ಶನಿವಾರ, ಡಿಸೆಂಬರ್ 28, 2019

ನಮ್ಮಕ್ಲಬ್ಬು-ಒಪ್ಪವಾಗಿದ್ದು -ಕೈಲಾಸಂ

https://archive.org/details/unset0000unse_n0e5
ನಮ್ಮಕ್ಲಬ್ಬು 

ಪಾತ್ರಗಳು 

ಅಶ್ವತ್ಥ  )
ರಂಗಣ್ಣ  )
ಸಂಪತ್ ) Memberಗ್ಳು 
ಬದರಿ )
ಸುಬ್ಬಣ್ಣ )
ವೆಂಕಟೇಶ )
ಅಹೋಬ್ಲು )
ಶೇಷು )
ಪಿಲ್ಲೂರಾವ್ )

ಶಾಸ್ತ್ರಿ 

ಸಾನ : ಬುಳ್ಳಾಪುರದ ರಾಜಬೀದಿ 
ಕಾಲ, ಭಾಷೆ : ಆಧುನಿಕ 
-----------------------------------------------------------

ಪ್ರಥಮ ರಂಗ 

ರಂಗಣ್ಣ: Good God! Aswath! 

ಅಶ್ವತ್ಥ: ಯಾಕೆ ರಂಗೂ? God ಯಾಕೆ ಈಗ? 

ರಂಗಣ್ಣ: ಅಲ್ಲ Aswath! Convocationನಲ್ಲಿ ನೋಡಿದ್ದು ನಿನ್ನ. ನೋಡಿದ್ದು ಅಂದರೆ ಏನು 
ಬರಿ B.A. ನಾನು : ಡಿಗ್ರಿಗೆ ಅಂದರೆಂದಿದ್ದೆ; ನೀನೋ M.Sc. Goldmedalಉ, ನನ್ನ 
ಹಣೇಬರಹ  B.A...L.L.B.ನೋ clerkshipಓ  according to father-in-law's fiscal policy. 
But Aswath. (ಅಶ್ವತ್ಥನನ್ನು ತಬ್ಬಿಕೊಳ್ಳುತ್ತಾ)  Room matesesಉ.... ನಾವು..... father father-  in-law... ಇಬ್ರೂ  disappoint ಮಾಡಿದಾಗ ನಿನ್ನ ... elocution prize forty rupees 
ನನ್ಕೈಲಿಟ್ಯೆಲ್ಲಾ!.... ಅದೇನು obligationಎ!  loanಏ!... you disappeared suddenly ! ನಾನ್ 
ತಿಳ್ಕೊಂಡೇ  Tata Institute. Bombay, Research workeಉ  ಈ lineನಲ್ಲಿ ... perhaps foreign
ಉ ಹೀಗೆಲ್ಲಾ ತಿಳ್ಕೊಂಡಿದ್ರೆ  .... Here you are in henighted Bullapur..... Scantily dressed! 
Do you know Aswath? ನಿನ್ನ arrest ಮಾಡಿಸ್ಬಲ್ಲೆ  under the Vagrancy Act? ಅಲ್ಲಾ  Aswath... ನಿನ್ನ brainಉ, ನಿನ್ನ peopleಉ ಇಷ್ಟೆಲ್ಲ backing ಇಟ್ಗೊಂಡಿಲೋ ನೀನು... How long?... I mean ಎಷ್ಟು ದಿವಸ ಈ ಊರ್ಗೆ ಎಂದು ? 

ಅಶ್ವತ್ಥ: ಹೌದು Rangu! growing grey at 38! Bad signಉ, ಮಗು, one year my 
juniorಉ (ಫಕಫಕನೆ ನಗುವನು ). I used my... what you call gold-medal brainoo and 
ನಾನ್‌ collegeಲ್ಲ್ಕಲ್ತ science, in business und agriculture. 
 
ರಂಗಣ್ಣ: Aswathoo. Roadನಲ್ಲಿ celebrate ಮಾಡೋದೆon, old friend's meetingoo?  best placeಉ ನಮ್ಕ್ಳಬ್ಬು, for our talkoo..... ಅಲ್ಲಿಗೆ ಹೋಗೋಣ! you must be a member 
of our cluboo! Businessoo, agricultureoo, ಅಂದೆಯಲ್ಲಾ.... therefore ನಿನಗೆ more permanent locus standi than usಉ, birds of passageoo... in public serviceoo. ಈವತ್ತು 
ಈ ಡಿಸ್ಟ್ರಿಕ್ಟೂ ನಾಳೆ ಆ ಡಿಸ್ಟ್ರಿಕ್ಟೂ Never never know where you are in public serviceoo  only thing permanentoo...pensionಉ plus insuranceಉ. ನಮ್ಮ clubಗೆ  ಹೋಗೋಣ.

ಅಶ್ವತ್ಥ: ಕ್ಷಮ್ಸು dear boy. Watch ಮಾಡ್ತಾಲೇ ಇಧೇನೆ ನಿಮ್ಮ ಕ್ಲಬ್ನ Lawyer ಈಗ್ಳು. 
doctorಉಗ್ಳು, engineerಗ್ಳು etcetera plus of course your lone lone selfಉ judge you 
know?... in a manner of speaking in the club and yet out of it!!!... Poor Rangoo 
ನೀನೋ ನಿಮ್ಕ್ಲೊಬ್ಬೋ! 

ರಂಗಣ್ಣ: ಅಲ್ಲಾ Aswathoo ನಿನ್ಗೆ clubಎ ಗೊತ್ತಿಲ್ಲಾ ಯಾವಾಗ್ಲೂ collegeನಲ್ಲಿ  hostelನಲ್ಲಿ  lone wolfoo ... ನೀನು clubಗೆ ಬಾ, club lifeಉ ಅಂದ್ರೆ   you are thinking that 
lawyerಉಗ್ಳು doctorಉಗ್ಳು and engineerಗ್ಳು cleclera will go on talking "Shopoo" 
ಅಂತ ತಿಳ್ಕೊಂಡಿಧೀಯಾ? We Officersoo and professional menoo in  our respective 
professials ದನದ್ದಾಗೆ day ಎಲ್ಲಾ ದುಡ್ಡೂ ದುಡ್ಡೂ ದಣ್ದೂ  ದಣ್ದೂ..... ಮನೇಗ್ಬಂದ್ರೋ!  Saaame bungalow saame gateoo saaame portico.... same ಕಿರ್ಲಿಂಗ್‌ 
 
------------------------------------------

ಮಕ್ಳು. Six o'clock to sleeping ten o'clock ಹ್ಯಾಗೆ  spend ಮಾಡೋದು time? Of course 
ಬಂಗ್ಲೆ ಬೇಕು . servants ಬೇಕು, wife ಬೇಕು, childrenoo ಬೇಕು . But "possession is nine 
points of ಪಾಲ್ಮಾರಿಕೆ." The price of success in service is "ಬೇಜಾರು !" Therefore. 
club ಇರೋದು , to forget our pensionಉ..... ಸಂಬ್ಳಾಸೂ and positionಊ for two hours 
in the day. Come on dear bo!!.... [A Car arrives, Ranganna and Aswath get in 
and the car drives of]. 

ದ್ವಿತೀಯ ರಂಗ 
[The Reading room of the Multipolitan Club. Members scattered haphazard 
round a table heavily laden with journals and magazines.] 

ಸಂಪತ್: ಎನ್ ಶಾಸ್ತ್ರಿ, ಮೇಲ್ paperಏ ಇಲ್ಲಾ? 

ಶಾಸ್ತ್ರಿ: ಎನ್ ಹೇಳ್ಲಿ ಸಾರ್, Pilloo ರಾಯ್ರು,  Head Masteroo.... ಬೆಳಗ್ಗೆ ತೆಗೊಂಡ್ಹೋದೋವ್ರು.... 

ಸಂಪ: ಯಾರಿಗೆ ಹೆಡ್ ? ಯಾರಿಗ್ಮಾಸ್ಟ್ರೂ? ನನಗೋ ? ನಿನಗೋ? ಇಂಗ್ಪಾರ್ ಬದ್ರಿ? 
Head master ಅನಾಕಲ್ಲೆ..., ಅವಂಡೆ ಸ್ಕೂಲ್ಕ್ಹೆಡ್ಡು ... ಆವಂಡೆ ಬಡ್ಡಿ ಫಸಲ್ ಕಿ ಮಾಸ್ತರು !... 
ಉಣ್ತೆ ಎಣ್ಕೆ ಹೆಡ್ಡಾ... ಉಣ್ಡೆ ಎಣ್ಡೆ ಮಸ್ಟ್ರಾ... ಏನ್ ಸುಬ್ಬೂ? ಎನ್ ವೆಂಕಟೇಶ್ ?... Good 
Gog. ನಾನು ಮೊದ್ಲೇ ಹೇಳ್ದೆ Non gitzetted mennoo, ನಮ್ಮ clubಗೆ..... ಬೇಡ ಅಂತ. 

ಹಿರಿಯಣ್ಣಯ್ಯ: Gentlemen! Stopit! This is a club!.... officials or non-officials, 
gazetted or non-gazetted... I mean... ಕ್ಷಮ್ಸಿ ! But (ಫಕ್ಕನೆ ನಕ್ಕು) ... u know what I mean    

All the rest at the table: Quite so. sir! 

ಬದರಿ: (rising) But still sir... last month's Strand Magazine... ten days 
ಇಂಟ್ಕೊಂಡೂ...ಯಾಕೇಂತ explanation ಕೇಳಿದ್ರೆ ಹಾರ್ಮೋನಿಯಂ (out Of orderoo; ಅದ್ನ ರಿಪೇರಿ ಮಾಡ್ಕೊಂಡು, ಆಮೇಲೆ magazine ಒದ್ದೇ, therefore ತಡ, delay.... 
ಕ್ಷಮಿಸಬೇಕು - apologies” ಅಂತಂದವ್ರು...ಬೆಳಿಗ್ಗೆ ಬಂದ ಮೇಲ್ paperಉ ಮನೇಗೆ  ತೊಗೊಂಡ್ಹೋಗಿ .... Still he has gol it. sir! As common members, up to date with 
Subscriptions... (ಶಾಸ್ತ್ರಿ ಕಡೆ ತಿರುಗುತ್ತಾ ಏನ್ ಶಾಸ್ತ್ರೀ ? 

ಶಾಸ್ತ್ರಿ: (ತಾವುಗಳೆಲ್ಲ up-to-dateಉ ಸಾರ್ subscriptonನಲ್ಲಿ!.... ಆತ up ಏನೂ? to  ಏನೂ ? date ಎನೂ? ಒಟ್ನಲ್ಲಿ Sirs, ಕಮಿಟಿ ಮೆಂಬರು ಇನ್ನೇನು ಹೇಳ್ಲಿ? 

ವೆಂಕಟೇಶ: ಹೇಳೋದೇನು? ಕೇಳಿ ? Mail paper ಏಕೆ ಇನ್ನೂ ಬರಲಿಲ್ಲಾಂತ. 

ಶಾಸ್ತ್ರಿ: (appoching Hiriyanniah) ಕ್ಷಮ್ಸಿ, ಸನ್ನಿಧಾನದಲ್ಲಿ ಅರಿಕೆ ಮಾಡ್ತೇನೆ, ಬಡವ, 
------------------------------------- 

ಎಂಟು ರೂಪಾಯಿ ಸಂಬ್ಳ. ಒಂದು Tuition ಇಟ್ಕೊಂಡಿದ್ದೇನೆ, ಸಂಸ್ಕೃತ; ಐದು ರೂಪಾಯಿ  ಹದಿಮೂರು! ಎರಡು ರೂಪಾಯಿ  promotion increment application ಹಾಕಿಧೇನೆ 
committeeಗೆ ..... ಆತ committee ಮೆಂಬರು ಪ್ರಾಮುಖ್ಯ ಮೆಂಬರು..ನನ್ನ ಅನಿವಾರ್ಯಗಳ್ನ 
ಸನ್ನಿಧಾನ... ಮನಸ್ಸಿಗೆ ಇಂಗಿತ ಮಾಡ್ಕೊಂಡು.... ಈಗ ಆತನ್ನ.... ಈ Paper ವಿಷಯದಲ್ಲಿ 
ಪ್ರಶ್ನಿಸಿದ್ನೋ....? 

ಸುಬ್ಬು: It's all right, ಶಾಸ್ತ್ರಿ! We will manage him 

ಹಿರಿಯಣ್ಣಯ್ಯ: I doubt it. 

[Enter ಪಿಲ್ಲೂರಾವ್‌, ಶಾಸ್ತ್ರಿ,  abjectly approaches him and whispers]  

ಶಾಸ್ತ್ರಿ: ಸ್ವಾಮಿ..... ದೊಡ್ಸಾಹೇಬ್ರು, ಚಿಕ್ಸಾಹೇಬ್ರು, Engineer ಸಾಹೇಬ್ರು doctor ಸಾಹೇಬ್ರು 
ಒಟ್ನಲ್ಲಿ ಸಾಹೇಬುಗಳೆಲ್ಲಾ ಈ ಹೊತ್ತೇ ತಾವು ಒಯ್ದ Mail paper ಮೇಲೆ ವ್ಯಾಮೋಹ ಹುಟ್ಟಿದೆ. 
ದಯವಿಟ್ಟು ನನ್ನವಸ್ಥೆ ಮರೀದೆ... ಅವ್ರ ಅವಸ್ಥೇನ... ಹೇಗಾದ್ರೂ ಸ್ವಾಮಿ, ತಮಗೇನು ಬುದ್ದಿ 
ಕಡಿಮೆಯೇ... ಸಾಹೇಬ್ರು ನೀವಾಗಬೇಕಾಗಿತ್ತು! ಆಗದ್ದು ನನ್ನ ಪಾಪ! ಆದ್ರೂ ನಿಮ್ಮ High School 
ಹುಡುಗ್ರ ಪುಣ್ಯ! ದೊಡ್ಡ ಸಾಹೇಬ್ರಿಂದ D.S.P. ಸಾಹೇಬ್ರವರಗೂ ಹೊಂಚು ಕಾದಿದೆ-ಈ ಕೇವಲ 
English Mail paper ನೆಪ ಇಟ್ಕೊಂಡು ತಮ್ಮನ್ನ ಮುತ್ತಿ ಮುಳುಗಿಸೋಕೆ. 

ಪಿಲ್ಲೂರಾವ್: (In a loud whisper) ಶಾಸ್ತ್ರಿ ನಿನ್ನ two rupees increment ಖಾತ್ರಿ,  ಎಂಟು 
ಘಂಟೆಗೆಲ್ಲಾ ಹೊರಟು ಹೋಗ್ತೆವಲ್ಲ ಒಂದು petromaxಗೆ ಒಂದೊಂದು ರಾತ್ರಿಗೆ ಒಂದೊಂದು bottle  kerosene oil ಖರ್ಚು ಇರಬಹುದು, ಆದ್ರೆ ನಮ್ಮನೇಲಿ.... ಯಪ್ಪತ್ತೈದು ರೂಪಾಯಿ 
ಸಂಬ್ಳ... ಹತ್ತು ರೂಪಾಯಿ oil allowanceಉ... ದೀಪ...? 

ಶಾಸ್ತ್ರಿ: ಅದು ಚಿಲ್ರೆ ಬಾಬ್ತು, ಆ ವಿಧದಲ್ಲಿ ನಾಳೆಯಿಂದ... ಎಲ್ಲಾ ತಿಳಿದ ನೀವು ಮುಂದಕ್ಕೆ 
ಅರ್ಥಮಾಡಿಕೊಳ್ಳಿ! ..., ಏರ್ಪಾಡು ಆಗುತ್ತೆ!!.. 

ಪಿಲ್ಲೂರಾವ್‌ : Thank you. Sastry! (Loudly) Mail paper ಕೇಳ್ತೀಯಾ ಶಾಸ್ತ್ರಿ? Let 
me explain: ದೊಡ್ಡ ಮನುಷ್ಯ ಒಬ್ಬ jailಗೆ ಹೋಗ್ತಾನೆ, for what he thinks is the Country's 
cause, ನಾನ್ನೋಡ್ದೆ! ಮಿಕ್ಕ prisoners ಜೊತೇಗೆ ಇವ್ರು jailಗೆ ಹೋಗೋ procession ನಲ್ಲಿ.... 
"left-right, left-right”...... ಶಂಕರಾಭರಣ, ಒಂದು English note ಹಾಗೆ. 
 
ಸಗ್ಗಾ, ಸಗ್ಗಾ ಸಗ್ಗಾ, ಮಗರಿಸ |
ನಿರ್ರೀ, ನಿರ್ರೀ, ನಿರ್ರೀ, ಗರಿಸನಿ | 
ಸಾಗ್ಗಾ, ಸಗ್ಗಾ, ಸರಿಗಮಪಾ | 
ಧಪಮಗ ಪಮಗರಿ, ಸಸ್ಸಸ್ಸಾ | 
ಅಂತಾ ಹೊಡೆದ್ಬಿಡೋಣಾಂತ ನೋಡ್ದೆ. ಅವನ ದೊಡ್ಡ ಮನುಷ್ಯಕೇಗೆ ಸರಿಯಾಗಿ! But 
then Sastry, ಎಷ್ಟು ದೊಡ್ಡ ಮನುಷ್ಯನಾದ್ರೂ JAILಗೆ ಹೋಗ್ತಾನೆ., Therefore dignityನೂ 
ಇರ್ಬೇಕು.... ಕೇದಾರ etc, hopelessoo! Jailoo..... ನೀಲಾಂಬರಿ ಮುಖಾರಿ ಆದೂ ಆಗ್ದು. Therefore dignily plus depression ಎರಡೂ ಇರೋಹಾಗೆ ಹುಸೇನಿ, ಮಂಜರಿ ಹೀಗೆ 
---------------------------------------
 
ಯಾವುದಾದರೂ ರಾಗ ಚುನಾಯಿಸೊಂಡು ಓದಿಬಿಟ್ಟು ನಾಳೆ ತಿರುಗಿ ತೊಗೊಂಡು ಬರೋಣಾಂತ 
Mail paperನ ಮನೇಲೇ ಬಿಟ್ಟಿಟ್ಬಂದೆ. 

ವೆಂಕಟೇಶ )
ಸಂಪತ್    )(Suddenly shooting up in one indignant voice) 
ಬದರಿ        )
ಸುಬ್ಬಣ್ಣ,  )
ಏನ್ರೀ ಇದೂ, Head Masterರ್ರೆ!- ನಮಗೆ headಎ ನೀವು, ನಮ್ಗೆ masterಏ? Public 
Reading roomಉ!.... private subscriptionsಉ... paper ಭೋಗಕ್ಕೆ ತಗೊಂಡ್ರಾ ಇಲ್ಲಾ 
ಭೋಗ್ಯಕ್ಕೋ?.... ನಿಮ್ಮುಖಾರೀಗೂ, Mail paperಗೂ ಏನ್ರೀ ಸಂಬಂಧ?.... ನೀಲಾಂಬರಿ ಎಲ್ಲಿ 
News paper ಎಲ್ಲಿ?.... are you mad... or are we all mad!? 
 
ಹಿರಿಯಣ್ಣಯ್ಯ: Don't include me gentlemen in your intriguing Mise-en Scene! 

ಪಿಲ್ಲೂರಾವ್‌ : Forgive me sir! ತಮ್ಮ uprightness, probity, rectitudeಊ, 
Veracily, Willingnessಉ world knownಊ.  ತಾವು meticulously, succinctly, 
punctiliously striving to uphold the motto of our beloved sovereignಊ needless to remind gazetted officersಉ..... 'ಸತ್ಯಮೇವೋದ್ಧರಾಮ್ಯಹಂ'....... Humble ನನ್ನ motto- 
"Get what you getಉ and while you get itಊ. make the most of itಊ!" But 
*ಅಹಿಂಸಾ ಪರಮೋ ಧರ್ಮಃ' which is the same as ಸತ್ಯಾನ್ನ ಪರೋ ಧರ್ಮಃ ; ಒಂದೊಂದು 
ಸಾರಿ difficult to reconsileಉ, ಸುಳ್ಳು ಹೇಳ್ಬಾರ್ದು, ಹಿಂಸೇನೂ ಮಾಡ್ಬಾರ್ದು. ನಮ್ಮ High 
School ಸಂಸ್ಕೃತ ಪಂಡಿತ್, ಹುಡುಗರಿಗೆ ಹೇಳುತ್ತಿದ್ದಾಗ, ಕೊನೇಲಿ ನಾನು ಈ English 
Burderded ಭಾರತದ ಒಂದು lineಉ ಪೋಣಿಸ್ದೆ! ಆತ ಹೇಳ್ಕೊಡ್ತಿದ್ದದ್ದು: 
“ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ 
ನಬ್ರೂಯಾತ್ ಸತ್ಯಮಪ್ರಿಯಂ  
ಪ್ರಿಯ್ಯಂತ ನಾsನೃತಂ ಬ್ರೂಯಾತ್ ಅಂತ. 
ನಂದು Or'ware o' th' world's opprobrium! 
 
But coming down to practical factsಉ gentlemen, officers  but  fellow 
members of up-to-date or out-of-date in subscriptionಉ. I ask  you a question! 
Subscription ಕೊಟ್ಟೂ ಓದತ್ತೀರಲ್ಲ papersಉ . magazinesಉ! ಮನಸ್ಸಿನಲ್ಲಿ memoryಲಿ  ನಿಲ್ಲಬೇಕಾದ್ರೆ music ಇಲ್ದೆ ಹೇಗೆ manage ಮಾಡ್ತೀರಾ? ಗಮಕಿಗಳು ಸಂಗೀತವಿಲ್ದೆ ಮಹಾಭಾರತ 
ಬೊಗಳ್ಲಿ ನೋಡೋಣಾ ! ಕಂತೆ ಇಲ್ದೆ. ಪುರಾಣಗಳ್ನೆ ಕಿರ್ಲಿ! ಆಗೋದಿಲ್ಲ gentlemen! Music 
....ಇದ್ರೆ memorize ಆಗುತ್ತೆ! ಅಮರ music: ಇಲ್ದೆ memorize ಹೇಗೆ ಸಾರ್ ಆಗುತ್ತೆ? mettreಉ 
ಛಂದಸ್ಸು, etc...? ನೋಡಿ....! 

------------------------------------
ಲೋ  ಟಾ ಟಾ ಲೋ ಟ ಟಾ ಟಾ ಟ ! 
ಲಂ ಟ ಟಾ ಲ ಟ ಟಾ ಟ ಟಾ !  
ಇದು boys boyhoodನಲ್ಲಿ ಬದಕೊಂದ್ರೆ... ಎಂಭತ್ತು ವಯಸ್ಕಾದ್ರೂ deathbedನಲ್ಲಿ 
din.... ಆಗಿರುತ್ತೆ..., ಲಂಟಾ ಲಂಟಟಾ ಟಾಟ! ಲಂಟಟಾ ಲಟಟಾ ಟಟಾ ಅಂತ. 

Paperನಲ್ಲಿ ಬಂದ್ಬಾಬ್ತುಗಳೆಲ್ಲಾ ಓದೋದು ಜ್ಞಾಪಕ ಇಟ್ಕೋಬೇಕು ಅಂದ್ರೆ musicಏ, first 
and last resourceಉ. Artoo develop'doo; up-to-date politicsoo, Social lifeಊ, 
ಸರ್ವಾನೂ kept in touchoo! I shall give you a practical demonstrationಉ because, 
I teachಉ just what I practiseoo, meaning practiseoo just what I preachoo! ಶಾಸ್ತ್ರಿ! 
ಹಳೇ paper ಯಾವುದಾದ್ರೂ ತೆಗಿ!! 
[Sastry hands over an old news paper] 

ಪಿಲ್ಲೂರಾವ್‌ : Old paperoo, and of last warco, delusion of old peaccoo, 
resultoo-deluge of present waroo)....: (ಪೇಪರಿನಿಂದ ಓದುತ್ತ ) 

[Newspaper:- A poor unknown warrior dying in far away France shedding 
his blood for his king and his country was buried in Westminister 
Abbey..........................A 
 
His Most Gracious Majesty the king Emperor with Her most Gracious 
Majesty the Queen Empress with His Royal Highness the Prince of Wales, were 
the chief mourners.............B 
 
The British army was there. This Fusiliers were there. The Gold stream 
guards were there. The house guards were there..... Indian Army... the black 
guards were there...............C 
 
Declaration of peaceco....! We, delegates and representatives of all nations 
in meeting assembled declare Universal Peace.... the basis  of all religionsಊ ....... 
universal Loveಊ....... ಲಾವ್ವೂ.... ಲವ್ವೂ ..............  D  
[ ಮೊದಲು ಸಾಧಾರಣವಾಗಿ ಮೇಲ್ಕಂಡ A.B.C.D, ಭಾಗಗಳನ್ನು ಓದುವನು.| 

ಪಿಲ್ಲೂರಾವ್: ಈಗೇನ್‌ ಅರ್ಥವಾದ್ಹಾಗಾಯ್ತು..... ಎಷ್ಟ್ಹೊತ್ತಿರುತ್ತೆ ತಲೇಲಿ? ತಿರುಗಿ ಬನ್ನಿ. 
ಸಂಗಿತ ವ್ಯಕ್ತಿ sing ಮಾಡ್ತೇನೆ!! (ಮೇಲ್ಕಂಡ Aನ್ನು ನೀಲಾಬರಿಯಲ್ಲೂ Bನ್ನು ಕೇದಾರದಲ್ಲೂ, Cನ್ನು ಅಠಾಣದಲ್ಲೂ, Dನ್ನು ಸುರುಟಿಯಲ್ಲೂ ಪಾಡುತ್ತಾ ಕೊನೆಯ ಲವ್ವೂ ಲವ್ವೂ .... ಎಂಬ 
ಪದಾರ್ಥದ ಆವೇಶದಲ್ಲಿ club ನಲ್ಲೆಲ್ಲಾ ಕುಳ್ಳನಾದ memberನ ಆಲಿಂಗಿಸಿ ಆತನ ಫಾಲಪಟ್ಟವನ್ನು 
ಚುಂಬಿಸುವನು.) 

ಕುಳ್ಳ: ಎನ್ರಿ ಇದು ! Member Niemberನ ಮುತ್ತಿಡೋದೂ !? 

ಪಿಲರಾವ್: ಕ್ಷಮ್ಸಿ! ರಸ ....ಯ motionsoo!  
-------------------------------------

ಒಬ್ಬ ಮೆಂಬರು: ಏನ್ರಸ್ವೂ...  ಎರಡು ಕೊಡ ಎಂಜಲು !.... ಸಾರ್.. (to 
Hiriyannaiah) ಏನ್ಸಾರ್‌ ನೀವೂ ಸುಮ್ನಿಧೀರ!  I will appeal to the committee! 

[Hiriyannaiah exits with handkerchief stuffed in his mouth, hy door R. Pillu 
Rao approaching door L. confronts Sastry and speaks Sotto-Voice.] 
 
ಪಿಲ್ಲೂರಾವ್: ಶಾಸ್ತ್ರಿ! ನಿನಗೆ ಸಂಸ್ಕೃತ ಗೊತ್ತು! ಇನ್ನು ಐದು ನಿಮಿಷ ಕೂಡಾ ಇಲ್ಲಾ.... 
ಹತ್ತು ನಿಮಿಷ... perhaps ಅರ್ಧ ಘಂಟೆ petromax ಉರಿದೀತು. ಜಾತಾ ಬಾಕಿ..ಸಿಲ್ಕು... 
ಸೀಮೆಎಣ್ಣೆ.  
ಮಯಾಪ್ಯರ್ಧಂ | ತ್ವಯಾಪ್ಯರ್ಧಂ 
ಮಾವಿಘ್ನಂ | ಕುರುಶಾಸ್ತರೀ || 
ಅರ್ಥ್ವೇ ? 
ಶಾಸ್ತ್ರಿ: ಏನ್ಸಾರ್‌ ನೀವು ನೀವೇಯೇ? ತಾವು ಈ ಊರ್ಗೆ ಬಂದ ತಕ್ಷಣದಿಂದ ತಹಲ್‌ವರೆಗೂ 
ನಮ್ಮ ನಮ್ಮಲ್ಲಿ ತಮ್ಮ ನನ್ನಲ್ಲಿ... ಪರಸ್ಪರ ಪ್ರಕೃತಿ ಲಾಭಾರ್ಥದ ಆನುಕೂಲಾನ ಆಂತ ನನ್ನ 
“ಆರ್ಥವೇ? ಶಾಸ್ತ್ರಿ !” ಅಂತೀರಲ್ಲಾ! ಆಶ್ಚರ್ಯ! ಸೀಮೆಯೆಣ್ಣೆ ಸಲ್ಲಿಸ್ತೇನೆ! ನನ್ನ ಎರಡು ರೂಪಾಯಿ 
increment applicationಉ! ....ಒಟ್ನಲ್ಲಿ... commitee meetingoo ...ನಾಳೆ ! .. ನಾಲ್ಕುವರೆ 
ಘಂಟೆಗೆ! ನಮ್ಮ ಅಪ್ಪ , ಅಮ್ಮ ಮುದಿ ಗೊಡ್ಡುಗ್ಳು... ನನ್ನ ಮಕ್ಕು...  ಇವರೆಲ್ರ ಜೀವಗ್ಳು ತಮ್ಮ 
ಕೈಲಿದೆ ಮರಿಬೇಡಿ... ನಾನೂ ಮರೆಯೋದಿಲ್ಲ.... ಸೀಮೆಯೆಣ್ಣೆ ಸಲ್ಲಿಸೋದ್ನ... ನಾಳೆ ಪ್ರಭಾತಕ್ಕೆ 
ಮುಂಚೆ...ದೊಡ್ಡ ಮನುಷ್ಯನೋ?... ಚಿಕ್ಕ ಮನುಷ್ನೋ!... ಜೈಲೋ ಬಂಗ್ಲೇನೋ! ಮೇಲ್ 
paperನ ಕಳಿಸ್ಬಿಡಿ, ದಮ್ಮಯ್ಯಾ! 

ಪಿಲ್ಲೂರಾವ್: ಕಳಿಸೋದೇನು ! ಬಿಡೋದೇನು ? ಶಾಸ್ತ್ರೀ! ನನ್ನ ದಬಾಯಿಸ್ದ ಈ ದೊಡ್ಡ 
ಮನುಷ್ಯರನ್ನ double ದಬಾಯಿಸಿದ್ನೇ ಹೊರ್ತು... ನಿನ್ನ ಬಿಟ್ಕೊಟ್ಟೇನೇ ಶಾಸ್ತ್ರೀ? (ಕಿಸೆಯಿಂದ Mail 
paper ಹೊರ ಹಾಕಿ ಶಾಸ್ತ್ರಿ ಕೈಯಲ್ಲಿಟ್ಟು ) ಶಾಸ್ತ್ರೀ ಇದು ಅನ್ನೋನ್ಯ.... ಅರ್ಥವೇ? 

ಶಾಸ್ತಿ: ಸಾರ್! ಅನ್ಯಾಯ ಸಾರ್ ! ಅನ್ಯಾಯ ಬುದ್ದಿ ತಮ್ಮದು!! 

[Exit Pillu Rao] 

ಬದರಿ: Do you see doctor? ನಾವುಗ್ಳೆಲ್ಲ ಇಷ್ಟರಮಟ್ಟಿಗೆ ಕ್ಳಬ್ನ one for all all for 
one...ಹೀಗೆ organise ಮಾಡಿ... presidenteಉ. committee, membersoo ಹೀಗೆಲ್ಲಾ  arrange 
ಮಾಡಿದ್ರೆ.., Strand Magazine kept back because ಮನೇ ಹಾರ್ಮೋಾನಿಯಮ್ ಮುಲುಕ್ಲು, 
Mail paper not avilable for members .. because correct ರಾಗ ತೋಚಲಿಲ್ಲಾ! ಹೀಗೆಲ್ಲಾ 
ಈ ಪಿಲ್ಲೂರಾಯ ನಮ್ಮ Multipolitan club ಪುಂಗಿ ಬಾರ್ಸೋ ಹಾವಾಡಿಗೆ ಹಾವನ್ನ 
ಫಿರಾಯ್ಸೋ ಹಾಗೆ... ನಮ್ಮನ್ನೆಲ್ಲಾ... ಫಿರಾಯ್ಸೋಕೆ .... ! ... ಆ! 

ವೆಂಕಟೇಶ್‌: Why not get him transferred I say? 

ಸುಬ್ಬಣ್ಣ: ಪ್ರಯೊಜನ್ವೇನು... some other districtoo! ಅಲ್ತಾನೇ ಏನೂ... some 
other cluboo... and some other membersoo... same victimisation as us.... ಒಟ್ನಲ್ಲಿ  we 
are all martyrs to Pilludom!! 

-----------------------------------

ವೆಂಕಟೇಶ್‌: ಹೌದೂ ... - Public pestoo...! But so is plagueoo ...! Let 
us forget him!... press telegramsoo... oh! here is Sastry. 

ಶಾಸ್ತ್ರಿ :(ಮಡಿಸಿದ Mail paperನ್ನು ವಿಸ್ತರಿಸಿ ಮೇಜಿನ ಮೇಲಿಟ್ಟು). ಕ್ಷಮ್ಸಿ! Sirs! 
ಬಂದ್ಬಿಟ್ತು  Mail paperoo! 

[Herein enter Aswatha Ranganna] 

ರಂಗಣ್ಣ : Come straight in, dear boy... ( ಮೇಜಿನ ಸುತ್ತಲೂ ಕುಳಿತುಕೊಂಡಿರುವ 
ಆರು memberಗಳಿಗೆ ಒಟ್ಟಾಗಿ introduse ಮಾಡುತ್ತಾ ) 

My friend Aswath you know. gentlemen! 

My friends you know. Aswath! 
[The sexteile at the table arise and bow to Aswath's bowing, and resume their absorption in the papers]
 
ರಂಗಣ್ಣ: Come on dear boy... (leads him to a teapoy with chairs around. 
The two seat themselves.) 

ರಂಗಣ್ಣ ಶಾಸ್ತ್ರೀ..(Sastry Comes up with a “Sir?) ಏನ್ tiffin ಊ ? 
 
ಶಾಸ್ತ್ರಿ: ಇಷ್ಟ್ಹೊತ್ತಿಗೇ ? ಏಳೂವರೆ ಆಗ್ತಾ ಬಂತು ! ಆದರೆ ಮಹಾಸ್ವಾಮಿ ತರ್ಸೇ ಬಿಡ್ತೇನೆ 
ತಡ ಇಲ್ದೆ... ಬುಳ್ಳೂ ಭವನ್ ಇದೆ ಪಕ್ದಲ್ಲೆ ! coffee... tea.... ಇಲ್ಲಾ. Crushಗಳೋ ?!  

ಅಶ್ವತ: ಇದೇನ್ರಂಗೂ! ನಿಮ್ಮ ಟವನ್ನಲ್ಲಿ ದಿನಾದಿನಾ ದುಡ್ಡ ಕಸಬ್ನ ಮರ್ಯೋಕೆ ನಿಮ್ಕಬ್ನಲ್ಲಿ  
brainಗೆ restoo, recreationoo ಅಂಬೊದ್ನ demonstrate ಮಾಡೋಕೆ ಕರ್ಕೊಂಡ್ಬೆಂದ್ನನ್ಗೆ .... 
tiffin ಎನೂ? tea ಏನೂ ಇಷ್ಟ್ಹೊತ್ಗೆ!? 
 
ರಂಗಣ್ಣ: All right Aswath (to Sastry) two crushesoo orangeoo...! 
 
[Sastry brings two glasses and two aerated 'crushes' and 'opener'. opens the 
bottles and empties them into the glasses and departs.] 

ಬದರಿ: ಇಂಗ್ಪಾರ್ ಸಂಪತ್ತೂ! Concrete test ಪಣ್ಣಿಂದೂ ನಾನೆ ಇನ್ Supervising 
ಓ ಎಣ್ಡೆ overserಉ. ಕಣ್ರೆಪ್ಪೆ ಮುಚ್ಚಾದೆ ರಾತ್ರಿ ಪಗಲು ಕುಕ್ರಿಚ್ಕೊಂಡು ಇರ್ದಾನು breach 
ಅನ bridge ಮೇಲೆ, ಇತ್ನ precautionಕೂ ಪಂಗ್ನಾಮ ಹಚ್ಚಿದ್ದೂ ಆಲ್ದಾದೆ ಎಂಗಲ್ಡೆ department 
departmentಕೇ ಗೂಟ್ನಾಮ ಹಚ್ಚಿಕ್ತಾನೇ ಇಂದ contractor ಬಡ್ಡಿಹೈದೂ ! ಇಪ್ರೂ ಎಣ್ಡೆ position 
ಎನ್ನಾ.... before portfolio ministeroo! 
 
ಸಂವತ್: ಬದ್ರೀ ಉಂಡೇ affairsಓ Public affairsoo ಪಾಳಾಯ್‌ ಪೋಗುಟ್ಟುoom!! 
ಎಂಡ private affairs ಕೇಳು ಬದ್ರೀ?  Best of materials ತರ್ವಿಚ್ಕೊಂಡು... beautiful 
mansion ಕಟ್ಕೊಡೇ ಮಲ್ಲೇಶ್ವರತ್ತೆ! ಎನ್ಕುom ಬಾಳೆಹೊನ್ನೂರ್ ಪಕ್ಕುom... ಕಳಸಾ..., 
ಅನ್ಪಕ್ಕು, ತೆರಂಜಿಕ್ರದೆ ಉನ್ಕು ಮಲೆನಾಡು, mosqito curtain ಸಮೇತM ಪೊಯಿಕ್ರಪ್ಪೋ... ಮನೇ 
--------------------------------
 
ಬಾಡಿಕ್‌ಗೆ ಕುಡ್ತಾಕಾಲೇ...  ಎಂಡೇ ಬಡ್ಡೀ tenentsಉ.... ಮುಂದಿನ್‌ drawing room ಕೋಣೆ 
ಗೋಡೇಲೆ.... ಗೂಟಂಗ್ಳು.... ಗಜ ಗಜುದ್ದೂom ಗೂಟಂಗ್ಳು, ಬಡಿಚ್ಕೊಂಡು ಪಗ್ಗಂಗಳ್‌ 
ಕಟ್ಕೊಂಡು.... ಪಡ್ವೆ ಪಾವಾಡೆ ಒಣತ್ಕೊಂಡು! ಇರ್ಕಟ್ಟು!! ಎಂಡೇ special glaped sunlight 
terrace ಇಕ್ರದೇ, ಮೂರ್ನೆ: ಮಹಡಿ... ಆದ್ಮೇಲೆ ಹಪ್ಳಂಗೊಳ್‌ ಹಚ್ಚಿಂದೂom ಹಚ್ಚಿಂದೇ.... 
ಸಂಡ್ಗೇಗಳ್‌ ಒಣ್ತಿಂದೂom ಒಣತಿನ್ದೇ! ಇಮ್‌ಮಾದ್ರಿ ಮಣ್ಣ್ಪಾಲಾಜ್ದೋ ಎಂಡೇ mansionಉ?.... 

ಇನ್ನೂ ಎಂಡೇ garden ಪಟ್ಣಗೋಳ್ ಕೇಳು, ಮಲಾಮರೂom ಇಕ್ರದೇ ಕಸಿ! ಎಂಡೇ 
ಬಂಗೇಲ್ ಇಕ್ರ ಮಂಗಾ ಮರೂಂ ... ಗಂಗಪಾಣಿ ತೇಂಗಾಮರೂom ಮಗ್ಗಲೇ ಇಕ್ರದು 
ಮಂಗಾ ಮರುom ... ಕಸೀ ಮಾಂಗಾ ಮರೂಂ, Mysore Stateಲ್ಯೇ ಇಲ್ಯಾದ ಅದ್ಭುತ ಮಾಂಗಾ 
ಮರುಂ... ಇನ್ ಮರೊom ಕಾಯ್ಬಿಟ್ಟಿರಂದಾಲೆ ಎಂಡೇ ಬಡ್ಡೀ tenants ಹೈಕ್ಳೂ ಅಂದ್ಮರೂಮ್ 
ಹತ್ತಿಂದೂ ಹತ್ತಿಂದೇ ಹಾರಿಂದೂ ಹಾರಿಂದೇ! ಕೊಂಬೆ ಕೊಂಬೇ ಮುರಿಂಜ್ಜೋನಾಲೂom 
ಎಗ್ರಿಂದೂom ಎಗ್ರಿಂದೇ! ಇನ್ನೂ ಖಾರ್ಪಡಿ ಪೋಟ್ಕೊಂಡು , ಕಾಯಿ, ಹಣ್ಣೂಂ ಹೀಚ್ ಸಮೇತ 
ಬಾಕಿ ಇಲ್ಲಾದ ಸರ್ವಮೂ, ಗದಕಿಂದೂ ಗದಕಿಂದೇ !! 
***
ವೆಂಕಟೇಶ್ : ಏನ್ Subhods? ನಾನು D.M.O., ಆದ್ರೂ... only through 
circumstancesಊ ... happy marriageಊ... father-in-law's money... ಇವೆಲ್ಲಾ,  saw 
me through. ಅಲ್ಲದೆ ನೀನು anatomy, physiology. histology ನನಗೆ couch ಮಾಡಿದೆ !... 
because and only because father-in-law... did not see YOU through!.... never 
mind ಈಗ ನನ್ನ pysiklurn ನೋಡೋ...! ! 

ಸುಬ್ಬಣ್ಣ: What is it?... go ahead!, fire away!
 
ವೆಂಕಟೇಶ್‌: ನೋಡು Subboo! Patientಉ wrestlerಉ!, beautiful body but 
ಗಾಂಜಾ addictಉ ! ನಾನು ಸೊರಾಬದಲ್ಲಿ Assistant Surgeon ಆಗಿದ್ದಾಗ ಬಂದ  patientಉ! 
Right leg a knee, gangrene! ಮಾಡೋದೇನೂ? ನಿನಗೂ ಗೊತ್ತು ನನಗೂ ಗೊತ್ತು!, 
amputatin! ಕುಸ್ತಿ career out off! warn ಮಾಡ್ದೆ “ಗಾಂಜಾಬಿಡೂ! ಬದಕ್ತೀಯಾ ! ಇಲ್ಲಾ 
limb limboo ಹೋಗ್ತಾಯಿರುತ್ತೇಂ"ತ. Again ನೋಡೋ, at Tumkur ತಿರ್ಗೂ ಬಂದಿದಾನೆ!!  
Same ಗಾಂಜಾ, same gangrene but left legoo same amputationಉ at lelt knee!! 
ಆಯ್ತೇ ! When I was in Nanjangud-ಅತ್ಕಡೆ  peopleoo horribly uneducatedoo! ಅತ್ಕಡೆ 
ಇತ್ಕಡೆ  cholera ಇತ್ತು, sporadicಉ!, sporadicಉ! But importedಉ. But then the 
local illiterate foolsಉ who suffered from diarrhoea, mistook it for cholera and 
voluntarily died!! A cican case of mass follows de-so! ನನಗೂ ಸತ್ತ್ ಶೋದ್ನೆ  post- 
mortem ಗಲಾಟೆ ಏತನ್ಮಧ್ಯೆ the same ಗಾಂಜಾ gangrene patientಉ ಒಂದು  wheel-barrow 
ಮೇಲೆ  push ಮಾಡ್ಕೋತಾ ಬಂದ, with both arms gangrene troubled! As  per usual 
amputation!! This was two years ago! ಈಗ್ನೋಡು  Subbuo, ಈವತ್ಬಂದಿದ್ದಾನೆ the same 
old patienteಉ, legless ad armlessoo. but with gangrene on the trachea working 
---------------------------------------------
 
into the aesophagus!.... of course ನನ್ನ duty amputation of  headoo! But medical 
jurisprudence! Gribble & Hiheir ಎಲ್ಲಾ ತಿರ್ವಿತಿರ್ವಿ ಓದ್ದೆ...  Subboo! to save him from 
gangrene.  Neck amputation ಮಾಡಿದ್ರೆ  legal troubleಉ , ಏನಾದ್ರೂ ಉಂಟೆ ಇಲ್ವೇ?  
Public D.M.O. ನಾನು! Thirty years serviceoo! pension provident fund plus 
insurance impending ಇನ್ನು one yearನಲ್ಲಿ ... ಏತನ್ಮಧ್ಯೆ ಇದು , my operation of 
gangrene at the throatoo! riskಉ patientದು and ampution of the headoo certain 
deathoo so far as science knows-and yet death is deathoo! Clear duty ಒಂದ್ಕಡೆ! 
certain death ಅತ್ಕಡೆ !  ಈಗ ನಾನು D.Cನ consult ಮಾಡೋದೇ , D.S.P.ನ್ನೇ ಇಲ್ಲಾ.. public prosecutorನ್ನೇ? ಇಲ್ಲಾ  patientನೇ discharge ಮಾಡಿ, chief surgeon ರೇಗಿ, dismiss ಮಾಡಿಸ್ಕೊಳ್ಳೋದೇ ? and myself, family ನಡ್ಬೀದೀಲೇ ?!! It advise me dear boy! 

ಸುಬ್ಬಣ್ಣ: ನಿನ್ನ predicamentoo peculiaroo.... Prospectಓ ನಿನ್ನ  problem ನೋಡ್ದೆ 
precariousoo. My hest adviceoo is for you to take a trip to Bullappaನ ಹಳ್ಳಿ. Three 
cases of ptomaine poisoningoo. Twenty two into two. forty four mileseಉ plus three 
day's haltage. T.A.ನೂ ಆಯ್ತು ತಿರುಗಿ ಬರೋಷ್ಟರಲ್ಲಿ gangrene patientಏ ಗೋತಾ!!! 
What do you think.... good idea ಅಲ್ವವೇ? 
 
ವೆಂಕಟೇಶ್‌:  Dear boy! ಬದಕ್ದೆ ನಾನು! Thanks to you! But then let me 
congratulate you. M.B.B.S.ಉ.... Mysore double Bahadur serviceಉ...  
ನಾನಾದ್ರೂ..... ನನ್ಗತಿ  ಹೀಗೆ. ನೀನೋ  a common or garden L.M.P. ಅಂತ ನಾನ್‌ 
ತಿಳ್ಕೊಂಡಿದ್ದೆ. "Licensed to Murder Promiscuously" ಅಂತ! But I hear  you are 
miniting money!.... more than I the D.M.O.!! 

ಸುಬ್ಬಣ್ಣ: ಕ್ಷ್ಷ್‌ ಹುಷಾರೋ ! ಬೆಪ್ಪೂ! ! Incometax officerಉ ಆತ! ಆತನ್‌ 
ಕಿವಿಗೇನಾದ್ರೂ ಬಿದ್ರೋ ಬಿಳುತ್ತೆ ಬುರುಡೇಗೆ ! 

ವೆಂಕಟೇಶ್‌: Ohh!.....I.... understand!... 
***

ಶೇಷು: But, ಅಹೋಬ್ಲು!  Circumstanceಉ alter casesಉ! So also circumstantial 
evidenceಉ!! 
 
ಅಹೋಬ್ಲು: ಇರಬಹುದು ಶೇಷು ! But then a professionಲಿ ಮರೀಬೇಡ! 
circumstantialitiesಉ in point of evidenceಉ .... not only alter criminal casesಉ!, 
But also.... alter ಆಗೋಗಲಾಡೇಲಿ , client ಕುತ್ತಿಗೇಗೇ  halterನೂ ಅಲ್ಲಿಸುತ್ತೆ!  Therefore... 
you never.... know where your client is. But as a lawyer take care to know where 
you are!.. I mean fees firstoo.... became ನಮ್ಮ law, is the only profession in 
worldಉ wherein the professional may not sue his client for services rendered!! 
--------------------------------------

Therefore ನಿನಾಯ್ತು ನಿನ್ನ ಫೀಸಾಯ್ತು, ಆಮೇಲೇನೇ... client ಆಯ್ತು ಅವನ Judge 
ಆಯ್ತು!....  ಕೇಳು ನಿನ್ನ principleoo: Principal firstoo! principle lastoo!!
 
ಶೇಷ: By the bye ಅಹೋಬ್ಳು... open and shut caseಉ... so far as prosecuting 
evidence shows... Prima facie Witnessoo!, ಮಾಲು ಕದ್ಕೊಂಡ್ಹೋದ್ದು  record ಆಗಿದೆ. 
Still... ಅದ್ಹ್ಯಾಗೆ ನಿನ್ನ clitric acquit ಮಾಡ್ಸ್ಕೊಂಡೆ? Wonderful brainoo ನಿಂದು ! ಅನ್ಯಾಯ 
grey matter ನಿನ್ನ್‌ ಕ್ರೇನಿಯಂನಲ್ಲಿ! 

ಅಶ್ವತ್ಥ: ನನ್‌ cranium grey matter ಅಲ್ಲ....... that stood me in good stead. 
Magistrate craniumನಲ್ಲಿ ತುಂಬ್ಕೊಂಡಿದ್ದ adi-pose matteroo emply fatಉ!,  ಬರೀಕೊಬ್ಬು !, 
ಕುಚೋದ್ಯ!, ಕಿಲಾಡಿತನ! ಅದ್ನೆ advantage ತೊಗೊಂಡೆ ನಾನು! ಬದಕ್ದೆ ಬದಕಸ್ದೆ ಕಕ್ಷಿಗಾರನ್ನ! 
ಕಳ್ಳ of course!... But then law is law despite justice being justiceoo. Details ಕೇಳು ! 
ಮಟ್ಮಟ್ಮಧ್ಯಾಹ್ನ! ಮನೇಲಿ ಅಮ್ಮಾವು ; ಯಜಮಾನ್ರಫೀಸ್ಲಿ; ಮಕ್ಳುಸ್ಕೂಲ್ಲಿ : ಜವಾನ ಹೋಗಿದ್ದಾನೆ 
ಊಟಕ್ಕೆ: ಬಾಗಿಲು ತೆಗೆದಿದೆ; Situationನ....many many previous studiesನಿಂದ study 
ಮಾಡ್ಕೊಂಡಿದ್ದ ನನ್ಕ್ಲೈಂಟು... also a professional in his line, which is all breadth and 
no lengthಉ... cool ಆಗಿ went in!, quite ಆಗಿ drawing room table ಮೇಲೆ ಇಟ್ಟಿದ್ದ 
ಕಾಸಿನ ಸರಾನ ಬಲಗೈ ತೋರ್ಬೆಟ್ಟಿಗೆ ತಗಲಿಸ್ಕೊಂಡ.... ತೆಪ್ಪನ್ ಹೊರಕ್ಬಂದ! gateoolದಾಟ್ದ.... 
public roadನೂ ತಲ್ಪ್ದ;  ಹೊರಗೆಲ್ಲೋ ಸಂಚರಿತಿದ್ದ ಅವರ್ಮನೆ bull dogoo ಬಂದು ಒಂದೇ 
ಧುಮ್ಕು.... attached itself to my client's calfoo ಪಕ್ಕದ್ಬಂಗ್ಲೆ ಆಕೆ  with her servants 
ಹೊರಕ್ಕೆಂದು scene ನೋಡಿಧಾರೆ, ಕಾಲನ್ನ ಕಚ್ಕೊಂಡಿದೆ bull dogoo, ಬಲಗೈ  ತೋರ್ಬೆಟ್ನಲ್ಕಾಸಿನ್ಸರ 
ತೂಗಾಡ್ತಿದೆ! An open and shut case... prosecutionಗೆ! clientಓ advance ನಾನೂರು 
ರೂಪಾಯಿ ನಗದು ನನ್ಕೈಲಿಟ್ಟು aquit ಆದ್ರೆ ೬೦೦ ರಪಾಯ ಕಾದಿದೆ ಆಂದ! I was on 
velvetoo in any caseoo!, so far as feesoo! But then, so far as my reputationoo as 
criminal lawyeroo not on velvetoo! I found myself climbing up and down on a 
ಮುಳ್ಮುತ್ತುಗ್ದ ಮರ, ದೇವರ್ದಯ!.. Judgeಓ.!! with a reputation for joking! witticisms 
etc. etc! advantage ತೊಗೊಂಡೆ; ಕೇಳು ನನ್ನ summing upoo..."your honour. despite 
the overwhelming evidence adduced by the prosecution. I feel that this whole case 
depends upon one principal based on equity which in itself is the basis of all law 
May I put it to your honour, in all humility. a problem? Hypothetically assuming 
that a single member of a community, an assembly or a club or a body of members 
commits a cognisable act against law. would your honour incarcerate the whole 
community assembly or a club or a body of members, as the case may be?" ಜಡ್ಜಿ 
ಹೇಳ್ತಾನೆ:- "Not at all. learned counsel! No public body of members may be inculpated for any misdemeanour of a single integrant member"......ಸಿಕ್ತು ಸುಬ್ಬು... 
pointoo ನನ್ಗೆ ! ಹೊಡ್ದೆ.... "I welcome the words "body and member in your honour's 
------------------------------------
 
just and wise dictum. My client is a body of members. It may seem childish to 
quote that the oldest of authorities is AEsop of the Fables fame. Nevertheless my 
client is a body of members. The prosecution evidence has proved that but one 
member of his body, to wit, his right fore-arm, bore away exhibit No. I. ಕಾಸಿನಸರ. 
On your honour's own asseveration would it be justice to imprison the whole body 
of my client for a criminal act of but one of the members that make up his body?" 
-ಅಂದೇ .. ಅವ್ನೋ braily! Twinkling eyesoo! sneering lipsoo! sarcastic toungueoo!..... 
ಹೇಳ್ತಾನೆ! .... "I quite appreciate your point, learned counsel. without going a syllable 
back on whatever I have a averred before. I sentence the fore-arm of the prisoner 
in the dock to six month's rigorous imprisonment. If the rest of the members that 
make up the body of your client cannot help sympathetically following their erring 
fellow member that would be no fault of this count!".... ಜಡ್ಜ್‌ಮೆಂಟ್‌ ಕಢಳುತ್ಲೂ 
ಕೋರ್ಟ್‌ ಕೋರ್ಟೇ ನಗತ್ತೆ ನನ್ನೊಡಿ!; But ಕೊನೇ ಹಾಸು ಆಡಿದ್ದು ಜಡ್ಜಿ!... goodoo.But 
ಕೊನೇ ತುರುಫ್ ಕರ್‍ಚಿ ನನ್ಕೈಲ್ಲಿ! sweet ಆಗಿ ಸೋಕಿಸ್ಥೆ ತುರುಫ್‌ ಖಿರ್ಚಿನ ಜಡ್ಡಿ ಹಾಸಿನ 
ಮೇಲೆ! ಗೆದ್ಜೆ ಕೇಸ್ನ! ಆಗ್ನೋಡಬೇಕಾಗಿತ್ತು ನೀನು ಕೋರ್ಟಿನವರ ಮೂತೀನ! ಒಟ್ನಲ್ಲಿ ಆ 
ಆರ್ನೂರ್ರೂಪಾಯೂ ಸೇರ್ತು Current accountಗೆ !! 

ಶೇಷು: ಆರ್ಥವಾಗಿಲ್ಲ! fore-arm ಜೊತೇಗೆ.... rest of the body clientದು, ಹೇಗ್ತಾನೆ follow ಮಾಡ್ಲಿಲ್ಲ?? 

ಅಹೋಬ್ಳು :  ನನ್ಕ್ಲೈಂಟೂ.... ಗಾಂಜಾ friendಉ; an old patient of the self same 
doctoroo the... ಗಾಂಜಾ amputation specialistoo forearm ಕಟಾಯಿಸ್ಕೊಂಡು  corkನಲ್ಲಿ  
ಮಾಡ್ದ ಪ್ರಾಂಶ ಬಾಹು! ಕೊನೆಗೆ ಉಕ್ಕಿನ ಕೊಕ್ಕೆ ಸೆಕ್ಸಿದೆ!! ನನ್ನ last wordsಉ ಆ ಕೋರ್‍ಟ್‌ನಲ್ಲಿ!,  Prisoner's dockoo ಸಮೀಪಿಸ್ತಾ  " abide by your honour's edict pregnant with forensic 
erudition" ಅಂತಾಲೇ , ಈ cork forearm buckles ಬಿಚ್ಚಿ ಆ constable ಕೈಲಿ ಕೊಟ್ಟು clientನ 
support ಮಾಡ್ತಾ court ಹೊರಗಡೆ ಹೊತ್ತೋಂಡ್ಕಂದೆ clientನ..! ಆರ್ನೂರ್ರೂಪಾಯಿ ಸಿಲ್ಕಗೆ! 
ತಿಳಿತೇ ಈಗ!! 
 
ಶೇಷು: ಸತ್ಯವಾಗಿ ಹೇಳ್ತೇನೆ, ಅಹೋಬ್ಳು, ಇದು ಒಳ್ಳೇದಕ್ಕಲ್ಲ! ವಿನಾಶಕಾಲೇ ವಿಪರೀತ.
 
ಆಹೋಬ್ಳು: “ಬುದ್ಧಿ” ಅಂತೀಯ, ಆದೂ ಜಡ್ಡಿ ಹಣೇಬರಹ! ನನಗಿರೋ ಹೆದರಿಕೆ 
"ಸಿದ್ದೀ" ಅಂತ ಆಗಿದೆಯಲ್ಲಾ ಅಂತ!! 
*** 
(ಇದುವರಗೂ ಜರುಗಿದ ಜೋಡಿ ಜೋಡಿಗಳ ಸಂವಾದ ಸಂಭಾಷಣೆಗಳು ಕಿವಿಗೆ ಬೀಳಲು 
ರಂಗಣ್ಣನು ಘಜ್ಞಾದ ಮುದಿವನ್ನು ತಿರುಗಿಸಿಕೊಳ್ಳುತ್ತಾ, ಆಶ್ವತನು ತುಂಬಿ ತುಳುಕುತ್ತಿರುವ 
ನಸುನಗುವನ್ನು ನುಂಗುತ್ತಲೂ, ಕೊನೆಗೆ ಜೋಲು ಮುಖವನ್ನು ತೂಗುವ ರಂಗಣ್ಣನಿಗೆ, ಅಶ್ವತ್ಥ) 
-----------------------------------------

ಅಶ್ವತ್ಥ: ರಂಗೂ ! ಎರಡ್ಲಾಯ್ರಿ! ಎರಡ್ಡಾಕ್ಟ್ರು; ಎರಡಿಂಜಿನೀರು; ಹಿಗ್ಹೀಗೆ ಸಂತೋಷವಾಗಿ 
ಅನ್ನೋನ್ಯವಾಗಿ ಅವ್ರವ್ರ ಕಸಬ್ನ ಮರ್ತು ಪರಸ್ಪರ ಪ್ರಶಂಸೆ ಸಂದೀಲಿ ಸ್ವಸ್ವಸಮಾರಾಧನೇನ 
ಸಲ್ಲಿಸ್ಕೊಳೋ ಸಂಭ್ರಮದಲ್ಲಿ...District Districtಗೆ ಎರಡ್ಡಿಸ್ಟ್ರಿಕ್ Munsiffಗ್ಳು, ಎರಡೆರಡು  D.C.ಗಳ್ನ ನಮ್ಮನಾಳುವ ಮಹಾಸ್ವಾಮಿಗಳು ಏರ್ಪಡಿಸೋ ವರ್ಗೂ , District Magistrate 
D.Cನೂ District Munsirf ನೀವೂವೆ Hopelessಲೀ isolated. ಇಲ್ಲಾ  insalatedಉ? ಈ 
ನಿನ್ಕ್ಲಬ್ಗೆ ನನ್ನ ಇಲ್ಲಿ ಕರ್ಕೊಂಡ್ಬರೂವಾಗ್ಲೆ ನನಗೆ guarantee ಮಾಡ್ದ Mental Recreationನಿಗೆ, 
ನನ್ಹಾಗೆಯೇ .... ಇನ್ನೊಬ್ಬ... merchantನ  member ಮಾಡ್ಕೊಂಡು... "ಮೆಣಸಿನಕಾರ ಬೆಲೆ 
ಎದ್ದಿದೆಯ? ಇದಿಯೇ ? ಕಾಫೀನ ಕರ್ಣಾಟಕರ್ಗೇವೇಯೇ ಒದಗ್ಸಿದ್ರೆ ನನ್ನ current account 
ತುಂಬುತ್ಯೇ? ಇಲ್ಲಾ outside ಕರ್ಣಾಟಕ export ಮಾಡಿ  current accountನ  fixed  depositಗೆ 
ಏರ್ಸೋದೇ !" ಹೀಗೇನೇ ರಂಗೂ, you find another District Munsiffಉ for mental 
recreation...... to discuss shop" with you and enjoy this cluboo! 

In the meanwhile I also shall try and find a fellow merchant to discuss 
merchandise with me! And then, dear boy, this will really be a multipolitan club!! 

(ಎನ್ನುತ್ತಾ "MULTIPOLITAN CLUB" ಎಂದು ಗೋಡೆಯ ಮೇಲೆ ತಗಲಿ ಹಾಕಿರುವ 
ನೋಟೀಸನ್ನ ತೋರು ಬೆಟ್ಟಿನಿಂದ ತೋರುತ್ತಿರುವಲ್ಲಿ ಫರದೆಯು ಕ್ರಮೇಣ ಜಾರುವುದು.) 
================================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ