https://archive.org/stream/dli.osmania.4374
ಸ್ವಪ್ನಜೀವಿ1
‘A mind not to be changed by place or time,
.......................in itself
Can make a Heaven of Hell, a Hell of Heaven.
— MILTON.
ನೆನ್ನೆ ಮಧ್ಯಾಹ್ನ ಇಂಗ್ಲೀಷು ಮಾಸಪತ್ರಿಕೆಯೊಂದರಲ್ಲಿ ಒಂದು ಕಥೆ
ಯನ್ನು ಓದಿದೆ. ಅದರ ಹೆಸರು “ ಬೆಳದಿಂಗಳು?' ಎಂದು. ಅದರಲ್ಲಿ
ಬೆಳದಿಂಗಳಿಗೂ ಮಾನವನ ಜೀವನಕ್ಕೂ ಒಂದು ಅತಿ ಸೊಗಸಾದ ಸಂಬಂಧ
ವನ್ನು ಕಲ್ಪಸಿ, ಆ ಮೂಲಕ ಅದಕ್ಕೊಂದು ಬೆಲೆಯನ್ನು ಕಟ್ಟುವ ಪ್ರಯತ್ನ
ನಡೆದಿತ್ತು. ಕಥೆಯನ್ನು ಓದಿ ಮುಗಿಸಿದ ಮೇಲೆ ಬೆಳದಿಂಗಳ ವಿಷಯ
ವಾಗಿ ನನಗೊಂದು ಹೊಸ ದೃಷ್ಟಿ ಮೂಡಿತು. ಅದೃಷ್ಟವಶಾತ್ ನೆನ್ನೆ
ಪೂರ್ಣಿಮೆ. ದೃಷ್ಟಿ ಹೊಸದಾಗಿರುವಾಗಲೇ ಚಂದ್ರಿಕೆಯ ಸಾಂದ್ರತೆಯಲ್ಲಿ
ನುಗ್ಗಿ, ಕಥೆಯ ಬೆಳದಿಂಗಳ ಬೆಲೆಯನ್ನು ನಿಜವಾದ ಬೆಂದಿಂಗಳು ಕಾಣ
ಬೇಕೆಂದು ಹವಣಿಸಿ, ಸಾಯಂಕಾಲ ಸುಮಾರು ಏಳು ಗಂಟೆ ಹೊತ್ತಿಗೆ
ನಿಷತ್‌ಬಾಗಿಗೆ*" ಹೋದೆ. ಅಲ್ಲಿ ಕುಳಿತುಕೊಳ್ಳಲು ಒಂದು ಬೆಂಚನ್ನು
ಹುಡುಕಬೇಕಾಯಿತು, ನಾನು ಅಲ್ಲಿಗೆ ಹೋದರೆ ಸಾಧಾರಣವಾಗಿ ಹಚ್ಚ
ನೆಯ ಹುಲ್ಲುಮಕಮಲ್ಲಿನ ಮೇಲೆ ಉರುಳಿಕೊಳ್ಳುವುದೇ ವಾಡಿಕೆ. ಆದರೆ
ನೆನ್ನೆ ಇಬ್ಬನಿ ಸುರಿದು ಹುಲು ಸ್ವಲ್ಪ ಒದ್ದೆಯಾಗಿತ್ತು. ಆದುದರಿಂದ
ಅಲ್ಲಿದ್ದ ಬೆಂಚುಗಳ ಮೇಲೆಲ್ಲಾ ಜನರು ಕುಳಿತಿದ್ದರು. ನಾನು ಸ್ವಲ್ಪ
ಹೊತ್ತು ಅಲ್ಲಿ ಇಲ್ಲಿ ಸುಳಿದಾಡುತ್ತಿರಲು, ಉತ್ತರದ ಮೂಲೆಯಲ್ಲಿ ಸ್ವಲ್ಪ
ಪತ್ಯೇಕವಾಗಿದ ಒಂದು ಬೆಂಚಿನ ಮೇಲೆ ಕುಳಿತಿದ ಪ್ರಾಯದ ದಂಪತಿ
ಗಳಿಬ್ಬರು ಎದ್ದು ಹೊರಟರು. ನಾನು ಕೂಡಲೆ ಹೋಗಿ ಆ ಬೆಂಚಿನ ಮೇ
ಕುಳಿತೆ. ಕುಳಿತು, ಮಧ್ಯಾಹ್ನ ಓದಿದ ಕಥೆಯ ಬೆಳದಿಂಗಳ ವರ್ಣನೆ
1 ಡಚ್ ಕಥೆಗಾರನಾದ ಲೂಯಿ ಕೌಸೆರಸ"ನ ಒಂದು ಕಥೆಯ ರೂಪಾಂತರ
*ಮೈಸೂರು ನಗರದಲ್ಲೊ೦ದು ಸೊಗಸಸಾದ ಉದ್ಯಾನವನ
೨ -------------------------------------------------------
ಮಾತುಗಳನ್ನು ಒಂದೊಂದಾಗಿ ನೆನಪಿಗೆ ತಂದುಕೊಳ್ಳುತ್ತ. ಆ ಮಾತುಗಳ
ಬಣ್ಣಗನಡಿಯ ಮೂಲಕ ಜಗತ್ತನ್ನೆ ಆವರಿಸಿದ್ದ ಬೆಳದಿಂಗಳನ್ನು ನೋಡುತ್ತ
ನೋಡುತ್ತ ಮೆನುರೆಯುತ್ತಿ ಸ. ಸುಮಾರು ಕಾಲು ಗಂಟೆ ಹೀಗಿದ್ದೆನೆಂದು
ಕಾಣುತ್ತದೆ. ಆಗ ಒಬ್ಬ ಮನುಷ್ಯನು ಬಂದು ನಾನು ಕುಳಿತಿದ್ದ ಬೆಂಚಿನ
ಒಂದು ತುದಿಯ. ಕುಳಿತುಕೊಂಡ, ಅವನು ಬಂದು ಅಲ್ಲಿ ಕುಳಿತಿದ್ದ
ರಿಂದ ನನಗೆ ಸುಖವಾದ ಕನಸಿನಿಂದ ಹೊಡೆದೆಬ್ಬಿಸಿದಂತಾಯಿತು. ಎಚ್ಚತ್ತು
ತಿರುಗಿ ನೋಡಿಸಿ. ಮನುಷ್ಯ ಸ್ವಲ್ಪ ವಯಸ್ಸಾದ ತಿರುಕನ ಹಾಗೆ ಕಂಡ.
ಅವನು ಹಾಕಿಕೊಂಡಿದ್ದ ಅಂಗಿ, ಉಟ್ಟುಕೊಂಡಿದ್ದ ಪಂಚೆ ಹರಕು ಹರ
ಕಾಗಿ ತೀರಾ ಮಾಸಿಹೋಗಿತ್ತು. ಹೆಗಲ ಮೇಲೊಂದು ವಸ್ತ್ರವಿತ್ತು ;
ಅದೂ ಹರಕು ಚಿಂದಿ. ತಲೆಯಲ್ಲಿ ತುಂಬಾ ನರೆತ ಕೂದಲು ಕುರುಚಲು
ಕುರುಚಲಾಗಿ ಈಚಲ ಗರಿಯಂತೆ ಕೆದರಿಕೊಂಡು ಹಿತವಾಗಿ ಬೀಸುತ್ತಿದ್ದ
ಮೆಲುಗಾಳಯ ಆಡುತ್ತಿತ್ತು. ಮುಖದ ಮೇಲೆ ಹೇರಳವಾದ ಗಡ್ಡ
ಮೀಸೆಗಳು. ನಾಟಕದಲ್ಲಿ ವೃದ್ಧ ಖುಷಿಯ ವೇಷಕ್ಕೆ ಹೇಳಿ ಮಾಡಿಸಿದ
ಗಿತ್ತು ಅವನ ರೂಪು. ಆತ ಬಂದು ಅಲ್ಲಿ ಕುಳಿತುದು ಆ ಹೊತ್ತಿನಲ್ಲಿ
ನನಗೆ ಅಷ್ಟೇನೂ ಹಿತವಾಗಲಿಲ್ಲ ಆದುದರಿಂದ ಆ ಸ್ಥಳವನ್ನು ಬಿಟ್ಟು
ಹೊರಡಬೇಕೆಂದು ನಿರ್ಧರಿಸಿದೆ. ಕೂಡಲೇ ಎದ್ದುಬಿಟ್ಟರೆ ಅವನು ನೊಂದು
ಕೊಂಡಾನೆಂದು ಶಂಕಿಸಿ, ಒಂದೆರಡು ನಿಮಿಷ ಬಿಟ್ಟು ಏಳುವುದೆಂದು ಅಲ್ಲೇ
ಕುಳಿತೆ. ಆಗ ಅವನು ನನ್ನ ಕಡೆ ತಿರುಗಿ ಮಾತನಾಡಿದ:
" ಅಯ್ಯಾ, ನೀವು ಯಾರೆಂಬುದನ್ನು ನಾನು ಬಲ್ಲೆ. ನೀವೊಬ್ಬ ಕವಿ
ಗಳು-ಮಂಗಳೂರು ಕಡೆಯವರು-ನನಗೆ ಗೊತ್ತು.”
ನಾನು ಅವನ ಮುಖವನ್ನು ನೋಡಿದೆ. ಗಡ್ಡ ಮೀಸೆಗಳ ಪೊದೆಯ
ಹಿಂದೆ ಅರಳಿದ ಅವನ ಮುಗುಳು ನಗೆಯಿಂದ ನನ್ನ ಮನಸ್ಸು ಅವನ ವಿಷಯ
ದಲ್ಲಿ ಇದ್ದಕ್ಕಿದ್ದ ಹಾಗೆಯೇ ಮೃದುವಾಯಿತು. ಎದ್ದು ಹೋಗಬೇಕೆಂಬ
ಯೋಚನೆಯನ್ನು ಬಿಟ್ಟು ಅಲ್ಲಿಯೇ ಕುಳಿತೆ. ನನ್ನ ಊರಿನ ವಿಷಯವಾಗಿ
ಅವನಿಗಿದ್ದ ತಪ್ಪು ಅಭಿಪ್ರಾಯವನ್ನು ತಿದ್ದದೆ,
"ಹೌದು, ನಾನೊಬ್ಬ ಗ್ರಂಥಕಾರ-ಕಥೆಗಾರ. ನೀವು ನನ್ನನ್ನು
ಬಲ್ಲಿರಾ?”--- ಎಂದು ಕೇಳಿದೆ.
೩------------------------------------------------------------
"ಹೌದು, ಬಲ್ಲೆ. ನೀವು ಕವಿಯೆಂಬುದನ್ನು ಚೆನ್ನಾಗಿ ಬಲ್ಲೆ.”
- ಎಂದು ನನ್ನನ್ನೇ ತಿದ್ದಿ, ಆಮೇಲೆ ತಗ್ಗಿದ
“ನಾನೂ ಒಬ್ಬ ಕವಿ" ಎಂದು ಸೇರಿಸಿದ.
ಮುಂದೆ ಮಾತಿನ ಸರಣಿ ಹೇಗಿರುತ್ತದೆಯೆಂದು ಒಂದು ಕ್ಷಣದಲ್ಲಿ
ಊಹಿಸಿದೆ. ಕಷ್ಟಪರಂಪರಿಗಳ ವರ್ಣನೆ; ಕಲೆ ಪ್ರತಿಭೆ ಇತ್ಯಾದಿಗಳಿಗೆ
ಈ ಕಾಲದಲ್ಲಿ ಬೆಲೆಯೇ ಇಲ್ಲದಿರುವಿಕೆ; ಬದುಕಿನ ಭಯಂಕರ ಹೋರಾಟ-
ಆಮೇಲೆ-ಮೂರು ದಿನಗಳಿಂದ ಉಪವಾಸ ಮಾಡಿರುವುದು -.ಏನಾದರೂ
ಸಹಾಯದ ಯಾಚನೆ. ಕೊನೆಯಲ್ಲಿ ನಾನು ಜೇಬಿನಿಂದ ಎರಡಾಣೆ
ತೆಗೆದು, ಕೊಡಬಹುದೆಂದು ತೋರಿತು. ಆದರೂ ಕುತೂಹಲವಿಂದ ಆ
ವ್ಯಕ್ತಿಯನ್ನು ಆ ಆಮೂಲಾಗ್ರ ವಾಗಿ ನೋಡಿದೆ. ಅಪೂರ್ವ ವಾದ ಇಂತಹ
ಅಪರಿಚಿತ ವೃಕ್ತಿಗಳೆಲ್ಲರೂ ನನ್ನಲ್ಲಿ ಕುತೂಹಲವನ್ನೆಬ್ಬಿಸುತ್ತಾರೆ. ನೋಡಿ
ದ್ದರಲ್ಲಿ ಆತನ ವಯಸ್ಸು ಸುಮಾರು ಅರುವತ್ತು ವರ್ಷಗಳಿರುವಂತೆ ತೋರಿ
ದರೂ ಆ ಕಪ್ಪಾದ-ಗುಳಿಬಿದ್ದ ಕಣ್ಣುಗಳಲಿ ಇನ್ನೂ ಪ್ರಾಯ ಸುಳಿಯು
ತ್ತಿದ್ದಂತೆ ಭಾಸವಾಯಿತು. ಮತ್ತೆ, ಆಮುಗುಳುನಗೆ!- ಬೆಣಚುಗಲ್ಲನ್ನೂ
ಬೆಣ್ಣೆಯಂತೆ ಮಾಡುವ-ಗಡ್ಡ ಮೀಸೆಗಳಿಂದ ತೂರಿ ಬರುತ್ತಿದ್ದ ಮುಗುಳು
ನಗೆ !- ಅದರಲ್ಲೂ ಪ್ರಾಯವಿತ್ತು. ಅವನ ಕೈಗಳೂ, ಬೆರಳುಗಳೂ, ಕೂಲಿ
ಯವನ ಅಥವಾ ಭಿಕ್ಷುಕನ ಕೈ-ಬೆರಳುಗಳಂತೆ ಒರಟಾಗಿರದೆ, ಕಲೆಯ
ಬಲೆಗಳನ್ನು ನೇಯುವುದರಲ್ಲಿ ಪಳಗಿದ ಕವಿಯ ಅಥವಾ ಚಿತ್ರಶಿಲ್ಪಿಯ
ಕೈ-ಬೆರಳುಗಳಂತೆ ನಯವಾಗಿದ್ದುವು. ಅವನು, ತಾನೂ ಒಬ್ಬ ಕನಿ ಎಂದು
ಹೇಳಿಕೊಂಡುದಕ್ಕೆ ಉತ್ತರವಾಗಿ ನಾನು,
"ಉ-ಹ್ಞೂ! ಹಾಗೆಯೇ?......ಬಹಳ ಸಂತೋಷ. ನೀವೂ ಬರೆ
ಯುತ್ತೀರೋ?'' ಎಂದು ಸಹೃದಯ ವಾಣಿಯಿಂದ ಕೇಳಿದೆ
" ಇಲ್ಲ''-ಎಂದು ಮುಗುಳು ನಗೆ ನಗುತ್ತ " ಇಲ್ಲ, ನಾನು ಬರೆಯುವ
ಕವಿಯಲ್ಲ-ಆ ಪದ್ದತಿಯೇ ನನ್ನಲ್ಲಿಲ್ಲ. ಒಂದಕ್ಷರವನ್ನೂ ಬರೆದಿಲ್ಲ. ನನಗೆ
ಬರೆಯಲು ಸಾಧ್ಯವೂ ಇಲ್ಲ. ಪದ್ಯ ಹಾಗಿರಲಿ, ಒಂದು ಸಾಲು ಗದ್ಯ
ವನ್ನು ಬರೆಯುವುದೂ ನನ್ನಿಂದ ಸಾಧ್ಯವಿಲ್ಲ. -ಇಷ್ಟಾದರೂ ನಾನೊಬ್ಬ
ಕವಿ ನಾನು ಕವಿಯೆಂಬುದರ ಅನುಭವ ನನಗೆ ನಿರಂತರವಾಗಿಯೂ
೪ -----------------------------------------------------------
ಇದೆ ಹೇಗೆ ಎನ್ನುವಿರೋ? ಹೇಳುತ್ತೇನೆ ಕೇಳಿ, ನನ್ನ ಬದುಕು
ಸಂಪೂರ್ಣವಾಗಿ ನನ್ನ ಕಲ್ಪನೆಯಲ್ಲಿ. ಅದನ್ನು ಬಿಟ್ಟ ನನ್ನ ಬಾಳು ಬಟ್ಟ
ಬಯಲಿಗಿಂತ ಶೂನ್ಯ.”
--ಎಂದು ನನ್ನನ್ನೇ ದಿಟ್ಟಿಸಿ ನೋಡತೊಡಗಿದರು. ನಾನೂ ಅವನ
ಮುಖವನ್ನೇ ನೋಡುತ್ತ, ಏನೂ ಹೇಳದೆ ನನ್ನ ಎಚ್ಚರಿಕೆಯಲ್ಲಿ ನಾನಿದ್ದೆ.
ಬುದ್ದಿ ವಿಕಲ್ಪವಾದವರೆ ವಿಷಯದಲ್ಲಿ ನನಗೆ ಸ್ವಾಭಾವಿಕವಾಗಿಯೇ ಸ್ವಲ್ಪ
ಭಯ. ಸಾಲದುದಕ್ಕೆ ನೆನ್ನೆ ಪೂರ್ಣಿಮೆ! ಹುಚ್ಛು ಕೆರಳುವ ದಿನ!
" ಹೌದು ನಾನು ಜೀವಿಸುವುದು ಸಂಪೂರ್ಣವಾಗಿ ನನ್ನ ಕಲ್ಪನಾ
ರಾಜ್ಯದಲ್ಲಿ ಎಂದು ಮತ್ತೊಮ್ಮೆ ಒತ್ತಿ ಹೇಳಿದ.
ಪುನಃ ಮುಗುಳು ನಗೆ ನಗುತ್ತ, ಸಹಾನುಭೂತಿಪೂರ್ಣವಾದ ಕಣ್ಣುಗ
ಳಿಂದ ನನ್ನನ್ನು ನೋಡತೊಡಗಿದನು. ಆ ನೋಟದಲ್ಲಿ, ನಾನವನ ಮಾತಿ
ನರ್ಥವನ್ನು ಗ್ರಹಿಸಿದೆನೆಂಬ ನಂಬಿಕೆ ತೋರಿತು.
ನನಗೇನೋ ದಿಗ್ಭ್ರಮೆಯಾಗಿ-ಮಂಕು ಕವಿದು-ಏನು ಉತ್ತರ ಹೇಳ
ಬೇಕೋ ತೋರಲಿಲ್ಲ. ಅವನಿಗೆ ಉತ್ತರ ಹೇಳುವ ಬದಲು ಅಲ್ಲಿಂದ ಎದ್ದು
ಇನ್ನೆಲ್ಲಿಯಾದರೂ ಹೋಗಿ ಕುಳಿತು ಬೆಳದಿಂಗಳಲ್ಲಿ ಕರಗಿಹೋಗೋಣವೆನ್ನಿ
ಸಿತು. ಆದರೆ ಅವನನ್ನು ನೋಯಿಸಲು ಮನಸ್ಸು ಬಾರದೆ ಅಲ್ಲೇ ಕುಳಿತೆ.
ಅವನ ಕಡೆ ಕನಿಕರನಿಂದ ನೋಡಿ, ಅವನ ಮಾತುಗಳನ್ನು ಅರ್ಥಮಾಡಿ
ಕೊಂಡೆವನಂತೆ ಮುಗುಳು ನಗೆ ನಕ್ಕೆ. ಅವನು,
“ ನೋಡಿ, ಯಾರಿಗೆ ಆ ರೀತಿಯ ಜೀವನ ಸಾಧ್ಯವೋ ಅವರು ಅತ್ಯಂತ
ಸುಖಿಗಳು. ಈಗ ನನ್ನನ್ನು ನೋಡಿ, ನಾನು ಬಹಳ ಸುಖವಾಗಿದ್ದೇನೆ "
-ಎಂದು ಮಾತು ಮುಂದುವರಿಸಿದ.
ಆಗಲೂ ಮೌನವಾಗಿದ್ದೆ. ಏನಾದರೂ ಒಂದು ಮಾತಿನಿಂದ, ಯಾವು
ದಾದರೂ ಒಂದು ನೋಟದಿಂದ ಅವನಿಗೆಲ್ಲಿ ನೋವನ್ನುಂಟುಮಾಡುವೆನೋ
ಎಂದು ಭಯವಾಗಿ, ಒಂದು ಮಾತನ್ನೂ ಆಡದೆ, ಆದಷ್ಟು ಕನಿಕರದ ದೃಷ್ಟಿ
ಯಿಂದ ಅವನನ್ನೇ ನೋಡೆತೊಡಗಿದೆ.
" ಅಯ್ಯಾ, ನಿಜವಾಗಿ ನನ್ನ ಸುಖ ಅನಂತವಾದುದು”
-ಎಂದು ಪುನಃ ಹೇಳಿದ.
೫------------------------------------------------------------------
ನಾನು ಮೌನವನ್ನು ಬಿಡಲಿಲ್ಲ. ತನ್ನ ಪಕ್ಷನನ್ನು ಸಮರ್ಥಿಸಿ ನಾನ
ದನ್ನು ಒಪ್ಪಿಕೊಳ್ಳುವಂತೆ ಪುಸಲಾಯಿಸುವ ಧ್ವನಿಯಲ್ಲಿ ಮಾತು ಮುಂದು
ವರಿಸಿದ :
“ ನಿಜವಾಗಿ ಸುಖವಾಗಿರುವವರು ಬಹಳ ವಿರಳ. ಆದರೆ ನಾನು-
ನಾನು ಸುಖವಾಗಿದ್ದೇನೆ. ಅದು ನಿಜವಾದ ಸುಖ-ಅನಂತವಾದ, ಉತ್ಕಟ
ವಾದ ಸುಖ . . . ಬಹುಶಃ ನನ್ನ ಮಾತನ್ನು ಕೂಡಲೆ ತಿಳಿದುಕೊಳ್ಳಲಾರಿರಿ
ಎಂದು ಕಾಣುವುದು. ಏಕೆ ಗೊತ್ತೆ? ನಿಮಗೂ-ನಿಮ್ಮಂತೆಯೇ ಇರುವ
ಇತರರಿಗೂ ನಾನು ಹೇಗೆ ಕಾಣುತ್ತೀನೋ ಆ ನನ್ನ ವ್ಯಕ್ತಿತ್ವವನ್ನು ಮಾತ್ರ
ನೀವು ನೋಡುತ್ತಿದ್ದೀರಿ; ನನಗೆ ನಾನು ಹೇಗೆ ಕಾಣುತ್ತೇನೋ--ಆ ನನ್ನ
ಕಲ್ಪನಾರಾಜ್ಯದಲ್ಲಿ ಬಾಳುತ್ತಿರುವ-ನನ್ನ ನಿಜವಾದ ವ್ಯಕ್ತಿತ್ವವನ್ನು ನೀವು
ಕಾಣುತ್ತಿಲ್ಲ....ಆದರೆ ನನಗೆ ಮಾತ್ರ ಅದೊಂದೇ ನಿಜವಾದ ಬಾಳು-ನೂರ್ಮಡಿ
ನಿಜವಾದ ವ್ಯಕ್ತಿತ್ವ . . . ಇಲ್ಲಿ ನಾನು ಕುಳಿತಿರುವುದ್ಕು ನಿಮ್ಮನ್ನು ಕಂಡು
ಮಾತನಾಡಿಸುತ್ತಿರುವುದು--ಇವೆಲ್ಲಾ ನಾನು ಬೇಗ ಮರೆತುಹೋಗುವ
ಕನಸುಗಳು . . . ಇಲ್ಲಿ ನಿಮಗೆ ತಿಂಗಳಿಗೊಮ್ಮೆ ಪೂರ್ಣಿಮೆ... ನನ್ನಕಲ್ಪನಾ
ಲೋಕದಲ್ಲಾದರೋ ಪೂರ್ಣಚಂದ್ರನ ನಿತ್ಯೋತ್ಸವ . . . ಆಹಾ, ನಾನು
ಚಿತ್ರಗಾರನಾಗಿದ್ದಿದ್ದರೆ, ನನ್ನ ಆ ನಿಜನಾದ ವ್ಯಕ್ತಿತ್ವವನ್ನು ನಿಮಗಾಗಿ
ರೂಪಿಸುತ್ತಿದ್ದೆ ; ನನ್ನ ಕಲ್ಪನಾ ಪ್ರಪಂಚದ ಮೂಲೆ ಮೂಲೆಗಳನ್ನೂ
ಚಿತ್ರಿಸಿ ನಿಮ್ಮ ಕಣ್ಣುಗಳನ್ನು ತುಂಬಿ ತುಳುಕಿಸುತ್ತಿದ್ದೆ..... ನನ್ನನ್ನು ನೋಡಿ
ಇವನೊಬ್ಬ ತಿರುಕ ಎಂದು ಮಾತ್ರ ಅಲ್ಲಗಳೆಯಬೇಡಿ. ನಾನು ತಿರುಕ
ನಲ್ಲ-ಬಡವನೂ ಅಲ್ಲ. ನಾನು ಕುಬೇರನಂತೆ ನಿಪುಳೈಶ್ಚರ್ಯದಲ್ಲಿ ಸದಾ
ಓಲಾಡದೆ ಇರಬಹುದು; ಆದರೆ ನಾನು ಬಯಸುವ ಸುಖಪರಂಸರೆಗಳ
ನ್ನೆಲ್ಲಾ ಒದಗಿಸುವಷ್ಟು ಸಮೃದ್ಧಿಯಾಗಿದೆ . . ನೋಡಿ, ನನ್ನ ಈ ಬಟ್ಟೆ
ಗಳು ತುಂಬಾ ಬೆಲೆ ಬಾಳತಕ್ಕವು..... ಈ ನೀಲಮಣಿ ಉಂಗುರವೂ ಅಷ್ಟೆ
ಅನರ್ಘ್ಯವಾದುದು. ಇದನ್ನು ನನ್ನ ಗೆಳೆಯನೊಬ್ಬನು ನೆನಪಾಗಿ ಕೊಟ್ಟ.”
-ಎಂದು ಉಂಗುರವಿಲ್ಲದ ತನ್ನ ಎಡಗೈ ಕಿರುಬೆರಳನ್ನು ತೋರಿಸಿದ.
ಅಷ್ಟೇ ಅಲ್ಲ; ತಿಂಗಳ ಬೆಳಕಿನಲ್ಲಿ ಅದನ್ನು ಮಿಂಚಿಸುವವನಂತೆ ಬೆರಳನ್ನು
ಅತ್ತ ಇತ್ತ ಆಡಿಸಿದ. ಆಮೇಲೆ ಮುಂದುವರಿಯುತ್ತ,
೬ -----------------------------------------------------------
"ಇಲ್ಲೇ ಇಲ್ಲಿಗೆ ಎರಡು ಮೈಲಿ ದೂರದಲ್ಲಿ ಚಂದ್ರಪುರ ಇಲ್ಲವೆ?-ಅಲ್ಲಿ
ನನ್ನದೊಂದು ಮನೆಯಿದೆ. ಚಿಕ್ಕದಾದರೂ ಬಹಳ ಸುಂದರವಾಗಿ-ಸುಖ
ನಿವಾಸವಾಗಿದೆ. ಅಲ್ಲೇ ನಾನು ವಾಸಮಾಡುವುದು. ಒಬ್ಬನೇ ವಾಸಿಸು
ತ್ತಿಲ್ಲ".-ಕ್ಷಣಕಾಲ ಮೌನನಾಗಿದ್ದು-" ಅಲ್ಲಿ ಅನುಸಮ ಸುಂದರಿಯೊಬ್ಬ
ಳೊಡನೆ ವಾಸಿಸುತ್ತಿದ್ದೇನೆ.”
-ಎಂದ.
ನನಗೆ ಅವನನ್ನು ನೋಯಿಸುವ ಇಷ್ಟವಿರಲಿಲ್ಲವಾದರೂ ಸ್ವಲ್ಪ
ವ್ಯಂಗ್ಯವಾಗಿ,
“ಆ ಮನೆಯೂ ಆ ಅನುಪಮ ಸುಂದರಿಯೂ ನಿಮ್ಮ ಕೈ ಬೆರಳಲ್ಲಿ
ರುವ ನೀಲಮಣಿ ಉಂಗುರದಷ್ಟೇ ನಿಜವಾದುದು ತಾನೇ
ಎಂದು ಕೇಳಿದೆ.
ನನ್ನ ಮಾತುಗಳಿಂದ ಅವನು ಕೋಪಿಸಿಕೊಂಡಂತೆ ಕಾಣಿಸಲಿಲ್ಲ.
ಭುಜಗಳನ್ನೊಮ್ಮೆ ಕುಣಿಸಿ, ನನ್ನ ಮುಖದ ಮೇಲೆ ನೋಟವನ್ನು ನಟ್ಟು,
ಹೇಳತೊಡಗಿದ :
“ ಅಯ್ಯಾ, ನಿಜ ಅನ್ನುವುದು ಯಾವುದು?... ಹೇಳಿ. ನನ್ನ ಕಲ್ಪನಾ
ಪ್ರಪಂಚ ಯಾಕೆ ನಿಜವಲ್ಲ? ನಾನು ಆಗಲೇ ಹೇಳಲ್ಲಿವೆ?-ನಾನೊಬ್ಬ
ಕವಿ- ಕಲ್ಪನಾ ರಾಜ್ಯದ ಜೀವಿಸುತ್ತಿರುವ ಕವಿ-ಎಂದು?-ನಾನು ಕಾವ್ಯ
ವನ್ನು ಬರೆಯುವ ಕವಿಯಲ್ಲ-ಜೀವಿಸುವ ಕವಿ. ನನ್ನ ಕಲ್ಪನಾ ಸಾಮ್ರಾಜ್ಯ
ದಲ್ಲಿ ನನ್ನ ಉಜ್ವಲ ಜೀವನವೇ ನನ್ನದೊಂದು ಮಹಾಕಾವ್ಯ....ನನ್ನ
ಮಾತುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನ ಮಾಡಿ-ನೀವೂ
ಕವಿಗಳು-ಅಷ್ಟೇನೂ ಕಷ್ಟವಾಗಲಾರದು. ನಾನೇನೂ ಸಿಕ್ಕಾಪಟ್ಟೆ ಕಲ್ಪನೆ
ಮಾಡಿಕೊಳ್ಳುತ್ತಿಲ್ಲ ಕಲ್ಪನಾಪ್ರಪಂಚದಲ್ಲಿಯೇ ನಾನು ಸಮಗ್ರವಾಗಿ
ಬಾಳಿ ಬದುಕುತ್ತಿರುವುದು. ಅದರ ಹೊರತಾಗಿ ನಾನಿಲ್ಲ - -ನನ್ನ ಜೀವನ
ವಿಲ್ಲ!............ಎಲ್ಲಾ ಬಯಲು! ಎಲ್ಲಾ ಶೂನ್ಯ !!........ನಾನು ಹೇಳಿದೆ
ನಲ್ಲಾ ಆ ಸುಖನಿವಾಸ-ಅದು ಇದೆ; ನಿಜವಾಗಿ ಇದೆ. ನಾನು ಈಗ ಇಲ್ಲಿ
ಇರುವುದಕ್ಕಿಂತ ನಿಜವಾದ-ಸ್ಥೂಲವಾದ ವಸ್ತುವಾಗಿದೆ ಅದು ನನ್ನ ಭಾಗಕ್ಕೆ.
ನನ್ನ ಆಸ್ವರ್ಗೀಯ ಮಂದಿರವನ್ನು -ಅದರ ಒಂದೊಂದು ಭಾಗವನ್ನು - ವಿವರ
೭------------------------------------------------------
ವಾಗಿ ಪೂರ್ಣವಾಗಿ ವರ್ಣಿಸಬಲ್ಲೆ. ಯಾವ ಯಾವ ಕೊಟಡಿಯಲ್ಲಿ
ಏನೇನು ಅಲಂಕಾರ ವಸ್ತುಗಳವೆಯೆಂಬುದನ್ನು ಒಂದು ಚೂರೂ ಬಿಡದೆ
ಹೇಳಬಲ್ಲೆ. ನನಗೆ ಅಪೂರ್ವ ವಸ್ತುಗಳನ್ನು ಕಂಡರೆ ಬಹಳ ಪ್ರೀತಿ........
ನನ್ನ ಮಂದಿರದ ಪ್ರತಿ ಕೊಟಡಿಯನ್ನೂ ಅತ್ಯಂತ ಅಪರೂಪವಾದ ಅನರ್ಘ್ಯ
ವಸ್ತುಗಳಿಂದ ತುಂಬಿದ್ದೇನೆ........ ನನ್ನ ಕಲ್ಪನೆಯಲ್ಲಿ ಆ ಮನೆಯೂ ಅದ
ರಲ್ಲಿ ತುಂಬಿರುವ ವಸ್ತುಗಳೂ ಒಂದೊಂದು ಸಲ ಒಂದೊಂದು ರೀತಿಯಾಗಿ
ಕಾಣುವುದೆಂದು ಭಾವಿಸ ಬೇಡಿ........ಇಲ್ಲ! ನನ್ನ ಕಲ್ಪನೆಗೆ ಆ ಮನೆಯೂ,
ಆ ಅಲಂಕಾರ ವಸ್ತುಗಳೂ ಯಾವಾಗಲೂ ಒಂದೇ ರೀತಿಯಾಗಿ ಕಾಣುತ್ತವೆ.
ಅದೇ ಅವುಗಳ ನಿಜತ್ವಕ್ಕೆ ನಿದರ್ಶನ. ಆದುದರಿಂದಲೇ ನನಗೆ ಆ ಮಂದಿ
ರದ ಇರುವಿಕೆ ನಿಜ........ನಾನು ಕೆಲವು ತಿಂಗಳುಗಳ ಹಿಂದೆ ಒಂದು
ಮುರುಕುಮನೆಯ ಜಗಲಿಯ ಮೇಲೆ ಎಂಟು ದಿನಗಳನ್ನು ಕಳೆದೆ.
ಇನ್ನೊಮ್ಮೆ ಒಂದು ಹಳ್ಳಿಯ ಹುಲ್ಲು ಬಣವೆಯ ಮರೆಯಲ್ಲಿ ಒಂದು
ರಾತ್ರಿ ಕಳೆದೆ. ನೆನ್ನೆ ರಾತ್ರಿ ಈ ಊರ ಪೂರ್ಣಯ್ಯನ ಛತ್ರದ ಪಡಸಾಲೆ
ಯಲ್ಲಿ ಇದ್ದೆ....ಇವತ್ತು ಇನ್ನೆಲ್ಲೋ ?....ಹೀಗೆ ಅಡಿಗಡಿಗೆ ಬದಲಾಯಿ
ಸುವ ಈ ನೆಲೆಗಳೊಂದೂ ನನ್ನ ಭಾಗಕ್ಕೆ ನಿಜವಾಗಿಲ್ಲ. ಅವುಗಳ ನೆನ
ಪೆಲ್ಲಾ ನನಗೆ ಎಲ್ಲೋ ಕನಸಿನಲ್ಲಿ ಕಂಡ ಬೇಗ ಅಳಿಸಿ ಹೋಗುವ ಅಸ್ಪಷ್ಟ
ದೃಶ್ಯಗಳಾಗಿ ಪರಿಣಮಿಸಿವೆ. ಆದರೆ ಚಂದ್ರಪುರದ ನನ್ನ ಮಂದಿರವೂ,
ಅದರಲ್ಲಿ ತುಂಬಿರುವ ವಸ್ತುಗಳೂ ಹಾಗಲ್ಲ ; ಅವು ನನ್ನ ಕಲ್ಪನೆಯಲ್ಲಿ
ಮಾತ್ರವೇ ಇರುವುದಾದರೂ ನನಗೆ ನಿಜವಾದುವು; ನನ್ನ ಕಲ್ಪನೆಯಲ್ಲಿ
ಯಾವಾಗಲೂ ಒಂದೇ ರೀತಿಯಾಗಿ ನನಗೆ ಸ್ಪಷ್ಟವಾಗಿ ಗೋಚರಿಸತಕ್ಕವು.
ಆದುದರಿಂದಲೇ ನಿಜವಾಗಿ ಇರತಕ್ಕವು. ನೀವು ಅವುಗಳನ್ನು ಕಾಣಲಾರದ್ದ
ರಿಂದ ಅವುಗಳ ಇರುವಿಕೆಯಲ್ಲಿ ಸಂದೇಹ ಪಟ್ಟ ಮಾತ್ರಕ್ಕೆ ನನಗಾಗುವು
ದೇನು ? ನನ್ನ ಈ ನೀಲಮಣಿ ಉಂಗುರ ! ನಿಮಗೆ ಅದನ್ನು ಕಾಣುವ
ಕಣ್ಣಿಲ್ಲ. ಆದ್ದರಿಂದ ಅದೂ ಇಲ್ಲ ನಿಮ್ಮ ಭಾಗಕ್ಕೆ ........ನನಗಾದರೋ
ನೋಡಿ! ನೋಡಿ ! ಈ ಮಣಿಹೃದಯವು ತಿಂಗಳ ಬೆಳಕಿನಲ್ಲಿ ಸೂರೆ
ಯಾಗುತ್ತಿರುವುದು ಸ್ಪಷ್ಟವಾಗಿದೆ ! ಚಂದ್ರಕಿರಣಗಳಿಗೆ ನೀಲಿಯ ಸ್ನಾನ
ವಾಗುತ್ತಿರುವುದು ಕಣ್ಣಿಗೆ ಕಟ್ಟುತ್ತಿದೆ! ನೋಡಿ ......... ನನ್ನ ಮನೆ !....
ನನ್ನ ಈ ನೀಲಮಣಿಯುಂಗುರವನ್ನೇ ಕಾಣದವರು ಇನ್ನು ಆ ಮನೆ
೮---------------------------------------
ಯನ್ನು ಹೇಗೆ ಕಂಡೀರ!........ಆದರೆ ನನಗೆ ಆ ಮನೆ ಸ್ವರ್ಗ-ಸ್ವರ್ಗದ
ಸ್ವರ್ಗ!- ಬೇಸಗೆಯಲ್ಲಿ ತಂಪಾಗಿರುತ್ತದೆ-ಚಳಿಗಾಲದಲ್ಲಿ ಬೆಚ್ಚಗಿರುತ್ತದೆ-
ಮನದಿನಿಯಳ ಮೈ ಸೊಂಕಿನಂತೆ! ನ ನನ್ನ ಹಂಡೆತಿ........ "
ಮಾತನ್ನು ಅಷ್ಟಕ್ಕೇ ನಿಲ್ಲಿಸಿ ನನ್ನ ಕಡೆ ಸ್ವಲ್ಪ ಸರಿದ. ನಾನು
ಹಿಂದಕ್ಕೆ ಮುದುರಿಕೊಂಡರೆ ನೊಂದುಕೊಂಡಾನೆಂದು ಹೆದರಿ ಕುಳಿತವನು
ಅಲ್ಲಾಡಲಿಲ್ಲ. ಅವನು ಮಾತು ಮುಂದುವರಿಸಿದ :
"......ನನ್ನ ಹೆಂಡತಿ ರೂಪಸಿ- ಅತ್ಯ೦ತ ರೂಪಸಿ. ಮೃಣಾಳದಂತೆ
ಕೃಶಾಂಗಿ. ಅವಳ ಮೈ ಸಲ್ಪ ಬಳುಕಿದರೂ ರೂಪದ ತರಂಗಗಳು ಹುಟ್ಟಿ
ಹರಿಯುತ್ತವೆ. ಅವಳ ನೋಟ !-ಅದೊಂದು ಮೋಹಜಾಲ, ಸಾಧಾರಣ
ವಾಗಿ ಅಚ್ಚ ಬಳಿಯ ರೇಷ್ಮೆ ಸೀರೆಯನ್ನುಡುತ್ತಾಳೆ. ಅವಳ ಮಂದ
ಗಮನದ ಮೈ ಕುಲುಕಿನಿಂದ ಆ ಸೀರೆಯ ನಿರಿಯಲ್ಲೂ ಸೆರಗಿನಲ್ಲೂ ಮಡಿಕೆ
ಗಳು ತೆರೆ ತೆರೆಯಾಗಿ ಆಡುತ್ತ ಉಕ್ಕಿಜಾರುವ ಲಾವಣ್ಯದಂತೆ ತೋರು
ತ್ತವೆ. ನಾನು ಅವಳಿಗೆ ಇಲ್ಲದ ರೂಪವನ್ನು ವರ್ಣಿಸುತ್ತಿದ್ದೇನೆ ಎಂದು
ನೀವು ಭಾವಿಸಬಹುದು. ಆದು ತಪ್ಪು ಭಾವನೆ. ನನ್ನ ಮಾತನ್ನು
ನಂಬಿ; ಅವಳು ನಿಜವಾಗಿ ರೂಪು ಲಾವಣ್ಯ ಬೆಡಗುಗಳ ಏಕೀಕರಣ-ತೌರು
ಮನೆ. ನಿಮ್ಮ ಹೆಣ್ಣುಗಳ ಮೈಯ ಸಿರಿ ನಡೆಯ ಬೆಡಗು, ಒಡಲ ಬಳುಕು,
ಕಣ್ಣ ಚೆಲುವು-ನಗೆಯ ಅಂದ, ಮೊಗದ ಚಂದ ಎಲ್ಲ ಅವಳ ದಾನ. ನನ್ನ
ಆ ರೂಪಸಿಯ ರೂಪು ಲಾವಣ್ಯಗಳನ್ನೂ ಮೀರಿದುದೊಂದಿದೆ ; ಅದು
ಅವಳ ಶಕ್ತಿ-ಅದ್ಭುತ ಶಕ್ತಿ-ಅದವಳ ಕಣ್ಣುಗ ಗಳಲ್ಲ ಕೂಡಿ ನಿಂತಿದೆ...ಆಹಾ!
ಆ ಕಣ್ಣುಗಳು! ಬೆಳದಿಂಗಳ ತೊಟ್ಟಿಲಂತಿರುವ ಆ ನಯನೋತ್ಪಲಗಳೇ
ಸಾಕು ಲೋಕದೆದೆಯನ್ನು ಸೂರೆಗೊಳ್ಳುವುದಕ್ಕೆ... ನಾನವುಗಳ ಮೇಲೆ
ಮುತ್ತಿನ ಮಳಗರೆದರೆ ಅವುಗಳ ಕಾಂತಿ ನೂರ್ಮಡಿಸುವುದು.... ಆಹಾ!
ಅವಳ ಬಾಹುಲತಾ ಕುಂಜದಲ್ಲಿ ನಾನು ಸಸವಿಯುವ ಉತ್ಕಟವಾದ ಸುಖಕ್ಕೆ
ಸಾಟಯೆಂಬುದೆ ಇಲ್ಲ... ಅವಳ ಒಲವು !.ಅದನ್ನು ಎನೆಂದು ಹೇಳಲಿ?....
ಅದೊಂದು ನಿರರ್ಗಳವಾದ ಪರಮಾನಂದ ಲಹರಿ. ಅದರಲ್ಲಿ ನಾನು
ತೇಲುತ್ತ ತೇಲುತ್ತ ತೇಲುತ್ತ ಹೋಗುತ್ತೇನೆ. ನರಮಾತ್ರನಿಗೆ ತೀರ
ಮಿತಿಮಾರಿದಂಥ--ಅಷ್ಟು ಸುಖ-ಆ ಆನಂದಗಳು ನನ್ನ ಪಾಲಿಗೆ ಇವೆ.......
೯------------------------------------------------------------
ಆದರೆ-ಆದರೆ........ ಅಯ್ಯಾ ಇಷ್ಟು ಸುಖವನ್ನೂ ಭಂಗಪಡಿಸುವ ಭೀಕರ
ವಾದ ಸಂಗತಿಯೊಂದಿದೆ. ಅದು"
--ಎಂದು ಮಾತು ನಿಲ್ಲಿಸಿದ.
" ಏನದು?” ಎಂದು ಬಹಳ ಕುತೂಹಲದಿಂದ ಕೇಳಿದೆ.
“ ಅವಳ ದ್ರೋಹ !-ಘೋರವಾದ ದ್ರೋಹ !!...ನನಗವಳು ದ್ರೋಹ
ಮಾಡಿರುತ್ತಾಳೆ!...ಅಯ್ಯೊ ! ಮೇಲಿಂದ ಮೇಲೆ-ಹೆಜ್ಜೆಹೆಚ್ಚೆಗೆ ದ್ರೋಹ
ಮಾಡುತ್ತಾಳೆ!.... ಪಾಷಾಣ ಹೃದಯದ ಪರಮ ಚಾಂಡಾಲಿ!?
- ಎಂದು ಉದ್ರೇಕದಿಂದ ಹಲ್ಲು ಕಚ್ಚಿ ಹೇಳಿದ.
ನನಗೆ ಅವನ ಈ ಮಾತುಗಳನ್ನು ಕೇಳಿ ಅತ್ಯಾಶ್ವರ್ಯವಾಯಿತು.
ವಿಸ್ಮಯದಿಂದ ಕೇಳಿದೆ
“ ನಿಮಗೆ ಮೋಸ ಮಾಡುತ್ತಾಳೆಯೇ?-ಅದು ಹೇಗೆ ಸಾಧ್ಮ?........
ನಿಮ್ಮ ಮಾತು ನನಗೆ ಅರ್ಥವಾಗುವುದಿ್ಲ.''
“ ಅದು ನಿಮ್ಮ ದುರದೃಷ್ಟ !-ನಾನೇನು ಮಾಡಲಿ?”
“ ಎಲ್ಲಾ ನಿಮ್ಮ ಕಲ್ಪನೆ ಎನ್ನತ್ತೀರಿ. ನಿಮ್ಮ ಮನೆಯ ಅಚ್ಚುಗಟ್ಟು-
ನಿಮ್ಮ ವಸ್ತುಸಂಗ್ರಹದ ಸಂಭ್ರಮ-ನಿಮ್ಮ ಹೆಂಡತಿಯ ರೂಪು ಲಾವಣ್ಯ-
ಎಲ್ಲವೂ ನಿಮ್ಮ ಕಲ್ಪನೆಯ ಪ್ರಭಾವವೆನ್ನುತ್ತೀರಿ ಹೀಗಿರೋವಾಗ, ಆಕೆಯ
ದ್ರೋಹವೂ ನಿಮ್ಮ ಕಲ್ಪನೆಯೃ ಅಲ್ಲವೆ? ಕಲ್ಪನೆಯನ್ನು ಖರ್ಚು
ಮಾಡಿದ ನಿಮಗೆ ಅವಳಲ್ಲಿ ಪಾತಿವ್ರತ್ಯವನ್ನು ಕಲ್ಪಿಸಲು ಏನೂ ಉಳಿ
ಯದೇ ಹೋಯಿತೆ? ನಮ್ಮ ಕಲ್ನಾ ಪಪ್ರಪಂಚ ಬಹಳ ಸುಂದರವಾದ
ಚಿತ್ರ; ಅದರ ಮೇಲೆ ಈ ಕಣ್ಣುರಿಸುವ ದ್ರೋಹದ ಮಸಿಯನ್ನೇಕೆ
ಬಳಿದಿರಿ?"
ಅವನ ಮಾತನ್ನು ಅರ್ಥಮಾಡಿಕೊಳ್ಳಲಾರದೆ ನಾನು ಕೇಳಿದ ಪ್ರಶ್ನೆಗ
ಳಿಂದ ನನ್ನ ವಿಷಯದಲ್ಲಿ ತುಂಬಾ ಕನಿಕರ ಪಡುವವನಂತೆ ನೋಡುತ್ತ
ಉತ್ತರ ಕೊಡಲಾರೆಂಭಿಸಿದ :
" ಅಯ್ಯಾ, ನೀವು ಕವಿಯಾದರೂ ಕಲ್ಪನೆಯಲ್ಲಿ ಬಾಳುವುದೇನೆಂಬು
ದನ್ನು ತಿಳಿಯಲಾರಿರಿ ; ಅದೇ ನನಗೆ ವ್ಯಥೆಯಾಗುತ್ತದೆ-ಕನಿಕರವಾಗು
ತ್ತದೆ......... ನೋಡಿ, ನೀನು ಭಾವಿಸಬಹುದು--ಒಬ್ಬನು ತನ್ನ ಇಷ್ಟ
೧೦ ---------------------------------------------
ಬಂದಂತೆಲ್ಲಾ ಕಲ್ಪಿಸಿಕೊಳ್ಳಬಹುದೆಂದು; ಅದು ಶುದ್ಧ ತಪ್ಪುಭಾವನೆ.
ನಮ್ಮನ್ನು ಆಡಿಸುವ ವಿಧಿ ಒಂದಿರುವಂತೆ-ನಮ್ಮ ಮನೋರಾಜ್ಯದ ಕಲ್ಪನೆ
ಗಳನ್ನೂ ಶಾಸನ ಮಾಡುವ ವಿಧಿಯೊಂದಿದೆ. ಆ ಘೋರ ವಿಧಿಯ ನಿಷ್ಠುರ
ಶಾಸನ ವಶನಾದ ನನಗೆ, ಈ ದಾರುಣವೂ-ಅನಿವಾರ್ಯವೂ ಆದ ಈ ಪ್ರಸಂ
ಗದ ನಿಜತ್ವವನ್ನು ಬಿಟ್ಟು ಕಲ್ಪಿಸಿಕೊಳ್ಳುವ ಶಕ್ತಿ ಇಲ್ಲವಾಗಿದೆ. ಅದೇನಂ
ದರೆ, ನನ ಕಲ್ಪನೆಯಲ್ಲಿ ಹುಟ್ಟಿ ನನ್ನವಳಾದ ಮೇಲೆ ಅವಳು ನನ್ನನ್ನು
ವಂಚಿಸುತ್ತಾಳೆ-ಎಂದು. ಕರುಣೆಯಲ್ಲದೆ. ನಾಚಿಕೆಯಿಲ್ಲದೆ. ಅಡಿಗಡಿಗೆ
ವಂಚಿಸುತ್ತಾಳೆ ಎಂದು. ಎಲ್ಲರೊಡನೆ-ಯಾರು ಸಿಕ್ಕರೆ ಅವರೊಡನೆ ಕೂಡಿ
ನನ್ನನ್ನು ಪೆಂಚಿಸುತ್ತಾಳೆ-ಎಂದು....ಅಹಾ! ನನ್ನ ಸಂಕಟದ ಉರಿಯನ್ನು
ನೀವು ಅರಿಯಲಾರಿರಿ. ಊಹಿಸಲೂ ನಿಮ್ಮಿಂದ ಸಾಧ್ಯವಿಲ್ಲ. ಬೀದಿಯಲ್ಲಿ
ಗಂಡಸು ಎನ್ನುವವನು ಸುಳಿದರೆ ಸಾಕು-ಅವನು ಗೃಹಸ್ಥನಿರಲಿ- ಕೂಲಿಯ
ವನಿರಲಿ, ಪ್ರಾಯದವನಿರಲಿ-ಮುದುಕನಿರಲಿ, ಧನಿಕನಿತಲಿ-ದರಿದ್ರನಿರಲಿ-
ವಿವೇಚನೆಯಿಲ್ಲದೆ-ನಾಚಿಕೆಯಿಲ್ಲದೆ. ಅವನನ್ನುಮನೆಯೊಳಗೆ- ಅಹಾ !
ನಾನು ಅವಳಿಗಾಗಿ ಕಟ್ಟಿದ ಆ ಮನೆಯೊಳಗೆ-ಕರೆದೊಯ್ದು ತನುಮನಗಳ
ನ್ನೊಪ್ಪಿಸಿ ನನ್ನನ್ನು ವಂಚಿಸುತ್ತಾಳೆ. ಅವಳ ಈ ವಂಚನಾ ಪರಂಪರೆಗಳು
ನನಗೆ ಗೊತ್ತಾಗಿ ನಾನು ರಂಪಮಾಡಿದರೆ ಆ ವಂಚಕಿ ತನ್ನ ನೂರಾರು
ವಂಚನೆಗಳನ್ನೂ ನಿರಾಕರಿಸುತ್ತಾಳೆ, ನೀರು ಕುಡಿದ ಹಾಗೆ ಸುಳ್ಳು ಹೇಳಿ
ನನ್ನ ಬಾಯಿ ಬಡಿಚುತ್ತಾಳೆ. ಕ್ಷಣಾರ್ಧದಲ್ಲಿ ಅಸಾಧ್ಯವಾದ ಕಥೆ ಕಟ್ಟಿ-
ಮರುಳುಮಾಡಿ ನನ್ನ ಮೇಲೆ ಮೋಹಜಾಲವನ್ನು ಬೀಸುತ್ತಾಳೆ-ಮಾಯ
ವಿನಿ! ಮರುಕ್ಷಣವೇ ನನ್ನನ್ನು ತನ್ನ ಬಾಹುಲತೆಗಳಲ್ಲಿ ಬಿಗಿದು ಮುದ್ದು
ಹೊಳೆಯಲ್ಲಿ ಒಲವಿನ ಜೋಗುಳ ಹೇಳುತ್ತ ತೇಲಿಸಿಕೊಂಡು ಹೋಗು
ತ್ತಾಳೆ!..... ನಾನು ಪುನಃ ಅವಳ-ಆ ದ್ರೋಹಿಯೆ !-ದಾಸ !!-ಗತಿಗೆಟ್ಟ
ಗುಲಾಮ!....ಅಯ್ಯಾ, ನನ್ನ ಈ ವಿಚಿತ್ರ ಜೀವನನು ಎರಡು ತುತ್ತತುದಿ
ಗಳ ಅಂತರದಲ್ಲಿ ಉಯ್ಯಾಲೆಯಾಡುತ್ತಿದೆ-ಅದನ್ನು ನೀವು ಅರಿಯಲಾರಿರಿ....
ಒಂದು ಕಡಿ ಮೈ ಮರೆಸುವ ಪರಮಾನಂದ ಗಿರಿಯ ಅತ್ಯುನ್ನತ ಶಿಖರ !-
ಒಂದು ಕಡೆ ಗತಿ ಕಾಣದ ಭೀಕರ ನಿರಾಶೆಯ ನಿರಾಳ ಪಾತಾಳ !....ಅವಳು
ನನ್ನನ್ನು ನಿರಂತರವೂ ವಂಚಿಸುತ್ತಾಳೆ-ಎಂದು ಬಲ್ಲೆ. ರೂಪ ಸಾಗರದ
೧೧------------------------------------------------------------
ಅಂತರಾಳದಲ್ಲಿ ದ್ರೋಹದ ಬಡಬಾನಲವಿದೆಯೆಂದು ಬಲ್ಲೆ-ಬಲ್ಲೆ! ರತ್ನ
ಕಲಶದಲ್ಲಿ ಕಾಲಕೂಟ ತುಂಬಿ ತುಳುಕುತ್ತಿದೆಯೆಂದು ಗೊತ್ತು! .........
ಆದರೂ ನಮ್ಮ ಸುಖನಿನಾಸದಲ್ಲಿ, ಸುಂದರವಾಗಿ ಸುಸಜ್ಜಿತವಾದ ಶಯನ
ಮಂದಿರದ ಏಕಾಂತದಲ್ಲಿ....ಸ್ಪರ್ಗೀಯ ತೂಲಿಕಾತಲ್ಪದ ಮೇಲೆ. ..ಅವಳ
ಅಂಗಲತೆ ನನ್ನ ದೇಹಕ್ಕೆ ಹಬ್ಬಿಸುತ್ತಿಕೊಳ್ಳಲು, ನನ್ನ ಕೋಪದ ಕೆಂಡ
ತನಗೆ ತಾನೇ ಉರಿದುರಿದು ಬೂದಿಯಾಗಿ ತೂರಿ ಹೋಗುವುದು. ಆಮೇಲೆ
ನನಗೆ ಬೈಯ್ಯಲು ಬಾಯೇ ಬರುವುದಲ್ಲ. ..ಆ ಯಕ್ಷಿಣಿಯ ಮಂತ್ರ ಬಂಧ
ನದಲ್ಲಿ ಸಂಪೂರ್ಣವಾಗಿ ಸಿಕ್ಕು ಬಿದ್ದಿದ್ದೇನೆ....ನನ್ನನ್ನು ತುತ್ತತುದಿಯ
ಸ್ವರ್ಗಕ್ಕೆಳದೊಯ್ದು ಅಲ್ಲಿಂದ ಕಟ್ಟಕಡೆಯ ನರಕಕ್ಕೆ ನೂಕುವುದು
ಆ ಬೆಕ್ಕಿಗೊಂದು ಚಿನ್ನಾಟವಾಗಿ ಬಿಟ್ಟಿದೆ...ಆದರೂ....ನಾನು ಇಷ್ಟು
ದುಃಖ ದುರವಸ್ತೆಗೀಡಾಗಿದ್ದರೂ, ಸ್ವರ್ಗೀಯವಾದ-ಉತ್ಕಟವಾದ-ಸುಖದ
ಪರಮೋತ್ಕರ್ಷಾನುಭವಕ್ಕಾಗಿ ಅವನ್ನೆಲ್ಲ ನುಂಗಿಕೊಳ್ಳಬೇಕಾಗಿದೆ.......
ಏಕೆನ್ನುವಿರೋ? ಕೇಳಿ, ನನ್ನ ಅನುಭವದಲ್ಲಿ ಅನೇಕ ಹೆಣ್ಣುಗಳನ್ನು
ಬಲ್ಲೆ-ಆದರೆ ಯಾವ ಹೆಣ್ಣೂ ಇವಳು-ಈ ನನ್ನ ರೂಪಸಿ-ನನಗೆ ಕೊಟ್ಟ
ಸುಖಕ್ಕೆ ಎಣೆಯಾದ ಸುಖವನ್ನು ಕೊಟ್ಟಿಲ್ಲ ಈ ಮರ್ತ್ಯಲೋಕ
ದಲ್ಲೇ ಅಮರಲೋಕದ ಆನಂದಾಮೃತವನ್ನು ಎರದಿದ್ದಾಳೆ...... ಆದರೆ ಅಯ್ಯೋ,
ಆತ್ಮ- ಇಂದ್ರಿಯಗಳ- ಉತ್ಕಟ ಪ್ರೇಮ ಕಾಮಗಳ ಸಂಗಮವಾಹಿನಿಯಲ್ಲಿ
ಮುಳುಗಿಸಿ ಮುಳುಗಿಸಿ ಸ್ನಾನ ಮಾಡಿಸಿದ್ದಾಳೆ. ಆದರೆ... ಅಯ್ಯೋ,
ಪೂರ್ಣ ವರ್ಣನೆಗೆ ಸಿಕ್ಕದ ಅ ಪರಮ ಸುಖದ ಆಯಸ್ಸು ಅತ್ಯಲ್ಪ! --
ವರ್ಷಾಕಾಲದ ಕಾಳರಾತ್ರಿಯಲ್ಲಿ ನಿಬಿಡೆ ಮೇಘ ರಾಶಿಯ ಬಸಿರಿಂದ
ಒಮ್ಮೆ ಮಾತ್ರ ಚಿಮ್ಮಿ, ಕ್ರಣಾರ್ಧದಲ್ಲಿ ಲೋಕವನ್ನೇ ಬೆಳಗಿ ಬೆರಗು
ಮಾಡಿ ಮಾಯವಾಗುವ ಸೆಳೆಮಿಂಚಿನಂತೆ ಕ್ಷಣಿಕವಾದುದು -ಪ್ರತಿ ನಿತ್ಯವೂ
ರಾತಿಯಲಿ ಒಂದು ಕ್ಷಣ ಮಾತ, ಉಳಿದ ಕಾಲವೆಲ್ಲಾ ಇಮ್ಮಡಿಸಿದ
ನಿರಾಶೆಯ ಕಾಲಿಮೆ!.... ಆ ಕಾಲಿಮೆಯಲ್ಲಿ ದುಃಖದ ಗುಡುಗಿದ ದನಿ-
ಮಾರ್ದನಿಗಳು ಮಾತ್ರ ಕೇಳಿ ಬರುವುವು....ಓ! ನೀವು ತಿಳಿಯಲಾರಿರಿ.
ನಿ ಮ್ಮ ದು ಕಲ್ಪನಾರಹಿತವಾದ-ರಾಗ-ರಸ-ಕಲಾವಿಹೀನವಾದ-ನಿತ್ಯ ೦
ಪ್ರತಿಯ ಜಳ್ಳು ಜೀವನ! ಬರೀ ಸಿಪ್ಪೆ! ಈ ಸ್ಥೂಲ ಜಗತ್ತಿನಲ್ಲಿ-ಬರೀ ರಕ್ತ
೧೨ --------------------------------------------------------
ಮಾಂಸಗಳ-ಸ್ಥೂಲಕಾಯದ-ಪಶುಪ್ರಾಯರಾದ ಬಂಧು ಮಿತ್ರರ ಮಧ್ಯೆ
ಕುರುಡುಜೀವನ ನಡೆಸುತ್ತಿರುವ ನೀವು, ನನ್ನ ಆ ಸೂಕ್ಷವಾದ. ಕಮ
ನೀಯ ಕಲ್ಪನಾ ಜಗತ್ತಿನಲ್ಲಿ-ನಾನನುಭನಿಸುತ್ತಿರುವ ಸುಖ ದುಃಖಗಳನ್ನು
ಕಾಣಲಾರಿರಿ....ಅವು ನಿಮ್ಮ ಬಡ ಊಹೆಗೂ ಸಿಕ್ಕವು! "
ವೃದ್ಧನ ಕಣ್ಣುಗಳಲ್ಲಿ ಉನ್ಮಾದವು ಉಮ್ಮಳಿಸಿತು. ನೀಳವಾಗಿ ಎಸ
ಳಾಗಿದ್ದ ತನ್ನ ಕೈ ಬೆರಳುಗಳನ್ನೂ ಹಿಸುಕಿಕೊಳ್ಳುತ್ತ, ಸುಖದುಃಖಗಳ
ತೀಕ್ಷ್ಣವಾದ ಸ್ಮರಣೆಯಿಂದ, ತಗ್ಗಿದ ದನಿಯಲ್ಲಿ ಒಮ್ಮೆ ನರಳಿದನು.
ಅನಂತರ ಹೊಸದು ಏನನ್ನೋ ಕಂಡವನಂತೆ ರಹಸ್ಯವಾಣಿಯಲ್ಲಿ
ಹೇಳತೊಡಗಿದ :
“ ನೋಡಿ, ಇದಕ್ಕೆಲ್ಲಾ ಇರುವುದು ಒಂದೇ ಉಪಾಯ !- ಒಳ್ಳೆಯ
ಮದ್ದು!....ಏನು ಗೊತ್ತೇ. 1?
"ಇಲ್ಲ"
ಪ್ರತಿಯಾಗಿ ನಾನೂ ಅವಳಿಗೆ ವಂಚಕನಾಗುವುದು- ದ್ರೋಹಿ
ಯಾಗುವುದು.... ನನ್ನ ಸುತ್ತ ಇತರ ಹೆಣ್ಣುಗಳ ಮಾಲೆಯನ್ನೇ ಸುತ್ತಿ
ಕೊಂಡು- ಉನ್ಮತ್ತ ಕೇಳಿಯಲ್ಲಿ ತಲ್ಲೀನನಾಗುವುದು !...ನಾನೂ ವಿವೇ
ಚನೆ- ನಾಚಿಕೆ. ಕರುಣೆ ಎಲ್ಲವನ್ನೂ ತೊರೆದು ಕಣ್ಣುಮುಚ್ಚಿ ಕೊಂಡು
ರಾಗಮಯ ಕಾಮ ಸಮುದ್ರದಲ್ಲಿ ತಲೆ ಮೊದಲಾಗಿ ಧುಮುಕುತ್ತೇನೆ! .
ಅದೇ ಸರಿಯಾದ ಶಿಕ್ಷೆ- ಆ ಪಾಷಾಣ ಹೃದಯದ ಮಾಯಾನಿನಿಯ
ನೆಗೆ: ಆದರೆ... ಆದರೆ ಬಹಳ ಕಷ್ಟ.... ನನ್ನ ಉಪಾಯ ಈಡೇರುವುದು
ತೀರ ದುಸ್ಸಾಧ್ಯ"
" ಹೇಗೆ ದುಸ್ಸಾಧ್ಯ ?"
" ಅಯ್ಯೋ ಏನು ಹೇಳಲಿ! ನಿಮಗೆ ಗೊತ್ತಾಗುವುದಿಲ್ಲ ಆ
ಮಾಯಾರೂಪಸಿ ಅವರೆಲ್ಲರನ್ನೂ ಜಯಿಸಿ ಅಟ್ಟಹಾಸ ಮಾಡುತ್ತಾಳೆ.
ಅವಳನ್ನು ಯಾವುದೂ ತಡೆಯುವಂತಿಲ್ಲ- ಭದ್ರವಾಗಿ ಹಾಕಿದ ಬಾಗಿಲು
ಗಳ ಮೂಲಕ ನಿರಾಯಾಸವಾಗಿ ಕೊಟಡಿಯೊಳಕ್ಕೆ ತೇಲಿಕೊಂಡು ಬಂದು
ಬಿಡುತ್ತಾಳೆ, ನಾನು ಬೇರೆ ಹೆಣ್ಣುಗಳನ್ನಪ್ಪಿಕೊಳ್ಳಹೋದರೆ, ಅವಳು
ನಮ್ಮಿಬ್ಬರಿಗೂ ಮಧ್ಯೆ ಲೀಲಾಜಾಲವಾಗಿ ನುಸುಳಿ ಬರುತ್ತಾಳೆ; ನನ್ನ
೧೩----------------------------------------------
ಆಲಿಂಗನ ಅವಳಿಗೇ-ಯಾವಾಗಲೂ ಅವಳಿಗೇ- ಆಗಿ ಬಿಡುತ್ತದೆ...
ಉಳಿದ ಹೆಣ್ಣುಗಳ ಮಾತಿನಲ್ಲೆಲ್ಲ- ಅವಳ ಧ್ವನಿ ಕೇಳಿಬರುತ್ತದೆ...
ಒಂದೊಂದು ವೇಳೆ ಅವರೆಲ್ಲಾ ಅವಳೇ ಆಗಿ ನನಗೆ ಹುಚ್ಚು ಹಿಡಿದು
ದಿಗ್ಭ್ರಮೆಯಾಗಿಬಿಡುತ್ತದೆ....ಆದರೂ .. ಅಯ್ಯಾ, ಈ ರಾತ್ರಿ ನನ್ನ
ಸಂಕಟ ಸಹನಾತೀತವಾಗಿದೆ...ಅದನ್ನು ಅಂಥೋನ್ಮತ್ತ ಕೇಳಿಯಲ್ಲಿ ಮುಳು
ಗಿಸಿ ಬಿಡಲು ಪುನಃ ಪ್ರಯತ್ನ ಮಾಡುತ್ತೇನೆ- ಕಟ್ಟಕಡೆಯ ಪ್ರಯತ್ನ
ಈ ರಾತ್ರಿ ನನ್ನ ಮನೆಯಲ್ಲಿ ಸೊಗಸಾದ ಭೋಜನಕೂಟವನ್ನೇರ್ಪಡಿಸು
ತ್ತೇನೆ. ಅದಕ್ಕೆ, ಬಾಗಿ ಬಳುಕಿ ಕುಲುಕಿ ಕುಣಿಯುವ ನಯನ ಮನೋ
ಹರ ರೂಪಿಣಿಯರನ್ನು, ಕಲಕಂಠವಾಣಿಯರನ್ನು- ಮೋಹವೆರಚುವ
ಸುವಾಸಿನಿಯರನ್ನು - ಚಂದುಟಯ ಚೆಲುವೆಯರನ್ನು-ಮುಟ್ಟಿದರೆ ಮೂರ್ಛೆ
ಬರುವ ಸುಮಕೋಮಲಾಂಗಿಯರನ್ನು ಬರಮಾಡಿಕೊಳ್ಳುತ್ತೇನೆ!...
ಎಂದು ಮಾತನ್ನು ನಿಲ್ಲಿಸಿ ತನ್ನ ಹರಕು ಅಂಗಿಯ ಜೇಬುಗಳನ್ನೆಲ್ಲಾ
ಹುಡುಕಿದ. ಏನೂ ಸಿಕ್ಕದಿರಲು ನಿರಾಶನಾಗಿ,
“ ಹುಂ!..,ಈ ರಾತ್ರಿ ಸಾಧ್ಯವಾಗುವಂತಿಲ್ಲ. ಏನು ಮಾಡುವುದು
ಸ್ವಲ್ಪದರಲ್ಲಿ ಮೋಸವಾಯಿತು. ಇವತ್ತು ಮನೆಬಿಡುವಾಗ ಅಂಗಿ ಬದ
ಲಾಯಿಸಿದೆ, ನನ್ನ ಹಣದ ಗಂಟು ಹಳೇ ಅಂಗಿ ಜೇಬಿನಲ್ಲೇ ಉಳಿದು
ಬಿಟ್ಟಿತು. ನನ್ನ ಏರ್ಪಾಟಿಗೆ ಕನಿಷ್ಟಪಕ್ಷ ಎರಡು ಸಾವಿರ ರೂಪಾಯಿಗಳಾ
ದರೂ ಬೇಕು ! ಆಹಾ, ಎಂಥಾ ಮೋಸವಾಯಿತು ! ?
——ಎಂದು ವೃಥೆಪಟ್ಟ.
ಆತನಿಗೆ ಬೇಕಾಗಿದ್ದ ಎರಡು ಸಾವಿರ ರೂಪಾಯಿಗಳೇನೂ ಅಷ್ಟು
ದೊಡ್ಡ ಮಾತಲ್ಲವೆನ್ನುವ ತರದಲ್ಲಿ ಸ್ವಲ್ಪ ಹಗುರವಾಗಿಯೇ,
"ಇಷ್ಟೇ ತಾನೇ? ಎರಡು ಸಾವಿರ ರೂಪಾಯಿಗಳು ಯಾವ
ದೊಡ್ಡ ಮಾತು? ಅದರ ಕೊರಕೆಯೊಂದೇ ನಿಮ್ಮ ಇಷ್ಟ ಪೂರ್ತಿಯಾ
ಗಲು ಅಡ್ಡಿಯಾಗಿದ್ದರೆ ಚಿಂತಿಸಬೇಡಿ. ನಾನು ನಿಮಗೆ ಸ್ವಲ್ಪಮಟ್ಟಿಗೆ
ಸಹಾಯ ಮಾಡಬಲ್ಲೆ ನಿಜ, ನನಗೂ ಈಗ ನೀನು ದಿ ುವ
ಏರ್ಸಾಡು ಸರಿಯೆಂದು ಕಾಣುತ್ತೆ. ನಿಮ್ಮ ಮನವೊಪ್ಪಿದ ಇನ್ನೊಂದು
೧೪____________________________________________
ಹೆಣ್ಣನ್ನು ಆರಿಸಿಕೊಳ್ಳಿ; ಅವಳೊಡನೆ ಎಲ್ಲಿಯಾವರೂ ಸುಖವಾಗಿ ಭೋಜನ
ಮಾಡಿ. ಅನಂತರ ಅವಳ ಸರಸಸಲ್ಲಾಸಗಳಲ್ಲಿ- ತೋಳಸೆರೆಯಲ್ಲಿ-ೆ ಪ್ರೇಮದ
ಮರೆಯಲ್ಲಿ... ಕಾಮದ ಪಾಲಿನಲ್ಲಿ ನಿಮ್ಮ ಆ ಮಾಯಾವಿಸಿಯನ್ನು ಮರೆ
ಯಿರಿ.., ...ನಿಜ, ಇದಕ್ಕೆಲ್ಲಾ ದುಡ್ಡು ಬೇಕಾಗುತ್ತದೆ. ಸ್ವಲ್ಪ ಹೆಚ್ಚಾ
ಗಿಯೇ ಬೇಕಾಗುತ್ತದೆ. ನನ್ನ ಹತ್ತಿರ ಸದ್ಯಕ್ಕೆ ಐದು ಸಾವಿರ ರೂಪಾಯಿ
ಗಳಿವೆ. ಅವನ್ನು ನಿಮಗೆ ಈಗ ಸಾಲವಾಗ ಕೊಡುತ್ತೇನೆ. ಇನ್ನೆಂದಾದರೂ
ಹೀಗೆಯೇ ಸಿಕ್ಕಾಗ ನೀವು ಪುನಃ ನನಗೆ ಕೊಡಬಹುದು.
ಎಂದು ಹೇಳ್ಳಿ ನನ್ನ ಜೇಬಿನಲ್ಲಿದ್ದ ಒ ಒಂದು ಐದು ರೂಪಾಯಿಯ
ನೋಟನ್ನು ತೆಗೆದು ಅವನಿಗೆ ಕೊಡಹೋದೆ. ಅವನು ಕ್ಷಣಕಾಲ ಹಿಂತೆ
ಗೆದು ತೆಗೆದುಕೊಂಡ- ಉತ್ಸಾಹದಿಂದ ಉಬ್ಬಿ ಕೃತಜ್ಞತೆ ಯಿಂದ ಹೇಳಿದ
“ಅಯ್ಯಾ, ನಿಮ್ಮ ಈ ಉಪಕಾರವನ್ನು ಎಂದೆಂದಿಗೂ ಮರೆಯ
ಲಾರೆ. ಇದಕ್ಕಾ ಗಿ ನಿಮಗೆ ನನ್ನ ವಂದನೆಗಳು-ಬಹಳ-ಬಹಳ-ಬಹಳ-ವಂದನೆ
ಗಳು... ನೀವು ಇತರರ ಹಾಗಲ್ಲ. ಅದರಲ್ಲಿ ಬಹುಮಂದಿ ಮಂಕು
ಮುಸುಕಿದ ಮೂಢರು...ಆದರೆ ನಿಮ್ಮ ರೀತಿಯೇ ಬೇರೆ . ನೀವು ಕವಿ
ಗಳು! ಸ್ವಲ್ಲ ಪ್ರಯತ್ನಪಟ್ಟರೆ ನೀವೂ ಕಲ್ಪನಾಜೀವನದ ಸುಖವೇನೆಂಬು
ದನ್ನು-ಸೊಬಗೇನೆಂಬುದನ್ನು ಸವಿಯೇನೆಂಬುದನ್ನು ತಿಳಿಯಬಲ್ಲಿರಿ..
ಕೇಳಿ, ರಾಗ ರಸರಹಿತವಾದ, ಈ ಸ್ಥೂಲ ಜಗತ್ತಿನಲ್ಲಿ ಮಂಕುಜೀವಿಗಳ ಮಧ್ಯೆ
ವೈವಿಧ್ಯವಿಲ್ಲದ ಬೇಸರದ ದಿನಗಳನ್ನು ಪ್ರಯಾಸದಿಂದ ಕಳೆಯುವುದಕ್ಕಿಂತ,
ಆ ಕಲ್ಪನಾಪ್ರಪಂಚದಲ್ಲಿ ಬಾಳುವುದರ ಸುಖ ಅತ್ಯುತ್ಕಟವಾದುದು! ಕೋಟಿ
ಪಾಲಿಗೆ ಉತ್ತಮವಾದುದು; ನನ್ನ ಮಾತನ್ನು ನಂಬಿ; ಆ ಜೀವನ-ಚಿನ್ನದ
ದೋಣಿಯಲ್ಲಿ ಕುಳಿತು ಜೇನಿನ ಹೊಳೆಯಲ್ಲಿ ಮಂದಗಮನನಿಂದ ತೇಲಿ
ಹೋಗುವ-ಆ ಬಾಳು-ಅತ್ಯಂತ ರಸಪೂರ್ಣವಾದುದು ...ನೀವು ನನಗೆ ಐದು
ರೂಪಾಯಿಗಳನ್ನು ಕೊಟ್ಟಿರುತ್ತೀರಿ . ಅಲ್ಲ-ಅಲ್ಲ ಐದು ಸಾವಿರ ರೂಪಾಯಿ
ಗಳನ್ನು ಸಾಲವಾಗಿ ಕೊಟ್ಟಿರುವಿರಿ. ಇದರಿಂದ ನೀವು ನಾಕ ನರಕಗಳಗೊ
ಯ್ಯುವ ಪಥದಲ್ಲಿ ಮೊದಲಡಿಯಿಟ್ಟಂತಾಯಿತು. ಭಯಪಡಬೇಡಿ!
ಏನಾದರೂ ಆಗಲಿ, ನಿಮ್ಮ ಕಲ್ಪನೆ ನಿಮ್ಮನ್ನು ದಿವ್ಯವಾದ ಸ್ವರ್ಗಕ್ಕೊಯ್ಯಲಿ,
ಘೋರವಾದ ನರಕಕ್ಕೆ ನೂಕಲಿ, ಎಂದಿಗೂ ಮರುಗಬೇಡಿ-ಕೊರಗಬೇಡಿ,
೧೫--------------------------------------------------------
ಪಶ್ಚಾತ್ತಾಪ ಪಡಬೇಡಿ,............ನೋಡಿ ಅವರೆಲ್ಲಾ ''--ಎಂದು ದೂರದಲ್ಲಿ
ಅಲ್ಲಲ್ಲಿ ಕುಳಿತಿದ್ದವರನ್ನೂ, ಸುಳಿದಾಡುತ್ತಿದ್ದವರನ್ನೂ ಕೈಬೀಸಿ ತೋರಿ
ಸುತ್ತ ಸಜೀವ ಜೀವಿಗಳೇ ಅಲ್ಲ!.. ಅವರ ಬಾಳೊಂದು ಬಾಳೇ.
ಹುಂ! ಎನ್ನುತ್ತ ಎದ್ದು ನಿಕೃಷ್ಟ ಭಾವದಿಂದ ಮುಗುಳುನಗೆ ನಗುತ್ತ-
"ನಾವು-ಕವಿಗಳು-ನಾನು ಮಾತ್ರ ಸಜೀವ ಜೀವಿಗಳು! ..ನಮ್ಮ ಬಾಳೇ
ಬಾಳು!!"
-ಎಂದು ಹೆಮ್ಮೆಯಿಂದ ತಲೆಯೆತ್ತಿ ಎದೆಯನ್ನು ತಟ್ಟಿಕೊಂಡ.
ಅನಂತರ ಕೈಮುಗಿದು, “ ಅಯ್ಯಾ, ಹೋಗಿ ಬರುತ್ತೇನೆ; ಜ್ಞಾಪಕ
ವಿರಲಿ. ಮತ್ತೊಮ್ಮೆ ಭೇಟಿಯಾಗೋಣ.''
-ಎಂದು ಹೇಳಿ ನಿದಾನವಾಗಿ ಹೊರಟುಹೋದ. ನಾನು ಅವನು
ಹೋಗುತ್ತಿದ್ದುದನ್ನೇ ನೋಡುತ್ತ ಕುಳಿತೆ. ತಲೆಬಗ್ಗಿಸಿ, ಬಾಗಿದ ಬೆನ್ನ
ಹಿಂದೆ ಕೈಗಳನ್ನು ಜೋಡಿಸಿಕೂಂಡು ಹೋಗುತ್ತಿದ್ದ ಆ ವೃದ್ಧನನ್ನು
ಕಣ್ಮರೆಯಾಗುವವರೆಗೂ ನೋಡುತ್ತ ಕುಳಿತೆ.
ಎಂತಹ ಬಾಳು!
ಅವನ ಸುಖ ಯಾರಿಗೂ ಇರಲಾರದು; ಅನನ ದುಃಖವೂ ಅಷ್ಟೆ!
=============================================
ರೂಪಾರಾಧನೆ*
ಸ್ತ್ರೀ ರೂಪಮೆ ರೂಪಂ
-ನೇಮಿಚಂದ್ರ
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು, ನಾನು ಆಗ ತಾನೆ
ಹುಡುಗಾಟಿಕೆಯ ಸೀಮೆಯನ್ನು ದಾಟಿ ಹೊಸ ಪ್ರಾಯದ ಗಡಿಯೊಳಗೆ
ಕಾಲಿಡುವ ಕಾಲ. ಒಂದು ಹೆಜ್ಜೆಯ ನನ್ನು ಪ್ರಾಯದಲ್ಲಿ ಊರಿ, ಇನ್ನೊಂದನ್ನು
..................
* ಲೂಯಿ ಕೌಪೆರಸ್ ಎಂಬ ಡಚ್ ಕಥೆಗಾರನ "ದಿ ಫೋಟೋ ಗ್ರಾಫ್'' ಎಂಬ
ಕಥೆಯ ಇಂಗ್ಲಿಷ್ ಭಾಷಾಂತರದ ಕನ್ನಡ ಜನ್ಮ- ಈ ಕಥೆ
೧೬ -------------------------------------------------------
ಹುಡುಗಾಟಿಕೆಯಿಂದ ತೆಗೆಯುವುದರಲ್ಲಿದ್ದ ಆ ಸಂಧಿಕಾಲದಲ್ಲಿ ನನಗೂ ಅನ
ನಿಗೂ ಪರಿಚಯವಾಯಿತು-ಗೆಳೆತನದ ನಂಟು ಬಿತ್ತು.
ಈಗ ನೆನೆಸಿಕೊಂಡರೆ, ಒಂದು ದೃಷ್ಟಿಯಿಂದ ಆ ಸಂಧಿಕಾಲ ನಮ್ಮ
ಜೀವನದಲ್ಲಿ ಬಹಳ ಸುಖದ ಕಾಲ ಎನಿಸುತ್ತದೆ. ಪ್ರಾಯಶಃ ಬಹುಮಂದಿಗೆ
ಹಾಗೆಯೇ ತೋರಬಹುದು, ಎಂದು ಭಾವಿಸುತ್ತೇನೆ. ಆಗ ನಮ್ಮಲ್ಲಿ ಬೇರೆ
ಯಾವುದೋ ಆತ್ಮವೊಂದು ಬಂದು ನೆಲಸಿದಂತೆ ಅನುಭವವಾಗುತ್ತದೆ.
ನಮ್ಮ ನೋಟಗಳಲ್ಲಿ, ಕನಸುಗಳಲ್ಲಿ, ಯೋಚನೆಗಳಲ್ಲಿ ಆಸೆ ಆಕಾಂಕ್ಷೆಗಳಲ್ಲಿ
ಭಾವನೆಗಳಲ್ಲಿ, ಸಂದೇಹಗಳಲ್ಲಿ ರಾಗದ್ವೇಷಗಳಲ್ಲಿ, ಇಷ್ಟಾನಿಷ್ಟಗಳಲ್ಲಿ ನಮ್ಮ
ನೂರಾರು ಅವ್ಯಕ್ತ-ಅಸ್ಫುಟ ಆದರ್ಶಗಳಲ್ಲಿ-ಎಲ್ಲದರಲ್ಲೂ ಹೊಸದೊಂದು
ಹುರುಪು ಮೂಡುತ್ತದೆ. ಜ್ಞಾನ ವಿಜ್ಞಾನ, ಸಾಹಿತ್ಯ-ಕಲೆ, ರಾಜಕೀಯ.
ಸಾಮಾಜಿಕ, ಸತ್ಯ- ಸೌಂದರ್ಯ ಇವು ಒಂದೊಂದರಲ್ಲೂ ಎಲ್ಲದರಲ್ಲೂ
ಆದರ್ಶವನ್ನು ಹುಡುಕಲು ತುದಿಗಾಲ ಮೇಲೆ ನಿಂತು ತೋಳನ್ನು ಚಾಚು
ತ್ತೇವೆ. ಈ ಎಲ್ಲ ಪ್ರಯತ್ನಗಳ-ಉನ್ನತವಾದ ಭಾವನೆಗಳ-ಅತಿತೊಡಕಾದ
ಆಳವಾದ ಚಿಂತನೆಗಳ ಅಂತರಾಳದಲ್ಲಿ, ಅತ್ಯಾಶ್ಚರ್ಯಕರವಾದುದೊಂದು
ಅಂಕುರಿಸುತ್ತದೆ. ಅದು ನಮ್ಮ ಮೊದಲನೆಯ ಒಲವು! ಮೊಟ್ಟ ಮೊದಲ
ನೆಯ ಒಲವು!!...
ನಾನಿಲ್ಲಿ ವರ್ಣಿಸಬೇಕೆಂದಿರುವುದು ಆ ನನ್ನ ಗೆಳೆಯನ ಅಂತಹ ಒಲ
ವಿನ ಎರಡು ಚಿತ್ರಗಳನ್ನ.
ಮೊದಲನೆಯದರ ಕಾಲ ಇಪ್ಪತ್ತು ವರ್ಷಗಳ ಹಿಂದೆ. ಆಗ ನಾನು
ಬೆಂಗಳೂರಲ್ಲಿ ಒಂದೇ ಸ್ಕೂಲಿನಲ್ಲಿ ಓದುತ್ತಿದ್ದೆವು. ಆಗ ಇಬ್ಬರಿಗೂ ಹೆಚ್ಚು
ಕಡಿಮೆ ಒಂದೇ ವಯಸ್ಸು-ಸುಮಾರು ಹದಿನಾರು ಹದಿನೇಳು ವರ್ಷಗಳು.
ಒಂದೇ ತರಗತಿಯಲ್ಲಿ ಒಟ್ಟಿಗೆ ಕುಳಿತು ಕಲಿಯುತ್ತಿದ್ದೆವು. ನಮ್ಮಿಬ್ಬರ
ಸ್ವಭಾವಗಳೂ ಪರಸ್ಪರ ಒಗ್ಗಿಹೋಗಿದ್ದವು. ಬಿಡುವಾಗಿ ಒಟ್ಟಿಗೆ ಕಲೆತಾಗ
ಲೆಲ್ಲಾ, ಒಬ್ಬರಿಗೊಬ್ಬರು ಮನಸ್ಸು ಬಿಚ್ಚಿ ಮಾತನಾಡುತ್ತ, ಆ ಮೂಲಕ
ಒಬ್ಬರ ವ್ಯಕ್ತಿತ್ವವನ್ನೊಬ್ಬರು ಪರಿಚಯಮಾಡಿಕೊಳ್ಳುತ್ತಿದ್ದೆವು, ನಾವು
ನೋಡಿದ ನೋಟ, ಕಂಡ ಕನಸು ಸವಿದ ಸಾಹಿತ್ಯ, ಅನುಭವಿಸಿದ ಸುಖ
ದುಃಖಗಳು, ಮೂಡಿದ ಆಕಾಂಕ್ಷೆ ಆದರ್ಶಗಳು-ಇವುಗಳ ವರ್ಣನೆ ಚರ್ಚೆ
೧೭ ------------------------------------------------------------
ಗಳಿಂದ ನಮ್ಮ ವಿರಾಮಕಾಲವನ್ನು ತುಂಬಿ ತೃಪ್ತಿ ಪಡುತ್ತಿದ್ದೆವು. ಅಂತಹ
ಸುಖಮಯವಾದ ಕಾಲದಲ್ಲಿ ಒಂದು ದಿನ ಸಂಜೆ, ನಾವಿಬ್ಬರೂ ಲಾಲ್
ಬಾಗಿನ * ದಕ್ಷಿಣ ಮೂಲೆಯಲ್ಲಿ ಒಂದು ಮರದಡಿ ಹುಲ್ಲಿನ ಮೇಲೆ ಕುಳಿತು
ಮಾತನಾಡುತ್ತಿದ್ದೆವು. ನನ್ನ ಗೆಳೆಯ ಅದೇ ದಿನ ಬೆಳಿಗ್ಯೆ ವೃತ್ತಪತ್ರಿಕೆ
ಯೊಂದರಲ್ಲಿ, ಅಮೆರಿಕದ ಖಗೋಳ ವಿಜ್ಞಾನಿಯೊಬ್ಬನು, ಅನೇಕಾನೇಕ
ಕೋಟ ಮೈಲಿಗಳಾಚೆ ಇದ್ದ ಒಂದು ನಕ್ಷತ್ರವನ್ನು, ಕಂಡುಹಿಡಿದುದರ ವಿಷ
ಯವನ್ನು ಓದಿದ್ದ. ವಿಜ್ಞಾನ ಪ್ರಪಂಚದ ಆ ಅದ್ಭುತ ವಿಷಯದೊಡನೆ
ಪ್ರಾರಂಭವಾದ ನಮ್ಮ ಮಾತು, ಭಗವಂತನ ಮತ್ತು ಅವನ ಸೃಷ್ಟಿಯ ಕಡೆ
ತಿರುಗಿತು. ಅನನ ಈ ವಿಚಿತ್ರ ವಾದ ಸೃಷ್ಟಿಯಲಿ, ಸುಖ ದುಃಖಗಳ- ಪ್ರೀತಿ
ದ್ವೇಷಗಳ- ಸೌಂದರ್ಯ ನಿರಾಸೆಗಳ- ರೌದ್ರ ಸೌಮ್ಯಗಳ- ಅಣು ಅಗಾಧ
ಗಳ ಸಮರ ಸಮನ್ವಯಗಳನ್ನು ವಿಮರ್ಶೆಮಾಡತೊಡಗಿದೆವು. ಮಾತಿನ
ಸರಣಿ ಬರಬರುತ್ತ ಸಮಾನವಾಗಿ ಹೊರಗಣ ಜಗತ್ತನ್ನು ಬಿಟ್ಟು ನಮ್ಮ
ಅಂತರಂಗವನ್ನು ಮುಟ್ಟಿತು. ನನ್ನೆದೆಗಳಲ್ಲಿ ಅಂಕುರಿಸಿದ ಮೊಟ್ಟ ಮೊದಲ
ಪ್ರೇಮದ ಮಾತು ಬಂತು........ ನಮ್ಮ ಮೊಟ್ಟ ಮೊದಲ ಪ್ರೇಮ! _
ಅಹಾ!- ನಮ್ಮ ಮೊಟ್ಟ ಮೊದಲ ಹುಚ್ಚುತನ!” ಕೆಲವು ವರ್ಷಗಳ
ಮೇಲೆ ನೆನೆಸಿಕೊಂಡರೆ, ನಮಗೆ ನಾವೇ ಮುಗುಳು ನಗೆ ನಕು, ನಾಚಿಕೆ
ಯಿಂದ ತಲೆ- ತಟ್ಟಿಕೊಂಡು-ತಗ್ಗಿಸುವಂತಹ- ಆ ಹಿಂದುಮುಂದಿಲ್ಲದ
ಹುಚ್ಚುತನ !......ನನ್ನ ಗೆಳೆಯ ಅಂದು ಸಾಯಂಕಾಲ ತನ್ನ ಪ್ರಥಮ
ಪ್ರೇಮಾಂಕುರದ ಸವಿಯನ್ನು ಮನತಣಿಯೆ ವರ್ಣಿಸಿದ.
ಅವಳು ಇನ್ನೂ ಕೃಷಿಯಿಲ್ಲದ ಅವನ ಹೃದಯ ಭೂಮಿಯಲ್ಲಿ
ಪ್ರೇಮದ ಬಿತ್ತವನ್ನು ಮೊಟ್ಟಮೊದಲು ಬಿತ್ತಿದ- ಅವಳು- ಹದಿನಾರು
ವಸಂತಗಳ ಸೊಬಗು- ಸೊಂಪು- ಪೆಂಪುಗಳು ಒಟ್ಟುಗೂಡಿ ಮೈವೆತ್ತ
ಮನಮೋಹಕ ಮೂರ್ತಿಯೆಂದು ಮುನ್ನುಡಿ ಹೇಳಿ, ಅವಳ ರೂಪಜಾಲದ
ಒಂದೊಂದು ಎಳೆಯನ್ನೂ ವರ್ಣಿಸಲಾರಂಭಿಸಿದ. ಅವಳ ಮುಖದ
ಚೆಲುವು, ಅವಳ ಕಬರಿಯ ಸೊಬಗು, ಅವಳ ಹಣ್ಣುಕೇತಕಿಯ ಮೈಬಣ್ಣ,
...............
*ಬೆಂಗಳೂರಿನ ಅಗ್ನೇಯ ಮೂಲೆಯಲ್ಲಿರುವ ಒಂದು ರಮಣೀಯವಾದ
ಉದ್ಯಾನವನ,
೧೮----------------------------------------------------------
ಚೆಂದುಟಿಗಳ ಚಿರಮಂದಹಾಸ, ಮುಂಗುರುಳ ಲೀಲೆ, ಅದರಡಿ ವಿಶಾಲ
ವಾದ ಸುಂದರವಾದ ಅವಳ ಹಣೆ, ಅದರ ಮೇಲೆ ನೋಟವನ್ನು ಹಿಡಿದು
ನಿಲ್ಲಿಸುವ ಕುಂಕುಮದ ಬೊಟ್ಟು, ಎರಡು ಕಡೆಗೂ ಸಮನಾಗಿ ನೀಳವಾಗಿ
ಬಾಗಿದ್ದ ಹುಬ್ಬಿನ ರೇಖೆಗಳು, ಆ ಬೊಗಸೆಗಣ್ಣುಗಳು, ಅವುಗಳಲ್ಲಿ ಮರಿ
ಮಿಂಚುಗಳ ಚಂಚಲ ನರ್ತನ, ಇತ್ಯಾದಿ ಇತ್ಯಾದಿಗಳನ್ನು ಒಂದೊಂದಾಗಿ-
ಹುಡುಗರು ನಾಲಗೆಯ ಮೇಲೆ ಪೆಪ್ಪರಮೆಂಟನ್ನು ಹೊರಳಿಸಿ ಹೊರಳಿಸಿ
ಸವಿಯುವಂತೆ- ಸಾವಧಾನವಾಗಿ ವರ್ಣಿಸಿದ. ಅನಂತರ ಅವಳ ಉಡಿಗೆ
ತೊಡಿಗೆಗಳ ಮಾತು ತೆಗೆದು, ಅವಳು ಸಾಧಾರಣವಾಗಿ ಎರಡು ಬೆರಳು
ಸರಿಗೆಯಂಚಿನ ಅಚ್ಚಗಪ್ಪು ರೇಷ್ಮೆ ಸೀರೆಯನ್ನುಟ್ಟು, ಬಿಳಿ ಮಲ್ಲಿನ ರವಿಕೆ
ಯನ್ನು ತೊಡುತ್ತಾಳೆಂದೂ, ಒಂದೊಂದು ಸಲ ಅಚ್ಚ ನೀಲಿ ಸೀರೆಯನ್ನುಟ್ಟು
ತಿಳಿಹಳದಿಯ ರವಿಕೆ ತೊಡುತ್ತಾಳೆಂದೂ ಹೇಳಿದ. ಸಮನಾಗಿ ಹೆಜ್ಜೆ
ಯಿಟ್ಟು ನಡೆಯುವ ಅವಳ ಮಂದಗಮನವು ಅನುರಾಗಕ್ಕೆ ತಾಳದಂತಿರು
ವುದೆಂದೂ, ಅವಳ ತುದಿಗಾಲ ತಳಿರ ತಾಡನಕ್ಕೆ ಸಿಕ್ಕು ಆಡುವ ನಿರಿಯ
ಚಲನವೈಖರಿಯನ್ನು ವರ್ಣಿಸುವುದು ಅಸಾಧ್ಯವೆಂದೂ ಬಾಯಿತುಂಬಾ
ವರ್ಣಿಸಿದ. ನನ್ನ ಗೆಳೆಯನ ಈ ವರ್ಣನೆಗಳು ನನ್ನ ಮನಸ್ಸಿಗೆ ಅಷ್ಟೇನೂ
ಹಿಡಿಸಲಲ್ಲ, ಅವನು ಬರೀ ಅವಳ ರೂವವರ್ಣನೆಯಲ್ಲಿಯೇ ಬಹಳ ತೃಪ್ತಿ
ಪಡುತ್ತಿದ್ದಂತೆ ತೋರಿತು. ಅದನ್ನು ಮುಗಿಸಿ, ಅವಳ ಗುಣ, ವಿದ್ಯ,
ಅವಳ ಅಂತರಂಗ ವ್ಯಕ್ತಿತ್ವ. ಅವಳ ಸರಸ ವಿನೋದಗಳು. ರಸಿಕತ್ವ ಇವು
ಗಳ ವಿಷಯವಾಗಿ ಏನನ್ನಾದರೂ ಹೇಳುವನೇನೋ ಎಂದು ನಿರೀಕ್ಷಿಸು
ತ್ತಿದ್ದೆ. ಆದರೆ ಅವನು ಅವುಗಳ ಗೋಜಿಗೇ ಹೋಗಲಿಲ್ಲ ; ಅದರ ಬದಲು,
ಅವಳ ರೂಪದ ಪ್ರತಿ ಅಂಶವನ್ನೂ ಪುನಃ ಪುನಃ ವರ್ಣಿಸಿದ. ಅದಕ್ಕಿಂತ
ನನ್ನ ಪ್ರಥಮ ಪ್ರೇಮಾನುಭವವೇ ಹೆಚ್ಚು ಕೌತುಕಮಯವಾಗಿದ್ದಂತೆ
ತೋರಿತು. ಕೇಳಿದ್ದನ್ನೇ ಕೇಳುವ ಬದಲು, ನನ್ನ ಅನುಭವವನ್ನು ಅವನಿಗೆ
ಹೇಳೋಣವೆನ್ನಿಸಿತು. ಆದರೆ ತನ್ನ ಪ್ರೇಯಸಿಯ ವರ್ಣನೆಯ ಬಿಸಿಯ
ಲ್ಲಿದ್ದ ನನ್ನ ಗೆಳೆಯನ ಮುಖದ ಮೇಲೆ ತಣ್ಣೀರೆರಚಲು ಹಿಂತೆಗೆದು, ಅವನ
ಮಾತುಗಳನ್ನು ತಡೆಯದೆ ತಾಳ್ಮೆಯಿಂದ ಕೇಳುತ್ತ ಕುಳಿತೆ. ಅವಳು
ಭೂಲೋಕದ ಜನರಿಗೆ ನಭೋಲೋಕದ ಸೌಂದಯ್ಯಸಾರವನ್ನು ಪರಿಚಯ
೧೯ --------------------------------------------------------------
ಮಾಡಿಕೊಡುವುದಕ್ಕೋಸ್ಕರವೇ ಅವತರಿಸಿದ ಅಮರಾಂಗನೆಯ ಹಾಗೂ,
ತಾನು ಆಕೆಯ ಪದತಲದಲ್ಲಿ ತನ್ನ ತರುಣ ತನುಮನಗಳನ್ನು ಅರ್ಪಿಸಿದ,
ಆರಾಧಕನ ಹಾಗೂ, ಭಾಸವಾಗುವಂತೆ ವರ್ಣಿಸಿದ........ಆಗ, ಇದ್ದಕ್ಕಿದ್ದ
ಹಾಗೆಯೇ ಸ್ವಲ್ಪ ಮುಂದಕ್ಕೆ ಬಾಗಿ,, ನನ್ನ ಕೈಹಿಡಿದು, ತಗ್ಗಿದ ದನಿಯಲ್ಲಿ ಉತ್ಸಾಹದಿಂದ ಹಳಿದ :
"ಅಗೋ, ಅಲ್ಲಿ ಬರುತ್ತಾ ಇದಾಳೆ ನೋಡು !”-ಎಂದು.
ನಾನು ಅವನು ತೋರಿಸಿದ ಕಡೆ ನೋಡಿದೆ. ನಾವು ಕುಳಿತಿದ್ದ ಸ್ಥಳಕ್ಕೆ
ಎದುರಾಗಿ ದೂರದಲ್ಲಿ ಒಬ್ಬ ಬಾಲೆ ಬರುತ್ತಿದ್ದಳು. ಜೊತೆಯಲ್ಲಿ ಒಬ್ಬ
ಚಿಕ್ಕ ಹುಡುಗಿಯೂ ಒಂದು ಹೆಜ್ಜೆ ಹಿಂದೆ ಒಬ್ಬ ದಾಸಿಯೂ ಇದ್ದರು.
ನಿದಾನವಾಗಿ ನಮಗೆದುರಾಗಿಯೇ ನಡೆದು ಬರುತ್ತಿದ್ದರು. ನಾನು ನೋಡಿ
ಯೂ ನೋಡದವನ ಹಾಗೆ ನೋಡುತ್ತಿದ್ದೆ. ಅವರು ನಮ್ಮಿಂದ ಸುಮಾರು
ಇಪ್ಪತ್ತು ಗಜ ದೂರದಲ್ಲಿದ್ದಾಗ ಆ ಬಾಲೆ, ಹಸುರು ಹುಲ್ಲಿನ ಮೇಲೆ ಕುಳಿ
ತಿದ್ದ ಒಂದು ಪತಂಗವನ್ನು ನೋಡುವುದಕ್ಕೋಸ್ಕರ ಬಾಗಿದಳು. ಪತಂಗ
ಎದ್ದು ಅಲ್ಲಿಯೇ ಸುತ್ತಸುತ್ತ ಹಾರತೊಡಗಿತು. ಬಾಲೆಯೂ ಆ ಚಿಕ್ಕ
ಹುಡುಗಿಯೂ ಆ ಪಂಗದ ನರ್ತನವನ್ನು ನೋಡುತ್ತ ನಿಂತರು. ನಾನು
ನೋಡಿದೆ. ನಿಜವಾಗಿಯೂ ಆ ಬಲ ಚಲುವೆಯಾಗಿದ್ದಳು. ವಯಸ್ಸು,
ಸುಮಾರು ಹದಿಮೂರು ಹದಿನಾಲ್ಕು ವರ್ಷಗಳಿಗೆ ಮೀರಿದಂತೆ ಕಾಣಲಿಲ್ಲ.
ನನ್ನ ಗೆಳೆಯ ಹೇಳಿದಂತೆ, ಇಂದು ಅವಳು, ಅಚ್ಚ ನೀಲಿ ಸೀರೆಯನ್ನುಟ್ಟು
ತಿಳಿಹಳದಿ ರವಿಕೆಯನ್ನು ತೊಟ್ಟಿದ್ದಳು. ಅಲ್ಲಿಯೇ ಹಾರಾಡುತ್ತಿದ್ದ ಪತಂಗ
ವನ್ನು ನೋಡಲು ಒಮ್ಮೆ ತಿರುಗಿದಳು. ತಲೆಯಲ್ಲಿ ಆ ವಯಸ್ಸಿಗೆ ಮೀರಿ
ದಂಥ ದೊಡ್ಡ ತುರುಬು ಕಾಣಿಸಿತು. ಬಿಚ್ಚಿದರೆ ಹಿಮ್ಮಡಿಗೆ ಸೋಂಕುವು
ದೇನೋ ಅನ್ನುವಷ್ಟಿತ್ತು. ತುರುಬಿನ ಮೇಲು ಕಮಾನಿನಲ್ಲಿ ಎರಡು
ಮೂರು ಬಿಡಿಮಲ್ಲಿಗೆಗಳು ಸೆರೆಯಾದ ತಾರೆಗಳಂತೆ ಕಂಡವು. ಹುಡುಗಿ
ತುಂಬಾ ಚೆಲುವೆಯಾಗಿದ್ದುದೇನೋ ನಿಜ ; ಆದರೆ ನನ್ನ ಗೆಳೆಯ
ವರ್ಣಿಸಿದಷ್ಟು ರೂಪಸಿರಿ ಆಕೆಯ ಮೈಗೂಡಲು, ಇನ್ನೂ ನಾಲೈದು
ವಸಂತಗಳ ಸೇವನೆಯಾಗಬೇಕೆನ್ನುವಂತಿತ್ತು. ಚೆಲುವೆಯ ಆ ಎಳೆಯ
ಮುಖದಲ್ಲಿ, ಇನ್ನೂ ಪ್ರಣಯದ ಅರಿವಿಲ್ಲದ ಮುಗ್ಧ ಕಳೆ ರಂಜಿಸುತ್ತಿತ್ತು.
೨೦---------------------------------------------------------------------
ಬಹುಶಃ ಪ್ರಾಯದ ಭೂತಗನ್ನಡಿಯ ಮೂಲಕ ನೋಡುತ್ತಿದ್ದ ನನ್ನ ಗೆಳೆ
ಯನ ಕಣ್ಣುಗಳಿಗೆ, ಅವಳು ಅವನು ವರ್ಣಿಸಿದಷ್ಟು ರೂಪಸಿಯಾಗಿ ಕಂಡರ
ಬೇಕೆಂದುಕೊಂಡೆ. ಆದರೂ ಇಂದಲ್ಲ ನಾಳೆ ಬಾಲೆ ನೋಡುವವರ
ಕಣ್ಮನಗಳನ್ನು ಸೂರೆಗೊಳ್ಳುವ ರೂಪಲಕ್ಷ್ಮಿಯಾಗುತ್ತಾಳೆನ್ನುವುದರಲ್ಲಿ
ಸ್ವಲ್ಪವೂ ಸಂದೇಹವಿರಲಿಲ್ಲ.
ಪತಂಗವು ಎಲ್ಲಿಯೋ ಹಾರಿಹೋಯಿತು. ಬಾಲೆ, ಜೊತೆಯಲ್ಲಿದ್ದವ
ರೊಂದಿಗೆ, ಇನ್ನು ನಾಲ್ಕಾರು ಹೆಜ್ಜೆ ನಮಗೆ ಸಮೀಪವಾದಳು. ನನ್ನ ಗೆಳೆಯ
ತನ್ನ ಒಲವಿನ ಚೆಲುವೆಯೊಂದಿಗೆ ಮಾತನಾಡಲು ಅವಕಾಶವನ್ನು ಕಲ್ಪಿಸಿ
ಕೊಡುವ ಉದ್ದೇಶದಿಂದ, ಏನಾದರೂ ನೆವತೆಗೆದು, ಎದ್ದು ಹೋಗೋಣ
ವೆನ್ನಿಸಿತು. ಅವರು ನಾನಿದ್ದಲ್ಲಿಗೆ ಸುಮಾರು ಆರೇಳು ಮಾರು ದೂರಕ್ಕೆ
ನಿದಾನವಾಗಿ ನಡೆದು ಬಂದರು. ನಾನು ನನ್ನ ಗೆಳೆಯನ ಮುಖ ನೋಡಿದೆ.
ಅವನ ಹೃದಯದಲ್ಲಿದ್ದಿದ್ದ ಏನೋ ಗಲಿಬಿಲಿ ಅವನ ಕಣ್ಣುಗಳಲ್ಲಿ ಪ್ರಕಟ
ವಾಗಿತ್ತು. ಮುಖ ಸ್ವಲ್ಪ ಪೆಚ್ಚಾಗಿತ್ತು. ಅವಳ ರೂಪವನ್ನು ಬಾಯಿ
ತುಂಬಾ ಅಷ್ಟು ವರ್ಣಿಸಿದ ಅವನು, ಆಕೆ ಎದುರಿಗೇ ಬಂದಾಗ ಆ ಕಡೆ
ಕಣ್ಣೆತ್ತಿಯೂ ನೋಡಲಿಲ್ಲ! ಅಷ್ಟೇ ಅಲ್ಲ, ಆ ಹುಡುಗಿಯು ಕೂಡ,
ನಮ್ಮ ಕಡೆ-ನನ್ನ ಗೆಳೆಯನ ಕಡೆ-ಒಮ್ಮೆಯಾದರೂ ನೋಡಲಿಲ್ಲ!
ನೋಡುವುದು ಬೇಡ-ಆಕೆಯ ಕಡೆಗಣ್ಣ ಕಟಾಕ್ಷವೂ ಇಲ್ಲವಾಯಿತು
ಅವನಿಗೆ! ಇದೇನು ವಿಚಿತ್ರ ! ಎಂದು ನಾನು ವಿಸ್ಮಯಸಡುತ್ತಿದ್ದಂ
ತೆಯೇ ಅವರು ಸಲ್ಪ ದೂರದಲ್ಲಿ ನಮ್ಮ ಮುಂದೆಯೇ ಹಾದುಹೋದರು.
ನನ್ನ ಗೆಳೆಯನೂ ಆಕೆಯೂ ಹೀಗೆ ಒಬ್ಬರಿಗೊಬ್ಬರು ಅಪರಿಚಿತರಂತೆ
ನಡೆದುಕೊಂಡುದು ನನಗೇನೋ ಒಂದು ಒಗಟೆಯಾಗಿ ಕಂಡಿತು. ಇದರ
ಗುಟ್ಟನ್ನು ತಿಳಿಯಬೇಕೆಂದು. ಅವನನ್ನು-“ ಯಾಕೋ ಮಾತಾಡಿಸಲಿಲ್ಲ
ನಿನ್ನ-" ಎಂದು ಅಷ್ಟಕ್ಕೆ ನಿಲ್ಲಿಸಿ ಕೇಳಿದೆ.
ಎಳೆಪ್ರಾಯದ ನಿರ್ದೋಷವಾದ ನಾಟುವ ನೋಟದಿಂದ ನನ್ನನ್ನು
ನೋಡಿದ. ಇತರ ಸಂದರ್ಭಗಳಲ್ಲಿ, ಜೀವನದ ಹಲವು ಗಭೀರ ಸಮಸ್ಯೆ
ಗಳನ್ನು ಭೇದಿಸುವ ನೋಟವದು. ಕಂಪನ ಸ್ವರದಲ್ಲಿ ತಡೆತಡೆದ್ದು
ಹೇಳಿದ :
೨೧-----------------------------------------------------
“ ನನಗೆ--ನನಗೆ-ಅವಳ ಪರಿಚಯವಿಲ್ಲ........”
" ಹಾಗಾದರೆ!........
“ ದಿನಾ...... ಅವಳನ್ನು-ನೋಡುತ್ತೇನೆ-ಅಷ್ಟೆ.'' ನಾನು ಏನೂ ಉತ್ತರ
ಕೊಡಲಿಲ್ಲ.
"ಬಸವನಗುಡಿಯಲ್ಲಿ....ನಾನಿರೋ ಬೀದೀಲಿ-ದಿನಾ ನೋಡುತ್ತೇನೆ.....
ಅಷ್ಟೇ."
ಅಮೇಲೆ?
" ಅಷ್ಟೇ!”
“ ಅವಳು ಯಾರು?-ಯಾರ ಮನೆಯವಳು?"
“ ಅದು ನನಗೆ ಗೊತ್ತಿಲ್ಲ.”
“ ಮದುವೆಯಾಗಿದೆಯೇ ಅವಳಿಗೆ?”
“ ಅದೂ ನನಗೆ ತಿಳೀದು.?
ಪಾಠಕರೇ, ನಾನವನನ್ನು ಲೇವಡಿಮಾಡಲಿಲ್ಲ. ಅವನು ಕೊಟ್ಟ
ಉತ್ತರಗಳಿಂದ ನನಗೆ ಮಿತಿಮಾರಿದ ಆಶ್ಚರ್ಯವಾದುದೇನೋ ನಿಜ;
ಆದರೂ ನಾನವನನ್ನು ಪರಿಹಾಸ್ಯ ಮಾಡಲಿಲ್ಲ. ನಾನೂ ಅವನ ವಯಸ್ಸಿ
ನವನೇ ಆಗಿದ್ದೆನೆಂಬುದನ್ನು ಮರೆಯದಿರಿ. ಆ ವಯಸ್ಸಿನಲ್ಲಿ-ಭಗವಂತ
ಇದ್ದಾನೆಯೇ ಇಲ್ಲವೇ?....ಅವನ ಸ್ವರೂಪ ಸತ್ಯವೊ ಸೌಂದರ್ಯವೋ....
ಸೌಂದರ್ಯಪೂಜೆ ಭಗವಂತನ ಪೂಜೆಯಾಗುವುದೋ ಇಲ್ಲವೋ?-ಇಂತಹ
ವಿಷಯಗಳು ಅಷ್ಟೇಕೆ ?.ಎಲ್ಲ ವಿಷಯಗಳೂ ನಮ್ಮ ದೃಷ್ಟಿಯಲ್ಲಿ ಅತಿ
ಗಹನವೂ ಗುರುತರವೂ ಆಗಿರುತ್ತವೆ. ನನ್ನ ಗೆಳೆಯನ ಪ್ರೇಮದ ವಿಷಯ
ಅಂತಹುದೆಂದು ಭಾವಿಸಿದೆ. ಪರಸ್ಪರ ಪರಿಚಯವಿದ್ದವರ ಪ್ರಣಯ-
ಪ್ರೇಮಗಳು ಸಾಧಾರಣವಾದುವು. ಪ್ರಿಯವಾದ ವಸ್ತುವಿನ ಪರಿಚಯ
ಲೇಶಮಾತ್ರವೂ ಇಲ್ಲದೆ, ಅದರ ವಿಷಯದಲ್ಲಿ ಅಷ್ಟು ಪ್ರೇಮವನ್ನು ಪ್ರಕಟ
ಸುವುದೂ-ಉತ್ಸಾಹಪ್ರೇಮಗಳನ್ನು ತೋರುವುದೂ. ಜಗತ್ತಿನಲ್ಲಿ ಅಪರೂಪ.
ಯೌವನದಲ್ಲಿ ಪದಾರ್ಪಣೆ ಮಾಡುವುದರಲ್ಲಿರುವ ಯುವಕನು, ಜೀವನಕ್ಕೆ
ಸಂಬಂಧಪಟ್ಟ ಎಲ್ಲ ವಿಷಯಗಳಲ್ಲೂ ಆದರ್ಶವನ್ನು ಆರಿಸಿಕೊಂಡು ಪೂಜೆ
ಸುತ್ತಾನೆ. ಅಂತಹ ವಿಷಯಗಳಲ್ಲಿ ಹೆಣ್ಣು ಒಂದು. ಒಂದು ವಯಸ್ಸಿನಲ್ಲಿ
೨೨ --------------------------------------------------------------
ಅದು ಅತಿನಿಕಟ ಸಂಬಂಧವುಳ್ಳದ್ದು. ನನ್ನ ಗೆಳೆಯನ ಪ್ರೇಮ ಆ ಹೆಣ್ಣಿ
ನಲ್ಲಿ ತನ್ನ ಆದರ್ಶವನ್ನು ಕಂಡು ಪೂಜಿಸುವ ರೀತಿ ಎಂದು ಭಾವಿಸಿ
ಕೊಂಡೆ. ಆಗತಾನೇ ಹುಡುಗತನದ ಪೊರೆಗಳಚಿಬಿಟ್ಟಿದ್ದ ಅವನ ಹರೆಯದ
ಕಣ್ಣುಗಳಿಗೆ ಆ ಆರೆಯರಳಿದ ಚೆಲುವೆ ಸ್ರೀ ಸೌಂದರ್ಯದ ಆದರ್ಶ
ವಾಗಿ ಕಂಡುದು ಆಶ್ಚರ್ಯವಲ್ಲ. ನಾನು ಅವನ ಪ್ರಥಮ
ಪ್ರೇಮವನ್ನು ಲಘುವಾಗಿ ಕಾಣಲಿಲ್ಲ. ಲೇವಡಿಮಾಡಲಿಲ್ಲ. ಅದರ ವಿಷಯ
ವಾಗಿ ಬಹಳ ಗೌರವವನ್ನು ತೋರುತ್ತ, ಅವನ ಭಾವನೆಗಳನ್ನೆಲ್ಲ ವಿರಳ
ವಿರಳವಾಗಿ ಹಿಂಜಿ, ಅವುಗಳ ಒಂದೊಂದು ಛಾಯೆಯನ್ನೂ ಸೂಕ್ಷ್ಮವಾಗಿ
ವರ್ಣಿಸುವಂತೆ, ಕುತೂಹಲದಿಂದ- ಆದರದಿಂದ ಕೇಳಿದೆ. ಅವನು ನಿದಾನ
ವಾಗಿ ಮಾತನಾಡತೊಡಗಿದ:
"ನಿಜ ಆನಂದ-ನನಗೆ ಅವಳ ಪರಿಚಯವಿಲ್ಲ; ಅವಳ ಮನೆಯವರ
ಪರಿಚಯವೂ ಇಲ್ಲ ಅವಳಿಗೆ ಮದುವೆಯಾಗಿದೆಯೋ ಇಲ್ಲವೋ-ಅದನ್ನೂ
ಅರಿಯೆ, ಅವಳ ಹೆಸರು. ಜಾತಿ. ಕುಲ ಗೋತ್ರ ಇವೊಂದನ್ನೂ ನಾನ
ರಿಯೆ. ನನ್ನ ಪ್ರೀತಿಗೆ ಆ ಪರಿಚಯಗಳೊಂದೂ ಬೇಡ.... ಅವಳೊಡನೆ
ಮಾತನಾಡಬೇಕೆಂದು ಕನಸಿನಲ್ಲೂ ಬಯಸಿದವನಲ್ಲ!....ನಾನು ಪ್ರೀತಿಸು
ವುದು ಅವಳ ರೂಪವನ್ನು ಮಾತ್ರ!.... ಆ ರೂಪಾಮೃತದಲ್ಲಿ ನನ್ನ ಕಣ್ಣು
ಗಳನ್ನು -ಕಣ್ಣುಗಳನು ಮಾತ್ರ-ತೋಯಿಸಬೇಕೆಂಬ ಆಸೆ ಅಷ್ಟೇ! ಅವಳ
ಗುಣ, ಆಟಪಾಟ ಮಾತುಕಥೆ ಇವೊಂದೂ ನನಗೆ ಬೇಡ!........ ಹೇಳು,
ಇದು ತಪ್ಪೇ?''
“ ತಪ್ಪಲ........ ಆದರೆ... "
" ಅದರೆ-ಏನು?''
“ ನಿನ್ನ ಆಸೆ ಕಣ್ಣುಗಳ ಗಡಿಯನ್ನು ದಾಟದೆ ಇದ್ದರೆ ಮಾತ್ರ.”
"ಅಂದರೆ? "
“ ಅವುಗಳ ಹಿಂದೆ ಉಳಿದ ಇಂದ್ರಿಯಗಳು ಹೊಂಚಿ ಕಾಯದೆ ಇದ್ದರೆ
ಮಾತ್ರ ತಪ್ಪಲ್ಲ."
“ ಹಾಗಿರುವುದು ಸಾಧ್ಯವಿಲ್ಲವೇ?"
“ ಅಸಾಧ್ಯವಲ್ಲ; ದುಸ್ಸಾಧ್ಯ!
೨೩ -----------------------------------------------------------
“ ಅಂದರೆ?"
“ ರುಚಿರುಚಿಯಾದ ತಿಂಡಿಯನ್ನು ನೋಡುತ್ತಿರುವ ಹಸಿದವನ ನಾಲಗೆ
ಯಲ್ಲಿ ನೀರೂರದೆ ಇರುವುದು ಅಸಾಧ್ಯವಲ್ಲ ದುಸ್ಸಾಧ್ಯ.”
“ ನಿನ್ನ ಮಾತು ಸಾಧಾರಣವಾಗಿ ಅನ್ವಯಿಸುತ್ತದೆ ; ಆದರೆ ನನಗೆ
ಆ ಮಾತು ಅನ್ವಯಿಸುವುದಿಲ್ಲ ಎಂದು ಒತ್ತಿ ಹೇಳಬಲ್ಲೆ.”
" ಹಾಗಾದರೆ ಸಂತೋಷ; ಅಪಾಯವಿಲ್ಲ”
" ಕೇಳು, ಅವಳು ನನ್ನವಳಾಗಬೇಕೆಂಬ ಆಸೆ ಸ್ವಲ್ಪವೂ ಇಲ್ಲ. ಅವಳ
ರೂಪ ನನ್ನದಾಗಿದೆ ; ಅಷ್ಟು ಸಾಕು ನನಗೆ....... ಇಂದಲ್ಲ ನಾಳೆ ಇನ್ನೆಲ್ಲಿ
ಗಾದರೂ ಹೋಗಬಹುದು. ಅವಳು. ....ವಯಸ್ಸು ಕಳೆದ ಹಾಗೆಲ್ಲಾ ಆ
ರೂಪ ಇಳಿಮುಖವಾಗಬಹುದು; ಅದು ಶಾಶ್ವತವಲ್ಲ ಎನ್ನುವುದನ್ನು
ಬಲ್ಲೆ........... ಆದರೆ ನನ್ನ ಈ ಕಣ್ಣುಗಳಲ್ಲಿ ವಾಸಿರುವತನಕ-ಅವಳ
ಇಂದಿನ ರೂಪ, ಅಚ್ಚಳಿಯದೆ-ಮಾಸದೆ ಇರುತ್ತದೆ. ಕಾಲದ ಬಲೆಯಲ್ಲಿ
ಸಿಕ್ಕಿರುವ ನನ್ನ ಕಣ್ಣುಗಳು ಕ್ರಮೇಣ ಮಂಜಾಗುವುವು-ವಿಜ. ಆದರೆ
ಅವುಗಳಲ್ಲಿ ನೆಲೆಸಿರುವ ಅವಳ ಈಗಿನ ರೂಪ ಮಾತ್ರ, ಕಾಲದ ಬಲೆಗೆ
ಹೊರತಾಗಿ-ಸದಾ ಹೊಸತಾಗಿರುವುದು........ ಇದು ಖಂಡಿತ.”
ಅವನ ಈ ಮಾತುಗಳನ್ನು ಕೇಳಿದಮೇಲೆ ನನಗೆ ಆಶ್ಚರ್ಯವಾಗಲಿಲ್ಲ
ಅದರ ಬದಲು ಅವನ ವಿಷಯದಲ್ಲಿ ಮಂಬಾ ಗೌರವ ಉಂಟಾಯಿತು.
ಅವನ ಈ ಮೊದಲ ಪ್ರೀತಿಯೊಡನೆ ಹೋಲಿಸಲು, ನನ್ನ ಪ್ರಣಯದ ಕಥೆ
ತೀರ ಸಪ್ಪೆಯಾಗಿ ಕಂಡಿತು; ಆದುದರಿಂದ ನಾನದರ ಮಾತನ್ನೇ
ಎತ್ತಲಿಲ್ಲ.
ಇದು ನನ್ನ ಗೆಳೆಯನ ಮೊದಲನೆ ಒಲವಿನ ಚಿತ್ರ.
* * * *
ಅವನ ಎರಡನೆ ಒಲವಿನ ಕಾಲ ಸುಮಾರು ಐದಾರು ವರ್ಷಗಳ
ನಂತರ.
ಅವನೂ ನಾನೂ ಒಟ್ಟಿಗೆಯೇ ಹೈಸ್ಕೂಲಿನಿಂದ ಪಾರಾದೆವು. ನಾನು
ಬೆಂಗಳೂರಲ್ಲೇ ಉಳಿದುಕೊಂಡು, ಸೆಂಟ್ರಲ್ ಕಾಲೇಜು ಸೇರಿದೆ. ಅವನು
೨೪ -----------------------------------------------------------
ಮೈಸೂರಿಗೆ ಹೋಗಿ ಅಲ್ಲಿಯ ಕಾಲೇಜು ಸೇರಿದ. ಅವನು ಅಲ್ಲಿಗೆ
ಹೋದ ಹೊಸದರಲ್ಲಿ ಕೆಲವು ಕೆಲವು ತಿಂಗಳು ನನಗೂ ಅವನಿಗೂ ಕಾಗದ
ಪತ್ರ ನಡೆಯುತ್ತಿತ್ತು. ಆಮೇಲೆ ಅದೂ ನಿಂತು ಹೋಯಿತ್ತು ಆಗಾಗ
ಅವನ ನೆನಪು ಮಾತ್ರ ನನಗೆ ಆಗುತ್ತಿತ್ತು. ಹೀಗೆ ಪರಸ್ಪರ ವರ್ತಮಾನ
ವಿಲ್ಲದೆ ಭೇಟಿಯಿಲ್ಲದೆ ಐದಾರು ವರ್ಷಗಳು ಕಳೆದು ಹೋದವು. ನಾನು
ಆ ವೇಳೆಗೆ ಕಾಲೇಜಿನಿಂದ ಹೊರಬಿದ್ದು ಮೂರು ವರ್ಷವಾಗಿತ್ತು. ಆ
ಕಾಲದಲ್ಲಿ ನಾನೊಬ್ಬ ಹೀಚುಕಥೆಗಾರನಾಗಿದ್ದೆ ! ನನ್ನ ಲೇಖನಿಯ ಅಪ
ರಾಧಗಳು ಅಲ್ಲಲ್ಲಿ ಮಾಸಸತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದವು !
ಆ ಕಾಲದಲ್ಲಿ ಒಂದು ದಿನ ಸಾಯಂಕಾಲ, ತಲೆಯಲ್ಲೇ ಯಾವುದೋ
ಕಥೆಯನ್ನು ತಿರುವಿಹಾಕುತ್ತ, ಬಸವನಗುಡಿ ಸಾಲುಮರದ ರಸ್ತೆಯಲ್ಲಿ
ಕೋಟೆ ಕಡೆ ನಡೆದು ಬರುತ್ತಿದ್ದೆ. ಆಗ ನನಗೆದುರಾಗಿ ಬರುತ್ತಿದ್ದ !-ನನ್ನ
ಗೆಳೆಯ!!! ನನ್ನನ್ನು ಕಂಡವನೇ ಬೇಗ ಬೇಗ ಹೆಜ್ಜೆ ಹಾಕಿ ಬಂದು ನನ್ನ
ಕೈ ಹಿಡಿದು,
“ ಎಂಥಾ ಸುಯೋಗ- ಆನಂದ!” ಎಂದು ಬಹಳ ಉತ್ಸಾಹದಿಂದ
ನನ್ನ ಕೈಕುಲುಕಿದ. ನನಗೂ, ಅವನನ್ನು ಅನಿರೀಕ್ಷಿತವಾಗಿ. ಆಕಸ್ಮಿಕ
ನ ನೋಡಿದುದರಿಂದ ಬಹಳ ಸುಖವಾಯಿತು.
"ಯಾವಾಗ ಬಂದೆಯೋ?"
“ ಇವತ್ತು ಬೆಳಿಗ್ಗೆ ರೈಲಿನಲಿ ಬಂದೆ.”
"ಬೆಳೆಗ್ಯೆ ಬಂದವನು ಈಗಲೇ ನನ್ನ ನೋಡೋಕೆ ಬರೋದು?”
“ ನಿನ್ನ ಪತ್ತೆ ಹಚ್ಚುವುದಕ್ಕೆ ಇಷ್ಟು ಹೊತ್ತಾಯಿತು. ಈಗ ನಿನ್ನನ್ನೇ
ಹುಡುಕಿಕೊಂಡು. ಹೊರಟಿದ್ದೆ. ಎದುರಿಗೇ ಸಿಕ್ಕಿದೆ! ಅದೇ ಸುಯೋಗ
ಅಂದದ್ದು.”
ಈ ಐದಾರು ವರುಷಗಳು ಅವನ ಸುದ್ದಿಯೇ ಇಲ್ಲದಿದ್ದುದಕ್ಕೆ ಕಾರಣ
ವನ್ನು ಕೇಳಿದೆ. ಅವನು ಸಂಕ್ಷೇಪವಾಗಿ ಹೇಳಿದ. ಮೈಸೂರಿಗೆ ಹೋದ
ವನು ಅಲ್ಲಿ ಬಹಳ ದಿನವಿರಲಿಲ್ಲವಂತೆ. ಆಗತಾನೇ ಭಾರತದಲ್ಲಿ ರಾಜ
ಕೀಯ ಚಳವಳಿಯ ಪ್ರಚಂಡ ವಿದ್ಯುತ್ಪ್ರವಾಹವು ದೇಶದ ಮೂಲೆ
ಮೂಲೆಗೂ ಹರಡಿ, ಅದರ ಸುಳಿಗೆ ಸಿಕ್ಕಿದವರನ್ನೆಲ್ಲಾ ಕೊಚ್ಚಿಕೊಂಡು
೨೫ ------------------------------------------------------------------
ಹೋಗುತ್ತಿತ್ತು. ಹಾಗೆ ಹೋದವರಲ್ಲಿ ನನ್ನ ಗೆಳೆಯನೂ ಒಬ್ಬ. ಅವನು
ಕಾಲೇಜಿನಲ್ಲಿ ವ್ಯಾಸಂಗವನ್ನು ನಿರಾಕರಿಸಿ, ಅವನಂತೆಯೇ ನಿರಾಕರಿಸಿದ
ಇನ್ನು ಕೆಲವು ತರುಣರೊಡನೆ, ರಾಜಕೀಯ ಚಳವಳಿಯಲ್ಲಿ ಭಾಗ ವಹಿ
ಸಲು ಉತ್ತರ ಭಾರತಕ್ಕೆ ಹೊರಟುಹೋದನಂತೆ. ಆಗ ಸುಮಾರು ಆರು
ವರ್ಷಗಳ ಹಿಂದೆ ಹೋದವನು ಊರಿಗೆ ಪುನಃ ಬಂದುದು ಅವತ್ತೇ ಎಂದು
ಹೇಳಿದ.
ಈ ಆರು ವರ್ಷಗಳಲ್ಲಿ ಅವನಲ್ಲಿ ಕೆಲವು ಬದಲಾವಣೆಗಳಾಗಿದ್ದವು.
ಬಟ್ಟೆ ಬರೆಗಳ ಕಡೆ ಅಷ್ಟು ಲಕ್ಷ್ಯವಿದ್ದಂತೆ ತೋರಲಿಲ್ಲ. ಅವನು ಹಾಕಿದ್ದ
ಪೂರ್ಣ ಖಾದಿ ಉಡುಪು ದೊಗಲು ದೊಗಲಾಗಿತ್ತು! ತಲೆಯಲ್ಲಿ ಸ್ವಲ್ಪ
ಉದ್ದವಾದ ಕ್ರಾಪು ತೀರಾ ಅಲಕ್ಷ್ಯಕ್ಕೀಡಾಗಿತ್ತು! ಆಗಿಗೂ ಈಗಿಗೂ
ಅವನ ಮುಖದ್ದ ಸ್ವಲ್ಪ ಬೆಳವಣಿಗೆ ಕಾಣುತ್ತಿತ್ತು. ಅಷ್ಟೇ ಅಲ್ಲ; ಸ್ವಲ್ಪ
ಕಷ್ಟವನ್ನು ಕಂಡ ಗುರುತುಗಳೂ ಕಾಣುತ್ತಿದ್ದವು. ತುಟಯ ಮೇಲೆ
ಸಣ್ಣದಾದ ಪ್ರಾಯದ ಮೀಸೆ ಮುಖಕ್ಕೊಂದು ಗೌರವವನ್ನು ಕೊಡು
ತ್ತಿತ್ತು. ಹೊಸ ರೀತಿಯ ದೊಡ್ಡದಾದ ಕನ್ನಡಕ ಹಾಕಿದ್ದ. ಅದರ
ಹಿಂದೆ ಇದ್ದ ಕಣ್ಣುಗಳಲ್ಲಿ ಏಕೋ ದೂರ ದೃಷ್ಟಿ-ಗಹನವಾದ, ತೊಡ
ಕಾದ ಸಮಸ್ಯೆಗಳನ್ನೊಡೆಯಲೆಳಸುತ್ತಿದ್ದ-ಸ್ನಿಗ್ಧ ಗಂಭೀರ ದೃಷ್ಟಿ.
ಬಹಳ ದಿನಗಳ ಮೇಲೆ ಸಂಧಿಸಿದಾಗ ನಡೆಯಬೇಕಾದ ಕುಶಲ ಪ್ರಶ್ನೆ,
ಪರಸ್ಪರ ಕಾರ್ಯಕಲಾಪಗಳ ವಿಚಾರಣೆ, ಇತ್ಯಾದಿಗಳೆಲ್ಲವೂ ಸಂಧಿಸಿದೆಡೆ
ಯಲ್ಲಿಯೇ ಆದ ಮೇಲೆ, ಹಾಗೆಯೇ ಮಾತನಾಡುತ್ತ ಇಬ್ಬರೂ ಲಾಲ್
ಬಾಗಿನ ಕಡೆ ಹೊರಟೆವು. ದಾರಿಯಲ್ಲಿ ಮಾತು ನಿದಾನನಾಗಿ ಹಿಂದಿನ
ನೆನಪಿನ ಕಡೆ ತಿರುಗಿತು. ನಾವಿಬ್ಬರೂ ಒಟ್ಟಿಗೆ ಕಳೆದ ದಿನಗಳನ್ನು
ಜ್ಞಾಪಿಸಿಕೊಳ್ಳುತ್ತ ನಡೆದೆವು. ಅವನು ಭಾರತಕ್ಕೆ ಸ್ವಾತಂತ್ರ್ಯವನ್ನು
ಗಳಿಸಲು ಸೊಂಟಕಟ್ಟವವರ ಪಂಙ್ತಿಯನ್ನು ಸೇರಿದವನಾಗಿ, ರಾಷ್ಟ್ರೀಯ
ಭಾವನೆಯಿಂದ ತುಂಬಿ ತುಳುಕುವ ಬಿಸಿರಕ್ತದ ತರುಣನಾಗಿದ್ದ. ತನ್ನ
ಆ ರಾಷ್ಟ್ರೀಯ ದೃಷ್ಟಿಯಿಂದ ನನ್ನನ್ನು ವಿಮರ್ಶೆ ಮಾಡಿದ. ನನ್ನ ಕಥೆ
ಗಳಲ್ಲಿ ಶೃಂಗಾರ-ಪ್ರಣಯಗಳೇ ಹೆಚ್ಚೆಂದೂ, (ಈ ಮಾತು ಸ್ವಲ್ಪಮಟ್ಟಿಗೆ
ನಿಜ!) ನಾನು ಸ್ವಲ್ಪ ಸೊಗಸುಗಾರನೆಂದೂ, (ಈ ಮಾತು ನಿಜವಲ್ಲವೆಂದು
೨೬--------------------------------------------------------
ನನ್ನ ಭಾವನೆ!) ನನ್ನನ್ನು ಮೃದುವಾಗಿ ಭರ್ತನೆ ಮಾಡಿದ. ಇಷ್ಟು
ಮಾತು ಅಡುತ್ತಿದ್ದಂತೆಯೇ ಲಾಲ್‌ಬಾಗನ್ನು ತಲುಪಿ ವರ್ಷಗಳ
ಹಿಂದೆ ಆ ಸಂಜೆ, ಯಾವ ಸ್ಥಳದಲ್ಲಿ ಕುಳಿತಿದ್ದೆವೋ. ಅದೇ ಸ್ಥಳಕ್ಕೆ ಹೋಗಿ
ಕುಳಿತೆವು. ಅಲ್ಲ ಕುಳಿತೊಡನೆಯೇ ಒಬ್ಬರ ಮುಖವನ್ನೊಬ್ಬರು ನೋಡಿ
ಮುಗುಳು ನಕ್ಕೆವು! ಸ್ಥಳ ಮಾಹಾತ್ಮ್ಯೆ! ನಾನು ಅವನನ್ನು ಕೇಳಿದೆ:
"ಆ ಚಿತ್ರ ಮಾಸಿಲ್ಲವಷ್ಟೆ? ಈ ಆರು ವರ್ಷಗಳಲ್ಲಿ" ಎಂದು.
ಈ ಮಾತನ್ನೆತ್ತಿದೊಡನೆಯೇ ನನ್ನ ಗೆಳೆಯನ ರೀತಿ ಬದಲಾಯಿಸಿತು.
ಗಂಭೀರವಾಗಿ ತಲೆದೂಗಿ ಮುಗುಳು ನಗೆ ನಕ್ಕು ಹೇಳಿದ :
" ಮಾಸುವುದಷ್ಟೇ ಅಲ್ಲ--ಅಳಿಸಿಯೇ ಹೋಯ್ತು!
ನಾನು ಸ್ವಲ್ಪ ನಗುತ್ತ,--
“ ನಾನು ಆಕೆಯನ್ನು ಅವತ್ತೇ ಮೊದಲು ನೋಡಿದ್ದು ; ಅದೇ
ಕೊನೆಯ ಸಲವೂ ಆಯ್ತು. ಆದರೂ ನನ್ನ ಕಣ್ಣುಗಳು, ಆ ದಿನ
ನೋಡಿದ ರೂಪ, ಆರು ವರ್ಷಗಳ ಮೇಲೆ ಈಗಲೂ ಹಾಗೆಯೇ ನಿಂತಿದೆ !
ಅಷ್ಟೇ ಅಲ್ಲ ; ನನ್ನ ಕಥೆಯೊಂದರಲ್ಲಿ ಆ ಮೂರ್ತಿ ಚಿರಸ್ಥಾಯಿಯಾಗಿದೆ !”
ಆಗ ನನಗೆ ಹಾಗೆನ್ನಿಸಿತ್ತು ; ಆದರೆ ಈಗ ಎಷ್ಟು ಪ್ರಯತ್ನಪಟ್ಟರೂ
ಅವಳ ಆ ರೂಪದ ನೆರಳೂ ನೆನಪಾಗಲೊಲ್ಲದು.!”
" ರಾಷ್ಟ್ರೀಯ ಚಳವನ್ನು ಹುಚ್ಚುಹೊಳೆಯಲ್ಲಿ ಎಲ್ಲಾ ಕೊಚ್ಚಿ
ಕೊಂಡು ಹೋಯಿತೆಂದು ಕಾಣುತ್ತದೆ ! ... ಅವರ ರಭಸಕ್ಕೆ ತಡೆಯು
ವುದಲ್ಲ-ಲಲಿತವಾದ ಹೆರ್ಣಣಿನ ರೂಪಚಿತ್ರ!"
" ಉಹ್ಞು, ಹಾಗಲ್ಲ : ಮಿಂಚಿನ ಪ್ರಭೆಯಲ್ಲಿ ಮಿಣುಕು ದೀಪದ
ಬೆಳಕು ಅಳಿಸಿಹೋಯಿತು ! ಅಷ್ಟೆ. ಅದೆಲ್ಲಾ ಆಗಿನದೆಲ್ಲಾ ಹುಡುಗತನದ
(ಈ ಆರು ವರ್ಷಗಳಲ್ಲಿ ಬಹಳ ದೊಡ್ಡವನಾದಂತೆ !) ಹುಚ್ಚು! ....
ಆದರೆ . . . ಈಗ, ನನ್ನೆದೆಯ ಪೀಠದಲ್ಲಿ ಒಬ್ಬ ರೂಪರಾಣಿಯನ್ನು
ಪ್ರತಿಷ್ಠೆ ಮಾಡಿದ್ದೇನೆ. . . . ಅವಳ ಸಲುವಾಗಿ ನನ್ನ ಎದೆಯಲ್ಲಿ ಪ್ರೇಮ ತುಂಬಿಹೋಗಿದೆ . . . ನೀನು ನಕ್ಕರೂ ಚಿಂತೆಯಿಲ್ಲ, ಹೇಳುತ್ತೇನೆ ಕೇಳು.
ಅವಳ ರೂಪದದ್ಯಾನ ಮಾತ್ರದಿಂದ, ನನಗೊಂದು ಹೊಸ ಶಕ್ತಿ ಬಂದಂ
ತಾಗುತ್ತದೆ. ಮೈಯಲ್ಲೆಲ್ಲಾ ಮಿಂಚು ಹರಿದಾಡುತ್ತದೆ! ಕೇಳು ಆನಂದ,
೨೭----------------------------------------------------------
ಈ ಆರು ವರ್ಷಗಳಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದೇನೆ.
ಬಹಳ ಕಷ್ಟವನ್ನು ಕಂಡಿದ್ದೇನೆ. ಅವಳು ನನ್ನ ಆ ಉತ್ಸಾಹದ ನಿಧಿಯಾ
ಗಿದ್ದಾಳೆ. ನನ್ನ ಆ ಕಷ್ಟಗಳನ್ನೆಲ್ಲಾ ಹೂವಿನಂತೆ ಹಗುರ ಮಾಡಿದ್ದಾಳೆ
ಆ ರೂಪರಾಣಿ."
ಎಂದು ಹೇಳಿ, ನನ್ನ ಗೆಳೆಯ ತನ್ನ
ಈ ಹೊಸ ಪ್ರೇಮವನ್ನೂ, ಅದಕ್ಕೆ ಪಾತ್ರಳಾಗಿದ್ದ ರೂಪರಾಣಿಯನ್ನೂ
ವರ್ಣಿಸತೊಡಗಿದ. ಆರು ವರ್ಷಗಳ ಹಿಂದೆ ಇದ್ದ, ಅದೇ ಉತ್ಸಾಹದಿಂದ.
ಸಲಿಗೆಯಿಂದ ವರ್ಣಿಸಿದ. ಆಪಾದಮಸ್ತಕ ಅವಳ ರೂಪವನ್ನು, ಕಣ್ಣು
ತುಂಬಿ ತುಳುಕುವಂತೆ ಚಿತ್ರಿಸಿದ. ಅವಳ ನಡೆನುಡಿಗಳನ್ನೂ ಆಟಪಾಟಗ
ಳನ್ನೂ, ಅವಳ ಅಂತರಂಗದ ಯೋಚನೆಗಳನ್ನೂ, ಭಾವನೆಗಳನ್ನೂ, ಅವಳ
ಸ್ವಭಾವದ ವಿವಿಧ ಛಾಯೆಗಳನ್ನೂ ಚಾಚೂ ತಪ್ಪದೆ ವರ್ಣಿಸಿದ. ನಾನು
ನಾನು ತಾಳ್ಮೆಯಿಂದ (ಆರು ವರ್ಷಗಳ ಹಿಂದೆ ಕೇಳಿದಷ್ಟು ತಾಳ್ಮೆಯಿಂ
ದಲ್ಲದಿದ್ದರೂ !) ಕೇಳಿದೆ. ಹೆಣ್ಣಿನ ವರ್ಣನೆಯ ರಸದಲ್ಲಿ ಉರುಳುತ್ತಿದ್ದ
ಅವನ ನಾಲಗೆಗೆ ಅಡ್ಡಿ ಮಾಡದೆ ಅವನು ಹೇಳಿದುದನ್ನೆಲ್ಲಾ ಆದಷ್ಟು ಸಾವ
ಧಾನದಿಂದ ಕೇಳಿದೆ. ಹೇಳುವಷ್ಟನ್ನೆಲ್ಲಾ ಹೇಳಿ ಮುಗಿಸಿ ಅವನು ತನ್ನ
ಅಂಗಿಯ ಒಳಜೇಬಿಗೆ ಕೈಹಾಕಿ ಒಂದು ಚೌಕವಾದ ರೇಷ್ಮೆಯ, ಚೀಲವನ್ನು
ಈಚೆಗೆ ತೆಗೆದ. ಅದರೊಳಗಿನಿಂದ ಒಂದು ಕಾಗದದ ಚೀಲವನ್ನು ಹೊರಗೆ
ಳೆದ. ಆ ಚೀಲದಿಂದ ದಪ್ಪನಾದ ಮಡಿಸಿದ ರಟ್ಟು ತೆಗೆದ. ಆ ಮುಡಿಸಿದ
ರಟ್ಟಿನ ಒಳಭಾಗದಲ್ಲಿ ಒಂದು ಪಕ್ಕಕ್ಕೆ, ಒಬ್ಬ ಯುವತಿಯ ಫೋಟೋ
ಅ೦ಟಿಸಿತ್ತು. ನನ್ನ ಗೆಳೆಯ ರತ್ನ ವ್ಯಾಪಾರಿಯಂತೆ ಆ ರಟ್ಟಿನ ಮಡಿಕೆ
ಯನ್ನು ಜೋಪಾನವಾಗಿ ತೆರೆದು, ನನ್ನ ಕಡೆಗೆ ನೀಡಿ ಹೇಳಿದ:
" ಇದೇ ಅವಳ ಫೋಟೋ . . . ನನ್ನ ರಕ್ಷೆ! . . . ಸದಾ ನನ್ನ ಬಳಿ
ಯಲ್ಲಿ-ಇಲ್ಲಿ (ಎದೆಯನ್ನು ಮುಟ್ಟಿಕೊಂಡು ಇರುತ್ತದೆ.”
ಹೀಗೆ ಹೇಳಿ ಫೋಟೋವನ್ನು ತೋರಿಸುತ್ತ ನನ್ನನ್ನು ನಟ್ಟ ನೋಟ
ದಿಂದ ನೋಡಿದ. ನನ್ನ ಅಂತರಂಗದ ಭಾವನೆಗಳನ್ನು ನನ್ನ ಕಣ್ಣುಗಳಲ್ಲಿ,
ಹುಡುಕುತ್ತಿದ್ದಂತೆ ತೋರಿತು-ಆ ನೋಟ. ಆರು ವರ್ಷಗಳ ಹಿಂದೊಮ್ಮೆ-
ಅವನು ಅದೇ ರೀತಿಯಲ್ಲಿ ನೋಡಿದ್ದುದು ನೆನಪಾಯಿತು. ಆ ನೋಟ
೨೮ -----------------------------------------------------
ಅವನಿಗೆ ಈಗ ಸ್ವಾಭಾವಿಕವಾಗಿರಲಿಲ್ಲ. ಅದು ಬಹಳ ಬದಲಾಯಿಸಿತು.
ಅದರಲ್ಲಿ ಈಗ ಪ್ರಪಂಚದ ವಿಷಯದಲ್ಲಿ ಏನೋ ಒಂದು ಅತೃಪ್ತಿ ಕಾಣು
ತ್ತಿತ್ತು. ರಕ್ತದ ಬಿಸಿ ನೋಟದಲ್ಲಿ ಕುದಿಯುತ್ತಿದ್ದಂತೆ ಭಾಸವಾಗುತ್ತಿತ್ತು.
ಆದರೆ ಫೋಟೋವನ್ನು ತೋರಿಸಿದ ಈ ಒಂದು ಕ್ಷಣದಲ್ಲಿ ಆ
ಅತೃಪ್ತಿ- ಆ ಕುದಿಯೆಲ್ಲಾ ಮಾಯವಾಗಿ, ಆರು ವರ್ಷಗಳ ಹಿಂದಿನ- ಆ
ಹದಿನೇಳು ವರ್ಷಗಳ ಎಳೆಪ್ರಾಯದ ಸರಳ ನೋಟ ಮೂಡಿತು. ಅಂದು-
ಮೊಟ್ಟಮೊದಲು--ಆ " ಅರೆಯರಳಿದರಳ ಮೈ ತರಳೆಯೆ" ಯ ರೂಪರಸ
ದಲ್ಲಿ ತೋಯಲೆಳಸುತ್ತಿದ್ದ,--ಅದೇ ಕಣ್ಣುಗಳು, ನನ್ನನ್ನು ನೋಡುತ್ತ
ನೋಡುತ್ತ ಮುಂದಕ್ಕೆ ಬಾಗಿದ ; ಮೆಲುನಗೆ ನಗುತ್ತ, ಅರೆ ಮೃದುವಾಗಿ,
ತಗ್ಗಿದ- ಅದರೂ ಆಳವಾದ, ಗಂಭೀರವಾದ- ದನಿಯಲ್ಲಿ, ಏನೋ ಅತಿ
ರಹಸ್ಯವಾದ ವಿಚಾರವನ್ನು ನನಗೆ ಮಾತ್ರ ಹೇಳುವವನಂತೆ ಹೇಳಿದ:
" ನಾನೊಬ್ಬ ಹುಚ್ಚಾಂತ ನೀನು ಭಾವಿಸಬಹುದು :....... "
" ಇಲ್ಲ-- ಹಾಗೇಕೆ ಊಹಿಸುತ್ತಿ? ''
“ ಆಗ- ಅವಳ ಪರಿಚಯ ನನಗಿರಲಿಲ್ಲ; ಆದರೂ ಅವಳನ್ನು ನೋ
ಡಿದ್ದೆ- ಅನೇಕ ಸಲ ನೋಡಿದ್ದೆ ........."
"ಸರಿ "
"-ಆದರೆ ಈಗ....."
“ ಯಾಕೆ? ಬಹಳ ಸಂಕೋಚ? ಹೇಳು.”
" ಇವಳನ್ನ- ಇಟ್ಟು ಕೊಂಡು (ಎದೆಯನ್ನು ಮುಟ್ಟಿಕೊ
ಳ್ಳುತ್ತ) ಪೂಜಿಸುತ್ತಿರುವ. ಈ ರೂಪರತ್ನವನ್ನ- ಈ ಕಣ್ಣುಗಳು ನೋಡಿ
ಯೇ ಇಲ್ಲ!”
"ಏನು???-"
“ ಕೇಳು ಈ ಕಥೇನ, ನಾನು ಈಗ್ಯೆ ಎರಡು ವರ್ಷದ ಹಿಂದೆ ಮಂಗ
ಳೂರಿಗೆ ಹೋಗಿದ್ದೆ, ಅಲ್ಲಿ ಒಬ್ಬ ಸ್ನೇಹಿತನ ಮನೇಲಿ ಕೆಲವು ದಿನ
ಇದ್ದೆ....ಅವನ ತಂಗಿಯ ಫೋಟೋ ಇದು........ ಮೊದಲ ಸಲ ಬಂದ
ಇನ್‌ಫ್ಲೂಯಂಜಾದಲ್ಲಿ ಸತ್ತುಹೋದಳಂತೆ. ಕೇಳಿ ನನಗೆ ವ್ಯಸನವಾದರೂ
ಆಶ್ಚರ್ಯವಾಗಲಿಲ್ಲ--?
೨೯----------------------------------------------------
"ಏಕೆ?"
" ಇಷ್ಟು ರೂಪಲಾವಣ್ಯ--ಇಲ್ಲಿ ಬಹುಕಾಲ ಬಾಳತಕ್ಕದ್ದಲ್ಲ."
“ ಮದುವೆಯಾಗಿತ್ತೆ ?”
“ ಇಲ್ಲವಂತೆ. ಯೋಗ್ಯನಾದವನಿಗೆ ಕೊಡಬೇಕೆಂದು ಸ್ವಲ್ಪ ನಿದಾನಿಸಿ
ದರಂತೆ. ತಾಯಿ ತಂದೆಗಳಿಗೆ ಬಹಳ ಅಚ್ಚುಮೆಚ್ಚಿನ ಮುದ್ದುಮಗಳಾಗಿ
ದ್ದಾಳೆನ್ನುವುದು ಇವಳ ತಾಯಿಯ ವರ್ಣನೆಯಿಂದಲೇ ತಿಳಿಯಿತು.
ನಾನು ಅಲ್ಲಿ ಇದ್ದಷ್ಟು ದಿನವೂ ಆಕೆ ಕಣ್ಣೀರಿಡುತ್ತಾ ವರ್ಣಿಸಿ ವರ್ಣಿಸಿ
ಹೇಳಿದರು......... ಅವರ ಮನೆಯಲ್ಲಿ ಇವಳ ಫೋಟೋಗಳೆಷ್ಟು....... !
ಇವಳು ತೀರ ಚಿಕ್ಕವಳಾಗಿದ್ದಾಗಿನಿಂದ, (ಕೈಲಿದ್ದ ಫೋಟೋವನ್ನು ತೋರಿ
ಸುತ್ತಾ) ಈ ವಯಸ್ಸಿನ ವರೆಗೆ ತೆಗೆಸಿದ್ದ ಫೋಟೋಗಳನ್ನೆಲ್ಲಾ ಕ್ರಮವಾಗಿ
ಇಟ್ಟು ನೋಡಿದರೆ--ಜಾತಿ ಗುಲಾಬಿ ಮೊಗ್ಗು, ಕಣ್ಣೆದುರಿಗೇ ಅರಳಿದಂತೆ
ಆಗುತ್ತಿತ್ತು !........ ಒಂದು ದಿನ ಹಾಗೆಯೇ ಮಾಡಿ ತೋರಿಸಿದರು ಆಕೆ...
ನಾನು ಅವರ ಮನಕೆ ಬಿಡುವಾಗ ಇದನ್ನು ಬೇಡಿ ತೆಗೆದುಕೊಂಡು ಬಂದೆ....?
ನನ್ನ ಗೆಳೆಯನ ಮಾತುಗಳನ್ನು ಕೇಳಿ ಮೂಕನಾಗಿಬಿಟ್ಟ. ಏನೂ
ಉತ್ತರ ಕೊಡದೆ ಆ ಫೋಟೋವನ್ನು ಕೈಗೆ ತೆಗೆದುಕೊಂಡು ನೋಡಿದೆ.
ಚಿತ್ರಗತಳಾಗಿದ್ದ ಆ ಯುವತಿ, ಅತ್ಯಂತ ರೂಪವತಿಯಾಗಿದ್ದಳೆನ್ನುವುದು
ಸ್ವಯಂಪ್ರಕಾಶವಾಗುತ್ತಿತ್ತು.... ನನಗೆ ಬಹಳ ಅಶ್ಚರ್ಯವಾಯಿತು; ಆದರೆ
ರೂಪಜಾಲವನ್ನು ನೋಡಿಯಲ್ಲ.- ನನ್ನ ಗೆಳೆಯನ ಅತ್ಯಪೂರ್ವವಾದ
ಪ್ರೇಮದ ಪರಿಯನ್ನು ನೋಡಿ-ಕೇಳಿ. ನಾನು ಒಂದು ಮಾತನ್ನೂ ಆಡಲಾ
ರದವನಾಗಿಬಿಟ್ಟೆ. ಈಗಲೂ ಪರಿಹಾಸ್ಯ ಮಾಡಲಿಲ್ಲ. ಆರು ವರ್ಷಗಳ ಹಿಂದೆ
ಎಷ್ಟು ಗೌರವದಿಂದ- ವಿಶ್ವಾಸದಿಂದ ಕೇಳಿದ್ದೆನೋ ಅಷ್ಟೇ ಗೌರವ ವಿಶ್ವಾ
ಸಗಳಿಂದ ಕೇಳಿದೆ.
ಪಾಠಕರೇ, ನನ್ನ ಗೆಳೆಯನ ಈ ಎರಡನೆಯ ಪ್ರೇಮೋತ್ಸಾಹದ ಕಥೆ
ಯನ್ನು ಕೇಳಿ ಇಂದಿಗೆ ಹೆದಿಮೂರು-ಹದಿನಾಲ್ಕು ವರ್ಷಗಳಾಗಿ ಹೋಗಿವೆ.
ಆದರೆ ಈಗಲೂ ನೆನೆಸಿಕೊಂಡರೆ ಅವನ ವಿಲಕ್ಷಣವಾದ ಪ್ರೇಮ ಲಘು
ವಾಗಿ ಕಾಣುವುದಿಲ್ಲ. ನನ್ನ ಅಂದಿನ ವಯಸ್ಸಿಗೂ ಇಂದಿನ ವಯಸ್ಸಿಗೂ
ಮಧ್ಯದ ಕಾಲವಿಸ್ತಾರದಲ್ಲಿ ಜೀವನದ ಎಷ್ಟೋ ವಿಷಯಗಳ ಬೆಲೆ-
೩೦----------------------------------------------------
ಅರ್ಥಗಳು, ನನ್ನ ಭಾವನೆಯಲ್ಲೇ ತಲೆಕೆಳಗಾಗಿ ಬಿಟ್ಟಿವೆ. ಆದರೆ ಈ
ಒಂದು ವಿಷಯದಲ್ಲಿ ಮಾತ್ರ ಅವು ಪಲ್ಲಟವಾಗಿಲ್ಲ....ನಮಗೆ-ಮಾನವರಿಗೆ
ಕೆಲವು ವೇಳೆಗಳಲ್ಲಿ, ಯಾವುದು ಹಾಸ್ಯಾಸ್ಪದವೋ ಅದೇ ಆದರ್ಶವಾಗು
ತ್ತದೆ. ನಾವು ಗಂಡಸರೇ ಆಗಲಿ, ಹೆ೦ಗಸರೇ ಆಗಲಿ- ಬಾಲ್ಯದ ಗಡಿ
ಯನ್ನು ದಾಟಿದ ಮೇಲೂ ನಮ್ಮ ಸ್ವಲ್ಪ ಉಳಿದುಕೊಳ್ಳುವ ಬಾಲ್ಯ
ತನವೇ, ಕಡೆಯ ತನಕ ಮನುಷ್ಯತ್ವದ ಸಾರವಾಗಿ ನಿಲ್ಲುವುದು........
ಮಾಯೆಯ ತೆಳುವಾದ ಮುಸುಕಿನೊಳಗಿದ್ದುಕೊಂಡು, ನಮ್ಮಿಂದ ಅತಿ
ದೂರವಾದ ಸ್ವಲ್ಪವೂ ಪರಿಚಯವಿಲ್ಲದ ಒಂದು ವ್ಯಕ್ತಿಯನ್ನು ಪಡೆಯ
ಬೇಕೆಂಬ ಆಸೆಯಿಲ್ಲದೆ ಹೊಸ ಪ್ರಾಯದ ಪೂರ್ಣೋತ್ಸಾಹ-ಸರಳತೆಗಳಿ೦ದ
ಪ್ರೀತಿಸುವುದೂ, ಕಂಡರಿಯದ ನಶಿಸಿಹೋದ ಒಂದು ವ್ಯಕ್ತಿಯ ಛಾಯಾ
ರೂಪವನ್ನು ನೋಡಿ, ಗುಣಕಥನವನ್ನು ಕೇಳಿ, ಆ ವ್ಯಕ್ತಿಯನ್ನು ಕಲ್ಪನೆ
ಯಲ್ಲಿ ಪುನರ್ನಿರ್ಮಾಣಮಾಡಿ, ಹೃದಯ ವೇದಿಕೆಯಟ್ಟುಕೊಂಡು ಪೂಜಿ
ಸುವುದೂ, ಅಂತಹ ಪ್ರೀತಿ ಕ್ರೀಡೆಗಳನ್ನು ಸ್ನೇಹಿತನೊಬ್ಬನ ಉತ್ಸಾಹ
ದಿಂದ ಹೇಳಕೊಳ್ಳುವುದೂ, ಒಂದು ತೆರನ ದೌರ್ಬಲ್ಯ ಎನ್ನುವಿರೇನು ?
ನಿಜ ; ನಮ್ಮಲ್ಲಿ ಎಲ್ಲರಲ್ಲಿ ಅಲ್ಲದಿದ್ದರೂ ಅನೇಕರಲ್ಲಿ, ಕಂಡೂ ಕಾಣದಂತೆ
ಸುಳಿಯುತ್ತಿರುವ ದೌರ್ಬಲ್ಯ ! ಅವರೆಲ್ಲರೂ ನಿಮ್ಮಲ್ಲಿ ಒಪ್ಪಿಕೊಂಡದ್ದೇ
ಆದರೆ ನಿಮಗೆ ಅತ್ಯಾಶ್ಚರ್ಯವಾಗುವಂತಹ ದೌರ್ಬಲ್ಯ ! ! ಆದರೆ ಅದು
ಸರಳವಾದುದು, ಅಮಲವಾದುದು, ಅನುಕಂಪವನ್ನು ಹುಟ್ಟಿಸುವಂತ
ಹುದು....... ದೈವಿಕವಾದುದು.
೩೧---------------------------------------------------
ಚ ಪ ಲಾ
೧. ಜಯಂತನ ಮಾತು
ಬೈಕುಲಾದಲ್ಲಿದ್ದ ನನ್ನ ಗೆಳೆಯನೊಬ್ಬನನ್ನು ನೋಡಬೇಕೆಂದು
ಟ್ರಾಂ ನಿಲ್ದಾಣದಲ್ಲಿ ಗಾಡಿ ಹತ್ತಿದೆ. ಟ್ರಾಮಿನಲ್ಲಿ ಜನಸಂದಣಿ ಹೆಚ್ಚಾ
ಗಿರಲಿಲ್ಲ. ನಾನು ಹೋಗಿ ಗಾಡಿಯ ಎಡಭಾಗದ ಒಂದು ಬೆಂಚಿನ
ಮೇಲೆ ಕುಳಿತೆ. ಕುಳಿತದ್ದೇ ತಡ, ಏನೋ ಒತ್ತಿದ ಹಾಗಾಯಿತು. ಕುಳಿತ
ಹಾಗೆಯೇ ಕೈಯ್ಯಾಡಿಸಿ ಅದನ್ನು ಈಚೆಗೆ ತೆಗೆದೆ. ಒಂದು ಪುಟ್ಟ, ನಯ
ವಾದ ಕಪ್ಪು ಬಣ್ಣದ ಡೈರಿ! ಪಾಪ! ಯಾರೋ ಮರೆತು ಹೋಗಿದ್ದರು.
ನಾನು ಕೂಡಲೇ ಅದನ್ನ ಜೇಬಿಗೆ ತುರುಕಿದೆ. ಅದನ್ನು ಲಪಟಾಯಿಸ
ಬೇಕೆಂಬ ಇಷ್ಟವೇನೂ ನನಗಿರಲಿಲ್ಲ; ಅಥವಾ ಅದನ್ನ ಟ್ರಾಂ ಕಂಡಕ್ಟರಿಗೆ
ಉಡುಗೆರೆಯಾಗಿ ಕೊಡುವ ಯೋಚನೆಯೂ ನನಗೆ ಇರಲಿಲ್ಲ ; ಪುಸ್ತಕ
ದಲ್ಲಿ ಮಾಲೀಕರ ಹೆಸರು, ವಿಳಾಸ ಇದ್ದೇ ಇರುತ್ತೆ ; ಆಮೇಲೆ ನೋಡಿ,
ಅದನ್ನ ಅವರಿಗೆ ತಲುಪಿಸೋಣಾಂತ ಉದ್ದೇಶಪಟ್ಟೆ ಅಷ್ಟೆ.
ಈ ಡೈರಿ ಸಿಕ್ಕು, ನಾನು ಬೈಕುಲಾಕ್ಕೆ ಹೋಗುವುದು ನಿಂತುಹೋಯ್ತು.
ಅಲ್ಲಿಗೆ ಹೋಗಲೇ ಇಲ್ಲ ! ನನ್ನ ಕುತೂಹಲ ಕುದುರೆಯಾಯ್ತು ; ಈ
ಡೈರಿ ಅದಕ್ಕೆ ಚಾವಟಿಯಾಯಿತು ! ಇಷ್ಟಾದರೂ ಟ್ರಾಮಿನಲ್ಲೇ ಅದನ್ನ
ಈಚೆಗೆ ತೆಗೆದು ಚೆನ್ನಾಗಿ ಪರೀಕ್ಷಿಸುವ ಧೈರ್ಯ ಮಾಡಲಿಲ್ಲ. ಸ್ವಲ್ಪ
ದೂರ ಹೋಗುವುದರೊಳಗಾಗಿ ಗಾಡಿಯಿಂದ ಇಳಿದು, ಮನೆಗೆ ವಾಪಸು
ಬಂದುಬಿಟ್ಟೆ.
ಹೊಸಲೊಳಗೆ ಕಾಲಿಟ್ಟೊಡನೆಯೇ ಜೇಬಿನಿಂದ ಪ್ರಸ್ತಕ ತೆಗೆದೆ.
ಮೊದಲನೆಯ ಪುಟದಲ್ಲೇ, ಇಂಗ್ಲೀಷಿನಲ್ಲಿ ಹೆಣ್ಣಿನ ಬರವಣಿಗೆಯಲ್ಲಿ
" ಚಪಲಾ ವಾಗ್ಲೆ, ಬೊಂಬಾಯಿ " ಎಂದು ಬರೆದಿತ್ತು. ಅಷ್ಟೆ. ವಿಳಾಸದ
.................
- ಶ್ರೀಯುತ ವಿ. ಎಸ್. ಗುರ್ಜಾರ್‌ರವರ ಮರಾಠಿ ಮೂಲಕಥೆಯ ಶ್ರೀಯುತ
ಆರ್. ಕೆ ದ್ರಾವಿಡ್ ರವರ ಇಂಗ್ಲಿಷ್ ತರ್ಜುಮೆಯ ಕನ್ನಡ ಅನುವಾದ.
– ಆನ೦ದ.
೩೨-----------------------------------------------
ವಿವರಗಳೇನೂ ಇರಲಿಲ್ಲ. ಹಾಳೆಗಳನ್ನು ತಿರಿವಿಹಾಕಿದೆ. ಇಂಗ್ಲೀಷು,
ಮರಾಠಿ ಭಾಷೆಗಳಿಂದ ಆರಿಸಿ ಬರೆದುಕೊಂಡ ಪಂಕ್ತಿಗಳು ಇದ್ದವು, ಅಷ್ಟೇ
ಅಲ್ಲ !-- ಅಲ್ಲಲ್ಲಿ ಕೆಲವು ಅಂತರಂಗ ವಿಚಾರಗಳೂ ಗುರ್ತಿಸಲ್ಪಟ್ಟಿದ್ದವು!
ನಾನು ಕೂಡಲೆ ಡೈರಿಯನ್ನು ಮುಚ್ಚಿದೆ. ಕುಲೀನ ಯುವತಿಯ
ದಿನಚರಿ ಪುಸ್ತುಕದಲ್ಲಿ ಅನೇಕಾನೇಕ ಸ್ವಂತ ರಹಸ್ಯ ವಿಷಯಗಳಿರಲೇ
ಬೇಕು! ಸ್ವಾರಸ್ಯವಾದ ಮಾತುಗಳೆಷ್ಟೋ ಇರಬೇಕು! ಅವುಗಳನ್ನೆಲ್ಲಾ
ನೋಡುವುದೇ? ಛೆ!--ಎಂದಿಗೂ ಕೂಡದು! ಒಬ್ಬಳೇ ಸಿಕ್ಕಿದ
ನಿಸ್ಸಹಾಯಳಾದ --ಹುಡುಗಿಯ ಮೇಲೆ ಕೈ ಮಾಡುವಂಥ ಪೋಕರಿತನಕ್ಕೆ
ಸಮಾನ ಆದು! ಅಂಥ ದಿಟ್ಟತನವಾಗಲಿ, ಕೇಡಿಗಬುದ್ಧಿ ಯಾಗಲಿ ನನ
ಗಿರಲಿಲ್ಲ.
ನನ್ನ ಈ ಮಹಾತ್ಯಾಗಕ್ಕೆ-- ತ್ಯಾಗವೇನು! ಮಾಡಬಾರದ್ದನ್ನ ಮಾಡ
ದಿರುವುದಕ್ಕೆ !--ಇನಾಮಾಗಿ, ಆ ಪುಸ್ತುಕದಲ್ಲಿದ್ದ ಎಂಟು ಒಂದಾಣೆ
ಸ್ವಾಂಪುಗಳನ್ನು ನನಗೆ ನಾನೇ ಕೊಟ್ಟುಕೊಂಡೆ! ಇದು ಸರಿಯಲ್ಲ
ಎಂದು ಯಾರಾದರೂ ಅಂದುಕೊಳ್ಳಬಹುದು; ಒಂದು ಕೆಟ್ಟಕೆಲಸ ಮಾಡು
ವುದಕ್ಕೆ ಸೊಗಸಾದ ಆಸ್ಪದವಿದ್ದೂ, ಚಪಲವಿದ್ದೂ, ಅದನ್ನು ಮಾಡದಿರ
ಬೇಕಾದರೆ ಎಷ್ಟು ಆತ್ಮ ಸಂಯಮವಿರಬೇಕು!
ಇನ್ನು ನನಗೆ ಉಳಿದದ್ದು ಒಂದೇ ಒಂದು ಸಮಸ್ಯೆ: “ ಚಪಲಾ
ವಾಗ್ಲೆ, ಬೊಬಾಯಿ" ಎಂಬ ಈ ನಾರೀರತ್ನ ಯಾರು ?- ಎಲ್ಲಿದ್ದಾಳೆ?
ಬೊಬಾಯಿನ ಈ ಮಹಾ ಜನಸಮುದ್ರದಲ್ಲಿ ಅದನ್ನ ಹುಡುಕಿ ತೆಗೆಯುವ
ಬಗೆ ಹೇಗೆ? - ಎಂದು.
ದಿನಚರಿ ಪುಸ್ತುಕಕ್ಕೆ ನಯವಾದ, ಕಪ್ಪು ಮೊರಾಕೋ ಚರ್ಮದ
ಬೈಂಡು ಹಾಕಿತ್ತು. ಏನಿಲ್ಲಾ ಅಂದರೂ ಎಂಟು ಹತ್ತು ರೂಪಾಯಿಗಳಿಗೆ
ಕಡಿಮೆ ಬೆಲೆ ಇರಲಾರದು. ಅದರ ಒಡೆಯಳಿಗೆ ಬಹಳ ಪ್ರಿಯವಾದ
ವಸ್ತುವಾಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಪುಸ್ತುಕದಿಂದ ಒಂದು ಅಪೂರ್ವ
ವಾದ--ಅಸಾಧಾರಣವಾದ- ಸುಲಭವಾಗಿ ಗುರುತಿಸಲಾಗದ ಪರಿಮಳ,
ಇದ್ದೂ ಇಲ್ಲದಹಾಗೆ ಹೊರಸೂಸುತ್ತ, ನನಗೂ ಪುಸ್ತುಕಕ್ಕೂ ಇನ್ನೂ
ಸಾಮೀಪ್ಯವನ್ನು ಕಲ್ಪಿಸಿ ಅದರ ವಿಷಯದಲ್ಲಿ ನನಗಿದ್ದ ಚಪಲವನ್ನು
೩೩--------------------------------------------
ಮತ್ತೂ ಕೆಣಕತೊಡಗಿತು ! ಒಂದೆರಡು ಬಾರಿ ಮೂಸಿನೋಡಿ ಪರಿಮಳ
ವನ್ನು ಗುರುತಿಸುವ ಪ್ರಯತ್ನ ಮಾಡಿದೆ; ಬೇಗ ಸಿಕ್ಕದು. ಅಂಗಡಿ
ಗಳಲ್ಲಿ ಸಿಕ್ಕುವ ಅಗ್ಗದ ಸೆಂಟುಗಳಲ್ಲವೆಂಬುದು ಖಂಡಿತವಾಯಿತು. ಮತ್ತೆ?
ಯಾವುದೋ, ಬಹುಕಾಲ ನಿಲ್ಲುವ, ಕುಸುಮಕೇಸರದ ಪರಾಗ ಪರಿಮಳ.
ಯಾವುದು? ಫಲಿತ ಕೇತಕಿಯ ಕನಕ ಪರಾಗವೆ? ಮತ್ತಿರಡು ಬಾರಿ
ಮೂಸಿನೋಡಿದೆ. ಉಹುಂ! ಅಲ್ಲ. ಅರೆಬಿರಿದ ಸುರಯೀ ಹೃದಯ
ಪರಾಗವೇ? ಉಂ? ಹೌದು ಹೌದು! ಇದು ಸುರಯೀ ಸೌರಭ. ಸುರ
ಯಿಯ ಹೂ ಒಣಗಿದರೂ ಪರಿಮಳ ಇಂಗುವುದಿಲ್ಲ. ಸುರಯಿ ಸ್ವಲ್ಪ
ಅಪೂರ್ವವಾದ ಹೂವೇ. ಪರಿಮಳದ ವಿಷಯದಲ್ಲಿ ಇಂಥ ಅಪೂರ್ವ
ವಾದ ಅಭಿರುಚಿಯುಳ್ಳ ಸ್ತ್ರೀಯ ಉಡಿಗೆತೊಡಿಗೆಗಳಲ್ಲಿ ಇನ್ನೆಂಥ ನಯವಿರ
ಬೇಕು !..-ಎಂಥ ಲಾವಣ್ಯವಿರಬಹುದು? ಈ ಹುಡುಗಿಗೆ ಮದುವೆಯಾಗಿ
ದೆಯೇ? ಬಹುಶಃ ಇರಲಾರದು. ಅದಕ್ಕೇ ತನ್ನ ಹೃದಯದ ಅಂತರಂಗ
ವನ್ನೆಲ್ಲಾ ಈ ಪುಸ್ತುಕಕ್ಕೆ ಒಪ್ಪಿಸಿದ್ದಾಳೆ. ಮದುವೆಯೆ ಹಾಗಿದ್ದರೆ ಗಂಡನ
ಕಿವಿಯೇ ‘ಡೈರಿ'ಯಾಗುತ್ತಿತ್ತು!
ಚಪಲಾ ಕುಮಾರಿಯ ವಿಷಯವಾಗಿ ಇನ್ನೂ ಹೆಚ್ಚಾಗಿ ಸಮಾಚಾರ
ತಿಳಿದು ಕೊಳ್ಳಬೇಕಾಗಿದ್ದಿದ್ದರೆ, ಆಕೆ ಪ್ರಸ್ತಕಕ್ಕೆ ಒಪ್ಪಿಸಿದ್ದ “ ಅಂತರಂಗ”
ವನ್ನು ಪ್ರವೇಶಿಸದೆ ಆಗುತ್ತಿರಲಿಲ್ಲ. ನಿಜವನ್ನು ಒಪ್ಪಿಕೊಳ್ಳಬೇಕಾದರೆ,
ಪುಸ್ತಕದ ಒಳಗಿದ್ದುದನ್ನೆಲ್ಲಾ ಓದಿಬಿಡಬೇಕೆಂಬ ಕೆಟ್ಟ ಕುತೂಹಲ
ನನ್ನನ್ನು ಕಿತ್ತು ತಿನ್ನುತ್ತಿತ್ತು ! ಆದರೆ ಹೇಗೋ ಬಹಳ ಕಷ್ಟದಿಂದ
ಅದನ್ನು ತುಳಿದಿಟ್ಟಿದ್ದೆ.
ಡೈರಿಯ ಮಾಲೀಕ ವಿಳಾಸ ತಿಳಿಯದೆ, ಮನಸ್ಸು ಪೀಕಲಾಟಕ್ಕೆ ಸಿಕ್ಕಿ
ರಲು, ಪುಸ್ತಕವನ್ನು ಹಾಗೆಯೇ ಕೈಯಿಂದ ಕೈಯಿಗೆ ಆಡಿಸುತ್ತ ಕುಳಿತೆ.
ಪುಸ್ತುಕದ ಒಂದುಕಡೆಯ ರಟ್ಟಿನ ಒಳಮುುಖಕ್ಕೆ ಅಂಟಿಕೊಂಡಂತೆ ಇದ್ದ
ಜೇಬಿನೊಳಗೆ ಏನೋ ಇದ್ದ ಹಾಗೆ ಕಾಣಿಸಿತು. ಜೇಬನ್ನು ಸ್ವಲ್ಪ ಓರೆ
ಮಾಡಿ ನೋಡಿದೆ. ಯಾವುದೋ ಸಣ್ಣ ಚಿತ್ರವಂತೆ ಕಂಡಿತ. ಈಚೆಗೆ ತೆಗೆದೆ.
ಆಹಾ! ನಯನಮನೋಹರ ರೂಸಸಿಯೋರ್ವಳ ಚಿತ್ರ !-ಫೋಟೋ
ತೆಗೆದ ಚಿತ್ರ. ತಲೆ, ಭುಜಗಳು ಅಷ್ಟನ್ನೇ ತೆಗೆದ ಚಿತ್ರ. ಆದರ ಒಂದು
೩೪ -------------------------------------------
ಮೂಲೆಯಲ್ಲಿ “ ಪ್ರೇಮದಿಂದ--ಚಪಲಾ”--ಎಂದು ಬರೆದಿತ್ತು. ಪುಸ್ತುಕ
ಯಾರದ್ದೋ ಫೋಟೋನೂ ಆಕೆಯದೇಸಂಜೀಹವಿಲ್ಲ. ಹೆಸರು ಗೊತ್ತಾ
ಯಿತು ರೂಪದ ಪರಿಚಯವಾಯಿತು ! ಆಹಾ! ಎಂತಹ ರೂಪರಾಶಿ!
ತುಟಿಗಳಲ್ಲದೇನು ಮೆಲುನಗೆಯ ಮಧುಲೇಪ! ಮುಖವನ್ನು ಸ್ವಲ್ಪ
ಮಾತ್ರ ಬಲಕ್ಕೆ ಓರೆಮಾಡಿ, ಆ ಕಪ್ಪಾದ ಆಲಿಗಳನ್ನು--ಆ ಬೊಗಸೆಗಣ್ಣು
ಗಳ ಎಡದ ಮೂಲೆಗೆ ತಂದು ನಿಲಿಸಿರುವ ನೋಟದಲ್ಲಿ ಏನು ಸೆಳೆತ! ಸೆಳೆ
ಮಿಂಚಿನ ಕುಡಿಯನ್ನು ಕೊಯ್ದು ಅಂಟಿಸಿದಂತಿದ್ದ--ಆ ನೀಳವಾಗಿ ಬಾಗಿದ
ನಡು ಬೈ ತಲೆಯ ಬೆಳ್ಳಿ ಗೆರೆಯ ವೈಖರಿಯೇನು! ಓರೆಯಾದ ತಲೆಯ
ಹಿಂದಿನಿಂದ ಇಣಿಕಿ ನೋಡುತ್ತಿದ್ದ ಹೂ ಮುಡಿದ ಸೋರ್ಮುಡಿಯ
ಹೆಗ್ಗಂಟಿನ ವಿಲಾಸವೇನು! ಅಂಗೈಯಗಲ ಕಾಗದದಲ್ಲಿ ಜಗತ್ತನ್ನೇ ಜಯಿ
ಸುವ ರೂಪಶಕ್ತಿ ಅಡಕವಾಗಿದೆಯಲ್ಲ!- - ಏನು ವಿಚಿತ್ರ! ಅರ್ಧಾಕೃತಿ
ಯಲ್ಲೇ ಇಷ್ಟು ಲಾವಣ್ಯವಿರಲು, ಇನ್ನು ಪೂರ್ಣಾಕೃತಿಯ ಸೊಗಸು ಹೇಗಿರ
ಬಹುದು!-ಎಂದು ಮುಂತಾಗಿ ಆಶ್ಚರ್ಯಪಡುತ್ತ ಹಸಿದ ಕಣ್ಣುಗಳಿಂದ
ಆ ರೂಪಾಮೃತವನ್ನು ಹೀರುತ್ತ ಕುಳಿತೆ. ಹುಡುಗಿಗಿನ್ನೂ ಮದುವೆ
ಯಾಗಿಲ್ಲ! ಪ್ರಣಯದ ಮೊದಲನೆಯ ಪಾಠದಲ್ಲಿದ್ದಾಳೆ. ಯಾರೊಡನೆ
ಪಾಠನಾಗುತ್ತದೆಯೊ ಅವನಿಗೆ--ಆ ಪ್ರಣ್ಯವಂತನಿಗೆ-- ಈ ಫೋಟೋನ
ಕೊಡುವ ಉದ್ದೇಶದಿಂದ ಇಟ್ಟುಕೊಂಡಿದ್ದಳೆಂದು ಊಹಿಸಿದೆ. ಆಹಾ!
ಸುರಯಾ ಪರಿಮಳಾಸಕ್ತೆಯಾದ ಈ ಸುರಸುಂದರಿಯ ಪ್ರಣಯಕ್ಕೆ ಪಾತ್ರ
ನಾದ ಅವನು ಪುಣ್ಯವಂತನೇ ಸರಿ!
ನಾನು ಬಹಳ ಯೋಚನೆಮಾಡಿ ಕೊನೆಗೆ “ಟೈಂಸ್ ಆಫ್ ಇಂಡಿಯಾ”
ಪತ್ರಿಕೆಗೂ, ಇನ್ನೆರಡು ಮೂರು ಪ್ರಮುಖ ಮರಾಠಿ ದಿನವಹಿ ಪತ್ರಿಕೆ
ಗಳಿಗೂ ಡೈರಿಯ ವಿಷಯವಾಗಿ ಒಂದು ಸಣ್ಣ ಪ್ರಕಟನೆಯನ್ನು ಕಳಿಸಿದೆ.
ಮರುದಿನದ ಪತ್ರಿಕೆಗಳಲ್ಲಿ ಎರಡು ಪ್ರಕಟನೆಗಳಿದ್ದುವು.
ಒಂದು,
"ಸಿಕ್ಕಿದೆ!
ಒಂದು ಪುಟ್ಟ, ಮೊರಾಕೋ ಚರ್ಮದಲ್ಲಿ ಬೈಂಡಾದ ಕಪ್ಪು
ವರ್ಣದ ಡೈರಿ ಸಿಕ್ಕಿದೆ! ಆದರಲ್ಲಿ ಮಾಲೀಕಳ ಹೆಸರಿದೆ--ವಿಳಾಸ
೩೫-------------------------------------------------
ವಿಲ್ಲ. ದಯವಿಟ್ಟು 'ಜ' : ಎಂಬುವವರಿಗೆ, ಬೊಂಬಾಯಿನ
ದಿನಮಣಿ ಪತ್ರಿಕೆ ಕಚೇರಿಯ ವಿಳಾಸಕ್ಕೆ ಬರೆದು ವಿಚಾರಿಸಬಹುದು.”
—ಎಂದು.
ಇನ್ನೊಂದು,
“ ಟ್ರಾಮಿನಲ್ಲಿ ಕಳೆದು ಹೋಗಿದೆ!
ಒಂದು ಪುಟ್ಟ, ಮೊರಾಕೋ ಚರ್ಮದ ಬೆಂಡಾದ ಕಪ್ಪು
ವರ್ಣದ ಡೈರಿ. ಅದರಲ್ಲಿ ಕೆಲವು ಒಂದಾಣೆ ಸ್ಟಾ೦ಪುಗಳೂ, ಮತ್ತು
ಇನ್ನೂ ಏನೇನೋ ಇದ್ದವು. ಅದು ಯಾರಿಗಾದರೂ ಸಿಕ್ಕು, ಅವರು
ಅದನ್ನು ನನಗೆ ವಾಸಸು ಕಳಿಸಿದರೆ ಬಹುಮಾನ ಕೊಡಲಾಗುವುದು.
ಅದನ್ನು ದಯವಿಟ್ಟು . ಕುಮಾರಿ ಚಪಲಾ ವಾಗ್ಲೆ, ಮಧುನಿವಾಸ,
ಬೊಂಬಾಯಿ ೪ ' ಎಂಬ ವಿಳಾಸಕ್ಕೆ ಕಳಿಸಬಹುದು. "
-ಎಂದು.
ವಿಳಾಸವೂ ಪತ್ತೆಯಾದ ಹಾಗಾಯಿತು. ಮಧುನಿವಾಸ! ಆಹಾ!
ಅಂತಹ ರೂಪಲಕ್ಷ್ಮಿಗೆ ತಕ್ಕ ನಿವಾಸವೇ ಆಗಿರಬೇಕು--ಮಧುನಿವಾಸ!
ಬೆಲೆಬಾಳುವ ಡೈರಿ, ಅದರ ನಯ, ಆ ಸುರಯೀ ಪರಿಮಳ, ಒಡತಿಯ
ಹೆಸರು---ರೂಪ---ಆಕೆಯ ನಿವಾಸದ ಹೆಸರು ಎಲ್ಲವೂ ಒಂದಕ್ಕೊಂದು
ಹೊಂದಿಕೊಂಡು, ಮನಸ್ಸಿಗೆ ಸುಖವನ್ನುಂಟುಮಾಡತೊಡಗಿದನು.
ವಿಳಾಸ ತಿಳಿದ ಕೂಡಲೆ ನಾನು ಆ ಡೈರಿಯನ್ನು ಟಪಾಲು ಮೂಲಕ
ರವಾನಿಸಿದೆ. ಜೊತೆಯಲ್ಲಿ ಒಂದು ಕಾಗದವನ್ನು ಬರೆದಿಟ್ಟೆ. ಅದರಲ್ಲಿ,
“ ನಿಮ್ಮ ಡೈರಿ ನನ ನನಗೆ ಟ್ರಾಮಿನಲ್ಲಿ ಸಿಕ್ಕಿತು. ಅದನ್ನು ನಿಮಗೆ ಕಳಿಸಿ
ದ್ದೇನೆ. ಕಳುಹಿಸುವ ಮೊದಲ್ಬು, ಅದರಲ್ಲಿದ್ದ ೫ ಆಣೆ ಸ್ಟಾಂಪುಗಳನ್ನೂ
ಒಂದು ಫೋಟೋವನ್ನೂ ನನಗೆ ಸಲ್ಲಬೇಕಾದ ಬಹುಮಾನದ ಬಾಬಿಗೆ
ಜಮಾ ಕಟ್ಟಿಕೊಂಡಿದ್ದೇನೆ! ಪುಸ್ತುಕ ತಲುಪಿದ್ದಕ್ಕೆ ದಯವಿಟ್ಟು ಬರೆಯಿರಿ.
'ಜ' "
-ಎಂದು ಬರೆದಿದ್ದೆ.
೩೬ --------------------------------------------------------------
೨. ಕಾಗದಗಳು
ಇದಾದ ಮೂರನೇ ದಿನ ಬೆಳಿಗ್ಯೆ ನನಗೊಂದು ಪತ್ರ ಬಂತು. ಅದು
ನಾನು ಪ್ರಕಟನೆಯಲ್ಲಿ ಕೊಟ್ಟಿದ್ದ ದಿನಮಣಿ ಪತ್ರಿಕೆಯ ವಿಳಾಸಕ್ಕೆ ಹೋಗಿ,
ಅಲ್ಲಿಂದ ನನ್ನ ಸ್ವಂತ ವಿಳಾಸಕ್ಕೆ ಬಂದಿತ್ತು. ಕವರಿನೊಳಗಿಂದ ಕಾಗದ
ವನ್ನು ಈಚೆಗೆ ತೆಗೆಯುತ್ತಿದ್ದಂತೆಯೇ ಅದು ಸುರಯೀ ಪರಾಗ ಪರಿಮಳ
ವನ್ನು, ಬೀರಿ ತನ್ನ ಪರಿಚಯವನ್ನು ಹೇಳಿಕೊಂಡಿತು! ಚಪಲಾ ಕುಮಾ
ರಿಯ ಸ್ವಹಸ್ತ ನ್ನ ನನಗೊಂದು ಕಾಗದ ಬಂದಿಲ್ಲಾ ಎಂದು ಸಂತೋ
ಷವೂ, ಆಕೆಯಿಂದ ಉತ್ತರ ಬರುವುದಿಂದು ಕನಸಿನಲ್ಲೂ ಎಣಿಸಿರಲಿಲ್ಲವಾಗಿ,
ಅದು ಬಂದದ್ದರಿಂದ ಆಶ್ಚರ್ಯವೂ ಒಟ್ಟಿಗೆಯೇ ಆಯಿತು. ಕಾಗದವನ್ನು
ಓದುವ ಮೊದಲೇ ಬಹುಶಃ ಫೋಟೋ ವಿಚಾರ ಬರೆದಿರುವಳೆಂದೂ.
ಅದನ್ನು ಕಳಿಸಬೇಕೆಂದು ಕೇಳಿರುವಳೆಂದೂ ಊಹಿಸಿದೆ. ಚಪಲಾ ಹೀಗೆ
ಬರೆದಿದಳು
"............ನಿಮಗೆ ನನ್ನ ಕೃತಜ್ಞತೆಯನ್ನು ಎಷ್ಟು ತೋರಿಸಿ
ದರೂ ಸ್ವಲ್ಪವೇ ನೀವು ಕೃಪೆಮಾಡಿ ಕಳಿಸಿದ ನನ್ನ ಡೈರಿ ನನಗೆ
ಬಹುಮಾನವಾಗಿ ಬಂದದ್ದು. ಕೊಟ್ಟವರು ನನ್ನ ಪ್ರಾಣಕ್ಕಿಂತಲೂ
ಹೆಚ್ಚಾದವರು. ಆದುದರಿಂದ ನನಗೆ ಪ್ರಪಂಚದಲ್ಲಿ ಅದಕ್ಕೆಣೆಯಾದ
ವಸ್ತು ಇನ್ನೊಂದಿಲ್ಲ. ನಿಮ್ಮ ದಯೆ ಅಪಾರವಾದ್ದರಿಂದ ನಾನದನ್ನು
ಪುನಃ ನೋಡುವಂತಾಯಿತು. ಇದರಿಂದ ನನಗಾನಿರುವ ಸುಖವನ್ನು
ಹೇಳ ಮುಗಿಸಲಾರೆ. ನನ್ನ ವಿಷಯದಲ್ಲಿ ಇಷ್ಟು ದಯೆ ತೋರಿಸಿದವ
ನನ್ನು ಕಣ್ಣಾರೆ ನೋಡಿ ವಂದಿಸಲು ಆಸೆಯಾಗುತ್ತದೆ. ಆದ್ದರಿಂದ
ನಾಳೆ ಸಾಯಂಕಾಲ ನೀವು ನನ್ನನ್ನು ನೋಡಲು ಬರುವಿರಾ? ನನ್ನ
ಆಸೆ ಸಣ್ಣದು. ನೀವು ಮನಸ್ಸನ್ನ ದೊಡ್ಡದು ಮಾಡುವಿರಾ?-
ಬರುವಿರಾ?
ಚಪಲಾ ವಾಗ್ಲೆ.”
ಕಾಗದವನ್ನು ಓದಿದೆ. ಆಕೆ ಬರೆದಿದ್ದ ಮಾತುಗಳಿಂದ ನನಗೆ
ಸಂತೋಷವಾಯಿತು. ನನ್ನನ್ನು ಬರಹೇಳಿ ಬರೆದಿದ್ದಳು. ಅಹ್ವಾನ ಕೇವಲ
ಸರಳವಾದುದೇ ಅಥವಾ ಇನ್ನೇನಾದರೂ ಅರ್ಥವನ್ನು ಕಲ್ಪಿಸ
೩೭--------------------------------------------------------------
ಬಹುದೇ--ಎಂದು ಯೋಚಿಸತೊಡಗಿದೆ. ಹೊಳೆಯಿತು! ತನ್ನ ಫೋಟೋ
ವನ್ನು ಏನಾದರೂ ಸವಿಮಾತುಗಳಿಂದ ವಾಸನು ಪಡೆಯುವುದಕ್ಕೆ ಈ.
ಆಹ್ವಾನದ ಆಟ ಹೂಡಿದ್ದಾಳೆ-- ಎಂದು ಕ್ಷಣಾರ್ಧದಲ್ಲಿ ಹೊಳೆಯಿತು
ಆಹಾ! ಕುಶಾಗ್ರ ಬುದ್ಧಿಯೇ ಸರಿ! ವಿಶ್ವಾಸದಿಮದ ಕರೆಯಲ್ಪಟ್ಟ ಒಬ್ಬ
ಗೃಹಸ್ಥ, ಆಹ್ವಾನಿಸಿದವರು---ಅದರಲ್ಲೂ ಹೆಂಗಸು!-- ಯುವತಿ!!--
ರೂಪವತಿ !!!--ಸವಿಗೊರಳಲ್ಲಿ ಏನಾದರೂ ಸಣ್ಣ ಬೇಡಿಕೆಯನ್ನು ಕೇಳಿದರೆ,
ನಿರಾಕರಿಸಲು ಸಾಧ್ಯವೆ ? ಎಂದಿಗೂ ಇಲ್ಲ! ಇದೇ ಆಕೆಯ ಉಪಾಯದ
ತಳಹದಿ. ಆಹಾಹ ಎಷ್ಟು ನಯವಾಗಿ ಹರಡಿದಾಳೆ ಬಲೆಯನ್ನ! ಚಪಲಾ
ಕುಮಾರಿ, ನೀನೊಡ್ಡಿರುವ ಬಲೆಗೆ ಬೀಳುವಷ್ಟು ಮಂಕು ಕುರಿಯಲ್ಲ ನಾನು!
ಯುವತೀಮಣಿ, ನಿನ್ನ ಫೋಟೋವಿಗಾಗಿ ನೀನೇ ಏಕೆ ಇಷ್ಟು ಹಾತೊರೆ
ಯುತ್ತಿರುವೆ? ನಿನ್ನ ಬಳಿ ಬೇರೊಂದು ಪ್ರತಿ ಇವೇ? ಸಜೀವ ಮೂಲ
ವಸ್ತುವಿಗೆ ತನ್ನ ನಿರ್ಜೀವ ಛಾಯೆಯ ಮೇಲೇಕೆ ಇಷ್ಟು ಹಂಬಲು !-ಎಂದು
ಮುಂತಾಗಿ ಮನಸ್ಸಿನಲ್ಲೇ ಅಂದುಕೊಂಡೆ ಆಕೆಯನ್ನು ಹೋಗಿ ನೋಡು
ವುದೇ ಇಲ್ಲವೇ ಎಂದು ಸ್ವ ಲ್ಸ ಹೊತ್ತು ತರ್ಕಿಸಿ ಕಡೆಗೆ ನೋಡಕೂಡದೆಂದು
ನಿರ್ಧರಿಸಿದೆ. ಆದೇ ದಿನ ಆಕೆಗೆ ಒಂದು ಉತ್ತರವನ್ನು ಬರೆದೆ.
" ನಿಮ್ಮ ವಿಶ್ವಾಸಪೂರ್ಣವಾದ ಆಹ್ವಾನ ತಲುಪಿತು. ಅದಕ್ಕೂ,
ನೀವು ನನ್ನ ವಿಷಯದಲ್ಲಿ ಬರೆದಿರುವ ಮಾತುಗಳಿಗೂ ನನ್ನ ಅನಂತಾ
ನಂತ ವಂದನೆಗಳು. ನೀವು ಲೇಖನಿಯನ್ನು ಜೇನುತುಪ್ಪದಲ್ಲಿ ಅದ್ದಿ
ಬರೆದಂತಿದೆ ನಿಮ್ಮ ಕಾಗದ ! ನಾನು ಮಾಡಿದುದು ಅ೦ಥಾ ಮಹಾ
ಕಾರ್ಯವೇನೂ ಅಲ್ಲ ; ಆದರೂ ನೀವು, ನಿನ್ನಂಥವರಿಗೆ ಸ್ವಭಾವ
ವಾದ ಸವಿಮಾತುಗಳಿಂದ ನನ್ನನ್ನು ಬಾಯಿ ತುಂಬಾ ಹೊಗಳಿದ್ದೀರಿ.
ಅಷ್ಟು ಹೊಗಳಿಕೆಗೆ ನಾನು ಪಾತ್ರನಲ್ಲ ಯಾರಾದರೂ ಕಳೆದು
ಕೊಂಡ ಪದಾರ್ಥ ಸಿಕ್ಕರೆ, ಅವರನ್ನು ಪತ್ತೆ ಮಾಡಿ, ಅದನ್ನು ಅವರಿಗೆ
ತಲುಪಿಸಬೇಕಾದ್ದು ಅಥವಾ ತಲುಪಿಸಲು ಪ್ರಯತ್ನವನ್ನಾದರೂ
ಮಾಡಬೇಕಾದ್ದು ಸಭ್ಯರಾದವರ ಕರ್ತವ್ಯ. ನಾನು ಮಾಡಿದ್ದಾದರೂ
ಅಷ್ಟೆ. ಅಲ್ಲದೆ ಈ ಸಂದರ್ಭದಲ್ಲಿ, ಒಂದು ರೀತಿಯಿಂದ ನೀವು
ನನ್ನನ್ನು ವಂದಿಸುವ ಬದಲು, ನಾನೇ ನಿಮ್ಮ ಕ್ಷಮಾಪಣೆಯನ್ನು
೩೮---------------------------------------------
ಬೇಡಬೇಕಾಗಿದೆ. ಪದಾರ್ಥವನ್ನು ನಿಮಗೆ ತಲುಪಿಸಿದ್ದಕ್ಕೆ ನಿಮ್ಮ
ಕೈಯಿಂದಲೇ ಬಹುಮಾನವನ್ನು ಸಡೆಯುವ ತಾಳ್ಮೆ ಯಿಲ್ಲದೆ,
ಪದಾರ್ಥವನ್ನು ನಿಮಗೆ ತಲುನಿಸುವುದಕ್ಕೆ ಮುಂಚೆಯೇ--ನಾನೇ--
ಬಹುಮಾನವನ್ನು ಗಿಟ್ಟಿಸಿಕೊಂಡು ಬಿಟ್ಟಿದ್ದೇನೆ! ಹೀಗೆ ಮಾಡಿ
ದ್ದರೂ ನೀವು ನನ್ನನ್ನು ವೃಥಾ ಹೊಗಳಿ ಬರೆದು ನನಗೆ ನಾನೇ
ನಾಚಿಕೆಪಟ್ಟು ಕೊಳ್ಳುವಂತೆ ಮಾಡಿರುವಿರಿ. ಇನ್ನು ಸನ್ನಿಧಿಗೆ ಬರ
ಮಾಡಿಕೊಂಡು, ನಾನು ತಲೆ ತಗ್ಗಿಸುವುದನ್ನು ಕಣ್ಣಾರೆ ನೋಡ
ಬೇಕೇ? ಹಾಗೆ ಮಾಡದಿರಿ ಎಂದು ಬೇಡುತ್ತೇನೆ. ಸ್ತ್ರೀಯರು
ಕ್ಷಮಾಶೀಲರಂತೆ. ನಿಮ್ಮ ಆ ಶೀಲ ನನ್ನನ್ನು ಮನ್ನಿಸಲಿ.
' ಜ ' "
- ಎಂದು ಮುಗಿಸಿದ್ದೆ.
ಏನೇ ಆಗಲಿ ನಾನಂತೂ ಫೋಟೋವನ್ನು ವಾಪಸು ಕೊಡುವುದಿಲ್ಲ!
ಉಹುಂ!! ಅಷ್ಟೇ ಅಲ್ಲ; ನಾನು ಆಕೆಯ ಡೈರಿಯನ್ನು ಓದಿರುವೆನೋ
ಏನೋ ಎಂದು ಅವಳಿಗೆ ಬಲವಾದ ಸಂದೇಹವಿರಬೇಕು! ನಾನು ಓದಿ
ದ್ದೇನೋ ಇಲ್ಲವೋ ಅದನ್ನು ಕೂಡ ಅವಳಿಗೆ ತಿಳಿಸುವುದಿಲ್ಲ. ಫೋಟೋನ
ವಾಪಸು ಪಡೆಯುವ ಆಸೆಗಿಂತ ಇದನು ತಿಳಿಸುವ ಕುತೋಹಲವೇ
ಅವಳಿಗೆ ಹೆಚ್ಚಾಗಿರಬೇಕು. ಆದ್ದರಿಂದಲೇ ಮಾತುಗಳಿಗೆ ಸಕ್ಕರೆ ಸವರಿ
ಬರೆದಿದ್ದಾಳೆ ! ಕಣ್ಣಾರೆ ನೋಡಿ ವಂದಿಸಬೇಕೆನ್ನುವುದರಲ್ಲಿ ಆಕೆಗೆ ಬೇರಿ
ಇನ್ನಾವ ಉದ್ದೇಶವಿರಬಹುದು? -ಎಂದು ಯೋಚನೆ -ಊಹೆಗಳ ಮೆಲಕು
ಹಾಕುತ್ತ ಇದ್ದೆ.
ನನ್ನ ಊಹೆ ಹೆಚ್ಚು ಕಡಿಮೆ ಸರಿಯಾಗಿಯೇ ಇತ್ತು ಎನ್ನುವುದು,
ಮರುದಿನ ಬಂದ ಚಪಲಾ ಕುಮಾರಿಯ ಕಾಗದದಿಂದ ವಿಶದವಾಯಿತು.
ಕಾಗದದಲ್ಲಿ -
"ನನ್ನ ವಿಷಯವಾಗಿ ಎಂಥೆಂಥ ಯೋಚನೆಗಳಿಗೆ ಅಭಿಪ್ರಾಯ
ಮನಸ್ಸಿನಲ್ಲಿ ಸ್ಥಳ ಕೊಟ್ಟಿರುವಿರೋ ನಾನು ಅರಿಯ
ಲಾರೆ. ನನಗೆ ತಿಳಿಯದೊಬ್ಬರೊಡನೆ ಈ ರೀತಿ ಪತ್ರವ್ಯವಹಾರವನ್ನು
ಪ್ರಾರಂಭಿಸುವುದೂ, ಬೆಳೆಸುವುದೂ ಉಚಿತವಾಗಿ ಕಾಣುವುದಿಲ್ಲ.
೩೯--------------------------------------------------------
ಆದರೆ ಹಾಗೆಯೇ ಯೋಚಿಸಿದರೆ ನಾವು ಪರಸ್ಸರ ಅಷ್ಟು ತೀರಾ
ಅಪರಿಚಿತರೇನೂ ಅಲ್ಲವೆಂದು ನನ್ನ ಭಾವನೆ. ಡೈರಿಗೆ ನನ್ನ
ಮನೋಭಾವನೆಗಳನ್ನೆಲ್ಲಾ ಸ್ವಲ್ಪವೂ ಹೆಚ್ಚುಕಡಿಮೆ ಮಾಡದೆ
ಒಪ್ಪಿಸಿದ್ದೆ. ಒಬ್ಬರ ನಿಜವಾದ ವ್ಯತ್ತಿತ್ವ ದೇಹವಲ್ಲ- -ಅದರೊಳಗಿನ
ಮನಸ್ಸು. ನನ್ನ ಅಂಥ ವ್ಯಕ್ತಿತ್ವವನ್ನು ನೀವು ಪೂರ್ಣವಾಗಿ
ತಿಳಿದಿರುವಿರಿ ; ಆದರೆ ನನಗೆ ನಿಮ್ಮ ಆ ವ್ಯಕ್ತಿತ್ವದ ಪರಿಚಯವೇ
ಇಲ್ಲವಾಗಿ, ನಮ್ಮ ಪರಸ್ಪರರ ಪರಿಚಯಗಳು ಸಮತೂಕವಾಗಿಲ್ಲ!
ಮುಖದಿಂದ ಮನಸ್ಸನ್ನು ತಿಳಿ-ಎನ್ನುವ ಮಾತು ನಿಜವಾದಕ್ಕೆ ನಿಮ್ಮ
ಮುಖದರ್ಶನದಿಂದ ನನ್ನ ಬಯಕೆ ಪೂರ್ಣವಾದೀತು.
ಚಪಲಾ."
-ಎಂದು ಬರೆದಿತ್ತು.
ಕಾಗದ ಓದಿ, " ಭೇಷ್! ಭಲಾ! -- ಚಪಲಾ!! ನಿನ್ನಂಥ ಹೆಣ್ಣಿ
ಗಲ್ಲದೆ ಇನ್ಯಾರಿಗೆ ಸಾಧ್ಯ -ಇಂಥ ಬಲೆ ಹರಡುವುದು! ಒಂದೇ ಚಮಕಿ
ನಲ್ಲಿ ನನ್ನನ್ನು ಸೋಲಿಸಲೆಳಸುವಿಯಾ?-- ಎಲಾ ಹುಡುಗೀ!!! ಇರಲಿ,
ಇರಲಿ!” ಎಂದುಕೊಂಡೆ.
ನಾನು ಹೋಗಲಿಲ್ಲ ; ಕಾಗದಕ್ಕೆ ಉತ್ತರ ಬರೆದೆ. ಅದರಲ್ಲಿ---
"ನಾನು ನಿಮಗೆ ಅಷ್ಟು ಅಪರಿಚಿತನಲ್ಲ. ಅದ್ದರಿಂದ ನನ್ನ
ನಾಚಿಕೆ ಈಗ ಮಾಯವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ತಿಳಿಯದ ಒಬ್ಬರೊಡನೆ- -ಅದರಲ್ಲೂ ಸ್ತ್ರೀಯೊಡನೆ !--ಪತ್ರವ್ಯವ
ಹಾರ ನಡೆಸಿಕೊಂಡು ಬರುವುದು ನನಗಾದರೂ ಅಹಿತವಾಗಿಯೇ
ಇರುತ್ತಿತ್ತು. ಆದರೆ ಈಗ ಹಾಗ್ಲಿಲ್ಲ. ನಿಮ್ಮ ಫೋಟೋ ನನ್ನ ಬಳಿ
ಇದೆ- -ಆದ್ದರಿಂದ ನಿಮ್ಮನ್ನು ಅಪರಿಚಿತರಂತೆ ಭಾವಿಸುವುದಿಲ್ಲ--
ಎಂಬುದನ್ನು ನೀವು ಈ ವೇಳೆಗೆ ತಿಳಿದಿರಬೇಕು. ನನ್ನ ಅಪರಾಧ
ವನ್ನೂ ದಿಟ್ಟ ತನವನ್ನೂ ಕ್ಷಮಾಶೀಲರಾದ ನೀವು ಮನ್ನಿಸುವಿರೆಂದು
ಬಗೆಯುತ್ತೇನೆ. ನಾನೂ ನಿಮ್ಮ ಡೈರಿಯನ್ನೂ ಓದಿದ್ದೇನೆ ಎಂದು
ಭಾವಿಸಿ ಹಾಗೆಯೇ ಬರೆದಿರುವಿರಿ. ಈ ಸಂದರ್ಭದಲ್ಲಿ ನನ್ನ ಸಲಹೆ
ಇಷ್ಟೆ ; ಒಬ್ಬ ಬಾಲೆಯ ಡೈರಿಯನ್ನು ಕದ್ದು ಓದುವಷ್ಟು ಮಟ್ಟಿಗೆ
೪೦ ------------------------------------------------------
ಒರಟನೂ ಅನಾಗರಿಕನೂ ಎಂದು ನೀವು ಭಾವಿಸುವ ನರಾಧಮನ
ಮುಖಾವಲೋಕನವನ್ನು ಕೂಡ ಮಾಡದಿರುವುದು ಶ್ರೇಯಸ್ಕರ.
'ಜ.' "
-ಎಂದು ಬರೆದಿದ್ದೆ.
ಅದಕ್ಕೆ ಪ್ರತ್ಯುತ್ತರವಾಗಿ,-
"ನಿಮ್ಮ ವಿಷಯದಲ್ಲಿ ನನಗೆ ತುಂಬಾ ವಿಶ್ವಾಸವುಂಟಾಗಿದೆ,
ನೀವು ನನ್ನ ಅತ್ಯಂತ ಪ್ರಿಯ ಮಿತ್ರರು ಎಂದೆಣಿಸುತ್ತೇನೆ. ಏನೋ
ತುದಿ ನಾಲಗೆಯ ಮಾತಿದು-ಎಮದು ಭಾವಿಸಬೇಡಿ. ನನ್ನ ಅಂತ
ರ್ಯದ ಮಾತುಗಳಿವು. ನಾನು ಕೈಮೀರಿ ಒಂದೆರಡು ಮಾತು ಬರೆದು
ನಿಮಗೆ ಕೋಪಪವನ್ನು೦ಟುಮಾಡಿದ್ದೇನೆ-ಅನುಮಾನವಿಲ್ಲ. ಕೃಪೆ
ಮಾಡಿ ಕ್ಷಮಿಸಿ. ನಾನು ನಿಮ್ಮ ವಿಷಯದಲ್ಲಿ ಶಂಕೆ ಪಟ್ಟೆ. - ನಿಜ.
ಅದಕ್ಕೆ ಕಾರಣವೇನೆಂದರೆ ನಾನೇ ನೀವಾಗಿದ್ದರೆ, ಡೈರಿಯನ್ನು ಓದಿ
ಬಿಡುತ್ತಿದ್ದೆ. ನಾನು ಶಂಕೆಪಟ್ಟು ನಿಮಗೆ ನ ಮಾಡಿದಂತಾ
ಯಿತು. ಅದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ನಿಜವಾಗಿ ಯೋಚಿಸಿ
ದರೆ ನನ್ನಂಥ ಹೀನಬುದ್ದಿಯ ಹುಡುಗಿಯನ್ನು ನೋಡುವ ದುರ್ಗ
ತಿಗೆ ನೀವೇಕೆ ಇಳಿಯಬೇಕು--ಎಂದು ತೋರುತ್ತದೆ.
ಚಪಲಾ"
--ಎಂದು ಕಾಗದ ಬಂತು. ಓದಿ, “ ಆಹಾ! ಇನಗ ಬಲು ಸೊಗ
ಸಾಯಿತು! ನಾನೆಸೆದ ಮಾತು ನನ್ನ ಹಣೆಗೆ ಬಡಿಯುವಂತೆ ಮಾಡಿದ
ಳಲ್ಲಾ ಈ ಹೆಣ್ಣು ! ಏನು ಕೌಶಲ !! ಇಂಥ ಹೆಣ್ಣುಗಳ ಅನುಭವವಿತ್ತೋ
ಏನೋ ಕಾಲಿದಾಸನಿಗೆ 'ಕಲಿಸದೆ ಬರ್ಪುದು ಕೌಶಲಂ ಸ್ರೀ ಜಾತಿಗೆ! '
—ಎಂದು ಬರೆದಾಗ! ನಿಜ ನಿಜ! ಮೀನಿಗೆ ಈಜುವುದನ್ನು ಯಾರು ಹೇಳಿ
ಕೊಡುತ್ತಾರೆ? ಬಹುಶಃ ಆಕೆ ಯೋಚಿಸಿರಬಹುದು-ಹೀಗೆ ಬರೆದರೆ ಮನಸ್ಸು
ಕರಗಿ ಬಂದುಬಿಡುತ್ತಾನೆ ಮಂಕು!--ಎಂತ. ಅನುಮಾನವೇನು! ಅಲ್ಲದೆ
ನನ್ನಲ್ಲಿ "ತುಂಬಾ ವಿಶ್ವಾಸವುಂಟಾಗಿದೆ' ಯಂತೆ! ಅದೆಷ್ಟು 'ತುಂಬಾ'- ನೋ!
ನಾನು ಅವಳಿಗೆ " ಅತ್ಯಂತ ಪ್ರಿಯ ಮಿತ್ರ' ನಂತೆ! ಬರೀ' ಪ್ರಿಯ' —
ಅಲ್ಲ; " ಅತ್ಯಂತ ಪ್ರಿಯ' | ಅಬ್ಬಾ ಹುಡುಗೀ! ಲಜ್ಜೆಯೆ ಇಲ್ಲದೆ
೪೧---------------------------------------------------
ಬರೆದಿದ್ದೀಯಲ್ಲಾ!” ”- ಎಂದು ಆಶ್ಚರ್ಯಪಟ್ಟೆ. “ ಇಲ್ಲಾ ಚಪಲಾ
ಕುಮಾರೀ, ನಿನ್ನ ಶಂಕೆ ಇನ್ನೂ ಪೂರ್ಣವಾಗಿ ಆರಿಲ್ಲ. ನಿನ್ನಾ ಡೈರಿಯಲ್ಲಿ
ಎಂಥ ಭೀಕರ ರಹಸ್ಯಗಳನ್ನು ಬಚ್ಚಿಟ್ಟಿದ್ದೆಯೋ ಭಗವಂತನೇ ಬಲ್ಲ!
ಗುರುತು ಕಾಣದ ನನ್ನನ್ನು ಪ್ರಿಯ ಅಲ್ಲ ಅತ್ಯಂತ ಪ್ರಿಯಮಿತ್ರನೆಂದು
ಕರೆಯುವ ಮಟ್ಟಿಗೆ ಲಜ್ಜೆ ಬಿಟ್ಟೆ ! ಇನ್ನೆಷ್ಟು ಲಜ್ಜೆ ಬಿಟ್ಟು ನಿನ್ನ ಗುಟ್ಟು
ಗಳನ್ನೆಲ್ಲಾ ಆ ಡೈರಿಯಲ್ಲಿ ಬಿಡಿಸಿ ಬಿಡಿಸಿ ಬರೆದಿರಲಾರೆ ! ಇಲ್ಲದಿದ್ದರೆ,
ನಾನವುಗಳನ್ನು ಓದಿರುವೆನೋ ಇಲ್ಲವೋ ಎಂದು ತಿಳಿಯಲು ನೀನು
ಇಷ್ಟು ಹೆಣಗುತ್ತಿರುವುದಕ್ಕೆ ಕಾರಣವೇನು ? ನೀನು ಏನೇನೋ ಬರೆದು
ಬಿಟ್ಟಿದ್ದೀಯೆ ಎಂದು ನನಗೇನೋ ಖಂಡಿತವಾಗಿದೆ ! " ಎಂದು ಮೊದ
ಲಾಗಿ ಯೋಚಿಸಿ, ಚಪಲಾಗೆ ಉತ್ತರ ಬರೆದೆ-
"ವಿಶ್ವಾಸಾರ್ಹರಾದ ಕುಮಾರಿ ಚಪಲಾ, ನೀವು ಎಳ್ಳಷ್ಟೂ
ಎದೆಗುಂದಬೇಕಾಗಿಲ್ಲ. ನನ್ನನ್ನು ಅತ್ಯಂತ ಪ್ರಿಯಮಿತ್ರನೆಂದು
ಕರೆದಿರಿ. ನನ್ನ ಸಾಮೀಪ್ಯವನ್ನು ಬಯಸುತ್ತಿರುವಿರಿ. ಇದೆಲ್ಲ
ನಿಮ್ಮ ಔದಾರ್ಯವಲ್ಲವೇ? ನಾನು ಇದುವರೆಗೂ ನಿಮ್ಮಲ್ಲಿಗೆ
ಬರದೆ ತಪ್ಪಿಸಿಕೊಳ್ಳುತ್ತಿದ್ದೇನೆ ಅದಕ್ಕೆ ಕಾರಣವೇನು ಎನ್ನು
ವುದನ್ನು ಊಹಿಸುವುದು ನಿಮ್ಮ ಚುರುಕು ಬುದ್ಧಿಗೆ ನೀರು ಕುಡಿದ
ಹಾಗೆ! ನೀವು ಎರಡು ಗಾದೆಗಳನ್ನು ಕೇಳಿರಬಹುದು. ' ದೂರದ
ನೋಟ ಕಣ್ಣಿಗೆ ಅಂದ ' ಎನ್ನುವುದೊಂದು ; - ಅತಿ ಸ್ನೇಹ ಗತಿ
ಕೆಡಿಸಿತು' ಎನ್ನುವುದಿನ್ನೊಂದು ! ಈಗ ಇದುವರೆಗೆ ಕೇವಲ
ಪತ್ರವ್ಯವಾರದಿಂದ ಸೃಷ್ಟಿಯಾಗಿರುವ ಸ್ಥಿತಿ, ಸಮೀಪದ ಮುಖಾ
ಮುಖ ಮಾತುಕಥೆಗಳಿಂದ ಲಯವಾದರೂ ಆಗಬಹುದು ! ನಾನಿದು
ವರೆಗೂ ನಿಮ್ಮನ್ನು ನೋಡದಿರುವದಕ್ಕೆ ಇದೆ ಕಾರಣ. ನಾವು
ಕಂಡು ಪರಿಚಿತರಾದವರು ಎಷ್ಟೋ ಮಂದಿ ಇರುತ್ತಾರೆ. ನಾವು
ಕಾಣದ- ಆದರೂ ಚೆನ್ನಾಗಿ ಪರಿಚಿತರಾದವರೂ ಒಬ್ಬರು ಏಕೆ
ಇರಬಾರದು ?
'ಜ' "
ಈ ಪ್ರಸಂಗದಿಂದ ಮನಸ್ಸಿಗೊಂದು ತೆರನ ರಂಜನೆಗೆ ದಾರಿಯಾ
೪೨---------------------------------------------------------
ಯಿತು. ನನಗೆ ನಾನೇ ಅಂದುಕೊಂಡೆ : “ ಎಲೌ ಚಪಲಾ ಕುಮಾರೀ,
ಅದೃಷ್ಟವಶಾತ್ ಈ ಪ್ರಸಂಗದಲ್ಲಿ ನನಗೆ ಬಹಳ ಬಹಳ ಅನುಕೂಲ
ವಿರುವುದು ! ಈ ಆಟದಲ್ಲಿ ನೀನು ಬೇಟೆ-- ನಾನು ಬೇಟೆಗಾರ ! ಬೇಟೆ
ಗಾರನು - 'ಬೇಟೆ 'ಯನ್ನು ಬಲ್ಲ ; ಬೇಟೆಗೆ ಮಾತ್ರ ಬೇಟೆಗಾರನ ಸುಳಿವೂ
ಇಲ್ಲ ! ಈ ಸನ್ನಿವೇಶವನ್ನು ಬಿಡದೆ ಉಪಯೋಗಿಸಿಕೊಳ್ಳುತ್ತೇನೆ. ನಿನ್ನನ್ನು
ಎಲ್ಲಿ ಕಂಡರೂ ಕ್ಷಣದಲ್ಲಿ ಗುರ್ತಿಸಬಲ್ಲೆ; ಆದರೆ ನಿನಗೆ ನನ್ನನ್ನು ಗುರ್ತಿಸಲು
ಸಾಧ್ಯವೇ ಇಲ್ಲ ! ಸುತರಾಂ ಇಲ್ಲ !! ನಿನ್ನೆದುರಿಗೇ ಬಂದರೂ ಡಿಕ್ಕಿ
ಹೊಡೆದರೂ ! - ನೀನು ಗುರ್ತಿಸಲಾರೆ ! ಈ ವಿಷಯದಲ್ಲಿ ಮಾತ್ರ ನೀನು
ನಿಜವಾಗಿಯೂ ಅಬಲೆ ! ”
ಚಪಲಾ ಕುಮಾರಿಯೂ ನನಗಿದ್ದ ಅನುಕೂಲ ಸನ್ನಿವೇಶವನ್ನು ಚೆನ್ನಾಗಿ ಗ್ರಹಿಸಿದ್ದಳೆನ್ನುವುದು ಅವಳು ಬರೆದ ಉತ್ತರದಿಂದ ವ್ಯಕ್ತವಾ
ಯಿತು. ಅದರಲ್ಲಿ ; -
" ಪ್ರಿಯ ಮಿತ್ರ, ನಾನು ಕಾಣದ ಒಬ್ಬಾತನಿಗೆ, ಕಾಗದ ಬರೆ
ಯುವುದೆಂದರೆ ಏನೋ ಮನಸ್ಸಿನಲ್ಲಿ ತೊಡಕಾಗುವುದು ಸ್ವಭಾವ.
ಆದರೆ ನಿಮಗೆ ಬರೆಯುವಾಗ ನನಗೆ ಹಾಗೆ ಆಗುವುದಿಲ್ಲ. ಇದು
ಸೋಜಿಗವಲ್ಲವೆ - ಹೇಳಿ ? ನಿಜ, ನಿಮ್ಮ ಮಾತು ! ನೀವು ಮೊಟ್ಟ
ಮೊದಲಲ್ಲೇ ಬಂದು ನನ್ನನ್ನು ನೋಡಿದ್ದರೆ ಬಹುಶಃ ನಮ್ಮ
ಪರಿಚಯ ಅಲ್ಲಿಗೆ ಮುಕ್ತಾಯವಾಗುತ್ತಿತ್ತೋ ಏನೋ ! ಆದರೆ
ಈ ಮಾತು ಜ್ಞಾಪಕವಿರಲಿ !-ಒಂದು ವಿಷಯದಲ್ಲಿ ನಿಮಗೂ
ನನಗೂ ತೂಕದಲ್ಲಿ ಹೆಚ್ಚು ಕಡಿಮೆಯಾಗಿದೆ ! ನೀವು ನನ್ನನ್ನು
ಕಂಡ ಕ್ಷಣವೇ ತಿಳಿಯಬಲ್ಲಿರಿ; ನನಗೆ ಅದು ಸಾಧ್ಯವಿಲ್ಲ! ಹೇಳಿ
ಇದು ಸರಿಯೆ ? ನ್ಯಾಯವೇ ?
ಚಪಲಾ"
-ಎಂದು ಬರೆದಿದ್ದಳು.
ನಾನದಕ್ಕೆ ಹೀಗೆ ಉತ್ತರ ಬರೆದೆ:-
"ಪ್ರಿಯ ಕುಮಾರಿ ಚಪಲಾ, ನಾವಿಬ್ಬರೂ ಸ್ನೇಹಿತರೆಂದು ನೀವು
ಹೇಳುವಿರಿ. ಇದು ಸ್ನೇಹವೇ ಎಂದು ನಾನು ಕೇಳುತ್ತೇನೆ. ನಾನು
ಯಾರೆಂಬುದನ್ನು ಕೂಡ ನೀವು ತಿಳಿಯದಿರುವಾಗ... ತಿಳಿಯುವ
ಆಸ್ಪದವೇ ಇಲ್ಲದಿರುವಾಗ ಇದು ಸ್ನೇಹ ಹೇಗೆ ಆದೀತು ? ಕೋಟಿ
ಜನಗಳ ಗುಂಪಿನಲ್ಲಿದ್ದರೂ ಕಣ್ಣು ಮುಚ್ಚಿಕೊಂಡು ಗುರ್ತಿಸುವುದೀಗ ಬಲವಾದ ಸ್ನೇಹ ! ನಿಮ್ಮ ಸ್ನೇಹ ಅಷ್ಟು ಬಲವಾದುದೇ ? ಪರೀ
ಕ್ಷಿಸಿ. ನನ್ನನ್ನು ಗುರ್ತಿಸಲು ನಿಮ್ಮ ಪ್ರಯತ್ನ ಕೈಗೂಡಿದ ದಿನ ನೀವು ಬಯಸಿದ್ದನ್ನ ತಂದೊಪ್ಪಿಸಲು ಸಿದ್ಧನಾಗಿದ್ದೇನೆ-ಫೋಟೋ
ವಿನಹಾ ! ಅದನ್ನ ಮಾತ್ರ ಕೊಡಲಾರೆ !
'ಜ' "
ಈ ಕಾಗದಕ್ಕೆ ಚಪಲಾ-ಇಂದ ಉತ್ತರ ಬರಲಿಲ್ಲ. ದಿನಗಳು ಕಳೆ
ಯುತ್ತ ಹೋದವು. ಕೆಲವು ದಿನಗಳ ವರೆಗೆ ನಾನು ಸೋಲುವುದಿಲ್ಲ ಈ
ಹೆಣ್ಣಿಗೆ ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಬಹಳ ಉತ್ಸಾ
ಹದಿಂದ ಇದ್ದೆ. ಆದರೆ ಬಹು ಬೇಗ ಅದು ಇಳಿಮುಖವಾಯಿತು. ಕುಲೀನ
ಸ್ತ್ರೀಯರು ಹೋಗಬಹುದಾದ ಅಂಗಡಿಬೀದಿಗಳು, ವಿಹರಿಸಬಹುದಾದ
ಉದ್ಯಾನವನಗಳು-ಸಮುದ್ರದ ಕರೆಯ ಮರಳು--ಮುಖ್ಯವಾಗಿ
ಚೌಪಾತಿ ಮರಳು - ಎಲ್ಲ ಹೋದರೂ ಸದಾ ನನ್ನ ನೋಟ ಬೇಟೆ
ಯಾಡತೊಡಗಿತು. ಎಲ್ಲಿ ಸ್ವಲ್ಪ ಸುವಾಸನೆ ಪರಿಮಳ ಬಂದರೂ ಸುರಯೀ
ಸೌರಭವೋ ಎಂಬ ಭ್ರಮೆಯಾಗುತ್ತಿತ್ತು. ಟ್ರಾಂ ಗಾಡಿಗಳಲ್ಲಂತೂ, ಕಣ್ಣಲ್ಲಿ
ಕಣ್ಣಿಟ್ಟು ಹುಡುಕತೊಡಗಿದೆ ಆ ಡೈರಿಯ ಒಡತಿಯನ್ನು ಕಾಣಬಹು
ದೆಂದು. ಆಹಾ ! ಆ ಡೈರಿ ! ಚಪಲ ಕುಮಾರಿಯ ಎಂಥೆಂಥದೋ ಗುಟ್ಟು
ಗಳ ಎಷ್ಟಷ್ಟೋ ಗುಟ್ಟುಗಳ ಭಂಡಾರಿ ! ನನ್ನ ಕೈಲಿತ್ತು !! ತೆರೆದು
ನೋಡದೆ ವಾಪಸು ಕೊಟ್ಟೆ ! ಅದರಲ್ಲೇನೇನಿತ್ತೋ ದೇವರೇ ಬಲ್ಲ !-
ಅಥವಾ ಅವನೂ ಕಾಣನೋ !!
೩. ಚಪಲೆಯ ಮಾತುಗಳು.
ಮೊನ್ನೆ ಸುಲಭಾ ಜೊತೇಲಿ ಕಾಲೇಜಿಂದ ಬರೋವಾಗ ಹಾಗೇ
ಅಂಗಡೀ ವ್ಯಾಪಾರಕ್ಕೆಂತ ಹೊರಟೆ. ಇಂದೂನ ಹುಟ್ಟಿದ ಹಬ್ಬಕ್ಕೆ
ಉಡುಗೆರೆ ಕೊಡೋಕೆ ಏನಾದರೂ ಕೊಳ್ಳೋಣಾಂತ ಆಸೆಯಾಗಿತ್ತು. ಏನಾ
೪೪
ದರೂ ಅಪರೂಪವಾದ್ದು - ನಾಜೂಕಾದ್ದು ಆರಿಸುವುದರಲ್ಲಿ ಸುಲಭಾಗೆ
ಒಳ್ಳೆ ತಿಳುವಳಿಕೇಂತ ಅವಳನ್ನ ಜೊತೇಲಿ ಕರಕೊಂಡು ಹೋದೆ.
ಇಂದೂಗೆ ಒಂದು ಸೊಗಸಾದ ಬ್ರೋಚು ತೆಗೆದೆ ; ನನಗೆ ಮೆಚ್ಚಿಕೆಯಾದ
ಇನ್ನೂ ಏನೇನೋ ಸಾಮಾನು ಕೊಂಡುಕೊಂಡೆ. ಒಂದು ಪದಾರ್ಥ
ಕೊಳ್ಳೋಕೆ ಹೋಗಿ ಹತ್ತು ಪದಾರ್ಥ ಕೊಳ್ಳೋದು ನನ್ನ ಸ್ವಭಾವವಾಗಿ
ಬಿಟ್ಟಿದೆ. ಅದಕ್ಕೇ ಅಪ್ಪಾಜಿ ನನ್ನ ದುಂದುಗಾತಿ ಅಂತ ಕರೆಯೋದು !
ಅವರ ಮಾತು ಸುಳ್ಳಲ್ಲ ; ನಾನೇನು ಮಾಡಲಿ ? ನನ್ನ ಎರಡು ಕೈತುಂಬಾನೂ
ಸಣ್ಣ ಸಣ್ಣ ಪೆಟ್ಟಿಗೆಗಳು-ಪೊಟ್ಣಗಳೇ ಆಗಿ ಹೋಗಿತ್ತು! ವ್ಯಾಪಾರವೆಲ್ಲಾ
ಮುಗಿದ ಮೇಲೆ, ನಾವಿಬ್ಬರೂ ಮನೇಕಡೆ ಹೋಗೋ ಟ್ರಾಂ ಗಾಡಿ ಹತ್ತಿ
ದೆವು. ಸುಲಭಾ, ತನ್ನ ಮನೆ ಸಮೀಪದಲ್ಲಿ ಇಳಿದಳು. ಸ್ವಲ್ಪ ದೂರ
ವಾದ ಮೇಲೆ ನಾನೂ ಇದು ಮನೆಗೆ ಬಂದೆ, ಬಂದು ನೋಡಿದಾಗ
ಒಂದು ಪದಾರ್ಥ ಕಳಕೊಂಡು ಬಿಟ್ಟೆಂತ ಗೊತ್ತಾಯಿತು. ಅದು ನನ್ನ
ಡೈರಿ ! ಸಾಮಾನುಗಳ ಗುರುತು ಹಾಕೋಕೇಂತ ಈಚೆಗೆ ತೆಗೆದ ಡೈರೀನ
ಪುನಃ ಕೈ ಚೀಲಕ್ಕೆ ಹಾಕೋದನ್ನ ಮರೆತು, ಸಾಮಾನುಗಳ ಜೊತೇಲಿ
ಅದನ್ನೂ ಕೈಲೇ ಹಿಡಿದುಕೊಂಡಿದ್ದೆ. ಆ ಮೇಲೆ ಟ್ರಾಮಿನಿಂದ ಇಳಿಯೋ
ವಾಗ, ಸಾಮಾನುಗಳನ್ನೆಲ್ಲಾ ಜೋಡಿಸಿಕೊಳ್ಳೋ ತರಾತುರೀಲಿ--
ಇಳಿಯೋ ಅವಸರದಲ್ಲಿ, ಡೈರನ ಮರೆತೇ ಬಿಟ್ಟೆ ಅಂತ ಕಾಣುತ್ತೆ ! ಆಹಾ !
ಚೆನ್ನಾಗಿ ಜ್ಞಾಪಕ-ಟ್ರಾಮಿನಲ್ಲಿ ಬಿಟ್ಟೆ ! ಡೈರೀ ಎಂಟೋ ಹತ್ತೋ
ಒಂದಾಣೆ ಸ್ಟಾಂಪುಗಳಿದ್ದವು. ಇದೇನು ಅಂಥಾ ನಷ್ಟವಲ್ಲ
ಆದರೆ- ಅಯ್ಯೋ ! ಇನ್ನೇನು ಗತಿ ! ಅಮ್ಮಮ್ಮಾ! ಏನೇನೋ ಗೀಚಿದ್ದೆ
ನಲ್ಲಾ ಅದರಲ್ಲಿ !....................................ದೇವರೇ ಹೀಗೇಕೆ ಮಾಡಿದೆ ! .......ನನ್ನ
ಮರೆವು ! ಹಾಳು ಮರೆವು !!........ಅಮ್ಮ ಕೊಟ್ಟದ್ದೂಂತ ಅವಳ ನೆನಪಿ
ಗಾಗಿ, ಎಷ್ಟೋ ಪ್ರೀತಿಯಿಂದ ಇಟ್ಟುಕೊಂಡಿದ್ದೆ. ಹೋಯಿತು ! ನನ್ನ
ಹೃದಯಾನೆಲ್ಲಾ ಬಿಚ್ಚಿ ಬಿಚ್ಚಿ ಅದಕ್ಕೊಪ್ಪಿಸಿದ್ದೆ. ನಿದ್ದೆ ಮಾಡೋ
ವಾಗಲೂ ಹತ್ತಿರ ಇಟ್ಟು ಕೊಳ್ಳುತ್ತಿದ್ದೋಳಿಗೆ ಇವತ್ತೇನು ಬಂತು ಕೇಡು
ಗಾಲದ ಮರೆವು ?........ಅಯ್ಯೋ, ನನ್ನ ಅದೃಷ್ಟವೇ ?...ಯಾರಾದರೂ
ಪ್ರಾಯದ ಹುಡುಗನ ಕೈಗೆ ಅದು ಸಿಕ್ಕರೇನು ಗತಿ ! ಬೆಕ್ಕಿಗೆ ಹಾಲುಕೆನೆ
೪೫-------------------------------------------------
ಸಿಕ್ಕಿದರೆ ಬಿಡುತ್ತೆಯೇ? ಅವನೂ ಅಷ್ಟೇ ! ಇನ್ನೆಷ್ಟು ಸಲ ಓದು
ವನೋ !......... ಯಾರಾರಿಗೆ ತೋರಿಸುತ್ತಾನೋ !......... ಯಾರ್ರಾರಿಗೆ
ಹೇಳುವನೋ !! ನನ್ನ ವಿಚಾರದಲ್ಲಿ ಅವನು ಏನು ಅಂದುಕೊಂಡಾನು ?
ನೋಡಿದೋರು ಕೇಳಿದೋರು ಏನಂದುಕೊಂಡಾರು ?........ನಾನದರಲ್ಲಿ
ಏನೇನು ಬರೆದಿದ್ದೆ ಏನೇನೋ ಬರೆದಿದ್ದೆ !....ಜ್ಞಾಪಿಸಿಕೊಳ್ಳೋಕೇ
ಹೆದರಿಕೆಯಾಗುತ್ತೆ .........ಇರಲಿ, ಏನು ಬರೆದಿದ್ದೆ ?.....ಮೊದಲು ಕೆಲವು
ಹಾಳೆಗಳಲ್ಲಿ, ಇಂಗ್ಲೀಷು ಮರಾಠಿ ಪುಸ್ತಕಗಳಿಂದ ಒಳ್ಳೆ ಮಾತು
ಗಳನ್ನ ಆರಿಸಿ ಬರೆದಿದ್ದೆ. ಅದೇನು ಮಹಾ ! ಅಂಥಾ ನಾಚಿಕೆಪಟ್ಟುಕೊಳ್ಳ
ಬೇಕಾದ್ದೇನೂ ಇಲ್ಲ ! ಈಗಿನ ಕಾಲದ ಹುಡುಗೀರೆಲ್ಲಾ ತಮ್ಮ ತಮ್ಮ
ಡೈರೀಲಿ ಅಂಥಾ ಮಾತುಗಳನ್ನು ಬರೆದಿಟ್ಟುಕೊಳ್ಳೋದು ಸಾಧಾರಣವಾಗಿ
ಬಿಟ್ಟಿದೆ.......ಒಳ್ಳೇದು, ಆಮೇಲೆ !.... ನನ್ನ ಹೋದ ಹುಟ್ಟಿದ ಹಬ್ಬದ
ದಿನ ಏನೋ ಬರೆದೆನಲ್ಲಾ, ಏನದು ?........ ಹಾ ! ನೆನಪಾಯಿತು ..........
" ಇವತ್ತಿಗೆ ನನಗೆ ೧೯ ವರ್ಷ. ಆದರೂ ಜೀವನದ ಗುರಿ ಏನೆಂದು ಅರಿಯೆ.
ಯಾವುದರಲ್ಲೂ ನನಗೆ ಆಸೆಯಾಗಲಿ, ಕುತೂಹಲವಾಗಲಿ ತೋರುವುದಿಲ್ಲ
ವಲ್ಲ ! ಕಾರಣವೇನು ? ಎಲ್ಲರಂತೆ ನಾನೂ ಕಾಲೇಜಿಗೆ ಹೋಗುತ್ತೇನೆ--
ಬರುತ್ತೇನೆ. ಆದರೆ ನನ್ನ ಮನಸ್ಸೆಲ್ಲಾ ಕಾಲೇಜಿಗೇ ಮೀಸಲಾಗಿಲ್ಲ ;
ಕಾಲೇಜು ಹುಡುಗಿಯಾಗಿರುವುದರಲ್ಲಿ ಎಷ್ಟು ಆನಂದ ಹೆಮ್ಮೆ ಇರಬೇಕೋ
ಅಷ್ಟು ಇಲ್ಲ, ಜೀವನದ ಸಾರವೇನು ? ನಾನು ಅದನ್ನು ಇನ್ನೂ
ಸವಿದಿಲ್ಲವೆಂದು ನನ್ನ ಭಾವನೆ .... ಈ ಮಾತುಗಳಲ್ಲಿ ತಾನೆ ತಲೆ ತಗ್ಗಿಸ
ಬೇಕಾದ್ದೇನಿದೆ ? ಇತರ ಹೆಣ್ಣುಗಳ ಹೃದಯದಲ್ಲಿ ಎಂಥೆಂಥಾ ಕೊಳಕು
ಆಸೆಗಳಿರುತ್ತೆಯೋ ನಾ ಕಾಣೆ. ಆದರೆ ನಾನು ಬರೆದ ಮಾತುಗಳಿಂದ
ನನ್ನ ಆಸೆಗಳೂ ಅಂಥವೇ ಎಂದು ಯಾರೂ ಊಹಿಸದಿರಲಿ. ಹಾಗೆ ಊಹಿಸಿ
ದರೆ ಅದು ತೀರಾ ಅನ್ಯಾಯ ! ದೇವರೇ ನೀನೇ ನೋಡಿಕೋ ! ಕೆಟ್ಟ ಮನ
ಸ್ಸಿನೋರು ನನ್ನ ಮಾತುಗಳಿಗೆ ಕೆಟ್ಟ ಅರ್ಥ ಮಾಡುತ್ತಾರೆ ನಿಜ! ಹುಂ!
ಮಾಡಲಿ ; ಅಬ್ಬರು ಮಾಡುತ್ತಾರೆ! ನಾಯಿ ಬೊಗಳಿದರೆ ದೇವಲೋಕ
ಹಾಳೇ ? ನಾನದನ್ನ ಮನಸ್ಸಿಗೆ ಹಚ್ಚಿಕೊಳ್ಳೋದಿಲ್ಲ. ಆ ಮಾತು ಬರೆ
ದಿದ್ದಕ್ಕೆ ದಂಡಿಸೋರಾರು ನನ್ನ .......ಸರಿ, ಆ ಮೇಲೆ ಏನು ಬರೆದೆ ?
೪೬---------------------------------------------------------------
ಹ್ಞಾ! ಜ್ಞಾಪಕವಾಯಿತು ! ಹೆಚ್ಚು ಕಡಿಮೆ ಈ ರೀತಿಯಾಗಿ ಬರೆದೆ ;
"೨೪ ನೇ ಜುಲೈ. ಇವತ್ತು ಟ್ರಾಮಿನಲ್ಲಿ ಒಬ್ಬ ಯುವಕನನ್ನು ನೋಡಿದೆ.
ಸಾಧಾರಣವಾಗಿ ಈ ಕಾಲದ ಯುವಕರು ಒಂದಲ್ಲಾ ಒಂದು ನೆವದಲ್ಲಿ
ಪ್ರಾಯದ ಹುಡುಗಿಯರ ಸ್ನೇಹಕ್ಕೆ ಹಾತೊರೆಯುತ್ತಾರೆ. ಆದರೆ ನಾನು
ಇವತ್ತು ಟ್ರಾಮಿನಲ್ಲಿ ನೋಡಿದವನ ರೀತಿ ಬೇರೆಯಾಗಿತ್ತು. ನಾನು
ಟ್ರಾಮಿನಿಂದ ಇಳೀಬೇಕೆಂದಿದ್ದಾಗ ವಿಪರೀತ ಮಳೆ ಸುರೀತಿತ್ತು. ನನ್ನ
ಮರೆವಿನಿಂದ ಕೊಡೇನ ಮನೇಲಿ ಮರೆತು ಬಿಟ್ಟು ಬಂದಿದ್ದೆ. ಮಳೇಲಿ
ಹೇಗಮ್ಮಾ ಇಳಿಯೋದೂಂತ ಯೋಚಿಸುತ್ತಿದ್ದೆ. ಯೋಚಿಸೋದೇನು ?
ನಾನು ಇಳೀಲೇ ಬೇಕಾಗಿತ್ತು. ಆ ಸಮಯದಲ್ಲಿ ಯುವಕ ನನ್ನ ಕಳವಳ
ನನ್ನ ನೋಡುತ್ತಿದ್ದಾಂತ ಕಾಣುತ್ತೆ. ನಾನು ಇನ್ನು ತಡ ಮಾಡಿದ್ದರೆ
ಗಾಡಿ ಹೊರಟುಬಿಡುತ್ತಿತ್ತು. ಆದ್ದರಿಂದ ಗಟ್ಟಿ ಮನಸ್ಸು ಮಾಡಿ ಇಳಿದೇ
ಬಿಟ್ಟೆ. ನನ್ನ ಹಿಂದೆಯೇ ಅವನೂ ಇಳಿದು, ಅದೇ ಕ್ಷಣದಲ್ಲಿ ತನ್ನ ಮಳೆ
ಅಂಗೀನ (Water-Proof) ನನ್ನ ಮೈತುಂಬ ಹೊದಿಸಿಬಿಟ್ಟ! ಇದೇನು
ಬಂತೂ ಅಂತ ತಿರುಗಿ ನೋಡೋದರೊಳಗೆ ಇಷ್ಟು ನಡೆದು ಹೋಯ್ತು.
ಅಂಗೀ ಹೊದಿಸಿದವನು ಒಂದು ಮಾತೂ ಆಡಲಿಲ್ಲ ! ಕೂಡಲೆ, ಒಂದು
ವಿಕ್ಟೋರಿಯಾ ಗಾಡೀನ ಕರೆದು, ನನ್ನ ಅದರೊಳಗೆ ಹತ್ತಿಸಿದ. ನಾನು
ಗಾಡಿಯಲ್ಲಿ ಕುಳಿತು ಅವನ ಮಳೇ ಅಂಗೀನ ವಾಪಸು ಕೊಟ್ಟೆ. ಗಾಡಿಯ
ವನಿಗೆ ಅವನೇ ಬಾಡಿಗೇನೂ ಕೊಟ್ಟು ಬಿಟ್ಟ ! ಆ ಮೇಲೆ, ಗಾಡಿಯವನಿಗೆ,
ನನ್ನಿಂದ ಮನೆ ಅಡ್ರೆಸ್ಸು ತಿಳಿದುಕೊಂಡು ಅಲ್ಲಿಗೆ ಕರೆದುಕೊಂಡು ಹೋಗು
ವಂತೆ ಹೇಳಿದ ! ನನ್ನ ಅಡ್ರೆಸ್ಸನ್ನ ಅವನೇ ಕೇಳಿ, ಗಾಡಿಯವನಿಗೆ ಹೇಳೋಕೆ
ಯಾಕೆ ಸಂಕೋಚಪಟ್ಟು ಕೊಂಡನೋ ನಾ ಕಾಣೆ ! ಹತ್ತಿರದಲ್ಲೆ
ಅವನ ಸ್ನೇಹಿತರು ಮೂರು ನಾಲ್ಕು ಜನ ಇದ್ದರೂಂತ ಕಾಣುತ್ತೆ. ನನಗೆ
ಎಷ್ಟು ನಾಚಿಕೆಯಾಯಿತೋ ! ಸ್ನೇಹಿತರು ಸ್ವಲ್ಪ ಹಾಸ್ಯ ಮಾಡಲಾರಂಭಿಸಿ
ದರು. ಅವನು ಅದೊಂದನ್ನೂ ಲಕ್ಷಿಸದೆ ಬಹಳ ಬಿಗುಮಾನದಿಂದ
ಹೊರಟೇ ಹೋದ. ನನ್ನ ಹೆಸರು ವಿಳಾಸ ಕೇಳಲಿಲ್ಲ ; ಹೋಗಲಿ ;
ಕಡೆಗೆ ಒಂದೇ ಒಂದು ಮಾತನ್ನೂ ಆಡದೇ ಹೋದನಲ್ಲಾ ! ಯುವಕನ
ಈ ಅಪೂರ್ವವಾದ ನಡತೆ ನನ್ನಲ್ಲಿ ಒಂದು ತರ ಗೌರವವನ್ನು ಹುಟ್ಟಿಸಿತು.
೪೭-----------------------------------------------------
ಆದರೂ ಅವನ ಅಕ್ಷಮ್ಯವಾದ ಅಲಕ್ಷದಿಂದ ನನಗೆ ಸ್ವಲ್ಪ ಉರಿಉರಿಯಾ
ಯಿತು! ಎಷ್ಟು ಪ್ರಯತ್ನ ಮಾಡಿದರೂ ನನ್ನ ಮನಸ್ಸು ತಂಪಾಗಲೊಲ್ಲದೆ
ಹೋಯಿತು. ಅಷ್ಟು ಗರ್ವ ಅಲಕ್ಷ್ಯಗಳಿಂದ ತುಂಬಿದವನು, ನನ್ನ
ಸ್ಥಿತಿಗೆ ಮರುಗಿದುದೇನು ? ಸಹಾಯ ಮಾಡಿದುದೇನು ? ಅವನು ಸಹಾ
ಯಕ್ಕೆ ಬರದೆ ಇದ್ದಿದ್ದರೆ ನಾನು ಮಳೆಯಲ್ಲಿ ತೋಯ್ದು ಹೋಗುತ್ತಿದ್ದೆ,
ನಿಜ. ಅದರಿಂದ ಅವನಿಗೇನಾಗುತ್ತಿತ್ತು ?........ ಏನಾದರೂ ಆಗಲಿ.......
ಆದರೆ, ಆಹಾ ! ಮಳೆ ಅಂಗಿಯಿಂದ ನನ್ನ ಮೈ ಮುಚ್ಚಿದ ಅವನ ರೀತಿ
ಯಲ್ಲಿ ಅದೇನು ಗಾಂಭೀರ್ಯ ! ಎಂತಹ ವಿನಯ !! ಒಂದು ಕ್ಷಣವಾದರೂ
ಹಿಂತೆಗೆದನೇ ?-ಹಿಂದುಮುಂದು ನೋಡಿದನೇ ? ಅವನು ಅಂಗಿ
ಯನ್ನು ಹೊದಿಸಿದ ಕ್ಷಣದಲ್ಲಿ ನನ್ನ ನೆತ್ತಿಯಿಂದ ಅಂಗಾಲಿನವರೆಗೆ ಜುಂ-
ಗುಟ್ಟಿತು ! ಮುಖವೆಲ್ಲಾ ಬಿಸಿಬಿಸಿಯಾಯಿತು ? ಅವನಿಗೋ ?...........
ಹೆಣ್ಣಿನ ವಿಷಯದಲ್ಲಿ ಅವನಿಗೆ ಎಷ್ಟು ಗೌರವ ಬುದ್ದಿ ! ಅವನಂಥವರು
ಸಹಾಯಕ್ಕೆ ಬರುವುದಾದರೆ ಕಷ್ಟಕ್ಕೆ ಸಿಕ್ಕುವುದೂ ಸುಖವೇ ! ಎಷ್ಟೋ
ವರ್ಷಗಳಿಂದ ನನ್ನನ್ನು ಚೆನ್ನಾಗಿ ಬಲ್ಲವನಂತೆ ನಡೆದುಕೊಂಡ, ಆ ದಿನ-
ಈಗಲೂ ನೆನಸಿಕೊಂಡರೆ ಮನಸ್ಸಿಗೆ ಏನೋ ಸುಖವಾಗುತ್ತಿದೆ !..."
ಅಯ್ಯೋ ! ತೀರಾ ನಾಚಿಕೆ ಬಿಟ್ಟು ಇದನ್ನೆಲ್ಲಾ ಬರೆದುಬಿಟ್ಟೆನಲ್ಲಾ!
ಹುಂ ! ಬರೆದಾಗ ಗೊತ್ತಿತ್ತೇ ? ಈ ಮಂಕು ಡೈರೀನ ಕಳೆದುಕೊಳ್ಳುತ್ತೆ-
ಅಂತ ! ಏನೋ ಆಗಿಹೋಯ್ತು !....ಆಮೇಲೆ.... ಮುಂದೆ ಏನು ಬರೆದೆ !
ಆಗಸ್ಟ್ ೧ ನೇ--ಅಲ್ಲ -೨ ನೇ ತಾರೀಖಿನಲ್ಲಿ ಹೆಚ್ಚು ಕಡಿಮೆ ಈ
ಮಾತುಗಳನ್ನು ಬರೆದೆ :
" ಆ ಯುವಕನ ಹೆಸರು ಜಯಂತ ! ಇವತ್ತು ತಿಳಿಯಿತು. ಅಕ
ಸ್ಮಾತ್ತು ಈ ದಿನ ಅವನನ್ನ ನೋಡಿದೆ. ಅವನು ನನ್ನನ್ನು ಗುರ್ತಿಸ
ಲಿಲ್ಲಾ ಅಂತ ಕಾಣುತ್ತೆ. ನಾನು ಅವನ ಹಿಂದೆ ಕುಳಿತಿದ್ದೆ. ಅವ
ನೇಕೆ ನನ್ನನ್ನು ಗುರ್ತಿಸಬಾರದಾಗಿತ್ತು ? ನಾನು ಅವನನ್ನು ಗುರ್ತಿಸ
ಲಿಲ್ಲವೇ? ಅವನ ಭಾವನೆ ಏನಿರಬಹುದು ? ಬೀದಿ ಬೀದಿಗಳಲ್ಲಿ
ಕಷ್ಟಕ್ಕೆ ಸಿಕ್ಕಿದ ಹೆಣ್ಣುಗಳಿಗೆಲ್ಲಾ ಕನಿಕರದಿಂದ ಸಹಾಯಮಾಡುವು
ದಷ್ಟೇ ತನ್ನ ಕರ್ತವ್ಯವೆಂದೂ, ಆಮೇಲೆ ಅವರನ್ನು ಎಲ್ಲಿಯಾದರೂ
೪೮--------------------------------------------------------------
ಕಂಡರೆ ಗುರ್ತಿಸಿ ಮಾತನಾಡಿಸುವ ಅಗತ್ಯವಿಲ್ಲವೆಂದೂ ಅವನ ಅಭಿ
ಪ್ರಾಯವೇ ? ಹಾಗಿದ್ದರೆ, ಪಾಪ ! ಎಷ್ಟು ಜನರನ್ನಾಂತ ಜ್ಞಾಪಕ
ದಲ್ಲಿಟ್ಟುಕೊಂಡಾನು ?....ಅವನ ಪಕ್ಕದಲ್ಲಿ ವಯಸ್ಸಾದಾತ ಒಬ್ಬರಿ
ದ್ದರು. ಅವರ ಕಕ್ಕನೊ - ಅಥವಾ ಇನ್ಯಾರೋ ಆಗಿರಬಹುದು.
ಅವರವರ ಮಾತುಕಥೆ ಯಿಂದ ಅವನ ಹೆಸರನ್ನಾದರೂ ತಿಳಿಯು ವಂತಾಯಿತು. ಬಹುಃ ಮುದುಕ ಹತ್ತಿರ ಇದ್ದದ್ದರಿಂದ ನನ್ನನ್ನು ತಿಳಿಯದವನಂತೆ ನಟಿಸಿದ ಹಾಗೆ ಕಾಣುತ್ತೆ ! ಅಬ್ಬಬ್ಬಾ ! ಒಳ್ಳೆ
ಗೃಹಸ, ಮಹರಾಯ!!?
ಆ ಮೇಲೆ ಏಳೆಂಟು ದಿನಗಳ ತರುವಾಯ ಹೀಗೆ ಬರೆದೆ ಅಂತ ಜ್ಞಾಪಕ:
"ಇವತ್ತಿನ ಪತ್ರಿಕೆಗಳಲ್ಲಿ ಒಂದು ಶುಭವಾರ್ತೆ ! ಯಾವುದೋ ವಿಶ್ವವಿದ್ಯಾನಿಲಯದ ಪ್ರಬಂಧರಚನಾ ಸ್ಪರ್ಧೆಯಲ್ಲಿ ಜಯಶೀಲನಾ ಗಿರುವನಂತೆ, ಜಯಂತ ೨೦೦ ರೂಪಾಯಿ, ಒಂದು ಪದಕ ಬಹು
ಮಾನವಂತೆ, ಈ ಸಮಾಚಾರವನ್ನು ಮತ್ತೆ ಮತ್ತೆ ಓದತೊಡಗಿದೆ.
ಯಾಕೆ ?.... ಯಾಕೋ ! ಓದುತ್ತ ಓದುತ್ತ ನಿದ್ದೆ ಮುಸುಕಿ ಬಂತು.
ಬರುತ್ತ ಒಂದು ಸೊಗಸಾದ ಕನಸನ್ನು ತಂದಿತು. ಆಹಾ ! ಎಷ್ಟು
ಚೆನ್ನಾಗಿತ್ತು ಕನಸು! ಜಯಂಠ ಪದಕವನ್ನು ನನ್ನ ಎದೆಗೆ ಸಿಕ್ಕಿ
ಸಿದ - ಕನಸಿನಲ್ಲಿ ! ಆಹಾ! ನನ್ನ ಎದೆ ಮುಖದಿಂದ ಉಬ್ಬಿ ಬಿರಿ
ಯುತ್ತಿದೆ.”
ಅಯ್ಯೋ ! ದೇವರೇ, ಈಗೇನು ಮಾಡಲಿ ! ಆ ಪುಸ್ತಕದಲ್ಲಿ ಮನ
ಸ್ಸಿಗೆ ಬಂದಿದ್ದನ್ನೆಲ್ಲಾ ಗೀಚಿಬಿಟ್ಟಿದ್ದೇನಲ್ಲಾ !- ಇನ್ನೇನು ಗತಿ ?
ಇವತ್ತು ಬೆಳಗಿನ ಟಪಾಲಿನಲ್ಲಿ ನನ್ನ ಪ್ರೀತಿಪಾತ್ರವಾದ ಆ ಡೈರಿ
ಬಂತು. ಜೊತೆಯಲ್ಲಿಯೇ ಕಳಿಸಿದವರಿಂದ ಒಂದು ಕಾಗದವೂ ಇತ್ತು.
ಯಾರೋ (ಜ' ಅನ್ನುವವರು - ದಿನಮಣಿ ' ಆಫೀಸಿನಿಂದ ಕಳಿಸಿದ್ದರು.
ಆಹಾ ! ಇದೀಗ ತಮಾಷೆ ! ಆಗೋದೇ ಹೀಗೆ ! ನನ್ನ ಕಕ್ಕನ ಮಗ
ಮಂಗೇಶ - ದಿನಮಣಿ ' ಆಫೀಸಿನಲ್ಲಿದ್ದಾನೆ. ನನ್ನನ್ನು ಕಂಡರೆ ಅವನಿಗೆ
ತುಂಬಾ ವಿಶ್ವಾಸ. ಸ್ವಲ್ಪ ತಲೆ ಸವರಿ ಅವನಿಂದ ಈ ' ಜ' ಅನ್ನೋರ
ಹೆಸರು ವಿಳಾಸ ತಿಳಿದುಕೊಂಡೆ. " " ಇನ್ನಾರೂ ಅಲ್ಲ, ಜಯಂತ !
೪೯--------------------------------------------
ಆಹಾ! ಇದಲ್ಲವೆ ಅದೃಷ್ಟ- ಸುದೈವ ಅನ್ನೋದು ! ಅಸಾಧ್ಯವಾದದೂ
ಸಾಧ್ಯವಾಗುವುದು ಅದರ ಬಲದಿಂದ ! ಇದೇನು ವಿಚಿತ್ರ ! ನನ್ನ ಡೈರಿ,
ಹೆಚ್ಚೇನು ?--ನನ್ನ ಅಂತರಂಗ ಅವನಿಗೆ ಸಿಕ್ಕಬೇಕೇ ?... ಇಷ್ಟು
ಲಕ್ಷ ಜನ ಇರುವ ಬೊಂಬಾಯಿನಲ್ಲಿ ! ಇದು ಬರೀ ಆಕಸ್ಮಿಕ ಘಟನೆಯೇ !
ಅವನಿಗೆ ನನ್ನ ಡೈರಿಯೇನೋ ಸಿಕ್ಕಿತು; ಆದರೆ, ಅಂದು ನಾನು ಮಳೆಗೆ
ಸಿಕ್ಕಾಗ ನನ್ನ ಹೆಸರನ್ನು ತಿಳಿದುಕೊಳ್ಳದೆ ಇದ್ದದ್ದರಿಂದ ಚಪಲಾ ವಾಗ್ಲೆ
ಯಾರು ಎಂದು ಅರಿಯಲಾರ ಬಿಗುಮಾನಿ ಜಯಂತ !
ಏನು ತುಂಟತನ ಅವನದು ! ನನ್ನ ಡೈರೀಲಿದ್ದ ಸ್ಟಾಂಪುಗಳನ್ನು
ಡೈರೀನ ವಾಪಸು ಕಳಿಸಿದ್ದಕ್ಕೆ ಬಹುಮಾನಾಂತ ಹೊಡೆದುಬಿಟ್ಟನಲ್ಲಾ--
ಸ್ವಲ್ಪವೂ ನಾಚಿಕೆಯಿಲ್ಲದೆ! ನನ್ನ ಗುಟ್ಟುಗಳನ್ನೆಲ್ಲಾ ಅವನು ಓದಿರುವು
ದಕ್ಕೂ ಸಾಕು ! ಓದಿಯೇ ಇರಬೇಕು ! ಅಮ್ಮಮ್ಮಾ ! ಈಗೇನು
ಮಾಡಲೇ ! ಅವನಿಗೆ ನನ್ನ ಮುಖಾ ತೋರಿಸೋಕೆ ನಾಚಿಕೆಯಾಗುತ್ತಿದೆ
ಯಲ್ಲಾ ! ಅಯ್ಯೋ ! ವಿಧಿಯೆ, ಎಲ್ಲರನ್ನೂ ಬಿಟ್ಟು ಅವನ ಕೈಗೆ ಹಾಕಿ
ದೆಯಾ ನನ್ನ ಡೈರೀನ ! ಇದೆಂಥಾ ಹಾಸ್ಯ ನಿನಗೆ ?..... ನನ್ನ ಗುಟ್ಟು
ಗಳನ್ನೆಲ್ಲಾ ಇವನು ಓದಿರಬಹುದೇ ? ಬಹುಶಃ ಓದಿರಲಾರ. ಅದನ್ನ
ತಿಳಿಯೋದು ಹೇಗೆ ? ನನ್ನನ್ನು ಬಂದು ಕಾಣುವಂತೆ ಕಾಗದ ಬರೀತಿನಿ.
ಆಗ ನಿಜವನ್ನ ತಿಳಿಯಬಲ್ಲೆ. ಡೈರೀನ ಓದಿದ್ದಾನೇಂತ ಏನಾದರೂ
ಗೊತ್ತಾದರೆ ಅವನಿಗೆ ಹುಚ್ಚು ಬಿಡಿಸಿಬಿಡುತ್ತೇನೆ ! ನೀನು ಶುದ್ಧ ಒರಟ
ಅಯೋಗ್ಯ, ಅಂಥವನು !-ಇಂಥವನು !-- ಅ೦ತ ಬಾಯಿ ಬಿಟ್ಟು
ಹೇಳಿಯೇ ಬಿಡುತ್ತೇನೆ- ಬಿಡೋಲ್ಲ !!
ಇವತ್ತು, ಜಯಂತನಿಗೆ ನನ್ನನ್ನು ಬಂದು ಕಾಣುವಂತೆ, ತಿಳಿಸಿ
ಕಾಗದ ಬರೆದೆ.
ಊ- ಹುಂ! ಈ ಜಯಂತ ಒಳ್ಳೆ ಗುಳ್ಳೆನರಿಯಾಗಿದ್ದಾನಲ್ಲಾ!
ನಾನೇ ಬಾಂತ ಕಾಗದ ಬರೆದರೂ ಬರದೆ, ಸಾವಿರಾರು ಇಲ್ಲದ ನೆವ ಹೇಳಿ
ತಲೆ ತಪ್ಪಿಸಿಕೊಳ್ಳುತ್ತಿದ್ದಾನಲ್ಲಾ ! ಶುದ್ಧ ಬೂಟಾಟಿಕೆ ದಾಸಯ್ಯ ! ಇರೋ
ಸಂಗತಿ ಇಷ್ಟು ; ನನ್ನ ಡೈರೀನ ಓದಿಬಿಟ್ಟಿದ್ದಾನೆ ; ಆದ್ದರಿಂದ ಬಂದು ಮುಖಾ ತೋರಿಸೋಕೆ ನಾಚಿಕೆ. ಪಾಪ ! ಓದೋವಾಗ ತಡೆಯಾಗದ
೫೦---------------------------------------------------------
ನಾಚಿಕೆ ಅವನು ಇಲ್ಲಿಗೆ ಬರೋಕೆ ತಡೆಯಾಗುತ್ತಿದೆ ! ಅವನು ಯಾವಾ
ಗಲಾದರೂ ಬಂದರೆ, ನಾನೇನೋ ಅವನನ್ನು ಮಿತಿಮೀರಿ ಬಯ್ಯೋಲ್ಲ--
ಉಹುಂ, ಇಲ್ಲ ! ಆದರೆ ಅವನು ಮಾಡಿದ್ದು ತಪ್ಪಂತ ಸ್ವಲ್ಪ ಬಿಸಿ
ಮುಟ್ಟೋ ಹಾಗೆ ಹೇಳುತ್ತೇನೆ, ಅಷ್ಟೆ. ಅವನನ್ನ ಎಷ್ಟು ಹೊತ್ತಿಗೆ
ನೋಡೇನೊ ಅಂತ ಹಂಬಲು ಹೆಚ್ಚುತ್ತಾ ಇದೆಯಲ್ಲ ! ಒಂದು ವೇಳೆ
ಬಂದರೆ, ಏನು ಹೇಳಲಿ ಅವನಿಗೆ ?........ಇವತ್ತೇನೋ ಮಳೆ ಬರೋ
ಹಾಗಿಲ್ಲ; ಆದ್ದರಿಂದ ಅವನ ಮಳೆ ಅಂಗಿಗೆ ಪ್ರಯೋಜನವಿಲ್ಲ .............
ಇವತ್ತು ನಾವೆಲ್ಲಿಯಾದರೂ ಸಂಧಿಸಿದರೆ ಅವನು ಏನು ಮಾಡಬಹುದು?
ಯಾಕೋ ಬಹಳ ಚಳಿಯಾಗಿದೆ ಇವತ್ತು.. ಆದ್ದರಿಂದ ನೋಡಬೇಕು! -
ಹುಂ ! ಈ ಯುವಕರ ವಿಷಯ ಹೀಗೇ ಅಂತ ಹೇಳೋದು ಕಷ್ಟ !....
ಆದರೆ ಇವತ್ತು ಜಯಂತ ಸಿಗುವನೇ ?
ಜಯಂತನಿಗೊಂದು ಕಾಗದ ಬರೆದಿದ್ದೇನೆ. ಡೈರಿಯಿಂದ ನನ್ನ
ಗುಟ್ಟುಗಳನ್ನೆಲ್ಲಾ ತಿಳಿದಿರುವುದರಿಂದ ಇನ್ನು ಮೇಲೆ ಅವನು ನನಗೆ ಅಪರಿ
ಚಿತನಲ್ಲವೆಂದೂ, ಆದ್ದರಿಂದಲೇ ಅವನನ್ನು ಕಣ್ಣಾರೆ ಕಂಡು ಮಾತನಾಡಲು
ಆಸೆಪಡುತ್ತೇನೆಂದೂ, ಅದರಲ್ಲಿ ತಿಳಿಸಿದ್ದೇನೆ. ಆಹಾ ! ಜಯಂತ ನಿಜ
ವಾಗಿಯೂ ಬಂದರೆ !............ಕಾಗದ ಬರೆಯುವಾಗ ನನ್ನ ಕೈ ನಡುಗು
ತ್ತಿತ್ತು !
ಇದೀಗ ನಿಜವಾಗಿಯೂ ತಮಾಷೆಯಾಗುತ್ತಿದೆ ! ಜಯಂತನಿಂದ
ಉತ್ತರಬಂತು. ಅವನು ಹೊಡೆದು ಇಟ್ಟು ಕೊಂಡಿರುವ ಫೋಟೋ
ಸುಲಭೆ ಯದು : ನಾನೇ ತೆಗೆದದ್ದು. ಅದನ್ನ ಅವಳಿಗೆ ಕೊಡೋಣಾಂತ ನನ್ನ
ಡೈರೀಲಿ ಇಟ್ಟುಕೊಂಡಿದ್ದೆ. ಕೊಡೋದು ಮರೆತೆ. ಜಯಂತ ಅದು
ನನ್ನ ಫೋಟೋ ಅಂತ ಭಾವಿಸಿರೋ ಹಾಗೆ ಕಾಣುತ್ತೆ ! ಆದ್ದರಿಂದಲೇ
ಅವನು ನನ್ನನ್ನು ಕಂಡಾಗ ಗುರ್ತಿಸದೇ ಇದ್ದದ್ದು ! ಅದು ನನ್ನ
ಫೋಟೋನೇ ಆಗಿದ್ದಿದ್ದರೆ, ಕಂಡ ಕೂಡಲೆ ನನ್ನನ್ನು ಗುರ್ತಿಸುತ್ತಿದ್ದುದು
ಅಷ್ಟೇ ಅಲ್ಲದೆ, ನನ್ನನ್ನು ನೋಡೋಕೆ ಓಡಿ ಬರುತ್ತಿದ್ದ ! ನಾನು ಯೋಚಿ
ಸಿದ್ದದ್ದು. ಉಹುಂ! ನಾನು ಏನು ಯೋಚಿಸಿದ್ದೆ ಅನ್ನೋದನ್ನ ಬರೆಯ
ಲಾರೆ! ಆದರೆ, ಅಮ್ಮಮ್ಮಾ! ಇವನೆಂಥಾ ತುಂಟ. ಈ ಜಯಂತ !
೫೧-------------------------------------------------------------
ಹೀಗೂ ಉಂಟೇ ಲೋಕದಲ್ಲಿ ? ಯಾರೋ ಹುಡುಗಿ !--ಕಂಡಿಲ್ಲ-
ಕೇಳಿಲ್ಲ ! ಅವಳ ಫೋಟೋನ ಹೊಡೆದಿಟ್ಟು ಕೊಂಡು, ಅದನ್ನ ತಾನು
ಮಾಡಿದ ಉಪಕಾರಕ್ಕೆ ಬಹುಮಾನಾಂತ ಹೇಳಿಕೊಳ್ಳುತ್ತಾನಲ್ಲ ! ಇದೆಂಥಾ
ನಾಚಿಕೆಗೇಡು .........ಹುಂ ! ಒಳ್ಳೇದು !! ಆಗಲಿ ! ಆಗ !! ಜಯಂತ
ರಾಯರೇ ಆತುರ ಪಡಬೇಡಿ, ಕಾದು ನೋಡಿ, ನಾನೇನು ಮಾಡುತ್ತೇನೆ
ಅನ್ನೋದನ್ನ .........ಅವನೂ ಪ್ರಾಯದವನು- ರಸಿಕ ; ಫೋಟೋದಲ್ಲಿ
ರೋಳೂ ಪ್ರಾಯದವಳು, ರೂಪವತಿ. ಸರಿ, ಬಹುಮಾನದ ನೆವದಲ್ಲಿ
ಅದನ್ನು ಇಟ್ಟುಕೊಂಡ. ಆದರೆ, ಅದ್ಯಾಕೆ ನನ್ನನ್ನು ನೋಡೋಕೆ ಆಸೆ
ಪಡದೆ ತಲೆತಪ್ಪಿಸಿಕೊಳ್ಳುತ್ತಿದ್ದಾನೆ ? ಗುರುತಿಲ್ಲದ ಕಾರಣ ಎದುರಿಗೆ
ಬಂದು ಮುಖಾ ಕೊಟ್ಟು ಮಾತನಾಡುವುದಕ್ಕೆ ನಾಚಿಕೆ ಪಟ್ಟುಕೊಳ್ಳುತ್ತಿ
ದ್ದಾನೆಯೇ ? ಹಾಗಾದರೆ ಗುರುತಿಲ್ಲದ ಯಾವ ಒಬ್ಬಳ ಫೋಟೋನ
ಇಟ್ಟುಕೊಳ್ಳೋ ದಿಟ್ಟತನವೇಕೆ ಅವನಿಗೆ ?............ಅಮ್ಮಮ್ಮಾ! ಈ
ಪ್ರಾಯದ ಹುಡುಗರ ಹೃದಯಗವಿಗಳಲ್ಲಿ ಹೆಣ್ಣುಗಳ ವಿಷಯವಾಗಿ ಏನೇನು
ಅಭಿಪ್ರಾಯಗಳಿರುತ್ತವೆಯೋ, ಎಂಥೆಂಥಾ ಯೋಚನೆಗಳು ಅಡಗಿರುತ್ತ
ವೆಯೋ ಜಗದಂಬೆಗೇ ಗೋಚರ !........ನಮ್ಮ ಊಹೆಗೂ ಸಿಕ್ಕೋವಲ್ಲ!
ಒಂದುವೇಳೆ ಜಯಂತ ಬೀದೀಲಿ ಎಲ್ಲಯಾದರೂ ಸುಲಭಾನ ಕಂಡು
ಅವಳನ್ನೇ ಚಪಲಾ ಎಂದು ಭಾವಿಸಿದರೆ ?-ಭಾವಿಸಿ ಮಾತುಕಥೆ ಬೆಳೆದರೆ ?
ಅದರಿಂದ ಮಮತೆ ಹುಟ್ಟಿದರೆ ಮೋಹ ಮೊಳೆತರೆ ?....ಆಗ ?....ಓ!
ಆಗ ಇಬ್ಬರೂ ಸೇರಿ ಬಿದ್ದು ಬಿದ್ದು ನಗುವಂತಾಗುವುದು ನನ್ನ ಪಾಡು !....
ಅಯ್ಯೋ ! ನಿಜವಾಗಿಯೂ ಹಾಗಾದರೆ ಏನು ಗತಿ ?........ಇಲ್ಲ! ಇಲ್ಲ !!
ಬೇಕಾದ್ದಾಗಲಿ, ಹಾಗಾಗೋಕೆ ಬಿಡೋದಿಲ್ಲ! ಅದಕ್ಕೆ ಮುಂಚೇನೇ ಮದ್ದು
ಮಾಡುತ್ತೇನೆ !... ಎಲ್ಲವನ್ನೂ ತಿಳಿಸಿ ಅವನಿಗೆ ಬರೆದುಬಿಡುತ್ತೇನೆ. ಅದೇ
ಸರಿ, ಬರೀಲೇ ಬೇಕು !....ಆದರೆ ಹೇಗೆ ಬರೆಯಲಿ ? ಏನು ಬರೆಯಲಿ?
ಸುಲಭಾನ ಸಂಗಡ ಸ್ನೇಹ- ಸರಸ ಬೇಡಾಂತ ಬರೀಲೇ ? ಹೀಗೆ ಬರೆದರೆ
ನನ್ನ ವಿಷಯದಲ್ಲಿ ಏನು ತಿಳಿದುಕೊಂಡಾನು, ಅವನು ? ಆಗವನು
ಮಾಡುವುದು ? ಮಾಡುವುದೇನು ? ಪುನಃ ಬರೆಯುವುದು, ಅಷ್ಟೆ.
ಓ ಬಲು ಸೊಗಸಾಗಿದೆ ಜಯಂತನ ಈ ಉತ್ತರ! “ ನನ್ನನ್ನು
೫೨----------------------------------------------------
ಗುರ್ತಿಸುವ ನಿಮ್ಮ ಪ್ರಯತ್ನ ಕೈಗೂಡಿದಂದು ನೀವು ಕೇಳಿದ್ದನ್ನ ಕೊಡಲು
ಸಿದ್ಧನಾಗಿದ್ದೇನೆ! ಆದರೆ ಜ್ಞಾಪಕವಿರಲಿ-ಫೋಟೋ ಮಾತ್ರ ಕೊಡಲಾರೆ ! ”
ಎಂದು ಪಂಥ ಕಟ್ಟಿ ಬರೆದಿದ್ದಾನೆ. ಹ್ಞಾ! ಆ ಫೋಟೋ ನನ್ನದೇ ಅಂತ
ತಿಳಿದುಕೊಂಡಿದ್ದಾನೆ ಪಾಪ ! ಇರಲಿ. ಜಯಂತ ಯಾರು ಅನ್ನೋದನ್ನ
ಚಪಲೆ ಬಲ್ಲಳು ; ಆದರೆ ಚಪಲೆ ಯಾರು ಅನ್ನುವುದನ್ನ ಜಯಂತ
ಅರಿಯ-ಎನ್ನುವುದರ ಅರಿವೂ ಅವನಿಗಿಲ್ಲ !.. .ಹುಂ! ಆಗಲಿ, ಆಗಲಿ,
ಜಯಂತರಾಯರೇ, ಆಗಲಿ ! ನಿಮ್ಮನ್ನ ಅಲ್ಲಿಗೇ ಬಿಡೋಲ್ಲ ! ನಿನ್ನ ಈ
ಭ್ರಮೆ ಎಲ್ಲೀತನಕ ಹೋಗುತ್ತೆ ನೋಡಿಯೇ ಬಿಡುತ್ತೇನೆ. ನನ್ನನ್ನು
ನೋಡಿದೊಡನೆಯೇ ಗುರ್ತಿಸಬಲ್ಲ ಸ್ಥಿತಿಯಲ್ಲಿದ್ದೇನೇಂತ ನೀನು ತಿಳಿದು
ಕೊಂಡಿರುವೆ. ನಿನ್ನ ತಿಳುವಳಿಕೆ ಸ್ವಲ್ಪ ತಲೆಕೆಳಗಾಗಿದೆ ಅಷ್ಟೆ ! ನಿಜವಾ
ಗಿರೋ ಸಂಗತಿ, ನಾನು ನಿನ್ನ ಭಾಗಕ್ಕೆ ಕತ್ತಲೆಯೊಳಗಿದ್ದೇನೆ : ನನ್ನ
ಭಾಗಕ್ಕೆ ನೀನು ಬೆಳ್ಳಂಬೆಳಕಿನಲ್ಲಿದ್ದೀಯ! ನಿನ್ನನ್ನು ನೋಡಿದೊಡನೆಯೇ
' ಇದೋ ಜಯಂತ ' ಎಂದುಕೊಳ್ಳಬಲ್ಲೆ ; ನನ್ನನ್ನು ನೋಡಿದಾಗ
' ಇವಳೇ ಚಪಲಾ ' ಎಂದುಕೊಳ್ಳಬಲ್ಲೆಯಾ ? ಇಲ್ಲ ! ನಿನಗೆ ಅದು
ಸಾಧ್ಯವೇ ಇಲ್ಲ !!
ಇವತ್ತು ಡೈರಿಯಲ್ಲಿ ಬರೆದೆ :
"ಇಷ್ಟು ದಿನ ಗೋಚರವಾಗದೆ ಇದ್ದದ್ದು ಇವತ್ತು ಗೋಚರ
ವಾಯಿತು ! ”
೪. ಪುನಃ ಜಯಂತನ ಮಾತುಗಳು.
ಹುಂ! ಹಾಳಾಯ್ತು !! ಯಾಕೋ ಕೆಲವು ದಿನಗಳಿಂದ ಮನಸ್ಸಿಗೆ
ಏನೋ ಬೇಜಾರು ! -ನಿರುತ್ಸಾಹ! ಒಂದೂ ಬೇಡವಾಗಿದೆ. ಸ್ನೇಹಿತರ
ಹತ್ತಿರ ಮಾತುಕಥೆ ತುದಿಬುಡವಿಲ್ಲದ ಹರಟೆ ಅಂದರೆ ಊಟ ಬೇಡ-
ತಿಂಡೀ ಬೇಡ ಅಷ್ಟು ರುಚಿಯಾಗಿರುತ್ತಿತ್ತು. ಈಚೆಗೆ ಅದೊಂದೂ ಬೇಡ
ವಾಗಿದೆ. ಈಗ ಬೇಕಾಗಿರೋದು ಒಂದೇ ! ಸಮಯ ಸಿಕ್ಕಾಗಲೆಲ್ಲಾ
ಹುಚ್ಚನ ಹಾಗೆ ಬೀದಿಬೀದೀಲಿ ಬಿರುಗಣ್ಣು ಬಿಟ್ಟು ಕೊಂಡು ಅಲೆಯೋದು !
ಇಷ್ಟಕ್ಕೆ ಬಂತು ನನ್ನ ಗತಿ !
೫೩----------------------------------------
ಮೊನ್ನೆ ರಾಕ್ಸಿ ಥಿಯೇಟರಿಗೆ ಹೋಗಿದ್ದೆ. ಇದ್ದಕ್ಕಿದ್ದ ಹಾಗೆಯೇ
ಕತ್ತಲಲ್ಲಿ " ಸುರಯೀ ಪರಾಗ” ಪರಿಮಳ ಬಂತು ! ನನ್ನನ್ನೇ ಹುಡುಕಿ
ಕೊಂಡು ಬಂದಿತೋ ಎನ್ನುವಂತೆ ಬಂತು. ನನ್ನ ಮುಂದೆಯೇ ಸ್ವಲ್ಪ
ದೂರದಲ್ಲಿ ಒಬ್ಬ ಯುವತಿ ಕುಳಿತಿದ್ದಳು. ಆ ಪರಿಮಳದಿಂದ ಭ್ರಮೆ
ಗೊಂಡಿದ್ದ ನಾನು ' ಚಪಲಾ' ಎಂದು ಕರೆದು ಬಿಡುವುದರಲ್ಲಿದ್ದೆ. ಆದರೆ
ನನ್ನ ಸುದೈವ ! ಆ ಕ್ಷಣದಲ್ಲಿ ಥಿಯೇಟರಿನಲ್ಲಿ ಬೆಳಕಾಯಿತು. ಚೆನ್ನಾಗಿ
ನೋಡಿದೆ. ಫೋಟೋದಲ್ಲಿನ ಹುಡುಗಿಗೂ ಅವಳಿಗೂ ಸ್ವಲ್ಪವೂ ಸಾಮ್ಯ
ವಿರಲಿಲ್ಲ ! ಸಧ್ಯ, ಸಮಯದಲ್ಲಿ ಬೆಳಕು ಬಂದು, ತೀರಾ ಅನಾಹುತ
ವಾಗುತ್ತಿದ್ದುದು ತಪ್ಪಿ ಪಾರಾದೆ !
ನಾನು ಅವಳ ಮೇಲೇ ಕಣ್ಣನ್ನು ನೆಟ್ಟು, ಹುಚ್ಚನ ಹಾಗೆ ನೋಡು
ತ್ತಿರುವಾಗಲೇ ಆ ಯುವತಿ ತನ್ನ ಮೆಲುನಗೆಯ ಮುಖವನ್ನು ನನ್ನ ಕಡೆಗೆ
ತಿರುಗಿಸಿದಳು. ಎಂತಹ ರೂಪರಾಶಿ ! ಇದೇನು ಕಣ್ಣುಗ ಗಳು ! ಕಣ್ಣುಗಳೋ,
ಪ್ರಾಯದ ಕೊರಳಿಗೆ ಕಾಮನ ಕಣ್ಣಿಗಳೋ ! ಅದೇನು ರೂಪಜಾಲ !....
ಎಂದೂ ಎಲ್ಲೂ ನೋಡಿದ ಹಾಗೆ ನೆನಪಿಲ್ಲ.....?....ಇಲ್ಲ ಇಲ್ಲ! ಎಲ್ಲೋ
ನೋಡಿದ್ದೇನೇಂತ ಕಾಣುತ್ತೆ ! ಮಸಕುಮಸಕಾಗಿ ಜ್ಞಾಪಕ....ಎಲ್ಲಿ ?....
ಎಲ್ಲಿ ? ಹ್ಯಾ! ಹೌದು ! ಹೌದು! ಟ್ರಾಂ!! ಆರು ತಿಂಗಳ ಹಿಂದೆ ಟ್ರಾಮಿನಲ್ಲಿ
ನೋಡಿದೆ. ಸು! ಸರಿ ! ಅವತ್ತು ವಿಪರೀತ ಮಳೆ-ಹುಚ್ಚು ಹುಚ್ಚಾಗಿ
ಹೊಯ್ದಿತ್ತು. ಅವಳು ಟ್ರಾಮಿನಿಂದ ಇಳಿಬೇಕಾಗಿರೋದು, ಹತ್ತಿರ
ಕೊಡೆ ಇಲ್ಲ. ನನ್ನ ರೇನ್ ಕೋಟಿನಿಂದ (Rain Coat ) ಅವಳ ಮೈ
ಮುಚ್ಚಿ, ಒಂದು ಕೋಚ್ ಗಾಡಿ ಕರೆದು ಅದರಲ್ಲಿ ಕೂರಿಸಿ ಕಳಿಸಿದೆ. ಅವಳ
ಹೆಸರೇನೋ - ಯಾರ ಮನೆಯವಳೋ ಒಂದೂ ತಿಳಿಯೆ. ಮಾತಾಡಿಸ
ಲಿಲ್ಲ ; ಮಾತಾಡಿಸೋವೇ ! ಏನೂ ತಿಳಿದುಕೊಳ್ಳದಿದ್ದರೆ ಸರಿ; ಇಲ್ಲದೆ,
ಸಹಾಯಮಾಡೋ ನೆವದಲ್ಲಿ ಮಾತಾಡಿಸೋಕೆ ಬಂದ, ಇವನ್ಯಾವನೋ
ಪೋಕರಿ ಅಂತ ಭಾವಿಸಬಹುದಾಗಿತ್ತಲ್ಲ! ಉಹುಂ ! ಮಾತಾಡಿಸದೆ
ಇದ್ದದ್ದೇ ಕ್ಷೇಮವಾಯ್ತು.. ಈ ಸಂಗತಿ ನಡೆದು ಆರು ತಿಂಗಳ ಮೇಲೆ
ಆಯ್ತು. ಇಷ್ಟು ದಿನಗಳ ಮೇಲೆ ನನ್ನನ್ನ ಅವಳು ಗುರ್ತಿಸಿದ್ದಾಳೆಯೇ ?
ಬಹುಶಃ ಅವಳಿಗೂ ನೆನಪಾಗಿರಬಹುದು. ಇಲ್ಲದಿದ್ದರೆ ಆ ಮುಗುಳುನಗೆಯ
೫೪-------------------------------------------------------------
ಅರ್ಥವೇನು ? ಥಿಯೇಟರಿನಲ್ಲಿ ನೋಟ ಮುಗಿಯಿತು. ಜನರೆಲ್ಲಾ ಎದ್ದು ಹೊರಡಲಾರಂಭಿಸಿದರು. ನಾನು ಧೈರ್ಯಮಾಡಿದೆ. ಆಕೆಯ ಬಳಿಗೆ
ಹೋಗಿ,
“ ನನ್ನ ಗುರ್ತು ಸಿಕ್ಕಿತೇ ?"
-ಎಂದು ಕೇಳಿದೆ.
“ಅಯ್ಯೋ, ಹಾಗೆಂದರೇನು ಚೆನ್ನಾಯ್ತು ........ ಆದರೆ, ಇಷ್ಟು
ದಿನಗಳ ಮೇಲೆ ನಿಮಗೆ ನನ್ನ ಗುರ್ತು ಸಿಕ್ಕಿದ್ದು ಹೆಚ್ಚು!”
"ಇಲ್ಲ ಇಲ್ಲ; ಅದಕ್ಕಿಂತ ಹೆಚ್ಚು ನನ್ನ ಭಾಗ್ಯ !”
“ ಅದು ಹೇಗೆ ? ”
“ಗುರುತಿಲ್ಲದ ಒಬ್ಬ ಸ್ತ್ರೀಯ ನೆನಪಿನಲ್ಲಿ, ಆರು ತಿಂಗಳಾದರೂ
ಅಳಿಸಿಹೋಗದೆ ಇರುವುದು ಭಾಗ್ಯವಲ್ಲವೆ ?.. ಆ ದಿನ ನಾವು ಮಾತು
ಕೂಡ ಆಡಿರಲಿಲ್ಲ ! ”
"ನಿಜ; ಆದರೆ, ಮಾತಾಡಿಸೋಕೆ ಅವಕಾಶಾನೇ ಕೊಡಲಿಲ್ಲವಲ್ಲ !
ನನ್ನ ಗಾಡೀಲಿ ಕೂರಿಸಿದ್ದೆ ತಡ ಪರಾರಿ! ಏನೋ ಮಹಾಪಾತಕ
ಮಾಡಿದ ಹಾಗೆ ! ಅಲ್ಲವೇ, ಜಯಂತರಾಯರೇ ? ”
ಹ್ಞ? ಏನಂದಳು ? ಜಯಂತರಾಯರು ! ಆಶ್ಚರ್ಯ ! ಬಹಳ
ಆಶ್ಚರ್ಯ !! ಹೇಗೆ ಗೊತ್ತಾ ತು ಅವಳಿಗೆ ನನ್ನ ಹೆಸರು ?
“ನನ್ನ ಹೆಸರು ಹೇಗೆ ಗೊತ್ತಾಯಿತು ? ತಿಳಿಸಿರಲಿಲ್ಲವಲ್ಲಾ ನಾನು! ”
- ಎಂದು ಕುತೂಹಲದಿಂದ ಕೇಳಿದೆ.
ಉಪಕಾರ ಮಾಡಿದವರ ಹೆಸರನ್ನಾದರೂ ತಿಳಿದುಕೊಳ್ಳಬಾರದೆ ??
“ಓ! ಹಾಗೋ, ಈಗ ನಾನು ಉಪಕೃತನಾದೆ. ಆದರೆ ನನಗೆ ಇನ್ನೂ
ಆಶ್ಚರ್ಯವಾಗುತ್ತಿದೆ..ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯಿತು.
ಅಂತ.”
" ಕೆಲವು ದಿನಗಳ ಮೇಲೆ ನಿಮ್ಮಿಂದಲೇ ಗೊತ್ತಾಯಿತು ! ”
-ಎಂದು, ಉಕ್ಕಿ ಬರುತ್ತಿದ್ದ ನಗುವಿನಲ್ಲಿ, ಆಪಾದಮಸ್ತಕವೂ ಲತೆ
ಯಂತೆ ಬಳುಕಾಡಿದಳು.
“ ಏನು ? ಏನು ? ನನ್ನಿಂದಲೇ ಗೊತ್ತಾಯಿತೇ ?....ಇಲ್ಲ, ಇಲ್ಲ !
೫೫-------------------------------------------------------------
ಎಂದಿಗೂ ಇರಲಾರದು ! ಆ ದಿನದಿಂದ ಈಚೆಗೆ ನಾವು ಒಬ್ಬರನ್ನೊಬ್ಬರು
ನೋಡಲೇ ಇಲ್ಲವಲ್ಲ ! ಮಾತಾಡೋದು ಹಾಗಿರಲಿ ! ಇಂಥಾದ್ದರಲ್ಲಿ
ನಾನೇ ಹೇಗೆ ತಿಳಿಸಿದೆ ? "
"ಸ್ವಲ್ಪಪ್ರಯತ್ನ ಪಡಿ, ಜ್ಞಾಪಕವಾಗಬಹುದು !
“ ಆಗಲಿ, ಆಗಲಿ ; ಏನೋ ತಮಾಷೆಯಾಗಿದೆ !........ ಹೊರಗೆ
ಹೋಗೋಣ-ದಾರಿಗೆ ಅಡ್ಡವಾಗಿ ನಿಂತಿದ್ದೇವೆ.”
--ಎಂದೆ.
ಇಬ್ಬರೂ ಥಿಯೇಟರಿನಿಂದ ಹೊರಗೆ ಬಂದೆವು. ನಾನು ಕೇಳಿದೆ :-
ಕ್ಷಮಿಸಿ, ಒಂದೇ ಮಾತು. ಆ ದಿನ ನಿಮ್ಮ ಪರಿಚಯ ಹೇಳದೇ
ಹೊರಟುಹೋದಿರಿ; ಇವತ್ತೂ ಹಾಗೆಯೇ ಮಾಡುವಿರಾ ? ”
“ ಅವತ್ತು ಹಾಗೆ ಮಾಡಿದವಳು ನಾನೊಬ್ಬಳೇ ಅಲ್ಲ ! ನೀವು
ಹೂಡಿದ ಕಣ್ಣು ಮುಚ್ಚಾಲೆ-ಅಲ್ಲ-ಹೆಸರುಮುಚ್ಚಾಲೆ ಆಟದಲ್ಲಿ ನಾನು ಗೆದ್ದಿ
ದೀನಿ. ಈಗ ನಿಮ್ಮ ಸರದಿ; ಪ್ರಯತ್ನ ಮಾಡಿ, ನೋಡೋಣ ! ಹೆಣ್ಣು
ಹೆಂಗಸು ಗೆದ್ದಲ್ಲಿ ನಿಮಗೆ ಅಸಾಧ್ಯವೇ ? ಅಷ್ಟು ಕುತೂಹಲವಿದ್ದರೆ ನೀವೇ
ಪತ್ತೆ ಮಾಡಿ, ನೋಡೋಣ ನಿಮ್ಮ ಬುದ್ಧಿ ಚುರುಕನ್ನಾದರೂ ! ” ಎಂದು
ಹೇಳಿ, ಒಂದು ಕ್ಷಣ ದಿಟ್ಟಿಸಿ ನೋಡಿ, ತಡೆಗಟ್ಟಿದ್ದ ನಗುವಿನ ಬುಗ್ಗೆಯನ್ನು
ನನ್ನ ಮೇಲೆ ಬಿಟ್ಟಳು. ನಾನು ಬೆಕ್ಕನ ಬೆರಗಾಗಿ- ಬಿರುಗಣ್ಣಾಗಿ ನೋಡು
ತಿದ್ದಂತೆಯೇ, ಅವಳು ಅಲ್ಲೇ ಕಾದಿದ್ದ ಒಂದು ಬಾಡಿಗೆ ಮೋಟಾರನ್ನು ಕರೆದು, ಹತ್ತಿದಳು. ಗಾಡಿ ನಿದಾನವಾಗಿ ಚಲಿಸತೊಡಗಿತು. ಕಿಟಕಿಯಲ್ಲಿ ಮುಖವಿಟ್ಟು, ಮೆಲುನಗೆ ಬೆರಸುತ್ತ, “ ನಮಸ್ಕಾರ! ” ಎಂದಳು. ಗಾಡಿ
ಹೊರಟೇ ಹೋಯುತು !
೫. ಇನ್ನೆರಡು ಕಾಗದಗಳು.
ಮರುದಿನ ಒಂದು ಕಾಗದ ಬರೆದೆ - ಚಪಲಾಗೆ :
"ಮಾನಿನಿ, ನಾನು ಯಾರೆಂದು ಪತ್ತೆ ಮಾಡಲು ನೀವು ಸ್ವಲ್ಪವೂ
ಪ್ರಯತ್ನ ಮಾಡಿದಂತೆ ತೋರುವುದಿಲ್ಲ ! ಈಗಾಗಲೇ ಎಷ್ಟೋ ದಿನಗಳು
೫೬----------------------------------------------------------------------
ಕಳೆದು ಹೋಗಿವೆ ! ನನ್ನನ್ನು ಸಂಪೂರ್ಣವಾಗಿ ಮರೆತೇಬಿಟ್ಟಿರೋ ಹೇಗೆ ?
ಇರಲಾರದು ಎಂದು ನನ್ನ ನಂಬಿಕೆ.
ನೆನ್ನೆ ಸಾಯಂಕಾಲ ಒಂದು ತಮಾಷೆಯಾಯಿತು. ಕೇವಲ ಒಂದು
ಹೆಣ್ಣಿನಿಂದ ಸೋಲುವ ಹೊತ್ತು ಬಂದಿದೆ ! ತಮಾಷೆಯಲ್ಲವೇ ? ಆಕೆ ನನ್ನ
ಬುದ್ಧಿಶಕ್ತಿಯನ್ನಳೆಯಲು ನಿಶ್ಚಯಿಸಿದ್ದಾಳೆ!
ನಡೆದ ಸಂಗತಿ ಇಷ್ಟು ; ನೆನ್ನೆ ಸಾಯಂಕಾಲ ಸಿನಿಮಾ ಮಂದಿರದಲ್ಲಿ
ಯುವತಿಯನ್ನು ನೋಡಿದೆ. ಆಕೆಯನ್ನು ಸುಮಾರು ಆರು ತಿಂಗಳ
ಒಂದು ಸಂದರ್ಭದಲ್ಲಿ ನೋಡಿದ್ದೆ. ನೆನ್ನೆ ನನ್ನನ್ನು ನೋಡಿದ
ಕೂಡಲೆ ಗುರ್ತಿಸಿದಳು ; ಅಷ್ಟೇ ಅಲ್ಲ, ನನ್ನ ಹೆಸರನ್ನು ಕೂಡ ತಿಳಿದು
ಕೊಂಡಿದ್ದಳು. ಇದರಲ್ಲಿ ಆಶ್ಚರ್ಯವೇನು ಎಂದರೆ. ಹಿಂದೆ ನೋಡಿದ್ದಾಗ
ಮಾತು ಕೂಡ ಆಡಿರಲಿಲ್ಲ. ಮುಖಪರಿಚಯವೆಷ್ಟೋ ಅಷ್ಟೆ-- ಎಂದಿದ್ದೆ
ಈಗಲೂ ನನಗೆ ಆಕೆಯ ಹೆಸರು ಗೊತ್ತಿಲ್ಲ. ನೆನ್ನೆ ಕಂಡಾಗ ಮಾತನಾಡಿ
ಸಿದೆ. ಹೆಸರೇನೆಂದು ಕೇಳಿದೆ. ಆಕೆ ಹೇಳಲಿಲ್ಲ. ನಗುತ್ತ, “ ಅಷ್ಟು ಕುತೂ
ಹಲವಿದ್ದರೆ ನೀವೇ ಪತ್ತೆ ಮಾಡಿ !-ನಿಮ್ಮ ಬುದ್ಧಿ ಚುರುಕನ್ನಾದರೂ
ನೋಡೋಣ ! ” ಎಂದಳು.
ಈ ನನ್ನ ಬುದ್ಧಿ ಪರೀಕ್ಷೆಯ ಸಮಯದಲ್ಲಿ ನಿಮ್ಮ ಸಹಾಯವನ್ನು
ಅಪೇಕ್ಷಿಸುತ್ತೇನೆ. ಯಾವ ಧೈರ್ಯದಿಂದ-ಎಂದು ನೀವು ಕೇಳಬಹುದು,
ನನ್ನನ್ನು ನಿಮ್ಮ ಸ್ನೇಹವಲಯಕ್ಕೆ ಎಳೆದುಕೊಂಡಿರುವ ನಿಮ್ಮ ಅಮಿತ
ವಾದ ಔದಾರ್ಯದ ಬಲದ ಮೇಲೆ ಈ ಸಂದರ್ಭದಲ್ಲಿ ನಿಮ್ಮ ನೆರವನ್ನ
ಪೇಕ್ಷಿಸುತ್ತೇನೆ. ನೀವು ನಿರಾಕರಿಸಲಾರಿರಿ-ಎಂದು ಏನೋ ಒಂದು ನಂಬಿಕೆ
ಕೊಳ್ಳಲೇ ಬೇಕು ! ಇದಿದ್ದರೆ ನನ್ನ ಬುದ್ಧಿಶಕ್ತಿಗೆ ಆಕೆಯ ಗಣನೆಯಲ್ಲಿ
ಕಿಲುಬುತಾಸಿನ ಬೆಲೆಯೂ ಇಲ್ಲವಾಗುತ್ತದೆ? ಇಲ್ಲಿಯೇ ನಿಮ್ಮ ಸಹಾಯ
ಬೇಕಾಗಿರುವುದು. “ ಎಲ್ಲಿಯೋ, ಎಂದೋ ಯಾರೋ ಕಂಡ ಹುಡುಗಿಯ
ಹೆಸರನ್ನು ಪತ್ತೆಮಾಡುವುದಕ್ಕೆ ನನ್ನಿಂದ ಹೇಗೆ ಸಹಾಯವಾದೀತು ? ...
ಎಂದು ವಿಸ್ಮಯ ಪಡಬೇಡಿ, ನಾನು ನೋಡಿದ ಯುವತಿಯೂ ಕುಲೀನ
ವರ್ಗಕ್ಕೆ ಸೇರಿದ ಚೆಲುವೆಯೆನ್ನುವುದರಲ್ಲಿ ಸಂಶಯವಿಲ್ಲ. ಸಮಾನ ವರ್ಗಕ್ಕೆ
೫೭--------------------------------------------------------------
ಸೇರಿದ ಸಮಾನ ವಯಸ್ಸಿನ ಸ್ತ್ರೀಯರಲ್ಲಿ ಒಬ್ಬರಿಗೊಬ್ಬರ ಪರಿಚಯವಿರುವ
ಸಂಭವವೇ ಹೆಚ್ಚು. ಆದ್ದರಿಂದ ನಿಮ್ಮ ಸಹಾಯವನ್ನು ಬೇಡುತ್ತಿದ್ದೇನೆ.
ವರ್ಣನೆಯಿಂದ ಮಾತ್ರ ಹೆಸರನ್ನು ಊಹಿಸಬೇಕಾಗಿರುವುದರಿಂದ ಅಕೆಯ
ವರ್ಣನೆಯನ್ನು ಇಲ್ಲಿ ಸಂಕ್ಷೇಪವಾಗಿ ಕೊಡುತ್ತೇನೆ :-
ಸುಮಾರು ಇಪ್ಪತ್ತು-ಇಪ್ಪತ್ತೊಂದು ವರ್ಷಗಳ ಪ್ರಾಯ. ವರ್ಣ,
ಹೇಳಿಸಿಕೊಳ್ಳುವಂತಹ ಬಿಳುಪೇನೂ ಅಲ್ಲ. ದೊಡ್ಡ ತುರುಬು-ಅದೊಂದು
ವಿಲಾಸದಿಂದ ಸುತ್ತಿದ್ದಳು. ಅದರಲ್ಲಿ ಒಂದೆರಡು ಮಲ್ಲಿಕಾ ಕುಸುಮಗಳನ್ನು
ಸಿಕ್ಕಿಸಿದ್ಧಳು. ಅವಳ ಕಣ್ಣುಗಳು, ಕೆನ್ನೆಗಳು-ಗಲ್ಲ, ಮೂಗು, ಬಾಯಿ,
ಹೆಚ್ಚೇನು, ಪೂರ್ಣ ಮುಖವೇ ನೋಡುವವರ ಕಣ್ಣುಗಳಿಗೆ ಆಟದ ಬೈಲಿ
ನಂತಿತ್ತು ! ಕಮನೀಯವಾದ ಕೊರಳಲ್ಲಿ ಒಂದು ಚಿನ್ನದ ಸರ ಥಳಥಳಿಸು
ತ್ತಿತ್ತು, ಚಿನ್ನದ ಬಳೆಗಳನ್ನು ತೊಟ್ಟಿದ್ದಳು. ಎದೆಯ ಮೇಲೆ ಎಡಗಡೆ,
ಎಡಭುಜಕ್ಕೆ ಸಮೀಪವಾಗಿ ಒಂದು ಸೊಗಸಾದ ವಜ್ರದ ಬ್ರೋಚು. ಕಣ್ಣು
ಗಳು ತೀರ ದೊಡ್ಡವಲ್ಲವಾದರೂ ಅವುಗಳಲ್ಲಿ ಸದಾ ನರ್ತಿಸುವ ಮರಿಮಿಂಚು
ಮೇಲೆ ಬಿದ್ದರೆ ಹೊಸಮಲ್ಲಿಗೆಯಿಂದ ಹೊಡೆದಂತಾಗುವುದು ; ಮುಖದಲ್ಲಿ
ನಿತ್ಯವಾದ ನಗೆದಿಂಗಳು ಅತಿ ಬಿಗುಮಾನವಿಲ್ಲದ ಲಲಿತವಾದ ಮುಖಭಾವ.
ಕಂಠವೋ ಅತಿ ಮಧುರ- ಅತಿ ಮೃದು ! ಕೇಳಿದವನ ಮೈಯೆಲ್ಲ ಕಿವಿಯಾಗು
ವುದು ! ಅದರಲ್ಲಿ ಮುದ್ದಿನ ರಸವನ್ನೆರೆದಂತಾಗುವುದು !! ಬಲಗೆನ್ನೆ
ಯ ಮಧ್ಯದಲ್ಲಿ ಒಂದು ಪುಟ್ಟ ಮಚ್ಚೆ (ಅದು ಬಹಳ ಮುಖ್ಯವಾದ ಗುರುತು !)
“ ಇಲ್ಲಿ ಬಹಳ ಸಿಹಿಯಾಗಿದೆ” ಎಂದು ಕರೆಯುವುದು. ಕಣ್ಣುಗಳನ್ನು-
ಜೊತೆಗೆ ಮನಸ್ಸನ್ನೂ -ಸೆಳೆದೊಯ್ಯುವಂತಹ ನಯನ ಮನೋಹರವಾದ
ಗಮನವಿಲಾಸ, ಹೇಳಿ, ಕುಲೀನಳಾದ ಇಂತಹ ಮಹಾರಾಷ್ಟ್ರ ಯುವತಿ
ಯನ್ನು ನೀವು ಬಲ್ಲಿರಾ ? ನಾನು ಬೇಡಿರುವ ಸಹಾಯ ನಿಮಗೊಂದು
ಒಗಟೆಯಾಗಿ ತೋರಬಹುದು, ನಿಜ, ಆದರೆ ಬಹುಶಃ ನೀವಿದನ್ನು ಬಿಡಿಸ
ಬಲ್ಲಿರಿ ಎಂದು ನಂಬಿ, ನಿಮ್ಮ ಮುಂದಿಟ್ಟಿದ್ದೇನೆ.
ಇತಿ "ಜ"
ಈ ಕಾಗದಕ್ಕೆ ಆಕೆಯಿಂದ ಬಂದ ಉತ್ತರ-
“ಮಿತ್ರ ಮಹಾಶಯ ! ನೀವೀಗ ಒಳ್ಳೆ ಗೃಹಸ್ಥರಂತೆ ಕಾಣುವಿರಿ!-
೫೮----------------------------------------
ಸಾರ್ಥಕವಾಯ್ತು !! ಅಲ್ಲಾ ?-ಗುರುತು ಪರಿಚಯವಿಲ್ಲದ ಬೇರೆ
ಯಾವುದೋ ಹುಡುಗಿಯ ಮೊದ್ದು ಮುಖಕ್ಕೆ ನಿಮ್ಮ ಮನಸ್ಸನ್ನು ನೇವೇದ್ಯ
ಮಾಡಿರುವುದಲ್ಲದೆ, ಅವಳ ಹೆಸರು ಕುಲ ಗೋತ್ರಗಳನ್ನು ಬೇರೆ ಪತ್ತೆ
ಮಾಡಿ ಕೊಡು.. ಎಂದು ನನ್ನ ಕೇಳೀರಲ್ಲಾ ! ಚೆನ್ನಾಯ್ತು ! ಹೀಗೂ
ಉಂಟೇ !....ಅದೂ ಎಂಥಾ ಹುಡುಗಿ ! ಸಣ್ಣ ಕಣ್ಣು-ಕರೀ ಮುಸುಡಿ !!
ಆಹಾ ! ಏನು ಹೇಳಲೋ! ಎಲ್ಲಾ ಬಿಟ್ಟು ಇಂಥಾವಳಿಗೆ ಸೋಲೋದೇ
ನಿಮ್ಮ ಮನಸ್ಸು ? ಅದ್ಯಾಕೆ ?- ನಿಮ್ಮ ಈ ಮೋಹಿನೀಗಿಂತ ಕಣ್ಣು ಮೋರೆ
ಸ್ವಲ್ಪ ನೇರವಾಗಿರೋ ಸುಂದರಿ ಸಿಕ್ಕಲಿಲ್ಲವೇ ? ನಿಜವಾಗಿಯೂ ಆಶ್ಚರ್ಯ
ವಾಗುತ್ತಿದೆ!- ಏನು ಹೇಳಬೇಕೋ ನನಗೆ ಬೇರೇ ತೋರೊಲ್ಲ !.....
ಬಂದು ನೋಡೀ, ಬಂದು ನೋಡೀ - ಅಂತ ಇಷ್ಟು ದಿವಸವೂ ಸೆರಗೊಡ್ಡಿ
ಬೇಡಿಕೊಂಡೆನಲ್ಲಾ, ನೀವು ಒಂದು ಸಲವಾದರೂ ನನ್ನ ಮಾತಿಗೆ ಬೆಲೆ
ಕೊಟ್ಟಿರಾ ? ನಿಮ್ಮ ತುದಿಗಾಲ ಉಗುರಿನ ದರ್ಶನವೂ ಇಲ್ಲವಾಯ್ತೇ
ನನಗೆ ? ನನ್ನ ಮಾತು ಎಲ್ಲೋ ಹೋಯ್ತು; ಈಗ ಈ ಸೊಟ್ಟ ಮುಸುಡಿ
ಸಿವಂಗೀಗೆ ಹಂಬಲಿಸುತ್ತ ಇದ್ದೀರಲ್ಲ' ಉಂಟೇ ಈ ನಾಚಿಕೆಗೇಡು !ನಗು
ಪಾಟಲಿ !! ಆಹಾ ! ಆದರೂ ಒಳ್ಳೆ ಗಂಡಸು !
ನೋಡಿ, ನಿಮ್ಮ 'ಪತ್ತೇದಾರಿ' ಕೆಲಸ ನಿಮಗೇ ಇರಲಿ ! ನಿಮ್ಮ
ತೊಡಕಿನಲ್ಲಿ ಸಿಕ್ಕಿಕೊಳ್ಳುವುದಕ್ಕೆ ನನಗೆ ಸ್ವಲ್ಪವೂ ಇಷ್ಟವಿಲ್ಲ. ನಿಮ್ಮ
ಮೊದ್ದು ಮುಖಾ ನೋಡಿ ಯಾವನೋ ನಾಚಿಕೆಯಿಲ್ಲದ ಗಂಡುಬೀರಿ
ನಿಮ್ಮ ಹತ್ತಿರ ಚಿನ್ನಾಟ ನೋಡಿದ್ದಾಳೇಂತ ನನಗೆ ತೋರುತ್ತೆ ! ಅದಕ್ಕೆ
ಆ ಚೆಲ್ಲುಗಾತಿ ತನ್ನ ಹೆಸರು ; ವಿಳಾಸ ಕೊಡದೆ ನಿಮ್ಮನ್ನ ತನ್ನ ಕಿರುಬೆರಳ
ತುದೀಲಿ ಆಡಿಸುತ್ತಿದ್ದಾಳೆ. ಅಯ್ಯೋ, ಪಾಪ ! ನಿಮ್ಮ ಸ್ಥಿತೀನ ನೋಡಿ
ದರೆ, ಮೊನ್ನೆ ನಮ್ಮ ಮನೆ ಅಂಗಳದಲ್ಲಿ ಚಿನ್ನಿಗೆ ಸಿಕ್ಕಿದ್ದ ಇಲಿಯ
ಜ್ಞಾಪಕವಾಗುತ್ತೆ. ಚಿನ್ನಿ ನಮ್ಮ ಮನೆ ಬೆಕ್ಕು ಬಹಳ ಮುದ್ದಾಗಿದೆ !
ಈಗಲಾದರೂ ನನ್ನ ಮಾತಿಗೆ ಏನಾದರೂ ಬೆಲೆ ಕೊಡೋದಾದರೆ ಕೇಳಿ:
ಆ ಹುಡುಗಿಯ ಬೆನ್ನು ಹತ್ತಿ ಹೋಗಬೇಡಿ-ಅವಳ ಯೋಚನೆ ಬಿಟ್ಟುಬಿಡಿ.
ಇಷ್ಟರ ಮೇಲೆ ನಿಮ್ಮ ಇಷ್ಟ-ನೀವುಂಟು ಅವಳುಂಟು. ಅಂತು, ನಿಮ್ಮ
ಮತ್ತು ನಿಮ್ಮ ಆ ಅಗ್ಗದ ಹೆಣ್ಣಿನ ಮುಗ್ಗಿದ ಸರಸದ ಗೋಜೇ ಬೇಡ
೫೯------------------------------------------------------
ನನಗೆ, ಒಂದು ಹೆಣ್ಣಿಗೆ ಇನ್ನೊಂದು ಹೆಣ್ಣಿನ ವಿಷಯವಾದ ಮಾತು ಕಥೆ-
ವರ್ಣನೆ ವಿಲಾಸ ಸ್ವಲ್ಪವೂ ರುಚಿಸಿಲ್ಲ.ಅನ್ನೋ ಮಾತು ಲೋಕಕ್ಕೇ
ಗೊತ್ತಿದೆ !... ಆದರೂ ನಿಮಗೆ ತಿಳಿದೇ ಹೋಯ್ತಲ್ಲ ! ಏನುಹೇಳಲಿ .....
ಅಂತೂ ಏನಾದರೂ ಆಗಲಿ, ಪಾಪ, ಈ ಸಂದರ್ಭದಲ್ಲಾದರೂ ನಿಮಗೆ
ನನ್ನ ನೆನಪಾಯಿತಲ್ಲ, ಅದೇ ನನ್ನ ಪುಣ್ಯ ! ನಾನು ನಿಮ್ಮನ್ನ ಗೊತ್ತು
ಮಾಡೋಕೆ ಆತುರಳಾಗಿಲ್ಲಾಂತ ಬರೆದಿದ್ದೀರಿ. ಒಳ್ಳೇದು ! ನೀವು ಕೊಟ್ಟಿ
ರುವ ಭಾಷೆ ಜ್ಞಾಪಕವಿರುವುದಕ್ಕೆ ? ನಾನೇ ನಿಮ್ಮನ್ನು ಪತ್ತೆ ಮಾಡುವುದ
ರಲ್ಲಿ ಜಯಶೀಲಳಾದರೆ ನಾನು ಕೇಳಿದ್ದನ್ನ ಕೊಡುವುದಾಗಿ ಮಾತುಕೊಟ್ಟು
ಬರೆದಿರುವಿರಿ. ಆಗಲಿ, ಮಹಾಸ್ವಾಮಾ, ಈಗ ಬರೆಯುತ್ತೇನೆ- ಮನ
ಸ್ಸಿಟ್ಟು ಓದಿ. ನಾನು ನಿಮ್ಮನ್ನ ಪತ್ತೆ ಮಾಡಿದ್ದೇನೆ ಅಷ್ಟೇ ಅಲ್ಲ, ನಿಮ್ಮ
ಕೂಡ ಮಾತನ್ನೂ ಆಡಿದ್ದೇನೆ ! ಆದರೂ ನಿಮಗೆ ಮಾತ್ರ ನನ್ನ ಗುರುತು
ಸಿಕ್ಕದೇ ಹೋಯ್ತು! ಏನು ನಾಚಿಕೆಗೇಡು ! ನಿಮಗೆ ನಂಬಿಕೆ ಬರೊಲ್ಲ
ವೇನೋ ? ಕೇಳಿ, ನಿಜವಾಗಿ- ಸತ್ಯವಾಗಿ, ಈ ಕಾಗದದ ಆಣೆಗೂ ನಿಮ್ಮೊ
ಡನೆ ಐದು ನಿಮಿಷ- ಒಂದಲ್ಲ, ಎರಡಲ್ಲ ಐದು ನಿಮಿಷ ಮಾತಾಡಿದ್ದೇನೆ !
ಯಾವಾಗ ಹೇಳಲೇ ? ಹುಂ! ಹೇ? ಏನು ಉಪಯೋಗ ? ಬಹುಶಃ
ನಾನು ಮಾತಾಡಿಸುತ್ತಿದ್ದಾಗ, ಕಣ್ಣು ಮುಂದೆ, ನಿನ್ನ ಆ ಕಿರಿಗಣ್ಣಿನ
ಕೃಷ್ಣಾಂಗಿಯ ರೂಪದ ಕನಸು ಕಾಣುತ್ತಿದ್ದಿರೋ ಏನೆ, ಪಾಪ !-ಅಂಥಾ
ರತ್ನ ನಿಮ್ಮ ಕಣ್ಣು ಕಟ್ಟಿದ್ದಾಗ ನಮ್ಮಂಥ ಬಡಪಾಯಿಗಳು ಹೇಗೆ ತಾನೆ
ಗಮನಕ್ಕೆ ಬಂದಾರು ? ಅದು ಹೇಗಾದರೂ ಇರಲಿ, ಮಹಾಸ್ವಾಮಿ,
ಅಂತು ನೀವು ಹೂಡಿದ ಆಟದಲ್ಲಿ ನನಗೇ ಜಯವಾಯ್ತು! ಇನ್ನು ಉಳಿ
ದಿರುವುದು ನಿಮ್ಮ ಕೆಲಸ-ನನಗೆ ಸಲ್ಲಬೇಕಾದ ಬಹುಮಾನವನ್ನು ಕೊಟ್ಟು
ನಿಮ್ಮ ಮಾತನ್ನ ಉಳಿಸಿಕೊಳ್ಳುವುದು, ಏನು ಬಹುಮಾನ ಕೊಡುಏರಿ?
ಕೇಳಿದ್ದನ್ನ ಕೊಡುವುದಾಗಿ ಬರೆದಿರುವಿರಿ. ಇಲ್ಲ, ಇಲ್ಲ, ನಾನು ಕೇಳುವು
ದಿಲ್ಲ; ನೀವು ಕೊಟ್ಟಿದ್ದನ್ನು ತೆಗೆದುಕೊಳ್ಳುತ್ತೇನೆ ! ಅದೇನು ಕೊಡುವಿರೋ-
ಎಷ್ಟರ ಮಟ್ಟಿಗೆ ನಿಮ್ಮ ಮಾತನ್ನ ಉಳಿಸಿಕೊಳ್ಳುವಿರೋ ನೋಡುತ್ತೇನೆ !
ಕಡೆಯ ಮಾತು. ನೀವು ಜೋಪಾನವಾಗಿಟ್ಟುಕೊಂಡು ಅಷ್ಟೊಂದು
ಮಮತೆಯಿಂದ ಮುದ್ದಾಡುತ್ತಾ ಇರೋ ಆ ಫೋಟೋ ನನ್ನದಲ್ಲ ! ಅದು
೬೦---------------------------------------------------------
ನನ್ನ ಸಹಪಾಠಿ-ಗೆಳತಿ ಸುಲಭಾ ಕುಮಾರಿಯದು ; ನಾನೇ ತೆಗೆದದ್ದು.
ಸುಲಭಾಗೆ ಅದು ಬೇಕಂತೆ-ಪೀಡಿಸುತ್ತಾ ಇದ್ದಾಳೆ. ಆದ್ದರಿಂದ ದಯವಿಟ್ಟು
ಅದನ್ನ ಮರುಟಪಾಲಿನಲ್ಲೇ ಕಳಿಸಿ. ಇಲ್ಲದೆ ಇದ್ದರೆ ನಾನು ಅವಳಿಗೆ ಹೇಳಿ
ಬಿಡುತ್ತೇನೆ ಒಬ್ಬ ಹುಚ್ಚ ಇದ್ದಾನೆ; ಅವನಿಗೆ ನಿನ್ನ ಫೋಟೋ ಸಿಕ್ಕಿ
ಬಿಟ್ಟಿದೆ ; ಅಷ್ಟಕ್ಕೇ ತೃಪ್ತನಾಗಿ ಅದಕ್ಕೆ ನಿತ್ಯ ಮುತ್ತಿನಮಾಲೆ ಹಾಕು
ತ್ತಿದ್ದಾನೆ” ” ಅಂತ ! ಈ ಮಾತು ಹೇಳೋದು ಖಂಡಿತ !
ಚಪಲಾ.”
ಆಹಾ ! ಇದೀಗ ಸರಿಯಾಯ್ತು ! ನಾನು ಕಟ್ಟಿದ ಆಟದಲ್ಲಿ ನಾನೇ
ಸೋತ ಹಾಗಾಯ್ತೇ ! ಹುಂ! ಇನ್ನು ನನ್ನ ಶಪಥ ಬಿಡಬೇಕು !
ಸ್ತ್ರೀಯರು-ಎಂದರೆ ತಂತ್ರದ ಮೊಟ್ಟೆಗಳು ಅಂತಾರೆ ! ಬಹಳ ನಿಜವಾದ
ಮಾತು ! ಎಷ್ಟು ಹುಷಾರಾಗಿ ಮೈಯೆಲ್ಲಾ ಕಣ್ಣಾಗಿದ್ದರೂ ಒಂದು
ಹೆಣ್ಣಿನ ಬಲೇಲಿ ಸಿಕ್ಕಿ ಬೀಳೋ ಹಾಗಾಯ್ತಲ್ಲ ! ಹುಂ! ಆಗಲಿ, ಇವತ್ತು
ಹೋಗಿ, ಇಷ್ಟು ಸೊಗಸಾಗಿ ಬಲೆ ಬೀಸಿದ ಈ ಚಪಲಾ ಯಾರು ಅನ್ನೋ
ದನ್ನಾದರೂ ತಿಳಿದುಕೊಳ್ಳುತ್ತೇನೆ.
೬. ಕೊನೆಯ ಮಾತು.
ಸಾಯಂಕಾಲ ಸ್ವಲ್ಪ ಚಳಿಯಾಗಿತ್ತು. ಗಾಳಿ ತಣ್ಣಗೆ ಬೀಸುತ್ತ
ಮೈ ನಡುಗಿಸುತ್ತಿತ್ತು. ಹೊರಗೆ ಇಷ್ಟು ಚಳಿಯಾಗಿದ್ದರೂ ನನ್ನ ಅಂತರಂಗ
ದಲ್ಲಿ ಚಪಲಾ ಕುಮಾರಿಯನ್ನು ನೋಡಬೇಕೆಂಬ ಕೌತುಕ ಬಿಸಿಯೇರು
ತ್ತಿತ್ತು. ಆಕೆಯ ವಿಳಾಸಕ್ಕೆ ಹೋದೆ. ಆಕೆಯ ಮನೆ ದೊಡ್ಡ ಬಂಗಲೆ.
ಅದರ ಸುತ್ತ ದೊಡ್ಡ ಕಾಂಪೌಂಡು, ಮನೆ ಮುಂದಿನ ತೋಟದಲ್ಲಿ ಯಾರೂ
ಕಾಣಿಸಲಿಲ್ಲ. ಆದರೂ, ಗೇಟಿನ ಹತ್ತಿರ ಹೋದೊಡನೆಯೇ, ನನ್ನನ್ನು
ಕಂಡು ಯಾರೋ ಅದನ್ನು ತೆರೆದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು.
ಯಾರಿರಬಹುದು ? ನಾನು ಬರುವುದೇ ತಡ ಕಾದಿದ್ದು ಗೇಟು ತೆರೆದಂತೆ
ತೋರುವುದಲ್ಲಾ ? ಅಥವಾ ಇನ್ಯಾರನ್ನೋ ನಿರೀಕ್ಷಿಸುತ್ತಿದ್ದು-ನನ್ನನ್ನೇ
ಅವರೆಂದು ಭಾವಿಸಿ ತೆರೆದರೆ ? ಹೀಗೆ ಯೋಚಿಸುತ್ತಲೇ ಕಾಂಪೌಂಡಿ
ನೊಳಗೆ ಪ್ರವೇಶಿಸಿದೆ. ಪ್ರವೇಶಿಸಿದ್ದೇ ತಡ ಬೆಕ್ಕಸ ಬೆರಗಾಗಿ, ಕಲ್ಲು
೬೧--------------------------------------------------------
ಗೊಂಬೆಯಂತೆ ಮೂಕನಾಗಿ ನಿಂತುಬಿಟ್ಟೆ ! ಗೇಟು ತೆರೆದವಳನ್ನು ನೋಡಿ !
ಅವಳು, ಆ ಹುಡುಗಿ ನಾನು ರಾಕ್ಸಿ ಥಿಯೇಟರಿನಲ್ಲಿ ನೋಡಿ ಮಾತಾಡಿಸಿದ
ಆ ಹುಡುಗಿಯಾಗಿದ್ದಳು ! ಅದೇ ಕಿರಿಗಣ್ಣುಗಳು ! ಅವುಗಳಲ್ಲಿ ಅದೇ
ಕಪ್ಪಾದ ಆಲಿಗಳು ! ಆಹಾ ! ಅದೇ, ಅದೇ ನಗೆಮಲ್ಲಿಗೆ ಮುಖದಲ್ಲಿ !
ಇದೇನು ವಿಚಿತ್ರ ! ಚಪಲಾನ ನೋಡೋಣಾಂತ ಬಂದರೆ ಇಲ್ಲಿ ಈ
ಹುಡುಗಿ ! ಹಾಗಾದರೆ ಚಪಲಾ ಯಾರು ?
ನನ್ನ ಮನಸ್ಸು ಈ ಹೊಸ ತೊಡಕಿನಲ್ಲಿ ಸಿಕ್ಕಿರಲು, ಆಕೆ, ಮೆಲುನಗೆ
ಸೂಸುತ್ತ, ಮನೆಯ ಕಡೆ ಹಸ್ತವಿನ್ಯಾಸವನ್ನು ಮಾಡಿ,
"ಒಳಗೆ ದಯಮಾಡಿ ! ”
-ಎಂದಳು. ನನಗೆ ಬೇಗ ಮಾತು ಹೊರಡಲಿಲ್ಲ.
ನೀ-ನೀ-ನೀ” ಎಂದು ಏನೋ ಹೇಳುವುದಕ್ಕೆ ಹೊರಟೆ. ಆಕೆ,
" ಹುಂ! ಹೌದು, ಹೌದು ! ನಾ-ನಾ-ನಾ ! ”
-ಎಂದಳೋ ಇಲ್ಲವೋ, ಅವಳ ಮೆಲುನಗೆ, ನಗೆಯ
ಬುಗ್ಗೆ ಯಾಯಿತು ! ನಗುತ್ತ,
“ ಅಮ್ಮಮ್ಮ ನಗೂ ತಡೀಲಾರೆ ! ನಿಜವಾಗಿಯೂ ವಿಚಿತ್ರ ಪ್ರಾಣಿ
ಗಳೂ ಅಂದರೆ ಗಂಡಸರು !! ಈಗಲೀಗ, ನೀವು ಸ್ವಲ್ಪಾನೂ ಚುರುಕು
ಚಾಲೋಕಿಲ್ಲದ ಶುದ್ಧ ಮೊದ್ದು ಅನ್ನೋ ಮಾತು ಮತ್ತಷ್ಟು ನಿಜ
ವಾಯ್ತು !....ಹುಂ! ಹೋಗಲಿ, ಆ ಮಾತು ಅಲ್ಲಿಗೇ ಇರಲಿ; ನಾನು
ಗೆದ್ದರೆ ಕೇಳಿದ್ದನ್ನ ಕೊಡುವುದಾಗಿ ಮಾತು ಕೊಟ್ಟಿರುವುದು ಜ್ಞಾಪಕ
ವಿದೆಯಷ್ಟೆ ? ”
-ಎಂದು ಕೇಳಿದಳು.
“ ಯಾರು ಗೆದ್ದರೆ-ಯಾರಿಗೆ ?
ನಾನು ಗೆದ್ದರೆ ನನಗೆ !
“ ನಿಮಗೆ ? ನಿ-ಮ-ಗೆ ? ”
"ಹೌದು, ನನಗೇ-ನನಗೇ-ಇನ್ಯಾರಿಗೂ ಅಲ್ಲ, ನನಗೇ ! ಅಯ್ಯೋ !
ಇನ್ನೇನು ಹೇಳಲಿ !- -ಇನ್ನೂ ಗೊತ್ತಾಗಿಲ್ಲವೇ ನಿಮಗೆ ? ”
" ಏನು ? ”
೬೨------------------------------------------------
" ಚಪಲಾ ಯಾರೂ ಅಂತ ! ಅಥವಾ ಇನ್ಯಾರೂ ಅಲ್ಲಾಂತ ! ನೀವು
ಆ ದಿನ ಬಹಳ ಬಿಗುಮಾನದಿಂದ ಮಾತಾಡಿಸದೇ ಹೋದಿರಿ! ಹಾಗೆ
ಮಾಡದೆ ಇದ್ದಿದ್ದರೆ ಅವತ್ತೇ ಗೊತ್ತಾಗುತ್ತಿತ್ತು ನಿಮಗೆ ನನ್ನ ಹೆಸರು ಏನು
ಅಂತ.... ಹೋಗಲಿ, ಏನು, ಬಹಳ ಬೆರಗಾಗಿ ನೋಡುತ್ತಿದ್ದೀರಿ ? ”
" ನಿನ್ನನ್ನು ! ” ಎನ್ನುವಷ್ಟು ಸಾಹಸಮಾಡಿದೆ. " ನೀವು” ಅನ್ನುವ
ದೂರದಿಂದ. “ ನೀನು” ಅನ್ನುವಷ್ಟು ಸಮೀಪವಾಗಿದೆ ! ನನಗೇ ಆಶ್ಚರ್ಯ
ವಾಯಿತು ! ಆದರೂ ಈ ಸಂದರ್ಭದಲ್ಲಿ ಈ ಪರಿವರ್ತನೆ ಬಹಳ ಸ್ವಾಭಾವಿಕ
ವಾಗಿದ್ದಂತೆ ತೋರಿತು. ಈ ಮಾರ್ಪಾಟು ಆಗಿದ್ದು ನನ್ನೊಬ್ಬನಲ್ಲೇ ಅಲ್ಲ!
"ಬಾ, ಬಾ, ಹೇಳು, ನಿಜ ಹೇಳು ! ನಿನ್ನ ಮನಸ್ಸಿನಲ್ಲಿ ಏನಿದೆ
ಹೇಳು ? ”
- -ಎಂದು ಸಮೀಪಕ್ಕೆ ಬಂದು, ಹಗುರವಾಗಿ ನನ್ನ ಭುಜದ ಮೇಲೆ ಕೈಯಿಟ್ಟು, ನನ್ನ ಮುಖವನ್ನೇ ನೋಡುತ್ತ ಮೆಲುನಗೆ ನಕ್ಕಳು. ನಾನೂ ನಗುತ್ತ,
" ನಿಮ್ಮ ಮನೆ ಚಿನ್ನಿ ಹೆಣ್ಣು ಬೆಕ್ಕಿರಬೇಕು ಎಂದು ಯೋಚಿಸುತ್ತಿದ್ದೆ.”
---ಎಂದೆ. ಈ ಮಾತು ಕೇಳಿದ ಕೂಡಲೆ ಅವಳ ನಗು
ಆಪಾದಮಸ್ತಕವಾಗಿ ಉಕ್ಕಿ ಹರಿಯಿತು.
ಇಬ್ಬರೂ ಮಾತನಾಡುತ್ತ ಅವರ ಬಂಗಲೆ ಕಡೆಗೆ ಹೊರಟೆವು.
ಒಬ್ಬರಿಗೊಬ್ಬರು ಮನಸ್ಸಿನಲ್ಲಿ ಎಷ್ಟು ಸಮೀಪವಾಗಿದ್ದೆವೋ, ನಡೆದು
ಹೋಗುವಾಗ ಒಬ್ಬರಿಗೊಬ್ಬರು ಅಷ್ಟೇ ಸಮೀಪವಾಗಿದ್ದೆವು. ನಡೆಯುತ್ತ,
“ ಏನು ಯೋಚಿಸುತ್ತಾ ಇರುವೆ, ಹೇಳು ? ”
--ಎಂದು ಮತ್ತೊಮ್ಮೆ ಕೇಳಿದಳು.
* ಏನಿಲ್ಲ, ಒಂದು ಮಾತು ಜ್ಞಾಪಕಕ್ಕೆ ಬಂತು-ಬಹಳ ಹಳೇ
ಮಾತು, ಆದರೂ ಬಹಳ-ಬಹಳ ನಿಜವಾದ ಮಾತು ! ”
“ ಏನದು ? ”
“ ಸ್ತ್ರೀ ಜಾತಿಗೆ ಸಹಜವಾದ ತೀಕ್ಷ್ಮಬುದ್ಧಿ-"
" ಅಯ್ಯೋ ! ಇಷ್ಟೇನೇ ! ನಾನೇನೋ ಬೇರೇ ಊಹಿಸಿದ್ದೆ!”
"ಏನು ?
೬೩------------------------------------------------------
“ ನನಗೆ ಸಲ್ಲಬೇಕಾದ ಬಹುಮಾನ ಏನು ಕೊಡಲಿ ? ಎಂದು
ಯೋಚಿಸುತ್ತಿರಬಹುದು ಅಂತ !............ಹೇಳು, ಏನು ಬಹುಮಾನ
ಕೊಡಬೇಕೂ ಅಂತ ಇದ್ದೀಯ ? ”
ಈ ಸಮಯದಲ್ಲಿ ನಾವು ಮನೆಗೆ ಸ್ವಲ್ಪ ದೂರದಲ್ಲಿದ್ದ ಒಂದು ಮಲ್ಲಿಗೆ
ಚಪ್ಪರದಡಿಗೆ ಬಂದಿದ್ದೆವು. ಮಲ್ಲಿಕಾ ಕುಸುಮಾಂತರಂಗದಿಂದ ಪರಿಮಳದ
ಧಾರೆ ಸುಖವಾಗಿ ಬೀಳುತ್ತಿತ್ತು. ನಾನು ಒಮ್ಮೆ ಅತ್ತ-ಇತ್ತ ನೋಡಿ, ನನ್ನ
ಉಂಗುರವನ್ನು ತೆಗೆದು, ಅವಳ ಬೆರಳಿಗೆ ತೊಡಿಸಿ, ಹತ್ತಿರಕ್ಕೆಳೆದುಕೊಂಡು,
ಗಲ್ಲವನ್ನೆತ್ತಿ, ನೋಟಕ್ಕೆ ನೋಟವನ್ನು ಹೆಣೆದು ಪಿಸುಮಾತಿನಲ್ಲಿ ಕೇಳಿದೆ:---
"ಚಪಲಾ, ನಾನು ಸೋತರೂ ಸುಖಿಯಾದೆ. ನೀನು ? ಹೇಳು
ಚಪಲಾ, ನೀನು ಗೆದ್ದದ್ದರಿಂದ-ತೃಪ್ತಿಯಾಯಿತೋ ? ಅಥವಾ ಗೆಲುವಿನಿಂದ
ದೊರೆತದ್ದು ಮೋಸದ ಪದಾರ್ಥ ಎಂದುಕೊಳ್ಳುವೆಯೋ ? ಹೇಳು
ಚಪಲಾ !”
ಚಪಲಾ ನನ್ನ ಕಣ್ಣುಗಳಲ್ಲಿಳಿಯುತ್ತ, ಒಂದು ಕ್ಷಣ ತಡೆದು, ಗಂಭೀರ
ವಾಣಿಯಿಂದ ಆದರೂ ತುಂಬಿದ ಮಮತೆಯಿಂದ ಉತ್ತರಕೊಟ್ಟಳು:
“ ಇಲ್ಲ, ಇಲ್ಲ! ನಾನು ಪಡೆದದ್ದು ಮೋಸದ ಪದಾರ್ಥವಲ್ಲ! ಒಳ್ಳೇ
ಚಿನ್ನದಂಥ ಪದಾರ್ಥ ! ಆದರೆ ನನಗೆ ಒಂದೇ ಚಿಂತೆ ! ”
"ಏನದು"
"ಒಟ್ಟಿನಲ್ಲಿ ನಾನೊಂದು ಮೊದ್ದು ಹುಡುಗಿ ! ಅ೦ಥಾ-ಅಲ್ಲ-ಇಂಥಾ
ಪದಾರ್ಥಕ್ಕೆ ತಕ್ಕ ಯೋಗ್ಯತೆ ನನಗಿಲ್ಲವಲ್ಲಾ ! ಎಂದು ! ಹುಂ! ಆದ
ದ್ದಾಯ್ತು! ಇನ್ನೇನು ಮಾಡೋದು ! ಹೇಗೋ ಅನುಸರಿಸಿಕೊಂಡಿ
ರೋದು ! ”
ನನ್ನ ಹೃದಯ ಆನಂದದಿಂದ ತುಂಬಿ ತುಳುಕಿಹೋಯ್ತು. ಆ
ಸುಖದ ಸುಮ್ಮಾನದಲ್ಲಿ, ಕಿರುದನಿಯಿಂದ ಹಾಡಿದೆ :
" ಯಾವ ಜನುಮದಿ ಗೈದ ಏನು ಸುಕೃತದ ಫಲವೊ ಈ ಫಲವು ?”
- ಎಂದು.
===========================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ