ಹೂ
ತಾರೆಯ ಬಳಗದ ತಾಳದ ಕುಣಿತ! ಕುಂದಗೋಳದಾ ಕೆಳೆಯರ ಕುಣಿತ!
ಆಟ-ಪಾಟ ನೋಟ-ಮಾಟ!
ಚಿಮ್ಮು ಜವ್ವನದ ಹಮ್ಮಿನ ಕುಣಿತ, ಅಮ್ಮನ ಭಕ್ತಿಯ ಶಕ್ತಿಯ ಕುಣಿತ,
ಬಾ, ಓ ಜೀವಾ
ಕೈ ಕೈ ಕೊವಾ ನಾವೂ ಕೋವಾ, ಮಣಿವ, ಕುಣಿವ: ಮಿಡಿಯಿಸು, ನುಡಿಯಿಸು, ನುಡಿಯದೆ ಮಡಿವೆ, ಕೊರಳನು ತೆರೆಯಿಸು, ಕೂಗುವ, ನುಡಿವೆ,
ಬನ್ನಿ, ಬನ್ನಿ, ನಾವೇ ನಾಡು, ನಾಡೇ ನಾವು, ಬನ್ನಿ, ಬನ್ನಿ,
ಕಾಣಿಕೆ ತನ್ನಿ, ಕುಂದಗೋಳದಾ ತಾರೆಗಳೆಡೆಗೆ, ಸುಂದದ ಕುಚ್ಚಿನ ಹೂವಿನ ಹೊಡೆಗೆ, ಗಂಡೈರ್, ಎಂಗೊರ್ ಒನ್ನಳ್ಳೆಡೆಗೆ, ಒಲವಿನ ಹುಚ್ಚಿನ ಶಾಂತಿಯ ನಡೆಗೆ, ನಚ್ಚಿನ ನಾಡಿನ ಬಿಡುಗಡೆ ಕಡೆಗೆ, ಅಮ್ಮನಡಿಗಳಾ ಮುಡುಪಿನ ಕೊಡೆಗೆ, ಕನ್ನಡ ಕವಿಗಳ ಚಿನ್ನದ ಮುಡಿಗೆ, ಅರೆ ಗುಲಾಬಿಯಾ ಬಿರಿಹೂ ಮುಡಿಗೆ,
ಕನ್ನಡ ನುಡಿಗೆ, ಮಿಡಿಗೆ, ಕಿಡಿಗೆ, ನೆಗೆ ಓ ಜೀವಾ,
ಓ ನನ್ನ ಜೀವಾ, ಕುಂದಗೋಳದಾ ಕಂದರ ಒಳಿಗೆ,
ಆನಂದ ವೆಳ್ಳದ ಸುತ್ತುವ ಸುಳಿಗೆ, ಅಮ್ಮನ ಭಕ್ತಿಯ ಭಜನೆಯ ಕೂಟಕೆ, ಅಮ್ಮನ ಹರಕೆಯ ಜಾತ್ರೆಯ ಹೂಟಕೆ,
ನಡೆ ಎಲೆ ಜೀವಾ, ನೆಗೆ ಎಲೆ ಜೀವಾ,
೫೮೪
ಶ್ರೀ ಸಾಹಿತ್ಯ
ಕೈ ಕೈ ಕೋದು,
ಕನ್ನಡ ಕಾದು, ಕನ್ನಡ ತಾಯಿಯ ಬನ್ನವ ತೀದು. ಕುಂದಗೋಳದಲಿ ಜಯ, ಜಯ, ಜೀವಾ!
[ಕುಂದಗೋಳದ ತಾರೆಯ ಬಳಗದವರು ಪ್ರಕಟಿಸಿದ ಹೂ' ಕವನ ಸಂಕಲನದ ಮುನ್ನುಡಿ; ೧೯೩೭]
( ಮೊಗ್ಗಿನ ಮಾಲೆ )
ನಿಮ್ಮ ಈ ಇನ್ನುಡಿಗೆ ಕೇಳುವಿರಿ ನನ್ನ
ಮುನ್ನುಡಿಯ, ಕೆಳೆಯರೇ, ನುಡಿವನೇನನ್ನ? ನಿನ್ನೊಲುಮ ಸವಿನೆನಪನಲ್ಲದೇನನ್ನ?
ನಲವಿನಲಿ ನಾಡಹಬ್ಬಕೆ ಕರೆದಿರೆನ್ನ,
ಒಲವಿನಲಿ ಕನ್ನಡದ ಕರುಳೆಂದಿರೆನ್ನ, ಮಚ್ಚಿತ್ತು ಗೆಲವೆರೆದು ಕಳುಹಿದಿರಿ ಮುನ್ನ, ನಾ ನಿಮ್ಮ ನಂಟನಾದೆನು, ನಿಮ್ಮ ಬಂಟ ತಾಯ ಮರಸುತ ಬಹವು, ಬನ್ನಿ ದೆಸೆಯಂಟ, ಬಂಟನಾಗೊಬ್ಬ ಬರೆ ಮತ್ತೊಬ್ಬ ನಟ.
ಹಿರಿಯ ಪರಿಸಯ ಕೂಡಿ, ಕನ್ನಡದ ನುಡಿಯ, ಕನ್ನಡಿಗತನವೆಂಬ ಬಾವುಟದ ಕುಡಿಯ,
ಕಟ್ಟಿದಿರಿ, ತಾಯಿಗಿಟ್ಟಿರಿ ಹೊನ್ನ ಮುಡಿಯ. ಮನಸು ನಿಲಲಾರದಯ ನಾನೋಡಿ ಬಂದೆ : ಮೊಗ್ಗು ಮಾಲೆಯನಲ್ಲಿ ನಾ ನೋಡಿ ಬಂದೆ,
ಪರಿಸರದ ಬೆಳಗಿದಿರಿ, ಕಂಡು ನಾನಂದ
ಈ ನಾಡು ಕನ್ನಡದ ಹೊಳೆಗೆ ತಲೆ ಮೂಡು, ಕಾಸಿ ಕನ್ನಡಿಗನಿಗೆ, ಹಿರಿಯರಾ ಬೀಡು :
ಅವರ ಬೀಜವ ನೆಲದಿ ಮರಸಿತ್ತು ಸೂಡು ಮಳೆಯಾಯ್ತು ಅವರ ತೇಜವ, ಮತ್ತೆ ನೋಡು. ನೆಲವ ಬಿರಿಯುತ ಮೊಳೆತು ಮೊಗ್ಗೆ ಹೂ ಬೀಡು! ಅರಳಿದರು, ಎಚ್ಚರದೂ ಬೆಳ್ಳಿ ಮೂಡು !
ಮುನ್ನುಡಿಯ ಕೇಳುವಿರಿ, ಕೆಳೆಯರೇ, ನನ್ನ ; ಇನ್ನುಡಿಯ ಹಾಡಿಹಿರಿ, ಕೂಡಿಸಿರಿ, ಮುನ್ನ,
ಸವಿನೆನಪನಲ್ಲದೇ ನುಡಿವನೇನನ್ನ ? [ಹೈದರಾಬಾದಿನ ತರುಣ ತಂಡದವರು ಪ್ರಕಟಿಸಿದ 'ಮೊಗ್ಗಿನಮಾಲೆ' ಕವನ ಸಂಕಲನದ
ಮುನ್ನುಡಿ ;೧೯೩೭
೫೮೫
ಹೆಚ್ಚಿನ ಬರಹಗಳು
ಕನ್ನಡ ರಾಮಾಶ್ವಮೇಧ
ಸಂಸ್ಕೃತವನ್ನು ತಿಳಿಯದೆಯೇ ಕನ್ನಡದಲ್ಲಿ ಪಾಂಡಿತ್ಯವನ್ನು ಹೊಂದಿ ಕನ್ನಡ ಕಾವ್ಯಗಳನ್ನು ಬರೆಯ ಬಹುದೆಂದು ಹಿಂದಿನ ಕವಿಗಳು ಬಗೆದಂತೆ ಕಾಣಬರುವುದಿಲ್ಲ. ಉತ್ತಮ ಗ್ರಂಥಗಳೆಂದು ಹೆಸರು ಪಡೆದುವುಗಳಲ್ಲಿ ಯಾವುದನ್ನು ತೆಗೆದರೂ, ಒಡನೆಯೆ ಸಂಸ್ಕೃತ ಶೈಲಿ ಮತ್ತು ಸಂಸ್ಕೃತ ಪದಗಳ ಅಬ್ಬರವೇ ಹೊರತು ನಮ್ಮ ಕನ್ನಡವನ್ನು ಕಾಣಬೇಕಾದರೆ, ಮರಳಿನಲ್ಲಿ ಚಿನ್ನದ ಅದಿರುಗಳನ್ನು ಹುಡುಕ ಬೇಕಾಗುವುದು. ಕನ್ನಡದಲ್ಲಿ ಅಕ್ಕರೆಯುಳ್ಳವರಿಗೆ ಇದು ರುಚಿಸುವುದಿಲ್ಲ. ಕನ್ನಡ ಗ್ರಂಥವೆಂದು ಕರೆಯುವುದೇಕೆ? ಸಂಸ್ಕೃತ ಗ್ರಂಥದಲ್ಲಿ ಪ್ರಮಾದದಿಂದ ಕನ್ನಡವು ಸೇರಿಕೊಂಡಂತೆ ಬರೆಯುವುದೇಕೆ? ನಾಗಚಂದ್ರ, ಆಂಡಯ್ಯ, ಸಿಂಗರಾಯ್ಯ ಮೊದಲಾದ ಕೆಲವರು ಕನ್ನಡವನ್ನೇ ಮುಂದಿಟ್ಟು, ಸಂಸ್ಕೃತವನ್ನು ಬಿಟ್ಟಾಗಲಿ, ಕೊಂಚ ಕೊಂಚ ಬೆರಸಿಯಾಗಲಿ ಬರೆದಿರುವುದನ್ನು ನೋಡಿದರೆ ಆನಂದವಾಗುವುದು. ಅಗ್ಗಳ, ಷಡಕ್ಷರಿ, ರುದ್ರಭಟ್ಟ ಮೊದಲಾದ ಹಲವರ ಸಂಸ್ಕೃತದ ಅಬ್ಬರದಿಂದ ಬಂದ ತಲೆನೋವು, ಕನ್ನಡದಿಂದ ತುಂಬಿ ತುಳುಕುವ ಶ್ರೀರಾಮಾಶ್ವಮೇಧ 'ದಂತಹ ಗ್ರಂಥವನ್ನು ಓದುವುದರಿಂದ ಯಾರಿಗೆ ತಾನೆ ಹೋಗದಿರುವುದು?
“ಶ್ರೀರಾಮಾಶ್ವಮೇಧ'ವನ್ನು ಬರೆದ ಮುದ್ದಣನನ್ನು ಕುರಿತು ಹೆಚ್ಚಾಗಿ ಏನೂ ತಿಳಿದು ಬಂದಿಲ್ಲ. ಹದಿನೇಳನೆಯ ಶತಮಾನದಲ್ಲಿದ್ದ ತಿರುಮಲಾರ್ ಸಿಂಗರಾರರಿಗಿಂತ ಈಚಿನವನೆಂದು ನಮಗೆ ತೋರು ವುದು. ಅದು ಹೇಗೆ ಆದರೂ ಆಗಲಿ, ಈತನು ಕನ್ನಡದಲ್ಲಿ ಹೆಚ್ಚಾಗಿ ಅಕ್ಕರೆಯುಳ್ಳವನೆಂದು ತೋರಿಸು ವುದು ನಮ್ಮ ಕೆಲಸ, ತನ್ನ ಕಥೆಯನ್ನು ಹೆಂಡತಿಗೆ ಹೇಳತೊಡಗಿ ಹೀಗೆ ಮೊದಲು ಮಾಡಿರುವನು:
ಮುದ್ದಣ : ಆಲಿಸು ಸ್ವಸ್ತಿ ಶ್ರೀಮತ್ಸುರಾಸುರೇಂದ್ರನರೇಂದ್ರಮುನೀಂದ್ರಫಣೀಂದ್ರಮಣಿ ಮಕುಟತಟಘಟಿತ
ಮನೋರಮೆ: ಓ ಓ! ತಡೆ! ತಡೆ!...ಲೇಸು, ಲೇಸು! ನೀರೀಲಿಯದ ಗಂಟಲೊಳ್ ಕಡುಬು ತುಣುಕಿದಂತಾಯ್ತು: ಕನ್ನಡದ ಸೊಗಸನಜಿಯಲಾರ್ತೆನಿಲ್ಲೆನಗೆ ಸಕ್ಕದದ ಸೊಗಸು ಪೇಳ್ವುದು ಗಡ! ಮುದ್ದಣಂ : ಅಷ್ಟೊಡಿನ್ನೆಂತೊ ಒರೆವೆಂ? ಮನೋರಮೆ: ತಿರುಳನ್ನಡದ ಬೆನ್ನುಡಿಯೊಳೆ ಪುರುಳೊಂದೆ ಪೇಳ್ವುದು. ಕನ್ನಡಂ ಕತ್ತುರಿ
ಯಿ ! ಮುದ್ದಣ: ಅಪ್ಪುದಪ್ಪುದು. ಆದೋಡ ಸಕ್ಕದಮೊದೆ, ರನ್ನ ವಣಿಯ೦ ಪೊನ್ನಿಂ ಬಿಗಿದಂತೆಸೆಗುಂ; ಅದಜಿಂ...ಎಡೆಯೆಡೆಯೊಳ್ ಸಕ್ಕದದ ನುಡಿ ಮೆಜಿಲೆಯೆ.
ತಿರುಳನ್ನಡದೊಳೆ ಕತೆಯನುಸಿರ್ವೆಂ. ನಮ್ಮ ಕನ್ನಡದ ಏಳಿಗೆಗಾಗಿ ಎಷ್ಟೋ ತೊಂದರೆಗೊಂಡಿರುವ ಮೆ|| ರೈಸ್ ಸಾಹೇಬರವರು 'ಪದ್ಯಸಾರ'ದ ಪೀಠಿಕೆಯಲ್ಲಿ, ಕನ್ನಡಿಗರು ತಿರುಳುಳ್ಳ ಇಂಪಾದ ತಮ್ಮ ತಾಯುಡಿಯಲ್ಲಿ ಬರೆದರೆ ಲೇಸೆಂದು ಹೇಳುವು. ಕನ್ನಡಿಗರಲ್ಲದ ಇವರೇ ಹೀಗೆ ಹೇಳುವಾಗ ನಮ್ಮ ತಾಯ್ತುಡಿಯನ್ನು ನಾವು ಮುಂದಕ್ಕೆ ತರಬೇಡವೆ? ಸಂಸ್ಕೃತವನ್ನು ಬಿಟ್ಟೇಬಿಡಬೇಕೆಂದು ನಾವು ಹೇಳುವುದಿಲ್ಲ; ಹಾಗೆ ಹೇಳಿದ್ದಲ್ಲಿ ತುಪ್ಪವಿಲ್ಲದೆ ಊಟ ಮಾಡು ಎಂದಂತಾಗುವುದು. ಬರಿಯ ತುಪ್ಪವನ್ನೇ ತಿಂದು, ಟವಾಯ್ಕೆಂದು ಹೇಳಲೂ ಆಗುವುದಿಲ್ಲ. ಕನ್ನಡದ ಮಾತು ದೊರೆಯದಲ್ಲಿ, ಬಿಗಿಯನ್ನು ತಪ್ಪಿಸಬೇಕಾದಲ್ಲಿ, ಇಂಪನ್ನು ಹೆಚ್ಚಿಸುವಲ್ಲಿ, ಎಂತೂ ಆವಶ್ಯಕತೆ ಇದ್ದಲ್ಲಿ, ಸಂಸ್ಕೃತವನ್ನು ಬೆರಸಬೇಕೇ ಹೊರತು ಮನಸ್ಸಿಗೆ ಬಂದಂತೆ ಬೆರಸುವುದು ಸರಿಯೇ? ಕೆಲವರು ಶಬ್ದಾಲಂಕಾರ, ಅರ್ಥಾಲಂಕಾರಗಳನ್ನು ತರುವುದಕ್ಕೆ ಸಂಸ್ಕೃತವನ್ನು ಬರೆದೇ ತೀರಬೇಕೆಂದು ಹೇಳುವರು. ಕನ್ನಡದಲ್ಲಿ ಇದ್ದಮಟ್ಟಿಗೆ ಇವುಗಳನ್ನು ತಂದೇ ತರಬಹುದು;
೫೮
ಶ್ರೀ ಸಾವಿ
ಕೆಲವರು ತಂದೂ ಇರುವರು; ಮುದ್ದಣನೇ ಹಲವೆಡೆ ತಂದಿರುವನು. ಆದರೆ ಶಬ್ದಾಲಂಕಾರವು ಭೂಪ ವೆಂದು ನಮಗೆ ತೋರುವುದಿಲ್ಲ.
ಧೀರ ಧೀರಂಜಿತಂ ನೀಂ ತಡೆದಿರದೆ ಯಶಸ್ಸಾಧನಂ ಸಾಧನಂ ಮು ನೀರಿಂ ನೀರಂಧ ವಾದರ್ಪಿಸೆ ನಡೆದದಟಿಂದಾನವ ದಾನವ ದುಃ
ಪಾರು ಪಾರಂ ಕ್ಷಣಂ ಮಾರ್ಕೊಳೆ ಮಡಿಯಿಸು ಕಾಮಾರಿವೊಲ್ ಮಾರಿಪೂಲ್ | ಹಾರಂ ಹಾರಂ ಹರಾಂಗಂ ಬರೆ ನಿಜಶದೊಳ್ ಭಾಸಮಾನಂ ಸಮಾನ
(ಜಗನ್ನಾಥ ವಿಜಯ ೧೮-೨೬ ಜಾತಿಗೆ ಪುಷ್ಪಜಾತಿಗಳ ಜಾತಿಯದೇಂ ಸಮಜಾತಿಯಪ್ಪುದೇ ಜಾತಿಯ ಜಾತಿ ಮಿಕ್ಕಲರ ಜಾತಿಯದೇತಟ ಜಾತಿಯೆಂದು ತಾಂ ಜಾತಿಯ ಜಾತಿಯುಂ ಪೊಗಟ್ಟು ಜಾತಿವಿಚಾರವಿದಗ್ಡೆ ಕೊಟ್ಟುಳಾ ಜಾತಿಯನಾ ವಿಟ್ವಿಟವಿಭೂತಿಯನಾ ರತರಾಗದೂತಿಯಂ
(ಜಗನ್ನಾಥ ವಿಜಯು ೧೪-೮೨) ಇದೀಗ ಸಂಸ್ಕೃತವನ್ನು ಸೇರಿಸಿ ಬರೆವ ಸೊಗಸು! ಇವೆರಡರಲ್ಲಿ ಆನಂದವನ್ನು ಕೊಡುವ ಸೊಗಸ ಎಲ್ಲಿ ಅಡಗಿರುವುದೋ ತಿಳಿಯದು. ಅರ್ಥಾಲಂಕಾರಗಳು ಭೂಷಣಗಳೇ ಸರಿ; ಆದರೆ ಕೂದಲನ ಸೀಳಿದಂತೆ ನೂರಾರು ಭೇದಗಳನ್ನಿಟ್ಟುಕೊಂಡು, ಕವಿಗಳು ಅಲಂಕಾರಗ್ರಂಥಗಳನ್ನು ಗಟ್ಟಿಮಾಡಿ, ಕಾವ್ಯ ಅಲಂಕಾರವೇ ಜೀವವಿದು, ಹೊಂದುವ ಕಡೆ ಹೊಂದದ ಕಡೆ ಬಾಯಿ ತೆರೆದಾಗಲೆಲ್ಲಾ ಅಲಂಕಾರಗಳು ಸುರಿಯುವಂತೆ ? ಬರೆದಿಟ್ಟರೆ ಚೆಲುವೆಂದು ಹೇಳುವಿರೊ? ಈ ಪದ್ಯವನ್ನು ನೋಡಿ :
ಯೋಗಿಗಳ ಚಿತ್ರಮಪಗತ ರಾಗಮದ ನಡುಗಿಸಿ ಸಾಲುವು ತಳಿರ್ಗಳ್ ರಾಗಿಗಳವರ್ಕೆ ನಡುಕ ನಾಗಿಸದಿರ್ಕುಮೆ ವಸಂತಸಮಯಸಮೂಾರಂ
(ಮಲ್ಲಿನಾಥ ಪುರಾಣಂ ೬-೧೯
ಈ ಗದ್ಯವನ್ನು ನೋಡಿ :
ಅದು (ವಿಂಧ್ಯಾಟಮಿ) ಸಮಸಮುದ್ಯತನಂತೆ ವೇಣುಬಾಣಾಸನಾರೋಪಿತಶಿಳೀಮುಖಮ ವಿವಿಕ, ಸಿಂಹನಾದಮು೦...ಅವನಿಪತಿ ಗೃಹದ್ವಾರದಂತೆ ನೇತ್ರಲತಾಶತದಷ್ಟವೇಶಮುಂ.. ಕೂರಸತ್ಯಮಾಗಿಯುಂ ಮುನಿಜನಸೇವಿತಮುಮೆನಿಪುದು
(ಕಾದಂಬರಿ ೧-೧೧ ಇವುಗಳ ಭಾವದ ಗಂಭೀರತೆ ಏನೋ, ಇವುಗಳು ಕೊಡುವ ಆನಂದವೇನೂ ನಮಗಂತೂ ತಿಳಿದಿಲ್ಲ. ಕನ್ನಡದಲ್ಲಿ ಅಕ್ಕರೆಯಿಲ್ಲವೆಂದು ಓದುವವರನ್ನು ದೂರುವವರು ಹಲವರುಂಟು. ಇಂರ್ತ ಅಲಂಕಾರ ಪದ್ಯಗಳನ್ನು ಓದಲು ಕಟ್ಟುಬಿದು ಗೋಳಾಡುವವರನ್ನು ನೋಡಿ ಕನಿಕರಪತದೆ, ಕನ್ನಡದಲ್ಲಿ ಅಕ್ಕರೆಯನ್ನಿಡಿರೆಂದು ಯಾವ ಮೋರೆಯಿಂದ ತಾನೆ ಹೇಳಲಾಗುವುದು?
ಮುವಣನು ಕನ್ನಡವನ್ನೇ ಮುಂದಿಟ್ಟು, ಸಂಸ್ಕೃತವನ್ನು ಬೇಕಾದಲ್ಲಿ ಸೇರಿಸಿ, ಶಬ್ದಾಲಂಕಾರ ಅರ್ಥಾಲಂಕಾರಗಳನ್ನು ಎಲ್ಲೆಲ್ಲಿಯೂ ಎರಚದ ಬಿಗಿಹಿಡಿದು ಬರೆದಿರುವುದು ಹೊಗಳತಕ್ಕುದೇ ಸರಿ ಇದರಲ್ಲಿ ಇರುವಷ್ಟು ಅಲಂಕಾರವೂ ಹೆಚ್ಚೇ ಎಂದು ನಮಗೆ ತೋರುವುದು: ಹಿಂದಿನವರಿಂದ ಕದಿಯದ ತನ್ನದೇ ರೀತಿಯಲ್ಲಿ ಹೇಳುವುದರಿಂದಲೂ, ಈ ವಿಷಯಗಳಲ್ಲಿ ಅಭಿರುಚಿಯು ಬೇರೆ ಬೇರೆಯಾಗಿರುವುದ ರಿಂದಲೂ ಹೆಚ್ಚು ಆಕ್ಷೇಪಣೆಯನ್ನು ಮಾಡಲೊಲ್ಲೆವು. ಇದಲ್ಲದೆ, ಇವನ ಶೈಲಿಯು ಸ್ವಾಭಾವಿಕ
೫೮೭
ನ ಬರಹಗಳು
ಯೂ ಮನೋಹರವಾಗಿಯೂ ಲಲಿತವಾಗಿಯೂ ಇರುವುದು : ಹೇಳಬೇಕಾದುದರಲ್ಲಿ ಯನ್ನು ಹೆಚ್ಚಾಗಿಟ್ಟಿರುವನೇ ಹೊರತು, ಹೇಗೆ ಹೇಳಲಿ ಎಂದು ತಡವರಿಸಿದಂತೆ ತೋರುವುದಿಲ್ಲ. ಗುಣವನ್ನು ಹೆಚ್ಚಾಗಿ ಹೊಗಳಲಾರೆವು. ಓದುವವರೇ ತಿಳಿಯುವಂತೆ ಕೆಲವು ಭಾಗಗಳನ್ನು ಕಳಗೆ
ಹರಿಸುವೆವು :
ಬಗ್ಗಿ ಸೆಲೆ ಕೊಗಿಲೆ! ಏನೀ ಮಾಮರದ ಸೆಳೆಗೊಂಬಿನೊಳ್ ಮಗುವಟ್ಟಿರ್ಪಯಮ್? ಕಣ್ಮರಲ್ ಕೆಂಪಾದುವೇಕೆ? ಏತರ್ಕೆ ಬೆಲಗುವಡುವಮ್? ಅರೆನುಡಿಯೊಳೆಂಬುದೇಂ? ತಳಿರಿಲ್ಲವೆಂಬೆಯ? ಅಲ್ಕು : ಕಾಲಪುರುಷಂ ಜಡಭರಿತನೆಂಬೆಯ? ಅಂತದನಾರೂರೆದರ್?
ಇಂತಿದನತುಂ ಸೋಂಬನಾಗಿರ್ಪುದೊಳ್ಳಿತೆ? (ಶ್ರೀರಾಮಾಶ್ವಮೇಧ, ಪುಟ ೨) ನ ಕವಿಗಳು ಕನ್ನಡದಲ್ಲಿ ಅಕ್ಕರೆಪಡುವವರಿಲ್ಲವೆಂದು ಬಗೆದು ಹೆಚ್ಚಾಗಿ ಬರೆಯದ, ಹೆದರಿ, ಮಾರಿಗಳಾಗಿರುವರೆಂಬುದು ಇದನ್ನು ಓದಿದವರಿಗೆ ಯಾರಿಗೆ ಹೊಳೆಯದು?)
ಹಾ! ಲೋಕಾಪವಾದದೊಂದೇರದ ಬಿಯೇ! ಎಂತಪ್ಪರುಮಂ ಬಿಟ್ಟಿರಯೇ! ನಿನ್ನಿ ದೂಸಜಂ ಮದುವೆಯಿಂದ ಮಡದಿಯಂ ಬಿಟ್ಟಿರ್ಪುದಾಯ್ತು, ನಿಷ್ಕಳಂಕಯಂದಣಿಯನೇ? ಪಾವನೆಯೆಂದಜೀಯೆನೆ? ಹಾ! ಹಾ! ಸೀತೆ! ಎನ್ನ ಕೈವಿಡಿವಿನಂ ನಿನಗೊದವಿದ ಭಾಗ್ಯಮೇ! ಎನ್ನನೇ ವರಿಪೆನಂದಾವ ದೈವಮಂ ಮುಂ ನಂತೆಯೋ? ಅಕ್ಕಟಾ! ಕೈವಿಡಿದಿನ್ನಬರವೊಂದುದಿನಮಾದೊಡಂ ಸೊಗಮಂ ಕಂಡುದುಂಟೇ? ಎಳವೆ ವನಸಂಚಾರದೊಳಾಯ್ತು ; ಬಳವಿ ರಕ್ಕಸರ ಬಂದಿಯೊಳಾಯ್ತು : ಕೆಲವ ಪುಲಿಕರಡಿಗಳಿನ ಗುರ್ಮಿಸಿದ ಕಾರಡವಿಯೊಳಾಯ್ತಲೆ! ಅಯ್ಯೋ! ಅಬ್ಬೆಯಿಲ್ಲದ ಪೆಣ್ಮಗಳನೋರ್ವಳಂ ಕಾಡಿಗೊತ್ತೆಗೀವೊಡೆಂದೇಂ ಮದುವೆನಿಂದೆನೇ?
(ಶ್ರೀ ರಾಮಾಶ್ವಮೇಧಂ, ಪುಟ ೫) ಆಃ | ಮನುವಿನ ಮಾರ್ಗ೦, ಭಾನುವಿನ ತೇಜ, ತಕ್ಕಟಿಯದೆ ಬಟಿಸಲ್ವನನಿನಿತೊಂದು ಪೆರ್ಮೆಗಡರ್ಪಾದನಕ್ಕುಂ ರಾಮಂ, ಏಂ ದೆಸೆದೆಸೆಯ ಬಾಯಿಟ್ಟ ಕೀಳರಸುಗಳ ನೋಡಿ ಗಳಾಗರೆ? ತಾನೋರ್ವನೆ ಜಗಕ್ಕೆ ಗಂಡಂ, ಮಿಕ್ಕುದರಸುಗಳೆಲ್ಲರ್ ಬಾಂಬರೆಂದೆ ಒಗಮ ರಾಮು ; ಅಲ್ಲದೊಡೇಂ ಕೊರ್ವೊ? ಏಂ ಪಗತಿಕೆಯೋ? ಏಂ ಜಂಬಮೊ? ತಾಂ ಗಡ! ರಕ್ತಸ ವರ್ಗೆಯುಂ ಗಡ! ಪಾತಕಂ ಗಡ! ಯಜ್ಞಂ ಗಡ! ಇಂತೊಂದು ನವದಿಂ ಪಣದಾಸೆಗೆ ಈ ಹಸುವನಾಡಿಸಿ ಬೇಡಿಸಿ ಕೂಡಿಸುವ ಗಾರುಡಿಗತನಮಂ ಕಂಡೊರೆದ ಜೋಗಿಯ ಜಾಣಂ. ಅಕ್ಕೆ, ಮೊನೆಯೊಳ್ ಗೆಲ್ಲ ಬೀರರ್ ಬರ್ಕೆ, ಅನ್ನ ವರವೆನ್ನ ನಾಲೆಯೊಳ್ ಕಿಕುಳದ ಬಡವು ಕುದುರೆಗಳ ಸಾಲೋಲ್ ಕಟ್ಟುವೆ.
(ಶ್ರೀ ರಾಮಾಶ್ವಮೇಧಂ, ಪುಟ ೧೯೬) ಇದುವರೆಗೆ ಮುದ್ದಣನ ಭಾಷೆ ಮತ್ತು ಶೈಲಿಗಳನ್ನು ಚರ್ಚಿಸಿದೆವು. ಮುಂದೆ ಆತನ ಕಥಾ ವನ್ನು ಕುರಿತು ಚರ್ಚಿಸುವವು. ರೀತಿಯಲ್ಲಿ ಹಿಂದಿನ ಕವಿಗಳ ಪಗಡಕ್ಕೆ ಸೇರದಂತೆಯೇ, ವಸ್ತುವಿ ಮ ಹಿಂದಿನವರ ಪಂಗಡಕ್ಕೆ ಸೇರುವುದಿಲ್ಲ. ಒಂದಿನ ಕವಿಗಳಲ್ಲಿ ಮುಖ್ಯ ದೋಷಗಳು ನಾಲ್ಕು : ಗೆಯೇ ಹೊಳೆಯುವ ಹೊಸ ದಾರಿಗಳಲ್ಲಿ ಕಾಲಿದೆ, ಹಿಂದಿನವರು ಹೋದ ಕಡೆಯೇ ಹೋಗಿ, ರು ಹೇಳಿದುದನ್ನೇ ಹೇಳುವುದು ; ಅಷ್ಟಾದಶವರ್ಣನೆ ಮೊದಲಾದವು ಇದೇ ತೀರಬೇಕೆಂಬ ಟೆಗೆ ಕಟ್ಟುಬಿದ್ದಿರುವುದು ; ಕೊಂಚವಾದರೂ ನಾಚಿಕೆಯಿಲ್ಲದೆ, ಹೊಲಸುವಿಷಯಗಳನ್ನು ವಿಸ್ತರಿಸು : ಕೆಲವು ಮಾತುಗಳಲ್ಲಿ ಸೊಗಸಾಗಿ ವರ್ಣಿಸದೆ, ನೋಂದ ಕರಡಿಯು ಒರಲುವಂತೆ, ಹನಿಹಾಕದ ಡವು ಗುಡುಗೂವಂತೆ ವರ್ಣಿಸುವುದು. ಪಂಪ ಭಾರತ, ಸಾಳ್ಳ ಭಾರತ, ಜಿನ ಭಾರತ, ನಾರಣಪ್ಪನ ತ, ಪಂಪ ರಾಮಾಯಣ, ಕುಮುದೇಂದು ರಾಮಾಯಣ, ತೊರವೆಯ ರಾಮಾಯಣ, ಆನಂದ ಬಾಯಣ, ಆದಿ ಪುರಾಣ, ಶಾಂತಿ ಪುರಾಣ, ಅಜಿತ ಪುರಾಣ, ಮಲ್ಲಿನಾಥ ಪುರಾಣ-ಎಲ್ಲಿ ನೋಡಿ ೧ ಒಂದೇ ಕಥೆ, ಒಂದೇ ರೀತಿ, ಒಂದೇ ರಗಳೆ, ಯಾವ ಉತ್ತಮ ಕಾವ್ಯವನ್ನು ನೋಡಿದರೂ
C
೫೮೮
ಶ್ರೀ ಸಾರ್ಹಿ
ಸಮುದ್ರ, ದೇಶ, ನಗರ, ರಾಜ, ಮಂತ್ರಿ, ಋತುಗಳು, ಯುದ್ಧ, ಅರಣ್ಯ-ಇವುಗಳ ವರ್ಣನೆಯೇ ಇವು ಸಾಲದೆ ಅಸಹ್ಯವನ್ನು ಹೆಚ್ಚಿಸುವುದಕ್ಕೆ ಜಲಕೇಳಿ ವರ್ಣನೆ, ಚಂದ್ರಿಕಾವಿಹಾರ ವರ್ಣನೆ
-ವರ್ಣನೆ. ಜಯನೃಪಕಾವ್ಯದಲ್ಲಿ ಸುಲೋಚನೆಯು ಹೇಗೆ ವರ್ಣಿಸಲ್ಪಟ್ಟಿರುವಳು ಬಲ್ಲಿರಾ? ಅದು ವರ್ಣನೆಯೋ ಹೆಣವನ್ನು ಕೊಯ್ಯುವ ವಿದ್ಯೆಯೋ ಕಾಣೆವು. ಆಕೆಯ ಕಾಲು, ಮೇಗಾಲ ಕಾಲುಗುರು, ಕೈ, ಕೊರಲು, ಮುಖ, ಹಲ್ಲು, ತುಟಿ, ಕೆನ್ನೆ, ಮೂಗು, ಕಿವಿ, ಹುಬ್ಬು, ಹಣೆ, ಕುರುಳು ತುರುಬು, ಬೆನ್ನು-ಇವುಗಳಿಗೆ ಒಂದೊಂದು ಪದ್ಯ : ತೊಡೆ ಬಾಸೆಗಳಿಗೆ ಎರಡೆರಡು ; ನಡು, ಕಣ್ಣು ಗಳಿಗೆ ಮೂರು ಮೂರು ; ಇನ್ನು ನಾವು ಹೇಳಲು ನಾಚಿಕೆಯಾಗುವ ಅಂಗವರ್ಣನೆಗಳು ಹೇರಳವಾಗಿ ಉಂಟು (೩-೨೧೬೩). ಇಷ್ಟು ಸಾಲದೆ ೪ನೆಯ ಸಂಧಿ ೧೪ ೪೨ ವರೆಗೆ ಸುಲೋಚನೆಯ ವಿರ ತಾಪವನ್ನೂ 3ನೆಯ ಸಂಧಿ ೧೨೪ರವರೆಗೆ ಆಕೆಯನ್ನು ಕೆಳದಿಯರು ಸಿಂಗರಿಸಿದುದನ್ನೂ ವರ್ಣಿಸಿರು ವನು ; ಬಿಡುವಿದ್ದವರು ಓದಿ ಆನಂದವನ್ನು ಹೊಂದಬಹುದು.
ನಮ್ಮ ಮುದಣನಲ್ಲಿ ಈ ಕೊರತೆಗಳು ಎಷ್ಟು ಮಟ್ಟಿಗುಂಟು ? • ರಾಮಾಶ್ವಮೇಧ 'ದಕ ಹೊಸದೇನೂ ಅಲ್ಲ ; ಕಥೆ ಹೊಸದಲ್ಲದಿದ್ದರೂ ತನ್ನದೇ ಒಂದು ಹೊಸ ದಾರಿಯಲ್ಲಿ, ಮಾರ್ಪಾಡ ಗಳನ್ನು ಮಾಡಿ ಬರೆದೂ ಇಲ್ಲ; ನಮಗೆ ಇದೊಂದು ಕೊರತೆಯಾಗಿ ತೋರುವುದು ; ಆದರೆ ಗಂದ ಹೆಂಡಿರು ಮಾತನಾಡಿಕೊಳ್ಳುವ ಕಡೆಯಲ್ಲಿ ಹೊಸ ವಸ್ತುವೂ, ಹೊಸ ರೀತಿಯೂ ಇರುವುದೆಂದ ಮುಂದೆ ತೋರಿಸುವೆವು, ಕಥಾಭಾಗಗಳು ಈ ಹೊಸ ತೆರದಲ್ಲಿ ಬರೆಯಲ್ಪಡದಿದರೂ, ಹಿಂದಿನವರ ತೆರದಲ್ಲಿಯೇ ಬರೆಯಲ್ಪಟ್ಟಿವೆ ಎಂದು ಹೇಳಲಾಗುವುದಿಲ್ಲ ; ಹೊಲಸು ವರ್ಣನೆಗಳು ಹುಡುಕಿದರೂ ಸಿಕ್ಕುವುದಿಲ್ಲ. ಕಥೆಗೆ ಬೇಕಾದ ವರ್ಣನೆಗಳು, ಹಾಳತವಾಗಿ, ಅಲ್ಲಲ್ಲಿಗೆ ತಕ್ಕಂತೆ ಬಂದಿರುವುದೇ ಹೊರತು ಅಷ್ಟಾದಶ ವರ್ಣನೆಗಳಿಗಾಗಿಯೇ ಕಥೆಯನ್ನು ಬರೆದ ಹಾಗಿಲ್ಲ. ಮಂಗಳಾಚರಣೆ, ದೇವತಾಸ್ತುತಿಗಳನ್ನು ಮಾಡಿ ಕಥೆಯನ್ನು ಮೊದಲು ಮಾಡದೆ, ಮಳೆಗಾಲವನ್ನು ವರ್ಣಿಸಿ, ಗ್ರಂಥಮಧ್ಯದಲ್ಲಿ ದೇವತೆ ಸ್ತುತಿಗಳನ್ನು ಅಡಗಿಸಿರುವನು:
ಸುವ್ವ! ಸುವ್ವ! ನಾಗನಗ್ಗಿಟ್ಟಿಕೆಯೊಳೊಗೆದ ಒಳಗೆಯ ಮುದ್ದುಗುವರಿ! ಸುದ್ದಿ ಸುವ್ವ! ಬೀಣೆ ಹೊತ್ತಗೆಗಳಂ ಪೊತ್ತ ಕೈಯ ಚೆಲ್ವೆ! ಸುದ್ದಿ ! ಸುದ್ದಿ! ಬಾಣಿ...ನುಡಿಬಿರ್ನ್ನ ಮನೆನಗೆ ಕರುಣಿಸ! ನಿನಗೆಆಗುವೆಂ, ಸುವ್ವ! ಸುದ್ದಿ! ಆ! ಅ! ಅ! ಅ!!!
(ಪುಟ ೧೦೧ ನಾವು ಹಿಂದೆ ಹೇಳಿದಂತೆ ಹಿಂದಿನವರ ವರ್ಣನೆಯನ್ನು ನೋಡಿ ನಕ್ಕಿರುವನು:
* ಆ ಅಂದಿನ ರಗಳೆಯ ಬಣ್ಣನೆದು ದಿನಂಗಳ ಪಿಂಚಿದುವು.'
(ಪುಟ ೯೬ ಎಂದುಂ ಕಾಣದರೊಂದು ಪಾಂಗಿನಿಂ ಪೇಳ ಪೊಚ್ಚಂದ ನಿನ್ನೀ ಬಣ್ಣನೆಯ ನುಡಿಗೆ ನೆಂಬೆನೊ! ಒಡಲಸಿದೇಂ? ಮೊಗದೊಳೇತರ ಸಸಿ? ಕಣೋಳೇತರ ಪೊ? ನಡುವಿನೊಳೇ: ಪುಸಿ?...ನುಡಿನಿಟಿಗೆಯಂ ಬೆದಂಕಿ ಪಾರದಂತು. ಇರ್ದಂತು ಬಣ್ಣಿಪೊಂದು ಜಾಣೆ ದೊರೆಕೊಳ್ವಂತುಂ, ವಾಕ್ಸಿದ್ದಿಯಂ ಪಡೆವೆ. ಕಥಾಭಾಗಗಳಿಗಿಂತಲೂ ನಡುವೆ ಸೇರಿರುವ ಗಂಡ ಹೆಂಡಿರ ಮಾತುಗಳು ಮನಸ್ಸನ್ನು ಹೆಚ್ಚಾಗಿ ಸೆರೆಗೊಳ್ಳುವವೆಂದು ಓದುವವರೆಲ್ಲರೂ ಒಪ್ಪಿಯೇ ತೀರಬೇಕು. ಇಲ್ಲಿ ಮುದ್ದಣನು ತನ್ನ ಬಗೆಯ ಬೆಡಗೆಲ್ಲವನ್ನೂ ಹೊರಪಡಿಸಿರುವನು. ಹೀಗೆ ನಡುವೆ ನಡುವೆ ಮಾತನಾಡುವುದನ್ನು ಹಿಂದೆಲ್ಲಿಯ ಕಂಡರಿಯೆವು. ಇಲ್ಲಿ ಹಿಂದಿನ ಕಟ್ಟಳೆಗಳಲ್ಲಿ ಸಿಕ್ಕಿ. ಬೋನಿನಲ್ಲಿ ಸಿಕ್ಕಿಬಿದ್ದ ಹುಲಿಯಂತೆ ಒದೆದಾಡದಿರುವುದು ರಿಂದ ಎಷ್ಟೋ ಸೊಗಸಾಗಿರುವುದು. ರಕ್ಕೆ ಬಲಿತ ಹಕ್ಕಿಯು ಪಂಜರದಲ್ಲಿ ಕೂಡಲ್ಪಟ್ಟಾಗ ಹಾಡುವುದ. ಸೊಗಸೊ? ತನಗೆ ತೋರಿದ ಹಾಗೆ ಹಾರಿ ಬಯಲಿನ ತಿಳಿಗಾಳಿಯನ್ನು ಕೊಂಡು ನಲಿದಾಡುವ ಹಕ್ಕಿಯ. ಹಾಡು ಸೊಗಸೊ? ಕನ್ನಡದಲ್ಲಿ ಅಕ್ಕರೆಯುಳ್ಳ ಸೀತೆಯ ಸಂಕಟಗಳಲ್ಲಿ ಮನಸ್ಸನ್ನಿಟ್ಟು ಕೊರಗುವ ದೇವತೆಗಳು ತಪಸ್ವಿಗಳನ್ನು ಕೆಡಿಸಲು ತೊಡಗುವುದನ್ನು ಅಲ್ಲಗಳೆಯುವ, ಕಾಡು ಬೆಟ್ಟಗಳನ್ನು ಬಣ್ಣಿಸಲ.
(ಪುಟ ೧
೫೮೯
ಹೆಚ್ಚಿನ ಬರಹಗಳು
ಕಥೆಯನ್ನು ಬಿಟ್ಟು ಓಡಿಹೋಗುವ ನಲ್ಲನನ್ನು ಹಿಂದಕ್ಕೆ ತರುವ, ಆತನು ಕಾಳಗವನ್ನು ಬಣ್ಣಿಸುತ್ತಿದರೆ ತೂಕಡಿಸುವಳಂತೆ ನಟಿಸುವ, ಮಂತ್ರತಂತ್ರ ಸಿದ್ದಿಯಲ್ಲಿ ನಂಬಿಕೆಯಿಲ್ಲದ, ಆ ಮನೋರಮೆಯನ್ನು ನೋಡಿ ಯಾರಿಗೆ ಬೆಟ್ಟಿಂಗಳಲ್ಲಿ ಹಾಲನ್ನವನ್ನು ಉಂಡಂತಾಗದು? ಆಕಯು ಹೇಳಿದುದಕ್ಕೆ ಇದಿರಾಗಿ ಹೇಳುತ್ತಲೂ, ಆಕೆಯನ್ನು ತಿಳಿಯದ ಹೆಂಗಸೆಂದು ಹೀಯಾಳಿಸುತ್ತಲೂ ಆಕೆಯನ್ನು ರೇಗಿಸಿ ಒಳಗೆಯೇ ಸಂತೋಷಪಡುವ ಮುದ್ದಣನನ್ನು ನೋಡಿ ಯಾರು ಮೆಚ್ಚರು? ಇವರ ಸರಸವು ಹೊಗಳಲ್ಪಡಲು. ತಕ್ಕುದು. * ಕಬ್ಬಿಗರ್ಗೆ ಸಿದ್ಧಿಸಿದ ಪೆರ್ಮೆಯು ಸಪ್ತಾಕ್ಷರೀಮಂತ್ರವು ” ಯಾವುದೆಂದು ಕೇಳಿದ ಮನೋರಮೆಯಿಂದ, ಮರೆತಾದರೂ ಹೆರರಿಗೆ ಗುಟ್ಟನ್ನು ಬಿಡಕೂಡದಂದು, “ನಂಬುಗ್ಗೆಯಂ ಪೊಬ್ಬಿಕೊಂಡು ", ಕಿವಿಯಲ್ಲಿ “ ಭವತಿ ಭಿಕ್ಷಾಂದೇಹಿ” ಎಂದು ಹೇಳಿದುದನ್ನು (ಪುಟ ೧೩೪-೩೮) ಮನೋರಮಯು ನೋಂಪಿಯನ್ನು ಮಾಡಬೇಕೆಂದಾಗ " ಹೂರಣಗಡುಬು, ಸಂಡಿಗೆ, ಮಂಡಿಗೆ, ಹೋಳಿಗೆಗಳು” ಸಿಕ್ಕುವುವೆಂದು ಒಪ್ಪಿ, ಮುಂದೆ " ಪೊಡವಿಡಿದು ಬೈಗುವರೆಗಮುಪವಾಸ ಮಿರಲೇವೇಟ್ಟುದು” ಎಂದ ಕೂಡಲೇ, (ಬೆಡಗುಗೊಂಡು) " ಅಂತದ್ರೂಡೀ ನೋಂಪಿಯನೊಲ್ಲೆಂ” ಎಂದು ಹೇಳಿದುದನ್ನೂ (ಪುಟ ೧೫೪-೫೭) ಕೇಳಿ ಹೊಟ್ಟೆ ಹುಣ್ಣಾಗದಂತ ನಕ್ಕು ನಿಲ್ಲಿಸುವುದಕ್ಕಾಗು ವುದೇ? ತನ್ನನ್ನು ರತಿಯಾಗಿ ಬಗೆದು ಬಣ್ಣಿಸೆಂದ ನಲ್ಲಳೊಡನೆ ಸರಸವಾಡುವುದನ್ನು ನೋಡಿ :
ಮುದ್ದಣ : ಕೇಳ್, ಆಂ ಬಣ್ಣಿಪ ರತಿಗೆ ಮಿಂದ ಮರಗೂಬನೊಂದು ಮಯೊಗರ್. ಮನೋರಮ : ಮರಣನೆಂದೊಡಾರ್?
ಮು : ದಸವಳರೊಳೊರ್ವಂ . ಮ : ಉಂ. ಹುಂ. ಮು : ಸಿಂಗರದ ಮಲೆನಾಡಿಗನೊಂದು ಭಂಗಿಯ ಗಂ. ಮ : ಮಲೆನಾಡಿಗನೆಂದೂಡಾವ? ಮು: ಮಲೆಯೂಳೆ ನೆಲೆಗೊಂಡಿರ್ಪ ನಾಲೆಯ ದೇವರ್. ಮ : ಇಂತಪ್ಪ ದೇವರೊಲೈವಡೆದ ಮಲೆನಾಡ ಹೆಣ್ಣಲ್ ಕಣ್ಣೆ ಚೆಲ್ವೆಯರಾದರಕ್ಕುಂ ? ಮು : ಅಪ್ಪದು. ವತ್ರಮಾ ನೀಚಿಗೆ ಇರುಳ್ಳಣ್ಣಂಗೆಂತಂತೊಪ್ಪುವ ಬಟ್ಟನುಣ್ಣಣ್. ಮ : ಇರುಳಣ್ಣನೆಂದೊಡೆ ಆವ ಸೈಪುಳ್ಳಂ ? ಮು : ಇರುಳಣ್ಣನೆಂದು ಚೆಂದವನಕ್ಕುಂ.
(ಪುಟ ೧೩-೧೪) ನಾವು ಮುಗಿಸುವುದಕ್ಕೆ ಮುಂಚೆ ಮತ್ತೊಂದು ಮಾತು. ಸೀತೆಯು ಪಾವನೆಯೆಂದು ತಿಳಿದೂ ರಾಮನು, ಸರಿ ತಪ್ಪಂದು ನೋಡದೆ ತನಗೆ ತೊರಿದಂತೆ ಹರಟಿದ ಒಬ್ಬ ಅಗಸನ ದೂರಿಗೆ ಹೆದರಿ, ಆಕೆಯನ್ನು ಕಾಡಿಗೆ ಕಳಿಸಿದನಷ್ಟ. ಈ ವಿಷಯದಲ್ಲಿ ನಮ್ಮ ಮನೋರಮಯು ಹೇಳುವುದನ್ನು ಕೇಳೋಣ:
ಮುದ್ದಣ : ಸೀತಾರಾಮಂ ತನ್ನ ಬಿರ್ದಿನ... ಮನೋರಮ : ನಲ್ಲ! ಏವಾತೋ? ಸೀತೆಯನಂತುಮಿದುಮತ ಸೀತಾರಾಮಂ? ಪೋ, ಮಾಸ್! ಅವಂಗಿನ್ನೆತ್ತಣ ಸೀತೆ? ಅಷ್ಟೊಡಿನ್ನಾ ಕಲ್ಲೆರ್ದೆಯಂ ರಾಮನೂ ಭೀಮನೂ? ಏಂ? ಮು : ಎನ್ನ ಕೈಗಳಸಮೆ! ಇಂತುಮೆಂಬರೆ? ಶ್ರೀರಾಮಂ ಕಲ್ಲೆರ್ದೆಯನೆ? ಆಃ! - ಬಬಿಕ್ಕಮಾತನ ಪ್ರಳಾಪಮಂ ನೀ ಕೇಳುದಿಲ್ಲಂ ಮ : ಏಂ, ತಾನ ತಲೆವೊಯುಂ ಮುಗಿದನೆ? ಮು : ರಾಮ, ತಲವೊಯ್ದ ನೇಂ? ತಾಂ ಯಶೋಧನನಪ್ಪಿನಂ ಲೋಕಾಪವಾದ
ಭೀತಿಗಡವಿಗಟ್ಟಿದನಲ್ಲದರಸಿಯೊಳೇಂ ಪಗೆಯೆ? ಮ : ಪಗೆಯೇಂ, ನಗೆಯೇಂ? ಬಡವೆಯೊರ್ವಳ್ ಕಾಡಿಂಗಾದಿಸೆ! ಮು : ಇಂತಿದನ ನನನನದುಂಬರ ಪಲುಂಬಿದ. ಮ : ಏಂ, ತನಗೆ ಪೆಜರ್ ಪೆಂಡಿರಿಲ್ಲಂದೆಯೆ?
(ಪುಟ ೨೦)
ರಿ
೫೯೦
ಶ್ರೀ ಸಾಹಿತ
ಈಗಲೂ ರಾಮನು ಮಾಡಿದುದು ಸರಿಯೆಂದು ಹೊಗಳುವವರು ಹಲವರಿರುವಲ್ಲಿ ಮನೋರಮೆಯು ಹೀಗೆ ಹೇಳುವಂತೆ ಬರೆದಿರುವುದನ್ನು ನೋಡಿ ಬೆರಗಾಗದೆ ಇರುವುದೆಂತು? ಈ ಗ್ರಂಥದ ಕೊನೆಯಲ್ಲಿರುವ ಪದ್ಯವನ್ನು ನೋಡಿ ನಮ್ಮ ಬೆರಗು ಹೆಚ್ಚದಿರುವುದೆಂತು?
ಧರೆಯಯೆ ಜೀವರಾತಿಗೆ ಪಿರಿಯಂ ನನಾದಮಾದನಾತ್ಮಂ ತನ್ನೊಳ್ ದೊರೆಕೊಂಡಿರ್ಪಿನಮಂತದು
ಪರಿನಿರ್ಮಲಮಾಗೆ ಪೆರ್ಮಯಿರ್ಮಯ್ಯಡೆಗುಂ
| ಸುವಾಸಿನಿ ' ಪತ್ರಿಕೆಯ ಡಿಸೆಂಬರ್ ೧೯೦೨ರ, ೨ನೆಯ ಸಂಪುಟದಲ್ಲಿ ಮುದ್ರಿತವಾದ ಲೇಖನ ಇದನ್ನು ಎಂ. ಎನ್. ಎಸ್. ಅವರ ಜೊತೆಗೂಡಿ ಬರೆಯಲಾಗಿದೆ.]
ಮಾಸ್ತಿಯವರನ್ನು ಕುರಿತು ಅಧ್ಯಕ್ಷರೇ, ತಾಯಿಯರೇ, ಹಿರಿಯರೇ, ಕಿರಿಯರೇ, ಮಕ್ಕಳೇ
ಈ ದಿವಸದ ಸಂತೋಷದ ಸಮಾರಂಭಗಳನ್ನು ನಡೆಸಿಕೊಡಬೇಕೆಂದು ಮದರಾಸು ಪ್ರಾಂತ್ಯದ ಮಂತ್ರಿವರ್ಯರಾಗಿದ್ದ ಶ್ರೀ ರಾಜಗೋಪಾಲಾಚಾರ್ಯರನ್ನು ಪ್ರಾರ್ಥಿಸಿದೆವು. ಆದರೆ ಕಾರ್ಯಗೌರವದ ದೆಸೆಯಿಂದ ಅವರು ಬರಲು ಸಾಧ್ಯವಾಗದೆ ಕೊನೆಯ ಗಳಿಗೆಯಲ್ಲಿ ನಾನು ನಿಂತು ಈ ಕೆಲಸದ ಭಾಗವನ್ನು ವಹಿಸಬೇಕಾಗಿದೆ.
ಈ ಕೆಲಸವನ್ನು ಮಾಡುತ್ತಿರುವ ನನಗೆ ದೊಡ್ಡ ಆನಂದವಾಗಿದೆ ಎಂದು ನಾನು ತಮ್ಮಲ್ಲಿ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಆದರೆ ಈ ಅನಂದದ ಬಿಗಿತದಲ್ಲಿ ಕೊರಳು ಸೆರೆಹಿಡಿದು ಏನು ಮಾತನಾಡಬೇಕೆಂಬುದೇ ತೋಚದಾಗಿದೆ. ಈ ಭಾವಚಿತ್ರದ ಮೂಲರಾದ ವೆಂಕಟೆ ಶ ಅಯ್ಯಂ ಗಾರ್ಯರು ಅಂದರೆ ಶ್ರೀನಿವಾಸರವರು, ಅಂದರೆ ಮಾಸ್ತಿಯವರ ವಿಷಯವಾಗಿ ನಾನು ಏನು ಹೇಳಲಿ? ಕನ್ನಡ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಆಕೆಯ ಪ್ರೇಮದ ಆಶೀರ್ವಾದವನ್ನು ಪಡೆದು, ಆಕೆಯ ಸೇವೆಯನ್ನು ಅತ್ಯಂತ ಉತ್ಸಾಹಶ್ರದ್ಧೆಗಳಿಂದ ಮಾಡುತ್ತಿರುವ ನಮ್ಮ ಮಾಸ್ತಿಯವರ ವಿಷಯವಾಗಿ ಯೋಗ್ಯವಾಗಿ ನಾನು ಏನು ಹೇಳಬೇಕೆಂಬುದೇ ತೋಚದಾಗಿದೆ. ನಮ್ಮ ಶ್ರೀನಿವಾಸರ ಎದುರಿಗೇ ನನ್ನ ಮನಸ್ಸನ್ನು ಒಂದೆರಡು ಮಾತುಗಳಲ್ಲಿ ಮುಚ್ಚುಮರೆಯಿಲ್ಲದೆ ಆಡಬೇಕಾಗಿ ಬಂದದ್ದಕ್ಕೆ ನನಗೆ ಸ್ವಲ್ಪ ಸಂಕೋಚವೂ ಆಗುತ್ತಿದೆ.
ಮಾಸ್ತಿಯವರು ಕನ್ನಡನಾಡಿನ ಪ್ರೇಮಪುತ್ತಳಿ, ಅವರ ನಯ, ಅವರ ನಗೆ, ಅವರ ಶೈಲಿ. ಅವರ ನಿಷ್ಠೆ, ಅವರ ದೊಡ್ಡ ದೃಷ್ಟಿ, ಎಲ್ಲರನ್ನು ಸರಿಮಾಡಿಕೊಂಡು, ಎಲ್ಲರಿಗೂ ಸರಿಯಾಗಿದ್ದುಕೊಂಡು. ಎಲ್ಲರಲ್ಲಿಯೂ ಗುಣವನ್ನು ಕಂಡುಕೊಂಡು, ಕನ್ನಡಿಗರೆಲ್ಲರೂ ತಮ್ಮ ಮನೆಯವರೆಂಬಂತೆ ಹೊಂದಿ ಕೊಂಡು, ಕನ್ನಡನಾಡನ್ನು ಸುತ್ತಿ, ಕನ್ನಡಿಗರನ್ನೆಲ್ಲಾ ನೋಡಿ ತಿಳಿದು, ಪ್ರತಿಯೊಬ್ಬರ ರಹಸ್ಯವನ್ನೂ ಅರಿತುಕೊಂಡು, ಕನ್ನಡನಾಡಿನ, ಕನ್ನಡ ನುಡಿಯ ಶಕ್ತಿಯನ್ನೂ ತಿಳಿದು, ನಮ್ಮ ನಾಡು ಮೊದಲಿ ನಂತೆಯೇ ಸೊಬಗಿನ ಬೀಡಾಗಿ ಶಕ್ತಿಯಿಂದ ತುಂಬಿತುಳುಕುವಂತಾಗಲೆಂದು ಹಾರೈಸುತ್ತಾ, ಹಗಲೂ ಇರುಳೂ ಅವರು ನುಡಿಯ ಸೇವೆಯನ್ನು ಮಾಡುತ್ತಿರುವುದನ್ನು ನಾನು ಹೊಸದಾಗಿ ತಿಳಿಸಬೇಕಾಗಿಲ್ಲ. ನಮ್ಮ ನುಡಿ, ನಮ್ಮ ನಾಡು, ನಮ್ಮ ಹಿಂದಿನ ಹಿರಿಮೆ, ನಮ್ಮ ಸಂಸ್ಕೃತಿ ಇದುವರೆಗೂ ಯಾವ ನವಿರಿನಿಂದ ಬಂದಿತು, ನಮ್ಮಲ್ಲಿ ವಿಶ್ವವ್ಯಾಪಕದೃಷ್ಟಿಯ ಬೆಳವಣಿಗೆಯಿಂದ ಸಾಹಿತ್ಯದ ಮೇಲೆಯೂ ಪರಿಣಾಮವಾಯಿತು, ಇವೇ ಮೊದಲಾದ ವಿಷಯಗಳನ್ನು ಕುರಿತು ಅವರೊಡನೆ ಮಾತನಾಡುವುದೇ ಒಂದು ಸೊಗಸು. ಅವರು ತಮಿಳು, ಇಂಗ್ಲಿಷು, ಸಂಸ್ಕೃತ ಮೊದಲಾದ ಹೊರಸಾಹಿತ್ಯಗಳ ಒಳ
ನ ಬರಹಗಳು
ಸಿಕ್ಕು ಆ ಸಾಹಿತ್ಯಗಳಲ್ಲಿ ಕಂಡುಬರುವ ಸುಖವನ್ನು, ಶಕ್ತಿಯನ್ನು, ಮೇಲ್ಮೀಯನ್ನು, ಸೌಂದರ್ಯವನ್ನು ಡಸಾಹಿತ್ಯದಲ್ಲಿಯೂ ಕಂಡುಕೊಂಡು ನಮ್ಮ ನುಡಿಯಲ್ಲಿಯೂ, ನಮ್ಮ ಸಂಸ್ಕೃತಿಯಲ್ಲ ಶಕ್ತಿ ೨೦ಟು, ತೇಜಸ್ಸುಂಟು ಎಂಬುದನ್ನು ಹೆಮ್ಮೆಯಿಂದ ಜನರಿಗೆ ತೋರಿಸಿಕೊಡುತ್ತಿದಾರೆ. ಶ್ರೀನಿವಾಸರು – ನಾಡಿಗೇ ಹೆಮ್ಮೆಯಾಗಿರುತ್ತಾರೆ. ಮಾಸ್ತಿಯವರ ನಡೆ ನುಡಿಗಳನ್ನು ನೋಡಿದಾಗೆಲ್ಲಾ ಅವರು ಗೆ ಇಬ್ಬರು ಇಂಗ್ಲಿಷು ಕೃತಿಕಾರರನ್ನು ನನ್ನ ನೆನಪಿಗೆ ತರುತ್ತಾರೆ. ಅವರನ್ನು ಒಂದು ರೀತಿ ಹೊಗಳು ರಕ್ಕಾಗಿ ನಾನು ಈ ರೀತಿ ಹೇಳುತ್ತಿಲ್ಲ. ಮೊದಲನೆಯದಾಗಿ ಷೇಕ್ಸ್ಪಿಯರ್ ಕವಿ, ಯಾವ ಒಂದು ಶಿಯಲ್ಲಿಯೂ ಯಾರಿಗೂ ಸುಳಿವು ಕಾಣಿಸಿಕೊಳ್ಳದೇ, ದೊಡ್ಡ ಹೃದಯವನ್ನು ಬೆಳೆಯಿಸಿ, ತನ್ನಲ್ಲಿ Jಂಡ ಸತ್ಯವನ್ನು ಕಂಡುಕೊಂಡು, ವಿಶ್ವದಲ್ಲಿಯೂ ಅದೇ ಅಖಂಡ ಸತ್ಯವನ್ನು ಕಂಡು ಜನಗಳಿಗೆ. ಳವಾದ, ನಯವಾದ, ಸುಖವಾದ, ರೀತಿಯಲ್ಲಿ ತನ್ನ ಭಾವನೆಗಳನ್ನು ತಿಳಿಸಿ ಜನರ ಮಧ್ಯೆ ತಾನು ಾಡುವಾಗ, ಇವನು ನಿಜವಾಗಿಯೂ ದೊಡ್ಡ ಬರಹಗಾರನೇ ಎಂದು ಕೆಲವರಿಗೆ ಸಂದೇಹ ಬರುವಂತೆ. ವಿಸಿದ್ದ ಆ ಮಹಾಕವಿ, ನಾವು ಆಕ್ಸ್‌ಫರ್ಡ್ ಕೇಂಬ್ರಿಡ್ಜ್ ಎಂ.ಎ. ಪರೀಕ್ಷೆಗಳನ್ನು ಮಾಡಿರುತ್ತೇವೆ. ಧನು ಏನು ಮಾಡಿರುತ್ತಾನೆ. ಅವನು ನಮಗಿಂತ ಬುದ್ದಿವಂತನೇ ಎಂದೂ ಸಹ ಅವನ ಲದವರು ಅನ್ನುತ್ತಿದ್ದರೋ ಏನೋ. ಆದರೆ, ದಿನಗಳು ಕಳೆದ ಹಾಗೆಲ್ಲಾ, ಜನರು ಅವನ ಕವಿತೆಯನ್ನು ವಿದ ಹಾಗೆಲ್ಲಾ ಅವನ ಆಳ, ಅವನ ಹೃದಯದ ಘನತೆ, ಅವನ ಭಾಷೆಯ ಸರಣಿ, ರನ ಕವಿತೆಯು ಸೌಂದರ್ಯ, ಅಡಕವಾಗಿರುವ ಭಾವಗಳು, ಇವೆಲ್ಲಾ ಜನರಿಗೆ ಗೋಚರವಾಗಿ ಇಂದು ಕಾರನೆಂದರೆ ಅವನೇ ಎನು ತಿ.ದೇವೆ. ಮಾಸ್ತಿಯವರು ಷೇಕ್ ಪಿಯರ್ ಕವಿಗೆ ಸಮಾನರೆಂದು ನು ಹೇಳುತ್ತಿಲ್ಲ. ಆದರೆ ಇವರ ಕವಿತೆಗಳಲ್ಲಿ ಷೇಕ್ಸ್ಪಿ ಯರ್ ಕವಿಹೃದಯವನ್ನು, ರೀತಿಯನ್ನು ವು ಕಾಣಬಹುದು. ಇನ್ನೊಬ್ಬ ಕವಿ. ನನಗೆ ಬಹು ಪ್ರಿಯನಾದ ಮಾಥ್ಯ ಆರಾಲ್ಡ್, ಅವನ ಾತುಗಳೆಂದರೆ ಸಂಸ್ಕೃತಿಯ ಹಾಡು (Culture). ಅವನ ಕವಿತೆಗಳನ್ನು ಓದುವಾಗ ಜೀವನದ ಇಂಪು, weetness and Light) ಬೆಳಕು ಇವುಗಳು ಮೂರ್ತಿಮತ್ತಾಗಿ ನಮ್ಮ ಕಣ್ಣೆದುರಿನಲ್ಲಿ ಳಿಯುತ್ತವೆ. ನಮ್ಮ ಶ್ರೀನಿವಾಸರ ಕವಿತೆಯಲ್ಲಿಯೂ ನಾವು ನಮ್ಮ ನಾಡಿನ ಸಂಸ್ಕೃತಿ, ನಮ್ಮ
ಡಿನ ಜೀವನದ ಮಾಧುರ್ಯವನ್ನೂ ಬೆಳಕನ್ನೂ ನೋಡುತ್ತೇವೆ. ಶ್ರೀನಿವಾಸರದು ವಿಶ್ವದೃಷ್ಟಿ, ಎರ ಅಂತರಂಗ ಬಹಳ ದೊಡ್ಡ ಕ್ಷೇತ್ರದಲ್ಲಿ ನಡೆದುಕೊಂಡು ಹೋಗುತ್ತದೆ. ಈ ದಿನ ಕುಮಾರವ್ಯಾಸ, ಎಳೆ ವಾಲ್ಮೀಕಿ, ನಾಳಿದ್ದು ಪುರಂದರದಾಸರು, ಆಳ್ವಾರುಗಳು ಇಂತಹ ಮಹಾನುಭಾವರ ಹೃದಯದ ಭವನ್ನು ತಿಳಿದು ಆನಂದಿಸುವರು. ಇನ್ನೊಮ್ಮೆ ಮಹಾಕವಿ ಗಯತೆ, ಮಾರಸ್ ಅರಿಲಿಯಸ್ ಏನು ಳುತ್ತಾನೆಂದು ನೋಡುವುದು, ಆಗಸ್ಟಿನ್, ಡೇವಿಡ್ ಇವರ ಜೀವನಸ್ವಾರಸ್ಯವನ್ನು ಸಾರುವುದು. ತರ ಸಾಹಿತ್ಯಗಳ ವ್ಯಾಸಂಗದಿಂದ ತನಗುಂಟಾದ ಅನುಭವ ನಮ್ಮ ನಾಡಿನವರಿಗೂ ಆಗಲೆಂದು ಮುದ್ದಾದ ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುತ್ತಿದಾರೆ. ಅವರು ಚಿಕ್ಕವರಿಗೆ ಚಿಕ್ಕವರು, ದೊಡ್ಡವರಿಗೂ ಕವರು. ಇವರ ಹೃದಯವು ಬಹು ವಿಶಾಲವಾದುದು. ಇತರ ದೇಶಗಳವರನ್ನು ನೋಡಿ ನಾವು ರಿಯಬೇಕಾದುದೇನಿದೆ, ಇತರರನ್ನು ಬೇಡತಕ್ಕದೇನಿದೆ, ಎಲ್ಲವೂ ನಮ್ಮಲ್ಲಿಯೇ ಇದೆ ಎಂದು ಲವರು ಭಾವಿಸುತ್ತಾರೆ. ಆದರೆ ಮಾಸ್ತಿಯವರು ಹಾಗಿಲ್ಲ. ಗುಣ ಎಲ್ಲಿಯೆ ಇರಲಿ, ಯಾರಲ್ಲಿಯೇ ರಲಿ, ಅದನ್ನು ಸೆಳೆದು ತಮ್ಮದನ್ನಾಗಿ ಮಾಡಿಕೊಳ್ಳುತ್ತಾರೆ.
- ಕೆಲವು ಕಾಲದ ಹಿಂದೆ ಕನ್ನಡದಲ್ಲಿ ಬರಹಗಾರನ ಪಾಡು ಸ್ವಲ್ಪ ಕಷ್ಟವೇ ಆಗಿದ್ದಿತು. ಕನ್ನಡ ಾಷೆಯ ಭವಿಷ್ಯದಲ್ಲಿ ಜನರಿಗೆ ಸ್ವಲ್ಪ ಅವಿಶ್ವಾಸವೂ ಸಹ ಉಂಟಾಗಿದ್ದಿತು. ಆದರೆ ಇಂದು ಆ ಭೀತಿ ಗುಲ್ಲ. ಕನ್ನಡನುಡಿಯ ಸೇವೆ ಮಾಡಲು ಹಲವರು ಮುಂದೆ ಬರುತ್ತಿದಾರೆ. ಮಾಸ್ತಿಯವರಂತೂ ನಡನುಡಿಗೆ ಪ್ರಾಶಸ್ಯವೇ ಇಲ್ಲದ ಕಾಲದಲ್ಲಿಯೇ ಪುಸ್ತಕಗಳನ್ನು ಬರೆಯತೊಡಗಿದ್ದರು. ಕನ್ನಡ ಾಡನ್ನು ಹಿಂದೆ ಆವರಿಸಿದ್ದ ಕತ್ತಲೆ ಈಗ ಬೆಳದಿಂಗಳಾಗಿದೆ. ಕನ್ನಡದ ಜನ ತನ್ನ ಶಕ್ತಿಯನ್ನರಿತು Jಂಡಿದೆ. ಮಾಸ್ತಿಯವರು ರಚಿಸಿರುವ ಕಾವ್ಯಗಳು, ಅವುಗಳ ಸೊಗಸು, ಅವರ ಪ್ರತಿಭೆ-ಈ ವಿಷಯವಾಗಿ ನನಗಿಂತಲ೧ ಎಳೆಯ ಕಣ್ಣಿನವರು, ಹೊಸ ಕಣ್ಣಿನವರು ಹಲವರು, ವಿದ್ವನ್ಮಣಿಗಳು ಈ
೨೯೨
ಶ್ರೀ ಸಾಹಿ ದಿನ ಮಾತನಾಡತಕ್ಕವರಿದ್ದಾರೆ. ನಾನು ಆ ವಿಷಯವನ್ನು ಹೆಚ್ಚು ಪ್ರಸ್ತಾಪಿಸುವುದಿಲ್ಲ. ಆದರೆ ಇನ್ನೊಂದ ಮಾತನ್ನು ಹೇಳಿ ಈ ಭಾವಚಿತ್ರವನ್ನು ಅನಾವರಣ ಮಾಡುತ್ತೇನೆ.
ಇಷ್ಟೊಂದು ಕೃತಿಗಳನ್ನು ರಚಿಸಲು ನೀವು ಹೊತ್ತನ್ನು ಎಲ್ಲಿಂದ ತರುತ್ತೀರಿ ಎಂದು ರ್ನಾ ಮಾಸ್ತಿಯವರನ್ನು ಆಗಾಗ ಕೇಳುತ್ತಿರುತ್ತೇನೆ. ಅವರೇನೂ ಪುಸ್ತಕ ಪಿಶಾಚಿಗಳಲ್ಲ. ಮನೆಯ ಮಕ್ಕಳೊಡನೆ ವಿನೋದವಾಗಿ ಬೇಕಾದಷ್ಟು ಹೊತ್ತು ಕಾಲವನ್ನು ಕಳೆಯುತ್ತಾರೆ. ಹೊರಕ್ಕೆ ಬಂದ ಸ್ನೇಹಿತರು. ಎಲ್ಲರೊಡನೆಯೂ ಸರಸ, ಯಾರಿಗೆ ಬೇಕಾದರೂ ತಮ್ಮ ಅಮೂಲ್ಯವಾದ ಸಲಹೆಯನ ಕೊಟ್ಟು ಅವರ ಸುವಿದ್ದಲ್ಲಿ ತಾವೂ ಸಂತೋಷಪಡತಕ್ಕವರು, ಅವರು. ನಾವಾರಾದರೂ ಬಾಗಿಲು ಸಿಕ್ಕಿದರೆ ಸಾಕು. ಮೆಲ್ಲಗೆ ಮಾತನಾಡಿಸುತ್ತಾ ಮಹಡಿಯ ಮೇಲಕ್ಕೆ ಹತ್ತಿಸಿ ಅಲ್ಲಿ ಕಾಫಿ, ಮಾತುಕ ಗಳಾದನಂತರ ನಾವು ಕೆಳಗಿಳಿದು ಬರುವುದರಲ್ಲಿ ಯಾವುದೂ ಮಾಯದಲ್ಲಿ ಅವರ ಮೊಟಾರ ಕಾರು ಬಂದು ನಮ್ಮನ್ನು ಮನೆಗೆ ತೆಗೆದುಕೊಂಡು ಹೋಗಲು ಸಿದ್ಧವಾಗಿ ನಿಂತಿರುತ್ತದೆ. ಇವರ ತಮ್ಮ ಕಾಲವನ್ನು ಅನೇಕರಿಗೆ ಕೊಡತಕ್ಕವರು. ಅಲ್ಲದೆ ಸರ್ಕಾರದಲ್ಲಿ ಬಹಳ ಜವಾಬ್ದಾರಿ ಅಧಿಕಾರ ಸ್ಥಾನದಲ್ಲಿದ್ದಾರೆ. ಸರ್ಕಾರೀ ಕೆಲಸಕಾರ್ಯಗಳು, ಸ್ನೇಹಿತರೊಡನೆ ಮಾತುಕತೆಗಳು. ಇವುಗೆ ಜೊತೆಗೆ ಪುಸ್ತಕವನ್ನು ಓದುವುದಕ್ಕೆ ಬರೆಯುವುದಕ್ಕೆ ಇವರಿಗೆ ಕಾಲವಲ್ಲಿದೆ ಎಂದು ನಾನು ಯೋಚಿಸಿ ತೇನೆ. ಇವರು ಗ್ರಂಥಗಳನ್ನು ಯಾವ ಮಾಯದಲ್ಲಿಯೂ ರಚಿಸಿಬಿಡುತ್ತಾರೆ. ಹೆಂಗಸರು ಸಾಮಾನ ವಾಗಿ ವರ್ಷಕ್ಕೆ ಒಂದು ಮಗುವನ್ನು ಹೆರುತ್ತಾರೆ. ಕೆಲವರು ವರ್ಷಕ್ಕೆ ಎರಡು ಮಕ್ಕಳನ್ನು ಕೆ ಬಹುದು. ಪ್ರತಿ ವರ್ಷವೂ ನೀವು ಎರಡು ಮಕ್ಕಳನ್ನು ಹೆರುತ್ತಿದ್ದೀರಲ್ಲಾ ಎಂದು ನಾನು ಇವರನ ಆಗಾಗ ಹಾಸ್ಯಮಾಡುತ್ತೇನೆ. ಷೇಕ್ಸ್ಪಿಯರ್ ವರ್ಷಕ್ಕೆ ಒಂದು ಎರಡು ನಾಟಕವನ್ನು ಬರೆಯು ತಿದ್ದನಂತೆ. ಈ ಮಹಾರಾಯರು ವರ್ಷಕ್ಕೆರಡು ಪುಸ್ತಕಗಳನ್ನು ಅದು ಹೇಗೆ ಬರೆಯುತ್ತಾರೆಯೋ ನಾನು ಬೇರೆ ಕಣೆ. ಒಂದು ಬಗೆಯ ಕೃತಿಗಳಲ್ಲ, ಎಲ್ಲಾ ಬಗೆಯವು. ಸಣ್ಣಕಥೆ, ಸಣ್ಣ ನಾಟ ವಿಮರ್ಶೆ, ಸಣ್ಣಗೀತೆಗಳು, ಪದಗಳು, ದೊಡ್ಡ ಕಾವ್ಯಗಳು, ದೊಡ್ಡವರ ಜೀವನಚರಿತ್ರೆಗಳು, ಪ್ರ. ಯೊಂದು ರಚನೆಯಲ್ಲಿಯೂ ಭಾವಗಳು ತುಂಬಿ ತುಳುಕುತ್ತವೆ; ಸರಳ ಶೈಲಿ ಹರಿದುಹೋಗುತ್ತದೆ
ಇವರಿಗೆ ಹಿರಿಯರ ಮಾತು ಎಂದರೆ ಬಹು ಗೌರವ. ಯಾವ ಕೆಲಸಕ್ಕೇ ಆಗಲಿ, ಇವರು ಮುಂ ನುಗ್ಗುತ್ತಾರೆ. ಎಲ್ಲರನ್ನೂ ಪ್ರೀತಿಯಿಂದ ಕಂಡು ಎಲ್ಲರ ಪ್ರೀತಿಯನ್ನು ಗಳಿಸಿರುತ್ತಾರೆ. ಇಂದು ನವ: ನಾಡಿನಲ್ಲಿ ಇವರನ್ನು ಪ್ರೀತಿಸುವವರು ಅಸಂಖ್ಯಾತ ಮಂದಿ. ಮಾಸ್ತಿಯವರು, ಕನ್ನಡನಾಡು ಬೆಳೆ: ಬೇಕು, ಕನ್ನಡನುಡಿ ಬೆಳೆಯಬೇಕು, ಕನ್ನಡಿಗರ ಸಂಘಟನೆಯಾಗಬೇಕು ಎಂದು ತಮ್ಮ ತನುಮನಧ ಗಳನ್ನು ತೆತ್ತು ಕನ್ನಡಕ್ಕಾಗಿ ನಿರಂತರವೂ ದುಡಿಯುತ್ತಿದಾರೆ. ಹೋದವರ್ಷ ತಾನೇ ಒಂದು ರೂಪ ಬಂದ ಈ ಸಂಘದ ವಿಷಯದಲ್ಲಿ ಈ ರೀತಿ ಕನ್ನಡನಾಡಿನ ಸಾಹಿತಿಗಳನ್ನು ಕೂಡಿಸಬೇಕೆಂದು ಮಾ.. ಯವರೂ ಶ್ರೀ ಗುಂಡಪ್ಪನವರೂ, ನಾನೂ, ಇತರ ಮಿತ್ರರೂ ಹತ್ತು ಹದಿನೈದು ವರ್ಷಗಳಿಂದಲ. ಆಶಿಸುತ್ತಿದ್ದವು. ಇನ್ನೂ ಕಾಲ ಬಂದಿಲ್ಲ. ಹೊಂದಿಕೆಯಿಂದ ಎಲ್ಲರೂ ನಡಕೊಂಡು ಕೆಲಸ ಸಾಗಿಸಿಕೊಂಡ ಹೋಗುವ ಕಾಲ ಬಂದಿಲ್ಲ. ಭಿನ್ನ ದೃಷ್ಟಿಗಳನ್ನಿಟ್ಟಿದ್ದರ ನುಡಿಗಾಗಿ ಎಲ್ಲರೂ ಒಟ್ಟಾಗಿ ಸೇರಿ ಕೆಲ ಮಾಡುವ ಸ್ವಭಾವವು ನಮ್ಮಲ್ಲಿನ್ನೂ ಬಂದಿಲ್ಲದೇ ಇರಬಹುದು, ದುಡುಕಬಾರದು. ಸರಿಯಾ ತಳಪಾಯದ ಮೇಲೆ ಮನೆಯನ್ನು ಕಟ್ಟಬೇಕು ಎಂಬುದಾಗಿ ಅಳೆದು ಸುರಿದು ನೋಡಿದ್ದಾಯಿತೆ ಇಂದು ಸಾಹಿತಿಗಳ ಸಂಘಟನೆಗೆ ತಳಪಾಯ ಹಾಕಿದ್ದಾಯಿತು. ಆ ಸಂಘದ ಆಶ್ರಯದಲ್ಲಿ ನಡೆಯು: ಸಮ್ಮೇಳನದಲ್ಲಿ ಮಾಸ್ತಿಯವರ ಭಾವಚಿತ್ರವನ್ನು ಅನಾವರಣ ಮಾಡುವ ಭಾಗ್ಯ ನನಗೆ ಲಭಿಸಿದ ಇವರ ಭಾವಚಿತ್ರ ಕನ್ನಡಿಗರಿಗೆ ಸ್ಫೂರ್ತಿದಾಯಕವಾಗಿರುತ್ತದೆ; ಇದು ಕನ್ನಡದ ಏಳಿಗೆಗೆ ಸೂಚನೆಯ ನಿಲ್ಲುತ್ತದೆ ಎಂದು ನನಗೆ ಭರವಸೆಯಿದೆ. ಅತ್ಯಂತ ಸಂತೋಷದಿಂದ, ನನ್ನ ಮಿತ್ರವರ್ಯರ ಭಾವಚಿತ್ರವನೆ ಅನಾವರಣ ಮಾಡುತ್ತೇನೆ. ಭಗವಂತನು ಅವರಿಗೆ ಆಯುರಾರೋಗ್ಯಶ್ವರ್ಯಗಳನ್ನೂ, ಇನ ಉನ್ನತ ಪದವಿಗಳನ್ನೂ ಕರುಣಿಸಿ ಚಿರಕಾಲ ಅವರಿಂದ ಕನ್ನಡತಾಯ ಸೇವೆಯನ್ನು ಮಾಡಿಸಲೆಂದ ಬೇಡುತ್ತೇನೆ.
[ಜೀವನ ೫-೧; ಮಾರ್ಚ್, ೪ ೧೯೪

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ