ಶನಿವಾರ, ಡಿಸೆಂಬರ್ 28, 2019

ಸೀಕರ್ಣೆ ಸಾವಿತ್ರಿ-ಒಪ್ಪಮಾಡಿದ್ದು-ಕೈಲಾಸಂ

ಸೀಕರ್ಣೆ ಸಾವಿತ್ರಿ 
“ಏಕಾಂಕ ಏಕರಂಗ. 
ಏಕಪಾತ್ರ ರೂಪಕ 
(ಒಂದು ಸಣ್ಣ ಪ್ರಹಸನ) 

ಪಾತ್ರಗಳು 
ಪಾತ್ರ : ಸೀಕರ್ಣೆಯ ಸಾವಿತ್ರಿ ವೃತ್ತವಿತಂತು): ನಾಯಕಿ, 
ದೇಶ : ಬುಳ್ಳಾಪುರದ ನಾಟ್ಯಸಭೆ 
ಸ್ಥಾನ : ಮುಂಪೇಳುವ ಫೋಲ್ 
ಭಾ‍ಷೆ-ಆಧುನಿಕ
---------------------------------------------
[ಬಳ್ಳಾಪುರದಲ್ಲಿ ಬುಳ್ಳಪ್ಪನ ಚಪ್ರದಲ್ಲಿ ಬಳ್ಳಪ್ಪನ ಕಂಪನಿಯು ಆಡುತ್ತಿರುವ 'ಸತೀ ಸಾವಿತ್ರಿ' 
ನಾಟಕದ ನಾಲ್ಕನೆ ಅಂಕದ ಅಂತ್ಯದಲ್ಲಿ ನಾಯಕಿಯ ಪಾತ್ರವನ್ನು ವಹಿಸಿದ 'ಖಜ್ಜಿ ಕಪ್ಪಣ್ಣ'ನು 
ದಿನಕರ ದೇದೀಪ್ಯ ಪ್ರಭೆಯಲ್ಲಿ ದಿನವೆಲ್ಲಾ ಬುಳ್ಳಾಪುರದ ಬೀದಿಗಳಲ್ಲಿ ಸ್ವನಾಮಾಂಕಿತವು 
ಸಂಪೂರ್ಣವಾಗಿ ಅನ್ವಯಿಸುವಂತೆ ಕಾಣಿಸಿಕೊಳ್ಳುತ್ತಿದ್ದರೂ ಅದ್ಯತಃ “ಪೌಡರ್' 'ಟೋಫನ್ 
`ನೀರಾಜಿಸೀರೆ' 'ಪ್ಯಾರಿಸ್ ಡೈಮಂಡ್' ಇತ್ಯಾದಿಗಳೇ ಅಲ್ಲದೆ ಕೋಟಿ ದೀಪಗಳ ಬೆಳಕನ್ನು ಬೀರುವ 
`ಫುಟ್‌ಲೈಟ್' ಗಳ ಸಹಾಯದಿಂದ ರಂಭಾಪ್ಸರೆಯೋ ಎಂಬಂತೆ ಕಾಣಿಸಿಕೊಳ್ಳುತ್ತಾ... ಕಾಲನನ್ನು 
ಅಟ್ಟಿಸಿಕಂಡು ಬಂದ ಆತುರದಲ್ಲಿ ಮಳ್ಳು ಕಲ್ಲು ತಗುಲಿಯೂ ಜೀರ್ಣವಾಗದ ವಸನದಿಂದಲೂ 
ಗಂಟು ಬಿಚ್ಚಿ 'ಸ್ಟೇಜಿ'ನ ಜಮಖಾನೆಯನ್ನು ಗುಡಿಸುತೆ ಜೋಲಾಡುವ ಕೇಶ ಭಾರದಿಂದಲೂ, ಗದ್ಗದ 
ಸ್ವರದಲ್ಲಿ ಹಾರೂನಿಯಂ ಐದನೆ ಮನೆ ಕೃತಿಯಲ್ಲಿ ಸಂಚು ಸ್ವರದಲ್ಲಿ ಸೂಸುವ ನೀಲಾಂಬರಿ, 
ಅಸಾವೇರಿ, ಮುಖಾರಿ ಇತ್ಯಾದಿ ಶೋಕಗೀತೆಗಳಿಂದ, ಸಭಿಕರನ್ನೂ, ಪಾಷಾಣ ಹೃದಯಿಯಾದ 
ಕಾಲನವೇಷವನ್ನು ಧರಿಸಿದ ನೆಯಿಗೆ ನಂಜಪ್ಪನನ್ನೂ, ಶೋಕಾಬ್ಧಿಯಲ್ಲಿ ತೋಯಿಸಿ ತೇಲಿಸಿ, 
ಈಜಿಸಿ, ಕೊನೆಗೆ ಮುಳುಗಿಸಿ, ಎತ್ತಿ...ಆತಃಪರಂ ಸಾರಂಗಡವಾದ ವಾಕ್ಕುಶಲತೆಯಿಂದ ನಂಜಪ್ಪನನ್ನು 
ತೋಷಿಸಿ 'ಫಾರೆಸ್ಟು' ಫರದೆಯ ಹಿಂದೆ ಸತ್ತ ಸತ್ಯವಾನನ ವೇಷಧಾರಿಯಾದ ಅರ್ಥನಿದ್ರೆಯಲ್ಲಿರುವ 
ಗೋಣಿಗರ ಸುಬ್ಬುವಿನ ಪಂಚಪ್ರಾಣಗಳನ್ನು ಪಡೆದ ಸಂತೋಷದಲ್ಲಿ... ಸಮವರ್ತಿಯು ಆದಶ್ಯವಾಗಲು, 
ರಾಗ=ಕೇದಾರ ತಾಳ -ರೂಪಕ ದೃತಗತಿ 
ಸಾಂಥಸಾವ ನೈಧೇಏ ನಾನೀ ಈಘಳ್‌ ||ಪ||
(ಕೃ) ಥಾಂಥಾ ಖೃಪೆಯಿಂ || ಉಪ ಪಲ್ಲವಿ|| 
ಅಂಥು ಮ್ಹಢಿಧ ಖಾಂಥಾನುಸುಘಳಾ | 
ಅಂಥಯೀ | ಇಂಥುನ | ಅಂಥಖಾ | ನ 
ಸ್ಹಂಥೈಯೀಸ್ಹಿಹೀ  || ಆ || 

ಎಂದು ಪ್ರಾರಂಭಿಸಿ ಮೂರು ಚರಣಗಳು ಇದ್ದ ಪಾಡನ್ನು ಸಭಿಕರ ಮೂರು “ಒನ್ಸ್‌ಮೋರು"ಗಳಿಗೆ 
ಮೂರು ಸಾರ್ತಿ ಪಾಡಿ ನಾಲ್ಕನೆಯ ಸಲ ಪಾಡಲು ಕರತಾಡನ ಮೂಲಕ ಆಹ್ವಯಿಸುವ ಸಭಿಕರನ್ನು 
ಗಮನಿಸದೆ 'ಸೈಡ್ ವಿಂಗ್' ಹಾದು ಅದೃಶ್ಯಳಾಗುತ್ತಲೆ, ಝಾಂಗ್ಹೆಯು ನೇಪಥ್ಯದಲ್ಲಿ ಬಡಿಯುವ 
ರವಕ್ಕೆ ಸರಿಯಾಗಿ 'ಆಕ್ಟ್' ಫರದೆಯು ಬೀಳಲು-ಸಹಸಭಿಕಾದ ಸಹ ವಿತಂತು ಸೀತಮ್ಮನು 
“ ನೋಡಿದ್ರಾ ಸಾವಿತ್ರಮ್ನೋರೆ ! ಈ ನಾಟಕದ ಸಾವಿತ್ರಿಯ ಪ್ರಭಾವ ! ಗಂಡ ಸತ್ತಿದ್ದು ಹೆಣವಾಗುತ್ಲೂ 
ಗುಂಡ್ಗೆಗಟ್ಟಿಮಾಡ್ಕೊಂಡು ಯಮನ್ನ ಅಟ್ಕೊಂಡ್ಹೋಗಿ ಗಂಡನ್ಪ್ರಾಣಾನ ಗಿಟ್ಟಿಸ್ಕೊಂಡ್ಕಲ್ಲಾ! ಎನ್ಪ್ರಭಾವ, 
ಹೇಳ್ತೇನೆ !?” ಎಂದುದಕ್ಕೆ ನಮ್ಮ ನಾಟಕದ ನಾಯಕಿಯು ರೇಗಿ ರೇಗನ್ನು ಹತೋಟಿಗೆ ತಂದು 
ಕುಗ್ಗಿ, ಮತ್ತಿರಿಗಿ ಹಿಗ್ಗಿ, ಕೊನೆಗೆ ಮನೋಗಾಂಭೀರ್ಯವನ್ನು ಸೂರಿಗೆತ್ತಿದ ಮೂಗಿನಿಂದ ಸೂಚಿಸುತ್ತಾ 
ನಿಟ್ಟುಸಿರೆಳೆಯುತ್ತಾ ]
ನಾಯಕಿ 
ಎಲ್ಲಿದ್ದೀರಾ ಸೀತಮ್ಮ್ನೋರೆ! ಯಾರ್ನ ಮಾತಾಡಿಸ್ತಿದ್ದೀರಾ!? ಚೆತರ್ಸಿಕೊಳ್ಳಿ! ಸಾಧಾರ್ಣ 
ಹೆಂಗಸ್ಹ್ರಾಗೆ ಹುಟ್ಟ್ದ ನಿಮ್ಗೂ, ಅಗ್ನಿಪ್ರವೇಶ ಮಾಡಿದ ಶ್ರೀರಾಮ್ನ ಹೆಂಡ್ತೀಗೂ ಎಳ್ಳಷ್ಟೂ 
------------------------------------------------------------ 
ಸಂಬಂಧ್ವಿಲ್ಹಿದ್ರೂವೆ..... ಮೊಖಾ ಬೆಳ್ಗೆ ಬಣ್ಣ ಹಾಕ್ಕೊಂಡು, ಕೈನೂ ಕಾಲೂ ಕಫ್ಗೆ ಬಿಟ್ಕೊಂಡು 
ನಟುವನ ಹಾಗೆ ಆಡ್ತಾ ಹಾಡ್ತಾ ನಿಮ್ಮನಸ್ಸಿಗೆ ತಂದ ಸಾವಿತ್ರೀದೇವಿ ಹೆಸರ್ನ ನನಗೆ ಇಟ್ಟ ನಮ್ಮಪ್ಪಾ 
ಬೆಪ್ಪಲ್ಲಾ! ಈ ಸಾವಿತ್ರಿಗೂ ನನಗೂ ಸಂಬಂದ್ವಿದೆ. ನೀವಾಶ್ಚರ್ಯಪಟ್ಟಿದ್ದು ಸತ್ತಿದ್ದ ಗಂಡನ್ಪ್ರಾಣಾನ 
ಯಮನ್ಕೈಯಿಂದ ಸುಲ್ಕೊಂಡೆದ್ದು ಇವಳ ಪ್ರಭಾವ ಅಂದ್ರಲ್ಲಾ! ಇವಳ್ದೇನ್ಪ್ರಭಾವ! ಹಿಂದೆ ಕಲಾಬತ್ತು 
ಅಂಗಿ ಷರಾಯಿ ತೊಟ್ಕೊಂಡು ಸರ್ಗೆ ರುಮಾಲಿಟ್ಕೊಂಡ ಸತ್ಯವಾನನ ಹೆಣಾನ ಹುಷಾರಾಗಿ 
ನೋಡ್ಕೊಳ್ತಿರ್ತಾರಲ್ಲಾ ಇವ್ಳ ನೆಂಟ್ರು, ಇವಳ ಅಪ್ಪ ಅಮ್ಮ ಅತ್ತೆ ಮಾವಂದ್ರು... ಅವ್ರದ್ದು ಬೇಕಾದ್ರೆ 
ಹೇಳಿ ಪ್ರಭಾವ! ನಿಜ್ವಾದ ಪ್ರಭಾವ!!... ನಾನ್ಹೀಗ್ತಾನೇ ಮೋಸ ಹೋದದ್ದು ! ನನ್ತಾಳಿ ಕಳ್ಕೊಂಡು 
ತಲೇ ಮುಸ್ಕ್ಹಾಕೊಂಡು ಇಲ್ಲ ಹೀಗ್ಕೂತೀರೋದು ಯಾರ್ತಪ್ಪೂ ಅಲ್ಲ! ಯಮನ ತಪ್ಪೂ ಅಲ್ಲ !! 
ನೆಂಟ್ರನ್ನ ನಂಬಿ ನಮ್ಮ ಯಜಮಾನ್ರ ದೇಹಾನ ಅತ್ತೆ ಮಾವಂದ್ರ ಸುಫರ್ದ್ನಲ್ಲಿ ಅರ್ದ್ನಿಮ್ಷ ಬಿಟ್ಟು 
ಕಣ್ಮುಚ್ಚಿದ್ದು  ನನ್ತ್ನಪ್ಪು ಕೇಳಿ !: ನಮ್ಮಪ್ಪ ಜೋಯಿಸ. 

ಇನ್ನೇನು ಅಪ್ನೇ ಜೋಯಸ್ನಾಗಿರೋವಾಗ್ಗೆ ಹುಟ್ಟಿದ ಕ್ಷಣವೇ ಜಾತ್ಕ ಬರ್ದ. 
ನನ್ಜೀವಾತ್ಮದಲ್ಲಿ-ಆರುಂಧತಿ ಅಂತ್ಕೇಳೀಧೀರ ನಿತ್ಯ ಸುಮಂಗಲಿ? - ಅವ್ಳ ಸಂಸ್ಕಾರ ವಾಸ್ನೆ 
ನಮ್ಮಗೂಗೆ ಇಧೆ ಆಂದ್ನಂತೆ ನಮ್ಮಪ್ಪ! ಸಾವಿತ್ರಿಯೋ, ಯಮನ್ನ ಹಿಂಬಾಲಿಸಿದ್ಲು! ಯಮನ್ನ 
ಓದ್ದೋಡ್ಸೋ ಯೋಗ್ಯತೆ ಇರೊ ಅರುಂಧತಿಯ 'ವಾಸ್ನೆ' ನನ್ನ ಜಾತ್ಕದಲ್ಲಿ ಇಥೇಂತ ನಮ್ಮಪ್ಪ 
ನಿರ್ಧರಿಸಿದ್ಮೇಲೆ ನನಗೆ ವಯಸ್ಸಾಗಿ ವರಗ್ಳ ಮಾತು ಮನೇಲಿ ನಮ್ಮಮ್ಮ ಎತ್ತಿದಾಗ ಆರವತ್ತು, 
ಎಪ್ಪತ್ತು, ಎಂಭತ್ತು ಹೀಗೆ ಆಯ್ಸಿರೊ ಜಾತಕಗಳ್ಳು ಬಂದು ತುಂಬಿದಾಗ, “ನಾಹೇಳಿದ ಯಮನ್ನ 
ಓಡ್ಸೋ ಶಕ್ತಿ ಇಲ್ಲದ ಕನ್ಯೆಗಳು ಇವ್ರನ್ನೆಲ್ಲ ಮದ್ವೆಮಾಡ್ಕೊಳ್ಳಲಿ: ಇಪ್ಪತ್ತು, ಇಪ್ಪತ್ತೈದೂಂತ ಅಲ್ಪಾಯು 
ಯಾರಾದ್ರು ಮಿಕ್ಕ್ವಿಷ್ಯದಲ್ಲಿ ತಕ್ಮಟ್ಟಿಗೆ ಇದ್ರೆ, ನನಗ್ಕಟ್ಟಿ; ಯಮ ಬಂದಾಗ ನನ್ನ ಅಪ್ಪ ಹೇಳ್ದ 'ವಾಸನೆ' 
ಶಕ್ತಿಯಿಂದ ಗಂಡನ್ನ ಉಳಿಸ್ಕೋತ್ತೇನೇ"ಂದೆ, ನಂಬ್ತೀರೋ ಇಲ್ವೋ ಹಾಗ್ಯೇ ಆಯ್ತು! ಸಂಸಾರನೂ 
ಕುದುರ್ತು, ಕ್ರಮೇಣ ಇಪ್ಪತ್ತ್ನಾಲ್ಕೂವರೆ ವಯಸ್ ಆಗ್ತಾ ನಮ್ಮಪ್ಪ ಗಡುಹಾಕ್ದ ಇಪ್ಪತ್ತೈದ್ನೇ ವಯಸ್ಸು 
ಹತ್ರ ಬರ್ತಾ ಹತ್ರ ಬರ್ತಾ... ಮಟ್ಟ್ಮಟ್ಟ್ಮಧ್ಯಾಹ್ನ ಊಟ ಮಾಡಿ ಅಡ್ಕೆ ಎಲೆ ಮೆಲ್ಲ್ತಿದ್ವಸ್ತು ಥಟ್ನೆ 
“ನನಗೇನೂ ಸಂಕ್ಟವಾಗುತ್ತೆ!” ಅಂತಂದ್ರು. ಮೊದಲ್ನೆ ಫರ್ದೆ ಬೀಳೊಕ್ಮುಂಚೆ ಈ ನಾಟ್ಕದ ಸತ್ಯವಾನ 
ತೊರ್ಸಿದ ಚಿಹ್ನೆಗಳೆಲ್ಲಾ ಕಣ್ಡ್ಬನ್ದ್ವು! ನಾನು ಪಕ್ಕದಲ್ಲಿ ಕೂತು ಸೆರಗಿನಿಂದ ಬೀಸ್ತಾ “ಏನೂ 
ಹೆದರಬೇಡಿ . 

ನಾನು ಹತ್ರ ಇರೋವರ್ಗೂ ಯಾವ ಹಾನೀನೂ ಬರೋಹಾಗಿಲ್ಲ ನಿಮ್ಗೆ!” ಅಂತಂದ್ರೆ ನಂಬ್ತೆ 
ಆ ಪ್ರಾಣಿ? ಉಂಹುಃ! 'ಅಪ್ಪ! ಅಮ್ಮ' ಅಂತ ಅದ್ರ ರೋದನೆ ಸಹಿಸ್ಲಾರ್ರ್ದೆ ತಂತಿ ಕೊಟ್ಟು ಕರಸ್ದೆ 
ಅತ್ತೆ ಮಾವಂದಿರ್ನ, 'ಅಯ್ಯೋ ಅಂದ್ರೆ ಆರ್ತಿಂಗ್ಳು ನರ್ಕ' ಅಂಬೋದಕ್ಕೆ ದೃಷ್ಟಾಂತ ಕೇಳಿ! ಬಂದ್ಪಾಪಿಗಳು 
ಸೊಸೆಯ ಪಾತಿವ್ರತ್ಯದ ಮಹಿಮೇನ ನೋಡ್ಕೊಳ್ತಾ ಮುದಿರ್ಕೊಂಡಿದ್ಬಾರ್ದಾಗಿತ್ತೆ ಮನೆ ಮೂಲೇಲಿ ! 
"ಮಗ ... ಯಾಕೊ.. ಭಯ್ವಾಗುತ್ತೆ! ಮೃತ್ಯುಂಜಯ ಜಪ ಮಾಡೋದು ಮೇಲು”ಂತಾ ನಮ್ಮತ್ತೆ 
ಹಿಡಿದ್ಹಟಕ್ಕೆ ನನ್ನ "ಅರುಂಧತಿ ವಾಸ್ನೇ"'ನೂ ಮರ್ತು ಒಡಂಬಟ್ಟು ಭಟ್ಟ್ರಿಗೆ ಹೇಳ್ಕಳ್ಸಿ ಪೂಜೇನೂ 
ಆಯ್ತು... ಮಾವಾವ್ರೂ ಅತ್ತೆವ್ರೂ ಪೂಜೆ ನಂತ್ರ ಬಂದು ಇವ್ರ ಹತ್ರ ಕೂತಿದ್ದ ನನ್ನ 'ಪೂಜೆ ಆಯ್ತು!.. 
ಕುಂಕುಮ ನೆತ್ತಿಗೂ ತಾಳೀಗೂ ಹಚ್ಕೊಂಡು ಪ್ರಸಾದಾನ ಸೇವಿಸ್ಬಿಟ್ಟು ಬಾ!!' ಅನ್ತನ್ದ್ರು ದೊಡ್ಡೋರು 
ಹೇಳ್ತಾರಲ್ಲ ಹಾಗ್ಮಾಡೋಣ ಅಂತ ಕೈಹಿಡ್ಹೋರನ್ನ ಬಿಟ್ಟು ದೇವರ್ಮನೆಯ ಕಡೆ ಯಾವಾಗ ಹೆಜ್ಜೆ 
------------------------------------------------------

ಇಟ್ಟೆನೋ,  ಆಗ ತಪ್ಪಿತು ಆರುಂಧತಿ ವಾಸ್ತೆ!! ನರಳ್ತಿರೊ ಇವ್ರ್ನ, ಅತ್ತೆ ಮಾವಂದ್ರ ಸುಪರ್ದಿಗೆ 
ಒಪ್ಪ್ಸಿ ದೇವ್ರರ್ಮನೆಗೆ ಬಂದು ಸಹಸ್ರನಾಮ ಆದ ಕುಂಕುಮಾನ ಹಣೆಗೂ ತಾಳಿಗೂ ಇಟ್ಕೊಂಡು 
ಪ್ರಸಾದದ ಕಡೆ ಕಣ್ಗುಡ್ತೆಗಳ್ನ ತಿರುಗಿಸ್ತೇನೆ! ಕೋಸುಂಬ್ರಿ ಆಗಬಾರ್ದೆ! ಕಡ್ಬು ಆಗಬಾರ್ದೆ! ಪಾನ್ಕ 
ಆಗಬಾರರ್ದೆ ಪುಳಿಯೋರ ಆಗಬಾರದೆ! ನನ್ನ ಕಷ್ಟಕಾಲ ನೋಡಿ... ಈ ನೇವೇದ್ಯಗಳೆಲ್ಲಾ ಬಿಟ್ಟು 
ಸೀಕರ್ಣೆ ... ಪಂಚಾಮೃತ ಸೀಕರ್ಣೆ ಮಾಡಿಟ್ಟಿದಾಳೆ ನನ್ಮಾಂಗಲ್ಯಕ್ಕೆ ಮಾರಿ ಹಾಗೆ ಬಂದ ನಮ್ಮತ್ತೆ! 
ನಗುತೀರೋ ಏನೋ ಕಾಣೆ ಸೀತಮ್ಮನೊರೆ! ನಾನು ಹುಟ್ಟಿದಾರಭ್ಯ ನಮ್ಮಜ್ಜಿ, ನಮ್ಮಮ್ಮ 
ನಮ್ಮನೇಲಿ ಎಲ್ಲರೂ ಮದ್ವೆ ಅಗೋಮ್ಮುಂಚೆ ನಾನು ಹೋಗ್ತಿದ್ದ ಕನ್ನಡ ಇಸ್ಕೂಲು ಹುಡ್ಗೀರೂ 
ಕೂಡ ನನ್ನ 'ಸೀಕರ್ಣೆ ಸಾವಿತ್ರಿ!' ಅಂತ ಕೂಗೋದು ರೂಢಿ, ನಗಬೇಡಿ! ರಸಬಾಳೆ ಜೇನುತುಪ್ಪ 
ಬಾಬ್ತುಗಳು ಸರಿಯಾಗಿ ಸೇರಿದ ಬಾಬ್ತು ಅಂದ್ರೆ ಪ್ರಾಣ, ನನ್ಗೆ ಮೃತ್ಯುಂಜಯ ಜಪಕ್ಕೆ ನಮ್ಮತ್ತೆ 
ಜೋಡ್ತಪ್ಪಲೆ ತುಂಬ ಸೀಕರ್ಣ ಮಾಡಿಟ್ಟಳಲ್ಲಾ, ಒಂದು ಚಮ್ಚ ಒಂದು ಮಿಳ್ಳೆ - ಒಂದು ಸೌಟು. 
ಇಡಬಾರ್ದೆ?, ಈ ಹಾಳು, ಸೀಕರ್ಣೆ ತುಂಬಿದ ಜೋಡ್ತಪ್ಲೇಲಿ ! “ಎಲಾ ಎಜಮಾನ್ರನ್ನ ಬಿಟ್ಟ್ಬಿಟ್ಟು 
ಬಂದಿದೇನೆ! ಈಗ್ಲೋ ಆಗ್ಲೋ ಯಮ, ಅಪ್ಪ ಜಾತಕದಲ್ಲಿ ನಿರ್ಧರಿಸಿದ ಹಾಗೆ, ಬಂದ್ಬಿಟ್ಟಾನು!? 
ಈಗ ಇರಬೇಕಾದ್ದು ನಿನ್ನ ಗಂಡನ ಹತ್ತಿರ; ಇಲ್ಲಲ್ಲಾ! ಅತ್ತೆ ಮಾವಂದ್ರ ಮಾತು ಎತ್ತ್ಹಾಕ್ಬಾರ್ದು! 
ಸೌಟು ಮಿಳ್ಳೆ ಹುಡ್ಕೋಕೆ ಬಿಡ್ವಿಲ್ಲ ! ನೈವೇದ್ಯ ಬಾಯ್ಗ್ಹಾಕ್ಕೊಂಡು ಪ್ರತಿಪಾದಾನ ಸೇರು!” 
ಅನ್ತನ್ದುಕೊಂಡು ಆ ಜೋಡ್ತಪ್ಲೇನ ಎರ್ಡೂ ಕೈಯಿಂದ್ಲೂ ಎತ್ತಿ ಬಾಯ್ಬಿಟ್ಕೊಂಡು ಬಗ್ಗಿಸಿಕೊಂಡರೆ, 
ಒಂದು ತುಂಡು ಬಾಳೆಹಣ್ಣು ಒಂದು ತೊಟ್ಟು ಜೇನುತುಪ್ಪ ಮಟ್ಟಿಗೂ ಸೋಕಬಾರದಾಗಿತ್ತೆ 
ನನ್ನಾಲ್ಗೇಗೆ! ನನ್ನ ಕಷ್ಟಕಾಲ;  ನನ್ನ ತಾಳೀನ ಹಿಡಿದ ಹಾನಿ! ನೋಡಿ, ಸೀತಮ್ಮನೋರೆ! ಬಾಳೆಹಣ್ಣು, 
ಕಲ್ಲ್ಸಕ್ರೆ, ದ್ರಾಕ್ಷಿ, ಯಾಲಕ್ಕಿ ಬಾಬ್ತುಗಳೆಲ್ಲಾ ಮೇಲ್ತೇಲ್ತಾ ತೇಲ್ತಾ ಕೆಳಗೆ ಹರಿಯೋ ತುಪ್ಪ 
ಜೇನುತುಪ್ಪದ ಸಮೇತ ಅಷ್ಟುನೂವೆ ಜೋಡ್ತಪ್ಲೇಲಿ ಇದ್ದ ಸೀಕರ್ಣೆ ಅಷ್ಟುನೂವೆ, ಅನಾಮತ್ತಾಗಿ 
ನನ್ನ ಹಾಳು ಬಿರಿದ ಬಾಯ್ಗೇ ಜಾರಬೇಕೆ? ಇದು ಬಿದ್ದ ಜ್ಞಾಪಕ ! ಖಾಲಿ ಜೋಡಪ್ಲೆ 'ಠಂಗ್ಕ್!'ಂತ 
ನೆಲಕ್ಕೆ ಬಿದ್ದದ್ದು ಕೇಳಿದ ಜ್ಙಾಪಕ! ಸೀಕರ್ಣೆ, 'ಲೋಪ್ಟ್‌ !'ಂತ ಹೊಟ್ಟೇಗೆ ಬಿದ್ದದ್ದು ಜ್ಞಾಪಕ ! ತುಂಬಿದ  
ಹೊಟ್ಟೆ ಕೂತಿದ್ದ ಹಾಗೆ ಗೋಡೆಗೆ ಒರಗಿದೆ! ಕಣ್ಮುಚ್ಚ್ದೆ. 
 
ಒಂದೆ ಇಲ್ಲಾ ಒಂದೂವ್ವರೇನೂ ನಿಮಿಷ ಆಗದ್ದಿರಬಹುದ್ಹಾಗಿತ್ತು ನಾನು ಕಣ್ಣು ಬಿಟ್ಟಾಗ. 
ಜ್ಞಾಪಿಸಿಕೊಂಡೆ ಎಜಮಾನ್ರನ್ನ! ಥಟ್ಟನೆದ್ದು ದೂರ ದೂರ ಕಾಲುಹಾಕ್ತಿಧೇನೆ, ಇವರನ್ನ ಬಿಟ್ಟುಬಂದ  
ಕೋಣೆಯ ಕಡೆ! ಕಾಲು ತೊಳೀತಾ ನಿಂತಿಧಾರೆ ತೊಟ್ಟಿ ಕೋಳಾಯ್ಲಿ ಮಾವಾವ್ರು ಅತ್ತೇನೂ!  
ಇವ್ರನ್ನ್ಬಿಟ್ಟ್ಬಿಟ್ಟು ಇಲ್ಲಿ ಇವ್ರು ಇರುವುದನ್ನು ನೋಡಿ ರ್ರೇಗಿ "ಇದೇನಿದು! ಕಾಲ್ತೊಳೆಯೋದು 
ಯಾಕೆ? ಈಗ?” ಅಂದೆ, ಅವ್ರಿಬ್ರೂ ಒಂದೇ ಗಂಟ್ಳಲ್ಲಿ 'ಬೀದಿ ಉದ್ದಕ್ಕೂ ನಡಕೊಂಡು 
ಹೋಗ್ಬಂದದ್ದಕ್ಕೆ ತುಂಬಿರೋ ಧೂಳ್‌ ತೊಲಗಿಸೋಕೆ ತೊಳಕೊಳ್ಳೋದು' ಅಂದ್ರು. 'ಬೀದೀಲೇನ್ಕೆಲ್ಸಾ  
ಈಗ ನಮ್ಮಗಳ ಈ ಸ್ಥಿತಿಲಿ' ಅಂದೆ, ಅದಕ್ಕ್ನಮ್ಮತ್ತೆ 'ಕೆಲ್ಸವಿಲ್ದೇ ಏನೂ !? ಸತ್ತ ಮಗನ ಹೆಣಾನ 
ಸ್ಮಶಾನಕ್ಕೆ ಸಾಗ್ಸಿ ಸುಟ್ಟು ಬೀದಿ ಉದ್ದಕ್ಕೂ ನಡ್ಕೊಂಡು ಬಂದ್ಮೇಲೆ ಧೂಳು ಮುಚ್ಚ್ಕೊಳ್ದೆ ಇರುತ್ತ್ವ್ವೇ
ಪಾದಗಳು?” ಅಂದ್ರು! ಮೈಕೂದ್ಲು ನಡುಗ್ತಾ, ಮೈಯೆಲ್ಲಾ ಬೆವರ್ತಾ, ದುಡುಕ್ತಾ ಹಿತ್ತ್ಲ ಕಡೆ ಕಾಲ್ಹಾಕಿ  
ನೋಡ್ತೇನೆ! ಅಕೋ! ಹೋಗ್ತಿಧಾನೆ ಯಮಧರ್ಮ, ಆಕಾಶಾನೂ ಭೂಮಿನೂ ಸೇರೋ ದಿಗನ್ತ  
ಅನ್ತಾರಲ್ಲಾ , ಅಲ್ಲೆಲ್ಲೋ! ; ಬಲಗೈ ಒಂದೊಂದ್ಬೆಟ್ಟಿಗೂ ಒಂದೊಂದ್ಪ್ರಾಣಾನ ಸುತ್ಕೊಂಡು! ಏನ್ಮಾಡೋದು 
------------------------------------------------------------- 
ನಾನು!? ನಮ್ಮಪ್ಪ ಹೇಳ್ದ ಅರುಂಧತಿ 'ವಾಸ್ನೆ' ಪ್ರಭಾವ್ಹಿಂದ... ನನ್ನ ಘರ್ಜನೆಗೆ ಬೆದರ್ಬಿದ್ದು 
ಯಮರಾಯ ಯಜಮಾನ್ರ ಪಂಚಾಪ್ರಾಣಾನ ನನ್ಕೈಲಿಟ್ಟು ಪಾದಕ್ಬಿದ್ದು 'ತಪ್ಪಾಯ್ತು, ಕ್ಷಮ್ಸಿಂ'ತ 
ಮಾಡೋ ಮಹಿಮೆ ನನಗಿದ್ರೂನೂವೆ ಏತನ್ಮಧ್ಯೆ ಈ ಬೆಪ್ದಕ್ಡಿಗ್ಳು ನನ್ನ ಭರ್ತನ ದೇಹಾನ ಭಸ್ಮ 
ಮಾಡಿ ಭೂಮೀಗೆರಚಿದ್ಮೇಲೆ... ಪತಿಯ ಪ್ರಾಣಗಳ್ನ ಇವರ ರುಮಾಲ್ಗೆ ಕಟ್ಟೋದೆ? ಅಂಗಿಗೆ 
ತಗಲಿಸ್ಕೊಳ್ಳೋದೆ? ಹೀಗೇ !; ನಂಟ್ರನ್ನ ನಂಬಿ ನನ್ಕೆಟ್ಟದ್ದು!! ನನ್ನ ಪ್ರಭಾವ ಎಷ್ಟಾದ್ರೂನೂವೆ, 
ಇವರ ದೇಹದ ಪಕ್ಕದಲ್ಲಿದ್ದ ನೆಂಟರ ಅಜಾಗರೂಕತೆಯಿಂದ ಅನ್ಯಾಯವಾದದ್ದು ನನ್ಗೆ. ಈ 
ಸಾವಿತ್ರಿಯ ಪ್ರಭಾವವೇನು!? ನಿಜ್ವಾದ ಪ್ರಭಾವ ಆ ಘಟಾನ ನೋಡ್ಕೊಂಡಿದ್ರಲ್ಲ, ಅವರರ್ದು 
ಪ್ರಭಾವ!! 

(ನಾಟಕದ ಪರದೆಯು ಏಳುತ್ತ ಸಾವಿತ್ರಿಯು ಪ್ರವೇಶಿಸುತ್ತಾ ಸತ್ಯವಾನನ ಹಣದ ಸುತ್ತ ನಿಂತ 
ಚಮಕಿ ಕೊಟು ಷರಾಯ ರುಮಾಲು ತೊಟ್ಟ ಎರಡು ವೃದ್ದ ರಾಜ ಪಾರ್ಟುಗಳು, ಅದಕ್ಕೆ 
ಸರಿಯಾಗಿ ನೀರಾಜಿ ಸೀರೆ ಬಿಳೀಕೂದಲು 'ಟೋಫಸ್ ತೊಟ್ಟ ಎರಡು ವೃದ್ಧ ರಾಣೀ  
ಪಾರ್ಟುಗಳು, ಹೆಣವನ್ನು ಬಿಟ್ಟು ಏಕಗ್ರೀವದಿಂದ... 

(ದಿವಂಗತ ವರದಾಚಾರ್ಯರ ಶಾಕುಂತಲ್ಲಿ ನಾಟಕದಲ್ಲಿ ಕಣ್ವರು 'ಎಂತು ಕಳುಹಲಿ... 
ಸುತೆಯಾ' ಎಂದಂತೆ) 
ಇ್ಹಿಂತು ಬಂಧೆಯ್ಹಾ.. ಸ್ಹುತಳ್ಹೆ || 
ಇ್ಹಿಂತು ಭಂದೇಯಾ||
ಎಂದು ಹಾಡುತ್ತಾ ಮುಂದೆ ಬಂದು “ಸತಿ ಸಾವಿತ್ರಿ'ಯನ್ನು ಅಪ್ಪಿಕೊಳ್ಳುವ ಸೀನಿಗೆ ಪರದೆ ಏಳುವ 
ಸಮಯಕ್ಕೆ ಸರಿಯಾಗಿ 'ಸೀಕರ್ಣೆ ಸಾವಿತ್ರಿಯ'] 
ಪರದೆ ಬೀಳುವುದು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ