ಬುಧವಾರ, ಫೆಬ್ರವರಿ 7, 2024

ಕೆಲವು ಕಥೆಗಳು by ಆನಂದ

 https://archive.org/stream/dli.osmania.3057



ಭವತಿ ಭಿಕ್ಸಾಂ ದೇಹಿ” 



"ಭವತಿ ಭಿಕ್ಷಾಂ ದೇಹಿ! ”........ 


“ಭಿಕ್ಷಾನ್ನ, ತಾಯಿ!” 


“ಮುಂದೆ ಹೋಗಿಬಿಟ್ಟು ಬಾಪ್ಪ!” 


(ಬಹು ಸಂಕೋಚದಿಂದಲೂ ದೀನಸ್ವರದಿಂದಲೂ) 


“ಇವತ್ತು ಎಲ್ಲಿಯೂ ಸಿಕ್ಕಲಿಲ್ಲ, ತಾಯಿ!” 


ಭಕ್ಷಾನ್ನಕ್ಕೆ ಬಂದಿದ್ದ ಹುಡುಗನ ಹೆಸರು ಮಾಧು. (ಸ್ಟೂಲಿನಲ್ಲಿ 

“ಮಾಧವರಾವ್ ಎಂದು ಇರಬಹುದು.) "ಹೋಗಿಬಿಟ್ಟು ಬಾ? ಎಂದು 

ಹೇಳಿದವರು ನಾಗೇಶರಾಯರ ಹೆಂಡತಿ ಶಾರದಾಬಾಯಿ ; ಇದುವರೆಗೆ ಅವರು 

ಮಾಧುವನ್ನು ಎಂದೂ ಭಿಕ್ಕಾನ್ನ ಹಾಕದೆ ಕಳುಹಿಸಿರಲಿಲ್ಲ; ಆದರೆ ಇಂದು 

ಊಟವಾಗಿ ಎಲ್ಲ ಮುಗಿದು ಹೋಗಿತ್ತು; ಅವನೂ ಇದುವರೆಗೆ ಎಂದೂ 

ಎರಡನೆಯ ಸಾರಿ ಕೇಳಿದ್ದಿಲ್ಲ; ಆದ್ದರಿಂದ ಅವನು ಇವತ್ತು ಸಂಕೋಚದಿಂದ 

"ಎಲ್ಲಿಯೂ ಸಿಕ್ಕಲಿಲ್ಲ” ವೆಂದು ಹೇಳಿದ ಕೂಡಲೆ ಅವರ ಗನುನವು ಆ ಕಡೆ 

ಹೋಯಿತು. ಅನಂತರ, “ಮಧ್ಯಾಹ್ನದ ಅನ್ನ ಸ್ವಲ್ಪ ಮಿಕ್ಕಿದೆಯೇನೋ 

ಹಾಕಲೇ ಅಪ್ಪ? ” ಎಂದು ಕೇಳಿದರು. 


“ಹಾಕಿ ಅಮ್ಮ 


“ಸ್ವಲ್ಪ ಮೆತ್ತಗಿದೆಯೆಂತ ಕಾಣುತ್ತದೆಯಲ್ಲ, ಇರಲೇ? ಹಳಸಿದ ಅನ್ನ 

ಹಾಕಿದರೆಂದುಕೊಳ್ಳಬೇಡ ; ತಿನ್ನುವುದಕ್ಕೆ ಬರುವ ಹಾಗಿದ್ದರೆ ತಿನ್ನು; ಆಗ 

ದಿದ್ದರೆ ಬಸಾಟುಬಿಡು.” "ನ 


“ಹಾಕಿ ಅಮ್ಮ ; ಭಿಕಾನ್ನದ ಹುಡುಗರು ಅದೆಲ್ಲಾ , ನೋಡುವುದ 

ಕ್ಳಾಗುತ್ತದೆಯೇ? ನನಗೆ ಎಲ್ಲಾ ಅಭ್ಯಾಸವಾಗಿದೆ ; ಅದು ಉಪವಾಸಕ್ಕಿಂತ 

ಕಡೆಯೆ ತಾಯಿ! ” 



ಕೆಲವು ಕಥೆಗಳು 



“ಉಪವಾಸ ಏಕಪ್ಪ ! ? 


ಹೀಗೆಂದು ಹೇಳಿ ಶಾರದಮ್ಮನವರು ಮಿಶ್ಕಿದ್ದ ಮಧ್ಯಾಹ್ನದ ಅನ್ನ 

ನನ್ನೆಲ್ಲಾ ಹಾಕಿ ಕಳುಹಿಸಿದರು. ಈ ಮಾತುಗಳನ್ನು ಕೇಳ RASS 

ee ಮಗಳು _ಆಕೇಳು ವರ್ಷದ ಹುಡುಗಿ--ಸೀತೆ, ಹುಡುಗ ಹೊರಟು 

ಹೋದ ಮೇಲೆ, 


"ಹಳಸಿದ ಅನ್ನ ಹ್ಯಾಗೆ ತಿಂತಾನೇ ಅಮ್ಮಾ! ಅಸಯ್ಯ ಆಗುವದಿಲ್ಲ 

ವೇನೇ? * ಎಂದು ಕೇಳಿದಳು. 


“ಹಳಸಿರಲಿಲ್ಲ ಕಣೆ! ಎಲ್ಲೋ, ಸ್ವಲ್ಪ ಮೆತ್ತಗಿತ್ತು ಅಷ್ಟೆ? ಎಂದು 

ಶಾರದಮ್ಮನವರು ಉತ್ತರಕೊಟ್ಟರು. ಆದಕೆಆ ಹುಡುಗನ ಮಾತುಗಳನ್ನೂ 

ಅವನ ದೈನ್ಯವನ್ನೂ ನೋಡಿ ಅವನ ಪೂರ್ವೋತ್ತರಗಳನ್ನೆಲ್ಲಾ ತಿಳಿದುಕೊಳ್ಳ

ಬೇಕೆಂದು ಕುತೂಹಲ ಹುಟ್ಟಿತು; ನಾಗೇಶರಾಯರೂ ಆಗಬಹುದೆಂದೂ, 

ತುಂಬ ಕಷ್ಟಪಡುತ್ತಿದರೆ ಏನಾದರೂ ಸಹಾಯ ಮಾಡಬಹುದೆಂದೂ ಒಪ್ಪಿ 

ಕೊಂಡರು. 


ಗಂಡಹೆಂಡರಿಬ್ಬರಿಗೂ ಹೀಗೆ ಒಂದೇ ವಿಧವಾದ ಮನಸ್ಸೂ ಕನಿಕರವೂ 

ಧಾರಾಳಬುದ್ದಿಯೂ ಇರುವುದು ಅಪರೂಪ; ಸಾಮಾನ್ಯವಾಗಿ ವಿದ್ಯಾವಂತ 

ನಿಗೆ ಮೂಢೆಯೂ, ಸಾತ್ವಿಕನಿಗೆ ರಾಕ್ಷಸಿಯೂ, ಧಾರಾಳಿಗೆ ಜಿಪುಣೆಯೂ  

ಹೆಂಡತಿಯಾಗುವುದೇ ಹೆಚ್ಚು; ಹಾಗಲ್ಲದೆ ಅನುರೂಪಳಾದ ಹೆಂಡತಿ ಇದ್ದದ್ದ 

ರಿಂದ ನಾಗೇಶರುಯರ ಸಂಸಾರವು ಅಮೃತಮಯವಾಗಿತ್ತು; ಅವರು ತಮ್ಮ 

ಸಂಸಾರವನ್ನು ಕ್ಷೀರಸಾಗರವೆಂದೂ ತಮ್ಮ ಹೆಂಡತಿಯು ಅದರಲ್ಲಿ ಹುಟ್ಟಿದ 

ಲಕ್ಷ್ಮಿಯೆಂದೂ ಇನ್ನೂ ಏನೋನೋ ಹೇಳಿಕೊಳ್ಳುವರು. 


ಮರುದಿನ ಮಾಧು ಬಂದಾಗ ಅವನ ಕಥೆಯೆಲ್ಲಾ ತಿಳಿಯಿತು; ಬಹು 

ಕಷ್ಟವಾದ ಕಥೆ, ತಂದೆತಾಯಿಗಳು ತೀರ ಬಡವರು; ಎಲ್ಲೋ ದೂರದ 

ಹಳ್ಳಿಯಲ್ಲಿ ಇರುವರು; ಮಾಧುವು ಮಾತ್ರ ಪಟ್ಟಣಕ್ಕೆ ಬಂದು ಭಿಕ್ಷಾನ್ನ 

ದಿಂದ ಹೊಟ್ಟೆ ಹೊರೆದುಕೊಳ್ಳುತ್ತ ಎಂಟ್ರೆನ್ಸ್ ತರಗತಿಯಲ್ಲಿ ಓದುತ್ತಿದ್ದನು. 

ಒಪ್ಪತ್ತು ಉಪವಾಸ, ತಂಗಳು, ಹಳಸಲು, ಎಲ್ಲಾ ಅವನಿಗೆ ಚಿರಪರಿಚಿತ 

ವಾಗಿದ್ದುವು. ಈ ಪ್ರಪಂಚದಲ್ಲಿ ಎಷ್ಟೋ ಸಹಸ್ರ ಜನ ತನಗಿಂತಲೂ ಹೆಚ್ಚು 


` ಭವತಿ ಭಿಕ್ಸಾಂ ದೇಹಿ ೩ 


ಕಷ್ಟಪಡುತ್ತಿರುವರೆಂದೂ, ನಿಲ್ಲುವುದಕ್ಕೆ ನೆಲೆಯಿಲ್ಲದ ನಿಗರ್ತಿಕರು ಎಷ್ಟೋ 

ಮಂದಿ ಇರುತ್ತಿರುವರೆಂದೂ, ತನ್ನನ್ನು ದೇವರು ಅವರಿಗಿಂತಲೂ ನೂರು 

ಪಾಲು ಉತ್ತಮ ಸ್ಥಿತಿಯಲ್ಲಿಟ್ಟಿರುವನೆಂದೂ ಹೇಳಿಕೊಳ್ಳುವನು. "ನಾನು 

ಜೌಳಿಗೆ ಹಾಕಿಕೊಡು ಹೋದರೆ 'ಭಿಕ್ಷಾನ್ನದ ಹುಡುಗ ' ಎಂದು ಯಾರಾ 

ದರೂ ನಾಲ್ಕು ಜನ ಅನ್ನ ಹಾಕುತ್ತಾರೆ; ಬೀದಿಯಲ್ಲಿ ನರಳುತ್ತ ಬಿದ್ದಿರುವ 

ಕುಂಟರೂ ಕುರುಡರೊ ಕುಷ್ಟ ರೋಗಿಗಳೂ ಇದ್ದಾರಲ್ಲ ಇವರ ಗತಿಯೇನು?” 

ಎಂದು ಪದೇಪದೇ ಯೋಚನೆಯು ಬರುವುದು. ಆಗ ಹುಡುಗರು ಹೆದರಿಕೆಗೆ 

ಕಣ್ಣು ಮುಚ್ಚಿಕೊಂಡು ಬಿಡುವಂತೆ ಮುಂದೆ ಏನೂ ತೋರದೆ ಸೊರಗಿ ಸುಮ್ಮ 

ನಾಗುವನು. 


ಅವನ ಕಥೆಯನ್ನು ಕೇಳಿ ನಾಗೇಶರಾಯರಿಗೂ ಶಾರದಮ್ಮನನರಿಗೂ 

ಬಹಳ ವ್ಯಸನವಾಯಿತು; ಅಲ್ಲಿಂದ ಮುಂದೆ ಆ ಮನೆಯಲ್ಲಿ ಅವನು 'ಹೋಗಿ 

ಬಿಟ್ಟು ಬರ' ಬೇಕಾಗಲಿಲ್ಲ. ನಿತ್ಯವೂ ಅನ್ನದ ಜೊತೆಗೆ ಸ್ವಲ್ಪ ತುಪ್ಪವೂ 

ಹಬ್ಬ ಹರಿದಿನಗಳಲ್ಲಿ ತಿಂಡಿಗಳೂ ಸಿಕ್ಕುತ್ತ ಬಂದವು. 


"ಅಮ್ಮ, ಆ ಹುಡುಗ ಯಾರೇ? ” ಎಂದು ಸೀತೆಯು ಒಂದು ದಿನ 

ಕೇಳಿದಳು. 


ಶಾರದಮ್ಮ--""ಭಿಕ್ಷಾನ್ನದ ಹುಡುಗ ಕಣೇ! " 


ಸೀತೆ- “ಹೌದಮ್ಮ, ಭಿಕ್ಷಾನ್ನದ ಹುಡುಗ. ಅವನು ಯಾರೂ 

ಅಂತ ಕೇಳಿದೆ. ಅವನಿಗೆ ತಿಂಡೀ ಎಲ್ಲಾ ಕೊಡುತೀಯಲ್ಲಾ ಅದಕ್ಕೆ.” 


ಶಾರದಮ್ಮ--""ಯಾರಾದರೇನು? ನೀಯೇನು ಮದುವೆ ಮಾಡಿ 

ಕೊಳ್ಳಬೇಕೇನು? ” 


ನಮ್ಮ ಹೆಂಗಸರಿಗೆ ಅಡಿಗೆ, ಒಡವೆ ಮದುವೆ--ಇದರಲ್ಲಿ ಎಲ್ಲವೂ 

ಮುಗಿದು ಹೋಗುವುದು. ಈಗ ಸೀತೆಯ ಮಾತೂ ಇಲ್ಲಿಯೇ ನಿಂತು 

ಹೋಯಿತು. ಅಂತು ದಿನದಿನಕ್ಕೆ ಎಲ್ಲರಿಗೂ ಮಾಧುವಿನ ಮೇಲೆ ವಿಶ್ವಾಸವು 

ಹೆಚ್ಚಿತು. ಸೀತೆಯು ತಾನೇ ಒಂದೊಂದು ದಿನ ಅನ್ನವನ್ನು ಹಾಕುವಳು;  

ತಿಂಡಿ ಮಾಡಿದ ದಿನವಂತೂ ಅದನ್ನು ಮತ್ತಾರೂ ಹಾಕಲೇ ಕೂಡದು; ದಿನ 

ಕ್ಕೊಂದು ಸಾರಿಯಾದರೂ ಮನೆಯಲ್ಲಿ ಅವನ ಪ್ರಸ್ತಾಸ ಬರದೇ ಇರುತ್ತಿರ 


ಕೆಲಪು ಕಥೆಗಳು 


ಲಿಲ್ಲ. ಈ ಸಂದರ್ಭದಲ್ಲಿ ಮಾಧು ಇಷ್ಟಪಟ್ಟದ್ದರೆ ನಾಗೇಶರಾಯರಿಂದ 

ಬೇಕಾದ ಸಹಾಯವನ್ನೆಲ್ಲಾ ಪಡೆದು ಸುಖವಾಗಿರಬಹುದಾಗಿತ್ತು. ಆದರೆ 

ಅವನ ಪ್ರಕೃತಿಯು ಅಷ್ಟು ಸಡಿಲವಾಗಿರಲಿಲ್ಲ. 


ಒಂದು ದಿನ ರಾತ್ರಿ ನಾಗೇಶರಾಯರು ಊಟಕ್ಕೆ ಕುಳಿತಿರಲು ಅವರಿಗೆ 

ಅನ್ನ ಬಡಿಸಿ ತುಪ್ಪ ಹಾಕುವಾಗ ಶಾರದನ್ಮುನನರಿಗೆ ಮಾಧುನಿನ ಜ್ಞಾಪಕ 

ಬಂತು; ಆಗ ಅವರು 


“ ಪಾಪ, ಮಾಧೂಗೆ ಬಹಳ ಕಷ್ಟ !" ಎಂದರು. 


" ಹೌದು; ವಿನು ಮಾಡುವುದು? ನಾನೂ ನನ್ನ ಕೈಲಾದ ಸಹಾಯ 

ನನ್ನೆಲ್ಲಾ ಮಾಡುತ್ತಿದೇನೆ. ಯಾನದೋ ಎರಡು ಮೂರು ಪುಸ್ತಕಗಳು 

ಬೇಕಾಗಿದ್ದುವೆಂದು ತಿಳಿಯಿತು; ತೆಗಿಸಿಕೊಟ್ಟೆ; ಒಂದೆರಡು ಬಟ್ಟೆ ಕೊಡಿ 

ಸಿದೆ; ಬಹಳ ಕಷ್ಟವಾಗಿದ್ದರೆ ನಮ್ಮ ಮನೆಯಲ್ಲಿಯೇ ಬಂದಿರುವ ಹಾಗೆ 

ಹೇಳಿದೆ........ "


"ನನಗೆ ಈಗ ಅಷ್ಟೇನೂ ಕಷ್ಟವಿಲ್ಲ--ಎಂದ."

"ಅವನ ತಂದೆತಾಯಿಗಳು ತೀರ ಬಡವರಂತೆ.” 


ಹೌದು, ಮೊನ್ನೆ, ಅವರಿಗೆ ಕಳುಹಿಸುವ ಹಾಗೆ ಹೇಳಿ ಹತ್ತು 

ರೂಪಾಯಿ ಕೊಟ್ಟೆ. 


“ಏನೋ ನನ್ಮು ಕೈಲಾದಷ್ಟು ಮಾಡುವುದು. ದೇವರೇ ಅವನನ್ನು 

ಮುಂದಕ್ಕೆ ತರಬೇಕು.'' 


(೨) 

ಪರೀಕ್ಷೆಯು ಹತ್ತಿರ ಬಂದುಬಿಟ್ಟಿತಲ್ಲಾ ಎಂದು ಕಳವಳಪಡುನ ಹುಡು 

ಗರೇ ಹೆಚ್ಚು ಮಂದಿ; ಆದರೆ ಮಾಧುವು ಆ ಗುಂಪಿಗೆ ಸೇರಿದವನಾಗಿರಲಿಲ್ಲ. 

"ಪರೀಕ್ಷೆಯು ಇನ್ನೂಎರಡು ತಿಂಗಳಿದೆಯಲ್ಲಾ--ಎಂದಿಗೆ ಕಳೆಯುವುದೋ !” 

ಎಂದು ಯೋಚಿಸುತ್ತಿರುವನು; ಪರೀಕ್ಷೆ ಮುಗಿದ ಮೇಲೆ ಹೇಗಾದರೂ ತನ್ನ 

ಕಷ್ಟ ಸ್ವಲ್ಪ ತಪ್ಪೀತು ಎಂದು ಅವನ ಯೋಚನೆ, 


ಭವತಿ ಭಿಕ್ಷಾಂ ದೇಹಿ ೫ 



ಹಾಗೂ ಹೀಗೂ ಒಂದು ತಿಂಗಳು ಕಳೆಯಿತು; ಆಗ ಅವನಿಗೆ ಮಲೇ 

ರಿಯಾ ಜ್ವರ ಬಂದು ಹಾಸಿಗೆ ಹಿಡಿದು ಮಲಗಿಬಿಟ್ಟನು. ದಿನ ಬಿಟ್ಟು ದಿನ 

ಜ್ವರ ಬರುವುದಕ್ಕೆ ಆರಂಭವಾಗಿ ದೇಹದಲ್ಲಿದ್ದ ಬಲವನ್ನೆಲ್ಲಾ ಹಿಂಡಿ ತೆಗೆದು 

ಬಿಟ್ಟಿತು. ಏಳುವುದಕ್ಕೆ ತ್ರಾಣವಿಲ್ಲ. ಆ ಕಾಲದಲ್ಲಿ ಅವನ ಸ್ನೇಹಿತ ಕೃಷ್ಣ 

ಮೂರ್ತಿ ಎಂಬ ಹುಡುಗನು ನಿತ್ಯವೂ ತನ್ನ ಮನೆಯಿಂದ ಗಂಜಿ, ಹಾಲು, 

ಎಲ್ಲಾ ತಂದುಕೊಡುತ್ತಿದ್ದ. ಯಾರೋ ಪಂಡಿತರಿಗೆ ದಮ್ಮಯ್ಯಗುಡ್ಡೆ ಹಾಕಿ 

ಔಷಧಿಗೆ ಏರ್ಪಾಡು ಮಾಡಿದ... ಆದರೂ ಮಾಧುನಿಗೆ ಒಂದು ಕಡೆ ಜ್ವರದ 

ತಾಪ ಒಂದು ಕಡೆ ಪರೀಕ್ಷೆಯ ಯೋಚನೆ; ಇವೆರಡೂ ಸೇರಿ ಅವನ ಮನಸ್ಸಿ 

ನಲ್ಲಿ ಶಾಂತಿಯಿಲ್ಲದ ಹಾಗೆ ಮಾಡಿದುವು. ಆದರೂ ಅವನು ತನ್ನಕಾಯಿಲೆಯ 

ಸಮಾಚಾರವನ್ನು ಯಾರಿಗೂ ತಿಳಿಸಲಿಲ್ಲ; ತಿಳಿಸುವುದಕ್ಕೆ ಆಗಲೂ ಇಲ್ಲ 

ಯಾರೂ ಇರಲೂ ಇಲ್ಲ. ಇದ್ದ ಕೃಷ್ಣಮೂರ್ತಿಯೊಬ್ಬನು ನೆರವಾಗಿ ಬಂದ ; 

ತಂದೆತಾಯಿಗಳು ಗಾಬರಿಪಟ್ಟಾರೆಂದು ಅವರಿಗೆ ಬರೆಯಲಿಲ್ಲ. ಆದರೆ ತಂದೆ 

ತಾಯಿಗಳಿಗಿಂತ ಹೆಚ್ಚಾಗಿ ನಾಗೇಶರಾಯರಿಗೂ ಶಾರದನ್ಮುನವರಿಗೂ ಕಳ 

ವಳಕ್ಕೆ ಆರಂಭವಾಯಿತು. "ಪಾಪ, ಮಾಧು ಸ್ವಸ್ಥ ವಾಗಿದಾನೆಯೋ ಇಲ್ಲ 

ವೋಂದ್ರೆ! ಆಗಲೇ ಎಂಟು ಹತ್ತು ದಿನವಾಯಿತು ಭಿಕ್ತಾನ್ನಕ್ಕೆ ಬಂದು; 

ಪರೀಕ್ಷೆ ಬೇರೆ ಹತ್ತಿರವಾಯಿತು'' ಎಂದು ಶಾರದನ್ಮುನನರು ಗಂಡನ ಕೈಲಿ 

ಪ್ರಸ್ತಾಸವನ್ನೆ ತ್ತಿದರು. 


ನಾಗೇಶರಾಯರು ಮಾಧುವನ್ನು ನೋಡಿಕೊಂಡು ಬರುವುದಕ್ಕೆ ಅವನಿದ್ದ 

ಕೊಠಡಿಗೆ ಹೋದರು. ಕೊಠಡಿಯ ಬಾಗಿಲು ಓರೆಯಾಗಿತ್ತು; ಒಳಗೆ 

ಮಾಧುವು ಹಾಸಿಗೆಯ ಮೇಲೆ ಮಲಗಿದ್ದ. ನಾಗೇಶರಾಯರು ಹೊರಗೇ 

ನಿಂತುಕೊಂಡು “ಮಾಧೂ!' ಎಂದು ಕೂಗಿದರು. ಮಾಧುವು ಮಲಗಿ 

ಕೊಂಡೇ “ಯಾರು!” ಎಂದು ಕೇಳಿದನು. 


ರಾಯರು "ನಾನು" ಎಂದರು. 


ಈಗ ಧ್ವನಿಯಿಂದ ನಾಗೇಶರಾಯರೆಂದು ತಿಳಿದುಕೊಂಡು, ಕಷ್ಟದಿಂದ 

ಎದ್ದು ಬಾಗಿಲು ತೆಗೆದನು. ಅವರು ಒಳಗೆ ಬಂದು 


"ಏನಯ್ಯಾ, ಮಲಗಿಬಿಟ್ಟಿದ್ದೀಯೆ! ಏನು ಕಾಯಿಲೆ? ಹ್ಯಾಗಿದೆ ಈಗ? 

ನನಗೆ ಹೇಳಿಕಳುಹಿಸಬಾರದಿತ್ತೇ?” ಎಂದರು, 


ಕೆಲವು ಕಥೆಗಳು 


“ಚಳಿಜ್ವರ ಬರುತ್ತ ಇತ್ತು; ಈಗ ಸ್ವಲ್ಪ ಇಳಿದಿದೆ. ಬಹಳ ನಿಶ್ಯಕ್ತಿ.”' 


“ನನಗೇಕೆ ಹೇಳಿಕಳುಹಿಸಲಿಲ್ಲ ?” 


“ಅಯ್ಯೊ, ಸುಮ್ಮನೆ ತೊಂದರೆ!” 


“ಮತ್ತೆ, ಔಷಧಿ ಪಥ್ಯ?” 


“ನನ್ನ ಸ್ನೇಹಿತ ಕೃಷ್ಣಮೂರ್ತಿ ಎಂತ ಇದಾನೆ; ಅವನು ಸ್ವಲ್ಪ ಗಂಜಿ 

ಹಾಲು ತಂದುಕೊಡುತ್ತಾ ಇದಾನೆ. 


"ಆಗಲಿ; ಗಾಳಿಗೆ ಮೈ ಬಿಟ್ಟುಕೊಂಡಿರಬೇಡ; ಹೊದ್ದು ಕೊಂಡು 

ಮಲಗಿಕೊ. ಇಲ್ಲದಿದ್ದರೆ ನಮ್ಮ ಮನೆಗೇ ಬಂದುಬಿಡು, ಗಾಡಿ ತರುತ್ತೇನೆ. " 


"ಇಲ್ಲ ಇಲ್ಲೇ ಇರುತ್ತೇನೆ; ಇವತ್ತು ಸ್ಪಲ್ಪ ವಾಸಿ "


ನಾಗೇಶರಾಯರು ಅಲ್ಲಿಂದ ಮನೆಗೆ ಬಂದವರು ಡಾಕ್ಟರ್ ವೆಂಕಟ 

ರಾಯರಿಗೆ ಒಂದು ಚೀಟಿ ಬರೆದು ಕಳುಹಿಸಿದರು. ಅದನ್ನು ನೋಡಿ ಡಾಕ್ಟ ರು 

ಮಾಧುವಿನ ಕೊಠಡಿಗೆ ಹೋಗಿ ಅವನ ದೇಹಸ್ಥಿತಿಯನ್ನು ಪರೀಕ್ಷಿಸಿ ಔಷಧಿ 

ಕಳುಹಿಸಿಕೊಟ್ಟರು... ನಾಗೇಶರಾಯರ ಮನೆಯಿಂದ ಗಂಜಿ, ಬಿಸಿ ನೀರು, 

ಕಾಫಿ, ಇವೂ ಬಂದವು. ನಿತ್ಯವೂ ರಾಯರೂ ಡಾಕ್ಟರೂ ಬಂದು ಯೋಗ 

ಕ್ಷೇಮವನ್ನು ವಿಚಾರಿಸುತ್ತಿದ್ದರ ರು. “ಅಯ್ಯೊ, ಈ ಭಿಕಾರಿಗೆ ಇವರು ಇಷ್ಟು 

ಒದ್ದು ಕೊಳ್ಳುತ್ತಾರಲ್ಲ! " ಎಂದು ಮಾಧುವಿಗೆ ಬಹಳ ಸಂಕೋಚ ; ಅಂತೂ  

ಸುಮಾರು ಒಂದು ವಾರದಲ್ಲಿ ರೋಗವು ಗುಣಮುಖವಾಯಿತು. 


ಒಂದು ತಿಂಗಳು ಕಳೆಯಿತು ; ಪರೀಕ್ಷೆ ಬಂತು; ಅದೂ ಕಳೆಯಿತು. 

ಪ್ಯಾಸೂ ಆಯಿತು. ಅದನ್ನು ಕೇಳಿ ಅವನಿಗೆ ತಲೆಯ ಮೇಲಿನಿಂದ ಒಂದು 

ದೊಡ್ಡ ಬೆಟ್ಟವನು ಇಳಿಸಿದಂತಾಯಿತು. ಕೂಡಲೆ ಕೊಠಡಿಗೆ ಓಡಿಬಂದು 

ತಾನು ಪೂಜಿಸುತ್ತಿದ್ದ ಸರಸ್ವತೀ ಪಠದ ಮುಂದೆ ನಮಸ್ಕಾರ ಮಾಡಿ “ತಾಯೀ, 

ನಿನ್ನ ಪ್ರಸಾದ!” ಎಂದನು. 


ಮುಂದಿನ ತಿಂಗಳಿನ ಗೆಜೆಟ್ಟಿನಲ್ಲಿ, ಅವನು ಸಂಸ್ಥಾನದಲ್ಲಿ ಎರಡನೆ 

ಯವನಾಗಿ ಪ್ಯಾಸು ಮಾಡಿದ್ದಂತೆ ಪ್ರಕಟವಾಗಿತ್ತು. ಇದನ್ನು ನೋಡಿ 

ಅವನಿಗೆ ಆದ ಸಂತೋಷವು ವಿದ್ಯಾರ್ಥಿಗಳಾಗಿದ್ದವರಿಗೇ ಗೊತ್ತು . ತಾನು 


ಭವತಿ ಭಿಕ್ಷಾಂ ದೇಹಿ ೭ 


ಪಟ್ಟ ಶ್ರಮಕ್ಕೆ ತಕ್ಕ ಫಲ ದೊರೆಯಿತೆಂದು ಅವನಿಗೆ ಅಷ್ಟು ಸಂತೋಷವಿಲ್ಲ ; 

ಮುಂದೆ ತನಗೆ ತಿಂಗಳಿಗೆ ಇಪ್ಪತ್ತು ರೂಪಾಯಿ ವಿದ್ಯಾರ್ಥಿವೇತನ ಬರುವುದು ; 

ಅದರಲ್ಲಿ ಹತ್ತು ರೂಪಾಯನ್ಸಾ ದರೂ ತಮ್ಮ ತಾಯಿತಂದೆಗಳಿಗೆ ಕಳುಹಿಸ 

ಬಹುದು-ಎಂದು. ವೇತನವು ಬಂತು. ಜೊತೆಗೆ ಎಲ್ಲಿಯೋ ಒಂದು ಕಡೆ 

ಪಾಠ ಹೇಳುತ್ತ ತಿಂಗಳಿಗೆ ಐದಾರು ರೂಪಾಯಿ ಸಂಪಾದಿಸಿ ಅದನ್ನು ಪುಸ್ತಕ 

ಮುಂತಾದ ಹೆಚ್ಚು ಖರ್ಚುಗಳಿಗೆ ಉಪಯೋಗಿಸುವನು. ಭಿಕ್ಷಾನ್ನವು 

ತಪ್ಪಿತು. 


ಆದರೆ ನಾಗೇಶರಾಯರ ಮನೆಗೆ ಮಾತ್ರ ಹೋಗಿಬರುತ್ತಿದ್ದನು. ಹಬ್ಬ 

ಹರಿದಿನಗಳಲ್ಲಿ ಊಟಕ್ಕೆ ಅಥವಾ ತಿಂಡಿಗೆ ಹೋಗುವುದು ಪೂರ್ವದಂತೆ 

ನಡೆದುಕೊಂಡು ಬರುತ್ತಿತ್ತು. ಹಿಂದೆ ಇದ್ದ ಕಷ್ಟವು ಈಗ ಇಲ್ಲ. ಆದ್ದರಿಂದ 

ಮತ್ತೆ ಮೂರು ವರ್ಷಗಳು ಅನಾಯಾಸವಾಗಿ ಕಳೆದುಹೋದವು. ಬಿ.ಎ. 

ಪರೀಕ್ಷೆಯೂ ಆಯಿತು. ಆದರಲ್ಲಿ ಮಾಧು ಮೊದಲನೆಯ ತರಗತಿಯಲ್ಲಿ 

ತೇರ್ಗಡೆಹೊಂದಿ ಒಂದು ಭಂಗಾರದ ಪದಕವನ್ನು ಸಂಪಾದಿಸಿದನು. ಅದನ್ನು 

ಮೊದಲು ನಾಗೇಶರಾಯರಿಗೂ ಶಾರದಮ್ಮನವರಿಗೂ ತೋರಿಸಬೇಕೆಂಬ 

ಆತುರ; ಅದನ್ನು ಶಾರದಮ್ಮನನರು ಕೈಲಿ ಹಿಡಿದುಕೊಂಡು ತೂಗುತ್ತಾ 

"ಚೆನ್ನಾಗಿದೆ! ಏನು ಎರಡು ಸವರನ್ ಇರಬಹುದು?" ಎಂದು ಹೇಳಿ 

ಹಿಂತಿರುಗಿಕೊಟ್ಟು, “ಎಲ್ಲಿಯಾದರೂ ಚೆನ್ನಾಗಿರಪ್ಪ ; ನಮ್ಮ ಕಣ್ಣು ಮುಂದಿನ 

ಹುಡುಗ, ಎಷ್ಟೋ ಕಷ್ಟಪಟ್ಟದ್ದೀಯೆ " ಎಂದು ಹರಸಿದರು. ಮನಸ್ಸಿನಲ್ಲಿ 

"ಅವನ ತಾಯಿತಂದೆಗಳ ಪುಣ್ಯವೇ ಪುಣ್ಯ” ಎಂದುಕೊಂಡರು. ಮಾಧುವಿಗೆ 

ಅವರ ಅಂತಃಕರಣನನ್ನು ನೋಡಿ ಕಣ್ಣುತುಂಬ ನೀರು ತುಂಬಿತು. “ನಿಮ್ಮ 

ಆಶೀರ್ವಾದ ಅಮ್ಮ!” ಎಂದು ನಮಸ್ಕಾರ ಮಾಡಿದನು. 


ಸೀತೆಯು ತಾಯಿಯ ಬಳಿಯೇ ಅವರ ಸೆರಗನ್ನು ಹಿಡಿದುಕೊಂಡು 

ನಿಂತು ನೋಡುತ್ತಿದ್ದಳು. ತಾಯಿಯು ಪದಕವನ್ನು ಹಿಂತಿರುಗಿ ಕೊಟ್ಟ 

ಮೇಲೆ "ಎಲ್ಲಿ ಮಾಧು, ನೋಡೋಣ” ಎಂದು ತಾನು ಅದನ್ನು ತೆಗೆದು 

ಕೊಂಡು ಅಂಗೈಯಲ್ಲಿಟ್ಟುಕೊಂಡು ನೋಡಿದಳು. ಥಳಥಳನೆ ಹೊಳೆಯು 

ತ್ತಿತ್ತು. ಅದನ್ನು ನೋಡಿ ಅವಳ ಮುಖವು ಅರಳಿತು. ಮಾಧುವು 

ನೋಡಿ, "ಏನು ಸೀತಾ! ನಿನಗೆ ಬೇಕೇನು ಅದು? ನೀನೂ ಬಿ.ಏ. ಪ್ಯಾಸು 


ಕೆಲವು ಕಥೆಗಳು 


ಮಾಡು, ನಿನಗೂ ಸಿಗುತ್ತೆ ; ಇಲ್ಲದಿದ್ದ ರೆ ನಾಳೆ ನಿನ್ನೆ ಗಂಡ ಬರುತ್ತಾನಲ್ಲ 

ಅವನು ತಂದುಕೊಡುತ್ತಾನೆ ಎಂದನು 


(೩) 


ಮಾಧೂಗೆ ಈಗ ದೊಡ್ಡ ಕೆಲಸ; ದೊಡ್ಡ ಸಂಬಳ; ದೊಡ್ಡ ಮನೆ; 

ಮನೆಯಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಆಳುಗಳು, ತಾಯಿತಂಜಿಗಳ ಯೋಗ 

ಕ್ಲೇಮವನ್ನು ಸೋಜಿಕೊಳ್ಳುವುಡಕ್ಕಾಗಿಯೇ ಒಬ್ಬ ಅಡಿಗೆಯ ಸರಿಚಾರಕನೂ 

ಆಳೂ ಇದ್ದ ರು. ಅವರು ಹಳ್ಳಿಗೆ ಹೋಗಬೇಕೆಂದರೆ ಅನುಕೂಲವಾಗುವಂತೆ 

ಒಂದು ಗಾಡಿಯನ್ನೂ ಒಂದು ಜೊತೆ ಎತ್ತನ್ನೂ ಕೊಂಡುಕೊಂಡಿದ್ದ ನು. 

ಯಾವ ವಿಷಯದಲ್ಲಿಯೂ ಅವರಿಗೆ ವ್ಯಢೆಯಾಗಬಾರಜೆಂಬುದೇ ಅವನ ಆಸೆ. 

ಅದಕ್ಕಾಗಿ ಅವನು ಎಷ್ಟೆಷ್ಟೋ ತೊಂದರೆಪಟ್ಟು ಕೊಳ್ಳುತ್ತಿದ್ದನು. ಆದರೆ 

ಅವರು ಒಂದು ಸಾರಿ ಪ್ರೇಮಪುರಸ್ಸರವಾಗಿ "ಮಾಧೂ!" ಎಂದು ಕರೆದರೆ 

ಅವನು ಪಟ್ಟ ಶ್ರಮಕ್ಕೆಲ್ಲಾ ಫಲ ಬಂದಂತಾಗುತ್ತಿತ್ತು. 


ಒಂದು ದಿನ ತನಗೆ ಕೆಲಸವಾದ ಮೇಲೆ ಮಾಧುವು ನಾಗೇಶರಾಯರ 

ಮನೆಗೆ ಹೋದನು. ಆಗ ಮಧ್ಯಾಹ್ನ ; ನಾಗೇಶರಾಯರೂ ಶಾರದಾ 

ಭಾಯಿಯೂ ಮಾತನಾಡುತ್ತ ಕುಳಿತಿದ್ದರು. ಮಾಧು ಇಬ್ಬರಿಗೂ ನಮಸ್ಕಾರ 

ಮಾಡಿದನು. ಅವರು ಅವನನ್ನು ಹರಸಿ ಕೆಲಸವಾದದ್ದ ನ್ನು ಕೇಳಿ ಸಂತೋಷ 

ಪಟ್ಟರು. ಶಾರದಾಬಾಯಿಯು "ಏನಪ್ಪ, ಮಾಧು! `ಈಗ ನೀನು ದೊಡ್ಡವ 

ನಾದೆ; ದೊಡ್ಡ ಕೆಲಸಕ್ಕೆ ಬಂದೆ; ಕೈತುಂಬ ತುಂಬ ಸಂಬಳ ತರುತ್ತಿದ್ದೀಯೆ,  

ಇನ್ನು ಮೇಲೆ ನಿನ್ನನ್ನು ಮಾಧವರಾಯರೇ ಎಂದು ಕರೆಯಬೇಕು ಅಂತ 

ಕಾಣುತ್ತದೆ” ಎಂದರು. 


“ನಾನು ದೊಡ್ಡವನಾದರೂ ನಿಮಗೆ ಚಿಕ್ಕವನೇ ; ಮಾಧುವೇ; ನೀವು 

ಸಾಕಿ ಸಲಹಿದ ಹುಡುಗ "ರಾಯರು? ಹೇಗಾದಾನು? ? 


"ನಾವು ಸಾಕಿ ಸಲಹಿದ್ದು ಅಷ್ಟರಲ್ಲೇ ಇರಲಿ; ಆದರೆ ನೀನು ಮದುವೆ 

ಯಾಗಿ ನಿನಗೆ ಒಬ್ಬ ಹುಡುಗನಾಗುವವರೆಗೂ ನೀನು ಹುಡುಗನೇ; ನಿನ್ನ 

ಹೊಟ್ಟೆಯಲ್ಲಿ ಹುಟ್ಟಿದ ಮಗ ಬಂದು ಆಕ್ಷೇಪಣೆ ವೂಡಿದರೆ ಆಮೇಲೆ ಬೇಕಾದರೆ 

ಬಹುವಚನದಲ್ಲಿ ಕರೆಯೋಣವಂತೆ !" 



ಭವತಿ ಭಿಕ್ಷಾಂ ದೇಹಿ ೯ 



ಮಾಧೂಗೆ ಈ ಮಾತನ್ನು ಕೇಳಿ ಏನೋ ಸಂಕೋಚನಾಗಿ ಸ್ವಲ್ಪ ತಲೆ 

ಬಗ್ಗಿಸಿಕೊಂಡನು. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನೆ ಇದ್ದ ಮೇಲೆ, 

ಮಾಧು ತಟ್ಟನೆ “ಸೀತೆಯೆಲ್ಲಿ? ಕಾಣಿಸಲಿಲ್ಲ!” ಎಂದನು. ಶಾರದಾ 

ಬಾಯಿಯು ""ಎಲ್ಲೋ ಒಳಗಿರಬಹುದು! ?' ಎಂದು, ""ಸೀತಾ, ಸೀತಾ”; 

ಎಂದು ಕೂಗಿದರು. ಕೂಡಲೆ ಒಳಗೆ ""ಧಡ ಧಡ”! ಎಂದು ಸದ್ದಾಯಿತು? 

ಕೈಬಳೆಗಳ ಶಬ್ದ; ಕಾಲುರುಳಿಯ ಶಬ್ದ. ಸೀತೆಯು ಓಡಿಬರುತ್ತಿದ್ದಳು' 

ಬಂದು ಬಾಗಿಲಲ್ಲಿ ತಟ್ಟನೆ ನಿಂತುಬಿಟ್ಟಳು; ಆದರೆ ಬಾಗಿಲ ಹತ್ತಿರಕ್ಕೆ ಬಂದ 

ಕೂಡಲೆ, ಸರಿಗೆರುಮಾಲು ಹಾಕಿಕೊಂಡಿದ್ದ ದೊಡ್ಡಮನುಷ್ಯರೊಬ್ಬರು ಬೇರೆ 

ಇದ್ದರು. ಆದ್ದರಿಂದ ತಟ್ಟನೆ ಬಾಗಿಲಲ್ಲೇ ನಿಂತಳು. ಸೀತೆ ಅಲ್ಲೇ 

ನಿಂತದ್ದನ್ನು ನೋಡಿ, ಮಾಧು ಅವಳ ಕಡೆ ತಿರುಗಿ ನಗುತ್ತಾ "ಸೀತಾ! 

ಎಂದು ಕರೆದನು. 


ಸೀತೆ ಮಾತಾಡಲಿಲ್ಲ. 


ಶಾರದಾಬಾಯಿ “ಮಾತಾಡೇ ಸೀತಾ! ಎಂದರು. 


ಸೀತೆ ಇನ್ನೂ ಹಿಂದಕ್ಕೆ ಸರಿದಳು; ಮಾತನಾಡಲಿಲ್ಲ. 


ಮಾಧು ಪುನಃ “ಸೀತಾ!” ಎಂದು ಕೂಗಿದನು. ಉತ್ತರವಿಲ್ಲ. 


ಮಾಧು “ಯಾಕೆ ಸೀತೂ ಮಾತೇ. ಇಲ್ಲ? ನಾಚಿಕೆ ಬಂದು ಬಿಟ್ಟ 

ತೇನು ಆಗಲೇ? ಹೋಗಲಿ, ಅಲ್ಲಿಂದಲೇ ಮಾತನಾಡು? 


ಮಾತಿಲ್ಲ. 


“ಹೋಗಲಿ ಬಿಡಮ್ಮ! ನಿನಗೆ ಜಂಭ ಬಂದಿದೆ. ಬಡವರನ್ನು ಕಂಡರೆ 

ನಿನಗೆ ಉದಾಸೀನ! ಯಾರಾದರೂ ಐಶ್ವರ್ಯನಂತ ಗಂಡನನ್ನು ಗೊತ್ತು 

ಮಾಡಿಕೊಂಡು ಬಂದಿದ್ದಾರೊ ?" 


ಅದಕ್ಕೂ ಮಾತಿಲ್ಲ; ಮಾತಿಗೆ ಬದಲಾಗಿ ಸೀತೆ ಪುನಃ ಒಳಕ್ಕೆ 

ಹೊರಟುಹೋದಳು. ಮಾಧು ಇನ್ನೊಂದು ಗಳಿಗೆ ಮಾತ್ರ ಅಲ್ಲಿಯೇ 

ಮಾತಾಡುತ್ತಿದ್ದ. ಅವರ ಮನೆಯಲ್ಲಿಯೇ ಕಾಫಿ ತಿಂಡಿ ಎಲ್ಲಾ ಆಯಿತು. 


ಮಾಧು ಹೊರಟುಹೋದ ಮೇಲೆ ಗಂಡಹೆಂಡಂದಿರು ವಿನೇನೋ 

ಮಾತನಾಡುತ್ತಿದ್ದರು. ಮಾಧುನಿನ ಮಾತೇ ಹೆಚ್ಚು: ಒಬ್ಬರು 'ಎಂಥ 



೧೦ ಕೆಲವು ಕಥೆಗಳು 



ಬುದ್ಧಿವಂತ ! ' ಎಂದರು; ಮತ್ತೊಬ್ಬರು 'ಅಷ್ಟು ದೊಡ್ಡ ಸಂಬಳ ತಂದರೂ 

ಒಂದು ಚೂರೂ ಜಂಭವಿಲ್ಲ' ಎಂದರು. ಅಷ್ಟು ಹೊತ್ತಿಗೆ ಗಡಿಯಾರದಲ್ಲಿ 

"ಡಿಂಗ್ ಡಿಂಗ್” ಎಂದು ಗಂಟೆ ಹೊಡೆಯಿತು. ಕೂಡಲೆ ಶಾರದಮ್ಮ 

ನವರು ಗಂಡನನ್ನು ಕುರಿತು ಥಟ್ಟನೆ, “ಈಗ ನನ್ನ ಮನಸ್ಸಿನಲ್ಲೇನಿತ್ತು 

ಬಲ್ಲಿರಾ ?” ಎಂದು ಆಶ್ಚರ್ಯದಿಂದ ಕೇಳಿದರು. 


“ಹೆಂಗಸರಿಗಿನ್ನೇನು ಯೋಚನೆ? ಮಾಧೂ ಮದುವೆ ಯಾವಾಗ 

ಎಂತ ಯೋಚಿಸಿರಬಹುದು.'' 


"ಹೌದು ಅಂದ್ರೆ! ನಿಜವಾಗಿಯೂ ಅದೇ ಅದೇ; ನಿಮಗೆ ಹ್ಯಾಗೆ 

ಗೊತ್ತಾಯಿತು? ನಿಜವಾಗಿಯೂ ಮಾಧೂಗೆ ನಮ್ಮ ಸೀತೂನ ಕೊಟ್ಟು 

ಯಾಕೆ ಮದುವೆ ಮಾಡಿಬಿಡಬಾರದು ಎಂದು ಯೋಚನೆ ಮಾಡುತ್ತಿದ್ದೆ; ಅಷ್ಟು 

ಹೊತ್ತಿಗೆ ಸರಿಯಾಗಿ ಗಂಟೆ ಹೊಡೆಯಿತು.” 


ನಾಗೇಶರಾಯರು ನಕ್ಕುಬಿಟ್ಟರು. 

"ಇನ್ನೇನು ಮದುವೆಯಾದ ಹಾಗೇ ಹಾಗಾದರೆ?” 

"ಹಾಸ್ಯ ಮಾಡಬೇಡೀಂದ್ರೆ ; ವಿಚಾರಿಸಿ”? 


ಕೂಡಲೆ ಇಬ್ಬರೂ ಎದ್ದರು. ತಾಯಿಯ ಮನಸ್ಸಿನ ತುಂಬ ಮಗಳ 

ಮದುವೆಯ ಯೋಚನೆಯೇ". ಆಕೆಯು ಒಳಕ್ಕೆ ಹೋಗಲು ಸೀತೆಯು 

ತಾಯಿಯನ್ನು ನೋಡಿ “ಅಮ್ಮಾ ಬಾರೆ, ಕವಡೆ ಆಡೋಣ? ಎಂದಳು. 

ಅದಕ್ಕೆ ಆಕೆ “ಹೂ ಕಣೇ! ನನಗೆ ಬೇರೆ ಕೆಲಸವೇ ಇಲ್ಲ! ನಾಳೇ ಬರ್ತಾ 

ನಲ್ಲಾ ನಿನ್ನ ಗಂಡ ಅವನ ಕೈಲಿ ಬೇಕಾದರೆ ಆಡು” ಎಂದರು. ಅಷ್ಟಕ್ಕೆ 

ಸುಮ್ಮನಾಗಬೇಕೊ ಇಲ್ಲವೊ? ತುಂಟ ಹುಡುಗಿ!” ಆಡೇ ಆಡ್ತೀನಿ ಬಿಡ್ತೀ 

ನೇನು?’ ಎಂದುಬಿಟ್ಟಳು. ತಾಯಿಗೆ ಆಶ್ಚರ್ಯವಾಯಿತು. “ಅಲ್ಲ ಕಣೇ, 

ಇಷ್ಟು ಮಾತಾಡುವವಳಿಗೆ, ಪಾಪ! ಮಾಧು "ಸೀತಾ ಸೀತಾ' ಎಂದು 

ಕೂಗಿದಾಗ ಎಲ್ಲಿ ಹೋಗಿತ್ತೇ ಬಾಯಿ? ಅಷ್ಟು ಕೂಗಿದರೂ ಮಾತೇ ಆಡ 

ಬಾರದೇ ?” ಎಂದರು. ಸೀತೆಯು "ಹೋಗೇ !?' ಎಂದುಬಿಟ್ಟಳು. 

ಮುಖವು ಕೆಂಪೇರಿತು. ಮಾತು ಮರೆಸುವುದಕ್ಕಾಗಿ ""ಅಮ್ಮಾ ಈ ಕವಡೆ 

ಚೆನ್ನಾಗಿಲ್ಲ; ಬೇರೆ. ಇದ್ದರೆ ಕೊಡೇ?” ಎಂದಳು. ಸಫಲವಾಗಲಿಲ್ಲ. 


ಭವತಿ ಭಿಕ್ಸಾಂ ದೇಹಿ ೧೧ 


ಆಕೆಯು “ಇರಲಿ, ನಾಳೆ ನಿನ್ನ ಮಾಧೂಗೇ ಕೊಟ್ಟು ಮದುವೆ ಮಾಡು 

ವುದು! ಆಗಲೋ, ಮಾತೊಡ್ತೀಯೋ ಬಿಡ್ತೀಯೋ?” ಎಂದು ಹಾಸ್ಯ 

ಮಾಡಿದರು. 


ಸೀತೆ-- “ ನೀನು ಅಪ್ಪನ್ನ ಮದುವೆ ಮಾಡಿಕೊಂಡಾಗ ಏನು 

ಮಾಡಿದ್ದೆ? ಅವನ ಕೂಡ ಮಾತಾಡಿದ್ದೆಯೋ ಬಿಟ್ಟಿದ್ದೆಯೋ ?" 


ತಾಯಿ ಮಗಳ ಮಾತಿಗೆ ಬೆರಗಾಗಿ ಹೋಗಿ "ಅಬ್ಬಬ್ಬ! ಗಂಡುಬೀರಿ! 

ನಿನಗ್ಯಾರೇ ಇದನ್ನೆಲ್ಲಾ ಹೇಳಿಕೊಟ್ಟವರು ?? ಎಂದು ಹೇಳಿ ನಕ್ಳುಬಿಟ್ಟರು, 


(೪) 


ಇಷ್ಟೆಲ್ಲಾ ಆದದ್ದು ಮದುವೆಯಾಗದೆ ಇರುತ್ತದೆಯೆ? ಮದುವೆಯೂ 

ಆಯಿತು. . ಮದುವೆಯ ವರ್ಣನೆಯು ಅನಾವಶ್ಯಕ; ಏಕೆಂದರೆ ಮದುವೆ 

ಯನ್ನು ನೋಡದವರಾರು? ಆದರೆ ಮಾಧುನಿನ ಮದುವೆಯಲ್ಲಿ ಒಂದು 

ವಿಶೇಷ ಸಂಗತಿ ಮಾತ್ರ ನಡೆಯಿತು; ಅದನ್ನು ಇಲ್ಲಿ ತಿಳಿಸಬೇಕು. ಅವನು 

ಹುಡುಗಿಗೆ ಸೀರೆ ಕುಪ್ಪಸ ಒಡವೆವಸ್ತು ಇನೆಲ್ಲಾ ತಕ್ಕಮಟ್ಟಿಗೆ ಮಾಡಿಸಿಕೊ 

ಟ್ಟಿದ್ದನು. ಅವುಗಳಲ್ಲಿ ತಾನು ಬಹುಮಾನವಾಗಿ ಪಡೆದ ಪದಕವು ಮುಖ್ಯ 

ವಾದದ್ದು. ಅದಕ್ಕೆ ಅವನು ಒಂದು ಸರವನ್ನು ಮಾಡಿಹಾಕಿದ್ದನು, ಉರು 

ಟಣೆಯ ರಾತ್ರಿ ತಾನೂ ಸೀತೆಯೂ ಉಯ್ಯಾಲೆಯ ಮೇಲೆ ಕೂತು ಹೂವಿನ 

ಚಂಡಾಡುತ್ತ ಇದ್ದಾಗ ಅವನು ಆ ಪದಕವನ್ನು ಅವಳ ಕೊರಳಿಗೆ ಹಾಕಿಬಿ 

ಟ್ವನು. ಅಲ್ಲಿದ್ದ ಹೆಂಗಸರ ಗುಂಪಿಗೆ ಗುಂಪೇ ನಕ್ಕು ಬಿಟ್ಟತು. ಅವಳು 

ಮೊದಲೇ ತಲೆಯನ್ನು ಬಗ್ಗಿಸಿಕೊಂಡು ಕುಳಿತಿದ್ದಳು. ಅದು ನಾಚಿಕೆಯಿಂದ 

ಇನ್ನೂ ಬಾಗಿತು. ಅವಳು ನಗುತ್ತ ಆ ಪದಕವನ್ನು ಕೈಯಲ್ಲಿ ಹಿಡಿದು 

ನೋಡಿದಳು. ಅಲ್ಲಿದ್ದವರಲ್ಲಿ ಒಬ್ಬರು “ಏನೇ ದಾನಾ ಕೊಟ್ಟ ಎಮ್ಮೇನ 

ಹಲ್ಲು ಹಿಡಿದು ನೋಡ್ತೀಯಾ?” ಎಂದು ಕೇಳಿದರು. ಅವಳು ಸುಮ್ಮನೆ 

ಪದಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದಳು ; ಒಂದು ಕಡೆ ಇಂಗ್ಲೀಷಿನಲ್ಲಿ 

ಏನೇನೋ ಬರೆದಿತ್ತು ; ಮತ್ತೊಂದು ಕಡೆ "" ಶ್ರೀ ಸೀತಾದೇವಿ” ಎಂದು ಬರೆ 

ದಿತ್ತು. ಮಾಧು ಸ್ವಲ್ಪ ದಿನದ ಕೆಳಗೆ “ನಿನ್ನ ಗಂಡ ಪದಕವನ್ನು ತಂದು 


೧೨ ಕೆಲವು ಕಥೆಗಳು 


ಕೊಡುತ್ತಾನೆ” ಎಂದು ಹೇಳಿದ ಮಾತು ಈಗ ಅವಳಿಗೆ ಜ್ಞಾಪಕಕ್ಕೆ ಬಂದಿ 

ತೆಂದು ತೋರುತ್ತದೆ. 


ಇದೆಲ್ಲಾ ಆಗಿ ಈಗ ಐದಾರು ವರ್ಷಗಳಾಗಿ ಹೋಗಿವೆ. ಈಗ ಸೀತೆಯು 

ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಅಡಿಗೆ 

ಯವನಿಲ್ಲ; ಅವಳಿಗೆ ಅಡಿಗೆ ಮಾಡಿ ಬಡಿಸುವುದರಲ್ಲಿ ಬಹಳ ಆದರೆ; ಮಾಧು 

ನಿಗೂ ಅವನ ತಾಯಿತಂದೆಗಳಿಗೂ ಅವಳು ಅಡಿಗೆ ಮಾಡಿ ಬಡಿಸಿದರೇ ತೃಪ್ತಿ. 

ಅವರು ಅವಳಿಗೆ ತಾಯಿತಂದೆಗಳಿಗಿಂತಲೂ ಹೆಚ್ಚಾಗಿದ್ದರು. ಹೀಗೆ ಅವಳ 

ಸುಖಕ್ಕೆ ಯಾವ ಅಂಶದಲ್ಲಿಯೂ ಕುಂದು ಇರಲಿಲ್ಲ; ಗಂಡನು ಅವಳಲ್ಲಿ 

ಪೂರ್ಣ ಪ್ರೇಮವನ್ನಿಟ್ಟಿದ್ದನು; ಆ ಪ್ರೇಮವೃಕ್ಷವು ಒಂದು ಫಲವನ್ನೂ 

ಬಿಟ್ಟಿತು; ಅದರ ಹೆಸರು “ಕೃಷ್ಣಮೂರ್ತಿ” (ಉರುಫ್--ಮೂರ್ತಿ, ರಾಜ್ಯ 

ದೊರೆ ಇತ್ಯಾದಿ. ) 


ಮಾಧುವಿನ-ಮಾಧವರಾಯರ- ಮನೆಯಲ್ಲಿ ಈಗ ಮೂರು ನಾಲ್ಕು 

ಜನ ವಿದ್ಯಾ ರ್ಥಿಗಳು ಊಟ ಮಾಡಿಕೊಂಡಿದ್ದರು. ಅನರು ತಮ್ಮ ಮನೆಯಲ್ಲಿ 

ಊಟ ಮಾಡಿಕೊಂಡಿದ್ದಾರೆಂದು ಅವರಿಗೆ ಯಾವ ಕೆಲಸವನೂ ಸೀತಮ್ಮ 

ನಾಗಲಿ ಮಾಧವರಾಯನಾಗಲಿ- ಹೇಳುತ್ತಿರಲಿಲ್ಲ. ಅವರಿವರ ಮನೆಯಲ್ಲಿ 

ಊಟಮಾಡಿಕೊಂಡಿರುವ ಕೆಲವು ಹುಡುಗರನ್ನು ನಾನು ನೋಡಿದ್ದೇನೆ; 

ಹೊರಗಿನವರಿಗೆ ಇವರು ಎಷ್ಟೋ ಸುಖವಾಗಿದ್ದಾರೆಂದೂ ಭಿಕ್ಷಾನ್ನ ವಾರಗಳ 

ಪರದಾಟ ಅವರಿಗಿಲ್ಲನೆಂದೂ ಭಾವನೆ; ಮನೆಯ ಯಜಮಾನರು ತಿಳಿದ 

ಕೊಂಡಿರುವುದೂ ಹಾಗೆಯೇ; ಆದರೆ ನೂರಕ್ಕೆ ತೊಂಬತ್ತೊಂಬತ್ತು ಕಡೆ 

ಹುಡುಗರ ಅನುಭವ ಹಾಗಿರುವುದಿಲ್ಲ. ಏಕೆಂದರೆ, ಮುಂದೆ ತಮ್ಮ ಮಗಳನ್ನೋ 

ನಾದಿನಿಯನ್ನೋ ಭಾವಮೈದುನನ ಮಗಳನ್ನೋ ಕೊಟ್ಟು ಮದುವೆ ಮಾಡುವ 

ಅಭಿಸಂಧಿಯಿಟ್ಟುಕೊಂಡು ಅನ್ನದಾನ ಮಾಡುವ ಪುಣ್ಯವಂತರೇ ಹೆಚ್ಚು 

ಮಂದಿ; ಇದಲ್ಲದಿದ್ದರೆ ಆ ಹುಡುಗರಿಗೆ ನಿತ್ಯ ಮಾರ್ಕೆಟ್ಟಿಗೆ ಹೋಗಿಬರುವ 

ಕೆಲಸವೋ ಪಂಚೆ ಒಗೆದುಹಾಕುವ ಕೆಲಸವೋ ಇರುತ್ತದೆ ನನ್ನ ಸ್ನೇಹಿತ 

ನೊಬ್ಬನಿಗೆ ಹೀಗೆ ಕಾಗದ ಬರೆಯುವ ಕೆಲಸವಿತ್ತು; ಮನೆಯ ಯಜಮಾನ 

ಕೈ ನಡುಗುವುದೆಂದು ನೆವ; ಅವರು ಕಾಗದ ಬರೆಸುವುದಕ್ಕೆ ಕೂತರೆ ಮಧ್ಯೆ 

ನಾಲ್ಕು ಸಲ ಎದ್ದು ಹೋಗಿ ಹತ್ತು ಸಲ ಮಾತನಾಡಿ ಹೇಳಿದ್ದನನ್ನೇ ಹೇಳಿ 


ಭವತಿ ಭಿಕ್ಷಾಂ ದೇಹಿ  ೧೩


ಓದಿದ್ದನ್ನೇ ಓದಿಸಿ ಕೊನೆಗೆ ಮೂರು ಗಂಟಿಯ ಹೊತ್ತಿಗೆ ಹಾಗೂ ಹೀಗೂ 

ಮಾಡಿ ಕಾಗದವನ್ನು ಬರೆಸಿ ಮುಗಿಸುವರು. ಹೀಗೆ ವಾರಕ್ಕೆ ಎರಡು ಮೂರು 

ಕಾಗದಗಳಿದ್ದೇ ಇರುವುವು. ಇದರಂತೆ ""ಸ್ಪಲ್ಪ'' ಸೌದೆ ಒಡೆದು ಹಾಕಿ 

ಬಿಡುವುದು, ಮಗುವನ್ನು ಎತ್ತಿಕೊಳ್ಳುವುದು ಇಂಥ ಪ್ರಕರಣಗಳೂ ಉಂಟು. 


ಮಾಧನರಾಯನ ಮನೆಯಿದೆ ಹುಡುಗರಿಗೆ ಇಂಥ ಕೆಲಸವೊಂದೂ 

ಇರುತ್ತಿರಲಿಲ್ಲ; ಅವರಿಗೆ ಯಾವ ಕೆಲಸವನ್ನೂ ಹೇಳಕೂಡದೆಂದು ಖಂಡಿತ 

ವಾಗಿ ಅಪ್ಪಣೆ ಮಾಡಿದ್ದನು. ಭಿಕ್ಷಾನ್ನದವರು ಯಾರು ಬಂದರೂ ಹೋಗೆನ್ನು 

ತ್ತಿರಲಿಲ್ಲ; ಇವುಗಳ ಜೊತೆಗೆ ತಿಂಗಳಿಗೆ ಸುಮಾರು ಐವತ್ತು ರೂಪಾಯಿಗಳ 

ವರೆಗೂ ಅವರಿಗೆ ನಗದಾಗಿ ಸಹಾಯ ಮಾಡುತ್ತಿದ್ದನು. ಯಾರೋ ಬೀದಿ 

ಯಲ್ಲಿ ಹೋಗುವವರಿಗಾಗಿ ಇಷ್ಟು ಖರ್ಚಾಗಿ ಬಿಡುವದಲ್ಲಾ ಎಂದು ಒಂದು 

ದಿನವಾದರೂ ಅವನಾಗಲಿ ಅವನ ಹೆಂಡತಿಯಾಗಲಿ ಭಾವಿಸಿದವರಲ್ಲ. ಸ್ವಾರ್ಥ 

ವನ್ನು ಬಿಟ್ಟು ನಿಜವಾದ ಧರ್ಮಬುದ್ದಿಯಿಂದ ಖರ್ಚು ಮಾಡಿದಷ್ಟೂ ದೇವರು 

ಹೆಚ್ಚು ಹೆಚ್ಚಾಗಿ ಕೊಡುವನೆಂದು ಅವನಿಗೆ ಒಂದು ಗೊಡ್ಡು ನಂಬಿಕೆಯಿತ್ತು. 

ಅದರಂತೆ ಅವನಿಗೆ ಒಂದು ವರ್ಷವಾಗಲಿ ಯಾವುದಾದರೂ. ಒಂದು ವಿಧದಲ್ಲಿ 

ಹಿಂದಕ್ಕಿಂತ ಹೆಚ್ಚಾಗಿ ಸಂಪಾದನೆಯಾಗದೆ ಇರುತ್ತಿರಲಿಲ್ಲ. ಕೊನೆಗೆ ಅವನು 

ಧರ್ಮಾರ್ಥವಾದ ಒಂದು ವಿದ್ಯಾರ್ಥಿನಿಲಯವನ್ನು ಏರ್ಪಾಡು ಮಾಡಿ 

ಅದನ್ನು ನಡೆಸುತ್ತ ಬಂದನು. ಇದು ಬಹಳ ವರ್ಷಗಳಾದಮೇಲೆ ನಡೆದ 

ಮಾತು. ಇದಕ್ಕೆ ಮುಂಚೆ ಅವನು ಸಂಸಾರ ಹೂಡಿದ ಹೊಸದರಲ್ಲಿ ಒಂದು 

ಸಂಗತಿ ನಡೆಯಿತು. ಅದರಿಂದ ಅವನ ಮತ್ತು ಸೀತಮ್ಮನ ಮನಸ್ಸು ಬಡ 

ವಿದ್ಯಾರ್ಥಿಗಳ ಕಷ್ಟವನ್ನು ನೋಡಿ ಹೇಗೆ ಬೆಣ್ಣೆಯಂತೆ ಕರಗಿಹೋಗುತ್ತಿ 

ತ್ತೆಂದೂ ತಮ್ಮ ಸುಖವನ್ನಾ ದರೂ ಒತ್ತರಿಸಿ ಹೇಗೆ ಅನರು ಹುಡುಗರ ಸುಖ 

ವನ್ನು ನೋಡುತ್ತಿದ್ದರೆಂದೂ ಗೊತ್ತಾಗುತ್ತದೆ. 


ಒಂದು ದಿನ ಮಧ್ಯಾಹ್ನಕ್ಕೆ ಸರಿಯಾಗಿ ಮಾಧವರಾಯನು ಎಲ್ಲಿಂ 

ದಲೋ ತುಂಬ ಆಯಾಸಪಟ್ಟು ಮನೆಗೆ ಬಂದನು. ಮೈತುಂಬ ಬೆವರು 

ಹರಿಯುತ್ತಿತ್ತು. ಸೀತಮ್ಮನು ಲಾವಂಚದ ಬೀಸಣಿಗೆಗೆ ಹೂಜಿಯ ನೀರನ್ನು 

ಹಾಕಿ ಬೀಸಿಕೊಳ್ಳುವುದಕ್ಕೆ ಕೊಟ್ಟು ನಿಂಬೆಯ ಹಣ್ಣಿನ ಪಾನಕ ಮಾಡುತ್ತಿ 

ದಳು. ಅಷ್ಟು ಹೊತ್ತಿಗೆ ಒಬ್ಬ ಹುಡುಗನು ಹೊರಗೆ “ಭವತಿ 


೧೪ ಕೆಲವು ಕಥೆಗಳು 


ಭಿಕ್ಷಾಂ ದೇಹಿ !?' ಎಂದು ಕೂಗಿದನು.“ ಹೋಗಿಬಿಟ್ಟು ಬಾಪ್ಪ?” ಎಂದಳು. 

ಅದು ಅವನಿಗೆ ಕೇಳಲಿಲ್ಲವೋ ಏನೋ, ಪುನಃ ""ಭವತಿ ಭಿಕ್ಷಾಂ ದೇಹಿ !!" 

ಎಂದನು. ಸೀತಮ್ಮನು ಸ್ವಲ್ಪ ಬೇಸರಸಟ್ಟು ಕೊಂಡು “ಕೈಯಲ್ಲಿ ಕೆಲಸ 

ವಿದೆ, ಒಂದು ದಿನ ಹೋಗಿಬಾ ಅಂದರೆ ಹೋಗಬಾರದೇನೋ?'” ಎಂದು 

ಸ್ಪಲ್ಪ ಗದರಿಸಿದರು. ಗಂಡನು ತುಂಬ ಆಯಾಸಸಟ್ಟು ಬಂದಿರುವಾಗ 

ತಾನು ಪಾನಕ ಮಾಡುತ್ತಿರುವುದನ್ನು ಬಿಟ್ಟು ಎದ್ದು ಹೋಗಲು ಅವಳಿಗೆ 

ಮನಸ್ಸು ಬರಲಿಲ್ಲ. ಕೂಡಲೆ ಮಾಧುವು ಮೆಲ್ಲಗೆ "ಸೀತಾ! ಎಂದನು. 


ಸೀತೆಯು ಕತ್ತೆತ್ತಿ ನೋಡಿದಳು. 


""ಅದನ್ನು ಅಲ್ಲಿಡು ; ಎದ್ದು ಹೋಗಿ ಮೊದಲು ಆ ಹುಡುಗನಿಗೆ ಅನ್ನ 

ಹಾಕಿಬಿಟ್ಟು ಬಾ! ಪಾನಕವನ್ನು ನಾನು ಮಾಡಿಕೊಳ್ಳುತ್ತೇನೆ.” 


""ಇಷ್ಟು ಹೊತ್ತಿಗೆ ಆ ಹುಡುಗ ಹೊರಟುಹೋಗಿರಬಹುದು.” 


“ಹೋಗಿ ನೋಡು; ಮಗ್ಗುಲು ಮನೆಗೆ ಹೋಗಿದ್ದರೆ ಕರೆ 


ಸೀತಮ್ಮನು ಹೊರಗೆ ಬಂದು ನೋಡಲು ಆ ಹುಡುಗನು ಇನ್ನೂ 

ನಿಂತಿದ್ದನು. ಹುಡುಗ ಇನ್ನೂ ಚಿಕ್ಕವನು- ಸುಮಾರು ಹತ್ತು ಹನ್ನೆರಡು 

ವರ್ಷವಿರಬಹುದು. ಕೈಯಲ್ಲಿ ಒಂದು ಒದ್ದೆಯ ಜೋಳಿಗೆ. ಒಂದು ಸಣ್ಣ 

ಅಲ್ಯೂಮಿನಿಯಂ ಬಟ್ಟಲು ; ಒಂದು ಪದರದ ಒಂದು ಕೊಳೆಯ ಬಟ್ಟೆ 

ಯನ್ನು ಉಟ್ಟು ಕೊಂಡಿದ್ದನು ; ಹೊದ್ದುಕೊಂಡಿದ್ದುದೂ ಹಾಗೇ ಇತ್ತು; 

ತಲೆಯು ಒಂದು ಪೊದೆಯಾಗಿಯೂ ಮುಖವು ಒಣಗಿದ ನಿಂಬೆಕಾಯಿಯಂ 

ತೆಯೂ ಇದ್ದುವು. ಅವನು ಅಲ್ಲಿಯೇ ಇದ್ದುದನ್ನು ನೋಡಿ ಸೀತಮ್ಮನು 

ಅನ್ನವನ್ನು ತಂದು ಹಾಕಿದಳು. ಅಷ್ಟುಹೊತ್ತಿಗೆ ಮಾಧನರಾಯನೂ ಎದ್ದು 

ಬಂದು ಆ ಹುಡುಗನನ್ನು ನೋಡಿ “ನಿನ್ನ ಹೆಸೆರೇನೋ ಹುಡುಗ” ಎಂದು 

ಕೇಳಿದನು. “ನನ್ನ ಹೆಸರು ಶಿವು” ಎಂದು ಆ ಹುಡುಗನು ಉತ್ತರ 

ಕೊಟ್ಟನು. 


ಮಾಧನರಾಯನು ಪಾನಕವನ್ನು ಮಾಡಿಕೊಂಡಿರಲಿಲ್ಲವಾದ ಕಾರಣ 

ಸೀತಮ್ಮನು ಪುನಃ ಬಂದು ಅದನ್ನು ಮಾಡಿ ಒಂದು ಬೆಳ್ಳಿಯ ಲೋಟಕ್ಕೆ 

ಹಾಕಿ ಗಂಡನ ಕೈಗೆ ಕೊಡುವುದಕ್ಕೆ ಹೋದಳು; ಆಗ ಅವನ ಮುಖದಲ್ಲಿ. 


ಭವತಿ ಭಿಕ್ಷಾಂ ದೇಹಿ ೧೫ 


ಆಯಾಸದ ಚಿಹ್ನೆಯಿರಲಿಲ್ಲ; ಏನೋ ಯೋಚನೆ ಮಾಡುತ್ತಿ ದ್ದನು. ಲೋಟ 

ವನ್ನು ಕೈಗೆ ತೆಗೆದುಕೊಂಡು ""ಸೀತಾ!” ಎಂದನು. 


"ಏನು? 


"ನಿನಗೆ ಆ ಹುಡುಗನ ಮೇಲೆ ಸಿಟ್ಟು ಬಂತೇನು?” 


“ಸಿಟ್ಟೇನೂ ಇಲ್ಲ; ನೀನು ದಣಿದು ಆಯಾಸಪ ಪಟ್ಟು ಬಂದಿದ್ದಿರಿ : 

ನಿಮಗೆ ಸ್ವಲ್ಪ ಪಾನಕ ಮಾಡಿ ಕೊಡೋಣನೆಂದು ಹೋದಾಗಲೇ ಅವನು 

ಬಂದನಲ್ಲಾ, ಅದಕ್ಕೆ "ಹೋಗಿಬಿಟ್ಟು ಬಾ” ಎಂದೆ ಅಷ್ಟೆ.” 


“ಅವರ ಮೇಲೆ ಸಿಟ್ಟು ಮಾಡಬಾರದು. 1 ಪಾಪ, ಆ ಹುಡು 

ಗರು ಓದಬೇಕೆಂಬ ಆಸೆಯಿಂದ ಎಷ್ಟೆಷ್ಟೋ ಬಳಲುತ್ತಾರೆ; ಅವರಿಗೆ 

ಹೊತ್ತಿಗೆ ಗೊತ್ತಿಗೆ ಅನ್ನವಿಲ್ಲ, ನೀರಿಲ್ಲ, ಹೀಗಿರುತ್ತಾರೆ; ಒಂದೊಂದು ದಿನ 

ಉಪವಾಸ ಕೂಡ ಇದ್ದು ಬಿಡುತ್ತಾರೆ. ಏನೋ, ದೇವರು ನಮಗೆ ಒಂದು 

ತುತ್ತು ಅನ್ನವನ್ನು ಕೊಟ್ಟಿರುವುದರಿಂದ ಅವರು ನಮ್ಮ ಮನೆಯ ಬಾಗಿಲಿಗೆ 

ಬರುತ್ತಾರೆ; ನಾವು ಕೊಡದೇ ಇನ್ನಾರು ಕೊಡಬೇಕು? ಅವರು 

ತಾಯಿತಂದೆಗಳನ್ನು ಬಿಟ್ಟು ಬಂದಿರುತ್ತಾರೆ: ಅನೇಕರಿಗೆ ತಾಯಿತಂದೆ. 

ಯಾರೂ ಇರುವುದಿಲ್ಲ; ಅಂಥವರಿಗೆ ನಾವೇ ತಾಯಿತಂದೆ ಎಲ್ಲ. ಅಂಥವ 

ರಿಗೆ ಸಿಡುಕಿನಿಂದ ಅನ್ನ ಹಾಕಿದರೆ ಅದು ಅವರ ಮೈಗೆ ಹತ್ತುವುದಿಲ್ಲ. ನಮಗೆ 

ಅನ್ನ ದಾನದ ಫಲವೂ ಬರುವುದಿಲ್ಲ. ಸೀತಾ! ಇನ್ನು ಮೇಲೆ ನೀನು ನನ 

ಗೋಸ್ಕರವಾದರೂ ಆ ಬಡಪಾಯಿಗಳ ಮೇಲೆ ಯಾವ ಕಾರಣದಿಂದಲೂ ಸಿಟ್ಟು 

ಮಾಡಬೇಡ.” 


ಸೀತೆ ಅವನ ಪಕ್ಕದಲ್ಲಿಯೇ ಸುಮ್ಮನೆ ಮಾತಿಲ್ಲದೆ ನಿಂತಿದ್ದಳು ; 

ಮುಖ ತಗ್ಗಿ ಹೋಗಿತ್ತು. 


"ನಾನು ಹೀಗೆ ಹೇಳುತ್ತಾನೆಂದು ಕೋಪವೇ, ಸೀತಾ??? 


ಸೀತೆ ಸುಮ್ಮನಿದ್ದಳು. 


"ಸೀತಾ, ನಾನು ಹೀಗೆ ಹೇಳಿದೆನೆಂದು ನೊಂದುಕೊಳ್ಳಬೇಡ; ನಿನ್ನಲ್ಲಿ 

ತಪ್ಪೆಣಿಸುವುದಕ್ಕೆ ಹೀಗೆ ಹೇಳಿದೆನೆಂದು ಭಾವಿಸಬೇಡ; ಏನೋ ಅವರ  

ಕಷ್ಟಗಳೆಲ್ಲಾ ನನಗೆ ಚೆನ್ನಾಗಿ ಗೊತ್ತು; ಆದುದರಿಂದ ಹೀಗೆ ಹೇಳಿದೆ. ಒಂದಾ 


೧೬ ಕೆಲವು ಕಥೆಗಳು 


ನೊಂದು ಕಾಲದಲ್ಲಿ ನಾನೂ ಜೋಳಿಗೆ ಹಿಡಿದು ಹೀಗೆ ಬೀದಿ ಬೀದಿ ಅಲೆಯು 

ತ್ತಿದ್ದೆ. ನಿಮ್ಮ ಮನೆಗೂ ಭಿಕ್ಷಾನ್ನಕ್ಕೆ ಬರುತ್ತಿದ್ದೆ. ಆಗ ನೀನು ಇನ್ನೂ 

ಸಣ್ಣ ಹುಡುಗಿ; ಒಂದು ದಿನ ಭಿಕ್ಷಾನ್ನಕ್ಟಾಗಿ ನಿಮ್ಮ ಮನೆಯ ಬಾಗಿಲಿಗೆ 

ಬಂದೆ ; ಆಗ ನಿನ್ಮು ತುಯಿ ಏನೋ ತಿಂಡಿಯನ್ನು ತೆಗೆದುಕೊಂಡು ಹೋಗಿ 

ಹಾಕು ಎಂದರು. ನೀನು ಆಟದಲ್ಲಿದ್ದದ್ದರಿಂದ ನನ್ನನ್ನು "ನಿಂತುಕೊಂ 

ಡಿರೋ ಬಂದೆ!” ಎಂದು ಗದರಿಸಿಡಿ. ನಾನು ಕಾದಿರಬೇಕಾಯಿತು. 

ಇದೇನೋ ಬಹಳ ಹಿಂದಿನ ಮಾತು; ನಿನಗೆ ಮರೆತುಹೋಗಿದೆ; ಆದರೆ 

ನಾನು ಮರೆತಿಲ್ಲ. 


ಸೀತೆಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಮಾಧು ಪುನಃ 

ಹೇಳತೊಡಗಿದನು. 


“ಸೀತು, ನಿನ್ನ ತಂದೆತಾಯಿಗಳ ಗುರುತು ಆಗುವುದಕ್ಕೆ ಮೊದಲು 

ನನಗೆ ಬಹಳ ಕಷ್ಟವಾಗುತ್ತಿತ್ತು; ಕೆಲವು ಮನೆಯಲ್ಲಿ ತಂಗಳನ್ನವನ್ನು 

ಹಾಕುತ್ತಿದ್ದರು, ಮತ್ತೆ ಕೆಲವರು ಹಳಸಿದ ಅನ್ನವನ್ನು ಕೂಡ ಹಾಕಿಬಿ 

ಡುತ್ತಿದ್ದರು. ಬರಿಯ ಹೊಟ್ಟೆಯಲ್ಲಿ ಎಷ್ಟೋ ರಾತ್ರಿಗಳನ್ನು ಕಳೆದಿರು 

ವೆನು. ಈಗ ಅವುಗಳನ್ನು ನೆನೆಸಿಕೊಂಡರೆ ಕಣ್ಣಿನಲ್ಲಿ ನೀರು ಬರುವುದು ; 

ದೇವರ ದಯದಿಂದ ನಿನ್ನ ತಂದೆತಾಯಿಗಳ ಗುರುತು ಆಯಿತು. ಆಮೇಲೆ 

ನನಗೆ ಎಷ್ಟೋ ಸುಲಭವಾಯಿತು ; ನಿನ್ನ ತಂದೆಯಿಂದ ನನಗೆ ಎಷ್ಟೋ 

ವಿಧದಲ್ಲಿ ಸಹಾಯವಾಯಿತು; ಅವರೇ ನನ್ನ ಭಾಗದ ದೇವರಾಗಿದ್ದರು.?' 


ಸೀತೆಗೆ ಇನ್ನು ತಡೆಯಲಾಗಲಿಲ್ಲ; ಕಣ್ಣಿನಿಂದ ನೀರು ಹರಿದುಹೋ 

ಯಿತು; ಅಸಳು ಸುಮ್ಮನೆ ನೆಲನನ್ನು ನೋಡುತ್ತ ಕೇಳುತ್ತಿದ್ದಳು. ಮಾಧು 

ಪುನಃ ಪ್ರಾರಂಭಿಸಿದನು: 


"ಸೀತಾ, ಮೂರು ವರ್ಷಗಳ ಕಾಲ ಮಲಗುವುದಕ್ಕೆ ಹಾಸಿಗೆಯಿಲ್ಲದೆ 

ಬರೀ ಗೋಣೀ ತಟ್ಟಿನ ಮೇಲೆ ಮಲಗಿ ಕಾಲ ಕಳೆದೆ. ಒಂದು ಇಟ್ಟಿಗೆಯ 

ಮೇಲೆ ಹರಳೆಣ್ಣೆಯ ಹಣತೆಯೊಂದನ್ನು ಇಟ್ಟುಕೊಂಡು ರಾತ್ರಿಯ ಹೊತ್ತು 

ಓದುತ್ತಿದ್ದೆ. ನಾನು ಇದ್ದ ಕೊಠಡಿಯು ಚಿಕ್ಕದು; ಮೂಲೆಯಿಂದ ಮೂಲೆಗೆ 

ಮಲಗಬೇಕಾಗಿತ್ತು. ಒಂದು ಮೂಲೆಯಲ್ಲಿ ಹಣತೆ; ಒಂದು ಮೂಲೆಯಲ್ಲಿ 

ಪುಸ್ತಕ, ಮತ್ತೊಂದು ಮೂಲೆಯಲ್ಲಿ ಒಂದು ತುಂಡು ಪೊರಕೆ, ಹೊದಿಯು 


ಭವತಿ ಭಿಕ್ಷಾಂ ದೇಹಿ ೧೭ 


ವುದಕ್ಕೆ ಒಂದು ಪಂಚೆ ಬಿಟ್ಟರೆ ಮತ್ತೊಂದಕ್ಕೆ ಗತಿಯಿರಲಿಲ್ಲ; ಅಂಗಿಯೊಳಗೆ 

ಒಂದೆರಡು ಪುಸ್ತಕಗಳನ್ನು ಸುತ್ತಿ ಅದನ್ನೇ ತಲೆಯ ಕೆಳಗೆ ಇಟ್ಟುಕೊಳ್ಳು 

ತ್ತಿದೆ. ಪುಸ್ತಕಕ್ಕೆ ದುಡ್ಡಿಲ್ಲ; ಪರೀಕ್ಷೆಗೆ ಹಣ ಕಟ್ಟುವುದಕ್ಕೆ ದುಡ್ಡಿಲ್ಲ; 

ಯಾರಾರನ್ನೋ ಅಂಗಲಾಚಿ ಬೇಡಿದೆ, ಒಂದು ಕಾಸೂ ಸಿಕ್ಕಲಿಲ್ಲ; ನಿರಾಶ 

ನಾಗಿ ಊರಿಗೆ ಹೋಗಬೇಕೆಂದಿದ್ದೆ; ಆಗ ನಿನ್ನ ತಂದೆಯು ನನ್ನ ಭಾಗದ 

ದೇವರ ಹಾಗೆ ಬಂದು ಸಹಾಯ ಮಾಡಿದರು........ " 


ಆ ದಿನ ರಾತ್ರೆ ಸುಮಾರು ಹನ್ನೆರಡು ಗಂಟಿಯ ಸಮಯ ; ಮಾಧವ 

ರಾಯನು ಇನ್ನೂ ಒಂದು ಪುಸ್ತ ಕವನ್ನು ಹಿಡಿದುಕೊಂಡು ಓದುತ್ತಿದ್ದಾನೆ ; 

ದೀಪವು ಉರಿಯುತ್ತಿದೆ;  ಮಗ್ಗುಲಲ್ಲಿ ಕೃಷ್ಟ ಮೂರ್ತಿಯೂ ಸೀತೆಯೂ ಮಲಗಿ 

ನಿದ್ದೆ ಹೋಗುತ್ತಿದ್ದಾರೆ; ಸೀತೆಯು ಇದ್ದಕ್ಕಿದ್ದ ಹಾಗೆ ಕನವರಿಸಿಕೊಂಡಳು--- 


ಬಾಪ್ಪ, ಬಾ ನನ್ನ ಕಂದ! ಇಲ್ಲೇ ಊಟಮಾಡು ಬಾಮ್ಮಾ! 


ತಿರುಗಿ ನೋಡಿದನು, ಯಾರೂ ಇರಲಿಲ್ಲ; ಮೂರ್ತಿಯು 

ಮಲಗಿತ್ತು; ಆದ್ದರಿಂದ ಕನವರಿಕೆಯೆಂದು ತಿಳಿದು "ಸೀತಾ ಸೀತಾ! 

ಎಚ್ಚರ ಮಾಡಿಕೊಳ್ಳೆ ; ಕಂದ ಯಾರೆ; ಊಟ ಯಾರು ಮಾಡಬೇಕೆ? 

ಎಂದನು. ಅವಳು ಕಣ್ಣಿನಿಂದ ನೀರು ಸುರಿಸುತ್ತಾ ಅರ್ಧ ಎಚ್ಚರಿನಲ್ಲಿ, 

"ಶಿವು ಭಿಕ್ಷಾನ್ನಕ್ಕೆ ಬಂದಿದ್ದ ; ಇವತ್ತು ಎಲ್ಲಿಯೂ ಸಿಕ್ಕಲಿಲ್ಲ ತಾಯಿ 

ಬಂದ ನೀವು ಹೇಳಿದ್ದೆಲ್ಲಾ ಜ್ಞಾಪಕಕ್ಕೆ ಬಂತು; ಇಲ್ಲೇ ಊಟಮಾಡು 

ಏಳು ಎಂದೆ'? ಎಂದಳು. 


""ಇದ್ಯಾಕೆ ಅಳುತ್ತೀಯೇ? ಶಿವು ಎಲ್ಲಿದ್ದಾನೆಯೇ, ಎಚ್ಚರ ಮಾಡಿ 

ಕೊಳ್ಳೇ !?-_ಎಂದು ಮಾಧುವು ಸ್ವಲ್ಪ ತಣ್ಣೀರನ್ನು ತಂದು ಆಳ ಕಣ್ಣು 

ಗಳನ್ನು ಒರೆಸಿದನು. 


ಸೀತೆಗೆ ಎಚ್ಚರವಾಯಿತು; ನಾಚಿಕೆಯಿಂದ ನಕ್ಕು ಮುಸುಕುಹಾಕಿ 

ಕೊಂಡು ಮಲಗಿಬಿಟ್ಟಳು. 


ಮರುದಿನ ಎಂದಿನಂತೆ ಶಿವು ಭಿಕ್ಷಾನ್ನಕ್ಕೆ ಬಂದು --

"ಭವತಿ ಭಿಕ್ಷಾಂ ದೇಹಿ !'' ಎಂದು ಕೂಗಿದನು. 


ಅದನ್ನು ಕೇಳಿ ಸೀತಮ್ಮನು ತಟ್ಟನೆ ಎದ್ದು ಹೋಗಿ, ಆದರದಿಂದ 

ಅವನ ತಲೆಯನ್ನು ಸವರಿ ಬೆನ್ನು ತಟ್ಟಿ, "ಶಿವು ಇನ್ನು ಮೇಲೆ ನೀನು ಭಿಕ್ಷಾ 


೧೪ ಕೆಲವು ಕಥೆಗಳು 


ನ್ನಕ್ಕೆ ಹೋಗಬೇಡ ; ನಮ್ಮ ಮನೆಯಲ್ಲಿಯೇ ಇದ್ದುಬಿಡು; ಅವರು ನಿನಗೆ 

ಬೇಕಾದ ಪುಸ್ತಕ ಬಟ್ಟೆ ಬರೆಗಳನ್ನೆಲ್ಲಾ ಕೊಡಿಸುವರು'' ಎಂದಳು. 


ಅವನಿಗೆ ಆಶ್ಚ ರ್ಯವಾಯಿತು. ಅಲ್ಲಿಂದ ಮುಂದಕ್ಕೆ ಅವನು ಸೀತ 

ಮ್ಮನ ಇಷ್ಟದಂತೆ ಅವರ ಮನೆಯಲ್ಲಿಯೇ ನಿಂತನು. ಅಂದು ಹುಡುಗನಿಗೆ 

ಬಡಿಸುತ್ತ ಸೀತಮ್ಮನು 


"ಶಿವು ನಿಮ್ಮ ಊರು ಯಾವುದು?” ಎಂದು ಕೇಳಿದಳು. 


"ನಂಗೊತ್ತಿಲ್ಲ. 


"ನಿಮ್ಮ ಅಪ್ಪ ಅಮ್ಮ ಎಲ್ಲಿದ್ದಾರೆ?” 


"ನೀವೇ ನನ್ನ ಗೋಪು ಅಪ್ಪ ಅಮ್ಮ ಎಲ್ಲ.” 


"ಏನು? ನಿನಗೆ ತಂದಿ ತಾಯಿ ಯಾರೂ ಇಲ್ಲವೇ?’ 


"ಗೋಪು ಒಂದು ದಿನ, ನಮ್ಮ ಅಪ್ಪ ಅಮ್ಮ ಸತ್ತು ಏಳೆಂಟು ವರ್ಷ 

ಆಯಿತೆಂದು ಹೇಳಿ ಅತ್ತ ; ನಾನೂ ಅತ್ತೆ; ಅಷ್ಟೆ ; ; ನೀವೇ ನನ್ನ ಗೋಪು 

ಅಪ್ಪ ಅಮ್ಮ ಎಲ್ಲ.? 


ಸೀತೆಯ ಕಣ್ಣಿನಲ್ಲಿ ವೀರು ಬಂತು. 


"ಗೋಪು ಯಾರು? 


"ಗೋಪು ನನ್ನ ಅಣ್ಣ. 


“ಅವರೆಲ್ಲಿದಾರೆ ?” 


"ಅವನು ಆಸ್ಪತ್ರೇಲಿ ಸತ್ತುಹೋದ; ಅವನೇ ಸಾಯುವಾಗ ನನ್ನ 

ಕರೆದು 'ಇನ್ನು ಮೇಲೆ ನಿನಗೆ ಯಾರು ಅನ್ನ ಹಾಕುತ್ತಾರೆಯೋ ಅವರೇ ನಿನ್ನ 

ಗೋಪು ಅಪ್ಪ ಅಮ್ಮ ಎಲ್ಲ; ನಾನು ಹೋಗುತ್ತೇನೆ' ಎಂದು ಹೇಳಿದ.” 


ಸೀತಮ್ಮನು ಕಣ್ಣೀರನ್ನು ಒರಸಿಕೊಂಡು “ಶಿವು, ಹಾಗಾದರೆ ನಿನಗೆ 

ಯಾರೂ ಇಲ್ಲವೇ'? ಎಂದು ಕೇಳಿದಳು. 


“ಇದ್ದಾರೆ.” 


"ಯಾರು ?" 


""ನೀವೇ--ನನ್ನ ಗೋಪು ಅಪ್ಪ ಅಮ್ಮ ಎಲ್ಲಾ !” 

=================================================


ಸರಸಿ ಗೊಂಬೆ 



“A young boy is a young boy 

A young girl is a young woman” 

— Anon 

೧ 



ಸರಸಿ ವೆಂಕರಾಮಯ್ಗನವರ ಮಗಳು. ವೆಂಕಟರಾಮಯ್ಯನವರು 

ನಮ್ಮ ಹೆಳ್ಳಿಯ ಶ್ಯಾನುಭೋಗರು. ದಯವಿಟ್ಟು ನಮ್ಮ ಹಳ್ಳಿ ಯಾವುದೆಂದು 

ಕೇಳಬೇಡಿ. ನಿಮಗೆ ನಮ್ಮ ಹಳ್ಳಿಯ ಹೆಸರು ಗೊತ್ತಾದರೆ ನಾನು ಯಾರು 

ಎಂದು ಖಂಡಿತವಾಗಿಯೂ ಗೊತ್ತಾಗುತ್ತದೆ. ನಾನು ಯಾರು ಎಂದು 

ತೋರಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಿಮಗೆ ಯಾವ ಯಾವ ವಿಷಯ 

ಗಳನ್ನು ಹೇಳಬೇಕೆಂದು ತೋರುತ್ತದೆಯೋ ಅವುಗಳನ್ನೆಲ್ಲಾ ಮರೆಮಾಚದೆ

ಹೇಳುತ್ತೇನೆ. ಅನವಕಶ್ಯಕವಾದುದನ್ನೆಲ್ಲಾ ಹೇಳಿ ವೃಥಾ ನಿಮಗೇಕೆ ಬೇಸರ 

ವನ್ನುಂಟುಮಾಡಲಿ ? ಇಷ್ಟು ಹೇಳಿದರೆ ಸಾಕು-ನಮ್ಮ ಹಳ್ಳಿ ಮೈಸೂರು 

ಸೀಮೆಯಲ್ಲೇ ಎಲ್ಲೋ ಕಡೆ ಒಂದು ನದಿಯ ದಡದ ಮೇಲಿದೆ. 

ಇನ್ನು ವೆಂಕಟರಾಮಯ್ಯನವರ ನಿಷಯ. ಹಳ್ಳಿಯ ಶ್ಯಾನುಭೋಗರು ಅಂದ 

ಮೇಲೆ ನೆಮ್ಮದಿಯಾಗಿದ್ದಾರೆ ಎಂಬುದು ತಿಳಿದ ವಿಷಯವೇ! ಮಿತವಾದ 

ಸಂಸಾರ. ಅವರು ನಮಗೆ ಸ್ವಲ್ಪ ದೂರದ ಸಂಬಂಧ. ಅವರಿಗೆ ಮೂರು 

ಮಕ್ಕಳು. ಮೂರು ಹೆಣ್ಣು. ಸರಸಿಯೇ ಮೊದಲನೆಯವಳು. ಇಲ್ಲಿ ನಾನು 

ಹೇಳುವುದು ಮುಕ್ಕಾಲು ಪಾಲು ಸರಸಿಯ ವಿಚಾರ. 


ನಮ್ಮ ಮನೆಗೂ ಸರಸಿಯ ಮನೆಗೂ ಹತ್ತಿರ. ನಮ್ಮ ಮನೆಯ ಸಾಲಿ 

ನಲ್ಲೆ e ಎಡಕ್ಕೆ ಎರಡನೆಯದಲ್ಲ ಮೂರನೆಯದೆ ಅವರ ಮನೆ. ಆ ಸಾಲಿನಲ್ಲಿ 

ನಮ್ಮ ಮನೆಯೊಂದಕ್ಕೇ ಮಹಡಿ ಇರುವುದು. ನಮ್ಮ ಸಾಲು ಉತ್ತರಾಭಿ 

ಮುಖವಾಗಿದೆ. ಅದರಲ್ಲಿ ಇರುವುದೆಲ್ಲಾ ಒಟ್ಟು ಎಂಟು ಹತ್ತು ಮನೆಗಳು. 



೨೦ ಕೆಲಪು ಕಥೆಗಳು 



ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ, ಪಶ್ಚಿಮಾಭಿಮುಖವಾಗಿ ಸುಮಾರು 

ನೂರೈವತ್ತು ಗಜ ಹೋದರೆ ಎಡಕ್ಕೆ ಒಂದು ಕಾಲುಹಾದಿ ಸಿಕ್ಕುವುದು. ಅದು 

ನಮ್ಮ ಸಾಲಿನ ಹಿಂಭಾಗದಲ್ಲಿ ಹರಿಯುವ ನದಿಯ ಸೋಪಾನಕ್ಕೆ ಹೋಗು 

ತ್ತದೆ. ಸೋಪಾನ ಒರಟು ಒರಟಾಗಿದ್ದರೂ ಅದರಿಂದ ನಮ್ಮ ಹಳ್ಳಿಗೆ ಬಹಳ 

ಪ್ರಯೋಜನ. ಆ ಸೋಪಾನದ ಹತ್ತಿರದಲ್ಲೇ ನದಿಯ ದಡದ ಮೇಲೆ 

ಒಂದು ತೋಪು. ಅದರ ನೆರಳಿನಲ್ಲಿ ಒಂದು ಚಿಕ್ಕದಾದ ಪುರಾತನ ಕಾಲದ 

ದೇವಸ್ಥಾನ. ನರಸಿಂಹಸ್ವಾಮಿ ದೇವರದು. ಒಟ್ಟಿನಲ್ಲಿ ನಮ್ಮ ಹಳ್ಳಿ ಬಹು 

ರಮ್ಯವಾದ ಸ್ಥಳ, ಈ ನನ್ನ ಮಾತಿನ ನಿಜತ್ವವನ್ನು ಹಳ್ಳಿಯಲ್ಲಿದ್ದು ಆದರ 

ಸುಖವನ್ನು ಸವಿದವರು ಮಾತ್ರ ತಿಳಿಯಬಲ್ಲರು. ನಾನು ನಮ್ಮ ಹಳ್ಳಿಯಲ್ಲಿ 

ಐದು ರುಪಾಯಿ ಪರೀಕ್ಷೆ ಮುಗಿಸಿಕೊಂಡು ಮುಂದೆ ಓದುವುದಕ್ಕೆ ಬೆಂಗಳೂ 

ರಿಗೆ ಹೋಗಿ ನಮ್ಮ ಸೋದರಮಾವನ ಮನೆಯಲ್ಲಿದ್ದೆ. ಹಳ್ಳಿ ಯಲ್ಲಿರುವ 

ತನಕ ನನ್ನ ಮನಸ್ಸಿನಲ್ಲಿದ್ದ ಆನಂದ, ಗೆಲುವು-ಇವು ನಾನು ಬೆಂಗಳೂರಿಗೆ 

ಬಂದೊಡನೆಯೇ ಮಾಯವಾದುವು. ಬೆಂಗಳೂರಿಗೆ ಬಂದ ಮೇಲೆ ನಮ್ಮ 

ಹಳ್ಳಿಯ ಸುಖದ ಆಳ ಇಷ್ಟು ಎಂದು ಗೊತ್ತಾಯಿತು. ಎಷ್ಟು? ಎಂದು ಕೇಳು 

ವಿರೋ? ಅದಕ್ಕೆ ಆಳವೇ ಇಲ್ಲ. ಬೆಂಗಳೂರಿನಲ್ಲಿ ನಾಲ್ಕು ದಿನ ಇರುವುದರ 

ಲಿಯೆ ನನಗೆ ಹುಚ್ಚು ಹಿಡಿದಂತಾಯಿಶು. ಹುಚ್ಚು ಹಿಡಿಯದೆ ಮತ್ತೇನು? 

ಆ ಮೋಟಾರುಗಳೋ! ಆ ಬೈಸಿಕಲ್ಲುಗಳೋ! ಆ ಧೂಳೋ! ಇವೆಲ್ಲವನ್ನೂ 

ಮೀರಿಸಿದ ಆ ಜಟಕಾ ಗಾಡಿಗಳೋ! ಅಬ್ಬಬ್ಬ ! ಮನಸ್ಸಿನಲ್ಲೇ "ನಮ್ಮ ಹಳ್ಳಿ 

ಬಿಟ್ಟರೆ ಇನ್ನು ಇಲ್ಲ' ಅಂದುಕೊಂಡುಬಿಟ್ಟೆ.. ಯಾವುದೇ ಆಗಲಿ ಇದ್ದಾಗ 

ಅದರ ಗುಣ ಚೆನ್ನಾಗಿ ಗೊತ್ತಾಗುವುದಿಲ್ಲ ಅಥವಾ ಗೊತ್ತುಮಾಡಿಕೊಳ್ಳಲು 

ಪ್ರಯತ್ನಿ ಸುವುದಿಲ್ಲ. ಇಲ್ಲದಾಗ ಅಯ್ಯೋ ಇಲ್ಲವಲ್ಲಾ! ಹಾಗಿತ್ತು! ಹೀಗಿತ್ತು! 

ಅಂದುಕೊಳ್ಳುತ್ತೇವೆ. ಇಲ್ಲಿ ಗೋಪಾಲಸ್ವಾಮಿ ಮಾತು ಜ್ಞಾಪಕಕ್ಕೆ ಬರು 

ತ್ತದೆ. ಅವನು ಹಾಸ್ಟೆಲಿನಲ್ಲಿದ್ದ ದೊಡ್ಡ ಮನುಷ್ಯರ ಮಗ.  ಒಂದು ದಿನ 

ಅವನನ್ನು ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋದೆ. ಊಟಕ್ಕೆ, 

ಇತರ ಅಡಿಗೆಗಳ ಜೊತೆಗೆ ಮೆಂಥ್ಯ ದ ಹಿಟ್ಟಿನ ಗೊಜ್ಜೂ ಮಾಡಿತ್ತು. 

ಗೋಪಾಲಸ್ವಾಮಿ ಊಟಕ್ಕೆ ಪ್ರಾರಂಭಿಸಿದವು. ಮೊದಲಿನಿಂದ ಕೊನೆಯ 

ವರೆಗೂ ಆ ಹಿಟ್ಟಿನ ಗೊಜ್ಜಿನಲ್ಲೇ ಮುಗಿಸಿಬಿಟ್ಟ. ನಾನು ನಗುತ್ತ “ಇದೇನೋ 



ಸರಸಿಯ ಗೊಂಬೆ ೨೧ 



ಗೋಪು, ಎಲ್ಲಾ ಬಿಟ್ಟು ಬರೀ ಗೊಜ್ಜನೇ ಹಿಡಿದಿದ್ದೀಯಾ?'' ಎಂದು 

ಕೇಳಿದೆ. ಅವನು ಅದಕ್ಕೆ ಉತ್ತರವಾಗಿ “ಲೋ! ಬಿಡೋ! ಇನ್ನೆಲ್ಲಾ 

ಯಾವಾಗಲೂ ಇದ್ದೇ ಇದೆ. ಈ ಗೊಜ್ಜು ನೋಡು ಅಪರೂಪ. ಅದನ್ನ 

ತಿಂದು ಈಗ ಎರಡು ವರ್ಷಗಳ ಮೇಲೆ ಆಗಿತ್ತು. ನನಗೇನೋ ಅದು ಬಲು 

ರುಚಿ!” ಎಂದು ಹೇಳಿ ನಾಲಗೆಯನ್ನು ಚಪ್ಪರಿಸಿದ. ನೋಡಿ, ಅವನಿಗೆ 

ಮೆಂಥ್ಯದ ಹಿಟ್ಟಿನ ಗೊಜ್ಜು ಹೇಗೋ ನನಗೆ ನನ್ಮ ಹಳ್ಳಿ ಹಾಗೆ. ನೀವು 

ಏನಾದರೂ ಅಂದುಕೊಳ್ಳಿ! ನಮ್ಮ ಹಳ್ಳಿಯ ಮಾತನ್ನೆತ್ತಿದ್ದರಿಂದ ಇದ 

ನ್ನೆಲ್ಲಾ ಹೇಳಬೇಕಾಗಿ ಬಂತು. ಹಳ್ಳಿಯ ಮಾತು ಏಕೆ ಎಂದರೆ ಸರಸಿ 

ನಮ್ಮ ಹಳ್ಳಿಯ ಹುಡುಗಿ. ಅಲ್ಲದೆ ಇದರಲ್ಲಿ ನನ್ನ ವಿಷಯವೂ ಸ್ವಲ್ಪ 

ಸೇರಿದೆ. ಹೇಗೆ ಅನ್ನುವಿರೋ- ಮಾರಿಗೆ ಹಾಲಿನಲ್ಲಿ ನೀರು ಬೆರತ ಹಾಗೆ-- 

ಹಾಲು ಮಾರುವವರು ಅಪ್ಪಟವಾದ ಹಾಲನ್ನು ಕೊಡುವುದು ಅವರ ಕಸಬಿಗೆ 

ವಿರುದ್ಧ! ಇದುವರೆಗೆ ನಾನು ಹೇಳಿರುವುದೆಲ್ಲಾ ಅಪ್ಪಟ ನೀರು ಅನ್ನಬಹುದು, 

ಇನ್ನು ಸರಸಿಯ ವಿಷಯ. 


ಸರಸಿ ಎಳೆಯ ಮಗುವಿದ್ದಾಗಿನಿಂದಲೂ ನಾನು ಬಲ್ಲೆ. ನನಗೆ ಉಪ 

ನಯನವಾದ ಎಂಟು ದಿನಗಳಲ್ಲೆ ಅವಳು ಹುಟ್ಟಿದಳು. ಅವಳು ಹುಟ್ಟಿದ್ದೂ 

ನಮ್ಮ ಹಳ್ಳಿಯಲ್ಲಿ. ನನಗೆ ಉಪನಯನವಾಗಿದ್ದೂ ನಮ್ಮ ಹಳ್ಳಿಯಲ್ಲಿ. 

ಅವಳು ಹುಟ್ಟಿದಾಗ ನಾನು ಅವರ ಮನೆಗೆ ಹೋಗಿ ಕೊಬ್ಬರಿ ಸಕ್ಕರೆ ತಿಂದು 

ಕೊಂಡು ಬಂದುದೂ, ನಾಮಕರಣದ ದಿನ ಊಟಕ್ಕೆ ಹೋಗಿದ್ದುದೂ ಎಲ್ಲಾ 

ಜ್ಞಾಪಕವಿದೆ. ಎಷ್ಟೋ ದಿನ ನಾನು ಅವರ ಮನೆಗೆ ಹೋಗಿದ್ದಾಗ ಅವಳನ್ನು 

ಎತ್ತಿ ಮುದ್ದಾಡಿದ್ದೇನೆ. ತೊಟ್ಟಲಲ್ಲಿ ಇಟ್ಟು ತೂಗಿದ್ದೇನೆ. ಮಕ್ಕಳನ್ನು 

ಕಂಡರೆ ನನಗೆ ಏನೋ ಸುಖ. ಅದರಲ್ಲೂ, ಹೂವಿನ ಎಸಳಿನಂತಹ ಎಳೆಯ 

ಮಕ್ಕಳನ್ನು ಕಂಡರಂತೂ ಬಹಳ ಪ್ರೀತಿ. ಒಂದು ದಿನ ಅನರ ಮನೆಗೆ 

ಹೋಗಿದ್ದೆ; ಮಗು ತೊಟ್ಟಿಲಲ್ಲಿ ನಿದ್ರಿಸುತ್ತಿತ್ತು. ಹತ್ತರ ಯಾರೂ ಇರಲಿಲ್ಲ. 

ಎಲ್ಲರೂ ಒಳಗೆ ಎಲ್ಲೋ ಕೆಲಸದಲ್ಲಿದ್ದರು. ನಾನು ಸದ್ದು ಮಾಡದೆ ನಿದ್ರಿಸು 

ತ್ತಿದ್ದ ಹಾಗೆಯೇ ಸರಸಿಯನ್ನು ಎತ್ತಿಕೊಂಡು ಕಾಣದ ಹಾಗೆ ನಮ್ಮ ಮನೆಗೆ 

ಬಂದು ಬಿಟ್ಟಿ | ಅವರ ಮನೆಯವರೆಲ್ಲಾ ಬಹಳ ಗಾಬರಿಯಾಗಿ ಬಿಟ್ಟಿದ್ದರು! 

ನೆನೆಸಿಕೊಂಡರೆ ಈಗಲೂ ನಗು ಬರುತ್ತೆ. ಈಗ ಸ್ವಲ್ಪ ದಿನಗಳ ಕೆಳಗೆ ನಾನು 



೨೨ ಕೆಲವು ಕಥೆಗಳು 



ಸರಸಿಯನ್ನು ಕಂಡಾಗ, ಯಾವುದೋ ಸಂದರ್ಭದಲ್ಲಿ ಅವಳಿಗೆ ಈ ವಿಷಯ 

ಹೇಳಿದೆ. ಅವಳು ಸುಳ್ಳುಸುಳ್ಳೆ ಸಿಟ್ಟು ಕೋರಿಸಿ ವಕ್ರವಾಗಿ ನನ್ನ ಕಡೆ 

ನೋಡಿ ಮುಖನನ್ನು ಆ ಕಡೆ ತಿರುಗಿಸಿಕೊಂಡು ಬಿಟ್ಟಳು. ಸರಸಿ ಮಗುವಿ 

ನಲ್ಲಿ ಎಷ್ಟು ಮುದ್ದಾಗಿದ್ದಳೋ ಬೆಳೆಯುತ್ತ ಬೆಳೆಯುತ್ತ ಮುದ್ದು ಮುದ್ದಾ 

ಗಿಯೇ ಬೆಳೆದಳು. ಐದಾರು ವರ್ಷಗಳ. ಹುಡುಗಿಯಾಗಿದ್ದರೂ ಬಹಳ 

ಚುರುಕು. ಅವಳಿಗೆ ಇದ್ದ ಸ್ನೇಹಿತರಲ್ಲೆಲ್ಲಾ ನಾನೇ ಸ್ವಲ್ಪ ವಯಸ್ಸಾಗಿದ್ದ 

ವನು. ಉಳಿದವರೆಲ್ಲಾ ಹೆಚ್ಚು ಕಡಿಮೆ ಅವಳ ವಾರೆಗೆ. ಸಾಧಾರಣವಾಗಿ 

ಅವಳ ಜೊತೆಗೆ ಆಡುವುದಕ್ಕೆ ಯಾರೂ ಸಿಕ್ಕದೆ ಹೋದರೆ ಆಗ ನನ್ನನ್ನು 

ಹುಡುಕಿಕೊಂಡು ಬರುತ್ತಿದ್ದಳು. ನನ್ನಲ್ಲಿ ಅವಳಿಗೆ ಹೆಚ್ಚು ಸಲಿಗೆ: ಏಕೆಂ 

ದರೆ ಅವಳಿಗೆ ದೇವಸ್ಥಾನದ ತೋಪಿನಿಂದ ದೇವಗಣಗಲೆ ಹೂವು ತಂದು 

ಕೊಡುತ್ತಿದ್ದೆ. ಹೊಳೆಮರಳಿಗೆ ಹೋಗಿ ಅವಳ ಆಟಕ್ಕೆ ದುಂಡಾದ ಸಣ್ಣ 

ಸಣ್ಣ ಕಲ್ಲುಗಳನ್ನು ತಂದು ಕೊಡುತ್ತಿದ್ದೆ. ಒಂದೊಂದು ದಿನ ಸಾಯಂಕಾಲ 

ನಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಏನಾದರೂ ಹಣ್ಣುಗಳನ್ನು 

ಕಿತ್ತುಕೊಡುತ್ತಿದ್ದೆ. ಇಷ್ಟಲ್ಲದೆ ನಮ್ಮ ಮನೆಗೆ ಯಾವಾಗಲಾದರೂ ಬಂದಾಗ 

ಏನಾದರೂ ತಿಂಡಿ ಕೊಡುತ್ತಿದ್ದೆ. ಇಷ್ಟೆಲ್ಲ ಮಾಡಿದ ಮೇಲೆ ಸ್ವಲ್ಪ ಸ್ನೇಹ 

ಇಲ್ಲದೆ ಇರುತ್ತದೆಯೆ? ನನಗೂ ಅವಳೊಂದಿಗೆ ವಿನೋದವಾಗಿ ಸ್ವಲ್ಪ ಕಾಲ 

ಕಳೆಯಬೇಕೆಂದು ಆಸೆ. ಅವಳಿಗೆ ಆಟದ ಮೇಲೆ ಮನಸ್ಸು; ನನಗೆ, ಅವಳ 

ಪ್ರತಿ ಆಟ, ನೋಟ, ಮಾಯ--ಇವುಗಳಲ್ಲಿ ಅವಳ ಶುದ್ಧವಾದ ಎಳೆಯ 

ಮನಸ್ಸು ಹೇಗೆ ಅರಿಯುತ್ತಿದೆ, ನೋಡಬೇಕು ಅನ್ನುವ ಕುತೂಹಲ. . ನೀವು 

ಮಕ್ಕಳೊಡನೆ ಮಕ್ಕಳಾಗಿ ಆಡಿದರೆ ಆಗ ನಿಮಗೆ ಅದರ ಸುಖ ಆನಂದಗಳು 

ಗೊತ್ತಾಗುತ್ತವೆ. “ನನ್ನ ಬಳಿಗೆ ಬರುನ ಚಿಕ್ಕ ಮಕ್ಕಳನ್ನು ತಡೆಯಬೇಡಿ; 

ಏಕೆಂದರೆ ಸ್ಪರ್ಗವು ಅಂತಹ ಚಿಕ್ಕ ಮಕ್ಕಳಿಂದ ತುಂಬಿ ತುಳುಕುತ್ತಿದೆ" 

ಎಂದು ಹೇಳಿದ ಏಸುವಿನ ಮಾತು ಕಟ್ಟಿದ ಸಾರ ಎಂದು ನನಗೆ ತೋರುತ್ತಿದೆ. 

ಅಂತಹ ಸ್ವರ್ಗದ ಬಾಗಿಲನ್ನು ತೆಗೆದು, ಸರಸಿ ಎಷ್ಟೋ ಸಾರಿ ನನ್ನನ್ನು 

ಕೈಹಿಡಿದು ಅದರ ಒಳಕ್ಕೆ ಕರೆದುಕೊಂಡು ಹೋಗಿದ್ದಾಳೆ. ನಾನು ಇಲ್ಲಿ 

ಬರೆಯುವುದೆಲ್ಲಾ ಅವಳಿಂದ ಕಲಿತ ವಿಷಯಗಳು. ನಾನು ಅವಳೊಡನೆ 

ಇರುತ್ತಿದ್ದಷ್ಟು ಹೊತ್ತು, ನನಗೆ ಹೊರಗಿನ ಪ್ರಪಂಚವೆಲ್ಲಾ ಮಾಯನಾಗಿ 



ಸರಸಿಯ ಗೊಂಬೆ  ೨೩

ಅವಳದ್ದೇ ಬೇರೇ ಒಂದು ವಿಚಿತ್ರವಾದ ಪ್ರಪಂಚದಲ್ಲಿ ತೇಲುತ್ತಿದ್ದ ಹಾಗೆ 

ಅನುಭವವಾಗುತ್ತಿತ್ತು. ಅಲ್ಲಿ ಇರುವವರೆಗೂ, ಅವಳಿಗೂ ನನಗೂ ಇದ್ದ 

ವಯೋಭೇದವೇ ಕಾಣುತ್ತಿರಲಿಲ್ಲ... ಅವಳ ಪ್ರಪಂಚದ ಧರ್ಮವೇ ಬೇರೆ. 

ಅಲ್ಲಿ ನಿರ್ಜೀವವಾದ ಅಥವಾ ಅನುಪಯುಕ್ತವಾದ ಪದಾರ್ಥ ಒಂದೂ ಇಲ್ಲ, 

ಅಲ್ಲಿ ಕಲ್ಲುಮಣ್ಣುಗಳೇ ತಿಂಡಿ ತೀರ್ಥ, ಭಕ್ಷ್ಯಭೋಜ್ಯ! ದುಡ್ಡುಕಾಸು! 

ಒಂದೊಂದು ಸಾರಿ ಅವಳು ಅಂಗಡಿ ಇಟ್ಟುಕೊಂಡು ವ್ಯಾಪಾರದ ಆಟ ಆಡು 

ತ್ತಿದ್ದಳು. ಸೊಪ್ಪು ಸದೆ ಇವೇ ಅವಳ ಸರಕು. ಸಣ್ಣ ಸಣ್ಣ ಕಲ್ಲುಗಳೇ 

ಕೊಳ್ಳುವುದಕ್ಕೆ ದುಡ್ಡು. ಕಲ್ಲುಗಳಿಗೆ ಅವುಗಳ ಗಾತ್ರಕ್ಕೆ ತಕ್ಕ ಬೆಲೆ! ಒಂದು 

ದಿನ ಅವಳೂ ಅವಳ ಸಂಗಾತಿಗಳೂ ಸೇರಿ ಗೊಂಬೆ ಮದುವೆ ಆಟ ಎಂದು 

ಆಡುತ್ತಿದ್ದರು. ನಾನು ಅವರಿಗೆ ತಿಳಿಯದ ಹಾಗೆ ದೂರ ನಿಂತು ನೋಡು 

ತ್ತಿದ್ದೆ. ನನಗೆ ಅದು ಕೇವಲ ಆಟ ಎಂದು ತೋರುತ್ತಿತ್ತು. ಆದರೆ ಅವರಿಗೆ 

ಹಾಗೆ ತೋರುತ್ತಿತ್ತೇನು? ಎಂದಿಗೂ ಇಲ್ಲ. ಅವರ ಆಟದ ರೀತಿಯನ್ನು 

ನೋಡಿದರೆ ಆಗ ಅದು ಗೊತ್ತಾಗುತ್ತದೆ. ಅವರಿಗೆ ಆ ಗೊಂಬೆಗಳೆಲ್ಲಾ ನಮ್ಮ 

ಹಾಗೆಯೇ ಮನುಷ್ಯರು! ಚಿಕ್ಕ ಮಕ್ಕಳಿಗೆ ಅವು ಮಾತನಾಡಬಲ್ಲವು, ನಗ 

ಬಲ್ಲವು, ಅಳಬಲ್ಲವು, ಊಟ ಮಾಡಬಲ್ಲವು, ನಿದ್ದೆ ಮಾಡಬಲ್ಲುವು, ಅವರಿಗೆ 

ಇರುವ ಕಲ್ಪನಾ ಶಕ್ತಿಗೆ ಮೇರೆ ಇದ್ದಂತೆ ನನಗೆ ತೋರುವುದಿಲ್ಲ. ಅವರು 

ಎರಡು ಕಾಲುಗಳ ಮಧ್ಯದಲ್ಲಿ ಒಂದು ಉದ್ದವಾದ ಕೋಲನ್ನು ಇಟ್ಟು 

ಕೊಂಡು ಕುದುರೆ ಆಟವಾಡುವುದನ್ನು ನಿಮ್ಮಲ್ಲಿ ಅನೇಕರು ನೋಡಿರುವಿರಿ. 

ಬಾಲ್ಯದ ಮೇರೆ ದಾಟಿದ ನಮಗೆ ಅದು ಕಟ್ಟಿಗೆ! ಆದರೆ ಅವರ ಮುಖವನ್ನು 

ನೋಡಿ; ಯಾವ ಸವಾರನಿಗೂ ಇಲ್ಲದ ಹುಮ್ಮಸು ಇರುತ್ತದೆ! ನಮ್ಮ ದೇಹ 

ದೊಡ್ಡದಾದಹಾಗೆಲ್ಲ ನಮ್ಮ ಕಲ್ಪನಾಶಕ್ತಿ ಚಿಕ್ಕದಾಗುತ್ತ ಹೋಗುತ್ತದೆ ಎಂದು 

ತೋರುವುದು! ನೀವು ಸಮಯ ಬಿದ್ದಾಗ ಅವರಿಗೆ ಹುಣಸೆಯ ಮರ ಬೇವಿನ 

ಮರದ ಕಥೆಯನ್ನು ಹೇಳಿ. ನಾಳೆ ಅವರು ಆ ಮರಗಳ ಹತ್ತಿರ ಹೋಗಿ 

ಅವುಗಳೊಡನೆ ಮಾತನಾಡಿ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಾರೆ. 

ತಾವು ನೋಡಿದ ಎಲ್ಲಾ ಪದಾರ್ಥಗಳಿಗೂ ಅವರು ಜೀವಕಳೆಯನ್ನು ತುಂಬಿ, 

ತಮ್ಮ ದಾರಿಗೆ ಎಳೆದುಕೊಂಡು ತಮ್ಮ ಆಟಗಳಲ್ಲಿ ಭಾಗಿಗಳನ್ನಾಗಿ ಮಾಡಿ 

ಕೊಳ್ಳುತ್ತಾರೆ. ಇದು ಅವರ ಕಲ್ಬನಾಶಕ್ತಿ-ಅನರ ಅಪೂರ್ವವಾದ ಪ್ರಸಂಚದ 



೨೪ ಕೆಲವು ಕಥೆಗಳು 



ಧರ್ಮ, ಈಗಲೂ ಆ ದಿನಗಳನ್ನೆಲ್ಲ ನೆನೆಸಿಕೊಂಡರೆ ನನ್ನ ಪ್ರತಿ ರಕ್ತನಾಳ 

ಗಳಲ್ಲೂ ಆನಂದದ ಪ್ರವಾಹ ಹರಿಯುತ್ತದೆ. ಆಗ ಸಾಕ್ಷಾತ್ತಾಗಿ ಅನುಭವಿಸು 

ತ್ತಿದ್ದವನಿಗೆ ಈಗ ನೆನಪು ಮಾತ್ರ! ದೊಡ್ಡ ನಿಧಿಯನ್ನು ಕನಸಿನಲ್ಲಿ ಕಂಡು 

ಸುಖಪಟ್ಟ ಹಾಗೆ! ನಾನೇನೋ ಜ್ಞಾಪಿಸಿಕೊಳ್ಳುತ್ತಾ ಇರುತ್ತೇನೆ. ಆದರೆ 

ಸರಸಿ ಒಂದು ದಿನ ಒಂದು ಫಳಿಗೆಯಾದರೂ ಜ್ಞಾಪಿಸಿಕೊಳ್ಳುವಳೇ? ಜ್ಞಾಪಿ 

ಸಿಕೊಂಡಾಳು! ಅಥವಾ ಹೇಗೋ! ಹೇಳುವುದು ಹೇಗೆ! 


ನಾನು ನನಗೆ ಬೇಸರವಾದಾಗಲೆಲ್ಲಾ, ಅಥವಾ ಅವಳಿಗೆ ಜೊತೆಗೆ ಆಡು 

ವುದಕ್ಕೆ ಇನ್ಯಾರೂ ಸಿಕ್ಕದೆ ಇದ್ದಾಗಲೆಲ್ಲಾ, ನಾವಿಬ್ಬರೂ ಒಟ್ಟಿಗೆ ಸ್ವಲ್ಪ 

ಹೊತ್ತು ಕಾಲಕಳೆಯುತ್ತಿದ್ದೆವು. ಅವಳಿಗೆ ಭಕ್ತಿಯೋ ಪ್ರೀತಿಯೋ ಏನೋ 

ಹೇಳಲಾರೆ, ಅಂತು ಒಂದು ವಿಧವಾದ ಆದರಣೀಯವಾದ ಭಾವನೆ. ಆರು 

ವರ್ಷದ ಹುಡುಗಿಯಾಗಿದ್ದರೂ ಬಲು ಮಾತಿನ ಗಿಣಿ, ಇಷ್ಟರ ಮಧ್ಯೆ ನಾಚಿಕೆ 

ಬೇರೆ! ತನಗೆ ಗುರುತಿಲ್ಲದ ಗಂಡು ಹುಡುಗರು ಯಾರಾದರೂ ಎದುರಿಗೆ ಬಂದು 

ಬಿಟ್ಟರೆ ಹೊಸದಾಗಿ ಮದುವೆಯಾದ ಹುಡುಗಿಯ ಹಾಗೆ ಆಡಿ, ಓಡಿ ಬಿಡುತ್ತಿ 

ದ್ದಳು. ಆದರೆ ನನ್ನಹತ್ತಿರ ಅದೆಲ್ಲಾ ಇಲ್ಲ. ಬಹಳ ಸಲಿಗೆ. ನಾನೆಲ್ಲಿಯಾದರೂ 

ಮಧ್ಯಾಹ್ನ ನಮ್ಮ ಮನೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದರೆ, ಮೆಲ್ಲಗೆ ಸಪ್ಪಳಿಲ್ಲದೆ 

ಬಂದು ಕಿವಿಯಲ್ಲಿ ಕಿರ್ರನೆ ಊದಿಬಿಡುವಳು ಅಥವಾ ಜಕ್ಕಟಗುಳ್ಳೆ ಇಟ್ಟು ಬಿಡು 

ವಳ್ಳು ಇಲ್ಲವೆ, ಕಾಲುಕೆರೆದುಬಿಡುವಳು. ಅಂತು ಏನಾದರೂ ಮಾಡಿ ನನ್ನನ್ನು 

ಎಬ್ಬಿಸಿ ಬಿಡಬೇಕು. ನಾನು ನಿದ್ರೆಯಿಂದ ಎಚ್ಚರವಾಗಿ ಗಾಬರಿಯಿಂದ ಕಣ್ಣು 

ಬಿಟ್ಟರೆ ಅವಳು ದೂರ ಮೂಲೆಗೆ ಹೋಗಿ ನಿಂತುಕೊಂಡು ತನ್ನ ಪುಟ್ಟ ಎಳೆಯ 

ದೇಹವನ್ನು ಹಾಗೆ ಹೀಗೆ ಬಳುಕಿಸುತ್ತ, ಮುದ್ದಾ ಗಿ ಮಿಂಚುವ ಕಣ್ಣುಗಳನ್ನು 

ಇನ್ನಷ್ಟು ಬೆ. ದೊಡ್ಡದಾಗಿ ಬಿಡುತ್ತ, ಚಪ್ಪಾಳೆ ತಟ್ಟಿ ಕಿಲಕಿಲನೆ ನಕ್ಕುಬಿಡುವಳು. 

ನನಗೆ ಆ ಚಿಕ್ಕ ರತಿಯನ್ನು ಕಂಡರೆ ಮನಸ್ಸಿಗೆ ಬಹಳ ಸುಖವಾಗುತ್ತಿತ್ತು. 

ಒಂದು ದಿನ ಹಾಗೆಯೇ ಮಲಗಿಕೊಂಡಿದ್ದೆ. ನಿದ್ದೆ ಬಂದಿರಲಿಲ್ಲ. ಹೊರಗೆ 

ಸರಸಿ ಬರುತ್ತಿರುವುದು ಗೊತ್ತಾಯಿತು. ತಟ್ಟನೆ ಕಣ್ಣು ಮುಚ್ಚಿಕೊಂಡು ನಿದ್ದೆ 

ಬಂದೆ ಹಾಗೆ ನಟಸಿದೆ. ಸರಸಿ ಒಳಗೆ ಬಂದು ನನ್ನನ್ನು ನೋಡಿ, ಒಳ್ಳೇ 

ಸಮಯೆ ಅಂದುಕೊಂಡಿರಬೇಕು. ಕಿವಿಯಲ್ಲಿ ಊದುವುದಕ್ಕೆಂದು ಹತ್ತಿರ 

ಬಂದಳು. ನಾನು ಹತ್ತಿರ ಬರುವವರೆಗೂ ಸುಮ್ಮನಿದ್ದು ಆಮೇಲೆ ಸರ್ರನೆ 



ಸರಸಿಯ ಗೊಂಬೆ ೨೫ 



ಅವಳನ್ನು ಹಿಡಿದು ಎಳೆದು ತಬ್ಬಿ ಕೊಂಡು ಅವಳ ಮುಖಕ್ಕೆ ಚೆನ್ನಾಗಿ ಒಂದು 

ಮುತ್ತು ಕೊಟ್ಟೆ... ಅವಳು ಬಿಡಿಸಿಕೊಂಡು! ಹೋಗಲು ಪ್ರಯತ್ನ ಪಟ್ಟಳು. 

ಸಾಧ್ಯವಾಗಲಿಲ್ಲ. ನಾನು “ನನಗೆ ಒಂದು ಸಿಹಿಯಾದ ಮುತ್ತು ಕೊಟ್ಟರೆ 

ಬಿಡುತ್ತೇನೆ” ಎಂದೆ. ಕೂಡಲೆ ಅವಳು ನನ್ನ ಮುಖಕ್ಕೆ ತನ್ನ ಮುಖನನ್ವಿಟ್ಟು 

ಒಂದು ಮುತ್ತು ಕೊಟ್ಟಳು. ನನಗೆ ಅವಳ ಮುಖನನ್ನೂ ಆ ಕಣ್ಣುಗಳೆ ಸೊಬ 

ಗನ್ನೂ ನೋಡಿ, ಬಾಲಚಂದ್ರನು ಮಿರುಗುವ ಎರಡು ನಕ್ಷತ್ರಗಳೊಡನೆ ಭೂಮಿಗೆ 

ಇಳಿದಂತಾಯಿತು. ಸರಸಿ ಎಂತಹ ಮುತ್ತು ಕೊಟ್ಟಳು! ಅವಳ ಮಿತವಾದ 

ದೇಹದಲ್ಲಿ ಅಡಗಿದ್ದ ಅನಂತವಾದ ಹೃದಯದ, ಅಮಿತವಾದ ಪ್ರೇಮವೋ, 

ಅಭಿಮಾನವೋ, ಅವಳ ಆ ಎಳಸಾದ ತುಟಿಗಳನ್ನು ಹಾಯ್ದು ಬಂದು ನನ್ನ 

ಹೃದಯಕ್ಕೆ ಇಳಿದ ಹಾಗಾಯಿತು. ಗಂಭೀರವಾಗಿ ಅಡಗಿ ಈ ವಿಶ್ವವನ್ನೇ ವ್ಯಾಪಿ 

ಸಿರುವ ಅನಂತನಾದ ದೈವಿಕ ಪ್ರೇಮದ ಮೇಲಿನ ಮಾಯೆಯೆಂಬ ಮುಸುಕನ್ನು 

ಚಿಕ್ಕಮಕ್ಕಳು ತಮ್ಮ ಚಿಗುರಿನಂತಹ ತುಟಿಗಳ ಅರ್ಥವಿಲ್ಲದ ಚುಂಬನದಿಂದ 

ಒಂದೇ ಸಲಕ್ಕೆ ಹಾರಿಸಿ ಬಿಡುತ್ತಾರೆ ಎಂದು ನನಗೆ ಬೋಧಿಯಾಗುತ್ತದೆ. ಸರಸಿ 

ಮುತ್ತು ಕೊಟ್ಟು ನನ್ನ ಸಾಲವನ್ನು ತೀರಿಸಿದಮೇಲೆ, ನಾನು ಹಾಸ್ಯವಾಗಿ 

“ಸರಸಿ, ನೀನು ಹೀಗೆಯೇ ಮಾಡುತ್ತಿರು; ನಿನ್ನನ್ನು ನಿಮ್ಮಪ್ಪನಿಗೆ ಹೇಳಿ 

ಒಂದು ಕೋರೆ ತಿಮ್ಮಣ್ಣನಿಗೆ ಮದುವೆ ಮಾಡಿಸಿ ಬಿಡುತ್ತೇನೆ! ಆಗ ಹೀಗೆಲ್ಲಾ 

ಮಾಡು, ನಿನಗೆ ಚೆನ್ನಾಗಿ ಪರಚಿಬಿಡುತ್ತೆ !” ಅಂದೆ. ಅವಳಿಗೆ ಸ್ವಲ್ಪ ಸಿಟ್ಟು 

ಬಂತು. ಚಂದ್ರನಂತಹ ಮುಖವನ್ನು ಸೌತೇಕಾಯಿಯಹಾಗೆ ಮಾಡಿಕೊಂಡು 

ಕೊರಳನ್ನು ಒಂದು ವಿಧವಾಗಿ ಕೊಂಕಿಸಿ ""ಊ" ಎಂದಳು. ಅಷ್ಟಕ್ಕೇ 

ಸುಮ್ಮನಾಗಲಿಲ್ಲ. ನನ್ನ ಮಾತಿಗೆ ಸರಿಯಾಗಿ ಮಾತನಾಡಬೇಕೆಂದು “ನಿನ್ನ 

ಹೆಂಡತಿ ಯಾರು ಗೊತ್ತೇ?" ಎಂದು ಕೇಳಿದಳು. ನಾನು ತಮಾಷೆಗೆ 

""ನೀನು'' ಅಂದೆ. ಅವಳು ದೊಡ್ಡದಾಗಿ ನಕ್ಕು ಕೈತಟ್ಟುತ್ತ “ಹಾಗಾದರೆ 

ನೀನು ಕೋರೆಯ ತಿಮ್ಮಣ್ಣನಾಗಬೇಕಾಯಿತಲ್ಲ” ಅಂದುಬಿಟ್ಟಳು! ಅಬ್ಬಾ [ 

ಸರಿಯಾಗಿಯೇ ಮಾತನಾಡಿದಳು ಅಂದುಕೊಂಡು “ಹೌದು! ಹೌದು! ಮರೆ 

ತಿದ್ದೆ. ನಾನು ನಿನ್ನ ಮದುವೆಯಾಗುವುದಿಲ್ಲ. ಹಾಗಾದರೆ ನನಗೆ ಯಾರನ್ನು 

ಗೊತ್ತುಮಾಡಿರುವೆ!?' ಎಂದು ಕೇಳಿದೆ. ಅವಳು “ಬಿಟ್ಟರೆ ಹೇಳುತ್ತೇನೆ ? 

ಎಂದು ಹೇಳಿದಳು. ನಾನು ಬಿಟ್ಟೆ. ಅವಳು ದೂರ ಓಡಿಹೋಗಿ, ಬಾಗಿಲಿನ 



೨೬ ಕೆಲವು ಕಥೆಗಳು 



ಆಚೆ ನಿಂತುಕೊಂಡು ಬಗ್ಗಿ ನೋಡಿ “ಕಪ್ಪನೆ ಕರಡಿ? ಎಂದು ಹೇಳಿ ನಿಲ್ಲದೆ 

ಓಟ ಕಿತ್ತಳು. ನನಗೆ ಅವಳ ಆಟ, ಅವಳ ಮಾತು ಕೇಳಿ ಬಹಳ ಆನಂದ 

ವಾಯಿತು. ಸರಸಿ ಬಹಳ ಸರಸಿಯಾಗುತ್ತಾಳೆ ಅಂದುಕೊಂಡೆ. ಅವಳಿಗೆ 

ಒಳ್ಳೆಯ ತಕ್ಕ ಗಂಡ ಸಿಕ್ಕಲಿ ಎಂದು ಮನಸ್ಸಿನಲ್ಲೇ ಹಾರೈಸಿದೆ. 



೨ 


ಸರಸಿಗೆ ಅವಳ ಏಳನೆಯ ಹುಟ್ಟಿದ ಹಬ್ಬದ ದಿನ ಒಂದು ಗೊಂಬೆ 

ಬಹುಮಾನವಾಗಿ ಕೊಟ್ಟಿ. ಅದು ಅರಗಿನ ಗೊಂಬೆ. ಬೆಣ್ಣೆ ಕೃಷ್ಣನ 

ವಿಗ್ರಹ. ನಾನು ಬೆಂಗಳೂರಲ್ಲಿ ಯಾವುದೋ ಅಂಗಡಿಗೆ ಹೋಗಿದ್ದಾಗ 

ಅದನ್ನು ನೋಡಿದೆ. ಬಹಳ ಚೆನ್ನಾಗಿತ್ತು. ಸರಸಿಗೆ ಅದನ್ನು ತೆಗೆದು 

ಕೊಂಡು ಹೋಗಿ ಕೊಟ್ಟರೆ ಚೆನ್ನಾಗಿರುತ್ತೆ ಅಂದುಕೊಂಡು ಅದನ್ನು ಕೊಂಡು 

ತಂದಿದ್ದೆ. ಸರಸಿಗೆ ಅವಳ ಹುಟ್ಟಿದ ಹಬ್ಬದ ದಿನ ಬಹಳ ಸಡಗರ. ಹಿಂ 

ದಿನ ರಾತ್ರೆಯೆಲ್ಲಾ ಬಹುಶಃ ಅವಳಿಗೆ ನಿದ್ದೆ ಬಂದಿರಲಾರದು. ಮೂರು ದಿನ 

ಗಳ ಹಿಂದೆಯೆ ಅವಳು ನನ್ನ ಹತ್ತಿರ ಬಂದು, ನನ್ನ ಹೆಸರು ಹಿಡಿದು ಕರೆದು 

"ಊ-ಊ-ಮತ್ತೇ, ನಾಳೆ ಅಲ್ಲ. ಅದರ ನಾಳೆ ನನ್ನ ಹುಟ್ಟದ ಹಬ್ಬ; 

ನೀನೂ ಊಟಕ್ಕೆ ಬರಬೇಕು. ಮರೀಬೇಡಾ ಮತ್ತೇ, ನೋಡು!” ಎಂದು 

ಔತಣ ಹೇಳಿ ಹೋಗಿದ್ದಳು. ಹುಟ್ಟಿದ ಹಬ್ಬದ ದಿನ ಅವಳು ಎಲ್ಲರಿಗಿಂತಲೂ 

ಮುಂಚೆಯೇ ಎದ್ದು ಎರದುಕೊಂಡು ಚೆನ್ನಾಗಿ ಶೃಂಗಾರ ಮಾಡಿಕೊಂಡು 

ಬಂದು ನನಗೆ ತೋರಿಸಿದಳು. ಅವಳು ಹೊಸದಾಗಿ ಏನು ಇಡಿಗೆತೊಡಿಗೆ 

ಹಾಕಿಕೊಂಡರೂ ನನಗೆ ಮೊದಲು ಬಂದು ತೋರಿಸಬೇಕು. ನಾನು ಬಹಳ 

ಚೆನ್ನಾಗಿದೆ ಎಂದು ತಲೆಯನ್ನು ತೂಗಬೇಕು. ಅಲ್ಲಿಯವರೆಗೂ ಅವಳಿಗೆ 

ಸಮಾಧಾನನಿರುವುದಿಲ್ಲ. ಊಟಕ್ಕೆ ಕೂತುಕೊಳ್ಳುವಾಗಲಂತೂ ಅವಳ 

ಮಾತೇ ಮಾತು! ನನ್ನ ಹತ್ತಿರ ಕೊತುಕೊಳ್ಳಬೇಕೆಂದು ಆವಳ ಇಷ್ಟ. 

ಹೆಂಗಸರ ಮಧ್ಯೇ ಕುಳಿತುಕೊಳ್ಳಲಿ ಎಂದು ಅವಳ ತಾಯಿ ಹೇಳಿದರು. 

“ನೀನು ಈ ದಿನ ಹೆಂಗಸರ ಮಧ್ಯೆ ಕುಳಿತುಕೋಬೇಕಮ್ಮ” ಎಂದು ನಾನೂ 

ಹೇಳಿದೆ. ಅವಳು ಕೇಳಳು. ಕೊನೆಗೆ ನೀನೂ “ಅಲ್ಲೇ ಬಾ" ಎಂದಳು. 

ನನಗೆ ವಿಸರೀತ ನಗು ಬಂತು! "ಸರಿ ಚೆನ್ನಾಯ್ತು ! ನಾನೇನು ನಿನ್ನಹಾಗೆ 



ಸರಸಿಯ ಗೊಂಬೆ ೨೭ 



ಹೆಂಗಸೆ?” ಎಂದೆ. ಕೊನೆಯಲ್ಲಿ, ಅವಳು ಹೆಂಗಸರ ಮಧ್ಯೆ ಕುಳಿತುಕೊಳ್ಳ

ಬೇಕೆಂದೂ, ನಾನು ಅವಳಿಗೆ ಕಾಣುವ ಹಾಗೆ ಗಂಡಸರ ಮಧ್ಯೆ ಕುಳಿತುಕೊಳ್ಳ

ತಕ್ಕದ್ದೆಂದೂ ತೀರ್ಮಾನವಾಗಿ ಚರ್ಚೆ ಮುಗಿಯಿತು. 


ಊಟವಾಯಿತು ಗಂಡಸರೆಲ್ಲಾ ತಾಂಬೂಲಕ್ಕೆ ಕುಳಿತರು. ನಾನೂ 

ಅವರ ಮಧ್ಯೆ ಕುಳಿತಿದ್ದೆ. ಸರಸಿ ಹಿಂದಿನಿಂದ ಓಡಿಬಂದು ನನ್ನ ಬೆನ್ನು ಬಾಚಿ 

ಕೊಂಡು, ಸಾಯಂಕಾಲ ಆ ಕಡೆಗೆ ಬರಬೇಕೆಂದು ಕಿವಿಯಲ್ಲಿ ಊದಿ ಹೇಳಿ 

ದಳು. ನಾನು "ಉಹು' ಎಂದರೆ ನನಗೆ ಗೊತ್ತು. ಸಾಯಂಕಾಲ ಆರತಿ 

ಚೆನ್ನಾಗಿ ನಡೆಯುವುದಿಲ್ಲ ಎಂದು. ಅಲ್ಲದೆ ನನಗೂ ಆ ಬಾಲಸುಂದರಿ 

ಹಸೆಯ ಮೇಲೆ ಕುಳಿತಿರುವುದನ್ನು ನೋಡಬೇಕೆಂದು ಆಸೆಯಾಯಿತು. ಆಗಲಿ 

ಎಂದು ಒಪ್ಪಿ ಕೊಂಡೆ. 



ಸಾಯಂಕಾಲ ಅವರ ಮನೆಗೆ ಹೋದೆ. ಹೋಗುವಾಗ ಜೊತೆಯಲ್ಲಿ 

ಬೆಂಗಳೂರಿಂದ ತಂದಿದ್ದ ಬೆಣ್ಣೆ ಕೃಷ್ಣನ ಗೊಂಬೆಯನ್ನು ತೆಗೆದುಕೊಂಡು 

ಹೋದೆ. ಒಳಗಡೆ ದೊಡ್ಡ ಹಜಾರದಲ್ಲಿ ಆರತಿಯಾಗುವುದಕ್ಕೆ ಏರ್ಪಾಡಾ 

ಗಿತ್ತು. ನಾನು ಜಗುಲಿಯ ಮೇಲೆ ಹೋಗಿ, ಕಿಟಕಿಗೆ ಸ್ಪಲ್ಪ ಓರೆಯಾಗಿ 

ನಿಂತುಕೊಂಡೆ. ಒಳಗೆ ಕಿಟಕಿಗೆ ಎದುರಾಗಿ ಹಸೆಯಮೇಲೆ ಸರಸಿ ಅವಳ 

ಇಬ್ಬರು ತಂಗಿಯರು ಮತ್ತು ಒಂದು ಗಂಡು ಮಗುವೂ ಕುಳಿತಿದ್ದರು. ನನಗೆ 

ನೋಡಿ ಬಹಳ ಆನಂದವಾಯಿತು. ಕ್ಷಣಕಾಲ ನನ್ನ ಹೃದಯವು ಎಲ್ಲವನ್ನೂ 

ಮರೆತು ಆ ಆನಂದವನ್ನು ಮಾತ್ರ ಅನುಭವಮಾಡಿತು. ಅವಳು ಕೈಕಾಲು 

ಗಳನ್ನು ಮುದುರಿಕೊಂಡು ಕುಳಿತಿದ್ದೆ ಆ ಸೊಗಸೋ, ಆ ಎಳೆಯ ಸುಂದರ 

ವಾದ ಮುಖವೋ, ಅದರ ತುಂಬಾ ಆ ವಿಶಾಲವಾದ ಎಳೆ ಮಿಂಚಿನ ಕಣು 

ಗಳೋ, ಹಸೆಯ ನಿಯಮನನ್ನನುಸರಿಸಿ ಸ್ವಲ್ಪ ಬಾಗಿದ ಅವಳ ಕೊರಳ 

ಕೊಂಕೋ, ಇವು ಒಂದೊಂದರಲ್ಲಿಯೂ ಒಟ್ಟಿನಲ್ಲಿಯೂ ಕಾಣಬರುತ್ತಿದ್ದ 

ಆ ಗಾಂಭೀರ್ಯವೋ!- ನನ್ನ ಕಣ್ಣಣಿಯೆ ನೋಡಿದೆ. ನನ್ನ ಮನಸ್ಸಿಗೆ, ಆ 

ಕ್ಷಣವೇ ತಕ್ಕ ಗಂಡು ಸಿಕ್ಕಿಬಿಟ್ಟರೆ ಆ ಪುಟ್ಟ ವಧುವಿಗೆ ಅಲ್ಲಿಯೇ ಮದುವೆ 

ಮಾಡಿಬಿಡಬಹುದಲ್ಲಾ ಅನ್ನಿಸಿತು. ಯೋಗ್ಯನೂ ತಕ್ಕವನೂ ಆದ ಗಂಡ 

ಸಿಕ್ಕಲಿ ಎಂದು ಪುನಃ ಪುನಃ ಹಾರೈಸಿದೆ. ಇನ್ನೂ ಆರತಿ ಆಗಿರಲಿಲ್ಲ. ಬಂ 

ದಿದ್ದ ಮುತ್ತೈದೆಯರೆಲ್ಲಾ ಒಬ್ಬೊಬ್ಬರಾಗಿ ತಮತಮಗೆ ಬಂದ ಹಾಡುಗ 



೨೮ ಕೆಲವು ಕಥೆಗಳು 



ಳನ್ನು ಹೇಳುತ್ತಿದ್ದರು. ಸರಸಿ ಹಸೆಯಮೇಲೆ ಕುಳಿತು ಬಹಳ ಹೊತ್ತಾಗಿ 

ತ್ತೆಂದು ತೋರುತ್ತದೆ. ಎಷ್ಟು ಹೊತ್ತು ಸುಮ್ಮನೆ ಕಲ್ಲಿನ ಗೊಂಬೆಯ ಹಾಗೆ 

ಕುಳಿತಿರುವುದಕ್ಕಾಗುತ್ತದೆ? ಅವಳಿಗೆ ಬಹಳ ಹೊತ್ತು ಗಂಭೀರವಾಗಿ ಕುಳಿತು 

ಅಭ್ಯಾಸವಿಲ್ಲ! ಸ್ವಲ್ಪ ಸ್ವಲ್ಪವಾಗಿ ಕೈಕಾಲು ಅಲ್ಲಾಡಿಸುವುದು, ಸೆರಗು ಸರಿ 

ಯಾಗಿದ್ದರೂ ಪುನಃ ಪುನಃ ಸರಿಮಾಡಿಕೊಳ್ಳುವುದು--ಹೀಗೆ ಪ್ರಾರಂಭಿಸಿ ಬರ 

ಬರುತ್ತ ತಲೆಯನ್ನು ಪೂರ್ತಿಯಾಗಿ ಎತ್ತಿ ಕಿಟಿಕಿಯ ಹೊರಗೆ ನಾನು ನಿಂತು 

ದುದನ್ನು ನೋಡಿದಳು. ನೋಡಿದಳೋ ಇಲ್ಲವೋ ಕಣ್ಣುಗಳು ಅಗಲವಾ 

ದವು. ಅವುಗಳ ತುಂಬ ಮಿಂಚು! ತಾನು ಹಸೆಯ ಮೇಲೆ” ಕುಳಿತಿದ್ದುದನ್ನು 

ಮರೆತುಬಿಟ್ಟಳು ! ನನಗೆ “ಇನ್ನೇನು ಗತಿ! ಎದ್ದು ಓಡಿ ಬಂದುಬಿಡುತ್ತಾಳೆ 

ಯೇನೋ!” ಎಂದು ಭಯವಾಯಿತು. ಓಡಿ ಬರಲಿಲ್ಲ. ಆದರೆ ಏನು! 

ಥಟ್ಟನೆ ಹಸೆ ಮುಣೆಯಮೇಲೆ ಎದ್ದು ನಿಂತುಕೊಂಡು ಕೈ ತಟ್ಟುತ್ತ, ನನ್ನ 

ಹೆಸರು ಹಿಡಿದು ಕೂಗಿ “ಬಾ! ಬಾ! ಒಳಗೆ ಬಂದು ಕೂತುಕೊ?' ಎಂದು 

ಕೂಗಿಬಿಟ್ಟಳು! ಶುದ್ಧ ಹುಡುಗಿ! ಸ್ವಲ್ಪವೂ ಗೊತ್ತಿಲ್ಲ. ಅಲ್ಲಿದ್ದ ಹೆಂಗಸ 

ರೆಲ್ಲಾ ಕಿಟಿಕಿಯ ಕಡೆ ನೋಡಿದರು. ಇವರೆಲ್ಲಾ ನನ್ನ ಕಡೆ ನೋಡುವಹಾಗೆ 

ಮಾಡಿಬಿಟ್ಟಳಲ್ಲಾ--ಎಂದು ನನಗೆ ಬಹಳ ನಾಚಿಕೆಯಾಯಿತು. ಕಿಟಕಿ 

ಯಿಂದ  ಸ್ವಲ್ಲ ಪಕ್ಕಕ್ಕೆ ಹೋಗಿ "ಸುಮ್ಮನಿರು ಬರುತ್ತೇನೆ” ಎಂದು ಹೇಳುವ 

ಹಾಗೆ ಕೈಸನ್ನೆ ಮಾಡಿದೆ. ಆಗ ಪುನಃ ಹಸೆಯಮೇಲೆ ಕುಳಿತುಕೊಂಡಳು. 

ಆರತಿಯಾಗುವುದಕ್ಕೆ ಮುಂಚೆ ನಾನು ಸರಸಿಯ ತಾಯಿಯನ್ನು ಕರೆದು, 

ನಾನು ತೆಗೆದುಕೊಂಡು ಹೋಗಿದ್ದ ಗೊಂಬೆಯನ್ನು ಅವರ ಕೈಲಿಟ್ಟು "ಇದು 

ಸರಸಿಗೆ, ಅವಳ ಹುಟ್ಟಿದ ಹಬ್ಬದ ಉಡುಗೆರೆ'' ಎಂದು ಹೇಳಿ ಕೊಟ್ಟೆ. 

ನಾನು ನೋಡುತ್ತಿದ್ದ ಹಾಗೆಯೇ ಅವರು ಅದನ್ನು ತೆಗೆದುಕೊಂಡು ಹೋಗಿ, 

ಅವಳ ಹಣೆಗೆ ಕುಂಕುಮವನ್ನಿಟ್ಟು ಆ ಗೊಂಬೆಯನ್ನು ಅವಳಿಗೆ ಕೊಟ್ಟರು. 

ಅವಳಿಗೆ ಎಷ್ಟು ಸಂತೋಷವಾಯಿತೋ ಆದನ್ನು ನಾನು ಹೇಳಲಾರೆ! ಅವಳ 

ಮುಖ ಅರಳಿಹೋಯಿತು. ಅದನ್ನು ಕೈಲಿ ಹಿಡಿದುಕೊಂಡು ಬಿರಿಗಣ್ಣಿನಿಂದ 

ನೋಡುತ್ತ ತೊಡೆಯಮೇಲೆ ಇಟ್ಟುಕೊಂಡಳು;  ತಾಯಿ ತನ್ನ ಮಗುವಿಗೆ 

ನಾಮಕರಣವಾಗುವಾಗ ಅದನ್ನು ತನ್ನ ತೊಡೆಯಮೇಲೆ ಮಲಗಿಸಿಕೊಳ್ಳುತ್ತಾ 

ಳಲ್ಲಾ ಹಾಗೆ. ಇದುವರೆಗೂ ಇದ್ದ ಅವಳ ಗಂಭೀರ ಹಾರಿಹೋಯಿತು. ನಿಮಿ 



ಸರಸಿಯ ಗೊಂಬೆ ೨೯ 



ಷಕ್ಕೆ ನಾಲ್ಕು ಸಾರಿ ನನ್ನಕಡೆ ನೋಡುವುದಕ್ಕೆ ಪ್ರಾರಂಭಿಸಿದಳು. ತನಗೆ ಆರತಿ 

ಅನ್ನುವುದನ್ನು ಮರೆತುಬಿಟ್ಟಳು! ಬಂದವರಿಗೆಲ್ಲಾ ಅವಳ ಆಟವನ್ನು ನೋಡಿ 

ನಗು! ಸರಸಿ ಅದನ್ನು ತನ್ನ ಪುಟ್ಟ ಎdದೆಗಪ್ಪಿ ಕೊಂಡು ಮುತ್ತಿಡುವುದಕ್ಕೆ ಪ್ರಾರಂ 

ಭಿಸಿದಳು! ಅವಳ ತಾಯಿ “ಸರಸು! ಇದೇನು? ಗಂಭೀರವಾಗಿ ಕುಳಿತುಕೊ! 

ಅದನ್ನು ಪಕ್ಕದಲ್ಲಿಡು!” ಎಂದು ಸ್ವಲ್ಪ ಗದರಿಸಿದಳು. ನನಗೆ “ಅಯ್ಯೋ ಯಾಕೆ 

ಗದರಿಸಿದರೋ?' ಅನ್ನಿಸಿತು. ಸರಸಿ ಮನಸ್ಸಿಲ್ಲದ ಮನಸ್ಸಿನಿಂದ ಅದನ್ನು ಪಕ್ಕ 

ದಲ್ಲಿಟ್ಟು ಕೊಂಡು, ಗಂಭೀರವಾಗಿ ಕುಳಿತುಕೊಳ್ಳಲು ಪ್ರಯತ್ನ ಮಾಡಿದಳು. 

ಬಹಳ ಕಷ್ಟವಾಯಿತು. ಆದರೂ ಕ್ಷಣಕ್ಕೆ ಒಂದು ಸಲ ಅದರ ಕಡೆಗೆ ಓರೆ 

ಗಣ್ಣಿನಿಂದ ನೋಡುವಳು. ಮೆಲ್ಲನೆ ಬಲಗೈಯ್ಯನ್ನು ಪಕ್ಕಕ್ಕೆ ಎಳೆದುಕೊಂಡು 

ಅದನ್ನು ನಿಧಾನವಾಗಿ ಸವರುವಳು. ಅದರ ಮುಖ ಕೈ, ಕಾಲು, ಹೊಟ್ಟೆ 

ಎಲ್ಲವನ್ನೊ ತಡವರಿಸಿ ನೋಡುವಳು. ಆವಳ ತಾಯಿ ಇದನ್ನು ಕಂಡು 

ಒಂದು ಸಲ ""ಸರಸಾ!” ಎಂದು ಕಣ್ಣು ಬಿಟ್ಟರು. ಸರಸಿ ಸರ್ರನೆ ಯೆ 

ಳೆದುಕೊಂಡು ಮುಖದ ಮೇಲೆ ಗಂಭೀರ ಮುದ್ರೆ ಹಾಕಿಕೊಂಡಳು! ನನಗೆ 

ತಡೆಯಲಾರದಷ್ಟು ನಗು ಬಂತು. ಅವಳ ತಾಯಿಯೂ ಬಂದವರಲ್ಲಿ 

ಒಬ್ಬರೂ ಸೇರಿ ಆರತಿ ಎತ್ತಿದರು; ಎತ್ತುವುದಕ್ಕೆ ಮುಂಚೆ ಹಸೆಯ ಮೇಲಿದ್ದ 

ವರಿಗೆಲ್ಲಾ ಹಣೆಗೆ ಕುಂಕುಮವನ್ನಿಟ್ಟು ತಾಂಬೂಲ ಕೊಟ್ಟರು. ಸರಸಿ ಮನ 

ಸ್ಸಿನಲ್ಲಿ ಆ ಗೊಂಬೆಗೂ ಕುಂಕುಮವನ್ನಚ್ಚಿಸಬೇಕು, ತಾಂಬೂಲ ಕೊಡಿಸ 

ಬೇಕು--ಎಂದು. ಆದುದರಿಂದ ಅವರು : ತನಗೆ ಕುಂಕುಮ ಹಚ್ಚಿ ತಾಂಬೂಲ 

ಕೊಡುವಾಗ, ಪಕ್ಕದಲ್ಲಿದ್ದ ಆ ಗೊಂಬೆಯನ್ನು ಕೈಗೆ ತೆಗೆದುಕೊಡು ಪುನಃ 

ತೊಡೆಯ ಮೇಲೆ ಮಲಗಿಸಿಕೊಂಡಿದ್ದಳು. ತಮಗೆಲ್ಲಾ ಹಚ್ಚಿ ಆದ ಮೇಲೆ 

ಗೊಂಬೆಗೂ ಹೆಚ್ಚುತ್ತಾರೆ- ಅಂದುಕೊಂಡಿದ್ದಳು ಎಂದು ಕಾಣುತ್ತೆ. ಆದರೆ 

ಅವರು ಹಚ್ಚಲಿಲ್ಲ. ಸರಸಿಗೆ ಸ್ವಲ್ಪ ರೇಗಿರಬೇಕು! ಅವಳು ನಿರ್ಭಯವಾಗಿ 

ಆ ಗೊಂಬೆಯನ್ನು ಕೈಲಿ ತೆಗೆದುಕೊಂಡು ಮುಂದಕ್ಕೆ ಚಾಚಿ ""ಅಚ್ಚಿ! ಅಚ್ಚಿ! 

ಇದಕ್ಕೂ ಕುಂಕ್ಮ ಎಲೇ ಅಡಿಕೆ!” ಎಂದಳು. ಅವರು ನಕ್ಕು ಅದಕ್ಕೂ ಕುಂ 

ಕುಮ ಹಚ್ಚಿ“ ತಾಂಬೂಲ ಕೊಟ್ಟರು. ಆರತಿಗೆ ಬಂದಿದ್ದ ವರಿಗೆಲ್ಲಾ ಅರಿಶಿನ 

ಕುಂಕುಮ, ತಾಂಬೂಲ, ಬಾಗಿನ ಕೊಟ್ಟು ಆಯಿತು. ಬಾಗಿನಕ್ಕೆ ಅವಲಕ್ಕಿ 

ಉಂಡೆ ಬಾಳೇಹಣ್ಣು. ಸರಸಿ ಯಥಾರೀತಿಯಾಗಿ ಆ ಗೊಂಬೆಗೂ ಕೊಡಿಸಿ 

ದಳು, ನಾನು ಮನಸ್ಸಿನಲ್ಲೇ “ಭೇಷ್!” ಅಂದುಕೊಂಡೆ, 



೩೦ ಕೆಲವು ಕಥೆಗಳು 



ಸರಸಿಗೆ ಎಷ್ಟು ಹೊತ್ತಿಗೆ ಬಂದಿದ್ದವರೆಲ್ಲಾ ಹೊರಟು ಹೋಗುತ್ತಾರೋ 

ಅನ್ನಿಸಿರಬೇಕು. ಅವರೆಲ್ಲಾ ಹೊರಡುವುದಕ್ಕೆ ಏಳಲು ನಾನು ಜಗುಲಿಯ 

ಮೇಲಿದ್ದ ಕೊಠಡಿಯೊಳಕ್ಕೆ ಹೋದೆ! ಅವರು ಹೊರಟದ್ಬೇ ತಡ ಸರಸಿ 

ನಾನಿದ್ದ ಕೊಠಡಿಯೊಳಕ್ಕೆ ಚಿಗರಿ ಮರಿ ಹಾರಿ ಬಂದಹಾಗೆ ಬಂದಳು. ನಾನು 

ಅವಳನ್ನು ನನ್ನ ತೋಳುಗಳಲ್ಲಿ ಸೇರಿಸಿಕೊಂಡು ಮೃದುವಾದ ಅವಳ ಗಲ್ಲ 

ವನ್ನು ಸವರುತ್ತ ""ಎಲ್ಲಿ! ಸರು, ಒಂದು ಮುತ್ತು ಕೊಡು ನೋಡೋಣ! > 

ಎಂದೆ. ಸರಸಿ ಒಂದಕ್ಕೆ ಹತ್ತಾಗಿ ನನ್ನ ಮುಖವನ್ನೆಲ್ಲಾ ಮುತ್ತಿನಿಂದ 

ತುಂಬಿಬಿಟ್ಟಿಳು. ನನಗೆ ಜೋಡಿ ಬಾಗಿನ; ಸರಸಿಯ ತಾಯಿ ಕೊಟ್ಟುದು 

ಒಂದು, ಅವಳು ಖುದ್ದಾಗಿ ಕೊಟ್ಟಿದ್ದು ಒಂದು. ನಾನು ಬಾಗಿನವನ್ನೆಲ್ಲಾ 

ತುಂಬಿಕೊಂಡು ಮನೆಗೆ ಹೊರಡೋಣೆಂದು ಎದ್ದರೆ ಸರಸಿ ಬಿಡಳು. ನಾನು 

ಅಲ್ಲೇ ಊಟಮಾಡಿಕೊಂಡು ಹೊರಡಬೇಕು ಎಂದು ಅವಳ ಇಷ್ಟ. ಅವಳ 

ಇಷ್ಟ ಪ್ರಕಾರ ಅ ಅಲ್ಲಿಯೇ ಊಟಮಾಡಿ ಮನೆಗೆ ಹೊರಟೆ. ಸ್ವಲ್ಪ ದೂರ ಬಂ 

ದಿದ್ದೆ. ಅಷ್ಟರಲ್ಲೇ ಸರಸಿ ನನ್ನ ಹೆಸರು ಹಿಡಿದು ಕೂಗಿದಳು.  ನಾನು 

ತಿರುಗಿ ನೋಡಿದೆ. ಸರಸಿ ಅವರ ಮನೆಯ ಮೆಟ್ಟಲಿನ ಮೇಲೆ ನಿಂತಿದ್ದಳು. 

ನಾನು ಕೊಟ್ಟಿದ್ದ ಗೊಂಬೆಯನ್ನು ಎಡಗೈಯಿಂದ ತನ್ನ ಹೃದಯಕ್ಕೆ ಔಚಿ 

ಕೊಂಡಿದ್ದಳು. ನಾನು ತಿರುಗಿದ್ದನ್ನು ನೋಡಿ ಅವಳು ಮೆಲ್ಲಮೆಲ್ಲನೆ ಬಳ 

ಕುತ್ತ ಕಂಭವನ್ನು ಒರಗಿಕೊಂಡು, ನಗುತ್ತ “ನಾಳೇನೂ ಬರ್ತೀಯಾ ?" 

ಎಂದು ಕೇಳಿದಳು. "ಆಗಲಿ" ಎಂದು ಕೂಗಿ ಹೇಳಿ ತಿರುಗಿ ಮನೆಯ ಕಡೆ 

ಹೊರಟೆ. ಹೋಗುತ್ತಾ ಸ್ಪಲ್ಪ ಹೊತ್ತಿಗೆ ಮುಂಚೆ ನೋಡಿದ್ದೆಲ್ಲಾ ಮನಸ್ಸಿಗೆ 

ಬಂದು ಕಣ್ಣಿಗೆ ಕಟ್ಟಿದಂತಾಯಿತು. ಅಷ್ಟು ಪುಟ್ಟ ದೇಹದಲ್ಲಿ ಎಷ್ಟು ಅಭಿ 

ಮಾನ! ಎಷ್ಟು ಪ್ರೇಮ!!- ಅಂದುಕೊಂಡೆ. ದೇವರು, ಪ್ರಪಂಚದಲ್ಲಿನ 

ತಾಯ್ದನವನ್ನೆಲ್ಲಾ ಈ ಪುಟ್ಟ ಶರೀರದಲ್ಲಿ ಎರಕ ಹೊಯ್ದಿದಾನೆ-ಎಂದು 

ತೋರಿತು. ಅವಳಿಗೆ ಯಾವಾಗಲೂ ಸುಖವೇ ಇರಲಿ ಎಂದು ಅತ್ಯಂತ ಗೂಢ 

ವಾಗಿ ಹಾರೈ ಸಿಕೊಂಡೆ. ಅಷ್ಟರಲ್ಲೇ ಮನೆ ಸಿಕ್ಕಿತು. 


೩ 


ಮಾರನೆಯ ದಿನ ಬೆಳಿಗ್ಗೆ ನಾನಿನ್ನೂ ಎದ್ದೇ ಇರಲಿಲ್ಲ: ಅಷ್ಟು 

ಹೊತ್ತಿಗೆ ಸರಸಿ ನಮ್ಮ ಮನೆಗೆ ಬಂದುಬಿಟ್ಟದ್ದಳು. ಅವಳ ಕೈಯಲ್ಲಿ ನಾನು 



ಸರಸಿಯ ಗೊಂಬೆ ೩೧ 



ಕೊಟ್ಟಿದ್ದ ಗೊಂಬೆ ಇತ್ತು. ನಾನು ""ಸರಸೀ" ಎಂದು ಕೂಗಿ ಒಂದು ಮಗ್ಗ 

ಲಿಗೆ ತಿರುಗಿದೆ. ಸರಸಿ ಬಂದು ನನ್ನ ಪಕ್ಕದಲ್ಲಿ ಹಾಸಿಗೆಯ ಮೇಲೆ ಕುಳಿತು 

ಕೊಂಡಳು. ನಾನು ಯೋಚಿಸಿದ್ದರಲ್ಲಿ ಅವಳು ಬಹುಶಃ ರಾತ್ರಿಯೆಲ್ಲಾ ನಿದ್ದೆ

ಮಾಡಿರಲಾರಳು ಎಂದು ತೋರಿತು.  "ಏನು ಸರಸಿ, ಇಷ್ಟು ಬೇಗ ಬಂದು 

ಬಿಟ್ಟೆ; ರಾತ್ರೆ ನಿದ್ದೆ ಮಾಡಿದೆಯಾ?'' ಎಂದು ಕೇಳಿದೆ. ಅದಕ್ಕೆ ಅವಳು 

“ಇಲ್ಲ, ನನ್ಮಗು ಭಾಳ ಅಳ್ತಿತ್ತು; ನಿದ್ದೆ ಮಾಡೋಕೆ ಬಿಡಲಿಲ್ಲ” ಎಂದು 

ಹೇಳಿ ಆ ಅರಗಿನ ಗೊಂಬೆಯನ್ನು ತೊಡೆಯಮೇಲೆ ಇಟ್ಟುಕೊಂಡು ತಟ್ಟ 

ತೊಡಗಿದಳು. ನನಗೆ ನಗು ಬರುವಹಾಗಾಯಿತು. ನಕ್ಕರೆ ಕೆಲಸ ಕೆಟ್ಟು 

ಹೋಗಿಬಿಡುತ್ತೆ ಅಂದುಕೊಂಡು, ನಗುವನ್ನು ತಡೆದು, ಬಹು ವಾತ್ಸಲ್ಯದಿಂದ   

"ಯಾಕೆ ?" ಎಂದು ಕೇಳಿದೆ. 


""ಅದಕ್ಕೇ-ಮತ್ತೇ-ಜ್ವರಾ ಬಂದಿತ್ತು” 


“ಅಯ್ಯೋ! ಪಾಪ! ಯಾಕೆ ಬಂತು?” 


“ರಾತ್ರೆ ಬಾಳೇ ಹೆಣ್ಣು- ಅವಲಕ್ಕಿ ಉಂಡೆ ಎಲ್ಲು ತಿಂದ್ಬಿಡ್ತು” 


“ಅದಕ್ಕೇ ಬಂತು.?? 


ಮಕ್ಕಳದು ಎಂತಹ ಕಲ್ಪನಾಶಕ್ತಿ! ನೋಡಿ, ಸರಸಿಗೆ ಅದು ಅರಗಿನ 

ಗೊಂಬೆಯಾಗಿರಲಿಲ್ಲ. ಆದು ಜೀವವುಳ್ಳ-ಮುದ್ದಾದ--ಆವಲಕ್ಕಿ ಉಂಡೆ- 

ಬಾಳೇಹಣ್ಣು, ಎಲ್ಲಾ ತಿಂದುಬಿಟ್ಟರೆ ಜ್ವರಾ ಬರುವಂತಹ--ಮಗುವಾಗಿ 

ಬಿಟ್ಟದ್ದಿತು. 


ನಾನು “ಹೋಗಲಿ ಬಿಡು ಸರಸು, ಆಸ್ಪತ್ರೆಗೆ ಹೋಗಿ ಔಷಧಿ ತಂದು 

ಕೊಡೋಣ”? ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದೆ. ಸರಸಿ ತನ್ನತೊಡೆಯನ್ನು 

ಮೆಲ್ಲಗೆ ಅಲುಗಿಸುತ್ತ ಆ "ಮಗು" ನಿಗೆ ನಿದ್ದೆ ಬರುವಹಾಗೆ ಮಾಡುತ್ತಿದ್ದಳು. 

ನಾನು ಪುನಃ "ಸರಸೀ?" ಎಂದು ಕರೆದೆ. ಅವಳು ಫಕ್ಕನೆ ನನ್ನ ಕಡೆಗೆ ತಿರುಗಿ 

ದೊಡ್ಡದಾಗಿ ಕಣ್ಣು ಬಿಟ್ಟು ತುಟಿಯಮೇಲೆ ಬೆರಳನ್ನಿಟ್ಟು “ನಿದ್ದೆ ಮಾಡ್ತಾ 

ಇದೆ! ಸದ್ಮಾಡ್ಬೇಡ!'' ಎಂದು ಮೆಲ್ಲಗೆ ಉಸುರಿದಳು. ನಾನು ಬಾಯಿ ಭದ್ರ 

ವಾಗಿ ಹಿಡಿದುಕೊಂಡು ನಗು ತಡೆದೆ. ಇನ್ನು ನಗು ಬರುವುದಿಲ್ಲ ಅನ್ನುವ 

ಹಾಗಾದ ಮೇಲೆ ಪಿಸುಮಾತಿನಲ್ಲಿ "ಸರಸ'' ಎಂದು ಕರೆದೆ. ಸರಸಿ ನನ್ನ 

ಕಡೆಗೆ ತಿರುಗಿದಳು. 



೩೨ ಕೆಲವು ಕಥೆಗಳು 



"ಈ ಮಗುವಿನ ತಾಯಿ ಯಾರು?” ಎಂದು ಕೇಳಿದೆ. 


ನಾನು ಎಂದು ಹೇಳುತ್ತಾಳೆ ಎಂದು ಗೊತ್ತಿದ್ದರೂ ತಮಾಷೆಗೆ ಪುನಃ 

ಕೇಳಿದೆ. 


"ನಾನು" ಎಂದು ಅವಳಿಂದ ಉತ್ತರ ಬಂತು.' 


"ತಂದೆ ಯಾರು?'' 


ಈ ಪ್ರಶ್ನೆಗೆ ಉತ್ತರ ಬರಲಿಲ್ಲ. ಏನು ಹೇಳಬೇಕೆಂದು ತೋರದೆ 

ಅವಳ ಮನಸ್ಸಿನಲ್ಲುಂಟಾಗಿದ್ದ ಭಾವ ಮುಖದಲ್ಲಿ ತೋರಿತು. ನಾನು. 


“ನಿನ್ನ ತಾಯಿ ಯಾರೆ?” 


"ಅಚ್ಚಿ " 


"ತಂದೆ?” 


"ಅಪ್ಪ!" 


(ಅವಳು ತಂದೆಯನ್ನು “ಅಪ್ಪ ” ಎಂದು ಕರೆಯುವಳು.) 


"ಈಗ ಹೇಳು; ಈ ಮಗುವಿನ ತಾಯಿ? 


“-ನಾನು” 


""ಸರಿ ನೀನು ತಾಯಿಯಾದರೆ ತಂದೆಯೂ ಒಬ್ಬರು ಇರಬೇಕಾಯಿತಲ್ಲ, 

ಅವರು ಯಾರು?” 


ಪುನಃ ಉತ್ತರವಿಲ್ಲ. ಸ್ವಲ್ಪ ಹೊತ್ತು ಯೋಚಿಸಿ, ಆಮೇಲೆ ಮನಸ್ಸಿಗೆ 

ಏನೋ ಹೊಳೆದಿರಬಹುದು. ಥಟ್ಟನೆ ನನ್ನ ಕಡೆ ತಿರುಗಿ “ನೀನು” ಅಂದು 

ಬಿಟ್ಟಳು! ಶುದ್ಧ ಹುಡುಗಿ! ನನಗೋ ನಗು, ಮಳೆಗಾಲದಲ್ಲಿ ಕನ್ನಂಬಾಡಿ 

ಕಟ್ಟೆ ತುಂಬಿದಹಾಗೆ ತುಂಬಿಕೊಂಡು ಬಂತು. ಗಟ್ಟಿಯಾಗಿ ನಕ್ಕುಬಿಟ್ಟಿ [ 

ಅವಳು ಅಯ್ಯೋ! ಹೋಗು! ಮಗೂನ ಎಬ್ಬಿಸ್ಬಿಟ್ಟೆ!"  ಎಂದು ಹೇಳಿ 

ಹುಬ್ಬುಗಂಟಿಕ್ಕಿ ನನ್ನ ಕಡೆಗೆ ನೋಡಿದಳು. ನಾನು ಅದನ್ನ ಇಲ್ಲಿ, ನನ್ನ 

ಹಾಸಿಗೆಯ ಮೇಲೆ ಮಲಗಿಸು. ನಾನು ತಟ್ಟಿ ಮತ್ತೆ ನಿದ್ದೆ ಬರಸ್ತೀನಿ'' 

ಎಂದು ಹೇಳಿ ಅದನ್ನು ನನ್ನ ಪಕ್ಕದಲ್ಲಿ ಹಾಸಿಗೆಯಮೇಲೆ ಇಟ್ಟುಕೊಂಡು 

ತಟ್ಟುತ್ತಾ ಅವಳನ್ನು ಕುರಿತ್ಕು ಅಲ್ವೇ ಸರಸಿ, ನಾನು ಹ್ಯಾಗೆ ಅದರ ತಂದೆ? 

ಎಂದು ಕೇಳಿದೆ. 



ಸರಸಿಯ ಗೊಂಬೆ ೩೩ 



“ನೀನೇ ಅಲ್ವೇನು ತಂದ್ಕೊಟ್ಟಿದ್ದು ಅದನ್ನ?” 


ನಾನು ಏನು ಹೇಳುವುದು? ಒಪ್ಪಿಕೊಳ್ಳಬೇಕಾಗಿ ಬಂತು. ಎಷ್ಟು 

ಸುಲಭವಾಗಿ ನನ್ನನ್ನು ಒಬ್ಬ ತಂದೆಯನ್ನಾಗಿ ಮಾಡಿಬಿಟ್ಟಳು! ಸರಸಿ! 

ದೊಡ್ಡವಳಾದ ಮೇಲೆ ಒಳ್ಳೆಯ ತಾಯಿಯಾಗುತ್ತಾಳೆ ಅಂದುಕೊಂಡೆ. 

ಸರಸಿ ನನ್ನ ಕಡೆಗೇ ನೋಡುತ್ತಿದ್ದಳು. ನಾನು ರಾಗವಾಗಿ “ಸರಸೀ" 

ಎಂದು ಕರೆದು ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಅವಳ ಮುಖವನ್ನೇ 

ನೋಡುತ್ತಿದ್ದೆ. ಅವಳಿಗೆ ಅರ್ಥವಾಯಿತು. ಬಗ್ಗಿ ನನಗೊಂದು ಮುತ್ತು 

ಕೊಟ್ಟಳು. ನಾರು ಎದ್ದು ಅವಳನ್ನು ಅಲ್ಲಿಯೇ ಬಿಟ್ಟು ಮುಖ ತೊಳೆದು 

ಕೊಳ್ಳುವುದಕ್ಕೆ ಹೊರಟೆ. 





ಸರಸಿಗೆ ನಾನು ಗೊಂಬೆ ಕೊಟ್ಟು ಐದಾರು ದಿನಗಳಾದ ಮೇಲೆ ಒಂದು 

ದಿನ ಬೆಳಗ್ಗೆ ಸುಮಾರು ಏಳೂವರೆ ಎಂಟು ಗಂಟೆ ಸಮಯನಿರಬಹುದು, 

ನಾನು ನಮ್ಮ ಮನೆಯ ಜಗುಲಿಯ ಮೇಲೆ ಕುಳಿತುಕೊಂಡು ರಾಜಶೇಖರ 

ವಿಲಾಸವನ್ನು ಓದುತ್ತಿದ್ದೆ. ಅಷ್ಟು ಹೊತ್ತಿಗೆ ಸರಸಿ ನಮ್ಮ ಮನೆಯ ಕಡೆ 

ಬರುತ್ತಿದ್ದುದು ಕಾಣಿಸಿತು. ನೋಡಿದುದರಲ್ಲಿ ಅಳುತ್ತಿದ್ದ ಹಾಗೆ ತೋರಿತು. 

ಅಡಿಗಡಿಗೆ ಕೈ ಕಣ್ಣಿನ ಹೆತ್ತಿರ ಹೋಗುತ್ತಿತ್ತು. ನಮ್ಮ ಮನೆಯ ಹತ್ತಿರ 

ಬಂದಳು. ನಿಜವಾಗಿಯೂ ಅಳುತ್ತಿದ್ದಳು. "ಯಾಕೆ ಅಳುತ್ತಿದ್ದಾಳೆ! ಏನು 

ತಂಟಿ ಮಾಡಿ ಅವರ ಅಮ್ಮನ ಕೈಲಿ ಏಟು ತಿಂದಿದ್ದಾಳೋ” ಅನ್ನಿಸಿತು. 

ಸರಸಿ ಬಂದು ನನ್ನ ಮುಂದೆ ಕಂಭವನ್ನು ಒರಗಿಕೊಂಡು ನಿಂತು ಮೆಲ್ಲಗೆ 

ಬಿಕ್ಕಳಿಸಿ ಅಳಲಾರಂಭಿಸಿದಳು. ನನಗೆ ಆ ಮಗುನಿನ ಅಳುವನ್ನು ನೋಡಿ 

ಮನಸ್ಸು ತಲ್ಲಣಿಸಿತು. ಪುಸ್ತಕವನ್ನು ಮುಚ್ಚಿಟ್ಟು ಎದ್ದು, ಅವಳ ಕೈಹಿಡಿದು 

ನನ್ನ ಕೊಠಡಿಗೆ ಕರೆದುಕೊಂಡು ಹೋಗಿ ಹತ್ತಿರ ಕೂರಿಸಿಕೊಂಡು "ಯಾಕೆ 

ಸರಸು, ಬೆಳಗಾಗುತ್ತಲೆ ಅಳ್ತಿದ್ದೀಯಾ??' ಎಂದು ಕೇಳಿದೆ. 



ನನ್ನ ಪ್ರಶ್ನೆಗೆ ಉತ್ತರ ಹೇಳದೆ ಅಳುವನ್ನು ಹೆಚ್ಚು ಮಾಡಿದಳು; 


“ಯಾಕೆ ಹೇಳು ಅಜ್ಜಿ ಏನಾದರೂ ಹೊಡೆದರೆ?"



೩೪ ಕೆಲವು ಕಥೆಗಳು 



ಮಾತೇ ಇಲ್ಲ! ಬರೀ ಅಳು! ನಾನು ಅವಳನ್ನು ಇನ್ನೂ ಹತ್ತಿರಕ್ಕೆ 

ಎಳೆದು ಕಟ್ಟಿಕೊಂಡು ಅವಳ ಮುಂದಲೆಯನ್ನೂ ಕಣ್ಣೀರಿನಿಂದ ತೊಯ್ದ 

ಎಳಸಾದ ಕೆನ್ನೆಗಳನ್ನೂ ಸವರುತ್ತ, “ನೋಡು. ಸರಸಿ, ನೀನು ಒಳ್ಳೇ 

ಹುಡಗಿ ; ನನ್ನ ಹತ್ತಿರ ಹೇಳುವದಿಲ್ವೊ ? ಮರೆತುಬಿಟ್ಟಿಯಾ, ತೋಟ 

ದಿಂದ ಚಕ್ಕೋತನ ಹಣ್ಣು ತಂದ್ಕೊಟ್ಟಿದ್ದು? ? ಇನ್ನೂ ಬೇಕಾಪನ್ಸು ತಂದ್ಕೊ  

ಡ್ತೀನಿ, ನೀನು, ಹೇಳಿದ್ರಿ” ಎಂದು ಹೇಳಿದೆ. "ಚಕ್ಕೋತನ ಹಣ್ಣು? 

ಅಂದೊಡನೆಯೇ ಸರಸಿ ಬಾಯಿ ಬಿಡುವುದಕ್ಕೆ ಪ್ರಯತ್ನಿಸಿದಳು. 


“ಊ-ಊ-ಊ-ನಮುತ್ತೇ-ನನ್ಮಗು-ಊ-ಊ-” 


“ಏನೇ ನಿನ್ಮಗು ಏನಾಯ್ತು? ಹೇಳು; ಅದಕ್ಕೆ ಮತ್ತೆ ಜ್ವರ ಬಂತೆ!” 


"ಊಜಊ-- ನನ್ಮಗೂ-ಊ-ಕೆಟ್ಹೋಯ್ತು- ಉ-ಊ- ಊ-ಊ." 


ಅವಳ ಗೊಂಬೆ ಏನೋ ಆಗಿರಬೇಕು ಎಂದು ಊಹಿಸಿದೆ. ಅವಳನ್ನೂ 

ಕರೆದುಕೊಂಡು ಅವಳ ಮನೆಗೆ ಹೋಗಿ ವಿಚಾರಿಸಲಾಗಿ ನಡೆದ ಸಮಾ 

ಚಾರ ಗೊತ್ತಾಯಿತು. ಹಿಂದಿನ ರಾತ್ರೆ ಗೊಂಬೆಯನ್ನೂ ಹತ್ತಿರದಲ್ಲೇ ಇಟ್ಟು 

ಕೊಂಡು ಮಲಗಿದ್ದಳಂತೆ. ಬೆಳಿಗ್ಗೆ ಎದ್ದು ಮುಖ ಕೊಳೆದುಕೊಳ್ಳುವುದಕ್ಕೆ 

ಹೋಗುವಾಗ ಅದನ್ನೂ ಕೈಲಿ ಹಿಡಿದುಕೊಂಡು ಹೋದಳಂತೆ. ಬೆಳಿಗ್ಗೆ 

ಸ್ವಲ್ಪ ಚಳಿಯಾಗಿತ್ತು. ಆದ್ದ ರಿಂದ “ಮಗು” ಬೆಂಕಿ ಕಾಯಿಸಿಕೊಳ್ಳಲಿ ಎಂದು 

ಅದನ್ನು ಒಲೆಯ ಮುಂದಿಟ್ಟು ತಾನು ಮುಖ ತೊಳೆದುಕೊಳ್ಳುವುದಕ್ಕೆ ಹೋದ 

ಳಂತೆ. ಸರಿ ಮುಖತೊಳೆದುಕೊಂಡು ಬಂದು ನೋಡುವಾಗ ಆ ಗೊಂಬೆ 

ಬೆಂಕಿಯ ಕಾವಿಗೆ ಕರಗಿ ಮುದ್ದೆಯಾಗಿ, ವಿಕಾರವಾಗಿ ಗುರ್ತುಸಿಕ್ಕದ ಹಾಗಾಗಿ 

ಬಿಟ್ಟದ್ದಿತು. ನನಗೆ ನೋಡಿ ಅಯ್ಯೋ! ಪಾಪ! ಅನ್ನುವ ಹಾಗಾಯಿತು. 


ಸರಸಿಯನ್ನು ಸಮಾಧಾನ ಮಾಡುವುದು ಬಹೆಳ ಕಷ್ಟವಾಯಿತು. 

ಅವಳ ತಾಯಿ ಒಳ್ಳೇ ಮಾತಿನಿಂದ ಹೇಳಿದರು. ಗದರಿಸಿ ಹೇಳಿದರು. ಏನು 

ಮಾಡಿದರೂ ಅವಳ ದುಃಖ ಕಡಿಮೆಯಾಗಲಿಲ್ಲ. ನನಗೆ ಒಂದು ಉಪಾಯ 

ತೋರಿತು. ಅವಳನ್ನು ಪುನಃ ನಮ್ಮ ಮನೆಗೆ ಕರೆದುಕೊಂಡು ಹೋಗಿ, ಅದೇ 

ದಿನವೇ ಬೆಂಗಳೂರಿಗೆ ನಮ್ಮ ಸೋದರಮಾವರಿಗೆ ಬರೆದು ಅದಕ್ಕಿಂತ ಚೆನ್ನಾಗಿ 

ರುವ " ಮಗು" ವನ್ನು ತರಿಸಿ ಕೊಡುವುದಾಗಿ ಹೇಳಿ ಅವಳ ಎದುರಿಗೆ 



ಸರಸಿಯ ಗೊಂಬೆ ೩೫ 



ಕಾಗದ ಪೇನ ತೆಗೆದುಕೊಂಡು ಕಾಗದ ಬರೆದ ಹಾಗೆ ನಟಸಿದೆ. ಆಗ 

ಅವಳ ದುಃಖ ಸ್ವಲ್ಪ ಮಟ್ಟಿಗೆ ಇಳಿಯಿತು. ಕಣ್ಣೀರು ಒರಸಿಕೊಳ್ಳುತ್ತ 

" ಎಷ್ಟು ದಿನ ಆಗುತ್ತೆ ಬರೋದು?” ಎಂದು ಕೇಳಿದಳು. ನಾನು 

" ಅದೇನು! ನಾಲ್ಕೈದು ದಿನಗಳಲ್ಲಿ ಬಂದು ಬಿಡುತ್ತೆ! ಏನೂ ಯೋಚನೆ 

ಮಾಡಬೇಡ'' ಎಂದು ಸಮಾಧಾನ ಹೇಳಿ ನಮ್ಮ ಮನೆಯಲ್ಲೇ ಕಾಫಿ 

ತಿಂಡಿಕೊಟ್ಟು ಕಳಿಸಿದೆ. 


ನಾಲ್ಕು ದಿನ ಆದ ಮೇಲೆ ಸರಸಿ " ಎಲ್ಲಿ ಬರ್ಲಿಲ್ಲ'' ಎಂದು ಕೇಳಿದಳು. 

“ ಬರುತ್ತೆ ಬರುತ್ತೆ ನೋಡು ಕಾಗದ ಬಂದಿದೆ.  'ಒಳ್ಳೇ ಮಗು ಹುಡುಕ್ತಾ 

ಇದೀನಿ ಸಿಕ್ಕೊತ್ಲು ಕಳಸ್ತೀನಿ' ಅಂತ ಬರೆದಿದ್ದಾರೆ ನೋಡು” ಎಂದು 

ಹೇಳಿ ಯಾವುದೋ ಒಂದು ಕಾಗದವನ್ನು ತೋರಿಸಿದೆ. ಅವಳು ಅದೂ 

ನಿಜನೇನೋ ಅಂದುಕೊಂಡು ಸುಮ್ಮನಾಗಿ ದಿನವೂ ನಿರೀಕ್ಷಣೆಯಲ್ಲೇ 

ಇದ್ದಳು. ಆ ಅರಿಯದ ಮಗುವಿಗೆ ಸುಳ್ಳು ಹೇಳುವಂತಾಯಿತಲ್ಲಾ !--ಎಂದು 

ಸಂಕಟವಾಯಿತು. ಆದರೆ ಏನು ಮಾಡುವುದು? ನಿರ್ವಾಹವಿಲ್ಲ. ಹಾಗೆ 

ಹೇಳದೆ ಇದ್ದರೆ ಪುನಃ ರಗಳೆಗೆ ಪ್ರಾರಂಭಿಸಿಬಿಡುತ್ತಾಳೆ ಎಂಬ ಭಯ. 

ಇವತ್ತು-ನಾಳೆ-ಕಳ್ಸಿದಾರಂತೆ-ಶೈಲಿನಲ್ಲಿ ಬರ್ತಾ ಇದೆ--ಎಂದು ಹೇಳುತ್ತಾ 

ದಿನಗಳನ್ನು ಕಳದೆ. ಅಷ್ಟರಲ್ಲೇ ನನ್ನ ರಜ ಮುಗಿದು ನಾನು ಬೆಂಗಳೂರಿಗೆ 

ಹೊರಡಬೇಕಾಗಿ ಬಂತು. ಆಗ ನಾನು ಹೆಬ್ಬಾಳಿನಲ್ಲಿ ಅಗ್ರಿಕಲ್ಬರಲ್ ಸ್ಕೂಲಿ 

ನಲ್ಲಿ ಓದುತ್ತಾ ಇದ್ದೆ. ಅಲ್ಲಿ ವ್ಯಾಸಂಗ ಮುಗಿಸಿಕೊಂಡು, ಹಳ್ಳಿಯಲ್ಲಿ 

ನಮ್ಮ ಭೂಮಿಕಾಣಿ ನೋಡಿಕೊಂಡಿರಬೇಕೆಂಬ ಅಭಿಪ್ರಾಯ. 


ನಮ್ಮ ಹಳ್ಳಿಯಿಂದ ಗೆ ಬಂದು ರೈಲುಹತ್ತಿ ಬೆಂಗಳೂರು ಸೇರಿದೆ. 



೫ 



ರಜ ಮುಗಿದು ನಾನು ಹೆಬ್ಬಾಳು ತಲುಪಿ ಆರೇಳು ದಿನಗಳಾಗಿದ್ದು ವು. 

ಒಂದು ದಿನ ಸಾಯಂಕಾಲ ನಾನು ಹೆಬ್ಬಾಳು ಕೆರೆಯನ್ನು ಬಳಸಿಕೊಂಡು 

ಹೋಗಿ ಅದರ ಆಜೆ ಕಡೆಯಲ್ಲಿದ್ದ ಒಂದು ಎತ್ತರವಾದ ಬಂಡೆಯ ಮೇಲೆ 

ಕುಳಿತು, ಸುಖವಾಗಿ ಬೀಸಿ ಬರುತ್ತಿದ್ದ ತಂಗಾಳಿಯನ್ನು ಸೇವಿಸುತ್ತಿದ್ದೆ. 

ಪ್ರೇಯಸಿಯನ್ನು ಬಹಳ ಹೊತ್ತು ಕಾಯಿಸಿ ಆ ಮೇಲೆ ಅವಳ ಮನೆಗೆ 



೩೬ ಕೆಲವು ಕಥೆಗಳು 



ಹೋಗುವ ನಾಯಕನು, ಅವಳ ಮನೆಯ ಹತ್ತಿರ ಹತ್ತಿರ ಹೋದಹಾಗೆಲ್ಲಾ 

“ಛೆ! ಎಷ್ಟು ಹೊತ್ತು ಕಾಯಿಸಿಬಿಟ್ಟೆ! ಏನು ಅನ್ನುವಳೋ! ಎಷ್ಟು ಸಿಟ್ಟು 

ಮಾಡುವಳೋ !” ಎಂಬ ಮನಸ್ಸಿಗೆ ಸುಖನನ್ನುಂಟುಮಾಡುವ ಭೀತಿಯಿಂದ, 

ಹೆಜ್ಜೆಗಳನ್ನು ಮೆಲ್ಲಮೆಲ್ಲಗೆ ಇಡುವಂತೆ, ಸೂರ್ಯನು ಪಶ್ಚಿಮಾಕಾಶದಲ್ಲಿ ತಡೆ 

ತಡೆದು ಇಳಿಯುತ್ತಿದ್ದ. ಅನೇಕ ಜಾತಿಯ ಪಕ್ಷಿಗಳು ತಮ್ಮ ತಮ್ಮ ರಾಗಗ 

ಳನ್ನು ಹಾಡುತ್ತ ಸೂರ್ಯನ ಚಿನ್ನದ ಕಿರಣಗಳಲ್ಲಿ ತೂರಿ ತೂರಿ ಹಾರಾಡು 

ತ್ತಿದ್ದವು. ಕೆರೆಯ ಮೈದಾನದಲ್ಲಿ ಆ ಹಳ್ಳಿಯ ದನಕರುಗಳು ಹುಲ್ಲುಮೇಯು 

ತ್ತಿದ್ದುವು. ಏರಿಯ ತಡಿಯಲ್ಲಿ ಕೆಲವು ಹಳ್ಳಿಯ ಹೆಂಗಸರು ಕೊಡಗಳಲ್ಲಿ 

ನೀರು ತುಂಬಿಕೊಳ್ಳುತ್ತಾ ಇದ್ದರು. ಇನ್ನು ಕೆಲವರು ತುಂಬಿದ ಕೊಡಗ 

ಳನ್ನು ತಲೆಯ ಮೇಲೆ ಇಟ್ಟು ಕೊಂಡು, ಆ ಭಾರಕ್ಕೆ ಬಳುಕುತ್ತ ಒಯ್ಯಾ 

ರದಿಂದ ಗುಂಪು ಗುಂಪಾಗಿ ಏರಿಯ ಮೇಲೆ ನಡೆದು ಹೋಗುತ್ತಿದ್ದರು. ನಾನು 

ಕುಳಿತಿದ್ದ. ಸ್ಥಳಕ್ಕೆ ಹಿಂಭಾಗದಲ್ಲಿದ್ದ ತೋನಿನೊಳೆಗಿನಿಂದ ಯಾರೋ 

ಗಟ್ಟಿಯಾಗಿ ಲಾವಣಿ ಹೇಳುತ್ತಿದ್ದುದು ಕೇಳಿಬರುತ್ತಿತ್ತು ; ಗೊಲ್ಲರ ಹುಡುಗ 

ನಿರಬಹುದು. ಇದನ್ನೆಲ್ಲಾ ನೋಡುತ್ತಿದ್ದ ಹಾಗೆಯೇ ಗೋಲ್ಡ್ ಸ್ಕಿ ತ್ 

ಕವಿಯ “ Deserted Village " ಜ್ಞಾಪಕಕ್ಕೆ ಬಂತು. ಗೋಲ್ಡ್ 

ಸ್ಮಿತ್ ಕವಿ, ಪ್ರತಿಭಾಶಾಲಿ. ಈ ಸಮಯದಲ್ಲಿ ಅವನು ನನ್ನ ಜೊತೆಯಲ್ಲಿ 

ಆ ಬಂಡೆಯ ಮೇಲೆ ಕುಳಿತಿದ್ದಿದ್ದರೆ!--ಅನ್ನಿಸಿತು. ದೇವರು ನನಗೂ 

ಕವಿಯ ಹೃದಯವನ್ನೂ, ಕವಿಯ ಕಣ್ಣುಗಳನ್ನೂ ಕೊಟ್ಟಿದ್ದರೆ ನಾನೂ 

ಆಗಿನ ಸನ್ನಿವೇಶವನ್ನು ವರ್ಣಿಸಿ ಸೊಗಸಾದ ಒಂದು ಕವ್ಯವನ್ನು ಬರೆದಿ 

ರುತ್ತಿದ್ದೆ. ಆದರೆ ಎಲ್ಲಾ "ರೆ" ಮೇಲಿನ ಮಾತು! ನಮ್ಮ ಆಸೆಯೇ 

ಒಂದು -ನಮ್ಮ ಪಾಲಿಗೆ ಬರುವುದೆ ಒಂದು. ಇದರಲ್ಲಿ ಅರ್ಥವಿಲ್ಲ ಎಂದು 

ಕೆಲವರು ಗೊಣಗುಟ್ಟುತ್ತಾರೆ. ಆದರೆ ನಾವು ಆ ದೇವದೇವನ ಕಾರ್ಯಕಲಾಪ 

ಗಳಿಗೆ ಅರ್ಥವನ್ನು ಕಟ್ಟುವಷ್ಟು ಶಕ್ತರೆ?........ ಹೀಗೆಯೇ ಯೋಚಿಸುತ್ತ 

ಯೋಚಿಸುತ್ತ ನಮ್ಮ ಹಳ್ಳಿಯ ವಿಷಯವೂ ಅದರ ಸುಖಸಂತೋಷಗಳೂ 

ಮನಸ್ಸಿಗೆ ಬಂದವು. ನಮ್ಮ ಹಳ್ಳಿ ನನ್ನೆದುರಿಗೆ ಬಂದು ನಿಂತಂತಾಗಿ ಅಲ್ಲಿ 

ಬೀದಿಯಲ್ಲಿ ಕುಣಿಕುಣಿದು ನಲಿಯುತ್ತ ಸರಸಿ ಬರುತ್ತಿದ್ದ ಹಾಗೆ ತೋರಿತು. 

ಬರಬರುತ್ತ ಹಳ್ಳಿ ಮಾಯತಾಗಿ ಸರಸಿ ಮಾತ್ರ ನನ್ನ ಮನಸ್ಸಿನಲ್ಲಿ ಉಳಿದು 



ಸರಸಿಯ ಗೊಂಬೆ ೩೭ 



ಕೊಂಡಳು. ಇನ್ನೊಂದು ಯೋಚನಾತರಂಗ ಹೊರಟಿತು. ಆ ತರಂಗದ 

ತುದಿಯಲ್ಲಿ ಸರಸಿ....ನಮ್ಮ ಹಳ್ಳಿಗೆಲ್ಲಾ ಅವಳು ಬಹಳ ಸುಂದರಿಯಾದ 

ಹುಡುಗಿಯಾಗುತ್ತಾಳೆ. ಈಗಾಗಲೇ ಅವಳಿಗೆ ಏಳು ವರ್ಷ. ಇನ್ನೆಷ್ಟು 

ದಿನ?--ಅಬ್ಬಬ್ಬಾ ಅಂದರೆ ಇನ್ನು ನಾಲ್ಕು ವರ್ಷ, ಆಮೇಲೆ ಮದುವೆಯಾಗು 

ತ್ತಾಳೆ. ಅವಳಿಗೆ ಒಳ್ಳೇ ಗಂಡ ಸಿಕ್ಕಬೇಕು. ಹೌದು ದೇವಾ! ಅವಳಿಗೆ 

ಇಷ್ಟು ರೂಪು ಇಷ್ಟು ಗುಣ ಕೊಟ್ಟು "ಆ ರೂಪ ಆ ಗುಣಗಳಿಗೆ ತಕ್ಕ 

ಗಂಡನನ್ನು ಕೊಡಲಾರೆಯಾ? ಭಗವಂತಾ, ನೀನು ಅವಳ ಹಣೆಯಲ್ಲಿ 

ಏನು ಬರೆದಿರುವೆಯೋ? ಅಷ್ಟು ಮುದ್ದಾದ ಹಣೆಯಲ್ಲಿ ಏನು ಕಷ್ಟವನ್ನು 

--ನಿನು ದುಃಖವನ್ನು ತುಂಬಿದ್ದೀಯೋ?....... ಬಹುಶಃ ಬೇರಿ ಊರಿಗೆ 

ಕೊಡುತ್ತಾರೆ. ಆಮೇಲೆ? -- ಆಮೇಲೆ ಅವಳು ಗಂಡನ ಮನೆಗೆ ಹೋಗು 

ತ್ತಾಳೆ. ಆಮೇಲೆ ನಮ್ಮ ಹಳ್ಳಿಗೆ ಸರಸಿ ಇಲ್ಲದಹಾಗಾಗುತ್ತದೆ. 

ನನಗೂ ಇಲ್ಲದಹಾಗಾಗುತ್ತದೆ. ಅವಳು ಮದುವೆಯಾಗುವವರೆಗೂ ಒಂದು 

ತರಹ ಸರಸಿ-ಆಮೇಲೆ ಬೇರೆ-ಜೊತೆಯಲ್ಲಿ ಹುಟ್ಟಿದ ಅಕ್ಕತಂಗಿಯರೇ ಬೇರೆ 

ಯಾಗುತ್ತಾರೆ; ಇನ್ನು ಅವಳ ಮಾತೇನು? ಮೊದಲಿನ ಹಾಗೆ ನನ್ನೊಡನೆ 

ಸಲಿಗೆಯಾಗಿ ಬಂದು ಆಡುತ್ತಾಳೇನು? ಎಂದಿಗೂ ಇಲ್ಲ. ಅದು ಹೇಗಾ 

ದೀತು? ಮೊದಲು, ನನ್ನನ್ನು ಕಂಡೊಡನೆಯೇ ಓಡಿ ಬಂದು ನನ್ನ ಹೆಗಲ 

ಮೇಲೆ ಹಾರಿ ಕುಳಿತುಕೊಳ್ಳುತ್ತಿದ್ದವಳು ಮದುವೆಯಾದಮೇಲೆ ನನ್ನೆದುರಿಗೆ 

ನಿಲ್ಲುವುದಿಲ್ಲ. ಓಡಿಬಿಡುತ್ತಾಳೆ. ಇದುವರೆಗೂ ನನ್ನ ಹೃದಯಕ್ಕೆ ಅಂಟ 

ಕೊಂಡಿದ್ದ ಸರಸಿ ಲಗ್ನ ವಾದಮೇಲೆ ಇದ್ದಕ್ಕಿದ್ದಹಾಗೆಯೇ ದೂರವಾಗಿಬಿಡು 

ತ್ತಾಳೆ. "ಜೀವನದ ಧರ್ಮ” ಯಾರು ಏನು ಮಾಡಲಾದೀತು? ಅಯ್ಯೋ! 

ಸರಸಿ ಯಾಕೆ ದೊಡ್ಡವಳಾಗುತ್ತಿದ್ದಾಳೆಯೋ ! ಅವಳು ಎಂದೆಂದಿಗೂ ಈಗ 

ಇರುವಹಾಗೆಯೇ ಏಳುವರ್ಷದ ಹುಡುಗಿಯಾಗಿಯೇ ಇರಬಾರದೇ ! ಕಾಲದ 

ಪರಿವರ್ತನೆಗೆ ಯಾರೂ ಹೊರತಲ್ಲ. ಆದರೆ ಸರಸಿ ಮಾತ್ರ ಕಾಲದ ಪ್ರವಾ 

ಹಕ್ಕೆ ಸಿಕ್ಕದೆ ಈಗಿನ ಏಳು ವರ್ಷವೇ ಅವಳಿಗೆ ಸ್ಥಿರವಾದರೆ 1-ಓ! ಆಗ 

ಅವಳು ಯಾವಾಗಲೂ ನಮ್ಮ ಹಳ್ಳಿಯಲ್ಲೇ ಇರುತ್ತಾಳೆ !-ನನ್ನೊಡನೆ ಆಟ 

ಪಾಟ ಸಲಿಗೆ ಎಲ್ಲಾ ಮೊದಲಿನ ಹಾಗೆಯೇ! ನಾನು "ಪ್ರತಿದಿನವೂ ಅವಳನ್ನ 

ನೋಡಬಹುದು: ಇದೆಲ್ಲಾ ನನ್ನ ಒಣ ಹಂಬಲು. ಅವಳು ದೊಡ್ಡವಳಾ 



೩೮ ಕೆಲವು ಕಥೆಗಳು 



ಗದೆ ಇರುತ್ತಾಳೆಯೆ? ಮದುವೆಯಾಗದೆ ಇರುತ್ತದೆಯೆ? ಮೊಗ್ಗು ಹೂವಾಗಿ 

ಅರಳದೆ ಇರುತ್ತದೆಯೆ? ಆಮೇಲೆ ಯಾರೋ ಅದೃಷ್ಟಶಾಲಿ ಆ ಹೂವನ್ನು 

ಕೊಯ್ದುಕೊಂಡು ಹೋಗುತ್ತಾನೆ. ಆಮೇಲೆ ನಮ್ಮ ಹಳ್ಳಿ ಬರಿಯದಾಗುತ್ತೆ. 

ಆದರೆ ಅದಕ್ಕೆ ಏನು ನಷ್ಟ! ಇದಕ್ಕೆ ಮೊದಲು ಎಷ್ಟು ಜನ ನಮ್ಮ ಹಳ್ಳಿಯ 

ಹುಡುಗಿಯರು ಮದುವೆಯಾಗಿ ಹಳ್ಳಿಯನ್ನು ಬಿಟ್ಟು ತಮ್ಮ ತಮ್ಮ ಗಂಡನ 

ಮನೆಗೆ ಹೋಗಿಲ್ಲ? ಹಾಗಾದರೆ ನಷ್ಟ ಯಾರಿಗೆ?....ಯಾರಿಗೆ?.... ಇವೆಲ್ಲಾ 

ಆಗಲೇಬೇಕು; ಬೇರೆ ಮಾರ್ಗವಿಲ್ಲ. ಬೇರೆ ಮಾರ್ಗವಿಲ್ಲವೆ?.... ಇರಬಹುದು! 

ಇದೆ ! - ಇದೆ! ದೇವರು ಇಷ್ಟಪಟ್ಟರೆ ಬೇಕಾದಹಾಗೆ ಇದೆ ! ಹೌದು 

ಯಾಕಾಗಬಾರದು? ಆಗ! ಆಗ ಸರಸಿ ನಮ್ಮ ಹಳ್ಳಿಯಲ್ಲೇ ಇರುತ್ತಾಳೆ. 

ನಾನು ದಿನವೂ ಅವಳನ್ನು ನೋಡಬಹುದು. ಸರಸಿ! ಸರಸ್ಸಿ ನನ್ನ ಸರಸಿ 

ಯಾಗುತ್ತಾಳೆ. ನನ್ನ ಹೃದಯಕ್ಕೆ ಆಂಟಕೊಂಡಿರುವವಳು ಆಗ ನನ್ನ ಹೃದ 

ಯದಲ್ಲಿ ಸೇರಿ ನನ್ನ ಒಂದೊಂದು ರಕ್ತನಾಳದಲ್ಲಿ ಓಡುತ್ತಾಳೆ!...ಅಹಾ! 

ಆ ದಿನ ಬರಬಾರದೇ !....ನಾನೂ ಅವಳೂ ಒಟ್ಟಿಗೆ ನಮ್ಮ ನದಿಯ ಮರಳಿ 

ನಲ್ಲಿ ಓಡಾಡಬಹುದು ದೇವಸ್ಥಾನದ ತೋಪಿನಲ್ಲಿ ಮನಸ್ಸು ಬಂದ ಹಾಗೆ 

ಸುತ್ತಾಡಬಹುದು. ನಮ್ಮ ಹೊಲ ಗದ್ದೆಗಳಿಗೆ ಅವಳನ್ನು ಕರೆದುಕೊಂಡು 

ಹೋಗಬಹುದು. ನಮ್ಮದೊಂದು ಸೊಗಸಾದ ತೋಟ ಇದೆ. ಅದರಲ್ಲಿ 

ಅನೇಕ ತರಹ ಹಣ್ಣಿನ ಗಿಡಗಳಿವೆ. ತೋಟದ ಮಧ್ಯದಲ್ಲಿ ಒಂದು ಸೋಪಾ 

ನದ ಕೊಳ ಇದೆ. ಮೆಟ್ಟಿಲುಗಳು ಬಹಳ ಚೆನ್ನಾಗಿವೆ. ನಾನೂ ಅವಳೂ 

ಅಲ್ಲಿಗೆ ಹೋಗಿ ಆ ಮೆಟ್ಟಲುಗಳ ಮೇಲೆ ಕುಳಿತುಕೊಂಡು ಬಹಳ ಹೊತ್ತು 

ಮನಸ್ಸಿಗೆ ತೋರಿದುದನ್ನೆಲ್ಲಾ ಮಾತನಾಡಬಹುದು. ನಾನೇ ಹಣ್ಣುಗ 

ಳನ್ನು ಕಿತ್ತು ತರುತ್ತೇನೆ. ಇಬ್ಬರೂ ಮನಸ್ಸು ದಣಿಯುವಹಾಗೆ ತಿನ್ನಬ 

ಹುದು. ಅಲ್ಲಿ ಬಗೆಬಗೆಯ ಹೂವಿನ ಗಿಡಗಳಿವೆ. ಅವಳು ಹಣ್ಣು ತಿನ್ನು 

ತ್ತಿರುವಾಗ ನಾನು ಅವುಗಳನ್ನೆಲ್ಲಾ ಕಿತ್ತು ತಂದು ಅವಳ ಮುಂದೆ ರಾಶಿ 

ಹಾಕುತ್ತೇನೆ. ನಾರು ಇದ್ದರೆ ಮಾಲೆ ಕಟ್ಟಬಹುದು ಎಂದು ಅವಳು ಹೇಳು 

ತ್ತಾಳೆ. ನಾನು ಬಾಳೇ ಮರದಿಂದ ನಾರು ತಂದುಕೊಡುತ್ತೇನೆ. ಮಾತ 

ನಾಡುತ್ತ ಆಡುತ್ತ ಅವಳು ಆ ಹೂವುಗಳನ್ನೆಲ್ಲಾ ಮಾಲೆಯಾಗಿ ಕಟ್ಟುತ್ತಾ ಳೆ, 

ನಾನು “ಬಹಳ ಚನ್ನಾಗಿದೆ !" ಅನ್ನುತ್ತೇನೆ. ಅವಳು ಆ ಮಾಲೆಯನ್ನು 



ಸರಸಿಯ ಗೊಂಬೆ ೩೯ 



ನನ್ನ ಕೊರಳಿಗೆ ಹಾಕುತ್ತಾಳೆ. ನಾನು ಅದನ್ನು ತೆಗೆದು, ಅವಳನ್ನು ಹತ್ತಿ 

ರಕ್ಕೆ ಎಳೆದುಕೊಂಡು ಅವಳ ತುರುಬಿಗೆ ಸುತ್ತುತ್ತೇನೆ. ಅವಳು ನಗು 

ತ್ತಾಳೆ. ನಾನೂ ನಗುತ್ತೇನೆ. ""ಎಲ್ಲಿ, "ಒಂದು ಮುತ್ತು?” ಅನ್ನುತ್ತೇನೆ. 

ಅವಳು ""ಊ !ಮುತ್ತು!” ಎಂದು ಹೇಳಿ ಹಿಂದಕ್ಕೆ ಸರಿದು ಮಿಕ್ಕ ಹೂಗ 

ಳನ್ನೆಲ್ಲಾ ಬಾಚಿ ತೆಗೆದುಕೊಂಡು ನನ್ನ ಮೇಲೆ ಎರಚುತ್ತಾಳೆ. ನಾನು ಇದ್ದ 

ಕ್ಕಿದ್ದಹಾಗೆಯೇ "ಚೇಳು! ಚೇಳು! ಎಂದು ಕೂಗುತ್ತೇನೆ. ಅವಳು ಬೆಚ್ಚಿ 

ಬಿದ್ದು ನನ್ನ ಪಕ್ಕಕ್ಕೆ ಥಟ್ಟನೆ ಸರಿದು ನನ್ನನ್ನು ಬಲವಾಗಿ ತಬ್ಬಿ ಕೊಳ್ಳು 

ತ್ತಾಳೆ. ಆಗ ನಾನು "ಸಿಕ್ಕಿದೆಯೆಲ್ಲ ಈಗ! ಏನ್ಮಾಡ್ತಿ?” ಎಂದು ಕೇಳು 

ತ್ತೇನೆ. “ಸೋತೆ, ಬಿಡಿ” ಅನ್ನುತ್ತಾಳೆ. “ಸುಮ್ಮನೆ ' ಸೋತೆ ' ಅಂದರೆ 

ಬಿಡೊಲ್ಲೆ? ಎಂದು ಹೇಳುತ್ತೇನೆ. "ಇನ್ನೇನ್ಮಾಡಬೇಕು? ಎಂದು ಕೇಳು 

ತಾಳೆ. "ನಿನಗೆ ತಿಳಿಯದೆ?'' ಎಂದು ಹೇಳುತ್ತೇನೆ. "ತಿಳಿಯದು? 

ಅನ್ನುತ್ತಾಳೆ. ನಾನು ""ಹೇಳಿಕೊಡು....” ಅಂದುಕೊಳ್ಳುವಷ್ಟರಲ್ಲಿ ಈ 

ತಿರುಕನ ಕನಸಿಗೆ ಭಂಗವಾಯಿತು. ಏರಿ ಆಚಿಯಲ್ಲಿದ್ದ ಹಳ್ಳಿಯಲ್ಲಿ ಯಾವು 

ದೋ ಹುಲ್ಲು ಗುಡಿಸಲಿಗೆ ಬೆಂಕಿ ಹತ್ತಿ ಹಳ್ಳಿಯ ಜನಗಳೆಲ್ಲಾ ಬೊಬ್ಬಿಡು 

ವುದು ಕೇಳಿಬಂತು. ನಾನೂ ತಟ್ಟನೆ ಎದ್ದು ಆ ಕಡೆಗೆ ಓಡಿದೆ. 



೬ 


ಇನ್ನು ನಾಲ್ಕು ವರ್ಷಗಳು ಕಳೆದುವು. ಈ ನಾಲ್ಕು ವರ್ಷಗಳಲ್ಲಿ 

ಬಿಡಿಸಿ ಹೇಳಬೇಕಾದ ಹೆಚ್ಚು ಸಂಗತಿಗಳೇನೂ ನಡೆಯಲಿಲ್ಲ. ನಾನೂ 

ಹೆಬ್ಬಾಳಿನಲ್ಲಿ ನನ್ನವ್ಯಾಸಂಗವನ್ನು ಮುಗಿಸಿಕೊಂಡು ಬಂದು ನಮ್ಮ ಹಳ್ಳಿಯಲ್ಲಿ 

ನೆಲಸಿದೆ. ನಿದಾನವಾಗಿ ನಮ್ಮ ಜಮಾನಿನ ಆಡಳಿತವನ್ನು ನಾನೇ ವಹಿಸಲಾರಂ 

ಭಿಸಿದೆ. ನನ್ನ ಕೆಲಸವೇನೂ ಅಷ್ಟು ಹೆಚ್ಚಾಗಿರಲಿಲ್ಲ. ಬೇಕಾದ ಹಾಗೆ ವಿರಾಮ 

ಸಿಕ್ಕುತ್ತಿತ್ತು. ನಾನು ಆ ಕಾಲವನ್ನೆಲ್ಲಾ ಒಂದು ಕನಸಿನಿಂದ ತುಂಬುತ್ತಿದೆ. 

ಪ್ರತಿಯೊಂದು ಸಲವೂ ಆ ಒಂದೇ ಕನಸು ನನ್ನ ಜೀವವನ್ನು ಆವರಿಸುತ್ತಿತ್ತು. 

ಒಂದೊಂದು ಸಲವೂ ನಾನು ಆ ಕನಸನ್ನು ಹೆಚ್ಚು ಹೆಚ್ಚು ನಯವಾಗಿ 

ನೇಯುತ್ತ ಅದನ್ನು ನನ್ನ ಹೈದಯದ ಅಂತರಾಳದಲ್ಲಿ ಭದ್ರಪಡಿಸಿ ಈ ನಾಲ್ಕು 

ವರ್ಷಗಳ ಕಾಲ ಪೋಷಿಸಿದೆ ನಾನು ಹೀಗೆ ಮಾಡಿದುದು ಸರಿಯೋ 

ತಪ್ಪೋ ನಾನು ಕಾಣೆ. ಫಲಿತಾಂಶದಿಂದ ಒಂದು ವಿಷಯ ಪ್ರಾರಂಭದ 



೪೦ ಕೆಲವು ಕಥೆಗಳು 



ಔಚಿತ್ಯಾನೌಚಿತ್ಯಗಳನ್ನು ನಿರ್ಧರಿಸುವುದಾದರೆ ನಾನು ಹಾಗೆ ಮಾಡಿದುದು 

ಬಹಳ ಅನುಚಿತವಾದ ಕೆಲಸವಾಯಿತೆಂದು ನನಗೆ ಈಗ ತೋರುತ್ತದೆ. 

ಮೇಲೆ ಹೋದಷ್ಟೂ ಬೀಳುವ ಆಳ ಹೆಚ್ಚಾಗುವುದೆಂದು ಅರಿಯದೆ ನಾನು 

ನಿರ್ಯೋಚನೆಯಿಂದ ನನ್ನ ಕನಸಿನ ಶಿಖರನ್ನೇರಿದೆ. ಒಂದು ವೇಳೆ ಅಲ್ಲಿಂದ 

ಜಾರಿದರೆ ಏನು ಗತಿ?-ಎಂದು ಮನಸ್ಸಿಗೆ ಆಗಾಗ ತೋರಿದರೂ ಆ ಪರಿಣಾ 

ಮದ ವಿಷಯವಾಗಿ ನನ್ನ ಮನಸ್ಸು ಯೋಚಿಸಲೊಲ್ಲದೆ ಹೋಯಿತು. ಈ 

ಆತ್ಮವಂಚನೆಯಿಂದ ನನ್ನ ಮನಸ್ಸು ಬಹಳ ದುಃಖಕ್ಕೆ ಗುರಿಯಾಯಿತು. 

ಇದರಿಂದ ಎಲ್ಲಾ ನನಗೆ ಈಗ ತೋರುವುದೇನೆಂದರೆ ಅನೇಕ ವೇಳೆ ಆಸೆಯೇ 

ನಮ್ಮ ದುಃಖಕ್ಕೆ ಕಾರಣ. ಹುಟ್ಟುವುದು ನಮ್ಮ ಆಸೆಯಲ್ಲ. ಸಾಯುವುದು 

ನಮ್ಮ ಆಸೆಯಲ್ಲ. ಹೀಗಿರುವಲ್ಲಿ ಇವೆರಡರ ಮಧ್ಯೆ ನಮ್ಮ ಆಸೆ ಪ್ರಬಲ 

ವಾಗಲೇಕೆ? 


ಸರಸಿ ಮೆಲ್ಲಮೆಲ್ಲಗೆ ವಧೂ ವೇಷವನ್ನು ತಾಳುತ್ತಿದ್ದಳು... ಅವಳು 

ಬೆಳೆದ ಹಾಗೆಲ್ಲಾ ನಾನು ನೇಯ್ದು ಕೊಂಡಿದ್ದ. ಕನಸಿನ ಬಣ್ಣ ಮಾಸುತ್ತ 

ಬಂತು. ಆದರ ಒಂದೊಂದು “ಎಳೆಯೂ” ಛಿದ್ರಛಿದ್ರವಾಗತೊಡಗಿತು. 

ಒಂದು ದಿನ ಅದು ನನ್ನ ಹೃದಯದ್ವಿಂದ ಸಂಪೂರ್ಣವಾಗಿ ಅಳಿಸಿ ಹೋಗು 

ವಂತಾಯಿತು. ಆ ದಿನ ಹೇಗೆ ಬಂತು ಅನ್ನುವುದನ್ನು ನಾನು ಇಲ್ಲಿ ವಿವರಿಸ 

ಲಾರೆ. ಅದರಿಂದ ನನಗೆ ಬಹಳ ಯಾತನೆಯಾಗುತ್ತದೆ. ಅಂತೂ ಆ ದಿನ 

ಬಂತು. ಸರಸಿಯನ್ನು ಬೇರೆ ಕಡೆಗೆ ಕೊಟ್ಟು ಲಗ್ನ ಮಾಡಿದರು. 


ನನ್ನ ಪ್ರೇಮದ ಬೆಳಕು ಇದ್ದಕ್ಕಿದ್ದ ಹಾಗೆಯೇ ದುಃಖದ ಜ್ವಾಲೆಯಾ 

ಯಿತು. 


೭ 


ಸರಸಿಯ ವಿಷಯದಲ್ಲಿ ನನ್ನ ಬಲವತ್ತರವಾದ ಆಸೆ ಕೈ ಗೂಡದಿದ್ದರೂ 

ನನ್ನ ನಿರಂತರವಾದ ಹಾರೈಕೆ ಕೈಗೂಡಿತು. ಅವಳನ್ನು ಅನುರೂಪನೂ, 

ಯೋಗ್ಯನೂ ಆದ ವರನಿಗೆ ಕೊಟ್ಟು ಲಗ್ನಮಾಡಿದರು. ಅನಳ ಗಂಡನ 

ಊರು ಕೋಲಾರ. ಮೈ ಸೂರು ಕಾಲೇಜಿನಲ್ಲಿ ಓದುತ್ತಿದ್ದ. ಕೇಳಿದುದರಲ್ಲಿ 

ಅವರಿಗೆ ಬೇಕಾದ ಹಾಗೆ ಇದೆಯೆಂದೂ, ಅವನು ತನ್ನ ತಾಯಿತಂದೆಗಳಿಗೆ 

ಒಬ್ಬನೇ ಮಗನೆಂದೂ ತಿಳಿಯಬಂತು. ನನ್ನ ವಿಷಯ ಹೇಗಾದರೂ ಇರಲಿ, 



ಸರಸಿಯ ಗೊಂಬೆ ೪೧ 



ಸರಸಿಗೆ ಯಾವುದರಲ್ಲಿ ಏನೂ ಕೊರತೆಯಿಲ್ಲದಂತಾಯಿತಲ್ಲಾ, ಅಷ್ಟೇ ನನಗೆ 

ಸಂತೋಷ. ನನ್ನ ದುಃಖದ ಜ್ವಾಲೆಯ ಮೇಲೆ ಈ ಸಂತೋಷವನ್ನು 

ಚಿಮುಕಿಸಿ ಆರಿಸಲು ಪ್ರಯತ್ನ ಪಡುತ್ತಿದ್ದೆ. 


ಮದುವೆಯಾದ ಮೇಲೂ ಸರಸಿಯನ್ನು ಆಗಾಗ ನೋಡುತ್ತಿದ್ದೆ. 

ಆದರೆ ಎಷ್ಟು ವ್ಯತ್ಯಾಸ! ಆ ಸಲಿಗೆ ಆಟಪಾಟ ಎಲ್ಲ ಮರೆತು ಬಿಟ್ಟಳೆಂದು 

ತೋರುತ್ತದೆ... ಅವಳು ಮದುವೆಯಾದ ಮೇಲೆ ನನ್ನನ್ನು ಅಣ್ಣಯ್ಯಾ 

ಎಂದು ಕರೆಯಲು ಪ್ರಾರಂಭಿಸಿದಳು. ನಾನೂ ಅವಳನ್ನು ಸರಸಮ್ಮ ಎಂದು 

ಕರೆಯಬೇಕಾಯಿತು. ಸರಸಿಯನ್ನು ನಾನು ಕಳೆದುಕೊಂಡೆನೆಂಬ ಭಾವನೆ 

ನನ್ನ ಹೃದಯದಲ್ಲಿ ನಿಂತಿತ್ತು. ಆದರೆ ಅವಳಿಗೆ ಆ ಭಾವನೆ ಇರಲಿಲ್ಲ. 

ಏಕೆಂದರೆ ಅವಳು ಯಾನ ಆಸೆಯನ್ನೂ ಇಟ್ಟು ಕೊಂಡಿರಲಿಲ್ಲ. ಇಟ್ಟು 

ಕೊಳ್ಳುವ ವಯಸ್ಸೂ ಇರಲಿಲ್ಲ. ಆದುದರಿಂದ ಆ ಮದುವೆಯಿಂದ ದುಃಖಕ್ಕೆ 

ಈಡಾದವನು ನಾನೊಬ್ಬನೆ. ಅವಳಿಗೆ ಆ ದುಃಖವನ್ನು ದೇವರು ತಪ್ಪಿಸಿ 

ದನಲ್ಲಾ ಅಷ್ಟೇ ನನ್ನ ತೃಪ್ತಿ. 


ಮದುವೆಯಾದ ಎರಡು ವರ್ಷಗಳಲ್ಲಿಯೆ ಸರಸಿ ಗಂಡನ ಮನೆಗೆ 

ಹೋದಳು. ಅವಳು ಹೊರಡುವ ದಿನ ನಾನು ಮನೆಯಲ್ಲಿರಲಿಲ್ಲ. ನಮ್ಮ 

ತೋಟಕ್ಕೆ ಹೋಗಿ ಅಲ್ಲಿ ಕೊಳದ ಸೋಪಾನದ ಮೇಲೆ ಕುಳಿತು ಬೇಕಾದಷ್ಟು 

ಕಣ್ಣೀರು ಸುರಿಸಿದೆ; ಬೇಕಾದಷ್ಟು ನಿಟ್ಟುಸಿರುಬಿಟ್ಟೆ. ಅಲ್ಲಿ ಸುತ್ತಮುತ್ತಲು 

ಗಿಡಗಳ ತುಂಬ ಅನೇಕ ಜಾತಿಯ ಹೂಗಳು ಅರಳಿ ಜಗ್ಗುತಿದ್ದುವು. ಅವುಗಳ 

ನ್ನೆಲ್ಲಾ ನೋಡಿ ಅಯ್ಯೋ! ಅನ್ನಿಸಿತು. ಒಂದು ರೀತಿಯಾಗಿ ಆಗದಿದ್ದರೆ 

ಅವುಗಳ ಜನ್ಮ ಸಾರ್ಥಕವಾಗುತ್ತಿತ್ತು. ಆದರೆ ಅವುಗಳಿಗೇನು ? ಯಾರು 

ಇದ್ದರೂ ಇಲ್ಲದಿದ್ದರೂ ಅವು ಅರಳದೆ ಇರುತ್ತವೆಯೋ? ಅದು ದೇವರ 

ನಿಯಮ....ಎಲ್ಲವೂ ದೇವರ ನಿಯಮ! ಸಾಯಂಕಾಲ ಹೊತ್ತು ಮಾಡಿ 

ಕೊಂಡು ಮನೆಗೆ ಬಂದೆ. ಅಷ್ಟು ಹೊತ್ತಿಗೆ ಸರಸಿ ನಮ್ಮ ಹಳ್ಳಿ ಬಿಟ್ಟು 

ಹೊರಟುಹೋಗಿದ್ದಳು. 


ರಾತ್ರೆ ಹಸಿವು ತೋರಲಿಲ್ಲ. ಆದರೂ ಸ್ವಲ್ಪ ಊಟಮಾಡಿ ಕೊಠಡಿಗೆ 

ಹೋಗಿ ಮಲಗಿಕೊಂಡು ಬಿಟ್ಟಿ. ಬೇಗ ನಿದ್ರೆ ಹತ್ತುವಹಾಗೆ ಕಾಣಲಿಲ್ಲ. 



೪೨ ಕೆಲವು ಕಥೆಗಳು 



ತೋಟದಲ್ಲಿ ಕುಳಿತಿದ್ದಾಗ “ಎಲ್ಲವೂ ದೇವರ ನಿಯಮ”? ಅಂದಿದ್ದು 

ಪುನಃ ಈಗ ಜಾಗರಿತವಾಯಿತು. 


ಸರಸಿ ಪುನಃ ನಮ್ಮ ಹಳ್ಳಿಗೆ ಬಂದುದು ಎರಡು ವರ್ಷಗಳ ಮೇಲೆ. 

ಅದಕ್ಕೆ ಮುಂಚೆ ಒಂದು ಬಾರಿಯೂ ಅವಳು ತೌರು ಮನೆಗೆ ಬರಲಿಲ್ಲ. ಅವ 

ಳಿಗೆ ಗೌರ ಹಬ್ಬ, ಶ್ರಾವಣ ಮಾಸದ ವ್ರತ ಎಲ್ಲವೂ ಅಲ್ಲೇ ನಡೆಯಿತಂತೆ. 

ಅಂತಹ ಸೊಸೆಯನ್ನು ಯಾವ ಅತ್ತೆ ತಾನೆ ಬಿಟ್ಟರಬಲ್ಲಳು? ಕೊನೆಗೆ ಅವಳ 

ಹೆರಿಗೆ ಬಾಣಂತನ ಕೂಡ ಅಲ್ಲೇ ಆಯಿತು. ನಮ್ಮ ಹಳ್ಳಿಗೆ ಗಂಡು ಮಗು 

ಎಂದು ವರ್ತಮಾನ ಮಾತ್ರ ಬಂತು. ಅವಳು ಗಂಡನ ಮನೆಗೆ ಹೋದ ಮೇಲೆ 

ಮೊದಲನೆಯ ಸಲ ತೌರುವನೆಗೆ ಬಂದುದು ಆರು ತಿಂಗಳ ಮಗುವಿನೊಡನೆ. 


ಅವಳು ಗಾಡಿಯಲ್ಲಿ ಬರುತ್ತಿದ್ದಾಗ ನಾನು ನಮ್ಮ ಮನೆಯ ಜಗುಲಿಯ 

ಮೇಲೆ ನಿಂತಿದ್ದೆ. ಅವಳು ದೂರದಲ್ಲೇ ನನ್ನನ್ನು ಕಂಡು ಗುರ್ತಿಸಿ, ಗಾಡಿ 

ನಮ್ಮ ಮನೆಯ ಮುಂದೆ ಬಂಡೊಡನೆಯೆ ನಿಲ್ಲಿಸಹೇಳಿ, ನನ್ನ ನ್ನು ಕುರಿತು 

“ಅಣಯ್ಯಾ, ಕ್ಷೇಮವಾಗಿದ್ದೀಯಾ?” ಎಂದು ಕೇಳಿ ಕೈಲಿ ಎತ್ತಿ ಕೊಂಡಿದ್ದ 

ಮಗುವನ್ನು ನನ್ನ ಕಡೆಗೆ ತಿರುಗಿಸಿ “ಪುಟ್ಟI ಪುಟ್ಟ! ನೋಡು ಮಾವನ್ನ; 

ಎಂದಳು. ಅಮೇಲೆ ನನ್ನನ್ನು ಕುರಿತು ಆ ಮನೆಗೆ ಬರ್ತೀಯಾ?" ಎಂದು  

ಹೇಳಿ ಗಾಡಿಯನ್ನು ಮುಂದಕ್ಕೆ ಹೊಡೆಸಿದಳು. 


ನಾನು ಅವರ ಮನೆಗೆ ಹೋದಾಗ ಮಧ್ಯಾಹ್ನ ಸುಮಾರು ಮೂರು 

ಗಂಟಿ ಇರಬಹುದು. ಸರಸಿಯನ್ನು ನೋಡಿದೆ. ಈಗ ಅವಳು  ಸಣ್ಣ ಹೆಂ 

ಗಸು ಅದಕ್ಕೂ ಹೆಚ್ಚಾ ಗಿ ತಾಯಿ ಅವಳನ್ನು ನೋಡಿದುದರಲ್ಲಿ ಬಹಳ ಸುಖ 

ವಾಗಿದ್ದಾಳೆ, ಎಂದು ತೋರಿತು. ತನ್ನ ಮಗುವನ್ನು ತಂದು ತೋರಿಸಿ ನನ್ನ 

ಕೈಲಿಟ್ಟಳು. ಮಗು ಬಹಳ ಮುದ್ದಾಗಿದ್ದಿತು. ಆರೇ ತಿಂಗಳಾಗಿದ್ದರೂ 

ವರ್ಷದ ಮಗು ಅನ್ನುವ ಹಾಗಿತ್ತು. 


ಸರಸಿ ತನ್ನ ಗಂಡನ ಮನೆಯಿಂದ ತಂದಿದ್ದ ತಿಂಡಿ ಸ್ವಲ್ಪ ಕೊಟ್ಟಳು. 

ಅದನ್ನು ತಿನ್ನುತ್ತ, ಯೋಗಕ್ಷೇಮ ವಿಚಾರ, ಅದು ಇದು ಮಾತನಾಡುತ್ತ 

ಹಿಂದಿನ ವಿಷಯಗಳನ್ನೆಲ್ಲ ಜ್ಹಾಪಿಸಿಕೊಳ್ಳುತ್ತ ಅರಗಿನ ಗೊಂಬೆ ಪ್ರಸ್ತಾ 

ಪವನ್ನೆತ್ತಿ, ಅವಳು ಅದಕ್ಕಾಗಿ ಅತ್ತುದೂ, ನಾನು ಇನ್ನೊಂದು ಗೊಂಬೆ 

ತರಿಸಿಕೊಡುವುದಾಗಿ ಹೇಳಿ ಸಮಾಧಾನ ಮಾಡಿದುದೂ ಅಮೇಲೆ ಅದೆಲ್ಲಾ 

ಮರೆತುಹೋದದ್ದೂ ಎಲ್ಲಾ ಹೇಳಿ ಆಮೇಲೆ, 



ಸರಸಿಯ ಗೊಂಬೆ ೪೩ 



""ಏನಮ್ಮಾ ಸರಸಮ್ಮ, ಗೊಂಬೆ ತರಿಸಿಕೊಡುತ್ತೇನೆ ಎಂದು ಹೇಳಿ 

ಆಗ ಮರೆತುಬಿಟ್ಟೆ. ಈಗಲಾದರೂ ಹೇಳು, ನೀನು ಆಗಿನ ಹಾಗೆಯೇ 

ಅತ್ತು ಹಠ ಮಾಡಿದರೆ, ಈಗಲೂ ಇನ್ನೊಂದು ಗೊಂಬೆ ತರಿಸಿಕೊಡಲು 

ಸಿದ್ಧನಾಗಿದ್ದೇನೆ? ಎಂದು ಹಾಸ್ಯವಾಗಿ ಹೇಳಿದೆ. 


ಅದಕ್ಕೆ ಅವಳು ಉತ್ತರವಾಗಿ ತನ್ನ ಮಗನನ್ನು ಎತ್ತಿ ತಬ್ಬಿಕೊಂಡು 

ಒಂದು ಮುತ್ತು ಕೊಟ್ಟು ನನ್ನ ಕಡೆಗೆ ನೋಡುತ್ತ, 


“ಅಣ್ಣಯ್ಯಾ, ನಮ್ಮ ಪುಟ್ಟನನ್ನು ನೋಡು! ಇದಕ್ಕಿಂತ ಹೆಚ್ಚಿನ 

ಗೊಂಬೆ ನನಗೆ ಇನ್ಯಾವುದು ?" ಎಂದು ಹೇಳಿ, ಪುಟ್ಟನನ್ನು ತನ್ನ ತೋಳ್ಗಳ 

ಮೇಲೆ ಕುಣಿಸುತ್ತ “ಅಲ್ವೇನೋ ಪುಟ್ಟ?” ಎಂದು ಕೇಳಿದಳು. ಆ ನೋಟ 

ವನ್ನು ನೋಡಿ ನನ್ನ ಕಣ್ಣು ರ್ಸಾಥಕವಾಯಿತು. ಬಹಳ ದಿನಗಳ ಹಿಂ 

ದೆಯೇ ಅವಳ ಕೇವಲ ಬಾಲ್ಯದಲ್ಲಿ ನಾನು ಕಂಡಿದ್ದ ತಾಯ್ತನದ ಮೊಳಿಕೆ 

ಈಗ ಕೋಮಲವಾದ ಲತೆಯಾಗಿ ಬೆಳೆದು, ತನ್ನ ಮೊದಲನೆಯ ಮೊಗ್ಗನ್ನು 

ಧರಿಸಿ ನನ್ನೆದುರಿಗೆ ನಿಂತಿದ್ದುದನ್ನು ನೋಡಿ ನನಗೆ ಮಿತಿಮಾರಿದ ಆನಂದವು 

ಯಿತು. ಆಗ ನನಗೆ ಶ್ರೀರಾಮಾಶ್ವಮೇಧದಲ್ಲಿ ಸೀತಾದೇವಿ ತನ್ನ ಸಖಿಯನ್ನು 

ಕುರಿತು 


" ಎಳವರೆಯದೊಳ್ ನಲ್ಗೂಸಂ ಪೆತ್ತು ಬಾಲಕೇಳಿಯಂ ಕಣ್ಣಣಿಯೆ 

ಕಂಡು ಸಂಸಾರದ ಸಾರಮಿದೆನುತೆ ಸಂತಸಂಬಡುನ ಪೆಣ್ಗಳೆ ಧನ್ಯಯರಲ್ತೆ” 

ಎಂದು ಹೇಳಿದ ಮಾತು ಜ್ಞಾಪಕಕ್ಕೆ ಬಂತು. 

==============================================

೪೪ 


ದೂರದ ಆಸೆ 

-------

ರಾಮಚಂದ್ರ--""ಏನು ಯೋಚಿಸುತ್ತಿದ್ದೆ ಶ್ರೀಕಂಠ ?


ಶ್ರೀಕಂಠ--""ಏನು ಯೋಚಿಸಲಿ ರಾಮು! ನನಗೆ ಇರುವುದು ಒಂದೇ 

ಯೋಚನೆ.” 


“ಅದೇನು?” 


“ನಿನಗೆ ಗೊತ್ತಿಲ್ವೆ?'' 


"ಏನು ?" 


"ನನ್ನ ತಂಗಿ ಮದುವೆ ನಿಂತುಹೋದದ್ದು ?" 


“ಗೊತ್ತು.” 


“ಅದಕ್ಕೆ ಕಾರಣವೂ ಗೊತ್ತಿರಬಹುದು ?? 


“ಕಣ್ಣು ಏನೋ ಸ್ವಲ್ಪ............ "


“ಹೌದು. ಅದು ದಿನದಿನಕ್ಕೆ ಹೆಚ್ಚಿ ಈಗ ಅವಳು ಶುದ್ದ ಕುರುಡಿ 

ಯಾಗಿಬಿಟ್ಟಿದ್ದಾಳೆ. ಅವಳ ಸಂಕಟ ಹೇಳಲಾರೆ. ಅಮ್ಮ ಒಂದು ಕಡೆ 

ಕೊರಗುತ್ತಿದ್ದಾಳೆ. ಮೀನಾಕ್ಷಿಗೆ ಈಗಲೇ ಹನ್ನೆರಡು ತುಂಬಿ ಹದಿಮೂರ 

ನೆಯ ವರ್ಷ. ಇನ್ನೂ ಮದುವೆಯಿಲ್ಲ. ಹೇಗೆ ಆಗುತ್ತೋ ನಾನು ಕಾಣೆ. 

ಮದುವೆಗೆ ಗಂಡು ಗೊತ್ತಾಗಿ, ಎಲ್ಲವೂ ನಿಶ್ಚಯನಾಗಿ, ಲಗ್ನಕ್ಕೆ ದಿನವನ್ನೂ 

ಗೊತ್ತುಮಾಡಿದ್ದರು. ಅಷ್ಟರಲ್ಲೇ ದೇವರು ನಮಗೆ ಈ ಸಂಕಟ ತಂದಿಟ್ಟ. 

ಅಪ್ಪ ಬದುಕಿದ್ದಿದ್ದರೆ ಎಷ್ಟೋ ಥೈರ್ಯವಿರುತ್ತಿತ್ತು. ದೇವರು ಅವನನ್ನು 

ಕರೆದುಕೊಂಡ. ರಾಮು! ಈಗ ನಮ್ಮ ಪಾಡು ನಾಯಿಯ ಪಾಡಾಗಿದೆ. 

ಅವಳಿಗೆ ಮದುವೆಯಾಗಲೇಬೇಕು. ಆದರೆ ಹೇಗೆ ಆಗಬೇಕು? ಈಗ ಆ 

ನಿರ್ಭಾಗ್ಯಳನ್ನು ಯಾರು ಮದುವೆಯಾಗುತ್ತಾರೆ? ರಾಮು ಅವಳದ್ದು 

ಎಂತಹ ಕರ್ಮ! ಮನೆಯ ಕೆಲಸಕಾರ್ಯಗಳಲ್ಲಿ ಅವಳಿಗೆ ಎಷ್ಟು ಚಟು 



ದೂರದ ಆಸೆ ೪೫ 



ವಟಕೆ! ಒಂದು ದಿನವೂ ಗಟ್ಟಯಾಗಿ ಮಾತನಾಡಿದವಳಲ್ಲ. ಎಷ್ಟು ಪುಸ್ತ 

ಕಗಳನ್ನು ಓದುತ್ತಿ ದ್ದಳು! ಎಷ್ಟು ಹಾಡುಗಳು! ಈಗ ಅವಳಿಗೆ ಹಾಡುಗೀಡು   

ಒಂದೂ. ಬೇಡ. ಮೂಲೆಯಲ್ಲಿ ಕುಳಿತು ಅಳುವುದೇ ಒಂದೇ ಅವಳ ಹಾಡು. 

ಇನ್ನು ಮುಂದೆ ಅವಳಿಗೆ ಎಂತಹ ಜೀವನ! ಅಯ್ಯೋ ಕರ್ಮವೇ ! 


ಶ್ರೀಕಂಠನ ಕಣ್ಣುಗಳ ಅಂಚಿನಲ್ಲಿ ನೀರು ತುಂಬಿಕೊಂಡಿತು. ಅವನಿಗೆ 

ಮುಂದೆ ಮಾತನಾಡಲಾಗಲಿಲ್ಲ. ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡು 

ಕಣ್ಣೀರನ್ನು ಒರಸಿಕೊಳ್ಳುತ್ತ ಮೌನವಾಗಿ ಅಳುತ್ತಿದ್ದ. ರಾಮಚಂದ್ರನೂ 

ಮಾತಿಲ್ಲದೆ ಕುಳಿತಿದ್ದ. ರಜನಿಯ ನೀಲಿ ಸೀರೆಯ ಸೆರಗಿನಲ್ಲಿ ಸೇರಿಸಿ ನೆಯ್ದ 

ವಜ್ರದ ಕಿಡಿಗಳಂತೆ, ಆಕಾಶದಲ್ಲಿ ಅಲ್ಲಲಿ ನಕ್ಷತ್ರಗಳು ತಲೆದೋರುತ್ತಿದ್ದವು. 

ಯಾರನ್ನೋ ಹುಡುಕಿಕೊಂಡು ಸುತ್ತಾಡುತ್ತಿದ್ದರಂತೆ. ತಣ್ಣನೆಯ ಗಾಳಿ ಅಲ್ಲಿ  

ಸುಳಿದು ಇಲ್ಲಿ ಸುಳಿದು ಮೆಲ್ಲಗೆ ಬೀಸಿ ಬರುತ್ತಿತ್ತು. ರಾಮಚಂದ್ರ ಏನೋ 

ಯೋಚಿಸುತ್ತಿದ್ದವನು ಹಾಗೆಯೇ ಹಿಂದಕ್ಕೆ ಒರಗಿಕೊಂಡು ಈ ಕಡೆ 

ನೋಡತೊಡಗಿದನು. ಬರಬರುತ್ತ ಅವನ ಹೊರಗಿನ ದೃಷ್ಟಿ ಮಂಕಾಯಿತು. 

ನಿಧಾನವಾಗಿ ಅವನ ಕಣ್ಣು ರೆಪ್ಪೆ ಗಳು ಮುಚ್ಚಿ ಕೊಂಡವು. ಹುಬ್ಬು ಗಂಟಾಯಿತು. 

ಶ್ರೀಕಂಠನ ಗೋಳಿನ ಕಥೆಯನ್ನು ಕೇಳಿ ಅವನ ಮನಸ್ಸು ನೀರು ಹೊಯ್ದ ಸುಣ್ಣ 

ಕಲ್ಲಿನಂತೆ ಆಗಿತ್ತು. ರಾಮಚಂದ್ರ ಬಹಳ ಹೊತ್ತು ಹಾಗೆಯೇ ಇದ್ದು ಆಮೇಲೆ 

ದೊಡ್ಡದಾಗಿ ನಿಟ್ಟುಸಿರು ಬಿಟ್ಟು. ಶ್ರೀಕಂಠನ ಕಡೆಗೆ ತಿರುಗಿದ. ಶ್ರೀಕಂಠ ತಲೆ 

ಬಗ್ಗಿಸಿಕೊಂಡು ಕುಳಿತಿದ್ದ. ಅಷ್ಟು ಹೊತ್ತಿಗೆ ಅಠಾರಾ ಕಚೇರಿಯಲ್ಲಿ ಏಳು 

ಗಂಟೆ ಹೊಡೆಯಿತು. ರಾಮಚಂದ್ರ, "ಹೋಗೋಣವೆ? ” ಎಂದು ನಿಂತು 

ಕೊಂಡ. ಶ್ರೀಕಂಠನೂ ನಿಧಾನವಾಗಿ ಎದ್ದು ಪಂಚೆಯ ತುದಿಯಿಂದ ಕಣ್ಣೀ 

ರನ್ನು ಒರೆಸಿಕೊಂಡು ಹೊರಟ. 


೨ 


ಮಾರನೆಯ ದಿನ ಸಾಯಂಕಾಲ ಶ್ರೀಕಂಠನಿಗೆ ಒಂದು ಕಾಗದ ಬಂತು- 

ಕವರು. ಅವನಿಗೆ ಆಶ್ಚರ್ಯವಾಯಿತು. ಕಾಗದ ಪತ್ರ ಬರೆಯುವ ವಾಡಿ 

ಕೆಯೇ ಅವನಲ್ಲಿರಲಿಲ್ಲ. ಟಪಾಲು ಮುದ್ರೆ ನೋಡಿದ. ಅದೇ ಊರಿನದೆ! 

ಅವನಿಗೆ ಕುತೂಹಲ ಹೆಚ್ಚಿತು. ಕವರನ್ನು ಹರಿದು ನೋಡಿದರೆ ಒಳಗೆ ಕನ್ನಡ 


೪೬ ಕೆಲವು ಕಥೆಗಳು 


ದಲ್ಲಿ ಒಂದು ಕಾಗದ. ಯಾರು ಬರೆದಿರಬಹುದು ಎಂಬ ಕುತೂಹಲದಿಂದ 

ಕಾಗದದ ಕೆಳಗೆ ಮೊದಲು ನೋಡಿದ. ರಾಮಚಂದ್ರ ಎಂದು ಇತ್ತು. ಆತುರ 

ದಿಂದ ಕಾಗದವನ್ನು ಓದಿದ. ಓದುತ್ತ, ಓದುತ್ತ ಅವನ ಕಣ್ಣುಗಳಲ್ಲಿ ನೀರು 

ತುಂಬಿ ಜಾರಿತು. “ರಾಮು! ರಾಮು!” ಎಂದು ಮೆಲ್ಲಗೆ ಹೇಳುತ್ತ ಆ 

ಕಾಗದವನ್ನು ತನ್ನ ಎದೆಗೆ ಒತ್ತಿಕೊಂಡ. ರಾಮಚಂದ್ರ ದೊಡ್ಡ ಕಾಗದವನ್ನು 

ಬರೆದಿದ್ದ. ಅದರಲ್ಲಿ ಮುಖ್ಯವಾದ ವಿಷಯ ಈ ರೀತಿಯಾಗಿತ್ತು: -

ಬೆಂಗಳೂರು, 

ತಾ.................................................


".................................. ನೆನ್ನೆ ನೀನು ಹೇಳಿದ ವಿಚಾರವಾಗಿ, ಆಗಿನಿಂದ ಇದು 

ವರೆಗೂ ಬಹಳ ಯೋಚಿಸಿದ್ದೇನೆ. ಯಾವ ರೀತಿಯಲ್ಲಿ ಯೋಚಿಸಿದರೂ ನನಗೆ 

ಒಂದೇ ಒಂದು ದಾರಿ ತೋರುವುದು. ನೆನ್ನೆ ನೀನು “ಆ ನಿರ್ಭಾಗ್ಯಳನ್ನು 

ಯಾರು ಮದುವೆಯಾಗುತ್ತಾರೆ?" ಎಂದು ಕೇಳಿದೆ ಅದಕ್ಕೆ ಉತ್ತರವು ನೆನ್ನೆ 

ರಾತ್ರೆ ನನ್ನ ಮನಸ್ಸಿಗೆ ಹೊಳೆಯಿತು. ಉತ್ತರ--ನಾನು. ನಾನು ಅವಳನ್ನು 

ಮದುವೆಯಾಗುತ್ತೇನೆ. ನಾನು ನಿಮ್ಮ ಪಂಗಡಕ್ಕೆ ಸೇರಿದವನಲ್ಲ. ಆದರೆ 

ನೀನು ಎಷ್ಟರ ಮಟ್ಟಿಗೆ ಬ್ರಾಹ್ಮಣನೋ ನಾನೂ ಅಷ್ಟರ ಮಟ್ಟಿಗೇ ಬ್ರಾಹ್ಮಣ. 

ನನಗೆ ಒಂದು ಕುರುಡುಕಾಸಿನ ಆಸೆಯೂ ಇಲ್ಲ. ಈ ವಿಷಯವನ್ನು ನಿನ್ನ 

ತಾಯಿಯನರೊಡನೆ ಆಲೋಚನೆ ಮಾಡಿ ನೋಡು.  ನಿನ್ನ ತಂಗಿಯ ಅಭಿ 

ಪ್ರಾಯವೂ ಆವಶ್ಯಕ. ನೀವೆಲ್ಲರೂ ಒಪ್ಪುವುದಾದರೆ ನನ್ನ ಪರೀಕ್ಷೆ ಮುಗಿದ 

ಕೂಡಲೆ ಮದುವೆಯಾಗಲು ಸಿದ್ಧನಾಗಿದ್ದೇನೆ. ಈ ಕಾಗದದಲ್ಲಿ ಸಂಕ್ಷೇಪವಾಗಿ 

ಬರೆದಿದ್ದೇನೆ. ಸಾಧ್ಯವಾದರೆ ನಾಳೆ ಸಾಯಂಕಾಲ ನನ್ನ ಕೊಠಡಿಯ ಹತ್ತಿರ 

ಬಾ. ಇಬ್ಬರೂ ಹೆಚ್ಚು ವಿಶದವಾಗಿ ಮಾತನಾಡಬಹುದು............. 

.........

ಇತಿ ರಾಮಚಂದ್ರ- 


ರಾಮಚಂದ್ರನ ಕಾಗದ ಬಂದು ಶ್ರೀಕಂಠನ ಮನಸ್ಸಿಗೆ ಬಹಳ ಶಾಂತಿ 

ಯನ್ನು ತಂದಿತು. ದಾರಿ ತಪ್ಪಿದ ಕುರುಡನಿಗೆ ಯಾರೋ ಕೈಹಿಡಿದು ನಡಿಸಿ 

ದಂತಾಯಿತು. ಶ್ರೀಕಂಠ ಹೆಚ್ಚು ಕಾಲವಿಳಂಬ ಮಾಡದೆ ರಾಮಚಂದ್ರ 

ಬರೆದ ವಿಷಯವಾಗಿ ತನ್ನ ತಾಯಿಯೊಡನೆ ಪ್ರಸ್ತಾಪ ಮಾಡಿದ. ಲಕ್ಷ್ಮಮ್ಮ  

ನವರು ಮೊದಲು ಒಪ್ಪಲಿಲ್ಲ. “ಅವನು ಬೇರೆ ಸಂಗಡಕ್ಕೆ ಸೇರಿದವನು: 

ಹೇಗೆ ಅವನಿಗೆ ಹುಡುಗಿಯನ್ನು ಕೊಡುವುದು ಜನ ಏನೆಂದಾರು!” ಎಂದು 


ದೂರದ ಆಸೆ ೪೭ 


ಮುಂತಾಗಿ ಆಕ್ಷೇಪಣೆ ತಂದರು. ಶ್ರೀಕಂಠನಿಗೆ ಸ್ವಲ್ಪ ಸಿಟ್ಟು ಬಂತು. 

ಅವನು ಹೇಳತೊಡಗಿದನು :--""ಅಮ್ಮ ಇಲ್ಲಿ ಕೇಳು, "ಜನ ಏನೆಂದಾರು?' 

ಎನ್ನುವೆ. ಈಗ ಮೀನಾಕ್ಷಿಯ ಮದುವೆ ನಿಂತುಹೋಯಿತಲ್ಲ, ' ಜನ ' 

ನಮ್ಮ ಸಹಾಯಕ್ಕೆ ಬರುತ್ತಾರೇನು? ಅಪ್ಪ ಕಷ್ಟಪಟ್ಟಿದ್ದು ನಿನಗೆ ಗೊತ್ತಿ 

ಲ್ಲವೆ? ಆಗ "ಜನ' ಏನು ಸಹಾಯ ಮಾಡಿದರು? ಜನರ ಮನೆ ಹಾಳಾ 

ಯಿತು! ನೀನು ತಲೆಕೆಳಗಾದರೂ ನಮ್ಮ 'ಜನ' ಎನ್ಲಿಸಿಕೊಂಡವರಲ್ಲಿ 

ಯಾವ ವರನೂ ಸಿಕ್ಕುವುದಿಲ್ಲ. ಹುಡುಗಿ ಸರಿಯಾಗಿದ್ದಾಗಲೆ ಆ ಗತಿ. ಈಗ 

ಹೇಳುವದೇನಿದೆ? ನೀನೇ ಯೋಚಿಸಿ ನೋಡು. ನಮ್ಮ ಪಂಗಡದಲ್ಲಿ ಅಲ್ಲ 

ಇನ್ನು ಯಾವ ಪಂಗಡದಲ್ಲಿಯಾದರೂ, ನಾವು ಕಾಲಿಗೆ ಬಿದ್ದರೂ ಒಪ್ಪುವ 

ಗಂಡು ಒಬ್ಬನೂ ಇಲ್ಲ. ಹೀಗಿರುವಾಗ (ಕಣ್ಣುಗಳಲ್ಲಿ ಚಿಮ್ಮಿ ಬಂದ ನೀರನ್ನು 

ಒರಸಿಕೊಳ್ಳುತ್ತ) -- ನಾನು ಹೇಳಿದುದನೈಲ್ಲಾ ಕೇಳಿ, ರಾಮಚಂದ್ರ 

ತಾನಾಗಿ ಮೀನಾಕ್ಷಿಯನ್ನು ಮದುವೆಯಾಗಲು ಒಪ್ಪಿ ಬರೆದಿರುತ್ತಾನೆ. ಅವನು 

ನಮ್ಮ ಪಂಗಡಕ್ಕೆ ಸೇರದ ಮಾತ್ರಕ್ಕೆ ಬ್ರಾಹ್ಮಣನಲ್ಲವೆ? ನಮ್ಮ ಪಂಗಡ 

ದವರೇ ನಮ್ಮ ಕೈಬಿಟ್ಟ ಮೇಲೆ ಇನ್ನು ಆ ಪಂಗಡದಲ್ಲಿ ಏಕೆ ಇರಬೇಕು? 

ಅವನು ಈ ವರ್ಷ ಪರೀಕ್ಷೆಗೆ ಹೋಗಿದ್ದಾನೆ. ಖಂಡಿತವಾಗಿಯೂ “ಪ್ಯಾಸ್"

ಮಾಡುತ್ತಾನೆ. ಕೊನೆಗೆ ಒಂದು ಐವತ್ತು ರೂಪಾಯಿ ಸಂಬಳ ಸಿಕ್ಕಿದರೂ 

ಅವರು ಗಂಡ ಹೆಂಡತಿ ಸುಖವಾಗಿರಬಹುದು. ನೋಡು, "ಒಂದು ಕುರುಡು 

ಕಾಸಿನ ಆಸೆಯೂ ಇಲ್ಲ? ಎಂದು ಬರೆದಿದ್ದಾನೆ. ಆ ಬ್ರಹ್ಮರಾಕ್ಷಸ ವರ 

ದಕ್ಷಿಣೆಯ ಕಾಟವಂತೂ ಇಲ್ಲ. ಅಪ್ಪ ಮದುವೆಗಾಗಿ ಸೇರಿಸಿದ ದುಡ್ಡು 

ಹಾಗೆಯೇ ಇದೆಯಲ್ಲ, ಅದರಲ್ಲಿ ಅವನು ಮಾಡಿರುವ ಸಾಲವನ್ನೆಲ್ಲಾ ತೀರಿಸಿ 

ಉಳಿದ ಅಲ್ಪ ಸ್ವಲ್ಪದರಲ್ಲಿ ಹೇಗೋ ಹಾಗೆ ಮದುವೆ ಮಾಡಬಹುದು. ಅವನ 

“ಲೈಫ್ ಇನ್ಷೂರೆನ್ಸ್'' ಹಣ ಸ್ವಲ್ಪ ಬರುವುದಿದೆ. ಬಂದರೆ ಎಷ್ಟೋ 

ಸಹಾಯವಾಗುತ್ತದೆ. ನೀನು ಇದನ್ನೆಲ್ಲಾ ಯೋಚನೆ ಮಾಡದೆ ಸುಮ್ಮನೆ 

'ಆಗುವುದಿಲ್ಲ' ಎಂದರೆ ಚೆನ್ನಾಗಿರುತ್ತದೆಯೆ? ” 


ಈ ಉಪನ್ಯಾಸವನ್ನು ಕೇಳಿದ ಮೇಲೆ ಲಕ್ಷ್ಮಮ್ಮನವರಿಗೆ ಜ್ಞಾನೋ 

ದಯವಾಯಿತು. “ಆಗಲಪ್ಪ--ಆದರೆ...?' ಎಂದು ಹೇಳಿ ಸ್ವಲ್ಪ ನಿಲ್ಲಿಸಿ 


೪೮ ಕೆಲವು ಕಥೆಗಳು 


ದರು. ಶ್ರೀಕಂಠ ಹುಬ್ಬುಗಂಟಿಕ್ಕಿ ""ಪುನಃ ಇದೇನು? ಆದರೆ” ಎಂದು 

ಕೇಳಿದ. 


“ಮೀನಾಕ್ಷಿ ಏನು ಹೇಳುವಳೋ? ? 


"ಅದರ ವಿಷಯ ನನಗೆ ಬಿಡು.?? 


“ಶ್ರೀಕಂಠ ಪಕ್ಕದ ಕೊಠಡಿಗೆ ಹೋದ. ಒಳಗೆ ಬಾಗಿಲ ಹಿಂದೆ 

ಮೀನಾಕ್ಷಿ ಕುಳಿತಿದ್ದಳು. ತಲೆ ಬಾಚಿಕೊಂಡಿದ್ದಳು. ಬಲಗೈಯ ತೋರ 

ಬೆರಳಿನ ತುದಿಯಲ್ಲಿ ಒಂದು ಕುಂಕುಮದ ಬೊಟ್ಟು. ಕುಂಕುಮವನ್ನು ಇಟ್ಟು 

ಕೊಳ್ಳುವುದರಲ್ಲಿದ್ದಳು. ಅಣ್ಣತಾಯಿಯರ ಮಾತುಗಳನ್ನೆಲ್ಲಾ ಕೇಳುತ್ತಿದ್ದ 

ವಳು, ಕುಂಕುಮವನ್ನು ಇಟ್ಟುಕೊಳ್ಳುವುದನ್ನು ಮರೆತು ಹಾಗೆಯೇ ಕೈಯನ್ನು 

ತೊಡೆಯ ಮೇಲೆ ಇಟ್ಟು ಕೊಂಡಿದ್ದಳು. ಕಂಬನಿಗಳನ್ನು ಆಗ ತಾನೇ ಒರಸಿ 

ಕೊಂಡಿದ್ದಳು. ಮುಖದ ಮೇಲೆ, ಒಳಗಿನಿಂದ ಹರಿದು ಬಂದ ಮುಗು 

ಳ್ನಗೆಯ ಚಿಕ್ಕದೊಂದು ತರಂಗ ಆಡುತ್ತಿತು. ಶ್ರೀಕಂಠ ಇದನ್ನೆಲ್ಲಾ ನೋಡಿ 

ಮಾತನಾಡದೆ ಹೊರಗೆ ಬಂದು, ""ಅಮ್ಮಾ, ಮೀನಾಕ್ಷಿ ಒಪ್ಪಿದಳು” ಎಂದ. 



ಮರುದಿನ ಸಾಯಂಕಾಲ ಶ್ರೀಕಂಠ ರಾನುಚಂದ್ರ ಬರೆದಿದ್ದ ಪ್ರಕಾರ 

ಅವನ ಕೊಠಡಿಯ ಹತ್ತಿರ ಹೋದ. ರಾಮಚಂದ್ರ ಇವನಿಗಾಗಿ ಕಾದು 

ಕೊಂಡಿದ್ದ. ಇಬ್ಬರೂ “ಲಾಲ್ಬಾಗ್ ” ಕಡೆಗೆ ಹೊರಟರು. ಸ್ವಲ್ಪ ದೂರ 

ಯಾರೂ ಮಾತನಾಡಲಿಲ್ಲ. ಶ್ರೀಕಂಠನ ಮನಸ್ಸಿನಲ್ಲಿ "ಹೇಗೆ ಮಾತನ್ನು 

ಪ್ರಾರಂಭಿಸುವುದು?" ಎಂದು ಯೋಚನೆ. ರಾಮಚಂದ್ರನ ಮನಸ್ಸಿನಲ್ಲಿ 

"ನನ್ನ ಕಾಗದ ಏನೇನು ಕಾರುಬಾರು ಮಾಡಿದೆಯೋ !” ಎಂದು ಯೋಚನೆ. 

ಹೀಗೆ ಇಬ್ಬರೂ ಯೋಚನಾಪರರಾಗಿದ್ದುದರಿಂದ ಒಬ್ಬರೊಡನೊಬ್ಬರು ಮಾತ 

ನಾಡಲು ಅವಕಾಶವಾಗಲಿಲ್ಲ. ಇಬ್ಬರೂ ಮೌನವಾಗಿಯೇ "ಲಾಲ್ಬಾಗ್" 

ತೋಟವನ್ನು ಸೇರಿದರು. ಅಲ್ಲಿ ಸಾಂದ್ರವಾಗಿ ಬೆಳೆದಿದ್ದ ಮರಗಳ ಮಧ್ಯೆ 

ಹಾಕಿರುವ ಒಂದು ಶಿಲಾಸನದ ಮೇಲೆ ಕುಳಿತುಕೊಂಡರು. ರಾಮಚಂದ್ರನೇ 

ಮೊದಲು ಮೌನವನ್ನು ಭೇದಿಸಿ "ನನ್ನ ಮನಸ್ಸಿಗೆ ಹೊಳೆದ ಉತ್ತರ ಸರಿಯೆ?” 

ಎಂದು ಕೇಳಿದ. 


ದೂರದ ಅಸೆ ೪೯ 


ಶ್ರೀಕಂಠನಿಗೆ ಮಾತಿಲ್ಲ ಇದ್ದರೂ ನಾಲಗೆ ಹೇಳಲಾರದಂತಾಯಿತು. 

ಅವನ ಕಣ್ಣುಗಳಲ್ಲಿ ನೀರು ಜಳಜಳನೆ ಸುರಿಯಿತು. ಮೆಲ್ಲಗೆ ತಲೆಯನ್ನು 

ಎತ್ತಿ ರಾಮಚಂದ್ರನ ಮುಖವನ್ನು ನೋಡಿದ. ಏನನ್ನೋ ಹೇಳಬೇಕೆಂದು 

ಪ್ರಯತ್ನ ಪಟ್ಟ--ಆಗಲಿಲ್ಲ. ಇದನ್ನು ನೋಡಿ ರಾಮಚಂದ್ರನು ಮೃದುವಾದ 

ಧ್ವನಿಯಿಂದ “ಶ್ರೀಕಂಠ, ಏಕೆ ಹೀಗೆ? ನಾನು ಕಾಗದ ಬರೆದದ್ದು ತಪ್ಪಾ 

ಯಿತೆ?" ಎಂದು ಕೇಳಿದ. ಬಹಳ ಹೊತ್ತಾದ ಮೇಲೆ ಶ್ರೀಕಂಠ ರಾಮ 

ಚಂದ್ರನ ಕಡೆಗೆ ತಿರುಗಿ, ""ರಾಮು, ರಾಮು, ನಿನ್ನದು--? ಎಂದು ಅಷ್ಟಕ್ಕೆ 

ನಿಲ್ಲಿಸಿದ. ರಾಮಚಂದ್ರನ ಮನಸ್ಸು ಸ್ಪಲ್ಪ ಅಸ್ಥಿರವಾಯಿತು... “ಏನು 

ನನ್ನದು? ” ಎಂದು ಕೇಳಿದ. 


"ಬಹಳ ದೊಡ್ಡ ಮನಸ್ಸು. ನೀನು ನಮ್ಮ ಭಾಗದ ? 


"ಓ! ಅಷ್ಟೇ ತಾನೆ!” 


"ನಾನು ಮುಖಸ್ತು-" 


“ನನ್ನ ಉತ್ತರ ಸರಿಯಾಗಿತ್ತೆ ಹೇಳು. "


"ರಾಮು, ನನ್ನ ತಂಗಿ ಕುರುಡಿ ಶುದ್ಧ ಕುರುಡಿ, ಸ್ವಲ್ಪವೂ ಕಣ್ಣು 

ಕಾಣಿಸುವುದಿಲ್ಲ. ಈ ವಿಷಯ ನಿನ್ನ ಮನಸ್ಸ ನ್ನು ಸ್ವಲ್ಪವೂ ಹಿಂದೆಳೆಯ 

ಲಿಲ್ಲವೆ? ನಿನ್ನ ಕಾಗದದಿಂದ ನಮಗೆ ಎಷ್ಟು ಸಂತೋಷವಾಯಿತೋ ಅದನ್ನು 

ಹೇಳಲಾರೆ. ಆದರೆ ಈ ವಿಷಯದಲ್ಲಿ ಇಬ್ಬರೂ ಸುಖವಾಗಿರುವುದು ಮುಖ್ಯ. 

ಮುಂದೆ ' ನೀನು ಹೀಗೆ ಮಾಡಬಾರದಾಗಿತ್ತು' ಎಂದು ಅನ್ನುವ ಹಾಗಾಗ 

ಬಾರದು.” 


"ಶ್ರೀಕಂಠ ನನ್ನ ಮನಸ್ಸನ್ನು ನೀನಿನ್ನೂ ಅರಿಯೆ. ನಾನು ಆ 

ಕಾಗದವನ್ನು ಬಹಳ ಸಂತೋಷದಿಂದ ಬರೆದೆ.” 


“ಆದರೆ ನಿನ್ನದು ಎಂತಹ ಆತ್ಮನಿರಾಕರಣೆ |"


“ಆತ್ಮನಿರಾಕರಣೆ ಎಲ್ಲಿ ಬಂತು!” 


"ಹೌದು, ನೀನು ಎಲ್ಲಾ ಸರಿಯಾಗಿರುವ ಕಡೆ ಮದುವೆಯಾಗಿ ಸುಖ 

ವಾಗಿರು--? 


“ಅಯ್ಯೊ ! ಹುಚ್ಚ! ! ಹೆಂಡತಿ ಕುರುಡಳಾದ ಮಾತ್ರಕ್ಕೆ ಸುಖವಾಗಿರ 

ಲಾರೆನೆ? ಹೌದು, ಸ್ವಲ್ಪ ಕಷ್ಟ ವಾಗುತ್ತದೆ. ಆದರೆ ಹಾಗೆ ಕಷ್ಟ ಪಡುವುದ 


೫೦ ಕೆಲವು ಕಥೆಗಳು 


ರಲ್ಲಿ ಎಷ್ಟು ಸುಖವಿದೆ, ನಿನಗೆ ಗೊತ್ತೆ? ಯಾರಿಗೋಸ್ಕರ ನಮ್ಮ ಹೃದಯ 

ಕರುಳು ಎದ್ದು ಬರುತ್ತದೆಯೋ ಅವರಿಗೋಸ್ಕರ ಸಾಯುವುದೂ ಸುಖವಾಗಿರು 

ತ್ತದೆ. ಇಲ್ಲಿ ಆತ್ಮನಿರಾಕರಣೆ ಎಲ್ಲಿ?” 


“ನಿನ್ನ ಮನಸ್ಸು ದೊಡ್ಡದು. ಅದಕ್ಕೆ ಹಾಗೆ ತೋರದಿರಬಹುದು. 

ಆದರೆ ನಮಗೆ --"


"ಮೀನಾಕ್ಷಿ ಏನು ಹೇಳಿದಳು? " 


“ಏನೂ ಇಲ್ಲ.” 


""ಹಾಗಾದರೆ--?"  


“ನಿನ್ನ ಕಾಗದವನ್ನು ಅಮ್ಮನಿಗೆ ಓದಿ ಹೇಳಿ ಅದರ ವಿಷಯವಾಗಿ 

ಮಾತನಾಡುತ್ತಿದ್ದಾಗ ಮಿನಾಕ್ಷಿ ಪಕ್ಕದ ಕೊಠಡಿಯಲ್ಲಿ ಕುಳಿತು ಕೇಳು 

ಕ್ರಿದ್ದಳು. ಅಮ್ಮನ ಕೈಲಿ 'ಆಗಲಿ' ಅನ್ನಿಸಿಕೊಂಡು ಮೀನಾಕ್ಷಿ ಏನು 

ಹೇಳುವಳೋ ಎಂದು ಅವಳಿದ್ದ ಕೊಠಡಿಗೆ ಹೋದೆ. ನಾನು ಹೋದದ್ದು 

ಅವಳಿಗೆ ಗೊತ್ತಾಗಲಿಲ್ಲ. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. 

ತನ್ನಷ್ಟಕ್ಕೆ ತಾನೆ ಮೆಲ್ಲಗೆ ಮುಗುಳ್ನಗೆ ನಗುತ್ತಿದ್ದಳು. ಇನ್ಸೇನಾಗಬೇಕು"? 


“ ಓ! ಬೇಕಾದಷ್ಟಾಯಿತು! ಬಾ, ಹೊತ್ತಾಯಿತು ಹೋಗೋಣ. 


೪ 


ರಾಮರಾಯರು ಮಗಳ ಮದುನೆಗಾಗಿ ಗಳಿಸಿಟ್ಟದ್ದ ಹಣ ಹಾಗೆಯೇ 

ಇತ್ತು. ಶ್ರೀಕಂಠ ಅನರ ಕಾಗದ ಪತ್ರಗಳನ್ನೆಲ್ಲಾ ಹುಡುಕಿ ತೆಗೆದು, ಅವರು 

ಮಾಡಿದ್ದ ಸಾಲವನ್ನೆಲ್ಲಾ ಗಡುವು ಮುಗಿಯುವುದಕ್ಕೆ ಮುಂಚೆಯೇ ತೀರಿಸಿ 

ಉಳಿದುದನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದನು. ತಂದೆಯ ಜೀವವಿಮೆ 

ಹಣ ಸುಮಾರು ಎರಡು ಸಾವಿರ ರೂಪಾಯಿ ಕೈಗೆ ಬಂತು. 



ರಾಮಚಂದ್ರನ ಪರೀಕ್ಷೆ ಮುಗಿದು ರಜ ಬಂತು. ರಜಾದಲ್ಲಿ ಮೀನಾ 

ಕ್ಷಿಗೂ ರಾಮಚಂದ್ರನಿಗೂ ಮದುವೆಯಾಯಿತು. ರಾಮಚಂದ್ರ ಕುರುಡಿ 

ಯನ್ನು ಮದುವೆಯಾದ. ಕಾರ್ಯ ವಿದುರಾಶ್ವತ್ಸದಲ್ಲಿ ನೆರವೇರಿತು. ಬಡತನದ 

ಮದುವೆ. ಸುಲಿಗೆ ಇಲ್ಲ. ಸಂಕ್ಷೇಪದಲ್ಲಿ ಮುಗಿಯಿತು. ಅದರ ವರ್ಣನೆ 


ದೂರದ ಆಸೆ ೫೧ 


ಅನಾವಶ್ಯಕ. ಧಾರೆಯಾಯಿತು. ಹೋಗಿದ್ದವರೆಲ್ಲರೂ ಹಿಂತಿರುಗಿ ಊರಿಗೆ 

ಬಂದರು. 


ರಾಮಚಂದ್ರ ಮದುವೆಯಾದ ಮೇಲೆ ಕೆಲವು ದಿನಗಳು ಶ್ರೀಕಂಠನ 

ಮನೆಯಲ್ಲಿಯೇ ಇದ್ದು ತನಗೆ ಬರುತ್ತಿದ್ದ "ಸ್ಕಾಲರ್ ಷಿಪ್'? ಹಣದಲ್ಲಿ ಸ್ವಲ್ಪ 

ವನ್ನು ಗಳಿಸಿಟ್ಟಿದ್ದ. ಅದನ್ನು ಅವರ ಮನೆಯ ಖರ್ಚಿಗೆ ಕೊಟ್ಟು ಬಿಟ್ಟ. 


ಪರೀಕ್ಷೆಯ ಫಲಿತಾಂಶವು ಬಂತು. ರಾನುಚಂದ್ರ ಉತ್ತಮ ತರಗತಿ 

ಯಲ್ಲಿ ಉತ್ತೀರ್ಣನಾಗಿದ್ದ. ಕೆಲವು ದಿನಗಳಲ್ಲಿಯೇ ಅವನಿಗೆ ಎಪ್ಪತ್ತೆ ದು 

ರೂಪಾಯಿ ಸಂಬಳದ ಒಂದು ಉಪಾಧ್ಯಾಯ ವೃತ್ತಿ ದೊರೆಯಿತು. ಕೆಲಸ 

ವಾದ ಐದಾರು ದಿನಗಳಲ್ಲಿಯೇ ಒಂದು ಸಣ್ಣ ಅನುಕೂಲವಾದ ಮನೆಯನ್ನು 

ಗೊತ್ತುಮಾಡಿ, ಹೆಂಡತಿ, ಅತ್ತೆ, ಭಾವಮೈದುನ-ಎಲ್ಲರನ್ನೂ ಬರಮಾಡಿ 

ಕೊಂಡ. ಸಂಸಾರ ಸುಖವಾಗಿ ಸಾಗುತ್ತಿತ್ತು. 


ಹೀಗೆಯೇ ಕೆಲವು ದಿನಗಳು ಕಳೆದುವು. ಒಂದು ದಿನ ರಾಮಚಂದ್ರ 

ಒಬ್ಬನೇ ತನ್ನ ಕೊಠಡಿಯಲ್ಲಿ ಕುಳಿತು ಏನೋ ಯೋಚಿಸುತ್ತ ಯೋಚಿಸುತ್ತ 

ಕೊನೆಗೆ ಹೀಗೆ ಅಂದುಕೊಂಡ--"ದೇವರು ನನ್ನ ಮೀನಾಕ್ಷಿಯನ್ನು ನಾನು 

ಕಣ್ಣು ತುಂಬಾ ನೋಡುವ ಅದೃಷ್ಟವನ್ನು ನನಗೆ ಕೊಟ್ಟದ್ದಾನೆ. ಆದರೆ 

ಅದು ಅವಳಿಗೆ ಎಂದೆಂದಿಗೂ ಇಲ್ಲದಂತಾಯಿತಲ್ಲಾ! ಅಯ್ಯೋ! ಇದು 

ಮಾಯೆಯಂತೆ! ಇದು ಲೀಲೆಯಂತೆ! "' ಅವನ ಮುಖ ಹಾಗೆಯೇ ಗಂಭೀರ 

ವಾಯಿತು. ಬರಬರುತ್ತ ತಿರಸ್ಕಾರ ಭಾವವನ್ನು ತಾಳಿತು. ದೊಡ್ಡದಾಗಿ 

ನಿಟ್ಟುಸಿರು ಬಿಟ್ಟ. ಮೀನಾಕ್ಷಿಯೂ ಒಂದು ಕಡೆ ಕುಳಿತು ಯೋಚಿಸುವಳು. 

ಅವಳಿಗೆ ಏನು ಯೋಚನೆ ಅನ್ನುವಿರಾ? ಮೀನಾಕ್ಷಿ ಹದಿಮೂರು ವರ್ಷದ 

ಹುಡುಗಿ ; ವಯಸ್ಸಿಗಿಂತ ತಿಳುವಳಿಕೆ ಹೆಚ್ಚು. ಸಂಸ್ಕಾರ ಹೊಂದಿದ ಜೀವ; 

ತಿದ್ದಿದ ಮನಸ್ಸು; ಅವಳು ಹೀಗೆ ಯೋಚಿಸುವಳು- ""ಕಣ್ಣಿದ್ದವಳನ್ನು 

ಮದುವೆಯಾಗಿದ್ದರೆ ಎಷ್ಟು ಸುಖವಾಗಿರುತ್ತಿದ್ದತೊ! ಎಷ್ಟು ಸಂತೋಷವಿರು 

ತ್ತಿತ್ತೋ! ಈಗ ಅದನ್ನೆಲ್ಲಾ ಬಿಟ್ಟು ನನ್ನನ್ನು ಕಟ್ಟಿಕೊಂಡರಲ್ಲಾ ಅವ 

ರದ್ದು ಇನ್ನೆಂತಹ ದೊಡ್ಡ ಮನಸ್ಸು! ಅಂತಹ ದೇವರ ಕೈಹಿಡಿದೆನಲ್ಲಾ |" 

ಎಂಬ ಸಂತೋಷ. ಇದು ಒಂದು ಯೋಚನೆ, ಇನ್ನೊಂದು ಯೋಚನೆ-- 

“ಅವರು ನನಗೆ ಎಷ್ಟು ಹತ್ತಿರದವರು! ಅಷ್ಟು ಹತ್ತಿರದವರನ್ನು ಕಣ್ಣುತುಂಬಾ 


೫೨ ಕೆಲವು ಕಥೆಗಳು 


ನೋಡುವ ಪುಣ್ಯವೇ ನನಗೆ ಇಲ್ಲವಾಯಿತಲ್ಲಾ! ಭಗವಂತ !'' ಎಂಬುದು. 

ಇದು ಅವಳ ಜೀವವನ್ನೇ ಸುಡುವ ಯೋಚನೆ. 


ಒಂದು ದಿನ ರಾಮಚಂದ್ರನಿಗೆ ಮೀನಾಕ್ಷಿಯನ್ನು ಮಾತನಾಡಿಸ 

ಬೇಕೆಂದು ಮನಸ್ಸಾಯಿತು. ಮೀನಾಕ್ಷಿ ಒಳಗಿನ ಕೊಠಡಿಯಲ್ಲಿ ಒಬ್ಬಳೇ 

ಕುಳಿತಿದ್ದಳು. ಅದಕ್ಕೆ ಮೊದಲು ಅವನು ಅವಳೊಡನೆ ಮಾತನಾಡಿರಲಿಲ್ಲ. 

ಇದೇ ಮೊದಲು; ಮೆಲ್ಲಗೆ ಅವಳಿದ್ದ ಕೊಠಡಿಯೊಳಕ್ಕೆ ಹೋದ. ಕಣ್ಣು 

ಕಾಣಿಸುವ ಹುಡುಗಿಯಾಗಿದ್ದಿದ್ದರೆ "ಅವನು ಬರುವ ಸುಳುವು ಕಂಡಿದ್ದರೂ 

ಓಡಿಹೋಗುತ್ತಿದ್ದಳು. ಆದರೆ ಮೀನಾಕ್ಷಿ ಶುದ್ಧ ಕುರುಡಿ. ಕಾಲಿನ ಸಪ್ಪಳ 

ವನ್ನು ಕೇಳಿ “ಯಾರು ?" ಎಂದು ಮೃ ದುವಾಗಿ ಕೇಳಿದಳು. ರಾಮಚಂದ್ರ 

ನಿಗೆ ಆ ಎರಡು ಅಕ್ಷರ ಬಹಳ ಇಂಪಾಗಿ ಕೇಳಿಸಿತು... ಅವನು “ನಾನು” 

ಎಂದು ಮೆಲ್ಲಗೆ ಹೇಳಿದ. ಅವಳು ಧ್ವನಿಯನ್ನು ಗುರ್ತಿಸಿ, ಹೋಗಲು ಎದ್ದು 

ನಿಂತುಕೊಂಡಳು. ಆದರೆ ಹೇಗೆ ಹೋಗುವುದು? ಕುರುಡಿ! ಯಾರಾದರೂ 

ಕೈಹಿಡಿದು ದಾರಿ ತೋರಿಸಬೇಕು. ಈಗ ಕೊಠಡಿಯನ್ನು ಬಿಟ್ಟು ಹೋಗಲು 

ನಿಸ್ಸಹಾಯಳಾಗಿ ಇದ್ದಲ್ಲಿಯೇ ನಿಂತುಬಿಟ್ಟಳು ಅವಳ ಮುಖವು ಕೆಂಪೇರಿ 

ಅದರ ಮೇಲೆಲ್ಲಾ ಬೆನರು ಹನಿಗಳು ಮೂಡಿದವು. ಭಯದಿಂದ ಸ್ವಲ್ಪ 

ನಡುಗುತ್ತಿದ್ದ ಶರೀರ. ಜೊತೆಗೆ ನಾಚಿಕೆ ಬೇರೆ. ಅವಳಿಗೆ ದೃಷ್ಟಿ ಮಾತ್ರ 

ಇದ್ದಿದ್ದರೆ ಈ ಸಂದರ್ಭದಲ್ಲಿ ಅವಳ ಕಣ್ಣುಗಳಲ್ಲಿ, ಭಯಪಟ್ಟ ಚಿಗರಿಮರಿಯ 

ಕಣ್ಣಿನ ಚಂಚಲತ್ತದ ಪ್ರತಿಭಾಯೆಯನ್ನು ನೋಡಬಹುದಾಗಿತ್ತು. ಅದೇ 

ಇಲ್ಲ! ರಾಮಚಂದ್ರನಿಗೆ ಇದುವರೆಗೂ ಅವಳ ಕುರುಡು ವ್ಯಥೆಯನ್ನು ಕೊಟ್ಟಿ  

ರಲಿಲ್ಲ. ಆದರೆ ಇಂದು ಬಳುಕಿ ನಿಂತಿದ್ದ ಆ ಚಿಲುವೆಯನ್ನು ನೋಡಿ, ಅವನ 

ಮನಸ್ಸೂ ತಲ್ಲಣಿಸಿತು. ಅವನ ಹೃದಯ “ಅಯ್ಯೋ” ಎಂದು ಧ್ವನಿ 

ಮಾಡಿತು. ಕಣ್ಣು ಕುರುಡಾಗಿ ಮೀನಾಕ್ಷಿಯ ಜೀವವೇ ಭೂಮಿಗೆ ಇಳಿದು 

ಹೋಗಿತ್ತು. ಯಾವಾಗಲೂ ಒಂದು ಮೂಲೆಯಲ್ಲಿ ತಲೆ ಬಗ್ಗಿಸಿಕೊಂಡು 

ಕುಳಿತಿರುವಳು. ಲಕ್ಷ್ಮನ್ಮುನವರಿಗೆ ಅವರ ಕೆಲಸ, ಶ್ರೀಕಂಠನಿಗೆ ಒಬ್ಬ 

ಸಾಹುಕಾರನ ಮನೆಯಲ್ಲಿ ಗುಮಾಸ್ತಗಿರಿಯ ಕೂಲಿ.  ರಾಮಚಂದ್ರನಿಗೆ  

ಸ್ಕೂಲು. ಇನ್ನು ಅವಳೊಡನೆ ಮಾತನಾಡುತ್ತ ಅವಳ ಮನಸ್ಸಿಗೆ ಶಾಂತಿ 

ಯನ್ನು ತರುವವರಾರು? ರಾಮಚಂದ್ರ ಇದನ್ನೆಲ್ಲಾ ಯೋಚನೆ ಮಾಡಿ 


ದೂರದ ಆಸೆ ೫೩ 


ತಾನೇ ಆ ಕೆಲಸವನ್ನು ಕೈ ಕೊಳ್ಳಬೇಕೆಂದು ನಿಶ್ಚಯಿಸಿ ಈ ದಿನ ಅವಳ 

ಕೊಠಡಿಗೆ ಬಂದ. ಮೀನಾಕ್ಷಿ ಸುಮ್ಮನೆ ನಿಂತಿದ್ದನ್ನು ನೋಡಿ ಅವನು 

"ಮೀನಾಕ್ಷಿ'' ಎಂದು ಮೆಲ್ಲಗೆ ಕರೆದ. 


ಮೀನಾಕ್ಷಿ ಮೌನ! ರಾಮಚಂದ್ರ ಒಳಕ್ಕೆ ಹೋಗಿ, ಅವಳ ಕೈಹಿಡಿದು 

ಕೊಂಡ. ಅವಳು ಬಿಡಿಸಿಕೊಳ್ಳಪ್ರಯತ್ನ ಮಾಡಿದಳು-ರಾಮಚಂದ್ರ 

ಬಿಡಲಿಲ್ಲ. ಬಲವಂತದಿಂದ ಕೂರಿಸಿಕೊಂಡು, ಪುನಃ ಮೃದುವಾಗಿ “ಮೀನಾಕ್ಷಿ? 

ಎಂದು ಕರೆದ. 


ಉತ್ತರವಿಲ್ಲ. 


“ಮೀನಾಕ್ಷಿ, ನಾನು ನಿನ್ನ ಕೂಡ ಮಾತಾಡಬೇಕೆಂದು ಇಷ್ಟು ಆಸೆ 

ಯನ್ನು ಇಟ್ಟುಕೊಂಡು ಬಂದೆ ಗೊತ್ತೆ? ನಾನು ಇಷ್ಟು ಸಲ ಕರೆದರೂ 

ನೀನು ಒಂದು ಬಾರಿಯಾದರೂ ಮಾತನಾಡುವದಿಲ್ಲವಲ್ಲಾ? ಎಂದು ಮನಸ್ಸು 

ಕರಗುವ ಹಾಗೆ ಹೇಳಿದ. ಪುನಃ "ಮೀನಾಕ್ಷಿ'' ಎಂದು ಇನ್ನೂ ಮೃದುವಾಗಿ 

ಕರೆದ. 


ಇಷ್ಟು ಹೊತ್ತಿಗೆ ಅವಳ ಮನಸ್ಸು ಕರಗಿತೆಂದು ಕಾಣುತ್ತದೆ. ಬಗ್ಗಿದ 

ತಲೆಯನ್ನು ಇನ್ನೂ ಬಗ್ಗಿಸಿ, ಕೇಳಿಸಿತೋ ಇಲ್ಲವೋ ಅನ್ನುವ ಹಾಗೆ, 


“ಏನು" ಎಂದಳು. 


“ಮೂರು ಹೊತ್ತೂ ನೀನು ಒಬ್ಬಳೇ ಕುಳಿತಿರುವೆಯಲ್ಲಾ--ನಿನಗೆ 

ಬೇಸರವಾಗುವುದಿಲ್ಲವೆ"?? 


ಮೀನಾಕ್ಷಿ ಮಾತನಾಡಲಿಲ್ಲ. ದೊಡ್ಡದಾಗಿ ನಿಟ್ಟುಸಿರು ಬಿಟ್ಟಳು. 


"ನಾನು ನಿತ್ಯ ಸ್ವಲ್ಪ ಹೊತ್ತು ಬಂದು, ನಿನ್ನ ಹತ್ತಿರದಲ್ಲಿ ಕುಳಿತು ನಿನ್ನ 

ಬೇಸರ ಹೋಗುವ ಹಾಗೆ ಮಾಡಲೆ?” 


ಈಗಲೂ ಮೀನಾಕ್ಷಿ ಮಾತನಾಡಲಿಲ್ಲ. ಮುಖವನ್ನು ಸ್ವಲ್ಪ ಮೇಲಕ್ಕೆ 

ಎತ್ತಿದಳು. ಅದರಲ್ಲಿ ಒಳಗಿನ ಆನಂದ ಒತ್ತಿ ಬರುತ್ತಿತ್ತು. 


“ಹೇಳು ಮೀನಾಕ್ಷಿ! ನೀನು ಒಪ್ಪಿದರೆ ಬರುತ್ತೇನೆ. ಇಲ್ಲವಾದರೆ 

ಇಲ್ಲ !" 


೫೪ ಕೆಲವು ಕಥೆಗಳು 


ಮೀನಾಕ್ಷಿಗೆ ಸಂಕಟಕ್ಕೆ ಬಂತು! ಕೊನೆಗೆ ತುಟಿಯನ್ನು ಸ್ವಲ್ಪ ಕಂಪಿ 

ಸುತ್ತ--"ಆಗಬಹುದು'' ಎಂದು ಉತ್ತರಕೂಟ್ಟಳು. 


“ನಿನ್ನನ್ನು ಇಂದಿನಿಂದ "ಮೀನಾ' ಎಂದು ಕರೆಯುತ್ತೇನೆ. ಆಗ 

ಬಹುದೆ?” 


ಮೀನಾಕ್ಷಿಗೆ ನಾಚಿಕೆಯಾಯಿತು. ನಕ್ಕು ತಲೆಯನ್ನು ಬಗ್ಗಿಸಿ “ಹು” 

ಎಂದಳು. 


“ಮೀನಾ!" 


ಮೀನಾಕ್ಷಿ ನಗುತ್ತ ಎನು "ಏನು'' ಎಂದಳು. 


೫ 


ಒಂದು ದಿನ ಸಾಯಂಕಾಲ ಲಕ್ಷ್ಮಮ್ಮನವರು ಎಲ್ಲಿಯೋ ನೆರೆಮನೆಗೆ 

ಹೋಗಿದ್ದರು. ಶ್ರೀಕಂಠ ಏನೋ ಕೆಲಸದ ಮೇಲೆ ಪೇಟೆಯ ಕಡೆಗೆ 

ಹೋಗಿದ್ದ. ಮನೆಯಲ್ಲಿ ಮೀನಾಕ್ಷಿ, ರಾಮಚಂದ್ರ ಇಬ್ಬರೆ. ಮೀನಾಕ್ಷಿ 

ಕೊಠಡಿಯಲ್ಲಿ ಕುಳಿತು ಮಲ್ಲಿಗೆ ಹೂವಿನ ಸರವನ್ನು ಕಟ್ಟುತ್ತಿದ್ದಳು. ರಾಮ 

ಚಂದ್ರ ಅವಳ ಪಕ್ಕದಲ್ಲಿ ಹಾಸಿಗೆ ಸುರುಳಿಗೆ ತಲೆಕೊಟ್ಟು ಮಲಗಿಕೊಂಡಿದ್ದ. 

ಮಾತು ಪ್ರಾರಂಭವಾಗಿ ಸ್ವಲ್ಪ ಹೊತ್ತಾಗಿತ್ತು, 


“ನೀವಾಗಿ ಮನಸ್ಸು ಒಪ್ಪಿ ನನ್ನನ್ನು ಮದುವೆಯಾದಿರಾ? ” 


ಗಂಡ ಹೆಂಡರಿಗೆ ಆಗಲೆ ಸ್ವಲ್ಪ ಸಲಿಗೆ! 


“ಹೌದು.” 


“ಶ್ರೀಕಂಠನು ಹೇಳಲಿಲ್ಲನ ನಾನು ಶುದ್ಧ ಕುರುಡಿ ಅಂತ?” 


“ಹೇಳಿದ.” 


“ಹಾಗೂ ಒಪ್ಪಿದಿರಾ?-- ಈ ಕುರುಡಿಯನ್ನು ಮದುವೆಯಾಗುವು 

ದಕ್ಕೆ? ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೈಹಿಡಿದು ಕರೆದುಕೊಂಡು 

ಹೋಗಬೇಕು. ನಾನೇನೋ ನಿಮ್ಮ ಕೈ ಹಿಡಿದುದು ಸರಿ” (ಮಾತು ನಿಲ್ಲಿಸಿ, 

ನಗುತ್ತ)--“ನೀವೂ ನನ್ನ್ನ ಕೈ ಹಿಡಿಯುವ ಹಾಗಾಯಿತಲ್ಲಾ!” 


“ಅಯ್ಯೋ! ಮೀನಾ! ಅದರಲ್ಲಿ ಎಷ್ಟು ಸುಖವಿದೆ ಗೊತ್ತೆ? ” 


ದೂರದ ಆಸೆ ೫೫ 



"ಏನು ಸುಖವೋ ನಾನು ಕಾಣೆ! ಎಲ್ಲಿ ಎಷ್ಟು ಸುಖ ಸಂತೋಷ 

ಕಾದಿತ್ತೋ--ಯಾವ ಪುಣ್ಯವಂತೆ ಮಾಲೆ ಹಿಡಿದಿದ್ದಳೋ ಅದನ್ನೆಲ್ಲಾ 

ಬಿಟ್ಟು-" 


“ಸರಿ! ಪ್ರಾರಂಭ ಮಾಡಿದೆಯಲ್ಲ! ಮೀನಾ! ನಾನೂ ಹೂ 

ಕಟ್ಟಲೆ?” 


"ಈ ಕುರುಡಿಯನ್ನು ಕಟ್ಟಿಕೊಂಡಿರಲ್ಲ !"


“ನೀನು ಕುರುಡಿಯಾದ ಮಾತ್ರಕ್ಕೆ ಏನು? ಗುಣ, ರೂಪ ಎಲ್ಲಾ 

ಇದೆಯಲ್ಲ.” 


(ನಗುತ್ತ) “ನನ್ನ ಗುಣವನ್ನು ನೀವೇ ಮೆಚ್ಚಬೇಕು!" 


“ನ್ಯಾಯ | ಮೆಚ್ಚಬೇಕಾದವರು ಮೆಚ್ಚದೆ ಇತರರು ಮೆಚ್ಚಿದರೇನು?” 


““ಕುರುಡಿಗೆ ರೂಪವೆಲ್ಲಿ ?” 


"ಅಯ್ಯೋ! ಪೆಚ್ಚಿ! ಕಣ್ಣು ಕಾಣದ ಮಾತ್ರಕ್ಕೆ ರೂಪವಿಲ್ಲವೆ? 

ನೀನು ಕಣ್ಣು ರೆಪ್ಪೆಗಳನ್ನು ಮುಚ್ಚಿ ಕೊಂಡರೆ ಕುರುಡಿ ಎಂದು ಯಾರೂ 

ಹೇಳಲಾರರು.” 


“ಸರಿ! ಹಾಗಾದರೆ ಮೂರು ಹೊತ್ತೂ ರೆಪ್ಪೆ ಮುಚ್ಚಿಕೊಂಡೇ 

ಇರುತ್ತೇನೆ.” 


""ನಾನು ಹಾಗೆ ಹೇಳಲಿಲ್ಲ. ನಿನ್ನ ಕಣ್ಣಿನ ನೋಡುವ ಶಕ್ತಿ ಮಾತ್ರ 

ಹೋಗಿವೆ. ಅಷ್ಟೆ ಹೊರತು ಕಣ್ಣಿನ ಆಕೃತಿ ಸ್ವಲ್ಪವೂ ಕೆಟ್ಟಿಲ್ಲ.” 


ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಾದರು. ಮೀನಾಕ್ಷಿ ಮೌನವಾಗಿ 

ಸರ ಕಟ್ಟುತ್ತಿದ್ದವಳು ಅರ್ಧ ಮುಗಿದಿದ್ದ ಸರವನ್ನು ಹಾಗೆಯೇ ತೊಡೆಯ 

ಮೇಲೆ ಇಟ್ಟುಕೊಂಡು, ತಲೆಯನ್ನು ಸ್ವಲ್ಪ ಎತ್ತಿ, ಮುಖವನ್ನು ಅವಳ 

ನಲ್ಲನು ಕುಳಿತಿದ್ದ ಕಡೆಗೆ ತಿರುಗಿಸಿದಳು. ಕಾಂತಿ ಇಲ್ಲದ ಕಣ್ಣುಗಳು. ಅವು 

ಗಳಲ್ಲಿ ಸೆರೆಯಾಗಿ ಹೇಳುವುದಕ್ಕೆ ಆಗದ ಒಂದು ವಿಧವಾದ ಭಾವ. ಅವಳ 

ಸರ್ವ ಜೀವವೂ ಆ ಭಾವ ಗರ್ಭಿತ ಕಣ್ಣುಗಳ ಹಿಂದೆ ಒತ್ತಿ ಬಂದು, 

"ಪ್ರಿಯನನ್ನು ನೋಡಬೇಕು! ನೋಡಬೇಕು!” ಎಂದು ತುಡಿದುಕೊಳ್ಳು 

ವುದು. ಆದರೆ ಅವುಗಳ ಆ ಶಕ್ತಿಯೇ ಇಂಗಿಹೋಗಿದೆ. ಅವಳು ತನ್ನ ಆ 


೫೬ ಕೆಲವು ಕಥೆಗಳು 


ಕೊಳ್ಳೆ ಹೋದ, ಶೂನ್ಯ ವಾದ ಕಣ್ಣಾಲಿಗಳನ್ನು ಗಂಡನ ಕಡೆಗೆ ತಿರುಗಿಸಿ, 

ಒಂದು ವಿಧವಾದ ಆ ನಗುವಿನೊಡನೆ, "ನವು ನೀವು ಹೇಗೆ ಇದ್ದೀರಿ 

ನೋಡುವುದಕ್ಕೆ ? ಎಂದು ಕೇಳಿದಳು. ಕೇಳುತ್ತಿದ್ದ ಹಾಗೆಯೇ ಅವಳ 

ಕಣ್ಣುಗಳಲ್ಲಿ ಹನಿಗೂಡಿತು. 


"ಹೇಗೆ--ಎಂದರೆ ಏನು ಹೇಳಲಿ?” 


“ನಿಮ್ಮ ಮುಖ--ಕಣ್ಣು.......... 


"ಅದು ಹೇಗಿದ್ದರೇನು 2 


“ಅಯ್ಯೋ! ನೀವು ಹೇಗೆ ಇದ್ದೀರಿ ಎಂದು ನೋಡಲು ನನ್ನ ಜೀವ 

ಬೇಯುತ್ತದೆ. ಹೃದಯ ನೋಡಬೇಕು ಎಂದು ಎದ್ದು ಬಂದ ಹಾಗಾಗುತ್ತೆ. 

ಆದರೆ ಈ ನನ್ನ ಹಾಳು ಕಣ್ಣುಗಳು ನೋಡಲಾರವು. ನಿಮ್ಮ ರೂಪವೇ 

ನನಗೆ ಇಲ್ಲದ ಹಾಗಾಯಿತು!” 


ಮುಂದೆ ಮಾತು ಹೊರಡಲಿಲ್ಲ. ಮಾತಿಗೆ ಬದಲು ಎರಡು ಕಣ್ಣು 

ಗಳಿಂದಲೂ ನೀರು ಉಕ್ಕಿ ಉಕ್ಕಿ ಹರಿಯಿತು. ಕಣ್ಣೀರು ಮೌನವಾದ 

ಮಾತು. ರಾಮಚಂದ್ರನ ಕಣ್ಣಿಗೆ ಆ ಕಣ್ಣೀರು, ಎಲ್ಲಿಯೋ ಕತ್ತಲೆಯಾದ 

ಗುಹೆಯ ಅಂತರಾಳದಿಂದ, ತನ್ನದೇ ಒಂದು ಸಂಗೀತದೊಡನೆ ಹರಿದು 

ಬರುವ ಸಣ್ಣ ಪ್ರವಾಹದಂತೆ ತೋರಿತು. ಅವನ ಕಣ್ಣಾಲಿಗಳೂ ನೀರಿನಲ್ಲಿ 

ತೇಲರಾರಂಭಿಸಿದವು. ಅವನು ಎದ್ದು ಕುಳಿತು ಮೀನಾಕ್ಷಿಯ ಹತ್ತಿ ರಕ್ಕೆ 

ಸರಿದು, ಅವಳ ಕಣ್ಣೊರಸಿ ಮುಂದಲೆಯನ್ನು ಸವರುತ್ತ ಮೃದುವಾಗಿ 


“ಮೀನಾ ಏಕೆ ಕಣ್ಣೀರು?''--ಎಂದು ಕೇಳಿದ. 


"ನನ್ನ ಸಂಕಟವನ್ನು ನೀವು ಬಲ್ಲಿರಾ" 


“ಬಲ್ಲೆ. ಆದರೆ ಸುಮ್ಮನೆ ಕೊರಗಿದರೆ ಏನು ಮಾಡಿದ ಹಾಗಾ 

ಯಿತು?" 


"ಹಾಗಾದಕೆ ಇನ್ನೇನು ಮಾಡಬೇಕು ಕೊರಗದೆ? ಅಯ್ಯೋ! 

ನಾವಿಬ್ಬರೂ ಇಷ್ಟು ಹತ್ತಿರದವರಾದರೂ, ಈ ನನ್ನ ಹಾಳು ಕುರುಡು ಕಣ್ಣು 

ನಮ್ಮಿಬ್ಬರಿಗೂ ಮಧ್ಯೆ ಈ ಕತ್ತಲೆಯನ್ನು ತಂದುಹಾಕಿದೆಯಲ್ಲ | ಈ ಕತ್ತಲೆ 

ಹರಿಯುವುದು ಯಾವಾಗ?" 


ದೂರದ ಅಸೆ ೫೭ 


“ಮೀನಾ, ಹಾಗೆ ಹೇಳಬೇಡ. ಮನುಷ್ಯಪ್ರಯತ್ನ ಇನ್ನೂ ಇದೆ; 

ನಿನ್ನ ಕಣ್ಣಿಗೆ ಪುನಃ ಬೆಳಕನ್ನು ತರಲು ಸರ್ವಸ್ರಯತ್ನ ಮಾಡುತ್ತೇನೆ. ಸಾವಿರ  

ಔಷಧಿಗಳು ವ್ಯರ್ಥವಾದರೆ ಸಾವಿರದ ಒಂದನೆಯದು ಸಫಲವಾಗಬಹುದು. 

ನಿನ್ನೊಡನೆ ನಾನು ಮೊದಲು ಮಾತನಾಡಿದಂದಿನಿಂದ ಇದುವರೆಗೂ 

ನನ್ನ ಅಂತರಾಳದಲ್ಲಿ ಯಾರೋ 'ಪ್ರಯತ್ನ ಮಾಡು--ಸಫಲವಾಗಬಹುದು' 

ಎಂದು ಹೇಳುತ್ತಿರುವಂತಿದೆ. ನಾನು ಪ್ರಯತ್ನಮಾಡುತ್ತೇನೆ. ಇಲ್ಲಿ ಕೇಳು 

ಮೀನಾ, ನೀನು ಒಂದಲ್ಲ ಒಂದು ದಿನ ನನ್ನನ್ನು ಕಣ್ಣುತುಂಬಾ ನೋಡುವೆ ! 

ನಿನ್ನ ಮನಸ್ಸು ಸೋಲುವವರೆಗೂ ನೋಡುವೆ! ನೀನು ನಿನ್ನ ಹೃದಯವು, 

ತುಂಬಿತುಳುಕವವರೆಗೂ ನೋಡುವೆ. ನೀನು ಹುಟ್ಟುಕುರುಡಿಯಲ್ಲ. ನನ 

ಗೊಂದು ದೂರದ ಆಸೆ ಇದೆ........ ಈ ಮಾತಿನಲ್ಲಿ ಹೂನಿನ ಸರವನ್ನು ಮರತೇ 

ಬಿಟ್ಟೆಯಲ್ಲ! '' 


ಮೀನಾಕ್ಷಿ ಹೂವಿನ ಸರವನ್ನು ಪೂರ್ತಿಮಾಡಿದಳು. ರಾಮಚಂದ್ರ 

ಮೆಲ್ಲಗೆ ಆ ಸರವನ್ನು ಅವಳ ಕೈಯಿಂದ ತೆಗೆದುಕೊಂಡು ಮೀನಾಕ್ಷಿಯ 

ತುರುಬಿಗೆ ಸುತ್ತಿದ. ಮೀನಾಕ್ಷಿಗೆ ನಗು ಬಂತು. ಚಿಗುರಿನಂತಿದ್ದ ತನ್ನ 

ಕೈ ಬೆರಳುಗಳಿಂದ ತುರುಬನ್ನು ಮುಟ್ಟಿ ನೋಡಿಕೊಂಡಳು. 


೬ 


ಮೀನಾಕ್ಷಿಯ ಮದುವೆಯಾಗಿ ಐದು ವರ್ಷವಾಯಿತು. ಈಗ ಅವಳಿಗೆ 

ಎರಡು ವರ್ಷದ ಒಂದು ಗಂಡು ಮಗು ಇದೆ. ಚಂದ್ರಶೇಖರ ಎಂದು 

ಹೆಸರು. ಮಗು ಬಹು ಮುದ್ದಾಗಿದೆ. ಆದರೆ ಮೀನಾಕ್ಷಿಗೆ ಆ ಮುದ್ದಿನ 

ಅನುಭನ ಹಣೆಯಲ್ಲಿ ಬರೆದಿಲ್ಲ. ಎತ್ತಿಕೊಂಡು ಎಷ್ಟೋ ಮುದ್ದಾಡುವಳು. 

ಎಷ್ಟೋ ಆದರಿಸುವಳು. ಆದರೆ ಅದನ್ನು ನೋಡುವದಕ್ಕಿಲ್ಲ! ಮಗು 

ಹುಟ್ಟದ ಮೇಲೆ ಅವಳ ಕೊರಗು ಇದ್ದದ್ದೂ ಹೆಚ್ಚಾಯಿತು. "ಅಯ್ಯೋ! 

ನನ್ನ ಕಂದ ನನ್ನ ಮುದ್ದಿನ ಗೊಂಬೆ ನನ್ನ ಕರಳು. ಅದೂ ನನ್ನ ಕಣ್ಣಿಗೆ 

ಇಲ್ಲವಾಯಿತಲ್ಲಾ!'' ಎಂದು ಹಗಲೂ ಇರುಳೂ ಕಣ್ಣೀರು ಸುರಿಸುವಳು, 

ಇದು ಯಾವ ಪಾಪಕ್ಕೆ ಶಿಕ್ಷೆ? 


೫೮ ಕೆಲ ಕಥೆಗಳು 


ಒಂದು ದಿನ ಹೀಗೆಯೇ ಮಗುನನ್ನು ಎತ್ತಿಕೊಂಡು ಅಳುತ್ತಾ ಕುಳಿ 

ತಿದ್ದಳು. ಆ ಸಮಯಕ್ಕೆ ರಾಮಚಂದ್ರ ಅವಳಿದ್ದಲ್ಲಿ ಬಂದ. ಹೆಂಡತಿ 

ಅಳುತ್ತಿದ್ದುದನ್ನು ನೋಡಿ ಅವಳ ಸಮೀಪಕ್ಕೆ ಹೋಗಿ ಕುಳಿತುಕೊಂಡು 

ಮೃದುವಾಗಿ 'ಮೀನಾ' ಇದೇನು?” ಎಂದು ಕೇಳಿದ. ಮೀನಾಕ್ಷಿ ಕಣ್ಣು 

ಒರಸಿಕೊಂಡು ಸುಮ್ಮನಾದಳು. ಚಂದ್ರಶೇಖರ ತಂದೆಯನ್ನು ನೋಡಿ ತಾಯಿ 

ಯನ್ನು ಬಿಟ್ಟು ಅವನ ತೊಡೆಯನ್ನು ಏರಿದ. ರಾಮಚಂದ್ರ ಅವನನ್ನು 

ಮುತ್ತಿಡುತ್ತ ಪುನಃ ಹೆಂಡತಿಯನ್ನು ಕುರಿತು "ಮೀನಾ?” ಎಂದ. 


ಮೀನಾಕ್ಷಿ “ಏನು?” ಎಂದಳು. 


"ನೀನು ನಿತ್ತ ವೂ ಹೀಗೆ ಅತ್ತು ಅತ್ತು ಬೇಯುವುದನ್ನು ನೋಡಿ ನಾನು 

ಹೇಗೆ ಸಹಿಸಿಕೊಂಡರಲಿ?"


ಹೌದು; ನಾನು ಕಣ್ಣೀರು ಹಾಕುವುದನ್ನು ನೋಡಿ ನಿಮಗೆ ವ್ಯಥೆ 

ಯಾಗುತ್ತದೆ. ಆದರೆ ಏನು ಮಾಡಲಿ? ನನ್ನಜೀವ ಹತ್ತಿಕೊಂಡು ಉರಿಯು 

ತ್ತಿದೆ. 'ತಡೆದುಕೊಳ್ಳಬೇಕು - ಎಂದು ಎಷ್ಟೋ ಪ್ರಯತ್ನ ಮಾಡುತ್ತೇನೆ. 

ಆದರೂ ಅದು ನನ್ನ ಪ್ರಯತ್ನ ಸಹನೆ ಎಲ್ಲವನ್ನೂ ಮೀರಿ ಉರಿಯುವ ಬೆಂಕಿ." 


“ಅಯ್ಯೋ ! ಮೀನಾ, ನಾನು ಎಷ್ಟೆಷ್ಟು ಆಸೆ ಭರವಸೆ ಇಟ್ಟುಕೊಳ್ಳು 

ತ್ತೇನೋ ನೀನು ಅಷ್ಟಷ್ಟೂ ನಿರಾಶಳಾಗುತ್ತೀಯಲ್ಲ!” 


"ನಿರಾಶಳಾಗುತ್ತೀಯಲ್ಲಾ" ಎಂದರೆ ಏನು ಹೇಳಲಿ? ನೀವು ಹೇಳಿದಿ 

ರಲ್ಲಾ 'ನನ್ನ ಅಂತರಾಳದಲ್ಲಿ ಯಾರೋ ಆಸೆಯನ್ನು ಹುಟ್ಟಿಸುತ್ತಿದ್ದಾರೆ? 

ಎಂದು, ಹಾಗೆಯೇ ನನ್ನ 'ಅಂತರಾಳವನ್ನೆಲ್ಲಾ ನಿರಾಶೆಯಿಂದ 

ತುಂಬುತ್ತಿರುವಂತೆ ತೋರುತ್ತದೆ. ನಾನು ಏನು ಮಾಡಲಿ ?"


ಮೀನಾಕ್ಷಿಯ ಈ ಮಾತಿಗೆ ರಾಮಚಂದ್ರ ಯಾವ ಉತ್ತರವನ್ನೂ 

ಹೇಳಲಾರದೆ ಹೋದ. 


ರಾಮಚಂದ್ರ ಅವನ “ಅಂತರಾಳದಲ್ಲಿ ಯಾರೋ ಹೇಳಿದ” ಪ್ರಕಾರ 

ಪ್ರಯತ್ನವನ್ನು ಆರಂಭಿಸಿದ್ದನು. ಆ ಡಾಕ್ಟರು ಈ ಡಾಕ್ಟರು ಎಂದು ಕಣ್ಣು 

ಚಿಕಿತ್ಸೆಯಲ್ಲಿ ಹೆಸರು ಪಡೆದಿದ್ದ ಡಾಕ್ಟರುಗಳನ್ನೆಲ್ಲಾ ನೋಡಿದ್ದಾಯಿತು. 

ಏಳೆಂಟು ಜನ ಪಂಡಿತರೂ ಆದರು. ಏನೂ ಪ್ರಯೋಜನವಾಗಲಿಲ್ಲ. ಪಂಡಿತ 


ದೂರದ ಆಸೆ ೫೯ 


ರನ್ನು ಬಿಟ್ಟು ಹಕೀಮರಲ್ಲಿಗೆ ಕರೆದುಕೊಂಡು ಹೋದ. ಅವರೂ ನೋಡು 

ವಷ್ಟು ನೋಡಿ ಕೊನೆಗೆ ಆಗುವುದಿಲ್ಲವೆಂದು ಕೈಬಿಟ್ಟರು. ಪತ್ರಿಕೆಗಳಲ್ಲಿ 

ಪ್ರಕಟನೆಗಳನ್ನು ನೋಡಿ ಹೊರಗಿನಿಂದಲೂ ಅನೇಕ ಔಷಧಿಗಳನ್ನು ತರಿಸಿ 

ಉಪಯೋಗಿಸಿ ನೋಡಿದ. ಸ್ವಲ್ಪವೂ ಬದಲಾವಣೆಯಿಲ್ಲ. ಇಷ್ಟು ಪ್ರಯತ್ನ 

ವೆಲ್ಲಾ ವ್ಯರ್ಥವಾದುದನ್ನು ನೋಡಿ ರಾಮಚಂದ್ರನ ""ದೂರದ ಆಸೆ" ಸ್ವಲ್ಪ 

ಸ್ವಲ್ಪವಾಗಿ ಹಿಂಜರಿಯತೊಡಗಿತು. ಅವನ ಮನಸ್ಸಿನಲ್ಲಿ ಅಧೈರ್ಯ ಕಾಲಿ 

ಟ್ಟಿತು. ಅವನ ಮನಸ್ಸಿಗೆ ಇಬ್ಬರೂ ಸೇರಿ ತೀರ್ಥಯಾತ್ರೆ ಮಾಡಿಕೊಂಡು 

ಬರೋಣ ಎನಿಸಿತು. ಒಂದು ತಿಂಗಳು ರಜ ತೆಗೆದುಕೊಂಡು, ಹೆಂಡತಿ 

ಮಗುವಿನೊಡನೆ ಎಂಟು ಹತ್ತು ಪುಣ್ಯಸ್ಥಳಗಳಿಗೆ ಹೋಗಿ ಬಂದ. ಇಬ್ಬರ 

ಮನಸ್ಸಿ ಗೂ ತೀರ್ಥಯಾತ್ರೆಯಾಯಿತಲ್ಲಾ ಎಂದು ತೃಪ್ತಿಯಾಯಿತು. ಅಷ್ಟೇ 

ಹೊರತು, ಮೀನಾಕ್ಷಿಯ ನಿರಾಸೆಯ ಗಟ್ಟಿ ಕರಗಲಿಲ್ಲ. ರಾಮಚಂದ್ರನ 

ಮನಸ್ಸಿನಲ್ಲಿ ಹುಟ್ಟಿದ್ದ ಆಸೆ ನಿಧಾನವಾಗಿ ಸವೆಯತೊಡಗಿತು. ಆದರೆ 

ಅವನು- ಅವನ ಮನಸ್ಸು--ಆ 'ಸವೆಯುತ್ತಿದೆ' ಎಂಬ ಅಂಶವನ್ನು ತಿಳಿ 

ಯಲು ಅಸೇಕ್ಷಿಸುತ್ತಿರಲಿಲ್ಲ. ಇದೊಂದು ವಿಧವಾದ ಆತ್ಮವಂಚನೆ. ರಾಮ 

ಚಂದ್ರ ಆತ್ಮವಂಚನೆಯಿಂದ ಆಸೆಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದ. 

ಮೀನಾಕ್ಷಿ ಬರಬರುತ್ತ ಅಳುವುದನ್ನು ನಿಲ್ಲಿಸಿದಳು. ಕಣ್ಣೀರು ನಿಂತಿತು. 

ಈಚೀಚೆಗೆ ಅವಳು ಸುಮ್ಮನೆ ಯೋಚಿಸುವಳು. ಆಳವಾದ ಯೋಚನೆ; 

ಮುಖ ಗಂಭೀರವಾಗುವುದು. ಅವಳು ತನ್ನಷ್ಟಕ್ಕೆ ತಾನೇ ಅಂದುಕೊಳ್ಳುವಳು 

—“ನನ್ನ ಹಣೆಯಲ್ಲಿ ಕೊನೆಯವರೆಗೂ ಈ ಗೋಳನ್ನೇ ಬರೆದಿದ್ದರೆ ಎಷ್ಟು 

ಅತ್ತರೆ ಏನು ? ಎಷ್ಟು ಕಣ್ಣೀರು ತಾನೆ ಅದನ್ನು ಅಳಿಸಬಲ್ಲದು?  ನನ್ನ 

ಪ್ರಾರಬ್ಧ ಕರ್ಮ! ಯಾರೇನು ಮಾಡುವರು?” ಎಂದು. ಇಷ್ಟರ ಮಧ್ಯೇ 

ಒಂದೊಂದು ಸಲ ""ಅಯ್ಯೋ ದೇವಾ! ಒಂದು ಕ್ಷಣಕಾಲ- ಒಂದೇ ಕ್ಷಣ 

ಕಾಲ ನನಗೆ ದೃಷ್ಟಿಯನ್ನು ಕೊಡು. ಅವರು ಚಂದ್ರು ಇಬ್ಬರೂ ಎದುರಿಗಿದ್ದಾ ಗ 

ಒಂದು ಕ್ಷಣಕಾಲ ಈ ಕತ್ತಲೆಯನ್ನು ಹರಿಸು. ಸಾಕು ಅಮೇಲೆ ನಾನು 

ಕೇಳುವುದಿಲ್ಲ, ಅಳುವುದಿಲ್ಲ, ಕಣ್ಣೀರು ಸುರಿಸುವುದಿಲ್ಲ. ಭಗವಂತ! ಒಂದು 

ಕ್ಷಣಕಾಲ ಈ ಶಿಕ್ಷೆಯನ್ನು ನಿಲ್ಲಿಸಲಾರೆಯಾ?” ಎಂದು ಕೈಕೈ ಹಿಸುಕಿಕೊಂಡು 

ದೇವರಲ್ಲಿ ಮೊರೆ ಇಡುವಳು. 


೬೦ ಕೆಲವು ಕಥೆಗಳು 


೭ 


ಬೇಸಿಗೆಯ ರಜ ಬಂದು ಹದಿನ್ನೆದು ದಿನಗಾಳಾಗಿತ್ತು. ಮಧ್ಯಾಹ್ನ 

ಸುಮಾರು ಮೂರು ಗಂಟೆ ಸಮಯ. ರಾಮಚಂದ್ರ ಮನೆಯಲ್ಲಿ ಮುಂಬಾಗಿಲಿ 

ಗೆದುರಾಗಿ ಒಂದು ಸುಖಾಸನದ ಮೇಲೆ ಕುಳಿತುಕೊಂಡಿದ್ದ. ಮೀನಾಕ್ಷಿ 

ಪಕ್ಕದಲ್ಲಿ ಕೆಳಗೆ, ಚಾಪೆಯ ಮೇಲೆ ಒಂದು ತಲೆದಿಂಬನ್ನು ಇಟ್ಟುಕೊಂಡು 

ಮಲಗಿದ್ದಳು. ಸ್ವಲ್ಪ ನಿದ್ದೆ ಹತ್ತಿತ್ತು. ಅವಳಿಂದ ಸ್ವಲ್ಪ ದೂರದಲ್ಲಿ ಚಂದ್ರ 

ಶೇಖರ ಕೈಯಲ್ಲಿ ಒಂದು ಬಹಿಡಿದುಕೊಂಡು ಅದನ್ನು ಹಾಗೆ 

ತಿರುಗಿಸಿ ಹೀಗೆ ತಿರುಗಿಸಿ ಪರೀಕ್ಷಿಸುತ್ತಿದ್ದ.. ರಾಮಚಂದ್ರ ಎಡಗೈಯನ್ನು 

ಗಲ್ಲದ ಮೇಲೆ ಇಟ್ಟುಕೊಂಡಿದ್ದ. ಕಣ್ಣು ರೆಪ್ಪೆಗಳು ಅರ್ಧ ಮುಚ್ಚಿಕೊಂಡಿ 

ದ್ದವು. ಅಲ್ಲಿ ಕುಳಿತಾಗಿನಿಂದ ಅವನ ಮನಸ್ಸಿನಲ್ಲಿ ಯೋಚನೆಗೆ ಪ್ರಾರಂಭ 

ವಾಗಿತ್ತು. ಅವನಿಗೆ “ದೂರದ ಆಸೆ ಇದೆ” ಎಂದು ಹೇಳಿದಾಗ ಇದ್ದಷ್ಟು 

ಧೈರ್ಯ ಈಗ ಇಲ್ಲ. ಮೀನಾಕ್ಷಿಗೆ “ನನ್ನನ್ನು ಕಣ್ಣು ತುಂಬಾ ನೋಡುವೆ" 

ಎಂದು ಹೇಳಿದ್ದು ಜ್ಞಾಪಕಕ್ಕೆ ಬಂತು. ಇದ್ದಷ್ಟು ಧೈರ್ಯವೂ ಕ್ರಮೇಣ 

ಜಾರತೊಡಗಿತು. ಅವನ ದೃಷ್ಟಿ ಬರಬರುತ್ತ ಮಂಕಾಗಿ ಎದುರಿಗಿದ್ದ ಪದಾರ್ಥ 

ಗಳೆಲ್ಲಾ ಮಾಯವಾದಂತಾಯಿತು. ಅವನಿಗಿದ್ದ "ದೂರದ ಆಸೆ'' ಅವನ 

ಮನಸ್ಸಿನ ದಿಗಂತದ ಮೊಬ್ಬಿನಲ್ಲಿ ಮೆಲ್ಲಮೆಲ್ಲನೆ ಮರೆಯಾಗುತ್ತ ಬಂತು. 

ಮೀನಾಕ್ಷಿ “ದೂರವೇ ಸರಿ!” ಎಂದು ಬಹುದಾರುಣವಾದ ನಿಟ್ಟುಸಿರಿನೊಡನೆ 

ಹೇಳಿದ್ದು ಆ ಮೊಬ್ಬು ಕವಿದ ಮನಸ್ಸಿದಲ್ಲಿ ಪ್ರತಿಧ್ವನಿಯಾಯಿತು. ಅವನು 

ಇನ್ನು ಮುಂದೆ ಯೋಚಿಸಲಾರದೆ ಹೋದ. ಯೋಚಿಸಲೊಲ್ಲದೆ ಹೋದ 

ಎಂದರೆ ಹೆಚ್ಚು ನಿಜವನ್ನು ಹೇಳಿದಂತಾಗುತ್ತದೆ. ಇಲ್ಲಿಯೂ ಆತ್ಮವಂಚನೆ. 

ಅವನ ಮುಖದ ಭಾವ ಬಾಡಿತು. ಅವನ ಆತ್ಮ ಜಾಗ್ರದವಸ್ಥೆಯ ಸರ 

ಹದ್ದನ್ನು ದಾಟುವುದರಲ್ಲಿತ್ತು. ಹಾಗೆಯೇ ಕುಳಿತಿದ್ದ. ಹೊರಗೆ 'ಜೈ! 

ಗೌರೀಶಂಕರ್' ಎಂದು ಯಾರೋ ಕೂಗಿದ ಹಾಗಾಯಿತು. ರಾಮಚಂದ್ರ 

ಆ ಅರನಿದ್ರೆಯಿಂದ ಎಚ್ಚರವಾಗಿ ಕಣ್ಣುಬಿಟ್ಟು ನೋಡಿದ. ಬಾಗಿಲಿಗೆದುರಾಗಿ 

ಹೊರಗೆ ಒಬ್ಬ ಭಿಕ್ಷುಕ ಬೈರಾಗಿ ನಿಂತಿದ್ದ. ಎತ್ತರವಾದ ಆಳು- ದೃಢವಾದ 

ಮೈಕಟ್ಟು ಮುಖವನ್ನು ನೋಡಿದರೆ ""ಸಾಧಾರಣ ಬೈರಾಗಿಗಳಂತೆ ಅಲ್ಲ” 

ಅನ್ನುವ ಹಾಗಿತ್ತು. ರಾಮಚಂದ್ರ ಒಳಗಿನಿಂದ ಒಂದು ಹಿಡಿ ಅಕ್ಕಿಯನ್ನು 


ದೂರದ ಆಸೆ ೬೧ 


ತಂದು ಅವನಿಗೆ ನೀಡಿದ. ಇಷ್ಟು ಹೊತ್ತಿಗೆ ಚಂದ್ರಶೇಖರ ಆಡುತ್ತಿದ್ದವನು 

ಬೈರಾಗಿಯನ್ನು ನೋಡಿ, ದೊಡ್ಡ ದಾಗಿ ಕಣ್ಣು ಬಿಟ್ಟು, ಕಕಬಿಕಿಯಾಗಿ ಕೊನೆಗೆ 

ಚಪ್ಪಾಳೆ ತಟ್ಟುತ್ತ ನಕ್ಕುಬಿಟ್ಟ. ಬೈರಾಗಿಗೆ ಆ ನುಗುವನ್ನೂ ಅದರ ಆಟ 

ವನ್ನೂ ನೋಡಿ ಬಹಳ ಆನಂದವಾಯಿತು;  ಮುಂದಕ್ಕೆ ಹೋಗದೆ, ರಾಮ 

ಚಂದ್ರನ ಮುಖವನ್ನು ನೋಡಿ, “ಆ ಮಗು ಯಾರದ್ದು? ” ಎಂದು ಕೇಳಿದ. 


ರಾಮಚಂದ್ರ ಮಗನನ್ನು ಎತ್ತಿಕೊಂಡು ""ನನ್ನದು'' ಎಂದ. 


ಬೈರಾಗಿ ಅವನ ಮುಖನನ್ನೆ ದೃಷ್ಟಿಸಿ ನೋಡುತ್ತ "ನಿಮಗೆ ಏನೋ 

ದುಃಖ ಇದೆ; ಏನು ಅದು?” ಎಂದು ಕೇಳಿದ. ರಾಮಚಂದ್ರ ಬೈರಾಗಿಗಳ 

ವಿಷಯವಾಗಿ ಅನೇಕ ವಿಚಿತ್ರವಾದ ಕಥೆಗಳನ್ನು ಕೇಳಿದ್ದ. ಈ ಬೈರಾಗಿ 

ಇಷ್ಟು ವಿಚಾರಣೆಗೆ ಪ್ರಾರಂಭಿಸಿದ್ದನ್ನು ನೋಡಿ ಅವನ ಮನಸ್ಸಿಗೆ “ಇವನಿಂದ 

ಏನಾದರೂ ಉಪಯೋಗವಾಗಬಹುದೇ? ದೇವರೆ "ಇವನನ್ನು ಇಂದು 

ಇಲ್ಲಿಗೆ ಕಳಿಸಿರಬಹುದೆ?” ಎಂದು ಯೋಚಿಸಿದ. ಮುಳುಗುತ್ತಿರುವವನು 

ಒಂದು ತೇಲುತ್ತಿರುವ ಹುಲ್ಲುಕಡ್ಡಿ ಸಿಕ್ಕಿದರೂ ಅದನ್ನು ಹಿಡಿದುಕೊಳ್ಳಲು 

ಯತ್ನಿಸುತ್ತಾನೆ? ಎಂದು ಇಂಗ್ಲೀಷಿನಲ್ಲಿ ಒಂದು ಗಾದೆ ಇದೆ--ರಾಮಚಂದ್ರ 

ಮುಳುಗುತ್ತಿ ರುವನನಂತೆಯೇ ಆಗಿದ್ದ. ತೇಲುವ ಹುಲ್ಲಿನಂತೆ ಈ ಬೈರಾಗಿ 

ಬಂದ. "ಮನುಷ್ಯ ಪ್ರಯತ್ನ ಇನ್ನೂ ಇದೆ!” ಎಂದು ತಾನು ಹೇಳಿದ್ದು 

ಜ್ಞಾಪಕಕ್ಕೆ ಬಂತು. ಮನಸ್ಸಿನಲ್ಲಿ ಈ ಯೋಚನೆಗಳು ಹುಟ್ಟಿ ರಾಮಚಂದ್ರ 

ಬೈರಾಗಿಯ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ತಡವಾಯಿತು. ಬೈರಾಗಿ 

ಮನೆಯ ಒಳಗೆ ನೋಡಿದ. ಮೀನಾಕ್ಷಿ ನಿದ್ದೆ ಮಾಡುತ್ತಿದ್ದಳು. ಬೈರಾಗಿ 

ಅವಳನ್ನು ತೋರಿಸಿ, “ಆ ಅಮ್ಮ ಯಾರು?” ಎಂದು ಕೇಳಿದ. 


"ಈ ಮಗುವಿನ ತಾಯಿ.” 


"ಮಹರಾಜ್, ನಿಮಗೆ ಏನು ದುಃಖ??? 


"ಅವಳು ಕುರುಡಿ.” 


"ಹಾಯ್ ! ಭಗವಾನ್! ಹುಟ್ಟು ಕುರುಡು ಏನು?” 


“ಅಲ್ಲ ಹನ್ನೆರಡು ವರ್ಷ ಆದ ಮೇಕೆ ಕುರುಡಿಯಾದಳು.?? 



೬೨ ಕೆಲವು ಕಥೆಗಳು 


ಈ ಮಾತನ್ನು ಕೇಳಿ ಬೈರಾಗಿಯ ಮುಖ ಸ್ವಲ್ಪ ಅರಳಿದಂತಾಯಿತು. 

ಅವನು ತನ್ನ ಗಂಟನ್ನು ಮೆಟ್ಟಲಿನ ಮೇಲೆಯೇ ಇಟ್ಟು ಅಲ್ಲಿ ಕುಳಿತುಕೊಂಡು 

ರಾಮಚಂದ್ರನನ್ನು ಕುಳಿತುಕೊಳ್ಳುವ ಹಾಗೆ ಸಂಜ್ಞೆಮಾಡಿದ. ರಾಮ 

ಚಂದ್ರನೂ ಕುಳಿತ. ಬೈರಾಗಿ ಮುಂದಕ್ಕೆ ಬಗ್ಗಿ ಅವನ ಮುಖವನ್ನೇ 

ನೋಡುತ್ತ “ಒಳ್ಳೇದು ಸ್ವಾಮಿ, ನಾನು ಒಂದು ಔಷಧ ಮಾಡಿಕೊಡುತ್ತೇನೆ 

ಹಾಕುತ್ತೀರಾ?'' ಎಂದು ಕೇಳಿದ. ರಾಮಚಂದ್ರ ಉತ್ತರವಾಗಿ ಮುಖವನ್ನು 

ಸಪ್ಪಗೆ ಮಾಡಿಕೊಂಡು “ಅಯ್ಯೋ! ಈಗಾಗಲೇ ನೂರು ಔಷಧಿಯಾಯಿತು. 

ಇನ್ನೂ ಅವಳು ಕುರುಡಿಯಾಗಿಯೇ ಇದ್ದಾಳೆ? ಎಂದ. ಬೈರಾಗಿ ಸ್ವಲ್ಪ 

ನಕ್ಕು "ಅಯ್ಯಾ, ಇದರಲ್ಲಿ ಬಲವಂತ ಏನೂ ಇಲ್ಲ. ನೂರು ಆಯಿತಲ್ಲ, 

ಇದು ನಂದು ನೂರೊಂದನೇದು ನೋಡಿ. ಕಷ್ಟ ಏನೂ ಇಲ್ಲ'' ಎಂದ. ಈ 

ಮಾತನ್ನು ಕೇಳಿ ರಾಮಚಂದ್ರನ ಮನಸ್ಸಿನಲ್ಲಿ ""ಏನು! ನಾನು ಮೀನಾಕ್ಷಿಗೆ 

ಹೇಳಿದ ಮಾತನ್ನೇ ಇವನು ನನಗೆ ಹೇಳುತ್ತಿದಾನಲ್ಲಾ! ಆಗಲಿ, ಇದನ್ನೂ 

ಪರೀಕ್ಷಿಸಿ ಬಿಡೋಣ” ಎಂದು ತೋರಿತು. ಬೈರಾಗಿಯನ್ನು ಕುರಿತು “ಆಗಲಿ, 

ನೀನು ಔಷಧಿಯನ್ನು ಮಾಡಿಕೊಡು* ಎಂದು ಹೇಳಿದ. 


“ಸರಿ ಇನ್ನು ಮೂರು ದಿನ ಆದ್ಮೇಲೆ ತರ್ತೇನೆ. ಬರ್ತೇನೆ ಸ್ವಾಮಿ, 

"ಜೈ ಗೌರೀಶಂಕರ್'” ಎಂದು ಹೇಳಿಕೊಂಡು ಹೊರಟು ಹೋದ. 


ಮೂರು ದಿನಗಳಾದ ಮೇಲೆ ಬೈರಾಗಿ ತನ್ನ ಮಾತಿನ ಪ್ರಕಾರ, 

ಕೈಯಲ್ಲಿ ಎರಡು ಸೀಸೆಗಳನ್ನು ಹಿಡಿದುಕೊಂಡು ರಾಮಚಂದ್ರನ ಮನೆಗೆ 

ಬಂದ. ಆ ಎರಡು ಸೀಸೆಗಳನ್ನೂ ಅವನ ಕೈಗೆ ಕೊಟ್ಟು ಅದನ್ನು ಉಪ 

ಯೋಗಿಸುವ ವಿಧಾನವನ್ನು ಹೇಳಿದ. ರಾಮಚಂದ್ರ “ಇದಕ್ಕ ಎಷ್ಟು ದುಡ್ಡು 

ಕೊಡಬೇಕು?” ಎಂದು ಕೇಳಿದ. ಆದಕ್ಕೆ ಬೈರಾಗಿ ನಗುತ್ತ 


“ಇಲ್ಲ, ಮಹಾರಾಜ್, ನನಗೆ ದುಡ್ಡು ಬೇಡ. ಈ ಔಷಧಿ ಹಾಕಿ 

ಇನ್ನು ಒಂದು ತಿಂಗ್ಳು ಆಗೋದ್ರಲ್ಲಿ ಆ ಯಮ್ಮನಿಗೆ ಚೆನ್ನಾಗಿ ಕಣ್ಣು 

ಕಾಣ್ತದೆ. ನಾನು ಇನ್ನು ಆರು ತಿಂಗ್ಳು ಬಿಟ್ಟೊಂಡು ಮತ್ತೆ ಇಲ್ಲಿಗೆ ಬರ್ತೇನೆ. 

ನನ್ನ ಮಾತು ನಿಜಾಗಿದ್ರೆ ನಿಮ್ಮ ಮನಸ್ ಬಂದಿದ್ದು ಕೊಡಿ. ಇಲ್ಲೇ ಇದ್ರೆ 

ಬೇಡ. ನನ್ಗೆ ನಂಬ್ಕೆ ಐತೆ. ಈ ಮದ್ದು ಎಷ್ಟೋ ಕಡೆ ಕೊಟ್ಟಿದ್ದೇನೆ 


ದೂರದ ಅಸೆ ೬೩ 


ಸಾಮೀ, ಎಲ್ಲೂ ಸುಳ್ಳಾಗಿಲ್ಲ. ಭಗವಂತ ಇದಾನೆ ಮಹರಾಜ್!” ಎಂದು 

ಮೇಲಕ್ಕೆ ಕೈತೋರಿಸುತ್ತ ಹೇಳಿದ. ರಾಮಚಂದ್ರ ""ಆಗಲಿ ನೋಡೋಣ” 

ಎಂದು ಸೀಸೆಗಳನ್ನು ತೆಗೆದುಕೊಂಡು ಎದ್ದ, ಅಷ್ಟು ಹೊತ್ತಿಗೆ ಚಂದ್ರ 

ಶೇಖರ ಒಳಗಿನಿಂದ ತಪ್ಪು ತಪ್ಪು ಹೆಜ್ಜೆಗಳನ್ನಿಡುತ್ತ ನಗುತ್ತ ನಗುತ್ತ 

ಹೊರಕ್ಕೆ ಬಂದ. ಬೈರಾಗಿ ಎದ್ದು ಅವನ ಗಲ್ಲವನ್ನು ಮುಟ್ಟಿ ನಗುತ್ತ 

ಹೊರಟುಹೋದ. 


೮ 


ಬೈರಾಗಿ ತಂದು ಕೊಟ್ಟಿ ಎರಡು ಸೀಸೆಗಳಲ್ಲಿ, ಒಂದರಲ್ಲಿ ಯಾವುದೋ 

ಒಂದು ದ್ರಾವಕ, ಇನ್ನೊಂದರಲ್ಲಿ ಏನೋ ತೈಲ. ಮೀನಾಕ್ಷಿ ಅವೆರಡನ್ನೂ 

ಅವನು ಹೇಳಿದ್ದ ಪ್ರಕಾರ ಉಪಯೋಗಿಸತೊಡಗಿದಳು. ಮೊದಮೊದಲು 

ಅವಳಿಗೆ ಈ ಔಷಧಿಯಲ್ಲೂ ನಂಬಿಕೆ ಇರಲಿಲ್ಲ. ಗಂಡನ ಬಲವಂತಕ್ಕೆ ಉಪ 

ಯೋಗಿಸುತ್ತಿದ್ದಳು. ಆದರೆ ರಾಮಚಂದ್ರನಿಗೆ ಮಾತ್ರ ಬೈರಾಗಿಯ “ಎಲ್ಲೂ 

ಸುಳ್ಳಾಗಿಲ್ಲ'' ಎಂಬ ಮಾತು ಜ್ಞಾಪಕಕ್ಕೆ ಬಂದು ಅವನ ಮನಸ್ಸಿನ ಆ 

"ದಿಗಂತದ ಮೊಬ್ಬು'' ಹರಿದು ದೂರದಲ್ಲಿ ಪುನಃ ಆಸೆಯು ತಲೆದೋರಿತು. 

ದಿನಗಳು ಕಳೆದ ಹಾಗೆಲ್ಲಾ ತಾನು ಹೇಳಿದ್ದ "....ಸಾವಿರದ ಒಂದನೆಯದು 

ಸಫಲವಾಗಬಹುದು'? ಎಂಬ ಮಾತು ನಿಜವಾಗುವಂತೆ ತೋರಿತು. ಔಷಧಿಯ 

ಮಹಾತ್ಮೆಯೋ ಅಥವಾ ಇಷ್ಟು ದಿನಕ್ಕೆ ಮೀನಾಕ್ಷಿಯ ಕರ್ಮನೆಲ್ಲಾ ಸವೆ 

ಯಿತೋ ಹೇಗೋ ಅಂತು ಬೈರಾಗಿ ಕೊಟ್ಟ ಔಷಧಿಯಿಂದ ಗುಣ ಕಂಡು 

ಬಂತು. ಎಂಟು ದಿನ ಅನ್ನುವುದರಲ್ಲಿ ಅವಳ ಕಣ್ಜಿಗೆ ಕತ್ತಲೆ ಬೆಳಕು ಇವು 

ಗಳ ಅನುಭವ ಉಂಟಾಗತೊಡಗಿತು. ಆದ ಹಾಗೆಲ್ಲಾ ಅವಳ ನಿರಾಶೆಯ 

ಗಟ್ಟಿ ಬೇಗ ಬೇಗ ಕರಗುತ್ತ ಬಂತು. ತಾನು ನಿರಾಶಳಾಗಿ ಆಳುತ್ತಿದ್ದಾಗ 

ತನ್ನ ಪ್ರಿಯನು ಹೇಳಿದ್ದ ""ಮನುಷ್ಯಪ್ರಯತ್ನ--ಕಣ್ಣುತುಂಬಾ ನೋಡುವೆ--  

ದೂರದ ಆಸೆ" ಈ ಮಾತುಗಳು ಅವಳ ಮನಸ್ಸಿನಲ್ಲಿ ಪುನಃ ಜಾಗರಿತ 

ವಾದುವು. ಮನಸ್ಸಿನ ಒಳಗೇ ಅವಳು ಬಹಳ ಸುಖವನ್ನು ಅನುಭವಿಸಿದಳು. 

ಅವಳ ಅಂತರಾಳದಲ್ಲಿ “ಕಣ್ಣು ಬರುತ್ತೆ? ಎಂದು ಯಾರೋ ಭರವಸೆ ಕೊಟ್ಟ 

ಹಾಗಾಯಿತು. "ನನ್ನ ಜೀವದ ದೇವರನ್ನು ನೋಡಬಹುದು! ನನ್ನ ಕಂದ 

--ನನ್ನ ಚಂದ್ರನನ್ನು ನೋಡಬಹುದು!” ಎಂದು ಅವಳ ಮೈ ಪುಳಕಾಂ 


೬೪ ಕೆಲವು ಕಥೆಗಳು 


ಕಿತವಾಯಿತು. ಇನ್ನೂ ಕೆಲವು: ದಿನಗಳು ಕಳೆಯುವ ಹೊತ್ತಿಗೆ, ಬೆಳಗಿನ 

ಜಾವದಲ್ಲಿ ಕತ್ತಲು ಸವೆದಂತೆ, ಅವಳ ಕುರುಡೂ ಹೋಗುತ್ತ ಹೋಗುತ್ತ 

ಸುತ್ತಮುತ್ತಲಿನ ಪದಾರ್ಥಗಳು ಹೆಚ್ಚು ಹೆಚ್ಚು ವಿಶದವಾಗಿ ಕಾಣತೊಡಗಿ 

ದವು. ಮೆಲ್ಲಗೆ ಪ್ರಪಂಚವು ತನ್ನ ಕಪ್ಪಾದ ಮುಸುಕನ್ನು ತೆಗೆಯುತ್ತಿರು 

ವಂತೆ ತೋರಿತು. ಮೆಲ್ಲಮೆಲ್ಲಗೆ ಅದರ ಬೆಳಕೂ ಅವಳ ಹೃದಯದ ಬೆಳಕೂ 

ಒಂದು ಪ್ರವಾಹದಲ್ಲಿ ಸೇರತೊಡಗಿದವು. ಅವಳು ದಿನವೂ ಗಂಡನನ್ನು 

ನೋಡುವಳು. ಮಗುವನ್ನು ನೋಡುವಳು. ದಿನದಿನಕ್ಕೆ ಅವರು ಕತ್ತಲೆಯ 

ಸಮುದ್ರದಲ್ಲಿ ಈಜಿಕೊಂಡು ಇವಳಿದ್ದೆಡೆಗೆ ಬರುತ್ತಿದ್ದಂತೆ ತೋರಲಾರಂಭಿ 

ಸಿತು. ಕತ್ತಲು ಹರಿದ ಹಾಗೆಲ್ಲಾ ಅವಳಿಗೆ ಆತುರವೂ ಹೆಚ್ಚಿತು. "ಕಣ್ಣು 

ತುಂಬಾ ನೋಡುವ ದಿನ ಎಂದು ಬರುತ್ತದೆಯೋ'' ಎಂದು ಹಂಬಲಿಸಲಾ 

ರಂಭಿಸಿದಳು. ಆ ದಿನವೇನೂ ದೂರವಿರಲಿಲ್ಲ--ಅದೂ ಬಂತು. ಅವಳ 

ಜೀವನದಲ್ಲಿ ಅದೆಂತಹ ಸುದಿನ! 


೯ 


ಒಂದು ದಿನ ಭಾನುವಾರ ಮಧ್ಯಾಹ್ನ. ರಾಮಚಂದ್ರನಿಗೆ ರಜ. 

ಶ್ರೀಕಂಠನಿಗೆ ರಜ ಇರಲಿಲ್ಲ. ಕೂಲಿಯವರಿಗೆ ರಜ ಎಲ್ಲಿ? ಲಕ್ಷ್ಮಮ್ಮನವರು 

ಕೆಲಸ ಮುಗಿಸಿಕೊಂಡು ಒಳಗೆ ಎಲ್ಲೋ ನಿದ್ದೆ ಹೋಗುತ್ತಿದ್ದರು. ರಾಮ 

ಚಂದ್ರ ಮೀನಾಕ್ಷಿ ಇಬ್ಬರೂ ತಮ್ಮ ಕೊಠಡಿಯಲ್ಲಿದ್ದರು. ಚಂದ್ರಶೇಖರ 

ಮೂಲೆಯಲ್ಲಿದ್ದ. ರಾಮಚಂದ್ರನ ಒಂದು ಬೂಟ್ಸನ್ನು ತೆಗೆದುಕೊಂಡು 

ಅದರಲ್ಲಿ ತನ್ನ ಎರಡು ಕಾಲುಗಳನ್ನೂ ಹಾಕಲು ಸರ್ವಪ್ರಯತ್ನ ಮಾಡು 

ತ್ತಿದ್ದ. ರಾಮಚಂದ್ರ ಅವನನ್ನು ನೋಡಿ "ಎಲಾ! ಪೋಲಿ!” ಎಂದು 

ಕರೆದು ನಕ್ಕ. ಚಂದ್ರಶೇಖರ ಹಿಂತಿರುಗಿ ತಂದೆ ತಾಯಿ ಇಬ್ಬರನ್ನೂ ನೋಡಿ 

ಕುಣಿಯುತ್ತ ಕೇಕೆ ಹಾಕಿಕೊಂಡು ನಗುವುದಕ್ಕಾರಂಭಿಸಿದ. ಮೀನಾಕ್ಷಿಗೂ 

ಬಹಳ ನಗು ಬಂತು. ಅವಳು ನಗುತ್ತ ನಗುತ್ತ ಹಾಗೆಯೇ ಸ್ವಲ್ಪ ಕೊರಳನ್ನು 

ಬಳುಕಿಸಿ ಓರೆಗಣ್ಣಿ ನಿಂದ ಗಂಡನನ್ನು ನೋಡಿದಳು. ರಾಮಚಂದ್ರ ಈ ಪ್ರಸಾದ 

ವನ್ನು ಉಚಿತವಾದ ರೀತಿಯಲ್ಲಿ ಸ್ವೀಕಾರಮಾಡಿ, ನಗುತ್ತ ""ನೋಡು | 

ನೋಡು! ನಿನ್ನ ಮಗನ ಆಟಾನ |" ಎಂದು ಹೇಳಿ ಅವಳ ಕೈ ಹಿಡಿದು 



ದೂರದ ಆಸೆ ೬೫ 



ಕೊಂಡು ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ “ನಿಮ್ಮ ತಾಯಿ ಎಲ್ಲಿ? '' 

ಎಂದು ಕೇಳಿದ. 


“ಒಳಗೆ ಮಲಗಿಕೊಂಡಿದ್ದಾರೆ.”' 


“ಇದುವರೆಗೂ ಒಳಗೆ ಅವರೊಬ್ಬರದ್ದೇ ಕೆಲಸವಾಗಿತ್ತು. ಮೀನಾ! 

ಇನ್ನು ಮೇಲೆ ನೀನೂ ಮೈ ಬಗ್ಗಿಸಬೇಕಾಯಿತಲ್ಲ !" (ಹೀಗೆಂದು ಹೇಳಿ 

ನಗುತ್ತ) "" ಕುರುಡಾಗಿಯೇ ಇದ್ದಿದ್ದರೆ ಈ ಕಷ್ಟವೆಲ್ಲಾ ಇರುತ್ತಿರಲಿಲ್ಲ. 

ಅಲ್ಲವೆ?” ಎಂದನು. 


(ನಗುತ್ತ) ""ಹೌದು! ನನಗೂ ಹಾಗೇ ಅನ್ನಿಸುತ್ತೆ !?? 


ಅಷ್ಟು ಹೊತ್ತಿಗೆ ಬೈರಾಗಿ ಬಂದು ಕೂಗಿದ. ಮೀನಾಕ್ಷಿ ತಟ್ಟನೆ 

ಎದ್ದು ಹೋಗುವುದರಲ್ಲಿದ್ದಳು. ರಾಮಚಂದ್ರ ಅವಳನ್ನು ಹಿಡಿದು ನಿಲ್ಲಿಸಿ 

ಎದ್ದು ತನ್ನ ಪೆಟ್ಟಿಗೆಯಿಂದ ಒಂದು ನೂರು ರೂಪಾಯಿನ ನೋಟನ್ನು ತೆಗೆದು 

ಕೊಂಡು ಬಂದು ಮೀನಾಕ್ಷಿಯ ಕೈಗೆ ಕೊಟ್ಟು, ""ಮೀನಾ ನೀನು ಹೋಗಿ, 

ಒಂದು ಬೊಗಸೆಯಲ್ಲಿ ಅಕ್ಕಿ ತೆಗೆದುಕೊಂಡು ಅದರಲ್ಲಿ ಈ ನೋಟನ್ನು ಹುದು 

ಗಿಟ್ಟು ಕೊಂಡು ಬೈರಾಗಿಗೆ ಹಾಕು” ಎಂದು ಹೇಳಿದ. ಮೀನಾಕ್ಷಿ ಹೊರಗೆ 

ಬಂದು ಭಿಕ್ಷುಕನಿಗೆ ಅಕ್ಕಿ ನೀಡಿದಳು. ಅವನು ಅವಳ ಕಣ್ಣುಗಳನ್ನು ನೋಡಿದ. 

ಅವನಿಗೆ ಆನಂದವಾಯಿತು. “ಹಾ! ಭಗವಂತ! ಎಲ್ಲಾ ನಿನ್ನದು! 

ಎಂದುಕೊಂಡು ಹಿಂತಿರುಗುವುದರಲ್ಲಿದ್ದ. ಅಷ್ಟರಲ್ಲಿಯೇ ಅಕ್ಕಿಯ ಜೊತೆ 

ಯಲ್ಲಿ ನೋಟು ಇದ್ದುದನ್ನು ಕಂಡು ಆಶ್ಚರ್ಯದಿಂದ ಮೀನಾಕ್ಷಿಯನ್ನು 

ಕುರಿತು ""ತಾಯೀ! ಇದೇನು ನೋಟು !” ಎಂದು ಕೇಳಿದ. ರಾಮಚಂದ್ರ 

ಬಾಗಿಲ ಹಿಂದೆ ನಿಂತುಕೊಂಡು ಕೇಳುತ್ತಿದ್ದವನು ಮುಂದಕ್ಕೆ ಬಂದು ""ಅದು 

ನೀವು ಕೊಟ್ಟ ಔಷಧಿಗೆ” ಎಂದು ಹೇಳಿದ. ಬೈರಾಗಿ “ಇದೆಷ್ಟು"ಎಂದು 

ಕೇಳಿದ. 


“ಒಂದು ನೂರು ರೂಪಾಯಿ."


"ಎಷ್ಟು !"


“ಒಂದು ನೂರು"



೬೬ ಕೆಲವು ಕಥೆಗಳು 



"ಮಹಾರಾಜ! ಇಷ್ಟು ಏಕೆ ನನಗೆ? ನಾನು ಗರೀಬ! ನನಗೆ ಈ 

ದುಡ್ಡೇ ಬೇಡ. ನನ್ನ ಗುರುವಿನಲ್ಲಿ ನನ್ನ ಪ್ರಮಾಣವಿದೆ. ನಾನು ಮದ್ದಿಗೆ 

ದುಡ್ಡು ತೆಗೆದುಕೊಳ್ಳುವುದಿಲ್ಲ.? 


"ಮತ್ತೆ ನಿಮಗೆ ಇನ್ನೇನು ಕೊಡಲಿ?" 


"ಒಂದು ಕೃಷ್ಣಾಜಿನ--ಒಂದು ಚೆಂಬು--ಒಂದು ಹಿಡಿ ಅಕ್ಕಿ.” 


“ಆಗಲಿ, ನಾಳೆ ಬನ್ನಿ, ತರಿಸಿ ಇಟ್ಟರುತ್ತೇನೆ.?' 


ಬೈರಾಗಿ ಹೊರಟುಹೋದ. ರಾಮಚಂದ್ರ ಮೀನಾಕ್ಷಿ ಇಬ್ಬರೂ ಪುನಃ 

ತಮ್ಮ ಕೊಠಡಿಗೆ ಹೋಗಿ ಕುಳಿತುಕೊಂಡರು. ಸ್ವಲ್ಪ ಹೊತ್ತು ಇಬ್ಬರೂ 

ಮಾತನಾಡಲಿಲ್ಲ. ಮಿನಾಕ್ಷಿ ರಾಮಚಂದ್ರನನ್ನೇ ನಟ್ಟ ದೃಷ್ಟಿಯಿಂದ 

ನೋಡತೊಡಗಿದಳು. ಅವಳ ಮುಖದ ಮೇಲೆ ಮೆಲ್ಲಗೆ ಮುಗುಳ್ನಗೆ ಹರಡಿ 

ಕೊಂಡಿತು. ರಾಮಚಂದ್ರನಿಗೂ ನಗು ಬಂತು. “ಇದೇನು ಹೀಗೆ 

ನೋಡುತ್ತಿ?'' ಎಂದನು. 


“ಕಣ್ಣು ತುಂಬಾ ನೋಡುತ್ತಿದ್ದೇನೆ.” 


(ನಗುತ್ತ) “ಹು, ಸರಿ! ಆಮೇಲೆ?” 


“ನಿಮ್ಮನ್ನು ಹಿಡಿದು ನನ್ನ ಹೃದಯದಲ್ಲಿ ತುಂಬಿಕೊಳ್ಳುತ್ತಾ ಇದ್ದೇನೆ.” 


“ನಾನು ಸಿಕ್ಕಿದರೆ ಹೌದೋ ಅಲ್ಲವೋ ನೀನು ಹಿಡಿದುಕೊಳ್ಳುವುದು!” 


“ಸಿಕ್ಕದಿದ್ದ ರೆ ಬಿಡುವರು ಯಾರು?” 

------

===========================================

೬೭


ಮನೆಗೆ ಹೋದರು 


"ಜವರಾಯ ನುಂಗಿದೀ 

ಹೆಣ್ಣುಮಗುವಿನಲಿ 

ಹೊರೆದ ಕಲ್ಮಷ ತೊಳೆದು, 

ಈಗ ತಾನುಳಿದಿಹುದು, 

ಚೆಲುವಾದ ನಿರ್ಮಲದ, 

ಹೆಣ್ಣು ತನಮೊಂದು !" 

-ಶ್ರೀ. 


ಹೊತ್ತು ಮುಳುಗಿ ಬಹಳ ಹೊತ್ತಾಗಿರಲಾರದು. ಆಕಾಶವೆಲ್ಲಾ 

ನಿಬಿಡವಾಗಿ ಮೋಡದಿಂದ ತುಂಬಿತ್ತಾದ ಕಾರಣ ಸೂರ್ಯನು ಮುಳುಗಿ ಇಷ್ಟೇ 

ಹೊತ್ತಾಯಿತೆಂದು ಹೇಳುವಂತಿರಲಿಲ್ಲ. ಬಿರುಗಾಳಿಗೆ ಪ್ರಾರಂಭವಾಗಿ, ರಾತ್ರಿ 

ಯೆಲ್ಲಾ ಬಲವಾಗಿ ಮಳೆ ಸುರಿಯುವ ಹಾಗೆ ತೋರುತ್ತಿತ್ತು. ಆ ಕತ್ತಲೆಯ 

ಭರಣಿಯಲ್ಲಿ ಭೂಮಿ ಆಕಾಶಗಳೆರಡೂ ಒಂದಾಗಿ ಸೇರಿದ್ದವು. ಬಿರುಗಾಳಿಯ 

ಶಬ್ದವೇ ಶಬ್ದ. ಒಟ್ಟಿನಲ್ಲಿ ಪ್ರಕೃತಿಯು ಪ್ರಳಯೋನ್ಮುಖಿಯಾಗಿದ್ದಂತೆ 

ತೋರುತ್ತಿತ್ತು. 


ಈ ಸಮಯದಲ್ಲಿ ಊರಿನೊಳಗೆ ಒಂದು ದೊಡ್ಡ ಮನೆಯ ಮುಂದೆ 

ಒಬ್ಬ ಭಿಕ್ಷುಕಳು ನಿಂತು, ಬಹು ದೈನ್ಯಸ್ವರದಿಂದ “ತಾಯಾ, ಒಂದು ತುತ್ತು 

ಅನ್ನಾ ಕೊಡಿ ತಾಯಿ!” ಎಂದು ಬೇಡಿದಳು. 


ಒಳಗಿನಿಂದ ಉತ್ತರ ಬರಲಿಲ್ಲ. 


ಭಿಕ್ಷುಕಳು ಪುನಃ ಕೂಗಿದಳು. 


ಒಳಗಿನಿಂದ ಹದಿನೆಂಟು ವರ್ಷದ ಒಬ್ಬ ಹುಡುಗಿಯು ಬಂದಳು, 

ಸುಂದರಿ. 


ಯಾಚಕಳು ಪುನಃ ಅತಿ ದೈನ್ಯಸ್ವರದಿಂದ ಬೇಡಿದಳು. 



೬೮ ಕೆಲವು ಕಥೆಗಳು 


ಹುಡುಗಿಯು:--ಹೋಗು ! ಹೋಗು! ಇಷ್ಟು ಹೊತ್ತಿನಲ್ಲಿ ಭಿಕ್ಷ 

ಹಾಕುವುದಿಲ್ಲ. ಹೋಗು !'' ಎಂದಳು. ಕಂಠವು ಮಧುರವಾಗಿತ್ತು: 

ಆದಕೆ ಆ ಕಂಠದ ಮಾಧುರ್ಯಕ್ಕೂ ಅವಳ ಮಾತಿನ ಕಾಠಿಣ್ಯಕ್ಕೂ ಎಲ್ಲಿಯ 

ಸಂಬಂಧ? 


ಭಿಕ್ಷುಕಳು:--""ತಾಯಾ, ಬೆಳಗಿನಿಂದ ಉಪವಾಸವಿದ್ದೇವೆ ; ನಾನು 

ಹೇಗಾದರೂ ಸಹಿಸಬಲ್ಲೆ ; ಈ ನನ್ನ ಮಗು ಸಹಿಸುವುದೇ ತಾಯಿ? ಅತ್ತು 

ಅತ್ತು ಅದರ ಪ್ರಾಣ ಅರ್ಧ ಹೋಗಿದೆ. ಅಮ್ಮಾ, ಅದಕ್ಕಾದರೂ ಒಂದೇ 

ಒಂದು ತುತ್ತು ಅನ್ನ ಕೊಡಿ ತಾಯಿ. ನೀವು ತಿಂದು ಬಿಟ್ಟ ಎಂಜಲಾದರೂ 

ಸರಿಯೆ.” 


ಹೆಂಗಸಾದರೂ, ಅವಳ ಎದೆ ಕಲ್ಲಿಗಿಂತ ಗಟ್ಟಿಯಾಗಿದ್ದಿರಬೇಕು. 

ಅವಳನ್ನು ನೋಡಿದರೆ, ಇಷ್ಟು ಕಠಿಣಾತ್ಮಳು ಎಂದು ಊಹಿಸುವ ಹಾಗಿರ 

ಲಿಲ್ಲ. ಆ ಹುಡುಗಿ, ಇನ್ನು ಯಾವ ಯೋಚನೆಯಿಲ್ಲದಿದ್ದರೂ, ಭಿಕ್ಷುಕಳು 

ತನ್ನಂತೆಯೇ ಹೆಂಗಸು, ನಿಸ್ಸಹಾಯಳು-ಎಂಬ ಒಂದು ವಿಧವಾದ ಕನಿಕರ 

ದಿಂದಲಾದರೂ ಸ್ವಲ್ಪ ಭಿಕ್ಷನನ್ನು ನೀಡಬಹುದಾಗಿತ್ತು. ಅದೂ ಇಲ್ಲದೆ. 

ಹೋಗಲಿ. ಕೊನೆಗೆ, ಒಂದು ಎಳೆಗೂಸಿನ ಪ್ರಾಣವು ಉಪವಾಸದಿಂದ 

ತಲ್ಲಣಿಸುತ್ತಿದೆಯಲ್ಲ! ಅದರ ಗತಿಯೇನು? ಎಂದು ಕೂಡ ಯೋಚಿಸಲಿಲ್ಲ 

ಆ ಕಲ್ಲೆದೆಯ ಸುಂದರಿ! ಅವಳು ಈ ಭಿಕ್ಷುಕಳು: ಪುನಃ ಪುನಃ ಬೇಡುತ್ತಿದ್ದ 

ದನ್ನು ನೋಡಿ ಸಿಟ್ಟಿನಿಂದ ಹನುಮನನ್ನು ಕೂಗಿ ಅವಳನ್ನು ಆಚೆಗೆ ಕಳಿಸುವ 

ಹಾಗೆ ಹೇಳಿದಳು. ಹನುಮ ಅವರ ಮನೆಯ ಆಳು. ಹಿಂದೆ ಸಿಪಾಯಿ 

ಆಗಿದ್ದ ಎಂದು ತೋರುತ್ತದೆ. ಸ್ವಲ್ಪವೂ ಕನಿಕರವಿಲ್ಲ. ಒಳ್ಳೆ ಬಿಕ್ಕಟ್ಟಿನಿಂದ 

(ದೊಡ್ಡ ಮನುಷ್ಯರ ಮನೆಯ ಗುಲಾನುರೇ ಹಾಗೆ!) "ಏ! ಹೋಗಾಚೆ'' 

ಎಂದು ಗದರಿಸಿದನು. ಭಿಕ್ಷುಕಳು, “ಅಯ್ಯಾ ! ತಂದೆ... ಮಾತು ಮುಗಿ 

ಯುವುದರೊಳಗಾಗಿ ಆ ಪಾಸಿ ಕತ್ತಿಗೆ ಕೈಹಾಕಿ ಅವಳನ್ನು ಬೀದಿಯನರೆಗೂ 

ತಳ್ಳಿ ಬಂದನು. 


೨ 


ಭಿಕ್ಷುಕಳು ನಿರಾಶಳಾಗಿ, ನಿರುಪಾಯಳಾಗಿ ಅಳತೊಡಗಿದಳು. ಎಲ್ಲಿ 

ಕನಿಕರದ-ಧರ್ಮದ ಸುಳಿವು ಕೂಡಾ ಇಲ್ಲವೋ ಅಲ್ಲಿ ಅವಳು ಭಿಕ್ಷವನ್ನು ಬೇಡಿ 


ಮನೆಗೆ ಹೋದರು ೬೯ 


ದಳು. ದೇವರು ಈ ಪ್ರಪಂಚದಲ್ಲಿ ಎಷ್ಟೋ ಜನರಿಗೆ ಐಶ್ವರ್ಯವನ್ನು ಕೊಟ್ಟಿ 

ದ್ದಾನೆ; ಆದರೆ ಅವರಲ್ಲಿ ಅನೇಕರ ಹೃದಯಗಳನ್ನು ದಯೆಯಿಂದ ತುಂಬಿಲ್ಲ. 

ಅವರಿಗೆ ಧರ್ಮದ ಬುದ್ದಿಯನ್ನೇ ಕೊಟ್ಟಿಲ. ಹಾಗೆ ಕೊಟ್ಟಿದ್ದಿದ್ದರೆ ಈ 

ಪ್ರಪಂಚದಲ್ಲಿನ ಕಷ್ಟಗಳು ಬಹುಮಟ್ಟಿಗೆ ನಿವಾರಣೆಯಾಗುತ್ತಿತ್ತು. ಏನು 

ಕಾರಣವೋ ಅವನು ಹಾಗೆ ಮಾಡಲಿಲ್ಲ. ಎಲ್ಲವೂ ಅವನ ಲೀಲೆ ಅನ್ನುತ್ತಾರೆ. 


ಆ ಭಿಕ್ಷುಕಳಿಗೆ ಈ ಪ್ರಪಂಚದಲ್ಲಿ ತನ್ನ ಒಂದೇ ಮಗುವೇ ಸರ್ವಸ್ವ. 

ಅದರ ಸಂರಕ್ಷಣೆಗಾಗಿ ಅವತು ಎಷ್ಟೆಷ್ಟೊ ಕಷ್ಟಗಳನ್ನನುಭವಿಸಿದಳು - ಅನು  

ಭವಿಸುತ್ತಿದ್ದಳು. ಮಾನ, ಮರ್ಯಾದೆ ಎಲ್ಲವೂ ಹೋಯಿತು. ಎಲ್ಲವೂ ಆ 

ಮಗುವಿಗೋಸ್ಕರ--ಅದರ ಬಾಯಿಗೆ ಒಂದು ತೊಟ್ಟು ಹಾಲನ್ನು ಹಾಕಿ, 

ಅದು ನಲಿಯುವುದನ್ನು ನೋಡುವುದಕ್ಕಾಗಿ. ಅವಳ ದುರದೃಷ್ಟ ; ಇಂದು 

ಅದು ಸಿಕ್ಕಲಿಲ್ಲ. ಅವಳು ಹಾಗೆಯೇ ನಡೆದು ಬರುತ್ತ, ನಿಟ್ಟುಸಿರಿನಿಂದ 

“ಅಯ್ಯೋ ದೇವರೇ, ಏನು ಕಷ್ಟ ಕೊಟ್ಟೆ” ಎಂದು ಮೊರೆಯಿಟ್ಟಳು. ಅದನ್ನು 

ಕೇಳುವವರಾರು? ಅವಳ ನಿಟ್ಟುಸಿರು, ಮೊರೆ, ಎಲ್ಲಾ ಬಿರುಗಾಳಿಯ ರಭಸ 

ದಲ್ಲಿ ಶೂನ್ಯವಾಯಿತು. ಮಗುವು ಹಸಿವನ್ನು ತಡೆಯಲಾರದೆ ಕ್ಲೀಣಸ್ವರದಿಂದ 

ಅಳಲಾರಂಭಿಸಿತು. ಅದರ ಅಳುವನ್ನು ಕೇಳಿ ಭಿಕ್ಷುಕಳ ಹೃದಯವು ಹಿಂಡಿ 

ದಂತಾಗಿ ದುಃಖವು ಕಡೆಯಿಲ್ಲದೆ ಉಕ್ಕಿ ಬಂತು. ಅವಳೂ ಅಳತೊಡಗಿ 

ದಳು. ಅವಳಿಗೆ ಹಸಿನಿನ ಬಾಧೆಗಿಂತ ದುಃಖದ ಉದ್ರೇಗವು ಹೆಚ್ಚಾಯಿತು. 

ಎಷ್ಟು ಸಮಾಧಾನ ಮಾಡಿದರೂ ಮಗುವು ಅಳುವುದನ್ನು ನಿಲ್ಲಿಸಲಿಲ್ಲ. ಅದು 

ಜರದ ಎಷ್ಟು ಬಳಲಿದೆಯೋ ಅದಕ್ಕೆ ಎಷ್ಟು ಯಾತನೆಯೋ ಎಂಬ 

ಯೋಚನೆಯೊಂದೇ ಅವಳ ಹೃದಯದಲ್ಲಿ ಬೆಂಕಯಾಗಿ ಉರಿಯತೊಡಗಿತು. 

ಅವಳು ಹುಚ್ಚು ಹಿಡಿದಂತಾಗಿ “ಭಗವಂತ! ನೀನು ಯಾರಿಗೆ ತಿನ್ನು 

ವುದಕ್ಕೆ ಕೊಡುವುದಿಲ್ಲವೋ ಅವರಿಗೆ ಹಸಿವನ್ನೇಕೆ ಕೊಡುವೆ??' ಎಂದು 

ಕೂಗಿದಳು. 


ಮಗುವು ಅಳುವುದನ್ನು ನಿಲ್ಲಿಸಲಿಲ್ಲ. ಈ ನಿರ್ಭಾಗ್ಯರ ಸ್ಥಿತಿಯನ್ನು 

ನೋಡಿ ಪ್ರಕೃತಿಯೂ ನಿಟ್ಟುಸಿರನ್ನು ಬಿಡುತ್ತ ಕಣ್ಣೀರು ಹಾಕುವಳೋ ಎನ್ನುವ 

ಹಾಗೆ, ಬಿರುಗಾಳಿ ಬೀಸಿ ಮಳೆ ಸುರಿಯುವುದಕ್ಕೆ ಪ್ರಾರಂಭವಾಯಿತು. 

ಭಿಕ್ಷುಕಳು ಮಗುವನ್ನು ಕಟ್ಟ, ಅದನ್ನು ತನ್ನ ಸೆರಗಿನಲ್ಲಿ ಚೆನ್ನಾಗಿ ಸುತ್ತಿ- 


೭೦ ಕೆಲವು ಕಥೆಗಳು 


ತನ್ನ ಹೃದಯದ ಒಳಗೆ ಹುದುಗಿ ಇಟ್ಟುಕೊಳ್ಳುವಳೋ ಎನ್ನುವ ಹಾಗೆ- 

ತನ್ನ ಎದೆಗೆ ಅಪ್ಪಿ ಕೊಂಡು, ಬೇಗಬೇಗನೆ ನಡೆದುಬಂದು ಒಂದು ದೇವಸ್ಥಾನ 

ವನ್ನು ಸೇರಿದಳು. ಮಳೆಗಾಳಿಯ ದೆಸೆಯಿಂದ ಅಲ್ಲಿ ಜನರ ಸುಳಿವಿರಲಿಲ್ಲ. 

ಒಳಗೆ ಒಂದು ಸಣ್ಣ ದೀಪವು ಉರಿಯುತ್ತಿತ್ತು. ಗರ್ಭಗುಡಿಯ ಬಾಗಿಲು 

ಹಾಕಿತ್ತಾದರೂ, ಅದರಲ್ಲಿದ್ದ ಕಂಡಿಯಿಂದ ಒಳಗಿದ್ದ ದೇವರ ವಿಗ್ರಹವನ್ನು 

ನೋಡಬಹುದಾಗಿತ್ತು. ಹೆಂಗಸು ಗುಡಿಯನ್ನು ಪ್ರವೇಶಿಸುತ್ತಲೆ ಒಂದು 

ಮೂಲೆಗೆ ಹೋಗಿ “ಉಸ್ಸಪ್ಪ!” ಎಂದು ಕುಳಿತುಬಿಟ್ಟಳು. ತೊಯ್ದು 

ಹೋಗಿದ್ದ ತನ್ನ ಬಟ್ಟೆಯನ್ನು ಹಿಂಡಿಕೊಂಡು, ಮೈಯನ್ನು ಒರಸಿಕೊಂಡು 

ಮಗುವಿನ ಮೈಯನ್ನೂ ಒರಸಿ, ಕೆಳಗೆ ಮಲಗಿಸಿ, ಅದನ್ನು ನಿಧಾನವಾಗಿ 

ಸವರಿದಳು. ಮಗುವಿಗೆ ನಿದ್ದೆ ಹತ್ತಿತು. ಭಿಕ್ಷುಕಳು ಬಹಳ ಹೊತ್ತು ಮೌನ 

ವಾಗಿ ಕುಳಿತಿದ್ದಳು. ಅವಳ ಕಣ್ಣುಗಳು, ವಿಶಾಲವಾಗಿ ದುಃಖಮಯವಾಗಿ 

ದ್ಹರೂ-ಬಹು ಸುಂದರವಾಗಿದ್ದವು. ಇನ್ನೂ ಚಿಕ್ಕ ವಯಿಸ್ಸಿನವಳಂತೆ ತೋರು 

ತ್ತಿದ್ದಳು. ಕಷ್ಟಸರಂಪರೆಗಳಿಗೆ ಸಿಕ್ಕ ಮುಖವು ಬೇಸಿಗೆಯ ಬೇಗೆಯಲ್ಲಿ 

ಬಾಡಿದ ಹೂವಿನಂತೆ ಕಂಗೆಟ್ಟುಹೋಗಿತ್ತು. ತಲೆಯಲ್ಲಿ ಕೂದಲೇನೋ 

ಹೇರಳವಾಗಿತ್ತು; ಆದರೆ ಎಣ್ಣೆ ಕಾಣದೆ ಹೊಸೆದುಕೊಂಡು ಜಡೆಯಾಗಿ 

ಬಿಟ್ಟದ್ದಿತು. ತುಟಿಗಳು ಒಣಗಿ ಅವುಗಳ ಸೊಬಗೆಲ್ಲಾ ಇಂಗಿಹೋಗಿತ್ತು. 

ಆದರೂ ಅವುಗಳಲ್ಲಿ ಒಂದು ವಿಧವಾದ ರೋಷವೂ ಅಭಿಮಾನವೂ ತಲೆ 

ದೋರುತ್ತಿತ್ತು. ಒಟ್ಟಿನ ಮೇಲೆ ನೋಡಿದುದರಲ್ಲಿ ಅವಳು ಸ್ವಲ್ಪಕಾಲದ 

ಹಿಂದೆ ಸುಂದರಿಯೆಂಬ ಬಿರುದಿಗೆ ಪಾತ್ರಳಾಗಿದ್ದಳೆಂದು ಸುಲಭವಾಗಿ ಊಹಿಸ 

ಬಹುದಾಗಿತ್ತು. ""ಸುಂದರಿಯಾಗಿದ್ದಿದ್ದರೆ ಹೀಗೇಕಾದಾಳು?? ಎಂಬ ಪ್ರಶ್ನೆ 

ಬರಬಹುದು, ಹೌದು; ವಿಚಿತ್ರವಾಗಿದೆ. ಅದಕ್ಕೆ ತಾನೇ ಜೀವನವು ವಿಚಿತ್ರ 

ಎನ್ನುವುದು! 


ಭಿಕ್ಷುಕಳು ಗರ್ಭಗುಡಿಯ ಸಮಾಪಕ್ಕೆ ಬಂದಳು. ಅವಳ ದೇಹವೆಲ್ಲಾ 

ಭಯದಿಂದಲೋ ಚಳಿಯಿಂದಲೋ ಅರಳಿಯ ಎಲೆಯಂತೆ ನಡುಗುತ್ತಿತ್ತು. 

"ಭಯವೇತಕ್ಕೆ ?” ಎಂದು ಕೇಳಬಹುದು. ಹೌದು, ಭಯ; ಇಂದು ಆ 

ಗರ್ಭಗುಡಿಯಲ್ಲಿರುವುದು ಬರಿಯ ಶಿಲಾಮೂರ್ತಿಯಲ್ಲವೆಂದೂ, ಆ ಮೂರ್ತಿಯ 

ಅಂತರಾಳದಲ್ಲಿ ದೇವರು ನೆಲಸಿರುವನೆಂದೂ ಅವಳ ಭಾವನೆ. ನ್ಯಾಯಾಧಿ 


ಮನೆಗೆ ಹೋದರು ೭೧ 


ಪತಿಯ ಮುಂದೆ ನಿಂತ ಅಪರಾಧಿಯ ಮನಸ್ಸು ಹೇಗಿರುವುದೋ, ಇಂದು 

ಅವಳ ಮನಸ್ಸು ಹಾಗಿದ್ದಿ ತು. ಅವಳು, ದೇವರ ದೃಷ್ಟಿಯಲ್ಲಿ-ಜನಸಾಮಾನ್ಯದ 

ಭಾವನೆಯಲ್ಲಿ ಗುರುತರವಾದ ಅಪರಾಧವನ್ನು ಮಾಡಿದ್ದಳು. ಅವಳ ಹಿಂದಿನ 

ಚರಿತ್ರೆಯು ಸಮರ್ಪಕವಾಗಿರಲಿಲ್ಲ. ಇದು ಪಾಸ, ಇದನ್ನು ಮಾಡಬಾರದು, 

ಎಂಬ ಯೋಚನೆಯು ಅವಳ ಮನಸ್ಸಿಗೆ ತಟ್ಟಲಿಲ್ಲ. ತಾನು ಮಾಡುತ್ತಿದ್ದು 

ದೆಲ್ಲಾ ಸರಿಯೆಂದೇ ಅವಳ ಭಾವನೆಯಾಗಿತ್ತು. ಪರಿಣಾಮಫಲವನ್ನು ಸ್ವಲ್ಪ 

ಯೋಚಿಸಿದ್ದರೆ ಚೆನ್ನಾಗಿತ್ತು. ಸ್ತ್ರೀಯರಿಗೆ ಪಾತಿವ್ರತ್ಯವು ಎರಡನೆಯ ಜೀವ 

ವೆಂದು ಆ ನಿರ್ಭಾಗ್ಯಳ ಮನಸ್ಸಿನಲ್ಲಿ ತೋಚಲಿಲ್ಲ. ನಿರ್ಭೀತಿಯಿಂದ ಪಾಪದ 

ಮಾರ್ಗದಲ್ಲಿ ಕಾಲಿಟ್ಟಳು. ಇಡುವುದೇ ತಡ ಮಾರ್ಗವು ಬಹು ಬೇಗ ಬಹು 

ದೂರ ಸಾಗಿಹೋಯಿತು. ಅದಕ್ಕೆ ತಕ್ಕ ಫಲವೂ ಪ್ರಾಪ್ತವಾಯಿತು. ಈಗ 

ಅವಳಿಗೆ ಪಾಪದ ಅಮಲಿನಿಂದ ಎಚ್ಚರವಾಯಿತು. ಆಗ ತಿಂದ ವಿಷದ ಹಣ್ಣು 

ಈಗ ಕಹಿಯಾಗಿ ತೋರಿತು. ಕಳೆದುಹೋದ ಜೀವ ಮತ್ತೆ ಬರುವುದೇನು? 

ಲೋಕವು ಇವಳನ್ನು ಕಾಲಿನಿಂದ ತಳ್ಳಿ ಬಿಟ್ಟಿತು, ಈಗೀಗ ಅವಳಿಗೆ ತಾನು 

ಅಪರಾಧಿನಿಯೆಂದು ತಿಳಿಯಲು ಪ್ರಾರಂಭವಾಯಿತು. ತಾನು ಮಾಡಿದ ಅಪ  

ರಾಧವು ಎಷ್ಟರ ಮಟ್ಟಿಗೆ ಗುರುತರವಾದುದೆಂದು ತಿಳಿಯಲು ಅವಳಿಗೆ ಹೆಚ್ಚು 

ಕಾಲ ಬೇಕಾಗಲಿಲ್ಲ. ಆದುದರಿಂದಲೇ ಅವಳಿಗೆ ಭೀತಿ. ಎಲ್ಲವೂ ದೇವರ 

ಸಾನ್ನಿಧ್ಯದ ಮಹಿಮೆಯೆಂದು ತೋರುತ್ತದೆ. ಅವಳ ಮನಸ್ಸಿನಲ್ಲಿ ಪಶ್ಟಾ 

ತ್ತಾಪವು ಹುಟ್ಟಿತ್ತು. ಅವಳು ಮೆಲ್ಲಮೆಲ್ಲನೆ ಗರ್ಭಗುಡಿಯ ಸಮೀಪಕ್ಕೆ 

ಬಂದು, ಕೈಮುಗಿದುಕೊಂಡು ಬಾಗಿಲಿನ ಕಿಂಡಿಯಲ್ಲಿ ಒಳಗಿದ್ದ ದೇವರ 

ವಿಗ್ರಹವನ್ನು ನೋಡಿದಳು. ಶ್ರೀಕೃಷ್ಣದೇವರ ವಿಗ್ರಹ. ಬಾಲಮೂರ್ತಿ. 

ಮೈ ತುಂಬ ಆಭರಣಗಳಿದ್ದುವು. ಭಿಕ್ಷುಕಳ ಕಣ್ಣುಗಳಲ್ಲಿ ನೀರು ಸುರಿಯು 

ವುದಕ್ಕಾರಂಭಿಸಿತು. ಕೈಮುಗಿದುಕೊಂಡೇ ನಿಂತಿದ್ದಳು. ಅವಳ ದುಃಖವು 

ಮಾತಿನ ಶಕ್ತಿಯನ್ನೂ ಮೀರಿತು. ಬಹಳ ಹೊತ್ತು ಸುಮ್ಮನಿದ್ದಳು. ಅಮೇಲೆ 

ಅವಳು, ತಾನು ಹೇಳುವುದನ್ನು ದೇವರು ಕೇಳುತ್ತಾನೆಂದು ಭಾವಿಸಿದಳೋ 

ಏನೋ ಮಾತನಾಡಲಾರಂಭಿಸಿದಳು. "ದೇವಾ ನೀನೇ ಎಲ್ಲರಿಗೂ ಕೊಡು 

ವವನು, ಹೀಗಿರುವಲ್ಲಿ ನಿನಗೆ ಇದೆಲ್ಲಾ ಏಕೆ? (ಮಗುವಿನ ಕಡೆಗೆ ಕೈಬೆರ 

ಳನ್ನು ತೋರಿಸಿ) ಇಲ್ಲಿ ನೋಡು, ನೀನೇ ಜೀವನನ್ನು ತುಂಬಿದ-ನಿನ್ನ 


೭೨ ಕೆಲವು ಕಥೆಗಳು 


ಹಾಗೆಯೇ ಇರುವ ಒಂದು ಮಗುವಿಗೆ ಕುಡಿವುದಕ್ಕೆ ಒಂದು ತೊಟ್ಟು ಹಾಲೂ 

ಇಲ್ಲದೆ ಅದರ ಪ್ರಾಣವು ಹೋಗುತ್ತಾ ಇದೆ.  ನಿನಗೂ ನೀನು ಮಾಡಿದ 

ವಸ್ತುವಿಗೂ ಎಷ್ಟು ಅಂತರ! ನೀನು ಮಾಡಿದ ವಸ್ತುವಿನ ಮೇಲೆ ನಿನಗೆ 

ಮಮತೆ ಇಲ್ಲವೆ?” ಎಂದು ಕೇಳಿದಳು. 


ಅಷ್ಟು ಹೊತ್ತಿಗೆ ದೇವಾಲಯದ ಒಳಕ್ಕೆ ಮಧ್ಯವಯಸ್ಸಿನ ಹೆಂಗಸು 

ಪ್ರವೇಶಮಾಡಿದಳು. ತಲೆಯ ಮೇಲೆ ಸೆರಗನ್ನು ಹೊದೆದುಕೊಂಡಿದ್ದಳು. 

ಕೈಯಲ್ಲಿ ಒಂದು ತಟ್ಟೆ ; ಅದರಲ್ಲಿ ಪೂಜಾ ಸಾಮಗ್ರಿಗಳು. ಅವಳ ಮುಖವು 

ಸೌಮ್ಯವಾಗಿ ಸುಂದರವಾಗಿತ್ತು. ಕಣ್ಣುಗಳೂ ಹಾಗೆಯೇ ಇದ್ದುವು. 

ಎಲ್ಲಿಯೋ ಬಹಳ ದೂರದಲ್ಲಿರುವ, ಇಲ್ಲಿಗೆ ಸೇರದ ಯಾವುದನ್ನೊ ಬಿಡುವಿ 

ಲ್ಲದೆ ನೋಡುತ್ತಿದ್ದ ಹಾಗೆ ತೋರುತ್ತಿದ್ದವು. ಪೂಜೆಯು ಸಂಕ್ಷೇಪವಾಗಿಯೂ 

ಮೌನವಾಗಿಯೂ ನಡೆಯಿತು. ಕಣ್ಣುಗಳಿಂದ ಕಂಬನಿಗಳು ಮೌನವಾಗಿ 

ಜಾರಿದುವು. ಹೆಂಗಸು ದುಃಖಾರ್ತಳಾಗಿದ್ದಳೆಂದು ತೋರುತ್ತದೆ. ಭಿಕ್ಷುಕಳು 

ಇದನ್ನೆಲ್ಲಾ ದೂರದಿಂದ ನಿಶ್ಶಬ್ದವಾಗಿ ನೋಡುತ್ತಿದ್ದಳು. ಪ್ರಾರ್ಥನೆಯು 

ಮುಗಿಯುತ್ತಲೆ ಹೆಂಗಸು ಕಣ್ಣೊರಸಿಕೊಂಡು, ಹೊರಡಲುದ್ಯುಕ್ತಳಾದಳು. 

ಭಿಕ್ಷುಕಳು ಮುಂದೆ ಬಂದು "ತಾಯಾ, ಬೆಳಗಿನಿಂದ ಉಪವಾಸ, ತಾಯಾ! 

ಏನಾದರೂ ಭಿಕ್ಷ ಕೊಡಿ. ದೇವರು ನಿಮ್ಮನ್ನು ಚೆನ್ನಾಗಿಡಲಿ, ತಾಯೀ' 

ಎಂದು ಬಹು ದೈನ್ಯದಿಂದ ಬೇಡಿದಳು. ಹೆಂಗಸಿನ ಹೃದಯ ಕರಗಿ ನೀರಾ 

ಯಿತು. ಅವಳು ತಟ್ಟೆಯಲ್ಲಿದ್ದ ಒಂದು ಚಿಪ್ಪು ಬಾಳೇ ಹಣ್ಣಿನಲ್ಲಿ ಅರ್ಧವನ್ನು 

ಅವಳಿಗೆ ಕೊಟ್ಟು ಬಿಟ್ಟಳು. ಅಷ್ಟು ಹೊತ್ತಿಗೆ ಮಗುನಿಗೆ ಎಚ್ಚರವಾಗಿ ಅದು 

ಕ್ಷೀಣ ಸ್ವರದಿಂದ ಅಳಲಾರಂಭಿಸಿತು. ಹೆಂಗಸು “ಅದು ನಿನ್ನ ಮಗುವೇ?” 

ಎಂದು ಕೇಳಿದಳು. 


ಭಿಕ್ಷುಕಳು--“ಹೌದು; ಅದಕ್ಕೂ ಉಪವಾಸ? ಎಂದಳು. 


“ಎಲ್ಲಿ ನೋಡೋಣ.” 



ಭಿಕ್ಷುಕಳು ಮಗುವನ್ನು ತಂದು ಬೆಳಕಿನಲ್ಲಿ ತೋರಿಸಿದಳು. ಮಗು 

ವೇನೋ ಸುಂದರವಾಗಿತ್ತು--ಗಂಡು ಮಗು. ಆದರೆ ಹೊತ್ತು ಹೊತ್ತಿಗೆ 

ಆಹಾರವಿಲ್ಲದೆ ಚಳಿಗಾಳಿ ಮಳೆಗಳಿಗೆ ಸಿಕ್ಕಿ ಅದರ ಮೈಯಲ್ಲಿ ಚರ್ಮ, ಎಲುಬು, 


ಮನೆಗೆ ಹೋದರು ೬೩ 


ಇವೆರಡು ಹೊರತು ಇನ್ನೇನೂ ಇರಲಿಲ್ಲ. ಅದಕ್ಕೆ ಗಟ್ಟಿಯಾಗಿ ಅಳುವುದಕ್ಕೆ 

ಶಕ್ತಿ ಸಾಲದು. ಕಣ್ಣುಗಳು ಮಾತ್ರ ವಿಶಾಲವಾಗಿ ಅರಳಿದ ಹೂವಿನಂತೆ 

ಇದ್ದುವು. ಅವು ಸಮೀಪದಲ್ಲಿದ್ದ ಯಾವ ವಸ್ತುವನ್ನೂ ನೋಡುತ್ತಿರಲಿಲ್ಲ; 

ಎಲ್ಲೋ ಶೂನ್ಯದೃಷ್ಟಿ. ಹೆಂಗಸಿಗೆ ಆ ಮಗುವಿನ ಸಿ ತಿಯನ್ನು. ನೋಡಿ 

ಕನಿಕರವುಂಟಾಯಿತು. , ಮಗುವು ಅವಳನ್ನೇ ದೃಷ್ಟಿಸಿ ನೋಡುತ್ತಿತ್ತು. 

ಅವಳ ಕಣ್ಣಿಗೆ ಅದರ ಹೊಟ್ಟಿಯೊಳಗಿನ ಯಾತನೆಯಲ್ಲಾ ಆ ಮೌನವಾದ 

ದೃಷ್ಟಿಯಾಗಿ ಹೊರಹೊಮ್ಮುತ್ತಿರುವುದೋ ಎಂಬಂತೆ ತೋರಿತು. ಹೆಂಗಸಿಗೆ 

ಅಯ್ಯೋ ಪಾನ! ಎನ್ನಿಸಿತು. ಅವಳು ತಟ್ಟಿಯಲ್ಲಿದ್ದ ನಾಲ್ಕಾಣೆಯನ್ನು 

ಭಕ್ಷುಕಳಿಗೆ ಕೊಟ್ಟು, “ಇದನ್ನು ತೆಗೆದುಕೋ; ಎಲ್ಲಿಯಾದರೂ ಹಾಲನ್ನು 

ಕೊಂಡು ನಿನ್ನ ಮಗುವಿಗೆ ಹಾಕು. ಅದಕ್ಕೆ ಎಷ್ಟು ಯಾತನೆಯಾಗುತ್ತಿರು 

ವುದೋ!?' ಎಂದಳು. ಭಿಕ್ಷುಕಳ ಆನಂದವು ಎಲ್ಲೆಯನ್ನು ಮಾರಿತು. ಅವಳ 

ಕಣ್ಣುಗಳಿಂದ ಬಾಷ್ಪಕಣಗಳು ಉದುರಿದವು. ಅವಳು ಆ ದಾತೃವನ್ನು ಬಹು 

ವಾಗಿ ಕೊಂಡಾಡಿ ವಂದಿಸಿ “ತಾಯಾಾ, ದೇವರು ನಿಮಗೆ ಒಳಿತನ್ನು ಮಾಡಲಿ” 

ಎಂದಳು. ಹೆಂಗಸು ಗಂಭೀರಭಾವವನ್ನು ತಾಳಿದಳು. ಕ್ಷಣಕಾಲ ಮೌನ 

ವಾಗಿದ್ದು, ಆಮೇಲೆ ದೊಡ್ಡದಾಗಿ ನಿಟ್ಟುಸಿರುಬಿಟ್ಟು “ಏನು ಒಳಿತೋ ನಾ 

ಕಾಣೆ! ಅ ಅಯ್ಯೋ ದೇವರೇ! ಎಂದಳು. ಸ್ವಲ್ಪ ಹೊತ್ತು ಮೌನವಾಗಿದ್ದು 

ಪುನಃ “ನೋಡು, ನೀನು ಭಿಕ್ಷುಕಳಾಗಿದ್ದರೂ ನಿನಗೆ ಒಂದು ಮಗು ಇದೆ, 

ನಾನಾದರೋ ನನಗೆ ಇದ್ದ ಒಂದೇ ಮಗುವನ್ನು ಕಳೆದುಕೊಂಡೆ. ಇಲ್ಲ! 

ಇಲ್ಲ! ನನಗೆ, ತಾಯಿಯಾಗಿ ಮಗುವನ್ನು ಸಾಕಿ ಸಲಹುವ ಪುಣ್ಯವು ಹಣೆ 

ಯಲ್ಲಿ ಬರೆದಿಲ್ಲ. ಅಯ್ಯೋ ದೇವರೇ! “ಎಂದಳು. ಕಣ್ಣೀರು ಕಡೆಯಿಲ್ಲದೆ 

ಹರಿಯಿತು. 


ಹೆಂಗಸು ಕಣ್ಣೊರಸಿಕೊಂಡು ಹೊರಟು ಹೋದಳು. ಭಿಕ್ಷುಕಳು 

ಪುನಃ ದೇವರೆದುರಿಗೆ ಕೈ ಮುಗಿದುಕೊಂಡು "ದೇವಾ, ಅವಳ ದುಃಖವನ್ನು 

ಪರಿಹರಿಸು?” ಎಂದು ಬೇಡಿದಳು. 


ಭಿಕ್ಷುಕಳಿಗೆ ದೇವರಲ್ಲಿ ಭೀತಿ ಹೋಗಿ ಭಕ್ತಿಯು ತಲೆದೋರಿತು. ತನ್ನ 

ಗೋಳನ್ನು. ಕೇಳಿ ಜೀವರು ಆ ಹೆಂಗಸನ್ನು ಅಲ್ಲಿಗೆ ಕರೆತಂದನೆಂದು ಅವಳು 

ಭಾವಿಸಿದಳು. 

... ... ...

೬೪ ಕೆಲವು ಕಥೆಗಳು 


ಹೊರಗೆ ಮಳೆ ನಿಂತು ಬಹಳ ಹೊತ್ತಾಗಿತ್ತು. ಭಿಕ್ಷುಕಳು ಹೊರಡಲು 

ದ್ಯುಕ್ತಳಾಗಿ ಮಗುವನ್ನು ಎತ್ತಿಕೊಂಡಳು. ಅದನ್ನು ತನ್ನ ಎದೆಗೆ ಅಪ್ಪಿ ಕೂಂಡು 

"ನನ್ನ ಕಂದ! ದೇವರು ಇಂದು ನಿನ್ನಲ್ಲಿ ಕರುಣವನ್ನು ತೋರಿಸಿದ್ದಾನೆ. 

ಇನ್ನು ಅಳಬೇಡ, ನನ್ನ ಕಂದ” ಎಂದು ಮುದ್ದಿಟ್ಟಳು. ಮಗು ಸ್ವಲ್ಪ 

ನಕ್ಕಿತು. ಅವಳ ಆನಂದಕ್ಕೆ ಪಾರವೇ ಇಲ್ಲ. ಮಗು ನಕ್ಕ ಒಂದು ಕ್ಷಣಕಾಲ 

ಅವಳು ಎಂದೂ ಕಾಣದ ಸುಖವನ್ನ ನುಭವಿಸಿದಳು. ಮಗುವಿಗೂ ಅದು 

ಅರ್ಥವಾಯಿತೆಂದು ಕಾಣುತ್ತದೆ, ಅದು ಪುನಃ ನಕ್ಕು ತನ್ನ ಪುಟ್ಟ ಕೈಗಳಿಂದ 

ಅವಳ ಕೆನ್ನೆಯನ್ನು ಮುಟ್ಟಿತು. ಅವಳು ಅದರ ಮುಖವನ್ನೇ ನೋಡುತ್ತ, 

ವ್ಯಸನದಿಂದಲೂ, ಪ್ರೀತಿಯಿಂದಲೂ, ""ನನ್ನ ಮುದ್ದುಕಂದ! ನೀನೇಕೆ ನನ್ನ 

ಹೊಟ್ಟೆಯಲ್ಲಿ ಹುಟ್ಟಲಿಲ್ಲ?” ಎಂದಳು. ಮಗುವು ಅವಳು ಹೇಳಿದ್ದು ಅರ್ಥ 

ವಾದಂತೆ, ಏನೋ ಶಬ್ದಮಾಡಿತು. ಭಿಕ್ಷುಕಳು ದೊಡ್ಡದಾಗಿ ನಿಟ್ಟುಸಿರು 

ಬಿಟ್ಟು, ಮಗುವನ್ನು ಎತ್ತಿಕೊಂಡೇ ದೇವರಿಗೆ ತರೆಬಾಗಿ ವಂದಿಸಿ ದೇವಾಲಯ 

ದಿಂದ ಹೊರ ಹೊರಟಳು. 


೩ 


“ಹಾಗಾದರೆ ಅದು ಅವಳ ಮಗುವಲ್ಲವೆ??' ಎಂದು ನೀವಾರಾದರೂ 

ಕೇಳಬಹುದು. ಅಲ್ಲ; ಅದು ಅವಳ ಸ್ವಂತ ಮಗುವಲ್ಲ. ಅದನ್ನು ಅವಳೇ 

ಹೇಳಿದಾಳೆಯಷ್ಟೇ. ಅದು ಅವಳ ಹೊಟ್ಟೆಯಲ್ಲಿ ಹುಟ್ಟಿದ ಮಗುವಲ್ಲದಿದ್ದರೂ, 

ಅವಳು ಅದನ್ನು ತನ್ನಸ್ಪ ಸ್ಪಂತ ಮಗುವಿಗಿಂತ ಹೆಚ್ಚಾಗಿ ಪ್ರೀತಿಸುತ್ತಿ ದ್ದಳು ಅವ 

ಳಿಗೆ ಅದೇ ಪ್ರಾಣವಾಗಿತ್ತು. ಅವಳಿಗಿದ್ದ ಒಂದೇ ಆಸೆ ಏನೆಂದರೆ, — 

"ಅದು ಸುಖವಾಗಿರಲಿ * ಎಂಬುದು. 


ಅವಳಿಗೆ ಆ ಮಗು ಎಲ್ಲಿ ಸಿಕ್ಕಿತು ಎನ್ನುವಿರೋ? ಹೇಳುತ್ತೇನೆ ಕೇಳಿ. 

ಅವಳ ಚರಿತ್ರೆ ಚೆನ್ನಾಗಿರಲಿಲ್ಲ. ಲೋಕವು ಅವಳನ್ನು ಕಾಲಿನಿಂದ ತಳಿ 

ಬಿಟ್ಟಿತು ಎಂದು ಹೇಳಿದೆನಷ್ಟೆ. ಆಮೇಲೆ ಅವಳು ಜೀವನಕ್ಕೆ ಮಾರ್ಗ 

ತೋರದೆ ಈ ಊರಿಗೆ ಬಂದು ಭಿಕ್ಷಾವೃತ್ತಿಯನ್ನವಲಂಬಿಸಿದಳು. ಜೀವದ 

ಮೇಲಿನ ಆಸೆಯೊಂದು ಉಳಿದು ಅವಳಿಗೆ ಇನ್ನಾನ ಆಸೆಯೂ ಇರಲಿಲ್ಲ. 

ಸಿಕ್ಕಿದ ದಿನ ಊಟ- ಇಲ್ಲಿದೆ ಇದ್ದ ದಿನ ಉಸವಾಸ ಹೀಗೆ ನಡೆಯುತ್ತಿತ್ತು. 


ಮನೆಗೆ ಹೋದರು ೭೫ 


ಹೀಗಿರುವಲ್ಲಿ ಅಔಳಿಗೆ ಇನ್ನೊಬ್ಬ ಭಿಕ್ಷುಕಳ ಗುರುತಾಯಿತು. ಅವಳು 

ಮುದುಕಿ- ತೀರ ಮುದುಕಿ. ಆ ಮಗು ಅವಳ ಮಗಳ ಮಗು. ಅದಕ್ಕೆ 

ತಾಯಿ ಇರಲಿಲ್ಲ. ಅದರ ರಕ್ಷತೆಯ ಭಾರವು ಮುದುಕಿಗೆ ಸೇರಿತ್ತು. ಅವಳಿ 

ಗಾಗಲೆ ವಯಸ್ಸಾಗಿ ಹೋಗಿ ಅವಸಾನಕಾಲವು ಸಮೀಪಿಸುತ್ತಿತ್ತು. ದಿನವೂ 

ಅವಳಿಗೆ “ಮಗುವಿನ ಗತಿಯೇನು? ನಾನು ಹೋದ ಮೇಲೆ ಅದನ್ನು ನೋಡಿ 

ಕೊಳ್ಳುವರಾರು ?” ಇವೇ ಮೊದಲಾದ ಯೋಚನೆಗಳಿಗೆ ಪ್ರಾರಂಭವಾಯಿತು. 

ದೇವರ ದಯದಿಂದ ಅವಳಿಗೆ ಈ ಭಿಕ್ಷುಕಳ ಗುರುತಾಯಿತು. ಒಂದು ದಿನ 

ಮುದುಕಿಯು ಈ ಭಿಕ್ಷುಕಳನ್ನು ತನ್ನ ಮಗುವನ್ನು ತೋರಿಸಿಕೊಂಡು ಅವ 

ಳೊಡನೆ ಮಾತನಾಡುತ್ತ ಹೀಗೆ ಹೇಳಿದಳು. "ಇಲ್ಲಿ ನೋಡೇ, ತಾಯಿ. 

ಇದೊಂದು ಮಗು. ಇದಕ್ಕೆ ತಾಯಿ ತಂದೆ ಯಾರೂ ಇಲ್ಲ. ಏನೋ ಇದು 

ವರೆಗೂ ಇದನ್ನು ನಾನೇ ಸಲಹಿದೆ. ಇನ್ನು ನಾನು ಬಹಳ ದಿನ ಬದುಕೋ 

ದಿಲ್ಲ. ನಾನು ಹೇಳೋದೇನಂದರೆ, ನೀನು ಇನ್ನೂ ಹುಡುಗಿ, ಇದನ್ನು ತೆಗೆ 

ದುಕೊ. ಇದೇನೂ ನಿನಗೆ ಭಾರವಲ್ಲ. ಸಾಕಿ ಸಲಹು. ಮುಂದಕ್ಕೆ ನಿನಗೂ 

ಒಂದು ದಿಕ್ಕಾದ ಹಾಗಾಗುತ್ತದೆ. ನೀನೂ ಭಿಕ್ಷುಕಳು, ನಾನೂ ಭಿಕ್ಷುಕಳು. 

ನಿನ್ನಲ್ಲಿ ನಾನು ಬೇಡುವ ಭಿಕ್ಷ ಇದೊಂದೇ. ನನ್ನ ಮಾತನ್ನು ತೆಗೆದುಹಾಕ 

ಬೇಡ.” ಭಿಕ್ಷುಕಳು ಅವಳು ಹೇಳುತ್ತಿದ್ದುದನ್ನೈಲ್ಲಾ ಕೇಳುತ್ತಿದ್ದಳು. ಅವಳ 

ಮನಸ್ಸಿನಲ್ಲಿ ಯೋಚನೆಗೆ ಪ್ರಾರಂಭವಾಯಿತು. ಅವಳು ಮಗುವನ್ನು ನೋಡಿ 

ದಳು. ಬಹಳ ಹೀನಸ್ಸಿ ತಿಯಲ್ಲಿತ್ತು. ಸ್ವಲ್ಪ ಹೊತ್ತು ಸುಮ್ಮನಿದ್ದು “ಆಗಲಿ” 

ಎಂದಳು. 


ಕೆಲವು ದಿನಗಳಲ್ಲೆ ಮುದುಕಿಯು ಸತ್ತು ಹೋದಳು. ಮಗುವಿನ ರಕ್ಷಣೆ 

ಭಿಕ್ಷುಕಳಿಗೆ ಸೇರಿತು. 


“ಆಗಲಿ ಎಂದು ಹೇಳಿದಾಗ, ಭಿಕ್ಷುಕಳ ಮನಸ್ಸಿನಲ್ಲಿ ಆ ಮಗುವಿನ 

ವಿಷಯವಾಗಿ ಯಾವ ಭಾವನೆ ಇತ್ತೋ ಆ ಭಾವನೆ ಈಗ ಇಲ್ಲ. ಆಗ 

ಅವಳು ಯೋಚಿಸಿದುದೇನೆಂದರೆ ತಾನೊಬ್ಬಳೇ ಭಿಕ್ಷಾಟನೆ ಮಾಡುವುದ  

ಕ್ಕಿಂತ ಜೊತೆಯಲ್ಲಿ ಒಂದು ಮಗುವೂ ಇದ್ದರೆ ನೋಡಿದವರಲ್ಲಿ ಹೆಚ್ಚು ಕನಿ 

ಕರವನ್ನುಂಟು ಮಾಡಬಹುದು. ಎಂದು ಮಗುವೂ, ಉಗುರಿನಿಂದ ಚಿವುಟಿದ 

ಎಳೆಯ ಮೊಳಕೆಯ ಹಾಗೆ, ಬಹಳ ಕಂದಿಹೋಗಿತ್ತು.  ಭಿಕ್ಷುಕಳ ಹೊಟ್ಟೆ 


೭೬ ಕೆಲವು ಕಥೆಗಳು 


ಯಲ್ಲಿ ಹುಟ್ಟಿದ್ದು ಇನ್ನು ಹೇಗೆ ಇದ್ದೀತು? ಅವಳು ಯೋಚಿಸಿದಂತೆಯೇ' 

ಆ ಮಗುನಿನ ಸಹವಾಸದಿಂದ ಅವಳಿಗೆ ಭಿಕ್ಷಾಟನೆಯು ಬಹುಮಟ್ಟಿಗೆ ಸುಲಭ 

ವಾಯಿತು. ಮಗುವು ಆ ಸ್ಥಿತಿಯಲ್ಲಿ ಎಂತಹ ಕಲ್ಲು ಮನಸ್ಸನ್ನಾ ದರೂ 

ಕರಗಿಸುವಂತೆ ಇತ್ತು. ಅದಕ್ಕಾಗಿ ಅವಳಿಗೆ ಆ ಮಗುನಿನಲ್ಲಿ ಆಸೆಯುಂಟಾ 

ಯಿತು. ಜಟಕಾ ಗಾಡಿಯವನಿಗೆ ಚೆನ್ನಾಗಿ ಬಾಡಿಗೆ ತರುವ ಕುದುರೆಯನ್ನು 

ಕಂಡರೆ ಯಾವ ವಿಧವಾದ ಆಸೆಯೋ, ಆ ವಿಧವಾದ ಆಸೆ. ತನ್ನ ಜೀವನ 

ನನ್ನು ಸುಲಭ ಮಾಡಿತಲ್ಲಾ ಎಂದು ಅಷ್ಟೆ. ಮತ್ತೆ ಯಾರಾದರೂ ಅವಳಿಗೆ 

ಇನ್ನೂ ಸುಲಭವಾದ ಜೀವನವನ್ನು ಕಲ್ಪಿಸಿಕೊಟ್ಟಿದ್ದರೆ, ಅವಳು ಎರಡನೆಯ 

ಯೋಚನೆಯಿಲ್ಲದೆ - ನಿರಾತಂಕವಾಗಿ - ಆ ಮಗುವನ್ನು ಇನ್ನಾರಿಗಾದರೂ 

ಕೊಟ್ಟುಬಿಡುತ್ತಿದ್ದಳು. ಆದರೆ ಅಂತಹ ಸಂದರ್ಭ ಬರಲಿಲ್ಲ. ಹಾಗೆಯೇ 

ಸ್ವಲ್ಪ ಕಾಲ ಕಳೆಯಿತು. 


ಚಿಕ್ಕ ಮಕ್ಕಳು ದೇವರ ಹಾಗೆ--ಅವರಲ್ಲಿ ದೇವರ ಅಂಶ ಇರುತ್ತದೆ- 

ಎನ್ನುತ್ತಾರೆ ಅದು ನಿಜನಾದರೆ ಆ ಅಂಶವೋ ಏನೋ, ಭಿಕ್ಷುಕಳಿಗೆ ಆ 

ಮಗುವಿನಲ್ಲಿದ್ದ ಪ್ರೀತಿಯ ರೀತಿಯನ್ನು ಬದಲಾಯಿಸಿತು. ದಿನದಿನವೂ, 

ಆ ಮಗುವಿನ ಸಹವಾಸದಿಂದ - ಅದರ ಶುದ್ಧವಾದ ಆತ್ಮದ ಸಾಮೀಪ್ಯದಿಂದ- 

ಅದರ ನಿಸ್ಸಹಾಯವಾದ ಬಾಹುಗಳ ಆಲಿಂಗನದಿಂದ. ಅವಳು ಆ ಮಗು 

ವನ್ನು ನಿಜವಾದ ತಾಯಿಗೆ ತನ್ನ ಮಗುವಿನಲ್ಲಿರಬೇಕಾದ-ಪ್ರೀತಿಯಿಂದ ಕಾಣ 

ತೊಡಗಿದಳು. ಅವಳ ಆ ಪಾಪಕಲುಹಿತವಾದ ಜೀವನದಲ್ಲಿ ಆ ಪ್ರೀತಿಯು 

ಮಾತ್ರ, ಕೆಸರಿನಲ್ಲಿ ಕಮಲವು ಹುಟ್ಟಿ ಬೆಳೆದಂತೆ ಬೆಳೆಯಿತು. ಅವಳ ಜೀವ 

ನವು ಎಷ್ಟು ಪಾಪಗಳಿಂದ ಮಲಿನನಾಗಿದ್ದರೂ, ಅವಳ ನಡತೆಯು ಎಷ್ಟು 

ನೀತಿರಹಿತವಾಗಿದ್ದರೂ, ಒಂದು ವಿಷಯದಲ್ಲಿ ಮಾತ್ರ ಅವಳು ಪ್ರಶಂಸಾರ್ಹ 

ಳಾಗಿದ್ದಳು. ಅದು ಅವಳಿಗೆ ಆ ಮಗುವಿನಲ್ಲಿದ್ದ ಪ್ರೀತಿ. ಅವಳು ತಾಯಿಯಿಲ್ಲದ  

ಮಗುನಿಗೆ ತಾಯಿಯಾಗಿದ್ದಳು, ತಾಯಿಯ ಧರ್ಮವೊಂದನ್ನೇ ಯೋಚಿಸ 

ಹೋದರೆ, ಅವಳು ಆ ಧರ್ಮದಲ್ಲಿ ಇನ್ನು ಯಾವ ತಾಯಿಗೂ ಕೀಳಾಗಿರಲಿಲ್ಲ. 


೪ 

ದಿನಗಳ ಮೇಲೆ ದಿನಗಳು ಕಳೆಡು ಹೋದುವು. ಚಳಿಗಾಲ್ಲ ಮಳೆ 


ಮನೆಗೆ ಹೋದರು ೭೩ 


ಗಾಲ ಬೇಸಿಗೆ ಇವೇ ಮೊದಲಾದುವು, ಕಾಲದ ಸಮುದ್ರದಲ್ಲಿ ದೊಡ್ಡ ದೊಡ್ಡ 

ಅಲೆಗಳಂತೆ ಒಂದರ ಮೇಲೊಂದು ಬಂದು ಹೋದುವು. 


ಈಗ ಭಿಕ್ಷುಕಳ ಮಗುವು ಏಳೆಂಟು ವರ್ಷಗಳ ಹುಡುಗನಾಗಿದ್ದನು. 

ಕಾಲವು ಬದಲಾಯಿಸಿದ್ದರೂ, ಭಿಕ್ಷುಕಳು ಭಿಕ್ಷುಕಳಾಗಿಯೇ ಇದ್ದಳು, 

ಅವಳು ಬಹು ತಾಳ್ಮೆಯಿಂದ ನಿತ್ಯವೂ ಯಾಚನೆಗೆ ಹೋಗುವಳು. ಹುಡು 

ಅವಳ ಹಿಂದೆಯೇ ಹೋಗುವರು. ಈಗದೂ ಅವನ ಸ್ಥಿತಿ ಚನ್ನಾಗಿರಲಿಲ್ಲ. 

ಎಂಟು ವರ್ಷದ ಹುಡುಗ ಎಂದರೆ ನಂಬುನಂತಿರಲಿಲ್ಲ. ಈಚೇಜಿಗೆ-ಅವಳು 

ಕೆಲವು ದೇವರ ಕೀರ್ತನೆಗಳನ್ನು ಕಲಿತಿದ್ದಳು. ಅವನ್ನು ಹಾಡುತ್ತ ಭಿಕ್ಷಾಟನೆ 

ಮಾಡುವಳು. ಕಂಠ ಹಿಂದೆ ಚೆನ್ನಾಗಿತ್ತೆಂದು ತೋರುತ್ತದೆ; ಆದಕೆ ಈಗ 

ಇಲ್ಲ-ಒಡೆದುಹೋದ ಕೊಳಲಿನ ಧ್ವನಿಯ ಹಾಗೆ. ಧ್ವನಿ ಹಾಗಿದ್ದರೂ, 

ಅವಳ ಬಾಯಲ್ಲಿ ಆ ಕೀರ್ತನೆಗಳು ಮಾತ್ರ ಒಂದು ಅಪೂರ್ವವಾದ ಭಾವವನ್ನು 

ಪಡೆಯುತ್ತಿದ್ದವು. ಅವಳು ಹಾಡುತ್ತಿದ್ದರೆ ಅವಳ ಅಂತರಾಳದಲ್ಲಿರುವ ಭಕ್ತಿ 

ಅಲೆಅಲೆಯಾಗಿ ಇವಳ ಮುಖದಿಂದ ಹೊರಡುತ್ತಿರುವುದೋ ಎನ್ನುವ ಹಾಗೆ 

ತೋರುವುದು. ಅವುಗಳಲ್ಲಿ ಅವಳು ತಾನು ಮಾಡಿದ ಪಾಪಕಾರ್ಯಗಳನ್ನೆಲ್ಲಾ 

ನೆನೆನೆನೆದು ಪಡುವ ಪಶ್ಚಾತ್ತಾಪದ ಪ್ರತಿಧ್ವನಿಯು ಕೇಳಿಬರುತ್ತಿತ್ತು. ಕೀರ್ತನೆ 

ಗಳ ಪ್ರಭಾವದಿಂದಲೋ ಏನೋ ಕಂಡಕಂಡವರೆಲ್ಲ ಮನಕರಗಿ ಕಾಸು ಮೂರು 

ಕಾಸು ಕೊಡುತ್ತಿದ್ದರು. ಹುಡುಗನನ್ನು ನೋಡಿ, “ಅಯ್ಯೋ ಪಾಪ! 

ಎಷ್ಟು ಬಡವಾಗಿದೆ; ಅದಕ್ಕೇನಾದರೂ ಕಾಯಿಲೆಯೆ ?' ಎಂದು ಕೇಳುವರು. 

ಭಿಕ್ಷುಕಳಿಗೆ ಮೈ ನಡುಗುವುದು. ""ಅದಕ್ಕೆ ಕಾಯಿಲೆಯೆ?* ಎಂದು 

ಯಾರಾದರೂ ಕೇಳಿದರೆ ಅವಳು ಸಹಿಸಲಾರಳು. ಅದು ರೋಗಹೀಡಿತವಾಗಿ 

ದ್ದರೂ, ಅವಳ ಮನಸ್ಸು ಆ ಯೋಜನೆಯನ್ನು ಮಾಡಲೊಲ್ಲದು. "ಏನೂ 

ಇಲ್ಲ; ಹೊಟ್ಟಿಗಿಲ್ಲದೆ ಬಡವಾಗಿದೆ ಅಷ್ಟೆ'' ಎನ್ನುವಳು. ಆ ಮಗುವಿನ ವಿಷಯ 

ವಾಗಿ ಕೆಟ್ಟುದು ಏನನ್ನೂ ಯೋಚಿಸಲಾರದೆ, ಅದು ಸುಖವಾಗಿಯೇ ಇದೆ 

ಎಂದು ಅವಳು ತಿಳಿದುಕೊಂಡಿದ್ದಳು. ಅವಳ ಪ್ರೀತಿ ಅಷ್ಟು ಗಂಭೀರ. 


ಭಿಕ್ಷುಕಳು ಹೋಗದ ಸ್ಥಳವಿಲ್ಲ ಎಲ್ಲಿ ಸಂತೆ ಕೂಡುವುದೋ ಅಲ್ಲಿ 

ಅವಳನ್ನೂ ಆ ಮಗುವನ್ನೂ ನೋಡಬಹುದಾಗಿತ್ತು. ಎಲ್ಲಿ ರಥೋತ್ಸವ, 

ಜಾತ್ರೆ, ಇವುಗಳಾದರೆ ಅಲ್ಲಿ ಅವಳ ಕೀರ್ತನೆ ಕೇಳಿ ಬರುವುದು. ಅಂತು 


೭೮ ಕೆಲವು ಕಥೆಗಳು 


ಹಾಗೂ ಹೀಗೂ ಕಾಲ ಕಳೆಯುತ್ತಿದ್ದರು-ದೊಡ್ಡದಾದ ಸಮುದ್ರದ ಮೇಲೆ 

ಸಣ್ಣ ದೊಂದು ದೋಣಿಯಲ್ಲಿ ಕುಳಿತು  ಸಣ್ಣ ಸಣ್ಣ ಹುಟ್ಟುಗಳಿಂದ ಸಮುದ್ರದ 

ಅಲೆಗಳನ್ನು ಹಿಂದಕ್ಕೆ ನೂಕುವ ಹಾಗೆ. 

.... .... ....


ಆ ಊರಿಗೆ ಮೂರು ಮೈಲು ದೂರದಲ್ಲಿ ಈ ದಿನ ಜಾತ್ರೆ. ಹೊತ್ತು 

ಹುಟ್ಟುವುದಕ್ಕೆ ಮುಂಚೆಯೇ ಜನರು ಅಲ್ಲಿಗೆ ಹೊರಡುವುದಕ್ಕೆ. ಪ್ರಾರಂಭಿಸಿ 

ದರು. ಎಲ್ಲರಿಗೂ ಸಡಗರ. ಜನ ಸೇರಿದ ಕಡೆ ಭಿಕ್ಷುಕರಿಗೆ ಸುಗ್ಗಿ. ಅವರೂ 

ತಂಡತಂಡವಾಗಿ ಹೋಗುತ್ತಿದ್ದರು. ನಮ್ಮ ಭಿಕ್ಷುಕಳೂ ತನ್ನ ಹುಡುಗನನ್ನು 

ಕರೆದುಕೊಂಡು ಹೊರಟಳು. ಅವಳಿಗೆ ಮನಸ್ಸಿನಲ್ಲಿ ಸಂತೋಷ-ಬ್ರಾಹ್ಮಣಾ 

ರ್ಥಕ್ಕಾಗಿ ಹೋಗುತ್ತಿರುವ ಹಸಿದ ಬ್ರಾಹ್ಮಣನ ಸಂತೋಷದ ಹಾಗೆ. 

ಜಾತ್ರೆಯಲ್ಲಿ ಅವಳಿಗೆ ಬೇಕಾದ ಹಾಗೆ ದುಡ್ಡು ಸಿಕ್ಕಿತು. ಎಲ್ಲವೂ ಅವಳ 

ಕೀರ್ತನೆಯ ಪ್ರಭಾವ. ಅವರ ಸ್ಥಿತಿಯೇ ಮನಸ್ಸನ್ನು ಕರಗಿಸುತ್ತಿತ್ತು. 

ಜೊತೆಗೆ-ಹೃದಯವನ್ನು ನೀರು ಮಾಡುವಂತೆ ಕೀರ್ತನೆ. ಒಬ್ಬಳು ಇವಳಿಗೆ 

ಭಿಕ್ಷವನ್ನು ಹಾಕಿ 'ಅಲ್ಲವೆ, ನೀನು ಯಾರಾದರೂ ಒಬ್ಬ ಗಂಡಸಿಗೆ ನೆರವಾ 

ಗಿದ್ದು ಕೊಂಡು ಜೀವನ ಮಾಡಬಾರದಾಗಿತ್ತೆ? " ಎಂದು ಕೇಳಿದಳು. ಅವಳು 

ಭಿಕ್ಷುಕಳು ಎಂದು ಆ ರೀತಿ ಮಾತನಾಡಿದಳು. ಭಿಕ್ಷುಕಳಿಗೆ ಅಭಿಮಾನದಿಂದ 

ತುಟಿಗಳು ಅದುರಿದುವು. ಕಣ್ಣುಗಳು ಕಿಡಿಕಿಡಿಯಾದುವು. ಶ್ವಾಸವು ಬಿಸಿ 

ಯಾಯೆತು. ಅವಳು ರೋಷದಿಂದ ಹೇಳಿದಳು.--""ಏನಂದಿರಿ "ಗಂಡಸೇ? '

ಗಂಡಸು! ಗಂಡಸು! ನನಗೆ-” ಮುಂದಕ್ಕೆ ಏನನ್ನೋ ಹೇಳಬೇಕೆಂದಿದ್ದ 

ವಳು ಅಲ್ಲಿಗೇ ನಿಲ್ಲಿಸಿ ಪುನಃ "ಗಂಡಸಂತೆ ಗಂಡಸು! ಪಿಶಾಚಿಗಳು!” ಎಂದು 

ಹೇಳಿದಳು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಹೆಂಗಸು 

ಮರುಮಾತಿಲ್ಲದೆ ಹೊರಟು ಹೋದಳು. 


ಜಾತ್ರೆ ಮುಗಿದು ಎಲ್ಲರೂ ಹಿಂತಿರುಗಿದರು. ಭಿಕ್ಷುಕಳೂ ಊರಿನ ಕಡೆ 

ನಡೆದು ಬರುತ್ತಿದ್ದಳು. ಸ್ವಲ್ಪ ಹೆಚ್ಚಾಗಿ ಭಿಕ್ಷ ಸಿಕ್ಕಿದ್ದರಿಂದ ಅವಳಿಗೆ ಬಹು 

ಸಂತೋಷ. ಅವಳಿಗೆ ಅದಕ್ಕಿಂತಲೂ ಹೆಚ್ಚಿನ ಸಂತೋಷವೇನೆಂದರೆ, ಅವಳ 

ಹುಡುಗನೂ ನಗುತ್ತ ನಲಿಯುತ್ತ ಇದ್ದನು. ಅವನ ಕೈಯಲ್ಲಿ ಒಂದು ಮರದ 

ಗೊಂಬೆ ಇತ್ತು. ಅವಳು ತನಗೆ ಬಂದ ಭಿಕ್ಷದಲ್ಲಿ ಸ್ವಲ್ಪವನ್ನು ಹಾಕಿ ಅವನಿಗೆ 


ಮನೆಗೆ ಹೋದರು ೭೯ 


ಆ ಗೊಂಬೆಯನ್ನು ಕೊಂಡುಕೊಟ್ಟಿದ್ದಳು. ಹಿಂದೆ, ಎಷ್ಟೋ ಸಾರಿ, ಅವನು 

ಅಂಗಡಿಗಳಲ್ಲಿ ಯಾವುದಾದರೂ ಗೊಂಬೆಯನ್ನು ನೋಡಿ, ಅದು ಬೇಕೆಂದು 

ಕೇಳಿದಾಗ, ಅವಳು ಕೊಳ್ಳುವುದಕ್ಕೆ ದುಡ್ಕಿಲ್ಲದೆ ಖನ್ನಮನಸ್ಕಳಾಗುತ್ತಿದ್ದಳು. 

ಇಂದು ತನ್ನ ಪ್ರೇಮದ ಹುಡುಗನ ಆಸೆಯನ್ನು ಪೂರ್ತಿಮಾಡಿದ್ದಳು, ಅದಕ್ಕೇ 

ಅವಳಿಗೆ ಮಿತಿಮಾರಿದ ಆನಂದ. 

ಹಳೆಯ ವರ್ಷವು ಮುಗಿಯಿತು. ಹೊಸ ವರ್ಷದ ಮೊದಲನೆಯ 

ದಿನ. ಯುಗಾದಿ. ಎಲ್ಲರೂ ಸಂತೋಷದಿಂದಿರಚೇಕಾದ ದಿನ. ಹುಡುಗರು 

ನಕ್ಕು ನಲಿದು ಕುಣಿದಾಡುವ ದಿನ. ಆದರೆ ಭಿಕ್ಷುಕಳ ಹುಡುಗನಿಗೆ ಮಾತ್ರ 

ಆನಂದನಿಲ್ಲ. ಕುರುಡನು ಹೇಗೆ ಕತ್ತಲು, ಬೆಳಕು, ಎಂಬುದನ್ನು ಅರಿಯ 

ಲಾರನೋ ಹಾಗೆಯೇ ಅವನ ಆತ್ಮವು ಸುಖ ದುಃಖ ಯಾವುದನ್ನೂ ಅರಿಯ 

ಲಾರದಾಗಿತ್ತು. ಈಗ ಅವನಿಗೆ ತನ್ನ ಮರದ ಗೊಂಬೆಯ ಮೇಲೆ ಆಸೆಯಿಲ್ಲ. 

ಅವಳು, ಅದು ಸಂತೋಷವಾಗಿರಲಿ ಎಂದು ಎಷ್ಟೆಷ್ಟೋ ಪ್ರಯತ್ನ ಪಡುವಳು ; 

ಆದರೆ ಅವನು ಒಂದು ಮಾತನ್ನೂ ಆಡನು. ಅದನ್ನು ನೋಡಿ ಅವಳು 

ದುಃಖಪಡುವಳು. ಈಗ ಅವನ ಸ್ಥಿತಿ ಮೊದಲಿಗಿಂತ ಕೆಟ್ಟಿತ್ತು. ಅವಳ ಹಿಂದೆ 

ಮೂಕನ ಹಾಗೆ ಹೋದೆಡೆಯಲ್ಲಾ ಹೋಗುವನು. ಕೊಟ್ಟರೆ ತಿನ್ನುನನು, 

ಇಲ್ಲದೆ ಇದ್ದರೆ ಇಲ್ಲ. ಹಸಿವಾದಾಗ ತಿಂಡಿ ಕೊಡು ಎಂದು ಕೂಡಾ ಕೇಳು 

ತ್ಲಿರಲಿಲ್ಲ. ಅವನ ಆತ್ಮವು ಅಷ್ಟು ಮಂಕಾಗಿಹೋಗಿತ್ತು. ದಿನಗಳು ಕಳೆದ 

ಹಾಗೆಲ್ಲಾ ಅವನ ರೀತಿಯೇ ಬದಲಾಯಿಸುತ್ತ ಬಂತು. ಮುಖನೆಲ್ಲಾ ಬೆಳ್ಳ

ಗಾಗಿ, ಕಣ್ಣುಗಳು ಧೂಳು ಮುಚ್ಚಿದ ಕನ್ನಡಿಯಂತೆ ಕಾಂತಿಹೀನವಾಗಿ, 

ಎಲ್ಲಿಯೋ ಯಾವುದೋ ಕನಸನ್ನು ನೋಡುತ್ತಿರುವಂತೆ ಕಾಣುತ್ತಿತು. ಅವನ 

ಎಚ್ಚರಕ್ಕೂ ನಿದ್ದೆಗೂ ಬಹಳ ವ್ಯತ್ಯಾಸವಿರಲಿಲ್ಲ. ತಾಯಿ ಅವನಿಗೆ ಆನಂದ 

ವಾಗಲಿ ಎಂದು ಕೀರ್ತನೆಗಳನ್ನು ಹೇಳುವಳು. ಪ್ರೇಮದಿಂದ ಮಾತನಾಡಿಸು 

ವಳು. ಆದರೆ ಎಲ್ಲವೂ ವ್ಯರ್ಥ. ಅವನಿಗೆ ಈ ಪ್ರಪಂಚದಲ್ಲಿ ಯಾವುದ 

ರಿಂದಲೂ ಉಲ್ಲಾಸವಾಗುನಂತಿರಲಿಲ್ಲ. ಅವನ ಕಣ್ಣುಗಳು ಕಾಂತಿಹೀನ 

ವಾಗಿದ್ದರೂ ಅವು ಈ ಪ್ರಸಂಚವನ್ನು ಬಿಟ್ಟು ನಕ್ಷತ್ರಗಳ ಅಚೆ ನೋಡುತ್ತಿರು 


೮೦ ಕೆಲವು ಕಥೆಗಳು 


ನಂತೆ ತೋರುವುವು. ಅವನ ಅಂಗಾಂಗಗಳಲ್ಲಿಯೂ ಕಷ್ಟಜೀವನದ ಗುರುತು 

ಚೆನ್ನಾಗಿ ಊರಿತ್ತು. ಸುಖವಾಗಿರುವುದು ಅದರ ಹಣೆಯಲ್ಲಿ ಬರೆದಿರಲಿಲ್ಲ 

ವೆಂದು ತೋರುತ್ತದೆ. ಭಿಕ್ಷುಕಳಿಗೆ ಮನಸ್ಸಿನಲ್ಲಿ, ಮಗುವಿಗಾಗಿ ದುಃಖವು 

ಹೆಚ್ಚಿತು. ಅದನ್ನು ಹೇಳಿಕೊಳ್ಳಲು ಅವಳಿಗೆ ಯಾರೂ ಇರಲಿಲ್ಲ. ಯಾರಿಗೆ 

ಬೇಕು ಅವಳ ಕಥೆ? ತನ್ನನ್ನು ಬಿಟ್ಟರೆ ಆ ಮಗುವಿಗೆ ಇನ್ನಾರೂ ಗತಿಯಿಲ್ಲ 

ವೆಂದು ಚೆನ್ನಾಗಿ ತಿಳಿದಿತ್ತು. ಅದು ರೋಗದಿಂದ ನರಳುತ್ತಿದ್ದರೆ ಇತರರಿ 

ಗೇನು? ಏನೋ, ಮನಸ್ಸು ಬಂದರೆ ಎರಡು ಕಾಸು ಕೊಡುವರು. ಕೆಲವರು, 

“ಒಳ್ಳೆಯದೇ ಆಯಿತು; ಅದಕ್ಕೆ ರೋಗ ಹೆಚ್ಚಿದಷ್ಟೂ ರಿನಗೆ ಹೆಚ್ಚಿಗಿ ಛಿಕ್ಷ 

ಸಿಕ್ಕುತ್ತದೆ ?" ಎನ್ನುವರು. ಆದರೆ ಅವಳಿಗೆ ಅದು ಸಹಿಸುತ್ತಿರಲಿಲ್ಲ. ಏನೋ, 

ಹುಡುಗರಿಗೆ ಕಾಯಿಲೆ ಬರುವದುಂಟು; ಅದೇನು ಮಾಡುತ್ತೆ-ತಾನೇ ಹೋಗು 

ತ್ತದೆ” ಎಂದುಕೊಳ್ಳುವಳು. ಹೀಗೆ ಅವಳು ತನಗೆ ತಾನೇ ಸಮಾಧಾನ 

ಮಾಡಿಕೊಂಡು, ಮಗುವನ್ನು ಮೊದಲಿಗಿಂತಲೂ ಹೆಚ್ಚು ಎಚ್ಚರದಿಂದ ನೋಡಿ 

ಕೊಳ್ಳಲಾರಂಭಿಸಿದಳು. ಹುಡುಗನಿಗೆ ಅದೆಲ್ಲಾ ಬೇಕಾಗಿರಲಿಲ್ಲ. ಅವಳು 

ಏನು ಮಾಡಿದರೂ ಮಾಡಿಸಿಕೊಂಡು ಸುಮ್ಮನೆ ಮೂಕುಪ್ರಾಣಿಯ ಹಾಗೆ 

ಇರುತ್ತಿದ್ದನು. 


೬ 

ಚಳಿಗಾಲ ಪ್ರಾರಂಭವಾಯಿತು. ಬೆಳಗಾದರೆ ಸಾಯಂಕಾಲವಾದರೆ 

ಎಲ್ಲೆಲ್ಲಿಯೂ ಹಿಮವು ಕವಿದುಕೊಂಡು, ಪ್ರಕೃತಿಯ ಮುಖದ ಮೇಲೆ ತೆಳ್ಳ 

ನೆಯ ಅವಗುಂಠನದಂತೆ ಕಾಣುತ್ತಿತ್ತು. ಎಲೆಗಳೆಲ್ಲಾ ಉದುರಿ, ಮರಗಳು, 

ಬಟ್ಟೆಯಿಲ್ಲದ ನಿಗರ್ತಿಕಳಾದ ಭಿಕ್ಷುಕಳನ್ನು ಹೋಲುತ್ತಿ ದ್ದುವು. ಜನರ 

ಸಂಭ್ರಮನೆಲ್ಲಾ ಅಡಗಿ ಹೋಗಿತ್ತು. 


ಇಂತಹ ಹಿಮಕಾಲದ ಒಂದು ರಾತ್ರಿ. ಆಕಾಶದಲ್ಲಿ ಪೂರ್ಣಿಮೆಯ 

ಚಂದ್ರನಿದ್ದರೂ, ಮಂಜಿನ ಮುಸುಕಿನಲ್ಲಿ ಚಂದ್ರಿಕೆ ಅಷ್ಟು ಪ್ರಶಸ್ತವಾಗಿರಲಿಲ್ಲ. ' 

ಎಲ್ಲವೂ. ಮೊಬ್ಬುಮೊಬ್ಬು. ರಾತ್ರಿ ಬಹಳ ಹೊತ್ತಾಗಿತ್ತು. ಭಿಕ್ಷುಕಳು.ಮಗು 

ವನ್ನು ಎತ್ತಿ ಕೊಂಡು. ಬರುತ್ತಿದ್ದಳು. ಹಾಗೆಯೇ ಹೆಜ್ಜೆಯಿಡುತ್ತ ನದಿಯ 

ಸೋಪಾಸಕ್ಕೆ ಬಂದಳು. ಅಲ್ಲಿ ಸೋಪಾನದ ಮೇಲೆ ಕುಳಿತುಕೊಂಡಳು. 


ಮನೆಗೆ ಹೋದರು ೮೧ 


ಬಹಳ ದಣಿದಿದ್ದಳಾದುದರಿಂದ ಮಗುವನ್ನು, ಕಳಗೆ ಒಂದು ಚಿಂದಿಬಟ್ಟಿ 

ಯನ್ನು ಹಾಸಿ ಮಲಗಿಸಿದಳು. ಆದು ನಿದ್ದೆ ಹೋಗುತ್ತಿತ್ತು. ಅವಳು ಸ್ವಲ್ಪ 

ಹೊತ್ತು ಹಾಗೆಯೇ ಕುಳಿತು ಮಂಜು ಮುಸುಕಿದ ಆಕಾಶವನ್ನು ನೋಡುತ್ತಾ 

ಅಡಿಗಡಿಗೂ ನಿಟ್ಟುಸಿರು ಬಿಡುತ್ತಿದ್ದಳು. ಅವಳ ಆ ಮೌನವಾದ - ಶೂನ್ಯ 

ವಾದ - ದೃಷ್ಟಿ ಹಿಮದ ಹೊದಿಕೆಯನ್ನು ಸೀಳಿಕೊಂಡು ಹೋಗಲೆಳಸುತ್ತಿತ್ತು. 

ಕೆಳಗೆ ನಿಧಾನವಾಗಿ ಹರಿದು ಹೋಗುತ್ತಿರುವ ನದಿ. ಅದರಲ್ಲಿ ಚಿಕ್ಕ ಚಿಕ್ಕ 

ಅಲೆಗಳ ಸಂಗೀತ. ಕ್ಷೀಣವಾಗಿದ್ದರೂ ಬಹು ಇಂಪು-ಅಳುವ ಮಗುವಿಗೆ 

ಹೇಳುವ, ತಾಯಿಯ ಜೋಗುಳದಂತೆ. ಭಿಕ್ಷುಕಳು ಮೈಮರೆತು ಕಲ್ಲಿನ ಮೆಟ್ಟ 

ಲಿನ ಮೇಲೆ ಮಲಗಿ ನಿದ್ದೆಹೋದಳು. ಬಹಳ ಹೊತ್ತಿನವರೆಗೂ ನಿರಾತಂಕ 

ವಾಗಿ ನಿದ್ದೆಹೋದಳು. ಆಮೇಲೆ ಇದ್ದಕ್ಕಿದ್ದ ಹಾಗೆಯೇ ಅವಳಿಗೆ ಎಚ್ಚರ 

ವಾಯಿತು. ಕಣ್ಣುಬಿಟ್ಟು ನೋಡಿದರೆ ಎದುರಿಗೆ ಬಹಳ ಪ್ರಕಾಶಮಾನವಾದ 

ಒಂದು ದೀಪವು ಕಣ್ಣನ್ನು ಚುಚ್ಚುತ್ತಿದ್ದಿತು. ಕೂಡಲೇ ಅವಳು ಹತ್ತಿರದಲ್ಲಿ 

ಮಲಗಿದ್ದ ಮಗುವನ್ನು ಬೇಗನೆ ಎತ್ತಿಕೊಂಡು ಭದ್ರವಾಗಿ ಅಲಂಗಿಸಿ, ಕಣ್ಣು 

ಉಜ್ಜಿಕೊಂಡು ನೋಡಿದಳು. ಎದುರಿಗೆ, ಉದ್ದಕ್ಕೆ, ಕಪ್ಪಾದ ನಿಲುವಂಗಿ 

ಯನ್ನು ಹಾಕಿಕೊಂಡಿದ್ದ ಒಬ್ಬ ಪೋಲೀಸಿನವನು, ಆ. ಪ್ರಕಾಶಮಾನವಾದ 

ಬೆಳಕು ಅವನ ಕೈಯಲ್ಲಿದ್ದ ಲಾಂದ್ರ. ಭಿಕ್ಷುಕಳು ನಡುಗುತ್ತಿದ್ದಳು. ಪೋಲೀಸಿ 

ನವನು ಅವಳನ್ನು ನೋಡಿ ""ಏ! ಏಳು!-ಯಾರು ನೀನು? ಇಷ್ಟು ಹೊತ್ತಿ 

ನಲ್ಲಿ ಇಲ್ಲೇನು ಮಾಡುತ್ತಾ ಇದ್ದೀಯೆ? ಎಳು ಎಳು! ಹೊರಡು!” ಎಂದು 

ಹೇಳಿದನು. ಭಿಕ್ಷುಕಳು ಕ್ಷಮೆಯನ್ನು ಬೇಡದ ತೆರದಲ್ಲಿ ಅವನ ಮುಖನನ್ನು 

ನೋಡುತ್ತ ಕ್ಷೀಣವಾಗಿ ನಕ್ಕಳು. “ಆಗಲಿ, ತಂದೆ; ನಾನು ಇಲ್ಲಿ ನಿದ್ದೆಮಾಡ 

ಬೇಕೆಂದು ಬಂದವಳಲ್ಲ. ಇವತ್ತೆಲ್ಲಾ ಸುತ್ತಿ ಸುತ್ತಿ ಬಹಳ ದಣಿದಿದ್ದೆ. ಇಲ್ಲಿ 

ಬಂದು ದಣುವಾರಿಸಿಕೊಳ್ಳೋಣ ಎಂದು ಕುಳಿತೆ. ಹಾಗೆಯೇ ನಿದ್ದೆ ಬಂದು 

ಬಿಟ್ಟಿತು; ಅಷ್ಟೆ ತಂದೆ! ಮನೆಗೆ ಹೋಗದೆ ಉಂಟಿ?'' ಎಂದಳು. ಅವಳ 

ದೈನ್ಯತೆ-ಅವನು ಪೋಲೀಸಿನವನಾದರೂ-ಅವನ ಹೃದಯವನ್ನು ತಟ್ಟಿತು. 

ಅವನು ಬೆಳಕನ್ನು ಚೆನ್ನಾಗಿ ಅವಳ ಕಡೆ ತಿರುಗಿಸಿ, "ಅಲ್ಲಿರುವುದೇನು. 

ನಿನ್ನಮಗುವೆ?” ಎಂದು ಕೇಳಿದನು. ಭಿಕ್ಷುಕಳು ಅರ್ಧ ಅಭಿಮಾನದಿಂದಲೂ, 

ಅರ್ಧ ಮೃದುತ್ವದಿಂದಲೂ ಹಾದು?” ಎಂದು ಹೇಳಿ ಅದನ್ನು ನೋಡುತ್ತ 


೮೨ ಕೆಲವು. ಕಥೆಗಳು 



“ಪಾಪ, ಬಹಳ ಕಾಯಿಲೆಯಾಗಿತ್ತು; ಆದರೆ ಈಗ ಮೊದಲಿಗಿಂತ ವಾಸಿ 

ಯಾಗಿದೆ” ಎಂದು ಹೇಳಿ ಅದನ್ನು ತನ್ನ ಎದೆಗೆ ಅಪ್ಪಿಕೊಂಡಳು. ಆಮೇಲೆ 

ಅವನ ಸ್ನೇಹಮಯವಾದ ಧ್ವನಿಯಿಂದ ಪ್ರೋತ್ಸಾಹಗೊಂಡು ಅವನಿಗೆ ನಿಧಿ 

ಯನ್ನು ತೋರಿಸುವುದಕ್ಕೋಸ್ಟರ, ಮಗುವಿಗೆ ಸುತ್ತಿದ್ದ ಬಟ್ಟೆಯನ್ನು ಬಿಚ್ಚಿ 

ದಳು. ಪೋಲೀಸಿನವನು ಕೈಲಾಂದ್ರವನ್ನು ಅದರ ಮುಖಕ್ಕೆ ಚೆನ್ನಾಗಿ 

ತಿರುಗಿಸಿದರು. ನೋಡಿದನೋ ಇಲ್ಲವೋ ಅಷ್ಟರೊಳಗೆ ಬೆಚ್ಚಿ ಬಿದ್ದು ಹಿಂದಕ್ಕೆ 

ಸರಿದು “ಹಾ! ಇದೇನು? - ಅದು ಸತ್ತಿದೆ!” ಎಂದು ಕೂಗಿದನು. 

"ಸತ್ತಿದೆ! ಎಂದು ಕೇಳುತ್ತಲೆ ಭಿಕ್ಷುಕಳು ಚೀತ್ಕಾರ ಮಾಡಿದಳು. “ಅಯ್ಯೋ 

ಸುಳ್ಳು! ಸುಳ್ಳು! ನೀವು ಸುಳ್ಳು ಹೇಳುತ್ತೀರಿ! ಇಲ್ಲ ಅದು ಸತ್ತಿಲ್ಲ! ಕಾಯಿಲೆ 

ಯಿಂದ ಹಾಗೆ ಕಾಣುತ್ತದೆ. ತಂದೆ ಬೇಡಿ, ಬೇಡಿ ಹಾಗೆ ಹೇಳಬೇಡಿ! 

ನಿಮ್ಮ ದಮ್ಮಯ್ಯ ತಂದೆ! ಹೇಳಿ 'ಅದು ಸತ್ತಿಲ್ಲ' ಎಂದು ಹೇಳಿ. ಹಾ 

ಬಾ ಬಾ ನನ್ನ ಕಂದ! ನನ್ನ ಮುದ್ದುಮಗುವೇ, ಬಾ! ನೀನು ಸತ್ತಿಲ್ಲ! 

ಬಾ, ನನ್ನ ದೇವರೇ! ನೀನು ಎಂದಿಗೂ ಸಾಯುವುದಿಲ್ಲ!” ಹೀಗೆಂದು 

ಹುಚ್ಚಿಯಂತೆ ಕೂಗಾಡುತ್ತ, ಹೆದರಿಕೆಯಿಂದ ಬೇಗ ಬೇಗನೆ ಆ ಮಗುವಿನ 

ಕೈ, ಕಾಲು ಮುಖನನ್ನೂ ಮುಟ್ಟಿ ಮುಟ್ಟಿ ನೋಡಿದಳು. ಅದನ್ನು ಗಾಢ 

ವಾಗಿ ಆಲಂಗಿಸಿ ಮುದ್ದಿಟ್ಟುಕೊಂಡಳು. ಅದನ್ನು ನೂರಾರು ಪ್ರೀತಿಯ 

ಹೆಸರಿನಿಂದ ಕೂಗಿ ಕರೆದಳು. ಆದರೆ ಎಲ್ಲವೂ ವ್ಯರ್ಥ! ವ್ಯರ್ಥ | ಮಗುವು 

ನೀರವ! ಅದರ ಶರೀರವೆಲ್ಲಾ ತಣ್ಣಗಾಗಿ ಹೋಗಿತ್ತು. ಅದು ಸತ್ತು ಆಗಲೇ 

ಎರಡು ಘಂಟೆಗಳ ಮೇಲೆ ಆಗಿ ಹೋಗಿತ್ತು. 


ಪೋಲೀಸಿನನನು, ಮೌನವಾಗಿದ್ದನು. ಅವನಿಗೆ ಏನು ಮಾತನಾಡ 

ಬೇಕೆಂದು ತೋಚಲಿಲ್ಲ. ಕಣ್ಣುಗಳಲ್ಲಿ ನೀರು ಬಂತು. ಅವನು ಕಾಯಿದೆ 

ಕಾನೂನಿನ ಅಧಿಕಾರಿಯಾಗಿದ್ದರೂ, ಮೃದು ಪ್ರಕೃತಿಯವನಾಗಿದ್ದನು. ಮನೆ 

ಯಲ್ಲಿದ್ದ ಅವನ ಹೆಂಡತಿ ಮಕ್ಕಳು ಜ್ಞಾಪಕಕ್ಕೆ ಬಂದರು. 


ಭಿಕ್ಷುಕಳು ಮೌನವಾಗಿ, ಕಣ್ಣೀರು ಹಾಕುತ್ತ ತನ್ನ ತೊಡೆಯಮೇಲಿದ್ದ 

ಶವವನ್ನು ನೋಡುತ್ತಿದ್ದಳು. ಶವದ ಕಣ್ಣು ಮುಚ್ಚಿತ್ತು. ಅವು ಏನು 

ಮಾಡಿದರೂ ತೆರೆಯುವ ಹಾಗಿಲ್ಲ. ಈ ಬ್ರಹ್ಮಾಂಡನನ್ನೇ ಕೊಟ್ಟರೂ ಆ 

ಮುಚ್ಚಿದ ಕಣ್ಣುಗಳು ಮತ್ತೆ ಆರಳುವುವೇನು? ಇಲ್ಲ! ಅವುಗಳ ಮೇಲೆ 


ಮನೆಗೆ ಹೋದರು ೮೩


ಮೃತ್ಯುವು ಮುದ್ರಿಕೆಯನ್ನೊ ತ್ತಿ ಬಿಟ್ಟಿದ್ದನು. ದುಃಖದಿಂದ ಭಿಕ್ಷುಕ 

ಳಿಗೆ ನಾಲಿಗೆಯ ಶಕ್ತಿ ಆಡಗಿಹೋಗಿತ್ತು. ಪೋಲೀಸಿನವನುಅವಳ ಹತ್ತಿರಕ್ಕೆ 

ಹೋಗಿ, ಬಹು ಕನಿಕರದಿಂದ "ಇಲ್ಲಿ ನೋಡು, ಸುಮ್ಮನೆ ಅಳುವುದರಿಂದ 

ಪ್ರಯೋಜನನಿಲ್ಲ'' ಎಂದು ಹೇಳಿ ನಿಲ್ಲಿಸಿದನು. ಅವನಿಗೆ ಗಂಟಲಿನಲ್ಲಿ 

ಹಿಡಿದಂತಾಯಿತು. ಕಷ್ಟದಿಂದ ಅದನ್ನು ಹೋಗಲಾಡಿಸಿಕೊಂಡು ಪುನ 

“ಬಡಪಾಯಿ! ಅದರ ಪ್ರಾಣವು ಹೋಗಿದೆ. ಈಗ ಏನೂ ಮಾಡುವ 

ಹಾಗಿಲ್ಲ. ಅದಕ್ಕೆ ಇಲ್ಲಿಗಿಂತ ಪರಲೋಕವೇ ಒಳ್ಳೆಯದೆಂದು ತೋರುತ್ತದೆ. 

ಬದುಕಿದ್ದರೆ ಅದಕ್ಕೆ ಇನ್ನೂ ಏನೇನು ಕಷ್ಟಪರಂಪರೆಗಳು ಕಾದಿದ್ದುವೋ. 

ಬೇಡ ಅಳಬೇಡ. ಅದರಿಂದ ಏನೂ ಉಪಯೋಗವಿಲ್ಲ?” ಎಂದು ಹೇಳಿದನು. 

ಭಿಕ್ಷುಕಳು ನಡುಗಿ ನಿಟ್ಟುಸಿರುಬಿಟ್ಟಳು. ಅದೆಂತಹ ನಿರಾಸೆಯ ನಿಟ್ಟುಸಿರು! 

ಅವಳ ಪ್ರೇಮಭರಿತವಾದ ಹೃದಯವು ಬೆಂದು ಅದರಿಂದ ಹೊರಡುವ 

ಆವಿಯೋ ಎನ್ನುವ ಹಾಗೆ ಇತ್ತು. ಆ ನೀಳವಾದ ನಿಟ್ಟುಸಿರು ಅವನ 

ಮಾನವ ಹೃದಯವನ್ನು ಭೇದಿಸಿತು. ಅವನು ಎಷ್ಟು ಸಂತೈಸಿದರೂ ಅವಳಿಗೆ 

ಸಮಾಧಾನವಾಗಲಿಲ್ಲ. ಆದರೆ ಅವನು ಕರ್ತವ್ಯಬದ್ಧನಾಗಿದ್ದನು. ಬಹಳ 

ಹೊತ್ತು ಅಲ್ಲಿ ನಿಲ್ಲುವುದಕ್ಕಿಲ್ಲ. ಅವನು ಸ್ವಲ್ಪ ಗಂಭೀರ ಧ್ವನಿಯಿಂದ 

"ನೋಡು, ಇಲ್ಲಿ ಕುಳಿತು ಅತ್ತರೆ ಪ್ರಯೋಜನವಿಲ್ಲ. ಮನೆಗೆ ಹೋಗು. 

ನಾನು ಇಲ್ಲಿ ನಿನ್ನನ್ನು ಬಿಟ್ಟುಹೋದಕ್ಕೆ ನೀನು ಖಂಡಿತವಾಗಿಯೂ ಮನೆಗೆ 

ಹೋಗುವೆನೆಂದು ಮಾತು ಕೊಡುವೆಯಾ? ನಾನು ಪುನಃ ಇಲ್ಲಿಗೆ 'ಬೀಟು' 

ಬಂದಾಗ ನೀನು ಇಲ್ಲಿರಕೂಡದು. ಗೊತ್ತಾಯಿತೇ? * ಎಂದು ಹೇಳಿದನು. 

ಭಿಕ್ಷುಕಳು ತಲೆದೂಗಿದಳು. ""ಅದೀಗ ಸರಿ! ಇನ್ನು ಹತ್ತು ನಿಮಿಷ ಅಷ್ಟರಲ್ಲಿ 

ನೀನು ನೆಟ್ಟಗೆ ಮನೆಗೆ ಹೋಗಬೇಕು.'' ಎಂದು ಹೇಳಿ ಪೋಲೀಸಿನವನ 

ಹೊರಟುಹೋದನು. ಬರಬರುತ್ತ ಅವನ ಕಾಲಿನ ಸಪ್ಪಳು ಕ್ಷೀಣವಾಗುತ್ತ 

ಬಂದು ಕೊನೆಗೆ ನಿಂತುಹೋಯಿತು. ಭಿಕ್ಷುಕಳು ಒಬ್ಬಳೇ ಆದಳು. ಅವಳು 

ಎದ್ದು ಮಗುವಿನ ಶವವನ್ನು ತನ್ನ ಕೈಗಳಲ್ಲಿ ತೂಗುತ್ತ, ಸ್ವಲ್ಪ ನಕ್ಕಳು. 

ಅದು ದುಃಖವನ್ನು ಮುಟ್ಟಿ ಬಂದ ನಗು. . ಪೋಲೀಸಿನವನ “ನೆಟ್ಟಗೆ ಮನೆಗೆ 

ಹೋಗು” ಎಂಬ ಶಬ್ದಗಳು ಅವಳೆ ಮನಸ್ಸಿನಲ್ಲಿ ಧ್ವನಿಯಾಗುತ್ತಿದ್ದುವು. 

ಅವಳು “ನೆಟ್ಟಗೆ ಮನೆಗೆ ಹೋಗು” ಎಂದು ಮಹೇಳಿದಳು. ಸ್ವಲ್ಪ 


೮೪ ಕೆಲವು ಕಥೆಗಳು 


ಹೊತ್ತು ಸುಮ್ಮನಿದ್ದು ಪುನಃ "ಮನೆ! ಮನೆ! ಹೌದು ನನ್ನ ಕಂದ! ಮನೆಗೆ 

ಹೋಗಬೇಕು. ಬಾ ನನ್ನ ಮುದ್ದು ಕಂದ! ನಾವಿಬ್ಬರೂ ಒಟ್ಟಿಗೆ ಮನೆಗೆ 

ಹೋಗೋಣ” ಎಂದು ಹೇಳಿ, ಅದನ್ನು ಬಿಗಿಯಾಗಿ ತನ್ಸ ಎದೆಗೆ ಅಪ್ಪಿ 

ಕೊಂಡು, ಮೆಲ್ಲಗೆ ಜಾಗರೂಕತೆಯಿಂದ ಮುಟ್ಟಲುಗಳನ್ನು ಒಂದೊಂದಾಗಿ 

ಇಳಿದು ನೀರಿನ ಕಡೆಗೆ ಬಂದಳು. ಸಣ್ಣ ಸಣ್ಣ ಅಲೆಗಳು ಬಂದು ಅವಳ 

ಕಾಲಿಗೆ ಅಪ್ಪಳಿಸಲಾರಂಭಿಸಿದುವು. ನದಿ ಸುಸ್ವರದಿಂದ ಹಾಡುತ್ತ ಹಾಡುತ್ತ 

ಹರಿದು ಹೋಗುತ್ತಿತ ತ್ತು. ಭಿಕ್ಕುಕಳು ವಿಶಾಲವಾದ - ನಿರೀಕ್ಷಣೀಯವಾದ 

ಕಣ್ಣುಗಳಿಂದ ಮೇಲೆ ನೋಡುತ್ತ ಪುನಃ “ನೆಟ್ಟಗೆ ಮನೆಗೆ! ಕೊನೆಯಲ್ಲಿ 

ಎಲ್ಲರೂ ಹೋಗುವ ಮನೆಗೆ” ಎಂದು ಆ ಕ ಣಮಾತ್ರ ಸುಮ್ಮನಿದ್ದು ಪುನಃ 

“ನನ್ನ ಮುದ್ದು ಕಂದನೆ! ನನ್ನ ಪ್ರಾಣಪದಕ! ಹೌದು ನಾವಿಬ್ಬರೂ 

ಬಹಳ ದಣಿದಿದ್ದೇನೆ. ಬಾ! ನಾವಿಬ್ಬರೂ ಒಟ್ಟಿಗೆ ಮನೆಗೆ ಹೋಗೋಣ! ! 

ಅಲ್ಲಿ ಹೋಗಿ ದೊರು ಹೇಳೋಣ. ಹೋಗೋಣ ಬಾ! ಎಂದು ಹೇಳಿ 

ಮಗುನಿನ ಶವದ ತಣ್ಣನೆಯ ಮುಖನನ್ನು ಬಾರಿಬಾರಿಗೂ ಚುಂಬಿಸುತ್ತ, 

ಅದನ್ನು ಬಿಗಿಯಾಗಿ ತನ್ನ ಬಾಹುಗಳನ್ಲ ಆಲಂಗಿಸಿಕೊಂಡು ಮುಂದಕ್ಕೆ 

ಹಾರಿದಳು. ನೀರಿನಲ್ಲಿ ಶಬ್ದ ವಾಯಿತು ಒದೆದುಕೊಳ್ಳು ವುದು. ಆಮೇಲೆ 

ಎಲ್ಲವೂ ಪೂರ್ತಿಯಾಯಿತು. ನದಿ ಮೊದಲಿನಂತೆ ಸಣ್ಣ ಸಣ್ಣ ತರಂಗ 

ಗಳನ್ನು ಮೆಟ್ಟಲ ಮೇಲೆ ಅಪ್ಪಳಿಸುತ್ತ ಮಂಜುಳರವಮಬೆ ನೊಡನೆ ಹರಿದು 

ಹೋಗುತ್ತಿತ್ತು. 


ನದಿಯಲ್ಲಿ ಅಲೆಗಳ ಮೇಲೆ, ಒಣಗಿದ ಎರಡು ಎಲೆಗಳು ತೇಲಿಹೋಗುವ 

ಹಾಗೆ, ಭಿಕ್ಷುಕಳು, ಅವಳ ಗಾಢವಾದ ಆಲಿಂಗನದಲ್ಲಿ ಅವಳ ಹುಡುಗನ 

ಮೃತ ಶರೀರ-ಇವರಿಬ್ಬರೂ ಮುಳುಗುತ್ತ ಏಳುತ್ತ ತೇಲಿಹೋದರು. ಅವರಿಗೆ 

ಇಲ್ಲಿ ಸರಿಬೀಳೆಲಿಲ್ಲ. ತಾಯಿಯರಿಗೆ ಬೇರೆ ಒಂದು ಸ್ಪರ್ಗವಿರುವುದಾದರೆ 

ಭಿಕ್ಷು ಕಳು ಅಲ್ಲಿಗೆ ಹೋದಳು. ಇಬ್ಬನಿ ಸುರಿಯುತ್ತಲೇ ಇತ್ತು. 


ಪೋಲೀಸಿನನನು ಪುನಃ ಆ ಮಾರ್ಗವಾಗಿ ಬಂದನು. ಅಲ್ಲಿ ಭಿಕ್ಷುಕ 

ಳಾಗಲಿ ಅವಳ ಮಗುವಿನ ಶವವಾಗಲಿ ಇರಲಿಲ್ಲ. ನದಿ ನಿಧಾನವಾಗಿ ಏನೂ 

ಅರಿಯದಂತೆ ಹರಿದು ಹೋಗುತ್ತಿತ್ತು ಅವನ ಮನಸ್ಸಿಗೆ ವ್ಯಸನವಾಗಿದ್ದರೂ 

ಸ್ವಲ್ಪ ಹರ್ಷಚಿತ್ತನಾಗಿ “ಸರಿ ಮನೆಗೆ ಹೋಗಿರಬಹುದು” ಎಂದು ತನಗೆ 

ತಾನೇ ಹೇಳಿಕೊಂಡು ಕುಂದಿದ ಹೃದಯವುಳ್ಳವನಾಗಿ ಹೊರಟುಹೋದನು. 

------

೮೫==========================================


ನಾವೂ ಹಾಗೆಯೇ! 

---



Let us not insult Truth for fear of offending men 

— Rabindranath Tagore. 


೧ 

ಒಂದು ದಿನ ಸಾಯಂಕಾಲ. ತಂಗಾಳಿ ಮೆಲ್ಲಮೆಲ್ಲನೆ ತೊನೆಯು 

ತ್ತಿತ್ತು. ಸೂರ್ಯ ಆಗ ತಾನೆ ಮುಳುಗಿದ್ದ. ಪಶ್ಚಿಮ ದಿಕ್ಕಿನಲ್ಲಿ ಆಕಾಶವೆಲ್ಲಾ 

ಉಜ್ಜ್ವಲವಾದ ಓಕಳಿವರ್ಣ. ಆ ಓಕಳಿಯಲ್ಲಿ ಅಲ್ಲಿ ಇಲ್ಲಿ ತೇಲುತ್ತ ಹೂ 

ಗಳಂತೆ ಛಿದ್ರಛಿದ್ರಮೋಡಗಳು. ಪಕ್ಷಿಗಳು ತಮ್ಮ ಸಾಯಂಕಾಲದ ರಾಗದ 

ಆಲಾಪನೆಯಲ್ಲಿದ್ದುವು. ಹೊತ್ತು ಬಹಳ ಸುಖವಾಗಿತ್ತು. 


ಕೃಷ್ಣ ಮೂರ್ತಿ ಆಗ ತಾನೆ ಮನೆಗೆ ಬಂದಿದ್ದ. ಅವನ ಮನೆ ಶೇಷಾದ್ರಿ 

ಪುರದಲ್ಲಿ. ಕಾಲೇಜಿನಲ್ಲಿ ಆಟವಾಡಿಕೊಂಡು ಬಂದಿದ್ದ. ದಣುವಾರಿಸಿಕೊಳ್ಳು 

ವುದಕ್ಕೋಸ್ಕರ ಮನೆಯ ಮುಂದಿನ ಹೊದೋಟನಲ್ಲಿ ಒಂದು ಸುಖಾಸನ 

(Easy Chair) ದಲ್ಲಿ ಕುಳಿತಿದ್ದ. ಸಲ್ಪ ಹೊತ್ತು ಸುಮ್ಮನಿದ್ದು "ಶಾರಿ"  

ಎಂದು ಕೂಗಿದ. ಉತ್ತರ ಬರಲಿಲ್ಲ. ಪುನಃ “ಶಾರಿ” ಎಂದು ಕರೆದೆ. ಶಾರಿ 

ಒಳಗಿನಿಂದ ಜಾಗ್ರತೆಯಾಗಿ ನಡೆದು ಬಂದಳು. ಶಾರಿ ಅವನ ಹೆಂಡತಿ. 

ಅವಳ ಹೆಸರು ಶಾರದೆ; ಇವನಿಗೆ ಶಾರಿ. ಮದುವೆಯಾಗಿ ಎರಡು ವರ್ಷ 

ಗಳಾಗಿತ್ತು. ಇಷ್ಟು ದಿನ ಅವಳು ಇಲ್ಲಿ ಇರಲಿಲ್ಲ. ತೌರುಮನೆಗೆ ಹೋಗಿದ್ದ 

ವಳು ಬಂದು ಎಂಟು ದಿನಗಳಾಗಿದ್ದುವು ಅಷೆ. ಶಾರದೆ ಬಂದು, ನಿರಿಗಳನ್ನು 

ಸರಿಮಾಡಿಕೊಂಡು, ಮುಂದಲೆಯನ್ನು ಎಡಗೈಯಲ್ಲಿ ಸವರಿಕೊಳ್ಳುತ್ತ ಬಲ 

ಗೈಯಿಂದ ಸೆರಗನ್ನು ಮೇಲಕ್ಕೆಳೆದುಕೊಂಡು, ಅವನ ಕುರ್ಚಿಯ ಹಿಂದುಗಡೆ 


೮೬ ಕೆಲವು ಕಥೆಗಳು 


ನಿಂತುಕೊಂಡು, ತಗ್ಗಿದ ಧ್ವಥಿಯಿಂದ “ಏನು ಕರೆದದ್ದು?" ಎಂದು 

ಕೇಳಿದಳು. 


“ಆದೇನು? ಅಲ್ಲೇ ನಿಂತೆ! ಮುಂದಕ್ಕೆ ಬರಬಾರದೆ?” 


“ಉಹು! ನಾನೊಲ್ಲೆ! ನೀವು ಹಿಡಿದುಕೊಳ್ಳುತ್ತೀರಿ, ಯಾರಾದರೂ 

ನೋಡಿದರೆ ಏನು ಗತಿ!” 


“ಇಲ್ಲ; ಏನು ಮಾಡೋಲ್ಲ ಬಾ.” 


ಶಾರದೆ ಅವನ ಮುಂದುಗಡೆ ಬಂದು ಅವನ ಕೈಗೆ ಸಿಕ್ಕದಷ್ಟು ದೂರ 

ದಲ್ಲಿ ನಿಂತಳು. ಅವಳಿಗೆ ಒಳಗೊಳಗೇ ನಗು. ದೇಹವೆಲ್ಲಾ ಬಳಕುತ್ತಿತ್ತು. 

ಕೃಷ್ಣಮೂರ್ತಿ ಏಳುವನನಂತೆ ನಟಸಿದ. ಶಾರದೆ ಹೆದರಿ ಒಂದಕ್ಕೆ ಸರಿದು 

“ಅಯ್ಯೋ! ಬೇಡಿ, ನಿಮ್ಮ ದಮ್ಮಯ್ಯ ಸುಮ್ಮನೆ ಇರಿ! ಎಂದು ಧ್ವನಿ 

ಯನ್ನು ಕುಗ್ಗಿಸಿ ಹೇಳಿದಳು. 


"ಅಯ್ಯೋ! ಬೆಪ್ಪೆ! ಇದ್ಯಾಕೆ ಹೀಗಾಡ್ತೀಯೆ ! ಒಳಗೆ ಹೋಗಿ ಒಂದು 

ಲೋಟ ನೀರು ತೆಗೆದುಕೊಂಡು ಬಾ.” 


ಶಾರದೆ ಒಳಗೆ ಹೋಗಿ ನೀರು ತಂದಳು. ಅವಳು ತರುವುದರೊಳಗೆ 

ಕೃಷ್ಣಮೂರ್ತಿ ಇನ್ನೊಂದು ಕುರ್ಚಿಯನ್ನು ತರಿಸಿ ತನ್ನ ಪಕ್ಕದಲ್ಲೇ ಇಡಿ 

ಸಿದ್ದ. ಶಾರದೆ ಗಂಡನಿಗೆ ನೀರು ಕೊಟ್ಟು ಇನ್ನೊಂದು ಕುರ್ಚಿಯನ್ನು ನೋಡಿ 

ಸ್ಪಲ್ಪ ಆಶರ್ಯವನ್ನು ನಟಸಿ “ಇದೇನು? ಇನ್ನೊಂದು ಕುರ್ಚಿ ಯಾರಿಗೆ?” 

ಎಂದು ಕೇಳಿದಳು. 


"ರಾಣಿಯವರಿಗೆ.?' 

"ಸರಿ! ಚೆನ್ನಾಯ್ತು! ನಾನು ಕುಳಿತುಕೊಳ್ಳೋದಿಲ್ಲ.? 

“ನೀನೇ ಏನು ರಾಣಿ?” 

“ರಾಣಿಯೋ ಗಿಣಿಯೋ ನಾನೊಲ್ಲೆ!” 

“ಹಾಗಾದಕೆ ನನಗೆ ಈ ನೀರು ಬೇಡ.” 

“ಅಯ್ಯೋ! ಕುಡೀರೀ ಅಂದ್ರೆ! 

“ಅಯ್ಯೋ ! ಕುಳಿತುಕೊಳ್ಳೀ ಅಂದ್ರೆ " 


ನಾವೂ ಹಾಗೆಯೇ! ೮೭ 


"ಹು! ಕುಳಿತುಕೊಂಡೆ!” 

"ಹು! ಕುಡಿದೆ!” 


ಇಬ್ಬರೂ ಮೆಲಗೆ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿ ದರು. ಆಗಾಗ 

ಶಾರದೆ ಮನೆಯ ಕಡೆ ತಿರುಗಿ ನೋಡುತ್ತಿದ್ದಳು. ಮಧ್ಯೆ ಮಧ್ಯೆ ಶಾರದೆ 

ಮೆಲ್ಲನೆ ನಗುತ್ತಿದ್ದಳು. ಅದು ಸುಳಿಸುಳಿದು ಹರಿವ ಸಣ್ಣ ನದಿಬಂಡೆಗಳ 

ಸಂದಿನಲ್ಲಿ ಮಾಡುವ ಮೆಲ್ದನಿಯನ್ನು ಹೋಲುತ್ತಿತ್ತು. 


""ಶಾರೀ, ನಾನು ಬರೆದ ಕಥೆಯನ್ನು ಓದಿದಿಯಾ? 


“ಹು! ಓದಿದೆ ಚೆನ್ನಾಗಿದೆ! ಆದರೆ ಒಳ್ಳೇ ಕೆಲಸ ನಿಮ್ಮದು! ನಾವು 

ನಾವು ಮಾತಾಡಿಕೊಂಡಿದ್ದೆಲ್ಲಾ ಬರೆದುಬಿಟ್ಟಿದ್ದೀರಲ್ಲ! ಚೆನ್ನಾಯ್ತು!” 


"ನಿನ್ನ ಮಾತು ಅಷ್ಟು ಚೆನ್ನ! ಅಷ್ಟು ಮುದ್ದು !" 


“ಹೂ! ಹೂ! ಈಗ ಹಾಗೇ ಹೇಳ್ಕೋಬೇಕು! ನಿರ್ವಾಹವಿಲ್ಲ!?*' 


“ಆಗಲಿ, ಅದರದ್ದು ಇನ್ನೊಂದು “ಕಾಪಿ” ಮಾಡ್ತೀಯಾ?” 


"ಯಾಕೆ? 


“ಕಾಲೇಜಿನಲ್ಲಿ ನಮ್ಮ “ಪ್ರಬುದ್ಧ ಕರ್ನಾಟಕ.” ಇಲ್ವೇ, ಆ ಸಂಘ 

ದವರು ಒಂದು "ಸಣ್ಣ ಕಥೆಗಳ ಸ್ಪರ್ಧೆ' ಇಟ್ಟಿದ್ದಾರೆ. ಎಲ್ಲಾವುದಕ್ಕಿಂತ 

ಚಿನ್ನಾಗಿರುವುದಕ್ಕೆ ಮೆಡ್ಲು ಕೊಡ್ತಾರೆ. ಅದಕ್ಕೆ ನನ್ನ ಕಥೇನೂ ಕಳ್ಸೋಣಾ 

ಅಂತ."


"ಹು ಆಗಲಿ.” 


ಇಷ್ಟು ಮಾತು ಆಗಿದ್ದಾಗ ಹೊರಗೆ ಯಾರೋ “ಕೃಷ್ಣ ಮೂರ್ತಿ !"

ಎಂದು ಕೂಗಿದ ಹಾಗಾಯಿತು. ಶಾರದೆ ಬೆಚ್ಚಿ "ಅಕೋ! ಯಾರೋ 

ನಿಮ್ಮನ್ನು ಕೂಗ್ತಾರೆ ನೋಡಿ” ಎಂದು ಹೇಳಿ ಸರ್ರನೆ ಎದ್ದು ಮನೆಯ ಕಡೆ 

ಮಿಂಚಿದಳು. ಕೃಷ್ಣಮೂರ್ತಿಯ ಮನಸ್ಸಿಗೆ ಬಹಳ ಜುಗುಪ್ಸೆಯಾಯಿತು. 

ಬಹಳ ಬೇಸರಸಟ್ಟು ಕೊಂಡು ಬಂದು ನೋಡಿದ. ಗುಂಡಪ್ಪ ಬಂದಿದ್ದ. 

ಗುಂಡಪ್ಪ ಅವನ ಪ್ರಾಣಸ್ನೇಹಿತ. ಅವನನ್ನು ನೋಡಿ "ಬಾ, ಗುಂಡ, 

ಕೂತುಕೋ. ಏನು ಬಂದೆ?” ಎಂದು ಕೇಳಿದ. ಇಬ್ಬರೂ ಹೋಗಿ 


೮೮ ಕೆಲವು ಕಥೆಗಳು 


ತೋಟದಲ್ಲಿದ್ದ ಕುರ್ಚಿಗಳ ಮೇಲೆ ಕುಳಿತುಕೊಂಡರು. ಗುಂಡ ಅವನ ಮಾತಿಗೆ 

ಉತ್ತರವಾಗಿ “ವೈ. ಯಂ. ಸಿ. ಎ. ಗೆ ಹೋಗಿದ್ದೆ. ಈಗ ತಾನೇ ಅಲ್ಲಿಂದ 

ಬರ್ತಾ ಇದ್ದೇನೆ. ಹಾಗೇ ನೋಡಿಕೊಂಡು ಹೋಗೋಣ ಎಂತ ಬಂದೆ,” 

(ನಗುತ್ತ) “ಕತ್ತಲೆ, ಕಾಣಿಸಲಿಲ್ಲ ಕೂಗಿಬಿಟ್ಟಿ! ಆಮೇಲೆ ನನ್ನ ತಪ್ಪು 

ಗೊತ್ತಾಯ್ತು!” ಎಂದು ಹೇಳಿದ. 


"ಸರಿ ತಪ್ಪೇನು ಬಂತು!" 


“ತಪ್ಪಿಲ್ಲ ತಾನೆ!! ಹೋಗಲಿ ಬಿಡು. "ಸ್ಪರ್ಧೆ'ಗೆ ಕಥೆ ಬರೆದೆಯಾ?” 


“ಹೂ, ಏನೋ ಒಂದು ಬರೆದಿದ್ದೇನೆ; ಶಾರೀ ಅದರ 'Fair copy’ 

ಮಾಡುತ್ತಿದ್ದಾಳೆ.” 


“ಸರಿ! ಸರಿ! ಹಾಗಾದರೆ ಆದು 'Fair' ಆಗೇ ಇರಬೇಕು. 


“ನೀನು ಬರೀಲಿಲ್ವೆ ?” 


"ನನಗೆ ಏನೋ ಸೋಮಾರಿತನ ಕಣೋ! ಈಗ ಒಂದು ತಿಂಗಳ 

ಹಿಂದೆಯೇ ಬರೆಯೋಣ ಅಂದುಕೊಂಡು ಒಂದು ಕಾಗದದ ಮೇಲೆ ಏನೇನೋ 

ಗುರುತು ಹಾಕಿಟ್ಟಿದ್ದೆ. ಅದೆಲ್ಲಿ ಹೋಯಿತೋ ದೇವರೇ ಬಲ್ಲ. ಕಳೆದೇ 

ಹೋಯಿತೋ ಏನೋ! ಒಂದೆರಡು ಸಲ ಹುಡುಕಿದೆ, ಸಿಕ್ಕಲಿಲ್ಲ. ಹಾಳಾ 

ಯಿತು! ಎಂದು ಸುಮ್ಮನಾದೆ.? 


“ಇನ್ನೊಂದು ಸಲ ಚೆನ್ನಾಗಿ ಹುಡುಕು? 


“ನೀನು ನನ್ನ ರೂಂ ನೋಡಿದರೆ ಏನು ಹೇಳುವಿಯೋ! ಅದೊಂದು 

ಗೊಬ್ಬರದ ಗುಂಡಿಯಾಗಿದೆ. ಹೋದರೆ ಹೋಯಿತು ಬಿಡೋ!” 


“ಲೋ, ಐವತ್ತು ರೂಪಾಯಿ ಮೆಡ್ಲು!” 


“ನಿನಗೇ ಇರಲಪ್ಸ ಅದೆಲ್ಲಾ. ಆ ಮೆಡ್ಲು ನಿನಗೆ ಬಂದರೆ ಒಂದು 

ಸಾರ್ಥಕ.” 


“ಅದೇನು?” 


"Fair copy" ಮಾಡ್ತಾರಲ್ಲಾ ಅವರ ಕೊರಳಿಗೆ ಹಾಕಬಹುದು!” 


“ಬಂದ ಕಾಲಕ್ಕೆ ನೋಡೋಣಂತೆ.” 



ನಾವೂ ಹಾಗೆಯೇ! ೮೯ 



“ನಿನಗೆ ಬರಬೇಕು ಅನ್ನೋದೆ ನನ್ನ ಹಾರೈಕೆ. ಇನ್ನು ಹೊತ್ತಾಯ್ತು. 

ಹೊರಡ್ತೇನೆ. 


"ಹು, ಹೊರಡು.” 


ಇಬ್ಬರೂ ಎದ್ದು ನಿಂತುಕೊಂಡರು. ಗುಂಡ ಹೊರಟ. ಕೃಷ್ಣ 

ಮೂರ್ತಿ ಅಷ್ಟು ಹೊತ್ತಿಗೆ ಏನನ್ನೋ ಜ್ಞಾಪಿಸಿಕೊಂಡು ಗುಂಡನನ್ನು ಕೂಗಿ, 

ಲೋ ಗುಂಡ! ನಾಳೆ ಬೆಳಿಗ್ಗೆ ನಿನ್ನ ರೂಮಿಗೆ ಬರುತ್ತೇನೋ, ನನ್ನ 

‘Bradley’ ಬೇಕು. ಅದನ್ನ ಏನಾದರೂ ಓದಿದೆಯೇನೋ ?” ಎಂದ. 


"ಓದೋದೇ ! ಆಗಲಿ ಬೆಳಿಗ್ಗೆ ಬಾ. ಕೊಡುತ್ತೇನೆ. ನಿನ್ನಿಂದ ತೆಗೆದು 

ಕೊಂಡದ್ದು ಒಂದೇ ಅದನ್ನು ಕೈಯಿಂದ ಮುಟ್ಟಿಯೂ ಇಲ್ಲ” ಹೀಗೆಂದು ಹೇಳಿ 

ಗುಂಡ ಹೊರಟುಹೋದ. 


ಕೃಷ್ಣಮೂರ್ತಿ ಮನೆಯೊಳಕ್ಕೆ ಹೋದ. 


೨ 


ಮಾರನೆಯ ದಿನ ಬೆಳಿಗ್ಗೆ ಕೃಷ್ಣಮೂರ್ತಿ ಗುಂಡಪ್ಪನ ರೂಮಿಗೆ 

ಹೋದ. ಗುಂಡಪ್ಪ ಇನ್ನೂ ಎದ್ದೇ ಇರಲಿಲ್ಲ, ಕೃಷ್ಣಮೂರ್ತಿನೇ ಹೋಗಿ 

ಎಬ್ಬಿಸಿದ. ರೂಮು ಕಳ್ಳರು ಬಿದ್ದ ಮನೆಯ ಹಾಗೆ ಇತ್ತು. ಪುಸ್ತಕಗಳೂ, 

ಬಿಡಿಬಿಡಿ ಹಾಳೆಗಳೂ ನೆಲದ ಮೇಲೂ ಮೇಜಿನ ಮೇಲೂ ಚಿಲ್ಲಾಪಿಲ್ಲಿ ಯಾಗಿ 

ಬಿದ್ದಿದ್ದುವು. ಬಟ್ಟೆ ಬರೆಗಳ ಸ್ಥಿತಿಯೂ ಹಾಗೆಯೇ. ಕೃಷ್ಣಮೂರ್ತಿ ಈ 

ರಂಗವನ್ನು ನೋಡಿ, ""ಗೊಬ್ಬರದ ಗುಂಡಿಯೇ ! " ಎಂದುಕೊಂಡ. ಗುಂಡ 

ನನ್ನು ನೋಡಿ "ಇದೇನೋ. ಗುಂಡ! ಇಷ್ಟೊಂದು ಗಲೀಜು ಮಾಡಿಬಿಟ್ಟ 

ದ್ದೀಯೆ | ಎಂದು ಕೇಳಿದ. 


ಗುಂಡ--"ನಾನು ಆಗಲೇ ಹೇಳಲಿಲ್ರೇನೋ? ಎಲ್ಲಾ ಆ ಕೈಹಿಡಿ 

ದವಳ ಮಹಿಮೆ!” 


“ನನ್ನ ಪುಸ್ತಕ ಎಲ್ಲಿ?” 


"ಅದೋ ನೋಡು ಆ ಗೂಡಿನಲ್ಲಿ ಬಿದ್ದಿದೆ.? 



೯೦ ಕೆಲವು ಕಥೆಗಳು 



ಕೃಷ್ಣಮೂರ್ತಿ ಪುಸ್ತಕವನ್ನು ತೆಗೆದುಕೊಂಡು ಅದರ ಮೇಲಿದ್ದ 

ಧೂಳನ್ನು ಒರಸಿ ಗುಂಡನನ್ನು ಕುರತು “ಏಳೋ, ಕೋಟು ಹಾಕಿಕೋ 

ಸ್ವಲ್ಪ ಕಾಫಿ ಕುಡಿದುಕೊಂಡು ಬರೋಣ” ಎಂದ. ಗುಂಡ ಅಂಗಿಹಾಕಿ 

ಕೊಂಡು ಸಿದ್ಧನಾದ. ಇಬ್ಬರೂ ಹೋಟಲಿನ ಕಡೆಗೆ ಹೊರಟರು. ಅಲ್ಲಿ 

ಮುಗಿದನಂತರ ಕೃಷ್ಣಮೂರ್ತಿ ಗುಂಡಪ್ಪನನ್ನು ಅವನ ರೂಮಿನ ಹತ್ತಿರ 

ಬಿಟ್ಟು ತನ್ನ ಮನೆಗೆ ಬಂದ. 


ಆ ದಿನ ರಾತ್ರಿ ಕೃಷ್ಣಮೂರ್ತಿ ತನ್ನ ಕೊಠಡಿಯಲ್ಲಿ ಒಬ್ಬನೇ ಕುಳಿತು 

ಕೊಂಡು ಏನನ್ನೋ ಬರೆಯುತ್ತಿದ್ದ. ಒಳಗಿನಿಂದ ಬಾಗಿಲ ಅಗಳಿ ಹಾಕಿದ್ದ. 

ಅವನು ಬರೆಯುತ್ತಿದ್ದಾಗ ಮಧ್ಯೆ ಬಾಗಿಲನ್ನು ತಟ್ಟಿದ ಹಾಗಾಯಿತು. ಕೃಷ್ಣ 

ಮೂರ್ತಿ ಕುಳಿತಿದ್ದ ಹಾಗೆಯೇ ಬಾಗಿಲ ಕಡೆಗೆ ಮುಖವನ್ನು ತಿರುಗ 

ಯಾರು?” ಎಂದು ಕೇಳಿದ. ಉತ್ತರ ಬರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು 

ಪುನಃ ತಟ್ಟಿದ ಹಾಗಾಯಿತು. ಕೃ ಷ್ಣಮೂರ್ತಿ ಸ್ವಲ್ಪ ಸಿಟ್ಟನಿಂದ “ಯಾರದು?” 

ಎಂದು ಮೊದಲಿಗಿಂತ ಗಟ್ಟಿಯಾಗಿ ಕೇಳಿದ. ಹೊರಗೆ ಕೈಬಳೆಗಳ ಸದ್ದು 

ಕೇಳಿಸಿತು. ಜೊತೆಗೆ "ನಾವು" ಎಂದು ಉತ್ತರ ಬಂತು. ಅದೆಲ್ಲಿ ಹೋಯಿ 

ತೋ ಅವನ ಸಿಟ್ಟೆಲ್ಲಾ! ಜಗ್ಗನೆ ಎದ್ದು ಬಾಗಿಲನ್ನು ತೆರೆದರೆ ಹೊಸ್ತಲಿನು 

ಆಚೆ ಅವನ ಚೆಲ್ವಿನ ಶಾರಿ. ಮುದ್ದಾದ ಮುಖದ ಮೇಲೆ ಮುಗುಳ್ನಗೆಯ 

ಸುಳಿ; ಬೇಸಿಗೆಯ ಬೆಳದಿಂಗಳ ರಾತ್ರೆಯಲ್ಲಿ ಅಡಗಿದ ಚಂದ್ರನ ಅಮೃತ 

ದಿಂದ ತೋಯ್ದ ಕಾದಂಬಿನಿಯ ಅಂಚನ್ನು ನೆನಪಿಗೆ ತರುತ್ತಿತ್ತು. ಅವಳ 

ಎಡಗೈಯಲ್ಲಿ ಓಂದು ಬೆಳ್ಳಿಯ ತಟ್ಟೆ. ಅದರ ಒಂದು ಭಾಗದಲ್ಲಿ ಎರಡು 

ಚಪ್ಪರದ್ರಾಕ್ಷಿಯ ಗೊಂಚಲು, ಇನ್ನೊ೦ದು ಭಾಗದಲ್ಲಿ ತಾಂಬೂಲ. ಬಲ 

ಗೈಯಲ್ಲಿ ಒಂದು ಬಟ್ಟಲು ಹಾಲು. 


ಶಾರದೆ ಸ “ಒಳಗೆ ಬರಬಹುದೆ? ಸಿಟ್ಟಿನಲ್ಲಿರುವ ಹಾಗೆ 

ಕಾಣುತ್ತೆ !?' ಎಂದಳು. 


ಶಾರದೆ ಒಳಗೆ ಬಂದಳು. ಕೃಷ್ಣಮೂರ್ತಿ ಪುನಃ ಬಾಗಿಲನ್ನು ಹಾಕಿ 

ಕೊಂಡು ಮಂಚದ ಮೇಲೆ ಹೋಗಿ ಕುಳಿತುಕೊಂಡ. ಶಾರದೆ ತಟ್ಟೆಯನ್ನೂ 

ಬಟ್ಟಲನ್ನೂ ಮೇಜಿನ ಮೇಲೆ ಇಟ್ಟು, ಅದರ ಮೇಲಿದ್ದ ಕೈ ಬರಹದ ಕೆಲವು 

ಹಾಳೆಗಳನ್ನು ನೋಡಿ "ಇದೇನು? ಇನ್ನೊಂದು ಕಥೆ ಬರೆವ ಹಾಗಿದೆಯಲ್ಲ?? 


ನಾವೂ ಹಾಗೆಯೇ! ೯೧ 


ಎಂದು ಕೇಳಿದಳು. ಕೃಷ್ಣಮೂರ್ತಿ ಕೂಡಲೆ ಉತ್ತರ ಕೊಡಲಿಲ್ಲ. ಸ್ವಲ್ಪ 

ಹೊತ್ತು ಸುಮ್ಮನಿದ್ದು "ಹೌದು; ಇನ್ನೊಂದು ಕಥೆ ಬರೀತಾ ಇದ್ದೇನೆ " 

ಎಂದು ಹೇಳಿದ. ಶಾರದೆ ಕುತೂಹಲದಿಂದ “ಯಾವಾಗ ಮುಗಿಯುತ್ತೆ?” 

ಎಂದು ಕೇಳಿದಳು. 


“ಇವತ್ತೇ ಮಲಗುವುದಕ್ಕೆ ಮುಂಚೆ ಮುಗಿಸೋಣ ಅಂತೆ. ಆದರಂತೂ 

ಸರಿ; ಇಲ್ಲದೇ ಇದ್ದರೆ ನಾಳೆಯಾದರೂ ಮುಗಿಸಬೇಕು.” 


ಶಾರದೆ ಹತ್ತಿರ ಹೋಗಿ ಅವನ ಪಕ್ಕದಲ್ಲಿ ಕುಳಿತುಕೊಂಡು ಅವನ 

ಭುಜವನ್ನು ಮೆಲ್ಲಗೆ ಅಲುಗಿಸುತ್ತ “ನಾನೂ ಓದಬೇಕು ಆ ಕಥೇನ? ಎಂದು 

ಮೆಲ್ಲಗೆ ಹೇಳಿದಳು. 


“ಇನ್ನೂ ಪೂರ್ತಿಯಾಗಿಲ್ಲ; ಈಗಲೇ ಏನು ಅವಸರ?” 


“ಎಷ್ಟಾಗಿದೆಯೋ ಅಷ್ಟೇ ಆಯಿತು?” 


“ಉಹು! ಬೇಡ. ಈಗಿನ್ನೂ ಹರಕು ಹರಕಾಗಿದೆ. ಎಲ್ಲಾ ಬರೆದ 

ಮೇಲೆ ಓದಿದರೆ ಸೊಗಸು!” 

ಶಾರದೆ, ಧ್ವನಿಯನ್ನು ಸ್ವಲ್ಪ ರಾಗಮಾಡಿ, “ಊ, ನಾ-ಬಿ-ಡೊ-ಲ್ಲಾ” 

ಎಂದಳು. 


“ಏ-ನ್ಮಾ-ಡ್ತೀ-ಯಾ?” 


“ಏನೋ!” 


“ನೋಡು ನೀನು ಒಳ್ಳೇ ಹುಡುಗಿ, ಹಟ ಮಾಡಬೇಡ” (ಮೇಜಿನ 

ಮೇಲಿದ್ದ ತಟ್ಟೆಯನ್ನು ನೋಡಿ) “ಎಲ್ಲೀದು ದ್ರಾಕ್ಷೆ?” 


“ಆಚೆ ಬೀದೀಲಿ ಸೋನಮ್ಮನವರ ಮನೆಗೆ ಹೋಗಿದ್ದೆ. ಅವರು 

ಕೊಟ್ಟಿದ್ದು” ದ್ರಾಕ್ಷೆಹಣ್ಣುಗಳನ್ನು ತಿಂದುದಾಯಿತು. ಶಾರದೆಗೂ ತಿನ್ನು 

ಎಂದು ಹೇಳಿದ. ಅವಳು ತಿನ್ನೋಲ್ಲ-ಎಂದು ಹಟಮಾಡಿದಳು. ಅವನು 

ಬಿಟ್ಟರೆ ಸರಿ! ತಿನ್ನಿಸಿದ. ಆಮೇಲೆ ತಾಂಬೂಲ, ಆವಾಗ ಒಂದಿಷ್ಟು ಜಗಳ. 

ಇದೇನು ನಿಮ್ಮಲ್ಲಿ ಅನೇಕರಿಗೆ ಹೊಸದಲ್ಲ. ಗಟ್ಟಿಯಾಗಿ ಜಗಳ ಮಾಡುವ 

ಹಾಗಿಲ್ಲ. ಹೊರಗಿನವರಿಗೆಲ್ಲಾ ಕೇಳಿಸಿಬಿಡುತ್ತದೆ! ಜಗಳಮಾಡದೆ ಇರುವು 


೯೨ ಕೆಲವು ಕಥೆಗಳು 


ದಕ್ಕೆ ಮನಸ್ಸಿಲ್ಲ. ಹೇಗೋ ಆ ತಾಂಬೂಲದ ಜಗಳ ಮುಗಿದ ಹೊತ್ತಿಗೆ, 

ಶಾರದೆಯ ತುರುಬು ಬಿಚ್ಚಿ ಕೂದಲು ಕೆದರಿ ಅವಳು ಮುಡಿದುಕೊಂಡಿದ್ದ 

ಹೂವೆಲ್ಲಾ ಚಲ್ಲಾಪಿಲ್ಲಿಯಾಗಿ ನೆಲದ ಮೇಲೆ ಉದುರಿದ್ದುವು. ಕೃಷ್ಣ 

ಮೂರ್ತಿಯ ಷರಟನ ಜೋಬು ಕರಿದು, ಅವನ ಬಲಮುಂಗೈ ಮೇಲೆ ಅವಳ 

ಹಲ್ಲು ಸ್ವಲ್ಪ ಊರಿದ ಗುರುತಿತ್ತು. ಜಯಲಕ್ಷ್ಮಿ ಯಾರನ್ನು ಒಲಿದಳೋ 

ಹೇಳುವುದು ಕಷ್ಟ. ಸೋಲುವುದಕ್ಕೋಸ್ಕರ ಪ್ರಾರಂಭಿಸಿದ ಜಗಳ. ಶಾರದೆ 

ತುರುಬನ್ನು ಸುತ್ತಿಕೊಂಡು, ಕೆದರಿದ್ದ ಮುಂಗುರುಳುಗಳನ್ನು ಉಗುರ್ಗೊನೆ 

ಯಿಂದ ತಿದ್ದಿಕೊಳ್ಳುತ್ತ, ಸೀರೆಯ ಸೆರಗನ್ನೂ ನಿರಿಯನ್ನೂ ಸರಿಪಡಿಸಿ 

ಕೊಳ್ಳುತ್ತ, ನಗುತ್ತ, ನಗುತ್ತ, ಪುನಃ ಗಂಡನ ಸಮೀಪಕ್ಕೆ ಬಂದಳು. ಕೃಷ್ಣ 

ಮೂರ್ತಿ ಇವಳು ಬರುವುದನ್ನು ನೋಡಿ, ""ಬೇಡಾ!- ಬೇಡಾ!'' ಎಂದು 

ಓರೆಗಣ್ಣಿನಿಂದ ನೋಡಿದ. ಅವಳೂ ಅವನನ್ನು ಓರೆಗಣ್ಣಿನಿಂದ “ನೋಡುತ್ತ 

ಯಾಕೆ?- ಯಾಕೇ?” ಎಂದಳು. 


“ನೀನು ಹತ್ತಿರ ಇದ್ದರೆ ಕಥೆ ಬರೆಯೋಕೆ ಮನಸ್ಸು ಎಲ್ಲಿಂದಾ ತರಲಿ?” 


ಹಾಗಾದರೆ ಈವೊತ್ತು ಬೇಡ. ಇನ್ನೆಂದಾದರೂ ಬರೆದರೆ ಆಯ್ತು.? 


“ಸರಿ! ಚೆನ್ನಾಯ್ತು! ಈವನೊತ್ತೇನೋ ಕಥೆ ಬರೆಯೋಣಾ ಅಂತ 

ಮನಸ್ಸು ಹುಟ್ಟಿದೆ. ಈವೊತ್ತು ಬಿಟ್ಟರೆ ಇನ್ನೆಷ್ಟು ದಿನಕ್ಕೋ ಪುನಃ ಈ 

ಮನಸ್ಸು ಬರಬೇಕಾದರೆ! ಇಲ್ಲಾ, ಈವೊತ್ತೆ ಬರೆದು ಬಿಡಬೇಕು.” 


ಶಾರದೆ ಸುಳ್ಳು ಸುಳ್ಳೇ ಸ್ವಲ್ಪ ಸಿಟ್ಟನ್ನು ತೋರಿಸಿ “ಹಾಗಾದರೆ 

ನೀವೊಬ್ಬರೇ ಬರ್ಕೊಳ್ಳಿ-ನಾನು ಈವೊತ್ತು ಇಲ್ಲಿರೋಲ್ಲ-ಹೋಗ್ತೇನಿ” ಎಂದು 

ಹೇಳಿ ಬಾಗಿಲ ಕಡೆಗೆ ಹೊರಟಳು. ಕೃಷ್ಣಮೂರ್ತಿ ತಟ್ಟನೆ ಎದ್ದುಹೋಗಿ 

ಅವಳನ್ನು ಹಿಡಿದುಕೊಂಡು- “ಇಲ್ಲ, ಇಲ್ಲ ಬಾ- ಈವೊತ್ತು ಕಥೆ ಬೇಡ. 

ಇದೇಕೆ ಇಷ್ಟೊಂದು ಕೋಪ! '' ಎಂದು ಕರೆದುಕೊಂಡು ಹೋಗಿ ಮಂಚದ 

ಮೇಲೆ ಕೂರಿಸಿಕೊಂಡ. ಅವಳಿಗೆ ಒಳಗೊಳಗೇ ನಗು- ಕೃಷ್ಣಮೂರ್ತಿ 

ಅವಳನ್ನು ನೋಡುತ್ತ “ಹೀಗೆ ಮಾಡೋಣ; ನಾನು ಕಥೆ ಮುಗಿಸುವ 

ಹೊತ್ತಿಗೆ ಬಹಳ ಹೊತ್ತಾಗುತ್ತದೆ. ನೀನು ಮಲಗಿಕೋ, ನಾನು ಕಥೆ 

ಮುಗಿಸುತ್ತಲೇ ನಿನ್ನನ್ನು ಎಬ್ಬಿಸುತ್ತೇನೆ. . ನಿನಗೆ ಆಗ ನಿದ್ದೆ ಕಟ್ಟಿ ಓದುವುದ 


ನಾವೂ ಹಾಗೆಯೇ! ೯೩ 


ಕ್ಕಾದರೆ ಓದು-ಇಲ್ಲದೆ ಇದ್ದರೆ ನಾಳೆ ಬೆಳಿಗ್ಗೆ ಅಗತ್ಯವಾಗಿ ಓದಬಹುದು. 

ಮಹಾರಾಣಿಯರಲ್ಲಿ ಇದೀ ನನ್ನ ವಿಜ್ಞಾಸನೆ” ಎಂದು ನಗುತ್ತ ಹೇಳಿದ. 

ಅವಳು ನಿರ್ವಾಹವಿಲ್ಲದೆ ಒಪ್ಪಿದಳು. ಕೃಷ್ಣಮೂರ್ತಿ ಕಥೆ ಬರೆವುದಕ್ಕೆ 

ಕುಳಿತ. ಶಾರದೆ ಮಲಗಿಕೊಂಡಳು. ಆದರೆ ನಿದ್ದೆ ಇಲ್ಲ. ಸ್ವಲ್ಪ ಹೊತ್ತು 

ಬಿಟ್ಟುಕೊಂಡು “ಆಯಿತೇ? ಎಂದು ಕೇಳಿದಳು. ಕೃಷ್ಣ ಮೂರ್ತಿಗೆ 

ನಗು ಬಂತು. ಅವನು "ಹು, ಹನ್ನೆರಡು ಗಂಟಿ ಆಯಿತು” ಎಂದು 

ಉತ್ತರಕೊಟ್ಟ. 


ಕೃಷ್ಣಮೂರ್ತಿ ಬೇಗಬೇಗನೆ ಬರೆದುಕೊಂಡು ಹೋಗುತ್ತಿದ್ದ. ಮಾತು 

ಗಳೂ, ಭಾವಗಳೂ, ಯೋಚನೆಗಳೂ ನಾನು ಮುಂದೆ ತಾನು ಮುಂದೆ  

ಎಂದು ಬರುತ್ತಿದ್ದುವು. ಆವನ ಲೇಖನಿಗೆ ತಡೆಯೇ ಇಲ್ಲ. ಬರೆದ ಹಾಳೆ 

ಗಳನ್ನು ಜೋಡಿಸುವುದಕ್ಕೂ ಪುರಸತ್ತಿಲ್ಲ. ಬರೆದ ಹಾಗೆಲ್ಲಾ ಪಕ್ಕಕ್ಕೆ ಎಸೆ 

ಯುತ್ತಿದ್ದ. ಸುಮಾರು ರಾತ್ರಿ ಎರಡು ಗಂಟಿಯ ಹೊತ್ತಿಗೆ ಕಥೆಯನ್ನು 

ಬರೆದು ಮುಗಿಸಿದ... ಆಮೇಲೆ ಹಾಳೆಗಳನ್ನೆಲ್ಲಾ ಸರಿಯಾಗಿ ಜೋಡಿಸಿ 

ಹೊಲಿದು, ಅದರ ಮೊದಲನೆಯ ಹಾಳೆಯ ಮೇಲೆ “ಹಳೆಯ ಕನಸು” 

ಎಂದು ಬರೆದ. ಅದು ಅವನು ಆ ಕಥೆಗೆ ಕೊಟ್ಟ ಹೆಸರು. ಅದರ ಕೆಳಗೆ 

“ನನ್ನ ಶಾರದೆಗೆ” ಎಂದು ಬರೆದು, ಪುಸ್ತಕವನ್ನು ಸುತ್ತಿ, ಮೆಲ್ಲಗೆ ಮಂಚದ 

ಸಮಾಪಕ್ಕೆ ಹೋಗಿ, ಶಾರದೆಗೆ ಎಚ್ಚರವಾಗದಂತೆ ಅವಳ ಸೆರಗಿನ ತುದಿಯಲ್ಲಿ 

ಕಟ್ಟಿ ದೀಪವನ್ನು ಆರಿಸಿ ಮಲಗಿಕೊಂಡು ನಿದ್ದೆ ಹೋದ. 


೨ 

ಮಾರನೆಯ ದಿನ ಸಾಯಂಕಾಲ. ಗುಂಡಪ್ಪ ಕೃಷ್ಣಮಾರ್ತಿ ಇಬ್ಬರೂ 

ಕಾಲೇಜಿನಿಂದ ಮನೆಯ ಕಡೆಗೆ ಬರುತ್ತಿದ್ದರು. ಕೃಷ್ಣಮೂರ್ತಿ, ತಮ್ಮ 

ಮನೆಯಲ್ಲೇ ಟೀತೆಗೆದುಕೊಂಡು ಆಮೇಲೆ ಒಟ್ಟಿಗೆ ಸುತ್ತಾಡಿಕೊಂಡು ಬರು 

ವುದಕ್ಕೆ ಹೋಗೋಣವೆಂದು ಹೇಳಿದ. ಅದೇ ಪ್ರಕಾರ ಇಬ್ಬರೂ ಅಲ್ಲಿ ಟೀ 

ಮುಗಿಸಿಕೊಂಡು ಯಶವಂತಪುರದ ರಸ್ತೆಯನ್ನು ಸೇರುವುದಕ್ಟೋಸ್ಕರ ಸಂಪಿಗೆ 

ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಗಂಧದ ಎಣ್ಣೆಯ ಕಾರ್ಪಾನೆಯವರೆಗೂ 

ಬಂದಿದ್ದರು. ಮಾತುಕತೆ ಹೆಚ್ಚಾಗಿರಲಿಲ್ಲ. ಏನಿದ್ದರೂ ಗುಂಡಪ್ಪನೇ ಆಗಾಗ 


೯೪ ಕೆಲವು ಕಥೆಗಳು 


ಮಾತಾಡುತ್ತಿದ್ದವನು. ಕೃಷ್ಣಮೂರ್ತಿ ಸುಮ್ಮನೆ "ಹುಂ, ಹುಂ” ಎನ್ನು 

ತ್ತಿದ್ದ ಅಷ್ಟೆ. ಆಗ ತಾನೇ ಸ್ವಲ್ಪ ಮಳೆ ಬಿದ್ದು, ರಸ್ತೆಯಲ್ಲಿ ಧೂಳಿಲ್ಲದೆ, 

ಗಾಳಿ ನಿರ್ಮಲವಾಗಿ ತಂಪಾಗಿ ಬೀಸುತ್ತಿತ್ತು. ನಿಧಾನವಾಗಿ ನಡೆದು 

ಹೋಗುತ್ತಿದ್ದರೂ ಕೃಷ್ಣಮೂರ್ತಿ ಏನೂ ಮಾತಿಲ್ಲದೆ ಮೌನವಾಗಿದ್ದುದನ್ನು 

ನೋಡಿ ಗುಂಡನಿಗೆ ಆಶ್ಚರ್ಯವಾಯಿತು. ಅವನು ತಾಳ್ಮೆಯನ್ನು ಬಿಟ್ಟು 

“ಲೋ, ಕಿಟ್ಟು! ಯಾಕೋ ಈ ದಿನ ಹೀಗಿದ್ದೀಯೆ ?" ಎಂದು ಕೇಳಿದ. 


“ಹೇಗಿದ್ದೇನೆ.” . 


“ಸುಮ್ಮನೆ "ಹುಂ ಗುಟ್ಟಿ ಕೊಂಡು ಮೌನಗೌರಿವ್ರತ!” 


“ರಾತ್ರಿ ಎಲ್ಲಾ ನಿದ್ದೆ ಇಲ್ಲ ಕಣೋ? 


ನಗುತ್ತ ಸರಿ!” 


“ಏನು ಸರಿ! ಬೆಸ!? 


“ಇದುವರೆಗೂ ಸರಿಯಾಗಿದ್ದೆ. ಈಗ ಯಾಕೆ ಹೀಗೆ ಎಂದರೆ "ನಿದ್ದೆ 

ಇಲ್ಲಾ? ಅಂತ ಸುಳ್ಳು ಹೇಳ್ತೀಯಲ್ಲಾ! ಇನ್ನೇನು ವಿಚಾರ?” 


“ಹೌದು, ಒಂದು ವಿಷಯ ಇದೆ. ಅದನ್ನು ಈಗಲೇ ನಿನಗೆ ಹೇಳ 

ಬೇಕೋ ಬೇಡವೋ ಎಂದು ಯೋಚಿಸುತ್ತಿದ್ದೆ. ಅಷ್ಟೆ.” 


“ಹೇಳಬಹುದು ಅಂದುಕೊಂಡ್ಯೋ ಅಥವಾ ಬಾರದು ಅಂದು 

ಕೊಂಡ್ಯೋ?" 


“ಕಥೆ ಕಳಿಸೋಕೆ ಇನ್ನೂ ಎಷ್ಟು ದಿನ ಇದೆ?” 


“ಇವತ್ತೆಷ್ಟು ತಾರೀಖು? ಏಳು--ಇನ್ನೆಂಟು ದಿನ ಇದೆ.” 


“ಹಾಗಾದರೆ ಈವೊತ್ತಿಗೆ ಏಳನೆಯ ದಿನ ನಿನಗೆ ಹೇಳುತ್ತೇನೆ.” 


“ಏನು, ಇನ್ನೊಂದು ಕಥೆ ಬರೆದೆಯೋ? ” 


“ಹೌದು ; ನಿನ್ನೆ ರಾತ್ರಿ ಪ್ರಾರಂಭಮಾಡಿ ನಿನ್ನೆ ರಾತ್ರೀನೇ ಮುಗಿಸಿ 

ಬಿಟ್ಟೆ.” 


“ಏನು? ನೀನು!-ರಾತ್ರಿ! ಕಥೆ ಬರೆಯೋದು! ಸಾಧ್ಯವಾಯಿತೇ ?"


“ಲೋ ನಿಜವಾಗಿಯೂ ಒಂದು ಕಥೆ ಬರೆದೆನೋ.'' 


“ನಿಜವಾಗಿಯೂ? "



ನಾವೂ ಹಾಗೆಯೇ! ೯೫ 



“ಸತ್ಯವಾಗಿಯೂ ; ಅದಕ್ಕೇ ನಿದ್ದೆ ಇಲ್ಲಾ ಅಂದದ್ದು? 


"ಹಾಗಾದರೆ ನೋಡಬೇಕು. ಬಹಳ ಸಂತೋಷ! ಒಂದು ರಾತ್ರಿ 

ಯಲ್ಲಿ ಮುಗಿಸಿದ ಕಥೆ ಹೇಗಿದೆಯೋ ನೋಡೋಣ!” 


"ಲೋ ಗುಂಡ, ಇನ್ನೂ ಎಂಟು ದಿನ ಇದೆಯಲ್ಲ. ನೀನೂ ಒಂದು 

ಕಥೆ ಬರೆಯಬಹುದು ಮನಸ್ಸು ಮಾಡಿದರೆ.” 


ಉಹು! ನ-ನ್ಕೈ-ಲಾ-ಗೋ-ದಿ-ಲ್ಲಾ!? 


“ಹಾಗಾದರೆ ಹೀಗೆ ಮಾಡೋಣ. ನಾನು ನಿನ್ನೆ ರಾತ್ರಿ ಬರೆದೆನೆಲ್ಲಾ 

ಅದನ್ನು ನಿನ್ನ ಹೆಸರಿನಲ್ಲಿ ಕಳಿಸು. ನನ್ನ ಹೆಸರಿನಲ್ಲಿ ನಾನು ಮೊದಲು ಬರೆ 

ದದ್ದನ್ನು ಕಳಿಸ್ಕೇನೆ. ಏನ್ಹೇಳ್ತೀಯಾ ?"


"ಉಹು! ಅದಾಗದು. ಇಲ್ಕೇಳೋ ಕಿಟ್ಟಿ. ನನಗೆ ಈ ವರ್ಷ 

ಕಳ್ಸೋಕೇ ಮನಸ್ಸಿಲ್ಲ. ಹಾಗೆ ನನಗೆ ಕಥೆ ಕಳಿಸ್ಸೇಕು, ಮೆಡ್ಲು ಹೊಡೀ 

ಬೇಕು- ಎಂದು ಮನಸ್ಸಿದ್ದಿದ್ರೆ ಅದೇನೂ ದೊಡ್ಡಲ್ಲ. ಬೇಕಾದ್ರೆ ಈಗ್ಲೇ 

ಹೋಗ್ತಾ ಹೋಗ್ತಾ ಒಂದ್ಕಥೆ ಹೇಳೇನು! ಆದ್ರೆ ಉಹು-ನನಗೆ ಮನಸ್ಸಿಲ್ಲ- 

ನೀನು ಹತ್ಕಥೆ ಬರೆದಿದ್ರೂ ನಿನ್ನ ಹೆಸರಿನಲ್ಲೇ ಕಳ್ಸು. 


""ಹಾಗಾದ್ರೆ ನಾನೂ ಕಳ್ಸೋದಿಲ್ಲ?' 


""ಮಣ್ಣು ಹೊಯ್ಕೋ! ಅಲ್ಲವೋ ಬೆಪ್ಪ! ನಾನು ಕಳಿಸ್ದೇ ಇದ್ರೆ 

ನೀನೇಕೋ ಕಳಿಸ್ಟಾರ್ದು? ನೀನು ಕಳಿಸ್ಲೇಬೇಕು! ನಾನು ಯಾಕೆ ಕಳಿಸೋಲ್ಲ 

ಗೊತ್ತೆ? ?? 


“ಯಾಕೆ? 


-ನಗುತ್ತ 


""ನಾನು ಕಳಿಸಿದರೆ ನಿನಗೆ ಮೆಡ್ಲು ಬರೋದಿಲ್ಲ!” 


““ಸಂತೋಷ, ನಿನಗೇ ಬರಲಿ! 


""ನನಗೆ ಬಂದ್ರೆ ನಾನ್ಯಾರ ಕೊರಳಿಗೆ ಹಾಕಲಿ? 


“ನಿನ್ಕೊರಳಿಗೆ!” | 


“ನನ್ನೊರಳಿಗೆ ಬೇಡಾ ಅಂತ! ನೀನು ಕಳಿಸ್ಟೇಕು-ಮೆಡ್ಲು ಹೊಡೀ 

ಬೇಕು. ಯಾರು?-ಅವರ ಹೆಸರೇನು? ಶಾರೀ-ಅಂತಾನೆ?-ಅವರ ಕೊರ 

ಳಿಗೆ ಹಾಕ್ಬೇಕು, ಹಾಗಾದರೆ ನನಗೆ ಬಹಳ ಸಂತೋಷ! 


೯೬ ಕೆಲವು ಕಥೆಗಳು 



“ಸರಿ, ಇಷ್ಟು ಹಟನಾದರೆ ಇನ್ನೇನು ಮಾಡುವುದು?” 


ನಿಧಾನವಾಗಿ ಮಾತು ಬೇರೇ ದಾರಿ ಹಿಡಿಯಿತು. ಅವರಿಬ್ಬರೂ ಯಶ 

ವಂತಪುರದ ಸ್ಟೇಷನ್ನಿನ ತನಕ ಹೋಗಿ ತಿರುಗಿದರು. ಬರುವಾಗ ಕತ್ತಲೆ 

ಯಾಗಿತ್ತು. ಗುಂಡ ತನ್ನ ಕೊಠಡಿಯ ಹತ್ತಿರ ಬಂದೊಡನೆಯೆ, “ಲೋ, 

ಇನ್ನು ಹೊತ್ತಾಯಿತೋ, ಹೊರಡ್ತೀನಿ, ಹೊತ್ತಾಗಿ ಹೋದ್ರೆ ಹೋಟಲ್ಲಲ್ಲಿ 

ಕೂಳ್ಗೇ ಚಕ್ರು. ಬೆಳಿಗ್ಗೆ ಬರ್ತೇನೆ ನಿನ್ನ ರಾತ್ರಿಯ ಕಥೆ ನೋಡೋಕೆ!” 

ಎಂದು ಹೇಳಿ ಕೊಠಡಿಯ ಕಡೆಗೆ ತಿರುಗಿದ. 



ಕೃಷ್ಣಮೂರ್ತಿ ಒಬ್ಬನೇ ಆದ. ಮನೆಗೆ ಇನ್ನೂ ಒಂದು ಫರ್ಲಾಂಗು 

ಇದೆ. ಮನಸ್ಸಿನಲ್ಲೇ ಏನೇನೋ ಯೋಚನೆ ಮಾಡುತ್ತ ನಿಧಾನವಾಗಿ 

ನಡೆದು ಬರುತ್ತಿದ್ದ. ತನ್ನಷ್ಟಕ್ಕೆ ತಾನೇ ಗುಂಡಪ್ಪನ ಗುಣಕಥನ 

ಮಾಡುತ್ತಿದ್ದ. “ಶುದ್ಧ ಫೂಲ್ ! ಸೋಮಾರಿತನದಲ್ಲಿ ಮೊದಲು! ಜಂಭ 

ಬೇರೆ! ತಾನು ಕಳ್ಸಿದರೆ ನನಗೆ ಬರೋದಿಲ್ವಂತೆ! ಅದೇನೋ ನಿಜ. ಆದರೆ 

ಆದರೆ? ನಾಳೆ ಬರ್ಲಿ” (ಹಾಗೆಯೇ ಸ್ವಲ್ಪ ಹೊತ್ತು ಯೋಚಿಸಿ) “ಉಹು! 

ನಾಳೆ ಬೇಡ, ಕಳ್ಸೋವಾಗ ಅವನಿಗೆ ಗೊತ್ತಾಗದಂತೆ ಕಳಿಸಿದರೆ ಸರಿ-ಅವನು 

ನಾಳೆ ಬಂದರೆ? ಹು! ಬರ್ಲಿ ಅದಕ್ಕೆ ಸರಿಯಾಗಿ ಮಾಡುತ್ತೇನೆ.” ಇಷ್ಟು 

ಯೋಚನೆ ಮಾಡುವಷ್ಟರಲ್ಲೇ ಮನೆಯ ಹತ್ತಿರ ಬಂದುಬಿಟ್ಟ. ಸ್ವಲ್ಪ ನಗುತ್ತ 

"ಅವನಿಗೆ ಸ್ವಲ್ಪ ಬುದ್ಧಿ ಕಲಿಸ್ಪೇಕು ['? ಅಂದುಕೊಂಡು ಮನೆಯೊಳಕ್ಕೆ 

ಹೋದ. 


೪ 


ಆ ದಿನ ರಾತ್ರಿ ಸುಮಾರು ಎಂಟು ಗಂಟಿ ಸಮಯ. ಕೃಷ್ಣಮೂರ್ತಿ 

ಊಟವಾಗಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿಕೊಂಡಿದ್ದ. 

ನಿನೋ ಬಹಳ ಯೋಚನೆಯಲ್ಲಿದ್ದಂತೆ ತೋರುತ್ತಿತ್ತು. ಅವನ ಮನಸ್ಸು 

ಗಾಳಿಗೆ ಸಿಕ್ಕ ತರಗೆಲೆಯಂತೆ ಆಗಿತ್ತು. ತನ್ನಲ್ಲಿ ತಾನು “ನಾನೇನೋ 

ಈಜೆಗೆ ಬರೆದ ಕಥೆಯನ್ನು ಅವನ ಹೆಸರಿನಲ್ಲೇ ಕಳಿಸೋಣ ಎಂದು ಹೇಳಿದೆ. 

ಅವನೇ ಬೇಡಾ ಅಂದ. ಇನ್ನು ನಾನು ಮಾಡುವುದೇನು? ಅದಕ್ಟೋಸ್ಕರವೇ 

ಅದನ್ನು ಬರೆದೆ... ಅವನು ಹೀಗೆ ಹೇಳುತ್ತಾನೆ ಎಂದು ತಿಳ್ಲಿದ್ರೆ ಬರೀತಲೇ 


ನಾವೂ ಹಾಗೆಯೇ! ೯೭ 


ಇರ್ಲಿಲ್ಲ. ಈಗ ಬರೆದಿದ್ದುಯ್ತಲ್ಲ. ನಾನೇನೋ ಮೊದಲು ಬರೆದದ್ದನ್ನು 

ಕಳಿಸ್ಸಿಡ್ತೇನೆ-ಇದು ಹೀಗೇ ಇರ್ಲಿ-ಅವನಿಗೆ ಒಂದಲ್ಲ ಒಂದು ದಿನ ಚೆನ್ನಾಗಿ 

ಬೈದು ಹೇಳಿಬಿಡೋದು. ಇನ್ನೇನು ಮಾಡೋಕಾಗುತ್ತೆ?” ಎಂಬುದಾಗಿ 

ಯೋಚಿಸುತ್ತಿದ್ದ. ಇಷ್ಟು ಹೊತ್ತಿಗೆ ಶಾರದೆ ಎಂದಿನಂತೆ ಕೈಯಲ್ಲಿ ತಾಂಬೂ 

ಲದ ತಟ್ಟೆಯನ್ನು ಹಿಡಿದುಕೊಂಡು ಅವನ ಕೊಠಡಿಯೊಳಕ್ಕೆ ಬಂದಳು, 

ಅವಳ ಬರುವಿಕೆಯ ಸೊಗಸನ್ನು ಕೃಷ್ಣಮೂರ್ತಿ ನೋಡಲಿಲ್ಲ. ಅವಳು 

ಮೆಲ್ಲಮೆಲ್ಲನೆ ಅಡಿಯಿಡುತ್ತ, ಅಂದುಗೆಯ ತಾಳಕ್ಕೆ ಸರಿಯಾಗಿ ಬಳುಕುತ್ತ 

ಆ ಬಳುಕಿಗೆ ತಕ್ಕ ಕಟಾಕ್ಷದಿಂದಲೂ, ಆ ಕಟಾಕ್ಷವನ್ನನುಸರಿಸಿದ ಮುಗುಳ್ನಗೆ 

ಯಿಂದಲೂ, ತನಗಾಗಿ ಕಾದಿರುವ ರಾಜನ ಅಂತಃಪುರವನ್ನು ಪ್ರವೇಶಿಸುವ 

ರಾಣಿಯಂತೆ ಬಂದಳು. ಕೃಷ್ಣಮೂರ್ತಿ ತನ್ನ ಯೋಚನೆಯಲ್ಲಿದ್ದವನು 

ಇದನ್ನೆಲ್ಲಾ ನೋಡಲಿಲ್ಲ. ಯಾರಿಗೋಸ್ಕರ ಈ ಒನಪುಒಯ್ಯಾರಗಳನ್ನು 

ಮಾಡಿಕೊಂಡು ಬಂದಳೋ ಅವರು ತನ್ನ ಕಡೆ ತಿರುಗದೆ ಇದ್ದುದನ್ನು ನೋಡಿ 

ಅವಳ ಹೆಮ್ಮೆಗೆ ಸಿಡಿಲು ತಾಗಿದಂತಾಯ್ತು. ಅವಳ ನಿರೀಕ್ಷೆ, ದೊಡ್ಡ ದೊಡ್ಡ 

ಮರಗಳನ್ನೆಲ್ಲಾ ಕಿತ್ತು ಉರುಳಿಸುವೆನೆಂದು ಸೊಕ್ಕಿನಿಂದ ಹೊರಟ ಸುಂಟರ 

ಗಾಳಿ ನಿರ್ಜನವಾದ ಬಯಲಿನಲ್ಲಿ ಬೀಸಿದಂತಾಯಿತು. ಅವಳ ಮುಖ ಕ್ಷಣ 

ಕಾಲದ ಹಿಂದೆ ಎಷ್ಟು ನಲಿಯುತ್ತಿತ್ತೋ ಈಗ ಅಷ್ಟು ಕಂದಿಹೋಯಿತು. 

ಕಣ್ಣುಗಳಲ್ಲಿ ನೀರು ಅಂಚುಗಟ್ಟಿ ತುಂಬಿಕೊಂಡಿತು. ಅವಳು ತಾಂಬೂಲದ 

ತಟ್ಟೆಯನ್ನು ಮೇಜಿನ ಮೇಲಿಟ್ಟು, ಕೊಠಡಿಯ ಬಾಗಿಲನ್ನು ಹಾಕಿ ಮಂಚದ 

ಸಮೀಪಕ್ಕೆ ಹೋದಳು. ಕೃಷ್ಣ ಮೂರ್ತಿ ಕದಲಲಿಲ್ಲ. ಅವಳು ಅವನ ಪಕ್ಕ 

ದಲ್ಲಿ ಕುಳಿತುಕೊಂಡು ಮೆಲ್ಲಗೆ ಅವನ ಗಲ್ಲವನ್ನು ಮುಟ್ಟ ತನ್ನ ಕಡೆಗೆ ತಿರುಗಿಸಿ 

ಕೊಂಡಳು. ಕೃಷ್ಣಮೂರ್ತಿ ಸ್ವಲ್ಪ ನಗುತ್ತ ಅವಳ ಮುಖನನ್ನು ನೋಡಿದ. 

ಅವನ ಕೆನ್ನೆಯ ಮೇಲೆ ಅವಳ ಕಣ್ಣುಗಳಿಂದ ಒಂದೆರಡು ಹನಿ ಬಿಸಿನೀರು 

ಬಿತ್ತು. ಅವಳಿಗೆ ದಿಗ್ಗ ಮೆಯಾಯಿತು. ಸರ್ರನೆ ಎದ್ದು ಅವಳನ್ನು ತಬ್ಬಿ 

ಕೊಂಡು ""ಯಾಕೆ? ಶಾರಿ? ಏನಾಯಿತು?'' ಎಂದು ಕೇಳಿದ ಅವಳು 

ಉತ್ತರ ಕೊಡಲಿಲ್ಲ. ಮುಖನನ್ನು ಬೇರೇ ಕಡೆ ತಿರುಗಿಸಿಕೊಂಡು ಅಳುತ್ತಿ 

ದ್ದಳು, ಅವಳ ಕೋಮಲವಾದ ಕಪೋಲಗಳನ್ನು ತನ್ನ ಕೈಯಿಂದ ಸ ಸವರುತ್ತ 

ಅವಳ ಕಣ್ಣೀರನ್ನು ಒರಸಿ, ಅವಳ ಮುಖವನ್ನು ತನ್ನ ಕಡೆಗೆ ತಿರುಗಿಸಿ 


೯೮ ಕೆಲವು ಕಥೆಗಳು 


ಕೊಂಡ. ಅವಳ ತುಟಿಗಳು ದುಃಖದ ಉದ್ವೇಗದಿಂದ ಕಂಪಿಸುತ್ತಿದ್ದುವು. 

ಅವನು ಅವುಗಳ ಮೇಲೆ ಪ್ರೇಮದ ಮುದ್ರಿಕೆಯನ್ನೊತ್ತಿ ಆ ಕಂಪನವನ್ನು 

ನಿಲ್ಲಿಸಿ, ಕಾತರದಿಂದ “ಶಾರಿ! ಏನಾಯಿತು ಹೇಳಬಾರದೆ? ಯಾಕೆ ಈ 

ಕಣ್ಣೀರು? ನನ್ನಾಣೆ ಹೇಳು-ಎಲ್ಲಿ, ಹೀಗೆ ತಿರುಗು. . . ಅಮ್ಮ ಏನಾದರೂ 

ಅಂದಳೆ?'' ಎಂದು ಕೇಳಿದ. ಶಾರದೆ ಈಗಲೂ ಮೌನವಾಗಿದ್ದಳು. ಅವಳ 

ಎರಡು ಹನಿ ಕಣ್ಣೀರು ಅವನ ಕೆನ್ನೆಗಳ ಮೇಲೆ ಬಿದ್ದು ಅವನ ಹೃದಯ 

ಅಲ್ಲೋಲಕಲ್ಲೋಲವಾಗಿತ್ತು. ಅವಳ ಮೌನವು ಅವನ ತಾಳ್ಮೆಯ ಬುಡ 

ವನ್ನೇ ಅಲ್ಲಾಡಿಸಿ ಬಿಟ್ಟಿತು... ಅವನು ಪುನಃ ಅವಳನ್ನು ಗಾಢವಾಗಿ ಆಲಂ 

ಗಿಸಿಕೊಂಡು “ಶಾರಿ, ಅದೇನು ಹೇಳಲೇಬೇಕು. ನನ್ನ ಮೇಲೆ ಆಣೆಯಿದೆ. 

ಹೇಳು ಅಮ್ಮ ಏನು-'' ಎಂದು ಮಾತು ಪೂರೈಸುವುದರೊಳೆಗಾಗಿ, ಅವಳು 

ದೊಡ್ಡದಾಗಿ ನಿಟ್ಟುಸಿರು ಬಿಟ್ಟು, ತಲೆಯನ್ನು ತಗ್ಗಿಸಿ “ಅಯ್ಯೋ ಪಾಪ! 

ಅವರು ನನಗೆ ಇಲ್ಲಿ ತಾಯಿಯ ಹಾಗೆ ಇದ್ದಾರೆ. ಅವರದು ಬಹಳ ದೊಡ್ಡ 

ಗುಣ'' ಎಂದು ಮೆಲ್ಲಗೆ ಹೇಳಿ, ತಲೆಯನ್ನು ಸ್ವಲ್ಪ ಎತ್ತಿ ಗಂಡನ ಮುಖಕ್ಕೆ 

ಕಣ್ಣಿನ ತುದಿಯಿಂದ ಒಂದು ಮೃದುಮಧುರವಾದ ಅಂಬನ್ನು ಎಸೆದಳು. 

ಆ ಅಪೂರ್ವವಾದ ಅಂಬು ಆಗ ತಾನೆ ಕಣ್ಣೀರಿನಲ್ಲಿ ತೊಯ್ದಿದ್ದರಿಂದ ಮೃದು 

ವಾಗಿತ್ತು. ಮಾಧುರ್ಯ-ಬತ್ತಳಿಕೆಯ ಗುಣ. ಕೃಷ್ಣಮೂರ್ತಿಗೆ ಈ ಆಟ  

ದಿಂದ “ನೀವು ಕಾರಣ!” ಎಂದು ಹೇಳಿದ ಹಾಗಾಯಿತು. ಆ ಅಂಬಿನ 

ತುದಿ ಅವನ ಹೃದಯದ ಮೇಲೆ ಹಾಗೆ ಬರೆಯಿತೆಂದು ತೋರುತ್ತದೆ. ಅವನ 

ಮನಸ್ಸಿಗೆ ಅರೆಕ್ಷಣದಲ್ಲಿ ಎಲ್ಲಾ ಮಿಂಚಿನ ವೇಗದಿಂದ ಹೊಳೆಯಿತು. 

ಅವನು ದೊಡ್ಡದಾಗಿ ನಕ್ಕು ಹಾ! ಈಗ ತಿಳಿಯಿತು! ಹೌದು, ಹೌದು! 

ನನ್ನ ತಪ್ಪು! ಇನ್ನು ಮೇಲೆ ಹಾಗೆ ಮಾಡುವುದಿಲ್ಲ. ಏನೋ ಯೋಚನೆ 

ಯಲ್ಲಿದ್ದೆ. ನೀನು ಬಂದುದು ಗೊತ್ತಾಗಲಿಲ್ಲ. ಆದುದರಿಂದ ಈ ತಪ್ಪು 

ನಡೆದು ಹೋಯಿತು. ತಿಳಿದೂ ತಿಳಿದೂ ನಾನು ಎಂದು ನಿನ್ನಲ್ಲಿ ಉದಾಸೀನ 

ನಾಗಿದ್ದೆ ಹೇಳು, ಶಾರಿ? ನೀನು ಬಂದಾಗ ನನ್ನ ಮನಸ್ಸು ನನ್ನ ದೇಹದಲ್ಲಿರ 

ಲಿಲ್ಲ. “ಹೀಗೆಂದು ಹೇಳಿ ಅವಳ ತಾವರೆಯೆಸಳಿನಂತೆ 'ಮೃದುವಾ ದ ಕನ್ನೆ 

ಯನ್ನು ತನ್ನ ಕೆನ್ನೆಗೆ ಒತ್ತಿಕೊಂಡು ಸ್ವಲ್ಪ ಹೊತ್ತಿಗೆ ಮುಂಚೆ ಎಷ್ಟು 

ಸುಲಭವಾಗಿ ಅವಳ ಮುಖ ಕಂದಿಹೋಗಿತೋ ಈಗ ಅಸ್ಟು ಸುಲಭವಾಗಿ 


ನಾವೂ ಹಾಗೆಯೇ! ೯೯ 


ಅದರ ತುಂಬ ನಗೆದಿಂಗಳು ಹರಡಿಕೊಂಡಿತು. ಕಣ್ಣಿನಲ್ಲಿ ನೀರು ಆರಿ ಹೊಳ 

ಸೇರಿತು. ತುಂಬಿ ಬಂದ ಮುಗುಳ್ನಗೆಯಿಂದ ಅವಳ ಎಳಸಾದ ತುಟಿಗಳು 

ಸ್ಪಲ್ಪ ಅಲುಗಿದುವು. ಬೆಳದಿಂಗಿಳ ರಾತ್ರಿಯಲ್ಲಿ ಮಲ್ಲಿಗೆಯ ಮೊಗ್ಗೆ ಅರಳಿ 

ದಂತೆ ಆಯಿತು. ಅವನು “ನನ್ನ ಮನಸ್ಸು ನನ್ನ ದೇಹದಲ್ಲಿರಲಿಲ್ಲ. ಎಂದು 

ಹೇಳಿದೊಡನೆಯೇ ಅವಳ ಮುಗುಳ್ನಗೆ ಮೃದು ನಗುವಾಯಿತು. ನಕ್ಕು ತಲೆ 

ಯನ್ನು ಬಗ್ಗಿಸಿಕೊಂಡು, ಸೆರಗಿನ ತುದಿಯಲ್ಲಿ ಗಂಟು ಹಾಕುತ್ತ “ಯಾರನ್ನು 

ಹುಡುಕಿಕೊಂಡು ಹೋಗಿತ್ತು?'' ಎಂದು ಕೇಳಿದಳು. ಅವಳ ಮಾತಿಗೆ 

ಅವಳಿಗೇ ನಗು. ಕೃಷ್ಣ ಮೂರ್ತಿ ಮೆಲ್ಲಗೆ ಅವಳಿಗೆ ಒಂದು ಗುದ್ದು ಹಾಕಿ, 

"ಅಯ್ಯೊ ! ಗಂಡುಬೀರೀ! ಎಂದು ಹೇಳಿ ಮೆಲ್ಲಗೆ ಅವಳ ಕೆನ್ನೆಯನ್ನು 

ಹಿಂಡಿದ ಅವಳು ಎದ್ದು ಹೋಗುವುದಕ್ಕೆ ಪ್ರಯತ್ನ ಮಾಡಿದಳು. 

ಆದರೆ ಕೃಷ್ಣಮೂರ್ತಿ ಹುಷಾರಾಗಿದ್ದ. "ನನ್ನೊಬ್ಬಳ ಕಾಟ ಸಾಲದೆ! 

ನೋಡು ಈಗ ಒಂದು ಕ್ಷಣದಲ್ಲಿ ನನ್ನ ಎದೆಯನ್ನು ಒಡೆದುಬಿಟ್ಟಿದ್ದೆಲ್ಲಾ!'' 

ಎಂದ. 


“ಹೌ-ದು-ಮ-ತ್ತೆ!" 


"ಹೌದು ಹೌದು!” 


ಯಾವುದಾದರೂ ಮನೆಗೆ ಬೆಂಕಿ ಬಿದ್ದಿದ್ದರೆ ಬಹಳ ಕಷ್ಟದಿಂದ ಅದನ್ನು 

ಆರಿಸಿ ದಣಿದನನು ಒಂದು ಕಡೆ ಹೋಗಿ ಕುಳಿತುಕೊಂಡು, “ಉಸ್ಸಪ್ಪ!” 

ಅನ್ನುವ ಹಾಗೆ ಕೃಷ್ಣ ಮೂರ್ತಿ ನೀಳವಾಗಿ ಉಸಿರುಬಿಟ್ಟು “ಉಸ್ಸಪ್ಪಾ! 

ಎಂದ. ಶಾರದೆ ಎದ್ದು ಹೋಗಿ ತಾಂಬೂಲದ ತಟ್ಟೆಯನ್ನು ಮಂಚದ ಮೇಲೆ 

ತಂದಿಟ್ಟುಕೊಂಡು ಗಂಡನಿಗೆ ಎಲೆ ಮಡಿಸಿಕೊಡುತ್ತ “ಏನು? ಈವೊತ್ತು? 

ಅಷ್ಟೊಂದು ಯೋಚನೆ! ಮನಸ್ಸು ದೇಹವನ್ನು ಬಿಟ್ಟು ಓಡಿಹೋಗುವ 

ಹಾಗೆ?” ಎಂದು ಕೇಳಿದಳು. ಅವಳಗೆ ನಗು. ಕೃಷ್ಣಮೂರ್ತಿ ಎಲೆ ಅಡಿಕೆ 

ಅಗಿಯುತ್ತ ಅದರ ಜೊತೆಗ ಅಕ್ಷರಗಳನ್ನು ಅಗಿಯುತ್ತ "ಏನೋ ಯೋ-ಚ-ನೆ 

ಸ್ವಂ-ತ-ದ್ದು'? ಎಂದ. 


"ಬೇಡ-ಅಷ್ಟು ಸ್ವಂತ ಆದರೆ? 


“ನೋಡಿದೆಯಾ-ನಿನ್ನ ಡೊಂಕುಬುದ್ಧಿ! "


೧೦೦ ಕೆಲವು ಕಥೆಗಳು 


" ಹಾಗಾದರೆ ಅದೇನು-ನನಗೆ ಅದರಲ್ಲಿ ಅರ್ಧವಾದರೂ ಹೇಳಬೇಕು.” 


“ಹೇಳೋಕೆ ಮುಂಚೆ ಸುಂಕ ಕೊಡಬೇಕು.” 


"ಉ! ಸುಂಕ! ನೀನೇನ್ಮಾಡೀರಿ! ಅದೇ ಕೆಲಸ ನಿಮಗೆ!” 


""ಹಾಗಾದಕೆ ಬಿಡು ! ?? 


“ಇಲ್ಲ! ಇಲ್ಲ! ಹೇಳಿ, ಇಗೋ ಕೊಟ್ಟೆ... ಈಗ ಹೇಳಿ!” 


"ನಾನು ನಿನ್ನೆ ಬರೆದ ಕಥೆ ಓದಿದೆಯಾ !"


"ಹೂ ಓದಿದೆ! ಅದಕ್ಕಿಂತ ಇದೇ ಬಹಳ ಚೆನ್ನಾಗಿದೆ!? 


“ಅದರ ವಿಷಯವೇ ಯೋಚಿಸಿದ್ದೆ.” 


""ಅಯ್ಯೋ ಪಿಸ್ಸೆ [ ಇಷ್ಟೇನೇ! ಇದಕ್ಕೆ ಸುಂಕ! ಯಾಂಕೆ-ಹೊಸದನ್ನೇ 

ಕಳ್ಸಿ? 


ಕೃಷ್ಣಮೂರ್ತಿಯ ಮುಖದಲ್ಲಿ ಕಳವಳ ತಲೆದೋರಿತು. “ಆವಾಗ 

ಅದೇ ಚೆನ್ನಾಗಿದೆ ಅಂತ ಹೇಳಿದೆಯಲ್ಲಾ!? ಎಂದ. 


“ಹೌದು! ಆಗ ಇದು ಇತ್ತೇನು? ಬರೀ ಕರಿಬಾಳೇ ಹಣ್ಣೇ ಇದ್ರೆ 

ಅದೇ ಸಾಕು. ರಸಬಾಳೇಹಣ್ಣು ಇದೆ, ಯಾವುದು ರುಚಿ?” 


“ಅಬ್ಬಾ! ಏನು ಉಪಮಾನ ಬಹಳ ಜೋರಾಗಿದೆ!” 


“ಅಷ್ಟಲ್ಲದೆ ಏನು? ನನಗೇನೋ ಹೊಸ ಕಥೇನೇ ಒಪ್ಪಿತು.” 


"ಒಂದು ಕಥೇನ ನನ್ನ ಸ್ನೇಹಿತನ ಹೆಸರಿನಲ್ಲಿ ಕಳ್ಸೋಣ ಅಂತ.'' 


“ಹಾಗಾದರೆ ಮೊದಲನೇದನ್ನ ಅವರ ಹೆಸ್ರಿನಲ್ಲಿ ಕಳಿಸ್ಸಿಡಿ.”' 


“ಹಾಗಿಲ್ಲ, ಕಳಿಸಿದ್ರೆ, ಎರಡನೆಯದನ್ನೇ ಅವನ ಹೆಸರಿನಲ್ಲಿ, ಕಳ 

ಸ್ಟೇಕು. ಇಲ್ದೇ ಇದ್ರೆ ಇಲ್ಲ.” 


"ಹಾಗಾದರೆ ಬೇಡೇ ಬೇಡ.” 


"ಅವನೂ ಬೇಡಾ ಅಂತಾನೆ ಹೇಳಿದ.” 


“ಒಳ್ಳೇದೇ ಆಯ್ತ!” 


"ಅವನಿಗೆ ಗೊತ್ತಾಗದ ಹಾಗೆ ಅವನ ಹೆಸರಿನಲ್ಲಿ ಕಳಿಸೋಣಾ ಅಂತ.” 


"ಅದೇನು ಅಂಥಾ ಬಲವಂತ? ಏನೂ ಬೇಡ!” 



ನಾವೂ ಹಾಗೆಯೇ!  ೧೦೧



"ಹುಂ! ನೋಡೋಣ. ಇನ್ನೂ ಬೇಕಾದಷ್ಟು ದಿನ ಇದೆಯಲ್ಲ. 

ನಿದ್ದೆ ಮಾಡಬೇಕು. ಈಗಾಗಲೇ ಹನ್ನೆರಡು ಗಂಟಿಯಾಯಿತು.?' 


ಹೀಗೆಂದು ಹೇಳಿ ಕುಳಿತ ಹಾಗೆಯೇ ಹಾಸಿಗೆಯ ಮೇಲೆ ಉರುಳಿ 

ಹೊದಿಕೆಯನ್ನು ಎಳೆದುಕೊಂಡ. ಶಾರದೆ, ಸ್ವಲ್ಪಹೊತ್ತಿಗೆ ಮುಂಚೆ ನಡೆದು 

ದನ್ನೆಲ್ಲ ನೆನೆದುಕೊಂಡಳು. ಅವಳಿಗೆ ವಿಪರೀತ ನಗು ಬಂತು. ಕೃಷ್ಣಮೂರ್ತಿ 

ಮುಸುಕಿಕೊಳಗಿಂದಲೇ ""ಏನೇ ಅಡು-ನಗ್ತೀಯಾ?”” ಎಂದ. 


"ಸುಂಕ ಸುಂಕ! ಸುಂಕ ಕೊಟ್ರೆ!” 


ಊಹೂ! ನೀನು ಈಚೆಗೆ ಬಹಳ ಹೆಚ್ಚಿಕೊಂಡಿದ್ದೀಯೆ !"


ಶಾರದೇನೂ ದೀಪವನ್ನು ಸಣ್ಣಗೆ ಮಾಡಿ ಮಲಗಿಕೊಂಡಳು. ಕೃಷ್ಣ 

ಮೂರ್ತಿ ನಿದ್ದಮಾಡಬೇಕು ಎಂದು ಹೇಳಿದ್ದು ಎಷ್ಟೋ ಅಷ್ಟೇ. ಅವನಿಗೆ 

ನಿದ್ದೆ ಬರುವ ಹಾಗೆ ಇರಲಿಲ್ಲ. ಶಾರದೆಯೇ ಮುಂಚೆ ನಿದ್ದೆ ಹೋದವಳು. 

ರಾತ್ರಿ ಬಹಳ ನಿಶಬ್ದವಾಗಿತ್ತು. ಕೃಷ್ಣ ಮೂರ್ತಿಗೆ ಆ ನಿಶ್ಶಬ್ದವಾದ ರಾತ್ರಿ, 

ಅವನ ಕೇವಲ ಗೂಢವಾದ ಯೋಚನೆಗಳನ್ನೆಲ್ಲಾ ಕಿವಿಗೊಟ್ಟು ಕೇಳುವಂತೆ 

ತೋರಿತು. ಶಾರದೆ ಸುಖವಾಗಿ ನಿದ್ದೆಹೋಗುತ್ತಿದ್ದಳು. ಅವಳ ನೀಳವಾಗಿಯೂ 

ಮೃದುವಾಗಿಯೂ ಆಡುತ್ತಿದ್ದ ಉಸಿರು ಮಾತ್ರ ಆ ರಾತ್ರಿಯ ಮೌನವಾದ ಆವ 

ರಣಕ್ಕೆ ಭಂಗವನ್ನುಂಟುಮಾಡುತ್ತಿತ್ತು. ಅವನು ರಾತ್ರಿ ಊಟವಾದ ಮೇಲೆ ಆ 

ಕೊಠಡಿಗೆ ಬಂದು ಹಾಸಿಗೆಯ ಮೇಲೆ ಮಲಗಿ ಪ್ರಾರಂಭಿಸಿದ್ದ ಯೋಚನಾ 

ತರಂಗಗಳು ಮಧ್ಯೆ ಸ್ವಲ್ಪ ಕಾಲ ಭಂಗ ಹೊಂದಿ, ಈಗ ಪುನಃ ಪ್ರಾರಂಭವಾಗಿ 

ದ್ದುವು. ಅವನ ಮನಸ್ಸು ಹೊಸ ಊರಿಗೆ ಹೋಗಿ ದಾರಿತಪ್ಪಿದವನಂತೆ ಆಗಿತ್ತು; 

ಸುಮ್ಮನೆ ಮಗ್ಗುಲಿನಿಂದ ಮಗ್ಗುಲಿಗೆ ಹೊರಳುತ್ತಿದ್ದ. ನಿದ್ದೆ ಇಲ್ಲದೆ ಸುಮ್ಮನೆ 

ಮಲಗಿರುವುದಕ್ಕೆ ಬೇಸರವಾಗಿ ಹಾಗೆಯೇ ಹಾಸಿಗೆಯ ಮೇಲೆ ಎದ್ದು ಕುಳಿತು 

ಕೊಂಡ. ಶಾರದೆಯ ಕಡೆಗೆ ತಿರುಗಿ ನೋಡಿದ... ಅವಳ ನಿದ್ದೆಗೆ ಸ್ವಲ್ಪವೂ 

ಭಂಗವಿಲ್ಲ. ಸಣ್ಣಗೆ ಮಾಡಿಟ್ಟಿದ್ದ ದೀಪದ ಕ್ಷೀಣವಾದ ಬೆಳಕು ಅವಳ ಮುಖದ 

ಮೇಲೂ ಸುಖವಾಗಿ ಪವಡಿಸಿದ್ದ ಅವಳ ದೇಹದ ಮೇಲೂ ಬೀಳುತ್ತಿತ್ತು. 

ಸೆಕೆಯಾಗಿದ್ದುದರಿಂದ ಅವಳ ಹಣೆಯ ಮೇಲೂ ಕೆನ್ನೆಗಳ ಮೇಲೂ 

ಬೆವರಿನ ತುಂತುರು ಮೂಡಿದ್ದವು. ಕೃಷ್ಣಮೂರ್ತಿ ಎದ್ದುಹೋಗಿ ಕಿಡಿ 

ಕಿಯ ಬಾಗಿಲುಗಳನ್ನು ತೆಗೆದ, ಪುನಃ ಬಂದು ಅವಳ ಸಮೀಪದಲ್ಲಿ 


೧೦೨ ಕೆಲವು ಕಥೆಗಳು 


ಕುಳಿತುಕೊಂಡು, ಅವಳನ್ನು ನಟ್ಟ ದೃಷ್ಟಿಯಿಂದ ನೋಡತೊಡಗಿದನು. 

ಸ್ವಲ್ಪ ಕೆದರಿದ ಮುಂಗುರುಳು. ಹಣೆಯಲ್ಲಿ ಬೆವರಿನಿಂದ ತೊಯ್ದ ಕುಂಕು 

ಮದ ಬೊಟ್ಟು. ತಾಂಬೂಲವನ್ನು ಸವಿದು ರಂಗೇರಿದ ತಿದ್ದಿದ ತುಟಿಗಳು. 

ಮಾಟವಾಗಿ, ಮಿತವಾಗಿ ಸಂಪಗೆಯ ಹೂವಿನ ಹಾಗೆ ಮೂಗು. ಮಂಜಿನ 

ಹನಿಯ ಹಾಗೆ ಅದನ್ನು ಅಲಂಕರಿಸಿದ ಮೂಗುಬಟ್ಟು. ನೀಳವಾದ, 

ಕಪ್ಪಾದ, ಸರಳವಾಗಿ ಬಾಗಿದ ಹುಬ್ಬುಗಳು, ಅದರ ಕೆಳಗೆ, ತಾವರೆ ಎಸಳಿನ 

ಭರಣಿಯಂತೆ ಮುಚ್ಚಿದ `ಕಣ್ಣೆವೆಗಳು,  ಇಂಬಾಗಿ ತುಂಬಿಕೊಂಡಿದ್ದ ಕೆನ್ನೆ 

ಗಳು-ಸುಂದರವಾದ ಸುಳಿಗಲ್ಲ. ಇವುಗಳೆಲ್ಲದರ ಮೇಲೂ ಪಸರಿಸಿದ ಒಂದು 

ವಿಧವಾದ ಸೌಮ್ಯಕಳೆ. ಕೃಷ್ಣಮೂರ್ತಿ ಇವು ಒಂದೊಂದನ್ನು ನಿಧಾನವಾಗಿ 

ನೋಡಿದ. ಅವಳ ಆಟ-ಅವಳ ನೋಟ-ಅವಳ ಬಿನ್ನಾಣದ ಮಾತು 

ಒಂದೊಂದಾಗಿ ಅವನ ಜ್ಞಾಪಕಕ್ಕೆ ಬಂದುವು. ಅವನ ಹೃದಯಕ್ಕೆ ಮದವೇರಿ, 

ಅದು ಅವನ ಪ್ರೇಯಸಿಯ ರೂಪ ಸಾಗರದಲ್ಲಿ ಧುಮಿಕಿ ಓಲಾಡುತ್ತಿತ್ತು. 

ಸ್ವಲ್ಪ ಹೊತ್ತು ಈ ರೀತಿಯಾಗಿ ಸುಖಾನುಭವಮಾಡಿ ಪುನಃ ಮೊದಲು ಪ್ರಾರಂ 

ಭಿಸಿದ್ದ ಯೋಚನೆಗಳ ಕಡೆ ಗಮನಕೊಟ್ಟ. ಅವಳು ಕಥೆಯ ವಿಷಯವಾಗಿ 

ಹೇಳಿದುದೆಲ್ಲಾ ಜ್ಞಾಪಕಕ್ಕೆ ಬಂತು ""ರಸಬಾಳೆಹಣ್ಣು ಕರಿಬಾಳೆಹಣ್ಣು ! 

ಎಷ್ಟು ನಿಜವಾದ ಮಾತು !" ಎಂದುಕೊಂಡ. ಮೊದಲನೆಯದನ್ನೂ ಕಳಿ  

ಸೋದಕ್ಕೆ ನಾನೇ ಬರೆದದ್ದು ? “ಹೊಸದನ್ನು ಬರೆಯದೆ ಇದ್ದಿದ್ದರೆ : ?" ಎಂದು 

ತೋರಿಶು. "ಹಳೆಯದನ್ನೇ ಕಳಿಸಿಬಿಡುತ್ತೇನೆ! ನಾನೇನೋ ಅವನನ್ನು 

ಕೇಳಿದೆ. ಅವನೇ ಬೇಡಾ ಅಂದ. ಇನ್ನೇನು ಮಾಡೋದು! ನನ್ಹತ್ತಿರ್ಲೇ 

ಬಿದ್ದಿರತ್ತೆ! ಹಳೇಯದರ ಅದೃಷ್ಟ ಹೇಗೋ ಹೇಳ್ಲಾರೆ. ಹೊಸ್ತು ಕಳ್ಳಿದ್ರೆ 

ಖಂಡಿತ. ಆದ್ರೆ-ಉಹು!” ಇಲಿಗೆ ಸ ಸ್ವಲ್ಪ ಯೋಚನೆ ನಿಂತಿತು. ಸ್ವಲ್ಪ 

ಹೊತ್ತು ಏನೂ ಇಲ್ಲ - ಆ ಮೇಲೆ ಪುನಃ ಅವಳ ಕೊರಳಿಗೆ ಹಾಕ್ಬೇಕು!” 

ಗುಂಡನೆ ಈ ಮಾತು ಜ್ಞಾಪಕಕ್ಕೆ ಬಂತು. ಕುಳಿತುಕೊಂಡು ಹಾಗೆಯೇ 

ಪುನಃ ಶಾರದೆಯ ಕಡೆಗೆ ನೋಡಿದ. ನೋಡುತ್ತಿದ್ದ ಹಾಗೆಯೇ ಅವನ ಕಣ್ಣು 

ಗಳು ಮುಚ್ಚಿಕೊಂಡುವು. ಮುಚ್ಚಿಕೊಂಡಿದ್ದ ಕಣ್ಣುಗಳ ಕತ್ತಲೆಯನ್ನೆಲ್ಲಾ 

ಹರಿಸಿ, ಶಾರದೆ ನಗುತ್ತ ನಲಿಯುತ್ತ ತನ್ನ ಕಡೆ ಬರುತ್ತಿದ್ದ ಹಾಗೆ ಯೋಚನೆ, 

ಥಳಥಳ ಹೊಳೆವ ಸೊಗಸಾದ ಚಿನ್ನದ ಸದಕವನ್ನು ಅವಳ ಕೊರಳಿಗೆ ಹಾಕಿದ 



ನಾವೂ ಹಾಗೆಯೇ! ೧೦೩ 



ಹಾಗೆ ಅನುಭವ, ಕೂಡಲೆ ಅವಳು ತನ್ನನ್ನು ಅವಳ ತೋಳ ಸೆರೆಯಲ್ಲಿ 

ಬಿಗಿದುಕೊಂಡ ಹಾಗೆ ಭಾವನೆ. ಆಮೇಲೆ ನಿದಾನವಾಗಿ ಈ ದೃಶ್ಯ ಮಾಯ 

ವಾಗಿ ಪುನಃ ಕತ್ತಲು ಕವಿಯಿತು. “ಆದದ್ದಾಗಲಿ ಕಳಿಸಿಬಿಡುತ್ತೇನೆ!” ಅಂದು 

ಕೊಂಡ್ಕು ಕಣ್ಣು ಬಿಟ್ಟ. ಅವನ ಪಕ್ಕದಲ್ಲಿ, ಶಾರದೆ ಮಲಗಿದ್ದ ಹಾಗೆಯೇ 

ಸ್ವಲ್ಪ ಒಂದು ಪಕ್ಕಕ್ಕೆ ಹೊರಳಿದಳು. ಕೃಷ್ಣ ಮೂರ್ತಿಯ ದೃಷ್ಟಿ ಪುನಃ 

ಶಾರದೆಯ ಮುಖದ ಮೇಲೆ ಬಿತ್ತು. ಅವಳ ತುಟಿಗಳು ಸ್ವಲ್ಪ ಅಲುಗಿದುವು. 

ಅವುಗಳ ಮೇಲೆ ಮೆಲ್ಲನೆ ಒಂದು ಮುಗುಳ್ನಗೆ ಹೆರಿತು ಬಂತು, ಶಾರದೆ ಏನೋ 

ಕನಸು ಕಾಣುತ್ತಿದ್ದಳು. ಕೃಷ್ಣಮೂರ್ತಿಗೆ ನಗು ಬಂತು. ತನ್ನ ಪ್ರೇಯಸಿಯ 

ಸುಖದ ಕನಸಿನ ಸುಖವನ್ನು ತಾನೂ ಅನುಭವಿಸಬೇಕೆಂದು ಅವನಿಗೆ ಆಶೆ 

ಯಾಯಿತು. ಮೆಲ್ಲಗೆ ಬಾಗಿ, ಮುಗುಳ್ನಗೆಯಲ್ಲಿ ಮುಳುಗಿ ಬೆಳಗುತ್ತಿದ್ದ 

ಅವಳ ಅಂಚೆದುಟಗಳ ಮೇಲೆ ಒಂದು ಮುತ್ತು ಕೊಟ್ಟ. ಶಾರದೆಗೆ ಎಚ್ಚರ 

ವಾಯಿತು. ಕಣ್ಣು ಉಜ್ಜಿಕೊಂಡು, ಗಂಡ ಎದ್ದು ಕುಳಿತುದನ್ನು ನೋಡಿ 

ಆಶ್ಚರ್ಯದಿಂದ “ಇದೇನು ಯಾವಾಗ ಎದ್ದುದು?" ಎಂದು ಕೇಳಿದಳು. 


"ಏಳೋದೆಲ್ಲಿ ಬಂತು? ನಿದ್ದೆ ಮಾಡಲೇ ಇಲ್ಲ!” 


“ಹಾಗಾದರೆ ಏನ್ಮಾಡಿದ್ರಿ?”? 


“ನಿನ್ನ ಮುಖಾನೇ ನೋಡ್ತಿದ್ದೆ ! 


“ಅದ್ಯಾಕೋ !” 


“ಅದ್ಯಾಕೆ 1 ಕಾಸು ಖರ್ಚುಮಾಡಿ ಮದುವೆ ಮಾಡ್ಕೊಂಡಿದ್ದಕ್ಕೆ-

ಅದಿರಲಿ, ಅದೇನು ಕನಸು?” 


"ಏನೂ ಇಲ್ಲ !" -(ನಕ್ಳು)--“ಮನಸ್ಸಲ್ಲಿ ಮಂಡ್ಗೆ ತಿಂದ್ಹಾಗೆ!"


“ಅದೇನೇ ಹೇಳೇ ಬಿನ್ನಾಣಿ!” 


“ನೀವು ಬಿನ್ನಾಣಿ-ಗಿನ್ನಾಣಿ ಅಂದ್ರೆ ಹೇಳೊಲ್ಲ!” 


""ಹೇಳ್ದೇ ಇದ್ದೆ ಅಷ್ಟೇ ಹೋಗು.” 



—ಹೀಗೆಂದು ಹೇಳಿ ಕೃಷ್ಣಮೂರ್ತಿ ಮಲಗಿಕೊಳ್ಳುವುದಕ್ಕೆ ಪ್ರಯತ್ನ 

ಪಟ್ಟ., ಇಲ್ಲ. ಹೇಳ್ತೀನಿ ಕೇಳಿ. ಏನು ಅಂದ್ರೇ, ನೀವು ನಾನ್ಹೇಳಿ 

ದ್ನಲ್ಲಾ ಹಾಗೆ, ಹೊಸ ಕಥೆ ಕಳಿಸಿದ ಹಾಗೂ-ಅದಕ್ಕೆ ಪದಕ ಬಂದ ಹಾಗೂ- 


೧೦೪ ಕೆಲವು ಕಥೆಗಳು 


ನೀವು ಅದನ್ನು ನನಗೆ ಕೊಟ್ಟ ಹಾಗೂ ಕನಸು ಬಿತ್ತು- ಇದು ಮನಸ್ಸಲ್ಲಿ 

ಮಂಡ್ಗೆ ತಿಂದ್ಹಾಗಲ್ವೇನು?” 


“ಅದ್ಹೇಗೆ?” 


"ಹೌದು; ಹಳೆಯದಕ್ಕಿಂತ ಹೊಸ್ದೇ ಚೆನ್ನಾಗಿದೆ! ನೀವು ಹಳೆಯ 

ದನ್ನ ಕಳ್ಸಿದ್ರೆ?” 


""ಇಲ್ಲ, ಅದನ್ನು ಕಳ್ಸೊಲ್ಲ” 


""ಹಾಗಾದ್ರೆ ಹೊಸದನ್ನು ಕಳಸ್ತೀರೀ!? 


""ಉಹೂ ಅದನ್ನೂ ಕಳ್ಸೊಲ್ಲ!?' 


(ಶಾರದೆ ಪೆಚ್ಚುಮುಖ ಹಾಕಿಕೊಂಡು) 


"ಸರಿ ನಿರ್ಯೋಚನೆಯಾಯ್ತು! ಇಲ್ಲಾ ನೀ-ವು  ತ-ಮಾ-ಸೆ ಮಾ- 

ಡ್ತೀ-ರಿ- ಎಂದು ಕೊರಳನ್ನು. ಕೊಂಕಿಸಿ, “ಓರೆಗಣ್ಣಿನಿಂದ ಗಂಡನನ್ನು 

ನೋಡಿದಳು. 


“ತೆಗೆದೆಯಲ್ಲ ನಿನ್ನ ಆಟಾನ.'' 


"ನಿಮಗೆ ಬರೊಲ್ವೇನು ? "


ಗುಂಡಪ್ಪ ಅವನು ಹೇಳಿದ ಪ್ರಕಾರ ಮಾರನೆಯ ದಿನ ಬೆಳಿಗ್ಗೆ ಕೃಷ್ಣ 

ಮೂರ್ತಿಯ ಮನೆಗೆ ಹೋಗಲಿಲ್ಲ. ಕೃಷ್ಣಮೂರ್ತಿ, ಕಾದು ಕಾದು ಸಾಕಾಗಿ 

ಕೊನೆಗೆ ""ಹುಂ! ಒಳ್ಳೆಯದೇ ಆಯ್ತು!” ಅಂದುಕೊಂಡ. ಹಾಗಾದರೂ 

ಗುಂಡಪ್ಪ ಕಾಲೇಜಿನಲ್ಲಿ ಸಿಕ್ಕಾಗ ಅವನು ಬರದೆ ಇದ್ದುದಕ್ಕೆ ಕಾರಣವನ್ನು 

ಕೇಳಿದೆ. ಅದಕ್ಕೆ ಗುಂಡ “ಬರ್ತಿದ್ದೆ ಕಣೋ! ಆದರೆ ಏನ್ಮಾಡ್ಲಿ, ಏಳೋದೇ 

ಹೊತ್ತಾಯ್ತು. ರಾತ್ರಿ ಎರಡು ಗಂಟಿ ತನಕ "ನೋಟ್ಸ್? ಬರೀತಾ ಕೂತ್ಬಿಟ್ಟೆ. 

ಆದ್ರೂ ಇನ್ನೂ ಮುಗ್ದಿಲ್ಲ. ಬೆಳಿಗ್ಗೆ ಎದ್ಮೇಲೆ ಕಾಲೇಜಿಗೆ ಹೊರಡೋತನ್ಕ 

ಬರೀತಿದ್ದೆ. ಊಟಕ್ಕೂ ಪುರಸತ್ತಿಲ್ಲ'' ಎಂದು ಹೇಳಿದ. ಕೃಷ್ಣಮೂರ್ತಿ 


“ಕಥೆ ಕಳಿಸಿಬಿಡಬೇಕಲ್ಲೋ''--ಎಂದ. 


“ಕಳ್ಸು. ಕಳ್ಸು. ಅದು ವಾಪಸು ಬಂದಮೇಲೆ ನೋಡಿದರಾಯ್ತು, 

ಅದನ್ನೂ 'ಫೇರ್ ಕಾಪಿ' ಮಾಡಿಸುವೆಯಷ್ಟೆ !"  


ನಾವೂ ಹಾಗೆಯೇ ! ೧೦೫ 


"ಓಹೋ" 


"ಎರಡನ್ನೂ ಕಳಿಸ್ತಿಯೋ ಅಥವಾ” 


"ಒಂದು ನನ್ನ ಹೆಸರಿನಲ್ಲಿ, ಇನ್ನೊಂದು” 


"ಉಹು! ಉಹು! ಖಂಡಿತ ಬೇಡ. ನಾನು ಮೊದಲೇ ಹೇಳಿದ್ದೇನೆ.” 

.... .... .... .... ....


ಇಂದು ಕಥೆ ಕಳಿಸುವುದಕ್ಕೆ ಕೊನೆಯ ದಿನ. ಕೃಷ್ಣಮೂರ್ತಿ ಅವನ 

ಕೊಠಡಿಯಲ್ಲಿ ಕುಳಿತುಕೊಂಡಿದ್ದ. ಎದುರಿಗೆ ಮೇಜಿನ ಮೇಲೆ ಅವನು ಬರೆದ 

ಎರಡು ಕಥೆಯ ಪುಸ್ತಕಗಳೂ ಇದ್ದುವು. `ಯಾವುದನ್ನು ಕಳಿಸಬೇಕೆಂದು 

ಅವನ ಮನಸ್ಸು ಇನ್ನೂ ನಿರ್ಧರವಾಗಿರಲಿಲ್ಲ. ತಾನಾಗಿ ನಿರ್ಧರಿಸುವುದಕ್ಕೆ 

ಅವನ ಮನಸ್ಸಿಗೆ ಶಕ್ತಿ ಸಾಲದೆಿ ಹೋಯಿತು. ಅದು ಒಂದು ಸಲ “ಹಳೆ 

ಯದು? ಅನ್ನುವುದು. ಹಳೆಯದನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ 

"ಹೊಸದು! ಹೊಸದು!” ಎಂದು ಧ್ವನಿಮಾಡುವುದು.  ಹೊಸದನ್ನೇ ಕಳಿ 

ಸೋಣವೆಂದು ಅದರ ಕಡೆ ನೋಡಿದಾಗ "ಬೇಡಾ! ಬೇಡಾ! ಎಂದು 

ಪ್ರತಿಧ್ವನಿಯಾಗುವುದು. ಅಂತು ಯಾವುದನ್ನೂ ಇತ್ಯರ್ಥ ಮಾಡಲಾಗಲಿಲ್ಲ. 

ಆ ಸಮಯಕ್ಕೆ ಸರಿಯಾಗಿ ಶಾರದೆ ಅಲ್ಲಿಗೆ ಬಂದಳು. 


"ಇದೇನು, ಹೀಗೆ ಕುಳಿತಿದ್ದೀರಿ?''--ಎಂದು ಕೇಳಿದಳು. ಕೃಷ್ಣ 

ಮೂರ್ತಿ ತನ್ನ ಮನಸ್ಸಿನಲ್ಲಿದ್ದ ಕಷ್ಟವನ್ನು ಹೇಳಿದ. 


“ಅಯ್ಯೋ! ಇಷ್ಟ್ಯಾಕೆ ಯೋಚನೆ? ನನ್ಮಾತು ಕೇಳಿ. ಹೊಸದನ್ನೇ 

ಕಳ್ಸಿ.” 


“ಉಹು! ಇಬ್ಬರ ಮಾತೂ ಬೇಡ. ಚೀಟ ಬರೆದುಹಾಕಿ ಎತ್ತಿ ಬಿಡೋಣ. 

ಯಾವುದು ಎಂದು ಬರುತ್ತೋ ಅದು!” 


“ಹು! ಹಾಗೇ ಹಾಗಲಿ!?--(ಮನಸ್ಸಿನಲ್ಲಿ) ""ದೇವರೇ, ಹೊಸ್ದನ್ನೇ 

ಕಳ್ಳೋಹಾಗಾಗ್ಲಪ್ಪ !” 


ಹೊಸದು, ಹಳೆಯದು ಎಂದು ಎರಡು ಚೀಟಿ ಬರೆದು ಮಡಿಸಿ ಹಾಕಿದ. 

ಶಾರದೆಯನ್ನೇ ಎತ್ತು ಅಂದ. ಶಾರದೆ ಕಣ್ಣುಮುಚ್ಚಿಕೊಂಡು--"ದೇವರೇ?' 

ಎಂದು ಮೆಲ್ಲಗೆ ಹೇಳಿ ಚೀಟ ಎತ್ತಿದಳು. ಬಿಚ್ಚಿ ಓದಿದರೆ “ಹೊಸದು” 

ಎಂದು ಇತ್ತು. ಕೃಷ್ಣಮೂರ್ತಿ ಆ ದಿನ ಹೊಸ ಕಥೆಯನ್ನೇ ಕಳಿಸಿಬಿಟ್ಟ. 


೧೦೬ ಕೆಲವು ಕಥೆಗಳು 


ಇದಾದ ಮೂರು ದಿನಗಳಲ್ಲಿ ಶಾರದೆ ತವರುಮನೆಗೆ ಹೋದಳು. ಕೃಷ್ನ 

ಮೂರ್ತಿಗೆ ಒಂದೆರಡು ದಿನಗಳಿಂದ ಮನಸ್ಸಿಗೆ ಶಾಂತಿ ಇಲ್ಲ; ಬೇಜಾರು. 

ಕಾಲೇಜಿನಲ್ಲಿ ಬೇಜಾರು, ಮನೆಯಲ್ಲಿ ಬೇಜಾರು, ಆಟದಲ್ಲಿ ಬೇಜಾರು, ಊಟ 

ದಲ್ಲಿ ಬೇಜಾರು. ಅವನಿಗೆ ಬೇಜಾರು ಬೆನ್ನು ಹತ್ತಿ ಬಿಟ್ಟಿತ್ತು. ಗುಂಡಪ್ಪ ಇಷ್ಟು 

ದಿನ ಸೋಮಾರಿಯಾಗಿದ್ದು, ಈಗ "ನೊಟ್ಸ್" ಬರೆವ ಗಲಾಟಿಯಲ್ಲಿ ಇವನ 

ಜೊತೆಯಲ್ಲಿ ಹೆಚ್ಚು ಸೇರದಹಾಗಾಯ್ತು. ಕೃಷ್ಣಮೂರ್ತಿನೇ ಒಂದೆರಡು ಸಲ 

ಅವನನ್ನು ನೋಡಿಕೊಂಡು ಬರೋಣ ಎಂದು ಹೊರಟ. ಆದರೆ ಹೊರಟಾಗ 

ಇದ್ದ ಮನಸ್ಸು ಹೊರಟು ಸ್ಪಲ್ಪ ದೂರ ಹೋದ ಮೇಲೆ ಇರಲಿಲ್ಲ. ಗುಂಡನ 

ಕೊಠಡಿಗೆ ಹೋಗುವುದು ಬಿಟ್ಟು ಎಲ್ಲಿಯೋ ಹುಚ್ಚನಂತೆ ಹೊರಟುಬಿಟ್ಟ. 

ಹೆಂಡತಿ ಹಿಡಿಸಿದ ಹುಚ್ಚು ಇರಬಹುದೇ ? ಅಥವಾ, ಎಷ್ಟೆಷ್ಟು ತರ ಹುಚ್ಚು 

ಇರುತ್ತದಯೋ! | ದಿನ ಕಾಲೇಜಿನಲ್ಲಿ ಗುಂಡಪ್ಪ ಕೃಷ್ಣಮೂರ್ತಿ  

ಸಿಕ್ಕಾಗ "ಏನೋ ಅಪರೂಪವಾಗಿ ಬಿಟ್ಟೆ!” ಎಂದು ಕೇಳಿದ. 


"ಏನೋ ಬೇಜಾರು ಕಣೋ” ಎಂದು ಉತ್ತರ ಬಂತು. 


"ಯಾತಕ್ಕೆ ಹೊರಡೋದು ತಾನೇ-ಮಾ-ಅಲ್ಲ ಹೆಂಡತಿ ಮನೆಗೆ! 

ಮುಂದಿನ ವಾರ ಸಲೀಸಾಗಿದೆ. ನಾಳೆ ಶನಿವಾರ-ನಾಳಿದ್ದು ಭಾನುವಾರ. 

ಸೋಮವಾರ ಬೆಳಿಗ್ಗೆ ಕ್ಲಾಸು. ಮಂಗಳವಾರ ರಜ. ಬುಧವಾರ ಒಂದೇ 

"ಪಿರಿಯಡ್ಡು.? ಗುರುವಾರ ರಜ. ಶುಕ್ರವಾರ ಚಕ್ರಕೊಟ್ರೆ ಮತ್ತೆ ಶನಿನಾರ 

ಭಾನುವಾರ-ನೋಡು-ಯೋಚನೆ ಮಾಡ್ನೋಡು.?? 


ಗುಂಡಪ್ಪ ಸಲಹೆ ಕೊಟ್ಟುದು ಎಷ್ಟೋ ಅಷ್ಟೇ, ಕೃಷ್ಣಮೂರ್ತಿ ಹೋಗ 

ಲಿಲ್ಲ. ಹಾಗೂ ಹೀಗೂ ಒಂದುವರೆ ತಿಂಗಳು ಕಳೆಯಿತು. ಅಷ್ಟು ಹೊತ್ತಿಗೆ 

ಸಂಘದಿಂದ ಕಥೆಗಳ ಸ್ಪರ್ಧೆಯ ಫಲಿತಾಂಶ ಪ್ರಚುರವಾಯಿತು. ಕೃಷ್ಣ 

ಮೂರ್ತಿ ಕಳುಹಿದ್ದ ಕಥೆಗೆ ಮೊದಲನೆಯ ಸ್ಥಾನ ಕೊಡಲ್ಪಟ್ಟಿತ್ತು. ಈವರ್ತ 

ಮಾನದಿಂದ ಕೃಷ್ಣಮೂರ್ತಿಯ ಸ್ನ್ನೇಹಿತರಿಸೆಲ್ಲಾ ಬಹಳ ಸಂತೋಷವಾ 

ಯಿತು. ಆದರೆ ಅವನಿಗೆ ಮಾತ್ರ ಸಂತೋಷವಾದ ಹಾಗೆ ಕಾಣಲಿಲ್ಲ. ಎಲ್ಲರಿ 

ಗಿಂತ ಗುಂಡಪ್ಸನಿಗೆ ಬಹಳ ಸಂತೋಷ. ಅವನಿಗೆ ಗೊತ್ತಾದ ಕೂಡಲೇ 

ಕೃಷ್ಣ [ಮೂರ್ತಿಯನ್ನು ಕಂಡು “ಲೋ! ನೋಡೋ ಈಗ, ಬೆಪ್ತಕಡಿ! 

ಕಳ್ಸೋದೇ ಇಲ್ಲ, ಅಂದ್ಬಿಟ್ಟಿದ್ಧೆಯೆಲ್ಲೋ? ಎಂದು ಹಾಸ್ಯಮಾತಾಡಿದ. 


ನಾವೂ ಹಾಗೆಯೇ! ೧೦೭ 


"ಏನೋ ಕಳಿಸ್ಟಾರದಾಗಿತ್ತು-ಕಳಿಸ್ಬಿಟ್ಟೆ" 

"ವಹವಾ! ಈಗ ಮೆಡ್ಲು ಬಂದ್ಮೇಲೆ!" 


ಕೃಷ್ಣ ಮೂರ್ತಿಗೆ, ಗುಂಡಪ್ಪನ ಈ ಮಾತಿಗೆ ಏನು ಉತ್ತರ ಕೊಡ 

ಬೇಕೆಂದು ಗೊತ್ತಾಗಲಿಲ್ಲ. ಏನೋ ನೆವಮಾಡಿಕೊಂಡು ಅಲ್ಲಿ ನಿಲ್ಲದೆ ಹೊರಟು 

ಹೋದ. 


ಹೀಗೆಯೇ ಕೆಲವು ದಿನಗಳು ಕಳೆದುವು. ಶಾರದೆಯಿಂದ ಕಾಗದ 

ಬಂತು. ಒಂದೆರಡು ದಿನಗಳಲ್ಲಿಯೇ ಬರುವುದಾಗಿ ಬರೆದಿದ್ದಳು. ಕೃಷ್ಣ 

ಮೂರ್ತಿ ಆ ಎರಡು ದಿನಗಳನ್ನು ಹೇಗೆ ಕಳೆದನೋ! 


ಶಾರದೆ ಬಂದಳು. ಬಂದೊಡನೆಯೇ ಮೊದಲನೆಯ ಪ್ರಶ್ನೆ “ಕಥೆಯ 

ವಿಚಾರ ಏನಾಯ್ತ?'' ಎಂದು. ಕೃಷ್ಣಮೂರ್ತಿ ಬಹುಮಾನ ಬಂದ ವಿಷಯ 

ಹೇಳಿದ. ಶಾರದೆ ಸಂತೋಷದಿಂದ ಉಬ್ಬಿ ಹೋದಳು. "ನಿಜವಾಗಿಯೂ  

ಮಂಡಿಗೆ ತಿಂದ ಹಾಗೆ ಆಯ್ತು!'' ಎಂದು ಹೇಳಿ ಗಂಡನ ಮುಖನನ್ನು ನೋಡಿ 

ನಕ್ಕಳು. ಕೃಷ್ಣಮೂರ್ತೀನೂ ನಕ್ಕ. ಆದರೆ ಅವನ ಮನಸ್ಸು ನಗುವ ಹಾಗೆ 

ಇರಲಿಲ್ಲ. ಬಲವಂತದ ನಗು. ತಾನು ನಗದೆ ಇದ್ದರೆ ಅವಳು ಎಲ್ಲಿ ಅಳು 

ತ್ತಾಳೋ ಎಂದು ಅವನಿಗೆ ಭಯ. ನಡೆದಿದ್ದುದೆಲ್ಲಾ ಜ್ಞಾಸಕದಲ್ಲಿ ಇತ್ತು. 

ಅದಕ್ಕೇ ಆ ಸುಳ್ಳು ನಗುವನ್ನು ಹೊರಕ್ಕೆ ನೂಕಿದ. 


೨ 

ಈ ದಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ವಾರ್ಷಿಕೋತ್ಸವ. 

ಅಂತಹ ಉತ್ಸವವನ್ನು ನಿಮ್ಮಲ್ಲಿ ಕೆಲವರು ನೋಡಿದ್ದೀರಿ; ಇದ್ದು ಉಳಿದವರು 

ಅದರ ವರ್ಣನೆಯನ್ನು ಪ್ರಬುದ್ಧ ಕರ್ನಾಟಕದಲ್ಲಿ ಓದಿದ್ದೀರಿ. ಆದುದರಿಂದ 

ಇಲ್ಲಿ ಆ ಉತ್ಸವದ ವರ್ಣನೆ ಅನಾವಶ್ಯಕ. ಸಂಘದಿಂದ ಏರ್ಪಟ್ಟ ಸ್ಪರ್ಧೆ 

ಗಳಲ್ಲಿ ತೇರ್ಗಡೆಯಾದವರಿಗೆಲ್ಲಾ ಈ ಉತ್ಸವ ಕಾಲದಲ್ಲೆ ಬಹುಮಾನವನ್ನು 

ಹಂಚುವುದು. 


ಸಾಯಂಕಾಲ ಐದು ಘಂಟೆಯಾಗಿತ್ತು. ಆದರೂ ಕೃಷ್ಣಮೂರ್ತಿ 

ಇನ್ನೂ ಮನೆ ಬಿಟ್ಟು ಹೊರಬರಲಿಲ್ಲ. ಶಾರದೆಗೆ ಆಶ್ಚರ್ಯವಾಯಿತು. 


೧೦೮ ಕೆಲವು ಕಥೆಗಳು 


“ಯಾಕೆ? - ಹೋಗೊಲ್ವೆ?” ಎಂದು ಕೇಳಿದಳು. “ಇಲ್ಲ; ಏನೋ 

ಬೇಜಾರು? - ಎಂದು ಉತ್ತರ ಬಂತು. ಶಾರದೆಗೆ ಸ್ವಲ್ಪ ಅಸಮಾಧಾನವಾ 

ಯಿತು. ತಾನು ಹತ್ತಿರದಲ್ಲಿದ್ದೂ ಬೇಜಾರು ಅಂದನಲ್ಲಾ ಎಂದು. ಉತ್ಸವಕ್ಕೆ 

ಹೋಗಲೇ ಕೂಡದು ಬಂದು "ಮಾಡಿಕೊಂಡಿದ್ದವನು, ಹೆಂಡತಿಯ ಬಲವಂತ  

ಹೆಚ್ಚಾಗಿ ಹೊರಟ. ಶಾರದೆ, “ಅಲ್ಲಿ ಮುಗಿಯುತ್ತ  ಬೇಗ ಬಂದುಬಿಡಿ. 

ಹೊತ್ತಗಿ ಬಂದರೆ ನಾ ಸುಮ್ಮನೆ ಇರೊಲ್ಲ! " ಎಂದು ಹೇಳಿ ಒಂದು ಸಲ 

ಅವನನ್ನು ಚೆನ್ನಾಗಿ ಕಣ್ಣುತುಂಬಾ ನೋಡಿ ಒಳಕ್ಕೆ ಹೊರಟು ಹೋದಳು. 


ಕಾಲೇಜಿನಲ್ಲಿ ಉತ್ಸವದ ಕಾರ್ಯಗಳೆಲ್ಲಾ ಕ್ರಮವಾಗಿ ನಡೆದು ಸ್ಪರ್ಧೆ 

ಯಲ್ಲಿ ತೇರ್ಗಡೆಯಾದವರಿಗೆ ಬಹುಮಾನವನ್ನು ಹಂಚುವ ಹೊತ್ತು ಬಂತು. 

ಸಂಘದ ಕಾರ್ಯದರ್ಶಿಗಳು ತೇರ್ಗಡೆಯಾದವರ ಹೆಸರುಗಳ ಪಟ್ಟಿಯನ್ನು 

ಹಿಡಿದುಕೊಂಡು ಓದಿದರು. ಪದಕ ಬಹುಮಾನವೇ ದೊಡ್ಡ ಬಹುಮಾನ. 

ಆದುದರಿಂದ ಕೃಷ್ಣಮೂರ್ತಿಯ ಹೆಸರನ್ನು ಮೊದಲು ಓದಿದರು. ಅಗ್ರಸನಾಧಿ 

ಪತಿಗಳು ಪದಕವನ್ನು ಕೈಗೆ ತೆಗೆದುಕೊಂಡರು. ಕೃಷ್ಣಮೂರ್ತಿ ಬರಲಿಲ್ಲ. 

ಕಾರ್ಯದರ್ಶಿಗಳು ಪುನಃ ಅವನ ಹೆಸರನ್ನು ಕೂಗಿದರೂ ಕೃಷ್ಣ 

ಮೂರ್ತಿ ಇಲ್ಲ! ಎಲ್ಲರಿಗೂ ಆಶ್ಚ ರ್ಯ! ಗುಂಡಪ್ಪನಿಗೆ ಬಹಳ ವ್ಯಸನವಾ 

ಯಿತು. ಎದ್ದು ತಾನೇ ಅವನ ಪರವಾಗಿ ಆ ಪದಕವನ್ನು ತೆಗೆದುಕೊಳ್ಳುವು 

ದಾಗಿ ಹೇಳಿದ. ಅಗ್ರಸನಾಧಿಪತಿಗಳು ಅವನ ಮುಖನನ್ನು ನೋಡಿ ನಗುತ್ತ 

“ಅಯ್ಯಾ, ಸದ್ಯಕ್ಕೆ ನೀನೇ ಕೃಷ್ಣಮೂರ್ತಿ”? ಎಂದು ಹೇಳಿ ಆ ಪದಕವನ್ನು 

ಅವನ ಕೈಗೆ 

ಯಥಾಕ್ರಮವಾಗಿ ಸಭೆ ಮುಕ್ತಾಯವಾಯಿತು. 


ಸಭೆಯು ಮುಗಿದ ಮೇಲೆ ಗುಂಡಪ್ಪ ಪದಕವನ್ನು ಕೃಷ್ಣಮೂರ್ತಿಗೆ 

ಕೊಡುವುದಕ್ಕೋಸ್ಕರ ಅವನ ಮನೆಗೆ ಹೋದ. ಕ ; ಪ್ಹಮೂರ್ತಿ ಮನೆ 

ಯಲ್ಲಿಯೂ ಇರಲಿಲ್ಲ. “ಬೆಳಿಗ್ಗೆ ನೋಡಿದರಾಯ್ತು?' ಅಂದುಕೊಂಡು 

ಹಿಂತಿರುಗಿ ಸ್ವಲ್ಪ ದೂರ ಬಂದಿದ್ದ. ದೂರದಲ್ಲಿ ಕ್ಕ ಷ್ಣಮೂರ್ತಿ ಬರುತ್ತಿದ್ದು 

ದನ್ನು ಕಂಡ. ಅವನು ತಲೆಬಗ್ಗಿಸಿಕೊಂಡು ನಿಧಾನವಾಗಿ ನಡೆದು ಬರು 

ತ್ತಿದ್ದ. ಇಬ್ಬರೂ ಸಮೀಪಿಸಿದರು. ಆದರೂ ಕೃಷ್ಣಮೂರ್ತಿ ತಲೆಯೆತ್ತಲಿಲ್ಲ- 


ನಾವೂ ಹಾಗೆಯೇ! ೧೦೯ 


ಗುಂಡ, "ಲೋ, ಎಲ್ಲೋ ಹೋಗಿದ್ದೆ ಇಷ್ಟು ಹೊತ್ತೂ?' ಎಂದು ಕೇಳಿದ. 

ಕೃಷ್ಣಮೂರ್ತಿ ಆಗ ತಲೆಯೆತ್ತಿ “ಆ-ಆ? ಓ! ನೀನೋ!” ಎಂದ. 


ಗುಂಡ--""ಯಾಕೋ ಬರ್ಲಿಲ್ಲ ಈವತ್ತು?'' ಎಂದು ಕೇಳಿದ. 

“ಯಾಕೆ ಬರಬೇಕಾಗಿತ್ತು?'' 

"ಯಾಕೆ! ಪದಕ ತೆಗೆದುಕೊಳ್ಳು ವುದಕ್ಕೆ!” 


ಇಬ್ಬರೂ ಮಾತನಾಡುತ್ತ ಗುಂಡಪ್ಸನ ಕೊಠಡಿಯ ಕಡೆಗೆ ಹೊರಟರು. 

ಕೃಷ್ಣಮೂರ್ತಿ ಸ್ವಲ್ಪ ಹೊತ್ತು ಮೌನವಾಗಿದ್ದು ಆಮೇಲೆ ಮಾತನಾಡಲು 

ಪ್ರಾರಂಭಿಸಿದ. 


“ಇಲ್ಲಿ ಕೇಳು, ಗುಂಡ, "ನಮ್ಮ ಹಣೇ ಬರಹದ ಯೋಗ್ಯತೆ ನಮಗೆ 

ಗೊತ್ತೇ ಇರುತ್ತದೆ? ಎಂದು ಕೆಲವರ ನಂಬಿಕೆ. ಅದು ಶುದ್ಧ ಸುಳ್ಳು. ನಮ್ಮಲ್ಲಿ 

ಸ್ಪಲ್ಪ ಯೋಗ್ಯತೆ ಇದ್ದರೂ ಅದನ್ನು ಅಗಾಧವಾಗಿ ಮಾಡಿ ಜನರನ್ನು ಮರುಳು 

ಮಾಡಲು ಪ್ರಯತ್ನಿಸುತ್ತೇವೆ. ಹುಳುಕು ಎಷ್ಟಿದ್ದರೂ ಇದ್ದೇ ಇರುತ್ತೆ! 

ಅದರ ಕಡೆ ಕಣ್ಣು ಮುಚ್ಚಿ ಕೊಳ್ಳುತ್ತೇವೆ. ಅದು ಹುಳುಕು ಅಲ್ಲ ಎಂದು 

ನಮ್ಮ ಮನಸ್ಸಿಗೆ ನಾವೇ ಹೇಳಿಕೊಳ್ಳುತ್ತೇವೆ. ಇದು ಆತ್ಮವಂಚನೆ. ಅನೇಕ 

ವೇಳೆ-” 


“ಇದೇನೊ, ಉತ್ಸವಕ್ಕೆ ಯಾಕೆ ಬಂದಿಲ್ಲ ಅಂದ್ರೆ ಈ ಉಪನ್ಯಾಸ 

ತೆಗೆದೆ !?' 


"ನಾನು ಹೇಳುವುದನ್ನು ಪೂರ್ತಿ ಕೇಳು. ಆಮೇಲೆ ನೀನು ಕೇಳಿದ್ದ 

ಕ್ಕೆಲ್ಲಾ ಉತ್ತರ ಕೊಡುತ್ತೇನೆ. ಕೇಳು, ಅನೇಕ ವೇಳೆ ನಮ್ಮ ಮೋಸಕ್ಕೆ 

ನಾನೇ ಬಲಿ ಬೀಳುತ್ತೇವೆ. ನಮಗೆ ಗೊತ್ತಿಲ್ಲದ ಹಾಗೆ ಅನೇಕ ದುರ್ಗುಣ 

ಗಳು ನಮ್ಮಲ್ಲಿ ಅಡಗಿರಬಹುದು. ವಿಷದ ಬೀಜಗಳಂತೆ ಎಲ್ಲಿಯೋ ಹುದುಗಿ 

ಕೊಂಡು ಇರುತ್ತವೆ. ಸರಿಯಾಗಿ ಹದಬಿದ್ದಾಗ ಮೊಳಕೆಗೆ ಪ್ರಾರಂಭ. 

ಆಮೇಲೆ ಅದರ ಬೆಳವಣಿಗೆಗೆ ತಡೆಯೇ ಇಲ್ಲ. ಯಾರದ್ದೋ ಒಬ್ಬರ ಹಣ್ಣಿನ 

ತೋಟ ಎಂದು ಇಟ್ಟುಕೊ ; ಅದರಲ್ಲಿ ಒಳ್ಳೇ ಜಾತಿಯ ಕಿತ್ತಳೆಹಣ್ಣಿನ ಗಿಡ 

ಗಳು, ಅವುಗಳ ತುಂಬ ಹಣ್ಣುಗಳು. ಅವುಗಳ ಮನೋರಂಜಕವಾದ 

ಬಣ್ಣ. ಒಳ್ಳೇ ರಸದಿಂದ ಉಬ್ಬಿ ಬೆಳೆದ ಅವುಗಳ ಸೊಂಪು; ತಿನ್ನುವುದಕ್ಕೆ 


೧೧೦ ಕೆಲವು ಕಥೆಗಳು 


ಮುಂಚೆಯೇ ಅವುಗಳನ್ನು ನೋಡಿ ಮನಸ್ಸಿಗೆ ಅನುಭವವಾದ ಅವುಗಳ ರುಚಿ; 

ತಿನ್ನಬೇಕು ಎಂಬ ಲಾಲಸೆ--ಇನೆಲ್ಲಾ ಮನಸ್ಸನ್ನು ಅಸಹರಿಸುತ್ತವೆ. 

ಇದಕ್ಕೆ ಅನುಕೂಲವಾಗಿ, ಆ ತೋಟಕ್ಕೆ ಕಾವಲುಗಾರರು ಯಾರೂ ಇಲ್ಲದೆ 

ನಿರ್ಜನವಾಗಿದ್ದರೆ, ಆಗ ಅದರ ಹತ್ತಿರ ಅಕಸ್ಮಾತ್ತಾಗಿ ಹೋದ ಮನುಷ್ಯನ 

ಅಡಗಿದ ಗುಣಗಳು ಪರೀಕ್ಷಗೆ ಎದುರಾಗುತ್ತವೆ. ಅವನು ತನ್ನ ಸ್ಥಳದಿಂದ 

ಹೊರಟಾಗ ಅವನ ಮನಸ್ಸಿನಲ್ಲಿ ಯಾವ ವಿಧವಾದ ಯೋಚನೆಯೂ ಇಲ್ಲದೆ 

ಇದ್ದಿರಬಹುದು. ಅಂದರೆ ಕದಿವ ಗುಣ ಯೋಚನೆಯಾಗಿ ಪರಿಣಮಿಸದೆ 

ಇರಬಹುದು. ಆ ಗುಣ ಅವನಲ್ಲಿ ಅಡಗಿ ಇದ್ದುದೇ ಆದರೆ ಅದು ಈ ಸನ್ನಿ 

ವೇಶದಲ್ಲಿ ಅವನ ಎಲ್ಲಾ ಸ್ಥೈರ್ಯವನ್ನು ಒದ್ದು ಹೊರಹಾಕುತ್ತದೆ. ಆಗಲೂ 

ಅವನು ಆ ಕೆಲಸವನ್ನು ಕೆಟ್ಟದ್ದು ಎಂದು ತೊರುವ ಹಾಗೆ ಯೋಚಿಸುವುದಿಲ್ಲ. 

ದುರಭ್ಯಾಸಗಳನ್ನು ಮಾಡುವ ಅನೇಕರು, ಪ್ರಾರಂಭದಲ್ಲಿ ಯಾರಾದರೂ 

ಆಕ್ಷೇಪಿಸಿ ಕೇಳಿದರೆ. "ಸಮ್ಮನೆ !-ತಮಾಷೆಗೆ ಸರಿ [-ಇದನ್ಯಾವನು 

ಅಭ್ಯಾಸ ಮಾಡೋನು!” ಎಂದು ಉಡಾಫೆ ಮಾಡುತ್ತಾರೆ. ವಿಷವನ್ನು 

ತಮಾಷೆಗೆ ತಿಂದರೆ ಫಲನೇನಾದರೂ ವ್ಯತ್ಯಾಸವಾಗುತ್ತೇನು? ಇದು ಪಕ್ಕಾ 

ಆತ್ಮವಂಚನೆ.” 


ಇಷ್ಟು ಹೊತ್ತಿಗೆ ಇಬ್ಬರೂ ಗುಂಡಪ್ಪನ ಕೊಠಡಿಗೆ ಬಂದರು. ಗುಂಡಪ್ಪ 

ದೀಪ ಹೆಚ್ಚಿದ. ಇಬ್ಬರೂ ಕುಳಿತುಕೊಂಡರು. ಗುಂಡ ಪದಕವನ್ನು ತೆಗೆದು 

ಕೃಷ್ಣಮೂರ್ತಿ ಕೈಗೆ ಕೊಟ್ಟು “ಸರಿ, ನಿನ್ನ ಉಪನ್ಯಾಸ ಸ ಮುಗಿಯಿತಷ್ಟೆ? 

ಈಗ ಹೇಳು. ಯಾಕೆ ಬರಲಿಲ್ಲ?" ಎಂದು ಕೇಳಿದ. ಕೃಷ್ಣಮೂರ್ತಿ ಆ 

ಮಾತಿಗೆ ಉತ್ತರ ಕೊಡದೆ ಆ ಪದಕವನ್ನು ತೆಗೆದುಕೊಂಡು, ಎಲ್ಲಿ ಕೋಟನ 

ಮೇಲೆ ಹಾಕಿಕೊಂಡರೆ ಹೇಗೆ ಇರುತ್ತದೆ, ನೋಡೋಣ” ಎಂದು ಹೇಳಿ 

ಅದನ್ನು ಅವನ ಅಂಗಿಯ ಮೇಲೆ ಚುಚ್ಚಿ, ಅವನನ್ನು ಎಬ್ಬಿಸಿ ಬೆಳಕಿಗೆ ಎದು 

ರಾಗುವಂತೆ ತಿರುಗಿಸಿದ. ಗುಂಡ ನಗುತ್ತ ಯುದ್ಧದಲ್ಲಿ ಸಾಹಸ ಮಾಡಿ 

ಪದಕವನ್ನು ಪಡೆದ ಸಿಪಾಯಿಯಂತೆ ನೆಟ್ಟಗೆ ನಿಂತುಕೊಂಡು ಎದೆಯನ್ನು 

ಸ್ವಲ್ಪ ಮುಂದಕ್ಕೆ ಚಾಚಿ, ತಲೆಯನ್ನು ಸ್ವಲ್ಪ ಗರ್ವದಿಂದ ಮೇಲಕ್ಕೆ ಎತ್ತಿದ.

ಕೃಷ್ಣಮೂರ್ತಿ ಹಾಗೆಯೇ ಸ್ವಲ್ಪ ಹಿಂದಕ್ಕೆ ಸರಿದು, ಅವನನ್ನೂ, ಅವನ 

ಎದೆಯ ಮೇಲೆ ಬೆಳಕಿನಲ್ಲಿ ಹೊಳೆಯುತ್ತಿದ್ದ ಪದಕವನ್ನೂ, ಅವನ ಮುಖದ 


ನಾವೂ ಹಾಗೆಯೇ! ೧೧೧ 


ಮೇಲಿನ ಆ ಹುಸಿಗರ್ವವನ್ನೂ, ಅವನು ನಿಂತಿದ್ದ ವರಸೆಯನ್ನೂ ನೋಡಿ, 

ದೊಡ್ಡ ದಾಗಿ ಕಣ್ಣು ಬಿಟ್ಟು ಹಸನ್ಮುಖಿಯಾಗಿ “ಹಾ! ನಿನಗೆ ಪದಕ ಎಷ್ಟು 

ಚೆನ್ನಾಗಿ ಒಪ್ಪುತ್ತದೆ ಎಂದ. ಅವನ ಧ್ವನಿ ಸ್ವಲ್ಪ, ಅದುರಿದ ಹಾಗಾ 

ಯಿತು. ಗುಂಡಪ್ಪ ದೊಡ್ಡದಾಗಿ ನಕ್ಕು “ಓಹೊ! ನಿನಗೂ ಅಷ್ಟೇ ಚೆನ್ನಾಗಿ 

ಒಪ್ಪುತ್ತೆ!” ಎಂದ. ಕೃಷ್ಣಮೂರ್ತೀನೂ ನಕ್ಕ. ಆದರೆ ಅದು ಒಳಗಿನಿಂದ 

ಬಂದ ನಗು ಮುಖದ ಮೇಲೆ ಮಾತ್ರ ನಗು. ಅವನ ಹೃದಯ 

ಅಳುತ್ತಿತ್ತು. ಅವನು ನಟ್ಟ ದೃಷ್ಟಿಯಿಂದ ಗುಂಡನ ಮುಖವನ್ನು ನೋಡ 

ತೊಡಗಿದ. ನೋಡುತ್ತಿದ್ದ ಜಾಗ ಅವನ ಆ ಮೇಲಿನ ನಗು ಒಳಕ್ಕೆ  

ಸರಿದು ಅವನ ಹೃದಯದ ಆಳುವಿನಲ್ಲಿ ಮುಳುಗಿತು. ಕಣ್ಣುಗಳಲ್ಲಿ ಹನಿಗೂಡಿ 

ದೀಪದ ಬೆಳಕಿನಲ್ಲಿ ಹೊಳೆದುವು. ಮುಖ ಬಾಡಿ ಅದನ್ನು ಒಂದು ವಿಧವಾದ 

ದೈನ್ಯತೆ ಆವರಿಸಿತು. ಹಾಗೆಯೇ ಅವನು ಮುಖವನ್ನು ತಗ್ಗಿಸಿದ. ಕಣ್ಣೀರು. 

ಅವನ ಕೆನ್ನೆಗಳ ಮೇಲೆ ಜಾರಿ ಹರಿಯಲಾರಂಭಿಸಿತು. ಕೃಷ್ಣಮೂರ್ತಿ 

ನಿಶ್ಶಬ್ದವಾಗಿ ಅಳುತ್ತಿದ್ದ.  ಗುಂಡಪ್ಪನಿಗೆ ಇದೊಂದೂ ಅರ್ಥವಾಗಲಿಲ್ಲ. 

ಇದ್ದಕ್ಕಿದ್ದ ಹಾಗೆಯೇ ಅವನು ಅಳುವುದನ್ನು ನೋಡಿ ಅವನಿಗೆ ದಿಗ್ಭ ಮೆ 

ಯಾಯಿತು. ಅವನು ಕೃಷ್ಣ ಮೂರ್ತಿಯ ಹತ್ತಿರ ಹೋಗಿ ಅವನ ಹೆಗಲ 

ಮೇಲೆ ಕೈಹಾಕಿ “ಲೋ, ಕಿಟ್ಟು,  ಯಾಕೋ? ಏನೋ ಇದು?” ಎಂದು 

ಕೇಳಿದ. ಕೃಷ್ಣ ಮೂರ್ತಿ ಮಾತನಾಡಲಿಲ್ಲ. ತನ್ನ ಎರಡು ಕೈಗಳಿಂದಲೂ 

ಮುಖವನ್ನು ಮುಚ್ಚಿ ಕೊಂಡುಬಿಟ್ಟ. ಕಣ್ಣೀರು ನಿಲ್ಲಲಿಲ್ಲ. ಗುಂಡ ಬಹಳ 

ವಾಗಿ ಕೇಳಿದ. ಇನ್ನ ಮೇಲೆ ಆಣೆ ಇಟ್ಟು ಕೊಂಡ, ತಮ್ಮ ಸ್ನೇಹದ 

ಮೇಲೆ ಆಣೆ ಇಟ್ಟುಕೊಂಡ. ಸ್ನೇಹದ ಮಾತು ಬಂದೊಡನೆಯೇ "ಕೃಷ್ಣ 

ಮೂರ್ತಿ ಮಾತನಾಡಿದ. ಮುಖದಿಂದ ಕೈ ತೆಗೆಯಲಿಲ್ಲ. ಹಾಗೆಯೇ  

ನಿಧಾನವಾಗಿಯೂ, ಗಂಭೀರವಾಗಿಯೂ “ಗುಂಡ! ನನ್ನಂತಹ ಪಾಪಿ ಇಲ್ಲ! 

ಏನೋ ಮಾಡುವುದಕ್ಕೆ ಹೋಗಿ ಏನೋ ಮಾಡಿಬಿಟ್ಟೆ'' ಹೀಗೆಂದು ಹೇಳಿ 

ಸುಮ್ಮನಾದ. 


"ಅದೇನು " ಅಂಥಾದ್ದು?" 


"ಆ ಪದಕ ನ್ಯಾ ಯವಾಗಿ ನನಗೆ ಬರಬೇಕಾದ್ದ ಲ್ಲ. ನಾನು ಅಯೋಗ್ಯ 

ನಾಗಿ ಬೆಟ್ಟೆ !"


೧೧೨ ಕೆಲವು ಕಥೆಗಳು 


ಗುಂಡನಿಗೆ ಆಶ್ಚರ್ಯವಾಯಿತು. 


“ಅದು ಹೇಗೆ? ಏನು ಕಳವು ಮಾಲೆ? ಸೊಗಸಾಗಿ ಗೆದ್ದಿಲ್ಲವೇ?'' 


"ಹೌದು! ಕಳವು ಮಾಲು. ಕಥೆ ನನ್ನ ಸ್ವಂತ ಸಂಕಲ್ಪನೆಯಲ್ಲ.?? 


ಗುಂಡನಿಗೆ ಇನ್ನೂ ಆಶ್ಚರ್ಯವಾಯಿತು. ಅವನು ಆಶ್ಚರ್ಯವನ್ನು 

ಕಣ್ಣುಗಳಲ್ಲಿ ತೋರಿಸುತ್ತ "ಹಾಗಾದರೆ ಯಾರದು?” ಎಂದು ಕೇಳಿದ. 


ಕೃಷ್ಣ ಮೂರ್ತಿ ಈ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತನ್ನ ಜೇಬಿನಿಂದ 

ಒಂದು ಲಕ್ಟೋಟಿಯನ್ನು ತಗೆದು ಅದನ್ನು ಗುಂಡನ ಕೈ ಗೆ ಕೊಟ್ಟ. ಗುಂಡ 

ಆತುರದಿಂದ ಅದರ ಒಳಗಿದ್ದ ಕಾಗದವನ್ನು ತೆಗೆದು ನೋಡಿದ. ತಾನು ಗುರುತು 

ಹಾಕಿಟ್ಟಿದ್ದ ಕಥೆಯ ಸಂವಿಧಾನ! ಕ್ಷಣಕಾಲ ಅವನು ಸ್ಥಂಭಿತನಾಗಿಬಿಟ್ಟ. 

ಏನು ಮಾತನಾಡಬೇಕೆಂದು ಅವನಿಗೆ ತೋರಲಿಲ್ಲ. ಆಮೇಲೆ ಆ ಕಾಗದವನ್ನೇ 

ಕೊಡುತ್ತ “ಇದೆಲ್ಲಿ ಸಿಕ್ಕಿತು ನಿನಗೆ?” ಎಂದು ಕೇಳಿದ. 


"Bradely" 


ಗುಂಡನ ಮುಖ ಗಂಭೀರವಾಯ್ತು. ಬರಬರುತ್ತ ಆ ಗಂಭೀರಭಾವವು 

ನಿಧಾನವಾಗಿ ಮಾಯವಾಗಿ ಅದರ ಮೇಲೆ ಒಂದು ಅಪೂರ್ವವಾದ ನಗು 

ತೋರಿತು. ಹಾಗೆಯೇ ಅವನು ಸ್ವಲ್ಪ ಯೋಚನಾಪರನಾದ. ಆಮೇಲೆ 

ಮೆಲ್ಲಗೆ ಕೃಷ್ಣಮೂರ್ತಿಯ ಹತ್ತಿರ ಹೋಗಿ ಅವನ ಹೆಗಲಿನ ಮೇಲೆ ಕೈಹಾಕಿ, 

“ಇದರಲ್ಲಿ ಅಳುವುದಕ್ಕೆ ನಿನಗೆ ಏನು ಕಾರಣನಿದೆಯೋ ನಾ ಕಾಣೆ! ಕಿಟ್ಟು, 

ನಾನು ಹೆಚ್ಚು ಏನೂ ಹೇಳುವುದಿಲ್ಲ. ಇಲ್ಲಿ ಕೇಳು, ನೀನು ಬೇರೆ, ನಾನು 

ಬೇರೆ ಎಂದು ನನಗೆ ಎಂದೆಂದಿಗೂ ತೋರುವುದಿಲ್ಲ. ನೀನು ಮಾತ್ರ ಬೇರೆ 

ಯೆಂದು ಎಣಿಸುವ ಹಾಗೆ ಕಾಣುತ್ತೆ. ಇಲ್ಲವಾದರೆ ಈ ಸಣ್ಣ  ವಿಷಯಕ್ಕೆಲ್ಲಾ 

ನೀನು ಇಷ್ಟು ಕಣ್ಣೀರೇಕೆ ಸುರಿಯಬೇಕು! ನನ್ನ ತಾಯಿ "ಸತ್ತು ಸ್ವರ್ಗದಲ್ಲಿ 

ದ್ದಾಳೆ. ಆಕೆಯನ್ನು ಸ್ಮರಿಸಿಕೊಂಡು ಹೇಳುತ್ತೇನೆ. "ನನ್ನಲ್ಲಿ ಆ ಭೇದ 

ಭಾವವಿಲ್ಲ'' ಎಂದು ಹೇಳಿದ ಗುಂಡನ ಕಣ್ಣುಗಳಲ್ಲಿಯೂ ಸ್ವಲ್ಪ ನೀರಾ 

ಡಿತು. ಕೃಷ್ಣಮೂರ್ತಿಗೆ ಸಮಾಧಾನವಾದಂತೆ ತೋರಲಿಲ್ಲ. ಗುಂಡಪ್ಪ 

ಕಣ್ಣೊರಸಿಕೊಂಡು ಪುನಃ ಹೇಳತೊಡಗಿದ. 


“ಕಿಟ್ಟು, ನೋಡು, ಜೀವರು ನನ್ನ ಪ್ರಯತ್ನವಿಲ್ಲದೆಯೇ ನನಗ್ಗೆ ತಿಳಿಯ 

ದಂತೆ ನನ್ನಿಂದ ಒಂದು ಒಳ್ಳೆಯ ಕೆಲಸವನ್ನು ಮಾಡಿಸಿದ್ದಾನೆ. ಆ ಕಥೆ 


ನಾವೂ ಹಾಗೆಯೇ ! ೧೧೩ 


ಯನ್ನು ನಾನೇ ಬರೆದು, ನನಗೆ ಆ ಪದಕ ಬಂದಿದ್ದರೆ ಅದಕ್ಕೆ ಈಗಿನ ಉಪ 

ಯೋಗ ಇರುತ್ತಿತ್ತೆ! ನಾನು ಆ ಪದಕವನ್ನು ತೆಗೆದುಕೊಂಡು ಏನ್ನು ಮಾಡಬೇಕಾ 

ಗಿತ್ತು? ಯಾರ ಕೊರಳಿಗೆ ಹಾಕಬೇಕಾಗಿತ್ತು! ! ಈಗ ನೋಡು. ಅದರ ಸಾರ್ಥಕ್ಯ! 

ಒಂದು ವೇಳೆ ನಾನೇ ಅದನ್ನು ಗೆದ್ದು ನಿನ್ನ ಹೆಂಡತಿಗೆ ಬಹುಮಾನವಾಗಿ  

ಕೊಟ್ಟಿದ್ದೆ-ಎಂದು ಇಟ್ಟುಕೊ. ನೀನು ಗೆದ್ದು ಕೊಡುವುದು ಹೇಗಿರುತ್ತದೆ? 

ನಾನು ಕೊಟ್ಟರೆ ಹೇಗಿರುತ್ತೆ? ಇದಕ್ಕೆ ಯಾಕೆ ಇಷ್ಟು ಕೊರಗು? ಇಷ್ಟು 

ಕಣ್ಣೀರು? ನಮ್ಮ ಸ್ನೇಹಕ್ಕೆ ಈ ಕಣ್ಣೀರೇ ಬೆಲೆಯೆ? ನಾನು ನನ್ನ ಕಥೆಗಳಲ್ಲಿ 

ನಿನ್ನ ಮಾತುಗಳನ್ನೂ ನಿನ್ನ ಅಭಿಪ್ರಾಯಗಳನೂ ಸೇರಿಸಿಲ್ಲವೆ? ಆ “ಹೊಸ 

ಮಲ್ಲಿಗೆ” ಅನ್ನೋ ಕಥೆಯಲ್ಲಿ ಮುಕ್ಕಾಲೆಲ್ಲಾ ನಿನ್ನದೇ! ಅದರಲ್ಲಿ ಹೆಸರು 

ಮಾತ್ರ ನನಗೆ ಬಂತು! ನೀನು ಹೀಗೆಲ್ಲಾ ಆಡುವುದನ್ನು ನೋಡಿ ನನಗೆ ನಗ 

ಬೇಕೋ ಅಳಬೇಕೋ ತಿಳಿಯದು! ಈ ಹಾಳುಕಾಗದ ತಾನೆ, ನನ್ನದು ಅನ್ನು 

ವುದಕ್ಕೆ ಸಾಕ್ಷಿ!? ಹೀಗೆಂದು ಕೃಷ್ಣಮೂರ್ತಿ ಕೊಟ್ಟದ್ದ ಆ ಕಾಗದವನ್ನು 

ತೆಗೆದುಕೊಂಡು ತನ್ನ ಮೇಜಿನ ಮೇಲಿದ್ದ ದೀಪದ ಹತ್ತರ ಹೋಗಿ ಅದರ 

ಮೇಲೆ ಆ ಕಾಗದವನ್ನು ಹಿಡಿದ, ಅರ್ಧ ನಿಮಿಷದಲ್ಲಿ ಎಲ್ಲಾ ಸುಟ್ಟು ಬೂದಿ 

ಯಾಯಿತು. ತಿರುಗಿನೋಡಿದ ಕೃಷ್ಣಮೂರ್ತಿ ಕೊಠಡಿಯಲ್ಲಿರಲಿಲ್ಲ. ಗುಂಡಪ್ಪ 

ತಿರುಗಿ ನಿಂತಿದ್ದ ಹಾಗೆಯೇ ಆಲಸಿ ಕೇಳಿದ. ಕೃಷ್ಣ ಮೂರ್ತಿ ಹೊರಗೆ ನಿಶ್ಶಬ 

ವಾಗಿ ಆಳುತ್ತಿದ್ದಂತೆ ಭೋಧೆಯಾಯ್ತು. 


ಅದೇ ಹ ರಾತ್ರಿ ಬಹಳ ಹೊತ್ತಾಗಿತ್ತು. ಕೃಷ್ಣಮೂರ್ತಿ ಶಾರದೆ 

ಇಬ್ಬರೂ ತಮ್ಮ ಕೊಠಡಿಯಲ್ಲಿ ಮಾತನಾಡುತ್ತ ಕುಳಿತುಕೊಂಡಿದ್ದರು. ದೀಪ 

ಸಣ್ಣಗೆ ಉರಿಯುತ್ತಿತ್ತು. ಕೃಷ್ಣಮೂರ್ತಿ ಬಹಳ ಹೊತ್ತಿನಿಂದ ಮಾತನಾಡು 

ತ್ತಿದ್ದಂತೆ ಕೋರಿತು. ಶಾರದೆ” ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದಳು. 

ಮ ಹೇಳಿ ಕೊನೆಗೆ, “ಶಾರೀ, ನನಿಗೆ ಬುದ್ಧಿ ಕಲಿಸಬೇಕು ಅಂದು 

ಕೊಂಡವನು ನಾನೇ ಕಲಿವ ಹಾಗಾಯಿತು!" ಎಂದು ಹೇಳಿ ತಲೆ ತಗ್ಗಿಸಿ 

ಕೊಂಡ. ಅವನ ಹೃದಯ ಗಾಣಕ್ಕೆ ಕೊಟ್ಟ ಕಬ್ಬಿನಂತೆ ಆಗಿತ್ತು. ಕಣ್ಣು 

ಗಳಾದ ಹನಿಗಳು ಜಾರತೊಡಗಿದುವು. ಅವನು ಮೀರ ಬಂದ ದುಃಖವನ್ನು. 

ತಡೆಯಲಾರದೆ, ಹೆಂಡತಿಯ ತೊಡೆಯ ಮೇಲೆ ತಲೆಯನ್ಸ್ಟಿಟ್ಟು, ಮುಖವನ್ನು 

ಮುಚ್ಚಿ ಕೊಂಡು, "ಶಾರಿ, ಶಾರಿ, ನಾನೆಂತಹ ಪಾಪಿಯೇ? ನೀನು 


೧೧೪ ಕೆಲವು ಕಥೆಗಳು 


ಪಾಪಿಯ ಹೆಂಡತಿಯಾದೆಯಲ್ಲಾ!'' ಎಂದು ಹೇಳಿ ಅತ್ತ. ಶಾರದೆಗೂ 

ಕಣ್ಣುಗಳಲ್ಲಿ ನೀರು ಹರಿದುಬಂದು ಬಹಳ ಹೊತ್ತು ಮೌನವಾಗಿದ್ದಳು. 

ಮಾತು ಸುಲಭವಾಗಿ ಹೊರಡುವಂತಿರಲಿಲ್ಲ. ನಾಲಗೆ ಮಾಡಲಾಗದ ಕೆಲಸ 

ವನ್ನು ಹೃದಯ ಮಾಡಿತು. ಶಾರದೆ ಪ್ರಯತ್ನ ಪೂರ್ವಕವಾಗಿ ಗಂಡನನ್ನು 

ಬಹು ಪ್ರೇಮದಿಂದ ತನ್ನ ಬಾಹುಗಳಲ್ಲಿ ಬಿಗಿದಪ್ಪಿಕೊಂಡು ಅವನ ಮುಖಕ್ಕೆ 

ತನ್ನ ಮುಖನನ್ನಿಟ್ಟು ಒಂದು ಮುತ್ತು ಕೊಟ್ಟಳು. ಇಬ್ಬರ ಕಣ್ಣೀರೂ 

ಒಂದಾಗಿ ಸೇರಿದುವು. ಒಂದು ದುಃಖದ ಕಣ್ಣೀರು, ಇನ್ನೊಂದು ಕ್ಷಮೆಯ 

ಕಣ್ಣೀರು. 


ಶಾರದೆ ಮೂರ್ತಿಮತ್ತಾದ ಕ್ಷಮೆ. ಅದನ್ನು ಅನಳು ಆ ಚುಂಬನ 

ದಿಂದ ಸ್ಥಿರೀಕರಿಸಿದಳು. 


ಸಮುದ್ರದಲ್ಲಿರುವ ಮೀನು ನೀರಿಗೆ ಗೋಚರಿಸದಂತೆ ಯಾನ ಕೆಲಸ 

ವನ್ನು ಮಾಡಬಲ್ಲುದು? 


ನಾವೂ ಹಾಗೆಯೇ! 


=================================================






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ