ಗುರುವಾರ, ಸೆಪ್ಟೆಂಬರ್ 17, 2020

ರಾಮಚಂದ್ರ

https://archive.org/details/dli.osmania.4193

 UNIVERSAL LIBRARY
LIBRARY UNIVERSAL
ರಾಮಚಂದ್ರ.
(ಸಾಮಾಜಿಕ ಕಾದಂಬರಿ
ಜಂಗಮಕೋಟೆ ಕೃಷ್ಣಶಾಸ್ತ್ರಿ,
ಸಾಹಿತ್ಯಸರಸ್ವತಿ, ವಿದ್ಯಾಭೂಷಣ, ಮೈಸೂರು ವಿದ್ಯಾ ಖಾತೆಯ ಸತ್ವಿಸ್ ತುಮಕೂರು.
ಇವರಿಂದ ರಚಿಸಲ್ಪಟ್ಟು ದು
ತುಮಕೂರು ಶ್ರೀ ಪಾರ್ಶ್ವ ನಾಥ ಪ್ರಿಂಟಿಂಗ್ ವರ್ಕ್ಸ್ ನಲ್ಲಿ ಮುದ್ರಿಸಲ್ಪಟ್ಟಿತು
೧೯೨೮
54ಶೋಧನ ಪುಸ್ತಕ ಭಂtv
ತಿಂಗ
. ನಗರ
1# 14}} #s | * ( ,
e
n kopen BG CHERABAD-DN
D KARNATAK BOOK-DEPOT
| Pen, B + CHIMALEಫಿ ರ್ವೆ ಚೆ GOWLIGUDA HYDERABAD-ON
ರಾಮಚಂದ್ರ
ಶೀತಲಾ ನದಿಯ ತೀರ. ಬೆಳಗ್ಗೆ ಹನ್ನೊ೦ದು ಘ೦ಟೆ
ಏನು ರಾಮಾನಂದ, ಇನ್ನೂ ಹೀಗೆಯೇ ಇದ್ದೀರಿ' ಎಲ್ಲರೂ ಆಗಲೇ:
ಹೊರಟರಲ್ಲ.

ಆ ! ಅಷ್ಟು ಹೊತ್ತಾಯಿತೆ ?ಅಯ್ಯಾ, ದಯೆಯಿಟ್ಟು ನೀನು ನನಗೂ
ಒಂದೆಲೆಯನ್ನು ಮಾಡಿರು .ನಾಪಿತನನ್ನು ನಿರೀಕ್ಷಿಸುತ್ತಿದ್ದೇನೆ ಅದಾದ
ಕೂಡಲೆ ಸ್ನಾನಾಹ್ನಿಕಗಳನ್ನು ತೀರಿಸಿಕೊಂಡು ಮನೆಗೆ ಹೊಕ್ಕು ಬಂದು
ಬಿಡುವೆನು.

ಮಧ್ಯಾಹ್ನ ಒಂದು ಘಂಟೆಯೂ ಆಯಿತು. ರಾಮಾನಂದನು
ಪೂರ್ವೋಕ್ತ ಕರ್ಮಗಳನ್ನೆಲ್ಲಾ ಮುಗಿಯಿಸಿಕೊಂಡು ಮನೆಗೆ ಹೋಗಿ -ಏನೆ,
ಗಂಗಾಸಮಾರಾಧನೆಯ ಮನೆಯವರು ಎರಡನೆಸಲ ಕರೆಯವುದಕ್ಕೆ
ಬಂದಿದ್ದರೆ ?

ಇಲ್ಲಿ ಪುನಃ ಕರೆಯುವುದಕ್ಕೆ ಒರಲು ಜನಸಹಾಯವಿಲ್ಲ, ದಯಯಿಟ್ಟು
ಎಲ್ಲರೂ ಹನ್ನೆರಡು ಘಂಟೆಗೆ ಬರಬೇಕು ಎಂದು ಆಗಲೆ ಹೇಳಿರುವ
ರಲ್ಲಾ ? ಬೇಗ ಏಳ ಬಾರದೆ ! ನಿಮಗೋಸ್ಕರ ನಾನು ಕಾದುಕಾದು ಸಾಕಾಯ್ತು,

ಏನೆಂದೆ ? ನಾವೇನು ಅನ್ನಾ ಕಣದೆ ಕಂಗಾಳಿಗಳೂ ಎರಡನೆಯ ಸಲ
ಕರೆಯಿಸಿಕೊಳ್ಳದೆ ಹೋಗುವುದಕ್ಕೆ ? ಸರಿಸರಿ, ಇಷ್ಟವಿದ್ದರೆ ನೀನು
ಹೋಗು ಎಂದು ತಂದಿದ್ದ ಒದ್ದೆ ಬಟ್ಟೆಗಳನ್ನು ಮಡಿಸಿ ತಟ್ಟಿ ಕುಟ್ಟಿ ಹರಡುತ್ತ
ಕಾಲವನ್ನು ಕಳೆದನು. ಯಜಮಾನರನ್ನು ಬಿಟ್ಟು ಸವಿಯೂಟಕ್ಕೆ
ಹೋಗಲು ಇಷ್ಟವಿಲ್ಲ. ಆಕೆಯು ಖಿನ್ನಳಾಗಿ ಕುಳಿತಳು. ರಮಾನಂದ
ನಿಗೂ ಆ ಊಟವನ್ನು ಬಿಡಲು ಮನಸ್ಸಿಲ್ಲ ಮನೆಯಲ್ಲೂ ಅಡಿಗೆಯೇ
ಇಲ್ಲ. ಕಡೆಗೆ ಹೆಂಡತಿಯ ಉಪಚಾರೊಗಳ ಮೂಲಕ ತನ್ನ ದರ್ಪವನ್ನು
ಳಿಸಿಕೊಂಡಂತೆ ಆಕೆಯನ್ನು ಏನೋ ಉದ್ಧಾರಮಾಡುವಂತೆಯೂ
ನಟಿಸಿದನು. ಇಬ್ಬರೂ ಭೋಜನಕ್ಕೆ ತೆರಳಿದರು.

ಎಲ್ಲರೂ ಬಂದು ಕುಳಿತಿದ್ದಾರೆ ಎಲೆಗಳನ್ನು ಹಾಕಬೇಕು, ದೊಡ್ಡ
ಮನೆಯ ಧುಂಡಭಟ್ಟರೂ ಬಂದರು ಬಳಿಕ ಭೋಜನಕ್ಕೆ ಪ್ರಾರಂಭ. ಅತಿಧಿ
ಗಳಲ್ಲಿ ಕೆಲವರು ವೇದಪಾರಾಯಣ, ಕೆಲವರು ಲೋಕವ್ಯವಹಾರದ ಸಂಭಾ
ಷಣೆ, ಹೀಗೆ ನಿರತರಾಗಿದ್ದರು. ಅಭಿಘಾರವೂ ಆಯ್ತು. ಸರ್ವತ್ರ ನಿಶ್ಯಬ್ಬ.
ಪಾರ್ವತೀದೇವಿಯು ಬಂದು ಸಂಕಲ್ಪ ಮಾಡಿ ಅನ್ನವನ್ನು ಧಾರೆಯೆರೆದಳು.
ಇದಕ್ಕೆ ಮೊದಲೇ ಪರಮಪಾವನೆಯಾದ ಗಂಗಾಮಾತೆಯ ದಿವ್ಯತೀರ್ಧವು
ಪಙ್ತಿಯಮೇಲೆ ಸರ್ವತ್ರ ವಿನಿಯೋಗಿಸಲ್ಪಟ್ಟಿದ್ದಿತು. ಎಲ್ಲರೂ ಭಕ್ತಿಯಿಂದ
ಸ್ವೀಕರಿಸಿದ್ದರು. ಬಳಿಕ ಭೋಜನಕ್ಕೆ ಆರಂಭ ಅಂದು ಭಾನುವಾರ
ಯಾರಿಗೂ ಆತುರವಿಲ್ಲ, ಸಾವಕಾಶವಾಗಿ ಆಗಬೇಕೆಂಬ ಮನೆಯವರ ಉಪ
ಚಾರೋಕ್ತಿಗಳು ಬೇರೆ, ಮತ್ತು ಬಗೆಬಗೆಯ ಭಕ್ಷ್ಯಭೋಜ್ಯಗಳು.
ಇವೆಲ್ಲಾ ಕ್ಲುಪ್ತಕಾಲವನ್ನು ಕಡೆಗೊತ್ತಿದವು. ಅನಾಹೂತರಾಗಿ ಬಂದ ಅತಿ
ಧಿಗಳ ಸಂಖ್ಯೆಯೂ ಅಮಿತವಾಗಿಯೇ ಇದ್ದಿತು, ಇದರಿಂದ ಅನ್ನ ಮುಂತಾದ
ಕೆಲವು ಪದಾರ್ಥಗಳನ್ನು ಪುನಃ ಅಡಬೇಕಾಯ್ತು ಇದಕ್ಕೊಸ್ಕರ ಕಾಲವನ್ನು
ತೆಗೆದುಕೊಳ್ಳಲಿಕೊ ಬಡಿಸಿದ್ದ ಪದಾರ್ಥಗಳೆಲ್ಲಾ ಸಂಪೂರ್ಣವಾಗಿ ವಿನಿ
ಯೋಗವಾಗಲೆಂದೋ, ಆತುರಪಡಿಸಬಾರದೆಂಬ ಆದರಣೆಯಿಂದಲೋ,
ಅರಿತು ಹೇಗೋ ಎರಡನೆಯ ಸಲ ಬಡಿಸುವ ಕೆಲಸವು ಸ್ವಲ್ಪ ತಡವಾಯ್ತು.
ಆಗ ಪುನಃ ಎಲ್ಲೆಲ್ಲ ಲೋಕಾಭಿರಾಮವಾದ ಸಂಭಾಷಣೆಯೇ.
 
ಪಾರ್ವತೀದೇವಿಯು ಪಙ್ತಿಯಮೇಲೆ ಬಂದಾಗ ಧುಂಡಿಭಟ್ಟನು-
ತಾಯಿ, ನಿಮ್ಮ ಜನ್ಮ ಸಾರ್ಥಕ. ನಿಮ್ಮ ಮಹಾಯಾತ್ರೆ ಸಿದ್ದಿಸಿತು, ಈ
ಲೋಕದಲ್ಲಿ ನೀವೇ ಧನ್ಯರು, ಆಹಾ ! ಏನು ಸಮಾರಾಧನೆ ! ಏನು ವಿತರಣೆ!
ಎಲ್ಲಾ ನಳಪಾಕ ಭೀಮಪಾಕವೇ ! ಇಂದೆ ಸುದಿನ.

ಪಾರ್ವತೀದೇವಿ-ಅಪ್ಪ ಬಡವಳ ಭಕ್ತಿ, ನನ್ನಂತಹವಳು ಏನು
ಮಾಡಿಯೇನು, ಎಲ್ಲಾ ಭಗವಂತನ ಅನುಗ್ರಹ ನಿಮ್ಮಂತಹ ಐಶ್ವರ್ಯವಂತ
ರಾದರೂ ತೀರ್ಥಯಾತ್ರೆ ಮಾಡಿಕೊಂಡು ಬಂದರೆ ಎಷ್ಟೋ ವಿಜೃಂಭಣೆ
ಯಿಂದ ನಡೆಯಿಸೀರಿ. ಕಾಶಿಗೆ ನಿಮ್ಮ ಪ್ರಯಾಣ ಯಾವಾಗ ಧುಂಡಭಟ್ಟರೆ?

ಧುಂಡಭಟ್ಟ-ಅಮ್ಮ, ನಾನೇಕೆ ಕಾಶಿಗೆ ಹೋಗಬೇಕು? ಈ ದರ್ಭಿ
ಕ್ಷಕಾಲದಲ್ಲಿ ಹೆಚ್ಚು ವೆಚ್ಛಾ ದಂಡಾ ತೆತ್ತು. ದಾರಿಯಲ್ಲಿ ಕಷ್ಟ ನಷ್ಟಗಳನ್ನ
ನುಭವಿಸಿ,ಸಿಕ್ಕಿದ ನೀರನ್ನು ಕುಡಿದು, ರೋಗಾ ತಂದುಕೊಂಡರ ಗತಿಯೇನು?
ಅರ್ಥಹಾನಿ, ಪ್ರಾಣಹಾನಿ, ನಿಮ್ಮಂತಹ ಪುಣ್ಯಾತ್ಮರು ಯಾರಾದರೂ
ಯಾತ್ರೆ ಮಾಡಿಕೊಂಡು ಬಂದು ತೀರ್ಥ ಪ್ರಸಾದಗಳನ್ನು ಕೊಟ್ಟು, ಮೃಷ್ಟಾನ್ನ
ಸಂತರ್ಪಣೆಯನ್ನು ಮಾಡಿಸಿದರೆ ಇದ್ದ ಕಡೆಯೇ ಎಲ್ಲವೂ ಆಯಿತು.

ಪಾರ್ವತೀದೇವಿಯು ನಿಜವಾಗಿಯೂ ಒಡವಳು ಪಟ್ಟಣದಲ್ಲಿ ಹುಟ್ಟಿ
ಬಳೆದವಳು. ವಿದ್ಯಾವತಿ ವೃದ್ಧೆ. ಸ್ವರದಿಂದಲೇ ಸ್ವಭಾವವನ್ನು ತಿಳಿಯ
ಬಲ್ಲ ಜಾಣೆ. ಆದುದರಿಂದ ಮೌನದಿಂದ ಮುಂದಕ್ಕೆ ತೆರಳಿದಳು.

ರಾಮಾನಂದನು ಹತ್ತಿರ ಕುಳಿತಿದ್ದ ವ್ಯಕ್ತಿಯನ್ನು ನಿರ್ದೇಶಿಸಿ ಧುಂಡಿ
ಭಟ್ಟನನ್ನು ಕುರಿತು- "ಏನುಸ್ವಾಮಿ ಇನ್ನೂ ಕೆಲವು ದೊಡ್ಡ ಸಂತರ್ಪಣೆ
ಗಳ ಊಟ ಕಾದಿದೆ.” ಎಂದು ಕಣ್ಣು ಮಿಟಿಕಿಸಿದನು.
 
ಧುಂಡಿಭಟ್ಟ - ಓಹೂ ! ಹೌದು ಸ್ವಾಮಿ, ಮರೆತಿದ್ದೆ ಏನು ಸೀತಾ
ಕಾಂತ, ರಾಮಚಂದ್ರನಿಗೆ ಉಪನಯನ ಯಾವಾಗ ?

ರಾಮಾನಂದ-ಶೀಘ್ರದಲ್ಲೇ. ತಂದೆಮಕ್ಕಳಿಬ್ಬರೂ ಒಟ್ಟಿಗೆ,
ಇನ್ನೆನು ಈತನಿಗೆ ನೇತ್ರವೈದ್ಯರೂ ಮಗನಿಗೆ ಪುರೋಹಿತರೂ ುಪನಯನ
ಮಾಡಿಸುವರು.

ಸೀತಾಕಾಂತನು ಮುಗುಳುನಗೆಂದ ಸುಮ್ಮನಿದ್ದನು. ಈತನು
ಈ ಊರಲ್ಲಿ ಗ ನಾನೊಬ್ಬ ದೊಡ್ಡ ಮನುಷ್ಯ.  ಗುಣಶಾಲಿ, ಚೆನ್ನಾಗಿ
ಬದುಕಿದ ಮನೆತನದವನು. ಪ್ರಕೃತದಲ್ಲಿ ಲೇಖಕ ವೃತ್ತಿ ಇಪ್ಪತ್ತು ರೂಪಾ
ಯಿಗಳ ಅಲ್ಪವೇತನ ಆದರೂ ಉದಾರಿ, ಈತನ ಮಾತಿನಲ್ಲಿ ತೂಕವುಂಟು.
ಆದುದರಿಂದಲೇ ಈ ಸುಂದರಗಿರಿ ಗ್ರಾಮದ ದೊಡ್ಡ ಮನುಷ್ಯರ ಮಂಡಲಿ
ಯಲ್ಲಿ ಈತನು ಪ್ರಮುಖ.
 
ಸುಂದರಗಿರಿಯು ಸಾಮಾನ್ಯ ಗ್ರಾಮ, ಪ್ರಜಾಸಂಖ್ಯೆ ಮೂರುಸಾವಿರ
ಮಾತ್ರ ಬ್ರಾಹ್ಮಣರ ಮನೆಗಳಾದರೂ ಇಪ್ಪತ್ತೈದು. ಸೀತಾಕಾಂತನಿಗೆ
ಪೂರ್ವದಲ್ಲಿ ಕಾಲಕ್ಕೆ ನೂರುಖಂಡಗ ದವಸದ ಆಯತಿ ಇದ್ದಿತಂತೆ.  
ಮನೆಯಲ್ಲಿ ನಡೆಯುವ ಶುಭಾಶುಭಕರ್ಮಗಳು, ದೊಡ್ಡ ಮನುಷ್ಯರ
ಔತಣ ಉಪಚಾರಗಳು, ತಿಂಗಳಗಟ್ಲೆ ಬಂದು ತಿಷ್ಠಹಾಕುತ್ತಿದ್ದ ಬಾದ
ರಾಯಣ ಸಂಬಂಧದ ಬಂಧುಬಳಗದವರಿಗೆ ಅನ್ನವಸ್ತ್ರಗಳು, ಯಾಚಕರಿಗೆ
ಭೂರಿದಕ್ಷಿಣೆಗಳು, ನಿತ್ಯಗಟ್ಲೆ ಅತಿಥಿ ಅಭ್ಯಾಗತರಿಗೆ ಮೃಷ್ಟಾನ್ನ ಭೋಜನ,
ವಂಶಾನುಕ್ರಮವಾಗಿ ಬಂದ ದೇವರಸೇವೆಗಳು, ದಶವಗ್ರಹಸ್ವರೂಪನಾದ
ಜಾಮಾತನಿಗೂ ಬೀಗರಿಗೂ ನಡೆಸಿದ ಷೋಡಶೋಪಚಾರಗಳು, ಮಗಳಿಗೆ
ಕೊಟ್ಟ ಬಳುವಳಿ ಮೊದಲಿನ ಮತ್ತು ಈಗಿನ ಸರ್ವೆಫೈಮಾಯಿಷಿಯಂತೆ
ಹೆಚ್ಚಿದ ಕಂದಾಯ ಕವಳಿಗೆಗಳು, ವರಮಾನದ ತೆರಿಗೆ, ಮಠದ ದೀಪಾ
ರಾಧನೆ ಕಾಣಿಕೆಗಳು, ಇವೇ ಮೊದಲಾದ ಎಲ್ಲಾ ವೆಚ್ಚಗಳಿಗೂ ಈ ಆಯ
ತಿಯೇ ಉತ್ತರವಾದಿ, ಸೀತಾಕಾಂತನು ಸ್ವಂತವಾಗಿ ಆಳುಗಳನ್ನೂ ಎತ್ತು
ಬಂಡಿಗಳನ್ನೂ ಇಟ್ಟುಕೊಂಡು ಆರಂಬಮಾಡಿಸುತ್ತಿದ್ದನು. ಬರುಬರುತ
ಸಕಾಲಗಳಲ್ಲಿ ಮಳೆಬೆಳೆಗಳಾಗಲಿಲ್ಲ. ಕೂಲಿಕಂಬಳಗಳ ಧಾರಣೆ ಹೆಚ್ಚಿತು.
ಹೀಗೆ ಅನಿರೀಕ್ಷಿತವಾಗಿ ವೆಚ್ಚವು ಹೆಚ್ಚಿತು, ಆಯತಿ ತಗ್ಗಿತು. ತಕ್ಕಡಿ
ಯೇಳುವುದೇ ಕಷ್ಟ ವಾಯ್ತು. ಸಾಲದುದಕ್ಕೆ ಕಾಲುಬಾಯಿಜ್ವರ ಮತ್ತು
ದೊಡ್ಡರೋಗ ಬಂದು ಹಲವು ದನಕರುಗಳು ಸತ್ತುಹೋದುವು -ಹೀಗೆ
ವರ್ಷಕ್ಕೆ ಸಾವಿರಾರು ರೂಪಾಯಿ ನಷ್ಟವಾಗುತ್ತ ಬಂದಿತು. ಇದರಿಂದ
ಸ್ವಂತ ಬೇಸಾಯವನ್ನು ಬಿಟ್ಟನು. ಭೂಮಿಯನ್ನೆಲ್ಲಾ ವಾರಕ್ಕೆ ಕೊಟ್ಟನು.
ಇದರಿಂದ  ವರಮಾನವು ವರ್ಷಕ್ಕೆ ಇಪ್ಪತ್ತು ಖಂಡಗ ದವಸಕ್ಕೆ ಇಳಿಯಿತು.
ಸೀತಾಕಾಂತನ ಹಿರಿಯರಿಂದ ಈ ಊರಿನ ಮತ್ತು ನೆರೆಹೊರೆಯ ಹಲವು
ಹಳ್ಳಿಗಳವರಿಗೆ ಎಷ್ಟೋ ಸಹಾಯವಾಗಿದ್ದಿತು. ಈಗಲೂ ಈತನೂ ಎಲ್ಲರಿಗೂ
ಪ್ರೀತಿಪಾತ್ರನೇ, ಹೇಗೂ ಏನೇನು ಹರಣಭರಣಶಕ್ತಿಗಳನ್ನು ವೆಚ್ಚ ಮಾಡಿ
ದರೂ ಭೂಮಿಯ ಉತ್ಪತ್ತಿಯೇನೊ ಹೆಚ್ಚಲಿಲ್ಲ. ಕಡೆಗೆ ಈಗ್ಗಿಂತ ತಗ್ಗ
ದಂತೆ ಮಾಡುವುದಕ್ಕೆ ಕೂಡ ಎಷ್ಟೇ ಕಷ್ಟ, ಇತರ ಪಂಗಡಗಳವರ
ಸಮಾಜಸಂಸ್ಕರಣನಿಯಮಗಳು, ಸರ್ವತ್ರ ವಿದ್ಯಾಭ್ಯಾಸದ ಚಳುವಳಿ
ಇಂತಹವೆ ಇದಕ್ಕೆ ಕಾರಣ. ವಾರದ ಭೂಮಿಗೆ ಶ್ರಮಪಟ್ಟು, ಬೆಳೆಯಲ್ಲಿ
ದಣಿಗೆ ಪಾಲು ಕೊಡುವುದಕ್ಕಿಂತ ತಮ್ಮ ಸ್ವಂತ ಜವಾನುಗಳನ್ನೇ ಕ್ರಮ
ಪಡಿಸಿಕೊಂಡರೆ ತಾವು ಕುಬೇರರಾಗಬಹುದೆಂದು ರೈತರು ಭಾವಿಸುತ್ತ
ಬಂದರು. ಒಂದುವೇಳೆ ದಾಕ್ಷಿಣ್ಯಕ್ಕೆ ಈ ನಮ್ಮ ಸೀತಾಕಾಂತನಂತಹ
ದೊಡ್ಡ ಮನುಷ್ಯರ ಭೂಮಿಯನ್ನು ವಾರಕ್ಕೆ ಒಪ್ಪಿದರೂ ದೂರಕ್ಕೆ ಬಣ್ಣ
ವಾಗಿ ಮಾತ್ರ ಕಾಣುವಂತೆ ಉಳುವುದು, ಸ್ವಂತ ಕೆಲಸವನ್ನೆಲ್ಲಾ ತೀರಿಸಿ  
ಕೊಂಡು ಅಕಾಲದಲ್ಲಿ ಬಿತ್ತುವುದು, ಹೀಗೆ ಮಾಡುವರು, ಪೈರು ಬಂದ
ಮೇಲಾದರೂ ಆ ರೈತನ ಪಶುವರ್ಗವೇ ವಾರದ ಬೆಳೆಯ ಯೋಗಕ್ಷೇಮ
ವನ್ನು ನೋಡಿಕೊಳ್ಳುವುದು ಇತರ ದನಗಳು ಬಂದಾಗ ಮಾತ್ರ ಅವನ
ಹೆಂಡಿರೊ? ಮಕ್ಕಳೊ? ಹೋಗಿ ಬೆದರಿಸುವರು. ಹೀಗಿರುವಲ್ಲಿ ಸೀತಾ
ಕಾಂತನ ಜಮೀನು ಶ್ರಯಕ್ಕೆ ಬಂದು ಒಳ್ಳೆಯ ಉತ್ಪತ್ತಿಯನ್ನು ಕೊಡುವ
ದೆಂಬ ಆಸೆಯಾದರೂ ಉಂಟೆ ? ಈತನಿಗೆ ಸಾಲಸೋಲಗಳು ಹೆಚ್ಚಿದವು.
ಸಾಹುಕಾರರು, ಸ್ಟ್ಯಾಂಪ್ ವೆಂಡರುಗಳು, ಸಮನ್ ಪ್ಯಾದೆಗಳು, ಭತ್ಯಾ
ಮೀನರು, ಲಾಯರುಗಳು ಇಂತಹ ಸ್ಥಳಪರಸ್ಥಳಗಳ ಜನಮಂಡಲಿಯಲ್ಲಿ
ಬಳಕೆ ಹೆಚ್ಚಿತು. ಇವರೆಲ್ಲಾ ಇವನ ಗೃಹಕೃತ್ಯವಾದ್ಯಂತವನ್ನೂ ತಿಳಿಯ
ಬಲ್ಲ ಬಂಧುಗಳಂತಾದರು ಇದುವರೆಗೂ ಹೊಟ್ಟೆಯೊಳಗಿದ್ದ ಹುಣ್ಣು
ಈಗ ಹೊರಪಡಲು ನೊಣಗಳ ಬಾಧೆಯು ಹೆಚ್ಚಿತೇ ವಿನಾ ಗುಣಪಡಿಸುವ
ವೈದ್ಯರು ದೊರೆಯಲಿಲ್ಲ. ಆದರೆ ಜನರು ಕೈಬಿಟ್ಟರೂ ಜನಾರ್ದನನು
ಕೈಬಿಟ್ಟಾನೆ ? ಸದ್ಯಕ್ಕೆ ಸೀತಾಕಾಂತನಿಗೆ ಕುಶಲನಾದೊಬ್ಬ ಪರಮಾಪ್ತ
ಮಿತ್ರನ ಬೆಲೆಯಾದ ಸಲಹೆಯು ಸಕಾಲಕ್ಕೆ ಸಿಕ್ಕಿದುದು ಪುಣ್ಯವೇ ಸರಿ.
ಇವನ ಆಸ್ತಿ ಸ್ವಾಸ್ಥ್ಯಗಳು ಕೋರ್ಟಿನಲ್ಲಿ ಯಾಲಕ್ಕೆ ಈಡಾಗಿ, ಬರುವ
ಅಲ್ಪಸ್ವಲ್ಪ ದ್ರವ್ಯದಲ್ಲಿ ಬಕಪಕ್ಷಿಗಳಂತೆಯ ವೃಕಪೋತಗಳಂತೆಯ
ಸಮಯವನ್ನು ಕಾಯುತ್ತಿರುವ ನ್ಯಾಯವಾದಿಗಳಿಗೂ ಉಳಿದುದು ಸಾಲ
ಗಾರರಿಗೂ ಕೃಷ್ಣಾರ್ಪಣವಾಗಿ, ಸೀತಾಕಾಂತನು ಕಡೆಗೆ ಜ್ಞಾನಮಂಟಪಕ್ಕೆ
ಸೇರಿ ಅವಮಾನಪಡಬೇಕಾಗುವದೊ ಏನೋ ಎಂದು ಆ ಮಿತ್ರನು ಶಂಕಿಸಿ
ಸಿದನು. ಜಮೀನಿನ ಸ್ವಲ್ಪ ಭಾಗವನ್ನು ಮಾರಿ ಈ ೃಣಗಳನ್ನು ತೀರಿಸಿ
ದರ ಉಳೆಯುವ ಸ್ವತ್ತಾದರೂ ಸುರಕ್ಷಿತವಾಗಬಹುದೆಂದು ಸೂಚಿಸಿದನು.
ಎಂತಹ ಕಷ್ಟ ನಷ್ಟಗಳು ಬಂದರೂ ಹಿರಿಯರ ಸಂಪಾದನೆಯ ಸ್ವತ್ತನ್ನು
ಕಾಪಾಡಿಕೊಳ್ಳಬೇಕೆಂದೂ ಅದನ್ನು ವಿಕ್ರಯಿಸುವುದು ಅಪಕೀರ್ತಿಕರ
ವೆಂದೂ ಹಠಾ ಹಿಡಿದಿದ್ದ ಸೀತಾಕಾಂತನು ಈಗ ಸುಮ್ಮನೆ ಸಮ್ಮತಿಸಬೇಕಾ
ಯ್ತು. ಗೃಹಕೃತ್ಯವು ಈರೀತಿಯಾಗಿ ಪರಿಣಮಿಸಲು ಕೆಲವು ವೆಚ್ಚಗಳು
ತಾವಾಗಿಯೇ ನಿಂತುಹೋದವು, ಬಂಧುವರ್ಗ, ಯಾಚಕರು ಕಂದಾಯ
ಬಡ್ಡಿ ಇತ್ಯಾದಿಗಳ ಹೆಚ್ಚು ಕಾಟವು ತಪ್ಪಿತು. ಆದರೇನು! ಸೀತಾಕಾಂತನು  
ಒಂದಲ್ಲ ಒಂದುಯೋಜನೆಗೇನೊ ಈಡಾಗಿಯೇ ಇದ್ದನು, ಈತನು ಹಣ
ದಲ್ಲಿಷ್ಟು ಬಡವನಾದರೂ ಗುಣದಲ್ಲಿ ಧನಿಕನೆ ಎಂಬ ಬಗ್ಗೆ ಜನರಿಗೆ ಈತನ
ಇದ್ದ ಗೌರವವೇ ದೃಷ್ಟಾಂತವು.
                ------------------

                    ಎರಡನೆಯ ಪ್ರಕರಣ.
    
ಪಟ್ಟಕ್ಕೆ ಕುಳ್ಳಿರಿಸಿದ್ದ ಬೊಂಬೆಗಳೂ ಪ್ರದರ್ಶನದ ಇತರ ವಸ್ತು
ಗಳೂ, ಇನ್ನೂ ಪೆಟ್ಟಿಗೆಗಳೊಳಕ್ಕೆ ಸೇರಿಲ್ಲ. ಮನೆಗಳ ಬಹಿರಂತರ್ಭಾಗಗಳಲ್ಲಿ
ಅಲಂಕಾರಕ್ಕೆಂದು ಕಟ್ಟಿದ್ದ ಮಾವು ಬಾಳೆಗಳ ಎಳೆಗಳು ಬಾಡಿ ಇನ್ನೂ
ಕಳೆಗುಂದಿಲ್ಲ. ನವರಾತ್ರಿಯ ಅಭಿಷೇಕಪಾರಾಯಣಗಳೂ ರಾಮ ಪಟ್ಟಾಭಿ
ಷೇಕವೂ ಮುಗಿದು ಎರಡು ಮೂರು ದಿನಗಳು ಮಾತ್ರ ಆಗಿವೆ. ಸಕಾಲ
ಸುವೃಷ್ಟಿಯಿಂದ ಬೆಳೆಬಿತ್ತುಗಳೆಲ್ಲಾ ಸೊಂಪಾಗಿರುವವು. ಕೆರೆಕಟ್ಟೆಗಳು
ತುಂಬಿ ತುಳುಕುತ್ತಿರುವವ ತನ್ನ ಮೈಯಮೇಲೆ ಹೀಗೆ ಚೆಲುವಾಗಿ ಬೆಳೆದು
ನಲಿದಾಡುವ ಸಸ್ಯ ಪ್ರಾಣಿಗಳನ್ನು ಆಕಾಶಗಾಮಿಗಳು ನೋಡಿದರ ದೃಷ್ಟಿ
ದೋಷವಾದೀತೆಂಬ ಶಂಕೆಯಿಂದ ಭೂಮಾತೆಯು ಅಲ್ಲಲ್ಲಿ ತೆಳುವಾದ
ಮೋಡದ ಮುಸುಕನ್ನು ಮೇಲೆ ಹೊಡೆದುಕೊಂಡಿರುವಳೋ ಎಂಬಂತೆ
ತೋರುವ ಸಮಯ, ಒಂದಾನೊಂದು ಸಂಜೆ ಏಳುಗಂಟೆಯ ವೇಳೆ,
ಒಂದು ವ್ಯಕ್ತಿಯು ಸಂಧ್ಯಾವಂದನೆಯನ್ನು ಮಾಡಿಕೊಂಡು ಶಿವಸ್ತುತಿ
ಯನ್ನು ಹೇಳುತ್ತ ಹೊಳೆಯಿಂದ ಹಿಂದಿರುಗಿ ಹೊರಟು ಊರಬಾಗಿಲ ಮಾರು
ತಿಯ ಗುಡಿಯ ಮುಂದಣ ಅರಳೆಯ ಮರದ ನೆರಳಿನಲ್ಲಿ ಜಗತೀಕಟ್ಟೆಯ
ಬಳಿಯಲ್ಲಿ ಬರುತ್ತಿದ್ದಿತು. ಹಳ್ಳಿಗಾಡಿನ ಪದ್ಧತಿಯಂತೆ ಆಗಾಗಲೆ ಹಕ್ಕಿಗಳು
ಗಡಿನೊಳಕ್ಕೆ ಹುದುಗಿಕೊಳ್ಳುವಂತೆ ಎಲ್ಲರೂ ಊರೊಳಕ್ಕೆ ಸೇರಿಕೊಂಡಿ
ದ್ದರು, ಆಗ ಅದು ವಿಜನಾಂಗಣವಾಗಿದ್ದಿತು. ಆದರೂ ಆ ಅರ್ಧಾಂಧಕಾರ
ದಲ್ಲಿ ಗುಡಿಯ ಪಡಸಾಲೆಯ ಮುಂದುಗಡೆ ಇನ್ನೊಂದು ವ್ಯಕ್ತಿಯು ಕಂಭ
ಕ್ಕೆ ಒರಗಿ ಕುಳಿತುಕೊಂಡಿದ್ದು ದು ಮೊದಲನೆಯ ವ್ಯಕ್ತಿಗೆ ಗೊತ್ತಾಗಲು--
ಯಾರಲ್ಲಿ ” ಎಂದು ಗರ್ಜನೆಯಾಯ್ತು.

ಎರಡನೆ ವ್ಯಕ್ತಿ ಯಾಕೆ ? ನಾನು

ಒಂದನೆಯ ವ್ಯಕ್ತಿ-ಓಹೊ ... ಹೋ ! ಏನಯ್ಯ, ಇಲ್ಲಿದ್ದೀಯೆ ?
ಬೆಳಗಿನಿಂದ ನಿಮ್ಮ ಮನೆಗೆ ಮೂರು ವೇಳೆ ಹೋಗಿದ್ದೆನು. ನೀನು ಸಿಕ್ಕಲಿಲ್ಲ,
ಇದೇನು ! ಇಲ್ಲಿ ಹೀಗೆ ಒಬ್ಬನೆ ಕುಳಿತಿದ್ದೀಯೆ ?

ಎರಡನೆಯ ವ್ಯಕ್ತಿ-(ಮನದಲ್ಲಿ) ಆಹಾ ! ದೇವರು ದೊಡ್ಡವನು.
ಪ್ರಾಣಮಿತ್ರನು ಸಕಾಲಕ್ಕೆ ಬಂದೊದಗಿದನು. ಪ್ರಕಾಶವಾಗಿ --ಓಹೋ !
ಅಲಭ್ಯಲಾಭ ! ಇದೇನಪ್ಪ ! ಯಾವಾಗ ಬಂದೆ ? ಎಲ್ಲರೂ ಸೌಖ್ಯವೆ ?

ಒಂದನೆಯ ವ್ಯಕ್ತಿ-ನಿನ್ನೆ ರಾತ್ರಿ ಬಂದೆನು ಶಂಕರಶರ್ಮನ
ವರ್ಧಂತಿಗೆ ಬರಬೇಕೆಂದು ಅಮ್ಮನ ತಮ್ಮನದೂ ಒತ್ತಾಯ ಇಷ್ಟರ
ಮೇಲೆ ಕಾಗದ ಬೇರೆ. ಏನು ಮಾಡಲಿ ?

ಎರಡನೆಯ ವ್ಯಕ್ತಿ ಬಹಳ ಸಂತೋಷ, ನಾಳೆ ಭಾನುವಾರವಷ್ಟೆ.
ಸದ್ಯಃ ನೀನು ಬಂದುದು ನನಗೆ ಬರಗಾಲದಲ್ಲಿ ಹುಳಿಮಜ್ಜಿಗೆ ಸಿಕ್ಕಿ
ದಂತಾಯ್ತು.
 
ಒಂದನೆಯ ವ್ಯಕ್ತಿ-ಅದೇನಪ್ಪ ಅಂತಹುದು ? ಉ೦, ಆಗಲಿ.
ಮನೆಗೆ ಬಾ, ನೋಡೋಣ, ಈ ಬೆಳಗ್ಗೆ ನನಗೆ ನಿನ್ನ ಪಙ್ತಿಲಾಭದ
ಪುಣ್ಯವಿರಲಿಲ್ಲ. ನೀನು ಹಳ್ಳಿಯಿಂದ ಸಂಜೆಗೆ ಹಿಂದಿರುಗಿ ಬರುವೆಯೆಂ
ಬುದು ಗೊತ್ತು. ನಮ್ಮ ಮನೆಯವರು ಇನ್ನೂ ನಿರೀಕ್ಷಿಸುತ್ತಿದ್ದಾರೆ.
ಹೊಗೋಣ, ನಿಮ್ಮ ಮನೆಯಲ್ಲಿ ತಿಳಿಸಿ ಅವರನ್ನೂ ಕರೆದುಕೊಂಡು
ಹೋಗಬೇಕು.
 
ಎರಡನೆಯ ವ್ಯಕ್ತಿ-ಯೋಚನೆಯು ಯೋಜನಕ್ಕೆ ಮಾರಿದೆ, ಭೋ
ಜನವೇ ಬೇಕಿಲ್ಲವಲ್ಲಾ !

ಒಂದನೆಯ ವ್ಯಕ್ತಿ-ಇರಲಿ. ಎಂತದ ಯೋಜನೆಯಾದರೂ ಇರಲಿ,
ಎದೆಗುಂದಬೇಡ, ಬಾ.
 
ಎರಡನೆಯ ವ್ಯಕ್ತಿ ನಿನ್ನನ್ನು ಕಾಣುತಲೆ ನನ್ನ ವ್ಯಸನವೆಲ್ಲಾ
ಗರುಡ ಪಚ್ಚೆಯನ್ನು ಕಂಡ ಸರ್ಪದಂತೆ ಓಡುವದು ದಿಟ. ಇನ್ನು ನನಗೆ
ನಿರ್ಭಯ, ನೀನು ದಯೆಯಿಟ್ಟು ನಮ್ಮ ಮನೆಗೆ ಮಲಗುವುದಕ್ಕೆ  ಬಂದರೆ  
ನನ್ನ ಕಷ್ಟ ನಿಷ್ಟುರಗಳನ್ನು ನಿಧಾನವಾಗಿ ವಿವರಿಸುವೆನು.
 
ಒಂದನೆಯ ವ್ಯಕ್ತಿ-ಆಹಾ ! ಆಗಬಹದು.

ಇಬ್ಬರೂ ಜತೆಯಲ್ಲಿ ಹೊರಟರು. ಮಧುರಸಲ್ಲಾಪಗಳೊಡನೆ
ಮೃಷ್ಟಾನ್ನ ಭೋಜನವಾಯ್ತು, ಗಂಧ ಪುಷ್ಟ ತಾಂಬೂಲಗಳಾದನಂತರ
ಮಲಗುವ ಸ್ಥಳಕ್ಕೆ ಬಂದು ಕುಳಿತು ಲೋಕವ್ಯವಹಾರ ಮಾತುಗಳನ್ನಾಡ
ತೊಡಗಿದರು, ಸ್ವಲ್ಪ ಹೊತ್ತಿನ ಬಳಿಕ ಉದ್ದಿಷ್ಟವಾದ ಆಲೋಚನೆಗೆ
ಆರಂಭವಾಯ್ತು.
 
ವಾಚಕಮಿತ್ರರೆ, ಇವರಲ್ಲಿ ಎರಡನೆಯ ವ್ಯಕ್ತಿಯು ಸೀತಾಕಾಂತ
ನೆಂದರಿಯಿರಿ, ಇವನು ಬಂದಕಷ್ಟಗಳನ್ನೆಲ್ಲಾ ಯಾವ ಆಪ್ತಮಿತ್ರನ ಬೆಂಬಲ
ದಿಂದ ಪರಿಹರಿಸಿಕೊಂಡು ತನ್ನ ತನುಮನಧನಗಳನ್ನು ರಕ್ಷಿಸಿಕೊಂಡನೋ
ಆ ಗಂಗಾರಾಮನೇ ಮೊದಲನೆಯ ವ್ಯಕ್ತಿ. ಗಂಗಾರಾಮನು ಸೀತಾಕಾಂತನ
ಆಜೀವಿತಕೃತಜ್ಞತೆಗೆ ಪಾತ್ರನಾದವನು, ಸುಂದರಗಿರಿಗೆ ಸ್ಥಳಿಕ. ಆದರೂ
ಪ್ರಕೃತದಲ್ಲಿ ಹತ್ತು ಮೈಲಿಯ ದೂರದ ಒಂದು ತಾಲ್ಲೂಕು ಕಛೇರಿಯಲ್ಲಿ
ಪ್ರಧಾನಲೇಖಕನಾಗಿರುವನು. ವೇತನವು ಮಾಸಕ್ಕೆ ಮೂವತ್ತು ರೂಪಾಯಿ.
ಪಿತ್ರಾರ್ಜಿತವಾದ ಭೂಸ್ಥಿತಿಯೂ ತಕ್ಕ ಮಟ್ಟಿಗುಂಟು, ಶ್ರೀಮಂತನಾಗ
ಬೇಕೆಂದು ಸಂಕಲ್ಪಿಸಿದ್ದರೆ ಈತನು ರಾಜಕಾರ್ಯದಿಂದ ನಿವೃತ್ತನಾಗುವುದ
ರೊಳಗಾಗಿ ಕೆಲವು ಸಾವಿರ ರೂಪಾಯಿ ರೊಕ್ಕವನ್ನಾದರೂ ಸಂಪಾದಿಸ  
ಬಹುದಾಗಿದ್ದಿತು. ಹೀಗೆ ಧನಾರ್ಜನೆಯಲ್ಲಿ ವಿರಕ್ತನಾದರೂ ಜ್ಞಾನಾರ್ಜನೆ
ಯಲ್ಲಿ ಮಾತ್ರ ಈತನಿಗೆ ಪರಮದಾಹ, ಈತನು ಶಾಸ್ತ್ರ ಪರಿಜ್ಞಾನವೇ ಇಲ್ಲದೆ  
ಸದಾ ಮಕ್ಕಿಕಾಮಕ್ಕಿಯಾಗಿ ಬಿಳಿಯ ಹೊಲದಮೇಲೆ ಕರಿಯ ಬಿತ್ತಗಳನ್ನು
ಬಿತ್ತುವಂತಹ ಲೇಖಕಮಾತ್ರದವನೂ ಅಲ್ಲ, ಅಧವಾ ಲೋಕಪರಿಜ್ಞಾನವೇ
ಇಲ್ಲದ, ಹಾಗೂ ಅರ್ಧಜ್ಞಾನಶೂನ್ಯವಾದ ಅಧ್ಯಯನ, ಪಾರಾಯಣ, ಇತರ
ರನ್ನು ನೋಡಿದರೆ, ಅವರ ನೆರಳು ಸೋಕಿದರೆ, ಧ್ವನಿಯನ್ನು ಕೇಳಿದರೆ,
ಮೈಲಿಗೆ ಎಂದು ನೆಗೆದುಬೀಳುವುದು, ಇಂತಹ ಕಲ್ಯಾಣಗುಣಗಳಿಗೆ ಗಣಿ
ಯಾದ ವೈದಿಕಮಾತ್ರನೂ ಅಲ್ಲ. ಬಾಲ್ಯದಲ್ಲಿ ಸ್ವಲ್ಪಮಟ್ಟಿಗೆ ವೇದಾಧ್ಯಯನ
ಮಾಡಿ ಷೋಡಶಕರ್ಮಗಳಲ್ಲಿ ಯಾಜ್ಞಕವನ್ನು ಮಾಡಿಸಲು ದಕ್ಷನಾಗಿ
ದ್ದನು. ನಾಟಕಾಂತ ಸಂಸ್ಕೃತವನ್ನು ವ್ಯಾಸಂಗಮಾಡಿದ್ದನು. ಇಂಗ್ಲಿಷ್
ನಲ್ಲಿ ಮೆಟ್ರಿಕ್ಯುಲೇರ್ಷ ಪ್ಯಾಸಾಗಿದ್ದಿತು. ಆದರೂ ಈಗಿನ ಪಂಡಿತಂಮನ್ಯ
ರಾದ ಹವರಂತೆ ತಾನೇ ಸರ್ವಜ್ಞನೆಂದು ಭಾವಿಸಿಕೊಳ್ಳತಕ್ಕವನಲ್ಲ. ಸದಾ
ಹೊಸಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಲೇ ಇದ್ದನು ಹೀಗೆ ಈತನಿಗೆ
ಲೋಕಶಾಸ್ತ್ರಮೌಢ್ಯಗಳೆರಡೂ ದೂರೋಪಾಸ್ತವಾಗಿದ್ದವ ಈತನು
ಪರೋಪಕಾರದಲ್ಲಿ ಬದ್ಧ ಕಂಕಣನು.

ಸೀತಾಕಾಂತ- ಅಣ್ಣಯ್ಯ, ನೀನು : ಸಹಾಯ ಮಾಡಿದ್ದರೂ
ಇನ್ನೂ ನನಗೆ ಕೊರಗು ತಪ್ಪಲಿಲ್ಲ. ಒಂದಲ್ಲ ಒಂದು ತೊಂದರಯು ಸಂಭ
ವಿಸುತ್ತಲೇ ಇದೆ ಏನುಮಾಡಲಿ ?
 
ಗಂಗಾ -ಆಯ್ಯಾ, ನನ್ನ ಸಹಾಯವೇನು ? ದುಡ್ಡು ಕೊಡಲಿಲ್ಲ,
ಕಾಸುಕೊಡಲಿಲ್ಲ. ಈ ಬಾಯಿ ಮಾತು, ಉಂ ಆಗಲಿ. ಈಗೇನು
ತೊಂದರೆ ?

ಸೀತಾ-ಇನ್ನೆನು ಪುನಃ ವೆಚ್ಚ ರಾಮಚಂದ್ರನಿಗೆ ಉಪನಯನ
ವಾಗಬೇಕು ಮೊನ್ನೆ ತಾನೆ ನಾಮಕರಣಕ್ಕೆ ಮಾಡಿದ  ಚಿಲ್ಲರೆ ಕೈಸಾಲ,
ಅಂಗಡಿಗಳ ಬಾಕಿ, ಎಲ್ಲಾ ಒಟ್ಟು ಒಂದುನೂರು ರೂಪಾಯಿ ಆಗಿದೆ .
ಭ್ರಮರಾಂಬೆಯ ಮದುವೆಗೆ ೧೦೦0 ರೂ.ಅಮ್ಮನ ಉತ್ತರಕ್ರಿಯೆಗೆ
500 ರೂ ಇದೆಲ್ಲಾ ಹೋದವರ್ಷ ಆಯಿತು. ಹೀಗೆ ಪರಸರೆಯಾಗಿ
ವೆಚ್ಚಗಳು ಒದಗಿದರೆ ನನ್ನ ಪರಿಣಾಮವೇನು ? ಹೇಗೆ ಸುಧಾರಿಸಿಕೊಳ್ಳಲಿ?
ಈಗ ಈ ಮುಂಜಿಗೆ ಕಡೆಯ ಪಕ್ಷ ೫೦೦ ರೂಪಾಯಿಗಳಾದರೂ ಬೇಕು.
ಇರುವನೊಬ್ಬ ಹುಡುಗ, ತಕ್ಕ ಮಟ್ಟಿಗೆ ವಿಹಿತವಾಗಿ ಮಾಡಬೆ?ಡವೆ ?
ಎನುಮಾಡಲಿ ? ಬರಿಯ ಕೈಲಿ ಮೊಳಹಾಕಬೇಕಾಗಿದೆ.
 
ಗಂಗಾ-ಎಲೈ ನಿಮ್ಮ ಮನೆಯ ಶುಭಾಶುಭಕರ್ಮಕಾಲದಲ್ಲಿ
ನಾನು ಈಗಿನಂತೆ ಸಮಾಪ ಪ್ರದೇಶದಲ್ಲಿದ್ದಿದ್ದರೆ ಇಷ್ಟಕ್ಕೆ ಅವಕಾಶವಾಗದು.
ಏಕ ಪ್ಪ ಅಷ್ಟು ದುಂದು ? ಒಳ್ಳೆಯದು, ಹಣಕ್ಕೆ ಏನು ಮಾಡಿದೆ ?

ಸೀತಾ - ಬಾಳೆಯ ತೋಟವನ್ನು ಮಾರಿಬಿಟ್ಟೆ .

ಗಂಗಾ-ಆ!ಅಯ್ಯೋ! ಮಕ್ಕಳಕ್ಕೆಗೆ ಚಿಪ್ಪು  ಕೊಡುತ್ತಿಲ್ಲಯ್ಯ,
ಮಹರಾಯ ! ಆಗ ಬೇಕಾದಹಾಗೆ ಉಂಡು ಉಟ್ಟು ಹೊಗಳಿ ಹೊದ್ದವರು
ಈಗ ನಿನ್ನ ಚಿಂತೆಯನ್ನು ಪರಿಹರಿಸಬಲ್ಲನೆ ? ಆಗಲಿ. ಈಗೇನೂ ಸಾಲ
ವಿಲ್ಲವಷ್ಟೆ ?

ಸೀತಾ-ಒಂದುನೂರು ರೂಪಾಯಿ ಇದೆಯೆಂದೆನಲ್ಲಾ !  

ಗಂಗಾ-ಅಯ್ಯ, ಸಾಲವೇ ಶೂಲ, ನೂರು ರೂಪಾಯಿ ಸಾಲಕ್ಕೆ
ಸಾವಿರರೂಪಾ ಆಸ್ತಿಯ ತಡೆಯದು, ಜತೆಗೆ ಬಡ್ಡಿಯೊ? ವಿಷದಂತೆ
ಏರುವುದು, ಹೋಗಲಿ, ನಡೆದುಹೋದುದಕ್ಕೆ ನುಡಿದು ಫಲವೇನು ?
ಇನ್ನಾದರೂ ಎಚ್ಚರಿಕೆಯಿಂದಿರು, ಉಪನಯನಕ್ಕೆ ೫೦೦ ರೂಪಾಯಿಗಳೆ ?
ಏಕಪ್ಪ ? ದುಡ್ಡು ಹೆಚ್ಚು ವೆಚ್ಚವಾದರೆ ವಟುವು ದೊಡ್ಡ ಬ್ರಾಹ್ಮಣನಾಗು
ವನೆ ? ಸರಿ, ಇಷ್ಟಾಗಬೇಕೆಂದವರು ಯಾರು ?

ಸೀತಾ-ಎಲ್ಲರೂ ಹೇಳುವುದು ಸಾವಿರಾರು ರೂಪಾಯಿಗಳೆ, ನಾನೇ
ಹೀಗೆ ಬಲುಕಡಿಮೆಯಾಗಿ ಹೇಳುತ್ತಿರುವುದು.
 
ಗಂಗಾ-ಹೇಳಿದವರ ಕಿವೀಕಿತ್ತರು, ಅವರು ಹಿತಚಿಂತಕರೆ ?
ವಿಶ್ವಾಸದ್ರೋಹಿಗಳು, ನಿನ್ನ ಒುದ್ದಿ ನಿನ್ನ ಕೈಯಲ್ಲಿರಬೇಕು. ಅವರಿಗೇನು ?
' ಕಂಡವರ ಮನೆಯಲ್ಲಿ ನೋಡು, ನನ್ನ ಕೈ ಧಾರಾಳ ' ಎನ್ನುತ್ತಾರೆ. ಒಳ್ಳೆ
ಯದು, ಸುಮ್ಮನಿರು, ಗಾಬರಿಯೇಕೆ ? ಒಂದು ಪಟ್ಟಿಯನ್ನು ತಯಾರ್ಮಾ
ಡಿಸು. ತರುವಾಯ ಯೋಚಿಸೋಣ, ಬೆಳಗ್ಗೆ ನಾನು ಹಳ್ಳಿಯಕಡೆ
ಹೊರಟು ಗದ್ದೆಯನ್ನು ನೋಡಿಕೊಂಡು ಹಾಗೆಯೆ? ಊರಿಗೆ ಹೊರಡು
ವೆನು. ನಾಳೆ ಕ್ರಿಸ್‌ಮಸ್‌ ರಜಾದಲ್ಲಿ ಹೆಚ್ಚು ಅವಕಾಶ. ಆಗ ಎಲ್ಲವನ್ನೂ
ಏರ್ಪಡಿಸಿಕೊಳ್ಳೋಣ.

ಸೀತಾ--ಏನೋ ಅಪ್ಪ, ನಿನ್ನನ್ನೇ ನಂಬಿದ್ದೇನೆ. ಹೇಗಾದರೂ
ಮಾನಸಂರಕ್ಷಣೆ ಮಾಡುವಭಾರ ನಿನ್ನದು.

ಬಳಿಕ ಪ್ರಕೃತಿಯ ಪ್ರಿಯಪುತ್ರಿಯಾದ ನಿದ್ರಾದೇವಿಯು ಅನುಗ್ರ
ಹಿಸಿದಳು. ಸೀತಾಕಾಂತನನ್ನು ಹಿಡಿದಿದ್ದ ಚಿ೦ತಾದೇವಿಯು ಈಗ ಅ೦ತ
ರ್ಧಾನವಾದಳು.
            ----------------
            
            ಮೂರನೆಯ ಪ್ರಕರಣ.
            
ರಾಮಚಂದ್ರನು ನವರಾತ್ರಿಯ ರಜಾದಲ್ಲಿ ಊರಿಗೆ ಬಂದಿದ್ದವನು
ಇನ್ನೂ ಪುನಃ ಪ್ರಯಾಣಮಾಡಿಲ್ಲ.

ಏನೋ ಮಗ, ಹೀಗೆ ಕೆಟ್ಟು ಹೋದೆ ? ನಿ೦ತನಿಲುವಿನಲ್ಲೇ ನೀರು
ಕುಡಿಯುತ್ತೀಯ, ನೀನು ಬ್ರಾಹ್ಮಣನೆ ? ಇದೇನೋ ನೀನು ಇಬ್ಲೀಸು
ಓದಿಕಲಿತದ್ದು " ನೋಡು , ಅಪ್ಪ ಹೀಗೆ ಮಾಡುತ್ತಾರೆಯೇ?
 
ಏನು ಅಜ್ಜಿ, ನಿಂತು ನೀರು ಕುಡಿದರೆ ಜಾತಿಕೆಡುವುದೆ ? ಅದೆಂತದ
ಜಾತಿ ! ಅಜ್ಜಿ, ನಿನಗೇನು ಗೊತ್ತಿದೆ ? ಹಿಂದೆ ಕ್ರೂರರಾದ ಮತಾಂತರದ
ವರು ಬಂದು ನಮ್ಮ ಹಿಂದುಗಳನ್ನೆಲ್ಲಾ ಜಾತಿ ಕೆಡಿಸಿ ತಮ್ಮ ಮತಕ್ಕೆ ಸೇರಿಸಿ
ಕೊಳ್ಳಬೇಕೆಂದು ಕತ್ತಿಕಾಠಾರಿಗಳನ್ನು ಪ್ರಯೋಗಿಸಿ ಒಲಾತ್ಕರಿಸಿದರೂ
ನಮ್ಮ ಮತವ ನಿರ್ಮಲವಾಗಲಿಲ್ಲ. ನಮ್ಮ ಬ್ರಾಹ್ಮಜಾತಿಯು ಇಂತ
ಹುದಕ್ಕೆಲ್ಲಾ ಅಳಿಸಿಹೋಗುವುದೆಂದು ತಿಳಿದಿದ್ದಿಯಾ ?

ಪಟ್ಟಣಾಸೇರಿ ಇಬ್ಲೀಷು ಓದಿ ನೀನು ಕುಲಗೆಡುವದಲ್ಲದೆ ಎದುರು
ಮಾಡುವದನ್ನೂ ಕಲಿತುಕೊಂಡುಬಿಟ್ಟೆಯಲ್ಲಪ್ಪಾ !

ಅಜ್ಜಿ, ಇಷ್ಟು ಮಡಿ ಮಾಡುವ ನಿನ್ನಂತಹವರ ಹಾರಿಹಾರಿ ಎಂಜಿಲೆ
ಲೆಯಮೇಲೆಯೇ ಕಾಲಿಡತಕ್ಕವರು.
 
ಇಷ್ಟೆ೦ಬ ವೇಳೆಗೆ ಸರಿಯಾಗಿ-- "ಅಮ್ಮ ಬಚ್ಚಲಮನೆ ಬಿಡುವಾ
ಗಿದೆ. ಸ್ನಾನಕ್ಕೆ ಹೊರಡು, ಮಗು, ಬಾರಪ್ಪ ಬಡಿಸಿದೆ. ಎಲ್ಲರೂ
ಕಾದಿದ್ದಾರೆ,'' ಎಂಬ ಮಾತುಗಳು ಒಳಗಿನಿಂದ ಕೇಳಿಬ೦ದವು. ಇದು
ಇಂದಿರೆಯ ಧನಿ ಇಂದಿರೆಯು ಕೇವಲ ಕುಶಲೆ. ತನ್ನ ತಾಯಿ ಅನ್ನಪೂರ್ಣಾ
ದೇವಿಗೂ ಮಗನಾದ ರಾಮಚಂದ್ರನಿಗೂ ಸರಸದಾಗಿ ಅ೦ಕುರಿಸಿ ವಿರಸ
ವಾಗಿ ಪರಿಣಮಿಸಬಹುದಾದ ವಾಗ್ವಾದಗಳನ್ನೆಲ್ಲಾ ಉಪಾಯದಿಂದ ತಪ್ಪಿಸು
ವಳು. ಪತಿಯು ತಾಪತ್ರಯದಿಂದ ಚಿಂತಿಸುತ್ತಿದ್ದಾಗ ಸಂತೈಸಿ ಮೇಲಾದ
ಸಲಹೆಗಳನ್ನು ಕೆಡುವಳು ಆದರೆ ಮತಪತಿಗಳಿಗೂ ಪೂರ್ವಾಚಾರ
ಗಳಿಗೂ ಸ್ವಲ್ಪವೂ ವಿರೋಧವಾಗಿ ನಡೆಯಕೂಡದೆಂದೂ ಎಲ್ಲಾ ತುಂಬ
ಧಾರಾಳವಾಗಿಯೂ ವಿಜೃಂಭಣೆಯಾಗಿಯೂ ನಡೆಯಬೇಕೆಂದೂ ಮಾತ್ರ
ಹಠಾಹಿಡಿಯುವಳು, ಮಕ್ಕಳ ಮನಸ್ಸಿಗೆ ಈಷತ್ತೂ ಖೇದವಾಗದಂತೆ
ಲಾಲಿಸುವಳು. ಆದರೆ ಅತಿಯಾಗಿ ಮುದ್ದಿಸಿ ತಲೆಯ ಮೇಲೆ ಕುಳ್ಳಿರಿಸಿಕೊ
ಳ್ಳತಕ್ಕವಳಲ್ಲ. ನಯಭಯಗಳಿಂದ ಹದ್ದಿನಲ್ಲಿಟ್ಟುಕೊಂಡಿರತಕ್ಕವಳು.

ರಾಮಚಂದ್ರನು ಎರಡು ಗಾವುದ ದೂರದ ಅಮರಪುರದ ಇಂಗ್ಲಿಷ್
ಹೈಸ್ಕೂಲಿನ ಕೀಳ್ತರಗತಿಯಲ್ಲಿ ಮೆಲಾದ ವ್ಯಾಸಂಗದಿ೦ದ ಮೊಗಲನೆಯ
೧೨
ನಾಗಿರುವನು. ಮೇಧಾವಿ ಆದರ ಮುದುಕರನ್ನು ಕುಚೇಷ್ಟೆ ಕುಚೋ
ದ್ಯಗಳಿಂದ ರೇಗಿಸುವುದರಲ್ಲಿ ಅವನಿಗೆ ಬಹಳ ವಿನೋದ, ಅಮರಪುರದಲ್ಲಿ
ತನ್ನ ಚಿಕ್ಕಮ್ಮನ ಮನೆಯು ಎಂಬತ್ತು ವರ್ಷದ ಅಜ್ಜನಸ೦ಗಡ ನಿತ್ಯವೂ
ಸರಸವಾಡುತ್ತಿದ್ದ ಅಭ್ಯಾಸವೂ ಕೆಲವು ಹುಡುಗರ ಸಹವಾಸವೂ ಇದಕ್ಕೆ
ಮೂಲಕಾರಣ

ಅನ್ನಪೂರ್ಣೆ - ಇಂದಿರಾ, ಏನಮ್ಮ ? ಏನು ಯೋಚಿಸಿದಿರಿ ಎಳೆಯ
ಕೂಸಾಗಿರುವಾಗಲೇ ಒಂದು ಎಳೆಯನ್ನು ಹಾಕಿದರೆ ಕಣ್ಣು ತುಂಬ ನೋಡಿ
ಸ೦ತೋಷಪಟ್ಟೇನು. ಅರಿಸಿನದ ಪಂಚೆ ಉಟ್ಟು ಕೊಂಡು ದಂಡಕೋಲು
ಹಿಡಿದುಕೊಂಡು ಹಣೆಗೆ ಗೋಪೀಚಂದನದ ಬೊಟ್ಟನ್ನಿಟ್ಟುಕೊಂಡು ಕಣ್ಣಿಗೆ
ಕಪ್ಪು ಹಚ್ಚಿಕೊಂಡು ಕೊರಳಿಗೆ ಜೋಮಾಲೆಸರಾ ಹಾಕಿಕೊಂಡು ಜನಿ
ವಾರಕ್ಕೆ ಕೃಷ್ಣಾಜಿನಾ ಕಟ್ಟಿ ಕೊಂಡು ಸೊಂಟಕ್ಕೆ ನೊದೇಹುಲ್ಲುಹುರೀ
ಕಟ್ಟಿಕೊಂಡು ಕೈಲಿ ಬಟ್ಟಲು ಹಿಡಿದುಕೊಂಡು 'ಭವತಿ ಭಿಕ್ಷಾಂದೇಹಿ'
ಎಂತಾ ಮಗೂ ಬಂದರ ನೋಡುವದಕ್ಕೆ ಎಷ್ಟು ಚೆನ್ನೋ ! ಅಯ್ಯೋ !
ನಾನು ನೋಡುತೆನೆಯೆ ? ಯಾವಾಗ ಬಾಯಿಮುಚ್ಚಿಕೊಳ್ಳುತೇನೊ ?
(ಗಳಗಳನೆ ಅತ್ತಳು ).

ರಾಮಚಂದ್ರ - (ಧಟ್ಟನೆ ಎಲ್ಲಿಂದಲೋ ಒಂದು ಕಿಲಕಿಲನೆ ನಗುತ್ತ)
ಅಜ್ಜಿ, ನಿನ್ನ ಮೊಮ್ಮಗ, ದಾಸಯ್ಯನವೇಷವನ್ನು ಹಾಕಿಕೊಂಡು ನಡುವಿಗೆ
ಹಗ್ಗವನ್ನು ಕಟ್ಟಿಕೊಂಡು ಹಣೆಗೆ ಬಣ್ಣವನ್ನು ಬಳಿದುಕೊಂಡು ತಿರುಪಕ್ಕೆ
ಹೊರಟದ್ದನ್ನು ನೋಡಿ ಸಾಯಬೇಕೆಂದು ಕೋರುತ್ತಿದ್ದೀಯಾ ? ಆಗಲಿ
ಯಮ್ಮ, ಬಲು ಒಳ್ಳೆಯ ಅಜ್ಜಿ, ಇಂತಹ ಹಿರಿಯರೆ' ಇರಬೇಕು.

ಅನ್ನಪೂರ್ಣೆ- ನೋಡ ಇಂದಿರಾ, ಇವನ ಅರ್ಧ ! ಚಿಃ, ಬಿಡಿತು
ಅನ್ನಪ್ಪ ನನ್ನ ಕಂದ !

ರಾಮಚಂದ್ರ -- ಭಲೆಭಲೆ ಒಳ್ಳೆಯ ಮುದುಕಿ! ಅನ್ನುವುದನ್ನು ಅ೦ದು
ಬಿಟ್ಟು ಈಗ ಬಿನ್ನಾಣದಿಂದ ಬದಲಾಯಿಸುತ್ತಿಯಾ ? ಅಜ್ಜಿ, ನಿನಗೇಕಮ್ಮ
ಕೋಪ ? ಇನ್ನು ನಾನು ಇಲ್ಲಿರುವುದಿಲ್ಲ ನಾಳೆಯೇ ಹೊರಡುವೆನು.
ನಿನ್ನ ಮಡಿಗೆ ಏನೂ ತೊಂದರೆ ಬೇಡಮ್ಮ,
13-------------------------------------------

ಅನ್ನ -- ಅಯ್ಯೋ ಮಗು ! ಕೋಪಿಸಿಕೊಳ್ಳಬೇಡವೊ ದೀವಳಿಗೆಯಾದ
ಮೇಲಾದರೂ ಹೊರಡೊ ನಾನು ನಿನ್ನನ್ನೇನೂ ಅನ್ನಲಿಲ್ಲವಲ್ಲಪ್ಟ ?

ಇಷ್ಟರಲ್ಲೆ : ಸೀತಾಕಾಂತನು ಮಗನನ್ನು ಕರೆದನು. ಪುಸ್ತಕಗಳಿ
ಗೆಷ್ಟು ಬೇಕೆಂಬುದನ್ನು ಚರ್ಚಿಸಿ ಹತ್ತುರೂಪಾಯಿ ಕೊಟ್ಟನು.

ಮರುದಿನ ಶನಿವಾರ ರಾಮಚಂದ್ರನ ಪಯಣ ಸೋಮವಾರ
ಶಾಲೆಯನ್ನು ತೆರಯುವರು. ಇವನು ವೆತನದ ವಿದ್ಯಾರ್ಥಿ. ಮತ್ತು
ವ್ಯಾಸಂಗದಲ್ಲಿ ಕೇವಲ ಕುತೂಹಲಕಾರಿ ಎಂದಿಗೂ ಶಾಲೆಗೆ ತಪ್ಪಿಸಿಕೊ
ಳ್ಳತಕ್ಕವನಲ್ಲ. ಈದಿನಬೆಳಗ್ಗೆ ಎಂಟು ಘಂಟಿಗೆ ಭೋಜನವಾಯ್ತು, ಬಾಗಿಲ
ಬಳಿಗೆ ಬಂಡಿಯು ಬಂದು ನಿ೦ತಿತು, ಇದು ಈ ೩೦ವರ್ಷಕ್ಕೆ ಹಿಂದಣಕಾಲದ
ವಿಷಯ. ಆಗ್ಗೆ ಮೊಟಾರು ಮೊದಲಾದ ಸೌಕರ್ಯಗಳಿರಲಿಲ್ಲ ಚಕ್ಕುಲಿ,
ಕೋಡಬಳೆ, ಪುಳ್ಳಂಗಾಯಿ, ಅರಳಹಿಟ್ಟು ಇವುಗಳ ಗ೦ಟು, ಪುಸ್ತಕದ
ಪೆಟ್ಟಿಗೆ, ಹಾಸಿಗೆಯ ಸುರುಳಿ, ಇವುಗಳೆಲ್ಲಾ ಬಂಡಿಯೊಳಕ್ಕೆ ಸೇರಿದವು.
ಹುಡುಗನು ದೇವರಿಗೂ ಜನನಿ ಜನಕರಿಗೂ ಮಾತಾಮಹಿಗೂ ನಮಸ್ಕಾರ
ಮಾಡಿ, ತೊಟ್ಟಿಲಲ್ಲಿ ಚಟುವಟಿಕೆಯಿಂದ ನಲಿದು ನಗುತ್ತ ಮಲಗಿದ್ದ ತನ್ನ
ತಂಗಿ ಮೀನಾ೦ಬೆಗೆ ಮುತ್ತು ಕೊಟ್ಟನು. ಬಳೀಕ ಬಂಡಿಯಲ್ಲಿ ಕುಳಿತು
ಕೊಂಡು ತಂದೆಯ ಬುದ್ದಿವಾದವನ್ನು ವಿನಯ೦ದ ಸ್ವೀಕರಿಸಿ ತೆರಳಿದನು.
ಕಣ್ಣಿಗೆ ಕಾಣುವವರೆಗೂ ಮನೆಯವರೂ ನೆರೆಹೊರೆಯವರೂ ಸಂಗಾತಿ
ಗಳೂ ರಾಮಚಂದ್ರನನ್ನು ಪ್ರೇಮಪೂರ್ಣವಾದ ದೃಷ್ಟಿಯಿಂದ ನೋಡಿ
ದರು ವಾತ್ಸಲ್ಯದಿಂದ ಸೃದಯವ ಕರಗಿ ಉಕ್ಕಿ ಹರಿಯುವದೊ ಎಂಬಂತೆ
ಇಂದಿರಾ ಕಣ್ಣುಗಳಿಂದ ಬಿಸಿ ನೀರಿನ ಹನಿಗಳು ಉದುರುತ್ತ ಬಂದುವು.
ಸೀತಾಕಾಂತನು ಶಾಂತನಾಗಿದ್ದನು ' ಈಗಿನ ಕಾಲದಲ್ಲಿ ವಿದ್ಯೆಗೆಂದು ಹಸು
ಮಕ್ಕಳನ್ನು ಪರಸ್ಥಳಕ್ಕೆ ಅಟ್ಟುತ್ತಾರೆ, ಏನು ವಿದ್ಯೆಯೂ ! ' ಎಂದು ಮುದು
ಕಿಯ ಲೋಟಗಲು ಪೇಚಾಟಗಳು ನಡೆದುವು .

ರಾಮಚಂದ್ರನು ಹೊರಟೆ ಹೋದನು. ಮನೆಯಲ್ಲಾ ಭಿರಿ ಎನ್ನು
ತಿದೆ. ಎಲ್ಲರ ಮನಸೂ ಏನೋ ಒಂದು ವಿಧವಾಗಿದೆ. ಮಾತಾಪಿತೃಗ
ಳಿಗೆ ಈ ಮಧ್ಯಾಹ್ನ ತಿಂಡಿಯ ಬೇಕಾಗಲಿಲ್ಲ ರಾತ್ರಿಯೂಟವೂ ಸರಿಯಾಗಿ
ಸೇರಲಿಲ್ಲ. ಹೇಗೋ ಆಶಾಸ್ತ್ರವೂ ಆಯಿತು. ಬಳಿಕ ದಂಪತಿಗಳ ಸಂವಾದ,--
೧೪----------------------------------------------------------------
 
ಇಂದಿರ-ನಿನ್ನೆ ಮಧ್ಯಾಹ್ನ ಮಗುಏನ ಮಾತನ್ನು ಕೇಳಿದಿರಾ ?

ಸೀತಾ-ಏನು ? ಮಗು ಮೀನೆಯು ಆಗಲೇ ಮಾತನಾಡುತ್ತಾಳೆಯೆ ?

ಇಂದಿರ-ಆಲ್ಲ ಅಂದರೆ, ಅಯ್ಯೋ ಹಸುಕಂದ ' ಪಾಪ ! ನಮ್ಮ
ರಾಮಚಂದ್ರ ಆಡಿದ್ದು !

ಸೀತಾ- ಎನಂದ ?

ಇಂದಿರೆ-ಇನ್ನೆನು - ಇಲ್ಲ, ಪಟ್ಟಣವಾಸ ಪರಂಗಿಯವರ ಪಾಠ
ವಂತೆ, ಎಂತೆಂತಹ ಸಹವಾಸವೋ ಏನೋ? ? ಸದ್ಯಃ ಜಾತಿನೀತಿಗಳು ಕೆಡದೆ
ಹುಡುಗ ಯೋಗ್ಯನಾಗಿದ್ದರೆ ಸಂತೋಷ.

ಅದೇನು ? ಹಾಗೆಂದರೆ? ಅಂತಹ ಸೂಚನೆಯೆ?ನಾದರೂ ಉಂಟೋ?
ಹುಡುಗ ಸಭ್ಯ ಭೀತ. ಹಾಗೆ ಹೋಗಲಾರನಲ್ಲಾ !

ನಿಜ. ಅಂತಹುದನ್ನೆ ನೋ ಕಾಣೆ. ಆದರೆ ಅಮ್ಮನನ್ನು ಅವನು ಗೇಲಿ
ಮಾಡಿದುದನ್ನು ನೋಡಿದರೆ ನನಗೆ ಗಾಬರಿಯಾಗುತ್ತಿದೆ, ಅಷ್ಟೆ. ಅದು
ಹಾಗಿರಲಿ, ನಾನು ಕೇಳಿಕೊಂಡ ವಿಷಯವಾಗಿ ಏನು ಮಾಡಿದಿರಿ ?
ಯಾವಾಗ ಲಗ್ನ? ಖರ್ಚುವೆಚ್ಚಗಳಿಗೇನು ಮಾಡಬೇಕು? ಕಾಲಾತೀತ
ವಾಯ್ತಲ್ಲಾ ! ಕೇಳಿ ಕೇಳಿದವರಿಗೆಲ್ಲಾ ಉತ್ತರಾಹೇಳುವುದು ಕಷ್ಟ. ಮಗು
ಇಲ್ಲಿದ್ದಾಗ್ಗಿಂತ ಚೆನ್ನಾಗಿ ಬೆಳೆದು ಪುಷ್ಟನಾಗಿದ್ದಾನೆ. ಈ ವರ್ಷವಾದರೂ
ಮುಂಜೆಮಾಡದಿದ್ದರೆ ಮಾನವುಳಿಯುವುದಿಲ್ಲ ನಗುಬಾಳಾಗುವುದು, ಇರುವ
ನೊಬ್ಬ ಹುಡುಗ. ಸ್ವಲ್ಪ ವಿಜೃಂಭಣೆಯಿಂದ ವಿಹಿತವಾಗಿಯೇ ಮಾಡ
ಬೇಕು ನೋಡಿ.
 
ನಿನ್ನ ಮಾತು ನಿಜ ಲಗ್ನವೆನೋ? ಆದೀತು. ಆದರೆ ವಿಜೃಂಭಣೆಯೆಂಬ
ನಿನ್ನ ಈಮಾತು ಮಾತ್ರ ಪ್ರತಿಬಂಧಕವಾಗಿದೆ. ನಾವೇನೂ ಯಾವದನ್ನೂ
ವಿಜೃಂಭಣೆಯಾಗಿ ಮಾಡಲಿಲ್ಲವೆ ? ಭ್ರಮರಾಂಬೆಯ ಲಗ್ನದಲ್ಲಿ ಎಷ್ಟು
ವೆಚ್ಚವಾಯ್ತು ! ಈ ದುಷ್ಕಾಲದಲ್ಲಿ ಹಾಗೆಲ್ಲಾ ಸಾಧ್ಯವೆ ?

ಹೌದು. ನಿಜ, ಆಗ ಅಷ್ಟು ಅಟ್ಟಹಾಸದಿಂದಮಾಡಿ ಈಗ ಕಾರ್ಪಣ್ಯ
ದಿ೦ದ ನಡೆಯಿಸಿದರೆ ನೆರೆಹೊರೆಯವರು ಏನೆಂದಾರು ? ನಂಟರಿಷ್ಟರ ನಡುವೆ
ನಾವು ತಲೆಯೆತ್ತಿಕೊಂಡಿರಬಹುದೆ ? ಹುಡುಗತಾನೆ ಏನುತಿಳಿದುಕೊಂಡಾನು!
ಬುದ್ಧಿಬಂದವನು, ಕಡೆಗೆ ಒಂದುಸಾವಿರ ರೂಪಾಯಾದರೂ ಬೇಡವೆ ?
೧೫ ------------------------------------------------------------------

ಆ! ಒಂದುಸಾವಿರ ರೂಪಾಯೆ ? ಸರಿಸರಿ, ಆಡಿಕೊಳ್ಳುವವರೆಲ್ಲಾ
ನಮ್ಮ ತೊಂದರೆಯನ್ನು ತೀರಿಸುತ್ತಾರೆಯೋ ? ಬದುಕಿದರೆ ನೋಡಲಾ
ರರು, ಕೆಟ್ಟರೆ ಕೈಹಿಡಿಯಲಾರರು. ಕೆಲವರು ಸ್ವಾರ್ಧಕತೆಯಿಂದ
ನಮ್ಮನ್ನು ಹೊಗಳಿ ಏನನ್ನಾದರೂ ಕಸಿದುಕೊಂಡು ಹೋಗುತ್ತಾರೆ, ಎತ್ತು
ಹಾರುವುದಕ್ಕೆ ಮುಂಚೆ ಗೋಣಿ ಹಾರಿತು ಎ೦ಬ೦ತೆ ಇದೆಲ್ಲಾ ನಿನ್ನ ಹೆಂಗ
ಸರ ಆವುಟಗಳೇ. ಸರಿ, ನಿನಗೆ ಮುದುಕಿಯ ಉಪದೇಶವೂ ಆಯ್ತೇನೋ!
ಈಗ ಉಪನಯನಕ್ಕೇನು ಆತುರ ?

ಇದೇಕೆ ಹೀಗಾಡುತ್ತೀರಿ ? ಕಪಿಗೆ ಏಣಿಹಾಕಿಕೊಟ್ಟಂತೆಯೆ ಆಗು
ವುದು. ಮೊದಲೇ ಅವನಿಗೆ ಮುಂಜಿ ಬೇಕಿಲ್ಲ. ನೀವೂ ಹೀಗೆಂದರೆ ಮತ್ತೂ
ಚೆನ್ನಾಯಿತು, ಬೇಕಾದ ಅಂಗಿಯನ್ನೊ ಟೋಪಿಯನ್ನೋ ಕೊಡಿಸಿ
ಉಪಾಯಮಾಡಿ ಮುಂಜಿಗೆ ಒಪ್ಪಿಸಬೇಕು ನೀವೇ ಹೀಗಂದರೆ ಯಾರೇನು
ಮಾಡಿಯಾರು ? ಆಗುವ ವೆಚ್ಚವು ಆಗಿಯೇ ತೀರಬೇಕು. ಮಕ್ಕಳುಮರಿ
ಗಳಿರುವವರು ಮದುವೆ ಮುಂಜಿಗಳಿಗೆ ಹೆದರಿದರೆ ಆದೀತೆ ?

ಸೀತಾಕಾಂತನಿಗೆ ವ್ಯಸನಕೋಪಪಶ್ಚಾತ್ತಾಪಗಳು ಏಕಕಾಲದಲ್ಲಿ
ಬಂದೊದಗಿದವು. ಆದರೆ ಮೌನವ್ರತವೇ ಆಗ್ಗೆ ಮುಖ್ಯ ಕಾರ್ಯವೆಂದು
ನಂಬಿದನು, ಹಾಗೆ ವ್ರತದಲ್ಲಿರುವವನ ಗೊಡವೆಗೆ ಹೋಗಲು ನಿದ್ರಾ
ದೇವಿಗೂ ಧೈರಸಾಲಲಿಲ್ಲ. ಹೇಗೂ ಇಂದಿರೆಯೇನೋ ಈತನಿಗೆ ನಿದ್ರೆ
ಬಂದಿತೆಂದೇ ಭಾವಿಸಿ ಸುಮ್ಮನಾದಳು.

ಮರುದಿನ ಪ್ರಾತಃಕಾಲ ಸೀತಾಕಾಂತನು ಸದ್ದತಿಯಂತೆ ಮನೆಗೆ
ಪೂಜಾಪುಷ್ಪಗಳನ್ನು ತಂದನು. ಸ್ನಾನಾಹ್ನಿಕ ದೇವತಾರ್ಚನೆಗಳು ಆದುವು.
ಇವನು ನಿತ್ಯವೂ ನಡುನಡುವೆ ಯಾವದೊಂದು ಸಣ್ಣ ಪುಟ್ಟದನ್ನು ಅಣಿ
ಮಾಡುವದಕ್ಕೂ ಪತ್ನಿಯನ್ನು ಕರೆಯುತ್ತಿದ್ದನು. ಇಂದಾದರೂ ಆಕೆ
ಯನ್ನು ಯಾವುದಕ್ಕೂ ಕರಿಯಲೇ ಇಲ್ಲ. ಇ೦ದಿರೆಯು ಮೇಧಾವಿನಿ.  
ಅದರ ಕಾರಣವನ್ನು ಕೂಡಲೇ ಊಹಿಸಿದಳು. ಆತನು ಉಡುಪನ್ನು
ಧರಿಸಿ ಹೊರಕ್ಕೆ ಹೊರಡಲು ಸನ್ನದ್ಧನಾದಾಗ ಪಕ್ಕಕ್ಕೆ ಸರಿದು ನಿಂತು--
ಫಲಾಹಾರಕ್ಕೆ ಮಾಡಿಟ್ಟಿದ್ದೇನೆಯಲ್ಲಾ! ಎಂದು ಮೃದುವಾಗಿಯೂ ಮಧುರ  
ವಾಗಿಯೂ ನುಡಿದಳು, ಸ್ವಭಾವಶಾಂತನೋ ಇಂಗಿತಜ್ಞನೂ ಆದ ಪತಿಯು
೧೬-------------------------------------------------------------------------

'ಉಂ' ಎಂದು ನಿಂತು ಸ್ವಲ್ಪ ಮಟ್ಟಿಗೆ ಉಪಹಾರವನ್ನು ಭುಜಿಸಿದನು.
ಹೊರಡುವಾಗ-ಯಾರಾದರೂ ತಿಳಿದ ವೈದಿಕರಿಂದ ಒಂದು ಪಟ್ಟಿಯನ್ನು
ಬರೆಸು-ಎಂದನು.
            ----------
                
            ನಾಲ್ಕನೆಯ ಪ್ರಕರಣ.
ಯಾವ ಬಯಲಿನಲ್ಲಿ ನೋಡಿದರೂ ಪ್ರಾಕ್ಸುಮಂಗಲಿಯರು ಹಾಡು
ಗಳನ್ನು ಹೇಳಿಕೊಳ್ಳುತ್ತ ತುಂಬೆಯ ಹೂವನ್ನು ಬಿಡಿಸುತ್ತಿರುವರು. ಬಿಲ್ಲ
ಪತ್ರೆಯ ಮರಗಳಿಗಂತು ಉಳಿವಬಾಳಿಲ್ಲ, ಎಲ್ಲರ ಮನೆಗಳಲ್ಲಿ ಅತಿಶಯ
ವಾದ ಸಾರಣೆಕಾರಣೆಗಳು, ರಂಗವಲ್ಲಿಗಳು, ಶಿವದೇವಸ್ಥಾನಗಳಲ್ಲಾದರೋ
ಮನೋಹರವಾದ ತೋರಣಗಳು ಫಲಪುಷ್ಪರಾಶಿಗಳು, ಬ್ರಾಹ್ಮಣರ ವೇದ
ಘೋಷ, ಭಕ್ತಾದಿಗಳ ಓಡಾಟ, ಮಧ್ಯಾಹ್ನ ಹನ್ನೆರಡು ಘಂಟೆ ಆದರೂ  
ಯಾರಮನೆಯಲ್ಲಿ ಇನ್ನೂ ಅಡಿಗೆಗೆ ಯತ್ನವೇ ಇಲ್ಲ. ಇಂದು ಕಾರ್ತಿಕ
ಸೋಮವಾರ, ಹಳ್ಳಿಯ ಬ್ರಾಹ್ಮಣ್ಯದಲ್ಲಿ ಇನ್ನೂ ಪೂರ್ವಾಚಾರಗಳ ಕಟ್ಟು
ಸಡಿಲಿರಲಿಲ್ಲ. ಅವರೆಲ್ಲರೂ ಕೇವಲ ಭಕ್ತಿಯಿಂದ ಶಿವಪೂಜೆಮಾಡಿ ನಕ್ತದ
ಕಟ್ಟಳೆಯನ್ನು ಆಚರಿಸುತ್ತಿದ್ದರು.
 
ನಿತ್ಯಯಾತ್ರೆಯ ನರಹರಿಜೋಯಿಸನು ತನ್ನ ಕೆಲಸಗಳನ್ನೆಲ್ಲಾ ತೀರಿಸಿ
ಕೊಂಡು ಮನೆಯಿಂದ ಹೊರಟನು ಇವನಿಗೆ ಜೋಯಿಸನೆಂಬ ಈ ನಾಮ
ಧೇಯವು ಪಿತ್ರಾರ್ಜಿತವಾಗಿ ರೂಢವೇ ಹೊರತು ಯಗಿಕವಲ್ಲ, ಅನ್ನ
ಸ್ವರವೇ ಅಕ್ಷರಸ್ಕರಕ್ಕಿಂತ ಅತಿಶಯ, ಪುಣ್ಯಾಹ ಶ್ರಾದ್ರ ಮಂತ್ರ ಇವುಗ
ಳನ್ನು ಮಾತ್ರ ಸ್ವರವರ್ಣಲೋಪಸಹಿತವಾಗಿ ಗಂಗಾಪ್ರವಾಹದಂತೆ ಧಾರಾಳ
ವಾಗಿ ಹೇಳುವ ಶಕ್ತಿಯುಂಟು. ನಡುವೆಯೇನಾದರೂ ತಪ್ಪಿದರೆ ಪುನಃ
ಸಲಕ್ಷಣವಾಗಿ ಮೊದಲಿನಿಂದಲೇ ಪ್ರಾರಂಭಿಸಬೇಕು. ಸೀತಾಕಾಂತನ
ಪುರೋಹಿನಾದ ಜಟಾವಲ್ಲಭನು ಈಗ ಕೇವಲ ಧನಿಕನಾಗಿ ಈ ಗೃಹಸ್ಥನಂ
ತಹವರನ್ನು ಕೊಂಡುಕೊಳ್ಳುವ ಸ್ಥಿತಿಗೆ ಬಂದನು. ಮತ್ತು ಈ ಸುಂದರಗಿರಿಗೆ
ಒಂದೂವರೆಗಾವುದ ದೂರದ ತಮ್ಮದೊಂದು ಜೋಡೀಗ್ರಾಮಕ್ಕೆ ಹೋಗಿ
ನೆಲೆಗೊಂಡನು. ಆದುದರಿಂದ ಸೀತಾಕಾಂತನ ಮನೆಯ ಸಾಮಾನ್ಯವಾದ
೧೭----------------------------------------------------------------------

ಶುಭಾಶುಭಕರಗಳನ್ನೆಲ್ಲಾ ಈ ಜೋಯಿಸನೇ ವಸಿಷ್ಠ ಸ್ಥಾನದಲ್ಲಿ ನಿಂತು ನಡೆ
ಯಿಸುತ್ತಿದ್ದನು.

ಪುರೋಹಿತರಿಂದ ಉಪನಯನದ ವೆಚ್ಚದಪಟ್ಟಿಯನ್ನು ಬರೆಯಿಸ
ಬೇಕೆಂದು ಇಂದಿರೆಯು ಎಷ್ಟೋ ವೇಳೆ ಯತ್ನಿಸಿದಳು. ನಿತ್ಯವೂ ತನಗೆ
ಅಡಿಗೆಯ ಕೆಲಸ, ಜೋಯಿಸನಿಗೆ ಅಕ್ಕಿಯ ಜಮಾಬಂದಿಯ ಆತುರ ಹೀಗೆ
ಯಾರಿಗೂ ಅವಕಾಶವೇ ಇಲ್ಲ. ಇಂದುಮಾತ್ರ ಇಬ್ಬರಿಗೂ ಸ್ವಲ್ಪ ತೆರವು
ಜೋಯಿಸನು ಬಂದನು.

ಇಂದಿರೆ- ಏನು ಜೋಯಿಸರೆ, ಆಹೊತ್ತೆ ನಿಮ್ಮ ಸಂಗಡ ಹೇಳಿದ್ದೆ
ನಲ್ಲಾ, ನಮ್ಮ ರಾಮಚಂದ್ರನ ಮುಂಜಿಗೆ ಒಂದು ಪಟ್ಟಿಯನ್ನು ತಯಾರು
ಮಾಡಬೇಕು ಎಂದು. ಅದೇನು, ನಿಮ್ಮ ಕೈಯಲ್ಲಾಗುವುದೋ ಅಥವಾ
ಹಳ್ಳಿಯಿಂದ ದೊಡ್ಡ ಪುರೋಹಿತರನ್ನೆ ಕರೆಸಬೇಕೊ ?

ಜೋಯಿಸ-(ರೇಗಿ) ಅಮ್ಮ, ಯಾರೂ ಇಂತಹ ಮಾತನಾಡಿರಲಿಲ್ಲ ನಾನು
ಇಂಧಾದ್ದನ್ನು ಎಷ್ಟು ಮಾಡಿಸಿಲ್ಲ ? ಈ ಮಹಾಪಟ್ಟಿಗೆ ಅವನನ್ನು
ಕರೆಯಸುವಿರೊ ? ಅವನಿಗೇನು ತಿಳಿಯುವದು ! ಅನು ಮುನ್ನೂರುಗಾಲ
ನಿತ್ಯವೂ ನಿಮ್ಮ ಮನೆಯ ಹೊಸ್ತಿಲನ್ನು ಮೆಟ್ಟಿ ತುಳಿಯು ನಿಮ್ಮ ಕಷ್ಟ
ಸುಖಗಳಿಗೆ ಆಗುವವನು ನಾನು, ಈ ಫಲಕಾಲಕ್ಕೆ ಅವನೋ ? ಚೆನ್ನಾಯಿ
ತಮ್ಮ, ಇದೊ, ತೆಗೆದುಕೊಳ್ಳಿ. ಎಂತಹ ಪಟ್ಟಿ ಬೇಕು, ಭರ್ಜರಿ ಪಟ್ಟಿ
ಯನ್ನು ಕೊಡುತ್ತೇನೆ, ನೋಡಿರಮ್ಮ.

ಇಂದಿರೆ-ಜೋಯಿಸರೆ, ಸಿಟ್ಟೇಕೆ ? ಇಂದೇಲಗ್ನವಲ್ಲ. ಸುಮ್ಮನೆ
ವೆಚ್ಚದ ಪಟ್ಟಿಯನ್ನು ಗುರುತುಮಾತ್ರ ಹಾಕುವದು, ಈಗ ನಿಮಗೆ ಅವಕಾಶ
ವಿದ್ದರೆ ಆಗಬಹುದು. ಮುಂದಣ ಮಾತು ಹಾಗಿರಲಿ ಎಂದು ಸೌಮ್ಯ
ವಾಗಿ ಹೇಳಿ ಸಮಾಧಾನಮಾಡಿದಳು.

ಜೋಯಿಸ-ಅಮ್ಮ, ಒಂದು ತೆಂಗಿನಕಾಯಿ, ಎರಡು ಬಾಳೆಯ
ಹಣ್ಣು, ದಕ್ಷಿಣೆ, ಮಂತ್ರಾಕ್ಷತೆ, ಇತರ ಪೂಜಾದ್ರವ್ಯಗಳು, ಕಾಗದ
ಶಾಯಿ, ಲೇಖಿನಿ, ಇವುಗಳನ್ನು ತೆಗೆದುಕೊಂಡು ಬನ್ನಿ.

ಇಂದಿರೆಯು ಸ್ವಭಾವತಃ ಭಕ್ತಿ ಪರಾಯಣೆ ಈಗಂತು ಪ್ರಿಯಪುತ್ರನ
ಉಪನಯನವೆಂಬ ಹೆಚ್ಚು ಸಡಗರ. ಎಲ್ಲವನ್ನೂ ತಂದು ಜೋಯಿಸನ
೧೮------------------------------------------------------------------------

ಮುಂದಿಟ್ಟಳು, ಜೋಯಿಸನು ಕಾಗದದಮೇಲೆ ಶ್ರೀಕಾರವನ್ನು ಬರೆದು
ಆ ಪತ್ರದ ಅಷ್ಟದಿಕ್ಕುಗಳಿಗೂ ಕುಂಕುಮವನ್ನೂ ತುಪ್ಪವನ್ನೂ ಕಲಸಿ ಬಳಿ
ದನು. ಬಳಿಕ ಪಟ್ಟಿಯ ಬರೆವಣಿಗೆಗೆ ಪ್ರಾರಂಭ.

ಒಂದನೆಯದಾಗಿ -ಮನೆದೇವರ ಸೀರೆ ೫೦ ರೂಪಾಯಿ, ತಾಳಿ ಒಂದು
ವರಹಾತೂಕದ್ದು, ವಟುವಿಗೆ ಸುವರ್ಣಯಜ್ಞೋಪವೀತ ೫ ವರಹಾ
ತೂಕದ್ದು, ಭಿಕ್ಷದ ಬಟ್ಟಲು ೨ಕ್ಕೆ ೨ಸೇರುಬೆಳ್ಳಿ,. ದೀಕ್ಷಾ ವಸ್ತ್ರಕ್ಕೆ ಕಲಾ
ಪತ್ತಿನ ಪಂಚೆಗಳು ಜತೆ ಎರಡಕ್ಕೆ ಸುಮಾರು ೭೦ ರೂಪಾಯಿ. ಪಾದ
ಪೂಜೆಗೆ ಸೀರೆಧೋತ್ರಗಳು. ಬ್ರಹೋಪದೇಶಕ್ಕೆ ಕಾಶಿಯ ಪೀತಾಂಬರ
ಅಧವಾ ಕಾಶ್ಮೀರದ ಶಾಲುವಿಗೆ ೬೦ ರೂಪಾಯಿ, ಬಂಧು ಮಿತ್ರರಿಗೆ ಬೇಕಾ
ಗುವ ಜವಳಿ, ಭಾಷಿಂಗ, ಮತ್ತು ಯಾಜ್ಞಿಕಕ್ಕೆ ತಕ್ಕ ಸಾಮಾನುಗಳು.
ಅಂದರೆ ಅಕ್ಕಿ, ತೆಂಗಿನಕಾಯಿ, ಬಾಳೆಯಹಣ್ಣು, ಬೆಲ್ಲ ಮೊದಲಾದುವು.
ಪೌರೋಹಿತಸ್ವಾಮ್ಯ, ನವಗ್ರಹದ ದಕ್ಷಿಣೆ. ಯಜ್ಯೋಪವೀತದಾನದ
ದಕ್ಷಿಣೆ ಕೃಛ್ರದದಕ್ಷಿಣೆ, ಮಠದ ದಕ್ಷಿಣೆ, ಫಲತಾಂಬೂಲ.

ಎರಡನೆಯದಾಗಿ-ಓಲಗದವರು, ಮಡಿವಳರು, ಸ್ತಂಭಬಲಿಯದಿನ
ರಾತ್ರಿ ವಟುವನ್ನು ಅಶ್ವತ್ಥ ವೃಕ್ಷದಬಳಿಗೆ ದಾಟುಕರೆದುಕೊಂಡುಹೋಗುವ
ಮೆರೆವಣಿಗೆಯಲ್ಲಿ ಕುದುರೆಸಾರೋಟು, ಗ್ಯಾಸ್‌ 'ಲೈಟ್‌'ದೀಪ, ಆರತಿಯವೆಚ್ಚ.
ಮಾರ್ಗದಲ್ಲಿ ಕಂಡಕಂಡವರಿಗೆಲ್ಲಾ ಫಲಪುಪ್ಪ ತಾಂಬೂಲಗಳನ್ನು ಹಂಚು
ವುದು, ಇಡಿಗಾಯಿ ಒಡೆಯುವುದು, ವಟುವಿಗೆ ಕಾಲ್ತೊಳೆದ ಅಕ್ಕ ತಂಗಿಯ
ರಿಗೆ ರತ್ನಾಭರಣಗಳನ್ನೂ ಪಟ್ಟಿವಾಳಿಯನೂ ಓದಿಸುವದು, ಬಾಣಬಿರುಸು.
 
ಮೂರನೆಯದಾಗಿ-ಗೋಧಿಕಲ್ಲುಶಾಸ್ತ್ರ, ಲಗ್ನ ಪತ್ರಿಕೆಯನ್ನು ಚಿನ್ನದ
ಕ್ಷರದಲ್ಲಿ ಅಚ್ಚು ಹಾಕಿಸುವುದು, ಎಣ್ಣೆ ಅರಿಸಿನಾ ಬೀರುವುದು, ಸುವಾಸಿನೀ  
ಪೂಜೆ, ದೇವರಸಮಾರಾಧನೆ, ನದುದಿನ ನಿತ್ಯವೂ ಎರಡುವೇಳೆ ಊರಿ
ಗೆಲ್ಲಾ ಬ್ರಾಹ್ಮಣ ಸಂತರ್ಪಣೆ, ದೊಡ್ಡ ಮನುಷ್ಯರಾದ ಅತಿಧಿಗಳಿಗೂ ಬಂಧು
ಗಳಿಗೂ ಉಪ್ಪಿಟ್ಟು ಕಾಫಿ ಮೊದಲಾದ ಬಗೆಬಗೆಯ ತಿಂಡಿತೀರ್ಧಗಳು, ಅತಿ
ಶಯವಾಗಿ ಮಾಡಿಸುವ ಮಂಡಿಗೆ ಚಿರೋಟಿ ಫೇಣಿ ಇ೦ತಹ ಭಕ್ಷಗಳಿಗೆ
ತಗಲುವವೆಚ್ಚ.
 
ನಾಲ್ಕನೆಯಾಗಿ-- ಭಿಕ್ಷಕ್ಕೂ ಬಾಗಿನಗಳಿಗೂ ಇರುವ ಉಂಡೆಗಳು
೧೯--------------------------------------------------------------------

ಭಕ್ಷ್ಯಗಳು, ಹಣ್ಣು ಹಂಪಲುಗಳು, ವಟುವಿಗೆ ನಿತ್ಯದ ಆಹ್ನಿಕಕ್ಕೆ ಬೇಕಾ
ಗುವ ಬೆಳ್ಳಿಯ ಪಂಚಪಾತ್ರೆ, ಉದ್ದರಣೆ, ಅಘ್ಭ್ಯ ಪಾತ್ರೆ, ಚಂಬು ಮೊದ
ಲಾದವುಗಳಿಗೆ ತಗಲುವವೆಚ್ಚ.
 
ಐದನೆಯದಾಗಿ-ಮುಹೂರ್ತಕ್ಕೆ ಬಂದ ಸಮಸ್ಯೆ ಬಂಧುಗಳು,
ಮುಖ್ಯ ಓದಿಸಿದವರು ಮೊದಲಾದವರಿಗೆಲ್ಲಾ ಬಂಡಿದುಬಾಡಿಗೆ, ಉಡು
ಗೊರೆಗಳು, ಬಕುಲಿಯಹಿಟ್ಟು, ಪಳ್ಳಂಗಾಯಿ, ಅರಿಸಿನಕುಂಕುಮ, ಮೊದ
ಲಾದುವುಗಳನ್ನು ಹಂಚುವುದು, ಪುರೋಹಿತರನ್ನೂ ಸಭಾಮುದ್ರೆಯನ್ನೂ
ಸನ್ಮಾನಿಸುವುದು.
 
ಇದಲ್ಲದೆ ಮನೆಯನ್ನು ಸುಣ್ಣಬಣ್ಣಗಳಿಂದ ಅಲಂಕರಿಸುವುದು,
ಚಪ್ಪರ, ಆಳುಕಾಳುಗಳು, ಅಡಿಗಬ್ಬು ಮೊದಲಾದವುಗಳಿಗೂ ವೆಚ್ಚವಾಗ
ಬೇಕು.

ಈ ಪಟ್ಟಿಯನ್ನೆಲ್ಲಾ ನರಿಹರಿಜೋಯಿಸನು ಪರೀಕ್ಷೆಗೆ ವ್ಯಾಸಂಗ
ಮಾಡಿದ ವಿದ್ಯಾರ್ಥಿಗಳು ಬರೆವುದಕ್ಕಿಂತಲೂ ತ್ವರೆಯಾಗಿ ಸಂಭ್ರಮ
ದಿಂದ ಬರೆದುದನ್ನೆ ನೋಡಿದರೆ ಇಂತಹ ವಿಷಯಗಳಲ್ಲಿ ಈತನು ಎಷ್ಟು
ದಕ್ಷನು ಎಂದು ಮಿತಿಮೀರಿ ಸಂತೋಷಿಸುವಂತಾಗುವುದು. ಪಟ್ಟಿಯನ್ನು
ಓದಿದುದೂ ಆಯಿತು

ಇಂದಿರೆ - ಏನು ಬೋಯಿಸರೆ, ನಾವೇನು ದೊರಗಳೆಂದು ತಿಳಿ
ದಿದ್ದೀರಾ? ನಮ್ಮಂತಹವರು ಈ ಪಟ್ಟಿಯಂತೆ ನಡೆಸಲಾಗುವದೆ ?

ಜೋಸ-ತಾಯಿ, ನಮಗೆ ನೀವೇ ದೊರೆಗಳು. ಕಾಲಸ್ಥಿತಿಯು
ಬಹಳ ನಾಜೊಕೆಂದೆ ಎಲ್ಲವನ್ನೂ ಹ್ರಸ್ವ ಮಾಡಿ ಹೀಗೆ ಬರೆದಿದ್ದೇನೆ.
ದೊರಗಳಿಗಾದರೇನೆ ! ಆರೀತಿಯೇ ಬೇರೆ

ಇಂದಿರೆ... (ಬೆರಗಾಗಿ ಬಲಗೈಯಿಂದ ಬಾಯನ್ನು ಮುಚ್ಚಿಕೊಂಡು)
ಇದೇನಿರಪ್ಪ ೫ ವರಹಾತೂಕದ ಚಿನ್ನದ ಜನಿವಾರವೆ ?

ಜೋಯಿಸ-ಅಮ್ಮ, ನೋಡಿದಿರೊ ? ಮಾರಿಯ ಕಣ್ಣು ಹೋತನ
ಮೇಲೆ, ಪುರೋಹಿತನಿಗೇನಾದರೂ ಕೊಡಬೇಕೆಂದರೆ ನಿಮಗೆ ಹೊಟ್ಟೆಯುರಿ
ಯಮ್ಮ. ಎಲ್ಲಾ ನಮ್ಮ ವೈದಿಕರಿಗೇ ಹೊಡೆದುಕೊಳ್ಳುತ್ತಾರೆ.-ಎಂದು ರೇಗಿ
ಪಟ್ಟಿಯನ್ನೆತ್ತಿ ಕುಕ್ಕಿದನು.
೨೦-------------------------------------------------

ಮೌನದಿಂದ ಮೂಲೆಯಲ್ಲಿ ಕುಳಿತು ಇದನ್ನೆಲ್ಲಾ ನೋಡುತಿದ್ದ ಅನ್ನ
ಪೂರ್ಣಾದೇವಿಯು ತನ್ನ ಊರಗೋಲನ್ನು ಎತ್ತಿ ಹಿಡಿದು ತರಿಸುತ್ತ-ಆ!
ಏನಯ್ಯ ಬ್ರಾಹ್ಮಣ, ಯಾರಯ್ಯ ಮಾರಿ ? ತಿರಪದ ಅಕ್ಕಿ ಹೆಚ್ಚಾಯ್ತೊ ?
ನಿನಗೇನು ಬುದ್ಧಿಗಿದ್ಧಿಯಿದೆಯೋ ಇಲ್ಲ ವೊ ? ಜ್ಞಾನಗೆಟ್ಟಿದ್ದೀಯೊ ?
ಎಂದು ಗರ್ಜಿಸಿದಳು.
 
ಇಂದಿಯು ತಾಯನ್ನು ಸಂತೈಸಿ...' ಅಮ್ಮ, ಸುಮ್ಮನಿರು, ಅವರವರ
ಪಾಪ ಅವರವರದು. ಏನೋ? ! ಅರಿಯದ ಬ್ರಾಹ್ಮಣರು. ಒರಟುತನ.
ಹೋಗಲಿ ಬಿಡಮ್ಮ' ಎಂದಳು. ಒಳಕ್ಕೆ ಹೋಗಿ ಪನಃ ಒಂದು ತಟ್ಟೆಯಲ್ಲಿ
ತಾಂಬೂಲವನ್ನೂ ಒಂದುಪಾವಲೆ ದಕ್ಷಿಣೆಯನ್ನೂ ತಂದಿಟ್ಟಳು. ಜೋಯಿ
ಸನು ತನ್ನ ದುಡುಕಿಗೆ ಪೆಟ್ಟು ಬಿದ್ದಿದ್ದನು, ಆದರೂ ಬೆಳ್ಳಿಯನಾಣ್ಯದ
ಭೇಟಿಯಾದಕೂಡಲೆ ಮುಖದಲ್ಲಿ ಕಳೆಯೇರಿತು, ಪಟ್ಟಿಗೆ ಪೂಜೆಮಾಡಿ
ಎಲ್ಲವನ್ನೂ ಗಂಟುಕಟ್ಟಿ ಕೊಂಡು-ಅಮ್ಮ, ಬಡವ, ಕರುಣವಿರಬೇಕಮ್ಮ.
ಮುಖ್ಯವಾಗಿ ನಾವು ಗೊಡ್ಡು ವೈದಿಕರು. ಉಪನಯನಲಗ್ನವು ಎಂದಮ್ಮ?
ಮೊದಲೇ ತಿಳಿದಿದ್ದರೆ ಮಾಡಿಸುವುದಕ್ಕೆ ಯಾರನ್ನಾದರೂ ಏರ್ಪಾಡು ಮಾಡಿ
ರುತ್ತೆನೆ ಅಗ್ರಹಾರದ ಉಪಾಧ್ಯರನ್ನು ಕರೆದರೆ ಬಂದುದರಲ್ಲಿ ಅರ್ಧ
ಕೊಡಬೇಕೆಂದು ಕೇಳುತ್ತಾರೆ. ಅದಕ್ಕೋಸ್ಕರ ಹೇಳಿದೆನಮ್ಮ-ಎಂದನು.

ಇಂದಿರ-ಕ್ರಮೇಣ ಗೊತ್ತಾಗುವುದು.

ಜೋಯಿಸ-ಅಜ್ಜಿ, ಹೋಗಿಬರುತ್ತೆನೆ ಕೋಪಿಸಿಕೊಳ್ಳಕೂಡದು.

ಅನ್ನಪೂರ್ಣೆ-ಹೋಗೊ, ಉಪಾದಾನದೊನೆ !
                ----
                
ಐದನೆಯ ಪ್ರಕರಣ

ಪಟ್ಟಿಯೇನೊ ತಯಾರಾಯಿತು, ಇಂದಿರೆಯು ಬಲುಜಾಣೆ, ಪತಿಯು
ಮನಸ್ಸು ಸುಸಮಾಹಿತವಾಗುವ ಕಾಲವನ್ನು ನಿರೀಕ್ಷಿಸುತ್ತಿದ್ದಳು. ಇದ
ರಿಂದ ಒಂದೆರಡು ವಾರಗಳವರೆಗೂ ಪಟ್ಟಿಯು ಸೀತಾಕಾಂತನ ಕೈಗೆ ಸೇರ
ಲಿಲ್ಲ. ಒಂದುದಿನ ಪತಿಯು ವಿನೋದವಾಗಿ ಮಾತಾಡುತಿದ್ದನು. ಆಗ
ಇಂದಿರೆಯು ಪಟ್ಟಿಯನ್ನೂ ಕನ್ನಡಕದ ಪೆಟ್ಟಿಗೆಯನ್ನೂ ತಂದು ಪತಿಯ
೨೧------------------------------------------------------------------------

ಮುಂದಿಟ್ಟಳು. ಈತನು ಪತ್ನಿಯ ಗಾಂಭೀರ್ಯಕ್ಕೆ ಮೆಚ್ಚಿದನು, ಮಾತಾ
ಡದೆ ಸಂತೋಷದಿಂದ ಅದನ್ನು ತೆಗೆದುಕೊಂಡು ಕಣ್ಣಿಂದಲೇ ಓದಿಕೊಂ
ಡನು, ಹರ್ಷವಿವಾದಗಳೆರಡೂ ಏಕಕಾಲದಲ್ಲಿ ಅಂಕುರಿಸಿದವು. ಆದರೂ
ಮುಖಮುದ್ರೆಯಲ್ಲೆನೋ ಪ್ರಕಟವಾಗಲಿಲ್ಲ. ಇಂದಿರೆಯು ಏನೋ ಮನೆ
ಗೆಲಸಗಳ ಸಡಗರದಲ್ಲಿರುವಂತೆ ತೋರ್ಪಡಿಸಿಕೊಂಡಳು. ಆಕೆಯ ಮನಸ್ಸು
ಕಟಾಕ್ಷಗಳುಮಾತ್ರ ಈತನಕಡೆಯೆ. ಆದರೆ ಯಾವ ಉತ್ತರವೂ, ಕಡೆಗೆ
ಸೂಚನೆಯು ಕೂಡ ತಿಳಿಯಲಿಲ್ಲ. ದೀಪಕ್ಕೆದುರಾಗಿ ಸ್ತಂಭದ ಬಳಿಯಲ್ಲಿ
ನಿಂತಳು. ಪತಿಯ ಮುಖಾವಲೋಕನಮಾಡುತ್ತ ಬಂದಳು. ಈಗ ಏನಾ
ದರೂ ಉತ್ತರವು ಹೊರಡಲೇಬೇಕಾಯ್ತು.
 
ಸಿತಾಕಾಂತ -ಏನು? ಈ ಪಟ್ಟಿಯಿಂದ ನಮ್ಮ ಹಿಂದಿನ ಸ್ಥಿತಿಯೆಲ್ಲಾ
ನೆನಪಾಗುತ್ತದೆ. ಇದರಲ್ಲಿ ತೋರಿಸಿರುವಂತೆ ಊರಿನ ಬ್ರಾಹ್ಮಣರಿಗೆಲ್ಲಾ
ನಾಲ್ಕೈದುದಿನವೂ ಎರಡು ವೇಳೆಗಳಲ್ಲ ಸಂತರ್ಪಣೆಯೆ ! ಕಾಲಸ್ಥಿತಿಯು
ಹೀಗಿರುವದಲ್ಲ ' ಖರ್ಚುವೆಸ್ಟಗಳು ಮಿತಿಮೀರುವುವಲ್ಲವೆ ? ಬಂದಬಂದ
ವರನ್ನೆಲ್ಲಾ ಸುದಾರಿಸುವವರು ಯಾರು ? ಅವರ ಆಕ್ಷೇಪಣೆಗಳನ್ನು ತಡೆದು
ಕೊಳ್ಳುವಬಗೆ ಹೇಗೆ ?

ಇಂದಿರ-ಅದೇನು ! ಹೀಗೆನ್ನುವಿರಿ ? ಮುಖ್ಯವಾಗಿ ಅನ್ನ ಶಾಂತಿ
ಯಾಗಬೇಡವೆ ? ಸಾವಿರಾರು ಪ್ರಾಣಿಗಳು ಮನದಣಿಯುವಂತೆ ಉಂಡು
ಉಟ್ಟು ತಿಂದುತೇಗಿ ನಮ್ಮ ಮಗುವನ್ನು ಹರಸಬೇಡವೆ? ಇದೇನೂ ಬಾಧಕ
ವಲ್ಲ ನಮ್ಮ ಪುರೋಹಿತರು ಹಳ್ಳಿಯನ್ನು ಸೇರಿಕೊಂಡರು. ಈಗ ಸದ್ಯಕ್ಕೆ
ಚಿಲ್ಲರೆ ಕೆಲಸಗಳನ್ನು ನಡೆಸುತ್ತಿರುವ ಶುಕ್ಲವೃತ್ತಿಯ ನರಹರಿಜೋಯಿಸ
ನಿಗೇ ಈ ಹಕ್ಕು ಸೇರಬೇಕೋ ? ಈತನೇ ಈ ಪಟ್ಟಿಯನ್ನು ತಯಾರು
ಮಾಡಿಕೊಟ್ಟವರು. ಈತನಿಗೆ ಮಂತ್ರವೇ ಅಧೀನವಿಲ್ಲ. ಮಾಡಿಸುವುದಕ್ಕೆ
ಇನ್ಯಾರನ್ನಾದರೂ ಕರೆದುಕೊಂಡು ಬರುವರಂತೆ ! ಚಿನ್ನ ಬೆಳ್ಳಿಯ
ಸಾಮಾನು, ವಸ್ತ್ರಪಾತ್ರೆಗಳು, ಹಕ್ಕುದಾರಿಯ ಪುರೋಹಿತರಿಗೂ ಇಲ್ಲ
ವಂತೆ, ಎಲ್ಲೋ ನಿನ್ನೆ ಮೊನ್ನೆ ಬಂದ ಈ ದಡ್ಡ ಬ್ರಾಹ್ಮಣನಿಗೆ ಸಲ್ಲಬೇಕಂತೆ.
ನೋಡಿದಿರಾ ಈತನ ಆಶೆ !

ಸೀತಾಕಾಂತ -- ಅದು ಹಾಗಿರಲಿ, ಸಮಾರಾಧನೆದು ಮಾತನ್ನು
೨೨---------------------------------------------------------------------

ಹೇಳು, ಈವೂರಿನವರೆಲ್ಲಾ ಒಂದು ಎರಡುಹೊತೂ ಉಂಟುತಿಂದು
ತೇಗಿ ಹೋಗುವುದರಿಂದ ನಮಗೆ ಹೆಚ್ಚು ವೆಚ್ಚ. ಆದರೆ ಯಾರಿಗೂ
ಏನೂ ಅಂತಹ ದೊಡ್ಡ ಸಹಾಯವಾಗದು. ಔತಣದಲ್ಲಿ ಉಂಡು ಬಾಗಿನ
ದಲ್ಲಿ ಬದುಕಿದವರು ಯಾರುಂಟು ? ಪೌರೋಹಿತ್ಯದ ಸ್ವತ್ತಿನ ವಿಷಯದಲ್ಲಿ
ನನ್ನ ಆಕ್ಷೆಪಣೆಯೇನೂ ಇಲ್ಲ. ನಾವು ಕೊಡುವುದನ್ನು ಕೊಟ್ಟು ಬಿಟ್ಟ
ರಾಯ್ತು. ಬಳಿಕ ಅದು ಯಾರಿಗೆ ಸೇರಿದರೆತಾನೆ ನಮಗೇನು ? ಒಂದು
ವಿಧದಲ್ಲಿ ನೋಡಿದರೆ ನರಹರಜೋಯಿಸರಿಗೆ ಸೇರುವುದೇ ಮೇಲು. ಆತನು
ಬಡವ, ಏನಾದರೂ ಯಂಚಿತ್ ಸಹಾಯವಾದೀತು.

ಇಂದಿರೆ-ಅದು ಆದರೆ ಆತನು ದುರುಳ, ಜಗಳಗಂಟಿಗ.
ಹತ್ತು ಜನ ಸೇರಿದಾಗ ಮಾತುಮಾತಿಗೂ ಆತನಸಂಗಡ ಜಗಳವಾಡುವವರು
ಯಾರು ?

ಸೀತಾಕಾಂತ... - ಒಟ್ಟು ಎಷ್ಟು ವೆಚ್ಚವಾಗುವದು ಬಲ್ಲೆಯಾ ?

ಇಂದಿರೆ-ನನಗೇನು ಗೊತ್ತು ? ಹೆಣ್ಣು ಹೆಂಗಸು ಏನಾದರೂ
ಆಗಲಿ, ಇಷ್ಟಕ್ಕೂ ಕಡಿಮೆಯಾದರೆ ನಮ್ಮ ಮಾನಕ್ಕೆ ತಡೆದೀತೆ ? ಅತ್ತೆಮ್ಮ
ನವರು ಹೇಳುತ್ತಿದ್ದುದನ್ನು ಕೇಳಿದ್ದರೆ ನೀವು ಇನ್ನೂ ಏನೆನ್ನುತ್ತಿದ್ದಿರೊ ?  

ಸೀತಾಕಾಂತ -ಅನ್ನುವುದೇನು ? ನನ್ನ ಉಪನಯನದಲ್ಲಿ ಇದರ
ನಾಲ್ಕರಷ್ಟು ವೆಚ್ಚ. ನಾನೂ ಅಲ್ಪಸ್ವಲ್ಪ ಬಲ್ಲೆ. ಅಮ್ಮನೂ ಹೇಳುತ್ತಿ
ದ್ದಳು, ಆದರೆ ಕಾಲಸ್ಥಿತಿಯ ನಮ್ಮ ಸ್ಥಿತಿಯೂ ಬದಲಾಯಿಸಿವೆ. ಆಗಲಿ
ನೋಡೋಣ, ಇಷ್ಟಕ್ಕೂ ಮಾಘಾದಿ ಪಂಚಕದಲ್ಲಿ ತಾನೆ ಅಗ್ಯ ? ನಾಳೆ
ಕ್ರಿಸ್‌ಮಸ್‌ ರಜಾದಲ್ಲಿ ಮಗುವೂ ಇಲ್ಲಿಗೆ ಬರುವನು. ನನ್ನ ಆಪ್ತಮಿತ್ರ  
ನೂ ಬರುವನು. ಆಗ್ಗೆ ಎಲ್ಲವನ್ನೂ ನಿಶ್ಚಯಿಸೋಣ.
 
ನಿರ್ಮಲವಾದ ನೀಲಾಕಾಶ, ಎಲ್ಲೆಲ್ಲ ರೈತರಿಗೂ ಹಕ್ಕಿ ಪಕ್ಷಿಗಳಿಗೂ
ಕಾಳುಕಡ್ಡಿಗಳನ್ನು ಸಂಗ್ರಹಿಸುವ ಸಡಗರ. ಬಿಸಿಯೂಟ, ಕರಿಯಕಂಬಳಿ.
ಬೆಂಕಿಯಶಾಖ ಇವಕ್ಕೆ ಹೆಚ್ಚು ಪ್ರಾಶಸ್ತ್ರ . ಗಗನದಲ್ಲೆಲ್ಲೂ ಮೋಡವಿಲ್ಲ,
ಜನರ ಚುಟ್ಟಾಗಳಿಂದಲೂ ಪ್ರಾಣಿಗಳ ಮಗುಬಾಯಿಗಳಿಂದಲೂ ಸಣ್ಣ
ಪುಟ್ಟ ಮೋಡಗಳು ಹೊರಡುವಕಾಲ.
 
ಮಗನು ಊರಿಗೆ ಬರುವ ಸಂಭ್ರಮ, ಹಪ್ಪಳ, ಸಂಡಿಗೆ ಬಗೆ
೨೩--------------------------------------------------------------------

ಬಗೆಯ ಉಪ್ಪಿನಕಾಯಿ ಸಿದ್ಧವಾಗಿವೆ. ದಿನಬೆಳಗಾದರೆ ಅನ್ನಪೂರ್ಣೆಯು
'ಮಗು ಎಂದು ಬರುತ್ತಾನೆ ?' ಎಂದು ಕೇಳುತ್ತಲೇ ಇದ್ದಾಳೆ. ಪ್ರಿಯ
ಪುತ್ರನನ್ನು ಬಿಟ್ಟು ಭಜಿಸುವುದಕ್ಕೆ ಮನಸ್ಸಾಗದೆ ಹಸಿಯವರೆಯಕಾಯನ್ನು
ಕೂಡ ಇನ್ನೂ ಮನೆಗೆ ಒಂದುದಿನವೂ ತಂದಿಲ್ಲ. ಹೀಗೆ ಚಿರಕಾಲ ನಿರೀಕ್ಷಿ
ತವಾದ ಪುತ್ರಾಗಮನವು ಕಡೆಗೆ ಸಿದ್ಧಿಸಿತು. ರಾಮಚಂದ್ರನು ತಂಗಿಯ
ಆಟಕ್ಕೆ ಬಣ್ಣದ ಗಿಲಕೆ, ಕೊಬ್ಬರಿ ಮಿಠಾಯಿ, ಸಿಹಿಬಿಲ್ಲೆಗಳು, ಮುದುಕಿಯ
ಬಾಯಿಗೆ ಮೆತ್ತಗಾಗಿರುವ ಪೆಂಡಖರ್ಜೂರ, ತಾಯ್ತಂದೆಗಳಿಗೆ ತಾಮ್ರದ
ತಂಬಿಗೆಗಳಂತಿದ್ದ ಶ್ರೇಷ್ಠವಾದ ನಾಲ್ಕು ದಾಳಿ೦ಬದ ಹಣ್ಣುಗಳು ಇಷ್ಟನ್ನೂ
ತಂದನು. ಇಂದು ಮನೆಯವರಿಗೆ ಮಾತ್ರವಲ್ಲ, ಆ ಒಟ್ಟು ಬೀದಿಗೇ
ಎಷ್ಟೋ  ಸಂತೋಷ. ರಾಮಚಂದ್ರನು ಅಷ್ಟು ಜನಮೆಚ್ಚುಗೆಯ ಬಾಲ
ಕನು. ಇವನು ತನ್ನ ಸಂಗಾತಿಗಳಲ್ಲಿ ಕೆಲವರಿಗೆ ಆಟದ ಸಾಮಾನುಗಳನ್ನು
ತಂದಿರುವನು. ಈ ಹುಡುಗನು ಈಗ ನಿತ್ಯವೂ ಆಟಪಾಟಗಳು, ಕಥೆಯ
ಪುಸ್ತಕಗಳನ್ನೋದುವದು ಹೀಗೆ ಸುಖವಾಗಿ ಕಾಲಕ್ಷೇಪಮಾಡುತ್ತಿದ್ದನು.
 
ಒಂದುದಿನ ತಾಯಿ ಮಗನನ್ನು ಕುರಿತು ಮಗು, ನಾಳೆ ಚೈತ್ರ ಮಾಸದಲ್ಲಿ ನಿನಗೆ ಮುಂಜಿಮಾಡಬೇಕೆಂದು ಯೋಚಿಸಿದ್ದಾರಪ್ಪ

ರಾಮ-ಇದೇನಮ್ಮ, ಇಷ್ಟು ಬೇಗ! ಏನು, ನಾನು ಈಗಲೆ ವಿಭೂತಿ ರುದ್ರಾಕ್ಷಿಗಳ ವಸಿಷ್ಠನಾಗಬೇಕೆ? ಹಾಗಾದರೆ ಓದಿ ಉದಾರವಾದಂತೆಯೇ!

ಇಂದಿರೆ- ಏಕಪ್ಪ ಹೀಗೆನ್ನುತ್ತಿ? ಎಂಟು ವನುಸ್ಸಿಗೇ ಆಗತಕ್ಕದ್ದು ಏನೋ
ನಿಂತುಬಂದಿತ್ತು, ಇನ್ನು ತಡ ಮಾಡುವದಕ್ಕಾದೀತೆ ? ನಿನಗಿಂತಲೂ ಚಿಕ್ಕ
ವಯಸ್ಸಿನವನಾದ ಶಾಮಭಟ್ಟರಮಗನನ್ನು ನೋಡು, ಆಗಲೆ ಎಷ್ಟು ಮುದ್ದಾಗಿ
ದೇವರ ಪೂಜೆ ಮಾಡುತ್ತಾನೆ !

ರಾಮ-ಅಮ್ಮ, ಸಾಕು ನಿಲ್ಲಿಸು, ಇದನ್ನು ಕೇಳಿದರೆ ನನಗೆ ಹೊಂಗೆ
ಯೆಣ್ಣೆ ಕುಡಿದಂತಾಗುವುದು.

ಅನ್ನಪೂರ್ಣೆ-ಇಂದಿರಾ, ನೊಡಿದೆಯೋ ? ನಾನು ಹೇಳಿರಲಿಲ್ಲವೆ ?
ಈಗಿನಕಾಲದ ಹುಡುಗರನ್ನ ತಲೆ ಹೋಕರು, ಮುಖ್ಯವಾಗಿ ನೀವು
ಇಬ್ಲಿಷು ಓದುವುದಕ್ಕೆ ಹಾಕಿ ಮಗುವಿನ ತಲೆಯ ಮೇಲೆ ಕಲ್ಲುಹಾಕಿದಿರಿ,
ಅನುಭವಿಸಿರನ್ನು ಈಗ
೨೪-----------------------------------------------------------------------

ರಾಮಚಂದ್ರನು ಫಕ್ಕನೆ ನಕ್ಕು ಹೊರಡಲುದ್ಯುಕ್ತನಾದನು. ಇಂದಿ
ರೆಯು ಸಂತೈಸಿ ತಡೆದಳು.

ರಾಮಚಂದ್ರ-ಅಮ್ಮ, ನೀವು ಹಳೇಕಂದಾಚಾರದ ಮಾತುಗಳನ್ನೇ
ಆಡುತ್ತೀರಿ, ನಿಮಗೇನೂ ತಿಳಿಯುವುದಿಲ್ಲ. ಈಗ ಮುಂಜಿಗೇನಾತುರ ?
ನೋಡು, ನರಸಿಂಹೈ೦ಗಾರ್ರ, ಮಗನಿಗೆ ಬಿ.ಎ. ಆದಮೇಲೆ ಇಪ್ಪತ್ತನೆಯ
ವಯಸ್ಸಿನಲ್ಲಿ ದೇವಸ್ಥಾನದಲ್ಲಿ ಮುಂಜೆಯಾಯ್ತು. ಅದನ್ನು ನಾನು ಕಣ್ಣಾರ
ನೋಡಿದ್ದೇನೆ. ನಾನಿನ್ನೂ ಸ್ಕೂಲ್ ಫೈನಲ್ ಪ್ಯಾಸ್ ಮಾಡಿಲ್ಲ. ಈಗಲೇ
ಮುಂಜಿಯೆ ? ಆಹಾ ! ನಮ್ಮ ಸಾಹೇಬರ ಕಿವಿಗೆ ಬಿದ್ದರೆಷ್ಟು ಲೇವಡಿ
ಮಾಡುವರೋ ?

ಇಂದಿರೆ ---ಇಸ್ಕೂಲು ಫಿನೈಲೊ ಮನೆಯ ಫಿನೈಲೋ ನಮಗೆ
ತಿಳಿಯದಪ್ಪ.
 
ಅನ್ನಪೂರ್ಣೆ-ಅಮ್ಮಯ್ಯ, ದಾರಿಕೆಟ್ಟು ಹೋಯ್ತು. ಮೊಟ್ಟಮೊ
ದಲು ಮಗುವಿಗೊಂದು ಎಳೇಹಾಕಿಬಿಡಿ. ಇಲ್ಲದಿದ್ದರೆ ಹುಡುಗ ಕೈಗೆ
ಸಿಕ್ಕುವುದಿಲ್ಲ.

ಮೊಮ್ಮಗನು ಮುದುಕಿಯನ್ನು ಕುಚೇಷ್ಟೆ ಮಾಡಲೆಳಸಿದನು, ಆದರೆ
ಇಂದಿರೆಯು ಅವಕಾಶಕೊಡದೆ ನೈಜಭಾವದಿಂದ "ಅಪ್ಪ, ನೀನು ಹಠಮಾಡಿ
ಹಿರಿಯರ ಮನಸ್ಸು ನೋಯಿಸಬೇಡ. ನಿನಗೇನಪ್ಪ ಇದರಿಂದ ತೊಂದರೆ?''

ರಾಮ-ಅಮ್ಮ, ನಿನಗೆ ಲೆಕ್ಕಾಚಾರ ಗೊತ್ತಿಲ್ಲ. ನನಗೆ ತೊ೦ದ
ರೆಯೇ. ಮುಂಜಿಗೆಂದು ನೀವು ಬೇಕಾದಷ್ಟು ವೆಚ್ಚವನ್ನು ಮಾಡಿಬಿಡು
ವುದು, ಆಮೇಲೆ ಸಾಲಸೋಲ ಹೆಚ್ಚಾಯ್ತೆಂದೂ ಮುಂದಕ್ಕೆ ಓದಿಸಲಾ
ಗುವುದಿಲ್ಲವೆಂದೂ ನನ್ನ ವಿದ್ಯಾಭ್ಯಾಸಕ್ಕೆ ಕಲ್ಲುಹಾಕುವುದು. ಇಷ್ಟೇ.
 
ಇಂದಿರೆ-ಅಪ್ಪಯ್ಯ, ನೀನು ಸ್ವಲ್ಪವೂ ಯೋಚಿಸಬೇಡಪ್ಪ, ನಿನಗೆ
ಅನಾನುಕೂಲವಾಗದಂತೆ ಮಾಡುವರು. ಒಳ್ಳೆ ಅಂಗಿಪಾಜಾಮೆಗಳನ್ನು
ತ೦ದುಕೊಡುವರು.
 
ರಾಮ-ಕಡಲೇಪುರಿಯನ್ನು ತಂದುಕೊಡುವರೆಂದು ಏಕೆಹೇಳಲಿಲ್ಲ?
ನಾನೇನು ಎಳೆಯ ಮಗುವೇನಮ್ಮ ?
೨೫--------------------------------------------------------------------------

ವಾಚಕರೆ, ಶ್ರೋತ್ರಿಯ ಬ್ರಾಹ್ಮಣವಂಶದಲ್ಲಿ ಹುಟ್ಟಿ, ಸತ್ಸಂಪ್ರ
ದಾಯದಲ್ಲಿಯೇ ಬಳೆದಿದ್ದವರಿಗೂ ಸಹ ಕಾಲಮೋಷದಿಂದ ಬುದ್ಧಿಯು
ಹೇಗೆ ಬದಲಾಯಿಸುವುದೋ ನೋಡಿದಿರಾ !

ಇಷ್ಟರಲ್ಲೇ ನೆರೆಮನೆಯ ಸುಬ್ರಹ್ಮಣ್ಯನು ಒರಿದನು ರಾಮಚಂದ್ರ
ನನ್ನು ತನ್ನ ತೋಟಕ್ಕೆ ಕರೆದುಕೊಂಡು ಹೋಗಿ ಎಳನೀರಿನ ಔತಣ ಮಾಡಿಸ
ಬೇಕೆಂದು ಅವನಿಗಾಸೆ, ಈಗ ಎಲ್ಲರೂ ಧಟ್ಟನೆ ಮೌನಾವಲಂಬಿಗಳಾದರು.
 
ತಾಯ್ಮಕ್ಕಳ ಸಲ್ಲಾಪದ ಸಂಗತಿಯು ಸೀತಾಕಾಂತನವರೆಗೂ
ಮುಟ್ಟಿತು. ಮಗನಿಗೀಗಲೆ ಮತಾಭಿಮಾನವೆಲ್ಲಿ ತಪ್ಪುವುದೋ ಎಂಬು  
ದೊಂದುಕಡೆ, ಉಪನಯನಕ್ಕೆ ಹಣವನ್ನೊದಗಿಸಬೇಕಾದ ಯೋಜನೆಯೊಂ  
ದುಕಡೆ, ಮುಂಜಿಗೆವನನ್ನೊಪ್ಪಿಸಲು ಮತ್ತೇನು ಪಂಚಾಯಿತಿಯಾಗಬೇಕೋ*
ಎಂಬುದು ಮತ್ತೊಂದು ಕಡೆ, ಹಿ?ಗೆ ಅವನಿಗೆ ಸರ್ವತೋಮುಖವಾದ
ಚಿಂತೆಗವಕಾಶವಾಯ್ತು.
 
ಹೇಳಿದ ಗಡುವಿಗೆ ಸರಿಯಾಗಿ ಗಂಗಾರಾಮನೂ ಬ೦ದನು, ಆದರವ
ನಿಗೆ ಸುಗ್ಗಿಯ ಕಂಗಾಣದ ಹೆಚ್ಚು ಕೆಲಸ, ಇದುವರೆಗೂ ಕೇವಲ ದೂರ
ಪ್ರಾಂತದ ತಾಲ್ಲೂಕ್ ಗಳಲ್ಲೇ ಸರ್ಕಾರದ ಕೆಲಸದಲ್ಲಿದ್ದನು ಅದರಿಂದ ಪ್ರತಿ
ವರ್ಷವೂ ತನ್ನೂರಿಗೆ ಬರಲಿಕ್ಕಾಗುತ್ತಿರಲಿಲ್ಲ ಆಕೆಲಸಗಳೆಲ್ಲ ಈಗ ರಾಶಿ
ಬಿದ್ದಿವೆ. ನಿಂತಕಡೆ ನಿಲ್ಲಲಿಕ್ಕೂ ಅವಕಾಶವಿಲ್ಲ. ಹಾಗೂ ಎರಡು ಮೂರು
ವೇಳೆ ಬಂದು ಸೀತಾಕಾಂತನನ್ನು ವಿಚಾರಿಸಿದನು, ಆತನು ಸಿಕ್ಕಲಿಲ್ಲ. ಹೀಗೆ
ಪರಸ್ಪರ ದರ್ಶನಕ್ಕೆ ಕೂಡ ಒಂದುಸಲವೂ ಸಂದರ್ಭವು ದೊರೆಯಲಿಲ್ಲ.
ಕಡೆಗೆ ಐದುದಿನಗಳನಂತರ ಕಲೆತರು, ಉಪನಯನದ ವಿಷಯವಾಗಿ
ಪ್ರಸ್ತಾಪವು ನಡೆಯಿತು. ಬಳಿಕ ರಾತ್ರಿ ಇಬ್ಬರಿಗೂ ಅವಕಾಶವಿರುವುದ
ರಿಂದ ಆಗೆ ಎಲ್ಲವನೂ ಯೋಚಿಸಬೇಕೆಂದು ಸಿದ್ದಾಂತವಾಯ್ತು.  ಅದೇ
ರಾತ್ರಿ, ಪಟ್ಟಿಯ ವಿಷಯವಾಗಿ ಚರ್ಚೆ. ಗಂಗಾರಾಮನು ಪರಿಶೀಲಿಸಿ
ಕನ್ನಡಕವನ್ನು ಮೂಗಿನಿಂದ ಕೆಳಕ್ಕಿಳಿಸಿ-ಅಯ್ಯ, ಒಂದು ಮಾತನ್ನುಸಿರು
ವೆನು. ಅದು ನಿನಗೆಷ್ಟು ಮಟ್ಟಿಗೆ ಸಮ್ಮತವಾಗುವುದೋ ನಾನರಿಯೆನು.
ನೀನು ಸಮ್ಮತಿಸಿದರೆ ನೆಮ್ಮದಿಯಾಗುವೆ. ಇಲ್ಲದಿದ್ದರೆ ಬಹಳ ಕಷ್ಟಕ್ಕೆ
ಗುರಿಯಾಗುವೆ.
೨೬----------------------------------------------------------------------
 
ಸೀತಾಕಾಂತ -ಅಣ್ಣಯ್ಯ, ನಾನು ನಿನ್ನ ಸಹಾಯವನ್ನು ಮರೆತಿಲ್ಲ.
ಹಿಂದೆ ನಿನ್ನ ಮಾತನ್ನು ಕೇಳದೇ ಇದ್ದಿದ್ದರೆ ನನಗೆ ಮೂರುದಾರಿಯಮಣ್ಣೇ
ಗತಿಯಾಗುತ್ತಿದ್ದಿತು. ಆಪ್ತವಾಕ್ಯವು ಅಮೃತಪ್ರಾಯವ. ನೀನು ಹೇಳಿ
ದಂತೆ ನಡೆಯುವೆನು.

ಗಂಗಾ-ಅಯ್ಯ, ಈಗೇನೋ ಹೀಗೆನ್ನುವೆ, ಮುಂದೆ ನಡೆಯುವುದು
ಕಷ್ಟ, ಅಲ್ಲದೆ ಇಂತಹ ಸಂದರ್ಭಗಳಲ್ಲಿ ಸ್ತ್ರೀಯರ ಮುಷ್ಕರಗಳು ಬೇರೆ.

ಸೀತಾ-ಏನೇ ಆಗಲಿ, ನಿನ್ನ ಮಾತಿನಂತೆಯೇ ನಡೆಯುವೆನು, ಸಾವಿರ
ವಿಘ್ನಗಳು ಬಂದರೂ ಪರಿಗಣಿಸೆನು.

ಗಂಗಾ--ಹಾಗಾದರೆ ಕೇಳು. ಯಾವಪಟ್ಟಿಯೂ ಬೇಕಿಲ್ಲ ಉಪ
ನಯನವು ಬಾಲಕನಿಗೆ ಬ್ರಾಹ್ಮಣ್ಯವನ್ನುಂಟುಮಾಡುವ ವೇದೋಕ್ತಕರ್ಮವು.
ಅಟ್ಟಹಾಸಸಂಭ್ರಮಗಳಿಂದ ಜನರನ್ನು ಮೆಚ್ಚಿಸಿ ಜಂಭಪಡೆಯಬೇಕಾದಂ
ತಹ ಸಾಮಾಜಿಕಕಾರವಲ್ಲ. ಬ್ರಹ್ಮಧರ್ಮನಿರತರೂ ನಮ್ಮ ಪೂರ್ವಿಕರೂ
ಆದ ಆರ್ಯ ಮಹರ್ಷಿಗಳು ಅರಣ್ಯಗಳಲ್ಲಿ ನದಿತೀರದ ಪರ್ಣಶಾಲೆಗಳಲ್ಲಿ ವಾಸಿ
ಸುತ್ತಿದ್ದರಷ್ಟೆ, ಆಗಿನದಕ್ಕಿಂತಲೂ ಶ್ರೇಷ್ಠವಾದ ಉಪನಯನವನ್ನು ನಡೆ
ಯಿಸಲು ಯಾವ ಇತರರಿಗೂ ಸಾಧ್ಯವಿಲ್ಲ. ಅವರಕಾಲದಲ್ಲಿ ಸ್ವರ್ಣಯಜ್ಞೋ
ಪವೀತ, ಕಂಬಾವತಿಯ ಮಗುಟ, ಕಲಾಸಿನ ಪಂಡೆ. - ಕಾಶ್ಮೀರದ
ಶಾಲು, ಬೇಕಾಗಿದ್ದು ವೆ ? ಹುಡುಗನ ಕೊರಳಿಗೆ ಚಿನ್ನದಜೋಮಾಲೆಯಲ್ಲಿ
ಯದು ? ಚಕ್ಕುಲಿ, ಚಿರೋಟಿ, ಬಾಗಿನಗಳೆಲ್ಲಿದ್ದುವು? ಯಾವ ಓಲಗದವರು
ಕಳಾರಟ್ ಬ್ಯಾಂಡಿನವರುತಾನೆ ಬಾಜಿಸುತ್ತಿದ್ದರು ? ಯಾವಯಾವ ಬೀದಿ
ಗಳಲ್ಲಿ ಅವರು ಮೆರವಣಿಗೆ ಹೊರಡುತ್ತಿದ್ದರು ? ಆಶ್ರಮಗಳಲ್ಲಿ ಆಗಸರು
ಮೊದಲಾದವರೆಲ್ಲಿದ್ದರು ? ಉಡುಗೊರೆ, ಬಂಡಿಬಾಡಿಗೆ ರೈಲ್‌ ಛಾರ್ಜು
ಏನು ಬೇಕಾಗಿದ್ದುವು ? ಇಷ್ಟೆಲ್ಲಾ, ಇದಕ್ಕೆ ಮೀರಿದಷ್ಟೆಲ್ಲಾ ಈಕಾಲದಲ್ಲಿ
ನಡೆದರೂ ' ಮಂತ್ರದೊಡೆ ಉಗುಳುಬಹಳ ' ಎಂಬಂತೆಯ ಮಂತ್ರವಿ
ಲ್ಲದ ಸಂಧ್ಯಾವಂದನೆ ಮನೆಯೆಲ್ಲಾ ಹಳ್ಳವೆಂಬಂತೆಯೂ ಉಪನಯನದ
ಫಲವೇನೋ ಶೂನ್ಯವೇ. ಆಡಂಬರ, ಅಟ್ಟಹಾಸ, ದ್ರವ್ಯವ್ಯಯಗಳಲ್ಲಿ
ಮಾತ್ರ ಪರ್ಯವಸಾನ. ಮತ್ತು ಇದು ಈಗ ಸಾಮಾಜಿಕ ಸಮ್ಮೇಳನದಂತೆ
ನಡೆಯುತ್ತಿರುವದು, ಈ ಪಟ್ಟಿಯನ್ನು ಆಚೆಗೆಸಿ. ಧೈರ್ಯಮಾಡು.
೨೭------------------------------------------------------------------------

ಶಾಸ್ಪೋಕರೀ ತಿಗೆ ಸ್ವಲ್ಪವೂ ತಪ್ಪದೆಯ ಏನೂ ಹೆಚ್ಚು ವೆಚ್ಚವಿಲ್ಲದೆಯೂ
ಉಪನಯನವನ್ನು ನಡೆಯಿಸೋಣ.

ಸೀತಾಕಾಂತ-(ಮೂಗಿನಮೇಲೆ ಬೆರಳಿಟ್ಟುಕೊಂಡು) ಇದೇನು! ನೀನೂ
ಹೀಗೆನ್ನುವೆಯಾ ? ನಿನ್ನ ನನ್ನ ಉಪನಯನಗಳು ಎಷ್ಟೋ ವೈಭವ
ದಿಂದ ನಡೆದದ್ದು ನೆನೆಪಿಲ್ಲವೆ ? ನಮ್ಮ ಹಿರಿಯರು ಎಷ್ಟೆಷ್ಟು ಸಾವಿರ ರೂಪಾ
ಯಿಮುಟ್ಟಿಸಿ ಬ್ರಹ್ಮೋಪದೇಶವನ್ನು ಮಾಡಿದರು ! ಅಯ್ಯೋ ! ನನ್ನ
ಕಾಲಕ್ಕೆ ಏಕ ಪುತ್ರನ ಉಪನಯನಕ್ಕೆ ಈ ದುರ್ಗತಿಯೇ !

ಗಂಗಾ- ಅಪ್ಪಾ, ವಿದ್ಯಾವಿಹಿನೆಯರಾದ ಸ್ತ್ರೀಯರಂತೆ ಮೂಢ
ಪದ್ದತಿಗಳಬೇಡ. ನಮ್ಮ ಹಿರಿಯರು ದುಂದುಮಾಡಿದುದು ದಿಟ. ಅವ
ರಿಗೆ ಹೆಚ್ಚು ಅನುಕೂಲವಿದ್ದಿತು, ಆದರೆ ಆ ದುಂದಿನಿಂದ ಉಪನಯನದ
ಶ್ರೇಷ್ಠತೆಯೇನೂ ಹೆಚ್ಚಲಿಲ್ಲ, ಆಡಂಬರಮಾತ್ರ ಅತಿ. ಈಗ ನಾನು ಹೇಳು
ವುದರಲ್ಲಿ ಸಾರಹೆಚ್ಚು ಪೂರ್ವದಲ್ಲಿ ಮಹರ್ಷಿಗಳು ದಿವ್ಯವಾಗಿ ಆಶೀರ್ವಾದ
ಮಾಡುತ್ತಲೂ ಋಷಿ ಪತ್ನಿಯರು ಭಿಕ್ಷವನ್ನು ನೀಡುತ್ತಲೂ ಹವನಹೋಮ
ಗಳು ನಡೆಯುತ್ತಲೂ ಕರ್ಮವು ಸಾಂಗವಾಗಿ ಸಾಗುತ್ತಿದ್ದಿತು.
 
ಸೀತಾಕಾಂತ... ಇದೆಲ್ಲಾ ಸರಿ, ಮುಖ್ಯವಾಗಿ ಬ್ರಾಹ್ಮಣಸಂತರ್ಪ
ಣೆಯೇ ಬೇಡವೆ ? ಇಲ್ಲಿಯ ೨೦ ಮನೆಗಳವರನ್ನೂ ಐದಾರುದಿನ ಎರಡು
ವೇಳೆಯ ಭೋಜನಕ್ಕೆ ಕರೆಯಬೇಕಾದರೆ ಕಡೆಯ ಪಕ್ಷ, ಉಳಿದವೆಚ್ಚ
ವೆಲ್ಲಾ ಸಾಮಾನ್ಯವಾಗಿ ನಡೆದರೂ ೫೦೦ ರೂಪಾಯಾದರೂ ಬೇಡವೆ ?

ಗಂಗಾ-ಬ್ರಾಹ್ಮಣ ಭೋಜನವೇನೋ ಆಗತಕ್ಕದ್ದೆ. ಆದರೆ ಯಧಾ
ಶಕ್ತಿ. ಊರಿನವರನ್ನೆಲ್ಲಾ ಏತಕ್ಕೆ ಕರೆಯಬೇಕು ? ಏನಯ್ಯಾ ದವಲತ್ತು !
ಈ ಕಾಲದಲ್ಲಿ ಅರಮನೆಯಲ್ಲಿ ಹೀಗೆ ನಡೆದುದು ' ಉಪನಯನವನ್ನು ಈ
ಕೊಳಕುಗ್ರಾಮಗಳಲ್ಲಿ ನಡೆಸುವದೇ ಅನುಚಿತ.  ಶೀತಲಾನದಿಯ ತೀರದಲ್ಲಿ
ಮನೋಹರವಾದ ಅದೇ ಸುಂದರಗಿರಿಯಮೇಲೆ ಸುಂದರೇಶ್ವರನ ಸನ್ನಿಧಿ
ಯಲ್ಲಿ ನಡೆಸಬಹುದಲ್ಲಾ ! ಆಗ್ಗೆ ಈ ಈ ಬಾಧೆಗಳೂ ತಪ್ಪುವವು. ಕೇವಲ
ಯೋಗ್ಯರಾದ ಕೆಲವು ಬ್ರಾಹ್ಮಣರನ್ನೂ ಕೆಲವರು ಸುಮಂಗಲಿಯರನ್ನೂ
ಮಾತ್ರ ಆಮಂತ್ರಿಸಿ ಆದರಿಸಬಹುದು.

ಸೀತಾ-ನಮ್ಮ ಪೂರ್ವಿಕರು ಅಷ್ಟು ಚೆನ್ನಾಗಿ ಬದುಕಿದವರು. ಈಗ
೨೮------------------------------------------------------------------
 
ನನ್ನ ಕಾಲಕ್ಕೆ ಒಬ್ಬ ಮಗನಿಗೆ ಮುಂಜಿಮಾಡುವದಕ್ಕೂ ಗತಿಯಿಲ್ಲದೆ
ಬೆಟ್ಟಕ್ಕೋ ಗುಡ್ಡಕ್ಕೋ ? ಓಡಿಹೊದೆಸೆಂದು ಮಂದಿಯಾಡಿಕೊಳ್ಳರೆ ?

ಗಂಗಾ- ನಾನಾಗಲೇ ಹೇಳಲಿಲ್ಲವೆ ? ಇದು ಜನರಿಗಾಗಿ ನಡೆಸತಕ್ಕ
ಕರ್ಮವಲ್ಲ. ಬಾಲಕನಿಗೆ ಬ್ರಾಹ್ಮಣ್ಯವನ್ನು ಕೊಡತಕ್ಕದ್ದು. ಯಾರೇನಾದರೂ
ಅಂದುಕೊಳ್ಳಲಿ ಕರ್ಮಕ್ಕೇನೊ ಲೋಪವಿಲ್ಲ, ಮತ್ತು ಶ್ವಪಚರು, ಪತಿ
ತರು, ಅಸೂಯಾಪರರು. ಇಂತಹವರ ಅಯೋಗ್ಯ ಸಂಸರ್ಗವೇ ಇಲ್ಲ.
ಉಪನಯನಕ್ಕೆ ಮಹತ್ತ್ವ ಹೆಚ್ಚುವುದು. ಅಲ್ಲದೆ ಇದು ವಟುವಿಗೆ ತುಂಬ
ಶ್ರೇಯಸ್ಸಾಧಕ.

ಸೀತಾ -ಓಹೊ ಮರೆತಿದ್ದೆ. ಹುಡುಗನನ್ನು ಪನಯನಕೊಪ್ಪಿಸು
ವುದೇ ಕಷ್ಟವಾಗಿದೆಯಲ್ಲಾ ! ಅವನೇನೇನೋ ಪ್ರಶ್ನೆ ಹಾಕುತಾನಂತೆ. ಆದರೆ  
ಇನ್ನೂ ನನ್ನ ವರೆಗೂ ಬಂದಿಲ್ಲ, ಹೇಗೂ ಅದೂ ಒಂದು ದೊಡ್ಡ
ಗಂಡವಾಗಿದೆ ಯಾವ ಕಾಲು ಮುರಿದರೂ ಸೋ೦ಟಕ್ಕೆ ಊನ, ಅಂತು
ಇಂತು ನನಗೆ ಉಳಿವಬಾಳಿಲ್ಲ. ಸಾಕಪ್ಪಾ ಸಂಸಾರದಸುಖ ಸಾಕು !

ಗಂಗಾ- ಆಷ್ಟೇಕೆಬೇಸರ: ಸಂಸಾರದಿ೦ದಾಗಿರುವ ಕೇಡೇನು? ಯಾವ
ತೊಂದರೆಯನ್ನಾದರೂ ವಿವೇಕವೊಂದಿದ್ದರೆ ನಿವಾರಿಸಿಕೊಳ್ಳಬಹುದು, ತುಸ
ತಾಳ್ಮೆಯಿಂದ ಯೋಚಿಸಿದರೆ ಎಲ್ಲವೂ ನೇರ್ಪಡುವರು, ಒಳ್ಳೆಯದು. ಚಿಂತೆ
ಯೇಕೆ, ನಿನ್ನ ಸುತನನ್ನು ಪನಯನಕ್ಕೊಪ್ಪಿಸುವ ಭಾರ ನನಗಿರಲಿ.
 
ಸೀತಾ-ನೀನೆ ನನ್ನ ಆಪದ್ಬಂಧು, ದಿಟ , ಮತ್ತೇನುಹೇಳಲಿಕ್ಕೂ
ತೋರದು? ಬಳಿಕ ಇಬ್ಬರೂ ಸಮಾಹಿತರಾದರು ವೈಶಾಖ ಶುದ್ಧ ಬಿದಿಗೆ
ಬುಧವಾರ ರಾಮಚ೦ದ್ರನ ಉಪನಯನಲಗ್ನಕ್ಕೆ ಪ್ರಶಸ್ತವೆಂದಾಯ್ತು.
                ----
                
            ಆರನೆಯ ಪ್ರಕರಣ.

ಮರುದಿನ ಗುರುವಾರ, ಸುಂದರಗಿರಿಯಸಂತೆ.  ರಾಮಚಂದ್ರನು
ಇದನ್ನು ನೋಡಿ ಬಹುಕಾಲವಾಗಿದ್ದಿತು. ಊರಲ್ಲಿದ್ದಾಗ ಅಲ್ಲಿಗೆಹೋಗಲು
ಉದಾಸೀನತೆ ಈ ಸಲಮಾತ್ರ ಗೆಳೆಯರ ಒತ್ತಾಯದಿಂದ ಅಲ್ಲಿಗೆ ಹೋಗಿ
ದ್ದನು, ಚೆಲುವಾದ ಮತ್ತು ಬೆಳೆಯಾದ ಕೆಲವು ಒಳ್ಳೆಯ ಹೋರಿಗಳು,
೨೯-----------------------------------------------------------------------

ಶ್ರೇಷ್ಠವಾದ ತರಕಾರಿ, ಕೈಯಿಂದ ನೆಯ್ದ ಪಂಚೆ ದುಪ್ಪಟಗಳು, ರಾಶಿರಾಶಿ
ಯಾಗಿ ಸುರಿದಿದ್ದ ದಿನಸುಗಳು, ಇವೆಲ್ಲಾ ಇವನಿಗೀಗ ಪ್ರೀತಿಜನಕವಾದವು
ಒಂದೊಂದಾಗಿ ಎಲ್ಲವನ್ನೂ ನಿಧಾನವಾಗಿ ನೋಡುತ್ತಾ ಬಂದನು.
ನಮ್ಮ ರಾಜ್ಯವೂ ಕೇವಲ ತುಚ್ಛವಾದುದು, ಒಳ್ಳೆಯ ಯಂತ್ರಗಳು, ಕಾಗದ,
ಸಾಬೂನು, ಪೆಪ್ಪರ್‌ಮೆಂಟ್, ಕ್ಷೌರದಕತ್ತಿ, ಫ್ಯಾನಲ್‌ಬಟ್ಟೆ ಇಂತಹ
ವನ್ನು ನಮ್ಮ ದೇಶಕ್ಕೆ ಕಳುಹಿಸುವ ಪರಂಗಿಯವರ ಸೀಮೆಯೇ ಯ ಮೇಲಾ
ದುದು ಎಂದು ಮೊಟ್ಟಮೊದಲು ಏಕಪಕ್ಷವಾಗಿ ನಂಬಿದ್ದ ಇವನ ಮನಸ್ಸು
ಈಚೆಗೆ ಸ್ವಲ್ಪ ಸ್ವಲ್ಪವಾಗಿ ಬದಲಾಯಿಸುತ್ತ ಬಂದಿತು. ಮೇಲ್ತರಗತಿಗಳಲ್ಲಿ
ಸದುಪಾಧ್ಯಾಯರಿಂದ ನಡೆದ ಭೂವಿವರಣೆಯ ಬೋಧನೆಯಿಂದ ತಕ್ಕಮ
ಮಟ್ಟಿಗೆ ಪರಾಮರ್ಶಕ್ಕೆ ಕಾರಣವಾಗಿದ್ದುದೆ ಇದಕ್ಕೆ ಮೂಲ, ಸಂತೆಯ
ನ್ನೆಲ್ಲಾ ನೋಡಿದನು ಮನಸ್ಸಿನಲ್ಲಿ-ಆಹಾ ! ಹಳ್ಳಿಗಾಡಿನ ಈ ಒರಟು
ಸೀಮೆಯಲ್ಲಿ ಏನುಬೆಳೆ ! ಎಂತಹ ಪಶುಗಳು ! ಏನೇನು ಕೈಗಾರಿಕೆ !
ಎ೦ದು ಚೆನ್ನಾಗಿ ಪರಿಭಾವಿಸುತ್ತ ಬಂದನು, ಶಾಸ್ತ್ರಜ್ಞಾನವು ಈಗ ಲೋಕ
ವ್ಯವಹಾರಜ್ಞಾನಕ್ಕೆ ತಾಳೆ ಬರಲು ಸಂತೋಷಿಸಿದ್ದಲ್ಲದೆ ಈ ತತ್ತ್ವವನ್ನು
ತನ್ನ ಗೆಳೆಯರಿಗೂ ತಿಳಿಸಿದನು, ಅವರು ತಮ್ಮ ಹಳ್ಳಿಗಾಡಿನ ಪ್ರಾಶಸ್ತ್ಯಕ್ಕೂ
ಇವನ ಹೆಚ್ಚು ತಿಳಿವಳಿಕೆಗೂ ಹಿಗ್ಗಿ ಹಿಗ್ಗಿ ಕುಣಿದರು.

ರಾತ್ರಿ ಎಂಟು ಘಂಟೆ ರಾಮಚಂದ್ರನು ಸಂತೆಯಲ್ಲಿ ಕೊಂಡುತಂದಿ
ದ್ದ ಹಲಸಿದಹಣ್ಣನ್ನು ಬಿಚ್ಚುತ್ತಿದ್ದನು. ಗಂಗಾರಾಮನು ಆರೋಗಣೆಯಾ
ದನಂತರ ಎಂದಿನಂತೆ ಅಲ್ಲಿಗೆ ಮಲಗುವುದಕ್ಕೆ ಬಂದನು, ತಂದೆಯು ದೀಪ
ಸ್ಥಂಭದ ಬಳಿಯಲ್ಲಿ ಕುಳಿತು ದೀಪವನ್ನು ಮೀಟಿ ಹೆಚ್ಚಿಸುತ್ತಿದ ನು. ಈಗ
ತಾನೇ ಮೀಾನೆಯನ್ನು ಮಲಗಿಸಿ ಮುದುಕಿಗೆ ಫಲಹಾರಕ್ಕೆ ಬಡಿಸಲೆಂದು
ಇಂದಿರೆಯು ಅಡಿಗೆಮನೆಯನ್ನು ಹೊಕ್ಕಿದ್ದಳು. ಬಂದವನು ಬಾಗಿಲಲ್ಲೇ
ನಿಂತು -ಓಹೋ ! ಏನಯ್ಯ, ಕುಮಾರಕಂಠೀರವ, ಯುವರಾಜ ಕಡು
ಬಿನ ಹೊತ್ತಿಗೆ ಪಿಡಗಿನಹಾಗೆ ಬಂದೆನಯ್ಯ. ಘಮಘಮಾಯಿಸುತ್ತದೆ
ಯಲ್ಲಾ! ಇದೇನು ಪಟ್ಟಣವಾಸದ ಹುಡುಗರು ಸೇಬು, ಅ೦ಜೂರ ಕಿತ್ತಳೆ,
ಚಪ್ಪರದ್ರಾಕ್ಷಿ ಇಂತಹ ಹಣ್ಣುಗಳನ್ನು ಬಿಟ್ಟು ಹಳ್ಳಿ ಯವರಂತೆ ಹಲಸಿನ
ಹಣ್ಣು ತಿನ್ನುವುದುಂಟೆ ?
೩೦------------------------------------------------------------------------

ರಾಮಚಂದ್ರ - ಮಾನ , ಹಳ್ಳಿಗಳಿದ್ದರಲ್ಲವೆ ಪಟ್ಟಣ ! ಇಲ್ಲದಿದ್ದ
ರಲ್ಲೇನಿದೆ ? ಎಷ್ಟು ಹೆಚ್ಚು ಬೆಲೆ ಕೊಟ್ಟರೆ ತಾನೆ ಇಂತಹ ಶ್ರೇಷ್ಠವಾದ ತನಿ
ಹಣ್ಣು ಅಲ್ಲಿ ದೊರಕೀತೆ ? ಯಾವುದೂ ದೂರದಿಂದಲೇ ಅಲ್ಲಿಗೆ ಬರಬೇಕು
ಕಳಿತದ್ದು, ಕಸುಗಾಯಿ, ಇಲ್ಲವೆ ಹುಳಿತದ್ದು, ಒಣಗಿದ್ದು ಇಂತಹುದನ್ನೇ
ಒಂದಕ್ಕಾರು ಬೆಲೆಯನ್ನು ಕೊಟ್ಟು ಕೊಂಡುಕೊಳ್ಳಬೇಕು. ಮತ್ತು ಈ
ಯಕಾಲದಲ್ಲಿ ಈ ಹಣ್ಣು ಸಿಕ್ಕಿದುದು ಎಷ್ಟೋ ವಿಶೇಷವಲ್ಲವೆ, ನೋಡು
ಮಾವ ! ಹೀಗೆಂದು ಸಂತೆಯ ವಿಷಯದಲ್ಲಿ ತನಗೆ ತೋರಿದ ಸಂಗತಿಗಳ
ನ್ನೆಲ್ಲಾ ವಿವರಿಸಿದನು.

ಹುಡುಗನ ಮೇಲಾದ ಮೇಧೆಯನ್ನೂ ಯೋಗ್ಯವಾದ ನಡತೆಯನ್ನೂ
ಗಂಗಾರಾಮನು ಬಹುವಾಗಿ ಕೊಂಡಾಡಿದನು. ಬಳಿಕ ಹಲಸಿನಹಣ್ಣಿನ
ಜತೆಗೆ ಮುದಕಿಯ ಮೊಸರವಲಕ್ಕಿಯ ಉಪಹಾರವೂ ಸೇರಲು ಎಲ್ಲರೂ
ಮೆದ್ದರು.

ಗಂಗಾ-ಮಗು ಈ ತೊಟ್ಟಿಯಲ್ಲಿ ಬಹಳ ಚಳಿಯಪ್ಪ, ನಿನ್ನ ಕೊಠಡಿ
ಯಲ್ಲೇ ಮಲಗುವುದಕ್ಕೆ ಸ್ವಲ್ಪ ಸ್ಥಳವನ್ನು ಕೊಡುತ್ತಿಯಾ ?

ರಾಮ--ಓಹೋ ! ಅಗತ್ಯವಾಗಿ, ಆದರೆ ಅಲ್ಲಿಯೂ ನಾನು ಕಿಟಕಿ
ಗಳನ್ನು ತೆರೆದೇ ಮಲಗುವುದು, ನಿನಗೇನೂ ಅನಾನುಕೂಲವಿಲ್ಲದಿದ್ದರೆ ಆಗ
ಬಹುದು. ನಾನೇನೂ ಗೊರಕೆ ಹೊಡೆಯುವುದೂ ಇಲ್ಲ.
 
ಗಂಗಾ-ಭಲೆಭಲೆಹುಡುಗ ಏನು, ಒಳ್ಳೆ ಮಾತಿನಲ್ಲೇ ಬತ್ತೀಕೊಡುವೆ
ಯಲ್ಲೊ ! ಓಹೋ ! ನೀನು ಆರೋಗ್ಯಶಾಸ್ತ್ರವನ್ನು ಬಲ್ಲವನು ! ನಾನು
ಗೊರಕೆಹೊಡೆಯವೆನೆಂದು ಸೂಚಿಸಿದೆಯೊ ? ನಾನೇನೂ ಗೊರಕೊಡುವು
ದಿಲ್ಲವಯ್ಯ

ರಾಮ-ಇರಬಹುದು ಮಾವಯ್ಯ. ತಮ್ಮ ತಮ್ಮ ಗೊರಕೆ ತಮತಮಗೆ
ಕೇಳಿಸುವುದಿಲ್ಲ, ನನ್ನ ವಿಷಯ ಅಮ್ಮ ಹೇಳುವುದಪ್ಪಾ ಎಂದು ನಗುತ್ತ
ಹೋಗಿ ತನ್ನ ಕೊಠಡಿಯಲ್ಲಿ ಗಂಗಾರಾಮನಿಗೂ ಹಾಸಿದನು. ತರುವಾಯ
ಇಬ್ಬರೂ ಒಳಗೆ ಕುಳಿತರು.

ಗಂಗಾ--ನೀನು ಬ್ರಾಹ್ಮಣನಾಗುವುದು ಯಾವಾಗಯ್ಯ ?

ರಾಮ -- (ಬೆಚ್ಚಿ ) ಇದೇನು ಮಾವ ಈಗ ಜಾತಿಕೆಟ್ಟಿರುವುದು ?
೩೧-------------------------------------------------------------------

ಗಂಗಾ -ನಿನಗಿದ್ದರಲ್ಲವೆ ಕೆಟ್ಟಿತು ?

ರಾಮ-ಅದೇನು ಹಾಗೆಂದರ ?

ಗಂಗಾ-ಅದು ಹಾಗಿರಲಿ (ಮೆಲ್ಲಗೆ) ನಿನಗೆ ಮುಂಜಿಯಂತಲ್ಲೋ !

ರಾಮ -ಮುಂಜಿಯಬೇಡ ಏನೂ ಬೇಡ, ಸದ್ಯಕ್ಕೆ ಪರೀಕ್ಷೆಯಲ್ಲಿ
ಪ್ಯಾಸಾಗಲಿ, ಸಾಕು.

ಗಂಗಾ -ಆಗಲಿಯಪ್ಪ, ಅದರಪಾಡಿಗದು ಇದರಪಾಡಿಗಿದು.

ರಾಮ-ಯಾಕೆಮಾವ, ಎಲ್ಲರೂ ಮುಂಜಿಮುಂಜೆಯೆಂದು ಪೀಡಿಸು
ತ್ತೀರಿ ? ಮೊನ್ನೆ ಅಮ್ಮನೂ ಕೇಳಿದಳು. ಅದರಿಂದೇನು ಪ್ರಯೋಜನ ? ಬರೀ  
ಖರ್ಚು ಮತ್ತು ದುಂದು.

ಗಂಗಾ-ಸರಿ, ಒಪ್ಪಿದೆ. ದುಂಡಾಗಿ ಮಾಡುವುದು ಮುಂಜಿಯೇ
ಅಲ್ಲ. ನಿಜವಾದ ಮುಂಜಿಯ ರೀತಿಯೇ ಬೇರೆ.

ರಾಮಚಂದ-ಆಹಾ ! ಅಷ್ಟು ಮಟ್ಟಿಗೆ ನಿಜವನ್ನು ತಿಳಿಸಿದರೆ ಸಾಕು.
ಎಷ್ಟೋ ಉಪಕಾರ, ಹೇಳುಮಾವ.
 
ಗಂಗಾ-ಎಲ್ಲರಿಗಿಂತ ದೊಡ್ಡವನು ಯಾರು ? ಮಗು.

ರಾಮ-ದೇವರು.

ಗಂಗಾ-ನಾವು ದೇವರನ್ನು ಭಕ್ತಿಯಿಂದ ಆರಾಧಿಸಬೇಕು.

ರಾಮ-ಏಕೆ ?
ಗಂಗಾ-ನಮಗೆ ದಿವ್ಯವಾದ ಬುದ್ಧಿ, ಅದರಪ್ಪಣೆಯಂತೆ ನಡೆಯಬಲ್ಲ
ಸ ರ್ವಾತಿಶಯಕಾಯ, ಅಂಗಸೌಕಯ್ಯ ಇವನ್ನೆಲ್ಲಾ ದೇವರು ನಮಗೆ ಅನು
ಗ್ರಹಿಸಿರುವನು. ಅಂತಹ ಜಗದೀಶ್ವರನಲ್ಲಿ ಭಕ್ತಿಯಿಡದಿದ್ದರ ನಾವ ದೋಷಿ ಗಳಾಗುವೆವು.
 
ರಾಮಚಂದ್ರ -ದೇವರನ್ನು ಸೇವಿಸಲು ಮಾರ್ಗವಾವುದು ?

ಗಂಗಾ- ಮನದಲ್ಲೇ ಧ್ಯಾನಿಸುವುದು, ಬಾಯಿಂದ ಸೊತ್ರವನ್ನು
ಪಠಿಸುವುದು, ವಿಗ್ರಹಾರಾಧನೆ, ಹವನಹೋಮಗಳು, ಹೀಗೆ ಹಲವು ವಿಧ
ಗಳುಂಟು. ಒಂದೊಂದು ಪಂಗಡದವರೊಂದೊಂದು ಕ್ಲುಪ್ತಕ್ರಮದಲ್ಲಿ
ದೇವರನ್ನಾರಾಧಿಸುವರು. ಅಂತಹ ಒಂದೊಂದು ಪಂಗಡದವರದೇ ಒಂ
ದೊಂದು ಮತವೆನಿಸುವುದು. ಯಾವಯಾವವ ಮತದವರು ಹೇಗೆಹೇಗೆ
೩೨--------------------------------------------------------------------

ಸೇವಿಸಿದರೂ ಆಸೇವೆ ಸೇರುವದೊಬ್ಬ ದೇವರಿಗೇನೆ. ಏಕೆಂದರೆ-- ಎಲ್ಲರಿಗೂ
ದೇವರೊಬ್ಬನೇ, ಆದರೂ ಅವನನ್ನು ಸೇವಿಸುವ ಮತಗಳು ಮಾತ್ರ ಹೀಗೆ
ಬೇರೆಬೇರೆಯಾಗಿವೆ. ಈ ಮತಗಳವರನ್ನೇ ಹಿಂದುಗಳು, ಮಹಮ್ಮದೀ
ಯರು, ಕ್ರೈಸ್ತರು, ಬೌದ್ಧರು, ಜೈನರು, ಪಾರ್ಶಿಯವರು ಹೀಗೆ ಬೇರೆಬೇರೆ
ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಮತದವರೂ ತಾವು
ದೇವರ ಸ್ವರೂಪವನ್ನು ತಿಳಿದುಕೊಳ್ಳಲು ಶ್ರೇಷ್ಠವಾದ ಗ್ರಂಥಗಳನ್ನು ಪಡೆ
ದಿರುತ್ತಾರೆ. ಈ ಭರತಖಂಡದಲ್ಲಿ ಹೆಚ್ಚು ಜನರಾದ ನಾವೆಲ್ಲಾ ಶ್ರೇಷ್ಠವಾದ
ಹಿಂದೂ ಮತಕ್ಕೆ ಸೇರಿದವರು. ಅನಾದಿಯಾದ ನಮ್ಮ ಮತಗ್ರಂಥಗಳಿಗೆ
ವೇದಗಳೆಂದು ಹೆಸರು.

ರಾಮ-ನಮ್ಮ ವೇದಗಳ ವಿಷಯವನ್ನು ನಾವು ತಿಳಿದುಕೊಳ್ಳುವ
ಬಗೆ ಹೇಗೆ ?

ಗಂಗಾ-ಅದಕ್ಕೆ ತಕ್ಕ ಅಧಿಕಾರವನ್ನು ಸಂಪಾದಿಸಬೇಕು

ರಾಮ-ಯಾವ ಅಧಿಕಾರ ? ಏನು ಅಮಲ್ಲಾರಿಯೆ ? ಬಡವರು
ತಿಳಿಯಕೂಡದೋ ?

ಗಂಗಾ-ಮಗು, ಗೇಲಿಮಾಡಬೇಡ, ಅಧಿಕಾರವೆಂದರ ನೀನರಿತಿರು
ವಂತೆ ಸರ್ಕಾರದ ಹುದ್ದೆಯು ಮಾತ್ರವಲ್ಲ. ಅದು ಮೇಲಿನವರನ್ನಾಶ್ರಯಿಸಿ
ಹೊಟ್ಟೆ ಹೊರೆದುಕೊಳ್ಳುವ ಕೀಳ್ತರದುದ್ಯೋಗ, ನಾನು ಹೇಳುವುದಾ
ದರೋ ಶ್ರೇಷ್ಠವಾದುದು, ಇಲ್ಲಿ ಅಧಿಕಾರವೆಂದರೆ ಯೋಗ್ಯತೆ. ಉಪ
ನಯನದಲ್ಲಿ ಮೊದಲು ಗುರೂಪದೇಶವಾಗಿ ಬಳಿಕ ಉಪಾಕರವಾದರ
ಆಗ್ಗೆ ನಿನಗೆ ವೇದವನ್ನೊದುವ ಅಧಿಕಾರ ಅಂದರೆ ಅರ್ಹತೆಯುಂಟಾಗುವುದು.

ರಾಮಚಂದ್ರ-ವೇದವನ್ನೋದಿದರೆ ದೇವರ ಸ್ವರೂಪವು ಚೆನ್ನಾಗಿ
ಗೊತ್ತಾಗುವುದೆ ?

ಗಂಗಾ--ಓಹೋ ! ತಿಳಿಯುವುದು. ಆದರೆ ನಾನು ಮೊದಲೇ
ಹೇಳಿರುವಂತೆ ಉಪಾಕರವಾಗುವವರೆಗೂ ವೇದವನ್ನು ಕಲಿಯಕೂಡದು.
ಬಳಿಕ ಅದನ್ನು ಬಾಯಿಪಾಠಮಾಡಿ ಗುರುಮುಖತಃ ಅರ್ಧವನ್ನು ತಿಳಿದು
ಕೊಂಡರೆ ದೇವರ ಸ್ವರೂಪವು ಗೊತ್ತಾಗುವುದು.

ರಾಮ-ಮಾವಯ್ಯ, ಹಾಗಾದರೆ ನಾನೂ ನಮ್ಮ ವೇದವನ್ನು
೩೩----------------------------------------------------------------------

ಕಲಿಯಬೇಕು. ಅದುಸರಿ, ಉಪನಯನದಲ್ಲಿ ಹುಡುಗನಿಗೆ ವೇಷಾಹಾಕು
ವರು, ಭಿಕ್ಷ ಎತ್ತಿಸುವರು, ಕುದುರೆಮೇಲೆ ಕುಳ್ಳಿರಿಸಿ ಮೆರವಣಿಗೆ
ಮಾಡುವರು, ಏನೇನೊ? ಗೊಂದಲಾಹತ್ತಿಸುವರು ಹೆಂಗಸರು ಬಂದು
ಅಲಂಕಾರಮಾಡುವರು. ಓಲಗತಾಳಮೇಳಗಳ ಗದ್ದಲವು ಬೇರೆ. ಇದೆಲ್ಲಾ  
ಏಕೆ.

ಗಂಗಾ-ಶಾಸ್ತ್ರದಲ್ಲಿ ಇದನ್ನೆಲ್ಲಾ ಹೇಳಿಲ್ಲ, ತಿಳಿಗೇಡಿಗಳು ಹೀಗೆ ಅನಾ
ವಶ್ಯಕವಾಗಿ ಅತಿಮಾಡಿಕೊಂಡಿರುವರು. ನಿನ್ನು ಪನಯನದಲ್ಲಿ ಇಂತಹುದಾ
ವುದಕ್ಕೂ ಅವಕಾಶ ಕೊಡಬಾರದೆಂದಾಗಿದೆ.
 
ರಾಮ-ಮಾವಯ್ಯ, ಈ ಗದ್ದಲಕ್ಕಾಗಿಯೇ ನಾನು ಹೆದರುತ್ತಿ
ದ್ದುದು ನನಗೂ ನಮ್ಮ ಮತದಲ್ಲಿ ಪೂರ್ಣ ಪ್ರೀತಿ. ಇದಕ್ಕಾಗಿ ಮಾತ್ರ
ನಾನು ನಾಚುತ್ತಿದ್ದೆನು. ಪರೀಕ್ಷೆ ಕಳೆದನಂತರ ಬೇಸಗೆಯ ರಜಾದಲ್ಲಾ ವರನುಕೂಲ.

ಗಂಗಾ -ಆಗಲಿಯಪ್ಪ, ನೀನು ವಿಚಾರಶಾಲಿ, ಒಳ್ಳೆಯ ಹುಡುಗ,  
ನೋಡೋಣ. ನನಗೆ ನಿದ್ದೆ ಬೂಕಾಯಿಸುತ್ತಿದ .
                ----
                
            ಏಳನೆಯ ಪ್ರಕರಣ.
            
ಉಪನಯನವು ಗೊತ್ತಾದುದು ಅನೇಕರಿಗೆ ತಿಳಿಯಿತು. ಸುಗ್ಗಿಯ
ಕಾಲವೂ ಕಳೆಯುತ್ತ ಬಂದಿತು. ಬೇಕಾದ ಸಾಮಗ್ರಿಗಳನ್ನು ಶೇಖರಿಸಲು
ಇಂದಿರೆಯು ಪತಿಯನ್ನು ಪ್ರಬಲವಾಗಿ ಪ್ರೇರೇಪಿಸ್ತುತಬಂದಳು. ಆದರೆ ಪ್ರತಿ
ಯೊಂದು ಪ್ರಶ್ನೆಗೂ ಮೌನವೇ, ಅಥವ 'ಆಗಲಿ ನೋಡೊಣ' ಎಂಬುದೇ
ಉತ್ತರ, ಆಕೆಗೆ ಅದರ ತತ್ವವೇ ಗೊತ್ತಾಗದು. ಸುಮ್ಮನೆ ಕಳವಳಗೊ೦
ಡಳು. ಹಂಬಲಿಸಿದಳು, ಏನು ಮಾಡಿಯಾಳು ! ಸ್ವಾತಂತ್ರ್ಯವಿಲ್ಲದ ಸ್ತ್ರೀ
ಈ ಮಧ್ಯೆ ಅನ್ನಪೂರ್ಣೆಯ ಮರ್ಮೋದ್ಘಾಟನೆಯ ಮಾತುಗಳು ಬೇರೆ
ಅಂಕುಶಪ್ರಾಯವಾಗಿದ್ದವು. ಸಾಲಗಾರ ಬಿಟ್ಟರೂ ಸಾಕ್ಷಿಗಾರ ಬಿಡನೆಂಬ
ಲೋಕೋಕ್ತಿಯು ಸುಳ್ಳೆ ? ಸಾಲದ್ದಕ್ಕೆ ನೆರಹೊರೆಯವರು, ಗುರುತು
ಕಂಡವರು, ಎಲ್ಲರೂ ಮುಂಚೆಯ ವಿಷಯವನ್ನು ಕೇಳುವರೇ. ಒಂದು ದಿನ
೩೪--------------------------------------------------------------

ಇಂದಿರೆಯು ಮರುದಿನ ದೇವರ ಅಗ್ರೋದಕಕ್ಕೆಂದು ಹಸಿಮಡಿಯಲ್ಲಿ
ಐದು ಪೂರ್ಣಕುಂಭಗಳನ್ನು ತರುತ್ತಿದ್ದಳು, ತಲೆಯ ಮೇಲೆರಡು ಸೊಂಟದ
ಮೇಲೊಂಗು ಬಿಂದಿಗೆಗಳು ಬಲಗೈಯಲ್ಲಿ ಪುಟ್ಟ ಬಿಂದಿಗೆಗಳಂತಹ ಎರಡು
ತಂಬಿಗೆಗಳು, ಹೊಳೆಯಿಂದ ಮನೆಗರ್ಧಮೈಲಿ. ಆದರೂ ನಿರ್ಲಕ್ಷ್ಯ.
ಪಟ್ಟಣವಾಸಿನಿಯರಂತೆ ಈಕೆಯು ಮನೆಯ ಕೋಣೆಕೊಣೆಯಲ್ಲಿಯ
ನೀರಿಗೆ ಬೇರೆಬೇರೆ ನಲ್ಲಿಗಳನ್ನು ಪಡೆದು ಸುಖಪಟ್ಟವಳಲ್ಲ. ಆರೋಗದೃಢ
ಕಾಯೆ. ಈಕೆಗಿಂತ ಮೊದಲೇ ಹೊರಟು ಹಿಂದಿರುಗಿ ಬರುತ್ತಿದ್ದ ಕೆಲವರು
ಸ್ತ್ರೀಯರು ದಾರಿಯಲ್ಲಿ ಆಡಿಕೊಳ್ಳುತಲಿದ್ದ ಹಲವು ನುಡಿಗಳು ಈಕೆಗೆ ಕರ್ಣಾ
ಕಠೋರವಾದುವು. ಈ ಕೊರಗಿನಿಂದ ಈದಿನ ಊಟವೇ ಸೇರಲಿಲ್ಲ ಸೀತಾ
ಕಾಂತನು ರಾತ್ರಿ ಭೋಜನೋತ್ತರ ಕಂಭಕ್ಕೆ ಒರಗಿಕೊ೦ಡು ಏನನ್ನೋ
ಯೋಚಿಸುತ್ತ ಕುಳಿತಿದ್ದನು. ಕತ್ತನೋಡಲು ಪ್ರಮಾದ ! ಬಿಕ್ಕಳಿಕೆಯ
ಅಳುವು, ಸುರು ಬಸ್ಸು, ಅರೆನುಡಿ, ಕಂಬನಿಯ ತಟಕುಗಳು, ಕಂಡ
ಕೂಡಲೆ ಖಿನ್ನನಾಗಿ ಏಕೆ ಹೀಗಳುತ್ತೀಯೆ ? ಎಂದನು.”

ಇಂದಿರೆ-ಏನು ಹೇಳಲಿ ? ಇರುವನೊಬ್ಬ ಹುಡುಗ, ಒಳ್ಳೇದಾ
ಯ್ತೇಳಿ. ನೀವು ಗಂಡಸರು, ಕಲ್ಲುಮನಸ್ಸಿನವರು, ಸೆರಗೊಡ್ಡಿಬೇಡಿ
ಕೊಂಡರೂ ಕರುಣಬರಲಿಲ್ಲ. (ಅಳುವು ಅತಿಯಾಯ್ತು)

ಸೀತಾ-ಇದೇನು? ನನಗರ್ಥವಾಗದು, ಸರಿಯಾಗಿ ಒದರು.

ಇಂದಿರೆ-ಅರ್ಧವೆಲ್ಲಿಯದು ? ಅನರ್ಧವೇ, ಕುಮಾರನ ಮುಂಜಿಯ
ವಿಚಾರ. ಕಂಡಕಂಡವರೆಲ್ಲಾ ಒಂದೊಂದು ಮಾತಾಡುತ್ತಾರೆ, ಅವನನ್ನು
ಇಂಗ್ಲೀಷಿಗೆ ಹಾಕಿ ಜಾತಿ ಕೆಡಿಸುತ್ತೇವೆಯಂತೆ, ದಾಂಡಿಗನಂತೆ, ಮುಂಜೆಯ
ಎಳೆಯೇ ಇಲ್ಲವಂತೆ ನಮಗೆ ಗತಿಯಲ್ಲವಂತೆ. ಹೆಣ್ಣಾಗಿದ್ದರೆ ಮಕ್ಕಳ
ತಾಯಾಗಿರಬಹುದಾಗಿದ್ದಿತಂತೆ. ಅಯ್ಯೋ ! ನಗೆಬಾಳು.

ಸೀತಾ-ಇದೇನು ಈ ವ್ಯಾಖ್ಯಾನ? ಸಾಕುಸಾಕು ನಿಲ್ಲಿಸು.

ಇಂದಿರೆ-ಇದು ನನ್ನ ವ್ಯಾಖ್ಯಾನವಲ್ಲ. ಹಾದಿಯಲ್ಲಿ ಬೀದಿಯಲ್ಲಿ
ಹೋಗುವವರು, ನೀರಿಗೆ ಹೋಗಿಬರುವ ಹೆಂಗಸರು ಆಡಿಕೊಳ್ಳುತ್ತಿರುವ
ಮಾತು.  
೩೫ ---------------------------------------------------------------------

ಸೀತಾ-'ಸರಿ, ಇತಾನೆ? ಅವರೆಲ್ಲಾ ನಿನ್ನಂತಹ ಹೆಂಗಸರೇ, ಹೆಂಗ
ಸರಿಗಿನ್ನೇನು ಕೆಲಸ ? ' ಎಂದು ಸುಮ್ಮನಾದನು. ಮುಂದಕ್ಕೆ ಮಾತೇಯಿಲ್ಲ.
ಇಂದಿರೆ-( ಬಹಳ ಹೊತ್ತು ನೋಡಿ ಕಡೆಗೆ) ಇದೇನು ! ಯಾವಾ
ಗ್ಗೂ ಒಂದೇ ಬಾಳಾಯ್ತಲ್ಲಾ ! ಗಂಡಸರಿಗೆ ಹೀಗೆ ಮೌನಗೌರೀವ್ರತವೇ ?
ಗಂಡಸಿಗೇಕೆ ಗೌರೀದುಃಖ?' ಎನ್ನುವರಲ್ಲಾ ! ಏನು | ಉಪನಯನ
ವುಂಟೋ ಇಲ್ಲವೋ ? ಇನ್ನು ೧೦-೨೦ ದಿನವುಳಿಯಿತಲ್ಲಾ ! ಯಾವ
ಏರ್ಪಾಡೂ ಇಲ್ಲ. ಚಕ್ಕುಲಿ, ಪಳ್ಳಂಗಾಯಿಹಿಟ್ಟು, ಅರಿಸಿನದಪುಡಿ, ಮೆಣ
ಸಿನಪುಡಿ, ಅವಲಕ್ಕಿ, ಹಪ್ಪಳ, ಸಂಡಿಗೆ ಇವೂ ಆಗಿಲ್ಲ ಯಾರಮಾನಹೋಗ
ಬೇಕು ? ಮಗಳನ್ನು ಕರೆದು ತರುವುದು ಯಾವಾಗ ? ಕಡೆಗೆ ಸದ್ಯಕ್ಕೆ
ಏಳೆಂಟುಪಲ್ಲ ಅಕ್ಕಿಯನ್ನಾದರೂ ತರಿಸಬಾರದೆ ? ಲಗ್ನದ ಕಾಲ. ಜವಳಿ
ತಗ್ಗ೦ತೆ. ಮೊದಲೇ ತಂದಿಟ್ಟು ಕೊಳ್ಳಬೇಡವೆ ? ಇದೇನಮ್ಮ ! ಏನು
ಗಂಡಸರು ! ಯಾವಾಗೂ ಹೀಗಿರಲಿಲ್ಲಮ್ಮ, ಹೆಣ್ಣು ಹೆಂಗಸು, ನಾನೇನು
ಮಾಡೇನು ? ಕುಟ್ಟೋಬೀಸೋ ಕೂಲೀಹೆಂಗಸರು ಬಂದು ಬಂದು
ತಿರುಗಿ ಹೋಗುತ್ತಿದ್ದಾರ. ಹರದತ್ತಭಟ್ಟರ ಮನೆಯ ಮದುವೆಗೆ
ಪಟ್ಟಣದಿಂದ ಬಂದಿರುವ ಬ್ಯಾಂಡಿನವರಿಗೇ ಹೇಳಿ ಹತ್ತೋ ಐದೋ
ಮುಂಗಡಾ ಕೊಟ್ಟಿರಬಾರದೆ? ಅಡಿಗೆಯವರಿಗೂ ಪರಿಚಾರಕರಿಗೂ ಹೇಳು
ವುದು ಯಾವಾಗ ? ಆ ಸಮಯಕ್ಕೆ ಯಾರು ಸಿಕ್ಕುವರು ? ಬಾಳೆಲೆ ತರ
ಕಾರಿಗಳಿಗಾದರೂ ಹೇಳಿದ್ದೀರಾ ? ಅಕ್ಕಿ ಭಿಕ್ಷದ ಜೇಯಿಸರು ಮಾತ್ರ
ಪಾಪ , ನಿತ್ಯವೂ ಎರಡು ಮೂರು ವೇಳೆ ಬಂದು, ಮುಂಜಿಗಿದುಬೇಕೆ ?
ಅದುಬೇಕೆ ? ಒಟ್ಟಾಗಿ ತೆಗೆದುಕೊಂಡರ ಅಗ್ಗ " ಎಂದು ದರತಿರುಗಿ
ಹೋಗುತ್ತಿದ್ದಾರೆ.

ಸೀತಾಕಾಂತನು ಎಲ್ಲವನ್ನೂ ಆಲಿಸಿದನು. ಆದರೂ ಮಿತ್ರನ ಹಿತೊ
ಕ್ತಿಯಂತೆ ದೃಢಪ್ರತಿಜ್ಞೆ. ಇದಕ್ಕೆಲ್ಲಾ ಮನಗೊಡಲಿಲ್ಲ. ಕಡೆಗೇನಾ
ದರೂ ಉತ್ತರವನ್ನು ಕೊಡಲೇಬೇಕಾಗಿ ಬರಲು- ಏಕೆ ವೃಧಾ ವ್ಯಥೆ
ಪಡುವೆ ? ನಿನಗಿಂತ ನನಗೆ ಹೆಚ್ಚು ಯೋಚನೆ.  ಪೇಚಾಡಬೇಡ. ಎಲ್ಲಾ ಅನುಕೂಲಿಸುವದು. ಊಟಮಾಡಿಬಾ, ಹೋಗು,' ಎಂದನು,

' ಎಲ್ಲಕ್ಕೂ ಏನೋ ಏರ್ಪಾಡು ಮಾಡಿದಾರೆ, ಹಾಗಿಲ್ಲದೆ ಸುಮ್ಮನೆ
೩೬---------------------------------------------------------------------
 
ಕುಳಿತಿರತಕ್ಕವರೆ ನಮ್ಮ ಮನೆ ಗಂಡಸರು ? ಅಬ್ಬಬ್ಬ! ಎಷ್ಟು ಮಾಡಿದ
ಕೈಯೋ ? ಇರಲಿ, ಊಟಮಾಡಿಕೊಂಡುಹೋಗಿ ಎಲ್ಲವನ್ನೂ ತಿಳಿಯು
ವೆನು.' ಎಂದುಕೊಂಡು ಹಿಗ್ಗುತ ಸಮಾಧಾನದಿಂದ ಭೋಜನಮಾಡಿ
ತೃಪ್ತಳಾದಳು. ಕೇವಲ ಸಡಗರದಿಂದ ಯಜಮಾನರನ್ನು ಕಾಣಲೆಂದು
ಪುನಃ ಬರುವುದರಲ್ಲಿದ್ದಳು. ಆದರ ಆಗ್ಗೆ ಸರಿಯಾಗಿ ತೊಟ್ಟಿಲಲ್ಲಿ ಕಿರ್ರನೆ
ಮಗುವೂ ಅರಚಿತು ಕ್ಷೀರಪಾನಮಾಡಿ ಸುಖವಾಗಿ ಮಲಗಿದ್ದ ಶಿಶುವಿನ
ರಕ್ತಪಾನಮಾಡಲೆಳಸಿದ ಮತ್ಕುಣಗಳೆ ಇಗಕ್ಕೆ ಕಾರಣ ಹಾಗೂ
ಮಗುವನ್ನೆತ್ತಿಕೊಂಡೇ ಪತಿಯನ್ನು ಸಮೀಪಿಸಿದಳು ಆಗ್ಗಾಗಲೇ ಆತನು
ನಿದ್ರಾಧೀನನಾದಂತೆ ತೋರಿತು. ಮಗುವಿನಬ್ಬರದ ನಿದ್ರಾಭಂಗವಾಗ
ಬಾರದೆಂದು ಹೊರಟು ಹೋದಳು. ಆತನು ನಿದ್ರೆಯಲ್ಲಿದ್ದನೋ ಚಿಂತೆಯಲ್ಲ
ದ್ದನೋ ನಮಗೆಗೊತ್ತು. ಅ೦ತು ಈ ನಟನೆಯಿಂದ ಸದ್ಯಕ್ಕೆ ಹೆಂಡತಿಯ
ಕಾಟವು ತಪ್ಪಿತು. ಬೀಸುವ ದೊಣ್ಣೆಗೆ ತಲೆತಪ್ಪಿದರೆ ಸಾವಿರ ವರ್ಷ
ಆಯುಸ್ಸು.
 
ಭಾನುವಾರ ಪರಿಕ್ಷೆಯು ಸಮೀಪಿಸಿದೆ ರಾಮಚಂದ್ರನಿಗೆ ಅನ
ವರತ ವ್ಯಾಸಂಗಮಯ. ಆದರೆ ಅವನನ್ನು ತುಂಬ ಪ್ರೀತಿಸುತ್ತಿದ್ದ
ಗಣಿತಬೋಧಕನಾದ ಭವಾನಿ ಶಂಕರನನ್ನು ಸನ್ಮಾನಿಸಲು ಆದಿನ ಒಂದು
ಸಂತೋಷಕೂಟ. ಆತನಿಗೆ ಅಲ್ಲಿಂದ ವರ್ಗ. ಇನ್ನು ಪುನಃ ಇವನಿಗೆ ಆತನ
ಬೋಧನೆಯು ದುರ್ಲಭ, ಆದುದರಿಂದ ಸಂಜೆ ನಾಲ್ಕು ತಾಸಿನವೇಳೆಗೆ ತಾನೂ
ಶಾಲೆಗೆ ಹೋಗಿ ಸಹಪಾರಿಗಳ ಸಂಗಡ ಕಲೆತನು. ಕೆಲವು ಉಪಹಾರಗಳು
ಹಂಚಲ್ಪಟ್ಟವು, ದೊನ್ನೆ ಗಳು ಕೈಗೆ ಬಂದಕೂಡಲೆ ಗದ್ದಲವು ಸರ್ವತ್ರ
ಕಡಮೆಯಾಯ್ತು ಆದರೆ ಆಪ್ತಮಿತ್ರರವರು ಸೇರಿದ ಒಂದು ಗುಂಪಿನಲ್ಲಿ
ಮಾತ್ರ ಬಾಯಿಗೆರಡು ಕೆಲಸ. ಆ ಪ್ರಸ್ತಾಪಕ್ಕೆ ರಾಮಚಂದ್ರನ ಮುಂಜಿ
ಯೇ ಸುದ್ದಿ,

೧ನೆಯವನು - ನಿನ್ನ ಥ್ರೆಡ್ ಸರಿಮನಿ ( Thread Ceremony) ಯಾವಾಗ ರಾಮಚಂದ್ರ ?
೨ನೆಯವನು-ಓ ಯಸ್ (Oh yes) ' ಮರೆತಿದ್ದೆ ವಾಟ್ (what) ರಾಮ್‌' ? ಮುಂಜಿ ಯಾವಾಗಯ್ಯ ?
೩೭------------------------------------------------------------------------
 
೩ನೆಯವನು-ಈ ಸಮ್ಮರ್ ಹಾಲೀಡೇಸ್ (Summer Holio-
days) ನಲ್ಲಾದೀತ, ವಾಟ್ (What) ? ಕಮಾನ್‌ (come on).
ಅಚ್ಚಾ ! ಓಹೋ! ಏನಯ್ಯ, ನೀನು ಇನ್ನು ಮೇಲೆ ಹೋಟಲಿಗೆ (Hotel)
ಬರುವುದಿಲ್ಲ ಹಾಗಾದರೆ ? ಅದೇಕೆ ? ಮುಂಜೆಯಾದರೆ ಕಾಫಿ !(Coffee)
ಬೇಡವೊ ? ನಾನ್‌ಸೆನ್ಸ್ (norisense).

ಮತ್ತೊಬ್ಬ-ಹಾಗಲ್ಲಕಾಣೋ ವಿಲೇಜ್'ಪೀಪಲ್ ಬಹಳ ಆಎದಥೋ
ಡಾಕ್ಸ್ (Village people very orthodox) ಬಹಳ ಮಡಿ, ಏನು
ರಾಮ್‌ ಅಲ್ಲವೆ ?

ರಾಮಚಂದ್ರನು ಎಲ್ಲಕ್ಕೂ ಪ್ರಸನ್ನತೆಯನ್ನೆ ಉತ್ತರವನ್ನಾಗಿ
ಕೊಟ್ಟನು.
 
ಇನ್ನೊಬ್ಬ- ಏನಯ್ಯ, ನಾವೂ ಬರೋಣವೊ ?

ಬೇರಯವನು-- ವಾಟ್ ಡು ಯು ಮೀನ್‌  (What do you
mean )?ಅವನು ಆಗಲೇ ನಮ್ಮ ಫ್ರೆಂಡ್ತೀಗೆಲ್ಲಾ ಜನರಲ್ ಇನ್ವಿಟೇಷನ್‌
(General Invitation) ಕೊಟ್ಟಿದ್ದಾನೆ.

೧ನೆಯವನು- ವೆರಿಗುಡ್ (Very good).

ಭವಾನೀಶಂಕರನಿಗೆ ಸತ್ಕಾರವನ್ನು ಸಲ್ಲಿಸಿ ಸಮಸ್ತವಿದ್ಯಾರ್ಥಿಗಳೂ
ಆತನನ್ನು ಬಿಡಾರಕ್ಕೆ ಬಿಟ್ಟು ಬಂದರು. ರಾಮಚಂದ್ರನು ಮಾತ್ರ ಆ ಗುರು
ವಿನಪ್ಪಣೆಯಂತೆ ಅಲ್ಲಿಯೇ ಉಳಿದುಕೊಂಡನು, ಇವನಿಗೆ ಮೇಲಾಗ ಬುದ್ಧಿ
ವಾದಗಳೊಡನೆ ಹಲವು ಪುಸ್ತಕಗಳು ಆತನಿಂದ ದೊರೆತವು.

ಮರುದಿನ ಸಾಹೇಬನ ತರಗತಿಯಲ್ಲಿ ರಾಮಚಂದ್ರನ ಉಪನಯನದ
ವಿಷಯವಾಗಿಯೇ ಹುಡುಗರ ಸಲ್ಲಾಪ.
 
ಸರ್ (Sir), ರಾಮಚಂದ್ರನಿಗೆ ಈ ರಜಾದಲ್ಲಿ ಮುಂಜಿಯಂತೆ.

ಸಾಹೇಬ - ಯೂ ಬಾಯ್ಸ್‌ ಡೊಂಟ್ ಸ್ಟಿಕ್ ಇಂಗ್ಲಿಷ್ (You boys don't speak English). ವಾಟ್‌ ಇಸ್‌ ಇಟ್‌ (What
is it) ?

ಹಾಗೆಂದರೇನು ಸರ್‌, ಕನ್ನಡದಲ್ಲಿ ಪ್ಲಸ್ (Please) ಹೇಳಿ.
ಹಾಮನ್‌  (Hollen) ಸಾಹೇಬನು ವೃದ್ಧನು. ವಿದ್ಯಾರ್ಥಿವತ್ಸಲನು.
೩೮---------------------------------------------------------------------
 
ಈತನಿಗೆ ಕೋಪವೂ ಶಿಕ್ಷೆಯೂ ಸರಿಬೀಳವು. ಹೈಸ್ಕೂಲ್ ವಿದ್ಯಾರ್ಥಿಗಳ
ಇಂಗ್ಲಿಷ್ ಭಾಷಾಜ್ಞಾನವು ಸಾಲದಿರುವುದನ್ನು ಈತನು ಸಹಿಸನು.
ಇದಕ್ಕಾಗಿ ಮಿಡಲ್ ಸ್ಕೂಲುಗಳನ್ನು ಹಳಿಯುವನು. ಹೇಗಾದರೂ
ಹೈಸ್ಕೂಲಿನ ಕೀಳ್ತರಗತಿಯಿಂದಲೂ ಬಾಲಕರನ್ನು ಇಂಗ್ಲೀಷಿನಲ್ಲೇ
ಮಾತನಾಡುವಂತೆ ಮಾಡಬೇಕೆಂದು ಎಷ್ಟೋ ಯತ್ನಿಸುತ್ತಿದ್ದನು. ಗುರು
ಬಗೆ ತಿರುಮಂತ್ರ ಹೇಳುವ ಹುಡುಗರು ಈತನಿಗೆ ಕನ್ನಡವನ್ನು ಕಲಿಸಿ
ಕೊಡುತ ಬಂದರು, ಸ್ವಲ್ಪ ಹೊತ್ತು ನಿದಾನವಾಗಿ ಸಲ್ಲಾಪವು ನಡೆದನಂತರ  
ಸಾಹೇಬನಿಗೆ ಮುಂಜಿಯ ವಿಷಯವು ಅರ್ಧವಾಯಿತು.
 
ಆಗ ಈತನು-ಓ ನೌ ಐ ಅಂಡರ್‌ಸ್ಟಾಂಡ್ (Oh ! now I un- derstand) ಎಂದನು.

ಹುಡುಗರು ಪನಃ -- ಕನ್ನಡದಲ್ಲಿ ಪ್ಲೀಸ್ ಸರ್ (Please sir).
ಎಂದು ಗದ್ದಲಮಾಡತೊಡಗಿದರು. ಬಳಿಕ ಸಾಹೇಬನು ಹೇಳಿದುದನ್ನು
ಒಬ್ಬ ಪ್ರೌಢವಿದ್ಯಾರ್ಥಿಯು ಈ ಮುಂದೆ ಹೇಳುವಂತೆ ಪರಿವರ್ತಿಸಿದನು.....
ಓ, ನೀವು ಹಿಂದುಗಳು ಒಗೆbಗೆ ತಿಂಡಿಗೆ ಒಗೆಬಗೆ ಹಬ್ಬ, ಒಬ್ಬಟ್,
ಪೂರೀಸ್, ಚಿರೋಟಿ, ಥ್ರೆಡ್ ಸಮನೀಗೆ ಎಲ್ಲಾ ಬೇಕೆನೋ !
 
ವಿದ್ಯಾರ್ಥಿಗಳು-ಸರ್, ರಿಲಿಜಿಯಸ್ ಕರ್ಮ, (Sir Religious Karma)

ಸಾಹೇಬ-ವೈ ಆಲ್ ದಿಸ್ ವೇಸ್ಟ್ (Why al1 this waste)?

ವಿದ್ಯಾರ್ಥಿಗಳು-ಹಾಗೆನ್ನಬೇಡಿ ಸರ್, ನಿಮಗೆ ಗೊತ್ತಿಲ್ಲ.

ಸಾಹೇಬ-ವಿ ಕ್ರಿಶ್ಚಿಯನ್ ಡೋಂಟ್ ಅಗ್ರಿ ವಿತ್ ಯು (We
Christians don't agree with you) ನಾವು ಕ್ರಿಶ್ಚಿಯನ್ನರು
ನಿಮ್ಮ ಮಾತು ಒಪ್ಪುವುದಿಲ್ಲ.
 
ಇನ್ನೊಬ್ಬ ವಿದ್ಯಾರ್ಥಿಯು ನಿಂತು ಸಪ್ರತಾಸನಾಗಿ - ಸರ್, ನಮ್ಮ
ಮತದ ವಿಷಯವಾಗಿ ಏನೂ ತಿಳಿಯದೆ ಏಕೆ ದೂರುವಿರಿ ? ತಿಂದು ನೋಡಿ
ದರಲ್ಲವೆ ಸಕ್ಕರೆಯ ರುಚಿ ತಿಳಿದೀತು ? ನಾವು ನಿಮ್ಮಂತೆ ಪರಮತವನ್ನು
ರೂಪಿಸತಕ್ಕ ವರಲ್ಲ.

ಸಾಹೆಬ-ಹೌ ಆರ್ ವಿ ಟು ನೋ ಯುವರ್ ರಿಲಿಜನ್‌ (How
೩೯-------------------------------------------------------------------
 
are we to know your religion) ನಾವು ನಿಮ್ಮ ಮತವನ್ನು ತಿಳಿ
ಯುವ ಬಗೆ ಹೇಗೆ ?

ವಿದ್ಯಾರ್ಥಿಗಳು-ನೀವು ನಮ್ಮ ಮತಕ್ಕೆ ಸೇರಿದರೆ ತಿಳಿದೀತು ಸರ್.

ಸಾಹೇಬ---ನಗುತ್ತ-ಓ ಯಸ್, ಆಲ್ ರೈಟ್, ರಾಮಚಂದ್ರ ಐ
ಹೊಪ್ ಯ ವುಡ್ ಬಿಕಂ ಎ ಶಂಕರಾಚಾರ್ (I hope you
would become a Shankaracharya) ಒಳ್ಳೆಯದು, ಸರಿ, ರಾಮ
ಚಂದ್ರ, ನೀನೊಬ್ಬ ಶಂಕರಾಚಾರನಾಗುವೆಯೆಂದು ನಾನು ಹಾರೈ
ಸುತ್ತೇನೆ.

ರಾಮಚಂದ್ರ-ಧ್ಯಾಂಕ್ ಯ ಸರ್ (Thank you Sir).
ಇಷ್ಟರಲ್ಲೇ ಗಂಟೆಯಾಯ್ತು. ಶಾಲೆಯನ್ನು ಬಿಟ್ಟು ಬಿಟ್ಟರು.
            --------------
            
            ಎಂಟನೆಯ ಪ್ರಕರಣ.  
            
ವಸಂತಕಾಲ, ಎಲ್ಲೆಲ್ಲ ಮಾವಿನಮರಗಳು ಚಿಗುರಿ ಮನೋಹರ
ವಾಗಿರುವುವು. ಮಲ್ಲಿಗೆಸಂಪಿಗೆಹೂಗಳಸುಗ್ಗಿ, ರಾಮೋತ್ಸವ, ಹರಿಕಥ
ಸಂಗೀತಸಮ್ಮೇಳನ ಇವುಗಳ ವಿಜೃಂಭಣೆ, ಪಾನಕಪೂಜೆಗಳ ಪರುಠವಣೆ
ಬೀಸಣಿಗೆಗಳಿಂದ ಬಡಿದು ಗಾಳಿಯನ್ನೇಳಿಸುವ ಕಾಲ. ಎಲ್ಲಿನೋಡಿದರೂ
ದಿವಾಸ್ವಾಪ, ನಿಶಾಜಾಗರಣೆ, ಬೆಳುದಿಂಗಳ ಆಹ್ಲಾದ, ಶೀತಲವಸ್ತುಗಳ
ಸೇವನೆ, ಏಪ್ರಿಲ್ ತಿಂಗಳಲ್ಲಿ ನಡೆಯುವ ಪರೀಕ್ಷೆಗಳೆಲ್ಲಾ ಮುಗಿದುವು.
ವಿದ್ಯಾರ್ಥಿಗಳು ತಮ್ಮ ತಮ್ಮ ಸ್ಥಳಗಳಿಗೆ ಹೊರಡುವುದರಲ್ಲಿದ್ದಾರೆ. ಇವರ
ಲ್ಲರಿಗೂ-ಮುಖ್ಯವಾಗಿ ರಾಮಚಂದ್ರನಿಗೆ, ಊರಿಗೆ ತೆರಳುವ ಉದ್ದೇಶವು
ಇಮ್ಮಡಿ. ಉತ್ಸಾಹವಾದರೋ? ನೂರ್ಮಡಿ, ಮಾತಾಪಿತೃಗಳ, ತತ್ರಾಪಿ  
ಇಂದಿರೆಯ ಸಂಭ್ರಮಕ್ಕಂತೂ ಪಾರವೇ ಇಲ್ಲ. ದಿನಬೆಳಗಾದರೆ ಕರುವ
ನ್ನಗಲಿದ ಹಸುವಿನಂತ ಹಂಬಲಿಸುತ್ತ ನಿರೀಕ್ಷಿಸುವಳು.  

ಯುಗಾದಿಹಬ್ಬಕ್ಕೆ ಗಂಗಾರಾಮನೂ ಬಂದನು. ಪುನಃ ತನ್ನ ಸರ್ಕಾರದ
ಕೆಲಸಕ್ಕೆ ಹೋಗಲಿಲ್ಲ, ಈತನು ಪೂರ್ಣಕಾಮನೆಂಬುದು ನಮಗೆ ಗೊತ್ತೇ.
ಈಗ ತಾನಾಗಿಯೆ? ಉದ್ಯೋಗದಿಂದ ನಿವೃತ್ತನಾಗಿರುವನು,ಪಿತ್ರಾರ್ಜಿತವಾದ
೪೦--------------------------------------------------------------------------

ಆಸ್ತಿಯಜತಗೆ ಯಥೋಚಿತವಾಗಿ ದೊರೆಯುವ ವಿಶ್ರಾಂತಿವೇತನವ ಸಾಕೆಂ
ದು ತೃಪ್ತನಾದನು, ಈ ಕಾಲದ ಕೆಲವುಜನ ಸರ್ಕಾರದ ದೊಡ್ಡ ಅಧಿಕಾರ
ಗಳನ್ನು ನೋಡಿ. ಸ್ವಾಭಾವಿಕವಾಗಿ ವಯಃಕಾಯಗಳಲ್ಲಿ ವೃದ್ದರಾದರೂ
ಸರ್ಕಾರೀ ಜನ್ಮ ಪತ್ರಿಕೆಯಂತೆ ತಾವು ತರುಣರೆಂದೂ ಸರ್ವಶಕ್ತರೆಂದೂ,
ಇನ್ನೂ ಹಲವು ಕಾಲ ದುಡಿದು ರಾಜ್ಯವನ್ನುದ್ಧಾರಮಾಡಬಲ್ಲವರೆಂದೂ
ತಮ್ಮ ಉದ್ಯೋಗದ ಅವಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಾರ್ಥಿಸುವರಸ್ಟೆ.
 ಗಂಗಾರಾಮನಾದರೊ ಇದಕ್ಕೆ ಭಿನ್ನ ಸ್ವಭಾವದವನು, ಗ್ರಂಥವ್ಯಾಸಂಗ
 ದಿಂದ ಇಹಪರಗಳನ್ನು ಸಾಧಿಸಿಕೊಳ್ಳಬೇಕೆಂದು ಕುತೂಹಲಪಡುವನು.
 
ಗಂಗಾರಾಮನೂ ಸೀತಾಕಾಂತನೂ ರಾಮಚಂದ್ರನ ಉಪನಯನದ
ವಿಚಾರವಾಗಿ ಯೋಚಿಸಿದ್ದರಷ್ಟೆ. ಈ ಏರ್ಪಾಡು ಸ್ವಲ್ಪಸ್ವಲ್ಪವಾಗಿ ತಿಳಿ
ಯುತ ಬಂದಂತೆಲ್ಲಾ ಇಂದಿರೆಯ ವ್ಯಸನವೂ ಕೋಪವೂ ಕ್ರಮಕ್ರಮವಾಗಿ
ಬೆಳೆಯತೊಡಗಿದವು. ಈಕೆ ಸಭ್ಯೆ, ವನಿತೆ, ಪತಿಗೆದುರುಮಾತಾಡಿ
ಪ್ರತಿಭಟಿಸುವುದನ್ನರಿಯಳು. ಈಗ ಹೇಗೂ ಮನಸ್ಸು ನಿಲ್ಲದೆ ಕಂಡಕಂಡ
ವರ ಸಂಗಡಲೆಲ್ಲಾ ಇದನ್ನು ಹೇಳಿಕೊಂಡು ಗೋಳಾಡುವಳು. ಮಗನ
ಮೂಲಕವಾದರೂ ಮುರಾಡಾ ಹಾಕಿಸುವುದೆಂದರೆ ಅವನಿನ್ನು ಅತಿ.
ಸುಂಕದವರ ಸಂಗಡ ಸುಖದುಃಖ ಹೇಳಿಕೊಂಡಹಾಗೆಯೇ. ಅಥವಾ
ಮನೆಯ ದೀಪವೆಂದು ಮುತ್ತು ಕೊಟ್ಟಂತೆಯೇ. ಆದರೂ ಅವನೂ ಬರಲಿ,
ನೋಡೋಣ ಎಂದು ತವಕದಿಂದ ಎದುರುನೋಡುತ್ತಿದ್ದಳು.

ಒಂದುದಿನ ಬೆಳಿಗ್ಗೆ ಎಂಟುಘಂಟೆ. ರಾಮಚಂದ್ರನು ಬಂದೇಬಿಟ್ಟನು.
ಕುಲಪ್ರಶ್ನೆಗಳಾದುವು. ಸಕಾಲದಲ್ಲಿ ಭೋಜನ, ಬಳಿಕ ಅವನು ತಲೆಯ
ಕೆಳಕ್ಕೆ ತೋಳನ್ನಿಟ್ಟು ಮೈನೀಡಿದನು. ಹಿಂದಣರಾತ್ರಿ ಬಂಡಿಯಪಯಣ
ದಲ್ಲಿ ನಿದ್ರೆ ಬಂದಿರಲಿಲ್ಲ. ಎದ್ದ ಬಳಿಕ ನಾಲ್ಕು ಘಂಟೆಗೆ ಆಹಾರವೂ
ಆಯ್ತು, ಸಂಜೆಯಲ್ಲಿ ಒಬ್ಬನೇ ಹೊರಟನು. ಎಲ್ಲೆಲ್ಲೋ ಸುತ್ತಿಕೊಂಡು
ಹೊಳೆಯಬಳಿಗೆ ತಲಪಿದನು. ಅಲ್ಲಿ ಗಂಗಾರಾಮನ ದರ್ಶನವೂ ದೊರೆ
ಯಿತು, ಆಗ ಚಂದ್ರಿಕೆಯು ಬಹುರಮಣೀಯವಾಗಿದ್ದಿತು. ಇಬ್ಬರೂ ಅಲ್ಲೇ
ಬಹಳಹೊತ್ತು ಮಾತಾಡುತ್ತಿದ್ದರು, ಉಪನಯನದ ಏರ್ಪಾಡೆಲ್ಲಾ
ತಿಳಿದು ರಾಮಚಂದ್ರನಿಗೆ ತೃಪ್ತಿ ಜನಕವಾಯ್ತು. ಬಳಿಕ ಎದ್ದು ಮನೆಯ
ಕಡೆ ಬರುವುದರಲ್ಲಿದ್ದರು. ಅಷ್ಟರಲ್ಲಿ ಇಂದಿರೆಯ ತಳಮಳ. 'ಅಯ್ಯೋ !
ಮಗು ಎಲ್ಲಿ ಹೋದೆನೊ ! ಇಷ್ಟು ಹೊತ್ತಾದರೂ ಬರಲಿಲ್ಲವಲ್ಲಾ ! ಇನ್ನೇ
ನುಗತಿ ! ಒಬ್ಬನೇ ಹೋಗಿರುವನಲ್ಲಾ ! ಈ ಅವೇಳೆಯಲ್ಲಿ ಅರಳಿಮರದ
ಹತ್ತಿರಕ್ಕೆ ಹೋಗುವನೋ ಏನೋ ? ಅಲ್ಲಿ ಬ್ರಹ್ಮರಾಕ್ಷಸ ಇದೆಯಂತೆ !
ಅಧವಾ ಅವನಿಗೇನು ಕೋಪಬಂದಿತೋ ! ಯಾರೇನು ಹೇಳಿದರೂ !
ಅಯ್ಯೋ !' ಎಂದು ಗೋಳಾಡುತ್ತ ಬಂದಳು. ಬಾಗಿಲಲ್ಲಿ ನಿಂತಳು
ಬೀದಿಯಕಡೆಯ ನೋಡುವಳು. ಕಂಡಕಂಡವರನ್ನೆಲ್ಲಾ ಕೇಳುವಳು.
ಇದೇ ಸಂಗತಿಯನ್ನು ವಿಚಾರಿಸಲಿಕ್ಕೂ, ಬಹುದಿನಕ್ಕೆ ಬಂದಿರುವ ರಾಮ
ಚಂದ್ರನನ್ನು ನೋಡುವುದಕ್ಕೂ ಹಲವರು ಬಂದರು, ಆಗ್ಗೆ ಸರಿಯಾಗಿ
ಸೀತಾಕಾಂತನೂ ಮನೆಗೆ ಬಂದೆನು, ಸಂಗತಿಯನ್ನೆಲ್ಲಾ ವಿಚಾರಿಸಿದನು.
ಮರುದಿನ ಬೆಳಿಗ್ಗೆ ಒಂದು ನಿದಾನವಾಗಿ ಗೆಳೆಯನನ್ನು ನೋಡಬಹುದೆಂದು
ಜನರಿಗೆ ಹೇಳಿಕಳುಹಿಸಿದನು. ಏನೂ ಗಾಬರಿಗೊಳ್ಳಬೇಕಾದುದಿಲ್ಲವೆಂದು
ಪತ್ನಿಯನ್ನು ಸಂತೈಸಿದನು ಇಬ್ಬರೂ ಒಳಕ್ಕೆ ಹೊರಟರು ಉತ್ತರ
ಕ್ಷಣದಲ್ಲೇ ರಾಮಚಂದ್ರನು ಮನೆಗೆ ಒಂದನು. ಕೋಲಾಹಲವು ಶಾಂತ
ವಾಯಿತು.
 
ಇಂದಿರೆಯು ಪುತ್ರನಸಂಗಡ ತನ್ನ ವ್ಯಸನವನ್ನು ಹೇಳಿಕೊಳ್ಳಬೇಕು.
ಸಮಯವೇ ಇಲ್ಲ ಯಜಮಾನರಿಲ್ಲದಾಗ ಹುಡುಗನ ಮನೆ ಸೇರುವುದೇ
ಕಷ್ಟ. ಇದ್ಧರೂ ಗೆಳೆಯರ ಗುಂಪ, ಎನುಮಾಡಬೇಕು ! ಕಡೆಗೆ ಹೇಗೋ
ಸ್ವಲ್ಪ ಅವಕಾಶ ದೊರೆಯಿತು.

ಮಗು, ನೋಡಿದೆಯೇನಪ್ಪ, ಆವರುಮಾಡಿದ ಕೆಲಸ? ಇದು ಸರಿಯೇ?
ಆಗಬಹುದೆ ? ನೀನೇನೋಡು.
 
ರಾಮಚಂದ್ರ~. ಏನಮ್ಮ ಅದು '

ಇಂದಿರೆ-ಲಗ್ನವ ಸಮಾಪಿಸಿತು ಒಂದಾದರೊಂದು ಅಣಿಯಾಗ
ಲಿಲ್ಲವಲ್ಲಪ್ಪ, ನಾನೇನು ಮಾಡಲಿ ? ಮಾನಾ ಉಳಿಯುವುದು ಹೇಗೆ ?

ರಾಮಚಂದ್ರ-ಓಹೋ | ಉಪನಯನದ ವಿಷಯವೊ ? ನಿನಗೇ
ಗಮ್ಮ, ? ಸುಮ್ಮನಿರು, ಎಲ್ಲಾ ಸರಿಯಾಗಿ ನಡೆದುಹೋಗುವದು.

ತಾಯಿ--ಅಲ್ಲವೂ ಮಗು. ಶಾಸ್ತ್ರಕ್ಕಾಗಿ ಅಷ್ಟು ಮಾಡುವಕಡೆ ಇಷ್ಟಾ
೪೪-------------------------------------------------------------------
 
ಹಣವನ್ನೊದಗಿಸುವರೆಂಬುದನ್ನು ಬಲ್ಲನು. ಕಾಲದೇಶಧರ್ಮಗಳನ್ನರಿಯದೆ
ಬರೀ ಮೂಢಭಕ್ತಿಯಿಂದ ನಡೆಯುವ ಮಾತೆಯ ಮೂರ್ಖತನವೂ ಇವನಿಗೆ
ಗೊತ್ತು. ಆದರೂ ಆಕೆಯಲ್ಲಿ ಪೂಜ್ಯ ಬುದ್ದಿಯನ್ನಿಟ್ಟಿದ್ದನು.
 
ಲಗ್ನವಿಎನ್ನೆರಡು ದಿನಗಳಿಗೆ ನಡೆಯಬೇಕು. ಆದಿನ ಸಂಜೆ ನಾಲ್ಕು
ಘಂಟೆಗೆ ಜೋಡೆತ್ತಿನಗಾಡಿಯೊಂದುಒ೦ದು ಬಾಗಿಲಲ್ಲಿ ನಿಂತಿತು, ಮೊದಲೇ
ನಿಶ್ಚಯವಾಗಿದ್ದಂತೆ ಅದರಲ್ಲಿ ಲಗ್ನದಮನೆಯ ಮತ್ತು ಗಂಗಾರಾಮನ
ಮನೆಯ ಸ್ತ್ರೀಯರು, ಆಹೂತರಾಗಿದ್ದ ಮತ್ತೆ ಮೂವರು ಸುಮಂಗಲಿ
ಯರು, ಇಷ್ಟು ಜನರು ಮಾತ್ರ ಕುಳಿತರು. ಮತ್ತೊಂದು ಬ೦ಡಿಯಲ್ಲಿ
ಉಪ್ಪುಗೂಡಿ ಒಂಬತ್ತು, ಪದಾರ್ಧಗಳೂ ಹೇರಲ್ಪಟ್ಟವು. ವಟು,
ತಂದೆ, ಗಂಗಾರಾಮ ಇನ್ನು ಕೆಲವರು ಪಾದಚಾರಿಗಳಾಗಿಯೇ ಬಂಡಿಯ
ಹಿಂದೆ ಹೊರಟರು. ಸುಮಾರು ಒಂದೇ ಘಂಟೆಯಲ್ಲಿ ಪರ್ವತದ ಪಾದ
ವನ್ನು ಮುಟ್ಟಿದರು. ಬೆಟ್ಟವು ಕೇವಲ ಎತ್ತರವಿಲ್ಲ ಆದರೆ ಮೆಟ್ಟಲು
ಗಳೇನೋ ಕಡಿದೇ. ಹೋಗಿದ್ದವರೆಲ್ಲಾ ತಮ್ಮ ಕೈಲಾದಮಟ್ಟಿಗೂ ಸಾಮಾ
ನುಗಳನ್ನು ಮೇಲಕ್ಕೊಯ್ದುರು ಭಾರವಾದ ಮೂಟೆಗಳನ್ನು ಬ೦ಡಿಗಳವರು
ಹೊತ್ತರು.
 
ಗಂಗಾರಾಮನ ಸಲಹೆಯಂತೆ ಕೇವಲ ಹತ್ತಿರದ ಸಂಬಂಧದ ಬಂಧು
ಗಳಿಗೆ ಮಾತ್ರ ಲಗ್ನ ಪತ್ರಿಕೆ ಕಳುಹಿಸಲ್ಪಟ್ಟಿತು, ಎದುರಿಗೆ ಬಂದು
ಕರಿಯಲಿಲ್ಲವೆಂದೂ ತಾವು ಎಂದರೆ ಅಷ್ಟು ಉದಾಸಿನವೆಂದೂ ಆಕ್ಷೇಪಿ
ಸುತ್ತ ಕೆಲವರು ಬರದೆಯೇ ನಿಂತರು. ಇನ್ನು ಕೆಲವರು ಏನೇನೋ ನೆಪ
ಗಳನ್ನು ಹೇಳಿ ತಾವು ಬರುವುದಕ್ಕೆ ಯತ್ನವಿಲ್ಲವೆಂದು ಬರೆದರು. ಇಂದಿರೆಯ
ತಮ್ಮನಾದ ವಿದ್ಯಾವಿನೋದನು ತನ್ನ ಅಂಚೆಯ ಇಲಾಖೆಯವರಿಂದ ರಜಾಕ್ಕೆ
ಅನುಜ್ಞೆಯಾಗಲಿಲ್ಲವೆಂದೂ ಬರೆದು ಮೊದಲನೀರ ಮೀಣದಲ್ಲಿ ಅಕ್ಕನಿಗೆ ಓದಿ
ಸಲಿಕ್ಕೆಂದು ಹದಿನೈದು ರೂಪಾಯಿಗಳನ್ನು ಕಳುಹಿಸಿದನು. ಇದನ್ನು
ತಿಳಿದ ಇಂದಿರಯ ಮನಸ್ಸು ಉಕ್ಕಿದ ಕಡಲಿನಮೇಲೆ ಎಣ್ಣೆಯನ್ನು ಸುರಿ
ದಂತೆ ಸ್ವಲ್ಪಮಟ್ಟಿಗೆ ಶಾಂತವಾಯಿತು.
            ------
೪೫-------------------------------------------------------------------------
            ಒಂಬತ್ತನೆಯ ಪ್ರಕರಣ.
            
ಲಗ್ನಕ್ಕೆ ಬೇಕಾದ ಸಕಲ ಸ೦ಭಾರಗಳೂ ಸಿದ್ದವಾದವು, ನಾಂದಿಗ್ರಹ
ಯಜ್ಞಗಳಾಗುವ ದಿನ ಬೆಳಗ್ಗೆ ಹತ್ತು ಘಂಟೆ, ಪುಣ್ಯವಶಾತ್ ಭ್ರಮ
ರಾಂಬೆಯ ಪತಿಸಮೇತಳಾಗಿ ಬಂದಿಳಿದಳು. ಆಗ ಇಂದಿರೆಯ ಮನಸ್ಸು
ಶಾಂತವಾಯ್ತು. ಲೋಕದಲ್ಲಿ ಸುಖದುಃಖಗಳ ವೇಳೆಗಳಲ್ಲಿ ಆಪ್ತರೂ ಅನು
ಬಂಧಿಗಳೂ ಸಮೀಪದಲ್ಲಿರಲೇಬೇಕೆಂಬರು. ಯಾಕೆಂದರೆ, ಇವರ ಸಾನ್ನಿ
ಧ್ಯದಿಂದ ಸುಖಸಂತೋಷಗಳು ಹೆಚ್ಚುವುವು. ಮತ್ತು ದುಃಖವು ತಗ್ಗು
ವುದು. ಉಪನಯನಲಗ್ನವು ವಟುವಿಗೆ ಶ್ರೇಯಸ್ಕರವಾದೊಂದು ಶುಭಕರ್ಮ.
ಇಂತಹ ಸಂತೋಷಸಮಯದಲ್ಲಿ ತಮ್ಮ ಸಾಕ್ಷಾತ್ ಮಗಳೇ ಬಾರದಿದ್ದರೆ
ಮನಸ್ಸಿಗಸಮಾಧಾನವಾಗುವುದು ಸ್ವಾಭಾವಿಕವೇ. ಇಂದಿರೆಯಾದರೂ
ಮಗಳನ್ನು ಬಿಟ್ಟು ನಡೆಸಿದರೆ ಮುಂಜಿಯಕರ್ಮವೇ ಸಾಂಗವಾಗದೆ ಲೋಪ
ದೋಷಯುಕ್ತವಾಗುವುದೆಂದು ನಂಬಿದಳು. ಈಗ ಈಕೆಗುಂಟಾದ ಆನಂದ
ಕ್ಕೆಣೆಯೇ ಇಲ್ಲ.
 
ಇಂದು ಐವರು ಬ್ರಾಹ್ಮಣರಿಗೆ ಮಾತ್ರ ಆಹ್ವಾನ. ಶುಕ್ಲ ವೃತ್ತಿಯ
ನರಹರಿಜೋಯಿಸನೂ ಭೋಜನಮಾತ್ರಕ್ಕೆ ಪುರಸ್ಕಾರವನ್ನು ಪಡೆದನು.
ಪೌರೋಹಿತ್ಯದ ವಿಚಾರವನ್ನೆ ಪ್ರಸ್ತಾಪಿಸದಿದ್ದುದು ಈತನಿಗೆ ಕೇವಲ
ಕೋಪಾವಹವಾಯಿತು. ಆದುದರಿಂದ ಅಲ್ಲಿಗೆ ಭೋಜನಕ್ಕೆ ಹೋಗುವ
ದಕ್ಕೂ ಮನಸ್ಸಿಲ್ಲ. ಬಿಡುವುದೆಂದರೆ ಬಾಯನೀರು ಕರೆಯುತ್ತಿರುವುದು.
ಏನು ಮಾಡಬೇಕು! ಆದರೂ ಪೌರೋಹಿತ್ಯಕ್ಕೆ ತನ್ನ ಮಾತಿಲ್ಲದೆ ಯಾವ
ಗಂಡು ಬರುವನೋ? ನೋಡೋಣವೆಂದು ಅದನ್ನು ಪರೀಕ್ಷಿಸುವುದಕ್ಕಾಗಿ
ಯೂ ಹೋದನು ಗುಡಿಯಲ್ಲಿ ದಿವ್ಯವಾದ ತಳಿರತೋರಣ, ಮತ್ತು
ಚೆಲುವಾದ ಚಪ್ಪರ ಸಿದ್ದವಾದುವು, ಆದರೆ ಓಲಗದ ಸದ್ದೇ ಇಲ್ಲ, ಒಳಗೆ
ಬಂದು ನೋಡುವ ಗಂಗಾರಾಮನ ಪೌರೋಹಿತ್ಯ, ಮಹಾವಿದಿಯಾಗಿ
ಕರ್ಮವು ನಡೆಯುತ್ತಿರುವದು ತಾಯ್ತಂದೆಗಳ ವಟುವೂ ಹಸೆಯಮೇಲೆ
ಕುಳಿತಿರುವರು ಹಿಂದೆಹೇಳಿದ ಬ್ರಾಹ್ಮಣರು, ಸುಮಂಗಲಿಯರು ಇವರೆಲ್ಲ
ಸಭಿಕರು. ನವಗ್ರಹಧಾನ್ಯದಾನವನ್ನು ಮಾಡುವಾಗ ಶನಿಪ್ರೀತಿಕರವಾದ
೪೬-----------------------------------------------------------------------
 
ಎಳ್ಳೂ, ಮೃತ್ಯುಂಜಯಪ್ರೀತಿಕರವಾದ ಉಪ್ಪೂ ಈಜೊಯಿಸನಿಗೆ ಕೊಡಲ್ಪ
ಟ್ಟವು, ಈತನಿಗೆಂತಹ ದುರ್ದಾನವಾದರೂ ಹೆಚ್ಚು ದಕ್ಷಿಣೆಬಂದರೆ ತೃಪ್ತಿ.
ಇದನ್ನು ಹಲವರು ಬಲ್ಲರು. ಆದರೂ ಈ ಜೋಯಿಸನ ಮನಸ್ಸು ಇಷ್ಟಕ್ಕೇ
ತೃಪ್ತವಾಗುವಂತಹ ಅಲ್ಪವಲ್ಲ, ತನಗೆ ಪೌರೋಹಿತ್ಯವು ಸಿಕ್ಕಲಿಲ್ಲ, ಓಲಗ
ದವರ ದಳ್ಳಾಳಿಯ ದೊರೆಯಲಿಲ್ಲ ಎಂದು ಬಹಳ ವ್ಯಸನಪಟ್ಟನು. ಇಂದಿನ
ಯಾಜ್ಞೆಕವೆಲ್ಲಾ ಮುಗಿದಿತ್ತು ಮುತ್ತೈದೆಯರು ಮಂಗಳಸ್ವರದಿಂದ
ಹಾಡುಗಳನ್ನು ಹೇಳುತ್ತ ಆರತಿಯನ್ನೆತ್ತಲು ಬಂದರು. ಕುಚೇಷ್ಟೆಯಿಂದ
ಮುಂಜಿಯ ಮನೆಯವರನ್ನು ಅವಮಾನಗೊಳಿಸಲು ಇದೇ ಸಮಯವೆಂದು
ಈ ಜೋಯಿಸನು ಗಟ್ಟಿಯಾಗಿ " ಯಾರೋ ಅಲ್ಲಿ, ಓಲಗಮಾಡಿರೋ "
ಎಂದನು. ಚತುರನಾದ ವಟುವು ಧಟ್ಟ ನೆ " ಜೋಯಿಸರೆ, ಅಡಿಗೆಯಾ
ಗಿದೆ. ಇನ್ನೇನು ಎಲೇ ಹಾಕುತ್ತಾರೆ. ಕೂಗಿಕೊಳ್ಳಬೇಡಿ" ಎಂದನು.
ಜೋಯಿಸನು ತಲೆಯನ್ನು ತಗ್ಗಿಸಿದನು. ಸರ್ವರಿಗೂ ಸಕಾಲದಲ್ಲಿ ಮೃಷ್ಟಾನ್ನ
ಭೋಜನವಾಯ್ತು .

ಮಾರನೆಯದಿನ ಉಪನಯನಮಹೂರ್ತ. ಸಮಿಧೆ, ಅಕ್ಕಿ, ತುಪ್ಪ,
ಹಿಟ್ಟು, ಯಜ್ಞೋಪವಿತ, ದರ್ಭೆಮೊದಲಾದವೆಲ್ಲಾ ಅಣಿಯಾದವು. ಚೌಲ
ಪಙ್ತಿಯ ಭೋಜನಕ್ಕೊಸ್ಕರ ಪಂಚಭಕ್ಷ್ಯಗಳ ಅಡಿಗೆಯು ಸಿದ್ದವಾಯ್ತು.
ಮಾತಾಪಿತೃಗಳ ವಟುವೂ ಮಂಗಳಸ್ನಾನವಾದನಂತರ ಯಜ್ಞವೇದಿಕೆ
ಯನ್ನೇರಿದರು. ಆಚಾರ್ಯ ಪದವಿಯನ್ನಲಂಕರಿಸಿದ ಗಂಗಾರಾಮನು ಋತ್ವಿ
ಕ್ಕುಗಳೊಡನೆ ಯಜ್ಕಕ್ಕೆ ಪ್ರಾರಂಭಿಸಿದನು. ಪ್ರತಿಯೊಂದು ಸಂದರ್ಭ
ದಲ್ಲೂ ರಾಮಚಂದ್ರನು, ಹಾಗೆಂದರೇನು, ಇದನ್ನೇಕೆ ಮಾಡಬೇಕು ಎಂದು
ಆಚಾರ್ಯನನ್ನು ಪ್ರಶ್ನಿಸುತ್ತಾ ಬಂದನು. ಅದಕ್ಕಾತನು ಆಗಲೆ: ಉತ್ತರ
ಗಳನ್ನು ಹೇಳುತ್ತಾ ಹೋದರೆ ಸಕಾಲಕ್ಕೆ ಲಗ್ನ ಸಾಧನೆಯಾಗುವುದು ಕಷ್ಟ
ವೆಂದೂ ಬಳಿಕ ಎಲ್ಲವನ್ನೂ ವಿವರಿಸುವುದಾಗಿಯೂ ಹೇಳಿದನು. ತರುವಾಯ
ಚೌಲ, ಕಂಕಣಬಂಧನ, ಹವನಹೋಮಗಳು ನಡೆದವು. ಯಜ್ಞೋಪವೀತ
ದಾನಧಾರಣೆಗಳ ಸಮಯ. ಇನ್ನು ಪುನಃ ಅಲ್ಲಿಗೆ ಹೋಗಲೇಬಾರದೆಂದು
ಹಿಂದಿನ ದಿನವೇ ಮನದಲ್ಲಿ ಶಪಥಮಾಡಿಕೊಂಡಿದ್ದ ಜೊಯಿಸನು ಮತ್ತೆ
ಚಾಪಲ್ಯದಿಂದ ದಾನದಕ್ಷಿಣೆಗಳನ್ನಾದರೂ ಪಡೆಯೋಣವೆಂದೂ ಚಿನ್ನದ
೪೭------------------------------------------------------------------------

ಜನಿವಾರದ ವಿಷಯವೇನಾಯ್ಕ ತಿಳೆಯಬೇಕೆಂದೂ ಬಂದನು ಲಗ್ನದ
ವೇಳೆಗೆ ಸಭಾಪೂಜೆಗೆ ಬರಬೇಕೆಂದು ಆ ಗ್ರಾಮದ ಸಭಾಮಂಡಳಿಗೆಲ್ಲಾ
ಸಭಾಮುದ್ರೆಯಮೂಲಕ ಹೇಳಿಕಳುಹಿಸಿದ್ದರು. ಅನೇಕರು ಬರಲಿಲ್ಲ.
ಮೊದಲನೆಯದಿನ ಕರೆಯಲ್ಪಟ್ಟಿದ್ದವರು ವಿನಾ ಉಳಿದವರೆಲ್ಲಾ ಎಂಟು ಹತ್ತ
ಕ್ಕಿಂತ ಹೆಚ್ಚಾಗಿರಲಿಲ್ಲ, " ಊಟಕ್ಕೆ ಕೂಡ ಕರೆಯಲಿಲ್ಲ, ಬರೀ ಎಲೆಯ
ಡಕೆ ಮೂರುಕಾಸು ದಕ್ಷಿಣೆಯ ಆ ಮಹಾಸಂಸತ್ತಿನ ಮುಂಜಿಗೋಸ್ಕರ
 ಅಷ್ಟು ದೂರಹೋಗುವವರಾರು? ” ಎಂದು ಕೆಲವರೂ, " ಆ ಪರದೇಶಿ
ಮುಂಜಿಗೇಕೆ ಹೋಗಬೇಕು, ಹೊಟ್ಟೆ ತುಂಬ ಸುಖವಾದ ಊಟವಿಲ್ಲ. ಕೈ
ತುಂಬ ದಕ್ಷಿಣೆಯಿಲ್ಲ,'' ಎಂದು ಕೆಲವರೂ, " ಮುಯೊಡಿಸುವುದೇ
ತಪ್ಪಿತು,'' ಎಂದು ಕೆಲವರೂ, ಊರಿಗುಂಟಾದ ದೊಡ್ಡ ಮನುಷ್ಯ, ನಮ್ಮ
ನ್ನೆಲ್ಲಾ ಊಟಕ್ಕೆ ಕರೆಯದೆ ಮು೦ಜೆಮಾಡುವನಂತೆ ಏನು ಲಕ್ಷಣವೊ !
ಎಂದು ಕೆಲವರೂ, 'ಲಕ್ಷಣವಾಗಿ ಅಗ್ರಹಾರದ ಬ್ರಾಹ್ಮಣರನ್ನೆಲ್ಲಾ ಕರೆದು
ಬ್ರಹ್ಮ ಭೋಜನವನ್ನು ಮಾಡಿಸದಿದ್ದರೆ ಅದೆಂತಹ ಬ್ರಹ್ಮೋಪನಯನ!"
ಎಂದು ಕೆಲವರೂ ಹೀಗೆ ಬಗೆಬಗೆಯಾಗಿ ಆಕ್ಷೇಪಿಸುತ್ತಲೂ ಚರ್ಚಿಸುತ್ತಲೂ
ಅಗ್ರಹಾರದ ಬ್ರಾಹ್ಮಣರಲ್ಲನೇಕರು ಮರಮುದ್ರೆ ಶಿವದತ್ತ ಶೇಖರನ ಬಳಿಗೆ
ಹೋಗಿ ಬಹಳವಾಗಿ ಆರ್ಭಟಿಸಿದರು. ಆತನಿಗಿಗ ಹತ್ತು ಜನರ ಆಕ್ಷೇಪ
ಣೆಯೂ ಒತ್ತಾಸೆಯಾಗಲು "ಏನುಸ್ವಾಮಿ ಈ ಅನ್ಯಾಯ! ಮಠಕ್ಕೆ ಪ್ರತಿನಿಧಿ,
ಮುಮ್ಮನುಷ್ಯ, ಇಂತಹ ನನಗೆ ಒಂದು ತುತ್ತು ಅನ್ನವಿಲ್ಲ, ಪಂಗನಾಮ !
ಅಲ್ಲ, ಕ್ಷಮಿಸಿ, ಆವನ ಮನೆಯ ಅನ್ನಕ್ಕೆ ನಾನೇನು ಗತಿಗೆಟ್ಟಿದ್ದೇನೆಯೆ ?
ಮರ್ಯಾದೆಗೆ, ಏನು ಮಹಾವಿಷಯ ? ಇರಲಿ, ಒಳ್ಳೆಯದು, ಅವನು
ಮಂಜಿಯನ್ನು ಮಾಡಲಿ, ನನ್ನ ಮಠಮುದ್ರೆತನದ ಕೈವಾಡವನ್ನು ತೋರಿ
ಸುವೆನು, ಇನ್ನು ಎಂಟು ದಿನಗಳೊಳಗಾಗಿ ಅವನ ಗತಿ ಏನಾಗುವುದೋ?
ನೋಡುವಿರಂತೆ !'' ಎಂದನು, ಅಷ್ಟರಲ್ಲೆ : ಚತುರ್ವೇದಿಯೆಂಬಾತನು
ಬಂದು "ಸ್ವಾಮಿ, ಸೀತಾಕಾಂತನೇನು ಮಾಡಬಲ್ಲ ಪಶುಪ್ರಾಣಿ. ಇದೆಲ್ಲಾ
ಆ ಮನೆಹಾಳ ಮಾರೀಚನಾದ ಗಂಗಾರಾಮನ ಕರ್ಕೊಟಕತನ. ಆ
ಪಾಪಿಯು ಈ ವೂರಿಗೆ ಬಂದುದಂದಿನಿಂದಲೂ ಅಗ್ರಹಾರದ ಕಟ್ಟು
ಖಾಯದೆಗಳೆಲ್ಲಾ ಸಡಿಲವಾದುದಲ್ಲಾ! ಮುಂದೇನಗತಿ ! ಹೇಗಾದರೂ
೪೮-----------------------------------------------------

ಆ ದುರುಳನನ್ನು ಆಹುತಿತಗೆದುಕೊಳ್ಳಬೇಕು,” ಎಂದನು, ಇನ್ನು ಕೆಲವರು
" ಯಾರೋ ತಮಗೆ ಬೇಕಾದ ಕೆಲವು ಮನೆಗಳವರನ್ನು ಊಟಕ್ಕೆ ಕರೆದಿರು
ವರಂತೆ, ಹಾಗೆ ಊಟಕ್ಕೆ ಹೋಗಿರತಕ್ಕವರಿಗೂ ಪ್ರಾಯಶ್ಚಿತ್ತವಾಗಬೇಕು?'
ಎಂದು ಆರ್ಭಟಿಸಿದರು. ಮಠಮುದ್ರೆ- ಆಗಲಿ, ನಾನಂತೂ ಹೋಗು
ವುದಿಲ್ಲ. ನಾನು ಹೋಗದಿದ್ದರೆ ಸಭಾಪೂಜೆಯೆ ಇಲ್ಲ ಅಂತಹ ಕಡೆ
ಅನ್ನಾ ತಿಂದವರು, ಲಗ್ನವನ್ನು ಮಾಡಿಸಿದವನು, ಪ್ರಸ್ತದ ಯಜಮಾನ,
ಎಲ್ಲರೂ ಬಯಲಿಗೆ ಬರಬೇಡವೆ? ನೊಡುವಿರಂತೆ ಅದರ ಮಝ!'' ಎಂದು
ಗರ್ಜಿಸಿದನು. ಇನ್ನೊಬ್ಬನು “ ಅಯ್ಯೋ ಪಾಪ, ಅವನನ್ನೇತಕ್ಕೆ
ಗೋಳಾಡಿಸುವಿರಿ? ಇಲ್ಲಿ ಲಗ್ನ ಮಾಡಲು ಚೈತನ್ಯ ಸಾಲದು, ಸೀತಾಕಾಂತನು
ದೇವತಾಸನ್ನಿಧಿಯೆಂಬ ಕುಂಟುನೆಪವನ್ನು ಹೇಳಿ ಹೇಗೋ ಕಾಲವನ್ನು
ತಳ್ಳುವನಪ್ಪ, ವೃಥಾ ಏಕೆ ಆಕ್ಷೇಪಿಸುವಿರಿ ?” ಎನು ಪುನಃ ಮಠಮುದ್ರೆ
ರೇಗಿ ' ಆ, ಏನೆಂದೆ ? ಆಕ್ಷೇಪಣೆಯೆ ? ಅಷ್ಟರಲ್ಲೇ ಪರ್ಯವಸಾನವೆ ?
ನೋಡು, ಬಹಿಷ್ಕಾರ ಹಾಕಿಸದಿದ್ದರೆ ನಾವೇತಕ್ಕಾದೇವು ? ನಮ್ಮಲ್ಲೆಲ್ಲಾ
ಆವನು ಒ೦ದು ಗದುಕುವದಿಲ್ಲವೆ ? ಗತಿಯಿಲ್ಲದಿದ್ದರೆ ಸಾಲಾಮಾಡಲಿ
ಮನೆಬಾಗಿಲು ಯಾಲಾ ಹಾಕಲಿ, ನಮಗೇನಂತೆ!” ಎಂದು ಗಟ್ಟಿಯಾಗಿ
ಕೂಗಿಕೊಂಡನು.

ಹೀಗೆ ಚರ್ಚೆಯಾಗುತ್ತಲಿದೆ, ಇಷ್ಟರಲ್ಲೇ ನರಹರಿಜೋಯಿಸನು ಬೆಟ್ಟ
ದಿಂದ ಬಂದು ಇವರ ಜತೆಗೆ ಸೇರಿಕೊಂಡು “ಏನು ಸ್ವಾಮಿ ! ಏನುಲಗ್ನ "
ಓಲಗಿದವರೇ ಇಲ್ಲ. ಹೀಗುಂಟಿ ? ನೀವೆಲ್ಲಾ ಅಲ್ಲಿಗೆ ಹೋಗಿದ್ದೀರೇನೋ  
ಎಂದು ನಾನು ಅಲ್ಲಿಗೆ ಹೋಗಿದ್ದೆ, ಏನೂ ಸ್ವಾರಸ್ಯವಿಲ್ಲ ಕಾಣಿರಿ, ನನಗೂ
ಆರುಕಾಸು ಒಂದು ಜನಿವಾರ ಕೈಲಿಕ್ಕಿದರು. ನಾನವರ ಮನೆಗೆಷ್ಟು
ಕಷ್ಟ ಪಟ್ಟಿದೇನೆ ಗೊತ್ತೆ? ಯಾರಮನೆಗೆ ತಪ್ಪಿದರೂ ಅವರ ಮನೆಗೆ ನಿತ್ಯವೂ
ನಿತ್ಯಾತ್ರೆಗೆ ತಪ್ಪೆನು, ಮತ್ತು ಮುಂಜಿಯ ವಿಷಯವನ್ನು ಪದೇ ಪದೇ
ವಿಚಾರಿಸುತ್ತಲೇ ಇದ್ದೆನು. ನೆಚ್ಚಿ ದೆಮ್ಮೆ ಕೊಣನದಂತಾಯಿತು.
ಧರ್ಮವೇ ಜಯ. ಇನ್ನೊಂದು ವಿಷಯ, ನೋಡಿರಿ, ಮಠದ ಪ್ರತಿನಿಧಿ
ಗಳಾದ ಮಹನಿಯರನ್ನು ಬಿಟ್ಟು ಸಭಾಪೂಜೆ ಮಾಡಿಬಿಟ್ಟರಲ್ಲಾ ! ಎಷ್ಟು
ಧೈಯ್ಯ! ನಮ್ಮ ನರಷೀಯಾಚಾರ್ರು, ಶರಕೋಪಯ್ಯಂಗಾರ್ರು ಇಲ್ಲದಿದ್ದರೂ
೪೯--------------------------------------------------------------------------

ಮತತ್ರಯದ ತಾಂಬೂಲವನ್ನೆತ್ತಿ ಬಿಟ್ಟರಲ್ಲಾ ! ಇಂತಹ ಅನ್ಯಾಯವುಂಟೆ?
ಅಯ್ಯೋ ! ಕಾಲಕೆಟ್ಟುಹೋಯಿತು '' ಈರೀತಿಯಾಗಿ ಬಹಳ ಹೊತ್ತಿನ
ವರೆಗೂ ಆಕ್ಷೇಪಣೆಗಳೂ ಚರ್ಚೆಗಳೂ ಬಗೆಬಗೆಯಾಗಿ ನಡೆದುವು. ಕಡೆಗೆ
ಅಗ್ರಹಾರಿಕರಲ್ಲಾ ಸೀತಾಕಾಂತನ ಮನೆಯವರನ್ನೂ ಆ ಉಪನಯನಕ್ಕೆ
ಹೋಗಿದ್ದ ಬ್ರಾಹ್ಮಣರೆಲ್ಲರನ್ನೂ ಸವ್ಯವಹಾರಕ್ಕೆ ಸೇರಿಸಕೂಡದೆಂದು ಕಟ್ಟು
ಮಾಡಿಬಿಟ್ಟರು. ಇದನ್ನ ನುಮೋದಿಸುವುದರಲ್ಲಿ ನಮ್ಮ ನರಹರಿಜೋಯಿಸನೂ
ಅಗ್ರಗಣ್ಯನೆಂಬುದನ್ನು ನಾವರಿತೆ ಇರುವೆವು.
 
ಅತ್ತ ಉಪನಯನಮುಹೂರ್ತವ, ಸುಲಲಿತವಾಗಿ ನೆರವೇರಿತು.
ಘಂಟಾನಾದದ ಶುಭವಾದ್ಯಧ್ವನಿಯ ಜತೆಯಲ್ಲಿ ತಂದೆಯಿಂದ ಬ್ರಹ್ಮೋ
ಪದೇಶವೂ ಆಯಿತು, ದೀಕ್ಷಾವಸ್ತ್ರಕ್ಕೆ ಅರಿಸಿನದ ಪಂಚೆ, ಮೌಂಜೀಮೇಖಲೆ,
ಪಲಾಶದಂಡ, ಕೃಷ್ಣಾಜಿನದ ತುಂಡು, ಗೋಪೀಚಂದನ ಇ೦ತಹ ಶಾಸ್ತ್ರೋ
ಕ್ತ ವಸ್ತುಗಳ ಕೊರತು ಜೋಮಾಲೇಸರ, ಕಾಲ್ಗಡಗ ಮೊದಲಾದ ಸ್ತ್ರೀಯರ
ಯಾವ ಮುದ್ದಿನ ಒಡವೆಗಳನ್ನೂ ವಟುವಿಗಲಂಕರಿಸಿಲ್ಲ. ಆದರೂ ಅವನ
ಮುಖದಲ್ಲಿ ದಿವ್ಯವಾದ ವರ್ಚಸ್ಸು ಶೋಭಿಸುತ್ತಿದ್ದಿತು. ಮಾತೃಭಿಕ್ಷವಾದ
ನಂತರ ಇತರ ಸುಮಂಗಲಿಯರು ಬಂದು ಭಿಕ್ಷವನ್ನು ನೀಡಿದರು. ಬೆಳ್ಳಿಯ
ಬಟ್ಟಲಿಲ್ಲದೆ ಸಾಮಾನ್ಯವಾದ ಹಿತ್ತಾಳೆ ಒಟ್ಟಲ್ಲೇ ಭಿಕ್ಷವನ್ನೆತ್ತಿದು
ದಾಯ್ತು. ಕರ್ಮಕ್ಕೆ ಈಷತ್ತೂ ಲೋಪವಿಲ್ಲ, ಶಾಸ್ತ್ರೋಕ್ತರೀತಿಯಿಂದ
ಎಲ್ಲವೂ ಸಾಂಗವಾಗಿ ಸಾಗಿತು. ಇಷ್ಟಕ್ಕೂ ಉಚಿತಜ್ಞನೂ ವಿದ್ವಾಂಸನೂ
ಆದ ಗಂಗಾರಾಮನ ಸಲಹೆಗಳು ಸೀತಾಕಾಂತನ ದೃಢಪ್ರತಿಜ್ಞೆ, ಹುಡು
ಗನ ತಿಳಿವಳಿಕೆ ಇವೇ ಮುಖ್ಯ ಕಾರಣಗಳು. ಈ ಶುಭಕರ್ಮವು ಮಂತ್ರದಲ್ಲಿ
ಚಾಚೂತಪ್ಪದೆ ಲಕ್ಷಣವಾಗಿ ನಡೆದುದನ್ನು ನೋಡಿ ಇಂದಿರೆಯು ಕಡೆಗೆ
ಬಾಗಿನದ ಯೋಚನೆಯನ್ನು ಕೂಡ ಬಿಟ್ಟು ಬಿಟ್ಟಳು. ಇಲ್ಲಿ ಸೇರಿದ್ದ ಸ್ತ್ರೀಯ
ರಲ್ಲಾ ಗಂಗಾರಾಮನ ಮತ್ತು ಅವನಂತೆಯ ಸ್ವಭಾವವುಳ್ಳ ಕೆಲವರ
ಸ್ತ್ರೀಯರಾದುದರಿಂದ ಇತರರಂತೆ ಕೆಲಸಕ್ಕೆ ಬಾರದ ಹರಟೆಗಳಿಂದ ಕುಚೇ  
ಷ್ಟೆಯ ಮಾತುಗಳನ್ನಾಡುವುದು ದೂರುವುದು ಇಂತಹ ದುಶ್ಚೇಷ್ಟೆಗಳಿಗವ
ಕಾಶವಿರಲಿಲ್ಲ. ಕ್ಲುಪ್ತವಾಗಿ ಆಹ್ವಾನಗೊಂಡಿದ್ದ ಬ್ರಾಹ್ಮಣರಿಗೂ ಸುಮಂ
ಗರಿಯರಿಗೂ ಸಕಾಲಕ್ಕೆ ಸುಖಭೋಜನಸಂತರ್ಪಣೆ ನಡೆಯಿತು. ನಾಲ್ಕ
೫೦----------------------------------------------------------------------
 
ನೆಯದಿನ ಸ್ತಂಭಬಲಿಯ ಕರ್ಮವೂ ಸುಖವಾಗಿ ಸಾಗಿತು. ಹಿಂದೆಹೇಳಿದಂತೆ
ಮೆರೆವಣಿಗೆಯಲ್ಲಿ ತಾಳ, ಮೇಳ, ವಾಹನ, ಪರಿವಾರ, ಮೊದಲಾದ ಆಡಂ
ಬರವೇನೂ ಇಲ್ಲ. ಶ್ರೇಷ್ಠವಾದ ವೇದಘೋಷ ಮತ್ತು ಇಂಪಾದ ಸುಮಂ
ಗಲಿಯರ ಮಂಗಳಗಾನ, ಇವು ಚೆನ್ನಾಗಿ ಶೋಭಿಸಿದವು. ಮಾರನೆಯದಿನ
ಬೆಟ್ಟದಮೇಲೆಯೇ ಸ್ವಲ್ಪಮಟ್ಟಿಗೆ ವಿನೋದವಿಶ್ರಾಂತಿಗಳಿಂದ ಕಳೆದು
ಸಂಜೆಯ ವೇಳೆಗೆ ಸರ್ವರೂ ಸುಖವಾಗಿ ಊರಿಗೆ ಬಂದು ಸೇರಿದರು.
                ----
                
ಹತ್ತನೆಯ ಪ್ರಕರಣ.

ಗಂಗಾರಾಮನು ನಿತ್ಯವೂಬಂದು ವಟುವಿಗೆ ತ್ರಿಕಾಲrಳಲ್ಲ ಸಂಧ್ಯಾ
ವಂದನೆಯನ್ನೂ ಸಾಯಂಪ್ರಾತಃಕಾಲಗಳಲ್ಲಿ ಅಗ್ನಿ ಕಾರ್ಯವನ್ನೂ ಮಾಡಿಸು
ತ್ತಿದ್ದನು. ಈ ವಟುವು ಜಂಬಗಾರನೂ ಶಾಸೋಕ್ತಕರ್ಮಗಳಲ್ಲುದಾಸೀನನೂ
ಅಲ್ಲ, ಮತ್ತು ಪ್ರತಿಯೊಂದಕ್ಕೂ ಕಾರಣವನ್ನು ಕೇಳತಕ್ಕ ಸ್ವಭಾವದ
ವನು. ಒಂದು ದಿನ ಬೆಳಿಗ್ಗೆ ರಾಮಚಂದ್ರನು ವೇದವನ್ನು ಹೇಳಿಕೊಡೆಂದು
ಗಂಗಾರಾಮನನ್ನು ಕೇಳಿದನು. ಅದಕ್ಕಾತನು-- "ಅಯ್ಯ, ನಿನಗೆ ಮೊದ
ಲುಪಾಲಕರ್ಮವಾಗಬೇಕು. ಬಳಿಕ ವೇದಾಧ್ಯಯನಕ್ಕಧಿಕಾರ, ಈಗ್ಗೆ ಅಗ್ನಿ
ಕಾರ್ಯವೊಂದೇ ಸಾಕು.” ಎಂದನು.

ಸಂಧ್ಯಾವಂದನೆಯನ್ನೇಕೆ ಮಾಡಬೇಕು ?

ಮಗು, ಇದು ಬಹಳ ದೊಡ್ಡ ಪ್ರಶ್ನೆ, ಅಂದರೆ ದೊಡ್ಡ ಉತ್ತರವುಳ್ಳ
ಪ್ರಶ್ನೆ. ಆದರೂ ಸದ್ಯಕ್ಕೆ ನಿನಗೆ ತಿಳಿಯುವಮಟ್ಟಿಗೆ ಹೇಳುವೆನು ಕೇಳು.
ನಮ್ಮ ದೇಹವು ಅಥವಾ ಇಡೀ ಪ್ರಪಂಚವೇ ಭೂಮಿ, ನೀರು, ತೇಜಸ್ಸು ,
ಗಾಳಿ, ಆಕಾಶ ಎಂಬ ಪಂಚಭೂತಗಳಿ೦ದ ಆಗಿದೆಯಷ್ಟೆ. ಈ ಪಂಚಭೂತ
ಗಳ ಅಭಿಮಾನದೇವತೆಗಳನ್ನು ಆರಾಧಿಸುವದು ಶ್ರೇಯಸ್ಕರ. ಸಂಧ್ಯಾವಂ
ದನೆ, ಆಸನಶುದ್ದಿ ಮಂತ್ರ, ಆಚಮನ, ಅರ್ಘ್ಯ, ಸೂರ್ಯೋಪಸ್ಥಾಾನ, ಪ್ರಾಣಾ
ಯಾಮ ಇತ್ಯಾದಿಗಳಿಂದ ಈ ಆರಾಧನೆಯು ನಡೆಯುವುದು,

ಸಂಧ್ಯಾವಂದನೆಯನ್ನು ಇಂತಿಂತಹ ವೇಳೆಯಲ್ಲೇ ಮಾಡಬೇಕೆಂ
ಬುದೇತಕ್ಕೆ ?
೫೧-------------------------------------------------------------------------------
 
ದೇವರನ್ನು ಬ್ರಹ್ಮ, ವಿಷ್ಣು, ಈಶ್ವರ ಎಂಬ ತ್ರಿಮೂರ್ತಿಗಳ ರೂಪ
ದಲ್ಲಿ ಸೇವಿಸುವರು. ಸೂರ್ಯನು ಬೆಳಗ್ಗೆ ಬ್ರಹ್ಮನಾಗಿಯೂ ಮಧ್ಯಾಹ್ನ
ಈಶ್ವರನಾಗಿಯೂ ಸಂಜೆಯಲ್ಲಿ ವಿಷ್ಣು ವಾಗಿಯೂ ಹೀಗೆ ತ್ರಿಮೂರ್ತಿಸ್ವರೂಪಿ
ಯೆಂದು ನಂಬಿ ನಮ್ಮವರು ಈ ಮೂರು ವೇಳೆಗಳಲ್ಲೂ ಸೂರ್ಯಾರಾಧನೆ
ಯಾದ ಸಂಧ್ಯಾವಂದನೆಯನ್ನು ಮಾಡುವೆವು.
 
ಹಾಗಾದರೆ ಗಾಯತ್ರಿಯೆಂಬುವದಾವುದು ?

ಸೂರ್ಯನಲ್ಲಿರುವ ದೇವತಾಶಕ್ತಿಯನ್ನೇ ಗಾಯತ್ರಿ, ಸಾವತಿ,
ಸಂಧ್ಯಾ ಎಂದು ಪ್ರಾರ್ಥಿಸುವೆವು.

ಹಾಗಾದರೆ ಸಂಧ್ಯಾವಂದನೆಯೆಂದರೆ ಸೂರನನ್ನು ನಿತ್ಯವೂ ವಂದಿ
ಸುವದೆಂದರ್ಧವೊ ? ನಾವು ಈ ಹಳ್ಳಿಯ ಶಾಲೆಯಲ್ಲೊದುತ್ತಿದ್ದಾಗ
ನಿತ್ಯ ವೂ ಸಾಯಂ ಪ್ರಾತಃಕಾಲಗಳಲ್ಲಿ ಹಾಡು ಹೇಳಿಕೊಂಡು ಸಂಧ್ಯಾವಂದನೆ
ಯನ್ನು ಮಾಡುತ್ತಲೇ ಇದ್ದೆವು. ಆದರೆ ಹೀಗೆ ಪಾತ್ರೆಗಳು ನೀರು ಬೇಕಾ
ಗಿರಲಿಲ್ಲ.

ಹಾಗಲ್ಲ, ಈಗ ನೀನು ಮಾಡುತ್ತಿರುವ ಸಂಧ್ಯಾ ವಂದನೆಯು ವೇದ
ವಿಹಿತವಾದುದು. ಇದರಲ್ಲಿ ವೇದಮಂತ್ರಗಳುಂಟು. ವೇದಮಂತ್ರಗಳಲ್ಲಿ
ಪ್ರಭಾವಹೆಚ್ಚು.

ಸಂಧ್ಯಾವಂದನೆ ಮಂತ್ರಗಳರ್ಥವೇನು ?

ಈಗ ನಿನಗದು ತಿಳಿಯುವುದು ಕಷ್ಟ. ನಿನಗೆ ಸಂಸ್ಕೃತಭಾಷೆಯು
ಬಾರದು.

ಮುಖ್ಯವಾಗಿ ಅದರ ಗುಟ್ಟನ್ನು ತಿಳಿಯಲು ನನಗೆ ಬಹಳ ಆಸೆಮಾವ.
ನಾನು ಸಂಸ್ಕೃತವನ್ನು ಓದಲೆ!
 
ಆಗಬಹುದು. ಭಾರತಭೂಮಿಯಲ್ಲಿ ಉತ್ತಮವಾದ ಆರ್ಯವಂಶದಲ್ಲಿ
ಹುಟ್ಟಿ ದೇವಭಾಷೆಯಾದ ಸಂಸ್ಕೃತವನ್ನು ಕಲಿಯದಿರುವುದು ನಮ್ಮ
ಕುಲಕ್ಕೂ ಜನಾಂಗಕ್ಕೂ ಹೀನಾಯವಲ್ಲವೆ? ನೀನು ಈ ರಜಾವಲ್ಲಿ ಇಲ್ಲಿರುವ
ಪರಿಯ೦ತ ನಾನು ಬೋಧಿಸುವೆನು ಮುಂದೆಯೊ?
 
(ಸ್ವಲ್ಪ ಯೋಚಿಸಿ) ಓಹೋ! ಸರಿ, ಅನುಕೂಲವೇ ಆಯ್ತು ಮಾವ .
೫೨ -----------------------------------------------------------------

ನಿನ್ನ ಬಳಿಯಲ್ಲಿ ಈ ಎರಡು ತಿಂಗಳೂ ಚನ್ನಾಗಿ ವ್ಯಾಸಂಗಮಾಡಿ ಮುಂದೆ  
ಐದನೆಯ ಇಯತ್ತೆಯಿಂದ ಸಂಸ್ಕೃತಭಾಷೆಯನ್ನೆ ಐಚ್ಛಿಕವನ್ನಾಗಿ ತೆಗೆದು
ಕೊಳ್ಳುವೆನು.

ಬಲು ಒಳ್ಳೇಯೋಚನೆ ಈಗಿನಿಂದ ಶಾಲೆಯ ಪಾಠಗಳಲ್ಲೇ ಸಂಸ್ಕೃತ
ವನ್ನು ಅಲ್ಪಸ್ವಲ್ಪವಾಗಿ ಓದಿಕೊಳ್ಳುತಿದ್ದರೂ ಮುಂದಕ್ಕೆಷ್ಟೋ
ಉಪಯೋಗ.
 
ಓಹೋ ! ಮರೆತಿದ್ದೆನು. ಅಗ್ನಿ ಕಾರ್ಯ. ಅನ್ಯಾಯವಾಗಿ ಹವನ
ವೆಂದೂ ಹೋಮವೆಂದೂ ಬೆಂಕಿಗೆ ತುಪ್ಪ ಮುಂತಾದುವನ್ನು ಸುರಿದು
ವ್ಯರ್ಧಪಡಿಸುವುದೇತಕ್ಕೆ ?

ಆಯ್ಯ, ಆಗ್ನಿಯ ಸೂರ್ಯನ ಸಂಸಾರಕ್ಕೆ ಸೇರಿದುದೇ. ಅವನು
ಮರೆಯಾಗುವ ರಾತ್ರಿ ವೇಳೆಯಲ್ಲಿ ನಮ್ಮ ಜ್ಯೋತಿಗೂ ಅಡಿಗೆ ಕೆಲಸಗ
ಳಿಗೂ ಅಗ್ನಿಯನ್ನುಪಯೋಗಿಸಿಕೊಳ್ಳುವೆವು. ಈಗಿನವರಂತು ಆವಿಯ
ಯಂತ್ರಗಳಿಗಾಗಿ ಅಗ್ನಿಯನ್ನು ಎಷ್ಟು ಮಟ್ಟಿಗೆ ಉಪಯೋಗಿಸುವರೆಂ
ಬುದು ಎಲ್ಲರಿಗೂ ಗೊತ್ತೆ, ಅಗ್ನಿಯ ಮಹಿಮೆಯು ಅತಿಶಯವಾದುದು.
ಇದನ್ನೂ ಮುಖ್ಯವಾದೊಂದು ದೇವತೆಯೆಂದಾರಾಧಿಸುವೆವು. ಮತ್ತು
ಇತರದೇವತೆಗಳಂತ್ತಲ್ಲದೆ ಇದು ತನಗೆ ಕೊಟ್ಟುದನ್ನು ತಕ್ಷಣವೇ ನಮ್ಮೆದು
ರಿಗೇ ಕಬಳಿಸಿಬಿಡುವುದು. ಆದುದರಿಂದಲೇ ಇತರದೇವತೆಗಳಿಗೆ ಸಮರ್ಪಿ
ಸುವ ಆಹುತಿಗಳನ್ನು ಅಗ್ನಿಯೇ ಆಯಾ ದೇವತೆಗಳಿಗೆ ಒಯ್ಯುವುದೆಂದು
ನಮ್ಮವರು ನಂಬಿ ಇತರದೇವತೆಗಳಿಗುದ್ದೇಶಿಸಿದ ಮಂತ್ರ ಪೂತವಾದ ಹವಿಸ್ಸು
ಗಳನ್ನು ಅಗ್ನಿಯಲ್ಲಿ ಅರ್ಪಿಸುವರು.

ಮಾವಯ್ಯ, ಇಂತಹ ಹೊಸಹೊಸ ಸಂಗತಿಗಳನ್ನು ತಿಳಿದಷ್ಟೂ ಮನ
ಸ್ಸಿಗೆಷ್ಟೋ ಹರ್ಷ.
 
ಅಯ್ಯ, ನಿನ್ನ ಪ್ರಶ್ನೆಗಳಿಗೆಲ್ಲಾ ಈಗ ನಾನು ಹೇಳಿದಷ್ಟೇ ಉತ್ತರವಲ್ಲ.
ಇನ್ನೂ ಬಹಳವುಂಟು. ನೀನು ವಯಸ್ಕನಾಗುತ್ತ ಹೆಚ್ಚು ಜ್ಞಾನವನ್ನು
ಪಡೆಯುತ್ತಾ ಬಂದಂತೆಲ್ಲಾ ಅವು ಚೆನ್ನಾಗಿ ವಿಶದಪಡುವುವು, ಸಂಸ್ಕೃತ
ಭಾಷೆಯನ್ನು ಕಲಿತಮೇಲೆ ಯತ್ನಿಸಿದರೆ ಇದೆಲ್ಲಾ ಕರತಲಾಮಲಕವಾಗಿ
ಗೊತ್ತಾಗುವುದು.
೫೩------------------------------------------------------
ರಾಮಚಂದ್ರನು ಬೇಸಗೆಯ ರಜಾಮುಗಿಯುವವರೆಗೂ ಸುಂದರ
ಗಿರಿಯಲ್ಲೇ ಗಂಗಾರಾಮನ ಬಳಿಯಲ್ಲಿ ಸಂಸ್ಕೃತವನ್ನು ವ್ಯಾಸಂಗಮಾಡು
ತ್ತಿದ್ದನು. ಬಳಿಕ ಅಮರಪುರಕ್ಕೆ ತೆರಳಿ ಸಂಸ್ಕೃತಭಾಷೆಯನ್ನೆ ಐಚ್ಚಿಕ
ವನ್ನಾಗಿ ತೆಗೆದುಕೊಂಡು ಓದುತ್ತ ಬ೦ದನು.
                ----
                
            ಹನ್ನೊಂದನೆಯ ಅಧ್ಯಾಯ.

ಉಪನಯನ ಮುಹೂರ್ತವು ನೆರವೇರಿದ ಹಲವು ದಿನಗಳ ಬಳಿಕ ಸುಂದರ
ಗಿರಿಯ ಅಗ್ರಹಾರಿಕರಲ್ಲಿ ಹಲವರು ಮತ್ತು ಮಠಮುದ್ರೆ ಈ ಎಲ್ಲರೂ ಸೇರಿ
ಒಂದು ದಿನ ಸೀತಾಕಾಂತನನ್ನೂ ಗಂಗಾರಾಮನನ್ನೂ ಕರೆಯಿಸಿದರು.
ಮಠ ಮುದ್ರೆಯೆ ಇಲ್ಲದೆ ಸಭಾಪೂಜೆಯನ್ನು ನಡೆಸಿದುದು ಮತತ್ರಯ
ದವರೆಲ್ಲರೂ ಸೇರದಿದ್ದಾಗ ಆ ತಾಂಬೂಲವನ್ನೆತ್ತಿದುದು, ಊರಿಗೆಲ್ಲಾ ಒಟ್ಟು
ಬ್ರಾಹ್ಮಣ ಸಂತರ್ಪಣೆ ಮಾಡಿಸದಿದ್ದುದು, ಈ ತಪ್ಪಿತಗಳ ಶಿಕ್ಷೆಗಾಗಿ ಈ
ಎರಡು ಮನೆಗಳವರನ್ನೂ ಸವ್ಯವಹಾರಕ್ಕೆ ಕರೆಯುವುದಿಲ್ಲವೆಂದು ಕಟ್ಟು
ಮಾಡಿಕೊಂಡಿರುವ ಸಂಗತಿಯನ್ನು ತಿಳಿಯಿಸಿದರು. ಸೀತಾಕಾಂತನು
ಕೇವಲಖಿನ್ನನಾಗಿ ಮೌನದಿಂದಿದ್ದನು. ಗಂಗಾರಾಮನಾದರೋ ಎದ್ದು
ನಿಂತು---ಧೈರ್ಯದಿ೦ದ '' ಏನ೦ದಿರಿ" ಯಾವುದನ್ನೂ ನಾವು ಅಕ್ರಮವಾಗಿ
ನಡೆಯಿಸಿಲ್ಲ. ಮಠಮುದ್ರೆಯ ತ್ರಿಮತಸ್ಸರೂ ದಯಮಾಡಿಸಬೇಕೆಂದು
ವಿನಯಪೂರ್ವಕವಾಗಿ ಮರ್ಯಾದೆಯಿಂದ ಹೇಳಿಕಳುಹಿಸಿದೆವು ತಾವು
ಗಳು ಬಾರದೆ ನಿರ್ದಯವಾಡಿದಿರಿ, ಆದರೂ ನಾವು ಹಾಗೆಬಾರದಿದ್ದವರ
ಮರ್ಯಾದೆಗಳನ್ನು ದೇವರ ಮುಡುಪಿನಂತೆ ಭದ್ರವಾಗಿಟ್ಟಿರುವೆವು. ಆದುದ
ರಿಂದ ನಾವು ಶಿಕ್ಷಾರ್ಹರಲ್ಲ. ಮತ್ತು ಹೀಗೆ ಸ್ಟೇಚ್ಛೆಯಾಗಿ ನಿಷ್ಕಾರಣವಾದ
ತಿರಸ್ಕಾರದಿಂದ ನಿರಪರಾಧಿಗಳಾದ ನಮ್ಮಗಳನ್ನು ದೂರೀಕರಿಸುವದಕ್ಕೆ
ನಿಮ್ಮಗಳಿಗಧಿಕಾರವೂ ಇಲ್ಲ. ಸರಿಯಾದ ವಿಚಾರಣೆಯಿಂದ ನಮ್ಮ ಮೇಲೆ
ತಪ್ಪುಹೊತ್ತರೆ ಆಗ್ಗೆ ನಮ್ಮನ್ನು ಶಿಕ್ಷಿಸುವದಕ್ಕೆ ಗುರುಪೀರಕ್ಕೆ ಮಾತ್ರ
ಅಧಿಕಾರವುಂಟು ಮಠಮುದ್ರೆಯವರು ಮರದ ಸೇವಕರೇ ಹೊರತು
ಮಠಾಧಿಪತಿಗಳಲ್ಲಿ ಇವರು ಶುಭಶೋಭನಾಕಾರ್ಯಗಳಿಗೆ ಸಕಾಲದಲ್ಲಿ  
೫೪--------------------------------------------------------------------
 
ಮಠದ ಪ್ರತಿನಿಧಿಯಾಗಿ ಬಂದುನಿಂತು ಅತ್ಯವಶ್ಯಕವಾಗಿ ಮಾಡಬೇಕಾದ
ಕೆಲಸವು ಮಂಗಳಾಶೀಳರ್ವಾದವು. ಹೀಗೆ ಮಾಡದಿರುವುದು ಇವರ ತಪ್ಪಿತ.
ಆದುದರಿಂದ ನಿಮ್ಮ ಈ ವಿಧವಾದ ತೀರ್ಪಿಗೆ ನಾವು ಬದ್ದರಾಗತಕ್ಕವರಲ್ಲ "
ಎಂದು ಖಚಿತವಾಗಿ ಹೇಳಿಬಿಟ್ಟನು. ಬಳಿಕ ಸೀತಾಕಾಂತನೂ ಈತನೂ
ಅಲ್ಲಿಂದ ಹೊರಟರು ಅಲ್ಲಿದ್ದವರಲ್ಲೂ ಹಲವರು ಇವರ ಪಕ್ಷವನ್ನೇ ವಹಿಸಿ
ಇವರ ಹಿಂದೆಯೇ ಹೊರಟರು. ಹೀಗೆ ಈವೂರಿನ ಬ್ರಾಹ್ಮಣರಲ್ಲಿ ಎರಡು
ಪಂಗಡಗಳಾದವು. ಎರಡುಪಕ್ಷಗಳವರೂ ತಮ್ಮ ತಮ್ಮ ವಿಚಾರವನ್ನು
ಪತ್ರಿಕೆಗಳ ಮೂಲಕ ಮಠದ ಗುರುಗಳಿಗೆ ಅರಿಕೆ ಮಾಡಿಕೊಂಡರು. ಈ
ವಿಷಯದಲ್ಲಿ ಯಾರದು ಸರಿಯೆಂಬ ಬಗ್ಗೆ ನಿಷ್ಕರ್ಷೆಯಾದ ತೀರ್ಮಾನದಿಂದ
ಶ್ರೀಮುಖನನ್ನು ಅಪ್ಪಣೆ ಕೊಡಿಸಬೇಕೆಂದು ಪ್ರಾರ್ಥಿಸಿಕೊಂಡು ಅದೇ ನಿರೀ
ಕ್ಷಣೆಯಲ್ಲಿದ್ದರು.
 
ಉಭಯ ಪಕ್ಷದವರ ವಿಜ್ಞಾಪನ ಪತ್ರಗಳೂ ಗುರುಗಳ ಹಸ್ತಗತವಾಗು
ವುದಕ್ಕೆ ಮೊದಲೇ ಈ ಸಂಗತಿಯು ಜನರ ಮೂಲಕ ಅವರ ಶೃತಿಪಥಕ್ಕೆ
ತಲಪಿದ್ದಿತು ತರುವಾಯ ಗುರುಗಳು ಉಭಯರ ಮನವಿಗಳನ್ನೂ ಪರಿಶೀ
ಲಿಸಿ ಈ ಮುಂದೆ ಹೇಳುವಂತೆ ತೀರ್ಮಾನಿಸಿದರು.
 
(೧) ಸಭಾ ಪೂಜೆಗೆ ಸರ್ವರೂ ಬರಬೇಕೆಂದು ಸೀತಾಕಾಂತನು ಹೇಳಿ
ಕಳುಹಿಸಿದ್ದರೂ ಮಠಮುದ್ರೆಯೂ ಇತರ ಹಲವರೂ ಹೋಗದೆ ವೃಧಾ
ಆಕ್ಷೇಪಿಸುವುದು ಅನ್ಯಾಯ.  (೨) ತ್ರಿಮತಸ್ಥರಿಗೂ ಆಹ್ವಾನವಿದ್ದರೂ
ಅವರು ಹೊಗಲಿದ್ದುದು ಆತನ ತಪ್ಪಿತವಲ್ಲ. (೩) ಮರದ ಮತ್ತು ಮತ
ತ್ರಯದ ತಾ೦ಬಲ ಮೊದಲಾದ ಮರ್ಯಾದೆಗಳನ್ನು ಮೀಸಲಾಗಿಟೈರು
ವುದು ನಿರಾಕ್ಷೇಪವು. (೪) ಬ್ರಾಹ್ಮಣ ಸಮಾರಾಧನೆಯ ವಿಷಯವಾಗಿ
ಆತನು ಯಧಾಶಕ್ತಿ ನಡೆದುಕೊಂಡಿತವಾಗಿ ಕರ್ಮಲೋಪವಾಗಲಿಲ್ಲ.
(೫) ಈಅಲ್ಪ ವಿಚಾರಗಳಿಗೋಸ್ಕರ ಅನ್ಯಾಯವಾದ ರೋಷಾವೇಶಗಳಿಗೊ
ಳಗಾಗಿ ಅಗ್ರಹಾರಿಕರಾದ ಬ್ರಾಹ್ಮಣರು ಹೀಗೆ ಕಕಿ ದ್ವಯಕ್ಕೆ ಅವಕಾಶ
ವನ್ನುಂಟುಮಾಡಿಕೊಂಡುದು ಬಹಳ ಶೋಚನೀಯಾಂಶವಾಗಿದೆ. (೬) ಗೃಹ
ಸ್ಥಪುರೋಹಿತರು, ಉಪನಯನ ಲಗ್ನಕ್ಕೆ ಹೋಗಿದ್ದವರು ಮುಂತಾದವರ
ನ್ನೆಲ್ಲಾ ಸವ್ಯವಹಾರದಿಂದ ದೂರೀಕರಿಸಲು ಮಠಮುದೆಮೊದಲಾದ
೫೫---------------------------------------------------------------

ಒಂದು ಪಂಗಡದವರು ದುಡುಕಿ ಸ್ವತಂತ್ರಿಸಿ ಮಾಡಿರುವ ಅಪ್ಪಣೆಯು
ಅವರ ಅಧಿಕಾರಕ್ಕೆ ಮೀರಿ ಗೌರವಕ್ಕೆ ಕುಂದನ್ನುಂಟುಮಾಡತಕ್ಕುದಾಗಿದೆ.
ಆದರೂ ಈ ಸಲಕ್ಕೆ ಅವರುಗಳನ್ನು ಮನ್ನಿಸಿದೆ. ಇತಃ ಪರ ಇ೦ತಹ ನಡೆ
ವಳಿಕೆಯೇನಾದರೂ ಕಂಡುಬಂದಲ್ಲಿ ಅದಕ್ಕೆ ಕಾರಣರಾದವರು ಕ್ರೂರ
ವಾದ ಆಜ್ಞೆಗೆ ಗುರಿಯಾದಾರು. ಇದೇ ಸಂದರ್ಭದಲ್ಲಿ ನಾರಾಯಣಸ್ಮ
ರಣಪೂರ್ವಕವಾಗಿ ಸುಂದರಗಿರಿ ಅಗ್ರಹಾರದ ಮಹಾಜನಗಳಿಗೆ ಹೇಳ
ತಕ್ಕುದು ಮತ್ತೊಂದು ಸಂಗತಿಯುಂಟು, ಈಗ ಕಾಲಸ್ಕೃತಿಯು
ಬಹಳ ವಿಷಮವಾಗಿದೆ. ಪ್ರತಿಯೊಬ್ಬರಿಗೂ, ಮುಖ್ಯವಾಗಿ ಮಾನಿ
ತರಿಗೆ ಅನ್ನೋದಕಗಳಿಗೂ ಕಷ್ಟವಾಗಿದೆ. ಹೀಗಿರುವಲ್ಲಿ ಹವ್ಯಕವ್ಯಗಳಲ್ಲಿ
ಆಡಂಬರಕೊಸ್ಕರ ಅತಿಯಾಗಿ ದುಂದುಮಾಡಿ ಸಾಲಗಾರರಾಗುವದ
ರಿಂದ ನಮ್ಮವರು ಇನ್ನೂ ಹೀನಸ್ಥಿತಿಗೆ ಬರುವ ಸಂಭವವುಂಟು. ನಮ್ಮ
ಆರ್ಯ ಮತಕರ್ಮಗಳಲ್ಲಿ ಹೀಗೆ ದುಂದುಮಾಡಬೇಕೆಂದು ಎಲ್ಲಿಯೂ ಹೇಳಿಲ್ಲ.
ಭಕ್ತಿ, ಮಂತ್ರ, ಜ್ಞಾನ ಇವು ಮುಖ್ಯವೇ ವಿನಾ ಶಕ್ತಿಯನ್ನು ಮೀರ
ಬೇಕೆಂದಿಲ್ಲ. ಮಿತವ್ಯಯದಿಂದ ಕರ್ಮಲೋಪವಿಲ್ಲದೆ ರಾ|| ಸೀತಾಕಾಂತನು
ಹವ್ಯಕವ್ಯಗಳನ್ನು ನಡೆಸುತ್ತ ಇತರರಿಗೆ ಒಳ್ಳೆಯ ಮೇಲ್ಪಙ್ತಿ
ಯನ್ನು ಹಾಕಿಕೊಟ್ಟಿರುವುದು ಶ್ಲಾಘವಾದ ಸಂಗತಿಯಾಗಿದೆ. ಮತ್ತು
ಇದಕ್ಕೆ ಬೆಂಬಲರಾಗಿ ನಿಂತು ಪೌರೋಹಿತ್ಯವನ್ನು ಕೈಗೊಂಡು ಪಾಮರರ
ಮಾತುಗಳನ್ನು ಪರಿಗಣಿಸದೆ ಸಾಂಗವಾಗಿ ಆಚಾರ ಕಾರ್ಯವನ್ನು ನೆರವೇ
ರಿಸಿದ ವೇ|| ಗಂಗಾರಾಮನಂತಹವರು ನಮ್ಮಲ್ಲಿ ಕೆಲವರಾದರೂ ಇದ್ದರ
ಬ್ರಾಹ್ಮಣಸಂಪ್ರದಾಯಗಳು ಎಷ್ಟೇ ಒಳ್ಳೆಯಕ್ರಮದಲ್ಲಿ ನಡೆದಾವು.
ಈ ಗೃಹಸ್ಥ ಪ್ರರೊಹಿತರುಗಳ ಅನ್ಯಾದೃಶವಾದ ಧೈರಾಧಿಸಾಮರ್ಥ್ಯಗಳಿಗೆ
ಆನಂದಿಸಿ ಅವರಿಬ್ಬರಿಗೂ ಈ ಸಂಸ್ಕಾನ೦ದ ಎರಡುಜತೆ ಶಾಲುಗಳು
ಸನ್ಮಾನವಾಗಿ ಕಳುಹಿಸಲ್ಪಟ್ಟಿರುವುವು.

ಒಂದುದಿನ ಸಾಯಂಕಾಲ, ಗೋಧೂಳಿ ಮುಹೂರ್ತ. ಸುಂದರಗಿರಿ
ಅಗ್ರಹಾರದ ಬ್ರಾಹ್ಮಣರೆಲ್ಲಾ ಮನೆಗಳ ಜಗಳಗಳ ಮೇಲೆ ಆಚಾರ ಕಟ್ಟನ್ನು
ಕಟ್ಟಿಕೊಂಡು ಕುಳಿತು ಲೋಕಾಭಿರಾಮವಾಜ ಏನೇನೋ ಮಾತುಗಳನ್ನಾ
ಡಿಕೊಳ್ಳುತಿರುವರು. ಆಗ ಪರಸ್ಥಳಿಕರಾದ ಇಬ್ಬರು ಬ್ರಾಹ್ಮಣರು ಕೈಯ
೫೬-------------------------------------------------------------------
 
ಲ್ಲೊಂದೊಂದು ಬೆಳ್ಳಿಯ ಕೋಲನ್ನು ಹಿಡಿದುಕೊಂಡು ಊರೊಳಕ್ಕೆ ಪ್ರವೇ
ಸಿದರು, ಅವರು ಮೊಟ್ಟ ಮೊದಲು ಸೀತಾಕಾಂತ ಮತ್ತು ಗಂಗಾರಾಮ
ಈ ಇಬ್ಬರ ಮನೆಗಳನ್ನು ಹುಡುಕಿಕೊಂಡು ಬಂದು ಶ್ರೀ ಮಠದಿಂದ
ಶ್ರೀಮುಖವು ಬಂದಿರುವುದಾಗಿಯೂ ಆ ರಾತ್ರಿ ಊರಬಾಗಿಲ ಹನುಮಂತ
ರಾಯನ ಗುಡಿಯಲ್ಲಿ ಆತನ ಪಕ್ಷದ ಬ್ರಾಹ್ಮಣರಲ್ಲಾ ಶ್ರೀಮುಖದ ಶ್ರವಣ
ಕ್ಕಾಗಿ ಸಭೆಸೇರಬೇಕೆಂದೂ ಆ ವೇಳೆಗೆ ಮಠದ ಸರ್ವಾಧಿಕಾರಿಗಳೂ ದಯ
ಮಾಡಿಸುವರಂದೂ ತಿಳಿಸಿ ಮರದ ಹರಿಕಾರರನ್ನು ನೋಡುತಲೆ ಊರ
ಲೆಲ್ಲಾ ಬ್ರಾಹ್ಮಣಮಂಡಲಿಯಲ್ಲಿ ಗುಸಗುಸ, "ಸೀತಾಕಾಂತನಿಗೇನೋ
ಬಂದಿತು” ಎನ್ನುವರು, " ಮಠಮುದ್ರೆಗೆ ತೊಂದರೆ ?” ಎನ್ನುವರು.
"ಇಷ್ಟೆಲ್ಲಾ ಗಂಗಾರಾಮನ ಕೀಟ್ಳೆ,” ಎನ್ನುವರು, " ಯಾರಾರಿಗೇನೇನು
ಗತಿಯಾಗುವದೊ !” ಎನ್ನುವರು, ಹೀಗೆ ಎಲ್ಲರೂ ತಮತಮಗೆ ತೋರಿದ
ರೀತಿಯಲ್ಲಿ ಆಡಿಕೊಳ್ಳುತಬಂದರು. ಕ್ಲ್ ಪ್ತ ಕೈ ಕಾಲಕ್ಕೆ ಸರಿಯಾಗಿ ಸರಾಧಿಕಾರಿ
ಗಳೂ ಕುದುರಯ ಬಂಡಿಯಲ್ಲಿ ಬಂದಿಳಿದರು. ಆಗ್ಗಾಗಲೇ ದೇವಾಲಯ
ದಲ್ಲಿ ಸೇರಿದ್ದ ಉಭಯ ಪಕ್ಷದವರೂ ಅವರನ್ನು ಮರಾದೆಯಿಂದ ಸ್ವಾಗತ
ಮಾಡಿಕೊಂಡರು. ಬಳಿಕ ತಾಳಮೇಳಗಳ ಮತ್ತು ವೇದಘೋಷಗಳ ಸ್ವಸ್ತಿ
ಯೊಡನೆ ಊರಿನ ಮುಖ್ಯವಾದ ರಾಜಮಾರ್ಗಗಳಲ್ಲೆಲ್ಲಾ ಶ್ರೀ ಮುಖದ
ಮೆರೆವಣಿಗೆಯಾಯ್ತು. ತರುವಾಯ ಅದೇ ಗುಡಿಯಲ್ಲಿ, ಮೇಲೆಕಂಡಂತೆ
ಲಿಖಿತರೂಪದಲ್ಲಿದ್ದ ಶ್ರೀಮುಖವು ಸರ್ವರಿಗೂ ಶ್ರವಣ ಮಾಡಲ್ಪಟ್ಟಿತು.

ಶ್ರೀ ರಾಮಭಕ್ತಶಿರೋಮಣಿಯಾದ ಶ್ರೀಮದಂಜನಾಕುಮಾರನಿಗೆ
ಮಂಗಳಾರತಿಯನ್ನು ಬೆಳಗಿದುದಾಯಿತು. ಸರ್ವಾಧಿಕಾರಿಯು ರಾಮಚಂದ್ರನ
ಉಪನಯನ ಸಂಬಂಧದಲ್ಲಿ ಅಗ್ರಹಾರದ ಬ್ರಾಹ್ಮಣವರ್ಗದಲ್ಲಿ ನಡೆದ ಅಂತಃ
ಕಲಹಾದಿಗಳನ್ನು ಕ್ರೋಡೀಕರಿಸಿ ತಿಳಿಯಹೇಳಿದರು. ಗುರುಗಳಾದ ಶ್ರೀ
ಭಗವತ್ಪಾದರು ಸೀತಾಕಾಂತ ಗಂಗಾರಾಮ ಈ ದೊಡ್ಡ ಮನುಷ್ಯರುಗಳಿಗೆ
ಅನುಗ್ರಹಿಸಿದ್ದ ಶಾಲುಜೋಡಿಗಳನ್ನು ಆಶೀರ್ವಾದಪುರಸ್ಸರವಾಗಿ ಕೊಟ್ಟರು.
ಮಠಮುದ್ರೆಗೂ ಆತನ ಪಕ್ಷದವರಿಗೂ ಉಪನಯನ ವಿಷಯದಲ್ಲುಂಟಾಗಿದ್ದ
ತಪ್ಪು ತಿಳಿವಳಿಕೆಯನ್ನು ತಿದ್ದಿದರು. ಅಲ್ಲಿಂದ ಮುಂದಕ್ಕೆ ಆ ಗ್ರಾಮದಲ್ಲಿ
ಬ್ರಾಹ್ಮಣರೆಲ್ಲರೂ ಏಕಮುಖವಾಗಿರಬೇಕೆಂದೂ ದ್ವೈಧೀಭಾವವು ನಿಷಿದ್ಧ
೫೭-----------------------------------------------------------------------

ವೆಂದೂ ಉಚಿತವಾದ ಉದಾಹರಣೆಗಳೊಡಗೂಡಿದ ಬುದ್ಧಿವಾದಗಳಿಂದ ಎಲ್ಲ
ರನ್ನೂ ಆನಂದಗೊಳಿಸಿದರು.
 
ಆ ಗ್ರಾಮದ ಬಡಬ್ರಾಹ್ಮಣರಿಗೆ ಹವ್ಯಕವಾದಿಗಳಲ್ಲಿ ಅದುವರೆಗೂ
ಉಂಟಾಗಿದ್ದ ತೊಂದರಗಳೆಲ್ಲಾ ತಪ್ಪುವಂತೆ ಆಯಿತು. ಯಾರುಬೇಕಾದರೂ
ಸೀತಾಕಾಂತನಂತೆ ಅಧವಾ ಆತನು ಮಾಡಿದುದಕ್ಕಿ೦ಲೂ ಕಡಿಮೆ ವೆಚ್ಚದಿಂದ
ಶುಭಾಶುಭಕರಗಳನ್ನು ಯಧಾಶಕ್ತಿಯಾಗಿ ನಡೆಯಿಸಿಕೊಳ್ಳಲನುಕೂಲ
ವಾಯು, ಅಲ್ಲಿಂದ ಮುಂದಕ್ಕೆ ಸುಂದರಗಿರಿಯ ಬ್ರಾಹ್ಮಣರೆಲ್ಲರೂ ಮಿತ
ವ್ಯಯಕ್ಕೆ ಮೇಲ್ಪಙ್ತಿಯಾದರು
===========================================
ಶ್ರೀ ಪಾರ್ಶ್ವನಾಥ ಪ್ರಿಂಟಿಂಗ್ ವರ್ಕ್, ತುಮಕೂರು.
=========================================
ಶ್ಲಾಘ್ಯವಾದ ಪುಸ್ತಕಗಳು.
ಮೈಸೂರು ರಾಜ್ಯದ ಒಳಗೂ ಹೊರಗೂ ವಿದ್ಯಾ ಇಲಾಖೆಗಳಲ್ಲಣ -
ಕರ್ಣಾಟಕ ವಾತ ಕಮಂಡಲಿಯಲ್ಲಿ ಮೆಚ್ಚಿಕೆಯನ್ನು ಪಡೆದ
ಜೆ. ಕೃಷ್ಣಶಾಸ್ತ್ರಿ, ಕಣಾ೯ಟಕ ಸಾಹಿತ್ಯ ಸರಸ್ವತಿ, ವಿದ್ಯಾಭೂಷಣ,
ಇವರ ಗ್ರಂಥಗಳು.  
(೧ ) ಕಿಂಡರ್ ಗಾರ್ಟಸ್ ಕಥೆಗಳು-೧ರೂ, ಸರ್ವೋತ್ತಮ ವಿಷಯ
ಗಳನ್ನು ಕಧೆಗಳ ರೂಪದಲ್ಲಿ, ಲಲಿತವಾಗಿ ತಿಳಿಸುವುದು. ಉಪಾಧ್ಯಾಯ
ರಿಗೂ ಮಕ್ಕಳಿಗೂ ತಾಯ್ತಂದೆಗಳಿಗೂ ಆವಶ್ಯಕ. (೩ನೇ ಮುದ್ರಣ )
(೨) ಪ್ರಫುಲ್ಲೆ -೧೨ ಆ, ಜಗತ್ಪಸಿದ್ಧವಾದ ಪತ್ತೆದಾರಿ ಕಾದಂಬರಿ, ಗ್ರಂಧ
ಕರ್ತರ ಸಮ್ಮತಿಯಿಂದ ತೆನಗುಭಾಷೆಗೂ ಪರಿವರ್ತನೆಯಾಗಿದೆ, ಪ್ರತಿ
ಗಳೆಲ್ಲಾ ಮುಗಿದಿವೆ, ಅನೇಕರ ಕೋರಿಕೆಯಂತೆ ಪುನಃ ಅಚ್ಚಾಗುತ್ತಿದೆ.
ಇನ್ನು ೩ ತಿಂಗಳಿಗೆ ದೊರೆಯುವುದು,
(೩.) ಸಾಗರಪ್ರಪಂಚ-೧೦ ಆ. ಪ್ರಪಂಚದ ಸಮಸ್ತಸಮುದ್ರಸಾಗರ
ಗಳ ಮನೋಹರವಾದ ವರ್ಣನೆ ಮುತ್ತು, ಹವಳ, ಸ್ಪಂಜು ಶಂಖ,
ತಿಮಂಗಲದ ಬೇಟೆ, ಎಸ್ಕ್ವಿಮೋಗಳು ಇಂತಹ ಸೋಜಿಗವಾದ ವಿಷಯ
ಗಳನ್ನು ತಿಳಿಸಿ ಜ್ಞಾನವನ್ನು ಹೆಚ್ಚಿಸುವದು
(೪ ) ಬೋಧನ ಕ್ರಮಸಂಗ್ರಹ-೨|| ಆ. ಉಪಾಧ್ಯಾಯರಿಗೂ ಟ್ರೇನಿಂಗ್
- ವಿದಾರ್ಥಿಗಳಿಗೂ ಕೈಗನ್ನಡಿ, (೨ನೇ ಮುದ್ರಣ)
 ( ೫)ನಡೆವಳಿ -೧ ರೂ. ಪ್ರತಿಯೊಬ್ಬರೂ ಓದಿ ನಾಗರಿಕರಾಗಬೇಕಾಗಿದ್ದು,
 (೬) ರಾಮಚಂದ್ರ-೫ ಆ, ಸಾಮಾಜಿಕ ಕಾದಂಬರಿ, ಈಗತಾನೆ ಹೊಸ
ದಾಗಿ ತಯಾರಾಗಿದೆ

ಈ ಮುಂದಣಪುಸ್ತಕಗಳು ಮುಗಿದು ಹೋಗಿವೆ.
(೭.) ಜಪಾನ್‌ ಸಾಮ್ರಾಜ, (೮.) ಉತ್ತಮ, (೯:) ಟಿಪ್ಪಣಿಗಳ
ಪುಸ್ತಕ. (೧೦ ) ನೀಲಗಿರಿಯೂ ಆಲಿಯ ನಿವಾಸಿಗಳೂ,
{೧೧) ಪರೀಕ್ಷೆಗಳಲ್ಲಿ ಉತ್ತರಬರೆಯುವ ವಿಧಾನ. (೧೨.) ಉನ್ಮತ್ತೆ
(೧೩).ಕೋತಿಯ ಕಥೆ, (೧೪) ಕುದುರೆಯ ಕಥೆ
ದೊರೆಯುವ ಸ್ಥಳಗಳು :
ಬೆಂಗಳೂರು - ಎಲ್ಲಾ ಪುಸ್ತಕವ್ಯಾಪಾರಿಗಳಲ್ಲೂ
ಮೈಸೂರು: -- ಪ್ರೋಗ್ರೆಸ್‌ ಬುಕ್‌ ಸ್ಟಾಲ್‌  
ತುಮಕೂರು -ಜೆ. ಕೃಷ್ಣ ಶಾಸ್ತ್ರಿ, ಡಿ||ನಾರ್ಮಲ್ ಸ್ಕೂಲ್.
೧೨-೨-೧೯೨೮,             ಗ್ರಂಥಕರ್ತ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ