ಶನಿವಾರ, ಡಿಸೆಂಬರ್ 28, 2019

ವಿಜಯವಿಲಾಸ-ಬೆಳ್ಳಾವೆ ನರಹರಿಶಾಸ್ತ್ರಿ


https://archive.org/details/in.ernet.dli.2015.364300
ವಿಜಯವಿಲಾಸ
(ಕಥೆ)
ಬೆಳ್ಳಾವೆ ನರಹರಿಶಾಸ್ತ್ರಿ
ಪೀಠಿಕೆ
ಇದು ಯವನ ಯಾಮಿನೀ ಕಧೆಗಳ ಜಾತಿಗೆ ಸೇರಿದ ಒಂದು ಕಲ್ಪಿತ ಕಥೆಯು, ಓದುಗರಿಗೆ ಮನೋರಂಜನೆಯಾಗುವಂತೆಯ, ಆ ಮೂಲಕವಾಗಿ ಲೌಕಿಕ ಧರ್ಮ ನೀತಿಗಳು ಮನಮುಟ್ಟುವಂತೆಯ ವಿಷಯಗಳನ್ನು ಚಿತ್ರಿಸುವುದೇ ಈ ಗ್ರಂಥರಚನೆಯ ಮುಖ್ಯೋದ್ದೇಶವ, ಆದಕಾರಣ ಇದರಲ್ಲಿ ಅನೇಕ ಅದು ತ ಮಾಯಾಮಂತ್ರ ತಂತ್ರ ವಿಷಯಗಳನ್ನೂ ಅಮಾನುಷಕೃತ್ಯಗಳನ್ನೂ ಹೊಂದಿಸಿ ಕಥಾಸಂವಿಧಾನವನ್ನು ಕಲ್ಪಿಸಿದೆ. ಇದರಲ್ಲಿ ಗುಣವನ್ನು ಗ್ರಹಿಸಿ ಪ್ರೋತ್ಸಾಹಿಸುವ ಭಾಷಾಭಿಮಾನಿಗಳಿಗೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುವೆನು.
೧-೧೦-೧೯೩೪ | ಬೆಂಗಳೂರು ನಗರ |
ಬೆಳ್ಳಾವೆ ನರಹರಿ ಶಾಸ್ತ್ರಿ,
ಶ್ರೀ ವಿಜಯ ವಿಲಾಸ
ಪ್ರಥಮ ತರಂಗ
ವಿಜಯದಶಮಿ ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು ; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು ; ದಿಕ್ಕುಗಳು ಕಳೆಯೇರಿದುವ , ಪಕ್ಷಿಗಳು ಮಧುರವಾಗಿ ಗಾನವಾಡ ಲಾರಂಭಿಸಿದವು , ಪೂರ್ವದಿಕ್ಕಾವಿಸಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ ಮಾರ್ತಾಂಡನು ಉದಯಿಸಿ ಲೋಕಕ್ಕೆ
ಆನಂದವನ್ನುಂಟುಮಾಡಿದನು. ಇಂತಹ ಶುಭ ಸಮಯದಲ್ಲಿ ರಾಣಿಯಾದ ಶೀಲವತೀದೇವಿಯು ಪ್ರಭಾಕರನಂತೆ ಪ್ರಭಾಮಯನಾದ ಪುತ್ರರತ್ನ ವನ್ನು ಪ್ರಸವಿಸಿದಳು. ಪುತೊದಯ ವಾರ್ತೆಯನ್ನು ಚೇಟಿಯ ಮುಖದಿಂದ ಕೇಳಿದ ಚಂದ್ರಸೇನರಾಯನ ಆನಂದ ಸಾಗರವು ಉಕ್ಕಿ ಮೇರೆ ಮೀರಿತು. ಶೀಲವತಿಯ ಅಭ್ಯುದಯವನ್ನು ನೋಡಿ ಸಹಿಸಲಾರದೆ ಇದ್ದ ಆಕೆಯ
ಸವತಿಯರಾದ ಸೌದಾಮಿನಿ ಕಾದಂಬಿನಿಯರೆಂಬ ರಾಜನ ಕಿರಿಯ ಹೆಂಡಿ ರಿಬ್ಬರ ಅಸೂಯಾ ಕ್ರೋಧಗಳೂ ಮೇರೆ ಮೀರಿದುವು. ಶಿಶುವಿನ ಜಾತಕವನ್ನು ಪರಿಶೀಲಿಸಿದ ದೈವಜ್ಞರು, ಇವನು ಪ್ರಯತ್ನಿಸಿದ ಸಕಲ ಕಾರ್ಯಗಳಲ್ಲಿಯೂ ಅರ್ಜುನನಂತೆ ವಿಜಯಶಾಲಿಯಾಗುವನೆಂದು ಹೇಳಿದರು. ಇದನ್ನು ಕೇಳಿ ರಾಜರಾಜ್ಯರು, ಈ ಕುಮಾರನು ವಿಜಯದಶಮಿಯ ಶುಭದಿನದಲ್ಲಿ ಜನಿಸಿ ದವನಾಗಿ, ವಿಜಯನಾದ ಅರ್ಜುನನಂತೆ ವಿಜಯಶಾಲಿಯೂ ಆಗುವುದರಿಂದ * ವಿಜಯಕುಮಾರ 'ನೆಂಬ ಹೆಸರು ಇವನಿಗೆ ಅನ್ವರ್ಥವಾಗುವುದೆಂದಾಲೋ
ಚಿಸಿ, ಶಿಶುವಿಗೆ ವಿಜಯಕುಮಾರನೆಂದೇ ಹೆಸರಿಟ್ಟರು. ಅನಂತರ ಶುಕ್ಲ ಪಕ್ಷದ
--------------------------------------------
ಸುಧಾಕರನಂತೆ ದಿನದಿನಕ್ಕೆ ಕಳೆಯೇರಿ ವರ್ಧಿಸುತ್ತಿದ್ದ ಮಗನನ್ನು ಅತ್ಯಂತ ಪ್ರೀತಿಯಿಂದ ಲಾಲಿಸಿ ಪಾಲಿಸುತ್ತ ಅವನ ಬಾಲಲೀಲೆಗಳಿಂದ ಆನಂದ ಪಡುತ್ತಿದ್ದರು.
ಕೆಲವು ಕಾಲದ ಮೇಲೆ ಈ ಕಿರಿಯ ಹೆಂಡಿರಿಬ್ಬರಿಗೂ ಒಬ್ಬೊಬ್ಬ ಕುಮಾರನು ಜನಿಸಿದನು. ಸೌದಾಮಿನಿಯ ಕುಮಾರನಿಗೆ ಭಾನುತೇಜ ನೆಂತಲೂ, ಕಾದಂಬಿನಿಯ ಮಗನಿಗೆ ರಾಜಹಂಸನೆಂತಲೂ ಹೆಸರಿಟ್ಟು ರಾಜ ರಾಜ್ಞೆಯರು ಇವರನ್ನೂ ಬಹಳ ಪ್ರೀತಿಯಿಂದ ಪೋಷಿಸುತ್ತಿದ್ದರು. ಹೀಗೆ ಮೂರು ಮಂದಿ ಪುತ್ರರೂ ತೇಜಸ್ವಿಗಳಾಗಿ ದಿನದಿನಕ್ಕೆ ಅಭಿವೃದ್ಧಿ ಹೊಂದು ತಿರುವಲ್ಲಿ ರಾಜನು ಇವರಿಗೆ ಕಾಲೋಚಿತ ಶುಭ ಕರ್ಮಗಳನ್ನು ನಡೆಯಿಸಿ ಅಕ್ಷರಾಭ್ಯಾಸವನ್ನು ಮಾಡಿಸಿ, ಶಾಸ್ತ್ರ ವಿದ್ಯೆಯನ್ನೂ , ಶಸ್ತ್ರಾಸ್ತ್ರ ಕಲೆ ಗಳನ್ನೂ ಕಲಿಸಲು ಗುರುಗಳ ವಶಕ್ಕೆ ಒಪ್ಪಿಸಿದನು. ಈ ಮೂವರು ಸಹೋದರರಲ್ಲಿ ವಿಜಯಕುಮಾರನು ಅತ್ಯಂತ ಪ್ರತಿಭಾಶಾಲಿಯಾಗಿಯೂ ಇಂಗಿತಜ್ಞನಾಗಿಯೂ ಇದ್ದುದರಿಂದ ಗುರುಗಳು ಬೋಧಿಸಿದ ವಿದ್ಯೆಯನ್ನು ಚೆನ್ನಾಗಿ ಕುಲಿತು ಗುರುಗಳಿಗೂ ತಂದೆಗೂ ಅತ್ಯಾನಂದವನ್ನುಂಟು ಮಾಡಿ ದನು. ಭಾನುತೇಜನೂ ರಾಜಹಂಸನೂ ವಿದ್ಯಾವಂತರಾದರೂ ವಿಜಯ ಕುಮಾರನಷ್ಟು ಶಾಂತಿಪ್ಪೆರ್ಯಗಳೂ, ವಿವೇಕವೂ ಅವರಲ್ಲಿರಲಿಲ್ಲ. ಅವನಂತೆ ಸುಂದರರಾಗಿಯೂ ಇರಲಿಲ್ಲ. ಕುಮಾರರು ವಿದ್ಯಾವಂತರೂ, ವಯೋವಂತರೂ, ಆದುದನ್ನು ನೋಡಿ ರಾಜನು ಇವರಿಗೆ ವಿವಾಹ ಮಾಡ ಬೇಕೆಂಬ ಉದ್ದೇಶದಿಂದ ತಕ್ಕ ಕನೈಯರನ್ನು ಹುಡುಕಲು, ಮಂತ್ರಿಯಾದ ಧುರಂಧರನೊಡನೆ ಆಲೋಚಿಸುತ್ತಿದ್ದನು. ಆದರೆ ಬಾಲ್ಯದಿಂದಲೂ ಒಬ್ಬರೇ ಗುರುಗಳಲ್ಲಿ ರಾಜಪುತ್ರರ ಜೊತೆಯಲ್ಲಿಯೇ ಶಾಸ್ತ್ರ ವಿದ್ಯಾಭ್ಯಾಸ ಮಾಡು ತಿದ್ದ ಮಂತ್ರಿ ಪುತ್ರಿಯಾದ ವಿದ್ಯಾಧರಿಯ ಚಿತ್ರವು, ಸೌಂದರ್ಯ ಪರಾಕ್ರಮ ಶೋಭಿತನಾದ ವಿಜಯನಲ್ಲಿ ಸಂಪೂರ್ಣವಾಗಿ ನೆಲೆಸಿದ್ದಿತು. ಹಾಗೆಯೇ ವಿದ್ಯಾಧರಿಯ ಸೌಂದರ್ಯ ಸೌಭಾಗ್ಯವು ವಿಜಯನ ಮನಸ್ಸನ್ನು
----------------------------------------------------
ಚೆನ್ನಾಗಿ ಅಪಹರಿಸಿ ಬಿಟ್ಟಿತ್ತು. ಹೀಗೆ ಇವರ ಪರಸ್ಪರಾನುರಾಗವು ದಿನದಿನಕ್ಕೆ ಹೆಚ್ಚುತ್ತಿರುವುದನ್ನು ಸಖೀಜನರ ಮುಖದಿಂದ ತಿಳಿದ ಶೀಲವತೀ ದೇವಿಯು ಪತಿಯಾದ ಚಂದ್ರಸೇನರಾಯನಿಗೆ ರಹಸ್ಯವಾಗಿ ತಿಳಿಸಲು ರಾಯನು ಬಹಳ ಸಂತೋಷಪಟ್ಟು, ಈ ದಾಂಪತ್ಯವು ಎಲ್ಲ ವಿಚಾರಗಳ ಲ್ಲಿಯೂ ಉತ್ತಮವಾಗಿರುವುದೆಂದು ಅಂಗೀಕರಿಸಿದನು. ಅನಂತರ ಮಂತ್ರಿ
ಯಾದ ಧುರಂಧರನೊಡನೆ ಈ ವಿಚಾರವನ್ನು ತಿಳಿಸಲು, ಆತನೂ ಸಹ ರಾಜ ಸಂಬಂಧವೊದಗಿದುದಕ್ಕಾಗಿ ಸಂತೋಷಪಟ್ಟು ವಿದ್ಯಾಧರಿಯನ್ನು ವಿಜಯ ಕುಮಾರನಿಗೆ ಕೊಟ್ಟು ವಿವಾಹಮಾಡಲು ಒಪ್ಪಿದನು.
ಲಾವಣ್ಯದಲ್ಲಿ ಸುರಕಾಮಿನಿಯರನ್ನು ತಿರಸ್ಕರಿಸುತ್ತಿದ್ದ ವಿದ್ಯಾಧರಿಯ ರೂಪಕ್ಕೆ ಸೋತು ವಿಜಯನ ತಮ್ಮಂದಿರಾದ ಭಾನುತೇಜನೂ, ರಾಜ ಹಂಸನೂ ಸಹ ಅವಳ ಅನುರಾಗಕ್ಕೆ ಪಾತ್ರರಾಗಬೇಕೆಂದು ಆಲೋಚಿಸಿ ಒಬ್ಬನು ಮತ್ತೊಬ್ಬನಿಗೆ ತಿಳಿಯದಂತೆ ನಾನಾ ಪ್ರಯತ್ನಗಳನ್ನು ಮಾಡುತ್ತ ಸಮಯ ಸಿಕ್ಕಿದಾಗಲೆಲ್ಲವೂ ಆಕೆಯಲ್ಲಿ ಸರಸೋಕ್ತಿಗಳನ್ನಾಡಲು ಹೋಗಿ ಆಕೆಯಿಂದ ತಿರಸ್ಕೃತರಾಗಿ ಜೋಲುಮೋರೆ ಹಾಕಿಕೊಂಡು ಹಿಂದಿರುಗು ತಿದ್ದರು. ವಿದ್ಯಾಧರಿಯ ವಿಶ್ವಾಸ ಪ್ರೀತಿಗಳಾದರೋ ವಿಜಯಕುಮಾರನಲ್ಲಿ ದಿನದಿನಕ್ಕೆ ಅತಿಶಯವಾಗುತ್ತ ಬಂದವು. ವಿಜಯನಿಗೆ ಕನಸು ಮನಸ್ಸು ಗಳಲ್ಲಿ ಯಾವಾಗಲೂ ವಿದ್ಯಾಧರಿಯ ಬಿಂಬವೇ ಕಾಣಿಸುತ್ತಿತ್ತು. ಇಬ್ಬರೂ ತಮ್ಮ ವಿವಾಹ ಸಮಯವನ್ನು ಅತಿ ಕುತೂಹಲದಿಂದ ಎದುರುನೋಡುತ್ತ ದಿನಗಳನ್ನು ಯುಗಗಳಂತೆ ಕಳೆಯುತ್ತಿದ್ದರು.
ಹೀಗಿರುವಲ್ಲಿ ಚಂದ್ರಸೇನರಾಜನ ಆಸ್ಥಾನಕ್ಕೆ ಶಂಕರಾನಂದನೆಂಬ ಸಿದ್ದನು ಬಂದು ರಾಜನಿಂದ ಸತ್ಕೃತನಾಗಿ ಆತನ ಜನ್ಮಾದಿಯಾಗಿ ಜೀವ ಮಾನದ ಫಲಗಳೆಲ್ಲವನ್ನೂ ವಿವರವಾಗಿ ತಿಳಿಸಿ ರಾಜನನ್ನು ಕುರಿತು “ಎಲೈ ರಾಜೇಂದ್ರಾ ! ನೀನು ಹಿಮಾಚಲ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ಶಂಕರನನ್ನು ಕುರಿತು ತಪಸ್ಸನ್ನಾಚರಿಸು, ಅದರಿಂದ ಸಂತುಷ್ಟನಾದ ಪರ
-------------------------------------------------
ಮೇಶ್ವರನು ನಿನಗೆ ನಿತ್ಯವಿಜಯಕಾರಣವಾದ ವರವೊಂದನ್ನು ಕರುಣಿಸು ವನು. ಅದರಿಂದ ಮುಂದೆ ನೀನು ಬಹಳ ಸುಖದಿಂದ ಬಾಳುವೆ.” ಎಂದು ಹೇಳಿ ಆತನಿಗೆ ಶಿವಪಂಚಾಕ್ಷರೀ ಮಂತ್ರವನ್ನು ಪದೇಶಿಸಿ, ರಾಜನಿಂದ ಪಾರಿ ತೋಷಿಕವನ್ನು ಪಡೆದು ಪ್ರಯಾಣ ಮಾಡಿದನು. ತನ್ನ ಅನುಭವಗಳೆಲ್ಲ
ವನ್ನೂ ನಿಜವಾಗಿ ತಿಳಿಸಿದ ಸಿದ್ದ ಪುರುಷನ ಪ್ರತಿಭಾಶಕ್ತಿಗಳಿಗಾಶ್ಚರ್ಯಾ ಸಂದ ಪರವಶನಾದ ರಾಜನಿಗೆ ತಪಸ್ಸಿಗೆ ಹೊರಡುವ ಕುತೂಹಲವು ಪ್ರಬಲವಾಯಿತು. ಇದರಿಂದ ಮಗನ ವಿವಾಹ ವಿಚಾರವನ್ನು ತತ್ಕಾಲಕ್ಕೆ ನಿಲ್ಲಿಸಿ ಧುರಂಧರನ ವಶಕ್ಕೆ ರಾಜ್ಯವನ್ನೊಪ್ಪಿಸಿ ಪತ್ನಿ ಪುತ್ರರಿಗೆ ಕಾಲೋ ಚಿತವಾದ ಎಚ್ಚರಿಕೆಯನ್ನೂ ಬುದ್ದಿವಾದಗಳನ್ನೂ ಹೇಳಿ ಚಂದ್ರಸೇನ ರಾಯನು ಹಿಮಾಚಲ ಪ್ರಾಂತ್ಯಕ್ಕೆ ಪ್ರಯಾಣ ಮಾಡಿದನು.
ರಾಜನು, ಮಂಜುಮುಚ್ಚಿ ಸ್ಪಟಿಕರಾಶಿಗಳಂತೆ ಕಂಗೊಳಿಸುತ್ತ ಮುಗಿಲನ್ನು ಮುಟ್ಟುವಂತಿರುವ ಕೋಡುಗಲ್ಲುಗಳಿಂದ ಕೂಡಿದ್ದ, ನಿರ್ಜನ ವಾದ ಆ ಹಿಮಾಚಲದ ಬಳಿಯನ್ನು ಸೇರಿ, ಹಗಲಿರುಳೂ ಅವಿಚ್ಛಿನ್ನ | ವಾಗಿ ಸುರಿಯುತ್ತಿರುವ ಮಂಜಿಗೂ, ಚಳಿಗಾಳಿಗಳಿಗೂ ಸ್ವಲ್ಪವೂ ಹಿಂದೆಗೆ ಯದೆ ಬದರಿಕಾಶ್ರಮದಲ್ಲಿ ಪರಮಭಕ್ತಿಯಿಂದ ಮಹಾದೇವನನ್ನು ಕುರಿತು ಮಹಾ ತಪಸ್ಸನ್ನಾಚರಿಸುತ್ತಿದ್ದನು. ಅದೇ ಕಾಲದಲ್ಲಿಯೇ ರತ್ನ ದೀಪಾಧಿ ಪತಿಯಾದ ಅಗ್ನಿಶಿಖನೆಂಬ ರಾಕ್ಷಸೇಂದ್ರನೂ ಸಹ ತಾನು ಅಜೇಯ ನಾಗಿರುವಂತೆ ಶಂಕರನಿಂದ ವರವನ್ನು ಪಡೆಯಬೇಕೆಂದು ಘೋರ ತಪಸ್ಸನ್ನಾಚರಿಸುವುದಕ್ಕಾಗಿ ಚಂದ್ರಸೇನರಾಜನು ಕುಳಿತಿದ್ದ ಕಡೆಯಲ್ಲಿಯೇ ಬಂದು ಕುಳಿತನು. ಹೀಗೆ ಮಾನವೇಂದ್ರ ದಾನವೇಂದ್ರರಿಬ್ಬರೂ ಘೋರ ತಪಸ್ಸಿನಲ್ಲಿ ಕುಳಿತಿರಲು ಅನೇಕ ದಿನಗಳು ಕಳೆದುಹೋದುವು. ಕಡೆಗೆ ಪರಮೇಶ್ವರನು ಇವರ ಭಕ್ತಿಗೆ ಮೆಚ್ಚಿ ಇಬ್ಬರಿಗೂ ಏಕಕಾಲದಲ್ಲಿ ಪ್ರಸನ್ನ ನಾಗಿ ಪ್ರತ್ಯಕ್ಷನಾದನು. ಸ್ಪಟಿಕ ವಿಗ್ರಹದಂತಿರುವ ತನ್ನ ಶರೀರದಲ್ಲಿ ಬಳ್ಳಿ ಮಿಂಚುಗಳಂತೆ ಕಂಗೊಳಿಸುವ ವಿಭೂತಿ ಪುಂಡ್ರಗಳಿಂದಲೂ, ಸರ್ಪಾ
-----------------------------------------------
ಭರಣಗಳ ರತ್ನ ಕಾಂತಿಗಳಿಂದಲೂ, ಶಿರದಲ್ಲಿ ಧರಿಸಿರುವ ಬಾಲಚಂದ್ರನ ಕಳೆಗಳಿಂದ ಥಳಥಳಿಸುವ ದೇವಗಂಗೆಯಿಂದೊಪ್ಪುವ ಜಟಾಮುಕುಟ ದಿಂದಲೂ, ಮನೋಹರ ಸ್ಪಟಿಕಮಾಲಾ ಕಲಾಪಗಳಿಂದಲೂ, ತೇಜೋ ಮಯನಾಗಿ, ಶೂಲ ಖಡ್ಗ ಡಮರುಗ ಪರಶು ಮೃಗಾಲಂಕೃತ ಹಸ್ತನಾಗಿ ಪ್ರಕಾಶಿಸುತ್ತ, ಬೆಂಗಳನ್ನು ಧಿಕ್ಕರಿಸುವ ಸುಂದರ ಮಂದಹಾಸದಿಂದ ಬಂದು ನಿಂತು ಮಹಾದೇವನು ಭಕ್ತರಿಬ್ಬರನ್ನೂ ಆದರದಿಂದ ಮೈದಡವಿ ಎಚ್ಚರಿಸಿದನು. ಆಗ ಆ ತಪಸ್ವಿಗಳಿಬ್ಬರೂ ಆಶ್ಚರ್ಯದಿಂದೆದ್ದು, ಶಂಕರನ ದಿವ್ಯಾಕಾರವನ್ನು ನೋಡಿ, ಪರಮಾನಂದ ಪರವಶರಾಗಿ, ಸಾಷ್ಟಾಂಗ ನಮಸ್ಕಾರಮಾಡಿ ಕೈ ಮುಗಿದು ವಿಧವಿಧವಾಗಿ ಸಾಂಬಶಿವನನ್ನು ಸ್ತುತಿಸಿ ಆನಂದಾಶ್ರುಗಳಿಂದ ನೆನೆದರು. ಆಗ ಭಕ್ತವತ್ಸಲನಾದ ಶಂಕರನು, ರತ್ನ ಖಚಿತವಾದ ಸುವರ್ಣಬಾಣವೊಂದನ್ನು ಕೈಯಲ್ಲಿ ಹಿಡಿದು ಭಕ್ತರಿಬ್ಬ ರನ್ನೂ ನೋಡಿ, “ಎಲೈ ಭಕ್ತಶಿರೋಮಣಿಗಳಾದ ದನುಜೇಂದ್ರ ಮನುಜೇಂದ್ರರೇ ! ನಾನು ನಿಮ್ಮ ಭಕ್ತಿಗೆ ಮೆಚ್ಚಿದೆನು. ಇದೋ ಈ ರತ್ನ ಖಚಿತವಾದ ಸುವರ್ಣಬಾಣವು ಯಾರಲ್ಲಿರುವುದೋ ಆತನು ನಿತ್ಯವಿಜಯ ಶಾಲಿಯಾಗಿ ಇಷ್ಟಾರ್ಥಗಳನ್ನು ಪಡೆದು ಸುಖದಿಂದಿರುವನು. ಆದುದರಿಂದ ಈಗ ನೀವಿಬ್ಬರೂ ನಿಮ್ಮ ನಿಮ್ಮ ಶಕ್ತಿಗಳನ್ನು ತೋರಿಸಿದರೆ ನಿಮ್ಮಲ್ಲಿ ಹೆಚ್ಚು ಬಲಶಾಲಿಯಾದವನಿಗೆ ಈ ಶರವನ್ನು ಕೊಡುವೆನು ” ಎಂದನು. ಇದನ್ನು ಕೇಳಿದ ಕೂಡಲೇ ಅಹಂಕಾರ ಮತ್ತನೂ ಘೋರಾಕಾರನೂ ಆದ ಅಗ್ನಿ ಶಿಖನಿಗೆ ಬಹಳ ಸಂತೋಷವಾಯಿತು. ಆದಕಾರಣ ಅವನು ಶಂಕರ ನನ್ನು ನೋಡಿ " ಎಲೈ ಸ್ವಾಮಿಯೇ, ಈ ನಿನ್ನ ನಿಬಂಧನೆಯಿಂದಲೇ ನಿನಗೆ ನನ್ನಲ್ಲಿ ಅತಿಶಯವಾದ ಪ್ರೀತಿಯಿರುವುದೆಂದು ವ್ಯಕ್ತವಾಯಿತು. ಕುಲಗಿರಿ ಗಳನ್ನು ಚೆಂಡಾಡಬಲ್ಲ ಬಾಹು ಒಲದಿಂದ ಪ್ರಚಂಡ ಪರಾಕ್ರಮಿಯೆನಿಸಿರುವ ಲೋಕವಿಖ್ಯಾತನಾದ ಈ ಅಗ್ನಿ ಶಿಖನ ಮುಂದೆ ಈ ಬಡಮಾನವನು ಧೈರ್ಯ ದಿಂದ ನಿಂತು ಹೋರಾಡಬಲ್ಲನೆ! ಈ ತೃಣಪ್ರಾಯನಾದ ನರನೆಷ್ಟರವನು !
ವಿಜಯ ವಿಲಾಸ ಈ ಅಲ್ಪನ ಬಲವೆಷ್ಟರದು ! ಅಗ್ನಿ ಯ ಮುಂದೆ ತೃಣದ ಪೌರುಷವೇ ? ಇದೋ ಈಗಲೇ ನನ್ನ ಪೌರುಷಾಗ್ನಿ ಜ್ವಾಲೆಗಳಿಂದ ಈ ಬಡಮಾನವನನ್ನು ಸುಟ್ಟು ವಿಜಯಶಾಲಿಯಾಗಿ ನಿನಗೆ ನೇತ್ರೋತ್ಸವವನ್ನು ಂಟುಮಾಡಿ ನಿನ್ನಿಂದ ರತ್ನ ಶರವನ್ನು ಪಡೆಯುವೆನು.” ಎಂದು ಅಪರಿಮಿತವಾಗಿ ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತ, ಹೂಂಕರಿಸಿ ಬಳಿಯಲ್ಲಿ ನಿಂತಿದ್ದ ಚಂದ್ರಸೇನ ರಾಜನ ಕೈಯನ್ನು ಹಿಡಿದು ಮಲ್ಲಯುದ್ಧಕ್ಕೆ ಸಿದ್ಧನಾಗೆಂದು ಎಳೆದು ಮೂದಲಿಸಿದನು. ರಾಜನು ಮಹಾ ಪ್ರತಾಪಶಾಲಿಯಾದರೂ ತ್ರಿಪುರಾಂತ ಕನ ಮುಂದೆ ಅಲ್ಪನಾದ ತನ್ನ ಪೌರುಷವೆಷ್ಟರದೆಂಬ ದೈನ್ಯದಿಂದಲೂ, ಯುದ್ಧದಲ್ಲಿ ಜಯಪರಾಜಯಗಳು ದೈವಾಧೀನವೆಂದು ತಿಳಿದವನಾದುದ ರಿಂದಲೂ, ಸ್ವಲ್ಪವೂ ಅಹಂಕಾರಪಡದೆ ಮಹಾದೇವನ ಪಾದಾರವಿಂದ ಗಳಿಗೆ ನಮಸ್ಕರಿಸಿ " ಪರಮೇಶ್ವರಾ! ಭಕ್ತವತ್ಸಲನಾದ ನೀನು ನಿನ್ನ ಭಕ್ತ ನಲ್ಲಿ ಕಟಾಕ್ಷ ವನ್ನಿಟ್ಟು ಪಾಲಿಸು ” ಎಂದು ಪ್ರಾರ್ಥಿಸಿ ಅಗ್ನಿ ಶಿಖನೊಡನೆ ಮಲ್ಲಯುದ್ದವನ್ನಾರಂಭಿಸಿದನು. ಮಹಾ ಪರಾಕ್ರಮಿಗಳಾದ ಆ ವೀರರ ಪಾದಘಾತಗಳಿಂದ ಭೂಮಿಯು ಅದಿರುವಂತಾಯ್ತು. ಭುಜಾಸ್ಟಾಲನ ಶಬ್ದದಿಂದ ದಿಕ್ಕಟವು ಒಡೆಯುವಂತಾಯಿತು. ವಿಧವಿಧ ಬಂಧಗಳಿಂದ ಮಹಾ ಚಾತುರ್ಯವನ್ನು ತೋರಿಸಿ ಹೋರಾಡಿದ ಅವರಿಬ್ಬರ ಪರಾಕ್ರಮ ಕೌಶಲಗಳಿಗೆ ಪರಮೇಶ್ವರನು ಮೆಚ್ಚಿ ಸಂತೋಷಪಡುತ್ತಿದ್ದನು. ರಾಕ್ಷಸನು ರಾಜನನ್ನು ಹೆಮ್ಮೆಯಿಂದ ಅವಹೇಳನಮಾಡುತ್ತ, ಪೌರುಷೋಕ್ತಿಗಳನ್ನಾ ಡುತ್ತ, ಆತನ ಬೆನ್ನನ್ನು ಕಚ್ಚಿ ಮೇಲಕ್ಕೆ ಎತ್ತಿ ನೆಲಕ್ಕೆ ಅಪ್ಪಳಿಸಬೇಕೆಂದು ಹೋಗಲು ರಾಜನು ಈ ದಡಿಗನನ್ನು ಯುಕ್ತಿಯಿಂದ ಒಂದೇಸಲಕ್ಕೆ
ಫಕ್ಕನೆ ಮೇಲಕ್ಕೆ ಚಿಮ್ಮಿ ಎರಡು ಕಾಲುಗಳನ್ನೂ ಹಿಡಿದು ಗಿರಿಗಿರನೆ ತಿರುಗಿಸಿ ಬೀಸಿ ನೆಲಕ್ಕೆ ಬಡಿದೆಸೆದನು. ಆಗ ಅಗ್ನಿ ಶಿಖನು ರಕ್ತ ಮುಖ ನಾಗಿ, ಬಳಲಿ ಬೆಂಡಾಗಿ ಮೂರ್ಛಿ ಬಿದ್ದನು. ಶಂಕರನು ಚಂದ್ರಸೇನರಾಜನ ಪರಾಕ್ರಮಕ್ಕೆ ಆಶ್ಚರ್ಯಪಟ್ಟು ಆನಂದದಿಂದ ರತ್ನ ಬಾಣವನ್ನಾ ತನಿಗೆ
-----------------------------------------------
ಕೊಟ್ಟು ವಿಜಯಶಾಲಿಯಾಗೆಂದಾಶೀರ್ವದಿಸಿ, ಅಂತರ್ಧಾನನಾದನು. ಚಂದ್ರಸೇನರಾಯನು ಪರಮಾನಂದದಿಂದ ಬಾಣವನ್ನು ತೆಗೆದುಕೊಂಡು ಭವಿಷ್ಯವನ್ನು ಹೇಳಿದ ಸಿದ್ದ ಪುರುಷನನ್ನು ಮನಸ್ಸಿನಲ್ಲಿ ಕೊಂಡಾಡುತ್ತ ತನ್ನ ರಾಜಧಾನಿಯಾದ ವೇದವತೀ ನಗರವನ್ನು ಕುರಿತು ಪ್ರಯಾಣಮಾಡಿದನು. ಬಳಲಿ, ಶವದಂತೆ ಮೂರ್ಛ ಬಿದ್ದಿದ್ದ ಅಗ್ನಿ ಶಿಖನಿಗೆ ಇಷ್ಟು ಹೊತ್ತಿಗೆ ಮೂರ್ಛ ಯಿಂದೆಚ್ಚರವಾಯಿತು. ಆ ಕೂಡಲೇ ಎದ್ದು, ಮತ್ತೆ ಚಂದ್ರಸೇನನೊಡನೆ ಯುದ್ದ ಮಾಡಿ ಅವನನ್ನು ಸದೆಬಡಿದು ರತ್ನ ಶರವನ್ನು ಶಿವನಿಂದ ತಾನೇ ಪಡೆದುಕೊಳ್ಳಬೇಕೆಂಬ ಕೊಧಾತುರಗಳಿಂದ, ಅವನು ಮುಂದೆ ಬಂದು ಸುತ್ತಲೂ ನೋಡುವಲ್ಲಿ ಚಂದ್ರಸೇನನೂ ಇರಲಿಲ್ಲ, ಚಂದ್ರಶೇಖರನೂ ಇರ ಲಿಲ್ಲ. ಸ್ವಲ್ಪ ಹೊತ್ತು ಸಬ್ದನಾಗಿ ನಿಂತಿದ್ದು, ಕಡೆಗೆ ಚಂದ್ರಸೇನನಿಗೆ ಶರವು ಲಭಿಸಿತೆಂದು ತಿಳಿದು ಅಗ್ನಿ ಶಿಖನು ಭಗ್ನ ಮನೋರಥನಾಗಿ ಕ್ರೋಧಾಗ್ನಿ
ಬಂದ ಬೇಯುತ್ತ ಚಂದ್ರಸೇನನಿಗೆ ತಕ್ಕುದನ್ನು ಮಾಡಿ ಅವನಿಂದ ಹೇಗಾ ದರೂ ಆ ರತ್ನ ಬಾಣವನ್ನು ಅಪಹರಿಸದೆ ಬಿಡೆನೆಂದು ಶಪಥಮಾಡಿಕೊಂಡು ಹೊರಟನು. ಅನಂತರ ಕಾಮರೂಪಿಯಾದ ಆ ರಾಕ್ಷಸನು ತಾನು ಒಂದು ಹದ್ದಿನರೂಪವನ್ನು ಧರಿಸಿ ಅಂತರಿಕ್ಷಕ್ಕೆ ಹಾರಿಹೋಗಿ ಅಲ್ಲಿಂದ ನೋಡಿ ರಾಜನಿರುವ ಸ್ಥಳವನ್ನು ಕಂಡುಹಿಡಿದು ಉಪಾಯದಿಂದ ಶರವನ್ನು ಅಪಹರಿಸ ಬೇಕೆಂದು ಸಂಕಲ್ಪಿಸಿದನು. ಆದರೆ ಇಷ್ಟು ಹೊತ್ತಿಗೆ ಸಂಧ್ಯಾಕಾಲವಾ ಗುತ್ತ ಬಂತು. ಸೂರ್ಯನು ಅರುಣ ಕಿರಣಗಳಿಂದ ಕೂಡಿ ಅಸ್ಕಾಚಲದಿಂದ ಅಪರಾಂಬುಧಿಗೆ ಇಳಿಯುತ್ತಿದ್ದನು. ರಾಕ್ಷಸನೂ ಸಹ ಕಾಂತಿಗುಂದಿ, ಮಲ್ಲಯುದ್ಧದಿಂದ ಮೈನೊಂದು ಬಳಲಿ ಬೆಂಡಾಗಿ ವಿಶ್ರಾಂತಿಯನ್ನು ಬಯ ಸುತ್ತಿದ್ದನು. ಇದರಿಂದ ಆ ರಾತ್ರಿಯನ್ನು ಕಳೆದು ಮಾರನೆಯ ದಿನ ತನ್ನ ಮಾಯಾ ಗೃಢವೇಷದಿಂದ ಶರಾನ್ವೇಷಣಕ್ಕೆ ಹೊರಡಬೇಕೆಂದು ನಿಶ್ಚಯಿಸಿ ಅಗ್ನಿಶಿಖನು ತನ್ನ ರಾಜಧಾನಿಯಾದ ರತ್ನ ದ್ವೀಪಕ್ಕೆ ಹೊರಟುಹೋದನು.
------------------------------------------------
ದ್ವಿತೀಯ ತರಂಗ
ಇತ್ತಲಾ ವೇದವತೀ ನಗರದಲ್ಲಿ ರಾಜನು ತಪಸ್ಸಿಗೆ ಹೋದುದು ಮೊದಲಾಗಿ ಪರಮ ಪತಿವ್ರತೆಯಾದ ಶೀಲವತಿಯು ತನ್ನ ಪತಿಗೆ ಯಾವಾ ಗಲೂ ಶುಭವನ್ನೇ ಬಯಸುತ್ತ, ಆತನು ಯತ್ನಿಸಿದ್ದ ಕಾರ್ಯದಲ್ಲಿ ಜಯಶಾಲಿ ಯಾಗಿ ಇರುವಂತೆ ಅನುಗ್ರಹಿಸಲು ತ್ರಿಕಾಲದಲ್ಲಿಯೂ ಸರ್ವಮಂಗಳೆ ಯನ್ನಾರಾಧಿಸುತ್ತ, ಪತಿಯ ಆಗಮವನ್ನು ಅತಿ ಕುತೂಹಲದಿಂದ ನಿರೀಕ್ಷಿಸಿಕೊಂಡು ನಿಯಮನಿರತೆಯಾಗಿ ಕಾಲವನ್ನು ಕಳೆಯುತ್ತಿದ್ದಳು.
ವಿಜಯ ವಿದ್ಯಾಧರಿಯರು, ತಮ್ಮ ವಿವಾಹ ಮಂಗಳವ ನೆರವೇರಲು ವಿಳಂಬವಾದುದಕ್ಕಾಗಿ ವಿರಹವ್ಯಧೆಯಿಂದ ದಿನದಿನಕ್ಕೆ ಕೃಶರಾಗುತ್ತ, ಚಂದ್ರಸೇನರಾಯನು ವಿಜಯಶಾಲಿಯಾಗಿ ಬರುವುದನ್ನೆ ಅತಿ ಕುತೂಹಲ ದಿಂದ ಎದುರುನೋಡುತ್ತ, ಕನಸಿನಲ್ಲಿಯೂ ಸಹ ವಿವಾಹವಿಚಾರವಲ್ಲದೆ ಬೇರೊಂದನ್ನು ನೆನೆಯದೆ ಬಹು ಕಷ್ಟದಿಂದ ದಿನಗಳನ್ನು ನೂಕುತ್ತಿದ್ದರು.
ವಿದ್ಯಾಧರಿಯನ್ನು ಪಾಣಿಗ್ರಹಣಮಾಡಿಕೊಳ್ಳಬೇಕೆಂದು ಮೋಹಾ ತುರರಾಗಿದ್ದ ಭಾನುತೇಜನೂ ರಾಜಹಂಸನೂ ಸಹ ಹೇಗಾದರೂ ವಿಜಯ ವಿದ್ಯಾಧರಿಯರ ಪರಸ್ಪರಾನುರಾಗವನ್ನು ಒಡೆದು ಹಾಕಿ ತಾವು ಅವಳ ಪ್ರೀತಿಯನ್ನು ಸಂಪಾದಿಸಬೇಕೆಂದು ಒಬ್ಬನು ಮತ್ತೊಬ್ಬನಿಗೆ ಗೋಚರ ವಿಲ್ಲದೆ ನಾನಾ ಪ್ರಯತ್ನಗಳನ್ನು ಮಾಡಿ ವಿಫಲರಾದರು. ಇದರಿಂದ ವಿಜಯ ನಲ್ಲಿ ಅವರಿಗೆ ಅಸೂಯೆಯು ದಿನದಿನಕ್ಕೆ ಹೆಚ್ಚುತ್ತಲೇ ಬಂತು, ಒಂದಾ ನೊಂದು ದಿನ ಇವರಿವರ ಮನೋಭಾವಗಳು ಪರಸ್ಪರ ವ್ಯಕ್ತವಾದುವು. ಆದರೆ ಇವರಿಗೆ ವಿದ್ಯಾಧರಿಯ ಮೇಲಣ ಮೋಹವೂ ವಿಜಯನ ಮೇಲಣ ಅಸೂಯೆಯೂ ಸಮಾನವಾಗಿದ್ದು ವು. ಕಡೆಗೆ ತಮ್ಮಿಬ್ಬರಲ್ಲಿ ಯಾರಾದರೂ ಒಬ್ಬನು ವಿದ್ಯಾಧರಿಯನ್ನು ವಿವಾಹಮಾಡಿಕೊಳ್ಳಬೇಕಲ್ಲದೆ ಅವಳು ವಿಜಯನ
--------------------------------------------
ಕೈಸೇರುವಂತೆ ಎಂದಿಗೂ ಅವಕಾಶಕೊಡಕೂಡದೆಂದು ತಮ್ಮ ತಮ್ಮಲ್ಲಿ ನಿಶ್ಚಯಿಸಿಕೊಂಡರು. ಆದರೂ ಹೇಗಾದರೂ ಮಾಡಿ ತಾನೇ ಅವಳನ್ನು ವಿವಾಹ ಮಾಡಿಕೊಳ್ಳಬೇಕೆಂದು ಒಬ್ಬನು ಮತ್ತೊಬ್ಬನಿಗೆ ಮೋಸ ಮಾಡಲು ಆಂತರ್ಯದಲ್ಲಿ ಆಲೋಚಿಸಿಕೊಂಡನು. ಅನಂತರ ಇವರಿಬ್ಬರೂ ಅವಳನ್ನು ಉಪಾಯದಿಂದ ಸಮ್ಮತಿಪಡಿಸಬೇಕೆಂದು ಆಕೆಯು ಉದ್ಯಾನ ದಲ್ಲಿ ಶಿಲಾತಲ್ಪದ ಮೇಲೆ ವಿರಹವ್ಯಧೆಯಿಂದ ಕುಳಿತಿರುವ ಸಮಯದಲ್ಲಿ ಹೋಗಿ, ಆಕೆಯಲ್ಲಿ ಸರಸೋಕ್ತಿಗಳನ್ನಾರಂಭಿಸಿ ತಮ್ಮ ಭಾವನೆಯನ್ನು ಸೂಚಿಸಿ ಪ್ರಾರ್ಥಿಸಿಕೊಂಡರು. ವಿದ್ಯಾಧರಿಯಾದರೋ ನಿಜಪ್ರೇಮ ಯುಕ್ತಳೂ, ನಿಶ್ಚಲಮನಸ್ಕಳೂ ಆದುದರಿಂದ ಇವರ ಪ್ರಾರ್ಥನೆಯನ್ನು ತಿರಸ್ಕರಿಸಿ, ರೂಪದಲ್ಲಿ ಮನ್ಮಥನನ್ನೂ, ತೇಜಸ್ಸಿನಲ್ಲಿ ಚಂದ್ರನನ್ನೂ , ಪರಾ ಕ್ರಮದಲ್ಲಿ ಪಾರ್ಧನನ್ನೂ ಹೋಲುತ್ತಿರುವ ವಿಜಯಕುಮಾರನನ್ನೇ ತನ್ನ ಪತಿಯೆಂದು ಮನಸ್ಸಿನಲ್ಲಿ ನಿಶ್ಚಯಿಸಿರುವುದಾಗಿಯೂ, ಉಳಿದ ಪುರುಷರು ತನಗೆ ಸಹೋದರ ಸಮಾನರೆಂತಲೂ ಹೇಳಿ, ಇನ್ನು ಮುಂದೆ ತನ್ನಲ್ಲಿ ಈ ವಿಚಾರವನ್ನು ಹೇಳಬಾರದೆಂದು ರಾಜಕುಮಾರರಿಬ್ಬರಿಗೂ ಕೈಮುಗಿದು ಪ್ರಾರ್ಥಿಸಿಕೊಂಡಳು. ಆದರೂ ಬಿಡದೆ ಈ ಮೋಹಾಂಧರು ಆಕೆಯನ್ನು ಅತಿಯಾಗಿ ಪೀಡಿಸಲಾರಂಭಿಸಿದರು. ಆಕೆಯ ನಿಶ್ಚಲಮನಸ್ಸಿನ ಮುಂದೆ ಇವರ ಹರಟೆಗಳೆಲ್ಲವೂ ವ್ಯರ್ಥವಾದವು. ಕಡೆಗೆ ತಮ್ಮಿಂದ ಆಕೆಯ ಮನವ ನ್ಯೂ ಪ್ಪಿಸಲು ಅಸಾಧ್ಯವೆಂದು ತಿಳಿದು ತಮ್ಮ ತಾಯಿಯರಾದ ಸೌದಾಮಿನಿ ಕಾದಂಬಿನಿಯರ ಮೂಲಕ ಅವಳ ಮನಸ್ಸನ್ನು ತಮ್ಮ ಕಡೆಗೆ ತಿರುಗಿಸಿ ಕೊಳ್ಳಬೇಕೆಂದಾಲೋಚಿಸಿ ಅರಮನೆಗೆ ಬಂದು ತಾಯಿಯರೊಡನೆ ಎಲ್ಲ ವೃತ್ತಾಂತವನ್ನೂ ಹೇಳಿಕೊಂಡು ಹೇಗಾದರೂ ಆ ವಿದ್ಯಾಧರಿಯನ್ನು ತಮ್ಮಿಬ್ಬರಲ್ಲಿ ಒಬ್ಬರಿಗೆ ತಂದು ವಿವಾಹ ಮಾಡಲೇ ಬೇಕೆಂತಲೂ, ಇಲ್ಲವಾದರೆ ತಾವು ಪ್ರಾಣತ್ಯಾಗವನ್ನೆ ಮಾಡಿಕೊಳ್ಳುವೆವೆಂತಲೂ ಹೇಳಿಕೊಂಡರು. ಮೊದಲಿಂದಲೂ ಸವತಿಯಾದ ಶೀಲವತಿಯಮೇಲೆಯೂ ಅವಳ ಮಗನಾದ
---------------------------------------------
ವಿಜಯನಮೇಲೆಯೂ ಅಸೂಯೆಯಿಂದ ಬೆಂಕಿಯನ್ನೇ ಕಾರುತ್ತಿದ್ದ ಸೌದಾಮಿನಿ ಕಾದಂಬಿನಿಯರ ಕ್ರೋಧಾಗ್ನಿಗೆ ಇದು ಮತ್ತಷ್ಟು ತೈಲವನ್ನು ಸುರಿದಂತಾಯಿತು. ಆಗ ಅವರಿಬ್ಬರೂ ಒಂದಾಗಿ, ಹೇಗಾದರೂ ಆ ಶೀಲವತಿ ಯನ್ನೂ ಅವಳ ಮಗನನ್ನೂ ರಾಜನ ಆಗ್ರಹಕ್ಕೆ ಪಾತ್ರರನ್ನಾಗಿ ಮಾಡಿದರೆ ತಮ್ಮ ಮಾರ್ಗವು ನಿಷ್ಕಂಟಕವಾಗುವುದೆಂದು ಆಲೋಚಿಸಿ, ತಾವು ಆ ವಿದ್ಯಾಧರಿಯನ್ನು ವಿಜಯನಿಗೆ ತಪ್ಪಿಸಿ ಭಾನುತೇಜನಿಗಾಗಲಿ, ರಾಜಹಂಸನಿ ಗಾಗಲಿ ತಂದು ವಿವಾಹ ಮಾಡಿಸುತ್ತೇವೆಂದು ಮಕ್ಕಳಿಬ್ಬರಿಗೂ ಭರವಸೆ ಹೇಳಿ ರಾಜನ ಆಗಮನವನ್ನೆ ನಿರೀಕ್ಷಿಸಿಕೊಂಡಿದ್ದರು.
ಹೀಗಿರಲು ಶಂಕರನಿಂದ ರತ್ನ ಬಾಣವನ್ನು ಪಡೆದು ಲಬ್ದ ಮನೋರಥ ನಾಗಿ ರಾಜನು ರಾಜಧಾನಿಗೆ ಹಿಂದಿರುಗಿ ಬಂದನು, ಇಷ್ಟಾರ್ಥವನ್ನು ಪಡೆದು ಕುತೂಹಲದಿಂದ ಬಂದ ರಾಜನನ್ನು ನೋಡಿ ಪತ್ನಿ ಯರೂ, ಪುತ್ರರೂ ಮಂತ್ರಿಯಾದ ಧುರಂಧರನೂ ಸಹ ಪರಮಾನಂದ ಪರವಶರಾದರು. ಪ್ರಜೆ ಗಳೆಲ್ಲರೂ ಆನಂದಾಂಬುಧಿಯಲ್ಲಿ ಓಲಾಡುತ್ತ ರಾಜನನ್ನು ಕೊಂಡಾಡಿದರು. ರಾಜನೂ ಸಹ ತನಗೆ ಒದಗಿದ ದೈವಾನುಗ್ರಹದಿಂದ ಸಂತೋಷಪಟ್ಟು ಎಲ್ಲರನ್ನೂ ಅಭಿನಂದಿಸಿ ಜೇಷ್ಠ ಪುತ್ರನಾದ ವಿಜಯನ ವಿವಾಹ ಮಂಗಳ ವನ್ನು ನೆರವೇರಿಸುವ ಅಭಿಲಾಷೆಯನ್ನು ಸೂಚಿಸಿದನು. ಅಲ್ಲದೆ ಶಂಕರನಿಂದ ಅಬ್ದ ವಾದ ಮತ್ತು ವಿಜಯಪ್ರದವಾದ ರತ್ನ ಬಾಣವನ್ನು ಮುಂದೆ ತನ್ನ ಸ್ಥಾನವನ್ನ ಲಂಕರಿಸುವ ಯುವರಾಜನಾದ ವಿಜಯಕುಮಾರನಿಗೆ ವಿವಾಹ ಸಮಯದಲ್ಲಿ ಕೊಟ್ಟು ಆಶೀರ್ವದಿಸಬೇಕೆಂಬ ತನ್ನ ಕುತೂಹಲವನ್ನು ತನ್ನ ಮಂತ್ರಿ ಸಾಮಾಜಿಕರಿಗೂ ರಾಜ್ಯರಿಗೂ ತಿಳಿಸಿದನು.
ಇದನ್ನು ಕೇಳಿದ ಕೂಡಲೇ ಕಿರಿಯ ಹೆಂಡಿರಾದ ಸೌದಾಮಿನಿ ಕಾದಂಬಿನಿಯರಿಗೂ, ಅವರ ಪುತ್ರರಾದ ಭಾನುತೇಜ ರಾಜಹಂಸರಿಗೂ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ರತ್ನ ಬಾಣವೂ, ಕನ್ಯಾರತ್ನ ವೂ, ಸಿಂಹಾಸನಾಧಿಪತ್ಯವೂ ಎಲ್ಲವೂ ವಿಜಯನ ಪಾಲೇ ಆಗುವುವೆಂದು ಆ
----------------------------------------------
ನಾಲ್ಕು ಮಂದಿಯ ಮನಸ್ಸಿನಲ್ಲಿ ಕುದಿದು ತಳಮಳಿಸಿ ಹೇಗಾದರೂ ಈ ವಿಜಯನ ವಿವಾಹಕ್ಕೂ, ರಾಜನಿಗೆ ಅವನಲ್ಲಿರುವ ವಿಶ್ವಾಸಕ್ಕೂ ಭಂಗವನ್ನು ತರಲೇಬೇಕೆಂದು ನಿಶ್ಚಯಿಸಿಕೊಂಡರು. ಭಾನುತೇಜನೂ ರಾಜಹಂಸನೂ, ರತ್ನ ಬಾಣವನ್ನು ವಿಜಯನಿಗೆ ಕೊಡಗೊಡಿಸದೆ ತಾವೇ ಪಡೆಯಬೇಕೆಂದು ಅದಕ್ಕೆ ತಕ್ಕ ಉಪಾಯವನ್ನು ಆಲೋಚಿಸಲು ತಾಯಿಯ ರನ್ನು ಕೇಳಿದರು. ಅದಕ್ಕೆ ಕಾದಂಬಿನಿಯು ಮಕ್ಕಳನ್ನು ಕುರಿತು, “ನೀವೂ ಸಹ ನಿಮ್ಮ ತಂದೆಯಾರ್ಜಿಸಿದ ವಸ್ತುಗಳನ್ನು ಪಡೆಯಲು ವಿಜಯನಂತೆಯೇ ಬಾಧ್ಯತೆಯುಳ್ಳವರಾದುದರಿಂದ ಆ ಶರವನ್ನು ನಿಮಗೆ ಕೊಡಬೇಕೆಂದು ಹಠವನ್ನು ಹಿಡಿಯಿರಿ, ಕೊಡದೆ ಇದ್ದ ಪಕ್ಷದಲ್ಲಿ ಮುಂದೆ ತಕ್ಕ ಆಲೋಚನೆ ಯನ್ನು ನಾನು ಮಾಡುವೆನು ” ಎಂದು ಹೇಳಿದಳು. ಆಗಬಹುದೆಂದು ಸಂತೋಷದಿಂದ ಸಮ್ಮತಿಸಿ ಭಾನುತೇಜನೂ ರಾಜಹಂಸನೂ ಸಹ ತಂದೆಯ ಬಳಿಗೆ ಹೋಗಿ ರತ್ನ ಬಾಣವನ್ನು ತಮಗೇ ಕೊಡಬೇಕೆಂದು ಹಠಹಿಡಿದು ಕೇಳಿದರು. ಅದಕ್ಕೆ ರಾಜನು “ಸುಪುತ್ರರೇ ! ನೀವು ಮೂರು ಮಂದಿಯೂ ಶಸ್ತ್ರಾಸ್ತ್ರ ವಿದ್ಯೆಗಳಲ್ಲಿ ನಿಪುಣರಾಗಿರುವಿರಿ. ಶಂಕರನಿಂದ ಲಬ್ದವಾದ ಬಾಣ ವನ್ನು ಪಡೆಯಲು, ನಿಮ್ಮಲ್ಲಿ ಯಾವನು ಅತಿಶಯಪರಾಕ್ರಮಿಯೋ ಅವನೇ ಅರ್ಹನೆಂದು ನನಗೆ ತೋರುವುದು ” ಎಂದನು. ಅದಕ್ಕೆ ರಾಜಪುತ್ರರಿಬ್ಬರಿಗೂ ರೋಷ ಹುಟ್ಟಿ, " ತಂದೆಯೇ ನಿನ್ನ ಪುತ್ರರಾದ ನಾವು ವಿಜಯನಿಗಿಂತಲೂ
ಪರಾಕ್ರಮದಲ್ಲಿ ಕಡಿಮೆಯಾದವರೆಂದು ನೀನೆಂದಿಗೂ ತಿಳಿಯಬೇಡ. ಬೇಕಾದರೆ ಪರೀಕ್ಷಿಸು” ಎಂದರು. ಅದಕ್ಕೆ ರಾಜನು ಆಗಬಹುದೆಂದು ಸಮ್ಮತಿಸಿ ವಿಜಯನನ್ನೂ ಕರೆಯಿಸಿ, “ ನಾಳೆಯ ದಿನ, ನಾನು ಒಂದು ಗುರಿ ಯನ್ನಿಟ್ಟು ನಿಮ್ಮ ಮೂರು ಮಂದಿಯ ಬಾಣ ಪ್ರಯೋಗ ಚಾತುರ್ಯ ವನ್ನೂ ಪರೀಕ್ಷಿಸುವೆನು, ಅದರಲ್ಲಿ ಯಾರು ಗೆಲ್ಲುವರೋ ಅವರಿಗೆ ರತ್ನ ಬಾಣವನ್ನು ಕೊಡುವೆನು ” ಎಂದು ತಿಳಿಸಿದನು. ಮೂರು ಮಂದಿಗೂ ಬಹಳ ಸಂತೋಷವಾಯಿತು. ಭಾನುತೇಜನೂ, ರಾಜಹಂಸನೂ ತಾವೇ
-------------------------------------------
ಜಯಶಾಲಿಗಳಾಗುವೆವೆಂದು ನಂಬಿ ಆನಂದದಿಂದ ನಲಿಯುತ್ತ ತಾಯಿಯರ ಬಳಿಗೆ ಬಂದು ಈ ವಾರ್ತೆಯನ್ನು ತಿಳಿಸಿದರು. ಆಗ ಭಾನುತೇಜನ ತಾಯಿ ಯಾದ ಸೌದಾಮಿನಿಯು “ ನಾಳೆಯ ದಿನದ ಪರೀಕ್ಷೆಯಲ್ಲಿ ಯಾರು ಜಯ ಶೀಲರಾಗುವರೆಂಬುದನ್ನು ಹೇಳಲಾಗುವುದಿಲ್ಲ. ಅದರಿಂದ ವಿಜಯನ ಮೇಲೆ ಮೊದಲೇ ರಾಜನಿಗೆ ಅಸಹನೆ ಹುಟ್ಟುವಂತೆ ಮಾಡಿದರೆ ಅನಂತರ ಉಳಿದ ನಿಮ್ಮಿಬ್ಬರಲ್ಲಿನ ಪ್ರೀತಿಯಿಂದ ಶರವನ್ನು ನಿಮಗೆ ಕೊಟ್ಟು ಬಿಡುವನು. ಆದಕಾರಣ ಈ ದಿನ ರಾಜನ ಅಂತಃಪುರದಲ್ಲಿ ಇಟ್ಟಿರುವ ರತ್ನ ಬಾಣವನ್ನು ಗೋಪ್ಯವಾಗಿ ತಂದು ನಿಮ್ಮ ವಶಕ್ಕೆ ಕೊಡುವೆನು. ಅದನ್ನು ನೀವು ರಹಸ್ಯವಾಗಿ ವಿಜಯನ ಬತ್ತಳಿಕೆಯಲ್ಲಿ ಸೇರಿಸಿ ಮುಚ್ಚಿಡಿರಿ. ನಾಳಿನ ದಿನ ರಾಜನ ಎದುರಲ್ಲಿ ಅವನು ಬತ್ತಳಿಕೆಯನ್ನು ತೆಗೆದಾಗ ಈ ಬಾಣವು ಅವನಲ್ಲಿರು ವುದನ್ನು ನೋಡಿದರೆ ರಾಜನಿಗೆ ಕೋಪ ಬರಲೇ ಬರುವುದು. ಆಗ ಆತನು, ವಿಜಯನು ಶರವನ್ನು ಕದ್ದ ದ್ರೋಹಿಯೆಂದು ಅವನಿಗೆ ಶಿಕ್ಷೆಯನ್ನು ವಿಧಿಸಿ, ನಿಮ್ಮಿಬ್ಬರಲ್ಲಿ ಒಬ್ಬರಿಗೆ ಬಾಣವನ್ನು ಕೊಡುವನು' ಎಂದು ಹೇಳಿದಳು. ಅದಕ್ಕೆ ಆಗಬಹುದೆಂದು ಅವರಿಬ್ಬರೂ ಒಪ್ಪಿದರು. ವಿಜಯನಿಗೆ ಈ ಮೋಸವೊಂದೂ ತಿಳಿಯಲೇ ಇಲ್ಲ.
ಅನಂತರ ಆದಿನ ಸಂಧ್ಯಾ ಸಮಯದಲ್ಲಿ ಚಂದ್ರಸೇನರಾಜನು ಜೈಷ್ಣ ಪತ್ನಿ ಯಾದ ಶೀಲವತಿಯ ಅಂತಃಪುರವನ್ನು ಪ್ರವೇಶಿಸಿ ಆಕೆಯಿಂದ ಸತ್ತ ನಾಗಿ ಆಕೆಯ ಪತಿಭಕ್ತಿಗೆ ಸಂತೋಷಪಟ್ಟು ಸರಸೋಕ್ತಿಗಳನ್ನಾಡಿ ಅಲ್ಲಿಂದ ಹೊರಟು ಕಿರಿಯ ಹೆಂಡತಿಯಾದ ಸೌದಾಮಿನಿಯ ಅಂತಃಪುರಕ್ಕೆ ಬಂದನು. ಮೊದಲೇ ಕಿರಿಯ ಹೆಂಡರಿಬ್ಬರೂ ತಮ್ಮ ತಮ್ಮಲ್ಲಿ ಆಲೋಚಿಸಿ ಕೊಂಡಿದ್ದ ಮೇರೆಗೆ, ಸೌದಾಮಿನಿಯು ರಾಜನನ್ನು ನೋಡಿ ಬಹಳ ಖಿನ್ನ ಮನಸ್ಕಳಾಗಿ ಕುಳಿತಿದ್ದಳು. ರಾಜನು ಆಶ್ಚರ್ಯದಿಂದ ಆಕೆಯನ್ನು ನೋಡಿ “ಪ್ರಿಯೇ ! ಸೌದಾಮಿನಿ ! ರಾಜನೂ, ರಾಜ್ಯವೂ ಸಹ ಅಪರಿಮಿತ ಸಂತೋಷಸಾಗರದಲ್ಲಿ ತೇಲುತ್ತಿರುವ ಇಂತಹ ಆನಂದಕರವಾದ ಸಮಯ
--------------------------------------------------------------
ದಲ್ಲಿ ರಸಿಕಾಗ್ರಣಿಯಾದ ನೀನೇತಕ್ಕೆ ನುಗ್ಗ ಭಾವವನ್ನು ವಹಿಸಿರುವೆ ? ನಿನ್ನ ಚಿಂತೆಗೆ ಕಾರಣವೇನು ? ಹೇಳು. ಅದನ್ನು ನಾನು ಪರಿಹರಿಸುವೆನು ” ಎಂದು ಕೈ ಹಿಡಿದು ವಿನಯವಿಶ್ವಾಸಗಳಿಂದಲೂ ಮೃದುಮಧುರ ವಾಕ್ಕು ಗಳಿಂದಲೂ ಪ್ರಶ್ನೆ ಮಾಡಿದನು. ಆಗ ಸೌದಾಮಿನಿಯು ರಾಜನ ವಿಷಯ ದಲ್ಲಿ ಅತ್ಯಂತ ಪಶ್ಚಾತ್ತಾಪ ಪಟ್ಟಂತೆ ನಟಿಸುತ್ತ “ ಪ್ರಿಯಾ ! ನನ್ನ ನಿನ್ನ ತೆಯ ಕಾರಣವನ್ನು ತಾವು ಅನ್ಯರಿಂದ ತಿಳಿಯಬೇಕಲ್ಲದೆ ನನ್ನಿಂದ ಅದು ಹೊರಪಡಬಾರದು. ಹಾಗೆ ಅದು ನನ್ನಿಂದ ಹೊರಪಟ್ಟಲ್ಲಿ ನಾನು ಅಸೂಯಾಪರಳೆಂದು ತಮಗೆ ಭಾವನೆಯುಂಟಾದೀತು ” ಎಂದಳು. ಈ ಮಾತನ್ನು ಕೇಳಿದೊಡನೆಯೇ ರಾಜನಿಗೆ ವಿಷಯವನ್ನು ತಿಳಿಯುವ ಕುತೂ ಹಲವು ಮತ್ತಷ್ಟು ಪ್ರಬಲವಾಯಿತು. ಆಗ ಸೌದಾಮಿನಿಯನ್ನು ನೋಡಿ * ಎಲೌ ಮನೋಹರೇ ! ನಿಜಾಂಶವನ್ನು ನನಗೆ ಹೇಳುವ ವಿಷಯದಲ್ಲಿ ನೀನು ಸಂದೇಹಪಡಬಾರದು. ನೀನು ಅಸೂಯಾಪರಳಲ್ಲವೆಂಬುದನ್ನು ನಾನು ಚೆನ್ನಾಗಿ ಬಲ್ಲೆನು. ತಿಳಿದಂಶವನ್ನು ಪ್ರಿಯನಾದ ನನ್ನೊಡನೆ ಹೇಳದಿದ್ದರೆ, ನೀನು ಸತಿಯನ್ನು ವಂಚಿಸಿದವಳಾಗುವೆ. ಆದುದರಿಂದ ಯಾವ ಸಂದೇ ಹವೂ ಇಲ್ಲದೆ ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ವಿಸ್ತಾರವಾಗಿ ತಿಳಿಸಿ ನನ್ನ ಸಂಶಯವನ್ನು ಪರಿಹರಿಸು” ಎಂದು ಗಲ್ಲವನ್ನು ಹಿಡಿದು ಪ್ರಾರ್ಥಿ ಸಿದನು. ತಕ್ಕ ಸಮಯ ಸಂದರ್ಭಗಳು ಸಿಕ್ಕಿದುವೆಂದು ಮನಸ್ಸಿನಲ್ಲಿ ಸಂತೋಷವುಂಟಾದರೂ ಆ ಕುಟಿಲೆಯು ಬಹಳ ವ್ಯಥೆಪಟ್ಟವಳಂತೆ ನಟಿ ಸುತ್ತ, “ ಪ್ರಿಯಾ ! ಇದು ಬಹಳ ಗೋಪ್ಯವಾದ ವಿಚಾರವು. ತಮ್ಮ ಕೀರ್ತಿಗೆ ಮಾತ್ರವಲ್ಲದೆ ನಮ್ಮ ವಂಶಕ್ಕೇ ಮಹಾ ಕಳಂಕವನ್ನು ತರುವ ವಿಚಾರವು. ಅದನ್ನು ತಮ್ಮೊಡನೆ ನಾನು ಹೇಗೆ ಹೇಳಲಿ ! ಅಯ್ಯೋ ! ನನ್ನ ಬಾಯಿಂದ ತಮ್ಮ ಎದುರಲ್ಲಿ ಆ ವಿಚಾರವನ್ನು ಹೇಗೆ ಉಚ್ಚರಿಸಲಿ !” ಎಂದು ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುವಳಂತೆ ನಟಿಸಿದಳು, ರಾಜನ ಕುತೂಹಲವೂ ಭೀತಿಯೂ ಕ್ಷಣಕ್ಷಣಕ್ಕೂ ಮಿತಿಮೀರಿ ಉಕ್ಕಿದುವು.
--------------------------------------------------------
ಆಗ ಆತನು ಸೌದಾಮಿನಿಯ ಎರಡು ಕೈಗಳನ್ನೂ ಹಿಡಿದು, “ನೀನು ಸಂದೇಹಪಡಬೇಡ, ಅಂತಹ ವಿಚಾರವಿದ್ದಲ್ಲಿ ಅದನ್ನು ಆಪ್ತಳಾದ ನಿನ್ನಿಂದಲೇ ನಾನು ಕೇಳಬೇಕಲ್ಲದೆ ಅನ್ಯರ ಬಾಯಿಂದ ಇಂತಹ ಅಮಂಗಳ ವಿಚಾರವನ್ನು ನಾನು ಕೇಳಲೊಲ್ಲೆನು. ಮೊದಲು ಹೇಳು ! ಹೇಳು. ಇನ್ನು ನನ್ನ ಮನಸ್ಸಿನ ಕುತೂಹಲವು ಮೇರೆ ಮೀರಿತು. ಇನ್ನು ಈ ವ್ಯಸನ ಸಂದೇಹಗಳನ್ನು ಬಿಡು, ನಿಜಾಂಶವನ್ನು ವಿವರಿಸಿ ತಿಳಿಸು” ಎಂದನು. ಆಗ ಆ ಮಿಟಾರಿಯು ಮೆಲ್ಲನೆ, “ ಪ್ರಿಯಾ ! ತಮ್ಮ ಬಲಾತ್ಕಾರದಿಂದ ನಾನು ಈಗ ವಿಷಯವನ್ನು ಹೇಳಬೇಕಾಗಿದೆ. ಯಾವ ಮಹನೀಯಳನ್ನು ಮಹಾ ಪತಿವ್ರತೆಯ, ಪಟ್ಟದರಸಿಯೂ ಎಂದು ತಾವು ಭಾವಿಸಿ ತಮ್ಮ ಸರ್ವ ಪ್ರೀತಿಯನ್ನೂ ಅವಳಲ್ಲಿಟ್ಟು ಆನಂದಪಡುತ್ತಿರುವಿರೋ ಆ ಮಾಯಾಂಗನೆ ಯಾದ ಶೀಲವತಿಯು ತಾವು ತಪಸ್ಸಿಗೆ ಹೊರಟುಹೋದುದು ಮೊದಲಾಗಿ ತನಗನುರೂಪನೆಂದು ತೋರಿದ ಪರಪುರುಷನೊಬ್ಬ ನಲ್ಲಿ ಅನುರಕ್ತಳಾಗಿ ನಿತ್ಯವೂ ಅವನಲ್ಲಿ ಲೀಲಾವಿನೋದದಿಂದಿರುವಳು ” ಎಂದಳು. ಇದನ್ನು ಕೇಳಿದ ಕೂಡಲೇ ರಾಜನ ಎದೆಯು ಝಲ್ಲೆಂದಿತು. ಕಿವಿಗಳು ಕಿವು ಡಾದುವು. ಕಣ್ಣಿಗೆ ಮಂಜು ಕವಿಯಿತು. ತಲೆಯು ಗಿರನೆ ತಿರುಗಿತು. ಬುದ್ದಿಯು ಭ್ರಾಂತಿ ಹೊಂದಿ ರಾಜನು ಕಡಿದ ಮರದಂತೆ ದೊಪ್ಪನೆ ನೆಲಕ್ಕೆ ಬಿದ್ದನು. ಆಗ ಸೌದಾಮಿನಿಯು ತನ್ನ ಮಂತ್ರವು ಚೆನ್ನಾಗಿ ಫಲಿಸಿತೆಂದು ಮನಸ್ಸಿನಲ್ಲಿ ಸಂತೋಷಿಸಿದರೂ ಬಹಳ ಭಯಪಟ್ಟವಳಂತೆ ನಟಿಸುತ್ತ ರಾಜನನ್ನು ಹಿಡಿದೆತ್ತಿ ಉಪಚರಿಸಿ, “ ಪ್ರಿಯಾ ! ಇದಕ್ಕಾಗಿಯೇ ತಮ್ಮಲ್ಲಿ ನಾನು ಇಂತಹ ವಿಷಯವನ್ನು ತಿಳಿಸಲು ಸಂಶಯಪಟ್ಟುದು, ತಾವು ಶಾಂತರಾಗಬೇಕು ” ಎಂದು ಬೇಳುವೆಯ ಮಾತುಗಳಿಂದ ಕುಲುಕಿದಳು. ಆಗ ರಾಜನು, ''ಅಯ್ಯೋ! ನಿರ್ಮಲವಾದ ಈ ರಾಜವಂಶವು ಇಂತಹ ಕುಲಟೆಯಿಂದ ಕಳಂಕವನ್ನು ಪಡೆಯಿತೇ ! ಶಿವಶಿವಾ!” ಎಂದು ದುಃಖಿಸಿ ಮತ್ತೆ ಆಲೋಚಿಸಿ, “ಎಲ್‌! ಸೌದಾಮಿನೀ ! ನನ್ನ ಶೀಲವತಿಯು ಮಹಾ
---------------------------------------------------------
ಪತಿವ್ರತೆಯು ! ಕುಲಟೆಯಲ್ಲ! ನೀನು ಹೇಳುವ ಮಾತು ನಿಶ್ಚಯವೇ ? ನನ್ನ ಪ್ರಿಯೆಯಾದ ಶೀಲವತಿಯು ನನ್ನನ್ನು ವಂಚಿಸಿ ದುರ್ಮಾರ್ಗ ಪ್ರವರ್ತಕಳಾದಳೇ ? ನಾನು ನಂಬಲಾರೆನು” ಎಂದನು. ಅದಕ್ಕೆ ಆ ಮಾಯಾವಿನಿಯು “ ಪ್ರಿಯಾ ! ಇದಕ್ಕೆ ನಾನು ಈ ವಿಚಾರವನ್ನು ತಮ್ಮಲ್ಲಿ ತಿಳಿಸಲೊಲ್ಲೆನೆಂದು ಮೊದಲೇ ವಿಜ್ಞಾಪಿಸಿಕೊಂಡೆನು. ಆದರೂ ಬಲಾತ್ಕರಿಸಿ ನನ್ನಿಂದ ಹೇಳಿಸಿ ಈಗ ಅರಮನೆಯಲ್ಲಿ ಎಲ್ಲರೂ ನೋಡಿರುವ ವಿಷಯವನ್ನು ತಾವು ನಂಬುವುದಿಲ್ಲವೆಂದರೆ ನಾನು ಅಸೂಯಾಪರಳಾಗಿ ಅನ್ಯಾಯವಾಗಿ ಅವಳನ್ನು ದೂರಿದವಳಾದೆನು. ಚಿಂತೆಯಿಲ್ಲ. ನಾನು ತಮ್ಮಲ್ಲಿ ಅನೃತವನ್ನಾಡಿದೆನೆಂಬ ಭಾವನೆಯು ತಮಗುಂಟಾಗಿದ್ದರೆ, ತಾವೂ ತಮ್ಮ ಶೀಲವತಿಯ ಆನಂದದಿಂದಿರಿ. ನಾನು ಈ ಪ್ರಾಣವನ್ನೇ ಇರಿಸ ಲಾರೆನು. ದೂರು ಹೇಳಿದೆನೆಂಬ ಅಪವಾದವು ನನಗೆ ತಮ್ಮಿಂದಲೇ ಬಂದ ಮೇಲೆ ನಾನು ಈ ಭೂಮಿಯಲ್ಲಿ ಬಾಳಲಾರೆನು, ವಿಷಪಾನದಿಂದಲಾದರೂ ಪ್ರಾಣತ್ಯಾಗ ಮಾಡಿಕೊಳ್ಳುವೆನು ' ಎಂದು ಗೋಳಗೊಳನೆ ಅಳುವುದಕ್ಕಾ ರಂಭಿಸಿದಳು. ಉಭಯ ಸಂಕಟಗಳಿಗೆ ಸಿಕ್ಕಿದ ರಾಜನು ದಿಕ್ಕು ತೋರದೆ, “ ಪ್ರಿಯೇ ! ನಿನ್ನ ಮಾತಿನಲ್ಲಿ ನನಗೆ ನಂಬಿಕೆಯುಂಟು. ಆದರೆ ನಾನು ಸುಶೀಲವತಿಯೆಂದು ತಿಳಿದಿದ್ದ ಆ ಶೀಲವತಿಯು ದುಶೀಲವತಿಯಾದು ದಕ್ಕಾಗಿ ಆಶ್ಚರ್ಯಪಟ್ಟು ಹಾಗೆಂದೆನು. ನನ್ನನ್ನು ಕ್ಷಮಿಸು ಬಾ ದುಃಖಿಸಬೇಡ!” ಎಂದು ಸಂತೈಸಿದನು. ಅದಕ್ಕೆ ಆ ಮಾಯೆಗಾತಿಯು “ ಪ್ರಿಯಾ ! ನನ್ನ ಮಾತಿನಲ್ಲಿ ತಮಗೆ ನಂಬುಗೆ ಇಲ್ಲದಿದ್ದರೆ ಹೋಗಲಿ. ತಮ್ಮ ಪರಮಪ್ರೀತಿಗೆ ಪಾತ್ರಳಾಗಿರುವ ನಿಮ್ಮ ಕಾದಂಬಿನಿಯನ್ನಾದರೂ ಕೇಳಿ ನಿಜಾಂಶವನ್ನು ದೃಢಪಡಿಸಿಕೊಳ್ಳಿ ” ಎಂದು ಹೇಳಿ ಸರಸರನೆ ಕುಲುಕಿ ಕೊಂಡು ಹೋಗಿ ಸವತಿಯಾದ ಕಾದಂಬಿನಿಯನ್ನು ಕರೆತಂದಳು. ಮೊದಲೇ ಉರಿಯುತ್ತಿರುವ ಬೆಂಕಿಗೆ ಗಾಳಿಯೂ ಬೀಸಿದಂತೆ ಕುಟಿಲ ಸೌದಾಮಿನಿಯ ಜೊತೆಗೆ ಕುಶ್ಚಿತ ಕಾದಂಬಿನಿಯೂ ಬಂದು ನಿಂತಳು. ಆಗ ಆಶ್ಚರ್ಯ
-----------------------------------------------------
ವ್ಯಸನ ಕೋಪಗಳಿಂದ ಕರ್ತವ್ಯವನ್ನರಿಯದೆ ನಿಂತಿದ್ದ ರಾಜನು ಕಾದಂಬಿನಿಯ ಮುಖವನ್ನು ನೋಡಿ ತಲೆಯನ್ನು ತಗ್ಗಿಸಿದನು. ಸೌದಾಮಿನಿಯು ಕಾದಂ ಬಿನಿಯನ್ನು ನೋಡಿ “ ತಂಗೀ ! ಆರ್ಯಪುತ್ರನು ತಪಸ್ಸಿಗೆ ಹೋಗಿದ್ದ ಕಾಲದಲ್ಲಿ ಅಂತಃಪುರದಲ್ಲಿ ಏನೇನು ವಿಷಯಗಳು ನಡೆಯುತ್ತಿದ್ದು ವೆಂಬು ದನ್ನು ನೀನಾದರೂ ತಿಳಿಸಿ ಆತನ ಮನಸ್ಸಿನ ಸಂಶಯವನ್ನು ಪರಿಹರಿಸು. ಅದಕ್ಕಾಗಿಯೇ ನಾನು ನಿನ್ನ ನ್ನು ಕರೆತಂದುದು” ಎಂದಳು. ಅದಕ್ಕೆ ಆ ಠಕ್ಕುಮಾರಿಯು “ ಅಕ್ಕಾ ! ಮಾಡಿದವರ ಪಾಪ ಆಡಿದವರ ಬಾಯಲ್ಲಿ ” ಎಂಬ ಗಾದೆಯನ್ನು ಕೇಳಲಿಲ್ಲವೇ ? ಅದರಿಂದ ನಾವೇತಕ್ಕೆ ದೊಡ್ಡವರ ದೋಷಗಳನ್ನು ಬಿಚ್ಚಿ ಆರ್ಯಪುತ್ರನ ಕೋಪಕ್ಕೆ ಒಳಗಾಗ ಬೇಕು ? ಕ್ರಮಕ್ರಮವಾಗಿ ಆತನಿಗೇ ತಿಳಿಯುವುದು. ಮುಖ್ಯವಾಗಿ ಶೀಲವತಿಯು ಪಟ್ಟದರಸಿಯು, ನಾವುಗಳು ಅವಳ ಹಿಂದಿನವರು. ಇದರಿಂದ ಆಕೆಯ ದೋಷಗಳನ್ನು ನಾವುಗಳು ಹೇಳಿದಲ್ಲಿ ನಾವೇ ಆಸೂಯಾಪರರೆಂದು ಆರ ಪುತ್ರನಿಗೆ ತೋರಬಹುದು. ಇದರಿಂದ ನಾವು ಬಾಯಿಂದ ಹೇಳುವುದ ಕ್ಕಿಂತಲೂ ವಿಷಯವನ್ನು ಪ್ರತ್ಯಕ್ಷವಾಗಿ ತೋರಿಸಿದರಾಯಿತಲ್ಲವೇ ? ಕೈ ಹುಣ್ಣಿಗೆ ಕನ್ನಡಿಯೇಕೆ ? ಪ್ರಭುವು ಅರಮನೆಯಲ್ಲಿರುವಾಗಲೇ ಅಂತಃಪುರಕ್ಕೆ ಪರಪುರುಷನು ಪ್ರವೇಶಿಸುತ್ತಿರುವಲ್ಲಿ ಇನ್ನು ಆತನು ಕಣ್ಮರೆಯಾಗಿದ್ದಾಗ ಸ್ಥಿತಿಯು ಯಾವರೀತಿಯಿತ್ತೆಂಬುದನ್ನು ಆತನೇ ಊಹಿಸಲಿ ” ಎಂದಳು. ಇದನ್ನು ಕೇಳಿ ರಾಜನ ಮನಸ್ಸಿನಲ್ಲಿ ಮತ್ತಷ್ಟು ಶೂಲವಿರಿದಂತಾಗಿ, ಸೌದಾಮಿನಿಯ ಮಾತು ನಿಜವೆಂದು ದೃಢಪಟ್ಟಿತು. ಆಗ ಕೋಪತಾಪ ಗಳನ್ನು ಸಹಿಸಲಾರದೆ ಎಲ್‌ ! ಈಗಲೂ ಅಂತಹ ಅವಿವೇಕಗಳು ನನ್ನ ಅಂತಃಪುರದಲ್ಲಿ ನಡೆಯುತ್ತಿರುವುವೇ ?” ಎಂದು ಗಜರಿದನು, ಅದಕ್ಕೆ ಕಾದಂಬಿನಿಯು “ ಆರ್ಯಪುತ್ರನು ಈ ಕೋಪವನ್ನು ಸ್ವಲ್ಪ ಸೈರಿಸಿ ಈ ದಿನ ಅರ್ಧರಾತ್ರಿಯಲ್ಲಿ ನಮ್ಮೊಡನೆ ಶೀಲವತಿಯ ಅಂತಃಪುರಕ್ಕೆ ಗೋಪ್ಯ ವಾಗಿ ಬಂದರೆ ಆ ವಿಚಾರವು ಪ್ರತ್ಯಕ್ಷವಾಗಿ ವೇದ್ಯವಾಗುವುದು,”
-----------------------------------------------------------
ಎಂದಳು. ಅದಕ್ಕೆ ರಾಜನು ಸಮ್ಮತಿಸಿ ಆ ರಾತ್ರಿ ಹನ್ನೆರಡು ಘಂಟೆಗೆ ಸರಿಯಾಗಿ ತಾನು ಶೀಲವತಿಯ ಅಂತಃಪುರದ ಬಳಿಗೆ ಬರುವುದಾಗಿ ಹೇಳಿ, ಶೀಲವತಿಯ ವಿಷಯದಲ್ಲಿ ತಾನು ಇಟ್ಟಿದ್ದ ನಂಬಿಕೆಯೆಲ್ಲವೂ ವ್ಯರ್ಥ ವಾಯಿತೆಂಬ ಪಶ್ಚಾತ್ತಾಪದಿಂದಲೂ, ತನ್ನ ಪತ್ನಿ ಯು ಕುಲಟೆಯೆನಿಸಿದ ಳೆಂಬ ಅವಮಾನದಿಂದಲೂ ಮುಗ್ಗನಾಗಿ ಚಿಂತಾಗಾರವನ್ನು ಸೇರಿದನು.
ಇತ್ತಲಾ ಮಾಯೆಕಾತಿಯರಾದ ಸೌದಾಮಿನಿ ಕಾದಂಬಿನಿಯರು ತಮ್ಮ ಮಾತನ್ನು ರಾಜನಿಗೆ ನಿದರ್ಶನದಿಂದ ದೃಢಪಡಿಸಲು ತಮ್ಮ ತಮ್ಮಲ್ಲಿ ಆಲೋಚಿಸಿಕೊಂಡು ಆಪ್ತಸಖಿಯಾದ ಸರಸಾಂಗಿಯೆಂಬುವಳನ್ನು ಕರೆದು ಆದರಿಸಿ, ಅವಳಿಗೆ ಬೆಲೆಬಾಳುವ ರತ್ನ ಹಾರವೊಂದನ್ನು ಲಂಚವನ್ನಾಗಿ ಕೊಟ್ಟು, " ಎ ಸರಸಾಂಗೀ ಈ ರಾತ್ರಿ ಶೀಲವತಿಯು ಅಂತಃಪುರದಲ್ಲಿ ಒಂಟಿಯಾಗಿ ಮಲಗಿರುವಳು. ನೀನು ಪುರುಷವೇಷವನ್ನು ಧರಿಸಿ, ಅವಳು ನಿದ್ರಾಸಕ್ತಳಾಗಿರುವಾಗ ಅಲ್ಲಿಗೆ ಹೋಗಿ ಅವಳ ಒಳಿಯಲ್ಲಿ ಸುಳಿದಾಡುತ್ತಿರು. ಅಲ್ಲಿಗೆ ನಾವುಗಳು ರಾಜನೊಡನೆ ಬರುವೆವು. ಆಗ ರಾಜನು ನಿನ್ನನ್ನು ಪುರುಷನೆಂಬ ಭ್ರಾಂತಿಯಿಂದ ಶಿಕ್ಷಿಸುವನು. ನಮಗಾಗಿ ನೀನು ಆ ಶಿಕ್ಷೆ ಯನ್ನು ಸ್ವಲ್ಪ ಸಹಿಸಿಕೊಂಡು ಓಡಿಹೋಗು. ಅನಂತರ ನಾಳಿನ ಪ್ರಾತಃ ಕಾಲ ನಿನಗೆ ಬೇಕಾದಷ್ಟು ಹಣವನ್ನೂ ವಸ್ತ್ರಾಭರಣಗಳನ್ನೂ ಕೊಟ್ಟು ನಿನ್ನ ನ್ನು ಐಶ್ವರ್ಯದಲ್ಲಿ ತೇಲಿಸಿಬಿಡುವೆವು ” ಎಂದರು. ಅದಕ್ಕೆ ಸರಸಾಂಗಿಯು ನಡುಗುತ್ತ, “ ತಾಯಿ ! ಅರ್ಧರಾತ್ರಿಯಲ್ಲಿ ಪುರುಷವೇಷ ದಿಂದ ನಾನು ಹೋದರೆ ಆ ಕಾವಲುಗಾರರು ನನ್ನನ್ನು ಒಳಗೆ ಬಿಡು ವರೇ ? ಅಥವಾ ನಾನು ಒಳಗೆ ಉಪಾಯದಿಂದ ಹೋದರೂ ಅಪರಾಧಿ ಯೆಂದು ತಿಳಿದು ರಾಜನು ನನ್ನನ್ನು ಅಲ್ಲಿಯೇ ನಿರ್ಬಂಧಿಸದಿರುವನೇ? ಅಥವಾ ಶೂಲಕ್ಕೇರಿಸದಿರುವನೇ ? ಇದರಲ್ಲಿ ನನ್ನ ಪ್ರಾಣಕ್ಕೆ ಅಪಾಯ ಬರುವುದಿಲ್ಲವೇ ?” ಎಂದಳು. ಅದಕ್ಕೆ ಸೌದಾಮಿನಿಯು “ ಎಲ್‌! ನೀನು ಹೆದರಬೇಡ, ಅಂತಃಪುರದ ಕಾವಲುಗಾರರಿಗೆ ಲಂಚವನ್ನು ಕೊಟ್ಟು
----------------------------------------------------------
ಅವರನ್ನು ನಾವುಗಳು ಆಗಲೇ ನಮ್ಮ ಪಕ್ಷವಾಗಿ ತಿರುಗಿಸಿಕೊಂಡಿರು ವೆವು. ಅಲ್ಲದೆ ನೀನು ಅಲ್ಲಿಗೆ ಬರುವ ಕಾಲದಲ್ಲಿ ನಾವೂ ನಿನ್ನೊಡನೆ ಇದ್ದು ಕಿಟಕಿಯಿಂದ ನಿನ್ನ ನ್ನು ಒಳಕ್ಕೆ ಕಳುಹಿಸುವವು. ರಾಜನು ನಿನ್ನನ್ನು ಶಿಕ್ಷಿಸಲು ಬಂದಾಗ ಉಪಾಯದಿಂದ ನಿನ್ನನ್ನು ನಾವು ಆತನ ಕೈಯಿಂದ ಬಿಡುಗಡೆ ಮಾಡುವೆವು ; ಅಂಜಬೇಡ, ಧೈರ್ಯವಾಗಿ ನಾವು ಹೇಳಿದಂತೆ ನಡೆ,'' ಎಂದು ವಿಧವಿಧವಾಗಿ ಧೈರ್ಯವನ್ನು ಹೇಳಿ ಹುರಿದುಂಬಿಸಿ ಪುರುಷವೇಷದ ಉಡುಪನ್ನು ತಂದು ಅವಳಿಗೆ ತಾವೇ ಚೆನ್ನಾಗಿ ಅಲಂಕಾರಮಾಡಿದರು. ಸ್ವಲ್ಪ ಹೊತ್ತಿನೊಳಗಾಗಿ ಸರಸಾಂಗಿಯು ಸರಸಾಂಗನಾದಳು, ನಿಲುವುಗನ್ನಡಿಯನ್ನು ನೋಡಿಕೊಂಡು, ಸರ ಸಾಂಗಿಯು ಕನ್ನಡಿಯಲ್ಲಿ ಕಾಣುವ ಸರಸಾಂಗನಲ್ಲಿ ಮೋಹಪರವಶ ಳಾಗಿ ಭ್ರಾಂತಿಯಿಂದ ಮುಂಬರಿದು ಕನ್ನಡಿಯ ಮೇಲೆ ಬೀಳುತ್ತಿದ್ದಳು. ಸವತಿಯರಿಬ್ಬರೂ ನಕ್ಕು ಅವಳ ಪುರುಷರೂಪದ ಅಂದಕ್ಕೂ ತಾವು ಮಾಡಿದ ಅಲಂಕಾರದ ಚಾತುರ್ಯಕ್ಕೂ ತಮ್ಮ ತಮ್ಮಲ್ಲಿಯೇ ಸಂತೋಷ ಪಟ್ಟು ವಿನೋದದಿಂದ ಸರಸಾಂಗನನ್ನು ಪರಿಹಾಸ್ಯ ಮಾಡುತ್ತ, ಧೈರ್ಯ ಹೇಳುತ್ತ ಇದ್ದು, ಹನ್ನೆರಡು ಘಂಟೆಗಳಿಗೆ ಮುಂಚೆಯೇ ಶೀಲವತಿಯ ಅಂತಃಪುರದ ಬಳಿಗೆ ಬಂದು ಮೊದಲೇ ಏರ್ಪಡಿಸಿದ್ದಂತೆ ಕಾವಲುಗಾರರ ಸಹಾಯದಿಂದ ಪುರುಷವೇಷಧಾರಿಣಿಯನ್ನು ಒಳಹೊಗಿಸಿದರು.
ಕೌಟಿಲ್ಯವನ್ನ ರಿಯದ ಶೀಲವತಿಯಾದರೋ ಎಂದಿನಂತೆ ತಲ್ಪದಮೇಲೆ ಗಾಢ ನಿದ್ರೆಯಲ್ಲಿ ಮಲಗಿದ್ದಳು. ಸರಸಾಂಗನು ಸಪ್ಪಳಾಗದಂತೆ ಮೆಲ್ಲನೆ ಮುಂದೆ ಬಂದು, ಸ್ವಲ್ಪ ಹೊತ್ತು ನಿಂತು ರಾಣಿಯನ್ನು ನೋಡಿ, ಬಳಿಗೆ ಹೋಗಲು ಧೈರ್ಯವಿಲ್ಲದೆ ಅನುಮಾನಿಸುತ್ತಿದ್ದನು. ರಾಣಿಯು ಒಂದು ವೇಳೆ ಎಚ್ಚರವಾಗಿ ತನ್ನನ್ನು ಯಾರೆಂದು ಪ್ರಶ್ನೆ ಮಾಡಿದರೆ ಏನನ್ನು ಹೇಳಬೇಕೆಂಬುದೇ ಮೊದಲಾದ ವಿಧವಿಧಾಲೋಚನೆಗಳು ಇವಳ ಮನಸ್ಸಿ ನಲ್ಲಿ ಉಂಟಾದುವು. ಹೇಗಾದರೂ ತನ್ನ ಪ್ರಾಣಕ್ಕೆ ಸೌದಾಮಿನಿ
------------------------------------------------------------
ಕಾದಂಬಿನಿಯರು ಹೊಣೆಯಾಗಿರುವರೆಂಬ ಭರವಸವು ಮಾತ್ರ ಆಗಾಗ ಇವಳಿಗೆ ಧೈರ್ಯವನ್ನುಂಟುಮಾಡುತ್ತಿದ್ದಿತು. ಹೀಗೆ ಸ್ವಲ್ಪ ಹೊತ್ತು ಆಲೋಚನೆಯಲ್ಲಿಯೇ ಸ್ತಬ್ಬಳಾಗಿ ಶೀಲವತಿಯ ಮಂಚದ ಬಳಿಯಲ್ಲಿ ನಿಂತಿ ದ್ದಳು. ಇಷ್ಟು ಹೊತ್ತಿಗೆ ಹನ್ನೆರಡು ಘಂಟೆ ಹೊಡೆಯಿತು. ರಾಜನು ಸಂಕೇತದಂತೆ ಅಂತಃಪುರಕ್ಕೆ ಬರುವುದರೊಳಗಾಗಿ ಕಾದಂಬಿನಿ ಸೌದಾ ಮಿನಿಯರೂ ಸಹ ಗೋಚರವಾದರು. ರಾಜನು ಮೆಲ್ಲನೆ ಇವರ ಬಳಿಗೆ ಬಂದನು. ಕಾದಂಬಿನಿಯು ರಾಜನ ಕೈಯನ್ನು ಹಿಡಿದು ಮೆಲ್ಲನೆ ಕಿಟಿಕಿಯ ಬಳಿಗೆ ಕರೆತಂದು ಸಣ್ಣ ಕಿಂಡಿಯಲ್ಲಿ ತೋರಿಸಿ, “ ಪ್ರಿಯಾ ! ಇದೋ ! ಅಂತಃಪುರದ ರಹಸ್ಯವು ಪ್ರತ್ಯಕ್ಷವಾಗಿರುವುದು ' ಅವಲೋಕಿಸಬೇಕು, ಈಗಲಾದರೂ ನಮ್ಮ ಮಾತು ನಿಜವೋ ಅಥವಾ ಅಸೂಯಾಜನಿತ ವಾದುದೋ ಎಂಬುದನ್ನು ಚಿತ್ರಕ್ಕೆ ತರಬೇಕು'' ಎಂದಳು. ಅದಕ್ಕೆ ಸೌದಾಮಿನಿಯು “ ತಂಗೀ ! ಕಾದಂಬಿನೀ ! ಪ್ರತ್ಯಕ್ಷವಾಗಿ ಕಾಣುತ್ತಿರುವ ವಿಷಯವನ್ನು ನೋಡಿದ ಮೇಲೆ ಆರ್ಯಪುತ್ರನು ನಮ್ಮನ್ನು ಆಸೂಯಾಪರ ರೆಂದು ಎಂದಿಗೂ ಭಾವಿಸಲಾರನು” ಎಂದಳು. ರಾಜನಿಗೆ ಅವಮಾನವೂ ವ್ಯಸನವೂ ಕೋಪವೂ ಮೇರೆ ಮಾರಿದ್ದರೂ ವಿಷಯವು ಬಹಿರಂಗಪಡಿಸ ತಕ್ಕುದಲ್ಲವಾದುದರಿಂದ, ಮಂತ್ರ ಬಂಧಿತವಾದ ಘಟಸರ್ಪದಂತೆ ತನ್ನಲ್ಲಿ ತಾನೇ ಕುದಿದು ಕುದಿದು ಸ್ವಲ್ಪ ನಾಗಿ ನಿಂತಿದ್ದು, ಕಡೆಗೆ ಸಹಿಸಲಾರದೆ ಅಂತಃಪುರದ ಬಾಗಿಲನ್ನು ಬಲವಾಗಿ ಒದೆದು, “ ಬಾಗಿಲನ್ನು ತೆರೆ” ಎಂದು ಸಿಂಹಾರ್ಭಟದಿಂದ ಕೂಗಿದನು. ಗಾಢನಿದ್ರೆಯಲ್ಲಿದ್ದ ಶೀಲವತಿಯು ಬೆಚ್ಚು ಬಿದ್ದು ತಟ್ಟನೆ ಮೇಲಕ್ಕೆ ಏಳುವಷ್ಟರೊಳಗಾಗಿ ಸರಸಾಂಗನು ಹಿಂದಣಿಂದ ಫಕ್ಕನೆ ಮಂಚದ ಕೆಳಗೆ ಇಳಿಯ ಬಿದ್ದಿದ್ದ ತೆರೆಯಲ್ಲಿ ತೂರಿ ಮರೆಯಾದನು, ಶೀಲವತಿಯು ರಾಜನ ಧ್ವನಿಯನ್ನು ಕೇಳಿ ಬೇಗನೆ ಓಡಿ ಬಂದು ಕದವನ್ನು ತೆರೆದಳು. ಆ ಕೂಡಲೇ ಕಣ್ಣುಗಳಿಂದ ಕೆಂಡ ಗಳನ್ನು ಸುರಿಸುತ್ತ ರಾಜನು ಸಿಡಿಲಿನಂತೆ ಆರ್ಭಟಿಸಿ, ಶೀಲವತಿಯನ್ನು
---------------------------------------------------------
ಹಿಡಿದು, ಶಿರಸ್ಸನ್ನು ಕಡಿಯುವುದಕ್ಕಾಗಿ ಸೊಂಟದಿಂದ ಕತ್ತಿಯನ್ನೆಳೆಯಲು ವಷ್ಟರಲ್ಲಿ ಸೌದಾಮಿನಿಯ ಕಾದಂಬಿನಿಯೂ ಬೇಗನೆ ಒಂದು ರಾಜನ ಕೈಗಳನ್ನು ಹಿಡಿದು, “ ಸೈರಿಸು, ಪ್ರಿಯಾ ! ಸೈರಿಸು. ವಿಷಯವೇನೆಂಬು ದನ್ನು ವಿವರವಾಗಿ ವಿಚಾರಿಸದೆ ಅಕ್ಕನನ್ನು ಶಿಕ್ಷಿಸಬೇಡ. ಸ್ವಲ್ಪ ಸೈರಿಸು ” ಎಂದು ಹೇಳಿ ಸಮಾಧಾನಪಡಿಸುವಂತೆ ನಟಿಸಿ, ಶೀಲವತಿಯನ್ನು ರಾಜನ ಕೈಯಿಂದ ಬಿಡಿಸಿ ದೂರವಾಗಿ ಕರೆದುಕೊಂಡು ಹೋದರು. ಸತ್ಯಶೀಲೆ ಯಾದ ಶೀಲವತಿಯು, ಇವರು ಪರಮ ಸತ್ಯವಂತರೂ, ದಯಾವಂತರೂ ಎಂದು ತಿಳಿದು, “ಎಲೈ ತಂಗಿಯರಿರಾ! ನೀವೇ ನನ್ನ ಭಾಗದ ಭಾಗ್ಯ ದೇವತೆಯರು. ನನ್ನ ಪ್ರಾಣವನ್ನು ಳಿಸಿದ ಪುಣ್ಯಶೀಲೆಯರು ; ಆರ್ಯಪುತ್ರ ನಿಗೆ ನನ್ನ ಮೇಲೆ ಇಷ್ಟು ಆಗ್ರಹವುಂಟಾಗಲು ಕಾರಣವೇನು ? ನಿಮಗೇ ನಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿರಿ. ನನ್ನ ಅಪರಾಧಗಳೇನಾದರೂ ಇದ್ದಲ್ಲಿ ನಾನು ಆತನ ಪಾದಗಳ ಮೇಲೆ ಬಿದ್ದು ಕ್ಷಮೆಯನ್ನು ಬೇಡಿಕೊಳ್ಳು ವೆನು” ಎಂದು ವಿನಯದಿಂದ ಕೇಳಿಕೊಂಡಳು. ಆಗ ಸೌದಾಮಿನಿಯು * ಅಕ್ಕಾ ! ಇದಕ್ಕೆ ಕಾರಣವೇನೆಂಬುದು ನಮಗೂ ತಿಳಿಯದು. ಆರ್ಯ ಪ್ರತ್ರನು ಕೋಪದಲ್ಲಿರುವನು ; ಈಗ ಆತನ ಎದುರಿಗೇ ನೀನು ನಿಲ್ಲಬೇಡ ಬಾ.' ಎಂದು ದೂರವಾಗಿ ಕರೆದುಕೊಂಡು ಹೋದಳು. ಸರಸಾಂಗನು ಮಂಚದ ಕೆಳಗೆ ತೂರಿ ಅಡಗಿಕೊಂಡುದನ್ನು ಬಾಗಿಲ ಕಿಂಡಿಯಿಂದ ನೋಡಿದ್ದ ರಾಜನು ಮುಂದೆ ನುಗ್ಗಿ ಮಂಚದ ಮುಸುಕಿನೊಳಗಿದ್ದ ವೇಷ ಧಾರಿಯನ್ನು ಪುರುಷನೆಂದೇ ಭಾವಿಸಿ, ಹಿಡಿದೆಳೆದು ತರುವುದರೊಳಗಾಗಿ ಕಾದಂಬಿನಿಯು ಬೇಗನೆ ಬಂದು ರಾಜನ ಕೈಯನ್ನು ಹಿಡಿದು, " ನಿಲ್ಲು, ನಿಲ್ಲು ಪ್ರಿಯಾ ! ಇವನನ್ನು ವಧಿಸಬೇಡ. ಇನ್ನೂ ವಿಷಯಗಳೇನಿರುವುವೋ ನಾಳಿನ ದಿನ ಇವನನ್ನು ಕ್ರಮವಾಗಿ ರಹಸ್ಯದಲ್ಲಿ ವಿಚಾರಿಸಿ, ಇವನಿಗೆ ತಕ್ಕ ಶಿಕ್ಷೆಯನ್ನು ವಿಧಿಸಬಹುದು. ಇದು ಆಗ್ರಹದ ಸಮಯವು. ಈಗ ದುಡುಕು ವುದುಚಿತವಲ್ಲ; ಸ್ವಲ್ಪ ಸೈರಿಸು' ಎಂದು ಮಹಾವಿನಯ
ತೃತೀಯ ತರಂಗ ದಿಂದ ರಾಜನ ಪಾದಗಳ ಮೇಲೆ ಬಿದ್ದು ಬೇಡಿಕೊಂಡಳು. ಆಗ ರಾಜನು ತನ್ನ ವಂಶಕ್ಕೆ ಕಲಂಕವುಂಟಾಗಿ ತಾನು ಮಹಾವಮಾನಕ್ಕೆ ಗುರಿಯಾದೆ ನೆಂದು ಖೇದಗೊಂಡಿದ್ದರೂ, ಕಿರಿಯ ಹೆಂಡತಿಯು ಬೇಳುವೆಯ ಮಾತುಗಳಿಗೆ ಸೋತು ಸ್ವಲ್ಪ ಹೊತ್ತು ಒಬ್ಬನಾಗಿದ್ದು ಕಡೆಗೆ ಅಪರಾಧಿಗಳಿಬ್ಬರನ್ನೂ
ಕಾರಾಗೃಹದ ಬೇರೆಬೇರೆ ಕೊಟಡಿಗಳಲ್ಲಿ ಸೇರಿಸಿ ಬಲವಾದ ಬೀಗಗಳನ್ನು ಹಾಕಿ ಬೀಗದ ಕೈಗಳನ್ನು ತಾನೇ ತೆಗೆದುಕೊಂಡು ಅರಮನೆಗೆ ಬಂದನು. ಮತ್ತು, ಪತಿವ್ರತೆಯೆಂದು ತಾನು ನಂಬಿ ಪ್ರೀತಿಸುತ್ತಿದ್ದ ತನ್ನ ಪತ್ನಿ ಯು ಕುಂಟೆಯಾಗಿ ತನಗೆ ದ್ರೋಹಮಾಡಿ ತನ್ನ ವಂಶಕ್ಕೆ ಕಳಂಕವನ್ನು ತಂದ ಳೆಂಬ ದುಃಖಾನಮಾನಗಳಿಂದ ತಪ್ತನಾಗಿ ನಿದ್ರೆಯಿಲ್ಲದೆ ಆ ರಾತ್ರಿಯನ್ನು ಮಹಾ ವ್ಯಥೆಯಿಂದಲೇ ಕಳೆದನು.
----------------------------------------------
ತೃತೀಯ ತರಂಗ
ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣ ಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ಕಟಗಳನ್ನು ಬೆಳಗಲಾರಂಭಿ ಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂ ಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ನೋಡಲು, ಅಲ್ಲಿ ಆಕೆ ಇರಲಿಲ್ಲ. ಆಶ್ಚರ್ಯದಿಂದ ವಿಚಾರಿಸುವಲ್ಲಿ, ರಾತ್ರಿ
ನಡೆದ ಸಂಗತಿಯು ಅಲ್ಲಿದ್ದ ಚೇಟಿಯರಿಂದ ತಿಳಿಯಬಂತು. ತನ್ನ ತಾಯಿಯು ದುರಾಚಾರಿಣಿಯೆಂದು ರಾಜನು ಆಕೆಯನ್ನು ಕಾರಾಗೃಹದಲ್ಲಿಟ್ಟಿರುವನೆಂಬ ವಾರ್ತೆಯನ್ನು ಕೇಳಿದಕೂಡಲೆ ವಿಜಯನ ಕಿವಿಗಳಲ್ಲಿ ಕಾಯಿಸಿದ ಸೀಸವನ್ನು ಸುರಿದಂತಾಯಿತು. ಆದರೆ ತನ್ನ ತಾಯಿಯು ಮಹಾ ಪತಿವ್ರತೆಯೂ, ಶೀಲವತಿಯೆಂಬ ನಾಮಕ್ಕೆ ತಕ್ಕಗುಣವತಿಯೂ ಎಂಬ ವಿಚಾರವು ಮಾತ್ರ
-----------------------------------------------------------------------

ವಿಜಯನ ಮನಸ್ಸಿನಲ್ಲಿ ದೃಢವಾಗಿತ್ತು. ಆದುದರಿಂದ ಆಕೆ ಅಂತಹ ದುರಾ ಚಾರಿಣಿ ಯಾಗಿರಲಾರಳೆಂದು ನಂಬಿ, ಕೂಡಲೇ ತಂದೆಯ ಬಳಿಗೆ ಹೋಗಿ ನಮಸ್ಕರಿಸಿ, “ ಜನಕಾ ! ಮಾತೆಯಾದ ಶೀಲವತಿಯ ಗುಣವನ್ನು ನೀನು ಪರೀಕ್ಷಿಸಿದರೆ ಆಕೆಯು ನಿರ್ದೋಷಿಯೆಂಬುದು ನಿನ್ನ ಗೋಚರಕ್ಕೆ ಬಾರದೆ ಇರದು. ಆ ಮಹಾ ಪತಿವ್ರತೆಯ ವಿಷಯದಲ್ಲಿ ನೀನು ದಯೆಯನ್ನು ತೋರಿಸು.” ಎಂದು ಬೇಡಿಕೊಂಡನು. ಆದಕ್ಕೆ ರಾಜನು " ಎಲವೋ ! ವಿಜಯಾ ! ನಿಮ್ಮ ತಾಯಿಯ ಶೀಲವನ್ನು ನಾನೇ ಪ್ರತ್ಯಕ್ಷವಾಗಿ ನೋಡಿ ದೆನು. ಆದಕಾರಣ ನಿನ್ನ ವಾದವು ನನಗೆ ಬೇಡ. ಆ ನೀಚಳ ದಿನ ನಾನು ಶೂಲಕ್ಕೆ ಹಾಕಿಸುವನು,'' ಎಂದು ಗಜರಿದನು. ವಿಜಯನು ತಂದೆಯ ಪಾದಗಳನ್ನು ಹಿಡಿದು “ಜನಕಾ ! ಇದು ಏನೋ ವಿಚಿತ್ರ ವಿಷಯವಾಗಿರುವುದು. ಆಕೆ ಅಂತಹ ದುಶೀಲೆಯೆಂದು ನಿನಗೆ ಅಷ್ಟು ನಂಬುಗೆ ಇರುವುದಾದರೆ ಆಕೆಯು ಈ ವಿಚಾರವಾಗಿ ಏನು ಹೇಳುವ ಳೆಂಬುದನ್ನು ವಿಚಾರಿಸಿ ತಿಳಿದು, ಅನಂತರ ನಿನ್ನ ಇಷ್ಟಾನುಸಾರ ನಡೆಯಿಸ ಬಹುದು. ಅಪರಾಧಿನಿಯ ಮುಖದಿಂದ ಯಾವ ವಿಚಾರವನ್ನೂ ತಿಳಿಯದೆ ಹೀಗೆ ಮರಣದಂಡನೆಯನ್ನು ವಿಧಿಸುವುದು ನಿನ್ನಂತಹ ಸತ್ಯ ಪ್ರಭುವಿಗೆ ತಕ್ಕುದೇ ಎಂಬುದನ್ನು ದಯೆಯಿಟ್ಟು ಶಾಂತವಾಗಿ ಆಲೋಚಿಸಬೇಕು,” ಎಂದು ಕೈಮುಗಿದು ಬೇಡಿಕೊಂಡನು. ಅದಕ್ಕೆ ಆತನು "ಎಲವೋ ! ಆ ಅಯೋಗ್ಯಳ ಮುಖವನ್ನೇ ನಾನು ನೋಡಲಾರೆನು. ಇನ್ನು ಅವಳ ಮುಖದಿಂದ ಕೇಳಬೇಕಾದ ವಿಚಾರವೇನು ತಾನೇ ಇರುವುದು ? ಆದರೂ ನೀನು ಬಹಳವಾಗಿ ಪ್ರಾರ್ಥಿಸುವೆಯಾದುದರಿಂದ ಈ ದಿನ ಏರ್ಪಡಿಸಿರುವ ಶರವಿದ್ಯಾ ಪರೀಕ್ಷೆಯಲ್ಲಿ ನೀನು ಗೆಲ್ಲುವುದಾದರೆ ನಿನ್ನ ಇಷ್ಟದಂತೆ ಅವಳಿಗೆ ತನ್ನ ವಿಚಾರವಾಗಿ ನನ್ನೊಡನೆ ಮಾತನಾಡಲು ಅವಕಾಶ ಕೊಡುವೆನು,” ಎಂದನು, ಸದ್ಯಕ್ಕೆ ಇಷ್ಟು ಮಟ್ಟಿಗೆ ಆದುದೇ ಪುಣ್ಯವಶವೆಂದು ತಿಳಿದು ವಿಜಯನು ಆಗಬಹುದೆಂದು ಒಪ್ಪಿ ತಂದೆಗೆ ವಂದಿಸಿ ಹೊರಟನು.
--------------------------------------------------------
ಇತ್ತಲಾ ಸೌದಾಮಿನಿ ಕಾದಂಬಿನಿಯರು, ಸವತಿಗೆ ತಕ್ಕ ಶಿಕ್ಷೆ ಯನ್ನು ಮಾಡಿಸಲು ತಾವು ಮಾಡಿದ ಉಪಾಯವು ಫಲಿಸಿತೆಂದು ನಲಿ ಯುತ್ತಿದ್ದರು. ಇವರ ಮಕ್ಕಳಾದ ಭಾನುತೇಜನೂ ರಾಜಹಂಸನೂ ಸಹ ರತ್ನ ಬಾಣವನ್ನು ವಿಜಯನ ಬತ್ತಳಿಕೆಯಲ್ಲಿಟ್ಟಿದ್ದುದರಿಂದ ಅವನನ್ನು ರಾಜನು ಕಳ್ಳನೆಂದು ಕೂರಶಿಕ್ಷೆಗೆ ಗುರಿಮಾಡುವನೆಂತಲೂ ರತ್ನ ಬಾಣವೂ, ರಾಜ್ಯಾಧಿಪತ್ಯವೂ, ರಮಣಿರತ್ನ ವೂ, ತಮ್ಮ ವಶವೇ ಆಗುವು ವೆಂತಲೂ ಹಿಗ್ಗಿ ಆನಂದಪಡುತ್ತ, ಅಸ್ತ್ರವಿದ್ಯಾ ಪರೀಕ್ಷೆಗೆ ನಿಯಮಿತವಾಗಿದ್ದ ಕಾಲವನ್ನೇ ಅತಿಕುತೂಹಲದಿಂದ ಎದುರು ನೋಡುತ್ತಿದ್ದರು.
ಮೊದಲೇ ನಿಶ್ಚಿತವಾಗಿದ್ದಂತೆ ಮಧ್ಯಾಹ್ನ ವಾದ ಮೇಲೆ ಮೂರು ಘಂಟೆಯ ಸಮಯಕ್ಕೆ ಸರಿಯಾಗಿ ರಾಜನು, ಅರಮನೆಯ ಹಿಂದಣ ಉದ್ಯಾನದಲ್ಲಿ ಏರ್ಪಡಿಸಿದ್ದ ಲತಾಮಂಟಪ ಪ್ರದೇಶಕ್ಕೆ ಮಂತ್ರಿ ಪರಿವಾರ ಸಹಿತನಾಗಿ ಬಂದು ರತ್ನಾ ಸನದಲ್ಲಿ ಮಂಡಿಸಿದನು. ರಾಜನ ಬಲಗಡೆಯ ಭದ್ರಾಸನದಲ್ಲಿ ಮಂತ್ರಿವರ್ಯನಾದ ಧುರಂಧರನು ಕುಳಿತನು. ಮೂರು ಮಂದಿ ರಾಜಪುತ್ರರೂ ತಮ್ಮ ತಮ್ಮ ಧನುಸ್ಸುಗಳನ್ನೂ ಬತ್ತಳಿಕೆ ಗಳನ್ನೂ ತಂದು ಪರೀಕ್ಷೆಗೆ ಸಿದ್ಧರಾದರು. ರಾಜನು, ಮುಂದೆ ಕಾಣು ತಿದ್ದ ಒಂದು ಎತ್ತರವಾದ ಹಲಸಿನಮರದ ಮೇಲ್ಗಡೆಯ ಕೊಂಬೆಯಲ್ಲಿದ್ದ ಒಂದು ಎಲೆಗೆ ಕರಿಯ ಚುಕ್ಕೆಯ ಗುರುತನ್ನು ಇಡಿಸಿ, ಆ ಎಲೆ ಯನ್ನು ಒಂದೇ ಬಾಣದಿಂದ ಯಾವನು ಹೊಡೆದು ಉದರಿಸುವನೋ
ಕೊಡುವೆನೆಂದು ತಿಳಿಸಿದನು. ಆಗಬಹುದೆಂದು ಒಪ್ಪಿ, ಮೊದಲು ರಾಜಹಂಸನು ಬಾಣಪ್ರಯೋಗಮಾಡಿದನು. ಆದರೇನು ? ಗುರಿಯು ತಪ್ಪಿ ಬಾಣವು ವ್ಯರ್ಥವಾಯಿತು. ಅವನು ಜೋಲುಮುಖವನ್ನು ಹಾಕಿಕೊಂಡು ಹಿಂದಿರುಗಿದನು. ಭಾನುತೇಜನೂ ಅಟ್ಟಹಾಸದಿಂದ ಮುಂದೆ ಬಂದು ಧನುಷ್ಟಂಕಾರ ಮಾಡಿ ಬಿಲ್ಲಿಗೆ ಬಾಣವನ್ನು ಹೂಡಿ ಗುರಿನೋಡಿ ಹೊಡೆದನು. ಆದರೂ ಬಾಣವು ಗುರಿಯ ಸಮೀಪಕ್ಕೆ ಸಹ
ಅವ:
--------------------------------------------------------
ಹೋಗದೆ ಬೇರೆ ಎಲೆಗಳು ಉದುರಿದವು. ತಮ್ಮ ನಂತೆಯೇ ಇವನ ಮುಖವೂ ಕಳೆಗುಂದಿತು, ಅಸೂಯಾಪರರೂ, ದುಷ್ಟರೂ ಆದ ಭಾನು ತೇಜ ರಾಜಹಂಸರ ಡಂಭವು ಅಡಗಿತು. ತೇಜವು ಕುಂದಿತು. ಆಸೆಯು ವ್ಯರ್ಥವಾಯಿತು.
ಇಷ್ಟು ಹೊತ್ತಿಗೆ ರತ್ನ ಬಾಣವನ್ನೆಲ್ಲಿದ್ದರೂ ಕಂಡುಹಿಡಿದು ಅಪ ಹರಿಸಬೇಕೆಂದು ಮಾಯಾ ಗೃಢವೇಷಧಾರಿಯಾಗಿ ಅಗ್ನಿ ಶಿಖ ರಾಕ್ಷ ಸನು ನಾನಾ ಪ್ರದೇಶಗಳನ್ನು ಸಂಚರಿಸಿ ವೇದವತೀ ನಗರದ ಮೇಲೆ ಹಾರಾಡುತ್ತ ಇದ್ದನು.
ತಮ್ಮಂದಿರಿಬ್ಬರೂ ಸೋತನಂತರ, ವಿಜಯನು ಮುಂದೆ ಬಂದು ತಂದೆಯ ಪಾದಗಳಿಗೆ ನಮಸ್ಕರಿಸಿ ಧನುಷ್ಟಂಕಾರ ಮಾಡಿ ಬತ್ತಳಿಕೆಯಿಂದ ಬಾಣವನ್ನೆಳೆದು ಗುರಿಗೆ ಹೊಡೆದನು. ಆ ಕ್ಷಣವೇ ರಾಜನು ಕರಿಯ ಗುರುತನ್ನಿ ಡಿಸಿ ಗುರಿಯಾಗಿಟ್ಟಿದ್ದ ಎಲೆಯು ನೆಲಕ್ಕೆ ಉದುರಿತು. ವಿಜಯನು ಗೆದ್ದನೆಂದು ಎಲ್ಲರೂ ಕರತಾಡನಗಳನ್ನು ತ್ಸಾಹದಿಂದ ಮಾಡುತ್ತಿರುವಲ್ಲಿ ವಿಜಯನ ಧನುಸ್ಸಿನಿಂದ ಹೊರಟ ಬಾಣವು ರತ್ನ ಮಯವಾಗಿ ಥಳಥಳಿಸು ತಿದ್ದುದನ್ನು ರಾಜನು ನೋಡಿ, ಇದು ಯಾವ ಬಾಣವೆಂದಾಶ್ಚರ್ಯ ಪಡುತ್ತಿರುವಲ್ಲಿ, ಭಾನುತೇಜ ರಾಜಹಂಸರು ತಂದೆಯ ಬಳಿಗೆ ಬಂದು * ಜನಕಾ ! ಅದೋ ! ಅದೋ ! ವಿಜಯನು ನಿನ್ನ ರತ್ನ ಬಾಣವನ್ನು ಕದ್ದಿರುವನು” ಎಂದು ತೋರಿಸಿದರು. ರಾಜನು ತಾನು ರತ್ನ ಬಾಣವನ್ನಿ ಟ್ಟಿದ್ದ ಬತ್ತಳಿಕೆಯನ್ನು ತರಿಸಿ ನೋಡುವಲ್ಲಿ ಅದು ಬರಿಯದಾಗಿದ್ದಿತು. ಆಗ ವಿಜಯನು ಅದನ್ನು ಕದ್ದನೆಂಬುದೇ ರಾಜನ ಮನಸ್ಸಿನಲ್ಲಿ ದೃಢವಾಯಿತು. ಆ ಬಾಣವಾದರೋ ಗುರಿಯಾಗಿದ್ದ ಎಲೆಯನ್ನು ಉದುರಿಸಿದುದಲ್ಲದೆ ವಾಯುವೇಗದಿಂದ ಹೋಗಿ, ಮೇಲೆ ರತ್ನ ಬಾಣವನ್ನು ಕಂಡುಹಿಡಿಯಲು ಹಾರಾಡುತ್ತಿದ್ದ ಮಾಯಾಗೃಧ್ರರಾಜನ ಪಕ್ಕೆಗೆ ಚುಚ್ಚಿಕೊಂಡಿತು. ಆ ಹಕ್ಕಿಯ ಮೈಯಿಂದ ರಕ್ತದ ತೊಟ್ಟುಗಳು ನೆಲಕ್ಕೆ ಬಿದ್ದು ವೇ ಹೊರತು
------------------------------------------------------------
ಬಾಣವು ಮಾತ್ರ ಕೆಳಗೆ ಬೀಳಲೇ ಇಲ್ಲ. ಆದರೆ ಹದ್ದು ಬಾಣದೊಡನೆ ಹಾರಿಹೋದುದನ್ನು ವಿಜಯನು ಕಂಡನು. ಅದು ಎಲ್ಲಿ ಹೋಯಿತೆಂಬುದು ತಿಳಿಯಲಿಲ್ಲ. ಗೃಧ್ರರಾಜನು ಬಾಣಹತಿಯಿಂದ ನೊಂದು ಬಹಳ ಕಷ್ಟದಿಂದ ಹಾಗೆಯೇ ಹಾರಿ ರತ್ನ ದ್ವೀಪ ಪ್ರಾಂತಕ್ಕೆ ಬಂದು ಸೇರಿ ತನ್ನ ನಿಜರೂಪ ವನ್ನು ಪಡೆದನು. ಚುಚ್ಚಿಕೊಂಡಿದ್ದ ಬಾಣವನ್ನು ಮಾತ್ರ ಶರೀರದಿಂದ ಕೀಳಲು ಸಾಧ್ಯವಾಗಲಿಲ್ಲ. ಆದಕಾರಣ ಹಾಗೆಯೇ ಒಲು ನೋವಿನಿಂದ ನರಳುತ್ತ ಅಗ್ನಿ ಶಿಖನು ಹಾಸುಗೆ ಹತ್ತಿ ಮಲಗಿದನು.
ಇತ್ತ, ಆ ಚಂದ್ರಸೇನರಾಜನು, ತಾನು ಕಷ್ಟಪಟ್ಟು ತಪಸ್ಸಿನಿಂದ ಶಂಕರನನ್ನು ಮೆಚ್ಚಿಸಿ ಪಡೆದ ಅಮೋಘವಾದ ರತ್ನ ಬಾಣವನ್ನು ವಿಜಯನು ಕದ್ದು ದೂ ಅಲ್ಲದೆ, ಅದನ್ನು ಯಾರಿಗೂ ಇಲ್ಲದಂತೆ ಕಳೆದುಬಿಟ್ಟನೆಂದು ಅವನ ಮೇಲೆ ಕಿಡಿಕಿಡಿಯಾಗಿ ಕೆರಳಿದನು. ಆಗ ವಿಜಯನು ಕೋಪಗೊಳ್ಳದೆ ವಿನಯದಿಂದ ತಂದೆಗೆ ಕೈಮುಗಿದು, “ ಅಪ್ಪಾ! ನಿಜಾಂಶವನ್ನು ದಯವಿಟ್ಟು ಲಾಲಿಸಬೇಕು. ರತ್ನ ಬಾಣವನ್ನು ನಾನು ಕದ್ದವನಲ್ಲ. ಅದು ನನ್ನ ಬತ್ತಳಿಕೆಗೆ ಹೇಗೆ ಬಂದು ಸೇರಿತೆಂಬುದೂ ನನಗೆ ತಿಳಿಯದು. ಅದು ಹೇಗಾದರೂ ಇರಲಿ, ರತ್ನ ಬಾಣವನ್ನು ತಂದು ನಿನ್ನ ಸನ್ನಿಧಿಗೆ ಅರ್ಪಿಸುವ ಭಾರವು ನನ್ನ ದಾಗಿರುವುದು. ಆದರೆ ಈಗ ಪರೀಕ್ಷೆಯಲ್ಲಿ ನಾನೇ ಜಯಶಾಲಿಯಾಗಿರು ವುದರಿಂದ ನಿನ್ನ ವಾಗ್ದಾನದಂತೆ ನಮ್ಮ ತಾಯಿಯನ್ನು ಸರಿಯಾದ ವಿಚಾರಣೆಯಿಲ್ಲದೆ ಶಿಕ್ಷಿಸಲಾಗದೆಂದು ಮತ್ತೆ ಬೇಡಿಕೊಳ್ಳುತ್ತೇನೆ'' ಎಂದನು. ಅದಕ್ಕೆ ರಾಜನು “ ಎಲೈ ! ನೀನು ಪರೀಕ್ಷೆಯಲ್ಲಿ ಗೆದ್ದಿರುವುದರಿಂದ ನಾನು ನನ್ನ ವಾಗ್ದಾನವನ್ನೇನೋ ನಡೆಯಿಸಿಕೊಡುವೆನು. ಆದರೆ ಆ ಅಮೋಘ ವಾದ ಬಾಣವನ್ನು ನೀನು ನನಗೆ ಕ್ಷಿಪ್ರದಲ್ಲಿ ತಂದೊಪ್ಪಿಸಬೇಕು. ಇಲ್ಲವಾದರೆ ನಿನ್ನ ನ್ಯೂ , ನಿನ್ನ ತಾಯಿಯನ್ನೂ ಇಬ್ಬರನ್ನೂ ಹಿಡಿದು ಶಿರಚ್ಛೇದನ ಮಾಡಿ ಸುವೆನು” ಎಂದನು. ಅದಕ್ಕೆ ವಿಜಯನು “ ಅಪ್ಪಾ ! ಈ ದಿನ ಶುಕ್ಲ ಪಕ್ಷದ ಪಾಡ್ಯಮಿಯು, ಬರುವ ಪೂರ್ಣಿಮೆಯವರೆಗೂ ನನಗವಧಿಯನ್ನು ಕೊಡು,
----------------------------------------------------------
ಅಷ್ಟರೊಳಗಾಗಿ ನಾನು ನಿನ್ನ ರತ್ನ ಬಾಣವೆಲ್ಲಿದ್ದರೂ ಹುಡುಕಿ ತಂದೊಪ್ಪಿ ಸುವೆನು. ಆವರೆಗೂ ನನ್ನ ತಾಯಿಯ ಪ್ರಾಣವನ್ನು ಮಾತ್ರ ಕಾಪಾಡಿರ ಬೇಕು. ಅವಧಿಯಲ್ಲಿ ನಾನು ಜಯಶಾಲಿಯಾಗಿ ಬಾರದಿದ್ದರೆ ನನ್ನ ತಾಯಿಯ ವಿಷಯದಲ್ಲಿಯೂ, ನನ್ನ ವಿಚಾರದಲ್ಲಿಯೂ ನಿನ್ನ ಚಿತ್ರಾನುಸಾರ ನಡೆಯಿಸಬಹುದು ” ಎಂದನು. ಅದಕ್ಕೆ ಧುರಂಧರನು, ಈ ಆಲೋಚನೆಯು ಸಮಂಜಸವಾಗಿರುವುದೆಂದು ರಾಜನೊಡನೆ ಹೇಳಿ, ಇದಕ್ಕೆ ಒಪ್ಪುವ್ರದುಚಿತ ವೆಂದನು. ಅದರಂತೆ ರಾಜನು ಒಪ್ಪಿ ಹದಿನಾಲ್ಕು ದಿನಗಳ ಅವಧಿಯನ್ನು ಕೊಟ್ಟು ವಿಜಯನನ್ನು ಪ್ರಯಾಣಮಾಡಿಸಿ ಶೀಲವತಿಯನ್ನು ಪುನಃ ತನ್ನಾಜ್ಞೆಯಾಗುವವರೆಗೂ ಕಾರಾಗೃಹದಲ್ಲಿ ಎಚ್ಚರಿಕೆಯಿಂದ ನೋಡಿಕೊ ಳ್ಳುತ್ತಿರಬೇಕೆಂದು ಆಜ್ಞೆ ಮಾಡಿದನು. ಇದನ್ನರಿತು ಸೌದಾಮಿನಿ ಕಾದಂಬಿನಿ ಯರು ಶೀಲವತಿಯ ಜೀವಿತದ ಅವಧಿಯು ಹದಿನಾಲ್ಕು ದಿನಗಳು ಹೆಚ್ಚಿದುದಕ್ಕಾಗಿ ಮನಸ್ಸಿನಲ್ಲಿ ಖೇದಗೊಂಡರು. ಆದರೆ ರತ್ನ ಬಾಣವನ್ನು ಹುಡುಕಿಕೊಂಡು ಹೋದ ವಿಜಯನು ಜಯಶಾಲಿಯಾಗಿ ಶರವನ್ನು ತರು ವುದು ಅಸಂಭವವೆಂದು ಇವರು ಮನಸ್ಸಿನಲ್ಲಿ ಸ್ಥಿರಮಾಡಿಕೊಂಡು ತಮ್ಮ ಮಕ್ಕಳಲ್ಲಿ ಯಾರಾದರೂ ಒಬ್ಬನಿಗೆ ರಾಜ್ಯಾಧಿಪತ್ಯವೂ, ಮತ್ತೊಬ್ಬನಿಗೆ ವಿದ್ಯಾಧರಿಯ ಪಾಣಿಗ್ರಹಣವೂ ಆಗುವಂತೆ ಸಂಧಾನಮಾಡಬೇಕೆಂತಲೂ, ಹಾಗೆ ಕ್ಷಿಪ್ರದಲ್ಲಿ ಏರ್ಪಡಿಸಿ ನಡೆಯಿಸಿದರೆ, ಅನಂತರ ವಿಜಯನು ಬಂದರೂ ಅವನಿಗೆ ಯಾವ ಪ್ರಯೋಜನವೂ ಆಗದೆ ತಮ್ಮ ಇಷ್ಟಾರ್ಥವೇ ಫಲಿಸುವು ದೆಂತಲೂ ನಿಶ್ಚಯಿಸಿಕೊಂಡರು. ರಾಜನಿಗೂ ಸಹ ವಿಜಯನು ರತ್ನ ಶರ ವನ್ನು ತರುವ ವಿಷಯದಲ್ಲಿ ಸಂಪೂರ್ಣವಾದ ಸಂದೇಹವೇ ಉಂಟಾಗಿತ್ತು, ಹೇಗಾದರೂ ಅಯೋಗ್ಯಳಾದ ಶೀಲವತಿಯೂ, ಆ ದುಷ್ಕಳ ಮಗನಾದ ವಿಜಯನೂ ತನ್ನ ಎದುರಿಗಿಲ್ಲದೆ ತೊಲಗಿದರೆಂದು ಆಲೋಚಿಸಿ ತನ್ನ ವಾಗ್ದಾನ ದಂತೆ ಹದಿನಾಲ್ಕು ದಿನಗಳವರೆಗೂ ಶೀಲವತಿಯನ್ನು ಪ್ರಾಣದಿಂದಿಟ್ಟಿರ ಬೇಕಾದುದವಶ್ಯವೆಂತಲೂ, ಅವಧಿಯ ಹದಿನಾಲ್ಕು ದಿನಗಳು ಕಳೆದ ಮಾರ
---------------------------------------------------------------------
ನೆಯ ದಿನವೇ ಶೀಲವತಿಯನ್ನು ತಮ್ಮ ಕುಲದೈವವಾದ ಮಹಾಕಾಳಿಗೆ ಬಲಿಯಾಗಿ ಒಪ್ಪಿಸಬೇಕೆಂತಲೂ ನಿಶ್ಚಯಿಸಿ, ರಾಜನು ಅಧಿಕಾರಿಗಳಿಗೆ ಆಜ್ಞೆ ಮಾಡಿದನು. ವಿದ್ಯಾಧರಿಯನ್ನು ತಮ್ಮ ಮಕ್ಕಳಲ್ಲಿ ಒಬ್ಬನಿಗೆ ತಂದು ವಿವಾಹಮಾಡಿಕೊಳ್ಳಬೇಕೆಂಬ ಕುತೂಹಲದಿಂದ ಇದ್ದ ಸೌದಾಮಿನಿ ಕಾದಂಬಿನಿಯರು, ವಿಜಯನು ವಿಜಯಶಾಲಿಯಾಗಿ ಬರುವುದು ಅಸಂಭವ ವೆಂತಲೂ, ಒಂದು ವೇಳೆ ಅವನು ಜೀವದಿಂದ ಬಂದರೂ ಆ ಕುಲಟೆಯ ಮಗನಿಗೆ ಮಂತ್ರಿ ಪುತ್ರಿಯಾದ ವಿದ್ಯಾಧರಿಯಂತಹ ಕನೈಯನ್ನು ತಂದು ವಿವಾಹ ಮಾಡುವುದೂ ರಾಜ್ಯಾಧಿಪತ್ಯವನ್ನು ಕೊಡುವುದೂ ಸಮ್ಮತವಲ್ಲ ವೆಂತಲೂ, ಅದರಿಂದ ವಿದ್ಯಾಧರಿಯನ್ನು ಭಾನುತೇಜ ರಾಜಹಂಸರಲ್ಲಿ ಒಬ್ಬನಿಗೆ ವಿವಾಹಮಾಡಿ ಮತ್ತೊಬ್ಬನಿಗೆ ರಾಜ್ಯಾಧಿಪತ್ಯವನ್ನು ಕೊಡುವ ಸಂಕಲ್ಪ ಮಾಡಬೇಕೆಂತಲೂ, ಸಮಯವರಿತು ರಾಜನ ಮನಸ್ಸಿಗೆ ತಾಕುವಂತೆ ಆಗಾಗ ಒತ್ತಿ ಹೇಳುತ್ತ ಬಂದರು. ರಾಜನೂ ಸಹ ಇವರ ಮಾತುಗಳಿಗೆ ನಮ್ರನಾಗಿ ಅದರಂತೆ ಮಾಡಲು ಒಪ್ಪಿದನು.
ಮಂತ್ರಿಯಾದ ದುರಂಧರನಾದರೋ ಮೂರು ಮಂದಿ ರಾಜಪುತ್ರ ರನ್ನೂ ಬಾಲ್ಯದಿಂದಲೂ ಚೆನ್ನಾಗಿ ಬಲ್ಲವನು. ವಿಜಯನ ಗುಣ, ಗಾಂಭೀರ್ಯ, ಚಾತುರ್ಯಗಳ ವಿಷಯದಲ್ಲಿ ಆತನಿಗೆ ಹೆಚ್ಚು ಗೌರವವೂ ಪ್ರೀತಿಯೂ ಇತ್ತು. ಇದರಿಂದ ಅವನಿಗೇ ತನ್ನ ಪುತ್ರಿಯಾದ ವಿದ್ಯಾಧರಿ ಯನ್ನು ಕೊಟ್ಟು ವಿವಾಹಮಾಡಬೇಕೆಂಬ ಕುತೂಹಲವು ಆತನಿಗಿತ್ತು.
ವಿದ್ಯಾಧರಿಯಾದರೋ ವಿಜಯನಲ್ಲಿ ಬದ್ಧಾನುರಾಗೆಯಾಗಿ ಸದಾ ಅವನ ನಾಮಸ್ಮರಣೆಯಲ್ಲಿಯೇ ಕಾಲವನ್ನು ಕಳೆಯುತ್ತ, ಚಿತ್ರದಲ್ಲಿ ಅವನ ಬಿಂಬವನ್ನೇ ನೋಡುತ್ತ ವಿರಹವ್ಯಥೆಯಿಂದ ದಿನಗಳನ್ನು ಯುಗಗಳಂತೆ ನೂಕುತ್ತಿದ್ದಳು.
ಭಾನುತೇಜನೂ, ರಾಜಹಂಸನೂ ವಿಜಯನು ಹೊರಟುಹೋದುದ ರಿಂದ ಬಹಳ ಸಂತೋಷಪಟ್ಟು ಅವನು ಬರುವುದರೊಳಗಾಗಿ ಹೇಗಾದರೂ
------------------------------------------------------------
ವಿದ್ಯಾಧರಿಯ ಮನವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳಬೇಕೆಂದು ನಾನಾ ಪ್ರಯತ್ನಗಳನ್ನು ಮಾಡುತ್ತ ಬಂದರು. ವಿದ್ಯಾಧರಿಯ ಚಿತ್ರವಾದರೋ ವಿಜಯನಲ್ಲಿಯೇ ಲೀನವಾಗಿ ಹೋಗಿದ್ದುದರಿಂದ ಇವರ ಪ್ರಯತ್ನಗ ಳೊಂದೂ ಫಲಿಸಲಿಲ್ಲ. ಸೌದಾಮಿನಿ ಕಾದಂಬಿನಿಯರೂ ಸಹ ಇವಳಿಗೆ ನಾನಾ ರೀತಿಯಿಂದ ಬೋಧನೆಗಳನ್ನು ಮಾಡಿ ವಿಜಯನಲ್ಲಿ ದ್ವೇಷವನ್ನೂ, ಭಾನುತೇಜ ರಾಜಹಂಸರಲ್ಲಿ ಅನುರಾಗವನ್ನೂ ಹುಟ್ಟಿಸಲು ವಿಧವಿಧವಾದ ಪ್ರಯತ್ನಗಳನ್ನು ಮಾಡುತ್ತ ಬಂದರು.
---------------------------------------------------------------
ಚತುರ್ಥ ತರಂಗ
ಇತ್ತಲಾ ವಿಜಯಸು ರತ್ನ ಬಾಣದೊಡನೆ ಹಾರಿಹೋದ ಹದ್ದನ್ನು ಹುಡುಕಿಕೊಂಡು ಹೊರಟು, ಅದರ ಮೈಯಿಂದ ತೊಟ್ಟಿಕ್ಕಿದ್ದ ರಕ್ತದ ಗುರುತುಗಳನ್ನು ಅನುಸರಿಸಿ ಅದು ಹೋದ ಮಾರ್ಗವನ್ನು ಹಿಡಿದು ಬಹು ದೂರ ಹೋದನು. ಆದರೂ ಹದ್ದಿನ ನೆಲೆಯು ಮಾತ್ರ ತಿಳಿಯಲೇ ಇಲ್ಲ. ಹೀಗೆ ಅರಣ್ಯದಲ್ಲಿ ಬಹುದೂರ ಪ್ರಯಾಣಮಾಡಿ ಮಧ್ಯಾಹ್ಯಾ ಯಾಸವನ್ನು ಕಳೆಯಲು ವಿಶ್ರಮಿಸಿಕೊಳ್ಳಬೇಕೆಂದು ಒಂದು ವಟವೃಕ್ಷದ ಬಳಿಗೆ ಬಂದನು. ಅಷ್ಟರಲ್ಲಿಯೇ, ಆಜಾನುಬಾಹುಗಳಾಗಿಯೂ, ಭಯಂಕರಾಕಾರರಾಗಿಯೂ ಇದ್ದ ಇಬ್ಬರು ಪುರುಷರು, ರೆಕ್ಕೆಗಳುಳ್ಳ ಒಂದು ದಿವ್ಯವಾದ ಕುದುರೆಯ ತಲೆಯನ್ನೊ ಬ್ಬನೂ, ಬಾಲವನ್ನೊ ಬ್ಬನೂ ಹಿಡಿದೆಳೆಯುತ್ತ, ಜಗಳವಾಡುತ್ತ ಸ್ವಲ್ಪ ದೂರದಲ್ಲಿ ಬರುತ್ತಿರುವುದನ್ನು ಕಂಡನು. ಈ ಸಮಯದಲ್ಲಿ ತಾನು ಇವರೊಡನೆ ಮಾತನಾಡಿ ತನ್ನ ಕಾರ್ಯಕ್ಕೆ ಸೌಕರ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾದೀತೇ ಎಂದಾಲೋಚಿಸುತ್ತ ಮುಂದೆ ಬೇಗನೆ ಬಂದು ಇಬ್ಬರಿಗೂ ಕೈಮುಗಿದು, “ ಮಹಾಪುರುಷರಿರಾ! ನಿಮ್ಮಿಬ್ಬ
---------------------------------------------------------------
ರನ್ನೂ ನೋಡಿದರೆ ಅದ್ಭುತ ಸಾಹಸಿಗಳಾದ ಮಹಾನುಭಾವರಂತೆ ಕಾಣು ವಿರಿ. ನೀವುಗಳು ಈ ರೀತಿಯಾಗಿ ಈ ಕುದುರೆಯನ್ನು ಹಿಡಿದೆಳೆದಾಡುತ್ತ ಬರಲು ಕಾರಣವೇನು ? ದಯೆಯಿಟ್ಟು ತಿಳಿಸಿದರೆ ನಿಮ್ಮ ಜಗಳವನ್ನು ಸಾಧ್ಯವಾದರೆ ನಾನು ನ್ಯಾಯವಾಗಿ ತೀರಿಸುವೆನು” ಎಂದನು. ವಿಜಯನ ಗಂಭೀರಾಕಾರದಿಂದಲೂ, ನಯವಾದ ಭಾಷಣದಿಂದಲೂ ಇವನನ್ನು ನೋಡಿದೊಡನೆಯೇ ಆ ಪುರುಷರಿಬ್ಬರಿಗೂ ಇವನಲ್ಲಿ ಪ್ರೀತಿ ಗೌರವಗಳುಂಟಾ ದುವು. ಅದರಿಂದ ಇವನ ಮಾತಿಗೆ ಸಂತೋಷದಿಂದ ಸಮ್ಮತಿಸಿ, ಅವರಲ್ಲಿ ಒಬ್ಬನು ತಮ್ಮ ಜಗಳದ ವೃತ್ತಾಂತವನ್ನು ಈ ರೀತಿಯಾಗಿ ಹೇಳಿದನು. “ ಎಲೈ ಸೌಮ್ಯಾಕಾರನೇ ! ನಾವು ಇಲ್ಲಿಗೆ ಹತ್ತು ಯೋಜನ ದೂರದಲ್ಲಿರುವ ಕ್ರೌಂಚ ದ್ವೀಪದಲ್ಲಿ ವಾಸಿಸುವ ಕುಂಭ ನಿಕುಂಭರೆಂಬ ರಾಕ್ಷಸರು. ನಾವಿಬ್ಬರೂ ಮಲಯಪರ್ವತ ಪ್ರಾಂತ್ಯದಲ್ಲಿ ಪರಮಶಿವನನ್ನು ಕುರಿತು ಉಗ್ರತಪಸ್ಸನ್ನಾಚರಿಸಿದೆವು. ನಮ್ಮ ತಪಸ್ಸಿಗೆ ಮೆಚ್ಚಿ ಶಂಕರನು ವಾಯು ವೇಗವುಳ್ಳ ಕಾಮಗಾಮಿಯಾದ ಈ ಅಶ್ವವನ್ನು ನಮ್ಮ ವಶಕ್ಕೆ ಕೊಟ್ಟು ಇದನ್ನು ಹತ್ತಿ ಯಾವ ಸ್ಥಳಕ್ಕೆ ಹೋಗಬೇಕೆಂದು ಬಯಸಿದರೆ ಆ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ನಿಮ್ಮಿಬ್ಬರಲ್ಲಿ ಯಾವನು ಹೆಚ್ಚು ಬಲ ಶಾಲಿಯೋ ಅವನು ಇದನ್ನು ತೆಗೆದುಕೊಳ್ಳಬಹುದು ” ಎಂದು ಹೇಳಿ ಅಂತರ್ಧಾನನಾದನು. ಇದರಿಂದ ನಾವುಗಳು ಇದನ್ನು ಈ ರೀತಿಯಾಗಿ ಹಿಡಿದುಕೊಂಡಿದ್ದೇವೆ' ಎಂದನು. ಅದಕ್ಕೆ ವಿಜಯನು ಮನಸ್ಸಿನಲ್ಲಿ ತಮ್ಮ ತಂದೆಯ ತಪಸ್ಸಿನ ಕಥೆಯನ್ನು ಸ್ಮರಿಸಿಕೊಂಡು ಲೋಕರಕ್ಷಕನಾದ ಶಂಕರನು ದುಷ್ಟ ಶಿಕ್ಷಣಾರ್ಥವಾಗಿ ಇಂತಹ ವರಗಳನ್ನು ಕರುಣಿಸುವ ನೆಂದಾಲೋಚಿಸಿ ಅವರನ್ನು ಕುರಿತು, " ಅಯ್ಯಾ ! ಮಹಾ ತಪಸ್ವಿಗಳಾಗಿ ಮಹಾದೇವನ ಅನುಗ್ರಹಕ್ಕೆ ಪಾತ್ರರಾಗಿರುವ ನಿಮಗೆ ಅಲ್ಪನಾದ ನಾನು ಏನನ್ನು ಹೇಳುವುದಕ್ಕೂ ಶಕ್ತನಲ್ಲ. ಆದರೂ ನಾನು ಹೇಳುವಂತೆ ನೀವು ನಡೆದರೆ ನಿಮ್ಮ ಜಗಳವು ಕ್ಷಿಪ್ರದಲ್ಲಿಯೇ ಪಠ್ಯವಸಾನ ಹೊಂದುವುದು,
------------------------------------------------------------------
ಹೇಗೆಂದರೆ, ನೀವಿಬ್ಬರೂ ಈ ಕುದುರೆಯನ್ನು ಇಲ್ಲಿ ನಿಲ್ಲಿಸಿ, ಇಲ್ಲಿಗೆ ಸುಮಾರು ಇನ್ನೂ ರು ಗಜಗಳ ದೂರದಲ್ಲಿ ಕಾಣುವ ಆ ವಟವೃಕ್ಷವನ್ನು ಮುಟ್ಟಿ ಮತ್ತೆ ಓಡಿ ಬನ್ನಿ, ಯಾರು ಮೊದಲು ಬರುವಿರೋ ಅವರೇ ಹೆಚ್ಚು ಶಕ್ತಿ ವಂತರೆಂದು ವ್ಯಕ್ತವಾಗುವುದರಿಂದ ಅವರೇ ಆ ಕುದುರೆಯನ್ನೇರಿ ಹೊರಟು ಹೋಗಿರಿ. ಇದರಿಂದ ನಿಮ್ಮ ಬಲವೂ ವ್ಯಕ್ತವಾದಂತಾಗುವುದು. ಸುಲಭ ವಾಗಿ ವ್ಯಾಜ್ಯವೂ ತೀರ್ಮಾನವಾಗುವುದು” ಎಂದನು. ಮದಾಂಧರಾದ ರಾಕ್ಷಸರಿಬ್ಬರೂ ಆಗಬಹುದೆಂದು ಬಹಳ ಸಂತೋಷದಿಂದ ಸಮ್ಮತಿಸಿ, ಕುದುರೆಯನ್ನು ವಿಜಯನ ಬಳಿಯಲ್ಲಿ ನಿಲ್ಲಿಸಿ, ತಾವಿಬ್ಬರೂ ದೂರದಲ್ಲಿರುವ ವಟವೃಕ್ಷದ ಬಳಿಗೆ ಓಡಿಹೋದರು. ಅವರು ಹಿಂದುಮುಖನಾಗಿ ಓಡುತ್ತ ಆ ವೃಕ್ಷದಬಳಿ ಸೇರುವಷ್ಟರಲ್ಲಿ ವಿಜಯನು ಕುದುರೆಯನ್ನೇರಿ, ರತ್ನ ಬಾಣ ವಿರುವ ಕಡೆಗೆ ನನ್ನನ್ನು ಕರೆದುಕೊಂಡು ಹೋಗು” ಎಂದನು. ಆ ಕ್ಷಣವೇ ಕುದುರೆಯು ಆಕಾಶಕ್ಕೇರಿ ವಾಯುವೇಗದಿಂದ ರತ್ನ ದ್ವೀಪದ ಮಾರ್ಗವಾಗಿ ಹೊರಟಿತು. ವಟವೃಕ್ಷದ ಬಳಿಯನ್ನು ಸೇರಿ ಕುಂಭ ನಿಕುಂಭರಿಬ್ಬರೂ ಹಿಂದಿರುಗಿ ನೋಡಿ, ಕುಂಭಗಳಂತಿದ್ದ ತಮ್ಮ ಹೊಟ್ಟೆಗಳನ್ನು ಚೆಚ್ಚಿಕೊಂಡು,
ಅಯ್ಯಯ್ಯೋ ! ದುಷ್ಟನು ಎಂತಹ ಮೋಸ ಮಾಡಿದನು ! ಅಯ್ಯೋ ! ಇಬ್ಬರ ಜಗಳವು ಮೂರನೆಯವನಿಗೆ ಲಾಭವಾಯಿತಲ್ಲಾ !” ಎಂದು ದುಃಖಿಸುತ್ತ, ತಮ್ಮ ಅವಜ್ಞತೆಗಾಗಿ ಪಶ್ಚಾತ್ತಾಪಪಡುತ್ತ ವ್ಯಥೆಯಿಂದ ಜೋಲು ಮುಖಗಳನ್ನು ಹಾಕಿಕೊಂಡು ತಮ್ಮ ನಗರವನ್ನು ಕುರಿತು ಪ್ರಯಾಣಮಾಡಿದರು. * ವಿಜಯನು ದಿವ್ಯಾಶ್ವದ ಮೇಲೆ ವಾಯುವೇಗದಿಂದ ಪ್ರಯಾಣ ಮಾಡಿ ಸಂಧ್ಯಾಕಾಲಕ್ಕೆ ಆಗ್ನಿಶಿಖ ರಾಕ್ಷ ಸೇಂದ್ರನ ರಾಜಧಾನಿಯಾದ ರತ್ನಾವತಿಯ ಪ್ರಾಂತವನ್ನು ಸೇರಿ ನಗರದ ಹೊರಭಾಗದಲ್ಲಿ ಬಂದಿಳಿದನು. ಅನಂತರ ಕುದುರೆಯನ್ನು ಒಂದು ಪೊದರಿನ ಮರೆಯಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ, ಅಲ್ಲಿಯೇ ಯಾರೂ ಕಾಣದಂತೆ ಸ್ವಲ್ಪ ಹೊತ್ತು ವಿಶ್ರಮಿಸಿ
--------------------------------------------------------------------
ಕೊಂಡಿದ್ದು ಕತ್ತಲಾದ ಒಡನೆಯೆ ಮೆಲ್ಲನೆ ನಗರವನ್ನು ಪ್ರವೇಶಿಸಿ, ಅರಮನೆಯ ಮಾರ್ಗವಾಗಿ ಹೋಗುತ್ತಿದ್ದನು. ಅಷ್ಟರಲ್ಲಿಯೇ ಪದ್ಧತಿಯಂತೆ ಅರಮನೆಗೆ ಪುಷ್ಪಮಾಲೆಗಳನ್ನೂ, ಸುಗಂಧಲೇಪನಗಳನ್ನೂ ಅಣಿಮಾಡಿ ಕೊಂಡು ಹೋಗುತ್ತಿದ್ದ ಸರೋಜಿನಿ ಎಂಬ ಮಾಲೆಗಾತಿಯು ಇವನಿಗೆ ಗೋಚರಳಾದಳು. ಇವಳ ಸಹಾಯದಿಂದ ಈ ನಗರದ ವಿಚಾರಗಳನ್ನು ತಿಳಿದು ತನ್ನ ಕಾರ್ಯಸಾಧನೆಗೆ ಪ್ರಯತ್ನ ಮಾಡಬೇಕೆಂದುದ್ದೇಶಿಸಿ ವಿಜಯನು ಆಕೆಯ ಬಳಿಗೆ ಬಂದನು. ದಿವ್ಯವಸ್ನಾಭರಣ ಭೂಷಿತನಾಗಿ ನವಮನ್ಮಥನಂತೆ ಪ್ರಕಾಶಿಸುತ್ತಿದ್ದ ಇವನನ್ನು ನೋಡಿ ಸರೋಜಿನಿಯು ಆಶ್ಚರ್ಯಪರವಶಳಾಗಿ ಅವನನ್ನು ಕುರಿತು, “ಎಲೈ ಸುಕುಮಾರನೇ ! ನೀನು ಯಾರು ? ಹೊಸಬನಂತೆ ಕಾಣುವೆ? ನೀನು ಇಲ್ಲಿಗೆ ಬರಲೇನು ಕಾರಣ ? ನೀನೇನು ಗಂಧರ್ವನೋ ; ಕಿನ್ನರನೋ ? ಅಥವಾ ದಿಕ್ಷಾಲಕರಲ್ಲಿ ಒಬ್ಬನೋ
ಯಾರು ? ” ಎಂದು ಪ್ರಶ್ನೆ ಮಾಡಿದಳು. ಆಗ ವಿಜಯನು ಆಕೆಗೆ ನಮಸ್ಕರಿಸಿ, “ ತಾಯಿ ! ನಾನು ಗಂಧರ್ವನೂ ಅಲ್ಲ, ಕಿನ್ನರನೂ ಅಲ್ಲ. ದಿಕ್ಷಾಲಕನೂ ಅಲ್ಲ. ನಾನೊಬ್ಬ ರಾಜಪುತ್ರನು. ಬೇಟೆಯಾಡುತ್ತ ಮಾರ್ಗತಪ್ಪಿ ಇಲ್ಲಿಗೆ ಬಂದಿರುವೆನು. ನಿನ್ನನ್ನು ನೋಡಿದರೆ ಬಹಳ ದಯಾವತಿಯಂತೆ ಕಾಣುವೆ. ಆದುದರಿಂದ ನನಗೆ ಈ ನಗರದಲ್ಲಿ ನಿಲ್ಲಲು ಒಂದೆರಡು ದಿನಗಳು ಆಶ್ರಯ ವನ್ನು ಕೊಟ್ಟು, ಈ ನಗರದಲ್ಲಿನ ವಿಶೇಷಗಳನ್ನು ತಿಳಿದುಕೊಳ್ಳಲು ಅವಕಾಶ ವನ್ನುಂಟುಮಾಡಿ ಕೊಡಬೇಕಾಗಿ ಬೇಡುತ್ತೇನೆ. ಇದೋ ನಿನ್ನ ಉಪಕಾರ ಕ್ಯಾಗಿ ಮೊದಲು ಈ ರತ್ನ ವಲಯವನ್ನು ತೆಗೆದುಕೋ ” ಎಂದು ಹೇಳಿ ತನ್ನ ಕೈಯ್ಯಲ್ಲಿದ್ದ ರತ್ನ ವಲಯವನ್ನು ಅವಳಿಗೆ ಕೊಟ್ಟನು. ಮಾಲೆಗಾತಿಯು ಅತ್ಯಂತ ಸಂತೋಷದಿಂದ “ ಅಯ್ಯಾ ! ನಿನ್ನ ವೃತ್ತಾಂತವನ್ನು ಕೇಳಿ ಸಂತೋಷವಾಯಿತು. ಈ ನಗರವು ರತ್ನ ದ್ವೀಪಕ್ಕೆ ರಾಜಧಾನಿಯಾದ ರತ್ನಾವತಿಯು ಇಲ್ಲಿಗೆ ಮಹಾ ಮಾಯಾವಿಯೂ ಕಾಮರೂಪಿಯೂ ಕೂರಶಾಸನನೂ ಆದ ಅಗ್ನಿ ಶಿಖನೆಂಬ ರಾಕ್ಷಸೇಂದ್ರನು ರಾಜನಾಗಿರು
---------------------------------------------------------------
ವನು. ಆತನು ಅಂತರಿಕ್ಷ ಮಾರ್ಗದಲ್ಲಿ ಗೃಧ್ರರೂಪದಿಂದ ಬರುತ್ತಿರುವಾಗ ಯಾರೋ ಹೊಡೆದ ಒಂದು ರತ್ನ ಖಚಿತವಾದ ಬಾಣವು ದೇಹದಲ್ಲಿ ನಟ್ಟು ಕೊಂಡು ಕೀಳಲು ಬಾರದೆ ಇದೆ. ಈ ಬಾಧೆಯಿಂದ ಆತನು ಬಹಳವಾಗಿ ನರಳುತ್ತಿರುವನು. ವೈದ್ಯರು ಚಿಕಿತ್ಸೆ ಮಾಡುತ್ತಿರುವರು. ಆತನು ಬಹಳ ದಿನಗಳ ಹಿಂದೆ ಯಾವುದೋ ದೇಶದಿಂದ ಹೊತ್ತು ತಂದಿರುವ ಚಂದ್ರಲೇಖೆ ಎಂಬ ರಾಜಪುತ್ರಿಯು ಬಾಲ್ಯದಿಂದಲೂ ಆತನ ಬಳಿಯಲ್ಲಿಯೇ ಬೆಳೆದು, ಆತನನ್ನೇ ತಂದೆಯೆಂದು ಭಾವಿಸಿಕೊಂಡು ಉಪಚರಿಸುತ್ತಿರುವಳು. ಆಕೆಯ ಸೌಂದ ರ್ಯವನ್ನು ನಾನು ಅಪ್ಪಿಷ್ಟೆಂದು ಬಣ್ಣಿಸಲಾರೆನು. ಆಕೆಯೊಬ್ಬಳು ಬಳಿಗೆ ಹೋದರೆ ಸೌಮ್ಯನಾಗಿ ಮಾತನಾಡುವನು, ಇತರರು ಹೋದರೆ ಬಾಧೆಯ ಕೋಪದಿಂದ ಅವರ ಮೇಲೆ ರೇಗಿರೇಗಿ ಬೀಳುವನು. ಹೀಗೆ ಮಿತಿಮೀರಿದ ಬಾಧೆಯಿಂದ ಅಗ್ನಿಶಿಖನು ನರಳುತ್ತಿರುವನು. ಆತನ ಅರಮನೆಯೂ ವೈಭವವೊ ನೀನು ನೋಡತಕ್ಕುವಾಗಿರುವುವ ” ಎಂದಳು. ರತ್ನ ಬಾಣವು ರಾಕ್ಷಸೇಂದ್ರನ ದೇಹದಲ್ಲಿ ನೆಟ್ಟಿರುವದೆಂಬ ವಾರ್ತೆಯನ್ನು ತಿಳಿದೊಡನೆಯೇ ಬಹಳ ಸಂತೋಷಪಟ್ಟು ವಿಜಯನು ಹೇಗಾದರೂ ತನ್ನ ಕಾರ್ಯವನ್ನು ಸಾಧಿಸಿಕೊಂಡೇ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು ಮಾಲೆ ಗಾತಿಯನ್ನು ನೋಡಿ, “ತಾಯಾ ! ನಿನ್ನಿಂದ ಈ ವಿಚಾರಗಳನ್ನು ತಿಳಿದು ಬಹಳ ಸಂತೋಷವಾಯಿತು. ನೀನು ಯಾರು ? ನಿನ್ನ ವೃತ್ತಾಂತವೇನು ? ದಯೆಯಿಟ್ಟು ತಿಳಿಸಬೇಕು ” ಎಂದು ಕೇಳಲು ಆಕೆಯು “ ಅಯ್ಯಾ ! ನಾನು ಅರಮನೆಗೆ ಸುಗಂಧದ್ರವ್ಯಗಳನ್ನೂ ಪುಷ್ಪಮಾಲಿಕೆಗಳನ್ನೂ ಒದಗಿಸಿ ಕೊಡುವ ಸೈರಂದ್ರಿಯು, ಪದ್ಧತಿಯಂತೆ ಈ ದಿನ ರಾಜಪುತ್ರಿಗಾಗಿ ಮಾಲೆಗಳನ್ನೂ, ಅನುಲೇಪನಗಳನ್ನೂ ತೆಗೆದುಕೊಂಡು ಹೋಗುತ್ತಿರುವೆನು” ಎಂದಳು. ಅದಕ್ಕೆ ವಿಜಯನು, " ತಾಯಿ ! ನೀನು ನನಗೆ ದೊರೆತುದು ಮಹಾನಿಧಿಯು ದೊರೆತಂತಾಯಿತು. ಹಾಗೆಯೇ ಅರಮನೆಯಲ್ಲಿ ನನಗೆ ಯಾರನ್ನಾದರೂ ಪರಿಚಯಮಾಡಿಸುವುದರಲ್ಲಿ ಆಕ್ಷೇಪಣೆಯುಂಟೇ ?”
---------------------------------------------------------------------
ಎಂದನು. ಅದಕ್ಕೆ ಆ ಸೈರಂದ್ರಿಯು, 'ರಾಜಕುಮಾರಾ ! ನಿನ್ನಂತಹ ರಾಜಪುತ್ರನ ಪರಿಚಯವನ್ನು ಅರಮನೆಯ ಜನರಿಗೆ ಮಾಡಿಸುವುದರಲ್ಲಿ ಆತಂಕವೇನು ? ನಾಳಿನದಿನ ಪ್ರಯತ್ನಿಸಿ ನೋಡುವೆನು. ಈಗ ಬಾ ನಮ್ಮ ಮನೆಗೆ ಹೋಗೋಣ '' ಎಂದು ಹೇಳಿ ಅವನನ್ನು ಕರೆದುಕೊಂಡು ತನ್ನ ಮನೆಗೆ ಹಿಂದಿರುಗಿ ಬಂದು ಆತನಿಗೆ ವಿಶ್ರಮಿಸಿಕೊಳ್ಳುವಂತೆ ಹೇಳಿ ತಾನು ಅರಮನೆಗೆ ಹೋದಳು,
- ಮಾಲೆಗಾತಿಯು ಕಾಲಕ್ಕೆ ಬರಲಿಲ್ಲವೆಂದು ಅರಮನೆಯಲ್ಲಿ ರಾಜ ಪ್ರಯು ನಿರೀಕ್ಷಿಸಿಕೊಂಡಿರುವ ಸಮಯಕ್ಕೆ ಸರೋಜಿನಿಯು ಗಂಧ ಪುಷ್ಠಾದಿಗಳೊಡನೆ ಅಂತಃಪುರವನ್ನು ತಲಪಿದಳು. ಆಗ ರಾಜಪುತ್ರಿಯು ಈ ದಿನ ವಿಳಂಬವಾದುದಕ್ಕೆ ಕಾರಣವೇನೆಂದು ಕೇಳಲು, ಸರೋಜಿನಿಯು ವೇದವತೀ ನಗರದ ರಾಜಕುಮಾರನು ಮಾರ್ಗತಪ್ಪಿ ಬಂದು ತನ್ನ ಮನೆ ಯಲ್ಲಿ ಇಳಿದಿರುವನೆಂತಲೂ, ಆತನು ಮಾರ್ಗದಲ್ಲಿ ತನ್ನನ್ನು ಸಂಧಿಸಿ ಮಾತ ನಾಡುತ್ತಿದ್ದ ಕಾರಣ ತಾನು ಒರುವುದು ವಿಳಂಬವಾಯಿತೆಂತಲೂ ಆತನ ವೃತ್ತಾಂತವನ್ನು ವಿವರಿಸಿ ಹೇಳಿ, ಕ್ಷಮಿಸಬೇಕಾಗಿ ಬೇಡಿಕೊಂಡಳು. ರಾಜಕುಮಾರಿಯು ವೇದವತೀನಗರವೆಂದೊಡನೆಯೇ ಸಂತೋಷಪಟ್ಟು, * ಅಮ್ಮಾ : ವೇದವತೀನಗರದ ರಾಜನ ತಂಗಿಯೇ ನಮ್ಮ ತಾಯಿ ಯೆಂತಲೂ, ನಮ್ಮ ಜನಕ ತಂದೆಯು ಅಗ್ನಿ ಶಿಖರಾಕ್ಷ ಸೇಂದ್ರನೊಡನೆ ಯುದ್ಧ ಮಾಡಿ ಮೃತನಾಗಲು, ನನ್ನನ್ನು ಒಬ್ಬ ದಾದಿಯ ವಶದಲ್ಲಿ ಬಿಟ್ಟು ನಮ್ಮ ತಾಯಿಯು ಅಗ್ನಿ ಪ್ರವೇಶಮಾಡಿದಳೆಂತಲೂ, ಆಗ ಈತನು, ಶಿಶುವಾಗಿದ್ದ ನನ್ನನ್ನು ಬಲಾತ್ಕಾರದಿಂದ ಆ ದಾದಿಯ ಕೈಯಿಂದ ಕಿತ್ತು ತೆಗೆದುಕೊಂಡು ಬಂದನೆಂತಲೂ ನಮ್ಮ ವೃದ್ದ ಪರಿಚಾರಿಣಿಯರಲ್ಲಿ ಒಬ್ಬಳಾದ ಶಾಂತ ಮತಿಯು ಹೇಳುತ್ತಿದ್ದಳು. ನೀನು ಹೇಳುವ ರಾಜಕುಮಾರನ ವಿಷಯವನ್ನು ಕೇಳಿದರೆ ಆತನು ನಮ್ಮ ಸೋದರಮಾವನ ಮಗನೆಂದು ತೋರುವುದು. ಹೇಗಾದರೂ ನೀನು ನನಗೆ ಆತನ ದರ್ಶನವನ್ನು ಮಾಡಿಸಬೇಕು'' ಎಂದು
---------------------------------------------------------------------
ಬಹಳವಾಗಿ ಬೇಡಿಕೊಂಡಳು. ಸರೋಜಿನಿಯು ಸಂತೋಷಪಟ್ಟು, “ ನೀನು ಚಿಂತಿಸಬೇಡ, ನಾಳಿನದಿನ ಸಂಧ್ಯಾ ಕಾಲಕ್ಕೆ ನೀನು ಉದ್ಯಾನದಲ್ಲಿರುವೆ ಯಷ್ಟೆ ! ಅಲ್ಲಿಗೆ ನಾನು ಆತನನ್ನು ಕರೆತರುವೆನು'' ಎಂದಳು. ಆಗ ರಾಜಪುತ್ರಿಯು ದೈವಾನುಗ್ರಹದಿಂದ ತನಗೆ ಬಂಧವಿಮೋಚನೆಯ ಕಾಲವು ಸವಿಾಪಿಸಿತೆಂದಾಲೋಚಿಸಿ ಆ ವಾರ್ತೆಯನ್ನು ಹೇಳಿದ ಸೈರಂಧಿಗೆ ಪಾರಿ ತೋಷಿಕವನ್ನು ಕೊಟ್ಟು ಕಳುಹಿಸಿದಳು.
- ಸರೋಜಿನಿಯು ಮನೆಗೆ ಬಂದು ಅರಮನೆಯಲ್ಲಿ ನಡೆದ ವೃತ್ತಾಂತವೆಲ್ಲ ವನ್ನೂ ವಿಜಯನಿಗೆ ತಿಳಿಸಿ, “ ನಾಳಿನದಿನ ಸಂಧ್ಯಾಕಾಲದಲ್ಲಿ ನೀನು ರಾಜ ಪುತ್ರಿಯಾದ ಚಂದ್ರಲೇಖೆಯನ್ನು ಕಾಣಬೇಕು' ಎಂದು ಹೇಳಿದಳು. ಅದನ್ನು ಕೇಳಿದೊಡನೆಯೇ ವಿಜಯನು ಪರಮಾನಂದಭರಿತನಾಗಿ ಆ ರಾತ್ರಿ ಯನ್ನು ಕುತೂಹಲದಿಂದ ತನ್ನ ವಿಜಯಾಲೋಚನಗಳಿಂದಲೇ ಕಳೆದನು.
--------------------------------------------------------------
ಪಂಚಮ ತರಂಗ
ಸಕ್ಕೆಯಲ್ಲಿ ಚುಚ್ಚಿಕೊಂಡಿದ್ದ ರತ್ನ ಬಾಣವನ್ನು ತೆಗೆಯಲು ಬಾರದೆ ಬಹಳವಾದ ನೋವಿನಿಂದ ಹಾಸುಗೆ ಹತ್ತಿ ಮಲಗಿದ್ದ ಅಗ್ನಿ ಶಿಖ ರಾಕ್ಷ ಸೇಂದ್ರನಿಗೆ ಅರಮನೆಯ ವೈದ್ಯನಾದ ಚರಕಾಚಾರನು ಚಿಕಿತ್ಸೆ ಮಾಡು ತಿದ್ದನು. ಪುತ್ರಿಯಾದ ಚಂದ್ರಲೇಖೆಯು ಯಾವಾಗಲೂ ತಂದೆಯ ಬಳಿ ಯಲ್ಲಿಯೇ ಉಪಚರಿಸುತ್ತ ಕುಳಿತಿರುವಳು. ಗುಣಶಾಲಿನಿಯಾದ ಚಂದ್ರ ಲೇಖೆಯನ್ನು ರಾಕ್ಷಸೇಂದ್ರನೂ ಬಹಳ ಪ್ರೀತಿಯಿಂದ ಕಂಡುಕೊಂಡಿದ್ದನು. ಚರಕಾಚಾರನು, ದೇಹದಿಂದ ಬಾಣವು ಸಡಿಲಿ ಬೀಳುವಂತೆ ಔಷಧವನ್ನು ಹಾಕಿ, ನಾಳಿನದಿನ ಪ್ರಾತಃಕಾಲ ಬಾಣವನ್ನು ದೇಹದಿಂದ ಹೊರಗೆ ತೆಗೆಯುವುದಾಗಿ ಹೇಳಿದ್ದನು. ಅದರಂತೆ ರಾಕ್ಷ ಸೇಂದ್ರನು ಬಹಳ ನೋವಿ
-----------------------------------------------------------------------------------
ನಿಂದ ರಾತ್ರಿಯನ್ನು ಒಂದು ಯುಗದಂತೆ ಕಳೆಯುತ್ತ, ಎಂದಿಗೆ ಬೆಳಗಾದೀ ತೆಂಬ ಆತುರದಿಂದ ಸೂಯ್ಯೋದಯವನ್ನು ನಿರೀಕ್ಷಿಸುತ್ತಿದ್ದನು. ಚಂದ್ರ ಲೇಖೆಯು ಮಾಲೆಗಾತಿಯ ಮಾತಿನಂತೆ ನೂತನ ರಾಜಕುಮಾರನ ದರ್ಶನ ಕುತೂಹಲದಿಂದ ಆ ರಾತ್ರಿಯನ್ನು ಕಳೆದಳು.
ಬೆಳಗಾಗುತ್ತ ಬಂತು, ಮನೋಹರವಾದ ತಂಗಾಳಿಯು ಮೆಲ್ಲನೆ ಸುಳಿ ಯಲಾರಂಭಿಸಿತು. ಪೂರ್ವದಿಕ್ಕಿನಲ್ಲಿ ಕೆಂಪು ಮೂಡಿತು. ಚಂದ್ರಲೇಖೆಯು, ಮೋಹಾಲೋಚನೆಗಳಿಂದ ರಾತ್ರಿ ನಿದ್ರೆಯಿಲ್ಲದಿದ್ದರೂ, ಪದ್ಧತಿಯಂತೆ ಉಷಃಕಾಲಕ್ಕೆ ಎದ್ದು, ಮಿಂದು ತಂದೆಯನ್ನು ಪಚರಿಸಲು ಸಿದ್ಧಳಾದಳು. ಇಷ್ಟು ಹೊತ್ತಿಗೆ, ರಾಕ್ಷ ಸೇಂದ್ರನ ತಾಪಾಂಧಕಾರವನ್ನೂ ಚಂದ್ರಲೇಖೆಯ ವಿರಹಾಂಧಕಾರವನ್ನೂ, ವಿಜಯನ ಚಿಂತಾಂಧಕಾರವನ್ನೂ ನಿವಾರಿಸ ಲೆಂಬಂತೆ ಅರುಣಕಿರಣ ಮನೋಹರನಾದ ಸೂರದೇವನು ಉದಯಪರ್ವತ ವನ್ನೇರಿ ತನ್ನ ತೇಜದಿಂದ ಲೋಕಾಂಧಕಾರವನ್ನು ಪರಿಹರಿಸಿ ದಿಕ್ಕಟ ಗಳನ್ನು ಬೆಳಗಿದನು.
ಚರಕಾಚಾರನು ಹಿಂದಿನ ದಿನ ಹೇಳಿದ್ದ ಮೇರೆಗೆ ಬಂದು, ರಾಕ್ಷ ಸೇಂದ್ರನ ಸ್ಥಿತಿಯನ್ನು ಪರೀಕ್ಷಿಸಿ, ತಾನು ತಂದಿದ್ದ ದ್ರಾವಕವನ್ನು, ಬಾಣವು ಚುಚ್ಚಿಕೊಂಡಿದ್ದ ಸ್ಥಳದಲ್ಲಿ ಸವರಿ, ಮೆಲ್ಲಮೆಲ್ಲನೆ ಬಾಣವನ್ನು ದೇಹದಿಂದ ಬಿಡಿಸಿ ತೆಗೆಯಲು ಪ್ರಯತ್ನಿಸಿದನು. ಆದರೂ ರಾಕ್ಷಸೇಂದ್ರನಿಗೆ ನೋವು ಮಾತ್ರ ಬಹಳವಾಗಿ, ಬಾಣವು ಹೊರಗೆ ಬರುವ ವೇಳೆಗೆ ಆತನು ಮೂರ್ಛಬಿದ್ದು ಬಿಟ್ಟನು. ಚಂದ್ರಲೇಖೆಯು ಕಾತರಳಾಗಿ ದುಃಖಿಸತೊಡಗಿ
ದಳು. ಆಚಾರನು, ಆಕೆಗೆ ಬೆದರಬೇಡವೆಂದು ಧೈರ್ಯ ಹೇಳಿ, ಔಷಧೋಪ ಚಾರಗಳಿಂದಾತನನ್ನೆಬ್ಬಿಸಿ, ಗಾಯಕ್ಕೆ ಮತ್ತೆ ಔಷಧವನ್ನು ಹಾಕಿ ಕಟ್ಟಿ, ಆತನಿಗೆ ಸ್ವಲ್ಪ ಆಹಾರವನ್ನು ಕೊಡಿಸಿದನು. ಆಹಾರವನ್ನು ಸೇವಿಸಿದಮೇಲೆ ಅಗ್ನಿ ಶಿಖನು ಸ್ವಲ್ಪ ಚೈತನ್ಯ ಹೊಂದಿ ಗೆಲುವಾದನು. ಅನಂತರ, ತನ್ನ ಶರೀರ ದಿಂದ ತೆಗೆದಿದ್ದ, ರಕ್ತಮಯವಾದ ರತ್ನ ಬಾಣವನ್ನು ತೊಳೆಯಿಸಿ ತರಿಸಿ,
-------------------------------------------------------------------
ಅದನ್ನು ಕೈಗೆ ತೆಗೆದುಕೊಂಡು ನೋಡುತ್ತ, ಈಶ್ವರದತ್ತವಾದ ರತ್ನ ಬಾಣವು ಕಡೆಗೆ ಹೇಗಾದರೂ ತನಗೇ ಲಭಿಸಿತಲ್ಲಾ ! ಎಂದು ಸಂತೋಷಪಟ್ಟು, ಅದನ್ನು ಬಹಳ ಎಚ್ಚರಿಕೆಯಿಂದ ಪೆಟ್ಟಿಗೆಯಲ್ಲಿಟ್ಟಿರುವಂತೆ ಚಂದ್ರಲೇಖೆಯ ಕೈಯಲ್ಲಿ ಕೊಟ್ಟನು. ಆಕೆಯು ಅದರಂತೆ ಅದನ್ನು ಪೆಟ್ಟಿಗೆಯಲ್ಲಿ ಬಚ್ಚಿಟ್ಟಳು.
ಇತ್ತಲಾ ವಿಜಯನು ರಾತ್ರಿಯೆಲ್ಲವನ್ನೂ ತನ್ನ ವಿಜಯಾಲೋಚನೆ ಗಳಿಂದಲೇ ಕಳೆದು, ಚಂದ್ರಲೇಖೆಯ ಮುಖಚಂದ್ರದರ್ಶನ ಕುತೂಹಲದಿಂದ ತಹತಹಪಡುತ್ತ ಕ್ಷಣಗಳನ್ನೆಣಿಸುತ್ತಿದ್ದನು. ಚಂದ್ರಲೇಖೆಯೂ ಸಹ ವಿಜಯನ ಮುಖಚಂದ್ರ ದರ್ಶನಾತುರಳಾ | ಚಕೋರಿಯಂತೆ ತಪಿಸುತ್ತ ಮಧ್ಯಾಹ್ನ ವನ್ನು ಕಳೆದು ಸಂಧ್ಯಾ ಸಮಯ ನಿರೀಕ್ಷಣೆಯಿಂದಿದ್ದಳು.
ಪರಜೀವನವನ್ನ ಪಹರಿಸುವ ಪ್ರತಾಪಶಾಲಿಯಾದ ರಾಕ್ಷ ಸೇಂದ್ರನ ತೇಜವೂ ಹೀಗೆಯೇ ಕ್ಷೀಣವಾಗಿ ಅವನೂ ದುಃಖಾಂಬುಧಿಗೆ ಬೀಳುವ ನೆಂಬಂತೆ, ಪ್ರಭಾಮಯನಾದ ಪ್ರಭಾಕರನು ಅಸ್ತ ಪರ್ವತದೆಡೆಯಲ್ಲಿ, ಕ್ಷೀಣ ತೇಜದಿಂದ ಪಶ್ಚಿಮಸಮುದ್ರದಲ್ಲಿ ಬಿದ್ದು ಹೋಗುತ್ತಿದ್ದನು, ಸಂಕೇತದಂತೆ ಉದ್ಯಾನದ ಲತಾಮಂಟಪದಲ್ಲಿ, ಚಂದ್ರಲೇಖೆಯು ಸರೋಜಿನಿಯನ್ನು ರಾಜಕುಮಾರನೊಡನೆ ಎದುರುನೋಡುತ್ತ ಅತಿಕುತೂಹಲದಿಂದ ಕಾದಿ ದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಸರೋಜಿನಿಯು ಪುಷ್ಪಮಾಲಿಕಾಹಸ್ತಳಾಗಿ ವಿಜಯನೊಡನೆ ಅಲ್ಲಿಗೆ ಬಂದಳು. ಚಂದ್ರಲೇಖೆಯು, ನವಮನ್ಮಥನಂತಿದ್ದ ವಿಜಯನ ಸಂದರ್ಶನವಾದೊಡನೆಯೇ ಅವನ ಸೌಂದರ್ಯ ಸೌಭಾಗ್ಯದಿಂದ ಬೆರಗಾಗಿ ದಿಕ್ಕು ತೋರದೆ ಸ್ತಬ್ದ ಳಾಗಿ ನಿಂತು ಕಣ್ಣಿನಲ್ಲಿ ಆನಂದಬಾಷ್ಪ ಗಳನ್ನು ತಂದಳು. ವಿಜಯನು ಚಂದ್ರಲೇಖೆಯ ನಿರುಪಮಲಾವಣ್ಯ ವೈಭವ ದಿಂದ ಆಶ್ಚರ್ಯಾನಂದಭರಿತನಾಗಿ, ಮುಂಬರಿದು ಕೈ ಹಿಡಿಯಲು ಕುತೂಹಲಿ ಯಾದರೂ, ಧೀರೋದಾತ್ತನಾದುದರಿಂದ, ಸ್ವಭಾವವಾದ ವಿವೇಕದಿಂದಲೂ ಕರ್ತವ್ಯಲಕ್ಷ್ಯದಿಂದಲೂ ಚಿತ್ರವನ್ನು ಸ್ಥಿರಪಡಿಸಿಕೊಂಡು ನಿಂತಿರಲು, ಕಣ್ಣಿನಿಂದ ಆನಂದಾಶಗಳು ತಾವಾಗಿಯೇ ಧಾರೆಗಳಾಗಿ ಸುರಿದವು. ಆಗ
-------------------------------------------------------------------
ಆ ರಮಣಿಯು ಅರೆಬಿರಿದ ಕಮಲದಂತಿರುವ ಮುಗುಳ್ಳಗೆಯಿಂದ ಮನೋಹರ ವಾದ ಚೆಂದುಟಿಗಳ ನಡುವೆ ಮುತ್ತುಗಳಂತೆ ಬೆಳಗುವ ದಂತಗಳ ಕಾಂತಿ ಗಳನ್ನು ವಿಸ್ತರಿಸಿ, ಅಂತರಂಗದ ಮೋಹಾತಿಶಯನ್ನು ಬಾಯಿಂದ ಹೇಳ ಲಾರದೆಯೂ, ಒಳಗೆ ಆಚ್ಛಾದಿಸಲಾರದೆಯ ಕರ್ತವ್ಯವನ್ನರಿಯದೆ, ಮುಗ್ಧತೆಯಿಂದ ನಿಂತಳು. ಚಪಲವಾದ ಮೋಹಕರ ಕಟಾಕ್ಷವೀಕ್ಷಣ ಗಳಿಂದ ಕಂಗೊಳಿಸುತ್ತ, ಮುಖಚಂದ್ರನ ಕಳೆಯಿಂದ ತನ್ನ ಹೃದಯದ ಸಂತೋಷಾಂಬುಧಿಯನ್ನು ಉಕ್ಕಿಸುತ್ತಿರುವ ಆ ರಮಣಿರತ್ನ ವನ್ನು ನೋಡಿ, ವಿಜಯನೂ ತಾನು ದೇವಲೋಕದ ರಂಭೆಯ ಸನ್ನಿಧಿಯಲ್ಲಿರುನೆಂಬ ಭ್ರಾಂತಿ ಯಿಂದ ಮುಗ್ಧನಾದನು.
ಮೊಳಕಾಲಿನವರೆಗೂ ದಟ್ಟವಾಗಿಯೂ ನೀಳವಾಗಿಯೂ ಬಿದ್ದಿರುವ ಆ ಸುಂದರಿಯ ಕೇಶಪಾಶಗಳ ಸೌಂದರ್ಯ ಸೌಭಾಗ್ಯವು ವಿಜಯನ ಹೃದಯವನ್ನು ಕಾಮಪಾಶಗಳಿಂದ ಕಟ್ಟಿ ಹಾಕಿತು. ಆಕೆಯ ದೇಹಕಾಂತಿ ಯೆಂಬ ಮಿಂಚಿನ ಬೆಳಕಿನಲ್ಲಿ ಬೆರಗಾಗಿ ನಿಂದ ಆತನ ಕಣ್ಣಿಗೆ ಆ ದಿವ್ಯಾಕೃತಿ ಯೊಂದಲ್ಲದೆ ಪ್ರಪಂಚದ ಇತರ ಯಾವ ವಸ್ತುಗಳೂ ಕಾಣದೆ ಹೋದವು. ಒಂದು ರತ್ನ ಬಾಣಕ್ಕಾಗಿ ಒಂದ ಆತನ ಎದೆಗೆ ಒಂದು ಕೋಟಿ ಕಾಮಬಾಣ ಗಳು ಏಕಕಾಲದಲ್ಲಿ ತಗುಲಿದವ. ಚಂದ್ರಲೇಖೆಯ ಕಣ್ಣಿಗೆ ವಿಜಯನೂ, ವಿಜಯನ ಕಣ್ಣಿಗೆ ಚಂದ್ರಲೇಖೆಯ ಮಾತ್ರವೇ ಕಂಡರಲ್ಲದೆ ಇನ್ನು ಉಳಿದ ಜಗತ್ತೆಲ್ಲವೂ ಅವರ ಭಾಗಕ್ಕೆ ಶೂನ್ಯವಾದಂತೆ ಇತ್ತು, ಚಂದ್ರಲೇಖೆಗೆ ಲಜ್ಜೆಯು ಅಂಕುರಿಸಿ ಬರುತ್ತಿದ್ದರೂ ಮೋಹವ ಆ ಲಜ್ಜೆಯನ್ನು ಬಡಿದು ಹಿಂದಕ್ಕೆ ತಳ್ಳಲಾರಂಭಿಸಿತು. ವಿಜಯನ ಮಿತಿಮೀರಿದ ಕುತೂಹಲವು ಅವನ ವಿವೇಕವನ್ನು ಮುಂಒರಿಯದಂತೆ ನಿರೋಧಿಸುತ್ತಿದ್ದಿತು.
- ಇವರಿಬ್ಬರ ರೀತಿಯನ್ನು ನೋಡಿ ಇಂಗಿತಜ್ಞಳಾದ ಸರೋಜಿನಿಯು ಇವರಿಗೆ ರಾಕ್ಷಸರಿಂದ ಅಪಾಯವೊದಗೀತೆಂಬ ಭೀತಿಯಿಂದ ಉಭಯರಿಗೂ ಎಚ್ಚರವನ್ನು ಹೇಳಿ ಚಂದ್ರಲೇಖೆಯನ್ನು ಕುರಿತು, " ತಾಯಿಾ, ನಿನ್ನ
---------------------------------------------------------------
ಇಷ್ಟದಂತೆ ರಾಜಪುತ್ರನ ದರ್ಶನವನ್ನು ಮಾಡಿಸಿರುವೆನು, ಅಪ್ಪಣೆಯಾದರೆ ನಾನಿನ್ನು ಹೊರಡುವೆನು, ರಾಕ್ಷಸರಿಂದ ನಮ್ಮ ರಾಜಕುಮಾರನಿಗೆ ಅಪಾಯಬಾರದಂತೆ ನೋಡಿಕೊಳ್ಳುವ ಭಾರವು ನಿನ್ನದು ” ಎಂದು ಹೇಳಿ ಹೊರಟುಹೋದಳು.
ಈವರೆಗೆ ಮೋಹಾವೇಶವು ಚಂದ್ರಲೇಖೆಯ ಲಜ್ಜೆಯನ್ನು ಪೂರ್ಣ ವಾಗಿ ಓಡಿಸಿಬಿಟ್ಟಿದ್ದ ಕಾರಣ ಆ ಯುವತಿಯು ಓಡಿ ಬಂದು, ವಿಜಯನ ಪಾದಗಳಮೇಲೆ ಬಿದ್ದು, 'ಮೋಹನಾಂಗಾ ! ನಾನು ನಿನ್ನನ್ನು ನನ್ನ ಭಾಗದ ದೈವವೂ ನನ್ನ ಅರ್ಧಪ್ರಾಣವೂ ಎಂದು ಭಾವಿಸಿ ನಿನ್ನ ದಾಸಿಯಾಗಲು ನಿರ್ಧರಿಸಿರುವೆನು. ನನ್ನ ನ್ನು ಕೈಬಿಡದೆ ಕಾಪಾಡುವ ಭಾರವು ನಿನ್ನದು” ಎಂದು ಹೇಳಿ ಆತನ ಎರಡು ಕೈಗಳನ್ನೂ ಹಿಡಿದು ಕಣ್ಣಿನಲ್ಲಿ ನೀರು ತಂದಳು.
ವಿಜಯನ ಮನಸ್ಸಿನಲ್ಲಿ ಮೋಹಕ್ಕೂ ವಿವೇಕಕ್ಕೂ ಬಹಳವಾಗಿ ಹೊಡೆದಾಟ ನಡೆದು ಕಡೆಗೆ ಮೋಹವೇ ಜಯ ಹೊಂದಿದ್ದ ಕಾರಣ, ಡೋಲಾಯಮಾನವಾಗಿದ್ದ ಅವನ ಮನವು ಚಂದ್ರಲೇಖೆಯ ಪ್ರಾರ್ಥನೆಗೆ ವಶವಾಗಿ ಬಿಟ್ಟಿತು. ಉಭಯರೂ ಸರಸಾಲಾಪಗಳಿಂದ ಸ್ವಲ್ಪ ಹೊತ್ತನ್ನು ಕಳೆದು ಪರಸ್ಪರ ವೃತ್ತಾಂತಗಳನ್ನು ವಿಸ್ತರಿಸಿ ತಿಳಿಸಿದರು. ವಿಜಯನ ಅಪೇಕ್ಷೆಯಂತೆ ಚಂದ್ರಲೇಖೆಯು ತಮ್ಮ ತಂದೆಯ ಬಳಿಯಲ್ಲಿರುವ ರತ್ನ ಬಾಣವನ್ನು ತಾನು ತಂದುಕೊಡುವುದಾಗಿ ಒಪ್ಪಿ, ತನ್ನನ್ನು ಕೈವಿಡಿದು ತನ್ನ ಬಂಧುಗಳ ಬಳಿಗೆ ಕರೆದುಕೊಂಡು ಹೋಗಬೇಕೆಂದು ವಿಜಯನನ್ನು ಪ್ರಾರ್ಥಿಸಿಕೊಂಡಳು. ಈ ಪ್ರಾರ್ಥನೆಯಿಂದ ವಿಜಯನಿಗೆ ವಿಜಯ ಲಕ್ಷ್ಮಿಯ ಭಾಗ್ಯಲಕ್ಷ್ಮಿಯೂ ಸಹ ಏಕಕಾಲದಲ್ಲಿ ಭುಜಗಳನ್ನ ಲಂಕರಿಸಿ ದಂತಾಯಿತು. ಇದರಿಂದ ಆತನು ಸಂತೋಷದಿಂದ ಸಮ್ಮತಿಸಿದನು.
ರಾತ್ರಿ ಮತ್ತೆ ತಂದೆಯ ಉಪಚಾರಕ್ಕಾಗಿ ಹೋಗಬೇಕಾಗಿದ್ದ ಕರ್ತವ್ಯವು ಚಂದ್ರಲೇಖೆಯನ್ನು ಆಕಡೆಗೆ ಸೆಳೆಯುತ್ತಿತ್ತು. ರಾಕ್ಷಸ ರಿಂದೇನಾದರೂ ಅಪಾಯವೊದಗಿ ತನ್ನ ಕಾವ್ಯಕ್ಕೆ ಭಂಗವುಂಟಾದೀತೆಂಬ
--------------------------------------------------------------
ಭಯವು ವಿಜಯನನ್ನು ಚಪಲಗೊಳಿಸಿತ್ತು. ಇದರಿಂದ ಇಬ್ಬರೂ ಅಲ್ಲಿಂದ ಹೊರಡಲುದ್ಯುಕ್ತರಾದರು. ಹೃದಯಗಳು ಒಂದನ್ನೊಂದು ಅಗಲದೆ ಇದ್ದುದರಿಂದ ಶರೀರಗಳು ಆ ಸ್ಥಳದಿಂದ ಚಲಿಸುವುದೇ ಕಷ್ಟವಾಯಿತು. ಕಡೆಗೆ ಬೇರೆ ಉಪಾಯವಿಲ್ಲದೆ ಇಬ್ಬರೂ ಹೊರಡಲೇ ಬೇಕಾಯಿತು. ಮಾರನೆಯ ದಿನ ತಾನು ಒಂದು ವೇಳೆ ಹೇಳಿ ಕಳುಹಿಸಿದರೆ ಅರಮನೆಗೆ ಬರಬೇಕೆಂದು ಕೇಳಿಕೊಂಡ ಚಂದ್ರಲೇಖೆಯ ಪ್ರಾರ್ಥನೆಗೆ ವಿಜಯನು ಒಪ್ಪಿ, ಅಲ್ಲಿಂದ ತನ್ನ ಶರೀರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಸರೋಜಿನಿಯ ಮನೆಗೆ ಬಂದನು. ಚಂದ್ರಲೇಖೆಯೂ ವಿಜಯನಮೇಲೆ ನಟ್ಟ ದೃಷ್ಟಿಗಳನ್ನು ಕೀಳಲಾರದೆ ಬಹು ಪ್ರಯತ್ನದಿಂದ ಹೊರಟು ಅರಮನೆಗೆ ಬಂದು ತಂದೆಯ ಉಪಚಾರದಲ್ಲಿ ನಿರತಳಾದಳು.
ರಾತ್ರಿಯೆಲ್ಲವೂ ಉಭಯರಿಗೂ, ಆ ದಿನ ತಮಗೊದಗಿದ ಪರಸ್ಪರ ಸ್ನೇಹಾನಂದಗಳ ಸ್ಮರಣೆಯಿಂದಲೂ ಮುಂದಿನ ಆಲೋಚನೆಗಳಿಂದಲೂ, ನಿದ್ರೆಯೇ ಹತ್ತಲಿಲ್ಲ. ಸ್ವಲ್ಪ ಮಂಪರವೇನಾದರೂ ಹತ್ತಿದರೂ ಅದರಲ್ಲಿಯೂ ತಮ್ಮ ವಿಲಾಸ ವಿನೋದಗಳ ವಿಧವಿಧವಾದ ಸ್ಪಷ್ಟ ಗಳೇ ಕಾಣುತ್ತಿದ್ದವು.
ರಾಕ್ಷ ಸೇಂದ್ರನಿಗೆ ಆ ದಿನ ಗಾಯದ ನೋವು ಕಡಿಮೆಯಾಗಿ ಎಂದಿಗಿಂತಲೂ ಚೆನ್ನಾಗಿ ನಿದ್ದೆ ಹತ್ತಿತು. ಬೆಳೆಗಾದ ಮೇಲೆ ಎಂದಿನಂತೆ ತನ್ನ ನ್ನು ಉಪಚರಿಸಲು ಬಂದ ಮಗಳೊಡನೆ ಆತನು ಸಂತೋಷದಿಂದ ಮಾತನಾಡುತ್ತ, ''ಮಗೂ, ನಿನ್ನ ಪ್ರೀತಿಯಿಂದ ನನಗೆ ಬಹಳ ಸಂತೋಷ ವಾಯಿತು. ನನ್ನ ಕಷ್ಟ ಕಾಲದಲ್ಲಿ ನನಗೆ ನೀನು ಮಾಡಿದ ಉಪಚಾರ ದಿಂದ ನಾನು ಅತ್ಯಾನಂದಭರಿತನಾಗಿದ್ದೇನೆ. ನಿನ್ನ ಇಷ್ಟಾರ್ಥವೇನು ಹೇಳು. ಅದನ್ನು ನಡೆಯಿಸಿ ಕೊಡುವೆನು” ಎಂದು ನುಡಿದಡವಿ ಕೇಳಿದನು,
ಸಮಯೋಚಿತವಾಗಿ ತಂದೆಯ ಮುಖದಿಂದ ಹೊರಟ ಈ ಪ್ರಶ್ನೆ ಯಿಂದ ಆನಂದಭರಿತಳಾದ ಚಂದ್ರಲೇಖೆಯು, ತನ್ನ ಇಷ್ಟಾರ್ಥವನ್ನು ಸಾಧಿಸಿಕೊಳ್ಳಲು ಇದೇ ಸುಸಮಯವೆಂದು ಮನಸ್ಸಿನಲ್ಲಿ ನಲಿದು, ರಾಕ್ಷ
--------------------------------------------------------------------------
ಸೇಂದ್ರನನ್ನು ನೋಡಿ ವಿನಯದಿಂದ, “ ತಂದೆಯೇ, ನೀನು ನನ್ನಲ್ಲಿಟ್ಟಿರುವ ಪ್ರೀತಿಗಾಗಿ ನಾನು ನಿನಗೆ ಎಷ್ಟು ಸೇವೆಯನ್ನು ಮಾಡಿದರೆ ತಾನೆ ಸಾಕಾದೀತು ! ನನ್ನ ಕರ್ತವ್ಯದಂತೆ ನಾನು ನಿನಗೆ ಸಾಮಾನ್ಯವಾಗಿ ಉಪಚಾರ ಮಾಡಿದೆನು. ನೀನು ನನ್ನ ದೋಷಗಳನ್ನು ಎಣಿಸದೆ ನನಗೆ
ಈ ರೀತಿ ಪ್ರಸನ್ನ ನಾಗಿ ವರಪ್ರದಾನ ಮಾಡಿದುದರಿಂದ ಬಹಳ ಸಂತೋಷ ವಾಯಿತು. ಆದರೆ....” ಎಂದು ಅರ್ಧೋಕಿಯಲ್ಲಿ ಸುಮ್ಮನಾಗಿ ಲಜ್ಜೆ ಯಿಂದ ತಲೆಯನ್ನು ತಗ್ಗಿಸಿ, ನೆಲವನ್ನು ಉಂಗುಟದಿಂದ ಬರೆಯುತ್ತ ನಿಂತಳು. ಆ ಮುದ್ದು ಮೋಹನೆಯು ನಿಂತಿದ್ದ ಅಂದವನ್ನೂ ಅವಳಿಗೆ ತನ್ನಲ್ಲಿರುವ ಗೌರವ ಲಜ್ಞಾ ಭಾವಗಳನ್ನೂ ಸಹ ನೋಡಿ ದಾನವೇಂದ್ರ ನಿಗೆ ಮತ್ತಷ್ಟು ಪ್ರೀತಿಯು ಉಕ್ಕಿ, “ಮಗೂ, ಸಂದೇಹವೇಕೆ ? ನಿನ್ನ ಇಷ್ಟಾರ್ಥವೇನಿದ್ದರೂ ಸಂಕೋಚವಿಲ್ಲದೆ ಹೇಳು. ನಾನು ನಿಸ್ಸಂದೇಹ ವಾಗಿ ನಡೆಯಿಸಿಕೊಡುವೆನು. ತಂದೆಯಾದ ನನ್ನಲ್ಲಿಯೂ ನೀನು ಅಜೆ ಪಡಬೇಕೇ ? ಸಾಕು ; ಮಾತನಾಡು ” ಎಂದನು. ಅದಕ್ಕೆ ಆ ರಮ ಣಿಯು “ ಅಪ್ಪಾ, ಮತ್ತೇನೂ ಇಲ್ಲವು. ಎಲ್ಲ ಹೆಣ್ಣು ಮಕ್ಕಳೂ ಯಾವ ಇಷ್ಟಾರ್ಥವನ್ನು ತಂದೆಗಳಲ್ಲಿ ಹೇಳಲು ನಾಚುವರೋ ಅದನ್ನು ನೀನು ಬಲ್ಲವನಾಗಿಯೇ ಇರುವೆ. ಆ ವಿಷಯದಲ್ಲಿ ನೀನು ಮೊದಲೇ ಆಲೋಚಿ ಸುತ್ತಿರುವೆಯಷ್ಟೆ !” ಎಂದಳು. ಅದಕ್ಕೆ ರಾಕ್ಷಸೇಂದ್ರನು, “ಮಗೂ, ತಿಳಿಯಿತು, ನಿನ್ನ ಭಾವವು ತಿಳಿಯಿತು. ನಿನ್ನ ವಿವಾಹ ವಿಚಾರವು ತಾನೇ ! ಆಗಲಿ ಆ ವಿಷಯವಾಗಿ ನಿನ್ನ ಭಾವವೇನೆಂಬುದನ್ನು ತಿಳಿಸು, ನಡೆಯಿಸು ವೆನು ; ಲಜ್ಜೆಯೇಕೆ ?” ಎಂದು, ಬಳಿಯಲ್ಲಿ ನಿಂತಿದ್ದವಳನ್ನು ಕೈಹಿಡಿದು ತನ್ನ ಸಮೂಾಸದಲ್ಲಿ ಕುಳ್ಳಿರಿಸಿಕೊಂಡನು. ಚಂದ್ರಲೇಖೆಯ ಮನಸ್ಸಿನಲ್ಲಿ ಧೈರ್ಯ ಸಂತೋಷಗಳು ಹೆಚ್ಚುತ್ತ ಬಂದವು. ಆಗ ತಲೆಯನ್ನು ತಗ್ಗಿಸಿ “ ಅಪ್ಪಾ ! ನಾನು ಒಪ್ಪುವ ವರನಿಗೇ ನನ್ನನ್ನು ವಿವಾಹ ಮಾಡಿಕೊಡ ಬೇಕೆಂಬುದೇ ನನ್ನ ಪ್ರಾರ್ಥನೆಯು” ಎಂದು ಸುಮ್ಮನಾದಳು.
--------------------------------------------------------------------------------
ಆಣಿಮುತ್ತುಗಳಂತೆ ಗಂಭೀರವಾಗಿ ಪುತ್ರಿಯ ಮುಖದಿಂದ ಹೊರಟ ನುಡಿಗಳನ್ನು ಕೇಳಿ ರಾಕ್ಷ ಸೇಂದ್ರನಿಗೆ ಸಂತೋಷವಾಯಿತು. ಆಗ ಮುಡಿ ದಡವಿ, “ಮಗೂ, ಇದು ಯಾವ ಪ್ರಬಲವಾದ ವಿಚಾರವೆಂದು ಇಷ್ಟು ಭಯ ಸಂಕೋಚ ದೈನ್ಯಗಳಿಂದ ಕೇಳಿಕೊಂಡೆ ! ನಿನ್ನ ಇಷ್ಟದಂತೆಯೇ ಆಗಲಿ, ನೀನು ಒಪ್ಪುವ ವರನಿಗೇ ನಿನ್ನನ್ನು ಕೊಟ್ಟು ವಿವಾಹ ಮಾಡುವೆನು, ಅಂತಹ ವರನು ಯಾರಾದರೂ ನಿನ್ನ ಮನಸ್ಸಿಗೆ ಬಂದಿರುವನೇ ? ” ಎಂದು ಕೇಳಿದನು. ಅದಕ್ಕೆ ಸಂತೋಷದಿಂದ ಆ ಮೋಹನೆಯು, “ಅಪ್ಪಾ, ರೂಪ ದಲ್ಲಿ ಮನ್ಮಥನನ್ನು ತಿರಸ್ಕರಿಸುವ ತರುಣನೊಬ್ಬನು ಮಾರ್ಗವಶದಿಂದ ನಮ್ಮ ಅರಮನೆಯ ಕಡೆಗೆ ಬರುತ್ತಿದ್ದುದನ್ನು , ಉಪ್ಪರಿಗೆಯ ಮೇಲಿದ್ದ ನಾನು ನೋಡಿ ಅವನ ಸೌಂದರ್ಯ ಗಾಂಭೀರ್ಯಗಳಿಂದಾಶ್ಚರ್ಯಪಟ್ಟು, ದಾಸಿಯರ ಮೂಲಕ ಆತನ ವೃತ್ತಾಂತವನ್ನು ವಿಚಾರಿಸುವಲ್ಲಿ ಆತನು ದೇಶಸಂಚಾರಾರ್ಥವಾಗಿ ಬಂದಿರುವ ಯಾವನೋ ರಾಜಪುತ್ರನೆಂದು ತಿಳಿಯಿತು. ಆತನ ರೂಪಗಾಂಭಿರ್ಯಗಳನ್ನು ನೋಡಿದರೆ ಮಹಾ ತೇಜಸ್ವಿಯಾಗಿ ಕಾಣುವನು. ಅಪ್ಪಣೆಯಾದರೆ ದಾಸಿಯರ ಮೂಲಕ ಆತನನ್ನು ನಿನ್ನ ಸನ್ನಿ ಧಿಗೆ ಕರೆಯಿಸುವೆನು ನೋಡಬಹುದು” ಎಂದಳು.
ರಾಕ್ಷಸೇಂದ್ರನು ಆಗಬಹುದೆಂದು ತನ್ನ ಒಪ್ಪಿಗೆಯನ್ನು ಕೊಡಲು ಚಂದ್ರಲೇಖೆಯು ಸಂತೋಷದಿಂದ, ಆ ಕೂಡಲೇ ರಾಜಕುಮಾರನನ್ನು ಕರೆತರುವಂತೆ ದಾಸಿಯರನ್ಮೂಲಕ ಸರೋಜಿಸಿಗೆ ಹೇಳಿ ಕಳುಹಿಸಿದಳು.
ಇತ್ತಲಾ ಸರೋಜಿನಿಯ ಮನೆಯಲ್ಲಿ, ಚಂದ್ರಲೇಖೆಯ ಲೀಲಾ ವಿಲಾಸಗಳನ್ನೆ ನೆನೆ ನೆನೆದು, ಆಕೆಯು ಯಾವಾಗ ತನಗೆ ಹೇಳಿ ಕಳುಹಿಸು ವಳೋ ಎಂಬ ಆತುರದಿಂದಿದ್ದ ವಿಜಯನಿಗೆ ದಾಸಿಯರ ಮೂಲಕ ಬಂದ ಆಹ್ವಾನದಿಂದ ಪರಮಾನಂದವುಂಟಾಯಿತು. ಆ ಕೂಡಲೇ ಸರೋಜಿ ನಿಯು ಹೇಳಿದ ಮೇರೆಗೆ, ರಾಜಯೋಗ್ಯವಾದ ಉಡುಪನ್ನು ಧರಿಸಿ ಆಕೆ
ಯೊಡನೆ ಅರಮನೆಗೆ ಹೊರಟು ಬಂದನು.
---------------------------------------------------------------------------
ವಿಜಯನಾಗಮನವನ್ನು ಅತಿ ಕುತೂಹಲದಿಂದ ನಿರೀಕ್ಷಿಸಿಕೊಂಡಿದ್ದ ಚಂದ್ರಲೇಖೆಯು ಆತನನ್ನು ತನ್ನ ತಂದೆ ಇರುವ ಸ್ಥಳಕ್ಕೆ ಬರಮಾಡಿದಳು. ಆತನು ಭಯಂಕರಾಕಾರನಾದ ಅಗ್ನಿಶಿಖನ ಮುಖವನ್ನು ನೋಡಿ ಬೆರಗಾ ದರೂ, ಸರ್ಪದ ಶಿರಸ್ಸಿನಲ್ಲಿರುವ ಜೀವರತ್ನ ವನ್ನು ಪಡೆಯಲಾತುರನಾದ ವೀರನು ಆ ಸರ್ಪದ ಘೋರಾಕಾರಕ್ಕೂ ಭೀಕರ ಭೂಾರಕ್ಕೂ ಹೆದರದೆ ಮುಂಬರಿಯುವಂತೆ, ರತ್ನ ಬಾಣವನ್ನೂ ಕನ್ಯಾರತ್ನ ವನ್ನೂ ಸಾಧಿಸುವ ಕುತೂಹಲದಿಂದಿದ್ದ ವಿಜಯನು ಲೇಶವೂ ಹಿಂದೆಗೆಯದೆ ಧೀರನಾಗಿ ಮುಂದೆ ಬಂದು ರಾಕ್ಷ ಸೇಂದ್ರನಿಗೆ ನಮಸ್ಕರಿಸಿದನು.
ವಿಜಯನ ಮುಖವನ್ನು ನೋಡಿದ ಕೂಡಲೆ ಅಗ್ನಿ ಶಿಖನಿಗೆ, ತನ್ನನ್ನು ರತ್ನ ಬಾಣದಿಂದ ಹೊಡೆದ ವ್ಯಕ್ತಿಯು ಬಂದು ಎದುರಿಗೆ ನಿಂತಿತು. ಏತಕ್ಕೆಂದರೆ, ಆ ರಾಕ್ಷಸೇಂದ್ರನು ಮಾಯಾ ಗೃಧ್ರರೂಪದಿಂದ ರತ್ನ ಬಾಣವನ್ನು ಹುಡುಕಲು ಹೋಗಿದ್ದಾಗ, ವೇದವತೀನಗರ ಪ್ರಾಂತದಲ್ಲಿ ಇದೇ ವಿಜಯನು ರತ್ನ ಬಾಣವನ್ನು ತನ್ನ ಕಡೆಗೆ ಹೊಡೆದುದನ್ನು ತನ್ನ ತೀಕ್ಷ್ಯ ದೃಷ್ಟಿಯಿಂದ ಆತನು ಸ್ಪಷ್ಟವಾಗಿ ನೋಡಿದ್ದನು. ಆದಕಾರಣ ಇವನೇ ತನಗೆ ಇಷ್ಟು ಅನರ್ಥವನ್ನುಂಟುಮಾಡಿದ ದ್ರೋಹಿಯೆಂದು ರಾಕ್ಷಸನ ಮನಸ್ಸಿನಲ್ಲಿ ಕ್ರೋಧಾಗ್ನಿ ಯು ಪ್ರಜ್ವಲಿಸಿತು. ಅನಂತರ ಅವನ ಚರಿತ್ರೆಯನ್ನು ವಿಚಾರಿಸುತ್ತಲೇ, ವಿಜಯನು ವೇದವತೀನಗರದರಸ ನಾದ ಚಂದ್ರಸೇನರಾಯನ ಮಗನೆಂದೂ ತಿಳಿಯಿತು. ಆ ಚಂದ್ರಸೇನನೇ ತನ್ನನ್ನು ಕೈಲಾಸಪರ್ವತ ಪ್ರಾಂತದಲ್ಲಿ ಮಲ್ಲಯುದ್ಧದಲ್ಲಿ ಸೋಲಿಸಿ ಈಶ್ವರದತ್ತವಾದ ರತ್ನ ಬಾಣವನ್ನು ಹೊತ್ತುಕೊಂಡು ಹೋದವನೆಂಬುದೂ ಅವನ ಮನಸ್ಸಿಗೆ ಬಂದುದರಿಂದ ಅವನ ಆಗ್ರಹವು ಇಮ್ಮಡಿಸಿತು. ಆ ಕೂಡಲೇ ವಿಜಯನನ್ನು ಶೂಲಕ್ಕೇರಿಸಬೇಕೆಂಬ ಸಂಕಲ್ಪವು ಮನಸ್ಸಿನಲ್ಲಿ ಹುಟ್ಟಿದರೂ, ಅವನು ತನ್ನ ಪುತ್ರಿಯು ಒಪ್ಪಿದ ವರನಾದುದರಿಂದ, ಅವಳಿಗೆ ತಾನು ಕೊಟ್ಟ ವಾಗ್ದಾನವನ್ನು ಆ ಕ್ಷಣವೇ ವ್ಯರ್ಥಮಾಡಿದಂತೆ ತೋರ್ಪ 
--------------------------------------------------
ಡಿಸಿಕೊಳ್ಳಬಾರದೆಂದಾಲೋಚಿಸಿ, ಉಕ್ಕಿ ಬಂದ ಮಹಾ ಕ್ರೋಧವನ್ನು ಹಾಗೆಯೇ ನುಂಗಿಕೊಂಡು, ಪುತ್ರಿಯೊಡನೆ ಸಂತೋಷವನ್ನು ನಟಿಸಿ, ವಿಜಯನ ರೂಪಲಕ್ಷಣಗಳನ್ನು ಅವಳ ತೃಪ್ತಿಗಾಗಿ ಹೊಗಳಿ, ಅವರಿಬ್ಬರೂ ಪರಸ್ಪರ ಅನುರೂಪರಾದ ವಧೂವರರೆಂದು ಬಟಾಟಕದ ಮೆಚ್ಚಿಕೆಯನ್ನು ತೋರ್ಪಡಿಸಿ ಉಭಯರನ್ನೂ ಬೆರಗುಮಾಡಿದನು. ಚಂದ್ರಲೇಖೆಗೂ
ವಿಜಯನಿಗೂ ತಾವಿಬ್ಬರೂ ಸತಿಪತಿಯರಾದಂತೆಯೇ ಸಂಪೂರ್ಣವಾದ ಭರವಸೆಯುಂಟಾಯಿತು. ರಾಕ್ಷ ಸೇಂದ್ರನು ತಾನು ರಾಜಕುಮಾರನ ಶಕ್ತಿ ಚಾತುರ್ಯಗಳನ್ನು ನೆಪಮಾತ್ರಕ್ಕೆ ಪರೀಕ್ಷಿಸಿ ಅನಂತರ ಕನ್ಯ ಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿ, ಮಧ್ಯಾಹ್ನದ ಮೇಲೆ ವರಪರೀಕ್ಷೆಯನ್ನೇರ್ಪಡಿಸಿದನು.
ರಾಕ್ಷ ಸೇಂದ್ರನ ಮಾಯಾಮಂತ್ರ ತಂತ್ರಕೃತಿಮಾದಿಗಳೆಲ್ಲವನ್ನೂ ಚೆನ್ನಾಗಿ ತಿಳಿದಿದ್ದ ಚಂದ್ರಲೇಖೆಯು, ಪರೀಕ್ಷೆಯಲ್ಲಿ ಒಂದು ವೇಳೆ ತನ್ನ ಮನೋವಲ್ಲಭನು ಸೋತು ವಿಫಲನಾದಾನೆಂಬ ಸಂದೇಹದಿಂದ, ವಿಜಯ ನನ್ನು ತನ್ನ ಆಪ್ತದಾಸಿಯ ಮೂಲಕ, ಗುಟ್ಟಾಗಿ ಉದ್ಯಾನದ ಲತಾಗೃಹಕ್ಕೆ ಕರೆಯಿಸಿ, ಅಲ್ಲಿ ಆತನಿಗೆ ಕೆಲವು ಮಾಯಾ ಮಂತ್ರ ತಂತ್ರಗಳ ಮರ್ಮಗಳನ್ನು ಸಾಧ್ಯವಾದ ಮಟ್ಟಿಗೆ ತಿಳಿಸಿದುದಲ್ಲದೆ, ತನ್ನ ಬಳಿಯಲ್ಲಿದ್ದ ಆಪ್ತಸಖಿಯಾದ ಮಾಧುರಿಯು ರಾಕ್ಷಸ ಮಾಯಾ ಮಂತ್ರಾದಿಗಳನ್ನು ಚೆನ್ನಾಗಿ ಬಲ್ಲವ ಳಾದುದರಿಂದ ಅವಳನ್ನು ಕರೆದು, “ಮಾಧುರೀ, ಈ ನನ್ನ ಪ್ರಿಯನಿಗೆ, ನಾನಿಲ್ಲ ದಿರುವಾಗ ರಾಕ್ಷಸಮಾಯಾ ಮಂತಾದಿಗಳಿಂದ ಯಾವ ಅಪಾಯವೂ, ಪ್ರತಿಕೂಲವೂ ನಡೆಯದಂತೆ, ನೀನು ಆತನ ಬಳಿಯಲ್ಲಿಯೇ ಗುಟ್ಟಾಗಿದ್ದು, ಸಮಯೋಚಿತವಾದ ಎಚ್ಚರಿಕೆಗಳನ್ನು ರಹಸ್ಯ ಸಂಕೇತಗಳಿಂದ ಸೂಚಿಸುತ್ತ
ಜಾಗರೂಕತೆಯಿಂದಿರಬೇಕು' ಎಂದು ಹೇಳಿ ನಿಯಮಿಸಿ ಕಳುಹಿಸಿದಳು.
ರಾಕ್ಷಸರಾಜನು ಹೇಳಿದ್ದ ಮೇರೆಗೆ ಮಧ್ಯಾಹ್ವಾತ್ಪರ ಸುಮಾರು ಮೂರು ಘಂಟೆಯ ಸಮಯಕ್ಕೆ ಆತನು ವಿಜಯನನ್ನು ಕರೆಯಿಸಿ ಅರಮನೆಯ
--------------------------------------------------------------------
ವಿಲಾಸ ಮಂದಿರದಲ್ಲಿ ನಿಲ್ಲಿಸಿ, ಪುತ್ರಿಯಾದ ಚಂದ್ರಲೇಖೆಯನ್ನು ಬರುವಂತೆ ಕೂಗಿದನು, ಆ ಕೂಡಲೇ ಪರಸ್ಪರ ಲೇಶ ವ್ಯತ್ಯಾಸವೂ ಇಲ್ಲದ ಐದು ಮಂದಿ ಚಂದ್ರಲೇಖೆಯರು ಒಂದೇ ಸಮನಾದ ನಡೆನುಡಿ ದೃಷ್ಟಿ ಚಲನೆಗಳಿಂದ ಬಂದು ವಿಜಯನ ಎದುರಲ್ಲಿ ನಿಂತರು. ಉಡುಪಿನಲ್ಲಿಯಾಗಲಿ, ರೂಮಿನಲ್ಲಿ
ಯಾಗಲಿ, ಧ್ವನಿಯಲ್ಲಿಯಾಗಲಿ, ಅಂಗಚೇಷ್ಟೆಗಳಲ್ಲಿಯಾಗಲಿ, ಸ್ವಲ್ಪವೂ ಭೇದ ವಿಲ್ಲದೆ ಪರಸ್ಪರ ಛಾಯೆಗಳಂತಿದ್ದ ಸರ್ವಾಲಂಕಾರಭೂಷಿತೆಯರಾದ ಐದು ಮಂದಿ ಮೋಹಿನಿಯರನ್ನು ನೋಡಿ ವಿಜಯನು ವಿಭ್ರಾಂತನಾದನು. ಆಗ ಅಗ್ನಿ ಶಿಖನು, “ ವಿಜಯಕುಮಾರಾ, ಇವರಲ್ಲಿ ನೀನು ಮೆಚ್ಚಿರುವ ಚಂದ್ರ ಲೇಖೆಯನ್ನು ಆರಿಸಿ ಕರೆದುಕೊ" ಎಂದನು. ರಾಕ್ಷಸನು ತನಗೆ ಮೋಸ ಮಾಡಲು ಈ ರೀತಿಯಾಗಿ ಒಂದೇ ಆಕಾರವಳ್ಳಿ ಚಂದ್ರಲೇಖೆಯರನ್ನು ತನ್ನ ಮಾಯಾಶಕ್ತಿಯಿಂದ ಸೃಷ್ಟಿಸಿರುವನೆಂಬುದು ವಿಜಯನ ಮನಸ್ಸಿಗೆ ಗೋಚರವಾಯಿತು. ಆ ಐದು ಮಂದಿಯಲ್ಲಿ ನಿಜವಾದ ಚಂದ್ರಲೇಖೆ ಯಾರೆಂದು ಗುರುತಿಸಲಾರದೆ ಆತನು ಸಬ್ಬ ನಾಗಿ ನಿಂತು ನೋಡುತ್ತಿರು ವಲ್ಲಿ, ವಿಜಯನ ಎದುರಾಗಿ ದೂರದಲ್ಲಿ ನಿಂತಿದ್ದ ಮಾಧುರಿಯು ಗಟ್ಟಿಯಾಗಿ ಸೀನಿದಳು. ಆ ಸೀನಿನ ಶಬ್ದದಿಂದ ವಿಜಯನ ದೃಷ್ಟಿಯು ಅವಳಮೇಲೆ ಬಿತ್ತು. ಆ ಕೂಡಲೆ ಮಾಯಾಮರ್ವಗಳನ್ನು ಒಲ್ಲ ಚತುರೆಯಾದ ಮಾಧುರಿಯು ತನ್ನ ಬಲಗೈಯ ತರ್ಜನಿಯ ಬೆರಳಿನಿಂದ ಹಣೆಯ ಕುಂಕುಮ ವನ್ನು ಸರಿಮಾಡಿಕೊಳ್ಳುವಂತೆ ನಟಿಸಿ ವಿಜಯನ ಮುಖವನ್ನು ನೋಡಿ ಬಲಗೈ ಬೆರಳುಗಳನ್ನೆತ್ತಿ ತೋರಿಸಿದಳು. ಇದರಿಂದ ಇಂಗಿತಜ್ಞನಾಗಿಯೂ ಚಂದ್ರಲೇಖೆಯಿಂದ ಮಾಯಾಸಂಕೇತಗಳನ್ನು ಬಲ್ಲವನಾಗಿಯೂ ಇದ ವಿಜಯನು, ಎದುರಿಗಿದ್ದ ಮಾಧುರಿಯ ತರ್ಜನಿಯ ಬೆರಳು ತನ್ನ ಎಡಗಡೆ ಯಿಂದ ನಾಲ್ಕನೆಯದಾದ ಕಾರಣ, ಅಲ್ಲಿ ನಿಂತಿದ್ದ ಐದು ಮಂದಿ ಚಂದ್ರ ಲೇಖೆಯರಲ್ಲಿ ತನ್ನ ಎಡಭಾಗದಿಂದ ನಾಲ್ಕನೆಯವಳೇ ನಿಜವಾದ ಚಂದ್ರಲೇಖೆ ಯೆಂದು ನಿರ್ಧರಿಸಿ ರಾಕ್ಷಸೇಂದ್ರನ ಮುಖವನ್ನು ನೋಡಿ, “ರಾಜೇಂದ್ರಾ!
------------------------------------------------------------------
 ಇದೋ ಇವಳೇ ನಾನು ಮೆಚ್ಚಿರುವ ಚಂದ್ರಲೇಖೆಯು ” ಎಂದು ಆಕೆ ಯನ್ನು ತೋರಿಸಲು ಅವಳೇ ನಿಜವಾದ ಚಂದ್ರಲೇಖೆಯಾಗಿದ್ದಳು. ತನ್ನ ಮೋಸವು ಫಲಿಸಲಿಲ್ಲವೆಂದು ಅಗ್ನಿ ಶಿಖನ ಮುಖವು ಕಳೆಗೆಟ್ಟಿತು. ವಿಫಲ ನಾದೆನೆಂಬ ವ್ಯಸನದಿಂದ ವಿಜಯನಮೇಲೆ ಕ್ರೋಧವು ಮತ್ತಷ್ಟು ಹೆಚ್ಚಿತು. ಆದರೂ ಮಗಳಿಗೂ ವಿಜಯನಿಗೂ ತನ್ನ ಆಂತರ್ಯವನ್ನು ಬಿಡದೆ ಹೇಗಾ ದರೂ ಉಪಾಯದಿಂದಲೇ ಇವನನ್ನು ನಿವಾರಿಸಿಕೊಳ್ಳಬೇಕೆಂದಾಲೋಚಿಸಿ, ರಾಕ್ಷಸನು ವಿಜಯನನ್ನು ನೋಡಿ, “ಅಯ್ಯಾ ! ವಿಜಯಕುಮಾರಾ, ನಿನ್ನ ಬುದ್ದಿ ಕೌಶಲಕ್ಕೆ ನಾನು ಮೆಚ್ಚಿದೆನು, ನಿನ್ನ ನ್ನು ವಿನೋದಕ್ಕಾಗಿ ಪರೀಕ್ಷಿಸಲು ಈ ರೀತಿ ಮಾಯಾ ಕನೈಯರು ನಾಲ್ವರನ್ನು ನಿರ್ಮಿಸಿ ನಿಲ್ಲಿಸಿದ್ದೆನು. ನೀನು ನಿಜವಾದ ನಮ್ಮ ಚಂದ್ರಲೇಖೆಯನ್ನು ಗುರುತು ಹಿಡಿದ ಕಾರಣ ಆಕೆಯು ನಿನ್ನವಳೇ ಆಗಿರುವಳು. ನಾನು ಈ ನಿಮ್ಮಿಬ್ಬರ ವಿವಾಹ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ನಡೆಯಿಸಬೇಕೆಂದು ಸಂಕಲ್ಪಿಸಿರುವೆನು. ಅದಕ್ಕಾಗಿ ನಮ್ಮ ಬಂಧುವರ್ಗವೆಲ್ಲವನ್ನೂ ಬರಮಾಡ ಬೇಕಾಗಿರುವುದು. ಇಲ್ಲಿಗೆ ದಕ್ಷಿಣ ದಿಕ್ಕಿನಲ್ಲಿ ಒಂದುಯೋಜನ ದೂರದಲ್ಲಿ ರುವ ದುರ್ಗಾವತೀ ನಗರದ ಹೊರಗಣ ಪರ್ವತದ ಗವಿಯಲ್ಲಿ ನಮ್ಮ ಅಣ್ಣನಾದ ವೀರಭೈರವನೆಂಬ ರಾಕ್ಷಸೇಂದ್ರನು ಯಜ್ಞವನ್ನು ಮಾಡು ತಿರುವನು. ಅದು ನಾಳೆಗೆ ಪೂರಯಿಸುವುದು. ನಾನು ಕೊಡುವ ಲಗ್ನ ಪತ್ರಿಕೆಯನ್ನು ನೀನು ತೆಗೆದುಕೊಂಡು ಹೋಗಿ ಆತನಿಗೆ ಕೊಟ್ಟು ವಿವಾಹಕ್ಕೆ ಪರಿವಾರ ಸಹಿತನಾಗಿ ಒರುವಂತೆ ನಾನು ಪ್ರಾರ್ಥಿಸಿಕೊಂಡೆನೆಂದು ಹೇಳಿ ಪ್ರತ್ಯುತ್ತರವನ್ನು ತರಬೇಕು. ಅವರೆಲ್ಲರೂ ಬಂದ ಮಾರನೆಯ ದಿನವೇ ನಿಮ್ಮ ವಿವಾಹಮಂಗಳವು ನೆರವೇರುವುದು ” ಎಂದನು. ಅದಕ್ಕೆ ವಿಜಯನು ಬೇರೆ ಉಪಾಯವನ್ನರಿಯದೆ ಸಮ್ಮತಿಸಲೇ ಬೇಕಾಯಿತು. ಈ ವಿಚಾರ ವೆಲ್ಲವೂ, ಅಲ್ಲಿದ್ದ ಮಾಧುರಿಯ ಮೂಲಕ ಕ್ಷಣಮಾತ್ರದಲ್ಲಿ, ಚಂದ್ರಲೇಖೆಯ ಕಿವಿಯನ್ನು ಮುಟ್ಟಿತು.
------------------------------------------------------------------
ಅಗ್ನಿಶಿಖನು ಮಾಯಾಚಂದ್ರಕಳೆಯರನ್ನು ನಿರ್ಮಿಸಿ ಮಾಡಿದ ವರ ಪರೀಕ್ಷೆಯಿಂದಲೇ ಚಂದ್ರಕಳೆಗೆ ತನ್ನ ತಂದೆಯ ವಿಷಯದಲ್ಲಿ ಸಂದೇಹ ವಂಟಾಗಿ, ಆತನು ತನ್ನ ಪ್ರಿಯನಾದ ವಿಜಯನಿಗೆ ಕೇಡನ್ನು ತರಲು ಪ್ರಯತ್ನಿ ಸುತ್ತಿರಬಹುದೆಂದು ತೋರಿತ್ತು. ಈ ಎರಡನೆಯ ಆಜ್ಞೆಯನ್ನು ಕೇಳಿದ ಕೂಡಲೆ, ಅವಳ ಮನಸ್ಸಿನಲ್ಲಿ ತಂದೆಯ ಕೃತ್ರಿಮವು ದೃಢ ಪಟ್ಟಿತು. ಆದುದರಿಂದ ಹೇಗಾದರೂ ವಿಜಯನನ್ನು ರಕ್ಷಿಸಬೇಕೆಂದು ಸಂಕಲ್ಪಿಸಿ, ಮಾಧುರಿಯ ಮೂಲಕ ಅವನನ್ನು ತನ್ನ ಅಂತಃಪುರಕ್ಕೆ ಗುಟ್ಟಾಗಿ ಬರಮಾಡಿಕೊಂಡು, ಅವನಿಗೆ ರಾಕ್ಷಸೇಂದ್ರನ ದುಗ್ಧಭಾವ ವನ್ನು ಕುರಿತು ಎಚ್ಚರಿಕೆಗಳನ್ನು ಕೊಟ್ಟುದಲ್ಲದೆ, ಇನ್ನೂ ಅನೇಕ ಮಂತ್ರ ಮಾಯಾಮರ್ಮಗಳನ್ನು ಬೋಧಿಸಿ, ಸ್ವಲ್ಪ ಬೂದಿಯನ್ನೂ ಒಂದು ಕಲಶದಲ್ಲಿ ನೀರನ್ನೂ ಕೆಲವು ಕಲ್ಲುಗಳನ್ನೂ ಕ್ರಮವಾಗಿ ಆಗ್ನಿ ಯಾಸ್ತ್ರ ವಾರುಣಾಸ್ತ್ರ ಪರ್ವತಾಸ್ತ್ರ ಮಂತ್ರಗಳಿಂದ ಅಭಿಮಂತ್ರಿಸಿ, ಅವನ ಕೈಗೆ ಕೊಟ್ಟು, “ ಪ್ರಿಯಾ ನೀನು, ಆ ವೀರಭೈರವನ ಬಳಿಗೆ ಹೋಗಿ ಬರುವಷ್ಟರಲ್ಲಿ ನಿನಗೇನಾದರೂ ಅಪಾಯವು ಸಂಭವಿಸುವುದಾದರೆ ಇವು ಗಳಲ್ಲಿ ಯಾವುದನ್ನಾದರೂ ನಾನು ಹೇಳಿಕೊಟ್ಟಿರುವ ಆಯಾ ಮಂತ್ರ ಗಳಿಂದ ಅಭಿಮಂತ್ರಿಸಿ ಎರಚು, ಆಗ ಬೂದಿಯನ್ನೆ ರಚಿದರೆ ಬೆಂಕಿಯೂ, ನೀರನ್ನೆ ರಚಿದರೆ ಸಮುದ್ರವೂ ಕಲ್ಲನ್ನೆ ಸೆದರೆ ಬೆಟ್ಟಗಳೂ ನಿನ್ನ ಶತ್ರುವಿಗೆ ಅಡ್ಡಲಾಗಿ ನಿಂತು ನಿನ್ನನ್ನು ರಕ್ಷಿಸುವುವು ” ಎಂದು ಹೇಳಿ ಮತ್ತೆ ಅನೇಕ ವಿಧವಾದ ಎಚ್ಚರಿಕೆಗಳನ್ನು ಕೊಟ್ಟು ಅವನನ್ನು ಬೀಳ್ಕೊಟ್ಟಳು.
------------------------------------------------------------------
ಷಷ್ಣ ತರಂಗ
ಈವರೆಗೆ ಅನೇಕ ಯಕ್ಷಿಣೀ ಮಾಯಾ ಮಂತ್ರ ತಂತ್ರಗಳನ್ನು ಗ್ರಹಿಸಿಕೊಂಡಿದ್ದ ವಿಜಯನು, ದೇವರು ತನ್ನನ್ನು ಕೈಬಿಡದೆ ಕಾಪಾ ಡುವನೆಂಬ ಧೈರ್ಯದಿಂದ ಹೊರಟು, ಸರೋಜಿನಿಯ ಮನೆಗೆ ಬಂದು, ನಡೆದ ಸಂಗತಿಯನ್ನಾಕೆಗೆ ತಿಳಿಸಿ, ತನ್ನ ಮಾಯಾತುರಗವನ್ನೇರಿ ದುರ್ಗಾ ವತಿಯನ್ನು ಕುರಿತು ಪ್ರಯಾಣಮಾಡಿದನು. ಅನಂತರ ವಾಯುವೇಗ ದಿಂದ ಕುದುರೆಯಮೇಲೆ ಹೋಗಿ, ಮಾರನೆಯ ದಿನ ಮಧ್ಯಾಹ್ನ ಕಾಲಕ್ಕೆ ದುರ್ಗಾವತಿಯು ಪ್ರಾಂತವನ್ನು ಸೇರಿದನು. ಅಗ್ನಿ ಶಿಖನು ಹೇಳಿದ್ದ ಪರ್ವತದ ಗವಿಗೆ ಹೋಗಿ ನೋಡಲು, ಅಲ್ಲಿ ವೀರಭೈರವನು ಚಂಡಭೈರವ ನಾಗಿ ಅಗ್ನಿ ಯ ಮುಂದೆ ಕುಳಿತು ಕೆಲವು ಮಂದಿ ಮಾನವರನ್ನು ಮಾರಣ ಮಾಡುವಷ್ಟರಲ್ಲಿದ್ದನು. ದುರ್ಗಾದೇವಿಯ ಮುಂದೆ ಇದ್ದ ವಧಸ್ತಂಭದ ಬಳಿಯಲ್ಲಿ ಎಂಟು ಮಂದಿ ತರುಣ ಮಾನವರು, ಯಮದೂತರಂತಹ ಭಯಂಕರ ರಾಕ್ಷಸರಿಂದ ಹಿಡಿಯಲ್ಪಟ್ಟು ವಧೆಗೆ ಸಿದ್ದರಾಗಿದ್ದರು. ದುರ್ಗಿಯ ಮುಂದೆ ರಕ್ತಪ್ರವಾಹವೂ ಮಾಂಸದ ರಾಶಿಗಳೂ ಭಯಂಕರ ವಾಗಿದ್ದುದಲ್ಲದೆ ನೂರಾರು ಕುರಿಕೋಣಗಳು ಹತವಾಗಿ ಬಿದ್ದಿದ್ದು ವು. ಮನುಷ್ಯರ ತಲೆಬುರುಡೆಗಳ ಸಂಖ್ಯೆಗೆ ಪಾರವೇ ಇಲ್ಲ. ಇಂತಹ ಭೀಕರ ವಾದ ನೋಟದಿಂದ ವಿಜಯನ ಎದೆಯು, ಢಕ್ಕೆಂದರೂ, ಧೀರನಾದ ಅವನು ಮನಸ್ಸನ್ನು ಸ್ಥಿರಮಾಡಿಕೊಂಡು ಮುಂದೆ ಸುಗ್ಗಿ ನಮಸ್ಕರಿಸಿ, ಅಗ್ನಿ ಶಿಖನು ಕೊಟ್ಟಿದ್ದ ಪತ್ರವನ್ನು ಅಲ್ಲಿದ್ದ ರಾಕ್ಷಸರ ಮೂಲಕ ವೀರಭೈರವನ ಕೈಗೆ ಕೊಟ್ಟು ತಾನು ಬಂದ ಕಾರ್ ಗೌರವವನ್ನು ವಿಜ್ಞಾಪಿ ಸಿದನು. ಅದರಲ್ಲಿ ರಾಕ್ಷಸಲಿಪಿಯಿಂದ ಬರೆದಿದ್ದ ವಿಷಯವನ್ನು ವೀರ ಭೈರವನು ಓದಿಕೊಂಡು ಸಂತೋಷಪಟ್ಟು, ತಾನು, ಅದರಲ್ಲಿ ಬರೆದಿರುವ
--------------------------------------------------------------
ಕಾರವನ್ನು ಕೂಡಲೆ ನೆರವೇರಿಸುವಂತೆ ಪ್ರತ್ಯಕ್ಷವಾಗಿ ಹೇಳದೆ ಮತ್ತೊಂದು ಪತ್ರವನ್ನಾಗಿ ಬರೆದು, ಬಳಿಯಲ್ಲಿದ್ದ ರಕ್ತ ಮುಖನ ಕೈಗೆ ಕೊಟ್ಟನು. ರಕ್ತಮುಖನು ಅದನ್ನು ತನಗೆ ಬರೆದ ಪತ್ರವೆಂದರಿಯದೆ, ಈ ತರುಣನು ತಂದಿದ್ದ ಪತ್ರಕ್ಕೆ ಪ್ರತ್ಯುತ್ತರಪತ್ರವೆಂದು ತಿಳಿದು, ಎದ್ದು ಬಂದು ಅದನ್ನು ದೂರದಲ್ಲಿ ನಿಂತಿದ್ದ ವಿಜಯನ ಕೈಗೆ ಕೊಟ್ಟು ತಾನು ಕಾಲ್ಯಾಂತರ ದಿಂದ ಹೊರಗೆ ಬಂದನು. ಅಗ್ನಿ ಯ ಮುಂದೆ ಇದ್ದ ವೀರಭೈರವನಿಗೆ ಇದು ಗೋಚರವಾಗಲಿಲ್ಲ. ಪತ್ರವನ್ನು ತೆಗೆದುಕೊಂಡು ವಿಜಯನು, ತಾನು ಇನ್ನು ಇಲ್ಲಿ ನಿಂತರೆ ಚಂದ್ರಲೇಖೆಯು ಹೇಳಿದ್ದಂತೆ ಅಪಾಯ ವೇನಾದರೂ ಸಂಭವಿಸೀತೆಂದು ಅಲ್ಲಿನ ದೃಶ್ಯದಿಂದ ಸಂದೇಹಪಟ್ಟು ಆ ಕೂಡಲೇ ಹೊರಡಲು ನಿಶ್ಚಯಿಸಿ, ಮುಂದೆ ಬಂದು ವೀರಭೈರವನಿಗೆ ಮತ್ತೆ ನಮಸ್ಕಾರ ಮಾಡಿ, ತನ್ನ ಪ್ರಯಾಣಕ್ಕೆ ಅಪ್ಪಣೆಯನ್ನು ಬೇಡಿ ದನು. “ ನಮ್ಮ ರಕ್ತಮುಖನ ಜೊತೆಯಲ್ಲಿ ಹೋಗಿ ಅವನು ಹೇಳು ವಂತೆ ಕೇಳು ' ಎಂದು ಆಜ್ಞೆಯಾಯಿತು. ಅನಂತರ ಗವಿಯಿಂದ ಹೊರಗೆ ಬಂದಿದ್ದ ರಮುಖನನ್ನು ನೋಡಲು, ಆತನು, “ ದಾನವೇಂದ್ರನು ಬರೆದ ಪ್ರತ್ಯುತ್ತರವನ್ನು ನಿನಗೆ ಕೊಟ್ಟಿರುವೆನಷ್ಟೆ ! ಅದನ್ನು ನೀನು ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಿ ಅಗ್ನಿಶಿಖ ರಾಕ್ಷ ಸೇಂದ್ರನಿಗೆ ಕೊಡಬೇಕು' ಎಂದು ಗರ್ಜಿಸಿ ಹೇಳಿದನು. ಅದನ್ನು ಕೇಳಿದ ಕೂಡಲೆ ಸದ್ಯಕ್ಕೆ ಬದುಕಿದೆನೆಂದು ವಿಜಯನು ಕುದುರೆಯನ್ನು ಹತ್ತಿ ಪ್ರಯಾಣ ಮಾಡಿದನು. ಅನಂತರ ರಮುಖನು ವೀರಭೈರವನ ಬಳಿಗೆ ಬಂದು ಪತ್ರವನ್ನು ಕೊಟ್ಟು ಕಳುಹಿಸಿದನೆಂದು ವಿಜ್ಞಾಪಿಸಿದನು. ಅದನ್ನು ಕೇಳಿದ ಕೂಡಲೇ ವೀರಭೈರವನ ಮುಖವು ಪ್ರಳಯಕಾಲ ಭೈರವನ ಮುಖದಂತಾಯಿತು. ಆಗ ಅವನು ಕಿಡಿಕಿಡಿಯಾಗಿ, " ಎಲವೋ ರಕ್ತ ಮುಖಾ, ಪತ್ರವನ್ನ ನನಿಗೇತಕ್ಕೆ ಕೊಟ್ಟೆ ?” “ ಅವನನ್ನು ಹಿಡಿದು, ದುರ್ಗಿಯ ಬಲಿಗಾಗಿ ನೆಲಮಾಳಿಗೆಯಲ್ಲಿ ಕೂಡಿರು' ಎಂದು ನಿನಗಲ್ಲವೇ
--------------------------------------------------------------
ನಾನು ಪತ್ರವನ್ನು ಬರೆದುಕೊಟ್ಟುದು ? ಅವನಿಗೆ ನನ್ನ ಮಾತು ಕೇಳ ಬಾರದೆಂದು ನಿನಗೆ ಪತ್ರದ ಮೂಲಕ ತಿಳಿಸಲು ಆ ರೀತಿ ಬರೆದು ಕೊಟ್ಟೆನು. ಛೇ ! ಛೇ ! ನೀನೆಂತಹ ಕೆಲಸಮಾಡಿದೆ ! ಕೈಗೆ ಸುಲಭವಾಗಿ ಸಿಕ್ಕಿದ್ದ ಬಲಿಯನ್ನು ಬಿಟ್ಟು ಬಿಟ್ಟೆ ಯಲ್ಲಾ!” ಎಂದು ಕೈಕೈ ಹಿಸುಕಿಕೊಂಡು ಅಲ್ಲಿದ್ದ ರಾಕ್ಷಸರನ್ನು ನೋಡಿ, " ಎಲವೋ ! ಓಡಿರಿ, ಬೇಗನೆ ಓಡಿರಿ, ಆ ಬಡಮಾನವನು ಇನ್ನೆಷ್ಟು ದೂರತಾನೆ ಹೋಗಿದ್ದಾನು ! ಬೆನ್ನಟ್ಟಿ ಹೋಗಿ ಆ ನರಾಧಮನನ್ನು ಈಗಲೇ ಸೆಳೆದು ತನ್ನಿ, ಈ ಜನರಲ್ಲಿಯೆ ಬಿಡಿ, ನಾನಿವರನ್ನು ನೋಡಿಕೊಳ್ಳುವೆನು. ನೀವು ಮೊದಲು ಹೊರಡಿ” ಎಂದು ಕಾತುರನಾಗಿ ಗರ್ಜಿಸಿದನು. ಇದನ್ನು ಕೇಳಿದ ಕೂಡಲೇ ಆ ರಾಕ್ಷಸ ದೂತರು ತಾವು ಹಿಡಿದಿದ್ದ ಒಲಿಜನರನ್ನಲ್ಲಿಯೇ ಬಿಟ್ಟು ಓಡಿದರು. ರಮುಖನೂ ಓಡಿದನು. ವೀರಭೈರವನು ಕೈಗೆ ಸಿಕ್ಕಿದ್ದ ಬಲಿಯು ತಪ್ಪಿ ಹೋಯಿತಲ್ಲಾ ! ಎಂದು ಆಗ್ರಹ ಕುತೂಹಲಗಳಿಂದ ತಾನು ಗವಿಯ ಬಾಗಿಲಿಗೆ ಬಂದು ಓಡುತ್ತಿದ್ದವರ ಮಾರ್ಗವನ್ನೇ ನೋಡುತ್ತ ನಿಂತನು. ಈ ವರೆಗೆ ವಿಜಯನು ಕುದುರೆಯಮೇಲೆ ವೇಗವಾಗಿ ಹೋಗುತ್ತಿದ್ದನು.
ಇತ್ತಲಾ ಗವಿಯಲ್ಲಿ ಬಲಿಗಾಗಿ ನಿಲ್ಲಿಸಲ್ಪಟ್ಟಿದ್ದ ತರುಣರು ಹೊರಗೆ ತಪ್ಪಿಸಿಕೊಂಡು ಹೋಗದಂತೆ ಭಯಂಕರಾಕಾರನಾದ ವೀರಭೈರವನು, ಗವಿಯ ಬಾಗಿಲಲ್ಲಿಯೇ ಕಾವಲಾಗಿ ನಿಂತಿದ್ದ ನಷ್ಟೆ! ಆಗ ಆ ಬಡಮಾನವರು ಪರಸ್ಪರ ಸಂಕೇತಗಳಿಂದ ಮುಖಗಳನ್ನು ನೋಡಿಕೊಂಡು ಮೆಲ್ಲನೆ ಒಟ್ಟಾಗಿ ಗವಿಯ ಬಾಗಿಲಿಗೆ ಬಂದರು. ವಿಜಯನ ಮತ್ತು ರಾಕ್ಷಸದೂತರ ಮಾರ್ಗ ವನ್ನೇ ನೋಡುತ್ತಿದ್ದ ವೀರಭೈರವನ ಗಮನವು ಗವಿಯಲ್ಲಿದ್ದ ಬಲಿಜನರ ಮೇಲೆ ಬೀಳಲಿಲ್ಲ. ಆಗ ಅವರೆಲ್ಲರೂ, ಹಿಂದು ಮುಂದಾಗಿ ಅಜಾಗ ರೂಕತೆಯಿಂದ ನಿಂತಿದ್ದ ಭೈರವನ ಹಿಂದೆ ಬಂದು ಫಕ್ಕನೆ ಅವನ ಭುಜ ಗಳನ್ನೂ ಕಾಲುಗಳನ್ನೂ ತಲೆಯನ್ನೂ ಹಿಡಿದು ಮರ್ದಿಸಲಾರಂಭಿಸಿದರು. ಸ್ವಭಾವ ಬಲಶಾಲಿಯಾದ ಅವನು ಅವರೊಡನೆ ಪ್ರಬಲವಾಗಿ ಹೋರಾಡಿ,
-----------------------------------------------------
ಮೈಮುರಿಯುವಂತೆ ಒದೆಗಳನ್ನು ತಿಂದು ಕಡೆಗೆ ಪ್ರಾಣವುಳಿದರೆ ಸಾಕೆಂದು, ಅವರಿಂದ ಬಿಡಿಸಿಕೊಂಡು ತನ್ನ ದೂತರು ಓಡುತ್ತಿದ್ದ ಮಾರ್ಗವನ್ನೇ ಅನುಸರಿಸಿ ತಾನೂ ವಿಜಯನನ್ನು ಬೆನ್ನಟ್ಟಿದನು. ಇತ್ತಲಾ ಎಂಟು ಮಂದಿಯೂ ಮೃತ್ಯುವಿನ ದವಡೆಗೆ ಸಿಕ್ಕಿ ತಪ್ಪಿ ಬಂದೆವೆಂದು ಸಂತೋಷದಿಂದ ತಮ್ಮ ಭಾಗದ ದೇವರಾಗಿ ಬಂದ ವಿಜಯನನ್ನು ಸ್ತೋತ್ರಮಾಡುತ್ತ ಓಡಿಹೋಗಿ ಪ್ರಾಣಗಳನ್ನು ಉಳಿಸಿಕೊಂಡರು.
ವಿಜಯನಾದರೋ ವಾಯುವೇಗದಿಂದ ಕುದುರೆಯಮೇಲೆ ಓಡು ತಿದ್ದನು. ರಮುಖನೇ ಮೊದಲಾದ ರಾಕ್ಷಸರು ಕುದುರೆಗಿಂತಲೂ ವೇಗವಾಗಿ ಓಡುತ್ತ, ಕುದುರೆಗೆ ಕಲ್ಲುಗಳನ್ನು ಬೀರುತ್ತ ಬೆನ್ನಟ್ಟಿ ಬಹು ದೂರ ಹೋದರು. ಕಲ್ಲುಗಳು ಕಾಲುಗಳಿಗೆ ತಗುಲಿ ರಕ್ತ ಸುರಿಯುತ್ತಿ ದ್ದರೂ ಆ ಜಾತ್ಯಶ್ವವ್ರ ಸ್ವಲ್ಪವೂ ಶಕ್ತಿ ಕುಂದದೆ ಒಂದೇ ಸಮವಾದ ವೇಗದಿಂದ ಓಡುತ್ತಿತ್ತು. ಸ್ವಲ್ಪ ಹೊತ್ತಿನೋಳಗಾಗಿ ವೀರಭೈರವನೂ ಹಿಂದಣಿಂದ ಓಡಿಬಂದು ಈ ಗುಂಪನ್ನು ಸೇರಿದನು. ಇವರೆಲ್ಲರೂ ಕ್ಷಣಕ್ಷಣಕ್ಕೂ ಉಕ್ಕುವ ರೋಷಾವೇಶದಿಂದ ಓಡಿ ಕಟ್ಟಕಡೆಗೆ ವಿಜಯನ ಕುದುರೆಯನ್ನು ಅಡ್ಡಗಟ್ಟಿದರು. ವಿಜಯನು ಹೆದರದೆ ಕುದುರೆಯನ್ನು ಅವರ ಮೇಲೆ ಹಾರಿಸಿಕೊಂಡು ನಡೆದನು. ವಿಫಲರಾದ ಅವರ ರೋಷವು ಮತ್ತೆ ಮತ್ತೆ ಉಕ್ಕಿ ಬರುತ್ತಿದ್ದರೂ ವಿಜಯನನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದ ವೀರಭೈರವನು ಒಳಲಿ ಬೆಂಡಾಗಿ ಬೇಸತ್ತು ಕಡೆಗೆ ತನ್ನ ಮಂತ್ರ ಮಾಯಾಶಕ್ತಿಗಳನ್ನು ಪ್ರಯೋಗಿಸಲೇಬೇಕಾಗಿ ನಿರ್ಧರಿಸಿದನು. ತಕ್ಕ ಸಲಕರಣೆಗಳು ಯಾವುವೂ ತತ್ಕಾಲದಲ್ಲಿ ಬಳಿಯಲ್ಲಿರ ಲಿಲ್ಲ. ಆದರೂ ಮಾರ್ಗದಲ್ಲಿ ಬೆಳೆದಿದ್ದ ಮುಳ್ಳುಗಿಡವೊಂದನ್ನು ಕಿತ್ತು ಮಂತ್ರಿಸಿ ವಿಜಯನ ಕಡೆಗೆ ಎಸೆದನು. ಆ ಕೂಡಲೇ ಅವನ ಸುತ್ತಲೂ ಅಗಾಧವಾದ ಮುಳ್ಳುಗಿಡಗಳ ಪೊದೆಯು ಆವರಿಸಿ ಅವನನ್ನು ಮುಂದಕ್ಕೆ ಹೋಗದಂತೆ ಮಾಡಿತು. ವಿಜಯನು ದಿಕ್ಕು ತೋರದೆ ಸ್ವಲ್ಪ ನಿಲ್ಲುವಷ್ಟ
--------------------------------------------------------------
 ರಲ್ಲಿ ರಾಕ್ಷಸರು ಸವಿಾಪಗತರಾದರು, ಆಗ ವಿಜಯನು ಸ್ವಲ್ಪ ಭಸ್ಮ ವನ್ನು ತೆಗೆದು ಮಂತ್ರಿಸಿ ಸುತ್ತಲೂ ಎರಚಿದನು. ಆ ಕ್ಷಣವೇ ಅದ್ಭುತ ವಾದ ಬೆಂಕಿಯು ಹುಟ್ಟಿ ಆ ಮುಳ್ಳು ಪೊದೆಗಳೆಲ್ಲವನ್ನೂ ಸುಟ್ಟು ಭಸ್ಮ ಮಾಡಿತು. ಈವರೆಗೆ (ವಿಜಯನ ಸಮಾಜಕ್ಕೆ ಬರುತ್ತಿದ್ದ ರಾಕ್ಷಸರಲ್ಲಿ ಇಬ್ಬರು ಆ ಅಗ್ನಿಗೆ ಸಿಕ್ಕಿ ಭಸ್ಮವಾದರು. ಅನಂತರ ಕಲಶದ ನೀರನ್ನು ತೆಗೆದು ಒಂದು ಹನಿಯಷ್ಟನ್ನು ಮಂತ್ರಿಸಿ ಎರೆಚಿದ ಕೂಡಲೇ ಅದು ನೀರಿನ ಪ್ರವಾಹವಾಗಿ ಸುತ್ತಲೂ ಇದ್ದ ಬೆಂಕಿಯನ್ನಾರಿಸಿತು. ಆಗ ವಿಜಯನು ರತ್ನ ದ್ವೀಪದ ಮಾರ್ಗವನ್ನ ನುಸರಿಸಿ ವೇಗದಿಂದ ಪ್ರಯಾಣ ಮಾಡಿದನು. ಭೈರವಾದಿ ರಾಕ್ಷಸರು ತಮ್ಮ ಮಾಯಾಮಂತ್ರಗಳೂ ವಿಫಲ ವಾದುದನ್ನು ಕಂಡು ವಿಜಯನ ಮಂತ್ರಶಕ್ತಿಗೆ ಆಶ್ಚರ್ಯಪಟ್ಟರೂ ಅವ ನನ್ನು ಹೇಗಾದರೂ ಹಿಡಿದು ಬಲಿಯಿಕ್ಕಬೇಕೆಂದು ನಿರ್ಧರಮಾಡಿಕೊಂಡು ಮತ್ತೆ ಅವನನ್ನು ಬಿಡದೆ ಹಿಂಬಾಲಿಸುತ್ತಲೇ ಹೋದರು. ಕುದುರೆಯ ಕಾಲಿಗೆ ರಾಕ್ಷಸರ ಕಲ್ಲುಗಳ ಪೆಟ್ಟುಗಳು ಬಲವಾದುವು. ಇನ್ನೂ ಇವರ ಹಾವಳಿ ತಪ್ಪಲಿಲ್ಲವೆಂದು ವಿಜಯನು ಮತ್ತೆ ತನ್ನ ಕಲಶವನ್ನು ತೆಗೆದು ಒಂದು ಹಿಡಿಯಷ್ಟು ಜಲವನ್ನು ಮಂತ್ರಿಸಿ ಅವರ ಕಡೆಗೆ ಚೆಲ್ಲಿದನು. ಆ ಕೂಡಲೇ ಅದು ಸಮುದ್ರದಂತೆ ರಾಕ್ಷಸರ ಮುಂದೆ ನಿಂತಿತು. ಮಾಯಾ ವಿದ್ಯಾವಿಚಕ್ಷಣರಾದ ವೀರಭೈರವಾದಿಗಳಿಗೆ ಇವನ ಮಂತ್ರಶಕ್ತಿಯು ಮತ್ತಷ್ಟು ಕೋಧಾಸೂಯೆಗಳನ್ನೂ ಹಠವನ್ನೂ ಉಕ್ಕಿಸಿತು. ಅವ ರೆಲ್ಲರೂ ಆ ನೀರಿನಲ್ಲಿಯೇ ವೇಗವಾಗಿ ಈಜುತ್ತ ಸ್ವಲ್ಪ ದೂರ ಬಂದರು. ಅವನನ್ನು ಹಿಡಿಯಲು ಮಾತ್ರ ಸಾಧ್ಯವಾಗಲಿಲ್ಲ. ಕಡೆಗೆ ಆ ನೀರಿನಲ್ಲಿದ್ದ ಮೊಸಳೆಗಳನ್ನು ಹಿಡಿದು ತಮ್ಮ ಮಂತ್ರಶಕ್ತಿಯಿಂದ ಅವುಗಳನ್ನು ತಾವು ಹೇಳಿದಂತೆ ಕೇಳುವ ಹಾಗೆ ಮಾಡಿಕೊಂಡು ಎಲ್ಲರೂ ಅವುಗಳ ಮೇಲೆ ಕುಳಿತು ಮೊಸಳೆಗಳನ್ನು ವೇಗವಾಗಿ ಓಡಿಸುತ್ತ ಬಂದು ಸಮುದ್ರ ತೀರವನ್ನು ಸೇರಿದರು.
----------------------------------------------------------------
ಈವರೆಗೆ ಆಯಾಸಪಟ್ಟಿದ್ದ ವಿಜಯನು ಕುದುರೆಯ ವೇಗವನ್ನು ಕಡಿಮೆ ಮಾಡಿ, ಸ್ವಲ್ಪ ವಿರಾಮವು ಸಿಕ್ಕಿತೆಂದು ಒಂದು ಮರದ ಕೆಳಗೆ ಮಿಶ್ರಮಿಸಿಕೊಳ್ಳಬೇಕೆಂದಿರುವಷ್ಟರಲ್ಲಿ ರಾಕ್ಷಸರ ಗುಂಪು ಘೋರಾರ್ಭಟ ದಿಂದ ಸಮುದ್ರವನ್ನು ದಾಟಿ ಬರುತ್ತಿರುವುದು ಗೋಚರವಾಯಿತು. ಅವರನ್ನು ಮತ್ತೆ ನೋಡಿದೊಡನೆಯೇ ಅವನಿಗೆ ಅತ್ಯಾಶ್ಚರ್ಯವೂ ಭಯವೂ ಉಂಟಾದರೂ ಬೆದರಿದ್ದ ಮನವನ್ನು ಸ್ಥಿರಪಡಿಸಿಕೊಂಡು, ಎದೆಗುಂದದೆ ಕುದುರೆಯನ್ನು ಮತ್ತೆ ವೇಗವಾಗಿ ಓಡಿಸುತ್ತ ತನ್ನಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ಮಂತ್ರಿಸಿ ರಾಕ್ಷಸರ ಕಡೆಗೆ ಬೀಸಿ ಎಸೆದನು. ಆ ಕ್ಷಣವೇ ಅದು ದೊಡ್ಡ ಬೆಟ್ಟವಾಗಿ ರಾಕ್ಷಸರಿಗೆ ಅಡ್ಡಲಾಗಿ ನಿಂತಿತು. ಭೈರವನೂ ರಾಕ್ಷಸರೂ ಸಹ ಮಹಾಕೊಧದಿಂದ ಅದನ್ನೂ ಹತ್ತಿ ಇಳಿ ಯುತ್ತ ಬಂದರು. ಮುಖ್ಯವಾಗಿ ನಾನಾ ಯಕ್ಷಣಿ ಮಂತ್ರ ಮಾಯೆ ಗಳನ್ನು ಬಲ್ಲ, ಇವನನ್ನು ಹಿಡಿದು ವಧಿಸದೆ ಬಿಟ್ಟರೆ ಮುಂದೆ ಇವನಿಂದ ತನ್ನ ತಮ್ಮನಾದ ಅಗ್ನಿಶಿಖನಿಗೂ ತನಗೂ ಅಪಾಯವೇ ಸಂಭವಿಸುವುದೆಂಬ ಸಂದೇಹವು ಪ್ರಬಲವಾದುದರಿಂದ, ಎಷ್ಟು ಕಷ್ಟ ಪಟ್ಟಾದರೂ ಅವನನ್ನು ಬಲಿದೆಗೆದುಕೊಳ್ಳಬೇಕೆಂದು ವೀರಭೈರವನು ಮನಸ್ಸಿನಲ್ಲಿ ಸ್ಥಿರಸಂಕಲ್ಪ ಮಾಡಿಕೊಂಡನು. ವಿಜಯನು ವಾಯುವೇಗದ ತುರಗದ ಮೇಲೆ ಓಡುತ್ತ ಹಿಂದಿರುಗಿ ನೋಡುವಲ್ಲಿ ಈ ಪಿಶಾಚ ಸಂಘವು ಬೆನ್ನಟ್ಟಿ ಬರುತ್ತಲೇ ಇತ್ತು. ಅವರು ಆ ಬೆಟ್ಟವನ್ನು ಇಳಿದು ಬರುವಷ್ಟರಲ್ಲಿ ಏಜಯನು ದಟ್ಟವಾದ ಒಂದು ಅರಣ್ಯಕ್ಕೆ ಬಂದು ಅವರ ಕಣ್ಣಿಗೆ ಮರೆಯಾದನು. ಇಷ್ಟು ಹೊತ್ತಿಗೆ ಅವನಿಗೆ ಆಯಾಸವೂ ಮಿತಿಮೀರಿತು. ವಿಶ್ರಮಿಸಿಕೊಳ್ಳಬೇಕೆಂದು ಕುದುರೆಯಿಂದಿಳಿದು ಒಂದು ಮರದ ಕೆಳಗೆ ಸ್ವಲ್ಪ ಕುಳಿತುಕೊಳ್ಳುವಷ್ಟರಲ್ಲಿ ಮೃತ್ಯು ದೇವತೆಗಳಂತೆ ರಾಕ್ಷಸರು ಅದ್ಭುತಾರ್ಭಟದಿಂದ ಸಾವಗತ ರಾದರು. ಇನ್ನು ಬೇರೆ ಉಪಾಯವಿಲ್ಲವೆಂದಾಲೋಚಿಸಿ ಆ ಕ್ಷಣವೇ ಮತ್ತೆ ಕುದುರೆಯ ಮೇಲೆ ಹಾರಿ ಕುಳಿತು ತನ್ನ ಚೀಲದಲ್ಲಿದ್ದ ಬೂದಿಯಲ್ಲಿ
-------------------------------------------------------------------
 ಒಂದು ಹಿಡಿಯಷ್ಟನ್ನು ತೆಗೆದು ಚಂದ್ರಲೇಖೆಯು ಹೇಳಿಕೊಟ್ಟಿದ್ದ ಆಗೇ ಯಾಸ್ತ್ರ ಮಂತ್ರದಿಂದಭಿಮಂತ್ರಿಸಿ ಅವರ ಕಡೆಗೆರಚಿದನು, ಆ ಕೂಡಲೇ ಆ ಅರಣ್ಯವೆಲ್ಲಕ್ಕೂ ಬೆಂಕಿ ಹತ್ತಿ ಪ್ರಳಯಾಕ್ಸಿ ಯಂತೆ ಉರಿಯುತ್ತ ರಾಕ್ಷಸರ ಗುಂಪಿಗೆ ಅಡ್ಡವಾಯಿತು. ಭೈರವನು ಅಗ್ನಿ ಸ್ತಂಭನವನ್ನು ಬಲ್ಲವನಾದರೂ ತಕ್ಕ ಮಾಯಾಮಂತ್ರ ವಸ್ತುಗಳ ಸಹಾಯವಿಲ್ಲದೆ ಏನನ್ನೂ ಮಾಡಲಾರದೆ ಹೋದನು, ಇದರಿಂದ ವಿಜಯನನ್ನು ಹಿಡಿಯುವುದು ಅಸಾಧ್ಯವೆಂದೇ ಅವನ ಮನಸ್ಸಿಗೆ ತೋರಿತು. ಆದಕಾರಣ ಅಗ್ನಿ ಜ್ವಾಲೆಯನ್ನು ನಿವಾರಿಸಿ ಕೊಳ್ಳಲು ಸಾಧ್ಯವಿಲ್ಲದೆ ಕೈ ಕೈಗಳನ್ನು ಹಿಸಿಕಿಕೊಳ್ಳುತ್ಯ ರಾಕ್ಷಸ ದೂತ ರೊಡನೆ ಜೋಲುಮುಖವನ್ನು ಹಾಕಿಕೊಂಡು ಹಿಂದಿರುಗಬೇಕಾಯಿತು. ಇಷ್ಟು ಹೊತ್ತಿಗೆ ವಿಜಯನು ಬಹುದೂರ ಪ್ರಯಾಣಮಾಡಿ ಸಂಧ್ಯಾ ಸಮಯಕ್ಕೆ ರತ್ನ ದ್ವೀಪದ ಎಲ್ಲೆಯನ್ನು ಸೇರಿದನು. ಕುದುರೆಯೂ ತಾನೂ ಬಹಳ ದಣಿದಿದ್ದ ಕಾರಣ ಸ್ವಲ್ಪ ವೇಗವನ್ನು ಕಡಿಮೆಮಾಡಿ ರತ್ನಾವತೀ ಪ್ರಾಂತವನ್ನು ಸೇರಲು, ಸೂರನು ಅಸ್ತಂಗತನಾದನು. ವಿಜಯನು ಕತ್ತ ಲಾದಮೇಲೆ ನಗರವನ್ನು ಪ್ರವೇಶಿಸಿ ಗುಟ್ಟಾಗಿ ಸರೋಜಿನಿಯ ಮನೆಗೆ ಹೋಗಿ, ಆಕೆಗೆ ತನ್ನ ವೃತ್ತಾಂತವೆಲ್ಲವನ್ನೂ ತಿಳಿಸಿ ಆ ರಾತ್ರಿ ಅಲ್ಲಿ
ವಿಶ್ರಮಿಸಿಕೊಂಡು ಮಾರ್ಗಾಯಾಸವನ್ನು ಪರಿಹರಿಸಿಕೊಂಡನು.
ಸಪ್ತಮ ತರಂಗ
ಇತ್ಯ ರತ್ನಾವತಿಯ ಅರಮನೆಯಲ್ಲಿ ಮಾರನೆಯ ದಿನ ಅಗ್ನಿ ಶಿಖ ರಾಕ್ಷ ಸೇಂದ್ರನು ತನ್ನ ಪತ್ರದಂತೆ ಈವರೆಗೆ ವೀರಭೈರವನು ವಿಜಯನನ್ನು ದುರ್ಗಿಗೆ ಬಲಿಗೊಟ್ಟೇ ಇರುವನೆಂಬ ದೃಢವಾದ ನಂಬಿಕೆಯಿಂದ ಶತ್ರು ನಿವಾರಣೆಯಾಯಿತೆಂದು ತನ್ನಲ್ಲಿ ತಾನು ಸಂತೋಷಪಟ್ಟು ಕೊಂಡಿದ್ದನು. ಆ ದಿನ ಶುಕ್ರವಾರವಾದುದರಿಂದ ಪದ್ಧತಿಯಂತೆ ತಾನು ಆ ಊರಿಗೆ ಸ್ವಲ್ಪ
--------------------------------------------------------------
ದೂರದಲ್ಲಿ ಸುವರ್ಣಾದಿಯ ಮೇಲೆ ಇದ್ದ ತಮ್ಮ ಕುಲದೈವವಾದ ಮಹಾಕಾಳಿಯ ದರ್ಶನಕ್ಕೆ ಮಂತ್ರಿ ಪರಿವಾರಸಹಿತನಾಗಿ ಹೋಗಿ ಬರ ಬೇಕಾಗಿತ್ತು. ಇದರಿಂದ ಎಲ್ಲವನ್ನೂ ಸಿದ್ದ ಪಡಿಸಿಕೊಂಡು, ಪುತ್ರಿಯಾದ ಚಂದ್ರಲೇಖೆಗೆ ಎಚ್ಚರಿಕೆಯನ್ನು ಹೇಳಿ, ತಾನು ಬೆಟ್ಟದಮೇಲೆಯೇ ಆ ದಿನ ವೆಲ್ಲವೂ ವಿನೋದವಾಗಿದ್ದು ಮಾರನೆಯ ದಿನ ಪ್ರಾತಃಕಾಲಕ್ಕೆ ಮನೆಗೆ ಬರುವುದಾಗಿ ತಿಳಿಸಿ ಪರಿವಾರದೊಡನೆ ಹೊರಟು ನಿಂತಿದ್ದನು. ಆ ಸಮಯಕ್ಕೆ ಸರಿಯಾಗಿ ಪತ್ರಹಸ್ತನಾದ ವಿಜಯನು ಬಂದು ನಮ್ಮ ಸ್ಕರಿಸಿದನು. ಅವನ ಮುಖವನ್ನು ನೋಡಿದೊಡನೆಯೇ ಅಗ್ನಿ ಶಿಖ ನಿಗೆ ಆಶ್ಚರ್ಯಕ್ರೋಧಗಳು ಮಿತಿಮೀರಿದವು ಇವನು ನಿಜವಾಗಿಯೂ, ದುರ್ಗಾವತಿಗೆ ಹೋಗದೆ ತನ್ನಾಜ್ಞೆಯನ್ನುಲ್ಲಂಘಿಸಿರಬೇಕೆಂಬ ಸಂದೇಹವು ಮನಸ್ಸಿನಲ್ಲಿ ಉಂಟಾಯಿತು. ಆದರೆ ಪತ್ರವನ್ನು ಬಿಚ್ಚಿ ನೋಡುವಲ್ಲಿ, ಅದರಲ್ಲಿ ತನ್ನ ಅಣ್ಣನಾದ ವೀರಭೈರವನ ಲಿಖಿತವೇ ಇತ್ತು. ಮತ್ತು ತಾನು ಬರೆದಿದ್ದ ವಿಷಯಗಳಿಗೆ ತಕ್ಕಂತೆ “ ವಿಜಯನನ್ನು ದುರ್ಗಿಯ ಬಲಿಗಾಗಿ ನೆಲಮಾಳಿಗೆಗೆ ಸೇರಿಸು ” ಎಂದು ಬರೆದಿತ್ತಲ್ಲದೆ ಮತ್ತೇನೂ ಇರಲಿಲ್ಲ. ಇದರಿಂದ ವೀರಭೈರವನು ತನ್ನ ದೂತನಿಗೆ ಬರೆದ ಪತ್ರವನ್ನು ಇವನು ಅಪಹರಿಸಿ ಅವರ ಕೈಯಿಂದ ತಪ್ಪಿಸಿಕೊಂಡು ಕಳ್ಳತನದಿಂದ ಓಡಿಬಂದಿರುವ ನೆಂಬುದೇ ಅಗ್ನಿ ಶಿಖನ ಮನಸ್ಸಿನಲ್ಲಿ ನಿರ್ಧರವಾಯಿತು. ಆಗ ತನ್ನ ಪ್ರಯತ್ನ ವು ಈ ಸಲವೂ ವ್ಯರ್ಥವಾಯಿತೆಂಬ ಕ್ರೋಧದಿಂದ ಹುಟ್ಟು ಗಂಟಿಕ್ಕಿ, ಕಣ್ಣುಗಳಲ್ಲಿ ಬೆಂಕಿಯನ್ನು ಸುರಿಸುವನಂತೆ ದುರುದುರನೆ ನೋಡಿ, " ಎಲವೋ, ಈ ಪತ್ರವನ್ನು ನಿನಗೆ ಕೊಟ್ಟವರು ಯಾರು ? ನಿಜವಾದ ಸಮಾಚಾರವೆಲ್ಲವನ್ನೂ ವಿವರವಾಗಿ ತಿಳಿಸು ” ಎಂದು ಗರ್ಜಿಸಿ ಕೇಳಿದನು. ಅದಕ್ಕೆ ವಿಜಯನು ದುರ್ಗಾವತಿಯ ಗವಿಯಲ್ಲಿ ನಡೆದ ವಿಷಯಗಳನ್ನು ಮಾತ್ರ ತಿಳಿಸಿ, ಆ ಪತ್ರವನ್ನು ರಾಕ್ಷಸನೊಬ್ಬನು ತಂದು ತನ್ನ ಕೈಗೆ ಕೊಟ್ಟ ನೆಂತಲೂ, ಅದನ್ನು ತೆಗೆದುಕೊಂಡು ತಾನು ಕೂಡಲೆ ಹೊರಟು ಬಂದೆ
--------------------------------------------------------------------
ನೆಂತಲೂ ಮತ್ತು ತನ್ನ ನ್ನು ರಾಕ್ಷಸರು ಅಟ್ಟಿ ಬಂದು ಹಿಡಿಯಲಾರದೆ ವಿಫಲರಾಗಿ ಹಿಂದಿರುಗಿದರೆಂತಲೂ ಮಾತ್ರ ತಿಳಿಸಿದನೇ ಹೊರತು, ಚಂದ್ರ ಲೇಖೆಯು ತನಗೆ ಉಪದೇಶಮಾಡಿದ ಮಂತ್ರ ಮಾಯಾಶಕ್ತಿ ಸಾಧನಗಳಿಂದ ತಾನು ರಾಕ್ಷಸರಿಂದ ತಪ್ಪಿಸಿಕೊಂಡು ಬಂದೆನೆಂಬ ವಿಚಾರವನ್ನು ಮಾತ್ರ ಅವನು ತಿಳಿಸಲಿಲ್ಲ. ವೀರಭೈರವನ ಭಟರಕೈಗೆ ಸಿಕ್ಕದೆ ಇವನು ತಪ್ಪಿಸಿ ಕೊಂಡ ವಿಚಾರವನ್ನು ಕೇಳಿ ಅಗ್ನಿ ಮುಖನಿಗೆ ಪರಮಾಶ್ಚರ್ಯವೂ, ಇವನ ವಿಷಯದಲ್ಲಿ ತಾನು ಮಾಡಿದ ಎರಡು ಪ್ರಯತ್ನಗಳೂ ಭಗ್ನ ವಾದುವಾದುದ ರಿಂದ ಮಹಾಕ್ರೋಧವೂ ಉಕ್ಕಿ ಬಂದರೂ, ತನ್ನ ಅಂತರಂಗಭಾವವು ತನ್ನ ಪುತ್ರಿಗೆ ತಿಳಿಯಬಾರದೆಂದು ಮುಖದಲ್ಲಿ ಮಾತ್ರ ಸೌಮ್ಯಭಾವವನ್ನೇ ತೋರಿಸುತ್ತ, ಅಲ್ಲಿದ್ದ ಕೆಲವು ಮಂದಿ ಸೇವಕರನ್ನು ಕರೆದು, “ ಚಂದ್ರ ಲೇಖೆಗೆ ತಿಳಿಯದಂತೆ ಇವನನ್ನು ಕಾರಾಗೃಹದಲ್ಲಿ ಸೇರಿಸಿ ಚಿತ್ರಹಿಂಸೆ ಮಾಡುತ್ತಿರಿ. ನಾಳೆ ಪ್ರಾತಃಕಾಲಕ್ಕೆ ನಾನು ಬಂದು ಇವನ ವಿಷಯವಾಗಿ ಬೇರೆ ಆಜ್ಞೆ ಮಾಡುವೆನು ' ಎಂದು ರಾಕ್ಷ ಸಭಾಷೆಯಿಂದ ಹೇಳಿ, ವಿಜಯ ನನ್ನು ಬಳಿಗೆ ಕರೆದು ವಿನಯದಿಂದ, ''ವಿಜಯಕುಮಾರಾ, ನಿನ್ನ ಸಾಹಸಕ್ಕೂ ಚಾತುರ್ಯಕ್ಕೂ ನಾನು ಮೆಚ್ಚಿದೆನು. ನಿನ್ನಂತಹ ವರನು ನನ್ನ ಕುಮಾರಿಗೆ ದೊರೆತುದರಿಂದ ನನಗೆ ಬಹಳ ಸಂತೋಷವಾಯಿತು. ನೀನು ಬಹಳ ಆಯಾಸಪಟ್ಟು ಬಂದಿರುವಂತೆ ಕಾಣುವೆ; ಹೋಗು, ನಮ್ಮ ಪರಿಚಾರಕರು ನಿನ್ನನ್ನು ಪಚರಿಸುವರು, ನಾನು ಸುವರ್ಣಗಿರಿಗೆ ಹೋಗಿ ಸಂಧ್ಯಾಕಾಲಕ್ಕೆ ಬಂದು ಮತ್ತೆ ನಿನ್ನ ನ್ನು ಕಾಣುವೆನು ” ಎಂದು ಹೇಳಿ ಪರಿವಾರ ಸಹಿತ ನಾಗಿ ಸುವರ್ಣಗಿರಿಗೆ ಹೊರಟುಹೋದನು. ಇಷ್ಟೆಲ್ಲವೂ ನಡೆಯುವಾಗ ಮಾಯಾವಿನಿಯಾದ ಮಾಧುರಿಯು ಯಾರಿಗೂ ಕಾಣದಂತೆ ಬಾಗಿಲ ಹಿಂಭಾಗದಲ್ಲಿ ನಿಂತು ಎಲ್ಲ ವಿಷಯಗಳನ್ನೂ ಗ್ರಹಿಸಿದ್ದಳು. ಆದುದರಿಂದ ಅಗ್ನಿ ಶಿಖನು ಹೊರಟುಹೋದ ಕೂಡಲೇ ಅವಳು ವಿಜಯನಿಗೆ ಗೋಚರ ಳಾಗಿ, ಆ ಸೇವಕರ ಹಿಂದೆ ಹೋಗಬೇಡವೆಂದು ಸಂಜ್ಞೆಮಾಡಿ ಹೇಳಿ
ವಿಜಯ ವಿಲಾಸ ಆ ಕ್ಷಣವೇ ಹೋಗಿ ನಡೆದ ವೃತ್ತಾಂತವೆಲ್ಲವನ್ನೂ ಚಂದ್ರಲೇಖೆಗೆ ತಿಳಿಸಿ ದಳು. ವಿಜಯನು ದುರ್ಗಾವತಿಯಿಂದ ಸುರಕ್ಷಿತವಾಗಿ ಬಂದನೆಂದವಳಿಗೆ ಸಂತೋಷವಾದರೂ ಮುಂದೆ ತಮ್ಮ ತಂದೆಯಿಂದ ಅವನಿಗೆ ನಾಶವೇ ಸಂಭವಿಸುವುದೆಂಬುದು ಅವಳ ಮನಸ್ಸಿಗೆ ನಿರ್ಧರವಾಯಿತು. ಅಲ್ಲದೆ ತಾನು ಈ ಕಾಲದಲ್ಲಿ ಸುಮ್ಮನಿರುವುದಾದರೆ ಮುಂದೆ ತನಗೂ ಇದರಿಂದ ಅನರ್ಥ ಗಳೇ ಉಂಟಾಗುವುವೆಂಬ ಭೀತಿಯೂ ಸಹ ಪ್ರಬಲವಾಗಿ ತೋರಿತು. ಆದುದರಿಂದ ಕಾತುರಳಾಗಿ ಮಾಧುರಿಯನ್ನು ಕರೆದು, ಯಕ್ಷಿಣೀ ವಸ್ತು ಗಳನ್ನು ಸಿದ್ಧ ಪಡಿಸಿಕೊಂಡು ಬರುವಂತೆ ಹೇಳಿ, ತಾನೂ ತನ್ನ ಯಕ್ಷಿಣೀ ಸಾಮಗ್ರಿಗಳೊಡನೆ ವಿಜಯನನ್ನು ಕಾಪಾಡಲು ಹೊರಟಳು.
ಈ ವರೆಗೆ ರಾಕ್ಷಸ ಭಟರು ಹಿರಿದ ಕತ್ತಿಗಳಿಂದ ವಿಜಯನನ್ನು ಬಳಸಿ, ಬೇರೆ ಮಾರ್ಗದಿಂದ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮಾಧುರಿಯ ಸಂಜ್ಞೆಯಂತೆ ವಿಜಯನಿಗೆ ಅಪಾಯವು ಪ್ರತ್ಯಕ್ಷವಾಗಿಯೇ ಕಂಡು ಬಂದಿತು. ಆದರೂ ಬುದ್ದಿಶಾಲಿಯಾದ ಅವನು ಧೈರ್ಯಗೆಡದೆ ಆ ವೀರಭಟರನ್ನು ಬಹು ವಿನಯವಾಗಿ ಮಾತನಾಡಿಸುತ್ತ, ಕಾರಾಗೃಹ ವನ್ನು ಸೇರುವುದರೊಳಗಾಗಿ ತನ್ನ ಎಡಬಲದಲ್ಲಿದ್ದ ಇಬ್ಬರು ವೀರರ ಕೈಗಳಲ್ಲಿದ್ದ ಎರಡು ಖಡ್ಗಗಳನ್ನು ತನ್ನ ಎರಡು ಕೈಗಳಿಂದಲ. ಫಕ್ಕನೆ ಸೆಳೆದುಕೊಂಡು, ಆ ಭಟರ ಮೇಲೆಯೇ ಪ್ರಯೋಗಿಸಲಾರಂಭಿಸಿದನು. ದೈತ್ಯ ಭಟರಿಗೂ ವಿಜಯನಿಗೂ ಪ್ರಬಲವಾದ ಖಡ್ಡ ಯುದ್ಧವೇ ನಡೆದು ನಾಲ್ಕಾರು ಮಂದಿ ಭಟರು ನೆಲಕ್ಕುರುಳಿದರು. ಇದನ್ನು ನೋಡಿ ರಾಕ್ಷಸ ರನೇಕರು ವಿಜಯನ ಮೇಲೆ ಬೀಳಲು ಬಂದರು. ಆ ಕೂಡಲೇ ವಿಜಯನು ತನ್ನಲ್ಲಿದ್ದ ಸ್ವಲ್ಪ ಭಸ್ಮವನ್ನು ತೆಗೆದು ಮಂತ್ರಿಸಿ ಅವರಮೇಲೆ ಎರಚಲು ಅವರೆಲ್ಲರೂ ಧಗ್ಗನೆ ಉರಿದು ಬೂದಿಯಾದರು.
ಇಷ್ಟು ಹೊತ್ತಿಗೆ ಚಂದ್ರಲೇಖೆಯೂ ಮಾಧುರಿಯೂ ಸಹ ತಮ್ಮ ಯಕ್ಷಿಣೀ ಸಾಮಗ್ರಿಗಳೊಡನೆ ಆ ಸ್ಥಳಕ್ಕೆ ಬಂದು ನಡೆದಿದ್ದ ಅನರ್ಥ
--------------------------------------------------------------------------
ಗಳನ್ನು ನೋಡಿ, ಇನ್ನು ದಾನವೇಂದ್ರನಿಗೆ ಈ ವಿಚಾರವು ತಿಳಿಯವು ದಾದರೆ ವಿಜಯನನ್ನು ಪ್ರಾಣದಿಂದ ಬಿಡಲೇ ಬಿಡನೆಂದು ನಿರ್ಧರಿಸಿದರು. ಇದರಿಂದ ಚಂದ್ರಲೇಖೆಗೆ “ ಪಲಾಯನವೇ ಪರಮೋಪಾಯ'' ವೆಂದು ತೋರಿತು. ಆಗ ಮಾಧುರಿಯ ಮೂಲಕ ತಮ್ಮ ಪ್ರಯಾಣಕ್ಕೆ ಸಮಸ್ಯ ವನ್ನೂ ರಹಸ್ಯವಾಗಿ ಸಿದ್ಧಪಡಿಸಿ, ಚಂದ್ರಲೇಖೆಯು ಅಲ್ಲಿದ್ದ ಕಾವಲು ಗಾರರನ್ನು ಲಂಚದಿಂದ ತನ್ನಂತೆ ತಿರುಗಿಸಿಕೊಂಡು ವಿಜಯನನ್ನು ಕರೆದುಕೊಂಡು ಅಂತಃಪುರಕ್ಕೆ ಹೋದಳು. ವಿಜಯನು ರಹಸ್ಯ ವಾಗಿ ಸರೋಜನಿಯ ಮನೆಯನ್ನು ಸೇರಿ, ಆಕೆಗೆ ನಡೆದ ವೃತ್ತಾಂತ ವೆಲ್ಲವನ್ನೂ ತಿಳಿಸಿ, ಮಾರನೆಯ ದಿನ ಉಷಃಕಾಲಕ್ಕೆ ತಾನು ರಾಜ ಕುಮಾರಿಯೊಡನೆ ಪ್ರಯಾಣಮಾಡುವುದಾಗಿ ತಿಳಿಸಿದನು. ಅರ್ಧರಾತ್ರಿ ಯಾದಮೇಲೆ ಚಂದ್ರಲೇಖೆಯು ಮಾಧುರಿಯ ಸಹಾಯದಿಂದ ಪುರುಷ ವೇಷವನ್ನು ಧರಿಸಿ, ರತ್ನ ಬಾಣವನ್ನೂ ತನ್ನ ಯಕ್ಷಿಣೀ ವಸ್ತುಗಳನ್ನೂ ತೆಗೆದುಕೊಂಡು ಮೊದಲೇ ನಿಶ್ಚಿತವಾಗಿದ್ದಂತೆ ರಹಸ್ಯವಾಗಿ ಸರೋಜಿನಿಯ ಮನೆಗೆ ಬಂದು ನಿಂತಳು. ರಾಜಕುಮಾರನೂ, ಚಂದ್ರಲೇಖೆಯೂ ಸಹ ಸರೋಜಿನಿಯು ತಮಗೆ ಮಾಡಿದ ಸಹಾಯಕ್ಕಾಗಿ ಆಕೆಗೆ ಆಭರಣಗಳನ್ನೂ ಧನವನ್ನೂ ಬಹುಮಾನವಾಗಿ ಕೊಟ್ಟು ಮರುದಿನ ಉಷಃಕಾಲಕ್ಕೆ ಕಾಮ ಗಾಮಿಯಾದ ಅಶ್ವವನ್ನೇರಿ ಪ್ರಯಾಣಮಾಡಿದರು. ಮಾಧುರಿಯು ಅರಮನೆಗೆ ಬಂದು ಏನೂ ತಿಳಿಯದವಳಂತೆ ಇದ್ದಳು.
ಬೆಳಗಾದ ಮೇಲೆ ಅಗ್ನಿ ಶಿಖರಾಕ್ಷ ಸೇಂದ್ರನು ದೇವಿಯ ದರ್ಶನ ಮಾಡಿಕೊಂಡು ಸುವರ್ಣಾದಿಯಿಂದ ಹೊರಟು ಅರಮನೆಗೆ ಬಂದು, ಪದ್ದತಿಯಂತೆ ಪುತ್ರಿಯಾದ ಚಂದ್ರಲೇಖೆಯನ್ನು ಕೂಗಲು, ಆಕೆಯಿರಲಿಲ್ಲ. ಬಹಳ ಹೊತ್ತಾದರೂ ಬರಲಿಲ್ಲ ; ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಇಷ್ಟು ಹೊತ್ತಿಗೆ ವಿಜಯನು ಹಿಂದಿನ ದಿನ ನಡೆಯಿಸಿದ ರಾಕ್ಷಸ ವಧೆಯ ಅನರ್ಥವೂ ಸಹ ಅಗ್ನಿ ಶಿಖನಿಗೆ ತಿಳಿಯಬಂತು. ಇದೆಲ್ಲವನ್ನೂ ಕೇಳಿದಕೂಡಲೇ ಪ್ರಳಯ
-------------------------------------------------------------
ಕಾಲ ರುದ್ರನಂತೆ ಕೆರಳಿ, ಅಗ್ನಿ ಶಿಖನು ಅಗ್ನಿ ನೇತ್ರನಾಗಿ ದಿಕ್ತಟಗಳೊಡೆಯು ವಂತೆ ಆರ್ಭಟಿಸಿ, ಆ ನೀಚನಾದ ವಿಜಯನೇ ತನ್ನ ಪುತ್ರಿಯನ್ನೂ ಅಪಹರಿಸಿ ಕೊಂಡು ಹೋಗಿರುವನೆಂದು ನಿರ್ಧರಿಸಿ, ದ್ರೋಹಿಗಳಾದ ಅವರಿಬ್ಬರನ್ನೂ ಎಲ್ಲಿದ್ದರೂ ಹುಡುಕಿ ಹಿಡಿದು ತಂದು ತಕ್ಕ ಶಿಕ್ಷೆಯನ್ನು ಮಾಡಲೇ ಮಾಡುವೆನೆಂದು ಶಪಥಮಾಡಿಕೊಂಡು ದಿಕ್ಕು ದಿಕ್ಕುಗಳಿಗೂ ಭಟರನ್ನು ಕಳುಹಿಸಿ, ತಾನೂ ಸಹ ಅಶ್ವಾರೂಢನಾಗಿ ಉತ್ತರದಿಕ್ಕನ್ನು ಕುರಿತು ಆ ವಿಜಯನ ತಂದೆಯ ರಾಜಧಾನಿಯಾದ ವೇದವತೀ ನಗರದ ಮಾರ್ಗವನ್ನು ಹಿಡಿದು ಹೊರಟನು.
ವಿಜಯನೂ ಚಂದ್ರಲೇಖೆಯೂ ವೇಗವಾಗಿ ಪ್ರಯಾಣಮಾಡುತ್ತ ದಾಹವಾಗಲು, ಮಾರ್ಗದಲ್ಲಿದ್ದ ಒಂದು ಸರೋವರದಲ್ಲಿ ಜಲಪಾನಮಾಡು ಇದಕ್ಕಾಗಿ ಇಳಿದು ಕುದುರೆಯನ್ನೊಂದು ಮರಕ್ಕೆ ಕಟ್ಟಿ ನೀರಿನ ಬಳಿಗೆ ಹೋಗುತ್ತಿದ್ದರು. ಅಷ್ಟರಲ್ಲಿ, ದೂರದಿಂದ ಕುದುರೆಯ ಹೆಜ್ಜೆಗಳ ಸಪ್ಪಳವು ಕೇಳಿ ಬಂದಿತು. ಪ್ರತಿಕ್ಷಣವೂ, ಅಗ್ನಿ ಶಿಖನ ಕಡೆಯವರು ತಮ್ಮನ್ನು ಹುಡುಕಿಕೊಂಡು ಬರುವರೆಂಬ ಭಯದಿಂದಿದ್ದ ವಿಜಯನಿಗೆ ದೂರದಲ್ಲಿ ಅಶ್ವಾರೂಢನಾಗಿ ಬರುತ್ತಿದ್ದ ಒಂದು ಘೋರಾಕಾರವು ಗೋಚರವಾ ಯಿತು. ಚಂದ್ರಲೇಖೆಗೆ ಈ ವಿಷಯವನ್ನು ಹೇಳಲು ಅವಳು ದೂರದಿಂದಲೇ, ಅಗ್ನಿ ಶಿಖನು ಬರುತ್ತಿರುವನೆಂದು ಗುರುತಿಸಿದಳು, ವಿಜಯನು ಭಯದಿಂದ ಮಿಡುಕುತ್ತ ನಿಂತನು. ಚತುರೆಯಾದ ಚಂದ್ರಲೇಖೆಯು ಹೆದರಬೇಡ ವೆಂದು ಅವನಿಗೆ ಧೈರ್ಯವನ್ನು ಹೇಳಿ, ತನ್ನ ಮಂತ್ರಶಕ್ತಿಯಿಂದ ಕುದುರೆ ಯನ್ನು ಒಂದು ಬೇಟೆಯ ನಾಯಿಯನ್ನಾಗಿ ಮಾಡಿ ವಿಜಯನನ್ನೊಬ್ಬ ಕಾಡುಬೇಡರವನಂತೆ ಮಾರ್ಪಡಿಸಿ, ತಾನೊಬ್ಬ ಬೇಡಿತಿಯಾಗಿ ನಿಂತು ಅವನೊಡನೆ ಮಾತನಾಡುತ್ತಿದ್ದಳು. ಈವರೆಗೆ ಅಗ್ನಿ ಶಿಖನು ಸವಿಾಪಕ್ಕೆ ಬಂದು ಇವರನ್ನು ನೋಡಿ ನಿಜಾಂಶವನ್ನರಿಯದೆ, " ಎಲೈ ನೀವು ಯಾರು ? ಇಲ್ಲಿ ಏನು ಮಾಡುತ್ತಿರುವಿರಿ ? ' ಎಂದು ಪ್ರಶ್ನೆ ಮಾಡಿದನು. ತಮ್ಮ
--------------------------------------------------------------
ನಿಜಾಂಶವು ಎಲ್ಲಿ ಬಯಲಾಗುವುದೋ ಎಂದು ವಿಜಯನ ಎದೆಯು ಡವಡವನೆ ಬಡಿದುಕೊಳ್ಳುತ್ತಿತ್ತು. ಆಗ ಮಾಯಾ ಕಿರಾತಿಯು ರಾಕ್ಷಸ ನನ್ನು ನೋಡಿ ಧೈರ್ಯದಿಂದ, " ಸ್ವಾಮಿ, ನಾವು ಅಲ್ಲಿ ಕಾಣುವ ಬೆಟ್ಟದ ಪ್ರಾಂತದಲ್ಲಿ ವಾಸಿಸುವ ಕಿರಾತರು ; ಸೌದೆಯನ್ನಾ ರಿಸಿಕೊಂಡು ಹೋಗಲು ಇಲ್ಲಿಗೆ ಬಂದೆವು ತಾವೂ ಯಾರು ? '' ಎಂದಳು. ಆಗ ಅಗ್ನಿ ಶಿಖನು ಕುದುರೆಯನ್ನಿಳಿದು, “ ನನ್ನ ವಿಚಾರವು ಹಾಗಿರಲಿ, ಈ ಕಡೆ ಯಾವ ನಾದರೂ ರಾಜಕುಮಾರನು ಒಬ್ಬ ಕನೈಯೊಡನೆ ಹೋದುದನ್ನು ನೀವು ನೋಡಿದಿರಾ ? ಅದನ್ನು ತಿಳಿಸಿ ” ಎಂದು ಕೇಳಿದನು. ಅದಕ್ಕೆ ಆ ಕಿರಾತಿಯು, “ ಅಹುದು ಸ್ವಾಮಿಾ, ಈಗ ಸ್ವಲ್ಪ ಹೊತ್ತಿನ ಮುಂಚೆ ಒಬ್ಬ ಸುಂದರನಾದ ತರುಣನು ಒಂದು ಹೆಣ್ಣನ್ನು ಕುದುರೆಯ ಮೇಲೆ ಕುಳ್ಳಿರಿಸಿ ಕೊಂಡು, ತಾವು ಬಂದ ಮಾರ್ಗದಿಂದಲೇ ಬಂದು ಇದೇ ಸರೋವರದಲ್ಲಿ ಜಲಪಾನಮಾಡಿ ಈ ಕಡೆ ಪೂರ್ವದಿಕ್ಕಿಗೆ ಪ್ರಯಾಣಮಾಡಿದರು. ನಾವು ದೂರದಲ್ಲಿದ್ದುದರಿಂದ ಅವರೊಡನೆ ಮಾತನಾಡಲು ಸಂಧಿಸಲಿಲ್ಲ ” ಎಂದಳು. ಆಗ ಅವನೇ ವಿಜಯನು, ಅವಳೇ ಚಂದ್ರಲೇಖೆಯು, ಎಂದು ಅಗ್ನಿಶಿಖನು ಮನಸ್ಸಿನಲ್ಲಿ ನಿರ್ಧರಮಾಡಿಕೊಂಡು ಆ ಕಿರಾತಿಯು ತೋರಿಸಿದ ಅರಣ್ಯ ಪ್ರಾಂತವನ್ನು ಕುರಿತು ಆತುರದಿಂದ ಪ್ರಯಾಣಮಾಡಿದನು.
ಸದ್ಯಕ್ಕೆ ವಿಪತ್ತಿನಿಂದ ಪಾರಾದೆವೆಂದು ಸಂತೋಷಪಡುತ್ತಲೂ ತಾವು ಅಗ್ನಿ ಶಿಖನಿಗೆ ತಕ್ಕ ಮೋಸಮಾಡಿದೆವೆಂದು ನಗುತ್ತಲೂ ಅವರಿಬ್ಬರೂ, ಆ ರಾಕ್ಷಸನು ಹೋದ ಮಾರ್ಗವನ್ನೇ ನೋಡುತ್ತಿದ್ದು ಅವನು ಕಣ್ಮರೆಯಾದಮೇಲೆ ತಮ್ಮ ನಿಜರೂಪಗಳನ್ನು ಧರಿಸಿ, ನಾಯಿಯನ್ನು ಮತ್ತೆ ಕುದುರೆಯನ್ನಾಗಿ ಮಾಡಿ, ಅದನ್ನೇರಿ ವೇದವತೀ ನಗರವನ್ನು ಕುರಿತು ಪ್ರಯಾಣಮಾಡಿದರು.
---------------------------------------------------------------------
ಅಷ್ಟಮ ತರಂಗ
ಈಕಡೆ ವೇದವತೀ ನಗರದಲ್ಲಿ ಕಾರಾಗೃಹದಲ್ಲಿದ್ದ ಶೀಲವತೀ ದೇವಿಗೆ ವಿಜಯನ ಪ್ರತಿಜ್ಞೆ ಮತ್ತು ಪ್ರಯಾಣಗಳ ವಿಚಾರವು ಕಾವಲು ಗಾರರಿಂದ ತಿಳಿದಿತ್ತು. ಆಕೆಯು, ತನ್ನ ಸುಕುಮಾರನು ಕ್ಷಿಪ್ರದಲ್ಲಿ ವಿಜಯಶಾಲಿಯಾಗಿ ಬಂದು ಸತ್ಯಧರ್ಮಗಳನ್ನು ಆರಿಸಿ ತನ್ನನ್ನು ಮೃತ್ಯುವಿ ನಿಂದಲೂ ನಿರ್ಬಂಧದಿಂದಲೂ ಬಿಡಿಸುವಂತೆ ಅನುಗ್ರಹಿಸಬೇಕೆಂದು ಸದಾ ಕಾಲದಲ್ಲಿಯೂ ತಮ್ಮ ಕುಲದೇವತೆಯಾದ ಅಂಬಿಕೆಯನ್ನು ಪ್ರಾರ್ಥಿ ಸುತ್ತ ವಿಜಯಕುಮಾರನ ಸುಖಾಗಮನವನ್ನೇ ಎದುರುನೋಡುತ್ತಿದ್ದಳು. ಸೌದಾಮಿನಿ ಕಾದಂಬಿನಿಯರಾದರೋ ವಿಜಯನು ಹಿಂದಿರುಗದೆ ಹಾಗೆಯೇ ಹಾಳಾಗಿ ಹೋಗಲೆಂದು ಪ್ರತಿಕ್ಷಣದಲ್ಲಿಯೂ ಅವನಿಗೆ ಅಮಂಗಳವನ್ನೆ ಬಯಸುತ್ತಿದ್ದರು. ಆದರೆ ತಾವು ಎಷ್ಟು ಉಪಾಯಗಳನ್ನು ಮಾಡಿ ರಾಜ ನೊಡನೆ ಎಷ್ಟು ಬೇಳುವೆಯ ಮಾತುಗಳನ್ನಾಡಿದರೂ ಕಾರಾಗೃಹದಲ್ಲಿ ಪುರುಷವೇಷದಿಂದಿದ್ದ ಸರಸಾಂಗಿಗೆ ಮಾತ್ರ ಬಂಧವಿಮೋಚನೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿನ ಕಾವಲುಗಾರರಿಗೆ ಲಂಚವನ್ನು ಕೊಟ್ಟು ತಾವು ಕಿಟಿಕಿಯಿಂದ ರಹಸ್ಯವಾಗಿ ಅವಳೊಡನೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಂಡು ಅವಳಿಗೆ ವಿಧವಿಧವಾದ ಫಲ ಭಕ್ತಾದಿಗಳನ್ನು ತಂದು ಕೊಡುತ್ತ ಧೈರ್ಯಗೆಡಬೇಡವೆಂದು ಪ್ರೋತ್ಸಾಹಿಸುತ್ತ ಇದ್ದುದಲ್ಲದೆ, ವಿಚಾರಣೆಯ ಸಮಯದಲ್ಲಿ ಶೀಲವತಿಯು ತನ್ನಲ್ಲಿ ಅನುರಕ್ತಳಾಗಿದ್ದ ಳೆಂದು ರಾಜನೊಡನೆ ಹೇಳುವಂತೆ ಪದೇ ಪದೇ ಒತ್ತಿ ಹೇಳಿ ಕೊಟ್ಟು ಬೆನ್ನು ತಟ್ಟುತ್ತಿದ್ದರು. ಆದರೆ ಅವಳನ್ನು ಮುಂದೆ ರಾಜದಂಡನೆಯಿಂದ ಪಾರುಮಾಡುವುದಕ್ಕೆ ತಕ್ಕ ಉಪಾಯವೇ ಇವರಿಗೆ ಹೊಳೆಯಲಿಲ್ಲ. ಏತ ಕೆಂದರೆ, ಕಾರಾಗೃಹದ ಬೀಗದ ಕೈಗಳನ್ನು ರಾಜನು ಮಂತ್ರಿಯಾದ
----------------------------------------------------------
ಧುರಂಧರನ ವಶಕ್ಕೆ ಕೊಟ್ಟು ಆತನ ಮೂಲಕವೇ ಅಪರಾಧಿಗಳಿಗೆ ಆಹಾರಾದಿಗಳನ್ನು ಕೊಡಿಸುವಂತೆ ಏರ್ಪಡಿಸಿದ್ದು, ಇದರಿಂದ ಅವ ಳನ್ನು ಬಿಡುಗಡೆ ಮಾಡಲು ಈ ಠಕ್ಕು ಮಾರಿಯರು ಮಾಡಿದ ತಂತ್ರ ಗಳೆಲ್ಲವೂ ವ್ಯರ್ಥವಾದವು.
ಭಾನುತೇಜ ರಾಜಹಂಸರು ಮಾತ್ರ ವಿಜಯನಿಗೆ ರತ್ನ ಬಾಣವು ದೊರೆಯುವುದು ಅಸಾಧ್ಯವೆಂತಲೂ, ಇನ್ನು ರಾಜ್ಯ ಪಟ್ಟಾಭಿಷೇಕವೂ ವಿದ್ಯಾಧರಿಯ ಪಾಣಿಗ್ರಹಣವೂ ತಮಗೇ ಸ್ಥಿರವಾಯಿತೆಂತಲೂ ಸಂತೋಷ ಪಡುತ್ತಿದ್ದರು; ಆದರೆ ಇವರಲ್ಲಿ ಪ್ರತಿಯೊಬ್ಬನೂ ಮತ್ತೊಬ್ಬನಿಗೆ ಮೋಸ ಮಾಡಿ ತಾನೇ ವಿದ್ಯಾಧರಿಯ ಮನಸ್ಸನ್ನು ತನ್ನಂತೆ ತಿರುಗಿಸಿಕೊಂಡು ಅವಳನ್ನು ವಿವಾಹ ಮಾಡಿಕೊಳ್ಳಬೇಕೆಂದು ಆಂತರ್ಯದಲ್ಲಿ ವಿಧವಿಧವಾದ ಉಪಾಯಗಳನ್ನಾ ಲೋಚಿಸುತ್ತಿದ್ದರು. ಮತ್ತೆ ಆಗಾಗ ರಹಸ್ಯವಾಗಿ ವಿದ್ಯಾಧರಿಯನ್ನು ಕೆಣಕಿ ಅವಮಾನಪಟ್ಟು ಬರುತ್ತಿದ್ದರು.
ವಿದ್ಯಾಧರಿಯ ಮನಸ್ಸು ಮಾತ್ರ ವಿಜಯನಲ್ಲಿಯೇ ಲೀನವಾಗಿ, ಅವಳು ಸದಾ ವಿಜಯನ ವಿಜಯವನ್ನೇ ಬಯಸಿ ಅವನ ಸುಖಾಗಮನ ಕಾಗಿ ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್ನಾ ರಾಧಿಸುತ್ತಿದ್ದಳು. ಇವಳ ತಂದೆಯಾದ ಧುರಂಧರನಿಗೂ, ವಿಜಯನು ಮಹಾಪರಾಕ್ರಮಿಯೆಂಬ ನಂಬಿಕೆಯಿದ್ದುದರಿಂದಲೂ, ಅವನು ಯತ್ನಿಸಿದ ಕಾರ್ಯಗಳಲ್ಲಿ ತಪ್ಪದೆ ಜಯ ವನ್ನು ಪಡೆದುಬರುವನೆಂದು ದೈವಜ್ಞರು ಅವನ ಜಾತಕರೀತಿಯನ್ನು ನೋಡಿ ಹೇಳಿದ್ದುದರಿಂದಲೂ, ಅವನು ಅವಧಿಯೊಳಗಾಗಿ ಕಾರ್ಯವನ್ನು ಸಾಧಿಸಿ ಕೊಂಡು ಬಂದೇ ಬರುವನೆಂಬ ನಂಬಿಕೆಯು ಬಹಳವಾಗಿತ್ತು,
ಚಂದ್ರಸೇನರಾಜನಿಗಾದರೋ, ವಿವೇಕಿಯೂ ಯುಕ್ತಿ ಚಾತುರ್ಯ ಗಳಿಂದೊಪ್ಪುವ ಪರಾಕ್ರಮಶಾಲಿಯೂ ಆದ ವಿಜಯನ ನಿಜಸ್ಥಿತಿಯು ಮನಸ್ಸಿಗೆ ಬಾರದೆ ಇದ್ದುದರಿಂದಲೂ, ಶೀಲವತಿಯು ದುರ್ಮಾರ್ಗ ಗಾಮಿನಿಯಾದಳೆಂಬ ವ್ಯಥೆಯಿಂದಲೂ ಸಹ ಆತನು ವಿಜಯನ ಆಗಮನದ
------------------------------------------------------------------------------
ವಿಷಯದಲ್ಲಿ ಉದಾಸೀನನಾಗಿಯೇ ಇದ್ದನು. ಹದಿನಾಲ್ಕು ದಿನಗಳನಂತರ ಶೀಲವತಿಯ ಶಿರಚ್ಛೇದನವನ್ನು ಮಾಡಿಸಿ, ಅಂತಃಪುರ ಪ್ರವೇಶ ಮಾಡಿದ್ದ ಅಪರಾಧಿಯಾದ ಪುರುಷನ ವಿಚಾರಣೆಯನ್ನು ನಡೆಯಿಸಿ ಅವನಿಗೂ ತಕ್ಕ ಶಿಕ್ಷೆಯನ್ನು ವಿಧಿಸುವಾತುರದಲ್ಲಿಯೇ ಇದ್ದನು.
ಈ ವರೆಗೆ ಹದಿಮೂರು ದಿನಗಳು ಕಳೆದವು. ವಿಜಯನು ಇನ್ನು ಜಯಶಾಲಿಯಾಗಿ ಬರುವುದಿಲ್ಲವೆಂಬುದೇ ಎಲ್ಲರ ಮನಸ್ಸಿನಲ್ಲಿಯೂ ನಿರ್ಧರವಾಯಿತು. ಸ್ವಕಾರ ಧುರಂಧರೆಯರಾದ ಕಾದಂಬಿನಿ ಸೌದಾಮಿನಿ ಯರು ರಾಜನನ್ನು ಪ್ರೋತ್ಸಾಹಿಸಿ, ಭಾನುತೇಜನಿಗೆ ರಾಜ್ಯ ಪಟ್ಟಾಧಿಕಾರ ವನ್ನು ಕೊಡಲು ನಿರ್ಧರಿಸುವಂತೆಯೂ, ರಾಜಹಂಸನಿಗೆ ವಿದ್ಯಾಧರಿಯನ್ನು ತಂದು ಕ್ಷಿಪ್ರದಲ್ಲಿ ವಿವಾಹಮಾಡುವಂತೆ ಕೇಳಿಕೊಂಡರು. ಅವಧಿ ಯೊಳಗೆ ವಿಜಯನು ಬಾರದಿದ್ದರೆ ಅದರಂತೆಯೇ ಮಾಡುವೆನೆಂದು ರಾಜನು ವಾಗ್ದಾನ ಮಾಡಿದನು. ಮಾರನೆಯ ದಿನವೇ ಮಂತ್ರಿಯೊಡನೆ ಮಾತ ನಾಡಿ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡಲು ಆತನನ್ನು ಒಪ್ಪಿಸಿ ಲಗ್ನ ನಿಶ್ಚಯಮಾಡಬೇಕೆಂದು ನಿರ್ಧರಮಾಡಿಕೊಂಡರು. ಮಾರನೆಯ ದಿನ ಮಧ್ಯಾಹ್ನ ಹನ್ನೆರಡು ಘಂಟೆಯಾಯಿತು. ವಿಜಯನು ಬರಲಿಲ್ಲ. ಅವನು ಎಲ್ಲಿಯೋ ಕಾಡುಮೃಗಗಳ ಪಾಲಾದನೋ ಅಥವಾ ಕಾರ್ಯ ವನ್ನು ಸಾಧಿಸಲಾರದೆ ಅವಮಾನದಿಂದ ಮತ್ತೆ ಹಿಂದಿರುಗಿದರೆ ಅನರ್ಥ ವಾಗುವುದೆಂದು ದೇಶಭ್ರಷ್ಟನಾಗಿ ಹೋದನೋ, ಎಂದು ತರ್ಕಿಸಿ ರಾಜನೂ ಸೌದಾಮಿನಿ ಕಾದಂಬಿನಿಯರೂ ಸಹ ಭೋಜನವಾದನಂತರ ಮಂತ್ರಿಯಾದ ಧುರಂಧರನನ್ನು ಕರೆಯಿಸಿ ವಿವಾಹ ವಿಚಾರವಾಗಿ ಪ್ರಸ್ತಾಪಿಸಿದರು. ಮತಿವಂತನಾದ ಧುರಂಧರನು, ರಾಜನನ್ನು ನೋಡಿ “ ರಾಜೇಂದ್ರಾ, ಈ ಸೇವಕನ ವಿಜ್ಞಾಪನೆಯನ್ನು ಶಾಂತಮನಸ್ಕರಾಗಿ, ಲಾಲಿಸಬೇಕು, ವಿಜಯಕುಮಾರನಿಗೆ ನಿಶ್ಚಿತಳಾಗಿರುವ ಕನೈಯನ್ನು, ವಿಜಯನು ಪ್ರಾಣದಿಂದಿರುವವರೆಗೂ ಮತ್ತೊಬ್ಬರಿಗೆ ಕೊಡಲು ನಿಶ್ಚಯಿ
ಅಷ್ಟಮ ತರಂಗ
ಸುವುದು ಉಚಿತವೆಂದು ನನಗೆ ತೋರುವುದಿಲ್ಲ. ಅಲ್ಲದೆ ಆತನು ಹಿಂದಿರುಗಿ ಬರಲು ಇನ್ನೂ ಈ ದಿನ ಸೂರಾಸ್ತಮಯ ಸಮಯದವರೆಗೂ ಅವಧಿ ಯಿರುವುದು. ಆತನು ಜಯಶಾಲಿಯಾಗಿ ಬಂದರೆ ಬೇರೆ ಆಲೋಚನೆ ಯನ್ನೇ ಮಾಡಬೇಕಾಗುವುದಿಲ್ಲ. ಬಾರದಿದ್ದರೆ, ಅಥವಾ ಕಾವ್ಯವನ್ನು ಸಾಧಿಸದೆ ಬಂದರೆ, ನಾಳಿನ ದಿನ ಕಾರಾಗೃಹದಲ್ಲಿರುವ ರಾಜ್ಜಿಯವರ ಅಪರಾಧ ವಿಚಾರಣೆಯು ನಡೆಯಬೇಕಾಗುವುದು. ಅವರ ಪರಿಣಾಮವ ಮಂಗಳಕರವಾಗುವದೋ ಅಥವಾ ಅನ್ಯಥಾ ಆಗುವುದೋ ತಿಳಿಯದು ; ಇಂತಹ ಸಂಧಿಕಾಲದಲ್ಲಿ ವಿದ್ಯಾಧರಿಯ ವಿವಾಹ ನಿಶ್ಚಯವು ಸಮ ಯೋಚಿತವೆಂದು ನನ್ನ ಮನಸ್ಸಿಗೆ ಕಾಣುವುದಿಲ್ಲ. ಇದು ಕೇವಲ ಸಲಿಗೆ ಯಿಂದಲೂ ಸ್ವಾಮಿಭಕ್ತಿಯಿಂದಲೂ ನಾನು ವಿಜ್ಞಾಪನೆ ಮಾಡಿಕೊಂಡಿ ರುವ ವಿಚಾರವು ; ಚಿತ್ತದಲ್ಲಿ ಸಾವಧಾನವಾಗಿ ಆಲೋಚಿಸಿ ಹೇಗೆ ಅಪ್ಪಣೆ ಮಾಡಿದರೆ ಅದರಂತೆ ನಡೆಯಿಸಲು ಸಿದ್ಧನಾಗಿರುವೆನು” ಎಂದನು. ಚಂದ್ರಸೇನರಾಜನಿಗೆ ಮಂತ್ರಿಯ ಮಾತು ವಿವೇಕಯುಕ್ತವಾದುದೆಂದು ತೋರಿತು. ಆದರೂ ಆ ಮಾಯಾಂಗನೆಯರಿಬ್ಬರೂ ತಮ್ಮ ಇಷ್ಟಾರ್ಥ ವನ್ನು ನೆರವೇರಿಸಿಕೊಳ್ಳಬೇಕೆಂಬಾತುರದಿಂದ, ರಾಜನನ್ನು ಕುರಿತು * ಪ್ರಿಯಾ, ನಾಳಿನ ವಿಚಾರವು ಮಂಗಳಕರವೋ ಅಮಂಗಳಕರವೋ ನಮಗೆ ಯಾರಿಗೂ ತಿಳಿಯದು. ಆದರೆ ಪ್ರಕೃತ ಸಂಭವದಲ್ಲಿ ವಿಜಯನು ನಾಳೆ ಬೆಳಗಾಗುವುದರೊಳಗಾಗಿ ರತ್ನ ಬಾಣವನ್ನು ತರುವುದು ಅಸಾ ಧ್ಯವೇ ಸರಿ. ಆದುದರಿಂದ ಅವನು ಬಾರದಿದ್ದರೆ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡುವಂತೆ ಮಂತ್ರಿಯನ್ನೊ ಪ್ಪಿಸಲೇ ಬೇಕು ; ಏತಕ್ಕೆಂದರೆ, ಅನಂತರ ಆತನ ಮನಸ್ಸು ಬೇರೆಯಾದೀತು. ಆದುದರಿಂದ ವಿವಾಹವು ಇನ್ನು ಎಷ್ಟು ದಿನಗಳಿಗಾದರೂ ನಡೆಯಲಿ ; ಕನ್ಯಾದಾನದ ವಾಗ್ದಾನವು ಆತನಿಂದ ನಮಗೆ ಲಭಿಸಿದರೆ ಸಾಕು” ಎಂದು ಹಠ ಹಿಡಿದರು. ರಾಜನು ಕಿರಿಯ ಹೆಂಡಿರಮಾತಿಗೆ ಕಿವಿಜೋಲು ಹಾಕಿದನು. ಸ್ವಲ್ಪ ಹೊತ್ತು
-----------------------------------------------------
ಚರ್ಚೆಯು ನಡೆದಮೇಲೆ ಮಂತ್ರಿಯಾದ ಧುರಂಧರನು, “ ವಿಜಯನು ಬಾರದೆ ಹೋದರೆ ವಿದ್ಯಾಧರಿಯನ್ನು ರಾಜಹಂಸನಿಗೆ ಕೊಡುವೆನು” ಎಂದು ಒಪ್ಪಿದನು. ವಿಜಯನು ಬಾರದಿದ್ದರೆ ಭಾನುತೇಜನಿಗೆ ಯುವ ರಾಜಪಟ್ಟವನ್ನು ಕಟ್ಟಲು ರಾಜನ ವಾಗ್ದಾನವು ಮೊದಲೇ ಆಗಿರುವುದಷ್ಟೆ ! ಆದುದರಿಂದ ಆ ಮೋಸಗಾತಿಯರಿಬ್ಬರೂ ಸಂತೋಷದಿಂದ ನಲಿದು ತಮ್ಮ ಕುಮಾರರಿಬ್ಬರಿಗೂ ಈ ವಿಚಾರಗಳನ್ನು ತಿಳಿಸಿ, ಅವರ ಮನಸ್ಸು ಗಳನ್ನು ಸಂತೋಷಪಡಿಸಿ ತಾವೂ ಆನಂದಮಗ್ನರಾದರು.
ಈ ವಿಚಾರವೆಲ್ಲವೂ ವಿದ್ಯಾಧರಿಗೆ ತಂದೆಯ ಮುಖದಿಂದ ತಿಳಿದು ಆಕೆಯ ಮನಸ್ಸು ಬಹಳ ಚಿಂತೆಗೀಡಾಯಿತು. ಕಡೆಗೆ ವಿಜಯನು ಬಾರ ದಿದ್ದರೆ ವಿವಾಹವಿಲ್ಲದೆಯಾದರೂ ಕಾಲವನ್ನು ಕಳೆಯುವೆನಲ್ಲದೆ ತಾನು ರಾಜಹಂಸನನ್ನು ವರಿಸಲೊಲ್ಲೆನೆಂದು ಆಕೆಯ ತಂದೆಯ ಪಾದಕ್ಕೆರಗಿ ಬಿನ್ನವಿಸಿಕೊಂಡಳು. ಧುರಂಧರನು ದಿಕ್ಕು ತೋರದೆ ಚಿಂತಾಮಗ್ನ ನಾದನು,
ಇಷ್ಟು ಹೊತ್ತಿಗೆ ಮಧ್ಯಾಹ್ನ ಮೂರು ಘಂಟೆಯಾಯಿತು. ರಾಜ ಸೇವಕರು ಬಂದು ರಾಜಾಜ್ಞೆಯಾಯಿತೆಂದು ಮಂತ್ರಿಗೆ ತಿಳಿಸಿದರು. ಆ ಕೂಡಲೇ ಮತ್ತೆ ಆತನು ಅರಮನೆಗೆ ಬಂದನು. ಆವರೆಗೆ ರಾಜನು, * ಈ ದಿನ ಸಂಧ್ಯಾಕಾಲಕ್ಕೆ ವಿಜಯನ ಅವಧಿಯು ಪೂರಯಿಸುವ ಕಾರಣ ಅಪರಾಧಿನಿಯಾದ ಶೀಲವತಿಯ ವಿಚಾರಣೆಯನ್ನು ನಡೆಯಿಸಿ ಆಕೆಯ ಶಿರಸ್ಸನ್ನು ಛೇದಿಸಲಾಜ್ಞೆ ಮಾಡಬೇಕು' ಎಂದು ನಿರ್ಧರಿಸಿ ಅರಮನೆಯ ಒಳಭಾಗದ ಅಂಗಳದಲ್ಲಿ ಪತ್ನಿ ಪರಿವಾರಯುಕ್ತನಾಗಿ ಕುಳಿ ತಿದ್ದನು, ಮಂತ್ರಿಯು ಬಂದೊಡನೆಯೇ ಅಪರಾಧಿನಿಯಾದ ಶೀಲ ವತಿಯನ್ನು ವಿಚಾರಣೆಗಾಗಿ ಬರಮಾಡಬೇಕೆಂದನು. ಅದರಂತೆ ಧುರಂಧ ರನು ತಾನೇ ಕಾರಾಗೃಹದ ಬಳಿಗೆ ಹೋಗಿ ಮೊದಲನೆಯ ಅಪರಾಧಿನಿ ಯಾದ ಶೀಲವತಿಯನ್ನು ರಾಜಸೇವಕರ ಪಹರೆಯಿಂದ ಕರೆದುಕೊಂಡು
---------------------------------------------------------------------------------
ಬಂದು ರಾಜನ ಮುಂದೆ ನಿಲ್ಲಿಸಿದನು. ಮಹಾಪತಿವ್ರತೆಯಾದ ಶೀಲವತೀ ದೇವಿಯು ಕಾರಾಗೃಹದಲ್ಲಿ ಅವಿಚ್ಛಿನ್ನವಾದ ದುಃಖದಿಂದ ಕೃಶಳಾಗಿ ಜೀವಚ್ಛವದಂತೆ ನಿಂತು ಕಂಬನಿಗಳ ಮಳೆಯನ್ನೇ ಸುರಿಸಿದಳು. ಇದನ್ನು ನೋಡಿ ಸೌದಾಮಿನಿ ಕಾದಂಬಿನಿಯರು ಸಂತೋಷದಿಂದ ಉಬ್ಬಿ ಒಬ್ಬರನ್ನೊಬ್ಬರು ನೋಡಿದರು. ರಾಜನಿಗೆ ಮನಸ್ಸು ಕರಗಿದರೂ ಅಸ ಕೀರ್ತಿ ಬಂತೆಂಬ ಕ್ರೋಧವು ಅದನ್ನು ಕಠಿನವಾಗಿ ಮಾಡುತ್ತಿತ್ತು, ಆದುದರಿಂದ ಆಡಿದ ಮಾತನ್ನು ನಡೆಯಿಸಿ ರಾಜಧರ್ಮವನ್ನು ಪಾಲಿ ಸಲೇಬೇಕೆಂದು ಶೀಲವತಿಯನ್ನು ನೋಡಿ, “ ಎ, ದುಶೀಲವತೀ ! ನಿನ್ನೊಡನೆ ಮಾತನಾಡುವ ಇಷ್ಟವು ನನಗಿಲ್ಲದಿದ್ದರೂ ನಿನ್ನ ಮಗನು ಬಾಣಪ್ರಯೋಗ ಪರೀಕ್ಷೆಯಲ್ಲಿ ಗೆದ್ದವನಾದಕಾರಣ ಅವನಿಗೆ ಕೊಟ್ಟ ವಾಗ್ದಾನವನ್ನು ಳಿಸಲು ನಿನ್ನ ವಿಚಾರಣೆಯನ್ನು ಕ್ರಮವಾಗಿ ನಡೆಯಿಸಿ ಅನಂತರ ನಿನಗೆ ಶಿಕ್ಷೆಯನ್ನು ವಿಧಿಸಬೇಕೆಂದಿದ್ದನು. ಆದರೆ ಆ ದ್ರೋಹಿಯು ನನ್ನ ರತ್ನ ಬಾಣವನ್ನು ಕದ್ದು, ಅದನ್ನು ಕಳೆದು ಮತ್ತೆ ತರುವೆನೆಂದು ಹೋದವನು ಅವಧಿಯಲ್ಲಿ ಹಿಂದಿರುಗಲಿಲ್ಲವಾದಕಾರಣ ಅವನಿಗೆ ನಾನು ಹೇಳಿದ್ದಂತೆ ನಿನ್ನ ನ್ನು ಈಗ ಮರಣದಂಡನೆಗೆ ಗುರಿಮಾಡಿರುವೆನು. ಅವ ನಿಂದ ನಿನ್ನ ಆಯುಸ್ಸು ಹದಿನಾಲ್ಕು ದಿನಗಳು ಹೆಚ್ಚಿತ್ತು. ಇನ್ನು ಮೃತ್ಯುವಿಗೆ ತುತ್ತಾಗು ಹೊರಡು” ಎಂದು ಹೇಳಿ ಬಳಿಯಲ್ಲಿದ್ದ ವಧಕರ
ವಶಕ್ಕೆ ರಾಣಿಯನ್ನು ಒಪ್ಪಿಸಿದನು.
ಪ್ರತ್ಯಕ್ಷ ಮೃತ್ಯುಗಳಂತಿದ್ದ ಆ ವಧಕರು ಘೋರಾಯುಧಗಳನ್ನು ಧರಿಸಿ ಆಕೆಯ ಬಳಿಗೆ ಬಂದು ಹೊರಡುವಂತೆ ಗರ್ಜಿಸಿದರು. ಪತಿಯ ಕಡೆಯ ದರ್ಶನವನ್ನು ಮಾಡಿ ಬರುವೆನೆಂದು ಅವರನ್ನು ಕೇಳಿಕೊಂಡು ಶೀಲವತಿಯು ದೀನದೃಷ್ಟಿಗಳಿಂದ ರಾಜನನ್ನು ನೋಡಿ, “ ಪ್ರಿಯಾ ಹೋಗಿಬರುವೆನು” ಎನ್ನುವಷ್ಟರಲ್ಲಿ ಸುತ್ತಲಿದ್ದ ಜನಜಾಲವೆಲ್ಲವೂ *ಗೊಳ್ಳೆಂದು ಅತ್ತಿತು, ಆದರೂ ಮೃತ್ಯುವಿಗೆ ಕರುಣವೆಲ್ಲಿಯದು! ವಧಕರು
---------------------------------------------------------------------
ಗರ್ಜಿಸಿ ಆಕೆಯನ್ನು ಮುಂದೆ ಹೊರಡಲು ಬಲಾತ್ಕರಿಸಿದರು. ಶೀಲ ವತಿಯು ನಾಲ್ಕು ಹೆಜ್ಜೆಗಳನ್ನು ಮುಂದಿಟ್ಟಳು.
“ ನಿಲ್ಲಿ ನಿಲ್ಲಿ! ವಧಕರೇ ನಿಲ್ಲಿ!” ಎಂಬ ಗಟ್ಟಿಯಾದ ಶಬ್ದವೂ ಕುದುರೆಯ ಕಾಲುಗಳ ಸಪ್ಪಳವೂ ಆಕಸ್ಮಿಕವಾಗಿ ಕೇಳಿ ಬಂತು, ಎಲ್ಲರೂ ಭ್ರಾಂತರಾಗಿ ನೋಡುತ್ತಿರುವಷ್ಟರಲ್ಲಿ ದಿವ್ಯಾಶ್ಚದಮೇಲೆ ಸುಂದರೀ ಮಣಿಯೊಡನೆ ವೀರತರುಣನೊಬ್ಬನು ರತ್ನ ಬಾಣಹಸ್ತನಾಗಿ ಬಂದು ಅಶ್ವವನ್ನಿಳಿದು ರಾಜನಿಗೆ ನಮಸ್ಕರಿಸಿ, ಶರವನ್ನು ಆತನಿಗೆ ಒಪ್ಪಿಸಿದನು. ರಾಜನೂ ರಾಣಿಯರೂ ಮಂತ್ರಿಯೂ ಪರಮಾಶ್ಚರ್ಯದಿಂದ ದೃಷ್ಟಿಸಿ ನೋಡಲು, ಅವನು ವೀರಶಿಖಾಮಣಿಯಾದ ವಿಜಯಕುಮಾರನಾಗಿದ್ದನು. ರಾಜನಿಗೆ ಅತ್ಯಾನಂದವಾಯಿತು, ಇನ್ನು ಕಾರವು ಮಾರುವುದೆಂದು ವಿಜಯನು ತಂದೆಯನ್ನು ನೋಡಿ, “ ಜನಕಾ ! ನನ್ನ ಪ್ರತಿಜ್ಞೆಯನ್ನು ನಾನು ನಡೆಯಿಸಿರುವೆನು. ನೀನು ನಿನ್ನ ವಾಗ್ದಾನವನ್ನು ಪಾಲಿಸಬೇಕು. ನಮ್ಮ ತಾಯಿಯ ವಿಚಾರಣೆಯು ಈ ಸಭೆಯಲ್ಲಿ ನಡೆದನಂತರ ನ್ಯಾಯ ವರಿತು ಆಕೆಗೆ ಶಿಕ್ಷೆಯನ್ನು ವಿಧಿಸಬೇಕು' ಎಂದು ಮತ್ತೆ ನಮಸ್ಕರಿಸಿ ಬೇಡಿಕೊಂಡನು. ರಾಜನು ನಿಜವೆಂದು ಆ ಕೂಡಲೇ ವಧಕರ ವಶಕ್ಕೆ ಒಪ್ಪಿಸಿದ್ದ ಶೀಲವತೀ ದೇವಿಯನ್ನು ಮತ್ತೆ ತನ್ನ ಸನ್ನಿಧಿಗೆ ಕರೆತರುವಂತೆ ಆಜ್ಞೆಮಾಡಲು, ಮಂತ್ರಿಯು ಅದರಂತೆಯೇ ಆಕೆಯನ್ನು ಕರೆಯಿಸಿ ದನು. ವಿಜಯಕುಮಾರನ ಮುಖವನ್ನು ನೋಡಿದ ಶೀಲವತಿಗೆ, ಹೋಗಿದ್ದ ಪ್ರಾಣವು ಬಂದಂತಾಯಿತು. ಆಗ ತನ್ನ ಮನಸ್ಸಿನಲ್ಲಿ ಅಂಬಿಕೆಗೆ ಮತ್ತೆ ವಂದಿಸಿ ನಿಂತಳು. ರಾಜನು ವಿಜಯನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಶೀಲವತಿಯನ್ನು ನೋಡಿ, " ಎಲೌ ಶೀಲವತೀ, ನಿನ್ನ ಕುಮಾರನು ವಿಜಯ ಶಾಲಿಯಾಗಿ ಬಂದು ನಿನಗೆ ನನ್ನೊಡನೆ ಹೆಚ್ಚಾಗಿ ಮಾತನಾಡಲು ಅವ ಕಾಶವನ್ನು ಕೊಟ್ಟಿರುವನು. ಆದುದರಿಂದ ನಿನ್ನ ಅಪರಾಧವನ್ನು ಈಗ ವಿವರಿಸಿ ಹೇಳುವೆನು, ಅದಕ್ಕೆ ನೀನು ನಿನ್ನ ಆತ್ಮರಕ್ಷಣೆಗಾಗಿ ಏನಾ
ಅಚ್ಚದ ತರಂಗ ದರೂ ಹೇಳುವುದಿದ್ದರೆ ತಿಳಿಸು'' ಎಂದು ಹೇಳಿ ಭಗವದ್ಗೀತೆಯ ಶಸ್ತಕ ನನ್ನಾಕೆಯ ಕೈಗೆ ಕೊಡಿಸಿ, “ ಇದನ್ನು ತಲೆಯಮೇಲೆ ಹೊತ್ತು ಸತ್ಯ ವನ್ನು ಹೇಳು, ನೀನು ಪರಪುರುಷನ ಸ್ನೇಹಮಾಡಿದಂತೆ ನನ್ನ ಕಣ್ಣಿಗೆ ಗೋಚರವಾಗಿರುವುದು. ಇಂತಹ ಅಪರಾಧವನ್ನು ನೀನು ಏತಕ್ಕೆ ಮಾಡಿದೆ? ನಿನ್ನ ಪತಿಯಲ್ಲಿ ಯಾವ ದೋಷವನ್ನು ಕಂಡು ನೀನು ಅನ್ಯಪುರುಷನಲ್ಲಿ ಅನುರಕ್ತಳಾದೆ ? ತಿಳಿಸು” ಎಂದು ಪ್ರಶ್ನೆ ಮಾಡಿದನು. ಇದನ್ನು ಕೇಳಿದ ಕೂಡಲೇ ಶೀಲವತಿಯ ಕಿವಿಯಲ್ಲಿ ಕಾಯಿಸಿದ ಸೀಸವನ್ನು ಸುರಿದಂತಾ ಯಿತು, ಎದೆಗೆ ಶೂಲಗಳಿಂದ ತಿವಿದಂತಾಯಿತು. ಆಗ ಪ್ರಾಣಾಪಾಯ ಸಮಯವೆಂದು ಧೈರ್ಯವನ್ನು ತಂದುಕೊಂಡು, “ ಧರ್ಮಪ್ರಭೂ, ಈ ಗೀತಾ ಪುಸ್ತಕವನ್ನು ಶಿರದಲ್ಲಿ ಧರಿಸಿ ಸತ್ಯವಾಗಿ ವಿಜ್ಞಾಪಿಸಿಕೊಳ್ಳುತ್ತೇನೆ. ನಾನು ಈವರೆಗೆ ನನ್ನ ನ್ನು ಅಗ್ನಿ ಸಾಕ್ಷಿ ಕವಾಗಿ ಧರ್ಮಪತ್ನಿ ಯೆಂದು ಪಾಣಿಗ್ರಹಣಮಾಡಿದ ತಮ್ಮೊಬ್ಬರಲ್ಲಿ ಅಲ್ಲದೆ ಇತರ ಪುರುಷರಲ್ಲಿ ಸ್ವಲ್ಪ ದಲ್ಲಿಯಾದರೂ ಸ್ನೇಹವನ್ನು ಬಯಸಿದ್ದಲ್ಲಿ ಮಹಾರೌರವಾದಿ ಸರಕ ಭಾಗಿನಿಯಾಗುವೆನು. ಆದರೆ ತಾವು ಪ್ರತ್ಯಕ್ಷವಾಗಿ ನೋಡಿರುವ ನನ್ನ ಅಪರಾಧವೇನಾದರೂ ಇದ್ದರೆ ಅದನ್ನು ಸ್ಪುಟವಾಗಿ ಅಪ್ಪಣೆ ಕೊಡಿಸ ಬೇಕು, ನಾನು ಸ್ನೇಹಮಾಡಿರುವಂತೆ ತಮ್ಮ ಕಣ್ಣಿಗೆ ಗೋಚರವಾಗಿರುವ ಪುರುಷನನ್ನು ತಾವು ಸುಮ್ಮನೆ ಬಿಟ್ಟಿರಲಾರಿರಿ. ಆದುದರಿಂದ ಆ ಪುರುಷ ನನ್ನು ನನ್ನ ಎದುರಾಗಿ ಕರೆಯಿಸಿ ಅವನ ವಿಚಾರಣೆಯನ್ನು ನಡೆಯಿಸಬೇಕು. ಅನಂತರ ನನ್ನ ಅಪರಾಧವು ಸ್ಥಿರಪಟ್ಟರೆ ತಾವು ತಮ್ಮ ಇಚ್ಛಾನುಸಾರ ಶಿಕ್ಷೆಯನ್ನು ವಿಧಿಸಬಹುದು' ಎಂದಳು. ರಾಜನಿಗೆ ಈಕೆಯ ಮಾತಿನಿಂದ ಆಶ್ಚರ್ಯವಾಯಿತು. ಆ ಕೂಡಲೇ ಕಾರಾಗೃಹದಲ್ಲಿರುವ ಅಪರಾಧಿ ಯನ್ನು ಕರೆತರುವಂತೆ ಮಂತ್ರಿಗಾಜ್ಞೆ ಮಾಡಿದನು. ಈವರೆಗೆ ವಿಜಯ ನಾಗಮನದಿಂದ ಕಿರಿಯ ರಾಣಿಯರಿಬ್ಬರ ಹೊಟ್ಟೆಯಲ್ಲಿಯೂ ಬೆಂಕಿ ಬಿದ್ದಿತ್ತು. ಶೀಲವತಿಯನ್ನು ಮತ್ತೆ ಕರೆಯಿಸಿ ವಿಚಾರಣೆ ಮಾಡಿದ್ದರಿಂದ
-------------------------------------------------------------------
ಬೆಂಕಿಯು ಉರಿಯಹತ್ತಿತ್ತು. ಅಪರಾಧಿಯನ್ನು ಕರೆಯಿಸುವ ಆಜ್ಞೆಯಾ ದೊಡನೆಯೇ ಇಬ್ಬರಿಗೂ ಎದೆಗಳು ಝಲ್ಲೆಂದವು. ಆಗ ಮತ್ತೇನನ್ನು ಮಾಡಲೂ ಸಾಧ್ಯವಿಲ್ಲ. ಏನೇನಾಗುವುದೋ ನೋಡಿ ಅನುಭವಿಸಲೇ ಬೇಕು. ಅದರಿಂದ ಇಬ್ಬರೂ ಜೋಲುಮುಖಗಳನ್ನು ಹಾಕಿಕೊಂಡು ಮಿಡುಕುತ್ತ ಕುಳಿತರು. ಅಪರಾಧಿಯನ್ನು ಕರೆತಂದು ರಾಜಸಮುಖದಲ್ಲಿ ನಿಲ್ಲಿಸಿದರು. ರಾಜನು ಶೀಲವತಿಯನ್ನು ನೋಡಿ ಆ ಅಪರಾಧಿಪುರುಷನನ್ನು ತೋರಿಸಿ, “ ನೀನು ಈವರೆಗೆ ಈತನನ್ನು ನೋಡಿರುವೆಯೋ ಇಲ್ಲವೋ ? ” ಎಂದು ಪ್ರಶ್ನೆ ಮಾಡಿದನು. ಶೀಲವತಿಗೆ ಈ ಪುರುಷಾಕೃತಿಯನ್ನು ನೋಡಿದೊಡನೆಯೇ ಮುಖವು ಅನೇಕಾವೃತ್ತಿ ನೋಡಿದ್ದಂತೆಯೂ
ಪರಿಚಯವು ಇಲ್ಲದಂತೆಯೂ ಭ್ರಾಂತಿಯುಂಟಾಯಿತು. ಸ್ವಲ್ಪ ಆಲೋಚಿಸಿದ ಕೂಡಲೇ ಇವಳು ಪುರುಷವೇಷಧಾರಿಣಿಯಾದ ಸರಸಾಂಗಿಯೆಂಬುದು ಮನಸ್ಸಿಗೆ ದೃಢವಾಯಿತು. ಶೀಲವತಿ' ಓಹೋ ! ನಾನೀ ವರೆಗೆ ಈ ವ್ಯಕ್ತಿಯನ್ನ ನೇಕಾವೃತ್ತಿ
ನೋಡಿರುವೆನು.” ರಾಜ-ಎಲ್ಲಿ ನೋಡಿರುವೆ ? ಶೀಲವತಿ-ನಮ್ಮ ಅರಮನೆಯಲ್ಲಿ !
ರಾಜಅರಮನೆಯಲ್ಲಿಯೋ ಅಂತಃಪುರದಲ್ಲಿಯೇ ? ಶೀಲವತಿ_ಅಂತಃಪುರದಲ್ಲಿಯೂ ನೋಡಿರುವೆನು. ರಾಜ-ನಿಜ, ಅದನ್ನು ನಾನೇ ನೋಡಿರುವೆನು. ನಿಮ್ಮಿಬ್ಬರಿಗೂ ಸ್ನೇಹ
ವುಂಟಷ್ಟೆ ? ಶೀಲವತಿ_ಕೇವಲ ಸ್ನೇಹವೆಂದು ಹೇಳಲಾಗುವುದಿಲ್ಲ. ರಾಜ್‌ದಾಸೀ
ಭಾವವುಂಟು.
ಎಂದೊಡನೆಯೇ, ಶೀಲವತಿಯು ವ್ಯಕ್ತಿಯ ಗುರುತನ್ನು ಹಿಡಿದ ಳೆಂದು ಕಾದಂಬಿನಿ ಸೌದಾಮಿನಿಯರಿಗೆ ಎದೆಯೊಡೆಯಿತು. ರಾಜನಿಗೆ
ಮಾತ್ರ ನಿಜಾಂಶವು ತಿಳಿಯಲಿಲ್ಲ.
----------------------------------------------------------
ರಾಜ-ಎಲ್‌, ಹಾಗಾದರೆ ಈತನು ನಿನ್ನ ಬಳಿಯಲ್ಲಿ ಆಗಾಗ ನಿಸ್ಸಂಕೋಚ
ವಾಗಿ ವರ್ತಿಸುತ್ತಿದ್ದುದು ನಿಜವೋ ? ಶೀಲವತಿ-ನಿಜ ! ಸಂಕೋಚದಿಂದ ವರ್ತಿಸಲು ಕಾರಣವೇ ಇಲ್ಲವಲ್ಲಾ !
ರಾಜಏತಕ್ಕೆ ನಿನಗೆ ಪ್ರಿಯನಾದುದರಿಂದಲೇ ಅಲ್ಲವೇ ? ಶೀಲವತಿ ಅಲ್ಲ, ಸ್ತ್ರೀಯು ಸ್ತ್ರೀಗೆ ಪ್ರಿಯನಾಗಲು ಸಾಧ್ಯವೇ ? ರಾಜ-ಎಂದರೆ, ಇವನು ಪುರುಷನೆಂದು ನಿನ್ನ ಕಣ್ಣಿಗೆ ಕಾಣುವುದಿಲ್ಲವೋ
ಹೇಗೆ ? ಶೀಲವತಿ ತಮ್ಮ ಕಣ್ಣಿಗೆ ಪುರುಷನಾಗಿ ಕಾಣುತ್ತಿರಬಹುದು. ನನ್ನ ಕಣ್ಣಿಗೆ
ಮಾತ್ರ ನಮ್ಮ ಅರಮನೆಯ ಚೇಟಿಯಾದ ಸರಸಾಂಗಿಯು ಪುರುಷ ವೇಷಧಾರಿಣಿಯಾಗಿ ಕಾಣುತ್ತಿರುವಳು. ಈ ಉತ್ತರವನ್ನು ಕೇಳಿದೊಡನೆಯೇ ರಾಜನು ವಿಭ್ರಾಂತನಾದನು. ಆ ಕೂಡಲೇ ಆ ಪುರುಷವ್ಯಕ್ತಿಯನ್ನು ದುರದುರನೆ ನೋಡಿ, " ಎಲೆ, ಶೀಲವತಿಯು, ನೀನು ಅಂತಃಪುರದ ಚೇಟಿಯಾದ ಸರಸಾಂಗಿಯೆಂದು ಹೇಳುತ್ತಿರುವಳು, ನಿಜಾಂಶವನ್ನು ತಿಳಿಸು ; ಇಲ್ಲವಾದರೆ ನಿನ್ನ ತಲೆಯು ಹಾರಿಹೋದೀತು ” ಎಂದು ಗರ್ಜಿಸಿದನು. ಭೀತಳಾದ ಸರಸಾಂಗಿಯು ಗಡಗಡನೆ ನಡುಗುತ್ತ ಅಳುತ್ತ ರಾಜನ ಪಾದಗಳ ಮೇಲೆ ಬಿದ್ದು , “ ಮಹಾ ಪ್ರಭೂ, ನನ್ನ ಸರ್ವಾಪರಾಧಗಳನ್ನೂ ಮನ್ನಿಸಿ ಕಾಪಾಡಬೇಕು. ನಾನು ಸರಸಾಂಗಿಯೇ ನಿಜ ” ಎಂದು ಬೇಡಿಕೊಂಡಳು.
ರಾಜನು ಪರಮಾಶ್ಚರ್ಯಭರಿತನಾಗಿ, “ ಹಾಗಾದರೆ ನೀನು ಆ ದಿನ ಅಂತಃಪುರದಲ್ಲಿ ಈ ವೇಷದಿಂದಿರಲು ಕಾರಣವೇನು ? ನಿಜಾಂಶವನ್ನು ಮರೆ ಮಾಜದ ವಿವರವಾಗಿ ಹೇಳು'' ಎಂದನು. ಸರಸಾಂಗಿಯು ಪ್ರಾಣಭೀತಿ ಯಿಂದ ಸೌದಾಮಿನಿ ಕಾದಂಬಿನಿಯರ ಮುಖವನ್ನು ನೋಡಲು, ಅವರು ಏನು ಹೇಳುವುದಕ್ಕೂ ತೋರದೆ ತಮ್ಮ ಮುಖಗಳನ್ನಾ ಕಡೆಗೆ ತಿರುಗಿಸಿ ಕೊಂಡರು. ಇವರು ನನ್ನನ್ನು ಕೈಬಿಟ್ಟಿರುವಾಗ ನಾನೇತಕ್ಕೆ ನಿಜಾಂಶ
-------------------------------------------------------------------
ವನ್ನು ಹೇಳಿಬಿಡಬಾರದೆಂದು ಪ್ರಾಣದಮೇಲೆ ನಿರಾಶಳಾಗಿ ಸರಸಾಂಗಿಯು ರಾಜನಿಗೆ ಕೈ ಮುಗಿದು, "ಮಹಾಪ್ರಭೂ, ನನಗೆ ತಾವು ಯಾವ ಶಿಕ್ಷೆ ಯನ್ನು ವಿಧಿಸಿದರೂ ನಾನು ಮಾಡಿದ ಅಪರಾಧಕ್ಕಾಗಿ ಅದನ್ನು ನಾನು ಅನುಭವಿಸುವೆನು. ನಾನು ಈ ಅಪರಾಧಮಾಡಲು ಪ್ರೋತ್ಸಾಹಿಸಿದವ ರನ್ನು ತಾವು ಶಿಕ್ಷಿಸುವುದಿಲ್ಲವೆಂದು ಅಭಯವನ್ನಿತ್ತರೆ ನಿಸ್ಸಂದೇಹವಾಗಿ ಎಲ್ಲವನ್ನೂ ವಿಜ್ಞಾಪಿಸುವೆನು'' ಎಂದಳು. ರಾಜನು, ' ಇದು, ಇವಳು ಬುದ್ಧಿ ಪೂರ್ವಕವಾಗಿ ಮಾಡಿದ ಅಪರಾಧವಲ್ಲವೆಂದು ಊಹಿಸಿ, “ಎಲ್‌, ನೀನು ಸರಪ್ರೇರಣೆಯಿಂದೀಕಾರ ಮಾಡಿರುವುದಾದರೆ ನಿನಗಿಂತಲೂ ಅವರೇ ಅಧಿಕವಾದ ಶಿಕ್ಷೆಗರ್ಹರು. ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸದಿರು ವುದು ರಾಜಧರ್ಮವಲ್ಲ. ಈಗ ನಿನ್ನ ನಿಬಂಧನೆಗೆ ನಾನು ಒಳಗಾಗತಕ್ಕವ ನಲ್ಲ. ನಿಜಾಂಶವನ್ನು ಮರೆಮಾಚದೆ ತಿಳಿಸು. ಅನಂತರ ಅಪರಾಧದ ರೀತಿಯನ್ನು ನೋಡಿ ಧರ್ಮವಿರೋಧವಿಲ್ಲದಂತೆ ನಡೆಯುವೆವು” ಎಂದನು. ಆಗ ಸರಸಾಂಗಿಯು, ಬೇರೆ ಉಪಾಯವನ್ನರಿಯದೆ ಕಾದಂಬಿನಿ ಸೌದಾ ಮಿನಿಯರ ತಂತ್ರವೆಲ್ಲವನ್ನೂ ವಿವರಿಸಿ ಹೇಳಿಬಿಟ್ಟಳು. ಮೋಸಗಾತಿಯ ರಿಬ್ಬರಿಗೂ ಎದೆಯೊಡೆಯಿತು. ರಾಜನು ಎಲ್ಲವನ್ನೂ ಕೇಳಿದ ಕೂಡಲೇ, ತಾನು, ಅವಿಚಾರನಾಗಿ, ಮಹಾಪತಿವ್ರತೆಯಾದ ಶೀಲವತಿಯಲ್ಲಿ ದೋಷ ನನ್ನಾ ರೋಪಿಸಿ ಆ ಸತ್ಯವಂತೆಯನ್ನು ಮೃತ್ಯುವಶಕ್ಕೆ ಒಪ್ಪಿಸಿದ್ದೆನಲ್ಲಾ ! ಎಂದು ಬಹಳವಾಗಿ ಪಶ್ಚಾತ್ತಾಪಪಟ್ಟು ಆಕೆಯ ಬಳಿಗೆ ಬಂದು ಕೈಗಳನ್ನು ಹಿಡಿದು ತನ್ನ ಅಪರಾಧಗಳನ್ನು ಮನ್ನಿ ಸಬೇಕೆಂದು ಬಹಳವಾಗಿ ಕೇಳಿಕೊಂಡು ಆಕೆಯ ಕಣ್ಣೀರನ್ನು ಒರೆಸಿ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ವಿಜಯಕುಮಾರ ನನ್ನು ನೋಡಿ, "ಸುಕುಮಾರಾ, ನಿನ್ನಿಂದ ಸತ್ಯವಂತೆಯಾದ ನಿಮ್ಮ ತಾಯಿಯ ಪ್ರಾಣವು ಉಳಿಯಿತು. ನಮ್ಮ ವಂಶದ ಸರ್ತಿಯು ಸಂರಕ್ಷಿತವಾಯಿತು. ನಾನು ನರಕದಿಂದ ಪಾರಾದೆನು, ನೀನೇ ನನ್ನ ವಂಶಾಲಂಕಾರನಾದ ಸತ್ತು ಇನು' ಎಂದು ಆಲಿಂಗಿಸಿ ಮೂರ್ಧವನ್ನಾ ಘಾಣಿಸಿದನು.
---------------------------------------------------------
ಅನಂತರ ಅಪರಾಧಿನಿಯರಾದ ಸೌದಾಮಿನಿ ಕಾದಂಬಿನಿಯರು ರಾಜೀಪದವಿಯಲ್ಲಿರಲು ಅನರ್ಹರೆಂದು ಅವರನ್ನು ಪ್ರತ್ಯೇಕವಾದ ಮಂದಿರ ಗಳಲ್ಲಿರಿಸಿ, ಅವರ ಸಾಮಾನ್ಯ ಜೀವನಕ್ಕೇರ್ಪಡಿಸಿ, ರಾಜನು ತಾನು ಮತ್ತೆ ಅವರ ಮುಖಾವಲೋಕನಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಸರಸಾಂಗಿ ಯನ್ನು ಅವರ ಪರಿಚರ್ಯಕ್ಕೆ ನೇಮಿಸಿದನು.
ಭಾನುತೇಜ ರಾಜಹಂಸರ ವಿಚಾರಣೆಯಿಂದ ರತ್ನ ಬಾಣವು ವಿಜ ಯನ ಬತ್ತಳಿಕೆಯಲ್ಲಿ ಸೇರಿದ ವಿಚಾರವೂ ತಿಳಿಯಬಂತು, ಅನಂತರ ಅವ ರಿಬ್ಬರಿಗೂ ತಕ್ಕ ಬುದ್ದಿವಾದವನ್ನು ಹೇಳಿ, ಅವರು ತಮ್ಮ ಅಣ್ಣನಾದ ವಿಜಯಕುಮಾರನ ಮೇಲುಪಯನ್ನ ನುಸರಿಸಿ ಅವನ ಆಜ್ಞೆಯಲ್ಲಿರು ವಂತೆ ಏರ್ಪಡಿಸಿದನು.
ಅನಂತರ ವಿಜಯಕುಮಾರನ ಪ್ರಯಾಣಚರಿತ್ರೆಯೆಲ್ಲವನ್ನೂ ಚಂದ್ರ ಸೇನ ಶೀಲವತಿಯರು ವಿವರವಾಗಿ ಕೇಳಿ ಆಶ್ಚರ್ಯಾನಂದಮಗ್ನರಾದರು. ವಿಜಯನು ಕರೆತಂದಿದ್ದ ಚಂದ್ರಲೇಖೆಯು ತಮ್ಮ ಸೋದರ ಸೊಸೆಯೇ ಎಂಬ ವಿಚಾರವು ಆಕೆಯ ಪೂರ್ವಚರಿತ್ರೆಯಿಂದ ವ್ಯಕ್ತವಾದುದರಿಂದ ಅವ ರಿಗೆ ಮತ್ತಷ್ಟು ಸಂತೋಷವುಂಟಾಯಿತು.
ವಿಜಯಕುಮಾರನ ವಿಜಯೋತ್ಸವವನ್ನು ಕೇಳಿ ವಿದ್ಯಾಧರಿಯ ಆನಂದವು ಮೇರೆ ಮೀರಿತು. ಧುರಂಧರನ ಸಂತೋಷಕ್ಕೆ ಪಾರವೇ ಇಲ್ಲವಾಯಿತು.
ಅನಂತರ ಶುಭಲಗ್ನ ವೊಂದನ್ನೇರ್ಪಡಿಸಿ ಚಂದ್ರಸೇನರಾಜನು ವಿಜಯ ನಿಗೆ ವಿದ್ಯಾಧರಿಯನ್ನು ತಂದು ಚಂದ್ರಲೇಖಾ ವಿಜಯ ವಿದ್ಯಾಧರಿಯರ ವಿವಾಹಮಂಗಳವನ್ನು ಅತಿ ವಿಜೃಂಭಣೆಯಿಂದ ನಡೆಯಿಸಿ ಶೀಲವತೀ ಸಹಿತ ನಾಗಿ ಆನಂದಸಾಗರದಲ್ಲಿ ಓಲಾಡುತ್ತಿದ್ದನು.
ಅಷ್ಟಮ ತರ೦ಗ೦
ಸ೦ಪೂರ್ಣ೦

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ