https://archive.org/details/dli.osmania.3851
( ಇಲ್ಲಿ ಹೆಚ್ಚು ಪುಸ್ತಕಗಳಿವೆ- ಇದು ಮಧ್ಯದಲ್ಲಿದೆ)
ಕಾಳಿದಾಸ ಮಹಾಕವಿ ವಿರಚಿತ
ವಿಕ್ರಮೋರ್ವಶೀಯ
-----
"ವೇದಾಂತಗಳಲ್ಲಿ ಸಮಸ್ತವಾದ ದಿಗಂತಗಳನ್ನೂ
ತುಂಬಿರುವ ಏಕಪುರುಷನೆಂದು ಯಾವನನ್ನು ಹೇಳು
ವರೋ; ಈಶ್ವರ ಶಬ್ದವು ಅನನ್ಯ ವಿಷಯಕವಾಗಿ
ಯಾವನಲ್ಲಿ ಯಥಾರ್ಥವಾಗಿರುವುದೋ; ಮುಮುಕ್ಷು
ಗಳು ಅಂತರಂಗದಲ್ಲಿ ಪ್ರಾಣಾಯಾಮಗಳಿಂದ ಯಾವ
ನನ್ನು ಹುಡುಕುವರೋ ದೃಢವಾದ ಭಕ್ತಿ, ಯೋಗ
ಗಳಿಗೆ ಸುಲಭವಾಗಿ ದೊರೆಯುವಾ ಸ್ಥಾಣುವು--
ನಿಮಗೆ ಶ್ರೇಯಸ್ಪನ್ನುಂಟು ಮಾಡಲಿ? ಎಂದು ಸೂತ್ರ
ಧಾರನು ನಾಂದಿಗೆಯ್ದು, ಮಾರಿಷನನ್ನು ಕರೆದು
“ಮಾರಿಷ! ಈ ಪರಿಷತ್ತು ಪೂರ್ವಿಕರಾದ ಕವಿಗಳ ರಸ
ಪ್ರಬಂಧಗಳನ್ನು ನೋಡಿರುವುದು, ಈಗ ನಾನು
ವಿಕ್ರಮೋರ್ವಶೀಯವೆಂಬ ಹೊಸ ನಾಟಕವನ್ನು
ಆಡಿಸುವೆನು ಆದುದರಿಂದ ಪಾತ್ರವರ್ಗವು ತಮ್ಮ
೨
ತಮ್ಮ ಪಾಠಗಳಲ್ಲಿ ಜಾಗರೂಕರಾಗಿರತಕ್ಕುದೆಂದು
ಹೇಳು.” ಎಂದು ಅವನನ್ನು ಕಳುಹಿಸಿ, ಮತ್ತೆ,
ಆರ್ಯಮಿಶ್ರರನ್ನು ನಮಸ್ಕರಿಸಿ, 'ತಮ್ಮ ಪ್ರೀತಿಗೆ
ಪಾತ್ರರಾಗಿರುವ ನಮ್ಮಲ್ಲಿ ದಾಕ್ಷಿಣ್ಯದಿಂದಲಾದರೂ,
ಕಥೆಯ ಅಥವಾ ನಾಯಕನ ದೊಡ್ಡಸ್ತಿಕೆಗಾದರೂ
ಕಾಲಿದಾಸನ ಈ ಕೃತಿಯನ್ನು ಸಾವಧಾನದಿಂದ
ಪರಾಂಬರಿಸಬೇಕು' ಎಂದು ವಿಜ್ಞಾಪಿಸಿಕೊಳ್ಳುವನು;
ಅಷ್ಟರಲ್ಲಿ ಯೇ, ಊರ್ವಶಿಯನ್ನು ಬಂದಿಯಾಗಿ ಹಿಡಿ
ದೊಯ್ದುದಕ್ಕಾಗಿ ಮೊರೆಯಿಡುವ ಅಪ್ಸರೆಯರ
ಆಕ್ರಂದನವು ಕೇಳಿಬರಲು, ನಾಟಕವು ಮೊದಲಾ
ಯಿತೆಂದು ಹೊರಟುಹೋಗುವನು.
ಅನ೦ತರ "ಎಲೆ ಅ೦ಬರ ತಲದಲ್ಲಿ ಗತಿ
ಯುಳ್ಳವರೂ ಸುರಪಕ್ಷಪಾತಿಗಳೂ ಆದವರೆ! ಬನ್ನಿ.
ಸಹಾಯಕ್ಕೆ ಬನ್ನಿ” ಎಂದು ಅಪ್ಸರೆಯರು ಮೊರೆ
ಯಿಡುವರು. ಸೂರ್ಯನ ಸೇವೆಗಾಗಿ ಹೋಗಿದ್ದ
ಪುರೂರವನು ಹಿಂತಿರುಗಿ ಬರುತ್ತಾ ದಾರಿಯಲ್ಲಿ
ಇದನ್ನು ಕೇಳಿ, ಬಂದು, ಅಭಯಪ್ರದಾನ ಮಾಡಿ,
ಅವರ ಭೀತಿಕಾರಣವನ್ನು ಕೇಳಲು, ಅವರು "ಮಹಾ
ರಾಜನು ಲಾಲಿಸಬೇಕು. ತಪಸ್ವಿಜನ ಭೀತನಾದ
ಮಹೇಂದ್ರನ ಸುಕುಮಾರವಾದ ಆಯುಧವಾಗಿ,
ರೂಪಗರ್ವಿತೆಯಾದ ಶ್ರೀದೇವಿಯನ್ನೂ ನಿರಾಕರಿಸು
ವಳಾಗಿ, ಸ್ವರ್ಗ ಅಲಂಕಾರಪ್ರಾಯಳಾದ ನಮ್ಮ
ಪ್ರಿಯಸಖಿ ಊರ್ವಶಿಯು ಕುಬೇರನರಮನೆಯಿಂದ
ಹಿಂತಿರುಗುತ್ತಿರಲು, ಚಿತ್ರಲೇಖಾದ್ವಿತೀಯೆಯಾದ
೩
ಆಕೆಯನ್ನು ಹಿರಣ್ಯಪುರ ನಿವಾಸಿಯಾದ ಕೇಶಿ ದಾನ
ವನು ತಟ್ಟನೆ ಮೇಲೆ ಬಿದ್ದು ಬಲವಂತದಿಂದ ಹೊತ್ತು
ಕೊ೦ಡು ಈಶಾನ್ಯದ ಕಡೆಗೆ ಹೋದನು?” ಎಂದು
ವಿಜ್ಞಾಪಿಸಿಕೊಳ್ಳುವರು. ಆಗ ಆತನು, ''ನೀವು ಭಯ
ಬಿಡಿರೆ”೦ದು ಅವರನ್ನು ನಂಬಿಸಿ ಕೂಡಲೆಆಕೆಯನ್ನು
ಬಿಡಿಸಿಕೊಂಡು ಬರಲು ಹೊರಟು ಹೋಗುವನು.
ರಂಭಾದ್ಯಪ್ಸರಸೆಯರು ಹೇಮಕೂಟ ಶಿಖರದಲ್ಲಿ
ನಿಂತು ರಾಯನು ದುರ್ಜಯರಾದ ದಾನವರನ್ನು
ಜಯಿಸಿ ಸಖಿಯನ್ನು ಕಾಪಾಡಬಲ್ಲನೆ? ಅಧವಾಒದಗುವ
ದೇವಾಸುರ ಯುದ್ಧದಲ್ಲಿ ಇಂದ್ರನಿಗೂ ಸಹಾಯವಾಗಿ
ಬರುವ ಆ ರಾಜರ್ಷಿಯು ಆಕೆಯನ್ನು ಬಿಡಿಸಲಾರ
ನೆಂದರೇನು ?” ಎ೦ದು ಹಿ೦ದು ಮುಂದು ನೋಡುತ್ತ
ಕುಳಿತಿರುವಲ್ಲಿ, ಆತನು ಸಖೀಸಮೇತಳಾದ ಊರ್ವ ಶಿ
ಯನ್ನು ಹಿಂದಕ್ಕೆ ಕರೆತರುತ್ತ ತನ್ನ ಸೋಮದತ್ತ
ವೆಂಬ ಹರಿಣಕೇತನದ ರಥದಲ್ಲಿ ಕಾಣಿಸಿಕೊಳ್ಳು
ವನು. ಆತನು ಬರುತ್ತ ದಾರಿಯಲ್ಲಿ, ಗಾಬರಿ
ಯಿಂದಲೂ ದಿಗಿಲಿನಿಂದಲೂ ಮೂರ್ಛೆ ಹೋಗಿರುವ
ಊರ್ವಶಿಯನ್ನು ಕುರಿತು ಎಲೆ ಸುಂದರಿ! ಸಮಾಧಾನ
ವನ್ನು ಹೊಂದು. ರಾಕ್ಷಸರಿಂದ ಸಂಭವಿಸಿದ್ದ ಭಯವು
ತ್ರಿಲೋಕ ರಕ್ಷಕನಾದ ವಜ್ರಿಯ ಅಪಾರವಾದ
ಮಹಿಮೆಯಿಂದ ದೂರವಾಯಿತು. ಇನ್ನು ಮುಂಜಾವ
ದಲ್ಲಿ ಬಿರಿಯುವ ಪದ್ಮಿನಿಯಂತೆ, ಉತ್ಪಲಕ್ಕೆಣೆಯಾದ
ನಿನ್ನ ವಿಸ್ತಾರವಾದ ಕಣ್ಣುಗಳನ್ನು ತೆರೆ” ಎಂದು ಸಮಾ
ಧಾನ ಮಾಡಿ ಕೊನೆಗೆ ಚಿತ್ರಲೇಖೆಯ ಉಪಚಾರ
೪
ದಿಂದ ಜೇತರಿಸಿಕೊಳ್ಳುತ್ತಿರುವ ಊರ್ವಶಿಯನ್ನು
ಕಂಡು, "ಚಂದ್ರನು ಮೂಡುತ್ತಿರಲು ಕತ್ತಲೆಯು
ಬಿಡುತ್ತಿರುವ ರಾತ್ರಿಯಂತೆ; ಕುಡುವನ್ನೆಳಿಸಿದರೆ ಪ್ರ
ಜ್ವಲಿಸುವ ರಾತ್ರಿಯದೀಪಜ್ಞಾಲೆಯಂತೆ ಕುಸಿದುಬಿದ್ದ
ದಡದ ಮಣ್ಣಿನಿಂದ ಬಗ್ಗಡವಾಗಿದ್ದ ಗಂಗಾನದಿಯ
ನೀರು ತಿಳಿಯುವಂತೆ. ಮೂರ್ಛಯು ಬಿಡು
ತ್ತಿರುವ ಈ ಕೃಶಾಂಗಿಯು ಕಣಣುತ್ತಿರುವಳು."
ಎಂದು ಸಂತೋಷಪಡುವನು.
ಊರ್ವಶಿಯು ಚೇತರಿಸಿಕೊಂಡು 'ಮಹೇಂದ್ರನಿಂ
ದಲ್ಲದಿದ್ದರೂ ಮಹೇಂದ್ರ ಸದೃಶ ಪ್ರಭಾವನಾದ ಈ
ರಾಜರ್ಷಿಯಿಂದ ತನಗೆ ಬಿಡುಗಡೆ'ಯಾದುದನ್ನು ಕೇಳಿ,
ರಾಜನ ರೂಪಲಾವಣ್ಯಗಳನ್ನು ನೋಡಿ ಮನಸೋತು,
"ರಾಕ್ಷಸರು ಮಾಡಿದುದೂ ಉಪಕಾರವೇ ಆಯಿತು?
ಎಂದುಕೊಳ್ಳುವಳು. ರಾಜನೂ ಈಕೆಯ ಅಪರೂಪ
ವಾದ ಸೌಂದರ್ಯಾದಿಗಳನ್ನು ನೋಡುತ್ತಾ 'ನಾರಾ
ಯಣ ಯಷಿಯನ್ನು ಮೊಹಗೊಳಿಸಲೆಂದು ಹೋದ
ಅಪ್ಸರೆಯರು ಆತನ ಊರೂದ್ಭವೆಯಾದ ಈಕೆಯನ್ನು
ನೋಡಿ ನಾಚಿಕೊಂಡರೆಂಬುದು ಸರಿಯೇಸರಿ! ಆದರೂ
ಈಕೆಯು ಆತಪಸ್ವಿಯ ಸೃಷ್ಟಿಯಾಗಿರಲಾರಳು.
ಕಾಂತಿ ಪ್ರದನಾದ ಚಂದ್ರನೋ; ಶೃಂಗಾರವೇ ಕವಿರಸ
ವಾಗುಳ್ಳ ಮದನನೋ, ಅಥವಾ ಪುಷ್ಪಾಕರವಾದ
ವಸಂತ ಮಾಸವೋ ಈಕೆಯನ್ನು ಸೃಜಿಸಿರಬೇಕಲ್ಲದೆ.
ವೇದಾಭ್ಯಾಸದಿಂದ ಜಡವೂ ವಿಷಯ ಪರಾಙ್ಮುಖವೂ
ಆದ ಮನಸ್ಸುಳ್ಳ ಆ ಪುರಾಣಋಷಿಯು ಈ ಮನೋಹರ:
೫
ವಾದ ರೂಪವನ್ನೆಂತು ಹುಟ್ಟಿಸಬಲ್ಲನು ?” ಎಂದು
ಆಶ್ಚರ್ಯಪಡುತ್ತಿರುವಾಗ, ಊರ್ವಶಿಯು ನನ್ನ ಸಖಿ
ಯಲ್ಲಿರುವ'ರೆಂದು ಕೇಳುವಳು. ಪುರೂರವನು 'ಇದೇ
ಸಮಯ” ವೆಂದು "ನಿನ್ನ ಸಖೀ ಜನವು ದುಃಖದಲ್ಲಿರು
ವುದು. ಅದೃಷ್ಟ ವಶದಿಂದ ಒಂದು ಸಲ ನಿನ್ನನ್ನು ನೋಡಿ
ದವರೂ ಕೂಡ ನೀನು ಕಣ್ಣೆದಿರುಗಿಲ್ಲದಿದ್ದರೆ ತವಕ
ಪಡುವರು. ಹೀಗಿರುವಲ್ಲಿ ಪಕ್ವವಾದ ಸ್ನೇಹವುಳ್ಳ ಜನ
ಗಳ ಗತಿಯೇನ ?' ಎಂದು ಹೇಳುವನು. ಊರ್ವಶಿಯ
ಆಮಾತನ್ನು ಕೇಳಿ ಸಂತೋಷಪಟ್ಟು 'ಚಂದ್ರನು ಅಮೃತ
ವನ್ನು ಸ್ರವಿಸುವುದರಲ್ಲಿ ಆಶ್ಚರ್ಯವೇನು? ಎಂದು
ಕೊಳ್ಳುವಳು. ಹೇಮಕೂಟಶಿಖಿರದಲ್ಲಿರುವ ಸಖಿಯರ
ಬಳಿಗೆ ಬರುತ್ತಾ, ಹೆಳ್ಳದಿಣ್ಣೆಗಳನ್ನು ಇಳಿದೇರುತ್ತಾ
ರಥವು ಕುಲುಕಲ್ಕು ಊರ್ವಶಿಯು ಮುಗ್ಗರಿಸಿ, ಪುರೂ
ರವನನ್ನು ಅವಲಂಬಿಸುವಳು, ಆತನೂ ಅದರಿಂದ
ಪುಳಕಿತನಾಗಿ ಆ ಸೌಖ್ಯವನ್ನನುಭನಿಸುತ್ತಾಆ ವೇಳಗೆ
ರಥವು ಬಂದು ನಿಲ್ಲಲು, ಇಳಿದು, 'ಈ ಚಿತ್ರಲೇಖಾ
ದ್ವಿತೀಯೆಯಾದ ಊರ್ವಶಿಯೊಡನಿರುವ ಈ ರಾಜರ್ಷಿ
ಯು ವಿಶಾಖಾ ಸಹಿತನಾದಚಂದ್ರನಂತಿರುವನು. ಸಖಿ
ಯೂ ಹಿಂತಿರುಗಿ ಬಂದಳು. ಮಹಾರಾಜನೂ ಅಕ್ಷತ
ಶರೀರನಾಗಿ ಹಿಂದಿರುಗಿದನು' ಎಂದು ನಲಿಯುತ್ತಿರುವ
ಸಖಿಯರ ಸಮೀಪಕ್ಕೆ ಆಕೆಯನ್ನು ಕರೆದುತಂದು
ಬಿಡುವನು.
ಆ ವೇಳೆಗೆ ಇಂದ್ರನ ಅಪ್ಪಣೆಯಿಂದ್ಕ ಊರ್ವಶಿ
'ಯನ್ನುಬಿಡಿಸಿಕೊಂಡು ಬರುವುದಕ್ಕೇ ಹೊರಟಿದ್ದ ಚಿತ್ರ
೬
ಸೇನನು ಆಲ್ಲಿಗೆ ಬಂದು 'ಕೇಶಿಯು ಊರ್ವಶಿಯನ್ನು
ಕೊಂಡು ಹೋದುದನ್ನು ನಾರದರಿಂದ ಕೇಳಿ, ಮೆಹೇಂ
ದ್ರನು ನನ್ನ ಕೈಕೆಳಗೆ ಗಂಧರ್ವಸೇನೆಯನ್ನಟ್ಟಿದನು
ನಾನುನಿನ್ನವಿಜಯವನ್ನು ಚಾರಣರಿಂದ ಕೇಳಿಇಲ್ಲಿಗೆ
ಬಂದೆನು. ಎಲೆ ವಯಸ್ಯನೆ ! ನೀನು ಇಂದ್ರನಿಗೆ ಮಹ
ತ್ಪ್ರಿಯವನ್ನು ಮಾಡಿರುವೆ ಪೂರ್ವದಲ್ಲಿ ನಾರಾಯಣ
ಋಷಿಯು ಕರುಣಿಸಿದ್ದ ಈಕೆಯನ್ನು ಇಂದು ದೈತ್ಯರ
ಹಸ್ತದಿಂದ ತಪ್ಪಿಸಿ ಹೊಸದಾಗಿ ನೀನು ಕೊಟ್ಟೆ. ಅದ
ರಿಂದ ಈಕೆಯನ್ನು ನೀನೇ ಕೊಂಡುಬಂದು ದೇವ
ರಾಜನನ್ನು 'ನೋಡಬೇಕು' ಎಂದು ವಿಜ್ಞಾಪಿಸಲು,
ರಾಯನು. "ಎಲೆ ಸಖನೆ! ಪರ್ವತಗಳ ಗುಹೆಗಳಲ್ಲಿ
ಆಗುವ ಸಿಂಹಗರ್ಜನೆಯ ಪ್ರತಿಧ್ವನಿಯೂ ಆನೆಗಳನ್ನು
ಕೊಲುವಂತೆ, ಆತನ ಕಡೆಯವರೂ ದ್ವೇಷಿಗಳನ್ನು
ಜಯಿಸುವರೆಂಬುವುದು ವಜ್ರಿಯಾದ ಇಂದ್ರ ನ ವೀರ
ತ್ವದ ಮಹಿಮೆಯೇ ಸರಿ. ಆದರ ಶತಕ್ರತುವನ್ನು
ನೋಡಲು ಇದು ಕಾಲವಲ್ಲ. ಅದರಿಂದ ನೀನೀ ಈಕೆ
ಯನ್ನು ಪ್ರಭುವಿನ ಬಳಿಗೆ ಕರದೊಯ್ಯುವನಾಗು'
ಎಂದು ಹೇಳಲು ಆತನೂ "ಹಾಗೆಯೇ ಆಗಲಿ"
ಎಂದು ಅವನನ್ನು ಕರೆದುಕೊಂಡು ಹೋಗುವನು.
ಊರ್ವಶಿಯು ಹೊರಟು ನಿಂತು "ಎಲೆ ಸಖಿ!
ಚಿತ್ರಲೇಖೆ! ಉಪಕಾರಿಯಾಗಿದ್ದರೂ ಈ ರಾಜರ್ಷಿ
ಯನ್ನು ನಾನು ಮಾತಾಡಿಸಲಾರೆನು ಅದರಿಂದ ನನ
ಗೋಸ್ಕರೆ ನೀನೇಮಾತಾಡು' ಎನ್ನಲು ಚಿತ್ರಲೇಖೆಯು
'ವಯಸ್ಯ! ಊರ್ವಶಿಯು ಅಪ್ಪ ಣೆಯಾದರೆ ಮಹಾರಾ
೭
ಜನ ಕೀರ್ತಿಯನ್ನು ಪ್ರಿಯಸಖಿಯಂತೆ ಮಹೇಂದ್ರ
ಲೋಕಕ್ಕೆ ಕರೆದುಕೊಂಡು ಹೋಗುವೆನು ಎಂದು ವಿ
ಜಾ ಪಿಸುವಳು.' ಎಂದರಿಕೆ ಮಾಡಲು, ರಾಯನೂ
ಹಾಟ ಗಿಬನ್ನಿ ಎಂದು ಬೀಳ್ಕೊಡುವನು.
ಊರ್ವಶಿಯೂ ಹೋಗುತ್ತಾ, 'ಲತೆಯ
ಬಾಹುಗಳಲ್ಲಿ ನನ್ನ ಏಕಾವಳಿಯು ಸಿಕ್ಕಿಕೊಂಡಿತು
ಅದನ್ನು ಬಿಡಿಸು' ಎಂದು ಚಿತ್ರಲೇಖೆಯನ್ನು ಪ್ರಾರ್ಥಿ
ಸುತ್ತ, ರಾಜನನ್ನು ಹಿಂತಿರುಗಿ ನೋಡಲು, ಚಿತ್ರ
ಲೇಖೆಯು ನಗುತ್ತಾ' ಹೌದು ಬಲವಾಗಿ ಸಿಕ್ಕಿಕೊಂಡಿರು
ವುದು ಬಿಡಿಸಲಸಾಧ್ಯವು ಎಂದು ತೋರುವುದು. ಆಗಲಿ
ನೋಡೋಣ' ಎಂದು ಹಾಸ್ಯಮಾಡುತ್ತಾ ಬಿಡಿಸಲು
ಊರ್ವಶಿಯು 'ಈ ಮಾತಿನ ನೆನೆಪಿರಲಿ' ಎನ್ನುವಳು.
ಇಬ್ಬರೂ ಎಲ್ಲರೊಡನೆ ಹೊರಟುಹೋಗುವರು.
ರಾಯನೂ 'ಊರ್ವಶಿಗೆ ಕ್ಷಣಕಾಲ ಗಮನಭಂಗ
ಮಾಡಿ ಆ ಅಪಾಂಗನೇತ್ರೆಯು ಅರ್ಧಮುಖವನ್ನು
ಹಿಂತಿರುಗಿಸಿ ನನ್ನನ್ನು ನೋಡಲು ಅವಕಾಶಮಾಡಿದ
ಲತೆಯೇ! ನೀನು ನನಗೆ ಪ್ರಿಯವನ್ನು ಮಾಡಿದೆ'
ಯೆಂದು ಅದನ್ನು ಅಭಿನಂದಿಸಿ, ಆ ವೇಳೆಗೆ ಇಂದ್ರಾ
ಪರಾಧಿಗಳಾದ ದೈತ್ಯರನ್ನು ಲವಣ ಸಮುದ್ರದಲ್ಲಿ
ಕೆಡಹಿ ಹಿಂತಿರುಗಿ ಬಂದು, ಮಹೋರಗವು ಬಿಲವನ್ನು
ಹೋಗುವಂತೆ ಬತ್ತಳಿಕೆಯನ್ನು ಸೇರಿದ ವಾಯವ್ಯಾಸ್ತ್ರ
ವನ್ನು ಸ್ವೀಕರಿಸಿ. ರಥವನ್ನು ಹತ್ತಿ, " ಮನ್ಮಥನು
ದುರ್ಲಭವಾದ ವಸ್ತುವಿನಲ್ಲಿಯೇ ಮನಸ್ಸನ್ನು ಲಗ್ನ
ಮಾಡುವನು. ರಾಜಹಂಸಿಯು ಮುರಿದ ತಾವರೆಯ
೮
ದಂಟಿನಿಂದ ಸೂತ್ರವನ್ನು ಎಳೆದುಕೊಂಡು ಹೋಗು
ವಂತೆ ಈ ಸುರಾಂಗನೆಯ ನನ್ನ ಶರೀರದಿಂದ ಮನ
ಸ್ಸನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗು
ತ್ತಿರುವಳು " ಎಂದು ಊರ್ವಶಿಯು ಹೋದ ಕಡೆ
ಯನ್ನೇ ನೋಡುತ್ತಾ ತಾನೂ ಹೊರಟುಹೋಗುವನು.
ಇಂತಿದು ಪ್ರಥಮಾಂಕವು
--------
ದ್ವಿತೀಯಾಂಕ
ಎರಡನೆಯಂಕದ ವಿಷ್ಕಂಭದಲ್ಲಿ ಅನ್ಯಮನಸ್ಕ
ನಾದ ಪತಿಯನ್ನು ನೋಡಿ ಕಾತರಳಾಗಿರುವ ಕಾಶಿ
ರಾಜ ಪುತ್ರಿಯಾದ ಮಹಾರಾಣಿಯಿಂದ 'ಸೂರ್ಯೋ
ಪಸ್ಥಾನದಿಂದ ಹಿಂತಿರುಗಿದ ಆರ್ಯಪುತ್ರನು ಶೂನ್ಯ
ಹೃದಯನಾಗಿ ಕಾಣುವನು ಕಾರಣವನ್ನು, ಆರ್ಯ
ಮಾಣವಕವಿಂದ ತಿಳಿದು ಬಾರೆಂ'ದು ಆಜ್ಞಾಪಿತ
ಳಾದ ನಿಪುಣಿಕೆಯು "ಪರಮಾನ್ನದಿಂದ ಬಿರಿಯುತ್ತಿ
ರುವ ಹೊಟ್ಟೆಯುಳ್ಳ ಬ್ರಾಹ್ಮಣಾರ್ಥದ ಬ್ರಾಹ್ಮಣ
ನಂತೆ" ರಾಜರಹಸ್ಯದಿಂದ ಬಿರಿಯುತ್ತಿರುವ ಹೊಟ್ಟೆ
ಯ ಮಾಣವಕನನ್ನು ಕಂಡು, "ಆರ್ಯ ಮಾಣ
ವಕನು ಇಲ್ಲಿಯೆ ಚಿತ್ರದ ಕಪಿಯಂತೆ ಏನೋ ಆಲೋ
ಚಿಸುತ್ತ ಕುಳಿತಿರುವನೆಂ" ದು ಅಲ್ಲಿಗೆ ಬರುವಳು.
ಮಾತಾಳಿಯಾದ ಮಾಣವಕನು ಆ ದುಷ್ಠ ಚೇಟಿಯ
ಮುಖವನ್ನು ಕಂಡು ಎದೆಸೀಳಿಕೊಂಡು ಹೊರಬೀಳುತ್ತಿ
ರುವ ರಾಜರಹಸ್ಯವನ್ನು ಮುಚ್ಚಿಕೊಳ್ಳುತ್ತಾ, ನಿಪು
ಕೆಯು ಬಂದ ಕಾರಣವನ್ನು ವಿಚಾರಿಸುವನು.
“ದುಃಖಿತೆಯಾಗಿದ್ದರೂ ಆರ್ಯಮಾಣವಕನಿಗೆ
ನನ್ನನ್ನು ನೋಡುವಷ್ಟು ದಾಕ್ಷಿಣ್ಯವಿಲ್ಲವಾಯಿತು.
ಚಿಂತೆಯಿಲ್ಲ. ನೀನೇ ಹೋಗಿ ಅವನನ್ನು ನೋಡಿಬಾ''
ಎಂದು ಮಹಾರಾಣಿಯು ಆಜ್ಞಾಪಿಸಲು ನಿಪುಣಿಕೆ
ಯು ಬಂದಳೆಂದು ತಿಳಿದು ದುೂಖಕಾರಣವನ್ನು
೧೦
ವಿಚಾರಿಸುವನು. ನಿಪಣೆಯಾದ ನಿಪುಣಿಕೆಯೂ
" ಮಹಾರಾಜನು ತಾನು ಹಂಬಲಿಸುತ್ತಿರುವ ಯಾ
ವಳೋ ಒಬ್ಬಳು ಹೆಂಗುಸಿನ ಹೆಸರಿನಿಂದ, ದೇವಿಯ
ನ್ನು ನುಡಿಯಿಸಿದನೆಂದು ಹೇಳುವಳು. ಮೊಂಕನಾದ
ಮಾಣವಕನು "ರಾಜನೇ ತನ್ನ ಗುಟ್ಟು ಬಿಟ್ಟು ಕೊಟ್ಟ
ಮೇಲೆ ತನಗೇನು? ಎಂದುಕೊಂಡು, "ಹಾಗಾದರೇನು
ಊರ್ವಶೀ ಎಂದು ಕರೆದನೋ? ಎಂದು ವಿಚಾರಿಸಿ,
"ಊರ್ವಶಿಯೆಂಬಪ್ಸರಸೆಯುಂಟು. ಆಕೆಯನ್ನು ನೋ
ಡಿ ಅರಸನಿಗೆ ಹುಚ್ಚು ಜಡಿದು ಕೇವಲ ದೇವಿ
ಯೊಬ್ಬಳನ್ನೇ ಅಲ್ಲ; ತನ್ನನ್ನೂ ಕೂಡ ಬಹುವಾಗಿ
ಪೀಡಿಸುತ್ತಿರುವನು. ಇರಲಿ. ಈ ಬಿಸಿಲುಗುದುರೆ
ಯಿಂದ ಮಹಾರಾಜನನ್ನು ಹಿಂತಿರುಗಿಸಿಯೆ ದೇವಿ
ಯನ್ನು ನೋಡುವೆನೆಂದು ನಾನರಿಕೆ ಮಾಡಿದೆನೆಂದು
ದೇವಿಗೆ ವಿಜ್ಞಾಪಿಸು? ಎಂದು ಹೇಳುವನು. ನಿಪುಣಿಕೆ
ಯೂ 'ಭಟ್ಟನಗುಟ್ಟನ ಕೋಟೆಯನ್ನುಗೆದ್ದುದಾಯಿತು'
ಎಂದು ಹಿಂತಿರುಗಲು ವಿದೂಷಕನೂ 'ಲೋಕದಲ್ಲಿ
ರುವ ಪ್ರಜೆಗಳ ತಮೋವೃತ್ತಿಯನ್ನು ಧ್ವಂಸಮಾಡು
ವುದರಲ್ಲಿ, ದೇವನೂ, ಸವಿತೃ ದೇವನೂ ಸಮಾನ
ವಾದ ಅಧಿಕಾರವುಳ್ಳವರು. ಹಾಗೆಯೇ, ಸವಿತಾರನು
ಮಧ್ಯಾಹ್ನದ ಆರನೆಯ ಭಾಗದಲ್ಲಿ ಒಂದು ಕ್ಷಣ
ಕಾಲ ನಡುಬಾನಿನಲ್ಲಿ ನಿಲ್ಲುವಂತೆ ನೀನೂ ಅದೇ
ಹೊತ್ತಿನಲ್ಲಿ ತುಸಹೊತ್ತು ವಿಶ್ರಮವನ್ನು ಹೊಂದುವೆ'
ಎಂದು ಹಾಡುವ ವೈತಾಳಿಕಸಿಂದ ರಾಜನು ಬರುತ್ತಿ
ರುವುದನ್ನು ಅರಿತು, ತಾನೂ ರಾಜನ ಪಾರ್ಶ್ವವರ್ತಿ
ಯಾಗಲು ಹೋಗುವನು.
೧೧
ಹೀಗೆ ವಿಷ್ಕಂಭವನ್ನಾಚರಿಸಿದನಂತರ, ಉತ್ಕಂಠಿತ
ನಾದ ರಾಜನನ್ನೂ ವಿದೂಷಕನನ್ನೂ ಕವಿಯು
ಉದ್ಯಾನದಲ್ಲಿ ಪ್ರವೇಶಿಸುವನು, ವಿರಹದಿಂದ
ವ್ಯಥಿಸುತ್ತಿರುವ ರಾಜನು ತನ್ನ ಚಿಂತೆಯಲ್ಲಿರಲು
ವಿದೂಷಕನು, 'ಕಾಶಿರಾಜ ಪುತ್ರಿಯು ವ್ಯಥಿಸುತ್ತಿರು
ವಳು' ಎಂದು ವಿಜ್ಞಾಪಿಸುವನು. ರಾಜನು ಕೂಡಲೆ
'ನೀನು ಗುಟ್ಟನ್ನು ಬಿಟ್ಟು ಕೊಟ್ಟಿಲ್ಲವಲ್ಲಾ?' ಎಂದು
ಕೇಳಲು, ವಿದೂಷಕನು 'ವಂಚಿತನಾದೆನೆಂ'ದುಕೊಂಡು
ಮೌನವಾಗಿದ್ದು ಮತ್ತೆ ಕೇಳಿದ ಧೊರೆಗೆ 'ನೋಡು
ನಿನಗೂ ಉತ್ತರ ಕೊಡದಂತೆ ನಾಲಗೆಯನ್ನು ಹೇಗೆ
ಕಟ್ಟಿಕೊಂಡಿರುವೆನು?'ಎಂದು ಹೇಳಲು, ರಾಜನು "ಸರಿ?
ಯೆಂದು ಆ ಮಾತುಬಿಟ್ಟು 'ಅಯ್ಯಾ! ನನ್ನನ್ನುವಿನೋ
ದಪಡಿಸಲು ಯಾವುದಾದರೂ ಒಂದುಪಾಯವನ್ನು
ಹೇಳು'ಎನ್ನಲು ಹೊಟ್ಟೆಬಾಕನಾದ ವಿದೂಷಕನು 'ಬಾ
ಬಿಡದಿಗೆಹೋಗೋಣ, ಅಲ್ಲಿ ಭಕ್ಷ್ಯಭೋಜ್ಯಗಳಿರು
ವವು' ಎನ್ನುವನು. ಧೊರೆಯು 'ಅಲ್ಲಿ ನಿನಗೆ ಬೇಕಾದ
ವಸ್ತುಗಳಿರುವುದರಿಂದ ನಿನಗೆ ಸಂತೋಷವಾದರೂ
ದುರ್ಲಭವಾದ ವಸ್ತುವಿನಲ್ಲಿ ಮನಸ್ಸು ನೆಟ್ಟು, ಲಭಿ
ಸದ ಪ್ರಾರ್ಥಕೆಯುಳ್ಳ ನನಗೆ ಅಲ್ಲೇನಿರುವುದು ?'
ಎಂದು ವ್ಯಧಿಸಲು ವಿದೂಷಕನು ಮತ್ತೆ 'ತಡೆ.
ನಿನ್ನನ್ನು ಆ ಊರ್ವಶಿಯು ನೋಡಿರುವಳಷ್ಟೆ? ಹಾಗಾ
ದರೆ ಅವಳು ನಿನಗೆ ದುರ್ಲಭಳಲ್ಲ.' ಎಂದು ಹೇಳುವನು.
ರಾಜನು ಮತ್ತೆ 'ಸದ್ರೂಪಕ್ಕೆ ಆಕೆಯಲ್ಲಿರುವ ಪಕ್ಷ
ಪಾತವಾದರೋ ಅಲೌಕಿಕವಾದುದೆ'ನ್ನಲು ಮತ್ತೆ
ನಿದೊಷಕನು 'ಹಾಗಾದರೆ ಕುರೂಪದಲ್ಲಿ ನಾನು
೧೨
ಹೇಗೊಹಾಗೆ ಸುರೂಪದಲ್ಲಿ ಆಕೆಯು ಆದ್ದಿತೀಯಳೆ?'
ಎಂದು ಪ್ರಶ್ನೆ ಮಾಡಲು, ರಾಜನು 'ಮಾಣವಕ!ಪ್ರತ್ಯಂ
ಗವನ್ನೂ ವರ್ಣಿಸುವುದೆಂದಕೆ ಅದು ಅಶಕ್ಕ ವು. ಒಟ್ಟಿಗೆ
ಹೇಳುವೆನು ಕೇಳು. ಆಕೆಯು ಒಡವೆಗೆ ಒಡವೆಯು. ಆ
ಲಂಕಾರಕ್ಕೆ ಆಲಂಕಾರವು. ಆಕೆಯ ಶರೀರವು ಉಪಮಾ
ನಕ್ಕೆಲ್ಲ ಉಪಮಾನನು ಎಂದು ವರ್ಣಿಸಲು, ವಿದೂಷ
ಕನು ಅದಕ್ಕಾಗಿಯೇ ದಿವ್ಯರಸ ಸಾಭಿಲಾಷಿಯಾದ ನೀನು
ಜಾತಕವ್ರತವಹ್ಹು ಗ್ರಹಿಸಿರುವೆ!' ಎಂದು ಹಾಸ್ಯಮಾ
ಡುವನು. ಏಕಾಂತಪ್ರಿನಾದ ರಾಜನು ಉದ್ಯಾನವನ
ಕಾಗಿ ಹೊರಟು 'ಮಾಧವಿಯ ಸೊಗನ್ನು ಹೆಚ್ಚೆ
ಸುತ್ತ ಮೊಲ್ಲೆ ಯ ಬಳ್ಳಿ ಯನ್ನು ಕುಣಿಸುತ್ತಾ ಸ್ನೇಹ
ದಾಕ್ಷಿಣ್ಯಗಳಿಂದ ಕೂಡಿದ ಈ ದಕ್ಷಿಣ ಮಾರುತನು
ಕಾಮಿಯಂತಿರುವನು.' ಎಂದು ತನ್ನವಸ್ಥೆಯನ್ನೇ ಹೇಳಿ
ಕೊಳ್ಳುತ್ತಾ ಪ್ರಮುದವನ್ನು ಸೇರಿ, 'ತಾನು ತಾಪ
ಶಾಂತಿಗೆಂದು ಉದ್ಯಾನಕ್ಕೆ ಬಂದುದು ನದಿಯಲ್ಲಿ
ಕೊಚ್ಚಿ ಹೋಗುತ್ತಿರುವವನು ನದಿಗೆದುರಾಗಿಯೇ ಈಸ
ಲೆತ್ನಿಸಿದಂತಾಯಿತು.' ಎಂದು ವ್ಯಧಿಸುವನು.
"ಚಿಂತಿಸಬೇಡ. ಬಿನ್ನ ಯಿಷ್ಟವನ್ನು ಸಂಪಾದಿಸಿ
ಕೊಡುವ ಆನಂಗನೇ ನಿನಗೆ ಸಹಾಯಕಾರಿಯಾಗುವ
ನೆಂ'ದು ಮತ್ತೆ ಸಮಾಧಾನ ಹೇಳುವ ವಿದೂಷಕನಮಾ
ತನ್ನು ಮನ್ನ್ನಿಸುತ್ತಾ 'ಬರುತ್ತಿರುವ ಈವಸಂತದ ಸೊಗ
ನೋಡೆಂದ ವಿಭೂಪಷಕನಿಗೆ 'ಹೌದು. ಇಲ್ಲಿ
ನೋಡು ಹೆಂಗಸಿನುಸೆಳ್ಳುಗುರಿನಂತೆ ಮೊದಲಲ್ಲಿ ಮಾ
ಸಲುಕೋಪಾಗಿಯೂ, ಎರಡು ಪಕ್ಕಗಳಲ್ಲಿ ಕೊಂಚ
ಕಪ್ಪಗೂ ಇರುವೆ ಈ ಕೆಂಪು ಗೋರಂಟಿಯೂ, ಉತ್ಕೃ
೧೩
ಷ್ಟವಾದ ಕೆಂಪುಬಣ್ಣದಿಂದ ಕೂಡಿ ಚಿಗುರು ಒಡೆ
ಯುತ್ತಿರುವ ಬಾಲಾಶೋಸಕವುೂ. ಸ್ಪಲ್ಬವಾದ ಪುಷ್ಟ
ರಜದಿಂದ ಹೊಗೆಯ ಬಣ್ಣವಾಗಿರುವ ಮಾವಿನ ಹೂ
ಗೊಂಚಲೂ ಕೂಡಿರಲು, ಈ ವಸಂತಲಕ್ಷ್ಮಿಯು ಮು
ಗ್ಧತ್ವ ಯೌವನಗಳ ನಡುವಿರುವಳು' ಎಂದು ತನ್ನ ಅನು
ರಾಗದ ಸ್ಥಿತಿಯ ನ್ನೇ ಹೇಳಿಕೊಳ್ಳುತ್ತಾ, ಅವನ
ಕೋರಿಕೆಯಂತೆ ಬಂದು ಕರಿಯ ಮಣಿಶಿಲೆಯ
ಕಲ್ಲುಹಲಿಗೆಯ ಮೇಲೆ ಕುಳಿತುಕೊಳ್ಳುವನು.
ಎದುರಿಗೆ ಇರುವ ಲತೆಗಳನ್ನು ನೊಡಿ ಮನಸ್ಸನ್ನು
ವಿನೋದಪಡಿಸಿಕೋ ಎಂದ ವಿದೂಷಕನಿಗೆ, "ವಯಸ್ಯ!
ಆ ಅಂಗನೆಯನ್ನು ನೋಡಿದ ಕಣ್ಣಿಗೆ, ಬೇಕಾದಷ್ಟು
ಹೂವ್ವು ಬಿಟ್ಟು ನೆಲದಲ್ಲಿ ಮಲಗಿ ಬಿಟ್ಟಿರುವ ಗಿಡಗ
ಳೂ ಉಪವನ ಲತೆಗಳೂ ಸೊಗಸವು' ಎಂದ, ವ್ಯಧಿ
ಸುತ್ತಾ ಅವನನ್ನು 'ನನ್ನ ಇಷ್ಟವೀಡೇರುವಂತೆ ಒಂದು
ಪಾಯವನ್ನು ಹುದುಕೆಂ'ದು ಪ್ರಾರ್ಥಿಸವನು. ವಿದೂ
ಷಕನು ನಕ್ಕು "ಅಹಲ್ಯಾ ಕಾಮಕವಾದ ಇಂದ್ರನಿಗೆ
ಸಚಿವನಾದ ವಜ್ರವೂ ಊರ್ವಶೀ ಕಾಮುಕನಾದ
ನಿನಗೆ ಸಚಿವನಾದ ನಾನೂ ಇಬ್ಬರೂ ಉನ್ಮತ್ತರೇ !'
ಎ೦ದು ತನ್ನ ವಜ್ರಶುಂಠತೆಯನ್ನು ಹೇಳಿ ಕೊಳ್ಳುತ್ತಾ
ಮತ್ತೆ ಪ್ರಾರ್ಥಿತನಾಗಿ "ಹಾಗೆಯೇ ಆಗಲಿ. ಮತ್ತೆ
ನಿನ್ನ ಗೋಳಾಟದಿಂದ ನನ್ನ ಸಮಾಧಿಗೆ ಭಂಗತರ
ಬೇಡ' ವೆನ್ನುತ್ತಾ: ಒಂದು ಶುಭಶಕುನವನ್ನು ಕಾಣು
ವನು. ಆ ವೇಳೆಗೆ ರಾಜನೂ 'ಆ ಪೂರ್ಣೇಂದು ಮುಖಿ
ಯಾದರೊ ಆಸುಲುಭಳು. ಅನಂಗನ ಚೇಷ್ಟೆಯಾ
ದರೊ ವಿಚಿತ್ರವಾಗಿರುವುದು.. ಆದರೂ ಆಶೆಯು
೧೪
ಇನ್ನೇನು ಕೈಸೇರಿತು ಎನ್ನುವಾಗ ಇರುವಂತೆ ಮನಸ್ಸು
ಸಂತೋಷವನ್ನು ಹೊಂದಿರುವುದು" ಎಂದು ಕೊಳ್ಳು
ತ್ತಿರುವಾಗ ಊರ್ವಶೀ ಚಿತ್ರಲೇಖೆಯರು ಬರುವರು.
ಚಿತ್ರಲೇಖೆಯು "ಎಲೆ ಸಖಿ! ಊರ್ವಶಿ! ಹೇಳದೆ
ಕೇಳದೆಯೆ ಎಲ್ಲಿಗೆ ಹೊರಟರುವೆ? ರಾಜರ್ಷಿಯಾದ
ಪುರೂರವನ ಬಳಿಗೇನಾದರೂ ಹೊರಟರುವೆಯಾ?
ಹಾಗಾದರೆ ಯಾರನ್ನು ಮೊದಲು ಕಳುಹಿಸಿರುವೆ?
ನಿನ್ನನ್ನು ಹೋಗೆಂದವರು ಯಾರು?” ಎಂದು ಕುತೂ
ಹಲದಿಂದ ಕೇಳಲು, ಆಕೆಯು "ಸಖಿ! ಅಂದು ಹೇಮ
ಕೂಟದಲ್ಲಿ ಏಕಾವಳಿಯು ಸಿಕ್ಕಿಕೊಳ್ಳಲು ಬಿಡಿಸೆಂ
ದಾಗ ಏನ ಹೇಳಿದೆ ಜ್ಞಾಪಿಸಿಕೊ, ಎಂದು ನುಡಿದು,
"ನಾಣ್ಗೇಡಿಯಾದ ನಾನಲ್ಲಿಗೇ ಹೊರಬರುವೆನು
ಹೃದಯವು ಮೊದಲೇ ಹೋಗಿರುವುದು ಮದನನು
ನನ್ನನ್ನು ನಿಯೋಜಿಸಿರುವನು. ಅದರಿಂದ ನಡೆ
ವಿಘ್ನ ಬರದ ಮಾರ್ಗದಲ್ಲಿ ಹೋಗೋಣವೆಂ' ದಳು.
ಅದಕ್ಕೆ ಚಿತ್ರಲೇಖೆಯು 'ಸಖಿ! ಕಾತರಳಾಗಬೇಡ-
ದೇವಗುರುಗಳು ಉಪದೇಶಿಸಿರುವ ಶಿಖಾಬಂಧಿನೀ
ವಿದ್ಯಾಬಲದಿಂದ ಜೀವಶತ್ರು ಗಳು ಯಾರಿಗೂ
ನಾವು ಕಾಣಿಸುವುದಿಲ್ಲ' 'ಈ ಗಂಗಾ ಯಮುನಾ
ಸಂಗಮದಲ್ಲಿ ಇದೋ ತನ್ನನ್ನು ತಾನು ನೋಡಿ
ಕೊಳ್ಳುತ್ತಿರುವಂತಿರುವ ಪ್ರತಿಷ್ಟಾನ ನಗರದ
ಚೂಡಾ ಮಣಿಯಂತಿರುವ ಆ ರಂಜರ್ಷಿಯ ಅರ
ಮನೆಯು, 'ಇಳಿದು ಆಪನ್ನಾನು ಕಂಪಿಯಾದ ರಾಜ
ನೆಲ್ಲಿರುವನೋ ನೋಡೋಣ ಬಾರೆಂದು ಮುಂದೆ
೧೫
ನಡೆದು, ನಂದನ ವನದ ಒಂದು ಭಾಗದಂತಿರುವ
ಪ್ರಮದ ವನಕ್ಕೆ ಬಂದು ಅಲ್ಲೇ ಯಿರುವ ರಾಜನನ್ನು
ನೋಡಿ, "ಇದೋ! ಹುಟ್ಟುತ್ತಿರುವ ಚಂದ್ರನು ಬೆಳ
ದಿಂಗಳ ನಿರೀಕ್ಷಣೆಯಲ್ಲಿರುವಂತೆ ನಿನ್ನನ್ನೇ ಎದುರು
ನೋಡುತ್ತಿದ್ದಾನೆ ಬಾ. ಕಾಣಿಸಿಕೊಳ್ಳೋಣ." ಎನ್ನು
ವಳು. ಊರ್ವಶಿಯ್ಕು 'ಸಖಿ! ಈಗ ಈ ರಾಜ
ರ್ಷಿಯು ಮೊದಲಿಗಿಂತಲೂ ಪ್ರಿಯದರ್ಶನನಾಗಿ
ಕಾಣುವನು. ಆದರೂ ತಡೆ. ತಿರಸ್ಕರಿಣಿಯಿಂದ ಒಂದು
ಗಳಿಗೆ ಕಣ್ಮಮರೆಯಾಗಿದ್ದು ಮಹಾರಾಜನು ವಯಸ್ಯ
ನೊಡನೆ ಏಕಾಂತದಲ್ಲಿ ಏನು ಯೋಜಚಿಸುತ್ತಿರುವನೋ
ನೋಡೋಣ " ಎನ್ನುವಳು ಇಬ್ಬರೂ ಹಾಗೆಯೇ
ಮಾಡುವರು.
ಆ ವೇಳೆಗೆ ವಿದೂಷಕನೂ " ವಯಸ್ಕ! ದುರ್ಲಭ
ರಾದ ಪ್ರಣಯಿ ಜನರು ದೊರೆಯುವ ಉಪಾಯವೊಂ
ದನ್ನು ಕಂಡು ಹಿಡಿದಿರುವೆನು" ಎನ್ನಲು, ಊರ್ವಶಿಯು
ಆದನ್ನು ಕೇಳಿ "ಈತನು ಪ್ರಾರ್ಥಿಸಿದರೂ, ಒಲಿ
ಯದೆ ವಿರೋದವಾಡುವ ಆ ಹೆಂಗಸಾದರೂ
ಯಾರು?” ಎಂದು ವಿಚಾರಪರಳಾಗುವಳು, ಚಿತ್ರಲೇ
ಖೆಯು "ದಿವ್ಯದೃಷ್ಟಿಯಿಂದ ನೋಡಿನ್ನಲು "ಆತನ
ಮನೋಗತೆಯು ಬೇರೆಯಾಗಿದ್ದರೆ ಏನುಗತಿ?
ಎಂದು ಹೆದರುವಳು. ವಿದೂಷಕನು ಮಾತು
ಕಿವಿಗೆ ಬೀಳದೆ ಕುಳಿತಿದ್ದ ರಾಜನನ್ನು ಮತ್ತೆ ಸಂ
ಬೋಧಿಸಿ, "ಸ್ವಪ್ನದಲ್ಲಿ ಪ್ರಿಯೆಯನ್ನು ತೋರಿಸುವ
ನಿದ್ರೆಯನನ್ನಾದರೂ ಸೇವಿಸು. ಅಥವಾ ಆ ಊರ್ವ
ಶಿಯ ಪ್ರತಿಕೃತಿಯನ್ನು ಚಿತ್ರದಲ್ಲಿ ಬರೆದು ನೋಡಿ
೧೬
ಯಾದರೂ ಸಂತೋಷಪಡು' ಎನ್ನುವನು. ಅರಸನು
ಹೃದಯದಲ್ಲಿ ಕಾಮಶರವು ನೆಟ್ಟಿರಲು ನಿದ್ದೆಯು
ಬಂದು ಕನಸು ಬೀಳುವುದೆಂತು? ನಲ್ಲೆಯನ್ನು ಕಾಣುವು
ದೆಂತು? ಕಣ್ಣಿನಲ್ಲಿ ನೀರು ತುಂಬಿರಲು ಚಿತ್ರ ಲೇಖನ
ವೆಂತು ಸಾಧ್ಯವು?' ಎಂದು ಚಿಂತಿಸುವನು. ಊರ್ವ
ಶಿಯು ಇದನ್ನು ಕೇಳಿಯೂ 'ನನಗೆ ತೃಪ್ತಿಯಾಗ
ಲಿಲ್ಲ'ವೆನ್ನುತ್ತಿರಲು, ವಿದೂಷಕನು 'ಇಲ್ಲಿಂದ ಮುಂ
ದಕ್ಕೆ ನನ್ನ ಬುದ್ದಿಯೋಡುವುದಿಲ್ಲ' ವೆಂದು ಸುಮ್ಮ
ನಾಗಲ್ಕು ಆರಸನು ಮತ್ತೆ 'ಅಯ್ಯಾ ! ಆಕೆಯು
ತುದಿಯಿಂದ ತಾಳಿನವರೆಗೂ ಕಠಿಣವಾದ ನನ್ನ
ಮನೊರೋಗವನ್ನು ಕಾಣಳು. ಆಥವಾ
ತನ್ನ ಪ್ರಭಾವದಿಂದ ತಿಳಿದಿದ್ದರೂ, ನನ್ನನ್ನು
ಕಡೆಗಂಡಿರುವಳು. ಹೀಗೆ ಪ್ರಯೋಜನವಿಲ್ಲದಿರು
ವಂತೆ ಆ ಜನದಲ್ಲಿ ನನ್ನ ಮನಸ್ಸನ್ನು ಸಿಲುಕಿಸಿದ
ಪಂಚಬಾಣಮ ಈಗಲಾದಧದರೂ ಕೃತಕೃತ್ಯನಾಗಲೆಂ'ದು
ವ್ಯಧಿಸುವನು. ಅದನ್ನು ಪೇಳಿ ಊರ್ವಶಿಯು ಬಲು
ನೊಂದು "ಅಯ್ಯೋ ನನ್ನನ್ನು ಈತನು ಇಂತು ನಿಂದಿ
ಸುವನು. ನಾನಾದರೊ ಈತನ ಮುಂದೆ ನಿಂತು
ಕೊಳ್ಳಲಾರೆನು." ಎಂದು ತನ್ನ ಪ್ರಭಾವದಿಂದ
ಒಂದು ಭೂರ್ಜ ಪತ್ರವನ್ನು ನಿರ್ಮಿಸಿ, ಅದನ್ನು ಬರೆದು
ಆತನ ಮುಂದಿಡುವಳು. ವಿದೂಷಶಕನು ಗಾಳಿಯಲ್ಲಿ
ತೂರಿಕೊಂಡು ಬರುವ ಆ ಭೂರ್ಜ ಪತ್ರವನ್ನು ಕಂ
ಡು ಹಾವಿನ ಪೊರೆಯೆಂದು ಭೀತವಾಗಲು ರಾಜನು
ಅದನ್ನು ಮೋಡಿ “ಇದು ಹಾವಿನ ಪೊರೆಯಲ್ಲ. ಬರೆದಿರು
ವಭೂರ್ಜಪತ್ರವೆಂ`ದು ತೆಗೆದುಕೊಂಡು ವಿದೂಷಕನು
೧೭
ಹೇಳಿದಂತೆಯೇ ಅದು ಊರ್ವಶಿಯ ಪ್ರೇಮಲೇಖವಾ
ಗಿರಲು, ಅದನ್ನು ಕೇಳೆಂದು ವಿದೂಷಕನಿಗೆ ಓದಿ
ಹೇಳುವನು, "ಎಲ್ಲಿ ಸ್ವಾಮಿಯೇ ! ತಾವು ನನ್ನಲ್ಲಿ
ವಿಶ್ವಾಸವಿಟ್ಟು ಬಹುಮಾನಮಾಡಿದಿರಿ, ಅನುರಕ್ತ
ರಾದ ತಮ್ಮಲ್ಲಿ ನಾನೂ ಹಾಗೆಯೇ ಇರುವೆನು.
ಹಾಗಲ್ಲದಿದರೆ ಲಲಿತವಾದ ಪಾರಿಜಾತದ ಹೂವ್ವಿನ.
ಹಾಸಿನಲ್ಲಿ ಹೊರಳುವ ನನಗೆ, ಸುಖವಾದ ನಂದನ
ವನದ ಗಾಳಿಯೂ ಬೆಂಕಿಯಂತಾಗುವುದೆ?" ಎಂದೋ
ದಲು ಅರಸನೇನೆನ್ನುವನೋ ಎಂದು ಕುತೂಹಲಿ
ಯಾಗಿರುವಊರ್ವಶಿಯನ್ನು"ಕೊರಗಿದ ಕಮಲದಂತಿ
ರುವ ಅಂಗಗಳೇ ಹೇಳುತ್ತಿರುವುದಲ್ಲ" ಎಂದು ಚಿತ್ರ
ಲೇಖೆಯು ಸಮಾಧಾನಪಡಿಸಲು, ರಾಯನು
ಸಮಾನವಾದನುರಾಗದಿಂದ ಸುಂದರವಾಗಿಯೂ
ಲಲಿತವಾದ ಅರ್ಥದಿಂದ ಕೂಡಿರುವುದಾಗಿಯೂ
ಇರುವ ಪ್ರೇಯಸಿಯಪ್ರೇಮ ಲೇಖನವು ಕೈಸೇ
ರಲು, ಮದಿರೇಕ್ಷಣೆಯು ಬಂದು, ನನ್ನ ಮುಖದಲ್ಲಿ
ಮುಖವನ್ನಿಟ್ಟಂತಾಯಿತು? ಎಂದು ಸಂತೋ
ಷಿಸಿ, ವಯಸ್ಯ! ನನ್ನ ಬೆವರುವ ಕೈ ಬೆರಳಿನಿಂದ ಅಕ್ಷ
ರವು ಮಾಸಿ ಹೋಗುತ್ತದೆ. ಇದನ್ನು ನಿನ್ನ ಕೈಯ್ಯ
ಲಿಟ್ಟುಕೊಂಡಿರು ಎ೦ದು ಕೊಡುವನು. ವಿದೂಷ
ಕನೂ ಹಾಗಾದರೆ ಊರ್ವಶಿಯು ಆಶೆಯ ಗಿಡದ
ಹೂವನ್ನು ತೋರಿಸಿ ಫಲದಲ್ಲಿ ವಿಮುಖಳಾಗು
ವಳೇ?” ಎನ್ನುತ್ತಿರಲು ಊರ್ವಶಿಯ ಸೂಚನೆ
ಯಂತೆ ಚಿತ್ರ ರೇಖೆಯು ರಾಜನ ದೃಷ್ಟಿಗೆ ಗೋಚರ
ವಾಗಿ, "ರಾಯನೇ! ಸುರವೈರಿಯಿಂದಾದ ಸಂಕಟ
— ೧೮---------------------------------------
ದಲ್ಲಿ ಶರಣನಾದ ಮಹಾರಾಜನು ತನ್ನ ದರ್ಶನ
ವನ್ನೇ ನಿಮಿತ್ತವಾಗಿಟ್ಟುಕೊಂಡು ನನ್ನನ್ನು ಸಂಕಟ
ಪಡಿಸುವ ಮದನನಿಂದಲೂ ಕಾಪಾಡಬೇಕು ಎಂದೂ
ರ್ವಶಿಯು ವಿಜ್ಞಾಪಿಸುವಳೆಂ''ದು ಅರಿಕೆಗೈಯ್ಯಲು,
ರಾಯನು "ಆಕೆಯು ಮಾತ್ರ ಪರ್ಯುತ್ಸುಕಳಾಗಿರು
ವಳೆಂದು ಹೇಳುವೆಯಲ್ಲದೆ, ಪುರೂರವನ ಕಷ್ಟ
ವನ್ನು ನೋಡೆಯಲ್ಲ! ನಮ್ಮಿಬ್ಬರಿಗೂ ಪ್ರಣಯವು
ಸಮವಾಗಿರುವುದು ಕಾದಿರುವಾಗಲಲ್ಲವೆ, ಎರಡು
ಉಕ್ಕಿನ ತುಂಡುಗಳು ಒಂದನ್ನೊಂದು ಹೊಂದಿ
ಕೊಳ್ಳುವುವು?'' ಎಂದು ಹೇಳಿಕೊಳ್ಳಲು, ಚಿತ್ರಲೇ
ಖೆಯು "ಸಖಿ! ಊರ್ವಶಿ! ಇತ್ತ ಬಾ ಪ್ರಿಯತಮನ
ಅವಸ್ಥೆಯು ನಿನ್ನಿದಕ್ಕಿಂತಲೂ ದಾರುಣವಾಗಿರುವುದ
ರಿಂದ ನಾನುಆತನ ದೂತಿಯೇ ಆದೆನೆಂ"ದಳು.
ಊರ್ವಶಿಯು "ಎಲೆ ಚಂಚಲೆಯೆ! ನನ್ನನ್ನು ಎಷ್ಟು
ಬೇಗ ಬಿಟ್ಟೆ?” ಎನ್ನಲು, ಚಿತ್ರಲೇಖೆಯೂ "ಆಗಲಿ,
ಇನ್ನೇ ನು ಒಂದು ಗಳಿಗೆಯೊಳಗಾಗಿ ಯಾರು ಯಾರ
ಮಗ್ಗ ಬಿಡುವರೆಂಬುವುದು ತಿಳಿಯುವುದು. ಇರಲಿ.
ಮೊದಲು ಮಜರೆ ಮಾಡು” ಎವ್ಹೆಲ್ಲು, ಊರ್ವಶಿಯ
ನಾಚುತ್ತಾ ಮುಂದೆ ಬಂದು ಆಮಹಾಗಾಜನಿಗೆ ಜಯ
ವಾಗಲಿ ಜಯವಾಗಲಿ? ಎಂದು ಮರ್ಯಾದಿ ಮಾಡಲು
ರಾಯನು ತುಂಬಿದ ಸುವತ್ಮಾ ನದಿಂದ "ಸುನ್ಸರಿ! ಸಹೆ
ಸ್ರಾಕ್ಷನಿಗೆ ಜಯವಾಗಲಿ ಎನ್ನುತ್ತಿದ್ದವಳು ನನ್ನನ್ನೂ
ಕುರಿತು ಜಯವಾಗಲೆಂದವಮೇಲೆ ನನ್ನಿಂದ ಸರ್ವವೂ
ಜಿತವೇ ಆಯಿತು? ಎಂದುಪಚರಿಸಿ ಕೆಲದಲ್ಲಿ ಕುಳ್ಳಿ
ರಿಸಿಕೊಳ್ಳಲು, ಹಾಸ್ಕಪ್ರಿಯನಾದ ಬ್ರಶ್ಮ ಬಂಧುವು
೧೯
"ಅಯ್ಯೋ! ನಿಮ್ಮರಾಜ್ಯದಲ್ಲದೇನದು? ರಾಜಸಖನಾದ
ಬ್ರಾಹ್ಮಣನಿಗೆ ವಂದಿಸುವುದಿಲ್ಲವೇನು ?” ಎಂದು ಬಲ
ವಂತದಿಂದ ವಂದಿಸಿಕೊಳ್ಳುವನು. ಆ ವೇಳೆಗೆ ದೇವ
ದೂತನು "ಎಲೆ ಚಿತ್ರಲೇಖೆ! ಊರ್ವಶಿಯನ್ನು ತ್ವರೆ
ಗೊಳಿಸು. ಮರುತ್ಪತಿಯಾದಇಂದ್ರನು ಲೋಕಪಾಲ
ರೊಡನೆ ಭರತಮುನಿಯು ನಿಮಗೆ ಕಲಿಸಿಕೊಟ್ಟರುವ
ಅಷ್ಟರಸಾಶ್ರಯವಾದ ಲಲಿತಾಭಿನಯವನ್ನು ನೋಡ
ಲಿಚ್ಚಿಸಿರುವನು” ಎಂದು ಉದ್ಘೋಷಿಸಲು ರಾಜನೂ
ಅದನ್ನುಕೇಳಿ "ನೀವು ನಿಮ್ಮೊಡೆಯನ ಅಪ್ಪಣೆಯನ್ನು
ನೆರವೇರಿಸುವುದರಲ್ಲಿ ನಾನು ಅಡ್ಡಿ ಯಾಗತಕ್ಕವನಲ್ಲ.
ಆದರೆ ಈ ಜನರನ್ನು ಮಾತ್ರ ಮರೆಯಕೂಡದು."
ಎಂದು ಕೇಳಿಕೊಂಡು ಬೀಳ್ಕೊಡಲು, ವಿಯೋಗದುಃಖಿ
ತೆಯಾದ ಊರ್ವಶಿಯು ರಾಜನನ್ನು ನೋಡುತ್ತಾ
ಸಖಿಯೊಡನೆ ಹೊರಟು ಹೋಗುವಳು.
ರಾಜನು 'ಇನ್ನು ಕಣ್ಣುಗಳು ಇದ್ದೂ ವ್ಯರ್ಥವೆಂ'ದು
ಚಿಂತಿಸಲು, ವಿದೂಷಕನ ಭೂರ್ಜಪತ್ರವನ್ನಾದರೂ
ತೋರಿಸೋಣವೆಂದುಕೊಂಡು, ಊರ್ವಶೀದರ್ಶನ ವಿ
ಸ್ಮಿತನಾದ ತನ್ನ ಕೈಯ್ಯಿಂದ ತಾನರಿಯುದಂತೆಯೇ ಅ
ದು ಎಲ್ಲಿಯೋ ಬಿದ್ದು ಹೋಗಿರುವುದನ್ನರಿತು, ಅದನ್ನು
ಮರೆಸುವುದಕ್ಕೆ 'ವಯಸ್ಯ! ನೀನು ಮಾತ್ರ ದೇಹತ್ಯಾ
ಗದ ಯೋಚನೆ ಮಾಡಬೇಡ. ನಿನ್ನಲ್ಲಿ ಊರ್ವಶಿಯು
ದೃಢವಾದ ಅನುರಾಗವುಳ್ಳವಳಾಗಿರುವಳು. ಇಲ್ಲಿಂದ
ಈಗ ಹೊರಟುಹೋದಮಾತ್ರಕ್ಕೇ ಅವಳು ಈ ರೀತಿ
ಯಾದ ಅನುಬಂಧವನ್ನು ಸಡಿಲಸಡಿಸುವುದಿಲ್ಲ'ವೆಂದು
೨೦
ಧೈರ್ಯ ಹೇಳುವಂತೆ ನಟಿಸುವನು. ರಾಯನೂ
'ಹೌದು, ಆಕೆಯು ಹೋಗುವಾಗ ಬಿಡುವ ನಿಟ್ಟುಸಿರಿ
ನಿಂದ, ಎದೆಯು ಕಂಪಿಸುತ್ತಿತ್ತು. ಅದನ್ನು ನೋಡಿ
ದರೆ "ಶರೀರವು ಪರವಶವು. ಸ್ಪವಶವಾದ ಈ
ಹೃದಯವನ್ನು ನೀನು ತೆಗೆದುಕೋ?” ಎಂದಂತೆ
ಇದ್ದಿತು: ಎಂದು ಅದನ್ನೇ ಸಾಧಿಸುವನು.
ಇನ್ನು ಯಾವ ವೇಳೆಯಲ್ಲಿ ಆ ಭೂರ್ಜ ಪತ್ರವನ್ನು
ಕೇಳುವನೋ ಎಂದು ತನ್ನಲ್ಲಿಯೇ ಮಿಡುಕುತ್ತಿರುವ
ವಿದೂಷಕನನ್ನು, ಆರಸನೂ ಬೇರೆ ಉಪಾಯ ತೋ
ರದೆ ಭೂರ್ಜಪತ್ರವನ್ನು ತಾರೆನ್ನಲು, ವಿದೂಷಕನು
'ಇದೇನು? ಎಲ್ಲಿಯೂ ಕಾಣಲೇ ಕಾಣದು. ದಿವ್ಯವಾದ
ಆ ಭೂರ್ಜ ಪತ್ರವೂ ಆ ಊರ್ವಶೀಮಾರ್ಗವನ್ನೇ ಹಿಡಿ
ಯಿತೋ?' ಎಂದು ವಿಷಾದಿಸಿ ಅರಸನಿಂದ ಯಾವಾ
ಗಲೂ ನೀನೊಬ್ಬ ಮೊಂಕನೊಂದು ಬಯ್ಯಿಸಿಕೊಂಡು
ಅದನ್ನು ಹುಡುಕುತ್ತಿರುವನು.
ಆ ವೇಳೆಗೆ ಸರಿಯಾಗಿ ನಿಪುಣಿಕೆಯಿಂದ ರಾಯನ
ಗುಟ್ಟನ್ನು ಅರಿತು ನಿಜಾಂಶವನ್ನು ವಿಚಾರಿಸಬೇ
ಕೆಂದು ತಾನೇ ಪ್ರಮದ ವನಕ್ಕೆ ಬಂದ ಮಹಾ
ರಾಣಿಯ ನೂಪುರಕ್ಕೆ ಈ ಜೂರ್ಜಪತ್ರವು ಸಿಕ್ಕಿ
ಬೀಳುವುದು. ಆಕೆಯು ಅದನ್ನು ಚೇಟಯಿಂದ ಓದಿಸಿ
ಕೇಳಿ ಜುಗುಪ್ಸ===========================================
ವಿಕ್ರಮೋರ್ವಶೀಯ
===========================================
ಮುನ್ನು ಡಿ
ಭಾರತ ವರ್ಷದ ಕವಿಸಮ್ರಾಟನಾದ ಕಾಳಿ
ದಾಸನ ಅತ್ಯುತ್ತಮ ಕೃತಿಯಾದ ಈ ವಿಕ್ರಮೋ
ರ್ವಶೀಯನ್ನು ಕವಿತಿಲಕ ಶ್ರೀ ಸೋಸಲೆ ಅಯ್ಯಾ
ಶಾಸ್ತ್ರಿಗಳವರು ಈ ವೇಳೆಗಾಗಲೇ ನಾಟಕರೂಪ
ವಾಗಿ ಭಾಷಾಂತರಿಸಿದ್ದಾರೆ. ಕುಮಾರ ಕಾಳಿ
ದಾಸನೆಂದು ಖ್ಯಾತಿಪಡೆದ ಶ್ರೀ ಬಸವಪ್ಪಶಾಸ್ತ್ರಿ
ಗಳೂ ಎರಡು ಅಂಕಗಳನ್ನು ಕನ್ನಡದಲ್ಲಿ ಬರೆ
ದಿದ್ದಾರೆಯಂತೆ. ಆದರೂ ನಾನು ಈ ವಿಚಿತ್ರ ರೀತಿ
ಯಲ್ಲಿಇದನ್ನು ಬರೆಯುವುದಕ್ಕೆ ಒಂದು ವಿಶೇಷ
ಕಾರಣವುಂಟು.
ಇದರಲ್ಲಿ ಸಾಧ್ಯವಾದ ಮಟ್ಟಿಗೂ ಕಾಳಿ
ದಾಸನ ಮಾತುಗಳೇ ಉಪಯುಕ್ತಗಳಾಗಿವೆ.
ಆಗಿರುವ ವ್ಯತ್ಯಾಸಗಳಲ್ಲಿ ಮೊದಲನೆಯದು,
ಭಾವ ಪ್ರಜೋಧಕವಾಗಿರುವಂತೆ ನಡುನಡುವೆ
ಎರಡೆರಡು ಮಾತು ಸೇರಿಸಿರುವುದು. ಹಾಗೆಯೇ
ಅಲ್ಲಲ್ಲಿ ನಾಟಕಕ್ಕೋಸ ರ ಕವಿಯು ಬೆಳೆಸಿರುವ
ಸಂಭಾಷಣೆಗಳನ್ನು ಕಥೆಗೆ ಅನುಕೂಲವಾಗಿರು.
ii
ವಂತೆ ಕತ್ತರಿಸಿಕೊಂಡಿರುವುದು. ಹೀಗೆ ಮಾಡಿ
ರುವುದಕ್ಕೆ, ಕಥೆಗೂ ನಾಟಕಕ್ಕೂ ಇರುವ
ವ್ಯತ್ಯಾಸವು ವಿಚಾರಿಯಾದವನಿಗೆ ಗೊತ್ತಾಗ
ಬೇಕೆಂಬುದು ಉದ್ದೇಶವು. ಕಾಳಿದಾಸನ ಅನನ್ಯ
ಲಭ್ಯವಾದ ಕಾವ್ಯಸೃಷ್ಟಿ ಕಲಾನೈಪುಣ್ಯವನ್ನೂ,
ಸರ್ವ ಸುಲಭವಾದರೂ, ಭಾವಪುಷ್ಟಿಯಿಂದ
ಬಲಿತಿರುವ ರೀತಿಯನ್ನೂ, ಕನ್ನಡಿಗರಿಗೆ ತೋರಿಸಿ,
ಅವರಿಂದ ಸಂಸ್ಕೃತದ ಕಾವ್ಯವಿನ್ನೆಷ್ಟು ಸೊಗ
ಸಾಗಿದಿಯೊ ಎನ್ನಿಸಿಬಿಟ್ಟರೆ, ಈ ಕಾರ್ಯದ
ಉದ್ದೇಶವು ನೆರವೇರಿದಂತಾಯಿತು.
ಕಾಳಿದಾಸನ ನಾಟಕಗಳಲ್ಲಿ ಅಗ್ರ ಸ್ಥಾನವು
ಶಾಕುಂತಲಕ್ಕೆಂದು ಇದುವರೆಗೂ ನಿರ್ವಿವಾದ
ವಾಗಿ ಆಂಗೀಕೃತವಾಗಿದೆ. ಆದರೆ ಕೂಲಂಕಷ
ವಾಗಿ ವಿಚಾರಿಸಿ ನೋಡಿದರೆ ಆಗ್ರಸ್ಥಾನವನ್ನು
ವಿಕ್ರಮೋರ್ವಶಿಯಕ್ಕೇ ಕೊಡಬೇಕು ಎನ್ನಿಸು
ತ್ತದೆ. ವಸ್ತು ವಿನ್ಯಾಸ, ಪಾತ್ರರಚನೆ, ಭಾವ
ಪ್ರದರ್ಶನ, ಅಭಿನಯ ಸೌಲಭ, ಈ ದೃಷ್ಟಿಗೆ
ಳಿಂದ ವಿಚಾರಮಾಡಿದರೆ, ಈ ಅಭಿಪ್ರಾಯವಾ
ದರೂ ಮಾನ್ಯವಾಗುವುದೆಂದೇ ನನ್ನ ನಂಬಿಕೆ.
ಇಂತಹ ಉತ್ತಮ ಸಾರಸ್ವತ ಸಂಪದ್ಭವನ
ಶಿಖರಕ್ಕೆ ಇದುವರೆಗೂ ಕನ್ನಡದಲ್ಲಿ ಯಾವುದೂ
iii
ವಾಖ್ಯ್ಯಾನಗಳು ಆಗಿಲ್ಲವೆಂಬುದೆಂದು ದೊಡ್ಡ ಕೊ
ರತೆ. ಈ ಕುಂದನ್ನು ತಪ್ಪಿಸಲು ಸ್ವತಂತ್ರವಾದ,
ಕಥಾಚರಿತ್ರತರಂಗೆ, ಕಲಾವಿಲಾಸ ತರಂಗ, ತಾರ
ತಮ್ಮ ತರಂಗ, ವಿಚಾರ ತರಂಗ, ಎಂಬ ನಾಲ್ಕು
ತರಂಗಗಳಿಂದ ಕೂಡಿದ ಒಂದು ದೊಡ್ಡ ಪ್ರಬಂಧ
ವನ್ನು ಬರೆಯಬೇಕೆಂದುಕೊಂಡಿರುವ ನನ್ನ ಸಂಕ
ಲ್ಪವು ಈಡೇರುವುದು ಉದಾರಚಿತ್ತರಾದ ವಾಚಕ
ರನ್ನೇ ಸೇರಿದೆ.
ಒಟ್ಟಿನಲ್ಲಿ ಈ ಕನ್ನಡದ ರೂಪು ಸಂಸ್ಕತ
ಕಾವ್ಯಸೂರ್ಯನಿಗೆ ಹಿಡಿದ ಕನ್ನಡಿಯು. ಇದ
ರಲ್ಲಿ ಮಾತೃಕೆಯಲ್ಲಿರುವ, ಸವಿಯೂ, ಸೊಬಗೂ
ಸೊಗಸೂ ಇವೆಯೆಂದು ಕಯ್ಯೆತ್ತಿ ಹೇಳಲಾರೆನು.
ಆದರೂ,"ಪ್ರಾ೦ಶುಲಭ್ಯೇ ಫಲೇ ಲೋಭಾದುದ್ಭಾ
ಹುರಿವ ವಾಮನಃ' ಎಂಬ ಗಾದೆಯಂತೆ, ನಾನೂ
ಯತ್ನಿಸಿರುವೆನು. ನಿಶ್ಚಬ್ಬವಾದ ಅರ್ಥರಾತ್ರಿಯ
ಸಮಯದಲ್ಲಿ, ಏಕಾಂಗಿಯಾಗಿ ಕುಳಿತು, ವಕ್ರ
ಮೋರ್ವಶೀಯವನ್ನು ಓದಿಓದಿ ಕಣ್ಣೀರಿಟ್ಟು,
ಆನಂದ ಸಾಗರದಲ್ಲಿ ಓಲಾಡಿದ ನನ್ನ ಸೌಭಾಗ್ಯ
ವನ್ನು ನನ್ನ ಭಾಷಾ ಬಂಧುಗಳಿಗೂ ಕೊಡಬೇ
ಕೆಂಬ ಆಶೆಯಿಂದ ಬರೆದ ಕಾವ್ಯವಿದು. ನಮ್ಮಲ್ಲಿ
ಪಗಡೆಯ ಹೂವನ್ನು ಒಣಗಿಸಿ, ಸರಮಾಡಿಟ್ಟು
ಕೊಂಡಿದ್ದು, ಆಗಾಗ ಬಿಸಿನೀರು ಚುಮುಕಿಸಿ,
iv
ಅದರ ವಾಸನೆಯನ್ನನುಭವಿಸುವ ವಾಡಿಕೆಯುಂ
ಟು. ಅದರಂತೆಯೇ ರಸಿಕರಾದವರು, ಅಭಿಮಾ
ನದ ನಸುಬಿಸಿಯ ನೀರನ್ನು ತಳೆದು, ಕಾವ್ಯ
ರಸದ ತನಿಗಂಪನ್ನು ಸೌಹಾರ್ದದಿಂದ ಅನುಭವಿ
ಸಲು ಒಮ್ಮೆ ಯಾದರೂ ಈ ಗ್ರಂಥವು ಒದಗಲಿ
ಎಂದು ಹಾರೈಸುವೆನು. ಇದನ್ನು ಪ್ರಕಟಸಿದ
ಪರಮೋಪಕಾರ ಮಾಡಿರುವ ಶ್ರೀ ಕೃಷ್ಣಕಂಪೆನಿ
ಯವರಿಗೆ ಚಿರಕೃತಜ್ಞನಾಗಿರುವೆನು.
ಇತಿ ಲೇಖಕ
ದೇವುಡು
-----------------------------
ಕಾಳಿದಾಸ ಮಹಾಕವಿ ವಿರಚಿತ
ವಿಕ್ರಮೋರ್ವಶೀಯ
-----
"ವೇದಾಂತಗಳಲ್ಲಿ ಸಮಸ್ತವಾದ ದಿಗಂತಗಳನ್ನೂ
ತುಂಬಿರುವ ಏಕಪುರುಷನೆಂದು ಯಾವನನ್ನು ಹೇಳು
ವರೋ; ಈಶ್ವರ ಶಬ್ದವು ಅನನ್ಯ ವಿಷಯಕವಾಗಿ
ಯಾವನಲ್ಲಿ ಯಥಾರ್ಥವಾಗಿರುವುದೋ; ಮುಮುಕ್ಷು
ಗಳು ಅಂತರಂಗದಲ್ಲಿ ಪ್ರಾಣಾಯಾಮಗಳಿಂದ ಯಾವ
ನನ್ನು ಹುಡುಕುವರೋ ದೃಢವಾದ ಭಕ್ತಿ, ಯೋಗ
ಗಳಿಗೆ ಸುಲಭವಾಗಿ ದೊರೆಯುವಾ ಸ್ಥಾಣುವು--
ನಿಮಗೆ ಶ್ರೇಯಸ್ಪನ್ನುಂಟು ಮಾಡಲಿ? ಎಂದು ಸೂತ್ರ
ಧಾರನು ನಾಂದಿಗೆಯ್ದು, ಮಾರಿಷನನ್ನು ಕರೆದು
“ಮಾರಿಷ! ಈ ಪರಿಷತ್ತು ಪೂರ್ವಿಕರಾದ ಕವಿಗಳ ರಸ
ಪ್ರಬಂಧಗಳನ್ನು ನೋಡಿರುವುದು, ಈಗ ನಾನು
ವಿಕ್ರಮೋರ್ವಶೀಯವೆಂಬ ಹೊಸ ನಾಟಕವನ್ನು
ಆಡಿಸುವೆನು ಆದುದರಿಂದ ಪಾತ್ರವರ್ಗವು ತಮ್ಮ
೨
ತಮ್ಮ ಪಾಠಗಳಲ್ಲಿ ಜಾಗರೂಕರಾಗಿರತಕ್ಕುದೆಂದು
ಹೇಳು.” ಎಂದು ಅವನನ್ನು ಕಳುಹಿಸಿ, ಮತ್ತೆ,
ಆರ್ಯಮಿಶ್ರರನ್ನು ನಮಸ್ಕರಿಸಿ, 'ತಮ್ಮ ಪ್ರೀತಿಗೆ
ಪಾತ್ರರಾಗಿರುವ ನಮ್ಮಲ್ಲಿ ದಾಕ್ಷಿಣ್ಯದಿಂದಲಾದರೂ,
ಕಥೆಯ ಅಥವಾ ನಾಯಕನ ದೊಡ್ಡಸ್ತಿಕೆಗಾದರೂ
ಕಾಲಿದಾಸನ ಈ ಕೃತಿಯನ್ನು ಸಾವಧಾನದಿಂದ
ಪರಾಂಬರಿಸಬೇಕು' ಎಂದು ವಿಜ್ಞಾಪಿಸಿಕೊಳ್ಳುವನು;
ಅಷ್ಟರಲ್ಲಿ ಯೇ, ಊರ್ವಶಿಯನ್ನು ಬಂದಿಯಾಗಿ ಹಿಡಿ
ದೊಯ್ದುದಕ್ಕಾಗಿ ಮೊರೆಯಿಡುವ ಅಪ್ಸರೆಯರ
ಆಕ್ರಂದನವು ಕೇಳಿಬರಲು, ನಾಟಕವು ಮೊದಲಾ
ಯಿತೆಂದು ಹೊರಟುಹೋಗುವನು.
ಅನ೦ತರ "ಎಲೆ ಅ೦ಬರ ತಲದಲ್ಲಿ ಗತಿ
ಯುಳ್ಳವರೂ ಸುರಪಕ್ಷಪಾತಿಗಳೂ ಆದವರೆ! ಬನ್ನಿ.
ಸಹಾಯಕ್ಕೆ ಬನ್ನಿ” ಎಂದು ಅಪ್ಸರೆಯರು ಮೊರೆ
ಯಿಡುವರು. ಸೂರ್ಯನ ಸೇವೆಗಾಗಿ ಹೋಗಿದ್ದ
ಪುರೂರವನು ಹಿಂತಿರುಗಿ ಬರುತ್ತಾ ದಾರಿಯಲ್ಲಿ
ಇದನ್ನು ಕೇಳಿ, ಬಂದು, ಅಭಯಪ್ರದಾನ ಮಾಡಿ,
ಅವರ ಭೀತಿಕಾರಣವನ್ನು ಕೇಳಲು, ಅವರು "ಮಹಾ
ರಾಜನು ಲಾಲಿಸಬೇಕು. ತಪಸ್ವಿಜನ ಭೀತನಾದ
ಮಹೇಂದ್ರನ ಸುಕುಮಾರವಾದ ಆಯುಧವಾಗಿ,
ರೂಪಗರ್ವಿತೆಯಾದ ಶ್ರೀದೇವಿಯನ್ನೂ ನಿರಾಕರಿಸು
ವಳಾಗಿ, ಸ್ವರ್ಗ ಅಲಂಕಾರಪ್ರಾಯಳಾದ ನಮ್ಮ
ಪ್ರಿಯಸಖಿ ಊರ್ವಶಿಯು ಕುಬೇರನರಮನೆಯಿಂದ
ಹಿಂತಿರುಗುತ್ತಿರಲು, ಚಿತ್ರಲೇಖಾದ್ವಿತೀಯೆಯಾದ
೩
ಆಕೆಯನ್ನು ಹಿರಣ್ಯಪುರ ನಿವಾಸಿಯಾದ ಕೇಶಿ ದಾನ
ವನು ತಟ್ಟನೆ ಮೇಲೆ ಬಿದ್ದು ಬಲವಂತದಿಂದ ಹೊತ್ತು
ಕೊ೦ಡು ಈಶಾನ್ಯದ ಕಡೆಗೆ ಹೋದನು?” ಎಂದು
ವಿಜ್ಞಾಪಿಸಿಕೊಳ್ಳುವರು. ಆಗ ಆತನು, ''ನೀವು ಭಯ
ಬಿಡಿರೆ”೦ದು ಅವರನ್ನು ನಂಬಿಸಿ ಕೂಡಲೆಆಕೆಯನ್ನು
ಬಿಡಿಸಿಕೊಂಡು ಬರಲು ಹೊರಟು ಹೋಗುವನು.
ರಂಭಾದ್ಯಪ್ಸರಸೆಯರು ಹೇಮಕೂಟ ಶಿಖರದಲ್ಲಿ
ನಿಂತು ರಾಯನು ದುರ್ಜಯರಾದ ದಾನವರನ್ನು
ಜಯಿಸಿ ಸಖಿಯನ್ನು ಕಾಪಾಡಬಲ್ಲನೆ? ಅಧವಾಒದಗುವ
ದೇವಾಸುರ ಯುದ್ಧದಲ್ಲಿ ಇಂದ್ರನಿಗೂ ಸಹಾಯವಾಗಿ
ಬರುವ ಆ ರಾಜರ್ಷಿಯು ಆಕೆಯನ್ನು ಬಿಡಿಸಲಾರ
ನೆಂದರೇನು ?” ಎ೦ದು ಹಿ೦ದು ಮುಂದು ನೋಡುತ್ತ
ಕುಳಿತಿರುವಲ್ಲಿ, ಆತನು ಸಖೀಸಮೇತಳಾದ ಊರ್ವ ಶಿ
ಯನ್ನು ಹಿಂದಕ್ಕೆ ಕರೆತರುತ್ತ ತನ್ನ ಸೋಮದತ್ತ
ವೆಂಬ ಹರಿಣಕೇತನದ ರಥದಲ್ಲಿ ಕಾಣಿಸಿಕೊಳ್ಳು
ವನು. ಆತನು ಬರುತ್ತ ದಾರಿಯಲ್ಲಿ, ಗಾಬರಿ
ಯಿಂದಲೂ ದಿಗಿಲಿನಿಂದಲೂ ಮೂರ್ಛೆ ಹೋಗಿರುವ
ಊರ್ವಶಿಯನ್ನು ಕುರಿತು ಎಲೆ ಸುಂದರಿ! ಸಮಾಧಾನ
ವನ್ನು ಹೊಂದು. ರಾಕ್ಷಸರಿಂದ ಸಂಭವಿಸಿದ್ದ ಭಯವು
ತ್ರಿಲೋಕ ರಕ್ಷಕನಾದ ವಜ್ರಿಯ ಅಪಾರವಾದ
ಮಹಿಮೆಯಿಂದ ದೂರವಾಯಿತು. ಇನ್ನು ಮುಂಜಾವ
ದಲ್ಲಿ ಬಿರಿಯುವ ಪದ್ಮಿನಿಯಂತೆ, ಉತ್ಪಲಕ್ಕೆಣೆಯಾದ
ನಿನ್ನ ವಿಸ್ತಾರವಾದ ಕಣ್ಣುಗಳನ್ನು ತೆರೆ” ಎಂದು ಸಮಾ
ಧಾನ ಮಾಡಿ ಕೊನೆಗೆ ಚಿತ್ರಲೇಖೆಯ ಉಪಚಾರ
೪
ದಿಂದ ಜೇತರಿಸಿಕೊಳ್ಳುತ್ತಿರುವ ಊರ್ವಶಿಯನ್ನು
ಕಂಡು, "ಚಂದ್ರನು ಮೂಡುತ್ತಿರಲು ಕತ್ತಲೆಯು
ಬಿಡುತ್ತಿರುವ ರಾತ್ರಿಯಂತೆ; ಕುಡುವನ್ನೆಳಿಸಿದರೆ ಪ್ರ
ಜ್ವಲಿಸುವ ರಾತ್ರಿಯದೀಪಜ್ಞಾಲೆಯಂತೆ ಕುಸಿದುಬಿದ್ದ
ದಡದ ಮಣ್ಣಿನಿಂದ ಬಗ್ಗಡವಾಗಿದ್ದ ಗಂಗಾನದಿಯ
ನೀರು ತಿಳಿಯುವಂತೆ. ಮೂರ್ಛಯು ಬಿಡು
ತ್ತಿರುವ ಈ ಕೃಶಾಂಗಿಯು ಕಣಣುತ್ತಿರುವಳು."
ಎಂದು ಸಂತೋಷಪಡುವನು.
ಊರ್ವಶಿಯು ಚೇತರಿಸಿಕೊಂಡು 'ಮಹೇಂದ್ರನಿಂ
ದಲ್ಲದಿದ್ದರೂ ಮಹೇಂದ್ರ ಸದೃಶ ಪ್ರಭಾವನಾದ ಈ
ರಾಜರ್ಷಿಯಿಂದ ತನಗೆ ಬಿಡುಗಡೆ'ಯಾದುದನ್ನು ಕೇಳಿ,
ರಾಜನ ರೂಪಲಾವಣ್ಯಗಳನ್ನು ನೋಡಿ ಮನಸೋತು,
"ರಾಕ್ಷಸರು ಮಾಡಿದುದೂ ಉಪಕಾರವೇ ಆಯಿತು?
ಎಂದುಕೊಳ್ಳುವಳು. ರಾಜನೂ ಈಕೆಯ ಅಪರೂಪ
ವಾದ ಸೌಂದರ್ಯಾದಿಗಳನ್ನು ನೋಡುತ್ತಾ 'ನಾರಾ
ಯಣ ಯಷಿಯನ್ನು ಮೊಹಗೊಳಿಸಲೆಂದು ಹೋದ
ಅಪ್ಸರೆಯರು ಆತನ ಊರೂದ್ಭವೆಯಾದ ಈಕೆಯನ್ನು
ನೋಡಿ ನಾಚಿಕೊಂಡರೆಂಬುದು ಸರಿಯೇಸರಿ! ಆದರೂ
ಈಕೆಯು ಆತಪಸ್ವಿಯ ಸೃಷ್ಟಿಯಾಗಿರಲಾರಳು.
ಕಾಂತಿ ಪ್ರದನಾದ ಚಂದ್ರನೋ; ಶೃಂಗಾರವೇ ಕವಿರಸ
ವಾಗುಳ್ಳ ಮದನನೋ, ಅಥವಾ ಪುಷ್ಪಾಕರವಾದ
ವಸಂತ ಮಾಸವೋ ಈಕೆಯನ್ನು ಸೃಜಿಸಿರಬೇಕಲ್ಲದೆ.
ವೇದಾಭ್ಯಾಸದಿಂದ ಜಡವೂ ವಿಷಯ ಪರಾಙ್ಮುಖವೂ
ಆದ ಮನಸ್ಸುಳ್ಳ ಆ ಪುರಾಣಋಷಿಯು ಈ ಮನೋಹರ:
೫
ವಾದ ರೂಪವನ್ನೆಂತು ಹುಟ್ಟಿಸಬಲ್ಲನು ?” ಎಂದು
ಆಶ್ಚರ್ಯಪಡುತ್ತಿರುವಾಗ, ಊರ್ವಶಿಯು ನನ್ನ ಸಖಿ
ಯಲ್ಲಿರುವ'ರೆಂದು ಕೇಳುವಳು. ಪುರೂರವನು 'ಇದೇ
ಸಮಯ” ವೆಂದು "ನಿನ್ನ ಸಖೀ ಜನವು ದುಃಖದಲ್ಲಿರು
ವುದು. ಅದೃಷ್ಟ ವಶದಿಂದ ಒಂದು ಸಲ ನಿನ್ನನ್ನು ನೋಡಿ
ದವರೂ ಕೂಡ ನೀನು ಕಣ್ಣೆದಿರುಗಿಲ್ಲದಿದ್ದರೆ ತವಕ
ಪಡುವರು. ಹೀಗಿರುವಲ್ಲಿ ಪಕ್ವವಾದ ಸ್ನೇಹವುಳ್ಳ ಜನ
ಗಳ ಗತಿಯೇನ ?' ಎಂದು ಹೇಳುವನು. ಊರ್ವಶಿಯ
ಆಮಾತನ್ನು ಕೇಳಿ ಸಂತೋಷಪಟ್ಟು 'ಚಂದ್ರನು ಅಮೃತ
ವನ್ನು ಸ್ರವಿಸುವುದರಲ್ಲಿ ಆಶ್ಚರ್ಯವೇನು? ಎಂದು
ಕೊಳ್ಳುವಳು. ಹೇಮಕೂಟಶಿಖಿರದಲ್ಲಿರುವ ಸಖಿಯರ
ಬಳಿಗೆ ಬರುತ್ತಾ, ಹೆಳ್ಳದಿಣ್ಣೆಗಳನ್ನು ಇಳಿದೇರುತ್ತಾ
ರಥವು ಕುಲುಕಲ್ಕು ಊರ್ವಶಿಯು ಮುಗ್ಗರಿಸಿ, ಪುರೂ
ರವನನ್ನು ಅವಲಂಬಿಸುವಳು, ಆತನೂ ಅದರಿಂದ
ಪುಳಕಿತನಾಗಿ ಆ ಸೌಖ್ಯವನ್ನನುಭನಿಸುತ್ತಾಆ ವೇಳಗೆ
ರಥವು ಬಂದು ನಿಲ್ಲಲು, ಇಳಿದು, 'ಈ ಚಿತ್ರಲೇಖಾ
ದ್ವಿತೀಯೆಯಾದ ಊರ್ವಶಿಯೊಡನಿರುವ ಈ ರಾಜರ್ಷಿ
ಯು ವಿಶಾಖಾ ಸಹಿತನಾದಚಂದ್ರನಂತಿರುವನು. ಸಖಿ
ಯೂ ಹಿಂತಿರುಗಿ ಬಂದಳು. ಮಹಾರಾಜನೂ ಅಕ್ಷತ
ಶರೀರನಾಗಿ ಹಿಂದಿರುಗಿದನು' ಎಂದು ನಲಿಯುತ್ತಿರುವ
ಸಖಿಯರ ಸಮೀಪಕ್ಕೆ ಆಕೆಯನ್ನು ಕರೆದುತಂದು
ಬಿಡುವನು.
ಆ ವೇಳೆಗೆ ಇಂದ್ರನ ಅಪ್ಪಣೆಯಿಂದ್ಕ ಊರ್ವಶಿ
'ಯನ್ನುಬಿಡಿಸಿಕೊಂಡು ಬರುವುದಕ್ಕೇ ಹೊರಟಿದ್ದ ಚಿತ್ರ
೬
ಸೇನನು ಆಲ್ಲಿಗೆ ಬಂದು 'ಕೇಶಿಯು ಊರ್ವಶಿಯನ್ನು
ಕೊಂಡು ಹೋದುದನ್ನು ನಾರದರಿಂದ ಕೇಳಿ, ಮೆಹೇಂ
ದ್ರನು ನನ್ನ ಕೈಕೆಳಗೆ ಗಂಧರ್ವಸೇನೆಯನ್ನಟ್ಟಿದನು
ನಾನುನಿನ್ನವಿಜಯವನ್ನು ಚಾರಣರಿಂದ ಕೇಳಿಇಲ್ಲಿಗೆ
ಬಂದೆನು. ಎಲೆ ವಯಸ್ಯನೆ ! ನೀನು ಇಂದ್ರನಿಗೆ ಮಹ
ತ್ಪ್ರಿಯವನ್ನು ಮಾಡಿರುವೆ ಪೂರ್ವದಲ್ಲಿ ನಾರಾಯಣ
ಋಷಿಯು ಕರುಣಿಸಿದ್ದ ಈಕೆಯನ್ನು ಇಂದು ದೈತ್ಯರ
ಹಸ್ತದಿಂದ ತಪ್ಪಿಸಿ ಹೊಸದಾಗಿ ನೀನು ಕೊಟ್ಟೆ. ಅದ
ರಿಂದ ಈಕೆಯನ್ನು ನೀನೇ ಕೊಂಡುಬಂದು ದೇವ
ರಾಜನನ್ನು 'ನೋಡಬೇಕು' ಎಂದು ವಿಜ್ಞಾಪಿಸಲು,
ರಾಯನು. "ಎಲೆ ಸಖನೆ! ಪರ್ವತಗಳ ಗುಹೆಗಳಲ್ಲಿ
ಆಗುವ ಸಿಂಹಗರ್ಜನೆಯ ಪ್ರತಿಧ್ವನಿಯೂ ಆನೆಗಳನ್ನು
ಕೊಲುವಂತೆ, ಆತನ ಕಡೆಯವರೂ ದ್ವೇಷಿಗಳನ್ನು
ಜಯಿಸುವರೆಂಬುವುದು ವಜ್ರಿಯಾದ ಇಂದ್ರ ನ ವೀರ
ತ್ವದ ಮಹಿಮೆಯೇ ಸರಿ. ಆದರ ಶತಕ್ರತುವನ್ನು
ನೋಡಲು ಇದು ಕಾಲವಲ್ಲ. ಅದರಿಂದ ನೀನೀ ಈಕೆ
ಯನ್ನು ಪ್ರಭುವಿನ ಬಳಿಗೆ ಕರದೊಯ್ಯುವನಾಗು'
ಎಂದು ಹೇಳಲು ಆತನೂ "ಹಾಗೆಯೇ ಆಗಲಿ"
ಎಂದು ಅವನನ್ನು ಕರೆದುಕೊಂಡು ಹೋಗುವನು.
ಊರ್ವಶಿಯು ಹೊರಟು ನಿಂತು "ಎಲೆ ಸಖಿ!
ಚಿತ್ರಲೇಖೆ! ಉಪಕಾರಿಯಾಗಿದ್ದರೂ ಈ ರಾಜರ್ಷಿ
ಯನ್ನು ನಾನು ಮಾತಾಡಿಸಲಾರೆನು ಅದರಿಂದ ನನ
ಗೋಸ್ಕರೆ ನೀನೇಮಾತಾಡು' ಎನ್ನಲು ಚಿತ್ರಲೇಖೆಯು
'ವಯಸ್ಯ! ಊರ್ವಶಿಯು ಅಪ್ಪ ಣೆಯಾದರೆ ಮಹಾರಾ
೭
ಜನ ಕೀರ್ತಿಯನ್ನು ಪ್ರಿಯಸಖಿಯಂತೆ ಮಹೇಂದ್ರ
ಲೋಕಕ್ಕೆ ಕರೆದುಕೊಂಡು ಹೋಗುವೆನು ಎಂದು ವಿ
ಜಾ ಪಿಸುವಳು.' ಎಂದರಿಕೆ ಮಾಡಲು, ರಾಯನೂ
ಹಾಟ ಗಿಬನ್ನಿ ಎಂದು ಬೀಳ್ಕೊಡುವನು.
ಊರ್ವಶಿಯೂ ಹೋಗುತ್ತಾ, 'ಲತೆಯ
ಬಾಹುಗಳಲ್ಲಿ ನನ್ನ ಏಕಾವಳಿಯು ಸಿಕ್ಕಿಕೊಂಡಿತು
ಅದನ್ನು ಬಿಡಿಸು' ಎಂದು ಚಿತ್ರಲೇಖೆಯನ್ನು ಪ್ರಾರ್ಥಿ
ಸುತ್ತ, ರಾಜನನ್ನು ಹಿಂತಿರುಗಿ ನೋಡಲು, ಚಿತ್ರ
ಲೇಖೆಯು ನಗುತ್ತಾ' ಹೌದು ಬಲವಾಗಿ ಸಿಕ್ಕಿಕೊಂಡಿರು
ವುದು ಬಿಡಿಸಲಸಾಧ್ಯವು ಎಂದು ತೋರುವುದು. ಆಗಲಿ
ನೋಡೋಣ' ಎಂದು ಹಾಸ್ಯಮಾಡುತ್ತಾ ಬಿಡಿಸಲು
ಊರ್ವಶಿಯು 'ಈ ಮಾತಿನ ನೆನೆಪಿರಲಿ' ಎನ್ನುವಳು.
ಇಬ್ಬರೂ ಎಲ್ಲರೊಡನೆ ಹೊರಟುಹೋಗುವರು.
ರಾಯನೂ 'ಊರ್ವಶಿಗೆ ಕ್ಷಣಕಾಲ ಗಮನಭಂಗ
ಮಾಡಿ ಆ ಅಪಾಂಗನೇತ್ರೆಯು ಅರ್ಧಮುಖವನ್ನು
ಹಿಂತಿರುಗಿಸಿ ನನ್ನನ್ನು ನೋಡಲು ಅವಕಾಶಮಾಡಿದ
ಲತೆಯೇ! ನೀನು ನನಗೆ ಪ್ರಿಯವನ್ನು ಮಾಡಿದೆ'
ಯೆಂದು ಅದನ್ನು ಅಭಿನಂದಿಸಿ, ಆ ವೇಳೆಗೆ ಇಂದ್ರಾ
ಪರಾಧಿಗಳಾದ ದೈತ್ಯರನ್ನು ಲವಣ ಸಮುದ್ರದಲ್ಲಿ
ಕೆಡಹಿ ಹಿಂತಿರುಗಿ ಬಂದು, ಮಹೋರಗವು ಬಿಲವನ್ನು
ಹೋಗುವಂತೆ ಬತ್ತಳಿಕೆಯನ್ನು ಸೇರಿದ ವಾಯವ್ಯಾಸ್ತ್ರ
ವನ್ನು ಸ್ವೀಕರಿಸಿ. ರಥವನ್ನು ಹತ್ತಿ, " ಮನ್ಮಥನು
ದುರ್ಲಭವಾದ ವಸ್ತುವಿನಲ್ಲಿಯೇ ಮನಸ್ಸನ್ನು ಲಗ್ನ
ಮಾಡುವನು. ರಾಜಹಂಸಿಯು ಮುರಿದ ತಾವರೆಯ
೮
ದಂಟಿನಿಂದ ಸೂತ್ರವನ್ನು ಎಳೆದುಕೊಂಡು ಹೋಗು
ವಂತೆ ಈ ಸುರಾಂಗನೆಯ ನನ್ನ ಶರೀರದಿಂದ ಮನ
ಸ್ಸನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗು
ತ್ತಿರುವಳು " ಎಂದು ಊರ್ವಶಿಯು ಹೋದ ಕಡೆ
ಯನ್ನೇ ನೋಡುತ್ತಾ ತಾನೂ ಹೊರಟುಹೋಗುವನು.
ಇಂತಿದು ಪ್ರಥಮಾಂಕವು
--------
ದ್ವಿತೀಯಾಂಕ
ಎರಡನೆಯಂಕದ ವಿಷ್ಕಂಭದಲ್ಲಿ ಅನ್ಯಮನಸ್ಕ
ನಾದ ಪತಿಯನ್ನು ನೋಡಿ ಕಾತರಳಾಗಿರುವ ಕಾಶಿ
ರಾಜ ಪುತ್ರಿಯಾದ ಮಹಾರಾಣಿಯಿಂದ 'ಸೂರ್ಯೋ
ಪಸ್ಥಾನದಿಂದ ಹಿಂತಿರುಗಿದ ಆರ್ಯಪುತ್ರನು ಶೂನ್ಯ
ಹೃದಯನಾಗಿ ಕಾಣುವನು ಕಾರಣವನ್ನು, ಆರ್ಯ
ಮಾಣವಕವಿಂದ ತಿಳಿದು ಬಾರೆಂ'ದು ಆಜ್ಞಾಪಿತ
ಳಾದ ನಿಪುಣಿಕೆಯು "ಪರಮಾನ್ನದಿಂದ ಬಿರಿಯುತ್ತಿ
ರುವ ಹೊಟ್ಟೆಯುಳ್ಳ ಬ್ರಾಹ್ಮಣಾರ್ಥದ ಬ್ರಾಹ್ಮಣ
ನಂತೆ" ರಾಜರಹಸ್ಯದಿಂದ ಬಿರಿಯುತ್ತಿರುವ ಹೊಟ್ಟೆ
ಯ ಮಾಣವಕನನ್ನು ಕಂಡು, "ಆರ್ಯ ಮಾಣ
ವಕನು ಇಲ್ಲಿಯೆ ಚಿತ್ರದ ಕಪಿಯಂತೆ ಏನೋ ಆಲೋ
ಚಿಸುತ್ತ ಕುಳಿತಿರುವನೆಂ" ದು ಅಲ್ಲಿಗೆ ಬರುವಳು.
ಮಾತಾಳಿಯಾದ ಮಾಣವಕನು ಆ ದುಷ್ಠ ಚೇಟಿಯ
ಮುಖವನ್ನು ಕಂಡು ಎದೆಸೀಳಿಕೊಂಡು ಹೊರಬೀಳುತ್ತಿ
ರುವ ರಾಜರಹಸ್ಯವನ್ನು ಮುಚ್ಚಿಕೊಳ್ಳುತ್ತಾ, ನಿಪು
ಕೆಯು ಬಂದ ಕಾರಣವನ್ನು ವಿಚಾರಿಸುವನು.
“ದುಃಖಿತೆಯಾಗಿದ್ದರೂ ಆರ್ಯಮಾಣವಕನಿಗೆ
ನನ್ನನ್ನು ನೋಡುವಷ್ಟು ದಾಕ್ಷಿಣ್ಯವಿಲ್ಲವಾಯಿತು.
ಚಿಂತೆಯಿಲ್ಲ. ನೀನೇ ಹೋಗಿ ಅವನನ್ನು ನೋಡಿಬಾ''
ಎಂದು ಮಹಾರಾಣಿಯು ಆಜ್ಞಾಪಿಸಲು ನಿಪುಣಿಕೆ
ಯು ಬಂದಳೆಂದು ತಿಳಿದು ದುೂಖಕಾರಣವನ್ನು
೧೦
ವಿಚಾರಿಸುವನು. ನಿಪಣೆಯಾದ ನಿಪುಣಿಕೆಯೂ
" ಮಹಾರಾಜನು ತಾನು ಹಂಬಲಿಸುತ್ತಿರುವ ಯಾ
ವಳೋ ಒಬ್ಬಳು ಹೆಂಗುಸಿನ ಹೆಸರಿನಿಂದ, ದೇವಿಯ
ನ್ನು ನುಡಿಯಿಸಿದನೆಂದು ಹೇಳುವಳು. ಮೊಂಕನಾದ
ಮಾಣವಕನು "ರಾಜನೇ ತನ್ನ ಗುಟ್ಟು ಬಿಟ್ಟು ಕೊಟ್ಟ
ಮೇಲೆ ತನಗೇನು? ಎಂದುಕೊಂಡು, "ಹಾಗಾದರೇನು
ಊರ್ವಶೀ ಎಂದು ಕರೆದನೋ? ಎಂದು ವಿಚಾರಿಸಿ,
"ಊರ್ವಶಿಯೆಂಬಪ್ಸರಸೆಯುಂಟು. ಆಕೆಯನ್ನು ನೋ
ಡಿ ಅರಸನಿಗೆ ಹುಚ್ಚು ಜಡಿದು ಕೇವಲ ದೇವಿ
ಯೊಬ್ಬಳನ್ನೇ ಅಲ್ಲ; ತನ್ನನ್ನೂ ಕೂಡ ಬಹುವಾಗಿ
ಪೀಡಿಸುತ್ತಿರುವನು. ಇರಲಿ. ಈ ಬಿಸಿಲುಗುದುರೆ
ಯಿಂದ ಮಹಾರಾಜನನ್ನು ಹಿಂತಿರುಗಿಸಿಯೆ ದೇವಿ
ಯನ್ನು ನೋಡುವೆನೆಂದು ನಾನರಿಕೆ ಮಾಡಿದೆನೆಂದು
ದೇವಿಗೆ ವಿಜ್ಞಾಪಿಸು? ಎಂದು ಹೇಳುವನು. ನಿಪುಣಿಕೆ
ಯೂ 'ಭಟ್ಟನಗುಟ್ಟನ ಕೋಟೆಯನ್ನುಗೆದ್ದುದಾಯಿತು'
ಎಂದು ಹಿಂತಿರುಗಲು ವಿದೂಷಕನೂ 'ಲೋಕದಲ್ಲಿ
ರುವ ಪ್ರಜೆಗಳ ತಮೋವೃತ್ತಿಯನ್ನು ಧ್ವಂಸಮಾಡು
ವುದರಲ್ಲಿ, ದೇವನೂ, ಸವಿತೃ ದೇವನೂ ಸಮಾನ
ವಾದ ಅಧಿಕಾರವುಳ್ಳವರು. ಹಾಗೆಯೇ, ಸವಿತಾರನು
ಮಧ್ಯಾಹ್ನದ ಆರನೆಯ ಭಾಗದಲ್ಲಿ ಒಂದು ಕ್ಷಣ
ಕಾಲ ನಡುಬಾನಿನಲ್ಲಿ ನಿಲ್ಲುವಂತೆ ನೀನೂ ಅದೇ
ಹೊತ್ತಿನಲ್ಲಿ ತುಸಹೊತ್ತು ವಿಶ್ರಮವನ್ನು ಹೊಂದುವೆ'
ಎಂದು ಹಾಡುವ ವೈತಾಳಿಕಸಿಂದ ರಾಜನು ಬರುತ್ತಿ
ರುವುದನ್ನು ಅರಿತು, ತಾನೂ ರಾಜನ ಪಾರ್ಶ್ವವರ್ತಿ
ಯಾಗಲು ಹೋಗುವನು.
೧೧
ಹೀಗೆ ವಿಷ್ಕಂಭವನ್ನಾಚರಿಸಿದನಂತರ, ಉತ್ಕಂಠಿತ
ನಾದ ರಾಜನನ್ನೂ ವಿದೂಷಕನನ್ನೂ ಕವಿಯು
ಉದ್ಯಾನದಲ್ಲಿ ಪ್ರವೇಶಿಸುವನು, ವಿರಹದಿಂದ
ವ್ಯಥಿಸುತ್ತಿರುವ ರಾಜನು ತನ್ನ ಚಿಂತೆಯಲ್ಲಿರಲು
ವಿದೂಷಕನು, 'ಕಾಶಿರಾಜ ಪುತ್ರಿಯು ವ್ಯಥಿಸುತ್ತಿರು
ವಳು' ಎಂದು ವಿಜ್ಞಾಪಿಸುವನು. ರಾಜನು ಕೂಡಲೆ
'ನೀನು ಗುಟ್ಟನ್ನು ಬಿಟ್ಟು ಕೊಟ್ಟಿಲ್ಲವಲ್ಲಾ?' ಎಂದು
ಕೇಳಲು, ವಿದೂಷಕನು 'ವಂಚಿತನಾದೆನೆಂ'ದುಕೊಂಡು
ಮೌನವಾಗಿದ್ದು ಮತ್ತೆ ಕೇಳಿದ ಧೊರೆಗೆ 'ನೋಡು
ನಿನಗೂ ಉತ್ತರ ಕೊಡದಂತೆ ನಾಲಗೆಯನ್ನು ಹೇಗೆ
ಕಟ್ಟಿಕೊಂಡಿರುವೆನು?'ಎಂದು ಹೇಳಲು, ರಾಜನು "ಸರಿ?
ಯೆಂದು ಆ ಮಾತುಬಿಟ್ಟು 'ಅಯ್ಯಾ! ನನ್ನನ್ನುವಿನೋ
ದಪಡಿಸಲು ಯಾವುದಾದರೂ ಒಂದುಪಾಯವನ್ನು
ಹೇಳು'ಎನ್ನಲು ಹೊಟ್ಟೆಬಾಕನಾದ ವಿದೂಷಕನು 'ಬಾ
ಬಿಡದಿಗೆಹೋಗೋಣ, ಅಲ್ಲಿ ಭಕ್ಷ್ಯಭೋಜ್ಯಗಳಿರು
ವವು' ಎನ್ನುವನು. ಧೊರೆಯು 'ಅಲ್ಲಿ ನಿನಗೆ ಬೇಕಾದ
ವಸ್ತುಗಳಿರುವುದರಿಂದ ನಿನಗೆ ಸಂತೋಷವಾದರೂ
ದುರ್ಲಭವಾದ ವಸ್ತುವಿನಲ್ಲಿ ಮನಸ್ಸು ನೆಟ್ಟು, ಲಭಿ
ಸದ ಪ್ರಾರ್ಥಕೆಯುಳ್ಳ ನನಗೆ ಅಲ್ಲೇನಿರುವುದು ?'
ಎಂದು ವ್ಯಧಿಸಲು ವಿದೂಷಕನು ಮತ್ತೆ 'ತಡೆ.
ನಿನ್ನನ್ನು ಆ ಊರ್ವಶಿಯು ನೋಡಿರುವಳಷ್ಟೆ? ಹಾಗಾ
ದರೆ ಅವಳು ನಿನಗೆ ದುರ್ಲಭಳಲ್ಲ.' ಎಂದು ಹೇಳುವನು.
ರಾಜನು ಮತ್ತೆ 'ಸದ್ರೂಪಕ್ಕೆ ಆಕೆಯಲ್ಲಿರುವ ಪಕ್ಷ
ಪಾತವಾದರೋ ಅಲೌಕಿಕವಾದುದೆ'ನ್ನಲು ಮತ್ತೆ
ನಿದೊಷಕನು 'ಹಾಗಾದರೆ ಕುರೂಪದಲ್ಲಿ ನಾನು
೧೨
ಹೇಗೊಹಾಗೆ ಸುರೂಪದಲ್ಲಿ ಆಕೆಯು ಆದ್ದಿತೀಯಳೆ?'
ಎಂದು ಪ್ರಶ್ನೆ ಮಾಡಲು, ರಾಜನು 'ಮಾಣವಕ!ಪ್ರತ್ಯಂ
ಗವನ್ನೂ ವರ್ಣಿಸುವುದೆಂದಕೆ ಅದು ಅಶಕ್ಕ ವು. ಒಟ್ಟಿಗೆ
ಹೇಳುವೆನು ಕೇಳು. ಆಕೆಯು ಒಡವೆಗೆ ಒಡವೆಯು. ಆ
ಲಂಕಾರಕ್ಕೆ ಆಲಂಕಾರವು. ಆಕೆಯ ಶರೀರವು ಉಪಮಾ
ನಕ್ಕೆಲ್ಲ ಉಪಮಾನನು ಎಂದು ವರ್ಣಿಸಲು, ವಿದೂಷ
ಕನು ಅದಕ್ಕಾಗಿಯೇ ದಿವ್ಯರಸ ಸಾಭಿಲಾಷಿಯಾದ ನೀನು
ಜಾತಕವ್ರತವಹ್ಹು ಗ್ರಹಿಸಿರುವೆ!' ಎಂದು ಹಾಸ್ಯಮಾ
ಡುವನು. ಏಕಾಂತಪ್ರಿನಾದ ರಾಜನು ಉದ್ಯಾನವನ
ಕಾಗಿ ಹೊರಟು 'ಮಾಧವಿಯ ಸೊಗನ್ನು ಹೆಚ್ಚೆ
ಸುತ್ತ ಮೊಲ್ಲೆ ಯ ಬಳ್ಳಿ ಯನ್ನು ಕುಣಿಸುತ್ತಾ ಸ್ನೇಹ
ದಾಕ್ಷಿಣ್ಯಗಳಿಂದ ಕೂಡಿದ ಈ ದಕ್ಷಿಣ ಮಾರುತನು
ಕಾಮಿಯಂತಿರುವನು.' ಎಂದು ತನ್ನವಸ್ಥೆಯನ್ನೇ ಹೇಳಿ
ಕೊಳ್ಳುತ್ತಾ ಪ್ರಮುದವನ್ನು ಸೇರಿ, 'ತಾನು ತಾಪ
ಶಾಂತಿಗೆಂದು ಉದ್ಯಾನಕ್ಕೆ ಬಂದುದು ನದಿಯಲ್ಲಿ
ಕೊಚ್ಚಿ ಹೋಗುತ್ತಿರುವವನು ನದಿಗೆದುರಾಗಿಯೇ ಈಸ
ಲೆತ್ನಿಸಿದಂತಾಯಿತು.' ಎಂದು ವ್ಯಧಿಸುವನು.
"ಚಿಂತಿಸಬೇಡ. ಬಿನ್ನ ಯಿಷ್ಟವನ್ನು ಸಂಪಾದಿಸಿ
ಕೊಡುವ ಆನಂಗನೇ ನಿನಗೆ ಸಹಾಯಕಾರಿಯಾಗುವ
ನೆಂ'ದು ಮತ್ತೆ ಸಮಾಧಾನ ಹೇಳುವ ವಿದೂಷಕನಮಾ
ತನ್ನು ಮನ್ನ್ನಿಸುತ್ತಾ 'ಬರುತ್ತಿರುವ ಈವಸಂತದ ಸೊಗ
ನೋಡೆಂದ ವಿಭೂಪಷಕನಿಗೆ 'ಹೌದು. ಇಲ್ಲಿ
ನೋಡು ಹೆಂಗಸಿನುಸೆಳ್ಳುಗುರಿನಂತೆ ಮೊದಲಲ್ಲಿ ಮಾ
ಸಲುಕೋಪಾಗಿಯೂ, ಎರಡು ಪಕ್ಕಗಳಲ್ಲಿ ಕೊಂಚ
ಕಪ್ಪಗೂ ಇರುವೆ ಈ ಕೆಂಪು ಗೋರಂಟಿಯೂ, ಉತ್ಕೃ
೧೩
ಷ್ಟವಾದ ಕೆಂಪುಬಣ್ಣದಿಂದ ಕೂಡಿ ಚಿಗುರು ಒಡೆ
ಯುತ್ತಿರುವ ಬಾಲಾಶೋಸಕವುೂ. ಸ್ಪಲ್ಬವಾದ ಪುಷ್ಟ
ರಜದಿಂದ ಹೊಗೆಯ ಬಣ್ಣವಾಗಿರುವ ಮಾವಿನ ಹೂ
ಗೊಂಚಲೂ ಕೂಡಿರಲು, ಈ ವಸಂತಲಕ್ಷ್ಮಿಯು ಮು
ಗ್ಧತ್ವ ಯೌವನಗಳ ನಡುವಿರುವಳು' ಎಂದು ತನ್ನ ಅನು
ರಾಗದ ಸ್ಥಿತಿಯ ನ್ನೇ ಹೇಳಿಕೊಳ್ಳುತ್ತಾ, ಅವನ
ಕೋರಿಕೆಯಂತೆ ಬಂದು ಕರಿಯ ಮಣಿಶಿಲೆಯ
ಕಲ್ಲುಹಲಿಗೆಯ ಮೇಲೆ ಕುಳಿತುಕೊಳ್ಳುವನು.
ಎದುರಿಗೆ ಇರುವ ಲತೆಗಳನ್ನು ನೊಡಿ ಮನಸ್ಸನ್ನು
ವಿನೋದಪಡಿಸಿಕೋ ಎಂದ ವಿದೂಷಕನಿಗೆ, "ವಯಸ್ಯ!
ಆ ಅಂಗನೆಯನ್ನು ನೋಡಿದ ಕಣ್ಣಿಗೆ, ಬೇಕಾದಷ್ಟು
ಹೂವ್ವು ಬಿಟ್ಟು ನೆಲದಲ್ಲಿ ಮಲಗಿ ಬಿಟ್ಟಿರುವ ಗಿಡಗ
ಳೂ ಉಪವನ ಲತೆಗಳೂ ಸೊಗಸವು' ಎಂದ, ವ್ಯಧಿ
ಸುತ್ತಾ ಅವನನ್ನು 'ನನ್ನ ಇಷ್ಟವೀಡೇರುವಂತೆ ಒಂದು
ಪಾಯವನ್ನು ಹುದುಕೆಂ'ದು ಪ್ರಾರ್ಥಿಸವನು. ವಿದೂ
ಷಕನು ನಕ್ಕು "ಅಹಲ್ಯಾ ಕಾಮಕವಾದ ಇಂದ್ರನಿಗೆ
ಸಚಿವನಾದ ವಜ್ರವೂ ಊರ್ವಶೀ ಕಾಮುಕನಾದ
ನಿನಗೆ ಸಚಿವನಾದ ನಾನೂ ಇಬ್ಬರೂ ಉನ್ಮತ್ತರೇ !'
ಎ೦ದು ತನ್ನ ವಜ್ರಶುಂಠತೆಯನ್ನು ಹೇಳಿ ಕೊಳ್ಳುತ್ತಾ
ಮತ್ತೆ ಪ್ರಾರ್ಥಿತನಾಗಿ "ಹಾಗೆಯೇ ಆಗಲಿ. ಮತ್ತೆ
ನಿನ್ನ ಗೋಳಾಟದಿಂದ ನನ್ನ ಸಮಾಧಿಗೆ ಭಂಗತರ
ಬೇಡ' ವೆನ್ನುತ್ತಾ: ಒಂದು ಶುಭಶಕುನವನ್ನು ಕಾಣು
ವನು. ಆ ವೇಳೆಗೆ ರಾಜನೂ 'ಆ ಪೂರ್ಣೇಂದು ಮುಖಿ
ಯಾದರೊ ಆಸುಲುಭಳು. ಅನಂಗನ ಚೇಷ್ಟೆಯಾ
ದರೊ ವಿಚಿತ್ರವಾಗಿರುವುದು.. ಆದರೂ ಆಶೆಯು
೧೪
ಇನ್ನೇನು ಕೈಸೇರಿತು ಎನ್ನುವಾಗ ಇರುವಂತೆ ಮನಸ್ಸು
ಸಂತೋಷವನ್ನು ಹೊಂದಿರುವುದು" ಎಂದು ಕೊಳ್ಳು
ತ್ತಿರುವಾಗ ಊರ್ವಶೀ ಚಿತ್ರಲೇಖೆಯರು ಬರುವರು.
ಚಿತ್ರಲೇಖೆಯು "ಎಲೆ ಸಖಿ! ಊರ್ವಶಿ! ಹೇಳದೆ
ಕೇಳದೆಯೆ ಎಲ್ಲಿಗೆ ಹೊರಟರುವೆ? ರಾಜರ್ಷಿಯಾದ
ಪುರೂರವನ ಬಳಿಗೇನಾದರೂ ಹೊರಟರುವೆಯಾ?
ಹಾಗಾದರೆ ಯಾರನ್ನು ಮೊದಲು ಕಳುಹಿಸಿರುವೆ?
ನಿನ್ನನ್ನು ಹೋಗೆಂದವರು ಯಾರು?” ಎಂದು ಕುತೂ
ಹಲದಿಂದ ಕೇಳಲು, ಆಕೆಯು "ಸಖಿ! ಅಂದು ಹೇಮ
ಕೂಟದಲ್ಲಿ ಏಕಾವಳಿಯು ಸಿಕ್ಕಿಕೊಳ್ಳಲು ಬಿಡಿಸೆಂ
ದಾಗ ಏನ ಹೇಳಿದೆ ಜ್ಞಾಪಿಸಿಕೊ, ಎಂದು ನುಡಿದು,
"ನಾಣ್ಗೇಡಿಯಾದ ನಾನಲ್ಲಿಗೇ ಹೊರಬರುವೆನು
ಹೃದಯವು ಮೊದಲೇ ಹೋಗಿರುವುದು ಮದನನು
ನನ್ನನ್ನು ನಿಯೋಜಿಸಿರುವನು. ಅದರಿಂದ ನಡೆ
ವಿಘ್ನ ಬರದ ಮಾರ್ಗದಲ್ಲಿ ಹೋಗೋಣವೆಂ' ದಳು.
ಅದಕ್ಕೆ ಚಿತ್ರಲೇಖೆಯು 'ಸಖಿ! ಕಾತರಳಾಗಬೇಡ-
ದೇವಗುರುಗಳು ಉಪದೇಶಿಸಿರುವ ಶಿಖಾಬಂಧಿನೀ
ವಿದ್ಯಾಬಲದಿಂದ ಜೀವಶತ್ರು ಗಳು ಯಾರಿಗೂ
ನಾವು ಕಾಣಿಸುವುದಿಲ್ಲ' 'ಈ ಗಂಗಾ ಯಮುನಾ
ಸಂಗಮದಲ್ಲಿ ಇದೋ ತನ್ನನ್ನು ತಾನು ನೋಡಿ
ಕೊಳ್ಳುತ್ತಿರುವಂತಿರುವ ಪ್ರತಿಷ್ಟಾನ ನಗರದ
ಚೂಡಾ ಮಣಿಯಂತಿರುವ ಆ ರಂಜರ್ಷಿಯ ಅರ
ಮನೆಯು, 'ಇಳಿದು ಆಪನ್ನಾನು ಕಂಪಿಯಾದ ರಾಜ
ನೆಲ್ಲಿರುವನೋ ನೋಡೋಣ ಬಾರೆಂದು ಮುಂದೆ
೧೫
ನಡೆದು, ನಂದನ ವನದ ಒಂದು ಭಾಗದಂತಿರುವ
ಪ್ರಮದ ವನಕ್ಕೆ ಬಂದು ಅಲ್ಲೇ ಯಿರುವ ರಾಜನನ್ನು
ನೋಡಿ, "ಇದೋ! ಹುಟ್ಟುತ್ತಿರುವ ಚಂದ್ರನು ಬೆಳ
ದಿಂಗಳ ನಿರೀಕ್ಷಣೆಯಲ್ಲಿರುವಂತೆ ನಿನ್ನನ್ನೇ ಎದುರು
ನೋಡುತ್ತಿದ್ದಾನೆ ಬಾ. ಕಾಣಿಸಿಕೊಳ್ಳೋಣ." ಎನ್ನು
ವಳು. ಊರ್ವಶಿಯ್ಕು 'ಸಖಿ! ಈಗ ಈ ರಾಜ
ರ್ಷಿಯು ಮೊದಲಿಗಿಂತಲೂ ಪ್ರಿಯದರ್ಶನನಾಗಿ
ಕಾಣುವನು. ಆದರೂ ತಡೆ. ತಿರಸ್ಕರಿಣಿಯಿಂದ ಒಂದು
ಗಳಿಗೆ ಕಣ್ಮಮರೆಯಾಗಿದ್ದು ಮಹಾರಾಜನು ವಯಸ್ಯ
ನೊಡನೆ ಏಕಾಂತದಲ್ಲಿ ಏನು ಯೋಜಚಿಸುತ್ತಿರುವನೋ
ನೋಡೋಣ " ಎನ್ನುವಳು ಇಬ್ಬರೂ ಹಾಗೆಯೇ
ಮಾಡುವರು.
ಆ ವೇಳೆಗೆ ವಿದೂಷಕನೂ " ವಯಸ್ಕ! ದುರ್ಲಭ
ರಾದ ಪ್ರಣಯಿ ಜನರು ದೊರೆಯುವ ಉಪಾಯವೊಂ
ದನ್ನು ಕಂಡು ಹಿಡಿದಿರುವೆನು" ಎನ್ನಲು, ಊರ್ವಶಿಯು
ಆದನ್ನು ಕೇಳಿ "ಈತನು ಪ್ರಾರ್ಥಿಸಿದರೂ, ಒಲಿ
ಯದೆ ವಿರೋದವಾಡುವ ಆ ಹೆಂಗಸಾದರೂ
ಯಾರು?” ಎಂದು ವಿಚಾರಪರಳಾಗುವಳು, ಚಿತ್ರಲೇ
ಖೆಯು "ದಿವ್ಯದೃಷ್ಟಿಯಿಂದ ನೋಡಿನ್ನಲು "ಆತನ
ಮನೋಗತೆಯು ಬೇರೆಯಾಗಿದ್ದರೆ ಏನುಗತಿ?
ಎಂದು ಹೆದರುವಳು. ವಿದೂಷಕನು ಮಾತು
ಕಿವಿಗೆ ಬೀಳದೆ ಕುಳಿತಿದ್ದ ರಾಜನನ್ನು ಮತ್ತೆ ಸಂ
ಬೋಧಿಸಿ, "ಸ್ವಪ್ನದಲ್ಲಿ ಪ್ರಿಯೆಯನ್ನು ತೋರಿಸುವ
ನಿದ್ರೆಯನನ್ನಾದರೂ ಸೇವಿಸು. ಅಥವಾ ಆ ಊರ್ವ
ಶಿಯ ಪ್ರತಿಕೃತಿಯನ್ನು ಚಿತ್ರದಲ್ಲಿ ಬರೆದು ನೋಡಿ
೧೬
ಯಾದರೂ ಸಂತೋಷಪಡು' ಎನ್ನುವನು. ಅರಸನು
ಹೃದಯದಲ್ಲಿ ಕಾಮಶರವು ನೆಟ್ಟಿರಲು ನಿದ್ದೆಯು
ಬಂದು ಕನಸು ಬೀಳುವುದೆಂತು? ನಲ್ಲೆಯನ್ನು ಕಾಣುವು
ದೆಂತು? ಕಣ್ಣಿನಲ್ಲಿ ನೀರು ತುಂಬಿರಲು ಚಿತ್ರ ಲೇಖನ
ವೆಂತು ಸಾಧ್ಯವು?' ಎಂದು ಚಿಂತಿಸುವನು. ಊರ್ವ
ಶಿಯು ಇದನ್ನು ಕೇಳಿಯೂ 'ನನಗೆ ತೃಪ್ತಿಯಾಗ
ಲಿಲ್ಲ'ವೆನ್ನುತ್ತಿರಲು, ವಿದೂಷಕನು 'ಇಲ್ಲಿಂದ ಮುಂ
ದಕ್ಕೆ ನನ್ನ ಬುದ್ದಿಯೋಡುವುದಿಲ್ಲ' ವೆಂದು ಸುಮ್ಮ
ನಾಗಲ್ಕು ಆರಸನು ಮತ್ತೆ 'ಅಯ್ಯಾ ! ಆಕೆಯು
ತುದಿಯಿಂದ ತಾಳಿನವರೆಗೂ ಕಠಿಣವಾದ ನನ್ನ
ಮನೊರೋಗವನ್ನು ಕಾಣಳು. ಆಥವಾ
ತನ್ನ ಪ್ರಭಾವದಿಂದ ತಿಳಿದಿದ್ದರೂ, ನನ್ನನ್ನು
ಕಡೆಗಂಡಿರುವಳು. ಹೀಗೆ ಪ್ರಯೋಜನವಿಲ್ಲದಿರು
ವಂತೆ ಆ ಜನದಲ್ಲಿ ನನ್ನ ಮನಸ್ಸನ್ನು ಸಿಲುಕಿಸಿದ
ಪಂಚಬಾಣಮ ಈಗಲಾದಧದರೂ ಕೃತಕೃತ್ಯನಾಗಲೆಂ'ದು
ವ್ಯಧಿಸುವನು. ಅದನ್ನು ಪೇಳಿ ಊರ್ವಶಿಯು ಬಲು
ನೊಂದು "ಅಯ್ಯೋ ನನ್ನನ್ನು ಈತನು ಇಂತು ನಿಂದಿ
ಸುವನು. ನಾನಾದರೊ ಈತನ ಮುಂದೆ ನಿಂತು
ಕೊಳ್ಳಲಾರೆನು." ಎಂದು ತನ್ನ ಪ್ರಭಾವದಿಂದ
ಒಂದು ಭೂರ್ಜ ಪತ್ರವನ್ನು ನಿರ್ಮಿಸಿ, ಅದನ್ನು ಬರೆದು
ಆತನ ಮುಂದಿಡುವಳು. ವಿದೂಷಶಕನು ಗಾಳಿಯಲ್ಲಿ
ತೂರಿಕೊಂಡು ಬರುವ ಆ ಭೂರ್ಜ ಪತ್ರವನ್ನು ಕಂ
ಡು ಹಾವಿನ ಪೊರೆಯೆಂದು ಭೀತವಾಗಲು ರಾಜನು
ಅದನ್ನು ಮೋಡಿ “ಇದು ಹಾವಿನ ಪೊರೆಯಲ್ಲ. ಬರೆದಿರು
ವಭೂರ್ಜಪತ್ರವೆಂ`ದು ತೆಗೆದುಕೊಂಡು ವಿದೂಷಕನು
೧೭
ಹೇಳಿದಂತೆಯೇ ಅದು ಊರ್ವಶಿಯ ಪ್ರೇಮಲೇಖವಾ
ಗಿರಲು, ಅದನ್ನು ಕೇಳೆಂದು ವಿದೂಷಕನಿಗೆ ಓದಿ
ಹೇಳುವನು, "ಎಲ್ಲಿ ಸ್ವಾಮಿಯೇ ! ತಾವು ನನ್ನಲ್ಲಿ
ವಿಶ್ವಾಸವಿಟ್ಟು ಬಹುಮಾನಮಾಡಿದಿರಿ, ಅನುರಕ್ತ
ರಾದ ತಮ್ಮಲ್ಲಿ ನಾನೂ ಹಾಗೆಯೇ ಇರುವೆನು.
ಹಾಗಲ್ಲದಿದರೆ ಲಲಿತವಾದ ಪಾರಿಜಾತದ ಹೂವ್ವಿನ.
ಹಾಸಿನಲ್ಲಿ ಹೊರಳುವ ನನಗೆ, ಸುಖವಾದ ನಂದನ
ವನದ ಗಾಳಿಯೂ ಬೆಂಕಿಯಂತಾಗುವುದೆ?" ಎಂದೋ
ದಲು ಅರಸನೇನೆನ್ನುವನೋ ಎಂದು ಕುತೂಹಲಿ
ಯಾಗಿರುವಊರ್ವಶಿಯನ್ನು"ಕೊರಗಿದ ಕಮಲದಂತಿ
ರುವ ಅಂಗಗಳೇ ಹೇಳುತ್ತಿರುವುದಲ್ಲ" ಎಂದು ಚಿತ್ರ
ಲೇಖೆಯು ಸಮಾಧಾನಪಡಿಸಲು, ರಾಯನು
ಸಮಾನವಾದನುರಾಗದಿಂದ ಸುಂದರವಾಗಿಯೂ
ಲಲಿತವಾದ ಅರ್ಥದಿಂದ ಕೂಡಿರುವುದಾಗಿಯೂ
ಇರುವ ಪ್ರೇಯಸಿಯಪ್ರೇಮ ಲೇಖನವು ಕೈಸೇ
ರಲು, ಮದಿರೇಕ್ಷಣೆಯು ಬಂದು, ನನ್ನ ಮುಖದಲ್ಲಿ
ಮುಖವನ್ನಿಟ್ಟಂತಾಯಿತು? ಎಂದು ಸಂತೋ
ಷಿಸಿ, ವಯಸ್ಯ! ನನ್ನ ಬೆವರುವ ಕೈ ಬೆರಳಿನಿಂದ ಅಕ್ಷ
ರವು ಮಾಸಿ ಹೋಗುತ್ತದೆ. ಇದನ್ನು ನಿನ್ನ ಕೈಯ್ಯ
ಲಿಟ್ಟುಕೊಂಡಿರು ಎ೦ದು ಕೊಡುವನು. ವಿದೂಷ
ಕನೂ ಹಾಗಾದರೆ ಊರ್ವಶಿಯು ಆಶೆಯ ಗಿಡದ
ಹೂವನ್ನು ತೋರಿಸಿ ಫಲದಲ್ಲಿ ವಿಮುಖಳಾಗು
ವಳೇ?” ಎನ್ನುತ್ತಿರಲು ಊರ್ವಶಿಯ ಸೂಚನೆ
ಯಂತೆ ಚಿತ್ರ ರೇಖೆಯು ರಾಜನ ದೃಷ್ಟಿಗೆ ಗೋಚರ
ವಾಗಿ, "ರಾಯನೇ! ಸುರವೈರಿಯಿಂದಾದ ಸಂಕಟ
— ೧೮---------------------------------------
ದಲ್ಲಿ ಶರಣನಾದ . ಮಹಾರಾಜನು ತನ್ನ ದರ್ಶನ
ವನ್ನೇ ನಿಮಿತ್ತವಾಗಿಟ್ಟುಕೊಂಡು ನನ್ನನ್ನು ಸಂಕಟ
ಪಡಿಸುವ ಮದನನಿಂದಲೂ ಕಾಪಾಡಬೇಕು ಎಂದೂ
ರ್ವಶಿಯು ವಿಜ್ಞಾಪಿಸುವಳೆಂ''ದು ಅರಿಕೆಗೈಯ್ಯಲು,
ರಾಯನು "ಆಕೆಯು ಮಾತ್ರ ಪರ್ಯುತ್ಸುಕಳಾಗಿರು
ವಳೆಂದು ಹೇಳುವೆಯಲ್ಲದೆ, ಪುರೂರವನ ಕಷ್ಟ
ವನ್ನು ನೋಡೆಯಲ್ಲ! ನಮ್ಮಿಬ್ಬರಿಗೂ ಪ್ರಣಯವು
ಸಮವಾಗಿರುವುದು ಕಾದಿರುವಾಗಲಲ್ಲವೆ, ಎರಡು
ಉಕ್ಕಿನ ತುಂಡುಗಳು ಒಂದನ್ನೊಂದು ಹೊಂದಿ
ಕೊಳ್ಳುವುವು?'' ಎಂದು ಹೇಳಿಕೊಳ್ಳಲು, ಚಿತ್ರಲೇ
ಖೆಯು "ಸಖಿ! ಊರ್ವಶಿ! ಇತ್ತ ಬಾ ಪ್ರಿಯತಮನ
ಅವಸ್ಥೆಯು ನಿನ್ನಿದಕ್ಕಿಂತಲೂ ದಾರುಣವಾಗಿರುವುದ
ರಿಂದ ನಾನುಆತನ ದೂತಿಯೇ ಆದೆನೆಂ"ದಳು.
ಊರ್ವಶಿಯು "ಎಲೆ ಚಂಚಲೆಯೆ! ನನ್ನನ್ನು ಎಷ್ಟು
ಬೇಗ ಬಿಟ್ಟೆ?” ಎನ್ನಲು, ಚಿತ್ರಲೇಖೆಯೂ "ಆಗಲಿ,
ಇನ್ನೇ ನು ಒಂದು ಗಳಿಗೆಯೊಳಗಾಗಿ ಯಾರು ಯಾರ
ಮಗ್ಗ ಬಿಡುವರೆಂಬುವುದು ತಿಳಿಯುವುದು. ಇರಲಿ.
ಮೊದಲು ಮಜರೆ ಮಾಡು” ಎವ್ಹೆಲ್ಲು, ಊರ್ವಶಿಯ
ನಾಚುತ್ತಾ ಮುಂದೆ ಬಂದು ಆಮಹಾಗಾಜನಿಗೆ ಜಯ
ವಾಗಲಿ ಜಯವಾಗಲಿ? ಎಂದು ಮರ್ಯಾದಿ ಮಾಡಲು
ರಾಯನು ತುಂಬಿದ ಸುವತ್ಮಾ ನದಿಂದ "ಸುನ್ಸರಿ! ಸಹೆ
ಸ್ರಾಕ್ಷನಿಗೆ ಜಯವಾಗಲಿ ಎನ್ನುತ್ತಿದ್ದ ವಳು ನನ್ನನ್ನೂ
ಕುರಿತು ಜಯವಾಗಲೆಂದವಮೇಲೆ ನನ್ನಿಂದ ಸರ್ವವೂ
ಜಿತವೇ ಆಯಿತು? ಎಂದುಪಚರಿಸಿ ಕೆಲದಲ್ಲಿ ಕುಳ್ಳಿ
ರಿಸಿಕೊಳ್ಳಲು, ಹಾಸ್ಕಪ್ರಿಯನಾದ ಬ್ರಶ್ಮ ಬಂಧುವು
ಹಾ ಅ
"ಅಯ್ಯೋ! ನಿಮ್ಮರಾಜ್ಯದಲ್ಲದೇ ನದು? ರಾಜಸಖನಾದ
ಬ್ರಾಹ್ಮಣನಿಗೆ ವಂದಿಸುವುದಿಲ್ಲವೇನು ?” ಎಂದು ಬಲ
ವಂತದಿಂದ ವಂದಿಸಿಕೊಳ್ಳುವನು. ಆ ವೇಳೆಗೆ ದೇವ
ದೂತನು "ಎಲೆ ಚಿತ್ರಲೇಖೆ! ಊರ್ವಶಿಯನ್ನು ತ್ವರೆ
ಗೊಳಿಸು. ಮರುತ್ತತಿಯಾದಇಂದ್ರನು ಲೋಕಪಾಲ
ರೊಡನೆ ಭರತಮುನಿಯು ನಿಮಗೆ ಕಲಿಸಿಕೊಟ್ಟರುವ
ಅಸ್ಪರಸಾಶ್ರಯವಾದ ಲಲಿತಾಭಿನಯವನ್ನು ನೋಡ
ಲಿಚ್ಚಿ ಸಿರುವನ.” ಎಂದು ಉದ್ಭೋಹಿಸಲು ರಾಜನೂ
ಅದನ್ನುಕೇಳಿ "ನೀವು ನಿವೆಸ್ಮದೆಯನ ಅಪ್ಪಣೆಯನ್ನು
ಸೆರವೇರಿಸುವುದರಲ್ಲಿ ನಾನು ಅಡ್ಡಿ ಯಾಗತಕ ವವಲ್ಲ.
ಆದರೆ ಈ ಜನ. ನ್ನು ಮಾತ್ರ ಮಟಹುಳೂಡಡು
ಎಂದು ಕೇಳಿಕೊಂಡು ಬೀಳ್ಕೊಡಲು, ಸಿಯೋಗದುಃಖಿ
ತೆಯಾದ ಊರ್ವಶಿಯು ರಾಜನನ್ನು ನೋಡುತ್ತಾ
ಸಖಿಯೊಡವಬೆ ಹೊಗ. ಹೋಗುವಳು.
ರಾಜನು "ಇನ್ಟು ಕಣ್ಣುಗ:ು ಇದ್ದೂ ವ್ಯರ್ಥವೆಂದು
ಚಿಂತಿಸಲು, ವಿದೂಷಕನ ಭೂರ್ಜಪತ್ರವನ್ನಾ ದರೂ
ತೋರಿಸೋಣವೆಂದುಕೊಂಡು, ಊರ್ವತಶೀದರ್ಶನ ವಿ
ಸ್ಥಿತನಾಜ ತನ್ನ ಕ್ಸೆಯ್ಯೊಂದ ಶಾನರಿಯುದಂಶೆಯೇ ಅ
ದು ಎಲ್ಲಿಯೋ ಬಿದ್ದು ಹೋಗಿರುವುದನ್ನರಿತು, ಅದನ್ನು
ಮರೆಸುವುದಕ್ಕೆ "ವಯಸ್ಕ! ನೀನು ಮಾತ್ರ ದೇದತ್ಯಾ
ಗದ ಯೋಚನೆ ಮಾಡಬೇಡ. ನಿನ್ನ ಲ್ಲಿ ಉಊರ್ವತಿಯು
ದೃಢವಾದ ಆ 5ಮರಾಗವುಳ್ಳವಳಾಗಿರ:ವಳು. ಇಲ ಆದ
Fo ಹೊರಟುಹೋದಮಾತ್ರಕ್ಕೆ € ಅವಳು ಈ ರೀತಿ
ಯಾದ ಅನುಬಂಧವನ್ನು ಸಡಿಲಸಡಿಸುವುದಿಲ್ಲ'ವೆಂದು
೧
೨9೦ ೨ __
ಥ್ಛೇರ್ಯ ಹೇಳುವಂತೆ ನಬಸುವನು. ಇಯ ನೂ
ಹೌದು, ಆಕೆಯು ಹೋಗುವಾಗ ಬಿಡುವ ನಿಟ್ಟುಸಿರಿ
ನಿಂದ, ಎದೆಯು ಕಂಪಿಸುತ್ತಿತ್ತು. ಅದನ್ನು ನೋಡಿ
ದರೆ "ಶರೀರವು ಪರವಶವು. ಸ್ಪವಶವಾದ ಈ
ಹೃದಯವನ್ನು ನೀನು ತೆಗೆದುಕೋ?” ಎಂದಂತೆ
ಇದ್ದಿತು: ಎಂದು ಅದನ್ನೇ ಸಾಧಿಸುವನು.
ಇನ್ನು ಯಾವ ವೇಳೆಯಲ್ಲಿ ಆ ಭೂರ್ಜ ಪತ್ರವನ್ನು
ಕೇಳುವನೋ ಎಂದು ತನ್ನಲ್ಲಿಯೇ ಮಿಡುಕುತ್ತಿರುವ
ವಿದೂಷಕನನ್ನು, ಆರಸನೂ ಬೇರೆ ಉಪಾಯ ಶೋ
ರದೆ ಭೂರ್ಜಪತ್ರವನ್ನು ತಾರೆನ್ನಲು, ವಿದೂಷಕನು
"ಇದೇನು? ಎಲ್ಲಿಯೂ ಕಾಣಲೇ ಕಾಣದು. ದಿವ್ಯವಾದ
ಆ ಭೂರ್ಜ ಪತ್ರವೂ ಆ ಊರ್ವಶೀಮಾರ್ಗವನ್ನೇ ಹಿಡಿ
ಯಿತೋ?' ಎಂದು ವಿಷಾದಿಸಿ ಅರಸನಿಂದ ಯಾವಾ
ಗಲೂ ನೀನೊಬ್ಬ ಮೊಂಕನೊಂದು ಬಯ್ಯಿಸಿಕೊಂಡು
ಅದನ್ನು ಹುಡುಕುತ್ತಿರುವನು.
ಆ ವೇಳೆಗೆ ಸರಿಯಾಗಿ ನಿಪ್ರಣಿಕೆಯಿಂದ ರಾಯನ
ಗುಟ್ಟನ್ನು ಅರಿತು ನಿಜಾಂಶವನ್ನು ವಿಚಾರಿಸಬೇ
ಕೆಂದು ತಾನೇ ಪ್ರಮದ ವನಕ್ಕೆ ಬಂದ ಮಹಾ
ರಾಣಿಯ ನೂಪುರಕ್ಕೆ ಈ ಬೂರ್ಜಪತ್ರವು ಸಿಕ್ಕಿ
ಬೀಳುವುದು. ಆಕೆಯು ಅದನ್ನು ಚೇಟಯಿಂದ ಓದಿಸಿ
ಕೇಳಿ ಜುಗುಪ್ಸೆಪಟ್ಟು ಅದನ್ನು ಕಾಣದೆ ಉದ್ದಿಗ್ನನಾದ
ರಾಜನನ್ನು ಅದನ್ನು ಒಪ್ಪಿಸುವಳು. ಆಗ ವಿದೂಷ
ಕನು ಏನು ಮಾಡೋಣವೆಂದ ರಾಜನಿಗೆ 'ಕಳುವು
ಮಾಲಿನಿಂದ ಸಿಕ್ಕಿರುವ ಕಳ್ಳನು ಏನು ಹೇಳಬಲ್ಲ'
೨೧
ನೆಂದು ಹಾಸ್ಯ ಮಾಡಿ, ದೇವಿಯನ್ನು ಕುರಿತು
ಒಡತಿಯೆ! ಬೇಗ ಈತನಿಗೆ ಭೋಜನವನ್ನುಮಾಡಿಸು,
ಪಿತ್ತವು ಶಮನವಾಗಿ ಸ್ವಸ್ಥವಾಗಲೆ'ನ್ನುವನು. ರಾಜನ
"ಅಯ್ಯೊ! ಮೂರ್ಖ! ನನ್ನನ್ನು ಬಲವಂತವಾಗಿ ಅಸ
ರಾಧಿಯಾಗಿ ಮಾಡುವೆಯೆಂ'ದು ಹೇಳಲು, "ನಿನ್ನಪರಾ
ಧವೇನು? ಪ್ರತಿಕೂಲದರ್ಶನೆಯಾಗಿದ್ದೂ ಎದುರಿ
ಗಿರುವ ನನ್ನದೇ ಆಪನಾಧವೆಂ' ದು ಹೊರಡುವ
ರಾಣಿಯ ಕಾಲಿಗೆ ಬಿದ್ದು, 'ನಾನು ಅಪರಾಧಿಯು,
ಕೋಪಗೊಳ್ಳ ಬೇಡ. ಸೇವ್ಯರಾದಜನರು ಕೋಪಗೊಳ್ಳ
ಬೇಕಾದರೆ ದಾಸನು ಹೇಗೆ ತಾನೇ ನಿರಪರಾಧಿಯಾಗಿ
ದ್ದಾನು?' ಎಂದು ಕೇಳಿಕೊಂಡರೂ ದೇವಿಯು ಹಾಗೂ
ನಿಲ್ಲದೆ ಹೊರಟು ಹೋಗುವಳು. ವಿದೂಷಕನು 'ದೇವಿ
ಯು ಮಳೆಗಾಲದ ನದಿಯಂತೆ ಪ್ರಸನ್ನಳಾಗದೆ ಹೊರ
ಟು ಹೊದಳು. ನೀನು ಮೇಲಕ್ಕೇಳು' ಎನ್ನಲು ರಾಯ
ನೆದ್ದು "ವಯಸ್ಯ! ದಯಿತಜನರ ಅನುನಯವು ಎಷ್ಟು
ಪ್ರಿಯವಾಗಿದ್ದರೂ ನೀರಸವಾಗಿದ್ದರೆ, ಅವರಿಗೆಸೊಗಸದು'
ಕೃತ್ರಿಮಮಣಿಯು ಅದನ್ನು ತಿಳಿದವರ ಮನಸ್ಸಿ ಗೆ ಹಿಡಿ
ಯುವುದೆ ? ಎಂದು ಹೇಳುವನು. ವಿದೂಷಕನು 'ಹೋಗ
ಗಲಿ.ಆನುಕೂಲವಾಯಿತು. ಕಣ್ಣುಬೇನೆಯವನುಎದು
ರಿಗೆ ದೀಪಶಿಖೆಯನ್ನು ಸಹಿಸನು' ಎಂದು ಹೇಳಲು,
ರಾಯನು 'ಹಾಗಲ್ಲ. "ಊರ್ವಶಿಯಲ್ಲಿ ಅನುರಕ್ತನಾಗಿ
ದ್ದರೂ ನನಗೆ ದೇವಿಯಲ್ಲಿ ಮೊದಲಿನ ಬಹುಮಾನವೇ
ಇರುವುದು ಅದರಿಂದ ಈಗಾದುದಕ್ಕಾಗಿ ಬಹಳ ವಿಷಾದಿ
ಸಿದರೂ, ನಾನು ಕಾಲುಹಿಡಿದು ಬೇಡಿದರೂ ಆಕೆಯು
ನಿರಾಕರಿಸಿದಳೆಂಬುದರಿಂದ ಧೈರ್ಯವಾಗಿರುವೆನು?
೨೨
ಎನ್ನುವನು. ಆಗ ವಿದೂಷಕನು ನಿನ್ನ ಧ್ವೇರ್ಯ
ವಿರಲಿ. ಹಸಿದ ಬ್ರಾಹ್ಮಣನ ಪ್ರಾಣವನ್ನು ಕಾಪಾಡು
ನಡೆ. ಸ್ನಾನಭೋಜನದ ಕಾಲವಾಯಿತೆ'ಂದು ಹೇಳಿ
ಆರಸನನ್ನು ಕರೆದುಕೊಂಡುಹೋಗುವನು.
ಇಂತಿದು ದ್ವಿತೀಯಾಂಕವು
-----
------------------------------
ತೃತೀಯಾಂಕವು.
ಭರತಾಶ್ರಮ ಪ್ರಾಂತದಲ್ಲಿ ಭರತರ್ಷಿಯು ದೇವ
ಲೋಕಕ್ಕೆ ನಾಟಕವಾಡಿಸಲು ಹೋಗಿದ್ದಾಗ, ಅಗ್ನಿ
ರಕ್ಷಣಾರ್ಥವಾಗಿ ಆಶ್ರಮದಲ್ಲಿ ಯೇ ಉಳಿದಿದ್ದ ಗಾಲ
ವನು ಭರತನ ಜತೆಯಲ್ಲಿ ಹೋಗಿದ್ದ ಪೈಲವನನ್ನು
ಕುರಿತು 'ಸರಸ್ವತಿಯು ಬರೆದ ನಾಟಕವು ಹೇಗಿದ್ಧಿತು?
ಸಭೆಯವರು ಅದನ್ನು ಮೆಚ್ಚಿದರೆ ?' ಎಂದು ಕೇಳಲು
ಅವನು 'ಪರಿಷತ್ತು ಆರಾಧಿತವಾಯಿತೋ ಇಲ್ಲವೋ
ತಿಳಿಯೆನು. ಅದರೆ ಊರ್ವಶಿಯು ಮಾತ್ರ ಅಲ್ಲಲ್ಲಿ
ಸ್ವಲ್ಪ ಉನ್ಮಾದಿಕೆಯಾಗಿದ್ದಳು. ಲಕ್ಷ್ಮಿಯ ಪಾತ್ರ
ವನ್ನು ವಹಿಸಿದ್ದ ಊರ್ವಶಿಯನ್ನು ವಾರುಣಿಯ
ಪಾತ್ರವನ್ನು ವಹಿಸಿದ್ದ ಮೇನಕೆಯು 'ಇದೋ ಲೋಕ
ತ್ರಯವಿಖ್ಯಾತರಾದ ಪುರುಷರೂ, ಕೇಶವನೂ,
ಲೋಕಪಾಲರೂ ಬಂದಿರುವರು. ಇವರಲ್ಲಿ ನಿನಗೆ
ಯಾರ ಮೇಲೆ ಮನಸ್ಸು ?' ಎಂದು ಕೇಳಲು, ಪುರ
೨೩
ಷೋತ್ತಮನೆಂಬುದಕ್ಕೆ ಪ್ರತಿಯಾಗಿ ಪುರೂರವನೆಂದು
ಆಕೆಯ ಬಾಯಲ್ಲಿ ಬಂದು ಬಿಟ್ಟಿತು. ಆಗ ಉಪಾ
ಧ್ಯಾಯನು ನನ್ನ ಉಪದೇಶವನ್ನ ಮೀರಿದೆ. ನಿನಗೆ
ದಿವ್ಯಲೋಕವಾಸವು ತಪ್ಪಿ ಹೋಗಲಿ' ಎಂದು ಶಾಪ
ಕೊಟ್ಟನು. ನಾಚಿಕೆಯಿಂದ ತಲೆಬಗ್ಗಿ ನಿಂತಿದ್ದ
ಊರ್ವಶಿಯನ್ನು ನೋಡಿ ಪುರಂದರನು ಕೂಡಲೆ
ನಿನ್ನ ಮನಸ್ಸು ನಟ್ಟಿರುವ ಆ ರಾಜರ್ಷಿಯ ನನಗೆ
ರಣಸಹಾಯಕನಾದ ಸಖನು. ಆತನಿಗೆ ನಾನೂ
ಒ೦ದು ಪ್ರಿಯವನ್ನು ಮಾಡಬೇಕಾದುದಂಟು.
ಅದರಿಂದ ಆತನು ಇಲ್ಲಿ ಪಡೆದ ಸಂತಾನವನ್ನು
ನೋಡುವವರೆಗೂ ನೀನು ಆತನಲ್ಲಿದ್ದು ಬಾ' ಎ೦ದು
ಆ ಶಾಪವನ್ನೇ ಅನುಗ್ರಹ ಮಾಡಿದನು' ಎ೦ದು
ಹೇಳುತ್ತಾ 'ಮಾತನಾಡುತ್ತ ಅಭಿಷೇಕದ ವೇಳೆಯು
ಮೀರಿತು. ನಡೆ, ಎಂದು ಉಪಾಧ್ಯಾಯನ ಬಳಿಗೆ
ಹೊರಟು ಹೋಗುವರು.
ಅನಂತರ ಅ೦ತಃಪುರದ ಕಂಚುಕಿಯು ಬಂದು
'ವ್ರತಾಚರಣೆಗಾಗಿ ಈ ಮೊದಲೇ ಕೋಪವುಳಿದು
ನಿಪುಣಿಕೆಯ ಮೂಲಕವಾಗಿ ಮಹಾರಾಜನನ್ನು
ಯಾಚಿಸಿರುವನು ಆದನ್ನೇ ಮತ್ತೆ ವಿಜ್ಞಾಪಿಸು
ಎಂದು ನೇಮದಲ್ಲಿರುವ ಕಾಶೀರಾಜ ಪುತ್ರಿಯ ಅಪ್ಪಣೆ
ಯಾಗಿರುವುದು. ಇದೋ ನಾನೂ ಹೋಗಿ, ಸಂಧ್ಯಾ
ಕಾರ್ಯವನ್ನು ಪೂರೈಸಿರುವ ಮಹಾರಾಜನನ್ನು
ನೋಡುವೆನು' ಎ೦ದು ಮು೦ದೆ ನಡೆದು, “ ಈ ಸಂಧ್ಯಾ ಕಾಲವು ರಾಜವಸತಿಯಲ್ಲಿ ರಮಣೀಯವಾಗಿರುವುದು
೨೪
ವಾಸಯಷ್ಟಿಗಳಲ್ಲಿ ನವಿಲುಗಳು ತೂಕಡಿಸುತ್ತ ಕೆತ್ತಿ
ದ೦ತೆ ಕುಳಿತ್ತಿರುವುವು. ಗವಾಕ್ಷಗಳಲ್ಲಿ ಹೊಗೆಯು
ಹೊರಹೊಮ್ಮುತ್ತಿರಲು, ಅಲ್ಲಿ ಪಾರಿವಾಳದ ಸ೦ದೇ
ಹವು ತೋರುತ್ತಿರುವದು, ಪರಿಶುದ್ಧವಾದ ಪರಿಶುದ್ಧವಾದ ಅ೦ತ
ರ೦ಗವುಳ್ಳ ಈ ವೃದ್ಧರು ಪುಷ್ಪಬಲಿಸಮೇತವಾದ
ಸ್ಥಳಗಳಲ್ಲಿ ಸಂಧ್ಯಾ ಮಂಗಳ ದೀಪಿಕೆಗಳನ್ನಿಡುತ್ತಿರು
ವರು ಎಂದು ಮು೦ದೆ ನೋಡಿ 'ಇದೋ ದೇವನಿತ್ತ
ಕಡೆಯೇ ಬಿಜಮಾಡಿಸುತ್ತಿರುವನು. ಪರಿಜನರು ದೀವ
ಟಿಕೆಗಳನ್ನ ಹಿಡಿದಿರಲು, ಸುತ್ತುವರದಿರುವ ಚಂಡು
ಮಲ್ಲಿಗೆಗಳು ಹೂವ ಬಿಟ್ಟಿರಲು ರೆಕ್ಕೆಯ ಬಡಿತ
ವಿಲ್ಲದೆಯೇ ನಡೆದು ಬುರುತ್ತಿರುವ ಗಿರಿಯಂತಿರುವನು'
ಎ೦ದು ವರ್ಣಿಸಿ 'ಇರಲಿ ಈತನು ಬರುತ್ತಿರುವ
ಮಾರ್ಗದಲ್ಲಿ ನೀನು ಈತನನ್ನು ನಿರೀಕ್ಷಿಸುವೆನು'
ಎಂದು ನಿಂತುಕೊಳ್ಳುವನು.
ಅನ೦ತರ ರಾಜನ "ಕಾರ್ಯಾ೦ತರದಿ೦ದ ದಿನವ
ನ್ನೆಲ್ಲ ಅತಿ ಕಷ್ಟದಿಂದ ಕಳೆದುದಾಯಿತು, ಯಾವು
ದೊ೦ದು ವಿನೋದಕ್ಕೂ ಅವಕಾಶ ಕೊಡದ ರಾತ್ರಿ
ಯನ್ನು ಹೇಗೆ ತಾನೇ ಕಳೆಯುವುದು ?" ಎ೦ದು
ಚಿ೦ತಿಸುತ್ತ ಮು೦ದೆ ಬ೦ದು ಅರಿಕೆ ಮಾಡಿದ ಕಂಚು
ಕಿಯ ವಿಜ್ಞಾಪನೆಯನ್ನು ಕೇಳಿ 'ದೇವಿಯರಿಷ್ಟದಂ
ತೆಯೇ ಆಗಲಿ' ಎಂದು ಮನ್ನಿಸಿ, ವಿದೂಷಕನನ್ನು
ನೋಡಿ 'ವಯಸ್ಯ ! ದೇವಿಯು ವ್ರತವನ್ನು ಆಚರಿ
ಸುವ ಕಾರಣವಾದರೂ ಏನಿರಬಹುದು?' ಎಂದು ವಿಚಾ
ರಿಸುವನು. ಬುದ್ದಿವ೦ತನಾದ ಅವನ 'ನೀನು
೨೫
ಕಾಲುಹಿಡಿದು ಅಡ್ಡಬಿದ್ದಾಗ ದೇವಿಯು ತಿರಸ್ಕರಿಸಿ
ಹೊರಟು ಹೋದಳು, ಆ ಮೇಲೆ ಪಶ್ಚಾತ್ತಾಪ ಹುಟ್ಟಿ
ಆದನ್ನು ಮರೆಸುವುದಕ್ಕಾಗಿ ಈ ವ್ರತವನ್ನಾಚರಿಸು
ವಳು? ಎಂದು ಹೇಳಲು, 'ಇರಬಹುದು' ಎ೦ದು,
ರಾಜನೂ ವಿದೂಷಕನ ಮಣಿಹರ್ಮ್ಯಕ್ಕೆ ಬರು
ವರು.
ಗ೦ಗಾ ತರಂಗಗಳಿ೦ದ ಶೀತಲವಾದ ಸ್ಪಟಿಕದ
ಹಂತಗಳನ್ನು ಹತ್ತಿ ಸದಾ ರಮ್ಯವಾದ, ಅಲ್ಲಿಗೆ ಬಂದು
ಕುಳಿತುಕೊ೦ಡು ಇನ್ನೇನು ಚ೦ದ್ರೋದಯವಾಗು
ವುದು' ಎಂದು ವಿದೂಷಕನ ಸೂಚಿಸಲು "ಅಹದು.
ಉದಯಾದ್ರಿಯನ್ನೇರಿ ಬರುತ್ತಿರುವ ಚಂದ್ರನ ಕಿರಣ
ದಿ೦ದ ಕತ್ತಲು ದೂರವಾಗುತ್ತಿರಲು ಪೂರ್ವ ದಿಶೆಯು
ಓಸರಿಸಿದ ಮುಂಗುರುಳು ಹೆಣ್ಣಂತೆ ಕಣ್ಣಿಗೆ ಬಣ್ಣ
ವಾಗಿರುವುದು' ಎಂದು ವರ್ಣಿಸುವ ನು. ವಿದೂಷಕ
ನೂ 'ಇದೋ, ಮುರಿದು ಹೋದ ಕಡುಬಿನಂತೆ ಸೊಗ
ಸಾಗಿರುವ ಈ ಔಷಧೀಶನು ಹುಟ್ಟಿದನು.' ಎಂದು
ತೋರಿಸಲು, 'ಹೊಟ್ಟೆ ಬಾಕನಾದವನಿಗೆ ಮೂರು ಹೊ
ತ್ತೂ ತಿಂಡಿಯ ಯೋಚನೆಯೆ !' ಎಂದು ರಾಜನು
ಮೆಲ್ಲಗೆ ನಕ್ಕು, ಸಜ್ಜನರ ಕ್ರಿಯೆಯು ನಡೆಯಲೆಂದು
ಸೂರ್ಯನನ್ನು ಪ್ರವೇಶಿಸುವ, ಪಿತೃಗಳನ್ನೂ ದೇವತೆ
ಗಳನ್ನೂ ಸುಧೆಯಿಂದ ತೃಪ್ತಿಗೊಳಿಸುವ, ರಾತ್ರಿಯಲ್ಲಿ
ಮೋಹದಿ೦ದ ಮೂರ್ಛೆಗೆ ಸಂದವರನ್ನು ಶಿಕ್ಷಿಸುವ,
ಈಶ್ವರನ ತಲೆಯಲ್ಲಿರುವ ನಿನಗೆ ನಮಸ್ಕಾರ' ಎಂದು
ಚಂದ್ರನಿಗೆ ಕೈಮುಗಿದು ನಮಸ್ಕಾರಮಾಡಿ 'ಬ್ರಾಹ್ಮಣ
೨೬
ನಿಂದ ನಿನ್ನ ಪಿತಾಮಹನು ಹೇಳಿಸುವನು ನೀನು
ಆಸನದಲ್ಲಿ ಕುಳಿತುಕೋ, ನಾನೂ ಕುಳಿತುಕೊಳ್ಳ
ವೆನು,' ಎಂದು ವಿದೂಷಕನು ಹೇಳಲು, ಅದರಂತೆಯೇ
ಕುಳಿತುಕೊಂಡು, 'ಚಂದ್ರಿಕೆಯು ಚೆನ್ನಾಗಿ ಬೆಳಗುತ್ತಿ
ರಲು, ಈ ದೀಪಗಳು ಬೇರೆಯೇಕೆ ?” ಎಂದವುಗಳನ್ನು
ನಿವಾರಿಸುವನು.
ದೇವಿಯು ಬರುವುದು ಒ೦ದು ಗಳಿಗೆ ತಡವಾಗಲು,
'ವಯಸ್ಯ! ವಿಷಮವಾದ ಅರೆಗಳಲ್ಲಿ ಉರುಳಿ, ಮು೦
ದಕ್ಕೆ ಹರಿಯಲಾರದ ಹೊಳೆಯ ಹೊನಲ೦ತೆ, ಕೈಸೇ
ರಿದ್ದ ಸಮಾಗಮ ಸುಖಕ್ಕೆ ವಿಘ್ನ ವೊದಗಲು ಆಶೆಯೂ
ಮು೦ದೆ ಹೋಗಲಾರದೆ ತಪ್ಪಿಸುತ್ತಿರುವುದು.” ಎ೦ದು
ರಾಜನು ಹೇಳಿಕೊಳ್ಳುವನು ವಿದೂಷಕನೂ, 'ನಿನ್ನ
ಅವಸ್ಥೆಯು ಕಣ್ಣಿಗೆ ಕಾಣತಕ್ಕುದಲ್ಲ. ಆದರೂ ಆಕೆ
ಯ ಆ ವಿಧವಾದ ಗಾಢಾನುರಾಗವನ್ನು ತಿಳಿದಿರುವೆ
ಯಾಗಿ, ಆಶಾತಂತುವಿನಿಂದ ಆತ್ಮವನ್ನು ಹಿಡಿದಿರಬ
ಹುದು, ಅಲ್ಲದೆ ನಿನಗೂ ಕೂಡ ಮೈಯು ಬಡವಾ
ಗುತ್ತಿದ್ದರೂ ಕಳೆಯೇರುತ್ತಲೇ ಇರುವುದು. ಇದರಿಂದ
ನಿಮ್ಮಿಬ್ಬರಿಗೂ ಖ೦ಡಿತ ಸಮಾಗಮವಾಗಲೇ ಬೇಕು,
'ಹೆಚ್ಚಾದ ವ್ಯಥೆಯುಳ್ಳ ನನ್ನನ್ನು ಆಶಾಜನಕವಾದ
ಮಾತಿನಿ೦ದ ನೀನು ಸಂತೈಸುವಂತೆಯೇ ಈ ಬಲ
ದೋಳೂ ಕುಣಿದು ಕುಣಿದು, ನಂಬಿಸುತ್ತಿರುವುದು '
ಎ೦ದು ಆಶೆಯಿ೦ದ ಕುಳಿತುಕೊಳ್ಳುವನು.
ಆ ವೇಳೆಗೆ, ಆಕಾಶಯಾನದಲ್ಲಿ ಅಭಿಸಾರಿಕೆಯ
೨೭
ವೇಷವುಳ್ಳ ಊರ್ವಶಿಯು ಚಿತ್ರಲೇಖೆಯೊಡನೆ ಬಂದು
'ಸಖಿ! ಮುಕ್ತಾಭರಣ ಭೂಷಿತವಾಗಿ, ನೀಲವಸ್ತ್ರವನ್ನು
ಹೊದೆದುಕೊ೦ಡಿರುವ ಈ ಅಭಿಸಾರಿಕಾ ವೇಷವು ನಿನ
ಗೆ ಸೊಗಸಿತೆ'? ಎಂದು ಕೇಳಲು, ಚಿತ್ರಲೇಖೆಯು
'ಹೊಗಳಲು ನನಗೆ ವಾಗ್ವಿಭವವಿಲ್ಲ. ಆದರೂ ಕೇಳು.
ನನ್ನ ಮನಸ್ಸು ನಾನೇ ಆ ಪುರೂರವನಾಗಲಿಲ್ಲವಲ್ಲ
ಎಂದು ಚಿಂತಿಸುತ್ತಿರುವುದು' ಎಂದು ಎ೦ದು ಹೇಳುವಳು.
ಮತ್ತೆ ಊರ್ವಶಿಯ 'ನಾನು ಅಸಮರ್ಧಯಾಗಿರು
ವೆನು. ಆತನನ್ನಾದರೂ ಬೇಗ ಕರೆದು ತಾ. ಇಲ್ಲವಾದರೆ
ನನ್ನನ್ನಾದರೂ ಆ ಸೌಭಾಗ್ಯವಂತನ ಬಳಿಗೆ ಕರೆದು
ಕೊಂಡು ಹೋಗು' ಎಂದು ಕೇಳಿಕೊಳ್ಳಲು, ಚಿತ್ರಲೇ
ಖೆಯು “ಇದೋ ಯಾಮಿನಿ ಎಂಬ ಯಮನೆಯಲ್ಲಿ
ಪ್ರತಿಬಿಂಬಿಸಿರುವ ಕೈಲಾಸ ಶಿಖರದಂತೆ ಹೊಳೆಯುತ್ತಿ
ರುವ ನಿನ್ನ ಪ್ರಿಯನರಮನೆಗೆ ಆಗಲಿ ಬಂದಿರುವೆ
ವೆಂದು” ತೋರಿಸಲು "ಹಾಗಾದರೆ ಪ್ರಭಾವದಿಂದ
ನನ್ನ ಹೃದಯ ಚೋರನಲ್ಲಿ ರುವನೋ ನೋಡು” ಎಂದ
ಊರ್ವಶಿಗೆ, ಇವಳೊಡನೆ ಹುಡುಗಾಟವಾಡಬೇಕೆಂದು
ಕೊ೦ಡು, "ಆತನಿದೋ ಕಾಣುತ್ತಿರುವನು; ಉಪಭೋ
ಗಕ್ಕೆ ಅವಕಾಶವು ದೊರೆತಿರಲು, ಮನೋರಥಲಬ್ಧವಾದ
ಪ್ರಿಯಾ ಸಮಾಗಮಸುಖವನ್ನು ಅನುಭವಿಸುತ್ತ ಕುಳಿ
ತಿರುವನು" ಎ೦ದು ಹೇಳಲು, "ಹೋಗೆ ನನ್ನ
ಮನಸ್ಸು ನಂಬುವುದಿಲ್ಲ. ಮನಸ್ಸಿನಲ್ಲೇನೋ ಇಟ್ಟು
ಕೊ೦ಡು, ಬಾಯಿಗೆ ಬ೦ದ೦ತೆ ಹೇಳುತ್ತಿರುವ ಆತನು
ನನ್ನ ಮನಸ್ಸನ್ನು ಈ ವೇಳೆಗಾಗಲೇ ಅಪಹರಿಸಿರು
ವನು" ಎಂದು ಹೇಳುತ್ತಿರುವ ಊರ್ವಶಿಯೊಡನೆ
೨೮
ಮಣಿಹರ್ಮ್ಯ ಪ್ರಾಸಾದ ಗತನಾದ ಪುರೂ ರ ನ ನ
ಬಳಿಗೆ ಬರುವಳು.
ಅಲ್ಲಿ ರಾತ್ರಿಯೊಡನೆ ಹೆಚ್ಚಾದ ಮದನ ಬಾಧೆ
ಯನ್ನು ಅನುಭವಿಸುತ್ತ, "ಕುಸುಮಶಯನವೂ,
ಚ೦ದ್ರಕಿರಣಗಳೂ, ದೇಹಕ್ಕೆಲ್ಲ ಲೇಪಿಸಿರುವ ಶ್ರೀ
ಗ೦ಧವೂ, ತಣ್ಣಗಾಗಲೆ೦ದು ಕೈಯಲ್ಲಿ ಹಿಡಿದು
ಕೊ೦ಡ ರತ್ನ ಯಷ್ಟಿಗಳೂ, ಹೋಗಲಾಡಿಸದ ಈ
ಮನ್ಮಥ ರೋಗವನ್ನು ಶಮನ ಮಾಡಬೇಕಾದರೆ
ದಿವ್ಯಾಗನೆಯಾದ ಆ ಊರ್ವಶಿಯಾದರೂ ಬೇಕು,
ಅಥವಾ ಆಕೆಗೆ ಸಂಬಂಧಪಟ್ಟ ಕಥೆಯಾದರೂ ಆಗ
ಬೇಕು'' ಎಂದು ಹೇಳಿ ಕೊಳ್ಳುವ ರಾಯನನ್ನು ಕುರಿತು
ವಿದೂಷಕನು 'ಹೌದು ಹೌದು. ನನಗೂ ಹಾಗೆಯೇ!
ಮಾವಿನ ಹಣ್ಣಿನ ಶ್ರೀಕರಣೆಯ. ಸಿಕ್ಕದೆ ಹೋ
ದಾಗಲೆಲ್ಲಾ ಅದರ ಚಿ೦ತನದಿ೦ದಲೇ ಸುಖವನ್ನು
ಹೊ೦ದುವೆನು' ಎ೦ದು ಹೇಳುವನು, ರಾಯನೂ ಹೂ
ಗುಟ್ಟಿಕೊ೦ಡು "ಅಯ್ಯಾ! ರಥವು ಬೆಟ್ಟದ ಹಾದಿಯಲ್ಲಿ
ಕುಲುಕಿದಾಗ, ಆಕೆಯ ಶರೀರವನ್ನು ತಗುಲಿದ ಈ
ತೋಳೊಂದನ್ನು ಬಿಟ್ಟು ಮಿಕ್ಕೆ ಮೈಯೆಲ್ಲ ಭೂ
ಮಿಗೆ ಭಾರವು' ಎ೦ದು ಹ೦ಬಲಿಸುತ್ತಿರುವುದನ್ನು ಮರೆ
ಯಲ್ಲಿದ್ದ ಊರ್ವಶಿಯು ಕೇಳಿ - ಇನ್ನು ತಡಮಾಡು
ವುದು ಸರಿಯಲ್ಲವೆಂದು ಮುಂದೆ ಹೋಗಿ ನಿಂತು, ಮ
ಹಾರಾಜನು ತನ್ನನ್ನುಪಚರಿಸದಿರಲು, " ಚಿತ್ರಲೇಖೆ!
ಕಣ್ಣು ಮು೦ದೆಯೇ ನಿ೦ತಿದ್ದರೂ ಮಹಾರಾಜನು ನನ್ನ
ಲ್ಲಿ ಉದಾಸೀನನಾಗಿರುವನು' ಎಂದು ವಿಷಾದಿಸಲು,
೨೯
ಚಿತ್ರಲೇಖೆಯು "ಆತುರಗಾರಳೆ! ನೀನಿನ್ನೂ ತಿರಸ್ಕರಿ
ಣಿಯನ್ನು ಪರಿತ್ಯಜಿಸಲಿಲ್ಲ.'' ಎಂದು ಸಮಾಧಾನ
ಪಡಿಸುವಳು.
ಆ ವೇಳೆಗೆ ನೈಪಥ್ಯದಲ್ಲಿ ರಾಜಪತ್ನಿಯ ಬರುತ್ತಿರು
ವಳೆ೦ದು ಕಲಕಲವಾಗಲು, ಸರ್ವರೂ ಯಥಾಯಥಾ
ಸುಸ್ಥಿತರಾಗುವರು. ವಿಷಣ್ಣೆಯಾದ ಊರ್ವಶಿ
ಯನ್ನು ಚಿತ್ರಲೇಖೆಯು “ಏಕೆ ಚಿ೦ತಿಸುವೆ? ಕ೦ಚ
ಕಣ್ಮರೆಯಾಗಿಯೇ ಇರು, ರಾಜ ಪತ್ನಿ ಯು ನೇಮದಲ್ಲಿ
ರುವಳೆಂದು ಆಕೆಯ ವಸ್ತ್ರಭೂಷಣಗಳು ಸೂಚಿಸು
ವುವು. ಆದುದರಿ೦ದ ಈ ಕ ಯು ಬಹಳ ಹೊತ್ತು
ಇಲ್ಲಿರಲಾರಳು” ಎಂದು ಮತ್ತೆ ಸಮಾಧಾನ
ಪಡಿಸುವಳು ; ಆಗ ದೇವಿಯ ಪೂಜಾ ಪರಿಕರ
ಗಳನ್ನು ತರುತ್ತಿರುವ ಪರಿಜನರೊಡನೆ ಬರಲು,
ವಿದೂಷಕನು “ ನನಗೆ ಸ್ವಸ್ತಿವಾಯನವನ್ನು ಕೊಡು
ವಳು ಚಂದ್ರವ್ರತವೆಂಬ ನೆಪದಿಂದ ನಿನ್ನ ಮೇಲಿನ
ಕೋಪವನ್ನು ಬಿಟ್ಟಿರುವಳು. ಅದರಿಂದ ಈಗ ಈ
ದೇವಿಯನ್ನು ನೋಡಿದರೆ ಎಷ್ಟೋ ಸಂತೋಷವಾಗು
ವುದು' ಎಂದು ರಾಯನಿಗೆ ಅರಿಕೆ ಮಾಡಲು, ಆತನೂ
'ಎರಡೂ ಸರಿಹೋಗುವುದು, ಈಗ ಈಕೆಯು ಬಿಳಿ
ಯ ಬಟ್ಟೆಯ ನ್ನುಟ್ಟು, ಅರಿಶಿನ ಕುಂಕುಮಗಳನ್ನು
ಮಾತ್ರವಿಟ್ಟು, ಪವಿತ್ರವಾದ ಗರಿಕೆಯ ಹುಲ್ಲನ್ನು
ಮುಂಗುರಳಲ್ಲಿ ಮುಡಿದು, ವ್ರತವೆಂಬ ನೆಪದಿಂದ
ಸರ್ವವನ್ನೂ ಬಿಟ್ಟು, ನನ್ನಲ್ಲಿ ಪ್ರಸನ್ನೆಯಾಗಿರುವು
ದನ್ನು ತನ್ನ ತನುವೇ ತೋರುತ್ತಿರಲು ಒಪ್ಪು
೩೦
ತ್ತಿರುವಳು' ಎಂದು ವಿದೂಷಕನ ಮಾತನ್ನು
ಅನುಮೋದಿಸುತ್ತಿರಲು, ದೇವಿಯೂ
ಬಂದು ರಾಯನಿಗೆ ಮುಜರೆ ಮಾಡಿ ನಿಲ್ಲುವರು
ರಾಜನು ದೇವಿಗೆ ಸ್ವಾಗತವೆನ್ನುವಾಗ, ಮರೆಸಿ
ಕೊ೦ಡು ಅಲ್ಲಿ ಯೇ ನಿ೦ತಿದ್ದ ಊರ್ವಶಿಯ
" ದೇವೀಶಬ್ದವು. ಈಕೆಗೆ ತಕ್ಕದ್ದು, ಕಾಂತಿಯಲ್ಲಿ
ಯೂ, ಸೊಗಸಿನಲ್ಲಿ ಯೂ, ಈಕೆಯು ಶಚೀದೇವಿಗೆ
ಯಾವ ತೆರದಲ್ಲೂ ಕಡಿಮೆಯಾದವಳಲ್ಲ' ಎಂದು
ಅಸೂಯೆಯನ್ನು ಬಿಟ್ಟು ಒಪ್ಪಿಕೊಳ್ಳುವಳು. ದೇವಿ
ಯು “ಆರ್ಯಪುತ್ರನನ್ನು ಮುಂದಿಟ್ಟುಕೊಂಡು ಯಾ
ವುದೋ ವ್ರತವನ್ನು ಮಾಡಬೇಕೆಂದಿರುವೆನು, ಅದ
ರಿಂದ ಒಂದು ಗಳಿಗೆ ಕಷ್ಟವನ್ನು ಸಹಿಸಬೇಕು' ಎಂದು
ವಿಜ್ಞಾಪಿಸಿಕೊಳ್ಳುವಳು ರಾಯನೂ ಕಷ್ಟವೇನೂ
ಇಲ್ಲ ಮತ್ತು ಅನುಗ್ರಹವನ್ನು ಮಾಡಿದ೦ತಾಯಿತು."
ಎಂದುಪಚಾರದ ಮಾತನಾಡಲು, ವಿದೂಷಕನೂ " ಈ
ರೀತಿಯಾದ ಸ್ವಸ್ತಿವಾಚನಗಳಿ೦ದ ನನಗೆ ಬೇಕಾ
ದಷ್ಟು ಕಷ್ಟವಾಗಲಿ, ಎ೦ದು ಸೇರಿ ನುಡಿಯುವನು.
ರಾಯನು ನಿಪುಣಿಕೆಯಿಂದ ಈ ದೇವಿಯ ಆಚರಿ
ಸುವುದು, ಪ್ರಿಯ ಪ್ರಸಾದನವೆ೦ದರೆ, ಬೇಕಾದವರನ್ನು
ಒಲಿಸಿಕೊಳ್ಳುವುದು ಎಂಬ ವ್ರತವೆಂದು ಕೇಳಿ, 'ದೇವಿ!
ಹಾಗಾದರೆ, ನಿನ್ನ ಪ್ರಸಾದವನ್ನೇ ಒಯಸುತ್ತಿರುವ
ದಾಸ ಜನವನ್ನು ಮತ್ತೆ ಒಲಿಸಿಕೊಳ್ಳ ಬೇಕೆ೦ದು
ತಾವರೆಯ೦ತೆ ಕೋಮಲವಾದ ನಿನ್ನ ದೇಹವನ್ನು ಈ
ವ್ರತದಿ೦ದ ಆಕಾರಣವಾಗಿ ಶಾಪ ಪಡಿಸುವೆ" ಎಂದು
ಹೇಳಿಕೊಳ್ಳಲು ಊರ್ವಶಿಯ ಊರ್ವಶಿಯು ಅದನ್ನು ಸಹಿಸ
೩೧
ಲಾರದೆ ಬೇರೆ ಕಡೆ ತಿರುಗಿ "ಈತನಿಗೆ ಈಕೆಯಲ್ಲಿ
ಬಲು ಬಹುಮಾನ"ವೆನ್ನುವಳು. ಚಿತ್ರಲೇಖೆಯು
" ಎಲೆ ಮುಗ್ಧ ! ಮತ್ತೊಬ್ಬಳಿಗೆ ಮನಸ್ಸು ತೆತ್ತಿ
ರುವ ನಾಗರಕನು ಹೆಂಡಿತಿಯಲ್ಲಿ ಬಹು ದಾಕ್ಷಿಣ್ಯ
ವನ್ನು ತೋರಿಸುವನೆಂ"ದು ಸಮಾಧಾನ ಮಾಡುವಳು.
ದೇವಿಯೂ "ರಾಯನು ನನ್ನಲ್ಲಿ ಹೀಗೆ ಅನುಗ್ರಹ
ಮಾಡಿರುವುದು ಈ ವ್ರತದ ಮಹಿಮೆ" ಯೆ೦ದು ಹೇಳಿ,
ರೋಹಿಣೀ ಸಹಿತನಾದ ಚಂದ್ರನನ್ನು ಪೂಜೆಗೈದು
ಮಾಣವಕನಿಗೂ ಕಂಚುಕಿಗೂ ವಾಯನವನ್ನೂ ಕೊ
ಟ್ಟು ಅವರ ಆಶೀರ್ವಾದವನ್ನು ಪಡೆದು, ಪತಿಗೂ
ಪೂಜೆ ಮಾಡಿ, " ಈ ರೋಹಿಣೀ ಚಂದ್ರರೆ೦ಬ ದೇವ
ತಾಮಿಥುನವೇ ಸಾಕ್ಷಿ, ಆ ಪುತ್ರನ ಪ್ರಸಾದವನ್ನು
ಪಡೆದುಕೊಳ್ಳುವೆನು, ಇ೦ದಿನಿ೦ದ ಆರ್ಯಪುತ್ರನು
ತನಗೆ ಬೇಕಾದವಳೊಡನೆಯೂ, ತನ್ನನ್ನು ಕಾಮಿಸಿದ
ವಳೊಡನೆಯ, ಸಹ ಯಾವ ಪ್ರತಿಬ೦ಧಕವೂ ಇಲ್ಲದೆ
ವರ್ತಿಸಬಹುದು' ಎಂದು ಪ್ರತಿಜ್ಞೆ ಮಾಡುವಳು.
ಊರ್ವಶಿಯ ಅದನ್ನು ಕೇಳಿ ಅಲ್ಲೇ ಕರಗಿಹೋ
ಗುವಳು. ಚಿತ್ರಲೇಖೆಯ, ಮಹಾನುಭಾವೆಯೂ
ಪ್ರತಿವ್ರತೆಯೂ ಆದ ಈಕೆಯಿಂದ ಅನುಜ್ಞೆಯಾಗಿರಲು,
ಇನ್ನು ನಿನಗೆ ಯಾವ ತಡೆಯೂ ಇಲ್ಲದೆ ಪ್ರಿಯನು
ದೊರೆಯುವ'ನೆಂದು ಧೈರ್ಯಪಡಿಸುತ್ತಿರಲು ವಿದೂಷ
ಕನು ಮರೆಯಲ್ಲಿ, ಕೈ ತಪ್ಪಿ ವಧ್ಯನೂ ಓಡಿ ಹೋದರೆ
ಬೇಡನೂ, 'ಹೋಗು ಧರ್ಮ ಬ೦ದಿತೆನ್ನುವನು'
ಎಂದು, ಪ್ರಕಾಶವಾಗಿ, ' ಒಡೆತಿ! ಹಾಗಾದರೆ ಒಡೆಯ
ನು ಉದಾಸೀನನಾಗಿರುವನೋ? ಎ೦ದು ಕೇಳಲು,
೩೨
ದೇವಿಯು ಮೂಢ! ನನ್ನ ಸುಖವಲ್ಲದಿದ್ದರೂ ಹೋ
ಗಲಿ; ಆರ್ಯ ಪುತ್ರನಿಗೆ ಸುಖವಾಗಲೆಂದು ಬಯಸು
ವವಳು ನಾನು. ಇಷ್ಟರಿ೦ದಲೇ ಆತನು ನನ್ನ
ಪ್ರಿಯನೋ ಅಲ್ಲವೋ ತಿಳಿದುಕೋ' ಎಂದು ಹೇಳಿ
"ಎಲೆ ! ಅಸಹನೇ! ನನ್ನನ್ನು ಅನ್ಯಳಿಗಾದರೂ ಕೊ
ಡು. ದಾಸನ ದಾಸನನ್ನಾಗಿಯಾದರೂ ಮಾಡಿಕೊ
ನೀನು ನನ್ನ ನಡತೆಯಲ್ಲಿ ಅನುಮಾನ ಪಡುತ್ತಿರು
ಆದರೆ, ನಾನು ಮಾತ್ರ ಹಾಗಿಲ್ಲ. ” ಎಂದು ಹೇಳಿ
ಕೊಳ್ಳುವ ರಾಜನನ್ನು ಗಣಿಸದೆ, * ಹೇಗಾದರೂ
ಆಗಲಿ ವಿಹಿತವಾದಂತೆ ವ್ರತವನ್ನಾಚರಿಸಿದುದಾ
ಯಿತು ಬನ್ನಿ ಹೋಗೋಣ' ಎಂದು ಪರಿಜನ
ರೊಡನೆ ಹೊರಟು ಹೋಗುವಳು.
ಊರ್ವಶಿಯು ಇದೆಲ್ಲವನ್ನೂ ನೋಡಿ 'ಸಖಿ
ರಾಜಹೀಯಾದರೋ ಪ್ರಿಯ ಕಲತ್ರನು. ನಾನಾ
ದರೋ ಮನಸ್ಸನ್ನು ಹಿಂತಿರುಗಿಸಲಾರೆನು' ಎಂದು
ವ್ಯಥೆ ಪಡುತ್ತಿರಲು, ರಾಯನು “ವಯಸ್ಯ! ದೇವಿಯು
ಹೊರಟುಹೋದಳು ' ಎನ್ನಲು ವಿದೂಷಕನು 'ಹೂ
ಏನು ಹೇಳಬೇಕೆಂದಿರುವೆಯೋ ಅದನ್ನು ಧೈಯ
ವಾಗಿ ಹೇಳು. ಅಸಾಧ್ಯವೆಂದು ತಿಳಿದು, ರೋಗಿ
ಯನ್ನು ಕೈಬಿಡುವ ವೈದ್ಯನ೦ತೆ ದೇವಿಯ ನಿನ್ನನ್ನು
ತೊರೆದು ಹೋದಳು' ಎನ್ನಲು, ರಾಜನು 'ವಯಸ್ಯ
ಗುಟ್ಟಾಗಿ ಬರುವ ಆ ಊರ್ವಶಿಯ ಕಾಲು ಕಡಗದ
ಸದ್ದಾದರೂ ಕೇಳಬಾರದೆ? ಆಕೆಯು ಹಿಂದಿನಿಂದ
ಬಂದು ನನ್ನ ಕಣ್ಣುಮುಚ್ಚಬಾರದೆ? ಈ ಮಾಡದಲ್ಲಿ
೩೩
ಳಿದು ಲಜ್ಜೆಯಿ೦ದ ಮು೦ಬರಿಯಲಾರದ ಆಕೆಯನ್ನು
ಚತುರೆಯಾದ ಆ ಸಖಿಯಾದರೂ ನನ್ನ ಸಮೀಪಕ್ಕೆ ಒ೦
ದೊಂದು ಹೆಜ್ಜೆಯಾಗಿ ಕಳೆದುತರಬಾರದೆ' ಎ೦ದು ತನ್ನ
ಆಶೆಯನ್ನು ಹೇಳಿಕೊಳ್ಳಲು, ಅದನ್ನು ಕೇಳಿದ
ಊರ್ವಶಿಯ ಹಾಗೆಯೇ ಬಂದು ಅರಸನ ಕಣ್ಮು
ಚ್ಚುವಳು. ರಾಜನು 'ಕುಮುದವು ಚ೦ದ್ರಕಿರಣ
ದಿ೦ದಲ್ಲದೆ ಸೂರಕಿರಣಗಳಿ೦ದ ಅರಳದು. ಹಾಗೆಯೇ
ನನ್ನ ದೇಹವೂ ಕೈಸೋ೦ಕಿನಿ೦ದ ಪುಲಕಿತವಾಗ
ಬೇಕಾದರೆ, ಈಕೆಯ ಊರ್ವಶಿಯೇ ಆಗಿರಬೇಕು.'
ಎಂದು ನಿರ್ಧರಿಸಲು ಊರ್ವಶಿಯೂ ಪ್ರಿಯ ಸ್ಪರ್ಶ
ದಿ೦ದ ಹೊ೦ದಿ ಆನ೦ದದಿ೦ದ ನಿಷ್ಠಬ್ಧಳಾಗಿ ಕೊನೆಗೆ
ಹೇಗೆ ಹೇಗೋ ಕೈ ತೆಗೆದು ನಾಚಿಕೆಯು ಮಿತಿಮೀರಿ
ನಿಂತುಕೊಳ್ಳಲು ರಾಯನ್ನು ಕೈಹಿಡಿದುಕೊಳ್ಳುವನು.
ಊರ್ವಶಿಯು - ಜಯವಾಗಲಿ, ಮಹಾರಾಜನಿಗೆ ಜಯ
ವಾಗಲಿ' ಎಂದು ಜಯಶಬ್ದವನ್ನು ನುಡಿಯುವಳು.
ಚಿತ್ರಲೇಖೆಯು ವಯಸ್ಯನಿಗೆ ಸುಖವೇ ?' ಎ೦ದು
ಕೇಳುವಳು, ಆತನು ಇದೋ ಕಣ್ಣೆದುರಿಗೇ ಲಭಿಸಿರು
ವುದಲ್ಲಾ' ಎನ್ನುವನು. ಊರ್ವಶಿಯು ಆಗ "ಎಲೆ !
ಮಹಾರಾಜನು ದೇವಿಯಿಂದ ದತ್ತನಾಗಿರುವನು. ಆದು
ದರಿ೦ದ ನಾನು ಈತನ ದೇಹದಲ್ಲಿ ಐಕ್ಯವಾಗಿರುವನು.
ನನ್ನನ್ನು ಕೇವಲ ದೋಷೈಕ ದೃಷ್ಟಿಯೆಂದು ಭಾವಿ
೩೪
ಸದಿರು.' ಎನ್ನಲು, ರಾಯನು ಮತ್ತೆ 'ದೇವೀದತ್ತನೆಂ
ದು ನನ್ನ ಶರೀರದಲ್ಲಿ ನೀನು ವ್ಯಾಪಾರವನ್ನು ಮಾಡು
ವುದಾದರೆ ನೀನು ಮೊಟ್ಟ ಮೊದಲು ಯಾರನ್ನು ಕೇಳಿ
ನನ್ನ ಹೃದಯವನ್ನು ಕದ್ದೆ?' ಎ೦ದು ಹಾಸ್ಯ ಮಾಡಲು,
ಚಿತ್ರಲೇಖೆಯು 'ವಯಸ್ಯ! ಈಕೆಯು ನಿರುತ್ತರೆ ಯಾ
ದಳು. ನಾನು ವಿಜ್ಞಾಪಿಸುವುದನ್ನು ಲಾಲಿಸಬೇಕು.
ವಸಂತದನಂತರ ಗ್ರೀಷ್ಮದಲ್ಲಿ ಭಗವಂತನಾದ ಸೂರ್ಯ
ನನ್ನು ನಾನು ಉಪಚರಿಸಬೇಕಾಗಿರುವುದು. ಅದರಿಂದ
ನಾನು ಹೋಗುವನ್ನು ಆದುದರಿ೦ದ ಹೇಗೂ ಈ ನಮ್ಮ
ಪ್ರಿಯಸಖಿಯು ಸ್ವರ್ಗಕ್ಕಾಗಿ ಹಂಬಲಿಸದಿರುವಂತೆ
ನೋಡಿಕೊಳ್ಳಬೇಕು' ಎ೦ದು ವಿಜ್ಞಾಪಿಸಲು,
ವಿದೂಷಕನು "ಭವತಿ! ಸ್ವರ್ಗವನ್ನು ನೆನಸಿಕೊಳ್ಳು
ವುದಕ್ಕೆ ಅಲ್ಲೇನಿದೆ ? ಎನ್ನುವುದಿಲ್ಲ, ಕುಡಿಯುವುದಿಲ್ಲ.
ಕೇವಲ ಮೀನಿನಂತೆ ಸುಮ್ಮನೆ ಬಿಟ್ಟ ಕಣ್ಣು
ಬಿಟ್ಟ೦ತೆ ಕುಳಿತಿರುವುದು ” ಎಂದು ಪರಿಹಾಸ್ಯ
ಮಾಡಲು, ರಾಯನು 'ಹೀಗೆಂದು ಹೇಳಲೂ ಆಗದ
ಸುಖವುಳ್ಳ ಸ್ವರ್ಗವನ್ನು ಮರೆವುದೆಂತು ? ಆದರೂ
ಇನ್ನಾವ ಹೆ೦ಗುಸಿಗೂ ದೊರೆಯದ ಪುರೂರವನು ಇವ
ಳಿಗೆ ದಾಸನಾಗಿರುವನು' ಎಂದು ಹೇಳಲು, ಚಿತ್ರಲೇ
ಖೆಯು ಸ೦ತುಷ್ಟಳಾಗಿ ಊರ್ವತಿಯ ಮತ್ತು ರಾಯನ
ಅನುಜ್ಞೆಯನ್ನು ಪಡೆದು ಹೊರಟು ಹೋಗುವಳು.
೩೫
ವಿದೂಷಕನು ಅದೃಷ್ಟವಶದಿಂದ ನಿನ್ನ ಮನೋ
ರಥವು ಸಿದ್ಧಿಸಿತು' ಎನ್ನಲು, ರಾಯನು ' ಈ ಮನೋ
ರಥ ಸಿದ್ಧಿಯನ್ನಾದರೂ ನೋಡು, ಸಾಮ೦ತ ಮೌಲಿ
ಮಣಿಗಳಿಂದ ರ೦ಜಿತವಾದ ಪಾದಪೀಠವುಳ್ಳ
ಸಿ೦ಹಾಸನದಲ್ಲಿ ಕುಳಿತು, ಒಂದೇ ಛತ್ರಿಯಿಂದ,
ಅವನಿಯನ್ನೆಲ್ಲ ಆಳುವುದಕ್ಕಿಂತಲೂ ಈಕೆಯ ಚರಣತ
ಲದಲ್ಲಿ ದ್ದು ಈಕೆಯ ಆಟ್ಯಾಕರನಾಗಿ ಕೃತಾರ್ಥನಾಗು
ವುದೇ ಸೌಖ್ಯವಾಗಿರುವುದು' ಎಂದು ತನ್ನ ಸಂತೋಷ
ವನ್ನು ಹೇಳಿಕೊಳ್ಳಲು, ಇನ್ನು ಇದಕ್ಕಿ೦ತಲೂ ಹೆಚ್ಚಾ
ಗಿ ಏನು ಹೇಳಲೆಂದು ಊರ್ವಶಿಯು ಸುಮ್ಮನಾಗಲು
ರಾಯನು ಆಕೆಯನ್ನು ಕೈಹಿಡಿದು ನುಡಿಸುತ್ತಾ 'ಬೇ
ಕಾದುದು ದೊರೆತಾಗ ಎಲ್ಲವೂ ಬೇಕಾದುದೇ
ಬೆಳೆವುವು' ಎಂದು ಹೇಳಿ 'ಮೊದಲಿನ ಚಂದ್ರಕಿರಣವೇ
ಈಗ ದೇಹವನ್ನು ಸುಖಗೊಳಿಸುವುದು. ಅದೇ ಮದನ
ಬಾಣಗಳು ಮನಸ್ಸಿಗೆ ಅನುಕೂಲಗಳಾಗಿರುವುವು ಎಲೆ
ಸು೦ದರಿ! ಮೊದ ಮೊದಲು ಕೋಪಗೊಂಡು ದಾರುಣ
ಗಳಾಗಿದ್ದವುಗಳೆಲ್ಲವೂ ನಿನ್ನ ಸಂಗಮದಿಂದ ಸಮಾ
ಧಾನಪಟ್ಟ೦ತೆ ಅನುಕೂಲವಾಗಿರುವುವು ನೋಡು'
ಎಂದು ತನ್ನ ಸ್ಥಿತಿಯನ್ನು ತೋರಿಸುವನು ಊರ್ವಶಿ
ಯು 'ಅಯ್ಯೋ ನಾನು ಮುಂಚೆಯೇ ಬರಬಾರದಾಗಿತ್ತೆ?”
ಎಂದು ವ್ಯಧಿಸುವಳು. ರಾಯನು 'ಸುಂದರಿ! ಹಾಗಲ್ಲ.
೩೬
ಬಿಸಿಲಿನಲ್ಲಿ ವ್ಯಥೆ ಪಟ್ಟರುವನಿಗೆ ಮರದ ನೆರಳು ಸುಖ
ಕರವಾಗುವಂತೆ, ದುಃಖಪಟ್ಟ ಮೇಲೆ ಹೊಂದಿದ ಸುಖ
ವೇ ರಸವತ್ತರವಾದುದು' ಎಂದು ಸಮಾಧಾನ ಪಡಿ
ಸಿ, 'ಹೊತ್ತಾಯಿತು. ಇನ್ನು ಅರಮನೆಯೊಳಕ್ಕೆ
ಹೋಗೋಣ' ಎಂದು ಅರಿಕೆ ಮಾಡಿದ ವಿದೂಷಕನ
ಮಾತಿನಂತೆ ರಾಯನು ಊರ್ವಶಿಯನ್ನು ಕರೆದೊ
ಯ್ಯುತ್ತ, 'ಮನೋರಥವು ಲಭಿಸದಿರಲು ಒಂದು
ರಾತ್ರಿಯು ನೂರು ರಾತ್ರಿಯಾಗುತ್ತಿತ್ತು; ನಿನ್ನ ಸಮಾ
ಗಮದಲ್ಲಿಯೂ ಹಾಗೆಯೇ ದೀರ್ಘವಾಗುವುದಾದರೆ
ನಾನು ಕೃತಾರ್ಥನಾದೇನು' ಎಂಬ ತನ್ನಾಶೆಯನ್ನು
ಹೇಳಿಕೊಳ್ಳುತ್ತಾ ಎಲ್ಲರೊಡನೆಯೂ ಹೊರಟು ಹೋಗು
ವನು.
ಇಂತಿದು ತೃತೀಯಾಂಕವು.
----
೩೭
ಚತುರ್ಥಾಂಕ
ಊರ್ವಶಿಗೆ ಬೇಕಾದವರೂ, ಸೂರ್ಯಪ೦ಚರ್ಯೆ
ಯಲ್ಲಿರುವವರೂ ಆದ ಸಹಜನ್ಯೆ, ಚಿತ್ರಲೇಖೆಯೆಂ
ಬಿಬ್ಬರು ಅಪ್ಸರೆಯರು ಬರುವರು. ದುಃಖಿಸುತ್ತಿರುವ
ಕಾರಣವನ್ನು ಕೇಳಿದ ಸಹಜನ್ಯಗೆ ಚಿತ್ರಲೇಖೆಯು
“ಮಂತ್ರಿಗಳ ವಶದಲ್ಲಿ ರಾಜ್ಯವನ್ನು ಇಟ್ಟು, ಪುರೂರವ
ನು ಊರ್ವಶಿಯೊಡನೆ ಕೈಲಾಸ ಶಿಖರ, ಗಂಧಮಾದನ
ವನ ಇವುಗಳಲ್ಲಿ ವಿಹರಿಸಲು ಹೊರಟನು. ಮಂದಾ
ಕಿನೀ ತೀರದಲ್ಲಿ ಮರಳು ದಿಣ್ಣೆಯಲ್ಲಿ ಕ್ರೀಡಿಸುತ್ತಿದ್ದ
ಉದಯವತಿಯೆ೦ಬ ವಿದ್ಯಾಧರ ಕುಮಾರಿಯನ್ನು
ಆತನು ದೀರ್ಘ ಕಾಲ ನೋಡಿದನೆಂದು ಊರ್ವಶಿಯು
ಕೋಪಗೊ೦ಡ, ಆತನನುನಯವನ್ನೂ ಲಕ್ಷಿಸದೆ, ಗುರು
ಶಾಪದಿಂದ ಮರೆವುಗೊಂಡು, ಸ್ತ್ರೀ ಜನರು ಪ್ರವೇಶಿಸ
ಬಾರದಾದ ಕುಮಾರವನವನ್ನು ಹೊಕ್ಕು ಅಲ್ಲಿ ಲತೆ
ಯಾಗಿರುವಳು. ಆತನೂ ಅದೇ ವನದಲ್ಲಿಯೇ
ಪ್ರಿಯೆಯನ್ನು ಹುಡುಕುತ್ತ ಹುಚ್ಚನಾಗಿ ಹೋಗಿರು
ವನು. ಸಾಲದುದಕ್ಕೆ ಈಗ ಮುಂಗಾರೂ ಬಂದಿರು
ವುದು, ಏನಾಗುವುದೋ ಎ೦ದು ಶ೦ಕಿಸುವೆನು.'' ಎ೦
ದು ಹೇಳಲು, ಆಕೆಯ ವ್ಯಸನ ಪಟ್ಟು " ಸಖಿ! ಸಂಗ
ಮೋಪಾಯವೇನೂ ಇಲ್ಲವೇ ? ? ಎಂದು ಕೇಳಿ,
"ಗೌರೀಚರಣ ರಾಗದಿಂದ ಸಂಭವಿಸಿದ ಸಂಗಮಮಣಿ
ಯೊಂದನ್ನು ಬಿಟ್ಟು ಬೇರೆ ಉಪಾಯವೇ ಇಲ್ಲವೆಂ"
ದು ಆಕೆಯು ಹೇಳಲು, * ಸಖಿ! ಹಾಗಾದರೆ ಚಿಂತೆ
೩೮
ಯಿಲ್ಲ. ಅಂತಹ ಲಕ್ಷಣವಂತರಾದವರು ಬಹುಕಾಲ
ದು:ಖವನ್ನನುಭವಿಸರು. ಯಾವುದಾದರೊ೦ದು
ಪಾಯದಿ೦ದ ಅವರಿಗೆ ಸ೦ಗಮವಾಗುವುದು ” ಎಂದು
ಹೇಳುತ್ತಾ, ಆಗ ತಾನೆ ಉದಯಿಸುವ ಸೂರ್ಯಬಿ೦ಬ
ವನ್ನು ನೋಡಿ ಅವರಿಬ್ಬರೂ ಉಪಸ್ಥಾನಕ್ಕಾಗಿ ಹೊರ
ಟುಹೋಗುವರು.
ಅನಂತರ ಹುಚ್ಚನಾದ ರಾಯನು ಆಕಾಶವನ್ನೇ
ನೋಡುತ್ತಾ ಬಂದು, ಹೋಗುತ್ತಿರುವ ಮೋಡವನ್ನು
ನೋಡಿ ಪೂರ್ವದ ರಾಕ್ಷಸ ಬಾಧೆಯನ್ನು ನೆನಸಿಕೊಂ
ಡು ಭ್ರಾಂತನಾಗಿ ಕೋಪದಿಂದ “ ಎಲೆ ದುರಾತ್ಮ
ನಾದ ರಾಕ್ಷಸನೆ ! ನಿಲ್ಲು, ನಿಲ್ಲು, ನನ್ನ ಪ್ರಿಯತಮೆ
ಯನ್ನು ಹಾರಿಸಿಕೊಂಡು ಎಲ್ಲಿ ಹೋಗುವೆ? ” ಎಂದು
ಮು೦ದೆ ಹೋಗಿ, ಅಷ್ಟರಲ್ಲಿಯೇ ಮೋಡವು ಕೊಡು
ಗಲ್ಲನ್ನು ಸಂಧಿಸಲು, ಎಲೆಲಾ ! ಶೈಲ ಶಿಖರವನ್ನೇರಿ
ನನ್ನನ್ನು ಬಾಣಗಳಿಂದ ಹೊಡೆಯುವೆಯಾ?” ಎಂ
ದು, ಮತ್ತೇನೂ ಸಿಕ್ಕದಿರಲು ಅಲ್ಲಿ ಬಿದ್ದಿದ್ದ ಮಣ್ಣು
ಹೆಂಟೆಯನ್ನೆತ್ತಿ ಹೊಡೆಯಲೋಡುತ್ತಾ, ಚೆನ್ನಾಗಿ
ನೋಡಿ ಮೋಡವೆಂದು ತಿಳಿದು ವ್ಯಧಿಸಿ, "ಅಯೋ !
ಇದು ಹೊಸ ಮೋಡವಲ್ಲದೆ ಗರ್ವಿತನಾದ ರಾಕ್ಷಸನಲ್ಲ.
ಇದು ಮಣಿ ಧನುವಲ್ಲದೆ ಅವನ ಧನುವಲ್ಲ. ಇದು
ಪಟಪಟನುದುರುವ ಮಳೆ ಹನಿಯಲ್ಲದೆ ಬಾಣ ಪರಂ
ಪರೆಯಲ್ಲ. ಇದು ಒರೆಗಲ್ಲಿನಲ್ಲಿ ಉಜ್ಜಿದ ಚಿನ್ನದ
ರೇಖೆಯಂತಿರುವ ಮಿಂಚಲ್ಲದೆ ನನ್ನ ಪ್ರಿಯೆಯಾದ
ಉರ್ವಶಿಯಲ್ಲ. '' ಎಂದು ಮೂರ್ಛಿತನಾಗುವನು.
ಮತ್ತೆ ಹಾಗೆಯೇ ಮೇಲಕ್ಕೆದ್ದು ಬಾಳೆಯಂತೆ ತೊಡೆ
೩೯
ಯುಳ್ಳ ಆ ನನ್ನ ಪ್ರಿಯೆಯು ಎಲ್ಲಿ ಹೋಗಿದ್ದಾಳು ?
ಎ೦ದು ವೇಳೆ ಕೋಪಿಸಿಕೊಂಡು ಪ್ರಭಾವದಿಂದ ತನ್ನ
ನ್ನು ಮುಚ್ಚಿಕೊಂಡು ಮರೆಯಾಗಿ ಕುಳಿತಿರುವಳೆಂದರೆ
ಆಕೆಯು ಬಲು ಹೆಚ್ಚು ಹೊತ್ತು ಕೋಪಗೊಳ್ಳುವ
ಳಲ್ಲ. ಸ್ವಗಕ್ಕಾಗಿ ಹೊರಟುಹೋಗಿರಬಹುದೇ ಎ೦ದರೆ,
ಆಕೆಯು ನನ್ನಲ್ಲಿ ಬದ್ಧಾನುರಾಗವುಳ್ಳವಳು. ನನ್ನೆ
ದುರಿರುವ ಆಕೆಯನ್ನು ದೇವದ್ವೇಷಿಗಳಾದ ಅಸುರರೂ
ಹಾರಿಸಿಹೊಂಡು ಹೋಗಲಾರರು, ಹೀಗಿದ್ದರೂ
ಆಕೆಯು ಕಣ್ಣಿಗೆ ಕಾಣದೇ ಹೋದಳೆಂದರೆ ಏನೀ
ವಿಧಿಯು ! ” ಎ೦ದು ಚಿ೦ತಿಸುತ್ತಾ ಮು೦ದೆ ಬ೦ದು,
"ಎಲಾ ! ಅದೃಷ್ಟವು ಪರಾಙ್ಮಖವಾಗಿರುವವರಿಗೆ
ದುಃಖದ ಮೇಲೆ ದುಃಖವು ಒದಗುವುದು. ಇಗೋ!
ಇತ್ತ ಒ೦ದು ಕಡೆ, ಆ ಪ್ರಿಯೆಯ ವಿಯೋಗವು ಸಹಿಸು
ವುದಕ್ಕೆ ಅಸಾಧ್ಯವಾಗಿ ಪ್ರಾಪ್ತವಾಗಿ ರುವುದು, ಹೊಸ
ದಾದ ಮೇಘಗಳ ಉದಯದಿಂದ ಬಿಸಿಲಿನ ಹೆಸರಿಲ್ಲದೆ
ಅತಿ ರಮ್ಯವಾದ ದಿನಗಳೂ ಈಗಲೇ ಒದಗಿರುವುವು.”
ಎಂದು ವ್ಯಧಿಸುತ್ತಾ ಮತ್ತೆ ನಕ್ಕ, "ರಾಜನೇ ಕಾಲಕ್ಕೆ
ಕಾರಣನೆಂದು ಋಷಿಗಳೂ ಹೇಳುವಲ್ಲಿ ನಾನೇ ಮನ
ಸ್ಸಿನ ಸಂತಾಪವೃದ್ಧಿಯನ್ನು ಉಪೇಕ್ಷಿಸುತ್ತಿರುವನು.
ನಾನೇಕೆ ಈ ಕಾರ್ಗಾಲವನ್ನು ನಿರಾಕರಿಸಬಾರದು ? ”
ಎ೦ದುಕೊ೦ಡು, ಹಾಗೆಯೆ ಮತ್ತೆ" ಈ ಮಳೆಗಾಲವು
ಅದೇ ಚಿಹ್ನೆಗಳಿ೦ದಲೆ ನನಗೆ ರಾಜೋಪಚಾರ ಮಾ ತ
ಡುತ್ತಿರಲು ಇದನ್ನು ನಾನೇಕೆ ನಿರಾಕರಿಸಲಿ ? ಇಗೋ
ಮಿ೦ಚಿನ ಬಳ್ಳಿಯೆಂಬ ಚಿನ್ನವುಳ್ಳ ಈ ಮೋಡವು
ನನಗೆ ಬೆಳ್ಗೊಡೆಯು. ಕ೦ಪಿಸುತ್ತಿರುವ ನಿಚುಲ
೪೦
ತರುಗಳ ಚಿಗುರು ಜೊಂಪೆಯೇ ಚಾಮರಗಳು ಬೇಸಿಗೆ
ಯು ಕಳೆದು ತಂಪಾಗಿರಲು, ಸುಂದರವಾಗಿ ಕೇಕೆಹಾ
ಕುವ ಈ ನೀಲಕ೦ಠಗಳೇ ವಂದಿಗಳು. ಈ ಮೋಡ
ಗಳೇ ಧಾರೆ ಎ೦ಬ ಸಾರವನ್ನು (ನೀರು-ಐಶ್ವರ್ಯ)
ತರುವ ವ್ಯಾಪಾರಗಾರರು." ಹೀಗೆ ಸುತ್ತಮುತ್ತಲಿರು
ವುದನ್ನು ಹೊಗಳುತ್ತಾ ಕುಳಿತರೇನಾಯಿತು, ಇರಲಿ
ಈ ಕಾನನದಲ್ಲಿ ಆ ಪ್ರಿಯೆಯನ್ನು ಹುಡುಕುವೆನು."
ಎಂದು ಹಾಗೆಯೇ ಸುತ್ತಲೂ ನೋಡಿ, “ಅಯ್ಯೋ!
ಹುಡುಕಲು ಹೊರಟ ನನಗೆ ವಿರಹವು ಹೊಗೆಯಾಡು
ತ್ತಿದ್ದುದು ಕಿಚ್ಚೆಂದ್ದಂತಾಯಿತು. ಇಗೋ ಈ ಹೊಸ
ಬಾಳೆಯ ಗಿಡವು ಕೊಂಚ ಕೆಂಪುಗೂಡಿದ, ಒಳನೀರಿ
ನಿ೦ದ ಸೊಗಸಾದ ಹೂಗಳಿಂದ ಕೋಪಗೊ೦ಡ
ಆಕೆಯ ಹನಿಗೂಡಿದ ಕಣ್ಣನ್ನು ನೆನಹಿಗೆ ತರುವುದು.”
ಎಂದು ವ್ಯಧಿಸಿ, ಅಯ್ಯೋ! ಇದೇ ಮಾರ್ಗವಾಗಿಯೇ
ಆಕೆಯು ಹೋದಳೆಂದು ನಾನು ಹೇಗೆ ತಿಳಿಯಲಿ?
ಹೊಸದಾಗಿ ಮಳೆಯಾಗಿರುವ ಈ ಕಾಡಿನಲ್ಲಿ ಈ
ಮರಳಿನಲ್ಲಿ ಕಾಲಿಟ್ಟು ನಡೆದು ಹೋದುದೇ ಆದರೆ,
ಹಿಮ್ಮಡಿಯು ಗುರುವಾದ ನಿತಂಬದ ಭಾರದಿಂದ ಹಳ್ಳ
ವಾಗಿಯೂ, ಆ ಹಜ್ಜೆ ಯು ಕಾಲಿನ ಅಲಕ್ತರಸದಿಂದ
ಕ೦ಪಾಗಿಯೂ ಇರಬೇಕು" ಎ೦ದುಕೊ೦ಡು ಮು೦ದೆ
ಹೋಗುತ್ತ, ಅಲ್ಲೊಂದು ಹುಲ್ಲಿನ ಹೆಪ್ಪನ್ನು ನೋಡಿ
"ಆ ಮು೦ಗೋಪಿಯು ಹೋದ ಹಾದಿಯನ್ನು ಹಿಡಿವ
ಗುರುತು ಸಿಕ್ಕಿತೆಂದು ನಲಿದು, “ ಆಧರ ರಾಗವನ್ನು
ತೊಳೆದು ಕೊ೦ಡು, ಹಳ್ಳವಾದ ನಾಭಿಗೆ೦ದು ಕೆಳಕ್ಕಿಳಿ
ಯುವ, ಆಕೆಯು ಕೋಪದಿಂದ ಬಿಟ್ಟ ಕ೦ಬನಿಗಳಿ೦ದ
೪೧
ಅಂಕಿತವಾಗಲು, ಹೋಗುತ್ತಿದ್ದವಳು ರೋಷದಿಂದ
ಒ೦ದುಗಳಿಗೆ ನಿ೦ತು ತೆಗೆದೆಸೆದ, ಶುಕೋದರದ೦ತೆ
ಶ್ಯಾಮವಾದ ಸ್ತನಾಂಶುಕವಿದು" ಎಂದು ಹತ್ತಿರ
ಹೋಗಿ 'ಅಯ್ಯೋ! ಇಂದ್ರ ಗೋಪದ ಹುಳು
ಹಿಡಿದಿರುವ ಹೊಸ ಹುಲ್ಲಿನ ಹೆಪ್ಪಿದು” ಎಂದು ಭಗ್ನ
ಮನೋರಥನಾಗಿ " ಈ ಈ ನಿರ್ಜನವಾದ ವನದಲ್ಲಿ
ಪ್ರಿಯೆಯು ಹೋದ ಮಾರ್ಗನ್ನು ಹೇಗೆ ತಿಳಿಯು
ವುದು” ಎಂದು ಶೋಕಿಸುವನು.
ಅಲ್ಲಿ ಮಳೆ ನೀರು ಕುಡಿದು ತಣ್ಣಗಿರುವ ಕಿಬ್ಬ
ರಿಯ ಕಲ್ಲಿನ ಮೇಲೆ ಗಾಳಿಯಿಂದ ಶಿಖೆಯು ಹಾ
ರುತ್ತಿರಲು, ಹೋಗುತ್ತಿರುವ ಮೇಘರಾಜಿಯನ್ನು
ನೋಡುತ್ತಾ, ಕತ್ತನ್ನು ಮುಂದಕ್ಕೆ ಚಾಚಿ ಕೇಕೆ
ಹಾಕುತ್ತ ನಿ೦ತಿರುವ ನವಿಲನ್ನು ನೋಡಿ, "ಇದನ್ನಾ
ದರೂ ಕೇಳುವೆನು” ಎಂದು ಹತ್ತಿರ ಹೋಗಿ “ಎಲೆ
ನೀಲಕಂಠನೆ ! ಈ ವನದಲ್ಲಿ ಉತ್ಕಂಠಯಾದ ನನ್ನ
ಹೆ೦ಗಸನ್ನು ಕ೦ಡಿಯಾ ? ಎಲೆ ಸಿತಾಪಾಂಗನೇ !
ದೀರ್ಘಾಪಾ೦ಗೆಯಾದಾಕೆಯು ನಿನ್ನ ಕಣ್ಣಿಗೆ ಬಿದ್ದ
ಳೆ” ಎ೦ದು ಕೇಳಿ ಅದು ಗಮನಿಸದೆ ತನ್ನ ಪಾಡಿಗೆ
ತಾನು ಕುಣಿಯುತ್ತಿರಲು, " ಇದೇಕೆ ಇಷ್ಟು ಹರ್ಷ
ಪಡುತ್ತಿರುವುದು ?'' ಎ೦ದು ವಿಚಾರಿಸಿ, " ಆಹಾ!
ನನ್ನ ಪ್ರಿಯೆಯು ನಷ್ಟವಾದುದರಿಂದ, ಹೂ ಗಳಿಗೆ
ಹಾರುತ್ತಿರುವ ನಿಬಿಡವಾದ ತನ್ನ ಕಲಾಪಕ್ಕೆ ಎದುರಿ
ಲ್ಲದೆ ಹೋಯಿತು ಎಂದು ನಲಿಯುತ್ತಿರುವುದು. ರತಿ
ಕಾಲದಲ್ಲಿ ಬಿಚ್ಚಿ ಹೋದ ಹೂ ಮುಡಿದ ಮುಡಿಯ
೪೨
ನ್ನು ಕೈಯಲ್ಲಿ ಹಿಡಿದು ಆಡಿಸುವ ನನ್ನೊಡತಿಯಿದ್ದಿ
ದ್ದರೆ, ಈ ನವಿಲೇನು ಮಾಡುತ್ತಿದ್ದಿತು? ಹೋಗಲಿ,
ಇನ್ನೊಬ್ಬರ ದುಃಖದಲ್ಲಿ ಸಂತೋಷಪಡುವ ಇದನ್ನು
ಇನ್ನು ಕೇಳೆನು ? ಎ೦ದು ಮು೦ದೆ ಹೋಗುವನು
ಅಲ್ಲಿ ಗ್ರೀಷ್ಮಾ೦ತದಲ್ಲಿ ಹೆಚ್ಚಿಗೆ ಮದ ಒ೦ದು
ಹೆಣ್ಣು ಕೋಗಿಲೆಯು ನೇರಿಲೇ ಮರದಲ್ಲಿ ಕುಳಿತಿ
ರಲು, ಹಕ್ಕಿಗಳಲ್ಲೆಲ್ಲಾ ಇದು ಬಹಳ ಪಂಡಿತನಾದ
ಜಾತಿಯು. ಇರಲಿ. ಇದನ್ನು ಪ್ರಾರ್ಥಿಸುವೆನು." ವ
ಎಂದು "ಎಲೆ ಕೊಕಿಲೆ ! ಕಾಮಿಗಳು ನಿನ್ನನ್ನು
ಮದನ ದೂತಿಯೆಂದೂ, ಕಾಮಿನಿಯರ ಮಾನವನ್ನು
ಮುರಿವ ಮನ್ಮಥನ ಅಮೋಘವಾದ ಅಸ್ತ್ರವೆಂದೂ ಹ
ಹೇಳುವರು. ಪ್ರಿಯತಮೆಯಾದ ಆಕೆಯನ್ನಾದರೂ
ನನ್ನ ಸಮೀಪವನ್ನು ಹೊಂದಿಸು, ಅಥವಾ ನನ್ನನ್ನಾ
ದರೂ ಕಲಭಾಷಿಣಿಯಾದ ಆ ಕಾಂತೆಯ ಬಳಿಗೆ
ಕರೆದುಕೊ೦ಡು ಹೋಗು" ಎಂದು ಬೇಡಿಕೊಂಡು,
ಅದು- ಆಕೆಯು ನಿನ್ನನ್ನೇಕೆ ಬಿಟ್ಟು ಹೊದಳು ?"
ಎ೦ದು ಕೇಳಿದ೦ತೆ ಭಾವಿಸಿಕೊಂಡು "ಆಕೆಯು
ಗೊ೦ಡುದು೦ಟು. ಆದರೆ ಆಕೆಯು ಹಾಗೆ ಕೋಪಿಸಿ
ಕೊಳ್ಳುವುದಕ್ಕೆ ನಾನೇನು ಮಾಡಿರುವೆನೋ ನನಗೆ
ತಿಳಿಯದು. ಮುಖ್ಯವಾಗಿ, ಹೆಂಗಸರು ಕೋಪಗೊ
ಳ್ಳಲು, ಗಂಡಂದಿರ ಮೇಲೆ ಅವರಿಗೆ ಇರುವ ಪ್ರಭು
ತ್ವವೇ ಸಾಕಾಗಿರಲು, ಬೇರೆಯೊಂದು ತಪ್ಪಾದರೂ
ಏಕೆ ಬೇಕು"” ಎಂದು ಹೇಳಿ, ಅದು ತನ್ನ ಕೆಲಸ
ವನ್ನು ತಾನು ಮಾಡಿಕೊಳ್ಳುತ್ತಿರಲು, ಎಲೆ ನನ್ನ
೪೩
ಕಥೆಯನ್ನು ಹೇಳುಕೊಳ್ಳುತ್ತಿರಲು ಕೇಳದೆ ನಡುವೆ
ಮತ್ತೊಂದನ್ನು ತಂದಿಡುವುದಲ್ಲ ! ಇತರರ ದುಃಖವು
ಎಷ್ಟೇ ಹೆಚ್ಚಿದ್ದರೂ, ಲೋಕರು ಅದರ ವಿಚಾರವಾಗಿ
ಬಲು ತಣ್ಣಗೆ ಸೊಗಸಾಗಿ ಮಾತನಾಡುವರು. ಆಪದ್ಗತ
ನಾದ ನನ್ನ ಪ್ರಣಯದ ವ್ಯಥೆಯನ್ನು ಗಣಿಸದೆ ಅಧರ
ದ೦ತೆ ಕೆ೦ವಾಗಿರುವ ಈ ಜ೦ನೇರೆಳೆಯ ದೊರೆಗಾಯ
ನ್ನು ಕಚ್ಚುವುದರಲ್ಲಿಯೇ ಈ ಮತ್ತ ಕೋಕಿಲೆಯು
ವ್ಯಗ್ರವಾಗಿರುವುದಲ್ಲಾ!" ಎ೦ದು ವೃಧಿಸಿ ಮತ್ತೆ,
“ಹೀಗಿದ್ದರೂ ನನ್ನ ಪ್ರೀಯೆಯ೦ತೆ ಇದ್ದ ಮನೋ
ಹರವಾದ ಕಂಠರವುಳ್ಳುದಾದುದರಿಂದ ನನಗೆ ಇದ
ರಲ್ಲಿ ಕೋಪವಿಲ್ಲ. ಎಲ್ಲಾದರೂ ಸುಖವಾಗಿರಲಿ,
ನಾವೆಲ್ಲಿಯಾದರೂ ಹುಡುಕಿಕೊಳ್ಳೋಣ" ಎ೦ದು
ಮು೦ದೆ ನಡೆದು, "ಅ! ಇದೋ ! ಈ ತೆಂಕಣಿ೦ದ
ಪ್ರಿಯೆಯು ಪದವಿನ್ಯಾಸವನ್ನು ಸೂಚಿಸುವ ನೂಪುರರ
ವವು ಕೇಳಿ ಬರುತ್ತಿರುವುದು" ಯೆಂದಲ್ಲಿ ಹೋಗುವನು.
ಅದು ನೂಪುರಸಿಂಜಿತವಲ್ಲದೆ, ಮೇಘಗಳಿ೦ದ ತು೦ಬಿ
ದ ದಿಕ್ಕಗಳನ್ನು ನೋಡಿ. ಮಾನಸ ಸರೋವರಕ್ಕೆ
ಹಿ೦ತಿರುಗಲು ಹೊರಟಿರುವ ಹಂಸಪಕ್ಷಿಗಳ ಕೂಜಿತ
ವಾಗಿರಲು, ಭಗ್ನಮನೋರಥನಾಗಿ, “ ಇರಲಿ ಈ
ಪಕ್ಷಿಗಳು ಸರಸ್ಸನ್ನು ಬಿಡುವುದಕ್ಕಿಂತ ಮುಂಚೆಯೇ
ಪ್ರಿಯೆಯು ಎತ್ತ ಹೋದಳೆಂಬುದನ್ನು ತಿಳಿದುಕೊಂ
ಡು ಬಿಡಬೇಕು'' ಎಂದು ಮುಂದೆ ಬಂದು, "ಎಲೈ
ಜಲವಿಹಂಗಮ ರಾಜನೆ ! ಮಾನಸ ಸರೋವರಕ್ಕೆ
ಆ ಮೇಲೆ ಹೋಗುವೆಯಂತೆ; ಬುತ್ತಿ ಕಟ್ಟಿರು
ವೀ ತಾವರೆ ದ೦ಟನ್ನು ಬಿಡು ; ಮತ್ತೆ ತೆಗೆದು
೪೪
ಕೊಳ್ಳುವೆಯಂತೆ ; ಪ್ರಿಯೆಯ ವಿರಹದಿಂದ ದುಃಖ
ಸಾಗರದಲ್ಲಿ ಮುಳುಗಿರುವ ನನ್ನನ್ನು ಉದ್ಧರಿಸು.
ಸತ್ಪುರುಷರಿಗೆ ತಮ್ಮ ಕೆಲಸಕ್ಕಿಂತಲೂ ಶೋಕಾರ್ತರ
ಕೆಲಸವೇ ಹೆಚ್ಚಲ್ಲವೆ"” ಎಂದು ಬೇಡಿ “ಯೇನು
ಮಾನಸಕ್ಕೆ ಹೋಗುವ ಅವಸರದಲ್ಲಿರುವ ನಾನು
ನೋಡಲಿಲ್ಲವೆನ್ನುವೆಯಾ ? ಎಲೆ ಹಕ್ಕಿ ! ಕುಪಿತೆ
ಯಾರ ಆ ಕಾ೦ತೆಯು ಸರೋವರದ ತೀರ
ದಲ್ಲಿ ನಿನ್ನ ಕಣ್ಣಿಗೆ ಬಿದ್ದಿರಬೇಕು. ಇಲ್ಲವಾದರೆ
ಆ ಮಡದಿಯ ಬೆಡಗಿನ ನಡೆಯನ್ನು ಮತ್ತೆಲ್ಲಿ ತಾನೆ
ಕಲಿಯುವೆ ? ಕಳುವು ಮಾಲಿನ ಒಂದು ಭಾಗವಿರು
ವವನೇ ಎಲ್ಲದಕ್ಕೂ ಹೊಣೆಯ ನೀನು ಆಕೆಯ
ನಡೆಯನ್ನು ಅಪಹರಿಸಿದರೂ ಹೋಗಲಿ ನನ್ನ
ಕಾ೦ತೆಯನ್ನು ತೋರಿಸಿ ಕೊಡು” ಎಂದು ಮುಂದೆ
ನಡೆದು, ಅದು ಪುತ್ರನೆ ಹಾರಿ ಹೋಗಲು, ನಕ್ಕು,
" ಇದು ಕಳ್ಳರನ್ನು ಶಿಕ್ಷಿಸುವ ರಾಜನೆಂದು ಭಯಪಟ್ಟು
ಓಡಿಹೋಯಿತು"ಎಂದು ಮುಂದೆ, ಹೊಗುವನು,
ಅಲ್ಲಿ ಒಂದು ಚಕ್ರವಾಕ ಮಿಥುನವನ್ನು ಕ೦ಡು,
"ಎಲೆ ! ರಥಾಂಗವೆಂದು ಹೆಸರುಳ್ಳ ಚಕ್ರವರ್ತಿಕವೇ!
ರಥಾ೦ಗದ೦ತೆ ವಿಸ್ತಾರವಾದ ನಿತಂಬ ಭಾಗವುಳ್ಳ
ಹೆಂಡಿತಿಯಿಂದ ವಿಯುತನಾದ ನೂರಾರು ಮನೋ
ರಥಗಳಿ೦ದ ಕೂಡಿದ ಈ ರಥಿಯು ಕೇಳಿಕೊಳ್ಳುವನು”
ಎ೦ದು ಹೇಳಿಕೊ೦ಡ: ಅದು ಕ್-ಕ್ ಎಂದುಕೊಳ್ಳ
ಲು, 'ನೀನು ಯಾರನ್ನುವಿಯಾ ? ನಿನಗೆ ತಿಳಿಯದೆ?
ಸೂರ್ಯ ಚಂದ್ರಲೇ ನನ್ನ ಮಾತಾಮಹಪಿತಾ
ಮಹರು, ಊರ್ವಶಿಯು ಭೂಮಿಯೂ ತಾವಾಗಿ
೪೫
ವರಿಸಿದ ಪತಿಯು ನಾನು” ಎಂದು ಹೇಳಿ, ಹಾಗೂ
ಉತ್ತರ ಕೊಡದಿರಲು ರೇಗಿ, ಕೊಳದಲ್ಲಿ ಒಂದು
ತಾವರೆ ಯೆಲೆಯ ಮರೆಯಲ್ಲಿದ್ದು ನಿನ್ನ ಸಹಚರಿಯು
ಕಣ್ಣಿಗೆ ಕಾಣದಿರಲು ಎಲ್ಲಿಯೋ ದೂರಗತಳಾದ
ಳೆ೦ದು ಆಳುವ ಯಲ್ಲವೆ? ಹೆಂಡತಿಯ ಮೇಲಿನ ಸ್ನೇಹ
ದಿ೦ದ ವಿರಹ ಭೀತಿಯು ನಿನಗಿಷ್ಟಿದ್ದರೂ ದುಃಖಿತ
ನಾದ ನನಗೆ ನನ್ನ ಕಾ೦ತೆಯ ಸಮಾಚಾರವನ್ನು
ಹೇಳದೆಯಿರುವುದೂ ಸರಿಯೆ?" ಎಂದು ಬಯ್ದು "ಹು!
ನಮ್ಮ೦ತಹವರಲ್ಲಿ ದುರ್ವಿಧಿಯು ತನ್ನ ಪ್ರಭಾವನ್ನು ತೋರಿಸುವುದು.” ಎಂದು ತಾನೇ ಸಮಾಧಾನ ಹೇಳಿ
ಕೊಳ್ಳು ಮು೦ದೆ ಹೋಗುವನು.
ಅಲ್ಲಿ ಒ೦ದು ದು೦ಬಿಯ ಝ೦ಕಾರದಿ೦ದ ಸು೦ದ
ರವಾದ ತಾವರೆಯನ್ನು ಕಂಡು 'ಹೀಗೆಯೇ ಸಸೀ
ತ್ಕಾರವಾಗಿ ಆಕೆಯ ವದನವನ್ನು ಚುಂಬಿಸುತ್ತಿದ್ದ
ನಾನು ಇಲ್ಲಿಂದ ಮುಂದೆ ಹೋಗಲಾರೆನು. ಇಲ್ಲಿ
ಯೇ ಇದ್ದು ಈ ಕಮಲದಲ್ಲಿರುವ ದುಂಬಿಯೊಡನೆ
ಸ್ನೇಹ ಮಾಡಿಕೊಳ್ಳುವೆನು ಇಲ್ಲಿಂದ ಮುಂದೆ
ಹೋಗಿ ಪಶ್ಚಾತ್ತಾಪ ಪಡದಂತಿರಲಿ' ಎಂದು ಆ
ಮಧುಕರವನ್ನು ಸಂಬೋಧಿಸಿ 'ಮದಿರಾಕ್ಷಿಯು
ಎಲ್ಲಿ ಹೋದಳು ಹೇಳು' ಎಂದು ಕೇಳಿ, ಹಾಗೆಯೇ,
“ಅಥವಾ ನೀನು ಆಕೆಯನ್ನು ನೋಡಲಿಲ್ಲ. ಹಾಗೆ
ನೋಡಿ, ಆಕೆಯ ಉಚ್ಚಾಸದ ಸುಗ೦ಧವು ನಿನಗೆ
ದೊರೆತಿದ್ದರೆ, ಈ ಪುಂಡರೀಕದಲ್ಲಿ ನಿನಗೆ ಮನಸ್ಸಿರು
ತ್ತಿದ್ದಿತೇನು ?" ಎಂದು ಅದನ್ನು ಬಿಟ್ಟು ಮು೦ದೆ
ಹೋಗಿ, ಹೆಣ್ಣಾನೆಯೊಡನೆ ವಿಹರಿಸುತ್ತಾ ನೀಪ
೪೬
ವೃಕ್ಷದ ಕೆಳಗೆ ಕುಳಿತಿರುವ ಆನೆಯ ಬಳಿಗೆ ಹೋಗಿ
ಸಲ್ಲಕಿಯ ಹೊಸ ಚಿಗುರನ್ನು ಹೆಣ್ಣಾನೆಯ ಕಯ್ಯಿಂದ
ಸ್ವೀಕರಿಸಿ ಭೋಜನ ಮಾಡುತ್ತಿರುವುದರಿ೦ದ ಹೋ
ಗುವುದು ಸರಿಯಲ್ಲವೆಂದು ಅದರ ಊಟ ಮುಗಿದ
ಮೇಲೆ ಹತ್ತಿರ ಹೋಗಿ, 'ಬಾಲಚಂದ್ರ ಕಲೆಯ೦ತಿ
ರುವ ಜಾಜಿಯ ಹೂವನ್ನು ಮುಡಿದಿರುವ ಸ್ಥಿರಯೌ
ವನೆಯಾದ ಆಕೆಯನ್ನು ಕಂಡೆಯಾ?' ಎಂದು ಕೇಳಿ
ಅದರ ಬೃ೦ಹಿತದಿ೦ದ ಸ೦ತಷ್ಟನಾಗಿ 'ನಾವಿಬ್ಬರೂ
ಸಮಾನಧರ್ಮಿಗಳು. ಅದರಿಂದ ನನ್ನಲ್ಲಿ ನಿನಗೆ
ಪ್ರೀತಿಯಿರುವುದು. ನನ್ನನ್ನು ಪೃಥ್ವೀಭೃತ್ತು
ಗಳಾದ ಕ್ಷತ್ರಿಯರಿಗೆ ಅಧಿಪತಿಯೆಂದು ಹೇಳುವರು.
ನೀನು ನಾಗಾಧಿರಾಜನು ನನಗೆ ಅರ್ಥಿಗಳಲ್ಲಿರುವ
ದಾನ ಪ್ರವೃತ್ತಿಯೂ ನಿನಗೂ ಸ೦ತತವಾಗಿರದು.
ಸ್ತ್ರೀ ರತ್ನಗಳಲ್ಲಿ ಉರ್ವಶಿಯ ನನಗೆ ಕಾಂತೆಯು.
ನಿನಗೆ ಈ ಹೆಣ್ಣಾನೆಯ ಹೀಗೆ ಸರ್ವವೂ ನಮ್ಮಿ
ಬ್ಬರಿಗೂ ಸಮನಾಗಿದ್ದರೂ, ಪ್ರಿಯಾವಿರಹಬ೦ದು೦
ಟಾಗುವ ವ್ಯಥೆಯನ್ನು ಮಾತ್ರ ನೀನು ಎಂದೆಂದಿಗೂ
ಅನುಭವಿಸಬೇಡ. ಎಲ್ಲಾದರೂ ಚೆನ್ನಾಗಿರು. ನಾನು
ಹುಡುಕಿಕಿ೦ದು ಹೋಗುವನು' ಎ೦ದು ಮು೦ದೆ
ಹೊರಟು, ಇದು ಸುರಭಿಕಂದರವೆಂದು ಪ್ರಸಿದ್ಧವಾದ
ವಿಶೇಷ ರಮಣೀಯವಾದ ಪರ್ವತವು, ಇದು ಅಪ್ಸರಸೆ
ಯರಿಗೆ ಪ್ರಿಯವಾದುದು ಒಂದುವೇಳೆ ಆ ಊರ್ವ
ಶಿಯು ಇಲ್ಲೇ ದೊರೆತರೂ ದೊರೆಯಬಹುದು' ಎ೦ದು
ಕೊ೦ಡು ಆವೇಳೆಗೆ ಅ೦ಧಕಾರ ಪ್ರಾಪ್ತಿಯಾಗಲು
ಮಿ೦ಚಿನ ಬೆಳಕಿನಿಂದ ನೋಡುವುದಕ್ಕೆ ಅದೂ ಇಲ್ಲ.
೪೭
ದಿರರು ವ್ಯಥೆಪಟ್ಟು ಆ ಪರ್ವತವನ್ನು ಕುರಿತು, "ಎಲೆ
ಪರ್ವತವೆ ! ತು೦ಬಿ ಬೆಳೆದ ಮೆಯ್ಯುಳ್ಳ, ನಿತ೦ಬವತಿ
ಯ ಗುರುಸ್ತನವುಳ್ಳವಳೂ ಆದ ಆಕೆಯು ಮನ್ಮಥನ
ಮನೆಯಾದ ಈ ಕಾಡಿನಲ್ಲೇನಾದರೂ ಇರುವಳೆ "?
ಎ೦ದು ಕೇಳಿ ಪ್ರತ್ಯುತ್ತರ ಬರದಿರಲು 'ದೂರದಿ೦ದ
ಕೇಳುವದಿಲ್ಲ, ಹತ್ತಿರ ಹೋಗುವೆನು' ಎಂದು ಹೋಗಿ
“ಎಲೆ ಪರ್ವತನಾಥನೆ, ನನ್ನಿ೦ದ ಬಿಡಲ್ಪಟ್ಟು ಒಬ್ಬಳೇ
ತಿರುಗುತ್ತಿದ್ದ ಸರ್ವಾ೦ಗ ಸು೦ದರಿಯಾದ ಆ ನನ್ನ
ಕಾ೦ತೆಯನ್ನು, ಈ ವನೋದ್ದೇಶದಲ್ಲಿ ನೀನು ನೋಡಿ
ದೆಯಾ?' ಎಂದು ಕೇಳಿ ಅಲ್ಲುಂಟಾದ ಪ್ರತಿಶಬ್ದವನ್ನು
ಪ್ರತ್ಯುತ್ತರವೆಂದುಕೊಂಡು 'ಹಾಗಾದರೆ ನನ್ನ ಕಾ೦ತೆ
ಯೆಲ್ಲಿ?' ಎಂದು ಕೇಳಿ ಉತ್ತರ ಬರದಿರಲು ಪ್ರತಿ
ಧ್ವನಿಯವ ಆಗ ತಿಳಿದು, 'ದಣಿದಿರುವೆನು.
ಈ ನದಿಯ ದದದಲ್ಲಿ ಕುಳಿತು ಈ ಅಲೆಗಳ ಮೇಲೆ
ಬರುವ ಗಾಳಿಯನ್ನು ಸೇವಿಸುವೆನು' ಎಂದು ಅಲ್ಲಿ
ಕುಳಿತುಕೊಳ್ಳುವನು.
ಹೊಸ ನೀರಿನಿಂದ ಕಲುಷವಾಗಿರುವ ನದಿಯನ್ನು
ನೋಡಿ ಅದರಲ್ಲಿ ಪ್ರೀತಿಯನ್ನು ಪಡೆದು, ಅಸಹನೆ
ಯಾದಾಕೆಯು ಭ್ರೂಭಂಗದಿಂದಲೂ, ಗಾಬರಿಯಾಗಿ
ಚದುರುವ ನೀರುಹಕ್ಕಿಗಳೆ೦ಬ ನಡುಕಟ್ಟಿನಿಂದಲೂ
ತಡೆವ ಭಸದಲ್ಲಿ ಜಾರಿರುವ ಒಟ್ಟಿಯನ್ನು ಎಳೆದು
ಕೊಳ್ಳುತ್ತಿರುವಂತೆ ಕಾಣುವ ನೊರೆಯಿಂದಲೂ ಕೂಡಿ
ಅಲ್ಲಿಗಲ್ಲಿಗೆ ನಿಂತು ನಿಂತು, ಸುತ್ತಿಕೊಂಡು ಸುತ್ತಿ
ಕೊ೦ಡು ಮು೦ದೆ ಮು೦ದೆ ಹೋಗುತ್ತಿರುವ ಈ ನದಿ
ಯಾಗಿರಬೇಕು' ಎಂದು ನಿರ್ಧರಿಸಿ, ಅದಕ್ಕೆ ಕೈಮುಗಿದು
೪೮
"ಎಲೆ ! ನಿನ್ನಲ್ಲಿಯೇ ಮನಸ್ಸಿಟ್ಟುಕೊಂಡು, ಪ್ರಿಯ
ವಾದಿಯಾಗಿ, ತಪ್ಪು ಮಾಡುವುದು ಎಂಬುದನ್ನೇ
ಕಾಣದ ನನ್ನಲ್ಲಿ ಯಾವ ಅಪರಾಧವನ್ನು ಕ೦ಡೆ ?
ನಿನಗೆ ದಾಸನಾದ ನನ್ನನ್ನು ಯಾತಕ್ಕೆ ತೊರೆದೆ?'
ಎಂದು ಕೇಳಿಕೊ೦ಡರೂ ನದಿಯು ಪ್ರಸನ್ನವಾಗದಿ
ರು, 'ಊರ್ವಶಿಯು ಪುರೂರವನನ್ನು ಬಿಟ್ಟು ಸಮು
ದ್ರವನ್ನು ಎಂದಿಗೂ ಸೇರಳು. ಆದರಿ೦ದ ಇದು ನದಿ
ಯೇ ಆಗಿರಬೇಕು. ಇರಲಿ, ಶ್ರೇಯಸ್ಸೆ೦ಬುದು
ನಮಗೆ ತಿಳಿಯದೆಯೇ ಪ್ರಾಪ್ತವಾಗುವುದು. ಆಕೆಯು
ನನಗೆ ಕಾಣದೆ ಮಾಯವಾದ ಆಯೆಡೆಗೇ ಹೋಗು
ವೆನು' ಎಂದುಕೊಂಡು, ಅಲ್ಲಿದ್ದ ರಕ್ತಕದಂಬವನ್ನು
ಗುರ್ತಿಸಿ, ಬೇಸಿಗೆಯ ಕೊನೆಯಲ್ಲಾಗುವ ಅದರ ಹೂ
ವನ್ನು, ಇನ್ನೂ ಚೆನ್ನಾಗಿ ಅರಳದೆಯೇ ಇದ್ದರೂ,
ತೆಗೆದು ಊರ್ವಶಿಯು ಮುಡಿದುಕೊಂಡುದನ್ನು ನೆನೆ
ದು, ಇದೇ ಆಕೆಯು ಹೋದ ಮಾರ್ಗವೆಂದು ನಿಶ್ಚ
ಯಿಸಿಕೊಂಡು ಅತ್ತಕಡೆಯೇ ಹೋಗುವನು.
ಅಲ್ಲಿರುವ ಒಂದು ಸಾರ೦ಗವನ್ನು ಕಂಡು ಅದ
ರಿಂದೇನಾದರೂ ತನ್ನ ಪ್ರಿಯೆಯ ವರ್ತಮಾನವು ತಿಳಿ
ದೀತೇನೋ ಎಂದು 'ಕಪ್ಪಗಿರುವೀ ಸರಗವು ವನ
ಲಕ್ಷ್ಮಿಯು ಅರಣ್ಯದ ಸೊಬಗನ್ನು ನೋಡಲು ಬಿಟ್ಟಿ
ರುವ ಕಣ್ಣಿನಂತೆ ಇರುವುದು' ಎಂದು ವರ್ಣಿಸಿ,
ಮರಿಗೆ ಹಾಲು ಕೊಡುತ್ತಿರುವ ತನ್ನ ಕೆಳದಿಯನ್ನು
ಕತ್ತು ತಿರುಗಿಸಿಕೊಂಡು ನೋಡುತ್ತಿರುವ ಆ ಸಾರ
ಗವು ತನ್ನನ್ನು ಗಣಿಸದಿದ್ದರೂ ಚಿಂತೆಯಿಲ್ಲವೆ೦ದು
ಅದನ್ನು ಸಂಬೋಧಿಸಿ 'ಎಲೆ ಯಧಪತಿಯೆ ! ನೀನು
೪೯
ಈ ವನದಲ್ಲಿ ನನ್ನ ಪ್ರಿಯೆಯನ್ನು ಕಂಡೆಯಾ ?
ಆಕೆಯ ಗುರುತನ್ನು ಹೇಳುವನು ಕೇಳು. ನಿನ್ನ ಸಹ
ಚರಿಯಂತೆ ವಿಸ್ತಾರವಾದ ಕಣ್ಣುಳ್ಳವಳು, ಹಾಗೆ
ಯೇ ಲಕ್ಷಣವಾದ ನೋಟವುಳ್ಳವಳು” ಎಂದು ಹೇಳಿ
ದರೂ ಗಮನಿಸದೆ ತನ್ನ ಹೆಂಡಿತಿಯ ಕಡೆಗೇ ತಿರು
ಗಿದುದನ್ನು ನೋಡಿ, “ದುರ್ದಶೆಗಳಲ್ಲಿ ಅವಮಾನ
ವಾಗುವುದೂ ಸರಿಯೆ!' ಎಂದು ಮು೦ದೆ ಹೋಗಿ,
ಅಲ್ಲಿ ಕಲ್ಲಿನ ಹೊಳ್ಳಿನಲ್ಲಿ ಕಂಡಗಿರುವ ಏನೋ
ಒಂದನ್ನು ಕಂಡು, ಸಿಂಹವು ಬೇಟೆಯಾಡಿದ ಮೃಗದ
ಮಾ೦ಸದ ಚೂರಾದರೆ ಇಷ್ಟ ಪ್ರಭೆಯಲ್ಲಿಯದು ?
ಒ೦ದು ವೇಳೆ ಬೆಂಕಿಯ ಕಿಡಿಯಿರಬಹುದೇ,
ಎ೦ದರೆ, ಈಗತಾನೇ ಮಳೆಯಾಗಿರುವುದು. ಇದನ್ನು
ತೆಗೆದುಕೊಳ್ಳುವುದಕ್ಕೆ ಸೂರ್ಯನೇನಾದರೂ ಕರವ
ನ್ನು ನೀಡಿರುವನೋ ಎಂಬಂತಿರುವ ರಕ್ತಾಶೋಕಕ್ಕೆ
ಸಮಾನವಾದ ಕಾ೦ತಿಯುಳ್ಳ ಇದು ರತ್ನವೆ ಆಗಿರ
ಬೇಕು. ನನ್ನ ಮನಸ್ಸನ್ನು ಅಪಹರಿಸಿರುವ ಇದನ್ನು
ತೆಗೆದುಕೊಳ್ಳುವೆನು.” ಎಂದುಕೊಂಡು ಕೈ ನೀಡಿ,
ಹಾಗೆಯೇ-ಅಯ್ಯೋ ! ಈ ಮಣಿಯು ಮನ್ದಾರ
ಪುಷ್ಪವನ್ನು ಮುಡಿದಿರುವ ಆಕೆಯ ಕಬರಿಯಲ್ಲಿ
ಇರುವುದಕ್ಕೆ ಯೋಗ್ಯವಾದುದು. ಅಂಥಾ ಪ್ರಿಯೆಯೇ
ದುರ್ಲಭಳಾಗಿರಲು, ಈ ಮಣಿಯನ್ನು ತೆಗೆದುಕೊ೦ಡು,
ಏತಕ್ಕೆ ನನ್ನ ಕಣ್ಣೀರಿಂದ ಕೆಡಿಸಲಿ"” ಎಂದು
ಸುಮ್ಮನಾಗುವನು.
ಆಗ "ವತ್ಸ! ತೆಗೆದುಕೋ, ತೆಗೆದುಕೋ, ಪಾರ್ವತೀ
ದೇವಿಯ ಚರಣ ರಾಗದಿಂದ ಜನಿಸಿದ ಸಂಗಮನೀ
೫೦
ಯ ಮಣಿಯು ಇದು. ಇದನ್ನು ಧರಿಸಿದವರು ಪ್ರಿಯ
ಜನರನ್ನು ಬಹು ಬೇಗ ಹೊಂದುವರು.” ಎ೦ದು
ಆಕಾಶವಾಣಿಯಾಗಲು, ಯಾರು ಹೀಗೆ ನನಗೆ ಅಪ್ಪಣೆ
ಮಾಡುವರೆಂದು ನೋಡಿ ಭಗವಂತನಾದ ಚಂದ್ರನ
ಅನುಗ್ರಹವೆಂದು ತಿಳಿದು, "ನಿಮಗ್ನ ಮಧ್ಯೆಯಾದಾಕೆ
ಯನ್ನು ನನಗೆ ದೊರಕಿಸಿ ಕೊಟ್ಟುದೇ ಆದರೆ,
ಈಶ್ವರನು ಬಾಲಚಂದ್ರನನ್ನು ಧರಿಸುವಂತೆ ನಿನ್ನನ್ನು
ಶಿಖಾಮಣಿಯನ್ನಾಗಿ ಧರಿಸುವೆನು” ಎಂದು ಆ ಸ೦
ಗಮನೀಯಕ್ಕೆ ಹರಕೆ ಹೊತ್ತು, ಅದನ್ನು ತೆಗೆದು
ಕೊ೦ಡು, ಅಲ್ಲಿರುವ ಒ೦ದು ಬಳ್ಳಿಯನ್ನು ನೋಡಿ,
“ಇದೇನು ? ಹೂವಿಲ್ಲದಿದ್ದರೂ, ಈ ಲತೆಯನ್ನು
ನೋಡಿ ನನಗೆ ಅತಿ ಪ್ರೀತಿಯು ಆಗುತ್ತಿರುವುದು.
ಇದಾದರೋ, ಮೇಘ ಜಲವು ಚಿಗುರನ್ನು ತೆಳುವಾಗಿ
ನೆನೆಯಿಸಿರಲು, ಕಣ್ಣೀರಿಂದ ತೊಳೆದ ಚೆಂದುಟಿಯು
ಳ್ಳವಳಂತೆ; ಹೂವಿನ ಕಾಲವು ಕಳೆದು ಒಂದೂ
ಹೂವಿಲ್ಲದೆ ಇರಲು ಆಭರಣಗಳನ್ನೇ ತೊಡದೇ ಇದ್ದ
ವಳ೦ತೆ; ದು೦ಬಿಯ ಶಬ್ದವಿಲ್ಲದಿರಲು, ಚಿಂತೆಯಿ೦ದ
ಮೌನವಾಗಿ ಕುಳಿತಿರುವಳಂತೆ, ಕಾಲಿಗೆ ಬಿದ್ದರೂ
ನನ್ನನ್ನು ಕೇಳದೆ ಹೋಗಿ, ಆಮೇಲೆ ಜನಿಸಿರುವ
ಅನುತಾಪವುಳ್ಳ ಆ ಊರ್ವಶಿಯ೦ತೆಯೇ ಕಾಣುವು
ದು. ಆದರಿಂದ ಪ್ರಿಯೆಯ೦ತೆಯೇ ಇರುವ ಈ ಲತೆ
ಯನ್ನು ಆಲಂಗಿಸುವೆನು” ಎಂದು ಆ ಬಳ್ಳಿಯನ್ನು
ತಬ್ಬಿಕೊಳ್ಳಲು, ಆದೇ ಬಳ್ಳಿಯೇ ಸಂಗಮನೀಯದ
ಪ್ರಭಾವದಿ೦ದ ಊರ್ವಶಿಯಾಗುವುದು. ರಾಜನು
ಅಂಗಸ್ಪರ್ಶ ಸುಖವನ್ನು ಅನುಭವಿಸುತ್ತಾ ಇನ್ನೂ
೫೧
ಅದರಲ್ಲಿ ನಂಬಿಕೆ ಪಡದೆ, “ನಾನು ಪ್ರಿಯೆಯೆ೦ದು
ತಿಳಿಯುತ್ತಿರುವುದೇ ಒಂದು ಕ್ಷಣದಲ್ಲಿ ಹಾಗಾಗದೇ
ಹೋದೀತು, ಆದುದರಿಂದ ನಾನು ಪ್ರಿಯೆಯ ಅಂಗದ
ಸ್ಪರ್ಶವನ್ನು ಹೊ೦ದಿದರೂ ತಟ್ಟನೆ ಕಣ್ಣು ಬಿಡಲಾರೆ
ನು” ಎ೦ದು ಗೆ ಯೇ ಒಂದು ಗಳಿಗೆಯಿದ್ದು, ಕೊನೆಗೆ
ನಿದಾನವಾಗಿ ಕಣ್ಣು ಬಿಟ್ಟು ಎದುರಿಗಿರುವ ಊರ್ವಶಿ
ಯನ್ನು ನೋಡಿ, “ ಪ್ರಿಯೆ! ನಿನ್ನ ವಿರಹವೆಂಬ ಅಂಧ
ಕಾರದಲ್ಲಿ ಬಿದ್ದಿದ್ದ ನನಗೆ ನೀನು ದೊರೆತುದು ಹೋ
ಗಿದ್ದ ಪ್ರಾಣಗಳು ಮರಳಿ ಬ೦ದ೦ತಾಯಿತು" ಎಂದು ನಲಿ
ಯುವನು. ಆಕೆಯೂ, "ನಾನೂ ಮನೋದೃಷ್ಟಿ
ಯಿಂದಲೇ ಎಲ್ಲವನ್ನೂ ನೋಡುತ್ತಿದ್ದೆನು” ಎ೦ದು ತ
ನಗೆ ಸ೦ಭವಿಸಿದ ದುರವಸ್ಥೆಯನ್ನೆಲ್ಲಾ " ನೀನಷ್ಟು
ದಿವಸ ನನ್ನನ್ನು ಬಿಟ್ಟು ಹೇಗಿದ್ದೆ?” ಎಂದು ಆಶ್ಚ
ರ್ಯ ಪಡುತ್ತಿರುವ ರಾಯನಿಗೆ ಅರಿಕೆ ಮಾಡುವಳು.
ಆತನು, ಸುಂದರಿ ! ಸ್ವಲ್ಪ ಹಾಗೆಯೆ ನಿ೦ತುಕೊ"
ಎಂದು ಆ ಸ೦ಗಮನೀಯವನ್ನು ಆಕೆಗೆ ಅಲ೦ಕರಿಸು
ವನು. ಆಮೇಲೆ ಊರ್ವಶಿಯ "ರಾಜಧಾನಿಯಿಂದ
ಬ೦ದು ಬಹಳ ದಿನವಾಯಿತು''ಎಂದು ಜ್ಞಾಪಿಸುವಳು.
ಮಹಾರಾಜನಿಷ್ಟದ೦ತೆ ಮಿಂಚೆಂಬ ಪತಾಕೆಯಿ೦ದ
ಲೂ, ಸುರಧನುಗಳೆಂಬ ಚಿತ್ರಗಳಿ೦ದಲೂ ಕೂಡಿ
ರುವ, ಹೊಸ ಮೋಡವೆಂಬ ವಿಮಾನದಲ್ಲಿ ಕುಳಿತು,
ಇಬ್ಬರೂ ಹೊರಟು ಹೋಗುವರು.
ಇ೦ತಿದು ಚತುರ್ಥಾಂಕವು.
-------
ಪಂಚಮಾಂಕ
ನಂದನವನವೇ ಮೊದಲಾದ ಪ್ರದೇಶಗಳಲ್ಲಿ ಊ
ರ್ವಶೀ ಸಹಾಯನಾಗಿ ವಿಹರಿಸುತ್ತಿದ್ದ ರಾಜನು ಹಿಂ
ದಿರುಗಿ ಬಂದು ರಾಜಧಾನಿಯನ್ನು ಸೇರಿ, ರಾಜ್ಯಭಾ
ರವನ್ನು ಮಾಡುತ್ತಾ ಸುಖದಿಂದಿದ್ದನು. ಆತನಿಗೆ
ಸ೦ತಾನವಿಲ್ಲವೆ೦ಬುದೊಂದು ವಿನಾ ಇನ್ನಾವ ಯೋ
ಚನೆಯೂ ಇರಲಿಲ್ಲ.
ಹೀಗಿರಲು ಒ೦ದಾನೊಂದು ದಿನ ಯೇನೋ ವಿಶೇ
ಷವೆ೦ದು ಅರಸನು ದೇವಿಯೊಡನೆ ಗ೦ಗಾ ಯಮುನಾ
ಸಂಗಮದಲ್ಲಿ ಮೀಯ್ಯುವುದಕ್ಕೆ ಹೋಗಿದ್ದನು.
ಆಗ ಅವರ ಅಲಂಕಾರಕ್ಕೆಂದು ಚೇಟಿಯು, ತಾಳೆಯ
ಗರಿಯ ಬೀಸಣಿಗೆಯನ್ನು ಮುಚ್ಚಿದ ಒಂದು ತಟ್ಟೆ
ಯಲ್ಲಿ ರತ್ನಾಭರಣಗಳನ್ನೆಲ್ಲಾ ಇಟ್ಟುಕೊ೦ಡುಹೋ
ಗುತ್ತಿರಲು, ಅರಮನೆಯಲ್ಲಿ ಸಾಕಿದ್ದ ಒಂದು ಗಿಡಗವು
ಸರ್ರನಿಳಿದು ಮಾ೦ಸವೆ೦ಬ ಭ್ರಾಂತಿಯಿಂದ ಸ೦ಗಮ
ನೀಯವೆಂಬ ಮಣಿಯನ್ನು ಹಾರಿಸಿಕೊಂಡು ಹೋ
ಯಿತು.
ಇದನ್ನು ತಿಳಿದ ರಾಜನು ಊರ್ವಶಿಯನ್ನು ದೊರ
ಕಿಸಿದ ಮಣಿಯು ಹೋಯಿತಲ್ಲಾ ಎಂಬ ಆಕ್ರೋಶ
ದಿಂದ ಧನುವನ್ನು ತೆಗೆದುಕೊಳ್ಳುವುದರೊಳಗಾಗಿ
ಆ ಹಕ್ಕಿಯು, ಈ ಆ ಮಣಿಯ ಪ್ರಭೆಯೆಂಬ ಚಿಗುರಿ
೫೪
ನಿ೦ದ ದಿಕ್ಕುಗಳಿಗೆ ಅಶೋಕದ ಚಿಗುರಿನ ಕಿವಿಯೊಡ
ವೆಯನ್ನು ಮಾಡುವಂತೆ ಸುತ್ತುತ್ತಾ ಅಲಾತ ಚಕ್ರ
(ದೀವಟಿಗೆಯ ಸಲಾಮು) ಭ್ರಮೆಯನ್ನುಂಟುಮಾಡು
ತ್ತಾ ರಾತ್ರಿಯಲ್ಲಿ ಮೋಡದ ನಡುವೆ ಮೆರೆಯುವ ಅಂ
ಗಾರಕ ನಕ್ಷತ್ರದಂತೆ ಶರಪಥವನ್ನತಿಕ್ರಮಿಸುವುದು.
ರಾಜನೂ ಆ ಹಕ್ಕಿಯು ಸಂಜೆಗೆ ಯಾವುದಾದರೂ
ಮರೆದ ಮೇಲೆ ಕೂಡುವುದು. ಆಗ ಅದನ್ನು ಹೊಡೆದು
ಮಣಿಯನ್ನು ತರುವುದು'' ಎಂದು ಆಜ್ಞಾಪಿಸುವನು.
ಆ ಆ ವೇಳೆಗೆ ಆಗಲೆ ಮತ್ತೊಬ್ಬನು ಧನುರ್ಧಾರಿ
ಯಿಂದ ಆಹತವಾಗಿ, ಆ ಹಕ್ಕಿಯು ಬಿದ್ದು ಹೋಗ
ಲು, ಆ ಮಣಿಯನ್ನು ಆ ಹಕ್ಕಿಯನ್ನೂ ಹೊಡೆದ ಆ
ಶರವನ್ನೂ ಸಹ ತೆಗೆದುಕೊಂಡು ಕಂಚುಕಿಯು
ಬಂದು ರಾಯನಿಗೊಪ್ಪಿಸಲು, ರಾಯನು ಸಂತುಷ್ಟ
ನಾಗಿ, ಆ ಶರದಲ್ಲಿ “ ಊರ್ವಶೀ ಪುರೂರವ ಸ೦ಭ
ವನಾದ ಆಯುವಿನ ಬಾಣವಿದು. ದ್ವೇಷಿಸಿದವರ
ಆಯುಷ್ಯವನ್ನು ತೊಡೆಯುವುದು ?” ಎಂದು ಬರೆದಿರು
ವುದನ್ನು ನೋಡಿ ಆಶ್ಚರ್ಯಪಟ್ಟು, ವಿದೂಷಕನನ್ನು
ಕುರಿತು, "ವಯಸ್ಯ! ಆ ನೈಮಿಷಾರಣ್ಯದಲ್ಲಿ ನಡೆದ
ಯಜ್ಞ, ಕಾಲದಲ್ಲಿ ವಿನಾ ಮತ್ತಾವಾಗಲೂ ಆಕೆ
ಯನ್ನು ನಾನು ಬಿಟ್ಟದ್ದುದಿಲ್ಲವಾದರೂ ಆಕೆ
ಯಲ್ಲಿ ನಾನು ಗರ್ಭಚಿನ್ನೆಯನ್ನು ಕಾಣಲಿಲ್ಲ.
ಕಪ್ಪಾದ ಸ್ತನಾಗ್ರವನ್ನು ನೋಡಲಿಲ್ಲ. ಲವಲೀ
ಲತೆಯ ಚಿಗುರಿನಂತೆ ಬೆಳ್ಳಗಿರುವ ಮುಖ ಕಾಂತಿ
ಯನ್ನು ನೋಡಲಿಲ್ಲ ಆಕೆಯು ಆಲಸ್ಯ ಪಡುತ್ತಿದ್ದು
೫೫
ದನ್ನ೦ತೂ ನೋಡಲೇ ಇಲ್ಲ'' ಎಂದು ಹೇಳಿ ವಿಚಾ
ರಿಸುವನು. ವಿದೂಷಕನು, * ಮಾನುಷಿ ಧರ್ಮ
ವನ್ನು ದಿವ್ಯ ವನಿತೆಯಾದ ಆಕೆಯಲ್ಲಿ ಭಾವಿಸದಿರು.
ಆಕೆಯು ಎಲ್ಲವನ್ನೂ ಏತಕ್ಕಾಗಿ ಮುಚ್ಚಿಟ್ಟರು
ವಳೋ ಯಾರು ಬಲ್ಲರು?' ಎ೦ದು ರಾಯನಿಗೆ
ಅರಿಕೆ ಮಾಡುವನು.
ಅಷ್ಟರಲ್ಲಿಯೇ ಚ್ಯವನಾಶ್ರಮದಿಂದ ಬಂದ ಒಬ್ಬ
ತಾಪಸಿಯು, ಆ ಹಕ್ಕಿಯನ್ನು ಹೊಡೆದ ಕುಮಾರ
ನನ್ನು ಕರೆದು ತಂದು ರಾಯನಿಗೊಪ್ಪಿಸುವಳು.
ತಂದೆ ಮಕ್ಕಳೆಂಬ ಸಂಬಂಧವನ್ನು ಅವರವರ ಅಂಗ
ಗಳೇ ಉದ್ಘೋಷಿಸುತ್ತಿರಲು, ರಾಯನು, ಆ ಕುವರ
ನನ್ನು ನೋಡಿ ವಾತ್ಸಲ್ಯದಿಂದ ಹೃದಯವು ಉಬ್ಬಿ,
ಮನಸ್ಸು ಪ್ರಸನ್ನವಾಗಿರಲು, ತನಗೆ ನಮಸ್ಕರಿಸಿದ
ಆತನನ್ನು ತಬ್ಬಿಕೊಳ್ಳುವನು, ತಾಪಸಿಯೂ ಆತನಿಗೆ
“ಊರ್ವಶಿಯ ಈತನನ್ನು ಇನ್ನೂ ಮಗುವಾಗಿರು
ವಾಗಲೇ ಕರೆತಂದು ಆಶ್ರಮದಲ್ಲಿ ಬಿಟ್ಟಳು. ಈತನಿಗೆ
ಚ್ಯವನ ಭಗವಾನರು ಕ್ಷತ್ರಿಯೋಚಿತವಾದ ಸಂಸ್ಕಾರ
ಗಳನ್ನೆಲ್ಲಾ ಮಾಡಿ, ಧನುರ್ವೇದವನ್ನು ಕಲಿಸಿದರು.
ಈತನು ಇ೦ದು ಸಮಿತ್ಕುಶಾರ್ಥವಾಗಿ ಹೋಗಿದ್ದು,
ಮಾಂಸವನ್ನು ಬಾಯಲ್ಲಿ ಕಚ್ಚಿಕೊಂಡು, ಮರದ
ಮೇಲೆ ಕೂತುಕೊಳ್ಳುತ್ತಿದ್ದ ಹಕ್ಕಿಯನ್ನು ಹೊಡೆದನು.
ಆದುದರಿ೦ದ ಚ್ಯವನ ಭಗವಾನರು ಇವನನ್ನು
ಕರೆದುಕೊ೦ಡು ಹೋಗಿ ಊರ್ವತಿಗೊಪ್ಪಿಸಿ ಬಿಡೆಂದು
ಅಪ್ಪಣೆ ಮಾಡಿದರು. ಅದಕ್ಕಾಗಿ ಆಕೆಯನ್ನು
೫೬
ನೋಡ ಬ೦ದೆನು " ಎಂದು ಅರಿಕೆ ಮಾಡುವಳು.
ರಾಯನೂ ಊರ್ವಶಿಗೆ ಹೇಳಿ ಕಳುಹಿಸಿ, ಮಗನನ್ನು
ಮತ್ತೆ ತಬ್ಬಿಕೊಂಡು ತನ್ನ ಚಿನ್ನದ ಮಣೆಯ ಮೇಲೆ
ಕುಳ್ಳಿರಿಸಿಕೊ೦ಡು. ತಲೆಯನ್ನು ಸವರುತ್ತಿರುವನು.
ಊರ್ವಶಿಯ ಆ ವೇಳೆಗೆ ಸರಿಯಾಗಿ ಅಲ್ಲಿಗೆ ಬಂದು,
ಮಗನನ್ನು ಗುರ್ತಿಸುವಳು, ತಾಪಸಿಯ ದ್ವಿತೀಯಾ
ಶ್ರಮಯೋಗ್ಯನಾದ, ಮಗನನ್ನು ಊರ್ವಶಿಗೊಪ್ಪಿಸಿ,
ಎಲ್ಲರನ್ನೂ ಬೀಳ್ಕೊಂಡು ಆಶ್ರಮಕ್ಕೆ ಹಿ೦ತಿರುಗು
ವಳು.
ರಾಯನು "ಸು೦ದರಿ ! ಪಾಲೋಮೀ ಸಂಭವ
ನಾದ ಜಯ೦ತನಿ೦ದ ಪುರಂದರನು ಪುತ್ರವಂತರಲ್ಲಿ
ಶ್ರೇಷ್ಟನಾದ೦ತೆ, ನೀನು ಕೊಟ್ಟ ಈ ಮಗನಿ೦ದ
ನಾನೂ ಶ್ರೇಷ್ಟನಾದೆನು.'' ಎ೦ದು ಊರ್ವಶಿಯನ್ನು
ಬಹುವಾಗಿ ಅಭಿನಂದಿಸಲು, ಆಕೆಗೆ ಏನೋ ನೆನೆಪಿಗೆ
ಬ೦ದು, ಆಕೆಯು ವಿಷಾದಿಸುವಳು. "ವ೦ಶವು
ಬೆಳೆಯಿತೆಂದು ನಾನು ಸ೦ತೋಷ ಸಾಗರದಲ್ಲಿ ಮು
ಳುಗೇಳುತ್ತಿರುವ ಈ ಸಮಯದಲ್ಲಿ ನೀನೇಕೆ ಕಂಬನಿ
ಯಿಂದ ಸ್ತನಾಂಶುಕವನ್ನು ತೋಯಿಸುತ್ತಿರುವೆ? "
ಎಂದು ರಾಯನು ಭೀತನಾಗಲು, ಊರ್ವಶಿಯು
ಆತನಿಗೆ, ಹಿ೦ದೆ ಇ೦ದ್ರನು ಮಾಡಿದ್ದ "ನಿನ್ನಲ್ಲಿ ಜನಿ
ಸಿದ ಪುತ್ರನ ಮುಖವನ್ನು ಕಾಣುವವರೆಗೆ ಮಾತ್ರ
ನೀನು ಪುರೂರವನಲ್ಲಿರು.” ಎಂಬ ಸಮಯವನ್ನು
ವಿಜ್ಞಾಪಿಸಿ, ತಾನು ರಾಯನನ್ನು ಅಗಲುವ ವೇಳೆ
ಯು ಬ೦ದಿತೆ೦ದು ವ್ಯಧಿಸುವಳು.
೫೭
ರಾಯನು ಆ ಮಾತನ್ನು ಕೇಳುತ್ತಲೇ ಮೂರ್ಛೆ
ಹೋಗಿ, ಮತ್ತೆ ಹಾಗೆಯೇ ಅರಿವು ತ೦ದುಕೊ೦ಡು,
" ಪುತ್ರನು ಲಭಿಸಿದನೆ೦ದು ಸ೦ತೋಷ ಪರವಶನಾಗಿದ್ದ
ನನಗೆ, ಈಗಲೇ ನಿನ್ನ ವಿಯೋಗವೂ ಆಗುವುದೆಂದರೆ,
ಮೊದಲನೆಯ ಮಳೆಯಲ್ಲಿ ನೆನೆದು, ಬೇಸಿಗೆಯ ಬೇ
ಗೆಯನ್ನು ಕಳೆಯುತ್ತಿರುವ ಮಹಾವೃಕ್ಷವು ಹಾಗೆಯೇ
ಶಿಡಿಲು ಬಿದ್ದು ಬೆದ್ದ೦ತಾಯಿತು” ಎಂದು ವ್ಯಥೆ
ಗೊಳ್ಳುವನು.
ವಿದೂಷಕನು "ಹಾಗಾದರೇನು? ನೀನು ನಾರು
ಡೆಯುಟ್ಟು ವಾನಪ್ರಸ್ಥನಾಗಿ ತವೋವನಗಳಿಗೆ ಹೊರ
ಡುವೆಯೆ೦ದು ಇದರ ಅರ್ಥವೇನು” ಎಂದು ಗಾಬರಿ
ಪಡುವನು. ಊರ್ವಶಿಯು "ಆಯ್ಯೋ ! ನನ್ನ
ದುರದೃಷ್ಟವೆ ! ಪುತ್ರ ರತ್ನದ ಲಾಭದನ೦ತರ ನಾ
ನೂ ಅರಸನನ್ನು ಬಿಟ್ಟು ಸ್ವರ್ಗಕ್ಕೆ ಹೊರಟ ಹೋಗ
ಬೇಕಾಗಿರುವುದನ್ನು ಈ ವಚನವು ಸೂಚಿಸುವುದ
ಲ್ಲಾ!” ಎಂದು ಅತಿಯಾಗಿ ಚಿಂತಿಸುವಳು.
ಅರಸನೂ " ಸು೦ದರಿ! ಹಾಗಲ್ಲ ಪರರ ಧೀನ
ದಲ್ಲಿರುವಾಗ ಆತ್ಮ ಪ್ರಿಯವನ್ನು ಸಾಧಿಸಿಕೊಳ್ಳಲು
ಆಗುವುದಿಲ್ಲ. ಅದರಿಂದ ನೀನು ಪ್ರಭುವಿನ ಆಜ್ಞೆ
ಯನ್ನು ನಡೆಸು, ಈಗ ನಾನೂ ಕೂಡ, ನಿನ್ನ ಮಗ
ನಿಗೆ ರಾಜ್ಯಭಾರವನ್ನು ವಹಿಸಿ, ಜಿ೦ಕೆಗಳ ಹಿಂಡು
ತಿರುಗುವ ವನಗಳನ್ನು ಆಶ್ರಯಿಸುವೆನು ” ಎ೦ದು
ಊರ್ವಶಿಯನ್ನೂ, “ನೃಪಪುಂಗವನು ಧರಿಸಿರುವ ರಾ
ಜ್ಯದಲ್ಲಿ ಎಳೆಯ ಹುಡುಗನನ್ನು ನಿಯೋಜಿಸುವುದು
೫೮
ಸರಿಯೆ” ಎಂದು ಮರುಗುವ ರಾಯಗುವರನನ್ನು,
“ವತ್ಸ ! ಹಾಗಲ್ಲ. ಮರಿಯಾಗಿದ್ದರೂ, ಗ೦ಧದ್ವಿಪವು
ಇತರ ಗಜಗಳನ್ನು ಗೆಲ್ಲಬಲ್ಲದು. ಹಾವು ಮರಿಯಾ
ಗಿದ್ದರೂ, ಅದರ ವಿಷವು ಮಾತ್ರ ತೀವ್ರವಾಗಿಯೇ
ಇರುವುದು. ನೃಪತಿಯು ಬಾಲಾಗಿದ್ದರೂ ಭೂಮಿ
ಯನ್ನು ಆಳಬಲ್ಲನು ಸ್ವಕಾರ್ಯವನ್ನು ನಿರ್ವಹಿ
ಸುವ ಗುಣವು ಜನ್ಮದಿಂದಲೇ ಬರುವುದಲ್ಲದೆ ವಯಸ್ಸಿ
ನಿ೦ದಲ್ಲ " ಎಂದು ಆತನನ್ನೂ ಸಮಾಧಾನಪಡಿಸಿ,
" ಆ ಯುವಿಗೆ ರಾಜ್ಯಾಭಿಷೇಕ ಮಾಡಲು ಸಾಮಗ್ರಿ
ಯನ್ನು ಸಿದ್ಧಪಡಿಸೆಂ' ದು ಅಮಾತ್ಯನಿಗೆ ಆಜ್ಞೆಮಾ
ಡುವನು.
ಆ ವೇಳೆಗೆ, ಅ೦ತರಿಕ್ಷದಿಂದ, ಗೋರೋಚನದಂತೆ
ಪಿಂಗಲವರ್ಣವಾದ ಜಟಾಕಲಾಪವುಳ್ಳ, ಚ೦ದ್ರನಂತೆ
ನಿರ್ಮಲವಾದ ಯಜ್ಯೋಪವಿತವುಳ್ಳ, ಮುತ್ತಿನ ಹಾರ
ಗಳಿ೦ದ ಅಲ೦ಕೃತನಾದ, ಚಿನ್ನದ ಚಿಗುರಿನಿ೦ದ ಕೂಡಿ
ತಿರುಗುತ್ತಿರುವ ಕಲ್ಪ ವೃಕ್ಷವೋ ಎ೦ಬ೦ತಿರುವ
ನಾರದನು ಬ೦ದು ರಾಯನನ್ನು ಸಮಾಧಾನ ಪಡಿಸಿ
“ಎಲೈ ರಾಯನೇ, ಇಂದ್ರನು ಹೀಗೆ ಆಜ್ಞಾಪಿಸುವನು.
ಮುಂದೆ ಸುರಾಸುರರಿಗೆ ಯುದ್ಧವಾಗುವುದೆಂದು ತ್ರಿಕಾ
ಲಜ್ಞಾನಿಗಳಾದ ಮಹರ್ಷಿಗಳು ಅಪ್ಪಣೆಕೊಟ್ಟಿರುವರು.
ನೀನು ನಮಗೆ ಯುದ್ಧ ಕಾಲದಲ್ಲಿ ಸಹಾಯನಾಗತ
ಕ್ಕವನು. ಆದುದರಿಂದ ನೀನು ಶಸ್ತ್ರಸಂನ್ಯಾಸಮಾ
ಡುವುದು ತಕ್ಕುದಲ್ಲ. ಈ ಊರ್ವಶಿಯ ಕೂಡ
ಜನ್ಮಾಂತ್ಯದವರೆಗೂ ನಿನ್ನಲ್ಲಿಯೇ ಇರಲಿ, ಸೂರ್ಯ
೫೯
ನು ತೇಜಸ್ಸಿನಿಂದ ಅಗ್ನಿಯನ್ನೂ ಅಗ್ನಿಯು ಸೂರ್ಯ
ನನ್ನೂ ಪ್ರಜ್ವಲಿಸುವಂತೆ ನೀನು ವಾಸವನ ಕಾರ್ಯ
ವನ್ನೂ ನಿನ್ನ ಕಾರ್ಯವನ್ನು ವಾಸವನ ಮಾಡು
ವುದು.” ಎಂದು ತನ್ನ ಜತೆಯಲ್ಲಿ ಬಂದ ರ೦ಭಾದ್ಯಪ್ಸ
ರೆಯರು ತ೦ದ ದಿವ್ಯೋದಕಗಳಿಂದ ಆಯುವಿಗೆ ಯೌ
ವ್ವರಾಜ್ಯಾಭಿಷೇಕ ಮಾಡಿದನು. ರಾಯನು ಕುಲಧು
ರ೦ಧರನಾಗೆ೦ದೂ ಊರ್ವಶಿಯು ಪಿತೃವನ್ನಾರಾಧಿಸು
ವನಾಗೆಂದೂ ಆಶೀರ್ವಾದ ಮಾಡಿದರು. ವೈತಾಳಿಕರು
"ದೇವರ್ಷಿಯಾದತ್ರಿಯು ಬ್ರಹ್ಮನಿಗೂ, ಅತ್ರಿಗೆ ಚಂದ್ರ
ನೂ, ಚಂದ್ರನಿಗೆ ಬುಧನೂ, ಆತನಿಗೆ ನಮ್ಮ ಸ್ವಾಮಿ
ಯಾದ ಪುರೂರವನೂ ಇರುವಂತೆ ನೀನೂ ಲೋಕ ಮ
ನೋಹರವಾದ ಗುಣಗಳಿಂದ ನಿನ್ನ ತಂದೆಗೆ ಅನುರೂ
ಪನಾಗು. ಅತಿಶಯವಾದ ನಿನ್ನ ವಂಶದಲ್ಲಿ ಸಮಸ್ತ
ವಾದ ಆಶೀರ್ವಾದಗಳೂ ಫಲಿಸಲಿ ಎಂದು ಹೊಗಳಲು,
ಮತ್ತೊಬ್ಬ ವೈತಾಳಿಕನು ದೊಡ್ಡವರಿಗೆಲ್ಲಾ ದೊಡ್ಡವ
ನಾದ ಈ ನಿನ್ನ ತಂದೆಯಲ್ಲಿದ್ದ ರಾಜ್ಯಲಕ್ಷ್ಮಿಯು
ಹಿಮವಂತನಲ್ಲಿದ್ದುಕೊಂಡು ಸಮುದ್ರವನ್ನು ಸೇರಿದ
ಗ೦ಗೆಯ೦ತೆ ಚಲಿಸದ ಧೈರ್ಯವುಳ್ಳ ನಿನ್ನಲ್ಲಿಯೂ
ಸ್ಥಿತಿಯನ್ನು ಹೊಂದಿ ಮೆರೆಯುವಳು” ಎಂದು ಹೊಗ
ಳಲು, ನಾರದನು “ನಿನ್ನ ಮಗ ಆಯುವಿನ ಯೌವರಾ
ಜ್ಯಾಭಿಷೇಕವು ಇಂದ್ರನು ಮಹಾಸೇನನನ್ನು ಸೈನ್ಯಾಧಿ
ಪತ್ಯದಲ್ಲಿ ಅಭಿಷೇಕ ಮಾಡಿದ್ದನ್ನು ಜ್ಞಾಪಕಕ್ಕೆ ತರು
ವುದು” ಎನ್ನುತ್ತಿರಲು, ಕವಿಯು “ಪರಸ್ಪರ ವಿರೋಧಿನಿ
ಯರಾಗಿ ಒಂದೇ ಕಡೆ ಕಾಣುವಿಕೆಯೆಂಬುವುದು ದುರ್ಲ
ಭವಾಗಿರುವ ಶ್ರೀ ಸರಸ್ವತಿಯರು ಒಟ್ಟಿಗಿರಲಿ, ಒಳ್ಳೆಯ
೬೦
ವರಿಗೆ ಸರ್ವದಾ ಮಹತ್ವಗಳು೦ಟಾಗಲಿ” ಎ೦ದು ಭರತ
ವಾಕ್ಯವನ್ನು ನುಡಿಸಿ ತ್ರೋಟಕವನ್ನು ಸಾಂಗವಾಗಿ
ಸಮರ್ಥಿಸುವನು.
ಸ೦ಪೂರ್ಣ
------------------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ