೧. ಪೀಠಿಕೆ
ಕನ್ನಡಸಾಹಿತ್ಯದ ಚರಿತ್ರೆಯನ್ನು ನಿಸ್ಸಂದೇಹವಾಗಿಯೂ, ಎಲ್ಲಾ ಭಾಗಗಳಲ್ಲಿ ಸಂಪೂರ್ಣವಾಗಿಯೂ ಬರೆಯಲು ಇನ್ನೂ ಸಾಧ್ಯವಿಲ್ಲ. ಗ್ರಂಥಗಳನ್ನು ಕಂಡುಹಿಡಿಯುವುದು, ಶೋಧನೆಮಾಡಿ ಮುದ್ರಿಸುವುದು, ಕಾಲವನ್ನು ನಿರ್ಣಯಮಾಡುವುದು, ಗುಣದೋಷಗಳನ್ನು ವಿಮರ್ಶಿಸುವುದು-ಇವೇ ಮುಂತಾದ ಸಾಹಿತ್ಯ ಚರಿತ್ರೆಗೆ ಸಹಕಾರಿಗಳಾದ ಕಾವ್ಯಗಳು ಇನ್ನೂ ಪೂರ್ತಿಯಾದುವೆಂದು ಹೇಳುವ ಹಾಗಿಲ್ಲ. ಅನೇಕ ವಿಷಯಗಳಲ್ಲಿ ನಿಷ್ಕರ್ಷೆಯಾದ ಒಂದು ಅಭಿಪ್ರಾಯವಿಲ್ಲದೆ ವಿದ್ವಾಂಸರಲ್ಲಿ ಈಗಲೂ ಜಿಜ್ಞಾಸೆ ನಡೆಯುತ್ತಲೇ ಇದೆ.
ಮೊದಲು, ಗ್ರಂಥಗಳ ಜ್ಞಾನವೇ ಇನ್ನೂ ದಿನದಿನಕ್ಕೆ ವೃದ್ಧಿಯಾಗುವುದರಲ್ಲಿದೆ. ಹಿಂದಕ್ಕೆ, ಕನ್ನಡ ಗ್ರಂಥಗಳನ್ನು ಸಾಧಾರಣವಾಗಿ ಆಯಾ ಮತಸ್ಥರು ತಮತಮಗೆ ಇಷ್ಟವಾದುವುಗಳನ್ನು ಓಲೆಯ ಮೇಲೆ ಪ್ರತಿಮಾಡಿಕೊಂಡು ಓದಿಕೊಳ್ಳುತ್ತಿದ್ದರು. ಆ ಪ್ರತಿಗಳು ಆಯಾ ಮತದ ಮಠಗಳ ಮತ್ತು ವಿದ್ವಾಂಸರ ಪುಸ್ತಕ ಭಂಡಾರಗಳಲ್ಲಿ ಇರುತ್ತಿದ್ದುವು. ಯಾವನಾದರೂ ಪಂಡಿತನಾಗಲಿ, ಕವಿಯಾಗಲಿ, ಅವನ್ನು ಉದ್ದೇಶಪೂರ್ವಕವಾಗಿ ತೆಗೆದು ನೋಡಬೇಕು; ಅಥವಾ ಪುಣ್ಯಕಾಲಗಳಲ್ಲಿ ಪುರಾಣವಾಗಿ ಸಾಮಾನ್ಯ ಜನರು ಓದಿಸಿ ಕೇಳಬೇಕು-ಹೀಗಿದ್ದಿತು. ೧೯ನೆಯ ಶತಮಾನದಲ್ಲಿ ಇಂಗ್ಲಿಷರ ಆಳಿಕೆಯಲ್ಲಿ ಕೈಸ್ತ ಪಾದ್ರಿಗಳು ಕನ್ನಡ ದೇಶದಲ್ಲಿ ನೆಲಸಿ, ತಮ್ಮ ಮತಪ್ರಚಾರಕ್ಕಾಗಿ ಬೈಬಲನ್ನು ಕನ್ನಡಿಸುವುದಕ್ಕೆ ಹೊರಟು, ಭಾಷಾಜ್ಞಾನಕ್ಕಾಗಿ ಕನ್ನಡ ಕಾವ್ಯಗಳನ್ನೂ, ವ್ಯಾಕರಣ ಮುಂತಾದ ಲಕ್ಷಣ ಗ್ರಂಥಗಳನ್ನೂ ಸಂಗ್ರಹಿಸುವುದಕ್ಕೆ ಕೈಹಾಕಿದಾಗ, ಒಂದೊಂದಾಗಿ ಪುರಾತನ ಗ್ರಂಥಗಳು ಪ್ರಕಾಶಕ್ಕೆ ಬರಲು ಆರಂಭ ವಾಯಿತು. ಆಗ್ಗೆ ಸುಲಭವಾಗಿ ಸಿಕ್ಕುತ್ತಿದ್ದ ಗ್ರಂಥಗಳನ್ನು ಶೇಖರಿಸುವ ಮತ್ತು ಮುದ್ರಿಸುವ ಪ್ರಯತ್ನ ದಲ್ಲಿ ಬದ್ದ ಕಂಕಣರಾದ ಪಾಶ್ಚಾತ್ಯ ಪಂಡಿತರೊಳಗೆ ಕಿಟ್ಟಲ್ ಸಾಹೇಬರು ಸುಪ್ರಸಿದ್ದರು. ಮಂಗಳೂರು ಬಾಸಲ್ ಮಿಷನ್ ಪ್ರೆಸ್ಸಿನಿಂದ ತಮ್ಮ ಹಿಂದಿನವರು ಮುದ್ರಿಸಿದ್ದ ಬಸವ ಪುರಾಣ, ಚೆನ್ನಬಸವ ಪುರಾಣ, ಜೈಮಿನಿ ಭಾರತ, ದಾಸರ ಪದಗಳು ಮುಂತಾದ ಕೆಲವು ಗ್ರಂಥಗಳ ಜೊತೆಗೆ, ತಾವು ಕೇಶಿರಾಜನ ಶಬ್ದಮಣಿ ದರ್ಪಣವನ್ನೂ (೧೮೭೨) ನಾಗವರ್ಮನ ಛಂದೋಂಬುಧಿಯನ್ನೂ (೧೮೭೫) ಅಚ್ಚು ಹಾಕಿಸಿದರು. ಕನ್ನಡ-ಇಂಗ್ಲಿಷ್ ನಿಘಂಟುವನ್ನೂ (೧೮೯೪), ಇಂಗ್ಲಿಷಿನಲ್ಲಿ ಒಂದು ಕನ್ನಡದ ವ್ಯಾಕರಣವನ್ನೂ (೧೯೦೩) ಬರೆದರು. ಮತ್ತು ಆಗ ತಮಗೆ ತಿಳಿದಿದ್ದ ಕವಿಗಳನ್ನು ಒಟ್ಟುಗೂಡಿಸಿ ಒಂದು ಸಾಹಿತ್ಯ ವಿಷಯವಾದ ಉಪನ್ಯಾಸವನ್ನು ತಾವು ಪ್ರಕಟಿಸಿದ ಛಂದೋಂಬುಧೀ ಗ್ರಂಥಕ್ಕೆ ಪೀಠಿಕೆಯಾಗಿ ಸೇರಿಸಿದರು. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಸಾಧಿಸುವುದಕ್ಕೆ ಇದೇ ಮೊದಲು ಆಯುಧಪೂಜೆ.
ಇವರ ತರುವಾಯ ಮೈಸೂರು ಸರ್ಕಾರದ ವಿದ್ಯಾಭ್ಯಾಸದ ಮತ್ತು ಪುರಾತನ ವಿಷಯ ಶೋಧನದ ಇಲಾಖೆಗಳ ಅಧ್ಯಕ್ಷರಾಗಿದ್ದ ಬ್ರೂಯಿಸ್ ರೈಸ್ ಸಾಹೇಬರು ದೇಶದ ಮೇಲೆಲ್ಲಾ ಸಂಚರಿಸಿ ಅನೇಕ ಓಲೆಯ ಪ್ರತಿಗಳನ್ನು ಹುಡುಕಿಸಿ ತಂದು ಕಾಗದದ ಪ್ರತಿಗಳನ್ನು ಮಾಡಿಸಿದರು. ಆಗ ಕನ್ನಡ ಭಾಷೆಯಲ್ಲಿ ಅಭಿಮಾನವೂ, ವಿದ್ಯಾಭ್ಯಾಸಕ್ಕೆ ಕನ್ನಡ ಗ್ರಂಥಗಳ ಆವಶ್ಯಕತೆಯೂ ಹುಟ್ಟಿದ್ದದ್ದರಿಂದ ಭಾಷಾವ್ಯಾಸಂಗಕ್ಕೆ ಅನುಕೂಲವಾಗುವಂತೆ, ನಾಗವರ್ಮನ ಭಾಷಾಭೂಷಣ (೧೮೮೪), ಭಟ್ಟಾಕಳಂಕನ ಶಬ್ದಾನುಶಾಸನ (೧೮೯೦) 1, ನೃಪತುಂಗನ ಕವಿರಾಜಮಾರ್ಗ ($೮೯೮) ಮತ್ತು ನಾಗವರ್ಮನ ಕಾವ್ಯಾವಲೋಕನ (೧೯೦೩)-ಈ ಲಕ್ಷಣ ಗ್ರಂಥಗಳನ್ನೂ, ಪಂ ಕಾಮಾಯಣ (೧೮೯೨), ಮತ್ತು ಪಂಪಭಾರತ (೧೮೯೮) ಈ ಪ್ರಸಿದ್ದ ಕಾವ್ಯಗಳನ್ನೂ ಅಚ್ಚುಹಾಕಿಸಿ ದರು. ಇದಲ್ಲದೆ, ಶಾಸನ ಮುಂತಾ ದುವುಗಳ ಸಹಾಯದಿಂದ ಸಾಹಿತ್ಯ ವಿಚಾರವಾಗಿ ಅನೇಕ ಹೊಸ ಸಂಗತಿಗಳನ್ನು ಕಂಡುಹಿಡಿದು, ಶಬ್ದಾನುಶಾಸನಕ್ಕೆ ಪೀಠಿಕೆಯಾಗಿ ಒಂದು ಸಣ್ಣ ಸಾಹಿತ್ಯ ಚರಿತ್ರೆಯನ್ನು ರಚಿಸಿದರು (೧೮೯೦), ತಮ್ಮ ಮೈಸೂರ್ ಗೆಜೆಟಿಯರ್ ಪುಸ್ತಕದಲ್ಲಿಯೂ ಸಂಕ್ಷೇಪವಾಗಿ ಕನ್ನಡ ಭಾಷೆಯ ಮತ್ತು ಸಾಹಿತ್ಯದ
1 ಎರಡನೆಯ ಮುದ್ರಣ-ಪ್ರಾಕ್ತನವಿಮರ್ಶವಿಚಕ್ಷಣ ರಾವ್ಬಹದ್ದೂರ್ ಆರ್. ನರಸಿಷ್ಕಾಚಾರರಿಂದ (೧೯೨೩).
೪೦೮
ಶ್ರೀ ಸಾಹಿತ್ಯ
ವಿಚಾರವಾಗಿ ಒಂದು ಅಧ್ಯಾಯವನ್ನು ಸೇರಿಸಿದರು. ಹೀಗೆ ೧೯ನೆಯ ಶತಮಾನ ಪೂರೈಸುವುದರೊಳಗೆ, ಕಿಟ್ಟಲ್ ಮತ್ತು ರೈಸ್ ಸಾಹೇಬರುಗಳ ಕನ್ನಡದ ಪ್ರೀತಿ ಮತ್ತು ಕೃಷಿಯಿಂದ, ಕನ್ನಡದ ಏಳಿಗೆಗೆ ಮುಖ್ಯ
ವಾಗಿ ಬೇಕಾಗಿದ್ದ ಪ್ರಸಿದ್ದವಾದ ಲಕ್ಷಣ ಗ್ರಂಥಗಳೂ, ಪ್ರಧಾನಕವಿಗಳ ಉತ್ತಮ ಕಾವ್ಯಗಳೂ, ಸಾಹಿತ್ಯದ ವಿಸ್ತಾರ ವಿಭಾಗಗಳು ಮತ್ತು ಕಾಲವ್ಯಾಪ್ತಿ ಇವುಗಳ ಸಾರಾಂಶಜ್ಞಾನವೂ, ಕನ್ನಡದಲ್ಲಿ ಅಭಿರುಚಿಯುಳ್ಳ ಪ್ರತಿಯೊಬ್ಬನಿಗೂ ಸುಲಭ ಸಾಧ್ಯವಾದದ್ದೇ ಅಲ್ಲದೆ, ಕನ್ನಡದ ಅಭಿವೃದ್ಧಿಗೆ ಪ್ರಬಲವಾದ ಸಹಾಯವನ್ನೂ ಪ್ರೇರಣೆಯನ್ನೂ ಒದಗಿಸಿಕೊಟ್ಟಂತಾಯಿತು.
ಈ ವಿದೇಶೀಯ ಪಂಡಿತರ ಜೊತೆಗೆ, ಇವರಿಗೆ ಸಹಾಯಕರಾಗಿ ಕನ್ನಡಮಾತೆಯ ಸೇವೆಗೆ ತಮ್ಮನ್ನೇ ಒಪ್ಪಿಸಿಕೊಟ್ಟ ಮ|| ರಾ|| ಶ್ರೀಗಳಾದ ಬಿ. ಮಲ್ಲಪ್ಪನವರು, ಎಸ್. ಜಿ. ನರಸಿಷ್ಕಾಚಾರರು, ಆರ್. ನರಸಿಹ್ಮಾಚಾರೈರು, ಎಂ. ಎ. ರಾಮಾನುಜಯಂಗಾರರು ಮುಂತಾದ ನಮ್ಮ ದೇಶದ ಪಂಡಿತರೂ ಕನ್ನಡ ಕಾವ್ಯಮಾಲೆಯ ಜೀರ್ಣೋದ್ದಾರಕಾರದಲ್ಲಿ ಉತ್ಸಾಹಶಾಲಿಗಳಾಗಿ ಕಾದಂಬರಿ (೧೮೯೨), ಅಪ್ರತಿಮವೀರಚರಿತೆ (೧೮೯೩), ಗದಾ (೧೮೯೫)2, ಆದಿಪುರಾಣ (೧೯೦೦), ಚಂದ್ರಪ್ರಭ ಪುರಾಣ (೧೯೦೧), ಜಗನ್ನಾಥವಿಜಯ (೧೯೦೪), ಗಿರಿಜಾ ಕಲ್ಯಾಣ (೧೯೦೫), ಚಿಕ್ಕದೇವರಾಜ ಬಿನ್ನಪ ಗೀತಗೋಪಾಲ (೧೯೧೫), ಹರಿಶ್ಚಂದ್ರಕಾವ್ಯ (೧೯೦೯) ಮುಂತಾದ ಅನೇಕ ಪುರಾತನ ಕಾವ್ಯಗಳನ್ನು ಪ್ರಾಚ್ಯಕೋಶಾಲಯ ಗ್ರಂಥಾವಳಿಯಲ್ಲಿಯೂ ಕಾವ್ಯಮಂಜರಿ, ಕಾವ್ಯಕಲಾನಿಧಿ ಮುಂತಾದ ಪತ್ರಿಕೆಗಳಲ್ಲಿಯೂ ಮುದ್ರಣಗೊಳಿಸಿ ಜೈನ, ವೀರಶೈವ, ಬ್ರಾಹ್ಮಣ ಕವಿಗಳ ಗ್ರಂಥಸಮೃದ್ಧಿಯನ್ನು ಪ್ರಕಾಶಪಡಿಸಿ ಕನ್ನಡಿಗರನ್ನು ಹೆಮ್ಮೆಗೊಳಿಸಿದರು. ಪುಸ್ತಕ ವ್ಯಾಪಾರಿಗಳಾದ ವರ್ತಕರ ಮೂಲಕವೂ ಭಾರತ, ಭಾಗವತ, ರಾಮಾಯಣ, ಸತ್ವಜ್ಞಮೂರ್ತಿಯ ವಚನಗಳು, ಪ್ರಭುಲಿಂಗಲೀಲೆ, ಬಸವ ಪುರಾಣ, ಚೆನ್ನಬಸವ ಪುರಾಣ, ಗಿರಿಜಾ ಕಲ್ಯಾಣ, ರಾಜಶೇಖರವಿಲಾಸ ಮುಂತಾದ ಜನಸಾಮಾನ್ಯಪ್ರಿಯವಾದ ಗ್ರಂಥಗಳು ಹೊರಕ್ಕೆ ಬಂದುವು.
ಈ ರೀತಿ ಶ್ರೀಮನ್ಮಹಾರಾಜರವರ ಅರಮನೆಯಲ್ಲಿಯೂ, ಜೈನ ವೀರಶೈವ ಬ್ರಾಹ್ಮಣ ಗುರುಗಳ ಮಠಗಳಲ್ಲಿಯೂ, ಶ್ರೀಮಂತರ ಮತ್ತು ವಿದ್ವಾಂಸರ ಮನೆಗಳಲ್ಲಿಯೂ ಇದ್ದ ಪುಸ್ತಕ ಭಂಡಾರಗಳಲ್ಲಿ ಕಟ್ಟು ಕಟ್ಟಾಗಿ ಬಿದ್ದಿದ್ದು ಗೆದ್ದಲು ಹುಳುಗಳ ಮತ್ತು ಒಲೆಗಳ ಪಾಲಾಗುತ್ತಿದ್ದ ಎಷ್ಟೋ ಓಲೆಯ ಮತ್ತು ಕಾಗದದ ಪ್ರತಿಗಳು ಉಳಿದುಕೊಂಡು, ಬೆಳಕಿಗೆ ಬಂದುವು. ಇನ್ನೂ ರಹಸ್ಯವಾಗಿ ಗ್ರಂಥಗಳು ಬಹಳ ಇವೆಯೆಂದೂ, ಪೂರ್ವದಿಂದ ಬಂದ ಮತಾಭಿಮಾನದಿಂದ ಅವುಗಳನ್ನು ಹೊರಗೆ ಕೊಡುವುದಕ್ಕೆ ಒಂದೆಗೆಯುತ್ತಾರೆಂದೂ ಶೋಧಕರು ಹೇಳುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ಕೋಶಾಲಯದಲ್ಲಿ ಅನೇಕ ಓಲೆ ಪ್ರತಿಗಳನ್ನು ಶೇಖರಿಸಿರುವುದಲ್ಲದೆ, ಪ್ರತಿವರ್ಷವೂ ಹೊಸಪ್ರತಿಗಳನ್ನು ಹುಡುಕಿ ತರುತ್ತಲೂ, ಗ್ರಂಥಗಳನ್ನು ಪ್ರಕಟಿಸುತ್ತಲೂ ಇರುತ್ತಾರೆ. ಇಂಥಾ ಗ್ರಂಥಗಳಲ್ಲಿ ಮುಖ್ಯ ವಾದುವು-ಆದಿಪುರಾಣ (೧೯೦೦), ಜಗನ್ನಾಥವಿಜಯ (೧೯೦೪)ತಿ, ಕುಮಾರವ್ಯಾಸಭಾರತ (೧೯೧೨ ೧೯೨೭)4, ಉದ್ಭಟಕಾವ್ಯ (೧೯೨೧), ಧರ್ಮಾಮೃತ (೧೯೨೪). ಕರ್ಣಾಟಕ ಪರಿಷತ್ತಿನ ಪಂಡಿತರು ಹೊಸ ಪ್ರತಿಗಳನ್ನು ವಿಚಾರಿಸಿ, ಅಚ್ಚಾಗಿದ್ದ ಗ್ರಂಥಗಳನ್ನು ಶುದ್ಧಪಡಿಸುವ ಕಾವ್ಯವನ್ನು ಕೈಗೊಂಡಿರು ತ್ತಾರೆ. ಇವರು ಈ ಪ್ರಕಾರ ಶಬ್ದಮಣಿದರ್ಪಣ (೧೯೨೦), ಪಂಪರಾಮಾಯಣ (೧೯೨೧), ಈ ಗ್ರಂಥಗಳನ್ನು ಶುದ್ಧ ಮಾಡಿ, ಉತ್ತರ ಇಂಡಿಯಾದ ಬಿಹಾರ್ ಪ್ರಾಂತದ ಆರಾ ಎಂಬ ಸ್ಥಳದಿಂದ ಪಂಪಭಾರತದ ಒಂದು ಹೊಸ ,ತಿಯನು ಸಂಪಾದಿಸಿ, ಆ ಗ್ರಂಥದ ಎರಡನೆಯ ಮುದ್ರಣವನ್ನು ಅರ್ಧಮಟ್ಟಿಗೆ ಪೂರೈಸಿರುತ್ತಾರೆ. ಹೀಗೆಯೇ ಧಾರವಾಡ ಪ್ರಾಂತದಲ್ಲಿ ಮ|| ರಾ|| ಉತ್ತಂಗಿಯವರು ಸರಜ್ಞ ಮೂರ್ತಿಯ ವಚನಗಳನ್ನೂ, ರಾವ್ ಸಾಹೇಬ್ ಹಳಕಟ್ಟಿಯವರು ವಚನಶಾಸ್ತ್ರಸಾರವೆಂಬ ಸಂಗ್ರಹಿಸಿದ ಗ್ರಂಥವನ್ನೂ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಜೈನಯುವಕ ಸಂಘದವರು ಭರತೇಶ
2 ಮೂರನೆಯ ಮುದ್ರಣ (೧೯೨೫).
ಎರಡನೆಯ ಮುದ್ರಣ (೧೯೨೩). 4ಇದು ಉದ್ಯೋಗಪರ್ವದವರೆಗೆ ಸಾಗಿದೆ.
೪೦೯
ಕನ್ನಡ ಸಾಹಿತ್ಯದ ಚರಿತ್ರೆ
ವೈಭವವನ್ನೂ (೧೯೨೩-೨೫) ಪರಿಷ್ಕರಿಸಿ ಮುದ್ರಿಸಿರುತ್ತಾರೆ. ಈ ರೀತಿ ಮೊದಲನೆಯ ಸಾರಿ ಅಚ್ಚಾದ ಕಾವ್ಯಗಳು ಅಲ್ಲಲ್ಲಿ ಗ್ರಂಥಪಾತವಾಗಿಯೂ, ಸಾಮಾನ್ಯವಾಗಿ ಅಶುದ್ದವಾಗಿಯೂ, ಕೆಲವು ಕಡೆ ಪ್ರಕ್ಷಿಪ್ತ ಭಾಗಗಳನ್ನು ಒಳಕೊಂಡುವಾಗಿಯೂ, ಸಂಪಾದಕರ ಬುದ್ದಿಗನುಸಾರವಾಗಿ ತಿದ್ದಿದ ಬದಲಾವಣೆಗಳಿಂದ ಕೂಡಿದುವಾಗಿಯೂ ಇದ್ದು, ಈಗೀಗ ಎರಡನೆಯ ಮುದ್ರಣಕ್ಕೆ ಅವಕಾಶ ದೊರೆತು, ಶಾಸ್ತ್ರ ರೀತಿಯಲ್ಲಿ
ಶಿಕ್ಷಿತರಾದ ಪಂಡಿತರಿಂದ ಪರಿಷ್ಕಾರವಾದ ರೂಪವನ್ನು ಪಡೆಯುತ್ತಿವೆ.
ಹೀಗೆ ಶುದ್ಧವಾದ ರೂಪದಲ್ಲಿ ಅಚ್ಚಾದ ಪುರಾತನ ಕಾವ್ಯಗಳ ರಾಶಿ ಸಿದ್ದವಾಗುತ್ತಿರುವಲ್ಲಿ, ಕಿಟ್ಟಲ್ ಮತ್ತು ರೈಸ್ ಸಾಹೇಬರುಗಳು ಹಾಕಿದ ತಳಪಾಯದ ಮೇಲೆ ಎಸ್. ಜಿ. ನರಸಿಷ್ಮಾಚಾರ್ಯರು ಮತ್ತು ಆರ್. ನರಸಿಹಾಚಾರ್ಯರು ಅನೇಕ ಹಸ್ತಪ್ರತಿಗಳ, ಶಾಸನಗಳ, ರಾಜವಂಶಾವಳಿಗಳ, ಮತ್ತು ಗುರುಪರಂಪರೆಗಳ ಶೋಧನೆಗಳಿಂದ ಬಹು ಶ್ರಮಪಟ್ಟು, ಬೇಕಾದಷ್ಟು ಹೊಸ ವಿಷಯಗಳನ್ನೂ, ಎಷ್ಟೋ ಮಂದಿ ಹೊಸ ಕವಿಗಳನ್ನೂ, ಕಂಡುಹಿಡಿದು ಕರ್ಣಾಟಕ ಕವಿಚರಿತೆಯ ಮೊದಲನೆಯ ಭಾಗವನ್ನು (೧೯೦೭) ರಚಿಸಿದರು. ಈಚೆಗೆ ತಮ್ಮ ಸಪಕರ್ತೃಗಳು ಗತಿಸಿದ ಮೇಲೆ, ಆರ್. ನರಸಿರಾ ಚಾತ್ಯರು ತಾವೊಬ್ಬರೇ ಕನ್ನಡದ ಮೇಲಿನ ಪ್ರೇಮದಿಂದ ಹಿಡಿದ ಕಾರವನ್ನು ಬಿಡದೆ, ಎರಡನೆಯ ಭಾಗವನ್ನು (೧೯೧೯) ಪೂರೈಸಿ, ಮೂರನೆಯ ಭಾಗವನ್ನೂ ಪ್ರಕಟಿಸಿ ಕವಿಚರಿತೆಯನ್ನು ಪೂರ್ಣ ಗೊಳಿಸುವುದರಲ್ಲಿದ್ದಾರೆ. ಈ ಮಹನೀಯರ ಗ್ರಂಥದ ಬಲವಿಲ್ಲದೆ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕಾಲಿಡಲು ಯಾರಿಗೂ ಸಾಧ್ಯವಿಲ್ಲ. ಇವರ ಗ್ರಂಥದ ಆಧಾರದ ಮೇಲೆ ಲೂಯಿಸ್‌ರೈಸ್ ಸಾಹೇಬರ ತಮ್ಮಂದಿರಾದ ಇ. ಪಿ. ರೈಸ್ ಸಾಹೇಬರು ಇಂಗ್ಲಿಷಿನಲ್ಲಿ ಸೂಕ್ಷ್ಮವಾಗಿ ಆಯಾ ಮತವಿಷಯಗಳನ್ನೂ, ಕಾಲಗುಣವನ್ನೂ ತಿಳಿಸಿ ಮುಖ್ಯಕವಿಗಳನ್ನು ನಿರ್ದೆಶಿಸಿ ಒಂದು ಸಣ ಪುಸ್ತಕವನ್ನು ಬರೆದಿರುತ್ತಾರೆ (೧೯೧೫, ೧೯೨೧). ಇನ್ನೂ ಕೆಲವರು ಪಂಡಿತರು ಪರಿಷತ್ಪತ್ರಿಕೆ, ಪ್ರಬುದ್ಧ ಕರ್ಣಾಟಕ ಮುಂತಾದ ಪತ್ರಿಕೆಗಳಲ್ಲಿ ಕವಿಗಳ ಕಾಲ, ಶೈಲಿ, ಯೋಗ್ಯತೆ ಮೊದಲಾದ ವಿಷಯಗಳನ್ನು ಕುರಿತು ವಿಮರ್ಶೆ ಮಾಡುತ್ತಾ ಇರುತ್ತಾರೆ.
ಈ ಭಾಷಾಪ್ರೇಮಿಗಳೆಲ್ಲರ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿ, ಈ ಸಣ್ಣ ಪುಸ್ತಕ ಭಾಗವನ್ನು ಬರೆಯಲಾಗಿದೆ. ಇದರಲ್ಲಿ ದೊಡ್ಡ ಗ್ರಂಥದಲ್ಲಿ ಹೇಳಬಹುದಾದ ಕವಿಗಳನ್ನೆಲ್ಲಾ ಹೇಳ ಲಾಗುವುದಿಲ್ಲ. ಕಾವ್ಯ, ಸಾಹಿತ್ಯ ಎಂಬ ಶಬ್ದಗಳ ಶ್ಲಾವ್ಯವಾದ ಅರ್ಥದ ಮೇಲೆ ದೃಷ್ಟಿಯಿಟ್ಟು, ವಿದ್ಯಾರ್ಥಿಗಳ ಪ್ರಥಮ ಪರಿಚಯಕ್ಕಾಗಿ ಪ್ರಸಿದ್ದರಾಗಿಯೂ, ಬೇರೆಬೇರೆ ಮತಗಳಿಗೆ ಪ್ರತಿನಿಧಿ ಗಳಾಗಿಯೂ, ಯಾವುದಾದರೂ ಒಂದು ಕಾರಣದಿಂದ ಗಣ್ಯರಾಗಿಯೂ ಇರುವ ಕವಿಗಳನ್ನು ಮಾತ್ರ ಆಯ್ದುಕೊಂಡು, ಒಟ್ಟಿನ ಮೇಲೆ ಕನ್ನಡ ಸಾಹಿತ್ಯದ ಬೆಳೆವಳಿಗೆ ವಿಭಾಗಗಳು, ಸ್ವರೂಪ, ಯೋಗ್ಯತೆ ಇವುಗಳನ್ನು ಸ್ಪಷ್ಟಪಡಿಸಬೇಕೆಂದು ಪ್ರಯತ್ನ ಪಟ್ಟಿರುತ್ತದೆ. ಕಾವ್ಯವಿಮರ್ಶೆಯ ಭಾಗದಲ್ಲಿ ವ್ಯವಸ್ಥೆಯಾಗಿ ಎಲ್ಲರೂ ಒಪ್ಪಬಹುದಾದ ಅಭಿಪ್ರಾಯಗಳು ಪ್ರಚಾರದಲ್ಲಿಲ್ಲವಾದದ್ದರಿಂದಲೂ, ಹೊಸದಾಗಿ ಸಿಕ್ಕಿರುವ ನಿಕ್ಷೇಪವನ್ನು ಕನ್ನಡಿಗರು ಇನ್ನೂ ಆಶ್ಚರ್ಯಪಟ್ಟು ಹೊಗಳಿಕೊಳ್ಳುವ ಸಂಭ್ರಮದಲ್ಲಿಯೇ ಇರುವುದ ರಿಂದಲೂ, ಪೂರ್ವದ ಸಂಪ್ರದಾಯವಾದ ಸಂಸ್ಕೃತ ಕಾವ್ಯಲಕ್ಷಣರುಚಿಗೂ ಈ ಕಾಲದ ಇಂಗ್ಲಿಷ್ ಕಾವ್ಯಾಭ್ಯಾಸಬಲದಿಂದ ಉಂಟಾಗಿರುವ ಹೊಸರುಚಿಗೂ ಬಹಳ ತಾರತಮ್ಯವಿರುವುದರಿಂದಲೂ, ಆ ಭಾಗಕ್ಕೆ ಇಲ್ಲಿ ಹೆಚ್ಚಾಗಿ ಪ್ರವೇಶಮಾಡುವುದು ಸೂಕ್ತವಾಗಿ ಕಾಣಿಸಲಿಲ್ಲ.
ಶ್ರೀ ಸಾಹಿತ್ಯ
೨. ಸಾಹಿತ್ಯ ಚರಿತ್ರೆಯ ವಿಷಯಗಳು
ಸಾಹಿತ್ಯದ ಲಕ್ಷಣ ಒಂದು ಭಾಷೆಯ ಸಾಹಿತ್ಯವೆಂದರೆ ಆ ಭಾಷೆಯಲ್ಲಿ ಬರೆದಿರುವ ಗ್ರಂಥಗಳ ರಾಶಿ ಎಂದು ಹೇಳುವು ದುಂಟು. ನಾಗರಿಕರಾದ ಜನರಲ್ಲಿ ಓದುಬರಹ ಹಚ್ಚಿದ ಹಾಗೆಲ್ಲಾ ಆನಾರ್ಜನೆಯಲ್ಲಿ ಉತ್ಸಾಹ ಹುಟ್ಟು ಇದೆ; ಪಂಡಿತರಾದವರು ಉತ್ತಮ ಭಾಷೆಗಳನ್ನು ಕಲಿತು ಅವುಗಳಲ್ಲಿರುವ ಗ್ರಂಥಗಳಿಂದ ತಾವು ಸಂಪಾದಿಸಿದ ಜ್ಞಾನವನ್ನು ತಮ್ಮ ಜನರಲ್ಲಿ ಮಾತೃಭಾಷೆಯಲ್ಲಿ ಹರಡಲು ಇಚ್ಛೆಪಡುತ್ತಾರೆ. ಪೂರ್ವ ಕಾಲದಲ್ಲಿ ಮುಖ್ಯವಾಗಿ ಮತ, ಶಾಸ್ತ್ರ, ನೀತಿ, ಪುರಾಣಕಥೆಗಳು, ಇತಿಹಾಸಗಳು, ಮುಂತಾದುವೇ ಗ್ರಂಥ ಗಳ ವಿಷಯಗಳಾಗಿರುತ್ತವೆ. ಹೀಗೆ ಒಂದು ಉಪಯೋಗಕ್ಕಾಗಲಿ, ಲೌಕಿಕ ವ್ಯವಹಾರಕ್ಕಾಗಲಿ, ಮೋಕ್ಷ ಸಾಧನೆಗಾಗಲಿ ಬೇಕಾದ ಸಂಗತಿಗಳನ್ನು ಒಳಗೊಂಡ ಗ್ರಂಥಗಳೇ ಪುರಾತನ ಸಾಹಿತ್ಯಗಳಲ್ಲಿ ಹೆಚ್ಚು. ಕನ್ನಡದಲ್ಲಿಯೂ ಹೀಗೆಯೇ, ಆರ ಸಂಸ್ಕೃತಿಯನ್ನು ಬೋಧಿಸುವುದಕ್ಕಾಗಿ ಸಂಸ್ಕೃತ ಭಾಷಾ ಪಂಡಿತರು ಸಾವಿರಾರು ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಗ್ರಂಥ ಸಮುದಾಯವೆಲ್ಲಾ ಸಾಹಿತ್ಯವೆ? ಒಂದು ಭಾಷೆಯಲ್ಲಿ ಬರೆದ ಬರವಣಿಗೆಯೆಲ್ಲಾ ಸಾಹಿತ್ಯವೆಂಬ ಹೆಸರಿಗೆ ಅರ್ಹವೆ?-ಎಂದು ವಿಚಾರ ಮಾಡಿದರೆ, ಕೇವಲ ಜ್ಞಾನಪ್ರಸಾರಣೆಗಾಗಿ, ಪಾಂಡಿತ್ಯ ಪ್ರದರ್ಶನಕ್ಕಾಗಿ ಬರೆದ ಗ್ರಂಥಗಳಿಗಿಂತಲೂ, ವಿಷಯವೇನೇ ಆಗಿರಲಿ, ಸರಸ್ವತೀಪ್ರಸಾದವನ್ನು ಪಡೆದು, ರಸೋತ್ಪಾದನಶಕ್ತಿ ಕಲ್ಪನಾಶಕ್ತಿಗಳಿಂದ ಕೂಡಿ, ತನ್ನದೇ ಒಂದು ಪ್ರತಿಭೆಯ ರೀತಿಯ ವ್ಯಕ್ತಿತ್ವವೂ ತನ್ನ ಕಾವ್ಯದಲ್ಲಿ ಉಕ್ಕುವಂತೆ ಮಾಡಿ, ಓದುವವರ ಹೃದಯವನ್ನು ಹೊಕ್ಕು, ಅಲ್ಲಿ ಸೌಂದಯ್ಯ ಆನಂದದ, ಅನುಭವಗಳನ್ನುಂಟುಮಾಡಬಲ್ಲ ಕವಿಗಳ ಗ್ರಂಥಗಳ ಸಾಹಿತ್ಯವೆನ್ನಿಸಿಕೊಳ್ಳುವುದಕ್ಕೆ ಯೋಗ್ಯವಾದವುಗಳೆಂದು ಹೇಳಬೇಕಾಗುತ್ತದೆ. ಇಂಥಾ ಕವಿಗಳು ಮಹಾಕವಿಗಳೇ ಆಗಿರಬೇಕೆಂಬ ನಿಯಮವಿಲ್ಲ: ಇಂಥಾ ಕಾವ್ಯಗಳು ಉತ್ಕೃಷ್ಟ ಕಾವ್ಯಗಳೇ ಆಗಿರಬೇಕೆಂಬ ನಿರ್ಬಂಧವಿಲ್ಲ. ಕವಿ ನಿಜವಾಗಿಯೂ ಕವಿಯಾಗಿದ್ದರೆ ಸರಿ; ಕಾವ್ಯ ನಿಜವಾಗಿಯೂ ಕಾವ್ಯ ಜಾತಿಗೆ ಸೇರಿದ್ದರೆ ಸಾಕು. ಆದರೆ, ಶುಷ್ಕ ಪಾಂಡಿತ್ಯವೂ, ಭಾಷಾಡಂಬರವೂ, ಸಾಧಾರಣ ಭಾವಗಳೂ, ಬರಿಯ ತಿಳಿವಳಿಕೆಯ ಸಂಗತಿಗಳೂ, ಎಷ್ಟೇ ದೊಡ್ಡದಾದ ಗ್ರಂಥವನ್ನೂ ಸಾಹಿತ್ಯವೆನ್ನಿಸಲಾರವು. ಕವಿಯಲ್ಲದವನ ಕರ್ಮ ಕಾವ್ಯವಾಗಲಾರದು. ಕನ್ನಡಭಾಷೆಯ ಗ್ರಂಥವಿಸ್ತಾರವನ್ನು ತೋರಿಸುವುದಕ್ಕೆ ದೊಡ್ಡ ಚರಿತ್ರೆಗಳಲ್ಲಿ ಆ ಬಗೆಯ ಗ್ರಂಥಗಳನ್ನೆಲ್ಲಾ ಸೇರಿಸಬಹುದಾದರೂ, ಈ ಸಣ್ಣ ಉಪನ್ಯಾಸದಲ್ಲಿ ಕಾವ್ಯಜಾತಿಗೆ ಸೇರಿದ ಸಾರವತ್ತಾದ ಪ್ರಧಾನಕವಿಗಳ ಕಾವ್ಯಗಳಿಗಲ್ಲದೆ ಮಿಕ್ಕು ವಕ್ಕೆ ಅವಕಾಶವಿಲ್ಲ.
ಇದು ಕಾವ್ಯಗಳ ಮಾತಾಯಿತು. ಇಂಥಾ ಗ್ರಂಥಗಳಲ್ಲದೆ, ಕನ್ನಡದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಶಬ್ದಕೋಶ, ವ್ಯಾಕರಣ, ಛಂದಸ್ಸು, ಅಲಂಕಾರ, ರಸ, ಕಾವ್ಯಲಕ್ಷಣ ಮುಂತಾದ ವಿಷಯಗಳನ್ನು ಪ್ರತಿಪಾದಿಸುವ ಗ್ರಂಥಗಳು ಎಷ್ಟೋ ಇವೆ. ಇವು ನ್ಯಾಯವಾಗಿ ಸಾಹಿತ್ಯಕ್ಕೆ ಸೇರುವುದಿಲ್ಲವಾದರೂ, ಸಾಹಿತ್ಯಕ್ಕೆ ಮುಖ್ಯವಾದ ಅಂಗಗಳಾಗಿರುವುದರಿಂದ ಇವುಗಳಲ್ಲಿ ಪ್ರಸಿದಿ ಯಾ ಬೇಕಾಗಿದೆ. ಇವಲ್ಲದೆ, ಸಾಹಿತ್ಯಕ್ಕೆ ಸಂಬಂಧವೇ ಇಲ್ಲದೆ, ಕೇವಲ ಶಾಸ್ತ್ರ ವಿಷಯಗಳನ್ನು ಪ್ರೌಢವಾದ ಪದ್ಯ ಗದ್ಯ ಶೈಲಿಯಲ್ಲಿ ತಿಳಿಸುವ ಅನೇಕ ಶಾಸ್ತ್ರಗ್ರಂಥಗಳಿರುತ್ತವೆ. ಮತ್ತು, ಇನ್ನೊಂದು ತಂಡವಾಗಿ, ದೇಶದಮೇಲೆಲ್ಲಾ ವ್ಯಾಪಿಸಿರುವ ಸಾವಿರಾರು ಶಾಸನಗಳಲ್ಲಿ ಚರಿತ್ರಾಂಶಗಳೂ, ಸಾಮಾಜಿಕ ವೃತ್ತಾಂತ ಗಳೂ, ಉತ್ಕೃಷ್ಟವಾದ ಶೈಲಿಯಲ್ಲಿ ಬರೆದಿರುವ ಕೆಲವು ಸಣ್ಣ ಕವನಗಳೂ ದೊರೆಯುತ್ತವೆ. ದಿಕ್ಷದರ್ಶನ ನಾರ್ಥವಾಗಿ, ಈ ಚರಿತ್ರೆಯ ಒಂದು ಭಾಗದಲ್ಲಿ, ಈ ಲಕ್ಷಣ ಗ್ರಂಥಗಳು, ಶಾಸ್ತ್ರಗ್ರಂಥಗಳು, ಶಾಸನಗಳು ಇವುಗಳ ವಿಷಯವಾಗಿ ಸ್ವಲ್ಪಮಟ್ಟಿಗೆ ಹೇಳಿರುತ್ತದೆ.
ಕವಿಗಳ ಚರಿತ್ರೆ ಮತ್ತು ಕಾಲ ಸಾಹಿತ್ಯದ ಗ್ರಂಥವಿವರಣೆಯನ್ನು ಮಾಡುವಾಗ, ಆ ಗ್ರಂಥಗಳನ್ನು ಬರೆದ ಕವಿಗಳ ವಿಷಯವನ್ನೂ ಹೇಳತಕ್ಕದ್ದು ಸ್ವಾಭಾವಿಕವಾಗಿಯೇ ಇದೆ. ಆದರೆ ನಮ್ಮ ದೇಶದಲ್ಲಿ ಕವಿಗಳ ಕಾಲ, ಜೀವನಚರಿತ್ರೆ
ಕನ್ನಡ ಸಾಹಿತ್ಯದ ಚರಿತ್ರೆ
೪೧೧
ಮುಂತಾದ ಸಂಗತಿಗಳಿಗೆ ಪೂರೈಕರು ಗಮನ ಕೊಟ್ಟಿಲ್ಲವಾದದ್ದರಿಂದ, ಕವಿಗಳ ವಿಷಯವಾಗಿ ನಮಗೆ ತಿಳಿದಿರುವ ನಿಜಾಂಶಗಳು ಬಹಳ ಸ್ವಲ್ಪವೇ. ಅಲ್ಲಲ್ಲಿ ಪ್ರಸಿದ್ಧ ಕವಿಗಳ ವಿಷಯವಾಗಿ ಜನರು ಆಡಿಕೊಳ್ಳುವ ಐತಿಹ್ಯಗಳುಂಟು; ಕೆಲವು ಪುಸ್ತಕಗಳಲ್ಲಿ ಇವನ್ನು ಸೇರಿಸಿರುವುದೂ ಉಂಟು. ಆದರೆ ಇಂಥಾ ಐತಿಹ್ಯಗಳು ಕವಿ ಸತ್ಯ ಬಹುಕಾಲದ ಮೇಲೆ ಹುಟ್ಟಿರುವುದರಿಂದಲೂ ಸಂಸ್ಕೃತ ಸಾಹಿತ್ಯದ ಭೋಜ, ಕಾಳಿದಾಸ ಮುಂತಾದವರ ವಿಷಯವಾದ ಸೃಷ್ಟನೆಯ ಕಥೆಗಳನ್ನು ಇವು ಅನುಕರಿಸಿರುವುದರಿಂದಲೂ, ಚರಿತ್ರೆಯ ಶೋಧನೆಗೆ ಸಿಕ್ಕಿದಾಗ ಇವುಗಳಲ್ಲಿ ಕೆಲವು ಸುಳ್ಳೆಂದು ಕಂಡುಬಂದಿರುವುದರಿಂದಲೂ, ಸಾಮಾನ್ಯವಾಗಿ ಇವೆಲ್ಲಾ ಕಲ್ಪಿತ ಕಥೆಗಳೆಂದೇ ಹೇಳಬಹುದು. ಖಂಡಿತವಾದ ಆಧಾರವಿಲ್ಲದೆ ಇವನ್ನು ನಂಬಲಾಗುವುದಿಲ್ಲ. ಕವಿಗಳು ತಾವೇ ತಮ್ಮ ವಿಷಯವಾಗಿ ಏನಾದರೂ ಹೇಳಿದ್ದರೆ ಅದು ನಂಬತಕ್ಕದಾಗಿದೆ. ಆದರೆ ಕೆಲವರು ಉದಾಸೀನಪುರುಷರು ತಮ್ಮ ಹೆಸರನ್ನೇ ಹೇಳುವುದಿಲ್ಲ. ಮತ್ತೆ ಕೆಲವರು ತಮ್ಮ ಹೆಸರನ್ನು ಗಂಭೀರ ವಾದ ಸಂಸ್ಕೃತದಲ್ಲಿ ಅರ್ಧ ಮುಚ್ಚಿರುತ್ತಾರೆ. ಪೊನ್ನನೆಂದು ಹೆತ್ತ ತಾಯಿ ಕರೆದರೆ ಕಾವ್ಯಗೌರವವು ಪನ್ನ ಮಾರನೆಂದು ಕೂಗುತ್ತದೆ: ಬೊಮ್ಮನ ಕಮಲಭವನಾಗಿ ಮಾರ್ಪಡುತ್ತಾನೆ; ಸುಮನೋಬಾಣನಿಗೆ ಬಿರುದಿನಲ್ಲೇ ಪಠ್ಯವಸಾನ; ಲಕ್ಷ್ಮೀಶನು ಲಕ್ಷ್ಮಿಪತಿಯಾಗಿರಬಹುದು, ಲಕ್ಷ್ಮೀಕಾಂತನೂ ಆಗಬಹುದು. ಕೆಲವರು ತಮ್ಮ ತಂದೆ, ತಾಯಿ, ಅಣ್ಣತಮ್ಮಂದಿರು, ಹೆಂಡತಿ, ಮಕ್ಕಳು, ಗುರುಗಳು ಮುಂತಾದವರ ಹೆಸರನ್ನು ತಿಳಿಸಿದ್ದಾರೆ; ತಮ್ಮ ರೂಪು, ಪಾಂಡಿತ್ಯ, ಒಬ್ಬರು ಕೊಟ್ಟರೋ ತಾವೇ ಇಟ್ಟುಕೊಂಡ ಬಾಯಿತುಂಬ ಬಿರುದು, ಶೌರ, ಐಶ್ವರ ಇವುಗಳನ್ನು ಯಥೇಷವಾಗಿ ಹೊಗಳಿಕೊಂಡಿದ್ದಾರೆ. ಚರಿತ ಕಾರನಿಗೆ ಈ ಸಂಗತಿಗಳಿಂದ ಹೆಚ್ಚು ಪ್ರಯೋಜನವಿಲ್ಲ; ಅವನಿಗೆ ಸಹಾಯವಾಗುವುದು, ಕವಿ ತಾನು ಗ್ರಂಥವನ್ನು ಪೂರೈಸಿದ ವರ್ಷ, ತನ್ನ ರಾಜ, ಗುರು, ತನಗೆ ಹಿಂದಿದ್ದ ಕವಿಗಳು ಇವುಗಳನ್ನು ತಿಳಿಸುವುದು. ಅವನ ಅದೃಷ್ಟಕ್ಕೆ, ಕೆಲವರು ಈ ವಿಚಾರಗಳನ್ನು ಹೇಳಿ ತಮ್ಮ ಕಾಲನಿರ್ಣಯಕ್ಕೆ ಸಾಧನವನ್ನು ಒದಗಿಸಿ ಕೊಟ್ಟಿದ್ದಾರೆ.
ಸಾಹಿತ್ಯ ಚರಿತ್ರೆಗೆ ಮುಖ್ಯವಾಗಿ ಬೇಕಾದುದು ಕಾಲ. ಕನ್ನಡ ಸಾಹಿತ್ಯದಲ್ಲಿ ಕವಿಗಳ ವಿಷಯ ನಮಗೆ ತಿಳಿದಿರುವುದು ಬಹಳ ಸ್ವಲ್ಪವಾದರೂ, ಅವರ ಕಾಲಗಳನ್ನು ನಿರ್ಣೆಸುವುದು ಬಹು ಮುಖ್ಯ ವಾದ ವಿಷಯವಾಗಿದೆ. ಈ ಕಾಲನಿರ್ಣಯಕ್ಕೆ ಸಾಧನಗಳು ಯಾವುವೆಂದರೆ
9ನೆಯ ಸಾಧನ: ಗ್ರಂಥಸಮಾಪ್ತಿಯ ಕಾಲವನ್ನು ಕವಿ ತಾನೇ ಹೇಳಿರುವುದು, ಜೈನ ವೀರಶೈವ ಕವಿಗಳು ಸಾಮಾನ್ಯವಾಗಿ ಹೀಗೆ ಕಾಲವನ್ನು ತಿಳಿಸುವುದು ಹೆಚ್ಚು: ಬ್ರಾಹ್ಮಣ ಕವಿಗಳು ತಿಳಿಸುವುದು ಅಪೂರ್ವ, ಗ್ರಂಥದ ಕೊನೆಯಲ್ಲಿ ಕವಿ ಶಾಲಿವಾಹನಶಕದ ವರ್ಷವನ್ನು ಸಂಖ್ಯೆಯಿಂದಾಗಲಿ ಸಂಕೇತ ಶಬ್ದಗಳಿಂದಾಗಲಿ ಹೇಳಿರುತ್ತಾನೆ. ಇದಕ್ಕೆ ೭೮ನ್ನು ಸೇರಿಸಿದರೆ ಕ್ರಿಸ್ತಶಕದ ವರ್ಷವಾಗುತ್ತದೆ. ಉದಾಹರಣೆಗಾಗಿ, ಕನ್ನಡದಲ್ಲಿ ಆದಿಕವಿಯೆಂದು ಹೆಸರುಗೊಂಡ ಪುಪನು ತನ್ನ ಆದಿಪುರಾಣದ ಕೊನೆಯಲ್ಲಿ
ಶಕವರ್ಷಮೆಂಟುನೂ ರ್ಕೆ ಕಡೆಯೊಳುವತು ಮೂಜು ಸಂದಂದು ಜಗ ಪ್ರಕಟಪ್ಪ ವಸಂವತ್ಸರ
ದ ಕಾರ್ತಿಕಂ ಮುದವನೀಯ ನಂದೀಶ್ವರದೊಳ್
ಈ ಕೃತಿ ನೆಗಟ್ಟುದು...... ಎಂದು ಹೇಳಿದ್ದಾನೆ. ಇದರಿಂದ ಈ ಗ್ರಂಥದ ಕಾಲ ೮೬೩ +೭೮=೯೪೧ ಆಯಿತು.
ಹೀಗೆಯೇ ರನ್ನನು
ಶಕವರ್ಷ೦ ಪಂಚದಶಾ ಧಿಕ ನವಶತಮಾಗೆ ವಿಜಯಸಂವತ್ಸರ ಕಾ ರ್ತಿಕ ನಂದೀಶ್ವರ ದಿನದೊಳ್ ಪ್ರಕಟಿಸಿದುದು ರತ್ನನಿಂದಮಜಿತಪುರಾಣಂ
೪೧೨
ಶ್ರೀ ಸಾಹಿತ್ಯ
ಎಂಬ ಪದ್ಯದಲ್ಲಿ ಅಜಿತಪುರಾಣವನ್ನು ಶಾ. ಶ. ೯೧೫ ಎಂದರೆ ಕ್ರಿ. ಶ. ೯೯೩ ರಲ್ಲಿ ಪ್ರಕಟನೆ ಮಾಡಿದನೆಂದು ತಿಳಿಸಿದ್ದಾನೆ.
ನಮಗೆ ತಿಳಿದುಬಂದಿರುವ ವೀರಶೈವ ಕವಿಗಳಲ್ಲಿ ಮೊದಲು ತನ್ನ ಕಾಲವನ್ನು ತಿಳಿಸಿರುವವನು ಸೋಮರಾಜ.
ಜನನಾಘೋತ್ತಮ ಸೋಮರಾಜನುಸಿರ್ದಿ ಕಾವ್ಯಂ ವಲಂ ಶಾಲಿವಾ ಹನ ಶಾಕಾಬ್ದಮದೆಯೆ ಸಾಸಿರದ ನೂಆಂ ಸಂದ ನಾಲ್ವತ್ತು ನಾ ಲ್ಬನೆಯಾ ರಂಜಿತ ಚಿತ್ರಭಾನುವ ವರಾಜೋತ್ಸತೈಕಾದಶೀ
ವನಜಾರಾತಿತನೂಜವಾಸರದೊಳಾದಲ್ಲಮಂಗರ್ಪಿತಂ | ಎಂಬ ಈತನ ಹೇಳಿಕೆಯ ಆಧಾರದ ಮೇಲೆ ಈತನ ಉದ್ಧಟ ಕಾವ್ಯವು ೧೪೪ +೭೮ =೧೨೨೨ ರಲ್ಲಿ ಮುಗಿಯಿತು ಎಂದು ನಿಶ್ಚಿಸಬಹುದು.
ಬಸವಪುರಾಣವನ್ನು ಬರೆದ ಭೀಮಕವಿ
ಕೋವಿದರು ಕೇಳೋಳ್ಳಿತೆನಲುಡು ದೇವನಿಧಿ ನಯನೇಂದು ಸಂಖ್ಯೆಗೆ ಲೈವಿ ಶಕವರ್ಷಗಳಾಗಲು ಸೌಮ್ಯವತ್ಸರದ
ಶ್ರಾವಣ ಬಹುಳಪಕ್ಷ ದಶಮೀ ಜೀವವಾರದೊಳಾದಿ ವೃಷಭೇಂ
ದ್ರಾವತಾರದ ಬಸವಚರಿತೆ ಸಮಾಪ್ತಿಯಾಯಿತ್ತು ಎಂಬುದಾಗಿ ಸಂಕೇತ ಪದಗಳಿಂದ ಕಾಲವನ್ನು ಸೂಚಿಸಿರುವನು. ಇಲ್ಲಿ ಉಡುದೇವ = ಚಂದ್ರ=೧ (ಏಕಸ್ಥಾನದಲ್ಲಿ): ನಿಧಿ=ನವನಿಧಿ =೯ (ದಶಕಸ್ಥಾನದಲ್ಲಿ); ನಯನ =೨ (ಶತಕಸ್ಥಾನದಲ್ಲಿ); ಇಂದು= ೧ (ಸಹಸ್ರಸ್ಥಾನದಲ್ಲಿ); ಆದದ್ದರಿಂದ ಗ್ರಂಥಕಾಲ: ೧೨೯೧+೭೮=೧೩೬೯.
ಈ ರೀತಿ ನಿಸ್ಸಂಶಯವಾದ ಕವಿಗಳ ಕಾಲಗಳನ್ನು ಹೆಗ್ಗುರುತಾಗಿಟ್ಟುಕೊಂಡು ಮಿಕ್ಕ ಕವಿಗಳ ಕಾಲವನ್ನು ಹೆಚ್ಚು ಕಡಮೆ ಊಹಿಸಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದ ವರ್ಷಗಳು ಯಾವು ವೆಂದರೆ
ಜೈನ
ವೀರಶೈವ
ಬ್ರಾಹ್ಮಣ
೯೪೧ ಪಂಪ ೯೭೮ ಚಾವುಂಡರಾಯ ೯೯೩ ರನ್ನ ೧೧೧೨ ನಯಸೇನ ೧೧೮೯ ಅಗ್ಗಳ ೧೨೦೯ ) ಜನ್ನ ೧೨೩೦ ೨ ೧೨೨೨ ಪಾರ್ಶ್ವ
೧೨೨೨ ಸೋಮರಾಜ
೧೩೬೯ ಭೀಮ ೧೪೨೪ ಭಾಸ್ಕರ ೧೫೦೮ ಮಂಗರಸ
೧೫೧೩ ಮಲ್ಲಣಾರ್
೪೧೩
ಕನ್ನಡ ಸಾಹಿತ್ಯದ ಚರಿತ್ರೆ
೧೫೩೩ ವಿದ್ಯಾನಂದ ೧೫೨೭ ರತ್ನಾಕರ
೧೫೮೪ ವಿರೂಪಾಕ್ಷ ೧೬೧೪ ಭಟ್ಟಾಕಳಂಕ
೧೬೫೫ ) ಷಡಕ್ಷರಿ ೧೬೭೭
೧೬೭೯-೯೧ ಚಿಕುಪಾಧ್ಯಾಯ ೧೭೯೭) ದೇವಚಂದ್ರ ೧೮೩೮ )
ಈ ಕಾಲನಿರ್ಣಯದಿಂದಲೂ, ಶಾಸನಗಳಿಂದ ತಿಳಿಯುವ ನೃಪತುಂಗನ ಕಾಲದಿಂದಲೂ (೮೧೪-೮೭೭), ೯ ನೆಯ ಶತಮಾನದ ಮಧ್ಯಕಾಲದಿಂದ ಕನ್ನಡಸಾಹಿತ್ಯ ಬೆಳೆದು ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.
೨ನೆಯ ಸಾಧನ: ಶಾಸನಗಳು, ಕೆಲವು ಕವಿಗಳು ತಾವೇ ಶಾಸನಗಳನ್ನು ಬರೆದಿದ್ದಾರೆ. ೧೯೧ ಮತ್ತು ೧೯೭ರಲ್ಲಿ ಬರೆದ ಎರಡು ಶಾಸನಗಳಲ್ಲಿ “ ಜನ್ನಯ್ಯನ ಕವಿತೆ” ಎಂದಿದೆ. ೧೨೦೫ರ ಒಂದು ಶಾಸನದಲ್ಲಿ
ಲಳಿತಪದಾರ್ಥಾಳಂಕೃತಿ ಗಳಿನೂಸರ್ ರಸಂಗಳಿಂದ ಬುಧರೊಳ್ ಪುಳಕಾ ವಳಿಸಸ್ಯಗೆಯೆ ಕವಿಕುಳ
ತಿಳಕಂ ಶಾಸನವನೊಲ್ಲು ಪೇಟ್ಟಿಂ ಪಾರ್ಶ್ವಂ ಎಂದು ಹೇಳಿದೆ. ಈ ಕಾಲಗಳು ಕವಿಗಳೇ ಹೇಳಿರುವ ಮೇಲೆಕೊಟ್ಟಿರುವ ಕಾಲಕ್ಕೆ ಸರಿಹೋಗುತ್ತವೆ.
ಅಥವಾ, ಶಾಸನದಲ್ಲಿ ಕವಿಗಳ ಗ್ರಂಥದಿಂದ ಪದ್ಯಗಳನ್ನು ಎತ್ತಿ ಬರೆದಿರಬಹುದು. ನಾಗಚಂದ್ರನು ಗುರುಗಳನ್ನು ಸ್ತುತಿಸುವ ಪದ್ಯಗಳು ಶ್ರವಣಬೆಳದ ೧, ೧೧೫, ೧೧೪೫, ೧೧೬೩ರಲ್ಲಿ ಬರೆದ ಶಾಸನಗಳಲ್ಲಿ ಸಿಕ್ಕುವುದರಿಂದಲೂ, ಮತ್ತು ಇತನ ಸ್ಥಳವೆಂದು ಊಹಿಸಿರುವ ಬಿಜಾಪುರದಲ್ಲಿ ೧೭೬
೧೧೨೫ರಲ್ಲಿ ಆಳುತ್ತಿದ್ದ ರಾಜನ ಕಾಲದಲ್ಲಿ ಬರೆದ ಶಾಸನದ ಪದ್ಯಗಳಿಗೂ ರಾಮಚಂದ್ರಚರಿತ ಪುರಾಣದ ಕೆಲವು ಪದ್ಯಗಳಿಗೂ ಹೋಲಿಕೆ ಇರುವುದರಿಂದಲೂ, ಈತನು ೧೧೦ಕ್ಕೆ ಹಿಂದೆ ಇದ್ದನೆಂದು ಊಹಿಸಬಹುದಾಗಿದೆ.
ಮತ್ತು, ಈ ಕವಿಗಳು ರಾಜರಾಗಿದ್ದರೆ ಅಥವಾ ತಮ್ಮ ರಾಜರ ಮತ್ತು ಗುರುಗಳ ಹೆಸರನ್ನು ಹೇಳಿದ್ದರೆ, ಅವರ ಕಾಲಗಳು ಶಾಸನಗಳಿಂದ ಗೊತ್ತಾಗಬಹುದು. ನೃಪತುಂಗನು ರಾಜನು; ಶಾಸನಗಳಿಂದ ಇವನ ಕಾಲ ೮೧೪-೮೭೭, ಪೊನ್ನನು ಕೃಷ್ಣರಾಜನು ತನಗೆ ಉಭಯ ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನೆಂದು ಹೇಳುತ್ತಾನೆ. ಈ ರಾಜನು ೯೩೯-೯೬೮ರಲ್ಲಿ ಆಳಿದನು. ರನ್ನನು ಜೈಲಪನಿಂದ (೯೭೩-೯೯೭) ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು ಮತ್ತು ಆತನ ಮಗನಾದ ಸತ್ಯಾಶ್ರಯನನ್ನು (೯೯೭-೦೭) ಭೀಮನಿಗೆ ಹೋಲಿಸಿ ಗದಾಯುದ್ಧವನ್ನು ಬರೆದನು. ಇದು ತಾನು ಕೊಟ್ಟಿರುವ ಕಾಲಕ್ಕೆ (೯೯೩) ಹೊಂದುತ್ತದೆ.
ಚಿಕ್ಕದೇವರಾಜ ಒಡೆಯರ ಕಾಲ ೧೬೭೨-೧೭೦೪. ಇದರಿಂದ ಇವರ ಗ್ರಂಥಗಳ ಕಾಲವೇ ಅಲ್ಲದೆ, ಇವರ ಆಶ್ರಿತರಾಗಿದ್ದೆವೆಂದು ಹೇಳಿಕೊಂಡಿರುವ ತಿರುಮಲಾರ್, ಸಿಂಗರಾರ, ಚಿಕುಪಾಧ್ಯಾಯ, ಹೊನ್ನಮ್ಮ ಮುಂತಾದವರ ಕಾಲವೂ ತಿಳಿಯಬರುತ್ತದೆ. ಚಿಕುಪಾಧ್ಯಾಯನು ತಾನೇ ಕೊಟ್ಟಿರುವ ನಿಲವನ್ನು ಮೇಲೆ ಹೇಳಿದ.
{
3
ಶ್ರೀ ಸಾಹಿತ್ಯ
ಆದರೆ ಈ ಸಾಧನದಲ್ಲಿ ಒಂದು ನ್ಯೂನತೆ ಉಂಟು. ಕೆಲವು ವೇಳೆ ಒಂದೇ ಹೆಸರುಳ್ಳ ಗುರುಗಳು, ರಾಜರು ಹಲವರಿರುತ್ತಾರೆ. ಮತ್ತು ಪೂರ್ವಿಕರ ಬಿರುದುಗಳನ್ನೇ ಮುಂದೆ ಬರುವವರೂ ಅನ್ವಯಿಸಿ ಕೊಳ್ಳುತ್ತಾರೆ. ಇದರಿಂದ ಯಾರ ಕಾಲದಲ್ಲಿ ಕವಿ ಇದ್ದನೆಂದು ನಿರ್ಧರಿಸಬೇಕಾದರೆ ಬೇರೆ ಸಾಧನಗಳನ್ನೂ ಉಪಯೋಗಿಸಬೇಕಾಗುತ್ತದೆ. ವೀರಶೈವ ಕವಿಗಳಲ್ಲಿ ಆದಿಕವಿ ಎಂದು ಹೇಳಬಹುದಾದ ಹರೀಶ್ವರನು ಹೊಯ್ಸಳರಾಜನಾದ ನಾರಸಿಹನಲ್ಲಿ ಕರಣಿಕನಾಗಿದ್ದನೆಂದು ಪ್ರತೀತಿ ಇದೆ. ಇದರ ಮೇಲೆ ಕಿಟಲ್ ಸಾಹೇಬರು ೧೨೮೩ರಲ್ಲಿ ಪಟ್ಟಕ್ಕೆ ಬಂದ ವೀರನಾರಸಿಹ್ಮನೆಂದು ಭಾವಿಸಿ ಹರೀಶ್ವರನು ಸುಮಾರು ೧೨೯೦ರಲ್ಲಿ ಇದ್ದಿರಬೇಕೆಂದು ಊಹಿಸಿದ್ದಾರೆ. ಆದರೆ ಸೋಮರಾಜನು ೧೨೨೨ರಲ್ಲಿ ಹರೀಶ್ವರನನ್ನು ಸ್ತುತಿಸಿರುವುದರಿಂದ, ಹರೀಶ್ವರನು ೧೪೧ ರಿಂದ ೧೧೭೩ರ ವರೆಗೆ ಆಳಿದ ನರಸಿನ ಕಾಲದಲ್ಲಿ ಸುಮಾರು ೧೧೬೫ರಲ್ಲಿರಬೇಕೆಂದು ನರಸಿಹಾಚಾರರು ನಿಷ್ಕರ್ಷಿಸಿರುತ್ತಾರೆ. ಈತನು ನರಸಿಹನೆಂಬ ರಾಜನ ಕಾಲದಲ್ಲಿದ್ದುದು ನಿಜಾಂಶವಾದರೆ, ೧೧೬೫ನ್ನೇ ಒಪ್ಪಬೇಕಾಗುತ್ತದೆ. ೧೨೨೨ಕ್ಕೆ ಹಿಂದೆ ಇದ್ದ ನೆನ್ನುವುದರಲ್ಲಿ ಸಂದೇಹವೇ ಇಲ್ಲ.
ಒಂದೊಂದು ವೇಳೆ ಅತಿಪುರಾತನವಾದ ಪ್ರತಿಯನ್ನು ಮಾಡಿದ ವರ್ಷವೂ ಕಾಲನಿರ್ಣಯಕ್ಕೆ ಸಹಾಯವಾಗುತ್ತದೆ.
೩ನೆಯ ಸಾಧನ: ಪೂರ್ವಕವಿಪಂಕ್ತಿಯಲ್ಲಿ ಕವಿಯ ಹೆಸರನ್ನು ಹೇಳಿರುವುದು, ಕವಿಗಳು ಪ್ರಸಿದ್ಧರಾದ ಅಥವಾ ತಾವು ಓದಿದ್ದ ಪೂರ್ವಕವಿಗಳನ್ನು ಸ್ತೋತ್ರಮಾಡುವ ಪದ್ಧತಿಯುಂಟು. ಇದರಿಂದ ಕವಿಗಳ ಆನುಪೂರ್ವಿ ಗೊತ್ತಾಗುತ್ತದೆ. ಸೋತ್ರಮಾಡುವ ಕವಿಯ ಕಾಲ ನಿರ್ಧರವಾದರೆ, ಆ ಕಾಲಕ್ಕೆ ಹಿಂದೆ ಇದ್ದನೆಂಬುದು ಸ್ವತಸ್ಸಿದ್ದವಾಗಿಯೇ ಇದೆ; ಆದರೆ ಎಷ್ಟು ಹಿಂದೆ ಇದ್ದನೆಂದು ಹೇಳುವುದಕ್ಕಾಗುವು ದಿಲ್ಲ. ಪಂಪನು ಮತ್ತು ರನ್ನನು ತಮ್ಮ ಕಾಲಗಳನ್ನು ತಿಳಿಸಿದ್ದಾರೆ; ಪೊನ್ನನು ತಿಳಿಸಿಲ್ಲ. ಪಂಪನು ಪೊನ್ನನನ್ನು ಹೊಗಳಿಲ್ಲ. ಪೊನ್ನನು ಪಂಪನನ್ನು ಹೊಗಳಿಲ್ಲ. ರನ್ನನು ಪಂಪ ಪೊನ್ನರಿಬ್ಬರನ್ನೂ ಹೊಗಳಿದ್ದಾನೆ:
ಕವಿಜನದೊಳ್ ರತ್ನತ್ರಯ ಪವಿತ್ರರೆನೆ ನೆಗಟ್ಟಿ ಪಂಪನುಂ ಪೊನ್ನಿಗನುಂ ಕವಿರತ್ನನುಮಾ ಮೂವರ್
ಕವಿಗಳ್ ಜಿನಸಮಯದೀಪಕರ್ ಪೆಜರೊಳರೇ? ಇದರಿಂದ ಪೊನ್ನನು ಪಂಪರನ್ನರ ಮಧ್ಯೆ ಇದ್ದನೆಂದು ಹೇಳಬಹುದಾಗಿದೆ. ಮೇಲೆ ಹೇಳಿದ ಎರಡನೆಯ ಆಧಾರದಿಂದ ಸುಮಾರು ೯೫೦ರಲ್ಲಿದ್ದನೆಂದು ಊಹಿಸಬಹುದಾಗಿದೆ. ಪಂಪನ ಹೆಸರನ್ನು ಏಕೆ ಈತನು ಹೇಳಲಿಲ್ಲವೋ ತಿಳಿಯದು.
ಇದೇ ರೀತಿ ನೃಪತುಂಗನು (೮೧೪-೮೭೭) ತನ್ನ ಹಿಂದೆ ಇದ್ದ ಕವಿಗಳ ಹೆಸರನ್ನು ಹೇಳಿರುವನು. ನಯಸೇನನು (೧೧೨)
ಅಸಗನ ದೇಸೆ ಪೊನ್ನನ ಮಹೋನ್ನತಿವ ಬೆಡಂಗು ಪಂಪನಂ ದಸದೃಶಮಪ್ಪಪೂರ್ವರಸಮೆ ಗಜಾಂಕುಶನೊಳ್ಳುವತ್ತು ರಂ ಜಿಸುವ ಸದರ್ಥದೃಷ್ಟಿ ಗುಣವರ್ಮನ ಜಾಣ್ ಕವಿರತ್ನನೊಜೆ ಶೋ
ಭಿಸಿ ನೆಲಸಿರ್ಕೆ ಧಾರಿಣಿ ಮನಂಗೊಳೆ ಮತಿಯೊಳ್ ನಿರಂತರ ಎಂದು ಪ್ರಾರ್ಥಿಸಿರುವನು. ಈ ಕವಿಗಳಲ್ಲಿ ಪಂಪ ರನ್ನರ ಕಾಲ ಅವರೇ ತಿಳಿಸಿದ್ದಾರೆ; ಪೊನ್ನನ ಕಾಲ ಸುಮಾರಾಗಿ ಊಹಿಸಿದ; ಮಿಕ್ಕ ಕವಿಗಳು (ಅಸಗ, ಗಜಾಂಕುಶ, ಗುಣವರ್ಮ) ೧೧೨ಕ್ಕೆ ಹಿಂದಿನವರು ಎಂದು ಹೇಳಬಹುದು. ಪೊನ್ನನೂ ಅಸಗನ ಹೆಸರನ್ನು ಹೇಳಿದ್ದಾನೆ.
೪೧೫ ಕನ್ನಡ ಸಾಹಿತ್ಯದ ಚರಿತ್ರೆ
ಹೀಗೆ ಸೋಮರಾಜನು ಹರೀಶ್ವರ, ಕೆರೆಯಪದ್ಮರಸ, ಪಾಲ್ಕುರಿಕೆ ಸೋಮನಾಥ ಇವರನ್ನು ಹೊಗಳಿರುವುದರಿಂದ ಇವರು ೧೨೨೨ಕ್ಕೆ ಮುಂಚೆ ಇದ್ದರೆಂದು ವ್ಯಕ್ತವಾಗುತ್ತದೆ.
- ೪ನೆಯ ಸಾಧನ: ಉದ್ದರಣ, ಅನುಕರಣ, ಲಕ್ಷಣಗ್ರಂಥ ಕಾವ್ಯಸಂಗ್ರಹಗಳಲ್ಲಿ ಕವಿಯಪದ್ಯ ಗಳನ್ನು ಲಕ್ಷವಾಗಿ ಕೊಟ್ಟಿರುತ್ತಾರೆ. ನೃಪತುಂಗನ ಕವಿರಾಜಮಾರ್ಗ, ನಾಗವರ್ಮನ ಕಾವ್ಯಾವಲೋಕನ, ಕೇಶಿರಾಜನ ಶಬ್ದಮಣಿದರ್ಪಣ-ಈ ಗ್ರಂಥಗಳಲ್ಲಿ ಪೂರ್ವಕವಿಗಳಿಂದ ಉದಾಹರಣೆಗಳು ಸಿಕ್ಕುತ್ತವೆ. ಕೇಶಿರಾಜನು ರನ್ನ, ನಾಗವರ್ಮ, ನಾಗಚಂದ್ರ, ನೇಮಿಚಂದ್ರ, ಹಂಸರಾಜ, ಬ್ರಹ್ಮಶಿವ ಮುಂತಾದವರ
ಪದ್ಯಗಳನ್ನು ಅವರ ಹೆಸರು ಹೇಳದೆ ಕೊಟ್ಟಿರುವುದಲ್ಲದೆ,
ಗಜಗನ ಗುಣನಂದಿಯ ಮನ ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ ವಿಜಯರ ಹೊನ್ನನ ಹಂಪನ
ಸುಜನೋತ್ತಂಸನ ಸುಮಾರ್ಗಮಿದಳೆ ಲಕ್ಷಂ ಎಂದು ತನಗೆ ಪೂರ್ವದಲ್ಲಿದ್ದ ಕೆಲವರು ಕವಿಗಳ ಹೆಸರನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ. ಹೊಯ್ಸಳ ರಾಜನಾದ ಸೋಮೇಶ್ವರನ ಆಳಿಕೆಯಲ್ಲಿದ್ದ (೧೨೩೩-೧೨೫೪) ಕೇಶಿರಾಜನ ತಂದೆಯಾದ ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವವೆಂಬ ಕಾವ್ಯ ಸಂಗ್ರಹದಲ್ಲಿಯೂ, ಅಭಿನವ ವಿದ್ಯಾನಂದನ (೧೫೩೩) ಕಾವ್ಯಸಾರದಲ್ಲಿಯೂ, ಭಟ್ಟಾಕಳಂಕನ (೧೬೦೪) ಶಬ್ದಾನುಶಾಸನದಲ್ಲಿಯೂ ಅನೇಕ ಕವಿಗಳ ಪದ್ಯಗಳು ಉದ್ದರಿಸಲ್ಪಟ್ಟಿರುತ್ತವೆ.
ಉದ್ದರಣವಲ್ಲದೆ ಅನುಕರಣದಿಂದಲೂ ಒಂದೊಂದು ವೇಳೆ ಕವಿಗಳ ಆನುಪೂರಿಯನ್ನೂ ಕಾಲವನ್ನೂ ಊಹಿಸಬಹುದಾಗಿದೆ. ಲಕ್ಷ್ಮೀಶನ ಜೈಮಿನಿ ಭಾರತದ ವರ್ಣನೆಗಳಿಗೂ, ವಿರೂಪಾಕ್ಷನ ಚೆನ್ನಬಸವಪುರಾಣದ ವರ್ಣನೆಗಳಿಗೂ ಕೆಲವು ಕಡೆ ಬಹಳ ಹೋಲಿಕೆ ಇರುತ್ತದೆ. ವಿರ ಪಾಕನ ಕಾಲ ೧೫೮೪, ಲಕ್ಷ್ಮೀಶನನ್ನು ವಿರೂಪಾಕ್ಷನು ಅನುಕರಿಸಿದ್ದರೆ, ಲಕ್ಷ್ಮೀಶನು ೧೫೮೪ಕ್ಕೆ ಹಿಂದೆ ಇದ್ದಿರಬೇಕು; ಲಕ್ಷ್ಮೀಶನೇ ಅನುಕರಿಸಿದ್ದರೆ ೧೫೮೪ಕ್ಕೆ ಈಚೆಗೆ ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಅನುಕರಿಸಿ ದವರು ಯಾರೆಂಬ ವಿವಾದಕ್ಕೆ ಅವಕಾಶವುಂಟು,
೨ನೆಯ ಸಾಧನ: ಐತಿಹ್ಯಗಳು, ಕೆಲವು ಪ್ರಸಿದ್ಧ ಕವಿಗಳ ವಿಷಯದಲ್ಲಿ ಹೇಳುವ ಐತಿಹ್ಯಗಳಿಂದ ಕಾಲನಿರ್ಣಯಕ್ಕೆ ಸಹಾಯವಾಗಬಹುದೆಂದು ತೋರಬಹುದು. ಆದರೆ ಇಂಥ ಕಥೆಗಳು ಜನರಂಜನೆ ಗಾಗಿ ಹುಟ್ಟಿದ ಕೇವಲ ಕಲ್ಪನೆಗಳೇ ಹೊರತು ಪ್ರಾಮಾಣಿಕವೆಂದು ನಂಬುವುದಕ್ಕೆ ಆಧಾರಗಳಿಲ್ಲ. ಉದಾಹರಣೆಗಾಗಿ, ಕಾದಂಬರೀ ಕಾವ್ಯವನ್ನು ಸುಡಿಸಿ ನೇಮಿಚಂದ್ರನ ಲೀಲಾವತಿಗೆ ಕಡಿಸಿದರೆಂಬ
ಪ್ರತೀತಿ ಒಂದುಂಟು.
ಬಾಣ ಪೇಳಿದ ಕಾದಂಬರಿ ಕಾವ್ಯವ ಕೋಣಿಯಕೆಯೊಳು ಸುಡಿಸಿ
ಮಾಣದೆ ಲೀಲಾವತಿಗೆ ಕಪ್ಪಿಡಿಸಿದ ಜಾಣ ನೇಮಿಯ ಬಲಗೊಂಬೆ (ದೊಡ್ಡಯ್ಯ, ಸುಮಾರು ೧೫೫೦) ಸುಡಿಸಿ ಕಾದಂಬರಿಯನು ಲೀಲಾವತಿ ಗಿಡಿಸಿ ಕಪ್ಪನು ಕೀರ್ತಿ ಜಗವ ಎಡೆಗೊಂಡ ನೇಮಿಚಂದ್ರನ ಚಮತ್ಕತಿ ಬಂ
ದೆಡೆಗೊಳ್ಳುದೆನ್ನ ಚಿತ್ತದೊಳು (ಬಾಹುಬಲಿ, ಸು. ೧೫೬೦) * ಕಾದಂಬರಿಯೆಂಬ ಶೃಂಗಾರಕಾವ್ಯಮಂ ಮಾಡಿ ದೊರೆಯು ಮೆಚ್ಚಿಸಿ ಆನೆಯಮೇಲೇಜ್‌ಸಿ ಬರ್ಪಲ್ಲಿ ನೇಮಿಚಂದ್ರಕವಿ ತಡೆದು ಶೃಂಗಾರಮಪ್ಪ ಲೀಲಾವತಿಯ ರಚಿಸಿ ಸಭೆಯೊಳೋದಿಸೆ...ಮೆಚ್ಚಿ ಕಾದಂಬರೀಕಾವ್ಯ ಪುಸ್ತಕಮಂ ಸುಟ್ಟು ಲೀಲಾವತಿಗೆ ಕಪ್ಪನಿಡುವಲ್ಲಿ, ಕೇಳಿಕೊಂಡು ಮೊದಲೊಂದು ಓಲೆಯಂ ಸುಡಿಸಿ ಲೀಲಾವತಿಗೆ ಕಪ್ಪನಿಡಿಸಿದರ್.*
(ದೇವಚಂದ್ರ, ೧೮೩೮)
೪೧೬
ಶ್ರೀ ಸಾಹಿತ್ಯ
ಈ ಕಥೆಯಲ್ಲಿ ಏಳನೆಯ ಶತಮಾನದಲ್ಲಿ ಸಂಸ್ಕೃತದ ಕಾದಂಬರಿಯನ್ನು ಬರೆದ ಬಾಣನಿಗೂ, ಇದನ್ನು ಸುಮಾರು ೯೯೦ರಲ್ಲಿ ಕನ್ನಡಿಸಿದ ಒಂದನೆಯ ನಾಗವಮ್ಮನಿಗೂ, ಸುಮಾರು ೭೦ರಲ್ಲಿ ಲೀಲಾವತಿಯನ್ನು ರಚಿಸಿದ ನೇಮಿಚಂದ್ರನಿಗೂ ಗಂಟುಹಾಕಿದೆ.
ಹೀಗೆಯೇ ರುದ್ರಭಟ್ಟ, ಷಡಕ್ಷರಿ, ಲಕ್ಷ್ಮೀಶ ಈ ಮೂವರೂ ಸಮಕಾಲಿಕರೆಂದೂ ಇವರೊಳಗೆ. ಕವಿತಸ್ಪರ್ಧೆ ನಡೆಯಿತೆಂದೂ ಹೇಳುವ ಕಥೆಯೂ ಸೃಷ್ಟನೆಯ ಕಥೆಯೇ
ಶಿವಕಲಾ ಶಕ ಶುಕ್ತ ವರ್ಷ ಮಾ ಧವಸಿತಾರ್ಕದಿನ ಜೀವವಾರದೊಳ್ ಭವಿಗಳೆಲ್ಲ ವರರುದ್ರಭಟ್ಟನೇ ಕವಿಯೆನಿರೆದನೊಂದು ಕಾವ್ಯಮಂ
ಅರಸಲ್ ಜಗನ್ನಾಥವಿಜಯಮೆನಿಪಾ ಕಬ್ಬ ಮುರುದೋಷಪೂಗಪರಿಚಿತಮಾಗೆ ಲಾಕ್ಷಣಿಕ ವರರದಂ ರಾಜಶೇಖರವಿಳಾಸಕ ಪಡಿಯನೂರೆಯದಿರೆ ರುದ್ರಭಟ್ಟಂ ಪರಿಭವಕೆ ಗುರಿಯಾದನೆಂದು ಸಭಿಕರ್ ಪೇಳ ಪರಿಯರಿತು ಕರುಣದಿಂದಾ ಷಡಕ್ಷರಿದೇವ ಬಿರುದುಗಳ ಕೊಂಡು ಮಗುಳಿತ್ತು ಮನ್ನಿಸಿ ಪೊರೆದನದ ಕೇಳಿ ಲಕ್ಷ್ಮೀಶನು
ಹರಿಚರಿತದಿಂ ಕೂಡಿ ಹರಿಮೆಧಪರ್ವಕಥೆ - ಯೋರೆದ ವಾರ್ಧ ಕಪದಿಗಳಿಂದ ಜೈಮಿನಿದು ವರಸೂಕ್ತಿ ತಾತ್ಪರ್ಯಭರಗರ್ಭಿತಮದಾಗೆ ರಸಿಕರ್ಕಳನುಮೋದಿಸಲ್ ಪರಿಪರಿಯಲಂಕಾರರಸಭಾವಪುಷ್ಟಿಯಿಂ ಮೆರೆದುದು ಗುಣೇಂದುಕಲೆ ಪರಿಮಿತಾಬ್ದದ ಶಕದಿ ಹರಿವಾರ ಕಾರ್ತಿಕದ ಸಿತ ಪಂಚಮೀಪ್ರಜಾಪತಿಶರದಿ ಸಾಂಗಮನಲು
ಕನ್ನಡಗಬ್ಬಿಗರಂತನ ಮನ್ನಿಸಿ ಲಕ್ಷ್ಮೀಶನೊರ್ವನೇ ಕವಿರತ್ನಂ ಸನ್ನು ತನೆಂದುರುಬಿರುದಂ ಚಿನ್ನದಿ ಕವಿಚೂತಚೈತನೆನೆ ಬರೆದಿತ್ತರ್
ಇಲ್ಲಿ ಒಟ್ಟಿಗೆ ಕಲಸಿರುವ ಮೂವರಲ್ಲಿ ರುದ್ರಭಟ್ಟ ೧೨ನೆಯ ಶತಮಾನದವನೆಂದು ಖಂಡಿತವಾಗಿ ತಿಳಿದಿದೆ. ಷಡಕ್ಷರಿ ೧೭ನೆಯ ಶತಮಾನದವನೆಂದು ತಾನೇ ಕೊಟ್ಟಿರುವ ವರ್ಷಗಳಿಂದ ಗೊತ್ತಾಗಿದೆ. ಲಕ್ಷ್ಮೀಶನ ಕಾಲ ಇನ್ನೂ ಸಂದೇಹದಲ್ಲಿದೆ.
ಹೀಗೆಯೇ ಅಭಿನವಪಂಪನಿಗೂ ಕಂತಿಯೆಂಬ ಕಬ್ಬಿಗಿತಿಗೂ, ಚಾಮರಸನಿಗೂ ಕುಮಾರವ್ಯಾಸ ನಿಗೂ ಕವಿತಾಸ್ಪರ್ಧೆಗಳನ್ನು ಹುಟ್ಟಿಸಿರುತ್ತಾರೆ. ಇಂಥಾ ಕಥೆಗಳು ರಾಜಾವಳೀಕಥೆ, ಚೋರಬಸವಚರಿತ್ರೆ, ಭೈರವೇಶ್ವರಕಥಾಸೂತ್ರರತ್ನಾಕರ ಮುಂತಾದ ಆಧುನಿಕ ಗ್ರಂಥಗಳಲ್ಲಿ ಸಿಕ್ಕುತ್ತವೆ. ಚರಿತ್ರಾರ್ಹವಾದ ಪ್ರಮಾಣವಿಲ್ಲದೆ ಇಂಥಾ ಐತಿಹ್ಯಗಳು ಪ್ರಯೋಜನಕ್ಕೆ ಬರುವುದಿಲ್ಲ.
೬ನೆಯ ಸಾಧನ: ಕಾವ್ಯದ ಮತ, ವಿಷಯ, ರೂಪ, ಶೈಲಿ, ಮುಂತಾದುವು. ಇದೂ ಹಿಂದಿನ ಸಾಧನದಂತೆಯೇ ಅಷ್ಟು ಬಲವಾದ ಆಧಾರವಲ್ಲ. ಸಾಧಾರಣವಾಗಿ ನೋಡಿದರೆ, ಮೊದಲು ಜೈನರು, ಆಮೇಲೆ ವೀರಶೈವರು, ಆಮೇಲೆ ಬ್ರಾಹ್ಮಣರು; ಮೊದಲು, ಮತಬೋಧಕ ಗ್ರಂಥಗಳು, ಪುರಾಣಗಳು, ಭಕ್ತರ ಕಥೆಗಳು, ಆಮೇಲೆ ಅವುಗಳ ಆಧಾರದಮೇಲೆ ವಿಸ್ತರಿಸಿ ಬರೆದ ಅದೇ ಜಾತಿಯ
2----------
ಕನ್ನಡ ಸಾಹಿತ್ಯದ ಚರಿತ್ರೆ
೪೧೭
ಗ್ರಂಥಗಳು, ಶೃಂಗಾರಕಾವ್ಯಗಳು, ಕಥಾಕಾವ್ಯಗಳು; ಮೊದಲು, ಚಂಪು, ಬಳಿಕ ಷಟ್ಟದಿ, ಸಾಂಗತ್ಯ, ರಗಳೆ, ಮುಂತಾದ ವೃತ್ತಗಳಲ್ಲಿ ಬರೆದ ಕಾವ್ಯಗಳು; ಮೊದಲು ಆಕಾರ ಆಕಾರ ಶುದ್ಧ ಪ್ರಾಸ, ಆಮೇಲೆ ನಕಾರ ರಕಾರ ಮಿಶ್ರವಾದ ಪ್ರಾಸ; ಮೊದಲು, ಹಳಗನ್ನಡದ ಪ್ರೌಢಶೈಲಿ, ಈಚೆಗೆ ನಡುಗನ್ನಡ, ಹೊಸಗನ್ನಡದ ಲಲಿತಶೈಲಿ-ಇವೇ ಮುಂತಾದ ಚಿಹ್ನೆಗಳಿಂದ ಒಂದು ಕಾಲಕ್ರಮವನ್ನು ಸ್ಕೂಲವಾಗಿ ಹೇಳಬಹುದೆಂದು ತೋರಬಹುದು. ಆದರೆ ಕನ್ನಡ ಸಾಹಿತ್ಯವೆಲ್ಲಾ ಈ ಅಂಶಗಳಲ್ಲಿ ಬಹುಮಟ್ಟಿಗೆ ಒಂದೇ ಲಕ್ಷಣವುಳ್ಳದ್ದಾಗಿ ರುವುದು. ಬ್ರಾಹ್ಮಣ, ಜೈನ, ವೀರಶೈವ ಮತಗಳು ಬಹು ಪುರಾತನಕಾಲದಿಂದಲೂ ಇರುವುವು. ಬಳಕೆಯಲ್ಲಿಲ್ಲದ ಪುರಾತನಭಾಷೆಯಲ್ಲಿ ನೂತನ ಕಾಲದ ಕವಿಗಳು ಬರೆಯುವುದುಂಟು. ಚಂಪುವೆಂದಾಗಲಿ, ಸಾಂಗತ್ಯವೆಂದಾಗಲಿ, ಹೊಸಗನ್ನಡವೆಂದಾಗಲಿ-ಇದು ಹೊಸದು, ಇದು ಹಳೆಯದು, ಇದು ಹಿಂದಿ ನದು, ಇದು ಮುಂದಿನದು, ಇದು ಈ ಶತಮಾನಕ್ಕೆ ಸೇರಿದ್ದು ಎಂದು ದೃಢವಾಗಿ ಹೇಳುವಹಾಗಿಲ್ಲ. ಷಡಕ್ಷರದೇವನ ರಾಜಶೇಖರವಿಲಾಸದ ಪ್ರೌಢವಾದ ಭಾಷೆ, ಚಂಪೂಕಾವ್ಯಲಕ್ಷಣಗಳನ್ನು ನೋಡಿ ಇದು ಜೈನರ ಚಂಪೂಕಾವ್ಯಗಳ ಕಾಲಕ್ಕೆ ಎಂದರೆ ೧-೧೪ನೆಯ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುವು ದಿಲ್ಲ. ಲಕ್ಷ್ಮೀಶನ ಜೈಮಿನಿ ಭಾರತದ ವೈಷ್ಣವ ಕಥೆ, ವಾರ್ಧಕಷಟ್ಟದಿ, ಹೊಸಭಾಷೆಯ ಶೈಲಿಗಳನ್ನು ನೋಡಿ ಇವನು ರುದ್ರಭಟ್ಟನ ಜಗನ್ನಾಥವಿಜಯವೂ ರಾಘವಾಂಕನ ಹರಿಶ್ಚಂದ್ರ ಕಾವ್ಯವೂ ಹುಟ್ಟಿದ
ಹನ್ನೆರಡನೆಯ ಶತಮಾನದಲ್ಲಿ ಬರೆದಿರಲಾರನೆಂದು ದೃಢವಾಗಿ ಸಾಧಿಸಲಾಗುವುದಿಲ್ಲ.
ಒಟ್ಟಿನಮೇಲೆ, ೧ನೆಯ ಸಾಧನದಿಂದ ವರ್ಷವನ್ನೂ, ೨ನೆಯ ಸಾಧನದಿಂದ ಸುಮಾರು ಕಾಲ ಅಥವಾ ಶತಮಾನವನ್ನೂ, ೩, ೪ನೆಯ ಸಾಧನಗಳಿಂದ ಆನುಪೂರ್ವಿಯನ್ನೂ, ಗೊತ್ತುಮಾಡಬಹುದು. ೫, ೬ನೆಯ ಸಾಧನಗಳು ಮಿಕ್ಕ ಆಧಾರಗಳಿಗೆ ಹೊಂದಿಕೆಯಾದಾಗ ಮಾತ್ರ ಉಪಯೋಗಿಸತಕ್ಕುವಾಗಿವೆ.
ಸಾಹಿತ್ಯದ ವಿಭಾಗ ಪಂಪನಿಂದೀಚೆಗೆ ಸುಮಾರು ಒಂದುಸಾವಿರ ವರ್ಷಗಳ ಕನ್ನಡ ಸಾಹಿತ್ಯವನ್ನು ಎರಡು ಬಗೆಯಾಗಿ ವಿಭಾಗಮಾಡಬಹುದು: ಕಾಲಕ್ಕನುಸಾರವಾಗಿ, ಮತಕ್ಕನುಸಾರವಾಗಿ, ಕಾಲಕ್ರಮವನ್ನು ಕುರಿತು ವಿಭಾಗಮಾಡುವುದಾದರೆ, ಭಾಷೆ, ಕಾವ್ಯದ ರೂಪ, ರಾಜವಂಶಗಳು, ಪ್ರಧಾನ ಕವಿಯ ಹೆಸರು ಮುಂತಾದುವನ್ನು ಅನುಸರಿಸಿ, ಹಳಗನ್ನಡದ ಕಾಲ, ಹೊಸಗನ್ನಡದ ಕಾಲ; ಚಂಪುಗಳ ಕಾಲ, ಷಟ್ಟದಿ ಸಾಂಗತ್ಯಗಳ ಕಾಲ, ಯಕ್ಷಗಾನದ ಕಾಲ; ರಾಷ್ಟ್ರಕೂಟ-ಚಾಳುಕ್ಯ-ಗಂಗರ ಕಾಲ, ಹೊಯ್ಸಳ-ಬಿಜ್ಜಳರ ಕಾಲ, ವಿಜಯನಗರದ ರಾಜರ ಕಾಲ, ಮೈಸೂರು ರಾಜರ ಕಾಲ; ಪಂಪನ ಕಾಲ, ನಾಗಚಂದ್ರನ ಕಾಲ, ಕುಮಾರವ್ಯಾಸನ ಕಾಲ, ಷಡಕ್ಷರಿಯ ಕಾಲ-ಇವೇ ಮುಂತಾದ ಕಾಲಭಾಗಗಳನ್ನು ಏರ್ಪಡಿಸಿಕೊಳ್ಳ ಬೇಕಾಗುತ್ತದೆ. ಈ ವಿಭಾಗದಲ್ಲಿ ಸೌಕರವಾಗಲಿ, ಸಾಹಿತ್ಯದೃಷ್ಟಿಯಿಂದ ಒಂದು ಲಕ್ಷಣ ಸಮನ್ವಯ ವಾಗಲಿ, ವಿಶೇಷ ಪ್ರಯೋಜನವಾಗಲಿ ಕಾಣಬರುವುದಿಲ್ಲ. ಕನ್ನಡ ಸಾಹಿತ್ಯವೆಲ್ಲಾ ಪ್ರಾಯಶಃ ಸಂಸ್ಕೃತ ಸಾಹಿತ್ಯವನ್ನು ಅವಲಂಬಿಸಿ, ಸಂಪ್ರದಾಯ ಮಾರ್ಗವನ್ನೇ ಹಿಡಿದು, ರಚಿತವಾಗಿರುವುದರಿಂದಲೂ, ಬಹುಮಟ್ಟಿಗೆ ಸಮಾಜದಲ್ಲಿ ಕೂಡ ಕಾಲಕಾಲಕ್ಕೆ ಕಾಲಗುಣ ಬದಲಾಯಿಸದೆ ಒಂದೇ ರೀತಿಯಲ್ಲಿರುವುದ ರಿಂದಲೂ, ಕಾಲಕ್ಕನುಸಾರವಾಗಿ ಸಾಹಿತ್ಯವಿಭಾಗ ಮಾಡುವುದರಲ್ಲಿ ಅಷ್ಟು ಔಚಿತ್ಯ ತೋರುವುದಿಲ್ಲ.
ಮತವನ್ನು ಪ್ರಾಧಾನ್ಯವಾಗಿಟ್ಟುಕೊಂಡು ನೋಡಿದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಮೂರು ನಾಲ್ಕು ಘಟ್ಟಗಳು ಅಥವಾ ಚಳವಳಿಗಳು ಚೆನ್ನಾಗಿ ಮೇಲಕ್ಕೆದ್ದು ಕಣ್ಣಿಗೆ ಕಾಣುತ್ತವೆ. ಮೊದಲು, ಜೈನಮತಪ್ರಚಾರಣೆ, ಇದು ಮೊದಲನೆಯ ಘಟ್ಟ, ಕನ್ನಡ ಕಾವ್ಯಗಳು ನಮಗೆ ಕಣ್ಣಿಗೆ ಬೀಳುವುದಕ್ಕೆ ಮುಂಚೆಯೇ ಈ ಜೈನಮತಪ್ರಚಾರಣೆ ಕನ್ನಡ ದೇಶದಲ್ಲಿ ನಡೆದು, ಅನೇಕ ರಾಜವಂಶಗಳ ಆಶ್ರಯದಲ್ಲಿ ಜೈನಕವಿಗಳು ಉತ್ತಮ ಕಾವ್ಯಗಳನ್ನು ರಚಿಸಿರುತ್ತಾರೆ. ತೀರ್ಥಕರರ ಚರಿತ್ರೆ, ಪ್ರಸಿದ್ಧ ಪುರುಷರ ಇತಿಹಾಸಗಳು, ಜೈನ ತತ್ವಗಳು, ಇವೇ ಮುಂತಾದ ಜೈನಮತ ಸಂಬಂಧವಾದ ವಿಷಯಗಳನ್ನು ಪ್ರೌಢ ವಾದ ಹಳಗನ್ನಡಶೈಲಿಯಲ್ಲಿ ಚಂಪೂಗ್ರಂಥಗಳಲ್ಲಿ ವಿಸ್ತಾರವಾಗಿ ಬರೆದಿರುತ್ತಾರೆ. ಈ ಘಟ್ಟ ೯ ರಿಂದ ೧೨ನೆಯ ಶತಮಾನದವರೆಗೆ ಚಾಚಿರುತ್ತದೆ. ಆ ಶತಮಾನದ ಮಧ್ಯದಲ್ಲಿ ಎರಡನೆಯ ಘಟ್ಟ ಅಥವಾ
27
೪೧೮
ಶ್ರೀ ಸಾಹಿತ್ಯ ಚಳವಳಿಯನ್ನು ಸೇರುವವು. ಅದು ವೀರಶೈವಮತಪ್ರಚಾರಣೆ, ಪ್ರಜಾಸಾಮಾನ್ಯದಲ್ಲಿ ಹೆಚ್ಚಾಗಿ ವ್ಯಾಪಿಸಿದ ಈ ಮಹಾಚಲನದ ಪ್ರಭಾವದಿಂದ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಬದಲಾವಣೆಗಳು ಉಂಟಾದುವು. ಹಳಗನ್ನಡವನ್ನು ಹಿಮ್ಮೆಟ್ಟಿಸಿ, ಆಗ್ಗೆ ಬಳಕೆಯಲ್ಲಿದ್ದ ಹೊಸಗನ್ನಡದಲ್ಲಿ ಗ್ರಂಥರಚನೆ ಆರಂಭವಾಯಿತು. ಸುಸ್ಕೃತ ಛಂದಸ್ಸಿನ, ಚಂಪೂಗ್ರಂಥಗಳ ಪ್ರಾಧಾನ್ಯತೆ ತಗ್ಗಿ, ದೇಶ್ಯವೃತ್ತಗಳು ಮತ್ತು ಹಾಡುಗಬ್ಬಗಳು ಮುಂದಕ್ಕೆ ಬಂದುವು. ಆದರೂ ಹಳಗನ್ನಡಭಾಷೆಯೂ, ಚಂಪೂಗ್ರಂಥ ಗಳೂ ನಿಂತುಹೋಗಲಿಲ್ಲ; ಪ್ರೌಢಕವಿಗಳು ಜೈನಕವಿಗಳ ಸಮಾನ ಗೌರವಕ್ಕೆ ಪಾತ್ರರಾಗಬೇಕೆಂದು ಅವರ ಕ್ರಮವನ್ನೇ ಹಿಡಿದರು. ಜೈನಕವಿಗಳೂ ಈ ವೀರಶೈವ ಕವಿಗಳ ಪ್ರಾಬಲ್ಯಕ್ಕೆ ಒಳಪಟ್ಟು ಅವರ ಭಾಷೆ ಯನ್ನೂ, ಕಾವ್ಯರೂಪವನ್ನೂ, ಸಾಹಿತ್ಯ ಲಕ್ಷಣಗಳನ್ನೂ ಸ್ವೀಕರಿಸಿದರು. ಮೂರನೆಯದಾಗಿ, ೧೫ನೆಯ ಶತಮಾನದಲ್ಲಿ ವೈಷ್ಣವಭಕ್ತಿಮಾರ್ಗಪ್ರಚಾರಣೆಯ ಘಟ್ಟಕ್ಕೆ ಬರುವೆವು. ಇದು ಭಾಷೆಯಲ್ಲಿಯೂ, ಕಾವ್ಯಸ್ವರೂಪದಲ್ಲಿಯೂ ವೀರಶೈವರ ಮೇಲುಪಳ್ಳಿಯನ್ನು ಹಿಂಬಾಲಿಸಿತೇ ಹೊರತು ಬೇರೆ ವ್ಯತ್ಯಾಸ ವನ್ನೇನೂ ಮಾಡಲಿಲ್ಲ. ಮತವಿಷಯದಲ್ಲಿ ಮಾತ್ರ ಜಿನಭಕ್ತಿ, ಶಿವಭಕ್ತಿಯನ್ನು ಸಾರಿದ ಕಡೆ ವಿಷ್ಣು ಭಕ್ತಿ ಯನ್ನು ಸಾರಿ, ವೈದಿಕಮತಾನುಸಾರವಾಗಿ ವೇದಾಂತ, ಇತಿಹಾಸ, ಪುರಾಣಗಳನ್ನು ಪ್ರತಿಪಾದಿಸಿತು. ಹೊಳೆ ಬಂದು, ಹೊಳೆ ಇಳಿದು ಹೋದಂತೆ, ಕನ್ನಡಸಾಹಿತ್ಯದಲ್ಲಿ ಈ ರೀತಿ ಜೈನ ವೀರಶೈವ ಬ್ರಾಹ್ಮಣ ಸಾಹಿತ್ಯಗಳು ಒಮ್ಮೆ ಅಭ್ಯುದಯಸ್ಥಿತಿಯಲ್ಲಿಯೂ, ಒಮ್ಮೆ ಕ್ಷೀಣದಶೆಯಲ್ಲಿಯೂ ಇರುತ್ತ, ಹಳೆಯ ನೀರೂ ಹೊಸ ನೀರೂ ಬೆರೆದುಕೊಂಡೇ ಬರುತ್ತಿರುವುವು.
ಈಗ ೧೯ನೆಯ ಶತಮಾನದಲ್ಲಿ ಇಂಗ್ಲಿಷರ ಆಳಿಕೆಯಲ್ಲಿ ಪಾಶ್ಚಾತ್ಯರ ನಾಗರಿಕತೆ, ಐಹಿಕ ಸಾಧನ ಸಂಪತ್ತು, ರಾಜ್ಯಶಾಸ್ತ್ರ, ಕಲೆ, ಸಾಹಿತ್ಯ, ಮತ ಮುಂತಾದುವುಗಳಿಗೆ ಸಂಬಂಧಪಟ್ಟ ನವೀನ ಜ್ಞಾನದ ಸೆಳೆತಕ್ಕೆ ಮಿಕ್ಕ ದೇಶಭಾಷೆಗಳಂತೆಯೇ ಕನ್ನಡವೂ ಸಿಕ್ಕಿ ಒಂದು ಹೊಸ ಅಭಿಮಾನವನ್ನೂ, ಹೊಸ ಅಭಿ ರುಚಿಯನ್ನೂ ಕಲಿತು, ಹೊಸ ರೀತಿಗಳಲ್ಲಿ ಕಾವ್ಯಸೃಷ್ಟಿಯನ್ನು ಅಭ್ಯಾಸ ಮಾಡುತ್ತಿದೆ. ಭಾಷಾಂತರ ಗಳೂ, ಅನುಕರಣಗಳೂ, ಸ್ವಂತ ಕವಿತೆಗಳೂ, ಹೊಸ ಕಾವ್ಯರೂಪಗಳೂ, ಹೊಸ ಛಂದಸ್ಸುಗಳೂ, ಹೊಸ ಅಭಿಪ್ರಾಯಗಳೂ, ಸಂಪ್ರದಾಯಮಾರ್ಗವನ್ನು ಲಕ್ಷಕ್ಕೆ ತಾರದೆ ಸ್ವಾತಂತ್ರಪ್ರಿಯರಾದ ಗ್ರಂಥ ಕರ್ತರಿಂದ ದೇಶದಲ್ಲೆಲ್ಲಾ ಸುಲಭವಾದ ವ್ಯವಹಾರ ಭಾಷೆಯಲ್ಲಿ ಹರಡಿಕೊಳ್ಳುತ್ತಿವೆ. ಮತಸಂಬಂಧ ವಾದ ವಿಷಯಗಳು ಈಗ ಅಷ್ಟು ಪ್ರಧಾನವಲ್ಲ; ಅವುಗಳಲ್ಲಿ ಸಾಹಿತ್ಯಕಾರರಿಗೆ ಅಷ್ಟು ವಿಶ್ವಾಸವಿಲ್ಲವೆಂದೇ ಹೇಳಬಹುದು. ಲೌಕಿಕ ಸಾಮಾಜಿಕ ಚಿತ್ರಗಳು, ಸ್ವಾಭಾವಿಕ ವರ್ಣನೆ, ಜೀವನದ ಸುಖ ದುಃಖಗಳು, ರಾಗದ್ವೇಷಾದಿಗಳು, ಶ್ರೇಯಸ್ಕರವಾದ ಪುರುಷಾರ್ಥಗಳು, ಇವೇ ಮುಂತಾದ ಈ ಕಾಲದ ವಿಷಯಗಳು ನಾಟಕಗಳಲ್ಲಿಯೂ, ಕಾದಂಬರಿಗಳಲ್ಲಿಯೂ, ಸಣ್ಣ ಕಥೆಗಳಲ್ಲಿಯೂ, ಪ್ರಸಂಗಗಳಲ್ಲಿಯೂ, ಚರಿತ್ರೆಗಳಲ್ಲಿಯೂ, ಜೀವನಚರಿತ್ರೆಗಳಲ್ಲಿಯೂ ಯಥೇಷ್ಟವಾಗಿ ಪ್ರತಿಪಾದಿಸಲ್ಪಡುತ್ತಿವೆ. ವಿದ್ಯಾ ಭ್ಯಾಸದ ಹೆಚ್ಚಿಗೆಯಿಂದಲೂ, ಮುದ್ರಣ ಯಂತ್ರದ ಸೌಕಯ್ಯದಿಂದಲೂ, ದೇಶಾಭಿಮಾನದ ಬೆಳವಳಿಗೆ ಯಿಂದಲೂ ಅನೇಕ ಜನರಿಗೆ ಈ ಕಾಲದಲ್ಲಿ ಗ್ರಂಥಪರಿಚಯವಾಗುತ್ತಿದೆ.
ಈ ನಾಲ್ಕು ಘಟ್ಟಗಳಲ್ಲಿ ಹರಿದು ಬಂದಿರುವ ನಮ್ಮ ಕನ್ನಡ ಸಾಹಿತ್ಯವನ್ನು, ನಮ್ಮ ಕನ್ನಡ ನಾಡಿನ ಏರುತಗ್ಗಿನ ಘಟ್ಟಗಳಲ್ಲಿ ನುಗ್ಗಿ ಬರುವ ಕಾವೇರೀನದಿಗೆ ಹೋಲಿಸಬಹುದು. ಅದರಂತೆಯೇ, ನಮ್ಮ ಸಾಹಿತ್ಯದ ಮೂಲವೂ ಕಾಡಿನಲ್ಲಿ ಅಡಗಿಹೋಗಿದೆ. ಆ ಬಳಿಕ ಉಪನದಿಗಳು ಒಂದೊಂದಾಗಿ ಸೇರುವಂತೆ, ಜೈನಸಾಹಿತ್ಯ ಪ್ರವಾಹವೂ, ವೀರಶೈವ ಸಾಹಿತ್ಯ ಪ್ರವಾಹವೂ, ಬ್ರಾಹ್ಮಣ ಸಾಹಿತ್ಯ ಪ್ರವಾಹವೂ, ಒಂದಾದಮೇಲೊಂದು, ಒಂದರ ಕೂಡ ಮತ್ತೊಂದು, ಬಂದು ಮಿಳಿತವಾಗಿ ಮೂರು ಬಣ್ಣದ ನೀರುಳ ದೊಡ್ಡ ಹೊಳೆಯಾಗಿದೆ. ಕಡೆಗೆ ಈಗ ಇಂಗ್ಲಿಷ್ ಸಾಹಿತ್ಯ ದೃಷ್ಟಿಯಿಂದ ಹುಚ್ಚು ಹೊಳೆಯಾಗಿ ಮೆರೆಯುತ್ತ, ಬಂಡೆಗಳ ನಡುವೆ ನೂರು ಕವಲಾಗಿ ಒಡೆಯುತ್ತ, ಜನ್ಮಭೂಮಿಯ ಘಟ್ಟಗಳನ್ನು ತೊರೆದು ದಿವ್ಯವೇಗದೊಡನೆ ಕೆಳಕ್ಕೆ ದುಮುಕಿ, ಸ್ವತಂತ್ರವಾಗಿ, ವಿಸ್ತಾರವಾಗಿ, ಬಯಲು ನಾಡಿನಲ್ಲಿ ಪಯಿರ ಸಮೃದ್ಧಿಯನ್ನು ಪಡೆದು ವಿಹಾರಮಾಡಲು ತವಕಿಸುತ್ತಿದೆ. ಈ ತತ್ವವನ್ನು ನೆನಪಿನಲ್ಲಿಟ್ಟು ಸಾಹಿತ್ಯ ಚರಿತ್ರೆಯನ್ನು ಇಲ್ಲಿ ಈ ಪ್ರಕಾರ ವಿಭಾಗಮಾಡಿರುತ್ತದೆ :
ಕನ್ನಡ ಸಾಹಿತ್ಯದ ಚರಿತ್ರೆ
೧. ಆರಂಭಕಾಲ: ೧೦ನೆಯ ಶತಮಾನದವರೆಗೆ
ಮತಪ್ರಾಬಲ್ಯ ಕಾಲ: ೧೦-೧೯ನೆಯ ಶತಮಾನಗಳು ಜೈನಕವಿಗಳು: ೧೦ನೆಯ ಶತಮಾನದಿಂದ ವೀರಶೈವಕವಿಗಳು: ೧೨ನೆಯ ಶತಮಾನದಿಂದ
ಬ್ರಾಹ್ಮಣಕವಿಗಳು: (ಮುಖ್ಯವಾಗಿ) ೧೫ನೆಯ ಶತಮಾನದಿಂದ ೩. ನವೀನಕಾಲ: ೧೯ನೆಯ ಶತಮಾನದಿಂದ.
೩. ಆರಂಭಕಾಲ (೧೦ನೆಯ ಶತಮಾನದವರೆಗೆ)
ಕನ್ನಡಸಾಹಿತ್ಯದ ಆರಂಭ ಯಾವಾಗ ಆಯಿತೋ ಹೇಳುವುದು ಕಷ್ಟ. ಶಾಸನಗಳನ್ನು ನೋಡಿದರೆ ಸುಮಾರು ೬ನೆಯ ಶತಮಾನದಿಂದ ಕನ್ನಡದಲ್ಲಿ ಬರೆದಿರತಕ್ಷುವು ಸಿಕ್ಕುತ್ತವೆ. (ಅದಕ್ಕೆ ಮುಂಚೆ ಪ್ರಾಕೃತ ಸಂಸ್ಕೃತಗಳಲ್ಲಿರುವುವು.) ಇವುಗಳೆಲ್ಲಾ, ಚಿಕ್ಕವು; ಪ್ರಾಯಶಃ ಗದ್ಯದಲ್ಲಿವೆ; ಕೆಲವು ಒಂದೆರಡು ಪದ್ಯಗಳಾಗಿವೆ. ೯ನೆಯ ಶತಮಾನದಿಂದೀಚೆಗೆ, ಎಂದರೆ ಪಂಪನ ಕಾಲದಿಂದೀಚೆಗೆ, ಉತ್ತಮವಾದ ಕಾವ್ಯಶೈಲಿಯಲ್ಲಿ ಗದ್ಯಪದ್ಯಗಳುಳ್ಳ ದೊಡ್ಡ ಶಾಸನಗಳು ದೊರೆಯುತ್ತವೆ. ಗ್ರಂಥಗಳನ್ನು ನೋಡಿದರೆ, ಭ೧೭ ರಿಂದ ೮೭೭ರ ವರೆಗೆ ಆಳಿದ ಕೂಟ ರಾಜನಾದ ನೃಪತುಂಗನ ಕವಿರಾಜಮಾರ್ಗವೇ ಸಿಕ್ಕಿರುವ ಗ್ರಂಥಗಳಲ್ಲಿ ಅತಿ ಪುರಾತನವಾದದ್ದು. ಈತನು ಕುಂತಳದೇಶದ ಕೊಪಣ ಪುಲಿಗೆರೆ ಮುಂತಾದ ಪ್ರಾಂತದ ಭಾಷೆ ಕನ್ನಡಕ್ಕೆ ತಿರುಳೆಂದೂ, ಕನ್ನಡದಲ್ಲಿ ಬೆದಂಡೆ, ಚತ್ತಾಣ ಎಂಬ ಕಾವ್ಯಭೇದಗಳುಂಟೆಂದೂ, ಗದ್ಯದಲ್ಲಿಯೂ, ಪದ್ಯದಲ್ಲಿಯೂ ಗ್ರಂಥಕರ್ತರಿದ್ದರೆಂದೂ ಹೇಳಿ, ಆ ಕವಿಗಳ ಹೆಸರುಗಳನ್ನೂ, ಕೆಲವು ಉದಾಹರಣೆಗಳನ್ನೂ ಕೊಟ್ಟಿದ್ದಾನೆ. ಇದರಿಂದ ೯ನೆಯ ಶತಮಾನಕ್ಕೆ ಹಿಂದೆ ಕನ್ನಡದ ಗ್ರಂಥಗಳು ಹುಟ್ಟಿದುವೆಂದು ವ್ಯಕ್ತವಾಗುತ್ತದೆ. ೧೦ನೆಯ ಶತಮಾನದಲ್ಲಿದ್ದ ಪಂಪ, ಪೊನ್ನ, ರನ್ನರಿಂದ ಕನ್ನಡ ವಿಗಳ ಸಂಗತಿ ಹೆಚ್ಚಾಗಿ ತಿಳಿಯುವುದಿಲ್ಲ. ಪೊನ್ನನು ಅಸಗನೆಂಬ ಕವಿಯಿದ್ದನೆಂದು ಹೇಳುತ್ತಾನೆ. ಸಂಪರನ್ನರು ಪಂಪನಿಗೆ ಹಿಂದಿನವರಾದ ಕನ್ನಡ ಕವಿಗಳ ಹೆಸರನ್ನೇ ಎತ್ತಿಲ್ಲ. ಆದರೆ ಪಂಪನು ಹಿಂದಿನ ವ್ಯಗಳನ್ನೆಲ್ಲಾ ತನ್ನ ಕಾವ್ಯಗಳು * ಇಕ್ಕಿ ಮೆಟ್ಟಿದುವು” ಎಂದು ಹೇಳುತ್ತಾನೆ. ಮತ್ತು ತನ್ನಂತೆ ಮಸ್ತ ಭಾರತವನ್ನೂ ಒಂದು ಉಪಾಖ್ಯಾನವನ್ನಾದರೂ ಬಿಡದೆ ಹಿಂದೆ ಕವಿಗಳು ಹೇಳಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಆಗ್ಗೆ ರನ್ನನ ಗದಾಯುದ್ಧದಂತೆ ಉಪಾಖ್ಯಾನಗಳನ್ನು ಮಾತ್ರ ಹೇಳುವ, ಅಥವಾ ಬಹು ಸಂಕ್ಷೇಪವಾದ ಭಾರತಗಳು ಇದ್ದುವೆಂದು ಊಹಿಸಬಹುದಾಗಿದೆ. ನೃಪತುಂಗನ ಉದಾಹರಣೆಗಳನ್ನು ನೋಡಿದರೆ ರಾಮಾಯಣವೂ ಇದ್ದಿತೆಂದು ಹೇಳಬಹುದಾಗಿದೆ. | ಅಂತೂ, ೬ನೆಯ ಶತಮಾನಕ್ಕೆ ಹಿಂದೆ ಕನ್ನಡದಲ್ಲಿ ಬರೆದ ಶಾಸನವಾಗಲಿ, ಗ್ರಂಥವಾಗಲಿ, ಯಾವ ರೇಖನವೂ ದೊರೆತಿಲ್ಲ. ಮೇಲೆ ಸೂಚಿಸಿರುವ ಕವಿಗಳು ಇದಕ್ಕೆ ಮುಂಚೆ ಇದ್ದರೆಂದು ಹೇಳುವುದಕ್ಕೆ
ಧಾರವಿಲ್ಲ. ಆ ಕಾಲದಿಂದ ಒಬ್ಬೊಬ್ಬರು ಕವಿಗಳು ಕನ್ನಡದಲ್ಲಿ ಕವಿತ್ವ ಮಾಡುವುದಕ್ಕೆ ಆರಂಭಿಸಿದ jಂದೂ, ಅವರ ಗ್ರಂಥಗಳು ಅಷ್ಟು ದೊಡ್ಡವಾಗಿಯೂ ಪ್ರೌಢವಾಗಿಯೂ ಇರಲಿಲ್ಲವೆಂದೂ, ನೃಪ ಮಂಗನು ಕವಿಶಿಕ್ಷಣಕ್ಕಾಗಿ ಸಂಸ್ಕೃತದಿಂದ ದಂಡಿಯ ಅಲಂಕಾರವನ್ನು ಕನ್ನಡಕ್ಕೆ ಪರಿವರ್ತಿಸಿದನೆಂದೂ, ಕಂಪನ ಕಾವ್ಯಗಳು ಪ್ರೌಢಗ್ರಂಥಗಳಿಗೆ ಆದರ್ಶಗಳಾದದ್ದರಿಂದ ಪಂಪನಿಗೆ ಕನ್ನಡಕ್ಕೆ ಆದಿಕವಿ ಎಂಬ
ಸರು ಬಂದಿತೆಂದೂ ಊಹಿಸಬಹುದಾಗಿದೆ.
ಭಾಷಾದೃಷ್ಟಿಯಿಂದಲೂ ಇದೇ ಅನುಮಾನ ಹುಟ್ಟುತ್ತದೆ. ದ್ರಾವಿಡ ಭಾಷೆಗಳಲ್ಲಿ ತೆಲುಗು ಕೂದಲು ಬೇರೆ ಭಾಷೆಯಾಗಿ, ಬಳಿಕ ತಮಿಳು, ಕನ್ನಡ, ಮಲೆಯಾಳಗಳು ಒಟ್ಟಿಗಿದ್ದು ಬೇರೆ ಬೇರೆ ತಂತ್ರ ಭಾಷೆಗಳಾಗಿ ಒಡೆದ ಹಾಗೆ ಊಹಿಸುವುದಕ್ಕೆ ಕಾರಣಗಳಿವೆ. ಸುಮಾರು ೫-೬ನೆಯ ಶತಮಾನ
೪೨
ಶ್ರೀ ಸಾಹಿತ್ಯ
ಗಳಲ್ಲಿ ಕನ್ನಡವು ಬೇರೆಯಾಯಿತೆಂದೂ, ಕನ್ನಡ ದೇಶದ ರಾಜರು ಪ್ರಬಲಿಸಿದರೆಂದೂ ತೋರುತ್ತದೆ. ಕೆಲವರು ಕ್ರಿಸ್ತಪೂರ್ವದಲ್ಲಿಯೇ ಬನವಾಸಿಯಲ್ಲಿ ಪೂರ್ವದ ಹಳಗನ್ನಡವನ್ನು ಆಡುತ್ತಿದ್ದರೆಂದೂ, ೨ನೆಯ ಶತಮಾನದ ಗ್ರೀಕ್ ನಾಟಕವೊಂದರಲ್ಲಿ ಕನ್ನಡ ವಾಕ್ಯಗಳು ಸಿಕ್ಕುತ್ತವೆಂದೂ ಹೇಳುತ್ತಾರೆ. ನೃಪತುಂಗನ ಉದಾಹರಣೆ, ವಿಮರ್ಶೆಗಳಿಂದ ಆತನ ಕಾಲದಲ್ಲಿ ಭಾಷೆ ಇನ್ನೂ ಅವ್ಯವಸ್ಥೆಯಲ್ಲಿಯೇ ಇದ್ದಂತೆ ಕಾಣುತ್ತದೆ.
ಕನ್ನಡ ಸಾಹಿತ್ಯಕ್ಕೆ ಸಂಸ್ಕೃತಸಾಹಿತ್ಯವೇ ಪ್ರೇರಕ, ಪೋಷಕ, ಗುರು. ಈ ಸಂಸ್ಕೃತಸಾಹಿತ್ಯದ ಮತ್ತು ಭಾಷೆಯ ಪ್ರಾಬಲ್ಯವನ್ನು ಯೋಚಿಸಿದರೂ, ಸುಮಾರು ೬ನೆಯ ಶತಮಾನಕ್ಕೆ ಹಿಂದೆ ಕನ್ನಡದಲ್ಲಿ ಗ್ರಂಥಗಳು ಹುಟ್ಟಿರಲಾರವೆಂಬ ಅನುಮಾನ ಬಲವಾಗುತ್ತದೆ. ನೃಪತುಂಗನ ಕಾಲಕ್ಕೆ ಸಂಸ್ಕೃತ ಸಾಹಿತ್ಯವು ಪರಮಪದವನ್ನು ಮುಟ್ಟಿ, ಕೆಳಮುಖವಾಗಿ ತಿರುಗಿದ್ದಿತು. ಭಾರತ, ಭಾಗವತ, ಹರಿವಂಶ, ರಾಮಾಯಣ, ಪುರಾಣಗಳು ಪ್ರಸಿದ್ದಿಯಾಗಿದ್ದುವು; ಕಾಳಿದಾಸ, ಭಾರವಿ, ಮಾಘ, ಭವಭೂತಿ, ಭಟ್ಟ ನಾರಾಯಣ, ಭರ್ತಹರಿ, ಬಾಣ, ಸುಬಂಧು, ಮುಂತಾದ ಕವಿಗಳೂ, ಭರತ, ದಂಡಿ,' ವಾಮನ ಮುಂತಾದ ಆಲಂಕಾರಿಕರೂ ಸಾಮಾನ್ಯವಾಗಿ ವಿದ್ಯಾವಂತರೆಲ್ಲರಿಗೂ ತಿಳಿದವರಾಗಿದ್ದರು,
ಈ ಸಾಹಿತ್ಯದ ಶಿಕ್ಷಣದ ಮತ್ತು ಹಿಮ್ಮೇಳದ ಬಲದಿಂದ ಕನ್ನಡದ ಚಿಕ್ಕ ಹೆಣ್ಣು ಕುಣಿಯುವುದಕ್ಕೆ ಹೊರಟು ಆಗಾಗ್ಗೆ ತಪ್ಪು ಹೆಜ್ಜೆಗಳನ್ನು ಹಾಕುತ್ತಿದ್ದಳು. ನೃಪತುಂಗನೂ, ಪಂಪನೂ ಆಕೆಯನ್ನು ಪ್ರೌಢದಶೆಗೆ ತಂದರು. ಇವರ ಗ್ರಂಥಗಳಲ್ಲಿ ಸಂಸ್ಕೃತದ ಸಂಸ್ಕಾರ ಪೂರ್ಣವಾಗಿ ವ್ಯಾಪಿಸಿರುತ್ತದೆ. ನೃಪತುಂಗನು ಗದ್ಯಕ್ಕೆ ಬಾಣನ ಹರ್ಷಚರಿತ ಕಾದಂಬರಿಗಳನ್ನೂ, ಪದ್ಯಕ್ಕೆ (ಗುಣಸೂರಿ) ನಾರಾಯಣ, ಭಾರವಿ, ಕಾಳಿದಾಸ, ಮಾಘಾದಿಗಳನ್ನೂ ಹೇಳುತ್ತಾನೆ. ಪಂಪನು ಸಂಸ್ಕೃತ ಕವಿಗಳ ಹೆಸರನ್ನು ಹೇಳ ದಿದ್ದರೂ ಶ್ರೀಹರ್ಷ, ಕಾಳಿದಾಸ, ಭಾರವಿ, ಬಾಣ, ಭಟ್ಟನಾರಾಯಣ ಮೊದಲಾದ ಕವಿಗಳ ಭಾವ ಗಳನ್ನೂ, ಸಂವಿಧಾನಗಳನ್ನೂ ಉಪಯೋಗಿಸಿಕೊಂಡಿರುತ್ತಾನೆ. ಪೊನ್ನನು ಕಾಳಿದಾಸನಿಗೆ ತಾನು ರಚನೆಯಲ್ಲಿ ನೂರಡಿ ಎಂದು ಹೊಗಳಿಕೊಂಡಿದ್ದಾನೆ. (ಇದಲ್ಲವ ಧೈಯ್ಯ!). ರನ್ನನು ರಾಮಾಯಣ ಬಾರತ ಕವಿಗಳೂ, ಪದರಚನೆಯಲ್ಲಿ ಕಾಳಿದಾಸನೂ, ಗದ್ಯರಚನೆಯಲ್ಲಿ ಬಾಣನೂ ನಮಗೆ ಅಭಿವಂದ್ಯರು ಎಂದು ಹೇಳಿದ್ದಾನೆ. ಕನ್ನಡದ ಪ್ರಥಮಕಾಲದ ಕವಿಗಳೆಲ್ಲರೂ ಸಂಸ್ಕೃತಸಾಹಿತ್ಯದ ಉತ್ತಮಕಾಲದ ಕವಿಗಳ ಬೆಂಬಲದಿಂದ ಕವಿತ್ವ ಮಾಡಿದರೆಂದು ಸ್ಪಷ್ಟವಾಗಿದೆ.
ಕನ್ನಡ ಕವಿಗಳು ಭಾವ, ರೀತಿ, ವಸ್ತುಗಳೇ ಅಲ್ಲದೆ ಗ್ರಂಥಗಳ ರೂಪದಲ್ಲಿಯೂ 'ಸಂಸ್ಕೃತ ಕವಿಗಳನ್ನು ಅನುಸರಿಸಿರುತ್ತಾರೆ. ಮೊದಮೊದಲು, ಭಾರತ, ರಾಮಾಯಣ, ರಘುವಂಶ ಮುಂತಾದ ಕಾವ್ಯಗಳಲ್ಲಿಯೂ, ನಾಟಕಗಳಲ್ಲಿಯೂ ಪ್ರಸಿದ್ದಿಯಾಗಿ ಬರುವ ಅನುಷ್ಟುಪ್ಪು, ಇಂದ್ರವಜ್ರ, ವಂಶಸ್ಥ, ಮಾಲಿನಿ, ಔಪಚ್ಛಂದಸಿಕ, ಆರೆ ಮುಂತಾದ ವೃತ್ತಗಳನ್ನು ಉಪಯೋಗಿಸಿದಂತೆ ನೃಪತುಂಗನ ಗ್ರಂಥ ದಿಂದಲೂ, ಇವನ ಮತ್ತು ನಾಗವರ್ಮ ಕೇಶಿರಾಜರ ಉದಾಹರಣೆಗಳಿಂದಲೂ ಊಹಿಸಬಹುದಾಗಿದೆ. ಈ ವೃತ್ತಗಳನ್ನು ಪರೀಕ್ಷೆಮಾಡಿ, ಕನ್ನಡಕ್ಕೆ ಹೊಂದುವುದಿಲ್ಲವೆಂದು ಕಂಡುಬಂದುವುಗಳನ್ನು ಬಿಟ್ಟು, ಬಳಿಕ ಕಂದ, ಪ್ರಸಿದ್ದಿಯಾದ ಚಂಪಕಮಾಲೆ ಮುಂತಾದ ಆರು ವೃತ್ತಗಳು, ಜೊತೆಗೆ ಕೆಲವು ಕನ್ನಡ ವೃತ್ತಗಳು ಇವನ್ನು ಉಪಯೋಗಿಸಿದ ಹಾಗೂ, ಬಳಿಕ ಸಂಸ್ಕೃತದಲ್ಲಿ ಚಂಪು ಪ್ರಬಲಿಸಿದಾಗ ಇವರೂ ಚಂಪುವನ್ನು ಹೆಚ್ಚಾಗಿ ರೂಢಿಗೆ ತಂದ ಹಾಗೂ ಕಾಣುತ್ತದೆ.
ಈ ರೀತಿ ಸಂಸ್ಕೃತ ಕಾವ್ಯದಿಂದ ಶಿಕ್ಷಿತವಾಗಿ ಕನ್ನಡಕಾವ್ಯ ಒಂದು ಸ್ಥಿತಿಗೆ ಬರುವುದಕ್ಕೆ ಮುಂಚೆ, ಸಂಸ್ಕೃತ ನಾಗರಿಕತೆಯ ಪ್ರಾಬಲ್ಯ ಕನ್ನಡದೇಶದಲ್ಲಿ ಕ್ರಿ.ಪೂ. ೩ನೆಯ ಶತಮಾನದಿಂದಲೂ ಇದ್ದದ್ದು ಚಿತ್ರದುರ್ಗ ಪ್ರಾಂತದಲ್ಲಿರುವ ಅಶೋಕ ಮಹಾರಾಜನ ಪ್ರಾಕೃತ ಶಾಸನಗಳಿಂದ ವ್ಯಕ್ತವಾಗಿದೆ. ಮೊದಲು ರಾಜಭಾಷೆಗಳು ಪ್ರಾಕೃತ ಸಂಸ್ಕೃತಗಳಾಗಿದ್ದು ದೇಶಭಾಷೆಯಾದ ಕನ್ನಡವು ಕ್ರಮೇಣ ಅಭಿವೃದ್ಧಿಗೆ ಬಂದು ಕಾವ್ಯಕ್ಕೆ ಅರ್ಹವಾಗುವಂತೆ ಪುಷ್ಟಿಯಾಯಿತು. ಕನ್ನಡದ ಲಿಪಿ ಈ ಶಾಸನದ ಬ್ರಾಹೀಲಿಪಿಯಿಂದ ಹುಟ್ಟಿತು. ಕನ್ನಡಭಾಷೆಗೆ ಪ್ರಾಕೃತದಿಂದ ಎಷ್ಟೋ ಶಬ್ಬಗಳು ಬಂದು ಸೇರಿದುವು. ಇವು ವೈಯಾ ಕರಣರು ಹೇಳುವಂತೆ ಸಂಸ್ಕೃತದಿಂದ ನೆಟ್ಟಗೆ ಅಪಭ್ರಂಶವಾದಂತೆ ಕಾಣಲಿಲ್ಲ. ಇವು ಮತ, ಶಾಸ್ತ್ರ, ಪ್ರೌಢಜ್ಞಾನ, ನಾಗರಿಕತೆ ಮುಂತಾದ ವಿಷಯಕ್ಕೆ ಸಂಬಂಧಪಟ್ಟುವಾಗಿದ್ದುವು. ಮತಗಳಲ್ಲಿ, ಬ್ರಾಹ್ಮಣ
ಕನ್ನಡ ಸಾಹಿತ್ಯದ ಚರಿತ್ರೆ
೪೨೧
ಮತ, ಬೌದ್ಧಮತ, ಜೈನಮತಗಳು ಹರಡಿಕೊಂಡಿದ್ದುವು. ಬ್ರಾಹ್ಮಣರು ದೇಶಭಾಷೆಯಲ್ಲಿ ಮತ ಪ್ರಚಾರಣೆಯನ್ನು ಮಾಡಲಿಲ್ಲ; ಸಂಸ್ಕೃತವನ್ನೇ ಉಪಯೋಗಿಸಿದರು. ಬೌದ್ಧರು ಮಾಡಿದ್ದರೂ ಮಾಡಿರಬಹುದು; ಆದರೆ ಆ ಕಾಲದಲ್ಲಿ ಪ್ರಾಕೃತವೇ ಹೆಚ್ಚು ಪ್ರಚಾರದಲ್ಲಿದ್ದದ್ದರಿಂದ ಅದರಲ್ಲಿಯೇ ಬರೆದಿರಬಹುದು; ಕನ್ನಡದಲ್ಲಿ ಬರೆದಿದ್ದರೆ ೮-೯ನೆಯ ಶತಮಾನದ ಹೊತ್ತಿಗೆ ಅವರು ಕ್ಷೀಣದಶೆಗೆ ಬುದು ಅವರ ಮಠಗಳೆಲ್ಲಾ ನಾಶವಾದದ್ದರಿಂದ ಅವರ ಗ್ರಂಥಗಳು ನಾಶವಾಗಿರಬೇಕು. ನಮಗೆ ತಿಳಿದಿರುವ ಮಟ್ಟಿಗೆ ಜೈನಮತಗ್ರಂಥಗಳೇ ಮೊದಲು ಕನ್ನಡದಲ್ಲಿ ಹೊರಟುವು ಎಂದು ಹೇಳ ಬೇಕಾಗಿದೆ. ಈ ಗ್ರಂಥಗಳು ವೀರಶೈವಮತಪ್ರಚಾರಣೆಯ ಕಾಲದ ವಚನಗಳಂತೆ ಮೊದಲು ಗದ್ಯದಲ್ಲಿ ವ್ಯಾಖ್ಯಾನ ಮತ್ತು ಸಿದ್ದಾಂತ ನಿರೂಪಣಗಳ ರೂಪದಲ್ಲಿದ್ದಿರಬಹುದು; ತೀರ್ಥಂಕರರ ಮತ್ತು ಪುರಾಣ ಪುರುಷರ ಕಥೆಗಳು ಜೈನ ಸಂಪ್ರದಾಯಕ್ಕನುಸಾರವಾಗಿ ಭಾರತ, ರಾಮಾಯಣ, ಹರಿವಂಶ ಮುಂತಾದ ವಿಷಯಗಳನ್ನು ಪ್ರತಿಪಾದಿಸಿರಬಹುದು. ಕ್ರಿ. ಶ. ೧-೮ನೆಯ ಶತಮಾನಗಳಲ್ಲಿ ಜೈನಗುರುಗಳು ವಾದಗಳನ್ನು ಮಾಡಿ ಇತರರನ್ನು ಜಯಿಸಿ ರಾಜಾಸ್ಥಾನಗಳಲ್ಲಿ ಪೂಜ್ಯರಾದರು. ಇವರಲ್ಲಿ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯಪಾದ, ಅಕಳಂಕ ಎಂಬ ಪ್ರಸಿದ್ದ ಗುರುಗಳನ್ನು ಜೈನಕವಿಗಳನೇಕರು ಸ್ತೋತ್ರ
ಮಾಡಿದ್ದಾರೆ. ಇವರು ಕನ್ನಡದಲ್ಲಿ ಬರೆದಂತೆ ಕಾಣುವುದಿಲ್ಲ.
ಒಟ್ಟಿನಮೇಲೆ, ಕ್ರಿ. ಶ. ೬-೭ನೆಯ ಶತಮಾನಗಳವರೆಗೆ ಕನ್ನಡ ಜನರಲ್ಲಿ ಸಂಸ್ಕೃತವಿದ್ಯೆಯೂ, ಮತಜ್ಞಾನವೂ, ಇತಿಹಾಸ ಪುರಾಣಪುಣ್ಯಕಥೆಗಳೂ, ಶಾಸ್ತ್ರಗಳೂ, ಪ್ರಾಕೃತ ಸಂಸ್ಕೃತ ಶಬ್ದಗಳಿಂದ ಭಾಷಾಚೈತನ್ಯವೂ ಹೆಚ್ಚುತ್ತ ಬಂದು ಬಳಿಕ ಕನ್ನಡಕವಿತ್ವವು ಆರಂಭವಾಯಿತೆಂದು ಹೇಳಬಹುದು.
- ಆದರೆ ಆರರು ದಕ್ಷಿಣದೇಶದಲ್ಲಿ ನೆಲಸುವುದಕ್ಕೆ ಮುಂಚೆ ಸಂಸ್ಕೃತ ಸಾಹಿತ್ಯದ ಗಂಧವೇ ಇಲ್ಲದ ಕಾಲದಲ್ಲಿ, ದ್ರಾವಿಡಜನರಲ್ಲಿ ಕವಿತ್ವವೇ ಇರಲಿಲ್ಲವೆ? ಆಗ ಭಾಷೆ ಒಂದೇ ಆಗಿರಲಿ, ಮೂರುನಾಲ್ಕಾಗಿ ಒಡೆದಿರಲಿ, ಜನರು ನಾಗರಿಕರಾಗಿದ್ದರೆಂದು ಚರಿತ್ರಕಾರರು ನಿರ್ಣಯಿಸಿರುವುದರಿಂದ, ಕೇವಲ ವ್ಯಾವ ಹಾರಿಕವಾದ ಭಾಷೆ ಮಾತ್ರ ಇರದೆ, ಭಾಷೆಯಲ್ಲಿ ಕವಿತ್ವವೂ ನಡೆಯುತ್ತಿತ್ತೆಂದು ಹೇಳಬೇಕಾಗಿದೆ. ಬರಹದಲ್ಲಿ ಉಳಿದುಕೊಳ್ಳದೆ, ಬರಿಯ ನೆನಪಿನಲ್ಲಿಟ್ಟಿದ್ದು ಕಡೆಗೆ ಉತ್ತಮಸಾಹಿತ್ಯದ ಪ್ರಾಬಲ್ಯದಿಂದ ದೇಶಭಾಷೆಯ ಕವಿತ್ವವು ನಶಿಸಿ ಹೋಗಿರುವುದು ಅನೇಕ ಭಾಷೆಗಳ ಆದಿಕಾಲದ ಅನುಭವವಾಗಿದೆ. ಕನ್ನಡದಲ್ಲಿಯೂ ಹೀಗೆಯೇ ಆಗಿರಬೇಕು. ಎಲ್ಲಾ ಕಡೆಯಂತೆಯೇ, ಇಲ್ಲಿಯೂ ಮೊದಲು ಸಣ್ಣ ಸಣ್ಣ ಕವನಗಳನ್ನು ಪದ್ಯಗಳಲ್ಲಿ ಕಟ್ಟಿರಬೇಕು. ಒಗಟುಗಳು, ಕುಯಿಲು, ಕುಡಿತ, ಮದುವೆ, ಸಾವು, ಮುಂತಾದು ವನ್ನು ಕುರಿತ ಜನಜೀವನ ಪ್ರತಿಬಿಂಬಿಗಳಾದ ಹಾಡುಗಳು, ಕಾಳಗದ ಪದಗಳು, ಸಣ್ಣ ಪುಟ್ಟ ಕಥೆಗಳು ಈ ವಿಷಯಗಳು ಕವಿತ್ವಕ್ಕೆ ಆಧಾರವಾಗಿರಬೇಕು. ಈಗಲೂ ಜನಗಳು ಹೇಳುವ
ಈಚಲ ಮರದವ್ವಾ,
ಬಾರೋ ಬಾರೋ ಮಳೆರಾಯಾ,
ಒಂದೆಂಬೋದು, ಮುಂತಾದ ಹಾಡುಗಳ ಅಚ್ಚುಪಡಿಗಳು ಆಗಲೂ ಕನ್ನಡನಾಡಿನಲ್ಲಿ ಇದ್ದೇ ಇರಬೇಕು. ಹೆಂಗಸರು ಇವುಗಳನ್ನು “ಒನಕೆವಾಡಾಗಿ” ಹಾಡುತ್ತಿದ್ದರು. ಆದರೆ ಪಂಡಿತರಾದ ಕವಿಗಳು ಈ ಹಾಡುಗಳನ್ನು 'ಟ್ಟಿದ ಕವಿಗಳನ್ನು ಲಕ್ಷಣವನ್ನರಿಯದ ದುಷ್ಕವಿಗಳೆಂದು ಜರೆಯುತ್ತ
5 ತಮಿಳಿನಲ್ಲಿ ಬೌದ್ಧಗ್ರಂಥವಿರುವುದಾಗಿ ಹೇಳುತ್ತಾರೆ. 6 ಏವೇಲ್ವುದೊ ಶಿವಮಾರ ಮ
ಹೀವಳಯಾಧಿಪನ ಸುಭಗಕವಿತಾಗುಣಮಂ ಭೂವಳಯದೊಳ್ ಗಜಾಷ್ಟಕ ಮೋವನಿಗೆಯುವೆನಕೆವಾಡುವಾದುದೆ ಪೇಟ್ಟುಂ (ಸು, ೮೦)
೪೨೨
ಶ್ರೀ ಸಾಹಿತ್ಯ
ಪಂಡಿತರುಂ ವಿವಿಧಕಳಾ ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್ ಕಂಡರ್ ಕೇಳ್ಕೊಡೆ ಗೊರವರ
ಡುಂಡುಚಿಯೇ ಬೀದಿವಾಯ ಬೀರನ ಕತೆಯೇ? (ಮಧುರ) ಎಂದು ಹಾಸ್ಯಮಾಡುತ್ತ ಈ ಹಾಡುಗಬ್ಬಗಳನ್ನು ಮೂಲೆಗೆ ತಳ್ಳಿದರು. ಇವು ಉಳಿಯಲಿಲ್ಲ; ಇವು ಇದ್ದುದಕ್ಕೆ ನಿದರ್ಶನ ಮಾತ್ರ ಉಳಿದಿದೆ. ಯಾವುದೆಂದರೆ ಸಂಸ್ಕೃತಪ್ರಾಕೃತಗಳಲ್ಲಿಲ್ಲದೆ, ದ್ರಾವಿಡಭಾಷೆಗಳಲ್ಲಿ ಮಾತ್ರ ಇರುವ, ಎರವಲ್ಲದ, ದೇಶ ಛಂದಸ್ಸು, ವಿದ್ಯಾವಂತರಲ್ಲಿ ಮತಗ್ರಂಥಗಳೂ, ವ್ಯಾಖ್ಯಾನಗಳೂ ಪ್ರಚಾರದಲ್ಲಿದ್ದರೆ ಸಾಮಾನ್ಯಜನರಲ್ಲಿ, ಹೆಂಗಸರಲ್ಲಿ ಈ ದ್ರಾವಿಡ ಛಂದಸ್ಸಿನ ಕವಿತ್ವಗಳು ಬಳಕೆಯಲ್ಲಿದ್ದು ಕ್ರಮೇಣ ಉತ್ತಮಗ್ರಂಥಗಳಲ್ಲಿಯೂ ತಮ್ಮ ಲಕ್ಷಣಗಳನ್ನು ಸೇರಿಸಿದುವು. ದೇಸಿ, ಮಾರ್ಗ ಎಂದು ಕವಿಗಳು ಹೇಳುವುದು ಇದೇ ಎಂದು ತೋರುತ್ತದೆ. ಜೈನ ಪಾಂಡಿತ್ಯದ ಉರುಬು ಕಡಮೆಯಾಗಿ, ವೀರಶೈವರು ಕವಿತ್ವಕ್ಕೆ ಹೊರಟಾಗ ಈ ಸ್ವದೇಶದ ಕನ್ನಡ ಹಾಡುಗಳ ಛಂದಸ್ಸನ್ನೇ ಬಲಪಡಿಸಿ ಹೊಸ ಹೊಸ ಪದ್ಯಗಳನ್ನು ಸೃಷ್ಟಿಸಿದರು.
ಈ ಛಂದಸ್ಸಿನ ವೃತ್ತಗಳನ್ನು ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಸಂಸ್ಕೃತಛಂದಸ್ಸು ಗಳಿಂದ ಬೇರೆಯಾಗಿ ವಿಂಗಡಿಸಿ ಹೇಳಿರುತ್ತಾನೆ. ಇವು ಬ್ರಹ್ಮ, ವಿಷ್ಣು, ರುದ್ರ ಎಂಬ ಅಕ್ಷರಗಣಗಳಿಂದ ಕೂಡಿದುವು. ಇವಕ್ಕೆ ಪ್ರಾಸವುಂಟು; ಯತಿನಿಯಮವಿಲ್ಲ. ದ್ವಿಪದಿ, ತ್ರಿಪದಿ, ಚೌಪದಿ, ಅಕ್ಕರ, ಗೀತಿಕೆ, ಏಳ, ಷಟ್ಟದಿ ಮುಂತಾದುವು ಈ ಬಗೆಯ ಪದ್ಯಗಳು. ಇವನ್ನು ತಾಳಲಯಗಳಿಗೆ ಅನುಸಾರವಾಗಿ ಹಾಡಬಹುದು. ಇವುಗಳ ವಾಸನಾಬಲದಿಂದ, ಪ್ರಾಕೃತಛಂದಸ್ಸಿನಿಂದ ತೆಗೆದ ಪದ್ಯಗಳಲ್ಲಿ ಕಂದ, ರಗಳೆ ಇವೇ ಕನ್ನಡದಲ್ಲಿ ಒಗ್ಗಿ ಬೇರೂರಿದುವು. ಇವೂ ಮಾತ್ರಾಗಣಗಳಾಗಿ ಹಾಡುವುದಕ್ಕೆ ಸಾಧ್ಯವಾಗಿ, ಅಕ್ಷರಗಣಗಳ ಪದ್ಯಗಳಿಗೆ ಹೊಂದಿಕೆಯಾಗಿದ್ದದ್ದರಿಂದ, ಸಂಸ್ಕೃತಪ್ರಾಕೃತದಿಂದ ಬಂದ ಪದ್ಯ ವೃತ್ತಗಳಿಗೂ ತಮ್ಮ ಲಾಂಛನವನ್ನು ಹತ್ತಿಸಿದುವು-ಪ್ರಾಸವನ್ನೂ, ಯತಿಭಂಗವನ್ನೂ, ಈ ಛಂದಸ್ಸುಗಳಲ್ಲಿ ಕೆಲವು ಶಾಸನಗಳಲ್ಲಿ ಸಿಕ್ಕುತ್ತವೆ. ಸು. ೭೦ರಲ್ಲಿ ಬರೆದ ಬಾದಾಮಿಯ ಶಾಸನದಲ್ಲಿ ತ್ರಿಪದಿ ಇದೆ:
ಸಾಧುಗೆ ಸಾಧು ಮಾಧುರಂಗೆ ಮಾಧುರಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತಂ ಮಾಧವನೀತನ್ ಪೆನಲ್ಲ ಕಟ್ಟಿದ ಸಿಂಘಮನ್ ಕೆಟ್ರೋದೇನಮಗಂದು ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಂ ೯೪೨ರಲ್ಲಿ ಬರೆದ ಶ್ರವಣಬೆಳಗೊಳದ ಶಾಸನದಲ್ಲಿ ಅಕ್ಕರವಿದೆ:
ಒಳಗ ದಕ್ಷಿಣಸುಕರದುಷ್ಟರಮಂ ಪೊಂಗಣ ಸುಕರದುಷ್ಕರಭೇದಮಂ ಒಳಗೆ ವಾಮದ ವಿಷಮಮನಲ್ಲಿಯ ವಿಷಮದುಷ್ಕರವನಿನ್ನದು ಪೊಆಗ ಗ್ಗಳಿಕೆಯೆನಿಪತಿವಿಷಮಮನದಾತಿವಿಷಮದುಷ್ಕರವೆಂಬ ದುಷ್ಟರಮಂ
ಎಳೆಯೊಳೊಲ್ವನೆ ಚಾರಿಸಲ್ ಬಲ್ಲಂ ನಾಲ್ಕು ಪ್ರಕರಣವನಿಂದ್ರರಾಜ ನೃಪತುಂಗನು ಉದಾಹರಿಸಿರುವ ಅನುಷ್ಟುಪ್ಪಿನಲ್ಲಿ ಪ್ರಾಸವಿದೆ:
ತಾರಾ ಜಾನಕಿಯಂ ಪೋಗಿ ತಾರಾ ತರಳನೇತ್ರಯಂ ತಾರಾಧಿಪತಿತೇಜಸ್ವಿ ತಾರಾದಿವಿಜಯೋದಯಾ (೨೧೨೮)
೪೨೩
ಕನ್ನಡ ಸಾಹಿತ್ಯದ ಚರಿತ್ರೆ
ಪೆಜನಾವಂ ಧರಾಚಕ ಕೈತೆಯು ಕೆಳೆಯಪ್ಪವಂ ನೆಕ್ಯಾರೆಣೆಯೆಂಬನ್ನಂ
ಕುತಬ್ಬಿಗೆ ಬನ್ನಮಂ (೨-೧೨೫) ಪಂಪನ ಕಾಲಕ್ಕೆ ಅನುಷ್ಟುಪ್ಪ ಮುಂತಾದ ಕೆಲವು ವೃತ್ತಗಳು ಬಿಟ್ಟುಹೋಗಿದ್ದುವು. ವೃತ್ತಗಳೂ, ಕಂದವೂ ಮುಖ್ಯ ಪದ್ಯಗಳಾದುವು. ಆದರೆ ಯಾವುದೋ ಒಂದು ಔಚಿತ್ಯವನ್ನು ಹಿಡಿದು ಚಂಪೂ ಗ್ರಂಥಗಳಲ್ಲಿಯೂ ಈ ದ್ರಾವಿಡ ಛಂದಸ್ಸನ್ನು ಕವಿಗಳು ಅಲ್ಲಲ್ಲಿ ಪ್ರಯೋಗಿಸಿರುತ್ತಾರೆ. ಹಾಡು, ಬೇಟೆ, ಪುರವರ್ಣನೆ, ವರ್ಣನೆ, ವಿವಾಹ, ನೀತಿ ಮುಂತಾದ ಸಂದರ್ಭಗಳಲ್ಲಿ ತ್ರಿಪದಿ, ಅಕ್ಕರ, ರಗಳೆ ಇವು ಬರುತ್ತವೆ. ಚಂಪು, ವಸ್ತು ಅಥವಾ ಓದುಗಬ್ಬಗಳಲ್ಲಿ, ವರ್ಣಕ ಅಥವಾ ಸಂಸ್ಕೃತಲಕ್ಷಣಬದ್ಧವಲ್ಲದ ಹಾಡುಗಬ್ಬಗಳ ಚಿಹ್ನೆಗಳು ಸೇರಿರುತ್ತವೆ.
ಇದುವರೆಗೆ ತಿಳಿಸಿದ ಅಂಶಗಳ ಪರಾಮರ್ಶನೆಯಿಂದ, ಸು. ೬-೭ನೆಯ ಶತಮಾನಗಳವರೆಗೆ ಸಂಸ್ಕೃತ ಮತ, ನಾಗರಿಕತೆ ಮತ್ತು ಸಾಹಿತ್ಯಜ್ಞಾನ ಇವು ಕನ್ನಡ ಜನರಲ್ಲಿ ವ್ಯಾಪಿಸಿ ಅವರ ಭಾಷೆ ಪುಷ್ಟಿಯಾಗಿ, ಕಾವ್ಯಕರ್ಮಕ್ಕೆ ಸಾಧ್ಯವಾಯಿತೆಂದೂ, ಆರಂಭವಾದಾಗ ಸಂಸ್ಕೃತದ ಸಂಸ್ಕಾರಬಲವೇ ಸತ್ವವ್ಯಾಪಿಯಾಗಿತ್ತೆಂದೂ, ಬಹುಶಃ ಅಚ್ಚಗನ್ನಡದಲ್ಲಿ, ಕನ್ನಡ ಛಂದಸ್ಸಿನಲ್ಲಿ ಕವಿತ್ವವಿದ್ದು ನಶಿಸಿಹೋಗಿ ಆ ಕಾಲದ ಗ್ರಂಥಗಳಲ್ಲಿ ತನ್ನ ಕೆಲವು ಚಿಹ್ನೆಗಳನ್ನು ಸೇರಿಸಿ ಹಾಡಿನ ರೂಪದಲ್ಲಿ ಜನಸಾಮಾನ್ಯರಲ್ಲಿ ಬಳಕೆಯಲ್ಲಿರುತ್ತಾ ವೀರಶೈವರ ಪ್ರೊತ್ಸಾಹದಲ್ಲಿ ಮತ್ತೆ ತಲೆಯೆತ್ತಿತೆಂದೂ ಊಹಿಸಬಹುದಾಗಿದೆ. ಈಗ ಸುಮಾರು ೭ ರಿಂದ ೧೦ನೆಯ ಶತಮಾನದವರೆಗೆ ಗ್ರಂಥಗಳ ಮತ್ತು ಶಾಸನಗಳ ಆಧಾರದಿಂದ ನಿಶ್ಚಯಿಸಬಹುದಾದ ಸಾಹಿತ್ಯ ಚರಿತ್ರೆಯನ್ನು ಸಂಗ್ರಹಿಸುತ್ತದೆ.
ಈ ಕಾಲದ ಮುಖ್ಯ ಕವಿಗಳು ಯಾರೆಂದರೆ: ೧. ಶಾಸನದ ಮತ್ತು ಭಟ್ಟಾಕಲಂಕ ದೇವಚಂದ್ರರ ಹೇಳಿಕೆಯಿಂದ ಶ್ರೀವರ್ಧದೇವ. ೨. ನೃಪತುಂಗನ ಹೇಳಿಕೆಯಿಂದ ದುಗ್ವಿನೀತ, ಶ್ರೀವಿಜಯ.
ನೃಪತುಂಗ (ಸಿಕ್ಕಿರುವ ಅತಿ ಪುರಾತನ ಗ್ರಂಥ ಈತನದು). ಕೇಶಿರಾಜ, ಮಲ್ಲಿಕಾರ್ಜುನ, ವಿದ್ಯಾನಂದರ ಹೇಳಿಕೆಯಿಂದ-ಶ್ರೀವಿಜಯ, ಅಸಗ,
ಗುಣನಂದಿ, ಗುಣವರ್ಮ.
ಈ ಕವಿಗಳೆಲ್ಲರೂ ಜೈನರು. ಇವರು ಮತವಿಷಯವಾದ ಸಿದ್ಧಾಂತಗಳನ್ನೂ, ತೀರ್ಥಕರರ ಚರಿತ್ರಗಳನ್ನೂ ಬರೆದಿರುತ್ತಾರೆ. ನೃಪತುಂಗನು ಈ ಕಾಲದ ಗ್ರಂಥಗಳ ದೋಷಗಳನ್ನು ನೋಡಿ, ಕನ್ನಡ ಕವಿಗಳಿಗೆ ಮಾರ್ಗದರ್ಶಕನಾಗುವ ಉದ್ದೇಶದಿಂದ ಕವಿರಾಜಮಾರ್ಗವೆಂಬ ತನ್ನ ಅಲಂಕಾರ ಗ್ರಂಥವನ್ನು ಬರೆದಹಾಗೆ ಕಾಣುತ್ತದೆ.
(೧) ಶ್ರೀವರ್ಧದೇವ (ಸು. ೬೫೦) : ಈತನನ್ನು ನೃಪತುಂಗನು ಹೇಳಿಲ್ಲ. ಆದರೆ ೫೨೯ರಲ್ಲಿ ಬರೆದ ಶ್ರವಣಬೆಳದ? ೬೭ನೆಯ ಶಾಸನದಲ್ಲಿ ಶ್ರೀವರ್ಧದೇವನು ಚೂಡಾಮಣಿಕಾವ್ಯವನ್ನು ರಚಿಸಿದ ನೆಂದೂ, ಈತನನ್ನು ದಂಡಿ ಹೊಗಳಿದನೆಂದೂ ಹೇಳಿದೆ. ದಂಡಿಯ ಕಾಲ ೭ನೆಯ ಶತಮಾನ; ಈತನೂ ಅದೇ ಶತಮಾನದಲ್ಲಿರಬೇಕಾಯಿತು. ಈತನ ಗ್ರಂಥವನ್ನು ಕುರಿತು ಭಟ್ಟಾಕಳಂಕನು (೧೬೦೪) ಕನ್ನಡದ ಪ್ರಾಶಸ್ಯವನ್ನು ಹೇಳುವಾಗ, ೯೬,೦೦೦ ಗ್ರಂಥವುಳ್ಳ ಚೂಡಾಮಣಿಯೆಂಬ ತತ್ವಾರ್ಥ ಮಹಾಶಾಸ್ತ್ರ ವ್ಯಾಖ್ಯಾನವು ಕನ್ನಡದಲ್ಲಿ ದೊರೆಯುತ್ತದೆ ಎಂದು ಹೇಳಿದ್ದಾನೆ. ದೇವಚಂದ್ರನು (೧೮೩೦) ತುಂಬು ಲೂರು ನಾಮಾಚಾರರು ೮೪,೦೦೦ ಗ್ರಂಥದ ಕರ್ತಗಳಾಗಿ ಕನ್ನಡದಲ್ಲಿ ಚೂಡಾಮಣಿವ್ಯಾಖ್ಯಾನವನ್ನು
7ಎರಡನೆಯ ಮುದ್ರಣ.
೪೨೪
ಶ್ರೀ ಸಾಹಿತ್ಯ ಮಾಡಿದರು ಎಂದು ಹೇಳುತ್ತಾನೆ. ಚಾವುಂಡರಾಯನು (೯೭೮) ತಂಬುಳರಾಚಾರನೆಂಬ ಗುರುವನ್ನು ಸ್ತೋತ್ರಮಾಡಿದ್ದಾನೆ. ಇವರೆಲ್ಲರೂ ಹೇಳುವ ಗ್ರಂಥ ಒಂದೇ, ಗ್ರಂಥಕರ್ತ ಒಬ್ಬನೇ ಎಂದು ನಿರ್ಧರಿಸು
ವುದಕ್ಕೆ ಸಾಕಾದಷ್ಟು ನಿದರ್ಶನವಿಲ್ಲ.
(೨) ದುರ್ವಿನೀತ, ಶ್ರೀವಿಜಯ: ನೃಪತುಂಗನು ಹೇಳುವ ಕವಿಗಳು ಯಾರೆಂದರೆ :
ವಿಮಲೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೇ ಕ್ರಮದೊಳ್ ನೆಗಟ್ಟಿ ಗದ್ಯಾ ಶ್ರಮಪದಗುರುತಾಪ್ರತೀತಿಯಂ ಕೈಕೊಂಡರ್ (೧-೨೯) ಪರಮ ಶ್ರೀವಿಜಯ ಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತು ವಿಸ್ತರ ವಿರಚನೆ ಲಕ್ಷಂ ತದಾವ್ಯ ಕಾವ್ಯಕ್ಕೆಂದು
(೧-೩೩) ಈ ಪದ್ಯಗಳಲ್ಲಿ ಎಷ್ಟು ಹೆಸರಿರುವುವೋ ಖಂಡಿತ ಹೇಳಲಾಗುವುದಿಲ್ಲ. ಎಲ್ಲರೂ ಜೈನರೆಂದು ತೋರುತ್ತದೆ. ದುರ್ವಿನೀತನು ಗಂಗರಾಜನೆಂದೂ, ೭ನೆಯ ಶತಮಾನದ ಆದಿಭಾಗದಲ್ಲಿದ್ದನೆಂದೂ, ಈತನ ಆಸ್ಥಾನದಲ್ಲಿ ಭಾರವಿ ಕೆಲವು ಕಾಲ ಇದ್ದನೆಂದೂ, ಆತನ ಕಿರಾತಾರ್ಜುನೀಯದ ೧೫ನೆಯ ಸರ್ಗಕ್ಕೆ ದುರ್ವಿನೀತನು ವ್ಯಾಖ್ಯಾನವನ್ನು ಬರೆದನೆಂದೂ ಶಾಸನಗಳಿಂದ ತಿಳಿಯುತ್ತದೆ.
ಶ್ರೀವಿಜಯನನ್ನು ಕೇಶಿರಾಜನೂ ಹೇಳಿರುತ್ತಾನೆ. ದುರ್ಗಸಿಂಹನು (ಸು. ೧೧೪೫)
ಶ್ರೀವಿಜಯರ ಕವಿಮಾರ್ಗ೦
ಭಾವಿಪ ಕವಿಜನದ ಮನಕೆ ಕನ್ನಡಿಯುಂ ಕೈ ದೀವಿಗೆಯುಮಾದುದದಂ
ಶ್ರೀವಿಜಯರ್ ದೇವರವರನೇವಣ್ಣಪುದೋ ಎಂದು ಹೊಗಳಿದ್ದಾನೆ. ಮಂಗರಸನೂ (೧೫೦೮) ದೊಡ್ಡಯ್ಯನೂ (ಸು. ೧೫೫೦) ಈತನು ಚಂದ್ರ ಪ್ರಭಪುರಾಣವೆಂಬ ಚಂಪುವನ್ನು ಬರೆದಿರುವನೆಂದು ಹೇಳುತ್ತಾರೆ. ಕೆಲವರು ಈ ಶ್ರೀವಿಜಯನೇ ನೃಪತುಂಗನ ಹೆಸರಿನಲ್ಲಿ ಕವಿರಾಜಮಾರ್ಗವನ್ನು ಬರೆದನೆಂದು ಊಹಿಸುತ್ತಾರೆ.
ಪತುಂಗ (೮೧೪-೭೭) : ಈತನು ರಾಷ್ಟ್ರಕೂಟ ವಂಶದ ರಾಜನು; ಮಾನ್ಯಖೇಟದಲ್ಲಿ ಆಳುತ್ತಿದ್ದನು. ಈತನಿಗೆ ಅಮೋಘವರ್ಷ, ಅತಿಶಯಧವಳ ಎಂಬ ಬಿರುದುಗಳುಂಟು. ಈತನ ಗುರು ಸಂಸ್ಕೃತದಲ್ಲಿ ಆದಿಪುರಾಣವನ್ನು ಬರೆದ ಜಿನಸೇನನು (೮೮). ತಾನು ಬರೆದಿರುವ ಪ್ರಶೋತ್ತರ ಮಾಲಿಕೆಯೆಂಬ ಸಂಸ್ಕೃತಗ್ರಂಥದಲ್ಲಿ ತಾನೇ ರಾಜ್ಯವನ್ನು ತ್ಯಾಗಮಾಡಿದನೆಂದು ಹೇಳುತ್ತಾನೆ.
ಈತನ ಕವಿರಾಜಮಾರ್ಗವು ಅಲಂಕಾರಗ್ರಂಥ. ಇದರಲ್ಲಿ ದೋಷಾದೋಷಾನುವರ್ಣನನಿರ್ಣಯ, ಶಬ್ದಾಲಂಕಾರ, ಆರ್ಥಾಲಂಕಾರ ಎಂಬ ಮೂರೂ ಪರಿಚ್ಛೇದಗಳಿವೆ. ಇವುಗಳ ಕೊನೆಯಲ್ಲಿ “ ನೃಪತುಂಗ ದೇವಾನುಮತಮಪ್ಪ ಕವಿರಾಜಮಾರ್ಗದೊಳ್ ” ಎಂದಿದೆ. ಇಲ್ಲಿ 'ಕೃತಂ' ಎಂದು ಹೇಳದೆ “ಅನು ಮತಂ' ಎಂದು ಹೇಳುವುದರಿಂದಲೂ ಪರಿಚ್ಛೇದಗಳ ಕಡೆಯ ಪದ್ಯಗಳಲ್ಲಿ ಶ್ರೀವಿಜಯಪ್ರಭೂತ” ಎಂಬ ಶಬ್ದ ವೋ ಅರ್ಥವೋ ಬರುವಂತೆ ಇರುವುದರಿಂದಲೂ, " ನೃಪತುಂಗ ಸಭಾಸದು...ಪೇಟ್ಟಿ ನುತಕಾವ್ಯಂ” ಎಂದು ಗ್ರಂಥದ ಕಡೆಯಲ್ಲಿ ಇರುವುದರಿಂದಲೂ, ದುರ್ಗಸಿಂಹನ "ಶ್ರೀವಿಜಯರ ಕವಿಮಾರ್ಗ” ಎಂಬ ವಾಕ್ಯಭಾಗದಿಂದಲೂ, ಶ್ರೀವಿಜಯನೇ ನೃಪತುಂಗನ ಸಭಾಸದನಾಗಿದ್ದು ಆತನ ಅಂಕಿತದಿಂದ ಗ್ರಂಥವನ್ನು ಬರೆದಿರಬೇಕು ಎಂದು ಊಹಿಸಿರುತ್ತಾರೆ. ಕೆಲವರು ಕವಿ ಶ್ರೀವಿಜಯನಲ್ಲ, ಕವೀಶ್ವರನು ಎಂದು ಅಭಿಪ್ರಾಯಪಡುತ್ತಾರೆ. ಆದರೆ ನಾಗವರ್ಮ ಭಟ್ಟಾಕಳಂಕರು ನೃಪತುಂಗನೇ ಗ್ರಂಥಕರ್ತವೆಂದು ತಿಳಿದಿದ್ದ ಹಾಗೆ ಕಾಣುತ್ತದೆ; ಮತ್ತು ಶ್ರೀವಿಜಯನಾಗಲಿ, ಕವೀಶ್ವರನಾಗಲಿ
Ly
೪೨೫ ಕನ್ನಡ ಸಾಹಿತ್ಯದ ಚರಿತ್ರೆ
ಬರೆದಿದ್ದರೆ ತಮ್ಮ ಹೆಸರನ್ನೇ ಪ್ರಧಾನಮಾಡಿ “ ಪರಮಶ್ರೀವಿಜಯ ಕವೀಶ್ವರ...” ಎಂದು ಪೂರೈ ಕವಿಗಳ ಪಂಕ್ತಿಯಲ್ಲಿ ಹೇಳಲಾರರಾದದ್ದರಿಂದಲೂ, ನೃಪತುಂಗನು ಸಂಸ್ಕೃತದಲ್ಲಿ ಒಂದು ಗ್ರಂಥವನ್ನು ಬರೆದಿರುವುದರಿಂದಲೂ, ಸ್ವತಂತ್ರ ಗ್ರಂಥವಲ್ಲದೆ ದಂಡಿಯ ಗ್ರಂಥದ ಪರಿವರ್ತನೆಯಾದದ್ದರಿಂದ ತಾನೂ ಆತನ ಶಾಸ್ತ್ರವನ್ನು ಒಪ್ಪಿರುವುದಾಗಿ “ ಅನುಮತು” ಎಂದು ಹೇಳಿರುವನೆಂದು ಸಮಾಧಾನ ಹೇಳ ಬಹುದು.
ಈತನ ಗ್ರಂಥದಲ್ಲಿ ಹೇಳಿರುವ ಅಲಂಕಾರಶಾಸ್ತ್ರವಿಷಯಕ್ಕಿಂತಲೂ, ಚರಿತ್ರಕಾರನಿಗೆ ಆ ಕಾಲದ ಕನ್ನಡದ ಸ್ಥಿತಿಯನ್ನು ಕುರಿತು ಈತನು ಹೇಳಿರುವ ಅಂಶಗಳು ಹೆಚ್ಚು ಬೆಲೆಯುಳ್ಳವಾಗಿವೆ. ಸಂಸ್ಕೃತ ಕನ್ನಡ ಕವಿಗಳ ವಿಷಯ ಹಿಂದೆಯೇ ಹೇಳಿದೆ. ಕನ್ನಡ ದೇಶದ ಎಲ್ಲೆಗಳ ವಿಷಯದಲ್ಲಿ
ಕಾವೇರಿಯಿಂದಮಾ ಗೋ ದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ (೧-೩೬) ಎಂದು ಹೇಳುತ್ತಾನೆ. ಎಂದರೆ ಆ ಕಾಲದಲ್ಲಿ ಮಹಾರಾಷ್ಟ್ರಭಾಷೆ ಕನ್ನಡವನ್ನು ಇನ್ನೂ ದಕ್ಷಿಣಕ್ಕೆ ಒತ್ತಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಈ ಪದ್ಯವನ್ನೇ ನಂಜುಂಡಕವಿ (೧೭ನೆಯ ಶತಮಾನ) ಅನುವಾದಿಸಿರುತ್ತಾನೆ:
ಕಾವೇರಿಯಂ ಗೋದಾವರಿವರೆಗಮಿ ರ್ದಾವಸುಧಾತಳವಳಯ ಭಾವಿಸೆ ಕರ್ಣಾಟಕ ಜನಪದವದ
ನಾವನೊಲಿದು ಬಣ್ಣಿಸುವನು ಈ ಕನ್ನಡ ನಾಡಿನ ಮಧ್ಯರಾಷ್ಟ್ರವಾಗಿ ತಿರುಳು ಕನ್ನಡವನ್ನು ಆಡುವ ಪ್ರದೇಶ ಯಾವುದೆಂದರೆ:
ಅದಿಳಗಂ ಕಿಸುವೋಟಿಲಾ ವಿದಿತ ಮಹಾಕೊಪಣನಗರದಾ ಪುಲಿಗೆಳೆಯಾ ಸದಭಿಸ್ತುತಮತ್ತೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ (೧೩೭) ಮುಂದಿನ ಶತಮಾನದಲ್ಲಿ ಇದೇ ಅರ್ಥವನ್ನು
ರಾಜಸುಧಾನಿಯ ಪುಟವಹ 8
ಸಾಜದ ಪುಲಿಗೆರೆಯ ತಿರುಳ ಕನ್ನಡದೊಳ್ | ಎಂದು ಪಂಪನ (ಭಾರತ ೧೪-೫೮),
ಕನ್ನಡಮೆರಡುನೂಜಜ
ಕನ್ನಡಮಾ ತಿರುಳ ಕನ್ನಡಂ ಎಂದು ರನ್ನನೂ (ಗದಾಯುದ್ದ -೪೨) ಹೇಳುತ್ತಾರೆ.
ಕನ್ನಡಿಗರು ಬಹಳ ಬುದ್ದಿವಂತರೆಂದೂ, ಕಾವ್ಯದಲ್ಲಿ ಬೇಗ ದೋಷವನ್ನು ಹಿಡಿಯುವರೆಂದೂ ಹೇಳುತ್ತಾನೆ:
ಪದನಳಿದು ನುಡಿಯಲುಂ ನುಡಿ
ದುದನಃದಾರಯಲುಮಾರ್ಪರಾ ನಾಡವರ್ಗಳ್ 8 ರಾಜಾಜಕಮನಿಸಿದ (ಪರಿಷತ್ತಿನ ಮುದ್ರಣ).
ಶ್ರೀ ಸಾಹಿತ್ಯ
ಚದುರರ್ ನಿಜದಿಂ ಕುಯ್ತೋ
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್ (೧-೩೮) ಬಳಿಕ, ಹಿಂದಿನ ಕಾವ್ಯದ “ ಪಂಗನ್ನಡಮಂ ಪೋಲಗೆಡಿಸಿ ” ಕವಿಗಳು ಬರೆಯುತ್ತಾರೆಂದೂ, “ ಕನ್ನಡಂಗ ಳೊಳ್ ದೇಶಿ ಬೇಯಬೇವಿಪ್ಪುದಂ ವಾಸುಕಿಯುಂ ದೋಸಮಿನಿತೆಂದಳಿಯಲಾಟದ ಬೇಸರಗುಂ” ಎಂದೂ ಹೇಳಿ, ಕನ್ನಡ ಭಾಷೆಯಲ್ಲಿ ಉತ್ತರದಕ್ಷಿಣಮಾರ್ಗದಲ್ಲಿದ್ದ ಕೆಲವು ಶಬ್ದಗಳ ಬೇರೆಬೇರೆ ರೂಪ ಗಳನ್ನೂ, ಶೈಲಿಯನ್ನೂ ತಿಳಿಸಿ (೨, ೯೯ ೧೦೮), ಬೆದಂಡೆ, ಚತ್ತಾಣಗಳೆಂಬ ಎರಡು ವಿಧ ಪದ್ಯಕಾವ್ಯ ಗಳುಂಟೆಂದು ಹೇಳುತ್ತಾನೆ.
ನುಡಿಗೆಲ್ಲಂ ಸಲ್ಲದ ಕ ನ್ನಡದೊಳ್ ಚತ್ತಾಣಮುಂ ಬೆದಂಡೆಯುಮಂದೀ ಗಡಿನ ನೆಗಟಿಯ ಕಬ್ಬದೊ
ಟೊಡಂಬಡಂ ಮಾಡಿದ ಪುರಾತನ ಕವಿಗಳ್ (೧-೩೨)
ಕಂದವೂ, ವೃತ್ತವೂ, ಒಂದೊಂದು ಜಾತಿಯೂ, ಇರುವುದು ಬೆದಂಡೆಯೆಂದೂ; ಕಂದಗಳು ಹಲವಾಗಿ, ವೃತ್ತಗಳು, ಅಕ್ಕರ, ಚೌಪದಿ, ಗೀತಿಕೆ, ತಿವದಿ (ತ್ರಿಪದಿ) ಇರುವುದು ಚತ್ಯಾಣವೆಂದೂ ಲಕ್ಷಣವನ್ನು ಹೇಳಿದ್ದಾನೆ.
ಈತನ ಭಾಷೆ ಹಳಗನ್ನಡವೇ ಆದರೂ ಅಲ್ಲಲ್ಲಿ ಪೂರ್ವದ ಹಳಗನ್ನಡದ ರೂಪಗಳು ಇವೆ. ಈತನು ಮುಖ್ಯವಾಗಿ ಕಂದಗಳನ್ನೇ ಪ್ರಯೋಗಿಸಿದ್ದಾನೆ; ಗೀತಿಕೆಗಳೂ, ಸಣ್ಣ ಸಂಸ್ಕೃತ ವೃತ್ತಗಳೂ ಸುಮಾರಾಗಿವೆ; ಪ್ರಸಿದ್ಧ ವೃತ್ತಗಳು ಬಹಳ ಕಡಮೆ; ಪರಿಚ್ಛೇದಗಳ ಅಂತ್ಯದಲ್ಲಿ ಒಂದೆರಡು ಔಪಚ್ಛಂದ ಸಿಕವೂ ಇವೂ ಇವೆ; ಪರಿಚ್ಛೇದ ಸಮಾಪ್ತಿಯನ್ನು ಹೇಳುವುದಕ್ಕೆ ಮಾತ್ರ ಗದ್ಯವಿದೆ. ಈ ಗ್ರಂಥದಲ್ಲಿ ಕವಿಯೇ ಬರೆದಿರತಕ್ಕೆ ಎರಡು ಅನುಷ್ಟುಪ್ಪುಗಳು:
ಇವು ದುಷ್ಕರ ಕಾವ್ಯಂಗಲ್ ಸವಿಶೇಷ ವಿವರ್ತಿಗಳ ಸುವಿಚಾರಿತಮಿಾ ತೋರ್ಪೆ ನಿವಬಾ ಲಕ್ಷಭೇದಮಂ (೨-೧೧) ಗತಪ್ರತ್ಯಾಗತೊಪಾತ್ರ ಚತುಷ್ಟಯ ವಿಕಲ್ಪಮಾ ಪ್ರತೀತಿ ತೋರ್ಪೆನಾ ಗೂಢ
ಚತುರ್ಥಂಗಳ ಲಕ್ಷಮಂ (೨-೫೭) ವಾಕ್ಕಾತುರವನ್ನೂ, ಕವಿತಾಶಕ್ತಿಯನ್ನೂ, ಕಾವ್ಯಪ್ರಯೋಜನವನ್ನೂ ಕುರಿತು ಹೇಳುವುದು:
ಕುವಂತು ಪೇಜರ ಬಗೆಯಂ
ತೆರೆದಿರೆ ಪೆರ್ಗಪಲಾರ್ಪವಂ ಮಾತಲ್ವಂ ಕೀಜದಳೆ ಪಿರಿದುಮರ್ಥಮ ನಂಪಲ್ ನೆವಾತನಾತನಿಂದಂ ನಿಪುಣಂ
ನುಡಿಯಂ ಛಂದದೊಳೊಂದಿರ ತೊಡರ್ಚಲಜೀವಾತನಾತನಿಂದಂ ಜಾಣಂ ತಡೆಯದ ಮಹಾಧ್ಯಕೃತಿಗಳ ನೂಡರಿಸಲಾರ್ಪಾತನಲ್ಲರಿಂದಂ ಬಲ್ಲಂ
3-----------
೪೨೭
ಕನ್ನಡ ಸಾಹಿತ್ಯದ ಚರಿತ್ರೆ
ಮಾತಜ್ವರ್ ಕೆಲಬರ್ ಜಗ ತೀತಳಗತಮನುಜರೊಳಗೆ ಮಾತುವವರೂ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮಕವಿವೃಷಭರ್ಕಳ್
ಪಾಪವಿದು ಪುಣ್ಯಮಿದು ಹಿತ ರೂಪಮಿದಹಿತಪ್ರಕಾರವಿದು ಸುಖಮಿದು ದುಃ ಯೋಪಾತ್ರವಿದೆದಜಪುಗು
ಮಾ ಪರಮಕವಿಪ್ರಧಾನರಾ ಕಾವ್ಯಂಗಳ್ (೧ ೧೫೧೮) ಈತನು ಉದಾಹರಿಸಿರುವ ಕೆಲವು ಪದ್ಯಗಳು:
ಕೇಡಡಸಿದಂದು ಬಗೆಯುಂ, ಕೂಡದು ಕೂಡಿದುದುಮಲದು ವಿಪರೀತಮುಮಂ
ಮಾಡುಗುಮದಂ ಕರ್ಮ ಕೋಡಿ ಬರ್ದುಂಕಲ್ಕಮಜ್ವರಾರ್ ಭೂತಳದೊಳ್ (೧-೭೧)
ಶಶಧರಬಿಂಬಾನನೆಯಂ ರುಷಕೇತನಕೇತನಾಭತನುತನುವಂ ತಾಂ
ಬಿಸವಿಶದವರ್ಣೆಯಂ ಕಂ | ಡೊಸೆದ ಬನದೊಳಗೆ ಜನಕತನಯಳನಣುವಂ (೨-೮೮)
ಅಲರಂಬು ಕರ್ಬುವಿಲ್ ಕೋ ಮಲ ಸರಸಿಜನಾಳತಂತು ತಿರು ಮತ್ತಿವಜಾ ಬಲದಿನಗಲ್ಬರನೆಚ್ಚಾ ತ್ರಿಲೋಕಮಂ ಕಂತು ಬಸಕೆ ಬರಿಸುವನೆಂತುಂ (೩-೧೨೧) ಮಿಗೆ ಪಜಿವರೆನ್ನನೆನ್ನದೆ ಪೊಗರ್ ನೆರೆದೆಲ್ಲರನ್ನನೆನ್ನದೆ ತನ್ನೆಲ್ ಬಗೆದುಭಯಲೋಕಹಿತದೊಳ್
ನಗಟ್ಟಲೆ ಜನಂ ಪಳಗೆ ಪೊಗಟೆ ತನಗೇನದಲೊಳ್ (೩-೧೭೯) (೪) ಅಸಗ, ಗುಣನಂದಿ, ಗುಣವರ್ಮ: ಕೇಶಿರಾಜನು ತನ್ನ ವ್ಯಾಕರಣದಲ್ಲಿ ಲಕ್ಷವಾಗಿ ಇಟ್ಟುಕೊಂಡಿರುವ ಕವಿಗಳನ್ನು ಈ ಪದ್ಯದಲ್ಲಿ ಹೇಳುತ್ತಾನೆ:

ಸುಜನೋತ್ತಂಸನ ಸುಮಾರ್ಗಮಿದಳೆ ಲಕ್ಷಂ ಇವರಲ್ಲಿ ಶ್ರೀವಿಜಯನ ವಿಷಯ ಹಿಂದೆ ಹೇಳಿದ್ದಾಯಿತು; ಹೊನ್ನನೂ ಹಂಪನೂ ಮುಂದೆ ಬರುವರು. ಮಿಕ್ಕವರಲ್ಲಿ ಅಸಗನು, ಪೊನ್ನನ ಹಿಂದೆ ಇದ್ದವನು: “ ಕನ್ನಡ ಕವಿತೆಯೊಳಸಗಂಗನ್ನೂರ್ಮಡಿ” ಎಂದು ಪೊನ್ನನು ಹೇಳಿರುತ್ತಾನೆ. ಗುಣನಂದಿಯ ಗುಣವರ್ಮನೂ ಸುಮಾರು ೯೦೦ರಲ್ಲಿ ಇದ್ದಿರಬಹುದು; ಇವರನ್ನು ನೃಪತುಂಗನು ಹೇಳದಿರುವುದರಿಂದ ಆತನಿಗೆ ಈಚೆಯವರು. ಮಲ್ಲಿಕಾರ್ಜುನನು ಗುಣ ನಂದಿಯ ಗ್ರಂಥದಿಂದ ಉದಾಹರಣೆಗಳನ್ನು ತೆಗೆದಿರುವಂತೆ ಹೇಳುತ್ತಾನೆ. ಗುಣವರ್ಮನ ಗ್ರಂಥದಿಂದ
೪೨೮
ಶ್ರೀ ಸಾಹಿತ್ಯ
ವಿದ್ಯಾನಂದನ ಕಾವ್ಯಸಾರದಲ್ಲಿ ಪದ್ಯಗಳನ್ನು ಕೊಟ್ಟಿದೆ. ಗುಣವರ್ಮ ಎಂಬ ಹೆಸರಿನವರು / ಇಬ್ಬರು ಇದ್ದಾರೆ. ಜನ್ನನನ್ನು (೧೨೦೯) ಸ್ತುತಿಸಿರುವನು ಒಬ್ಬನು (ಸು. ೧೨೩೫): ನಯಸೇನನು (೧೨) ಸ್ತುತಿಸಿರುವನೊಬ್ಬನು. ಇವನೇ ಇಲ್ಲಿ ಹೇಳಿರುವ ಮೊದಲನೆಯ ಗುಣವರ್ಮ (ಸು. ೯೦೦).
ಈ ಗುಣವರ್ಮನು ಒಂದು ಹರಿವಂಶವನ್ನು ಬರೆದಿರುವಂತೆ ಕೇಶಿರಾಜನೂ ಇದನ್ನೇ ನೇಮಿನಾಥ ಪುರಾಣವೆಂದು ಪಾರ್ಶ್ವನೂ ಹೇಳಿದ್ದಾರೆ. ಶೂದ್ರಕವೆಂಬ ಗ್ರಂಥವನ್ನು ಬರೆದಿರುವುದಾಗಿ ವಿದ್ಯಾನಂದನ ಕಾವ್ಯಸಾರದಿಂದ ತಿಳಿಯಬರುತ್ತದೆ. ಈ ಶೂದ್ರಕ ಗ್ರಂಥದಲ್ಲಿ ಮಹೇಂದ್ರಾಂತಕ, ಕಾಮದ ಎಂಬ ಬಿರುದುಗಳುಳ್ಳ ಗಂಗರಾಜನಾದ ಎರೆಯಪ್ಪನನ್ನು (೮೮೬-೯೧೩) ಶೂದ್ರಕನಿಗೆ ಹೋಲಿಸಿದ್ದಾನೆ.9 ತನ್ನ ಪೋಷಕನಾದ ರಾಜನನ್ನು ಪ್ರಸಿದ್ಧ ಪುರುಷರಿಗೆ ಹೋಲಿಸಿ ಒಂದು ಲೌಕಿಕ ಕಾವ್ಯವನ್ನೂ ತೀರ್ಥ ಕರಾದಿಗಳ ಪುರಾಣವನ್ನು ಹೇಳಿ ಒಂದು ಧಾರ್ಮಿಕ ಕಾವ್ಯವನ್ನೂ ಬರೆಯುವ ಪದ್ಧತಿಗೆ ನಾವು ತಿಳಿದ ಮಟ್ಟಿಗೆ ಗುಣವರ್ಮನೇ ಮೊದಲು. ಪಂಪ, ಪೊನ್ನ, ರನ್ನ ಮುಂತಾದವರು ಈ ಪದ್ದತಿಯನ್ನು ಅನುಸರಿಸಿದ್ದಾರೆ.
ಈ ಗಂಗರ ಕಾಲದಲ್ಲಿಯೇ ಗುಣಗಾಂಕಿಯವೆಂಬ ಒಂದು ಛಂದಶ್ಯಾಸ್ತ್ರ ಹುಟ್ಟಿದಂತೆ ತಮಿಳು ಗ್ರಂಥದಿಂದ ತಿಳಿಯಬರುತ್ತದೆ.
ಅಂತೂ ೧೦ನೆಯ ಶತಮಾನದ ಹೊತ್ತಿಗೆ ಕನ್ನಡದಲ್ಲಿ ಸಾಹಿತ್ಯದ ದಾರಿ ಸವೆದು, ಪ್ರೌಢಕವಿಗಳ ವಿಜಯಯಾತ್ರೆಗೆ ಸಕಲ ಸನ್ನಾಹವೂ ನಡೆದಿತ್ತು. ಭಾಷೆ ಪ್ರಾಕೃತ ಸಂಸ್ಕೃತ ಶಬ್ದಗಳಿಂದ ತುಂಬಿ, ಗ್ರಾಮ್ಯ, ದೇಶಿರೂಪಗಳನ್ನು ಬಿಟ್ಟು ಗ್ರಂಥಾರ್ಹವಾದ ಹಳಗನ್ನಡವಾಗಿತ್ತು. ಸಂಸ್ಕೃತದಿಂದಲೂ, ಪ್ರಾಕೃತದಿಂದಲೂ, ಕನ್ನಡದಿಂದಲೂ, ಉಚಿತವಾದ ವೃತ್ತಗಳು ಒದಗಿದ್ದುವು. ಉತ್ತಮವಾದ ಸಂಸ್ಕೃತ ಕಾವ್ಯಗಳನ್ನೂ, ಅಲಂಕಾರ ಗ್ರಂಥಗಳನ್ನೂ ಅಭ್ಯಾಸಮಾಡಿ, ಉಭಯಕವಿಗಳಾಗಬಲ್ಲ ವಿದ್ವಾಂಸರ ನೇಕರು ಕನ್ನಡ ದೇಶದಲ್ಲಿ ರಾಜಸಭೆಗಳನ್ನು ಅಲಂಕರಿಸಿದರು. ಉತ್ತರದಲ್ಲಿ ರಾಷ್ಟ್ರಕೂಟ ಚಾಳುಕ್ಯರೂ, ದಕ್ಷಿಣದಲ್ಲಿ ಗಂಗರೂ ಪ್ರಬಲರಾಗಿ ದೇಶಭಾಷೆಯಲ್ಲಿ ಗ್ರಂಥಗಳನ್ನು ಬರಸಿ ತಮ್ಮ ಕೀರ್ತಿಯನ್ನು ಸ್ಥಿರವಾಗಿ ನಿಲ್ಲಿಸುವ ಉತ್ಸಾಹವುಳ್ಳವರಾದರು. ಕೊಪಣ, ಶ್ರವಣಬೆಳ್ಳೋಳ, ಮುಂತಾದ ಜೈನಕ್ಷೇತ್ರ ಗಳಲ್ಲಿಯೂ ರಾಜರ ಆಸ್ಥಾನಗಳಲ್ಲಿಯೂ ಇದ್ದ ಯೋಗಿಗಳೂ ಗುರುಗಳೂ ತಮ್ಮ ಮತಬೋಧನೆಗಾಗಿ ಕನ್ನಡದಲ್ಲಿ ಕಾವ್ಯನಿರ್ಮಾಣಕ್ಕೆ ಪ್ರೇರಕರಾದರು. ಕವಿತಾಮಾರ್ಗವನ್ನು ಕವಿರಾಜಮಾರ್ಗವೂ ಗುಣ ಗಾಂಕಿಯವೂ ತೋರಿಕೊಟ್ಟುವು. ಶ್ರೀವರ್ಧ, ಶ್ರೀವಿಜಯ, ಗುಣವರ್ಮ ಮುಂತಾದ ಕವಿಗಳು ಶ್ರೇಷ್ಠವಾದ ಕಾವ್ಯಗಳನ್ನು ಗದ್ಯದಲ್ಲಿಯೂ ಪದ್ಯದಲ್ಲಿಯೂ ಬರೆದು, ಲೌಕಿಕ ಧಾರಿಕ ಶಾಸ್ತ್ರಿಕ ವಿಷಯ ಗಳನ್ನು ಕನ್ನಡದಲ್ಲಿ ಸಾಧ್ಯವಾಗುವಂತೆ ಮಾಡಿದರು. ಈ ಮತಬೋಧಕರ, ಲಾಕ್ಷಣಿಕರ, ಕವಿಗಳ ಕೃಷಿಯಿಂದ, ಕನ್ನಡ ಸಾಹಿತ್ಯದ ಭೂವಿ ಸಾರವತ್ತಾಗಿ, ಕಡೆಗೆ ಪಂಪ, ಪೊನ್ನ, ರನ್ನ ಎಂಬ ಕವಿರತ್ನ ತ್ರಯದ ಕಾವ್ಯಗಳಲ್ಲಿ ಉತ್ಕೃಷ್ಟವಾದ ಫಲವನ್ನು ಕೊಡುವಂತಾಯಿತು.
ಈ ಆರಂಭಕಾಲದ ಗ್ರಂಥಗಳಲ್ಲಿ, ಸಿಕ್ಕಿರುವ ಒಂದು ಗ್ರಂಥವನ್ನು, ಅದರಲ್ಲಿರುವ ಕೆಲವು ಉದಾ ಹರಣೆಗಳ ಮುರುಕು.ಗಳನ್ನು, ಬಿಟ್ಟರೆ ಮಿಕ್ಕುವೆಲ್ಲವೂ ಮುಳುಗಿಯೇ ಹೋದುವೆ? ಇನ್ನೂ ಕೆಲವಾದರೂ ಒಳಗೆಯೇ ಅಡಗಿದ್ದು ಪ್ರಕಾಶಕ್ಕೆ ಬಂದಾವೆ? ಬಂದರೆ, ಆ ಕಾಲದ ಭಾಷೆ, ಛಂದಸ್ಸು, ಕಾವ್ಯಸ್ವರೂಪ, ಇವುಗಳ ವಿಷಯ ಎಷ್ಟು ತಿಳಿವಳಿಕೆಯಾದೀತು! ಚರಿತ್ರಕಾರರೂ, ಕಾವ್ಯರಸಿಕರೂ, ಬಹಳ ಕುತೂಹಲ ದಿಂದ ಈ ಕತ್ತಲೆಯ ತೆರೆ ಎದ್ದೀತೆ ಎಂದು ಅತ್ತಕಡೆಯೇ ಕಣ್ಣಾಗಿರುವರು.
9 ಕಾವ್ಯಸಾರ, ಪದ್ಯ ೨೧೫, ೪೩೭, ೫೫೧.
೪೨೯
ಕನ್ನಡ ಸಾಹಿತ್ಯದ ಚರಿತ್ರೆ
೪. ಜೈನಕವಿಗಳು
ಒಟ್ಟು ದೃಷ್ಟಿ: ಕನ್ನಡ ಸಾಹಿತ್ಯವನ್ನು ಮೊದಲು ಉತ್ತಮದಶೆಗೆ ತಂದವರು ಜೈನ ಕವಿಗಳು. ಕವಿಚರಿತಕಾರರು ಹೇಳಿರುವ ೧೭೫ ಜೈನ ಕವಿಗಳಲ್ಲಿ, ಪ್ರಮುಖರಾದ ಸುಮಾರು ೪೫ ಜನರನ್ನು ಆಯ್ದುಕೊಂಡು, ಅವರ ಹೆಸರು, ಕಾಲ, ಗ್ರಂಥಗಳನ್ನು ಒಂದೇ ಸಲ ದೃಷ್ಟಿಗೆ ಬೀಳುವಂತೆ ಇಲ್ಲಿ ತೋರಿಸಿದೆ.
೧. ರಾಷ್ಟ್ರಕೂಟ-ಚಾಳುಕ್ಯ-ಗಂಗರ ಕಾಲ (೯೪೧-೧೧೦೦)
ಪಂಪ (೯೪೧) : ಆದಿಪುರಾಣ, ವಿಕ್ರಮಾರ್ಜುನವಿಜಯ,10 ಪೊನ್ನ (ಸು.೯೫೦): ಶಾಂತಿಪುರಾಣ, ಭುವನೈಕರಾಮಾಭ್ಯುದಯ. ಚಾವುಂಡರಾಯ (೯೭೮): ತ್ರಿಷಷ್ಟಿ ಲಕ್ಷಣ ಮಹಾಪುರಾಣ (ಗದ್ಯ). ನಾಗವರ್ಮ ೧ (ಸು.೯೯೦): ಕಾದಂಬರಿ, ಛಂದೋಂಬುಧಿ (ಛಂದಸ್ಸು). ರನ್ನ (೯೯೩): ಅಜಿತಪುರಾಣ, ಸಾಹಸಭೀಮವಿಜಯ. ಶ್ರೀಧರಾಚಾರ (೧೦ರ್೪): ಚಂದ್ರಪ್ರಭಚರಿತೆ, ಜಾತಕತಿಲಕ (
ಜೋತಿಷ). ಶಾಂತಿನಾಥ (೧೦೬೮): ಸುಕುಮಾರಚರಿತ.
೨. ಕಳಚುಕ್ಯ-ಹೊಯ್ಸಳರ ಕಾಲ (೧೧೦೦-೧೩೫೦)
ನಾಗಚಂದ್ರ (ಸು.೧00): ರಾಮಚಂದ್ರಚರಿತಪುರಾಣ, ಮಲ್ಲಿನಾಥಪುರಾಣ. ಬ್ರಹ್ಮಶಿವ (ಸು.೧೦೦): ಸಮಯಪರೀಕ್ಷೆ (ಕಂದವೃತ್ತ). ನಯಸೇನ (೧೨): ಧರ್ಮಾಮೃತ. ಕರ್ಣ ಪಾರ (ಸು.೧೧೪೦): ನೇಮಿನಾಥಪುರಾಣ . ನಾಗವರ್ಮ ೨ (ಸು.೧೧೪೫): ಕಾವ್ಯಾವಲೋಕನ (ಅಲಂಕಾರ ಕರಣ), ಕರ್ಣಾಟಕ ಭಾಷಾ
ಭೂಷಣ (ವ್ಯಾಕರಣ), ವಸ್ತುಕೋಶ (ನಿಘಂಟು). ವೃತ್ತವಿಲಾಸ (ಸು.೧೧೬೦): ಧರ್ಮಪರೀಕ್ಷೆ. ನೇಮಿಚಂದ್ರ (ಸು.೧೭೦): ಲೀಲಾವತಿ, ನೇಮಿನಾಥಪುರಾಣ. ಬೊಪ್ಪಣ (ಸು.೧೧೮೦): ಗೊಮ್ಮಟಸ್ತುತಿ (ವೃತ್ತ).
ಅಗ್ಗಳ (೧೮೯): ಚಂದ್ರಪ್ರಭಪುರಾಣ. ಆಚಣ್ಣ (ಸು.೧೧೯೫): ವರ್ಧಮಾನ ಪುರಾಣ. ಬಂಧುವರ್ಮ (ಸು.೧೨೦೦): ಹರಿವಂಶಾಭ್ಯುದಯ, ಜೀವಸಂಬೋಧನೆ. ಪಾರ್ಶ್ವ (೧೨03): ಪಾರ್ಶ್ವನಾಥಪುರಾಣ, ಜನ್ನ (೧೨೦೯): ಯಶೋಧರಚರಿತೆ (ಕಂದವೃತ್ತ), (೧೨೩೦): ಅನಂತನಾಥ ಪುರಾಣ. ಶಿಶುಮಾಯಣ (ಸು.೧೨೩೩): ತ್ರಿಪುರದಹನ ಸಾಂಗ ವ್ಯ, ಅಂಜನಾಚರಿತ್ರೆ (ಸಾಂಗತ್ಯ). ಗುಣವರ್ಮ ೨ (ಸು.೧೨೩೫): ಪುಷ್ಪದಂತಪುರಾಣ, ಚಂದ್ರನಾಥಾಷ್ಟಕ. ಕಮಲಭವ (ಸು.೧೨೩೫): ಶಾಂತೀಶ್ವರಪುರಾಣ.
ಆಂಡಯ್ಯ (ಸು.೧೨೩೫): ಕಬ್ಬಿಗರಕಾವ. ಮಲ್ಲಿಕಾರ್ಜುನ (ಸು.೧೨೪೫): ಸೂಕ್ತಿಸುಧಾರ್ಣವ (ಕಾವ್ಯಸಂಗ್ರಹ).
10 ಬೇರೆ ಹೇಳದಿದ್ದರೆ ಗ್ರಂಥ ಚಂಪೂ ಕಾವ್ಯವೆಂದು ತಿಳಿಯಬೇಕು.
೪೩೦
ಶ್ರೀ ಸಾಹಿತ್ಯ
ಮಹಾಬಲ (೧೨೫೪): ನೇಮಿನಾಥಪುರಾಣ, ಕೇಶಿರಾಜ (ಸು.೧೨೬೦): ಶಬ್ದಮಣಿದರ್ಪಣ (ವ್ಯಾಕರಣ). ಕುಮುದೇಂದು (ಸು.೧೨೭೫): ರಾಮಾಯಣ (ಷಟ್ಟದಿ). ನಾಗರಾಜ (೧೩೩೧): ಪುಣ್ಯಾಸವ. ವಿಜಯನಗರದ ರಾಜರ ಕಾಲ (೧೩೫೦-೧೫೬೫) ಮಂಗರಾಜ (ಸು.೧೩೬೦): ಖಗೇಂದ್ರಮಣಿದರ್ಪಣ (ವೈದ್ಯ). ಮಧುರ (ಸು.೧೩೮೫): ಧರ್ಮನಾಥಪುರಾಣ. ಆಯತವರ್ಮ (ಸು.೧೪೦೦): ರತ್ನಕರಂಡಕ. ಭಾಸ್ಕರ (೧೪೨೪): ಜೀವಂಧರಚರಿತೆ (ಷಟ್ಟದಿ). ಬೊಮ್ಮರಸ (ಸು.೧೪೮೫): ಸನತ್ಕುಮಾರಚರಿತೆ (ಷಟ್ಟದಿ), ಜಿವಂಧರ ಸಾಂಗತ್ಯ. ಮಂಗರಸ (೧೫೦೮): ಜಯನೃಪಕಾವ್ಯ (ಷಟ್ಟದಿ), ಸಂಯಕೌಮುದಿ (ಷಟ್ಟದಿ). ವಿದ್ಯಾನಂದ (೧೯೩೩): ಕಾವ್ಯಸಾರ (ಕಾವ್ಯಸಂಗ್ರಹ). ಸಾಳ್ವ (ಸು.೧೫೫೦): ಭಾರತ (ಷಟ್ಟದಿ), ರಸರತ್ನಾಕರ (ಅಲಂಕಾರ). ದೊಡ್ಡಯ್ಯ (ಸು.೧೫೫೦): ಚಂದ್ರಪ್ರಭಚರಿತೆ (ಸಾಂಗತ್ಯ). ರತ್ನಾಕರ (೧೫೫೭): ಭರತೇಶವೈಭವ (ಸಾಂಗತ್ಯ), ಶತಕಗಳು. ಮೈಸೂರು ರಾಜರ ಕಾಲ (೧೫೬೫-೧೮೦೦) ಬಾಹುಬಲಿ (ಸು.೧೫೬೫): ನಾಗಕುಮಾರ ಕಥೆ (ಸಾಂಗತ್ಯ). ಪದ್ಮರಸ (೧೫೯೯): ಶೃಂಗಾರ ಕಥೆ (ಸಾಂಗತ್ಯ). ಭಟ್ಟಾಕಳಂಕ (೧೬೦೪): ಕರ್ಣಾಟಕ ಶಬ್ದಾನುಶಾಸನ (ಸಂಸ್ಕೃತ ಸೂತ್ರ). ಪಂಚಬಾಣ (೧೬೧೪): ಭುಜಬಲಿಚರಿತೆ (ಸಾಂಗತ್ಯ). ಚಂದ್ರಮ (೧೬೪೬) :ಗೊಮ್ಮಟಚರಿತೆ (ಸಾಂಗತ್ಯ). ಧರಣಿಪಂಡಿತ (ಸು.೧೬೫೦): ಬಿಜ್ಜಳರಾಯಚರಿತೆ (ಸಾಂಗತ್ಯ). ಚಿದಾನಂದ (ಸು.೧೬೮೦): ಮುನಿವಂಶಾಭ್ಯುದಯ (ಸಾಂಗತ್ಯ). ದೇವಚಂದ್ರ (೧೭೯೭): ರಾಮಕಥಾವತಾರ, (೧೮೩೦): ರಾಜಾವಳೀಕಥೆ (ಗದ್ಯ). ಚಂದ್ರಸಾಗರವರ್ಣಿ (೧೮೧): ಕದಂಬಪುರಾಣ (ಷಟ್ಟದಿ), ಪರಶುರಾಮ ಭಾರತ (ಷಟ್ಟದಿ),
ಭವ್ಯಾಮೃತ (ಕಂದ),
ರಾಷ್ಟ್ರಕೂಟ-ಚಾಳುಕ್ಯ-ಗಂಗರ ಕಾಲ ಚಿನ್ನದ ಮೊದಲು ಬೆಳೆ; ಹತ್ತನೆಯ ಶತಮಾನದಲ್ಲಿ ಕನ್ನಡಸಾಹಿತ್ಯವು ಇಬ್ಬರು-ಮೂವರು ಮಹಾಕವಿಗಳಿಂದ ಕವಿತಾ ಸಾಮ್ರಾಜ್ಯದ ತಳಹದಿಯನ್ನು ಭದ್ರವಾಗಿ ಹಾಕಿತು. ಉತ್ತರ ಕರ್ಣಾಟಕದಲ್ಲಿ ಚಾಳುಕ್ಯ ರಾಷ್ಟ್ರಕೂಟರ ಆಶ್ರಯದಲ್ಲಿ ಪಂಪ ಪೊನ್ನರೂ, ದಕ್ಷಿಣ ಕರ್ಣಾಟಕದಲ್ಲಿ ಗಂಗರ ಆಶ್ರಯದಲ್ಲಿ ಚಾವುಂಡರಾಯ ನಾಗವರ್ಮರೂ, ಉಭಯರ ಆಶ್ರಯದಲ್ಲಿ ರನ್ನನೂ ಧಾರ್ಮಿಕ, ಲೌಕಿಕ, ಶೃಂಗಾರ ಕಾವ್ಯಗಳನ್ನೂ, ಲಕ್ಷಣಗ್ರಂಥವನ್ನೂ ರಚಿಸಿ ಮುಂದಿನ ಕವಿಗಳಿಗೆ ಆದರ್ಶಪ್ರಾಯರಾದರು. ಹಿಂದಿನ ಕಾವ್ಯಗಳ ಸಾರವೆಲ್ಲಾ ಇವರ ಕಾವ್ಯಗಳಲ್ಲಿ ಸೇರಿಹೋಯಿತು. ಚಾವುಂಡರಾಯನು ತೀರ್ಥಕರರ, ಜೈನರ ಇತಿಹಾಸಗಳ, ಕಥಾಸಾರಾಂಶವನ್ನೆಲ್ಲಾ ಗದ್ಯದಲ್ಲಿ ಸಂಗ್ರಹಿಸಿದನು. ನಾಗವರ್ಮನು ಸಂಸ್ಕೃತ ಮತ್ತು ಕನ್ನಡ ಛಂದಸ್ಸುಗಳನ್ನು ವಿವರಿಸಿ ಪ್ರದರ್ಶಿಸಿದನು. “ ರತ್ನತ್ರಯ ” ವೆಂದು ಪ್ರಸಿದ್ಧರಾದ ಪಂಪ ಪೊನ್ನ ರನ್ನರು ಶಾಂತಿರಸಪ್ರಧಾನವಾದ ತೀರ್ಥಕರ ಚರಿತ್ರೆಗಳನ್ನೂ, ವೀರರಸ ಪ್ರಧಾನವಾದ ಭಾರತ ರಾಮಾಯಣ ಕಥೆಗಳನ್ನೂ, ಉತ್ತಮವಾದ ಚಂಪೂ ಕಾವ್ಯಗಳಲ್ಲಿ ಎರಕಹೊಯ್ದು ದಿವ್ಯ ವಿಗ್ರಹ
ಕನಡ ಸಾಹಿತ್ಯದ ಚರಿತ್ರೆ
೪೩೧
ಗಳನ್ನಾಗಿ ಮಾಡಿ ನಿಲ್ಲಿಸಿದರು. ನಾಗವರ್ಮನು ಬಾಣನ ಕಾದಂಬರಿಯನ್ನು ಕನ್ನಡಿಸಿ ಅದ್ಭುತರಸ ಶೃಂಗಾರ ರಸಗಳು ತುಂಬಿರುವ ಪ್ರೇಮಕಥೆಗೆ ಮೇಲುಪಂಕ್ತಿಯನ್ನು ಹಾಕಿದನು. ಅಂದಿನಿಂದ ಇಂದಿನ ವರೆಗೂ, ಸುಮಾರು ಸಾವಿರ ವರ್ಷಗಳ ಕಾಲ, ಧರ್ಮಕಥೆ, ವೀರಕಥೆ, ಪ್ರೇಮಕಥೆಯನ್ನು ಬರೆಯ ತಕ್ಕವರಿಗೆಲ್ಲಾ ಪಂಪ ರನ್ನ ನಾಗವರ್ಮರು “ ಗುರುತಾ ಪ್ರತೀತಿ *11 ಯನ್ನು ಕೈಕೊಂಡವರಾಗಿದ್ದಾರೆ
- ಪಂಪ ಕನ್ನಡ ಕವಿಗಳಿಗೆಲ್ಲಾ ಆದಿಕವಿ, ಸಮಾಜ, "ಪಸರಿಪ ಕನ್ನಡಕ್ಕೊಡೆಯನೊರ್ವನ"12 ಪಂಪ. ಈತನನ್ನು ಹೆತ್ತು ಕನ್ನಡಮಾತೆ ಮಹಾಕವಿಮಾತೆಯಾದಳು. ಈತನ ಕಾವ್ಯಗಳು ಹಿಂದಿನ ಕಾವ್ಯಗಳನ್ನೆಲ್ಲಾ * ಇಕ್ಕಿ ಮೆಟ್ಟಿದುವು *: ಮುಂದಿನ ಕಾವ್ಯಗಳಿಗೆಲ್ಲಾ ಬಟ್ಟೆದೋರಿದುವು. ಈತನು ಬೆಳೆಯುತ್ತಿದ್ದಾಗ ಚಾಳುಕ್ಯರನ್ನು ಸೋಲಿಸಿ ರಾಷ್ಟ್ರಕೂಟರು ಕರ್ಣಾಟಕವನ್ನು ಆಳುತ್ತಿದ್ದರು. ಅವರಲ್ಲಿ “ಸಾಮಂತ ಚೂಡಾಮಣಿ ”ಯಾಗಿ, “ ವಿಕ್ರಮಾರ್ಜುನ”, “ಗುಣಾರ್ಣವ” ಎಂಬ ಬಿರುದುಗಳನ್ನು ಧರಿಸಿ, ತನ್ನ ಮನತನವನ್ನು ಮತ್ತೆ ಸಾಮ್ರಾಜ್ಯ ಸ್ಥಾನಕ್ಕೆ ಎತ್ತುವುದನ್ನೇ ನಿರೀಕ್ಷಿಸುತ್ತಿದ್ದ ಅರಿಕೇಸರಿಯೆಂಬ ಚಾಳುಕ್ಯ ರಾಜನಿದ್ದನು. ಈತನಿಗೆ ಮುದ್ದುಹೆಸರು “ಪ್ರಿಯಗಳ”, “ಅರಿಗ ” ಈತನ ಆಸ್ಥಾನಕ್ಕೆ ಪಂಪನಿಗೆ ಕರೆ ಬಂದಿತು: * ಕವಿತಾಗುಣಾರ್ಣವ "ನೆಂಬ ಬಿರುದು ಸಂದಿತು. ರಾಜ, ವೈದಿಕಮತಾವಲಂಬಿ, ಕವಿ, ವೈದಿಕರ ವಂಶ, ಆದರೆ ಜೈನಧರ್ಮಿ. ಮೂರು ತಿಂಗಳಲ್ಲಿ ತನ್ನ ಪ್ರಿಯಧರ್ಮವನ್ನು ಬೆಳಗುವ ಆದಿಪುರಾಣವನ್ನು ರಚಿಸಿ ತನ್ನ ಕೀರ್ತಿಧ್ವಜವನ್ನು ನೆಟ್ಟು ಯಶೋದುಂದುಭಿಯನ್ನು ಮೊಳಗಿದ್ದನು:
ದುಂದುಭಿಗಭ್ರನಿನದ ದುಂದುಭಿಸಂವತ್ಸರೋದ್ಭವಂ ಪ್ರಕಟಯಶೋ ದುಂದುಭಿ ಸಿಂಹಾಸನಸುರ ದುಂದುಭಿಪತಿ ಚರಣಕಮಲಶೃಂಗಂ ಪಂಪಂ!
(ಆದಿಪುರಾಣ ೧-೩೩)
ರಾಜನ ಕ್ಷೇತ್ರರಕ್ತವೂ, ಕವಿಯ ಬ್ರಾಹ್ಮಣರಕ್ತವೂ ಒಟ್ಟಿಗೆ ಕುದಿದುವು. ವೇದವ್ಯಾಸರ ಮಹಾಭಾರತವು ಪಂಪನ ವಿಕ್ರಮಾರ್ಜುನ ವಿಜಯವಾಗಿ ಪರಿಣಮಿಸಿತು-ಆರು ತಿಂಗಳಲ್ಲಿ! ಪಂಪಭಾರತದಲ್ಲಿ * ವಿಭವದೊಳರಿಗಂಗಾಯ್ತು ರಾಜ್ಯಾಭಿಷೇಕಂ !” (ಭಾರತ ೧೪-೮), “ ಪ್ರಿಯಗಳ್ಳಂಗೋಸದೀಗೆ ಮಂಗಳಮಹಾಶ್ರಿಯಂ ಜಯಶ್ರೀಯುಮಂ !” ಎಂಬ ರಾಜಾಶೀರ್ವಾದವಾಯಿತು (೧೪-೩೫). ಒಂಬತ್ತು ತಿಂಗಳಲ್ಲಿ ಕನ್ನಡತಾಯಿ ಪಂಪಾಪತಿಯ ಪ್ರಸಾದದಿಂದ ಎಲ್ಲರ ಹೃದಯದಿಂದಲೂ ಹೊಮ್ಮವ ಬಿರುದಿನ ಕವಿರತ್ನವನ್ನು, ಕವಿಚಕ್ರವರ್ತಿಯನ್ನು ಹಡೆದಳು,
ಪಂಪನ ಪೂರ್ವಿಕರು ವೆಂಗಿಪಳುವಿನ ವತ್ವಕುಲದ ಬ್ರಾಹ್ಮಣರು, “ ತನ್ನಧ್ವರಧೂಮದ ನಿಜಯಶಮಂ ಕರಿದು ಮಾಡಿದ ” ಮಾಧವ ಸೋಮಯಾಜಿ; ಆತನ ಮಗ ಅಭಿಮಾನಚಂದ್ರ: ಆತನ ಮಗ ಕೊಮರಯ್ಯ; ಆತನ ಮಗ ಅಭಿರಾಮದೇವರಾಯ, ಪಂಪನ ತಂದೆ, ಕೊಂಡಕುಂದಾನ್ವಯದ ಜೈನನಾದನು
ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ ಮಾತೊ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ತ ಜ್ಞಾತಿಯನುತ್ತರೋತ್ತರಮೆ ಮಾಡಿ ನೆಗಳ್ಳಿದನಿಂತಿರಾತ್ಮವಿ ಖ್ಯಾತಿಯನಾತನ್, ಆತನ ಮಗಂ ನೆಗಟೀಂ ಕವಿತಾಗುಣಾರ್ಣವ
(ಭಾರತ ೧೪-೪೮)
11 ನೃಪತುಂಗ 12 ನಾಗರಾಜ,
ಶ್ರೀ ಸಾಹಿತ್ಯ
ಮುನಿಜನದೊದಿಸಿದೊಜೆಯೊ ತನುವದಿಪುದೊಂದೆ ಕೊಂಡಕುಂದಾನ್ವಯ ನಂ ದನವನ ಶುಕಮಂದೆನಗಿನಿ ಸನುಗ್ರಹಂಗೆಯೆ ಕರುಣದಿಂ ಮುನಿನಿವಹಂ
(ಆದಿಪುರಾಣ ೧-೧೪) ಪಂಪನು ದುಂದುಭಿ ಸಂವತ್ಸರದಲ್ಲಿ ಕ್ರಿ.ಶ. ೯೦೨ರಲ್ಲಿ ಹುಟ್ಟಿದನು. ಆದಿಪುರಾಣವನ್ನು ಶಾ. ಶ. ೮೬೩ನೆಯ ಪ್ಲವ ಸಂವತ್ಸರದಲ್ಲಿ ಬರೆದನು.
ಶಕವರ್ಷಮೆಂಟುನೂ ರ್ಕೆ ಕಡೆಯೊಳವತ್ತುಮೂಜು ಸಂದಂದು ಜಗತ್ ಪ್ರಕಟ ಪ್ಲವಸಂವತ್ಸರ ದ ಕಾರ್ತಿಕ ಮುದವನೀಯೆ ನಂದೀಶ್ವರದೊಳ್ ಸಿತಪಕ್ಷದ ಪಂಚಮಿ ದಿನ ಪ್ರತಿವಾರ ಶುಭದ ಮೂಲನಕ್ಷತ್ರದೊಳ ದ್ವಿತಮಾಗೆ ನೆಗಟ್ಟುದೀ ಮ ತೃತಿ ಜಗದೊಳ್ ಪುದಿದು ಸಾಗರಾಂತಕ್ಷಿತಿಯಂ
(ಆದಿಪುರಾಣ ೧೬-೭೬, ೭೭) ಭಾರತದಲ್ಲಿ ಬನವಾಸಿ ದೇಶವನ್ನು ಮನಸ್ಸು ಕರಗುವಂತೆ ವರ್ಣಿಸಿರುವುದನ್ನು ನೋಡಿದರೆ, ಅಲ್ಲಿಯೇ ಹುಡುಗನಾಗಿ ಬೆಳೆದಂತೆ ತೋರುತ್ತದೆ. ವಿಷ್ಣುಪುರಾಣದ ನೆನಪೂ, ಬಾಲಕನ ಪ್ರಕೃತಿ ಸೌಂದರ್ಯಾನುಭವದ ನೆನಪೂ, ದೇಶಾಭಿಮಾನವೂ ಹೇಗೆ ಕಲೆಯುತ್ತವೆ, ನೋಡಿ:
ಸೊಗಯಿಸಿ ಬಂದ ಮಾಮರನೆ, ತಲೆವಳ್ಳಿಯ, ಪೂತ ಜಾತಿ ಸಂ
ಪಗೆಯ, ಕುಕಿಲ್ವ ಕೋಗಿಲೆಯ, ಪಾಡುವ ತುಂಬಿಯೆ, ನಲ್ಲರೋಗಂ ನಗೆಮೊಗದೊಳ್ ಪಳಂಚಲೆಯ ಕೂಡುವ ನಲ್ಲರೆ, ನೋಬೊಡಾವ ಬೆ ಟ್ಟು ಗಳೊಳಮ್, ಆವ ನಂದನವನಂಗಳೊಳಮ್, ಬನವಾಸಿದೇಶದೊಳ್
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ ೪ಾಗರಮಾದ ಮಾನಸರೆ ಮಾನಸರ್! ಅಂತವರಾಗಿ ಪುಟ್ಟಲೇ ನಾಗಿಯುಮನೂ ತೀರ್ದಪುದೆ? ತೀರದೊಡಂ ಮಣಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿದೇಶದೊಳ್
ತೆಂಕಣಗಾಳಿ ಸೋಂಕಿದೊಡಮ್ ಒಳುಡಿಗೇಳ್ಕೊಡಮ್, ಇಂಪನಾಳ ಗೇ ಯಂ ಕಿವಿವೊಕ್ಕೊಡಮ್, ಬಿರಿದ ಮಲ್ಲಿಗೆಗಂಡೊಡಮ್, ಆದ ಕೆಂದಲಂ ಪಂ ಕೆಳೆಗೊಂಡೊಡಮ್, ಮಧುಮಹೋತ್ಸವಮಾದೊಡಮ್, ಏನನೆಂಬೆನಾ ರಂಕುಸಮಿಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ! ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲೊಂದಿಪುಂ ತಗುಳ್ಳೆಂದು ಗೇ ಯಮುಮ್, ಆದಕ್ಕರಗೊಟ್ಟಿಯುಂ, ಚದುರರೋಳ್ಳಾತುಂ, ಕುಳಿರ್‌ಕೊಪ್ಪೆ ಜೊಂ ಪಮುಮ್, ಏವೇದನುಳ್ಳ ಮೆಯ್ಯುಕಮುಮ್, ಇಂತೆನ್ನಂ ಕರಂಡಿ ನಾ ಡೆ ಮನಂಗೊಂಡಿರೆ ತೆಂಕನಾಡ ಮಳಿಗೆಯಲ್ಲಿಂ ಮನಂಬರ್ಕುಮೇ
(ಭಾರತ ೪-೨೮೩೧)
ಕನ್ನಡ ಸಾಹಿತ್ಯದ ಚರಿತ್ರೆ
ಅರಿಕೇಸರಿಯ ರಾಜಧಾನಿಯಾದ ಪುಲಿಗೆರೆಯ ತಿರುಳಕನ್ನಡದಲ್ಲಿ ಸಹಜವಾಗಿ ಭಾರತವನ್ನು ಬರೆದಿದ್ದಾನೆ. ನೃಪತುಂಗನೂ ಈ ಪ್ರಾಂತವನ್ನು ಕನ್ನಡದ ತಿರುಳೆಂದು ಹೇಳಿದ್ದಾನೆ; ಈ ಕನ್ನಡವನ್ನೇ ಹುಡುಗನಿಂದಲೂ ಪಂಪನು ಪಳಗಿಸಿ ಸ್ವಾಧೀನಕ್ಕೆ ತಂದುಕೊಂಡಿರಬೇಕು.
ರಾಜದ್ರಾಜಕಮೆನಿಸಿದ ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ ರ್ವ್ಯಾಜದೆಸಕದೊಳೆ ಪುದಿದೊಂ ದೊಜೆಯ ಬಲದಿನಿಯ ಕವಿತೆ ಪಂಪನ ಕವಿತೆ!
(ಭಾರತ ೧೪-೫೮)
ಪಂಪನ ಗುರು ದೆವೇಂದ್ರಮುನಿ. ಈತನನ್ನು ಶ್ರವಣಬೆಳೊಳದ ೬೬ನೆಯ ಶಾಸನದಲ್ಲಿ ಭಾರತೀಭಾಳಪಟ್ಟನೆಂದು ಹೊಗಳಿದೆ. ಆದಿಪುರಾಣದ ಆಶ್ವಾಸಾಂತ ಗದ್ಯಗಳಲ್ಲಿ ಕವಿ ಈತನ ಹೆಸರನ್ನು ಭಕ್ತಿಯಿಂದ ಸ್ಮರಿಸುತ್ತಾನೆ. ಕನ್ನಡ ಕವಿಗಳು ಈ ರೀತಿಯ ಗದ್ಯವನ್ನು ಬರೆಯುವುದಕ್ಕೆ ಉದಾಹರಣೆಯಾಗಿ ಇದನ್ನು ಕೊಡಬಹುದು :
* ಇದು ದೇವೇಂದ್ರ ಮುನೀಂದ್ರ ವಂದ್ಯ ಪರಮಜಿನೇಂದ್ರ ಮುಖಚಂದ್ರ ವಾಕ್ಕಂದ್ರಿಕಾ ಪ್ರಸರ ಪ್ರಸಾದೀರ್ಣ ಸೂಕ್ತಿ ಕಲ್ಲೋಲ ಮಾಲಾಕೀರ್ಣ ಕವಿತಾಗುಣಾರ್ಣವ ಪ್ರಣೀತ
ಮಚ್ಛಾದಿಪುರಾಣದೊಳ್...” ಭಾರತದ ಆಶ್ವಾಸದ ಕೊನೆಯ ಗದ್ಯ ಹೀಗಿದೆ:
* ಇದು ವಿವಿಧ ವಿಬುಧ ಜನ ವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯ ದೊಳ್.”
ಗುರುಪ್ರಸಾದ! ಜಿನೇಶ್ವರಪ್ರಸಾದ!-ಈ ಭಕ್ತಶಿರೋಮಣಿಯ ಭಕ್ತಿಯನ್ನೂ, ವಿನಯವನ್ನೂ ನೋಡಿ:
ಪೆಸರ್ಗೊಂಡಿಂದ್ರನರೇಂದ್ರವಂದ್ಯನನೊಲ್ಲೆತ್ಯಾನುಮೋರೊರ್ಮೆ ಚಿಂ ತಿಸಿದೊಂಗಂ ಪವಣಿಲ್ಲ ಪುಣ್ಯಮೆನೆ, ಪೂಣೇಂದಮೋರಂತೆ ಭಾ ವಿಸಿ ತಾನ್ ತನ್ಮಯನಾಗಿ ತಚ್ಚರಿತಮಂ ಕಾವ್ಯಂಗಳೊಳ್ ಕೂಡೆ ಬ ಣ್ಣಿಸಿ ಪೇಟ್ಟಾತನ ಕರ್ಮಜ್ರರೆಯನಂತಿಂತುಂತೆನಲ್ ಬರ್ಕುಮೇ?
ಪ್ರಾಣಿಹಿತಮಂ ವಿನೆಯ ಪ್ರೀಣನಕರಮಂ ಜಗತ್ರಯಪ್ರಕಟಿತ ಕ ಲ್ಯಾಣಮನೀ ನೆಗಳ್ತಾದಿಪು ರಾಣಮನಪರಿಮಿತಭಕ್ತಿಯಿಂ ವಿರಚಿಸುವೆಂ
(ಆದಿಪುರಾಣ ೧-೩೭,೪೨) ಭಾರತದಲ್ಲಿಯೂ ಹೀಗೆಯೇ! ವ್ಯಾಸ * ಭಟ್ಟಾರಕ "ರಲ್ಲಿ ಭಕ್ತಿ, ನಮ್ರತೆ; ತನ್ನ ರಾಜನಲ್ಲಿ ಪ್ರೇಮ,
ಹೆಮ್ಮೆ:
ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ, ಗುಣಾರ್ಣವನೊಳು ಮನ್ಮನೋ ವಾಸಮನೆಮ್ಮೆ ಪೇಪನದಲ್ಲದೆ ಗರ್ವಮೆ ದೋಷಮ್, ಅಗಂ ದೋಷಮೆ? ಕಾಣೆನ್, ಎನ್ನವ ಮಾಯೆ ಪೇನಿದಾವ ದೋಷವೋ! 28.
ಶ್ರೀ ಸಾಹಿತ್ಯ
ವಿಪುಳಯಶ್ವಿ ತಾನಗುಣವಿಲ್ಲದನಂ ಪ್ರಭುಮಾಡಿ ಪೂರ್ವಭೂ ಮಿಪರ ಪದಂಗಳಂ ಪುಗಿಸಿ ಪೋಲಿ[ಪರ್]!ಈತನುದಾತ್ತಪೂರ್ವಭೂ ಮಿಪರುಮನೊಳ್ಳಿನೊಳ್ ತಗುಳೆ ವಂದೊಡೆ, ಈ ಕಥೆಯೊಳ್ ತಗುಳ್ಳಿ ಪೋ ಲಿಪೊಡನಗಿಯಾದುದು ಗುಣಾರ್ಣವಭೂಭುಜನಂ ಕಿರೀಟಿಯೊಳ್
(ಭಾರತ ೧-೧೩,೧೪) ಪಪನ ಸ್ವಾಭಿಮಾನವೂ ಗಾಂಭೀರ್ಯವೂ ಹೇಗೆ ಹೊರಟುಬರುತ್ತವೆ!
ಅರಿಕೇಸರಿಯ ಆಸ್ಥಾನದಲ್ಲಿ ಪಂಪನು ಕೇವಲ ಕವಿಯೇ ಆಗಿರಲಿಲ್ಲ; ಕಲಿಯೂ ಆಗಿದ್ದನು (ದಂಡನಾಯಕನಾಗಿದ್ದಿರಬಹುದು):
ಪಂಪಂ, ಧಾವಳಯನಿ ಆಂಪಂ, ಚತುರಂಗಬಳಭಯಂಕರಣಂ, ನಿ ವ್ಯಂಪಂ, ಲಲಿತಾಲಂಕರ
ಣಂ, [ಪಂಚಶರ್]ಕರೂಪನ್, ಅಪಗತಪಾಪಂ! ಕವಿತೆ ನೆಗಟಿಯಂ ನಿಆಸೆ, ಜೋಳದಪಾಟ್ ನಿಜಾಧಿನಾಥನಾ ಹವದೊಳರಾತಿನಾಯಕರ ಪಟ್ಟನೆ ಪಾಸೆ, ಸಂದ ಪೆಂಪು ಭೂ ಭುವನದೊಳಾಗಳುಂ ಬೆಳಗೆ, ಮಿಕ್ಕಭಿಮಾನದ ಮಾತು ಕೀರ್ತಿಯಂ ವಿವರಿಸೆ, ಸಂದನೇಂ ಕಲಿಯೋ ಸತ್ಕವಿಯೋ - ಕವಿತಾಗುಣಾರ್ಣವಂ
(ಭಾರತ ೧೪-೪೯,೫೦) ಇಷ್ಟು ಪದ್ಯಗಳಲ್ಲಿಯೇ ಪಂಪನ ಗಂಭೀರಮೂರ್ತಿ ನಮ್ಮ ಕಣ್ಣೆದುರಿಗೆ ಎದ್ದು ನಿಲ್ಲುತ್ತದೆಯಲ್ಲವೆ? ಕರ್ಣಾಟಕದ ಸ್ವರ್ಣಯುಗಕ್ಕೆ ತಕ್ಕ ಆತ್ಮಜ್ಯೋತಿ, ನಡೆ, ನುಡಿ, ಆಕಾರ, ಕೆಚ್ಚು!
ಗ್ರಂಥಗಳು: ಕ್ರಿ.ಶ. ೯೪೧ರಲ್ಲಿ, ತನ್ನ ೩೯ನೆಯ ವರ್ಷದಲ್ಲಿ, ಪರಿಪಕ್ವವಾದ ಪ್ರತಿಭೆಯಲ್ಲಿ ಪಂಪನು ಎರಡು ಗ್ರಂಥಗಳನ್ನು ಮೇಲೆ ಹೇಳಿರುವಂತೆ ಬರೆದನು. ಸಧರ್ಮಿಗಳ ಕಲ್ಯಾಣಕ್ಕಾಗಿಯೂ, ಆತ್ಮಕಲ್ಯಾಣಕ್ಕಾಗಿಯೂ ಆದಿಪುರಾಣವನ್ನು “ ತಮ್ಮತಮ್ಮಣುಗಿಂದು ಹೆಸರಿಟು ಬುಧಸಮೂಹಂ ಪೇಟಿಲೆಂದೊಡೆ ಪೇರಿಲ್ಯಾಂ ಬಗೆದಂದೆಂ” (ಆದಿಪುರಾಣ ೧-೩೪), ಯಾವ ಲಾಭಕ್ಕೂ ಅಲ್ಲ; ಯಾರ ಮೆಚ್ಚಿಕೆಗೂ ಅಲ್ಲ.
ಕವಿತೆಯೊಳಾಸೆಗೆಯ್ಯ ಫಲಮಾವುದೊ? ಪೂಜೆ, ನೆಗಟಿ, ಲಾಭಮೆಂ ಬಿವೆ ವಲಮ್; ಇಂದ್ರಪೂಜೆ, ಭುವನಸ್ತುತಮಪ್ಪ ನೆಗಿ, ಮುಕ್ತಿ ಸಂ ಭವಿಸುವ ಲಾಭವೆಂಬಿವೆ ಜಿನೇಂದ್ರಗುಣಸ್ತುತಿಯಿಂದ ತಾಮೆ ಸಾ
ರವೆ? ಪೆರೀವುದೇಂ, ಪೆಜರ ಮಾಡುವುದೇಂ, ಪೆಜರಿಂದಮಪ್ಪುದೇಂ? (೧-೩೬) ಆದುದರಿಂದ ತನ್ನ ಆತ್ಮತುಷ್ಟಿಗಾಗಿ, ತನ್ನ ಕವನಶಕ್ತಿಯನ್ನು ಮೀಸಲೆರೆದು ಧರ್ಮಗ್ರಂಥವನ್ನು ರಚಿಸಿದನು.
ಇದುವೆ ಸುಕವಿಪ್ರಮೋದ ಪ್ರದಮ್, ಇದುವೆ ಸಮಸ್ತಭವ್ಯಲೋಕಪ್ರಮುದ ಪ್ರದಮನೆ ನೆಗಣ್ಣಾದಿಪುರಾ
ಣದೊಳವುದು ಕಾವ್ಯಧರ್ಮಮಂ, ಧರ್ಮಮುಮಂ! (೧-೩೮) ವಿಕ್ರಮಾರ್ಜುನವಿಜಯವನ್ನು ಅರಿಕೇಸರಿಯ ಕೀರ್ತಿಗಾಗಿ ಬರೆದನು; ಅದರಿಂದ ಕವಿಗೂ ರಾಜ ಮರಾದೆಯೂ, ಬಹುಮಾನಗಳೂ ದೊರೆತುವು. ಯಾರೂ ಹಿಂದೆ “ಸಮಸ್ತ” ಭಾರತವನ್ನು ಹೇಳಿಲ್ಲ: ನೀನೇ ಹೇಳಲು ಶಕ್ತ; ಹೇಳು ಎಂದು
ಕನ್ನಡ ಸಾಹಿತ್ಯದ ಚರಿತ್ರೆ
ಆತ೦ಗರಿಕೇಸರಿ ಸಂ ಪ್ರೀತಿಯ ಬಲಿಯಟ್ಟಿ ಪಿರಿದನಿತ್ತು ನಿಜಾಧಿ ಖ್ಯಾತಿಯನಿಳೆಯೊಳ್ ನಿಕ್ಸ
ಲೀ ತೆಜದಿತಿಹಾಸಕಥೆಯನೊಪ್ಪಿಸೆ ಕುತಂ ಎಸೆಯೆ ಸಮಸ್ತ ಭಾರತಮನಾವ ನರೇಂದ್ರರುಮಾರ್ತು ಕೂರ್ತು ಪೇ
ಸ[ರ], ಕವೀಂದ್ರರುಂ ನೆಲೆಯೆ ಪೇ []ರೆ, ಪೇಪೊಡೆಯ್ದೆ ನೀನೆ ಪೇ. ಸುವೆಯುದಾತ್ತಕೀರ್ತಿ ನಿಲೆ ಪೇಡೆ ಪಂಪನೆ ಪೇಟ್ಟು ಮಿಂತು ಪೇ ಭಿಸಿದ ನರೇಂದ್ರರುಂ ನೆಲೆಯೆ ಪೇಟ್ಟಿ ಕವೀಂದ್ರರುಮಾರ್ ಧರಿತ್ರಿಯೊಳ್ !
(೧೪-೫೧, ೫೩) ಹೀಗೆ ಹೇಳಿಸಲು, ಅರಿಕೇಸರಿಯನ್ನೇ “ ಕಥಾನಾಯಕಂ ಮಾಡಿ ಸಂದರ್ಜುನನೊಳ್ ಪೋಲ್ವಿ ಕಥಾ ಭಿತ್ತಿಯನನುನಯದಿಂ ಪೇಲಲೆಂದೆತ್ತಿಕೊಂಡಂ” (೧-೫೧), * ಉಪಾಖ್ಯಾನಕಥೆಗಳೊಳವೊಂದುಂ ಕುಂದಲೀಯದೆ ಪೇಟೆ೦” (೧೪-೫೪ ವಚನ). ಈ ಕಾವ್ಯಕ್ಕೆ ಬಹುಮಾನವಾಗಿ ಅರಿಕೇಸರಿ ಬಟ್ಟೆ ಸಾಸಿರದಲ್ಲಿರುವ ಧರ್ಮಪುರವೆಂಬ ಶಾಸನದಗ್ರಹಾರವನ್ನು ಕೊಟ್ಟನು.
(೧೪-೫೬) ಈ ಎರಡು ಕಾವ್ಯಗಳ ಪ್ರಶಸ್ತಿಯನ್ನು ಕವಿ ಹೀಗೆ ಹೇಳಿದ್ದಾನೆ:
ಪುದಿದ ಜಸಂ ಪೊದು ಚಳವೊಂದಿದಳಂಕೃತಿ ಕೈತ ದೇಸಿಯಂ ಬುದನೆನೆ ವಸ್ತುವಿದ್ಯೆಯೆನೆ ಕಬ್ಬಮೆ ಮುನ್ನಮವಂತವಲ್ಲದ ಲ್ಲದೆ ಪೆವಿಲ್ಲ ಕಬ್ಬಮನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮ ಟ್ಟಿದುವು ಸಮಸ್ತ ಭಾರತಮುವಾದಿಪುರಾಣ ಮಹಾಪ್ರಬಂಧಮುಂ ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸಂ ಗೊಳುತಿರೆ ಪೂಣ್ಣು ಪೂಣ್ಣ ತೆ[ದೊಂ]ದಜದಿಂಗಳೊಳೊಂದು ಮೂಜತಿಂ ಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾಗುಣಾರ್ಣವಂ ಕ್ಷಿತಿಗೆ ಸಮಸ್ತ ಭಾರತಮುಮಾದಿಪುರಾಣಮುಮೀಗಳೊಂದಳಂ ಕೃತಿಯವೊಲಿರ್ದುವೇಕಯ? ಪೋದವರಾದವರೊಳ್ ಸರಸ್ವತೀ
ಮತಿ ಕವಿತಾಗುಣಕ್ಕೆ ಪದದೆಯೆವರ ಕವೀಂದ್ರರಾರ್ ಸರ ಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಳಾಸಮಂ!
(೧೪-೫೯೧ ೬೧)
|
ಹೀಗೆ “ ಪುರಾಣಕವಿ 'ಯೂ, “ ನಾಡೊವಜ "ನೂ ಆದ ಪಂಪಕವಿ ಸಾರಭೌಮನನ್ನು ರನ್ನನು ಮೊದಲುಗೊಂಡು ಪ್ರಾಯಶಃ ಹೊಗಳದ ಕನ್ನಡದ ಹಿರಿಯ ಕವಿಗಳೇ ಇಲ್ಲ. ಜೈನಕವಿಗಳೆಲ್ಲರೂ ಈತನನ್ನು ಹೊಗಳಿ ಹೊಗಳಿ ದಣಿದು ಹೋಗಿದ್ದಾರೆ. ನಾಗವರ್ಮ, ಕೇಶಿರಾಜ, ಮುಂತಾದ ಲಾಕ್ಷಣಿ ಕರೂ ಕಾವ್ಯಸಂಗ್ರಹಿಗಳಾದ ಮಲ್ಲಿಕಾರ್ಜುನ ವಿದ್ಯಾನಂದರೂ “ ಗುರುಹಂಪ”ನ ಪದ್ಯಗಳನ್ನು ಉದಾಹರಿಸಿದ್ದಾರೆ. ಹೊಯ್ಸಳರ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಪುನರ್ಜೀವ ಬಂದಾಗ ಶ್ರೇಷ್ಠ ಕವಿ ನಾಗ ಚಂದ್ರನು “ ಅಭಿನವ ಪಂಪ” ಎಂಬ ಹೆಸರನ್ನು ಅಭಿಮಾನದಿಂದ ಸ್ವೀಕರಿಸಿದ್ದಾನೆ. ಜೈನಸಾಹಿತ್ಯ ಸತ್ಯನು ಉನ್ನತಸಾ ನದಿಂದ ಜಾರಿ ಅಸ್ತಮಯವಾಗುತ್ತ ಬಂದ ಕಾಲದಲ್ಲಿ ಮಧುರಕವಿ ಪಂಪನಾಮ
ಮಂತ್ರವನ್ನು ಜಪಿಸಿದ್ದಾನೆ, ಬಹು ಚಮತ್ಕಾರವಾಗಿ
೪೩೬
ಶ್ರೀ ಸಾಹಿತ್ಯ
ಆದಿಕವಿ ಪಂಪನಂದನು ವಾದಿಸಿ ವಾದಿಸಿ ವಿರೋಧಿ ವಿಪರೀತತೆಯಿಂ ದೂದೆ ವಿಲೋಮದ ಪೆಸರಂ
ಮೇದಿನಿಯೊಳಗವನ ಹೆಸರೆ ಪಸರೈಡೆದೆಸೆಗುಂ! ನಮ್ಮ ಕಾಲದಲ್ಲಿಯೂ, ಕುಗ್ಗಿದ್ದ ಕನ್ನಡ ಚಿಗುತುಕೊಳ್ಳುವ ಆರಂಬದಲ್ಲಿ, ೧೮೯೮ರಲ್ಲಿ ಪಂಪಭಾರತವನ್ನು ಮುದ್ರಿಸಿ, ರೈಸ್ ಸಾಹೇಬರು- ಪಂಪನ ಕಾವ್ಯಗಳಿಂದ ಕನ್ನಡ ಕವನಕ್ಕೆ ತುಂಬ ಉತ್ಸಾಹವೆರಿದಂತೆ ತೋರುತ್ತದೆ; ಈ ಮುದ್ರಣವೂ ಅದೇ ರೀತಿಯಲ್ಲಿ ಭಾಷೆಯ ಸಾಹಿತ್ಯಕ್ಕೆ ಮತ್ತೆ ಉತ್ತೇಜನವನ್ನು ಕೊಡುವುದಂದು ನಂಬಿದ್ದೇನೆ” ಎಂದು ಪೀಠಿಕೆಯಲ್ಲಿ ಭರವಸೆಗೊಂಡಿದ್ದಾರೆ. ೧೯೦೦ನೆಯ ಮುದ್ರಣದ ಆದಿಪುರಾಣದಲ್ಲಿ ಕೀರ್ತಿಶೇಷರಾದ ಎಸ್. ಜಿ. ನರಸಿಂಹಾಚಾರರು – ಕನ್ನಡ ಕವಿಗಳೆಲ್ಲರೂ ಈತನನ್ನು ಏಕಕಂಠರಾಗಿ ಸ್ತುತಿಸಿದ್ದಾರೆ......ಲಕ್ಷಣಗಳಿಗೆ ಅನುಸಾರವಾದ ಕಾವ್ಯಶ್ರೇಷ್ಠವನ್ನು ವಿರಚಿಸಿ ತನ್ನ ಲಕ್ಷಣಕ್ಕೆ ತನ್ನ ಕಾವ್ಯವನ್ನೇ ಲಕ್ಷವಾಗಿ ತೋರಿಸಿದವನು ಮಹಾಕವಿ ಪಂಪನೊಬ್ಬನೇ ಎಂದು ಧಾರಾಳ ವಾಗಿ ಹೇಳಬಹುದು” ಎಂದು ಅಪ್ಪಣೆ ಕೊಡಿಸಿದ್ದಾರೆ. ಈಚೆಗೆ ಸಾಹಿತ್ಯ ಪರಿಷತ್ತಿನವರು ಭಾರತದ ಉತ್ತಮ ಪ್ರತಿಯನ್ನು ಸಂಪಾದಿಸಿ, ನ್ಯೂನತೆಗಳನ್ನು ಸಾಧ್ಯವಾದಮಟ್ಟಿಗೂ ಹೋಗಲಾಡಿಸಿ, ಪಂಪನ ದಿವ್ಯವಿಗ್ರಹಕ್ಕೆ ಯೋಗ್ಯವಾದ ಮಣಿಭವನವನ್ನು ಕಟ್ಟಿದ್ದಾರೆ. ಗೆಲ್ಲಲಿ ಪಂಪ! ಆತನ ಬೆಳಕಿನಲ್ಲಿ ಬೆಳಗಲಿ ಕನ್ನಡ!
ಆದಿಪುರಾಣದ ವಿಮರ್ಶೆ: ಭಾರತಕಥೆ ಸರ್ವರಿಗೂ ಆದರಣೀಯವಾದುದರಿಂದಲೂ, ತೀರ್ಥ ಕರ ಚರಿತೆಗಳಲ್ಲಿ ಜನ್ಮಾವಳಿಯ ಕಥೆಗಳ ಮತ್ತು ಜೈನಮತ ಪ್ರಕ್ರಿಯೆಗಳ ವಿವರಗಳು ತುಂಬಿಕೊಂಡಿರು ವುದರಿಂದಲೂ, ಸಾಮಾನ್ಯವಾಗಿ ಜನರ ಮನಸ್ಸು ಪಂಪನ ಆದಿಪುರಾಣಕ್ಕಿಂತಲೂ ಭಾರತದ ಕಡೆಗೆ ಒಲೆಯುವುದು ಸ್ವಾಭಾವಿಕವಾಗಿದೆ. ಆದರೆ ಇದರಿಂದ ಆದಿಪುರಾಣವು ಪಂಪಭಾರತದಷ್ಟು ಉತ್ಕೃಷ್ಟವಾದ ಕಾವ್ಯವಲ್ಲವೆಂದು ಮಾತ್ರ ಭಾವಿಸಬಾರದು. ಅಷ್ಟೇ ಅಲ್ಲ, ಪಂಪನ ಧರ್ಮಶ್ರದ್ದೆಯಿಂದಲೂ ಭಕ್ತಿ ಜ್ಞಾನ ವೈರಾಗ್ಯ ಭಾವನೆಗಳಿಂದಲೂ ಕವಿತಾವೇಶದ ಪ್ರಥಮಸ್ಫೂರ್ತಿಯಿಂದಲೂ ಪ್ರಜ್ವಲಿಸುವ ಈ ಕಾವ್ಯವು ಕಡೆಗೆ ಆತನ ಭಾರತಕ್ಕೆ ಒಂದು ಕೈ ಮೇಲೆಂದು ಹೇಳಿದರೂ ಹೇಳಬಹುದಾಗಿದೆ.
ತನ್ನ ಭಕ್ತಿಪ್ರದರ್ಶನಕ್ಕೆ ಪಂಪನು ಮೊಟ್ಟ ಮೊದಲನೆಯ ತೀರ್ಥಕರನಾದ ಪುರುದೇವನನ್ನೇ ಆಯ್ದುಕೊಂಡನು; ಆತನೂ, ಮೊಟ್ಟ ಮೊದಲನೆಯ ಚಕ್ರವರ್ತಿಯಾದ ಆತನ ಮಗ ಭರತನೂ ನಮ್ಮ ಆದಿಕವಿಗೆ ಧರ್ಮನಾಯಕನೂ, ವೀರ ನಾಯಕನೂ ಆದರು. ಹದಿನಾರು ಆಶ್ವಾಸಗಳುಳ್ಳ ಆದಿಪುರಾಣ ವನ್ನು ಮೂರು ಭಾಗವಾಗಿ ತೆಗೆದುಕೊಂಡರೆ, ಮೊದಲನೆಯ ಭಾಗದಲ್ಲಿ ಪುರುದೇವನ ಹಿಂದಿನ ಒಂಬತ್ತು ಜನ್ಮಗಳ ವೃತ್ತಾಂತವಿದೆ (ಆಶ್ವಾಸ ೧೬); ಎರಡನೆಯ ಭಾಗದಲ್ಲಿ ಪುರುದೇವನ ಜನನ, ವಿದ್ಯೆ, ವಿವಾಹ, ರಾಜ್ಯಭಾರ, ವೈರಾಗ್ಯ, ಪರಿನಿಷ್ಕ ಮಣ, ತಪಸ್ಸು, ಕೇವಲ ಜ್ಞಾನೋತ್ಪತ್ತಿ, ಸಮವ ಸರಣ, ಧರ್ಮವಿಹಾರ-ಇವುಗಳು ವರ್ಣಿತವಾಗಿವೆ; ಎಂದರೆ, ತೀರ್ಥಕರಜನ್ಮವೈಭವವೆಲ್ಲಾ ಸಾಂಗವಾಗಿ ನಿರೂಪಿತವಾಗಿದೆ (ಆಶ್ವಾಸ ೭-೧); ಮೂರನೆಯ ಭಾಗದಲ್ಲಿ ಭರತಚಕ್ರವರ್ತಿಯ ದಿಗ್ವಿಜಯವೂ, ತಮ್ಮನಾದ ಬಾಹುಬಲಿಯೊಡನೆ ಯುದ್ಧವೂ, ಬಾಹುಬಲಿಯ ಜಿನದೀಕ್ಷಾಸ್ವೀಕರಣವೂ, ಭರತನ ರಾಜ್ಯಪರಿಪಾಲನೆಯೂ, ಬ್ರಾಹ್ಮಣ ವರ್ಣಸೃಷ್ಟಿಯೂ, ಜಿನಮತದ ಭವಿಷ್ಯದರ್ಶನವೂ, ಆದಿದೇವನಾದ ವೃಷಭನಾಥನ ಮತ್ತು ಬಾಹುಬಲಿಭರತರ ಮೋಕ್ಷವೂ ಹೇಳಿವೆ (ಆಶ್ವಾಸ ೫-೧೬).
ಜಗತ್ಸಾಮಿಯೂ, ಅಗಾಧಬೋಧನಿಳಯನೂ, ದುರ್ವಾಸಂಸಾರವಿಚ್ಛೇದೋಪಾಯ ನಿಯುಕ್ತಸಕ್ತಿಯೂ ಆದ ಆದಿಬ್ರಹ್ಮನು ನಮಗೆ ಮುಕ್ತಿಶ್ರೀ ಸುಖಾವಾಪ್ತಿಯನ್ನು ದಯೆಗೆಯ್ಯಲಿ ಎಂದು ಕವಿ ಗ್ರಂಥಕ್ಕೆ ನಾಂದಿಯನ್ನು ಮಾಡಿ (೧೧),
4--------------
೪೩೭
ಕನ್ನಡ ಸಾಹಿತ್ಯದ ಚರಿತ್ರೆ
ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಜದು ಪೆಣ್ಣ ರೂಪಮಂ ಧರಿಯಿಸಿ ನಿಂದುದಲ್ಲದುವೆ ಭಾವಿಸಿದುವ ಕೇಳ ಪೂಜಿಪಾ ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ
ರ್ಕೆರೆದಪೆನಾ ಸರಸ್ವತಿಯೆ ಮಾಮಗಿಲ್ಲಿಯೆ ವಾಗ್ವಿಳಾಸಮಂ ಎಂದು ಜಿನವಾಣಿಯನ್ನು ಪ್ರಾರ್ಥಿಸಿ (೧೯), ಜೈನಪುರಾಣ ಲಕ್ಷಣವನ್ನು ತಿಳಿಸುವನು:
“ ಆ ಪುರಾಣಕ್ಕಂ ಲೋಕಾಕಾರಕಥನಮುಂ, ದೇಶನಿವೇಶೋಪದೇಶಮುಂ, ನಗರಸಂಪತ್ಸರಿವರ್ಣ ನಮುಂ, ರಾಜ್ಯರಮಣೀಯಕಾಖ್ಯಾನಮು, ತೀರ್ಥಮಹಿಮಸಮರ್ಥನಮುಂ, ಚತುರ್ಗತಿಸ್ವರೂಪ ನಿರೂಪಣಮುಂ, ತಪೋದಾನವಿಧಾನವರ್ಣನಮುಂ, ತತ್ಪಳಪ್ರಾಪ್ತಿ ಪ್ರಕಟನಮುಂ, ಎಂದಿಂತವಯವಂ ಗಳೆಂಟಕ್ಕುಂ”
(೧-೪೨ ವಚನ)
ಎಂದರೆ, ಮುಖ್ಯವಾಗಿ, ಅರ್ಥಕಾಮಗಳ ತೃಷ್ಠೆಯಿಂದ ಮಾಡಿದ ಶುಭಾಶುಭಕರ್ಮಗಳ ಫಲವಾಗಿ, ತಿರ್ಯಕ್, ಮನುಷ್ಯ, ನಾರಕ, ದೇವ ಎಂಬ ನಾಲ್ಕು ಗತಿಗಳುಳ್ಳ ಸಂಸಾರದಲ್ಲಿ ತೊಳಲುವ ಜೀವನು ಜಿನಧಮ್ಮದಲ್ಲಿ ಶ್ರದ್ದೆಯಿಟ್ಟು ಸಮ್ಯಗ್ದರ್ಶನ, ಸಮ್ಯಜ್ಞಾನ, ಸಮ್ಯಕ್ಷಾರಿತ್ರವೆಂಬ ರತ್ನತ್ರಯಗಳಿಂದ ಪರಿಷ್ಕೃತನಾಗಿ, ದಾನ ಧರ್ಮ, ವೈರಾಗ್ಯ ತಪಸ್ಸುಗಳಿಂದ ಉತ್ತಮಜನ್ಮಗಳನ್ನು ಹೊಂದುತ್ತ, ಭವಾವಳಿಯ ತುದಿಯಲ್ಲಿ ಅಹಮಿಂದ್ರನಾಗಿ ದೇವಲೋಕದಲ್ಲಿದ್ದು, ಪರಿಶುದ್ಧಾತ್ಮನಾಗಿ ಮನುಷ್ಯ ಲೋಕಕ್ಕೆ ಬಂದು ಚರಮದೇಹಧಾರಿಯಾಗಿ ವೈರಾಗ್ಯದಿಂದ ಸಕಲವನ್ನೂ ತೊರೆದು ತಪಸ್ಸು ಮಾಡಿ ಕರ್ಮಕ್ಷಯವನ್ನು ಮಾಡಿಕೊಂಡು ತೀರ್ಥಕರನಾಗಿ ಜೈನಧರ್ಮವನ್ನು ಲೋಕಕ್ಕೆ ಬೋಧಿಸಿ ನಿರ್ವಾಣ ವನ್ನು ಹೊಂದುವ ಚರಿತ್ರೆಯೇ ತೀರ್ಥಕರ ಪುರಾಣದ ಸಾರಾಂಶ. ಕೆಲವು ಪುರಾಣಗಳಲ್ಲಿ ಆ ಕಾಲದ ಚಕ್ರವರ್ತಿಗಳ ಚರಿತ್ರೆಯೂ ಸೇರುತ್ತದೆ.
ಆದಿಪುರಾಣದ ಭವಾವಳಿಯನ್ನೂ, ತೀರ್ಥಕರಜನ್ಮಚರಿತೆಯನ್ನೂ, ಚಕ್ರವರ್ತಿಚರಿತೆಯನ್ನೂ ಸ್ವಲ್ಪ ವಿಶದವಾಗಿ ಪರಿಶೀಲಿಸೋಣ. ಏಕೆಂದರೆ ಈ ಆದಿಕಾವ್ಯವನ್ನು ಮನದಟ್ಟುಮಾಡಿಕೊಂಡರೆ ಮಿಕ್ಕ ಜೈನಪುರಾಣಗಳೆಲ್ಲಾ ಹೃದ್ಧತಗಳಾದಂತೆಯೇ,
ವೃಷಭನಾಥನ ಜನ್ಮಾವಳಿಯನ್ನು ಈ ಅಕ್ಕರ ವೃತ್ತದಲ್ಲಿ ಒಟ್ಟುಗೂಡಿಸಿ ಕವಿ ಹೇಳಿದ್ದಾನೆ:
ಭೋಗಕಾಂಕ್ಷೆಯೊಳ್ ಜಯವರ್ಮಂ ಬಕೀ ಮಹಾಬಳಂ ಲಲಿತಾಂಗಂ ವಜ್ರಜಂಘಂ ಭೋಗಭೂಮಿಜಂ ಶ್ರೀಧರದೇವಂ ಸುವಿಧಿನರಾಧಿಪನಚ್ಯುತೇಂದ್ರಂ
ಸಾಗರಾಂತ ನೆಲನನಿತುಮಂ ಚಕ್ರದಿಂ ಬೆಸಕಯ್ಲಿದ ವಜ್ರನಾಭಿ ಯಾಗಿ ಸಾರ್ಥಸಿದ್ದಿಯೊಳ್ ಪುಟ್ಟಿ ಬಂದಿಲ್ಲಿ ತಾನಾದಿದೇವನಾದ
(೧೬-೫೮ ಮತ್ತು ೨-೪೪) ಮೊದಲು ಸಂಸಾರಭೋಗದ ದೃಶ್ಯಗಳನ್ನು ಕಣ್ಣಿಗೆ ಕಟ್ಟುತ್ತಾನೆ:
ಮಹಾಬಳನೆಂಬ ವಿದ್ಯಾಧರ ಚಕ್ರವರ್ತಿಯ ಒಡೋಲಗದಲ್ಲಿ ಸ್ವಯಂಬುದ್ಧನೆಂಬ ಮಂತ್ರಿ
ನಿನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಧೀಶ್ವರಾ! ಭವವಾರಾಶಿನಿಮಗೃರಂ ದಯೆ ದಮಂ ದಾನಂ ತಪಂ ಶೀಲಮೆಂ ಬಿವೆ ಮೆಯಾಗಿರೆ ಸಂದ ಧರ್ಮಮೆ ವಲಂ ಪೊತ್ತುಗುಂ ಮುಕ್ತಿಪ ರ್ಯವಸಾನಂಬರಮ್, ಆನುಷಂಗಿಕಫಲಂ ಭೂಪೇಂದ್ರ ದೇವೇಂದ್ರರಾ
ಜೈವಿಳಾಸ, ಪೆಂತು ನಂಬು ಖಚರಕ್ಷಪಾಲಚೂಡಾಮಣಿ ಎಂದು ಧರ್ಮಪ್ರಭಾವವನ್ನು ಸಾರುತ್ತಾನೆ. ಇದಕ್ಕೆ ಪ್ರತಿವಾದಿಗಳಾಗಿ “ ಜೀವಾಭಾವಮನೆ ಪಿಡಿಯಚ್ಚು ಬಡಿದು
೪೩೮
ಶ್ರೀ ಸಾಹಿತ್ಯ
ಒಡಲೊಳ ಜೀವಮಿರ್ದು ಗಡ ಸಂಚಿಸುತಿರ್ಪುದು ಪುಣ್ಯಪಾಪಮಂ ಗಡ! ಬಳಿಕ ಬೇಆ ಪೇಜತೆಂದೂಡಲೋಳ್ ಗಡ ತಾನೆ ನಿಂದೊಡ ಬಡಿಪುದು ಧರ್ಮಕರ್ಮಫಲಮಂ ಗಡ! ಸತ್ತನ ಮತ್ತೆ ಪುಟ್ಟುವ ಗಡ! ಪುಸಿ, ಕಾಣ! ಡಂಬಮಿದು, ಖೇಚರ ನೀನಿದನೆಂತು ನಂಬಿದೋ?
ತಿವಿದುಟ್ಟುದಿಕ್ಕಿ ಸುರಲೋಕಸುಖಗಳನುಸ್ಥ್ಯವೆಂಬ ಬ ತಲೆಗರ ಮಾತುಗೇಳದಿರು! ಬಾನಮಿಂದ್ರಿಯವರ್ಗದಿಚ್ಚೆಯಂ ಸಲಿಸಿ, ಬಸಂತದೊಳ್ ಕಳಿಕೆಗರ್ಚಿದ ಕೋಗಿಲೆಯಂತೆ ಬಿಚ್ಚತಂ
ನಲಿವುದು, ಕಂಡರಾರ್ ಮಜುಭವಗಳಲ್ಲಿ ವಿಯಚ್ಚರೇಶ್ವರಾ ?” (೨- ೯) ಎಂದು ಇತರ ಮಂತ್ರಿಗಳು ಹಾಸ್ಯ ಮಾಡುತ್ತಾರೆ. ಇದು ಪಂಪನ ಧರ್ಮಶ್ರವಣಕ್ಕೆ ಶ್ರುತಿ: ಇಲ್ಲಿ ಆಸ್ತಿಕ್ಯವೂ ನಾಸ್ತಿಕ್ಕವೂ, ಮುಕ್ತಿಯ ಭುಕ್ತಿಯ ಪ್ರತಿಭಟಿಸಿವೆ.
ಕೆಲವು ಕಾಲಾನಂತರ, ಸ್ವಯಂಬುದ್ದನು ಮತ್ತೆ ಎಚ್ಚರಿಸುತ್ತಾನೆ:
ಮಸೆದಂಗೋದ್ಭವನದಂತೆಸೆವ ನಿನ್ನೀ ರೂಪು ವೃದ್ಧತ್ವದೊಳ್ ಪೊಸತೊಂದಾಯ್ತು, ಮಮತ್ವಮಂ ಬಿಸುಟು ನೀನೇಕತ್ವಮಂ ಭವ್ಯ ಭಾ ವಿಸು, ನಿನ್ನೀ ತನುವಂ ತಪೋವನವನಕ್ರೀಡಾಸುಖಕೊಡು , ಚಿಂ ತಿಸದಿರ್ ಮುನ್ನಿನ ನಿನ್ನ ಯೌವನವನಕ್ರೀಡಾವಿಳಾಸಂಗಳಂ ನಿನಗೀ ಸಂಸೃತಿವಾರಿರಾಶಿತಟಮಾಸನ್ನಮ್, ಆಸನ್ನಭ ವನಯಂದೆಯ ಮುನೀಂದ್ರದಿವಮತದಿಂ ನಿಶೆಸಿದೆ, ಮಾಣಲಿ ನನಸು ಬಾರದು ನಿನ್ನಳಾಹಿತಮಂ ನಿಶ್ಮಿಸು, ಸನ್ಮಾರ್ಗಸೂ
ಚನೆಗೆಯ್ದಂ ಶರಣಂ ಜಿನೇಂದ್ರಚರಣಂ ವಿದ್ಯಾಧರಾಧೀಶ್ವರಾ (೨-೪೭, ೪೮) ಮಹಾಬಳನು ಹಾಗೆಯೇ ತಪಸ್ಸು ಮಾಡಿ ದೇವಲೋಕಗಳಲ್ಲಿ ಒಂದರಲ್ಲಿ ಹುಟ್ಟುತ್ತಾನ-ಲಲಿತಾಂಗನಾಗಿ. ಅಲ್ಲಿಯ ಶೃಂಗಾರ ವೈಭವವೋ !
ಸುರತರುನಂದನಗಳಿನಲರ್ಮ ಬಂದೆಗಿತ್ತು; ದೇವಸೌಂ ದರಿಯರ ದಿವ್ಯಮಪ್ಪ ಪೊಸಗುಂಪಿನಲಲಪನವುಂಕಿಕೊಂಡವ ಆರ ಮಿಳಿರ್ವೊಳ್ಳುರುಳಳನೆ ಲೀಲೆಯಿನಾಡಿಸಿ, ಪುಷ್ಪ ಕೇಸರಂ
ತೆರಳಿ ತೆರಳ್ಳಿ, ಬೀಸಿದುದು ತಂಬೆಲರೆಂಬೆಲರಪ್ಪಿಕೊಳ್ಳವೋಲ್! (೨-೬೨೫) ಅಲ್ಲಿ ಸ್ವಯಂಪ್ರಭೆಯೆಂಬವಳು ಲಲಿತಾಂಗನಿಗೆ ಪ್ರಿಯೆಯಾಗುವಳು. ಅವಳ ಸೌಂದರ್ಯರಾಶಿಯನ್ನು ಹೇಗೆ ಹೊಗಳಬೇಕು?
ಅದು ಸುಖದೊಂದು ಪಿಡಮ್, ಅದು ಪುಣ್ಯದ ಪುಂಜಮ್, ಅದಗಜಂಗ ಬಾ ಚಿತ್ರದಲ್, ಅದು ಚಿತ್ತಜಂಗೆ ಕುಲದೈವಮ್, ಅದಂಗಜಚಕ್ರವರ್ತಿಗೆ ತಿದ ಪೊಸವಟ್ಟಮ್, ಅಂತದು ಮನೋಜನ ಕೈಪಿಡಿಯಂದು ಮಾಗ್ಧನಾ
ಸುದತಿಯ ರೂಪನಿನ್ ಪೆಜತನೆಂದೊಡೆ ಚಿಃ ಕರಮೆಗ್ನನಾಗನೇ! (೨-೭೪) ಈ ದಿವ್ಯಸುಖಕ್ಕೂ ಅವಸಾನಕಾಲ ಹತ್ತಿರವಾಯಿತು: ಲಲಿತಾಂಗನಿಗೆ ಭಯ ಹುಟ್ಟಿತು! ಕೇಳಿ ಆ ಕುರಿಯ ಮೊರೆಯನ್ನು !
ಸುರತರುನಂದನಂಗಳಿರ, ರತ್ನ ಪಿನದ್ಧವಿಮಾನಕುಟ್ಟಿಮಾಂ ತರಸುರತಾಲಯಂಗಳಿರ, ಚಾರುವಿಲೋಲಕಟಾಕ್ಷಪಾತಸೌಂ ದರಪರಿವಾರದೇವಿಯರಿರಾ, ಕಡುಕಯು ಕೃತಾಂತನಿಂತು ನಿ ರ್ನರಮಣಿದುಯ್ಕೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ !
೪೩೯
ಕನ್ನಡ ಸಾಹಿತ್ಯದ ಚರಿತ್ರೆ
ಕಾಮಸಾಮ್ರಾಜ್ಯಸರ್ವಸ್ವಭೂತೆಯಾದ ನಲ್ಲಳಾದರೂ ಬಿಡಿಸಿಕೊಳ್ಳಬಾರದೇ? ಅಯ್ಯೋ
ಕಾಮಸಾಮ್ರಾಜ್ಯಸರ್ವಡಾದೊಡಮೇನ್, ಅಸುವ ಕೆಮ್ಮನೆನ್ನನು
ಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು
ಝಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇಟ್ ಸ್ವಯಂಪ್ರಭೇ! (೩-೪,೫) ಕನಿಕರಿಸಿ ಅಲ್ಲಿಯ ಜ್ಞಾನಿಗಳು ಸಂತೈಸುತ್ತಾರೆ :
ಆವನುಮೀ ಸಂಸಾರದೊಳ್ ಬೇಯದನೊಳನೆ ಶರಣ್ ಧರ್ಮದಿದೊಂದುಮುಂಟೇ ! ಜಿನಚೈತ್ಯವಾತಮಂ ಬಂದಿಸು, ಜನಪದಪದ್ಮಂಗಳಂ ದಿವ್ಯಮಪ್ಪ ರ್ಚನೆಯಿಂದಂ ಭಕ್ತಿಯಿಂದರ್ಚಿಸು, ಜಿನನ ನಮಸ್ಕಾರಮಂತ್ರಂಗಳೊಳ್ ಭಾ ವನೆಯಂ ತಾಳಿಯಿಂದಂ ಜಿನಮಹಿಮೆಗಳಂ ಮಾಡು, ನೀಂ ಭವ್ಯ,
ತ್ರಿನ ಮಿಥ್ಯಾಜ್ಞಾನಿವೋಲ್ ನೀನ್ ತರಳತೆವೆರಸಿಂತೇಕೆ ವಿಭ್ರಾಂತನಪ್ಪೆ! (೩-೬, ೭) ಜಿನಧ್ಯಾನಮಾಡುತ್ತ ಲಲಿತಾಂಗನು ಸ್ವರ್ಗಚ್ಯುತನಾಗುತ್ತಾನೆ; ಅತ್ತ ಸ್ವಯಂಪ್ರಭೆಯ ದುಃಖ ವನ್ನು ಯಾರು ಕೇಳಿಯಾರು?
ಮುರಿದೆಳೆದುಯ್ಕೆ ನಿನ್ನನಿರವಂತಕನ್, ಆನ್ ನಡೆ ನೋಡೆ ನೋಡೆ ನೀನ್ ಕರಗಿದೆ! ಎಂತುಮೆನ್ನ ಸುಶರೀರದೊಳಿರ್ದುದು ಜೀವಮ್? ಈಿ ಡಲ್ ಕರಗಿದುದಿಲ್ಲದೆನ್ನ ಬಸಮಿಡಲಿಂದೆಮ ಶೋಕದೊಳ್ ಮನಂ ಕರಗಿದುದೆಯೇ ವಾರದಿರೆಯಿರ್ದೆಡೆಯಿಂ ಲಲಿತಾಂಗವಲ್ಲಭಾ! ಮದನನ ಕೈದುವೆಲ್ಲಿದನ್! ಅನಂಗನ ಕೈಪೊಡೆಯೆಲ್ಲಿದನ್, ವಿಳಾ ಸದ ಕಣಿಯಲ್ಲಿದನ್, ಚದುರ ಪುಟ್ಟಿದನ್ ಎಲ್ಲಿದನ್, ಎಲ್ಲಿದನ್ ವಿನೋ
ದದ ಮೊದಲ್, ಎಲ್ಲಿದನ್ ಸೊಬಗಿನಾಗರಮ್, ಎಲ್ಲಿದನ್ ಇಚ್ಚೆಯಾನ್, ಎ ಇದನ್ ಎರ್ದೆಯಾನ್, ಎನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ!
(೩-೧೪, ೧೫) ಈ ಪ್ರಿಯರು ಭೂಲೋಕದಲ್ಲಿ ವಜ್ರಜಂಘ ಶ್ರೀಮತಿಯರಾಗಿ ಜನಿಸಿ ಒಬ್ಬರನ್ನೊಬ್ಬರು ನೆನಸಿಕೊಂಡು ವ್ಯಥೆಪಡುವರು. ಶ್ರೀಮತಿ ಪೂರ್ವಜನ್ಮದ ಪ್ರೇಮದ ಗುರುತುಗಳನ್ನು ಬರೆದು ಪಂಡಿತೆಯೆಂಬ ದಾದಿಯೊಡನೆ ಚಿತ್ರಪಟವನ್ನು ಕಳುಹುವಳು. ವಜ್ರಜಂಘನು ಕಂಡು ಸುರಲೋಕ ಸುಖಾನುಭವವನ್ನೂ, ಅಭಿಜ್ಞಾನಗಳನ್ನೂ ತಿಳಿಸುವನು. ಮದುವೆಯಾಗುವುದು. “ ನೂತನ ಪ್ರೇಮದೆ ನಿಮಿರ್ವೆಡೆಯೊಳ್ ದೃಪ್ರಿಯಂ ಕಾವನಾವನ್ ?” (೪-೫೧), ಊರಿಗೆ ದಂಪತಿಗಳು ಹೊರಡುವರು. ಕಾಳಿದಾಸನೂ ಪಂಪನೂ ಇಲ್ಲಿ ಧ್ವನಿಗೂಡುವರು:
ರಾಜಾಧಿರಾಜನಳಿಯನ ಮೊಗಮಂ ನೋಡಿ,
ಬಗೆದುಂ ನಿನ್ನನ್ವವಾಯೋನ್ನತಿಯನ್, ಇವಳಸ್ನೇಹಸಂಬಂಧಮಂ ನೀನ್ ಬಗೆದುಂ, ಸಂದೆಮ್ಮ ನಂ ಬಗೆದುಮ್, ಅಜಯದೇನಾನುಮೆಂದಾಗಳುಂ ಮೆ ಲ್ಲಗೆ ನೀನ್ ಕಲ್ಟಿಪ್ಪುದೆಮ್ಮ ನೆನೆದೆರ್ದೆಗಿಡದಂತಾಗೆ ಪಾಲಿಪ್ಪದಿಂತೀ
ಮೃಗಶಾಬೇಕಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದ ವಜ್ರಜಂಘಾ ಎಂದು ನುಡಿದು ಲಕ್ಷ್ಮೀಮತಿ ಮಹಾದೇವಿಯುಂ ತಾನುಮಾತ್ಮೀಯಪ್ರಿಯಾತ್ಮಜೆಯ ಮೊಗಮ ನಟ್ಟಿರ್ತು ನೋಡಿ,
ಶ್ರೀ ಸಾಹಿತ್ಯ
ಮನಮmದಂಜಿ ಬೆರ್ಚಿ ಬೆಸಕಮ್, ನಿಜವಲ್ಲಭನೇನನೆಂದೊಡಂ ಕಿನಿಸದಿರ್, ಒಂದಿದಗ್ರಮಹಿಷೇಪದದಲ್ಲಿ ಪರಸ್ಥೆಯಾಗು, ನಂ ದನವನಗಣ್ಯಪುಣ್ಯಧನರಂ ಪಡೆಯೆಂದಮರ್ದಪ್ಪಿಕೊಂಡು, ತ ತನುಜೆಯಗಲೆಯೊಳ್ ನೆಗಪಿದರ್ ಬಸವಲ್ಲದ ಬಾಷ್ಪವಾರಿಯಂ
ಆಗಳ್ ವಜ್ರದಂತನನಂತಸಾಮಂತಾಂತಃಪುರಪರಿವಾರಂ ಬೆರಸು ಪೋಗಿ, ಮಗಳುಮನಳಿಯನುಮಂ ಕಿದಂತರಂಬರಂ ಕಳಿಪಿ ಮಗುಟ್ಟಾಗಳ್,
* ಪೊಡೆವಡುವಪ್ಪಿಕೊಳ್ಳ, ನೆನೆಯುತ್ತಿರಿಮೆಂಬ, ಸಮಸ್ತವಸ್ತುವ
ಕುಡುವ, ಪಲರ್ಮಯಿಂ ಪರಸಿ ಸೇಸೆಯನಿಕ್ಕುವ, ಬುದ್ಧಿವೇಟ್ಟಿ, ಕೈ
ಯೆಡೆ ನಿಮಗೆಂದೊಡಂಬಡಿಪ, ನಲ್ಲರಗಿಗೆ ಕಣ್ಣ ನೀರ್ಗಳಂ
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್ (೪-೫೫ ೫೭) ಈ ರಮಣೀಯ ಪ್ರೇಮಕಥಾಲಹರಿಗೆ ಕೊನ?* ಭೋಗಿಸಿದನಖಿಳಭೋಗಂಗಳಂ ವಜ್ರಜಂಘಂ ” (೫-೨೨); ಭೋಗಿಸಿ ಒಂದು ರಾತ್ರಿ ಇವರು ಮಲಗಿದ್ದ ಮನೆಯಲ್ಲಿ “ ಮುಚ್ಚಿರ್ದ ಹರಿನೀಲಗವಾಕ್ಷ ಜಾಲಕವಾಟಪುಟಂಗಳಂ ತೆಣಿಯಲ್ ಮಅಲೆದು ಸೂರ್ಯಕಾಂತದ ಧೂಪಗುಂಡಿಗೆಯೊಳಳವಳಿಯದೆ ಸೆಜ್ಜೆವಳನಿಕ್ಕಿದ ಕೇಶಸಂಸ್ಕಾರ ಕಾಳಾಗರುಧೂಪಂ...ಕೊಂದುದು ಕೃಷ್ಕರಗಂ ಕೊಲ್ವವೋಲ್!” ಕವಿ ಏನೆನ್ನುತ್ತಾನೆ?
ಬಿಡದ ಪೊಗೆ ಸುತ್ತೆ ತೊಳಂ ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ ದೊಡಗಳೆದರ್! ಓಪರೂಪರೋ ಲೈಡಸಾಯಲ್ ಪಡೆದರ್! ಇನ್ನವೇಂ ಸಯೊಳವೇ? ಭೋಗಾಂಗಮಾಗಿಯುಂ ಕ್ಯ
ಪ್ಲಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ ಭೋಗಿಗಳನ್! ಇಂತು ಸಂಸ್ಕೃತಿ ಭೋಗಂಗಳ್ ! ಭೋಗಿಭೋಗದಿಂ ವಿಷಮಂಗಳ್!
ಅನಿತು ಸುಖದನಿತು ಭೋಗದ ಮನುಜಯುಗಂ ನೋಡೆ ನೋಡೆ ತತ್‌ಕ್ಷಣದೋಳ್ ತಾ ನಿನಿತೊಂದು ದೆಸೆಯನೆದು
ದನೆ ಜಡರೇನೆಂದು ನಂಬುವ ಸಂಸೃತಿಯಂ!
(೫-೨೨ ವಚನ ೧೨೬) ಭೋಗಕಾಂಕ್ಷೆಯಲ್ಲ, ಸಮ್ಯವೇ ಕರ್ಮಬಂಧವನ್ನು ಕಳೆಯುವುದು.
ಇವಜಂ ಸಮ್ಯಗ್ದರ್ಶನ ಮವಶ್ಯಮುಜಳಿಕುಮ್ ಅದುವೆ ಸಮ್ಯಗ್ದಾನ ಕವಕಾಶಮಕ್ಕುಮ್ ಅಂತದು ಕವಲು ಸಮ್ಯಕ್ಟರಿತ್ರಮಂ ಪ್ರಕಟಿಸುಗುಂ ಈ ಸಂಸಾರಾಂಭೋಧಿಯ ನೀಸುವ ನಿನಗಿದುವೆ ನಾವೆ, ತಡಿಗಾಯನಾ
ಯಾಸದೊಳೆ, ನಿನಗೆ ಮುಕ್ತಿ ಪ್ರಾಸಾದಮನಡರಲಿವುವೆ ಸೋಪಾನಂಗಳ್!
ಕನ್ನಡ ಸಾಹಿತ್ಯದ ಚರಿತ್ರೆ
ಸೂಕ್ತಂ ಭವ್ಯಜನಪ್ರ ವ್ಯಕ್ತಂ ಜೈನಾಗಮೋಕ್ತಮಿಂ ನಿನಗೆ ಮದೀ ಯೋಕ್ತಮ್ ಇದೆರ್ದೆಯೊಳ್ ನೆಲಸುಗೆ. ಮುಕ್ತಿ ಶ್ರೀಹಾರವಿಭ್ರಮಂ ಸಮ್ಯಕ್ಷಂ
(೫-೫೯೬೧)
ಸಾಕು ಜನ್ಮಾವಳಿ: ತೀರ್ಥಕರದರ್ಶನವನ್ನು ಮಾಡೋಣ!
ಹದಿನಾಲ್ಕನೆಯ ಮನು ನಾಭಿರಾಜ (೬-೭೦); ಆತನ ಸತಿ ಮರುದೇವಿ (೮೦): ಇವರಿಗೆ ತೀರ್ಥಕರನು ಜನಿಸುವುದನ್ನು ತಿಳಿದು ಇಂದ್ರನು ಅಯೋಧ್ಯಾಪುರವನ್ನು ನಿರ್ಮಿಸಿ (೮೯), ಆರು ತಿಂಗಳು ಮುಂಚೆಯೇ ವಸುಧಾರೆಯನ್ನು ಕರೆಯಿಸಿ (೭-೩), ದೇವತಾಸ್ತ್ರೀಯರಿಂದ ಜಿನಾಂಬಿಕೆಗೆ ಸೇವ ಮಾಡಿಸಿ, ಗರ್ಭಶೋಧನವನ್ನು ಮಾಡಿಸಿದನು (೨೩). ಗರ್ಭಾವತರಣವೆಂಬ ಪ್ರಥಮಕಲ್ಯಾಣ ವಾಯಿತು; ಮಹಾಬಳನ ಒಂಬತ್ತನೆಯ ಜನ್ಮದ ಅಹಮಿಂದ್ರನು ಸರ್ವಾರ್ಥಸಿದ್ದಿಯೆಂಬ ಸ್ವರ್ಗದಿಂದ ಬಂದು ಗರ್ಭದಲ್ಲಿ ಸೇರಿದನು.
ಜ್ಞಾನಮಯಂ ತೇಜೋನಿಧಿ ತಾನಿರ್ದುಂ ತಾಯ ಗರ್ಭದೊಳ್ ಪೀಡೆಯನ ತೇನಂ ಮಾಡಿದಲ್ಲ, ಕೃ ಶಾನುವ ನೆಲಳುರದಂತೆವೊಲ್ ಕನ್ನಡಿಯಂ
(೭-೩೨)
ಆತನು ಹುಟ್ಟುತ್ತಲೇ,
ತ್ರಿದಶಾಸನಂಗಳಲ್ಲಾ ಡಿದುವು ಜಗದ್ಗುರುಗೆ ಬೇಗಮುಚ್ಚಾಸನದಿಂ ದಿದಿರೇಟಿಮೆಂದು ಪೇಲ್ವಿ ಲದೇಂ ಕರಂ ತೀರ್ಥಕರರ ಪುಣ್ಯಂ ಪಿರಿದೋ!
(೪೦)
ಒಡನೆಯೆ ಸೌಧರ್ಮೆಂದ್ರನು ಶಚಿಯನ್ನು ಕಳುಹಿಸಿ ತಾಯ ಹತ್ತಿರ ಮಾಯಾಶಿಶುವನ್ನಿಡಿಸಿ (೪೪), ಜಿನಶಿಶುವನ್ನು ಐರಾವತದಮೇಲೆ ಏರಿಸಿಕೊಂಡು ಮೇರುಪರ್ವತಕ್ಕೆ ಹೋಗಿ ಜನ್ಮಾಭಿಷೇಕವನ್ನು ಮಾಡುವನು. ಇದು ಎರಡನೆಯ ಕಲ್ಯಾಣ,
ನರಲೋಕಂಬರಮುಣಿ ಪೊಣ್ಮದ ಪಯಣಪೂರಗಳಿಂದಂ ಮಹೀ ಧರಕಾಂತಾರನದೀಪಕರಮುಂ ವಿಶ್ವಾವನೀಭಾಗಮುಂ ನರನಾರೀಜನಮುಂ ಪವಿತ್ರತರವಾಯ್ತಿಂದಂದೆ ಕೇಳ್ತಂಗೆ ಬಿ ತರಿಪಂಗಾದವಳುಂಬಮಿ ಭಗವನ್ನಾಭಿಷೇಕೋತ್ಸವ
(೭-೧00) ಬಳಿಕ ಇಕ್ಷಾಕುತಿಳಕನನ್ನು ಅಯೋಧ್ಯೆಗೆ ಕರೆತಂದು, ತಂದೆತಾಯಿಗಳಿಗೊಪ್ಪಿಸಿ, ಆನಂದನೃತ್ಯವನ್ನು ಮಾಡಿ, “ ಈ ಪರಮೇಶ್ವರ ಧರ್ಮಾಮೃತವರ್ಷದಿಂ ಭವ್ಯ ಸಸ್ಯಸಮೃದ್ಧಿಯಂ ಮಾಡುವುದಂ, ವೃಷಮೆಂಬುದು ಧರ್ಮಮದಜಂದೊಪ್ಪವುದಣಿಂದ...ವೃಷಭಸ್ವಾಮಿಯೆಂದು ಹೆಸರನಿಟ್ಟು ” ತನ್ನ ಲೋಕಕ್ಕೆ ಹೋದನು.
(೭-೧೨೬, ೨೭) ಇತ್ತ ಯೌವನಪ್ರಾಪ್ತನಾದ ಪರಮನನ್ನು ನಾಭಿರಾಜನು ವಿವಾಹಕ್ಕೆ ಒಡಂಬಡಿಸುತ್ತಾನೆ.
ಉದಯಾಚಳಕ್ಕೆ ಪೆಸರಿನ ನುದಯದಿನಾದಂತಿರೆಮಗೆ ಗುರುಗಂ ಗುರುವೆ ದೊದವಿದ ಪೆಂಪಿದು ನಿನ್ನೊಂ
ದುದಯದಿನಾಲ್ಕಮರಮೌಳಿಲಾಲಿತಚರಣಾ
೪೪೨
ಶ್ರೀ ಸಾಹಿತ್ಯ
ತುಂಗಭವದ್ರೋಧದ ಬೆಳ ಗಿಂಗೊಳಗಪ್ಪನಿತನೆನ್ನ ಬಗೆ ಪುಗದು, ತಮಂ ಪಿಂಗೆ ದಿನಪತಿಯು ಬೆಳಪ ನ
ಭೋಂಗಣಮಂ ಜ್ಯೋತಿರಿಂಗಣಂ ಬೆಳಗುಗುಮೆ! ಇದು ದಲವಸ್ತುವೆನ್ನದೆ, ಮದುಕಿಯನೊಯ್ಯನೆ ಕೇಳು, ದಿವ್ಯಚಿ ತದೊಳವಧಾರಿಸೆಂತೆನೆ, ಜಗದ್ಗುರು ಲೋಕಹಿತಾರ್ಥದಿಂದ ಸ qುದು ವಲಮ್: ಇಂತಿದಂ ಬಗೆದು, ಪುತ್ರ ಕಳತ್ರಪರಿಗ್ರಹಕ್ಕೆ ಮಾ ಣದೆ ಬಗೆದರ್ಪುದೊಲ್ಲೆನಿದನೆಂದೊಡೆ ಸೃಷ್ಟಿಯೆ ಕೆಟ್ಟುಪೋಗದೇ?
ಮನುಮಾರ್ಗನಿಪುಣನೆನಿಸಿದ ನಿನಗಾಮ್ ಈ ರಾಜಮಾರ್ಗಮಂ ತೋಜಿ ಜಗ ಜ್ಞನಕೆ ನಗೆಯ? ಕಳಭಂ ವನಪಥಮಂ ಯಧಪತಿಗೆ ತೋರ್ಪಂತಕ್ಕುಂ
ಶಾಂತಾತ್ಮ, ಮದುವೆನಿಲ್ ನೀ ನಿಂತೆನ್ನ ಗೃಹಸ್ತ ಧರ್ಮದಿಂದಂ ನೀನೆಂ ತಂತೆ ಸಲೆ ನೆಗತಿ ಜಗತೀ
ಸಂತತಿ ನಿಲೆ ನಿನ್ನ ಧರ್ಮಸಂತತಿ ನಿಲ್ಕುಂ (೮೯೧ ೧೩) ತಂದೆಯ ಮಾತಿಗೆ ಒಪ್ಪಿ ಯಶಸ್ವತಿ ಸುನಂದೆ ಎಂಬ ಕನ್ಯಾರತ್ನಗಳನ್ನು ಪುರುದೇವನು ವರಿಸಿದನು. ಯಶಸ್ವತೀಮಹಾದೇವಿಯಲ್ಲಿ ಭರತನೂ ಬ್ರಹ್ಮಯ, ಸುನಂದಾ ಮಹಾದೇವಿಯಲ್ಲಿ ಬಾಹುಬಲಿಯೂ ಸೌಂದರಿಯೂ, ಅಂತೂ ಒಟ್ಟ ನೂರ್ವರು ಕುಮಾರರೂ, ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು. ಪುರುದೇವನೇ ಸರ್ವರಿಗೂ ಸಕಲಶಾಸ್ತ್ರಗಳನ್ನೂ ಉಪದೇಶಿಸಿದನು. ಮೊದಲು ಹೆಣ್ಣುಮಕ್ಕಳನ್ನು -
ತೆಗೆದುತ್ಸಂಗದೊಳಿಟೊ ಯ್ಯಗೆ ಮೊಗಮಂ ನೋಡಿ ಕರ್ಚಿ ಕದಪು ನುಡಿದಂ ಜಗದಧಿಪತಿ ನಿಮ್ಮಿರ್ಬರ ನೆಗಟಿ, ಮಕ್ಕಳಿರ. ವಿನಯವಿಳಸನನಿಳಯಂ
ಈ ವಯಸಮನೀ ಶೀಲಮ ನೀ ವಿನಯಮನೆಯೇ ವಿದ್ಯೆಯಿಂ ಪುದಿದೊಡೆ ಮ
ವೇಟ್ಟದೋ ನೀವೆ ಜಗ
ತಾವನೆಯರಿರಕ್ಕೆ ನಿಮಗಮಗ್ಗಳರೊಳರೇ! (೮-೫೭ ೨೫೮) ಎಂದು ಅವರಿಗೆ ಮೊದಲು, ಬಳಿಕ ಮಿಕ್ಕ ಮಕ್ಕಳಿಗೆಲ್ಲಾ ವಿದ್ಯೋಪದೇಶ ಮಾಡಿ, ಕ್ಷತ್ರಿಯವಣಿಕ್ಕದ ರೆಂಬ ವರ್ಣತ್ರಯವನ್ನು ಪಡೆದು, ಕರ್ಮನಿರೂಪಣಮಾಡಿ (೮೬೪ ವಚನ) ಕೃತಯುಗವನ್ನು ಆರಂಭಮಾಡಿ (೬೬), ರಾಜ್ಯಾಭಿಷಿಕ್ತನಾಗಿ (೬೯), ಕುರು, ಹರಿ, ನಾಥ, ಉಗ್ರ ಎಂಬ ರಾಜವಂಶಗಳನ್ನು ಸ್ಥಾಪಿಸಿ,
ಸುತರುಮನವರ್ಗವರಭಿಮತ ಮತಮೆಂತದನಿತ್ತು ನಿಲ್ಲಿಸಿದ ಪ್ರಭು, ನಿಜಸಂ ತತಿಯಂ ತಣಿಪಿ ಸುಹೃತ್ಕಂ ತತಿಯಂ ಪೆರ್ಚಿಪುದು ರಾಜ್ಯಫಲಮಿನಿತೆ ವಲಂ
(೮-೫೨)
ಕನ್ನಡ ಸಾಹಿತ್ಯದ ಚರಿತ್ರೆ
೪೪೩
ಈಗ ಭೋಗದಿಂದ ವೈರಾಗ್ಯಕ್ಕೆ ತಿರುಗಿ ಪಂಪನ ಕವಿತೆ ಪರಮೌನ್ನತ್ಯವನ್ನೇರುವುದು. ದೇವೇಂ ದ್ರನು "ಆದಿದೇವನ ಪರಿನಿಷ್ಕಮಣಕಲ್ಯಾಣಮತ್ಯಾಸ ಮೆಂಬುದನmದು ಸಂಗೀತಪ್ರಸಂಗದಿಂದ ಮೊಲಗಿಸಲೆಂದು” ಬರುವನು. ಭಗವದಾಸ್ತಾನ: ಇಂದ್ರನ ಬಿನ್ನಹ: “ ಆವುದು ನಿಮಗಾನಂದ
ಮದಕ್ಕೆ ” ಎಂದು ಅಪ್ಪಣೆ (೯-೮ ವಚನ ೧೩).
ಮದನನ ಬಿಲ್ಲೊಳಮಾತನ ಸುದತಿಯ ಬೀಣೆಯೊಳಮೆಸೆವ ದನಿಯುಮನಿಳಿಸಿ ಅದು ದಲೆನಿಸಿದುದು ಸುರ ತರ್ಯದ ರವದೊಳ್ ಪುದಿದ ಸುರವಧ್ರಗೀತರವಂ
(ಪ. ೧೫) ನೀಳಾಂಜನೆಯೆಂಬ ಅಮರನರ್ತಕಿ:
ಕಳೆ ಗೀತಂ ವಾದ್ಯಂ ನೃ ತ್ಯಲೀಲೆ ಪೆಜರ್ಗೋಪ್ರದೀಕೆಗಲ್ಲದೆ, ಗಣಿಕಾ ತಿಳಕಮಿವಳ್ ನರ್ತನರಸ ದೊಳೆ, ನಿಚ್ಚಂ ಮೆಚ್ಚುಗೊಳ್ವಳಿಂದ್ರನ ಕಯ್ಯೋಳ್ !
(ಪ. ೧೮) ಆಹ! ಏನಾಟ! ಏನು ನೋಟ!
ಸುರಗಣಿಕಾನಾಟ್ಯರಸಂ ಪರಮನ ಚಿತ್ರಮುಮನೆಯೆ ರಂಜಿಸಿದುದು! ವಿ ಸ್ಟುರಿತಸ್ಪಟಿಕಂ ಶುದ್ಧಾಂ ತರಂಗಮೇನನ್ಯರಾಗದಿಂ ರಂಜಿಸದೇ?
( ಪ. ೪೦)
ಆಗ ಏನಾಯಿತು?-ಯಮರಾಜ ಮತ್ತೆ!
ಆ ಮಧುರಾಕಾರಲತಾ ಕೋಮಳೆ ತನಗಾಗಳಾಯುರಂತ ಬರೆ, ಸೌ
ದಾಮಿನಿವೊಲ್, ಭೋಂಕನೆ ಸುರ ಕಾಮಿನಿ ರಂಗದೊಳದೃಶ್ಯಮಪ್ಪುದಮಾಗಳ್
ರಸಭಂಗಭಯದಿನಿಂದಂ ಪೊಸತೊಂದಾ ದೊರೆಯ ಪಾತ್ರಮಂ ತಂದನುಸಂ ಧಿಸುವುದುಮ್, ಅದನಣಮಜಲು ಲೈ ಸುರಾಸುರಸಮಿತಿಗಾದುದಿಲ್ಲಾ ಕಣದೊಳ್ !
ಆ ನೀಲಾಂಜನೆಯೆಂದೆ ಮ ನೋನಯನೋದಿತವಿಮೋಹದಿಂದಿರೆ ಸಭೆ, ವಿ
ದ್ಯಾನಿಳಯನದದಂ ದೇ ಹಾನಿತ್ಯತೆಗಿಂತು ನಾಡೆ ಚೋದ್ಯಂಬಟ್ಟಂ ನಾರೀರೂಪದ ಯಂತ್ರಂ, ಚಾರುತರು, ನೋಡೆ ನೋಡೆ, ಕರಗಿದುದೀ ಸು ಸಾರದನಿತ್ಯತೆ ಮನದೊಳ್ ಬೇರೂಆದುದೀಗಳಿಂದಂ ಕಡೆಗಣಿಪೆ
(೯-೪೧೪೩)
ಶ್ರೀ ಸಾಹಿತ್ಯ
ಕೊಟಿತೇಜದಿಂದಮೆಸೆವೀ
ನಾಟಕಮಂ ತೋಜ್ ಮಾಣ್ಣಳಿಲ್ಲ, ಬಗೆಯೊಳ್ ನಾಟುವಿನಮಮರಿ ಸಂಸ್ಕೃತಿ ನಾಟಕಮುಮನೆನಗೆ ನೆಣಿಯ ತೋಜಿದಳೀಗಳ
(ಪ. ೪೪,೪೫) ಎಲ್ಲಾ ಮಿಂಚಿನ ಹೊಳಪು, ಮುಗಿಲ ನೆರಳು, ನೀರ ಗುಳ್ಳೆ!
ಕಷ್ಟಂ, ದುಃಖಾನಳಪರಿ
ಪುಷ್ಟಂ, ಚಿಃ, ಗತಿಚತುಷ್ಟಯಂ, ಪ್ರಾಣಿಗೆ ಸಂ ತುಷ್ಟತೆಯನೆಮ್ಮೆ ಪಡೆದು! ಅ ಭೀಷ್ಟಸುಖಪ್ರದಮದೊಂದೆ ಮುಕ್ತಿಸ್ನಾನಂ!
(ಪ, ೫೧) ಎನಿತೊಡಲಂ ತಾಳಿದುದಿ ಲೆನಿತೊಡಲಂ ಬಿಸುಟುದಿಲ್ಲ, ವಿಷಯಾನಳನಿಂ ದೆನಿತೆನಿತಂ ಮುಗಿದುದಿ ಅನಂತಸಂಸಾರಗಹನದೊಳ್ ಜೀವಂಗಳ್! ಜನನೀಜನಕಸಹೋದರ ವನಿತಾಸುತಪುತ್ರಮಿತ್ರಸಂಬಂಧಮದೆಂ ತೆನಿತೆನಿತು ಭವದೊಳಾಯ್ತಿ ಲೈನಿತೆನಿತಂ ನೆನೆವುದೆನಿತನವಧರಿಸುವುದೋ!
(ಪ. ೩೩,೫೪)
ಎನಿತನುಮಂಬುನಿಧಿಗಳ ನನೇಕನಾಕಂಗಳಲ್ಲಿ ಕುಡಿದುಂ ಪೋಯ್ತಿ ಲೈನಗೆ ನರಭೋಗವೆಂಬೀ
ಪನಿಪುಲ್ಲಂ ನಕ್ಕೆ ತೃಷ್ಣ ಪೇಮ್ ಪೋದಪುದೇ ? ವಿದಿತಂ ಮೂರ್ಧಾಭಿಷಿಕ್ಕರ್ ಪಲಬರರಸುಗಳ ಪ್ರಾಜ್ಯ ಸಾಮ್ರಾಜ್ಯಲಕ್ಷ್ಮಿ ಪದಮಂ ಕೈಕೊಂಡು ತಮ್ಮ ಮಣಿದು ವಿಷಯಭೋಗಾಸವಾತ್ಯಂತಸೇವಾ ಮದದಿಂದಂ ಧರ್ಮಪೋತಚ್ಯುತರ್ ಅನವಧಿಸಂಸಾರವಾರಾಶಿಮಧ್ಯಾ ಸ್ಪದಸರ್ವಗ್ರಾಸಿಭೀಮಾಂತಕವದನಮಹಾರ್ಗದೊಳ್ ಮಗ್ನರಾದರ್ ಬಗೆಬೀಡಾಡೆ ದುರಂತದುಃಖತತಿಗಳ್, ಬೆನ್ನಟ್ಟೆ ದುರ್ಯೊಹಮ ತೃಗಣಂಗಳ್, ಕಡಿದಿಕ್ಕೆ ಲೋಭಮಕರಾನೀಕಂಗಳ್, ಆಟಂದು ನು
ಇಗೆ ನುಂಗುತ್ತಿರೆ ಮಾರರಾಗಶಿಶುಮಾರಂಗಳ್, ಮಹೋಗ್ರಂಗಳ್, ಇ
ನ್ನೆಗಮೋರಂತೆ ತೊಲ್ಲೆನಿಂ ತಿರಿಯಲಾಜೆಂ ನಾಂ ಭವಾಂಭೋಧಿಯೊಳ್ (೫೭, ೫೮, ೬೦) ಸರಿ: ಮೂರನೆಯದಾದ ಪರಿನಿಷ್ಮ ಣ ಕಲ್ಯಾಣ: ವೃಷಭನಾಥನು ತಪೊರಾಜ್ಯಕ್ಕೆ “ ನಡೆದ ನತ್ತೊಂದೆಡೆಯೊಳ್ ”; ಭರತರಾಜನು ಅಯೋಧ್ಯೆಯಲ್ಲಿ ಜಗತೀ ರಾಜ್ಯದಲ್ಲಿ “ನಿಂದನಿತೊಂದೆಡೆ ಯೋ”, ಆ ಕಾಲದ ಕಾಮದೇವನಾದ ಬಾಹುಬಲಿ ಯುವರಾಜನಾಗಿ ಪೌದನಪುರದಲ್ಲಿ ಆಳುತ್ತಿದನು ಒಂದು ದಿವಸ ರಾಜನಿಗೆ ಮೂರು ಒಸಗೆಗಳು ಒಟ್ಟಿಗೆ ಬಂದುವು: ಪುರುದೇವನ ಕೇವಲ ಜ್ಞಾನೋತ್ಪತಿ (ಇದು ನಾಲ್ಕನೆಯ ಕಲ್ಯಾಣ); ಚಕ್ರವರ್ತಿಯ ಆಯುಧಶಾಲೆಯಲ್ಲಿ ಚಕ್ರರತ್ನದ ಉತ್ಪತ್ತಿ; ಮಹಾದೇವಿಗೆ ಪುತ್ರರತ್ನದ ಉತ್ಪತ್ತಿ
೪೪೫
ಕನ್ನಡ ಸಾಹಿತ್ಯದ ಚರಿತ್ರೆ
ಧರ್ಮಾರ್ಥಕಾಮಮಂಬಿವು ಧರ್ಮಾರ್ಥಜನಕ್ಕೆ ನೆದ ನೆರ್ಮಂತವಳ್ ಧರ್ಮ ಪ್ರಧಾನಮರ್ಥಂ ಧರ್ಮಾಂಫ್ರಿಪಫಳಮದರ್ಕೆ ರಸಮದು ಕಾಮಂ
(೧೦-೪೭, ೪೮)
ಆದುದರಿಂದ ಅರ್ಹತೂಜೆ ಮುಖ್ಯವೆಂದು ಭರತಚಕ್ರವರ್ತಿಯೂ, ಬಾಹುಬಲಿಯ ಆದಿದೇವನಲ್ಲಿಗೆ ಬಂದು ಜಿನಸ್ತುತಿ ಮಾಡಿ, ತತ್ತೋಪದೇಶವನ್ನು ಪಡೆದು ಜಿನೇಶ್ಚರ ಪಾದಪದ್ಮಗಳಿಗೆರಗಿ ನಿಜರಾಜಧಾನಿ ಗಳಿಗೆ ಹೋದರು. ಬ್ರಹ್ಮಯ, ಸೌಂದರಿಯ, ಅನೇಕ ರಾಜಕುಮಾರರೂ ದೀಕ್ಷೆಯನ್ನು ಕೈ ಕೊಂಡರು. ದೇವತೆಗಳು ಆನಂದಪಟ್ಟರು
ಜಯ ಜಯ ನಂದ ನಂದ ಪರಮೇಶ್ವರ ಪಾಪವಿನಾಶ ಲೋಕವಿ ಸ್ಮಯಕರ ಶಂಭು ಶಂಕರ ಮನೋಜಭಯಂಕರ ಭವ್ಯಬಂಧು ನಿ ಮೃಯ ದಯೆಯಿಂದಮಾ ಭವಸಮುದ್ರಮನೀಸುವೆವೆಂಬ ದೇವಕೋ ಟಿಯ ನಿನದಂ ಪಳಂಚಲೆಯೆ ಪೂರ್ಣಿಸಿದತ್ತು ಸಮಸ್ತದಿಕ್ಕಟಂ
(೧೦-೨೧) ಬಳಿಕ ಸೌಧರ್ಮೆಂದ್ರನು ಸಮವಸರಣವನ್ನು ಕಂಡು, ಧರ್ಮಚಕ್ರವರ್ತಿತ್ವಕ್ಕೆ ದಿಗ್ವಿಜಯವೆನಿಸಿದ ಭಗವದ್ವಿಹಾರವನ್ನರಿದು,
ದೇವ ಎನೇಯೊತ್ಮರಸ ಸ್ಯಾವಳಿ ಸುಗಿದಗಿದು ಕೂಡೆ ಬಾಡಿರ್ದುದು ಪಾ ಪಾವಗ್ರಹದಿಂದದನಖಿ ಭಾವನಿತಳಕಂತು ತಳಿಯ ಧರ್ಮಾಮೃತಮಂ
ಮಿಳಿರೆ ದಯಾಧ್ವಜಮುನ್ನತಿ ಗೋಳಗಾಗಿರೆ ಧರ್ಮಚಕ್ರಮಾಯತಿಯಂ ಕೈ ಕೊಳೆ ಭವ್ಯವರೂಥಿನಿ ನಿ
ರ್ಮಳ ನಿನ್ನ ವಿಹಾರಮಾರನೇನೆಲಗಿಸದೆ
(೧೦೬೫, ೬೬) ಎಂದು ಬಿನ್ನಿಸುವನು. ಜಗತ್ತಿಗೆಲ್ಲಾ ಜಿನೇಶ್ವರನಿಂದ ಧರ್ಮಬೋಧೆಯಾಗುವುದು,
ಬಳಿಕ ಭರತೇಶ್ವರನು ಚಕ್ರಪೂಜೆ ಮಾಡಿ ದಿಗ್ವಿಜಯಕ್ಕೆ ಹೊರಟು ಪಟ್ಟಂಡ ಮಂಡಳವನ್ನು ಜಯಿಸುವನು (೧-೧೩). ಈ ಭಾಗದಲ್ಲಿ ಬರುವ ವನವಿಹಾರವರ್ಣನೆಯೂ, ಅದ್ಭುತ ಯುದ್ದ ವರ್ಣನೆಗಳೂ ಪಂಪನಿಗೊಬ್ಬನಿಗೇ ಸಾಧ್ಯವಾದುವು. ಅವನ್ನು ಉದಾಹರಿಸುವುದಕ್ಕೆ ಇಲ್ಲಿ ಅವಕಾಶವಿಲ್ಲ. ಈ ದಿಗ್ವಿಜಯದ ಮಹತ್ತು ತಾನೇ ಏನು, ಕೊನೆಗೆ?
ಆ ವೃಷಭಾದ್ರಿಯ ಮೇಖಳಾಭಿತ್ತಿಯೊಳ್ ಆತ್ಮೀಯ ವಿಶ್ವವಿಶ್ವಂಭರಾವಿಜಯಪ್ರಶಸ್ತಿಯ ನಖಿಯೊಳ್ ಬರೆಯಿಸುವೆನೆಂದು ಪೋಗಿ ನೋಡುವನ್ನೆಗಂ,
ಅದಳನೇಕಕಲ್ಪಶತಕೋಟಿಗಳೊಳ್ ಸಲೆ ಸಂದ ಚಕ್ರವೃಂ ದದ ಚಲದಾಯದಾಯತಿಯ ಬೀರದ ಚಾಗದ ಮಾತುಗಳ್ ಪೊದ ಣಿ ದವಿರೆ ತತ್ವಶಸ್ತಿಗಳೊಳಂತವನೊಯ್ಯನೆ ನೋಡಿ ನೋಡಿ ಸೊ ರ್ದುದು ಕೊಳಗೊಂಡ ಗರ್ವರಸಮಾ ಭರತೇಶ್ವರಚಕ್ರವರ್ತಿಯಾ!
(೮-೭೧) ಅಲ್ಲಿಂದ ಬಂದು ಅಯೋಧ್ಯಾಪುರದ ಬಾಗಿಲಲ್ಲಿ ಚಕ್ರರತ್ನವು ನಿಂತುಹೋಗಲು, ಬಾಹುಬಲಿ ತನಗೆ ಸೇವಾವೃತ್ತಿಯಲ್ಲಿಲ್ಲವೆಂದು ಅವನ ಮೇಲೆ ನಡೆದು ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯದ್ದಗಳನ್ನು ಮಾಡಿ ಸೋತುಹೋಗಿ ರೋಷದಿಂದ ಚಕ್ರವನ್ನೆಸೆಯುವನು. ಅದು ಬಾಹುಬಲಿಯನ್ನು ಪ್ರದಕ್ಷಿಣೆ
೪೪೬
ಶ್ರೀ ಸಾಹಿತ್ಯ
ಮಾಡಿ ಭುಜದ ಹತ್ತಿರ ನಿಲ್ಲುವುದು, ಭರತನಿಗೆ ನಾಚಿಕೆ: ಬಾಹುಬಲಿಗೆ ನನ್ನಲ್ಲಿಯೂ ಈ ಸಾಹಸವನ್ನು ಮಾಡಿದನಲ್ಲಾ ಅಣ್ಣ ಎಂಬ ಜುಗುಪ್ಪೆ -
ಸೋದರರೊಳ್ ಸೋದರರಂ ಕಾದಿಸುವುದು, ಸುತನ ತಂದೆಯೆಡೆಯೊಳ್ ಬಿಡದು ತ್ಪಾದಿಸುವುದು ಕೋಪಮನ್, ಅಳ ವೀ ದೊರೆತೆನೆ ತೊಡರ್ವುದಂತು ರಾಜ್ಯಶ್ರೀಯೋ? ಪಾತಕಿಯೊಳ್ ಲಕ್ಷ್ಮಿಯೋಳತಿ ಕಾತರಕಾಪುರುಷಗಣನೆಯೊಳ್ ನೆರೆಯಲ್ಲಿಂ ತೀತನೆ ಬಗೆಗಾಂ ಪುರುತನು
ಜಾತರ ಬಗೆದುದನೆ ಬಗೆವೆನಳಿಪಂ ಬಗೆಯೆಂ
(೧೪-೧೨೨, ೨3) ಎಂದು ನಿರ್ಣಯಿಸಿ ಭಗವತ್ಪಾದಪೀಠದ ಪಕ್ಕದಲ್ಲಿ ಬಾಹುಬಲಿ ತಪಸ್ಸಿಗೆ ನಿಲ್ಲುವನು. ಈತನ ಪ್ರತಿ ಮೆಯೇ ಶ್ರವಣಬೆಳೊಳದಲ್ಲಿ ಶಾಶ್ವತವಾಗಿ ಶಾಂತವಾಗಿ ನಿಂತಿರುವ ಗೊಮ್ಮಟೇಶ್ವರ! |
ಭರತನು ರಾಜ್ಯವಾಳುತ್ತ ವಿಪ್ರವರ್ಣವನ್ನೂ ಅವರ ಕರ್ಮಗಳನ್ನೂ ವಿಧಾಯಕಮಾಡಿ, ಜೈನಮತದ ಕ್ಷೀಣದಶೆಯನ್ನು ದುಸ್ಸಪ್ನಗಳಲ್ಲಿ ಕಂಡು, ಆದಿದೇವನು ಮುಕ್ತಿಗೆ ಸಲ್ಲುವ ಕಾಲಕ್ಕೆ ಅಲ್ಲಿಗೆ ಬರುವನು (೧೫).
ಧರ್ಮಚಕ್ರದ ದಿಗ್ವಿಜಯದ ಮುಂದೆ ಚಕ್ರವರ್ತಿಯ ದಿಗ್ವಿಜಯದ ಬೊಬ್ಬುಳಿಕೆಯೊಂದು ಎದ್ದು ತಣ್ಣಗಾಗಿತ್ತು. ಭರತೇಶ್ವರನು ಜಿನಸನ್ನಿಧಿಯಲ್ಲಿ ನಿಶ್ಚಯವನ್ನು ಕಂಡುಕೊಂಡಿದ್ದನು.
ಅಳತೆಗೆ ತೂಕಕ್ಕೆಣಿಕೆಗೆ ಮೊಳಗಾದುವು ಸಕಳವಸ್ತುಗಳ್ ಭುವನಜನ
•ಳೆಯಲ್ ತೂಗಿಣಿಸ qಳುಂಬಮೆನಿಸಿದುವು ನಿನ್ನ ಗುಣಗಣಮರ್ಹಾ! ಆಕುಳನೆನಾಗಿ ಸುದಿನ ನಾಕುಳಮಡೆಯನುಸಿ, ಕಾಣೆಂ ಮೂಲಂ ಲೋಕದೊಳಂ! ನಿನ್ನಿರ್ಕೆಯ ಲೋಕಾಗ್ರಮೆ ಸಂತಂ! ಅದನೆ ಮಾಡೆನಗರ್ಹಾ! ಭವನಿಗಳದ ತೊಡರ ಕಳೆ, ಭವಜಳಧಿಯ ತಡಿಗೆ ಸಾರ್ಚು, ಭವಗಹನದುಪ ದ್ರವಮಂ ಕಿಡಿಸು, ಭವಾಂತಕ
ಭವನಕ್ಕುಮ್ ತಡೆಯದೆನ್ನನಿಂ ಭವಮಥನಾ! ಅಮರೇಂದೋನ್ನತಿ, ಖೇಚರೇಂದ್ರವಿಭವ, ಭೋಗೀಂದ್ರಭೋಗಂ, ಮಹೇಂ ದ್ರಮದ್ಯೆಶ್ವರಮಿವೆಲ್ಲಮಧ್ರುವಮ್! ಇವಂ ಬೇಂತು ಬೇಳಲ್ಲೆನ್! ಉ ತಮದೀಕ್ಷಾವಿಧಿಯುಂ, ಸಮಾಧಿಮರಣಂ, ಕರ್ಮಕ್ಷಯ, ಬೋಧಿಲಾ ಭಮಮೋಘಂ ದೊರೆಕೊಳ್ಳುದಕ್ಕೆಮಗೆ ಮುಕ್ತಿಶ್ರೀಮನೋವಲ್ಲಭಾ! :
(೧೦-೫೩, ೫೫, ೫೬, ೫೯) ಮರುಸ್ಥಳದ ಮಾಳದೊಳ್ ನಡುವಗಲ್ವರಂ ಗ್ರೀಷ್ಮದೊಳ್ ಸುರುಳ್ಳಿನೆಗಮಟ್ಟಿ ಬೇವವರ್ಗೆ ಜೊಂಪಮಿಮ್ಮಾವು ನಿ ರ್ಝರಾಂಬು ದೊರೆಕೊಳ್ತವೊಲ್ ಭವದವಾಗ್ನಿಯೊಳ್ ಬೇವ ಜೀ
(೧೩-೮೬) ವರಾಶಿಗೆ ಭವದ್ವಚೋಮೃತಮ ಮರ್ದನಂಗಾಂತಕಾ
ಬೇಳಲ್ಲೆನ್! ಉ
ಭಮಮೋಘಂ ದೋಸಮಾಧಿಮರಣಂ, ಕರ್ಮ
5----------
೪೪೭ ಕನ್ನಡ ಸಾಹಿತ್ಯದ ಚರಿತ್ರೆ
ಹೀಗೆ ತಿಳಿದಿದ್ದರೂ ಐದನೆಯ ಕಲ್ಯಾಣವಾದ ಮಹಾಪರಿನಿರ್ವಾಣಕಲ್ಯಾಣವಾಗಿ ಗುರು ಪರಮಬ್ರಹ್ಮಸದ್ಯಕ್ಕೆ ಹೋಗಲು, ಇಂದ್ರಾದಿಗಳು ಬಂದು ಭಗವಚ್ಛರೀರಭೂತಿಯಿಂದ ತ್ರಿಪುಂಡ್ರ ವನ್ನಿಟ್ಟು, ಆನಂದನಾಟಕವನ್ನಾಡಿ ಹೋದರೂ, ಭರತನು ಗುರುವಿಯೋಗ ಶೋಕಾಗ್ನಿಯಿಂದ ಬೇಯುತ್ತಿರುವುದನ್ನು ನೋಡಿ ವೃಷಭಸೇನಗಣಾಗ್ರಣಿಗಳು ಸಮಾಧಾನಪಡಿಸುತ್ತಾರೆ.
ಖಳಕರ್ಮಾಷ್ಟಕಮಂ ಪಡಲ್ವಡಿಸಿ, ಸಂಸಾರಾಬ್ಬಿಯಂ ದಾಂಟಿ, ನಿ ಶೃಳಸೌಖ್ಯಾಸ್ಪದಮಂ ತೈದೀಯಜನಕಂ ಕೈಕೊಂಡೊಡೀ ದೇವಸಂ ಕುಳಮಿಂದಂ ಬೆರಸಾಡಿದಪ್ಪುದಿದುಳ್ ನೀಂ ರಾಗಿಸಲಕ್ಕುದೇ ಕೊಳಕೊಳ್ಳೆ ಜಡರಂತೆ ಶೋಕರಸಮಂ ಷಟ್ಟಂಡಧಾತ್ರೀಶ್ವರಾ!
ನಿನಗೆ ವೃಷಭೇಶ್ವರ ಲೋ | ಚನಗೋಚರನಿನ್ನೆ ವರೆಗಮ್, ಈಗಳ್ ನಿಂದಂ ಮನುಕುಲಲಲಾಮ, ನೆಟ್ಟನೆ
ಮನದೊಳ್! ಕಡುಸಾರೆಯಕ್ಕೆ ಮುನ್ನಿಂದೀಗಲ್? ಭವವಾರಾಶಿಯೊಳಿಂದು ಜೀವನಿವದ ಬರ್ದುತ್ತುಮಿರ್ಕು; ಮಹೋ ತೃವಮಿ ಗುರುವಿಂತು ದಾಂಟಿದೊಡಿದಂ? ಬೇಡೀ ವಿಷಾದ, ನಿರ ಸ್ವವಿವೇಕಂಬೊಲಿಕೆ ಮೋಹಿಸಿದಷ್ಟೆ? ನೀಂ ಮಾಣ, ಶಕ್ರಂಗೆ ವ ಸ್ತುವಿವರ್; ನಿನ್ನವೊಲಾರ್ ಪೆಜರ್ ಭುವನದೊಳ್ ಪಟ್ಟಂಡಧಾತ್ರೀಶ್ವರಾ!
ಎನೆ ದಾವದಗ್ಗ ಗಿರಿ ನೂ ತನಜಳದಜಳಂಗಳಿಂದಮಾಜವವೋಲ್ ಭೋಂ ಕನೆ ಭರತನನಾಸಿದಂ
ಮುನಿ ವಿನುತಗಣಾಧಿನಾಥವಚನಾಮೃತದಿಂ
(೧೬-೫೫, ೫, ೫೯೬೦) ಬಳಿ ಸಾಮ್ರಾಜ್ಯವನ್ನು ಬಿಟ್ಟು, ಪ್ರವಜ್ಯವನ್ನು ತೊಟ್ಟು, ಭರತನೂ ಮುಕ್ತಿಗೆ ಸಂದನು.
ಇನ್ನು ಪಂಪನ ಮಂಗಳ: ತ್ರಿದಶಸ್ತುತ್ಯಮಿದಾದಿದೇವಚರಿತಂ ಕರ್ಣಾಮೃತಸ್ಯಂದಿಯ ಕ್ಕಿದು ಭವ್ಯಾವಳಿಗೆಂದು ಪೇಟಸೆ ಬುಧರ್ ಸ್ವರ್ಗಾಪವರ್ಗಕ್ಕಮಾ ಸ್ಪದಮಪ್ಪಾದಿಪುರಾಣವಸ್ತುಕೃತಿಯಂ ಪೇಟ್ಟಿ೦ ಬೆಡಂಗಪ್ಪ ಮಾ ರ್ಗದೊಳಂ ದೇಸಿಯೊಳಂ ಪೊದು ಸೆವಿನಂ ಸಂಸಾರಸಾರೋದಯಂ
ರಸಭಾವೋಪೇತಧರ್ಮಾಮೃತರಸಮಯದೊಳ್, ಘೋರಸಂಸಾರನಾನಾ ವ್ಯಸನವುಚ್ಚಿತ್ತಿಯೊ, ಧಾರ್ಮಿಕಜನಜನಿತಾನಂದಸಂದೋಹವಿದ್ಯಾ ರಸದೊ, ಸಂಸಾರಸಾರೋದಯವಿರಚಿತದೊಳ್, ವಾಗ್ವಧೂಮುದ್ರೆಯೊಳ್, ಮು ದ್ರಿಸಿ ನಿಂದಾದಿತೀರ್ಥೇಶ್ವರನ ಚರಿತದೊಳ್ ವಾಕ್ಯಮಾಣಿಕ್ಯಕೋಶಂ!
(೧೬-೭೮, ೭೯) ವಿಕ್ರಮಾರ್ಜುನ ವಿಜಯದ ವಿಮರ್ಶೆ: ಆದಿಪುರಾಣದಲ್ಲಿ ಮಾಣಿಕ್ಕಜನೇಂದ್ರ ಬಿಂಬವನ್ನು ಕಡೆದು, ದಿವ್ಯಚೈತ್ಯವನ್ನು ಕಟ್ಟಿ (೧೬-
೧೩೬) ಪಂಪನ ಕೈ ಸೋಲಲಿಲ್ಲ; ಒಡನೆಯೇ ಮಹಾಭಾರತದ ಗಾಂಡೀವ ವನ್ನು ಬಾಗಿಸಿ, ಕನ್ನಡ ಕಲಿಗಳ ಕ್ಷಾತ್ರ ತೇಜಸ್ಸನ್ನೂ, ಕನ್ನಡ ರಾಯರ ಸದ್ಗುಣಾವಳಿಗಳನ್ನೂ, ಕನ್ನಡ ನಾಡಿನ ಅಂದಚೆಂದಗಳನ್ನೂ ಅದರಲ್ಲಿ ಹೂಡಿ, ತಿಳಿಯಾದ, ಎಲ್ಲರೂ ತಿಳಿಯಬಹುದಾದ, ತಿರುಳು
೪೪೮
ಶ್ರೀ ಸಾಹಿತ್ಯ
ಗನ್ನಡದಲ್ಲಿ ಭಾರತಭೂಮಿಯ ಅತ್ಯುತ್ತಮವಾದ ಇತಿಹಾಸವನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಒಪ್ಪಿಸಿದನು. ಜಿನಪಾದಪದ್ಯವನ್ನು ಹೃದಯದಲ್ಲಿಟ್ಟು, ಸಂಸಾರ ಸಮುದ್ರದ ಹುಚ್ಚು ತೆರೆಗಳನ್ನು ಅಡಗಿಸಿ, ಮುಕ್ತಿಸೋಪಾನವನ್ನು ಏಕಮನಸ್ಕನಾಗಿ ಹತ್ತಿದನು-ಅಲ್ಲಿ: ಇಲ್ಲಿ, ಧರ್ಮ ಸಾಮ್ರಾಜ್ಯದಿಂದ ಒಂದು ಮೆಟ್ಟಲಿಳಿದು, ಸಂಸಾರಸಾರವನ್ನು ಗಂಭಿರಧ್ವನಿಯಿಂದ ಲೋಕಕ್ಕೆ ಸಾರಿದನು. ತನ್ನ ರಾಜನ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿ ಆತನ ಮನ್ನಣೆಯನ್ನು ಪಡೆದನು ಉದ್ದೇಶದಿಂದಲ್ಲ; ಉಜ್ವಲ ಕರ್ಣಾಟಕ ಭಕ್ತಿಯ ಆನುಷಂಗಿಕಫಲವಾಗಿ, ಆತನ ಕೆಚ್ಚನ್ನು ಆಗಲೇ ಬಲ್ಲೆವಲ್ಲವೇ?
* ಪೆರೀವುದೇನ್? ಪೆಜರ ಮಾಡುವುದೇನ್? ಪೆಜರಿಂದಮಪ್ಪುದೇನ್? ”
ಪಂಪನಲ್ಲಿ ಬ್ರಾಹ್ಮಣರಕ್ತವಿದ್ದಿತು; ಆದರೆ ಅದು ಜೈನ ಸಂಸ್ಕಾರವನ್ನು ಹೊಂದಿದ್ದಿತು. ಮಹಾ ಭಾರತವು ವೈದಿಕಮತದವರಿಗೆ ಪುಣಕಥೆ, ಪಂಚಮವೇದವೆಂದು ಪೂಜ್ಯವಾದುದು; ಅವರ ನಂಬಿಕೆ ಯಲ್ಲಿ ಶ್ರೀಕೃಷ್ಣನು ಭಗವಂತನು. ಜೈನ ಪುರಾಣಗಳಲ್ಲಿ ಆತನಿಗೆ ಅಷ್ಟು ಉತ್ಕೃಷ್ಟಪದವಿ ಇಲ್ಲ; ಜೈನಮತಕ್ಕೆ ಭಾರತದಲ್ಲಿ ಅಷ್ಟು ಶ್ರದ್ದೆ ಇಲ್ಲ. ಪಂಪನು ಮಹಾಭಾರತವನ್ನು ಹೇಗೆ ನಿರ್ವಹಿಸಿ ಯಾನು? ಧರ್ಮಸಂಕಟವನ್ನು ಯಾವ ಚಾತುರ್ಯದಿಂದ ತಪ್ಪಿಸಿಕೊಂಡಾನು? ಭಾರತ ಕಥೆಯನ್ನು ಮುಖ್ಯಕಥೆ ಎದ್ದು ನಿಲ್ಲುವಂತೆ ಸ್ವಾರಸ್ಯವಾಗಿ ಸಿಂಹಾವಲೋಕನದಿಂದ ಸಂಕ್ಷೇಪಿಸಬಲ್ಲನು; ಅದರ ಅತಿರಥಮಹಾರಥರನ್ನು ತನ್ನ ಕಲ್ಪನಾಶಕ್ತಿಯಿಂದ ಸ್ಪಷ್ಟವಾಗಿ ಗುಣಾವರ್ಗುಣಮಿಶ್ರಿತರಾದ ಲೌಕಿಕ ಮನುಷ್ಯರಂತೆ ಚಿತ್ರಿಸಬಲ್ಲನು; ಅವರಲ್ಲಿ ಮೆಚ್ಚಿಕೆಯನ್ನೂ, ಸಂತಾಪವನ್ನೂ, ಸಹಾನುಭೂತಿಯನ್ನೂ, ಹುಟ್ಟಿಸಬಲ್ಲನು; ತನ್ನ ರೀತಿಯ, ಪ್ರತಿಭೆಯ, ಸಂಸಾರಾನುಭವದ, ಉದಾತ್ತ ಧೈಯಗಳ, ಚಮತ್ಕಾರ, ಸೌಂದರ್ಯ, ಸತ್ಯ, ಗಾಂಭೀರ್ಯಗಳನ್ನೆಲ್ಲಾ ತನ್ನ ಕಾವ್ಯಕ್ಕೆ ಧಾರೆಯೆರೆಯಬಲ್ಲನು. ಇಷ್ಟನ್ನೂ ಮಾಡಬಲ್ಲೆನೆಂದು ಪಂಪನಿಗೆ ಧೈರ್ಯ; ಆತನಿಗೆ ಆ ಕೆಲಸವನ್ನು ಒಪ್ಪಿಸಿದ ಅರಿಕೇಸರಿಗೆ ನೆಚ್ಚಿಕೆ. ಕೆಲಸವೂ ನೆಚ್ಚಿದಂತೆಯೇ ನೆರವೇರಿತು. ಆದರೂ ಮಹಾಭಾರತದ ಉಜ್ವಲ ಜ್ವಾಲೆಗೆ ಸ್ವಲ್ಪ ಮಂಕು ಮುಚ್ಚದೆ ಹೋಗಲಿಲ್ಲ. ಸ್ಟೇಚ್ಛೆಯಾಗಿ ಪಂಪನು ಭಾರತವನ್ನು ವ್ಯತ್ಯಾಸಪಡಿಸದೆ ಹೋದರೂ, ಕಥಾವಸ್ತುವಿನಲ್ಲಿ, ಪಾತ್ರರಚನೆಯಲ್ಲಿ, ಸೂಮಾಲೆಗಳಲ್ಲಿ, ವ್ಯಾಸಮಹರ್ಷಿಗಳ ಹಿಂದೆಯೇ ಪಂಪನು ನಮ್ರನಾಗಿ ನಡೆದಿದ್ದರೂ, ಒಂದು ವೇಳೆ ತನ್ನ ಕೆಲವು ವ್ಯತ್ಯಾಸಗಳಿಂದ, ರಚನಾಕೌಶಲ್ಯದಿಂದ ಮೂಲ ಗ್ರಂಥಕ್ಕೆ ಒಂದು ಕಳೆಯನ್ನು ಏರಿಸಿದ್ದಾನೆಂದು ಹೇಳಬಹುದಾದರೂ, ಎಲ್ಲಕ್ಕೂ ಬಹುಮುಖ್ಯವಾದ ಅಂಶದಲ್ಲಿ, ಮಹಾಭಾರತವೆಂಬ ವೇದಕ್ಕೆ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ, ಆತನ ದಿವ್ಯಾವತಾರ, ದಿವೋಪದೇಶ,13 ದಿವ್ಯಲೀಲೆಗಳ ವಿಷಯದಲ್ಲಿ, ಆದಿತೀರ್ಥಶ್ವರನಲ್ಲಿ ಪಂಪನಿಗಿದ್ದ ಅನನ್ಯಶರಣಭಾವವಿಲ್ಲದೆ ಇದ್ದದ್ದರಿಂದ, ತನ್ನ ಜೈನಶ್ರದ್ಧೆಗೂ ತನ್ನ ಪೂರ್ವಿಕರ ವೈದಿಕ ಸಂಸ್ಕಾರಕ್ಕೂ ಹೋರಾಟ ಹುಟ್ಟಿ, ಒಳಗೆಯೇ ಪಂಪನ ಮನಸ್ಸು ಎರಡು ಕವಲಾಗಿ ಒಡೆದು, ಆತನ ಕವಿದೃಷ್ಟಿಯನ್ನೂ ಆತನ ಉತ್ಸಾಹಧ್ವನಿಯನ್ನೂ ಸ್ವಲ್ಪಮಟ್ಟಿಗೆ ಕುಗ್ಗಿಸಿತೆಂದು ಹೇಳಬೇಕಾದ ನಿರ್ಬಂಧ ಒದಗಿದೆ. ಪಂಪನಿಗೆ ಕೊಟ್ಟ ಸಮಸ್ಯೆಯ ಸ್ವಭಾವವದು; ಅಷ್ಟು ಮಟ್ಟಿಗೆ ಪಂಪನು ಆ ಸಮಸ್ಯೆಯ ತೊಡಕನ್ನು ಬಿಡಿಸಿಕೊಂಡು, ಕನ್ನಡದ ಕಾವ್ಯಗಳಲ್ಲಿ ಗುರುಸ್ಥಾನದಲ್ಲಿರುವ ಮಹಾಕಾವ್ಯವನ್ನು ಸೃಷ್ಟಿಸಲು ಶಕ್ತನಾದ ನೆಂದರೆ ಆತನ ಪ್ರತಿಭೆಯ ಶ್ರೇಷ್ಠತೆಗೆ ಆಶ್ಚರ್ಯವಾಗುವುದೇ ಹೊರತು ಕೊರತೆ ಕಾಣಿಸಿಕೊಂಡದ್ದಕ್ಕೆ
13ಭಗವದ್ಗೀತೆಯನ್ನು ಇಷ್ಟರಲ್ಲಿ ತೇಲಿಸಿದ್ದಾನೆ ಕವಿ:-* ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋ
ಅದಿರದಿದಿರ್ಚಿ ತಳಿಯಲೀ ಮಲೆದೊಡ್ಡಿದ ಚಾತುರಂಗಮಂ ಬುದು ನಿನಗೊಡ್ಡಿ ನಿಂದುದಿದನೋವದ ಕೊಡ ನೀನುಮನ್ನ ಕ ಹೈದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂ ತದ ಪರಿಚರ್ಯೆಯಿಂ ನಯ ಯೋಜಿಸಿದಂ ಕದನತ್ರಿಣೇತ್ರನಂ
( ೧೪)
೪೪೯
ಕನ್ನಡ ಸಾಹಿತ್ಯದ ಚರಿತ್ರೆ ಆಶ್ಚರ್ಯವಾಗುವುದಿಲ್ಲ. ಕನ್ನಡದಲ್ಲಿ ಮಹಾಭಾರತದ ದಿವ್ಯಾಗ್ನಿಯನ್ನು ಮತ್ತೆ ಹೊತ್ತಿಸಬೇಕಾದರೆ ಶ್ರೀಕೃಷ್ಣಭಕ್ತನಾದ ವೇದವ್ಯಾಸರ ಮನೆಯ ಮಗನೊಬ್ಬನು ಮುಂದೆ ಹುಟ್ಟಬೇಕಾಯಿತು; ಆ ಅವತಾರವನ್ನು ಬಿಟ್ಟರೆ, ಪಂಪನ “ ಕಥಿತ ಕಥಾವತಾರಮೇನ್ ಕೇವಲಮೇ? ” ಏನು ಕವಿತೆ! ಏನು ಕಾವ್ಯ!
ವೈದಿಕಮತಾವಲಂಬಿಗಾಗಿ ಜೈನಕವಿ ಕಾವ್ಯವನ್ನು ಬರೆದದ್ದರ ಗುರುತನ್ನು ವಿಕ್ರಮಾರ್ಜುನವಿಜಯ ದಲ್ಲಿ ಒಂದು ಕಡೆ ಹೆಜ್ಜೆಹೆಜ್ಜೆಗೂ ಬರುವ ಶಿವಸ್ತುತಿಯಲ್ಲಿಯೂ, ಮತ್ತೊಂದು ಕಡೆ ಅಲ್ಲಲ್ಲಿ ಮುದ್ರೆ ಯೊತ್ತಿದಂತೆ ಜೋಡಿಸಿರುವ ಜೈನ ಸಂಸ್ಕಾರದಲ್ಲಿಯೂ ನೋಡಬಹುದು. ಅರಿಕೇಸರಿ ಈಶ್ವರ, ಉದಾರಮಹೇಶ್ವರ (೧-೨), ಗುಣಾರ್ಣವನಾದ ಅರ್ಜುನನು ಹುಟ್ಟುವುದಕ್ಕೆ ಆತನ ತಂದೆತಾಯಿಗಳು ಶಿವನನ್ನು ಅರ್ಜಿಸುವರು (೧-೧೩೫), ತೀರ್ಥಯಾತ್ರೆಯಲ್ಲಿ ಅರ್ಜುನನು “ ಗೋಕರ್ಣನಾಥನಂ ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಲೋಕೈಕಸಂಗೀತಕೀರ್ತಿಯಂ ಕಂಡು ಕೈಗಳು ಮುಗಿದು
ಸರ್ವಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ | ಎಂದು ಬಾಳೇಂದು ಮೌಳಿಯಂ” ಸ್ತುತಿಸುವನು (೪-೨೬ ವಚನ, ೨೭), ಇಂದ್ರಕೀಲದಲ್ಲಿ ಬರುವ ಶಿವಪಾರಮ್ಯವನ್ನು ಬೇರೆ ಹೇಳಬೇಕಾಗಿಲ್ಲ (೮-೮ ೨೬ ವಚನ). ಭೀಷ್ಮನು “ ಶ್ವೇತನ ಬಿಲೊಳಿರ್ದ ಮದನಾರಿಯ ರೂಪರ್ದೆಗೊಳ್ಳುದಂ, ಉದಾತ್ತಭಕ್ತಿಯೊಳೆ ” ಕೈಮುಗಿಯುವನು: ತನಗೆ ಹೆದರಿದ ನೆಂದು ತಿಳಿದು ಶ್ವೇತನು ಹಾಸ್ಯಮಾಡಲು, “ ತೈಲೋಕ್ಯನಾಥಂ ಕಣಾ, ವಿನಮನ್ಮಸ್ತಕನಾದಂ” ಎಂದು ಹೇಳುವನು (೧೦-೧೧೮೧೨). ಸೈಂಧವ ವಧೆಗಾಗಿ ವರವನ್ನು ಬೇಡಲು ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದೊಯ್ಯುವನು (೧೧೩೦, ೩೧), ಕರ್ಣಾರ್ಜುನರ ಕಾಳಗವನ್ನು ಆಕಾಶದಲ್ಲಿ ನೋಡು ತಿದ್ದ ದೇವತೆಗಳಲ್ಲಿ ಶಿವನೂ ಪಾರ್ವತಿಯ ಪ್ರಮುಖರು (೧೨-೧೩೯, ೧೪೨ ೧೪೪), ಶರಶಯನ ದಲ್ಲಿ ಭೀಷ್ಮನು ಶಿವಧ್ಯಾನವನ್ನು ಮಾಡುತ್ತಿರುವನು: * ಚಿತ್ತದೊಳ್ ಮೃಡಂ ತೊಡರ್ದಿರೆ” “ ಹರನೊಳೆ ಪತ್ನಿ, ತೆತ್ನಿಸಿದ ಚಿತ್ಯಂ ” (೧೩-೬೨, ೬೩), ಈ ಶಿವಭಕ್ತಿ, ಕೇವಲ ಭಾರತ ಕಥೆಯಿಂದಲೇ ಬಂದುದಲ್ಲ: ರಾಜನ ಇಷ್ಟದೇವತೆಯ ನಿರ್ದೆಶಕ್ಕಾಗಿಯೇ ಅಲ್ಲ: ಪಂಪನ ಮನೆತನದ ಉಪಾಸನಾ ಫಲವೂ ಆಗಿರಬೇಕು.
ವೈದಿಕ ಕಥೆಯನ್ನು ಸಾಧ್ಯವಾದಮಟ್ಟಿಗೆ ವೈದಿಕನಂತೆಯೇ ಬರೆಯುತ್ತಿದ್ದರೂ, ಕವಿ ತನ್ನ ಮತವನ್ನು ಸ್ಪಷ್ಟವಾಗಿಯೂ ಸೂಚನೆಯಾಗಿಯೂ ತಿಳಿಸದೆ ಬಿಟ್ಟಿಲ್ಲ. ಆಶ್ವಾಸಾಂತ ಗದ್ಯಗಳಲ್ಲಿ ತನ್ನ ಕವಿತೆ " ಜಿನಪದಾಂಭೋಜ ವರಪ್ರಸಾದೋತ್ಪನ್ನ ವೆಂದು ಸ್ಪಷ್ಟವಾಗಿ ಹೇಳಿದ್ದಾನೆ. ವ್ಯಾಸರು ಪಂಪನಿಗೆ ವ್ಯಾಸಭಟ್ಟಾರಕರು (೧-೧೩೦ ವ), ಶಿವ, ವಿಷ್ಣು, ಕೃಷ್ಣರ ಹೆಸರನ್ನು ಹೇಳುವಾಗ ಅಲ್ಲಲ್ಲಿ ದುರಿತಹರ, ತ್ರೈಲೋಕ್ಯನಾಥ, ಅಭವ, ಅಜ (=ಆದಿಬ್ರಹ್ಮ), ಅಜಿತ, ಅನಂತ ಎಂಬುದಾಗಿ ತೀರ್ಥಕರರ ಹೆಸರುಗಳನ್ನು ಕ್ಲೀಷೆಯಿಂದ ನೆನಸಿಕೊಳ್ಳುತ್ತಾನೆ. ಅರ್ಜುನನ ಜನನವನ್ನು ವರ್ಣಿಸುವಾಗ, ತೀರ್ಥಕರರ ಜನೋತ್ಸವದ ವರ್ಣನೆಯನ್ನು ಬಿಂಬಿಸುತ್ತಾನೆ: “ ಮೂವತ್ತುಮೂದೇವರುಂ, ಇಂದ್ರಂ ಬೆರಸು ವೈಮಾನಿಕದೇವರುಂ ನೆರೆದು...ಕೂಸಿಂಗೆ ಜನೋತ್ಸವಮಂ ಮಾಡಿ
ನೋಡುವನಾ ಬ್ರಹ್ಮಂ ಮುಂ
ಡಾಡುವನಮರೇಂದ್ರನಿಂದ್ರನಚ್ಚರಸೆಯರೆ ಬ್ಲಾಡುವರೆಂದೊಡೆ ಪೊಗಳಿ ಲೈಡ ಗುಣಾರ್ಣವನ ಜನ್ಮದಿನದ ಬೆಡಂಗಂ”
(೧೧೪೮) ತೀರ್ಥಕರನಿಗೆ ಹೇಗೋ ಹಾಗೆ ಈತನಿಗೂ ದೇವತೆಗಳು “ ಅಷ್ಟೋತ್ತರ ಶತನಾಮಂಗಳ ” ನಿಡುತ್ತಾರೆ (೧೪೮ ವ), ಹರಿಶ್ಚಂದ್ರನ ದಾನದ ಫಲವಾಗಿ ಆತನನ್ನು ಇಂದ್ರನು “ನಿಚ್ಚವೆಂದು ಪೊಬ್ರಪೋಗಿ
29
೪೫೦
ಶ್ರೀ ಸಾಹಿತ್ಯ
ಪೂಜಿಸಿ ಬರ್ಪಂ ” (೬-೧೭ ವ), ಚಿತ್ರಾಂಗದನು ಅರ್ಜುನನಿಗೆ “ ಪೂರ್ವಜನ್ಮದ ಪಗೆ” (೭-೩೨ ವ). ಅರ್ಜುನನು ತಪಸ್ಸು ಮಾಡುವಾಗ ದೇವೇಂದ್ರನಿಗೆ “ ಆಸನಕಂಪ "(೭-೮೦ ವ), ಅಭಿಮನ್ಯುವಿನ ಸಾವಿಗಾಗಿ ದುಃಖಪಡುವ ಧರ್ಮರಾಯವನ್ನು ವ್ಯಾಸರು ಜೈನಮುನಿಗಳ ರೀತಿಯಲ್ಲಿ ಸಮಾಧಾನ ಪಡಿಸುತ್ತಾರೆ :
ಜ್ಞಾನಮಯನಾಗಿ ಸಂಸಾ ರಾನಿತ್ಯತೆಯಂ ಜಲಕ್ಕನಾಗದಿರ್ದ ಜ್ಞಾನಿಯವೋಲ್ ನೀನುಂ ಶೋ ಕಾನಲಸಂತಪ್ತಚಿತ್ತನಪ್ಪುದು ದೊರೆಯೇ?
(೧೧-೧೦೮)
ಕರ್ಣನು ಸತ್ತಮೇಲೆ ಸಂಧಿಗೊಪ್ಪದೆ ದುರ್ಯೋಧನನು “ ಸಂಸಾರಾಸಾರತೆಯನಾದನುಂ ಮಹಾ ಸತ್ಯನುಮಪ್ಪುದಂ ತನ್ನಂ ತಾನೆ ಸಂತೈಸಿ ಕೊಳ್ಳುತ್ತಾನೆ (೧೩-೨ ವ), ಧರರಾಯನು ಜೂಜನ್ನು ಬಿಡದೆ ದೌಪದಿಯನ್ನು ಸೋತದಕ್ಕೆ ಕವಿ
ಆ ಪಲಗೆಯುಮಂ ಸೋಲ್ಕು ಮ ಹೀಪತಿ ಚಲದಿಂ ಬಕ್ಕೆ ಸೊಲ್ಲಂ ಗಡಮಾ ದೌಪದಿಯುಮನೇನಾಗದೋ ಪಾಪದ ಘಳಮೆಯ್ದೆ ವಂದ ದೆವಸದೊಳಾಗFo!
(೭-೪) ಎಂದು ವ್ಯಾಖ್ಯಾನ ಮಾಡುತ್ತಾನೆ. ಈ ಸ್ಥಳಗಳಲ್ಲಿ ಜೈನಮತ ಸಂಸ್ಕಾರದ ಧ್ವನಿ ಇದೆ.
ಉತ್ತಮವಾದ ವೈದಿಕ, ಶೈವ, ಜೈನ ಭಕ್ತಿಗಳನ್ನೂ ಭಾವಗಳನ್ನೂ ಸಮತಾದೃಷ್ಟಿಯಿಂದ ಆ ಕಾಲದ ಉದಾತ್ತಚರಿತರ ಮನಸ್ಸಿಗೆ ಹಿತವಾಗುವಂತೆ ಪಂಪನು ಹೇಗೆ ಸಮನ್ವಯ ಮಾಡಿರುವನೆಂಬುದು ಇದರಿಂದ ಚೆನ್ನಾಗಿ ಕಾಣುತ್ತದೆ.
ಮಹಾಭಾರತದ ಕಷ್ಟದ ಸಮಸ್ಯೆಯಲ್ಲಿ ಬ್ರಾಹ್ಮಣಮತದ ಉತ್ಕಟಭಕ್ತಿ ಒಂದು ಬಣ್ಣವಿಳಿದರೂ, ಮತಾಂತರಗಳ ಉದಾತ್ತಭಾವಗಳನ್ನು ಕವಿ ಹೇಗೆ ಹೊಂದಿಸಿಕೊಂಡು ಕಾವ್ಯರಚನೆ ಮಾಡಿರುವನೆಂದು ಹೇಳಿದ್ದಾಯಿತು. ಈಗ ಭಾರತ ಕಥೆಯನ್ನು ಯಾವ ರೀತಿ ಕವಿ ಸಂಗ್ರಹಿಸಿದ್ದಾನೆಂಬುದನ್ನು ಪರೀಕ್ಷಿಸೋಣ. ಭಾರತಕಥಾವಸ್ತುವಿಗೆ ಸೇರದ ಉಪಕಥೆಗಳು, ನೀತಿತತ್ವಗಳು, ಪಟ್ಟಾಭಿಷೇಕದ ಮುಂದಿನ ವೃತ್ತಾಂತಗಳು -ಮುಂತಾದುವೆಲ್ಲಾ ಬಿಟ್ಟುಹೋಗುವುದು ನ್ಯಾಯವಾಗಿಯೇ ಇದೆ. ವಿಕ್ರಮಾರ್ಜುನನು ಕಥಾ ನಾಯಕನಾದದ್ದರಿಂದ ಭಾರತದ ಪರ್ವಗಳ ವಿಭಾಗವನ್ನೂ ಪಂಪನು ಅಳಿಸಿ, ತನ್ನ ನಾಯಕನಿಗೆ ಸಂಬಂಧಪಟ್ಟ ಯಾವುದಾದರೂ ಒಂದು ಸಂದರ್ಭಕ್ಕೆ ಆಶ್ವಾಸವನ್ನು ತಂದು ನಿಲ್ಲಿಸಿ, ಆ ಆಶ್ವಾಸದ ಕಡೆಯ ಪದ್ಯದಲ್ಲಿಯೂ, ಮುಂದಿನ ಆಶ್ವಾಸದ ಮೊದಲನೆಯ ಪದ್ಯದಲ್ಲಿಯ ಅರಿಕೇಸರಿಯನ್ನು ಸ್ತುತಿಸುವ ಕ್ರಮವನ್ನು ಏರ್ಪಡಿಸಿಕೊಂಡಿದ್ದಾನೆ. ಉದಾಹರಣೆಗಾಗಿ, ಆರನೆಯ ಆಶ್ವಾಸದ ಕಡೆಯಲ್ಲಿ, ದೂತದ ಮಧ್ಯದಲ್ಲಿ, ಭೀಷ್ಮಾದಿಗಳು ಧೃತರಾಷ್ಟ್ರನಿಗೆ ದೂತವನ್ನು ನಿಲ್ಲಿಸು
ಕದನಪ್ರಾರಂಭಶೌಂಡಂ, ರಿಪುನೃಪಬಲದಾವಾನಲಂ, ವೈರಿಭೂಭ್ಯ
ದವನ್ಮಾತಂಗಕುಂಭಸ್ಥಳದಳನಖರೋಗ್ರಾಸಿ, ಪಂಚಾಸ್ಯಧೈಯ್ಯಂ, ವಿದಿತಪ್ರತ್ಯಕ್ಷನಾಶಾಕರಿನಿಕಟತಟಶ್ರಾಂತದಾನಂ ಭರಂಗೆ
↑ದಿರೊಳ್ ವಿಕ್ರಾಂತತುಂಗಂ ಹರಿಗನಿರೆ ಬಿಗುರ್ತಾಂಪನಂತಾವ ಗಂಡಂ (೬-೭೭) ಎಂದೂ, ಏಳನೆಯ ಆಶ್ವಾಸದ ಮೊದಲನೆಯ ಪದ್ಯದಲ್ಲಿ
ಶ್ರೀರಮಣೀರಮಣಂಗರಿ ನಾರೀ ವೈಧವ್ಯ ದಿವ್ಯ ದೀಕ್ಷಾದಕ್ಷಂ
೪೫೧
ಕನ್ನಡ ಸಾಹಿತ್ಯದ ಚರಿತ್ರೆ
ಗಾರೆಣೆ ಹರಿಗಂಗೀಗಡೆ ಬಾರಿಸು ನೀಂ ನಿನ್ನ ಮಗನನಂಧನರೇಂದ್ರಾ
(೭-೧)
ಎಂದೂ ಹೇಳುತ್ತಾರೆ; ಆದರೆ ದುರೊಧನನು ಒಪ್ಪದೆ ಜೂಜು ಮುಂದೆ ಸಾಗುತ್ತದೆ. ಹೀಗೆ ಪ್ರತಿ ಆಶ್ವಾಸದ ಕಡೆ ಮೊದಲು ಅರಿಕೇಸರಿಯ ಸ್ತೋತ್ರವು ಗ್ರಂಥವಿಭಾಗಕ್ಕೆ ಗುರುತಾಗಿದೆ.
ತಾನು ಆಯ್ತು ಸಂಗ್ರಹಿಸಿರುವ ಭಾರತದ ವಿಷಯಗಳನ್ನು ಪಂಪನೇ ಗ್ರಂಥದ ಕೊನೆಯಲ್ಲಿ ತಿಳಿಸಿರುತ್ತಾನೆ (೧೪-೫೨ ವ), ಆಶ್ವಾಸ ವಿಭಾಗವನ್ನು ಸೇರಿಸಿ, ಅವುಗಳನ್ನು ಹೀಗೆ ತೋರಿಸಬಹುದು:
೧೨, ೬೪ ವ. ಆದಿವಂಶಾವತಾರಸಂಭವ (ಅರ್ಜುನನ ಜನ್ನೊತ್ಸವಕ್ಕೆ ಮೊದಲನೆಯ ಆಶ್ವಾಸ ನಿಲ್ಲುತ್ತದೆ).
೨-೬೪ವ೯೮. ರಂಗಪ್ರವೇಶಂ (ವಾರಣಾವತಕ್ಕೆ ಪಾಂಡವರು ರಡ್ಡಿವುದಿಲq" ೩. ಜತುಗೃಹದಾಹಂ, ಹಿಡಿಂಬವಧೆ, ಬಕಾಸುರವಧೆ ಪ್ರಾಜೆದಿನ್ವಯಂವರಂ, ವೈವಾಹ
೪. ಯುಧಿಷ್ಠಿರಪಟ್ಟಬಂಧನ, ಇಂದ್ರಪ್ರಸ್ಥ ಪ್ರವೇ,ರ್ಜುನ ದಿಗ್ವಿಜಯಂ, ದ್ವಾರಾವತೀವಿ. ಪ್ರವೇಶಂ.
113642 ೫. ಸುಭದ್ರಾಹರಣಂ, ಸುಭದ್ರಾವಿವಾಹಂ, ಖಾಂಡವವನಡವನು, ೬೭-೨೧. ಮಯದರ್ಶನ, ನಾರದಾಗಮನಂ, ಜರಾಸಂಧವಧೆ, ರಾಜಸೂಯ, ಶಿಶು ಪಾಲವಧೆ, ದೂತವ್ಯತಿಕರಂ.
೭-೨೨ ೯೫. ವನಪ್ರವೇಶಂ, ಕಿಮೀರವಧೆ, ಕಾಮ್ಯಕವನದರ್ಶನಂ, ದೈತವನಪ್ರವೇಶಂ, ಸೈಂಧವಬಂಧನಂ, ಚಿತ್ರಾಂಗದಯುದ್ಧಂ, ಕಿರಾತದೂತಾಗಮನಂ, ದೌಪದೀವಾಕ್ಯಂ, ಪಾರಾಶರ ವೀಕ್ಷಣಂ, ಇಂದ್ರಕೀಲಾಭಿಗಮನಂ.
೮. ಈಶ್ವರಾರ್ಜುನಯುದ್ಧಂ, ದಿವ್ಯಾಸ್ತ್ರಲಾಭ, ಇದ್ರಲೋಕಾಲೋಕನಂ, ನಿವಾತಕವಚಾ ಸುರವಧೆ, ಕಾಳಕೇಯಪೌಳೋಮವಧೆ, ಸೌಗಂಧಿಕಕಮಲಾಹರಣಂ, ಜಟಾಸುರವಧೆ, ಮಾಯಾಮ, ಹಸ್ತಿವ್ಯಜಂ, ವಿರಾಟಪುರಪ್ರವೇಶ, ಕೀಚಕವಧೆ, ದಕ್ಷಿಣೋತ್ತರ ಗೋಗ್ರಹಣಂ,
೯. ಅಭಿಮನ್ಯುವಿವಾಹಂ, ಮಂತ್ರಾಲೋಚನಂ, ದೂತಕಾರ್ಯ, ಕುರುಕ್ಷೇತ್ರ ಪ್ರಯಾಣಂ. ೧೫-೫. ಭೀಷ್ಮಕರ್ಣವಿವಾದ, ಯುದ್ಧೋದ್ಯೋಗಂ, ಶ್ವೇತವಧೆ, ಭೀಷ್ಮಶರಶಯನಂ.
೧೧-೫೧೧೫೫. ದ್ರೋಣಾಭಿಷೇಕಂ, ಅಭಿಮನ್ಯುವಧೆ, ಸೈಂಧವವಧೆ.
೧೨. ಘಟೋತ್ಕಚವಧೆ, ದ್ರೋಣಚಾಪಮೋಕ್ಷಂ, ದ್ರೋಣವಧೆ, ಅಶ್ವತ್ಥಾಮಕರ್ಣವಿವಾದ, ಕರ್ಣಾಭಿಷೇಕಂ, ಸಂಸಪ್ತಕವಧೆ, ದುಶ್ಯಾಸನವಧೆ, ವೇಣೀಸಂಹನನ, ಕರ್ಣಾರ್ಜುನಯುದ್ಧಂ, ಕರ್ಣ ಸೂರ್ಯಲೋಕಪ್ರಾಪ್ತಿ,
೧೩. ಶಲ್ಯಾಭಿಷೇಕಂ, ಶಲ್ಯನಿಪಾತನಂ, ಭೀಮದುರ್ಯೋಧನ ಗದಾಯುದ್ಧಂ, ದುರ್ಯೋಧನ ವಧೆ, ಪಂಚಪಾಂಡವಹರಣಂ.
೧೪. ಸ್ತ್ರೀಪರ್ವಂ, ಅರ್ಜುನಾಭಿಷೇಕಂ, (ಕವಿವಿಷಯ, ಮಂಗಳ).
ಆ ಕಾಲದ ಅಭಿರುಚಿಗೆ ತಕ್ಕಂತೆ ಶೃಂಗಾರವರ್ಣನೆ, ಬೇಟೆಯವರ್ಣನೆ, ಸಂಕಲನ ಯುದ್ಧ ವರ್ಣನೆ ಮುಂತಾದ ಕೆಲವು ಭಾಗಗಳ ವಿಳಂಬವನ್ನು ಬಿಟ್ಟರೆ ಭಾರತರಥಕ್ಕೆ ಹೂಡಿದ ಪಂಪನ ಪ್ರತಿಭೆ ಉಸಿ ರಾಡುವುದಕ್ಕೆ ವಿರಾಮವಿಲ್ಲದೆ ಮೊದಲಿಂದ ಕಡೆಯವರೆಗೂ ಒಂದೇ ನಾಗಾಲೋಟದಿಂದ ಓಡುತ್ತದೆ. ಈತನ ಪದ್ಯಗಳನ್ನು ವಚನವನ್ನು ಓದಿದಂತೆ ಅರ್ಥದ ಮೇಲೆ ದೃಷ್ಟಿಯಿಟ್ಟು ಓದಬೇಕು. ಪದ್ಯದಿಂದ
೪೫೨
ಶ್ರೀ ಸಾಹಿತ್ಯ
ಗದ್ಯಕ್ಕೆ ಗದ್ಯದಿಂದ ಪದ್ಯಕ್ಕೆ ಹಾರುತ್ತ, ಎರಡು ಗೆರೆಯ ಚಿತ್ರದಲ್ಲಿ ಅಧ್ಯಾಯಗಳನ್ನೇ ಹೊಳೆಯಿಸುತ , ಪಾತ್ರನಿರೂಪಣೆ ಮತ್ತು ಸಂವಾದಗಳನ್ನು ರಸಪುಷ್ಟಿ ಭಾವಪುಷ್ಟಿಗೂ ಅವಕಾಶ ತೆಗೆದುಕೊಳ್ಳದೆ ಸೂಕ್ಷ ವಾಗಿ, ಸಾರವತ್ತಾಗಿ, ಸೂಚಿಸುತ್ತ, “ ವಿಕ್ರಮಾರ್ಜನನ ” ಪರಾಕ್ರಮವನ್ನು ಮಾತ್ರ ಅರಿಕೇಸರಿಯ ಬಿರುದಾವಳಿಗಳೊಂದಿಗೆ ಸಾಧ್ಯವಾದ ಕಡೆಯೆಲ್ಲಾ ವಿಸ್ತರಿಸುತ್ತ, ಅಲ್ಲಲ್ಲಿ ಋತುಗಳ ಸೂರೂ ದಯಾಸ್ತ್ರಗಳ ಒಂದೆರಡು ಪದದ ವರ್ಣನೆಯಿಂದ ಮನಸ್ಸಿಗೆ ಉಲ್ಲಾಸವನ್ನು ಉಂಟುಮಾಡುತ್ತ ಒಟ್ಟು ಕಥೆಯ, ಮಹಾವೀರರ, ಜೀವಾಳದ ಮೇಲೆಯೇ ದೃಷ್ಟಿಯನ್ನಿಟ್ಟು ಭಾರತದ ಮುಖ್ಯ ಸನ್ನಿ ವೇಶಗಳನ್ನೆಲ್ಲಾ ಸ್ಪಷ್ಟವಾಗಿ ತನ್ನ ಯಕ್ಷಿಣಿಯ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತ, ಶಾಕುಂತಳ, ಕುಮಾರ ಸಂಭವ, ರಘುವಂಶ, ಕಿರಾತಾರ್ಜುನೀಯ, ಶಿಶುಪಾಲವಧೆ, ವೇಣೀಸಂಹಾರ, ಊರುಭಂಗ ಮುಂತಾದ ಸಂಸ್ಕೃತ ಮಹಾಕಾವ್ಯಗಳ ಮತ್ತು ನಾಟಕಗಳ, ಉತ್ಕೃಷ್ಟ ಭಾವನೆಗಳನ್ನೂ, ಸಾರವನ್ನೂ ಸಮಯೋಚಿತ ವಾಗಿ ಗರ್ಭಿಕರಿಸುತ್ತ, ಅಲ್ಲಲ್ಲಿ ಭಾರತ ಸನ್ನಿವೇಶಗಳನ್ನು ತನ್ನ ಸೊಗಸಿಗೆ ತಕ್ಕಂತೆ ಉಪಾಯದಲ್ಲಿ ಅನಾಯಾಸವಾಗಿ ತಿದ್ದಿಕೊಳ್ಳುತ್ತ, ತಿರುಳುಗನ್ನಡವನ್ನು ಕಿವಿಯ ಬರ ತೀರಿಹೋಗುವಂತೆ ಭೂರಿಯರ ಚುತ್ತ, ಲೀಲಾಜಾಲವಾಗಿ ತಾಂಡವವಾಡುವ ಪಂಪನ ದಿವ್ಯಶಕ್ತಿಯನ್ನು ವರ್ಣಿಸುವವನು ಏನು ವರ್ಣಿಸು ವನು? ಕವಿತಾಗುಣಾರ್ಣವನ ಗುಣಾರ್ಣವವನ್ನು ಕವಿತಾಗುಣಾರ್ಣವನೇ ಅಳೆಯಬೇಕು:
ವಿದಿತಂ ಪ್ರಾತೀತಿಕಂ ಕೊಮಳಮತಿಸುಭಗಂ ಸುಂದರಂ ಸೂಕ್ತಿಗರ್ಭ೦, ಮೃದುಸಂದರ್ಭ೦, ವಿಚಾರಕ್ಷಮಮುಚಿತಪದಂ ಶ್ರಮವ್ಯಾಕುಳಂ ವ್ಯಾ ಪ್ರದಿಗಂತಂ ಕಾವ್ಯಮಂದನ್ವಿತ ಸುಕವಿಜನಂ ಮಚ್ಚೆ ನಿಚ್ಚಂ ಮನಂಗೊ ಳ್ಳುದಂದು ನೆಟ್ಟನೀತಂ ಸುಕವಿಜನಮನೋಮಾನಸೋತ್ತಂಸಹಂಸಂ ಇದು ನಿಚ್ಚಂ ಪೊಸತರ್ಣವಂಬೊಲತಿಗಂಭೀರ ಕವಿತ್ವಂ ಜಗ ಕದಂದಂ ಕವಿತಾಗುಣಾರ್ಣವನಿಳಾಲೋಕೈಕವಿಖ್ಯಾತನ ಭ್ಯುದಯಪ್ರಾಪ್ತಿ ನಿಮಿತ್ತಮುತ್ತಮಯಶಂ ಸಂಸಾರದೋಣಿ ಸಾರಮ ಪುದಂ ಧರ್ಮಮದ ನಿಮಿರ್ಚುವುದಂ ಸಂಸಾರಸಾರೋದಯಂ
ಅತಿಸುಭಗೆಗೆ ಸಂದ ಸರ ಸ್ವತಿಗೀತನ ಲಲಿತವಾಗ್ವಿಳಾಸಮೆ ದಲಲಂ ಕೃತಿಯವೊಲೆಸೆದಪುದು ಜಗ
ತೃತೀತನೀತನೆ ಸರಸ್ವತೀಮಣಿಹಾರಂ (ಆದಿಪುರಾಣ, ೧-೨೬೧ ೨೮) ಪಂಪಭಾರತದ ಉತ್ಕೃಷ್ಟತೆಯನ್ನು ಕೆಲವು ಅಂಶಗಳಲ್ಲಾದರೂ ಪ್ರದರ್ಶಿಸದ ಹೊರತು ವಾಚಕರಿಗೆ ಸಮಾಧಾನವಾಗಲಾರದು. ಮೂರು ವಿಷಯಗಳನ್ನು ತೆಗೆದುಕೊಳ್ಳೋಣ: ೧. ವರ್ಣನೆಯ ಮತ್ತು ಶೈಲಿಯ ಬಿಗಿಯನ್ನು ತೋರಿಸುವ ಚಲನಚಿತ್ರದಂತಹ ಚಿತ್ರಗಳು, ೨. ನಾಯಕ ಪ್ರತಿನಾಯಕರು ವಿಕ್ರಮಾರ್ಜುನ, ಕರ್ಣ ಇವರ ಪ್ರಶಸ್ತಿ, ೩. ದುರ್ಯೋಧನನ ಪಾತ್ರದಲ್ಲಿ ಕವಿಯ ಸಹಾನುಭೂತಿ ೧. ಚಿತ್ರಗಳು:
(i) ಕುರುಜಾಂಗಣದೇಶದ ನೆವದಲ್ಲಿ ಕನ್ನಡನಾಡಿನ ಸೊಬಗು: (ಬನವಾಸಿಯ ವರ್ಣನೆಯನ್ನು ಆಗಲೇ ಓದಿ ಸುಖಪಟ್ಟಿದ್ದೇವೆ).
ಆವಲರುಂ ಪಣ್ಣುಂ ಬೀ ತೋವವು ಗಡ, ಬೀಯವಲ್ಲಿ ಮಲ್ಲಿಗೆಗಳುಮಿ
ಮಾವುಗಳುಮೆಂದೊಡಿನ್ ಪೆಟ ತಾವುದು ಸಂಸಾರಸಾರಸರ್ವಸ್ವಫಲಂ
ಕನ್ನಡ ಸಾಹಿತ್ಯದ ಚರಿತ್ರೆ
ಮಿಡಿದೊಡೆ ತನಿಗರ್ವು ರಸಂ ಬಿಡುವುವು, ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ ಗಿಡುವುವು ತುಂಬಿಗಳ್, ಅಮೆ
ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್! (೧-೫೫, ೫೬) (ii) ಪಾಂಡುವಿನ ಮರಣ, ಮಾದ್ರಿಯ ಸಹಗಮನ: (ಕನ್ನಡನಾಡಿನ ಮಾಸತಿ ಕಲ್ಲುಗಳನ್ನು ಜ್ಞಾಪಿಸಿಕೊಳ್ಳಿ).
ವನದೇವತೆಗಳೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳು ಭೋಂಕ ನೆರ್ದೆದೆಳೆದು
ಆ ದೆಸೆಯೊಳ್ ಭೂಭುಜನೋ ಆ ದೆಸೆಯೊಳ್ ಮಾದ್ರಿ, ನೆಗೆವ ಕರುಣಾರವಮಂ ತಾ ದೆಸೆಯೋಳ, ಭೂಪತಿಗೇ ನಾದುದೊ ಪೇಟ್ ಬಿದಿಯೆ ಕೆಟ್ಟೆನಲಿದೆನೆನುತುಂ ಬಲಿಯನ್ ಮಕ್ಕಳ್ ಭೋರ್ಗರೆ | ದೇಯಿತುಂ ಪೆಜಪೇಜಗನಂತೆ ಪರಿತರೆ, ಮುಡಿ ಬಿ ಟೈಲೆ, ನಡು ನಡುಗೆ, ಕಣ್ಣೀರ್
ಗಂಗಳನೊರ್ಮೊದಲೆ ಸುರಿಯೆ ಪರಿತಂದಾಗಳ್ ಅಂತು ತನ್ನ ನಲ್ಲನ ಕಳೇವರಮಂ ತಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿ ಯುತ್ತುಮಿರ್ಪ ಮಾದ್ರಿಯಂ ಕಂಡು ಕೊಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ,
ಅಡವಿಯೊಳೆನ್ನು ಮನೆ ನಡಪಿದ ಶಿಶುಗಳುಮನಿರಿಸಿ, ನೀನ್ ಪೇದೆ ಪೋ ದೊಡಮೇನೊ, ನಿನ್ನ ಬಳಿಯನೆ
ನಡೆತರ್ಪೆಂ, ನಿನ್ನನರಸ ಬಿಸುಟೆಂತಿರ್ಪೆಂ? ಎಂದು ನೀನೀ ಕೂಸುಗಳಂ ಕೈಕೊಂಡು ನಡಪು, ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ, ಮಾದ್ರಿಯಿತೆಂದಳ್,
ಎನಗಿಂದಿನೊಂದು ಸೂಟುಮ ನಿನಿಯಂ ದಯೆಗೆಯ್ದನೆನ್ನ ಸೂಲಿಂ ನಿನಗಾ ನೆನಿತಾದೊಡಮೀವೆನೆ? ಮ
ತನಯ ಕಯ್ಯಡೆ, ಪಲುಂಬದಿ ಪೆಪೆಜವಂ ಎಂದು ತಪೋವನದ ಮುನಿಜನವಂ ವನದೇವತಾಜನಮುಂ ತನ್ನಂ ಪೊಗಳ ಮಾದ್ರಿ ಪಾಂಡುರಾಜನೊಡನೆ ಕಿರ್ಚಂ ಪುಗೆ, ಕುಲದೊಳಂ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೂರೆಗಂ ದೊರೆಗಮಾರುಮಿಲ್ಲೆನಿಸಿದಾಗ, ಕೊಂತಿ ಶೋಕಾಕ್ರಾಂತೆಯಾಗಿರೆ, ತಪೋವನದ ತಪೋವೃದ್ದರಾಕಾಂತೆಯನಿಂತೆಂದು ಸಂತೈಸಿದರ್ :
ಕಳಿದವರ್ಗಟ್ಟುದಡವರೇಡಮ್, ಅಂತವರಿಂ ಬಬಿಕ್ಕೆ ತಾ
ಮುಟ್‌ವೊಡಮ್, ವೀಟರಂತವರಣಂ, ತಮಗಂ ಬರ್ದುಕಿಲ್ಲ, ಧರ್ಮಮಂ ಗಬೇಯಿಸಿಕೊಳ್ಳುದೊಂದೆ ಚದುರ್, ಇಂತುಲು ಸಂಸ್ಕೃತಿಧರ್ಮಮ್, ಏಕೆ ಬಾ
ಯುವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವು
ಶ್ರೀ ಸಾಹಿತ್ಯ
ಬಿಡದ ಬಂಧುಜನದ ಮೀಡಿಯದ ಕಣ್ಣೀರ ಪೂರಮಾ ಪ್ರೇತಮನೋ ಗಡಿಸದೆ ಸುಡುವುದು ಗಡಮಿ
ನ್ನು ಡುಗುವುದೀ ಶೋಕಮಂ ಸರೋಜದಳಾಕ್ಷಿ (೨-೨೨ ವ. ೧ ೨೮) (iii) ಪಾಂಡವರು ವಾರಣಾವತಕ್ಕೆ ಪ್ರಯಾಣಮಾಡಿದ್ದು(ಕನ್ನಡ ರಾಯರ ದೇಶಸಂಚಾರ ವನ್ನು ಪಂಪನು ಬಲ್ಲನು; ಶಾಸನಗಳಲ್ಲಿ ನಾವು ಕಾಣಬಹುದು) :
ತಾವಾದಿಗರ್ಭೇಶ್ವರರಪ್ಪುದಂ ತಳರ್ದಡೆಯೆಡೆಯ ಮರಂಗಳ ತೋಟಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ಯುಂ, ಮಹಾಗ್ರಹಾರಂಗಳ ಮಹಾಜನಂಗಳ್ ಕೊಟ್ಟ ಪೊನ್ನ ಜನ್ನಿ ವರಂಗಳುಮನವರ ಪರಕೆಯುಮಂ ಕೈಕೊಳುತ್ತುಂ, ಅವರ್ಗೆ ಬಾಧೆಯಾಗದಂತು ಕಾಪಂ ನಿಯಮಿ ಸುತ್ತುಂ, ಕಾಲೂರ್ಗಳ ಗಂಡರ ಹೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ಳಗೆನಗುತ್ತು, ಅಲ್ಲಿಗಲ್ಲಿಗೊಡೆದ ಕೆಜಿಗಂ, ಅದಾಯತನಕ್ಕಂ, ಧನಮನಿತ್ತು ಜೀರ್ಣೋದ್ಧಾರಮಂ ಮಾಡಿಸುತ್ತುಂ, ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು...
(೨-೯೭ ವ.) (iv) ಬಕಾಸುರವಧೆ:
ಓಡ ತಮೋಬಳಮಗಿದ ೪ಾಡ ನಿಶಾಚರಬಲಂ, ರಥಾಂಗಯುಗಂಗಳ್ ಕೂಡೆ, ಬಗೆ ಕೂಡೆ, ನೇಸಮ್ ಮೂಡಿದುದು ಬಕಂಗೆ ಮಿಲ್ಕು ಮೂಡುವ ತೆಜದಿಂ
ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೊಜಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂಪಂ ಕೈಕೊಂಡು ನಿಲ್ಲುದುಂ, ಪಾರ್ವತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪ, ಪೋಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದೆಡೆಗೆಂದು,
ದಾಡೆಗಳನಜರೆಯೊಳಿಂಬಿಂ ತೀಡುತ್ಯುಂ ತೀವ್ರವಾಗಿ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ
ನಾಡೆಯ ಅಂತರದೆ ಕಂಡು ಮುಳಿದಂ ಭೀಮಂ ಕಡೆಗಣೋಳೆ ರಕ್ಕಸನಂ ನಡೆನೋಡಿ ಕೊಲಿ ಸತ್ವಮಪ್ಪಂತಿರೆ ಮುಂ ಪೊಡವೆಂ ಕೂ೦, ಬಸಿಯಂ ಪೊಡವೆಂ ರಕ್ಕಸನನೆಂದು ಸಾಹಸಭೀಮಂ
ಅಂತು ತನ್ನ ತಂದ ಬಂಡಿಯ ಕೂಲಿಲ್ಲಮಂ ಪತ್ತೆಂಟು ತುತ್ತಿನೊಳ ಸಮಯ ತುತ್ತುವುದಂ ಕಂಡು ರಕ್ಕಸನಿವನ ಪಾಂಗು ಮಚ್ಚಲಾರೆನೆನ್ನುಮನಿಂತು ಸಮೆಯ ತುತ್ತುಗುಮೆಂದು ಬಕಂ ಬಕ ವೇಷದಿಂ ಪಂಗಣದೆಸೆಗೆ ಮಲ್ಲನೋಸರಿಸಿ ಬಂದು,
ಎರಡುಂ ಕೆಲನುಮನೆರಡುಂ ಕರಪರಿಘದಿನಡಸಿ ಗುರ್ದಿ ಪೆಜಪಿಗುವಿನ
ಮುರಿದಡಸಿ ಪಿಡಿದು ಘಟ್ಟಿಸಿ ಪಿರಿಯಆಯೋಳ್ ಪೊಯ್ದ ನಸಗವೊಯ್ದಂ ಭೀಮಂ (೩-೨೭೩೦)
೪೫೫
ಕನ್ನಡ ಸಾಹಿತ್ಯದ ಚರಿತ್ರೆ
(v) ಖಾಂಡವದಹನ:
ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯಮಾಗೆ ಮಯನೆಂಬ ದಾನವ ವಿಶ್ವಕರ್ಮ೦ ನೆಗೆದರಿವುರಿಮಾಲೆಗಳಂ ಗದೆಯೊಳ್ ಬೀಸುತ್ತುಂ ಪೊಜೆಮಡೆ ಪೊಜಮಡಲೀಯದೆ,
ಒಂದು ದಸೆಯೊಳ್ ತಗುಳ್ಳ ಮು ಕುಂದನ ಕರಚಕ್ರಮ್, ಒಂದು ದೆಸೆಯೊಳ್ ನರನೆ ಚೊಂದು ಶರಮ್, ಒಂದು ದೆಸೆಯೊಳ್ ಕುಂದದೆ ದಹನಾರ್ಚಿ, ಸುತ್ತಿ ಮುತ್ತುವ ಪದದೊಳ್ ಶರಣಕ್ಕೆನಗರಿಕೇಸರಿ
ಯೆರಡು ಪದಾಂಬುಜಮುಮೀಗಳೆಂಬುದುವಾಗ, ಹರಿಚಕ್ರಂ ಕೊಳ್ಳದೆ! ನರ
ಶರಮುರ್ಚದೆ! ದಹನಶಖೆಗಳಳುರದೆ ಅವನಂ! ಆಗಳ್ ಮಯಂ ವಿಸ್ಮಯಂಬಟ್ಟು ಪೊಡೆವಟ್ಟು ಪೋದಂ, ಆಗಳಾ ವನಾಂತರಾಳದೊಳಿರ್ದ ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚ ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾಜುವಾಗಳದನರಂಡಮಪ್ಪಿನಂ ಆಖಂಡಳತನಯನಿಸುವುದು ತನ್ನ ಬಾಲಂ ಬೆರಸುರಿಯೊ ಬಿಟ್ಟು ಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯ ಮಳೆಯ ವೆಂಬುದು ನನ್ನಿ ಮಾಡಿ
ಪಗೆ ಸಾಲುವುದುಂ, ಕೊಲ್ಲೆಂ ಪಗೆಸಾಜಿದ ನಿನ್ನನಾರ ಮಳೆಯಂ ಪೊಕ್ಕುಂ ಪಗೆಯಂ ನೆಜಪೆನೆ, ನೇಜಪುವ
ಬಗೆಯೋಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ (೫-೯೭ ವ. ೧೦) (vi) ಶಿಶುಪಾಲನ ಕೋಪ:
ಮುಳಿದು ಶಿಶುಪಾಲನಾ ಸಭೆ ಯೊಳಗೆ ಮಹಾಪ್ರಳಯಜಳಧಿನಾದದಿನಿರದು ಚಳಿಸಿ ನುಡಿದಂತೆ! ಕಳೆ! ಕಳೆ! ಹರಿಗೆತ್ತಿದನರ್ಷ್ಟದರ್ಷ್ಟಮಂ ಧರ್ಮಸುತಾ! ತೀವಿದ ನರೆಯುಂ ಡೊಳ್ಳು ದೇವವ್ರತನೆನಿಸಿ ನೆಗಟ್ಟಿ ಯಶಮುಂ ಬೆರಸಿ ನೀವುದು ಹರಿಗರ್ಷ್ಟಮನೆಂ
ದಾವನುಮೀ ಭೀಷ್ಮರಂತು ನುಡಿದರುಮೊಳರೇ? ಕುರುವೃದ್ದಂ ಕುಲವೃದ್ದಂ ಸರಿತ್ತುತು ತಕ್ಕನೆಂದು ನಂಬಿದ ಸಭೆಯೊಳ್ ದೊರೆಗಿಡಿಸಿ ನುಡಿದೊಡೇನೊಲ
ವರಮೆನ್ನದೆ ನೀನುಮದನೆ ಕೊಂಡೆಸಗುವುದೇ? ಮನದೊಲವರಮುಳೊಡೆ ಕುಡು ಮನೆಯೊಳ್ ಹರಿಗಗ್ರಪೂಜೆಯಂ, ಯಜ್ಞದೋಳೀ ಮನುಜಾಧೀಶ್ವರಸಭೆಯೊಳ್ ನೆನೆಯಲುಮಾಗದು, ದುರಾತ್ಮನಂ ಬೆಸಗೊಳ್ಳಾ?
8982
ಶ್ರೀ ಸಾಹಿತ್ಯ ಅಳವಳಿಯದೆದ್ದು ಬಳವಳ ಬಳೆವಿನೆಗಂ ಪಚ್ಚಪಸಿಯ ತುಲುಕಾಳಿಂಗ ಗ್ಗಳಿಕೆಯನೆ ಮಾಡಿ ನೀನು ಪಳಿಯಂ ಕಟ್ಟಿದೆಯೋ ಭೂಪರಿನಿಬರ ಕೊರಳೊಳ್ ದೇವರನಡಿಗೆಅಗಿಸಿ ಸಕ ಭಾವನಿತಳದದಟರಂ ಪಡಲ್ವಡಿಸಿದ ಶೌ ಲ್ಯಾವಷ್ಟಂಭದೊಳಾನಿರೆ | ಗೋವಳಿಗಂಗಪೂಜೆಯಂ ನೀನ್ ಕುಡುವಾ?
ಸಮಕಟ್ಟಯದೆ ಹರಿಗ ರ್Fಮೆತ್ತಿ ನಿಂದಿರ್ದ ಯಜ್ಞಮದು ಮೊದಲೊಳ್ ತಾ ನಮರ್ದುಮಮರ್ದಿರದೆ ತಣಿಯುಂ ಡಮರ್ದ೦ ಗೋಮೂತ್ರದಿಂದ ಬಾಯಸಿದವೋಲ್ ಕುಡವೇಚ್ಚಿನ, ಕುಡುವನ, ಕುಡೆ ಪಡೆವನ ಪೆಂಪೇಂ ನೆಗಳೆ ವಡೆಗುಮೊ! ಪೇಂ ಕುಡವೇ ಮ! ಕುಡುವಣ್ಣಂ |
ಕುಡುಗೆಮ! ಕುಡೆ ಕೊಲ್ವ ಕಲಿಯನಚಿಯಲ್ಕಕ್ಕುಂ! (೬-೪೨೪೯) ಈ ಕಡೆಯ ಪದ್ಯದ ಕನ್ನಡವನ್ನೂ, ಅದರ ಪರಿಹಾಸ್ಯವನ್ನೂ, ಧಿಕ್ಕಾರವನ್ನೂ, ಕ್ರೋಧವನ್ನೂ, ಶೌಲ್ಯವನ್ನೂ ಪಂಪನಲ್ಲದೆ ಬೇರೆ ಯಾರು ಬರೆಯಬಲ್ಲರು?
(vii) ಅಪ್ಪರಸ್ತ್ರೀಯರು ಅರ್ಜುನನ ತಪೋಭಂಗಕ್ಕೆ ಪ್ರಯತ್ನ ಪಟ್ಟದ್ದು :
ಆಜುಂ ಋತುಗಳ ಪೂಗಳು ಮಾಲಂ ಋತುಗಳ ಪೊದಲ್ಲಿ ಚೆಲ್ಲುಗಳುಮಣಂ ಬೆಲ್ಲದೊಂದುಸೂಚ್ ಮೆ
ಯೋಚಿದುವೊಡನೊಡನೆ ನೆಲದೊಳಂ ಗಗನದೊಳಂ ಮಯೋ ಅದೊಡವಳೊಡನೆಯೆ ಮಯೋಚಿಲ್ ಬಗೆದನಂಗಜಂಗಮಲತೆಗಳ್ ಮೆಯ್ಯೋಯುವಂತೆ ಮೆಲ್ಲನೆ ಮೆಯೊಜಿದರಮರಗಣಿಕೆಯರ್ ವಂದಾಗಳ್ ಸಮದಗಜಗಮನೆಯರ್ ಮುಗಿ ಲ ಮೇಲೆ ನಡಪಾಡುವಾಕೆಗಳ ತಮಗೆ ಧರಾ ಗಮನಂ ಪೊಸತಪ್ಪುದಲ್ಲಿಂ
ದಮರ್ದಿರೆ ನಡೆನಡೆದು ನಡೆಯಲಾಗಿದೆ ಸುಚಿದರ್ ಅಂತಾಕಗಳೆಡೆಯಾಡಿಯುಂ ಮನುಗೊಳೆ ಪಾಡಿಯುಂ ಮನುಜ ಮಾಂಧಾತನು ಸೋಲಿಸ ಲಾಗಿದೆ, ಸಹಜಮನೋಜನ ರೂಪಿಂಗಂ, ಗಂಧೇಭವಿದ್ಯಾಧರನ14 ಗಂಡಗಾಡಿಗಂ ತಾಮ ಸೊಬೈಯ್ದೆ ವಂದು,
14 ಮನುಜಮಾಂಧಾತ, ಸಹಜಮನೋಜ, ಗ೦ಧೇಭ ವಿದ್ಯಾಧರ-ಇವೆಲ್ಲ ಅರಿಕೇಸರಿಯ ಬಿರುದುಗಳು.
6-------------------
೪೫೭
ಕನ್ನಡ ಸಾಹಿತ್ಯದ ಚರಿತ್ರೆ
ಬೂದಿ ಜೆಡೆ ಲಕ್ಕಣಂ ತಪ ಕಾದುವೆರಣೆ ಶರಾಸನಂ ಕವಚಮಿವೆಂ ತಾದುವೊ ಮುತ್ತುಂ ಮೆಜಸುಂ ಕೋದಂತುಟೆ, ನಿನ್ನ ತಪದ ಪಾಂಗೆಂತು ಗಡಾ?
ಕಡುತಪದಿಂದೆ ನಿನ್ನ ಪಡೆಪಾವುದೊ ಗಾವಿಲ? ಸಗ್ಗ ಮಿ? ಪೋ ! ನುಡಿಯವೊ! ಮೂರ್ಖ! ಸಗ್ಗದ ಫಲಂ ಸುಖಮಲೆ? ಸುಖಕ್ಕೆ ಪೇಡಂ ಬಡದವರಾರೋ? ಪೆಂಡಿರೊಳಗಾರ್ ಪೇಜರ್? ಆಮೆ ದಲ್? ಆಮೆ ಬಂದು ಕಾ ಊಡಿದಪೆವಿಂಬುಕಯ್ಯೋಡಿವು ಮೆಲ್ಲಡಿಗಳ ಗಡ! ಕರ್ಚು ಬೂದಿಯಂ
ಕೋಕಿಳಕುಳ ಕಳಗಳನ
ದಾಕುಳರವಮಿಂಪನಾಗಳುಂ ಪಡೆದುದು ನೋ ಡೀಕೆಗಳ ಚಳಿತ ಲುಳಿತ ಭೂಕುಟಿಯೇ ಪರಮಸುಖದ ಕೋಟಿಯನೀಗುಂ
ಎಂದೆನಿತಾನುಂ ತೆಜದೊಳಪಿನ, ಲಲ್ಲೆಯ, ಚೆಲ್ಲದ, ಪುರುಡಿನ, ಮುಳಿಸಿನ, ನವದ ಪಡೆ ಮಾತುಗಳಂ ನುಡಿದುಂ, ಕಾಲ್ವಿಡಿದುಂ, ಅಚಳಿತಧೈರ್ಯನ ಮನಮಂ ಚಳಿಯಿಸಲಾಟದಚ್ಚರಸೆಯರಚ್ಚಿ ಗಂಗೊಂಡಂತಾಗೆಯುಂ.
(೭-೮೨೯೧ ವ. ೯೪ ವ.) (viii) ಯುದ್ಧಕ್ಕೆ ಕರೆಯುವುದು:
ದುರ್ಯೊಧನಂ...ಕುರುಕ್ಷೇತ್ರದ ಪೂರ್ವದಿಕ್ಚಾಗದೊಳ್ ಪ್ರಳಯಂ ಮರಿವಿಟ್ಟಂತೆ ಬೀಡಂ ಬಿಟ್ಟು ಧರ್ಮಪುತ್ರನಲ್ಲಿಗೆ ಉಳೂಕನೆಂಬ ದೂತನನಿಂತೆಂದಟ್ಟಿದಂ:
ಮಸೆಯಿಸುಗುಳ್ಳ ಕೈದುಗಳನರ್ಚಿಸುಗಾನೆಗಳಂ ತಗುಳು ಪೂ ಜಿಸುಗೆ ವಿಶುದ್ಧವಾಜಿಗಳನಾಜಿಗೆ ಜಟ್ಟಿಗರಾಗಿ ಕೊಳ್ಳಿ
• ಸಿಸುಗೆ ನಿರಂತರಂ ರವಳಿ ಘೋಷಿಸುಗಿಂದೆ ಕಡಂಗಿ ಸಾರ್ಚಿ ಬಿ ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ ಎಂದಾ ದೂತನಾ ಮಾಲ್ಕಿಯೊಳೆ ಬಂದು ಪೇಟೆ ಕೇಳು ಯಮನಂದನನಿಂತೆಂದಂ: ಪಗೆ ಮಸೆದಂದೆ ಕೈದು ಮಸೆದಿರ್ದುವು, ಪೂಜಿಸುವಂಕದಾನೆ ವಾ ಜಿಗಳೆಮಗಿಲ್ಲ, ಜಟ್ಟಿಗರೆ ಎನ್ನೊಡವುಟ್ಟಿದರಿ; ನಾಲ್ಕು ಮಾ ನೆಗಳಿವನಾಂ ದಲೀ ರಣದೊಳರ್ಚಿಸಿ ಬಿಟ್ಟಪೆನೇಕೆ ಮಾನಾ
ವಗಮಿದಂತೆ ಪೇಟ್ ನೆಜತೆಯೆ ನಾಳೆಯೆ ಕಾಳೆಗನಂತೆ ಗೆಯ್ಯಮಾಂ (೧೦-೩೨,೩೩) ೨. ನಾಯಕ ಪ್ರತಿನಾಯಕರು:
(i) ಪಂಪನ ನಾಯಕ ಅರಿಕೇಸರಿ- ವಿಕ್ರಮಾರ್ಜುನ”, ಚಿತ್ರಪಟದ ಮಧ್ಯದಲ್ಲಿ ಅರ್ಜುನ; ಒಂದುಕಡೆ ದೌಪದಿ, ಒಂದುಕಡೆ ಸುಭದ್ರೆ: ಹಿಂದೆ ಕೃಷ್ಣ, ಧರ್ಮರಾಜ, ಭೀಮ; ಮೇಲೆ ಇಂದ್ರ, ಈಶ್ವರ, ಪಾರ್ವತಿ, ಕಾವ್ಯದ ಉದ್ದಕ್ಕೂ ಅರ್ಜುನ-ಅರಿಕೇಸರಿಯ ಸ್ತೋತ್ರ, ವರ್ಣನೆ, ವಂಶಾವಳಿ, ಬಿರುದು. ಗ್ರಂಥಾದಿಯಲ್ಲಿ ಶ್ರೇಷೆಯಿಂದ ಅರಿಕೇಸರಿಯೇ ನಾರಾಯಣ, ಈಶ್ವರ, ಸೂರ್ಯ, ಮನ್ಮಥ (೧-೧ ೪), (ರಾಜನೇ ಪ್ರತ್ಯಕ್ಷ ದೇವತೆಯಲ್ಲವೆ?). ಆಮೇಲೆ ಆತನ ಮಂಗಳಾಶಾಸನ (೧-
೫೭), ಚಾಳುಕ್ಯ ವಂಶಾವಳಿ (೧-೧೫ ೫೦), ಅರಿಕೇಸರಿ
೪೫೮
ಶ್ರೀ ಸಾಹಿತ್ಯ
(೪೪)
ಸಾಕ್ಷಾ ದಿಂದ್ರಂ ತಾನೆನೆ ಸಲೆ ನೆಗೆ ಜಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ : ಳೆದಂ
(೪೪) ಮೇಲೆ ಬಲಂ ಕೋಟಿಗೆ ಮೇಲಷ್ಟೊಡಮನ್ಯವನಿತೆ ನೆಗರ್ವರಿಗಂ ಮೇಲಷ್ಟೊಡಮಕ್ಕೆಂದು ಸೊಲವು ಕಣ್ ಪರಬಲಾಬಿಗಂ ಪರವಧುಗಂ
(೪೭) ಧುರದೊಳ್ ಮೂಜುಂ ಲೋಕಂ ನೆರೆದಿರೆಯುಂ, ಕುಡುವ
ಪೊಳ್ ಮೆರುವೆ ಮುಂ ದಿರೆಯುಂ, ಬೀರದ ಬಿಯದಂ
ತರಕ್ಕೆ ಕಿರಿದೆಂದು ಚಿಂತಿಪಂ ಪ್ರಿಯಗಳ್ಯಂ ಧರ ಪುತ್ರ ಭೀಮರ ಜನನಕ್ಕೆ ಎರಡು ಮೂರು ಪದ್ಯ: ಗುಣಾರ್ಣವನ ಜನನಕ್ಕೆ ವಿಸ್ತಾರ ವರ್ಣನೆ (೧-೧೩೪ ೧೪೯). " ಸರ್ವಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ” ಪಡೆಯುವುದಕ್ಕೆ ಪಾಂಡುರಾಜನೂ ಕುಂತಿಯೂ
ಅಲಸದೆ ಮಾಡಿ ಬೆಸದೆ ಸಾಲುಮಿದೆನ್ನದೆ ಮೆಟ್ರೋಗಕ್ಕೆ ಪಂ ಬಲಿಸದೆ ನಿದ್ದೆಗೆಟ್ಟು ನಿಡುಜಾಗರದೊಳ್ ತೊಡರ್ದೆ ಕಪಾದದೊಳ್ ಬಲಿಮಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮಕಮಂಗಳಂ ಸಲಿಸಿದರಂತು ನೋನದೆ ಗುಣಾರ್ಣವನು ಪಡೆಯ ತೀರ್ಗುಮೇ ?
(೧೩೬)
ದೇವತೆಗಳು, ಬ್ರಹ್ಮ, ಇಂದ್ರ, ಮುಂತಾದವರು ಜಮ್ರತ್ಸವವನ್ನು ನೆರವೇರಿಸಿ, ಅಷ್ಟೋತ್ತರ ಶನಾಮಗಳ ನವದಲ್ಲಿ ಆತನ ಬಿರುದುಗಳನ್ನು ಹೇಳಿ ಆಶೀರ್ವಾದ ಮಾಡುತ್ತಾರೆ (೧೪೭ ೧೪೯). ಎರಡನೆಯ ಆಶ್ವಾಸದಲ್ಲಿ ಗುಣಾರ್ಣವನ ವಿದ್ಯೆ ೨-೩೪೩೬), ವನ (೩೯೪೦), ದ್ರುಪದನನ್ನು ಗುರುಗಳಾದ ದ್ರೋಣಾಚಾರರ ಮಂಚಕ್ಕೆ ಕಟ್ಟಿದ್ದು, ದ್ರುಪದನು ಅರ್ಜುನನಿಗೆ ಕೊಡುವುದಕ್ಕೆ ಮಗಳನ್ನು ಪಡೆಯಲು ಪ್ರತಿಜ್ಞೆ ಮಾಡಿದ್ದು (೬೧೧೬೫).
ಮೂರನೆಯಾಶ್ಚಾಸದಲ್ಲಿ ದೌಪದೀ ಸ್ವಯಂವರ, ಕೃಷ್ಣ ಬಲರಾಮರ ಪ್ರಥಮಪರಿಚಯ ಅರ್ಜುನನ ಪ್ರತಾಪ: ಬಿಲ್ಲನ್ನು ಏರಿಸುವುದಕ್ಕೆದ್ದವನನ್ನು ಕಂಡು “ ಕದ್ದು ಮುದ ದೊಡ್ಡರೆಲ್ಲಂ ಮುಸುಜಿಸಿ
ಸಂಗತಸತ್ವರ್ ಕುರುರಾ ಜಂಗಂ ಕರ್ಣಂಗಮೇಜಿಸಲ್ಕರಿದನಿವಂ ತಾಂ ಗಡಮೇಟಿಪನೀ ಪಾ ರ್ವಂಗಕ್ಕಟ ಮೆಳೊಂದು ಮರುಳುಂಟಕ್ಕುಂ!
(೩-೬೨) ಎಂದು ಬಾಯ್ದೆ ವಂದುದನೆ ನುಡಿಯೆ ” ಲಕ್ಷಿಸದೆ ಬಿಲ್ಲನ್ನು ಏರಿಸಿ, ದೌಪದಿಯನ್ನು ವರಿಸುವನು: ಇಡಿದಿರೆ ಮಂಜಿನೊಳ್ ತುಜುಗಿ ತಕಣಗಾಳಿಯೊಳಾದ ಸೋಂಕಿನೊಳ್ ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಪಲ್ಲವ ಬಿಡಿದು ಬೆಡಂಗನಾಳು ದು ಗುಣಾರ್ಣವನೊಪ್ಪುವ ಪಾಣಿಪಲ್ಲವ
(೩-೭೨)
ಅರ್ಜುನನೊಬ್ಬನಿಗೇ ದೌಪದಿ ಹೆಂಡತಿ:
೪೫೯
ಕನ್ನಡ ಸಾಹಿತ್ಯದ ಚರಿತ್ರೆ
ಮತ್ತಿನ ನಾಲ್ವರ್ಗಂ ಕೊಂತಿಗು ಬೇಜವೇಜತೆ ಮಾಡಂಗಳಂ ಬೀಡುಟ್ಟು ಗುಣಾರ್ಣವನಂ ಸೆಜ್ಜೆಗೆ ಬಿಜಯಂಗೆಯ್ಕೆಮೆನೆ...
(೩-೮೧ ) ನಾಲ್ಕನೆಯಾಶ್ವಾಸದಲ್ಲಿ ಅರ್ಜುನನ ದೇಶಸಂಚಾರ, ಸುಭದ್ರಾವಿವಾಹ, ಧನ್ಮರಾಜನು ಇಂದ್ರಪ್ರಸ್ಥದಲ್ಲಿ ರಾಜ್ಯಭಾರಮಾಡುತ್ತಿರಲು, " ವಿಕ್ರಾಂತತುಂಗನೊಂದೆಡೆಯೊಆರ್ಪಿರವಿಂಗುಮ್ಮಳಿಸಿ ದಿಗಂಗನಾಮುಖಾವಲೋಕನಂಗೆಯ್ಯಲ್ಪಗೆದು
ಸೆಣಸುಳ್ಳುದ್ವತ್ತರಂ ತಳಿಯದೆ, ಚತುರಂಭೋಧಿಪತ್ಯಂತಮಂ ಧಾ ರಿಣಿಯಂ ತಾಂ ಪೋಗಿ ಬಾಯ್ಕಳಿಸದೆ, ಮುನಿಜನಕ್ಕಿಷ್ಟಿವಿಸ್ಟಂಗಳಂ ದಾ ರುಣದೈತ್ಯರ್ ಮಾಡೆ ನೀಡಿಲ್ಲದೆ ಸಲೆ ಚಲದಾಟಂದ ಕೊಂದಿಕ್ಕದೊರ್ವಂ
ಗುಣಮುಂಟೆಂದುಂಡು ಪಟ್ಟಿ ರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್ ಎಂದು ವಿಜಗೀಷುವೃತ್ತೋದ್ಯುಕ್ತನಾಗಲ್ ಬಗೆದು
ಅಜಿಸಿದೊಡೆನ್ನ ಪೋಗನಿನಿಯಳೆ ಮನಂ ಮಜುಕಕ್ಕೆ ನೀಳ ಕ ಸ್ಕೋಜಿದುಗುವಸ್ತುವಾರಿಗೆ ತೊದಳು ಡಿ ಲಲ್ಲೆಗೆ ಪಕ್ಕುಗೊಟ್ಟು ಕಾ
ಜಗಿರೆ ಪೋಗುಗೆಟ್ಟವುದು ಮೋಹಮಯಂ ನಿಗಳು ಕಳತ್ರಮಂ ದಜೆಪದೆ ನಟ್ಟಿರುಳ್ ಮಜಿಲೆದು ಸಾರ್ಚಿದ ನಲ್ಲಳ ತಳ ತೋಳಳ (೪-೫, ೧೨ ವ.)
ಮೆಲ್ಲಮೆಲ್ಲನೆ ಪತ್ತುವಿಡಿಸಿ” ಹೊರಡುವನು. (ಮಹಾಭಾರತದ ಕಾರಣವನ್ನು ಕವಿ ಇಲ್ಲಿ ವ್ಯತ್ಯಾಸಪಡಿಸಬೇಕಾಯಿತು. ಅರ್ಜುನನು ದ್ವಾರಾವತಿಗೆ ಬಂದು ಕೃಷ್ಣನ ಆತಿಥ್ಯವನ್ನು ಸ್ವೀಕರಿಸುವನು:
ಈತ ಬಿರ್ದಿನನೀತ ಭೂತಳಪತಿಯೆನಿಸಿದರಿಗನೂಡೆಯಂ ಹರಿ ತಾ ನೀತನ ಬಿರ್ದಿನನೆನ ವಿ ಖ್ಯಾತಂಗೆ ನರಂಗೆ ಸೆಂಪುಗೆಯನನಂತಂ
(೪-೪೪) ಅಂತೆನಿತಾನುಮಂದದೊಳ್ ಸೆಂಪುಗೆಯು ವಿವಿಧ ವಿನೋದಗಳಂ ತೋಜ್ ಮುನ್ನೆ ಬದರಿ ಕಾಶ್ರಮದೊಳ್
ಆಯತಿಯಿಂದ ನರ ನಾ ರಾಯಣರೆನೆ ನೆಗಳ್ಳವರಿಗೆ ನಾವಿರ್ವರುಮಿಂ ತೀ ಯುಗದೋಳಿಗಳಾಂ ನಾ
ರಾಯಣನಂ ನೀನುದಾತ್ತನಾರಾಯಣನಮ್ ಅದಜೆಂ ನಿನಗಮೆನಗಮೇತಳಂ ವಿಕಲ್ಪ ಮುಂ ವಿಚ್ಚಿನ್ನಮುಮಿಲ್ಲ. [ಅರಿಕೇಸರಿ ಹೇಗೆ ಅರ್ಜುನನ ಹಾಗೆ ರಾಮನೂ ಅಹುದು!
ದಕ್ಷಿಣಸಮುದ್ರದ ತಡಿವಿಡಿದು ಬಂದು ರಾಮಚಂದ್ರಂ ವಿಹರಿಸಿದೆಡೆಗಳಂ ನೋಡಿ ಅಂದಿದು ಸೀತೆಯಂ ನೆರೆದು ನಿಂದೆಡೆ, ತರದೂಷಣರ್ಕಳಂ ಕೊಂದೆಡೆ, ಪೋಗಿ ಪೊಮ್ಮರೆಯನೆಚ್ಚೆಡೆ, ತಪ್ಪದಿದಪ್ಪುದೆಂದು ಕಾ
ಮೈಂ ದಶಕಂಠನಂ ತ್ರಿದಶಕಂಟಕನಂ ಕೊಲಲೆಂದು ರಾಮನಾ ದಂದಿನ ಸಾಹಸಂ ಮನದೊಳಾವರಿಸಿಕಳಂಕರಾಮನಾ
(೪-೧೯)]
೪೬೦
ಶ್ರೀ ಸಾಹಿತ್ಯ
(೬೧)
ಅತ್ತ ಸುಭದ್ರೆಯುಡಲುರಿ ಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋ ಡುತ್ತಿರೆ ಸುಸಾಳಭಂಜಿಕೆ ಗೆತ್ತುದು ಕೆಳದಿಯರ ತಂಡಮಾಕೆಯ ರೂಪಂ ನುಡಿಯಿಸಿ ಕೇಳುಂ ಹರಿಗನ ಪಡೆಮಾತನೆ ಮಾತು ತಪ್ಪೆಡಂ ಮತ್ತಮಂ ನುಡಿಯಿಸುಗುಂ ಮೊದಲಿಂದಾ ನುಡಿ ಪಜಿಪಡೆ ಮುಳಿದು ನೋಡುಗುಂ ಕೆಳದಿಯರಂ
(೫೬) ಉಪಾಯದಿಂದ ಕೇಳಿದ ಕೆಳದಿಗೆ ತನ್ನ ರಹಸ್ಯವನ್ನು ಹೇಳುತ್ತಾಳೆ:
ಉಸಿರದಿರೆ ಮನದೊಳೆರ್ದೆಯಂ ಪಸರಿಸುಗುಂ ಮಜುಕಮದಜನನಗಿಂತುಟೆ ಎಂ ದುಸಿರುಸಿರ್ದೊಡೆ ಬಗೆ ತೀರ್ಗು೦ ಬಿಸಿದುಂ ಬೆಟ್ಟಿತ್ತುಮುಸಿರದೇಂ ತೀರ್ದಪುದೇ
(೬೦) ಪೇಟೆಂಬುದುಮಾಂ ನಿನಗೆಡೆ ವೇದೆ ಪೇಟಾರ್ಗೆ ಪೇಟಿನಿಂದಿನ ಬಂದಾ ಕಾಳಾದ ವಾಟೆಗೊಂಡೊಡೆ ಪಾಟಿದುದು ಮನಮುಮೆರ್ದೆಯುಮೇನಂ ಪೇಳ್ವೆಂ ಭೋಂಕನೆ ಮನಮಂ ಕದಡಿ ಕ ಲಂಕಿದಪುದು ಬಿಡದೆ ಮನಮನೋನಲಿಸಿದಪುದಾ ದಂ ಕೆಳದಿ ಪಾರಂಕುಸ
ನಂಕುಸದಾ ಪೊಳಪುಮವನ ಕಣ್ಣಳ ಬೆಳ್ಳುಂ ಕಡೆಗೆ ಇಬ್ಬರೂ ಉದ್ಯಾನವನದಲ್ಲಿ ಸೇರುತ್ತಾರೆ.
ಶ್ರೀ ವೀರಶ್ರೀ ಕೀರ್ತಿ ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್ ಭಾವಿಸಿದ ಪೆಂಡಿರೆನಿಸಿದ ಸೌಭಾಗ್ಯದ ಹರಿಗನೆಮ್ಮನೇನೆಲ್ಲ ಪನೋ? ಎಂಬ ಬಗೆಯೊಳ್ ಸುಭದ್ರೆ ಪ ಲುಂಬಿ ಮನಂಬಸದೆ ತನುವನಾಜೀಸಲಲರಿಂ ತುಂಬಿಗಳಿಂ ತಣ್ಣೆಲರಿಂ
ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಲ್
ಅರ್ಜುನನೂ
ಬೇಟದೊಳ್ ಬಿರಿವೊಡಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ
ತರದೊಳೆ ಕಾಣಲಕ್ಕು ಮದೀಯ ಮನೋರಥ ಜನ್ಮಭೂಮಿಯಂ ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಬಂದು ಆಕೆಯ ಪ್ರೇಮವನ್ನು ಸ್ವೀಕರಿಸು ವನು. ಕೃಷ್ಣನು ಒಪ್ಪಿ, “ ಈ ಪೊಲಿ ಪೊಟ್ಯಾಗೆ ನೀನೊಡಗೊಂಡುಯ್ಯುದು ಕನ್ನೆಯಂ ತಡೆಯದಿರ್ ಎಂದು ಕಳುಹಿಸುವನು; ಬಲರಾಮನ ಕೋಪವನ್ನು ಶಾಂತಮಾಡುವನು.
(೬೨)
(೧೪)
೪೬೧ ಕನ್ನಡ ಸಾಹಿತ್ಯದ ಚರಿತ್ರೆ
ಆ ಬಳಿಕ ಪಾಂಡವದಹನ: ಅಗ್ನಿಯ ಪ್ರಾರ್ಥನೆಯನ್ನು ನಡೆಸುವುದಕ್ಕೆ ಹೊರಟ ಅರ್ಜುನನನ್ನು ಕೃಷ್ಣನು “ ಈ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷ್ಟವಿದ್ರಾವಣ
ನಿಂತೆಂದಂ:
ಎರೆದನ ಪೆಂಪುವೇಡನಲಂ, ಪೊಣರ್ವಾತನ ಪೆಂಪುವೇಡಾ ಸುರಪತಿ, ಕೊಟ್ಟ ತಾಣದೆಡೆವೇಡಮಾ ಯಮುನಾನದೀತಟಾಂ ತರವೆಸೆದಿತ್ಯನಾನೆರೆಯ ಕೇಳ ನಿಳಾಧರ ನೀನದರ್ಕೆ ಮಾ ತೆರಡಣಮಾಡಲಾಗದಿದು ಸೈಪಿನೊಳಲ್ಲದೆ ಕೂಡಿ ಬರ್ಕುಮೇ
(೭೩) ಒತ್ತಿ ತುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ ಕೈತ್ತದೆ, ತನ್ನ ಮಜ್ವೊಕ್ಕೊಡೆ ಕಾಯದೆ, ಚಾಗದೊಳ್ಳಿನ ಜ್ಯೋತದೆ ಮಾಣ್ಣು ಬಾ ಪುಲವಾನಸನೆಂಬನಜಾಂಡಮೆಂಬುದೊಂ ದತ್ತಿಯ ಪಣ್ಳಿರ್ಪ ಪುಲುವಲ್ಲದೆ ಮಾನಸನೇ ಮುರಾಂತಕು”
(೭೫) ಇಂದ್ರನು ಯುದ್ಧಕ್ಕೆ ಬಂದು, ಬ್ರಹ್ಮನು ತಡೆದಮೇಲೆ ಗುಣಾರ್ಣವನಿಗೆ ಕಿರೀಟಿ, ಕೃಷ್ಣ ಎಂದು ಹೆಸರುಗಳನ್ನಿಡುವನು. “ಬ್ರಹ್ಮಂ ಬ್ರಹ್ಮಾಯುವಕ್ಕೆಂದು ಪರಸಿದಂ, ಈಶ್ವರಂ ನೀನುದಾರಮಹೇಶ್ವರ ನಪ್ಪುದಂ ನಿನಗಮೆನಗಮೇತಳಂ ವಿಕಲ್ಪ ಮುಂ ವಿಚ್ಛಿನ್ನಮುಮಿಲ್ಲೆಂದು”. (೧೦೧೧೧೫) - ಅಂತೂ ಅರಿಕೇಸರಿ ಈಶ್ವರ, ವಿಷ್ಣು, ಅರ್ಜುನ, ರಾಮ-ಸರ್ವವೂ ಅವನೇ! ಅಭೇದವಾದ!
ಆರನೆಯ ಆಶ್ವಾಸದಲ್ಲಿ ರಾಜಸೂಯ ಯಾಗ: ದಿಗ್ವಿಜಯದಲ್ಲಿ ಯಥಾಪ್ರಕಾರ ಅರ್ಜುನನ ಪರಾಕ್ರಮ (೬-೨೯ ೩೩), ಶಿಶುಪಾಲ ಕೃಷ್ಣರ ವಾಗ್ಯುದ್ದದಲ್ಲಿ ಗುಣಾರ್ಣವ ಸ್ವಲ್ಪ ಹಿಂದೆ: ಜೂಜಿನಲ್ಲಿ ಮತ್ತೆ ಮುಂದೆ ಭೀಷ್ಮಾದಿಗಳು ಹರಿಗನಲ್ಲಿ ದ್ವೇಷ ಬೇಡ ಎಂದು ದುದ್ಯೋಧನನನ್ನು ಎಚ್ಚರಿಸುವರು
(೬-೭೭, ೭-೧೧೨). ಆದರೆ ಅವನು ಕೇಳ, ಪಾಂಚಾಲಿಯನ್ನು ಸಭೆಗೆಳೆದು ತರಿಸುವನು (ವಸ್ತ್ರಾಪಹರಣವೂ ಅಕ್ಷಯವಸ್ತ್ರದಾನವೂ ಇಲ್ಲ).
ಮನದೊಳ್ ನೊಂದವರಾಪಗಾಸುತಕೃಪದ್ರೋಣಾದಿಗಳ್ ಬೇಡವೇ ಡೆನೆಯುಂ ಮಾಣದೆ ತೊಲೆ ತೊಟ್ಟವೆಸಕತ್ ಪೋಪೋಗು ನೀನೆಂದು ಬ ಮೈನಿತಾನುಂ ತೆಜದಿಂದಮುಟ್ಟುದುವರಂ ಕೈದಂದು ದುಶ್ಯಾಸನಂ ತನಗಂ ಮೆಲ್ಲನೆ ಮೃತ್ಯುಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣಯಾ
ಅಂತು ಕೃಷ್ಣಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಕರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಯಾಸನನುಮಂ ಕಣ್ಣೆತ್ತು ಕಿಳುನಗೆನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗ
ಮುಮಂ ಕಂಡು ಕಣ್ಣಳಿಂ ನೆತ್ತರ್ ತುಳುಂಕೆ, ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರ ನಾ ಸಾಫುಟಮೆಕ್ಕೆಯಿಂ ಪೊಡರ್ವ ಪುರ್ವು ಪೊದಲ್ಲಿ ಲಯಾಂತಕ ತ್ರಿಶೂ ಲೋಪಮಭೀಷಣಭ್ರುಕುಟಿ ಮುನ್ನಮೆ ರೌದ್ರಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳಗ್ರಹಮಾದುದು ಭೀಮಸೇನನಾ ನೆಲನಂ ನುಂಗುವ ಮೇರುವಂ ಪಿಡಿದು ಕೀಟ್ಯಾಶಾಗಜೇಂದ್ರಂಗಳಂ ಚಲದಿಂ ಕಟ್ಟುವ ಸಪ್ತಸಪ್ರಿಯನಿಳಾಭಾಗಕ್ಕೆ ತರ್ಪೊಂದು ತೋ ಧ್ವಲಮುಂ ಗರ್ವಮುಮು ಪೊ ಮನದೊಳ್ ಕೋಪಾಗ್ನಿ ಕೈಗ ಕ
ಲರೊಳ್ ಬಂದಿರ ನೋಡಿದ ಕಲುಷದಿಂ ಗಾಂಡೀವಿ ಗಾಂಡೀವಮಂ
೪೬ ೨
ಶ್ರೀ ಸಾಹಿತ್ಯ
ಪ್ರಕುಪಿತ ಮೃಗಪತಿಶಿಶು ಸ
ಕಾಶರತಿವಿಕಟಭೀಷಣಭೂಭಂಗರ್ ನಕುಲಸಹದೇವರಿರ್ವರು
ಮಕಾಲಕಾಲಾಗ್ನಿ ರೂಪಮಂ ಕೈಕೊಂಡರ್ ಅಂತು ವಿಳಯಕಾಲ ಜಳನಿಧಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗವು ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷವೀಕ್ಷೇಪದಿಂ ಬಾರಿಸೆ, ಅನಿತೊಂದುರ್ಕಿನೊಳುರ್ಕಿ ಕೌರವಖಳರ್ ಪಾಂಚಾಳರಜಾತ್ಮಜಾ ನನ ಪದ ಗಪಕಕಾರಣಪುರ್ ತಾಮಾಗೆಯು ಮತ್ತಮ ಣ್ಣನ ಕಣ್ಣನ್ನೆಗೆ ಮೀಟಿಲದೆ ಸಮಂತಿರ್ದರ್ ಪೈಥಾಪುತ್ರರಂ ತಿನಿತೊಂದಾದೊಡಂ ಮಹಾಪುರುಷರಾಬ್ದಾಲಂಘನಂಗೆಯ್ಯರೇ
(೬-೫೯) ಸರಿಯೆ. ಆದರೆ ಎಷ್ಟು ಚಮತ್ಕಾರ ಮಾಡಿದರೂ ಪಂಪನಿಗೆ ಇಲ್ಲಿ ಕಷ್ಟ, ದೌಪದಿ ಅರ್ಜುನ ನೊಬ್ಬನಿಗೆ ಹೆಂಡತಿ ಎಂದು ತಿದ್ದಿಕೊಂಡಾಗೇನೋ ಚೆನ್ನಾಗಿಯೇ ಇತ್ತು. ರಾಜಸೂಯಯಾಗದಲ್ಲಿ ತೇಲಿಸಿ “ಧರ್ಮಪುತ್ರಂ ಸಪತ್ನಿಯಜಮಾನನಾಗಿರ್ದಾಗಳ್ ” (೬-೩೩ ವ.) ಎಂದು ಹೇಳಿದರೆ, ಪತ್ನಿ ಯಾರು ಎಂದು ನಾವು ನಿರ್ಬಂಧಪಡಿಸಿ ಕೇಳಬೇಕಾಗಿಲ್ಲ. ಆದರೆ ಇಲ್ಲಿ ಪತ್ನಿಗೆ ಇಷ್ಟು ಅವಮಾನ ವಾದಾಗ ಪ್ರತೀಕಾರಪ್ರತಿಜ್ಞೆ ಮಾಡುವರು ಯಾರು? ದೌಪದಿ, ಭೀಮ! (೭-೧೦ ನ ೧೫). ಗುಣಾರ್ಣವ ಮಹಾಪುರುಷನೇನು ಮಾಡಿದನು? ಮಹಾಭಾರತದ ಕಟ್ಟಡವನ್ನು ಮುಖ್ಯಾಂಶದಲ್ಲಿ ಓರೆಮಾಡುವುದಕ್ಕೆ ಹೋದರೆ ಒಂದೆರಡು ತೊಂದರೆಯಾಗಬಹುದು! ದೌಪದಿಯ ಮಾನಭಂಗ; ದುರೋಧನ ದುಶ್ಯಾಸನರ ಛಲ, ದುಷ್ಟತನ; ಭೀಮನ ಕ್ರೋಧ, ಪ್ರತೀಕಾರ- ಇವು ಮಹಾಭಾರತದ ವೀರಕಥೆಯ ಕಟ್ಟಡ. ಸಾಹಸ ಭೀಮವಿಜಯದಲ್ಲಿ ರನ್ನನು ಪಂಪನ ಕ್ಷೇಶವನ್ನು ಕಂಡು ಈ ಕಟ್ಟಡ ವನ್ನು ಬಿಡದೆ ಬುದ್ದಿವಂತನಾದನು: ಪಂಪನು ಇಕ್ಕಟ್ಟಿಗೆ ಸಿಕ್ಕಿ ತನ್ನ ಕವಿತಾಸಂಪತ್ತಿನಲ್ಲಿ ಈ ಕುಂದನ್ನು ಮುಚ್ಚುವುದಕ್ಕೆ ಪ್ರಯತ್ನ ಪಟ್ಟನು. ಇಂದ್ರಕೀಲ ವಿಜಯದಲ್ಲಿ ಮತ್ತೆ ಅರ್ಜುನ ದೌಪದಿಯರ ಸಂಬಂಧ ವನ್ನು ಒತ್ತಿ ಹೇಳಿದನು:
ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡಮಟ್ಟು ಬೆಸಕೇಳ್ವನೆಂದಾಗಳ ಪಾಂಚಾಳರಾಜತನೂಜೆಯಿಂತೆಂದಲ್:
ಬಗೆಯದೆ ಮೆಯ್ಯೋಕಮಂ, ಬಗೆ ಪಗೆವರ ಕಡುವೆರ್ಚನೆನ್ನ ಪೂಣೈಯನೆರ್ದೆಯೊಳ್ ಬಗೆ, ಮುನಿಯ ಮಂತ್ರಪದಮಂ ಬಗೆ, ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ
ಎಂದು ಬುದ್ಧಿವೇಟ್ಟು ಮನದಜಕಂ ಮನೋವೇಗದಿಂ ಪರಿಯೆ ಸೈರಿಸಲಾಗಿದೆ,
ಬಳ್ವಳನೀಳ ಕಲರ ತಳ್ಮೆಯಿಂ ಕರೆಗಣಿ ಬೆಳಡ ಅಳ್ವರಿಯಲ್ಯಮಾಟಿಸಿದೊಡೊಯ್ಯನೆ ಮಂಗಳಭಂಗಭೀತಿಯಂ ತಳ್ಳದೆ ಮಾಡೆ ಬಾಪ್ಪಜಳಮಂ ಕಳೆದನೀಯ ಸಂಬಳಂ
ಗೊಳ್ಳವೋಲಾ ತಳೋದರಿಯ ಚಿತ್ರಮನಿಷ್ಕಳಿಗೊಂಡನರ್ಜುನಂ (೬೬೭, ೬೮) ಅರ್ಜುನ ದೌಪದಿಯರ ನಿಕಟ ಸಂಬಂಧ ಇಲ್ಲಿಗೆ ತೀರಿತು!
ಅರಣ್ಯಕ್ಷೇಶದಲ್ಲಿ ಧರ್ಮರಾಯನಲ್ಲಿ ಬ್ರೌಪದಿ ದುಃಖವನ್ನು ಹೇಳಿಕೊಳ್ಳಬೇಕು (೭-೪೫, ೫೨). ಭೀಮನು ಬೆಂಬಲವಾಗಬೇಕು (೭-೨೨ ವ. ೧ ೫೮), ಮತ್ತೆ, ಕೀಚಕನ ಬಾಧೆಯಿಂದ ನೊಂದು
೪೬೩ ಕನ್ನಡ ಸಾಹಿತ್ಯದ ಚರಿತ್ರೆ * ತಳೋದರಿ ವೃಕೋದರನಲ್ಲಿಗೆ ವಂದು ಕಟ್ಟೆಕಾಂತದೊಳ್...ಪರಿಭವಮನಿದಂ ನೀಗು ನೀನ್ ಭೀಮ ಸೇನಾ” ಎಂದು ಕೇಳಬೇಕು. ತನ್ನ ಪತಿ ಬೃಹಂದಳೆಯಾಗಿ ಬೆಳೆಯನ್ನು ತೊಟ್ಟು ಕುಳಿತಿದ್ದಾನೆ! ದುಶ್ಯಾಸನನನ್ನು ಭೀಮನು ಕೊಂದಾಗ, “ ಪವನಾತ್ಮಜಂ ದ್ರುಪದಾತ್ಮಜೆಗೆ ಬಚಿಯನಟ್ಟುವುದು ಆ ವನಿತೆ ಜಯವನಿತೆ ಬರ್ಪಂತೆ ಬಂದು...ಪುಡಿಯೊಳ್ ಪೊರಳ್ ಪಗೆಯಂ ಕಣ್ಣಾರ್ವಿನಂ ನೋಡಿದಳ್. ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ ನಿನ್ನನ್ನ ಪ್ರತಿಜ್ಞೆಯಂ ನೆಪುವಂ ಬಾಯೆಂದು...” ಸಾರ್ಥಕವಾಯಿತು!
ಅರಿಕೇಸರಿಯ ದಾಕ್ಷಿಣ್ಯದಲ್ಲಿ ಭಾರತದ ಕವಿ ಜಾರಿದನು: (ಕಣ್ಣು ಬಿಟ್ಟುಕೊಂಡೇ ಜಾರಿರುವನು). ಉಪೋದ್ಘಾತದಲ್ಲಿ ತನ್ನ ರಾಜನನ್ನು ಸ್ತೋತ್ರಮಾಡಿ ಯಾವ ಅಭೇದವನ್ನು ಬೇಕಾದರೂ ಹೇಳಿ, ಕಥಾಪ್ರವೇಶಮಾಡಿದೊಡನೆಯೇ ಭಾರತದ ಅರ್ಜುನನನ್ನು ಸ್ಥಿರವಾಗಿಟ್ಟುಕೊಂಡಿದ್ದರೆ ಭಾರತದ ನಡುನಡುವೆ ಅರಿಕೇಸರಿಯ ಬಿರುದುಗಳ ಅನೌಚಿತ್ಯಕ್ಕೆ ಅವಕಾಶವಿರುತ್ತಿರಲಿಲ್ಲ:
ಆನರಸುಗೆಯ್ಯ ಪವಗೆಯನದಂ ಪರಿಹರಿಸಿದೆನಾತನ
ಕಿರೀಟಿ ಗೆಲ್ಲೆನಗೆ ಪಟ್ಟಮಂ ಕಟ್ಟುವನೇ? ಎಂದು ನೊಂದು ನುಡಿದ ಧರ್ಮರಾಜನಿಗೆ, ಅರ್ಜುನನು:
ಮುಳಿದಿಂತು ಬೆಸಸೆ ನಿಮ್ಮಡಿ ಯೊಳೆ ಮಾರ್ಕೊಂಡೆಂತು ನುಡಿವೆನುಸಿರೆಂ ನಿಮ್ಮ ಮುಳಿಯಿಸಿದ ಸುರಾಸುರರುಮ ನೋಳರೆಸೆಂ ಕರ್ಣನೆಂಬನೆನಗೆವಿರಿಯಂ?
ನರಸಿಂಗಂಗಂ ಜಾಕ ಒರಸಿಗಮಳವೊದವೆ ಪುಟ್ಟಿ ಪುಟ್ಟಿಯುಮರಿಕೇ ಸರಿಯೆನೆ ನೆಗಟ್ಟು ಮರಾತಿಯ ಸರಿದೊರೆಗಂ ಬಂದೆನಪ್ರೊಡಾಗಳ್ ನಗಿರೇ?
(೧೨-೧೩೧,೩೨) ಎಂದು ಕೇಳುವಾಗಲ, ಕೃಷ್ಣನು ಸಂಧಿಕಾರಕ್ಕೆ ಹೋಗಿದ್ದಾಗ ದುಧನನನ್ನು ಗದರಿಸಿ ಅರಿಕೇಸರಿಯ ಬಿರುದಾವಳಿಗಳನ್ನೂ ಯುದ್ದದಲ್ಲಿ ಗೋವಿಂದರಾಜ, ಗೊಜ್ಜಿಗ, ಕಕ್ಕಲನ ತಮ್ಮ ಬಪ್ಪುವ ಮುಂತಾ ದವರನ್ನು ಗೆದ್ದ ಜಯಗಳನ್ನು ಹೇಳುವಾಗಲೂ (೯-೨೫ ವ.) ಆಭಾಸ ತೋರದೆ ಇರದು. ದೌಪದೀ ಮಾನಭಂಗವಾದಮೇಲೆ ಅರಿಕೇಸರಿಗೆ ಪ್ರಾಮುಖ್ಯತೆಯನ್ನು ಕೊಡುವುದು ಕಷ್ಟ; ಅಲ್ಲಿಂದ ಮುಂದಕ್ಕೆ ಕಥಾನಾಯಕ ಭೀಮ, ಅರ್ಜುನನಲ್ಲ. ಕರ್ಣಾರ್ಜುನರ ಸಂಗ್ರಾಮವನ್ನು ವಿಸ್ತರಿಸಬಹುದು. ಆದರೆ
ದುರೊಧನವಧೆಯಲ್ಲಿ ಅರ್ಜುನನಿಗೆ ಹೇಗೆ ಪ್ರಾಶಸ್ಯವನ್ನು ಹೇಳುವುದು? ಕಡೆಗೆ ಪಟ್ಟಾಭಿಷೇಕ ಮಾಡುವುದು: ಆಗಬಹುದು: ಪಟ್ಟಮಹಿಷಿ ಯಾರು? ಸುಭದ್ರೆ, ಏಕೆ? ದೌಪದಿ ಏನಾದಳು? ಅರಿಕೇಸರಿಯ ಮಹಾರಾಣಿ ಯಾದವವಂಶದ ರಾಜಪುತ್ರಿಯಾಗಿದ್ದಳೋ ಏನೋ!- ಯಾದವವಂಶ ಸಂಭೂತೆಯುಮನೇಕಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿಪಟ್ಟಮಂ ಕಟ್ಟಿ... ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನಿರ್ದು...” (೧೪-೧೮ ವ. ೧೨೦ ವ). ಇರಲಿ, ಉಂಡದ್ದು ಬಂತು ಸುಭದ್ರೆಗೆ: ನಮೆದದ್ದು ಬಂತು ದೌಪದಿಗೆ-ನ್ಯಾಯ!
(ii) ಅರ್ಜುನನ ಸ್ಥಾನದಲ್ಲಿ ಅರಿಕೇಸರಿ ತಲೆಹಾಕಿದರೆ ನಮಗೆ ಸ್ವಲ್ಪ ಬೇಸರವಾಗಬಹುದು. ದೌಪದಿಯ ಸ್ಥಾನದಲ್ಲಿ ಸುಭದ್ರೆ ಪಟ್ಟಮಹಿಷಿಯಾದರೆ ನಮಗೆ ಸ್ವಲ್ಪ ಅತೃಪ್ತಿ ಹುಟ್ಟಬಹುದು. ಆದರೆ ವಿಕ್ರಮಾರ್ಜುನನ ವೀರ್ಯ ಪ್ರತಾಪಗಳ ವರ್ಣನೆಯಲ್ಲಿ ಪಂಪನ ಕೆಲಸದಲ್ಲಿ ಯಾವ ಕೊರತೆಯ ಇಲ್ಲ. ಪ್ರತಿನಾಯಕನಾದ ಕರ್ಣನಿಗಂತೂ ತನ್ನ ಹೃದಯವನ್ನೇ ಅರ್ಪಿಸಿರುವನು: ಕರ್ಣನಿಗೆ ಕವಿ ಹೇಳುವ ಚರಮಶೋಕವೇನು?
೪೬೪
ಶ್ರೀ ಸಾಹಿತ್ಯ ನೆನೆಯದಿರಣ್ಣ ಭಾರತದೊಳಿನ್ ಪೆರಾರುಮಂದ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ, ಕರ್ಣನೊಳಾರ್ ದೊರೆ? ಕರ್ಣನೇಯ ಕ ರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮಂದು ಕ ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲೈ ಭಾರತ?
(೧೨-೨೭) ಕೆಲವು ಭಾಗಗಳಿಂದ ಕರ್ಣನ ಸ್ವರ್ಣಚಾರಿತ್ರಕ್ಕೆ ಪಂಪನು ಹೇಗೆ ಬಣ್ಣ ಹಾಕಿದ್ದಾನೆಂಬುದನ್ನು ತೋರಿಸ
ಬೇಕು.
ವಿದ್ಯಾಪರೀಕ್ಷೆಯ ಯುದ್ಧದಲ್ಲಿ ಅರ್ಜುನನನ್ನು ಕರ್ಣನು ಪ್ರತಿಭಟಿಸಿದಾಗ ದ್ರೋಣನು:
ಏವದ ಮುಳಿಸಿನ ಕಾರಣ ಮಾವುದೊ ನೀನ್ ನಿನ್ನ ತಾಯಿ ತಂದೆಯ ದೆಸೆಯಂ ಭಾವಿಸದೆ ಕರ್ಣ ನುಡಿವ ತಾವುದು ಸಮಕಟ್ಟು ನಿನಗಮರಿಕೇಸರಿಗಂ?
(೨-೮೨) ಎಂದು ಜರೆಯುತ್ತಾನೆ. ಸೂಾಂಶದಿಂದ ಸತ್ಕುಲದಲ್ಲಿ ಹುಟ್ಟಿದರೂ ಸೂತಪುತ್ರನೆಂಬ ಅಪವಾದ!
ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ
(೨-೮೩) ಎಂದು ದುರೊಧನನು ಸಮಾಧಾನ ಹೇಳಿ, ಅಂಗರಾಜ ಪದವಿಯನ್ನು ಕೊಟ್ಟು ಸ್ನೇಹವನ್ನು ಬೇಡು ವನು: “ನೀನೆನಗೊಂದನೀಯಲ್ವೇಟ್ಟುದು
ಪೊಡಮಡುವರ್, ಜೀಯೆಂಬರ್, ಕುಡು ದಯೆಗೆಯ್ಯಂ ಪ್ರಸಾದವೆಂಬಿವು ಪೆರೋಲ್ ನಡೆಗೆಮ್ಮ ನಿನ್ನಯೆಡೆಯೊಳ್ ನಡೆಯಲ್ವೇಡೆನಗೆ ಕೆಳೆಯನಯ್ ರಾಧೇಯಾ”
(೨-೮೫). ಅಂದು ಹೂಡಿದ ಸ್ನೇಹ ದುದ್ಯೋಧನನು ಸತ್ತಮೇಲೆಯೇ ಕಳಚಿ ಬಿದ್ದದ್ದು.
ಕೃಷ್ಣನು ಸಂಧಿಗಾಗಿ ಬಂದಾಗ ಒಡೋಲಗದಲ್ಲಿ ಸುಯೋಧನನು “ ಯುವರಾಜನಪ್ಪಣುಗ ದುಶ್ಯಾಸನನುಮಂ, ಅಂಗರಾಜನಪ್ಪಣುಗಾಳ್ ಕರ್ಣನುಮನೆರಡುಂ ಕೆಲದೊಳಂ ತೊಡೆಸೋಂಕೆ ಕುಳ್ಳಿರಿಸಿ ” ಇದ್ದಾನೆ. ಕೃಷ್ಣನು ಕರ್ಣನನ್ನು ಭೇದಿಸುವುದಕ್ಕೆಂದು ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿಟ್ಟೆಮ್ಮಂ ಕಿದಂತರಂ ಕಳಿಪಿ ಮಗು ಬಾ ಪೋಪಮೆಂದು ತನ್ನೊಡನೆ ರಥ ಮನೇಲಿಸಿಕೊಂಡು ಪೋಗಿ ಮುಂದೊಂದೆಡೆಯೊಳ್ ನಿಂದು
ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ ನಾದಿಯೊಳಬ್ಬೆ ಕೊಂತಿ, ನಿನಗಮ್ಮನಹರ್ಪತಿ, ಪಾಂಡುನಂದನರ್ ಸೋದರರೆಯ್ದೆ ಮಯ್ತುನನೆ ನಾನ್, ಪೆಜತೇನ್ ಪಡೆಮಾತೊ ನಿನ್ನದೀ
ಮೇದಿನಿ, ಪಟ್ಟಮುಂ ನಿನತೆ, ನೀನಿರೆ ಮತ್ತೆ ಪೆಜರ್ ನರೇಂದ್ರರೇ
(೯೬೪) ದುದ್ದೋಧನನು ನಿನ್ನ ನಿಜವೃತ್ತಾಂತವನ್ನು ದಿವ್ಯಜ್ಞಾನಿಗಳಿಂದ ತಿಳಿದು
(೬೬ ವ.) ಪಾಟಿಸುವೆನೊಯ್ಯನೆ ಮುಳೊಳೆ ಮುಳ್ಳನೆಂದು ತಾ ನೀ ನಯದಿಂದೆ ಪೆರ್ಚಿ ಪೊರೆದಳಂದೊಡನುಂಡನಲ್ಲನೇ?
(೬೭) ಎನೆಯೆನೆ ಬಾಷ್ಪವಾರಿ ಪುಳಕಂ ಬೆರಸೊರ್ಮೆಯೆ ಪೊಣ್ ಮುನ್ನ ನೀ ಮೆನಗಿದನೇಕೆ ಪೇಟ್ರೊ! ನಗಿ ಪೊಗಯನಾಂಪಿನಂ ಸುಯೋ
ಕನ್ನಡ ಸಾಹಿತ್ಯದ ಚರಿತ್ರೆ
೪೬೫
ಧನನೆನಗೊಳ್ಳಿಕೈದ ಕೃತಮಂ ಪೆಜಗಿಕ್ಕಿ ನೆಗಟಿ ಮಾಸೆ ನ ಣ್ಣಿನ ನೆವದಿಂದ ಪಾಂಡವರನಾನೂಳಪೊಕ್ಕೊಡೆ ನೀಮೆ ಪೇಸಿರೇ? ನೆತ್ತಮನಾಡಿ ಭಾನುಮತಿ ಸೋಲೊಡೆ ಸೋಲಮನೀವುದೆಂದು ಕಾ ಡುತ್ತಿರೆ ಲಂಬಣಂ ಪಯ್ಯ, ಮುತ್ತಿನ ಕೇಡನೆ ನೋಡಿ ನೋಡಿ ಬ ಳ್ಳುತ್ತಿರೆಯೇವಮಿಲ್ಲದಿವನಾಯ್ಡುದೊ ತಪ್ಪದೆ ಪೇಮೆಂಬ ಭೂ ಪೋತ್ತಮನಂ ಬಿಸುಟ್ಟಿರದೆ ನಿಮೋಳೆ ಪೊಕ್ಕೊಡೆ ಬೇಡನಲ್ಲನೇ?
(೬೮, ೬೯) ಎಂದು ನಿರ್ಣಯವಾಗಿ ಹೇಳಿ ಕುರುಪತಿಗಿಲ್ಲ ದೈವಬಲಂ, ಸೋದರರನೆಂತು ಕೊಲೈಂ, ಅಗ್ನಿ ಳೆನ್ನಂ ಪೊರೆದೆಯೇ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ? ಎನ್ನೊಡಲನಾಂ ತವಿಪೆಂ” (೭೦-೭೧) ಎಂದು ದೃಢಸಂಕಲ್ಪನಾಗುವನು.
ಕೃಷ್ಣನು ಕಳುಹಿಸಿದ ಕುಂತಿಗೆ
ಒಪ್ಪಿಸಿದೆಂ ಕಯ್ಕೆಡೆಯೆಂ ದಪ್ಪೆಸಿದ ನಿನ್ನ ಮಗನನೀಗಳೆ ನಿನಗೆ ದಪ್ಪೆಸಿ ಗಂಗೆ ಪೋಪುದು ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ ಪೋಲಮಟ್ಟು ಬರಲ್ ತನ್ನಡಿ ಗೆಣಗಿದ ನಿಜಸುತನನಂ ಪರಸಿ ಮನಂ ಮಲಗಿ ರವಿ ನುಡಿದನೆನ್ನುಮ ನುಜದೆ ಮರುಳ್ಳಗನೆ ಹರಿಗೆ ಕವಚಮನಿತ್ತಯ್! ನುಡಿಯೆನದ, ನಿನ್ನಂಬಿಕೆ ಪಡೆಮಾತೇಂ ಕೊಂತಿ ಹರಿಯ ಮತದಿಂ ಕಾಯ ಲೌಡರಿಸಿ ಬಂದಳ್ ಸುತರಂ, ಕುಡದಿರ್ ಪುರಿಗಣೆಯನೆನಿತು ಲಿಸಿದೊಡಂ ಎಂದರವಿಂದಪ್ರಿಯಸಖ ನಂದಂಬರತಳಮನಡರ್ವುದುಂ, ಕಯುಗಿದಿ ತೆಂದಂ ಕುಂತಿಯನಬೇಂ ವಂದಿರ್, ಪುದಿದೆನಗೆ ಸಯ್ತು ಬರ್ಪಂತೀಗಳೇ? ಚಲಮುಂ ಚಾಗಮುಮಳವುಂ ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೋಳ್ ನೆಲಸಿದುವು ನಿಮ್ಮ ಕರುಣಾ ಬಲದಿಂ ನೀವೆನ್ನನಿಂದು ಮಗನೆಂದುದಂ ಪಡೆದ ತಾಯುಂ ತಂದೆಯು ಮೊಡಲಂ ಪ್ರಾಣಮುಮನ್, ಅವರವವು, ಕಯ್ಯಡೆಯಂ ಕುಡುವುದರಿದಾಯ್ತಿ ನೀಮನಗೆದೆ ಮಡಗದೆ ಬೆಸಪ ತೋವೆಸನಂ ಬೆಸಸಿಂ ಎಂಬುದುಮಂಬಿಕೆ ಮಗನೆ ಮ ನಂಬೆಳಸಿದೆ ನೀನುಮಿತ್ರೆಯಾನುಂ ಪೆತ್ತೆಂ; ನಂಬಿದ ನಿನ್ನನುಜರ್ ನಿ ನ್ನಂ ಬೆಸಕೆಯೆ ನೀನೆ ನೆಲನನಾಳ್ಳುದು ಕಂದಾ!
೪೬೬
ಶ್ರೀ ಸಾಹಿತ್ಯ
ನಿನಗಪ್ಪರಸಂ ದುರ್ಯೊ ಧನನೋಲವಂ ಮುಂದುಗೆಯು ಬೆಸಕ್ಕವರೆ ನಿ ನೃನುಜರ್, ಎರಟ್ ಸೆಗಂ ಕಿಸು
ಆನಿಸಾಗದು, ಮಗನೆ ನೀನೊಡಂಬಡವೇಲ್ಕಂ ಎಂಬುದೆಲ್ಲಮಂ ಕೇಳು ಕರ್ಣಂ ಮುಗುಳ್ಳಗೆ ನಕ್ಕು ಭಯಮುಂ ಲೋಭಮುಮಂಬ ತಮ್ಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ ಆಯನೊಕ್ಕಾಳನ ಗೆಯ್ದು ಸತೃತಮುಮಂ ಪಿಂತಿಕ್ಕಿ ಜೋಳಕ್ಕೆ ತ ಪ್ಪಿಯುಮಿನ್ ಬಾಳ್ವುದೆ ಪೂಣ್ಣು ನಿಲ್ಲದಿಕೆಯಿಂ ಬಾಂತು ವಿಖ್ಯಾತ ಕೀ ರ್ತಿಯವೋಲೀಯೊಡಲಬ್ಬೆ ಪೇಮೆನಗೇಂ ಕಲ್ಪಾಂತರಸ್ಥಾಯಿಯೇ?
ಮೀಂಗುಲಿಗನೆನಾಗಿಯುಮಣ ಮಾಂ ಗುಣಮನ ಬಿಸುಟೆನಿಲ್ಲ ನಿಮಗಂ ಮಗನಾ ದಂಗೆನಗೆ ಬಿಸುಡಲಕ್ಕುಮ
ನೀಂ ಗಳ ಪಂಬಲನ ಬಿಸುಡಿಮಿನೈನೈಡೆಯೊಳ್ ಎಂಬುದುಂ ಕೊಂತಿ ಭೋಂಕನೆರ್ದೆದೆಯದು ಅದೆಂ ನೆಟ್ಟನೆ ಬೆಟ್ಟಿನಿಂತು ನುಡಿವ ನೀಂ ಕಂದ ಪೋಗಿಂದೆ ಕೆ ಟ್ಟದತ್ತಾಗದೆ ಸೋಮವಂಶಮೆನಗಿನ್ ಬಾಟ್ಟಾಸೆಯಲ್ಲಿ ಬಿ ಟ್ಟುಳಿದೆಂ ಮನ ಮಕ್ಕಳಾಸೆಯುಮನಾನಂದ, ಶೋಕಾಗ್ನಿ ಪೊಂ ಪುವೋಗುತ್ತಿರೆ ಕರ್ಣನೆಂದನಿನಿತೇನ್ ಪೋಲಬ್ಬೆ ಚಿಂತಾಂತರಂ?
ಪಿಡಿಯೆಂ ಪುರಿಗಣೆಯಂ ನರ ನೆಡೆಗೊಂಡೊಡಮುದ ನಿನ್ನ ಮಕ್ಕಳನ್ನೇ ರ್ದೊಡಮಣಿಯೆಂ ಪೆರ್ಜಸಮನೆ
ಪಿಡಿದೆನ್ನನ ರಣದೊಳವೆನಿರದಡಿಯಂ ಎಂದು ಕೊಂತಿಯಂ ವಿಸರ್ಜಿಸಿ ಚಲದ ಚಾಗದ ಕುಲದ ನಯನಾವರ್ಜಿಸಿ ರಾಧೇಯ ನೂಂಗಾಧೇಯವಾಗಿರ್ದಂ,
(೯-೭೬ ೮೭)
ಇದಲ್ಲವೆ ಮಹಾಕವಿಯ ಬರವಣಿಗೆ! ತಿಳಿಯಾದ ಕನ್ನಡಶೈಲಿ, ಗಂಭೀರ ಭಾವಪ್ರವಾಹ, ಒಂದು ಮಾತು ಹೆಚ್ಚಿಲ್ಲದ ವಾಕ್ಸಂಯಮ, ಸ್ವಾಭಾವಿಕತೆಯನ್ನು ಸ್ಪಷ್ಟವಾಗಿ ಕಂಡ ಕಲ್ಪನಾದೃಶ್ಯ; ಮೈತ್ರಿಯ, ಸ್ವಾಮಿಭಕ್ತಿಯ, ಧರ್ಮನಿಷ್ಠೆಯ, ಸ್ವಾರ್ಥತ್ಯಾಗದ ಪರಾಕಾಷೆ -ಈ ಪಂಪನ ಕರ್ಣನ ಮುಂದ ವಿಕ್ರಮಾರ್ಜುನನೇನು? ಕಡೆ ನೂ ಏನು? “ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯ ಮಾಗmದು ಪೋದ ನಾರಾಯಣಂ” ಸ್ವಲ್ಪ ನಾಚಿಕೆಪಟ್ಟುಕೊಂಡು ಹೋಗಿರಬೇಕಲ್ಲವೆ?
ಇಲ್ಲಿಂದಾಚೆಗೆ ಕರ್ಣನು ರುದ್ರನಾಯಕ: ಉಭಯಸಂಕಟದಲ್ಲಿ ಧರ್ಮಮಾರ್ಗವನ್ನು ಹುಡುಕು ತಿರುವವನು. ಭೀಷ್ಮರನ್ನು ಮೂದಲಿಸಿ ಆಮೇಲೆ ಪಶ್ಚಾತ್ತಾಪಪಟ್ಟುದನ್ನು ನಾವು ತೋರಿಸದೆ ಹೇಗಿರಲಾದೀತು? ಭೀಷ್ಮರಿಗೆ ಪಟ್ಟಾಭಿಷೇಕವಾದಾಗ
ಭಗವತಿಯೇಯವೇಟ್ಟಿ ತೇಜದಿಂ ಕಥೆಯಾಯ್ತಿವರೇಣು, ನೀನಿದಂ ಬಗೆದಿವರಿನ್ನು ಮಾಂತವರೆಂದು ವಿಮೋಹಿಸಿ ವೀರಪಟ್ಟಮಂ ಬಗೆಯದೆ ಕಟ್ಟಿದಮ್, ಗುರುಗಳಂ ಕುಲವೃದ್ಧರನಾಜಿಗುಯು ಕೆ ಮೃಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇನ್ ಸುಯೋಧನಾ?
7------------------
೪೬೭
ಕನ್ನಡ ಸಾಹಿತ್ಯದ ಚರಿತ್ರೆ
(೧೦-೧೬,೧೭)
ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆ ದೊರೆ, ಪಿಡಿದ ಬಿಲ್ಲೆ ದಂಟಿಂಗೆಣೆ ಕ ಣ್ಣೆಟ್ಟ ಮುದುಪಂಗೆ, ಪಗೆವರ ನಿಟ್ಟೆಲ್ವಂ ಮುಆವೊಡೆನಗೆ ಪಟ್ಟಂಗಟ್ಟಾ ಗಂಗಾಸುತಂ ಪೃಥಾಸುತ ರಂ ಗೆಲ್ಗೊಡೆ ತಪಕೆ ಪೋಪೆನ್, ಅವರ್ಗಳ ಕಯೊಳ್ ಗಾಂಗೇಯನದೊಡಹಿತರ
ನಾಂ ಗೆಲೆ ತಳಿಜವೆನನ್ನೆಗಂ ಬಿಲ್ವಡಿಯಂ ಎಂದುದಕ್ಕೆ ಭೀಷ್ಮರು ನಕ್ಕು
ಕಲಿತನದುರ್ಕು, ಜವ್ವನದ ಸೊರ್ಕು, ನಿಜೇಶನ ನಚ್ಚು, ಮಿಕ್ಕ ತೋ ಜ್ವಲದ ಪೊಡರ್ಪು, ಕರ್ಣ, ನಿನಗುಳ್ಳನಿತೇನೆನಗುಂಟೆ? ಭಾರತಂ ಕಲಹಮಿದಿರ್ಚುವಂ ಹರಿಗನಪ್ರೊಡೆ, ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ, ಸೂಡೆಯಲಪ್ಪುದು ಕಾಣ ಮಹಾಜಿರಂಗದೊಳ್ !
(೨)
(೨೨)
(೨೩)
ಅನುಭವದಲ್ಲಿ ಹಣಾ ದ ಮುದುಕನ ನಯದ ಪೆಟ್ಟು ! ಕರ್ಣನ ಹೃದಯವನ್ನಿರಿಯದೆ ಬಿಡಲಿಲ್ಲ. ತನಗೆ ಪಟ್ಟಾಭಿಷೇಕವಾದಾಗ
ಒತ್ವನ, ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಣಿದು ಮೂಲಸೂಜಿ ಬಲವಂದು ತದೀಯ ಪಾದಪದ್ಮಂಗಳಂ ತಲೆಯೊಳಿಟ್ಟುಕೊಂಡು
ಆಮಾತಜಯದೆ ಮುಳಿದು ನಿಮ್ಮಡಿಯಂ ನೋಯೆ ನುಡಿದೆನುಜದೇಳಿಸಲೇ ನೆಮ್ಮಳವೆ? ಮಠವುದಾ ಮನ ದುಮ್ಮಚ್ಚಮನಟ್ಟ ನಿಮ್ಮನೆರೆಯಲೆ ಬಂದೆ ಧುರದೊಳ್ ನಿಮ್ಮಡಿಯುಂ ಗೆಲ ಲರಿಯರನಾ ಪಾಂಡುಸುತರನೆಮ್ಮದಿಗರ ಚೇರಿಯಲ್ಲಿ ಗೆಲ್ವರೆಂಬುದು ಹರಿಗನೊಳುದೆಂತುಮೆನ್ನ ಚಲಮನೆ ಮೆಱವೆ
ಎಂಬುದುಂ, ಕುರುಪಿತಾಮಹನಹರ್ಪತಿಸುತನನಿಂತೆಂದಂ ನುಡಿವುದ ಪತಿಭಕ್ತಿಯ ಪೆಂಪಿಂ ನೀನ್ ನುಡಿದಮ್ ಪೆಜತಂದದಿಂ ನುಡಿದೆಯಲ್ಕು........
(೧೨-೫೩ ವ. ೧೫೬) ಅರ್ಜುನ ಕರ್ಣರ ಮೂದಲೆಗಳನ್ನು ಹೇಳಿ ಕರ್ಣನ ದಿವ್ಯವಿಗ್ರಹವನ್ನು ವಿಸರ್ಜಿಸೋಣ: ಪಿರಿದು ಪೊರೆದು ನಿನ್ನಂ ದುರ್ಯೋಧನಂ ನಿನಗೆನ್ನೊಳಂ ಪಿರಿದು ಕಲುಷಂ......
ಎನ್ನ ಪೆಸರ್ಗೆಳು ಸೈರಿಸ ದನ್ನಯ್, ಅದೆಂತೀಗಳನ್ನ ರೂಪಂ ಕಂಡುಂ ನಿನ್ನ ರಸನಣುಗದಮ್ಮನ, ನಿನ್ನ ತನೂಭವನ ಸಾವುಗಂಡು, ಮಾಗ್ವಾ?...
೪೭೮
ಶ್ರೀ ಸಾಹಿತ್ಯ ಸೆಟ್ಟಿಯಂ ಬಳ್ಳಂ ಕಿದೆಂಬುದೊಂದು ನುಡಿಯಂ ನೀಂ ನಿಕ್ಕುವಂಮಾಡಿದಮ್!...
ಪಸರಸೆಯ ಬೀರಮಂ ಪಾ ಡಿಸಿಯುಂ ಪೊಗಸಿಯುಮುರ್ಕಿ, ಬಿಟ್ಟಾಹವದೊಳ್ ಕುಸಿದು ಪಂಪಿಂಗಿ ಪೇಟ್ ಮಾ
ನಸರೇನಿನ್ನೂರು ವರ್ಷಮಂ ಬಬ್ಲಿ ಪರೇ?
ಎಂದ ನೃಪಪರಮಾತ್ಮನ ಪಾಟಿಯ ಪಸುಗೆಯ ನುಡಿಗೆ ಪರಮಾರ್ತನಾಗಿ, ತನ್ನನುದ್ಘಾಟಿಸಿ ನುಡಿದೊಡುಮ್ಮಚ್ಚದೊಳ್' ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರತನೂಜನಿಂತೆಂದಂ
ಏಟ್ಟಿನೇಟೆದು ನಿಮ್ಮ
ನಾಲ್ಕಡಿಗಳಿದೊಡೆ ಮದೀಯನಾಥಂ, ಬೇರು ಬಿಯನೆ ತಿಂದ ದವಸದೊ
ಇಾಡಿದ ಬೀರಮೀಗಳೇಂ ಪೊಸತಾಯ್ತ? ಮತ್ತನಯನರಸನನುಜನ ಸಲಿಲಂ ನಿನ್ನೊಳಸಲೆಂದಿರ್ದೆಂ ಬೆ
ಳ್ಳುತ್ತಿರ್ದೆನಪ್ರೊಡೇತೋದ ಇತ್ತಣ ದಿನನಾಥನಿತ್ಯ ಮೂಡುಗುಮಲೇ? ಕಸವರದ ಸವಿಯುಮಂ ಭಯ ರಸಕದ ಸವಿಯುಮನದೆಂತುಮಾನಜ್ಯದುದಂ ವಸುಮತಿಯುವುದು, ನೀಂ ಪುರು ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಲುಗುಮ?
ಒಡಲುಂ ಪ್ರಾಣಮುಮಂಬಿವು ಕಿಡಲಾದುವು ಜಸಮದೊಂದ ಕಿಡದದನಾಂ ಬ ಲೈಡಿವಿಡಿದು ನೆಗನುಱದಲಿ
ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವ ಬಿದಿವಸದಿಂದೆ ಪುಟ್ಟುವುದು, ಪುಟ್ಟಿಸುವಂ ಬಿದಿ, ಪುಟ್ಟಿದಂದಿವಂ ಗಿದು ಬಿಯಮ್, ಒಳ್ಳಿವಂಗಿದು, ವಿನೋದಮಿವಂಗಿದು, ಸಾವ ಪಾಂಗಿವಂ ಗಿದು, ಪಡೆಮಾತಿವಂಗಿದು ಪರಾಕ್ರಮವೆಂಬುದನೆಲ್ಲ ಮಾಳ್ಮೆಯಿಂ ಬಿದಿ ಸಮಕಟ್ಟಿ ಕೊಟ್ರೆಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್!
(೧೨-೧೭೩
೧೮೩)
ಎಂದೀ ಬಾಯ್ತಾತಿನೊಳೇ ವಂದಪುಣ್ಯದಣ್ಮಣಿ ಕಾದುಕೊಳ್ಳೆನುತುಂ ಭೋ ರಂದಿಸ ಪೊಸಮಸೆಯಂಬಿನ
ತಂದಲ ಬೆಳ್ಳರಿಗಳಿರದೆ ಕವಿದುವು ನರನಂ ವಿಧಿ ಕಟ್ಟಿಕೊಟ್ಟಂತೆಯೆ * ಕುಲಶೈಲಂ ಬೀಲ್ವಂತೆ ನೆಲನದಿರೆ” ಬಿದ್ದ ಕರ್ಣ!
ಕುಡುಮಿಂಚಿನ ಸಿಡಿಲುರುಳಿಯೋ ಟೊಡಂಬಡಂಪಡೆಯ ಕರ್ಣನೂಡಲಿಂದಾಗಳ್ ನಡೆ ನೋಡನೋಡೆ ದಿನಪನೂ ಳೊಡಗೂಡಿದುದೊಂದು ಮೂರ್ತಿತೇಜೋರೂಪಂ
(೧೨-೨೧೫)
೪೬೯
ಕನ್ನಡ ಸಾಹಿತ್ಯದ ಚರಿತ್ರೆ
ಅರಿಕೇಸರಿಗೆ ಪಂಪಕವಿ ತನ್ನ ಭಾರತವನ್ನು ಓದುತ್ತ ಇಲ್ಲಿಗೆ ಬಂದು ಕತ್ತೆತ್ತಿ ನೋಡಿ ಕಣ್ಣೀರಿಟ್ಟು:
ನೆನೆಯದಿರಣ್ಣ ಭಾರತದೊಳಿನ್ ಪೆರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ! ಕರ್ಣನೊಳಾರ್ ದೊರೆ? ಕರ್ಣನೇಜು, ಕ ರ್ಣನ ಕಡುನನ್ನಿ, ಕರ್ಣನಳವಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲೈ ಭಾರತಂ! ಎಂದು ಮೆಲ್ಲನುಸಿರಿದಾಗ, ಅರಿಕೇಸರಿಯೂ ತನ್ನ ಹೆಮ್ಮೆಯನ್ನು ಮರೆತು ಕರ್ಣನಲ್ಲಿ ಹೆಮ್ಮೆಪಟ್ಟು ತಾನೂ ಕಣ್ಣೀರು ಸುರಿಸಿರಬೇಕಲ್ಲವೆ? ೩. ದುರ್ಯೋಧನನ ಪಾತ್ರ:
ಆ ಪಾಪಿಯೆಂದು ಪ್ರಸಿದ್ಧನಾದ, ಅಸುರಾಂಶನೆಂದು ನಿಂದಿತನಾದ ದುರ್ಯೋಧನನಲ್ಲಿಯೂ ಪಂಪನ ಉದಾರಹೃದಯದ ಸಹಾನುಭೂತಿ ಎಷ್ಟರಮಟ್ಟಿಗಿದ್ದಿತೆಂದು ತೋರಿಸುವುದಕ್ಕೆ ಹೆಚ್ಚು. ಅವಕಾಶವಿಲ್ಲ. ಮಹಾಕವಿಗಳ ಕೈಯಲ್ಲಿ ಆಗುವುದೇ ಹೀಗೆ ಭಗವಂತನಿಗೂ ಹೀಗೆಯೇ ಎಂದು ತಿಳಿದವರು ಹೇಳುತ್ತಾರೆ-ಪಾಪಿಗಳಲ್ಲಿ ಗುಣಾನ್ವೇಷಣ, ಕನಿಕರ, ದಯೆ, ವಿಕ್ರಮಾರ್ಜುನ ನಾಯಕ; ಕರ್ಣರಸಾಯನ ಕರ್ಣ; ಭೀಮ ಧರ್ಮವೀರ, ನ್ಯಾಯಮೂರ್ತಿ, ಶಿಕ್ಷಾದೇವತೆ; ದುರ್ಯೋಧನನಲ್ಲಿ ಅಭಿಮಾನದ ಮೆಚಿಕೆ, ಮರುಕ, ಕೆಲವು ರತ್ನಗಳನ್ನು ಮಾತ್ರ ಪಂಪನ ಅಪಾರರತ್ನಾಕರದಿಂದ ತೆಗೆದಿಟು ತೃಪ್ತನಾಗುತ್ತೇನೆ ಹೆಚ್ಚು ಹೊರಟರೆ ಈ ಸಾಹಿತ್ಯ ಚರಿತ್ರೆಯಲ್ಲಾ ಪಂಪನೇ ಆದಾನು!-ರನ್ನ ಕಾದಿದ್ದಾನೆ!
ಇದು ಭೀಮ ದುರೊಧನರ ದ್ವೇಷಾಂಕುರಾರ್ಪಣ: ಎಷ್ಟು ಸಹಜವಾಗಿದೆ ನೋಡಿ: ಗಾಂಗೇಯನಯ್ಯರ್ ಕೂಸುಗಳುಮಂ ತನ್ನ ತೊಡೆಯ ತೊಟ್ಟಿಲಾಗೆ ನಡಪುತ್ತುಮಿರೆ ದುರ್ಯೊಧನ ಪ್ರಕೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ಯರುಂ ಸಹಪಾಂಸುಕ್ರೀಡಿತರಾಗಿ
ಒಡನಾಡಿಯುಮೊಡನೊದಿಯು ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂತುಂ ಪೊಡೆಸೆಂಡೆಂಬಿವನಾಡು ತೊಡವಳೆದರ್ ತಮ್ಮೊಲೆಳಸೆ ತಂತಂಗೆಡೆಗಳ
ಅಂತಾ ಕೂಸುಗಳ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸೆಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿ ರ್ಮತ್ಯ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಯಿ ಮಾಡಿ ಕೋಲನೀಡಾಡಿ ಪಲವು ಸೂಟ್ ಕಾಡಿ
ಪರಿದನಿಬರುಮೊಡನಡರ್ದಿರೆ ಮರನಂ ಮುಟ್ಟಿ ಪಡೆಯದನಿಬರ್ಗ೦ ಕಿಂ ಕಿರಿವೋಗಿ ಭೀಮಸೇನ
ಮರನಂ ಪಿಡಿದಲುಗೆ ಪಣೋಲನಿಬರುವುದಿರ್ದರ್! ಅಂತು ಬಿಟ್ಟು ಸುಲಿದ ಮೊಲಕಾಲ್ಗಳುಂ ಕಬಲ್ಲ ಪಲ್ಲಳುಮೆಲ್ವಡಗಾದ ಮೆಯ್ದಳುಮುಡಿದ ಕಯ್ದಳು ಮಾಗಿ ಬೆರಸುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂಬೇಡವರಿಂದಿತ್ತ ಭೀಮನೊಡ ನಾಡದಿರಿಮೆಂದು ಮುದುಗಲ್ ಬಾರಿಸಿ, ತಮ್ಮ ನೊಂದ ಸಿಗ್ಗಿಂಗನಿಬರುಮೊಂದಾಗಿ ಪೋಗಿ ಅವೊಲ ಮರದ ಕೆಳಗೆ ಮಲಸೊಂದಿದ ಭೀಮನನಡಸಿ ಪಿಡಿದು ನೂರ್ವರೂಂ ಗಂಟಲು ಮೆಟ್ಟಿ
೪೭೦
ಶ್ರೀ ಸಾಹಿತ್ಯ
ಪಾವುಗಳಂ ಕೊಳಿಸಿ, ಮಹಾ ಗ್ರಾವಮನುಜದಡಸಿ ಕಟ್ಟಿ ಕೊರಳ್, ಗಂಗಾ ದೇವಿಯ ಮಡುವಿನೊಳಿದ
ರಾವರಿಸದೆ ತಮ್ಮ ಕುಲಮನಡಿಗಟ್ಟುವವೋಲ್! (೨-೨೯ ವ. ೧೩೨) ದುದ್ಯೋಧನನ ಮಾತ್ಸಲ್ಯ ಬೆಳೆಯುತ್ತಾ ಹೋದದ್ದು: ರಂಗಪರೀಕ್ಷೆಯಾದ ಮೇಲೆ
ಪಾಲನೆಟಿವಿ ಪಾವಿಂಗೆ ದಾಯಾದ್ಯರಂ ಪಿರಿಯರ್ ಮಾಡಿದಿರಮ್ಮ ಸಾವುಮುವುಂ ದೈವೇಚ್ಛೆಯಾಯ್ತಾಗದೇ!
(೨-೮೯) ನಿಮಗಯ್ಯ ವಿಧಾತೃಯೊಗದಿಂ ಕಣ್ ಕುರುಡಾದೊಡೇನೂ ಕುರುಡಾಗಲೆವೇಚ್ಚದೆ ನಿಮ್ಮ ಬುದ್ದಿಯುಂ?
(೨-೯೧) ದೌಪದೀ ವಿವಾಹವಾದಮೇಲೆ-ಭೀಷ್ಮರು “ ಎನ್ನ ನಡಪಿದುದರ್ಕಂ, ಕೂರ್ತುದರ್ಕಂ, ಪಾಂಡುಪುತ್ರರ್ಗೆ ನೆಲನಂ ಪಚ್ಚು ಕೊಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯ್ದು ಮೊಡಂ ಬಡದಿರ...
ಸೋರ್ಕಿ ನೀನ್ ನುಡಿಯದಿರಣ್ಣ, ನಿನ್ನ ಮಡಿಗಾಂ ತಡೆದಿರ್ಪನೆ?... ಕ್ರಮಮದೆನ್ನ ಕೊಟ್ಟುದನೆ ಕೊಂಡು ಮನೋಮುದದಿಂದ ಬಾಲ್ಯದ ತವರಿವರೆಲ್ಲರುಂ ಸಮನ್...
ಆನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚು ಕುಡುವಾಗಳಡ್ಡಂಬರ್ಪ ಗಂಡರಂ ನೋಟ್ಟೆನೆಂದು ಭೀಷ್ಮರ್ ಬಗ್ಗಿಸಿದೊಡೆ ದುರೊಧನನತಿಸಂಭ್ರಮಾಕುಳಿತನಾಗಿ ನೀವೆಂದುದನೆಂದು ಬಾಳ್ವೆನೆಂ ದೊಡಪ್ಪುದೆಂದು”
(೪-೫ ವ. N೯) ಇಂದ್ರಪ್ರಸ್ಥ ರಾಜ್ಯವನ್ನು ಯುಧಿಷ್ಟಿರನಿಗೆ ಕೊಟ್ಟರು. ರಾಜಸೂಯವಾದಮೇಲೆ
ಮಗಿಲ್ಲದ ಬಲ್ಲಾಳನ
ದಾಗರಮನೆ ನಗು ತಡ್ನಥಾನಂದನರು ದ್ರೋಗದ ಚಾಗದ ಯಾಗದ ಭೋಗದ ಮೈಮೆಗೆ ಸುಯೋಧನಂ ಬೆಜಿಗಾದಂ!
(೬೬೭) ಆಗಿ “ ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು " ದೂತವನ್ನು ಹೂಡಿ, ಬ್ರೌಪದಿಯನ್ನು ಅವಮಾನಪಡಿಸಿ, ಭೀಮನಿಂದ ಪ್ರತಿಜ್ಞೆಗಳನ್ನು ಹೊರಡಿಸಿ “ ಕೌರವರ್ ಕಡಲ ನಡುವಣ ವಹಿತ್ಯದಂತಳ್ಳಾಡೆ, ಕುರುವೃದ್ಧನುಂ ಬುದ್ದಿ ವೃದ್ದನುಮಪ್ಪ ಗಾಂಗೇಯಂ ಧೃತರಾಷ್ಟಂಗಿಂತೆಂದಂ ”
ಭರತ ಯಯಾತಿ ಕುತ್ಯ ಪುರುಕುತ್ಸ ಪುರೂರವರಿಂದಮಿನ್ನಗು ಪರಿವಿಡಿಯಿಂದ ಬಂದ ಶಶಿವಂಶಮದೀಗಳಿವಂದಿರಿಂದ ನಿ ತರಿಸುವುದಕ್ಕು ಮಂದೆ ಬಗೆದಿರ್ದಡೆ, ಕೀಲೋಳೆ ಕಿಚ್ಚು ಪುಟ್ಟಿ ಭೂ ರ್ಗರೆದುರಿವಂತೆ ನಿನ್ನ ಮಗನಿಂದುರಿದದನಾರೋ ಬಾರಿಪರ್?
(೭-೧೬) ದೈತವನದಲ್ಲಿ ಪಾಂಡವರಿದ್ದಾಗ
* ದುರ್ಯೋಧನಂ ಸಮಸ್ತ ಸಾಧನಸಹಿತನಾಗಿ ಕಾಡೊಳ್ ಬೇಡರಂತೆ ತೊಲ್ಯ ದಾಯಿಗರ ಕಂದಿಕುಂದಿದ ಗಂಗಳಂ ನೋಡುವುದುಂ, ಎನ್ನ ನವಲಿಂ ನೋಡಿಸುವುದು, ಈ ಎರಡೆ ಸಂಸಾರ
ಕನ್ನಡ ಸಾಹಿತ್ಯದ ಚರಿತ್ರೆ
೪೭೧
ಫಲಮೆಂದು ನಾಗಪುರದಿಂ ಪೋಯಮಟ್ಟು...ಪಾಂಡವರ್ಗೆ ಸಮೀಪಮಾಗೆ ಬೀಡಂಬಿಟ್ಟು ಪಾಡಿಸುತ್ತು೦ ಪೊಗfಸುತ್ತುಮಿರ್ದ”, (ಘೋಷಯಾತ್ರೆ ಇಲ್ಲ). ಆಗ ಆದದ್ದು ತಿಳಿದೇ ಇದೆ! ಭಾನುಮತಿ ಧರ್ಮರಾಜನಲ್ಲಿಗೆ ಬಂದು
ನೋಂತರ ಪಗೆವರನೆ ದಂತಾಯ್ಕೆಂದಿರದೆ, ಪುರುಷಕಾರದ ಪೆಂಪು ಚಿಂತಿಸಿ, ತರಿಸಿ ಮಹೀಶನ ನೆಂತಪ್ಪೋಡಮೆನಗೆ ಪುರುಷಭಿಕ್ಷವನಿಕ್ಕಿಂ!
(೭-೩೪) ಎಂದು ಯಾಚಿಸಿ ಕೃತಾರ್ಥಳಾದದ್ದು.
ಕೃಷ್ಣದೌತ್ಯದಲ್ಲಿ ದುರೊಧನನ ಪಾತ್ರನಿರೂಪಣವನ್ನು ಗಮನಿಸಿ:
ಲೋಕಗುರು ಶಂಖಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ ವ್ಯಾಕುಳದೆ ಬಂದನೆಂದೊಡೆ ಲೋಕದೊಳಿನ್ನೆನ್ನ ದೊರೆಗೆ ಪಿರಿಯರುಮೊಳರೇ !
(೯-೩೦) ಎಂದು ಎದ್ದು, ಅಪ್ಪಿಕೊಂಡು, ಕುಳ್ಳಿರಿಸಿ, ಅರ್ತ್ಯವನಿತ್ತು, ಬಳಿಕ ತಾನು ಕುಳಿತು
ಸಂಸಾರದೊಳಿನ್ನೆನ್ನಿ
ಲೇಂ ಸಯ್ಯಂ ಪಡೆದರೊಳರೆ, ನೀಂ ಬರೆ, ಪೆಜತೇಂ ಕಂಸಾರೀ ಯುಷ್ಯತ್ವದ
ಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ
(೩೨) ಬಂದ ಬರವಾವುದಿದು?...ಬೆಸನಾವುದು?... ಎಂದು ಕೇಳುತ್ತಾನೆ. ಕೃಷ್ಣನು
ಅಯನಯಪರಾಕ್ರಮೋಪಾ ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ
ಯಜಯಮೆ ಕೂಡೆ ಲೋಕ ತ್ರಯದಿಂ ಪೊಗಿಸಿದುದಿಂತು ಪಿರಿಯರುಮೊಳರೇ? ಉನ್ನತನೆ ಆಗಿಯುಂ ನುಡಿ ನನ್ನಿಯನಳವನವು ವಿನಯಮನಾದಂ ಮನ್ನಣೆ ಗುರುಜನಮಂ ನೇತಿ ಮನ್ನಿಸಿದುದು ಪಿರಿಯ ಸಿರಿಯೊಳೇಂ ಸುಜನತೆಯೋ!
(೩೫,೩೬) ಇದು ಪೀಠಿಕೆ, ಬಳಿಕ ಅಹಿತಭಾಷಣ, ಪರಿಣಾಮ
* ಸುಯೋಧನಂ ಕ್ರೋಧಾನಲೋದ್ದೀಪಿತಹೃದಯನಾಗಿ ಶೌರ್ಯಮದಾಡಂಬರದೊಳಂಬರಂ ಬರಂ ಸಿಡಿಲು ತೊಲಗದೆ ಗೋವುಗಾದ ಕಿಷ್ಯಂದಿನ ಗೋವಿಕೆ ನಿನ್ನ ಚಿತ್ತದೊಳ್ ನೆಲಸಿದುದಕ್ಕುಂ...
ಪಜ್ಪಟ್ಟ ಪಗೆವರಂ ನಟಿ ಪಜ್ಪಡಲಣಮೀಯದವರನವರ್ಗಳ ಬಾಯೊಳ್ ನಿಟ್ಸಲ್ ಬಗೆವಯಮ್! ಕರಮೆನ ಗುಜದಿರ್ಕುಮೆ ನಿನ್ನ ಪೇಟ್ಟಿ ಧರ್ಮಶ್ರವಣಂ!
(೪೪,೨)
೪೭೨
ಶ್ರೀ ಸಾಹಿತ್ಯ ...ನಾಮೆಲ್ಲಮೊಂದೆಗರುಡಿಯೊಳೋದಿದ ಮಾನಸರೆವೆಮ್ಮಂ ನಿಮ್ಮಡಿ ಕೆಮ್ಮನೆ ಬಬಲಿಸಲ್ವೇಡ ಬಂದ ಬಟ್ಟೆಯಿಂ ಬಿಜಯಂಗೆಯ್ಯಂ...”
(೪೮ ವ.) ಶಾಂತಿಯನ್ನು ತಳ್ಳಿ ಖಡ್ಗವನ್ನು ಹಿರಿದವರು ಖಡ್ಗದಿಂದ ತಾನೇ ಮಡಿಯಬೇಕು. ಭೀಷ್ಮರು ಹೋದರು, ದ್ರೋಣಾಚಾರರು ಹೋದರು-ಪ್ರಾಣಮಿತ್ರ ಕರ್ಣನೂ ಹೋದ! ದುರ್ಯೋಧನನಿಗೆ ಹುಚ್ಚು ! ಅಶ್ವತ್ಥಾಮನ ಮೇಲೆ ಕ್ರೋಧ-ತನ್ನೊಳಗೇ ಪಶ್ಚಾತ್ತಾಪ. ಹಾಗೇ ಆಗಬೇಕು? ಎನ್ನುವವರು ಕೆಲವರು: ಅಯ್ಯೋ ಪಾಪ! ಎನ್ನುವವರು ಕೆಲವರು-ಲೋಕೋ ಭಿನ್ನರುಚಿಃ !
ನೀನುಮಗಲ್ಲೆಯಿನ್ನನಗೆ ಪೇಟ್ ಪೆರಾರನಗಾಸೆ, ನಿನ್ನನಿ ನಾನುಮಗನೇ ಕೆಳೆಯ, ಬೆನ್ನನೆ ಬಂದಪನಾಂತರಂ ಯಮ ಸ್ಥಾನಮನೆಯ್ಲಿ ಸುತ್ತಿದುವೆ ದಂದುಗಂ, ಎಂತರ್ದೆಮುಟ್ಟಿ ಕೂರ್ತು ಪೇಟ್ ಮಾನಸವಾಲನಂಗವಿಷಯಾಧಿಪ ನೀಂ ಪೊಂಗಾಗೆ ಬಾನೇ! ಒಡಲೆರಡೊಂದ ಜೀವಮಿವರ್ಗೆಂಬುದನೆಂಬುದು ಲೋಕಂ, ಈಗಳಾ ನುಡಿ ಪುಸಿಯಾಯ್ತು!
(೧೩-೩, ೪) ಆನುಂ ದುಶ್ಯಾಸನನುಂ ಕಾನೀನನುಮೊಡನೆ ಪೋಗಿ ಬೀಳೊಂಡು ರಣ ಸ್ಥಾನಕ್ಕೆ ಪೋದೆವಿನ್ ಮಗು
ಜೇನೆಂದಾನ್ ನಾದಿವರ15 ಮೊಗಮಂ ನೋಂ ! ಅಶ್ವತ್ಥಾಮನು ಹೀಯಾಳಿಸುವನು :
ಕುಳಬಳ ಶೌರಧೈಯ್ಯಯುತರೆಲ್ಲರುಮಂ ಪೆಜಗಿಕ್ಕಿ ಕರ್ಣನಂ ಪಳಯಿಸುತಿರ್ಪೆಯೇನೂ ಗಳ! ನಿನ್ನಯ ತಮ್ಮನ ನೆತ್ತರು ಭಯಂ ಗೋಳೆ ಪವಮಾನಸೂನು ತವ ಪೀರ್ದೆಡೆಯೊಳ್ ಕಲಿಕರ್ಣನೇಕೆ ಪೇಟ್ ಮಿಳಮಿಳನೋಡುತಿರ್ದನವನುರ್ಕನ್? ಇಳಾಧಿಪರುಂಟೆ ನಿನ್ನವೋಲ್?
ಅಂಬಿಗನೊಳಾದುದಿದು ಋಣ ಸಂಬಂಧಂ ನಿನಗಮೋಘಮಿದನುಳಿದವರಾ ರ್ಗ೦ ಬಿಸುಡಿಸಿ ಬರ್ಕುಮೆ?
ನೀಂ ಬೆಸಸುವುದನ್ನ ನಾಂತರಂ ತವ ಕೊಲ್ವೆಂ ಎಂದಶ್ವತ್ಥಾಮಂ ಕರ್ಣನಂ ಪಣಿದು ನುಡಿದೊಡಾ ನುಡಿಗೆ ಮುನಿದು ಕೊಲ್ವನಿತುವರಂ ಬಗೆದು ದುರ್ಯೋಧನನಿಂತೆಂದಂ :
ನಿನ್ನಿಂದ ತ್ರಿಭುವನರಾ ಜ್ಯೋನ್ನತಿ ಬಂದೆನಗೆ ಸಾರ್ಗುಮಪ್ರೊಡಮೊಲ್ಲೆಂ! ನೀನ್ ನುಡಿದು ಬರ್ದುಕಿ, ಪೆಟ
ರನ್ನಿದಿರೊಳ್ ನುಡಿದು ಕರ್ಣನಂ ಬರ್ದುಕುವರೇ? (೧೩-೨೫ ೨೭) ಯುದ್ಧಭೂಮಿಯಲ್ಲಿ ತನ್ನ ಪಾಪಕರ್ಮದ ಕೊಯಿಲನ್ನೆಲ್ಲಾ ನೋಡಿ ಬಂದು, ಭೀಷ್ಮರ ಸಂಧಿಯ ಮಾತನ್ನು ವಿನಯದಿಂದ ತಳ್ಳಿ, ಹೇಳುತ್ತಾನೆ:
(೭)
15 ತಾಯಿತಂದೆಗಳ.
೪೭೩
ಕನ್ನಡ ಸಾಹಿತ್ಯದ ಚರಿತ್ರೆ
ಶರಶಯ್ಯಾಗ್ರದೊಳಿಂತು ನೀಮಿರೆ ಘಟಿದ್ದೂತನಂತಾಗೆ ವಾ ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ವಕೋ ದರನಿಂದಂತದ ಸೈರಿಸಿಯುಮಾಂ ಸಂಧಾನಮಂ ವೈರಿಭೂ ಪರೊಳಿನ್ ಸಂಧಿಸಿ ಪೇಟಿಮಾರ್ಗೆ ಮೆರೆವೆಂ ಸಂಪತ್ತುಮಂ ಶ್ರೀಯುಮಂ
ಬಿಡಿಮೆನ್ನ ನುಡಿಗೆ ಬೀಳೆ ನುಡಿಯದಿರಿಂ ಪೆಜತನಜ್ಜ, ಮುಂನುಡಿದೆರಡಂ ನುಡಿವೆನೆ? ಚಲಮು ಬಲ್ವಡಿ ವಿಡಿದೆಂ; ತನ್ನ ಪ್ಪದಕ್ಕೆ ಸುಗರಧರೆಯೊಳ್
(೧೩-೬೯, ೭೦)
ಆಗುವುದೇ ಆಯಿತು.
* ಗದಾಘಾತದಿಂದೂರುಯುಗ್ಯಂ ಮುದೆಂ ನುಚ್ಚುನೂಜಾಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟಂ " (೧೩-೯೦) ಪಂಪನ ಕಡೆಯ ಮೆಚ್ಚುನುಡಿ ಇದು:
ನುಡಿದುದನೆಯೇ ತುತ್ತತುದಿಯೆಯು ವಿನಂ ನುಡಿದಂ, ಚಲಂ ಚಲಂ ಬಿಡಿದುದನೆಯೇ ಮುಂ ಪಿಡಿದುದಂ ಪಿಡಿದು, ಸಲೆ ಪೂಣ್ಣ ಪೂಣ್ ನೇ ರ್ಪಡೆ ನಡೆವನ್ನೆಗಂ ನಡೆದನಳ್ಳದೆ ಬಳ್ಳದೆ ತನ್ನೊಡಲ್ ಪಡ ಊಡುವಿನಮಣ್ಣುಗುಂದನೆ ದಲೇನಭಿಮಾನಧನಂ ಸುಯೋಧನಂ!
ಅಂತು ಸತ್ಯಂ ನೆಲನಂ ಪತ್ತುವಿಡೆನೆಂಬಂತೆ ನೆಲನ ಪತ್ತಿ ಮೂರ್ಛಾಗತನಾಗಿರ್ದಂ. (೧೩೯೭ವ.) ಭಾರತದ ಸಾರಾಂಶವನ್ನು ಹೇಳುವಾಗಲೂ ಮೊದಲು ದುರ್ಯೋಧನ, ಆಮೇಲೆ ಕರ್ಣ. (ಕೃಷ್ಣನ ಹೆಸರೇ ಇಲ್ಲ!)
ಚಲದೊಳ್ ದುರ್ಯೊಧನ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನ, ' ಬಲದೊಳ್ ಮಿಶನ್, ಅತ್ಯುನ್ನತಿಯೊಳಮರಸಿಂಧೂದ್ಭವ, ಚಾಪವಿದ್ಯಾ
ಬಲದೊಳ್ ಕುಂಭೋದ್ಭವ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್, ಇವರ್ಗಳಿನೀ ಭಾರತಂ ಲೋಕಪೂಜ್ಯಂ! (೧೪-೬೪)
ಪೊನ್ನ-ಸು. ೯೪೫-೯೫೦ ಸಾಮಂತರಾಜನ ಆಸ್ಥಾನದಲ್ಲಿ ತನ್ನ ಧಾರ್ಮಿಕ ಲೌಕಿಕ ಗ್ರಂಥಗಳ ಬೆಳಕನ್ನು ಬೀರಿ ಪಂಪ ಮಹಾಕವಿ ಕರ್ನಾಟಕಸಾಹಿತ್ಯದಲ್ಲಿ ನವಚೈತನ್ಯವನ್ನು ಹೊಮ್ಮಿಸಿದಾಗ, ರಾಷ್ಟ್ರಕೂಟ ಚಕ್ರವರ್ತಿಯಾದ ಕೃಷ್ಣ-ಕನ್ನರನ (೯೩೯-೯೬೮) ಸಭೆಯಲ್ಲಿ “ ಸರಸ್ವತಿಯಂ ಸಾಧಿಸೆ ಸಂದ ಸಯ್ತು ಸವಣಂಗಕ್ಕುಂ ಪೆಜಿಂಗಕ್ಕುಮೇ? ” ಎಂದು ಹೊಗಳಿಸಿಕೊಳ್ಳುತ್ತಿದ್ದ ಪೊನ್ನ ಕವಿಯ ಕಾವ್ಯಸೃಷ್ಟಿಗೆ ಉತ್ತೇಜನ ಗೊಂಡನು. ಈತನು ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಪ್ರೌಢನಾಗಿದ್ದು ರಾಜನಿಂದ * ಉಭಯ ಕವಿಚಕ್ರವರ್ತಿ ” ಎಂಬ ಬಿರುದನ್ನು ಪಡೆದನು.
ಭುವನದ ಕನ್ನಡ ಸಕ್ಕದ ಕವಿಗಳ್ ಸಲೆ ಸಾಲೆ ಸೊಲೆ ಸವಣಂಗಿತ್ತ೦
ಸವಿವೇಕಮುಭಯಕವಿಚ ಕ್ರವರ್ತಿವೆಸರು ನಿಜಾಹಿತೋಷ್ಣಂ ಕೃಷ್ಣಂ
(ಶಾಂತಿ, ೧-೯)
೪೭೪
ಶ್ರೀ ಸಾಹಿತ್ಯ
ಕವಿತಾವಿಳಾಸಮಂ ಚ ಕ್ರವರ್ತಿ ತಾನಿರ್ದು ಮಚ್ಚೆ ಪೆಸರ್ಗೊಂಡೆರಡು ಕವಿತೆಯೊಳಮುಭಯಕವಿಚ ಕ್ರವರ್ತಿಯೆನೆ ನೆಗಟ್ಟಿನೀ ಕುರುಳ್ಳ ಸವಣಂ
(೧೨-೭೨) ಈ ಅಂಶವನ್ನು ದುರ್ಗಸಿಂಹನೂ ಜನ್ನನೂ ದೃಢಪಡಿಸಿದ್ದಾರೆ.
ಜೈನಶಾಸ್ತ್ರದಲ್ಲಿ ಉದ್ದಾಮಪಂಡಿತನಾಗಿ, ಯತಿವಯ್ಯನಂತೆ ಗೌರವ ಪಡೆದು, “ ಸವಣ ", * ಕುರುಳಳ ಸವಣ” ಎಂದು ಈತನು ಕರೆಸಿಕೊಳ್ಳುತ್ತಿದನು. ಜಿನಾಕ್ಷರಮಾಲೆ ಎಂಬ ೩೯ ಕಂದಪದ್ಯ ಗಳಲ್ಲಿ ಕ ಕಾರದಿಂದ ಳ ಕಾರದವರೆಗೆ ಅಂತಾದಿಯಾಗಿ ಜಿನಸ್ತೋತ್ರ ಮಾಡಿದ್ದಾನೆ.
ಳಾಂತಂಬರಂ ಬುಧರ್ ಪೊಗ ಟ್ವೆಂತಕ್ಕರಮಾಲೆಯ ಜಿನಸ್ತವದೊಳಗೊ ರಂತಿರೆ ಪೇಟ್ಲಿಂ ಹಿಮಸೇ
ತ್ವಂತುವರಂ ಪರೆವಿನಿಂ ಕುರುಳಳ ಸವಣಂ ಈತನ ಕೀರ್ತಿ ಶಾಂತಿಪುರಾಣ6 ದ ಮೇಲೆ ನಿಂತಿದೆ. ಇದರಲ್ಲಿ ತಾನು ಭುವನೈಕ ರಾಮಾಭ್ಯುದಯ ಎಂಬ ಹದಿನಾಲ್ಕು ಆಶ್ವಾಸಗಳುಳ್ಳ ಒಂದು ಲೌಕಿಕ ಗ್ರಂಥವನ್ನೂ, ಒಂದು ಗತಪ್ರತ್ಯಾಗತವನ್ನೂ (ಸಂಸ್ಕೃತ) ಬರೆದಂತೆ ಹೇಳಿದ್ದಾನೆ.
ಪ್ರಕಟಂ ಲೋಕೋತ್ತರ ಲೌ ಕಿಕ ಪರಿಣತಿ ಪೊನ್ನಿಗಂಗೆ ಶಾಂತೀಶ್ವರ ರಾ ಮಕಥಾ ಪ್ರಶಸ್ತಿಯಿಂದಾ ದ ಕೃತಿಗಳಿಂ [ಕೃತಿಯುಗಂಗಳಿ]ನ್ನ ವುಮೊಳವೇ ? ವಿದಿತ ಭುವನೈಕ ರಾಮಾ ಭ್ಯುದಯಕ್ಕಂ ಬೆಲೆಗಮಾವುದಂತರವಿಂತೀ ಪದಿನಾಲ್ಕುಂ ಭುವನಂಗಳ
ಪದಿನಾಲ್ಯಾಶ್ವಾಸ ರಚನೆಗಂ ಬೆಲೆಯಕ್ಕುಂ (ಶಾಂತಿ, ೧೨೬೫, ೬೬) ಈ ಭುವನೈಕ ರಾಮಾಭ್ಯುದಯದಿಂದ ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ಎರಡು ಪದ್ಯಗಳನ್ನು ಉದಾಹರಣೆಗಾಗಿ ಎತ್ತಿರುವಂತೆ ಕಾಣುತ್ತದೆ:
ಆನೆಯಮೇಲೆಯುಮಾಳಮೇಲೆಯುಂ ಕುದುರೆಯ ಮೇಲೆಯುಂ ಪರಿದುದೊಂದೆ ಗಜಂ ಭುವನೈಕರಾಮನಾ ಉದಯಾಸ್ತೋನ್ನತ ಶೈಲಸೇತುಹಿಮವತ್ಕುಲಪತ್ಯಂತ ಸಂ. ಪದೆಯಂ ವಾರ್ಧಿತರಂಗರಂಗನಿನದತ್ಕಾಂಚೀಕಲಾಪಾಂಚಿತಾ ಸ್ಪದೆಯಂ ಸಾಧಿಸಿ ಕಬ್ಬಿಗಂಗೆ ನೆಲನ ನಿರ್ವ್ಯಾಜದಿಂದ ನಿಮಿ ರ್ಚಿದ ಗೆಲ್ಲಂ ಭುವನೈಕರಾಮಮಹಿಪಂಗಕ್ಕುಂ ಪೆರ್ಗಕ್ಯುಮೆ
ಈ ಕಾವ್ಯ ಪಂಪನ ವಿಕ್ರಮಾರ್ಜುನ ವಿಜಯದಂತೆ ತನ್ನ ರಾಜನನ್ನು ರಾಮನೊಡನೆ ಅಭೇದವಾಗಿ ಹೋಲಿಸಿ ರಾಮಾಯಣ ಕಥೆಯನ್ನು ಹೇಳಿದಿರಬಹುದು.
ಶಾಂತಿಪುರಾಣದಲ್ಲಿ ಕವಿ ತನ್ನ ವಿಷಯವಾಗಿ ಕೆಲವು ಸಂಗತಿಗಳನ್ನು ತಿಳಿಸಿದ್ದಾನೆ. ತಾನು ಶಾಸ್ತ್ರಜ್ಞ ನೆಂಬ ಅಂಶವನ್ನು
೪೭೫
ಕನ್ನಡ ಸಾಹಿತ್ಯದ ಚರಿತ್ರೆ
ಸಕಳೇತರ ನೈಗವಸ ಕಕ ಭವಕಾರಣದೆ ಜೀವ [ಮುಖ್ಯ] ಪದಾರ್ಥ ಪ್ರಕರಮನವೆಡೆಗೆರಡನ
ಯಕಳಂಕಂ ನೋಡಿಮೀ ಕುರುಳ ಸವಣಂ ತತ್ವಮನಾದಿನಾಥ ಮತದಿಂ ಸಿರಿಯಂ ನೃಪರಿಂ ಮಹಾಪ್ರಸಿ ದೃತ್ವಮನಗ್ಗದಕ್ಕರಿಗರಿಂ ಕವಿತಾರಸಮಂ ಸದರ್ಥವಾ ದಿತ್ವಮನಿಂದ್ರನಂದಿಮುನಿಯಿಂ ಪಡೆದೊಂ ದೊರೆಯಾರ್ “ ಕವಿತ್ವವಾ ದಿತ್ವಫಲಂ ಹಿ ಶಾಸ್ತ್ರ "ಮೆನಿಪುನ್ನತಿಯಾ ಕವಿಚಕ್ರವರ್ತಿಯಾ
(ಶಾಂತಿ, ೧೨-೭೧೮) ಈ ಪದ್ಯಗಳಲ್ಲಿ ಹೇಳುತ್ತಾನೆ. ಇದರಿಂದ ಈತನ ಗುರು ಇಂದ್ರನಂದಿ ಎಂದು ತಿಳಿಯುತ್ತದೆ
ತನ್ನ ಕವಿತಾಶಕ್ತಿಯನ್ನು ಹೊಗಳಿಕೊಳ್ಳುವುದರಲ್ಲಿ ಈತನಿಗೆ ಸಂಕೋಚವಿಲ್ಲ. ಕಾಳಿದಾಸನಿಗೆ ನೂರ್ಮಡಿ ಎಂದಮೇಲೆ ಮತ್ತೇನು ಹೇಳುವುದಿದೆ? ಸಂಸ್ಕೃತದೊಡನ ಕನ್ನಡದ ಮೇಲಾಟವನ್ನು
ಈ ಕಾಲದ ಕವಿಗಳು ಕೈಕೊಂಡ ಧೀರತನವನ್ನು ಇದು ಸೂಚಿಸುತ್ತದೆ.
ದೊರೆಯಿಲ್ಲೆನೆ ಪೊರೆಯಿಲ್ಲೆನೆ ನೆರಮಿಲ್ಲೆನೆ ಸಮಜಿ ಸಕ್ಕದಂ ಕನ್ನಡಮೆಂ ಬೆರಡುಂ ಕವಿತೆಯನಮಲ್ವೆ ತರಂತಿರೊಡನಡಪಿದಂ ಕುರುಳ್ಳ ಸವಣಂ ಕನ್ನಡಗವಿತೆಯೊಳಸಗಂ ಗನ್ನೂರ್ಮಡಿರೇಖೆಗಳಂ ಸಕ್ಕದದೊಳ್ ಮುನ್ನುಳ್ಳ ಕಾಳಿದಾಸ ಗನ್ನೂರ್ಮಡಿ17 ರಚನೆಯೋಳ್ ಕುರುಳಳ ಸವಣಂ
(೧೧, ೧) ಇದಿರ್ಗೆ ಬರೆ ಪೊನ್ನಿಗಂ ಕಿಡಿ ಸದಿರಂ ಕವಿ ಗಮಕಿ ವಾದಿ ವಾಗ್ರಿಗಳ ಕವಿ ತ್ವದ ಗಮಕಿತ್ವದ ವಾದಿ ತ್ವದ ವಾಗ್ನಿತ್ವದ ಪೊಡರ್ಪಮಂ ದರ್ಪಮುಮಂ
(೧೨-೬೪) ನೇರಿದುವೆನಿಪೆರಡುಂ ಕವಿ ತಾರಸಮೀ ಸವಣನೋರ್ವನೊಳ್ ನೆಲಸಿದುವಿ ನಾರಾರ ಕವಿತ್ವಮುಮವಿ ಚಾರಿತರಮಣೀಯಮಲ್ಲಿ ಪುರುಳಸುವುದೇ?
ಎರಡೆಡೆಗೆ ವರ್ಪನುಂ ಮ ಚರಿಸುವನುಂ ನುಡಿಗೆ ಸಕ್ಕದಂ ಕನ್ನಡ ಬೆರಡುಂ ಕವಿತೆಯ ಬಲೆಗೆ ಬೆರಲೆತ್ತಿದನಿಳೆಯೊಳೀ ಕುರುಳಳ ಸವಣಂ
(೧೨೬೯, ೭೦)
17 ಪಾಠಾಂತರ: ನಾಲ್ವಡಿ.
೪೭೬
ಶ್ರೀ ಸಾಹಿತ್ಯ
(೭೭)
(೭೯)
ಆಯ್ತು ಕಷಾಯೋದಕದೊಳ್ ತೊಯ್ದ ಸಗಂಭೋಲ್ ನೃಪೇಂದ್ರಸಭೆಯೆಂಬ ಕೊಳ ಕುಯ್ದ (ಲಸದಲೆದು ಸಿಲೆಯೊಳ್] ಪೊಯ್ದಂ ಕವಿಚಕ್ರವರ್ತಿ ಕವಿಚೀವರಮಂ
(೭೩) ನೋಡಿರೆ ಪೇಟ್ಟಿ ಮೂಲುವರೆ ಭಾಷೆಗಳಂ ಪೇಜರರ್ಥಮಂ ಪೇಜರ್ ಮಾಡಿದ ದೇಸಿಯಂ ಪೆಜರ ಬಿನ್ನಣಮಂ ಪೆಂರೊಜೆಯಂ ಕಡಂ ಮಾಡುವ ಕಳ್ಳ ಕೊಳ್ಳ ಖಳರಿರ್ಕೆಮ ಕಬ್ಬಿಗಗಳ್ಳರೆಂದು ಕೂ ಸಾಡಿಸಬಾರದಕ್ಕರದ ರಾಜ್ಯದೊಳೀ ಕವಿಚಕ್ರವರ್ತಿಯಾ ಉಡುಗಿದುದೀಗಳೀಗಳಿನ ಕಬ್ಬದೊಳೊಟ್ಟಜೆ ಕೆಟ್ಟುದೀಗಡೀ ಗಡಿನ ಕವಿವಜಕ್ಕೆ ಪದಸಂಚಯಮಂಚಿರವಾದುದೀಗಡೀ ಗಡಿನ ಕಥಾನ್ವಯಕ್ಕೆ ರಸಮುಂ ಪೊಸಗಬ್ಬಮಪೂರೈಮಾವುವು ಲೈಡಮವು ಪೇಟ್ಟು ಸಾಧಿಸಿದ ಕಬ್ಬಮೆ ದಲ್ ಕವಿಚಕ್ರವರ್ತಿಯಾ
ಈ ಆತ್ಮಪ್ರಶಂಸೆಯ ಭಾವವನ್ನೂ, ಪಂಪನ ಹೆಸರನ್ನು ಎತ್ತದಿರುವ ಸಂಗತಿಯನ್ನೂ, ಕೆಲವು ಕವಿಗಳು (ನಯಸೇನ, ದುರ್ಗಸಿಂಹ, ಕೇಶಿರಾಜ) ಕವಿಸ್ತುತಿಯಲ್ಲಿ ಪಂಪನ ಹೆಸರಿನ ಹಿಂದೆ ಪೊನ್ನನ ಹೆಸರನ್ನು ಹೇಳಿರುವುದನ್ನೂ ಗಮನಿಸಿ ಕೆಲವರು ಪೊನ್ನನು ಪಂಪನಿಗಿಂತ ಮುಂಚೆ (೯೩೭ರ ಚಿತ್ರ ದುರ್ಗದ ೭೬ನೆಯ ಶಾಸನದಲ್ಲಿ ಕೃಷ್ಣನ ಶೌಲ್ಯವನ್ನು ಹೊಗಳಿರುವುದರಿಂದ ಕೃಷ್ಣರಾಜನು ಯುವರಾಜ ನಾಗಿರುವಾಗಲೇ ಭುವನೈಕರಾಮಾಭ್ಯುದಯವನ್ನು ಸುಮಾರು ೯೩೫ರಲ್ಲಿ ಬರೆದಿರಬೇಕೆಂದು ಊಹಿಸು ತಾರೆ. ಈ ಸಂಬಂಧದಲ್ಲಿ ರನ್ನನು ಸ್ಪಷ್ಟವಾಗಿ ಪಂಪನಾದ ಮೇಲೆ ಪೊನ್ನನ ಹೆಸರನ್ನು ಹೇಳುತ್ತಾ ನೆಂಬುದನ್ನೂ, ಪಂಪನಿಗೆ ಆದಿಕವಿ ಎಂದಿರುವ ಪ್ರಶಸ್ತಿಯನ್ನೂ ಗಮನಿಸಬೇಕು ಪಂಪನನ್ನು ಸ್ಪರ್ಧಿಸಿ ಪೊನ್ನನು ಸಾಮಂತರಾಜನ ಪ್ರತಿಯಾಗಿ ಚಕ್ರವರ್ತಿಯನ್ನೂ, ಜಿನೇಂದ್ರನೂ, ಮನ್ಮಥನೂ, ಚಕ್ರ, ವರ್ತಿಯೂ ಆಗಿ ಈ ದೃಷ್ಟಿಯಿಂದ ವೃಷಭನಾಥನಿಗೆ ಮಿಗಿಲಾದ ಶಾಂತಿನಾಥನನ್ನೂ, ಆಯ್ದುಕೊಂಡ ನೆಂದು ಊಹಿಸಬಹುದಾಗಿದೆ. ಪಂಪನ ಕೆಲವು ಪದ್ಯಗಳನ್ನು ಪೊನ್ನನು ಸ್ಮರಿಸಿಕೊಂಡಿರುವಂತೆಯೂ ತೋರುತ್ತದೆ. ಒಟ್ಟಿನಮೇಲೆ, ೯೫೦ ಅಲ್ಲದಿದ್ದರೂ ೯೪೫ರ ಸುಮಾರು ಕಾಲವನ್ನು ಪೊನ್ನನಿಗೆ ಹೇಳ ಬಹುದು.
ಶಾಂತಿಪುರಾಣ : ಹೆಸರು : ಪೊನ್ನನು ಈ ಗ್ರಂಥಕ್ಕೆ ಪುರಾಣಚೂಡಾಮಣಿ ಎಂಬ ಹೆಸರನ್ನು ಕೊಟ್ಟು, ಶಾಂತಿತೀರ್ಥೇಶ್ವರನ ಮೇಲೆಯನ್ನು ಸೂಚಿಸಿರುವನು.
ಶಾಂತಿಜಿನಜನ್ಮಜಲಧಿಗೆ ಶಾಂತಿಪುರಾಣಮೆ ಪರಾರ್ಥರತ್ನಮಿದಂ ಪೇ ಟ್ವೆಂತು ಕವಿಚಕ್ರವರ್ತಿಯೆ ನೋಂತಂ ಪೆಸರಿಂ ಪುರಾಣಚೂಡಾಮಣಿಯಂ ಜಿನಮದನರೊಳಗೆ ಪದಿನಾ ಆನೆಯಂ ತತ್ಸಕಳ ಚಕ್ರವರ್ತಿಗಳೊಳಗ ಯ್ದನೆಯನೆನೆ ಪುಣ್ಯಪುಂಜಾ ರ್ಜನಕ್ಕೆ ಶಾಂತೀಶನಂತು ನೋಂತರುಮೊಳರೇ ಆ ತೀರ್ಥಕರನ ಪೆಂಪುಪ ಮಾತೀತಮದರ್ಕೆ ಬಯಸಿ ಕಣ್ಣುಂ ಕಾಲುಂ ಬಾತೊಡೆ ಬರ್ಕುಮೆ ಪುಣ್ಯಮ ನಾತನ ನೆರಪಿದುದನೆಯೇ ನೆರಪದ ಮೊದಲೋ ? (೧-೧೨v೧೪)
8----------------------
೪೭೭
ಕನ್ನಡ ಸಾಹಿತ್ಯದ ಚರಿತ್ರೆ
ಜಿನಚಂದ್ರನ ಹೆಸರಿನಲ್ಲಿ ಬರೆದದ್ದು: ಈ ಗ್ರಂಥವನ್ನು ಬರೆದ ಸಂದರ್ಭವನ್ನು ಹೀಗೆ ಹೇಳಿರು ವನು. ವೆಂಗಿವಿಷಯದ ಕಮ್ಮೆನಾಡಿನ ಪುಂಗನೂರಿನಲ್ಲಿ ನಾಗಮಯ್ಯನೆಂಬ ಜೈನಬ್ರಾಹ್ಮಣನ ಮಕ್ಕಳು ಮಲ್ಲಪಯ್ಯ, ಪುನ್ನಮಯ್ಯ ಎಂಬ ಶ್ರೀಮಂತರು ವಾಣಿಯವಾಡಿಯಲ್ಲಿದ್ದ (?೩೩) ತಮ್ಮ ಗುರುವಾದ ಜಿನಚಂದ್ರನ “ ಪರೋಕ್ಷವಿನಯ "ಕ್ಕಾಗಿ (೧೯೫೦) ಈ ಗ್ರಂಥವನ್ನು ಬರಸಿದರು. ಪುಜ್ಯಪಾದ, ಅಕಳಂಕ, ಸಮಂತಭದ್ರ ಇವರಿಗೆ ಸಮಾನನಾದ ಜಿನಚಂದ್ರನೇ ಈ ಕೃತಿಗೆ ಪತಿ (೧-೨೫೫೨).
(೫೫)
ಆ ಜಿನಚಂದ್ರನನಯನಯ ಭಾಜನನಂ ಸಲೆ ಪುರಾಣಚೂಡಾಮಣಿಗೀ ಭಾಜಿತ ಶಾಂತೀಶ್ವರಕಥೆ
ಗೀ ಜಗದೊಳ್ ಪತಿಯೆನ ಪೇಳ್ವೆಂ ಕೃತಿಯಂ ಕವಿ ಕವಿಚಕ್ರವರ್ತಿ ಕೃತಿನಾಯಕನಾ ಜಿನಚಂದ್ರದೇವನು ತೃವನಿಧಿ ಮಲ್ಲಪಾರ್ಯನುಮುದಾತ್ತಯಶೋನಿಧಿ ಪುನ್ನಮಾರ್ಯನುಂ ಸವಿ ತವದಂತು ಪೇಚಿಸಿದರೆಂದೊಡೆ ಶಾಂತಿಪುರಾಣಮೇನ್ ಕರು ನವರಸಮೇನ್ ಸಮರ್ಥಯುತಮೇನ್ ಮೃದುಬಂಧನಮೇನ್ ಪ್ರಸನ್ನ
ಉಪಮಾತೀತಂ ಕೃತಿ ಶಾಂ ತಿಪುರಾಣಂ ಸಲೆ ಪುರಾಣಚೂಡಾಮಣಿಯೆಂ ದುಪಶಮದಿಂ ಬರೆಯಿಸಿ ಮ ಲ್ಲಪಯ್ಯನುಂ ಪುನ್ನಮಯ್ಯನುಂ ಪರೆಯಿಸಿದರ್
(೧_೩೬ ೧೩೮) ತವದ ಪಿರಿದಿಯಿಂದಿದ ನವರಿರ್ವರುಮಯ ನಟಿಯ ಪೇಚಿಸಿ ಜಿನಚರಿ ದ್ರವರಮುನೀಂದ್ರರ ಪೆಸರೊಳ್ ಸವೆಯಿಸಿದ ನೆಗದ್ದಿಖಂಡಭೂಮಂಡಳದೊಳ್ ನಿಜಗುರುಪರೋಕ್ಷ ವಿನಯದಿ ನಜಿತರ್ ಜಿನಚಂದ್ರಕೃತಿಗೆ ಕಲಶವನಿಟ್ಟರ್
(೧೨-೬೩ ಮತ್ತು ೧೩-೫೪ ೬೩) ಕಥಾವಸ್ತು: ಶಾಂತಿಪುರಾಣದಲ್ಲಿ ಹನ್ನೆರಡು ಆಶ್ವಾಸಗಳಿವೆ. ಶಾಂತಿನಾಥನ ಹನ್ನೆರಡು ಜನ್ಮಗಳ ಕಥೆಯನ್ನೂ, ಸಂದರ್ಭೋಚಿತವಾಗಿ ಸಂಕ್ಷೇಪವಾಗಿ ಜೈನಧರ್ಮದ ಸಾರಾಂಶವನ್ನೂ ತಿಳಿಸಿದೆ. ಹನ್ನೆರಡು ಜನ್ಮಗಳು ಯಾವುವೆಂದರೆ ೧. ಶ್ರೀಷೇಣ, ೨. ಭೋಗಭೂಮಿಜ, ೩. ಶ್ರೀದೇವ, ೪. ಅಮಿತತೇಜ, ೫. ಮಣಿಚೂಳ, ೬, ಅಪರಾಜಿತ, ೭. ಅಚ್ಯುತೇಂದ್ರ, ೮. ವಜ್ರಾಯುಧ, ೯, ಅಹ ಮಿಂದ್ರ, ೧೦. ಮೇಘರಥ, ೧೧. ಮಹೇಂದ್ರ, ೧೨. ಶಾಂತಿನಾಥ.
ಜಿನಚಂದ್ರಂ ಮುನಿಚಂದ್ರನೆ ಶಾಂ ತಿನಾಥನೀ ಶಾಂತಿನಾಥನಾ ಜಿನಚಂದ್ರಂ ಜಿನಚಂದ್ರಮುನೀಂದ್ರನ ಶಾಂ ತಿನಾಥನಾದೊನ್ ಭವಾವಳೀ ವಿರಮಣದೊಳ್
(೧೨-೬೦) ಕಥೆ ೬ನೆಯ ಜನ್ಮದಲ್ಲಿ ಆರಂಭವಾಗಿ ಹಿಂದಿನ ಜನ್ಮಗಳನ್ನು ಪ್ರಕರಣಾಂತರವಾಗಿ ೫-೮ ಆಶ್ವಾಸಗಳಲ್ಲಿ ತಿಳಿಸುತ್ತದೆ. ಅಪರಾಜಿತ ಅನಂತವೀರರು ಬಲದೇವ ವಾಸುದೇವರಾಗಿರುತ್ತಾರೆ. ದಮಿತಾರಿ ಚಕ ವರ್ತಿ ನಾರದನ ಮಾತನ್ನು ಕೇಳಿ ಇವರ ಬಳಿಯಿದ್ದ ಬರ್ಬರ ಕಿರಾತೆಯರೆಂಬ ಗಾಯಕಿಯರನ್ನು ಕೇಳುತ್ತಾನೆ. ಅಧಿರಾಜ ಯುವರಾಜರು ಮಂತ್ರಾಲೋಚನೆ ಮಾಡಿ, ಗಾಣತಿಯರ ವೇಷದಿಂದ ಹೋಗಿ, ದಮಿತಾರಿಯ ಮಗಳಾದ ಕನಕಶ್ರೀಯನ್ನು ಕರೆದುಕೊಂಡು ಬರುತ್ತಾ ರ: ದಮಿತಾರಿ
೪೭೮
ಶ್ರೀ ಸಾಹಿತ್ಯ ಯುದ್ಧಕ್ಕೆ ಬಂದು ಸಾಯುತ್ತಾನೆ. ದಾರಿಯಲ್ಲಿ ವಿಮಾನ ನಿಲ್ಲುತ್ತದೆ. ಕೇವಲಿಗಳ ದರ್ಶನದಿಂದ ಕನಕಶ್ರೀ ಹಿಂದಿನ ಜನ್ಮದ ಕಥೆಯನ್ನು ತಿಳಿದು ಮದುವೆಯನ್ನೊಲ್ಲದೆ ವೈರಾಗ್ಯವನ್ನು ಕೈಕೊಳ್ಳುತ್ತಾಳೆ.
ಒಂದು ದಿವಸಂ ಪುರಂದ್ರಿ ವೃಂದದ ಕೌತುಕದಿನದು ಪಾಣಿಗ್ರಹಣಾ ನಂದಮನಬಿಲ್ಲು ಚಿತ್ತದೊ ಳೆಂದ ಪಿತೃಮರಣ ಕುಲವಿನಾಶವ್ಯಥೆಯಿಂ ಆ ದೊರೆಯ ತಂದೆ ಸಾಯೆಯು ಮೀದೊರೆಯ ಕುಲಾಪವಾದವಾಗಿಯುಮೆನಗಿ ನೈದೊರೆ ವಿವಾಹಮಯಶದೊ ೪ಾದೀ ಕಣಿ ಕರ್ಚೆ ಪೋಗದೀ ಕಯ್ದಿರೊಲ್ ತೊಳೆವೊಡದಂ ಜಿನಪತಿಮತ ಸಳಿಳಂ ತೊಳೆಗುಂ ವಿಶೋಧಿ ತೊಳೆಗುಂ ನಿಯಮಂ ತೊಳೆಗುಂ ದಯೆ ತೊಳೆಗುಮಂ ತೊಳೆಗುಮಯಂ ತೊಳೆಗುಮುಚಿತಚರಿತಂ ತೊಳೆಗುಂ
(೪-೭೭೭೯) ಅಪರಾಜಿತನ ಮಗಳಾದ ಸುಮತಿಯ ಸ್ವಯಂವರದಲ್ಲಿ ಹಿಂದಿನ ಜನ್ಮದ ಪಂಥದಂತೆ ಒಬ್ಬ ಖೇಚರಿ ಬಂದು ಎಚ್ಚರಿಸುತ್ತಾಳೆ. ಸುಮತಿ ದೀಕ್ಷೆ ವಹಿಸುತ್ತಾಳೆ.
ಅಕ್ಕ...ಪಿರಿಯೆನಾನ್ ನೀನ್ ಕಿಯಮ್...ಮನುಷ್ಯಲೋಕದೊಳ್ ನಮ್ಮೊಳಾರಾದೊಡ ಮೊಂದೊರ್ವರು ಪ್ರತಿಬೋಧಿಸುವಂತು ಪೂಣ್ಣು ಪೋದೆವು...ಅದು ನೀನೀಗಲ್
ಮಣಿದುದೀ ಸಂಸಾರಮ ನಯದರಂತೇನುಮಲ್ಲದಲ್ಪಸುಖಕ್ಕುಂ
ತೆಜಗಿ ಮರುಳಕ್ಕೆ ಕನಸಿನ
ತೊಳೆಯೊಳ್ ನೀರ್‌ಗುಡಿದು ತಣಿವನಜಸಿದರೊಳರೇ? ...ಈ ದೊರೆಯ ಪರಿಗ್ರಹಭಾರದಿಂ ಮುಲುಗಲ್ಲದೆಂದಿಂಗಂ ನೆಗೆಯಕ್ಕುಮೆ? ಮೇಗಪ್ಪುದಂ ನೀನಟಿವೆಯೆಂದು ನಾಣ್ಣುದುಂ,
ಅವನೆಡೆವಳಿದು ಕೆಟ್ಟುದ
ನಕ್ಸಲ್ ಪೋಪಂತೆ... ಸುಮತಿ ಮುಚ್ಚೆವೋಗಿ ಎಟ್ಟಿತ್ತು ಅನುಭವಿಸುತ್ತುಮಿರ್ದು ಸುಖದಿಂ ಸುಖಮಂ ಸುರಲೋಕದೊಳ್ ಪುರಾ ತನ ಭವಮೋಹದಿಂದನುಜೆಯೆಂದೆನಗಿಷ್ಟಮತಿಪ್ರಕಾಶಮಂ ಜನಿಯಿಪ ನಿನ್ನದೊಂದು ದಯೆಗೇನ್ ತೊದಳಕ್ಕ ಮಹಾಪ್ರಸಾದಮಾ ಜಿನಮತಮಂ ಭವನ್ಮತಮುಮಂ ಮಜದಿಂದವಿವೇಕಿಯಪ್ಪನೇ!
ಇದು ಭವದಮಳಿನ ಸೌಹಾ ರ್ದದುದಯಮಲ್ಲದೆ ಮದೀಯ ಮಹಿಮೋನ್ನತಿಯ ಅದನದ ಮಾರ್ಗದ ಪ್ಪಿದ ಕುರುಡರನಜದ ಬಟ್ಟೆಗುಯ್ಯರ್ ಪಿರಿಯರ್
೪೭೯ ಕನ್ನಡ ಸಾಹಿತ್ಯದ ಚರಿತ್ರೆ
ಆದಜಿಂದಮೆಮಗೆ ನಿಮ್ಮನುಡಿ ಮರ್ದಿನ ಕೃಪೆಯಂತುಟೆ...ನಿಮ್ಮಪೇಟ್ಟುದನುಪೇಕ್ಷಿಸಿದೊಡೆನ್ನ ದೋಷಂ, ಎಂದು ಸುಮತಿವೆಸರಂ ನನ್ನಿ ಮಾಡಿ...ಪರಮದೀಕ್ಷೆಯಂ ಕೈಕೊಂಡಳ್,
* (೪-೯೩೧೧೦೫ ವ.) ಕಾಲಾಂತರದಲ್ಲಿ ಅನಂತವೀರ ಅಪರಾಜಿತರು ಜನ್ಮವನ್ನು ನೀಗುತ್ತಾರೆ (ಆಶ್ವಾಸ ೧-೪). ಜೈನಮತದಲ್ಲಿ ಪೂರ್ವಜನ್ಮ ಪ್ರೇಮದಿಂದ ಅನುಸರಿಸಿ ಬಂದು ವಿರಕ್ತರು ಸಂಸಾರಮೊಹಬದ್ಧರನ್ನು ಎಚ್ಚರಿಸುವ ಕಥಾಸಂದರ್ಭಗಳು ಬಹು ಹೃದಯಂಗಮವಾಗಿರುತ್ತವೆ. ದಯೆ ಅನಂತವಾದುದೆಂದು ಜೈನಧರ್ಮ ಒತ್ತಿ ಹೇಳುತ್ತದೆ.
ಶಾಂತಿನಾಥನ ಜನ್ಮ ೯-೧೨ ಆಶ್ವಾಸಗಳಲ್ಲಿ ಬರುತ್ತದೆ. ಕುರುಜಾಂಗಲದ ಹಸ್ತಿನಪುರದ ವಿಶ್ವಸೇನ ಮಹಾರಾಜನಿಗೂ ಐರಾವತೀ ಮಹಾದೇವಿಗೂ ಮಗನಾಗಿ ಹುಟ್ಟುವನು. “ ಶಲಾಕಾ ಪುರುಷನುಂ, ಚಕ್ರವರ್ತಿಯುಂ, ಮನ್ಮಥನುಂ, ತೀರ್ಥಕರ ಪರಮದೇವನುಂ” ಜೈನಪುರಾಣಕ್ರಮದಲ್ಲಿ ತಾಯ ಗರ್ಭಶುದ್ದಿಯೂ ಇಂದ್ರ, ಶಚಿಯರಿಂದ ಜನ್ಮಾಭಿಷೇಕವೂ, ಇಂದ್ರನ ಆನಂದನೃತ್ಯವೂ, ನಡೆಯುವುವು.
ಅಂತಾ ಕುರುವಂಶಶಿಖಾಮಣಿ, ಜಿನಚಂದ್ರದೇವ, ವಯೋಬಾಲಕನುಂ ಜ್ಞಾನವೃದ್ದನುಮಪ್ಪ ಜಗದ್ದುರು...ಬಾಲಭಾವಮಂ ಪೆಂಗಿಕ್ಕಿ ಯೌವನಪ್ರಾದುರ್ಭಾವಕ್ಕಿದಿರಾಗಿ
ಎಯದ ಬಗೆಯನೆ ಮೆಯ್ದ ಸ್ಪಂತೆನಿತು ಮೆಯ್ದರೆ ವಧುವರ್ ಬಂಧರೂಪಿಂಗಾ ಯೋಯ್ತನ್ನನಪ್ಪ ಪರಮನು
ಅಂತುಮಾರೂಪನೆ ಚಿಂತಿಸಿ ಚಿಂತಿಸಿ ಕಾಂತೆಯ ಪತಿಗೆ ರತಿ ಸೋಲ್ಲ ಕೆಂದಳಿ ರಂತಲರ್‌ಗಣೆಗೆ ಡೊಣೆಯಾದರ್
(೧೦-೮೧೧ ವ. ೯೨) ಬಳಿಕ ರಾಜ್ಯಾಭಿಷೇಕವಾಗುವುದು: ಚಕ್ರ ಹುಟ್ಟುವುದು: ಅದನ್ನು ಪೂಜಿಸಬೇಕೆಂದ ಕುಲವೃದ್ಧರಿಗೆ
...ದರಹಸಿತಾಸ್ಯಂ ಶಾಂ ತಿನಾಥನೆಂತೆಂತೊ ಚಕ್ರಮಂ ಪೂಜಿಸೆ ಮು ನ್ನಿನ ಚಕ್ರವರ್ತಿಗಳ ತೆಅ ದಿನಾಮುಮಗುವುದು ನಿಮಗೆ ಹೃದಯಂಗಮವೇ ? ಬಗೆಗೆಳಿಗೆ ಸಿದ್ದ ಪರಮೇ ಷ್ಠಿಗಳಲ್ಲದೆ ರಮ್ಯರಲ್ಲರುಲಿದ ಸಮಸ್ಯೆ ರ್ವಿಗಳೆಮ್ಮಂಫಿಯುಗಕ್ಕೆ ಗುಗುಂ ಸ್ಪುರದ್ವೀಪವರ್ತಿ ನಿಧಿಗೆಅಗುವವೋಲ್
ಅದಲ್ಲದೆಯುಮೀ ಶರೀರದೊಳ್ ಘಾತ್ಯಘಾತಿ ದುರಿತವಿನಾಶಮುಂ, ಅನಂತ ಚತುಷ್ಟಯಮುಂ ಕೇವಲಲಬ್ಲಿ ಲಾಭಮುಮಪ್ಪುದನದುಂ ಈ ಚಕ್ರಲೋಹಖಂಡಕ್ಕಂ ಕುಡುಗ ಮುಗಿಯೆಂಬೊಡ ದುವುಮಂ ನೀಮವಿರೆಮಗೆ ಮಹತ್ತರ ವಚನಮಮೋಘಂ ಮಾನ್ಯವೆ?
ಎನೆಯೆನೆ ಚಕ್ರರತ್ನಮಮರಾಳಿವೃತಂ ಬಲಗೊಂಡು ಶಾಂತಿನಾ ಥನ ಪದಪಂಕಜಕ್ಕೇಜಗೆ ಮುನ್ನಿದನರ್ಚಿಸು ಪೂಜಿಸೆಂದು ಪೇ ಆನುಮಳಿಗೆಂದು ಪೇಟ್ಟಿನುಮಿದಾದಿಯ ಶಕ್ತಿಗಳಿಂದವೆಂದು ಪೇ ಆನುಮಿದು ಚೋದ್ಯಮೆಂದು ಬೆಳಿಗಾಗಿ ನಿಜೋಕ್ತಿಗೆ ತಾಮೆ ನಾಣ್ಣೀದರ್
(೧-೧೧೫ ೧೨೨)
೪೮೦
ಶ್ರೀ ಸಾಹಿತ್ಯ ಇಲ್ಲಿ ಪಂಪನ ವರ್ಣನೆಗೆ ವಿರುದ್ಧವಾಗಿರುವುದನ್ನು ಕಾಣಬಹುದು.
ಬಳಿಕ ದಿಗ್ವಿಜಯದಿಂದ ಭರತಷಟ್ಕಂಡವನ್ನು ಕಡಿತ” ಕ್ಕೆ ತರುತ್ತಾನೆ. ಈ ದಿಗ್ವಿಜಯಪೂಜೆ ಸಂಪ್ರದಾಯಾನುಸಾರವಾಗಿ ಪಂಪನಲ್ಲಿದ್ದಂತೆ ಇದ್ದರೂ,
ಇತ್ತುತ್ತರ ಭರತಮನಾ ಳುತ್ತಿರ್ದರನೇಕ ಚಕ್ರವರ್ತಿಗಳ ಪೆಸರ್ ಸುತ್ತಿ ಬರೆದರೆ ನಿಬಂಧದ
ಹೊತ್ತಗೆಯೆಂಬಂತಿರಿರ್ದ ವೃಷಭಾಚಲಮಂ ಕಂಡು...ಲಿಪಿಪ್ರಪಂಚ ವಚನಾಳಿಯನಳಿಯೆ ಕೇಳು...ಆತ್ಮಗುಣಸ್ತುತಿ ಸಿಗ್ಗನೀಯ... 'ಕಿಕ್ಕಿಗಿಳಿದಿರ್ದ ಪುರಾತನ ಚಕ್ರವರ್ತಿಗಳ ನಾಮಾಂಕಮಾಳಿಕೆಯಂ ಕಂಡದು ಮಂತ್ರಿವರ್ಗ
ಮನಪಲೆಂದು ಬಂದನಪ್ಪುದಂದಂ
ಮುಂ ಬರೆದಭಿಧಾನಮನ ದಿಂ ಬರೆವಹಮಿಕೆಯ ಪೆಸರೋಳೇವಂದಪುದೇ ನುಂ ಬೇಡ ಬನ್ನಿ ಮಂದಧಿ
ಪಂ ಬೀಡಂ ಬಂದು ಪೊಕ್ಕು ಸುಖದಿಂದಿರ್ದಂ ಮಂತ್ರಿಮುಖ್ಯರುಂ...ಮುನ್ನಿರ್ದೊಂದು ಪ್ರಶಸ್ತಿಯಂ ಪರಾಮೃಷ್ಟಂಮಾಡಿ ಪ್ರಶಸ್ತಿಯಂ ಬರೆಯಿಸಿದರ್.
(೧೬೧೬೭ ವ.) ಎಂಬ ಭಾಗದಲ್ಲಿ ಪಂಪನ ಭರತಪ್ರಶಸ್ತಿಗೆ ಸ್ಪರ್ಧೆಯಲ್ಲಿ ವಿರುದ್ಧವಾಗಿ ಬರೆದುದಾಗಿ ಕಾಣುತ್ತದೆ.
ಶಾಂತೀಶ್ವರನು ಚಕ್ರವರ್ತಿ ಭೋಗದಲ್ಲಿ ಬೀಳದೆ,
ಕೈಕೊಡಾತ್ಮಸುಖಮನೆ ಕೈಕೊಳ್ವುದು ದೇಹಿ ನೆಗತಿ ಪರಹಿತನುಮನೀ ಹೈಕನೆರಡಲೊಳಲೊಂದಂ ಕೈಕೊಡೆ ಹಿತಮುಮಾಹಿತನೊಂದೆ ವಲಂ ಧರೆ ಶಾಶ್ವತವಲ್ಯಷ್ಟಮ ಧರೆ ಶಾಶ್ವತವವನಿಚಕ್ರವಿಕ್ರಮಚಕ್ರಂ ದೊರೆಯು ಧರ್ಮಚಕ್ರಂ ದೊರೆಯಕ್ಕುಂ ಭವ್ಯವಿನಯದಪ್ರತಿಬದ್ಧಂ ಈ ಪದಿನಾಲ್ಕುಂ ರತ್ನ ಕ ಲಾಪಂ ರತ್ನತ್ರಯಕ್ಕೆ ಬರುವೆ ಭೂಪಾ ಟೋಪಂ ಬುಮೆ ವ್ಯಜಿನ ವಿ ಲೋಪಿ ಜಿನೇಂದ್ರ ಪ್ರಶಾಂತಿಯೊರೆಗಂ ದೊರೆಗಂ? ಸ್ತ್ರೀರತ್ನದೆಡೆಗೆ ಮುಕ್ತಿ ಸ್ತ್ರೀರತ್ನಂ ಸಭೆಗೆ ದೇವಮಾನವಸಭೆ ಗಂ ಭೀರೋಕ್ತಿಗೆ ದಿವ್ಯಧ್ವನಿ
ಸಾರಮವಂ ಬಿಸುಟನಷ್ಟೊಡುಲುಮಾಲಿ? ಅದಂದಮಲ್ಪಮುಮನಿತ್ಯಮುಮಪ್ಪಾಜವಂಜವಾಂತರ್ವತಿ್ರಗಳ ಪಲರುಂ ಆಸನ್ನಭವ್ಯ ತಾಪೇತರವ್ಯವಸಾಯಪರರಾಗಿ
೪೮೧
ಕನ್ನಡ ಸಾಹಿತ್ಯದ ಚರಿತ್ರೆ
ಶಿವಸುಖಮನಯದೀ ಮಾ ನವಸುಖದ ನಿಮಿತ್ತದಿಂ ತಪಂಗೆಯ್ಯವರೊ ಪವ ಮಾಣಿಕಮಂ ತೌಡಿಂ
ಗವಯವದಿಂ ಮಾಣುಗುಡುವ ಮರುಳಂ ಪೋಲ್ಕುಂ ಇಂತೆಂದು ವಿಸ್ತರರೂಪದೊಳ್ ಸಂಸಾರ ತದ್ದೇತುಬಂಧ ತನ್ನಿಮಿತ್ತಮೋಕ್ಷ ತತ್ಕಾರಣ ಪ್ರಪಂಚಮಂ ದಿವ್ಯಚಿತ್ತದೊಳ್ ಪರಮಾರ್ಥಂಗೆಯು ಪರಿನಿಷ್ಟ್ರಮಣಕಲ್ಯಾಣಾಭಿಮುಖ ನಾಗಿರ್ದ ಚಕ್ರವರ್ತಿಯ ಬಗೆಯನಡ್ದು ಲೋಕಾಂತಿಕದೇವರ್ ಬಂದು ಪ್ರತಿಬೋಧಿಸಿದರ್
ಮಳರಹಿತನೊರ್ಮೆ ವಿಳಸ “ಳನೊರ್ಮೆ ಪೆಲಿಂ ಸದಾಚ್ಚನೆ ನೀನ್ ಬೇಗಂ ತಿಳಿವುದುಮಾ ಕದಡುವುದಂ ಕುಳುಂಪೆಯೊಳ್ ನೆಗಟ್ಟು ಮುದಧಿಯೊಳ್ ನೆಗಟ್ಟಿಪುದೇ? ನೀರಜದ ರಜದ ಪೊರೆಪಾ ನೀರೇಜದ ನೀರ ಪೊರೆಪು ಪೊರೆವೊರೆ ನೀನ್ ಸಂ
ಸಾರಕ್ಕೆ ನಿನಗಮೀ ಸಂ ಸಾರಂ ಪೊರೆವೊರೆ ಪರಾತ್ಮಹಿತನುತಚರಿತಾ
(-೮೭N೯೮)
ಆ ಬಳಿಕ ಪುರಾಣೋಕ್ತ ಕ್ರಮದಲ್ಲಿ ದೀಕ್ಷೆ, ತಪಸ್ಸು, ಕರ್ಮಕ್ಷಯ, ನಿರ್ವಾಣ.
ಕದಳೀಘಾತ ಜೀವ ಕ್ಕೆ ದುರಿತದಿಂದಕ್ಕುಮೆಂಬುದರ್ಹನ್ಮತಮಂ ತದು ಮಾಣ್ಣಿರೆ ಬೇರ್‌ವೆರಸಾ ದುದು ಜಿನನೀ ಘಾತಿಗಳೆ ಕದಳೀಘಾತಂ
(೧-೩೧೨)
• ಆತನ ಧರ್ಮೋಪದೇಶವನ್ನು ಸಂಕ್ಷೇಪವಾಗಿ ೧೨ನೆಯ ಆಶ್ವಾಸದಲ್ಲಿ ಕೊಟ್ಟಿದೆ.ಆಸ್ತವ
ಮನೋವಚನಕಾಯವೃತ್ತಿ ಶುಭಮಿ ಪುಣ್ಯಾಸ್ರವಂ
ಮನೋವಚನಕಾಯವೃತ್ಯಶುಭಮ ಪಾಪಾಸ್ತವ ಸಂವರ ನಿರ್ಜರೆ-ಕರ್ಮಬಂಧ-ಕರ್ಮನಿರ್ಮೂಲನ-ಮೋಕ್ಷ ; ಲೋಕವಿಭಾಗ-ಜೀವಗತಿ ನಾಲ್ಕು
-ನಾಕ, ನರಕ-ನಿಗೋದ-ಸಿದ್ಧಲೋಕ-ಅಷ್ಟಾವರಣೀಯಗಳು-ಇವು ಹೇಳಿವೆ, ಆಮೇಲೆ ಧರ್ಮವಿಹಾರ
ಬಾಲಂಗಬಲೆಗೆ ಬಲಗೊ ಪಾಲಕವರ್ಗಕ್ಕೆ ಸಗ್ಗ ದಪವರ್ಗದ ಮಾ ರ್ಗಾಲಂಬನವಾದುದು ತತ್
ತೈಲೋಕ್ಯಶರಣ್ಯಸೇವ್ಯ ದಿವ್ಯಧ್ವನಿಯಿಂ ಪುರುದೇವ ದಿವ್ಯಕೈಲಾಸದೊಳಘಮಥನಂ ಸಾವೆಯೋಳ್ ವೀರನಾಥಂ ಸ್ಥಿರಬೋಧ ಚಂಪೆಯೊಳ್ ಪೆಂಪೆಸೆದಿರೆ ವಸುಪೂಜ್ಯಾತ್ಮಜಂ ನೇಮಿನಾಥಂ ದೊರೆವೆತ್ತುಜ್ಜಂತದೊಳ್ ನಿರ್ಮಿದರುಳಿದ ಜಿನರ್ ಸಂದ ಸಮ್ಮೇದದೊಳ್ ಮು ಕರುಮಾ ದೇಶರ್ಕಳೆಂದಲ್ಲಿಗೆ ಮಿಗೆ ಬಿಜಯಂಗೆಯ್ದ ನಾ ಶಾಂತಿನಾಥಂ
(೨೮)
31
(೩೦)
೪೮೨
ಶ್ರೀ ಸಾಹಿತ್ಯ ಅಲ್ಲಿ ಮೂವತ್ತಿಬ್ಬರಿಂದ್ರರು ಸೇರಿ ಜಿನದೇಹವನ್ನು ಸಂಸ್ಕರಿಸಿ ತ್ರಿಪುಂಡ್ರವನ್ನು ನೊಸಲಲ್ಲಿಟ್ಟು ಆನಂದನೃತ್ಯವನ್ನಾಡಿದರು.
ಆ ಸಮಯದೊಳಂದರ್ಹ ಜ್ಞಾಸನಬದ್ದ ಪ್ರಸಿದ್ದ ಭವಸಂತತಿಯಂ ಭಾಸುರಕುಳಿಶದೆ ಬರೆಯಿಸಿ ವಾಸವನೆಲಗಿದನದರ್ಕೆ ಭಕ್ತಿಯ ಭರದಿಂ
(೪೦) ಅಯ್ತುಂ ಕಲ್ಯಾಣಂಗಳ ನೆಯ್ದಿಸಿ ಷೋಡಶ ಜಿನೇಂದ್ರನಂ ಮುಕ್ತಿಯನಿ ವೈಯುವುದುಮರಿದೆ ಹರಿಗಾ ರಝೇದನಾರ್ ನಂಬರಖಿಳಭುವನತ್ರಯದೊಳ್
(೪೨) ಆ ಜಿನೇಂದ್ರನ ಶರೀರಸಂಸ್ಕಾರಭೂಮಿಪ್ರದೇಶಕ್ಕೆ ಕಾಲತ್ರಯನಿಯಮಮಂ ತಪ್ಪದೆ
ಇಂದ್ರರ್ ಬಂದೆಲಗುವರಹ ಮಿಂದ್ರರ್ ತಮ್ಮಿರ್ದ ನೆಲೆಯೊಳಿರ್ದಆಗುವರ ಗೀಂದ್ರರ್ ಸೊಡರಿಂದಾಗುವ ರೇನ್ ದ್ರವ್ಯದ ಭಾವದರ್ಚನಾವಿಧಿ ಪಿರಿದೊ !
(೪೭)
ಚಾವುಂಡರಾಯ-೯೭೮ ಚಾವುಂಡರಾಯನು ಬಹಳ ಪ್ರಸಿದ್ಧ ಪುರುಷನು. ಈತನು ಗಂಗರಾಜನಾದ ರಾಚಮಲ್ಲನ (೯೭೭೯೮೪) ಮಂತ್ರಿಯಾಗಿ, ಅನೇಕ ಯುದಗಳಲ್ಲಿ ಜಯಶೀಲನಾಗಿ ಬಿರುದುಗಳನ್ನು ಸಂಪಾದಿಸಿರು ವುದಲ್ಲದೆ, ಶ್ರವಣಬೆಳೊಳದಲ್ಲಿರುವ ಗೊಮ್ಮಟೇಶ್ವರನ ವಿಗ್ರಹವನ್ನು ಪ್ರತಿಷೆ ಮಾಡಿಸಿ (೯೮೨), ಅಲ್ಲಿ ಒಂದು ಬಸದಿಯನ್ನು ಕಟ್ಟಿಸಿರುವನು. ಈತನನ್ನು ವಿಷ್ಣುವರ್ಧನನ ಮಂತ್ರಿಯಾದ ಗಂಗರಾಜನಿಗೆ (೧೧೨೦) ಹೋಲಿಸಿ, ಜೈನಭಕ್ತ, ದಾನಿ, ವೀರ, ಕವಿಜನಪೋಷಕ ಮುಂತಾಗಿ ಬೆಳೊಳ ಶಾಸನಗಳಲ್ಲಿ ಶ್ಲಾಘಿಸಿದೆ. ಈತನು ತಮ್ಮ ಆಶ್ರಯದಾತನೆಂದು ರನ್ನನೂ ನಾಗವಮ್ಮನೂ ಹೇಳಿದ್ದಾರೆ. ಈತನನ್ನು ರಾಯ, ಅಣ್ಣ ಎಂದು ಗೌರವಿಸಿ ಕರೆಯುತ್ತಿದ್ದರು; ಇವು ಈತನ ಲೌಕಿಕ ಧಾರ್ಮಿಕ ಶ್ರೇಷ್ಠತನವನ್ನು ತೋರಿಸುತ್ತವೆ. ಬ್ರಹ್ಮ ಕ್ಷತ್ರಿಯ ಕುಲದಲ್ಲಿ ಹುಟ್ಟಿ, ಅಜಿತಸೇನಾಚಾರ್ಯರ ಶಿಷ್ಯನಾಗಿ, ನೊಳಂಬ ಕುಲಾಂತಕ ಮಾರಸಿಂಹ (೯೬೧೯೭೪), ರಾಚಮಲ್ಲ ಸತ್ಯವಾಕ್ಯ (೯೭೪-೭೭), ರಕ್ಕಸಗಂಗ ರಾಚಮಲ್ಲರ (೯೭೭-೯೮೪) ಆಳಿಕೆಗಳಲ್ಲಿ ಸೇನಾಧಿಪತಿಯ ಮಂತ್ರಿಯೂ ಆಗಿ ರಾಜ್ಯಭಾರವನ್ನು ನಿರ್ವಹಿಸಿ, ಕವಿಗಳನ್ನು ಪ್ರೋತ್ಸಾಹಿಸಿ, ತಾನೇ ತನ್ನ ಮತಪ್ರಭಾವನೆಗಾಗಿ ತ್ರಿಷಷ್ಟಿ ಲಕ್ಷಣಮಹಾಪುರಾಣವನ್ನು (೯೭೮) ಬರೆದಿದ್ದಾನೆ. ಗೊಮ್ಮಟಸಾರವನ್ನು ಬರೆದ ನೇಮಿಚಂದ್ರ ಸಿದ್ದಾಂತಿಯೂ ಈತನ ಗುರು ವಾಗಿದ್ದನು. ಈತನು ಸಂಸ್ಕೃತ ಪ್ರಾಕೃತ ಕನ್ನಡ ಮೂರು ಭಾಷೆಗಳಲ್ಲಿಯೂ ಪಂಡಿತನಾಗಿದ್ದನು.
ನವಶತಸಂಖ್ಯೆಯಾಗೆ ಶಕಕಾಲಸಮಂ ನೆಗಳ್ಳೀಶ್ವರಾಬ್ದ ಮು ತೃವಕರವಾಗೆ...
ಕವಿಜನಶೇಖರಂ ಬರೆದು ಪುಸ್ತಕಕೇಯ್ಸಿದಂ ಪುರಾಣಮಂ -ಎಂಬ ಪದ್ಯದಿಂದ ಕ್ರಿ.ಶ. ೯೭೮ ಈ ಗ್ರಂಥದ ರಚನೆಯ ಕಾಲವೆಂದು ಸ್ಪಷ್ಟವಾಗುತ್ತದೆ. ಇದನ್ನು ಸಾಮಾನ್ಯವಾಗಿ ಚಾವುಂಡರಾಯ ಪುರಾಣವೆಂದು ಕರೆಯುತ್ತಾರೆ.
ಗ್ರಂಥದ ಮೊದಲಲ್ಲಿಯ ಕಡೆಯಲ್ಲಿಯೂ ಕೆಲವು ಪದ್ಯಗಳಿವೆ; ನಡುವೆಯೂ ಕೆಲವುಂಟು. ಆದರೆ ಇದು ಗದ್ಯಗ್ರಂಥ, ಹಳಗನ್ನಡದಲ್ಲಿ ನಮಗೆ ಸಿಕ್ಕಿರುವ ಗದ್ಯಗ್ರಂಥಗಳಲ್ಲಿ ಮೊದಲನೆಯದಿರ
೪೮೩
ಕನ್ನಡ ಸಾಹಿತ್ಯದ ಚರಿತ್ರೆ
ಬಹುದು. ಶಿವಕೋಟ್ಯಾಚಾದ್ಯರ ವಡ್ಡಾರಾಧನೆ ಇದಕ್ಕೆ ಪೂರ್ವದೋ, ಸಮಕಾಲೀನವೋ ಹೇಳಲು ಅದರ ಕಾಲ ನಿರ್ಧರವಾಗಿಲ್ಲ; ಭಾಷಾಪ್ರಯೋಗವನ್ನು ನೋಡಿದರೆ ಸ್ವಲ್ಪ ಹಿಂದಿನದಿದ್ದರೂ ಇರ ಬಹುದು.
ಗ್ರಂಥದ ಆದಿಯಲ್ಲಿ ತೀರ್ಥಂಕರರ ಸ್ತುತಿ ಇದೆ:
ಶ್ರೀ ವೃಷಭ ಜಿನೇಂದ್ರಾದಿ ಮ ಹಾವೀರಜಿನಾಂತರಾದ ಜಿನಪತಿಗಳ್ ಭ ವ್ಯಾವಳಿಗೆ ಚತುರ್ವಿಂಶತಿ
ದೇವರ್ ದಯೆಗೆಯ್ಕೆ ವಿಮಲರತ್ನತ್ರಯಮಂ ಬಳಿಕ ತತ್ವಾರ್ಥಸೂತ್ರವನ್ನು ಬರೆದ ಗೃಧ್ರಪಿಂಛಾಚಾರರು, ಸಮಂತಭದ್ರ, ಪೂಜ್ಯಪಾದ, ಕವಿ ಪರಮೇಶ್ವರ, ವೀರಸೇನ, ಜಿನಸೇನ, ಗುಣಭದ್ರ ಮುಂತಾದ ಪೂಜ್ಯ ಜೈನಾಚಾರರನ್ನು ಸ್ಮರಿಸಿ, ತನ್ನ ಗುರುವಾದ ಅಜಿತಸೇನಾಚಾರರನ್ನು ಹೊಗಳಿದ್ದಾನೆ.
ಶೋಧಿಸಲುಗ್ರಕರ್ಮ ಮಳಮಂ ಪ್ರತಿಬೋಧಿಸಲಾಪ್ತವರ್ಗಮಂ
ಬಾಧಿಸಲನ್ಯವಾದಿ ನಿಕುರುಂಬಮನಕ್ಷಯಮೋಕ್ಷಲಕ್ಷಿಯಂ ಸಾಧಿಸಲಿಯುಂ ಬಗೆಯುಮುಳ್ಕೊಡೆ ಚಿತ್ರವಿಶುದ್ದಿಯಿಂದಮಾ ರಾಧಿಸು ಭವ್ಯ ನೀನಜಿತಸೇನಮುನೀಂದ್ರರ ಪಾದಪದ್ಮಮಂ
ಪ್ರಿಯದರ್ಶನರೆನೆ ಧರ್ಮ ಪ್ರಿಯರೆನೆ ಧರ್ಮಾನುರಾಗಮಂ ಕೂಡೆ ಜಗತ್ ತ್ರಯದೊಳ್ ಮಾಡಿದ ಪೆರ್ಮಾ
ಡಿಯುಮಣ್ಣನುಮಜಿತಸೇನದೇವರ ಗುಡ್ಡರ್ ಎಂದರೆ ರಾಜನಾದ ರಾಚಮಲ್ಲನೂ, ಚಾವುಂಡರಾಯನೂ, ಹಾಗೆಯೇ ನಾಗವಮ್ಮನೂ, ರನ್ನನೂ ಈ ಅಜಿತಸೇನರ ಶಿಷ್ಯರಾದರು. ಎಂತಹ ಶಿಷ್ಯರು, ಎಂತಹ ಗುರು!
ತನ್ನ ಪರಾಕ್ರಮವನ್ನು ಹೀಗೆ ವರ್ಣಿಸಿದ್ದಾನೆ;
ನಡೆಯಲ್ ಬಗೆದಂ ತನ್ನಿ ರ್ದೆಡೆಯಿಂದ ತಳರ್ದನೆತ್ತಮೊಗಸಿದನಾಮಂ ಗಡಿಯಿಟ್ಟನಣ್ಣನೆಂದುಂ ಪುಡಿಕೆಯ ಮೊಲದಂತೆ ತುಬ್ಬುತಿರ್ಪರ್ ಪಗೆವರ್ ಮುಳಿದನಸಹಾಯವಿಕ್ರಮ ನೊಳಕೊಳ್ಳುದು ಕಾವುದೆಮ್ಮನೆಂದೆಂದರಿಮಾಂ ಡಳಿಕರ್ ಭಯವಶದಿ ದೀ
ವಳಿಗೆಯ ಪಯಣಿಯಂತೆ ಪೊಕ್ಕಪರ್ ಮನೆಮನೆಯಂ ಬಳಿಕ ತನ್ನ ಗ್ರಂಥದ ಆಕರಗಳನ್ನು ತಿಳಿಸುತ್ತಾನೆ:
ಇಂತೆನಿಸಿ ನೆಗಟ್ಟಿ ಸಮ್ಯಕ್ಷರತ್ನಾಕರಂ ಶ್ರೀಮಚ್ಚಾವುಂಡರಾಜಂ
ವಿರಚಿಸಿದರ್ ಮುನ್ನೆ ಮಹಾ ಪುರಾಣಮಂ ನೆಗಟ್ಟಿ ಕೂಚಿಭಟ್ಟಾರಕರುಂ
ಶ್ರೀ ಸಾಹಿತ್ಯ
ಪರಮ ಶ್ರೀನಂದಿಮುನೀ ಶ್ವರರುಂ ತದನಂತರಂ ಜಿನಾಗಮತಿಲಕರ್
ಕವಿಪರಮೇಶ್ವರರ್ ಬರೆದುದಂ ಜಿನಸೇನಮಹಾಮುನೀಶರೀ ಯವನಿಗೆ ಪೆಟ್ಟು ಮಾಣೆ ಗುಣಭದ್ರಮುನೀಶ್ವರರೆಯ್ದೆ ಪೇಟ್ಟು ಪ ಲ್ಲವಿಸಿದುದಂ ತ್ರಿಷಷ್ಟಿಪುರುಷಪ್ರತಿಬದ್ಧ ಪುರಾಣಮಂ ಮಹೋ ತೃವದೊಳೆ ಭವ್ಯಕೋಟಿಗಚಿಯಲ್ ಬರೆದಂ ಗುಣರತ್ನಭೂಷಣಂ
ಗ್ರಂಥದ ಕೊನೆಯ ಪದ್ಯಗಳಲ್ಲಿ ವರ್ಧಮಾನನಿಂದೀಚೆಗೆ ಆದ ಶ್ರುತಕೇವಲಿಗಳಿಂದ ಹಿಡಿದು ಆಚಾರಪರಂಪರೆಯನ್ನು ನಿವೇದಿಸಿ,
ಇಂತಯ್ಯತೊಂಬ ಜಿನಮುನಿ ಸಂತತಿಯಿಂದಂ ಶ್ರುತಾವತಾರಂ ಧರೆಗೂ ರಂತೆ ನಿಮಿರ್ದುದವರ್ಗಳ
ಸಂತತಿಯೊಳ್ ನಗರಜಿತಸೇನಾಚಾರರ್ ಎಂದು ತಿಳಿಸಿ, ತನ್ನ ಪರಾಕ್ರಮವನ್ನೂ, ಬಿರುದುಗಳನ್ನೂ ಹೇಳಿ ಗ್ರಂಥನಿರಾಣ ಶಕೆಯನ್ನು ಕೊಟ್ಟು
ಎನಿತೊಳವು ಮನದ ಸಂದೆಯ ಮನಿತುಮಸಂದಿಗ್ಗಮನಿಸುಗುಂ ಧರ್ಮದೊಳ ಪ್ರನುರಾಗಂ ಪೆರ್ಚುಗುವ ಣ್ಣನ ಬರದ ಮಹಾಪುರಾಣಮಂ ಕೇಳಲೊಡಂ
ಪರಿಪೂರ್ಣವಾಗಿರಣ್ಣಂ ಬರದಂ......ತ್ರಿಷಷ್ಟಿಶಲಾಕಾ ಪುರುಷ ಪುರಾಣಗಭೀರಾಂ ಬುರಾಶಿಯೊಳ್ ಕವಿಗಳಾಡಿದರ್ ತಡಿದಡಿಯೋಣ
ಎಂದು ಮುಗಿಸುತ್ತಾನೆ.
ಈ ಕೊನೆಯ ಪದ್ಯಗಳು,
ನಗು ಕವಿರತ್ನನಂತೊಳ ಪುಗುವುದು ಮೊಗ್ಗಾಯ ಜಿನಮತಾಂಭೋಧಿಯುಮಂ ಪುಗದಾಗಮಮಅವರ ಬಗೆ. ವುಗದ ಕಲರ್ ಕವಿಗಳಾಡಿದರ್ ತಡಿದಡಿಯೋ
(ಅಜಿತ, ೧೯೪)
ಎನಿತೋಳವು ಮನದ ಸಂದಯ ಮನಿತುಮಸಂದಿಗ್ಗಮನಿಸುಗುಂ ಧರ್ಮದೂಳ ಪೈನುರಾಗವೋದವುಗುಂ ರ ತನ ಪೇಟ್ಟಿಜಿತನ ಪುರಾಣಮಂ ಕೇಳಲೊಡಂ
(೧೨-೩೧)
ಎಂಬ ರನ್ನನ ಪದ್ಯಗಳನ್ನು ನೆನಪಿಗೆ ತಂದು ಆತನ ಕೈವಾಡವೂ ಸೇರಿದೆಯೋ ಎಂಬ ಅನುಮಾನವನ್ನುಂಟು ಮಾಡುತ್ತವೆ, ಮತ್ತು ಆದಿಪುರಾಣದ ಭಾಗ ಪಂಪನ ಗ್ರಂಥದ ಸಾರಾಂಶದಂತೆ ಕಾಣುತ್ತದೆ; ಪದಸರಣಿ
೪೮೫
ಕನ್ನಡ ಸಾಹಿತ್ಯದ ಚರಿತ್ರೆ
ಅದನ್ನು ಹಿಂಬಾಲಿಸುವಂತೆ ತೋರುತ್ತದೆ. ಆದಿಪುರಾಣ, ಶಾಂತಿಪುರಾಣ, ರಾಮಕಥೆ, ನೇಮಿಪುರಾಣ, ವರ್ಧಮಾನಪುರಾಣ ಇವು ಮಾತ್ರ ತಕ್ಕಮಟ್ಟಿಗೆ ವಿಸ್ತಾರವಾಗಿವೆ. ಮಿಕ್ಕುವು ಬಹು ಚಿಕ್ಕವಾಗಿವೆ. ಲಂಬಿಸಿರುವುವು ಹಿಂದಿನ ಕನ್ನಡ ಕವಿಗಳ ಚಂಪುಗಳನ್ನು ಅವಲಂಬಿಸಿರುವುವೋ ಹೇಗೋ ವಿಚಾರವಾಡ ತಕ್ಕದ್ದಾಗಿದೆ.
ಚಾವುಂಡರಾಯ ಪುರಾಣ18 : ಇದರಲ್ಲಿ ಜೈನಧರ್ಮದ ನಂಬಿಕೆಗಳೂ, ತತ್ವಗಳೂ, ಇತಿಹಾಸ ಗಳೂ ಅಡಕವಾಗಿವೆ. ಇದು ಜೈನಧರ್ಮದ ಕೈಪಿಡಿ ಎನ್ನಬಹುದು: ಸರಳ ಗದ್ಯದಲ್ಲಿ ಮುಖ್ಯಾಂಶ ಗಳನ್ನೆಲ್ಲಾ ತಿಳಿಯಬಹುದಾಗಿದೆ. ೬೩ ಮಹಾಪುರುಷರು ಯಾರೆಂದರೆ: ೨೪ ತೀರ್ಥಂಕರರು, ೧೨ ಚಕ್ರವರ್ತಿಗಳು, ೯ ಬಲದೇವರು, ೯ ವಾಸುದೇವರು, ೯ ಪ್ರತಿವಾಸುದೇವರು.
ๆ ๔ ๖ =
೨೧.
ನಮಿ
೨೪ ತೀರ್ಥಂಕರರು ಯಾರೆಂದರೆ:
೧೭. ೧. ವೃಷಭ
೯. ಪುಷ್ಪದಂತ
ಕುಂಥು ೨. ಅಜಿತ
೧೦. ಶೀತಲ
೧೮. ಅರ ಶಂಭವ
ಶ್ರೇಯಾಂಸ
೧೯. ಮಲ್ಲಿ ಅಭಿನಂದನ
೧೨. ವಾಸುಪೂಜ್ಯ ೨೦. ಮುನಿಸುವ್ರತ ೫. ಸುಮತಿ
೧೩. ವಿಮಲ ಪದ್ಮಪ್ರಭ
೧೪. ಅನಂತ
೨೨. ನೇಮಿ ೭. ಸುಪಾರ್ಶ್ವ
೧೫. ಧರ್ಮ
೨೩. ಪಾರ್ಶ್ವ ೮. ಚಂದ್ರಪ್ರಭ ೧೬, ಶಾಂತಿ
೨೪. ವರ್ಧಮಾನ
೧೨ ಚಕ್ರವರ್ತಿಗಳಲ್ಲಿ ಪ್ರಸಿದ್ದರು: ೧. ಭರತ, ೨. ಸಗರ, ೩. ಮಘವ, ೪, ಸನತ್ಕುಮಾರ, ೫. ಶಾಂತಿನಾಥ, ೬. ಪದ್ಮ,
ಬಲದೇವ ವಾಸುದೇವ ಪ್ರತಿವಾಸುದೇವರಲ್ಲಿ ಪ್ರಸಿದ್ದರಾದವರು: ರಾಮ, ಲಕ್ಷ್ಮಣ, ರಾವಣ; ಬಲರಾಮ, ಕೃಷ್ಣ, ಜರಾಸಂಧ.
ಚಾವುಂಡರಾಯನು ಮೊದಲು ಎಲ್ಲಾ ಪ್ರಾಣಿಗಳುಂ ಆತ್ಯಂತಿಕ ಸುಖಮನಿಚ್ಚೆಸುವರೆ, ಆ ಸುಖಂ ಕರ ಕ್ಷಯದಿನಲ್ಲದಾಗದು. ಕಕ್ಷಯಕ್ಕೆ ಪಲವು ಕಾರಣಮೊಳವಾಗಿಯುಂ ಮುಖ್ಯಕಾರಣಂ ಸಮ್ಯಕ್ಕೆ” ಎಂದು ಹೇಳಿ, ಕಾಲವನ್ನು ಉತ್ಸರ್ಪಿಣಿ, ಅವಸರ್ಪಿಣಿ ಎಂದು ವಿಭಾಗಿಸಿ, ಅವಸರ್ಪಿಣಿ ಯಲ್ಲಿ ಚತುರ್ದಶಮನುಗಳ (ಕುಲಧರರ) ಚರಿತ್ರೆಯನ್ನು ವರ್ಣಿಸಿ, ಹದಿನಾಲ್ಕನೆಯ ಮನುವಾದ ನಾಭಿ ರಾಜನ ಮಗನಾದ ಮೊದಲನೆಯ ತೀರ್ಥಂಕರನಾದ ವೃಷಭನಾಥನ ಕಥೆಯನ್ನು ಭವಾವಳಿಯೊಡನೆ ವಿವರಿಸುವನು. ಅವನ ಮಕ್ಕಳು ಭರತ (ಮೊದಲನೆಯ ಚಕ್ರವರ್ತಿ) ಬಾಹುಬಲಿ ಇವರ ಯುದ್ದ ವನೂ, ಬಾಹುಬಲಿಯ ವೈರಾಗ್ಯವನೂ ವರ್ಣಿಸುವನು (ಈ ಬಾಹುಬಲಿಯ ವಿಗ್ರಹವೇ ಗೊಮಟ ನೆಂದು ಹೆಸರುಳ್ಳ ಚಾವುಂಡರಾಯನು ಪ್ರತಿಷ್ಠೆ ಮಾಡಿದ ವಿಗ್ರಹ). ಇದು ಪಂಪನ ಆದಿಪುರಾಣದ ವಸ್ತು : ಅದರ ಸಂಗ್ರಹವೂ ಇರಬಹುದು.
ಆಮೇಲೆ ಸ್ವಲ್ಪದರಲ್ಲಿ ಅಜಿತನ, ಆ ಕಾಲದ ಚಕ್ರವರ್ತಿ ಸಗರನ ಕಥೆ. ಇದು ರನ್ನನ ಅಜಿತ ಪುರಾಣದ ವಸ್ತು: ಅದರ ಸಂಗ್ರಹವೂ ಇರಬಹುದು. ಇದರ ಸಾರಾಂಶ, ಈ ತೀರ್ಥಂಕರರ ಕಥೆಗಳ ಅಚ್ಚನ್ನು ತೋರಿಸುತ್ತದೆ-ಆ ಕಾಲದ ತಿಳಿಗನ್ನಡ ಶೈಲಿಯನ್ನೂ ತೋರಿಸುತ್ತದೆ.
18 ಆದಿಪುರಾಣ ಭಾಗ ಮಾತ್ರ ಪರಿಷತ್ತಿನಿಂದ ಪ್ರಕಟವಾಗಿದೆ (ಎರಡನೆಯ ಮುದ್ರಣ, ೧೯೨೮).
೪೮೬
ಶ್ರೀ ಸಾಹಿತ್ಯ
ಅಜಿತಪುರ್ರಾ ಶ್ರೀಮದಮರೇಂದ್ರರುಂದ್ರ ಶಿ
ಖಾಮಣಿಗಣಕಿರಣಜಾಳಜಟಿಲಿತ ಚರಣ ಚಾಮೀಕರಾಂಗರಜಿತ
ಸ್ವಾಮಿಗಳೆಮಗೀಗೆ ಮೋಕ್ಷಲಕ್ಷ್ಮೀ ಪದಮಂ ಈ ಜಂಬೂದ್ವೀಪದ ಪೂರ್ವ ವಿದೇಹದ ಸೀತಾ ನದಿಯ ತೆಂಕಣ ತಡಿಯ ವತೃಕಾವತೀ ವಿಷಯದ ಸುಸೀಮಾನಗರಮನಾಳ್ಯ ವಿಮಲವಾಹನನೊಂದು ದಿವಸ ಸಂಸಾರಭೀರುತೆಗೆ ಕಾರಣ ಮಾಗಿ...ಸಂಯಮಮಂ ಕೈಕೊಂಡು...ತೀರ್ಥಂಕರ ಮಹಾಪುಣ್ಯಮಂ ಕಟ್ಟಿ....ಅಹಮಿಂದ್ರನಾಗಿ... ತ್ರಯಸ್ತ್ರಿಂಶತ್ ಸಾಗರೋಪಮಾಯುಷ್ಯನುಂ...ಏಕರ ಪ್ರಮಾಣನುಂ...ದಿವ್ಯಭೋಗಂಗಳನುಣು ತಿನ್ನಿನಂ: ಇತ್ತ ಜಂಬೂದ್ವೀಪದ ಭರತಕ್ಷೇತ್ರದಿಧ್ಯಾಪರಮನಾಳ್ವ ಇಕ್ಷಾಕು ವಂಶದ ಅಜಿತಶತ್ರು ವೆಂಬರಸನ ಮನೋವಲ್ಲಭೆ ಜಯಸೇನಾಮಹಾದೇವಿ...ಹೊಸಶಸ್ತ್ರಪ್ಲಾಂತರಂ ನಿಜವದನಮಂ ಗಜಂ ಪುಗುವುದು ಕಂಡು...ಫಲಂಗಳಂ ಕೇಳು ಸಂತೋಷದೊಳಿರ್ಪಿನಂ; (೧) ಸ್ವರ್ಗಾವತರಣ ಕಲ್ಯಾಣ ಪೂರ್ವಕ ವಿಮಲವಾಹನಚರಾಹಮಿಂದ್ರಂ ಮಹಾದೇವಿಯ ಗರ್ಭದೊಳ್ ಸಂಕ್ರಮಿಸಿ...ವೃಷಭನಾಥ ತೀರ್ಥಸಂತಾನಕಾಲಂ ಪಂಚಾಶಲಕ್ಷಣ ಕೊಟಿಸಾಗರೋಪಮಂ ಪೋಗೆ ತತ್ಕಾಲದೊಳೆ ತ್ರಿಜ್ಞಾನಧರಂ ಪುಟ್ಟಲೊಡಂ ದೇವೇಂದ್ರಂ ಬಂದು (೨) ಜನ್ಮಾಭಿಷೇಕ ಮಹಾಕಲ್ಯಾಣಮಂ ಮಾಡಿ ಅಜಿತರೆಂದು ಪೆಸರನಿಟ್ಟು ಆನಂದನೃತ್ಯಮನಾಡಿ ಪೋದ. ಇತ್ತ ಎಪ್ಪತ್ತೆರಡುಲಕ್ಕೆ ಪುಬೈ ಪರಮಾಯುಷ್ಯ ಮೊಡೆಯನು, ನಾಲ್ವರಯ್ಯತ್ತು ಬಿಡಿಯನುಂ, ಹೇಮವರ್ಣನುಮನಿಸಿ ಬೆಳೆದು ಪದಿನೆಂಟುಲಕ್ಕೆ ಪೂರ್ವಂ ಕುಮಾರಕಾಲಂ ಪೋಗೆ ಕುಮಾರಂಗ ಪಟ್ಟಮಂ ಕಟ್ಟೆ, ಸಾಸಿರ್ವರ್ ಕನ್ನೆಯರು ಮದುವೆ ನಿಂದು....ರಾಜ್ಯಕಾಲಂ ಸಲ್ವಿನಮೊಂದುದಿವಸಮುತ್ಕಾಪಾತದರ್ಶನ ನಿಮಿತ್ತದಿ ಪುಟ್ಟಿದ ಸಂಸಾರ ಶರೀರಭೋಗ ನಿರ್ವಗದಿನಿರೆ, ಲೋಕಾಂತಿಕ ದೇವರ್ ಪ್ರತಿಭೋಧಿಸಿ, ರಾಜ್ಯಮನಜಿತಸೇನನೆಂಬ ಮಗಂಗೆ ಕೊಟ್ಟು (೩) ಪರಿನಿಷ್ಠ ಮಣ ಕಲ್ಯಾಣಾಭಿಷೇಕಪುರಸ್ಸರು...ದೀಕ್ಷೆಯಂ ಕೈಕೊಂಡು... ಸಾಕೇತನಗರಮಂ ಚಾಮಾರ್ಗದಿಂ ಪೊಕ್ಕು...ಬ್ರಹ್ಮನೆಂಬರಸಂ ನಿಲ್ಸೆ ನಿಲೆ ಪಂಚಾಶ್ಚರಂಗಳಾಗೆ... ಛದ್ಮಸ್ಥಕಾಲಂ ಪೋಗೆ...ಕಾಯೋತ್ಸರ್ಗದೊಳ್ (೪) ಕೇವಲಜ್ಞಾನೋತ್ಪತ್ತಿಯಾಗೆ ಸೌಧರ್ಮೆಂದ್ರನಿಂ ತತ್ಕಲ್ಯಾಣಮನೆ ....ಸಿಂಹಸೇನ ಗಣಾಗ್ರಣಿವೆರಸು ತೊಂಬತ್ತಿಲ್ವರ್ ಗಣಧರರುಂ....ಪೂರ್ವಧರರಂ, ...ಶಿಕಕರುಂ....ಅವಧಿಜ್ಞಾನಿಗಳುಂ....ಕೇವಲಿಗಳುಂ....ವಿಕ್ರಿಯರ್ಧಿಸಂಪನ್ನರುಂ....ಅಜ್ಜಿಕೆಯರುಂ... ಶ್ರಾವಕರುಂ, ...ಶ್ರಾವಕಿಯರು, ...ದೇವದೇವಿಯರುಂ, ...ತಿರ್ಯಗ್ಲಾತಿಗಳು, ...ಮಹಾಯಕ್ಷನುಂ, ಯಕ್ತಿಯುಂ ಬೆರಸು ಧರ್ಮಾಮೃತಮಂ ಕಳೆಯುತ್ತುಂ...ಕಾಲಂ ವಿಹಾರಿಸಿ, ಒಂದು ತಿಂಗಳ ವಿಹರಣ ವಿಧಿಯಂ ಮಾಣು ಸಮೃದಗಿರಿಯೊಳ್ ಚೈತ್ರ ಶುದ್ಧ ಪಂಚಮಿ ಪೂರ್ವಾಹ್ಯದೊಳ್ ರೋಹಿಣಿ ನಕ್ಷತ್ರಮಾಗೆ ಪ್ರತಿಮಾಯೋಗದೊಳ್ ಅಜಿತಭಟ್ಟಾರಕರ್ ಮುಕ್ತಿಗೆ ಸಂದರ್, ಸೌಧರೇಂದ್ರನುಂ (೫) ಪರಿನಿಡ್ವಾಣ ಕಲ್ಯಾಣದೊಳ್ ಆನಂದನೃತ್ಯಮನಾಡಿ ಪೋದಂ .
ತೀರ್ಥಂಕರರ ಪುರಾಣಗಳೆಲ್ಲ ಈ ಅಚ್ಚಿನಲ್ಲಿ ಎರಕಹೊಯ್ಯುವಾಗಿವ: ಭವಾವಳಿ, ತಂದೆ ತಾಯಿ, ಊರು. ಎತ್ತರ, ಬಣ್ಣ ಮುಂತಾದುವು ಬೇರೆ ಬೇರೆ: ಕ್ಷತ್ರಿಯ ವಂಶ, ೫ ಕಲ್ಯಾಣಗಳು, ವೈರಾಗ್ಯ, ಧವಿಹಾರ, ತಪಸ್ಸು, ಮುಕ್ತಿಸ್ಸಳ, ಇಂದ್ರನ ಪೂಜೆ. ಆನಂದನೃತ್ಯ.
ಅಜಿತಪುರಾಣದನಂತರ ಆ ಕಾಲದ ಎರಡನೆಯ ಚಕ್ರವರ್ತಿ ಸಗರನ ಕಥೆ. ಮೂರರಿಂದ ಹನ್ನೊಂದನೆಯವರೆಗಿನ ತೀರ್ಥಂಕರರ ಕಥ. ಶ್ರೇಯಾಂಸನ ಕಾಲದ ಮೊದಲನೆಯ ಬಲದೇವ ವಾಸುದೇವ ಪ್ರತಿವಾಸುದೇವರಾದ ವಿಜಯ ಸೃಷ್ಟ ಅಶ್ವಗ್ರೀವರ ಕಥೆ, ಪರುಶುರಾಮನ ಕಥೆ. ಹೀಗೆಯೇ ಹೋಗಿ ಹದಿನಾರನೆಯ ತೀರ್ಥಂಕರನಾದ ಶಾಂತೀಶ್ವರನ ಪುರಾಣ: ಆತನೇ ಐದನೆಯ ಚಕ್ರವರ್ತಿ, ಇಪ್ಪತ್ತನೆಯ ತೀರ್ಥಂಕರ ಮುನಿಸುವ್ರತನ ಕಾಲದಲ್ಲಿ ಎಂಟನೆಯ ಬಲದೇವ ವಾಸುದೇವ
9---------------------
೪೮೭
ಕನ್ನಡ ಸಾಹಿತ್ಯದ ಚರಿತ್ರೆ
ಪ್ರತಿವಾಸುದೇವರಾದ ರಾಮ ಲಕ್ಷ್ಮಣ ರಾವಣರ ಕಥೆ. ಇಪ್ಪತ್ತೆರಡನೆಯ ತೀರ್ಥಂಕರನಾದ ನೇಮಿ ನಾಥನ ಕಾಲದಲ್ಲಿ ಬಲರಾಮ ಕೃಷ್ಣ ಜರಾಸಂಧರ ಕಥೆ, ಮಹಾವೀರನ ಕಥೆ: ಜೀವಂಧರ ಮುಂತಾದವರ ಕಥೆ.
ಈ ಮಧ್ಯೆ ಅಲ್ಲಲ್ಲಿ ಯಜ್ಞಖಂಡನ, ಅಹಿಂಸಾಬೋಧೆ, ಸಮ್ಯಕ್ತಪ್ರತಿಪಾದನ, ಮಿಥಾನಿರಸನ, ಜೈನಪ್ರಕ್ರಿಯೆಗಳು ಮುಂತಾದುವು ಬರುತ್ತವೆ. ಚಕ್ರವರ್ತಿಗಳ ದಿಗ್ವಿಜಯಗಳೆಲ್ಲಾ ಒಂದೇ ಕ್ರಮದಲ್ಲಿ ನಿರೂಪಿತವಾಗಿವೆ.
ಚಾವುಂಡರಾಯನ ಶೈಲಿಯನ್ನು ತೋರಿಸುವುದಕ್ಕೆ ಒಂದು ಪದ್ಯ, ಒಂದು ಗದ್ಯಭಾಗವನ್ನು ಬರೆಯಬಹುದಾಗಿದೆ.
ಶಲಾಕಾಪುರುಷರು :
ಎನಿಖರ್ ಜಿನರುಂ ಚಕ್ಕಿಗ ಳೆನಿಬರ್ ಬಲದೇವರೆನಿಟರಚ್ಯುತರುಂ ತಾ ಮೆನಿಬರ್ ವೃಷಭೇಶ್ವರ ಬೆಸ ಸೆನಿಟರ್ ಪ್ರತಿವಾಸುದೇವರವಸರ್ಪಿಣಿಯೊಳ್
ಸ್ತ್ರೀಜನ್ಮ:
ಶೂರ್ಪನಖಿ ಸೀತೆಯಂ ಕಂಡು ವೃದ್ಧೆಯ ವೇಷದಿನೆಯ್ದವರೆ, ಕೆಲದೊಳಿರ್ದಾಕೆಗಳ ಆಕೆಯಂ ನೀನಾರೆನೆಂಬೆಯೆಂದು ಬೆಸಗೊಳೆ, ಪೇಟ ಮಾನ್ ಧನಪಾಳಿಕೆಯೆನೆಂದವರ ಮನಮಂ ನೋಡಲ್
ನುಡಿದು, ನೀಮೆ ಪುಣ್ಯವಂತೆಯರ್ ಇಂತಪ್ಪ ರಾಜಕುಮಾರರೊಳನುಭವಿಸಲ್ ಪಡೆದಿರ್, ಮುನ್ನಿನ ಜನ್ಮದೊಳಾವ ಪುಣ್ಯಮಂ ನೆರಪಿದಿರದನೆನಗಪಿಮಾನುವಂತೆ ನೆಗಟ್ಟು ನಿಮ್ಮಂತರಸಿಯಾಗಿ ನಿಮ್ಮ ನಲ್ಲರನೆನಗೆ ನಲ್ಲರ್‌ಮಾಡಿ ನಿಮಗೆ ವಿರಕ್ಕಂ ಮಾನೆಂಬುದುಂ, ಅದಂ ಕೇಳೀಕೆಯ ಮನಮೆಳದು ಮೆಯ್ಯೋಳ್ ಮುಪ್ಪೆಂದು ಓರೊಲ್ವರ ಕಯ್ಯಂ ಪೊಯ್ದು ನಗುವುದುಂ, ಮಾಯಾವೃದ್ದೆ ಮತ್ತಮಿಂತೆಂ ದಟ್-ಎಲೆ ಕುಲರೂಪಮೌವನ ಸೌಭಾಗ್ಯದಿಂ ಸಂಪನ್ನೆಯರಪ್ಪ ವನಿತೆಯರ್ಗೆ ಸುಭಗರ್ಗನುಕೂಲ ಮಪ್ಪ ಪುರುಷನೊಡನಿರ್ಪುದಂದೆ ಮೊಕ್ಕಳಂ ಜನ್ಮಸಫಲವಳೊಡೆ ಪೇಮೆಂಬುದುಂ, ಪ್ರಿಯ ಸಂಗಮೆ ನಿನಗೆ ಜನ್ಮಸಫಲಮಪ್ರೊಡದನರಸನೊಳ್ಳಿತ್ತಾಗೆ ಮಾಟ್ಟಂ, ಆಮೊರ್ವೆಯುಂ ಬಾರಿಸುವೆ ಮಲ್ಲೆಮೆಮ್ಮರಸುಗೆ ಮಹಾದೇವಿಯಾಗೆಂದು ಅಂತಃಪುರಕಾಂತೆಯರಪಹಾಸ್ಯಂಗೆಯ್ದು ಸರಸಂ ನುಡಿಯೆ ಸೀತೆ ಕಂಡು ಕರುಣಿಸಿ ನೀನ್ ಹಿತಮನಲಿಯದೆ ಪೆಣ್ಣಿರುದನೇಕೆ ಬಯಸುವೆ. ಸ್ತ್ರೀಯರ ಪಾಪ ಫಲಮಂ ಕೇಳೆಂದಿಂತೆಂದಳ-ಗರ್ಭದೊಳಿರ್ದಂದಿನ ದುಃಖವುಂ, ಕನ್ಯಾಕಾಲದೊಳಭಿಮತಲಕ್ಷಣ ಮಾಗೆ ಪುಟ್ಟಿದ ಮನೆಯೊಳಂ ಕೊಟ್ಟ ಮನೆಯೊಳಂ ದೂಜೆಯು ವುದುಂ, ಬಂಜೆಯಪ್ಪುದುಂ, ಬಡ ತನಂ ಬಪ್ದುಂ , ಪಡಣಿಕೆಯೆಂದು ಗಂಡನೊಲ್ಲ ಬಿಸುಟ್ಟುದುಂ, ಅಶುಚಿಯೆಂದು ಪೇಜರ್ ಮುಟ್ಟದಿ ರ್ಪುದುಂ, ಪತಿವಿಯೋಗದಿಂ ಸಂತಾಪಂಗೋಳ್ಳುದಂ, ಚಕ್ರವರ್ತಿಯ ಮಗಳಾದೊಡಂ ಪೆರ್ಗೆ ಕಿಂಕುರಾಣಂ ಗೆಯ್ಯುದು, ಸವತಿಯರ್ ಗೆಯ್ಯಪಮಾನಕ್ಕೆ ಭಂಗಮಂ ಸೈರಿಸುವುದುಂ, ಸ್ವಭಾವಕುಟಿ ಳಂಗಳಪ್ಪ ಮನೋವಾಕ್ಕಾಯಂಗಳೊಳ್ ಮಾಯಾಪ್ರಪಂಚಮಂ ತಾಳ್ವುದುಂ, ಗರ್ಭಿಣಿಯಾಗಿ ಗರ್ಭ ರೋಗಾದಿ ವೇದನೆಯಂ ಸೈರಿಸುವುದುಂ, ಪ್ರಸವಸಮಯದೊಳಂ ಮತ್ತಂ ಪುಟ್ಟಿನೊಳಂ ಮಕ್ಕಳ ಸಾವಿನೊಳಮಪ್ಪ ಮಕಮಾರೋಳಂ ನಂಬುಗೆವಡೆಯದಿರ್ಪುದುಂ, ತನ್ನ ಬಸವಲ್ಲದುದಂ ದಾನಶೀಲೋಪವಾಸಾದಿಗಳಿಂ ಪರಲೋಕಹಿತದೊಳ್ ನೆಗಡೆಯವುದಂ, ವೈಧವ್ಯದೊಳಾಮರ ಣಾಂತ ದುಃಖಮನುಳ್ಳುದುಂ, ಪರಪುರುಷಕಾಂಕ್ಷೆಯಿಂ ತಪಶ್ಚರಣದೊಳ್ ರ್ನೆ'ದುಂ, ಪಡಿಗದಂತೆ ಪಲಂಬರೆಂಜಲ್ಸ್ ಪೋತಕಮಪ್ಪುದು, ಎಲ್ಲಾ ಸ್ತ್ರೀಯರ್ಗಂ ಸಾಧಾರಣಮದಂ ಸ್ತ್ರೀತ್ವಮಂ ಬಯಸದೆ ಸದಾಚಾರದೊಳ್ ನೆಗದು ಎಂದು ಸೀತೆ ನುಡಿದಳ್.
Moses
ಶ್ರೀ ಸಾಹಿತ್ಯ
ನಾಗವರ್ಮ I-ಸು. ೯೯೦-೧೦೦೦ ಈ ಕವಿಯ ಚರಿತ್ರೆ ಚರ್ಚಾಸ್ಪದವಾಗಿದೆ. ಛಂದೋಂಬುಧಿ, ಕಾದಂಬರಿ- ಈ ಎರಡು ಗ್ರಂಥ ಗಳನ್ನು ಸುಮಾರು ೯೯ರಲ್ಲಿ ಒಬ್ಬ ನಾಗವಮ್ಮನು ಬರೆದನೆಂದೂ, ಕಾವ್ಯಾವಲೋಕನ ಮುಂತಾದ ಗ್ರಂಥಗಳನ್ನು ಬರೆದವನು ಸುಮಾರು ೧೧೪೫ರಲ್ಲಿದ್ದ ಮತ್ತೊಬ್ಬ ನಾಗವಮ್ಮನೆಂದ ಇ ಕವಿಚರಿತಕಾರರ ಮತ. ಕಾ ನಂಬರಿಯನ್ನು ಬರದ ನಾಗವಮ್ಮನೇ ಛಂದೋಂಬುಧಿಯನ್ನೂ ಬರೆದನೆಂಬುದಕ್ಕೆ ತಕ್ಕಷ್ಟು ಪ್ರಮಾಣವಿಲ್ಲದಿದ್ದರೂ, ಈ ಮತವನ್ನು ಇಲ್ಲಿ ಅನುಸರಿಸಿದೆ.
ಛಂದೋಂಬುಧಿಯಲ್ಲಿ
ಅರಸು ರಕ್ಕಸಗಂಗಂ ಗುರುಗಳ ನೆಗಟ್ಟಿಜಿತಸೇನದೇವರ್19 ದಯೆಯಿಂ ಪೊರವ ನೃಪನಣ್ಣನೆನೆ ಮ ಚ್ಚರಿಸುವರಾರ್ ನಾಕಿಯಿರುಳೊಳೇಂ ಪುಟ್ಟಿದನೇ? ಗಂಡರ ಮೂರುತಿಯೆನಿಸಿದ ಮಂಡಳಿಕರ ಮಂತ್ರಿ ಸಂಧಿವಿಗ್ರಹಿ ರಾಯಂ ಕೊಂಡಾಡಿ ಪೊರೆದನೆನೆ ಧರೆ ಕೊಂಡಾಡದ ಕೊಂಡುಕೊನೆಯದೆ ನಾಕಿಗನಂ
ಎಂಬ ಎರಡು ಪದ್ಯಗಳಿವೆ. ಇವು ಕೆಲವು ಪ್ರತಿಗಳಲ್ಲಿಲ್ಲವಾದ್ದರಿಂದ ಪ್ರಕ್ಷಿಪ್ತವೇ ಎಂಬ ಸಂದೇಹ ವುಂಟಾಗುವುದಾದರೂ, ಇವು ಪ್ರಾಮಾಣಿಕವೆಂದು ತಿಳಿದರೆ, ನಾಗವಮ್ಮನು ಚಾವುಂಡರಾಯನ ಆಶ್ರಿತನಾದ, ಅವನ ಗುರುಗಳ ಶಿಷ್ಯನಾದ, ರಾಚಮಲ್ಲನ ತಮ್ಮ ರಕ್ಕಸಗಂಗನ (೯೮೪) ಪ್ರಜೆಯಾದ ಜೈನನಾಗುವನು. ಇವನ ಕಾಲ ಸುಮಾರು ೯೯೦ ಆಗುವುದು.
ಛಂದೋಂಬುಧಿಯಲ್ಲಿ, ತಾನು ಯುದ್ದ ವೀರನೆಂದು “ ಭಗವತಿ ಕರ್ತು ಬೀರಸಿರಿಯಿಗೆ ಭುಜಾಸಿಗೆ ನಾಗವರ ನಾ”, “ ಕುಂತೀಪುತ್ರಂ ಪೊಣರ್ದ ರಣದೊಳ್ ” ಎಂಬ ಕಡೆಗಳಲ್ಲಿ ಹೇಳಿ ಕೊಂಡಿದ್ದಾನೆ. ತಾನು ಸಯ್ಯಡಿಯಾತನೆಂದೂ, ವೆಂಗಿಪಟುವಿನ ವೆಣ್ಣಮಯ್ಯನೆಂಬ ವೈದಿಕ ಬ್ರಾಹ್ಮಣನ ಮಗನೆಂದೂ, ತನಗೆ ಕವಿರಾಜಹಂಸ, ವಿಬುಧಜನಮನಃಪದ್ಮನೀರಾಜಹಂಸ (ಕಾದಂಬರಿಯಲ್ಲಿ ಬುಧಾಬ್ಬ ವನಕಳಹಂಸ), ನೆಗಿಗೋಜ, ಕಂದಕಂದರ್ಪ ಎಂಬ ಬಿರುದುಗಳಿದ್ದವೆಂದೂ ಹೇಳಿದ್ದಾನೆ. “ ಕಾಳಿದಾಸನು ಮನೇಳಿಸಿತು ” ತನ್ನ ಪಾಂಡಿತ್ಯ ಪ್ರಚುರತೆ ಎಂದೂ, “ತನಗಿನ್ನಾರ್ ಸರಿ ನಾಗವಮ್ಮನೊಳೆ ದಾಸರ್ ಕಾಳಿದಾಸಂಬರಂ ” ಎಂದಣ ಹೇಳಿ ಬಾಣ, ಮಯೂರ, ಮಾಘ, ಗುಣಾಡ್ಯ, ದಂಡಿ, ಧನಂಜಯ ಮುಂತಾದ ಸಂಸ್ಕೃತಕವಿಗಳಿಗೆ ಕ್ಲೀಷೆಯಿಂದ ತನ್ನನ್ನು ಹೆಚ್ಚಿಸಿ ಹೋಲಿಸಿಕೊಂಡಿದ್ದಾನೆ. ಇದರಿಂದ ತಾನು ಉದ್ದಾಮಕವಿಯೆಂದೂ, ಲಕ್ಷಣಕಾರನುದೂ ಸೂಚಿಸಿರುವಂತಿದೆ.
ಕಾದಂಬರಿಯಲ್ಲಿ ಭೆ ಜರಾಜನು ತನಗೆ “ ಸತ್ಯತಿವನಿತೆಗಿದೌಚಿತ್ಯವೆಂದು ” ಜಾತ್ಯತ್ವಗಳನ್ನು ಕೊಟ್ಟಂತೆ ಹೇಳಿರುವುದರಿಂದ ೧೦ನೆಯ ಶತಮಾನದ ಅಂತ್ಯ ಅಥವಾ ೧೧ನೆಯ ಶತಮಾನದ ಆದಿ ಯಲ್ಲಿದ್ದಿರಬಹುದಾಗಿದೆ. ಸುಮಾರು ೯೯೦ರಲ್ಲಿ ಛಂದೋಂಬುಧಿಯನ್ನೂ, ಸುಮಾರು ೧೧೦ರಲ್ಲಿ ಕಾದಂಬರಿಯನ್ನೂ ಬರದಿರಬಹುದು. ಆದಿಪವ್ಯದಲ್ಲಿ ಕಾವ್ಯನಾಯಕನಾದ ಚಂದ್ರನನ್ನು ಕ್ಲೀಷೆಯಿಂದ ಒಬ್ಬ “ ಕೃತಿಪತಿ ನರೇಂದ್ರಚಂದ್ರಂಗೆ ಹೋಲಿಸುವಂತೆ ತೋರುವುದರಿಂದ ಈತನ ರಾಜನು ನಾಗರ ಖಂಡವನ್ನು ಆಳುತ್ತಿದ್ದ ಒಬ್ಬ ಚಂದ್ರರಾಜನೆಂದು ಕೆಲವರು ಊಹಿಸುತ್ತಾರೆ.
19 ಪಾಠಾಂತರ: ವೀರಸೇನರ್
ಕನ್ನಡ ಸಾಹಿತ್ಯದ ಚರಿತ್ರೆ
೪೮೯
ಈತನ ಮತವೂ ನಿಷ್ಕರ್ಷೆಯಿಲ್ಲ. ಛಂದೋಂಬುಧಿ, ಕಾದಂಬರಿಗಳಲ್ಲಿ ಶೈವವಾತಾವರಣವೇ ತುಂಬಿದೆ; ಶಿವ ಪಾರ್ವತೀ ಸ್ತುತಿಯೇ ಎಲ್ಲೆಲ್ಲಿಯೂ, ಅಜಿತಸೇನದೇವರು ಗುರುಗಳು ಎಂಬ ವಾಕ್ಯ ವನ್ನೂ, ಚಾವುಂಡರಾಯನ ತಮ್ಮನಿರಬಹುದು ಎಂಬ ಊಹೆಯನ್ನೂ ಬಿಟ್ಟರೆ ಈತನು ಶೈವನೆಂದೇ ಹೇಳಬಹುದಾಗಿದೆ. ಛಂದೋಂಬುಧಿಯ ಗ್ರಂಥಾಂತಗದ್ಯದಲ್ಲಿ “ ಭಗವದರ್ಹತ್ಪರಮೇಶ್ವರಚರಣಾರ ವಿಂದ ” ಎಂದು ಕೆಲವು ಪ್ರತಿಗಳೂ “ ಪರಮೇಶ್ವರ”, “ ಭಗವದ್ಭವಾನೀವಲ್ಲಭ ” ಎಂದು ಕೆಲವೂ ತೋರಿಸುವುದರಿಂದ ವಿಷಯ ಸಂದೇಹದಲ್ಲಿಯೇ ಉಳಿಯುತ್ತದೆ. ಅಜಿತಸೇನರು ಕೇವಲ ವಿದ್ಯಾ
ಗುರುಗಳು ಮಾತ್ರ ಇರಬಹುದೆ? ಕಾದಂಬರಿ ಭಾಷಾಂತರವಾದ್ದರಿಂದ ಬಾಣನ ಮತವೇ ಪ್ರತಿಬಿಂಬಿಸಿ, ತನ್ನ ಮತದ ಮಾತನ್ನೆತ್ತಿಲ್ಲವೋ ಹೇಗೋ? 20 ಲೌಕಿಕ ಕಾವ್ಯದಲ್ಲಿ ಪಂಪ ರನ್ನ ರಂತೆ ವೈದಿಕದೇವತೆಗಳನ್ನು ಸ್ತುತಿಸಿದ್ದಾನೆಯೋ? ಛಂದೋಂಬುಧಿಯನ್ನು ಲಕ್ಷಣಗ್ರಂಥಗಳ ಕೆಳಗೆ ವಿಮರ್ಶಿಸುವುದಕ್ಕಿಟ್ಟುಕೊಂಡು ಇಲ್ಲಿ ಕಾದಂಬರೀ ಕಾವ್ಯವನ್ನು ಪ್ರಸ್ತಾಪಿಸೋಣ.
ಕಾದಂಬರಿ: ಇದು ಬಾಣನ ಪ್ರಸಿದ್ಧ ಗ್ರಂಥದ ಕನ್ನಡದ ಅನುವಾದವಾಗಿದೆ; ಅಕ್ಷರಶಃ ಭಾಷಾಂತರ ವಲ್ಲ. ಮೂಲಗ್ರಂಥ ಗದ್ಯದಲ್ಲಿದೆ; ಇದು ಚಂಪೂಕಾವ್ಯ, ಕವಿಯೇ ಹೇಳಿರುವಂತೆ, ಗ್ರಂಥಾದಿಯಲ್ಲಿ :
ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ಗೇವಿಗದ್ದವು , ಜಾಣಿಂ ಬಾಣಿಯೆನಿಪ್ಪದೊಂದು ಪೆಸರಂ ಮುನ್ನಿತನೆಂದಂದು ಪೋ ಮಾಣಿನ್ನನ್ಯಕವಿಸ್ತುತಿ ವ್ಯಸನಮಂ ವಾಗ್ದಾತಚಾತುರಗೀ ಲ್ಯಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೇಜರ್ ವಂದ್ಯರೇ
ಸಮ್ಮತಿ ಸಂಸ್ಕೃತದಿಂದೆ ಜ ಗತ್ತುಕವಾಗಿ ಮತ್ತೆ ಕರ್ಣಾಟದೊಳಂ ಸತ್ಕವಿನಿವಹಂ ಪೊಗಟೆ ಚ
ತಿಯಂ ಪಡೆದು ಸೊಬಗುವಡೆದಟ್ಟಗಳ್
ಕೃತಿಪತಿ ನರೇಂದ್ರಚಂದ್ರಂ ಕೃತಿಯಂ ಪೇಟ್ಟಿಂ ಬುಧಾಬ್ಬವನಕಳಹಂಸಂ ಕೃತಿ ಕಾದಂಬರಿಯೆನೆ ಸ
ಶೃತಿ ಕಥಿತ ಕಥಾವತಾರಮೇಂ ಕೇವಳಮೇ ! ಗ್ರಂಥಾಂತ್ಯದಲ್ಲಿ :
ಕೃತಿಯೊಳ್ ಸೌವರ್ಣಕಾಂತಿ ಪ್ರಸರಮಸದಳಂ ಪರ್ವೆ ಸಂದಿರ್ದುದಂತಾ ಕೃತಿ ಮುನ್ನ೦ ಬಾಣವಾಣಿಪ್ರಿಯನ ವಚನದಿಂ ಮತ್ತೆ ಕರ್ಣಾಟಭಾಷಾ
ಚತುರತ್ಕಂಬೊರ್ದಿ ಕಾದಂಬರಿ ಪಸರಿಸಿ ರಾಜೇಂದ್ರ ಚಂದ್ರಾಂಕನೊಳ್ ಸಂ ಗತಿವೆತ್ತಾದಂ ತ್ರಿಲೋಕೀ ಸಹಚರಿಯೆನೆ ತಾಂ ಸಂದುದಾಚಂದ್ರತಾರಂ
ಇದು ಚೋದ್ಯಂ ಕವಿಹೃದ್ಧ ತಂ ನವರಸಂ ನಿರ್ದೋಷಮೆಂದಿಗಳಾ ದುದು ಕಾದಂಬರಿ ಸೇವ್ಯಮಾದುದನಿತುಂ ತಾನೆಯೇ ಭೂಭಾಗದೊಳ್ ವಿದಿತ ಶ್ರೀಕವಿ ನಾಗವಮ್ಮನ ವಚಃಸಂದೋಹದಿಂ ದೋಷಂ ವದಲಂಕಾರದ ವಸ್ತುಬಂಧವಿದು ತಾನೇಂ ಮಾಡದೇಂ ಗೆಯ್ಯ !
20 ಇದರ ವಿಸ್ತಾರವಾದ ಚರ್ಚೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ಗ್ರಂಥಮಾಲೆಯ * ಕಾದಂಬರೀ ಸಂಗ್ರಹ'ದಲ್ಲಿ ನೋಡಬಹುದು.
೪೯೦
ಶ್ರೀ ಸಾಹಿತ್ಯ
* ಜಿತಬಾಣಂ” ಎಂದು ತಾನು ಹೇಳಿಕೊಂಡಿರುವಂತೆ ಅತಿ ಲಂಬಿಸಿದ ವರ್ಣನಾಭಾಗಗಳನ್ನು ಬಿಟ್ಟು, ಇಲ್ಲಿ ಸಂಗ್ರಹಿಸಿ, ಭಾವರಸಗಳನ್ನು ಪುಷ್ಟಿಕರಿಸಿ, ವಾಕ್ಯಗಳನ್ನು ಪದ್ಯದ ಹದಕ್ಕಳವಡಿಸಿ, ಕಥೆಯನ್ನು ಸಾಧ್ಯವಾದಮಟ್ಟಿಗೆ ಎದ್ದು ಕಾಣುವಂತೆ ಮಾಡಿ, ಪಾತ್ರಗಳ ವಿಮರ್ಶನವನ್ನು ಮನಸ್ಸಿಗೊತ್ತಿ, ಸಂಸ್ಕೃತ ಸಮಾಸಗಳಲ್ಲಿ ಪ್ರೌಢಿಮೆಯನ್ನು ತೋರಿದರೂ ಕನ್ನಡದ ಅಂದವನ್ನು ಕೆಡಿಸದೆ-ಎಲ್ಲಕ್ಕೂ ಹೆಚ್ಚಾಗಿ ಛಂದಸ್ಸಿನ ಕವಿತಾವರಣಕ್ಕೆ ತಿರುಗಿಸಿ ಅಪೂರ್ವ ಕಾಂತಿಯನ್ನು ಕೊಟ್ಟು, ನಾಗವಮ್ಮನು ಕನ್ನಡದ ಮೊದಲನೆಯ ಪ್ರಣಯಕಾವ್ಯವನ್ನು ಕನ್ನಡಿಗರಿಗೆ ಕೊಟ್ಟಿದ್ದಾನೆ. ಪಂಪಾದಿಗಳು ಭಾರತ ರಾಮಾಯಣ ಗಳನ್ನೂ, ತೀರ್ಥಂಕರ ಪುರಾಣಗಳನ್ನೂ ಕೊಟ್ಟರೆ, ನಾಗವರನು ಬಾಣನನ್ನು ಕನ್ನಡಿಗರಿಗೆ ಪರಿಚಯ ಮಾಡಿಸಿ ಪ್ರೇಮಶೃಂಗಾರದ ರಸದೂಟವನ್ನು ಒದಗಿಸಿದ್ದಾನೆ.
ಇವನ ಭಾಷಾಂತರ ಕ್ರಮವನ್ನು ತಿಳಿಸಲು “ಸತಿ ”ಯ ಪದ್ಧತಿಯನ್ನು ಕುರಿತ ಬಾಣನ ವಚನಗಳನ್ನೂ, ನಾಗವಮ್ಮನ ಪದ್ಯಗಳನ್ನೂ ಕೊಡಬಹುದಾಗಿದೆ.
ಬಾಣ :
ಯದೇತದನುಮರಣಂ ನಾಮ ತದನಿಷ್ಟ ಲಂ! ಅವಿದ್ವಜ್ಞನಾಚರಿತ ಏಷಮಾರ್ಗ, ಮೋಹವಿಲಸಿತಮೇತತ್, ಅಜ್ಜಾನಪದ್ಧತಿರಿಯಂ, ರಭಸಾಚರಿತಮಿದಂ, ಕುದ್ರದೃಷ್ಟಿಗೇಷಾ, ಅತಿ ಪ್ರಮಾದೋsಯಂ, ಮೌರ್ಖ್ಯಸ್ನಲಿತಮಿದಂ, ಯದುಪರತೇ ಪಿತರಿ ಭಾತರಿ ಸುಹೃದಿ ಭರ್ತರಿ ವಾ ಪ್ರಾಣಾಃ ಪರಿತ್ಯಜ್ಯಂತೇ। ಸ್ವಯಂ ಚೇನ್ನ ಜಹತಿ ನ ಪರಿತ್ಯಾಜ್ಯಾಃ| ಅತ್ರ ಹಿ ವಿಚಾರವಾಣೇ ಸ್ವಾರ್ಥ ಏವ ಪ್ರಾಣಪರಿತ್ಯಾಗೋsಯಂ ಅಸಹಶೋಕವೇದನಾ ಪ್ರತೀಕಾರತ್ತಾದಾತ್ಮನಃ| ಉಪರತಸ್ಯ ತು ನ ಕಮಪಿ ಗುಣಮಾವಹತಿ ನ ತಾವತ್ತಸ್ಯಾಯಂ ಪ್ರತ್ಯುಜೀವನೋಪಾಯಃ, ನ ಧರ್ಮೋಪಚಯ ಕಾರಣಂ, ನ ಶುಭ ಲೋಕೋಪಾರ್ಜನಹೇತುಃ, ನ ನಿರಯಪಾತಪ್ರತೀಕಾರಃ, ನ ದರ್ಶನೋಪಾಯಃ, ನ ಪರಸ್ಪರ ಸಮಾಗಮನಿಮಿತ್ತಂ! ಅನ್ಯಾಮೇವ ಸ್ವಕರ್ಮಫಲಪಾಕೊಪಚಿತಾಮಸವವಶೋನೀ ಯತೇ ಭೂಮಿಂ ಅಸಾವಪ್ಯಾತ್ಮಘಾತಿನಃ ಕೇವಲಮೇನಸಾ ಸಂಯುಜ್ಯತೇ! ಜೀವಂಸ್ತು ಜಲಾಂಜಲಿ ದಾನಾದಿನಾ ಬಹೂಪಕರೋತ್ಯುಪರತಸ್ಮಾತ್ಮನಶ್ಯ, ಮೃತಸ್ತುನೋಭಯಸ್ಯಾಪಿ ಸ್ಮರ ತಾವತ್ ಪ್ರಿಯಾಮೇಕಪಟ್ಟಂ ತಿಂ ಭಗವತಿ ಭರ್ತರಿ ಮಕರಕೇತ್ ಸಕಲಾಬಲಾಜನ ಹೃದಯಹಾರಿಣಿ ಪರ ಹುತಭುಗ್ಗ ಗೇsಪ್ಯವಿರಹಿತಾಮಸಾಭಿಃ | ಪೃಥಾಂ ಚ ವಾರ್ಷೆಯಿಂ ಶೂರಸೇನ ಸುತಾಮಭಿರೂಪೇ ಸಾವಜ್ಞವಿಜಿತಸಕಲರಾಜಕಮೌಲಿ ಕುಸುಮವಾಸಿತಾಶೇಷ ಪಾದಪೀಠ ಪತ್ಯಾವಖಿಲಭುವನಬಲಿಭಾಗ ಭುಜಿ ಪಾಂಡ್ ಕಿಂದಮಮುನಿಶಾಪಾನಂಧನತಾಮುಪಗತೇsಪರಿತ್ಯಕಜೀವಿತಾಂ ಉತ್ತರಾಂ ಚ ವಿರಾಟ ದುಹಿತರಂ ಬಾಲಾಂ ಬಾಲಶಶಿನೀವ ನಯನಾನಂದ ಹೇತ ವಿನಯವತಿ ವಿಕಾಂತೇ ಚ ಪಂಚಮಭಿಮನ್ಯಾವಾಗತೇsಪಿ ಮೃತ ದೇಹಾಂ ದುಃಶಲಾಂ ಚ ಧೃತರಾಷ್ಟಮಹಿತರಂ ಭಾತೃಶ ಶೃಂಗಲಾಲಿತಾಮತಿಮನೋಹರೇ ಹರವರಪ್ರದಾನ ವರ್ಧಿತಮಹಿಮ್ಮಿ ಸಿಂಧುರಾಜೇ ಜಯದ್ರಥೀsರ್ಜು ನೇನ ಲೋಕಾಂತರಮುಪನೀತೇsಪ್ಯ ಕೃತಪ್ರಾಣಪರಿತ್ಯಾಗಾಂ! ಅನ್ಯಾಶ್ನ ರಕ್ಷಃ ಸುರಾಸುರ ಮುನಿ ಮನುಜಸಿದ್ದಗಂಧರ್ವ ಕನ್ಯಕಾಭರ್ತೃರಹಿತಾಃ ಶೂಯಂತೇ ಸಹಸ್ರಶೋವಿಕೃತ ಜೀವಿತಾಃ | ಪೊನ್ನು ಚೈತಾಪಿ ಜೀವಿತಂ ಸಂದಿಗೇsಪ್ಯಸ್ಯ ಸಮಾಗಮೋ ಯದಿ ಸ್ಯಾತ್ || ನಾಗವರ್ಮ:
ಸತ್ತವರೇಟ್ಟರೆ ಪೇಡ ಸತ್ತೊಡೆ ತಮ್ಮಅಲಿನಳವಿಯಂ ಮಬ್ಬಿಸಲೆಂ ದತ್ತವಳಿಕೆಯೋಳೆ ಸಾವರ್
ಸತ್ತವರವರ್ಗಾವ ಒತಮನಾಚರಿಸುವರೋ ! ಅವರವರ್ಗಾದ ಕರ್ಮಫಲಮಿರ್ಪೆಡೆ ಬೇಜದಂದೆ ಮೇಲೆ ಕೂ ಡುವರೊಡಸತ್ತರೆಂಬೊಡದು ಕೂಡದು ಕೇವಲಮಾತ್ಮಘಾತ ದೋ
೪೯೧
ಕನ್ನಡ ಸಾಹಿತ್ಯದ ಚರಿತ್ರೆ
ಷವೆ ಪೆಜತಿಲ್ಲ ಸತ್ತರೊಡಸಾಯದೆ ನಿಂದೊಡೆ ಮಾಡಲಕ್ಕುಮಿ ಇವರ್ಗೆ ಜಲಾಂಜಲಿಪ್ರಕೃತಿ ದಾನವಿಶೇಷಮಹೋಪಕಾರಮಂ ಸತ್ತಳೆ ಕಾಮದೇವನ ಪರೋಕ್ಷದೊಳಾ ರತಿ ಪಾಂಡು ಸತ್ತೊಡಂ ಸತ್ತಳೆ ಕುಂತಿ ಮತ್ತಮಭಿಮನ್ಯುಕುಮಾರಕನಂದು ಸತ್ತೋಡೇ ನುತ್ತರೆ ಸತ್ತಳೇ ನೆಗಟ್ಟಿ ಸಿಂಧುನೃಪಾಲಕನಂದು ಸತ್ತೊಡಂ
ಸತ್ತಳೆ ದುಶ್ಯಳಾವನಿತೆಯೆಂಬಿವು ನೀವಜದಂದವಲ್ಲವೇ ಬಾಣನ ಕಥಾಪ್ರತಿಪಾದನಕ್ರಮವನ್ನನುಸರಿಸಿದ್ದಾನೆ. ಆಯಾ ಪಾತ್ರಗಳ ಮೂಲಕವೇ ಕಥೆಯೊಳಗಿನ ಕಥೆಯನ್ನು ಹೆಣೆದಿದ್ದಾನೆ. ಜನ್ಮಾಂತರ ಕಥೆಗಳು ಇದ್ದಹಾಗೆ ಇವೆ. ಬಾಣಭಟ್ಟನೂ, ಆತನ ಮಗ ಭೂಷಣಭಟ್ಟನೂ ಇಷ್ಟೊಡಾಗಿ ಬರೆದ ಮೂಲವನ್ನು ಒಕ್ಕೆಯಾಗಿ ಒಂದು ವ್ಯಕ್ತಿತ್ವದಲ್ಲಿ ನಿಮ್ಮಿಸಿ ದ್ದಾನೆ. ಸಂಸ್ಕೃತಸಾಹಿತ್ಯ, ಉಪನಿಷತ್ತು, ವ್ಯಾಸ ವಾಲ್ಮೀಕಿಗಳು, ಭಾಸ ಕಾಳಿದಾಸರ ರಸಪ್ರಧಾನತೆಯನ್ನೂ, ಸರಳತೆಯನ್ನೂ ಹಿಂದಿಟ್ಟು, ಚಮತ್ಕಾರ ಪ್ರೌಢಿಮ ಶಬ್ದಾರ್ಥಾಲಂಕಾರಗಳಿಗೆ ಹೆಚ್ಚು ಪ್ರಾಶಸ್ಯವನ್ನು ಕೊಟ್ಟ ಹೊಸರುಚಿಯ ಪ್ರತಿಬಿಂಬವಿದರಲ್ಲಿ ತಕ್ಕಷ್ಟು ಇದ್ದರೂ, ಕನ್ನಡಿಸುವಾಗ ಬಿಡುವುದು ಬಿಟ್ಟು, ಇಟ್ಟದ್ದು ಎದ್ದು ನಿಂತು, ಎರಡು ಪ್ರೇಮಕಥೆಗಳ ಪಾತ್ರರಸಪೋಷಣೆಗಳು ಮುಂದಾಗಿ, ಕನ್ನಡದ ಸೌಲಭ್ಯದಲ್ಲಿ ಕಾದಂಬರಿ ನಾಗವಮ್ಮನ ನುಡಿಬೆಡಗಿನಲ್ಲಿ ನಿರ್ದೋಷವೂ ಸೇವ್ಯವೂ ಆಗಿದೆ.
ರನ್ನ -೯೯೩
ಪಂಪ, ಪೊನ್ನ, ರನ್ನರು ರತ್ನತ್ರಯಗಳೆಂದ, ಹೇಳುವ ವಾಡಿಕೆ ಒಂದಿದೆ. ಇದಕ್ಕೆ ರನ್ನನೂ, ನಾಗಚಂದ್ರನೂ ಕಾರಣರು; ರನ್ನನ ಮಾತು :
ಜಗದೊಳಗಾದಿಪುರಾಣಂ ನೆಗುದು ಮುನ್ ಪಂಪನಿಂದೆ ಪೊನ್ನಿಗನಿಂದಂ ನಗಟ್ಟುದು ಶಾಂತಿಪುರಾಣಂ ನೆಗುದು ಕವಿರತ್ನನಿಂದಮಜಿತಪುರಾಣಂ ಉಪಮಾತೀತಮೆನಿಪ್ಪಾ ದಿಪುರಾಣದ ರೇಖೆಗಂ ಬರಲ್ ನೆಗುಮೆ ಸಾಂ ತಿಪುರಾಣದ ರೇಖೆಗಮಜಿ ತಪುರಾಣದ ರೇಖೆಗಂ ಪುರಾಣದ ಕೃತಿಗಳೇ?
ಕವಿಜನದೊಳ್ ರತ್ನತ್ರಯ ಪವಿತ್ರರೆನೆ ನೆಗದ್ದೆ ಪಂಪನುಂ ಪೊನ್ನಿಗನುಂ ಕವಿರತ್ನನುಮೀ ಮವರ್
ಕವಿಗಳ್ ಜಿನಸಮಯದೀಪಕರ್ ಪೆಜರೊಳರೇ ಇದನ್ನೆತ್ತಿಕೊಂಡು ನಾಗಚಂದ್ರನು
(ಅಜಿತ. ೧೨-೩೨ ೩೭)
ಮನ್ನಿಸುಗೆ ಕೃತಿಗೆ ಸೌಭಾ ಗೊನ್ನತಿಯಂ ಸುಕವಿ ಪಂಪನಾದಿಪುರಾಣಂ
ಪೊನ್ನನ ಶಾಂತಿಪುರಾಣಂ ರನ್ನನ ಕೃತಿರತ್ನಮನಿಸಿದಜಿತಪುರಾಣಂ
(ಮಲ್ಲಿನಾಥ, ೧-೨೫)
೪೯೨
ಶ್ರೀ ಸಾಹಿತ್ಯ
ರನ್ನನು ಅಜಿತಪುರಾಣವನ್ನು ೯೯೩ರಲ್ಲಿ ಬರೆದುದಾಗಿ ತಾನೇ ಹೇಳಿರುವನು:
ಶಕವರ್ಷ೦ ಪಂಚದಶಾ ಧಿಕ ನವಶತಮಾಗೆ ವಿಜಯಸಂವತ್ಸರ ಕಾ ರ್ತಿಕ ನಂದೀಶ್ವರದಿನದೊಳ್ ಪ್ರಕಟಿಸಿದುದು ರತ್ನನಿಂದಮಜಿತಪುರಾಣಂ
(೧೨-೧೪)
ಸೌಮ್ಯ ಸಂವತ್ಸರದಲ್ಲಿ ತಾನು ಉದಯಿಸಿದೆನೆಂದು (೧೨-೪೭) ಹೇಳಿರುವುದರಿಂದ ೯೪೯ರಲ್ಲಿ ಹುಟ್ಟಿ
ದಂತಾಯಿತು; ಇದನ್ನು ಬರೆದಾಗ ೪೪ ವಯಸ್ಸಾಯಿತು.
ಗುರುಗಳಜಿತಸೇನಾಚಾರ್ಯರಿಂದ್ರಾದಿವಂದ್ಯಾ ಚರಿತರಜಿತಶೌರ್ಯಸ್ವಾಮಿ ಚಾವುಂಡರಾಯಂ
(೪೮) ಎಂಬ ಮಾತು ಚಾವುಂಡರಾಯನ ಹತ್ತಿರಕ್ಕೆ ರನ್ನನನ್ನು ತರುತ್ತದೆ. ಬೆಳ್ಕೊಳದಲ್ಲಿ ಬಂಡೆಯಮೇಲೆ ಈತನ ಹೆಸರೂ ಕೆತ್ತಿದೆ: “ ಶ್ರೀಕವಿರತ್ನಂ” ಎಂದು.
ಅಜಿತಪುರಾಣದಲ್ಲಿ ತಾನು ಮತ್ತೂ ಮೂರು ಗ್ರಂಥಗಳನ್ನು ಬರೆದಿರುವುದಾಗಿ ಹೇಳಿದ್ದಾನೆ :
ಕರಮೆಸೆದುವು ರತ್ನತ್ರಯ
ಪರಿಕಲ್ಪದೆ ಪರಶುರಾಮಚರಿತಂ ಚಕ್ಕೆ ಶ್ವರಚರಿತಮಜಿತತೀರ್ಥ ಶ್ವರಚರಿತಂ ರತ್ನನಿಂದ ಭುವನತ್ರಯದೊಳ್
(೧೨-೪೨)
ಪರಶುರಾಮ ಚರಿತದಲ್ಲಿ ಜೈನಸಂಪ್ರದಾಯಕ್ಕನುಸಾರವಾಗಿ ಕಥೆಯಿರಬಹುದು : ಕೃತಿಪತಿ “ಸಮರ ಪರಶುರಾಮ”ನೆಂಬ ಬಿರುದುಳ್ಳ ಚಾವುಂಡರಾಯನಿರಬಹುದು ; ಹಾಗೆಯೇ, ಚಕ್ರೇಶ್ವರ ಚರಿತವೂ “ ಗಂಗಮಂಡಲ ಚಕ್ರೇಶ್ವರ ಕಟಕೋತ್ತಮ ನಾಯಕ ವಿರಚನೆಯಿನನರ್ತ್ಯರತ್ನಮಾದಂ ರತ್ನಂ” ಎಂಬ ಸಾಹಸಭೀಮ ವಿಜಯದ ವಾಕ್ಯವನ್ನು ನೋಡಿದರೆ ಚಾವುಂಡರಾಯನ ವಿಷಯವಾದ ಗ್ರಂಥವಿರ ಬಹುದೆಂದು ಕವಿಚರಿತೆಕಾರರು ಊಹಿಸುತ್ತಾರೆ. ಇವೆರಡು ಗ್ರಂಥಗಳೂ ಸಿಕ್ಕಿಲ್ಲ.
ಸಾಹಸಭೀಮವಿಜಯ (ಅಥವಾ ಗದಾಯುದ್ಧ) ಈ ಚಕ್ರೇಶ್ವರ ಚರಿತೆಯಾಗಿದ್ದರೂ ಇರ ಬಹುದು : ಏಕೆಂದರೆ ಅದರ ಆಶ್ವಾಸಾಂತ ಗದ್ಯಗಳಲ್ಲಿ “ ಚಾಳುಕ್ಯ ಚಕ್ರವರ್ತಿ ಶ್ರೀ ಸಾಹಸಭೀಮ ವಿಜಯದೊಳ್ ” ಎಂದಿದೆ.
ಕೃತಿ ನಗ ಗದಾಯುದ್ಧಂ ಕೃತಿಗೀಶ್ವರ (ಶಂ ?) ಚಕ್ರವರ್ತಿ ಸಾಹಸಭೀಮಂ
(೧-೩೨) ಎಂಬ ಮಾತೂ ಇದಕ್ಕೆ ಸಹಕಾರಿಯಾಗುತ್ತದೆ. ಆಗ್ಗೆ ಗದಾಯುದ್ಧ ಅಜಿತ ಪುರಾಣಕ್ಕೆ ಮುನ್ನವೇ ಬರೆದಿರಬೇಕಾಗುತ್ತದೆ. ಇದರ ಕಾಲವನ್ನು ತಿಳಿಸುವ ಪದ್ಯ ಕೆಟ್ಟು ಸಂದೇಹಾಸ್ಪದವಾಗಿದೆ:
ಶಕ ಸಮಗತಿ ಋತುಯುಗ ಶಶಿ | ನಿಕರಾಂಕಂ ಚಿತ್ರಭಾನು [ಸಂವತ್ಸರ] ಕಾ ರ್ತಿಕ ಸಿತ ಸಪ್ತಮಿ [ದಿನದೊಳ್] ಸುಕರಂ ಬುಧಸೇವ್ಯಮಾಯು ರನ್ನನ ಕಾವ್ಯಂ21
(೧-೨೩.)
21 ಶ್ರೀ ರಾಮಾನುಜಯ್ಯಂಗಾರರ ತೃತೀಯ ಮುದ್ರಣ, ೧೯೨೫
೪೯೩
ಕನ್ನಡ ಸಾಹಿತ್ಯದ ಚರಿತ್ರೆ
ಚಿತ್ರಭಾನುವನ್ನು ಮುಖ್ಯವಾಗಿಟ್ಟುಕೊಂಡರೆ ಕ್ರಿ. ಶ. ೯೮೨ ಆಗುತ್ತದೆ : : ಶಕಸಂಖ್ಯೆ ಸ್ಪಷ್ಟ ವಾಗಿಲ್ಲ. ಶಕ (೬+೨+೧) =೯,೪,೨ ಎಂದಾದರೆ ೧೦೨೦ ಆಗುತ್ತದೆ. ಗತಿ ಸಮ ಎಂದೊದಿದರೆ ಶಕ ೯೨೪ ಎಂದರೆ ೧೦೦೨, ೯೦೪ ಆದರೆ ೯೮೨ ಆಗುತ್ತದೆ. ಗ್ರಂಥದ ವೀರರಸವನ್ನೂ ಉತ್ಕೃಷ್ಟ ಕವಿತಾಶಕ್ತಿಯನ್ನ ನೋಡಿದರೆ ಕವಿ ೩೩ ವರ್ಷದ ರನ್ನನೇ ಎಂದು ಊಹಿಸಬೇಕಾಗುತ್ತದೆ. ಆಗ ರಾಜನು ತೈಲಪನಾಗುತ್ತಾನೆ (೯೭೩-೯೯೭) ; ಸತ್ಯಾಶ್ರಯನ ಕಾಲ ೯೯೭-೧೦೯.
ಹೀಗೆ ಉಳಿದಿರುವ ರನ್ನನ ಎರಡು ಗ್ರಂಥಗಳಲ್ಲಿ ಅಜಿತಪುರಾಣ ೯೯೩ ಖಂಡಿತ ; ಸಾಹಸ ಭೀಮ ವಿಜಯ, ೯೮೨ ? ಸಂದೇಹ.
ರನ್ನನ ಜೀವನಚರಿತೆಯನ್ನು ಅವನ ವಾಕ್ಯಗಳಿಂದಲೇ ಕಟ್ಟಬಹುದು. ಸೌಮ್ಯಸಂವತ್ಸರದಲ್ಲಿ ಹುಟ್ಟಿದನು : ಮುದುವೊಳಲಲ್ಲಿ-(ಈಗಿನ ಮುಧೋಳ).
ಬೆಳುಗಲಿಯಯ್ಯಅಳ ಗ್ಗಳಮನಿಸುವ ಜಂಬುಮಿಂಡಿಯೇರ್ಕಂ ತಿಳಕಮನ ನೆಗಟ್ಟಿ ಮುದುವೋಲಿ ಲೋಳೆ ಪುಟ್ಟಿ ಸುಪುತ್ರನೆನಿಸಿದಂ ಕವಿರತ್ನಂ
(ಅಜಿತ, ೧೨-೪೪)
ಬಳೆಗಾರರ ವಂಶದಲ್ಲಿ
ಬೆಳುಗರೆ ನಾಡೊಳ್ ಪುಟ್ಟಿದ, ಬಳೆಗಾಜರ ಕುಲದೊಳೆಂದ, ಜಿನಶಾಸನಮಂ ಬೆಳಗುವ ಚಕ್ರೇಶ್ವರ ಮಂ ಡಳೇಶ್ವರಂ ಬೆಸಸೆ ನೆಗಟ್ಟಿ, ಕವಿ ಕವಿರತ್ನಂ
(೪೩) ದ್ವಿಜವಂಶಧ್ವಜ ವೈಶ್ಯ ಧ್ವಜರೆನ್ನದರೊಳರೆ ಪಂಪನಂ ರತ್ನನುಮಂ
(೩) ದಕ್ಷಿಣಕ್ಕೆ ಹೋಗಿ, ಶ್ರವಣಬೆಳ್ಕೊಳದಲ್ಲಿ ಅಜಿತಸೇನಾಚಾರರಿಂದ ವಿದ್ಯೆಯನ್ನೂ, ಚಾವುಂಡರಾಯನಿಂದ ಆಶ್ರಯವನ್ನೂ ಪಡೆದನು. ಹೆಸರನ್ನು ಬೆಟ್ಟದಮೇಲೆ ಕೆತ್ತಿಸಿದನು. ಗೊಮ್ಮಟ ವಿಗ್ರಹವನ್ನು ಪೂಜಿಸಿದನು. ಅಜಿತಪುರಾಣವನ್ನು ಬರೆಯಿಸಿದ ತನ್ನ ಆಶ್ರಯದಾತೆ ಅತ್ತಿಮಬ್ಬೆ ಬೆಟ್ಟವನ್ನು ಹತ್ತಿ
ದ್ದನ್ನು ಹೇಳಿರುವನು:
ಉನ್ನತ ಕುಕ್ಕುಟೇಶ್ವರ ಜಿನೇಶ್ವರನಂ ಜಿನಭಕ್ಕೆ ಪೋಗಿ ಕಾ ಇನ್ನೆಗಮನ್ನಮಂ ಬಿಸುಟು ಪರ್ವತಮಂ ಪರಿದೇ ತಜ್ಜಿನಾ ಸನ್ನದೊಳತ್ತಿಮಬ್ಬೆಗೆ ಪಥಶ್ರಮಮಾಚಿಲಕಾಲವೃಷ್ಟಿಯಾ
ಮೈನ್ನದೊ ದೇವಭಕ್ತಿಗದು ಚೋದ್ಯಮೆ ಕೊಳ್ಳವೆ ಪುಷ್ಪವೃಷ್ಟಿಗಳ (೧-೧) ತನಗೆ ಅಕ್ಕಿ, ಶಾಂತಿ ಎಂದು ಇಬ್ಬರು ಹೆಂಡತಿಯರು; ತನ್ನ ಮಕ್ಕಳಿಬ್ಬರಿಗೆ ತನ್ನಿಬ್ಬರು ದಾತರ ಹೆಸರಿಟ್ಟು, ರಾಯ, ಅತ್ತಿಮಬ್ಬೆ ಎಂದು ಕರೆದು, ಅವರಿಗೆ ತನ್ನ ಎರಡು ಕೃತಿಗಳನ್ನು ಅಂಕಿತ ಮಾಡಿರುವನು.
(೧೨-೫೦೫೩) ನೆಗಟ್ಟಿ ವರಿರ್ವರ ಪೆಸರ್ಗಂ ನೆಗಟ್ಟುವು ತನ್ನೆರಡುಮುದೃಕೃತಿಗಳ ರಾಯಂ
೪೯೪
ಶ್ರೀ ಸಾಹಿತ್ಯ
ಮಗನತ್ತಿಮಬ್ಬೆ ಮಗಳೆನೆ ನೆಗಟೀಂ ಸಂತಾನವೃದ್ಧಿಯಿಂ ಕವಿರತ್ನಂ
(೫೩) ಮೊದಲು ಸಾಮಂತರಲ್ಲಿಯೂ ಮಂಡಲೇಶ್ವರರಲ್ಲಿಯೂ ಇದ್ದು, ಕಡೆಗೆ ಚಾಳುಕ್ಯ ಚಕ್ರವರ್ತಿ ತೈಲಪನಲ್ಲಿ ಸೇರಿ, ಯುವರಾಜನಾದ ಸತ್ಯಾಶ್ರಯನನ್ನು ನಾಯಕನಾಗಿಟ್ಟುಕೊಂಡು ಸಾಹಸಭೀಮ ವಿಜಯವನ್ನು ಬರೆದು ಕವಿಚಕ್ರವರ್ತಿ ಎಂಬ ಬಿರುದನ್ನೂ, ರಾಜಮಯ್ಯಾದೆಗಳನ್ನೂ, ಬತ್ಯಗಾವೆ ಎಂಬ ಜಹಗೀರನ್ನೂ ಪಡೆದನು (೧೨-೪೯). * ಕವಿರತ್ನ ” “ ಕವಿತಿಲಕ "ನಾದನು. ಈ ತನ್ನ ಕವಿತಾ ಪ್ರಶಸ್ತಿಯನ್ನು ನಿಶ್ಚಂಕೆಯಿಂದ ಘೋಷಿಸಿರುವನು (ಪ್ರಶಸ್ತಿ ತಾನೇ ಬರೆದದ್ದಾದರೆ).
ಅಜಿತಪುರಾಣದಲ್ಲಿ:
ಕವಿಮುಖಚಂದ್ರಂ ಕವಿಚ| ಕ್ರವರ್ತಿ ಕವಿರಾಜಶೇಖರಂ ಕವಿರಾಜಂ ಕವಿಜನ ಚೂಡಾರತ್ನಂ ಕವಿತಿಲಕಂ ಕವಿಚತುರ್ಮುಖಂ ಕವಿರತ್ನ ಕೊಂಡಾಟದ ಸಾಮಂತರ ಮಂಡಳಿಕರ ಸಕಲ ಚಕ್ರವರ್ತಿಗಳ ಸಭಾ ಮಂಡಲದೊಳುಭಯಕವಿಮುಖ ಮಂಡನಮಾಗಿರ್ಪ ರತ್ನಮೀ ಕವಿರತ್ನಂ
ವಸುಧೆಯೊಳಗೊಂದು ರತ್ನಮಿ ದೆಸೆದಿರ್ದುದು ಪಲವು ರತ್ನಮಿಲ್ಲೆಂಬಿನಮೇಂ ಮಸುಳಿಸಿದನೋ ಬಹುರತ್ನಾ ವಸುಂಧರಾ ಎಂಬ ವಾಕ್ಯಮಂ ಕವಿರತ್ನಂ
ಅವನಿಪರೊಳ್ ನಿಜಭುಜ ಚ ಕ್ರವರ್ತಿ ರಣಜಯಕೆ ತೈಲನೆಂತಸಹಾಯಂ ಕವಿಗಳೊಳಮಂತೆ ಕವಿ ಚ ಕ್ರವರ್ತಿ ಕವಿರತ್ನನಂತು ಕೃತಿಗಸಹಾಯಂ
...ಕವಿತಾಸಾಮ್ರಾಜ್ಯಮಂ ತಾಳಿದು «ತಿಯಿಂದಂ ಕವಿಚಕ್ರವರ್ತಿವೆಸರೇಂ ರನ್ನಂಗೆ ಮೆಯ್ದೆತ್ತುದೋ
(೧-೮೧೮೫)
ಕವಿಗಳಿವರಿರ್ವರೇ ಪು ಣ್ಯವಂತರಿರ್ವರ ಕೃತಾರ್ಥರಿರ್ವರ ಸುಭಗರ್ ಕವಿತಾಗುಣಾರ್ಣವ ಮೇಣ್ ಕವಿರತ್ನಂ ಮೇಣ್ ಗುಣಕ್ಕೆ ಮಚ್ಚರಮುಂಟೇ ! ತ್ರಿಜಗದೊಳಾದಿಪುರಾಣಮ ನಜಿತಪುರಾಣಮುಮನೆಸೆಯೆ ಪೇಟ್ಟು ದಂದಂ ದ್ವಿಜವಂಶಧ್ವಜ ವೈಶ್ಯ ಧ್ವಜರೆನ್ನದರೊಳರೆ ಪಂಪನಂ ರತ್ನನುಮಂ
(೧೨-೩೯, ೩೯೦)
೪೯೫೫
ಡ ಸಾಹಿತ್ಯದ ಚರಿತ್ರೆ
ರಾಯುದ್ಧದಲ್ಲಿ:
ಮೊದಲೊಳ್ ಸಾವಂತರಿನಿನಿ ಸುದಿತೋದಿತನಾಗಿ ಮಂಡಲೇಶ್ವರದ ಭ್ಯುದಯಪರನೆನಿಸಿ ಚಕ್ರಿಯೆ ನುದಯಪರಂಪರೆಯನೆಯ್ದಿ ದಂ ಕಏತನ್ನಂ ಪಡೆಯೆಡೆಯ ಕಡೆಯ ಬಡವರ್ ಕುಡೆ ಪಡೆದನೋ ಚಕ್ರವರ್ತಿಯೊಳ್ ತೈಲಪನೂಲ್ ಪಡೆದ ಮಹಿಮೋನ್ನತಿಯಂ ಪಡೆದಂ ಕವಿಚಕ್ರವರ್ತಿವೆಸರಂ ರನ್ನ೦
ಆರಾತೀಯ ಕವೀಶ್ವರ ರಾರುಂ ಮುನ್ನಾರ್ತರಿಲ್ಲ ವಾಗ್ಗೇವಿಯ ಭಂ ಡಾರದ ಮುದ್ರೆಯನೊಡೆದು ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ ಕನ್ನಡಮೆರಡುನೂ ಕನ್ನಡಮಾ ತಿರುಳ ಕನ್ನಡಂ ಮಧುರಮ್ಮೊ ತನ್ನಂ ಸಂಸ್ಕೃತವೆನೆ ಸಂ ಪನ್ನಂ ನೆಗಟ್ಟು ಭಯಕವಿತೆಯೊಳ್ ಕವಿರನ್ನಂ ರತ್ನ ಪರೀಕ್ಷಕನಾಂ ಕೃತಿ ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ ರತ್ನಮುಮಂ ರನ್ನನ ಕೃತಿ ರತ್ನಮುಮಂ ಪೇಟ್ ಪರೀಕ್ಷಿಪಂಗೆಂಟೆರ್ದೆಯೇ
(೧-೩೪, ೩೭, ೩೮, ೪೨, ೪೪)
ಅಜಿತ ಪುರಾಣ (೯೯೩) : ಈ ಧಾತ್ಮಿಕಗ್ರಂಥವನ್ನು ರನ್ನನು ೯೯೩ರಲ್ಲಿ ದಾನಚಿಂತಾಮಣಿ ಯಾದ ಅತ್ತಿಮಬ್ಬೆಗಾಗಿ ಬರೆದನು. ಪಂಪನ ಮತ್ತು ಪೊನ್ನನ ಪುರಾಣಗಳ ಜೊತೆಗೆ ಇದೂ ಸೇರುವು ದೆಂದು ಹೊಗಳಿರುವನು. ಭವಾವಳಿಯ ತೊಡಕಿಲ್ಲದ ಎರಡನೆಯ ತೀರ್ಥಕರನನ್ನು ಆಯು ಕೊಂಡು ವೈರಾಗ್ಯದ ಪರಮಾವಧಿಯ ವರ್ಣನೆಯಿಂದಲೂ, ಭಕ್ತಿಯ ಪರಾಕಾಷ್ಟೆಯಿಂದಲೂ ಲಘುವಾದ ಕಾವ್ಯ ವೊಂದನ್ನು (೧೨ ಆಶ್ವಾಸ, ೭೮೦ ಪದ್ಯಗಳು) ನಿಶ್ಮಿಸಿದ್ದಾನೆ. ಸಗರ ಚಕ್ರವರ್ತಿಯ ಕಥೆಯನ್ನು ಜೋಡಿಸಿ ದ್ದಾನೆ. ಮತಪ್ರಕ್ರಿಯೆಗಳಿಂದಲೂ, ಪುರಾಣಪ್ರತಿಪಾದನಕ್ರಮದಿಂದಲೂ, ಕವಿಗೆ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಹೆಚ್ಚು ಸಿಕ್ಕಿಲ್ಲ: ಆದರೂ ವೈರಾಗ್ಯವನ್ನು ಬೋಧಿಸುವ ಭಾಗದಲ್ಲಿ (೨-೫೦ v೧೧೨) ಕೆಲವು ಪದ್ಯಗಳು ಕನ್ನಡ ಸಾಹಿತ್ಯದಲ್ಲಿ ಎಣೆಯಿಲ್ಲದುವು ಎಂದು ಹೇಳಬಹುದು. ಅತ್ತಿಮಬ್ಬೆಯನ್ನು ಸ್ತುತಿ ಸುವ ಭಾಗವೂ ಗೌರವ ವಿಶ್ವಾಸಗಳಿಂದ ಕೂಡಿ ಹೃದಯಂಗಮವಾಗಿವೆ;22 ಆ ಕಾಲದ ಶ್ರೀಮಂತರು
22 ಶಕ ೯೨೯ನೆಯ ಲಕ್ಕುಂಡಿಯ ಶಾಸನವನ್ನು ನೋಡಿ, ಅಜಿತಪುರಾಣದ “ ಉನ್ನತ ಕುಕ್ಕು ಟೇಶ್ವರ ” ಎಂಬ ಪದ್ಯ ಇದರಲ್ಲಿದೆ. (Bombay Karnataka Inscriptions, Vol. 1, Part I, No. 52)
೪೯
ಶ್ರೀ ಸಾಹಿ
ಮತಪ್ರಚಾರಕ್ಕಾಗಿ ಮಾಡುತ್ತಿದ್ದ ಸಹಾ ಗುವೂ, ಅವರ ಭಕ್ತಿಯೂ, ಜೀವನಚಿತ್ರವೂ ಗಂಭೀರವಾ ಬಂದಿವೆ. ಅತ್ತಿಮಬ್ಬೆಯ ಹಿರಿಯರು ಮಲ್ಲಣ ಪುನ್ನಮಯ್ಯರು ಪೊನ್ನನಿಂದ ಶಾಂತಿಪುರಾಣವನ್ನು ಬ ಯಿಸಿದರು; ತಾನು ಅದರ ಪ್ರತಿಗಳನ್ನು ಮಾಡಿಸಿದ್ದಲ್ಲದೆ, ರನ್ನನಿಂದ ಅಜಿತಪುರಾಣವನ್ನು ಬರಸಿದಳ
ಪಂಪ ಪೊನ್ನರ ಪ್ರಭಾವವನ್ನು ರನ್ನು ಸಂಪೂರ್ಣವಾಗಿ ಹೀರಿದ್ದನು: ಆದರೆ ತನ್ನದೇ ಆ ಒಂದು ಸರಳತೆಯನ್ನೂ, ರಸಘಟ್ಟಿಯನ್ನೂ, ತಿಳಿನುಡಿಯನ್ನೂ ಈ ಕಾವ್ಯದಲ್ಲಿ ಪ್ರದರ್ಶಿಸಿರುವನ ಹೇಳಿದ ಅರ್ಥವನ್ನು ಒತ್ತಿ ಒತ್ತಿ ಮನಸ್ಸಿಗೆ ಹಿಡಿಸುವ ಶಕ್ತಿ ರನ್ನನ ಒಂದು ವೈಶಿಷ್ಟ್ಯ.
ಜೈನಧರವನ್ನು ವಿಶದವಾಗಿ ಸಾರವಾದುದೊಂದನ್ನೂ ಬಿಡದಂತೆ ಹೇಳಿರುವೆನೆಂದು ತಿಳಿಸಿದ್ದಾ ಒಟ್ಟಿನಮೇಲೆ ಈ ಗ್ರಂಥದಲ್ಲಿ ಕವಿಗಿಂತಲೂ ಶಾಸ್ತ್ರಜ್ಞನು ಹೆಚ್ಚು ಕಾಣಿಸಿಕೊಳ್ಳುವನು. ಗದಾಯುದ್ಧ ಯೌವನದ ಉತ್ಸಾಹವೂ ಕಳಕಳಿಯ ಕವಿತಾವೇಶವೂ ಇದರಲ್ಲಿ ಮುಳುಗುವ ಸೂರನ ಕಾಂತಿಯ ತಂಪುಗೊಂಡಿವೆ.
ಈ ಧೀರ ಶಾಂತ ಶೈಲಿಗೆ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ: ಅವು ನೆಗಿಯೆಂಬುಭಯಕಾಂಡಮೆ ಮುಕ್ತಿಪಥಕ್ಕೆ ಹೇತುವಂ
ದಳಪುವರನ್ಯರಂತವರೊಳೇನೋ ಜಿನಾಗಮಮಂತುಟಲ್ಕು ಮಿ ಕೃಜವಿನ ಮಿಕ್ಕ ನಂಬುಗೆಯ ಮಿಕ್ಕ ನೆಗಿಯ ಕೂಟದಿಂದಮಾ
ದಜಿವನಿತರ್ಕಮಾನೆಜಗಿ ಪೊರ್ದುವೆನಕ್ಕಪವರ್ಗಮಾರ್ಗಮಂ
ಬಳದೇವ ವಾಸುದೇವರ ನಿಪುದು ಗುಣದೊಳು ರಾಮಲಕ್ಷ್ಮಣರಂ ಪಂ ಪಿಪುದು ಭೀಮಾರ್ಜುನರುಮ ನಿಚಿಪುದು ಮಲ್ಲಪನ ಪೊನ್ನಮಯ್ಯನ ಚರಿತಂ ಗುರು ಜಿನಚಂದ್ರಮುನೀಂದ್ರರ ಪರೋಕ್ಷದೊಳ್ ತಮುತಿರ್ವರುಂ ಪೊನ್ನಿಗನಿಂ ಬರೆಯಿಸಿದ ಸಕಳೊರ್ವಿಗೆ. ಪರೆಯಿಸಿದರ್ ಸಲೆ ಪುರಾಣಚೂಡಾಮಣಿಯಂ
(೧-೩೩,೩
(೧೪
ಎರಡೆ ವಲಂ ಕುಲವಧುಗಾ ಚರಿಸಲ್ ಪತಿಯಿಂ ಪರೋಕ್ಷದೊಳ್ ಜಿನದೀಕ್ಷಾ ಚರಣಂ ಮೇಣ್ ಶುಭಚರಿತದೆ ಮರಣಂ ಮೇಣಳಿಪಿನಿಂದೆ ಬಾಲ್ವುದು ದೊರೆಯೇ! ಶ್ರೀ ಜಿನಧರ್ಮವಿಭೂತಿ ವಿ ರಾಜಿತೆಯಂ ಚಕ್ರವರ್ತಿ ಪೂಜಿತೆಯಂ ಭ ವ್ಯಾಜಿರಕಲ್ಪಲತಾವಿ ಭಾಜಿತೆಯಂ ಪೊಗು ದಾನಚಿಂತಾಮಣಿಯಂ
ಉತ್ತಮಗೋದ್ಭವೆ ಸ ದೈತೆ ಮಹಾಸತಿ ವಿನೇಯಚೂಡಾಮಣಿ ತಾ ನೆ ದರೆ, ಪಿಕ್ಕುವೊ
ಡತ್ತಿಯ ಪಣ್ಣತ್ತಿಮಬ್ಬೆಯಲ್ಲದರ ಗುಣಂ
10-------------------------
೪೯೭
ಕನ್ನಡ ಸಾಹಿತ್ಯದ ಚರಿತ್ರೆ
ಸತಿಯರೊಳಗ್ಗಳದವನೀ ಸುತೆ ಸೀತೆ ಪುಲೋಮಸುತೆ ಶಚೀದೇವೆ ಕುಕೃತ್ ಸುತೆ ಗಂಗೆ ದಕ್ಷಸುತೆ ಭವ ಸತಿಯ ಸಮನಪ್ರೊಡಕ್ಕೆ ಮಲ್ಲಪಸುತೆಯೊಳ್ ಅಂಗನೆಯರೊಳಗೆ ಶೀಲ ಗು ಣಂಗಳನೊಳಕೊಂಡು ನೆಗದ್ದೆ ರಾಮಾಂಗನೆ ಕಾ ಮಾಂಗನೆ ಪಂಕೇರುಹನಾ ಭಾಂಗನೆ ಸಮನಕ್ಕೆ ನಾಗದೇವಾಂಗನೆಯೊಳ್ ನಂಬುಗೆ ಜಿನಮತದಲ್ಲಿ ಮ ನಂಬುಗೆ ದರ್ಶನವಿಶುದ್ದೆಯೆನೆ ನೆಗಟ್ಟಿ ಜಯಂ ತಾಂಬಿಕೆ ಸಲೆ ನೆಗಟ್ಟಜಿತಜಿ ನಾಂಬಿಕೆ ಸಮನಪ್ರೊಡಕ್ಕೆ ತೈಲಾಂಬಿಕೆಯೊಳ್ ಶೀಲಾಲಂಕೃತೆಯಂ ಗುಣ
ಮಾಲಾಲಂಕೃತೆಯನಾ ಮಹಾಸತಿಯಂ ಶ್ರೀ ತೈಲಾಂಬಿಕೆಯಂ ಪೆಸರ್ಗೊಳೆ
ಬಾಲೆಯರಂ ಖಳಕಲಂಕಮೇಂ ಪೊರ್ದುಗುವೇ
ಅಳುರದು ಕಿರ್ಚು ಮುಟ್ಟದು ವಿಷಾಹಿ ಮಹಾಸತಿಯಿರ್ದ ಮಂಡಲಂ ಬೆಳೆವುದು ಬೇಡಿದಂತೆ ಮಳೆ ಕೊಳ್ಳುದೆನಿಪ್ಪ ಜಸಕ್ಕೆ ನೋಂತ ಭೂ ತಿಲಕಪವಿತ್ರೆಯಂ ಗುಣಪವಿತ್ರೆಯನಾ ಸತಿಯಂ ಮಹಾಸತೀ ತಿಲಕೆಯನತ್ತಿಮಬ್ಬರಸಿಯಂ ಪೆಸರ್ಗೊಳ್ಳುದು ಪುಣ್ಯಕಾರಣಂ
ಅದುಕಾರಣದಿಂ,
( ೧೦೧೭೭)
ಭಾಂತೇನಾದಿಪುರಾಣದ ಶಾಂತಿಪುರಾಣದ ಸಮಾನಮೆನೆ ಕೃತಿಯಂ ಕ ಲ್ಯಾಂತಸ್ಥಾಯಿಯನಾಶ್ರಿತ
ಚಿಂತಾಮಣಿಗತ್ತಿಮಬ್ಬೆಗಿಯೆ ಪೇಳ್ವೆಂ ಜಿನಪುರಾಣಕ್ಕೆ ಏನು ಭಕ್ತಿಗಾಂಭೀರದ ಶ್ರುತಿ ಇದು!
ಮತಿಗೆಟ್ಟು ಜೀವ ಧಾ ಮೃತಮಂ ಸೇವಿಸದಧರ್ಮಮಂ ಸೇವಿಸಿ ದು ರ್ಗತಿಗೀಣಿದೀ ಜವನೆಂಬ ಸಿ ತಿನ್ನ ದೈವಕ್ಕೆ ಪೋಗಿ ಪಾಟಿಂ ಬಿಡುವೆ! ಎನಿತೆನಿತು ಕೇಳಿದ ಭವಮಂ ನೆನೆದಪೆ, ಎನಿತೆನಿತು ಭವದ ಬಂಧುಗಳಂ ನೀನ್ ನೆನೆದಪೆ, ಎನಿತೆನಿತೊಡಲಂ ನೆನೆದಪೆ, ಎಲೆ ಜೀವ, ನೀನೆ ಪೇಟ್ ಪವಡೊಳವೇ? ಎನಿತಂ ಕುಕ್ಕುಟಿಗುದಿದಪೆ, ಎನಿತಂ ಕಕ್ಕಲಿಗಲ್ಲ ಪೈ, ಜೀವನೆ ನೀ
ಶ್ರೀ ಸಾಹಿ
ನೆನಿತಂ ಮಲವು ಮಿಗುವೆ, ಎನಿತಂ ಸಂಸಾರದೊಳಗೆ ತಿನ ತಿರಿ! ಕಡೆಯಿಲ್ಲದ ಸಂಸಾರಕ್ಕೆ ಕಡೆಗಾಣಲ್ ಬಗೆವೆಯಷ್ಟೂಡೆನ್ನುಕ್ಕಿಗೊಡಂ ಬಡು ಜೀವ ನಿನ್ನ ಕಾಲು ಪಿಡಿವೆಂ ಧರ್ಮಮನೆ ಮಗುಣಿ ಬಲ್ವಡಿವಿಡಿಯಾ (೨-೫೮, ೬೦,೬೧, ೬೩ ಎನಿತೋಳವು ಮನದ ಸಂದೆಯ ಮನಿತುಮಸಂದಿಗ್ಧಮೆನಿಸುಗುಂ ಧರ್ಮದೊಳ ಪ್ಪನುರಾಗದವುಗುಂ ರ
ತ್ನನ ಪೇಜಿತನ ಪುರಾಣಮಂ ಕೇಳಲೊಡಂ ಪೆಜಿಟಿಯುಳುವಿಲ್ಲಿಯೊಳವಾಗಮಭಾಷೆಗಳಿಲ್ಲಿಯುಳ್ಳುವ ಪೆಅಉಟ ಕಾಣಲಾಗದೆನೆ ಪಂಪನ ಪೊನ್ನನ ಪೇಟ್ಟಿ ಕಬ್ಬದೊಳ್ ನೆಲೆಯ ಪರಿಸ್ತು ಟಂ ನೆಳೆಯದಿರ್ದುದುಮಂ ನುಡಿದೆಯೇ ಬಿ ಕ ಣ್ಣೆಅಲೆಯೆ ನೆಗಟ್ಟಿದಂ ಕವಿಚತುರ್ಮುಖನಾಗಮವೇದಿಯಪ್ಪುದಂ
(೧೨-೩೧, ೩೨
ಸಾಹಸಭೀಮವಿಜಯ (೯೮೨) (೧೦೦-)? : ಈ ಲೌಕಿಕಗ್ರಂಥ ಸತ್ಯಾಶ್ರಯನು ಯುವರಾಜ ನಾಗಿದ್ದಾಗ ರಚಿಸಿದ್ದೆಂದು ಒಂದು ವಾದವೂ,ಚಕ್ರವರ್ತಿಯಾಗಿದ್ದಾಗ ರಚಿಸಿದ್ದೆಂದು ಮತ್ತೊಂದು ವಾದವೂ ಇರುವುವು. ಗ್ರಂಥದಲ್ಲಿ ಚಕ್ರವರ್ತಿ ಎಂಬುದು ಸ್ಪಷ್ಟವಾಗಿದೆ. ಕಾಲವನ್ನು ಸೂಚಿಸುವ ಕೊನೆಯ ಪದ್ಯ ಚರ್ಚಾಸ್ಪದವಾಗಿದೆ; ಒಂದು ಪ್ರತಿಯಲ್ಲಿಲ್ಲವೆಂದೂ ಹೇಳುತ್ತಾರೆ. ತೈಲಪ ಚಕ್ರವರ್ತಿಯ ಕಾಲದಲ್ಲಿ ರಚಿತವಾಗಿ, ಸತ್ಯಾಶ್ರಯನ ಸಾಹಸಗಳನ್ನು ವರ್ಣಿಸಿ, ರನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನು ತಂದಂತೆ ಕಾಣುತ್ತದೆ. ಸಂದೇಹ ಹುಟ್ಟಿಸುವ ಪದ್ಯಗಳು ಹಿಂದಿನಿಂದ ಸೇರಿರಬಹುದು; ನಾಟಕವಾಗಿ ಬರೆದ ಗ್ರಂಥ ಚಂಪುವಾಗಿ ಮಾರ್ಪಟ್ಟಿರಬಹುದು (೧ ಆಶ್ವಾಸ, ೫೭೬ ಪದ್ಯಗಳು). ಚಕ್ರೇಶ್ವರಚರಿತೆ ಇದೇ ಆಗಿದ್ದಲ್ಲಿ, ಅಜಿತಪುರಾಣಕ್ಕೆ ಪೂರ್ವದಲ್ಲಿ ಇದು ರಚಿತವಾದದ್ದು, ಈ ಕವಿ ಬ್ರಾಹ್ಮಣನೆಂಬ ವಾದವೂ ಒಂದಿದೆ: ಅಜಿತಪುರಾಣದ ರನ್ನನಿಂದ ಭಿನ್ನನೆದು.
'ಸಾಹಸಭೀಮ' ಎಂಬುದು ಪಂಪನ ಮಾತು; ಆತನ ವಿಕ್ರಮಾರ್ಜುನ ವಿಜಯದ ಗದಾ ಯುದ್ದದ ಭಾಗವನ್ನು ತಳಹದಿಯಾಗಿಟ್ಟುಕೊಂಡು, ಆತನ ಸ್ಫೂರ್ತಿಯನ್ನೂ, ವಾಗೋರಣೆಯನ್ನೂ ಹೃದಯದಲ್ಲಿ ತುಂಬಿಕೊಂಡು, ಆತನು ಶ್ರುತಿ ಎತ್ತಿದ ಚರಣಗಳನ್ನು ಆಲಾಪನೆ ಮಾಡುತ್ತ, ತನ್ನ ಸರಸ್ವತೀಪ್ರಸನ್ನ ಶಕ್ತಿ ಉಕ್ಕಿ, ರನ್ನನು ಕನ್ನಡಸಾಹಿತ್ಯದ ಅತ್ಯುತ್ಕಷ್ಟವೆಂದು ಹೇಳಬಹುದಾದ ಕಾವ್ಯ ವನು ನಿರ್ಮಿಸಿದ್ದಾನೆ. ವಸ್ತುವಿನ್ಯಾಸ, ಸಂಭಾಷಣೆಯ ನಾಟಕೀಯತೆ, ರಸಪ್ರವಾಹ, ಗಂಡುತನದ ಮಹಾಶೈಲಿ, ಮಿತವರ್ಣನೆ, ಸಂಸ್ಕೃತ-ಕನ್ನಡದ ಹಿತಮೈತ್ರಿ ಸಮ್ಮಿಲನ,-ಇವು ಅತಿರಮಣೀಯ ವಾಗಿವೆ. ಗ್ರಂಥದಲ್ಲಿ ಅತಿ ಲಂಬಿಸುವುದಾಗಲಿ, ಬರಿಯ ವಾಗಾಡಂಬರವಾಗಲಿ, ಶುಷ್ಠಭಾಗಗಳಾಗಲಿ ಇಲ್ಲ. ಗುಣ, ಪ್ರಮಾಣವಲ್ಲ, ರನ್ನನ ಬಯಕೆ. ಚರಿತ್ರಾಂಶಗಳು ಪಂಪನಂತೆಯೇ ರನ್ನನಿಗೂ ಹೊಂದಿ, ಕೆಲವು ಕಡೆ ಭಾರತದ ಮೇಲ್ಮಟ್ಟದಿಂದ ಕರ್ನಾಟಕದ ಹತ್ತನೆಯ ಶತಮಾನಕ್ಕೆ ನಮ್ಮನ್ನು ಕೆಡವಬಹುದು: ಚಾಳುಕ್ಯರಾಜರ ವಂಶಾವಳಿಯೂ ಇರಿವಬೆಡಂಗನ ಸಾಹಸಾವಳಿಗಳೂ ವೀರಕಥೆಯ ಅದ್ಭುತರಸದಿಂದ ಪ್ರಾಕ್ತನಚರಿತ್ರಾನ್ವೇಷಿಗಳ ಗದ್ಯಕಸಕ್ಕೆ ಇಳಿಯಬಹುದು. ಆದರೆ ಕನ್ನಡ ರಾಜರು ಭಾರತವೀರರ
ರ್೪್ರ
ಕನ್ನಡ ಸಾಹಿತ್ಯದ ಚರಿತ್ರೆ
ಸಮಾನರು, ಅವರಿಂದ ಅಭಿನ್ನರು ಎಂಬ ಅಭಿಮಾನವೂ, ಕನ್ನಡನಾಡಿನ ಕಲಿಗಳು ಪರರಾಜರ ಮೇಲೆ ಹೋರಾಡಿ ಕನ್ನಡವನ್ನು ಸ್ವತಂತ್ರವಾಗಿ ಉಳಿಸಿದ ಸನ್ನಿವೇಶವೂ ಇದಕ್ಕೆ ಸಮಾಧಾನಗಳಾಗಬಹುದು. ಅರ್ಜುನನು ಅರಿಕೇಸರಿಯಾಗಿ ಪಂಪನು ಬ್ರೌಪದಿಯನ್ನು ಭೀಮನ ತಳೋದರಿ 'ಯನ್ನಾಗಿ ಮಾಡ ಬೇಕಾಗಿ, ಕೊನೆಯಲ್ಲಿ ಪಟ್ಟಮಹಿಷಿಯಾಗದಂತೆ ತಳ್ಳಬೇಕಾಗಿ ಸಂಕಟಕ್ಕೆ ಸಿಕ್ಕಿದನು. 'ರನ್ನನು ಭೀಮನೇ ಸತ್ಯಾಶ್ರಯನೆಂದು ಹೇಳಿ, ತನ್ನ ಪತ್ನಿಯಾದ ದೌಪದಿಗೆ ಕೇಶವನ್ನು ಕಟ್ಟುವಂತೆ ಮಾಡಿ, ಭೀಮನಿಗೂ ಆಕೆಗೂ ಪಟ್ಟಾಭಿಷೇಕವನ್ನು ಮಾಡುವ ಪುಣ್ಯವನ್ನು ಪಡೆದನು. ಪಂಪನು ಕಗ್ಗಲ್ಲಿನಿಂದ ಅದ್ಭುತ ವಿಗ್ರಹವನ್ನು ಕಡೆದು ಮಹೋನ್ನತಿಯನ್ನ ಶಕ್ತಿಯನ್ನೂ ತೋರಿಸಿದರೆ, ರನ್ನನು ಸಣ್ಣ ವಿಗ್ರಹವನ್ನು ಸುಂದರವಾದ ಸೂಕ್ಷಕಲಾಕರ್ಮದಲ್ಲಿ ತೋರಿ, ಉನ್ನತಿಯನ್ನೂ ಶಕ್ತಿಯನ್ನೂ ಬಿಡದೆ, ಪಂಪನಿಗೆ ಸರಿತೂಕವಾಗಿ, ಕಡೆಗೆ ಒಂದು ಕೈ ಮೇಲೋ ಎಂಬಂತೆ ಸಾಹಸಭೀಮವಿಜಯದಲ್ಲಿ ಕಾಣುವನು. ಜೈನಕವಿಗಳಲ್ಲಿ ಒಟ್ಟಿನಮೇಲೆ ಈ ಇಬ್ಬರ ಭುಜಸಮಕ್ಕೆ ಬರುವವರಿನ್ನು ಯಾರು? ನಾಗಚಂದ್ರನೆ? ಜನ್ನನೆ? ರತ್ನಾಕರನೆ?
ಸಾಹಸಭೀಮವಿಜಯದಲ್ಲಿ ಎಲ್ಲಕ್ಕೂ ಆಶ್ಚರ್ಯಕರವಾದ ವಿಶೇಷವೆಂದರೆ, ದುರೊಧನ ಪಾತ್ರ ದಲ್ಲಿ ರನ್ನನ ಸಹಾನುಭೂತಿ: ನೀತಿವೃಷ್ಟಿಯಿಂದಲ್ಲ, ಕರುಣ ದೃಷ್ಟಿಯಿಂದ. ಭೀಮನು ಸತ್ಯರಕ್ಷಕ, ಅನ್ಯಾಯಶಿಕ್ಷಕ, ಕಡೆಗೆ ಪಟ್ಟಾಭಿಷಿಕ್ಕ: ಅವನ ವಿಜಯವೇ ಗ್ರಂಥದ ವಸ್ತು; ಅವನ ಶೌರಪ್ರತಾಪಗಳೇ ಅದರ ಭೇರೀಧ್ವನಿ: ಅವನು ಇರಿವಬೆಡಂಗನಲ್ಲವೇ? ಆದರೆ ಗಾಂಧಾರಿಯ ತಾಯಿಕರುಳು ರನ್ನ ಕವಿಯದು: ಸೋತ, ಕೆಟ್ಟ, ಶೂರನಲ್ಲಿಯೂ, ಪ್ರತಿನಾಯಕನಲ್ಲಿಯೂ, ಕ್ಷಮೆಯ, ಮರುಕದ ಕರುಳು ಕರಗಬಹುದಲ್ಲವೇ? ಕವಿಹೃದಯ, ಉದಾತ್ತಕವಿಯ ಹೃದಯ ಭಗವಂತನ ಹೃದಯದಂತೆ ಮರಣ ಶಿಕ್ಷೆಯನ್ನು ವಿಧಿಸುವಾಗಲೂ, ಕರುಣದಿಂದ ಮಿಡಿಯುವುದಲ್ಲವೆ? ಮಾನವೀಯತೆ, ಮನುಷ್ಯ ಹೃದಯ, ಮಿಶ್ರವಾದದ್ದು: ಒಳ್ಳೆಯದು ಕೆಟ್ಟದು ನುಲಿದು ಹೆಣೆದುಕೊಂಡದು: ಮಹಾನುಭಾವತೆಯೂ, ನೀಚತನವೂ ಒಬ್ಬನಲ್ಲಿ ಸೇರಿ ಆತನ * ರುದ್ರನಾಟಕ 'ವನ್ನು ಕಾವ್ಯಸಹಾನುಭೂತಿಯಿಂದ ವರ್ಣಿಸ ಬಹುದಲ್ಲವೆ? ಪಂಪನು ಹಾಗೆ ಮಾಡಿದನು: “ ಏನಭಿಮಾನಧನಂ ಸುಯೋಧನಂ”! ಭಾಸ ಹಾಗೆ ಮಾಡಿದ್ದನು-ಊರುಭಂಗದಲ್ಲಿ. ರನ್ನನೂ ಹಾಗೆ ಮಾಡಿರುವನು ತನ್ನ ದುದ್ಯೋಧನನ ಗುಣ ವಿಮರ್ಶೆಯಲ್ಲಿ, ಭೀಮನನ್ನು ಇಳಿಸಿಲ್ಲ. ಆದರೆ ದುರೊಧನನನ್ನು ಏರಿಸಿರುವನು, ಘನತೆಗೊಯಿ ರು ವರು. ಪಂಪನ ಕರ್ಣನೂ ಹೀಗೆಯೇ-ಅರಿಕೇಸರಿ, ವಿಕ್ರಮಾರ್ಜುನ ನಾಯಕ; ಮೆಚ್ಚಿಗೆ, ಹೊಗಳಿಕೆ ಅವನಿಗೆ: ಆದರೆ ಕಣ್ಣೀರು, ನಿಟ್ಟುಸಿರು ಮತ್ತೊಂದು ಬಗೆಯ ಮೆಚ್ಚಿಕೆಯೂ, ಹೊಗಳಿಕೆಯೂ, ಕರ್ಣನಿಗೆ: “ ನೆನೆವೊಡೆ ಕರ್ಣನಂ ನೆನೆಯ”! ದುದ್ಯೋಧನಪಾತ್ರ ತನ್ನದೆದ ಉದ್ದತಭೀಮನ ಪಾತ್ರ ಅಪಾತ್ರವೆನ್ನಿಸುವಮಟ್ಟಿಗೆ ರನ್ನನ ಬುದ್ದಿ ಮೀರಿ ಹೃದಯ ಹರಿದಿದೆ. ಮುಂದೆ ನಾಗಚಂದ್ರ ರಾವಣ ನನ್ನು ಹೀಗೆ ಚಿತ್ರಿಸಿರುವನು-ಉದಾತ್ತ ಭಾವದಿಂದ ಉದಾತ್ತರಾವಣನನ್ನಾಗಿ, ಸೇಟನ್ ಪಾತ್ರವನ್ನು ವರ್ಣಿಸಿದ ಮಿಲ್ಟನ್ ಕವಿಗೂ, ಬ್ಯೂಟಸ್ ಪಾತ್ರವನ್ನು ರಚಿಸಿದ ಷೇಕ್ಸ್ಪಿಯರಿಗೂ ಹೀಗಾಗಿದೆ. ಪಾಪಕ್ಕೆ ಶಿಕ್ಷೆ ವಿಧಿ: ಕರಣಕ್ಕೆ, ಸಹಾನುಭೂತಿಗೆ ಪಾಪಿಯೂ ಮುದ್ದು, ಲೋಕ ಜರೆಯುವುದೇ, ತಬ್ಬುಗೆ. ಈ ರೀತಿಯ ಕವಿತಾ ಹೃದಯ ಕನ್ನಡದಲ್ಲಿ ಉಕ್ಕಿ ಹರಿದಿರುವುದು ಈ ಕರ್ಣ, ದುರೊಧನ, ರಾವಣ ಪಾತ್ರಗಳಲ್ಲಿ: ಇದು ನಮ್ಮ ಹೆಮ್ಮೆಯ ಸಿರಿಯೊಡವೆ! ಎಷ್ಟು ಕವಿತಾನೀತಿಗಳನ್ನು ಒದರಿದರೂ ಈ ಕವಿತಾಸ್ವಾತಂತ್ರವನ್ನು ನಾವು ಬಿಟ್ಟುಕೊಡಲಾರೆವು.
ಒಳಪೊಕ್ಕು ನೋಡೆ ಭಾರತ ದೊಳಗಣ ಕಥೆಯೆಲ್ಲಮಿ ಗದಾಯುದ್ದದೊಳಂ ತೊಳಕೊಂಡತ್ತೆನೆ ಸಿಂಹಾ
ವಲೋಕನಕ್ರಮದಿನಪಿದಂ ಕವಿರನ್ನ೦!
ಭಾರತದ ವಿಷವೃಕ್ಷ ಈ ವಿಜಯ-ಮರಣಗಳಲ್ಲಿ ಫಲಿಸುವುದರಿಂದ ಬೇರು ಹೂವುಗಳು ಸೇರಿಯೇ ಸೇರುವುವು; ಆದರೆ ಅವನ್ನು ಎಳೆದು ತಂದು ತುರುಕಬೇಕಾಗಿಲ್ಲ: ನಿಜವಾಗಿ ಮನುಷ್ಯಭಾರತದ
೫೦೦
ಶ್ರೀ ಸಾಹಿ
ಹೋರಾಟವನ್ನು ಇಲ್ಲಿ ಕವಿಗಳ ರನ್ನನು ಸಿಂಹಾವಲೋಕನ ಮಾಡಿರುವನು: ದೊಡ್ಡ, ಆಳದ, ಒಲವಿ ನೋಟದಿಂದ ಬಾಳ ನಿಟ್ಟನ್ನೆಲ್ಲಾ ತೂಗಿ ಒಳಗೊಂಡಿರುವನು, “Glancing from heaven 1 earth, from earth to heaven !'' ಬಾನಿನಿಂದ ನೆಲಕ್ಕೆ, ನೆಲದಿಂದ ಬಾನಿಗೆ ಕಣ ಹೊಳೆಯಿಸಿ!
ಶ್ರೀಯುವತೀಪ್ರಿಯಂ ಬಲಯುತಂ ಬಲಿದರ್ಪಹರಂ ಜಿತಾರಿ ದೈ ತೇಯನನಂತಭೋಗನಿಲಯಂ ಪ್ರತಿಪಾಲಿತ ಧರ್ಮಚಕ್ರನ ಬ್ಲಾಯತನೇತ್ರನಾದಿಪುರುಷಂ ಪುರುಷೋತ್ತಮನಿ: ಚಳುಕ್ಯ ನಾ
ರಾಯಣದೇವನೀಗೆಮಗೆ ಮಂಗಳಕಾರಣನುತೃವಂಗಳಂ ಎಂದು ಆರಂಭ. ಸರಿಯೆ, ಸಂಪ್ರದಾಯ, ಪಂಪನ ಮಾದರಿ! ರನ್ನನ ರಕ್ತ ಇನ್ನೂ ಬಿಸಿಹತ್ತಿಲ್ಲ.
- ವಾಕ್ಕುಂದರಿ ಬಂದು ಸನ್ನಿಹಿತೆಯಕ್ಕೆ ಮುಖಾಂಭೋಜದೊಳ್ (೧-೨) (ಇಲ್ಲ, ಇನ ಬಂದಿಲ್ಲ).
ವ್ಯಾಸ, ವಾಲ್ಮೀಕಿ, ಕಾಳಿದಾಸ, ಬಾಣರು “ನಮಗಭಿವಂದ್ಯರ್ ” (೮, ೯) (ಪಂಪ, ಪೂರಿ ಭಾಸ, ಭಟ್ಟನಾರಾಯಣರೂ, ಹೇಳದಿದ್ದರೂ,
ಆಹವಮಲ್ಲ, ಸತ್ಯಾಶ್ರಯರ ಪ್ರಶಸ್ತಿ: ವಿಷ್ಣುಮೂರ್ತಿ ರುದ್ರಾವತಾರನಿಟಿವ ಬೆಡಂಗಂ (೧೪ ಅಮ್ಮನಗಂಧವಾರಣಂ (೧೭). ಸತ್ಯಾಶ್ರಯಂ ಸಾರ್ವಭೌಮಂ (೨೮).
ಬೆಳಗುವ ಸೂಡರೂಳ್ ಸೊಡರಂ ಬೆಳಗಿ ಪಲರ್ ಕೋಂಡುಪೋಗೆಯುಂ ಕುಂದದ ಪ ಜ್ಜಳಿಸುವವೋಲ್ ಜಗಮೆಲ್ಲಂ ಕೊಳಲು ತವದಿತ್ತು ಮವನಿಜವಬೆಡಂಗಂ
೩
(ಮಾರ್ಗವಾಯಿತು, ದೇಸಿ).
ಎನಿಸಿದ ಸತ್ಯಾಶ್ರಯ ದೇ ವನೆ ಪೃಥ್ವಿವಲ್ಲಭಂ ಕಥಾನಾಯಕನಾ ಗನಿಲಜನೊಳ್ ಪೋಲಿಸಿ ಪೇ
ನೀ ಗದಾಯುದ್ಧಮಂ ಮಹಾಕವಿ ರನ್ನಂ ಕೃತಿ ನೆಗಟ್ಟಿ ಗದಾಯುದ್ಧಂ
ಕೃತಿಗೀಶ್ವರ (ಶಂ?)ಚಕ್ರವರ್ತಿ ಸಾಹಸಭೀಮಂ ಮೊದಲೊಳ್ ಬದ್ಧವಿರೋಧದಿಂ ನೆಗಟ್ಟಿ ಕುಂತೀಪುತ್ರರೊಳ್ ಭೀಮನಂ ಕದ ಗಾಂಧಾರಿಯ ಪುತ್ರರೂಳ್ ವದಲಿಗಂ ದುರೂಧನ ಧರ್ಮಯು ದ್ದದೊಳಂತಾತನನಿಕ್ಕಿಕೊಂದನದಂ ಭೀಮ ಜಯೋದ್ದಾಮನಂ | ಬುದನೆಂಬಂತಿದು ವಸ್ತುಯುದ್ಧಮನಿಸಲ್ ಪೇಟ್ಟಿಂ ಗದಾಯುದ್ಧ ಮಂ
(33 ಗ್ರಂಥದ ಎರಡನೆಯ ಹೆಸರು ಗದಾಯುದ್ಧ: ವಸ್ತುಯುದ್ಧ; ಭೀಮ-ಜಯೋದ್ದಾಮ; ಧರ ಯುದ್ಧದಲ್ಲಿ ಕೊಂದ-ಹೌದೋ? ಹೌದು-ಅಲ್ಲ. ಇನ್ನೂ ರಾಜನ ಕಡೆ ಕಣ್ಣು: ದುದ್ಯೋಧನ ದುಃಖದ ಕಾವು ಹತ್ತಿಲ್ಲ.
ಯ
೫೦೧ ನ್ನಡ ಸಾಹಿತ್ಯದ ಚರಿತ್ರೆ
ತನ್ನ ಅಭ್ಯುದಯ ಪರಂಪರೆ-ಚಕ್ರವರ್ತಿಯ ಮನ್ನಣೆ: ತನ್ನ ಮಹತ್ವ. ದಂಡನಾಯಕಂ ಶಿ ತಿರ್ದೆ ಪೇಟ್ಟಿ ಕೃತಿ ಯಶ ವನಿತೆಗಲಂಕೃತಿಯೆನಿಪ್ಪದೊಂದಚ್ಚರಿಯೇ! (೧-೩೪೧೫೧)
ಇಲ್ಲಿಗೆ ಪ್ರಸ್ತಾವನೆ ಮುಗಿಯಿತು. ಇನ್ನು ಜಯದ ಮಂಗಳದ ವೀರಕಾವ್ಯ-ಅದರ ಹೊಟ್ಟೆ ರಲ್ಲಿ ರುದ್ರನಾಟಕ:
* ಮಚ್ಚೆ ಬಣ್ಣಿಸಲಭಿಯೋಗಮಾಯ್ಕೆನಗೆ ಸಾಹಸಭೀಮನ ಸಾಹಸಂಗಳಂ” * ಕುರುರಾಜರತ್ನಮಕುಟೋತ್ತೂಟಾಂಘಿಸಂಘಟ್ಟಸಂಗರನೆಂದಭಿವರ್ಣಿಪಂ ರಣಯಶಃ ಶ್ರೀರಾಮ ನಂ ಭೀಮನಂ ”.
(೧-೫೩, ೫೨) ಎತ್ತಿಕೊಂಡ ಉದ್ದೇಶ ಸತ್ಯಾಶ್ರಯನ ವಿಜಯು: * ಸುಯೋಧನ ಪ್ರಳಯದಲ್ಲಿ ದ್ರುಪದನಿಯ ಶಂಕೆ: ಭೀಮನ ಅಣಕ; ಕೋಪ, ಪ್ರತಿಜ್ಞೆ:
ಕುರುನಂದನರಂ ಕೊಂದೆಂ ಕುರುಶಾಬಾನುಜನ ನೆತ್ತರಂ ಕುಡಿದರೆ ಣ್ಣೆರಡಂ ತೀರ್ಚಿದೆನಿರ್ದಪು
ವೆರಡುಮವಂ ತೀರ್ಚಿ ತೀರ್ಚದಿರ್ಪೆನೆ ಊರುಗಳನುಡಿವೆನೆದೆವೆ ಕೌರವಪರಿವೃಢನ ಮಕುಟಮಂ ವೇಣಿ ಸಂಹಾರ ಮಾಡುವೆನದಂ
ಭಾರಮದಿಸಿತ್ತಲ್ಲದೆ ಪರಿಭವಭಾವಂ * ಸಂಧಿಯನಾಗಲೀವೆನೇ ”? ಎಂದು “ ಕಾಂತೆಯ ಮುಂದೆ ಪೂಣ್ಣು ನುಡಿದಂ ಚಾಳುಕ್ಯಕಂಠೀರವಂ”.
(೧೬೯ ೧೭೪) ದೌಪದಿ ಸಂತೋಷಪಟ್ಟು ಮೂದಲಿಸಿ ನುಡಿಯುತ್ತಾಳೆ:
ಒಡಲೊಡಮೆಯೆಂಬಿವೆರಡುಂ | ಕೆಡಲಿರ್ಪುವು ಕೆಡದ ಕಸವರಂ ಜಸಮದಂ ಕೆಡುವೊಡಲೊಡಮೆಯನೆಂದುಂ ಕೆಡದೊಡಮೆಗೆ ಮಾಜಿಗುಡುವುದಿವ ಬೆಡಂಗಾ ಮಣಿಕನಕಂ ವಸ್ತುವಿಗೂ ಷಣಂಗಳಂ ಕೊಟ್ಟು ಪೆಂಡಿರೊಲ್ವರೆ ಗಂಡರ್ ಗುಣಮನೆ ಮರೆವುದು ಶಸ್ತ್ರ ವಣಮಂ ನಿನ್ನಂತೆ ಮಳೆವುದಿವ ಬೆಡಂಗಾ
(೨-೪, ೫) ಇಲ್ಲಿ ಚಾಳುಕ್ಯವಂಶಾವಳಿ ಮೂಲಪುರುಷ ಸತ್ಯಾಶ್ರಯನಿಂದ ಶ್ರೀಮನ್ ನೂರಡಿ ತೈಲಪನೆನಿಸಿ ದಾಹವಮಲ್ಲದೇವನವರೆಗೆ-ಕಡೆಗೆ ಇಳಿವ ಬೆಡಂಗನ ಸ್ತುತಿ (೨-೭ ವ, ೮), ವಿದೂಷಕನ ಹಾಸ್ಯ: ದೌಪದಿ ಎರಡನೆಯ ಹಿಡಿಂಬಿ! (೯) ಇದು ಒಂದು ದೃಶ್ಯ.
ಬಳಿಕ ಯುದ್ಧರಂಗದಲ್ಲಿ ದುದ್ಯೋಧನನ ಪ್ರವೇಶ-ಸಂಜಯನೊಡನೆ, ದ್ರೋಣ, ಅಶ್ವತ್ಥಾಮ, ಭೀಷ್ಮರು ತನಗೆ ದ್ರೋಹಮಾಡಿದರೆಂಬ ಅಸಮಾಧಾನದ ಮಾತುಗಳು; ಸಂಜಯನ ಸಮಾಧಾನ; ಅರ್ಜುನ ಭೀಮರ ಪರಾಕ್ರಮದ ಎಚ್ಚರಿಕೆ; ಸಂಧಿಮಾಡಿಕೊಳ್ಳೆಂಬ ಹಿತೋಕ್ತಿ- ಕೇಳ್ತಿಯ ಸಾಹಸ ಭೀಮನ ಸಾಹಸಗಳಂ”? * ಆಮಗಮಸಾಧನಾರ್ಗಮರಿಯಂ ಚಾಳುಕ್ತಕಂಠೀರವಂ”.
(೨- ೪೮: ೩-
೧ ೧೭)
೫೦೨
ಶ್ರೀ
ಸಾ
(೩
ಧರರಾಯನ ಮಹಿಮೆ; ಸದ್ಗುಣ:
ದಾನಂ ಪ್ರಿಯವಾಕ್ಸಹಿತು ಜ್ಞಾನಮಗರ್ವಂ ಕೃಪಾನ್ವಿತಂ ಶೌರಮೆನಿ ಪ್ರೀ ನುಡಿಯನೆ ನುಡಿಯಿಸಿದುದು
ದಾನಂ ಜ್ಞಾನ ಕ್ಷಮಾಗುಣಂ ಧರ್ಮಜನಾ ದುದ್ಯೋಧನನ ಆಕ್ಷೇಪಣೆ ಖಂಡನೆಗಳು ಕೃಷ್ಣನನ್ನೂ ಸೇರಿಸಿ: ವನಿತೆಯ ಕೇಶಮ ಸಭೆಯೋಳೆನ್ನನುಜಂ ತೆಗೆವಲ್ಲಿ ಗಂಡನಾ ಗನೆ ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತೆ ಗಂಡನಾ ಗನೆ ಕೂಲಿಲ್ಲದಂಗಪತಿ ಬಿಲ್ಲೆಳೆ ಕೋದೇವಲ್ಲಿ ಗಂಡನಾ ಗನೆ ಕುರುಬಾಲಸಂಹರಣಮಾತ್ರದೆ ಮಾರುತಿ ಗಂಡನಾದನೇ? ಗುರುವಂ ಪ್ರೊಜ್ಜಿತಚಾಪನ ಪುಸಿದು ಕೊಂದಾ ಬೀರಮಂ ಭೀಷ್ಕರು ಶರಶಯ್ಯಾಗತರಂ ಕುತ್ತು ಗುಜ್ಯೆಚ್ಚಾ ಪೊಚ್ಚ ಕರ್ಣನಂ | ವಿರಥಜ್ಯಾಯುಧನೆನ್ನದೆಚ್ಚು ತವೆ ಕೊಂದಾ ಶೌರಮಂ ಪಾಂಡುಪು ತರೆ ಬಲ್ಲರ್ ಮೆಜಿಲೆಯ ಸಾಹಸವನಂ ದುದ್ಯೋಧನಂ ಬಲ್ಲನೇ ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯಂ ಪಂಚವ ಲಭೆಯಂ ಮೋದೆಯುಮಲ್ಲಿ ಮಿಳನೆ ನೋಡುತ್ತಿರ್ದ ಬಲ್ಲಾಳ್ಳಲಿ ಲ್ಲಿ ಭರಂಗೆಯ ಪರೀ ಪರಾಕ್ರಮಮುಮೀ ಪೆರ್ಮಾತುಮೀ ಗಂಡುಮೀ ಸುಭಟಾಲಾಪಮುಮ್ಮೆಲ್ಲಮಾ ನೃಪಸುತರ್ಗಂದೆಲ್ಲಿ ಪೊಕ್ಕಿರ್ದುದೊ
ಪುರುಷರ್ ಮೂವರೊಳೊರ್ಬನಂಬರಸುರಪ್ರಧ್ವಂಸಿಯೆಂಬ ಜಗ ದುರುವಂಬರ್; ಪೆರ್ಗೆಕೆ ತೇರನೆಸಪಂ. ಧರ್ಮಾನುಜಂಗೇಕೆ ಕಿಂ ಕರನಾಂ ಕರವೇಯಾದನದಜಂ ಸೂತಂ ಭಟಂ ಪೇಟಿಯೆಂ ಬರಮಾತೊಪ್ಪುಗುಮಾದಿದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ
ಅನಿಮೇಷಾದ್ಯವತಾರ ತನಗಾಯು ದಶಾವತಾರಮಲ್ಲನೊಡಿರದ ರ್ಜುನನ ರಥಸಪ ಪನ್ಮೂಲ ದನೆಯದು ಸೂತಾವತಾರಮುಂ ಪರಿಗಾಯ್ಕೆ
ಎಂದು ಎಲ್ಲರನ್ನೂ “ ನಿರಾಕರಣಂಗೆಯು ಸಮರೊದ್ಯೋಗಂಗೆಯ್ಕೆ ಸಂಜಯನುಳಿದ ಮಾಕೂ ಡು”–“ ಪ್ರತಿಕೂಲದೇವ ನೀನ್ ಪ್ರತಿನೃಪನುಕೂಲದೈವರ್ ” ಎಂದು ಹೇಳಲು,
ಸಮರಜಯಂ ದೈವಾದು ತಮದನಾ ಪುರುಷಕಾರಮೆನಗಾಯ್ತಿಗಳ್
ಯಮನಂದನಾದಿಗಳೊಳೊಂ ದೆ ಮಯೊಳಾಂತೀಯವೆನನ್ನ ಚಲಮಂ ಮೇಟಿವೆಂ
(೩-೪೫, ೩
ಎಂದು ಸಂಜಯನ ಮಾತನ್ನು ಕೇಳದೆ ಯುದ್ಧಕ್ಕೆ ಹೊರಡಲು, ಅಶ್ವತ್ಥಾಮ ಬಲರಾಮರಲ್ಲೊಬ್ಬ ವೀರಪಟ್ಟವನ್ನು ಕಟ್ಟೆಂದು ಹೇಳಲು, ಅವರೆಲ್ಲಾ ತನ್ನನ್ನು ಕೈಬಿಟ್ಟವರು, ನೆಚ್ಚಿ ಕೆಟ್ಟೆ.
ಕಾನೀನಂ ದ್ರೋಣನದೀ ಸೂನುಗಳದಿನ್ ಬಕ್ಕೆ ಪರೆನಗಿಲ್ಲೆಂ
೫೦೩
ಕನ್ನಡ ಸಾಹಿತ್ಯದ ಚರಿತ್ರೆ
ದಾನೆ ಗಳಿತಾಶ್ರುಜಲದಿಂ ಸೇನಾಪತ್ಯಾಭಿಷೇಕಮಂ ಮಾಡಿದಪೆಂ
(೬೬)
ಇಲ್ಲಿಗೆ ನಾಯಕ ಪ್ರತಿನಾಯಕರ ಶಲ್ಯ ಛಲ ತೂಗಿದ್ದಾಯಿತು: ಯಾರೂ ಸಗುವವರಲ್ಲ; ಇಬ್ಬರಿಗೂ ಮಾನದೃಷ್ಟಿ; ಒಂದು ಕಡೆ ಕ್ರೋಧೋತ್ಸಾಹದ ರೋಷ, ಮತ್ತೊಂದು ಕಡೆ ದುಃಖದಿಂದ ಕೂಡಿದ ರೋಷ-ರನ್ನನು ದುರೊಧನನ ಹೃದಯವನ್ನೂ ಹೊಕ್ಕು ನೋಡಿ ಕರಗುವನು.
ಎನಗಿರ್ವರುಮೆರಡುಂ ತೋಳ್, ಎನರ್ಗಿವರುಮೆರಡು ಕಣ್ಣಳನ್ನರೆ ಯುವರಾ ಜನುಮಂಗರಾಜನುಂ ಪೋ ಆನೆ ಸಂಜಯ ಮತ್ತಮೆನಗೆ ಮಾನಸವಾಲೇ
ಕದಂ ದಿನಕರತನಯಂ, ಕದಂ ಯುವರಾಜನಪ್ಪ ದುಶ್ಯಾಸನನುಂ,
ತುಟಿಲಾಳನಿರ್ವರುಮಂ ಕಪಿ ಸುಯೋಧನನ ಬಾಲ್ಕದಂ ನಂಬಿದಿರೇ
ಎನಗೆ ಮನಮಿಂದು ಶೂನ್ಯಂ, ಮನೆ ಶೂನ್ಯಂ, ಬೀಡು ಶೂನ್ಯವಾದುದು ಸಕಲಾ ವನಿ ಶೂನ್ಯಮಾಯು ದುಶ್ಯಾ ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ?
(೩-೬೭೧೬೯) ಪಾಪದ ಫಲ, ನಿಜ; ಆದರೆ ಪ್ರೇಮದ ಪೆಂಪೂ ಅಲ್ಲವೆ? ಕರುಣವುಕ್ಕುತ್ತ ಕನ್ನಡವೂ ಉಕ್ಕುತ್ತಿರುವು ದಲ್ಲವೆ?
ಬಳಿಕ ಗಾಂಧಾರಿ ಧೃತರಾಷ್ಟರ ದುಃಖ-ದುರೊಧನನ ಮೂರ್ಛ, ಸಂಧಿಗಾಗಿ ಬೇಡಿಕೆ “ ನಿನ್ನನುಜರಂ ಕೊಂದಿಕ್ಕಿದಂ ಕೂಡೆ ನೂರ್ವರುಮಂ ನಿನ್ನು ಮನಿನ್ನದೇಕುಚಿಪುವಂ ಚಾಳುಕ್ಯ ಕಂಠೀರವಂ”? (೩-೮೭). “ ಸತ್ತ ಮಗಂದಿ ಸರ್ ನೀನೆಮಗುಳ್ಳೆಡೆ ಸಾಲ್ವುದವರನಿನ್ ತಂದಪವೇ ”? (೪-೩)
ಇಲ್ಲ: ಛಲ: ಫಲ್ಗುಣನನ್ನೂ ಭೀಮನನ್ನೂ ಸಾಧಿಸಿ, ಅವರ ಬಸಿರಿಂದ ಮೊದಲು ಕರ್ಣ ದುಶ್ಯಾಸನರನ್ನು ತೆಗೆಯಬೇಕು. ಹಾಗಾದರೆ ಭೀಷ್ಮರಲ್ಲಿ ಆಲೋಚಿಸಿ ಮುಂದಿನ ಕಾರ ಮಾಡು ಇದು ಎರಡನೆಯ ದೃಶ್ಯ. ವಿಧಿ ತಲೆಯಮೇಲೆ ತೂಗುತ್ತಿದೆ: ಸಂಧಿಯಾದೀತೋ, ಇಲ್ಲವೋ? ದುಃಖ ದುದ್ಯೋಧನನನ್ನು ಕರಗಿಸೀತೋ, ಉಕ್ಕು ಮಾಡೀತೇ ?
ಇನ್ನು ಮೂರನೆಯ ದೃಶ್ಯ-ಭಯಂಕರ ರಣರಂಗದಲ್ಲಿ ಮುಂದಕ್ಕೆ ಹೆಜ್ಜೆ: ಮರುಳುಗಳ ಅಣಕಾಟ, ಊರುಭಂಗದ ಎಚ್ಚರಿಕೆ; ಮರೊಧನನು “ ಮಹಾಸತ್ವನಪ್ಪುದಂ ಮರುಳಮಾತಿನೊ೪೯ ಪುರುಳೇನೆಂದು ಪೋಗೆವೋಗೆ”-(೪-೪೪ ವ.) ಸಂಜಯನ ಅನುತಾಪ;" ಗಳಗಳನೆ ಕಣ್ಣನೀರಂ ನೆರಪುವ ಸಂಜಯನನಭಿಮಾನಧನಂ ಸುಯೋಧನಂ ಸಂತೈಸಿ "
ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಿ ನೆಲವು ಸಮರಾ ವನಿಯೊಳುಡಿದಿರ್ದ ಕಯುಗ ಆನಿಸು ನೋಯಿಕುಮೆ ವಜ್ರಮನನಪ್ಪೆನ್ನಂ
(೧೯)
೫೦೪
ಶ್ರೀ ಸಾಹಿ
ದ್ರೋಣ, ಭೀಷ್ಮರನ್ನು ಕಂಡು ಸಂತಾಪ, ಪಶ್ಚಾತ್ತಾಪ, ಭಕ್ತಿ, ಅಭಿಮನ್ಯುವನ್ನು ಕಂಡು ಗೌರ
ಅಂತಹ ಮರಣದ ಪ್ರಾರ್ಥನೆ; ಲಕ್ಷಣಕುಮಾರನನ್ನು ಕಂಡು ಜಲಾಂಜಲಿಯನ್ನು ತಾನು ಮಗ ಕೊಡುವಂತೆ ಮಾಡಿದ್ದಕ್ಕೆ ವಿಷಾದ; ದುಶ್ಯಾಸನ ಕರ್ಣರನ್ನು ಕಂಡು ಕೋಡಿಬಿದ್ದ ಕರೆಯಂತೆ ಆರ್ತಪ್ರಲೆ (೫-೫ ೧೩೫), ಇವು ಈತನು ವಜ್ರಮನನೊ, ಕುಸುಮಹೃದಯನೊ-ಈ ವ್ಯಂಗ್ಯಗಳ ರನ್ನನಂತೆ ಅರಿತು ಮಿಡಿಯಬಲ್ಲ ಕವಿಯಾರು? ಕರ್ಣನನ್ನು ಹಂಬಲಿಸಿದ ಕೆಲವೇ ಪದ್ಯಗಳನ್ನು ಬರೆ ಮುಂದಕ್ಕೆ ಸಾಗುವ
ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕದ ಬಲಿ ಕ್ಯಾನುಂ ನೀನೆ ದಲೀಗಲ್ ನೀನುಂ ಮಗುಟ್ತವೋದೆ ಅಂಗಾಧಿಪತೀ ನಿನ್ನ ಕೆಳೆಯಂ ಸುಯೋಧನ ನನ್ನೊಡದೆ ನುಡಿಯದಪ್ಪಿಕೊಳ್ಳದೆ ಬೆಸನೇ ನೆನ್ನದೆ ಜೀಯೆನ್ನದೆ ದೇ ಎನ್ನದೆ ಏಕುಸಿರದಿರ್ಪೆ ಅಂಗಾಧಿಪತೀ
ಅನೃತಂ ಲೋಭಂ ಭಯಮೆಂ ಬಿನಿತುಂ ನೀನಿರ್ದ ನಾಡೋಳಿರ್ಕುಮೆ ರವಿನ ದನ ನನ್ನಿ ಚಾಗಮಂ ಬಿನಿತರ್ಕಂ ನೀನೆ ಮೊತ್ತಮೊದಲಿಗನಾದಯಮ್ ನೀನುಳ್ಕೊಡುಂಟು ರಾಜ್ಯಂ ನೀನುಳೊಡೆ ಪಟ್ಟಮುಂಟು ಬೆಳೊಡೆಯುಂಟಮ್ ನೀನುಯೊಡುಂಟು ಪೀಳಿಗೆ ನೀನಿಲ್ಲದಿವೆಲ್ಲವೊಳವೆ ಅಂಗಾಧಿಪತೀ ನಯನದೊಳಮರ್ದಬೋಳಂ ನಿ «ಯ ರೂಪಿರ್ದಪುದ, ನಿನ್ನ ಮಾತಿರ್ದಪುದೆ ನೈಯ ಕಿವಿಯೊಳಗಿನಂದನ ವಿಯೋಗವಂತಾದುದಯ್ಯ ಎನಗಂ ನಿನಗಂ ಇನಸುತನಿರವಂ ದುಶ್ಯಾ ಸನನಿರವಂ ಕಂಡುಮಿನ್ನು ಮನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬಟ್ಟಿನಾವನುಮೊಳನೇ ಸೂನುಗಳವಂ ಪ್ರಿಯಮಿ ತಾನುಜರವಂ ವಿಧಾತ್ರ ನೀನ್ ಕಾಣಿಸಿ ಇ ನೈನಂ ಕಾಣಿಸಲಿರ್ದಪೆ ನೀನೆನ್ನಂ ಪಾಪಕರ್ಮನಂ ನಿರ್ಗುಣನಂ
(೫-೧N
ಕಡೆಗೆ ಭೀಷ್ಮರನ್ನು ಕಾಣುವನು. ಸಂಧಿಯ ಮಾತನ್ನೆಲು
೫೦೫
ಕನ್ನಡ ಸಾಹಿತ್ಯದ ಚರಿತ್ರೆ
ನೆಲಕಿಜವೆನೆಂದು ಬಗೆದಿರೆ ಚಲಕಿವೆಂ ಪಾಂಡುಸುತರೋಳೀ ನೆಲನಿದು ಪಾಲ್ ನೆಲನೆನಗೆ ದಿನಪಸುತನು
ಕೊಲಿಸಿದ ನೆಲನೊಡನೆ ಮತ್ತೆ ಪುದುವಾದ್ದಿ ಪೆನೇ ಯಾರಿಗಾಗಿ ಬದುಕಲಿ? ಯಾರಿಗೆ ಸಂಪತ್ತನ್ನು ತೋರಲಿ? “ ಅಖಂಡಿತಮಭಿಮಾನಮದನ ಬಿಡಿ ದಿಡಿವೆಂ” (೫-೨೩). * ಭರತಾನ್ಯಾಯಕ್ಕೆ ಕಲಂಕಗವಾದಂತಿರೆ ನೆಗಳ್ಕೊಂ” (೬-೪) ಎಂದು ಜಗ್ಗದೆ, ಭೀಷ್ಮರ ಮಾತಿನಂತೆ ಬಲರಾಮ ಬರುವವರೆಗೆ ಕೊಳವನ್ನು ಹೊಗುವನು.
ಒಂದೆರಡುಮಂ ತರಂತರ ದಿಂದಂ ಪೋಲಮಟ್ಟ ಪಜ್ಜೆಯೆಂಬುದನೆನಿಸಲ್ ಪಿಂದು ಪೇಜಿಗಾಗಿ ಪುಗೆ ಚಿಃ ಎಂದವನಂ ರಾಜ್ಯಲಕ್ಷ್ಮಿ ಪೇಸಿ ಬಿಸುಟ್ಟಲ್
(೬-೯)
ಮುಂದಿನ ದೃಶ್ಯದಲ್ಲಿ ಭೀಮನು ದುರೊಧನನನ್ನು ಕಾಣದೆ ತಳಮಳಿಸಿ ಕೊಳಕ್ಕೆ ಬಂದು ಮೂದಲಿಸಿ ಅವನನ್ನು ಹೊರಕ್ಕೆ ಹೊರಪಡಿಸುವನು. ಧರರಾಜನ ಶಾಂತಿಮಾತುಗಳನ್ನು ಧಿಕ್ಕರಿಸಿ, ಇಬ್ಬರೂ ಗದಾಯುದ್ಧಕ್ಕೆ ನಿಲ್ಲುವರು. ಇಲ್ಲಿ ರನ್ನನು ನಾಟಕವನ್ನು ಬಿಟ್ಟು ಆಖ್ಯಾನವನ್ನೆತ್ತಿಕೊಳ್ಳುವನು; ವರ್ಣನೆಗೆ ಕೈಯಿಕ್ಕುವನು; ಸರೋವರ, ಯುದ್ದ, ಚಮತ್ಕಾರದ ಸಂಭಾಷಣೆಗಳಲ್ಲಿ ಸಮಭಮಿಗಿಳಿಯು ವನು. ಆದರೂ ಮಿಂಚು ಸಿಡಿಲು ಹೊಡೆಯುತ್ತಲೇ ಇರುವುದು: ರನ್ನನಲ್ಲವೆ?
(೬೭)
ಆ ರವಮಂ ನಿರ್ಜಿತಕಂ ಠೀರವರವಮಂ ನಿರಸ್ತಘನರವಮಂ ಕೋ ಪಾರುಣನೇತ್ರಂ ಕೇಳ್ತಾ ನೀರೊಳಗಿರ್ದುಂ ಬೆಮರ್ತನುರಗಪತಾಕಂ
(೭-೨೨) ಸ್ಟಿರಬದ್ದಮತ್ಸರ ಭೀ ಕರಬದ್ಧಭ್ರುಕುಟಿಘಟಿತರದ್ದುರಟ್ಟಾ ಸುರರಧಿಕಕೋಪಪಾಟಳ ಪರುಷೇಕ್ಷಣರೆನಿಸಿ ದೃಷ್ಟಿಯುದ್ಧಂಗೆಯ್ದರ್
(೮-೨) ಭೀಮನು ಬಿದ್ದರೆ ದುಧನನು ಗದೆಯ ಗಾಳಿಯಿಂದೆಚ್ಚರಿಸುವನು- ಧರ್ಮಯುದ್ದಮಂ ನನದು” (೮-೩೨), ಭೀಮನು ತೊಡೆಯನ್ನು ಮುರಿದು, “ಬಲದೇವಾದಿಗಳಾಗದಾಗದೆನೆ, ಮಾಮಸಕಂ ಮಸಗಿ ” ಕಿರೀಟವನ್ನೊದೆಯುವನು (೩೮-೩೯).
ಇಡೆ ತೊಡೆಯನುಡಿದು ನೆಟ್ಟನೆ ಕೆಡೆಯುತ್ತುಂ ಕರ್ಚಿ ನೆಲನನಾನಿದನೆಂತುಂ ಬಿಡೆನೆಂಬ ತೆಜದೆ ಕುಲಗಿರಿ ಕೆಡೆವಂದದೆ ಕೆಡೆದು ಕೌರವೇಂದ್ರಂ ಮಡಿದಂ
ಭೀಮನು ಏನಾದರೂ ಮಾಡಲಿ: ರನ್ನ ಘನತೆಯ ಸಾವನ್ನು ಕೌರವೇಂದ್ರನಿಗೆ ಕೊಟ್ಟಿರುವನು. ಇಲ್ಲಿಗೆ ರುದ್ರನಾಟಕ ಮುಗಿಯಿತು ಮಹಾಕಾವ್ಯ ಮುಂದುವರಿದು ಮಂಗಳಕ್ಕೆ ದಾರಿಹಿಡಿಯುತ್ತದೆ.
* ಅಹಿತಕುಳ ಕಾಳರಾತ್ರಿಯಂ ಬ್ರೌಪದಿಯಂ” (೪೪) ಬರಿಸಿ, ಮುಳಿಸಿಂ ನಂಜಿಕ್ಕಿ ಕೊಂದಂದಿನ, ಜತುಗೃಹದೊಳ್ ಸುಟ್ಟ, ಕೌಟಿಲ್ಯದುರ್ವಿ ತಳಮಂ ಜೂದಾಡಿ ಗೆಲ್ಲಂದಿನ, ನಿಜಕಬರೀ ನೀವಿಬಂಧಂಗಳಂ ದೋ
೫೦೬
ಶ್ರೀ ಸಾಹಿ
ರ್ವಳದಿಂದ ತಮ್ಮನಿಂದ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಸಂ ಚಳನಾ ಚಂಡಾಲನಾ ಪಾತಕನಿರವನಿದಂ ನೋಡು ಪಂಕೇಜವಕ್ಕೆ
" ಈ ಪಶುವಂ ಬೇಳೆ೦ ಕೋಪಾಗ್ನಿಯಿಂ” (೪೬): " ಸುಹುತಂ ಕೌರವ ಕ್ರಹದಿಂದೆ ಕೋಪಪವ್ಯವಹಂ", " ಪಗೆ ಮಡಿದುದು ಮುಡಿ” (೮-೪೦ ೧೪೮), ಮುಡಿದ ದೌಪದಿಂ ಶೃಂಗಾರವರ್ಣನ-ಇದು ಇಲ್ಲಿ ಬೇಕೆ? ಭೀಮನ ಬಯುಳೂ, ಇವಳ " ಸ್ವನಕುಂಭ ಪೂರ್ಣಕುಂ ಕೆಣೆಯೆನೆ "...ಮುಂತಾದ ಸೌಭಾಗ್ಯವೂ ಸರಸವೋ. ವಿರಸವೊ-ಈ ಸಂದರ್ಭದಲ್ಲಿ? ಕಥೆಯ ನೂ ನೂಲುತ್ತಾ ಹೋಗಿ ಅಶ್ವತ್ಥಾಮನ ಸೇಡುತೀರಿಕೆಯನ್ನೂ : ಲಕ್ಷ್ಮಿಯ ಪಾಂಡವರ ಕೂಡಿಕೆಯನ್ನೂ ಭೀಮನ ಪಟ್ಟಾಭಿಷೇಕವನ್ನೂ, ಮುಗಿಸಿ, "ಸಾಹಸ ಭೀಮವಿಜಯ ” ತೇರು ನಿಂತಂತೆ ನಿಲ್ಲುತ್ತ ಹಣ್ಣು ಕಾಯಿಮಾಡಿಕೊಂಡು ಮಂಗಳಮಯವಾಗಿ ಮನೆಗೆ ಹೋಗಬಹುದು. ಅದೇನು ಕಾರಣವೊ ಈ ನಿಲುಗಡೆಯಲ್ಲಿ ಗ್ರಂಥಭ್ರಂಶವಾಗಿ ಪಂಪನ ವಾಕ್ಕೋ ರನ್ನನ ವಾಕ್ಕೊ ಗುರುತುಹಿಡಿಯದಂತಾಗಿ ಇದೆ. ರನ್ನ ನಿಲ್ಲಿಸಿದ್ದಲ್ಲಿ ತಿಳಿಯುವುದಿಲ್ಲ.
ಹೋಗಲಿ-ಮುನ್ನುಡಿ, ಹಿನ್ನುಡಿಗಳೂ, ನಡುವಣ ಆಶ್ವಾಸಾಂತ. ಆರಂಭ ಪದ್ಯಗಳು ಆಶ್ವಾಸಾಂತ ಗದ್ಯಗಳೂ ಚಾಳುಕ್ಯಚಕ್ರವರ್ತಿ ಸಾಹಸಭೀಮನ ವಿಜಯವನ್ನೂ, ಕಠೋರಗರ್ಜನೆಯನು ಪಲ್ಲವಿಯಂತೆ ಘಂಟಾಘೋಷವಾಗಿ ಹೇಳುತ್ತವೆ. ಧರ್ಮಯುದ್ಧ, ಧರ್ಮಜಯವನ್ನು ಸಾರುತ್ತವೆ ಈ ಕೋಲಾಹಲದಲ್ಲಿ ಪಾಪಿ ದುರೊಧನನ (ದುರ್-ಎಂದಲ್ಲವೆ ಜನರ ಮನಸ್ಸಿನಲ್ಲಿ ಇವನ ಹೆಸರ ನೆಟ್ಟಿರುವುದು?) ಹೃದಯಭೇದಿಯಾದ ಸಂಕಟವನ್ನು ಕೇಳುವರು ಯಾರು? ಕೆಟ್ಟ: ಕಾಲಲ್ಲಿ ತುಳಿದ ನಮ್ಮ ಧರಪಕ್ಷಪಾತವನ್ನು ಬೆನ್ನು ತಟ್ಟುವ.
ಆದರೆ ರನ್ನ, ರನ್ನನ ಸಹೃದಯ?-ಈ ಪಟ್ಟಾಭಿಷೇಕದ ಕೋಲಾಹಲದಲ್ಲಿ ಒಂದು ಸಣ ದನಿ ಆ ಪಾಪಿ ಕೌರವನನ್ನು ನೆನೆಯಿಸದೆ? ಆ ಸಣ್ಣ ದನಿ ದೊಡ್ಡದಾಗಿ ಈ ಗರ್ಜನೆಯನ್ನು ನುಂಗದೆ ಮಹಾಕವಿಗಳ ಮಾರ್ಗವನ್ನು ಲಾಕ್ಷಣಿಕರ " ಮಾರ್ಗ "ದಿಂದ ಅಳೆಯಬಹುದೆ? ಕಳೆಯಬಹುದೆ ರನ್ನನ ಕೈವಾಡ. ಚೆಲುವು ಕೆಲಸ ಎಲ್ಲಿ ಭೀಮನಲ್ಲೇ? ದುರೊಧನನಲ್ಲೇ? ಪಂಪನ, ಜೈನಧರ ಶಲಾಕಾಪುರುಷರ, ಕರದಲ್ಲಿ ತೊಳಲಿ ಮೋಕ್ಷಗಾಮಿಗಳಾಗುವರ, ಮಾರ್ಗ ಎತ್ತ ಸಾಗುತ್ತದೆ; ಮೇಲ್ಪಂi ಹೇಗಿದೆ? ಬಲ್ಲವರೇ ಬಲ್ಲರು: * ರಸೋ ವೈ ಸಃ ", " ಏಕೊ ರಸಃ ಕರುಣ ಏವ”, ಪಂಪನು ಗದಾಯುದ್ದದ ನಿಜವಾದ ನಾಯಕನನ್ನು “ ಮಹಾನುಭಾವ "ನನ್ನು ನೋಡಿದ್ದರೆ- ಶಿಷ್ಯಾದಿ ಪರಾಜಯಃ ” ಎಂದು ಹೇಳಿ ಆನಂದಪಡುತ್ತಿದನು. ರನ್ನನ ಕವಿತಾಹೃದಯವನ್ನು ರನ್ನನಿಂದ ಹೊರಪಡಿಸುವ: ವಾಗ್ಗೇವಿಯ ಭಂಡಾರದ ಮುದ್ರೆಯನ್ನೊಡೆದವನಲ್ಲವೇ ಅವನು?
ಕವಿಮಾರ್ಗದೊಳೊಳಪೊಕ್ಕುಂ ನವರಸಮಂ ತೆರೆಯೆ ನುಡಿದನೆನಿಸಿದ ಕವಿ ಸ
ವಿಯೆನಿಕುಂ ಗೂಡಾರದ ಕವಿಯಂತಿರೆ ಮುಚ್ಚಿ ಪೋದ ಕವಿಯುಂ ಕವಿಯೇ!
ವರವುರಮುಮಂಟಸುಂಟಿಯು ಮರೆವೊರಕನುಮನಿಸಿ ತತಂ ನುಡಿದು ಸಭಾಂ ತರಮಂ ರಂಜಿಪುದೆ ರಸಾಂ ತರಂಗಳಂ ಮುಟ್ಟಿ ನುಡಿದು ರಂಜಿಸವೇಡಾ? ಸರಸತಿಯನಬಲೆಯಂ ಗೋಣ್ ಮುರಿಗೊಂಡರ್ಥಕ್ಕೆ ಕುದಿದು ನೋಯಿಸುವವನ ಕರಿಗನ ಪಾತಕನಾತನ ಸರಸ್ವತೀದ್ರೋಹನವನನಾರ್ ಮುಟ್ಟುವರೋ
11-----------------------
೫೦೭
ಕನ್ನಡ ಸಾಹಿತ್ಯದ ಚರಿತ್ರೆ
ಪೊಸದೇಸಿಯಂ ಬೆಡಂಗಂ ರಸಘಟ್ಟಿಯನರ್ಥದೃಷ್ಟಿಯಂ ಬಗೆವರೋ ಭಾ ವಿಸುವರೋ ಸಾರಣೆಯಂತಿರೆ ಕಸಮಂ ಪಿಡಿವರ್ ಕೆಲರ್ ಮಹಾಪುರುಷರ್ಕಲ್ ! (ಅಜಿತ ೧-೮೭, ರ್೮N೯೧)
ಶ್ರೀಧರಾಚಾರ-೧೦೪೯, ಶಾಂತಿನಾಥ-೧೦೬೮ ೧ನೆಯ ಶತಮಾನವೆಲ್ಲಾ ರಾಜ್ಯವಿಪ್ಲವದ ಕಾಲವಾಗಿತ್ತು. ಜೋಳರು ಪ್ರಬಲಿಸಿ ದಕ್ಷಿಣದಲ್ಲಿ ಗಂಗರನ್ನು ಉರುಳಿಸಿ (೧೦೦೪), ಉತ್ತರದಲ್ಲಿ ಚಾಳುಕ್ಯರ ಮೇಲೆ ಬಿದ್ದರು. ಹೊಯ್ಸಳರು ತಲೆಯೆತ್ತು ತಿದ್ದರು. ಜೈನಮತದ ಪ್ರಾಬಲ್ಯ ಕುಗ್ಗಿ, ಶೈವ ವೈಷ್ಣವ ಮತಗಳು ಹಬ್ಬಲಾರಂಭಿಸಿದುವು. ರಾಜರ ಆಶ್ರಯ ತಪ್ಪಿ, ಈ ಕಾಲದಲ್ಲಿ ಶ್ರೇಷ್ಠ ಕವಿಗಳು ಏಳಲಿಲ್ಲ. ಕೆಲವರು ಮಾತ್ರ ಸಾಹಿತ್ಯದ ನಂದಾದೀವಿಗೆ ಯನ್ನು ಬೆಳಗಿಸಿಕೊಂಡು ಬಂದರು. ಇವರಲ್ಲಿ ಗಜಾಂಕುಶ, ಮನಸಿಜ, ಚಂದ್ರಭಟ್ಟ ಮುಂತಾದವರ ಗ್ರಂಥಗಳು ಉಳಿದಿಲ್ಲ.
ಶ್ರೀಧರಾಚಾರನೆಂಬವನು ೧೪೯ರಲ್ಲಿ ಜಾತಕತಿಲಕ ಎಂಬ ಜ್ಯೋತಿಷ ಗ್ರಂಥವನ್ನು ಬರೆದನು. ಇವನ ಸ್ಥಳ ಬೆಳುವಲನಾಡಿನ ನರಿಗುಂದ, ಚಂದ್ರಪ್ರಭ ಚರಿತೆಯನ್ನು ಬರೆದಿರುವಂತೆ
ಸುಭಗವಚಂ ಕಾವ್ಯಕವಿ ತ್ವಭೂಷಣಂ ಶ್ರೀಧರಾಶ್ಯರಚಿತಂ ಚಂದ್ರ ಪ್ರಭಚರಿತಂ ಶಾಸ್ತ್ರಕವಿ
ತ್ವಭೂಷಣಂ ಧರೆಗೆ ನೆಗದ್ದಿ ಜಾತಕತಿಲಕಂ ಎಂಬ ಪದ್ಯದಿಂದ ತಿಳಿಯುತ್ತದೆ.
ಈತನು ಆದಿಪಂಪ, ಚಂದ್ರಭಟ್ಟ, ಮನಸಿಜ, ಗುಣವರ, ಗಜಾಂಕುಶ, ರನ್ನ-ಈ ಪೂರ್ವ ಕವಿಗಳನ್ನು ಸ್ಮರಿಸಿದ್ದಾನೆ. ನಾಗಚಂದ್ರನ ಹೆಸರಿಲ್ಲ.
- ಶಾಂತಿನಾಥನು ಸುಕುಮಾರ ಚರಿತ್ರವನ್ನು ಬರೆದಿದ್ದಾನೆ (೧೬೮), ಬನವಸೆಯಲ್ಲಿ ಅಧಿಕಾರಿ ಯಾಗಿದ್ದನು.
ಕಳಚುರ-ಹೊಯ್ಸಳರ ಕಾಲ ೧೨ನೆಯ ಶತಮಾನದಲ್ಲಿ ಕನ್ನಡದ ಎರಡನೆಯ, ಬೆಳ್ಳಿಯ ಬೆಳೆ ಬಂದಿತು-ಜೈನಸಾಹಿತ್ಯದಲ್ಲಿ (ಈ ಶತಮಾನದ ನಡುವಣಭಾಗದಲ್ಲಿ ಆರಂಭವಾದ ವೀರಶೈವ ಸಾಹಿತ್ಯವನ್ನು ಗಮನಿಸಿದರೆ, ಅದೂ ಒಂದು ಹಸನಾದ ಚಿನ್ನದ ಬೆಳೆಯೇ ಆಗುವುದು). ಈ ಕಾಲದ ಉತ್ತಮ ಕವಿಯೆಂದರೆ ಅಭಿನವ ಪಂಪನೆಂದು ಹೆಸರಿಟ್ಟುಕೊಂಡ ನಾಗಚಂದ್ರ ಇವನ ಹಿಂದೆ ನೇಮಿಚಂದ್ರ ಜನ್ನರು (ಲೀಲಾವತಿ, ಯಶೋಧರಚರಿತೆ) ಬರುವರು. ತೀರ್ಥಂಕರರ ಪುರಾಣಗಳು ಒಂದರಮೇಲೊಂದು ಹುಟ್ಟುವುವು (ಮಲ್ಲಿ ನೇಮಿ, ಚಂದ್ರಪ್ರಭ, ವರ್ಧಮಾನ, ಪಾಶ, ಅನಂತ, ಪುಷ್ಪದಂತ, ಶಾಂತಿ). ಪರಮತ ಖಂಡನೆಯೂ, ಜಿನಮತಮಂಡನೆಯೂ, ವಿವರಣೆಯೂ, ಬ್ರಹ್ಮಶಿವ, ವೃತ್ತವಿಲಾಸ, ನಯಸೇನ, ಬಂಧುವರ್ಮ, ನಾಗರಾಜ ಮೊದಲಾದವರಲ್ಲಿ ಕಾಣುವುವು. ಆಂಡಯ್ಯನು ಸಂಸ್ಕೃತವಿಲ್ಲದೆ ಕನ್ನಡದಲ್ಲಿ ಕವಿತೃಮಾಡಿ ಕನ್ನಡದ ಸ್ವತಂತ್ರಶಕಿ ಯನ್ನು ಸಾರಿರುವನು. ನಾಗವರ ೨, ಕೇಶಿರಾಜರು ಹಳಗನ್ನಡ
HO೮
ಶ್ರೀ ಸಾಹಿ
ಸಾಹಿತ್ಯದ ಲಾಕ್ಷಣಿಕರು: ಮಲ್ಲಿಕಾರ್ಜುನನು ಸಂಗ್ರಹಕಾರ, ಒಟ್ಟಿನಮೇಲೆ ಈ ಕಾಲದ ಸಾಹಿತ್ಯ ಪಂ ಯುಗದ ಸಾಹಿತ್ಯದ ಶಿಕ್ಷಾನುಸಾರಿ ಎಂದು ಹೇಳಬಹುದು: ಎರಡನೆಯ ಪಂಕ್ತಿಯ, ಅನುಕರಣಸಾಹಿತಿ ಕರ್ನಾಟಕದ ಕಾವು ಬೇರೆಕಡೆ ಬಸವಣ್ಣನವರ ಪ್ರಭಾವದಿಂದ ಹೊಸ ಬುಗ್ಗೆಯಾಗಿ ಚಿಮ್ಮಿತು (೧೧೬೦
4
ನಾಗಚಂದ್ರ (ಅಭಿನವಪಂಪ)-ಸು. ೧೧೦೦
ನಾಗಚಂದ್ರನು ಈ ಯುಗದ ಆಚಾರಕವಿ. ಈತನ ಸರಿಯಾದ ಕಾಲವೂ ಸ್ಥಳವೂ ಅನುಮಾ ದಲ್ಲಿಯೇ ಉಳಿದಿವೆ. ಈತನಿಗೆ ರಾಜಾಶ್ರಯವಿದ್ದಂತೆ ಕಾಣುವುದಿಲ್ಲ; ಈತನ ಗ್ರಂಥಗಳಲ್ಲಿ ಕ್ಷಾ ಕ್ಕಿಂತಲೂ ಭಕ್ತಿ ವೈರಾಗ್ಯಗಳು ಹೆಚ್ಚಾಗಿ ಹರಿಯುತ್ತವೆ. ಮಲ್ಲಿನಾಥಪುರಾಣ, ರಾಮಚಂದ್ರಚರಿ ಪುರಾಣಗಳು ಪುರಾಣಗಳು: ರಾಮಾಯಣದಲ್ಲಿ ಬರಬಹುದಾಗಿದ್ದ ಮಾನುಷ್ಯಲೋಕ ಜೀವ ಅಷ್ಟೊಂದು ಕಾಂತಿಯಿಂದ ಪ್ರತಿಬಿಂಬಿಸಿಲ್ಲ. ಜೀವನವೆಲ್ಲಾ ಶಾಂತರಸದ ಮಂಜಿನ ಮೂಲಕ ಈತ ಕಣ್ಣಿಗೆ ಕಾಣಿಸುತ್ತದೆ.
ಜೀವನಚರಿತ್ರೆ : ತಂದೆ, ತಾಯಿ, ಕುಲ, ಗೋತ್ರ, ಅಧಿಕಾರ, ರಾಜಾಸ್ಥಾನ, ಕಾಲ-ಈ ಬ7 ನಾಗಚಂದ್ರನು ಉದಾಸೀನನಾಗಿದ್ದಾನೆ. ಬಿಜಾಪುರ(?)ದಲ್ಲಿ ಒಂದು ಬಸದಿಯನ್ನು ಕಟ್ಟಿಸಿದುದಾ। ಹೇಳುತ್ತಾನೆ
ನಿಜವಿಭವೋದಯಂ ಸಫಳವಾಯ್ತನೆ ಮಲ್ಲಿಜಿನೇಂದ್ರ ಗೇಹಮಂ ವಿಜಯಪುರಕ್ಕಳಂಕರಣಮಾಗಿರೆ ಮಾಡಿಸಿ...
(ಮಲ್ಲಿ. ೧೪-೨೯೭
ಆ ಕಡೆಯ ಒಂದು ಶಾಸನದ ಪದ್ಯಗಳು ಈತನ ಪದ್ಯಗಳ ಛಾಯೆಯಾಗಿವೆ (ಕಾಲ: ಸು. ೧೯೫) “ ಕಂತಿಹಂಪನ ಸಮಸ್ಯೆಗಳಿಂದ ಬಲ್ಲಾಳರಾಯನ ಆಸ್ಥಾನದ ಮಾನ್ಯಕವಿಯಾಗಿದ್ದನೆಂಬ ಪ್ರತೀತಿ ಇದೆ ಇದನ್ನು ಬಾಹುಬಲಿ, ದೇವಚಂದ್ರರೂ ಹೇಳಿದ್ದಾರೆ. ಇದು ಚಾರಿತ್ರಾಂಶವೆಂದು ಖಂಡಿತ ಹೇಳಲು ಆಧಾರ ಸಾಲದು. ಅಂತೂ ರನ್ನನಂತೆ ಕರ್ನಾಟಕ ದೇಶವನ್ನು ಉತ್ತರದಿಂದ ದಕ್ಷಿಣಕ್ಕೆ ತೀರ್ಥಯಾತ್ರೆ ಮಾಡಿರಬಹುದು. ಅನೇಕ ರಾಜಮಂಡಳಿಕರನ್ನು ನೋಡಿರಬಹುದು: ಅನುಭವ ಸಂಸ್ಕಾರಗಳನ್ನು ಪಡೆದಿರಬಹುದು. ವಾಸ್ತವಾಂಶಗಳು ಸಿಕ್ಕುವುದಿಲ್ಲ.
ಈತನ ಗುರುವಾದ ಬಾಲಚಂದ್ರನನ್ನೂ, ಮೇಘಚಂದ್ರಯತಿಯನ್ನೂ ಹೊಗಳುವ ಪದ್ಯಗಳು ಶ್ರವಣಬೆಳೊಳದ ಶಾಸನಗಳಲ್ಲಿ ಸಿಕ್ಕುತ್ತವೆ (೧೧೦೦, ೧೧೧೫, ೧೧೪೬, ೧೧೬೩ ಕ್ರಿ.ಶ.), ನಾಗವಮ್ಮ - (ಸು. ೧೧೪೫), ಕೇಶಿರಾಜರು ಈತನ ಪದ್ಯಗಳನ್ನು ಉದಾಹರಿಸಿದ್ದಾರೆ. ಕರ್ಣಪಾಯ್ಯನು (ಸು. ೧೧೪೦)
ಅದ್ಯತನನಾಗಿಯುಂ ನೆಗ | ಬ್ಲಾದ್ಯರ ದೊರೆಯೆನಿಸಿ ಮದು ಸಾಹಿತ್ಯಕಳಾ ಹೃದ್ಯತೆಯಿನೆಸೆದನಾ ನಿರ
ವದ್ಯಗುಣಂ ಸಂದ ನಾಗಚಂದ್ರಕವೀಂದ್ರಂ ಎಂದು ಹೊಗಳಿದ್ದಾನೆ. ಹೀಗೆಯೇ ಪಾರ್ಶ್ವ, ಜನ್ನ, ಮಧುರ, ಮಂಗರಸ ಮುಂತಾದವರು ಗೌರವಿಸಿದ್ದಾರೆ.
ಘಳಿಲನೆ ವಿಬುಧರ್ ತುಷ್ಟಿಯ ನೋಳಕಯು ಮನಃಪ್ರಸಾದಮಂ ಪಡೆವುದಂ ಕಳೆಯಂ ಚಂದ್ರಂ ಕವಿತಾ ಕಳೆಯಂ ಕವಿನಾಗಚಂದ್ರನಾಂತುದೆ ಸಫಲಂ (ಮಧುರ)
೫೦೯ ಕನ್ನಡ ಸಾಹಿತ್ಯದ ಚರಿತ್ರೆ
ಇದರಿಂದ ಈತನ ಶ್ರೇಷ್ಠ ಕವಿತಾಸ್ಥಾನವೂ, ಸಾಹಿತ್ಯಕಲೋಪಾಸನೆಯೂ, ಮನಃಪ್ರಸಾದಪರಿಣಾಮವೂ ವ್ಯಕ್ತವಾಗುತ್ತವೆ.
ಘಟ್ಟಿ ಆಧಾರಗಳನ್ನು, ಮಾತ್ರ ಮನಸ್ಸಿನಲ್ಲಿಟ್ಟು ಪಂಪ ಪೊನ್ನ ರನ್ನರಿಂದೀಚೆಗೂ (ಸು. ೧೧00), ಶಾಸನಗಳ ವರ್ಷಗಳ ಆಚೆಗೂ (ಸು. ೧೧೦), ನಾಗಚಂದ್ರನ ಕಾಲವನ್ನು ಹಾಕಬಹುದು. ೧೧೪೦ ರಿಂದೀ ಚಿನ ಕವಿಗಳೇ ಆತನನ್ನು ಹೊಗಳುವ ಪದ್ಧತಿ ಕಾಣುವುದರಿಂದಲೂ ಶ್ರೀಧರಾಚಾರನು ಈತನ ಹೆಸರನ್ನದಿರುವುದರಿಂದಲೂ ಸು. ೧೭೫-೧೦ ರಲ್ಲಿದ್ದನೆಂದು ಸದ್ಯಕ್ಕೆ ಇಟ್ಟುಕೊಳ್ಳಬಹುದು.
ವ್ಯಕ್ತಿತ್ವ: ಈತನ ಮನೋಧರ ಲೌಕಿಕಕ್ಕಿಂತಲೂ ಧಾತ್ಮಿಕದ ಕಡೆಗೆ ಹೆಚ್ಚು ಒಲೆಯುತ್ತದೆಂದು ಹೇಳಬಹುದು. ಧರೋಪಾಸನೆ ಕಲೋಪಾಸನೆಗಳ ಪ್ರಪಂಚದಲ್ಲಿ ಈತನು ನಿಶ್ಚಲಭಕ್ತಿಯಿಂದಿದ್ದನು. *ಶುಭಧ್ಯಾನಾರ್ಥಿ "ಯಾಗಿ (ರಾಮಾ. ೧-೩೮) ಈತನ ಪುರಾಣಗಳು ರಚಿಸಿದುವು:
ಕಥೆ ಜಿನಚರಿತಮೆ, ಕವಿ ಜಿನ ಕಥೆಯಂ ಪೇಬಿ ವನೆ, ರಾಜ ವಿಟ ಜೋರ ಕಥಾ ಕಥೆ ಕಥೆಯೆ, ಕವಿ ಕವಿಯೆ, ತ ವ್ಯಥೆಯಂ ಪೇಟ್ಟಿ ಪ್ರಶಸ್ತಮಂ ಪುಟ್ಟಿಸುಗುಂ
(ಮಲ್ಲಿ. ೧-೫೦) ರಾಗದ್ವೇಷನಿಬಂಧಮಪ್ಪ ಕೃತಿಯಂ ನಿರ್ಬಂಧದಿಂ ಬಂಧಮಿಂ ಬಾಗರ್ಥಂ ಪೊಸತಾಗೆ ಪೇಟ್ಟಿ ಖಿಲಮಂ ರಾಗಾವಿಲಂ ಮಾಲ್ಟಿ ವಿ ದ್ಯಾಗರ್ವಗ್ರಹಪೀಡಿತರ್ ಸ್ವಪರಬಾಧಾಹೇತುವಂ ದುಸ್ತರೋ ದ್ಯೋಗಕ್ಷೇಶಿತರಾಗಿ ಬಿತ್ತಿ ಬೆಳೆವಂತಕ್ಕುಂ ವಿಷೋದ್ಯಾನಮಂ ಪೊಗಟ್ಟು ಮಹಾತ್ಮರುಜ್ಜಲಮೆನಿಪ್ಪ ಗುಣಂಗಳನುಜ್ಜಲಪ್ರಸಿ ದ್ವಿಗೆ ಪೊಲನಾಗದುಬ್ಬಲಿಸಿದಪ್ರತಿಮಪ್ರತಿಭಾಪ್ರಭಾವದಿಂ ಪೊಗಟ್ಟು ದುರಾತ್ಮರ ಮೊಗದೊಳಿರ್ದುಗುಂ ಪೊಆಗಿಕ್ಕಲಾದ ನಾ ಲಗೆಯವನೆತ್ತುನಾಲಗೆಯೊಳೋದಿದವರ ಕೃತಿಯೇ ಕೃತಾರ್ಥನೇ?
(ರಾಮಾ, ೧-೩೪, ೩೫) ರಸಮಂ ನಾಲಗೆ, ಕವಿತಾ ರಸಮಂ ಕವಿ, ಕುಸುಮರಸಮನಳಿಮಾಳೆ, ಸುಧಾ ರಸಮಂ ಸುರರ್, ಅಕ್ಷಯಸುಖ ರಸಮಂ ಪರಮಾತ್ಮನವನುಳಿದವರಯ್ಯರ್
(ಮಲ್ಲಿ. ೧-೨೮) ಜಿನಪತಿಗಂ, ಜಿನಮುನಿಗಂ, ಜಿನಾಗಮಕ್ಕಂ, ಜಿನಾಧಿಪತಿಭವನಕ್ಕಂ, ಜಿನಗುಣಸಂಪತ್ತಿಗಮ್, ಎಟಿ ಪನಾಗನುಳಿದವರ್ಗ ನಾಗಚಂದ್ರ ಕವೀಂದ್ರಂ
(೧-೪೦) ಶ್ರೀಯಂ ಧರೆ ಪೊಗನಗಂ ನ್ಯಾಯಾರ್ಜಿತಮನಿಸಿ ಪಡೆದು ತಕ್ಕೆಡೆಗmದೊ ಲೀಯುತ್ತುಮಮಲಕೀರ್ತಿ
ಶ್ರೀಯನುಪಾರ್ಜಿಸಿದುದಾತ್ತನಭಿನವ ಪಂಪ ಉದಾತ್ತ ” ಎಂಬುದು ನಾಗಚಂದ್ರನ ಒಿಯ ನುಡಿ.
2300
ಶ್ರೀ ಸಾಹಿ
ಶ್ರೀ ಪರಮಜಿನೇಶ್ವರ ಚರ
ಪಸ್ಥಲಮಂ ಪ್ರಧಾನಮಂಗಳಮಂ ಪು ಡೊಪಾರ್ಜನಮಂ ನಿತ್ಯ
ವ್ಯಾಪಾರಮನಪ್ಪುಕಯ್ಯ ನಭಿನವ ಪಂಪಂ
(೮
ಶ್ರೀಗಂ, ಪರಮಾತ್ಮ ಪದ ಶ್ರೀಗಂ, ನೆಲೆ ಧರ್ಮಮೆಂದು, ಧರ್ಮ ಧ್ಯಾನೋ ದೊಗಂ ಕೈಮಿಗೆ, ವಿಷಯ ವಿ
ರಾಗಮನಂ, ಸುಖದಿನಿರ್ದನಭಿನವ ಪಂಪ
(೧೦-೧
-ಈ ಪದ್ಯಗಳು ನಾಗಚಂದ್ರನ ವ್ಯಕ್ತಿತ್ವವನ್ನು ತಿಳಿಸುವುದು ನಮ್ಮ ನಂಬಿಕೆ.
ಮಲ್ಲಿನಾಥ ಪುರಾಣ : ಇದು ನಾಗಚಂದ್ರನ ಮೊದಲನೆಯಕಾವ್ಯವೆಂದು ತೋರುತ್ತರ ಅಜಿತಪುರಾಣದಂತೆ ಕಥೆ ಸ್ವಲ್ಪ: ಭವಾವಳಿ ಇಲ್ಲ: ಆದರೆ ಕವಿ ಕಥೆಯನ್ನು “ ಪ್ರಸಿದ್ಧ ಕವಿ ಪಟ್ಟಿ ಯು” ವರ್ಣನಾಭಾಗಗಳಿಂದ ಲಕ್ಷಣಪೂರಿತವಾಗಿ ಹಿರಿದುಮಾಡಿದ್ದಾನೆ. ಇದನ್ನು ಬರೆದು ಕಾವ್ಯರಚನೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ “ ಸಾಹಿತ್ಯವಿದ್ಯಾಧರ "ನೂ “ಸಾಹಿತ್ಯಸತ್ವಜ್ಞ "ನೂ ಆದನು.
ಧರೆ ಪೊಗಟೆ ವಿತರಾಗನ ಚರಿತದೊಳಳವಡಿಸಿ ಸಕಲ ರಸಮಂ ಕವಿತಾ ಪರಿಣತಿಯಂ ಮೆಲೆದ ಕಾ ವ್ಯರಸಾರ್ಣವಪೂರ್ಣಚಂದ್ರನಭಿನವಪಂಪ
(೧-೩೯
ಫುಲ್ಲಶರಂ ಬಸಂತದ ಪುಗಿಲ್ ನೆದಿಂಗಳ ತಣ್ಣಿಸಿಲ್ ಮುಗುಳ್ ಮಲ್ಲಿಗೆ ಬಂದ ಮಾವಲೆವ ತೆಂಕಣ ಗಾಳಿ ವಿಪಂಚಿಂಚರಂ ನಲ್ಗಳ ಲಲ್ಲೆ ಕೋಗಿಲೆಯ ಬಗ್ಗಣೆ ತುಂಬಿಯ ಗೇಯಮೆಂಬಿವಂ ಬಲ್ಲವರಂ ಮನಂಗೊಳಿಸುಗುಂ ಕೃತಿ ಸತ್ಕತಿ ನಾಗಚಂದ್ರನಾ ಎಂದನುರಾಗದಿಂ ಪೊಗಟ್ಟು ಭವ್ಯಜನಂ ಕಿಏದೀ ಕಥಾಪರಿ ಸ್ಪಂದಮಿದಂ ನಿಮಿರ್ಚಿ ಕವಿತಾರಸಮಂ ನೆಟ್ ಪೇರಿಲ್ಲ ಮು ನೈಂದು ಮಹಾಕವೀಶ್ವರರೊಳೊರ್ವರುಮೆಂದೊಡೆ ತೇಲಲಾಂ ಮನಂ ದಂದೆನದಲ್ಲದೆನ್ನಳವೆ ಮಲ್ಲಿಜಿನೇಂದ್ರ ಮಹಾಪುರಾಣಮಂ
(೧-೪೪, ೪೫
(5) ಮೊದಲಿನೆಂಟನೆಯ ಆಶ್ವಾಸಗಳಲ್ಲಿ ಭೋಗಸಾಮ್ರಾಜ್ಯದ ಚಿತ್ರಗಳು: ಮಹಾಕಾವ್ಯದ ಸಾಮಾನ ಪದ್ದತಿ:-ಮಗ್ಗದ ನೆಯ್ದೆ, ನುಣ್ಣನೆಯ ನೂಲು, ಹೂವು: (೧)-ಜಂಬೂದ್ವೀಪ, (೨)-ವಿದೇಶ ಸೀತಾ ನದಿ, ದೇಶವರ್ಣನ
ಕಳಕಂಠಕ್ಕತನುಗೆ ಚಾ ಪಳತಾರೋಹಣವಿಕಾರವಳಿಗಾಕುಜಾ ವಳಿಗೆ ಮಧುವಿಕೃತಿ ಮಾನವ ಕುಳಕ್ಕೆ ಕನಸಿನೊಳಮಿಂತಿವಿಲ್ಲಾ ನಾಡೆಲ್
(೨-೨೬
೫೧೧.
ನ್ನಡ ಸಾಹಿತ್ಯದ ಚರಿತ್ರೆ
ಜಧಾನಿ, ಉದ್ಯಾನ, ಕೋಟೆ, ವಾರಾಂಗನೆಯರು, ಅರಮನೆ (೩)-ವೈಶ್ರವಣರಾಜ, ಅವನ ಂದರಕ್ಕೆ ವಿಲಾಸಿನಿಯರ ವಿರಹ, ಅಗ್ರಮಹಿಷಿ ಧನಶ್ರೀ, ಅವಳ ಆಪಾದಮಸ್ತಕವರ್ಣನೆ,
ದಾಹರಣೆಗೆ
ಪಗೆ ತುಂಬಿಯೊಳ್ ಚಿರಂ ಸಂ ಪಗೆಗೀ ಕೋಮಳೆಯ ನಾಸಿಕಾಮುಕುಂ ಸು ಪಗೆಯ ಪಗೆ ನಾಸಿಕಾಸುರ ಭಿಗೆ ಕೆಳೆಯಂ ತುಂಬಿ, ಪಗೆಯ ಪಗೆ ಕೆಳೆಯಲೇ
(೭೭)
ಪತ್ರದೊಹಳ
ಎಳವೆ ಬಳೆಯದ ಗಗನ ಸ್ಥಳಿ, ಸಸಿ ಬೆಳೆಯದ ಧರಿತ್ರಿ, ಮೌಕಿಕ ರತ್ನಂ ಬಳೆಯದ ಶುಕ್ಕಿಕೆ, ಗರ್ಭ ಬಳೆಯದ ಬಾಲಕಿಯ ಬಸಿಜನರ್ಥಕಮಲೈ
(೧೧).
(೧೧೯)
ಪರಿದಾಡುವ ಸುತನ ಪದಾಂ ಬುರುಹಂಗಳೊಳುಲಿವ ಪೊನ್ನ ಗೆಜ್ಜೆಯ ದನಿಯಂ ತಿರೆ ನಚ್ಚಿನ ವೀಣಾವೇ
ಣುರವಂಗಳ್ ಕಲೆಯವ ಕರ್ಣಾಮೃತಮಂ ೪)-ಪತಿಯ ಸಮಾಧಾನ, ಜಿನಪೂಜೆ, ಗರ್ಭವರ್ಣನೆ, ಪುತ್ರೋತ್ಸವ, ವಿದ್ಯಾಭ್ಯಾಸ
ಗುರುಸನ್ನಿಧಿಯೊಳ್ ಮುನ್ನಂ ಪರಿಣತಿವಡೆದಿರ್ದ ಸಕಳ ವಿದ್ಯೆಯನೀಗಲ್ ಪರಿವಿಡಿಗೆಯಂತೆ ಕಳಾ ಧರನಾದಂ ಶ್ರೀಧರಂ ಧರಾಧರಿರಂ
(೧೩೪)
ರವವನಶ್ರೀ, ಯುವರಾಜಪಟ್ಟ (2 8,೬)-ವಸಂತಸಮಯವರ್ಣನ, ರಾಣಿಯರೊಡನೆ ವನಕೇಳಿ, ಪುಷ್ಟಾಪಚಯ, ಜಲಕೇಳಿ
ಅಲರ್ವಕ್ಕಿಯ ಗೆಡೆವಕ್ಕಿಯ ಜಲವಕ್ಕಿಯ ಪವಳವಾಯಪಕ್ಕಿಯ ಕಿಸುಗಣ್ ಮಲರ್ವಕ್ಕಿಯ ಮೆಲ್ಲುಲಿ ನ ಲ್ಲುಲಿ ಮದನನ ಗೀತವಾದ್ಯದುಲಿಯಮೋಲೆಸೆಗುಂ
ಕಳಕಂಠಂ ಪುಗಲೆಂಬೀ ಕಳದಿನದಂ ವಕ್ರವಾಗಿಯುಂ ನೃಪನ ಮನಂ ಗೊಳಲಾರ್ತುದು ಪುರುಡಿಪ ನ ಒಳ ನಿಯ ವಕ್ರವಚನದಂದದಿನಾಗಳ್
(೬, ೧)
ಇದು ನಾಗಚಂದ್ರನ ಯೌವನವಸಂತನ ನಲ್ಲುಲಿ, ಮೆಲ್ಲುಲಿ, ನಿಯುಲಿ: ಎಷ್ಟು ಕವಿಗಳ ಕೈಯಲ್ಲಿ ಈಚೆಗೂ, ಹಿಂದೂ, ನುಲಿದಾಡಿ, ಸುಳಿದಾಡಿ, ಇದು ಹಳಸಿದೆ! ಮನ್ಮಥನೂ, ಎಳಮೆಯೂ ಕವಿತೆಗೆ ಕೊರಗಲ್ಲ, ಖಂಡಿತ ಅಲ್ಲ; ಆದರೆ ಈ ಓರಚ್ಚು, ಈ ಮಾತಿನ ಮೆಲುಕಾಟ!
೫೧೨
ಶ್ರೀ ಸಾಹಿ
ರತಿ ಮದನಂ ವಸಂತಸಮಯಂ ಪುಳಿನ ನಳಿನ ಕೊಳಂ ಹಿಮ ದ್ಯುತಿ ಲತೆ ಮಾವು ತೀರಕಳಭಂ ಕಳಕುಂತರವಂ ರಥಾಂಗದ ಪತಿ ತಳಿರುಯ್ಯಲೋಪರ ಸುಸಿಲ್ ನನೆವಿಲ್ ನನೆಯಂಬು ಮಂದಮಾ ರುತನನೀನಿನಾದಮಿವಂ ಪೊಸಮಲ್ಲಿಗೆಗಕ್ಕೆ ಮಂಗಳಂ
(೬೩. (೭)-ಕತ್ತಲೆ, ಬೆಲ್ಲಿಂಗಳು,
ಒಗುಮಿಗೆ ಬೆಳಗಿದುದು ವಿಯೋ ಗಿಗಳ ಮೊಗಂ ಬೆಳ್ಳನಾಗೆ ವಿರಹಾಗ್ನಿಯ ಬೆ ಟೈಗೆ ಕಮಳದ ಪಗೆ ಕುಮುದದ
ನಗೆ ತಾಂ ಯೌವನದ ಬೇಳದಗೆ ಬೆಟ್ಟಿಂಗಳ್
(೭-೪ ಕೌಮುದಿ ಮಹೋತ್ಸವ, ಸೂಳೆಗೇರಿಯ ನೋಟಗಳು, (೮) ನಾಟಕಶಾಲೆ, ಸಂಗೀತ, ನರ್ತನ
ಸ್ಮರವಿಜಯಕ್ಕಿದೆ ನಿರ್ವಾ
ಣರೇಖೆಯನೆ ಮಸಗಿ ಮದನಮದಕರಿ ವಿಸಟಂ ಬರಿದುದೆನೆ ಕಾಮನೇಸಿನ ಪರಿಣತಿಯೆನೆ ತರುಣಿ ಬಹುವಿಧಂ ನರ್ತಿಸಿದ ನುಂಗಿದುದು ಸಕಲ ರಸಮಂ ಶೃಂಗಾರರಸಪ್ರವಾಹಮೆನ ಜನದ ಮನೂ ರಂಗ ಪ್ರತಿಷ್ಠೆ ರತಿಗಾ
ಯ್ಯಂಗಜನಿಂದೆನಿಸಿತ್ತು ಸಂಗೀತರಸಂ
(೫೭, ೫
ಮಳೆಗಾಲ, ಮುಗಿಲು, ಮಿಂಚು
ಬಿಡೆ ಕೆಮ್ಮನೆ ಗರ್ಜಿಪ ತ ಕೆಡೆ ತಗದೆಡೆಯೆನ್ನದೆಂಗುವಸ್ಟಿರಮಪ್ಪಾ
ಜಡಮಚಿರಪ್ರಭೆ ನಿಮಿಷದೊ ಆಡಂಗುಗುಂ ಬೆಳಗದೆಂದುಮದು ಸತ್ಪಥಮಂ
(೮-೯
ಶರತ್ಸಮಯ
ಪೆರೆಯಿಕ್ಕಿ ಪೋದುವಚಿರಾಂ ಶುರಸನ ಘನಕಾಲವಿಷಧರಂಗಳ್ ಗಗನೊ ದರಗಪ್ಪರದೊಳೆನಲ್ ತರ ತರದಿಂ ಪಸರಿಸಿದುವಂದು ಬಿಳಿಯ ಮುಗಿಲ್ಲ
(೮೫
ಬಳಸಿ ಸುಣಿದಾಡಿ ಕಾಲ್ಕಿಡಿ ದೆಳಸಿ ಕಳಾಳಾಪಮೊದವೆ ಜನನಿಯ ಮೊಲೆವಾ ಲ್ಲಳನುಣ್ಯ ಸಿಸುವಿನಂತಿರ
ಕಳಮೆಯ ಪಾಲ್ಲೆನೆಯ ಪಾಲನುಂಡುವು ಗಿಳಿಗಳ್ ದಿಗ್ವಿಜಯಕಾಲ, (೯)-ಚತುರಂಗಸೇನೆ, ಸ್ತ್ರೀಯರು ಮಾಳಿಗೆಯಿಂದ ನೋಡಿದ್ದು-ರಾಜ ಕುದು ಯೇರಿದ್ದು, ಇಳಿದದ್ದು- ಅಂಗಜ ಚಕ್ರವರ್ತಿ ಬಂದಪನೆಗೆ ಬಂದು "
(೧
೫೧೩
ನ್ನಡ ಸಾಹಿತ್ಯದ ಚರಿತ್ರೆ
ಸಿಡಿಲೆಂಬ ಜವನ ಕೊಡಲಿಯ ಕಡುವೊಯ್ಲಿಂ ನೆಗೆದ ಬೇರ್ಗಳೊಡನೆ ನೆಲಂ ಬಾ ಹೈಡೆ ಬೆಟ್ಟು ಕೆಡೆವ ತೆವದಿಂ ಕೆಡೆದಾಲಮನಿದಿರೋಳವನಿಪಾಳಂ ಕಂಡಂ
(೯-೫೫) -ಇಲ್ಲಿಯ ವರೆಗೆ ಜೀವನದ ಸುಖ, ಲೋಲುಪ್ತಿ, ಲಲ್ಲೆ: “A pretty piece of aganism” as Wordsworth said of Keats, ಅಧಿದೇವತೆಗಳು ಮನ್ಮಥ-ರತಿ: ಧೈಯ ಮಂತ್ರ, ರಂಭೆ ಶುಕನಿಗೆ ಹೇಳಿದಂತೆ-ಇದಿಲ್ಲದೆ, “ ವೃಥಾಗತಂ ತಸ್ಯ ನರಸ್ಯ ಜೀವಿತ”! ಆದರೆ ಇದು ಎಲ್ಲಿನಾಥಪುರಾಣ, ಮನ್ಮಥಪುರಾಣವಲ್ಲ: ಕಾಮಧ್ವಂಸಿ ಎಂದು ತೋರಿಸುವುದಕ್ಕಿಷ್ಟಿರಬಹುದು. ಇನ್ನು
ರಾಗ್ಯ, ಜನಪದವಿ.
(ii) ಇನ್ನು ಶುಕಮುನಿಯ ಪ್ರತಿಮಂತ್ರ-ಭೋಗತ್ಯಾಗವಿಲ್ಲದೆ, ಆತ್ಮಾನುಭವವಿಲ್ಲದೆ, “ ವೃಥಾಗತಂ ಸ್ಯ ನರಸ್ಯ ಜೀವಿತಂ ”: ಮಾರಕಮಂತ್ರವಲ್ಲ, ತಾರಕಮಂತ್ರ, ಧರ್ಮಸಾಮ್ರಾಜ್ಯದ ಅನಂತಸುಖ: ನಾದಿಯ ತಿರುವು. ಕವಿವಾಣಿ ಗಂಭೀರವಾಗುತ್ತದೆ. ರಾಜನಿಗೆ ವೈರಾಗ್ಯಬುದ್ದಿ :
ಆಲಂಬಂ ನಭಮಂ ಪಳಂಚಲೆವ ಶಾಖಾಶ್ರೇಣಿ ಸಗ್ಗ ಕೈನಿ ಪ್ಲಾಲಂ ಬನ್ನಮನೆಯ್ದೆ ಕಾಲವಶದಿಂ ಕಂಡುಂ ವಿದಗ್ಧಂ ಮಹೀ ಪಾಲಂ ಭಾವಿಸಿದಂ ದ್ರುಮಪ್ರಕೃತಿಯಂ ದುರ್ಮೊಹದಿಂ ಸಜ್ಜನೋ ಪಾಲಂಭಾವಿಳನಾಗಿ ನಿಲ್ಲದೊಡಲಂ ನಂಬಲ್ ಮನಂದರ್ಪುದೇ !
ಉಸಿರು ಕಾಳೊರಗನುಸಿ
ರ್ದುಸಿರ್ದಿರುಳುಂ ಪಗಲುಮೀಂಟಿಯುಂ ಮತ್ತಂ ಜೀ ವಿಸುವಳಿಪಿಂದೆಸಗುವ ಮಾ ನಿಸನಂ ಸೋ೦ಕಿದುದು ದೇಹಮೋಹಪಿಶಾಚಂ ನಿಮಿಷಾರ್ಧದ ಸಂಗತಿಯಿಂ ಸಮಸ್ತ ಭೋಗೋಪಭೋಗ ಶುಚಿವಸ್ತುಗಳೆ ಲ್ಲಮನಶುಚಿಮಾತ್ಪದಂ ದೇ ಹಮನಾತ್ಮಂ ಬಿಟ್ಟು ಪಿಂಗದನ್ನಂ ಶುಚಿಯೇ ಕುತ್ತದ ಪರಿವರಿ ಪಾಪದ ಬಿತ್ತು ಪರಾಭವದ ಬೆಳಸು ಪಸಿದ ಕೃತಾಂತ ಗೆತ್ತಿದ ಬೋನಂ ತನುವ ದುತ್ತಮರಳಿದುದರದ ನಂಟರ್ತನಮಂ ನೆರಪುವುದೊಡಲಂ ಮುನ್ನಂ ನೆರೆದೊಡಲಂ ಬಿಟ್ಟು ಕಳೆದು ಬೇಂದೊಡಲಂ ನೆರಪುವುದಿಂತನವಸ್ಥೆಯ ಮರುಳಾಟದೆ ಮರುಳ ಮಾವನಕ್ಕುಂ ಜೀವಂ ತೂಗುವಿನ ತಲೆ ಸೆರೆಗಳ ಬೀಗಿ ಕೊರಲ್ ಕುಸಿವಿನ ಕಲ್ವಿನೆಗಂ ಪಲ್ ಬಾಗುವಿನ ಬೆನ್ ಮನುಜರ
ಮೂಗಿನ ಮೇಲಾಡುವ ಜವಂ ಪಕ್ಕಣಮಂ 33
೫೧೪
ಶ್ರೀ ಸಾಹಿತ್ಯ
ಆವುದು ಸುಖವೆಂದೆಳಸುವ ನಾ ವಸ್ತುವೆ ದುಃಖಪೇತು ದುಃಖೋಪಶಮಂ ಜೀವಕ್ಕೆ ಸುಖಭ್ರಾಂತಿಯ ನೀವುದು ಭಾವಿಪೊಡಸಾರಮಿ ಸಂಸಾರಂ
(೯-೦೨) ಇಲ್ಲಿ ಭಾರತೀಯರ ಆಳದ ಒಂದು ಅನುಭವದ ಎಳೆಗೆ ಬಂದೆವು: ಪಂಪ, ಪೊನ್ನ, ರನ್ನರ, ಎಲ್ಲರ. ಪಲ್ಲವಿ ಇದು. ಈ ಸಂಸಾರದ ತೊರವೇ ಬಿಡುಗಡೆ-ಮೋಕ್ಷ, ನಿರ್ವಾಣ, ಶಾಂತಿ, ದೀಕ್ಷೆ: “ ದೇಹದನಿತ್ಯಮಪ್ಪ ನಿಲವು ಭಾವಿಸಿ, ಅನಾಮಯಮಂ ಪ್ರಿಯಮನಮಳ ರತ್ನತ್ರಯಮಂ
ಸಾಧಿಸುವೆ” ಎಂದು, “ ಸಂಸಾರಶರೀರಭೋಗನಿರ್ವೆಗಮನಪ್ಪುಕಯು ಪೂರ್ವಾನುಭವ ವಿಷಯಸುಖವಿಮುಖಚಿತ್ರಂ, ಪರಮ ಸುಖಸುಧಾಸ್ವಾದನೋತ್ಕಂಠನಾದ ”.
(೯-೭೫ ೧೭೭ ವ.) ಮಗನಿಗೆ ರಾಜ್ಯವನ್ನೊಪ್ಪಿಸುವುದು:
ಕಿಷ್ಯಂದೋದುವುದೆಲ್ಲಮ ನದನುಭವಿಸುವುದು ವಿಷಯಮಂ ಚೌವನದೊಳ್ ತಸಂದು ತಪದ ನೆರವಿಂ ತೊಳೆವುದು ಮುಪ್ಪಿನೊಳಿದ ಪಾರ್ಥಿವಚರಿತಂ
ಯುವರಾಜಂಗರಸಂ ರಾ ಜೈವಿಳಾಸಮನಿತ್ತು ಪರಮಸಂಯಮ ಸಾಮಾ ಜೈವಿಳಾಸತತ್ಪರಂ ಭಾ ರವಾಹಕಂ ಪೊಳೆಯನಿಗೊಪಿದಂತೆವೋಲಾದಂ
(೯-೮೮, ೧೩೦ ಅಲ್ಲಿಂದ ಮುಂದೆ ಶಾಸ್ರೋಕ್ತವಾಗಿ,
ತಪೋವನಗಮನ, ಶಬರರ ವರ್ಣನೆ, ಕಾಡುಮೃಗಗಳು, ಬೆಟ್ಟದ ಚೈತ್ಯಾಲಯ - ಅ ಜಿನಸ್ತುತಿ: ಇದು ಅಭಿನವಪಂಪನ ಆತ್ಮಸಾರ: ಇಲ್ಲಿ ತನ್ನ ಗುರುವನ್ನು ವದಿಸಿ, ಇದನ್ನೇ ತನ್ನ ರಾಮಾಯಣದಲ್ಲಿಯೂ ಸೇರಿಸಿದ್ದಾನೆ. ಈ ಜಿನಾಷ್ಟಕವನ್ನು ಪಠಿಸಿ ಈ ಗ್ರಂಥವಿಮರ್ಶೆಯನ್ನು ನಿಲ್ಲಿಸಬಹುದಾಗಿದೆ ಏಕೆಂದರೆ, ಮುಂದಿನ “ ಮಗ್ಗ "ವೂ ಎಲ್ಲಾ ಜಿನಪುರಾಣಗಳಂತೆಯೇ: ವೈಶ್ರವಣನ ಅಹಮಿಂದ್ರನಾಗಿ ಮಲ್ಲಿಜಿನನಾಗುವನು.
ಜಯ ಜಿತವೃಜಿನ ಜಿನೇಶ್ವರ ದಯಾನದೀಪುಳಿನರಾಜಹಂಸ ಭವಾಂಭೋ ಧಿಯ ತಡಿಯನೆ ಸೆನ್ನಂ ನಯನಿಕ್ಷೇಪಪ್ರಯಾಣಪಾತ್ರದಿನರ್ಹಾ ನೇವಾಳವೆಂದು ಕೆಲಬರ್ ಪಾವಂ ಪಿಡಿವಂತೆ ದೇವ ನೀನಲ್ಲದರಂ ದೇವರಿವರೆಂದು ಪಿಡಿದಿ ವೈವಿಧಿವಟ್ಟಿಪರೋ ಮೋಹಮೂರ್ಛಯಿರ್ನಾ ನಿನಗೆ ರಸಮೊಂದೆ ಶಾಂತಮೆ ಜಿನೇಂದ್ರ ಮನಮಾ ರಸಾಂಬುಧಿಯೊಳಗವಗಾ ಹನಮಿರ್ದು ಮಿಕ್ಕ ರಸಮಂ ಕನಸಿನೊಳಂ ನೆನೆಯದಂತು ಮಾಡೆನರ್ಗಾ
(೯-೧೪
೫೧೫
ಕನ್ನಡ ಸಾಹಿತ್ಯದ ಚರಿತ್ರೆ
ಮಣಿಭೂಷಣಭರದಿಂ ತನು ಕಿಣಮಪ್ಪುದದೇಕೆ ನಿನ್ನ ನಿರ್ಮಲಗುಣ ಭೂ ಷಣಮಂ ದಯೆಗೆಯ್ ಪಡೆವೆ ಪ್ರಣಯಮನಪವರ್ಗಲಕ್ಷ್ಮಿಗದಂದಹಾಗೆ ಸಿಂಗದ ಮಾರ್ದನಿ ಮದಮಾ ತಂಗಮನಳಿಸುವವೋಲ್ ನಿಜಪ್ರತಿಬಿಂಬ ಪಿಂಗದೆ ಮನದೊಳ್ ನಿಂದಿರೆ ಪಿಂಗಿಸುವುದು ಜನನಮರಣದುಃಖಮನರ್ಹಾ
ಮೆಚ್ಚೆ ಗಡ ಮುಳಿಯ ಗಡ ಬಗೆ ಬೆಚ್ಚಿರೆ ಬೇಜಾಗೆ ನಿನ್ನ ಪದದೊಳ್ ಮನುಜಂ ಗುಚ್ಚಗತಿ ನೀಚಗತಿವಡೆ ವಚ್ಚರಿ ಕಣ್ಣೆಆಳೆವ ತೆಜನನಪೆನಗರ್ಹಾ ಜ್ಯಾಯಂಗೆ ನೀನೆ ವಲಮಾ ದೇಯಂ ನೀನಲ್ಲದನ್ಯವಸ್ತುಗಳೆಲ್ಲಂ ಹೇಯಂಗಳೆಂಬ ತತ್ತೋ ಪಾಯಮನೆನಗೀವುವೆನುಬಿದುವನರ್ಹಾ ನಿತ್ಯಸುಖಮಾತ್ಯರೂಪಮ ನಿತ್ಯಸುಖ ಮೋಹರೂಪವೆಂಬ ವಿವೇಕಂ ಸತ್ಯಸ್ವರೂಪವುದಿಲ್ಲ ಗತ್ಯಂತಾನುಭವವಿಭವಮಕ್ಕೆನಗರ್ಹಾ
(ಮಲ್ಲಿ. ೧೦-೧೨೦ ೧೨೭; ರಾಮಾ, ೭-೪೦೪೭)
ಅರವಿಂದಸ್ಮರಮಾಸ್ಯಂ ತಿಳಿಪೆ ಹೃದಯಸಂಶುದ್ದಿಯಂ ಮಾನಸಂ ಶಾಂ ತರಸಾಧೀನಂ ಸಮಾಧಾನಮನಜ್ಪೆ ತಪಸ್ತ್ರಪ್ತಮುತ್ತಪ್ರಕಾರ್ತ ಸ್ವರಶಾಖಾಲೀಲೆಯಂ ಪಾಳಿಸಿ ತನು ನಯನಂ ಕಾರಂ ಮಾಡೆ ಕಾರು "ರಸಸ್ಪೂತಂಗಳಿಂ ಲೋಕಮನೇಗಿಸಿದಂ ಬಾಳಚಂದ್ರವತೀಂದ್ರಂ (ಮಲ್ಲಿ. ೧-೧೩೩)
ಈ ಸಂದರ್ಭದಲ್ಲಿ ತನ್ನ ಗುರುವಿನ ನೆನಪನ್ನು ತಂದುಕೊಂಡದ್ದೇ ಒಂದು ಕಾವ್ಯವಲ್ಲವೇ? ಆ ರುವಿನ ಜಿನಧಮ್ಮಬೋಧೆಯ ಸಾರವೇನು?-ಹೃದಯಶುದ್ಧಿ, ಮನಶ್ಯಾಂತಿ, ಕಾರುಣ್ಯ, ದೇಹದಾರ್ಡ್ಯ, ಶ, ನಿಷ್ಠೆ, ತಪಸ್ಸು.
ರಾಮಚಂದ್ರ ಚರಿತ ಪುರಾಣ: () ಪುರಾಣ : ಮಲ್ಲಿನಾಥಪುರಾಣದಲ್ಲಿ ಸೌಂದಯ್ಯವೂ ವೂ ತಕ್ಕಮಟ್ಟಿಗಿದ್ದರೂ, ನಾಗಚಂದ್ರನ ಹೆಸರು ಅಗ್ರಪಂಕ್ತಿಯಲ್ಲಿ ನಿಂತಿರುವುದು ರಾಮಚಂದ್ರ ತಪುರಾಣದಿಂದ, ಮೊದಲನೆಯದು ಗೀತಗುಣವುಳ್ಳದ್ದಾದರೆ (Lyric), ಇದು ಮಹಾಕಾವ್ಯ ಇವುಳ್ಳದ್ದಾಗಿದೆ (Epic); ಮತ್ತು ಜೈನಪುರಾಣವೂ ಆಗಿದೆ (Religious Epic), ಜೈನಸಂಪ್ರ ಯದಂತೆ ರಾಮಾಯಣದ ಕಥೆ ಉತ್ಕೃಷ್ಟವಾಗಿ ಇದರಲ್ಲಿ ಪ್ರತಿಪಾದನೆಯಾಗಿದೆ. * ಪಂಪ ರತ 'ದ ಪ್ರಾಶಸ್ಯವನ್ನು ಅಭಿನವ ಪಂಪನ “ಪಂಪರಾಮಾಯಣ” ಸಾಧಿಸಿದೆ.
೫೧೬
ಶ್ರೀ ಸಾಹಿತ್ಯ
ವಿಪುಲಾಚಲದೊಳ್ ವೀರ ಜಿ ನಪಾರ್ಶ್ವದೊಳ್ ಗೌತಮಂ ಗಣಾಗ್ರಣಿ ಮಗಧಾ ಧಿಪನಯ ನೆಯ ಪೇಟ್ಟದ ನಪೂರೈಮನ ರಾಮಕಥೆಯನಭಿವರ್ಣಿಸುವ
(೧-೪) ವಿಗತಾಷ್ಟಾದಶದೊಷರಪ್ಪ ಜನರುಂ ಜ್ಞಾನರ್ಧಿಸಂಪನ್ನರ ಪ್ರ ಗಣಾಧೀಶ್ವರರುಂ ಕ್ರಮಂಬಿಡದೆ ಮುನ್ನಂ ಪೇದಂ ಶ್ರಾವ್ಯ ಕಾ ವ್ಯಗುಣಖ್ಯಾತಿ ನಿಮಿತ್ತಲ್ಲದೆ ಶುಭಧ್ಯಾನಾರ್ಥಿಯೆನ್ ಪೇವಿಲಾಂ ಬಗೆದಂದೆಂ ರಘುವಂಶ ರಾಮಕಥೆ ಪೇಳ್ವಿಂತನ್ಯಸಾಮಾನ್ಯವೇ
(೧-೩೮) ನಾಯಕನನ್ಯನಾಗ ಕೃತಿ ವಿಶ್ರುತವಾಗದುದಾತ್ತರಾಘವಂ ನಾಯಕನಾಗೆ ವಿಶ್ರುತಮೆನಿಪ್ಪುದು ವಿಸ್ಮಯಕಾರಿಯನ್ನು ಕಾ ಲಾಯಸದಿಂ ವಿನಿರ್ಮಿಸಿದ ಕಠಿಕೆ ಕಾಂಚನಮಾಲೆಯಂತುಪಾ ದೇಯಮೆನಿಕ್ಯುಮೋ ವಿಷಯವೊಪ್ಪದೊಡಾವುದುಮೊಪ್ಪಲಾರ್ಕುಮೆ
(೧-೩೭) ಜಗಮಂ ಯುಗಮಂ ಮನ್ನಾ ದಿಗಳಂ ಕಾಲಸ್ವರೂಪಮಂ ಜಿನರು ಚ ಕ್ರಿಗಳು ಹಲಧರ ಕೃಷ್ಣಾ ದಿಗಳಂ ಶ್ರೀರಾಮಚರಿತದೊಳ್ ವರ್ಣಿಸುವ
(೧-೪೧ ಪಿರಿದೆನಿಸಿರ್ದ ರಾಮಕಥೆಯಂ ಕಿಡ್ದಾಗಿರೆ ದೇಸಿ ಮಾರ್ಗಮೆಂ ಬೆರಡಆಳಂ ರಸಂಬಡೆದು ಪಂಡಿತಮಂಡಲಿ ಮಚ್ಚೆ ನೇರ್ಪುವ ತಿರಲವಿರೊಧಮಾಗೆ ಕೃತಿವೇಡೆ ಸತ್ಕವಿ ನಾಗಚಂದ್ರನಂ ತಿರೆ ಪೆಜರಾರ್ ಸರಸ್ವತಿ ಕುಡಲ್ ಪಡೆದ ವರಮಂ ಕವೀಶ್ವರರ್ ಕೃತವಿದ್ಯ ಸಮಚಿತ್ತರಾಗಿ ಪದಪಿಂದಾರಯ್ಯ ಕರ್ಣಾಟ ಸು ಸ್ಕೃತಕಾವ್ಯಂಗಳೊಳರ್ಥದಿಂ ರಚನೆಯಿಂ ನೇರ್ಪಟ್ಟು ವಿದ್ವಚ್ಚಮ ತೃತಿಯಪ್ಪಂತಿರೆ ನಾಗಚಂದ್ರವಿಬುಧಂ ಪೇಂದದಿಂದಾದ್ಯರ ದ್ಯತನಂ ಪೇಟ್ಟಿ ಭಿರಾಮ ರಾಮಕಥೆಯಂ ಸಬ್ಸಿಂಗಡರ್ಪಾಗನೇ
(೧೬-೯೭, ೯ ಪರಮಬಹ್ಮಶರೀರಪುಷ್ಟಿ ಜನತಾಂತರ್‌ದೃಷ್ಟಿ ಕೈವಲ್ಯ ಧರಮಾಮೌಕ್ತಿಕಹಾರಯಷ್ಟಿ ಕವಿತಾವಲ್ಲೀ ಸುಧಾವೃಷ್ಟಿ ಸ ರ್ವರಸೋತ್ಪಾದ ನವೀನಸೃಷ್ಟಿ ಬುಧಹರ್ಷಾಕೃಷ್ಟಿ ಸಾಂಗಸುಂ ದರಿ ವಿದ್ಯಾನಟಿ ನಾಟಕಂನಲಿಗೆ ಮತ್ಯಾವ್ಯಸ್ಟಲೀರಂಗದೊಳ್
ಈ ಪದ್ಯಗಳಿಂದ ಪಂಪನು ಲೌಕಿಕಗ್ರಂಥವಾದ ಭಾರತವನ್ನು ಬರೆದಂತ ಅಭಿನವಪಂಪ ರಾಮಾಯಣ ಕಾವ್ಯವನ್ನು ಜೈನಸಂಪ್ರದಾಯವನ್ನನುಸರಿಸಿ ಪೂರ್ವಕವಿಗಳಿಗೆ ಅವಿರೋಧವಾಗಿ ಸಂಗ್ರ
ಮಾಡಿ ಬರೆದಿರುವುದಲ್ಲದೆ, ಧಾತ್ಮಿಕ ಗ್ರಂಥವಾಗಿ ರಾಮಜಿನನ ಪುರಾಣವನ್ನು ರಚಿಸಿರುವುದು ಅದರಲ್ಲಿ ಕೈವಲ್ಯಬೋಧವನ್ನು ಸೇರಿಸಿರುವುದೂ ಸ್ಪಷ್ಟವಾಗುತ್ತದೆ. ನಾಗಚಂದ್ರನ ಮನಸ್ಸಿನಲ್ಲಿರು ಪೂರ್ವಗ್ರಂಥಗಳು ಮುಖ್ಯವಾಗಿ ವಿಮಲಸೂರಿಯ ಪಉಮರಿಚಯ (ಪ್ರಾಕೃತ, ೧ನೆಯ ಶತಮಾ ಮತ್ತು ರವಿಷೇಣನ ಮಹಾಪುರಾಣ (ಸಂಸ್ಕೃತ, ೭ನೆಯ ಶತಮಾನ), ಚಾವುಂಡರಾಯಪುರಾಣ ಕಥೆ (ಕನ್ನಡ, ೧೦ನೆಯ ಶತಮಾನ) ಭಿನ್ನ ಸಂಪ್ರದಾಯಕ್ಕೆ ಸೇರಿದ್ದಾಗಿದೆ; ಇದನ್ನು ನಾಗಚಂದ್ರ ಅನುಸರಿಸಿಲ್ಲ (೧-೪೨೬೮).
12------------------
ಕನ್ನಡ ಸಾಹಿತ್ಯದ ಚರಿತ್ರೆ
೫೧೭
ಜೈನಪುರಾಣಕ್ಕೆ ತಕ್ಕಂತೆ, ಲೋಕ ಕಾಲಸ್ವರೂಪವೂ (೨-೧೪ ೧೨೯, ೫೬, ೭೩೭೫), ಕುಲ ಧರರ ಚರಿತ್ರೆಯೂ (೧೬೮೯೨), ಇಕ್ಷಾಕುರಾಜರ ಜಿನದೀಕ್ಷಾಸ್ವೀಕಾರಗಳೂ, ದಶರಥನ ವೈರಾಗ್ಯವೂ (೬-೫೩ ೧೭೩), ಜಿನಪತಿರತ್ನತ್ರಯಾರಾಧಕರಿಗಲ್ಲದೆ ಹೆರರಿಗೆರಗದ ವೀರವ್ರತಿಗಳ ಸ್ಥಿರಭಕ್ತಿಯೂ (೬-೫೦ ೨೬), ಈ ಜನ್ಮದಲ್ಲಿಯೇ ನಿಲ್ದಾಣವನ್ನು ಪಡೆಯುವ ಬಲದೇವನಾದ ರಾಮಚಂದ್ರನ ಸಾತ್ವಿಕಗುಣೋತ್ಕರ್ಷವೂ, ಅವನ ತಮ್ಮ ವಾಸುದೇವನಾದ ಲಕ್ಷ್ಮಣನ ಪಾತ್ರ ಗುಣಸಂಪತ್ತಿಯೂ, ರಾಮಭಟ್ಟಾರಕನ ತಪಸ್ಫೂ ವರ್ಣಿಸಿವೆ. ರಾವಣನು ಪ್ರತಿವಾಸುದೇವನಾಗಿ ಶಲಾಕಾಪುರುಷನಂತೆ, ಮಹಾಸತ್ವನೂ, ಉದಾತ್ತಸ್ವಭಾವವೂ, ಕರ್ಮವಶದಿಂದ ಅಧೋಗತಿಗಿಳಿದವನಾಗಿಯೂ ವರ್ಣಿಸಲ್ಪಟ್ಟಿ ದ್ದಾನೆ. ಸೀತೆ ಸಾದ್ವೀಮಣಿಯಾಗಿ ಬಾಳಿ, ಸಂಸಾರದ ಕಷ್ಟಗಳಿಗೊಳಗಾಗಿ, ಉಪಸರ್ಗಗಳಿಗೆ ಸಗ್ಗದೆ, ಕೊನೆಗೆ ದೀಕ್ಷೆಯನ್ನು ವಹಿಸುತ್ತಾಳೆ. ಇವರೆಲ್ಲರ ಭವಾವಳಿಯ ಸೂಕ್ಷ್ಮವಾಗಿ ಅಲ್ಲಲ್ಲಿ ನಿರೂಪಿಸಿದೆ. ಎಲ್ಲೆಲ್ಲಿಯೂ ಜಿನಗೃಹದ, ಜಿನವಂದನದ, ಜಿನಧಶ್ರವಣದ, ಜಿನದೀಕ್ಷೆಯ ಪ್ರಸಂಗಗಳು: ದಶರಥನ ಅಯೋಧ್ಯೆಯಲ್ಲಿ, ಜನಕನ ಮಿಥಿಲೆಯಲ್ಲಿ, ರಾಮನ ಪ್ರವಾಸಸ್ಥಳಗಳಲ್ಲಿ, ಸುಗ್ರೀವನ ಕಿಕ್ಕಿಂಧೆಯಲ್ಲಿ, ರಾವಣನ ಲಂಕೆಯಲ್ಲಿ. ಎಲ್ಲೆಲ್ಲಿಯೂ ವಿದ್ಯಾಧರರು, ವಿದ್ಯಾಶಕ್ತಿಗಳು, ಚಾರಣರು, ಭಟ್ಟಾರಕರು, ಭವಬದ್ಧ ವೈರಿಗಳು, ರಾಮಾಯಣ ಕಾವ್ಯಕಥೆ ಜೈನವಾತಾವರಣದಿಂದ ಮುಸುಕಿಹೋಗಿದೆ.
ರಾಮನ ಜಿನಸ್ತುತಿ ಹಿಂದೆ ಕೊಟ್ಟಿದೆ: ಜನಕನ ಜಿನಸ್ತುತಿಯನ್ನು ಇಲ್ಲಿ ಕೊಡಬಹುದು: ಕೇವಲಬೋಧದಿಂದದು ಪಾತ್ರವಪಾತ್ರವಿದೆಂಬ ಭೇದಮಂ ದೇವರ ದೇವ ಸಂಚಕಮಕ್ಷಯಮೋಕ್ಷಸುಖಕ್ಕೆನಲ್ ವಿನೇ ಯಾವಳಿಗಿತ್ತುದಾತ್ತ ದಿವಿಜೇಂದ್ರ ನರೇಂದ್ರ ಫಣೀಂದ್ರ ರಾಜ್ಯಲ &ವಿಭವಂಗಳಂ ತಳೆದೆ ನೀನ್ ಜಸಮಂ ಜಗದೊಳ್ ಜಿನೇಶ್ವರಾ ಇತ್ರವೆ ನೀನೆ ದೇಹಿಗನುರೂಪಮೆನಲ್ ಸುಖಲೇಶಮಾದಿಯಾ ಗಲನಂತಸೌಖ್ಯಮವಸಾನಮೆನಲ್ ಪೇಜರಾರುಮಿವರಿ
ಲ್ಲಿತ್ತಪರನ್ಯರೆಂದು ಬಹಿರಂಗನಿಮಿತ್ತದಿನೆರೆ ದೇ ವೋತ್ತಮ ನೀನೆ ಚಾಗಿವೆಸರು ಪಡೆದಮ್ ಜಗದೊಳ್ ಜಿನೇಶ್ವರಾ ಪಗೆ ಕೆಳೆಯೆಂಬ ಭೇದದಶಿತಂ ತಮಗಿಲ್ಲದೆ ತಮ್ಮ ನಂಟರಂ ಪಗೆವರೆ ಗೆತ್ತು ಕೊಂದು ಕಲಿಯಪ್ಪವರಕ್ಕೆಮ ಘಾತಿಕರ್ಮಮಂ ಪಗೆವಡೆಯಂ ಪಡಲ್ವಡಿಸಿ ಕೀಲಿ ಕೃತಾಂತನಕ್ಕೆ ವೀರಲ ಕ್ಷಿಗೆ ನೆಲೆಯಾದ ಮೆಯ್ಯಲಿಯೆ ನೀನೆ ವಲಂ ಜಗದೊಳ್ ಜಿನೇಶ್ವರಾ ನನೆಗಣೆಯಿಂ ಜಗತ್ರಯಮನಂಡಲೆವಂಗಭವಂಗೆ ಭಂಗಮಂ ಜನಿಯಿಸಿದ್ರೆ ಚರಾಚರರುಮಂ ತವೆ ನುಂಗಿದ ಕಾಲದಂದಶ್ ಕನ ರದಮಂ ಕಜಲ್ಲಿ ಕಳೆದ ಕಡುಬಲ್ಲಿದನಪ್ಪ ಮೊಹಮ 'ನ ಬಲಗಯ್ಯನಯ್ಯ ಮುಡ್ದಮ್ ಕಲಿ ನೀನೆ ವಲಂ ಜಿನೇಶ್ವರಾ ನೀರೆಯರುನ್ನತಸ್ತನಭರಂಗಳ ಭಾರಮವುಂಕಿ ಸೊಂಕೆ ನೀ ರೇಣಿದರೇದರ್ ಪೆಜವು ಪೀಠಮನನ್ಯರೊಳಾಪ್ತರೆಂಬ ಮಾ ತೇಜದು ಭಾರತೀಸ್ತನಭರಂಗಳ ಭಾರಮವುಂಕಿ ಸೋಂಕೆ ನೀ ರೇಜದೆ ಸಿಂಹವಿಷ್ಟರಮನೇದೆ ನೀನೆ ವಲಂ ಜಿನೇಶ್ವರಾ ಸುಗತಿಗೆ ಭಕ್ತಿ ದುರ್ಗತಿಗೆ ನಿನ್ನ ಪದ ಪ್ರತಿಕೂಲವೃತ್ತಿ ಮು ಕಿಗೆ ನಿಜತತ್ವ ಭಾವನೆಯೇ ಕಾರಣವೆಂದೊಡೆ ನೀನೆ ದೇಹಯಾ ತೆಗೆ ಸುಖದುಃಖಯೋಜನೆಗೆ ದೇಹಿಗೆ ಮುಖ್ಯನೆ ನಿನ್ನನಂತಂ ಜಗಮನಶೇಷಮಂ ಪಡೆವೆನೆಂಬುದು ಯುಕ್ತಿ ವಲಂ ಜಿನೇಶ್ವರಾ
೫೧೮
ಶ್ರೀ ಸಾಹಿತ್ಯ
ಕೊಲೆಯ ವಿಕಲ್ಪಕೋಟಿಗಳೆ ದುಷ್ಕತಮ್ಮೆಲ್ಲಮಬಾಧೆಯೊಂದೆ ಬಂ
ಬಲ ಸುಕೃತಂಗಳೆಲ್ಲಮವನಿರ್ಬಗಿಯಾಗಿರೆ ಮಾಡಿ ಮಾನವರ್ ಪೊಲೆಗಿಡದಂತು ದುಃಖಸುಖಹೇತುಗಳಂ ನಿಜದಿವ್ಯಭಾಷೆಯಿಂ ಜಲಕನ ತೋಜಿದಮ್ ಸಕಲ ದೇಹಿಗೆ ನೀನೆ ಶರಣ್ ಜಿನೇಶ್ವರಾ ಮದನಪತಿ ನಿನ್ನ ದೆಸೆಗಾಣದು ಮೋಹಮಹಾಹಿ ನಿನ್ನನ
ದು ಕಲುಷಾನಲಂ ನಿಜದಯಾರಸದಿಂ ಮಸಿಯಾಯು ಪಾಪವಿ ಲ್ಲದ ಪಯಣಕ್ಕೆ ನಿನ್ನ ನುಡಿ ಸಂಬಳವಾಯ್ತನೆ ಪೆಣ್ಣ ಮಣ್ಣ ಮೋ ಹದ ಪರಮಾತ್ಮರಂತಿರಲಿ ನೀನೆ ಜಗತ್ಸ್ತುತನಮ್ ಜಿನೇಶ್ವರಾ ನೋಟದ ತೀಟದಾಲಿಸುವ ಸೇವಿಪ ವಾಸನೆಗೊಳ್ಳ ಸೌಖ್ಯಮಂ
ಮಾಟದ ಸೌಖ್ಯವೆಂದು ಪೆಸರ್ಗೊಳ್ಳದೆ ನಿನ್ನೊಳಭೇದವಾದ ಕೊಂ ಡಾಟದನಂತಸೌಖ್ಯಮನೆ ಮಚ್ಚಿದ ಮಚ್ಚುಗೆಯೊಳ ತೊಡರ್ಚು ಮಾ ಜಾಟದಿನನ್ನ ದರ್ಶನವಿಶುದ್ಧಿಯೆ ಮೂಲ್ಯಮೆನಲ್ ಜಿನೇಶ್ವರಾ
(೫-೨೦೧೧: ಕೊನೆಯ ನಾಲ್ಕು-ಮಲ್ಲಿ. ೧೨-೧೭೫ ೧೭೮) ಇದೇ ಪಂಪರಾಮಾಯಣದ ಕಟ್ಟಕಡೆಯ ದರ್ಶನ. ರಾಮನು' ಎಣ್ಛಾಸಿರ * ಹೆಂಡತಿಯರನ್ನು ಮದುವೆಯಾಗಿ, ಕೆಲವು ಮಾನವದೌರ್ಬಲ್ಯಗಳನ್ನು ಪ್ರದರ್ಶಿಸಿ, ಕಡೆಗೆ ವಿಶುದ್ದನಾಗಿ, ಕೊಲೆಮಾಡದೆ, ದೀಕ್ಷೆಗೊಂಡು ಈ ಜಿನಸ್ಥಾನಕ್ಕೆ ಏರುವನು. ಲಕ್ಷಣನು ' ಪದಿನೆಣ್ಛಾಸಿರ * ಹೆಂಡಿರನ್ನು ಮದುವೆ ಯಾಗಿ ಕೋಪತಾಪಾವೇಶಗಳಿಂದ ಕೂಡಿ, ರಾಗದ್ವೇಷ ವೇಗಗಳಿಗೆ ಅವಕಾಶಕೊಟ್ಟು ಕೊಲೆಮಾಡಿ, ಅಧೋಗತಿಗಿಳಿಯುವನು. ರಾವಣನು ಪರಮೋತ್ಕಷ್ಟಗುಣಗಳಿಂದ ಕೂಡಿದ್ದರೂ ಪೆಣ್ಣ ಮಣ್ಣ ಮೋಹದಿಂದ ದುರಾತ್ಮನಾಗಿ ನರಕಕ್ಕಿಳಿಯುವನು. ಆದರೆ ಇವರೂ ಕೂಡ ಭವಾವಳಿಕ್ರಮದಲ್ಲಿ
ಶುದ್ದರಾಗುತ್ತ ಕೊನೆಗೆ ಉಪಶಮಹೊಂದಿ ಮೋಕ್ಷವನ್ನು ಸಾಧಿಸುವರು.
ಎಲ್ಲಾ ಸಂಸಾರಿಗಳೂ ಜಿನರಾಗಿ ಮೋಕ್ಷದೊಂದಬಹುದು; ಕರ್ಮದಿಂದಲೇ ಜೀವಿಗಳ ದುರ್ಗತಿ ಎಂಬ ಈ ದೊಡ್ಡ ತತ್ತ್ವದ ನಿದರ್ಶನಗಳೆಲ್ಲಾ ಈ ಪುರಾಣದ ಸನ್ನಿವೇಶಗಳಲ್ಲಿಯೂ ವ್ಯಕ್ತಿಗಳಲ್ಲಿಯೂ ಕಂಡುಬರುವಂತೆ ನಾಗಚಂದ್ರನು ಸ್ಪಷ್ಟಪಡಿಸಿದ್ದಾನೆ. ಈ ರಾಮಾಯಣ ಜೈನರಿಗೆ ಪ್ರಿಯವಾಗುವುದು
ಏನಾಶ್ಚಯ್ಯ?
(ii) ಮಹಾಕಾವ್ಯ : ಇನ್ನು ಜಿನಾಗಮಕ್ಕೆ ವಿರೋಧವಾಗದಂತೆ ರಾಮಾಯಣ ಕಥೆಯನ್ನು ನಾಗಚಂದ್ರನು ಹೇಗೆ ರಚಿಸಿದ್ದಾನೆ ನೋಡೆ ಣ.
ಜೈನ ದೃಷ್ಟಿಗೆ ವಾಲ್ಮೀಕಿ ರಾಮಾಯಣದಲ್ಲಿ ಕಾಣುವ ದೋಷಮ್ಯೂನತೆಗಳನ್ನು ವಿಮಲಸೂರಿ ತೆಗೆದು ರಾಮ ರಾವಣರ ಯುದ್ದವೀರಕಥೆಯನ್ನು ಜಿನಧರ್ಮ ಕಥೆಯನ್ನಾಗಿ ಅಳವಡಿಸಿದನು. ಆ ಸಂಪ್ರದಾಯವನ್ನೇ ನಾಗಚಂದ್ರನು ಅನುಸರಿಸಿರುವನು. ವೈದಿಕಜೈನ ಸಂಪ್ರದಾಯಗಳ ಮುಖ್ಯ ಭೇದಗಳನ್ನು ಹೀಗೆ ವಿವರಿಸಬಹುದು:
(೧) ರಾಮು ವಿಷ್ಣುವಿನ ಅವತಾರವಲ್ಲ: ಮನುಷ್ಯ, ರಾಮ ಲಕ್ಷ್ಮಣರು, ಬಲಾಚ್ಯುತರು ಕಾರಣಪುರುಷರು: ರಾಮ ಧರನಾಯಕ, ಅಹಿಂಸಾವತಿ: ಲಕ್ಷಣ ವೀರನಾಯಕ, ಪ್ರತಿನಾಯಕನಾದ ರಾವಣನನ್ನು ಕೊಲ್ಲುವವನು. ಈ ಕಥೆ ೨೦ನೆಯ ತೀರ್ಥಂಕರನಾದ ಮುನಿಸುವತನ ಕಾಲದಲ್ಲಿ ನಡೆಯಿ ತೆಂದು ಜೈನರ ನಂಬಿಕೆ.
(೨) ಯಜ್ಞಗಳಿಲ್ಲ, ವಿಶ್ವಾಮಿತ್ರರಿಲ್ಲ; ಶಿವಧನುರ್ಭಂಗವಿಲ್ಲ; ಪರಶುರಾಮ, ಮಂಥರೆಯರಿಲ್ಲ
(೩) ಸೀತೆ ಭೂಮಿಯಲ್ಲಿ ಹುಟ್ಟಿದವಳಲ್ಲ. ಜನಕನ ರಾಣಿಯ ಹೊಟ್ಟೆಯಲ್ಲಿ ಹುಟ್ಟಿದವಳು ಇವಳಿಗೆ ಪ್ರಭಾಮಂಡಲನೆಂಬ ಅಣ್ಣನುಂಟು.
೫೧೯ ಕನ್ನಡ ಸಾಹಿತ್ಯದ ಚರಿತ್ರೆ
(9) ಖೇಚರಪತಿಯ ಎರಡು ಬಿಲ್ಲುಗಳನ್ನು ರಾಮ ಲಕ್ಷ್ಮಣರು ಬಗ್ಗಿಸಿ ಅವರ ಮದುವೆ ಯಾಗುವುದು.
() ರಾಮ ಲಕ್ಷ್ಮಣರ ವೈಭವಕ್ಕೆ ಭರತನು ವಿಷಾದಪಡುವನು. ಕೈಕೆ ಈ ಕಾರಣದಿಂದ ಅವನಿಗಾಗಿ ರಾಜ್ಯವನ್ನು ಬೇಡುವಳು. ರಾಮನು ಸಂತೋಷದಿಂದ ಕೊಡುವನು.
(೬) ರಾವಣ ಮುಂತಾದವರು ರಾಕ್ಷಸರಲ್ಲ: ಭೀಮ ರಾಕ್ಷಸ ಎಂಬ ರಾಜನ ವಂಶದವರು. ಅವನಿಗೆ ಹತ್ತು ತಲೆಯಿಲ್ಲ; ಒಂಬತ್ತು ಮುಖವುಳ್ಳ ಒಂದು ಕನ್ನಡಿಯಲ್ಲಿ ಪ್ರತಿಬಿಂಬಿಸಿದ ಕಾರಣ ದಶಮುಖನೆಂಬ ಹೆಸರು ರೂಢಿಗೆ ಬಂದಿತು. ಸ್ವರ್ಣಮೃಗದ ವೃತ್ತಾಂತವಿಲ್ಲ.
(೭) ವಾಲಿ ಸುಗ್ರೀವಾದಿಗಳು ಕಪಿಗಳಲ್ಲ; ಕಪಿಧ್ವಜರಾದ ಖೇಚರರು. ವಾಲಿಯನ್ನು ರಾಮ ಕೊಲ್ಲುವ ಪ್ರಸಂಗವಿಲ್ಲ.
(೮) ರಾವಣನ ದಿಗ್ವಿಜಯವನ್ನೂ, ಉದಾತ್ತಗುಣಗಳನ್ನೂ ಅಸಾಧ್ಯ ಪರಾಕ್ರಮವನ್ನೂ ಜಾಂಬವಂತನು (ಇವನು ಕರಡಿಯಲ್ಲ) ರಾಮ ಲಕ್ಷ್ಮಣರಿಗೆ ತಿಳಿಸುತ್ತಾನೆ; ರಾವಣ ಉಪರಂಭೆಯರ ಕಥೆ ರಾವಣ ರಂಭೆಯರ ಕಥೆಯನ್ನು ತಿರುವು ಮುರುವು ಮಾಡಿದಂತಿದೆ. ಇವನು ತಿಳಿಸಿದ ಸಿದ್ದಾ ದೇಶದಂತೆ ಲಕ್ಷ್ಮಣನು ಸಿದ್ಧಶೈಲವನ್ನೆತ್ತಿ ತಾನು ರಾವಣನನ್ನು ಜಯಿಸಬಲ್ಲೆನೆಂದು ಸುಗ್ರೀವಾದಿಗಳಿಗೆ ನಂಬಿಕೆ ಹುಟ್ಟಿಸುತ್ತಾನೆ.
(೯) ಶಂಭುಕನೆಂಬ ಖರ ಚಂದ್ರನಖಿಯರ ಮಗನನ್ನು ಲಕ್ಷ್ಮಣನು ಕೊಂದದ್ದು ರಾಮ ರಾವಣ ಯುದ್ಧಕ್ಕೆ ಬೀಜಾಂಕುರವಾಯಿತು.
(೧೦) ಸೇತುಬಂಧನವಿಲ್ಲ. ಆಕಾಶಗಾಮಿನೀವಿದ್ಯೆಯಿಂದ ಸೈನ್ಯ ಸಾಗುತ್ತದೆ. - (೧) ಹನುಮಂತನು ರಾವಣನ ತಂಗಿಯ ಅಳಿಯ: ಅವನ ಕೆಟ್ಟ ಕೆಲಸಕ್ಕೆ ಹೇಸಿ ರಾಮನ ಮಿತ್ರನಾದನು. ಅವನು ಲಂಕೆಯನ್ನು ವಿದ್ಯಾಬಲದಿಂದ ಸುಟ್ಟನು.
(೧೨) ವಿಭೀಷಣನು ರಾವಣನು ಜಾನಕಿ ಕಾರಣವಾಗಿ ದಾಶರಥಿಯಿಂದ ಮಡಿಯುವನೆಂಬ ಆದೇಶವನ್ನು ಕೇಳಿ, ದಶರಥ ಜನಕರನ್ನು ಕೊಲ್ಲಲು ಮೊದಲು ಪ್ರಯತ್ನ ಪಡುವನು. ಕೊನೆಯಲ್ಲಿ ರವಣನಿಗೆ ಧರೋಪದೇಶಮಾಡಿ, ಅವನು ಧಿಕ್ಕರಿಸಲು ರಾಮನನ್ನು ಸೇರುತ್ತಾನೆ.
(೧೩) ಸೀತೆ ವಾಲ್ಮೀಕಿಗಳ ಆಶ್ರಮಕ್ಕೆ ಹೋಗುವುದು ಅಶ್ವಮೇಧದ ಕೊನೆಯಲ್ಲಿ ಭೂಮಿ ಯಲ್ಲಿ ಪ್ರವೇಶಮಾಡುವುದು-ಇವಿಲ್ಲ. ಜೈನಸನ್ಯಾಸಿನಿಯಾಗಿ ಒಂದು ಸ್ವರ್ಗದ ಇಂದ್ರಪದವಿಗೆ ಹೋಗುತ್ತಾಳೆ.
ಈ ವ್ಯತ್ಯಾಸಗಳನ್ನು ಮಾಡಿ ಜೈನಸಿದ್ದಾಂತಿಗಳು ತಮ್ಮ ಧಾರ್ಮಿಕದೃಷ್ಟಿಯಿಂದಲೂ, ಚಾರಿತ್ರಕ ದೃಷ್ಟಿಯಿಂದಲೂ, ವಾಸ್ತವದೃಷ್ಟಿಯಿಂದಲೂ ವಾಲ್ಮೀಕಿ ರಾಮಾಯಣವನ್ನು ತಿದ್ದಿ ದಂತಿದೆ. ಆ ವೈದಿಕ ರಾಮಾಯಣದ ಮೂಲಗಳನ್ನು ಹುಡುಕುವುದು ಇಲ್ಲಿ ಅಪ್ರಕೃತ, ರಾಮಾಯಣದ ಪುರಾತನ ಸಂಶೋಧಕರಿಗೆ ವೈದಿಕ ಬೌದ್ಧ ಜೈನ ಸಂಪ್ರದಾಯಗಳೂ, ಗ್ರೀಕ್ ಸಂಪರ್ಕಗಳೂ ವಿಚಾರಕ್ಷೇತ್ರಗಳು.
ಈಗ ಈ ರಾಮಾಯಣಕಥೆ ಮಹಾಕಾವ್ಯವಾಗಿ ಹೇಗೆ ನಾಗಚಂದ್ರನ ಕೈಯಲ್ಲಿ ನಡೆಯುತ್ತದೆ; ರಾಮ, ಸೀತೆ, ಲಕ್ಷ್ಮಣ, ರಾವಣ ಈ ಪಾತ್ರಗಳನ್ನು ಹೇಗೆ ಚಿತ್ರಿಸಿದ್ದಾನೆ-ಮುಖ್ಯ ಎಳೆಯನ್ನು ಹಿಡಿದು ಈ ಅಂಶಗಳನ್ನು ಪರಿಶೀಲಿಸೋಣ:
ಹದಿನಾಲ್ಕನೆಯ ಮನುವಾದ ನಾಭಿರಾಜನು ಕೋಸಲ ದೇಶದಲ್ಲಿ ಆಳಿದನು. ಅವನ ಮಗ ಆದಿಬ್ರಹ್ಮ (ವೃಷಭ, ಮೊದಲನೆಯ ತೀರ್ಥಂಕರ), ಇಕ್ಷಾಕು ವಂಶಾವಳಿ:
ನೆಲನಂ ಮರಾದೆಯಿಂ ಪಾಲಿಸಿ, ನಿಯಮಿಸಿ ವರ್ಣಾಶ್ರಮಾಚಾರಮಂ, ದೋ ಷ ಲವಂ ಮೆಯ್ಕೆರ್ಚದುತಿಂದ್ರಿಯಸುಖದೊದಮಂ ತೀರ್ಚಿ ಸಾಮ್ರಾಜ್ಯದೊಳ್ ಮುನ್
೫೨೦
ಶ್ರೀ ಸಾಹಿ
ನಲಿದಲ್ಲಿಂದಿತ್ತಲಾತ್ಯಂತಿಕಸುಖಪದಮಂ ಪೆತ್ತ ರಾಜಾಧಿರಾಜರ್ ಪಲರಿಂದಿಕ್ಷಾಕುವಂಶಂ ಕುಲನದಿಯವೊಲಾಯ್ತವ್ಯವಚ್ಛಿನ್ನರೂಪಂ
(೧೧೩೨ ಅನರಣ್ಯನು ರಾವಣನಿಗೆ ಸಹಸ್ರಕಿರಣನು ಸೋತು ಜಿನದೀಕ್ಷೆಗೊಂಡದ್ದನ್ನು ಕೇಳಿ ತಾನೂ ನಿಶ್ವೇi ಹೊಂದಿ, ಒಂದು ತಿಂಗಳ ಮಗನಾದ ದಶರಥನಿಗೆ ಪಟ್ಟಕಟ್ಟಿ, “ಮುಕ್ತಿಶ್ರೀವನಿತಾವರನಾದ.”
(೭೩೭೬
ಓದಿದೊಡೇನರಗಿಳಿ ಕ ಲೋದುವವೋಲ್ ಧರಶಾಸ್ತ್ರಮಂ ದಶರಥನಂ ತೋದಿ ತಿಳಿದವನಿಪತಿಮ
ರಾದೆಯೊಳೆಸುವುದು ಧರಪರನೆನೆ ಲೋಕಂ ಒಂದು ದಿವಸ ನಾರದನು ಬಂದು
(೩-೭
ಏನುಂ ತೊದಳಿಲ್ಲಿದುವೆ ಶಿ ಲಾಂಕ್ಷಿಪ್ತಾಕ್ಷರಂ ವಿಭೀಷಣ ರಣದೊಳ್ ಜಾನಕಿಯ ದೂಸಂ ಲಂ ಕಾನಾಥಂ ದಾಶರಥಿಯ ಕಯೊಳ್ ಮಡಿಗುಂ
(೨೩
ಎಂಬ ನೈಮಿತ್ತಿಕಾದೇಶವನ್ನು ಕೇಳಿ ನಿಮ್ಮನ್ನು ಕೊಲ್ಲಲು ಬರುವನು ಎಂದು ಎಚ್ಚರಿಸುವನು ವಿಭೀಷಣನು ಲೆಪ್ಪದರಸರನ್ನು ಕೊಂದು ಹೋಗುವನು. ರಾವಣನ ಮರಣವಿಧಿಯೂ, ಅದರ ಕಾರಣವೂ ಇಲ್ಲಿ ಸೂಚಿತವಾಯಿತು. ದಾಶರಥಿ ಲಕ್ಷಣ ಮುಂದೆ ಸಿದ್ಧಶಿಲೆಯನ್ನೆತ್ತಿ ಮತ್ತೊಂದ ಆದೇಶವನ್ನು ನೆರವೇರಿಸುವವನೂ ಲಕ್ಷಣನೇ (೧೦-೬ ೧ ೧೮). ಜನಕನೂಡನ ತಲೆಮರೆಸಿಕೊಂಡ ಹೋಗಿ ದಶರಥನು ಪ್ರತಿಸ್ಪರ್ಧಿಗಳನ್ನು ಗೆಲ್ಲಲು ರಥವೆಸಗಿದ ಕೈಕೆಯನ್ನು ವರಿಸಿ, ಆಕೆಗೆ ಎರಡ
ವರಗಳನ್ನು ಕೊಡುವನು: ಅವಳು ಅದನ್ನು ಮುಂದಕ್ಕೆ ಇಟ್ಟುಕೊಳ್ಳುವಳು.
ಬಗೆಗೆ ಬಂದೊಡಮೆಯನೂ ಲ್ದಾನೆರೆದಾಗಳೆ ಕುಡಿಮೆಂ ದಾನೃಪತಿಗೆ ಕೈಕೆ ಬಯ್ಕೆಗೊಟ್ಟಳ್ ಮೆಚ್ಚಂ
(೩-೬೭
ಅಪರಾಜಿತೆಗೆ ರಾಮನೂ, ಸುಮಿತ್ರೆಗೆ ಲಕ್ಷ್ಮಣನೂ, ಕೈಕೆಗೆ ಭರತನೂ, ಸುಪ್ರಭೆಗೆ ಶತ್ರುಘ್ನನು ಹುಟ್ಟುವರು. ರಾಮ ಲಕ್ಷ್ಮಣರ ಪ್ರಭಾವ-ಒಬ್ಬನು “ ನೀರಜ ಚರಿತ್ರನ್ ” (D), * ಜಗತ್ತಾತ ಶಮನನ್ ” (೧೧೨); ಒಬ್ಬನು ವೀರ ಅವನ ತೋಳು ದಶಕಂಠನ ಉಸಿರನ್ನು ಕುಡಿಯಲು ಬೆಳೆಯ ತಿತ್ತು, (೧೫೮), ಇಬ್ಬರೂ ಶಲಾಕಪುರುಷರು, ಕಾರಣಪುರುಷರು ಬಲಾಚ್ಯುತರು” (೧೫೯)
ರಣದೊಳ್ ರಾವಣನಂ ಜವಂಗೆ ಪೊಸತಿಕ್ಕಲ್, ತಾರಶೈಲಕ್ಕೆ ತೆಂ ಕಣದಂ ಕಂಕಣದಂತೆ ಕೈಗೆ ವರಿಸಲ್, ಭೂಚಕ್ರಮಂ ಚಕ್ರಮ ರಣದೊಳ್ ಸಾಧಿಸಲೆಂದು ಪುಟ್ಟಿದವರೇಂ ಸಾಮಾನ್ಯರೇ ರಾಮ ಲ
(೧೬೦ ಕ್ಷಣಪ್ರಾಕೃತವಿಕ್ರಮರ್ ತ್ರಿಭುವನಪ್ರಖ್ಯಾತಕೀರ್ತಿಧ್ವ ಜರ್ ಮತ್ತೆ ರಾವಣನ ಸಾವಿನ ನೆನಪು.
(೪-೨) ಇತ್ತ ಜನಕನಿಗೂ ವಿದೇಹಿಗೂ ಸೀತೆ ಪ್ರಭಾಮಂಡಲರ ಜನನ, ಭವಬದ್ಧ ವೈ ಗಂಡುಮಗುವನ್ನು ಖೇಚರಲೋಕಕ್ಕೆ ಹಾರಿಸುವುದು; ಪ್ರಭಾಮಂಡಲನಿಗೆ ಸೀತೆಯಲ್ಲಿ ಅನುರಾಗ ಬೇಡರು ಜನಕನನ್ನು ಕಾಡುವುದು, ರಾಮ ಲಕ್ಷ್ಮಣರ ಸಹಾಯ, ಸೀತೆಯನ್ನು ವಾಗ್ದಾನಮಾಡುವುದು
ಕನ್ನಡ ಸಾಹಿತ್ಯದ ಚರಿತ್ರೆ
೫೨
ನಾರದನ ಚೇಷ್ಟೆಯಿಂದ ಜನಕನನ್ನು ಹಿಡಿತರಿಸಿ ಸೀತೆಯನ್ನು ಕೇಳುವುದು: ಎರಡು ಧನುಸ್ಸನ್ನು ರಾಮನ ಸತ್ವಪರೀಕ್ಷೆಗೆ ಕಳಿಸುವುದು: ಸೀತಾಸ್ವಯಂವರ ಕಾಲದಲ್ಲಿ ಅವು ಎರಡು ಹಾವುಗಳಾಗುವುದು: ರಾಮ ನೊಂದನ್ನೂ ಲಕ್ಷ್ಮಣನು ಮತ್ತೊಂದನ್ನೂ ಬಗ್ಗಿಸಿ, ಜೇವೊಡೆಯುವುದು.
ಅದಟಂ ವಜ್ರಾವರ್ತ ಕ್ಕೆ ದಿವ್ಯಮೆನಿಸಿದ ಹಲಾಯುಧಂಬೆರಸು ಬಲಂ, ಗದೆವೆರಸು ಸಾಗರಾವ ರ್ತ ದಿವ್ಯಚಾಪಕ್ಕುಪೇಂದ್ರನಧಿಪತಿಯಾದ
(೫-೧೦೪)
ರಾಮನನ್ನು ಸೀತೆಯೂ, ಲಕ್ಷಣನನ್ನು ಚಂದ್ರಧ್ವಜನ ಹದಿನೆಂಟು ಮಂದಿ ಹೆಣ್ಣು ಮಕ್ಕಳೂ ಮದುವೆ ಯಾಗುವುದು. ಪ್ರಭಾಮಂಡಲನು ಪೂರ್ವಜನ್ಮಸ್ಮರಣೆಯಿಂದ ಸೀತೆಯನ್ನು ತಂಗಿಯೆಂದು ತಿಳಿದು ವಿಷಾದಿಸುವನು: ಅವನ ಸಾಕುತಂದೆ ಇದೇ ವೈರಾಗ, ಹೇತುವಾಗಿ ದೀಕೆಗೊಳುವನು (೬-೧೨೨೪). ಜನಕನೂ ವಿದೇಹಿಯೂ ಖೇಚರಲೋಕಕ್ಕೆ ಮಗನ ಹತ್ತಿರಕ್ಕೆ ಬರುವರು. ರಾಗದ ಹುಚ್ಚು:
ಕುಲಮದವೊಂದು ರೂಪಮದವೊಂದು ವಯೋಮದವೊಂದು ತನ್ನ ದೋ ರ್ಬಲಮದವೊಂದು ಜಾತಿಮದವೊಂದು ಕಲಾಮದವೊಂದು ದೇವತಾ ಬಲಮದವೊಂದು ರಾಜ್ಯಮದವೊಂದಿನಿತಲ್ಲದೆ ಬೇರೆ ರಾಗಮ ಗೃಲಿಸಿದ ದೋಷದೃಷ್ಟಿ ವಿಷಯಾತುರರೇಂ ಗಡ ಮುಂದುಗಾರೇ
(೬-೧೪)
ಇತ್ತ ರಾಮ ಲಕ್ಷ್ಮಣರಲ್ಲಿ ಪುಣ್ಯಪ್ರಭಾವವಾಯಿತು. ನನಗಾಗಲಿಲ್ಲ ಎಂದು ಭರತನು ತಪಸ್ಸನ್ನು ಬಯಸಲು, ಕೈಕೆ ಜನಕನ ತಮ್ಮ ಕನಕಧ್ವಜನ ಮಗಳನ್ನು ಕೊಡಿಸಿ ಮದುವೆಮಾಡುವಳು. ಎಲ್ಲರೂ ಅಯೋಧ್ಯೆಗೆ ಹಿಂತಿರುಗುವರು.
ಆರನೆಯ ಆಶ್ವಾಸ ಬಹುಗಾಂಭೀರದಿಂದ ಉನ್ನತಮಟ್ಟವನ್ನು ಏರುತ್ತದೆ. ದಶರಥನು ತನ್ನ ಭವಾವಳಿಯನ್ನು ಕೇಳಿ ವೈರಾಗ್ಯಹೊಂದಿ, ರಾಮನನ್ನು ಅಧಿರಾಜನನ್ನಾಗಿ ಮಾಡಿ ತಪಸ್ಸಿಗೆ ಹೋಗಲು ಅಪೇಕ್ಷಿಸಿದ್ದು, ಕೈಕೆ ತನಗೇನು ಗತಿಯೆಂದು ಭಯಪಟ್ಟು ವರಗಳನ್ನು ನೆನಸಿಕೊಂಡು ರಾಮನಿಗೆ ವನ ವಾಸವನ್ನೂ, ಭರತನಿಗೆ ರಾಜ್ಯವನ್ನೂ ಬೇಡಿದ್ದು, ಲಕ್ಷ್ಮಣನ ಕೊಪಾಟೋಪ, ಭರತನ ವಿಷಾದ, ರಾಮನ ಪ್ರೇಮದ ತ್ಯಾಗಬುದ್ದಿ, ಅಪರಾಜಿತೆಯ ಶೋಕ, ಸೀತೆಯ ಮನೋನಿರ್ಧಾರ-ಇವೆಲ್ಲಾ ನಾಗಚಂದ್ರನ ಅತ್ಯುತ್ತಮಶೈಲಿಯಲ್ಲಿ ಚಿತ್ರಿತವಾಗಿವೆ. ದಶರಥನ ವೈರಾಗ್ಯವನ್ನು ಈ ಪದ್ಯಗಳು ಬಿಂಬಿಸುತ್ತವೆ:
ಮೊದಲಿಲ್ಲಿನಿಪ್ಪ ಸಂಸಾ ರದಲ್ಲಿ ಸುಖದುಃಖಮಂ ಚತುರ್ಗ ತಿಯೊಲ್ ಮಾ ಣದೆ ಹಿರಿದು ಶುಭಾಶುಭ ಕ ರ್ಮದ ಫಲಮಂ ನಗುತುಮುತುರ್ಮುಣುತುಂ ಬಂದಯಮ್
(೫೫) ಯತಿಪತಿ ಪೇತಿ ಕೇಳು ಭವಸಂತತಿಯಂ ಬಗೆದಂಜವಂಜವ ಸ್ಥಿತಿಯನನಾದಿಯಂ ಸುಕೃತದುಷ್ಕೃತಕರ್ಮವಿಪಾಕ ಸೌದುಸ್ ಸ್ಥಿತಿಗಳನುಂಡು ಆಳದ ಗುಂಡಿಗೆಯಂತೆವೋಲಾದೆನೆಂದು ನಿ ರ್ವೃತಿಸುಖದಲಾಟಿಸಿದನೇಂ ರಘುಸೂನು ಮಹಾನುಭಾವನೋ ಅವಚದಿನ್ನೆಗಂ ಸವಿದನಿಂದ್ರಿಯಸೌಖ್ಯಮವಗ್ರನಂದನಂ ಕವಚವರಂ ಜಿತಾಹಿತಬಲಂ ಬಲನನ್ನನಿರಲ್ ಮಹಾಪರಾ ಭವಮಿವಚಿಂದವಾವುದೆನಗೆಂದಿರದುತ್ತರಿಸಿಡರ್ಚಿದಂ ಭವಜಲರಾಶಿಯಂ ದಶರಥಂ ಜಿನರೂಪವತ್ರಯಾತ್ರೆಯಿಂ
ខ.១១
ಶ್ರೀ
ಸಾ
ಪರಪೀಡಾಕರಮೆಂತು ನೋಡುವೊಡಮರ್ಥೋಪಾರ್ಜನಂ ತದುರಾ ಚರಿತೋದೀರಿತ ದುಃಖತಿಕ್ಕಫಲಸೇವಾಕಾಲದಂದೊಲ್ವರು ನೆರವಿಲ್ಲಾ ಧನಸೇವೆಯಂದೆ ನೆರವಪ್ಪರ್ ನಂಟರೆಂದಂದು ತಾಂ ಮರುಳಕ್ಕುಂ ಪುರುಳಕ್ಕು ಮಜ್ದು ಪಾನಾದಾನವಿಜ್ಞಾನಮಂ
ವನಿತಾಸಂಕುಲಮುಂ ಷಡಂಗಬಲಮುಂ ಭಂಡಾರಮುಂ ವಸ್ತುವಾ ಹನಮುಂ ತನ್ನೊಡವರ್ಪುವಲ್ಲವೊಡವರ್ಕುಂ ಪುಣ್ಯಪಾಪಂಗಳೆಂ ಬಿನಿತಂ ಭಾವಿಸಿ ತಾನೆ ತನ್ನ ದೆಸೆಯಿಂ ತನ್ನಂದಮಂ ಭಾವಿಸಲ್ ಮನಮಂ ತಾರದೆ ಬಾಹ್ಯಮಂ ಬಯಸುವಂತಶೂನ್ಯನುಂ ಮಾನ್ಯನೇ ಅವೆಣ್ಣಾದೊಡಂದೆರ ವಸವೊಂದಾಗಿರ್ದವಂ ನಂಟನೆ ದುದಂದನ್ಯರನಾಸೆಗೆಯ್ಯಳವಳಿಂ ನಿಲ್ವಾಕುಳಂ ಪೊಲ್ಲಿವಳ್
ಪುಣಿಗುಂಜಳ್ ಭರತಾದಿಗಳ ಪಲವು ಕಾಲಂ ತನ್ನೊಳೋತಿರ್ದವರ್ ಕದಂದಾ ಕ್ಷಣದೊಳ್ ಧರಾರಮಣಿ ಮತ್ತೊಲ್ವಂಗೆ ಪುಲ್ವಿಕ್ಕುವಳ್ ಮೃಗಭೂಮಿಶ್ರಿತಸಾಂದ್ರಚಂದನ ರಸಗಳ್ ಚಂದನೋಶೀರವಾ ರಿಗಳುಂ ನರ್ತಿತ ಪ್ರೇಮಚಾಮರಚಲನ್ಮಂದಾನಿಲಂಗಳ್ ವಿಲಾ ಸಗೃಹಂಗಳ ಕಳೆಯ ಸಾಫುವೆ ರಾಗದ್ವೇಷವೇಗಂಗಳಿಂ ಬಗೆಯೋಳ್ ಪೆರ್ಚದ ತಾಪಮಂ ಕಳೆವವೋಲ್ ಜೈನಾಂಘಿಕಲ್ಪಾಂಫಿಪಂ
ಎನಿತೆನಿತಂ ಪುಂಜಿಸಿದೊಡ ಮನಿತನಿತುಂ ಮಣಿಯಲwಯದಣಿಯರಮುರಿಗುಂ ಧನದಿಂ ಲೋಧಾಗ್ನಿಯನಿಂ ಧನಭಾರದಿನಾವನಗ್ನಿಯಂ ನಂದಿಸುವಂ
ಜನಕನನರಣ್ಯನಗ್ರಜ ನನಂತರಥನಿಳೆಯನೊಂದು ತಿಂಗಳ ಕೂಸಿಂ ಗೆನಗಿತ್ತು ಆದರೆನ್ನವೊ ಲಿನವಂಶದೊಳಿಂತು ಮೊಹಮೂರ್ಛಿತರೋಳರೇ
ಸಾವ ಪುಟ್ಟುವ ಭಯಮಂ ಸಂಸಾರಮಂ ಸಪ್ತಧಾತುಜಮಂ ದೇಹಸ್ಥಿತಿಯಂ ಆವ ವಸ್ತುವನುಂಡೊಡಂ ತಣಿಯದ ಕಾಂಕ್ಷೆಯಂ ಬಗೆದು ತನ್ನೊಳ ಏವುದೀ ತೊಡರ್ಪೆನಗಿದೇಕೆಂದು ದಶರಥಂ ಭಾವಿಸಿ ಭಾವಿತಾತ್ಮಂ ಭಾವಿತಾತ್ಮನಂ ಪರಮಯೋಗೀಂದ್ರನಂ ಬೀಜಿಂಡಯೋಧ್ಯೆಗೆ ಬಂದನಾಗಳ್
(೬೬೫
ಏಳೆಂಟನೆಯ ಆಶ್ವಾಸಗಳಲ್ಲಿ ಕೈಕೆ ಭರತರ ಪಶ್ಚಾತ್ತಾಪ. ರಾಮನ ದೃಢಸಂಕಲ್ಪ, ಶಾಂತಜ ಜಿನಸ್ತುತಿ, ಜೈನಭಕ್ತರನ್ನು ಬಾಧೆಪಡಿಸುವವರ ನಿಗ್ರಹ
(ಇಲ್ಲೊಂದು ಅಹಿಂಸಾಧಮ್ಮವನ್ನು ಕುರಿತ ದಿವ್ಯನಾದ ವಚನವಿದೆ: ಕಡೆದೊಡೆ ಪಾಲಡಲ್ ವಿವಿಧವಸ್ತುವನೀಯದೆ ತೇಯೆ ಚಂದನಂ ಕುಡದೆ ಸುಗಂಧಮಂ ಪಿಟಲಿಯೆ ಕರ್ಬಿನಿದಾಗದೆ ಕಾಸೆ ಕಾಂಚನಂ ಪಡೆಯದೆ ಕಾಂತಿಯಂ ನಿಜದಿನೊಳ್ಳಿದರಪ್ಪವರೆಂತು ಬಾಧವ ಟ್ರೋಡಮುಪಕಾರಮಂ ಪೆರ್ಗೆ ಮಾಡದೆ ಬಾಧೆಯನೇಕೆ ಮಾಡುವರ್) (೭--
೫೨೩
ಕನ್ನಡ ಸಾಹಿತ್ಯದ ಚರಿತ್ರೆ
ಅನಾಥರಕ್ಷಣೆ, ಮಳೆಗಾಲದ ವಾಸ, ಲಕ್ಷ್ಮಣನು ವನಮಾಲೆಯನ್ನು ವರಿಸಿದ್ದು:
(ಇದೊಂದು ಸೊಗಸಾದ ಪ್ರೇಮಕವಿತೆ:
“ ಅಂತಾ ಮರದಡಿಯೋಳಾಕೆ ನಿಂದು ರಾಮಾನುಜನಪ್ಪ ಲಕ್ಷಣಕುಮಾರನೆತ್ತಾನುಮೀ ಬನಕ್ಕೆ ವಿನೋದದಿಂ ಬಂದನಪ್ರೊಡೀ ವಟನಿವಾಸಿನಿಯರಪ್ಪ ದೇವತೆಯರಾರಾನುಮುಳ್ಕೊಡೆ ಲಕ್ಷಣಕುಮಾರ ವನಮಾಲೆ ನಿನಗಲ್ಲದೆ ವಧುವಾಗೆನೆಂದು ನೇಲ್ಲು ಸತ್ತಳೆಂಬಿದ ಮಜರೆಯದಣಿಪುವುದೆಂದು ಕರುಣ ವಾಗೆ ನುಡಿದು,
ಮೃತಿಗಿನಿಸಪ್ರೊಡಂ ಸೆಡೆಯದೀ ಭವದೊಳ್ ದೊರೆಕೊಂಡುದಿಲ್ಲ ದು ಹೃತದೋದವಿ ಮನಃಪ್ರಿಯಕರಗ್ರಹಣಂ ಮಯಿಮೆಯೊಳಾದೊಡಂ ಪತಿಯೆನಗಕ್ಕೆ ಲಕ್ಷ್ಮಣನೆನುತ್ತಮವಳ್ ಕೊರಲೊಳ್ ತೊಡರ್ಚಿದಲ್ ಲತೆಯನಿದೇವೊಗದೆರಡಿಲ್ಲದ ನಯನಾ ಲತಾಂಗಿಯಾ
ಅನಂತರಂ
ಬೇಗಂ ಬಂದಾ ವಧು ನೇ ಲ್ಯಾಗಳ್ ನೀನಜಿಸುವಾತನಾನು ಮರಣೋ ದ್ಯೋಗಮನೆಂದು ಘನಧ್ವನಿ
ಸೋಗೆಯ ಕಿವಿಸಾರ್ದುದೆನಿಸಿ ಕೃಷ್ಣಂ ನುಡಿದಂ ಅಂತು ನುಡಿದು...ನೇಲ್ದಾಕೆಯಂ ತಸಿ ನೆಗಪಿ,
ಓಪಳ ಕೊರಲೊಳ್ ಕೊದ ಲ ತಾಪಾಶಮನಂಬುಜೊವರಂ ಕಳೆದು ಸಮು ದೀಪಿತರಾಗಂ ಮೊದಲ ತಾಪಾಶಮನೊಡನೆ ತನ್ನ ಕೊರಳೊಳ್ ಕೋದಂ)
(೮-3 v೧೬)
ಭರತನ ಶತ್ರುಗಳನ್ನು ಸೋಲಿಸಿದ್ದು, ಲಕ್ಷ್ಮಣನಿಗೂ ರತಿಮಾಲೆ ಜಿತಪದ್ಮಯರಿಗೂ ವಿವಾಹ, ದೇಶ ಭೂಷಣ ಮುನಿಗಳಿಗಾದ ಉಪಸರ್ಗದ ನಿವಾರಣೆ, ಜಟಾಯುವಿನ ಕಥೆ-ಇವುಗಳನ್ನು ದಾಟಿದಮೇಲೆ ಮತ್ತೆ ಮುಖ್ಯಪ್ರಸಂಗಕ್ಕೆ ಬರುತ್ತೇವೆ: ಅದೇನೆಂದರೆ, ರಾಮ ರಾವಣರಿಗೆ ಯುದ್ಧವನ್ನು ತಂದಿಕ್ಕಿದ ಶಂಭುಕನ ಕೊಲೆ, ಗಡಿಗಾಳಗದ ಪ್ರಸಂಗ.
- ದಂಡಕಾರಣ್ಯದಲ್ಲಿರುವಾಗ ಒಂದು ದಿವಸ, ವನವಿಲಾಸವನ್ನು ನೋಡುತ್ತ ಬರುವ ಲಕ್ಷ್ಮಣನು ಸುವಾಸನೆಯನ್ನು ಬಳಿವಿಡಿದು ಬಂದು ಸೂರಹಾಸವೆಂಬ ಖಡ್ಗವನ್ನು ಕಂಡು ಕೈಕೊಂಡು, ಅದರ ಹರಿತವನ್ನು ನೋಡಲು ಬಿದಿರಮೆಳೆಯನ್ನು ಕತ್ತರಿಸುವನು. ಆಗ ಖರನ ಮಗನಾದ ಶಂಭುಕನ ತಲೆ ಹರಿದು ಹಾರುವುದು. ಆ ಖಡ್ಡ ಅವನ ತಪಸ್ಸಿಗೆ ಆವೊತ್ತು ಸಿದ್ಧಿಯಾಗಬೇಕಾಗಿತ್ತು. ಚಂದ್ರನಖಿ ಬಂದು ಮಗನ ತಲೆಯನ್ನು ನೋಡಿ ಖರನಿಗೆ ತಿಳಿಸುವಳು. ಖರನು ಯುದ್ಧವನ್ನೆತ್ತಿಕೊಂಡು, ರಾವಣನಿಗೆ ಸುದ್ದಿಯನ್ನು ಕಳುಹುವನು. ನಿಯಮದಲ್ಲಿದ್ದ ನಿರಪರಾಧಿಯಾದ ನನ್ನ ತಂಗಿಯ ಮಗನನ್ನು ಕೊಂದವನನ್ನು ತೀರಿಸುವೆನೆಂದು ಚಂದ್ರಹಾಸವನ್ನು ಜಡಿದು, “ಅಸ್ತಮಿತಪುಣ್ಯದಶಾನನನಾ ದಶಾನನಂ (೯-೭೨) ಪುಷ್ಪಕವಿಮಾನದಲ್ಲಿ ಬಂದು ಸೀತೆಯನ್ನು ಕಾಣುವನು.
ಬಲೆ ದೃಷ್ಟಿಗೆ ವಜ್ರದ ಸಂ ಕಲೆ ಹೃದಯಕ್ಕೆನಿಪ ರೂಪವತಿ ಜಾನಕಿ ಕಣ್ ಬೊಲದೊಳಿರೆ ಪದ್ಮ ಪತ್ರದ ಜಲಬಿಂದುವಿನಂತೆ ಚಲಿತವಾದುದು ಚಿತ್ರಂ
೫೨೪
ಶ್ರೀ
ಸಾರಿ
ಹಾರಮರೀಚಿಮಂಜರಿ ಸುಧಾರಸಧಾರೆ ಸುಧಾಂಶುಲೇಖೆ ಕ ರ್ಪೂರಶಲಾಕೆ ನೇತ್ರಸುಖದಾಯಕಮೀ ದೊರೆತಲ್ಲಮೀಕೆ ಶೃಂ ಗಾರಸಮುದ್ರಮಂ ಕಡೆಯೆ ಹೃದ್ದವನುದ್ಧವೆಯಾದಳೆಂದು ಕ ಣ್ಣಾರೆ ದಶಾಸ್ಯನೀಕ್ಷಿಸಿದನೀಕ್ಷಿಸಿ ಕಣ್ಣಜಿದಾರೆ ಮನ್ಮಥ ಪಲರುಂ ವಿದ್ಯಾಧರಸ್ತ್ರೀಯರುಮಮರಿಯರುಂ ಮಾನವಸ್ತ್ರೀಯರುಂ ತ ಮೊಲವಿಂ ಮೇಲ್ವಾಯೊಡಂ ಮುನ್ ಬಗೆಯದ ಬಗೆಯೇನಾದುದೆಂದುದ್ದ ತಂ ಮೂ
ದಲಿಸುತ್ತು೦ ರೂಪಿನೋಲ್ ಮಚರಿಸುವನೆನಗೆಂದಂಬನಂಬಟುವನ೦ ಪಲಕಾಲಕ್ಕೇಸುವೆಂ ದಶಮುಖನೆನುತುಂ ಮನ್ಮಥಂ ಮಾಣದೆಚ್ಚರ ವಿಹಿತಾಚಾರಮನಸ್ವಿಯಾಗತಗುಣಪ್ರಖ್ಯಾತಿಯಂ ದುಷ್ಟನಿ ಗ್ರಹಶಿಷ್ಟಪ್ರತಿಪಾಲನಕ್ಷಮತೆಯಂ ಕಯ್ಯಾಯದನ್ಯಾಂಗನಾ ಸೂಹೆಯಂ ತಾಳಿದನ ಕಾಲವಶದಿಂ ಲಂಕೇಶ್ವರಂ ವಿಸ್ಮಯಾ
ವಹಮಬ್ಬಿಯುಮೊರ್ಮೆ ಕಾಲವಶದಿಂ ಮಯ್ಯಾದೆಯ ದಾಂಟದೇ
(೯-೭೬, ೮೨, ೮೩, ೮೬) ವಿಧಿವಶನಾಗಿ, ಕರ್ಮವಶನಾಗಿ, ಕಾಲವಶನಾಗಿ ಇಲ್ಲಿಗೆ " ಉದಾತ್ತ” ರಾವಣನು “ ಅಸ್ತ್ರ ಪುಣ್ಯ "ನಾದನು. ಮೂರೂ ಕೂಡಿ ರಾಮಲಕ್ಷ್ಮಣರನ್ನೂ ರಾವಣನನ್ನೂ ಗಂಟುಹಾಕಿದವು.
ತನ್ನ ಅವಲೋಕಿನೀ “ ವಿದೆ ” ಯನ್ನು ನೆನೆಯುವನು-ಆ ದೇವತೆ,
ಆರಯ್ಕೆ ವಿರೋಧಂ ಸಾ ಧಾರಣಪುರುಷರೊಳಮುಚಿತಮಅಧಿಕಬಲರ್ ಕಾರಣಪುರುಷರಿವರ್ ನಿ ಪ್ಯಾರಣಮಿವರೊಲ್ ವಿರೋಧಮಂ ಮಾಡುವುದೇ? ಅನ್ನೆಯದಿಂ ನಡೆವವರಂ ನೀನ್ ನಿಯಮಿಸುವಯ್ ದಶಾಸ್ಯ ಪೆನಾವನ್ ನಿ ನೈನ್ ನಿಯಮಿಸುವ ಮುನ್ನೀರ್ ಬೆನ್ನಿರೆನೆ ಬೆರಸಲಣ್ಣ ತಣ್ಣೀರೊಳವೇ
(೯-೯೦, ಎಂದು ಎಚ್ಚರಿಸಿದರೂ ಕೇಳನು
ಬಿದಿಯಂ ಮೀಜುಗುಮೆ ಪೆಜರ ಪೇಟ್ಟು ಪ್ರದೇಶ?
ಜನಕಜೆಯನುಯ್ಕೆ ದಶರಥ ತನೂಜರಿಂ ಮರಣವಾಗಲೆಂದಿರ್ದಪುದೀ ತನ ಕಯ್ಯಳವು ಪುರಾ
ತನ ಕರ್ಮಾಯತ್ಯಮಲೈ ದೇಹಿಗಳೆಸಕಂ ಹೃದಯದ ಪಾಪಕ್ರಿಮಿ ಕೆರಳಿ ಎದ್ದು, ರಾವಣನು ಹುಚ್ಚನಾಗಿ, ಸೀತೆಯನ್ನು ಕದ್ದೊಡುವನು.
ಅಳಿಪಿ ಪರವಧುಗಧೋಗತಿ ಗಿಣಿವುದನಭಿನಯಿಸುವಂತೆ... ದೋಷಿ ಪಿಡಿವಂತೆ ದಿವ್ಯದ ಕಾಸಿದ ಕುಲುವ ಕಡಂಗಿ ಕಾಳೊರಗನಂ ಕೂಸು ಪಿಡಿವಂತೆ ಪಿಡಿದು
ಸಾಸಿಗನವಿವೇಕಿ ಸೀತೆಯಂ ದಶಕಂಠಂ
(೧೦, ೧
ಕನ್ನಡ ಸಾಹಿತ್ಯದ ಚರಿತ್ರೆ
೫೨೫
ಈ ಸನ್ನಿವೇಶದಲ್ಲಿ “ ಪಾತಕ ” ರಾವಣನನ್ನು ಕವಿ ದಯಾರ್ದಹೃದಯದಿಂದ ನೋಡಿ, ಇಂತಹ ವನೂ ಇಂತಹ ಕೆಲಸಮಾಡಿದನೇ, ಆಶ್ಚರ್ಯವೇನು-ಎಲ್ಲಾ ಕರ್ಮ ಎನ್ನುವನು.
ಆತ್ಮಸತ್ವಗುಣಹಾನಿಯ ಸೂಚಿಸದೇ ವಿನಾಶಮಂ?
(೮೯) ಇಲ್ಲಿಗೆ ರಾವಣನ ಜೀವನದಲ್ಲಿ ಎರಡನೆಯ ಘಟ್ಟ.
ಕರಾತ್ಮಂ ವಂಚಕನವಿ
ಚಾರಿ ದುರಾಚಾರಿ ಬಗೆಯದುಯ್ದ ಪನೆನ್ನಂ
ಹಾ ರಾಮಾ ಹಾ ರಾಮಾ
ಬಾರಿಪರಾರೆಂದು ಸೀತೆ ಶೋಕಂಗೆಟ್ಟ * ದಶಾಸ್ಯನನಂತವೀರಕೇವಲಿಗಳ ಚರಣೋಪಾಂತದೊಳ್ ಕೈಕೊಂಡ ಪರಾಂಗನಾ ವಿರತಿವ್ರತದ ಭಂಗಮಂ ಬಗೆಯದುದ್ದನ್.
(೧೧೩ ವ.) ರತ್ನಜಟಿ ಅಡ್ಡಗಟ್ಟಲು,
ಕಾದದ ಕರುಣಿಸಿ ವಿದ್ಯಾ ಚೈದಂಗೆಯಂ ನಿರಂಕುಶಂ ದಶಕಂಠಂ
(೧೪)
ಮಹಾಸತಿಯ ಶೀಲದಳವನಿಯನಪ್ಪುದಂ , ಅನಂತವೀರಕೇವಲಿಗಳಿತ್ಯ ಪರವಧ್ರವಿರತಿವ್ರತಪರಿ ಪಾಲನವೆನಗರಿದಾದುದೆನೆ ನಿಸರ್ಗರಾಗಿಗಳಪ್ಪ ಪೆಂಡಿರ ಪರಿಣಾಮವೆಲ್ಲಿವರಂ ನಡೆದಪ್ಪುದು, ಈಕೆಯ ನಾವ ತೇಜದೊಳಿಡಂಬಡಿಸುವುದಾವ ಗಹನವೆಂದು ತನ್ನಂ ತಾನೆ ಸಂತಯಿಸುತ್ತುಂ ಲಂಕೆಗೆಬಂದು ಸೀತೆಯನ್ನು ಉದ್ಯಾನವನದಲ್ಲಿಡಿಸುವನು.
(೧೪೮ ವ.) ಮಂಡೋದರಿಗೆ ತನ್ನ ಚಿಂತೆಯನ್ನು ತಿಳಿಸುವನು: ಅಜ್ಪುವ ವಾರ್ತೆಯನ್ನು ನಿನಗೆನ್ನ ನೆಗಟಿಯ ವಾರ್ತೆ, ನೀನೆ ಮು ನೈಜ್‌ದ ಬಚಿಕ್ಕದಂ ನಿನಗೆ ವಂಚಿಸಲಾಗದು, ತಂದೆನಿಂದು ಮುಂ ದಯದೆ ಸೀತೆಯಂ, ಮದನನಾಕೆಯ ದೂಸನೆನ್ನ ನೆಚ್ಚಪ, ನಗೊಳೆ ಪೂವಿನಂಬಲಗಿನಂಬುಗಳೆಂಬಿನಮಂಬುಜಾನನೇ
(೧೬೦)
ಅವಳು
ಅಚಿರಪ್ರಭೆಯುಂ ಪೆಂಡಿರ ಶುಚಿತ್ವಮುಂ ಕ್ಷಣದಿನಗ್ಗಳಂ ನಿಲ್ಕುಮೆ ಪೇಟ್ ಖಚರೇಂದ್ರ ನಿಜಾಕೃತಿ ಚಿ ಇಚಮತ್ಕತಿ ಕಂಡಿದರ್ಕೆ ಸೋಲದರೊಳರೇ
(೧೬೧) ಎಂದು ಸಂತೈಸಿ “ ಆಕೆಯನೊಡಂಬಡಿಸಲಾನೆ ಸಾಲ್ವೆನೆಂದು" ಬಂದು ಸೀತೆಗೆ ಬುದ್ದಿ ಹೇಳುವಳು (೯-೧೬೪೬೮). ಇದು ಮಂಡೋದರಿಯ ಮಟ್ಟ! (ಇಬ್ಬರೂ ಮಹಾಸತಿಯಳವನರಿಯರು). ತಕ್ಕ ಶಾಸ್ತಿ ಸೀತೆಯಿಂದಾಗುವುದು
ಇದು ಮತ್ತೊನ್ಮತ್ತಜಲ್ಬಂ ಕುಲವಧುವರ ಮಾತಲ್ಕು, ನಿಮ್ಮೊಂದಿಗರ್ ಮ ಶದ ಕೇಡಂ ನೋಡದೊಳ್ಳಂ ಬಗೆಯದೆ ಪಣಿಗಂ ಪಾತಕಕ್ಕಂ ಭಯಂಗೊ ಇದೆ ಪೇರ್, ಪೊಲ್ಲಮಾತಂ ನುಡಿವಿರಿದು ಮನಂ ಸಂಕಲ್ಪಜಲ್ಪಂ, ಮದಧೀಶಂ ರಾಮಚಂದ್ರಂ ಪೋಗನೆ ಪೆರೇವಾ ಜಾತಾನುಜಾತರ್
(೧೬೯)
೫೨೬
ಶ್ರೀ ಸಾಹಿ
ರಾವಣನೂ ಬಂದು
(೧೭೯
ಅನುನಯಶತಂಗಳಂ ನುಡಿ ದನುವಶಮಾಡಲ್ ವಿಯಚ್ಚರೇಂದ್ರನುಮೇನಾ ರ್ತನೆ ಜನಕಜೆಯಂ ಗಗನಮ
ನನುಲೇಪಂಗೆಯ್ಯೋ ಡಲ್ಲಿ ಮಸಿ ಪತ್ತುಗುಮೆ ವಿದ್ಯಾಧರ ಚಕ್ರಾಧಿಪತ್ಯದ ಸಿರಿಯನ್ನು ಧಿಕ್ಕರಿಸುವಳು ಸೀತೆ
ಗುಣಹಾನಿಯಿಂದಧೋಗತಿ ಗುಣದಿಂ ಸ್ವರ್ಗಾಪವರ್ಗಸುಖಮಕ್ಕುಮೆನಲ್ ಗುಣಹೀನನ ಸಿರಿಯಿಂದಂ
ಗುಣಿಗಳ ಬಡತನಮೆ ನಾಡೆಯುಂ ಲೇಸಲೇ ಆಗ ರಾವಣನು ಭಯಪಡಿಸಲು ಎಗುರ್ವಿಸಿ ಉಪಸರ್ಗವನ್ನು ತೋರಿಸುವನು:
(೧೮೨
ಬಗೆಯೊಳ ಜೈನಪದಂ ನಾ ಲಗೆಯೊಳ್ ಪಂಚಪದಮಗಲದಿರೆ ರನ್ನದ ದೀ ವಿಗೆ ಪರುಷಪವನಹತಿಯಂ
ಬಗೆಯದವೋಲ್ ಸೀತೆ ಬಗೆದಳಿಲ್ಲುಪಹತಿಯಂ ವಿಭೀಷಣಾದಿಗಳು ರಾವಣನ ಅಪಾಯವನ್ನು ಸೂಚಿಸುವರು
ವಿಗ್ರಹಸಮಗ್ರನಪ್ಪ ಸುಗ್ರೀವಂ ನಮ್ಮೊಳಾದನುಬಂಧದೊಳ್ ಶಿಥಿಲವಾಗಿರ್ಕುಂ, ಆತನೊಳನ ಬಂಧಮುಳ್ಳುದಂ ಹನುಮನುಮೆಮಗಲ್ಲನೆಂಬುದುಮಾ ನುಡಿಗೆ ದಶಮುಖ ಪರಿಹಾಸ ಮುಖರ ಮುಖನಾಗಿ ಕಡಲೊಳಗೊಂದೆರಟ್ ಜಲಕಣಂ ಪವನಾಹತಿಯಿಂ ವಿನಷ್ಟಮಾ ದೊಡೆ ಜಲರಾಶಿ ಕುಂದುಗುಮೆ ಮೇರೆಗೆ ದೂರಮೆನಿಪ್ಪ ನಮ್ಮ ಪೆ ರ್ವಡೆ ಖರದೂಷಣ ಕಣಿಯೆ ಕುಂದುಗುಮೆ ಕಪಿಚಪ್ಪರಿಲ್ಲದೇ ಕಿಡುವುದೋ ಭೂಚರರ್ ಧುರದೊಳಾಂಪರೆ ಪೇಚರಚಕ್ರವರ್ತಿಯಂ
(೯-೧೯೫)
ಹತ್ತನೆಯಾಶ್ಚಾಸ ರಾವಣನ ವಂಶವರ್ಣನ-ಅವನ ಮಹಿಮೆ, ದಿಗ್ವಿಜಯ, ರಾಜತಂತ್ರಜ್ಞತೆ ಶುಚಿತ್ವ, ಕರುಣೆ, ವಿದ್ಯಾಪ್ರಭಾವಗಳನ್ನು ಜಾಂಬವಂತನು ರಾಮ ಲಕ್ಷ್ಮಣರಿಗೆ ವರ್ಣಿಸುವನು. ಉಪರಂಭೆಯ ಕಥೆಯಲ್ಲಿ ಅವನ ಪರಾಂಗನಾವಿಮುಖತೆಯನ್ನು ತಿಳಿಸುವನು.
ರಾವಣನು ನಳಕೂಬರನ ಕೋಟೆಯನ್ನು ಹಿಡಿಯಲಾರದಿದ್ದಾಗ ಅದರ ರಹಸ್ಯವನ್ನು ಆತನ ರಾಣಿ ತಿಳಿಸುವುದಾಗಿ ಹೇಳಿಕಳುಹಿಸುವಳು
ನಳಕೂಬರನ ಕುಲಾಂಗನೆ ವಿಳಾಸವತಿ ರಾವಣಂಗೆ ಪಲಕಾಲಂ ಮು ನೈಳಸಿರ್ಪ ಕಾಮಕಾತರೆ ಕೆಳದಿಗೆ ತಿಳಿವಂತು ತನ್ನ ತೆಗಿನ ಪೇಟ್ಟಿ
ಅವಳು ಬಂದು,
ಏವೊಗನತನುವಿದ್ಯಾ ದೇವತೆ ನಿರತಿಶಯಮೆನಿಪ ರೂಪಿಂ ವಿದ್ಯಾ
೫೨೭
ಕನ್ನಡ ಸಾಹಿತ್ಯದ ಚರಿತ್ರೆ
ದೇವತೆ ಸಾಮರ್ಥ್ಯದಿನೆನಿ
ಪಾ ವಧು ಬರೆ ದೇವ ನಿನಗೆ ಶ್ರೀರದುದುಂಟೇ ಎನೆ ದಶಾನನಂ ಪಿಯುಂ ಪಾಪಮುಮಪ್ಪ ದುಶ್ಚರಿತ್ರಮನೇವೆನೆಂದು ಮನದೊಳೆ ನಿಶ್ಚಯಿಸಿ ವಿಭೀಷಣಂಗಪುವುದುಂ, ಆತ ವಿದ್ಯಾಪ್ರಾಕಾರಮಂ ಕಿಡಿಸುವಂತುಟಂ ಪ್ರತಿವಿದ್ಯೆಯನಾಕೆಯಂ ಬರಿಸಿ ಪುಸಿದು ನಂಬಿಸಿ ಕಲ್ಲುಕೊಳ್ಳುದೆನೆ, ರಾವಣಂ...ಆಕೆಯಂ ತಾಯೆಂದು ವಕ್ರೋಕ್ತಿಯಿಂ ನುಡಿವುದು ಆಕೆ ಬಂದು, ಕೋಟೆಯನ್ನು ಗೆದ್ದು, ನಳಕೂಬರನನ್ನು ಸೆರೆಹಿಡಿದು, -ರಾವಣಂ...ರಹಸ್ಯದಿಂದಾಕೆಯಂ ಕರೆದು ನೀನ್ ವಿಶುದ್ದ ಕುಲದೊಳ್ ಪುಟ್ಟಿದುದಂ ನಿಜಕುಲಾಚಾರಮಂ ಬಗೆದು ಶೀಲಪರಿಪಾಲನಂ ಮಾಟ್ಟುದು; ಅಂತಲ್ಲದೆಯುಂ ನೀನೆನಗೆ ವಿದ್ರೋಪದೇಶಂಗೆಯು ದಂ' ಗುರುವಾದೆ; ಪೆಜತೇನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಮಿರೆಂದು, ಆಕೆಯ ದುಷ್ಪರಿಣಾಮಮಂ ಪತ್ತುವಿಡಿಸಿ
ನಳಕೂಬರನುಮನಾಕ್ಷಣ ದೊಳೆ ಬರಿಸಿ ನಿಜಾಗ್ರತನಯನಿಂದಗಿಯಿಂದ ಗೃಳಮೆನೆ ಮನ್ನಿಸಿ ಭಯಮಂ ಕಳೆದಿತ್ತಂ ನೃತ್ಯಪದವಿಯಂ ದಶವದನಂ
(೧೦-೧೮೬ ವ. ೧೯೬) ಈ ರಾವಣಚಕ್ರವರ್ತಿ ರಾಜಕಾರಕುಶಲನೂ ಹೌದು, ಧರಾನುರುಚಿಯೂ ಹೌದು, ಪಾಪಿಗಳಲ್ಲಿ ಅನುಕಂಪೆಯುಳ್ಳವನೂ ಹೌದು.
ಮಹಾಕಾವ್ಯಗಳಲ್ಲಿ ಸಮಯಬಂದಾಗ ಹೀಗೆ ಮಧ್ಯೆ ಉಪಾಖ್ಯಾನರೀತಿಯಲ್ಲಿ ಪೂರ್ವಚರಿತೆಯನ್ನು ತಿಳಿಸುವುದು ಮಹಾಕವಿಗಳ ಕ್ರಮ. ಇಲ್ಲಿ ರಾವಣನ ಮಹಾನುಭಾವತೆ ಎದ್ದು ಕಾಣುವುದು. ಇಂತಹವನೂ ಕರಕ್ಕೆ ಮಾನವೀಯ ನಿಸರ್ಗಪಾಪವಾಸನೆಗೆ-ಹೊರಗಲ್ಲವೆಂಬುದೇ ಸಂಸಾರದ ರುದ್ರ ನಾಟಕದ ಮರ, ಒಳಗೆ ಕರ ವಿಪಾಕ-ಹೊರಗೆ ವಿಧಿವಿಲಾಸ ಈ ಕೂಟ ಹೋರಾಟದಲ್ಲಿ ಉದಾತ್ತನೂ ನೀಚನಾಗಿ “ ಪಾತಕಿ” ಯಾಗುವನು-ಕೆಳಗೆ ಬೀಳುವನು. ಹೊರಗ ನೋಡಿ ಶಪಿಸುವರು ಹಲವರು -ಒಳಗ ನೋಡಿ ಮರುಗುವರು ಕೆಲವರು-ಎರಡನ್ನೂ ಸಮತೂಕ ಮಾಡುವರು ಉದಾರಹೃದಯರೂ, ಪ್ರಾಜ್ಞರೂ ಆದ ಮಹಾಕವಿಗಳು-ಪಂಪ ರನ್ನ ನಾಗಚಂದ್ರನಂತಹವರು. * ಜಾಂಬವನು ರಾವಣನ ಔನ್ನತ್ಯವನ್ನು ಹೀಗೆ ಒತ್ತಿ ಹೇಳುವನು:
ಭರತಖಂಡಮಂ ದಶ ಶಿರನಾಳ್ತಂ ಚಕ್ರರತ್ನಮಸಿರತ್ನಂಗಳ್ ದೊರೆಕೊಂಡುವಖಿಳ ವಿದ್ಯಾ ಧರವಲ್ಲಭರೆಲ್ಲರುಂ ಪದಾನತರಾದರ್
ಆ ಕ್ರೋಧೋದ್ದ ತನಪ್ಪ ರಾವಣನೊಳಾವನ್ ಕಾದುವನ್ ಯುದ್ದದೊಳ್?...ಜಗದ್ವಿದ್ರಾವಣಂ ರಾವಣಂ
(೧೦-೨೨೧೧೨೩೧) ಈ ಮಾತಿಗೆ ಪ್ರತ್ಯುತ್ತರವಾಗಿ ಲಕ್ಷ್ಮಣನು ನಕ್ಕು, ಸೀತೆಯನ್ನು ಕದ್ದಾಗಲೆ ಅವನ ಶೌಯ್ಯ ತಿಳಿಯಿತು, ಎಂದು ಹೇಳಿ ಸಿದ್ಧಶೈಲವನ್ನೆತ್ತುವನು.
(೧-೭ ವ. N೧೪) ಹನ್ನೊಂದನೆಯ ಆಶ್ವಾಸದಲ್ಲಿ ವಿಭೀಷಣನಲ್ಲಿ ಹನುಮಂತನು ಸಂಧಿಗಾಗಿ ಹೋಗುವನು.
ನಯಮಂ ತಮಗಪಿದೊಡ ನೈಯಮಂ ಬಿಡದನ್ನರಿಲ್ಲ, ರಾಗಾದಿಗಳೇಂ ನಿಯತಗಳೆ ಕನ್ನಡಿಯಂ ಪ್ರಯತ್ನದಿಂ ಬೆಳಗೆ ಪತ್ತುವಿಡದೆ ಕಲುಂಬಂ?
(೧-೨)
೫೨೮
ಶ್ರೀ ಸಾಹಿ
ಹನುಮಂತನು “ ಶೌಚದಗ್ಗಳಿಕೆಯಂ ಕೊಂಡಾಡುವೀ ರಾವಣಂ"
ಎಣಿಸದೆ ತನ್ನ ಶೌಚಗುಣಮಂ ತರಕ್ಷಣಮಂ ಪರಾಂಗನಾ ಪ್ರಣಯಮನಪ್ಪುಕಯ್ಯ ಶರಣಾಗತರಕ್ಷಣದಕ್ಷನಪ್ಪ ದ ಕ್ಷಿಣಭರತಖಂಡಧರಣೀಪತಿ, ದಾನವಚಕ್ರವರ್ತಿ, ರಾ ವಣನಿದನಾಗದೆನ್ನದೊಡೆ ನಿನ್ನ ನೆಗಗೆ ಬನ್ನವಾಗದೇ
(೭೮
ಎಂದು ವಿಭೀಷಣನಲ್ಲಿ ಆಕ್ಷೇಪಣೆಮಾಡಲು, ಆತನು,
* ಆಗದಿಂದಾನಿದನಆಪದುದಾಸೀನದಿಂದಿರ್ದೆನೆ?...ಕೇಳನೆ...ಅನ್ನ ತ್ಯಾಗದೊಳೆ ದೆವಿ ಕುಲವ ವ್ರತಮಂ ತನ್ನುನ್ನತಿಯಂ ಕಾದೊಡಮಿನ್ನುಂ ವೈರಾಗ್ಯವಾದುದಿಲ್ಲೆನ್ನಗ್ರಜನೂಳ್...ಮ
ಮಟ್ಟಟ್ಟಿಯಟ್ಟುತಿರ್ದಪನ್ ” ಎಂದು ಶೋಕಿಸುವನು. ರಾವಣನು ಹನುಮಂತನನ್ನು ಗದರಿಸುವನು--ದ್ರೋಹಿ,
ಮಸುಳೆ ನಿಜಾನ್ವವಾಯ ಮಹಿಮೋನ್ನತಿ, ನಾಡೆಮೋಗೆ ಪಾಟಿಯುಂ ಪಸುಗೆಯುಂ, ಎನ್ನ ಮನ್ನಣೆಯನಿಂದಗಿಯೊಳ್ ಸಮಕಕ್ಷನಾಗೆ ರ ಕ್ಷಿಸಿದುದನೇನುಮಂ ಬಗೆಗೆ ತಾರದೆ ಲಜ್ಜೆಯನೊಕ್ಕು ಬಿಟ್ಟು ಮಾ ನಸಿಕೆಯನಿಂತು ಭೂಚರರ್ಗೆ ಖೇಚರ ನೀಂ ಚರನಾಗಿ ಬರ್ಪುದೇ
(೧೩ ಹನುಮನು “ ನೆನೆನುಡಿದು ” ಲಂಕೆಯನ್ನು ಅಗ್ನಿ ವಿದ್ಯೆಯಿಂದ ಸುಟ್ಟು ರಾಮನಿಗೆ ಚೂರಿ ಮಣಿಯನ್ನು ತಂದೊಪ್ಪಿಸುವನು.
(೧೬ ಸೇನೆ ಸೇತುವಿಲ್ಲದೆ ಲಂಕೆಗೆ ದಾಟುವುದು
ಬೆಟ್ಟಮನೊಟ್ಟಿ ಬಟ್ಟೆನಡವಚ್ಚಿಗಮೇವುದೊ ವಾರ್ಧಿಯಂ ಮುಗಿಲ್ ವಟ್ಟೆಯ ಬಟ್ಟೆಯಾಗೆ ನಡೆವಚ್ಚರಿವೆತ್ತು ವಿಯಚ್ಚರಾಧಿಪರ್ ತೊಟ್ಟನೆ ದಾಂಟಿ...
(೧೨-೯೬ ವಿಭೀಷಣನೂ ಅಣ ನಿಗೆ ಸೀತೆಯನು ಕೊಟಟುವುದೆಂದು ಮತ್ತೆ ಬುದ್ದಿ ಹೇಳಿ, ರಾಮನನ ಸೇರುವನು. (೧೨-೫೦ ೮೬ ವ), ಯುದ್ಧ (೧೩), ರಾವಣನ “ ಶಕ್ತಿ “ಯಿಂದ, ಲಕ್ಷ್ಮಣ ಮೂರ್ಛ, ವಿಶಲ್ಯಸೌಂದರಿಯಿಂದ ಪ್ರಾಣವುಳಿಯುವುದು, ಅವಳ ಮದುವೆ (೧೪-
೫೭೬). ಇನ್ನು ರಾವಣನ ಕೊನೆಯ ನೋಟ: ಕವಿಯ ಕಾರುಣ್ಯದ ಮಾಟ: ಕುಂಭಕರ್ಣಾದಿಗ ಸೆರೆಯಾದರು; ಲಕ್ಷಣ ಸಾಯಲಿಲ್ಲ; ಸೀತೆಯನ್ನು ಬಿಡೆಂದು ಮಂತ್ರಿಗಳು ಹೇಳುವರು; ಏನು ಮಾಡ ಎಂದು “ ಮಂತಣಮಿರ್ದು”, ರಾವಣನು ಶಾಂತಿಜಿನಮಂದಿರದಲ್ಲಿ ಬಹುರೂಪಿಣೀ ವಿದ್ಯೆಗಾಗಿ ಜ ಮಾಡುವನು. ರಾಮನರಿಯದಂತೆ ಅಂಗದ ಮೊದಲಾದವರು ಬಂದು ಉಪಸರ್ಗಮಾಡುವರ ರಾವಣನು “ ಧ್ರುವಮಂಡಲದಂತೆ ಚಲಿಯಿಸದೆ ಚಿತ್ತನಿರೋಧಂ ಗೆಯ್ದು ದಿವ್ಯಮಂತ್ರದಿಂ ವಿದ್ಯಯ ಸಾಧಿಸಿ "- ಜಾನಕಿಯನ್ನು ಗಂಡಗಾಡಿಯಿಂದ ಬಂದು ಕಾಣುವನು.
ರಾವಣನ ರೂಪು ಸೀತಾ ದೇವಿಗೆ ತೃಣಕಲ್ಪಮಾಯು ಪತಿಭಕ್ತಿಯೋಳಾ ರೀ ವನಿತೆಯ ತೆರಿದಿಂ ಸ ದ್ಯಾವಮನೊಳಕೊಂಡ ಪುಣ್ಯವತಿಯರ್ ಸತಿಯರ್! ಏನು ಕೇಳ್ಪೆನೋ ರಘು ಸೂನುವ ಲಕ್ಷಣನ ಪೊಲ್ಲವಾರ್ತೆಯನಿನ್ನಂ
ನ್ನಡ ಸಾಹಿತ್ಯದ ಚರಿತ್ರೆ
ದಾ ನಳಿನಾನನೆ ಬರ್ಪ ದ
ಶಾನನನಂ ಕಂಡು ತಾಳಿದಳ್ ತಲ್ಲಮಂ ಅಂತು ತಲ್ಲಣಿಸುತಿರ್ದ ಮಾನಿನಿಯನೆಮ್ಮೆ ವಂದು, ಬಹುರೂಪಿಣಿವಿದ್ಯೆ ಸಾಧಿತವಾದುದು ; ನನಗಸಾಧ್ಯಮಪ್ಪ ಮದುವಕ್ಕಮಿಲ್ಲ; ನಿನ್ನ ನೆಚ್ಚಿನ ರಾಮನಾಸೆಯಂ ಬಿಟ್ಟು, ಎನಗೊಡಂಬಟ್ಟು, ಇಮ್ರಾಜ್ಯಸುಖಮನನುಭವಿಸೆನೆ, ಸೀತೆ ವಿಹ್ವಲೀಭೂತಚಿತ್ತೆಯಾಗಿ
ಕರುಣಿಸುವೊಡೆನಗೆ ದಶ ಕಂಧರ, ಧುರದೊಳ್ ರಘುತನೂಜನಾಯುಃಪ್ರಾಣಂ ಬರೆಗ ಬಾರದಿರೆನುತುಂ, ಧರಿತ್ರಿಯೊಳ್ ಮೆಯ್ಯನೊಕ್ಕು ಮೂರ್ಛಗೆ ಸಂದಭ್ ಜಾನಕಿ ಮೂರ್ಛಿತೆಯಾಗೆ ದ ಶಾನನನನುಕಂಪ ಪುಟ್ಟೆ ಕರುಣಿಸಿ, ತನ್ನಂ ತಾನೆ ಪದುದು ಕರ್ಮಾ ಧೀನ ಸಮುತ್ಪನ್ನ ದುರಘದುಷ್ಪರಿಣತಿಯಂ ಕದಡಿದ ಸಲಿಲಂ ತಿಳಿವಂ
ದದೆ ತನ್ನಿ೦ ತಾನೆ ತಿಳಿದ ದಶವದನಂಗಾ ದುದು ವೈರಾಗ್ಯಂ ಸೀತೆಯೋ ತುದಾತ್ರನೊಳ್ ಪುಟ್ಟದ ನೀರಾಗಂ
ಪತ್ತುವಿಡದಿರ್ದನೇ ರವಿ ಪದ ಸಂಧ್ಯಾನುರಾಗಮಂ ಮನದಳಿಪಿಂ
ದೆತಾನುಂ ಪೊಲ್ಲೆನಿಪುದ ಸುತ್ತಮನಾಚರಿಸಿ ಪತ್ತುವಿಡದಿರ್ದಪನೇ!
ಅಂತು ಮನದೊಳೊಗೆದ ಕಾರುಣ್ಯರಸಮೆ ಸೀತೆಯೊಳಾದನುರಕ್ತತೆಯಂ ಕರ್ಚಿ ಕಳವುದುಂ ಭಾವಪರಿಣತಿಯೊಳ್ ನಿಂದು ಸ್ವಕೀಯಾಪ್ತಪುರುಷಪರಿಷಜ್ಜನಕ್ಕಿಂತೆಂದಂ
ಗುಣಪರಿಪಾಲನಾರ್ಥಮೆನಗಂ ಬಗೆದೊಯ್ದಳಿಲ್ಲ ದಿವ್ಯಭೂ ಷಣವಸನಾಂಗರಾಗಮುಮನೊಲ್ಲದೆ ಖೇಚರರಾಜ್ಯಲಕ್ಸಿಯಂ ತೃಣಸಮನಾಗೆ ಭಾವಿಸಿದಳೀ ಸತಿಯುಂ ಮೊದಲಾಗಿ ಪೌರುಷ ಪ್ರಣಯಿಯೆನಿಂತಪೇಕ್ಷಿಸುವೆನೇ ಗುಣಹಾನಿಯನೆನ್ನ ಪಾಪದಿಂ
ಇವರಂ ಪ್ರಾಣಪ್ರಿಯರಂ ನೆವಮಿಲ್ಲದೆ ಕರ್ಮವಶಮೆ ನೆವಮೆನೆ ಕಂದ ರ್ಪವಿಮೋಹದಿಂದಗಲ್ಲಿದೆ ನವಿವೇಕಿಯೆನೆನ್ನ ಕುಲದ ಪೆಂಪುವಿನೆಗಂ ರಾಮನಿನಗಲ್ಲಿ ತಂದಾ ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆ ಕಾಮವ್ಯಾಮೋಹದಿನಾ ಶಾಮುಖಮಂ ಪುದಿಯೆ ದುರ್ಯಶಃಪಟಹರವು
ಎನಗೆ ವಿಭೀಷಣಂ ಹಿತದಿನಾದರದಿಂದ ಪೇಟೆ ಕೇಳದಾ ತನನವಿನೀತನೆನ್ ಗಜ ಗರ್ಜಿಸಿ ಬಯ್ದನುಜಾತನಂ ವಿನೀ ತನನಳೆಯಟ್ಟಿ ದುರ್ವ್ಯಸನಿಯನ್ ಕಚಿದೆಂ ವ್ಯಸನಾಭಿಭೂತನಾ ವನುಮನುರಾಗವೇಗದ ಹಿತಾಹಿತಚಿಂತೆಯನೇಕೆ ಮಾಡುಗುಂ ಜಸದವ ಪರಾಭವದ ಪತ್ತುಗೆಯಂ ದೊರೆವೆತ್ತ ತಮ್ಮ ಮಾ ನಸಿಕೆಯ ಕೇಡನುನ್ನತಿಯ ಬನ್ನಮನನ್ಯಭವಾನುಬದ್ದಮ ಪ್ರ ಸುಗತಿಯಂ ಸುಕೃಜ್ಞನದ ಬೇವಸಮಂ ಜನತಾಪವಾದಮಂ ವ್ಯಸನಿಗಳಾರುಮೆತ್ತಲಾವರ್ ವಿಷಯಾಸವಮತ್ತಚೇತಸರ್
ಎಂದುದ್ವೇಗಪರನಾಗಿ ನುಡಿದು, ಆತ್ಮಗತದೊಳಿಂತೆಂದಂ
ಇರದುಗಳೆ ಕೊಟ್ರೊಡೆನ್ನ ಕಡುಪುಂ ಕಟ್ಟಾಯಮುಂ ಬೀರಮುಖ ಬಿರುದುಂ ಬೀಸರಮಕ್ಕುಮೊಸರಿಸಿದಂತಾಗಿರ್ಕು, ಅಂತಾಗದಂ ತಿರೆ ದೋರ್ಗವ್ರಮನಿರ್ವಲಂ ಪೊಗನಂ ಸೌಮಿತ್ರಿಯಂ ರಾಮನಂ ವಿರಥರ್‌ಮಾಡಿ ರಣಾಗ್ರದೊಳ್ ಪಿಡಿದುತಂದಾನ್ ಕೊಟ್ಟಪಂ ಸೀತೆಯಂ
ಎಂದು ನಿಶ್ಚಯಿಸಿ ನಿಜನಿವಾಸಕ್ಕೆ ವಂದಂ.
(೧೪-೧೭ ೧೧ ಇಂಥ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಅಪೂರ್ವ, ಪದ, ಅರ್ಥ, ಭಾವ, ರಸ, ಮನುಃ ಹೃದಯಜ್ಞಾನ, ಔದಾರ, ಸೀತೆಯ ರಾವಣನ ಉದಾತ್ತ ಚಿತ್ರ-ಎಲ್ಲಕ್ಕೂ ಮೇಲೆ ಧರದೃತಿ ಒಂದು ನುಡಿ ಬಿಡದ ಹಾಗೆ, ಒಂದು ನುಡಿ ಸೇರಿಸಿದ ಹಾಗೆ ಕನ್ನಡದ ಸಂಸ್ಕೃತದ ಶಬ್ದ ವಿನ್ಯಾಸ, ಸರ' ಗಂಭೀರ, ನಾಟಕೀಯಶೈಲಿ, ವೃತ್ತ ಕಂದ ವಚನಗಳ ಸಮಕಟ್ಟು! ಎಲ್ಲಾ ಹದಿಮೂರೇ ಪದ್ಯ! ನವ ಕವಿಗಳು ಸಾಮಾನ್ಯವಾಗಿ ಉತ್ತಮ ಕವಿಗಳು ಕೂಡ ಕಯ್ಯಂದ ಬಿತ್ತು, ಚೀಲವೆಲ್ಲಾ ಬಿತ್ತಬೇಡ ಎಂಬ ಗ್ರೀಕ್ ಬುದ್ದಿವಾದವನ್ನು ಮರೆಯುತ್ತಾರೆ. ಒಳಕಟ್ಟು, ಕಟ್ಟಡ, ಭಾವ ಚೆನ್ನಾಗಿಯೇ ಇರುತ್ತ
ಆದರೆ ಕಾಡಿನೊಳಗಣ ಗುಪ್ತಗಾಮಿನಿಯಂತೆ, ತೆರೆದು, ಸೋಸಿ, ಸಂಗ್ರಹಿಸಬೇಕಾಗುತ್ತದೆ. ಇಂತ ಕಾವ್ಯಸ್ಥಾನಗಳಲ್ಲಿ ನಮ್ಮವರು ಯಾರಿಗೂ ಕಡಮೆಯಲ್ಲ: ಇಂತಹ ಕಾವ್ಯಘಟ್ಟಿಗಳೇ ನಮಗೆ ಹೆರ ಗೌರವವನ್ನು ತರತಕ್ಕುವು: ಉತ್ತಮ ಕವಿಗಳಲ್ಲಿ ಕೂಡ ಇರುವ ಚರ್ವಿತಚರ್ವಣಗಳಲ್ಲ, ಶಬ್ದ ಜಾಲವ ಅತಿಯಾದ ಉಕ್ಕಿ ಚಮತ್ಕಾರಗಳಲ್ಲ; ಸಂಪ್ರದಾಯದ ಸಂಕೋಲೆಗಳಲ್ಲ: ಅಗ್ಗದ ನೀತಿಯಲ್ಲ; ಇ ಅವರು ಕಾಲಧರ್ಮವನ್ನನುಸರಿಸುತ್ತಾರೆ: ಕಾವ್ಯಸನಾತನಧರ್ಮವನ್ನಲ್ಲ.
ಈಗ ರಾವಣನಿಗೆ ಒಂದೇ ಧೈಯ್ಯ.-ಹಿಂದೊಮ್ಮೆ ಹೇಳಿದಂತೆ,
ಇಂದ್ರನುಮಂ ಗೆಲ್ಲೆನ್ನನು ಪೇಂದ್ರಂ ಗೆಲ್ಲಪನೆ ಗೆಲ್ಗೊಡಂ ಜೀವನಮಾ ಚಂದ್ರಾರ್ಕಮೆ ವಿಶದಯಶ ಶೃಂದ್ರಿಕೆಗೆ ಕಳಂಕವಾಗದಂತಿರೆ ನೆಗಳ್ವೆಂ
(೧೪-೭
ದುಶಕುನಗಳಿಗೆ ಅಳುಕದೆ, ರಾವಣಕೊಟಿಯಾಗಿ ಕಾದಿ, ಲಕ್ಷ್ಮಣನನ್ನಿಟ್ಟ ಚಕ್ರ ಅವನಿಂದಲೇ ಎಸೆದ ತಿರುಗಿ ಬಂದು ಹೊಡೆಯುವುದು- ಕೈಲಾಸಮಂ ತೂಗಿದ ಗಂಡ ” ನನ್ನು “ ಕೋಟಿಕಶಿಲೆಯನೆತ್ತಿ ಮಹಾಸತ್ವಂ ಸುದರ್ಶನಚಕ್ರದಿಂದಿಡುವುದುಂ "
ಹೃದಯಂ ಸೀತಾನಿಮಿತ್ತಂ ಮನಸಿಜನಿಸೆ ಪಂಚೇಷುಮಿಂ ಭಿನ್ನವಾಗಿ ರ್ದುದಂ ಲಕ್ಷ್ಮೀಧರಂ ಕೋಪದಿನಿ ಪೆಜತೇನ್ ಚಕ್ರರತ್ನಕ್ಕೆ ಪಾಡಾ
೩೧
ಡ ಸಾಹಿತ್ಯದ ಚರಿತ್ರೆ
ದುದೆನಲ್ ನಟ್ಟುರ್ಚೆ ಬೆನ್ನಿಂ ಪೊಜಮಡೆ ವಿಗತಪ್ರಾಣನಾ ದಾನವೇಂದ್ರಂ ತ್ರಿದಶೇಂದ್ರಂ ವಜ್ರದಿಂದಿಳ್ಕೊಡೆ ನಡುಗೆ ನೆಲಂ ಬೆಟ್ಟು ಬೀಳ್ವಿಂತೆ ಬಿಚ್ಚಿಂ
(೧೪-೧೮೮ ೮೯) ಇಲ್ಲಿ ಮಹಾಕಾವ್ಯದ ತೆರೆಯನ್ನು ಬಿಡಬಹುದು. ಬಳಿಕ ಪುರಾಣ, ಮಂಗಳ ಆಗುತ್ತದೆ. ಅಳುವ ತಃಪುರಕ್ಕೆ, ವಿಭೀಷಣನಿಗೆ “ ರಾಮಸ್ವಾಮಿ ಕರುಣಿಸಿ ರಾವಣಂಗೀ ಮರಣಮೀತನ ದುರ್ವ್ಯಸನ ದಾದುದಲ್ಲದೆಮ್ಮಿಂದಾದುದು, ಆರ್ಗಾದೊಡಂ ಸಂಸಾರಸ್ವರೂಪಮಿಂತುಟೆ ವಲಂ” ಮುಂತಾದ ತಿ, “ಸಂಸಾರ ಸುಖಂ ಸಾಲ್ಕು ಮೆಂದು ಭೋಗನಿರ್ವಗಪರರಾಗಿ” ಮಂಡೋದರಿ ಕುಂಭಕರ್ಣಾದಿ ಶು ದೀಕ್ಷೆಗೊಳ್ಳುವುದು (೧೪-೨೨೧೨೬), ಸೀತೆ ರಾಮರ ಆನಂದ, ಸೀತಾವನವಾಸ, ದೀಕ್ಷೆ ;
“ ಕ್ಷಮಿಯಿಸುವುದೆನಗೆ ನೀನ್ ಮು
ಮಿರ್ದ ತೇಜದಿ ಮದೀಯವಲ್ಲಭೆಯಾಗಿ ರ್ದಮೃತಾಂಶುವದನೆ ಸಾಮಾ "ಮಹಿಮೆಯೋಳ್ ನೆರೆದು ಪಡೆಯ ಸುಖಸಂಪದಮಂ
ದು ನುಡಿಯೆ ಸೀತಾದೇವಿ ರಾಮಸ್ವಾಮಿಗಿಂತೆಂದಳ್-ಎನ್ನ ಮುನ್ನು ಪಾರ್ಜಿಸಿದ ಕರ್ಮಮೆನಗೆ ದಪ್ಪ ದುಃಖಮಂ ಮಾಡಿದೊಡಾ ಕರ್ಮಕ್ಕೆ ಮುಳಿವೆನಲ್ಲದುಳಿದವರ್ಗೆಕೆ ಮುಳಿವೆಂ ಕೇಡು ಸಾರದೊಳಪ್ಪುದೇಂ ಕೇಡಿಲ್ಲದ ಮೋಕ್ಷಸುಖಕ್ಕೆ ಕಾರಣಮಪ್ಪ ತಪಮಂ ಕೈಕೊಳ್ವೆನೆಂದು ತನ್ನ ಸಹಸ್ರ ತಲ ಪಜಲಿ "ವಳು.
- (೧೬-೩೩ ವ.) * ಶೌಚಾಚಾರ ಪರಾಯಣನಪ್ಪ ರಾವಣನಾವ ಪಾಪಂಗೆಯ್ದನಾಗಿ ಸೀತಾದೇವಿಗೆ ಮರುಳೊಂಡು ದಂ” ಮುಂತಾದ ಪ್ರಶ್ನೆಗಳಿಗೆ ಭವಾವಳಿಗಳು; ದೇವತೆಗಳ ಮಾಯದಿಂದ ಕಡೆಗೆ ಲಕ್ಷಣನ ವು: ರಾಮನ ಪ್ರೇಮದ ವಿಚ್ಛೇದನಕ್ಕಾಗಿ ಇದೂ ಒಂದು ಸಂಸಾರಕರಬಂಧವಲ್ಲವೆ? (• that st infirmity of noble minds” ?)-ಅವನ ಶವವನ್ನು ಹೊತ್ತುಕೊಂಡು ತಿರುಗುತ್ತಿರಲು,
ಬಗೆಗಿಡಿ ಮೋಹನೀಯಂ ನಗಧರಶವಧಾರಿಯಾಗೆ ಷಣ್ಮಾಸಮಂ ನೆಗುದೊ ಸಲೆ ಬಲದೇವನ | ಪೆಗಲ ಪೆಣಂ ಕುಂದದೆಂದು ನಾಲ್ಕು ಡಿ ಜಗದೊಳ್
(೧೬-೫೩) ವೈಕಲ್ಯವೂ ಕಳೆದು-ವೈರಾಗ್ಯ, ತಪಸ್ಸು, ಮೋಕ್ಷ:
ಎನ್ನು ಮನಾನಜ್ಯದೆ ಚಿಃ ಬನ್ನಕ್ಕೊಳಗಾದೆನೆಂದು ರಘುಕುಲತಿಲಕಂ ತನ್ನಂ ತಾನದೊಡಲಂ
ತನ್ನಿಂ ಬೇರ್ಪಡಿಸಲಾದಮುತ್ಸುಕನಾದಂ ಸತತಂ ಪೂಜಿಸೆ ದೇವಮರ್ತ್ಯಖಚರಕ್ಷಾಪಾಲಕರ್ ಪಂಚವಿಂ ಶತಿಸಂವತ್ಸರಮಿಂತೆ ಪೂಜೆವಡೆಯುತ್ತುಂ ಭವ್ಯಸಸ್ಯಕ್ಕೆ ನಿ ರ್ವೃತಿಧರ್ಮಾಮೃತವೃಷ್ಟಿಯಂ ಕಳೆಯುತುಂ ನಿರ್ಭಾಧಬೋಧಂ ಯಶೋ ಲತೆಯಿಂ ಮುದ್ರಿಸಿದಂ ಜಗತ್ ತ್ರಿತಯಮಂ ಶ್ರೀರಾಮಭಟ್ಟಾರಕಂ ಕಿಡೆ ನಿಶ್ಚಿಷಮಘಾತಿ ಪಜ್ಜಳಿಗೆ ತನ್ನೆಂಟುಂ ಗುಣಂ ಕೂಡೆ ನೇ ರ್ಪಡೆ ದೀಪಾರ್ಚಿಗಳಂತಿರೂರ್ಧ್ವಗತಿ ಮೂಲಂ ಲೋಕದಿಂ ಮೇಲೆ ಬೆ ಳ್ಕೊಡೆಯಿರ್ಪಂತವೊಲಿರ್ದ ಸಿದ್ದನಿಲಯಕ್ಕಾನಂದದಿಂ ಪೋಗಿ ಕೈ
ವಿಡಿದಂ ಶಾಶ್ವತಮಪ್ಪ ಮುಕ್ತಿವಧುವಂ ಶ್ರೀರಾಮಭಟ್ಟಾರಕಂ (೧೬-೫೮, ೭೭, ೮೨)
======================

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ