ಬುಧವಾರ, ಫೆಬ್ರವರಿ 7, 2024

ಕಳ್ಳರ ಕೂಟ. ದೇವುಡು ಬರೆದುದು.

 https://archive.org/details/dli.osmania.3851

ಕಳ್ಳರ ಕೂಟ 



 

ಮೊದಲನೆಯ ಭಾಗ 






ಹುಚ್ಚನೇ ಹೌದೇ? 



ಪ್ರಥಮ ಪರಿಚ್ಛೇದ 



ದಫೆೇದಾರ ನರಸಿಂಗರಾಯನು ಬಹು ಬುದ್ದಿವಂತೆ. ಅನೇಕ 

ಕಳ್ಳರನ್ನು ಹಿಡಿದುಕೊಟ್ಟು, ಮೇಲಿನ ಅಧಿಕಾರಿಗಳಲ್ಲಿ ಪ್ರೀತಿ  

ಗೌರವಗಳನ್ನು ಸಂಪಾದಿಸಿದ್ದನು. ಆದರೂ ಈ ಹಾಳು ಜನರ 

ಬಾಯಿ] ಸುಮ್ಮನಿರದು. ' ಜೇಷ್ಟ ಆಷಾಢದ ಹೊಳೆಯು ಎರಡೂ 

ದಡಗಳನ್ನು ಮೀರಿ ಹೆರಿದುಬಿದುವಂತೆ ಒಮ್ಮೊಮ್ಮೆ ಅಂಕೆಯನ್ನು 

ಮೀರಿ ನಡೆದು " ಅವನೋ ದಫೇದಾರ ನರಸಿಂಗ! ಕಳ್ಳ ! 

ಕಳ್ಳರು ಕಾಣದ ಹಾಗೆ ಮನೆ ದೋಚಿದರೆ ಅವನು ಕಂಡಹಾಗೆ 

ದೋಚುತ್ತಾನೆ. ಅವನು ಹಗಲುಕಳ್ಳ. ಕಳ್ಳನಾದರೊ ಯಾರಾ 

ದರೂ ಕಂಡರೆ ಓಡಿಹೋಗುತ್ತಾನೆ. ಇವನು ಯಾರನ್ನಾದರೂ 

ಕಂಡರೆ ಹುಡುಕುವುದು ಇನ್ನಷ್ಟು ಬಲ?" ಎಂದು ಮುಂತಾಗಿ 

ಹೇಳಿಬಿಡುವರು. ಬಹು ಕಷ್ಟಪಟ್ಟು ಕಟ್ಟಿದ ಕೃಷ್ಣರಾಜಸಾಗರದ 





ಕಟ್ಟೆಯನ್ನು ಪ್ರವಾಹವು ಆಂಜಿಸಿ ಅಧಿಕಾರಿಗಳನ್ನು ದರ್ಶನಕ್ಕೆ 

ಬರಮಾಡಿಕೊಳ್ಳುವಂತೆ ಒನ್ಮೊ ಮ್ಮೆ ಈ ಕಿಂವದಂತಿಯೂ 

ಬಲವಾಗಿ “ನಿಜವೇ?” ಎಂದು ವಿಚಾರಿಸಲ್ಕು ಸಾವಿರ ರೂಪಾಯಿ 

ಸಂಬಳದ ಅಧಿಕಾರಿಗಳನ್ನೇ ಎಷ್ಟೋಸಲ ಬರಮಾಡಿಕೊಳ್ಳುವುದು. 

ಅವರೆಲ್ಲರೂ ನರಸಿಂಗರಾಯನು ದಕ್ಷನೆಂದೂ ಪ್ರಾಮಾಣೀಕನೆಂದೂ 

ಕೈಕುಯ್ಲು ಬರೆದುಕೊಟ್ಟಿರುವಾಗ ಬಡವರ ಕೂಗು. ಅವನೆಷ್ಟು 

ನರಹತ್ಯಗಳನ್ನು ತಿಂದು ತೇಗಿರುವನೆಂದರೇನು? ದೊಡ್ಡ ಅಧಿ 

ಕಾರಿಗಳು Mr, Narasiga Rao ಅನ್ನುವಾಗ, ಹೊಟ್ಟಿಗಿಲ್ಲ 

ದವರು ನರಸಿಂಗ ಅಂದರೇನು? ಅವನು ಹೇಳುವುದಿಷ್ಟೆ. "ಹಲ್ಕಾ 

ಜನಗಳು” “ಕೈಗೆ ಸಿಕ್ಕಲಿ” ಇದರಮೇಲೆ ಮಾತಿಲ್ಲ. ನಾನಿಷ್ಟು 

ಮಾತ್ರ ಬಲ್ಲೆವು ಇದು ಬರಿಯ ಮಾತಲ್ಲ. ಎನ್ನೊ ಜನ ನಿರಪರಾಧಿ 

ಗಳು ಜೈಲಿನಲ್ಲಿ ಶ್ರೀಮಾನ್ ಧಫೇದಾರ,..... ನ ಹೆಸರು ಹೇಳಿ 

ಕೊಂಡು ಆ! ಮರೆತೆವು ಅವನ ಗುಣಾವಳಿಯನ್ನು ಪಾಡುತ್ತ 

ಇರುವುದನ್ನು ನಾನು ಕೇಳಿದ್ದೇವೆ. ಆದರೆ ನಮಗೂ ದಿಗಿಲು. ಆದ 

ಕ್ಕಾಗಿ ಸುಮ್ಮನಿರುವುದು. 



ನರಸಿಂಗರಾಯನಿಗೆ ಏನೋ ದೇವರು ಕೊಟ್ಟಿಹಾಗೆ ೧೪ || 

ರೂ|| ಸಂಬಳ ಬಗುತ್ತಿದ್ದರೂ ಆಸ್ತಿಯೇನೋ ೧೦-೧೫ ಸಾವಿರ 

ದಷ್ಟಿತ್ತು. ಪಾಪ! ೨೦ ವರ್ಷದ ಹಿಂದೆ ಅವರಿವರ ಕೈಕಾಲು 

ಹಿಡಿದು ಕೆಲಸಕ್ಕೆ ಸೇರಿದಾಗ ಆ ಮಹಾತ್ಮನ ಆಸ್ತಿಯೆಲ್ಲವೂ 

ಆಕಾಶತತ್ವದಲ್ಲಿ ಅವೃಕ್ತವಾಗಿದ್ದಿತು. ಆ ಸರಕಾರದವರ ಅನು 

ಗ್ರಹವು ಇವನಿಗೆ ಪ್ರೂಪ್ತವಾಗಿ ಮೊದಲ ತಿಂಗಳು ೬ ರೂ|| ಸಂಬ 

ಳವು ಕೈಗೆ ಬಂದಿತು. ಅದರ ಜತೆಯಲ್ಲಿಯೇ ನರಸಿಂಗರಾಯನ 

ಆಸ್ತಿಯು ವ್ಯಕ್ತವಾಗುತ್ತ ಬಂದಿತು. ನರೆಸಿಂಗರಾಯನನ್ನೇ ಯಾರಾ 

ದರೂ ಆಸ್ತಿಯ ವಿಚಾರವಾಗಿ ಕೇಳಿದರೆ ಇನ್ನೂ ಉಪನಿಷತ್ತು 

ಶಾಂತಿ ಆಗಲಿಲ್ಲವೆನ್ನುವನು. ಸ್ವಲ್ಪ ಮಂದಬುದ್ಧಿಗಳಾದ ನಮ್ಮಂತ 

ವರು ಅದೇನೆಂದು. ಕೇಳಿದೆರೆ, ಸೇದುತ್ತಿದ್ದ ಚುಟ್ಟಿನನ್ನು ಸೊಟ್ಟ 





ಗಿಟ್ಬು, ಹಾಕಿಕೊಂಡು ಮೆರೆವ ಆ "ಹೊರಳಿಸಿದ ಚಿನ್ನ?' ದ ಕನ್ನ 

ಡಕದ ಮಧ್ಯದಿಂದ, ಮೃತ್ಯುವಿನ ದಾಯಾದಿಯಂತೆ, ಮಹಾಸ್ನಿಗ್ದ 

ವಾದ ದೃಷ್ಟಿಯಿಂದ ನೋಡುತ್ತ, ಸುಮಾರು ೬ ಧಡಿಯ ತೂಗಬಹು 

ದಾದ ಆ ತೋಳಿನಿಂದ ಕಾಲುಗಂಬೆ ಕಿವಿಹಿಂಡಿ, ಕೇಳಿದವನನ್ನು 

ಹತ್ತಿರ ಎಳೆದುಕೊಂಡು ಸಣ್ಣಗೆ ಬೆನ್ನಿಕಮೇಲೆ ಸ್ವಲ್ಪ ಬಾಸುಂಡೆ 

ಏರುವಂತೆ ತಟ್ಟಿ, ಗುದ್ದಿ " ಪೂರ್ಣ! ಗೊತ್ತಿಲ್ಲ!” ಎಂದುಬಿಡುವನು. 

ಹಾಗೆಂದರೆ ೨೦ ಎಂದು ಅವನ ಅರ್ಥವಂತೆ! ಆ ವಿಧವಾದ ಅತನ 

ಮೆಚ್ಚಿಕೆಗೆ ಪಾತ್ರರಾದವರ ಮನೋಭಾವವು ಹೇಗಾದರೂ ಇರಲಿ, 

ನೋಡಿದವರಿಗೆ ತಪ್ಪದೆ ನಾಲ್ಕರ ಭಳಿ ಬರುತ್ತಿವಿತು. ಅಷ್ಟೇನು? 

ಈತನ ಶಹಬಾಸುಗಿರಿಗಳನ್ನು ಹುಡುಗರು ಸ್ವಲ್ಪ ಗ್ರಹಚಾರ ಕಡಮೆ 

ಯಾಗಿ ಯಾವತ್ತುದರೂ ಕಂಡರೆ, ಅಂದು ತಾಯಿತಂದೆಗಳಿಗೆ 

ಹನುಮಂತರಾಯನ ಗುಡಿಯಲ್ಲಿ "ಗುಳಿಮದ್ದು" ಕಟ್ಟಿಸುವುದಕ್ಕೆ 

ಒಂದು ಆಣೆ ಖರ್ಚು. ಆದರೂ ಅಲ್ಲಿಂದ ಮುಂದೆ ದಫೇದಾರನ 

ಹೆಸರೆತ್ತಿದರೆ ಆ ಹುಡುಗರ ತುಂಟಾಟನೇ ಮುಗಿದು ಹೋಗು 

ತ್ತಿದ್ದಿತು. 


ಇಂತಹ ಪುಣ್ಯಾತ್ಮನು ಇವತ್ತು ವರುಣದ ಛತ್ರದ ಕಡೆ 

ಹೋಗುತ್ತಿದ್ದನು. ಮೈಸೂರಿನಿಂದ ಹೊರಟಾಗ ಸುಮಾರು ಒಂದು 

ಘಂಟೆ. ಕೃಷ್ಣವರ್ಣದ ಆ ಹಿಡಂಬ ಸುಂದರಾಕೃತಿಯು ಮಧ್ಯಾ 

ಹ್ನದ ಬಿಸಿಲಿನಲ್ಲಿ ಬೆಂದು ಸ್ವಲ್ಪ ವಿವರ್ಣವಾಗಿದಿತ್ತು. ಆದರೂ 

ಆ ಗಟ್ಟಿಬಣ್ಣಕ್ಕೇನೂ ಲೋಪವಿರಲಿಲ್ಲ. ಬೆವರು ಮಾತ್ರ ಬೆಟ್ಟ 

ದಿಂದ ಮಳೆ ಹುಯ್ದ ಮಾರನೇ ದಿನ ಹಗಿನು ಇಳಿದು ಬರವಂತೆ 

ತಲೆ ಕತ್ತು ಕಣ್ಣು ಹೊಗೆ ಎಲ್ಲದರಿಂದಲೂ ಸುರಿದುಹೋಗುತ್ತಿದ್ದಿತು. 

ಆತನನ್ನು ಹೊತ್ತಿದ್ದ ಆ "ಬೈಕು" ಸಹ, ಸ್ವಲ್ಪ ಧೂಳಿ ಧೂಸರ 

ವಾಗಿ, ವರ್ಣಾಂತರವನ್ನು ಹೊಂದಿ, ಸ್ವಾಮಿಯ ಮನೋಭಾವ 

ವನ್ನೇ ಸೂಚಿಸುತ್ತಿದ್ದಿತು ದಾರಿಯಲ್ಲಿ ಯಾರೂ ಸಿಕ್ಕಲಿಲ್ಲವಲ್ಲ 

ಎಂಬುದೊಂದೇ, ಇವನಿಗೆ ಮಹಾಕೋಪವನ್ನುಂಟು ಮಾಡಿದ್ದಿತು. 

ಯಾರಿಗೂ ಅದೃಷ್ಟ ತೀರಿರಲಿಲ್ಲ ಏನು ಮಾಡುವುದು? 





ಈ ವ್ಯಕ್ತಿಯು ಊರ ಸಮೀಪಕ್ಕೆ ಬಂದಹಾಗೆಲ್ಲಾ, ಆ 

ಛತ್ರದ ಮಗ್ಗಲ ತೋಪಿನಿಂದ ಗಳಿಗೆಗೊಂದು ಸಲ ಒಂದು ಕಲ 

ಕಲ ಶಬ್ದವು ಕೇಳಿಸಿ ತಟ್ಟನದು ನಿಂತು ನಿಶ್ಶಬ್ದವಾಗಿ ಮತ್ತೆಯೂ 

ಹಾಗೇ ಕೇಳಿಸುವುದು ಹೆಚ್ಚಾಯಿತು. ದಫೇದಾರನೂ ಆತುರ 

ಪಟ್ಟು ಏನಿರಬಹುೆದೋ ನೋಡೋಣವೆಂದು ಕುತೂಹಲದಿಂದ 

ಬೇಗ ಬೇಗ ಬೈಸಿಕಲ್ಲು ಒತ್ತುತ್ತಿದ್ದನು. ಅಂತೂ ಬೈಸಿಕಲ್ಲು 

ಬಂದು ತೋಪಿನ ಬಳಿ ಥಿಂತಿಶು. ಕೂಡಲೆ ರಾಯನು ಸರ್ರನಿಳಿದು 

ಬರ್ರನೆಹೋಗಿ ಅಲ್ಲಿ ನಿಂತನು. 



ಹರಕುಬರಕು ಬಟ್ಟೆಯಿಂದ ಹುಚ್ಚಾಗಿ ಸಿಂಗರಿಸಿಕೊಂಡು. 

ಬಾಯಿಗೆ ಬಂದುದನ್ನೆಲ್ಲಾ ಹಾಡು ಮಾಡಿಕೊಂಡು, ಹುಚ್ಚನೊ 

ಬ್ಬನು ನಿಂತಿದ್ದಾನೆ. ಅವನ ಸುತ್ತಲೂ, ಆ ಗ್ರಾಮದ ಹುಡುಗ 

ರೆಲ್ಲರೂ, ಸುತ್ತುಕೊಂಡಿದ್ದಾರೆ. ಅವನು ಒಮ್ಮೊಮ್ಮೆ ಅಳುತ್ತಾನೆ. 

ಮತ್ತೊಮ್ಮೆ ನಗುತ್ತಾನೆ. ಆದರೆ ವಿಶೇಷವೇನೆಂದರೆ ಅವನ 

ನಗುವು ಅಳುವಿನಂತೆ. ಸಾಲದೆ ಅವನು ಮಧ್ಯೆಮಧ್ಯೆ ಹಾಡುಗ 

ಳನ್ನು ಹೇಳುವನು. ಆ ಹಾಡಿನ ಅರ್ಥವು ತಿಳಿಯಲಿ ತಿಳಿಯದೆ 

ಹೋಗಲಿ, ಹುಡುಗರು ನಕ್ಕುಬಿಡುವರು. ಅವರು ತಿಳಿದಿರುವುದು 

ಅಷ್ಟೆ. ಹುಚ್ಚನಿಗೆ ಕಲ್ಲುಪೆಟ್ಟು ಬಿದ್ದು ನೋವಿಗೆ ಅವನು ಅತ್ತರೆ, 

ಹುಡುಗರಿಗೆ ನಗು. ಅವನು ಅಸ್ತವ್ಯಸ್ತವಾಗಿ ಮಾತನಾಡಿದರೆ 

ಆಗಲೂ ನಗು. ಅಂತು ಹುಡುಗರ ಮನಸ್ಸಿನಲ್ಲಿ ಹುಚ್ಚಿಗೂ 

ನಗುವಿಗೂ ನಿಕಟ ಸಂಬಂಧ. ಹುಚ್ಚನು ಬಂದರೆ ಜತೆಯಲ್ಲಿ 

ನಗುವೂ ಬರಬೇಕು. ಅಷ್ಟೆ! ಹುಡುಕಿನೋಡುವುದಾದರೆ ಅವರೂ 

ಹುಚ್ಚರೆ ! 



ಇಂತಹ ಹುಚ್ಚನ ಮತ್ತು ಅವನ ಅನುಯಾಯಿಗಳ ಗುಂಪಿ 

ನಲ್ಲಿ ದಫೇದಾರನು ಹೋಗಿ ನಿಂತನು. ಕೂಡಲೆ ಆ ಹುಡುಗರ 

ಗುಂಪಿನಲಿ ತುಂಬಿ ತುಳುಕುತ್ತಿದ ಸಂತೊೋಸನನ್ನ ಬತ್ತಿ ಬಯ 



೫ 



ಲಾಯಿತು. ಈತನೂ ತನ್ನ ಸ್ವಭಾವಾನುಗುಣವಾಗಿ ಕಯ್ಯಲ್ಲಿದ್ದ 

ಚಾಟಿ-ಛೇ, ಅಲ್ಲ Whip ಚಾಟಿಯಂದರೆ ಗಾಡಿ ಹೊಡೆಯು 

ವುದು Whip ಅಂದರೆ ದೊಡ್ಡದೊಡ್ಡ ಮನುಷ್ಯರು ಕಯ್ಯಲ್ಲಿ 

ಹಿಡಿದು ಆಡಿಸಲು, ಮತ್ತು ನಾಯಿ ಕುದುರೆ ಆಳು, ಕಾಳು, ಇವ 

ರನ್ನು ಹೊಡೆಯಲೂ ಉಪಯೋಗಿಸುವ ನವನಾಗರಿಕತೆಯ ದಿವ್ಯಾ 

ಯುಧ- Whip ನಿಂದ, ಹುಚ್ಚನನ್ನು ಅನುಗ್ರಹಿಸಲು 

ಯತ್ನಿಸಿದನು. ಹುಚ್ಚನು ಆ ಕೂಡಲೆ ಜಾಣನಾಗಿ, ತಟ್ಟನೆ 

ಅದರ ಮಾರ್ಗದಿಂದ ಹಿಂದೆ ಸರಿದು ಭೀಕರವಾದ ವಿಕಟಸ್ವರ 

ದಿಂದ "ನರಸಿಂಗರಾಯ!'' ಎಂದನು ಆ ವ್ಯಕ್ತಿಯ ಧ್ವನಿವೈ 

ಚಿತ್ರವೋ ಅಥವಾ ಆಕಾರ ವಿಶೇಷವೋ ವ್ಹಿಪ್ಪಾಯುಧವು ನಿಷ್ಪಲ 

ವಾಯಿತು. ಅಂತೂ ನರಸಿಂಗರಾಯನು ಅಪ್ರತಿಭನಾಗಿ ಒಂದು 

ಗಳಿಗೆ ನಿಂತಿದ್ದು ಒಂದು ಕತ್ತರಿ ಸಿಗರೇಟು ಸೇದಿಬಿಟ್ಟು, “This 

is not a K.D." ಎಂದು ಹೇಳಿಕೊಂಡು ಹೊರಟು 

ಹೋದನು. 


ಇಷ್ಟು ಹೊತ್ತೂ ಹುಡುಗರೂ ಅವಾಕ್‌. ಎಲ್ಲರೂ ನರ 

ಸಿಂಗರಾಯನನ್ನು ನೋಡಿ ಬೆಪ್ಪಾಗಿ, ಅನನ ಬಾಯಿಂದ ಹೊರ 

ಡುವ ಸಿಗರೇಟು ಹೊಗೆಯ ಅಂದವನ್ನು ನೋಡುತ್ತಾ, ಎಲ್ಲ 

ವನ್ನೂ ಮರೆತು ನಿಂತುಬಿಟ್ಟಿದ್ದರು. ದಫೇದಾರನ ಬೆನ್ನು ಕಂಡ 

ಕೂಡಲೆ ಹುಚ್ಚನು ಮತ್ತೆ ನಗುತ್ತಾ ತನ್ನ ಹಾಡನ್ನು ಹಾಡಿದನು. 

ಆದರೆ ಭಕ್ತಕದಂಬನವೀಸಲ್ಲ ತಮ್ಮ ಅನುಮೋದನವನ್ನು ಸಂಪೂ  

ರ್ಣವಾಗಿ ತೋರಿಸಲಿಲ್ಲ ಕೂಡಲೇ ಹುಚ್ಚನು ದೊಡ್ಡದಾಗಿ 

ಅಳುತ್ತಾ ಮುಂದಿ ಹೊರಟನು. ಅವನ ಹಾಡು ವಿಚಿತ್ರ 

ವಾಗಿದ್ದಿತು. 



 "ನನ್ನಂಥಮಂದಿಯ | ನಡುವಿದ್ದುನೋಡುವೆ | 

ನನ್ನ ಕೇಳುವರಿಲ್ಲ | ನಾನೊಬ್ಬರ ಕೇಳುವುದಿಲ್ಲ | 

" ಅಯ್ಯೋ "



೬ 



೨. ಅಳುವಿನ ನಡುವೊಮ್ಮೆ ನಗುವಿನಬೆಳಕು | 

ಕತ್ತಲನಡುವೊಮ್ಮೆ ಹಣತೆಯ ಬೆಳಕು || ಅಯ್ಯೋ ||



೩. ಹಚ್ಚನೆ ಹೆಸುರನು ಬೆಳ್ಳನೆಬಸವನು | 

ನುಣ್ಣಗೆ ತಿಂದಿದೊ ಸಣ್ಣಗೆತೂಗುವನು || ಅಯ್ಯೋ || 



೪, ಅಳದಿರೆತಿಳಿಯದು ನಗುವಿನನಲವು | ಅದಕಾಗಿ 

ಅಳುವುದೆ ಕೆಲಸವು ಬೆಳಗಿಂದ ಮೊದಲಾಗಿ 

||ಅಯ್ಯೋ ||



೫. ಬಣ್ಣನೆ ಸೀರೆಯುಟ್ಟ ಚೆಂದುಳ್ಳ ಚೆಲುವೆಯ | 

ಹಣ್ಣಾದ ಕಿತ್ತಲೆ ಬಣ್ಣದ ಮುದ್ದಿನ ನುಣ್ಣಿನ 

ಕೆನ್ನೆಯ ನೊಮ್ಮೆಯು ಮುದ್ದಿಸಲಿಲ್ಲವಯ್ಯೋ | 

---



ದ್ವಿತೀಯ ಪರಿಚ್ಛೇದ 



ಹುಚ್ಚನ ಹಾಡು ಹೃದಯ ವಿದ್ರಾವಕವಾಗಿದ್ದಿತು. 

---


ಹುಚ್ಚನು ಮುಂದುಮುಂದಕ್ಕೆ ಹೋದನು. ಅಲ್ಲಿ ಒಂದು 

ಛತ್ರ. ಆ ಛತ್ರದ ಬಾಗಿಲಲ್ಲಿ ನಿಂತು, ಹುಚ್ಚನು ತನ್ನ ಅನು 

ಯಾಯಿಗಳಲ್ಲಿ ಒಬ್ಬನನ್ನು ಕರೆದು "" ಆಶ್ರಮ ಯಾರದೊ? ಇಲ್ಲಿ 

ರುವವರು ಯಾರೋ? ಎಂದನು. ದಫೆದಾರನ ದರ್ಶನ 

ದಿಂದುಂಟಾದ ಭೀತಿಯು ತಪ್ಪಿದ್ದ ಹುಡುಗರಲ್ಲೊಬ್ಬನು " ಇಲ್ಲಿ 

ಯಾರು ಇರೋದು? ಗೊತ್ತಿಲ್ಲವೆ? ಛತ್ರದ ಪಾರುಪತ್ತೆಗಾರ್ರು 

ವೆಂಕಟಿರಮುಣಯ್ಯನವರು. ಅವರ ಮಗಳು ಸುಂದರಮ್ಮ." 

ಎಂದರು. ಆಗ ಆ ಹುಡುಗರ ನಡುವೆ ತಿಳಿದವನೊಬ್ಬನಿದ್ದಿದ್ದನು. 





ಆ ಕೂಡಲೆ ಆ ಹುಚ್ಚನ ಮುಖದಲ್ಲಿ ವ್ಯತ್ಯಾಸವನ್ನು ಚನ್ನಾ 

ಗಿಯೂ ಕಾಣಬಹುದಾಗಿದ್ದಿತು. 



ಹುಚ್ಚನು ಅರ್ಥ ನಗುತ್ತ, ಅರ್ಧ ಅಳುತ್ತಾ ತನ್ನ ಹಾಡನ್ನು 

ಹೇಳತೊಡಗಿದನು. 


 "ಅಳುತಳುತ ಹೋದರೆ ಯೇನಾಯ್ತು ! | 

ನಗುವಿನ ನಡುವಿದ್ದರೇನಾಯ್ತು ! || 

ನಕ್ಕು ಅಳಬೇಕು! | ಅತ್ತುನಗದೇಕು” || ಅಯ್ಯೋ ॥ 


ಎಂದು ಹಾಡಿದನು. ಹುಚ್ಚನ ಕಂಠವು ಸ್ವಭಾವವಾಗಿ 

ಸರಳವಾದುದು, ಆದರೂ ಈಗ ಸ್ವಲ್ಪ ವರಟಾಗಿದ್ದಿತು. ಹಾಗೆ 

ವರಟಾಗಿಯೇ ಹಾಡು ಹೇಳುತ್ತಾ ಛತ್ರದೊಳ ನುಗ್ಗಿದನು. 

ಹುಚ್ಚನ ಹಿಂದೆ ಬಂದ ಹುಡುಗರ ಗದ್ದಲವು ಅಲ್ಲಿದ್ದವರನ್ನು ಈಚೆಗೆ 

ಬರಮಾಡಿತು. ಎಲ್ಲರೂ ಬಂದರೂ, ಒಬ್ಬಳು ಸುಮಾರು ೧೬ 

ವರ್ಷದ ಹುಡುಗಿಯೊಬ್ಬಳು ಮಾತ್ರ ಒಂದು ಕಿರುಮನೆಯ ಬಾಗಿ 

ಲನ್ನು ಅರ್ಧಸರಿದ್ಕು, ಹೊಸಲ ಮೇಲೆಯೇ ನೋಡುತ್ತ ನಿಂತಿ 

ದ್ದಳು, ಹುಚ್ಚನು ವಿಕಟಿವಾಗಿ ನಗುತ್ತಾ, ಸುತ್ತಲೂ ನೋಡಿ 

ಎಲ್ಲರನ್ನೂ ಬಿಟ್ಟು ನೇರನಾಗಿ ಆ ಹುಡುಗಿಯ ಬಳಿಗೆ ಹೋಗಿ. 

ನಿಂತನು. 


ಹುಚ್ಚನಿಗೆ ಕತ್ತು ಬಿಗಿದುಕೊಂಡು ಮಾತೇ ಹೊರಡಲಿಲ್ಲ- 

ನೋಡಿದರೆ ಕಣ್ಣಲ್ಲಿ ಎರಡು ತೊಟ್ಟು ನೀರೂ ಇದ್ದಂತಿದ್ದಿತು. 

ಅಂತೂ ಬಹು ಪ್ರಯಾಸದಿಂದ, ಹೊರಡದ ಶಬ್ದವನ್ನು ಹೊರಡಿಸಿ 

" ನನಗೆ ಹಸಿವು, ಅನ್ನ ಕೊಟ್ಟರೆ ಹಾಡು ಹೇಳುತ್ತೇನೆ " ಎಂದನ್ನು 

ಹುಡುಗಿಯೂ ಆ ಶಬ್ಧವನ್ನು ಕೇಳಿ ನೆಟ್ಟ ನೋಟದಿಂದ ಹುಚ್ಚ

ನನ್ನು ನೊಡುತ್ತಾ ನಿಂತುಬಿಟ್ಟಳು. ಕಾಲನ್ನು ಕೀಲಿಸಿದಂತಾಗಿ, 

ಮುಂದೆ ಹೋಗಲಾರದೆ ನಿಂತಿರಲು, ಹುಚ್ಚನು ಮತ್ತೆ ಹಾಡನ್ನೆತ್ತಿ 


೮ 


ದನು. ಈಗಿನ ಹಾಡು ಹಿಂದಿನಂತೆ ವಿಕಟಸ್ವರದಲ್ಲಿರಲಿಲ್ಲ. ಸಣ್ಣ 

ಧ್ವನಿಯಲ್ಲಿ ಮರ್ಮಾಂತಿಕವಾದ ವೇದನೆಯಿಂದ ಕೂಡಿದ್ದಿತು. 


ಅಳುನಿನ ನಡುವೊಮ್ಮೆ ನಗುವಿನ ಬೆಳಕು | 

ಕತ್ತಲೆ ನಡುವೊಮ್ಮೆ ಹಣತೆಯ ಬೆಳಕು || ಅಯ್ಯೋ || 


ಹುಡುಗಿಯ ಯೋಚನೆಯು ತೀರಿತು. ಆಗಿಯುತ್ತಿದ್ದ 

ಅಡಕೆಲೆಯನ್ನು ಹಾಗೆಯೇ ದವಡೆಯಲ್ಲಿಟ್ಟು ಕೊಂಡು, ಬಾಗಿ 

ಲನ್ನು ಹೊರಗೆಳೆದು ಕೊಂಡು ಹೊರಟು ಹೋದಳು. ಅವಳ 

ನಡಗೆಯನ್ನು ನೋಡಿದರ ತನಗೆ ಬೇಕಾದವರು ಯಾರೋ 

ತನ್ನನ್ನು ನೋಡುತ್ತಿರುವರೆಂಬ ನಂಬುಗೆಯಿಂದ ನಡೆವಂತಿದ್ದಿತು. 

ನಡೆಗೆಯಲ್ಲಿ ಚಾಂಚಲ್ಯವಿಲ್ಲ. ಸ್ಥೈರ್ಯವಿದೆ. ಹೋಗಲಿಷ್ಟವಿಲ್ಲದೆ 

ಇಲ್ಲ ಆದರೆ ಜಾಗ್ರತೆಯ ನಡೆಯಲ್ಲ ತನಗಿಷ್ಟವಿರುವಾಗ ಅರೆ 

ನಿದ್ದೆಯಲ್ಲಿ ತೂಗಾಡದೆ ನಡೆವ ನಡೆ ಅಂತೂ ಒಟ್ಟಿನಲ್ಲಿ ಹುಡು 

ಗಿಯ ಸರ್ವಾಂಗವೂ ಗಾಂಭೀರ್ಯವನ್ನು ತೋರಿಸುತಿದ್ದಿತು. 

ಆದರೆ ಅದು ಸ್ವಾಭಾವಿಕವಾದುದುಲ್ಲ; ತನ್ನ ಹೈದಯದ ಭಾವ  

ವನ್ನು ಹೊರಗೆ ಬಿಟ್ಟು ಕೊಡಲಾರದ ಲೋಭದಂತಹ ಗಾಂ 

ಭೀರ್ಯ. 


ಸ್ವಲ್ಪ ಹೊತ್ತಿನೊಳಗೆ ಹುಡುಗಿಯು ಬಂದಳು. ಮೊಸ 

ರನ್ನವನ್ನು ಕಲೆಸಿ, ಅದರ ಮೇಲೆ ಒಂದು ಚೂರು ಉಪ್ಪಿನಕಾಯಿ 

ಯನ್ಸಿಟ್ಟು ತಂದಿದ್ದಾಳೆ. ಕಣ್ಣಿನ ಕೊನೆಯ ಒಂದು ತೊಟ್ಟು 

ನೀರು ಹಾಗೆಯೇ ನಿಂತಿದೆ. ಬಿಗಿದ ಕತ್ತಿನಿಂದ ಉಗುಳು ನುಂಗಿ 

ಕೊಳ್ಳುತ್ತಾ ""ಎಲ್ಲಿ ತಿನ್ನುವೆ?” ಎಂದು ಕೇಳಿದಳು. ಹುಡುಗಿಯು 

ನಡುವಿಗೆ ಬಿಗಿದುಕೊಂಡಿರುವ ಸೆರಗೂ, ಅವಳ ಮುಖಮುದ್ರೆಯೂ 

ಈಷದ್ದುಃಖದ್ಯೋತಕವಾದ ಅವಳ ನೋಟವೂ ಹುಚ್ಚನನ್ನು ಹಗ್ಗ 

ದಿಂದ ಕಟ್ಟಿದಂತೆ ಮಾಡಿಬಿಟ್ಟವು. ಇದುವರೆಗೂ ಮುಖದ ಮೇಲಿ 

ರದ ಒಂದು ಭಾವವು ಬಂದು, " ಮೂರು ದಿನದಿಂದ ಅನ್ನವಿಲ್ಲ 



ಈಗ ಸಿಕ್ಕಿತು ಎಲ್ಲಾದರೂ ತಿನ್ನೋದು." ಎಂದು ಅನ್ನವನ್ನು 

ಈಸಿಕೊಂಡನು ಎರಡು ಕೈಗಳಲ್ಲಿ ಅದನ್ನು ಹಿಡಿದುಕೊಂಡು 

ಬಾಯಿಂದ ಸ್ವಲ್ಪ ಸವಿದು "ಆಹಾ! ಸುಂದರ! ಸುಂದರ! ಬಹು 

ಸೊಗಸಾಗಿದೆ. ನಿನ್ನ ಹಾಗೆ ಇದೆ” ಎಂದು ವಿಕಟವಾಗಿ ನಕ್ಕು 

ಬಿಟ್ಟು ಕೂಡಲೆ ಕುಳಿತುಕೊಂಡು ದೊಡ್ಡದಾಗಿ ಬಿಕ್ಕಿಬಿಕ್ಕಿ ಅತ್ತು 

ಬಿಟ್ಟನು. ಕೊನೆಗೆ (ಆ ಹುಡುಗಿಯ ಮುಖವನ್ನು ವಕ್ರವಾಗಿ 

ವಿಚಿತ್ರವಾದ ದೃಷ್ಟಿಯಿಂದ ನೋಡುತ್ತಾ ಆ ಅನ್ನವನ್ನು 

ಮತ್ತೊಮ್ಮೆ ಸವಿಯುತ್ತಾ ಆ! ಬಲು ಸುಂದರ! ಅನ್ನವನ್ನು 

ಐದು ಘಂಟಿಗೆ ಕೆರೆಯ ಹತ್ತಿರ ನಿನ್ನ ಹೆಸರು ಹೇಳಿಕೊಂಡು ತಿನ್ನು 

ವೆನು'' ಎಂದು ಮೇಲಕ್ಕೆದ್ದನು. 


ಹತ್ತಿರಿದ್ದವರಲ್ಲಿ ಯಾರೊ “ನಿತ್ಯ ಅನ್ನ ಕೊಡುತ್ತಾಳೆ. 

ಅವಳನ್ನು ಮದುವೆಮಾಡಿಕೊ. ? ಎಂದರು. ಹುಚ್ಚನು ಅದಕ್ಕೆ 

ಅಳುತ್ತಾ "ನಾನೇ ಹೆಂಡತಿ ಅವಳೇ ಮಾಡಿಕೊಳ್ಳಲಿ” ಎಂದನು, 

ಅರ್ಥವಿಲ್ಲದ ಮಾತೂ ಹುಡುಗಿಗೆ ಅರ್ಥವಾಗುವಂತೆ ಕಂಡಿತು.  

ಅವಳು ಅಲ್ಲಿ ನಿಲ್ಲದೆ ಹೊರಟು ಹೋದಳು. ಬಾಗಿಲು ದಪ್ಪಸದ್ದಿ

ನೊಡನೆ ಮುಚ್ಚಿಕೊಂಡಿತು. ಯಾರಾದರೂ ಬಾಗಿಲ ಕಿಂಡಿ 

ಯಿಂದ ನೋಡಿದ್ದರೆ ಹುಡುಗಿಯು ಮೊಗವಡಿಯಾಗಿ ಹಾಸಿಗೆಯ 

ಮೇಲೆ ಬಿದ್ದುಕೊಂಡು ಅಳುತ್ತಿದ್ದುದನ್ನು ನೋಡಬಹುದಾಗಿದ್ದಿತು. 


ತೃತೀಯ ಪರಿಚ್ಛೇಧ

ಸಾಯಂಕಾಲ ನಾಲ್ಕುಗಂಟೆ. ಹುಚ್ಚನು ಎಂದಿನಂತೆ 

ಹಾಡುವುದಿಲ್ಲ. ಸುಮ್ಮನೆ ಕುಳಿತಿದ್ದವನು ಇದ್ದಕ್ಕಿದ್ದ ಹಾಗೆಯೇ 

ಸಣ್ಣನಗು ನಕ್ಕು, ಹಾಗೆಯೇ ನಿಟ್ಟುಸಿರು ಬಿಟ್ಟು ಕುಳ್ಳಿರುವನು. 

ಅವನ ಹಿಂದಿನ ಚರ್ಯೆಯಿಂದ ಹುಚ್ಚನೆಂದು ಬಂದು ಅವನನ್ನು 


೧೦ 


ಮುತ್ತಿದ್ದ ಹುಡುಗರು ಇಂದು ಅವರೇನುಮಾಡಿದರೊ ಸುಮ್ಮನಿ 

ರುವುದನ್ನು ಕ೦ಡು ಒಬ್ಬೊಬ್ಬರಾಗಿ ಹೊರಟುಹೋದರು. 

ಹುಚ್ಚನು ಕುಳಿತಿದ್ದ ಹುಣಸೇಮರವು ತಾಳಿಂದ ತುದಿಯವರೆಗೂ 

ಹೂ ಬಿಟ್ಟಿದ್ದಿತು. ಒಂದೊಂದು ಸಲ ಗಾಳಿಯು ಬಂದಾಗಲೂ ಆ 

ಮರವು ಸಣ್ಣಗೆ ಪ್ರಷ್ಪವೃಷ್ಟಿಯನ್ನು ಮಾಡುವುದು, ನೆರಳು ಹುಚ್ಚ

ನಿದ್ದ ಸ್ಥಳದಿಂದ ಹಿಂದಕ್ಕೆ ಹೊರಟುಹೋಗಿದೆ. ಬಿಸಿಲಿಗೆ ಸಿಕ್ಕಿ  

ಮೈಯ್ಯಲ್ಲಿ ಬೆವರು ಧಾರಾಳವಾಗಿ ಸೋರುತ್ತಿದೆ. ಅದರೂ 

ಹುಚ್ಛನಿಗೆ ಮೈ ಮೋಲೆ ಪ್ರಜ್ಞೆಯಿಲ್ಲ. ಅನ್ನದಗಂಟು ಮಗ್ಗುಲ 

ಲ್ಲಿದೆ. ಅವನಿಗೆ ನಿದ್ರೆಯಿಲ್ಲ. ಕಣ್ಣು ತೆರಿದಿದೆ.  ಮೈಕವಿಲ್ಲ. 

ಚನ್ನಾಗಿ ಎಚ್ಚರವಿದ್ದು ರೆಪ್ಪೆ ಬಡಿಯುತ್ತಿದ್ದಾನೆ. ಆದರೂ ಹೊರ 

ಗಿನ ಜ್ಞಾನವಿಲ್ಲ. 


ಇದ್ದ ಹಾಗೆಯೇ ಒಂದು ಕೆಂಜಗವು ಮೇಲಿಂದ ಗಾಳಿಗುದುರಿ 

ಹುಚ್ಚನೆಂಬ ಅಭಿಮಾನವಿಲ್ಲದೆ ಬಲವಾಗಿ ಕಚ್ಚಿಬಿಟ್ಟಿತು. ಹುಚ್ಚನು 

ಭಾವನಾಶರಂಗಿಣಿಯಲ್ಲಿ ಈಜುತ್ತಿದ್ದವನು ಈಚೆಗೆ ಬರಬೇಕಾ 

ಯಿತು. ಬಂದು ನೋಡಿದರೆ ಆಗಲೇ ೫ ಗಂಟೆಯಾಗಿರಬಹುದು. 

ಬಿಂಬವು ಪಶ್ಚಿಮ ಕ್ಷಿತಿಜದ ಹತ್ತಿರ ಹತ್ತಿರ ಬಂದು 

ಸೂರ್ಯನ ಪ್ರತಾಪನು ಕುಗ್ಗಿದೆ. ಬಿಂಬವನ್ನು ಸ್ವಲ್ಪ ಕಷ್ಟ ಪಟ್ಟರೆ 

ಕಣ್ಣಿನಿಂದಲೇ ನೋಡಬಹುದು. ಆಗಲೇ ಕೆಂಬಣ್ಣವು ಹುಟ್ಟಿ

ಪಶ್ಚಿಮ ದಿಗಂತವನ್ನು ವ್ಯಾಪಿಸುತ್ತಿದೆ. ಸಂಧ್ಯಾ ಸೂರ್ಯನ 

ಕಿರಣರಾಶಿಯು ಮೇಘ ಮಂಡಲದ ಮೇಲೆ ವಿಚಿತ್ರವಾದ ಬಣ್ಣಗ 

ಳಿಂದ ಚಿತ್ರಿಸುತ್ತಿದೆ. ಸುತ್ತಲೂ ಮರಗಳೆಲ್ಲ ಚಿನ್ನದ ಮುಲಾಮು 

ಆದಂತೆ ಶೋಭಿಸುತ್ತಿವೆ. " ಇದಿಷ್ಟೂ ನೋಡದೆ ಕುಳಿತಿದ್ದ 

ತಾನು ಹುಚ್ಚನಲ್ಲದೆ ಮತ್ತೇನು?” ಎಂದುಕೊಂಡು ಹುಚ್ಚನಲ್ಲಿಂ 

ದೆದು ಕೆರೆಯ ಕಡೆಗೆ ಹೋದನು, ಇವನಲ್ಲಿಗೆ ಹೋಗುವುದ 

ರೊಳಗಾಗಿ ಊರಿನ ಹೆಂಗಸರು ಕೆರೆಯಿಂದ ಹಿಂತಿರುಗಿದ್ದುದನ್ನು 

ಕಂಡು ಹುಚ್ಛನಿಗೆ ದಿಗಿಲಾಯ್ತು. ಅವಳೂ ಬಂದು ಹೊರಟು 

ಹೋಗಿದ್ದರೆ ?, 


೧೧ 


ಹುಚ್ಚನು ಹುಚ್ಚಾಗಿ ಕಾಣಿಸಿಕೊಳ್ಳುವುದೂ ಬೇಕಾಗಿದ್ದಿತು.. 

ಹೆಂಗುಸರೆಲ್ಲರೂ ಹೊತ್ತಿರುವ ನೀರಿನ ಕೊಡದ ಭಾರವನ್ನೂ ಲಕ್ಷಿ 

ಸದೆ ತನ್ನನ್ನು ನೋಡಲು ನಿಂತುಕೊಂಡರೆಂದು ಕಂಡು, ಹುಚ್ಚನು 

ಒಂದು ದೊಡ್ಡ ಕಲ್ಲು ತೆಗೆದುಕೊಂಡು ವಿಕಾರವಾಗಿ ಕೂಗಿಕೊ 

ಕೊಳ್ಳುತ್ತ, ದಾಪುಗಾಲು ಹಾಕಿಕೊಂಡು ನಡೆಯಲು ಮೊದಲು 

ಮಾಡಿದನು. ಕೂಡಲೇ ಹೆಂಗಸರು ಏನೋ ಹೊಸ ವಿಪತ್ತು 

ಎಂದು ಹೇಳದೆ ಕೇಳಗೆ ಹೊರಟುಹೋದರು. ತನ್ನ ಉಪಾಯಕ್ಕೆ 

ತಾನೇ ನಗುತ್ತಾ ಹುಚ್ಚನು ಕೆರೆಗೆ ಹೋದನು. 


ಸಾಯಂಕಾಲ ೬ ಗಂಟೆಯಾಗಿ ಹೋಗಿದೆ. ಹುಡುಗಿಯು 

ಬರುವಳೆಂಬ ನಂಬಿಕೆಯು ಹುಚ್ಚನನ್ನು ಅಲ್ಲಿಯೇ ನಿಲ್ಲಿಸಿಕೊಂ 

ಡಿದೆ. ಹುಚ್ಚನು ಈಗ ಹುಚ್ಚಾಗಿಲ್ಲ. ಶಾಂತನಾಗಿದ್ದಾನೆ. ಇದು  

ವರೆಗೂ ಮೊಗದ ಮೇಲೆ ಮಾತ್ರ ಕಾಣುತ್ತಿದ್ದ ಹುಚ್ಚು ಹೋಗಿ 

ಒಳಗಿನ ಕ್ಷೋಭವು ಒಡೆದು ಕಾಣುತ್ತಿದೆ. ಊರ ದಾರಿಯನ್ನೇ 

ಎದುರು ನೋಡುತ್ತ ಕುಳಿತಿದ್ದಾನೆ. ಒಮ್ಮೊಮ್ಮೆ ನಿರಾಶೆಯ ದರ್ಪ 

ದಿಂದ ಆಹತನಾದರೂ ಮತ್ತೆ, ಸಪ್ರತ್ಯಯನಾಗಿ ಕಾದು ಕುಳಿತಿ 

ದ್ದಾನೆ. ಸಂಜೆಯೂ ಆಯಿತು. ಸೂರ್ಯಬಿಂಬವು ಅಸ್ತ 

ವಾಯಿತು. ಹಕ್ಕಿಯ ಗದ್ದಲವು ತಾನೇತಾನಾಯಿತು. ಇನ್ನೂ 

ಹುಡುಗಿಯು ಬರಲಿಲ್ಲ. 

---


ಚತುರ್ಥ ಪರಿಚ್ಛೇದ 


ಸಂಜೆಯ ಮಸಕು ಹಬ್ಬುತ್ತಾ ಬಂತು. ದೂರಕ್ಕೆ ಕಣ್ಣು 

ಕಾಣಿಸದೆ ಹೋಯಿತು. ಹುಚ್ಚನು ನಿರಾಶೆಯಿಂದ ಹುಚ್ಚಾಗಿ 

ಒದ್ದಾಡುತ್ತಾ ಇದ್ದಾನೆ. ಕೊನೆಗೆ ಮರದಡಿಯಲ್ಲಿ ಕಾಲಿನಸದ್ದು. 

ಸೀರೆಯ ನೆರಿಯ ನಿರಿಮುರಿ. ಯಾರೋ ಹೆಂಗಸು ಬರುವಂತಿದೆ 

ಅವಳೇನೋ? 


೧೨ 


ಹುಚ್ಚನ ಕಣ್ಣು ಅಂಗೈಯಗಲವಾಗಿ ನೋಡಿತು ಒಂದೇ 

ಸಲಕ್ಕೆ ಮೇಲೆ ಮೇಲೆ ಬರುತ್ತಿದ್ದ ಆ ಕಾವಳದಲಿ, ಎದು 

ರಿರುವಸ್ತ ಸ್ಥಳವನ್ನಲ್ಲಾ ಒಮ್ಮೆಗೇ ಹುಡುಕಿಬಿಟ್ಟಿತು. ಅವಳೇಯೊ ? 

ಅವಳೇ ಎನ್ನುವಂತಿದೆ! ಹೌದು! ಅವಳೇ! ಹುಚ್ಚನ ಹೃದಯವು 

ಒಟ್ಟಿಗೆದ್ದು ಬಾಯಿಗೆ ಬಂದುಬಿಟ್ಟಂತಾಗಿದೆ. ಆ ಸಾಯಂಕಾಲ 

ದಲ್ಲೂ ಮೈಯೆಲ್ಲಾ ಬೆವರಿ ಹೋಗಿದೆ. ಏನೋ ಆಗಿ ಸುಮ್ಮನೆ 

ನಿಂತುಬಿಟ್ಟಿದ್ದಾನೆ. ಹುಡುಗಿಯೂ ಹಿಂದೆ ಮುಂದೆ ನೋಡಿಕೊ 

ಳ್ಳುತ್ತಾ; ಕಣ್ಣೀರು ವರಿಸಿಕೊಳ್ಳುತ್ತಾ ಒಂದೊಂದು ಹೆಜ್ಜೆಯಾಗಿ 

ಮುಂದುವರಿಯುತ್ತಿದ್ದಾಳೆ. ಕಂಕುಳಲ್ಲಿರುವ ಬರಿಯ ಬಿಂದಿ 

ಗೆಯೂ ಭಾರವಾದಂತೆ ಕಾಣುತ್ತಿದೆ. ನಿಲುವುದಕ್ಕೆ ಕೈಲಾಗದು. 

ಮುಂದೆ ಹೋಗದಿರಲಾರಳು. ಅಂತೂ ಪರಪ್ರೇಷಿತೆಯಂತೆ, 

ಭೂತಾವಿಷ್ಟೆಯಂತೆ ಮುಂದುವರಿಯುತ್ತಿದ್ದಾಳೆ. ಕೊನೆಗೆ, ಇನ್ನು 

ಹತ್ತು ಹೆಜ್ಜೆ ಇದೆ. ಅಲ್ಲಿ ನಿಂತಿದ್ದವನನ್ನು ನೋಡಿದಳು. ತಡೆ 

ಯುವುದು ಅಸಾಧ್ಯವಾಗಿ ದುಃಖವು ಬಂದುಬಿಟ್ಟಿತು. ಹುಡು 

ಗಿಯು ದೊಡ್ಡದಾಗಿ ಅತ್ತುಬಿಟ್ಟಿಳು. ಕೈಯ್ಯ ಕೊಡವು ಬಿದ್ದು 

ಹೋಗಿ, ಸಮೀಪದಲ್ಲಿದ್ದ ಸೋಪಾನ ಪಂಗ್ತಿಯ ಮೇಲುರುಳಿ 

ಕೊಂಡು ಹೋಗಿ ಕೆರೆಗೆ ಬಿದ್ದು ಬಿಟ್ಟಿತು. ಹುಚ್ಚನೂ ಕಣ್ಣೇರು 

ಕರೆಯುತ್ತಿದ್ದನು. ಅವನೂ ಅದನ್ನು ನೋಡಲಿಲ್ಲ. ಅಥವಾ 

ನೋಡಿದರೂ ಗಮನಿಸಲಿಲ್ಲ ಮರ್ಮಾಂತಿಕವಾದ ವೇದನೆಯಿಂದ  

ಅಳುತ್ತಿರುವ ಈ ಪ್ರಾಣಿಗಳು ಆ ಬಿಂದಿಗೆಯೆನ್ನ ಗಮನಿಸುವುದೂ 

ಉಂಟೇನು? 


ಕೊನೆಗೆ ಸು೦ದರಿಯೇ ಮಾತನಾಡಿದಳು. ಇಬ್ಬರೂ

ಒಬ್ಬರ ಮುಂದೆ ಒಬ್ಬರು ಕುಳಿತಿದ್ದಾರೆ. ಅತ್ತು ಅತ್ತು ಕಣ್ಣು 

ಕೆಂಪಗೆ ಆಗಿ ಹೋಗಿದೆ. ಮೂಗಿನಲ್ಲಿ ಸಿಂಬಳವು ಸುರಿಯುತ್ತದೆ. 

ಇಬ್ಬರೂ ನೀರವ. ಹೀಗಿದ್ದಾಗ ಹುಡುಗಿಯು ಮಾತನಾಡಿದಳು. 

'ರಾಮೂ! ಇದೇಕೆ ಹೀಗಾಗಿಬಿಟ್ಟೆ ? ನಿನಗಾಗಿ........” ಹುಡುಗಿ


೧೩. 


ಯು ಸುಮ್ಮನಾದಳು ಮತ್ತೆ "ರಾಮೂ! ನೋಡಿ ಬಹಳ ದಿನ  

ವಾಯಿತು, ನೋಡಬೇಕೆಂದು ಇದ್ದೆ. ನೋಡಿದುದಾಯಿತು. ಇದೇ 

ಕೊನೆ. ಇನ್ನು ಒಬ್ಬರನ್ನೊಬ್ಬರು ಮರೆತುಬಿಡೋಣ'' ಎಂದಳು 

ರಾಮುವಿಗೆ ಮತ್ತೆ ಮಿತಿಮೀರಿದ ದುಃಖವು ಬಂದಿತು. ಹೇಗೆ 

ಹೇಗೋ ಸಂವರಣ ಮಾಡಿಕೊಂಡು “ಇದಕ್ಕಾಗಿಯೇ ನಾನು 

ನಿನ್ನನ್ನು ಹುಡುಕಿ ಬಂದುದು?” ಎಂದನು. ಹುಡುಗಿಯು ಕೂಡಲೇ 

ಧೀರಳಾಗಿ ಮನಸ್ಸಿನ ಆನೇಗವನ್ನು ದೂರನಿಟ್ಟು ಈಷ 

ತ್ಕ್ರೋಧದಿಂದ " ತಪ್ಪು ನನ್ನದಲ್ಲ" ಎಂದು, ಹಾಗೆಯೋ 

ಮತ್ತೆ ಶಾಂತಳಾಗಿ ಆ ಕಳೆದುವನ್ನು ಕೆದಕಿ ಆಗಬೇಕಾದುದೇನು? 

ನಾವಿಬ್ಬರೂ ಲಕ್ಷಿಸಬೇಕಾದುದು ಧಮ, ನಾವಿಬ್ಬರೂ ಎದುರಿ 

ಗಿರುವುದರಿಂದ ಅದು ಲೋಪವಾಗಬಹುದಾದ ಸಂಭವವುಂಟು.  

ಆದುದರಿಂದ ನಿಲ್ಲಬೇಡ ಹೊರಟುಹೋಗು. ನಾನೂ ಹೊಃಗುವೆನು” 

ಎಂದಳು. ರಾಮುವೂ ನಿರಾಶಾಹತನಾಗಿ " ಸುಂದರ! ಹೊರಟು 

ಹೋಗಬೇಡ ಧರ್ಮಲೋಪವಾಗದಂತೆ ಜಾಗ್ರತರಾಗಿರೋಣ. 

ಒಂದು ಘಳಿಗೆ ಕುಳಿತುಕೊ. ಒಂದು ಘಳಿಗೆ ಕುಳಿತುಕೊ'` 

ಎಂದು ಅಂಗಲಾಚಿ ಬೇಡಿಕೊಂಡನು ಹುಡುಗಿಯ ವಿವೇಕವು 

ನಿಲ್ಲಲಿಲ್ಲ. ಕುಳಿತುಕೊಂಡಳು. ರಿಣಮು ಮತ್ತೆ ಹೃದಯದಲ್ಲಿ 

ಕಾಳ್ಕಿಚ್ಚು ಬೇಯುತ್ತಿದ್ದು, ಅಡು ವೃರ್ಥವಾಯಿತೆಂಬ ನಂಬಿಕೆಯು 

ಹುಟ್ಟಿ, ಕುದಿಯುತ್ತಿರುವವರಿಗೆ ಮಾತ್ರವೇ ಸಾಧ್ಯವಾದ ಒಂದು 

ವಿಚಿತ್ರ ದೈನ್ಯದಿಂದ ಹೇಳಿಕೊಂಡನು. ""ಸುಂದರ! ತಪ್ಪು ನನ್ನ 

ದೇ ಆಗಲಿ. ಆದರೂ ತಪ್ಪಿತಸ್ಥನೆಂದು ದೂರಮಾಡುವೆಯಾ? 

ಸುಂದರ! ನಿನ್ನ ಮನಸ್ಸು ಇತರರ ಮುಖವನ್ನು ಗಣಿಸದಷ್ಟು 

ನಿಷ್ಟುರವಾಯ್ತೆ? ನನ್ನನ್ನು ಕಂಡು ಇಂದಿಗೆ ಐದು ವರುಷವಾ 

ಯಿತು. ತಪ್ಪು ನನ್ನದೇ ಆಗಲಿ! ಒಂದು ಸಲವಾದರೂ ಈ 

ಪಾಪಿಯು ನಿನ್ನ ಮನಸ್ಸಿನಲ್ಲಿ ಎಡೆಯನ್ನು ಹೊಂದಿರಲಿಲ್ಲವೆ? 

ನೀನು ನನ್ನನ್ನು ಪ್ರೇಮಾರ್ದವಾದ ದೃಷ್ಟಿಯಿಂದ ನೋಡಿರಲಿಲ್ಲವೆ? 

ಅದಕ್ಕಾದರೂ ಈದಿವಸ ಮತ್ತೊಮ್ಮೆ ನನ್ನೊಡನೆ ಮಾತನಾಡು, 


೧೪ 


ದೇವಿ ! ನಿನ್ನನ್ನು ಹಗಲಿರಳೂ ಧ್ಯಾನಿಸುತ್ತಿರುವುದು ಸುಳ್ಳೆಂದು 

ನಿನಗೆ ತೋರಿದರೆ ಈ ಹೃದಯವನ್ನು ಬಗಿದು ನೋಡು. ಅಲ್ಲಿ 

ನಿನ್ನ ಸುಂದರ ತಮ ಮೂರ್ತಿಯು ಪ್ರಸ್ಥಾಪಿತವಾಗಿಲ್ಲದಿದ್ದರೆ 

ನನ್ನನ್ನು ನಂಬಬೇಡ. ಲೋಕದಲ್ಲಿ ನಿನ್ನ ವಿನಾ ನನಗೆ ಮ 

ತ್ತೊಂದೂ ಇಲ್ಲ. ಸುಂದರ! ನೀನೂ ಕೈಬಿಡುನೆಯಾ? ಹಾಗಿ 

ದ್ದರೆ ಹೇಳು. ಇನ್ನೊಂದು ಘಳಿಗೆ ಕುಳಿತುಕೋ ನಿನ್ನನ್ನು 

ನೋಡುನೋಡುತ್ತಾ, ಈ ತುಂಬಿರುವ ಕೆರಯಲ್ಲಾದರೂ ಬಿದ್ದು 

ಪ್ರಾಣವನ್ನು ಬಿಟ್ಟು ಬಿಡುವೆನು.” ಎಂದೆದ್ದನು. ಹುಡುಗಿಯ 

ಮನಸ್ಸು ಸ್ವಲ್ಪ ವ್ಯತ್ಯಸ್ತವಾಯಿತು. ಕೂಡಲೇ ಎದ್ದು ನಿಂತು 

"ರಾಮು! ನಾಳೆಯಲ್ಲಾದರೂ ನೋಡೋಣ. ಇಂದು ಬೇಡ, 

ಹೊತ್ತಾಯಿತು. ನಾನು ಹೋಗುವೆನು? ಎಂದಳು ಕೂಡಲೇ 

ರಾಮುವು " ನಾಳೆ ಛತ್ರದ ಮಗ್ಗುಲಲ್ಲಿರುವ ತೋಪಿನಲ್ಲಿ ಒಂದು 

ಗುಡಾರವಿರುವುದು, ಅಲ್ಲಿಗೆ ಬರುವೆಯಾ?” ಎಂದನು. ಸುಂದ 

ರಿಯು "ಆಗಲಿ. ರಾತ್ರಿ. ಹನ್ನೊಂದು ಘಂಟೆಯಮೇಲೆ ಕಾಯ್ದು 

ಕೊಂಡಿರು" ಎಂದು ಹೇಳಿ ಹೊರಟುಹೋದಳು. ಯುವಕನಿಗೆ 

ಅತೃಪ್ತಿಯಲ್ಲಿ ತೃಪ್ತಿ. ಯುವತಿಗೆ ಭೀತಿಯಲ್ಲಿ ಧೈರ್ಯ. ಆದರೂ 

ಯಾವುದೋ ಪ್ರಬಲದುಃಖವು ಬೇರೆ ಭಾವಗಳನ್ನೆಲ್ಲ ಮುಳುಗಿಸಿ 

ಬಿಟ್ಟಿದ್ದಿತು. 

=====================================


೧೫


ಎರಡನೆಯ ಭಾಗ 


ಜೂಜಿನ ದೊಂಬಿ 



ಪ್ರಥಮ ಪರಿಚ್ಛೇದ 



ಛತ್ರದ ಪಾರುಪತ್ತೆಗಾರ ವೆಂಕಟಿರಮಣಯ್ಯನು ಯಾರನ್ನು 

ಕಂಡರೂ ಲಕ್ಷಿಸುವವನಲ್ಲ. ಆ ಊರಿನಲ್ಲಿ ತನಗಿಂತ ಮಿಗಿಲಾದ 

ಅಧಿಕಾರಸ್ಥರೇ ಇಲ್ಲವೆಂದು ಆತನ ನಂಬಿಕೆ. ಅಧಿಕಾರ ಗೌರವವು 

ಕಡಮೆಯಾಗಿದ್ದರೂ ಆತನ ಲೇವಾದೇವಿಯ ದರ್ಪವು ಒಳ್ಳೆ ಬಲ 

ವಾಗಿದ್ದಿತು. ಹಳ್ಳಿ ಯ ಲೇವಾದೇವಿಗೆ ತಕ್ಕಷ್ಟು ಹಣವು ಆತನ 

ಲ್ಲಿದಿತು. 


ಆತನಿಗೂ ನಡುನಡುವೆ ಕಷ್ಟ ಬರುತ್ತಿದ್ದತು. ಅಕಸ್ಮಾತ್ತಾಗಿ  

ಯಾರಾದರೂಬ್ಬ ಅಧಿಕಾರಿಗಳು ವೆಂಕಟರಮಣಯ್ಯನು ದೊಡ್ಡ 

ವರೆನ್ನುವ ಅಧಿಕಾರಿಗಳು ಪ್ರಾಪ್ತರಾಗುವರು. ಅದುವರೆಗೂ 

ಬಂದ ಹಾದಿಹೋತರಿಗೆ ಆಗಬೇಕಾಗಿದ್ದ ಉಪಚಾರಗಳ ಒಟ್ಬಿನಲ್ಲಿ 

ಅರ್ಧವನ್ನು ಆವರಿಗೆ ಒಪ್ಪಿಸಿಬಿಡುವನು. ಅಧಿಕಾರಿಗಳೂ ತಮ್ಮಂ 

ತೆಯೇ ಇತರರಿಗೂ ನಡೆಯುವುದೆಂಬ (" ಆತ್ಮವ 

ತ್ಸ ರ್ವಭೂತಾನಿ ಯಃ ಪಶ್ಯತಿ ಸ ಪಶ್ಯತಿ” ಎಂಬ ಭಗವದ್ದಾಕ್ಯವು 

ಇಲ್ಲಿ ಮಾತ್ರ ಅನ್ವಯಿಸುತ್ತಿತು) ಹೊರಟು ಹೋಗುವರು. 

ಮಳೆ ಹುಯ್ದ ಉತ್ತರಕ್ಷಣದಲ್ಲಿ ಇಕ್ಕೆಲವನ್ನೂ ಮೀರಿ ಹರಿದು, 

ಇನ್ನೊಂದು ಕೊಂಚ ಹೊತ್ತಿನಲ್ಲಿಯೇ ಬತ್ತಿಹೋಗುವ ಗಿರಿನದಿ 


೧೬ 


ಯಂತೆ ಅಧಿಕಾರಸ್ಥರ ಮುಖದರ್ಶನವಾದೊಡನೆಯೇ ಉಕ್ಕಿ 

ಹರಿದು ಬರುತ್ತಿದ್ದ ಉಪಚಾರ ತರಂಗಿಣಿಯು, ಅವರು ಹಿಂತಿರುಗಿ 

ದೊಡನೆಯೇ ಬತ್ತಿಹೋಗುತಿದ್ದಿತು. ಅದಷ್ಟಾದರೂ ಅಗಲು ವೆಂಕಟ 

ರಮಣಯ್ಯನಿಗೆ ಅಂತರಂಗದಲ್ಲಿದ್ದ ಒಂದು ದೊಡ್ಡ ಭೀತಿಯೇ 

ಕಾರಣ ಯಾವನಾದರೂ ಪಾಪಭೀತನಾದ ಅಧಿಕಾರಿಯು ಬಂದಾ 

ನೆಂಬ ದಿಗಿಲು. ಆದರೆ ಅರ್ಧ ಧೈರ್ಯ. ಈಗಿನ ಕಾಲದಲ್ಲಿ 

ಅಂತಹವರು ಅಧಿಕಾರವನ್ನು ಹುಡುಕಿಕೊಂಡು ಹೋಗುವುದಿಲ್ಲ 

ವೆಂದು 


ಇವನ ಅಳಿಯ ಕೃಷ್ಣಮೂರ್ತಿಯು ಆ ಮಾವನಿಗೆ ಕಡಮೆ 

ಯಾದವನಲ್ಲ. ಆ ಹಳ್ಳಿಯಲ್ಲಿ ಕುಳಿತುಕೊಂಡು ಸುಮ್ಮನಿರಲಾಗ 

ದೆಂದು ಅಲ್ಲಿ "ಕ್ಲಬ್‌" ಒಂದನ್ನು ಏರ್ಸಡಿಸಿರುವನು. ಅಲ್ಲಿಗೆ 

" ನೆಂಬರ್‌ದಾರ್‌'' ಆಗಲು, (ಅಲ್ಲಿಯವರು ಹೇಳುವುದು ಹಾಗೆ) 

ದುಡ್ಡುಕಾಸು ಚನ್ನಾಗಿ ಕೈಯ್ಯಲ್ಲಿರಬೇಕೆಂಬುದೊಂದೇ ನಿಯಮ. 

ಜಾತಿ, ಕುಲ, ಗೋತ್ರಗಳ ತಾರತಮ್ಯವಲ್ಲಿಲ್ಲ. ಮೇಲುಕೀಳೆಂಬ 

ಆ ಎಲ್ಲರೂ ಒಂದೇ. ಜನವಾರ್ತೆಯನ್ನು ನಂಬು 

ವುದಾದರೆ ಅಲ್ಲಿ ಬೆಳಗಿನಿಂದ ಸಂಜೆವರೆಗೂ ಜೂಜು ನಡೆಯುತ್ತ 

ದೆಂದು ಹೇಳಬೇಕು. ಅಲ್ಲಿನವರನ್ನೇ ಕೇಳಿದರೆ, ಅವರು “ತಮಾಷೆ"

ಯಾಗಿ ಕಾಲಹರಣಮಾಡುವರು ಅಷ್ಟೆ. ಆದರೆ ಈ " ತಮಾಷೆ” 

ಕಾಲಹರಣವು ಎಷ್ಟೊ ಜನರ ಮನೆ ಮುಳಿಗಿಸಿಬಿಟ್ಟಿದ್ದಿತು. 


ಆ ಕ್ಲಬ್ಬಿನವರಲ್ಲಿ ಮತ್ತೊಂದು ಸುಗುಣವಿದ್ದಿತು. ಯಾವು 

ದೊಂದು ಸಭ್ಯ ಮಂಡಲಿಯವರಿಂದಲೂ ತಮಗೆ ಯಾವ ಬಿರುದೂ 

ಲಭ್ಯವಾಗುವುದಿಲ್ಲವೆಂದು ತಿಳಿದು ಅಥವಾ ತಮಗೆ ಬಿರುದುಕೊಡುವ 

ಸೌಭಾಗ್ಯವು ಯಾವುದೂ ಸಭ್ಯಮಂಡಲಿಗಿಲ್ಲವೆಂದು ತಿಳಿದು, ಅವರು 

ತಮ್ಮ ತಮ್ಮಲ್ಲಿಯೇ ಬಿರುದಾವಳಿಗಳನ್ನು ಹಂಚಿಕೊಂಡಿದ್ದರು. 

ಸರ್ವಜ್ಞ ಕೃಷ್ಣಮೂರ್ತಿಗಳು ಪ್ರೆಸಿಡೆಂಟರು (ಇವರಿಗೆ ಎಂಟು 

ಸಲ ಸ್ಕೂಲ್‌ ಫೈನಲ್‌ ಹಾಲ್‌ ಟಿಕೆಟ್‌ ಬಂದಿದ್ದಿತಂತೆ) ಆಫೀಸರ್‌ 


೧೭


ರಾಮರಾಯರು ವೈಸ್‌ ಪ್ರೆಸಿಡೆಂಟರು. (ಇವರಿಗೆ ಸುಮಾರು ೫೦ 

ವಯಸ್ಸು, ಯಾವ ಆಫೀಸಿಗೂ ಇವರು ಕೆಲಸಕ್ಕಾಗಿ ಅರ್ಜಿಯನ್ನು 

ಹಾಕಿದುವಿಲ್ಲ). ಗೆಲುವುದಾರ ವೆಂಕಣ್ಣಯ್ಯನವ (ಇವರು ಎಂದೂ 

ಯಾವುದರಲ್ಲಿಯೂ ಗೆದ್ದುದೇ ಇಲ್ಲ). ಸ್ಯಾಂಡೋ ಸಣ್ಣಪ್ಪನವರು 

(ಇವರನ್ನು ಮೂರುಸಲ ಗಾಳಿಹೊಡೆದುಕೊಂಡು ಹೋಗಿದಿತಂತೆ). 

ಆರೊಗ್ಯವಂತರು ಜಿನದಾಸ ಪಂಡಿತರು (ಇವರ ಹಾಸಿಗೆ ಹಿಡಿದು 

ಮಲಗದ ದಿವಸವಿಲ್ಲ). ಆಚಾರ ವಿಚಾರದ ಸುಬ್ರಹ್ಮಣ್ಯಾವಧಾನಿ 

ಗಳು (ಇವರ ಮುಖ ನೋಡಿದರೆ ವಾಂತಿಗೆ ಬರುತ್ತಿದ್ದಿತಂತೆ). 

ಮೊದಲಾದವರು 'ಕಮಿಟೀ ಮೆಂಬರು'ಗಳು. ಅಂತೂ " ಟೈಟಲ್‌ 

ಹೋಲ್ಡರ್ಸ್:" ಅಲ್ಲಿ ಸೇರುವ ಹಾಗೇ ಇರಲಿಲ್ಲ. 


ಆ ಕ್ಲಬ್ಬಿನಲ್ಲಿ ಒಂದುದಿನ ಒಂದು ವಿಶೇಷವು ನಡೆಯಿತೆಂದು  

ಸಮಾಚಾರ. ಮೈಸೂರಿನಿಂದ ಯಾರು ಯಾರೋ ದೊಡ್ಡ ಮನು 

ಷ್ಯರು ಅಲ್ಲಿಗೆ ಅತಿಥಿಗಳಾಗಿ ಹೋಗಿದ್ದಂತೆಯೊ, ಅಂದು ಅವರ 

ಸಮಾಗಮನದ ಸಂತೋಷ ಸೂಚನಾರ್ಥವಾಗಿ 'ಕ್ಲಬ್ಬಿ'ನವರು 

ಒಂದು ದೊಡ್ಡ ಆಟವನ್ನು ಹೂಡಿದ್ದಂತೆಯೂ, ಇವು ಹೇಗೆಹೇಗೋ  

ಪಾರುಪತ್ತೆ ಗಾರನಿಗೆ ತಿಳಿದು, ಆತನು ಬಂದು ಅಳಿಯನನ್ನು ಯದ್ವಾ 

ತದ್ವಾ ವಾಚಾಮಗೋಚರವಾಗಿ ಆಡಿದಂತೆಯೂ, ಆಗ ಅಳಿ 

ಯನು " ಅವರೆಲ್ಲರೂ ದೊಡ್ಡದೊಡ್ಡಮನುಷ್ಯರು ಅವರೆದುರಿಗೆ ತನಗೆ 

ಅವಮಾನವಾಯ್ತೆಂ''ದು "ಕ್ರುದ್ಧನಾಗಿ, ತನ್ನ ಮಾವನು ಪಾರು 

ಪತ್ತೆಗಾರನಾಗಿರುವುದರಿಂದ ತನಗೆ ಬಂದಿರುವ ಅನಮಾನವನ್ನು 

ತಪ್ಪಿಸಲು ತಾನು ಅಂತಹ ದೊಡ್ಡಮನುಷ್ಯರ ಸಹವಾಸಮಾಡಿರು  

ವುದಾಗಿಯೊ ಹೇಳಿಕೊಂಡು, ಅನರೆಲ್ಲರನ್ನೂ ಪ್ರತ್ಯೇಕ ಪ್ರತ್ಯೇಕ 

ವಾಗಿ ಕುಲಗೋತ್ರಗಳನ್ನು ಹೇಳಿ ಮಾವನಿಗೆ ತೋರಿಸಿದಂತೆಯೂ  

ಮರುದಿನ ಬೆಳಗ್ಗೆ ಆ ದೊಡ್ಡಮನುಸ್ಯರು ತಾವು ನಿಜವಾಗಿಯೂ 

ದೊಡ್ಡ ಮನುಷ್ಯರೇ ಎಂದು ತೋರಿಸಿಕೊಳ್ಳಲು ಮೈಸೂರಿನ ಬೀದಿ 

ಯನ್ನು ನಿರ್ನುಲಮಾಡುವ ದೊಡ್ಡಕೆಲಸದಲ್ಲಿ ಪ್ರವೃತ್ತರಾಗಿದ್ದ 


೧೮ 


ರೆಂತಲೂ ವರ್ತಮಾನ. ಅಂತೂ ನಾನು ಇಷ್ಟುಮಾತ್ರ ಹೇಳುವೆವು. 

ಈಗಿನ ಸಂಘಸುಧಾರಕರು ಜನಸ ಮೂಹದಲ್ಲಿ ಎಂತು ಗಂಟಲು 

ಕಿತ್ತುಕೊಳ್ಳುವುದಕ್ಕಿಂತಲೂ 'ಹೋಟಲು' ಜೂಜಿನ ಮನೆಗಳನ್ನು 

ದಿನ ವೊಂದಕ್ಕೆ ಹತ್ತುಹತ್ತರಂತೆ ಹೆಚ್ಚಿಸುತ್ತ ಬಂದರೆ ನಮ್ಮ 

ಪುರೋಭಿವೃದ್ಧಿಗೆ ಅಡ್ಡವಾಗಿರುವ ವರ್ಣಾಶ್ರಮ ಧರ್ಮಗಳೂ 

ಪರಸ್ಪರ ವೈಷಮ್ಯಗಳೂ ತಪ್ಪಿ ಸರ್ವಸಮತ್ವವು ತಾನೇ ತಾನಾಗುವು 

ಪರಲ್ಲಿ ಸಂದೇಹವಿಲ್ಲ. 

---


ದ್ವಿತೀಯ ಪರಿಚ್ಛೇದ 



ಹೇಗೆಹೇಗೋ ಈ ಕ್ಲಬ್ಬಿನ ಸಮಾಚಾರವು ಮೈಸೂರು 

ಪೋಲೀಸ್‌ ಇನ್ಸ ಸ್ಪೆಕ್ಟರಿಗೆ ತಿಳಿಯಬಂದಿತು, ಅವರು ಇದರ ತತ್ವಾರ್ಥ 

ವಿಚಾರಿಸಲು ಪ್ರಸಿದ್ಧ ಪಕ್ತೀದಾರನಾದ ನರಸಿಂಗರಾಯ 

ನನ್ನು ಕಳುಹಿಸಿದರು. ಅವನು ಬಂದಿರುವುದು ಯಾರಿಗೂ ತಿಳಿ 

ಯದು. ಅಂದು ಭಾನುವಾರವೆಂದು ಆ ಊರಿನ 'ನೆಂಬರುದಾರ್ರ' 

ಜತೆಗೆ ಹೊರಗಿನ ಅತಿಧಿಗಳನ್ನೂ ಬರಮಾಡಿಕೊಂಡು, ಅಂದು 

ಕ್ಲಬ್ಬಿನವರು ಮಹಾ ವೈಭವದಿಂದ ಸಂತೋಷಕೂಟವನ್ನು ನಡೆ 

ಸುತ್ತಿದ್ದಾರೆ ಅಂದು ಬರಿಯ ಕಾಫಿ ತಿಂಡಿಗಾಗಿ, ಒಂದು ಹೊತ್ತಿಗೇ 

ಹತ್ತು ರೂಪಾಯಿ ಖರ್ಚಾಗಿದೆ ರೂಪಾಯಿಗಳ ಶಬ್ದವು 

ಸುಮಾರು ದೂರಕ್ಕೆ ಕೇಳಿಸುತ್ತ, ಕ್ಲಬ್ಬಿನವರ ಧನಿಕತೆಯನ್ನು 

ವ್ಯಕ್ತಪಡಿಸುತ್ತದೆ. 


ಮಾವನು ಅಳಿಯನ ವೈಭವವನನ್ನು ನೊಡಿ ಬೆರತುಹೋಗಿ 

ದ್ದಾನೆ. ಮಾವನಿಗೆ ಒಳಗೆ ಒಂದು ಯೋಚನೆಯಿದ್ದಿತು. ಯಾವ 

ತ್ತಾದರೂ ಒಂದು ದಿನ ಅಳಿಯನಿಗೆ ಅದೃಷ್ಟ ಬಂದರೆ ಅಷ್ಟು 


೧೯ 


ಹಣವೂ ತನ್ನದಾಗುವುದು. ಅಲ್ಲದೆ ನಿತ್ಯವೂ ತಪ್ಪದೆ ಅಳಿಯನು 

೨-೩ ರೂಪಾಯಿ ತಂದುಕೊಡುವನು. ಇನ್ನೇನಾಗಬೇಕು ? 


ಸುಮಾರು ಮೂರುವರೆ ಗಂಟೆ. ಆ ವೇಳೆಗೆ ಅಳಿಯಂದಿರು 

ಕೃಷ್ಣ ಮೂರ್ತಿಗಳಿಗೆ ಬಂದಿದ್ದ ಹಣವೆಲ್ಲ ಕೈಬಿಟ್ಟು ಹೋಗಿದೆ. 

ಗಳಿಗೆಗೊಂದು ಸಲ " ಸುಖದುಃಖೇ ಸಮೇಕೃತ್ವಾ ಲಾಭಾ 

ಲಾಭೌ ಜಯಾ ಜಯೌ'' ಎಂದು ಶ್ಲೋಕವನ್ನು ಹೇಳುತ್ತಲ್ಕೂ 

ಮತ್ತೊಮ್ಮೆ “ ಸುಮಾರು ೩೦೦ ರೂಪಾಯಿ ಬಂದಿತ್ತು. ಎದ್ದಿದರೆ 

ಚನ್ನಾಗಿದ್ದಿತು " ಎಂದು ಹೇಳಿಕೊಳ್ಳುತ್ತಲೂ ಆಡುತ್ತಲೇ ಕುಳಿತಿ 

ದ್ದನು. ಸುತ್ತಿನವರು " ತಾವು ಒಬ್ಬರ ಕೈಕೆಳಗೆ ಇರುವವರಲ್ಲ. 

ತಮಗೆ ಧಾರಾಳವಾಗಿ ಮಾತಾಡುವ ಹಕ್ಕು ಉಂಟೆ”ಂದು ತೋರಿಸಿ 

ಕೊಳ್ಳಲು ತೋರಿದುದನ್ನೆಲ್ಲ ಮಾತನಾಡುತ್ತಿದ ರು. 



ಸಿಗರೇಟು ಬೀಡಿ ಚುಟ್ಟಾಗಳ ಹೊಗೆ ಆ ಆವರಣ 

ವನ್ನೆಲ್ಲಾ ವ್ಯಾಪಿಸಿ ಅಲ್ಲಿ ಸಣ್ಣಗೆ ಮಂಜು ಮನುಸುಕಿರುವಂತೆ 

ಕಾಣುತ್ತದೆ. ಆ ಸುಗಂಧನ್ರು ಸುತ್ತಲೂ ವ್ಯಾಪಿಸಿದೆ. ಬಿಸಾಡಿದ 

ತುಂಡುಗಳೆಲನೂ ದಟ್ಟವಾಗಿ ಬಿದ್ದಿದ್ದು, ಅಂಗೈಯಗಲವೂ ಬರಿನೆಲ 

ಕಾಣಿಸದಂತೆ ಆಗಿದೆ ಬೆಳಗಿನಿಂದಲೂ ಅದೃಷ್ಟದೇವತೆಯ  

ಕೋಪಕ್ಕೆ ಪಾತ್ರರಾಗಿರುವವರ ತಾರದ್ವನಿಯೊಡನೆ ಆಕೆಯ ಕಟಾ 

ಕ್ಷಕ್ಕೆ ಪಾತ್ರರಾಗಿರುವವರ ಮಂದ್ರಗಂಭೀರ ಧ್ವನಿಯೂ, ಹಾಗೂ 

ಹೀಗೂ ಇರುವವರ ಅಸಮಾಧಾನದ ಮಧ್ಯಮಧ್ವನಿಯೂ ಸೇರಿ 

ದೊಡ್ಡ ಸಂಗೀತವನ್ನು ಮಾಡುತ್ತಿವೆ ಆಗಿಂದಾಗ್ಯೆ ಜಲ್‌ 

ಜಲ್ಲೆಂದು ಕೇಳಿಸುವ ರೂಪಾಯಿನ ಶಬ್ದವು ತಾಳವಾಗಿದೆ. ಎಲ್ಲ 

ರಿಗೂ ಜೂಜಿನ ಅಮಲು ತಲೆಗೇರಿದೆ. ಯಾವನು ಬಂದರೂ ಹೆದ

ರುವ ಹಾಗಿಲ್ಲ. ಸರಿ! "ಆನೆ ನೀರಾಟದೊಳು ಮೀನ ಕಂಡಂಜು

ವುದೆ ? ” ಎಂದಹಾಗೆ. 



೨೦ 



ಕೊನೆಗೆ ನಂಬರುವಾರರ ಮನೋಧಾರ್ಥ್ಡ್ರವನ್ನು ಪರೀಕ್ಷೆ 

ಮಾಡುವ ಕಾಲವು ಬಂದಿತು. ಸುಮಾರು ನಾಲ್ಕುಗಂಟೆ ಇರಬಹುದು 

ಒಬ್ಬನು ವದೆ ಮಾರುವವನು ಅಲ್ಲಿಗೆ ಬಂದನು. ಊಟಮಾಡಲು 

ಪುರಸತ್ತಿಲ್ಲದ ಕೆಲವರು ಕೂಡಲೆ ಅವನನ್ನು ಗಿ ಕರಿಡರು. 

ವಡೆಯ ಮಾರಾಟಿವೂ ಚೆನ್ನಾಗಿ ಆಯಿತು; ಅವನಿಗೂ ವಡೆ ಜೆನ 

ಜಃ ಎಂದು ಒಂದು ರೂಪಾಯಿ ಇನಾಮೂ ಸಿಕ್ಕಿತು. ಅವನೂ 

ದೂ ಇದೂ ಮಾತನಾಡುತ್ತ ಅಲ್ಲೆಕುಳಿತು ಬಿಟ್ಟಿತು. ಮತ್ತೊ 

ಹ ಕೋಡಿಬಳೆ ತಂದನು. ಅದೂ ಚೆನ್ನಾಗಿದು ಎಲ್ಲಾ ಖರ್ಚಾ 

ಗಿ, ಅವನೂ ವಡೆಯವನೂ ತಮ್ಮತಮ್ಮ ವೃತ್ತಿಯ ವಿಚಾರವಾಗಿ 

ಮಾತನಾಡುತ್ತ ಕುಳಿತುಕೊಂಡರು. ಆ ವೇಳೆಗೆ ಸುಮಾರು 

ಐದು ಗಂಬೆಯಾಗಿರಬಹುದು. ಮನೆಗೆ ಹೋಗಿ ದೃವರೂ ಬಂದು 

ಬಿಟ್ಟಿದ್ದಾರೆ, ' ಕ್ಲಬ್‌ `'ಭತಿೀಯಾಗಿ ಹೋಗಿದೆ. ಯಾರೂ ಶಪ್ಪಿಸಿ 

ಕೊಂಡಿಲ್ಲ. 



ತೃತೀಯ ಪರಿಚ್ಛೇದ 

--


ಆ ವೇಳೆಗೆ "ಕೃಷ್ಣಮೂರ್ತಿಗಳೇ" ಎಂದು ಕೂಗುವ  

ಸ್ವಲ್ಪ ಕ್ರೂರವಾದ ಶಬ್ದವೊಂದು ಕೇಳಿಸಿತು. ಪರಿಚಿತವಾದ ಆ

ಶಬ್ದವೆತ್ತಲಿಂದ ಬಂದಿತೆಂದು ನೋಡುತ್ತವಾಗಲೇ, ಸಾಮಾನ್ಯ   

ವಾಗಿ, ನೋಡಿದರೆ ಹೆದರಿಕೆಯಾಗನಿವೆ ಭೀಮ ಸ್ವರೂಪವೊಂದು, 

"ಕಾಕಿ"ಯೂನಿಫರಮ್ಮಿನಲ್ಲಿ ಇನ್ನೂ ಕರಾಳವಾಗಿ ಎದುರಿಗೆ 

ಬಂದು ನಿಂತಿತು. ಅವರು ಬಾಗಿಬು ಚಿಲಕೆ ಹಾಕದೆ ಮೈಮರೆತ 

ದಿನವಿಲ್ಲ. ಇಂದು ಈ ವ್ಯಕ್ತಿಯು ಒಳಗೆ ಬಂದು ಹೇಗೆ? ಎಲ್ಲ 

ರಿಗೂ ಅಶ್ಚರ್ಯ. ಎಲ್ಲರೂ ತುಟಿಪಿಟಕ್ಕೆನ್ನದೆ ಚಿತ್ರದ ಬೊಂಬೆಗ 



೨೧ 



ಳಂತೆ ಕುಳಿತಿದ್ದಾರೆ. ದುಡ್ಡಿನ ರಾಶಿಯು ಮುಂದೆ ಸುರಿದಿದೆ, 

ಎಲ್ಲರೂ ಸುತ್ತ ಕುಳಿತಿದ್ದಾರೆ. ಕೈಯ್ಯ ಎಲೆಗಳು ಕ್ರಮೇಣ 

ಜಾರಿಬಿದ್ದು ಹೋಗುತ್ತಿವೆ. ಬಲಗೈಯ್ಯ ಸಿಗರೇಟು, ಬೀಡಿ ಇತ್ಯಾ 

ದಿಗಳು ಅಲ್ಲಲ್ಲೆ ಕವರಿಹೋಗುತ್ತಿವೆ.  ಎಲ್ಲಿದ್ದವರು ಅಲ್ಲೆ! 


ಈ ವೇಳೆಗೆ ಆಗಲೇ, ವಡೆಯವನೂ ಕೋಡು, ಬಳೆಯವನೂ 

ಹೋಗಿ ಎರಡು ಪಿಸ್ತೂಲುಗಳನ್ನು ಹಿಡಿದು ಕೊಂಡು ಆ ಕಿರುಮನೆ 

ಗಿದ್ದ ಎರಡು ಬಾಗಿಲಲ್ಲಿ ನಿಂತಿದ್ದಾರೆ , ಯಮನೆರಡಾಗಿ ಬಂದಂತೆ 

ಕಾಣುತ್ತದೆ. ಯಾರೂ ಏನೂ ಮಾಡುವ ಹಾಗಿಲ್ಲ; ಎದ್ದು 

ಹೋಗಲು ಯತ್ನಿಸಿದರು. ಆದರೆ ನಡೆಯಲಿಲ್ಲ.  


ಮುಂದಿನ ಫಲಾಫಲಗಳೆಲ್ಲವೂ ಎಲ್ಲರ ಮನಸ್ಸಿಗೂ ತಟ್ಟನೆ 

ಹೊಳೆದು ಹೋಯಿತು. ಕೆಲವರ ಕಣ್ಣಿನಲ್ಲಿ ನೀರು ದಡಗುಟ್ಟಿ

ಕೊಂಡು ಹರಿಯಲೂ ಹರಿಯಿತು. ಆದರೂ ಯಾರಿಗೂ ಮಾತ 

ನಾಡುವ ಎದೆಯಿಲ್ಲ. ಎಲ್ಲರೂ ನೀರವ. ಮಾಡುವ ಕೆಲಸವು 

ತಪ್ಪೆಂದು ತಿಳಿದಿರುವಾಗ, ಒಮ್ಮೆಯಾದರೂ ಅದು ಮನುಷ್ಯನನ್ನು 

ಕಾಡದೆ ಹೋಗುವುದೇನು? 


ಕೊನೆಗೆ ನರಸಿಂಗರಾಯನೇ ಮಾತನಾಡಿದನು. ಆ ಬದ್ಮಾ 

ಷ್‌? ಅಬ್‌ ಕ್ಯಾಬೋಲ್ತೆ ತುಂ ಸಬ್‌ಲೋಗ್‌ ?" ಎಂದು ಗದರಿಸಿ 

ದನು. ಗರ್ಜನೆಯು ಎಲ್ಲರ ಎದೆಯನ್ನೂ ನಡಗಿಸಿ ಬಿಟ್ಟಿತು. 

ಏನೂ ಯಿಲ್ಲದಾಗ ನಗುತ್ತಿರುವ ಆ ಪೋಲೀಸಿನವರ ಮುಖದಲ್ಲಿ, 

ಯಾವನಾದರೊಬ್ಬನು (ಅವನು ಅಪರಾಧವನ್ನೇ ಮಾಡಿರಬೇಕಾ 

ದ್ದೇ ಇಲ್ಲ), ಬಂದು ಎದುರಿಗೆ ನಿಂತರೆ ಕಿಡಿಯೇಳುತ್ತದೆ. ನೋಡು 

ವವರ ಎದೆ ಇಬ್ಬಾಗವಾಗುತ್ತದೆ. ಮೊದಲೇ ಕಣ್ಣೀರು ಬಿಡುತ್ತಿದ್ದ 

ವರು ದೊಡ್ಡದಾಗಿ ಗೊಳೋ ಎಂದು ಅತ್ತುಬಿಟ್ಟರು. ಮತ್ತೆ ಕೆಲ 

ವರು ಸುಮ್ಮನೆ ಮುಸುಕು ಹಾಕಿಕಂಡು ತಲೆ ತಗ್ಗಿಸಿಕೊಂಡು 

ಕುಳಿತರು; ಹೊರಗೆ ಹೊರಡಬೇಕೆಂದ ಒಬ್ಬಿಬ್ಬರ ಪ್ರಯತ್ನಗಳೂ 



೨೨ 


ಸಹ ನಡೆಯಲಿಲ್ಲ ಕೊನೆಗೆ ಬೇರೆ ಗತಿಯಿಲ್ಲದೆ ಕೃಷ್ಣಮೂರ್ತಿಯೇ 

ಮುಂದೆ ಬರಬೇಕಾಯಿತು. ಸಾಮದಾಸನಾದ್ಯುಪಾಯಗಳನ್ನೆಲ್ಲಾ 

ಪ್ರಯೋಗಿಸಿದುದರ ಫಲವಾಗಿ ಕೊನೆಗೆ ನರಸಿಂಗರಾಯನಿಗೆ 

ಮೂರುನೂರು ರೂಪಾಯಿಯನ್ನೂ, ಅವರಿಬ್ಬರಿಗೂ ಐವತ್ತು 

ಐವತ್ತು ರೂಪಾಯಿಯನ್ನೂ ಕೊಡಬೇಕೆಂದು ಇತ್ಯರ್ಥವಾಯಿತು. 

ಬಂದಿದ್ದ ಮೃತ್ಯುವು ದುಡ್ಡಿನ ಮೇಲೆ ಹೋಗಿ, ತಾವು ಉಳಿದು 

ಕೊಂಡೆವೆಂದು ನಿಶ್ಚಯವಾದ ಕೂಡಲೆ, ಎಲ್ಲರೂ ಚಿಗುತುಕೊಂ 

ಡರು. ಅರೆಗಂಟೆಯ ಮುಂದೆ ಒಬ್ಬೊಬ್ಬರು ನೂರು ರೂಪಾಯಿ 

ಕೊಡಲು ಸಿದ್ದವಾಗಿದ್ದವರು, ಈಗ ಇಪ್ಪತ್ತು ರೂಪಾಯಿ ಕೊಡು 

ವುದೂ ಕಷ್ಟವಾಗಿ ಹೋಯಿತು ತುಂಬಿದ ಕಟ್ಟೆಯಲ್ಲಿ ಮೂರು 

ನೂರು ರೂಪಾಯಿ ಹುಟ್ಟುವುದು ಕಷ್ಟವಾಗಿ ಹೋಯಿತು. ಕೊನೆಗೆ 

ಯಜಮಾನ ಕೃಷ್ಣಮೂರ್ತಿಯು ಅಲ್ಲೊಬ್ಬ ಬಳಿ ಒಂದು ದಿವಸದ 

ವಾಯಿದೆ ಮಾಡಿಕೊಂಡು ನೂರು ರೂಪಾಯಿಗಳನ್ನು ಸಾಲಮಾಡಿ 

ತನ್ನ ಲ್ಲಿದುದನ್ನೂ ಸೇರಿಸಿಕೊಟ್ಟು, ಆ ಪ್ರಾರಬ್ಧಗಳನ್ನು ತೊಲ  

ಗಿಸಿದನು 


ಅಲ್ಲಿಗೆ ಆಟವು ನಿಂತುಹೋಯಿತು. ಎಲ್ಲರೂ ಚದುರಿ 

ಹೋದರು. ಕೃಷ್ಣಮೂರ್ತಿಗೆ ಮಾತ್ರ ಯೋಚನೆ. ಮರುದಿವಸ 

ನೂರು ರೂಪಾಯಿಗಳನ್ನು ಎಲ್ಲಿ೦ದ ತರುವುದು? ಯಾರನ್ನು 

ಕೇಳುವುದು??' ಅವನಿಗೆ ಬಹಳ ಬೇಕಾದವರೊಬ್ಬರಿದ್ದರು "ಅದ 

ಕ್ಕೇನು? ನಿಮ್ಮ ಮಾವನನ್ನೇ ಕೇಳಿದರಾಯಿತು” ಎಂದರು. 

ಮಾವನ ಯೋಗ್ಯತೆ ಅಳಿಯನಿಗೆ ಗೊತ್ತು. ಅಂತೂ ಅವನಿಗೆ 

ಆಕಾಶವೇ ಕಳಚಿಬಿದ್ದಂತೆ ಇದೆ. ಜೂಜಿನಕಟ್ಟೆ ಸಾಲ ಮೊದಲು 

ತೀರಿಸಬೇಕು. ಇಲ್ಲವಾದರೆ ಮಾನ ಹೋಗುತ್ತದೆ. ಮನೆಯಲ್ಲಿ 

ಮಕ್ಕಳು ಅನ್ನವಿಲ್ಲ ದೆ ಅತ್ತರೂ ಚಿಂತೆಯಿಲ್ಲ. ತ:ನು ವಾರಕ್ಕೊಂದು 

ಸಲ ಭೀಷ್ಮ ಸಹಕ ಮಾಡುತ್ತಿದ್ದರೂ ಯೋಚನೆ ಇಲ್ಲ. ಜೂಜಿನ 

ಸಾಲ ಮೊದಲು ತೀರಿಸಬೇಕು. "ಇಲ್ಲವಾದರೆ ಮಾನ ಹೋಗುತ್ತದೆ. 

ಜೂಜಿಗೂ ಮಾನಕ್ಕೂ ಬಹು ನಿಕಟ ಸಂಬಂಧವೇನೊ? 


೨೩


ಮೂರನೆಯ ಭಾಗ 


ಹವಣಿಕೆ


ಪ್ರಥಮ ಪರಿಚ್ಛೇದ 


ಇಂದು ಛತ್ರದ ಪಾರುಪತ್ತೇಗಾರ್ರಿಗೆ ಸ್ವಲ್ಪವೂ ಬಿಡಿತಿಯಿಲ್ಲ 

ಅವರಿಗೆ ಬಲುಕೆಲಸ. ಯಾರೋ ದೊಡ್ಡ ಅಧಿಕಾರಿಗಳು ಬಂದಿ 

ದ್ದಾರೆ. ಅವರಿಗೆ ಬೇಕಾದ " ಸರಬರಾಯಿ” ಮಾಡಿಸಿ ಒಳ್ಳೆಯ 

ವನೆನ್ನಿಸಿಕೊಳ್ಳಬೇಕೆಂದು ಆಶೆ; ಸಾಲದುದಕ್ಕೆ ತನಗೆ ಅಂತರಂಗ 

ದಲ್ಲಿ ಒಂದು ದಿಗಿಲು. ಮೊನ್ನೆ ಆ ಪಳ್ಳಿ ಆಯ್ಯನು "ನೋಡು 

ತ್ತಿರು, ಇನ್ನು ಒಂದು ವಾರದೊಳಗಾಗಿ ನಿನ್ನ ಬಾಯಿಗೆ ಮಣ್ಣು 

ಹಾಕಿಸಿ ಬಿಡುತ್ತೇನೆ' ಎಂದಿದ್ದನಂತೆ. ಈ ಅಧಿಕಾರಿಯು ಬಂದು. 

ದು ಅದಕ್ಕೇ ಏನೋ? 


ಬಾಗಿಲು ಕಾಯುವ ಜವಾನರಿಬ್ಬರಿಗೂ ಬೇಕಾದ ಉಪಚಾರ: 

ವಾಯಿತು. ಆದರೂ ಅವರೇನೂ ಸಗ್ಗಲಿಲ್ಲ. " ಅವರು ರಾಜ್ಯದಲ್ಲಿ 

ದೊಡ್ಡ ಅಧಿಕಾರಿಗಳು ಅಷ್ಟೆ.” ಹೆಚ್ಚುಮಾತು ಅವರಿಂದ ಹೊರಡ 

ಲಿಲ್ಲ ವೆಂಕಟರಮಣಯ್ಯನಿಗೆ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿದೆ. 

"ಏನಾದರೂ ಆಗಲಿ; ಇವರು ಯಾರೆಂದು ತಿಳಿದರೆ ಸಾಕು” ಸಾಲ 

ದುದಕ್ಕೆ, ಹಾಳು, ಎಲ್ಲಿಯೋ ನೋಡಿದಂತಿದೆ. ಅದು ಬೇರೆ 

ಅಂಜುವವರ ಮೇಲೆ ಕಪ್ಪೆ ಯಿಟ್ವಂತೆ. 


೨೪


ದ್ವಿತೀಯ ಪರಿಚ್ಛೇದ

ಕೃಷ್ಣಮೂರ್ತಿಯ ಯಿದೆ ಮೀರುತ್ತಾ ಬಂದಿತು. 

ಅವನಿಗೆ ಎಲ್ಲಿಯೂ ಹಣವು ದೊರೆಯಲಿಲ್ಲ. ಯತ್ನವಿಲ್ಲದೆ ಮಾವ 

ನನ್ನು ಕೇಳಿದನು. ಪೂರ್ವಾಪರಗಳನ್ನೆಲ್ಲ ತಿಳಿದ ಮಾನವನು ಹಣ 

ವನ್ನು ಕೊಡಲಿಲ್ಲ ಹೆಂಡತಿಯನ್ನು ಕೇಳಬೇಕೆಂದು ಅಪೇಕ್ಷೆ. 

ಕೇಳಲು ಥೈರ್ಯವಿಲ್ಲ ಅದರಿಂದ "ಅಯ್ಯೋ ಪಾಪ! ಅವಳ 

ಹತ್ತಿರ ಎಲ್ಲಿ ಬಂದಿತು?” ಎಂದುಕೊಳ್ಳವನು. ಏನಾದರೂ ಮಾಡ 

ಬೇಕು. ಇಲ್ಲವಾದರೆ ಯತ್ನವಿಲ್ಲ. ಏನು ಮಾಡಬೇಕೆಂಬ:ದೇ 

ತೋರದು. 


ಕೊನೆಗೆ ಪಾಯವು ಹೊಳೆಯಿತು. ಅಂದು ಆ ಊರಿಗೆ 

ಒಬ್ಬ ದೊಡ್ಡ ಮನುಷ್ಯನು ಬಂದಿದಾನೆ. ಊರನವರಲ್ಲ ಅವನನ್ನು 

'ಆಫೀಸರು' ಮಾಡಿದ್ದರೂ, ಅದರಲ್ಲಿ ಕೃಷ್ಣ ಮೂರ್ತಿಗೆ ನಂಬಿಕೆ  

ಯಿಲ್ಲ. ಯಾವ ಆಫೀಸರ್ ಆದರೇನುನ.? ಯತ್ನವಿಲ್ಲ. ನಡು ನಡುವೆ 

ಮಾತ್ರ ಒಂದು ಸಲ ಎಲೋ ಯಾವುದೊ ಸಣ್ಣಸೊಲ್ಲು " ಸಿಕ್ಕಿ 

ಬಿದ್ದರೆ? " ಎನ್ನುವುದು. ಕೂಡಲೆ ಕೃಷ್ಣಮೂರ್ತಿಯು ಪ್ರತಿಹತ  

ನಾದರೂ " ಓ! ನಾನು ಸಿಕ್ಕಿಬೀಳುತ್ತೇನೆಯೋ? "ತ್ಸ್ ಚ್" ಎಂದು 

ಕೊಳ್ಳುವನು. ಕೊನೆಗೆ ಹಾಗೆ ಮಾಡಲು. ನಿಶ್ಚಯವಾಯಿತು. 

ಬಾಗಿಲು ಪಹರೆಯವರಿಬ್ಬರು? ಅವರಿಗೆ ಗಾಢನಿದ್ರ ಬಂದು ಬಿಟ್ಟರೆ? 

----

ತೃತೀಯ ಪರಿಚ್ಛೇದ 


ಈ ಛತ್ರದ ಕಿರುಮನೆಯ ಮೂಲೆಯೊಂದರಲ್ಲಿ ಮತ್ತೊಂದು 

ಪ್ರಾಣಿಯೂ ಯೋಚಿಸುತ್ತ ಕುಳಿತಿದೆ. ಎದುರಿಗೆ. ದೊಡ್ಡದಾದ 


೨೫


ಇಂದು ಕನ್ನಡಿ. ಅದರಲ್ಲಿ ತನ್ನ ಪ್ರತಿಬಿಂಬವನ್ನೊಮ್ಮೆ ನೋಡಿ 

ಕೊಂಡು ತಾನು ಸುಂದರಿಯೆಂಬ ಅಹಂಕಾರಕ್ಕೆ ಒಂದು ಗಳಿಗೆ ಎಡೆ 

ಕೊಡುತ್ತಾಳೆ. ಮತ್ತೊಂದು ಗಳಿಗೆಯಲ್ಲಿ ಮುಖವು ವಿವರ್ಣ 

ವಾಗಿ ಕಣ್ಣೀರು ಬರುತ್ತದೆ, ಹೀಗೆ ವಿವಿಧ ಮನೋಭಾವನೆಗಳಿಂದ 

ಅಹತಪ್ರತ್ಯಾಹತವಾಗುತ್ತಿರುವ ಯ:ವತಿಯ ಕಣ್ಣಿಗೆ ಹತಾತ್ತಾಗಿ 

ಸಾಯಂಕಾಲದ ಸೂರ್ಯನ ಪ್ರತಿ ಬಿಂಬವು ಬಿದ್ದಿತು. ಆಗಲೇ 

ಐದು ಗಂಟೆಯಾಗಿ ಹೋಗಿದೆ. ಇನ್ನು ಬಹ ಕಾಲವಿಲ್ಲ. ತಾನು 

ಸಿದ್ದಳಾಗಬೇಕು ಬೆಳೆದು ಬಂದು ಫಲೋನ್ಮುಖವಾಗುವುದರೊ 

ಳಗಾಗಿ ಒಣಗಿ ಕೂೋಗಿದ್ದ ಪ್ರೇಮ ವೃಕ್ಷವಿಂದು ಪುನರುಜ್ಜೀವಿತ 

ವಾಗಿರಲು, ಇದುವರೆಗೂ ಪ್ರಸುಪ್ತವಾಗಿದ್ದ ಅಂತರಿಕವಾದ 

ಪ್ರೇಮಬಂಧವು ಇಂದು ಪ್ರಬುದ್ದವಾಗಿರಲು, ಹೃದಯವು ಹೇಳಕೇ 

ಳದೆ ತನಗಿಷ್ಟವಾದ ವಸ್ತುವಿನ ಬಳಿಗೆ ಹೊರಟುಹೋಗಿರಲು,  

ಹೋಗದಿರುವುದೆಂತು? ಅಭಾವದಲ್ಲಿ ಬೇಡವೆಂದು ಕೃತನಿಶ್ಚಯೆ 

ಯಾದರೂ ವರ್ಷಾಂತರಗಳಿಂದ ಬೇಕೆಂದ ವಸ್ತುವೆದುರಿಗೆ ಬಂದು 

ನಿಂತರೆ ಅದನ್ನೆಂತು ತಿರಸ್ಕರಿಸುವುದು? ಅಜ್ಞಾತವಾಗಿಯೇ 

ಭೂಮಿಯನ್ನು ಅಗೆದು ಹಸನು ಮಾಡಿ ಗಿಡವನ್ನು ನೆಟ್ಟು ಅದು 

ಬೆಳೆದು ಬಂದು ಫಲೋನ್ಮುಖವಾಗಿರಲು, ಈಗ ಜ್ಞಾತವಾಗಿ ಅದನ್ನು 

ಕಿತ್ತು ಮೂಲೋತ್ಪಾಟನ ಮಾಡಲು ಮನಸ್ಸು ಬರುವುದೆ? ವರ್ಷಾಂ  

ತರಗಳಿಂದ ಮನೋಭಿತ್ತಿಯಲ್ಲಿ ನಾನಾ ವಿಧವಾಗಿ ವರ್ಣಿವವಾಗಿ 

ಉಜ್ವಲವಾಗಿ ಬೆಳಗುತ್ತಿದ್ದ ಚಿತ್ರಪಟವಿಂದು ಪ್ರತ್ಯಕ್ಷವಾಗಿದೆ. 

ಕೊಳ್ಳುವುದೂ ಬಿಡುವುದೂ ತನ್ನ ಕೈಯ್ಯಲ್ಲಿದೆ ಏನು ಮಾಡು 

ವುದು? 


ಆದರೂ ಮನಸ್ಸು ಹಿಂತೆಗೆಯುತ್ತದೆ. ಸುಖಕ್ಕೆ ಆಶೆಪಟ್ಟು 

ಕೆಟ್ಟ ಹೆಸರನ್ನು ಸಂಸಾದಿಸುವುದೆ? ಪ್ರೇಮಾಗ್ನಿಗೆ ತುತ್ತಾಗಿ 

ಧರ್ಮಕ್ಕೆ ಜಲಾಂಜಲಿ ಕೊಡುವುದೆ? ದೃಷ್ಟ ಫಲಕ್ಕೆ ಬೆರೆತು ಅಮೋ 

ಘವಾದ ಅದೃಷ್ಟ ಫಲವನ್ನು ತೊರೆಯುವುದೆ? ಯಾಕಾಗಬಾರದು? 


೨೬


ಪ್ರಪಂಚವು ತನ್ನನ್ನು ಯಾರ ಪಾಲಿಗೆ ಬಿಟ್ಟಿರುವುದೋ ಅವನಿಗೆ 

ತಾನು ಬೇಕಾಗಿಲ್ಲ ಅವನಿಗೆ ಬೇಕಾಗಿರುವುದು ಕೇವಲ ಜೂಜು 

ತಾನು ನೋಡುವುದಕ್ಕೆ ಚೆನ್ನಾಗಿಲ್ಲದೆ ಇಲ್ಲ. ರೂಪವತಿಯಲ್ಲದಿದ್ದರೆ 

ಕಂಡವರೆಲ್ಲರೂ, ಮತ್ತೊಂದು ಗಳಿಗೆ ನಿಂತು ನೋಡುವರೇ? ಕಂಡ 

ಕಂಡವರ ಕಣ್ಣಿಗೆಲ್ಲಾ ಕಮನೀಯವಾದುದನ್ನೂ, ಕಡೆಗಾಣಿಸು 

ವವನ ಕೈ ಹಿಡಿದ ತನ್ನ ದೌರ್ಭಾಗ್ಯವೆಂತಹುದು? ತನಗೆ ಹಲ 

ವರು ಮೆಚ್ಚುವಂತೆ ಗಂಡನೊಡನೆ ಸಂಸಾರ ಮಾಡಬೇಕೆಂದು ಆಶೆ. 

ಅದಕ್ಕಿಂತಲೂ ಹೆಚ್ಚಾಗಿ ಹಣ್ಣಾಗದೆ ಹೋದ ಹೆಣ್ಣಿನ ಬಯಕೆ, 

ಸೌಂದರ್ಯದ ಪಾಶದಿಂದ ಬಿಗಿದು, ಹೃದಯದ ಅಂತರಾಂತರದ  

ಸೌಹಾರ್ದ್ರದ ಸೋನೆಗರೆದು ಹೃದಯವನ್ನು ನೆನೆಯಿಸಿ ಸೋಲಿಸಿ, 

ತನ್ನ ಸರ್ವಸ್ವವನ್ನೂ ಸೂರೆಗೊಟ್ಟು, ಪತಿಯನ್ನು ತನ್ನವನನ್ನಾಗಿ 

ಮಾಡಿಕೊಂಡು, ಪ್ರೇಮವೆಂಬ ಸತ್ಫಲವನ್ನು ಹೊಂದಿ ಮನಸಾರೆ 

ಸಂಸಾರ ಸುಖವನ್ನು ಅನುಭವಿಸಬೇಕೆಂದಿದ್ದ ಪ್ರಯತ್ನಗಳೆಲ್ಲವೂ 

ವಿಫಲಗಳಾಗಿದ್ದವು. ಹೃದಯವು ವಿಫಲಿತ ಪ್ರಯತ್ನದ ಬೇಗುದಿ 

ಯಿಂದ ಬೆಂದ ಹೋಗಿದ್ದಿತು. ಮತ್ತೆ ಆ ಬಾಲ್ಯಸ್ನೇಹದ ಸೊದೆಯ 

ಸುರಿಮಳೆಯಾಗಿ, ಆಶಾತಂತುಗಳೆಲ್ಲವೂ ಪುನರುಜ್ಜೀವಿತವಾಗಿವೆ. 

ಸೌಖ್ಯಪಡಬೇಕೆಂಬ ಆಶೆಯ ಹಿರಿಯ ಹೊನಲಿನ ಹೊಡೆತದಲ್ಲಿ 

ವಿವೇಕದ ಅಡ್ಡ ಕಟ್ಟೆಯು ನಿಲ್ಲುವುದೆ? ಧರ್ಮದ ತಡಿಕೆಯು ತಡೆ 

ಯುವುದೆ? ಒಬ್ಬನಿಗೆ ತಾನು ಬೇಕಾಗಿಲ್ಲ; ಇದ್ದರೂ ಒಂದೆ ಹೋ 

ದರೂ ಒಂದೆ ಮತ್ತೊಬ್ಬನಿಗೆ ತಾನು ಸರ್ವಸ್ವ ತಾನು ಹೋದರೆ 

ಜಗತ್ತೇ ಹೋಯಿತೆಂದು ತಿಳಿಯುತ್ತಾನೆ. ತನ್ನನ್ನು ಕಸಕ್ಕಿಂತ 

ಕಡೆಯೆಂದು ನೋಡುವವನಲ್ಲಿದ್ದು ಸಾಯುವವರೆಗೂ ದುಃಖ 

ವನ್ನನುಭವಿಸುವುದೇ? ಅಥವಾ ತನ್ನನ್ನು ಗೊತ್ತುಗಾತಿಯನ್ನಾಗಿ 

ಮಾಡುವವನೊಡನೆ ಸೌಖ್ಯ ಸಾಮ್ರಾಜ್ಯವನ್ನು ಅನುಭವಿಸುವುದೆ? 



ಹುಡುಗಿಯ ಮನಸ್ಸು ಭಾವನಾತರಂಗಿಣಿಯಲ್ಲಿ ಕೊಚ್ಚಿ 

ಹೋಯಿತು. ತಾನು ಸೌಂದರ್ಯವತಿ ಎಂಬ ಗರ್ವದಿಂದ ಕೂಡಿ, 


೨೭


ತಿರಸ್ಕಾರವೆಂಬ ಸರ್ಪದಿಂದ ದಷ್ಟೆಯಾಗಿ, ಇಂದ್ರಿಯಸೌಖ್ಯವೆಂಬ  

ವಿಷಕ್ಕೆ ಮನಸ್ಸನ್ನು ತೆತ್ತಿರಲು ಉಳಿಯುವುದುಂಟೇನು? ಹೊಡೆದು 

ಕೊಂಡು ಹೋಯಿತ್ತು. ಮುಂದಿನ ಯೋಚೆನೆಗಳು ತಾವೇತಾವಾಗಿ,. 

ಅವಳಿಗೆ ಮೈಮರೆಸಿದವು. 



ಒಮ್ಮೊಮ್ಮೆ ಮಾತ್ರ ಹುಡುಗಿಯು ವಿಷಣ್ಣೆಯಾಗಿ "ಅಯ್ಯೋ! 

ಅನನೇ ನನ್ನ ಗಂಡನಾಗಬಾರದಾಗಿತ್ತೆ? ಅಥವಾ ನನ್ನ ಗಂಡನು 

ಅವನಂತೆ ಆಗಬಾರದಾಗಿತ್ತೆ?" ಎಂದುಕೊಳ್ಳುವಳು ಕೂಡಲೆ 

ಕಣ್ಣಿನಲ್ಲಿ ನೀರು ಬಂದುಬಿಡುವುದು. ಆದರೇನು? ಬಂಡೆಗಳು 

ಕೊಚ್ಚಿಹೋಗುವ ಪ್ರವಾಹದಲ್ಲಿ ಸಣ್ಣಕಲ್ಲು ನಿಲ್ಲುವುದೇ? ಆದರೂ 

ಒಂದು ಯೋಚನೆ. "" ಅವರು ಬಂದು ಬಿಟ್ಟರೆ ಅಥವಾ ತಿಳಿದರೆ? 

ಹಾದಿರಂಪು ಬೀದಿ ರಂಪು ಆಗುತ್ತದೆ. ಆದರಾಯಿತು ತಪ್ಪು ನನ್ನ 

ದಲ್ಲ." 

-----


ಚತುರ್ಥ ಪರಿಚ್ಛೇದ 


ರಾಮಸ್ವಾಮಿಗೂ ಮನಸ್ವಸ್ಥತೆಯಿಲ್ಲ. ಅವನ ಸ್ಥಿತಿಯು 

ಪುಟಚಂಡಿನಂತೆ ಆಗಿದೆ, ಒಂದು ಸಲ ತನ್ನ ಆಶೆಯು ಸಫಲ 

ವಾಗುವುದೆಂದು ಸ್ವರ್ಗಕ್ಕೆ ಏರುತ್ತಾನೆ. ಮತ್ತೊಮ್ಮೆ " ಸುಂದ 

ರಿಯು ಎಲ್ಲ ಹೆಂಗುಸರ ಹಾಗಲ್ಲ. ಧನಾದಿಗಳ ಅವಳ ಮನಸ್ಸನ್ನು 

ಸೆರೆಹಿಡಿಯಲಾರವು, ಸೌಖ್ಯವು ಅವಳನ್ನು ಚಸಲಪಡಿಸಲಾರದು. 

ಹೀಗಿರಲು ಮನಸೋತು ಕೆಟ್ಟ ಹೆಸರನ್ನು ಲಕ್ಷಿಸದೆ, ಹುಡು 

ಗಿಯು...ಅದು ಅಸಾಧ್ಯ,” ಎಂದಾಗ ಮನಸ್ಸು ಅಲ್ಲಿಯೇ ಇಳಿದು. 

ಹೋಗುವುದು. ಅಂತೂ ಒಂದೆಡೆಯಲ್ಲಿ ಕೂರಲು ಸಾಧ್ಯವಿಲ್ಲ. 

ಕೆರೆ, ಕಟ್ಟೆ, ತೋಪು, ಕೋಡಿ, ಹಳ್ಳ, ಎಲ್ಲವೂ ತಿರುಗಿ ಆಯಿತು.  


೨೮


"ಆದರೂ 'ಎಲ್ಲಿ ಹೋಗಿದ್ದೆ' ಎಂದು ಕೇಳಿದರೆ ಮಾತ್ರ ಅವನು ಹೇಳ 

ಲಾರನು ಅಂತರ್ದೃಷ್ಟಿಯಾಗಿರುವಾಗ, ಬಾಹ್ಯವಸ್ತುಗಳು ಕಣ್ಣಿಗೆ 

ಬೀಳುವವೇನು? ಮನಸ್ಸಿನಲ್ಲಿ ಕರುಮಾಡ ಕಟ್ಟುತ್ತಿರುವಾಗ, 

ಇನ್ನೊಬ್ಬರು ಕಟ್ಟಿದ ಆರಮನೆಯಾದರೂ ಕಣ್ಣಿಗೆ ಬೀಳುವುದೇನು? 


ಒಮ್ಮೊಮ್ಮೆ " ಇರಲಿ. ಅವಳು ಬರಲಿ” ಎನ್ನುವನು. 

ಮತ್ತೊಮ್ಮೆ ಬರುವುದೇ ಅಸಂಭವವೆಂದು ತೋರುವುದು. 

ಒಮ್ಮೊಮ್ಮೆ " ತಪ್ಪಿಸಿಕೊಂಡು ಹೋಗಲೆಂದು ಬರುವೆನೆಂದು 

ಸುಳ್ಳಾಡಿರಬಹುದೆ?'' ಎನ್ನುವನು. ಆದರೆ ಅವಳು ಅಂಥವಳಲ್ಲ 

ಮೊದಲಿನಿಂದಲೂ ಸುಳ್ಳಾಡಿದವಳಲ್ಲ ಅವಳು ಎಂಟು ವರ್ಷದ 

ಹುಡುಗಿಯಾಗಿದ್ದಾಗ, ನೀರಿಗೆ ಬಂದಿದಳು. ರಾಮುವೂ ಅವಳೂ 

ಆಟವಾಡುತ್ತ ಆಡುತ್ತಾ ಬಿಂದಿಗೆಯು ಭಾವಿಗೆ ಬಿದ್ದು ಹೋಯಿತು. 

ತಾಯಿಯು ಬಯ್ಯುವಳೆಂದು ಚೆನ್ನಾಗಿಯೂ ಗೊತ್ತು. ಆದರೂ 

ಅವಳು ಸಳ್ಳು ಹೇಳಲಿಲ್ಲ. ರಾಮೂವಿಗೆ ಸುಳ್ಳೋ ಪಳ್ಳೋ, 

ಸುಂದರಿಗೆ ಏಟು ಬೀಳಕೂಡದು. ತಾನು ಎಷ್ಟು ಪ್ರಾರ್ಥಿಸಿದರೂ 

ಅವಳು ಸುಳ್ಳಾಡುವುದಿಲ್ಲವೆಂದಾಗಲೂ, ತಾನೂ ಅವನ ಹಿಂದೆಯ 

ಹೋಗಿ ಅವರಮ್ಮನಿಗೆ ತಾನು ಮಾಡಿದೆನೆಂದು ಹೇಳಿಕೊಂಡು 

ಬಯ್ಗಳನ್ನು ತಪ್ಪಿಸಿದನು. ಆಂತಹ ಸಣ್ಣಸಣ್ಣ ವಿಚಾರಗಳ 

ಲಿಯೂ ಸುಳ್ಳು ಹೇಳುತ್ತಿರಲಿಲ್ಲ ಈಗ? 


ನಡುನಡುವೆ ಒಮ್ಮೊಮ್ಮೆ " ಅಯ್ಯೊ! ನಿನ್ನೆ ಅವಳು ಅಷ್ಟು  

ದುಃಖ ಪಡುತ್ತಿದ್ದಾಗ ಒಮ್ಮೆ ಯಾದರೂ ಅವಳ ಕಣ್ಣೀರು ಒರೆಸದೆ 

ಹೋದೆನಲ್ಲ! ಎಂದು ತನ್ನನ್ನು ತಾನೆ ಬಯ್ದುಕೊಳ್ಳುತ್ತಿದ್ದನು. 

ಮತ್ತೊಮ್ಮೆ ತಾನು ಹಿಡಿದಿರುವ ಆಶಾತಂತುವು ಕಲ್ಪವೃಕ್ಷದ 

ಬೇರೆಂದೂ, ಅದನ್ನು ಹಿಡಿದು ತಾನು ಸ್ವರ್ಗವನ್ನೇರುವೆನೆಂದೂ, 

ಭಾವಿಸಿಕೊಳ್ಳುವನು. ಮನಸ್ಸಿನ ಎಣಿಕೆಗೆ ಯಾರ ತಡೆಯಾದರೂ 

ಉಂಟೆ? ಅವಳು ಬಂದಾಗ ಆ ಮಾತು ಅವಳಾಡಿದರೆ ತಾನು ಈ 


೨೯


ಮಾತು ಆಡುವೆನೆಂದುಕೊಳ್ಳುವುದರಲ್ಲಿಯೇ ಸೂರ್ಯನು ಪೂರ್ವದಿಂದ 

ಪಶ್ಚಿಮಕ್ಕೆ ಹೋಗಿ ಮುಳುಗಿದನು. 


ಆದರಿನ್ನೊಂದು ಹೆದರಿಕೆ. ಅವಳು ಗಂಡನಿಗೆ ಮೋಸಮಾಡಿ 

ಬರಬೇಕು ಅದು ಸಾಧ್ಯವೇ? ರಾಮುವಿಗೆ ಮುಖವು ವಿವರ್ಣ 

ಹೋಯಿತು. ಆಕೆಯು ನಿರಾಕೆಯಾಗಿ ಹೋಯಿತು. ಅಲ್ಲಿಂದ 

ಹೊರಟಿ ಹೊಗಬೇಕೆನ್ನಿಸಿತು. ಆದರೂ ನೋಡಿಹೋಗೋಣ 

ವೆಂದುಕೊಂಡನು. "ಅಗಲೆ ಏಳು ಗಂಟೆಯಾಗಿದೆ. ಇನ್ನು ನಾಲ್ಕು 

ಗಂಟೆಯ ಹೊತ್ತು ತಾನೆೇ' 

-------


೩೦ 


ನಾಲ್ಕನೆಯ ಭಾಗ 


ಕಳ್ಳರ ಕೂಟ 

ಪ್ರಥಮ ಪರಚ್ಛೇದ


ರಾತ್ರಿ ಸುಮಾರು ಹೆತ್ತು ಗಂಟೆಯಾಗಿರಬಹುದು. ಎಲ್ಲರೂ 

ಮಲಗಿದ್ದಾರೆ. ಯಾರ ಮನೆಯಲ್ಲೂ ದೀಪವಿಲ್ಲ. ಕತ್ತಲಿನ ಚೀಲ 

ದಲ್ಲಿ ಕೂಡಿಟ್ಟಿದ್ದರೆ ಇರುವಂತೆ ಹಳ್ಳಿಯೆಲ್ಲಾ ನಿಶ್ಚಬ್ದವಾಗಿದೆ. 


ಛತ್ರದ ಮಗ್ಗುಲಲ್ಲಿರುವ ತೋಪಿನ ನಡುವಿನ ಗುಡಾರದಲ್ಲಿ 

ಮಾತ್ರ ದೀಪವಿನ್ನೂ ಇದೆ. ಬಾಗಿಲಲ್ಲಿ ರಾಮಸ್ತಾಮಿಯು ಒಂದು 

ಆರಾಮ ಕುರ್ಚಿಯಲ್ಲಿ ಕುಳಿತಿದ್ದಾನೆ. ಆದರೆ ಕುಳಿತಿರುವುದು 

ಹೆಸರಿಗೆ ಮಾತ್ರ. ಗಳಿಗೆಗೆಂಟುಸಲ ಏಳುವುದು ಅತ್ತಕಡೆ 

ಹೋಗಿ ದಾರಿನೋಡುವುದು, ಹಿಂತಿರುಗಿ ಬಂದು ಗುಡಾರದೊಳಗೆ 

ಹೊಗುವುದು ಅಲ್ಲಿಟ್ಟರುವ ಸಾಮಾನುಗಳನ್ನು ಒಂದೆಡೆಯಿಂದ 

ಮತ್ತೊಂದೆಡೆಗೆ ಇಡುವುದು. ಮತ್ತೆ ಬಂದು ಕೂರುವುದು. ಗಳಿಗೆ 

ಗೊಂದುಸಲ ಕೈಗೆ ಕಟ್ಟಿರುವ ಗಡಿಯಾರವನ್ನು ನೋಡಿಕ್ಕೊಂಡು 

"ಇನ್ನೂ ಎಷ್ಟು ಹೊತ್ತಪ್ಪಾ!'' ಎಂದು ಒಂದು ದೊಡ್ಡ ನಿಟ್ಟು 

ಸಿರು ಬಿಡುವುದು. ಅಂತೂ ಸಂಜೆಯಷ್ಟು ನಿರಾಶೆಯಿಲ್ಲ ಹುಡು 

ಗಿಯು ಕೈಗೆ ಸಿಕ್ಕಿದಳೆಂಬ ನಂಬಿಕೆ. ಇಲ್ಲವಾದರೆ ಸಂಜೆಗೆ ಬಂದು 


೩೧


ಅಷ್ಟು ಬುದ್ಧಿ ವಂತಿಗೆಯಿಂದ, ತನಗೆ ಒಂದು ಗಂಟೆಗೆಂದು ಬರೆದಿ 

'ರುವ ಚೀಟಿಯನ್ನು ತಲಪಿಸುತಿದ್ದಳೆ? ಬೇಟೆಯು ಬಲೆಗೆ ಬಿದ್ದಿದೆ, 

ಒಂದೊಂದುಸಲ ಮಾತ್ರ ಒಂದು ಪ್ರಶ್ನೆಯು ತಲೆದೋರುವುದು; 

ಸುಂದರಿಯು ಪರಸ್ತ್ರೀ! ಅವಳನ್ನು ತಾನು ಗ ಗ್ರಹಣಮಾಡುವುದೇ?' 

ರಾಮಸ್ವಾಮಿಯು ಈ ಪ್ರಶ್ನೆ ಬಂದಾಗಲೆಲ್ಲಾ ಅಪ್ರತಿಭನಾಗು 

ವನು. ಅವಾಕ್ಕಾಗುವನು. ಉತ್ತರ ಕೊಡಲಾರದೆ ಹೋಗು 

ವನು. ಬೇರೆ ಏನೂ ತೋರದೆ ಆ ಇರಲಿ! ಆ ವಿಚಾರ ಆಮೇಲೆ” 

ಎನ್ನುವನು 


ಆದರೂ ಕಾಯುವುದು ಮಾತ್ರ ಕೆಟ್ಟ ವೈರಿಗೂ ಬೇಡ. 

ರಕ್ತವೇ ಕುದಿದು ಬಿಡುತ್ತದೆ. ರಾಮಸ್ವಾಮಿಯು ತಾನೇ ಎಷ್ಟು 

ಹೊತ್ತು ಒಂದೆಡೆ ಕುಳಿತು ಕಾದಾನು? ಅಸಾಧ್ಯವಾಯಿತು. ಅಲ್ಲದೆ 

ಅವನಿಗೂ ಬಹಳ ಹೊತ್ತಿನಿಂದ ಒಳಗೂ ಹೊರಗೂ ತಿರುಗಿ ತಿರುಗಿ 

ಕೈಕಾಲು ನೋವು. ಏನುಮಾಡುವುದು? ಏನು ಮಾಡುವುದಕ್ಕೂ 

ತೋರದು. ನೋಡುವವರಿಗೆ ಚಿಕ್ಕದಾಗಿ, ನಿವಾರಿಸುವುದಕ್ಕೆ 

ಸಾಧ್ಯವಾಗಿ, ಮನಸಿಗೆ ಆಯಾಸವನ್ನುಂಟುಮಾಡಿ ಬಂದ ಕೋ 

ಪವನ್ನು ತೀರಿಸಲು ದಾರಿಕಾಣದೆ ಕೋಪವನ್ನು ಸಂವರಣಮಾಡ 

ಲಾರದೆ ಬೇಸರಪಟ್ಟುಕೊಳ್ಳುವಂತೆ ಮಾಡಿ ಗೋಳು ಹುಯ್ದು 

ಕೊಳ್ಳವ, ಮಾವಿನಹಣ್ಣಿನ ಕಾಲಲ್ಲಿ ಮುತ್ತುವ ನೊಣದಂತೆ. 

ಹೆಣ್ಣಿನ ಬಯಕೆಯು ನುಣ್ಣಗೆ ಮನಸ್ಸಿನಲ್ಲಿ ಮನೆ ಮಾಡಿ 

ರಲು ಸುಮ್ಮನೆ ಕುಳ್ಳಿರುವುದು ಹೇಗಾದೀತು? 


ಒಳಗೆ ಹೋಗಿ ಯಾವುದಾದರೂ ಒಂದು ಪುಸ್ತಕವನ್ನಾದರೂ  

ಓದೋಣವೆಂದುಕೊಂಡು ಹೋದನು. ದೀಪವನ್ನು ದೊಡ್ಡದು  

ಮಾಡಿದುದಾಯಿತ್ತು ಪುಸ್ತಕವನ್ನು ತೆರೆದುದಾಯಿತು. ಓದಬೇ 

ಕೆನ್ನುವಷ್ಟರಲ್ಲಿ ಮನಸ್ಸು ಮತ್ತೊಂದುರಡೆ ತಿರುಗಿ,  " ಓದುವು 

ದಿರಲಿ ಅವಳು ಪರಸತಿಯಲ್ಲಾ |" ಎನ್ನಿಸಿತು.  ಪುಸ್ತಕವನ್ನು 

ಮುಚ್ಛಿ ಅತ್ತಿಟ್ಟಿನು, ಮತ್ತೆ ಅದೇ ಪ್ರಶ್ನೆ. ಆದೇ ಮೌನ. ಮೊದಲಿ 


೩೨ 


ನಂತೆಯೇ ಆ ವಿಚಾರ ಆಮೇಲಾಗಲೆಂದು ಸಿದ್ಧಾಂತ ಇನ್ನೊಂದು 

ಗಳಿಗೆಯಾಯಿತು. ಮತ್ತೆ ಒಳಗೆ ಹೋದನು. ಮತ್ತೊಂದು 

ಪ್ರಶ್ನೆ ಹುಟ್ಟಿತ್ತು. " ಅವನು ಬಂದರೆ ಎಲ್ಲಿ ಕುಳ್ಳಿರಿಸುವುದು?' 

ಕುಳಿತಿದ್ದ ವೆ.ತ್ತೆಯ ಕುರ್ಚಿಯನ್ನು ಮಂಚದ ಬಳಿ ಎಳೆದು ಅಲ್ಲಿ 

ಅವಳು ಬಂದು ಕುಳಿತಂತೆಯೂ, ತಾನು ಅವಳ ಪಾದ ಮೂಲ 

ದಲ್ಲಿ ಕುಳಿತು, ತನ್ನ ಕಷ್ಟನಿಷ್ಟೂರಗಳ ಕಾರುಣ್ಯ ಪೂರ್ಣವಾದ 

ಕೂರ್ಮೆಯ ಕಥೆಯನ್ನು ಹೇಳಿಕೊಳ್ಳುತ್ತಿರುವಂತೆ ಭಾವಿಸಿ  

ಕೊಳ್ಳುತ್ತಾ, ಕಣ್ಣು ಮುಚ್ಚಿ ಕೊಂಡು ಭಾವನಾತರಂಗಿಣಿಯಲ್ಲಿ 

ಮನಸನ್ನು ಕೊಚ್ಚಿಬಿಟ್ಟು ಹಾಗೆಯೇ, ಆ ಕುರ್ಚಯಲ್ಲಿಯೇ 

ತಾನರಿಯದೇ ಕುಳಿತು ಬಿಟ್ಟನು. 

-----

ದ್ವಿತೀಯ ಪರಿಚ್ಛೇದ

   ---

ಹಾಗೆಯೇ ನಿದ್ದೆ  ಅದರಲ್ಲೊಂದು ಪುಟ್ಟಕನಸು. ಎಲ್ಲಿಯೋ 

ಒಂದು ಕಿರುಮನೆ. ಪಟಗಿಟಗಳೇನು ಇಲ್ಲ. ಮೂಲೆಯಲ್ಲಿ 

ಒಂದು ಹಾಸಿಗೆ ಹಾಸಿದೆ. ತಲೆದಿಂಬಿನ ಮಗ್ಗುಲಲ್ಲಿ ಒಂದು 

ಬೆಳ್ಳಿಯ ತಟ್ಟೆ. ಅದರಲ್ಲಿ ಅಡಿಕೆಲೆ ಹೂವು. ಇನ್ನೊಬ್ಬರು 

ತಂದರೆ ಚೆನ್ನಾಗಿರುವುದಿಲ್ಲವೆಂದು ಅಂದಿನ ಮಧ್ಯಾನ್ಹ ತಾನೇ 

ಮೈಸೂರಿಗೆ ಹೋಗಿ ಚಿಗುರಲೆಯನ್ನೂ ಪರಿಮಳದ ಹೂವನ್ನೂ  

ಸುಂದರಿಗೆಂದು ತಂದಿದ್ದನು. ನೋಡಿದರ ಅದೇ ಎಲೆ, ಅದೇ ಹೂ 

ವೆಂದು ತೋರುತ್ತದೆ. ಅದರ ಮಗ್ಗುಲಲ್ಲಿ ಹಾಲು ತುಂಬಿರುವ 

ರೈಲು ಚೊಂಬೊಂದು. ತಾನು ಬಹಳ ಹೊತ್ತು ಕಾತರನಾಗಿ 

ಕಾದಿದ್ದ ಮೇಲೆ ಸುಂದರಿಯು ಬಂದಿದ್ದಾಳೆ. ತನಗೆ ಖಂಡುಗ 

ದಷ್ಟು ಅಶೆಯಿದ್ದರೂ ಧಾರಾಳವಾಗಿ ಬರಲಾರದೆ ಹೆಜ್ಜೆಯಮೇಲೆ 

ಹೆಜ್ಜೆಯನ್ನಿಟ್ಟುಕೊಂಡ್ಕು ಮನವು ಮೊದಲು ಹೋಗಿರುವೆಡೆಗೆ  



೩೩



ತನುನನ್ನು ನಡೆಸಿಕೊಂಡು ಹೋಗುವೆ ಹೊಸತಾಗಿ ಪ್ರಸ್ತವಾದ 

ಹುಡುಗಿ ಮದುವಣಗಿತ್ತಿಯಂತೆ, ಗಳಿಗೆಗೊಂದುಸಲ ಹೆಜ್ಜೆಯ 

ನ್ನಿಟ್ಟುಕೊಂಡು ಬಂದಿದ್ದಾಳೆ. ಬಾಗಿಲಿಂದ ಹಾಸಿಗೆಗೆ ಸರಿಯಾಗಿ 

ನಡೆದರೆ ಸುಮಾರು ಮೂರು ಹೆಜ್ಜೆಯಿರಬಹುದು. ನಾಚಿಕೆಯ 

*ಹೆದ್ನ ಹಾಕಿದಂತೆ ಅಶೆಯು ನೂಕಿದಂತೆ, ನಡೆವ ಅವಳಿಗೆ 

ಅಲ್ಲಿಂದಲ್ಲಿಗೆ ಬರುವುದಕ್ಕೆ ಸುಮಾರು ಹೊತ್ತಾಗಿದೆ. ತಾನು 

ಆ ವಿಳಂಬವನ್ನು ಸೈರಿಸಲಾರದೆ ಕೇವಲ ಕಾತರನಾಗಿ ಕೈನೀಡಿ ಕರೆ 

ಯುತ್ತಿದ್ದಾನೆ. ಮಧುವ್ಯಧೆಯು ಹಿಡಿದು ಮಂಕಾಗಿರುವ ಮದ 

ಗಜದಂತೆ ಅವಳೂ ಬಲುಮೆಲ್ಲಗೆ ನಡೆದುಬಂದು ಪಕ್ಕದಲ್ಲಿ ಕುಳಿತಿ 

ದ್ದಾಳೆ. ತಾನೂ ಯವ್ವನಭರದಲ್ಲಿ, ಸಪೂರ್ಣನಾದ ಪ್ರೀತಿಯ 

ಆವೇಶದಲ್ಲಿ, ಮಾತ್ರ ಸಾಧ್ಯವಾದ ಒಂದು ರಭಸದಿಂದ ಅವಳನ್ನು 

ಬರಸೆಳೆದು ಅಪ್ಪಿಕೊಂಡು ಮುದ್ದಿಸಿದ್ಧಾನೆ. ಸುಂದರಿಯ ಸೀ 

ಸಹಜವಾದ ವೈಯ್ಯಾರದಿಂದ ಬಿಡಿಸಿಕೊಂಡು ಅತ್ತ ಸರಿದು 

ಹಾಲಿನ ತಂಬಿಗೆಯನ್ನು ಕೈಗೆ ತೆಗೆದುಕೊಂಡಿದ್ದಾಳೆ. ಅದನ್ನು 

ನೋಡಿ, ಉಕ್ಕುತ್ತಿದ್ದ ಸಂತೋಷ ಸಂಭ್ರಮಗಳು ಅಲ್ಲಿಯೇ 

ತಟ್ಟನೆ ತಿರೋಧಾನವಾಗಿ, ಮುಖವು ಗಂಭೀರವಾಗಿದೆ. ಮೋಹಾ 

ವೇಶಪರವಶನಾಗಿದ್ದ ಇವನಿಗೂ ಇದನ್ನು ನೋಡಿ, ಭಯವಾಗಿ, 

ಅದೇನೆಂದು ನೋಡಿದ್ದಾನೆ. ಕೆಂಪಗೆ ಕಾಸಿದ ಗಮಗಮನೆ ನರು 

ಗಂಪಿಡುವ, ಹೆಚ್ಚಗೆ ಕೆನೆಗಟ್ಟದ ಹಾಲಿನಲ್ಲಿ ಒಂದು ನೊಣ. 

ಇಬ್ಬರಿಗೂ ಅಸಮಾಧಾನ. ಆದರೂ ರಾಮುವು "ಅದು ಹೋಗಲಿ 

ನೀನಿರುವೆ” ಯೆಂದು ಅವಳನ್ನು ಮತ್ತೊಮ್ಮೆ ತಬ್ಬಿಕೊಳ್ಳಲು ಕೈ 

ನೀಡಿದ್ದಾನೆ. 



ಆವೇಳೆಗೆ ಬಾಗಿಲಲ್ಲಿದ್ದ ನಾಯಿ ಬಗೆಳಿತ್ತು ಕನಸು ಮುರಿದು 

ಎಚ್ಚರವಾಗಿ ರಾಮುವು ಕಣ್ಣು ಬಿಟ್ಟನು ಎದುರಿಗೆ ಗುಡಾರದ 

................


* ತೇರುಗಳ ಚಕ್ರಗಳು ಅತ್ತಲಾಗಿ ಇತ್ತಲಾಗಿ ಹೋಗದೆ ಸರಿ 

ಯಾಗಿ ನಡೆಯಲು ಅಡ್ಡಗಿಸುವ ಮರದ ತುಂಡು. 



೩೪ 



ಬಾಗಿಲು. ಬಾಗಿಲಿನಲ್ಲಿ ಸುಂದರಿಯು ಕರಿಯ ಸೀರೆಯುಟ್ಟು 

ನಿಂತಿದಾಳೆ.  ಮೂಗಿನಲ್ಲಿ. ಒಂದು ವಜ್ರದ ಮೂಗುಬಟ್ಟು. 

ಸಂಧ್ಯಾಕಾಲದ ಮೃದುವಾದ ಬಿಸಿಲು ಬಿದ್ದು ಉಜ್ವಲವಾಗಿ ಬೆಳ 

ಗುತ್ತಿರುವ ಮುಖವು ನಗೆಯನ್ನು ಸೂಸುತ್ತಿದೆ. ನೋಡಿದವರ 

ಮನಸ್ಸನ್ನು ಮೋಹಗೊಳಿಸಿ ಸೂರೆಗೊಳ್ಳಲು ಬಂದಿರುವ ಮದನ  

ಮೋಹನ ಮಂತ್ರದಧಿದೇವತೆಯೆಂಬಂತಿದೆ. 


ಆ ದಿವ್ಯ ಮೂರ್ತಿಯನ್ನು ನೋಡಿ ಭ್ರಾಂತನಾಗಿ ತರುಣನು 

'ಸುಂದರಾ! ಎಂದು ಒಣಗಿರುವ ಗಂಟಲಿನ ಕಿರಚು ಧ್ವನಿಯಲ್ಲಿ 

ಕೂಗಿಕೊಂಡು ಕೈ ನೀಡಿಕೊಂಡು ಮುಂದರಿದನು. ಬಾಗಿಲಿಗೆ 

ಬರುವುದರೊಳಗಾಗಿ ಉಟ್ಟಿದ್ದ ಪಂಚೆಯು ಕಾಲಿಗೆ ತೊಡರಿತು 

ಬಿದ್ದುಬಿಟ್ಟನು. ಮತ್ತೆ ಎದ್ದು ಕಣ್ಣುಬಿಟ್ಟು ನೋಡಿದರೆ ಯಾರೂ 

ಇಲ್ಲ. ಗುಡಾರದ ಬಾಗಿಲಲ್ಲಿ ಇಳಿಯಬಿಟ್ಟಿದ ಕಡ್ಡಿಯ ಪರ 

ದೆಯು ನಟ್ಟಿರುಳಿನ ತಂಗಾಳಿಯಲ್ಲಿ ನರ್ತಿಸುತ್ತ ನಗುತ್ತಿದೆ. 

ಹೊರಕ್ಕೆ ಬಂದು ಸುತ್ತಲೂ ನೋಡಿದನು. ಎಲ್ಲಿಯೂ ಜನರ  

ಸುಳಿವೇ ಇಲ್ಲ. 


ರಾಮಸ್ವಾಮಿಯು ಮಂಕಾಗಿ ಹೋದನು. "ತಾನು ಸುಂದ 

ರಿಯ ಆಕಾರವನ್ನು ಕಂಡುದುಂಟು. ಬಂದಿದ್ದರೆ ಇಷ್ಟುಬೇಗ 

ಎಲ್ಲಿ ತಾನೆ ಹೋಗಿದ್ದಾಳು? ಅಥವಾ ಗಿಡದಮರೆಯಲ್ಲಿರಬಹುದೇ? 

ಹುಡುಗಿಯು ನಟ್ಟಿರುಳಿನಲ್ಲಿ ಮರೆಯಲ್ಲಿ ಮರೆಸಿಕೊಂಡು ಹುಡು 

ಗಾಟವಾಡುವಳೇ? ನೋಡಿಬಿಡಬೇಕು." ಎನ್ನಿಸಿತು. ಹಾಗೆಯೇ 

ಹೊರಟನು. ಬಾಗಿಲಲ್ಲಿದ್ದ ನಾಯಿಯೂ ಜತೆಯಲ್ಲಿಯೇ  

ಬಂತು. 


ಅಷ್ಟು ದೂರ ಹೋಗುವುದರೊಳೆಗಾಗಿ ನಾಯಿಯು ಏನ 

ನ್ನೋ ಕಂಡು ಬೊಗಳಿತು. ರಾಮುವು ಹಾಗೇ ನಿಂತು " ಇದನ್ನು 

ಬಿಚ್ಚಿದ್ದರೆ ಅನರ್ಥ. ಗುಡಾರದಲ್ಲೂ ಇರಬಾರದು” ಎಂದುಕೊಂಡು, 



೩೫ 



ಹಿಂತಿರುಗಿ ಹೋಗಿ ಅದರ ಸರಸಣಿಯನ್ನು ತಂದು, ಗುಡಾರದ 

ಹಿಂದೆ ಸುಮಾರು ದೂರದಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ತಜೆ 

ಯಮೇಲೆ ಒಂದು ಏಟು ಹೊಡೆದು " ಸದು ಮಾಡಿಯೆ ಎಂದು 

ಹೊರಟುಹೋದನು. ಗುಪ್ತದಳದವರಲ್ಲಿ ತಯಾರಾದ ನಾಯಿ. 

ಮತ್ತೆ ಉಸರಿತ್ತದೆ ಮಲಗಿಬಿಟ್ಟಿತು. 

-----


ತೃತೀಯ ಪರಿಚ್ಛೇದ

---


ರಾಮನು ಅತ್ತಕಡೆಗೆ ಹೋಗುತ್ತಲೇ ಒಂದು ವ್ಯಕ್ತಿಯು 

ಗುಡಾರವನ್ನು ಹೊಕ್ಕಿತು, ತಲೆಯಿಂದ ಕಾಲುವರೆಗೂ ದೊಡ್ಡ 

ನಿಲುವಂಗಿಯಂತೆ ಕರಿಯ ಕಂಬಳಿಯ ಗೊರಟೆಯೊಂದು. ನಡುವಿ 

ನಲ್ಲಿ ಒಂದು ದೊಡ್ಡ ಚಾಕು. ಮೊಗಕ್ಕೆಲ್ಲ ಕೀಲೆಣ್ಣೆಯಂ 

ತಿರುವ ಮಸಿ. ನೋಡಿದರೆ ಭಯಂಕರ. ಯಾರೆಂದು ಗುರ್ತಿ  

ಸಲು ಸಾಧ್ಯವಿಲ್ಲ. 


ಬಂದವನು ಮೊದಲು ಹೋಗಿ ದೀಪವನ್ನು ತಗ್ಗಿಸಿದನು. 

ಮೊದಲೇ ಹಸುರು ಬುರುಡೆಯ ದೀಪ. ಸಣ್ಣ ಮಾಡುತ್ತಲೇ 

ಬೆಳಕು ಇನ್ನೂ ಮಸಕಾಯಿತು. ಆ ಮಸಕಿನಲ್ಲಿಯೇ, ವ್ಯಕ್ತಿಯು 

ಏನನ್ನೋ ಹುಡುಕಲು ಮೊದಲು ಮಾಡಿದನು. ಇತ್ತ ತಿರುಗುವು 

ದರೊಳಗಾಗಿ ಮಗ್ಗಲಲ್ಲಿದ್ದ ಮೇಜು ಕಣ್ಣಿಗೆ ಬಿತ್ತು. ಅದರ 

ಮೇರೆ ಒಂದು ವಿಲಾಯಿತಿ ಮಣ್ಣಿನ ಸುಮಾರು ಒಂದಡಿ ಎತ್ತರದ 

ಬೊಂಬೆ. ಅದಕ್ಕೆ ಕಲಾಬತ್ತಿನ ಸೀರೆಯುಡಿಸಿ, ಸಕಲವಾದ ಆಭ 

ಣಗಳನ್ನು ತೊಡಿಸಿದೆ. ನವರಾತ್ರಿಯ ಬೊಂಬೆಯಂತೆ ಕಾಣು 

ತ್ತದೆ. ಆ ಬೊಂಬೆಯ, ಎಳೆತನನು ಹೊರಸೂಸುತ್ತಿರುವ ಮುಖವು 

ಅವನಿಗೆ ಚಿರಪರಿಚಿತವಾಗಿರುವಂತೆ ಕಾಣುತ್ತಿದೆ. ಕಳ್ಳನಿಗೆ (ಅದು  



೩೬



ನಮ್ಮ ಊಹೆ. ಅನೇಕವೇಳೆ ಊಹೆಗಳು ನಿಜವಾಗುವುದೂ 

ಉಂಟು.) ಆ ಬೊಂಬೆಯನ್ನು ಮತ್ತೊಮ್ಮೆ ನೋಡಬೇಕೆನ್ನಿ  

ಸಿತು. ದೀಪವನ್ನು ದೊಡ್ಡದು ಮಾಡಿ, ಒಂದೆರಡು ಸಲ ರೆಪ್ಪೆ 

ಹುಯ್ಯುವವಷ್ಟು ಹೊತ್ತು ನೋಡಿ, "ಅವಳೆ ಇರಬಹುದೇ?' 

ಎಂದುಕೊಂಡನು. ಬೊಂಬೆಯ ಮೇಲಿನ ಒಡವೆಗಳನ್ನು ನೋಡಿ 

" ಎಷ್ಟು ಬೆಲೆಯಾಗುವುದು! ಇಷ್ಟು ದುಡ್ಡಿದ್ದರೆ ಒಂದು ವಾರ 

ಆತಂಕವಿಲ್ಲದೆ ಆಡಿಕೊಳ್ಳಬಹುದು" ಎಂದುಕೊಂಡನು, ಆದರೆ 

ಏನನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ, ನಿಂತು ಮುಂದೆ ನೋಡಲು 

ಅವಕಾಶವಿಲ್ಲ. ಅಲ್ಲಿಂದ ತಿರುಗಿದರೆ ಅದರ ಮಗ್ಗುಲಲ್ಲಿ. ಒಂದು 

ತಟ್ಟೆಯಲ್ಲಿ ಬಲು  ಸೊಗಸಾದ ಚಿಗುರೆಲೆ. ಗಮ್ಮೆಂದು ತನಿಗಂ 

ಪನ್ನು ಬೀರುತ್ತಿರುವ ಜಾಜಿಯ ಒತ್ತುಸರ. ಆದರ ಮುಗ್ಗುಲಲ್ಲಿ 

ಒಂದು ಕಾಗದದ ಮೇಲೆ ಸಂಪಿಗೆ ಹೂವಿನ ಪೊಟ್ಟಣವೊಂದು. 

ಕಾಗದದಲ್ಲಿ ಏನೋ ಬರೆವಣಿಗೆ. ಪೊಟ್ಟಣವನ್ನು ಜರುಗಿಸಿ ನೋಡಿ 

ದರೆ ಹೆಂಗಸಿನ ಬರೆಹದಲ್ಲಿ "ಒಂದು ಗಂಟೆ” ಎಂದು ಬರೆದಿದೆ. 

ಬರಹದ ಗುರುತಿರುನಂತಿದೆ, "ಮತ್ತೆ ಅವಳೇನೋ?--ಇರ 

ಬಹುದು ಇದ್ದೀತೆ? -ಹಾಗಾದರೆ-" ಕಳ್ಳನಿಗೆ ಯೋಚನೆ 

ಬಂದಿತು. " ನಾನು ಇವನ ಹಣವನ್ನು ಕದಿಯುವುದಕ್ಕೆ ಬಂದರೆ  

ಇವನು ಬಂದಿರುವುದು ತನ್ನ....?" ಕಳ್ಳನಿಗೆ ಮೈ ಜುಮ್ಮೆ 

ನ್ನಿಸಿತು ಮುಂದಕ್ಕೆ ಯೋಚಿಸಲಿಲ್ಲ. ತನ್ನ ಕೆಲಸಕ್ಕೆ ಹೋದನು. 


ಕೈ ಪೆಟ್ಟಿಗೆ ಮಂಚದ ಕೆಳಗೆ ಇದ್ದಿತು. ಕಳ್ಳನಿಗದನ್ನು ಕಂಡು 

ಹಿಡಿಯುವುದು ಕಷ್ಟವಾಗಲಿಲ್ಲ. ಅನುಕೂಲವಾಯಿತೆಂದು ಮಂಚದ 

ಕೆಳಗೆ ತೂರಿ ಕೈ ಪೆಟ್ಟಗೆಯನ್ನು ಎಳೆದುಕೊಳ್ಳ ಬೇಕೆಂದು ಯತ್ನಿಸಿ 

ದನು. ಸರಪಳಿಯಿಂದ ಮಂಚದ ಕಾರಿಗೆ ಕಟ್ಟಿರಲು ಅದಾಗಲಿಲ್ಲ 

ತಾನೇ ಮುಂದಕ್ಕೆ ಹೋದನು. 


ಪೆಟ್ಟಗೆಯ ಬಾಗಿಲು ತೆರೆದುದಾಯಿತು. ಒಂದು ಮಗ್ಗುಲಲ್ಲಿ 

ರೂಪಾಯಿ ತುಂಬಿದ್ದಿತು. ಆದರಲ್ಲಿ ಲೆಖ್ಬಮಾಡಿ ನೂರು ರೂಪಾಯಿ 



೩೭ 



ತೆಗೆದುಕೊಂಡು, ಅದನ್ನು ಉಟ್ಟಿದ್ದ ಪಂಚೆಯ ಕೊನೆಯಲ್ಲಿ ಕಟ್ಟಿ, 

ನಡುನಿಗೆ ಸಿಕ್ಕಿಸಿಕೊಂಡು, ಮಂಚದಡಿಯಿಂದ ಹೊರಗೆ ಬಂದು 

ಸುತ್ತಲೂ ನೋಡಿದನು. ಯಾರೂ ಇದ್ದಂತೆ ಇರಲಿಲ್ಲ ಹೊರಟು 

ಬಾಗಿಲಿಗೆ ಬಂದನು. ಒಂದು ಯೋಚನೆ ಹೊಳೆಯಿತು. " ಇದು 

ಸಾಲ ತೀರಿಸುವುದಕ್ಕಾಯಿತು ಆಟಕ್ಕೆ? ಇನ್ನೂ ರೂಪಾಯಿ 

ಇದೆ. ಒಂದು ಹಿಡಿಯಷ್ಟಾದರೂ ತಂದರೆ | ?' ಎಂದುಕೊಂಡನು. 

ಆಟದ ಆಶೆಯು ಬಲವಾಗಿ, ಮುಂದಕ್ಕೆ ಹೋಗಲಾರದೆ ಹಿಂದುರಿಗಿ 

ದನು, ಮತ್ತೆ ಮಂಚದಡಿಗೆ ಹೋಗಲು, ನಡುವಿನಲ್ಲಿ ಚಾಕೂ, 

ಹಣದ ಗಂಟು, ಚಾಕುವನ್ನು ತೆಗೆದು ಎಡಗೈಯಲ್ಲಿ ಹಿಡಿದುಕೊಂ 

ಡು, ಪೆಟ್ಟಿಗೆಯ ಬಾಗಿಲನ್ನು ತೆಗೆದು ಒಂದು ಹಿಡಿ ಹಣವನ್ನು 

ತೆಗೆದುಕೊಂಡಿದ್ದಾನೆ. ಇನ್ನೂ ಅರೆಗಯ್ಯು ಪೆಟ್ಟಿಗೆಯ ಒಳಗೇ 

ಇದೆ. ಗುಡಾರದ ಹೊರೆಗೆ ಯಾರೋ ಮಾತನಾಡಿದಂತೆ ಆಯಿತು. 

ಕಳ್ಳನಿಗೆ ಜೀವವು ಹಾರಿ ಹೋದಂತಾಯಿತು. ಉಸಿರು ಗಟ್ಟಿ

ಯಾಗಿ ಬಿಡದೆ ಸದ್ದಾಗದಂತೆ ಪೆಟ್ಟಿಗೆ ಮುಚ್ಚಿ, ಅಲ್ಲಿಯೇ ಕಂಬ 

ಳಿಯನ್ನೆಳೆದುಕೊಂಡು ಕುಳಿತು ಕೊಂಡನು. 


ಇತ್ತ ತಿರುಗಿ ನೋಡಲು, ಒಬ್ಬ ಗಂಡುಸು ಒಳಗೆ ಬಂದನು. 

ಕಳ್ಳನಿಗೆ ಮಂಚದಡಿಯೇ ಸೆರಮನೆಯಾಯಿತು. 

====


ಐದನೆಯ ಭಾಗ


ಹಿಂದಿನ ಕಥೆ

        ಪ್ರಥಮ ಪರಿಚ್ಛೇದ 



ಬಂದವನು ರಾಮು. ನೇರವಾಗಿ ಹೋಗಿ ಮಂಚದ ಬಳಿ 

ಯಲ್ಲಿದ್ದ ಕುರ್ಚಿಯಲ್ಲಿ ಕುಳಿತನು. ಮಂಚದ ಕಡೆಗೆ ತಿರುಗಿ 

ಕೊಂಡಿದ್ದು ಕಾಲನ್ನು ನೀಡಿದ್ದರೆ ಕರಿಯ ಕಂಬಳಿಯು ಕಾಲಿಗೆ ತಗ 

ಉತ್ತಿತ್ತೋ ಏನೋ! 


ಅವನು ಬಂದ ಕೊಂಚ ಹೊತ್ತಿನಲ್ಲಿಯೇ ಮತ್ತೊಬ್ಬ 

ಹೆಂಗುಸು ಬಂದಳು. ಕಾಲಿನ ಸದ್ದಾಗದಂತೆ ಬಹಳ ಸಾಹಸದಿಂದ 

ನಡೆಯುತ್ತಿದ್ದಾಳೆ. ಮೈಯ್ಯೆಲ್ಲಾ ಕಿರುಬೆಮರಿಟ್ಟಿದೆ. ಮುಖದಲ್ಲಿ 

ಗಾಬರಿಯು ತಾನೇ ತಾನಾಗಿದೆ. ಕಣ್ಣುಗಳು ಕಳವಳದಿಂದ 

ಕತ್ತಲೆ ಹಿಡಿದಂತೆ ಕಾಣುತ್ತವೆ, ಒಟ್ಟಿನಲ್ಲಿ ರೂಪವೇ ಬದಲಾ 

ಯಿಸಿ ಹೋಗಿದೆ. ಅವಳು ಬರುತ್ತಲೇ, ಬಾಗಿಲಿಗೆ ಬರುತ್ತಿದ್ದ 

ಹಾಗೆಯೇ ಅವಳನ್ನು ಬರಸೆಳೆದು ತಬ್ಬಿಕೊಳ್ಳುವೆನೆಂದು ಕುಣಿಯು 

ತ್ತಿದ್ದ ರಾಮುವು ಅವಳನ್ನು ನೋಡಿ, ಕಾತರನಾಗಿದ್ದಾನೆ. ಅವ 

ಳನ್ನು ತಬ್ಬಿಕೊಳ್ಳುವುದಿರಲಿ, ಮಾತನಾಡಿಸುವುದಕ್ಕೂ ತೋರದೆ 

ಹೋಗಿ, ನಾಲಗೆಯೇ ಒಣಗಿ ಹೋಗಿದೆ. ಹಾಗೂ ಹೀಗೂ 

ಕಷ್ಟಪಟ್ಟು, " ಇದೇಕೆ? ಸುಂದರಾ! ಸ್ವಸ್ಥವಾಗಿಲ್ಲವೇ?” ಎಂ. 



೩೯ 



ದನು. ಅವಳೂ " ಏನೆೊ? ಅದೊಂದೂ ಕೇಳಬೇಡ. ನೀನು 

ನನ್ನನ್ನು ಬರಹೇಳಿದುದೇಕೆ? ಅದನ್ನು ಮೊದಲು ಹೇಳು” ಎಂ 

ದಳು. 



ರಾಮುನು ಏನೂ ಹೇಳಲಾರದೆ ಹೋದನು. ಒಂದು ಗಳಿಗೆ 

ಸುಮ್ಮನಿದ್ದು, ಸ್ವಲ್ಪ ಶಾಂತನಾಗಿ, " ಮೊದಲು ಬಾ. ಇಲ್ಲಿ 

ಕುಳಿತುಕೋ ಎಲ್ಲವನ್ನೂ ಹೇಳುವೆನು" ಎಂದವಳ ಭುಜವನ್ನು 

ಹಿಡಿದು ಕೂರಿಸಬೇಕೆಂದು ಕೈ ನೀಡಿದನು. ಹುಡುಗಿಯು ಅತ್ತ 

ಸರಿದಳು; ಗಂಟಿಕ್ಕಿದ ಹುಬ್ಬು ನೀಡಿದ ಕಯ್ಯನ್ನು ನಿರೋಧಿಸಿತು. 

ಹುಡುಗಿಯು ತಾನೇ ಹೋಗಿ ಅವನು ತೋರಿಸಿದ ಕುರ್ಚಿಯಲ್ಲಿ 

ಕುಳಿತುಕೊಂಡಳು ರಾಮುವು ಸಂಶಯ ಗ್ರಸ್ತನಾಗಿ ಬಂದೆ 

ರೇನೋ,-ಬರದಿದ್ದರೇನೋ-ಎಂಬಂತೆ, ಹಾಗೂ ಹೀಗೂ, ಬಂದು 

ಕುರ್ಚಿಯ ಬಳಿ ಮೇಜನ್ನೊರಗಿ ನಿಂತನು. ಇಬ್ಬರೂ ಮಾತನಾಡ 

ಲೊಲ್ಲರು. 



ಕೊನೆಗೆ ಹುಡುಗಿಯೇ ಮಾತನಾಡಿದಳು. “ರಾಮೂ! 

ನನ್ನನ್ನು ಬರಹೇಳಿದುದೇಕೆ?'' ಎಂದಳು. ರಾಮುವು ಕೊರಗಿ ಕುಗ್ಗಿ 

ರುವ ಸಣ್ಣ ದ್ವನಿಯಿಂದ " ಸುಂದರಾ! ನನ್ನ ಆಶೆ” ಎಂದನು. 

ಹುಡುಗಿಯ ಮೊಗವು ಗಂಭೀರವಾಯಿತು. ಹುಡುಗತನವಡಗಿ 

ಹೋಗಿ, ಸತಿಯ ಪವಿತ್ರ ತೇಜವು ತಟ್ಟನೆ ಮೊಗದಲ್ಲಿ ಕಾಣಿಸಿ 

ಕೊಂಡು-" ನನಗೆ ಮದುವೆಯಾಗಿದೆ. ನಾನೀಗ ನಿನಗೆ ಪರಸ್ತ್ರೀ"

ಎಂದಳು. ರಾಮನು ಸಣ್ಣಗೆ ನಗುತ್ತಾ "" ಸುಂದರ! ಹಾಗಾ 

ದರೆ ಇಲ್ಲಿಗೆ ಬಂದೆ ಏಕೆ?” ಎಂದನು. ಹುಡುಗಿಯು ನಡುಗಿ 

ದಳು ಹೃದಯವು ಇನ್ನೂ ಕಠಿಣವಾಗಿ, ಕುರ್ಚಿಯಲ್ಲಿ ಸರಿ 

ಯಾಗಿ ಕುಳಿತುಕೊಂಡು " ನಾನು ಬಂದುದು ಸ್ವೈರಿಣಿಯಂತಲ್ಲ; 

ಸೋದರಿಯಂತೆ. ನೀನು ಬೇರೆ ಭಾವಿಸುವುವಾದರೆ ಇದೋ 

ಹೊರಟೆ!" ಎಂದೆದ್ದಳು. 


೪೦


ರಾಮುವು ಆಪ್ರತಿಭನಾಗಿ, " ಇಲ್ಲ ಇಲ್ಲ. ಸುಂದರ-  

ನೀನು ಕುಳಿತುಕೋ. ನನ್ನ ಎರಡು ಮಾತು ಕೇಳಿ ಹೊರಟು 

ಹೋಗುವೆಯಂತೆ. ಕುಳಿತುಕೋ? ಎಂದನು. ಹುಡುಗಿಯೂ 

ಮತ್ತೆ ಕುಳಿತಳು. 


ಮಂಚದ ಕೆಳಗೆ ಕುಳಿತಿದ್ದ ವ್ಯಕ್ತಿಯು ಹಾಗೆಯೇ ಸದ್ದಾಗ 

ದಂತೆ ಒಂದು ನಿಟ್ಟಿಸರನ್ನು ಬಿಟ್ಟನು. 



ರಾಮುನು ಆರ್ತನಾಗಿ ಕೇಳಿಕೊಂಡನು. ಹುಡುಗಿಯೂ 

ನೀರವವಾಗಿ ಕೇಳಿದರು. “ನಾನೂ ಯೋಚಿಸಿದೆ. ನಿನ್ನೆಯ 

ದಿನ ನೀನೆಂದಂತೆ ತಪ್ಪು ನನ್ನದೇ ಸುಂದರ! ಅಮ್ಮನ ಮಾತನ್ನು 

ನಾನೇಕೆ ಮೀರಬಾರದಾಗಿದಿತ್ತು? ಮೀರಿದರೆ ನಾವಿಬ್ಬರೂ ಗಂಡ 

ಹೆಂಡಿರಾಗಿ ಎಷ್ಟು ಸುಖವಾಗಿರಬಹುದಾಗಿದ್ದಿತು! ಎಂದನು. 

ಮುಂದೆ ಹೇಳುವುದರೊಳಗಾಗಿ ಹುಡುಗಿಯು ಅಡ್ಡಗಿಸಿ, "ನಾನು 

ನಿನ್ನೆಯೇ ಹೇಳಲಿಲವೆ? ಕಳೆದುದನ್ನು ಕೆಣಕಬೇಡೆವೆಂದು | 

ಮತ್ತೇಕೆ? ಈಗ ಇಷ್ಟು ಹೇಳುವವನು ನೀನಿರುವೆಡೆಯನ್ನೂ ತಿಳಿ 

ಸದೆ ಹೊರಟು ಹೋದೆಯೇಕೆ? ನಾನು ಕೊನೆಗೆ ಅಮ್ಮನನ್ನೂ, 

ಅಯ್ಯನನ್ನೂ ಒಪ್ಪಿಸಿದ್ದೆ. ಅವರೂ ನನ್ನನ್ನು ನಿನಗೆ ಕೊಡುವು 

ದಕ್ಕೆ ಒಪ್ಪಿದ್ದರು” ಎಂದಳು. ರಾಮುವು ಪೆಚ್ಚಾಗಿ ನನಗೆ 

ಹುಚ್ಚು ಹಿಡಿದಂತಾಯಿ:ತು, ಸುಂದರ! ಅಮ್ಮನೂ ಆಗಕೂಡ 

ದೆಂದು ಹಟ ಹಿಡಿದಳು. ಅಮ್ಮನಾಡಿದ ಮಾತನ್ನು ಕೇಳಿ ಅತ್ತೆಯು 

ಈಗಲೇ ಬಡವರ ಮನೆಯ ಹೆಣ್ಣೆ೦ದು ಹಿಯ್ಯಾಳಿಸುತ್ತಾರೆ. 

ಮದುವೆಯಾದ ಮೇಲೆ ಬಾಳಿಸುವುದಿನ್ನಿಂತೋ ಕೊಡ 

ಕೂಡದು ಎಂದುಬಿಟ್ಟಳು. ಕಡೆಗೆ ಹೋಗಿ ಅಯ್ಯನೊಡನೆ ಹೇಳಿ 

ಕೊಂಡೆ. ಅಯ್ಯನು "ನೀನುಂಟು ನಿಮ್ಮ ಅಮ್ಮ ನುಂಟು' ಎಂದು 

ಬಿಟ್ಟ. ಏನು ಮಾಡಬೇಕು? ಮಾವನಿಗೆ ಮೊದಲೇ ಆಗದು. 

ಅತ್ತೆಗೆ ಅಮ್ಮನ ಮೇಲೆ ಕೋಪ, ಇನ್ನಾಗುವುದೆಂತು? ತಡೆಯ 



೪೧



ಲಾರದ ದುಃಖ ಬಂದು, ಆ ದುಃಖದಲ್ಲಿ ಪ್ರಾಣವನ್ನೆೇ ತಳೆದು 

ಕೊಳ್ಳ ಬೇಕೆಂದಿದ್ದೆ. ಬದುಕಿದ್ದರೆ ಒಂದು ದಿನವಾದರೂ ನಿನ್ನನ್ನು 

ನೋಡಬಹುದು ಎಂದು ಒಂದು ಸಣ್ಣ ಆಶೆ. ಅದರಿಂದ ಪ್ರಾಣ 

ಬಿಡಲಿಲ್ಲ. ಈಗ ನಿನ್ನನ್ನು ನೋಡಿದೆ. ನೀನು ಇಷ್ಟು ನಿಷ್ಠುರ 

ಳಾಗಿರುವೆ. ಇನ್ನು ನಾನು ಬದುಕಿ ಫಲವೇನು? ನಿನ್ನನ್ನು ನೋಡಿದೆ 

ನಲ್ಲ. ಅಷ್ಟೇ ಸಾಕು. ಈ ಜನ್ಮದಲ್ಲಿ ಇದೇ ಕೊನೆಯ ದರ್ಶನ.  

ನೀನಿನ್ನು ಹೋಗು? ಎಂದನು ಯುವಕನ ಮಾತಿನಲ್ಲಿ,  ಎಲ್ಲ 

ವನ್ನೂ ಸಂಪೂರ್ಣವಾಗಿ ಕಳೆದುಕೊಂಡವನ ನಿರಾಶೆಯು ತಾನೇ  

ತಾನಾಗಿದಿತು. ಮಾತುಮಾತಿನಲ್ಲಿಯೂ ಟೊಳ್ಳು ಸದ್ದುಬಡಿದು 

ಎದೆಯು ಝಲ್ಲೆನ್ನುತ್ತಿದ್ದಿತು. 

====


ದ್ವಿತೀಯ ಪರಿಚ್ಛೇದ 



ಹುಡುಗಿಯು ಕದಲಲಿಲ್ಲ. ಕುರ್ಚಿಯ ತೋಳಿನಮೇಲೆ 

ಕೈಯ್ಯೂರಿಕೊಂಡು ಅಂಗೈಯಲ್ಲಿ ಕೆನ್ನೆಯನ್ನಿಟ್ಟುಕೊಂಡು, ಹಾಗೆ 

ಯೇ ಕೇಳುತ್ತ ಕಳಿತುಬಿಟ್ಟಳು. ವರ್ಷಾಂತರಗಳ ಹಿಂದೆ ನಡಿದಿದ್ದು 

ದೆಲ್ಲವೂ ನೆನಪಿಗೆ ಬಂದು ಬಿಟ್ಟಿತು ತನ್ನ ತಾಯಿಯು ಸಾಯು  

ವಾಗ ತನ್ನನ್ನು ಕರೆದು ಹತ್ತಿರ ಕುಳ್ಳಿರಿಸಿಕೊಂಡು, "ನಾನು. 

ಹೋದರೆ ನಿನು ತಬ್ಬಲಿಯಾಗ.ವೆಯಲ್ಲೇ | '' ಎಂದು ಅತ್ತಿದ್ದುದು 

ಮತ್ತೆ ನೆನಪಿಗೆ ಬಂದು ಅವಳಿಗೆ ಬಲು ದುಃಖವಾಯಿತು. ಕಣ್ಣಿ 

ನಲ್ಲಿ ಎರಡು ತೊಟ್ಟು ನೀರೂ ಬಂದಿತು. 



ರಾಮುವು ಮತ್ತೆ ಹೇಳಿದನು "ನಾನು ದುಃಖವನ್ನು ತಡೆ 

ಯದೆ ದೇಶಾಂತರ ಹೊರಟು ಹೋದೆ. ಸುಂದರ! ಎರಡು ವರು 

ಷದ ದಿನ ಹುಚ್ಚು ಹಿಡಿದವನಂತೆ ಅಲೆದುಬಿಟ್ಟೆ ದಿನವೂ ಬೆಳಗಾ 



೪೨



ಗುತ್ತಿದ್ದಿತು. ಸಂಜೆಯಣಗುತ್ತಿದ್ದಿತು. ನನಗೆ ತಿಳಿಯುತ್ತಿದುದು 

ಅಷ್ಟೆ, ಒಂದು ದಿನವಾದರೂ ನನಗೆ ಸುಖವಿಲ್ಲ. ಬರುತ್ತಬರುತ್ತ 

ಅನ್ನವು ತಪ್ಪಿಹೋಯಿತು. ನಿದ್ದೆಯೂ ಹೋಯಿತು. ಯಾವಾ 

ಗಲೂ ಚಿಂತೆಯೇ ಆಯಿತು. ಈ ಹುಚ್ಚಿನಲ್ಲಿ ತಿರುಗುತ್ತಿರುವಾಗ 

ಯಾರೋ ನಮ್ಮೂರಿನವರು ನೋಡಿ ಅಪ್ಪನಿಗೆ ಬರೆದರಂತೆ. ಆವರೂ 

ಬಂದರು. ಮಾಸಿದ ಬಟ್ಟೆಯನ್ನುಟ್ಟು ಗಡ್ಡ ಮೀಸೆಗಳನ್ನು ಬೆಳ 

ಯಿಸಿಕೊಂಡು ನಿಂತಲ್ಲಿ ನಿಲ್ಲದೆ ಅಲೆಯುತ್ತಿದ್ದ ನನ್ನನ್ನು ಒಡಿದು 

ಕೊಂಡು ಬಂದು ಅಮ್ಮನನ್ನು ಕೂಗಿ " ಎಲೇ! ನಿನ್ನ ಮಗನನ್ನು 

ನೋಡಿ ಸಂತೋಷ ಪಡು. ಹೆತ್ತ ಹೊಟ್ಟೆಗೆ ಹಾಲು ಹುಯ್ದು ಕೋ"  

ಎಂದರು, ಅಮ್ಮನೂ ಈಚೆಗೆ ಬಂದು ನನ್ನನ್ನು ನೋಡಿ 

ಬಿಕ್ಕಳಿಸಿ ಅತ್ತಳು. " ನನ್ನ ದುರ್ಬುದ್ದಿಯೇ !" ಎಂದು 

ಕಣ್ಣೀರು ಕರೆದು ಬೇಕಾದಷ್ಟು ಬಯ್ದುಕೊಂಡಳು. ಆನ್ರೊತ್ತಿಗೆ 

ನಿನಗೆ ಮದುವೆಯಾಗಿ ಎಂಟು ದಿನವಾಗಿತ್ತಂತೆ?' ಎಂದನು. 


ಎದುರಿನಲ್ಲಿ ಕುಳಿತವರು ಸುಖದುಃಖಗಳನ್ನು ಹೇಳಿಕೊಳ್ಳು 

ತ್ತಿದ್ದರೆ ತಾವು ತಮ್ಮ ಕಥೆಯನ್ನು ಹೇಳದೆ ಕುಳ್ಳಿರುವುದು ಬಲು 

ಕಷ್ಟ. ಹುಡುಗಿಯೂ ವಿಷಣ್ಣೆಯಾಗಿ ಹೇಳಿದಳು. " ಹೌದು, 

ರಾಮು! ನೀನು ದೇಶಾಂತರ ಹೋದೆ, ನನಗೂ ಸನ್ನಿಯಾಗಿ 

ಆರು ತಿಂಗಳು ಹಾಸಿಗೆ ಹತ್ತಿ ಬಿದ್ದಿದ್ದೆ. ಆ ಸನ್ನಿಯಲ್ಲಿ ನಾವಿಬ್ಬರೂ 

ಆಡಿಕೊಂಡಿದ್ದ ಮಾತುಗಳಲ್ಲ ಹೊರಬಿದ್ದು ಅಮ್ಮನಿಗೂ ಅಪ್ಪನಿಗೂ 

ಹೃದಯ ಶಲ್ಯವಾಯಿತು. ಹೆಚ್ಚು ಹೇಳಲೇನು? ಅದೇ ಮೂಲ 

ವಾಗಿ, ಅಮ್ಮನು ಕೊರಕೊರಗಿ ಪ್ರಾಣಬಿಟ್ಟಳು ಅಪ್ಪನು ಅನೇಕ 

ವೇಳೆ ಅಮ್ಮನೊಡನೆ " ಹತ್ತು ಹನ್ನೊಂದುವರುಸದ ರಂಡೆಗೆ, 

ಇವಳಿಗೆ ಗಂಡನೆಂದರೆ ಏನು ಗೊತ್ತು? ಬೊಂಬೆಯಿಟ್ಟು ಕೊಂಡು 

ಆಡುವ ವಯಸ್ಸಿನವಳಿಗೆ ಮದುವೆಯೆಂದರೇನು. ಗೊತ್ತು?” 

ಎಂದಿದ್ದೆ. ಮುಖ್ಯ ನಾವು ಇವರಿಬ್ಬರನ್ನು ಮೊದಲಿಂದ ಒಟ್ಟು 

ಸೇರಿಸಬಾರದಾಗಿತ್ತು." ಎನ್ನುತ್ತಿದ್ದನು. ಕೊನೆಗೆ ನಮ್ಮವರೆಲ್ಲ 

ರಿಗೂ ಈ ಕಥೆಯು ತಿಳಿದುಹೋಗಿ ಯಾರೂ ನನ್ನನ್ನು ಮದುವೆ 


೪೩


ಮಾಡಿಕೊಳ್ಳದೆ ಹೊದರು. ಎಲ್ಲರೂ ಯಾರನ್ನು ಕೇಳಿದರೂ 

"ಹೂ! ಅವಳನ್ನು ಮದುವೆ ಮಾಡಿಕೋ! ಆಚೆಯಮನೆ ರಾಮೆ 

ಸ್ವಾಮಿಯು ಬಂದರೆ ಅವಳು ಓಡಿಹೋಗುತ್ತಾಳೆ' ಎನ್ನುವರು. 

ಅಪ್ಪನೂ ಬಹಳ ಕಾಯ್ದನು. ಅಲ್ಲದೆ ಅಮ್ಮನೂ ಸಾಯುವಾಗ, 

ಮಾವನನ್ನೂ ಅತ್ತೆಯನ್ನೂ ಕರೆಯಿಸಿಕೊಂಡು, " ಅತ್ತಿಗೆ! 

ಸುಂದರಿ ನಿನ್ನಮಗು. ನನ್ನ ಮಗುವಲ್ಲ, ರಾಮೂ ಹಿಂತಿರುಗಿ 

ಬಂದರೆ ಅವನಿಗೇ ಕೊಟ್ಟು ಮದುವೆ ಮಾಡು” ಎಂದು ಹೇಳಿ 

ಸತ್ತುಹೋದಳು. ಅತ್ತೆಯೂ ಒಪ್ಪಿದ್ದಳು. ನೀನು ಬರಲಿಲ್ಲ. 

ಮದುವೆಯಿಲ್ಲದೆ ಎಷ್ಟುದಿನ ವಿರಲಾದೀತು? ನೆರೆಹೊರೆಯವರೆಲ್ಲರೂ 

"ಬಸವಿ ಬಿಡುತ್ತಾರೆ ಕಾಣಿರೋ. ಹುಡುಗಿ ಚನ್ನಾಗಿದೆ" ಎನ್ನು 

ವರು. ಅಪ್ಪನೂ ಸೈರಿಸಲಾರದೆ, ಕೊನೆಗೆ ಬೆಂಗಳೂರಿಗೆ ಹೋಗಿ  

ಅಲ್ಲಿ ಓದುತ್ತಿದ್ದ ಯಾವುದೋ ಊರಿನವನೊಬ್ಬನನ್ನು ನೋಡಿ 

ಕೊಂಡು ಬಂದನು. ಇನ್ನು ಅವನನ್ನು ಮೈಸೂರಿಗೆ ಕರೆದುಕೊಂಡು  

ಬಂದರೆ ಕಥೆಯನ್ನು ಕೇಳಿಯಾನು ಎಂದು, ನನ್ನನ್ನು ಅಲ್ಲಿಗೇ  

ಕರಿದುಕೊಂಡು ಹೋದರು. ಅವನೂ ನನ್ನನ್ನು ನೋಡಿ ಒಪ್ಪಿ 

ದನೋ ಇಲ್ಲವೋ? ಅಂತೂ ಅಪ್ಪನು ಕೊಟ್ಟ ಥೈಲಿ ಹಣಕ್ಕಾಗಿ 

ಮದುವೆಯಾದನು. ಮದುವೆಯೂ ಪಶ್ಚಿಮವಾಹಿನಿಯಲ್ಲಿ 

ಆಯಿತು ಹೆಸರಿಗೆ. ಆವೇಳೆಗೆ ನಾನು ಮೈನೆರೆದು ಎರಡುತಿಂಗಳಾಗಿ 

ದ್ದಿತು. ಇನ್ನು ಆ ಕಥೆಯಲ್ಲೂ ಏಕೆ?'' ಎಂದಳು 



ಮಂಚದ ಕೆಳಗಿದ್ದೆ ವ್ಯಕ್ತಿಗೆ ಒಂದು ಸಂದೇಹವಿದ್ದಿತು. 

ಶಾನು ಓದುವುದರಲ್ಲಿ ಅಷ್ಟೇನೂ ಮುಂದಾಗಿರಲಲ್ಲ. ಭಿಕ್ಷಾನ್ನ 

ವೆತ್ತಿಕೊಂಡು, ಅದೂ ಹಗಲು ಹೋದರೆ ನಾಚಿಗೆಗೇಡೆಂದು ರಾತ್ರಿ 

ಹೋಗಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದವನಿಗೆ ಐನೂರು ರೂಪಾಯಿ 

ವರದಕ್ಷಣಿಯನ್ನು ಕೊಟ್ಟರಲ್ಲಾ ಎದು ಒಂದು ದೊಡ್ಡ ಆಶ್ಚರ್ಯ 

ವಾಗಿತ್ತು. ಕಾರಣವು ತಿಳಿಯಿತು. ಅಲ್ಲಿಯೇ ನಿಟ್ಟುಸಿರು 

ಬಿಟ್ಟನು. ನಿಟ್ಟುಸಿರಿನ ಸದ್ದು ಮಾತ್ರ ಯಾರಿಗೂ ಕೇಳಲಿಲ್ಲ. 



೪೪ 



ತೃತೀಯ ಪರಿಚ್ಛೇದ 

---


ರಾಮುವು ಹೇಳತೊಡಗಿದರು... " ಸುಂದರ! ಹೋಗಲಿ. 

ನೀವು ಗಂಡಹೆಂಡಿಗು ಸುಖವಾಗಿದ್ದೀರಾ? ಅದಾದರೂ ಹೇಳು, 

ಅದನ್ನಾದರೂ ಕೇಳಿ ಸಂತೋಷಪಡುವೆನು ಎಂದನು. ಮುಂಚದ 

ಕೆಳಗಿದ್ದ ವ್ಯಕ್ತಿಗೆ ಎದೆಯು ಹಾರಿತು. ಹುಡುಗಿಯು ಏನು ಉತ್ತರ 

ಕೊಡುವಳೋ? 


ಹುಡುಗಿಯು ಒಂದು ಗಳಿಗೆ ಸುಮ್ಮನಿದ್ದಳು. ಆಮೇಲೆ 

" ನೀನೀ ಪ್ರಶ್ನೆಯನ್ನು ಕೇಳುವೆಯೆಂದು ನನಗೆ ಮೊದಲೇ ಗೊತ್ತು 

ಆದರೆ ಆ ಪ್ರಶ್ನೆಗೆ ಉತ್ತರವನ್ನು ಹೇಳುವುದು ನನಗೆ ಸಮ್ಮತವಿಲ್ಲ"  

ಎಂದಳು. ಹುಡುಗಿಯ ಮಾತು ಖಂಡಿತವಾಗಿದ್ದರೂ ಮನಸು 

ಅಲ್ಲೋಲಕಲ್ಲೋಲವಾಗಿದೆಯೆಂಬುದು ಮಾತ್ರ ಒಡೆದು ಕಾಣು 

ದ್ದಿತು. ರಾಮಸಾಮಿಯು ಮುಂದೆ ಉತ್ತರಕ್ಕೆ ಒತ್ತಾಯ 

ಮಾಡಲಿಲ್ಲ. 



ಮಾತು ಹೊರಳಿಸಿ, " ಈ ದಿನಗಳಲ್ಲಿ  ಒಂದು ದಿವಸವಾದರೂ 

ನನ್ನನ್ನು ನೆನೆಸಿಕೊಂಡೆಯಾ ಸುಂದರ! ಈ ನಿರ್ಭಾಗ್ಯನ ನೆನಪು 

ನಿನಗೆ ಇದ್ದಿತೆ? ಅಥವಾ ಇರುವುದಕ್ಕೆ ಕಾರಣವಾದರೂ ಏನು?" 

ಎಂದನು. ಸುಂದರಿಯು ಅರಳಿದ ಕಣ್ಣಿಂದ ಬಿರಬಿರನೆ ಕೊಂಚ 

ಹೊತ್ತು ನೋಡಿ, ನಿಟ್ಟುಸಿರೊಂದು ಬಿಟ್ಟು, ಸುಮ್ಮನಾದಳು.  

ಅವನ ಪ್ರಶ್ನೆಗೆ ಉತ್ತರವೇನೋ ಬಂದಿತು. ರಾಮುವು ತಲೆಯನ್ನು 

ತಗ್ಗಿಸಿಕೊಂಡು ಮತ್ತೆ ಹೇಳಿದನು ನಿನ್ನನ್ನು ನೋಡಬೇಕೆಂಬ 

ಆಶೆ ಬಹಳವಿದ್ದರೂ, ನಿನ್ನನ್ನು ನೋಡುವುದಕ್ಕೆ ಏಕೋ ಹೆದರಿಕೆ 

ಯಾಗುತ್ತಿದ್ದಿತು. ನೀನು ಇಲ್ಲಿರುವುದನ್ನು ನಾನು ಬಲ್ಲೆ. ಆದರೆ 

ನೇರವಾಗಿ ಬರಲಾರದೆ ಹೋದೆ ಅಲ್ಲದೆ ಮಾವನಿಗೆ ಮುಖವನ್ನು 

ತೋರಿಸಲು ಇಷ್ಟವಿಲ್ಲ. ಯಾವಾಗಲೂ ನಿನ್ನನ್ನೇ ಕುರಿತು ಚಿಂತಿ 



೪೫ 



ಸುತ್ತಿದ್ದರೂ, ನಿನ್ನನ್ನು ನೋಡಲು ಒಂದು ವಿಧದ ಕಳವಳವು 

ಹಾದಿಗೊಡಲಿಲ್ಲ. ನಿನ್ನ ರೂಪವು ಕಣ್ಣಿಗೆ ಕಟ್ಟಿರುವುದು. 

ಯಾವಾಗಲೂ ಯಾವ ಕೆಲಸ ಮಾಡುತ್ತಿದ್ದರೂ, ನೀನು ಜತೆ 

ಯಲ್ಲಿಯೇ ಇರುವಂತೆ ಇರುವುದು. ನಿನ್ನ ಸಣ್ಣಕೊರಳಿನ 

ಮೃದು ಮಾತುಗಳು ಕಿವಿಯಲ್ಲಿ ಜಿನುಗುತ್ತಲೇ ಇರುವುವು. 

ನಾವಿಬ್ಬರೂ ಸಣ್ಣ ಹುಡುಗರಾಗಿರುವಾಗ ಹಿಂದೊಂದು ದಿನ ನಾನು 

ತುಂಬಿದ ಬೆಳದಿಂಗಳಲ್ಲಿ ನಿನ್ನ ತೊಡೆಯಮೇಲೆ ತಲೆಯನ್ನಿಟ್ಟು, 

ಕೊಂಡು ಮಲಗಿದ್ದೆ. ನೀನು ಯಾವುದೋ ಹಾಡು ಹೇಳಿ ಕೈಬ 

ಳೆಯ ತಾಳದೊಡನೆ ತಟ್ಟುತ್ತಿದೆ ನನಗೆ ಹಾಗೆಯೇ ಸಣ್ಣಗೆ 

ಜೊಂಪು ಹತ್ತಿತು. ಅತ್ತೆಯು ಆಗ ಬಂದು, " ಇದೇನೇ ಇದು? 

ಎಂದಳು. ನೀನು ನಾಚಿಗೆಯಿಂದ ನನ್ನ ತಲೆಯನ್ನು ತೆಗೆದು 

ಕೆಳಗಿರಿಸಿ ಓಡಿಹೋದೆ. ನನಗೂ ಎಚ್ಚರವಾಯಿತು. ನಾನೂ 

ಅತ್ತೆಯನ್ನು ಕಂಡು ಓಡಿಹೋದೆ ನಿತ್ಯವೂ ನನಗೆ ಕಣ್ಣು 

ಮುಚ್ಚಿದರೆ ಅದೇ ಕನಸು. ಅದೇ ಹತ್ತು ವರುಷದ ಸುಂದರ. 

ನಾನೂ ಆದೇ ಹುಡುಗ. ಮತ್ತೆ ನಾವು ಆಡುವುದು ಅದೇ ಆಟ 

ಅದೇ ನೆನಸಿನಲ್ಲಿಯೇ, ಕಣ್ಮುಚ್ಚಿಕೊಂಡು ಸುಖಪಡುತ್ತ ಹೊರಗಿನ 

ಪ್ರಪಂಚವನ್ನೇ ಮರೆತಿದ್ದೇನೆ. ಸುಂದರ! ನಾನು ನಿನ್ನನ್ನು ಇದ 

ಕ್ಕೆ ಮೊದಲೇ ನೋಡಬಹುದಾಗಿತ್ತು. ಅದೇನೂ ಕಷ್ಟವಿರಲಿಲ್ಲ. 

ಆದರೆ ನಿನ್ನನ್ನು ಕಂಡರೆ ನನಗೆ ಮೈಮರೆವುದೆಂದಿದ್ದೆ. ಕೆಳಗೆ 

ಬಿದ್ದುಹೋಗುವೆನೆಂದಿದ್ದೆ. ಅಲ್ಲದೆ ನನ್ನ ಸೌಖ್ಯದ ಅಧಿದೇವತೆಯು  

ಸೊದೆಗಣಿಯಾದ ನನ್ನ ಇನಿಯಳು ಪರನ ಪಾಲಾಗಿರಲು ನಾನೆಂತು 

ನೋಡಲೆಂದು ನೋಡಲಿಲ್ಲ. ಸುಂದರ! ನನ್ನ ಆಳುಗಳಿಂದ ನಿನ್ನ 

ಸ್ಥಿತಿಗತಿಗಳನ್ನೆಲ್ಲಾ ತಿಳಿದುಕೊಂಡೆ ನೀನು ಹಗಲಿರುಳೆನ್ನದೆ 

ಕಣ್ಣೀರಲ್ಲಿ ಕಯ್ತೊಳೆಯುತ್ತಿರುವುದೂ ತಿಳಿಯಿತು. ನಿನ್ನ ಗಂಡನು 

ನಿನ್ನ ವಿಚಾರದಲ್ಲಿ ಉದಾಸೀನನಾಗಿರುವುದೂ ತಿಳಿಯಿತು ಅನೇಕ 

ವೇಳೆ ಅದಕ್ಕೆ ಪ್ರತೀಕಾರ ಮಾಡಬೇಕೆಂದುಕೊಂಡೆನು. ನನ್ನ 

ಮುದ್ದಿನ ಮನದನ್ನೆಗೆ, ನನ್ನರಗಿಣಿಗೆ, ಮನೋಮೋಹನೆಗ್ಗೆ ಮನ 



೪೬ 



ಸ್ಸಿಗೆ ವ್ಯಥೆಯನ್ನುಂಟುಮಾಡುವ ನಾ--(ತರುಣನು ನಾಲಗೆಯನ್ನು 

ಕಚ್ಚಿಕೊಂಡನು) ವ್ಯಥೆಯನ್ನುಂಟುಮಾಡುವವನಿಗೆ ಪ್ರತೀಕಾರ 

ಮಾಡಬೇಕೆಂದು ಕೃತನಿಶ್ಚಯನಾದೆನು.  ಆದರೆ ನನಗದು  ಸಮ್ಮ  

ತವೋ, ಅಸಮ್ಮತವೋ ಅದನ್ನು ತಿಳಿಯೆಲಾರದೆ ಸುಮ್ಮನಿದ್ದೆನು.

ಸುಂದರ! ಕೊನೆಗೆ ಮನಸ್ಸು ತಡೆಯಲಾರದೆ ಹೋಯಿತು. ಪ್ರತೀ 

ಕಾರ ಮಾಡಿಯೇ ಬಿಡುವೆನೆಂದು ಬಂದಿದ್ದೇನೆ.?' ಎಂದನು. ತರು 

ಣನು ತಗ್ಗಿನ ದನಿಯಲ್ಲಿ ಮಾತನಾಡುತ್ತಿದ್ದರೂ ಬಾಯಲ್ಲೆಂದು 

ದನ್ನು ಕಯ್ಯಲ್ಲಿ ಮಾಡುವವನ ಮನಸ್ಸಿನ ಕಠಿಣ್ಯವು ಚೆನ್ನಾಗಿ 

ತೋರುವಂತಿತ್ತು. 



ಹುಡುಗಿಗೆ ಸಮಾಧಾನದ ಸಣ್ಣ ನಗು. ಮೊಲ್ಲೆಯ ಮೊಗ್ಗೆ 

ಯಂತೆ ಅಂದವಾದ ಹಬ್ಬು ಚೆಂದುಟಿಯ ನಡುವೆ ತಲೆಹಾಕುತ್ತಿರಲು,  

"ಪ್ರತೀಕಾರವೇನೋ?'' ಎಂದಳು. ಈ ಇಬ್ಬರ ಭಾವವೂ ಹೀಗಿ 

ಸುವುದನ್ನು ತಿಳಿದು ಮಂಚದ ಕೆಳಗಿನ ವ್ಯಕ್ತಿಗೆ ಮೈಬೆವರಿಟ್ಟಿತು.

ಅವನು ಭಯಂಕರವಾದ ನೋಟವನ್ನು ಕಂಡು ಹೆದರಿದವನಂತೆ 

ಎರಡು ಕೈಗಳಿಂದಲೂ ಭದ್ರವಾಗಿ ಮುಖವನ್ನು ಮುಚ್ಛಿಕೊಂಡನು 



ರಾಮುವು ಹೇಳಿದನು "" ನದ್ನ ಪ್ರತೀಕಾರದ ತೆರನು ಹೊ 

ಸತು. ಅವನೀಗ ನಿನ್ನನ್ನು ನಿರಾಕರಿಸಿ ಕಾಲುಕಸಕ್ಕೆಂತ ಕಡೆ  

ಯಾಗಿ ನೋಡುತ್ತಿರುವನು ನಾನು ನಿನ್ನನ್ನು ಭವ್ಯವಾದ ಹೃದಯ 

ಮಂದಿರದ ಅಧಿದೇವಿಯನ್ನಾಗಿ ಪ್ರತಿಷ್ಠಾಪಿಸಿ ನಿನ್ನ ಆಜ್ಞೆಗೆ 

ಬದ್ಧನಾಗಿ ಅಡಿಯಾಳಾಗಿರುವೆನು, ನಿನ್ನನ್ನು ಸಹಧರ್ಮಿಣಿಯಂತೆ . 

ಅರ್ಧಾಂಗಿಯಂತೆ, ಕಷ್ಟ ಸುಖಗಳಲ್ಲಿ ಸಮಭಾಗಿಯಂತೆ ಕಾಣದೆ 

ನಿನ್ನ ಮನಸ್ಸಿಗೆ ದುಃಖವನ್ನುಂಟುಮಾಡುತ್ತಿರುವನು. ನಾನು ನಿನ್ನ 

ನೆರಳಾಗಿ ನಡೆದರಡಿ ಸಮೆಯುವುದೆಂದು ಆರಾಧಿಸುವೆನು. ದಾಸಿ 

ಯೆಂದು ದೂರನಿಟ್ಟರುವನವನು. ದೇವಿಯೆಂದು ಸರ್ವಸ್ವವನ್ನು 

ಒಪ್ಪಿಸಿ, ತಲೆಯಲ್ಲಿಟ್ಟು ಮೆರೆವೆನು ನಾನು. ನೀನು ಮನಸ್ಸು 

ಮಾಡು. ಇಂದಿನ ರಾತ್ರಿಯೇ ನಾಳೆ ಬೆಳಗಾಗುವುದರೊಳಗಾಗಿ 



೪೭ 



ನೂರಾರು ಮೈಲಿದೂರ ಹೊರಟುಹೋಗೋಣ. ನಿನ್ನ ಗಂಡನಿಗೆ 

ನೀನು ಬೇಡ; ಅವನು ಹುಡುಕುವುದಿಲ್ಲ. ಮಾವ! ಅವನಿಗೆಂದು 

ಹಣವನ್ನು ತಂದಿದ್ದನೆ ಇನ್ನೇನಾಗಬೇಕು ?" ಎಂದನು, 


ಮಂಚದ ಕೆಳಗೆ ಅಡಗಿದ್ದ ವ್ಯಕ್ತಿಗೆ ಸಾವಿರಚೇಳು ಒಟ್ಟಿಗೆ 

ಕುಟುಕಿದಂತಾಯಿತು. ನೂರಾರು ಸಬಳಗಳನ್ನು ಹೊಟ್ಟೆಗೆ ಹಾಕಿ 

ತಿವಿದದಂತಾಯಿತು. ಇದುವರೆಗೂ ಹೆಂಡತಿ ವಿಚಾರದಲ್ಲಿ 

ಅವನು ಹಾಗಿದುದು ನಿಜ, ಆದರೆ ಅವಳನ್ನು ಚೆಲುವೆಯೆಂದು, 

ತನ್ನಮನೆಯ ನಂಬದ ದೀವಿಗೆಯೆಂದು, ತನ್ನ ಜೀವಿತದ ಸೊದೆಯ 

ಹೊಳೆಯೆಂದು ಎಂದೂ ಭಾವಿಸಿರಲಿಲ್ಲ. ಅವಳೊಂದು ಭೋಗ್ಯ 

ವಸ್ತು. ಬೇಕಾದಾಗ ಬೇಕು; ಬೇಡದಾಗ ಬೇಡ, ಹೀಗಿದ್ದವನಿಗೆ 

ತನ್ನ ಹೆಂಡತಿಯ ಮೇಲೆ ಮತ್ತೊಬ್ಬನ ಕಣ್ಣಿರವುದೆಂದು ತಿಳಿದ 

ಕೂಡಲೆ ಮನಸ್ಸಿನಲ್ಲಿ ಅಡಗಿದ್ದ ಮಡದಿಯ ಮೇಲಿನ ಮೋಹವು 

ಹೆಡೆಯೆತ್ತಿ ಮೇಲಕ್ಕೆ ದು ನಿಲ್ಲುವ ನಾಗರ ಹಾವಿನಂತೆ ಪ್ರಬುದ್ಧ  

ವಾಯಿತು. ಮಲಗಿ ಗೊರಕೆ ಹೊಡೆಯುತ್ತಿದ್ದ ಮಮತೆಯೆಲ್ಲವೂ 

ತಟ್ಟನೆ ತಾನೇತಾನಾಗಿ ಹೋಯಿತು. ಹೆಂಡತಿಯ ವಿಚಾರವಾಗಿ 

ಒಂದು ಕ್ಷಣದ ಹಿಂದೆ ಅವನಲ್ಲಿ ಹುಡುಕಿದರೂ ಕಂಡು ಬರದಿದ್ದ 

ಕಾತುರವು ಇಂದು ಮನದಲ್ಲಿ ಮನೆ ಮಾಡಿಬಿಟ್ಟಿತು. ಗಂಟಿಲೊ 

ಣಗಿ ಹೋಯಿತು. ಅವಳು ಹೊರಟು ಹೋದರೆ...ಗತಿ... ಮುಂದೆ 

ಯೋಚಿಸಲಾರದೆ ಹೋದನು. ಅಯ್ಯೋ! ತಾನು ಸರಿಯಾಗಿರು 

ವುದಕ್ಕೆ ಏನು ರೋಗವೆನ್ನಿಸಿತು ಈ ಮಂಚದಡಿಯಿಂದ ಮುಕ್ತ 

ನಾದರೆ, ಅವಳ ಕೈ ಕಾಲಾದರೂ ಕಟ್ಟಿಕೊಳ್ಳಬಹುದು. ಆದರೆ 

ಮುಕ್ತನಾಗುವುದು ಹೇಗೆ? 



ಹುಡುಗಿಯು ನೀರವವಾಗಿ ಕೇಳುತ್ತಿ ದ್ದ ವಳು ಇನ್ನೇನಾಗಬೇ 

ಕೆಂಬ ಪ್ರಶ್ನೆ ಕೈಗೆ ಉತ್ತರವಾಗಿ 'ನಾನು ಮನಸ್ಸು ಮಾಡಬೇಕು ಅಷ್ಟೆ !" 

ಎಂದಳು, ರಾಮಸ್ವಾಮಿಯು ಮೇಜನ್ನೊರಗಿದ್ದಂತೆಯೇ, ಒಂದು  

ಕಡೆಗೆ ಬಾಗಿ, ಕುರ್ಚಿಯ ತೋಳಿನಮೇಲೆ ಕಯ್ಯನ್ನಿಟ್ಟು ಮೆತ್ತಗೆ 



೪೮ 



ಒರಗಿದನ್ನು ಅವನ ಬಿಸಿಯುಸಿರು ಸುಂದರಿಯ ಭುಜದ ಮೇಲಿನ 

ಸೆರಗನ್ನು ಸೆಳೆಯಬೇಕೆಂದು ಯತ್ನಿಸಿತು ಅವನು "ಹೌದು 

ಸುಂದರ! ನೀನು ಮನಸ್ಸು ಮಾಡಬೇಕು ಅಷ್ಟೆ!' ಎಂದನು. 

ಸುಂದರಿಯು " ಹೌದು! ನೋಡುವವರು ಏನೆನ್ನುವರು!?' ಎಂದಳು. 

" ನೋಡುವವರ ಮಾತು ಎಷ್ಟುದಿನ? ಸುಂದರ! ಎರಡು ದಿನ. 

ಬೆಟ್ಟದ ನದಿಯಂತೆ ಎರಡು ದಿನ ಬಿರುಸಾಗಿದ್ದು ಮತ್ತೆ ತಣ್ಣಗಾ 

ಗುವುದು” ಎಂದನು. ಯುವಕನ ದೇಹವು ಇನ್ನೂ ವಾಲುತ್ತಾ 

ಬಂದು, ಬಿಸಿಯುಸಿರು ಹುಡುಗಿಯ ಕೆನ್ನೆಗೆ ಬಡಿಯಿತು. ಹುಡು 

ಗಿಯು ತಟ್ಟನೆ ಎದ್ದು ನಿಂತು "ಎಲ್ಲನನ್ನೂ ಚಿನ್ನಾಗಿಯೇ ಗುಣಿ 

ಸಿದೆ. ಆದರೆ ನಾನು ಹೆಂಗಸೆಂಬುದನ್ನು ಮಾತ್ರ ಗುಣಿಸಲಿಲ್ಲ?' 

ಎಂದಳು. ತರುಣನಿಗೆ ತಿಳಿಯದೆ ಬೆಪ್ಪಾಗಿ 'ಹಾಗೆಂದರೆ?' 

ಎಂದನು ಎಂದರೆ ಗಂಡನೊಡನೆ ಮಾನವಾಗಿ ಸಂಸಾರ ಮಾಡಿ 

ಕೊಂಡಿರಬೇಕಲ್ಲದೆ ಮಾನಗೆಟ್ಟು ಮಿಂಡನೊಡನೆ ಮೆರೆಯಬೇ 

ಕೆನ್ನುವಳಲ್ಲ ಎಂದು. ನೀನಿಂತಹೆ ದುರ್ಭಾಷೆಯಾಡುವೆ ಎಂದು 

ತಿಳಿದಿದ್ದರೆ ನಾನಿಲ್ಲಿ ನಿಲ್ಲುತ್ತಿರಲಿಲ್ಲ ನಾನಿಲ್ಲಿಗೆ ಬರುತ್ತಿರಲಿಲ್ಲ 

ಇದೋ ಹೊರಟೆ' ಎಂದಳು. ಗಂಡನುಹೆಂಡತಿಯನ್ನು ಮನಸ್ಸಿ 

ನಲ್ಲಿ ಸಾವಿರ. ಸಲ ವಂದಿಸಿದನು 



ರಾಮಸ್ವಾಮಿಂಯು "ಸುಂದರ! ಈಗ ರಾತ್ರಿ ಎರಡೂವರೆ 

ಗಂಟೆ. ಸರಿರಾತ್ರಿಯಲ್ಲಿ ಇಲ್ಲಿ ಬಂದಿರುವೆ. ನೀನು ಒಬ್ಬಳು 

ನಾನು ವರ್ಷಾಂತರಗಳಿಂದ ತಡೆದುಕೊಂಡು ಬಂದಿದ್ದು ಈಗ 

ಕಟ್ಟು ಒಡೆದಿರುವ ಮೋಹದ ಆಡಳಿತದಲ್ಲಿ ಸಿಕ್ಕಿರುವವನು. ನನಗೆ 

ಮೈಮೇಲೆ ಅರಿವಿಲ್ಲ. ನಾನು ನಿನ್ನನ್ನು ಅಡ್ಡಹಾಕಿದರೆ" ಎಂದನು 

ಹೌದು ಹುಡುಗಿಯು ಒಬ್ಬಳು ತರುಣನು ಅಗಲವಾದ ಎದೆಯೂ, 

ಲಾಳಮುಂಡಿಗೆಯಂತಿರುವ ತೋಳುಗಳೂ ಉಳ್ಳವನು. 

-----


೪೯



ಚತುರ್ಥ ಪರಿಚ್ಛೇದ 

---


ಹುಡುಗಿಯು ಹೆದರಲಿಲ್ಲ ಅಧೀರಳಾಗಲಿಲ್ಲ. ಕಾತರಳಾಗ 

ಲಿಲ್ಲ ನೆಟ್ಟ ಗೂಟದಂತೆ ಅಲುಗದೆ ಸ್ಥಿರಳಾಗಿ ನಿಂತು "ಅದು. 

ನಿನ ಕೈಯಲ್ಲಾಗುವುದಿಲ್ಲ. ನಿನ್ನ ಮನಸ್ಸನ್ನು ನಿಂನರಿಯೆ 

ಅದರಿಂದ ಹೀಗೆ ಹೇಳುವೆ. ನೀನು ಬೇಕೆನ್ನುವುದು ನನ್ನನ್ನು 

ನನ್ನ ದೇಹವನ್ನಲ್ಲ. ನನ್ನನೊಲಿಸಿಕೊನ್ಸಬೇಕೆಂದು ಬಂದಿರುವೆ 

ಯಲ್ಲದೆ ನನ್ನನ್ನು ನನ್ನ ಇಷ್ಟಕ್ಕೆ ವಿರೋಧವಾಗಿ ಹೊತ್ತುಕೊಂಡು 

ಹೋಗಬೇಕೆಂದಲ್ಲ ಇದನ್ನು ನಾನು ಬಲ್ಲೆ, ನೀನರಿಯೆ'' ಎಂದಳು. 

ರಾಮುವು ಅಪ್ರತಿಭನಾದನು ಆಡಬಾರದ ಮಾತನ್ನಾಡಿದುದಕ್ಕೆ 

ಬಲು ನಾಚಿಕೆಯಾಯಿತ್ತು. ತಾನಾರಾಧಿಸುತ್ತಿರುವ ದೇವಿಯನ್ನು 

ಇಂತು ನೀಚವಾಗಿ ನುಡಿಸಿದುದಕ್ಕೆ ಹೃದಯವು ನಿಂದಿಸಿತು, ಮನ 

ದಲ್ಲಿ ಕಟ್ಟದ ಕರುಮಾಡದ ರನ್ನದೀವಿಗೆಯೆಂದು ನಂಬಿದ್ದ, 

ದಿವ್ಯಧಾಮದ ಸ್ವರ್ಗೀಯ ಮೂರ್ತಿಗೆ ಅಸಮಾನ ಮಾಡಿದೆಯೆಂದು 

ಮನವು ತಿರಸ್ಕರಿಸಿತು. ರಾಮುವು ಬಹಳ ಕಾತರನಾದನು. ಕರ 

ಣಗಳು ಕಳವಳಿಸಿದವು ಕಣ್ಣು ಕತ್ತಲೆಯಿಟ್ಟತು. ತನ್ನ ತಿರಸ್ಕಾರ 

ವನ್ನು ತಾನೇ ಸಹಿಸಲಾರದೆ 'ಅಯ್ಯೊ!' ಎಂದಳಲಿಹೋದನು; 

ವೇದನೆಯು ತೀವ್ರವಾಗಿ ಮೆಯ್ಯರಿವು ಮರತು ಭೊಪ್ಪನೆ ಬಿದ್ದು 

ಹೋದನು. ಶರೀರವು ಸುಂದರಿಯ ಪಾದಮೂಲದಲ್ಲಿ ಉರುಳಿತು. 



ಹುಡುಗಿಯು ಕಣ್ಣೀರಿನ ಮಳೆಗರೆದು ಇಷ್ಟಕ್ಕೂ ತಾನೇ 

ಕಾರಣನೆಂದು ತಿರಸ್ಕರಿಸಿಕೊಂಡಳು. ಆದರೂ ತಾನು ಮಾಡಿದುದೇ 

ಸರಿಯೆಂದು ಸಣ್ಣ ದನಿಯೊಂದು ಧೈರ್ಯಹೇಳುತ್ತಿದ್ದಿತು. 



ಹುಡುಗಿಯು ಕಣ್ಣೀರು ಸುರಿಸುತ್ತಲೇ, ಅವನನ್ನು ಮೆಲ್ಲಗೆ  

ಹಿಡಿದೆತ್ತಿ ಮಂಚದ ಮೇಲೆ ಮಲಗಿಸಿದಳು, ಮೂಲೆಯಲ್ಲಿ ಒಂದು 

ಹೂಜಿಯಲ್ಲಿದ್ದ ನೀರನ್ನು ತಲೆಗೂ ಹಣೆಗೂ ತಳೆದು ಸ್ನೇಹಸ್ನಿಗ್ಧ  


೫೦


ವಾದ ಮೃದು ಮಧುರ ಧ್ವನಿಯಿಂದ ಮೆಲ್ಲಗೆ 'ರಾಮೂ!' ಎಂದಳು. 

ತರುಣನು ಮೆಲ್ಲಗೆ ಕಣ್ತೆರೆದು ಆಯಾಸದಿಂದ ಮೆಲ್ಲಗೆ 'ಸುಂದರಾ!' 

ಎಂದನು. ಕಣ್ಣು ನೀರಿನಿಂದ ತುಂಬಿದ್ದಿತು. ಕತ್ತು ಸೆರೆಬಿಗಿದು 

ಮುಂದಕ್ಕೆ ಮಾತು ಹೊರಡಲಿಲ್ಲ. ಹುಡುಗಿಯೂ ಅವನ ತಲೆಯ 

ಮೇಲೆ ಕಯ್ಯಿಟ್ಟು ಸ್ಥಿರದೃಷ್ಟಿಯಿಂದ ಚಾಂಚಲ್ಯದ ಸೊಂಕಿಲ್ಲದೆ 

ನೋಡುತ್ತ ಶುಳಿಶಿಟೆಳು. 


ತರುಣನು ಚೇತರಿಸಿಕೊಂಡು ಎದ್ದು ಕುಳಿತನು. ಮುಖವು 

ಬಹಳವಾಗಿ ಕಂದಿ ಹೋಗಿದ್ದಿತು. ಸರ್ವನಾಶವಾಯಿತೆಂದು ದೃಢ 

ವಾದ ಮೇಲೆ ತೋರುವ ಒಂದು ತೆರದ ಸ್ಥೈರ್ಯದಿಂದ, ಹೇಳ 

ತೊಡಗಿದನು; 'ಸುಂದರ! ದೇವರು ನನಗೆ ಎಲ್ಲವನ್ನೂ ಕೊಟ್ಟು 

ಒಂದನ್ನು ಕಿತ್ತುಕೊಂಡಿದಾನೆ. ದೇವರು ಕೊಡದಿರುವುದನ್ನು 

ನೀನು ಕೊಡಬಲ್ಲೆ. ಮತ್ತೊಮ್ಮೆ ಯೋಚಿಸು ಸುಂದರ! ನನ್ನ  

ಜೀವನವನ್ನು ರಮಣೀಯವಾದ ನಂದನವನ್ನು ಮಾಡುವುದೂ 

ಹುಲ್ಲು ಕಡ್ಡಿಯೂ ಕಾಣದ ಬೆಂಗಾಡನ್ನು ಮಾಡುವುದೂ ಈಗ ನಿನ್ನ 

ಕಯ್ಯಲ್ಲಿದೆ. ನನ್ನ ಹೃದಯವನ್ನು ನಿನ್ನ ಪಾದ ತಲದಲ್ಲಿ ಒಪ್ಪಿ 

ಸಿದ್ದೇನೆ. ನನ್ನ ಜೀವಿತವನ್ನು ನಿನಗೆಂದು ಮೀಸಲು ಕಟ್ಟಿ ಇಟ್ಟಿ

ದ್ದೇನೆ.  ಕಾಲಲ್ಲ ನೂಕುವೆಯಾ? ತಳ್ಳಿಬಿಡುವೆಯಾ? ತಲೆಯಲ್ಲಿ 

ಮುಡಿದೆಸೆದ ಹೂವನ್ನೂ ನಾನು ಮುಡಿದಿದ್ದ ಹೂವೆಂದು ಹೇಳು 

ತ್ತಿದ್ದ ಕರುಣವಂತೆಯು ನೀನು, ನೀನಾಗಿ ಬೆಳೆಸಿದ ಗಿಡವನ್ನು 

ಕಡಿದು ಬೆಂಕಿಯೊಟ್ಟುವಿಯಾ? ಮತ್ತೊಮ್ಮೆ ಕೈಮುಗಿದು ಕೇಳಿ 

ಕೊಳುವೆನು. ನನ್ನ ಜನ್ಮವನ್ನು ಸಫಲಮಾಡು. ದಯೆಮಾಡು? 

ಎಂದನು.


ಹುಡುಗಿಯ ಉತ್ತರನು ಕೂಡಲೆ ಬಂದಿತು. ಮರ್ಮಾಂತಿಕ 

ವೇದನೆಯಿಂದ ಅಲ್ಲಲ್ಲಿ ನಿರುದ್ಧವಾಗಿಯಾಗಿ ಮುಂದರಿಯಿತು. 

'ರಾಮೂ! ನೀನು ನನಗಾಗಿ ಪಡುತ್ತಿರುವ ಕಷ್ಟವು ಅತಿಶಯವಾ 

ದುದು. ಕೆಲಸಕ್ಕೆ ಬಾರದ ನನ್ನಂತಹವಳಿಗಾಗಿ ನೀನು ಇಷ್ಟು 



೫೧


ವ್ಯ ಧೆಪಡುತ್ತಿದ್ದರೆ, ನನ್ನ ಮನಸ್ಸು ಕರಗದೆಂದುಕೊಂಡಿದ್ದೀಯಾ?

ನಾನು ಯಾವಾಗಲೂ ನಿನ್ನವಳೇ ರಾಮು! ಆದರೆ ಯೋಚಿಸು. 

ಜಗತ್ತಿನಲ್ಲಿ ಕೆಟ್ಟವಳೆನ್ನಿಸಿಕೊಳ್ಳಲು ನನಗೆ ಇಷ್ಟವಿಲ್ಲ. ರಾಮೂ! 

ನಾವಿಬ್ಬರೂ ಹೃದಯವನ್ನು ನೋಡಬಲ್ಲ ದೇವರೆದುರಿಗೆ ಧರ್ಮ 

ದಂಪತಿಗಳು. ಆದರೆ ಹೊರಗಣ ಕಣ್ಣಿಂದ ನೋಡುವ ಜಗತ್ತಿಗೆ 

ಪಾಪಿಗಳು ಧರ್ಮಭ್ರಷ್ಟರು. ಒಬ್ಬರಿಂದ ನಮಗಾಗಬೇಕಾದುದೇ 

ನೆನ್ನುವೆ? ಅದಕ್ಕೆ ನಾನೇನೂ ಹೇಳಲಾರೆ. ರಾಮು! ಲೋಕ 

ವನ್ನು ನಾನು ಕಂಡಿರುವೆನು. ಧರ್ಮವನ್ನು ನಾನು ಕಾಣೆ. 

ರಾಮು! ಕಂಡಿರುವ ಈ ಲೋಕವನ್ನ ಮೆಚ್ಚಿಸದ ನಾನು ಕ೦ಡರಿ 

ಯದ ದೇವರನ್ನು ಮೆಚ್ಚಿಸುವುದುಂಟೇ? ಎಲ್ಲರಿಂದಲೂ ಒಳ್ಳೆಯವ 

ಳೆನ್ನಿಸಿಕೊಳ್ಳಬೇಕೆಂಬ ಆಶೆಯು ಮಾತ್ರ ನನಗೆ ಬಹಳವುಂಟು 

ನಾಳೆಯ ದಿನ ನನ್ನ ಮಕ್ಕಳನ್ನು ನೋಡಿ ಯಾರಾದರೂ "ಇವ 

ರಿಂಧವಳ ಮಕ್ಕಳೆಂದರೆ, ಇವರ ತಾಯಿ, ಹೀಗೆಂದರೆ, ಅದನ್ನು 

ಕೇಳಿ ನನ್ನ ಮಕ್ಕಳು ಏನೆಂದುಕೊಳ್ಳುವರು ಯೋಚಿಸು. ಅಲ್ಲದೆ, 

ರಾಮ! ನಾಚಿಗೆಯನ್ನು ಬಿಟ್ಟು ಹೇಳಿಕೊಳ್ಳಬೇಕೆಂದರೆ ಮನಸ್ಸು 

ಬರದು. ಇಲ್ಲವಾದರೆ ನನ್ನ ಹೃದಯವನ್ನು ಬಿಚ್ಚಿ ನಿನ್ನ ಮುಂದಿ 

ಡುತ್ತಿದ್ದೆನು. ಹೇಳಲಾರೆನಾದರೂ ಒಟ್ಟಿನಲ್ಲಿ ಹೇಳುವೆನು ಕೇಳು. 

ನನ್ನ ವ್ಯಥೆಯು ನಿನ್ನ ವ್ಯಧೆಗೆ ಕಡಿಮೆಯಾಗಿಲ್ಲ. ನೀನು ದೇವ 

ರಾಗಿದ್ದರೆ ನನಗೆ ಮುಕ್ತಿಯು ಖಂಡಿತ ದೊರೆಯುತ್ತಿದ್ದಿತು. ಇನ್ನ 

ಲ್ಲಿಂದ ಮುಂದಕ್ಕೆ ಹೇಳಲಾರೆ. ಒಂದು ಮಾತ್ರ ಖಂಡಿತವಾಗಿರು. 

ನಿನ್ನ ಹೃದಯದಲ್ಲಿ ಅಚ್ಚಳಿಯದಂತೆ ಬರೆದಿಟ್ಟುಕೊ. ಸು೦ದ 

ರಿಯ ದೇಹವು ನಿನ್ನದಲ್ಲ. ಮನಸ್ಸು ನಿನ್ನದು. ಆದರೂ, ಈ 

ಜನ್ಮದಲ್ಲಿ ಮಾತ್ರ ನಿನ್ನವಳಾಗಲಾರೆನು. ನಿನ್ನವಳು ಹೌದು; 

ಆದರೆ ಮತ್ತೊಬ್ಬನೊಡನೆ ಸಂಸಾರ ಮಾಡಿಕೊಂಡಿರುವೆನು. ಅಲ್ಲದೆ 

ನೀನು ಮತ್ತೊಂದನ್ನು ಯೋಚಿಸಲಿಲ್ಲ. ನೀನು ಹಲವು ವರ್ಷದ 

ಹಿಂದಿನ ಸವಿಗನಸುಗಳನ್ನು ಇಂದು ಹೇಳುತ್ತಿರುವೆ. ನಾನು ಅಂದಿ 

ನಿಂದಲೂ ಬೆಳೆದಿದ್ದೇನೆ. ನೀನೂ ಬೆಳೆದಿದ್ದೀಯೆ. ಮೊದ ಮೊದಲು


೫೨



ನಾವಿಬ್ಬರೂ ಎಳೆತನದಲ್ಲಿ ಸಸಿಗಳ೦ತೆ ಒಟ್ಟಿಗಿದ್ದೆವು. ಈಗ 

ಜತೆಯಲ್ಲಿ ಹುಟ್ಟಿದರೂ ಪ್ರವಹಿಸುವಾಗ ಬೇರೆಯಾಗಿವ ನದಿಗ 

ಳಂತೆ ಇದ್ದೇವೆ. ನಿನ್ನ ಪಾಡಿಗೆ ನೀನಿರು ನನ್ನ ಪಾಡಿಗೆ ನಾನಿರು 

ವೆನು. ಒಂದು ವೇಳೆ ನಾನು ಸತ್ತು ಹೋಗಿದ್ದರೆ ಆಗ ನಿನೇನು 

ಮಾಡುತ್ತಿದ್ದೆ ? ಈಗಲೂ ಹಾಗೆಯೇ ಇರು, ನಿನಗೆ ಮದುವೆ 

ಯಾಗದೆ ಇಲ್ಲ. ಯಾರು ಬೇಕಾದರೂ ಹೆಣ್ಣು ಕೊಡುತ್ತಾರೆ.

ಮದುವೆ ಮಾಡಿಕೊಂಡು ಸುಖವಾಗಿರು. ಇಂದಿನಿಂದ ಆಚೆಗೆ

ನಾನೂ ನೀನೂ ಅಣ್ಣತಂಗಿಯರು. ಸೋದರಮಾವನ ಮಕ್ಕಳಲ್ಲ; 

ಒಂದು ಹೊಟ್ಟೆಯಲ್ಲಿ ಹುಟ್ಟಿದವರು' ಎಂದಳು.


ತರುಣಣೇನೆನ್ನಬೇಕು ? ಪಾರ್ಥಿವವಾದ ಶರೀರವನ್ನು 

ಧರಿಸಿದ್ದರೂ ಕಾಮವಿಕಾರವಿಲ್ಲದೆ, “ ನಾನು ನಿನ್ನವಳು ಹೌದು. 

ಆದರೆ ತಂಗಿಯೆಂದು ತಿಳಿದುಕೊ '' ಎ೦ದು ಹೇಳುತ್ತಿರುವ ಹೆಂಗ 

ಸನ್ನು ಕಂಡು ಚಕಿತನಾಗಿ ಹೋದನು. " ಹಣವೆಂದರೆ ಬಾಯ್ಬಿ 

ಡುವಳು. ಹೊಗಳಿದರೆ ವಶಳಾಗುವಳು ” ಎಂದು ತಾನೆಂದು 

ಕೊಂಡಿದ್ದ ಹೆಂಗಸಲ್ಲಿ ವಳು. ಅವನೂ ಪ್ರಪಂಚವನ್ನು ಬಲ್ಲವನು. 

ಪತ್ತೇದಾರರ ಇಲಾಖೆಯಲ್ಲಿ ಬಹು ನಿಪುಣನೆಂದು ಪ್ರಸಿದ್ಧನಾದ 

ವನು. ಮನುಷ್ಯ ಸ್ವಭಾವವನ್ನು ಚೆನ್ನಾಗಿಯೂ ಅರಿತವನು ; 

ಆದರೂ ಓದಿನ ಗುರುತರಿಯದ ಹುಡುಗಿಯ ಸಾಮಾನ್ಯವಾದ 

ಮಾತುಗಳಿಗೆ ಮುಗ್ಧನಾಗಿ ಹೋದನು; ಪರಾಜಿತನಾದೆನೆಂದು 

ಒಪ್ಪಿಕೊಂಡನು ಎಲ್ಲದಕ್ಕಿಂತಲೂ ಒಂದು ಮಾತು ಬಹಳ ಹಿಡಿ 

ಯಿತು. ಇಂದಿನ ಸುಂದರಿಯು ಅಂದಿನ ಸುಂದರಿಯೇ ? ಅ೦ದು 

ಕಿಲಕಿಲನೆಂದು ನಗುತ್ತಾ, ಲೋಕದ ಕಷ್ಟ ಸುಖಗಳರಿಯದೆ 

ಹಾರುವ ಹಕ್ಕಿಯಂತಿದ್ದ ಸುಂದರಿಯೇ ಈಗಲೂ ? ಸಾಧ್ಯವಿಲ್ಲ. 


------

೫೩


ಪಂಚಮ ಪರಿಚ್ಛೇದ 



ಇಬ್ಬರಲ್ಲಿ  ಯಾರೂ ಮಾತನಾಡಲಿಲ್ಲ. ಸುಮಾರು ಹೊತ್ತಾ 

ಯಿತು. ಎಲ್ಲಿಯೋ ಒಂದು ಝುಾಮದ ಕೋಳಿಯು ಕೊಕ್ಕೋ 

ಎಂದಿತು. ಇಬ್ಬರೂ ಯೆಚ್ಛೆತ್ತರು. ಹುಡುಗಿಯು "" ಆಗಲೇ 

ಕೋಳಿ ಕೂಗುವ ಹೊತ್ತಾಯಿತು. ಇನ್ನು ನಾನು ಹೋಗುವೆನು. 

ಎಂದೆದ್ದಳು. ತರುಣನು ಕೈಮುಗಿದುಕೊಂಡು ಅಂಗಲಾಚಿಕೊಂಡು 

" ಸುಂದರ ! ನೀನು ಹೇಳಿದಂತೆ ಕೇಳಿಕೊಂಡಿರುವೆನು. ನಿನ್ನ 

ಚರಣಸೆೇವಕನಾಗುವೆನು. ನಿನ್ನ ದಾಸಾನುದಾಸನಾಗುವೆನು. 

ಕೊನೆಯ ಮಾತನ್ನು ಹೇಳು?” ಎಂದು ಮತ್ತೆ ಬೇಡಿಕೊಂಡನು, 

ಹುಡುಗಿಗೆ ಅಸಮಾಧಾನವಾಗಿ ಕೊಂಚ ಕೋಪ ಬಂದಿತು. ಕಡೆ 

ಗಣ್ಣು ತುದಿಯಿಂದ ಗಂಟಿಕ್ಕಿದ ಹುಬ್ಬಿನಿಂದ, ಗಂಭೀರವಾದ  

ಮುಖದಿಂದ ತನ್ನಕೋಪವನ್ನು ಸೂಚಿಸುತ್ತಾ " ನಾನು ಹೇಳ 

ದನ್ನು ಆಗಲೇ ಹೇಳಿದ್ದೇನೆ ನಿನಗೆ ಈ ದೇಹದಮೇಲೆ ಆಶೆಯಾ 

ದರೆ ಈಗಲೆ, ಇದೊ ನಿನಗೆ ಬೇಕಾದುದನ್ನು ಮಾಡಿಕೋ ಆದರೆ 

ಒಂದು ತಿಳಿದಿರು. ಮಾನವನ್ನು ನೀಗಿ ನನ್ನನ್ನು ದನಕ್ಕಿಂತಲೂ 

ಕಡೆಯಾಗಿಸುವೆ ನೀನು. ಇಂತಹ ನಿನ್ನಲ್ಲಿ ಸಾಯುವವರೆಗೂ 

ದ್ವೇಷವನ್ನು ಸಾಧಿಸುವೆನು. ಒಂದು ಗಳಿಗೆಯ ಇಂದ್ರಿಯ ಸುಖ 

ಕ್ಕಾಗಿ ಜೀವಾವಧಿ ಶಪಿಸುವ ರಾಕ್ಷಸಿಯ ದ್ವೇಷ ಬೇಕೋ ಇಲ್ಲ 

ವಾದರೆ ನಿನ್ನ ಶ್ರೇಯಸ್ಸಿಗರಂದು ದಿನವೂ ದೇವರಿಗೆ ಹರಕೆ 

ಯನ್ನು ಹೊರುವ ತಂಗಿಯ ಪ್ರೇಮ ಬೇಕೊ ನೀನೇ ಗೊತ್ತು 

ಮಾಡು” ಎಂದು ಮತ್ತೆ ಕುಳಿತುಬಿಟ್ಟಳು. 



ರಾಮುವು " ಸುಂದರ! ಇನ್ನು ನಿನ್ನೂಡನೆ ಕಾಮದ 

ಮಾತುಗಳನ್ನಾಡುವುದಿಲ್ಲ. ಚಾಪಲ್ಯದ ನುಡಿಗಳನ್ನು ನುಡಿಯು 

ವುದಿಲ್ಲ ಆದರೆ ಬಹುದಿವಸದ ಆಶೆಯ ಪಿಶಾಚವು ನನ್ನನ್ನು 



೫೪ 



ತಟ್ಟನೆ ಬಿಡುವುದಿಲ್ಲ. ನನಗೊಂದು ಮುತ್ತು ಕೊಡು. ವರ್ಷಾಂ 

ತರಗಳಿಂದಲೂ ಹಂಬಲಿಸಿದ್ದನೆ. ಮರುಮಾತನಾಡಬೇಡ. 

ನಾನು ಪಶು. ನನಗೆ ವಿವೇಕವಿಲ್ಲ ಇದೋ ಕೊನೆಯ ಪ್ರಾರ್ಥನೆ 

ಇದೊಂದನ್ನು ನೆರವೇರಿಸು. ಕೈಮುಗಿದು ಕೇಳಿಕೊಳ್ಳುವೆನು. 

ಇಲ್ಲವೆನ್ನ ಬೇಡ. ಕರುಣಿಸು?' ಎಂದು ಮಂಚದಿಂದಿಳಿದು ಮುಂದ 

ರಿದನು ಹುಡುಗಿಯು ಅವಾಕ್ಕಾಗಿದ್ದಳು. ವಿರೋಧಿಸಲಿಲ್ಲ. 

ತರುಣನು ಮಹತ್ತರವಾದ ಮನೋವೇದನೆಯಿಂದ ಅವಳನ್ನು ಬರ 

ಸೆಳೆದು ಅಪ್ಪಿ ಕೊಂಡು, ತಗ್ಗಿಸಿದ್ದ ಮೊಗವನ್ನು ಎತ್ತಿ ಮುತ್ತಿಟ್ಟು 

ಕೊಂಡನು. ಆ ವೇಳೆಗೆ ಎಲ್ಲಿಯೂ ಇಲ್ಲದ ಗಾಳಿಯೊಂದು ಬಂದು 

ದೀಪವು ಆರಿಹೋಯಿತು. ಇಂತಹ ಅವಿವೇಕವನ್ನು ದೀಪವೆಂತು 

ಸೈರಿಸುವುದು? ನಂದಿ ಹೋಯಿತು. ಗುಡಾರವೆಲ್ಲವೂ ಅಂಧಕಾ 

ರಾವೃತವಾಗಿ ಹೋಯಿತು. ಪ್ರಕೃತಿಯು ಈ ಪ್ರಾಣಿಗಳಿಬ್ಬರೆ 

ಚರ್ಯೆಯನ್ನು ಪ್ರಪಂಚವು ಕಾಣದಿರಲೆಂದು ಕತ್ತಲೆಯಿಂದ 

ಮುಚ್ಚಿ ಬಿಟ್ಟಳು. 


ಮಂಚದ ಕೆಳಗೆ ಅವಿತಿದ್ದ ವ್ಯಕ್ತಿಯು ಬದುಕಿದೆನೆಂದು 

ಓಡಿ ಹೋಯಿತು. 



-----

೫೫


ಆರನೆಯ ಭಾಗ 

ಹಂಗಿನ ಹೊರೆ. 

ಪ್ರಥಮ ಪರಿಚ್ಛೇವ 



ಅಳಿಯನು ಹಿಂದಿನ ದಿನ ಮಾವನೊಡನೆ "ನಾನು ನಾಟ 

ಕಕ್ಕೆ ಹೋಗಬೇಕ್ಕು ಮೈಸೂರಿಗೆ ಹೋಗಿಬರುವೆನೆಂ"ದು ಹೇಳಿ 

ಸಂಜೆಯಲ್ಲಿ ಎಲ್ಲಿಯೋ ಹೊರಟಹೋಗಿದ್ದನು; ರಾತ್ರಿ ಸುಮಾರು 

ನಾಲ್ಕು ಗಂಟೆಯ ಹೊತ್ತಿಗೆ ಈಚೆ ಬಂದಿದ್ದ ಮಾವನು ಅಳಿಯನ 

ಕಿರುಮನೆಯಲ್ಲಿ ಏನೋ ಸೊರಸೊರ್ರೆಂಬ ಶಬ್ದವನ್ನು ಕೇಳಿ ಅಲ್ಲಿಗೆ 

ಹೋಗಿ ಬಾಗಿಲಿಗೆ ಕಿವಿಕೊಟ್ಟು ಕೇಳಿದನು. ಯಾರೋ ಮರ್ಮಾಂ  

ತಿಕವಾದ ವೇದನೆಯಿಂದ. ನೀರವವಾಗಿ ಆಳುತ್ತಿರುವಂತೆ ತೋರಿತು. 

ಸಾಮಾನ್ಯವಾಗಿ ಸುಂದರಿಯು ಅಳುತ್ತಿರುವುದುಂಟು. ಆದರೆ 

ಅವಳ ಧ್ವನಿಯ ಹಾಗೆ ತೋರಲಿಲ್ಲ. 



ಮಾವನು ಹಿಂತಿರುಗಿ ಬಂದು ತನ್ನ ಕಿರುಮನೆಗೆ ಹೋಗು  

ವುದರೊಳಗಾಗಿ, ಯಾರೋ ಛತ್ರದ ಹಿತ್ತಲ ಬಾಗಿಲನ್ನು ತೆರೆದಂತಾ 

ಯಿತು. ತಾನು ಆಗ ತಾನೇ ಬಾಗಿಲು ಹಾಕಿಕೊಂಡು ಬಂದಿದನು. 

ಆ ಬಾಗಿಲು ಹೊರಗಿಂದ ತೆಗೆಯಬೇಕಾದರೆ ತಮ್ಮ ಮನೆಯವರಿಗ 

ಲ್ಲದೆ ಇತರರಿಗೆ ತಿಳಿಯ್ದದು. ಕಳ್ಳರೇನೋ ಎಂದುಕೊಂಡು, 



೫೬ 



ಹಾಗೆಯೇ ನಿಂತುಕೊಂಡನು. ಬಾಗಿಲು ತೆರೆದು, ಒಂದು ವ್ಯಕ್ತಿ 

ಯು ಒಳಗೆ ಬಂದು ನೇರವಾಗಿ ಸುಂದರಿಯ ಕಿರುಮನೆಗೇ ಹೋ 

ಯಿತು ಹಾಗೆಯೇ ನೋಡಿದನು. "ಬಂದವಳು ಹುಡುಗಿ. 

ಹಾಗಾದರೆ ಕೃನ್ನು ಮೂರ್ತಿಯೇ ಅಳುತ್ತಿ ದ್ದುದು? ಸಾಮಾನ್ಯವಾಗಿ 

ನಾಟಕಕ್ಕೆಂದು ಮೈಸೂರಿಗೆ ಹೋದವನು ಮರುದಿನ ಬೆಳಿಗ್ಗೆ ಹತ್ತು 

ಗಂಟೆಯ ವೇಳೆಗೆ ಬರುತ್ತಿದ್ದನು. ಈದಿನ ನಾಲ್ಕು ಗಂಟೆಗೇ ಬಂದಿರು 

ವನೇ? ಏನೋ ಹಾಳಾಗಿಹೋಗಲಿ ನನಗೇಕೆ ?" ಎಂದು ಒಂದು 

ದಪ್ಪ ಚಿಟಿಕೆ ನಸ್ಯವನ್ನು ಮೂಗಿಗೆ ಬಲವಾಗಿ ಏರಿಸಿ ಮುಸುಕನ್ನು 

ಬೀರಿ ಮಲಗಿಬಿಟ್ಟನು. 


ಮರುದಿನ ಬೆಳಗಾಯಿತು. ಕೃಷ್ಣಮೂರ್ತಿಯ ಮುಖವನ್ನು 

ಕಂಡವರೆಲ್ಲರೂ ಜ್ವರಬಂದಿದಿಯೇ ಎನ್ನುವರು. ಕಣ್ಣುಗಳು 

ಕೆಂಪಾಗಿ ಹೋಗಿ. ಕೊಂಚ ಊದಿಕೊಂಡಂತೆ ಕಾಣುತ್ತವೆ.  

ಮೊಗನೆಲ್ಲನೂ ನಿಸ್ತೇಜವಾಗಿ ಹೋಗಿದೆ. ಅಂಗಾಂಗಗಳೆಲ್ಲವೂ 

ಬಳಲಿಕೆಯಿಂದ ಬೆಂಡುಗಿ ಹೋಗಿವೆ. 

-----


ದ್ವಿತೀಯ ಪರಿಚ್ಛೇದ 



ಹಿಂದಿನ ದಿನ ಒಡೆಯನ ಅಪ್ಪ ಣೆಯಾಗಿದ್ದಂತೆ. ಆಳುಗಳು 

ಮತ್ತೆಲ್ಲಿಯೋ ಮಲಗಿದ್ದು ಬೆಳೆಗ್ಗೆ ಆರು ಗಂಟೆಗೆ ಬಂದರು. ಆ ವೇ 

ಳೆಗೆ ಅವರೊಡೆಯನು ಎಂದಿನಂತೆ ಎದ್ದಿರದೆ ಇನ್ನೂ ಮಲಗೇ 

ಇದ್ದನು. ಪಕ್ಕದ ಮೇಜಿನ ಮೇಲೆ ಆಡಕೆಲತೆ, ಒಳ್ಳೆಯ ಹೂ, 

ಹಾಲಿನ ಚಂಬು, ಸಂಪಗೆ ಹೂವಿನ ಪೊಟ್ಟಣ, ಅಲಂಕೃತವಾದ 

ಹೆಣ್ಣು ಬೊಂಬೆ. ಸಾಮಾನ್ಯವಾಗಿ ಒಡೆಯನು ಏನುಮಾಡಿದರೂ 

ಅದನ್ನು ಕುರಿತು ಆಳು ಮರುಮಾತನಾಡುತ್ತಿರಲಿಲ್ಲ ಆದರೆ 



೫೭ 



ಈಸಲ ಒಂದು ಸಣ್ಣ ನಗು ಬಂದಿತು. ಅದನ್ನು ಹಾಗೇ ತಡೆದು 

"ಅಡಕೆಲೆ ಹಾಕಿಕೊಂಡಿಲ್ಲ ಹೂ ಕಟ್ಟು ಬಿಚ್ಚಿಲ್ಲ. ಇದೇನು 

ಆಟವೋ? ಕೊನೆಯವರಿಗೆ ನೋಡೋಣ? ಎಂದುಕೊಂಡು ಸಾಹೇ 

ಬರು ಏಳುವುದರೊಳಗಾಗಿ ಎಲ್ಲವನ್ನೂ ಗುಡಿಸಿಬಿಡೋಣವೆಂದು 

ಹೊರಟನು ಹಾಸಿದ್ದ ರತ್ನಗಂಬಳಿಯೆಲ್ಲ ಸುಕ್ಕ ಸುಕ್ಕಾಗಿದ್ದಿತು. 

ಹಾಗೆಯೇ ಹುಡುಕಿಕೊಂಡು ಬಂದರೆ ಒಂದು ಚೂರಿ. 

ಸಂದೇಹವಿನ್ನೂ ಬಲವಾಗಿ, ಮತ್ತೊಬ್ಬನನ್ನು ಕರೆದು ಆದನ್ನು 

ತೋರಿಸಿದನು. ಬಾಗಿಲಲ್ಲಿ ಎಂದಿನಂತೆ ನಾಯಿಯಿಲ್ಲ; ಹುಡುಕಿ 

ದರೆ ಗುಡಾರದ ಹಿಂದೆ ಸುಮಾರು ದೂರದಲ್ಲಿ ಒಂದು ಮರಕ್ಕೆ 

ಕಟ್ಟಿಹಾಕಿದೆ. ಇಬ್ಬರಿಗೂ ಸಂಶಯವು ಬಲವಾಯಿತು. ಚಿನ್ನದ 

ಒಡವೆಗಳಿದ್ದ ಬೊಂಬೆಯೂ ಬೆಳ್ಳಿಯ ತಂಬಿಗೆಯೂ ಇದ್ದಹಾ 

ಗಿಯೇ ಇವೆ. ಮಂಚದಡಿ ಚೂರಿ ಇದೆ. ಅವರಿಬ್ಬರ ತರ್ಕದಲ್ಲಿ 

ಯಾರೋ ತಮ್ಮ ಸ್ವಾಮಿಯ ಜೀವಿತ ಹರಣಕ್ಕಾಗಿ ಬಂದಿರಬೇ 

ಕೆಂದು ಸಿದ್ಧವಾಯಿತು. ಹಗಲಿರರೂ ಪತ್ತೆದಾರಿಯ ಸಾಹಸ 

ಕರ್ಮದಲ್ಲಿ ತೊಡಗಿರುವವನ ಮೇಲೆ ಅಂತಹ ಅತ್ಯಾಚಾರ ನಡಿ 

ಯುವುದು ಅಸಂಭವವೇನೂ ಅಲ್ಲ. 


ಅವರಿಗೂ ಆಗ ತಾವೇ ಒಂದು ಗಳಿಗೆಯ ಮುಂಚೆ ಜೊಂಪು 

ಹಿಡಿದಿದ್ದಿತು. ರಾತ್ರಿಯೆಲ್ಲವೂ ಹುಚ್ಚುಜ್ವರ ಕಾಯ್ದಂತೆ ಆದರೆ 

ಗಾಬರಿಯಿಲ್ಲ. ಒಂದುತರದ ಧೈರ್ಯವಿದೆ. ಎಲ್ಲವೂ ಅರಿಕೆ  

ಯಾಯಿತು ಅವರಿಗೂ ಆಶ್ಚರ್ಯವಾಗಿ ಚೂರಿಯನ್ನು ತರಿಸಿ 

ಕೊಂಡು ನೋಡಿದರು. ಹಣದ ಪಟ್ಟಗೆಯು ತೆರದಿದುದೂ ಅದ 

ರಲ್ಲಿ ಸುಮಾರು ನೂರೈವತ್ತು ರೂಪಾಯಿ ಹೋಗಿರುವುದೂ 

ಗೊತ್ತಾಯಿತು. ನಾಯಿಯನ್ನು ತರಿಸಿ, ಜಾಡೆಯನ್ನು ಗುರ್ತು 

ಹೆಚ್ಚಿಸಿದರು. ಎರಡು ಜಾಡೆಗಳು. ಎರಡೂ ಛತ್ರದ ಕಡೆಗೇ 

ಹೋಗುತ್ತ ಹಿಂಬಾಗಿಲಿಂದ ಒಳಕ್ಕೆ ಹೋಗುತ್ತವೆ. ಒಂದು ಪಾರು 


೫೮ 


ಪತ್ತೆಗಾರರ ಕೊಠಡಿಗೆ ಹೋಗಿ, ಅಲ್ಲಿಂದ ಮತ್ತೊಂದು ಕಿರು  

ಮನೆಗೆ ಹೋಗುತ್ತದೆ. ಮತ್ತೊಂದು ಕಿರುಮನೆಯು ಯಾರದು 

ಎಂಬುದು ಸಾಹೇಬರಿಗೆ ಗೊತ್ತು. 


ಆಳುಗಳಿಬ್ಬರೂ ಪ್ರಚಂಡರು. ದಫೇದಾರ್‌ ನರಸಿಂಗ 

ರಾಯನು ಬಂದಿರುವುದನ್ನು ಬಲ್ಲರು. ಒಬ್ಬನು ಹೋಗಿ ಕಥೆಯನ್ನು 

ಉಪ್ಪುಕಾರ ಹಚ್ಚಿ ಹೇಳಿ ಕರೆದುಕೊಂಡು ಬಂದನು. ಅವನೂ 

'ದೊಡ ಸಾಹೇಬರು, ಪತ್ತೇದಾರರ ಆಫೀಸರ್‌? ಎಂದು ತಿಳಿದು 

ಮುತುವರ್ಜಿವಾಡಿ, ಒಂದು 'ಭಲೆ!' ಹೊಡೆದು ಬಿಡಬೇಕೆಂದು 

ಬಂದನು. ಆಸೀಸರ್‌ ಇನ್ನೇನೂ ಕೊಡುವುದಿಲ್ಲವೆಂದು ಅವನ 

ಮತ ಬಂದು ಸಾಹೇಬರ ಮುಂದೆ, ಬಹು ಮರ್ಯಾದೆಯಿಂದ 

ಬಗ್ಗಿ ಸಲಾಂಮಾಡಿ, ತಾನು ಒಂದು ನಿಮಿಷದಲ್ಲಿ ಪತ್ತೆಮಾಡು 

ವುದಾಗಿ ಹೇಳಿದನು. ಏನೋ ಯೋಚನೆಯಲ್ಲಿದ್ದ ಆಫೀಸರ 

ಆಗಬಹುದೆಂದರು. ನರಸಿಂಗರಾಯನು ಚೂರಿಯನ್ನು ತೆಗೆದು 

ಕೊಂಡು ಹೋದನು.  


ಆಫೀಸರಿಗೆ ಒಂದೇ ಯೋಚನೆ. "ಇನ್ನೂ ಹದಿನೆಂಟು. 

ವರ್ಷದ ಹುಡುಗಿ. ಹೆಚ್ಚು ಓದಿದವಳೂ ಅಲ್ಲ, ಇಷ್ಟು ಮಾತು 

ಎಲ್ಲಿ ಕಲಿತಳು?” ಆಶಾಭಂಗದಿಂದ ಭಗ್ನವಾದ ಮೃದು ಹೃದಯ 

ದಲ್ಲಿ, ಸಫಲವೂ ನಿಷ್ಫಲವೂ ಅಲ್ಲದ ಕಾಮವು ಕಡೆಕಡೆದು ಮನ 

ಸ್ಸನ್ನು ಹರಿತಮಾಡಿ, ತಿಳಿಯದುದನ್ನು ತಿಳಿಸಿಕೊಡುವುದೆಂಬ 

ಗುಟ್ಟು ಆಫೀಸರಿಗೆ ಇನ್ನೂ ತಿಳಿದಿರಲಿಲ್ಲ. 


ಸುಮಾರು ಅರ್ಥ ಗಂಭಿಯಲ್ಲಿ ಆಫೀಸರು ಇನ್ನೂ ಹಾಸಿ 

ಗೆಯ ಮೇಲಿರುವಹಾಗೆಯೇ, "ಕಳ್ಳನು ಸಿಕ್ಕಿದ್ದಾನೆ. ಕದ್ದಿರು 

ವವನು ಛತ್ರದ ವಾರುಪತ್ತೇಗಾರ ವೆಂಕಟರಮಣಯ್ಯ. ಚೂರಿಯು 

ಅವನದೇ" ಎಂದು ವರದಿ ಬಂದಿತು, ಆಫೀಸರಿಗೆ ಮೈಹಿಡಿದು 

ಕುಲುಕಿದಂತಾಯಿತು 

-------------


೫೯



ತೃತೀಯ ಪರಿಚ್ಛೇದ 



ಸುಮಾರು ಎಳುಗಂಟೆಯ ವೇಳೆಗೆ ಭತ್ರದಬಳಿ ಗದ್ದಲವೋ 

ಗದ್ದಲ. ಪಾರುಪತ್ತೆಗಾರರನ್ನು ಪೋಲೀಸಿನವರು ಹಿಡಿದುಕೊಂಡು 

ಹೋಗಿದಾರೆ. ಅನೇಕರಿಗೆ ಅದು ಸಮ್ಮತ. 'ಆಗಬೇಕು. ಸುಮ್ಮನಿರು 

ಕಳ್ಳಲೆಖ್ಬ ಬರೆದು ಕೊಳ್ಳೆ ಹೊಡೆಯುತಿದ್ದ' ಎಂದು ಕೆಲವರು 

" ಎಲ್ಲಿಯೋ ಸಿಕ್ಕಿಬಿದ್ದಿದಾನೆ? ಎಂದಿಲ್ಲರ ಅಭಿಪ್ರಾಯವಾದರೂ 

" ಗುಡಾರಕ್ಕೆ ನುಗ್ಗಿ ನೂರೈವತ್ತು ರೂಪಾಯಿ ಕದ್ದನೆಂ''ದರೆ 

ಯಾರೂ ಒಪ್ಪರು. ಎಲ್ಲರೂ "ಅಯ್ಯೋ ಪಾಪ; ಆ ಅಳ್ಳದೆಯ 

ಅಯ್ಯನಿಗೆ ಅಷ್ಟು ಧೈರ್ಯವೆಲ್ಲಿಂದ ಬಂತು?'' ಎನ್ನುವರು, 

ಮತ್ತೆ ಕೆಲವರು ಸರ್ವಜ್ಞರು " ಸರಿ! ಕೇಡುಕಾಲಕ್ಕೆ ಕೆಟ್ಟ ಬುದ್ಧಿ 

ಏನೋ? ಎಂತೋ? ಏನೂ ಇಲ್ಲದೆ ಪೋಲೀಸಿನವರು  ಹಿಡಿದು 

ಕೊಂಡು ಹೋಗುತ್ತಾರೆಯೇ?? ಎಂದರು. ಹಿಡಿದು ಕೊಂಡು 

ಹೊಗಿರುವುದೇಕೆಂದು ವಿಚಾರಿಸಿ, ಅವನನ್ನು ಬಿಡಿಸಿಕೊಂಡು 

ಬರುವ ಬುದ್ದಿ ಒಬ್ಬರಿಗೂ ಇಲ್ಲ. ಎಲ್ಲರೂ ತರ್ಕವಿತರ್ಕವಾದ 

ವಿವಾದಗಳ ಪಾರ್ಲಿಮೆಂಟು ನಡೆಸುತ್ತಾ ಕುಳಿತಿದ್ದರು. ‌ 



ಈ ಗದ್ದಲದಲ್ಲಿ ಸುಂದರಿಗೆ ಎಚ್ಚರವಾಯಿತು. ಈಚೆ ಬಂದು 

ವಿಚಾರಿಸಿ, " ಅದೆಲ್ಲ ಸುಳ್ಳು.” ಎಂದಳು. ಯಾವನೋ "ನಿನಗೆ 

ಬಹಳ ಗೊತ್ತು ಕಾಣಮ್ಮ! ನಿನ್ನ ಕೊಠಡಿ ಬಿಟ್ಟು ಈಚೆಗೆ ಬರದ 

ವಳಿಗೆ" ಎಂದನು. ಅವಳೂ ಮರುಮಾತನಾಡದೆ ಬಂದು ಬಿಟ್ಟಳು 

ಒಬ್ಬ ಹುಡಗನನ್ನು ಒಳಕ್ಕೆ ಕರೆದು ಎಲ್ಲವನ್ನೂ ವಿಚಾರಿಸಿದಳು. 

ಅವಳಿಗೂ " ಇರಬಹುದೇ?" ಎನ್ನಿಸಿತು. 


ಅವಳು ಅತ್ತ ತಿರುಗಿದಾಗ ಯಾರೋ " ಹುಡುಗಿಗೆಲ್ಲೊ 

ಭೀತಿಶಂಕೆಯಾಗಿದೆ ಕಣೋ! ಮೊನ್ನೆ ಒಳ್ಳೆಯ ನಿಂಬೆಹೆಣ್ಣಿನ 

ಹಾಗೆ ನೋಡುವುದಕ್ಕೆ ಅಷ್ಟು ಸೊಗಸಾಗಿದ್ದವಳು ಇವತ್ತು ಹೆಣದ 



೬೦ 



ಹಾಗೆ ಆಗಿ ಹೋಗಿದ್ದಾಳೆ? ಎಂದನು. ಆ ಮಾತು ಅವಳ ಕಿವಿಗೆ 

ಬಿದ್ದಿತು. ಅವಳಿಗೆ ನಗು. 



“ ಭೀತಿಯೂ ಯಿಲ್ಲ ಗೀತಿಯೂ ಇಲ್ಲ ಆ ಹೆಣ್ಣಿ ಗೆ ಗಂಡ 

ಹೀಗೆ ದುರಿತಪ್ಪಿರುವನಲ್ಲ ಎಂದು ಯೋಚನೆ. ದಿನವೂ ಇರುಳೆಲ್ಲ 

ಅಳುತ್ತಲೇ ಇರುವಳಂತೆ. ನಿದ್ದೆ ಮಾಡದೆ ಅತ್ತುಅತ್ತು ಹೀಗಾಗಿ 

ದ್ದಾಳೆ" ಎಂದನು.  "ತನ್ನ ಬಾಳು ಹೀಗಾಯಿತಲ್ಲಾ ! " ಎಂಬ 

ಗಾಯವಡೆದ ಅಭಿಮಾನದಿಂದ ಅವಳಿಗೆ ಬಲುದುಃಖವಾಯಿತು. 


ಗಂಡನು ಮನೆಯಲ್ಲಿಲ್ಲ. ಎಲ್ಲಿಯೋ ಹೋಗಿದ್ದಾನೆ. 

ಮತ್ತೆ ಬೆಳಗಾಗುವುದರೊಳಗಾಗಿ ಜೂಜಿನ ಕಟ್ಟಿಗೆ ಹೋಗಿರಬಹು 

ದೇನೋ ಎಂದಲ್ಲಿಗೂ ಒಬ್ಬಹುಡುಗನನ್ನು ಕಳುಸಿಸಿದಳು. 

ಕೊನೆಗೆ ಎಂದೂ ಇಲ್ಲದೆ ಇಂದು ಕೆರೆಯಕಡೆಗೆ ಹೋಗಿರುವನೆಂದು 

ತಿಳಿಯಿತು ನಡೆದುದನ್ನೆಲ್ಲಾ ಅಲ್ಲಿಗೇ ಮುಸುರೆಯುಜ್ಜುವವಳೊ  

ಡನೆ ಹೇಳಿಕಳುಹಿಸಿದಳು. “ಹಣವನ್ನು ಅವರೇ ಕದ್ದಿರಬಹುದೋ?" 

ಎಂದು ಅವಳಿಗೆ ಒಂದು ಸಂದೇಹ. ಜೂಜಿನಮನೆ ಗದ್ದಲವು 

ಅವಳ ಕವಿಗೂ ಬಿದ್ದಿದ್ದಿತು. 

------


ಚತುರ್ಥ ಪರಿಚೀದ 


-----




ವೆಂಕಟರಮಣಯ್ಯನು ಚಾವಡಿಯಲ್ಲಿ ಕುಳಿತಿದ್ದಾನೆ. ನರ 

ಸಿಂಗರಾಯನು ಒಳ್ಳೆಯ ಜರ್ಬಿನಿಂದ, ಕುರ್ಚಿಯಲ್ಲಿ ಕಾಲುಮೇಲೆ 

ಕಾಲು ಹಾಕಿಕೊಂಡು, ಸೊಗಸಿಂದ ಸಿಗರೇಟ್‌ ಸೇದುತ್ತಾ ಕಳಿತಿ 

ದ್ದಾನೆ ಇಬ್ಬರಿಗೂ ಯೋಚನೆ. 


ಒಬ್ಬನಿಗೆ ಇವನು ಒಳ್ಳೆಯ ಹಣವಂತ. ಚನ್ನಾಗಿ ಕಕ್ಕಿಸ 

ಬಹುದಾಗಿದ್ದಿತು. ಏನಿಲ್ಲವೆಂದರೂ ನೂರು ರೂಪಾಯಿ ಸಿಕ್ಕು 



೬೧



ತ್ತಿದ್ದಿತು. ಎರಡು ದಿನ ಗೋಳುಗುಟ್ಟಿಸಿ, ರೂಪಾಯಿ ಕಸಿದು 

ಕೊಂಡು 'ಎವುಡೆನ್ಸು' ಸಾಲದು ಎಂದು ಒಂದು 'ಬಿ ಷೀಟ್‌'

ಕೊಟ್ಟಿದ್ದರೆ ಮುಗಿದುಹೋಗುತ್ತಿದ್ದಿತು. ಈ ಹಾಳು ಆಫೀಸರ್‌ 

ಬೇರೆ ಬಂದು ಕೆಲಸ ಕೆಟ್ಟುಹೋಗಿದೆ? ಎಂದು ಯೋಜನೆ. 


ಮತ್ತೊಬ್ಬನು "ಸರಿ. ಅರ್ಧವಾಯಿತು. ಗಂಡ ನನ್ನನ್ನು 

ಹಣ ಕೇಳಿದರೆ, ನಾನು ಕೊಡಲಿಲ್ಲ. ಅವನೆಲ್ಲಿಯೋ ಅತ್ತು 

ಕೊಂಡಿದ್ದಾನೆ. ಅದನ್ನು ಕಂಡು ಅವಳಿಗೆ ಮರುಕ ಹುಟ್ಟಿದೆ. 

ಹೀಗೆ ಮಾಡಿಬಿಟ್ಟಿದ್ದಾಳೆ. ಅಯ್ಯೋ ! ಹಾಳು ಹುಡುಗಿ ! ನನ್ನ 

ಹತ್ತಿರಲೇ ತೆಗೆದುಕೊಳ್ಳಬಾರದಾಗಿತ್ತೆ? ಪೆಟ್ಟಿಗೆಯ ಬೀಗದ 

ಕೈಯಳೆರಡೂ ನಿನ್ನ ಹತ್ತಿರಲೇ ಇತ್ತಲ್ಲಾ ! ಎಲ್ಲಿ ? ಹೇಗೆ ತೆಗೆ 

ದುಕೊಳ್ಳುವುದು ? ನಾನು ಕೊಠಡಿಯಲ್ಲಿಯೇ ಕುಳಿತಿದ್ದೆನಲ್ಲ! 

ಹುಡುಗಿಗೆ ಹೀಗೆ ಗಂಡನಲ್ಲಿ ಇಷ್ಟು ಆಶೆ ಎಂದು ತಿಳಿದಿದ್ದರೆ 

ಕೊಟ್ಟು ಬಿಡುತ್ತಿದ್ದೆನಲ್ಲಾ" ಎಂದುಕೊಳ್ಳುತ್ತಿದ್ದನು. 


ಹುಟ್ಟಿದ ಯೋಚನೆಯು ಬಲಪಟ್ಟು ಸಿದ್ದಾಂತವಾಗುವುದಕ್ಕೆ

ಬಹಳ ಹೊತ್ತು ಬೇಕಾಗಿಲ್ಲ. ನಿರಾಧಾರವಾಗಿರುವಾಗಲ೦ತೂ 

ನಿರ್ಧಾರವಾಗುವುದು ಬಹುಬೇಗ. ಕೊನೆಗೆ ಹಾಗೆಯೇ ನಡೆದಿರ

ಬೇಕೆಂದು ಖಂಡಿತ ಮಾಡಿಕೊಂಡು, “ ದಫೇದಾರೆ ! ಕದ್ದವನು 

ನಾನಲ್ಲ. ಕಳ್ಳರು ಯಾರು ಎನ್ನುವುದು ಊಹಿಸಿದ್ದೇನೆ. ದಯ 

ವಿಟ್ಟು ನನ್ನನ್ನು ಬಿಡಿಸಿ ಬಿಡಿ. ಅವರ ರೂಪಾಯಿ ಅವರಿಗೆ 

ಕೊಟ್ಟು ಬಿಡುತ್ತೇನೆ. ತಮಗೂ ಏನಾದರೂ ಸಂಭಾವನೆ ಕೊಡು 

ತ್ತೇನೆ” ಎಂದನು. ಸಂಭಾವನೆ ಎನ್ನುತ್ತಲೇ ದಫೇದಾರಿಗೆ ಕಿವಿ 

ನೆಟ್ಟಗಾಯಿತು. " ಸಾಹೇಬರಿಗೆ ಅವರ ಹಣ ಅವರಿಗೆ ಬಂದ 

ಮೇಲೆ, ಇನ್ನೇನು? ತನಗೂ ಚೆನ್ನಾಗಿದೆ, ಇರಲಿ ?” ಎಂದುಕೊಂಡು 

"ಹಾಗಾದರೆ ಸಾಹೇಬರ ಹತ್ತಿರಲೇ ಈ ಮಾತು ಹೇಳುವಿರೋ ? " 

ಎಂದನು. ವೆಂಕಟರಮಣಯ್ಯನೂ ಒಪ್ಪಿಕೊಂಡನು. ಇಬ್ಬರೂ 

ನೇರವಾಗಿ ಹೋಗಿ ಸಾಹೇಬರನ್ನು ನೋಡಿದರು.



೬೨ 



ಸಾಹೇಬರ ಪರಿಚಯವು ವಾರುಪತ್ತೇದಾರ್ರಿಗೆ ಇಲ್ಲವಾದರೂ 

ಇವರ ಗುರುತು ಅವರಿಗೆ ಸಂಪೂರ್ಣವಾಗಿ ಉಂಟೆಂಬಂತೆ ತೋರಿತು. 

“ ಬನ್ನಿ ಕುಳಿತುಕೊಳ್ಳಿ" ಎಂದು ಒಂದು ಕುರ್ಚಿ ಕೊಟ್ಟು ಕೂರಿಸಿ 

ದರು. ದಫೇದಾರ್ರಿಗೆ ಸಂಕಟ " ಕದ್ದ ಕಳ್ಳನಿಗೆ ಕುರ್ಚಿ ಕೊಟ್ಟ 

ರಲ್ಲಾ!” ಎಂದು. 



ವೆಂಕಟರಮಣಯ್ಯನು ಕುಳಿತುಕೊಳ್ಳಲಿಲ್ಲ. ಕೈಕಟ್ಟಿಕೊಂಡು 

ವಿನಯದಿಂದ "ಸ್ವಾಮಿ! ಕ್ಷಮಿಸಬೇಕು. ತಮ್ಮಲ್ಲಿ ಹಣ ಕದ್ದ 

ವರು ಯಾರೆಂಬುದನ್ನು ನಾನ ಬಲ್ಲೆ. ಆದರೆ ಹೇಳಿಕೊಳ್ಳುವ 

ಹಾಗಿಲ್ಲ. ತಮ್ಮ ಹಣವನ್ನು ವಾಪಸು ತಮಗೆ ತಂದುಕೊಡು 

ತ್ತೇನೆ. ನನ್ನನ್ನು ಬಿಟ್ಟುಬಿಡುಂತೆ ಅಪ್ಪಣೆಯಾಗಬೇಕು" ಎಂದು  

ಕೇಳಿಕೊಂಡನು. ಸಾಹೇಬರಿಗೆ ಕುತೂಹಲವು ಹೆಚ್ಚಿ 

ಕದ್ದವರು ಯಾರು?" ಎಂದರು. ವೆಂಕಟರಮಣಯ್ಯನಿಗೆ 

ಕಷ್ಟಕ್ಕೆ ಬಂದಿತು. ಯತ್ನವಿಲ್ಲದೆ "ಸ್ವಾಮಿ! ಕದ್ದವಳು ನಮ್ಮ  

ಹುಡುಗಿ, ಗಂಡನಿಗಾಗಿ ಕದ್ದಿದ್ದಾಳೆ, ತಿಳಿಯದೆ ಮಾಡಿದ್ದಾಳೆ. 

ಕ್ಷಮಿಸಬೇಕು. ಇಲ್ಲವಾದರೆ ಮಾನ ಹೋಗುತ್ತದೆ ” ಎಂದನು.


ಸಾಬರ ಮುಖವು ಗಂಭೀರವಾಯಿತು. ''ಸುಂದರಾನೆ ?"

ಎ೦ದರು. ಪಾರುಪತ್ತೆಗಾರನು ಹೌದೆಂದರೂ, 'ಇವರಿಗೆ ಮಗಳ 

ಹೆಸರು ಹೇಗೆ ತಿಳಿಯಿತು?” ಎಂದು ಒಂದು ಪ್ರಶ್ನೆ ಹುಟ್ಟಿತು. 

ಆದರೆ ಆಫೀಸರ್ರು ! ಕೇಳುವುದು ಹೇಗೆ ? 


ಕೊನೆಗೆ ವೆಂಕಟರಮಣಯ್ಯನಿಗೆ ಬಂಧನ ಮೋಕ್ಷವಾಯಿತು. 

ಸಾಹೇಬರೇ ಸ್ವಂತವಾಗಿ ದಫೇದಾರರನ್ನು ಕರೆದು " ಇವರನ್ನು 

ಬಿಟ್ಟು ಬಿಡಿ" ಎಂದರು. ಆದರೂ ದಫೇದಾರ್ರು ತಮ್ಮ ಬಹು 

ಮಾನ ತಮಗೆ ಬರುವವರೆಗೂ ಬಿಡುವುದೆಲ್ಲಿ ? 



ದಾರಿಯಲ್ಲಿ ಕೃಷ್ಣಮೂರ್ತಿಯು ಸಿಕ್ಕಿದನು. ಮಾವನವ 

ರನ್ನು ಬಿಡಿಸುವ ಯತ್ನವು ಸಫಲವಾಗಲಿಲ್ಲ. ಕೊನೆಗೆ ತಾನೇ 



೬೩



ಸಾಹೇಬರ ಬಳಿಗೆ ಹೋದನು. ಅದರೆ ಅನನೊಡನೆ ಏನು ಹೇಳ 

ಬೇಕು? ಏನೂ ಹೇಳದೆ ಹೋದರೆ ಮಾವನನ್ನು ಬಡಿಸುವುದು 

ಹೇಗೆ? ಕೊನೆಗೆ ಏನಾದರೂ ಹೇಳಿಬಿಡುವೆನೆಂದುಕೊಂಡು ಅವರೆ 

ದುರಿಗೆ ಹೋಗಿ ನಿಂತನು. "ಯಾರು ನೀವು? "ಎಂಬ ಪ್ರಶ್ನೆಗೆ 

ಉತ್ತರವಾಗಿ " ನಾನು ವಾರುಪತ್ತೆಗಾರರ ಅಳಿಯ ಕೃಷ್ಣ 

ಮೂರ್ತಿ" ಎಂದನು ಸಾಹೇಬರಗೆ ಈ ಮೂರ್ತಿ ಯನ್ನು ನೋಡಲು 

ಆಶೆಯಿದ್ದರೂ, ಹೀಗೆ ತಟ್ಟನೆ ನೋಡಲು ಅವರು ಸಿದ್ಧರಾಗಿರಲಿಲ್ಲ. 

" ಅವಳ ಗಂಡನೇ ಇವನು?” ಮನಸ್ಸಿನ ಅಲ್ಲೋಲಕಲ್ಲೋಲ 

ವನ್ನು ಹೊರಗೆಡದೆ "ಏನು ಬಂದಿರಿ" ಎಂದರು; "ಸ್ವಾಮಿ! 

ನಮ್ಮ ಮಾವನವರು ತಮ್ಮಲ್ಲಿ ಹಣ ಕದ್ದರೆಂದು ಅವರನ್ನು 

ಪೋಲೀಸಿಗೆ ಕೊಟ್ಟದ್ದಿರಂತೆ ಕದ್ದವರು ಅವರಲ್ಲ. ಬೇರೆ. 

ಅವರನ್ನು ಬಿಡಿಸಿಬಿಡಿ" ಎಂದನು. ಮಾತು ಖಂಡಿತವಾಗಿದ್ದಿತು. 

ಮಾತಿನಲ್ಲಿ ವಿನಯವೂ ಧೈರ್ಯವೂ ಇದ್ದಿತು. "ಹೌದು. 

ಅವರೂ ಹಾಗೆಯೇ ಎ೦ದರು. ಆದರೆ ಕಳ್ಳರಾರು ಎ೦ಬುದು ತಿಳಿ 

ಯಬೇಕಲ್ಲಾ! ಎಂದರು. ಕೃಷ್ಣಮೂರ್ತಿಯು " ಕಳ್ಳನು

ತಮ್ಮೆದುರಿಗೆ ನಿಂತಿದ್ದಾನೆ ಕದ್ದವನು ನಾನು” ಎಂದನು. ಸಾಹೇ

ತಮ್ಮೆದುರಿಗೇ ನಿಂತಿದ್ದಾನೆ. ಕದ್ದವನು ನಾನು” ಎಂದನು. ಸಾಹೇ 

ಬರಿಗೆ ಅತ್ಯಾಶ್ಚರ್ಯವಾಯಿತು. ಕದ್ದ ಕಳ್ಳನು ತಾನೇ ಬಂದು 

ಹೇಳಿಕೊಳ್ಳುವುದುಂಟೆ? ಅಸತ್ಯದ ಮೂಟೆಯಾದ ಪ್ರಪಂಚದಲ್ಲಿ 

ಸತ್ಯವು ಕಣ್ಣಿಗೆ ಬಿದ್ದರೆ ನಂಬುವುದು ಸಾಧ್ಯವೆ? 


ಆಫೀಸರು " ಇರಲಾರದು. ನಾನು ರಾತ್ರಿಯಲ್ಲಾ ಇಲ್ಲೇ  

ಇದ್ದೆ. ಅಲ್ಲದೆ ಚೂರಿಯು ನಮ್ಮ ಆ- ನಿಮ್ಮ ಮಾನನವರವದು ?? 

ಎಂದರು. 


ಕೃಷ್ಣಮೂರ್ತಿಯು ಒಂದು ಗಳಿಗೆ ಹಿಂದು ಮುಂದೆ ನೋಡಿ 

ದನು. ಒಂದು ಗಳಿಗೆ ಅಸ್ಥಿರನಾಗಿದ್ದು ಮತ್ತು ಔಡುಕಚ್ಚಿದ ದೃಢ 

ಮನಸ್ಸಿನಿಂದ ಹೇಳಿದನು. " ಹೌದು! ಚೂರಿಯು ಅವರದು 

ಆದರೆ ಕದ್ದವನು ನಾನೇ! ತಾವು ನಾಯಿ: ಕಟ್ಟುವ ವುದಕ್ಕೆ ಹೊರಗೆ 



೬೪ 



ಹೋದಿರಿ. ನಾನು ಒಳಗೆ ಬಂದೆ. ನಾನು ಮತ್ತೆ ಹೊರಗೆ 

ಹೋಗುವುದರೊಳಗಾಗಿ ತಾವು ಬಂದುಬಿಟ್ಟಿರಿ. ಕೊನೆಗೆ ನಾನು 

ಓಡಿಯೋಗುವುದಕ್ಕೆ ಅವಕಾಶವಾದಾಗ ಅವಸರದಲ್ಲಿ ಚೂರಿಯನ್ನು 

ಮರೆತ ಬಿಟ್ಟೆಎಂದನು, 


"ನೀವು ಓಡಿಹೋದಾಗ ಎಷ್ಟು ಹೊತ್ತು?`` 


"ಸುಮಾರು ನಾಲ್ಕು ಗಂಟೆ?” 



ಆಫೀಸರಿಗೆ ತಲೆಯಮೇಲೆಸಿಡಿಲುಬಿದ್ದಂತಾಯಿತು. ನಾಲಿಗೆ,  

ಗಂಟಲು, ಎಲ್ಲಾಒಣಗಿಹೋಯಿತು ಬಹುಕಷ್ಟದಿಂದ 'ನಿರ್ದ್ರವವಾದ 

ಬರಿಯ ಧ್ವನಿಯಿಂದ, "ಹಾಗಾದರೆ..........." ಎಂದರು. 

ಕೃಷ್ಟಮೂರ್ತಿಯು ಕೂಡಲೇ ಅದೇ ಗಂಭೀರ, ಸ್ಥಿರ, ಅಚಲಿತ 

ವಾದ ಮುಖ ಮುದ್ರಿಯಿಂದ "ಹೌದು. ನಾನು ನಡೆದುದನ್ನೆಲ್ಲಾ 

ಬಲ್ಲೆ, ಇಲ್ಲಿಯೇ ಇದೇ ಮಂಚದ ಕೆಳೆಗೆ ಕುಳಿತಿದ್ದೆ. ತಾವು 

ನೆಲದಮೇಲೆ ಬಿದ್ದಾಗ ತಮ್ಮನ್ನು ಎತ್ತು ಒವುದಕ್ಕೆ ಅವಳು... 

ಆ... ಆಕೆಯು ಬಗ್ಗಿದಾಗ ನನ್ನನ್ನು ಕಾಣಬಹುದಿಂದಿದ್ದೆ. ಕಾಣ 

ಲಿಲ್ಲ. ” ಕೊನೆಗೆ ಗಂಟಲು ಒಣಗಿತು. ಒಮ್ಮೆ ನೀರು ನುಂಗಿ ಮತ್ತೆ 

ಹೇಳಿದನು. "ದೀಪವಾರಿದಾಗ ಓಡಿಹೋದೆ” ಎಂದನು. 


ಆಫೀಸರಿಗೆ ತಲೆ ತಿರುಗಿತು. ಕಣ್ಣು ಕತ್ತಲೆಯಾಯಿತು. 

ನೆಲವು ಬಾಯಿಬಿಟ್ಟು ನುಂಗಿಬಿಟ್ಟಿದ್ದರೆ ಅವರಿಗೆ ಎಷ್ಟೋ 

ಸಂತೋಷವಾಗುತಿದ್ದಿತು. 


ಸುಮಾರು ಅರೆಗಂಟೆ ಹೊತ್ತು ಒಬ್ಬರೂ ಮಾತನಾಡಲಿಲ್ಲ. 

ಇಬ್ಬರೂ ತಲೆ ತಗ್ಗಿಸಿದ್ದರು. ಒಬ್ಬರಿಗೆ ಕಣ್ಣಿನಲ್ಲಿ ನೀರು ಬರುವ 

ಸ್ಥಿತಿ ಇದ್ದರೂ ದೇಹದಲ್ಲಿ ದ್ರವವಿಲ್ಲದುದರಿಂದ ಕಣ್ಣಿನಲ್ಲಿ ನೀರು 

ಬರುತ್ತಿರಲಿಲ್ಲ. ಮತ್ತೊಬ್ಬರಿಗೆ ಹೃದಯವೆಲ್ಲ ಕರಗಿ ಕಣ್ಣಿನಲ್ಲಿ 

ನೀರಾಗಿ ಹರಿಯುತಿದ್ದಿತು. 



೬೫ 



ಕೊನೆಗೆ ರಾಮುವು " ನೀನೆ ನನಗೆ ಅಪರಿಚಿತರು. ಆದರೂ 

ನಿಮಗೆ ತಿಳಿಯದ ವಿಷಯವಲ್ಲ. ನಿಮ್ಮಲ್ಲಿ ನನ್ನದೊಂದು ಬೇಡಿಕೆ 

ಯುಂಟು. ಸಲ್ಲಿಸುವಿರಾ? ಎಂದು ಬೇಡಿಕೊಂಡನು. ಮಾತಿ 

ನಲ್ಲಿ ದೈನ್ಯವು ಮನೆಮಾಡಿದ್ದಿತು. ಹೃದಯವು ಕರಗಿ ಹೋಗುವಂ 

ತಿರುವ ಆ ಪ್ರಾರ್ಥನೆಯನ್ನು ಕೃಷ್ಣಮೂರ್ತಯು ಸಲ್ಲಿಸುವುದಿಲ್ಲ 

ವೆಂಬುದೆಂತು? " ಅಪ್ಪಣೆಯಾಗಲಿ" ಎಂದನು. ರಾಮುವು "ಆ 

ಹುಡುಗಿಯು ನನ್ನ ಪ್ರಾಣ. ಅವಳನ್ನು ಗೋಳುಗುಟ್ಟಿಸಬೇಡಿ.  

ನೀವು ಕೇಳಿದುದದನ್ನು ಕೊಡುವೆನು. ಹೇಳಿದುದನ್ನು ಮಾಡು 

ವೆನು. ನಿಮ್ಮ ದಾಸಾನುದಾಸನಾಗುವೆನು. ಇಷ್ಟು ಮಾಡಲಾ 

ರಿರಾ? ಎಂದನು ಕೃಷ್ಣಮೂರ್ತಿಯು ನೀರವವಾಗಿ ಅಳುತ್ತಿದ್ದ  

ವನು ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟನು. ಕೊನೆಣಗೆ ಬಿಕ್ಕಳಿಕೆಯ 

ಮಧ್ಯದಲ್ಲಿ "ಸ್ವಾಮಿ! ತಾವೆಂದುದು ನಿಜ. ಅಕೆಯು ದಿವ್ಯ 

ಧಾಮ ದೇವಿ. ನಾನು ನರಲೋಕದ ಪಶು. ಸ್ವರ್ಗದ ದೇವಿ 

ಯೆಂದು ತಿಳಿಯದೆ ದನವಾಗಿದ್ದೆ. ಇನ್ನು ಮುಂದೆ ಹಗಲಿರುಳೂ  

ಆಕೆಯ ಸುಖಕ್ಕಾಗಿ ಬದುಕಬೇಕೆಂದಿರುವೆನು. ಸರ್ವಶಕ್ತಿ  

ಯಿಂದಲೂ ಆಕೆಯನ್ನಾರಾಧಿಸುವೆನು. ನನ್ನ ಆಶೆಯು ಅಫಲವಾ 

ಗುವಂತೆ ತಾವು ಆಶೀರ್ವಾದ ಮಾಡಿ" ಎಂದು ರಾಮಸ್ವಾಮಿಯ  

ಕಾಲಿಗೆ ಬಿದ್ದನು. 


ಆ ವೇಳೆಗೆ ಸರಿಯಾಗಿ ಸರಿಯಾಗಿ ಪಾರುಪತ್ತೆಗಾರರು ಬ೦ದರು. ಅಳಿ 

ಯನು ಆಫೀಸರ ಪಾದಮೂಲದಲ್ಲಿ ಒಮ್ಮೆ ಬಿದ್ದುದನ್ನು ಕ೦ಡು, 

ಅವರಿಗೆ ತಮ್ಮ ಊಹೆಯೇ ಸರಿಯೆನ್ನಿಸಿತು. ಮನೆಗೆ ಹೋಗಿ 

ಮಗಳನ್ನು ಕೇಳಿದಾಗ, ಅವಳು ಕಣ್ಣಿರಿಟ್ಟಾಗ, ಹುಟ್ಟಿದ್ದ ಸಂಶ 

ಯವು ದೂರವಾಯಿತು. ಹಮೊರಹವೆಂದು ವ್ಯಥೆಪಟ್ಟುಕೊಳ್ಳುತ್ತಾ, 

ಪಂಚೆಯ ಸೆರಗಿನಲ್ಲಿ ಗಂಟುಹಾಕಿದ್ದ ಹಣವನ್ನು ಬಿಚ್ಚಿ ಎಣಿಸಿ, 

ಆಫೀಸರ ಮು೦ದೆ ನೆಲದ ಮೇಲಿಟ್ಟು - ಮೇಜಿನ ಮೇಲಿಡುವುದಕ್ಕೆ 

ಹೆದರಿಕೆ ಕೈ ಮುಗಿದುಕೊಂಡು " ಮಹಾಸ್ವಾಮಿ ! ಹಣವನ್ನು 

ಒಪ್ಪಿಸಿಕೊಳ್ಳಬೇಕು.” ಎಂದರು.


೬೬


ಆಫೀಸರು “ ಹಣವು ತಮ್ಮಲ್ಲೇ ಇರಲಿ. ಇಟ್ಟುಕೊಂಡಿರಿ?”

ಎ೦ದರು.


ವೆಂಕಟರಮಣಯ್ಯನವರಿಗೆ ಹಣವು ಉಳಿಯಿತೆಂದು ಮರಣ

ಸಂತೋಷವಾಯಿತು.

* * *   *

ಮರುದಿನ ವೆಂಕಟರಮಣಯ್ಯನವರ ಮನೆಯಲ್ಲಿ ಔತಣ. 

ಮುದುಕನಿಗೆ ಅತ್ಯಾಶ್ಚರ್ಯ ಗಂಡಹೆಂಡಿರು ಒಬ್ಬರೊಬ್ಬರು ಸರಿ 

ಯಾಗಿ ಮುಖಕೊಟ್ಟು ಮಾತನಾಡಿದುದನ್ನೇ ಆತನದುವರೆಗೆ ಕಂಡಿ 

ರಲಿಲ್ಲ. ಇಂದು ಇಬ್ಬರೂ ಅತ್ಯಂತ ಆದರದಿಂದ, ಬಲು ಸಂಭ್ರಮ 

ದಿಂದ ಓಡಾಡುತ್ತಿದ್ದಾರೆ.


ಊಟ ಮಾಡುವಾಗ ಸುಂದರಿಯು " ಅಡಿಗೆ ಹೇಗಿದೆ ? 

ರಾಮೂ!” ಎಂದಳು. ರಾಮುವೂ “ ನೀನು ಮಾಡುವುದು ಯಾವು 

ದು ಚನ್ನಾಗಿರುವುದಿಲ್ಲವಮ್ಮಾ ! ?” ಎಂದನು ವೆಂಕಟರಮಣಯ್ಯ 

ನಿಗೆ ಕಣ್ಣು ಅರಳಿತು, ಹಾಗಾದರೆ, ಸಾಹೇಬರು ರಾಮೂನೆ ? 

ಅದಕ್ಕೆ ಹಣವನ್ನು ಹಿಂತಿರುಗಿ ಕೊಟ್ಟದು ?


ಕೊನೆಗೆ ಮೂವರೂ ಸೇರಿದರು. ಅಡಕೆಲೆಯನ್ನು ಹಾಕಿ 

ಕೊಳ್ಳುತ್ತಾ ಆಮಾತು ಈ ಮಾತು ಬಂದು ರಾಮವು “ ಏನೋಪ್ಪ! 

ಏನಾದರೂ ಆಗಲಿ ಸುಂದರ ಅ೦ತಹ ತಾಯಿ ಇರಬೇಕಪ್ಪ. 

ಜನ್ಮ ಜನ್ಮಾಂತರಕ್ಕೂ ಇವಳೇ ತಾಯಿಯಾಗಲಪ್ಪ! ” ಎಂದನು. ಕೃಷ್ಣ ಮೂರ್ತಿಯು “ ನನಗೂ ಇಂತಹವಳೇ ಹೆಂಡತಿಯಾಗಲಿ ಎನ್ನಿಸು 

ತ್ತದೆ. ಆದರೆ ಒಂದು ಮಾತ್ರ ಕಷ್ಟ ಆಕೆಯು ಇನ್ನೊಬ್ಬರಿಗೆ ಮುತ್ತು 

ಕೊಡುವುದನ್ನು ನೋಡುವುದು ಮಾತ್ರ........?” ಎಂದನು.


ರಾಮ ಸುಂದರಿಯರು ಮುಖವನ್ನು ತಗ್ಗಿಸಿದರು. ಕೃಷ್ಣ 

ಮೂರ್ತಿಗೂ ನಾಚಿಕೆಯಾಯಿತು.


೬೭


ಸುಂದರಿಯು ಮನದಲ್ಲಿಯೇ “ ಮನವೊಪ್ಪಿದವನನ್ನು ಮದು 

ವೆಯಾಗುವ ಭಾಗ್ಯವು ನನ್ನದಾಗಲಿ ” ಎಂದುಕೊ೦ಡಳು.

--------

ಉಪಸಂಹಾರ,

ವೆಂಕಟರಮಣಯ್ಯನು ಈಗ ಛತ್ರದಲ್ಲಿಲ್ಲ. ಮೈಸೂರಿನಲ್ಲಿ 

ದ್ದಾನೆ. ಗಂಡಹೆಂಡಿರು ಬಹಳ ಅನುಕೂಲರಾಗಿದ್ದಾರೆಂದು ಮೊನ್ನೆ 

ಯಾರೋ ಹೇಳಿದರು. ರಾಮಸ್ವಾಮಿಗೆ ಮದುವೆಯಂತೆ.


ಸಂಪೂರ್ಣ. 

=======================================


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ