕರು ಮರೆತಿರಲಿಕ್ಕಿಲ್ಲ. ತಾನು ಹೊಸತಾಗಿ ಕಟ್ಟಿಸಿದ ಬಂಗಲೆಯ ಪ್ರವೇ

ಶದ ವಿಧಿಯನ್ನು ಬಲು ಗದ್ದಲದಿಂದ ಮಾಡಿಸಿದನು. ಸಾವಿರಾರು

ಮಂದಿ ನೆರೆದಿದ್ದರು. ವಿಶೇಷ ಖರ್ಚೂ ತಗಲಿತು. ಕಂಟ್ರಾಕು ದಾರ

೬೮----------------------------------------------------------


ನಿಗೆ ಐನೂರು ರೂಪಾಯಿಯ ಒಡವೆಗಳನ್ನು ಪಾರಿತೋಷಕವಾಗಿ

ಕೊಟ್ಟನು. ಬಂದ ಮಹನೀಯರೆಲ್ಲಾ ಯಥಾಯೋಗ್ಯವಾದ ಸತ್ಕಾರಗ

ಳನ್ನು ಹೊಂದಿ ತೆರಳಿದರು.


ಪ್ರವೇಶದ ಕೆಲಸ ನಡೆದು ನಾಲೈದು ದಿವಸ ಕಳೆಯುತ್ತಲೇ ತನ್ನ

ಹೆಂಡತಿಯನ್ನು ಕರಕೊಂಡು ಹೋಗಿ ಅಲ್ಲಿಯೇ ವಾಸಿಸುವ ವಿಷಯದಲ್ಲಿ ನಿಶ್ಚಯಮಾಡಿದನು. ಇದನ್ನು ಕೇಳಿದ ತಾಯಿಗೆ ಬಹಳ ವ್ಯಸನವಾ

ಯಿತು. ಮಗನನ್ನು ಕುರಿತು “ಮಗೂ ಮುದ್ದೂ! (ತಾಯಿಯು ಕರಿ

ಯುವ ಹೆಸರು.) ನೀನು ಬೇರೆ ಮನೆ ಮಾಡುತ್ತೀಯೇ? ಇಲ್ಲಿ ಯಾವು

ದಕ್ಕೆ ಕಡಿಮೆಯಾಗಿ ನೀನಲ್ಲಿ ಹೋಗುವಿ? ನನ್ನ ಹೊಟ್ಟೆಯಲ್ಲಿ ಮಗ

ನೆಂದರೂ ನೀನೇ, ಮಗಳೆಂದರೂ ನೀನೇ; ನೀನಲ್ಲದೆ ನನಗೆ ಮತ್ತಾರೂ

ಇಲ್ಲ, ನನಗೂ ವಯಸ್ಸು ಮೀರಿಹೋಗಿದೆ. ಇನ್ನೊಬ್ಬ ನೀನೂ ಪಟ್ಟ

ಣದಲ್ಲಿ ಕುಳಿತರೆ ಇಲ್ಲಿ ಈ ಮನೆ ಯಾರಿಗೆ ಬೇಕು? ನಮ್ಮ ಹಿರಿಯರು

ದೊಡ್ಡ ಮನೆಯನ್ನು ಕಟ್ಟಿಸಿ ಅದಕ್ಕೆ ಬೇಕಾದ ಆಸ್ತಿ ಪಾಸ್ತಿಯನ್ನು ಸಂಪಾ ದಿಸಿಟ್ಟು, ಒಳ್ಳೆ ಗೌರವದಿಂದಲೂ ಮರ್ಯಾದೆಯಿಂದಲೂ ಕಳಿದರು.

ನಮ್ಮ ಮನೆತನಕ್ಕೆ ಒಪ್ಪಿದ ಹವ್ಯಕವ್ಯ ಹಾಗೂ ದೇವತಾ ವಿನಿಯೋಗ

ಗಳೂ ಎಷ್ಟೋ ಇವೆ.. ನೀನಲ್ಲಿ ಕೂತರೆ ಇವನ್ನೆಲ್ಲಾ ನಡಿಸುವವ

ರಾರು? ನಿನಗಿಂತ ಹೆಚ್ಚಿನವರು ಈ ಮನೆಯಲ್ಲಿ ನನಗಾರಿರುವರು? ಆದು ದರಿಂದಲೇ ನಮ್ಮಣ್ಣನು ತೀರಿಹೋದ ಮೇಲೆ ಕುಟುಂಬದ ಆಸ್ತಿಯ

ಕುಡ್ತಲೆಯನ್ನು ನನ್ನ ಹೆಸರಿಗೆ ಹಾಕಿಸಿಕೊಳ್ಳದೆ ನಿನಗೇನೇ ಆಗುವಂತೆ

ಕಬೂಲಿ ಕೊಟ್ಟು ಬಿಟ್ಟೆನು. ಈ ವಿನಃ ನಮ್ಮ ಮನೆತನಕ್ಕೆ ಒಪ್ಪಿದ

ವಿಶಿಷ್ಟ ಸಂಪತ್ತನ್ನೂ ನಿನಗೇನೇ ಒಪ್ಪಿಸಿದ್ದೇನೆ. ನೀನು ಅದನ್ನು

ಚೆನ್ನಾಗಿ ಕಾಪಾಡಿ ವೃದ್ಧಿ ಮಾಡಿದರೆ ಮುಂದೆ ನಿನ್ನ ಪುತ್ರ ಪೌತ್ರರಿಗಲ್ಲದೆ ಮುದಿಯಾದ ನನಗೇನು ಬೇಕಾಗಿದೆ? ನೀನು ಪಟ್ಟಣ ಸೇರಿದರೆ ಈ

ಮನೆಯ ಜೋಕೆ ನೋಡುವವರಾರು? ಮಗೂ! ಅಪ್ಪಾ! ನೀನು ಮನೆಬಿ

ಡಬೇಡ. ನೀನು ಹಾಗೆ ಮಾಡಿದರೆ ಮುದುಕಿಯಾದ ನಾನು ಅದೇ ವ್ಯಸ

೭೯ ----------------------------------------------------------

ನದಲ್ಲಿ ಕೊರಗಿ ಕೊರಗಿ ಸಾಯುವುದೇ ಸರಿ" ಎಂದು ಬಗೆಬಗೆಯಾಗಿ ನೀತಿ ಹೇಳಿದಳು. ಆದರೂ ಆ ಪುಂಡನಿಗೆ ನೀತಿಗೀತಿ ಆವುದೂ ಮೆಚ್ಚಲಿಲ್ಲ.


ಮರುದಿನ ಬೆಳಿಗ್ಗೆ ಮೂರುನಾಲ್ಕು ಗಾಡಿಗಳು ಮನೆಯ ಮುಂದೆ

ಬಂದು ನಿಂತವು. ತನ್ನ ಬಂಗಲೆಗೆ ಬೇಕಾದ ವಿಶಿಷ್ಟ ಸಾಮಾನುಗಳನ್ನೂ ತುಂಬಿಸಿದನು. ಮತ್ತು ತನ್ನ ಹೆಂಡತಿಯೊಡನೆ ಹೊರಟೇ ಹೊರಟನು.

ಆ ಕಾಲದಲ್ಲಿ ತಾಯಿ ಹೊನ್ನಮ್ಮನು ಬಿಕ್ಕಿ ಬಿಕ್ಕಿ ಅಳುತ್ತಾ ಒಂದೆಡೆ

ಮಲಗಿದ್ದಳು. ಮಗನ ಬುದ್ಧಿಯನ್ನೆಲ್ಲಾ ಇಷ್ಟು ಬದಲಾಯಿಸಿ ಬಿಟ್ಟ

ವಳು ಅವನ ಹೆಂಡತಿ ರುದ್ರಮ್ಮನೇ ಎಂದು ನಿಶ್ಚಯಿಸಿದ್ದಳು. ಆ ಊಹ

ನೆಯೂ ಸಟೆಯಾಗಿರಲಿಲ್ಲ. ರುದ್ರಮ್ಮನ ಒತ್ತಾಯವೂ ಇದ್ದಿತೆಂದು ಬಲ್ಲೆವು. ಅವಳು ಯಾವಾಗಲೂ ಪಟ್ಟಣವಾಸದ ಸುಖವನ್ನೇ ಹೊಗಳುತ್ತಿದ್ದಳು.

ಮತ್ತು ಗಂಡನು ಆ ಹೊಸ ಬಂಗಲೆ ಕಟ್ಟಿಸುತ್ತಾನೆಂದು ಕೇಳಿದಂದಿ

ನಿಂದಂತೂ ಅವಳ ಸಂತೋಷಕ್ಕೆ ಪಾರವೇ ಇಲ್ಲ. ಇಲ್ಲಿ ಮನೆಯಲ್ಲಿ

ಅತ್ತೆ ಸೊಸೆಯರಿಗೆ ಆಗಾಗ್ಗೆ ಜಗಳ, ಒಬ್ಬಳ ನಡತೆಯು ಇನ್ನೊಬ್ಬಳಿಗೆ ಸರಿಬೀಳುತ್ತಿರಲಿಲ್ಲ. ಆದುದರಿಂದ ಗಂಡನ ಒಟ್ಟಿಗೆ ಬೇರೆ ಮನೆಯಲ್ಲಿರ

ಬೇಕೆಂದು ಗಂಡನನ್ನು ಆಗಾಗ ಪೀಡಿಸುತ್ತಿದ್ದಳು. ಈಗಂತೂ ಬಂಗ

ಲೆಯ ಸಿದ್ದವಾಗಿ ಪ್ರವೇಶದ ವಿಧಿಯೂ ಮುಗಿದಿದೆ.


ಮುದ್ದಣ್ಣನು ಪಟ್ಟಣವನ್ನು ಸೇರಿ ಬಲು ದರ್ಬಾರಮಾಡಲಿಕ್ಕೆ

ತೊಡಗಿದನು. ಮತ್ತೂ ಕೆಲವು ಮಂದಿ ಆಪ್ತ ಮಿತ್ರರ ಬಳಕೆಯನ್ನೂ ಸಂಪಾದಿಸಿಕೊಂಡನು. “ವಿನಾಶಕಾಲೇ ವಿಪರೀತ ಬುದ್ಧಿಃ” ಎಂಬಂತೆ

ಪಾಲಿನ ವ್ಯಾಪಾರದ ಭಂಡಸಾಲೆಯನ್ನು ತೆರಿಯುವದಾಗಿ ಆಲೋಚನೆ

ನಡಿಯಿತು. ಮುದ್ದಣ್ಣನ ಮನಸ್ಸಿಗೆ ಏನಾದರೊಂದು ಹೊಳೆಯುವುದೇ

ತಡ, ಅದನ್ನು ಮಾಡೇ ಮಾಡುವನು. ಅದರ ಮುಂದಿನ ಪರಿಣಾಮ

ವನ್ನು ವಿಚಾರ ಮಾಡುವ ಗೊಡವೆಗೇನೇ ಹೋಗನು. ಮೂವರು ಸೇರಿ

ವ್ಯಾಪಾರ ಮಾಡುವುದಾಗಿ ನಿಶ್ಚಯವಾಯಿತು. ಇವನ ಒಟ್ಟಿಗೆ ವ್ಯಾಪಾ

ರದಲ್ಲಿ ಸೇರಿದ ಒಬ್ಬ ಸ್ನೇಹಿತನ ಹೆಸರು “ಅಬ್ದುಲ್ಲ.” ಇನ್ನೊಬ್ಬನ

೮೦----------------------------------------------------------


ಹೆಸರು ವೆಂಕ್ಟೇಶ.” ಇವರಿಬ್ಬರೂ ಬಲು ಜಾಣರು. ಮೊದಲು ಬಹಳೇ

ವ್ಯಾಪಾರ ನಡೆಸಿದವರು. ಮುದ್ದಣ್ಣನಂಥವರ ಜೊತೆಯನ್ನು ಹುಡುಕು ತಿರುವವರು, ವ್ಯಾಪಾರದ ಮುಬಾದಿಲೆಗೇನೂ ಇವರಲ್ಲಿ ಆಭಾವವಿರ

ಲಿಲ್ಲ. ಸದ್ಯಕ್ಕೆ ಇವರ ಮುಬಾದಿಲೆ ಅಂದರೆ ಠಕ್ಕು ಭಕ್ತಿ, ಸುಳ್ಳುಮಾತು,

ಸಭ್ಯನಟನೆ ಇವಲ್ಲದೆ ಬೇರೆ ಚಿಕ್ಕಾಸೂ ಇದ್ದಿರಲಿಲ್ಲ. ಎಂಥವರನ್ನಾ

ದರೂ ಕ್ಷಣಮಾತ್ರದಲ್ಲಿ ವಶಮಾಡಿಕೊಳ್ಳುವಷ್ಟು ಯುಕ್ತಿಯುಳ್ಳವರಾ

ಗಿದ್ದರು. ಗಾಳಿಬಂದಂತೆ ಕೂರಿಗೊಳ್ಳುವವರು; ಮಾತಿನಲ್ಲೇ ಮರುಳು ಮಾಡಿಬಿಡುವವರು, ವ್ಯಾಪಾರವೇನೋ ಭಾರೀ ಆಡಂಬರದಿಂದ ನಡಿಯ

ಹತ್ತಿತು. ಇವರ ಭಂಡಸಾಲೆಯಲ್ಲಿ ಯಾವ ಸಾಮಾನು ಬೇಕಾದರೂ

ಸಿಕ್ಕುತ್ತಿತ್ತು. ಮಾರಾಟಕ್ಕಾಗಿ ಬಂದ ಬಂದ ಸಾಮಾನನ್ನು ಬಿಡುತ್ತಿದ್ದಿಲ್ಲ. ಒಬ್ಬಿಬ್ಬರು ಶ್ಯಾನುಭಾಗರೂ, ನಾಲ್ಕಾರುಮಂದಿ ಊಳಿಗದ ನೌಕರರೂ,

ಇದ್ದು ಭಾರೀ ಗದ್ದಲದಿಂದ ವ್ಯಾಪಾರ ನಡಿಯುತ್ತಿತ್ತು. ಮುದ್ದಣ್ಣನು ದಿವ

ಸಕ್ಕೆ ಎರಡುಮೂರು ಬಾರಿ ಭಂಡಸಾಲೆಗೆ ಹೋಗಿ ಬರುತ್ತಿದ್ದನು. ಇವನ ಸವಾರಿಯು ಒಮ್ಮೆ ಸಾರಟನ ಮೇಲೂ, ಇನ್ನೊಮ್ಮೆ ಬೈಸಿಕಲ್ಸ್ ಮೇಲೆ

ಯೂ, ಮತ್ತೊಮ್ಮೆ ಡೋಕ್ಕಾರ್ಟಿನ ಮೇಲೂ ಬರುತ್ತಿತ್ತು. ಶಿಲುಕಿನ

ಬೀಗವು ಶ್ಯಾನುಭಾಗನ ಕೈಯಲ್ಲಿ. ಮುದ್ದಣ್ಣನಿಗಂತೂ ಈ ಭಂಡಸಾಲೆ

ತೆರೆದ ಮೇಲೆ ರಾತ್ರಿಂದಿನವೂ ಗರ್ಜು, ಯಾವಾಗಲೂ ಹಣದ ಅಡಚಣೆ.

ಕುಟುಂಬದ ಪಿತರಾರ್ಜಿತವಾದ ಚಿನ್ನದ ನಗಗಳೆಲ್ಲಾ ಈಡಿಗಾಗಿ ಓಡಾಡು

ತಿದ್ದುವು. ಕೆಲವು ನಗಗಳು ಅಡವಿನ ನೆವದಿಂದ ಹೋದದ್ದು ಪುನಃ

ಕಾಣಲಿಲ್ಲ. ಕೆಲವು ವಿಕ್ರಯವಾದುವು. ಭಂಡಸಾಲೆ ಲೆಕ್ಕಕ್ಕೆ ಹಣ

ಬೇಕಾದಹಾಗೆ ಕೊಡುವುದು ಮಾತ್ರ ಮುದ್ದಣ್ಣನ ಪಾಲಿಗೆ ಸೇರಿತ್ತು.

ಒಂದು ಕಾಸಾದರೂ ತಿರಿಗಿ ಕಾಣಲಿಕ್ಕಿಲ್ಲ. ವ್ಯಾಪಾರದ ಲೆಕ್ಕದಲ್ಲಿ ಹೊರಗೆ

ಸಲಬೇಕಾದುದಕ್ಕೆಲ್ಲಾ ಮುದ್ದಣ್ಣನ ಹೆಸರಿನ ಕಾಗದವೇ ಸಲ್ಲುತ್ತಿತ್ತು.

ಆ ಸಾಲಕೊಟ್ಟ ಆಸಾಮಿಗಳೂ ಮುದ್ದಣ್ಣನ ಕಾಗದವನ್ನೇ ಅಪೇಕ್ಷಿಸು

ತ್ತಿದ್ದರು. ಏಕೆಂದರೆ ಇವನ ಜೊತೆಯವರೀರ್ವರೂ ತಾಜಾ ದಿವಾಳಿ

೮೧--------------------------------------------------------


ಖೋರರಾಗಿದ್ದರು. ಭಂಡಸಾಲೆ ಲೆಕ್ಕಕ್ಕೆ ಹೊರಗಿನಿಂದ ಬರುವ ಲೆಕ್ಕಾ

ಚಾರಗಳಿಗೆ ಪಡಿಯುವ ಕಾಗದಗಳನ್ನೆಲ್ಲಾ ಅಬ್ದುಲ್ಲ'ನಾಗಲಿ, “ವೆಂಕ್ಟೇಶ?

ನಾಗಲಿ ತಮ್ಮ ಹೆಸರಿನಲ್ಲಿ ಪಡಕೊಳ್ಳುತ್ತಲಿದ್ದರು.


ಆದರೆ ಇವನ ಜೊತೆಯಲ್ಲಿ ವ್ಯಾಪಾರ ನಡೆಸುವ ಆ ಪಾಲುಗಾರರೂ

ಇತರ ನೌಕರರೂ ಮುದ್ದಣ್ಣನನ್ನು ಬಲು ಗೌರವಿಸುತ್ತಿದ್ದರು. ಎಲ್ಲರೂ ಅವನನ್ನು ಧನಿಯರೆಂದೇ ಸಂಬೋಧಿಸುತ್ತಿದ್ದರು. ಇವನು ಭಂಡಸಾಲೆಗೆ

ಬಂದಷ್ಟು ಸಲವೂ ಎದ್ದು ನಿಂತು, ಬಗ್ಗಿ ನಮಸ್ಕಾರಮಾಡುವುದೂ, ಬಲು

ಹೆದರಿ ನಡೆಯುವವರಂತೆ ನಟಿಸುವುದೂ ರೂಢಿಯಾಯಿತು. ಧನಿಯರು ಭಂಡಸಾಲೆಯಲ್ಲಿ ಇರುವಾಗಲೆಲ್ಲಾ ಗಟ್ಟಿಯಾಗಿ ಮಾತನ್ನೂ ಆಡದೆ, ತಂತ ಮೊಳಗೆ ಪಿಸು ಪಿಸು ಮಾತಾಡುವುದೂ ಬಳಿಕೆಯಾಯಿತು. ಇದರಿಂದ

ಮುದ್ದಣ್ಣನು ಪೂರ್ಣ ಸಂತೃಪ್ತ ನಾಗಿದ್ದನು.


ಮುದ್ದಣ್ಣನು ಈ ವ್ಯಾಪಾರಕ್ಕೆ ಕೈಕೊಟ್ಟು ದರಿಂದ ಬಲು ಸಾಲ

ಸೋಲದಲ್ಲಿ ಬಿದ್ದನು. ತನಗೆಷ್ಟು ಸಾಲವಿದೆ, ಎಂಬುದರ ಅರಿವು ಕೂಡಾ ಅವನಿಗಿರಲಿಲ್ಲ. ಈ ವ್ಯಾಪಾರಕ್ಕೆ ತೊಡಗಿದ ಮರುವರುಷದಲ್ಲೇ ಮುದ್ದ

ಣ್ಣನು ಕಠಿಣ ಕಾಯಿಲೆಯಲ್ಲಿ ಬಿದ್ದು ಬಿಟ್ಟನು. ಹಿಡಿದ ರೋಗಗಳೆಲ್ಲಾ

ವ್ಯಭಿಚಾರ ಸಂಬಂಧದಿಂದ ಬಂದುವುಗಳಾಗಿದ್ದವು. ಜಾರತನದಿಂದ ಜನ

ರಿಗೆ ತಗಲಬಹುದಾದ ರೋಗಗಳೇನೇನಿವೆಯೋ ಅವೆಲ್ಲಾ ಒಂದುಳಿಯ

ದಂತೆ ಮುದ್ದಣ್ಣನಿಗೆ ಒಮ್ಮೆಗೇನೇ ತಗಲಿಕೊಂಡುವು. ' ಇವನು ರೋಗ

ದಲ್ಲಿ ಬಿದ್ದುದರಿಂದ ಭಂಡಸಾಲೆಯೆಲ್ಲಾ ಪಾಲುಗಾರರಿಗೂ ನೌಕರರಿಗೂ

ಸೂರೆಗೆ ಬಿಟ್ಟಂತಾಯಿತು. ಅವರೇನು ಮಾಡಿದರೂ ಕೇಳುವವರೇ

ಇಲ್ಲ. ರೋಗದ ಯಾತನೆಯು ದಿನದಿನಕ್ಕೆ ಪ್ರಬಲವಾಯಿತು. ಊರ

ಜನರ ಮದ್ದೂ, ಕೆಲವು ವೈದ್ಯರ ಮದ್ದೂ ನಡಿಯಿತು. ಉಪಯೋಗಕ್ಕೆ

ಬೀಳಲಿಲ್ಲ. ಕಾಯಿಲೆಯು ಕಠಿಣವಾಯಿತು. ಇವನು ರೋಗದಲ್ಲಿ ಬಿದ್ದು

ಸಾಯುವ ಸ್ಥಿತಿಯಲ್ಲಿದ್ದಾನೆಂಬ ಸುದ್ದಿಯು ಅವನ ತಾಯಿ ಹೊನ್ನಮ್ಮ

ನಿಗೂ ತಲಪಿತು. ತನ್ನ ಮುದ್ದು ಮಗನು ರೋಗದಲ್ಲಿ ಬಿದ್ದು ಸಾಯುವ

೮೨ ---------------------------------------------------------


ಅವಸ್ಥೆಯಲ್ಲಿ ಇದ್ದಾನೆಂದು ಕೇಳಿದರೆ ಯಾವ ತಾಯಿಯು ಮರುಗಲಿಕ್ಕಿಲ್ಲ? ಮಗನು ದುರ್ಗುಣನಿರಲಿ, ಜಾರನಿರಲಿ, ಚೋರನಿರಲಿ, ಹೆತ್ತ ಹೊಟ್ಟೆಯ

ಲ್ಲವೇ? ಕೂಡಲೇ ಜನರನ್ನು ಕಳುಹಿಸಿ ಮಂಚಲಿನಿಂದ ಮಗನನ್ನು ಹೊತ್ತು ತರುವಂತೆ ಆಜ್ಞಾಪಿಸಿದಳು. ಒಕ್ಕಲುಗಳು ಹೋಗಿ ಎರಡು ಮೂರು ಘಂಟೆಯೊಳಗೇನೇ ಮನೆಗೆ ತಂದರು. ಕೂತುಕೊಳ್ಳಲಿಕ್ಕೂ ಗಟ್ಟಿಮಾ

ತಾಡಲಿಕ್ಕೂ ಕೂಡುತ್ತಿರಲಿಲ್ಲ. ಮಗನ ಅವಸ್ಥೆ ಯನ್ನು ಕಂಡಳು. ಆ

ತಾಯಿ-ಮುದುಕಿಯು ಸಿಕ್ಕ ಸಿಕ್ಕವರ ಕಾಲುಹಿಡಿದು ವೈದ್ಯರನ್ನು ಕರತರಿ

ಸಿದಳು. ನನ್ನ ಮಗುವನ್ನು ಬದುಕಿಸಿಕೊಡಿರಪ್ಪಾ! ನಿಮಗೆ ಕೇಳಿದಷ್ಟು ಹಣಕೊಡುತ್ತೇನೆ”ಂದು ವೈದ್ಯರನ್ನು ಬೇಡುವಳು. ಏನೇನು ಮದ್ದು

ಕೊಟ್ಟರೂ ಉಪಯೋಗಕ್ಕೆ ಬೀಳಲಿಲ್ಲ. ಅನೇಕ ಪಂಡಿತರು ಹೇಳದೆ

ಹೋದರು. ಕೆಲವರು ಬಲು ಪ್ರಯತ್ನಿಸಿದರು. ವ್ಯಭಿಚಾರ ದೋಷದಿಂದ

ಹತ್ತಿದ ಒಂದಲ್ಲ ಎರಡಲ್ಲ ಮೂರು ರೋಗಗಳು; ಅವುಗಳ ವೇದನೆಯಿಂದ ಜ್ವರವೂ, ಅದರೊಂದಿಗೆ ಕಫವೂ ಬಾಧಿಸುತ್ತಿತ್ತು. ಇವುಗಳಲ್ಲಿ ಒಂದಕ್ಕೆ

ಮದ್ದು ಕೊಟ್ಟರೆ ಇನ್ನೊಂದು ಹೆಚ್ಚಾಗುವುದು. ಒಂದಕ್ಕೆ ಸುಖ

ಕಂಡದ್ದು ಮತ್ತೊಂದಕ್ಕೆ ದುಃಖವಾಗುವುದು. ಇದರಿಂದ ಬಂದ ವೈದ್ಯ

ರಲ್ಲಿ ಅನೇಕರು ಅಸಾಧ್ಯ ಲಕ್ಷಣವೆಂದು ಶ್ಲೋಕಾಧಾರದಿಂದ ವ್ಯಕ್ತ

ಪಡಿಸಿದರು. ಒಳಗಿನ ರೋಗದ ವೇದನೆಯ ಒಟ್ಟಿಗೆ ಹೊರಗಿನ ಸಾಲದ

ವೇದನೆಯೂ ಬಾಧಿಸತೊಡಗಿತು. ಇಂಥಾ ಕೆಡುಕಾಲದ ಮಹಿಮೆ

ಯನ್ನು ವರ್ಣಿಸಲು ಯಾರಿಗೆ ತಾನೇ ಸಾಧ್ಯ. ಒಂದೆಡೆ ಟಪ್ಪಾಲು ರಿಜಿಸ್ತ್ರಿ ಕಾಗದಗಳೂ, ಇನ್ನೊಂದೆಡೆ ದಾವಾ ನೋಟೀಸುಗಳೂ, ಬರಲು ಪ್ರಾರಂಭಿ-

ಸಿತು. ಅನೇಕ ಜನರು ಮುದ್ದಣ್ಣನ ಕಾಯಿಲೆಯನ್ನು ನೋಡುವ ನೆವನ

ಹಿಡಿದು ಬಂದು ಹೋಗುತ್ತಿದ್ದರು. ರೋಗಿಯ ಅವಸ್ಥೆಯನ್ನು ಕಂಡು

ಇದ್ದ ಸೊತ್ತುಗಳನ್ನಾದರೂ ಜಪ್ತಿ ಮಾಡಿಸಬಹುದೆಂಬ ಆಸೆಯಿಂದ ಬೇಗ

ಬೇಗ ಕೋರ್ಟುದಾವೆಗಳಿಗೆ ಕೈಕೊಟ್ಟರು. ಈಗ ಬರುವ ಕೈಫೇತು ನೋಟೀಸುಗಳಲ್ಲಿ ಹಲವು ನಿಜವಾದ ಸಾಲಗಳಾಗಿದ್ದರೂ, ಕೆಲವು ಸುಳ್ಳು

ಸಾಲಗಳೂ ಇದ್ದಿದ್ದುವು. ಈ ದಾವೆಯ ನೋಟೀಸುಗಳನ್ನು ಹೊರಡಿಸಿ

೮೩---------------------------------------------------------


ದವರೆಲ್ಲಾ ಮುದ್ದಣ್ಣನ ಕೇವಲ ಮಿತ್ರರಾಗಿದ್ದರು, ದುರ್ದಶಿಯು

ಬಂದು ಸಂಪತ್ತಿನ ತಲೆ ಕೆಳಗಾಗುವ ಹೊತ್ತಿಗೆ ತೃಣಗಳೆಲ್ಲಾ ಬ್ರಹ್ಮಾಸ್ತ್ರ

ಗಳಾಗಿ ಪರಿಣಮಿಸುವುವು. ಬಿದ್ದವರನ್ನು ಎತ್ತುವ ಆ ಕಾಲವು ಎಂದೋ ಮಾಯವಾಗಿ ಹೋಗಿದೆ. ಕಾಲುಜಾರಿದವನ ತಲೆಯ ಮೇಲೆ ಕಲ್ಲೆಸೆ

ಯುವ ಈ ಕಾಲದಲ್ಲಿ ಹಾಗೂ ಮುದ್ದಣ್ಣನಂಥ ಆಸ್ತಿ ಪಾಸ್ತಿಯುಳ್ಳವರು ಒಂದಿಷ್ಟು ತೇವಿದರೆ ಕೂಡಲೇ ಕೆಡವಿಹಾಕಿ ಇದ್ದುದುಬಿದ್ದುದನ್ನು

ಹಂಚಿಕೊಳ್ಳುವ ಎಂದು ಹೊಂಚು ಹಾಕುತ್ತಿರುವ ಆ ದುಷ್ಟ ಜನರೆಲ್ಲಾ

ಈಗ ತಲೆಯೆತ್ತಿ ಮುಂದೆ ಬಂದಿರುವರು. ಕೋರ್ಟಿನಲ್ಲಿ ದಾಖಲಾದ

ಸಿವಿಲ್ ದಾವೆಗಳಲ್ಲಿ ಅದು ಸುಳ್ಳು, ಇದು ನಿಜ ಎಂದು ವಾದಿಸುವವರಾ

ದರೂ ಯಾರಿದ್ದಾರೆ? ಇಲ್ಲೊಬ್ಬ ಗಂಡಸು ಹಾಸಿಗೆ ಹಿಡಿದಿರುವ ರೋಗಿಯಾ ಗಿದ್ದನು. ಹೊನ್ನಮ್ಮನು ಹೆಂಗುಸು, ಅಬಲೆ; ಮುದ್ದಣ್ಣನ ಮಿತ್ರರೆಂಬು ವವರೆಲ್ಲಾ ಈಗೆಲ್ಲಿ ಹೋಗಿರುವರೋ ದೇವರೇ ಬಲ್ಲ. “ಸಂಗಾತಿಯ ಗುಣ ಸೋತುನೋಡು” ಎಂಬ ಸಾಮತಿಯು ಇಲ್ಲಿ ಪ್ರತ್ಯಕ್ಷಕ್ಕೆ ಬಂದಿದೆ.

ಮುದ್ದಣ್ಣನ ಕೈಯಲ್ಲಿ ಹಣ ಓಡಾಡುತ್ತಿರುವಾಗ-೨ ತಿಂಡಿಫಲಹಾರ ಕೊಡು ವಾಗ-ಊಟಕ್ಕೆ ಇಕ್ಕುವಾಗ ಸ್ನೇಹಿತರಿಗೆ ಬರಗಾಲವೆಲ್ಲಿ? ಎಲ್ಲರೂ ಪರಮ ಮಿತ್ರರೇ, ಅವನ ಮೊದಲಿನ ಮಿತ್ರರೆಂಬವರೆಲ್ಲಾ ಈಗ ಶತ್ರುಗಳಾಗಿ ಪೀಡಿಸುತ್ತಿರುವರು. ಹೊನ್ನಮ್ಮನು ಬಲು ಸಂಕಟದಲ್ಲಿ ಬಿದ್ದಳು. ಮನೆ

ಯಲ್ಲಿ ನಗದು ಹಣವಾಗಲೀ ನಗನಾಣ್ಯಗಳಾಗಲೀ ಯಾವುದೂ ಇಲ್ಲ.

ಸಾಲಗಾರರ ದಾವಾ ನೋಟೀಸುಗಳಾದರೋ ದಿವಸ ಹೋಗುತ್ತಾ

ಹೆಚ್ಚು ಹೆಚ್ಚಾಗಿ ಬರುತ್ತಿದ್ದುವು. ಇದರಿಂದ ತಾನೇನು ಮಾಡಬೇಕೆಂದು

ಅವಳಿಗೆ ತೋರದೆ ಹೋಯಿತು. ಹುಚ್ಚರಂತೆ ಏನೇನೋ ಅಂದುಕೊ

ಳ್ಳುತ್ತಾ, ನಿಟ್ಟುಸುರು ಬಿಡುತ್ತಾ ನಿಂತೆಡೆ ನಿಲ್ಲದೆ ಅತ್ತಿತ್ತ ಅಲೆಯುವುದೂ ತನ್ನೊಳಗೆ ತಾನೇ ಗುಣುಗುಟ್ಟುವುದೂ ಅವಳ ಹಾಡಾಯಿತು.


ಹೊನ್ನಮ್ಮನಿಗೆ ತನ್ನ ಸೊಸೆ ರುದ್ರಮ್ಮನನ್ನು ಕಂಡರಾಗದು.

ಅವಳ ಮೇಲಿನ ಹಿತವೆಂದರೆ ಅಷ್ಟಷ್ಟೇ, ಹೊನ್ನಮ್ಮನು ಮನೆವಾರ್ತೆ ಕೆಲ

೮೪----------------------------------------------------------


ಸದ ಅಗ್ಗು ಜಗ್ಗು ನೋಡಿ ಮನೆಗೆ ಬೇಕಾದ ಒಡವೆಗಳನ್ನು ರೇಖೆಮಾಡು

ವುದರಲ್ಲಿ ಬಲು ಜಾಣೆಯಾಗಿದ್ದಳು. ಮನೆಗೆ ಒಪ್ಪಿದ ಎಲ್ಲಾ ಕೆಲಸಗಳ ಮೇಲ್ವಿಚಾರವನ್ನೂ ತಾನೇ ಸ್ವತಹ ನೋಡುತ್ತಿದ್ದಳು. ಉದ್ಯೋಗ ಪ್ರಿಯರಾದವರಿಗೆ ನಿರುದ್ಯೋಗಿಗಳನ್ನು ಕಂಡರೆ ಹೇಗೆ ತಾನೇ ಮೆಚ್ಚೀತು? ಸಹನವಾದೀತು? ರುದ್ರಮ್ಮನು ಅಡಿಗೆಪಡಿಗೆ ಕೆಲಸವಾವುದನ್ನೂ ನೋ

ಡದೆ ತನ್ನ ಉಡಿಗೆತೊಡಿಗೆ ಮುಂತಾದ ಶೃಂಗಾರಕ್ಕೇನೇ ದಿವಸ ತೆಗೆಯು

ತಿದ್ದಳು. ಇದರಿಂದ ಹೊನ್ನಮ್ಮನು ಸೊಸೆಗೆ ಮೊದಲು ಮೊದಲು ಕೆಲ

ಸ ಮಾಡುವಂತೆ ಹೇಳುತ್ತಿದ್ದಳು. ರುದ್ರಮ್ಮನಾದರೋ ಪುಟ್ಟಮ್ಮನ

ಮಗಳು; ಅವಳು ಇಂಥ ಹತ್ತಿಪ್ಪತ್ತು ಅತ್ತೆಯರನ್ನಾದರೂ ನುಂಗಿಬಿಡು

ವಳು; ಊಟದ ಹೊತ್ತಿಗೆ ಮಾತ್ರ ಅಡಿಗೆ ಕೋಣೆಯಲ್ಲಿ ಸೇರುತ್ತಿದ್ದಳು.

ಒಂದು ಹುಲ್ಲುಕಡ್ಡಿ ಕೂಡ ಈಚೆಯಿಂದ ಆಚೆಗಿಡಳು. ಅತ್ತೆ ಸೊಸೆಯರಿಗೆ

ಅನುದಿನ ಜಗಳ, ಮುದ್ದಣ್ಣನು ಆಗ ಹೆಂಡತಿಯ ಪಕ್ಷವನ್ನು ಹಿಡಿಯುತ್ತಿ

ದ್ದನು. ಮಗನು ಮುದ್ದುಮಗ, ಅವನ ಬುದ್ಧಿಯನ್ನು ಬದಲಾಯಿಸಿದವಳು

ಆ ಹೆಂಡತಿ. ಆದುದರಿಂದ ಸೊಸೆಯನ್ನು ಕಂಡಾಗಲೆಲ್ಲಾ ಕಲಿಲಕ್ಷ್ಮಿ”

ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದಳು. ಮತ್ತು ಮಗನ ಮೇಲಿನ

ಪ್ರೀತಿಯಿಂದ ಆ ಸೊಸೆಯ ಸೇಡು ತೀರಿಸಿಕೊಳ್ಳಲಿಕ್ಕೆ ಕೈಲಾಗದೆ ಸುಮ್ಮ

ನಿದ್ದಳು.


ಈಚೆಗೆ ತನ್ನ ಮಗನು ದುಂದು, ಜುಗಾರು, ದುಸ್ಸಂಗ, ಮುಂ

ತಾದುವುಗಳಿಂದ ಕೆಟ್ಟು ಹೋಗುತ್ತಿರುವುದನ್ನು ಕಂಡು, ಇವೆಲ್ಲಾ ದುರ್ನ

ಡತೆಗಳಿಗೆ ಇವನ ಹೆಂಡತಿಯೇ ಕಾರಣಳೆಂದೂ, ಅವಳು ಹೋದ ಮನೆಗೆ

ಮಣ್ಣು ಹಾಕುವವಳೆಂದೂ ಆ “ಜೈಷ್ಟ ಲಕ್ಷ್ಮಿಯನ್ನು ಕೈಹಿಡಿದು ತನ್ನ

ಮಗನು ಕೆಟ್ಟು ಹೋದನೆಂದೂ, ಅವಳು ಈ ಮನೆಗೆ ಕಾಲಿಟ್ಟಿದ್ದರಿಂದ

ತನ್ನ ಮನೆಯೇ ಹಾಳಾಯಿತೆಂದೂ, ನೋಡಿದಂತೆಲ್ಲಾ ಬೈಯುತ್ತಿದ್ದಳು.

ಈ ತೊಂದರೆಗಳಿಂದ ದೂರವಾಗಬೇಕೆಂದು ಗಂಡನೊಡನೆ ಪೇಟೆಯ

ಬಂಗಲೆಗೆ ಸೇರಿದಳು. ಒಂದೇ ಒಂದು ವರುಷ ಕಳಿದಿದೆ ಮಾತ್ರ, ಆ

೮೫-----------------------------------------------------------


ಹಾಳು ರೋಗವು ಮುದ್ದಣ್ಣನಿಗೆ ಹತ್ತಿದುದರಿಂದ ಪುನಃ ಮನೆ ಸೇರಬೇ

ಕಾಯಿತು. ಈಗಂತೂ ಆ ಅತ್ತೆಯ ಬಾಯಿಯಲ್ಲಿ ಬಿದ್ದಳು. ಮುದ್ದ

ಣ್ಣನು ಹಾಸಿಗೆ ಹಿಡಿದಿರುವನು. ಅತ್ತೆಯ ಬೈಗಳು ದಿನದಿನಕ್ಕೆ ಇಮ್ಮಡಿ, ಮುಮ್ಮಡಿ, ನಾಲ್ಕಡಿಯಾಯಿತು. ರುದ್ರಮ್ಮನು ಬಲು ಕಷ್ಟದಲ್ಲಿ

ಬಿದ್ದಳು. ಗಂಡನು ಕಠಿಣರೋಗದಲ್ಲಿ ನರಳುತ್ತಾನೆ. ಅತ್ತೆಯಂತೂ ನೋಡಿದಂತೆಲ್ಲಾ ಬೈಯುವುದೂ, ಗಂಡನು ಮಲಗಿರುವ ಕೋಣೆಗೆ ಸಹಾ ಹೋರಗೊಡದಿರುವುದೂ, ಒಂದೊಂದು ವೇಳೆ ಊಟಕ್ಕೇನೇ ಇಕ್ಕದಿರು

ವುದೂ ಹೀಗೆ ಬಗೆಬಗೆಯ ದುಃಖದಿಂದ ಪೀಡಿಸುತ್ತಿದ್ದಳು. ಮುಂಜಾನೆ

ಯಿಂದ ಸಂಜೆಯವರೆಗೆ ಆ ಸೊಸೆಗೆ ಸಹಸ್ರನಾಮ ಜಪಮಾಡುವಳು.

ಮಗನ ಈ ಎಲ್ಲಾ ದುಃಖವೂ ಅವನ ಕೈಹಿಡಿದ ಈ ಹಾಳು ಮು........

ಯಿಂದ ಪ್ರಾಪ್ತವಾಯಿತೆಂದೂ ಅವಳಿಗೆ ಬೆರಳು ತೋರಿಸಿ, ಕೆಲವು ವೇಳೆ

ತಿವಿದು ಹೇಳುತ್ತಿದ್ದಳು. ಒಂದೆಡೆ ನಿಲ್ಲಲಿಕ್ಕೂ ಒಂದೆಡೆ ಕೂತುಕೊಳ್ಳ

ಲಿಕ್ಕೂ ಬಿಡಳು; ರಾತ್ರಿ ಮಲಗಲಿಕ್ಕೂ ಇಲ್ಲ. ದೀಪ ಹಿಡಿದು ಹುಡುಕಿ

ಅಲ್ಲಿಗೂ ಬಂದು ಬೈಯುವಳು. ಇದರಿಂದ ಆ ಸೊಸೆ ರುದ್ರಮ್ಮನಿಗೆ

ಒಂದು ದಿನವನ್ನು ಒಂದು ಯುಗದಂತೆ ಕಳಿಯಬೇಕಾಯಿತು.


ಹೊನ್ನಮ್ಮನು ತನ್ನ ಮಗನ ಬಳಿ ಕುಳಿತು ಹೀಗೆ ಹೇಳುವಳು. “ಈಗ

ನಿನ್ನನ್ನು ನಾನೇ ನೋಡಬೇಕು. ಹೆಂಡತಿಯ ಮಾತು ಕೇಳಿ ಪೇಟೆಯ

ಬಂಗಲೆಗೆ ಸೇರಿದೆ. ಹೆತ್ತು ಹೊತ್ತು ಸಾಕಿದ ನನ್ನ ಮಾತು ಕೇಳದೆ ಆ

ಶೃಂಗಾರದ ಬೊಂಬೆಯೊಟ್ಟಿಗೆ ಹೋಗಿಬಿಟ್ಟೆ. ಈಗ ಈ ಕಷ್ಟ ಕಾಲದಲ್ಲಿ

ಸಾಯುವ ಹೊತ್ತಿಗೆ ಯಾರಿದ್ದಾರೆ? ನಾನೇ ಮುದುಕಿ ಕಷ್ಟ ಪಡಬೇಕು,

ನಿದ್ದೆ ಬಿಡಬೇಕು, ಅಳಬೇಕು, ಕಣ್ಣೀರು ಸುರಿಸಬೇಕು,” ಎಂದು ಜರಿಯು

ವಳು, ಮತ್ತು ಆ ಸೊಸೆಯ ಮುಂದೆ ಹೋಗಿ “ನಿನ್ನ ಆ ಸೊಟ್ಟ ಮೋರೆ

ಯನ್ನು ನನ್ನ ಮಗನಿಗೆ ತೋರಿಸಬೇಡ, ನನ್ನ ಮುದ್ದು ಮಗನನ್ನು

ತೆಗೆದುಬಿಟ್ಟೆ, ಹಾಳುಮಾಡಿದೆ, ನನ್ನ ಮನೆಯೇ ಹೋಯಿತು. ಜಕ್ಕ

ಜವ್ವನಿಯರಾದ ಇಂಥಾ ರಂ......ಯವರಿಂದ ಊರೇ ಹಾಳಾಯಿತು.

೮೬-----------------------------------------------------------


ಮುತ್ತಿನಂಥ ಮಕ್ಕಳನ್ನು ಕೆಡಿಸಿಬಿಡುವರು” ಎಂದು ಕೆಟ್ಟ ಬೈಗಳಿಂದ ಬೈಯುತ್ತಿರುವಳು.

ಮುದ್ದಣ್ಣನ ರೋಗವು ದಿನದಿನಕ್ಕೆ ಜಾಸ್ತಿಯಾಗುತ್ತಾ ಬಂದು

ಈಗ ಸಾಯುವ ಅವಸ್ಥೆಯಲ್ಲಿ ಇರುತ್ತಾನೆಂಬ ಸಂಗತಿಯೂ, ಅವನ

ಸಾಲಸೋಲದ ಸುದ್ದಿಯೂ, ಇತ್ತ ಸೌಖ್ಯಪರಕ್ಕೂ ತಾರಾನಾಥಪ್ರರಕ್ಕೂ ಮುಟ್ಟಿತು. ಆ ಹುಡುಗನ ಮರ್ಜಿಯು ಅಷ್ಟು ಚಲೋದ್ದಲ್ಲವೆಂದು

ಮೊದಲೇ ತೆಗೆದಿಟ್ಟಿದ್ದರೂ, ಎಂಥಾ ದುರ್ನಡತೆಯವನನ್ನಾ ದರೂ, ಇಂಥಾ

ಕಠಿಣ ಪ್ರಸಂಗದಲ್ಲಿಯೂ ವಿಚಾರಿಸದೆ ಕುಳಿತರೆ ಜನಾಪವಾದಕ್ಕೆ ಗುರಿ ಯಾಗಬೇಕಾದೀತೆಂದು, ಸಂಜೀವ ಶೆಟ್ಟಿ ರೂ ಶ್ರೀನಿವಾಸ ಹೆಗ್ಗಡೆಯರೂ ಮುತ್ತೂರಿಗೆ ಬಂದರು. ಮುದ್ದಣ್ಣನ ದೇಹದ ಸ್ಥಿತಿ, ಸಾಲದ ತಗಾದೆ,

ಇವುಗಳನ್ನು ಕಂಡು ಬಲು ಬೇಸರಪಟ್ಟರು, ಕೂಡಲೇ ಪ್ರಖ್ಯಾತನಾದ

ಒಬ್ಬ ವೈದ್ಯನನ್ನು ಕರೆಯಿಸಿ ಮದ್ದು ಕೊಡಿಸುವ ಏರ್ಪಾಡು ಮಾಡಿ

ದರು. ಒಂದೆರಡು ದಿವಸಗಳಲ್ಲಿ ರೋಗಿಯು ಗೆಲಮೊಗವಾದನು. ಈ

ವೈದ್ಯನ ಮದ್ದು ರೋಗಕ್ಕೆ ತಗಲಿತೆಂದು ಎಲ್ಲರೂ ಸಂತೋಷಪಟ್ಟರು.

ರೋಗದ ಬಲವು ಕುಂದಿದ ಚಿಹ್ನೆಯು ಪ್ರತಿದಿನವೂ ತೋರಿಬರುತ್ತಿತ್ತು.

ಮಗನನ್ನು ನೋಡಿ ಹೊನ್ನಮ್ಮನಿಗೂ ಸಂತೋಷವಾಯಿತು. ತನ್ನ

ಮುದ್ದು ಮಗನು ಬದುಕುವನೆಂದು ಕಂಡುಬಂದುದರಿಂದ ಮನೆಯ ಆಸ್ತಿ

ಪಾಸ್ತಿಯ ಮೇಲೆ ಆಸೆ ಹುಟ್ಟಿತು. ಸಂಜೀವ ಶೆಟ್ಟರನ್ನೂ ಶ್ರೀನಿವಾಸ ಹೆಗ್ಗಡೆಯರನ್ನೂ ನೋಡಿ ಹೊನ್ನಮ್ಮನು ಹೀಗೆ ಹೇಳಿದಳು:


“ಈ ಆಸ್ತಿ, ಮನೆ, ಸೊತ್ತುಗಳು ನಿಮ್ಮ ಮುದ್ದಣ್ಣನಿಗೆ, ಅವನು

ಉಳಿಸಿದರೆ ಅವನಲ್ಲಿ ಹುಟ್ಟಿದ ಮಕ್ಕಳಿಗೆ ಹೊರತು ಮುದುಕಿಯಾದ

ನನಗೇನು ಬೇಕು? ನನ್ನ ಈ ಮುದ್ದು ಮಗನ ಗ್ರಹಚಾರ ಕೆಟ್ಟಿದೆ.

ಬಹಳೇ ನಷ್ಟ ಮಾಡಿದನು. ನನ್ನ ಕಣ್ಣ ಮುಂದೆ ಅವನು ಸಿವಿಲ್

ಖೈದಿಗೆ ಹೋಗುವುದನ್ನು ನೋಡಲಾರೆ. ನೀವು ನಮ್ಮ ನೆಂಟರು,

ಆಪ್ತರು, ನಮಗೆ ಬೇಕಾದವರು ನಿಮಗಿಂತ ಹೆಚ್ಚಿನವರು ನನಗಾರೂ

೮೭-------------------------------------------------------


೮೭ -

ಇಲ್ಲ, ಆದುದರಿಂದ ಸಾಲಗಾರರನ್ನೆಲ್ಲಾ ಬರಮಾಡಿಕೊಂಡು ಲೆಕ್ಕ

ಮಾಡಿ ಅವರಿಗೆ ಸಲತಕ್ಕದ್ದನ್ನು ಕೊಡಿಸಿ ನನ್ನ ಮಗನನ್ನು ಋಣಮು

ಕ್ತನನ್ನಾಗಿ ಮಾಡಿಸಿರಿ. ಅಷ್ಟೊಂದು ದಯವಿಡಿರಿ! ಅವನು ಎಂಥವನೇ

ಇರಲಿ, ಅದನ್ನು ಇನ್ನೂ ಎಣಿಸಿದರೆ ಪ್ರಯೋಜನ ಇಲ್ಲ' ಎಂದು

ಕಣ್ಣೀರು ಸುರಿಸಿದಳು.


ಕೂಡಲೇ ಸಂಜೀವ ಶೆಟ್ಟರೂ ಶ್ರೀನಿವಾಸ ಹೆಗ್ಗಡೆಯರೂ ಅವನ

ಬಂಗಲೆಗೆ ಹಾಗೂ ಅವನ ಭಂಡಸಾಲೆಗೆ ಹೋಗಿ, ಮುದ್ದಣ್ಣನ ಸೊತ್ತು ಗಳೇನೇನಿವೆಯೋ ಅವೆಲ್ಲವನ್ನೂ ವಶಮಾಡಿಕೊಂಡರು. ತರುವಾಯ ಅವನ ಸಾಲಗಾರರೆಂಬವರನ್ನೆಲ್ಲಾ ಬರಮಾಡಿಕೊಂಡು ಕೋರ್ಟು ದಾವೆಗೆ ಕೈ

ಕೊಟ್ಟವರ ಲೆಕ್ಕವನ್ನೂ, ಕೋರ್ಟಿಗೆ ಹೋಗಲು ಉದ್ಯುಕ್ತರಾದವರ

ಲೆಕ್ಕವನ್ನೂ ಮೊದಲು ಮಾಡಿಸಿ, ಅವರನ್ನು ಸಮಾಧಾನಪಡಿಸಿದರು.

ಆ ಬಳಿಕ ಇತರ ಸಾಲಗಾರರ ಲೆಕ್ಕ ಮಾಡಿ ನೋಡಿದ್ದಲ್ಲಿ ಮುದ್ದಣ್ಣನ

ಸಾಲದ ಮೊತ್ತವು ಮೂವತ್ತೆರಡು ಸಾವಿರಕ್ಕೆ ಹೋಗಿತ್ತು. ಅವನ

ಸಾರಟು, ಕುದುರೆ, ಬಂಗಲೆ, ಮುಂತಾದುವುಗಳನ್ನೆಲ್ಲಾ ಮಾರಿಬಿ

ಟ್ಟ ರೂ, ಉಳಿದ ಸಾಲವು ಹದಿನೆಂಟು ಸಾವಿರವಾಯಿತು. ಇದಕ್ಕಾಗಿ ಹೊನ್ನಮ್ಮನೂ ಮುದ್ದಣ್ಣನೂ ಕೂಡಿ ತಮ್ಮ ಪೂರ್ಣ ಆಸ್ತಿಯನ್ನು

ಈಡು ಕೊಟ್ಟು ಹಣಪಡದು ಚಿಲ್ಲರೆ ಸಾಲಗಳನ್ನೆಲ್ಲಾ ಪೂರ್ಣವಾಗಿ ತೀರಿಸಿ

ದರು. ಮುದ್ದಣ್ಣನು ತನ್ನ ಆರುವರ್ಷದ ಆಡಳಿತೆಯಲ್ಲಿ ಎಷ್ಟು ನಷ್ಟಮಾ ಡಿದನೆಂಬುದನ್ನು ವಾಚಕರೇ ಲೆಕ್ಕಿಸಬಹುದಾಗಿದೆ. ಆದರೂ ಪ್ರಕೃತಕ್ಕೆ

ಇಷ್ಟು ವ್ಯವಸ್ಥೆ ಮಾಡಿಟ್ಟು ಹೋದರು. ಮುದ್ದಣ್ಣನ ಜಾಡ್ಯವು ಪೂರ್ಣ

ಗುಣ ಕಂಡರೂ, ಒಂದು ಕಣ್ಣು ಮಾತ್ರ ಊನವಾಯಿತು. ಅದರ

ದೃಷ್ಟಿಯೇ ಕೆಟ್ಟು ಹೋಯಿತು. ಮತ್ತು ಆ ಹಾಳು ವಾತದ ಬಾಧೆ

ಯಿಂದ ಬೆನ್ನು ಗೂನಾಗಿ ಹೋಯಿತು. ಇದರಿಂದ ಯಾವಾಗಲೂ

ಒಂದಿಷ್ಟು ಬಗ್ಗಿ ನಡಿಯುವ ಪ್ರಯಾಸ ತಪ್ಪಲಿಲ್ಲ. ಮಿಕ್ಕ ಎಲ್ಲಾ

ಜಾಡ್ಯವೂ ಪ್ರಕೃತ ಶಮನವಾಯಿತು.

೮೮ -------------------------------------------------------


ಈ ರೋಗದಿಂದ ಗುಣಹೊಂದಿ ಎದ್ದ ನಂತರ ಇಂಥ ಕಠಿಣ ರೋಗ

ಗಳು ಕಾಣಿಸಿಕೊಳ್ಳದಿದ್ದರೂ, ಇದರ ನೆನಪು ಪೂರ್ಣ ಮಾಯವಾಗದಂತೆ

ವರುಷಕ್ಕೆ ನಾಲ್ಕಾರು ವೇಳೆ ಒಂದುದೊಂದು ವಿಧದಿಂದ ಈ ರೋಗದ

ಬಾಧೆಯು ತಟ್ಟದೆ ಇರಲಿಲ್ಲ. ತನ್ನ ಯೌವನದ ಭರದಲ್ಲಿ ಸಂಪಾದಿಸಿ

ಕೊಂಡ ಈ ರೋಗಗಳನ್ನು ಶಾಸ್ತ್ರ ಸಮ್ಮತವಾಗಿ ಅರ್ಧಾಂಗಿ ಎನ್ನಿಸುವ

ತನ್ನ ಸತಿಯಳಿಗೂ ಕೊಡದೆ ಇರಲಿಲ್ಲ. ಗಂಡನ ಸಂಪಾದನೆಯನ್ನು

ಉಂಡು ತೇಗಿದ ತರುಣಿಯು ಈಗ ಹಾಸಿಗೆ ಹಿಡಿದು ನರಳುತ್ತಿರುವಳು.

ತವರು ಮನೆಯನ್ನು ಸೇರಿ ತನ್ನ ತಂದೆತಾಯಿಗಳ ಆರೈಕೆಯಲ್ಲಿ ಜೀವ ಉಳಿಸಿಕೊಳ್ಳುವುದೇ ದುಸ್ತರವಾಯಿತು. ರೋಗಹತ್ತಿದುದರಿಂದ ಅವಳ ಸೌಂದರ್ಯವೆಲ್ಲಾ ಮಾಯವಾಗಿ ಹೋಗಿ, ಮೊದಲು ನೋಡಿ ಪರಿಚಿತಿ

ಯುಳ್ಳವರು ಈಗ ಗುರುತಿಸುವದು ಕೂಡ ಪ್ರಯಾಸವಾಗುವಷ್ಟು ಬದ

ಲಾಗಿ ಹೋಗಿದ್ದಳು. ತಲೆಯ ಹಾಗೂ ಕಣ್ಣು ಹುಬ್ಬಿನ ಕೂದಲುಗ

ಳೆಲ್ಲಾ ಬಿಟ್ಟು ಹೋದುವು. ಇಂಥ ಕೆಟ್ಟ ರೋಗಗಳಿಂದ ಅವಳಲ್ಲಿ ಸಂತ

ತಿಯೇ ಆಗಲಿಲ್ಲ. ಒಂದೆರಡು ಸಲ ಗರ್ಭೋತ್ಪತ್ತಿಯಾದರೂ ಅದೂ

ನಾಲ್ಕಾರು ಮಾಸಗಳಲ್ಲಿ ಸ್ರಾವವಾಗಿ ಹೋಯಿತು. ಇವಳಲ್ಲಿ ಗರ್ಭ

ನಿಂತು ಮಕ್ಕಳು ಹುಟ್ಟಿ ಸಂತತಿಯಾಗಬೇಕೆಂದು ಎಷ್ಟೆಷ್ಟೋ ಮದ್ದು ಮಾಡಿಸಿದರು. ಸಿಕ್ಕಸಿಕ್ಕವರು ಹೇಳಿದಂತೆ ದೇವರಿಗೆ ಹರಿಕೆ ಹೇಳಿಕೊಂ

ಡರು. ಅದೊಂದೂ ಫಲಕ್ಕೆ ಬರಲಿಲ್ಲ. ಒಬ್ಬ ಯೋಗ್ಯ ವೈದ್ಯನು ಈ ದಂಪತಿಗಳನ್ನು ಪರೀಕ್ಷಿಸಿ ಹೇಳಿದ್ದೇನಂದರೆ,-“ಇವರಿಬ್ಬರ ಶರೀರಸ್ಥಿತಿಯು

ಪೂರ್ಣ ಕೆಟ್ಟಿದೆ. ಇವರಿಗೆ ಹತ್ತಿದ ರೋಗವೇ ಇವರನ್ನು ಈ ಅವಸ್ಥೆಗೆ

ಹಾಕಿತು. ಇದರಿಂದ ಈ ದಂಪತಿಗಳಿಗೆ ಈ ಜನ್ಮದಲ್ಲಿ ಮಕ್ಕಳು ಹುಟ್ಟು

ವದೆಂಬ ಆಶೆಯನ್ನು ಕನಸು ಮನಸಿನಲ್ಲಿಯೂ ನೆನೆಸುವುದು ಬೇಡ”

ಎಂದು ಹೇಳಿದನು. ಪುನಃ ಮುದ್ದಣ್ಣನನ್ನು ನೋಡಿ, “ನೀವು ವ್ಯಭಿಚಾ

ರದ ದುರ್ವ್ಯಸನಕ್ಕೆ ತುತ್ತಾಗಿ ನಿಮ್ಮ ದೇಹವನ್ನೂ ನಿಮ್ಮ ಸತಿಯನ್ನೂ

ಕೆಡಿಸಿ ಮುಂದಿನ ಸಂತತಿಯನ್ನೂ ಹಾಳುಮಾಡಿಬಿಟ್ಟಿರಿ. ನಿಮ್ಮ ತಪ್ಪಿ

೮೯-------------------------------------------------------

ನಿಂದ ಯಾರೆಲ್ಲಾ ಶಿಕ್ಷಿಸಲ್ಪಟ್ಟರು. ತಮ್ಮಾ! ದುರ್ವ್ಯಸನದವರ ಗತಿ ಇದೇ ತಿಳಿಯಿತೇ?” ಎಂದು ಹೇಳಿ ಹೊರಟುಹೋದರು.


ಅಶಿಕ್ಷಿತನೂ ಅವಿವೇಕಿಯೂ ಆದ ಮುದ್ದಣ್ಣನು ತನ್ನ ಅಲ್ಪಕಾ

ಲದ ಯೌವನದ ಹಾಗೂ ಅಧಿಕಾರದ ಭರದಲ್ಲಿ ಜೀವಮಾನವೆಲ್ಲಾ

ಮರೆಯದಂಥ ದುರವಸ್ಥೆಯನ್ನು ಹೊಂದಿದನು. ಮುತ್ತೂರಿನ ಸಂಸತ್ಸ ಮೃದ್ಧವಾದ ಆ ಮನೆತನವನ್ನೇ ಕೆಡಿಸಿಬಿಟ್ಟನು. ವಿಚಾರಹೀನನಾಗಿ

ಕೈಬೀಸಿ ಖರ್ಚು ಮಾಡಲು ಕಲಿತ ಆ ಯುವಕನು ಇನ್ನು ಮುಂದೆ ಸಾ

ಲದ ಬಡ್ಡಿಯನ್ನು ತೆತ್ತು ಅದನ್ನು ತೀರಿಸಿ ಆಸ್ತಿಯನ್ನು ಉಳಿಸುವನೆಂದು

ಯಾರೂ ನೆನಸುವಂತಿಲ್ಲ.


ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತ |

ಏಕೈಕ ಮನರ್ಥಾಯ | ಕಿಮುತ್ರ ಚತುಷ್ಟಯಂ ||

“ಯಾವನವೂ, ಧನವೂ, ಪ್ರಭುತ್ವವೂ, ಅವಿವೇಕವೂ, ಇವುಗಳಲ್ಲಿ

ಒಂದೊಂದೇ ಇದ್ದರೆ ಮನುಷ್ಯನನ್ನು ಕೆಡಿಸಿಬಿಡುವುವು. ಹೀಗಿರುವಲ್ಲಿ

ಈ ನಾಲ್ಕೂ ಒಬ್ಬನಲ್ಲೇ ಸೇರಿದರೆ ಕೇಳುವುದೇನು?”

-----------


ಹದಿಮೂರನೆಯ ಅಧ್ಯಾಯ.


ಪಾಠಕರೇ! ನಾವು ಈಗ ಆನಂದನನ್ನು ನೋಡೋಣ. ಅವ

ನೇನು ಮಾಡುತ್ತಿರುವನೆಂಬುದನ್ನು ವಿಚಾರಿಸೋಣ. ಅವನು ಮದರಾ

ಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ. ಎ. ಕಲಿತು ಆ ಪರೀಕ್ಷೆಯಲ್ಲಿ ಉತ್ತೀ

ರ್ಣನಾಗಿ ಪ್ರಥಮಸ್ಥಾನವನ್ನು ಪಡೆದನು. ತಾನು ವಕೀಲಿ ಉದ್ಯೋ

ಗಕ್ಕೆ ಸೇರಲು ತಕ್ಕವನಿದ್ದೇನೆಂದು ಮನಗಂಡುದರಿಂದ ಅದಕ್ಕೆ ಬೇಕಾದ

ಶಿಕ್ಷಣ ಹೊಂದುವುದಕ್ಕಾಗಿ ಲೊ ಕೊಲೇಜಿಗೆ ಸೇರಿ ಬಿ. ಯಲ್. ಪರೀಕ್ಷೆ

ಕೊಟ್ಟು ಅದರಲ್ಲಿಯೂ ಜಯಶೀಲನಾದನು. ಈಚೆಗೆ ಹೈಕೋರ್ಟು

೯೦----------------------------------------------------


ಸನದು ಪಡದುಕೊಂಡನು. ಮದರಾಸಿನಲ್ಲಿ ತಾನು ಕಲಿಯಬೇಕಾದ

ವಿಷಯಗಳನ್ನು ಕಲಿತು ಮುಗಿಸಿದರೂ, ಆನಂದನಿಗೆ ಪರಿಚಿತಿಯುಳ್ಳವರ

ನೇಕರು ಮದ್ರಾಸಿನಲ್ಲೇ ನಿಂತು ಅಲ್ಲಿ ವಕಾಲತು ಕೆಲಸ ನಡಿಸಬೇಕೆಂದು

ಬಹಳೇ ಒತ್ತಾಯಪಡಿಸಿದುದರಿಂದ ತನ್ನ ಮಿತ್ರ ಮಂಡಳಿಯವರ ಮಾ

ತನ್ನು ಮೀರಲಾರದೆ, ಹಾಗೆ ನಿಲ್ಲುವ ಸಂಗತಿಯಲ್ಲಿ ಮಾವನ ಹಾಗೂ

ತಂದೆಯ ಅನುಮತಿಯನ್ನು ಪಡಕೊಂಡನು. ಆ ಕಾಲದಲ್ಲಿ ಮದ್ರಾಸಿನ ವಕೀಲರಲ್ಲೆಲ್ಲಾ ಹೆಸರುವಾಸಿಯನ್ನು ಹೊಂದಿದ್ದ ಬ್ಯಾರಿಷ್ಟರ್ ಬಿ. ಕೆ.

ಶ್ರೀನಿವಾಸ ಐಯಂಗಾರ್ ಎಂಬವರು ಆನಂದನ ಸ್ನೇಹಿತರುಗಳಲ್ಲಿ ಒಬ್ಬ ರಾಗಿದ್ದರು. ಅವರು ಆನಂದನ ವಾಕ್ಚಾತುರ್ಯತೆ ಹಾಗೂ ಅವನ

ಸೂಕ್ಷ್ಮ ಬುದ್ಧಿಗೆ ಮೆಚ್ಚಿ ತನ್ನ ಒಟ್ಟಿನಲ್ಲಿ ವಕಾಲತು ಕೆಲಸ ನಡಿಸಲಿಕ್ಕೆ ಸಹಾಯಕನಾಗಿ ನಿಲ್ಲುವಂತೆ ಕೇಳಿಕೊಂಡರು. ಶ್ರೀನಿವಾಸ ಐಯಂಗಾರ

ರಷ್ಟು ಸಮರ್ಥರಾದ ವಕೀಲರು ಆ ಕಾಲದಲ್ಲಿ ಮದ್ರಾಸಿನಲ್ಲಿ ಮತ್ತಾರೂ ಇರಲಿಲ್ಲ. ಸಿವಿಲ್, ಕ್ರಿಮಿನಲ್ ಈ ಎರಡು ಬಾಬಿನ ಅದ್ವಿತೀಯ ಶಿಖಾಮಣಿಯರಾಗಿದ್ದರು. ಯಾವುದೊಂದು ದಾವೆಯಲ್ಲಿ ಶ್ರೀನಿವಾಸ ಐಯಂಗಾರರು ಒಂದು ಪಕ್ಷದಲ್ಲಿ ಇದ್ದಾರೆಂದರೆ, ಅವರ ಪ್ರತಿಕಕ್ಷಿಯ

ವಕಾಲತು ಹಿಡಿಯುವವರಿಗೆ ಒಂದು ವಿಧದ ಭಯವುಂಟಾಗದೆ ಇಲ್ಲ.

ಐಯಂಗಾರರ ಮಾತೆಂದರೆ ಕೋರ್ಟಿನ ಒಳಗೂ ಹೊರಗೂ ಬಹಳ

ಮಾನ್ಯತೆ. ಅವರನ್ನು ಎಲ್ಲರೂ ಗೌರವಿಸುತ್ತಿದ್ದರು. ಇದರಿಂದ

ಐಯಂಗಾರರಿಗೆ ಬರುವಷ್ಟು ವಕಾಲತು ಮತ್ತೆ ಯಾರಿಗೂ ಬರುತ್ತಿರ

ಲಿಲ್ಲ. ಹೀಗಾಗಿ ಅವರಿಗೆ ಒಂದಿಷ್ಟಾದರೂ ಬಿಡುವೇ ಇರಲಿಲ್ಲ. ಎಷ್ಟು

ಹೊತ್ತಿಗೆ ನೋಡಿದರೂ ಅವರ ಬೈಠಕುಖಾನೆಯಲ್ಲಿ ಜನರ ಕಲಕಲ,

ಈ ಕಾರಣದಿಂದ ಐಯಂಗಾರರಿಗೆ ಮೈತುಂಬಾ ಕೆಲಸ. ತನಗೆ ಸಹಾ

ಯಕರಾಗಿ ಈ ಮೊದಲೇ ಮೂವರು ವಕೀಲರನ್ನು ಇಟ್ಟು ಕೊಂಡಿದ್ದರೂ

ದಿನೇದಿನೇ ಹೆಚ್ಚುತ್ತಾ ಬರುವ ವಕಾಲತಿನಿಂದ ಅದೂ ಪೂರೈಸಲಿಲ್ಲ.

ಇನ್ನೊಬ್ಬ ಯೋಗ್ಯ ವಕೀಲನನ್ನು ತನ್ನ ಸಹಾಯಕ್ಕೆ ಇಟ್ಟುಕೊಳ್ಳಬೇ

೯೧---------------------------------------------------------

ಕಂದು ಕೆಲವು ಸಮಯದಿಂದ ಹುಡುಕುತ್ತಿದ್ದರೂ ಅವರಿಗೆ ಮೆಚ್ಚುವಂಥ ಯೋಗ್ಯತೆಯುಳ್ಳವರು ಒಬ್ಬರೂ ದೊರಕಲಿಲ್ಲ. ಈಚೆಗೆ ಆನಂದನ ಪರಿ

ಚಯ ಉಂಟಾದಂದಿನಿಂದ ಇವನನ್ನು ಬಹಳೇ ಮೆಚ್ಚಿದ್ದರು; ಮತ್ತು

ತನ್ನೊಡನೆ ನಿಲ್ಲುವಂತೆ ಕೇಳಿಕೊಂಡರು. ಆನಂದನೂ ತಾನು ತೀರ ಹೊಸಬನಾದುದರಿಂದ ಐಯಂಗಾರರಂಥ ಜೊತೆಯನ್ನು ಹುಡುಕುತ್ತಿ

ದ್ದನು. ಈಗ ಅವರೊಟ್ಟಿಗೆ ಕೆಲಸ ನಡಿಸಹತ್ತಿದನು. ಐಯಂಗಾರರಿಗೆ ವಿಧೇಯನಾಗಿದ್ದು ಅವರ ಪ್ರೀತಿಗೆ ಪಾತ್ರನಾದನು. ಅವರು ತನ್ನ ಯಾ

ವತ್ತೂ ರಿಕಾರ್ಡುಗಳನ್ನೂ ಹೆಚ್ಚೇಕೆ ತನ್ನ ಹಣ ಮೊದಲಾದುವನ್ನೂ

ಸಹ ಆನಂದನ ವಶ ಒಪ್ಪಿಸುತ್ತಿದ್ದರು. ತನ್ನನ್ನು ಅಷ್ಟು ಭರವಸೆ

ಯಿಂದ ನೋಡುವ ಐಯಂಗಾರರ ವಿಷಯದಲ್ಲಿ ಆನಂದನು ವಿನಯದಿಂ

ದಲೂ ನಿಷ್ಕಳಂಕವಾದ ಭಕ್ತಿಯಿಂದಲೂ ನಡಕೊಳ್ಳುತ್ತಿದ್ದನು.


ವಾಚಕರೇ ! ಬ್ಯಾರಿಸ್ಟರ್ ಐಯಂಗಾರರನ್ನು ತನ್ನ ಸದ್ಗುಣಗಳ

ಬಲದಿಂದ ವಶಪಡಿಸಿಕೊಂಡ ಆನಂದನು ಎಷ್ಟು ಸುಗುಣಿಯಾಗಿರ ಬೇಡ?

ನಿಷ್ಠ ಪಟ ಅಂತೂ ಬಾಲಕರಂತೆ ತಿಳಿವಾದ ಬುದ್ಧಿಯುಳ್ಳ ಆನಂದನನ್ನು ಮೆಚ್ಚದವರಾರು? ಇಂಥವರೇ ನಂಬಿಗೆಗೆ ಯೋಗ್ಯರಲ್ಲವೇ? ಐಯಂಗಾರರ ಪರಿಚಿತಿಯುಳ್ಳವರೆಲ್ಲರೂ ಇವನನ್ನು ಗೌರವಿಸುತ್ತಿದ್ದರು. ಅವರ ಬಳಿಯಲ್ಲಿ ಒಳ್ಳೆ ಮರ್ಯಾದೆಯಿಂದಲೂ ಸಂಪಾದನೆಯಿಂದಲೂ ಕೆಲಸ ಮಾಡುತ್ತಿದ್ದ ಆನಂದನನ್ನು ನೋಡಿ ಕೆಲವು ಮಂದಿ ದುಷ್ಟರು ಇಲ್ಲದ ಅಪವಾದ

ವನ್ನು ಹೊರಿಸಿದರು; ಐಯಂಗಾರರಿಗೆ ಚಾಡಿ ಹೇಳಿದರು. ಆ ಮಾತು

ಬಯಲಿಗೆ ಬರಲು ಆನಂದನು ನಿರ್ದೋಷಿ ಎಂಬುದು ವ್ಯಕ್ತವಾಯಿತು.

ಇದರಿಂದ ಆನಂದನ ಸೌಶೀಲ್ಯತೆಗೆ ಮಿರುಗು (ಒಪ್ಪು) ಕೊಟ್ಟಂತಾಯಿತಲ್ಲದೆ

ಆ ದುಷ್ಟರು ಎಣಿಸಿದಂತಾಗಲಿಲ್ಲ. ಅವರ ಪ್ರಯತ್ನ ಸಫಲವಾಗಲಿಲ್ಲ.


ಐಯಂಗಾರರಿಗೆ ವಯಸ್ಸಾದುದರಿಂದಲೂ ಒಂದು ಬಗೆಯ ಜಾಡ್ಯ

ದಿಂದ ಕಣ್ಣಿನ ದೃಷ್ಟಿಯು ಹಾಳಾದುದರಿಂದಲೂ ತಾನು ಚಾವಡಿಯಲ್ಲಿ

೯೨-------------------------------------------------------------


ಕೂತುಕೊಂಡು ಕೆಲಸ ಮಾಡುವುದಲ್ಲದೆ ಕೋರ್ಟಿಗೆ ಹೋಗಿ ವ್ಯಹರಿಸು

ವಂಥ ಕೆಲಸವನ್ನು ಆನಂದನಿಗೇನೇ ಒಪ್ಪಿಸುತ್ತಿದ್ದರು. ಹಟದಿಂದ ವಾದಿಸ

ಬೇಕಾದ ಹಾಗೂ ಹೆಚ್ಚಿನ ಮಹನತು ತೆಕ್ಕೊಳ್ಳುವ ಅವಶ್ಯವುಳ್ಳ ಎಲ್ಲಾ

ದಾವೆಗಳಲ್ಲಿಯೂ ಆನಂದನ ವರ್ಚಸ್ಸೇ ಬೇರೆ. ತನ್ನ ಸಾಧನೆಗೆ ಬಲವುಳ್ಳ ಸಾಕಷ್ಟು ಕಾರಣಗಳನ್ನು ಧೈರ್ಯದಿಂದಲೂ, ಯುಕ್ತಿಯುಕ್ತವಾಗಿ

ಯೂ ಹೇಳಿ ಸಾಧಿಸುತ್ತಿದ್ದನು. ಕೆಲವು ಸಂದರ್ಭಗಳಲ್ಲಿ ಆನಂದನು ನಿರ್ದಾಕ್ಷಿಣ್ಯವಾಗಿ, ಹಾಗೂ ನಿರ್ಭೀತಿಯಿಂದ ಚರ್ಚಿಸುವ ಅವನ

ಸಾಮರ್ಥ್ಯವನ್ನು ನೋಡಿ ಮಿಕ್ಕ ವಕೀಲರೆಲ್ಲರೂ ಬೆರಗಾಗುತ್ತಿದ್ದರು. ಐಯಂಗಾರರಲ್ಲದೆ ಅವನಷ್ಟು ಎದೆಯವರು ಮತ್ತಾರೂ ಇರಲಿಲ್ಲ. ಆನಂದನ ಜಾಣತನವನ್ನು ನೋಡಿದ ಇತರ ವಕೀಲರೆಲ್ಲರೂ ಆನಂದನನ್ನು ಎರಡ

ನೆಯ ಐಯಂಗಾರರೆಂದು ಅಡ್ಡ ಹೆಸರಿನಿಂದ ಕರೆಯುವುದು ರೂಢಿ

ಯಾಯಿತು. ಅವರು ಹಾಗೆ ಕರದಂತೆಲ್ಲಾ “ ನನ್ನನ್ನು ಐಯಂಗಾ

ರರ ಶಿಷ್ಯನೆಂದು ಕರೆಯಿರಿ' ಎಂದು ನಗುತ್ತಿದ್ದನು. ಆನಂದನು ಮದ್ರಾಸಿ

ನಲ್ಲಿ ಬಹಳ ಹಣವನ್ನು ಸಂಪಾದಿಸಿದನು; ಮತ್ತು ಒಳ್ಳೆ ಯಶಸ್ಸು

ಪಡೆದನು.


ಇತ್ಯ ಸೌಖ್ಯಪುರದಲ್ಲಿ ಶ್ರೀನಿವಾಸ ಹೆಗ್ಗಡೆಗೆ ಕಠಿಣ ಕಾಯಿಲೆಯು ಪ್ರಾರಂಭವಾಯಿತು. ರೋಗವು ದಿನದಿನಕ್ಕೆ ಹೆಚ್ಚಾಗುವುದು ನೋಡಿ

ಕೂಡಲೆ ಬರುವಂತೆ ಆನಂದನಿಗೆ ತಂತಿಕೊಟ್ಟರು. ಆನಂದನು ಬಂದು

ನಾಲ್ಕಾರು ದಿನಗಳಲ್ಲೇ ಶ್ರೀನಿವಾಸ ಹೆಗ್ಗಡೆಯವರು ದೈವಾಧೀನರಾದರು.

ಅವರ ಉತ್ತರಕ್ರಿಯೆಯ ವಿಧಿಗಳೆಲ್ಲಾ ಯೋಗ್ಯರೀತಿಯಿಂದ ನಡೆಯಿತು.

ಆ ಬಳಿಕ ಕುಟುಂಬದ ಮುಂದಿನ ಆಡಳಿತ ನಡೆಸುವ ವಿಷಯ ಪ್ರಸ್ತಾಪಕ್ಕೆ

ಬಂತು. ಆನಂದನ ದೊಡ್ಡ ತಾಯಿ ಚಿಕ್ಕ ತಾಯಿ ಮುಂತಾದವರೆಲ್ಲಾ

ಆನಂದನೇ ಆಡಳಿತೆಯನ್ನು ವಹಿಸಿಕೊಳ್ಳಬೇಕಾಗಿ ಬಲು ಒತ್ತಾಯ

ಮಾಡಿದರು. ಶ್ರೀನಿವಾಸ ಹೆಗ್ಗಡೆಯರ ಅಳಿಯಂದಿರಲ್ಲಿ ಆನಂದನೇ

ಹಿರಿಯನೂ, ಎಲ್ಲರ ಪ್ರೀತಿಪಾತ್ರನೂ, ವಿವೇಕಿಯೂ ಆಗಿದ್ದನು. ಆದರೆ

೯೩----------------------------------------------------------


ಕುಟುಂಬದ ಹಿರಿತನವು ಮಾತ್ರ ಈಗ ಆನಂದನ ದೊಡ್ಡ ತಾಯಿಯಲ್ಲಿತ್ತು, ಆದುದರಿಂದ ಅವರ ಹೆಸರಿನಲ್ಲಿ ಆಡಳಿತೆ ಇದ್ದು, ಪ್ರಾಯಪ್ರಬುದ್ಧ ನಾದ

ಅವರ ಮಗನು ಕೆಲಸಕಾರ್ಯಗಳನ್ನು ನಡೆಸಿಕೊಂಡು ಬರುವುದು ನ್ಯಾಯ

ವಾಗಿತ್ತು. ಹಾಗೆ ಮಾಡುವುದು ಉತ್ತಮವೆಂದು ಆನಂದನು ತನ್ನ

ಅಭಿಪ್ರಾಯವನ್ನು ಹೇಳಿದನು. ಆದರೆ ಅವನ ದೊಡ್ಡ ತಾಯಿಯು “ನಾನು

ಆ ಆಡಳಿತೆಯನ್ನು ವಹಿಸಿಕೊಳ್ಳಲೊಲ್ಲೆನು. ನಮ್ಮ ಕುಟುಂಬದ ಮಟ್ಟಿಗೆ

ಆ ಹಿರಿತನ ಕಿರಿತನವೆಂಬ ಕಾನೂನಿನ ಮಾತು ಬೇಡ, ಹಿರಿಯಳಾಗಿ

ಹುಟ್ಟಿರುವೆನೆಂಬ ಒಂದೇ ಒಂದು ಕಾರಣದಿಂದ ನನ್ನಂಥವರು ಕುಟುಂಬದ

ಆಡಳಿತೆ ಎಂಬ ಬಲು ಜವಾಬ್ದಾರಿಯ ಕೆಲಸವನ್ನು ಹೊತ್ತುಕೊಂಡು,

ತಿಳುವಳಿಕೆಯ ಸಂಕೋಚತೆಯಿಂದ ಒಂದಕ್ಕೊಂದು ಮಾಡಿ, ಮನೆತನ

ವನ್ನು ಹಾಳುಮಾಡುವುದಕ್ಕಿಂತ ಎಲ್ಲರನ್ನೂ ಸರಿಸಮಾನತೆಯಿಂದ ನಡಿಸಿ ಕುಲಮರ್ಯಾದೆಗೆ ಓಸರಬಾರದಂತೆ ಆಡಳಿತ ನಡಿಸಲು ಸಮರ್ಥರಾದ

ನಿನ್ನಂಥವರೇ ವಹಿಸಿಕೊಳ್ಳುವುದು ಎಲ್ಲಕ್ಕೂ ಮೇಲಲ್ಲವೇ? ಆದುದರಿಂದ ಆನಂದೂ! ಇಂದಿನಿಂದ ನಮ್ಮೆಲ್ಲರನ್ನೂ ನಮ್ಮ ಮನೆತನವನ್ನೂ ಕಾಪಾಡುವ ಭಾರವನ್ನು ನಿನಗೆ ಒಪ್ಪಿಸಿದ್ದೇನೆ. ಈ ಮನೆಗೆ ಸೇರಿದ ಸಕಲಸಂಪತ್ತನ್ನೂ ಆಸ್ತಿಪಾಸ್ತಿಯನ್ನೂ ನಿನ್ನ ವಶಕ್ಕೆ ಕೊಟ್ಟಿದ್ದೇನೆ. ನಾನೂ ನಮ್ಮ

ಕುಟುಂಬದ ಸರ್ವರೂ ನೀನು ಹೇಳಿದಂತೆ ನಡಕೊಳ್ಳುವೆವು.” ಎಂದು

ಖಂಡಿತ ಹೇಳಿಬಿಟ್ಟಳು.


ಅಳಿಯಕಟ್ಟಿನ ಆಡಳಿತೆಯ ಅಡಚಣಿಯನ್ನೆಲ್ಲಾ ಅಂತ ಆನಂದನು

ಅಷ್ಟೊಂದು ಇಷ್ಟವಿಲ್ಲದಿದ್ದರೂ ವಹಿಸಿಕೊಳ್ಳಬೇಕಾಯಿತು.


ಆನಂದನು ಕುಟುಂಬದ ಆಡಳಿತೆಗೆ ಕೈಕೊಡುವ ಪ್ರಸಂಗವೊದಗಿ

ದುದರಿಂದ ಮದ್ರಾಸಿನಲ್ಲಿರುವ ತನ್ನ ಬಿಡಾರವನ್ನು ಮಂಗಲಪುರಕ್ಕೆ ತರಿಸಿಕೊಳ್ಳಬೇಕಾಯಿತು. ಮಂಗಲಪುರವು ಜಿಲ್ಲೆಯ ಪ್ರಧಾನಪಟ್ಟಣ

ವಾಗಿದ್ದು, ಅಲ್ಲಿ ಜಿಲ್ಲಾ ಕಲೆಕ್ಟರರ ಕಚೇರಿ, ಡಿಸ್ಟಿಕ್ಸ್ ಜಡ್ಡರ ಕೋರ್ಟು , ಸಬ್‌ಕೋರ್ಟ ಇವುಗಳಿದ್ದು ಬಲು ಹೆಸರುಗೊಂಡ ಪಟ್ಟಣವಾಗಿತ್ತು.

೯೪------------------------------------------------------


ಆ ಪಟ್ಟಣವು ಸೌಖ್ಯಪುರದಿಂದ ಹದಿನೈದು ಮೈಲು ದೂರದಲ್ಲಿದ್ದುದರಿಂದ ವಾರಕ್ಕೊಮ್ಮೆ ರಜಾದಿನಗಳಲ್ಲಿ ಮನೆಗೆ ಹೋಗಿ ಬರಲು ಅನುಕೂಲವುಳ್ಳು ದಾಗಿತ್ತು. ಆದುದರಿಂದ ಅಲ್ಲಿ ನಿಂತು ವಕಾಲತು ಕೆಲಸ ನಡಿಸುವುದು

ಸರ್ವ ವಿಷಯಗಳಲ್ಲಿಯೂ ಯೋಗ್ಯವೆಂದು ನಿಶ್ಚಯಿಸಿದನು.


ಸೌಖ್ಯಪುರದ ಕುಟುಂಬದ ಆಡಳಿತೆಯನ್ನು ವಹಿಸಿಕೊಂಡ ಆನಂದನು

ಮನೆಯ ಸಾಗುವಳ್ಳಿ ಮತ್ತು ಕುಟುಂಬದ ಸೌಕರ್ಯಕ್ಕೆ ಬೇಕಾದ ಇತರ ಕಾಮಗಾರಿಗಳಲ್ಲಿ ಹೆಚ್ಚಿನ ಬದಲಾವಣೆಯನ್ನು ನಡಿಸಿದನು. ಇವನಿಗೆ

ಆಡಳಿತೆ ಬರುವಾಗ ಆ ಹಳ್ಳಿಯಲ್ಲಿ ಭತ್ತದ ಒಂದೇ ಒಂದು ಪೈರಲ್ಲದೆ

ಇತರ ಯಾವ ಬೆಳೆಯನ್ನೂ ಬೆಳಿಸುತ್ತಿದ್ದಿಲ್ಲ. ಮಳೆಯ ಅಭಾವದಿಂದ

ಆ ಪೈರಿಗೆ ಏನಾದರೂ ಒಂದಿಷ್ಟು ಹಾನಿಯುಂಟಾದರೆ ಬಡಬಗ್ಗರು

ತೊಂದರೆಗೆ ಈಡಾಗುತ್ತಿದ್ದರು. ಈಚೆಗೆ ಆನಂದನು ಕಬ್ಬು, ಶುಂಠಿ,

ಅರಸಿನ ಮುಂತಾದ ಪೈರುಗಳನ್ನು ಬೆಳಿಸುವಂತೆ ತನ್ನ ಒಕ್ಕಲುಗಳಿಗೆ

ಬೀಜ ಒದಗಿಸಿಕೊಟ್ಟು ಪ್ರೋತ್ಸಾಹಿಸಿದನು. ಭತ್ತದ ಬೆಳೆಯ

ಲ್ಲಿಯೂ ಎಷ್ಟೋ ಸುಧಾರಣೆ ಉಂಟುಮಾಡಿದನು. ಉತ್ತಮ ಬೀಜದ

ಚುನಾವಣೆ, ಗೊಬ್ಬರ ತಯಾರಿಸುವ ವಿಧಾನ, ಇದನ್ನು ಎಲ್ಲಾ ರೈತರೂ ಅಭ್ಯಾಸಿಸಿದರು. ಈಗ ವ್ಯವಸಾಯದ ನೂತನ ಕ್ರಮಗಳನ್ನು ಅಭ್ಯಾಸಿಸ ಬೇಕೆಂದಿರುವವರು ಒಮ್ಮೆ ಸೌಖ್ಯಪುರಕ್ಕೆ ಹೋಗಿ ಅಲ್ಲಿ ಆನಂದನು ಮಾಡಿ

ಸಿದ ಏರ್ಪಾಡುಗಳನ್ನು ನೋಡಿದರಾಯಿತು. ಆ.ಹಳ್ಳಿಯಲ್ಲಿ ಒಂದೊಂದೇ ನೇಜಿನೆಡುವ ಕ್ರಮವನ್ನು ಎಲ್ಲರೂ ಪ್ರಚಾರದಲ್ಲಿ ತಂದಿರುವರು. ಕಟ್ಟಿಗೆ

ಯ ಲಭ್ಯಕ್ಕಾಗಿ ಬೆಲ್ಲ ಬೇಯಿಸುವ ಒಲೆ, ಕೊಪ್ಪರಿಗೆ, ಇವುಗಳಲ್ಲಿ ಮಾಡಿ

ರುವ ಸುಧಾರಣೆಯನ್ನು ನೋಡಿ ಆಜುಬಾಜಿನ ರೈತರೂ, ನೆರೆಕರೆಯ

ಗ್ರಾಮಗಳ ಜನರೂ, ಇವನ ಕ್ರಮವನ್ನೇ ಮಾದರಿಯಾಗಿಟ್ಟುಕೊಂಡು

ಹಾಗೆಯೇ ಮಾಡುವರು. ಆನಂದನು ತನ್ನ ಆಳು ಒಕ್ಕಲುಗಳನ್ನು ನಡಿ

ಸುವ ವಿಧಾನವೇ ಬೇರೆ. ಇದನ್ನು ನೋಡಿ ಸಮೀಪದ ಹಳ್ಳಿಯ ಬಡಬಗ್ಗರು

ಇವನ ಒಕ್ಕಲಾಗಿ ನಿಲ್ಲುವಂತೆ ಆಶಿಸುವರು. ಆನಂದನು ತನ್ನ ಮನೆ

೯೫-----------------------------------------------------------


ಸಾಗುವಳ್ಳಿಯಲ್ಲಿ ಬೆಳಿಸುವ ಪೈರುಪಟ್ಟೆಗಳು ಆದರ್ಶಸ್ವರೂಪದಲ್ಲಿದ್ದು ಸೌಖ್ಯಪ್ರರದ ಆ ವಿಸ್ತಾರವಾದ ಬಯಲಿನಲ್ಲಿ ಆನಂದನ ಪೈರು ಇಂಥವೇ

ಎಂದು ಆ ಹುಲುಸಾದ ಬೆಳೆಯನ್ನು ನೋಡಿಯೇ ಗುರುತಿಸಬಹುದಾಗಿತ್ತು. ಆನಂದನ ಪೈರು ಸೊಗಸಾಗಿ ಬೆಳೆದುದರಲ್ಲಿ ಆಶ್ಚರ್ಯವೇನು? ಯಾವ

ಯಾವ ಪೈರಿಗೆ ಎಂಥೆಂಥ ಗೊಬ್ಬರವು ಉತ್ತಮವೆಂದು ತಿಳಿದುಕೊಂಡು

ಸಾಕಷ್ಟು ಗೊಬ್ಬರವನ್ನು ಹಾಕಿಸುತ್ತಿದ್ದನು. ಮತ್ತು ಗೊಬ್ಬರಕ್ಕೆ ಹಣ ಕೊಡುವುದು ಅದೊಂದು ನಷ್ಟವೆಂದು ಎಣಿಸದೆ, ಅದಕ್ಕೆ ಮಾಡುವ

ಖರ್ಚು ಸದ್ವಿನಿಯೋಗಕ್ಕೆ ಬಳಸಿದಂತಾಗುತ್ತದೆಂದೂ, ಅದರಿಂದ ಹೇರಳ

ಲಾಭ ಬರುತ್ತದೆಂದೂ ತಿಳಿದುಕೊಂಡಿದ್ದನು. ಆನಂದನ ಆಡಳಿತೆಯಲ್ಲಿ

ಹೆಚ್ಚಿನ ಆಸ್ತಿ ಸಂಪಾದಿಸಿದುದಲ್ಲದೆ ಕುಟುಂಬದ ಭೂಮಿಯಲ್ಲಿ ಹೆಚ್ಚಿನ

ಕೃತ ನಡಿಸಿ ಬೆಳೆಯಿಂದ ಬಲು ಮುನಾಫೆ ಹೊಂದುತ್ತಿದ್ದನು. ಮನೆ

ಸಾಗುವಳ್ಳಿಗೆ ಭೂಮಿಯು ಮೊದಲಿನಷ್ಟೇ ಇತ್ತಾದರೂ ಬೆಳೆಯ

ಉತ್ಪತ್ತಿಯು ಮೊದಲಿನ ಇಮ್ಮಡಿಯಾಗಿ ದೊರಕುತ್ತಿತ್ತು.


ತನ್ನ ವಕೀಲಿ ಉದ್ಯೋಗದ ಸಲುವಾಗಿ ಆನಂದನು ಮಂಗಲಪುರದಲ್ಲಿ

ಬಿಡಾರ ಮಾಡಿಕೊಂಡಿದ್ದರೂ, ಮನೆಕೆಲಸಗಳೆಲ್ಲಾ ಸಕಾಲದಲ್ಲಿ ಸುಸೂತ್ರ

ವಾಗಿ ಸಾಗುವಂತೆ ಒಳ್ಳೆ ವ್ಯವಸ್ಥೆ ಮಾಡಿ ಇಟ್ಟಿದ್ದನು. ಮನೆಯಲ್ಲಿ ಅವನ ಸಹೋದರರೂ, ದೊಡ್ಡಮ್ಮ ಚಿಕ್ಕಮ್ಮ ಇವರ ಮಕ್ಕಳೂ, ಆನಂದನಿಗೆ

ಎಲ್ಲಾ ವಿಷಯಗಳಲ್ಲಿ ಸಹಾಯಕರಾಗಿದ್ದು ಸಂಸಾರವು ಒಳ್ಳೆ ರೀತಿ

ಯಿಂದ ನಡೆಯುತ್ತಿತ್ತು.


ಮಂಗಲಪುರದಲ್ಲಿ ವಕಾಲತ್ತು ನಡಿಸುತ್ತಿದ್ದ ಆನಂದನಿಗೆ ಮೊದಲು

ಮೊದಲು ಜನರ ಪರಿಚಯ ಇಲ್ಲದುದರಿಂದ ಆದಾಯವು ಬಲು ಕಮ್ಮಿ

ಯಾಗಿತ್ತು. ಒಂದೆರಡು ವರುಷ ಕಳೆದ ತರುವಾಯ ಆನಂದನ

ಕೀರ್ತಿಯು ಮೆಲ್ಲಮೆಲ್ಲನೆ ಬೆಳೆಯಹತ್ತಿತು. ಅವನು ಹಿಡಿದ ವ್ಯಾಜ್ಯ

ಗಳಲ್ಲಿ ಅವನಿಗೇನೇ ಜಯಸಿಕ್ಕುತ್ತಿತ್ತು. ನಂಬಿಗೆಗೂ ಯೋಗ್ಯನಾ

ಗಿದ್ದನು. ಆಡಿದ ಮಾತಿಗೆ ತಪ್ಪಿದನೆಂದಾಗಲಿ, ಮೋಸಮಾಡಿದನೆಂದಾ

೯೬---------------------------------------------------------

ಗಲಿ ಹೇಳಿದವರೇ ಇಲ್ಲ. ಇದನ್ನು ಕಂಡು ಇವನಲ್ಲಿ ಬರುವ ಕಕ್ಷೆ

ಗಾರರ ಸಂಖ್ಯೆಯು ಹೆಚ್ಚಾಗತೊಡಗಿತು. ಅನುಕೂಲಕಾಲದ ಮಹಿ

ಮೆಯನ್ನೇನು ವರ್ಣಿಸಬೇಕು? ಆನಂದನ ಬೈಠಕುಖಾನೆಯಲ್ಲಿ ಜನ

ಸಂದಣಿಯಿಂದ ಯಾವಾಗಲೂ ಕಲಕಲ, ಅಲ್ಲಿ ಸ್ಥಳಸಂಕೋಚ

ವಾಗುವುದರಿಂದ ಆ ಬೈಠಕುಖಾನೆಯನ್ನು ವಿಸ್ತರಿಸಬೇಕಾಯಿತು. ಮೂ

ರು ನಾಲ್ಕು ಮಂದಿ ಗುಮಾಸ್ತರಿಗೆ ಬರಿಯುವ ಕೆಲಸದಲ್ಲಿ ಒಂದಿಷ್ಟೂ ಬಿಡುವಾಗುತ್ತಿದ್ದಿಲ್ಲ. ಆನಂದನಿಗಂತೂ ಬೆಳಿಗ್ಗೆ ಆರು ಗಂಟೆಯಿಂದ

ಸಂಜೆ ಹತ್ತು ಗಂಟೆಯ ವರೆಗೆ ಒಂದು ಕ್ಷಣಗಾಲವಾದರೂ ಸಮಯ

ಸಿಕ್ಕುತ್ತಿರಲಿಲ್ಲ. ಸಂಜೆ ಮುಂಜಾನೆ ಕಕ್ಷಿಗಾರರಿಗೆ ಆಲೋಚನೆ

ಹೇಳುವುದು, ಆ ದಿನದ ದಾವೆಗಳಿಗೆ ಬೇಕಾದ ಅನುಭವ ಪಡಕೊಳ್ಳು

ವುದು ಇದೇ ಕೆಲಸ ವರುಷದ ಸರಾಸರಿ ಲೆಕ್ಕದಲ್ಲಿ ಇವನಿಗೆ ಬರು

ವಷ್ಟು ವಕಾಲತುಗಳು ಆ ಕಾಲದಲ್ಲಿ ಮತ್ತಾವ ವಕೀಲರಿಗೂ ಬರು

ತ್ತಿರಲಿಲ್ಲ. ಡಿಸ್ಟಿಕ್ಸ್ ಜಡ್ಡರೂ ಸಬ್ ಜಡ್ಡರೂ ಆನಂದನ ಮಾತಿಗೆ

ಒಳ್ಳೆ ಬೆಲೆಕೊಡುತ್ತಿದ್ದರು. ಕೋರ್ಟಿನ ಇತರ ವಕೀಲರೂ ಇವನನ್ನು ಗೌರವಿಸುತ್ತಿದ್ದರು. ಇದರಿಂದ ಆನಂದನ ಕಕ್ಷಿಗಾರರ ಸಂಖ್ಯೆಯು

ದಿನೇದಿನೇ ವೃದ್ಧಿಯಾಗುತ್ತಿತ್ತು. ಆ ಕಾಲದಲ್ಲಿ ಆನಂದನ ಸಂಪಾ

ದನೆಯೇ ಸಂಪಾದನೆ!


ಆನಂದನು ತಾನು ವಿದ್ಯಾವಂತ, ಬುದ್ದಿವಂತ ಹಾಗೂ ಐಶ್ವರ್ಯ

ವಂತನೆಂದು ಅಹಂಕಾರ ಪಡದೆ, ತನ್ನ ಮಾತಿನಿಂದಾಗಲಿ ಕೃತಿಯಿಂದಾ

ಗಲಿ ತಾನು ಇತರರಿಗಿಂತ ಮೇಲೆಂದು ತೋರಿಸಿಕೊಳ್ಳದೆ, ತನ್ನಲ್ಲಿ ಬಂದ ಕಕ್ಷಿಗಾರರನ್ನು ದೊಡ್ಡವರು ಬಡವರೆಂಬ ಭೇದವಿಡದೆ, ಚಂದವಾದ

ಮಾತಿನಿಂದ ಅವರವರ ಕೆಲಸ ಮಾಡಿಸಿ ಬೇಗಬೇಗನೆ ಕಳುಹಿಸುವ

ಏರ್ಪಾಡು ಮಾಡುತ್ತಿದ್ದನು. ಆನಂದನಲ್ಲಿ ವ್ಯವಹರಿಸಲಿಕ್ಕೆ ಬಂದಿ

ರುವ ದಾವೆಯು ದೊಡ್ಡದಿರಲಿ, ಚಿಕ್ಕದಿರಲಿ, ಸಿಕ್ಕಿದ ವಕಾಲತಿ ರುಸುಂ ಅಲ್ಪವಿರಲಿ, ಹೆಚ್ಚಿಗಿರಲಿ, ತನ್ನ ವಕೀಲಿ ಧರ್ಮವನ್ನು ಮರೆಯದೆ ಆ

೯೬------------------------------------------------------------

ದಾವೆಯಲ್ಲಿ ಜಯಲಾಭ ಸಂಪಾದಿಸುವುದೇ ತನ್ನ ಆದ್ಯ ಕರ್ತವ್ಯವೆಂದು ನಂಬಿದ್ದನು. ತನ್ನ ಕಕ್ಷಿಗಾರರಿಗೆ ಅಪಜಯ ಹೊಂದಿದರಂತೂ ತನ

ಗೇನೇ ನಷ್ಟವಾದಂತೆ ಬಲು ಕನಿಕರ ಪಡುತ್ತಿದ್ದನು. ಇದರಿಂದ ಅವನ

ಯಶಸ್ಸು ಆ ಕಾಲದಲ್ಲಿ ಎಲ್ಲೆಲ್ಲ ಹರಡಿತ್ತು.


ಅತ್ತ ತಾರಾನಾಥವರದಲ್ಲಿ ಸಂಜೀವ ಶೆಟ್ಟ ರೂ ಕಾಲವಾದರು.

ಆ ಕುಟುಂಬದಲ್ಲಿ ಚಿಕ್ಕ ವಯಸ್ಸಿನ ಹುಡುಗರಲ್ಲದೆ ಪ್ರಾಯಪ್ರಬುದ್ಧ

ರಾದ ಗಂಡುಸರಾರೂ ಇರಲಿಲ್ಲವೆಂಬುದು ವಾಚಕರಿಗೆ ತಿಳಿದೇ ಇದೆ.

ಆ 'ಸಂಪತ್ಸಮೃದ್ಧಿಯುಳ್ಳ ಮನೆತನದ ಆಡಳಿತೆಯನ್ನು ಹೆಂಗಸ

ರಿಂದಲೇ ನಡಿಸಿಕೊಂಡು ಹೋಗುವುದು ಅಸಾಧ್ಯವಾಗಿತ್ತು. ಆ

ಮನೆಯ ಹುಡುಗಿಯರ ಪತಿಯರಲ್ಲಿ ಓರ್ವನಿಗೆ ಆಡಳಿತವನ್ನು ಒಪ್ಪಿಸ ಬೇಕಾಯಿತು. ಅಲ್ಲಿಯ ಹೆಣ್ಣು ಹುಡುಗಿಯರಲ್ಲಿ ರುದ್ರಮ್ಮನು ಹಿರಿಯ ನಳಾಗಿದ್ದಳು. ಅವಳ ಗಂಡನಾದ ಮುದ್ದಣ್ಣನಿಗೆ ಆಡಳಿತೆಯನ್ನು ವಹಿ

ಸುವುದು ಒಂದು ವಿಧದಲ್ಲಿ ನ್ಯಾಯವಿತ್ತು. ಆದರೆ ಏನುಮಾಡಲಿ!

ಅವನ ದುಂದು, ದುರ್ನಡತೆಯಿಂದ ತನ್ನ ಮನೆಯನ್ನೇ ಹಾಳುಮಾಡಿದ

ನೆಂದ ಬಳಿಕ ಮತ್ತೊಂದು ಮನೆಯ ಆಡಳಿತೆಯನ್ನು ಅಂಥವರಿಗೆ

ಒಪ್ಪಿಸಬಹುದೇ? ಪುಟ್ಟಮ್ಮನಂತೂ ಆ ಅಳಿಯ ಮುದ್ದಣ್ಣನು ಸಾಲಸೋಲ ದಲ್ಲಿ ಸಿಕ್ಕಿ ರೋಗರುಜೆಗಳನ್ನು ಪಡೆದು ನರಳುತ್ತಾನೆಂದು ಕೇಳಿದಂದಿ

ನಿಂದ ಜನರ ಮುಂದೆ ಮುಖ ತೋರಿಸಲಿಕ್ಕೇನೇ ನಾಚುತ್ತಿದ್ದಳು. ತಾನು ತಾತ್ಸಾರದಿಂದ ನೋಡಿದ ಅಳಿಯ ಆನಂದನು ಸಕಲ ವಿಷಯಗಳಲ್ಲೂ ಉನ್ನತಿಯನ್ನು ಹೊಂದಿ ಅವನ ಯಶಸ್ಸು ನಾಲ್ಕು ದಿಕ್ಕು ಗಳಲ್ಲೂ ಪಸರಿಸಿ ರುವುದರಿಂದ, ಪಟ್ಟಮ್ಮನು ತನ್ನ ಪೂರ್ವದ ನಡತೆಯನ್ನು ಸ್ಮರಿಸಿ ಸ್ಮರಿಸಿ ತುಟಿಯೆತ್ತದೆ ಮೂಕಳಂತೆ ಇರಬೇಕಾಯಿತು. ಈಗ ಈ ಆಡಳಿತೆಯನ್ನು ನೋಡುವವರಾರು? ಈ ಪ್ರಸಂಗದಲ್ಲಿ ಮಾತಾಡದೆ ಉಪಾಯ

ವುಂಟೇ? ಆ ದೊಡ್ಡ ಮನೆತನದ ಆಡಳಿತೆಯನ್ನು ಒಬ್ಬ ಯೋಗ್ಯನಿಗೆ ನೇಮಿಸದಿದ್ದರೆ ಮನೆಯು ಅನಾಯಕತ್ವ ಹೊಂದುವುದೇ ಸರಿ ಎಂದು

೯೮ –-------------------------------------------------------

ಚಿಂತಿಸಿದಳು. ಈಗ ಸರ್ವ ವಿಷಯಗಳಲ್ಲಿ ಆನಂದನಷ್ಟು ಸಮರ್ಥರಾದ

ವರು ಬೇರೆ ಇರಲಿಲ್ಲ. ಆದುದರಿಂದ ಆಡಳಿತೆಯನ್ನು ಆನಂದನಿಗೇನೇ ಒಪ್ಪಿ ಸುವದು ತಕ್ಕು ದೆಂದು ಪುಟ್ಟಮ್ಮನೇ ಹೇಳಿದಳು. ಇದಕ್ಕೆ ಕುಟುಂಬದ

ಮಿಕ್ಕ ಹೆಂಗಸರೆಲ್ಲಾ ಸಮ್ಮತಿಸಿದರು. ಆನಂದನಿಗೆ ತನ್ನ ಸ್ವಂತ ಕೆಲಸ

ಗಳ ತೊಂದರೆಯೇ ಹೆಚ್ಚಿಗಿರುವಾಗ ಈ ದೊಡ್ಡ ಆಡಳಿತೆಯನ್ನು ಹೊತ್ತು ಕೊಳ್ಳುವುದರಲ್ಲಿ ಇಷ್ಟವಿರಲಿಲ್ಲ. ಆದರೂ ತನ್ನ ಹೆಂಡತಿಯ ತವರು

ಮನೆದು ಸಿಮೆಂಬರರೆಲ್ಲರೂ ಬಲು ಒತ್ತಾಯಪಡಿಸುವಾಗ ಉಪಾಯ

ವಿಲ್ಲದೆ ಸಮ್ಮತಿಸಿದನು. ಆ ಕುಟುಂಬದಲ್ಲಿ ಪ್ರಾಯಕ್ಕೆ ಬಂದ ಎಲ್ಲಾ

ಮೆಂಬರರ ಕೂಡುವಿಕೆಯಿಂದ ಆಡಳಿತ ಮೊಕ್ತಾರಿಯನ್ನು ಬರಯಿಸಿ

ಕೊಂಡು ಆ ಕಾರಿನ ಶರ್ತಕ್ಕೆ ಅನುಸರಿಸಿ ಆಡಳಿತೆಯನ್ನು ನಡಿಸಹತ್ತಿದನು.

ಕರಾರು ವಿಧಿಯಂತೆ ಕುಟುಂಬದ ವೃದ್ಧಿ ಮಂಡಿಗಾಗಿ ವರುಷ ಒಂದರ

ರೂಪಾಯಿ ಎಂಟು ಸಾವಿರವನ್ನು ಅತ್ಯಂತ ಹಿರಿಯ ಹೆಂಗುಸಿನ ಹೆಸರಲ್ಲಿ

ಈಡು, ಅಡವು, ಅಥವಾ ಕ್ರಯದ ಹಕ್ಕಿನ ಮೇಲೆ ಸ್ಥಿರಾಸ್ತಿ ಜವಾಬ್ದಾರಿ

ಯಿಂದ ಇಡುತ್ತಾ ಬರಬೇಕಾಗಿಯೂ, ಕುಟುಂಬದ ಜೀವನ, ಶುಭಾಶುಭ ಕಾರ್ಯಗಳನ್ನು ಈ ಮೊದಲಿನಂತೆ ಯೋಗ್ಯ ರೀತಿಯಿಂದ ನಡೆಸಿಕೊಂಡು

ಬರಬೇಕಾಗಿಯ ವಗೈರೆ ಶರ್ತಗಳು ಇದ್ದಿದ್ದುವು.


ಸುಗಣಿಯ ವಿವೇಕಿಯೂ ಆದ ಆನಂದನಂಥ ಸದೃಹಸ್ಥರು

ಬರೇ ಶರ್ತಗಳನ್ನೇ ನೋಡುವರೇ? ತನ್ನ ಪಾಲಿಗೆ ಬಂದ ಯಾವ ಕೆಲಸ

ವನ್ನಾದರೂ ಚೆನ್ನಾಗಿ ಮಾಡಿ ಯಶಸ್ಸು ಪಡೆಯಬೇಕೆಂಬುದೇ ತನ್ನ ಪ್ರಥಮಪಾಠವಾಗಿ ಇಟ್ಟುಕೊಂಡಿರುವಾಗ ಇಂಥಾ ಕರಾರಿನಿಂದ

ಏನಾದೀತು? ತನಗೆ ಮುಂಚೆ ಇದ್ದ ಕೆಲಸಗಳಿಂದಲೇ ಅರೆಗಳಿಗೆ

ಯಾದರೂ ಬಿಡುವಿಲ್ಲದಿರುವಾಗ ಈಗ ತಾರಾನಾಥಪುರದ-ಅದರಲ್ಲೂ

ದೊಡ್ಡ ಮನೆತನದ-ಆಡಳಿತೆಯನ್ನು ವಹಿಸಿಕೊಂಡನು. ಇದರಿಂದ

ಆನಂದನಿಗೆ ಕೈತುಂಬಾ ಕೆಲಸ, ಮೈತುಂಬಾ ದಣುವು ಉಂಟೆಂದು

ನೋಡುವವರಿಗೆ ತೋರಿದರೂ, ವಿವೇಕಿಯಾದ ಆನಂದನಿಗೆ ದಣುವೆಂದ

೯೯----------------------------------------------------------


ರೇನು? ಶ್ರಮವೆಂದರೇನು? ಅವೊಂದೂ ಅವನಿರುವ ಊರಿಗೇನೇ

ಸುಳಿಯವು. ತಾನು ನಡಿಸಬೇಕಾಗಿ ಬಂದ ಎಲ್ಲಾ ಕೆಲಸಗಳೂ, ಸುಸೂ

ತ್ರವಾಗಿ ಸಾಗುವಂತೆ ಒಳ್ಳೆ ವ್ಯವಸ್ಥೆ ಮಾಡಿದ್ದನು. ಅವನ ಕೈಕೆಳಗಿನ ನೌಕರರೆಲ್ಲರೂ ಸ್ವಾಮಿಭಕ್ತಿನಿಷ್ಟ ರಾಗಿ ಪ್ರೀತಿಯಿಂದಲೂಭಯದಿಂದ

ಲೂ ಕ್ರಮವಾಗಿ ತಮ್ಮ ತಮ್ಮ ಕೆಲಸಗಳನ್ನು ನಡೆಸುತ್ತಿದ್ದರು. ಸೇವಕ

ರಂತೂ ತಮ್ಮ ಪಾಲಿಗೆ ಸೇರಿದ ಕೆಲಸಗಳನ್ನು ಯೋಗ್ಯರೀತಿಯಿಂದ

ಮಾಡಿ ತಮ್ಮ ಧನಿಯರಿಂದ ಶಹಭಾಸು” ಪಡಿಯಬೇಕೆಂದು ಆತುರ

ಪಡುತ್ತಿದ್ದರು. ತಾರಾನಾಥವರದ ಆಡಳಿತೆಯಲ್ಲಿ ಆ ಕುಟುಂಬದವರು ನಿರೀಕ್ಷಿಸಿದುದಕ್ಕಿಂತಲೂ ದ್ವಿಗುಣವಾದ ಪ್ರಯೋಜನವು ಆನಂದನ

ಆಡಳಿತೆಯಲ್ಲಿ ಲಭಿಸಿತೆಂದರೆ ಅತಿಶಯೋಕ್ತಿಯಾಗಲಾರದು. ಇದರಿಂದ ಆನಂದನೆಂದರೆ ಆ ಕುಟುಂಟದ ಆಬಾಲವೃದ್ಧರಿಗೆಲ್ಲಾ ಪ್ರೀತಿಯ

ಪುತ್ತಳಿಯಾದನು. ಆನಂದನಿಗೂ ಆ ಆಡಳಿತೆಯಿಂದ ವರುಷಕ್ಕೆ ಒಂದೆ

ರಡು ಸಾವಿರ ರೂಪಾಯಿಗಳ ಮುನಾಫೆಯ ಚೀಲದಲ್ಲಿ

-------------


ಅಂತಿಮ ಅಧ್ಯಾಯ.


ಉಪ ಸಂಹಾರ.


ಆನಂದನ ಕಾರ್ಯಕ್ಷೇತ್ರವು ದಿನದಿನಕ್ಕೆ ವಿಸ್ತರಿಸಹತ್ತಿತು. ತನ್ನ

ವಕೀಲಿ ಕೆಲಸದಿಂದಲೂ, ಆ ಎರಡು ಮನೆಯ ಆಡಳಿತೆಗಳಿಂದಲೂ

ಬಿಡುವು ಎಂಬುದೇ ಇಲ್ಲವೆಂದು ಕಾಣುತ್ತಿತ್ತು. ಆದರೂ ವಿಚಾರಪರ

ರಾದ ಆನಂದನಂಥ ಸಮರ್ಥರಿಗೆ 'ವೇಳೆ ಇಲ್ಲ' ಎಂಬ ಜೋಡು ಶಬ್ದದ

ಮಂತ್ರವು ಹಾಗೆ ತಾನೇ ಬಂದೀತು? ಇಂಥ ಹತ್ತು ಪಾಲು ಕೆಲಸ

ಸಿಕ್ಕಿದರೂ ಸುಸೂತ್ರವಾಗಿ ಸಾಗಿಸಬಲ್ಲ ಆನಂದನಿಗೆ ಸದಾ ಆನಂದವಲ್ಲದೆ ಒಂದಿಷ್ಟಾದರೂ ಬೇಸರಿಕೆ ಇದೆಯೇ? ಅವನ ಸೇರುವಿಕೆಯಿಂದ ನಡೆಯಿಸ

೧೦೦-----------------------------------------------------------

ಲ್ಪಡುವ ಪುಸ್ತಕಭಂಡಾರ, ಧನಾಗಾರ, ವ್ಯಾಪಾರಸಂಘ, ವ್ಯವಸಾಯ

ಸಂಘ, ಮುಂತಾದ ಸಂಸ್ಥೆಗಳೆಲ್ಲಾ ಯೋಗ್ಯರೀತಿಯಿಂದ ನಡೆಯುತ್ತಿ

ದ್ದುವು. ಅವುಗಳಲ್ಲಿ ಆನಂದನಿಗೆ ಒಂದೊಂದು ಪ್ರಧಾನ ಉದ್ಯೋಗ

(ಅಧಿಕಾರ) ಗಳೇ ಇದ್ದಿದ್ದುವು. ಇಂಥ ಸಂಘಗಳಲ್ಲಿ ತಾನು ಒಂದೊಂದು

ಗೌರವ ಹುದ್ದೆಗಳನ್ನು ಸಂಪಾದಿಸಿಕೊಂಡಮಾತ್ರದಲ್ಲಿ ತನ್ನ ಕೆಲಸವಾ

ಯಿತೆಂದು ಹಿಗ್ಗಿಕೊಳ್ಳದೆ, ಅದರಲ್ಲಿ ತಾನು ಮಾಡಬೇಕಾದ ತನ್ನ ಕರ್ತ

ವ್ಯವನ್ನು ಮರೆತಿರಲಿಲ್ಲ. ಹಲವರು ಒಂದೊಂದು ಗೌರವ ಹುದ್ದೆಗಳನ್ನು

ಹೊಂದುವ ವರೆಗೆ ತಮ್ಮ ಉತ್ಸಾಹವನ್ನೆಲ್ಲಾ ಪ್ರದರ್ಶಿಸಿಬಿಟ್ಟು, ಕೊನೆ

ಯಲ್ಲಿ ತಾವು ಮಾಡಬೇಕಾದ ಕೆಲಸಗಳಾವುದನ್ನೂ ಮಾಡದೆ, ಬರೇ

ಉತ್ಸವ ಮೂರ್ತಿಯಂತೆ ಕುಳಿತುಕೊಳ್ಳುವರು. ಇದು ಕೇವಲ ಹುಚ್ಚು ತನವೆಂತಲೂ, ಮತ್ತು ಅದರಿಂದ ದ್ರೋಹಮಾಡಿದಂತಾಗುತ್ತದೆಂತಲೂ ಅಂಥವರನ್ನು ಆನಂದನು ಆಗಾಗ್ಗೆ ದೂಷಿಸುತ್ತಿದ್ದನು.


ಆನಂದನು ಮಂಗಲಪುರದಲ್ಲಿ ವಕೀಲಿ ಉದ್ಯೋಗ ನಡಿಸಹತ್ತಿ ಐದು ವರುಷವಾಯಿತು. ಒಳ್ಳೆ ಸಂಪಾದನೆಯ ಆಗುತ್ತಿತ್ತು. ಹೀಗಿರುವಾಗ

ಒಂದು ಮುನಸೀಫ್ ಕೆಲಸ ಖಾಲಿಯುಂಟೆಂತಲೂ, ಅದಕ್ಕೆ ಆನಂದನು ಪ್ರಯತ್ನಿಸಬೇಕೆಂತಲೂ, ಹಾಗೆ ಪ್ರಯತ್ನಿಸಿದರೆ ಆನಂದನಿಗೆ ಆ ಕೆಲಸ ಲಭ್ಯವಾಗುವುದರಲ್ಲಿ ಸಹಾಯಮಾಡುವ ಒಳ್ಳೇ ಜನ ಸಹ ಉಂಟೆಂತಲೂ

ಅವನ ಮಿತ್ರರ ಕಾಗದ ಬಂತು. ಮತ್ತು ಆ ಬಗ್ಯೆ ಪ್ರಯತ್ನಿಸಬೇಕಾಗಿ

ಆಪ್ತಮಿತ್ರರ ಒತ್ತಾಯವೂ ನಡೆಯಿತು. ಆ ಕಾಲದಲ್ಲಿ ಅದನ್ನು ಸಂಪಾದಿಸಿ ಕೊಂಡಿದ್ದರೆ ಸ್ವಲ್ಪ ಸಮಯಗಳಲ್ಲಿಯೇ ಸಬ್‌ಜಡ್ಜ್ ಹಾಗೂ ಡಿಸ್ಟಿಕ್ಸ್

ಜಡ್ಜ್ ಕೆಲಸವೂ ಲಭ್ಯವಾಗುವ ಸಂಭವವಿದ್ದಿತು. ಆದರೆ ಆನಂದನು

ತನಗೆ ಆ ದಾಸ್ಯ ವೃತ್ತಿಯು ಬೇಡವೆಂತಲೂ, ಸ್ವಾತಂತ್ರವಾಗಿ ಜೀವಿಸಿ

ತನ್ನ ದೇಶದ ಬಂಧುಭಗಿನಿಯರ ಸೇವೆಮಾಡಿ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂತಲೂ ಹೇಳಿಬಿಟ್ಟನು.


ಆನಂದನು ತನ್ನ ಮಿತ್ರರನೇಕರ ಸಹಾಯದಿಂದ ಒಂದು ವಿದ್ಯಾಲ

ಯವನ್ನು ಸ್ಥಾಪಿಸಿ ಅದರ ಆಡಳಿತವನ್ನು ತನ್ನ ಹೆಸರಿನಲ್ಲಿ ಇಟ್ಟುಕೊಂಡು,

೧೦೧-------------------------------------------------------------


ಯೋಗ್ಯರೀತಿಯಿಂದ ನಡೆಸುತ್ತಿದ್ದನು. ಪರಮಾತ್ಮನ ಕೃಪೆಯಿಂದ

ಆ ವಿದ್ಯಾಲಯವು ದಿನಕ್ರಮವಾಗಿ ಬೆಳೆದು ಉನ್ನತಿಯನ್ನು ಹೊಂದಿತು.

ಇದರಿಂದ ಆನಂದನಿಗೆ ಎಲ್ಲಿ ಹೋದರೂ ಒಳ್ಳೆ ಸನ್ಮಾನವು ಸಿಕ್ಕುತ್ತಿತ್ತು.

ಅವನ ಆಡಳಿತೆಯಲ್ಲಿರುವ ಆ ವಿದ್ಯಾಲಯದಲ್ಲಿ ಶಿಕ್ಷಣಹೊಂದುವ ವಿದ್ಯಾರ್ಥಿಗಳೆಲ್ಲಾ ಆತನಂತೆಯೇ ಧೀರರೂ ಸ್ಥಕರ್ತವ್ಯಪರಾಯಣರೂ ಆಗುತ್ತಿದ್ದರು.

ಮುತ್ತೂರಿನ ಮುದ್ದಣ್ಣನ ತಾಯಿಯು ಏನೋ ಒಂದು ಬಗೆಯ

ಜಾಡ್ಯದಿಂದ ಕಾಲವಾದಳು. ಮುದ್ದಣ್ಣನೂ ಒಂದಲ್ಲದೊಂದು ಬಗೆಯ ಜಾಡ್ಯದಿಂದ ನರಳುವ ನಿತ್ಯರೋಗಿಯಾಗಿದ್ದನು. ಅವನ ಕುಟುಂಬದ ಆಡಳಿತೆಯನ್ನು ನೋಡಿ, ಸಾಲದ ಬಡ್ಡಿಯನ್ನು ಕೊಟ್ಟು ಜೀವನ

ನಡಿಸಿಕೊಂಡು ಬರುವುದೇ ಕಷ್ಟ ಕಂಡಿತು. ಈಚೆಗೆ ಎರಡುಮೂರು

ವರುಷಗಳಿಂದ ಒಕ್ಕಲು ಹುಟ್ಟುವಳಿಯೇ ಸರಿಯಾಗಿ ವಸೂಲಾಗುತ್ತಿರಲಿಲ್ಲ. ಮುದ್ದಣ್ಣನು ಕೈಲಾಗದವನೆಂದು ಅವನ ಒಕ್ಕಲುಗಳು ತಿಳಿದಿದ್ದು,

ಗೇಣಿ ಕೇಳಿದಂತೆಲ್ಲಾ ಉಡಾಪೆ ಜವಾಬು ಕೊಡುತ್ತಿದ್ದರು. ಹುಟ್ಟು

ವಳಿ ವಸೂಲಾಗದೆ ಇದ್ದುದರಿಂದ ಮೂರು ವರುಷಗಳ ಸಾಲದ ಬಡ್ಡಿಯೂ ಬಾಕಿನಿಂತಿತು. ತನ್ನ ಕೈಯಲ್ಲಿ ಯಾವ ಕೆಲಸವೂ ಸಾಗುವದಿಲ್ಲವೆಂದು

ತಿಳಿದ ಮುದ್ದಣ್ಣನು ಆನಂದನನ್ನು ಬರಮಾಡಿಕೊಂಡು ತನ್ನ ಸುಖಕಷ್ಟ ಗಳನ್ನೆಲ್ಲಾ ಆತನೊಡನೆ ನಿವೇದಿಸಬೇಕೆಂದಾಲೋಚಿಸಿದನು. ಮುದ್ದಣ್ಣ

ನಿಗೆ ಆನಂದನಿಗಿಂತ ಹೆಚ್ಚಿನ ಹಿತಚಿಂತಕರಾದ ಬಂಧುಗಳು ಯಾರೂ

ಇರಲಿಲ್ಲ. ಆದುದರಿಂದ ಅವನೊಡನೆ ತನ್ನ ಯಾವತ್ತೂ ಸುಖಕಷ್ಟ

ಗಳನ್ನು ಹೇಳಿಕೊಂಡರೆ ಅದಕ್ಕೆ ತಕ್ಕ ಪರಿಹಾರವನ್ನು ಮಾಡುವ

ನೆಂದು ತುಂಬಾ ಭರವಸೆಯಿಂದಿದ್ದು, ಅವನನ್ನು ಕರೆಯಿಸಿ ತನ್ನ ಅವಸ್ಥೆ

ಯನ್ನು ಹೇಳಿ ಕಣ್ಣೀರು ಸುರಿಸಿ ಅತ್ತನು. ಅದನ್ನು ನೋಡಿದ ಆನಂದ

ನಿಗೆ ಬಲು ವ್ಯಸನವುಂಟಾಯಿತು. ಕೂಡಲೇ ಮುದ್ದಣ್ಣನಿಂದ ಒಂದು

ವೀಲು ಬರೆಯಿಸಿ ಇಟ್ಟನು. ಅದರ ವಿಧಿಯಂತೆ ಮುತ್ತೂರಿನ ವಿಶಿಷ್ಟ

೧೦೨-------------------------------------------------------


ಆಸ್ತಿ, ಮನೆ, ಯಾವತ್ತೂ ಸೊತ್ತುಗಳು ಮುದ್ದಣ್ಣನ ಕಾಲಾನಂತರ ರುದ್ರಮ್ಮನಿಗೇನೇ ಸೇರಬೇಕೆಂತಲೂ, ಆ ಆಸ್ತಿಗೆ ಒಪ್ಪಿದ ಸಾಲವನ್ನೂ

ರುದ್ರಮ್ಮ ನೇ ತೀರಿಸಿಬಿಡಬೇಕೆಂತಲೂ ವಗೈರೆ ಬರೆದಿತ್ತು. ಅದನ್ನು

ರಿಜಿಸ್ತ್ರಿ ಮಾಡಿಸಿದ ಮರುದಿನವೇ ಮುದ್ದಣ್ಣನೂ ರುದ್ರಮ್ಮನೂ ಸೇರಿ

ಆನಂದನ ಹೆಸರಿಗೆ ಆಡಳಿತೆಯನ್ನು ಬಿಟ್ಟು ಕೊಡುವುದಾಗಿ ನಿಶ್ಚೈಸಿದರು. ಆನಂದನು ಮೂವತ್ತು ವರುಷ ಆಡಳಿತೆಯನ್ನು ನಡಿಸಿ ಮುದ್ದಣ್ಣನ ಸಾಲವನ್ನೆಲ್ಲಾ ಆ ಆಡಳಿತೆಯ ಅವಧಿಯಲ್ಲಿ ತೀರಿಸಿಬಿಡಬೇಕೆಂತಲೂ, ಮುದ್ದಣ್ಣನ ಹಾಗೂ ಅವನ ಹೆಂಡತಿಯ ಅಶನವಸನದ ಸಲುವಾಗಿ ವರುಷ - ಒಂದರ ಮುನ್ನೂರಅರುವತ್ತೈದು ರೂಪಾಯಿಗಳನ್ನು ಮುದ್ದಣ್ಣನ ಕೈಯ್ಯ ಕೊಟ್ಟು, ಅವನ ರಶೀದಿಪಡಿಯಬೇಕೆಂತಲೂ ಶರ್ತ ನಮೂದಿಸಿ, ಆ ದಂಪತಿಗಳೀರ್ವರೂ ಕೂಡಿ ರಿಜಿಸಿ ದಸ್ತಾವೇಜು ಮೂಲಕ ಆಡಳಿತೆ

ಯನ್ನು ಆನಂದನ ವಶ ಬಿಟ್ಟು ಕೊಟ್ಟರು.


ಕರಾರಾದ ಬಳಿಕ ಸಾಲ ತೀರಿಸುವ ಆ ಜವಾಬುದಾರಿ ಕೆಲಸವು

ತನ್ನ ಪಾಲಿಗೆ ಸೇರಿದುದರಿಂದ ಆನಂದನಿಗೆ ತುಸು ಬೇಸರಿಕೆ ಉಂಟಾದರೂ

ನಾಲೈದು ದಿವಸಗಳ ಒಳಗೇನೇ ಮುದ್ದಣ್ಣನ ವಿಶಿಷ್ಟ ಸಾಲಗಳನ್ನೂ ಒಂದುಳಿಯದಂತೆ ತೀರಿಸಿಬಿಟ್ಟನು. ಮತ್ತು ಮುದ್ದಣ್ಣನ ಎಲ್ಲಾ ಒಕ್ಕ

ಲುಗಳನ್ನು ಕರೆಯಿಸಿ ಅವರ ಹಿಂದಿನ ಬಾಕಿ ಲೆಕ್ಕಾಚಾರಗಳಿಗೆ ಕರಾರು

ಪತ್ರಗಳನ್ನು ಮಾಡಿಸಿಕೊಂಡು ಮುಂದಿನ ಗೇಣಿಯ ಬಗ್ಗೆ ಕ್ರಮವಾದ ಎದುರುನುಡಿಗಳನ್ನು ಪಡಕೊಂಡನು. ಮುದ್ದಣ್ಣನ ಆಸ್ತಿಯ ಗೇಣಿಯ

ದರವೆಂಬುದು ಮಾಜಿ ರಾಣಿ ಕಾಲದ ದರವಾಗಿತ್ತು. ಈಚೆಗೆ ಆ ಒಕ್ಕಲು

ಗಳು ಅದನ್ನೂ ವಸೂಲುಕೊಡದೆ ಮುದ್ದಣ್ಣನನ್ನು ಬಲು ದಣಿಸುತ್ತಿ

ದ್ದರು. ಆನಂದನು ಆಡಳಿತೆ ವಹಿಸಿಕೊಂಡ ನಂತರ ಆ ಗ್ರಾಮದ

ಇತರ ವರ್ಗದಾರರು ಗೇಣಿ ವಸೂಲುಮಾಡುವ ಕ್ರಮವನ್ನೂ ಅವರ

ಗೇಣಿಯ ದರವನ್ನೂ ಸ್ಥಳದ ಯೋಗ್ಯತೆಯನ್ನೂ ಆಲೋಚಿಸಿ, ಅವುಗಳ

ತರಗತಿಗೂ ಊರ ರಿವಾಜಿಗೂ ಅನುಸರಿಸಿ ಗೇಣಿ ಹೊರಿಸಿದನು.

೧೦೩ --------------------------------------------------


ಮತ್ತು ಮುದ್ದಣ್ಣನಿಗೆ ಅವಿಧೇಯರಾಗಿ ನಡಕೊಂಡ ಒಕ್ಕಲುಗಳನ್ನು

ಕಿತ್ತು ಹಾಕಿಬಿಟ್ಟನು. ಕೆಲವರು ತಕ್ಕ ಹದಕ್ಕೆ ಬಂದರು. ಮೊದಲು ಅಲ್ಪ

ಗೇಣಿಗೆ ಸಾಗುವಳಿ ಮಾಡಿಕೊಂಡಿದ್ದ ಒಕ್ಕಲುಗಳೆಲ್ಲಾ ಮುದ್ದಣ್ಣನ

ಭೂಮಿಯು ತಮ್ಮ ತಮ್ಮ ಉತ್ತಾರದ (ಉಂಬಳಿ) ಭೂಮಿಯೆಂಬಂತೆ ಬೆಳೆದದ್ದನ್ನೆಲ್ಲಾ ನುಂಗಿಕೊಂಡಿದ್ದರು. ಮೂರು ವರುಷಗಳಿಂದ ಗೇಣಿ

ಕೊಡದೆ ತಿಂದುತೇಗಿದ ಒಕ್ಕಲಿನವರೆಲ್ಲರೂ ಈಗ ಒಂದೇ ಗಂಟಿನಿಂದ

ಕೊಟ್ಟು ಕಾರಬೇಕಾಯಿತು. ಈಗಿನ ಗೇಣಿಯ ದರವು ಬಹಳೇ ಅಧಿಕ

ವಾದದ್ದೆಂದು ಒಕ್ಕಲುಗಳೆಲ್ಲಾ ತಮ್ಮೊಳಗೇನೇ ಗುಣುಗುಟ್ಟ ಹತ್ತಿದರು.

ತನ್ನ ಮನಸ್ಸಾಕ್ಷಿಗೂ, ನೀತಿಗೂ, ನ್ಯಾಯಕ್ಕೂ ತಕ್ಕುದೆಂದು ಕಂಡದ್ದನ್ನೇ ಮಾಡಬಲ್ಲ ಆ ಅಸಹಾಯ ಶೂರನಾದ ಆನಂದನ ಮುಂದೆ ಅವರ ಗುಣು ಗುಟ್ಟುವಿಕೆಯು ಎಷ್ಟು ದಿವಸ ತಾನೇ ನಿಂತೀತು? ಗೇಣಿಯ ವಸೂಲಿಯ

ವೇಳೆ ಪಿಟ್ಟೆಂದು ಮಾತೆತ್ತದೆ ಸಕಾಲದಲ್ಲಿ ಜಾಡಾಗಿ ವಸೂಲಾಯಿತು.

ಮುದ್ದಣ್ಣನ ಆಡಳಿತೆಯಲ್ಲಿ ವಸೂಲಿ ಕ್ರಮವು ಬಹಳ ಅವ್ಯವಸ್ಥೆ ಯನ್ನು ಹೊಂದಿತ್ತು. ಆನಂದನ ಮುಂದೆ ಅದೆಲ್ಲಾ ನಡದೀತೇ? ಒಂದೇ ಒಂದು

ವರುಷದಲ್ಲಿ ಅವರೆಲ್ಲರನ್ನೂ ಒಳ್ಳೆಯ ಮಾರ್ಗಕ್ಕೆ ತಂದನು. ಅವನ ಪ್ರತಿ ಯೊಂದು ಮಾತೂ ಅಪ್ಪಣೆ, ಹುಕುಂ ಆಗಿ ಪರಿಣಮಿಸಿತು., ಆನಂದನು

ಆಡಳಿತೆ ಹೊಂದುವಾಗ ಕರಾರಿನಲ್ಲಿ ನಮೂದಿಸಿದ ಗೇಣಿಗಿಂತ ಈಗ

ಇನ್ನೂರು ಮುಡಿ ಅಕ್ಕಿಯೂ, ನೂರಎಪ್ಪತ್ತೈದು ರೂಪಾಯಿ ನಗದಿ

ಯಾಗಿಯೂ ಹೆಚ್ಚಿಗೆ ಸಿಕ್ಕುವಂತಾಯಿತು. ಇಷ್ಟು ಉತ್ಪತ್ತಿ ಹೆಚ್ಚಿಗೆ

ಸಿಕ್ಕಿದರೂ, ಗೇಣಿಯ ದರವು ಊರ ರಿವಾಜಿಗೆ ಒಂದೇ ಒಂದು ತಿಲಾಂಶವಾ

ದರೂ ಜಾಸ್ತಿಯಾಗಿರಲಿಲ್ಲ. ಒಂದೆರಡು ವರುಷ ಕಳೆಯುತ್ತಲೇ ಮೊದಲು

ಮೊದಲು ದೂರುತ್ತಿದ್ದ ಒಕ್ಕಲುಗಳೇ ಆನಂದನನ್ನು ಹೊಗಳ ಹತ್ತಿದರು.

ಅವನು ಮುತ್ತೂರಿನ ಆಡಳಿತೆಯನ್ನು ವಹಿಸಿಕೊಂಡ ತರುವಾಯ ಆ

ಊರಿನಲ್ಲಿ ಕಬ್ಬು, ಹೊಗೆಸೊಪ್ಪು, ಗೆಣಸು, ಮೆಣಸು ಮುಂತಾದ ಇತರ ಪೈರುಗಳನ್ನು ಬೆಳಿಸುವಂತೆ ಪ್ರೋತ್ಸಾಹಿಸಿ ಈಗ ಆ ಊರಿನ ಬಯಲುಗಳು

೧೦೪ -------------------------------------------------------


ಎಲ್ಲಾ ಋತುಗಳಲ್ಲಿಯೂ ಪೈರುಗಟ್ಟೆಗಳಿಂದ ಕಂಗೊಳಿಸುವಂತೆ ಮಾಡಿ

ದನು. ಈಗ ಒಕ್ಕಲುಗಳೆಲ್ಲಾ ಉಂಡುತಿಂದು, ಧನಿಗೆ ಕೊಟ್ಟು,

ಒಂದಿಷ್ಟು ಮಾರಿ ಹಣವನ್ನು ಕೂಡಹಾಕಿ ಸುಖವಾಗಿದ್ದರು. ಹೀಗೆ

ಆನಂದನ ಮುತ್ತೂರು ಮನೆಯ ಆಡಳಿತೆಯಲ್ಲಿ ಹೆಚ್ಚಿಗೆ ಮುನಾಫೆ ಉಳಿಯುವುದನ್ನು ನೋಡಿ ಮುದ್ದಣ್ಣನಿಗೆ ಹೀಗೆ ಹೇಳಿದನು. "ನಿಮ್ಮ

ಆಸ್ತಿಯಿಂದ ನನಗೀಗ ಹೆಚ್ಚಿಗೆ ಲಾಭದೊರೆಯುತ್ತಿದೆ. ಇನ್ನೂ ಹೆಚ್ಚಿಗೆ

ಸಿಕ್ಕುವ ಸಂಭವವೂ ಇದೆ. ಆದುದರಿಂದ ನೀವು ನನಗೆ ಆಡಳಿತೆಯನ್ನು

ಒಪ್ಪಿಸುವಾಗ ಸಾಲತೀರಿಸಲಿಕ್ಕೆ ಮೂವತ್ತು ವರುಷದ ಅವಧಿ ಹಾಕಿ

ಕೊಟ್ಟಿದ್ದೀರಿ. ಈಗಿನ ವಿದ್ಯಮಾನದ ಮೇಲೆ ಆ ದೀರ್ಘ ವಾಯಿದೆಯ

ಅವಶ್ಯ ಕಾಣುವುದಿಲ್ಲ. ಶ್ರೀಶಾನುಗ್ರ ಹದಿಂದ ನಿಮ್ಮ ಸರ್ವ ಆಸ್ತಿಯನ್ನೂ ಸಾಲದಿಂದ ವಿರಹಿತ ಪಡಿಸಿ ಇನ್ನು ಸ್ವಲ್ಪ ವರುಷಗಳಲ್ಲೇ ನಿಮ್ಮ ತಾಬೆಗೆ ಒಪ್ಪಿಸುವೆನು'' ಎಂದು ವಾಗ್ದಾನ ಮಾಡಿದನು.


ಆನಂದನು ಒಮ್ಮೆ ತನ್ನ ಬೈಠಕುಖಾನೆಯಲ್ಲಿ ಕುಳಿತು ಹೀಗೆ

ಆಲೋಚಿಸಿದನು. ತಾನು ವಿದ್ಯಾವಂತನಾಗಿದ್ದು, ಹುಟ್ಟಿದ ಸಮಾಜ

ವನ್ನು ಉನ್ನತಿಗೆ ತರುವುದರಲ್ಲಿ ತನ್ನ ಕೈಯಲ್ಲಾದ ಪ್ರಯತ್ನ ಮಾಡಲೇ ಬೇಕೆಂದು ಸಂಕಲ್ಪಿಸಿಕೊಂಡನು. ಇತರ ಎಲ್ಲಾ ಸಮಾಜವೂ ವಿದ್ಯೆ

ಬುದ್ದಿ ಹುದ್ದೆಯಲ್ಲಿ ಮುಂದೆ ಬಂದು ನವನಾಗರಿಕತೆಯಲ್ಲಿ ಮೆರೆಯುತ್ತಿರು

ವಾಗ, ನಮ್ಮ ಜನರು ಅವಿದ್ಯೆಯಿಂದ, ಅಮಿತಿ ವೆಚ್ಚದಿಂದ ಅನಾಗರಿಕರಾಗಿ ಕಣ್ಣುರುಡರಂತೆ ಮೌಡ್ಯದಲ್ಲಿರುವುದು ಕೇವಲ ಶೋಚನೀಯವಾದ ಸಂಗತಿಯಾಗಿದೆ. ಅಜ್ಞಾನದಿಂದ ಬಳಲುವ ತನ್ನ ಬಂಧುಭಗಿನಿಯರ

ಅಭಿವೃದ್ಧಿ ಸಾಧನೆಗೆ ಪ್ರಯತ್ನಿಸದವನು ಅವನೆಷ್ಟು ಜ್ಞಾನಿಯಾಗಿದ್ದರೂ ಅಂಥವನಿಗೆ ಅಜ್ಞಾನಿ ಎಂಬ ಹೆಸರೇ ಒಪ್ಪುವುದು.” ಎಂದು ತನ್ನೊಳ

ಗೇನೇ ಅಂದುಕೊಂಡನು.


ಆನಂದನು ತಾನು ಕೈಕೊಂಡಿದ್ದ ವಕೀಲಿ ಉದ್ಯೋಗವನ್ನು ಬರೇ

ಲಾಭದ ದೃಷ್ಟಿಯಿಂದಲೇ ನಡಿಸುತ್ತಿದ್ದಿಲ್ಲ. ಕೋರ್ಟು ಕಚೇರಿಗಳ ಬಳಿ

೧೦೫ ----------------------------------------------------------

ಅಲೆದು ವಕೀಲರ ಚಾವಡಿಯಲ್ಲಿ ಕಾದುಕಾದು ಹಣವನ್ನು ದುರ್ವ್ಯಯ ಮಾಡುತ್ತಿರುವ ತನ್ನವರಿಗಾಗಿ ಬಲುನೋಯುತ್ತಿದ್ದು, ಅದನ್ನು ತಪ್ಪಿ

ಸಲು ಏನುಮಾಡಬೇಕೆಂದು ಸದಾ ಚಿಂತಿಸುತ್ತಿದ್ದನು. ಉಭಯ ಕಕ್ಷ್ಮಿ

ಗಾರರೂ ತನ್ನವರಿದ್ದು, ಅವರು ತನ್ನ ಮಾತಿನಂತೆ ನಡಿಯುವರೆಂದು

ಕಂಡರೆ ಅವರ ದಾವೆಯನ್ನು ಕೋರ್ಟಿನ ಒಳಗೇನೇ ಹೋಗಗೊಡದೆ

ತಾನೇ ತೀರಿಸಿಬಿಡುತ್ತಿದ್ದನು. ಕುಟುಂಬದ ಕಲಹಗಳನ್ನಂತೂ ರಾಜಿಯಿಂದ ಪಂಚಾಯತಿಕೆ ಮಾಡಿಸಿ ತೀರಿಸಿ ಬಿಡಲು ಆನಂದನಷ್ಟು ಪರಿಶ್ರಮ ಪಡು

ವವರು ಈ ಕಾಲದ ವಕೀಲರಲ್ಲಿ ಯಾರೂ ಇಲ್ಲವೆಂದು ಧೈರ್ಯವಾಗಿ ಹೇಳಬಹುದಾಗಿದೆ. ಆ ಕಾಲದಲ್ಲಿ ಆನಂದನು “ವಿವಾದ ಕೆಡುಕು”

ಎಂಬ ಒಂದು ಸ್ವಾರಸ್ಯವಾದ ಗ್ರಂಥವನ್ನು ರಚಿಸಿದ್ದನು. ಅದನ್ನು ಓದದ ಕನ್ನಡಿಗರಿಲ್ಲ. ಅದರ ರಸಾಸ್ವಾದನೆಯಿಂದ ಆನಂದಿಸದ ಪಂಡಿತರಿಲ್ಲ.


ದಿವಸ ಹೋಗುತ್ತಾ ಹೋಗುತ್ತಾ ಆನಂದನ ಕೋರ್ಟು ಕೆಲಸ

ಕ್ಕಿಂತಲೂ ಚಾವಡಿಯ ಪಂಚಾಯತಿಯ ಕೆಲಸವೇ ಹೆಚ್ಚಿಗೆ ಸಾಗುತ್ತಿತ್ತು.

ಅಲ್ಲಿ ಆಗುವ ತೀರ್ಮಾನಗಳೆಲ್ಲಾ ಕೋರ್ಟಿನ ತೀರ್ಮಾನಕ್ಕಿಂತಲೂ

ನ್ಯಾಯವೂ ಆದಾಯವೂ ಉಳ್ಳುದಾಗಿತ್ತು. ಇದರಿಂದ ಯಾವಾಗಲೂ ಪಂಚಾಯತಿಕೆಯ ಗದ್ದಲವೇ ಗದ್ದಲ, ಇದು ಕೋರ್ಟಿನವರ ತಿಳುವಳಿ

ಕೆಗೆ ಬಂದುದರಿಂದ ಅಲ್ಲಿ ದಾಖಲಾದ ಎಷ್ಟೊ ನಂಬರುಗಳನ್ನು ಪಂಚಾ

ಯಿತಿಕೆ ತೀರ್ಪಿಗಾಗಿ ಆನಂದನ ಬಳಿಗೆ ಕಳುಹಿಸುತ್ತಿದ್ದರು. ಆ ಕಾಲ

ದಲ್ಲಿ ಕುಟುಂಬದ ಕಲಹಕ್ಕೆ ಸಂಬಂಧಪಟ್ಟ ಕೋರ್ಟುದಾವೆಗಳು ನಾಮಾ ವಶೇಷವಾದುವು.


ಆನಂದನು ತನ್ನ ವಿದ್ಯತ್ವ ವಿಚಾರಶೀಲತೆಯಿಂದ ತನ್ನ ಮನೆತನ

ವನ್ನೂ, ಬಂಧುಮಿತ್ರರನ್ನೂ, ಹುಟ್ಟಿದ ಸಮಾಜವನ್ನೂ, ಉನ್ನತಿಗೆ

ತಂದುದಲ್ಲದೆ ಕ್ರಮಕ್ರಮವಾಗಿ ಭಾಷಾಸೇವೆ, ದೇಶಾಭಿವೃದ್ಧಿ ಮುಂತಾದ ಕಾರ್ಯಗಳನ್ನು ಮಾಡುತ್ತಾ ಆ ಕಾಲದಲ್ಲಿ ಗಣ್ಯ ಮುಖಂಡರುಗಳಲ್ಲಿ

ಒಬ್ಬನಾಗಿ ಬಹಳೇ ಕೀರ್ತಿಹೊಂದಿದನು.

೧೦೭ →-----------------------------------------------------


ಸರ್ವೆಶ್ವರ! ದಯಾಮಯ! ನಿನ್ನ ಅಮೋಘ ಕೃಪಾಕಟಾಕ್ಷ

ವೆಂಬ ಜ್ಯೋತಿಯಲ್ಲಿ ಪ್ರಕಾಶಿಸುವ ಸದ್ದುಣಯುಕ್ತಳಾದ ಆ ಸಾದ್ವಿ ಸುಶೀ

ಲೆಯು ತನ್ನ ಸ್ವಾಮಿಯಾದ ಆನಂದನನ್ನು ಒಡಗೂಡಿ ಸ್ವರ್ಗೋಪಮಾನ

ವಾದ ಸಂತೋಷದಿಂದ ದಾಂಪತ್ಯ ಸುಖವನ್ನು ಹೊಂದುತ್ತಿದ್ದಳೆಂದು ಬೇರೆ ಹೇಳಬೇಕೇ? ಇವರ ದಾಂಪತ್ಯದಲ್ಲಿ ಸುಲಕ್ಷಣ ಹಾಗೂ ಸದ್ದು ಣವಂತ

ರಾದ ಸುಪುತ್ರ ಪುತ್ರಿ ರತ್ನಗಳನ್ನು ಪಡೆದು ಸುಖಿಗಳಾಗಿದ್ದರು.


ಸಕಲಸಂಪತ್ತುಗಳಿಂದ ಕೂಡಿ ಆನಂದಸಾಗರದಲ್ಲಿ ವಿಹರಿಸುತ್ತಿದ್ದ

ಸುಶೀಲೆಯು ತನ್ನ ಅನುದಿನದ ಪ್ರಾರ್ಥನೆಯಲ್ಲಿ ಜಗತ್ಕರ್ತನನ್ನು

ಹೀಗೆ ಬೇಡುತ್ತಿದ್ದಳು. “ಹೇ ಪ್ರಭೋ ! ನೀನು ದಯಾಳು, ನನ್ನಂ

ತೆಯೇ ನನ್ನ ಇತರ ಬಂಧುಭಗಿನಿಯರಿಗೂ ಮಂಗಳವನ್ನುಂಟುಮಾಡು!!

ಇಷ್ಟೇ ನಿನ್ನೊಡನೆ ನನ್ನ ಪ್ರಾರ್ಥನೆಯು.”


ಜಗಧೀಶನು ಸರ್ವರಿಗೂ ಮಂಗಲವನ್ನುಂಟುಮಾಡಲಿ! ತಥಾಸ್ತು !!


+++++++ +++

ಸಂಪೂರ್ಣಂ.

===================================

ಹೊಸ ಪುಸ್ತಕ!

ಅಂದವಾದ ಮುದ್ರಣ!! “ ಶಾಂ ತಾ ಬಾ ಯಿ' ತರುಣ ತರುಣಿಯರಿಗೂ ನೂತನ ದಂಪತಿಗಳಿಗೂ ಅತಿ

ಉಪಯುಕ್ತವಾದ ಪುಸ್ತಕ, ಬೆಲೆ ಆಣೆ ೫, ತಮ್ಮ ಪೂರ್ಣ ವಿಳಾಸದೊಡನೆ ೫11 ಆಣೆಯ ಚೀಟು ಕಳುಹಿಸಿದರೆ ಪುಸ್ತಕವು ತಮ್ಮಲ್ಲಿಗೆ ಬಂದು ಸೇರುವದು, ಇದರ ಮುನಾಫೆ ಬಡ ವಿದ್ಯಾರ್ಥಿಫಂಡಿಗೆ ಕೊಡಲಾದೀತು.

ಈ ಪುಸ್ತಕವು ಹಳದಿಪುರ ಕನ್ನಡ ಶಾಲಾ ಮಾಸ್ತರ ಮ! ರಾ। ವಿಠೋಬಾ ವೆಂಕನಾಯಕ ತೊರ್ಕೆ ಇವರಿಂದ ಮನೋ . ರಂಜಕವಾಗಿ ಬರೆಯಲ್ಪಟ್ಟು ಮಂಗಳೂರು ಕೆನರಾ ಛಾಪಖಾನೆ ಯ ಮೆನೇಜರ್ ಎಚ್. ರಾಮಣ್ಣನಾಯಕ ಇವರಿಂದ ಮುದ್ರಿ ಸಲ್ಪಟ್ಟಿತು. ಅತ್ತೆಯು ಸೊಸೆಯನ್ನು ಹ್ಯಾಗೆ ನಡಿಸಿಕೊಳ್ಳ ಬೇಕು; ಸೊಸೆಯು ಅತ್ತೆಯ ಕಡೆಗೆ ಹ್ಯಾಗೆ ನಡಕೊಳ್ಳಬೇಕು; ಮನೆಯವರಲ್ಲಿಯೂ, ನೆರೆಕರೆಯವರಲ್ಲಿಯೂ ನಡಕೊಳ್ಳತಕ್ಕ ರೀತಿನೀತಿಗಳು, ಮತ್ತು ಪತಿ ಪತ್ನಿಯರಲ್ಲಿರತಕ್ಕ ವಿಶ್ವಾಸ ಭಕ್ತಿಗೂ ದಾಂಪತ್ಯಾನುರಾಗಕ್ಕೂ ಶಾಂತಾಬಾಯಿಯು ಆದರ್ಷ ರಮಣಿಯಾಗಿರುವಳು.

ಪುಸ್ತಕ ದೊರೆಯುವ ಸ್ಥಳಗಳು: 1. ಎಚ್. ಕೋಟಿಯಣ್ಣ ಶೆಟ್ಟಿ, ಹಿಂದೂ ಹಾಯರ್ ಎಲಿಮೆಂಟರಿ ಸ್ಕೂಲು, ಬಸರೂರು. 2. ಪಿ, ಎ. ಪೈ, ಬ್ರದರ್ಸ್, ಉಡುಪಿ, 3. ಮನೇಜರ, ಕೆನರಾ ಛಾಪಖಾನೆ, ಮಂಗಳೂರು.



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ