https://archive.org/stream/dli.osmania.3888
ಮಾಟಗಾತಿ!
ನುರಿಸಿದ ಹಾಗೆಲ್ಲ ಹೊಸಗಂಪು ಹೊರಸೂಸಿ
ನೆನೆದರೆ ತನುಮನ ಗಮಗಮಿಸಲೋ,
ಪ್ರಣಯಿನಿ ನಯದಲ್ಲಿ ಕಿರುನಗೆ ಮಿಂಚಿಸಿ
ಸರಸಕಿತ್ತರು ಪ್ರಣಯದ ಕುರುಹೋ,
ನಾಣಬಿನ್ನಣ ಬಳ್ಳಿವರಿವಂತೆ ಕೈಚಾಚಿ
ನಲ್ಲೆ ನಲ್ಲಂಗಿತ್ತ ತಾಂಬೂಲವೋ---
ರಸನೆ ರಂಜಿಸಲೆಂದು ರಸಿಕನಿಗಿತ್ತೊಂದು
ಕತೆಗಳೀ ಕವಳವು ಕಂಗೊಳಿಸಲೋ.
-ದ. ರಾ. ಬೇಂದ್ರೆ.
==============================================
ಮಾಟಗಾತಿ |
ಇಂದಿಗೆ ಇಪ್ಪತ್ತು ದಿನಗಳಾದುವು--ಹೌದು, ಇ.ಪ್ಪತ್ತು--ಇವತ್ತು
ಯಾವ ವಾರ?-ಗುರುವಾರ--ಹೌದು ಸರಿಯಾಗಿ ಇಪ್ಪತ್ತು ದಿನಗಳು.
ಈ ಇಪ್ಪತ್ತು ದಿನಗಳಿಂದ ಅವಳನ್ನು ನೋಡುತ್ತಿದೇನೆ; ಒಂದು ದಿನವೂ
ತಪ್ಪಿಲ್ಲ. ಅವಳು ಯಾರು ?-ಹೆಸರೇನು ?-ಹೇಗಿದ್ದಾಳೆ? ... ಸ್ವಲ್ಪ
ನಿದಾನಿಸಿ ; ಇಲ್ಲವನ್ನೂ ಹೇಳುತ್ತೇನೆ. ಅದಕ್ಕ ಮುಂದೆ ಹೇಳಬೇಕಾದ
ವಿಷಯಗಳು ಒಂದೆರಡಿವೆ. ನಾನು ಎಲ್ಲಿ ಕುಳಿತು ಇದನ್ನೆಲ್ಲಾ ನಿಮಗೆ
ಹೇಳುತ್ತಿದ್ದೇನೋ ಇಲ್ಲಿ--ಈ ಮನೆ--ಅಲ್ಲ--ಕೂಠಡಿಯಲ್ಲಿ ಒಬ್ಬನೇ ವಾಸ
ವಾಗಿದ್ದೇನೆ. ಇಷ್ಟು ಸಾಕು ಸದ್ಯಕ್ಕೆ. ನನ್ನ ಊಟ -ತಿಂಡಿ- ಕೆಲಸ ಇವು
ಗಳ ವಿಚಾರ ಈಗ ಬೇಡ. ಅದರಿಂದ ನಿಮಗೂ ಉಸಯೋಗವಿಲ್ಲ, ನನಗಂತೂ
ಮೊದಲೇ ಇಲ್ಲ.
ಇನ್ನು ಅವಳ ವಿಚಾರ. ಅವಳು ಯಾರು? ಗೊತ್ತಿಲ್ಲ. ಹೇಸರೇನು 7.
ತಿಳಿಯದು. ಹೇಗೆ ಇದ್ದಾಳೆ? ಅವಳು ಹಾಗೆ ಇದ್ದಾಳೆ- ಹೀಗೆ ಇದ್ದಾಳೆ-
ಇನ್ನು ಹೇಗೋ ಇದ್ದಾಳೆ ಎ೦ದು ಒಂದು ಮಾತಿನಲ್ಲಿ ಹೇಳಿ ಮುಗಿಸ
ಲಾರೆ. ಅಲ್ಲದೆ ಸ್ತ್ರೀವರ್ಣನೆಯ ವಿಚಾರದಲ್ಲಿ 'ಶ್ರೀನಿವಾಸ 'ರು ಮಾಡಿರುವ
ಕವಿಗಳ ಭರ್ತ್ಸನೆಯನ್ನು ಓದಿದ ಮೇಲಂತೂ ಎತ್ತ ಸ್ವಲ್ಪ ಹಿಮ್ಮೆಟ್ಟುತ್ತಿದೆ.
ಆದರೂ ' ಅವರ ಭರ್ತ್ಸನೆ ಕವಿಗಳಿಗೆ ತಾನೆ! ನಾನೆ ಕವಿಯಲ್ಲವಲ್ಲ!'
ಎಂದು ಹೇಳಿಕೊಂಡು ಧೈರ್ಯಮಾಡುತ್ತೇನೆ
ನಾನು ನಿಮಗೆ ವರ್ಣಿಸುವುದಾದರೂ ಆಕೆಯ ಮುಖವನ್ನು ಮಾತ್ರ.
ಏಕೆಂದರೆ ಈ ಇಪ್ಪತ್ತು ದಿನಗಳಿಂದ ನನ್ನ ದೃಷ್ಟಿಯನ್ನು ಸೆಳಿದಿರುವುದು
ಆ ಮುಖ ಮಾತ್ರ. ಇದುವರೆಗೂ ನಾನು ಅವಳೊಡನೆ ಮಾತನಾಡಿಲ್ಲ;
ಆಕೆಯ ದನಿಯನ್ನು ಕೇಳಿಲ್ಲ. ಎಲ್ಲಿ ಹುಟ್ಟಿದಳೋ, ಎಲ್ಲಿ ಬಳೆದಳೋ
ಅರಿಯೆ. ಆದರೂ ಈ ಇಪ್ಪತ್ತು ದಿನಗಳಿಂದ ಅಕೆಯನ್ನು ತಪ್ಪದೆ. ನೋಡಿ
ದ್ದೇನೆ ಸಲಸಲವೂ ನಮ್ಮ ದೃಷ್ಟಿಗಳು ಒಂದಾಗಿವೆ; ಸಲಸಲಕ್ಕೆ ಅವಳು
ನನಗೆ ಹೆಚ್ಚು ಹೆಚ್ಚು ಆತ್ಮೀಯಳಾಗಿದ್ದಾಳೆ.
ಅವಳು ಮುಖವನ್ನು ಏನೆಂದು ವರ್ಣಿಸಲಿ? ನೀವು ಒಂದು ಮಾತಿನಲ್ಲಿ
೨ ಮಾಟಗಾತಿ
ಗ್ರಹಿಸಬಲ್ಲವರಾದರೆ ಹೇಳುತ್ತೇನೆ ಕೇಳಿ-ಅವಳು ಸುಂದರಿ. "ಎಂತಹ
ಸಂದರಿ? ' ಎ೦ದರೆ ಮಾತ್ರ ಹೇಳಲಾರೆ. ಸೌಂದರ್ಯದಲ್ಲಿ ಭೇದವುಂಟು.
ಇನಿಯಳ ರೂಪವೆ ?-ತಾಯ ಸೌಂದರ್ಯವೆ ?--ವೇಶ್ಯೆಯ ಬೆಡಗೆ ?
ನಾನು ಹೀಗೇ ಸರಿ ಎಂದು ಹೇಳಲಾರೆ. ರವೀಂದ್ರ ಕವಿಯು ಊರ್ವಶಿ
ಯನ್ನು ವರ್ಣಿಸುತ್ತ "ಎಲೌ ಊರ್ವಶಿಯೇ, ಮಾತೆಯಲ್ಲ, ಮಗಳಲ್ಲ,
ಮಡದಯಲ್ಲ ನೀನು! ಅಮರಲೋಕದ ಆತ್ಮವನ್ನು ಸೂರೆಗೊಳ್ಳುವ
ಸ್ತ್ರೀಯು ನೀನು! ' ಎಂದು ಹೇಳಿದ್ದಾನೆ. ನಾನು ಇವಳನ್ನು ಊರ್ವಶಿಗೆ
ಹೋಲಿಸಲಾರೆ ; ಏಕೆಂದರೆ ಆ ಸ್ಪರ್ಗವಾಸಿಯನ್ನು ನಾನು ಇನ್ನೂ
ನೋಡಿಲ್ಲ-ನೋಡುವ ಸಂಭವವೂ ಇಲ! ಒಂದು ವೇಳೆ (ಗೊತ್ತು
ಇಲ್ಲಾ ಅಂತ !--ಆದರೂ) ನೋಡಿದರೂ ಆಗ ನಿಮಗೆ ಹೇಳಲಾರೆ.
ಕಾರಣವೇನೆಂದರೆ, ಆಗ ನನಗೂ ನಿಮಗೂ ವ್ಯವಹಾರ ನಿಂತುಹೋಗಿರು
ತ್ತದೆ. ಹಾಗಾದರೆ ಅವಳನ್ನು ಇನ್ನು ಹೇಗೆ ವರ್ಣಿಸಲಿ? ಅವಳ ಮುಖ
ಚಂದ್ರಬಿಂಬಕ್ಕೆ ಸಮನಾಗಿಲ್ಲ. ಕಣ್ಣಿನ ಸೊಬಗು ಕಮಲದಿಂದ ಕದ್ದ
ದ್ವಲ್ಲ. ಅವಳ ನಾಸಿಕಕ್ಕೂ ಸಂಪಗೆಯ ಹೂವಿಗೂ ಪರಚಯವೇ ಇಲ್ಲ.
ಅವಳ ತುಟಿಗಳ ಅಂದ ತೊಂಡೆಯ ಹಣ್ಣಿನಿಂದ ಬಂದ ಬಳುವಳಿಯೂ
ಅಲ್ಲ. ಮತ್ತೆ ಇನ್ನು ಹೇಗೆ? ನೋಡಿ, ಸಾವಿರ ವರ್ಣನೆಗಳೂ ಒಂದು
ಸಲದ ನೋಟಕ್ಕೆ ಸರಿತೂಗಲಾರವು. ನೀವು ಮಾವಿನ ಹಣ್ಣನ್ನು ತಿಂದಿ
ಲ್ಲವೆ? ಅದರ ರುಚಿಯೇನು ?--ಎಂದರೆ, ಸಿಹಿ-ಎನ್ನುವಿರಿ. ಆದರೆ ಎಂತಹ
ಸಿಹಿ? ಸಕ್ಕರೆಯ ಸಿಹಿಯೆ? ಕಬ್ಬಿನ ಸಿಹಿಯೆ ? ಕಿತ್ತಳೆಯ ರುಚಿಯೆ ?
ಸೇಬಿನ ಸವಿಯ? . . ಯಾವುದು? ಎಲ್ಲವೂ ಮಧುರ. ಆದರೆ ಬೇರೆ ಬೇರೆ
ಮಾಧುರ್ಯ. ಮಾವಿನ ಹಣ್ಣನ್ನು ಕಾಣದವನಿಗೆ ಸೇಬಿನ ಹಣ್ಣನ್ನು
ಕೊಟ್ಟು ಮಾವಿನ ಹಣ್ಣಿನ ಪರಿಚಯವನ್ನು ಮಾಡಿ ಕೊಡಲಾಗುವುದೆ ?
ಅದು ನನ್ನ ಕೈಲಂತೂ ಆಗದ ಕೆಲಸ, ನೀವು ಅವಳನ್ನು ವರ್ಣಿಸುವುದರಲ್ಲಿ
ನನಗಿರುವ ಕಷ್ಟವನ್ನು ಗ್ರ ಹಿಸಬಲ್ಲವರಾದರೆ, ಆಕೆಯ ಸೌಂದರ್ಯವನ್ನೂ
ಗ್ರಹಿಸ ಸಬಲ್ಲಿರಿ.
ಅವಳನ್ನು ಇಷ್ಟು ದಿನಗಳಿಂದ ನೋಡಿ ನೋಡಿ, ಈಗ ನೆನೆಸಿಕೊಂಡ
ಮಾತ್ರಕ್ಕೆ ನನ್ನ ಚಿತ್ತದಲ್ಲಿ ಸ್ಫೂರ್ತಿಸುವುದು ಆಕೆಯ ಮುಃಖ ಮಾತ್ರ ;
ಇನ್ನು ಉಳಿದುದೆಲ್ಲಾ ಕತ್ತಲು. ಆ ಕತ್ತಲಿನಲ್ಲಿ ಆ ಮುಖ ಸೌಮ್ಯ
ಪ್ರಭೆಯ ಪುಟ್ಟದೊಂದು ಜ್ವಾಲೆಯಂತೆ ತೋರುತ್ತದೆ. ಕೂಡಲೆ ನಾನು
ಮಾಟಗಾತಿ ! ೩
(ನನ್ನ ಹೃದಯ--ಮನಸ್ಸು ಏನು ಬೇಕಾದರೂ ತಿಳಿದುಕೊಳಿ !) ಒಂದು
ಪತಂಗದಂತೆ ಆಗುತ್ತೇನೆ ಆ ರೂಪವತಿಯ ಮುಖದ ಸೊಬಗಿನ ಅನು
ಭವವು ಪೂರ್ಣವಾಗಿ ನಿಮಗೆ ಆಗಬೇಕಾದರೆ ನೀವೂ ನನ್ನ ಹಾಗೆಯೇ
ಪತಂಗವಾಗಬೇಕು. ಅದು ಸಾಧ್ಯವೋ? .. . ಇಲ್ಲವೋ... ಬಿಡಿ,
ನನ್ನ ಆ ಮಾತುಗಳನ್ನು ಕೇಳಿ ನೀವು "ಇದೇನು ಹುಚ್ಚು [ ಇವನಿಗೆ! "
ಎಂದು ಯೋಚಿಸಬಹ.ದು. ಯೋಚಿಸಿ. ಪರವಾ ಅಲ್ಲ. ಅದರಿಂದ ನನ್ನ
ಮನಸ್ಸು ಸ್ವಲ್ಪವೂ ನೋಯುವುದಿಲ್ಲ. ಧೈರ್ಯವಾಗಿರಿ. ಏಕೆಂದರೆ
ಸಿಮ್ಮ ಯೋಚನೆ ತಪ್ಪಲ್ಲ. ಇರೋ ಸಂಗತಿ ಹೇಳಿಬಿಡುತ್ತೇನೆ; ನನಗೆ
ಅವಳ ಮುಖ ಎಂದರೆ ಸ್ವಲ್ಪ (ಸ್ವ-ಲ್ಪ- ವೇ-ನು! ಚೆನ್ನಾಗಿಯೂ!)
ಹುಚ್ಚೇ ಸರಿ. ಈ ಹುಚ್ಚು ಇದುವರೆಗೂ ನಾನು ಬಾ ಅಂದಾಗ ಒಂದು,
ಹೋಗು ಅಂದಾಗ ಹೋಗುತ್ತಾ ಒಂದು ತರದಲ್ಲಿ ವಿಧೇಯವಾಗಿದೆ.
ಆದರೆ ಎಂದು ಅವಿಧದೇಯತನಕ್ಕೆ ಬಿದ್ದು ನನ್ನ ಮರ್ಯಾದೆ ಕಳೆಯುತ್ತೋ
ಹೇಳಲಾರೆ, ದೇವರು ಆ ದಿನವನ್ನು ದೂರ ಇಟ್ಟಿರಲಿ. ಒಂದು ವೇಳೆ ಆ
ದಿನ ಬಂದರೂ ನ ನನ್ನ ಮರ್ಯಾದೆೇನಾದರೂ ಭದ್ರಮಾಡಲಿ.
ನನ್ನ ಹುಚ್ಚಿಗೆ ಮುಖ್ಯವಾದ ಕಾರಣ ಆಕೆ ಮುಖದ ಮೇಲೆ
ಶಾಶ್ವತವಾಗಿ ನಲೆಸಿದ್ದ ಆ ಮೆಲುನಗೆ | ಅದನ್ನು ಹೇಗೆ ವರ್ಣಿಸಲಿ?
ಇಲ್ಲಿಯೂ ಅದೇ ಗೊಳು! ವರ್ಣಿಸುವುದಕ್ಕೆ ಪ್ರಯತ್ನಿಸಿದರೆ ಹುಚ್ಚು
ಹೆಚ್ಚುವುದೇ ಹೊರತು ಪ್ರಯತ್ನವು ಅಫಲವಾಗುವುದೆಂದು ತೋರುವುದಿಲ್ಲ.
ಈ ಇಪ್ಪತ್ತು ದಿನಗಳಿಂದ ಆ ಮುಖ್ಯ ಆ ಮುಖದಲ್ಲಿ ಆ-ಆ-ಆ ಎಂಥಾ
ಮೆಲುನಗೆಯೆಂದು ಹೇಳಲಿ? --ಆ ಮೆಲುನಗೆಯನ್ನು ಮೇಲಿಂದ ಮೇಲೆ
ನೋಡಿದ್ದರೂ ಅದನ್ನ ವರ್ಣಿಸುವುದಕ್ಕೆ ಒಂದು ಮಾತೂ ಇಲ್ಲವಾಗಿದೆ!
ಮಧುವನ್ನು ಸವಿದ ಮೂಕನಂತಾಗಿದ್ದೇನೆ! ಆಹಾ! ಆ ಮುಗುಳ್ನಗೆ!
ಅಯ್ಯಾ, ಮಧುಮಾಸದಲ್ಲಿ ನೀವು ವನಗಳಲ್ಲಿ ಅಡ್ಡಾಡಿಲ್ಲವೆ? ("ಇಲ್ಲ"
ಎಂದರೆ ನನ್ನ ಮುಂದಿನ ಮಾತುಗಳು ಕಿನ್ನರಿ ಬಾರಿಸಿದ ಹಾಗೆಯೇ ಸರಿ.
“ಹು'' ಎಂದರೆ ಅಲ್ಲಿ ನಿಮಗೆ ಪರಿಚಯವಿಲ್ಲದ ಪರಿಮಳವೊಂದು ಗಾಳಿಯಲ್ಲಿ
ಬೆರತು ಬರತೊಡಗಲು ನೀವು ನಿಮ್ಮ ಹೆಜ್ಜೆಗಳನ್ನು ನಿದಾನಿಸಿ--ನಿಂತು-
ಸುತ್ತ ಮುತ್ತ ನೋಡಿಲ್ಲವೆ ? ಹಾಗೆ ನೋಡುವಾಗ ಒಂದು ದಿಕ್ಕಿನಲ್ಲಿ
ಜಾಡು ಹಿಡಿದು ಅಲ್ಲಿ ಇಲ್ಲಿ ಸುಳಿದು ಹೋಗಿ, ಒಂದೆಡೆಯಲ್ಲಿ ಆ ಅಪರಿಚಿತ
೪ ಮಾಟಗಾತಿ !
ವಾದ ಪರಿಮಳಕ್ಕೆ ನೆಲೆಯಾದ ಹೂವಿನ ಗಿಡವನ್ನೂ ಮರವನ್ನೋ
ಬಳ್ಳಿಯನ್ನೋ ನೋಡಿ ಆನಂದಪಟ್ಟಿಲ್ಲವೆ ? ನೋಡಿ, ಆ ಪರಿಮಳವು
ಹೇಗೆ ನಿಮ್ಮ ಮೂಗನ್ನು ಹಿಡಿದು ಎಳೆದೊಯ್ದಿತೋ ಹಾಗೆಯೇ ಅವಳ
ಮುಗುಳ್ಳಗೆಯು ಈ ಇಪ್ಪತ್ತು ದಿನಗಳಿಂದಲೂ ನನ್ನ ಕಣ್ಮನವನ್ನು
ಸೆಳೆದಿದೆ. ಈ ಉಪಮಾನದಿಂದ ನನಗೂ ಆಕೆಯ ಮುಗುಳ್ಳಗೆಗೂ ಇದ್ದ
ಸಂಬಂಧವನ್ನು ವ್ಯಕ್ತಪಡಿಸಿದಂತಾಯಿತೇ ಹೊರತು ಮುಗುಳ್ಳಗೆಯನ್ನು
ವರ್ಣಿಸಿದಂತಾಗಲಿಲ್ಲ. ಸೋಲನ್ನು ಒಪ್ಪಿಕೊಂಡುಬಿಡುತ್ತೇನೆ-ನಾನು
ವರ್ಣಿಸಲಾರೆ. ನನ್ನ ಸ್ನೇಹಿತರು ಕೆಲವರು ನನ್ನ ವರ್ಣನಾಶಕ್ತಿಗೆ ಮೆಚ್ಚಿ
ತಮ್ಮ ತಲೆ ತೂಗಿ ನನ್ನ ತಲೆ ತಿರುಗುವ ಹಾಗೆ ಮಾಡಿಬಿಟ್ಟಿದ್ದರು. ಆ ತಿರು
ಗುವ ತಲೆಯನ್ನು ನಿಲ್ಲಿಸುವುದಕ್ಕಾಗಿ ಇವಳು ನನ್ನ ಕಣ್ಣಿಗೆ ಬಿದ್ದಳೋ
ಏನೋ ಎಂದು ಒಂದೊಂದು ಸಲ ಅನ್ನಿಸುತ್ತದೆ. ಅಂದಿನಿಂದ ಇದು
ವರೆಗೆ ಎಷ್ಟೋ ಬಾರಿ ಮನದಲ್ಲೇ "ಕುಸುಮವೇ, ನಿನ್ನನ್ನು ನಾನು
ವರ್ಣಿಸಲಾರೆ ! ” ಎಂದು ತಲೆಯಾಗಿ ಹೇಳಿದ್ದೇನೆ. ಇನ್ನು ಆ ಕಣ್ಣುಗಳು!
“ ಓಹೋ ! ತುಟಿಯಾಯಿತು-ಇನ್ನು ಕಣ್ಣಿಗೆ ಹೋದನೋ ! ” ಎಂದು
ದೋರಣೆಮಾಡಿ, ನನ್ನನ್ನು ನೂಕಬೇಡಿ. ದೇವರು ನಿಮಗೆ ಕೊಟ್ಟಿರುವ
ಕಣ್ಣುಗಳು ಸಾರ್ಥಕವಾಗಬೇಕಾದರೆ ನೀವು ಅವಳ ಕಣ್ಣುಗಳೊನ್ನೊಮ್ಮೆ
ನೋಡಬೇಕು. “ ಏನು, ಮಲ್ಲಿಗೆಯರಳಲ್ಲಿ ಸೆರೆಯಾದ ಮರಿದುಂಬಿ
ಯಂತಿತ್ತೋ ?” ಎಂದು ಹಾಸ್ಯ ಮಾಡುವಿರಾ ? ಅಥವಾ “ ಏಣಾಕ್ಷಿ
ಯೋ?-ಉತ್ಪಲಾಕ್ಷಿಯೇ ? ಪದ್ಮನಯನೆಯೋ ? ಪ್ರಫುಲ್ಲ ನಯನೆ
ಯೋ ?'' ಎಂದು ಕೇಳುವಿರಾ? ನಾನೇನು ಅವುಗಳನ್ನು ಯೋಚಿಸದೆ
ಇಲ್ಲ. ಈ ಇಪ್ಪತ್ತು ದಿನಗಳಿಂದ ಸುಮ್ಮನೆ ಇದ್ದೆನೆಂದು ತಿಳಿದುಕೊಂಡಿರಾ?
ಯೋಚಿಸಿದ್ದೇನೆ-ಚರ್ಚೆಮಾಡಿದ್ದೇನೆ-ಚಿಂತಿಸಿದ್ದೇನೆ. ಅವುಗಳಲ್ಲಿ
ಯಾವ ಒಂದು ಹೆಸರೂ ಅವಳ ಕಣ್ಣುಗಳನ್ನು ಪೂರ್ಣವಾಗಿ ವರ್ಣಿಸ
ಲಾರದು. ಆ ಹೆಸರುಗಳನ್ನೆಲ್ಲಾ ಸಮನಾದ ಹದದಲ್ಲಿ ಬೆರೆಸಿ ಒಂದು
ಸಮಾಸವನ್ನು ಮಾಡಬಲ್ಲಿರಾ? ನೋಡಿ, ಪ್ರಯತ್ನ ಮಾಡಿ ; “ ಮರಳಿ
ಯತ್ನವಮಾಡಿ.”
ನಮ್ಮ ದೃಷ್ಟಿಯು ಪರಸ್ಪರ ಸಂಧಿಸಿದಾಗಲೆಲ್ಲಾ ನಾನು ದೊಡ್ಡ
ದೊಂದು ಸೂಜಿಗಲ್ಲಿನ ನೆರೆಯಲ್ಲಿರುವ ಕಬ್ಬಿಣದ ಸಣ್ಣದೊಂದು ಅದುರಿ
ನಂತಾಗಿದ್ದೇನೆ. ಆ ಒಂದು ಕ್ಷಣದಲ್ಲಿ ನನ್ನ ಸ್ಕೂಲಕಾಯವು ಕರಗಿ-
ಮಾಟಗಾತಿ ! ೫
ಆರಿಹೋಗಿ, ನನ್ನ ಕಣ್ಣುಗಳು ಮಾತ್ರ ಯಾವುದೋ ಮಾಯೆಯಲ್ಲಿ
ಉಳಿದುಕೊಂಡಂತಾಗಿದೆ.. ಬರಬರುತ್ತ ಆ ಕಣ್ಣ ಕಾಂತಿಯಲ್ಲಿ " ನಾನು "
ಎಂಬ ಜ್ಞಾನವೂ ಮಸಕಾಗಿ ಮಾಯವಾಗಿ ಹೋಗಿದೆ.
ಈ ಇಪ್ಪತ್ತು ದಿನಗಳಲ್ಲ ಅನೇಕ ಸಲ “ನಾನು ಚಿತ್ರಗಾರನಾಗಿ
ದ್ದಿದ್ದಿರೆ ! '' ಎ೦ದು ಅನ್ನಿಸಿದೆ; ಮರುಕ್ಷಣದಲ್ಲೇ " ಅಲ್ಲವೆ ನಾನು
ಚಿತ್ರಗಾರನಲ್ಲವೆ?'' ಎಂದೂ ತೋರಿದೆ. ನನ್ನ ಕಡೆಯ ದಿನದವರೆಗೂ ನನ್ನ
ಚಿತ್ರದಲ್ಲಿ ಊರಿ ನೆಲೆಸುವುದು ಅವಳ ಆ ಮುಖ--ಆದರಲ್ಲಿ ಆ ಮೆಲುನಗೆ--
ಆ ಕಣ್ಣುಗಳು. ನೆನೆಸಿದ ಕ್ಷಣದಲ್ಲಿ ಆ ಮುಖದ ಒಂದೊಂದು ಅಂಶ
ವನ್ನೂ ಒಂದೊಂದು ರೇಖೆಯನ್ನೂ ನನ್ನ ಚಿತ್ತಭಿತ್ತಿಯಲ್ಲಿ ಚಿತ್ರಿಸಿ
ಕೊಳ್ಳಬಲ್ಲೆ. ನಾನು ಚಿತ್ರಕಾರನಲ್ಲವೆ ? ಬಣ್ಣಗಳಿಂದ ಕಾಗದದ ಮೇಲೆ
ಅವಳನ್ನುಚಿತ್ರಿ ಸಲಾರೆನಿರಬಹುದು. ಆದರೇನು? ನನ್ನ ಮನವು ತಾಳಲಾ
ರದ ಬಣ್ಣ-ಅದು ಎಳೆಯಲಾರದ ರೇಖೆ ಯಾವುದಿದೆ?... ನಿಮಗೆ
ಬೇಸರವೇನೋ? ಆಕಳಿಸುತ್ತಾ ಇದ್ದೀರಿ !
ನಿನ್ನೆಗೆ ಇಪ್ಪತ್ತು ದಿನಗಳಾಗಿ ಹೋದವು ; ಇಂದು ಇಪ್ಪತ್ತೊ೦ದ
ನೆಯ ದಿನವೂ ಅವಳನ್ನು ನೋಡಿದೆ. ಇದುವರೆಗೂ ಸುಮ್ಮನೆ
ನೋಡುವುದು ಮಾತ್ರ ಆಗಿದೆ. ಏನಾದರೂ ಮಾಡಿ ಅವಳೊಡನೆ ಮಾತ
ನಾಡಬೇಕು-ಅವಳ ದನಿಯನ್ನು ಆಲಿಸಬೇಕು--ಎಂಬ ಬಲವತ್ತರವಾದ
ಆಸೆಯೊಂದು, ಅಡಿಗಡಿಗೆ ನನ್ನ ಹೃದಯದಲ್ಲಿ ಮಹಾಸಾಗರದ ಅಲೆ
ಯಂತೆ ಎದ್ದು ನನ್ನ ಮನವನ್ನು ಮೇಲಿಂದ ಮೇಲೆ ಅಪ್ಪಳಿಸಿದೆ.
ಆದರೆ ನನ್ನ ಆಸೆಯು ಪೂರ್ಣವಾಗುವ ಬಗೆ? . . . ಏನು ಉಪಾಯ?
ಮಾತನಾಡಲು ನಾನು ಸಿದ್ಧವಾಗಿದ್ದೇನೆ; ಆದರೆ... ಅವಳು? .....
ಇಲ್ಲ! ಅವಳು ಮಾತನಾಡುವಳೆ ? ಸಾಧ್ಯವೇ ಅಲ್ಲ! ನಾನು ಹುಚ್ಚ-
ಉನ್ಮತ್ತ! ನನ್ನೊಡನೆ ಅವಳು ಹೇಗೆ ಮಾತನಾಡಬಲ್ಲಳು? ಇಪ್ಪತ್ತು
ದಿನಗಳಿಂದ ನನ್ನ ಕಣ್ಣುಳಲ್ಲಿ ಹದ್ದುಮೀರಲಿರುವ ಉನ್ಮಾದವನ್ನು.
ಅವಳು ಕಾಣದಿರುವಳೆ ? ಅಸಂಭವ! ಹೀಗಿರುವಲ್ಲಿ ಅವಳು ಮಾತ ನಾಡ
ವುದೆಂತು? ಆದರೂ ಅವಳೊಡನೆ ಇಷ್ಟು ದಿನಗಳೂ ಒಂದು ರೀತಿ
ಯಲ್ಲಿ ಮಾತನಾಡಿಯೇ ಇದ್ದೇನೆ-ಕಣ್ಣುಗಳಿಂದ ನೀರವವಾಗಿ ಮಾತ
ನಾಡಿದ್ದೇನೆ. ನನ್ನ ದನಿಯಿಲ್ಲದ ಮಾತುಗಳನ್ನು ಅವಳು ಕೇಳಿರುವಳೆ?
ಆಸೆಯ ಭಾರದಿಂದ ಬಳುಕುವ ನನ್ನ ದೃಷ್ಟಿ ಅವಳ ಹೃದಯವನ್ನು ಸೋಂ
೬ ಮಾಟಗಾತಿ !
ಕಿರುವುದೆ ? ನಾನು ಅವಳ ಮೊಗದ ಕಾಂತಿಗೆ ಮರುಳಾದ ಪತಂಗ ಎಂದು
ಅರಿತಿರುವಳೆ ? ಅವಳ ಮುಖವು ಶೀತಳವಾದ ಜ್ವಾಲೆಯಂತೆ ಎಂದರೆ
ನೀವು ನಗುವಿರಿ; “ಇದೇನು 'ಬಿಸಿಬಿಸಿ ಮಂಜುಗಡ್ಡೆ !' ಅನ್ನುವಿರಿ.
ನನ್ನ ಮೆದುಳಿನ ಯಾವುದೋ ಭಾಗದಲ್ಲಿ ಏನೋ ಒಂದು ಸಡಿಲ
ವಾಗಿದೆ ಎಂದು ಹಾಸ್ಯ ಮಾಡುವಿರಿ, ಶೀತಳ-ವಾ-ದ-ಜ್ವಾ-ಲೆ! ಹೌದು!
ಏಕಾಗಬಾರದು! ತಾಳಿ, ಅದರ ಅನುಭವವನ್ನು ಈ ಕ್ಷಣದಲ್ಲಿ ನಿಮಗೆ
ಮಾಡಿಕೊಡುತ್ತೇನೆ. ನಾನು ಹೇಳಿದ ಹಾಗೆ ಕೇಳಬೇಕು, ಅಷ್ಟೆ. ಎಲ್ಲಿ
ಕಣ್ಣು ಮುಚ್ಚಿಕೊಳ್ಳಿ; ಆಯಿತೋ? . . . ಈಗ ನಿಮ್ಮ ಮನಸ್ಸನ್ನು ನನ್ನ
ವಶಕ್ಕೆ ಕೊಡಿ; ಹುಚ್ಚ - -ಎಂದು ಹೆದರಬೇಡಿ. . . ಅದೋ ನೋಡಿ-
ಕಣ್ಣು ತೆರೆಯಬೇಡಿ !-ಹಾಗೇ ನೋಡಿ ! ನೋಡಿ ! ಕಗ್ಗತ್ತಲ ಮಧ್ಯ
ದಲ್ಲಿ ಪುಟ್ಟದೊಂದು ಜ್ವಾಲೆ ಕಾಣುವದಿಲ್ಲವೆ? .. ಎಷ್ಟು ಪ್ರಕಾಶ ! ..
ಹೇಗೆ ನಗುತ್ತಿದೆ ! ಹೇಗೆ ಬಳುಕುತ್ತಿದೆ ! .. ಅದೇನು ನಲಿದಾಟ !! ನೋಡಿ,
ಚೆನ್ನಾಗಿ ನೋಡಿ . . ಈಗ ಬನ್ನಿ ಅದರ ಹತ್ತಿರ, ಬನ್ನಿ .. ಹೆದರಬೇಡಿ !
.. ಎಲ್ಲಿ, ನಿಮ್ಮ ಕೈಕೊಡಿ .. ಏನು ಭಯ!! ಇಲ್ಲ, ಸುಡುವುದಿಲ್ಲ ! ..
ತಂಪು! ತುಷಾರದಂತೆ ತಂಪಾಗಿದೆ! ನಂಬುವುದಿಲ್ಲವೆ? ಇದೋ . . ನೋಡಿ
ನಾನು ಬೆರಳನ್ನಿಡುತ್ತೇನೆ ! ನೋಡಿ !-ನೋಡಿ ! ಜ್ವಾಲೆ ಹೇಗೆ ಆಡು
ತ್ತಿದೆ! ಹೇಗೆ ಬಳುಕುತ್ತಿದೆ !-ನನ್ನ ಬೆರಳಿನ ಮೇಲೆ ! .. ಎಲ್ಲಿ, ಈಗಲಾ
ಲಾದರೂ ಇಡಿ ನಿಮ್ಮ ಬೆರಳನ್ನು ಹ! ಹಾ! ನೋಡಿದಿರಾ! . . ತಂಪಾ
ಗಿಲ್ಲವೆ? ಜ್ವಾಲೆ ಶೀತಳವಾಗಿಲ್ಲವೆ? ಹೇಳಿ, ಈಗಲಾದರೂ ನನ್ನ ಮಾತು
ನಿಜವೋ ಸುಳ್ಳೋ ? ನಂಬಿಕೆಯಾಯಿತೆ? ಹುಂ! ಸರಿ, ಇನ್ನು ನಿಮ್ಮ
ಮನಸ್ಸನ್ನು ವಾಪಸು ತೆಗೆದುಕೊಳ್ಳಿ ; ನನ್ನ ಜವಾಬುದಾರಿ ಮುಗಿಯಿತು.
ಕಣ್ಣು ಬಿಡಿ .. ಇದೇನು ? ಎದ್ದು ಬಿಟ್ಟಿರಿ? ನೀವು ಯೋಚಿಸುತ್ತಿರಬಹುದು
“ಈ ಹುಚ್ಚನ ಮಾತುಗಳನ್ನು ಕೇಳುತ್ತಿದ್ದರೆ ಇವನ ಜಾಡ್ಯ ನಮಗೂ
ಅಂಟುವುದೋ ಏನೋ!” ಎಂದು. ಆ ಭಯ ಬೇಡ. ನನ್ನ ಹುಚ್ಚು
ಸಾಂಕ್ರಾಮಿಕ ಜಾಡ್ಯವಲ್ಲ; ಕುಳಿತುಕೊಳ್ಳಿ . . ಹುಂ, ಏನು ಹೇಳುತ್ತಿದ್ದೆ ?
...ನೆನಪಾಯಿತು; ಅವಳೊಡನೆ ಮಾತು. ಹೌದು, ಏನಾದರೂ ಮಾಡಿ
ಅವಳೊಡನೆ ಮಾತನಾಡಿಯೇ ಬಿಡಬೇಕೆಂದು ನಿರ್ಧರಿಸಿದೆ. ಅವಳು ಆಡ
ದಿದ್ದರೆ ಏನಾಯ್ತು ? . . ಒಳ್ಳೆಯದು .. ಏನೆಂದು ಮಾತನಾಡಿಸಲಿ? ..
ಮಾಟಗಾತಿ ! ೭
ಹೆಸರು-ಊರು-ಆಮೇಲೆ? ಆಮೇಲೆ ಏನೋ! ಮಾತು ಪ್ರಾರಂಭವಾ
ದರೆ ಆಮೇಲೆ ಹೇಗಾದರೂ ಮುಂದೆ ಸಾಗುತ್ತೆ.
* * * *
ಇಪ್ಪತ್ತೆರಡನೆಯ ದಿನ, ಇಂದು ಮಾತನಾಡಿಸಿಯೇ ಬಿಡುವುದೆಂದು
ಬಹಳ ಗಟ್ಟಿ ಮನಸ್ಸು ಮಾಡಿಕೊಂಡಿದ್ದೆ. ಆದರೆ ಅವಳನ್ನು ನೋಡಿದಾಗ
ನನ್ನ ನಾಲಗೆ ಹಿಮ್ಮೆಟ್ಟಿತು ; ನನ್ನ ಕಣ್ಣುಗಳಿಗೆ “ ಅಯ್ಯಾ, ಮಿತ್ರನೇ,
ಇಂದೂ ನೀನೇ ಮಾಡಿಬಿಡು ನನ್ನ ಕೆಲಸವನ್ನ -ಏಕೋ ಮೈಯಲ್ಲಿ
ಚೆನ್ನಾಗಿಲ್ಲ' ಎಂದು ಅಂಗಲಾಚಿತು. ನನ್ನ ನಾಲಗೆ ನನಗೇ ಹೀಗೆ
ಮೋಸಮಾಡುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮೋಸವಾಯಿ
ತಲ್ಲಾ !-ಎಂದು ಏನೋ ಮಂಕು ಮುಚ್ಚಿದವನಂತೆ ಹಾಗೇ ಕುಳಿತಿದ್ದೆ.
ಪೋಸ್ಟ್ ಮ್ಯಾನ್ ಒಂದು ಒಂದು ಕಾಗದ ಕವರು ಕೊಟ್ಟು ಹೋದ.
ನೋಡಿದೆ, ಸರೂ ಕಾಗದ ! ಎದೆಯಲ್ಲಿ ಏನೋ ಒಂದು ಮಾದರಿ ಅಲ್ಲ
ತರ-ಉಹು-ಅದೇನೋ ಒಂದು ನಮೂನೆ ಆಯಿತು. ಅದೇನು ಅನ್ನು
ವುದನ್ನು ನೀವು ತಿಳಿದುಕೊಳ್ಳಲಾರಿರಾ? ಸಮಯ ಸಿಕ್ಕಾಗ ಹೀಗೆ ಮಾಡಿ;
ನೀವು ತಿಂಗಳುಗಟ್ಟಲೆ ಬೇರೆ ಊರಲ್ಲಿರಬೇಕಾದರೆ, ನಿಮ್ಮ ಕೈಹಿಡಿದಾಕೆ
ಅಥವಾ ನೀವು ಯಾರ ಕೈ ಹಿಡಿದಿರೋ ಆಕೆ ದಿನ ಬಿಟ್ಟು ದಿನ ಬರೆಯುವ
ಎಂಟು ಪುಟಗಳ ಕಾಗದಕ್ಕೆ ನೀವು ಇಪ್ಪತ್ತು ದಿನಗಳಿಗೋ ತಿಂಗ
ಳಿಗೋ ಒಂದು ಅರ್ಧ ಪುಟ ಗೀಚಿಹಾಕಿ, ಆ ಮೇಲೆ ಅವರು ಒಂದು
ಕಾಗದ ಒರೆಯುತ್ತಾರೆ. ಆ ಕಾಗದವನ್ನು ನೋಡಿ-ಓದಿ ; ಆಗ ನಿಮಗೆ
ನಾನು " ಎದೇಲಿ ಒಂದು ನಮೂನೆ-ಇತ್ಯಾದಿ '' ಎಂದು ಹೇಳಿದೆನಲ್ಲಾ
ಅದರ ಪರಿಚಯವಾಗುತ್ತೆ!
* * * *
ಸರೂಗೆ ಏನು ಉತ್ತರ ಬರೆಯಲಿ ? ಎಂದು ಯೋಚಿಸ ತೊಡಗಿದೆ.
ಈ ಇಪ್ಪತ್ತು ದಿನಗಳಲ್ಲಿ ಅವಳಿಂದ ಐದು, ಅಲ್ಲ ಆರು ಕಾಗದಗಳು ಬಂದಿ
ದ್ದವು. ಇದು ಏಳನೆಯದು ; ಬಲು ಜೋರಾಗಿದೆ ! ಮೆಣಸಿನ ಪುಡಿ
ಹೆಚ್ಚು !! ನಾನಾದರೋ ಒಂದೇ ಒಂದು ಸಣ್ಣ-ಸಾಧಾರಣವಾದ ಸಪ್ಪೆ
ಕಾಗದ ಬರೆದಿದ್ದೆ. ಇವತ್ತು ಬಂದ ಈ ಕಾಗದಕ್ಕೆ ಏನು ಉತ್ತರ ಕೊಡು
ವುದೋ ತೋರದಾಗಿದೆ .. ಯಾವ ಕಾರಣ ಜೋಡಿಸಲಿ ? .. ಏನು ನೆವ
ಹೊಂದಿಸಲಿ ? ಬಲು ಕಿಡಿಕಿಡಿಯಾಗಿದ್ದಾಳೆ! ಅವಳ ಕೋಪವನ್ನು ಹೇಗೆ
೮ ಮಾಟಗಾತಿ !
ಹತೋಟಿಗೆ ತರಲಿ ? ಕುಂಟು ನೆವ ಹೇಳಲೆ ? ಅಥವಾ ನಿಜವಾದ ಕಾರಣ
ವನ್ನು ಬರೆದು ಬಿಡಲೆ? ನಿ-ಜ-ವಾ-ದ ಕಾ-ರ-ಣ ! ಏ-ನಾ-ಗು-ತ್ತೆ ! ಏ-ನಾ-
ಗುತ್ತೆ! ಸುಂಟರಗಾಳಿಗೆ ಔತನ ಕೊಟ್ಟ ಹಾಗಾಗುತ್ತೆ ! ಕೈಹಿಡಿದವಳ
ಕಾಲು ಹಿಡಿಯಬೇಕಾಗುತ್ತೆ !! ಖಂಡಿತ ! ನಿಜವಾದ ಕಾರಣ ನನ್ನ
ಹುಚ್ಚು ! ಈ ಹುಚ್ಚನ್ನು ಅವಳು ನನ್ನ ಸರು ತಿಳಿದುಕೊಳ್ಳಬಲ್ಲಳೇ?
ಹೆಂಗುಸರು ಕೆಲವು ಕಷ್ಟವಾದ ವಿಷಯಗಳನ್ನು ಲೀಲಾಜಾಲವಾಗಿ ತಿಳಿದು
ಕೊಂಡುಬಿಡುತ್ತಾರೆ ; ಕೆಲವು ಅತಿ ಸರಳವಾದ ವಿಷಯಗಳನ್ನು ಸ್ವಲ್ಪವೂ
ತಿಳಿದುಕೊಳ್ಳಲಾರರು. ನನ್ನ ಹುಚ್ಚು ಈ ಎರಡನೆಯ ಜಾತಿಗೆ ಸೇರಿ
ದುದು. ಸರು ಖಂಡಿತ ತಿಳಿದುಕೊಳ್ಳಲಾರಳು ; ತಿಳಿದುಕೊಳ್ಳುವ ಪ್ರಯತ್ನ
ವನ್ನೂ ಮಾಡುವುದಿಲ್ಲ. ಅವಳು ನನ್ನ ಈ ಹುಚ್ಚು ಕೆಲಸವನ್ನು ಎಂದಿಗೂ
ಒಪ್ಪುವುದಿಲ್ಲ ? ಒಪ್ಪುವುದು ಹಾಗಿರಲಿ, ಸಹಿಸುವುದಿಲ್ಲ. “ ನಿನಗೆ ಒಪ್ಪಿ
ಗೆಯೆ ? ನಿನ್ನ ಈ ಹುಚ್ಚು ಕೆಲಸ ? " ಎಂದು ಕೇಳುವಿರೇನೋ ! ಹೇಗೆ
ಹೇಳಲಿ ಅದು ಸರಿಯೋ ತಪ್ಪೋ ಎಂದು ? ಒಂದು ಸಲ ತಪ್ಪು
ಎಂದು ತೋರಿದರೆ ನೂರು ಸಲ ಸರಿ ಎಂದು ತೋರುವುದು, ಅವಳನ್ನು
ಪಡೆಯಬೇಕು-ನನ್ನವಳನ್ನಾಗಿ ಮಾಡಿಕೊಳ್ಳಬೇಕು ಎಂಬ ಆಸೆಗಳಾ
ವುವೂ ಜ್ಞಾನಾವಸ್ಥೆಯಲ್ಲಿ ನನಗೆ ತಿಳಿದ ಮಟ್ಟಿಗೆ ತೋರಿಲ್ಲ. ಇರುವ
ಆಸೆಯೆಲ್ಲಾ ನನ್ನ ಕಣ್ಣುಗಳದು ಎಂದು ತಿಳಿದುಕೊಂಡಿದ್ದೇನೆ. ಸುಮ್ಮನೆ
ನೋಡಬೇಕು ಎಂದು, ಅಷ್ಟೆ. ಇದು ತಪ್ಪೆ ? ತಪ್ಪು ಎಂದು ಮನಸ್ಸನ್ನು
ತಿದ್ದಿದರೆ ತಪ್ಪಾಗಿ ಕಾಣುತ್ತದೆ; ಸರಿ-- ಎಂದು ತಿದ್ದಿದರೆ ಸರಿಯಾಗಿ
ಕಾಣುತ್ತದೆ. ನನ್ನಲ್ಲಿ ಇದುವರೆಗೂ ಹೆಚ್ಚಾಗಿ ಆಗಿರುವ ಪ್ರಯತ್ನ “ ಸರಿ "
ಎಂದು ತಿದ್ದುವುದಕ್ಕೆ. ಇದಕ್ಕೆ ತೌರುಮನೆ ಮೆದುಳೋ, ಹೃದಯವೋ,
ಪಿತ್ತಕೋಶವೋ, ಗುಲ್ಮವೋ ನಾನು ನಿರ್ಧರಿಸಲಾರೆ. ತನ್ನದಲ್ಲದ ತನಗೆ
ಸಿಲುಕದ ಒಂದು ವಸ್ತುವಿನಲ್ಲಿ ಅನುರಾಗವನ್ನು ತೋರುವುದೂ, ಅದನ್ನು
ಆಶಿಸುವುದೂ ನೀತಿಗೆ ವಿರುದ್ದ. ಈ ಮಾತನ್ನು ಒಪ್ಪುವರು ಎಷ್ಟು
ಜನ-ಒಪ್ಪದವರು ಎಷ್ಟು ಜನ? ಎರಡು ಪಂಗಡದಲ್ಲಿಯೂ ಅನೇಕರಿರಬ
ಹುದು-ಇದ್ದಾರೆ. ಈ ನೀತಿ ಅನ್ನುವುದು ದೇಹವನ್ನು ಆಳಬಲ್ಲುದು;
ನಾಲಗೆಯನ್ನು ಹಿಡಿತದಲ್ಲಿಡಬಲ್ಲುದು; ಆದರೆ ಮನಸ್ಸನ್ನ ಕಷ್ಟ!
ಅತಿಕಷ್ಟ ! ಅದರ ಎದುರಿನಲ್ಲಿ ನೀತಿಯು ನುಚ್ಚು ನುರಿಯಾಗುವ ಸಂಭವವೇ
ಹೆಚ್ಚು. ಬೆಣ್ಣೆಯಂತೆ ಮೃದುವಾಗ ಬಲ್ಲುದು, ಈ ಮನಸ್ಸು-ಕಲ್ಲಿನಂತೆ
ಮಾಟಗಾತಿ ! ೯
ಗಟ್ಟಿಯಾಗಬಲ್ಲುದು; ಗಾಳಿಯಂತೆ ಹಗುರಾಗಬಲ್ಲುದು ಬೆಟ್ಟದಂತೆ ಜಡ
ವಾಗಬಲ್ಲುದು ; ಹನಿಯಾಗಬಲ್ಲುದು-ಮಹಾಸಾಗರವಾಗಬಲ್ಲುದು; ಅಮೃತವಾಗಬಲ್ಲುದು-ಕಾಲಕೂಟವಾಗಬಲ್ಲುದು ! ಇದು ಮನಸ್ಸಿನ
ಮಾಯೆ ! ಈ ಮಾಯಾವಿಯೊಡನೆ ನೀತಿಗೆ ಮಲ್ಲಯುದ್ಧ ಸಂಭವಿಸಿದರೆ
ಗೆಲುವು ಯಾರಿಗೆ ಸೋಲು ಯಾರಿಗೆ ?
ಆಕೆಯ ವಿಚಾರದಲ್ಲಿ ನನ್ನ ಮನೋವೃತ್ತಿ ನನಗೇ ಗೊತ್ತಿಲ್ಲವಾಗಿದೆ.
ನನ್ನದು ಇಂದು ಇದ್ದು ನಾಳೆ ಹೋಗುವ ಬರೀ ಹುಚ್ಚೆ? ಅಥವಾ
ನನ್ನ ಎದೆಯ ಆಳದಲ್ಲಿ ಹುಟ್ಟಿ ಹರಿಯುತ್ತಿರುವ ಅನುರಾಗವೆ? ನನಗೇ
ತಿಳಿಯದು. ಇದು ಉನ್ಮಾದ ದ ಮಾತ್ರ ಎಂದು ಅಡಿಗಡಿಗೆ ತೋರುವುದು.
ಅ-ನು-ರ-ಕ್ತ-ನೆ ? • • • • • • ಆಕೆಯಲ್ಲಿ ? ಒಂದು ವೇಳೆ ಇದ್ದರೂ ಆ
ಅನುರಾಗದ ಅರಿವು ಇಂದಿನ ವರೆಗೂ ನನಗೆ ತಿಳಿದುಬಂದಿಲ್ಲ. ಇದ್ದರೂ
ಇರಬಹುದು ಇಲ್ಲದೆಯೂ ಇರಬಹುದು. ಆದರೆ ಹುಚ್ಚಿನ ವಿಷಯದಲ್ಲಿ
ಮಾತ್ರ ನನಗೆ ಚೆನ್ನಾಗಿ ಮಂದಟ್ಟಾಗಿ ಹೋಗಿದೆ. ಸಾಧಾರಣವಾಗಿ
ಹುಚ್ಚರು ರು ತಾವು ಹುಚ್ಚರು ಎಂದು ಯೋಚಿಸುವುದಿಲ್ಲ; ಅಥವಾ
ಅವರಿಗೆ ಹಾಗೆ ತೋರುವುದಿಲ್ಲ. ಆದರೆ ನನ್ನ ಹುಚ್ಚು ಇದೆಯಲ್ಲಾ
ಇದು ಅಸಾಧಾರಣವಾದುದು! ಇದು ನನ್ನಲ್ಲಿ ನೆಲೆಸಿ, ವ್ಯಾಪಿಸಿ
ನನಗೆ ತನ್ನ ಇರವಿನ ಜ್ಞಾನವನ್ನೂ ಉಂಟುಮಾಡಿದೆ ! . . ಈ ಹುಚ್ಚಿ
ನಿಂದ ಯಾವಾಗ ಬಿಡುಗಡೆ ನನಗೆ ? ಯಾವಾಗ ಮುಕ್ತಿ ? ದಾರಿ
ಯಾವುದು. . . ಗೊತ್ತು!-ಗೊತ್ತು! ದಾರಿಯೊಂದೇ ! ಹುಚ್ಚು ಹಿಡಿಸಿ
ದವಳು ಅವಳು ; ಅವಳೇ ಬಿಡಿಸಬೇಕು ! ನನ್ನ ಹುಚ್ಚನ್ನ ದಿನದಿನಕ್ಕೆ
ಹೆಚ್ಚಿಸಿದೆ ಆ ಮಾಯಾವಿಯ ಮೌನ ! ಒಂದು ದಿನ ಒಂದು ಗಳಿಗೆ
ಒಂದು ಕ್ಷಣ, ಅವಳು ನನ್ನೊಡನೆ ಒಂದು ಮಾತನಾಡಿದರೆ ಆ ಒಂದು
ಕ್ಷಣದಲ್ಲಿ ಆ ಒಂದು ಮಾತಿನಿಂದ ಈ ಇಪ್ಪತ್ತು ದಿನಗಳ ಹುಚ್ಚೂ
ಕೊಚ್ಚಿ ಹೋಗುತ್ತದೆ ! . . . ದೇವರೇ, ಅವಳು ನನ್ನೊಡನೆ ಮಾತನಾಡು
ವಂತೆ ಒಂದೇ ಮಾತು !-ಮಾಡು, ಈ ಹುಚ್ಚು ಕಟ್ಟನ್ನು ಹರಿಯು
ತ್ತಿದೆ! ನಾನು ಮಾತನಾಡಿಯೇ ಬಿಡಬೇಕು-ಅವಳೊಡನೆ ! ಇಲ್ಲ
ದಿದ್ದರೆ .. ಇಲ್ಲದಿದ್ದರೆ ಮಾತೃಭೂಮಿ-ಮಾ-ತೃ-ಭೂ-ಮಿ-
ಯೇ-ನು ?-ನನ್ನ ಸರು ನನ್ನನ್ನು ಕಳೆದುಕೊಳ್ಳುವುದು ಖಂಡಿತ !
ಖಂಡಿತ ! . . ಇದನ್ನೆಲ್ಲಾ ಹೇಗೆ ಬರೆಯಲಿ ಸರೂಗೆ ? ಬರೆದರೂ ಏನು
೧೦ ಮಾಟಗಾತಿ !
ಭರವಸೆ ? ಅವಳು ತಿಳಿದುಕೊಳ್ಳುತ್ತಾಳೆ ಅಂತ ? . . . ಹುಂ ಏನಾದರೂ
ಆಗಲಿ, ಬರೆದೇ ಬಿಡುವುದು ಎಂದು ನಿರ್ಧರಿಸಿದೆ. ಆದರೆ ಏನು ಬರೆಯಲಿ?
ಹೇಗೆ ಪ್ರಾರಂಭಿಸಲಿ ? ..........ಮೊದಲು ಯಾವುದು ಕೊನೆಯಾ
ವುದು ?-ಈ ಹುಚ್ಚು ಕಥೆಗೆ ? ಬಗೆ ಹರಿಯಲಿಲ್ಲ. ಅತಿ ಗಹನವಾದ
ವಿಚಾರಗಳಲ್ಲಿ ಬಗೆ ಹರಿಯದಿದ್ದರೆ ನಾನೊಂದು ಹಳೆ ಉಪಾಯಮಾಡುವ
ವಾಡಿಕೆಯುಂಟು. ಏನಂದರೆ ಕಣ್ಣುಗಳನ್ನು ಅರ್ಧ ಮುಚ್ಚಿಕೊಳ್ಳು
ವುದು ; ಆ ಅರೆತೆರೆದ ರೆಪ್ಪೆಗಳ ಮೂಲಕ ಎರಡು ಕಣ್ಣುಗಳಿಂದಲೂ
ಸ್ವಂತ ನಾಸಿಕಾಗ್ರವನ್ನು ನೋಡುವರು. ಆಗ ಏಕಾಗ್ರತೆ ಬರುತ್ತದೆ.
ಜ್ಞಾನವು ಅಂತರುಖಿಯಾಗುತ್ತದೆ. ವಿಷಯ ಎಷ್ಟೇ ಕಷ್ಟವಾಗಿರಲಿ,
ಎಷ್ಟೇ ತೊಡಕಾಗಿರಲಿ, ಕೂಡಲೆ “ಸುಲಿದ ಬಾಳೆಯ ಹಣ್ಣಿನಂದದಿ
ಸರಳವಾಗುತ್ತದೆ. ಬೇಕಾದ ಉತ್ತರ ಮೂಗಿನ ತುದಿಯಲ್ಲೇ ಸಿಕ್ಕುತ್ತೆ.
ದೂರ ಹೋಗಬೇಕಾಗುವುದಿಲ್ಲ. ನಾನು ಈ ಉಪಾಯವನ್ನು ನನ್ನ
ಮೇಲೆ ನಾನೇ ಪ್ರಯೋಗಮಾಡಿಕೊಂಡೆ. ಬರಬರುತ್ತ ನನ್ನ ಇಂದ್ರಿಯ
ಗಳು ಒಳಮುಖವಾದುವು. “ ಮನ್ಮಥವಿಜಯ''ದಲ್ಲಿ ವರದಾಚಾರ್ಯರು
ಮಾಡುತ್ತಿದ್ದ, ತಪೋಮಗ್ನನಾದ ಪರಶಿವನ ವರ್ಣನೆಯನ್ನು ಕೇಳಿಲ್ಲವೆ?
ನಾನು ಆ ಪರಶಿವನಂತೆ ಆಗಿರಬಹುದು. ನನ್ನ ತಪಸ್ಸಿನ ಬೀಜಾಕ್ಷರಗಳು
“ ಏನು ಬರೆಯಲಿ ? ಹೇಗೆ ಬರೆಯಲಿ? ಹೇಗೆ ಬರೆಯಲಿ ? ಏನು ಬರೆ
ಯಲಿ?' ಎಂದು.
* * * *
ಈ ತಪಸ್ಸಿನಲ್ಲಿ ಎಷ್ಟು ಹೊತ್ತು ಕಳೆದೆನೋ ಹೇಳಲಾರೆ. ಸುಮಾರು
ಹತ್ತು ನಿಮಿಷಗಳಾಗಿರಬಹುದು. ಇನ್ನೂ ತೊಡಕಿನ ತುದಿಯೇ ಸಿಕ್ಕಿರ
ಲಿಲ್ಲ. ನಾನು ಆ ತೊಕಿನ ಅಂಕಣದಲ್ಲೇ ಅಲೆಯುತ್ತಿದ್ದೆ, ಆಗ
ಹೊರಗೆ ನನ್ನ ತಪಸ್ಸಿಗೆ ಏನೋ ಭಂಗ ಬಂದೊದಗಿದಂತೆ ಅನುಭವ
ವಾಯಿತು. ಯಾರು ?” ಎಂದೆ ನನ್ನ ಅರ್ಧ ನಿಮೀಲಿತ ನಯನಗಳಿಗೆ
ಅವು,
" ಅವಳು ! ” ಎಂದವು.
"ಯಾರು ? "
“ ಅವಳು ! ನಿನಗೆ ಹುಚ್ಚು ಹಿ..."
"ಹ!"
ಮಾಟಗಾತಿ! ೧೧
" ಹೌದು ; ಅವಳೇ ! "
ನಾನು ಹಾರಿಬಿದ್ದೆ ! ತಪಸ್ಸಿಗೆ ತರ್ಪಣ ಕೊಟ್ಟು ಕಣ್ಣುಗಳನ್ನು ತೆರೆದೆ.
ಹೌದು ! ಅವಳೇ ! ಅವಳೆ !! ಕ್ಷಣಕಾಲ ನನಗೆ ನಂಬುಗೆಯಾಗಲಿಲ್ಲ.
ಇದು ಕನಸೆ ? ನಾನು ಕನಸು ಕಾಣುತ್ತಿರುವೆನೆ ? • • • ಏನು ಭ್ರಾಂತಿ ?
ಇಲ್ಲ . . ಇಲ್ಲಾ ! ಇದು ಕನಸಾದರೆ . . ನಾನು ಇಪ್ಪತ್ತು ದಿನಗಳಿಂದ
ನೋಡುತ್ತಿದ್ದುದೂ, ಉಹು! ಇರಲಾರದು. ಇಲ್ಲ! ಎಂದಿಗೂ ಇಲ್ಲ!
. . ಇಲ್ಲಿಗೆ! .. ಇಷ್ಟು ಹತ್ತಿರಕ್ಕೆ ಹೇಗೆ ಬಂದಳು? ಇಪ್ಪತ್ತು ದಿನಗಳಿಂದ
ಇಲ್ಲದ ಧೈರ್ಯ ! . . ಇಂದು ! .. ಅದು ಹೇಗಾದರೂ ಆಗಲಿ, ಇದು
ವರೆಗೂ ಮಾತಿಗೆ ಅವಕಾಶವಿರಲಿಲ್ಲ. ಇಂದು ನನ್ನ ಕೊಠಡಿಯಲ್ಲಿ ನನ್ನ
ಎದುರಿಗೆ ಕೈಚಾಚಿದರೆ ಸಿಕ್ಕು ಹಾಗೆ ನಿಂತಿದ್ದಾಳೆ! . . “ಈ ಅವಕಾಶ
ವನ್ನು ಬಿಡಬಾರದು ! ” ಅಂದುಕೊಂಡೆ. ಇಪ್ಪತ್ತು ದಿನಗಳ ಆಸೆಯನ್ನು
ಇವತ್ತು ತೀರಿಸಿಕೊಂಡೇ ಬಿಡಬೇಕೆಂದು ನನಗೆ ನಾನೆ ಹುರಿದುಂಬಿದೆ!...
ಆದರೆ ಎಷ್ಟು ಹತ್ತಿರ ನಿಂತಿದ್ದಳು ! . . ಅವಳ ಸಾಮೀಪ್ಯದಿಂದ ನನ್ನ
ಹುರುಪು ಹುಡಿಯಾಯಿತು ! ಏಳುವುದಕ್ಕೆ ಪ್ರಯತ್ನ ಪಟ್ಟೆ ; ಆಗಲಿಲ್ಲ. ಆ
ಮಾಯಾವಿಯ ದೃಷ್ಟಿನನ್ನನ್ನು ಕುರ್ಚಿಗೆ ಒತ್ತಿ ಹಿಡಿದಿದ್ದಂತೆ ತೋರಿತು.
ಮಾತನಾಡಲು ಪ್ರಯತ್ನ ಪಟ್ಟೆ ; ಆಗಲಿಲ್ಲ. ನನ್ನ ನಾಲಿಗೆ ಗರುಡಮಣಿ
ಯನ್ನು ಕಂಡ ಸರ್ಪದ ಹೆಡೆಯಂತೆ ಮುದುರಿ ಹೋಗಿತ್ತು ! ಮೊದಲು
ಒಂದು ಮಾತನಾಡಿದರೆ ಸಾಕು, ಆ ಮೇಲೆ ಸುಲಭವಾಗುವುದು- ಎಂದು
ಬಹಳ ಪ್ರಯತ್ನ ಪಟ್ಟೆ ; ಆದರೆ ಉಹು ಒಂದು ಮಾತನ್ನೂ ನಾಲಿಗೆ
ಅಡಲಾರದೆ ಹೋಯಿತು. ಬಾಯಲ್ಲಿ ಅದು ಇದೆಯೋ ಇಲ್ಲವೋ ಎಂದು
ಭ್ರಮಿಸುವ ಹಾಗಾಯಿತು.-“ಹಾವು ಸಾಯಬಾರದು-ಕೋಲು
ಮುರಿಯಬಾರದು''-ನಾಲಿಗೆ ಆಡಲೊಲ್ಲದು, ನಾನು ಬಿಡಲೊಲ್ಲೆ. ಕುರು
ಕ್ಷೇತ್ರದಲ್ಲಿ ಅರ್ಜುನ ಯುದ್ಧ ಮಾಡುವುದಿಲ್ಲ ಅಂದಾಗ ಶ್ರೀ ಕೃಷ್ಣ
ಚಿತಾವಣೆ ಮಾಡಲಿಲ್ಲವೆ? ನಾನೂ ಹಾಗೇ ನನ್ನ ನಾಲಿಗೆಗೆ ಚಿತಾವಣೆ
ಮಾಡತೊಡಗಿದೆ. ಅದು ಬಲು ಹೊತ್ತಿನ ಮೇಲೆ, ಕೈ ಕೆಳಗಿನ ನೌಕರರಲ್ಲಿ
ಶೋಭಿ ವ ತಾಬೇದಾರಿಯ ಪುಕ್ಕಲುತನದಿಂದ ಒಂದು ಮಾತನ್ನು
ತೊದಲಿತು ! ಬ-ಬ-ಬಂದೆಯಾ ? ” ಎಂದು.
ಅಬ್ಬಾ ! ಏನು ದಿಗ್ವಿಜಯ !
" ಕಾಣೋಲ್ಲವೆ ?
೧೨ ಮಾಟಗಾತಿ !
ಅವಳೂ ಮಾತನಾಡಿದಳು ! ಎಂತಹ ಕೊಳಲದನಿ ! ಕನಸು-
ಎಂದು ಒಂದು ಅಣುವಿನಷ್ಟು ಸಂದೇಹವಿದ್ದಿದ್ದರೂ ಈ ಕೊಳಲ ಗಾನದಿಂದ
ಅದು ಸರಿದು ಹೋಯಿತು. ಇಲ್ಲ ! ಎಷ್ಟು ಮಾತ್ರಕ್ಕೂ ಇದು ಕನ
ಸಲ್ಲ! ಹೇಗೆ ಆದೀತು ? ಈ ಕ್ಷಣದಲ್ಲಿ ಕೈ ನೀಡುವುದೇ ತಡ ....
ಇಲ್ಲ ! ಇಲ್ಲ ! . . ಕಣ್ಣು ಒಂದೇ ಮೋಸಹೋಗಬಹುದು ; ಕಿವಿಯೊಂದೇ
ಮೋಸಹೋಗಬಹುದು . . . ಆದರೆ ಒಟ್ಟಿಗೆ ? . . ಇಲ್ಲ ! ಕಣ್ಣು ಮೋಸ
ಹೋಯಿತೆಂದುಕೊಂಡರೆ ಕಿವಿ " ಕೇಳುವುದಿಲ್ಲವೆ ? '' ಎನ್ನುವುದು.
ಕಿವಿ ಮೋಸವೆಂದುಕೊಂಡರೆ ಕಣ್ಣು " ಕಾಣುವದಿಲ್ಲವೆ ?" ಎಂದುಸು
ರುವುದು, "ಕಾ-ಣೊ-ಲ್ಲ-ವೆ? ”
“ ಹು, ಹೌದು ; ನೀನು ಬಬಂದಿದ್ದೀಯ” ಎಂದೆ. ಈ ಮಾತ
ನಾಡಿ, ಆ ಕಡೆ ಈ ಕಡೆ ಯಾವಕಡೆಯಾದರೂ ನೋಡೋಣ ಎಂದು
ಪ್ರಯತ್ನ ಪಟ್ಟಿ; ಆಗಲಿಲ್ಲ . ... ಎಷ್ಟು ಅಸಹಾಯತೆ ! . . . ಅದೂ ಒಬ್ಬ
ಅಪರಿಚಿತ ಯುವತಿಯ ಎದುರಿಗೆ !, ಅ-ಪ-ರಿ-ಚಿ-ತ- ಳೆ ? ಅದು ಹೇಗಾ
ದೀತು? ಈ ಇಪ್ಪತ್ತು ದಿನಗಳಲ್ಲಿ ಇಪ್ಪತ್ತು ವರುಷಗಳ ಪರಿಚಯವಾ
ದಂತಿದೆ ! ಅಪರಿಚಿತಳು ! ಅಲ್ಲ ! ಅಲ್ಲ ! ! ಅವಳ “ ಅಲ್ಲ ! ” ಎಂದಳು.
ಮಾರ್ದನಿ ! ನನ್ನ ಹೃದಯದ ಅಂತರಾಂತರಾಳದ ದನಿಯ ಮಾರ್ದನಿ !!
"ಏನು' ಅಲ್ಲ '?'' ಎಂದೆ.
“ ಅಪರಿಚಿತಳಲ್ಲ ! "
ಅದೆಂತಹ ಮಾಯಾವಿ? ಹೇಗೆ ತಿಳಿಯಿತು ? ಅವಳಿಗೆ ನನ್ನ ಈ-ಈ
ಅತಿಗುಟ್ಟಾದ ಯೋಚನೆ ? ನನ್ನ ಕಳವಳವನ್ನು ಕಂಡು ಅವಳಿಗೆ ನಗು
ಬರುವುದರಲ್ಲಿತ್ತು ; ಆದರೆ ಅದು ಮುಗುಳ್ಳಗೆಯನ್ನು ದಾಟಲಿಲ್ಲ. ಅದೆಂತಹ
ಮುಗುಳಗೆ!... ಆ ಕಣ್ಣುಗಳೊ !... ಮಾಟಗಾತಿಯೇ ಸರಿ !
" ನಿನಗೆ ನನ್ನ............."
ನೀನು ನನ್ನಿಂದ ಏನನ್ನೂ ಮುಚ್ಚಿಡಲಾರೆ !"
ಪುನಃ ! . . ಪ್ರಶ್ನೆ ಕೇಳುವುದಕ್ಕೆ ಮೊದಲೇ ಉತ್ತರ!
" ಏನನ್ನೂ ಮುಚ್ಚಿಡಲಾ ........................
" ನಿನ್ನ ಆ ಕಣ್ಣುಗಳು ಏನನ್ನೂ ಮುಚ್ಚಿಡಲಾರವು!”
ಆ ಕ್ಷಣದಲ್ಲಿ ಕೈಗಳಿಂದ ಕಣ್ಣನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದೆ ;
ಆಗಲಿಲ್ಲ. ರೆಪ್ಪೆಯನ್ನೂ ಮುಚ್ಚಲಾರದೆ ಹೋದೆ ! ಎಂತಹ ದುರ್ಬಲತೆ-
ಮಾಟಗಾತಿ ! ೧೩
ಈ ಮಾಟಗಾತಿಯ ಎದುರಿನಲ್ಲಿ ! . . ನನ್ನ ಕಂಠವನ್ನು ದಾಟದ ಗುಟ್ಟೂ
ನನ್ನದಲ್ಲವಲ್ಲಾ !! ನನ್ನ ಮನಸ್ಸಿನಲ್ಲಿ ಮಾತಿಗೆ ಸಿಲುಕದ ಗಲಿಬಿಲಿ
ಯೊಂದು ಎದ್ದಿತು. ಏಳಲು ಪ್ರಯತ್ನ ಪಟ್ಟೆ ; ಆಗಲಿಲ್ಲ. ಈ ಮಾಟ
ಗಾತಿಯ ಎದುರಿನಲ್ಲಿ ನನ್ನ ಯಾವ ಪ್ರಯತ್ನವೂ ನಿಷ್ಪಲವಾಗುವಂತೆ
ತೋರಿತು. ಅವಳು ತನ್ನ ಆ ಕಣ್ಣುಗಳನ್ನು ಒಂದು ಕ್ಷಣಾರ್ಧ ಕಾಲ
ಆ ಕಡೆ ಈ ಕಡೆ ಮಿಂಚಿಸಿದ್ದರೆ ನಾನು ಎದ್ದುಬಿಡುತ್ತಿದ್ದೆ. ಆದರೆ ಇಲ್ಲ.
ನನ್ನನ್ನು ಹತೋಟಿಯಲ್ಲಿಟ್ಟಿದ್ದುದು ತನ್ನ ಕಣ್ಣುಗಳು-ಎಂದು ಅವಳು
ಚೆನ್ನಾಗಿ ಅರಿತಿದ್ದಳೆಂದು ತೋರುತ್ತದೆ ; ನನ್ನ ಮೇಲೆ ಅವುಗಳ ಪ್ರಯೋಗ
ವನ್ನು ಪೂರ್ಣವಾಗಿ ಮಾಡಿದಳು. ಆದರೆ ಅದೇನು ಅವಳ ದಯೆಯೋ !
ನಾಲಿಗೆಯನ್ನು ಮಾತ್ರ ಬಂಧಿಸಿರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ,
ಮೆಲ್ಲಗೆ ಕೇಳಿದೆ
" ನೀನು . . ಇಲ್ಲಿಗೆ . • ಬರಲು • • • “
"ನೀನೇ ಕರೆಯಲಿಲ್ಲವೆ ?
“ ನಾನು?-ನಾ-ನು ? "
ಮಾಟಗಾತಿ !
“ ನೀನು ನಿನ್ನ ಹೃದಯ ನಿನ್ನ ಕಣ್ಣು ; ತಿಳಿಯಿತೆ ?
“ನಾನು, ನನ್ನ ಹೃ-ದ . . . .”
"ಈ ಇಪ್ಪತ್ತು ದಿನಗಳಿಂದ! "
" ಈ-ಇ-ಪ್ಪ-ತ್ತು-ದಿ-ನ-ಗ-ಳಿಂ-ದ!"
“ಹೌದು !-ಸುಳ್ಳೆ ? ” ಸುಳ್ಳು ಹೇಗಾದೀತು ? .. ಆದರೆ .. ಇವ
ಳಿಗೆ ಹೇಗೆ ಹೇಗೆ ಅದು ಹೇಗೆ ಗೊತ್ತಾಯಿತು? ಈ ಮಾಟ
ಗಾತಿಗೆ ?
"ಸುಳ್ಳಲ್ಲ, ಆದರೆ ನಿನಗೆ ಗೊತ್ತಾದ . . .”
"ಅದೆಲ್ಲ ನಮ್ಮದೊಂದು ಮಾಟ !”
ಅಬ್ಬಾ! ಮಾ-ಟ-ಗಾ-ತಿಯೇ ಸರಿ !! ಕ್ಷಣಕಾಲ ಮೂಕನಂತಾದೆ. ಆ ಮೇಲೆ ಪುನಃ ಹೇಳಿದೆ-
“ ಅದೂ ಬಂದೆಯಲ್ಲಾ!” ಸಂತೋಷವಾಯಿತೆ ? ”
“ ನೀನು ಹೆಂಗುಸಲ್ಲವೆ?"
೧೪ ಮಾಟಗಾತಿ !
“ನಿನ್ನ ಸರಸ್ವತಿಯೂ ಹೆಂಗುಸಲ್ಲವೆ?"
ನನ್ನ ಸರಸ್ವತಿ ! ಎಂತಹ ಪ್ರಶ್ನೆ !
"ನನ್ನ ಸರು ನಿನಗೆ ಹೇ ...
“ ಅವಳದೇ ಅಲ್ಲವೆ ಆ ಕಾಗದ ?”
ಕಾಗದವನ್ನು ಮುದುರಿ ಎಸೆದುಬಿಡೋಣವೆನ್ನಿಸಿತು-ಆಗಲಿಲ್ಲ.
ಅಸಹಾಯತೆ ! ಅಯ್ಯೋ !-ಅಸಹಾಯತೆಯೆ ! ನನ್ನ ನಾಲಿಗೆ !
ಒಂದು ಮಾತ್ರ ನನ್ನ ಸ್ವಾಧೀನ.
“ ಹೌದು ಅವಳದೇ.
“ ಏನು ಉತ್ತರ ಬರೆಯುವೆ ? ”
“ ಏನು ಬರೆಯಲಿ ?”
" ' ನಿನಗಿಂತ ಸುಂದರಿ ಒಬ್ಬಳು ಸಿಕ್ಕಿದ್ದಾಳೆ' ಎಂದು ಬರಿ. ''
" ಅದು ಹೇಗೆ ?"
“ ಅದು ಹಾಗಲ್ಲದಿದ್ದರೆ ನೀನು ಹೀಗಾಗುತ್ತಿದ್ದೆಯಾ?''
“ ಹೇಗೆ ?”
"ಹುಚ್ಚು ಹಿಡಿದ ಪತಂಗದ ಹಾಗೆ!??
"ಹುಚ್ಚ ! ಪ-ತಂ-ಗ ! ಕೇವಲ ನನ್ನದು ಎಂದು ಹೇಳಿಕೊಳ್ಳುವುದಕ್ಕೆ
ಗುಟ್ಟಾದ ಒಂದು ಯೋಚನೆಯೂ ಇಲ್ಲವಾಯಿತು ನನಗೆ ಈ- ಈ-
" ಶೀತಳವಾದ ಜ್ವಾಲೆಯ ದೆಸೆಯಿಂದ.”
“ ಹೌದು ! ಹೌದು!! ನೀನು ಶೀತಳವಾದ ಜ್ವಾಲೆ !”
" ಖಂಡಿತವಾಗಿಯೂ?"
"ಸತ್ಯವಾಗಿಯೂ ! ”
"ನಿನ್ನೆ ಸರೂ . . . ಆಣೆಗೂ ? ''
"ನನ್ನ ಸರೂ-ಆಣೆಗೂ ! ಎಂತಹ ಬರೆ ಎಳೆಯುವ ಪ್ರಶ್ನೆ ! ಇದಕ್ಕೆ
ಉತ್ತರವುಂಟೇ ?-ಏನು ಹೇಳಲಿ ? ನನ್ನ ಸರೂ ಎಲ್ಲಿ ?--ಈ-ಈ-
ಓ! ಏನೆಂದು ಹೇಳಲಿ ?
“ ಹಾಗಾದರೆ ನೀನು ಮಾಡುತ್ತಿರುವುದು ಯೋಗ್ಯವೆ??
"ಏನು?”
“ಅನ್ಯಾಯ-ಸರಸ್ವತಿಗೆ ! ಕೈಹಿಡಿದವಳಿಗೆ ಮೋಸ ! ”
"ಮೋಸವೇನು ?"
ಮಾಟಗಾತಿ ! ೧೫
“ಮೋಸವಲ್ಲದೆ ಮತ್ತೇನು? ನನ್ನಿಂದ ಒಂದು ಯೋಚನೆಯ ಚೂರನ್ನೂ
ಬಚ್ಚಿಡಲಾರೆ ! ಹೇಳು ನಿನಗೆ ನನ್ನಲ್ಲಿ ಅಪೇಕ್ಷೆ !-ಅಲ್ಲವೆ?"
"ಮಾತನಾಡಬೇಕೆಂದು ಅಷ್ಟೆ..
“ಅಷ್ಟೇ ? ಅಷ್ಟೇಯೋ ? “ ಹೌದು ; ಅಷ್ಟೆ.”
"ಅದರ ಹಿಂದೆ ಮತ್ತೇನೂ ಇಲ್ಲವೆ?"
"ಇದ್ದರೆ ನಿನಗೆ ತಿಳಿಯುವುದಿಲ್ಲವೆ?"
" ತಿಳಿಯದೆ ಏನು !”
"ಹಾಗಾದರೆ ಅದೇನು- ಹೇಳು !”
“ ನಿನಗೆ ನಾನು ಬೇಕು ನನ್ನನ್ನು ಹೊಂದಬೇಕೆಂದು ಅಡಗಿಸ
ಲಾಗದ ಆಸೆ ನಿನಗೆ !”
" ನಿನ್ನನ್ನು ನೋಡಿದವರು ಯಾರು ತಾನೆ ಅಂತಹ ಆಸೆಯನ್ನು
ಅಡಗಿಸಬಲ್ಲರು !”
"ಬುದ್ಧಿ ಇದ್ದವರು.”
" ಆ ಕಣ್ಣುಗಳೆದುರಿಗೆ ಎಷ್ಟು ಬುದ್ದಿ ತಾನೇ ನಿಂತೀತು !”
“ ನೀನು ಮಾಡುತ್ತಿರುವುದು ಹುಚ್ಚು ಕೆಲಸ ! ನೀನು ಹುಚ್ಚ !-
ಶುದ್ದ ಹುಚ್ಚ !!”
" ಹುಚ್ಚನ ಹತ್ತಿರ ಏತಕ್ಕೆ ಬಂದೆ ? ”
" ಬುದ್ದಿ ಕಲಿಸುವುದಕ್ಕೆ !”
" ಬುದ್ದಿ-ಕ-ಲಿ-ಸು-ವು-ದ-ಕ್ಕೆ ಎಷ್ಟು ಧೈರ್ಯ !”
" ಧೈರ್ಯವೇನು ? ”
"ಇಲ್ಲಿ . . . . ನಾನು ಒಬ್ಬನೆ ! . . . ಮೇಲೆ ನಿನಗಾಗಿ ಉನ್ಮತ್ತ !!
..............ಧೈರ್ಯವಲ್ಲವೆ ?-ಇದು ? ”
“ ನೀನು ನನಗೆ ಏನೂ ಮಾಡಲಾರೆ ! ನನ್ನನ್ನು ಮುಟ್ಟಲೂ ಆರೆ !”
" ಏನು ? ಇಷ್ಟು ಹತ್ತಿರ! . . . ನಾನು ಮುಟ್ಟಲಾರೆನೆ ? . . . ಈ
ಕ್ಷಣದಲ್ಲಿ............."
" ಹೋ! ಹೋ ! ಅದು ಅಷ್ಟು ಸುಲಭವಲ್ಲ!”
“ ಇದು ಸುಲಭವಲ್ಲದಿದ್ದರೆ ಇನ್ನು ಯಾವುದು ಸುಲಭ ಈ ಪ್ರಪಂಚ
ದಲ್ಲಿ ! "
೧೬ ಮಾಟಗಾತಿ !
“ ನೀನೊಬ್ಬ ಹುಚ್ಚ !”
" ನೀನೇ ಹಿಡಿಸಿದವಳು !"
" ನಾನೇ ಓಡಿಸುತ್ತೇನೆ ! "
"ಜೀವ ಬಿಡಬಲ್ಲೆ- ಈ ಹುಚ್ಚು ಬಿಡಲಾರೆ!"
“ ನಾನು ಹೊರಟೆ.”
"ಎಲ್ಲಿಗೆ ? "
“ನಿನ್ನ ಸರೂ-ಹತ್ತಿರಕ್ಕೆ ?”
" ನನ್ನ ಸರೂ ಹತ್ತಿರ! ಏತಕ್ಕೆ ?”
“ ನಿನಗೆ ಬುದ್ದಿ ಕಲಿಸುವುದಕ್ಕೆ ನಿನ್ನ ಹುಚ್ಚು ಬಿಡಿಸುವುದಕ್ಕೆ !
........ಇಗೋ ಹೊರಟೆ ! ''
" ಬೇಡ-ಬೇಡ! . . . ಹೋಗಬೇಡ . . . ಇಲ್ಲಿಂದ ಹೋಗಲಾರೆ
ನೀನು!"
"ಅದು ಹೇಗೆ ? "
“ ನಾನು ತಡೆಯುತ್ತೇನೆ ! ನನ್ನಿಂದ ತಪ್ಪಿಸಿಕೊಳ್ಳಬಲ್ಲೆಯಾ ನೀನು ?”
“ ನೀನು ತಡೆಯಲಾರೆ ! ತಪ್ಪಿಸಿಕೊಳ್ಳುವುದೆ ? ಸಿಕ್ಕಿದ್ದರೆ ತಾನೆ ?
ಹುಚ್ಚ ! . . . ನೋಡು ಹೊರಟೆ !"
ನನ್ನ ಕಣ್ಣುಗಳನ್ನೇ ನೋಡುತ್ತ, ಮೆಲ್ಲನೆ ಎರಡು ಹೆಜ್ಜೆ ಹಿಮ್ಮೆಟ್ಟಿ .
ದಳು. ಇನ್ನೇನು ಹೊರಟು ಹೋಗಿಬಿಡುತ್ತಾಳೆ! ಎಂದಿಗೂ ನನ್ನ
ಸಮೀಪಕ್ಕೆ ಬರುವುದಿಲ್ಲ! ಇದೊಂದು ಕ್ಷಣ-ಈಗ ತಪ್ಪಿದರೆ ನನ್ನ
ಜೀವಮಾನದಲ್ಲೇ ಪುನಃ ಬರಲಾರದು, ಇಂತಹ ಇನ್ನೊಂದು ಕ್ಷಣ . ..
ಇಲ್ಲ. ನಾನು ಏಳಲೇ ಬೇಕು ! . . . ಎದ್ದೆ. ಅವಳು ಇನ್ನೊಂದು ಹೆಜ್ಜೆ
ಹಿಮ್ಮೆಟ್ಟಿದಳು. ನಾನು ಮುಂದುವರಿದ ಹಾಗೆಲ್ಲ ಅವಳು ಹಿಂದೆ ಹಿಂದೆ
ಸರಿಯುತ್ತ ಹೋದಳು. ಇಪ್ಪತ್ತು ದಿನಗಳ ಅಡಗಿದ್ದ ಆಸೆಯೆಲ್ಲಾ ಈ
ಒಂದು ಕ್ಷಣದಲ್ಲಿ ಅಪ್ಪಳಿಸಿ ಆರ್ಭಟಿಸಿ ಹೊರಟಿತು ! . . . ಕೈಗಳನ್ನು
ಚಾಚಿ ಅವಳ ಕಣ್ಣಿಗೆ ಕಣ್ಣು ಸೇರಿಸಿದೆ. ಹೆಜ್ಜೆಯ ಮೇಲೆ ಹೆಜ್ಜೆ
ಯಿಟ್ಟು ಹಿಮ್ಮೆಟ್ಟುತ್ತಿದ್ದಳು. ಇನ್ನೇನು ಹೋಗಿ ಬಿಡುತ್ತಾಳೆ !-ಓಡಿ
ಬಿಡುತ್ತಾಳೆ ! ಮಾಯವಾಗಿ ಬಿಡುತ್ತಾಳೆ! ಕೈಗಳನ್ನು ಚಾಚಿಕೊಂಡು
ಥಟ್ಟನೆ ಮುಂದಕ್ಕೆ ಹಾರಿದೆ ! ನನ್ನ ನೆಗೆತಕ್ಕೆ ಸರಿಯಾಗಿ ಅವಳೂ ಚಂಗನೆ
ಮಾಟಗಾತಿ ! ೧೭
ಮೇಲಕ್ಕೆ ಹಾರಿದಳು ! ಹಾರಿ ಗೋಡೆಯ ಮೇಲಿದ್ದ ಚೌಕಟ್ಟನ್ನು ಸೇರಿ
ದಳು. ನನ್ನ ತಲೆ ಗೋಡೆಗೆ ಬಡಿಯಿತು ! . . .
* * *
ತಲೆಯನ್ನು ಉಜ್ಜಿಕೊಳುತ್ತ ಅವಳ ಪಠವನ್ನು ನೋಡುತ್ತಿದ್ದೆ !
ನಾನು ಇಪ್ಪತ್ತು ದಿನಗಳಿಂದ ನೋಡುತ್ತಿದ್ದುದು ಆ ಪಠವನ್ನು !-
ಅಂದರೆ ಅವಳ ಪಠವನ್ನು!!
ಕೊನೆಯ ಮಾತು ; ನಗಬೇಡಿ-
ನನಗೆ ಇನ್ನೂ ಬಿಟ್ಟಿಲ್ಲ ಹುಚ್ಚು !!
೧೮===========================================
ನಾನು ಕೊಂದ ಹುಡುಗಿ
ಆರೇಳು ವರ್ಷಗಳ ಹಿಂದಿನ ಮಾತು. ಬೇಸಗೆಯ ರಜದಲ್ಲಿ ನಮ್ಮ
(ಮೈಸೂರು) ಸೀಮೆಯನ್ನೆಲ್ಲಾ ಸುತ್ತಿಕೊಂಡು ಬರಬೇಕೆಂದು ಹೊರಟೆ.
ನನಗೆ ನಮ್ಮ ದೇಶದಲ್ಲಿರುವ ಹೆಸರುಗೊಂಡ ಶಿಲಾಶಿಲ್ಪಗಳ ವೈಖರಿಯ
ನ್ನೆಲ್ಲಾ ಚಿತ್ರರೂಪದಲ್ಲಿ ಸಂಗ್ರಹಿಸಬೇಕೆಂಬ ಒಂದು ಹುಚ್ಚು ಹಿಡಿದಿತ್ತು.
ಸೋಮನಾಥಪುರ, ಬೇಲೂರು, ಹಳೇಬೀಡು ಮುಂತಾದ ಸ್ಥಳಗಳಲ್ಲಿನ
ದೇವಾಲಯಗಳ ವರ್ಣನೆಗಳನ್ನು ಪುಸ್ತಕಗಳಲ್ಲಿ ಓದಿದಾಗ "ಇರಲಿ !
ಸಾಯದೆ ಬದುಕಿದ್ದರೆ ಒಂದಲ್ಲ ಒಂದು ದಿನ ಅವುಗಳನ್ನೆಲ್ಲಾ ಕಣ್ಣಾರೆ
ನೋಡಿಕೊಂಡು ಬರುತ್ತೇನೆ!” ಅಂದುಕೊಂಡಿದ್ದೆ. ಆದುದರಿಂದ ನಾನು
ಸಂಚಾರ ಹೊರಟಾಗ ನನ್ನ ಆಸೆಯ ಕನಸು ನಿಜವಾಗುವಂತಾಯಿತಲ್ಲಾ !-
ಎಂದು ಹಿಗ್ಗಿದೆನು. ಇಲ್ಲಿ ನಾನು ಮುಂದೆ ಹೇಳುವ ವಿಷಯ-ನನ್ನ
ಸಂಚಾರವನ್ನು ಕುರಿತು ಒಂದು ಉಪನ್ಯಾಸವಲ್ಲ. ನನ್ನ ಸಂಚಾರದ
ಮಧ್ಯದಲ್ಲಿ, ಒಂದು ಹಳ್ಳಿಯಲ್ಲಿ ನಡೆದ ಒಂದೆರಡು ದಿನಗಳ ಸಂಗತಿಯನ್ನು
ಕುರಿತು.
ಆ ಹಳ್ಳಿಯ ಹೆಸರು ನಾಗವಳ್ಳಿ, ನಾನು ಅಲ್ಲಿಗೆ ಬರುವ ವೇಳೆಗೆ ನನ್ನ
ಸಂಚಾರ ಮುಕ್ಕಾಲುಪಾಲು ಮುಗಿದಿತ್ತು ಅನ್ನಬಹುದು. ಅಷ್ಟು ಹೊತ್ತಿ
ಗಾಗಲೆ ಸುಮಾರು ನೂರು-ನೂರೈವತ್ತು ಚಿತ್ರಗಳನ್ನು ಸಂಗ್ರಹಿಸಿದ್ದೆ.
ಎಲ್ಲವೂ ನಾನೇ ಸ್ವಂತವಾಗಿ ತೆಗೆದ ಫೋಟೋಗಳು.
ನಾಗವಳ್ಳಿಯಲ್ಲಿ ಕರಿಯಪ್ಪನವರೆಂಬುವರು ಬಹಳ ಗಣ್ಯರಾದವರು.
ಆ ಹಳ್ಳಿಗೆಲ್ಲಾ ಯಜಮಾನರಂತಿದ್ದರು. ನಾನು ಅವರ ಮನೆಯಲ್ಲಿಯೇ
ಉಳಿದುಕೊಂಡಿದ್ದದ್ದು. ಕಥೆ ಇಲ್ಲಿಂದ ಪ್ರಾರಂಭ ಎಂದು ಇಟ್ಟು ಕೊಳ್ಳ
ಬಹುದು.
ನಾನು ಆ ಹಳ್ಳಿಗೆ ಬಂದಾಗ ರಾತ್ರಿ ಸುಮಾರು ಒಂಭತ್ತು ಗಂಟೆಯ
ಸಮಯ. ನನ್ನ ಸಾಮಾನುಗಳನ್ನೆಲ್ಲಾ ಒಂದು ಸಂತೆಯ ಗಾಡಿಯಲ್ಲಿ
ಹಾಕಿ ನಾನು ಅದರ ಹಿಂದೆ ನಡೆದುಕೊಂಡು ಬಂದೆ. ರಾತ್ರಿಯೆಲ್ಲಾ ಆ
ನಾನು ಕೊಂದ ಹುಡುಗಿ ೧೯
ಎತ್ತಿನ ಗಾಡಿಯಲ್ಲಿ ಪ್ರಯಾಣಮಾಡುವುದು ನನಗೆ ಸರಿಬೀಳಲ್ಲ.
ಆ ರಾತ್ರೆ ಆ ಹಳ್ಳಿಯಲ್ಲೇ ಉಳಿದುಕೊಳ್ಳೋಣ ಅನ್ನಿಸಿತು. ಉಳಿದು
ಕೊಳ್ಳುವುದಕ್ಕೆ ಸಂಯಾದ ಸ್ಥಳ ಯಾವುದಾದರೂ ಇದೆಯೇ--ಎಂದು
ಗಾಡಿಯವನನ್ನು ವಿಚಾರಿಸಿದೆ. ಅವನು ಕರಿಯಪ್ಪನವರ ಹೆಸರನ್ನು ಹೇಳಿ
" ಸ್ವಾಮೀ, ಅಪ್ಪಣೆಯಾದರೆ ಅವರ ತಾವ ಹೋಗಿ ಹೇಳ್ತೀನಿ ಅವರು
ಎಲ್ಲಾ" ಅನ್ಕೂಲಮಾಡ್ತಾರೆ ಬುದ್ದೀ " ಅಂದ. ನಾನು "" ಆಗಬಹುದು''
ಎಂದೆ. ಇನ್ನು ಹತ್ತುಮಾರು ಹೋಗುವುದರಲ್ಲಿ ಅವರ ಮನೆ ಸಿಕ್ಕಿತು.
ನಾನು ಗಾಡಿಯ ಹತಿ ತಿರದಲ್ಲೇ ನಿಂತಿದ್ದೆ. ಗಾಡಿಯವನು ಇಳಿದು ಮನೆಯ
ಕಡೆ ಹೋಗಿ ಬಟು '`ಮಿಷ ಬಿಟ್ಟುಕೊಂಡು ಇನ್ನೊಬ್ಬ ಗಂಡಸಿ
ನೊಡನೆ ಬಂದು " ಬುದ್ದೀ, ಇವರೇ ಕರಿಯಪ್ನೋರು ಅನ್ನೋರು"
ಎ೦ದು ಹೇಳಿದ. ಕರಿಯಪ್ಪನನರು ನನ್ನ ಸಮೀಪಕ್ಕೆ ಒಂದು ಬಹಳ
ನಮ್ರಭಾವದಿಂದ ಕೈಮುಗಿದು "ಸ್ವಾಮೀ, ದಯಮಾಡಿ. ಇದು ತಮ್ಮ
ಮನೇ ಎಂದೇ ತಿಳೀಬೇಕು ” ಎಂದು ಹೇಳಿದರು. ನಾನೂ ಅವರಿಗೆ
ಕೈಮುಗಿದು " ತಮಗೆ ತೊಂದರೆ ಕೊಟ್ಟ ಹಾಗಾಯಿತು ಎಂದೆ. ಅದಕ್ಕೆ.
ಅವರು "" ಸ್ವಾಮೀ, ಎಲ್ಲಾದರೂ ಉಂಟೆ ! ತೊಂದರೆ ಹೇಗೆ ಸ್ವಾಮೀ!
ತಾವು ದೊಡ್ಡ ಮನಸ್ಸು ಮಾಡಿ, ನನ್ನ ಮನೆಗೆ ಬರಲು ಒಪ್ಪಿದರಲ್ಲಾ ಅದೇ
ನನ್ನ ಪುಣ್ಯ ತೊಂದ್ರೆ ಗಿಂದ್ರೆ ಅನ್ನಬೇಡಿ ಸ್ವಾಮಿ; ಹೀಗೆ ದಯ
ಮಾಡಬೇಕು" ಎ೦ದು ತಮ್ಮ ಮನೆ ಕಡೆ ಕೈತೋರಿಸಿ, ಗಾಡಿಯವ
ನನ್ನು ಕರೆದು "ಲೋ ತಿಮ್ಮಾ , ಧಣಿಗಳ ಸಾಮಾನ್ನೆಲ್ಲಾ ಜಗ್ತಿಮೇಲೆ
ತಂದಿಡೋ '' ಎಂದು ಹೇಳಿದರು.
ನಾವು ಹೋಗಿ ಅವರ ಮನೆ ಜಗುಲಿಯ ಮೇಲೆ ಹಾಸಿದ್ದ ಚಾಪೆಯ
ಮೇಲೆ ಕುಳಿತುಕೊಂಡೆವು. ಕರಿಯಪ್ಪನವರದು ದೊಡ್ಡ ಸಂಸಾರ, ತುಂಬಿದ
ಮನೆ. ನಾನು ಹೋಗಿ ಕುಳಿತೊಡನೆಯೆ ಒಳಗಿನಿಂದ ಮೂರು ನಾಲ್ಕು
ಸಣ್ಣ ಸಣ್ಣ ಮಕ್ಕಳು ಹೊರಕ್ಕೆ ಓಡಿಬಂದು ಕುತೂಹಲದಿಂದ ನಮ್ಮ
ಸುತ್ತಲೂ ನಿಂತುಕೊಂಡರು. ನನ್ನ ಹ್ಯಾಟು, ಬೂಟು ಎಲ್ಲಾ ಅವರಿಗೆ
ತಮಾಷೆಯಾಗಿ ಕಂಡಿರಬೇಕು!
ಜಗುಲಿಯ ಒಂದು ಪಕ್ಕಕ್ಕೆ ಒ೦ದು ಕೊಠಡಿ. ಮನೆಯ ಆಳು ಅದರ
ಬಾಗಿಲನ್ನು ತೆರೆದು ಗುಡಿಸಿ ಚಾಪೆ ಹಾಕಿ ಒಂದು ದೀಪವನ್ನು ತಂದಿಟ್ಟ.
ಗಾಡಿಯವನು ನನ್ನ ಸಾಮಾನುಗಳನ್ನೆಲ್ಲಾ ಕೊಠಡಿಯೊಳಗೆ ಇಟ್ಟು
೨೦ ನಾನು ಕೊಂದ ಹುಡುಗಿ
ಬಂದ. ಅವನಿಗೆ ಸಲ್ಲಬೇಕಾಗಿದ್ಧ ಬಾಡಿಗೆ ಕೊಟ್ಟು ಕಳಿಸಿಬಿಟ್ಟೆ, ಕರಿಯಪ್ಪ
ನವರು " ಸ್ವಾಮೀ, ಇನ್ನು ಬಟ್ಟೆ ಬಿಚ್ಚಬಹುದಲ್ಲ'' ಎಂದರು. ನಾನು
ಎದ್ದು ಕೊಠಡಿಯೊಳಗೆ ಹೋಗಿ ನನ್ನ ಬಟ್ಟೆಗಳನ್ನೆಲ್ಲಾ ಬಿಚ್ಚಿ, ಪಂಚೆ
ಉಟ್ಟು ಷರಟು ಹಾಕಿಕೊಂಡು ಬಂದೆ. ಅಷ್ಟು ಹೊತ್ತಿ ಗೆ ಯಾರೋ ಒಳ
ನಿಂದ ಬಿಸಿನೀರು ತಂದಿಟ್ಟರು. ಕೈಕಾಲು ಮುಖ ತೊಳದುಕೊಂಡೆ. ಇನ್ನು
ಅರ್ಥಗಂಟಿಯಲ್ಲ ಊಟವಾಯಿತು. ಪುನಃ ಹೊರಗೆ ಜಗುಲಿಯ ಮೇಲೆ
ಕುಳಿತುಕೊ೦ಡು ತಾಂಬೂಲ ಹಾಕಿಕೊಳ್ಳುತ್ತಾ ಮಾತನಾಡುತ್ತಿದ್ದೆವು.
ನನ್ನ ಸಂಚಾರದ ವಿಷಯವನ್ನು ಅವರಿಗೆ ವಿವರಿಸಿ ಹೇಳಿದೆ. ನಾನು ಅವರ
ಮನೆಯಲ್ಲ ಉಳಿದುಕೊಂಡದ್ದು ಅವರಿಗೆ ಬಹಳ ಸಂತೋಷಕ್ಕೆ ಕಾರಣ
ವಾಯಿತು. ಅದು ಅವರ ನಡೆನುಡಿಯಲ್ಲೇ ತೋರುತ್ತಿತ್ತು. ಮಾತನಾಡುತ್ತ
ಆಡುತ್ತ ಅವರ ವಿಷಯವನ್ನೂ ಸ್ವಲ್ಪ ತಿಳಿದುಕೊಂಡೆ... ಬಹಳ ನೆಮ್ಮದಿ
ವಂತರು. ನಾನೂರು ರೂಪಾಯಿ ಕಂದಾಯ ಕೊಡುತ್ತಾರಂತೆ. ಮನೆಯ
ತುಂಬಾ ಜನ; ಆಳುಕಾಳುಗಳು--ದನಕರುಗಳು ಯಾವುದರಲ್ಲೂ ಕೊರತೆ
ಯಿಲ್ಲ. ಮನೆಯನ್ನು ದೊಡ್ಡದಾಗಿ ಕಟ್ಟಿಕೊಂಡಿದ್ದರು. ಆ ಹಳ್ಳಿಗೆಲ್ಲಾ
ಅದೇ ದೊಡ್ಡದು. ಎಲಕ್ಕೂ ಮಿಗಿಲಾಗಿ ನನ್ನ ಮನಸ್ಸಿನಲ್ಲಿ ನಿಂತದ್ದು
ಅವರ ನಿಷ್ಕಪಟವಾದ ನಮ್ರತೆ. ಅದು ಆ ಜನರಿಗೆ ಬಹಳ ಸ್ವಾಭಾವಿಕ
ವೆಂದು ತೋರಿತು. ಒಟ್ಟಿನ ಅವರ ಮನೆಯಲ್ಲಿ ನನಗೆ ಬಹಳ ಉಪಚಾರ
ವಾಗುತ್ತೆ ಅಂದುಕೊಂಡೆ.
ಊಟವಾದ ಮೇಲೆ ಬಹಳ ಹೊತ್ತು ಮಾತನಾಡುತ್ತಿರಲಿಲ್ಲಿ. ದಾರಿ
ನಡೆದು ಬಂದುದರಿಂದ ಸ್ವಲ್ಪ ಆಯಾಸವಾಗಿತ್ತು. ಅವರಿಗೆ ಆ ವಿಷಯವನ್ನು
ತಿಳಿಸಿ ಕೊಠಡಿಯೊಳಗೆ ಹೋಗಿ ದೀಪವನ್ನು ಆರಿಸಿ ಮಲಗಿಕೊಂಡುಬಿಟ್ಟೆ.
೨
ಬೆಳಿಗ್ಯೆ ಎಚ್ಚರವಾದಾಗ ಸುಮಾರು ಆರೂವರೆ-ಏಳುಗಂಟೆ. ಇರ
ಬಹುದು. ಅಷ್ಟು ಹೊತ್ತಿಗಾಗಲೆ ನನ್ನ ಕೊಠಡಿಯ ಹೊರಗೆ ನೀರು
ಸಿದ್ದವಾಗಿತ್ತು ! ಮುಖ ತೊಳೆದುಕೊಂಡು ಕೊಠಡಿಯಲ್ಲೇ ಕುಳಿತಿದ್ದೆ.
ಕರಯುಪ್ಪನವರು ತಾವೇ ಕೈಯಲ್ಲ ಒಂದು ಬಟ್ಟಿಲು ಹಾಲನ್ನು ತೆಗೆದು
ಕೊಂಡು. ಬಂದರು. ಅವರ ಮನೆಯಲ್ಲಿ ಕಾಫಿ ಅಭ್ಯಾಸವಿಲ್ಲ! ನನಗೆ
ಹಾಲು ಅಭ್ಯಾಸವಿಲ್ಲ! ಹೇಗೊ--ಅವರು ಅಷ್ಟು ಆದರದಿ೦ದ ತಂದ
ನಾನು ಕೊಂದ ಹುಡುಗಿ ೨೧
ದ್ದನ್ನು ಬೇಡವೆನ್ನಬಾರದೆಂದು-ಕುಡಿದೆ. ಆ ಮೇಲೆ ಅವರನ್ನು ಅಲ್ಲೇ
ಕೂರಿಸಿಕೊಂಡು ನಾನು ಸಂಚಾರಮಾಡಿ ತಂದಿದ್ದ ಚಿತ್ರಗಸನ್ನೆಲ್ಲಾ
ತೋರಿಸಿ, ಅವುಗಳ ವಿಷಯವಾಗಿ ನಾನು ತಿಳಿದುಕೊ೦ಡಿದ್ದನ್ನು ಹೇಳಿದೆ.
ಕೇಳಿ ಅವರಿಗಾದ ಸಂತೋಷವನ್ನೂ ಆಶ್ಚರ್ಯವನ್ನೂ ನಾನು ವಿವರಿಸ
ಲಾಠೆ. ಅವರು ನನ್ನನ್ನು ನೋಡಿ "ಸ್ವಾಮೀ, ತಾವು ಒಪ್ಪೋದಾದ್ರೆ-
ಇಲ್ಲೇ ಹತ್ತಿರದಲ್ಲೇ ಒಂದು ದೇವಸ್ಥಾನ ಇದೆ--ರಂಗಪ್ಪನ ಗುಡಿ-ಬಹಳ
ಹಳೇದು ಸ್ನಾಮೀ; ಬಲು ಖಚಿತವಾಗಿದೆ! ಬಹಳ ದೂರಾನೂ ಇಲ್ಲ''
ಎ೦ದರು. ನನಗೆ ಕಿವಿ ನೆಟ್ಟಗಾಯಿತು.
" ಎಲ್ಲಿ? '' ಎಂದು ಕೇಳಿದೆ.
| ಇಲ್ಲೇ, ಇಲ್ಲಿಗೆ ಒಂದು ಹರಿದಾರಿ ದೂರ್ದಾಗಿದೆ ; ಅದೋ ನೋಡಿ
ಕಾಣೋಕಿಲ್ವೆ ಆ ಮರಡಿ ಬೆಟ್ಟ --ಅದರ ಬುಡ್ಡಾಗಿದೆ.''
ನನಗೆ ಬೇಲೂರಿನಲ್ಲಿ ತಿಗೆದಿದ್ದ ಚಿತ್ರಗಳಲ್ಲಿ ಕೆಲವಕ್ಕೆ ಟಿಪ್ಪಣಿ-ವಿವ
ರಣೆ ಬರೆಯುವುದಿತ್ತು. ಅಲ್ಲದೆ ಲಕ್ಷ್ಮಿಗೆ ಕಾಗದ ಬರೆಯಬೇಕಾಗಿತ್ತು !
ಸರಿ, ಹಾಗಾದರೆ ನಾಳೆ ಬೆಳಿಗ್ಯೆ ಅಲ್ಲಿಗೆ ಹೋಗಿ ಬರುತ್ತೇನೆ; ಈ
ವತ್ತು ಸ್ವಲ್ಪ ಬರೆಯುವ ಕೆಲಸವಿದೆ " ಎಂದು ಹೇಳಿದೆ.
" ತಮ್ಮ ಚಿತ್ತ--ಹಾಗೇ ಆಗಲಿ ” ಎಂದರು.
* * * *
ಆ ದಿನ ಟಿಪ್ಪಣಿ ವಿವರಣೆ ಬರೆಯುವುದರಲ್ಲೇ ಹನ್ನೆರಡು ಗಂಟೆಯಾಗಿ
ಹೋಯಿತು. ಊಟವಾದ ಮೇಲೆ ಲಕ್ಷ್ಮಿಗೆ ಕಾಗದ ಬರೆಯುವುದಕ್ಕೆ
ಕುಳಿತುಕೊಂಡೆ. ನನ್ನ ಸಂಚಾರದಲ್ಲಿ ಪುರಸತ್ತು ಸಿಕ್ಕಿದಾಗಲೆಲ್ಲಾ ಅವ
ಳಿಗೆ ಕಾಗದ ಬರೆಯುತ್ತಿದ್ದೆ. ಎಲ್ಲದರಲ್ಲೂ ಮುಕ್ಕಾಲುಪಾಲು ನನ್ನ
ಸಂಚಾರದ ವಿಷಯವೇ-- ನಾನು ನೋಡಿದ ದೇವಸ್ಥಾನಗಳು--ನೋಟ
ಗಳು ಅವುಗಳ ವರ್ಣನೆ ಇತ್ಯಾದಿ. ನನ್ನ ಸಂಚಾರದಲ್ಲಿ ಲಕ್ಷ್ಮಿಯ
ನೆನಪು ನಿತ್ಯವೂ ನನ್ನನ್ನು ಎಡೆಬಿಡದೆ ಹಿಂಬಾಲಸುತ್ತಿತ್ತು. ಎಷ್ಟೋ
ಸಾರಿ ಅಯ್ಯೊ ! ಈ ಸೊಬಗನ್ನು ನೋಡುವುದಕ್ಕೆ ನನ್ನ ಲಕ್ಷ್ಮಿ
ಇಲ್ಲವಲ್ಲಾ ಅವಳು ನನ್ನ ಸಮೀಪದಲ್ಲಿ ಇದ್ದಿದ್ದರೆ ಅವುಗಳ ಸೊಬಗು
ಇನ್ನೂ ಹೆಚ್ಚುತ್ತಿತ್ತು!: ಅಂದು ಕೊಂಡಿದ್ದೇನೆ. ಆ ದಿನ ನಾನು
ನಾಗವಳ್ಳಿಗೆ ಬಂದದ್ದು, ಅಲ್ಲಿ ಕರಿಯಪ್ಪನವರ ಆದರಣೀಯವಾದ
ಆತಿಥ್ಯ ಉಪಚಾರ-- ಅವರ ಮಕ್ಕಳು ಮರಿ ವಿಚಾರ ಎಲ್ಲಾ ಬರೆದು--
೨೨ ನಾನು ಕೊಂದ ಹುಡುಗಿ
ನಾಳೆ ಮರಡಿ ಬೆಟ್ಟಕ್ಕೆ ಹೋಗಬೇಕೆಂದಿರುವನ್ನೂ ತಿಳಿಸಿ ಆ ಮೇಲೆ
ನಮ್ಮ ನಮ್ಮ ಕೆಲವು ಮಾತುಗಳನ್ನು ಬರೆದು ಕಾಗದವನ್ನು ಮುಗಿಸಿದೆ.
ಆ ಹಳ್ಳಿ ಟಪಾಲು ಆಫೀಸು ಇಲ್ಲ; ಒಂದು ಟಪಾಲು ಪೆಟ್ಟಿಗೆ
ಮಾತ್ರ ಇದೆ; ವಾರಕ್ಕೆ ಎರಡು ಸಲವೋ ಮೂರು ಸಲವೋ ಬೇಲೂರಿಂದ
ಅಂಚೆಯವನು ಬಂದು ಕಾಗದಗಳನ್ನು ತೆಗೆದುಕೊಂಡುಹೋಗುತ್ತಾನೆ.
ವಿಚಾರಿಸಿದ್ದರಲ್ಲಿ ಆ ವಿಷಯ ತಿಳಿಯಿತು. ಆದರೆ ಟಪಾಲು ಪೆಟ್ಟಿಗೆ
ಎಲ್ಲಿತ್ತೋ ಗೊತ್ತಿರಲಿಲ್ಲ. ಆಳು ಯಾರಾದರೂ ಇದ್ದರೆ ಅವನ ಕೈಲಿ
ಕಾಗದವನ್ನು ಟಪಾಲು ಪೆಟ್ಟಿಗೆಗೆ ಕಳಿಸಬಹುದೆಂದು ಯೋಚಿಸಿ,
ಕೊಠಡಿಯಿಂದ ಹೊರಗೆ ಬಂದೆ. : ನಾನು ಹೊರಗೆ ಬಂದಾಗ ಕೊಡಡಿಗೆ
ಎದುರಾಗಿ ಸ್ವಲ್ಪ ದೂರದಲ್ಲಿ ಜಗುಲಿಯ ಕಂಭವನ್ನು ಒರಗಿಕೊಂಡು
ಒಬ್ಬ ಪ್ರಾ ಯದ ಹುಡುಗಿ ಕುಳಿತಿದ್ದಳು, ಯಜಮಾನರ ಮಗಳಿರಬಹು
ದೆಂದು ತೋರಿತು. ನಾನು ಹೊರಗೆ ಬಂದವನು ಆಳನ್ನು ಕಾಣದೆ, ಏನು
ಮಾಡಬೇಕೆಂದು ತೋಚದೆ ನಿಂತಿರಲು, ನಾನು ನೋಡಿದಾಕೆಯು ಎದ್ದು
ಬಂದು " ಏನು ಬುದ್ದೀ ಏನಾಗ್ಬೇಕು ಅಪ್ಪಣೆಯಾಗಲಿ'' ಎ೦ದು ಕೇಳಿ
ಸ್ವಲ್ಪ ಹಸನ್ಮುಖಿಯಾದಳು. ಆ ಹಳ್ಳಿಯ ಹುಡುಗಿಯ ನಯವನ್ನೂ
ಸರಳತೆಯನ್ನೂ ನೋಡಿ ನನಗೆ ಸಂತೋಷವಾಯಿತು. ನಾನು ಹೇಳಿದೆ--
"ಏನೂ ಇಲ್ಲವಮ್ಮಾ ; ಈ ಕಾಗದಾನ ಟಪಾಲಿಗೆ ಕಳಿಸಬೇಕಾ
ಗಿತ್ತು. ಆ ಪಟ್ಟಿಗೆ ಎಲ್ಲಿದೆಯೋ ನಂಗೊತ್ತಿಲ್ಲ. ಹೇಳ್ತೀಯಾ?''
ಆಕೆ ನಗುತ. ನನ್ನ ಕಡೆಗೆ ಎರಡು ಕಣ ಇಟ್ಟು -
ಅದ್ಧಾಕ್ಬುದ್ದೀ ಓಟೊಂದು ತೊಂದೆ, ತಮ್ಗೆ! ಆ ಕಾದ್ಗಾನ
ಇಲ್ಕೊಡಿ ನನ್ನೊಡ್ಯಾ-ನಾನೋಗಿ ಹಾಕ್ತವ್ನಿ" ಅಂದಳು.
ಅವಳ ಮಾತುಗಳನ್ನು ಕೇಳಿ, ಅವಳೊಡನೆ ಇನ್ನೂ ನಾಲ್ಕು ಮಾತು
ಗಳನ್ನಾಡಬೇಕೆನ್ನಿಸಿತು! -
"ನಿನಗೆ ತೊಂದರೆ ಅಲ್ವೆ ?'' ಎಂದು ಕೇಳಿದೆ.
"ಅಯ್ದೋ! ಬುದ್ದೀ! ಅದ್ಯಾಂಗೆ ತೊಂದ್ರೆ ? ತಾವು ದೊಡ್ಡೊರು!''
"ಷಹಾಗಾದರೆ ನಿನಗೆ ತೊಂದರೆ ಇಲ್ಲವಷ್ಟೆ?".
"ಇಲ್ಲ ನನ್ನೊಡ್ಯಾ [ ಇಲ್ಕೊಡಿ ಆ ಕಾದ್ಗಾನ
-ಹೀಗೆಂದು ಹೇಳ ಎರಡು ಕೈಗಳನ್ನೂ ನೀಡಿದಳು , ನಾನು ಕಾಗದ
ವನ್ನು ಅವಳ ಕೈಗೆ ಕೊಟ್ಟು " ನಿನ್ನ ಹೆಸರೇನು ?'' ಎಂದು ಕೇಳಿದೆ.
ನಾನು ಕೊಂದ ಹುಡುಗಿ ೨೩
"ನನ್ನೆಸ್ರು ಚೆನ್ನಿ ' ಎಂದು ಸ್ವಲ್ಪ ನಾಚಿಕೆಯಂದ ಹೇಳಿ ಹೂರಟು
ಹೋದಳು.
ಸೊಗಸಾದ ಹೆಸರು ಅಂದುಕೊಂಡೆ. ಚೆನ್ನಿ ಚೆನ್ನಾಗಿ ಮಾತನಾಡಿ
ದಳು. ಅವಳ ಮುಖದಲ್ಲಿನ ಆ ನಮ್ರಭಾವ--ಕಣ ಪ್ಲಗಳಲ್ಲಿ ಆಕೆಯ ತಿಳಿ
ಹೃದಯದ ನಿರ್ಮಲ ಛಾಯೆ--ಮಾಶುತಳಲ್ಲಿ ಹಳ್ಳಿ ಗಾಡಿನ ಒಂದು ವಿಧ
ವಾದ ಲಾಲಿತ್ಯ ಇವು ಪ್ರ ತಿಯೊಂದೂ ನನ್ನ ಮನಸ್ಸಿನಲ್ಲಿ ನಾಟಿದವು.
* * * *
ಆ ದಿನ ಮದ್ಯಾನ್ಹ ಊಟವಾದ ಮೇಲೆ ಸ್ವಲ್ಪ ನಿದ್ದೆ ಮಾಡಿದೆ
ಎಚ್ಚರವಾದಾಗ ಸುಮಾರು ನಾಲ್ಕುಗಂಟೆ ಇರಬಹುದು... ಮುಖ ತೊಳೆದು
ಕೊಳ್ಳುವುದಕ್ಕೆ೦ದು ಕೊಠಡಿಯಿಂದ ಹೊರಗೆ ಬಂದೆ. ಪುನಃ ಅದೇ ಹುಡುಗಿ,
ನಾನು ಮೊದಲು ನೋಡಿದ ಸ್ಪಳದಲ್ಲೇ ಕಂಭವನ್ನು ಒರಗಿಕೊಂಡು
ಕುಳಿತಿದ್ದಳು... ನಾನು ಹೊರಗೆ ಬಂದುದನ್ನು ನೋಡಿದೊಡನೆಯೇ
ಚಾಚಿದ ಕಾಲುಗಳನ್ನು ಮುದುರಿಕೊಂಡು, ಏನೋ ಒಂದು ವಿಧವಾದ
ಅನ್ಯಮನಸ್ಕತೆಯಿಂದ ಸೆರಗಿನ ತುದಿಯಲ್ಲಿ ದಾರದ ಎಳೆಯನ್ನು ಕೀಳ
ಲಾರಂಭಿಸಿದಳು. ನನಗೆ ನೀರು ಬೇಕಾಗಿತ್ತು. ಆಲ್ಲಿ ಕೇಳಲು ಮತ್ತ್ಯಾರೂ
ಇರಲಿಲ್ಲ. ಆಗಲೆ ಒಂದು ಸಲ ಆಕೆಯೊಡನೆ ಮಾತನಾಡಿದ್ದೆನಷ್ಟೆ ; ಈಗ
ಅದರ ಸಲಿಗೆಯಿಂದ ಅವಳನ್ನೇ ಕುರಿತು " ಚೆನ್ನಮ್ಮಾ, ಸ್ವಲ್ಪ ನೀರು
ಬೇಕಿತ್ತು ಮುಖಾ ತೊಳೆಯೋಕೆ'' ಅಂದೆ. “ಆಗ್ಬೈದು ನನ್ನೊಡ್ಯಾ''
ಎಂದು ಮುಗುಳ್ನಗೆ ನಗುತ್ತ ಏನೋ ಒಂದು ಸಡಗರದಿಂದ ಒಳಕ್ಕೆ,
ಹೋದಳು. ಚೆನ್ನಮ್ಮ ಹುಟ್ಟುತ್ತಲೇ ಮುಗುಳ್ನಗೆಯನ್ನು ತಂದಿರಬೇ
ಕೆಂದು ತೋರಿತು. ನಾನು ನೋಡಿದಾಗಲೆಲ್ಲಾ ಆಕೆಯ ಆ ಮುಗ್ಧವಾದ
ಮುಖವು ತಿಳಿನಗೆಯಿಂದ ಬೆಳಗುತ್ತಿತ್ತು. ಪಟ್ಟಣಗಳಲ್ಲಿ ಯುವತಿಯರ
ಮಂದಹಾಸವನ್ನು ಅನೇಕ ಸಂದರ್ಭಗಳಲ್ಲಿ ನೋಡಿದ್ದೇನೆ. ಆದರೆ ಅದು
ಸಾಧಾರಣವಾಗಿ ದೊಡ್ಡ ದೊಡ್ಡ ಮರಗಳನ್ನುಳಿಸಿ ಧೂಳೆಬ್ಬಿಸುವ
ಬಿರುಗಾಳಿಯಂತೆ, ಮನಸ್ಸನಲ್ಲಿ ಗರ್ಜಿಸುವ ಅಲೆಗಳನ್ನೆಬ್ಬಿಸಿ ಅಲ್ಲೋಲ
ಕಲ್ಲೊಲಮಾಡುವ ಮುಗುಳ್ನಗೆ! ಚೆನ್ನಮ್ಮನ ಮುಗುಳ್ನಗೆ ಅಂತಹು
ದಲ್ಲ. ಅದು ಮೃದುವಾಗಿ ಅಲ್ಲಿ ಸುಳಿದು ಇಲ್ಲಿ ಸುಳಿದು, ಚಿಗುರುಗಳಲ್ಲಿ
ತೂರಿ, ಹೂ ಗೊಂಚಲನ್ನು ಹಾಯ್ದು, ಪರಿಮಳವನ್ನು ಹೊತ್ತು ತರುವ
ತಂಗಾಳಿಯಂತೆ ಹೃದಯದಲ್ಲಿ ಚಿಕ್ಕ ಚಿಕ್ಕ ತರಂಗಮಾಲೆಗಳನ್ನು ಹುಟ್ಟಿ
೨೪ ನಾನು ಕೊಂದ ಹುಡುಗಿ
ಸುವ ಸರಳವಾದ ಮುಗುಳ್ನಗೆ! ಬಿರುಗಾಳಿಯಲ್ಲಿ ಸಿಕ್ಕರೆ ಬರೀಧೂಳು!
ಕಣ್ಣಿಗೆ, ಬಾಯಿಗೆ ಮಣ್ಣು ! ಅದರಲ್ಲಿ ಸೌರಭವಿಲ್ಲ. ಈ ಯು ಹುಡು
ಗಿಯ ನಗುವಿನಲ್ಲೋ? 1 ಅದು "ಮಲ್ಲಿಗೆಯ "ಹುವ್ವಿನ ನ ಹಾಗೆ! ಮಲ್ಲಿ
ಗೆಯ ಹೂವಿನದು ಎ೦ತಹ ಶುಭ್ರತೆ! ಎಣೆಯಿಲ್ಲದ. ಪರಮಳ! ......
ಇಷ್ಟು ಯೋಚನೆ ಆಗಿದ್ದಾಗ ಚನ್ನಮ್ಮ ನೀರು. ತಂದಳು. ಕೈಕಾಲು
ಮುಖ ತೊಳೆದುಕೊಂಡು ಕೊಠಡಿಗೆ ಹೋಗುವುದರೊಳಗೆ ಚೆನ್ನಮ್ಮನೇ
ಸ್ವಲ್ಪ ತಿಂಡಿ, ಒಂದು ಬಟ್ಟಲಲ್ಲಿ ಹಾಲು ತಂದಿಟ್ಟು ಹೋದಳು. ತಿಂಡಿ
ಮುಸಿಕೊಂಡು ಹಾಗೆಯೇ ಸುತ್ತಾಡಿಕೊಂಡು ಬರೋಣವೆಂದು ನನ್ನ
ಕೊಳಲನ್ನೂ ಸಣ್ಣದೊಂದು. " ಕ್ಯಾಮರಾ''ವನೂ ತೆಗೆದುಕೊಂಡು
ಕೊಠಡಿಯನ್ನು ಬಿಟ್ಟೆ. ಹೊರಗೆ ಬಂದಾಗ ಚೆನ್ನಮ್ಮ । ಅದೇ ಸ್ಥಳ
ದಲ್ಲೇ ಕುಳಿತಿದ್ದಳು. ನಾನು ಮನೆಯನ್ನು ಬಿಟ್ಟು ನಾಲ್ಕಾರು ಮಾರು
ಬಂದೆ. ಎತ್ತ ಕಡೆ ಹೋಗೋಣ ಎಂದು ಯೋಜನೆಯಾಯಿತು. ಮನೆಯ
ಹಿಂದೆ ಅವರ ತೋಟ ಇದೆ ಎಂದು ಕೇಳಿದ್ದುದು ಜ್ಞಾಪಕಕ್ಕೆ ಬಂದು
ಅಲ್ಲಗೇ ಹೋಗೋಣವೆಂದು ನಿರ್ಧರಿಸಿದೆ. ಆದರೆ ದಾರಿ ಗೊತ್ತಿಲ್ಲ. ಏನು
ಮಾಡುವುದು ಎ೦ದು ಯೋಚಿಸುತ್ತ ಚೆನ್ನಮ್ಮನನ್ನೇ ಕೇಳಿಬಿಡುವುದು
ಎ೦ದುಕೊಂಡು ತಿರುಗಿ " ಏನಮ್ಮಾ, ನಿಮ್ಮ ತೋಟ ಇದೆಯಂತಲ್ಲ,
ಅದನ್ನ ನೋಡೋಣಾಂತ ಇದ್ದೇನೆ. ದಾರಿಯಾವುದು ಹೇಳ್ತೀಯಾ?"
ಎಂದು ಕೇಳಿದೆ. ಆಕೆ "ಆಗಲಿ ನನ್ನೊಡ್ಯಾ '' ಎಂದು ಎದ್ದುಬಂದು
ನನ್ನನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡುಹೋಗಿ, ಒಂದು ಕಾಲು
ದಾರಿಯನ್ನು ತೋರಿಸಿ " ಇದೇ ನನ್ನೊಡ್ಯಾ ಹಾದಿ ನಮ್ತೋಟಕ್ಕೆ "
ಎಂದು ಹೇಳಿದಳು. "ಸರಿ, ಇನ್ನು ಹೋಗುತ್ತೇನೆ'' ಎಂದು ಹೇಳಿ
ಹೊರಟೆ. ಆ ಕಾಲುಹಾದಿ ಹಿತ್ತಲ ತರಕಾರಿ ತೋಟವನ್ನು ಬಳಸಿಕೊಂಡು
ದೊಡ್ಡ ತೋಟಕ್ಕೆ ಹೋಗಿತ್ತು. ಆ ದಾರಿಯಲ್ಲಿ ಸುಮಾರು ಇಪ್ಪತ್ತು
ಮಾರು ಹೋಗಿದ್ದೆ. ಆಗ ಗಾಳಿ ಬಂದು ನಾನು ಹೊದೆದುಕೊಂಡಿದ್ದ
ಧೋತ್ರದ ತುದಿ ತರಕಾರಿ ತೋಟದ ಬೇಲಿಗೆ ಸಿಕ್ಕಿಕೊಂಡಿತು. ಬಿಡಿಸಿ
ಕೊಳ್ಳುವುದಕ್ಕಾ ಗಿ ಹಿಂತಿರುಗಿದೆ. ಚೆನ್ನಮ್ಮ, ನಾನು ಅವಳನ್ನು ಎಲ್ಲಿ
ಬಿಟ್ಟಿದ್ದೆನೋ ಅಲ್ಲೇ ನಿಂತಿದ್ದಳು. ನಾನು ದಾರಿತಪ್ಪೇನೆಂಬ ಶಂಕೆ
ಯೇನೋ ಅವಳಿಗೆ ಅಂದುಕೊಂಡೆ.
ಇನ್ನು ಸುಮಾರು ನೂರುಗಜ ಹೋಗುವುದರಲ್ಲಿ ತೋಟ ಸಿಕ್ಕಿತು.
ನಾನು ಕೊಂದ ಹುಡುಗಿ ೨೫
ಅದು ಬಹಳ ಸೊಗಸಾದ ಶೋಟ. ವಿಶೇಷವಾಗಿದ್ದುದು ಅಡಿಕೆ-ತೆಂಗು.
ಇನ್ನು ಕೆಲವು ಹಣ್ಣು ಹಂಪಲು ಗಿಡಗಳೂ ಇದ್ದವು. ಸ್ವಭಾವತಃ
ರಮ್ಯವಾದ ಆ ತೋಟದ ಸೊಬಗು ಅಂದು ಸಾಯಂಕಾಲದ ಸೂರ್ಯನ
ಭಂಗರದ ಕಾಂತಿಯಲ್ಲಿ ನೂರ್ಮಡಿಯಾಗಿತ್ತು. ತೋಟವನ್ನು ಹೊಕ್ಕು
ಹತ್ತಾರು ಹೆಜ್ಜೆ ಹೋಗುವುದರಲ್ಲಿ ಒಂದು ವಿಶಾಲವಾದ ಬಾವಿ ಸಿಕ್ಕಿತು.
ಅದು. ಯಾತದ ಬಾವಿ. ಒಂದು ಪಕ್ಕದಲ್ಲಿ ನೀರಿನವರೆಗೂ ಇಳಿದು
ಹೋಗುವುದಕ್ಕೆ ಮೆಟ್ಟಲುಗಳಿದ್ದವು. ಬಾವಿಯ ಸುತ್ತಲೂ ಸುಮಾರು
ಎರಡು ಅಡಿ ಎತ್ತರ ಕಲ್ಲಿನ ಗೋಡೆ. ನಾನು ಹೋಗಿ ಆ ಗೋಡೆಯ ಮೇಲೆ
ಕುಳಿತುಕೊಂಡು ತೋಟದ ಸೊಬಗನ್ನು ಕುಡಿಯಲಾರಂಭಿನಿದೆ.
೩
ಸ್ವಲ ಕಾಲ ನನ ಮನಸ್ಸು ಆ ತೋಟದ ಸೊಬಗಿನ ಪಾನದಿಂದ
ಮುದೆವೇರಿ ಯಾವುದೋ ವರ್ಣಿಸಲಾಗದ ಸುಖವನ್ನನುಭವಿಸಿತು.
ತೋಟದ ತಂಪು ಗಾಳಿಯಲ್ಲಿ ಬೆರೆತು ಹಾಯ್ದು ಹಾಯ್ದು ಬರುತ್ತಿತ್ತು.
ಬಾವಿಯ ಸುತ್ತಲೂ ತರತರದ ಹೂವಿನ ಗಿಡಗಳಿದ್ದವು. ಅವುಗಳ ಪರಿ
ಮಳವೆಲ್ಲಾ ತಂಗಾಳಿಯಲ್ಲಿ ಸೂರೆಯಾಗುತ್ತಿತ್ತು. ನಾನಾ ಜಾತಿಯ
ಪಕ್ಷಿಗಳ ಕಂಠ ಆಕಾಶದಲ್ಲಿ, ಗಿಡಗಳಲ್ಲಿ, ಮರಗಳು ಎಲ್ಲೆಲ್ಲಿಯೂ ಕೇಳಿ
ಬರುತ್ತಿತ್ತಿತ್ತು. ನನ್ನ ಹೃದಯವುಪಕ್ಷಿಗಳೊಡನೆ ಪಕ್ಷಿಯಾಯಿತು.
ಹೂಗಳೊಡನೆ ಹೂವಾಯಿತು. ಕವಿಗಳು ಕಾಣದ ಸ್ವರ್ಗವನ್ನು ಏಕೆ
ವರ್ಣಿಸುತ್ತಾರೆಯೋ ಅನ್ನಿಸಿತು. ಎಲ್ಲಿ ಸುಖವೋ ಅಲ್ಲೇ ಸ್ವರ್ಗ! .....
ಹೃದಯವು ಆನಂದದಿಂದ ತುಂಬಿ ಹರಿಯಿತು. ಅದರ ಭರದಲ್ಲಿ ಕೊಳಲನ್ನು
ನುಡಿಸಲಾರಂಭಿಸಿದೆ. ಕೊಳಲಿನ ಒಂದು ಸ್ಪರವು ನೂರು ಸ್ವರವಾಗಿ ತೋಟ
ವನ್ನೆಲ್ಲಾ ತುಂಬಿತು. ನನ್ನ ಕೊಳಲಿನ ಗಾನಕ್ಕೆ ನಾನೇ ಉಬ್ಬಿಹೋದೆ.
ಒಂದೆರದು ಕೀರ್ತನೆಗಳನ್ನು ಕೊಳಲಲ್ಲಿ ನುಡಿಸಿ ಆ ಮೇಲೆ ಬಾಯಲ್ಲಿ
ಹೇಳುವುದಕ್ಕಾರಂಭಿಸಿದೆ. ತೋಟದಲ್ಲೆಲ್ಲಾ ನಾನೊಬ್ಬನೇ ಎಂಬ ಧೈರ್ಯ
ದಿ೦ದ ಬಾಯಿಗೆ ಬಂದಂತೆ ಹಾಡತೊಡಿಗಿದ. ಇದ್ದಕ್ಕಿದ್ದ ಹಾಗೆಯೇ ನನ್ನ
ಹಿಂದೆ " ಗುಳು ಗುಳು'' ಎಂಬ ಶಬ್ದ ವಾಯಿತು. ನಾನು ತ ತಟ್ಟನೆ ಹಾಡು
ವುದನ್ನು ನಿಲ್ಲಿಸಿ ತಿರುಗಿ ನೋಡಿದೆ. ನೋಡಿದರೆ ಆ ಹುಡುಗಿ ಚೆನ್ನಿ!
ಮೆಟ್ಟಿಲುಗಳ ನ ಮೂಲಕ ಕೆಳಗೆ ನೀರಿಗಿಳಿದು, ಕೊಡದಲ್ಲಿ ನೀರು ತುಂಬು
೨೬ ನಾನು ಕೊಂದ ಹುಡುಗಿ
ತ್ತಿದ್ದಳು. ನಾನು ತಿರುಗಿ ನೋಡಿದಾಗ ಅವಳು ತಲೆಯನ್ನೆತ್ತಿ ನನ್ನ
ನೋಡುತ್ತಿದ್ದಳು. ನನಗೆ ಬಹಳ ನಾಚಿಕೆಯಾಯಿತು. ನಾನು ಪಟ್ಟಣ
ನಾಗರಿಕನೆಂದು ಇವರು ಗೌರವವನ್ನಿಟ್ಟುಕೊಂಡಿದ್ದಕ್ಕೂ, ಈಗ ನಾನು
ಗೊಲ್ಲರ ಹುಡುಗನಂತೆ ಕೊಳಲೂದುತ್ತ ಬಾಯಿಗೆ ಬಂದಂತೆ ಅರಚು
ತ್ತಿದ್ದುದಕ್ಕೂ ಸರಿಹೋಯ್ತು! ಅಂದುಕೊಂಡೆ. ನಾನು ಮೆಟ್ಟಲು
ಗಳ ಕಡೆಗೆ ಬೆನ್ನು ತಿರುಗಿಸಿಕೊಂಡು ಕುಳಿತಿದ್ದುದರಿಂದ ಆಕೆ ಬಂದದ್ದು
ತಿಳಿಯಲ್ಲ. ನನ್ನ ಸಂಗೀತದ ಭರದಲ್ಲಿ ಆಕೆಯ ಕೈಬಳೆಗಳ ಸದ್ದಾಗಲಿ,
ಕಾಲಂದುಗೆಯ ಸದ್ಧಾಗಲಿ ಕೇಳಿಸಲಿಲ್ಲ, ಅಂತು ಆಗಿನ ನನ್ನ ಸ್ಥಿತಿ
ಬಹಳ ನಾಚಿಕೆಗೆ ಕಾರಣವಾಯಿತು. ಒಂದು ಕ್ಷಣ ನಾನೇ " ಏನಾಯ್ತು
ಬಿಡೋ ! '' ಅಂದುಕೊಂಡೆ. ಆದರೂ ಮನಸ್ಸು ಸಮಾಧಾನವಾಗ
ಲೊಲ್ಲದು. ನಗು ಬರುವ ಹಾಗಾಯಿತು. ಕೊಳಲನ್ನು ಪಕ್ಕದಲ್ಲಿಟ್ಟು
"ಕ್ಯಾಮರ" ವನ್ನು ನನ್ನ ಕೈಗೆ ತೆಗೆದುಕೊಂಡು ಅದನ್ನು ನೋಡುವವನಂತೆ
ನಟಿಸಿದೆ. ಆಕೆ ಕೊಡೆದಲ್ಲ ನೀರು ತುಂಬಿಕೊಂಡು ಮೆಟ್ಟಿಲುಗಳನ್ನು
ಒಂದೊಂದಾಗಿ ಹತ್ತಿಬಂದಂತೆ ಬೋಧೆಯಾಯಿತು. ಮೆಟ್ಟಿಲುಗಳನ್ನೆಲ್ಲಾ
ಹತ್ತಿದ ಮೇಲೆ ಆಕೆಯ ಕಾಲು ಸಪ್ಪಳ ಕೇಳಿಸಲಿಲ್ಲ. ನನಗೆ ಆಕೆ ಎಷ್ಟು
ಹೊತ್ತಿಗೆ ಹೊರಟು ಹೋಗುತ್ತಾಳೋ ಅನ್ನಿಸಿತು. ಕಾಲು ಸಪ್ಪಳದ ಬದಲು
ಕೈಬಳೆಗಳ ಸದ್ದು ಕೇಳಿಸಿತು. ಪುನಃ ಆಕೆಯ ಮುಖವನ್ನು ನೋಡು
ವುದಕ್ಕೆ ನಾಚಿಕೆಯಾಯಿತು! ಆದರೂ ತಿರುಗಿ ನೋಡಿದೆ! ಆಕೆ ಚೆನ್ನಾಗಿ
ಬೆಳಗಿದ್ದ ಎರಡು ಹಿತ್ತಾಳೆ ಕೊಡಗಳಲ್ಲಿ ನೀರು ತುಂಬಿಕೊಂಡು, ಮೆಟ್ಟಿಲು
ಗಳನ್ನೆಲ್ಲಾ ಹತ್ತಿಬಂದು ಅವುಗಳನ್ನು ಕೊಳದ ಸುತ್ತಲೂ ಇದ ಕಟ್ಟೆಯ
ಮೇಲೆ ಇಟ್ಟಿದ್ದಳು. ಈ ಸಮಯದಲ್ಲಿಯೇ ನಾನು ಅವಳನ್ನು ಪುನಃ
ನೋಡಿದ್ದು. ನನ್ನ ವಿಚಿತ್ರ ವಾದ ಸಂಗೀತದಿಂದ ಉಂಟಾಗಿದ್ದ ನಗು
ಇನ್ನೂ ಆಕೆಯ ಮುಖದ ಮೇಲೆ ಸುಳಿಯುತ್ತಿತ್ತು. ನನಗೆ ಬಹಳ ನಾಚಿಕೆ
ಯಾಯತು. ಮುಖವನ್ನು ತಿರುಗಿಸಿಕೊಂಡು ಕುಳಿತಿದ್ದವನು ಎದ್ದೆ.
ಅತೆ ಏನೋ ಮಾತನಾಡಿದ ಹಾಗಾಯಿತು. ನನ್ನ ಮನಸ್ಸಿನ ಗಲಭೆ
ಯಲ್ಲಿ ಅದು ಏನು ಬಂದು ತಿಳಿಯಲಿಲ್ಲ. ಪುನಃ ಆಕೆಯ ಕಡೆಗೆ ತಿರುಗಿ
" ಏನಮ್ಮಾ " ಎಂದು ಕೇಳಿದೆ. ಆಕೆ " ಪದಾ ಹೇಳೊದ್ಯಾಕ್ಬಿಟ್ರಿ
ನನ್ನೊಡ್ಯಾ? "ಎಂದು ಕೇಳಿದಳು. ಆಕೆಯ ಈ ಪ್ರಶ್ನೆಯಿಂದ ನನ್ನ
ಮನಸ್ಸಿನಲ್ಲಾದ ಕಳವಳವೂ ಅವಮಾನವೂ ದೇವರಿಗೇ ಗೊತ್ತು! ಏನು
ನಾನು ಕೊಂದ ಹುಡುಗಿ ೨೭
ಹೇಳಬೇಕೋ ಕೂಡಲೆ ಗೊತ್ತಾಗದೆ " ಆ-ಊ'' ಎಂದು ಉಪಚಾರಕ್ಕೆ
ಹಲ್ಲುಕಿರಿದು ಆಮೇಲೆ "ಮುಗಿದುಹೋಯ್ತಮ್ಮಾ" ಎಂದೆ. ಆಕೆ
ಕೇಳಿದ ಪ್ರಶ್ನೆ ಅಪಹಾಸ್ಯವಾಗಿ ತೋರಿತಾದರೂ ಅದರಿಂದ ನನಗೆ ಸಿಟ್ಟು
ಬರಲಿಲ್ಲ. ಸಿಟ್ಟು ಏಕೆ ಬರಬೇಕು! ನಾನು ಮಾಡಿದ್ದು ಬೆಪ್ಪು ಕೆಲಸ!
ನನ್ನ ಆಗಿನ ಮನಸ್ಸಿನ ಸ್ಥಿತಿಯಲ್ಲಿ ಅದು ಅಪಹಾಸ್ಯವಾಗಿ ತೋರಿರ
ಬೇಕೇ ಹೊರತು, ನಿಜವಾಗಿಯೂ ಹಸನ್ಮುಖಿಯಾದ ಈ ಹಳ್ಳಿಯ
ಮುಗ್ಧೆಗೆ ನನ್ನನು ಹಾಸ್ಯಮಾಡುವ ಅಭಿಪ್ರಾಯವಿರಲಾರದು ಎಂದು
ತೋರತು. ಹೇಗೋ ಆದದ್ದು ಆಗಿಹೋಯಿತು ಇನ್ನು. ಈ ಜಾಗ
ಬಿಡೋಣ ಅಂದುಕೊಂಡು, ಕೊಳಲನ್ನೂ ಕ್ಯಾಮರವನ್ನೂ ಕೈಗೆ ತೆಗೆದು
ಕೊಂಡು ಒಂದೆರಡು ಹೆಜ್ಜೆ ಮುಂದಕ್ಕಿಟ್ಟೆ. ಅಷ್ಟರಲ್ಲೇ " ನನ್ನೊಡ್ಯಾ"
ಎ೦ದು ಕರೆದಳು. " ಪುನಃ ಇದೇನು ನನ್ನೊಡ್ಯಾ " ಎಂದು ತಿರುಗಿದೆ.
ಆಕೆ ತುಂಬಿದ ಒಂದು ಕೊಡವನು ನ್ನ ತಲೆಯಮೇಲೆ ವತ್ತಿ ಇಟ್ಟು
ಕೊಳುತ್ತಾ ಇದ್ದಛು ಇನ್ನೊ ೦ದು ಕಟ್ಟೆಯ ಮೇಲೆಯೇ ಇತ್ತು. ನಾನು
ತಿರುಗಿದನ್ನು ನೋಡಿ ಆ ಬಿಂದಿಗೆಯನ್ನು ತೋರಿಸುತ್ತಾ " ಬುದ್ದೀ,
ಈ ಬಿಂದಿಗೇನ ಒಸಿ ಎತ್ತಿಕೊಡ್ತೀಋಆ?" ಎಂದು ನಾಚಿಕೆಯಿಂದಲೂ
ಸಲ್ಪ ಸಂಕೋಚದಿಂದಲೂ ಕೇಳಿದಳು. ನಾನು "ಓ, ಅಗತ್ಯವಾಗಿ ''
ಎಂದು ಹೇಳಿ, ಕೈಲಿದ್ದ ಕ್ಯಾಮರಾವನ್ನೂ ಕೊಳಲನ್ನೂ ಕೆಳಗಿಟ್ಟು,
ಆ ಬಿಂದಿಗೆಯನ್ನು ಎತ್ತಿ ಅವಳ ಸೊಂಟದ ಮೇಲಿಟ್ಟೆ. ನಾನು ಇಷ್ಟು
ಮಾಡಿದ್ದು ಅವಳಿಗೆ ಬಹಳ ಅಗಾಧವಾಗಿ ಕಂಡಿರಬೇಕು. ಅವಳ ಮುಖದ
ಮೇಲೆ ಬಹಳ ಸಂತೋಷ ಕಂಡುಬಂತು. ಮನೆಯ ಹಾದಿಯನ್ನು ಹಿಡಿದು
ಮೆಲ್ಲಗೆ ನಾಲ್ಕಾರು ಹೆಜ್ಜೆ ಹೋದಳು. ತುಂಬಿದ ಕೊಡಗಳ ಭಾರಕ್ಕೆ
ಬಳುಕುತ್ತ ಹೋಗುತ್ತಿದ್ದ ಆ ತುಂಬುಯೌವನವು ಅಂದಿನ ಸಾಯಂಕಾಲದ
ಸೂರ್ಯನ ಭಂಗಾರದ ಬೆಳಕಿನಲ್ಲಿ ಅತ್ಯಂತ ಮನೋಹರವಾಗಿ ಕಂಡಿತು.
ಕೂಡಲೆ ನ ನನ್ನ ಮನಸ್ಸಿನಲ್ಲಿ ಆಕೆಯ ಆ ನಿಲುವಿನಲ್ಲಿ ಒಂದು ಫೋಟೋ
ತೆಗೆಯಬೇಕೆಂದು ಆಸಯಾಯಿತು ಕ್ಯಾಮರಾವನ್ನು ಸಿದ್ದಮಾಡಿ
ಕೊಂಡು, ಹುಡುಗಿ ಏನು ತಿಳಿದುಕೊಂಡಾಳು ಎ೦ಬ ಯೋಚನೆ ಸಹ
ಇಲ್ಲದೆ "ಚೆನ್ನಮ್ಮಾ" ಎಂದು ಕರೆದೆ. ಆಕೆ ಭಾರದ ಜೋಕಿನಲ್ಲಿಯೇ
ಮೆಲ್ಲಗೆ ತಿರುಗಿ ”ಕರೆದರಾ ನನ್ನೊಡ್ಯಾ '' ಎಂದು ಕೇಳಿದಳು. ನಾನು
"ಹೂ" ಎಂದು ಅವಳ ಸಮೀಪಕ್ಕೆ ಹೋಗಿ " ತಾಯೀ, ನೀನು ಒಂದು
೨೮ ನಾನು ಕೊಂದ ಹುಡುಗಿ
ಕ್ಷಣ ಹಾಗೇ ನಿಂತಿರುವೆಯಾ |!” ಎಂದು ಕೇಳಿದೆ. ಅವಳಿಗೆ ಸ್ವಲ್ಪ
ಆಶ್ಚರ್ಯವಾಗಿರಬೇಕು. ಮುಖದಲ್ಲಿ ಅದರ ಚಿಹ್ನೆಯನ್ನು ತೋರುತ್ತ,
ಹೂ ಬಿಸಿಲಿಗೆ ಎದುರಾಗಿ ಬಳುಕಿ ನಿ೦ತಳು. ಅವಳ ಮುಖದ ಮೇಲೆ
ಚ್ಯುತಿಯೇ ಇಲ್ಲದೆ ಆ ಎಳೆನಗು, ಸ್ವಲ್ಪದರಲ್ಲಿ ಮರೆಯಾಗುವುದರಲ್ಲಿದ್ದ
ಚಿನ್ನದ ಕಿರಣಗಳಲ್ಲಿ ಬಹಳ ಸುಖವಾಗಿ ಬೆರೆಯುತ್ತಿತ್ತು. ನಾನ
ಫೋಟೋ ತೆಗೆದು "ಇನ್ನು ನೀನು ಹೊರಡಮ್ಮಾ '' ಎ೦ದೆ. ಆಕೆ
ಕುತೂಹಲದಿಂದ " ಅದೇನ್ಮಾಡಿದ್ರಿ ಬುದ್ದೀ? '' ಎಂದು ಕೇಳಿದಳು.
ಆಕೆಗೆ ತಿಳಿಯುವ ಹಾಗೆ ಹೇಳುವುದು ಹೇಗೆ? " ನಾಳೆ ಹೇಳುತ್ತೇನೆ ”
ಎ೦ದೆ. ಆಕೆ ತಿರುಗಿ ನಿಧಾನವಾಗಿ ಮನೆಯ ಕಡೆ ನಡೆದು ಹೋದಳು.
೪
ಆ ರಾತ್ರೆ ಊಟವಾದ ಮೇಲೆ ಕೊಠಡಿಗೆ ಹೋಗಿ ಹಾಸಿಗೆಯ
ಮೇಲೆ ಮಲಗಿಕೊಂಡೆ. ಬೇಗ ನಿದ್ದೆ ಬರಲಿಲ್ಲ. ಸಾಯಂಕಾಲ ತೋಟ
ದಲ್ಲಿ ನಡೆದ ವಿಷಯ ಇನ್ನೂ ಮನಸ್ಸಿನಲ್ಲಿ ಇತ್ತು. ನನ್ನಷ್ಟಕ್ಕೆ ನಾನೇ
ನಕ್ಕು--ಲಕ್ಷ್ಮಿ ಗೆ ಈ ವಿಷಯ ಹೇಳಿದರೆ ಏನಂತಾಳೋ! ಎಷ್ಟು ನಗು
ತ್ತಾಳೋ!-ಟಂದುಕೊಂಡೆ. ನನ್ನ ನಗು ಇನ್ನೂ ಹೆಚ್ಚಿತು.
* * * *
ಹಿಂದಿನ ರಾತ್ರೆ ನಿದ್ದೆ ಮಾಡಿದಾಗ ಬಹಳ ಹೊತ್ತಾಗಿತ್ತೆ೦ದು ತೋರುತ್ತೆ.
ಬೆಳಿಗ್ಗೆ ಎದ್ದಾಗ ಎಂಟು ಗಂಟೆಯಾಗಿ ಹೋಗಿತ್ತು. ಆದಷ್ಟು ಬೇಗ
ಮುಖ ತೊಳೆದುಕೊಂಡು, ತಿಂಡಿತೀರ್ಥ ಮುಗಿಸಿಕೊಂಡು, ಮರಡಿ
ಬೆಟ್ಟಕ್ಕೆ ಹೊರಡಲು ಸಿದ್ಧವಾದೆ. ಯಜಮಾನರು ಒಬ್ಬ ಆಳನ್ನು ಗೊತ್ತು
ಮಾಡಿಕೊಟ್ಟರು. ಅವನ ಕೈಲಿ ಬೇಕಾದ ಸಲಕರಣೆಗಳನ್ನೆಲ್ಲಾ ಹೊರಿಸಿ
ಕೊಂಡು ಹೊರಟೆ, ಮರಡಿ ಬೆಟ್ಟದಲ್ಲಿ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು
ಹಿಂತಿರುಗುವ ಹೊತ್ತಿಗೆ ಸುಮಾರು ಹನ್ನೆರಡು ಗಂಟೆಯಾಗಿರಬಹುದು.
ಹಿ೦ದಿರುಗಿ ಬರುತ್ತ ಕಾಲುದಾರಿಗೆ ಸ್ವಲ್ಪ ದೂರವಾಗಿ ಹಸುರಿನಲ್ಲಿ ದನ
ಕರುಗಳು ಮೇಯುತ್ತಿದ್ದುವು. ಅಲ್ಲಲ್ಲಿ ರೈತರು ಗದ್ದೆಗಳಲ್ಲಿ ಕೆಲಸಮಾಡುತ್ತಿ
ದ್ದರು. ಹಾಗೆಯೇ ಸ್ಪಲ್ಪ ದೂರದಲ್ಲಿ ಗೊಲ್ಲರ ಹುಡುಗನೊಬ್ಬನು
ಲಾವಣಿ ಹೇಳುವುದಕ್ಕಾರಂಭಸಿದ. ಅವನಿಗೆ ಯಾರದ್ದೇನು ಹೆದರಿಕೆ!
ಜೋರಾಗಿ ಬಲು ಜೋಕಿನ ಮೇಲೆ ಪ್ರಾರಂಭಿಸಿದ. ಬಹಳ ತಮಾಷೆಯಾ
ನಾನು ಕೊಂದ ಹುಡುಗಿ ೨೯
ಗಿತ್ತು. ಸ್ವಲ್ಪಹೊತ್ತು ನಿಂತು ಕೇಳೋಣವೆನ್ನಿಸಿತು. ಆದರೆ ಜೊತೆಯಲ್ಲಿ
ಆಳು ಇದ್ದ. ನಗುವನೇನೋ ಏಂದು ಸಂಕೋಚ. ಅಲ್ಲದೆ ಹಿಂದಿನ ದಿನದ
ಸಾಯಂಕಾಲ ಜ್ಞಾಪಕಕೆ ಬಂತು. ನಿಲ್ಲಲ್ಲ. ಹಾಗೆಯೇ ಚೆನ್ನಮ್ಮನ
ಜ್ಞಾಪಕವಾಯಿತು. ಆ ಹಳ್ಳಿಗಾತಿಯ ಸ್ವಾಭಾವಿಕವಾದ ಎಳೆನಗು ನನ್ನ
ಕಣ್ಣ ಮುಂದೆ ಕುಣಿದಂತಾಯಿತು. ಥಳಥಳಿಸುವ ತುಂಬಿದ ಬಿಂದಿಗೆಗಳನ್ನು
ಹೊತ್ತು, ಅವುಗಳ ಭಾರಕ್ಕೆ ಬಳುಕಿ ನಿಂದ ಅವಳ ಆ ಒಯ್ಯಾರದ ನಿಲುವು
ಕಣ್ಣಿಗೆ ಒತ್ತಿದಂತಾಯಿತು. ಚೆನ್ನಮ್ಮ ಮನೆಯ ಯಜಮಾನನ ಮಗಳಿರ
ಬಹುದೆಂದು ಊಹಿಸಿದ್ದೆನೇ ಹೊರತು. ನಿಜವಾದ ವಿಷಯ ಗೊತ್ತಿರಲ್ಲ.
ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಆಳನ್ನು ಕುರಿತು--
" ನಿಮ್ಮ ಯಜಮಾನರ ಮನೆಯಲ್ಲಿರುವ ಆ ಹೆಣ್ಣುಮಗಳು
ಯಾರಯ್ಯಾ ?'' ಎಂದು ಕೇಳಿದೆ.
ಆಳು ನಿಂತು, ತಿರುಗಿ ನನನ್ನು ನೋಡುತ್ತ "ಯಾವ ಹೆಣ್ಮಗಳು
ಬುದ್ದೀ '' ಎ೦ದು ಕೇಳಿದ. ನಾನು ಯಾವಾಕೆಯನ್ನು ಉದ್ದೇಶಿಸಿ ಕೇಳಿ
ದೆನೋ ಅದು ಅವನಿಗೆ ಗೊತ್ತಾಗಲಿಲ್ಲ. ನಾನು "ಆ ಚೆನ್ನಮ್ಮಾ ಅಂತಿ
ದ್ದಾಳಲ್ಲ ಆಕೆ '' ಎಂದೆ. ಆಳು ನನ್ನ ಕಡೆಯೇ ನೋಡುತ್ತಿದ್ದವನು ನನ್ನ
ಪ್ರಶ್ನೆಯನ್ನು ಕೇಳಿ ನಕ್ಕು, ಮುಖವನ್ನು ತಿರುಗಿಸಿಕೊಂಡು " ಯಾಕೆ
ಬುದ್ದೀ" ಎಂದು ಕೇಳಿದ ! ನನಗೆ ಬಹಳ ಅವಮಾನವಾದ ಹಾಗಾ
ಯಿತು. ನಾಚಿಕೆಯಾಯಿತು. ಈ ಆಳು ನನ್ನ ಪ್ರಶ್ನೆ ಯಲ್ಲಿ ಏನೋ ದುರಭಿ
ಪ್ರಾಯವನ್ನು ನೋಡುವ ಹಾಗಾಯಿತಲ್ಲಾ--ಎಂದು ನನ್ನ ಮನಸ್ಸಿನಲ್ಲಿ
ಕ್ಷಣಕಾಲ ಬಹಳ ಗಲಿಬಿಲಿಯಾಯಿತು. ಲಕ್ಷ್ಮಿಯನ್ನು ಬಿಟ್ಟು ನನ್ನ
ಜೀವವೇ ಇಲ್ಲವೆಂದು ಈ ಮುಠ್ಠಾಳನು ತಿಳಿಯುವುದು ಹೇಗೆ ಅವ
ನೇನೋ ವ್ಯಂಗ್ಯವಾಗಿ ನಕ್ಕು ಯಾಕೆ ಬುದ್ದೀ '' ಎ೦ದು ಕೇಳಿಬಿಟ್ಟ.
ನಾನು
"ಯಾಕೂ ಇಲ್ಲವಯ್ಯ--ಸುಮ್ಮನೆ ಕೇಳಿದೆ--ಕೇಳಬಾರದಾಗಿತ್ತೆ ?"
ಎಂದೆ.
"ಅಯ್ಯೋ! ಅದಕ್ಕೇನ್ಪುದ್ದೀ--ಪರವಾ ಇಲ್ಲ. ಆಕೆ ಯಜಮಾನ್ರ
ಮಗಳು ''ಅ೦ದ.
ಇನ್ನೊ೦ದು ಪ್ರಶ್ನೆ ನಾಲಗೆ ತುದಿಯವರೆಗೆ ಬಂದಿತ್ತು; ಆದರೆ ತಡೆದೆ!
"ಯಾರು " ಎ೦ದು ಕೇಳಿದ್ದಕ್ಕೇ ನಕ್ಕವನು ಇನ್ನು " ಮದುವೆಯಾ
೩೦ ನಾನು ಕೊಂದ ಹುಡುಗಿ
ದೆಯೇ?'' ಎಂದು ಕೇಳಿದರೆ ಇನ್ನೇನು ತಿಳಿದುಕೊಳ್ಳುವನೋ ಎಂದು.
ಭಯವಾಯಿತು. ಸುಮ್ಮನಾದೆ.
* * * *
ಮನೆಗೆ ಬಂದವನೇ ಸ್ನಾನಮಾಡಿ ಊಟವನ್ನು ಮುಗಿಸಿಕೊಂಡು,
ಹಿಂದಿನ ಸಾಯಂಕಾಲ ತೆಗೆದ ಚೆನ್ನಮ್ಮನ ಫೋಟೋವಿನ ಮೂರು-
ನಾಲ್ಕು ಅಚ್ಚು ತೆಗೆದೆ. ಚಿತ್ರ ಬಹಳ ಚೆನ್ನಾಗಿ ಬಂದಿತು. ಮನೆಯವ
ರೆಲ್ಲಾ ಅದನ್ನು ನೋಡಿ ಬಹಳ ಸಂತೋಷಪಟ್ಟರು.
* * * *
ಮಧ್ಯ್ಮಾಹ್ನ ಊಟ ಹೊತ್ತಾಗಿತ್ತು. ಆದ್ದರಿಂದ ರಾತ್ರೆ ಹಸಿವು ತೋರ
ಲ ರಾತ್ರೆ ಊಟಮಾಡುವುದಿಲ್ಲವೆಂದು "ಮನೆಯವರಗೆ ತಿಳಿಸಿಬಿಟ್ಟೆ.
ನಿದ್ರೆಯೂ ಬೇಗ ಬರುವಂತೆ ತೋರಲಿಲ್ಲಾ. ಏನುಮಾಡುವುದಕ್ಕೂ ತೋಚದೆ
ಸ್ವಲ್ಪದೂರ ಸುತ್ತಾಡಿಕೊಂಡು ಬರೋಣವೆಂದು ಹೊರಟೆ; ಪುನಃ ಕೊಠಡಿಗೆ
ಟ್ಟ ಒ೦ಭತ್ತುಗಂಟೆಯಾಗಿ ಹೋಗಿತ್ತು. ಇನ್ನೂ ನಿದ್ದೆ ದೂರ
ಇದ್ದಂತೆ ತೋರಿತು. ದೀಪಹಚ್ಚಿ, ಹಾಸಿಗೆ ಹಾಸಿ, ಅದರ ಮೇಲೆ ಮಲಗಿ
ಕೊಂಡು ಯಾವುದೋ ನಾವೆಲನ್ನು ತೆಗೆದು ಓದತೊಡಗಿದೆ. ಸುಮಾರು
ಹತ್ತುನಿಮಿಷ ಓದಿರಬಹುದು. ಆಗ ಕೊಠಡಿಯ ಬಾಗಿಲು ಏನೋ
ಸದ್ದಾದ ಹಾಗಾಯಿತು. ಗಾಳಿಯೇನೋ ಅಂದುಕೊಂಡು ಪುನಃ ಪುಸ್ತಕ
ವನ್ನು ನೋಡತೊಡಗಿದೆ. ಪುನಃ ಸದ್ದಾಯಿತು. ಈ ಬಾರಿ ಮೆಲ್ಲಗೆ ತಟ್ಟಿದ
ಹಾಗಾಯಿತು. ಮಲಗಿದ್ದ ಹಾಗೆಯೇ "ಯಾರಪ್ಪಾ ಅದು? " ಎಂದು
ಕೇಳಿದೆ. ಉತ್ತರವಿಲ್ಲ. ಒಂದು ಕ್ಷಣಬಿಟ್ಟು ಪುನಃ ಯಾರೋ ಮೆಲ್ಲಗೆ
ತಟ್ಟಿದ ಹಾಗಾಯಿತು. ಎದ್ದು ಕುಳಿತು " ಯಾರದು? '' ಎಂದು ಕೇಳಿದೆ.
ಕೈಬಳೆಗಳ ಸದ್ದಾಯಿತು! ಜೊತೆಗೆ ಕ್ಷೀಣ ಸ್ವರದಲ್ಲಿ " ನಾನು ಚೆನ್ನಿ
ಎಂದು ಉತ್ತರಬಂತು! ನನಗೆ ಆಶ್ಚರ್ಯವಾಯಿತು. ಇಷ್ಟು ಹೊತ್ತಿನಲ್ಲಿ
ಇವಳಿಗೆ ನನ್ನಲ್ಲಿ ಏನು ಕೆಲಸ? , ,.. ಏನಾದರೂ ಇರಲಿ ವಿಚಾರಿಸೋಣ
ವೆಂದು ಎದ್ದು "ಬಾಗಿಲನ್ನು ಹೊರಗೆ ಮುಖಹಾಕಿ " ಏನಮ್ಮಾ"
ಎಂದು ಕೇಳದೆ. ನನ್ನ ಕೊಠಡಿಯ ಬೆಳಕು ಸ್ವಲ್ಪವಾಗಿ ಅವಳ ದೇಹದ
ಮೇಲೆ ಬೀಳುತ್ತಿತ್ತು. ಅವಳ ಕೈಯಲ್ಲಿ ಒಂದು ತಟ್ಟೆ, ಅದರಲ್ಲಿ
ನಾಲ್ಕೈದು ಬಾಳೆಹಣ್ಣುಗಳು, ಸ್ಪಲ್ಪ ಸಕ್ಕರೆ, ಒಂದು ಬಟ್ಬಲಲ್ಲಿ ಸ್ವಲ್ಲ
ಹಾಲು ಇಷ್ಟು ಇತ್ತು. ನಾನು“ಏನಮ್ಮಾ '' ಎಂದು ಕೇಳಿದ್ದಕ್ಕೆ
ನಾನು ಕೊಂದ ಹುಡುಗಿ ೩೧
ಆಕೆ " ಬುದ್ದೀ, ತಮ್ಗೆ ಈಗ ಊಟ ಇಲ್ಲ ಅದಕ್ಕೇ ಇದನ್ನ ತಂದೆ
ನನ್ನೊಡ್ಯಾ ” ಎಂದಳು. ನನಗೆ ಆಗ ಸ್ಪಲ್ಪ ಸ್ವಲ್ಪವಾಗಿ ಹಸಿವು ತೋರು
ವುದಕ್ಕಾರಂಭವಾಗಿತ್ತು. "ಬಹಳ ಸಂತೊಷವಮ್ಮ '' ಎಂದು ಹೇಳಿ
ಆಕೆಯ ಕೈಯಿಂದ ಆ ತಟ್ಟೆಯನ್ನು ತೆಗೆದುಕೊಂಡು "ಹಾಸಿಗೆಯ ಸಮೀ
ಪದಲ್ಲಿಡಲು ಹೋದೆ. ಚೆನ್ನಮ್ಮ ಹಿಂದೆಯೇ ಕೊಠಡಿಯೊಳಕ್ಕೆ ಬ೦ದಳು !
ನನ್ನ ಎದೆ ಸ್ವಲ್ಪ ಅದುರಿತು! ಆ ಸಮಯ ಹಾಗೆ ಇತ್ತು. ನಾನು ತಟ್ಟೆ
ಯನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟು ತಿರುಗಿ " ನನಗೆ ಇನ್ನೇನೂ
ಬೇಡವಮ್ಮಾ ; ನೀನು ಇನ್ನು ಹೋಗಬಹುದು '' ಎಂದೆ. ಆಕೆ ನಗುತ್ತ
" ನಾನಿದ್ರೇನ್ಬುದ್ದೀ, ತಾವು ತಿನ್ಬಾರದಾ? ' ಎ೦ದು ಕೇಳಿದಳು. ನಾನು
"ಹೋ, ತಿನ್ನಬಹುದು; ಅದಕ್ಕಲ್ಲ “ನಾನು ಹೇಳಿದ್ದು. ಆದರೆ ಈಗ
ನನಗೆ ಇನ್ನೇನೂ ಬೇಕಿಲ್ಲ; ಅಲ್ಲದೆ ಇಷ್ಟು ಹೊತ್ತಿನಲ್ಲಿ ನೀನೊಬ್ಬಳೇ
ಇಲ್ಲಿ ಇರ...." ನನ್ನ ಮಾತು ಪೂರೈಸುವುದರೊಳಗಾಗಿ ಅವಳು ನನ್ನ
ಕೊಠಡಿಯ ಬಾಗಿಲನ್ನು ಮುಚ್ಚಿ ಆಗಣಿಹಾಕಿಯಟ್ಟಳು. ಆಕೆ ನನ್ನ
ಕೊಠಡಿಯೊಳಕ್ಕೆ ಬಂದೊಡನೆಯೇ ನನ ಮನಸ್ಸನಲ್ಲಿ ಉಂಟಾಗಿದ್ದ
ಮೊಬ್ಬು ಮೊಬ್ಬಾದ ಯಾವುದೋ ಭಾವನೆಯು ಈಗ ಸ್ಪಲ್ಪ ಸ್ವಲ್ಪವಾಗಿ
ಸ್ಪೂರ್ತಿಗೊಳ್ಳಲಾರಂಭಿಸಿತು. ಅವಳು ಬಾಗಿಲು ಹಾಕಿದ ನ ನ್ನು ನೋಡಿ
ಇದ್ದಕ್ಕಿದ್ದ ಹಾಗೆಯೇ ನನ್ನ ಮೈ ನಡುಗಿ ಬಿಸಿಯಾಯಿತು; ಬೆವರು ಮುಖದ
ಮೇಲೆಲ್ಲಾ ಮೂಡಿತು. ಗಂಟಲು ಒಣಗಿ ಉಗುಳು ನುಂಗತೊಡಗಿದೆ.
ಕಷ್ಟದಿಂದ " ಯಾಕಮ್ಮಾ, ಬಾ--ಬಾಗಿಲು ಹಾಕಿದೆ ?''. ಎಂದು
ಕೇಳುತ್ತ, ತೆಗೆಯುವುದಕ್ಕೋಸ್ಕರ ಎರಡು ಹೆಜ್ಜೆ ಇಟ್ಟೆ. ಚೆನ್ನಮ್ಮ
ಸರ್ರನೆ ಸರಿದು ಬಾಗಿಲಿಗೆ ಅಡ್ಡವಾಗಿ ನಿಂತು ಮುಗುಳ್ನಗೆ ನಗತೊಡಗಿದಳು!
ನನ್ನ ಮೊಳಕಾಲು ಕಳಚಿದರತಾಯಿತು. ಸರಿ! ಏನೂ ಸಂಶಯ ಉಳಿಯ
ಲಿಲ್ಲ! ಅವಳ ಅಭಿಪ್ರಾಯ ನನ್ನ ಎದೆಯ ಮೇಲೆ ಊರಿ ಬರೆದ೦ತಾಯಿತು.
ನನ್ನ ಮನಸ್ಸಿನಲ್ಲೇ ಅಂದುಕೊಂಡೆ, "ಇವಳೇ। ಹಳ್ಳಿ ಗಾಡಿನ ಮುಗ್ಧ
ಯುವತಿ! ''-ಎಂದು.
೫
ನನಗೆ ನಿಲ್ಲಲು ಕಾಲೇ ಇಲ್ಲದ ಹಾಗಾಯಿತು. ಹೋಗಿ ಹಾಸಿಗೆಯ
ಮೇಲೆ ಕುಳಿತು, ಎರಡು ಕೈಗಳಿಂದಲೂ ತಲೆಯನ್ನು ಹಿಡಿದುಕೊಂಡು
ಯೋಚಿಸಲಾರಂಭಿಸಿದೆ.
೩೨ ನಾನು ಕೊಂದ ಹುಡುಗಿ
ಇಲ್ಲಿ, ಮುಂದೆ ನಡೆದ ವಿಷಯವನ್ನು ತಿಳಿಸುವುದಕ್ಕೆ ಮೊದಲು ಬೇರೆ
ಒಂದೆರಡು ಮಾತುಗಳನ್ನು ಹೇಳಬೇಕೆನ್ನಿಸುತ್ತದೆ. ಕೇಳಿ, ಆ ದಿನ ರಾತ್ರೆ
ನನ್ನನ್ನು ಪಾಪದ ಬಲೆಯಿಂದ ತಪ್ಪಿಸಿ ರಕ್ಷಿಸಿದವಳು ನನ್ನ ಲಕ್ಷ್ಮಿ.
ಅವಳ ಪ್ರೇಮವೆಂಬ ಕೋಟೆ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು.
ನಾನೂ ಅವಳ ಒಂದಾದಂದಿನಿಂದ ಇದುವರೆಗೂ, ನಾನು ಅವಳಲ್ಲಿ
ಕಾಣದ್ದನ್ನು ಇನ್ನೆಲ್ಲಿಯೂ ಕಾಣಲಾರೆ ಅನ್ನುವಹಾಗೆ ಮಾಡಿಬಿಟ್ಟಿ
ದ್ದಳು. ರೂಪಕ್ಕಾಗಲಿ, ಗುಣಕ್ಕಾಗಲಿ, ಪ್ರೇಮಕ್ಕಾಗಲಿ, ನಾನು ಅವಳಲ್ಲಿ
ಇಟ್ಟ ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಬೇಕಾಗಿರಲಿಲ್ಲ. ಲಕ್ಷ್ಮಿ ನನ್ನ
ಪಾಲಿಗೆ ಇಲ್ಲದೆ ಇದ್ದು, ನಾನು ಆ ರಾತ್ರೆ ಇದ್ದ ಸನ್ನಿವೇಶದಲ್ಲಿ, ಅರಕ್ಷಿತ
ವಾದ ನನ್ನ ಮನಸ್ಸು ಆ ಹಳ್ಳಿಯ ಯುವತಿಯಲ್ಲಿ ಪ್ರವರ್ತಿಸಿದ್ದಿದ್ದರೆ
ಅದರಲ್ಲಿ ಆಶ್ಚರ್ಯವಿರುತ್ತಿರಲಿಲ್ಲವೆಂದು ನನಗೆ ಈಗಲೂ ಬೋಧೆಯಾಗು
ತ್ತದೆ. ಈ ವಿಷಯ ನಡೆದಾಗ ನನಗೆ ಯೌವನದ ಎಳೆಯ ದಿನಗಳು ;
ದೃಢಕಾಯನಾಗಿದ್ದೆ. ನನ್ನ ರೂಪವನ್ನು ನಾನು ಹೇಳಿಕೊಳ್ಳುವುದು
ಕಷ್ಟವಾದರೂ ಕುರೂಪಿಯಲ್ಲವೆಂದು ಖಂಡಿತವಾಗಿ ಹೇಳಬಲ್ಲೆ. ವಿಷಯ
ಚೆನ್ನಾಗಿ ತಿಳಿಯಬೇಕಾದರೆ ಇಲ್ಲಿ ಚೆನ್ನಮ್ಮನನ್ನೂ ವರ್ಣಸಬೇಕು.
ಆಕೆಗೆ ಇಪ್ಪತ್ತು ವರ್ಷಗಳಿಗೆ ಹೆಚ್ಚಿರಲಾರದು. ಅತಿ ಎತ್ತರವೂ ಅಲ್ಲದ
ಅತಿ ಗಿಡ್ಡ ಅಲ್ಲದ ಆಕೃತಿ. ಬಣ್ಣ ಎಣ್ಣೆಗೆಂಪು, ಮುಖದ ಮಾದರಿ
ಲಕ್ಷಣವೆಂತಲೇ ಹೇಳಬೇಕು. ತುಂಬುಪ್ರಾಯದಿಂದ ಬಿಗಿದ ಮೈ ಕಟ್ಟು.
ಆಕೆಯ ತುಟಿಗಳ ಮೇಲೆ ನಾನು ನೋಡಿದಾಗಲೆಲ್ಲಾ ಎಳೆನಗು ಬಹಳ
ಸ್ವಾಭಾವಿಕವಾಗಿ ಕಾಣುತ್ತಿತ್ತು. ಕಣ್ಣುಗಳಲ್ಲಿ ಇನ್ನೂ ಹುಡುಗಾಟಿಕೆಯ
ಎಳೆಮಿಂಚಿನ ಹೊಳಪು ಸುಳಿದಾಡುತ್ತಿತ್ತು. ಎಳೆನಗೆಯೂ, ಎಳೆಮಿಂಚೂ
ಪರಸ್ಪರ ಬೆರೆತು ಒಂದು ಅಪೂರ್ವವಾದ ಮಾಧುರ್ಯದಲ್ಲಿ ಕೊನೆಗಾಣು
ತ್ತಿತ್ತು. ಮನಸ್ಸನ್ನು ಅಪಹರಿಸುವುದಕ್ಕೆ ಬೇಕಾದ ಎಲ್ಲಾ ಸಾಧಕಗಳೂ
ಅವಳಲ್ಲಿದ್ದು ಎಂದು ಒಂದು ಮಾತಿನಲ್ಲಿ ಹೇಳಬಹುದು. ಸಾಲದುದಕ್ಕೆ
ಆ ದಿನ ರಾತ್ರೆ ಆಕೆಯ ನಡೆವಳಿಕೆ “ ಹಳ್ಳಿಗಾಡಿನ ಮುಗ್ಧ ಯುವತಿ”
ಯಿಂದ ಸ್ವಲ್ಪ ದೂರವಾಗಿತ್ತು !
ನಾನು ಹಾಸಿಗೆಯ ಮೇಲೆ ಕುಳಿತೊಡನೆಯೇ ಯೋಚನೆಗಳು ಒಂದೊಂ
ದಾಗಿ, ಹತ್ತು ಹತ್ತಾಗಿ, ನೂರುನೂರಾಗಿ ನುಗ್ಗಿ ಬರತೊಡಗಿ, ನನ್ನ ತಲೆ
ಗಾಣದಲ್ಲಿ ಸಿಕ್ಕಿದಂತಾಯಿತು. ನನ್ನ ಮನಸ್ಸು ಕತ್ತಲೆಯ ಸಮುದ್ರದಲ್ಲಿ
ನಾನು ಕೊ೦ದ ಹುಡುಗಿ ೩೩
ಮುಳುಗಿದಂತೆ ತೋರಿತು, ಗಂಟಲು, ಬಾಯಿ ಒಣಗಿ, ಉಗುಳು ನುಂಗು
ವುದೂ ಕಷ್ಟವಾಯಿತು. ನಾನು ಈ ಯುವತಿಯಲ್ಲಿ ಕಾಮವನ್ನು ಕೆಣಕಿದ್ದೆ
ನೆಂದು ಕನಸಿನಲ್ಲಿಯೂ ಕಾಣೆ! ನನ್ನ ವಿಷಯದಲ್ಲಿ ಇವಳಿಗೆ ಆಸೆ ಹುಟ್ಟಿದ್ದ
ಪಕ್ಷದಲ್ಲಿ ಅದಕ್ಕೆ ನಾನು ಯಾವ ವಿಧದಲ್ಲಿಯೂ ಪ್ರೋತ್ಸಾಹ ಕೊಡಲಿಲ್ಲ
ವೆಂದು ಎಲ್ಲಿ ಬೇಕಾದರೂ ನಿಂತು ಯಾವ ಪ್ರಮಾಣವನ್ನಾದರೂ ಮಾಡ
ಬಲ್ಲೆ! ಇವಳು ತಿಳಿಯದವಳಲ್ಲ! ಅದನ್ನು ಅವಳೇ ತೋರಿಸಿಕೊಂಡಿದ್ದಾಳೆ!
ತಿಳಿದೇ ಇಂಥಾ ಕೆಲಸದಲ್ಲಿ ಮುಂದಾಳಾಗಿದ್ದಾಳಲ್ಲಾ ! ಇದೇನು
ಹುಚ್ಚು ! ಇದೂ ಒಂದು ತರದ ಹುಚ್ಚೇ ಸರಿ ! ಮನೆಯವರಿಗೆ ತಿಳಿದರೆ
ಏನು ಗತಿ ! ನಾನು ದೊಡ್ಡ ಮನುಷ್ಯನ ಹಾಗೆ ಇವರ ಮನೆಯಲ್ಲಿ
ಅತಿಥಿಯಾಗಿರುವುದು ; ಈಗ ಈ ಸರಿರಾತ್ರೆಯಲ್ಲಿ ಇವಳೂ ನಾನೂ
ಒಟ್ಟಿಗೆ ನನ್ನ ಕೊಠಡಿಯಲ್ಲಿ . . . ಮರ್ಯಾದೆ ಉಳಿಯುವ ಹಾಗೆ
ತೋರಲಿಲ್ಲ. ಒಂದ ರೀತಿಯೋ, ಕದ್ದು ಬಂದಿದ್ದಾಳೆ ! ಇವಳಿಗೆ ಮದು
ವೆಯಾಗಿಲ್ಲವೆ? ನನ್ನ ಮನಸ್ಸಿಗೆ ಬಹಳ ಜುಗುಪ್ಪೆಯಾಯಿತು. ಈಗ
ಒಂದೊಂದಾಗಿ ನನಗೆ ಅವಳ ಹಿಂದಿನ ದಿನ ಸಾಯಂಕಾಲದ ನಡೆವಳಿಕೆ
ಗಳೆಲ್ಲಾ ಅರ್ಥವಾಗ ತೊಡಗಿತು. ಅವಳು ಆ ಹೊತ್ತಿನಲ್ಲಿ ನನ್ನ ಹಿಂದೆಯೇ
ತೋಟಕ್ಕೆ ಏಕೆ ಬಂದಳು ? . . . ನೀರಿನ ಕೊಡ ಶುದ್ಧ ನೆವ ! . . .
ನೀರಿನ ಕೊಡವನ್ನು . . . ನನ್ನ ಕೈಲಿ ಏಕೆ ಎತ್ತಿಸಿಕೊಂಡಳು ? . ...
ಹೋಗಲಿ, ನಾನು ನೀರಿನ ಕೊಡವನ್ನು ಎತ್ತಿ ಕೊಟ್ಟಾಗ, ಅದರ ಸುತ್ತಲೂ
ಕೈಹಾಕಬೇಕಾದರೆ ನನ್ನ ಕೈಗೆ ತನ್ನ ಕೈ ಸೋಂಕಿಸಿದಳು. ಆಗ ಅದು
ಏನೋ ಆಕಸ್ಮಿಕವೆಂದು ತೋರಿತು. ಇನ್ನೊಂದು ವಿಷಯ. ಅವಳು
ಮೊದಲು ಕೊಡವನ್ನು ಎತ್ತುವುದಕ್ಕೋಸ್ಕರ ಬಗ್ಗಿದಾಗ ಅವಳ ಸೆರಗು
ಜಾರಿತು. ನಾನು ಅವಳನ್ನು ಆ ಅವಸ್ಥೆಯಲ್ಲಿ ನೋಡಿದಾಗ ಅವಳು
ಲಜ್ಜೆಯ ಚಿಹ್ನೆ ಯಾವುದೂ ಕಾಣಲಿಲ್ಲ. ಕೊಡವನ್ನು ತಲೆಯ ಮೇಲೆ
ಇಟ್ಟುಕೊಂಡು ನಿದಾನವಾಗಿಯೇ ಸೆರಗನ್ನು ಮೇಲಕ್ಕೆಳೆದುಕೊಂಡಳು.
ಇವುಗಳಲ್ಲೆಲ್ಲಾ ಆಗ ನಾನು ಇವಳ ಮುಗ್ಧತೆಯನ್ನು ಕಾಣುತ್ತಿದ್ದೆನೆಂದು
ಭಾವಿಸಿದೆನೇ ವಿನಾ ಇವೆಲ್ಲಾ ನನಗಾಗಿ ಇವಳು ಹರಡುತ್ತಿದ್ದ ಬಲೆಯ
ಒಂದೊಂದು ಎಳೆ ಎಂದು ತಿಳಿಯದೆ ಹೋದೆ.
ಈ ಯೋಚನೆಗಳಿಂದ ಅಲ್ಲೋಲಕಲ್ಲೋಲವಾಗಿದ್ದ ನನ್ನ ಮನಸ್ಸನ್ನು
ಆದಷ್ಟು ಸ್ತಿಮಿತಕ್ಕೆ ತಂದು, ಇನ್ನು ಈ ಇಕ್ಕಟ್ಟಿನಿಂದ ಹೇಗೆ ಪಾರಾಗ
೩೪ ನಾನು ಕೊಂದ ಹುಡುಗಿ
ಬೇಕೆಂದು ಯೋಚಿಸಲಾರಂಭಸಿದೆ. ಸಿಟ್ಟು ತೋರುವುದು ಕಾರ್ಯಕಾರಿ
ಯಲ್ಲ; ಪ್ರಮಾದವಾದೀತೆಂದು ಭಯವಾಯಿತು. ಬೇರೆ ಯಾವುದಾ
ದರೂ ಉಪಾಯದಿಂದ ಇ.ವಳನ್ನು ಮೆಲ್ಲಗೆ ಹೊರಕ್ಕೆ ಸಾಗಹಾಕ
ಬೇಕೆಂದು ಯೋಚಿಸಿದೆ. ಆದರೆ ಏನು ಉಪಾಯ? ಹೇಗೆ ಮಾತನ್ನು
ಪ್ರಾರಂಭಸಲಿ? ಅಥವಾ ಸುಮ್ಮನೆ ಮುಸುಕುಹಾಕಿಕೊಂಡು ಮಲಗಿ
ಬಿಡಲೆ ?--ಎಂದು ಯೋಚಿಸಿದೆ. ಅದು ಆಗದ ಕೆಲಸ. ಇವಳು ಇಲ್ಲ
ಇರುವ ತನಕ ನನ್ನ ಎದೆಯ ಮೇಲೊಂದು ದೊಡ್ಡ ಬಂಡೆ ಇದ್ದಂತೆಯೇ
ಸರಿ. ಇನ್ನೊಂದು ಯೋಚನೆ ತೋರಿತು. ಅದೇ ಸರಿ ಎಂದ ಕೊಂಡೆ.
ಏನಾದರೂ ಮಾಡಿ, ಅವಳು ಮಾಡುತ್ತಿರುವ ಕೆಲಸ ಬಹಳ ಕೆಟ್ಟದು--
ಬಹಳ ನೀಚವಾದದ್ದು --ಬಹಳ ಪಾಪ ಎಂದು ಅವಳ ಮನಸ್ಸಿಗೆ
ಚೆನ್ನಾಗಿ ನಾಟುವ ಹಾಗೆ ಮಾತನಾಡಿ, ಉಪಾಯದಿಂದ ಕಳಿಸಿಬಿಡ
ಬೇಕೆ೦ದುಕೊಂಡೆ. ದೇವರು, ಪಟ್ಟಣವಾಸಿಯಾದ ನಾನು ಈ ಹಳ್ಳಿಯ
ಹುಡುಗಿಗೆ ಪತಿವ್ರತಾಧರ್ಮದ ಮೇಲೆ ಒಂದು ಉಪನ್ಯಾಸವನ್ನು
ಕೊಡುವ ಹೊತ್ತನ್ನು ತಂದೊದಗಿಸಿದ್ಧಕ್ಕಾಗಿ ನನಗೆ ನಾನೇ ನಗು
ವಂತಾಯಿತು. ಹಾಗೆಯೇ ತಲೆಯನ್ನು ಎತ್ತಿ ಚೆನ್ನಮ್ಮ ನಡೆ ನೋಡಿದೆ.
ಚೆನ್ನಮ್ಮ ಇನ್ನೂ ಬಾಗಿಲನ್ನು ಒರಗಿಕೊಂಡೇ ನಿಂತಿದ್ದಳು, ನನ್ನ
ಮುಖದ ಮೇಲೆ ನಗುವನ್ನು ನೋಡಿ ಅವಳೂ ನಕ್ಕಳು. ನನ್ನ ನಗುವಿ
ನಲ್ಲಿ ಅವಳು ಪ್ರೋತ್ಸಾಹವನ್ನೇ ನಾದರೂ ಕಂಡಳೇನೋ ಎಂದು ಭಯ
ವಾಗಿ ಕೂಡಲೆ ನನ್ನ ನಗುವನ್ನು ನುಂಗಿಕೊಂಡು, ಮೆಲ್ಲಗೆ " ಚೆನ್ನಮ್ಮಾ "
ಎಂದು ಕರೆದೆ. ಚೆನ್ನಮ್ಮ "ಏನು ದೇವರೇ ? '' ಎಂದು, ಎರಡು-ಮೂರು
ಹೆಜ್ಜೆ ಇಟ್ಟು ನನಗೆ ಸ್ವಲ್ಪ ದೂರದಲ್ಲಿ ನಿಂತಳು. ನಾನು. " ಕುಳಿ
ತುಕೋ '' ಎಂದೆ. ಅವಳು ನನ್ನ ಹಾಸಿಗೆಯ ಮೇಲೆಯೇ ಕುಳಿತು
ಬಿಟ್ಟಳು ! ನಾನು ಸ್ವಲ್ಪ ದೂರ ಸರಿದು ಒಂದೆರಡು ಸಲ ಉಗುಳು
ನುಂಗಿ, ಪುನಃ “ ಚೆನ್ನಮ್ಮಾ" ಎ೦ದೆ.
"ಏನು ನನ್ನೊಡ್ಯಾ? ?'' ಎಂದು ಮೆಲ್ಲಗೆ ಕೇಳಿದಳು. ಅವಳ ನಡೆವಳಿಕೆ
ಗಳು ಇಷ್ಟು ವಿಪರೀತವಾಗಿದ್ದರೂ ಅವಳ ಧ್ವನಿಯಲ್ಲಿ ಇನ್ನೂ ಮುಗ್ಧತೆಯು
ಹರಿಯುತ್ತಿತ್ತೆ೦ದು ಬೋಧೆಯಾಗುತ್ತಿತ್ತು. ನಾನು ಪ ಪ್ರಾರಂಭಿಸಿದೆ':
" ಚೆನ್ನಮ್ಮಾ, ನೋಡು ; ನೀನು ಹೀಗೆ ಮಾಡಬಹುದೆ? ''
"ಹ್ಯಾಗೆ ಬುದ್ದೀ ?"
ನಾನು ಕೊಂದ ಹುಡುಗಿ ೩೫
"ಹೀಗೆ--ನಡುರಾತ್ರಿಯಲ್ಲಿ ಕದ್ದುಬಂದಿ ........"
ನಾನು ಮಾತು ಪೂರೈಸಲಿಲ್ಲ. ಅಷ್ಟರಲ್ಲೇ ಅವಳು--
" ಕದ್ದು ಬಂದಿಲ್ಲಾ ! ನನ್ನ ದೇವರೇ | ''
" ಹಾಗಾದರೆ ? "
ಅವಳಿಂದ ಮಾತು ಹೊರಡಲ್ಲ. ನಾನು ಹೇಳಿದೆ:
" ನೋಡು, ನಿನ್ನ ಮನೆಯವರಿಗೆ ತಿಳಿದರೆ ನಿನಗೂ ಮರ್ಯಾದೆ
ಬರೊಬ್ಬ, ನನಗೂ ಬರೊಲ್ಲ.''
" ಅವರೇನೂ ಅನ್ನೊಕಿಲ್ಲ ದೇವರೇ,''
ನನಗೆ ಇದ್ದುದೂ ಆಶ್ಚರ್ಯವಾಯಿತು ! ಕೇಳಿದೆ:
" ಏನಂದೆ?"
" ಅವರೂ--ಏನೂ--ಅನ್ನೊಕಿಲ್ಲಾ --ಅಂದೆ.''
" ನೋಡು. ಅವರು ಅನ್ನಲಿ ಬಿಡಲಿ- ಇದು ನಾನು ಒಪ್ಪದ ಕೆಲಸ.
ಚೆನ್ನಮ್ಮಾ ನನಗೆ ಮದುವೆಯಾಗಿದೆ ; ನಾನು ಇನ್ನೊಬ್ಬರ ಹೆಂಡತೀನ
ಕೆಡ...”
" ಅಯ್ಯೋ! ಬುದ್ದೀ ಹೀಗ್ಯಾಕಂತೀರಿ! ನನ್ಗೆ ಮದುವೆ ಇಲ್ಲಾ
ನನ್ನೊಡ್ಯಾ-- ನಾನು ಬಿಸ್ವಿ.
"ಏನು ?--ಏನು?- ಏನಂದೆ ? "
" ನನ್ನ ಬಸ್ವಿ ಬಿಟ್ಟಿದ್ದಾರೆ ಒಡೆಯಾ.''
" ಬಸ್ವಿ ! ಬಸ್ವಿ |! ಹಾಗಂದರೆ? ?
" ದೇವರಿಗೆ ಬಿಟ್ಟಿದ್ದಾರೆ.”
ನಾನು ಎಲ್ಲೂ ನೋಡಿರಲ್ಲೂ ದೇವರಿಗೆ ಬಡೋದು--ಬಸ್ವಿ ಮುಂತಾ
ದ್ದನ್ನ ಕೇಳಿದ್ದೆ ಅಷ್ಟೆ. ಆದರೆ ಅದರ ಅರ್ಥ ತಿಳಿದಿರಲಿಲ್ಲ. ನನಗೆ ಮೊದಲಿನ
ಹೆದರಿಕೆ ತಪ್ಪಿ ಕುತೂಹಲ ಹೆಚ್ಚಿತು. ವಿಷಯ ಸ್ವಾರಸ್ಯವಾಗಿದೆ ತಿಳಿದು
ಕೊಳ್ಳಬೇಕೆಂದು--
"ದೇವರಿಗೆ ಬಿಟ್ಟರೆ? ಯಾರು '' ಎಂದು ಕೇಳಿದೆ.
" ನಮ್ಮ ಅಪ್ಪ ಅಮ್ಮನೂ "
" ಅದ್ಯಾಕ್ಬಿಟ್ರು ? "
| ಬುದ್ದೀ, ಈಗ ಎಂಟೊರ್ಸದಾಗೆ ನಂಗೆ ಬಲು ದಣುವಾಗಿತ್ತು.
ಆಗ ನಮ್ಮ. ಅಪ್ಪ ಅಮ್ನೂ ಮರಡೀ ದೇವರ್ಗೆ ಹರಕೆ ಮಾಡ್ಕೊಂಡ್ರು
೩೬ ನಾನು ಕೊಂದ ಹುಡುಗಿ
ನನ್ನೊಡ್ಯಾ--ನನ್ಗೆ ಗುಣವಾದ್ರೆ ಆ ದೇವ್ರ ಹೆಸರ್ನಾಗೆ ನನ್ನ ಬಸ್ವಿ
ಬಿಡ್ತೀವಿ ಆಂತ. ನನ್ಗೆ ಗುಣವಾಯ್ತು ಬುದ್ದೀ. "
" ಹಾಗಾದ್ರೆ ನೀನು ಮದುವೆ ಮಾಡ್ಕೊಳ್ಳೋದೆ ಇಲ್ಲ! "
"ಇಲ್ಲ ಬುದ್ದೀ."
"ಹೀಗೇ ಇರ್ತೀಯಾ?''
" ಹೌದು ನನ್ನೊಡ್ಯಾ."
" ಸೂಳೆಯ ಹಾಗೆ! "
ನನ್ನ ಈ ಮಾತನ್ನು ಕೇಳಿ ಅವಳ ಎದೆಯಲ್ಲಿ ಚೂರಿಯನು ನೆಟ್ಟ
ಹಾಗಾಗಿರಬೇಕು. ಒಂದು ಕ್ಷಣದಲ್ಲಿ ಅವಳ ಹುಬ್ಬುಗಳು ಗಂಟಿಕ್ಕಿದವು.
ಮೂಗಿನ ಹೊಳ್ಳೆಗಳೂ ತುಟಿಗಳೂ ಅದುರಲಾರಂಭಿಸಿದವು. ಕೋಪಗೊಂಡ
ಸ್ತ್ರೀಯ ಮುಖದಲ್ಲಿ ಒಂದು ಬಧವಾದ ಭೀಷಣತೆಯಿರುತ್ತದೆ. ಅವಳ
ಮುಖವು ಆ ಭೀಷಣತೆಯಲ್ಲಿ ತೇಲುತ್ತಿರುವಂತೆ ತೋರಿತು. ಕ್ರೂರವಾದ
ದೃಷ್ಟಿಯಿಂದ ನನನ್ನು ತಿವಿಯುತ್ತ--
"ಬುದ್ದೀ ತಾವು ಆ ಮಾತು ಹೇಳಬಾರ್ದು !'' ಎಂದಳು.
ಅವಳಲ್ಲಿ ಆದ ಮಾರ್ಪಾಟನ್ನು ನೋಡಿ ನನಗೆ ಯಾಕೋ ಸ್ವಲ್ಪ
ದಿಗ್ಭ್ರಮೆಯಾದ ಹಾಗಾಯಿತು. ಸ್ಪಲ್ಪ ಉಗುಳು ನುಂಗುತ್ತ--
"ಯಾವ ಮಾತು? '' ಎಂದು ಕೇಳಿದೆ.
"ನಾವು ಸೂಳೇರಲ್ಲ.-ತಿಳೀರಿ !"
" ಇನ್ನೂ ಆಶ್ಚರ್ಯವಾಯಿತು! ಮದುವೆ ಇಲ್ಲ! ! ನಡೆವಳಿಕೆ ನೋಡಿ
ದರೆ ವಿಪರೀತ !! ಆದರೂ " ಸೂಳೇರಲ್ಲ! " ನನಗೂ ಸ್ವಲ್ಪ ಸಿಟ್ಟು
ಬಂದತಾಯಿತು ನಾನು ಹೇಳಿದೆ--
" ಅಷ್ಟಲ್ಲದೆ ಮತ್ತೇನು? ನೀನು ಎಲ್ಲರ ಹಾಗೆ ವದುವೆಮಾಡಿಕೊಂಡು
ಗರ್ತಿಯ ಹಾಗೆ ಇರೋದು ಬಿಟ್ಟು, ಹೀಗೆ ಈ ನಡುರಾತ್ರಿಯಲ್ಲಿ ಮೇಲೆ
ಬದ್ದು ಬಂದಿ .. "
" ಬುದ್ದೀ, ನಿಮ್ಗೆ ಇನ್ನೂ ಗೊತ್ತಾಗಿಲ್ವೆ ? ಬಸ್ವೀರು ಲಗ್ನಾ
ಮಾಡ್ಕೊಲ್ಲೋಕಾಗ್ದು ನನ್ನೊಡ್ಯಾ.''
" ಯಾಕಾಗ್ದು "
" ಹರಕೆ ಒಪ್ಪಿಸ್ಬೇಕಲ್ಲಾ ಬುದ್ದಿ | ಇಲ್ದಿದ್ರೆ ಕೇಡಲ್ವಾ? "
" ಮದುವೇ ಮಾಡ್ಕೊಂಡ್ರೆ ಹರಕೆ ಒಪ್ಸೋಕಾಗಲ್ವೇ |
ನಾನು ಕೊಂದ ಹುಡುಗಿ ೩೭
“ಇಲ್ಲಾ ನನ್ನೊಡ್ಯಾ; ಒಬ್ಬನ್ನ ಮದ್ವೆ ಮಾಡ್ಕೊ೦ಡ್ರೆ ನಿಮ್ಮ೦ಥಾ
ವರ ಸ್ಯಾವೆ ಹ್ಯಾಗ್ಬುದ್ಧೀ ಮಾಡೋದು ? ಮಾನ ಬರ್ತದಾ? "
" ಸರಿ ಇನ್ನೊಬ್ಬನ ಸೇವೆ ಯಾಕೆ ಮಾಡ್ಬೇಕು ?''
" ಮತ್ತೆ! ದೇವುಹರಕೆ ಒಪ್ಪಿಸ್ಬೇಡ್ವಾ?"
" ಹೀಗೆಯೇ ಒಪ್ಪಿಸೋದು ದೇವರ ಹೆಸರಿನಲ್ಲಿ ಸೂಳೆಗಾರಿಕೆ
ಮಾಡುತ್ತ . . .''
ತಟ್ಟನೆ ಅವಳು ಪುನಃ ಹುಬು ಗ೦ಟಿಕ್ಕಿ--
"ಬುದ್ಧೀ, ಆ ಮಾತು ನನಗೆ ಹೇಳ್ಬೇಡಿ! ' ಎ೦ದಳು .
" ನೋಡು ನಾನು ನಿನ್ನ ಗಂಡನಲ್ಲ ; ನೀನು ಎಷ್ಟು ರಾತ್ರಿ ಯಲ್ಲಿ
ನನ್ನ ಹತ್ತಿರ ಬಂದಿದ್ದೀಯಲ್ಲ -ಇದು ಯಾರು ಮಾಡುವ ಕೆಲಸ? 'ಸೂಳೇ
ರಲ್ಲ' ಎಂದು ಮಾತ್ರ ಹೇಳುವೆಯಲ್ಲ ! ''
ನಾವು ಸೂಳೇರ ಬುದ್ದೀ, ನಾವು ಸೂಳೇರಲ್ಲ! ಸೂಳೇರಿಗೆ ದುಡ್ನಾಸೆ
ನನ್ನೊಡ್ಯಾ. ಅವರು ಜನಾಜನಾ ನೋಡಾಕಿಲ್ಲ. ಅವರಿಗೆ ಹರಕೆಗಿರಕೆ
ಏನೂ ಇಲ್ಲ; ಆ ಕಸಬೇ ಅವರಿಗೆ ಜೀವನ.''
"ನೀವು?"
"ನಾವು ಹಣಾಗಿಣಾ ಮುಟ್ಟಾಕಿಲ್ಲ ನನ್ನೊಡ್ಯಾ. ಅಂತಾ ಇಂತಾ
ಜನ್ರನ್ನ ಹತ್ರ ಸೇರ್ಸಾಕಿಲ್ಲ. ತಮ್ಮಂತಾ ಕುಲೀನ್ರು ಯಾರಾದ್ರು ಬಂದ್ರೆ
ಅವು ಸ್ಯಾವೆಮಾಡಿ ಹರಕೆ ಒಪ್ಪಿಸ್ತೀವಿ. ನಮ್ಮನ್ನ ಸೂಳೇರು ಅನ್ಬ್ಯಾಡಿ
ನ್ನ ದೇವರೇ. "
“ ಹಾಗಾದ್ರೆ ಈ? ನಿನ್ನ "ಸ್ಯಾವೆ' ನಿನ್ನ ತಂದೆ ತಾಯಿಗೆ ಗೊತ್ತೊ? ''
" ಇಲ್ವೆ ಬುದ್ಧೀ ! ಅವ್ರು ಹರ್ಕೆ ಮಾಡ್ಕೊಂಡೋರು ಅವ್ರಿಗೆ ಗೊತ್ತಿಲ್ದೇ
ಇರ್ತದಾ?”
"ಸರಿ, ಅವರೇನೋ ಕಳಿಸಿದರು. ಆದರೆ ನಾನು ಇದಕ್ಕೆ ಒಪ್ಪು
ತ್ತೀನಿ-ಇಲ್ಲಾ ಅನ್ನೋದು ಅವರಿಗೇನು ಗೊತ್ತು? ಯಾವ ಧೈರ್ಯದ
ಮೇಲೆ ನಿನ್ನ ನನ್ನ ಹತ್ರ ಕಳಿಸಿದರು? ''
ಈ ಪ್ರಶ್ನೆಗೆ ಕೂಡಲೆ ಉತ್ತರ ಬರಲಿಲ್ಲ. ಮುಗುಳ್ನಗೆ ನಗುತ್ತ
ಕೊರಳನ್ನುಒಂದು ವರಸೆಯಲ್ಲಿ ಬಳುಕಿಸಿ ಓರೆಗಣ್ಣಿನಿ೦ದ ನೋಡುತ್ತ--
ನೀವು--ಕೇಳಿದರಂತೆ--ನಮ್ಮ ಆ ಆಳ್ನ __ನಾನು ಯಾರು--ಏನು--
ಎತ್ತ ಅಂತ! '' ಎಂದು ಸ್ವಲ್ಪ ನಾಚಿಕೆಯಿಂದ ಹೇಳಿದಳು.
೩೮ ನಾನು ಕೊಂದ ಹುಡುಗಿ
ಈಗ ನನಗೆ ಅರ್ಥವಾಯಿತು! ನಾನು ಆಳನ್ನು ಕೇಳಿದಾಗ ಅವನು
ವ್ಯ೦ಗ್ಯವಾಗಿ ನಕ್ಕು "ಯಾಕೆ ಬುದ್ಧಿ " ಎಂದು ಕೇಳಿದ್ದು ! " ಅಯ್ಯೋ! [
ಭಗವಂತಾ | '' ಅಂದುಕೊಂಡೆ.
"ಹೌದು, ಚೆನ್ನಮ್ಮಾ ಕೇಳಿದೆ; ಸುಮ್ಮಗೆ ತಿಳಿದುಕೊಳ್ಳೋಣಾ
ಅಂತ ಕೇಳಿದೆ ಅಷ್ಟೆ. ಚೆನ್ನಮ್ಮಾ, ನನ್ನ ಲಕ್ಷ್ಮಿಯ ಆಣೆಗೂ ಬೇರೆ
ಯಾವ ಆಸೆಯೂ ಇಲ್ಲ."
"ಅಯ್ಯೋ! ಬಿಡೀ ನನ್ನ ದೇವರೇ, ಈಗೇನಾಯ್ತು. ಇದಕ್ಕೆಲ್ಲಾ
ನೀವು ಆಣೆಗೀಣೆ ಇಡಬ್ಯಾಡ್ರಿ !"
" ಹಾಗಲ್ಲ ಚೆನ್ನಮ್ಮಾ, ಕೇಳು, ಹೋದ ಪ್ರಾಣ ಮತ್ತೆ ಬರುತ್ತೆಯೆ ?''
ಚೆನ್ನಮ್ಮ, ಸುಮ್ಮನಿದ್ದಳು.
“ಹೇಳು"
"ಇಲ್ಲ ನನ್ನೊಡ್ಯಾ.'
" ಹಾಗಾದ್ರೆ ಕೇಳು, ಹೆಂಗಸಿಗೆ ಮಾನವೇ ಪ್ರಾಣ. ಮಾನ ಕಳ
ಕೊಂಡ ಹೆಂಗಸು ನಾಯಿಗಿಂತ ಕಡೆ. ಇರೋದೇ ಮಾನ ನಿಮಗೆ ;
ನೀವು ಅದನ್ನ ಹೀಗೆ ಮಾರಿಕೋಬಾರದು. ಮಾನ ಬಿಟ್ಟ ಹೆಂಗಸಿಗೆ
ನರಕಲ್ಲೂ ಸ್ಥಳವಿಲ್ಲಾ ಅಂತ ಹೇಳ್ತಾರೆ ತಿಳಿದವರು. "
" ಬುದ್ದೀ ನೀವು ಹೇಳೋದು ಲಗ್ನ ಆಗಿ ಗಂಡ ಇರೋರ್ಗೆ ಸರಿ
ನನ್ನೊಡ್ಯಾ. ಅವ್ರು ನಮ್ಮ ಹಾಗಿದ್ರೆ ಅವರನ್ನ ಜಾತಿಯಿಂದ ಹೊರಗೆ
ಹಾಕ್ತಾರೆ ನಮಗೆ ಹಾಗಲ್ಲಾ ದೇವರೇ ; ನಮ್ಮನ್ನ ದೇವರಿಗೆ ಬಿಟ್ಟಿ
ದಾರೆ. ನಮಗೆ ನಿಮ್ಮ೦ತಾ ಕುಲೀನರ ಸ್ಯಾವೇನೇ . ..."
"ಅಯ್ಯೋ, ಚೆನ್ನಮ್ಮಾ, ನಿನಗೆ ತಿಳೀದು. ಇಲ್ಲಿ ಕೇಳು, ದೇವರ
ಹೆಸರಿನಲ್ಲಿ ಹೆಂಗಸು ಮಾನಗೆಟ್ಟರೆ ಅವನಿಗೆ ಪ್ರೀತೀನೇ ? ದೇವರಲ್ಲಿ ಹರಕೆ
ಇದ್ದರೆ ಆ ದೇವರ ಸೇವೆಮಾಡು. ಯಾರು ಬೇಡ ಅನ್ನುತ್ತಾರೆ. ಅದು
ಬಿಟ್ಟು ಹೀಗೆ ಮಾನವನ್ನು ಮಾರಿಕೊಳ್ಳವುದೆ?''
"ಬುದ್ಧೀ, ತಮ್ಮಂತ ಕುಲೀನರೇ ನಮಗೆ ದೇವರು, ನನ್ನೊಡ್ಯಾ.
ನಿಮಗೆ ಸ್ಯಾವೆಮಾಡಿದರೆ ಅದೇ ನಮ್ಮ ಪುಣ್ಯ."
ಅವಳ ಮಾತುಗಳನ್ನು ಕೇಳಿ ನನ್ನ ಹೃದಯದಿಂದ "ಅಯ್ಯೋ,
ದೇವರೇ! ನಿನ್ನ ಹೆಸರಿನಲ್ಲಿ ನಿನ್ನನ್ನು ಮೆಚ್ಚಿಸುವುದಕ್ಕೋಸ್ಯರ ಎಷ್ಟು
ಅನ್ಯಾಯ--ಎಷ್ಟು ಪಾಪ ನಡೆಯುತ್ತಿದೆ!” ಎಂಬ ಉದ್ಗಾರವು ಹೊರ
ನಾನು ಕೊಂದ ಹುಡುಗಿ ೩೯
ಟಿತು ಸ್ವಲ್ಪ ಕಾಲ ಏನೂ ಮಾತನಾಡದೆ ನನಗೆ ನಾನೇ ಯೋಚಿಸ
ತೊಡಗಿದೆ.
ಇದೇನು ಈ ಜನರ ಮೌಲ್ಯ ! ಪ್ರಸಂಗದಲ್ಲಿ ಇಂತಹ ಅಸಹ್ಯಕರ
ವಾದ ವಾಡಿಕೆಯು ಉಂಟೆ ! ದೇವರಿಗೆ ಬಿಡುವುದೇನೋ ಸರಿ ಕೇಳಿ
ದ್ದೇವೆ. ಅದು ಅವರವರ ಭಕ್ತಿ, ಆದರೆ ಈ ಕೆಲಸ! ಹೀಗೆಯೇ ?-ಈ
ಜನರು ದೇವರಿಗೆ ಹರಕೆಯನ್ನೊಪ್ಪಿಸುವುದು? ಭಗವಂತನ ದಿವ್ಯವಾದ
ಹೆಸರಿನಲ್ಲಿ ಈ ಜನರು ಅಂತಹ ಹೇಯವಾದ ಕೆಲಸವನ್ನು ಮಾಡುತ್ತಿರು
ವರಲ್ಲಾ- ಇವರ ಗತಿ ಏನು? ಈ ಹುಡುಗಿಯು ಖಂಡಿತವಾಯ ಏನೂ
ಅರಿಯದ ಹಳ್ಳಿಗಾಡಿನ ಮುಗ್ಧ ಯುವತಿಯೇ ಸರಿ! ಜಾರಸ್ತ್ರೀಯರ
ಲಕ್ಷಣವೇ ಬೇರೆ ; ಇವಳ ರೀತಿಯೇ ಬೇರೆ. ಇವಳು ತನ್ನ ಜನರ ಅಸಹ್ಯ
ಕರವಾದ ವಾಡಿಕೆಗೆ ಬಲಿಬಿದ್ದ ಮುಗ್ಧೆ. ತಾನು ಮಾಡುತ್ತಿರುವ ಕೆಲಸ
ದಿಂದ ದೇವರಿಗೆ ಹರಕೆ ತಲಪುತ್ತದೆಯೊಂದೇ ಇವಳ ನಂಬಿಕೆ. ಆಯ್ಯೋ!
ದೇವಾ! ತಂದೆತಾಯಿಗಳ ಕಯ್ಯಾರ ತಮ್ಮ ಒಬ್ಬ ಮಗಳ ಜೀವ
ವನ್ನು ಪಾಪದಿಂದ ತುಂಬುತ್ತಿರುವರಲ್ಲಾ ಅವರ ಗತಿ ಏನು? ಇವಳ
ಗತಿ ಏನು? ಅವರೇನೋ ತಮ್ಮ ಹರಕೆಯಿಂದ ಮಗಳು ಬದುಕಿದ
ಳೆಂದು ತಿಳಿದಿರಬಹುದು. ಆದರೆ ಈಗ ದಿನದಿನವೂ ಅವಳು ಮಾಡುತ್ತಿ
ರುವ ಕೆಲಸದಿಂದ, ಅವಳ ಜೀವನಕ್ಕೆ ಆತ್ಮರೂಪವಾದ ಸ್ತ್ರೀತ್ವವೇ ಸಾಯು
ತ್ತಿದೆಯಲ್ಲಾ! ಇದನ್ನು ಅವರು ತಿಳಿಯುವ ಬಗೆ ಹೇಗೆ? ಅಗ, ಮಗುವಾಗಿ
ದ್ದಾಗ ಒಂದು ದಿನ, ಒಂದು ಕ್ಷಣದಲ್ಲಿ ಸಾಯುವ ಬದಲು, ಈಗ ದಿನ
ದಿನವೂ ಕ್ಷಣಕ್ಷಣವೂ ಸ್ವಲ್ಪ ಸ್ವಲ್ಪವಾಗಿ ಸಾಯುತ್ತಿರುವರಲ್ಲಾ ! ಅದನ್ನು
ಇವಳು ತಿಳಿದಿದ್ದಾಳೆಯೇ ! ಇಲ್ಲ! ಅದೇ ಆಶ್ಚರ್ಯ! ತಾನು ಮಾಡುತ್ತಿ
ರುವ ಕೆಲಸ ಸರಿಯಾದದ್ದು-ದೇವರಿಗೆ ಒಪ್ಪಿದ ಕೆಲಸ ಅವನು ಉಳಿಸಿ
ಕೊಟ್ಟ ಜೀವವನ್ನು ಹೀಗೆ ಕಳೆದರೆ ಅದು ಅವನಿಗೆ ಇಷ್ಟವಾದ ಸೇವೆ-
ಎಂದು ಮೊದಲಾಗಿ ಅವಳ ದೃಢವಾದ ನಂಬಿಕೆ, ಮದುವೆಯಾದ ಹೆಂಗ
ಸಿನಲ್ಲಿ ಯಾವ ಕೃತ್ಯವನ್ನು ಅವಳು ಕೆಟ್ಟದು ಎಂದು ಹೇಳುವಳೋ
ಆ ಕೃತ್ಯವನ್ನು ತನ್ನ ಜೀವನದ ಧರ್ಮ ಎಂದು ಅನುಸರಿಸುತ್ತಾಳೆ ! ಇದಕ್ಕೆ
ಅವಳ ತಂದೆತಾಯಿಗಳೂ ಸಹಾಯ! ಪಾಪ! ಅವರಾದರೂ ಏನು ಮಾಡಿ
ಯಾರು ? ಅವರ ಜಾತಿಯ ವಾಡಿಕೆಗೆ ಬಲಿಬಿದ್ದಿದ್ದಾರೆ ! • • •
ಬಲು ದಾರುಣವಾದ ಈ ಯೋಚನೆಗಳಿಂದ ನನ್ನ ಎದೆ ಬಿರಿದಂತಾ
೪೦ ನಾನು ಕೊಂದ ಹುಡುಗಿ
ದೊಡ್ಡದಾಗಿ ನಿಟ್ಟುಸಿರು ಬಿಟ್ಟೆ, ಚೆನ್ನಮ್ಮ ಸುಮ್ಮನೆ ಸೆರಗಿನ ತುದಿ
ಯನ್ನು ತಿರುವುತ್ತಿದ್ದವಳು ನಾನು ನಿಟ್ಟುಸಿರು ಬಿಟ್ಟುದನ್ನು ಕೇಳಿ ನನ್ನ
ಕಡೆಗೆ ನೋಡಿದಳು. ಅವಳ ಮುಖದ ಮೇಲೆ ಆಗಲೇ ಏನೋ ಕಳವಳ
ತೋರುತ್ತಿತ್ತು. ಇಷ್ಟು ದಿನಕ್ಕೆ ಎಲ್ಲಿಯಾದರೂ ಮದುವೆಯಾಗಿ ನಾಲ್ಕು
ಜನರಂತೆ ತಾನೂ ಸುಖವಾಗಿ ಸಂಸಾರಮಾಡಿಕೊಂಡಿರುವುದು ಬಿಟ್ಟು,
ಈ ಮುಗ್ಧ ಅವರ ಯಾವುದೋ ಒಂದು ಅಸಹ್ಯವಾದ ವಾಡಿಕೆಗೆ ಬಲಿ
ಯಾಗಿದ್ದಾಳಲ್ಲಾ ಎಂಬ ಏನೋ ತಡೆಯಲಾರದ ಒಂದು ಸಂಕಟದಿಂದ
ನನ್ನ ಎದೆ ತಲ್ಲಣಿಸಿ, ಕಣ್ಣುಗಳಲ್ಲಿ ಹನಿಗೂಡಿತು.
" ಚೆನ್ನಮ್ಮಾ, ನಿನ್ನ ಭಾಗದ ದೇವರೇ ನಿನ್ನನ್ನು ಕಾಪಾಡಬೇಕು''
ಎಂದು ಹೇಳಿ ಕಣ್ಣೊರಸಿಕೊಂಡೆ. ಚೆನ್ನಮ್ಮನಿಗೆ ನಿನ್ನ ಕಣ್ಣೀರನ್ನು
ನೋಡಿ ಸ್ವಲ್ಪ ಗಾಬರಿಯಾಗಿರಬೇಕು. ನನ್ನ ಹತ್ತಿರಕ್ಕೆ ಸರಿದು ಬಂದಳು.
ಅವಳು ಹಾಗೆ ನನ್ನ ಹತ್ತಿರಕ್ಕೆ ಸರಿದು ಬಂದಾಗ ನನಗೆ ದೂರ ಸರಿಯಲು
ಮನಸ್ಸು ಬರಲಿಲ್ಲ. ಅವಳು ಮನಸಾ ಪಾಪಿಷ್ಟೆಯಾಗಿರಲಿಲ್ಲ. ಅಜ್ಞಾನದ
ಪಾಪಕ್ಕೆ ಅವಳ ದೇಹನ್ನ ಮಾತ್ರ ಭಾಗಿಯಾಗಿತ್ತು. ತಾವರೆ ಎಲೆಯ
ಮಧ್ಯದಲ್ಲಿ ಒಟ್ಟುಗೂಡಿ ನಿಂತು, ವಜ್ರದಂತೆ ಥಳಥಳಿಸುವ ನಿರ್ಮಲವಾದ
ಮಂಜಿನ ಹನಿಯಂತೆ ಅವಳ ಆತ್ಮವು ಪರಿಶುದ್ಧವಾಗಿತ್ತು. ಅವಳ ಸರಳತೆ
ಯನ್ನು ನೋಡಿ ನನಗೆ ಅತ್ಯಂತ ಕನಿಕರವಾಯಿತು ಅವಳನ್ನು ನೋಡಿದ
ಹಾಗೆಲ್ಲಾ, ಅವಳ ವಿಷಯವನ್ನು ಯೋಚಿಸಿದ ಹಾಗೆಲ್ಲಾ ನನ್ನ ಆರಿದ
ಕಣ್ಣುಗಳಲ್ಲಿ ಪುನಃ ಪುನಃ ನೀರೂರಿಬಂತು. ನನ್ನ ಕಣ್ಣೀರಿನಲ್ಲಿ ಅವಳ
ಕಲುಷಿತವಾದ ದೇಹವನ್ನು ತೊಳೆಯೋಣವೆನ್ನಿಸಿತು. ನನ್ನ ದೇಹವೂ
ಆತ್ಮವೂ ಅವಳಿಗಾಗಿ ಅತ್ಯಂತ ಸ್ನೇಹಮಯವಾಯಿತು. ಮೆಲ್ಲನೆ ಅವಳ ಕೈಹಿಡಿದುಕೊಂಡೆ. ನನ್ನ ಮೈ ಸ್ವಲ್ಪ ನಡುಗಿತು. ಕೈಬಿಡದೆ, ಹಾಗೆಯೆ
ಅವಳ ಬೆರಳುಗಳನ್ನು ಸವರುತ್ತ " ಚೆನ್ನಮ್ಮಾ ” ಎಂದು ಮೆಲ್ಲನೆ ಕರೆದೆ.
ನನ್ನ ಸ್ನೇಹ, ನನ್ನ ಕನಿಕರ ಅವಳ ಆತ್ಮವನ್ನು ಸೋಂಕಿತೆಂದು ತೋರು
ತ್ತದೆ. ನಾನು ಕೈಹಿಡಿದು ಅವಳ ಹೆಸರನ್ನು ಹೇಳಿದೊಡನೆಯೇ ಅವಳು
ಇನ್ನೂ ಹತ್ತಿರಕ್ಕೆ ಸರಿದು, ತಲೆಯನ್ನು ತಗ್ಗಿಸಿ ಬಹು ಮೃದುವಾಗಿ
“ಏನು ನನ್ನ ದೇವರೇ " ಎಂದು ಕೇಳಿದಳು. ಅವಳ ಮುಖದ ಮೇಲೆ
ಏನೋ ಒಂದು ವಿಧದ ಯೋಚನೆಯೋ-ಕಳವಳವೋ ತೋರುತ್ತಿತ್ತು.
ನಾನು ಅವಳ ಮುಖವನ್ನೇ ನೋಡುತ್ತ-
ನಾನು ಕೊಂದ ಹುಡುಗಿ ೪೧
"ನೋಡು ಚೆನ್ನಮ್ಮ, ನಾನು ನಿನ್ನ ದೇವರು ಅಂಶ ನೀನು ಹೇಳಲಿ
ಲ್ಲವೆ?"
"ಹೌದು ನನ್ನೊಡ್ಯಾ, ನೀವೇ ನ ನನ್ನ ದೇವರು.''
" ಹಾಗಾದರೆ ನಾನು ಹೇಳಿದ ಹಾಗೆ ನೀನು ಕೇಳಬೇಕಲ್ಲವೆ ?"
ನಿಮ್ಮ ದಾಸಿ ಇದೀನಿ, ಹೇಳಿ ನನ್ನ ದೇವರು.''
" ನೀನು ಇನು ಮುಂದೆ ಈ ಪಾಪದ ಕೆಲಸವನ್ನು ಮಾಡಕೂಡದು
ತಿಳಿಯಿತೆ ? ''
" ಮತ್ತೆ--ಹರಕೆ ?--ದೇವರಿಗೆ ? ''
" ಅಯ್ಯೋ ಆ ಹರಕೆ ಹಾಳಾಯ್ತು ! ನೋಡು, ಇಂದು ನಾನು ನಿನ್ನ
ದೇವರು ಅಂತ ಹೇಳಿದೆ. ಇದಕ್ಕೆ ಹಿಂದೆ ನೀನು ಇನ್ಯಾರ ಸೇವೆಯನ್ನೂ
ಮಾಡಲಿವೆ ?"
ಚೆನ್ನಮ್ಮ ಮಾತನಾಡಲಿಲ್ಲ. ತಲೆಯನ್ನು ತಗ್ಗಿಸಿದಳು.
"ನೋಡು ಇದಕ್ಕೆ ಹಿಂದೆ ನೀನು ಇನ್ನೂ ಯಾರ ಯಾರ ಸೇವೆ
ಯನ್ನೋ ಮಾಡಿದ್ದೀಯೆ. ಇಂದು ನಾನು ದೇವರು ಎಂದು ಹೇಳಿ ನನ್ನ
ಸೇವೆಗೆ ಬಂದಿದ್ದೀಯೆ, ಒಬ್ಬರು ತಿಂದ ಎ೦ಬಲನ್ನು ಇನ್ನೊಬ್ಬರಿಗೆ ಕೊಡ
ಬಹುದೆ ? ದೇವರಿಗೆ ಈ ಎಂಜಲ ಹರಕೆಯೆ ? ಚೆನ್ನಾ, ನಿನಗೆ ತಿಳಿಯದು--
ಇದು ಬಹಳ ಪಾಪಕರವಾದದು --ಎಂದು. ತಿಳಿದಿದ್ದರೆ ಎಂದಿಗೂ ನೀನು
ಈ ಪಾಪದ ಕೆಲಸವನ್ನು ಮಾಡುತ್ತಿರಲಿಲ್ಲ. ಸ್ಪಲ್ಪ ಯೋಚಿಸಿ ನೋಡು--
ನಿನಗೂ ಸೂಳೆಗೂ ಏನು ವ್ಯತ್ಯಾಸ? ಅವಳಿಗೆ ಅದು ಜೀವನ, ನಿನಗೆ
ಜೀವನಕ್ಕೆ ಕಡಮೆಯಿಲ್ಲ. ಅದರೆ ಪಾಪವೇನೋ ಒಂದೇ ! ದೇವರು ಈ
ಪಾಪವನು ಎಂದಿಗೂ ಒಪ್ಪನು.
ಚೆನ್ನಮ್ಮ ಮೌನವಾಗಿ ಎಲ್ಲವನ್ನೂ ಕೇಳಿದಳು. ಮೊದಲಿನ ಭ್ರಾಂತಿ,
ಕಳವಳದ ಚಹ್ನೆ ಅವಳ ಮುಖದಿಂದ ಜಾರಿತು. ಸ್ಪಲ ಸ್ವಲ್ಪವಾಗಿ ಮುಖವು
ಬಾಡಿತು. ದೇಹವು ಕುಗ್ಗಿತು. ದೃಷ್ಟಿ ನೆಲವನ್ನು ಹಿಡಿಯಿತು. ಮೆಲ್ಲಗೆ
ಅವಳ ಕೈಯನ್ನು ಅಲುಗಿಸಿ “ಚೆನ್ನಾ" ಎ೦ದು ಕರೆದೆ. ತಲೆಯೆತ್ತಿ ನನ್ನ
ಕಡೆ ನೋಡಿದಳು. ಅವಳ ದೃಷ್ಟಿಯಲ್ಲಿ ದಾರಿತಪ್ಪಿ ಅಲೆಯುತ್ತಿದ್ದ ಮಗುವಿನ
ಅಸಹಾಯತೆಯ ಛಾಯೆ ತೋರುತ್ತಿತ್ತು. ನನ್ನ ಮಾತು ಸರಿ-ಎಂದು
ಅವಳು ಮನಗಂಡಿರಬೇಕು.
"ಚೆನ್ನಾ, ನಾನು ಹೇಳಿದ್ದು ಸರಿಯಲ್ಲವೆ?'' ಬ೦ದು ಕೇಳಿದೆ.
೪೨ ನಾನು ಕೊಂದ ಹುಡುಗಿ
ಚೆನ್ನಮ್ಮ ಬಾಯಿ ಬಿಡಲ್ಲ. ತಲೆಯನು ಪುನಃ ತಗ್ಗಿಸಿದಳು. ನಾನು
ನೋಡುತ್ತಿದ್ದ ಹಾಗೆಯೇ ಎರಡುಹನಿ ಕಣ್ಣೀರು ಪಳಪಳನೆ ಅವಳ ಕನ್ನೆಗಳ
ಮೇಲೆ ಉರುಳಿಬಿದ್ದುವು. ಅದೇ ನನಗೆ ಅವಳು ಕೊಟ್ಟ ಮೌನವಾದ
ಉತ್ತರವಾಯಿತು. ಅವಳ ಶುಭ್ರವಾದ ಆತ್ಮವನ್ನು ಆವರಿಸಿದ್ದ ಅಜ್ಞಾನದ
ತೆರೆಯನ್ನು ತೆಗೆದೆಸೆಯುವ ಕೆಲಸ ನನ್ನ ಪಾಲಿಗಿತ್ತು ! ಯಾವುದೋ
ಸ್ಥಳವನ್ನು ಸೇರಬೇಕೆಂದು ಒಂದು ಮಾರ್ಗವನ್ನು ಹಿಡಿದು, ಅದರಲ್ಲಿ
ಹೆಜ್ಜೆ ಹಾಕುತ್ತ, ಹೆಜ್ಜೆ ಇಟ್ಟಹಾಗೆಲ್ಲಾ ಆ ಸ್ಥಳವು ಹತ್ತಿರವಾಗುತ್ತಿದೆ
ಯೆಂದು ನಂಬಿ ಬಹುದೂರ ನಡೆದುಹೋದಮೇಲೆ, ಯಾರಾದರೂ ದಾರಿ
ಯಲ್ಲಿ ಸಿಕ್ಕು, ನಾವು ಹೊರಟ ಸ್ಥಳಕ್ಕೆ ಆದು ಮಾರ್ಗವಲ್ಲವೆಂದೂ ಆ
ದಾರಿಯಲ್ಲಿ ನಡೆದಷ್ಟೂ ನಾವು ಸೇರಬೇಕೆಂದಿರುವ ಸ್ಪಳದಿ೦ದ ದೂರ
ವಾಗುತ್ತಿರುವೆವೆಂದೂ ಹೇಳಿದರೆ ಹೇಗಿರುತ್ತದೆ! ನಾನು ನನ್ನ ಮಾತು
ಗಳಿಂದ ಚೆನ್ನಮ್ಮನ ಹೃದಯದಲ್ಲಿ ಸ್ಪಲ್ಪ ಹೆಚ್ಚು ಕಡಮೆ ಅದೇ ವಿಧವಾದ
ಭಾವನೆಯನ್ನು೦ಟುಮಾಡಿದ್ದೆ.
ಚೆನ್ನಮ್ಮ ಬಹಳ ಅತ್ತಳು. ನಾನು ಅವಳನ್ನು ಸಮಾಧಾನಮಾಡುತ್ತ--
... "ನೋಡು ಚೆನ್ಪಾ, : ನಿನ್ನನ್ನು ಕಂಡರೆ ನನಗೆ ಸಿಟ್ಟಾ ಗಲಿ, ಅಸಹ್ಯ
ವಾಗಲಿ ಇಲ್ಲ. ಹೇಳು ಸಿಟ್ಟೆ ನನಗೆ? '' ಎಂದು ಕೇಳಿದೆ.
ಬಹು ನೊಂದ ಧ್ವನಿಯಿಂದ ಚೆನ್ನಮ್ಮ ಹೇಳಿದಳು--
"ಇಲ್ಲ ನನ್ನೊಡ್ಯಾ"
"ಸರಿ, ನಿನಗೆ ನನ್ನಮೇಲೆ ಸಿಟ್ಟೇನಾದರೂ . ..."
" ಅಯ್ಯೋ! ನನ್ನ ದೇವರೇ | ಅ ಹೇಳ್ಬೇಡಿ ನಿಮ್ಮನ್ನ ಕ೦ಡ್ರೆ,
ನನ್ನೊಡ್ಯಾ ನಿಮ್ಮ ಕಾಲ್ಕೆಳ್ಗೆ ಬಿದ್ದು ಹೊರಳಾಡೋಣಾ ಅಂತದೆ
ಜೀವ! " ಎಂದು ಹೇಳಿ ನನ್ನ ಕಾಲು ಹಿಡಿದು ತನ್ನ ಹಣೆಯಿಂದ ಅದನ್ನು
ಮುಟ್ಟುವುದರಲ್ಲಿದ್ದಳು ನಾನು ಅಷ್ಟಕ್ಕೆ ಬಿಡದೆ ಅವಳನ್ನು ಎಬ್ಬಿಸಿ
"ಸರಿ ಹಾಗಾದರೆ, ಎಲ್ಲಿ ನನ್ನ ಎದೇಮೇಲೆ ಕೈ ಇಟ್ಟು ಆಣೆ ಹಾಕು-
ಇನ್ಮೇಲೆ ಈ ಕೆಲ್ಸ ಬಿಡ್ತೀನಿ' . .. ಅಂತ'' ಎಂದು ಹೇಳಿದೆ.
ಚೆನ್ನಮ್ಮ ನನ್ನ ಎದೆಯ ಮೇಲೆ ಕೈ ಇಟ್ಟಳು. ಅವಳ ಮುಗ್ದವಾದ
ನೊಂದ ನೋಟ ನನ್ನ ಕಣ್ಣುಗಳನ್ನು ಹೊತ್ತು ಹೃದಯಕ್ಕಿಳಿಯಿತು.
ನೊಂದ ನೋಟ--ನೊಂದ ದ್ವನಿ, ಕಂಪಿಸುತ್ತ ಮೆಲ್ಲಗೆ ಹೇಳಿದಳು.
"ದೇವಾ--ಇನ್ಮೇಸಲೆ--ಈ ಕೆಲ್ಸಾ --ಮಾಡೋಕಿಲ್ಲ.'
ನಾನು ಕೊಂದ ಹುಡುಗಿ ೪೩
ನನ್ನ ಎದೆಯ ಮೇಲಿಂದ ಏನೋ ಭಾರವನ್ನು ಇಳಿಸಿದಂತಾಗಿ ದೊಡ್ಡ
ದಾಗಿ ನಿಟ್ಟುನಿರು ಬಿಟ್ಟೆ. ರಾತ್ರೆ ಬಹಳ ಹೊತ್ತಾಗಿಹೋಗಿತ್ತು. ಆದರೂ
ನಿದ್ದೆ ಮಾತ್ರ ಬರುವಂತೆ ತೋರಲಿಲ್ಲ. ಮನದಲ್ಲಿ ಶಾಂತತೆ ಹರದಾಡತೊಡ
ಗಿತು. ಚೆನ್ನಮ್ಮ ಒಂದು ಬಾರಿ ಆಕಳಿಸಿದಳು. ನನಗೆ ಅದೇ ನೆವವಾಗಿ
" ಚೆನ್ನಾ, ನೀನು ಹೋಗಿ ಮಲಗಿಕೋ" ಎ೦ದು ಹೇಳಿ ಎದ್ದೆ.
ಅವಳೂ ಎದ್ದಳು. ಬಾಗಿಲವರೆಗೂ ಅವಳೊಡನೆ ಹೋಗಿ ನಾನೇ ಬಾಗಿ
ಲನ್ನು ತೆಗೆದೆ." ಬಾಗಿಲಲ್ಲಿ ಪುನಃ ಅವಳ ಕೈಹಿಡಿದು ನನ್ನ ಕಡೆಗೆ ತಿರುಗಿಸಿ
ಕೊಂಡು ಜೆನ್ನಾ, ಜೆನ್ಪಾ, ದೇವರಾಣೆಗೂ ನನಗೆ ನಿನ್ನ ಮೇಲೆ
ಸಿಟ್ಟಿಲ್ಲ-ಎಲ್ಲಿ-'' ಎ೦ದು ಹೇಳಿ ನನ್ನ ಎರಡು ಕೈಗಳಿಂದಲೂ ಅವಳ ಮುಖ
ವನ್ನು ಹಿಡಿದು, ಹಣೆಯ ಮೇಲೆ ಒಂದು ಮುತ್ತು ಕೊಟ್ಟೆ. ಚೆನ್ನಮ್ಮ
ಹೊರಟುಹೋದಳು.
೬
ಇದ್ದಕ್ಕಿದ್ದ ಹಾಗೆಯೇ ಎಚ್ಚರವಾಯಿತು ! ನೋಡಿದರೆ ಕ ರಿಯಪ್ಪ
ನವರು! ಅವರೇ ಕೂಗಿ ಎಬ್ಬಿಸಿದ್ದು. ಅವರು ಒಳಗೆ ಹೇಗೆ ಬಂದರೋ
ತಿಳಿಯಲಿಲ್ಲ. ಬಹುಶಃ ರಾತ್ರ ಬಾಗಲ ಅಗಣಿ ಹಾಕುವುದನ್ನು ಮರೆತಿದ್ದೆ
ನೇನೋ ಅಂದುಕೊಂಡೆ.
" ಏನು ಯಜಮಾನರೇ?'' ಎ೦ದು ಕಣ್ಣು ಉಜ್ಜಿಕೊಳ್ಳುತ್ತ ಎದ್ದೆ.
"ಅಯ್ಯೋ ? ಏನು ಹೇಳಲಿ ಸ್ವಾಮೀ! ಅಯ್ಯೋ ನನ್ನ ಕಂದಾ!
ನನ್ನ ಚೆನ್ನಾ! ಎ೦ದು ಮಾತು ಪೂರೈಸದೆ ಕರಿಯಪ್ಪನವರು ಕೆಳಗೆ
ಬಿದ್ದು ಉರುಳಾಡತೊಡಗಿದರು. ಏನೋ ಒಂದು ತರದ ಅವ್ಯಕ್ತವಾದ
ಭೀತಿಯಿಂದ ನ ನನ್ನ ಎದೆ ಬಿರಿದು ರಕ್ತ ಚಿಮ್ಮಿದ ಹಾಗಾಯಿತು. ಅಷ್ಟು
ಹೊತ್ತಿಗೆ ಇನ್ನು “ಯಾರೋ ಬಂದು " ಸ್ವಾಮೀ ಚೆನ್ನಮ್ಮ ತೋಟದ
ಬಾವಿಗೆ ಬಿದ್ದು ..."
ಅವರು ಮಾತು ಪೂರೈಸುವ ತನಕ ನನ್ನ ಜೀವ ತಡೆಯಲಿಲ್ಲ. ಹಾಸಿಗೆ
ಯಿಂದ ಎದ್ದವನೇ ಹುಚ್ಚನಂತೆ ತೋಟದ ಬಾವಿಯ ಕಡೆಗೆ ಓಡತೊಡ
ಗಿದೆ! ಬಾವಿಯ ಹತ್ತಿರ ಹತ್ತು-ಹನ್ನೆರಡು ಜನ ಗುಂಪು ಕೂಡಿ ನಿಂತಿ
ದ್ದುದು ಕಾಣಿಸಿತು. ಇನ್ನೂ ಜೀವವಿರಬಹುದೇನೋ ಎಂಬ ಒಂದು
ಹುಚ್ಚು ಆಸೆ! ಅಯ್ಯೋ! ಹುಚ್ಚು ಆಸೆಯೇ ಸರಿ! ರಾತ್ರಿಯೇ ಅವಳು
೪೪ ನಾನು ಕೊಂದ ಹುಡುಗಿ
ಹೋಗಿ ಬಿದ್ಧಿರಬೇಕು-- ಇಲ್ಲಿವರೆಗೂ ಜೀವ ಇರುವುದುಂಟೇ !--ಎಂಬ
ನಿರಾಶೆ! ಹತ್ತರ ಹೋಗಿ ನಿಂತೆ. ಎಲರೂ ದಾರಿಬಿಟ್ಟರು. ನೋಡಿದೆ!
ಅಯ್ಯೋ | । ಭಗವಂತಾ! ಅದೆಂತಹ ನೋಟನನ್ನು ನೋಡಿದೆನೋ!
ಎದೆಯ ರಕ್ತ ಕಣ್ಣಿನಲ್ಲಿ ಚಿಮ್ಮಿ ಬಂದಂತಾಯಿತು. ಕಣ್ಣುಗಳು ಸಿಡಿದು
ಕತ್ತಲೆ ಕವಿಯಿತು.
* * * *
ಅಷ್ಟೇ ನನಗೆ ಜ್ಞಾಪಕ ಪುನಃ ನನಗೆ ಎಚ್ಚರವಾದಾಗ ಅಲ್ಲಿ ನಿಂತಿ
ದವ ರಲ್ಲಿ ಒಬ್ಬಿಬ್ಬರು ನ ನನ್ನ ತಲೆಗೂ ಮುಖಕ್ಕೂ ತಣ್ಣೀರೆರಚುತ್ತಿದ್ದರು.
ನನ್ನ ಮೂಗಿನಿಂದ ರಕ್ತ ಹರಿದು ಬರುತ್ತಿತ್ತು. ನನಗೆ ಯಾವುದೂ ಲಕ್ಷ್ಯ
ವಿಲ್ಲ. ಶವದ ಹತ್ತಿರ ಹೋಗಿ ಜೀವದ ಚಿಹ್ನೆ ಏನಾದರೂ ಇದೆಯೇ
ಎ೦ದು ಬಹಳ ಆಸೆಯಿಂದ ನೋಡಿದೆ. ಅಯ್ಯೋ! ಸುಮ್ಮನೆ ನೆ ಭ್ರಾಂತಿ!
ನನ್ನ ಭ್ರಮೆಯನ್ನು ನೋಡಿ ನನಗೇ “ ಆಯ್ಯೋ! ಹುಚ್ಚಾ !" ಅನ್ನಿ
ಸಿತು. ಅವಳ ದೇಹದಲ್ಲಡಗಿದ್ದ ಆ ಅಮಲವಾದ ಹಿಮಕಣವು ಆಗಲೇ
ಆರಿಹೋಗಿತ್ತು! ಪುಣ್ಯವು ಪಾಪದಿಂದ ಅಗಲಿಹೋಗಿತ್ತು! ಅಮೃತವು
ಇಂಗಿಹೋಗಿ ಉಳಿದಿದ್ದುದು ವಿಷದ ಚರಟ!
ಇನ್ನು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗಲಿಲ್ಲ. ನಿದಾನವಾಗಿ ಮನೆಯ
ಕಡೆ ನಡೆದೆ.
೭
ಅದೇ ದಿನ ಸಾಯಂಕಾಲ ನಾನು ಆ ಹಳ್ಳಿಯನ್ನು ಬಿಟ್ಟೆ. ಹೊರಡು
ವುದಕ್ಕೆ ಮುಂಚೆ ಚೆನ್ನಮ್ಮನ ಫೋಟೋವನ್ನು ಅವರ. ಮನೆಯಲ್ಲಿ ಬಿಟ್ಟು
ಬಂದೆ. ಅಂತಹ ಹುಡಗಿಯನು ಕಳೆದುಕೊಂಡ ಅವರಿಗೆ ಆ ಛಾಯೆಯೂ
ಏನು ಸಮಾಧಾನ ಕೊಟ್ಟೀತು?
ದಾರಿಯುದ್ದಕ್ಕೂ ಯೋಜನೆ. ಪೊಲೀಸಿನವರೇನೋ " ಆತ್ಮಹತ್ಯ"
ಎಂದು "ರಿಕಾರ್ಡು'' ಮಾಡಿಬಿಟ್ಟರು. ಆದರೆ ವಸ್ತುತಃ ನಾನೇ ಅವ
ಳನ್ನು ಕೊಂದಹಾಗಾಯಿತು ! ಏನು ಮಾಡಿದರೂ ಈ ಭಾವನೆ ನನ್ನನ್ನು
ಬಿಡುವಂತೆ ತೋರಲಿಲ್ಲ. ನಾನು ಹೇಳಿದುದೆಲ್ಲಾ ಅವಳ ಮನಸ್ಸಿಗೆ ನಾಟಿ,
ಇರುವುದಕ್ಕಿಂತ ಸಾಯುವುದೇ ಮೇಲಾಗಿ ತೋರಿರಬೇಕು. ನಾನು
ಅವಳನ್ನು ನನ್ನ ಕೊಠಡಿಯಿಂದ ಹೊರಕ್ಕೆ ಕಳಿಸಿದಾಗ ಅವಳ ಹೃದಯ
ನಾನು ಕೊಂದ ಹುಡುಗಿ ೪೫
ಸಾವಿನಿಂದ ತುಂಬಿತ್ತೆ೦ದು ಈಗ ತೋರುತ್ತಿದೆ. ಈ ಯೋಚನೆ ಬಂದೊಡ
ನೆಯೇ ನನ್ನ ಎದೆಯನ್ನು ಸೀಳಿ ಕಾದ ಸೀಸವನ್ನು ಹೊಯ್ದ ಹಾಗಾಗು
ವುದು! ನಾನು ಆ ಅವೇಳೆಯಲ್ಲಿ ಅವಳನ್ನು ಹೊರಕ್ಕೆ ಕಳಿಸದೆ ಇದ್ದಿದ್ದರೆ
ಅವಳ ಸಾಯಬೇಕೆಂಬ ಸ೦ಕಲ್ಪ ದೂರವಾಗುತ್ತಿತ್ತೊ ಏನೋ!--ಬದುಕು
ತ್ತಿದ್ದಳೋ ಏನೋ! ಅವಳ ಮನಸ್ಸಿಗೆ ಜೀವನವನ್ನು ನೀಗಬೇಕೆಂಬ
ಆಸೆಯನ್ನು ತಂದವನು ನಾನು; ಅದಕ್ಕೆ ಸಂಶಯವಿಲ್ಲ! ನನಗೆ ಏನು
ಅಧಿಕಾರವಿತ್ತು? ಅವರ ಧರ್ಮ -ಅಧರ್ಮಗಳನ್ನು ತುಲನೆ ಮಾಡುವುದಕ್ಕೆ
ನಾನು ಯಾರು? ನನ್ನ ಮಾತುಗಳು ಒಂದೊಂದೂ ಅವಳನ್ನು ಬಾವಿಯ
ವರೆಗೂ ತಳ್ಳಿ ಕೊಂಡು ಹೋಗಿರಬೇಕು. ಆ ಮೇಲೆ ಅವಳನ್ನು ಬಾವಿಗೆ
ತಳ್ಳಿದ್ದೂ ನನ್ನ ಮಾತುಗಳೇ-ನಾನೇ ಅಯ್ಯೋ! ನಾನೇ ಅವಳನ್ನು
ಕೈಯಾರೆ ಕೊಂದಹಾಗಾಯಿತಲಾ! ದೇವರ ಎದುರಿನಲ್ಲಿ ಇ ದಕ್ಕೆ
ಒಂದಲ್ಲ ಒಂದು ದಿನ ಉತ್ತರ ಹೇಳಬೇಕು. ಏನು ಹೇಳಲಿ? ...
ಯೋಜನೆಗಳಿಗೆ ತಡೆಯೇ ಇಲ್ಲ .
ನಾಳೆ ಊರು ಸೇರುತ್ತೇನೆ. ಈ ಕಥೆಯನ್ನೆಲ್ಲಾ ಕೇಳಿದರೆ ಏನನ್ನು
ವಳೋ ನನ್ನ ಲಕ್ಷ್ಮಿ!
೪೬=========================================
ಬದುಕು !
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ | ಕಕ್ಕಸಬಡುತಿದೆ ಬೊಕ್ಕಸದೊಡಲು |
ಬರಿದೋ ಬರಿದು ! ತೆರವೋ ತೆರವು ! | ಬಡವರ ಬಗ್ಗೆರ ತುತ್ತಿನ ಚೀಲಾ |
---ಅಂಬಿಕಾತನಯದತ್ತ
೧
ಶನಿವಾರ ಸಾಯಂಕಾಲ. " ಕಬ್ಬನ್ ಪಾರ್ಕಿ ''ನಲ್ಲಿ " ಬ್ಯಾ೦ಡು.''
ಜನಗಳು ವಿಶೇಷವಾಗಿ ನೆರೆದಿದ್ದರು. ನಾನಾ ತರದ-ನಾನಾ ಜಾತಿಯ--
ನಾನಾ ವೇಷಗಳ--ವಿವಿಧ ವಯಸ್ಸಿನ ಗಂಡಸರೂ ಹೆಂಗುಸರೂ ಹುಡು
ಗರೂ ಅನೇಕ ತರದ ಉದ್ದೇಶಗಳಿಂದ ಅಲ್ಲಿ ಸುಳಿದಾಡುತ್ತಿದ್ದರು. ಕೆಲವ
ರಿಗೆ ವಾದ್ಯವನ್ನು ಕೇಳಲಪಕ್ಷೆ ! ಕೆಲವರಿಗೆ ಕೇಳಲು ಬಂದವರನ್ನು
ಕಣ್ಣು ತುಂಬಾ ನೋಡುವ ಆಸೆ! ಇನ್ನು ಕೆಲವರಿಗೆ ತಮ್ಮ ಹೊಸ
ಉಡುಪಿನ ವೈಖರಿಯನ್ನು ಸಾಧ್ಯವಾದಷ್ಟು ಜನರ ಮುಖಕ್ಕೆ ಬೀರುವ
ಆಸೆ! ಹೀಗೆ ನಾನಾ ಜನಗಳು-ನಾನಾದ್ದೇಶಗಳು.
ವಾದ್ಯವು ಪ್ರಾರಂಭವಾಗಿತ್ತು. ಜನಗಳು ವಾದ್ಯವೇದಿಕೆ (Band
-stand) ಯ ಸುತ್ತಲೂ ಗುಂಪುಗುಂಪಾಗಿ ಮಂದಗಮನದಿಂದ-- ಪ್ರದ
ಕ್ಷಿಣೆಯಾಗಿಯೋ ಅಪ್ರದಕ್ಷಿಣೆಯಾಗಿಯೋ ಸುತ್ತುತ್ತಿದ್ದರು.
ಹಾಗೆ ಸುತ್ತುತ್ತಿದ್ದರಲ್ಲಿ ಇಬ್ಬರದ್ದೇ ಒಂದು ಗುಂಪು. ಇಬ್ಬರೂ
ಯುವಕರು. ಅವರಲ್ಲಿ ಒಬ್ಬನು ಸುಮಾರು ಐದೂವರೆ ಅಡಿ ಎತ್ತರ
ದವನು. ಒಳ್ಳೆಯ ಮೈಕಟ್ಟು ; ಲಕ್ಷಣವಾದ ಕಳೆತುಂಬಿದ ಮುಖ;
ತೀಕ್ಷ್ಣವಾದ ಕಣ್ಣುಗಳು. ಪಕ್ಕಾ ಪಾಶ್ಚಾತ್ಯ ಉಡುಪನ್ನು ಧರಿಸಿದ್ದ.
ನೋಡುವುದಕ್ಕೆ ಆಂಗ್ಲೇಯನ ಹಾಗೆ ಕಾಣಿಸದಿದ್ದರೂ "ಆಂಗ್ಲೋ-
ಇಂಡಿಯನ್ " (Anglo-Indian) ಎ೦ದರೆ ಒಪ್ಪುವ ಹಾಗಿದ್ದ. ಆದರೆ
ಅವನು ಆ ಮಧ್ಯ ಚಾತಿಗೆ ಸೇರಿದವನಲ್ಲ. ನಮ್ಮ ಇಂಡಿಯಾ ದೇಶ
ದವನೆ ! ಕರ್ಣಾಟಕದವನು ! ಮೈಸೂರಿನವನು | !! ಅವನ ಜೊತೆಯವನು
ಬದುಕು ! ೪೭.
ಆಕೃತಿಯಲ್ಲಿ ಸ್ವಲ್ಪ ಗಿಡ್ಡು ಆಸಾಮಿ. ಮೈಕಟ್ಟೂ ಪರವಾಗಿಲ್ಲ. ವರ್ಣ
ಎಣ್ಣೆ ಗೆಂಪು ಅಂತಾರಲ್ಲ ಅದು. ಆದರೆ ಉಡುಪಿನಲ್ಲಿ ಮಾತ್ರ ಇವನಿಗೂ
ಅವನಿಗೂ " ಇಮಾ೦ಸಾಬಿ--ಗೋತುಲಾಷ್ಟಮಿ" ಸಂಬಂಧ. ಈತ
ಧರಿಸಿದ್ದು ದು ಆಪಾದಮಸ್ತಕವೂ ಖಾದಿ ; ಒಂದು ಬಿಳಿಯ ತೋಪಿ--
ಒಂದು ಬಿಳಿಯ ಜುಬ್ಬ; ಲುಂಗಿ ಬಿಳೀದು--ಉತ್ತರೀಯ ; ಅದೂ
ಬಿಳೀದೆ. ಕಾಲಿಗೆ ನಯವಾದ ಮೆಟ್ಟು.
ಬಾರಿಸುತ್ತಿದ್ದ ಕೃತಿ ಕೊನೆಗಂಡು ವಾದ್ಯವು ನಿಂತಿತು. ಮಾತ
ನಾಡುತ್ತ ಸುತ್ತುತ್ತಿದ್ದ ಈ “ಸ್ವದೇಶಿ--ಪರದೇಶಿ" ಗಳಿಬ್ಬರೂ ಬರಿದಾಗಿದ್ದ
ಒಂದು ಶಿಲಾಪೀಠದ ಮೇಲೆ ಹೋಗಿ ಕುಳಿತುಕೊಂಡರು. ಅವರಿಗೆ ತಮ್ಮ
ಮಾತಿನಲ್ಲೇ ಹೆಚ್ಚು ಗಮನ. ತಗ್ಗಿದ ದನಿಯಲ್ಲಿ ಮಾತನಾಡುತ್ತಿದ್ದರು.
ಇವರು ಅಲ್ಲ ಕುಳಿತು ಐದು ನಿಮಿಷವಾಗುವುದರೊಳಗಾಗಿ ಅವರ ಸಮೀ
ಪಕ್ಕೆ ಒಬ್ಬ ಹುಡುಗ ಬಂದು, ಅತಿ ಸಣ್ಣ ದನಿಯಲ್ಲಿ “ ಸಾರ್ '' ಅಂದ.
ಇಬ್ಬರೂ ಮಾತು ನಿಲ್ಲಿಸಿ ಅವನ ಕಡೆ ನೋಡಿದರು. ಸುಮಾರು ಏಳೆಂಟು
ವರ್ಷದ ಹುಡುಗ ; ವಯಸ್ಸಿಗೆ ತಕ್ಕ ಬೆಳೆವಣಿಗೆ ಇಲ್ಲ-ತೆಳ್ಳಗೆ ಕಡ್ಡಿ
ಕಡ್ಡಿಯಾಗಿದ್ದ. ಬತ್ತಿದ ಮುಖ; ಬಡತನದ ಗೋಳನ್ನು ಉಗುಳುವ
ಕಣ್ಣುಗಳು. ಹರಕಲು ಅಂಗಿ--ತೇಪೆ ತೇಪೆಯಾಗಿದ್ದ ನಿಕ್ಕರ್. ತಲೆಯ
ಮೇಲೆ ಅಳತೆಗೆ ಮೀರಿದ ಹಳೆಯ ಫರ್ ಕ್ಯಾಪ್ (fur-cap)). ಕೈಯಲ್ಲಿ,
ಬಾದಾಮಿಕಾಗದದಲ್ಲಿ ಸುತ್ತಿದ್ದ, ಚಪ್ಪಟೆಯಾದ ಒಂದು ಪೊಟ್ಣವನ್ನು,
ಹಿಡಿದಿದ್ದ. ಹುಡುಗ " ಸಾರ್ " ಅಂದೊಡನೆಯೇ ಇಬ್ಬರೂ ಆ ಮೂರೂ
ವರೆ ಅಡಿಯ ಬಡಕಲು ಪಿಳ್ಳೆಯನ್ನು ನೋಡಿದರು. ಇವರ ದೃಷ್ಟಿಯನ್ನು
ನೋಡಿ ಹುಡುಗ ಮುಂದೆ ಮಾತನಾಡಲು ಸ್ವಲ್ಪ ಹಿಂತೆಗೆದ. ಖಾದಿ
ಧರಿಸಿದ್ದವನು ಮುಗುಳು ನಗೆ ನಗುತ್ತ "ಏನೋ ಮಗು? " ಎಂದು
ಕೇಳಿದ. ಹುಡುಗನಿಗೆ ಸ್ಕಲ್ಪ ಧೈರ್ಯ ಬಂತು.
" ಸಾರ್--ವಸ್ತ್ರ-ಹಾಂಡ್ ಕರ್ಚೀಫ್ ಸಾರ್ . . . ಇದೆ, ಬೇಕೆ ?''
ಎನ್ನುತ್ತ ಎರಡು ಹೆಜ್ಜೆ ಮುಂದಿಟ್ಟು ಪೊಟ್ಣವನ್ನು ಬಿಚ್ಚತೊಡಗಿದ.
ಖಾದಿವಾಲ--"ಎಲ್ಲಿ ತೆಗಿ? "
ಹುಡುಗ ಕಾಗದವನು ಬಿಚ್ಚಿದ. ಅದರೊಳಗೆ ಎರಡು ದಪ್ಪವಾದ
ರಟ್ಟಿನ ತುಂಡುಗಳು; ಅವುಗಳ ಮಧ್ಯೆ ಚೆನ್ನಾಗಿ ಮಡಿಸಿದ ಆರೇಳು
ಬಿಳೀ ಕರವಸ್ತ್ರಗಳಿದ್ದವು... ಹುಡುಗ ಅವುಗಳನ್ನು ಖಾದಿ ಧರಿಸಿದ್ದ ವನ
೪೮ ಬದುಕು !
ಕೈಗೆ ಕೊಟ್ಟ. ಒಂದು ವಸ್ತ್ರವನ್ನು ಬಿಚ್ಚಿ ನೋಡಿದ ಖಾದಿವಾಲ. ವಸ್ತ್ರ
ಚೆನ್ನಾಗಿತ್ತು. ಸುತ್ತಲೂ ಎಳೆತೆಗೆದು ಅಂಜುಗಟ್ಟಿ ಹೊಲಿಯಲ್ಪಟ್ಟಿತ್ತು.
ಸ್ತ್ರೀಕೈವಾಡ ಚೆನ್ನಾಗಿಯೂ ಕಾಣುತ್ತಿತ್ತು. ಖಾದಿವಾಲ ಅದರ
ಪರೀಕ್ಷೆಯಾದ ಮೇಲೆ ಹುಡುಗನನ್ನು ನೋಡುತ್ತ -
"ಮಗೂ, ಇದು ಯಾರು ಮಾಡಿದ್ದು ? ''--ಎಂದು ಕೇಳಿದ.
" ನನ್ನ ಅಕ್ಕ ಮಾಡಿದ್ದು.”
ನೀನು ಯಾರ ಮಗನೋ ಮಗು ?
ಹುಡುಗ ಉತ್ತರಕೊಡಲಿಲ್ಲ. ಅವನ ಕಣ್ಣುಗಳಲ್ಲಿ ಏನೋ ಕಳವಳ.
" ಏನೋ ಮಗು, ನಿನಗೆ ತಂದೆತಾಯಿ ಇಲ್ಲವೆ ?''
"ಇದಾರೆ ಸಾರ್,”
"ಯಾರು? ಅವರ ಹೆಸರೇನು ? "
ರಂಗಪ್ಪನೋರು--ಅಂತ.''
"ಏನು ಕೆಲಸ?''
ಹುಡುಗ ಪುನಃ ನೀರವ.
"ಕೆಲಸ ಇಲ್ಲವೆ? "
" ನನಗೆ ಗೊತ್ತಿಲ್ಲ ಸಾರ್.''
" ನಿನ್ನ ಹೆಸರೇನು?''
" ನಂಜುಂಡ--ಸಾರ್. "
"ನೀನು ಸ್ಕೂಲಿಗೆ ಹೋಗಲ್ಲವೆ?''
" ಹೋಗ್ತಿದ್ದೆ ಸಾರಾ-- ಬಡಿಸಿಬಟ್ಟರು. "
"ಯಾರು-ಬಿಡಿಸಿದವರು? "
" ನಮ್ಮ ತಾಯಿ''
" ಯಾಕೆ ?"
" ಗೊತ್ತಿಲ್ಲ ಸಾರ್.''
ಖಾದಿವಾಲ ದೊಡ್ಡದಾಗಿ ನಿಟ್ಟುಸಿರು ಬಿಟ್ಟ. ಹುಡುಗ--
" ವಸ್ತ್ರ ಬೇಡವೆ ಸಾರ್ ? " ಎಂದು ಕೇಳಿದ.
“ ಎಷ್ಟು ಬೆಲೆ ಇದಕ್ಕೆ ಮಗು? ''
" ಒಂದಕ್ಕೆ ಎರಡೇ ಆಣೆ ಸಾರ್.''
" ಬಹಳ ಹೆಚ್ಚು ಮಗು! ''
ಬದುಕು ! ೪೯
" ಏನ್ ಸಾರ್--ನೀ-ವೇ-ಹಾಗೆ ಹೇಳಿದರೆ! ''
"ನೋಡು ಮಗು, ನಾನು ಖಾದಿ ಹೂರತು ಬೇನೆ ತೆಗೆದುಕೊಳ್ಳಲ್ಲ.
ಈ ವಸ್ತ್ರ ಖಾದಿ ಅಲ್ಲ. (ಸ್ಪೇಹಿತನನ್ನು ಉದ್ದೇಶಿಸಿ) ಏನಯ್ಯಾ,
ಬೇಕೇನು ವಸ್ತ್ರ? ''
ಸೇಹಿತ “ಮಾತನಾಡದೆ ತಲೆಯನ್ನಲ್ಲಾಡಿಸಿ ಬೇಡವೆಂದು ಸೂಚಿಸಿದ.
ಹುಡುಗ ನಿರಾಶನಾದ. ದೈನ್ಯದಿಂದ"" ಸಾರ್-ಒಂದನ್ನಾದರೂ ತಕ್ಕೊಳ್ಳಿ
ಸಾರ್ ' ಎ೦ದು ಬೇಡಿಕೊಂಡ.
ಖಾದಿವಾಲ--" ಇನ್ಯಾರನ್ನಾದರೂ ಕೇಳಪ್ಪ ಮಗು, ನಮಗೆ ಬೇಡ "
ಎಂದು ಹೇಳಿ ಪೊಟ್ಣವನ್ನು ಹುಡುಗನಿಗೆ ಕೊಟ್ಟ.
"ಇತ್ತು ಒಂದೂ ಖರ್ಚಾಗಲಿಲ್ಲ ಸಾರ್--ಬಹಳ ಸುತ್ತಿದೆ !''
ಸ್ನೇಹಿತರಿಬ್ಬರೂ ಎದ್ದರು. ಹುಡುಗ ಪುನಃ " ಬೇಡವೆ ಸಾರ್ ?''
ಎ೦ದು ಕೇಳಿದ.
"ಉಹುಂ'' ಎಂದು ತಲೆಯನ್ನಲ್ಲಾಡಿಸಿದ ಖಾದಧಾರಿ.
"ಸಾರ್--ಒಂದೂ ಖರ್ಚಾಗದಿದ್ದರೆ-ನಾನು ಮಾರೋಕೇ ಹೋಗ್ಲಿ
ಲ್ಗಾ೦ತ ತಿಳಿಕೋತಾರೆ ಸಾರ್ ಮನೇಲಿ. ರಾತ್ರೆ-- ಅನ್ನಾ -ಹಾಕೊಲ್ಲಾ
ಸಾರ್ "
ಹುಡುಗನ ತುಟಿಗಳು ಕಂಪಿಸತೊಡಗಿದವು. ಕಣ್ಣುಗಳಲ್ಲು ನೀರು
ತುಂಬಿ ಬಂತು. ಅವನ ಅವಸ್ಥೆಯು ಬಹಳ ಶೋಚನೀಯವಾಯಿತು.
ಇಷ್ಟು ದೈನ್ಯತೆ ಆ ನೀರು ತುಂಬದ ಕಣ್ಣುಗಳಲ್ಲಿ-ಆ ನಿರಾಶೆಯ ದನಿ
ಯಲ್ಲಿ -ಆ ಮೂರೂವರೆ ಅಡಿಯ ಜೀವಿಯಲ್ಲಿ!
ಖಾದಿವಾಲ- ಇರಲಿ, ನಮ್ಮ ಜೊತೆಯಲ್ಲಿ ಬಾ” ಎಂದು ಹೇಳಿದ.
ಮೂವರೂ " ಜಿ. ಆರ್. ಎಸ್. ಕಾಸಿಕ್ಲಬ್ '' ಕಡೆ ಹೊರಟರು.
ಹುಡುಗ ಬಹಳ ಹಸಿದಿದ್ದ ಎಂದು ಕಾಣುತ್ತದೆ. ಸ್ನೇಹಿತರಬ್ಬರೂ
ತಾವು ತಿಂಡಿ ತಿನ್ನುತ್ತ, ಹುಡುಗ. ಸಾಕು ಅನ್ನುವರೆಗೂ ತಿಂಡಿ
ಕೊಡಿಸಿದರು. ಆಮೇಲೆ ಒಂದು ಎ೦ಟಾಣೆಗೆ ತಿಂಡಿ ಕಟ್ಟಿಸಿ, ಹುಡುಗನ
ಕೈಗೆಕೊಟ್ಟು "ಇದನ್ನು ಮನೆಗೆ ತೆಗೆದುಕೊಂಡು ಹೋಗು'' ಎಂದ
ಖಾದಿವಾಲ. ಹುಡುಗ ಇವರ ಪರಿಯನ್ನು ನೋಡಿ ಮೂಕನಾಗಿ
ಹೋಗಿದ್ದ. ತನ್ನ ಕೃತಜ್ಞತೆಯನ್ನು ಬಾಯಲ್ಲಿ ಹೇಳಲಾರದೆ ಕಣ್ಣುಗಳಲ್ಲಿ
ತೋರಿಸಿದ.
೫೦ ಬದುಕು !
" ಇನ್ನು ಮನೆಗೆ ಹೊರಡು '' ಎಂದ ಖಾದಿವಾಲ.
"ಆಗಲಿ ಸಾರ್ '' ಎಂದು ಹುಡುಗ ಹೆಜ್ಜೆಗೂ ಹಿಂತಿರುಗಿ
ಅವರನ್ನೇ ನೋಡುತ್ತ ಹೊರಟುಹೋದ.
* * * *
ಬ್ಯಾಂಡು ಮುಗಿದು ಜನ ನರೆಲ್ಲಾ ಒಬ್ಬೊಬ್ಬರಾಗಿ ಹಿ೦ತಿರುಗುವುದರಲ್ಲಿ
ದ್ದರು. ಖಾದಿವಾಲನೂ ಅವನ ಸ್ನೇಹಿತನೂ ಕಾಫಿಕ್ಲಬ್ಬಿನಿಂದ ನಡೆದು
ಬಂದು, ಪುನಃ ಒಂದು ಶಿಲಾಸನದ ಮೇಲೆ ಕುಳಿತುಕೊಂಡರು. ಸುಮಾರು
ಹತ್ತು ನಿಮಿಷ ಒಬ್ಬರೂ ಮಾತನಾಡಲಿಲ್ಲ. ಸೂಟು ಧರಿಸಿದ್ದವನು
ಜೇಬಿಸಿಂದ ಸಿಗರೇಟು ತೆಗೆದು ಹೊತ್ತಿಸುತ್ತ " ಏನಯ್ಯಾ ರಾಜು,
ಮನಸಲ್ಲೆ ಮೆಲುಕು ಹಾಕ್ತಿದ್ದೀಯೆ !'' ಎಂದ.
"ಏನೂ ಅಲ್ಲ; ಆ ಹುಡುಗನಿಗಾಗಿ 'ಅಯ್ಯೋ' ಅನ್ನುತ್ತಿದ್ದೆ!........
ಹು೦! ಏನು ಪಾಪಿ ಬದುಕು ಆ ಹುಡುಗನದು !"
" ಅಲ್ವೋ ರಾಜು, ಆ ಹುಡುಗನಿಗೆ ತಿಂಡಿಕೊಡಿಸಿದ್ದೇನೋ ಸರಿ,
ಅರ್ಥವಾಯ್ತು ; ಆದರೆ--ಮನೆಗೆ ಕಟ್ಟಿ ಕಳಿಸಿದೆಯಲ್ಲ ಬುತ್ತೀನ ..............."
"ಅವನ ತಾಯಿತಂದೆಗಳು ತೀರ ಬಡವರಾಗಿರಬೇಕು."
" ಆಯ್ಯೋ ಹುಚ್ಚ ! ನೀನು ಒಂದು ದಿನ--ಒಂದು ಎಂಟಾಣೆ ತಿಂಡಿ
ಕಳಿಸಿಬಿಟ್ಟರೆ ಅವರ ಬಡತನ ಹೋದ ಹಾಗಾಯ್ತೆ?''
"ನಾನು ಹಾಗೆ ಎಣಿಸಲಿಲ್ಲ ಸೀನು. ನಮ್ಮ ಕೈಲಾದಷ್ಟು ; ಅಷ್ಟೆ.
ನನಗೆ ಆ ಮಗುವನ್ನು ನೋಡಿ ತಡೆಯಲಾರದ ಸಂಕಟವಾಯಿತು.
ಅಲ್ಲಾ ಸೀನು, ಬದುಕಿನ ಹೋರಾಟದಲ್ಲಿ ಆ ಎಂಟು ವರ್ಷದ ಬಡಕಲು
ಜೀವಿಗೆ ಇರುವ ಸಾಧನಸಂಪತ್ತಿಯೇನು? ನ್ಯಾಯವಾಗಿ, ಈ ವಯಸ್ಸಿ
ನಲ್ಲ ಆ ಮಗು, ಯಾವ ಯೋಚನೆಯೂ ಇಲ್ಲದೆ, ಯಾವ ಭಾರವೂ
ಇಲ್ಲದೆ, ನಿರಾತಂಕವಾಗಿ ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಆಡುತ್ತ
ಪಾಠಗಳನ್ನು ಕಲಿಯಬೇಕು! ಅದು ಬಿಟ್ಟು, ಈಗಾಗಲೆ ಆ ಪಿಳ್ಳೆಗೆ
ಸಂಪಾದನೆಯ ಭಾರ! . .. ಎ೦ತಹ ಬಡತನವಾಗಿರಬೇಕು ಅವರದು !!
ವಸ್ತ್ರ ಗಳನ್ನು ಮಾರಿಕೊಂಡು ಹೋಗದೆ ಇದ್ದರೆ ತಾಯಿಯಾದವಳು ತನ್ನ
ಸ್ವಂತ ಮಗುವಿಗೆ ಅನ್ನ ಹಾಕದಿರಬೇಕಾದರೆ, "ಅದನ್ನೆಂತಹ ಪಾಪಿ ಬಡತನ
ವಿರಬೇಕು ಅವರದು !! ಸೀನು, ಇಂತಹುದು ನಮ್ಮ ಕಣ್ಣಿಗೆ ಬೀಳುವುದು
ಒಂದಾದರೆ ಬೀಳದೆ ಇರುವುದು ನೂರು! ಸಾವಿರ !! ಮೂರ್ತಿ, ಈ
ಬದುಕು ! ೫೧
ವಿಶಾಲಭಾರತದಲ್ಲಿ ಒಂದೊಂದು ತುಂಬಿದ ಹೊಟ್ಟೆಗೂ ಸಹಸ್ರ ಸಹಸ್ರ
ಹಸಿದು ಬೆಂದ ಹೊಟ್ಟೆಗಳಿವೆ! ಸೀನೂ, ಬಡತನದ ದಾಡೆಯಲ್ಲಿ ಸಾವು
ಅಮೃತ ! . . . ಎಷ್ಟು ಕಳವು-ಖೂನಿ, ಎಷ್ಟು ದರೋಡೆ ಎಷ್ಟು ಆತ್ಮ
ಹತ್ಯ-ಎಲ್ಲಕ್ಕೂ ಮೂಲ ಈ ಬಡತನ ! ಈ ಹಾಳು ಬಡತನ ತೊಡೆದು
ಹೋಗುವವರೆಗೂ ನಮಗೆ ನಿಸ್ತಾರವಿಲ್ಲ !! ಹುಂ ! ಅದಕ್ಕೆ ಒಂದೇ
ಮಾರ್ಗ!..."
* ಅದೇನು ? ''
"ಕಮ್ಯೂನಿಸಮ್ ! (Communism)"
* ಸರಿ ! ನೀನೊಬ್ಬ ಹುಚ್ಚ !”
“ ನೀನು ಕುರುಡ - ಕಿವುಡ !! ಇಲ್ಲದಿದ್ದರೆ ನೀನೂ ನನ್ನ ಹಾಗೆಯೇ
ಹುಚ್ಚನಾಗುತ್ತಿದ್ದೆ ನೀನೂ ! ಈ ನಿನ್ನ ವೇಷದಿಂದ ನಿನ್ನ ಪಿತೃಗಳಿಗೆ
ಪುನರ್ಜನ್ಮವಿಲ್ಲ ಕಣಯ್ಯ !! ಹುಚ್ಚನಂತೆ ಹುಚ್ಚು!”
೨
ಒಂದು ವಾರ ಕಳೆದು ಪುನಃ ಶನಿವಾರ ಬಂತು. ಈ ದಿನವೂ ರಾಜಾ
ರಾಯನೂ ಶ್ರೀನಿವಾಸಮೂರ್ತಿಯೂ ಕಬ್ಬನ್‌ಪಾರ್ಕಿನ ಕಡೆ ಹೊರಟರು.
ಹೊರಡುವಾಗ ಸ್ವಲ್ಪ ಹೊತ್ತಾಗಿತ್ತು. ಹಿಂದಿನವಾರ ನಡೆದ ವಿಷಯ
ವನ್ನೇ ಮಾತನಾಡುತ್ತ ಬರುತ್ತಿದ್ದರು. ಶ್ರೀನಿವಾಸಮೂರ್ತಿ “ ನೋಡು
ರಾಜು, ಬೇಕಾದರೆ ನಾನು ಸಂಥ ಕಟ್ಟುತ್ತೇನೆ-ಆ ಹುಡುಗ ಈಗಾಗಲೇ
ಪಾರ್ಕಿಗೆ ಒಂದು ನಮ್ಮನ್ನೇ ಹುಡುಕುತ್ತಿದ್ದಾನೆ' ಎಂದ.
"ಅದೇಕೆ ಹಾಗೆ ಹೇಳುವೆ?”
"ತಿಂದು ತೇಗುವವರೆಗೂ ತಿಂಡಿ ಕೊಡಿಸುವುದೂ ಅಲ್ಲದೆ, ಮನೆಗೆ
ಬೇರೆ ಎಂಟಾಣೆ ತಿಂಡಿ ಕೊಟ್ಟು ಕಳಿಸುವ ಪುಣ್ಯಾತ್ಮರು ಬಹಳ ಜನ
ಬರೊಲ್ಲ ಕಬ್ಬನ್‌ಪಾರ್ಕಿಗೆ ! "
"ನನ್ನ ಆತ್ಮದ ಪುಣ್ಯ ಅಷ್ಟರಲ್ಲೇ ಇದೆ ! ”
“ ಹಾಗಾದರೆ ' ಗುಗ್ಗೂಗಳು' ಅಂತ ಇಟ್ಟುಕೊ ! ”
ಪಾಪಿಗಳಿಗಿಂತ ಗುಗ್ಗಗಳು ಶ್ರೇಷ್ಠ !”
* * *
ಇಬ್ಬರೂ ವಾದ್ಯವೇದಿಕೆಯ ಸಮೀಪಕ್ಕೆ ಬಂದರು. ಆ ವೇಳೆಗೆ
೫೨ ಬದುಕು !
ವಾದ್ಯವು ಮುಕ್ತಾಯವತ್ತು, ರಾಜು ನೀನು ಇಬ್ಬರೂ ಮೆಲ್ಲಗೆ
ಅಠಾರಾ ಕಚೇರಿಯ ಕಡೆ ಹೊರಟರು. ನಾಲ್ಕು ಹೆಜ್ಜೆ ಇಡುವದರೊಳ
ಗಾ ಅವರ ಹಿಂದೆ, ಕುಗ್ಗಿದ ದನಿಯಲ್ಲಿ " ಸಾರ್ " ಅಂದ ಹಾಗಾಯಿತು.
ಇಬ್ಬರೂ ನಿಂತು ತಿರುಗಿದರು. ಆ ಹುಡುಗ! ಪ್ರತಿ ರಾಜನ ಮುಖ
ನೋಡುತ್ತ ಮುಗುಳ್ಳಗೆ ನಕ್ಕ. ರಾಜನಿಗೆ ಆ ಹುಡುಗನನ್ನು ನೋಡಿ
ಒಳಗೊಳಗೆ ಸಂತೋಷವಾಯಿತಾದರೂ ಅದನ್ನು ತೋರ್ಪಡಿಸಿಕೊಳ್ಳದೆ.
" ಏನೋ ಮಗು?'' ಎಂದು ದಯೆ ತುಂಬಿದ ದನಿಯಿಂದ ಕೇಳಿದ.
"ನಿಮ್ಮನ್ನೇ ಹುಡುಕುತ್ತಿದ್ದೆ ಸಾರ್ " ಅಂದ ಹುಡುಗ.
ಅವನ ಕೈಯಲ್ಲಿ ಹಿಂದಿನಂತೆಯೇ ಒಂದು ಪಟ್ಟಿ ಇತ್ತು. ಅಲ್ಲದೆ
ಅದರ ಜೊತೆಗೆ ಇನ್ನೊಂದು ಸಣ್ಣ ಪೊಟ್ಣವೂ ಇತ್ತು, ರಾಜನಿಗೆ ಇಂದು
ಆ ಹುಡುಗನ ಸಂತೋಷಕ್ಕಾದರೂ ಒಂದು ವಸ್ತ್ರವನ್ನು ಕೊಳ್ಳಬೇಕೆಂದು
ಆಸೆಯಾಯಿತು. ಜೇಬ್ನಿಂದ ದುಡ್ಡು ತೆಗೆಯುತ್ತ " ಮಗೂ-
ಒಂದು ವಸ್ತ್ರ ಕೊಡು ನನಗೆ !" ಎಂದ ಹುಡುಗ ತನ್ನ ಕೈಲಿದ್ದ ಚಿಕ್ಕ
ಪೊಟ್ಟವನ್ನು ಅವನ ಕೈಗೆ ಕೊಟ್ಟ. ರಾಜ ಬಿಚ್ಚಿನ ನೋಡಿದ. ಒಂದು ಅತಿ
ನಯವಾದ -ಸೊಗಸಾದ ರೇಷ್ಮೆ ವಸ್ತ್ರ-ಗುಲಾಬಿ ಬಣ್ಣದ್ದು. ಆದರ ಒಂದು
ಮೂಲೆಯಲ್ಲಿ ಒಂದು ಹೂವು. ಆ ಹೂವಿನ ಮೇಲೆ ಹಾರಾಡುತ್ತಿರುವಂತೆ
ಒಂದು ಪತಂಗ. ಕಸೂತಿಯ ಕೆಲಸ ಬಹಳ ಚೆನ್ನಾಗಿತ್ತು. ಹೌದೋ
ಅಲ್ಲವೋ ಅನ್ನುವ ಹಾಗೆ ಒಂದು ಪರಿಮಳವನ್ನು ಸೂಸುತ್ತಿತ್ತು. ರಾಜ
ವಸ್ತ್ರವನ್ನು ಪ್ರಶಂಸೆಮಾಡುತ್ತ, ಹುಡುಗನನ್ನು ನೋಡಿ “ ಏನಪ್ಪಾ
ಮಗು, ಒಳ್ಳೇ ಭಾರೀದನ್ನೇ ಕೊಟ್ಟುಬಿಟ್ಟೆ ! ಎಷ್ಟು ಬೆಲೆ ಇದಕ್ಕೆ
ಎಂದು ಕೇಳಿದೆ.
" 'ದುಡ್ಡು ತಕಬೇಡ ಹಾಗೆ ಕೊಡು' -ಅಂದರು ಸರ್,"
ರಾಜನಿಗೆ ಆಶ್ಚರ್ಯವಾಯಿತು, ಮೂರ್ತಿಯ ಮುಖವನ್ನು ನೋಡಿದ.
ಮೂರ್ತಿ ಮಾತನಾಡಲಿಲ್ಲ. : ಸುಮ್ಮನೆ ಕಣ್ಣು ಮಿಟಿಕಿಸಿದ ಅಷ್ಟೆ. ರಾಜ
ಹುಡುಗನನ್ನು ನೋಡಿ " ಯಾರು ಅಂದದ್ದು ಹಾಗೆ ?" ಎಂದು ಕೇಳಿದ.
ತಿಂಡಿ ಕೊಟ್ಟು ಕಳಿಸಿದುದಕ್ಕಾಗಿ ಕೃತಜ್ಞತೆಯ ಸೂಚನೆ ಇದು-
ಅಂದುಕೊಂಡ ರಾಜ ವಸ್ತ್ರವನ್ನು ಇಟ್ಟು ಕೊಂಡು “ ಇರಲಿ, ಇದು ವಸ್ತ್ರ
ಕ್ಕಲ್ಲ-ನಿನಗೆ ಇನಾಂ-ತಗೋ " ಎಂದು ನಾಲ್ಕಾಣಿಯನ್ನು ಅವರ ಕೈಲಿ
ಬದುಕು ! ೫೩
ಹಾಕುವುದಕ್ಕೆ ಹೋದ ಹುಡುಗ ಸ್ವಲ್ಪ ಹಿಂತೆಗೆದ. ರಾಜ " ಇರಲಿ
ತಗೋ " ಎಂದು ಬಲವಂತದಿಂದ ಕೊಟ್ಟು " ಹೊರಡು, ನಿನ್ನ ತಾಯಿಗೆ
ನನ್ನ ನಮಸ್ಕಾರ ಹೇಳು " ಎಂದ.
ಹುಡುಗ "ಸಾರ್-ಮತ್ತೆ-ಸಾರ್-ನಿ-ಮ್ಮ-ನ್ನ..." ಎಂದು
ತೊದಲು ಅರ್ಧದಲ್ಲಿಯೇ ನಿಲ್ಲಿಸಿದ
ರಾಜ" ಏನು ಮಗು ಪರವಾಗಿಲ್ಲ, ಹೇಳು " ಎಂದು ಪ್ರೋತ್ಸಾ
ಹಿಸಿದ.
“ ನಿಮ್ಮನ್ನ ಕ-ರ-ಕೊಂ-ಡು ಬಾ ಅಂದರು ಸಾರ್."
ರಾಜನಿಗೆ ಪ್ರನಃ ಆಶ್ಚರ್ಯ ! ಅವನು ಪುನಃ ಮೂರ್ತಿಯ ಮುಖವನ್ನು
ನೋಡಿದ. ಮೂರ್ತಿ ಸಿಗರೇಟಿನ ಹೊಗೆಯನ್ನು ಮೂಗಿನಲ್ಲಿ ಬಿಡುತ್ತ,
ಕಣ್ಣುಮುಚ್ಚಿ ಕೊಂಡು ಮುಗುಳ್ಳಗೆ ನಗುತ್ತಿದ್ದ.
ರಾಜ- "ಯಾರೋ ಮಗು ಬರಹೇಳಿದವರು ?"
"ನಮ್ಮ ತಾಯಿ ಸಾರ್"
" ಯಾಕೋ ಮಗು?"
" ನನಗೆ ಗೊತ್ತಿಲ್ಲ ಸಾರ್."
ಅರ್ಧ ಮೂರ್ತೀನ ಕೇಳಿದ ಹಾಗೂ ಅರ್ಧ ತನ್ನಷ್ಟಕ್ಕೆ ತಾನೇ
ಪ್ರಶ್ನೆ ಹಾಕಿಕೊಂಡ ಹಾಗೂ " ಯಾಕಿರಬಹದು ? " ಎಂದ. ಮೂರ್ತಿ
ಅದುವರೆಗೆ ಸುಮ್ಮನಿದ್ಧವನು ಆಗ "ಹೋದರೆ ತಾನೇ ತಿಳಿಯುತ್ತೆ! "
ಅಂದ. ರಾಜನಿಗೂ ಆ ಹುಡುಗನ ಮನೆಗೆ ಹೋಗಬೇಕೆಂಬ ಆಸೆ
ಹುಟ್ಟಿತ್ತು. ಮೂರ್ತಿಯ ಮಾತಿನಿಂದ ಆ ಆಸೆಗೆ ಪ್ರೋತ್ಸಾಹ ಸಿಕ್ಕಿತು.
"ಹೋಗೋಣವೇ?" ಎಂದ.
* ಹುಂ! ನಡಿ '' ಎ೦ದ ಮೂರ್ತಿ.
ರಾಜ ಹುಡುಗನನ್ನು ನೋಡಿ “ ಬರುತ್ತೇವೆ ನಡಿ ; ನಿಮ್ಮ ಮನೆ
ಎಲ್ಲಿದೆ ?" ಎಂದು ಕೇಳಿದ.
*' ಧರ್ಮರಾಯನ ಗುಡಿ ಹತ್ರ ಒಂದು ಓಣೀಲಿ ಸಾರ್. "
"ನಡಿ, ಹೋಗೋಣ"
ಸಾಯಂಕಾಲ ಏಳು, ಗಂಟೆಯಾಗಿತ್ತು. ಹುಡುಗ ಮುಂದೆ ಹೊರಟ.
ಇವರಿಬ್ಬರೂ ಅವನನ್ನು ಹಿಂಬಾಲಿಸಿದರು.
* * * *
ಬದುಕು !
ರಾಜ ಬಡತನವನ್ನು ನೋಡುವುದಕ್ಕೆ ಹೊರಟಿದ್ದ ! ಆ ಹುಡುಗನ
ತಾಯಿತಂದೆ-ಅವರ ಬಡತನ ಅವರ ಕಷ್ಟಗಳು ಅವರ ನೂರಾರು
ಗೋಳುಗಳು ಇವುಗಳನ್ನೆಲ್ಲಾ ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳುತ್ತ ಹೋಗು
ತ್ತಿದ್ದ. “ಎಷ್ಟು ಕೃತಜ್ಞತೆ-ಆ ತಾಯಿಗೆ ! " ಅಂದುಕೊಂಡ, "ಹಣಕ್ಕೆ
ಒಡತನವಾದರೆ-ಗಣಕ್ಕೆ ಸಿರಿತನ ! ಗುಣದ ಮುಂದೆ ಹಣ ಮಣ್ಣು !
ಆಕೆಯ ಗುಣದ ಸಾಕಾರದ ಹಾಗಿದೆ ಆಕೆ ಕಳಿಸಿದ ವಸ್ತ್ರ!” ಎಂದು
ವಸ್ತ್ರವನ್ನು ತೆಗೆದು ಕೆನ್ನೆಗೆ ಒತ್ತಿಕೊಳ್ಳುತ್ತಾ “ ಎಷ್ಟು ನಯವಾಗಿದೆ -
ಏನು ಕುಶಲತೆ !-ಎಂತಹ ಪರಿಮಳ ! . . . ಆ ತಾಯಿಯನ್ನು
ಗುಣಶ್ರೀಯನ್ನು ಹೇಗೆ ಮಾತನಾಡಿಸುವುದು ? .. • • • ಪಾಪ ! ಅವರದು
ಎಂತಹ ಮನೆಯೋ ! ಅದು ಮನೆಯೇ ಗೋಳಿನ ಗೂಡೋ !! . . . "
ಎಂದು ಮುಂತಾಗಿ ಯೋಚಿಸುತ್ತ ಹೊರಟ
* * * *
ಸುಮಾರು ಏಳೂವರೆ ಗಂಟೆ ಹೊತ್ತಿಗೆ ಹುಡುಗ ಅವರನ್ನು ತನ್ನ
ಮನೆಯ ಸಮೀಪಕ್ಕೆ ಕರೆದುಕೊಂಡುಹೋದ. ಆ ಮನೆ ಹುಡುಗ ಹೇಳಿದ
ಹಾಗೆ, ಒಂದು ಅತಿ ಇಕ್ಕಟ್ಟಾದ ಕತ್ತಲಾದ ಓಣಿಯಲ್ಲಿತ್ತು. ಬಚ್ಚಲು
ಮೋರಿಯ ವಾಸನೆ, ಮುನಿಸಿಪಾಲಿಟಿಯ ಕೀರ್ತಿಕುಸುಮದ ಪರಿಮ
ಳವೋ ಎಂಬಂತೆ ತಾನೇ ತಾನಾಗಿ ಮೂಗಿಗೆ ಅಡರುತ್ತಿತ್ತು. ಹುಡುಗ
ಅವರನ್ನು ನಡು ಓಣಿಯಲ್ಲಿ ನಿಲ್ಲಿಸಿ ಸಾರ್ ಸ್ವಲ್ಪ ಇರಿ ; ನಮ್ಮ
ತಾಯಿಗೆ ಹೇಳಿ ಬರ್ತೇನೆ” ಎಂದು ಹೇಳಿ, ನಾಲ್ಕು ಮಾರು ಮುಂದಕ್ಕೆ
ಹೋಗಿ, ಬಲಗಡೆ ಒಂದು ಬಾಗಿಲನ್ನು ತಟ್ಟಿದ. ಆ ಮನೆಗೆ ಮುಂದುಗಡೆ
ಆ ಬಾಗಿಲೊಂದೆ ; ಕಿಟಿಕಿಯಿಲ್ಲ. ಹುಡುಗ ತಟ್ಟಿದ ಒಂದೆರಡು ಕ್ಷಣ
ಗಳಲ್ಲಿ ಬಾಗಿಲು ತೆರೆದು, ಅವನು ಒಳಗೆ ಹೋದ. ರಾಜ ಮೂರ್ತೀನ
ಕುರಿತು " ಲೋ, ನರಕದ ವರ್ಣನೆಗೆ ಒಳ್ಳೆ ಮಾದರಿ ಈ ಜಾಗ-
ಅಲ್ವೆ ?” ಎಂದ. ಮೂರ್ತಿ ಮುಖಕ್ಕೆ ಮುತ್ತುತ್ತಿದ್ದ ಸೊಳ್ಳೆಗಳ
ಹಿಂಡನ್ನು ಕೈಬೀಸಿ ಓಡಿಸುತ್ತ “ ನೋಡಿದೆಯಾ, ಈ ಸೊಳ್ಳೆಗಳನ್ನ !
ಯಾರೋ ಹೊಸಬರು ಅಂತ ಎಷ್ಟು ಉಪಚಾರ ! ” ಎಂದ. ಇದ್ದಕ್ಕಿದ್ದ
ಹಾಗೆಯೇ ಗುರ್-ಗು-ಗುರ್ ಎಂದು ಸದ್ದಾಯಿತು ಮೋರೀಲಿ. ರಾಜ
ಬೆಚ್ಚಿ ಬಿದ್ದ. ಮೂರ್ತಿ " ಹೆಗ್ಗಣ ಅಷ್ಟೆ ! ಸಾಧುವಾದ ಪ್ರಾಣಿ-ಹೆದರ
ಬೇಡ!" ಎಂದ. ಆಗಾಗ ಆ ಕತ್ತಲಾದ ಓಣಿಯಲ್ಲಿ ಅತ್ತಲಿಂದ ಇತ್ತ
ಬದುಕು ! ೫೫
ಲಾಗಿ, ಇತ್ತಲಿಂದ ಅತ್ತಲಾಗಿ ಸುಳಿದಾಡುತ್ತಿದ್ದ ಜನರು ಯಾವುದೋ
ಹಾಳು ಊರಿನಲ್ಲಿ ದಾರಿತಪ್ಪಿ ಅಲೆಯುತ್ತಿದ್ದ ಪ್ರೇತ ಜೀವಿಗಳಂತೆ ತೋರು
ತ್ತಿದ್ದರು.
ಹುಡಗ ಇವರನ್ನು ಬಹಳ ಹೊತ್ತು ಕಾಯಿಸಲಿಲ್ಲ. ಐದು ನಿಮಿಷ
ದೊಳಗಾಗಿಯೇ ಓಡಿಒಂದು “ ಬನ್ನಿ ಸಾರ್ ಅಂದ. ಇಬ್ಬರೂ ಅವ
ನನ್ನು ಹಿಂಬಾಲಿಸಿ ಮನೆಯನ್ನು ಹೊಕ್ಕರು. ಇವರು ಬಾಗಿಲೊಳಗೆ
ಹೋಗುತ್ತಿದ್ದ ಹಾಗೆಯೇ ಒಳಬಾಗಲಲ್ಲಿ ಒಬ್ಬಾಕೆ ಸುಮಾರು ಮೂವತ್ತು
ಮೂವತ್ತೈದು ವರ್ಷಗಳಿರಬಹುದು-ಇವರನ್ನು ನೋಡಿ, ಸರಿಯಾಗಿದ್ದ
ಸೆರಗನ್ನು ಇನ್ನೂ ಸ್ವಲ್ಪ ಸರಿಮಾಡಿಕೊಳ್ಳುತ್ತ, ಒಂದು ತರದ ಮೆಲುನಗೆ
ಯಿಂದ ಆಪಾದಮಸ್ತಕವೂ ಬಳುಕುತ್ತ ದಯಮಾಡಿ ' ಎಂದಳು.
ಸ್ವಲ್ಪ ಅಪ್ರತಿಭನಾದ! ಅವನು ನಿರೀಕ್ಷಿಸಿದ್ದು ಮನೆಯ ಯಜ
ಮಾನನನ್ನು ! ಒಂದು ಸಲ ಉಗುಳು ನುಂಗಿದ. ಆಕೆ ಇವರನ್ನು ಎಡ
ಗಡೆ ಇದ್ದ ಕೊಠಡಿಯೊಳಕ್ಕೆ ಕರೆದೊಯ್ದಳು. ರಾಜನ ನಿರೀಕ್ಷೆಗೆ
ಮೊದಲ ಪೆಟ್ಟು ಬಿತ್ತು ! ಅವನು ಅವರ ವಿಷಯದಲ್ಲಿ ಮುಂಗಡವಾಗಿ
ಕಲ್ಪಿಸಿಕೊಂಡಿದ್ದ ಚಿತ್ರ ಮಾಸತೊಡಗಿತು! ಅವನು ಎಣಿಸಿದಷ್ಟು ಬಡ
ತನದ ಕುರುಹು ಆ ಕೊಠಡಿಯಲ್ಲಿ ಕಂಡುಬರಲಿಲ್ಲ. ಅಲ್ಲಿ ಒಂದು ಮೇಜು-
ನಾಲೈಲೆದು ಕುರ್ಚಿಗಳು-ಒಂದು ಹಳೆಯ ಸೋಫಾ ಇಷ್ಟು ಇದ್ದವು.
ಅವುಗಳ ಮೇಲೆಲ್ಲಾ ತರತರವಾಗಿ ಕಸೂತಿಕೆಲಸ ಮಾಡಿದ್ದ ರಂಗು
ರಂಗಿನ ಬಟ್ಟೆಗಳಿದ್ದವು. ಗೋಡೆಗಳ ಮೇಲೆ ನಾನಾ ತರದ ಚಿತ್ರಗಳು
ಕಂಗೊಳಿಸುತ್ತಿದ್ದವು. ಮೇಜಿನ ಮೇಲೆ ನಾಜೂಕಾದ ಒಂದು ಗಾಜಿನ
ಪುಷ್ಪ ಪಾತ್ರೆ-ಅದರ ಪಕ್ಕದಲ್ಲಿಯೇ ಒಂದು ಸಣ್ಣ ಫೋಟೊ. ಕೊಠಡಿಗೆ
ಇವರು ಪ್ರವೇಶಿಸಿದ ಬಾಗಿಲ ಮೇಲಿನ ಗೋಡೆಯಲ್ಲಿ ಒಂದು 'ಎಲೆ
ಕ್ಟ್ರಿಕ್' ದೀಪ, ಆ ಕೊಠಡಿಗೆ ಹೋಗುತ್ತಿದ್ದ ಹಾಗೆ ಬಲಗಡೆ ಗೋಡೆ
ಯಲ್ಲಿ ಒಂದು ಕಡೆಯ ಮೂಲೆಗೆ ಸಮೀಪವಾಗಿ-ಇನ್ನೊಂದು ಬಾಗಿಲು;
ಅರ್ಧ ತೆರೆದಿತ್ತು. ಅದರ ಒಳಭಾಗಕ್ಕೆ ತೆಳುವಾದ ತೆರೆಯೊಂದು ಅರ್ಧ
ಓರೆಯಾಗಿತ್ತು. ಆ ಕೊಠಡಿಯಲ್ಲೂ ಒಂದು ದೀಪ-ಅರುಣರಾಗವನ್ನು
ಬೀರುತ್ತಿತ್ತು, ಆ ಅರೆತೆರೆದ ಬಾಗಿಲ ಮೂಲಕ ಒಂದು ದೊಡ್ಡ ಮಂಚದ
ಸ್ವಲ್ಪ ಭಾಗವೂ ಒಂದೆರಡು ದೊಡ್ಡ ಪಠಗಳ (ಸಾಧಾರಣವಾಗಿ
ಆಯುಷ್ಕರ್ಮಶಾಲೆಯಲ್ಲಿ ಅಂತಹ ಪಠಗಳನ್ನು ನೋಡಬಹುದು !)
೫೬ ಬದುಕು !
ಕಾಣಿಸುತ್ತಿದ್ದವು. ಇವರು ಇದ್ದ ಕೊಠಡಿಯಲ್ಲಿ ಒಂದೆರಡು ಕಡೆಯಿಂದ,
ಹಚ್ಚಿದ ಊದುಕಡ್ಡಿಯ ಯ ಪರಿಮಳವು ಸನ್ನಿವೇಶಕ್ಕೆ ಒಂದು ರಂಗನ್ನು
ಕೊಡುತ್ತಿತ್ತು.
ಆಕೆಯು ಇವರನ್ನು ಮೇಜಿಗೆ ಸಮಾನವಾಗಿದ್ದ ಸೋಫಾದ ಮೇಲೆ
ಕುಳಿತುಕೊಳ್ಳ ಹೇಳಿ, ತಾನೂ ಮೇಜಿನ ಇನ್ನೊಂದು ಪಕ್ಕದಲ್ಲಿದ್ದ
ಕುರ್ಚಿಯ ಮೇಲೆ ಕುಳಿತುಕೊಂಡಳು. ಇವರಿಬ್ಬರೂ ಸೋಫಾದ ಮೇಲೆ
ಕುಳಿತುಕೊಂಡರು. ರಾಜ ಸಿಂಹಾವಲೋಕನ ದೃಷ್ಟಿಯಿಂದ ಒಂದು ಸಲ
ಕೊಠಡಿಯ ಅಲಂಕಾರವನ್ನೆಲ್ಲಾ ನೋಡಿದ. ಈ ವೇಳೆಗೆ ಅವನು ಮೊದಲೇ
ಕಲ್ಪಿಸಿಕೊಂಡಿದ್ದ ಮನೋಚಿತ್ರವು ಸಂಪೂರ್ಣವಾಗಿ ಅಳಿಸಿಹೋಗಿತ್ತು ;
ಇಲ್ಲಿ ಬಡತನದ ಸುಳಿವೇ ಇಲ್ಲ! ಒಳ್ಳೆ ನೆಮ್ಮದಿವಂತರ ಹಾಗೆಯೇ
ತೋರಿತು. ಎದುರಿಗೆ ಕುಳಿತಿದ್ದಾಕೆ, ರೂಪ ಒಂದಕ್ಕೆ ಅಲ್ಲ-ಹಣಕ್ಕೂ
ಅಧಿಕಾರಿಣಿಯಂತೆ ತೋರಿಬಂದಳು. ರಾಜ ಏನೇನು ಮಾತನಾಡಬೇ
ಕೆಂದು ಕಂಠಪಾಠಮಾಡಿಕೊಂಡಿದ್ದನೋ ಅದೊಂದೂ ಈಗ ಜ್ಞಾಪ ಕಕ್ಕೆ
ಬರಲಿಲ್ಲ. ರಂಗಸ್ಥಳದಲ್ಲಿ ಮಾತು ಮರೆತ ಹೊಸ ನಟನಂತೆ ಆಗಿತ್ತು
ಅವನ ಅವಸ್ಥೆ ! ಮೂಕನಾಗಿ ಉಗುಳು ನುಂಗುತ್ತ ಕುಳಿತುಬಿಟ್ಟ ಧೀರ !
ಇವರ ಮನವನ್ನು ನೋಡಿ ಆಕೆ ಒಂದು ಸಲ ರಾಜನ ಒಂದು
ಸಲ ಮೂರ್ತಿಯನ್ನೂ ನೋಡಿದಳು. ರಾಜನ ಮುಖದ ಮೇಲೆ ಹುಟ್ಟು
ಮೂಗನ ಮುಖಮುದ್ರೆ ! ಮೂರ್ತಿ ಮಾತ್ರ ಆಕೆಯ ದೃಷ್ಟಿಗೆ ಸೋಲ
ಲಿಲ್ಲ. ಆಕೆಯೇ ಮೊದಲು ಮಾತನಾಡಿದಳು. ಎಡಗೈಯಿಂದ ಬಲಗೈಯ
ಬೆರಳುಗಳನ್ನು ಹಿಸುಕಿಕೊಳ್ಳುತ್ತ, ಕ್ಷಣಕ್ಕೊಂದುಸಲ ತುದಿನಾಲಗೆಯಿಂದ
ತುಟಿಗಳಿಗೆ ಮೆಲುನಗೆಯನ್ನು ಲೇಪಿಸುತ್ತ, ತಡೆತಡೆದು-
" ನೀವು ದಯಮಾಡಿದ್ದು-ಬಹಾ-ಳ-ಸಂತೋಷ "-ಎಂದಳು.
ರಾಜನಿಗೆ ಏನು ಮಾತಾಡಬೇಕೋ ತಿಳಿಯಲಿಲ್ಲ. "ಆ-ಊ-ಇಹಿ !”
ಎಂದು, ಒಂದು ಸಲ ಉಗುಳು ನುಂಗಿ, ಹಲ್ಲುಕಿರಿದು ಬಿಟ್ಟ ! ಪಾಪ
ಅವನು ಇಲ್ಲಿ ಬಂದದ್ದು ಶುಕಮುನಿ ದಾರಿತಪ್ಪಿ 'ಸದಾರಮೆ' ನಾಟಕ
ವನ್ನು ಹೊಕ್ಕಂತಿತ್ತು ! ಅವನು ಬಾಯಿಪಾಠಮಾಡಿಕೊಂಡಿದ್ದ ಮಾತು
ಗಳೊಂದೂ ಈ ರೂಪಜೀವಿಗಳ ರಂಗದಲ್ಲಿ ಒಪ್ಪುವಂತಿರಲಿಲ್ಲ. ಅವನು
“ ಅಯ್ಯೋ ಪಾಪ !” ಎಂದು ಕನಿಕರದಿಂದ ಅವರ ಗೋಳಿನಲ್ಲಿ ಭಾಗಿ
ಯಾಗಿ ಸಂತೈಸುವುದಕ್ಕೆ ಬಂದಿದ್ದ. ಆದರೆ ಇಲ್ಲಿ ಬಂದು ನೋಡಲಾಗಿ
ಬದುಕು ! ೫೭
ಇವರಿಗೆ ಅವನ “ ಅಯ್ಯೋ ಪಾಪ"ದ ಅವಶ್ಯಕತೆ ಇದ್ದ ಹಾಗೆ ಕಾಣ
ಲಿಲ್ಲ. ಏನೂ ತೋರದೆ ರಾಜ ಮೂರ್ತಿಯ ಕಡೆ ನೋಡಿದ. ಮೂರ್ತಿ
ಇವನು ನೋಡಿದುದನ್ನು ಲೆಕ್ಕಿಸದೆ, ಬೇಬಿನಿಂದ ಸಿಗರೇಟನ್ನು ತೆಗೆದು
ಹೊತ್ತಿಸಿ, ಬಾಯ ತುದಿಯಿಂದ ಹೊಗೆಯನ್ನು ಬಿಡುತ್ತ, ಧೂಮಲೀಲೆ
ಯಲ್ಲಿ ಮಗ್ನನಾದ. ರಾಜ ಇನ್ನು ಹೆಚ್ಚು ಹೊತ್ತು ಸುಮ್ಮನಿರಲಾಗದೆ
ಏನೋ ಒಂದು ಸಂಕೋಚದಿಂದ " ನಿಮ್ಮ ಇಹಿ! . . . ನಿಮ್ಮ
ಹುಡುಗ “ ಬರಹೇಳಿದರು ' ಅಂದ ; ಇಹಿ ! ಅದಕ್ಕೇ • • •ಎಂದು
ಮಾತು ಪೂರೈಸದೆ ಪುನಃ ಹಲ್ಲುಕಿರಿದು ಬಿಟ್ಟ ! ಆಕೆ ಕೊರಳನ್ನು ಒಂದು
ಸಲ ಬಳುಕಿಸಿ, ಮುಂಗುರುಳನ್ನು ತಿದ್ದಿಕೊಳ್ಳುತ್ತ, ಹಸನ್ಮುಖದಿಂದ
" ನಮ್ಮ ಪುಣ್ಯ ! ” ಎಂದಳು. ಪುನಃ ಸ್ವಲ್ಪ ಹೊತ್ತು ಮೌನ-ಹುಚ್ಚು
ಹಿಡಿಸುವ ಮೌನ ! ರಾಜನಿಗೆ ಹುಡುಗನ ತಂದೆಯ ವಿಷಯ ಜ್ಞಾಪಕಕ್ಕೆ
ಬಂದು, ಮುಖದಲ್ಲಿ ಸ್ವಲ್ಪ ಕಳೆಯೇರಿತು. ಯಜಮಾನರ ಯೋಗಕ್ಷೇಮ
ವಿಚಾರಿಸಬೇಕೆಂದು "ಎಲ್ಲಿ ರಂಗಪ್ಪನವರು ?'' ಎಂದು ಕೇಳಿದ. ಆಕೆ
ಆಶ್ಚರ್ಯದಿಂದ ಮುಗುಳ್ಳಗೆ ನಗುತ್ತ " ಯಾವ ರಂಗಪ್ಪನವರು ?' ಎಂದು
ಕೇಳಿದಳು. ಅವಳ ಈ ಪ್ರಶ್ನೆಯಿಂದ ರಾಜನಿಗೆ, ದಾರಿ ಸಲೀಸಾಗಿದೆ-
ಎಂದು ಕಾಲಿಟ್ಟಾಗ ಮುಳ್ಳು ಚುಚ್ಚಿದಂತಾಯಿತು! ಅವನ ಆಶ್ಚರ್ಯ
ದಿಂದ-
"ಆ ಹುಡುಗ ನಿಮಗೆ ಏನಾಗಬೇಕು?' ಎಂದು ಕೇಳಿದ.
" ಅದೊಂದು ತಬ್ಬಲಿ ಮಗು ; ನಾನು ಸಾಕಿಕೊಂಡಿದ್ದೇನೆ. “
"ನಿನ್ನ ತಂದೆ ಯಾರು ಎಂದು ಕೇಳಿದಾಗ 'ರಂಗಪ್ಪನವರು '
ಎಂದನಲ್ಲಾ !
ಆಕೆ ಒಂದು ಸಲ ಬಳುಕಿದ ಹಾಗೆ ಮಾಡಿ, ನಗುತ್ತ “ ಅಯ್ಯೋ,
ಆ ತಬ್ಬಲಿಗೆ ಒಂದೂ ತಿಳೀದು ! ಅದಕ್ಕೆ ತಾಯಿತಂದೆ ಯಾರೂ ಇಲ್ಲ !"
ಎಂದಳು.
ಮತ್ತೆ ಮುಳ್ಳು ಚುಚ್ಚಿದ ಹಾಗಾಯಿತು ರಾಜನಿಗೆ.
"ಇದೇನು ಹೀಗೆ ಹೇಳುವಿರಿ ! ' ನಮ್ಮ ತಾಯಿ ಬರಹೇಳಿದರು.
ಎಂದನಲ್ಲಾ ಆ ಹುಡುಗ ? ”
"ಮೊದಲಿಂದ ನಾನೇ ಸಾಕಿದವಳು ; ನನ್ನನ್ನೇ ತಾಯಿ-ಅಂತ
ಕರಿತಾನೆ ಅಷ್ಟೆ.”
೫೮ ಬದುಕು !
ರಾಜನ ಮನಸ್ಸಿನಲ್ಲಿ ಕ್ಷಣಕಾಲ ಏನೋ ತೊಡಕಾಯಿತು. ಆಕೆ
ಯನ್ನು ನೋಡುತ್ತ ಹುಬ್ಬು ಗಂಟಿಕ್ಕಿ “ಹಾಗಾದರೆ ಇಲ್ಲಿ-(ಉಗಳು
ನುಂಗಿ)-ಗಂಡಸರು ಯಾರೂ ಇಲ್ಲವೆ? " ಎಂದು ಕೇಳಿದ.
" ಇಲ್ಲದೆ ಏನು" ಎನ್ನುತ್ತ ನಕ್ಕಳು, ಆಕೆ.
"ಯಾರು?"
“ ನೀವೇ " ಎನ್ನುತ್ತ ಕೊರಳನ್ನು ಕಿಂಕಿಸಿ, ತುದಿನಾಲಗೆಯಿಂದ
ಒಂದು ಸಲ ತುಟಿಯನ್ನು ಸವರಿಕೊಂಡಳು.
ಮೂರ್ತಿಯ ಹೊಟ್ಟೆಯಲ್ಲಿ ಹೊಗೆ-ನಗು ಎರಡೂ ಸೇರಿ ಅವನಿಗೆ
ಕೆಮ್ಮು ಬಂತು. ರಾಜನಿಗೆ ಗಬಗಬ ತಿನ್ನುತ್ತಿರಬೇಕಾದರೆ ನೆತ್ತಿ ಹತ್ತು
ವುದು ಅಂತಾರಲ್ಲ ಹಾಗಾಯ್ತು. ಆಕೆಯ ಉತ್ತರದಿಂದ! ರಾಜ
ಮತ್ತೊಂದ ಸಲ ಉಗುಳು ನುಂಗಿ, ಹಲ್ಲು ಕಿರಿಯುತ್ತ " ಅದು:-ಹಿಹಿ!-
ಸರಿ! ಮನೆಗೆ--ಯಜಮಾನರಾಗಿ (ಉಗುಳು ನುಂಗಿ) ಹಿಹಿ!-
ಒಬ್ಬರು- ಊ... " ಎಂದು ಮಾತು ಪೂರೈಸದೆ ನಿಲ್ಲಿಸಿದ. ಆಕೆ
ಕೊರಳನ್ನು ಓರೆಮಾಡಿಕೊಂಡು, ಸೆರಗಿನ ತುದಿಯನ್ನು ಬೆರಳಿಗೆ ಸುತ್ತಿ
ಕೊಳ್ಳುತ್ತ ಹೇಳಿದಳು-
"ಯಾರು ದಯವಿಟ್ಟು ನನ್ನು ಮನೆಗೆ ಬರ್ತಾರೋ ಅವರೇ ... ;
ಇವತ್ತು ನಿಮ್ಮ ದಯ ಇತ್ತು ನಮ್ಮ ಪಾಲಿಗೆ ... ನನ್ನ ಪುಣ್ಯ!"
ರಾಜ ಮುಂದೆ ಮಾತು ತೋರದೆ ಪುನಃ ಮರ್ತಿಯ ಕಡೆ ನೋಡಿದ.
ಮೂರ್ತಿ ಈಗಲೂ ಆನನ ನೋಟಕ್ಕೆ ಲಕ್ಷ್ಯ ಕೊಡದೆ, ಜೇಬಿನಿಂದ ವಸ್ತ್ರ
ತೆಗೆದು ಮುಖಕ್ಕೆ ಗಾಳಿಹಾಕಿಕೊಳ್ಳಲಾರಂಭಿಸಿದ. ರಾಜನಿಗೆ ಆಕೆ ಕಳಿಸಿದ್ದ
ರೇಷ್ಮೆ ವಸ್ತ್ರದ ನೆನಪಾಯಿತು. ವಸ್ತ್ರವನ್ನು ಜೇಬಿನಿಂದ ತೆಗೆಯುತ್ತ
' ನೀವು ಕಳಿಸಿದ ವಸ್ತ್ರ ಬಹಳ ಚೆನ್ನಾಗಿದೆ!' ಎಂದ.
" ಏನೋ ಬಡವರ ಕಾಣಿಕೆ. ಅದು ನನ್ನ ಪುಟ್ಟಮಣಿ ಕೆಲಸ."
ಮೂರ್ತಿ ಇದುವರೆಗೂ ಒಂದು ಮಾತನ್ನು ಆಡಿರಲಿಲ್ಲ. ಅವನು
ಮಾತನಾಡುವುದಕ್ಕೆ ಬಂದಿರಲಿಲ್ಲ : ತಮಾಷೆ ನೋಡುವದಕ್ಕೆ ಬಂದಿದ್ದ.
ಅದುವರೆಗೂ ಸುಮ್ಮನಿದ್ದವನು ಆಗ ಮುಂದಕ್ಕೆ ಬಗ್ಗಿ, ಮೇಜಿನ ಮೇಲಿದ್ದ ಫೋಟೋವನ್ನು ತೆಗೆದುಕೊಂಡು ಬೆಳಕಿಗೆ ಹಿಂದು ನೋಡತೊಡಗಿದೆ.
ಅದನ್ನು ನೋಡಿ ಆಕೆ " ಅದೇ ನಮ್ಮ ಪುಟ್ಟ ಮಣೀದು-ಹೊಸ ಫೋಟೋ.
ಮೊನ್ನೆ - ಹದಿನೆಂಟನೇ ಹುಟ್ಟಿದ ಹಬ್ಬದ ದಿನ ತೆಗೆಸಿದ್ದು. ಇನ್ನೂ ಒಂದು
ಬದುಕು! ೫೯
ವಾರವಾಗಿಲ್ಲ" ಎಂದಳು ಫೋಟೋದಲ್ಲಿನ ಹುಡುಗಿ-ಹುಡುಗಿಯೇನು!
-ಯವತಿ, ಒಳ್ಳೆಯ ರೂಪಸಿಯಂತೆ ತೋರುತ್ತಿದ್ದಳು. ಇವರಿಬ್ಬರೂ
ಫೋಟೋವಿನ ವಿಮರ್ಶೆಯಲ್ಲಿ ಮಗ್ನರಾಗಿರಲು, ಆಕೆ ಎದ್ದು ಒಳಗಿನ
ಕೊಠಡಿಯೊಳಕ್ಕೆ ಹೋದಳು, ಮೂರ್ತಿ ಫೋಟೋವನ್ನು ಪುನಃ ಮೇಜಿನ
ಮೇಲಿಟ್ಟು, ತನ್ನ ಬಲಮೊಳಕೈಯಿಂದ ರಾಜನ ಪಕ್ಕವನ್ನು ತಿವಿದ.
ರಾಜ ಮೂರ್ತಿಯ ಸಮೀಪಕ್ಕೆ ಸರಿದು, ಅವನ ಮುಖವನ್ನೇ ನೋಡುತ್ತ,
ಹಬ್ಬುಗಂಟಿಕ್ಕಿ ತಗ್ಗಿದ " ಇದೇನೋ-ಜನ, ಮೂರ್ತಿ-
ಇವರು ? " ಎಂದು ಕೇಳಿದ ಮೂರ್ತಿ ಮಾತನಾಡಲಿಲ್ಲ : ಕಣ್ಣು ಮಿಟಿಕಿ
ಸಿದ ರಾಜ ಪಾಪ ಬಾಯಲ್ಲಿ ಬೆಟ್ಟು ಇಟ್ಟರೆ ಕಚ್ಚುವುದಕ್ಕೆ ಬರದಂತಹ
ಸಾಧುವಾದ ಪ್ರಾಣಿ! ಅವನಿಗೆ ಮೂರ್ತಿಯ ಕಣ್ಣ ಭಾಷೆ ತಿಳಿಯದು.
" ಏನೋ ಹಾಗೆಂದರೆ ?'' ಎ೦ದ ಮೂರ್ತಿ ಅವನ ಕಿವಿಯ ಹತ್ತಿರ
ಬಾಯಿಟ್ಟು, ಪಿಸುಮಾತಿನಲ್ಲಿ "ಗೊತ್ತಾಗಲಿಲ್ಲೇನೋ ಬೆಪ್ತಕಡಿ !
ಇವರ ನಿತ್ಯ ಸುಮಂಗಲಿಯರು ! " ಎಂದ.
"ಏನಂದೆ? ನಿತ್ಯ- "
"ಗುಗ್ಗೂ! ಸೂಳೇರೋ!"
“ಮುಚ್ಚು ಬಾಯಿ! ತಮಾಶೆ ನೋಣ! ಗಾಲಾಟೆ ಮಾಡಬೇಡ!
ಅಕ್ಕೋ!"
ಒಳಗಿನ ಕೊಠಡಿಯಲ್ಲಿ ಇವರನ್ನು ಎದುರುಗೊಂಡಳಲ್ಲಾ ಆಕೆಯ
ಮಾತು ಕೇಳಿಸುತ್ತಿತ್ತು.
"ಬಾ, ಪುಟ್ಟೂ ಬಾ. ಇಷ್ಟು ನಾಚಿಕೆಯಾದರೆ ಹೇಗೆ ! ಬಾ, ಮಣಿ-
ಬಾ. ಬಾ!"
ಒಳಗಿನ ಕೊಠಡಿಯಿಂದ ಆಕೆ ಬಂದಳು. ಅವಳನ್ನು ಹಿಂಬಾಲಿಸಿ, ಕಸ
ಬಿಗೆ ಬಂದ ಒಯ್ಯಾರವನ್ನೆಲ್ಲಾ ಬೀರುತ್ತ, ಎಡಗೈಯಲ್ಲಿ ತಾಂಬೂಲದ
ತಟ್ಟೆಯನ್ನು ಹಿಡಿದು ಬಲಗೈಯಿಂದ ಸೆರಗನ್ನೆಳೆದುಕೊಳ್ಳುತ್ತ ಬಂದಳು
ಪುಟ್ಟ ಮಣಿ-ಹದಿನೆಂಟು ವರ್ಷಗಳ ಸಾಲಂಕೃತ ರೂಪಲಕ್ಷ್ಮಿ!
"ತಾಂಬೂಲ ಕೊಡು' ನಮಸ್ಕಾರ ಮಾಡು" ಎಂದಳು ಹಿರಿ
ಯವಳು. ಪುಟ್ಟಿ ಮಣಿ ಇನ್ನೆರಡು ಹಜ್ಜೆ ಮುಂದಿಟ್ಟು- ಅಲ್ಲಾ- ತೇಲಿ
ಬಂದು, ತಟ್ಟೆಯನ್ನು ಮೇಜಿನ ಮೇಲಿಟ್ಟು, ನಿರಿ ಸರಿಮಾಡಿಕೊಂಡು ಇಬ್ಬ
೬೦ ಬದುಕು!
ರಿಗೂ ನಮಸ್ಕಾರಮಾಡಿ ಪುನಃ ತಾಯಿಯ ಹಿಂದುಗಡೆ ಹೋಗಿ ಒಂದು
ಒಯ್ಯಾರದ ಬಳುಕಿನಲ್ಲಿ ನಿಂತಳು.
ಮೂರ್ತಿ `ಸೂಳೇ ರೋ!' ಅಂದಾಗ ರಾಜನ ಮೈ ನಡಗಿ ಬೆವರು
ಕಿತ್ತುಕೊಂಡಿತು! ಪಾಪ! ಆ ಪ್ರಾಣಿಗೆ ಇದೇ ಮೊದಲು !-ವೇಶ್ಯಾಗೃಹ
ಪ್ರವೇಶಕ್ಕೆ ! ತಿಳಿಯದೆ ಅದನ್ನು ಹೊಕ್ಕು ಆ ಮೇಲೆ ಅದರ ತಿಳಿವುಂಟಾ
ಗಿದೆ! ಅವನು ಬಂದ ಉದ್ದೇಶವೇನು ? ಇಲ್ಲಿ ಅವನು ನೋಡಿದುದೇನು ?
ಅವನ ಸಹಜವಾದ ಕನಿಕರವು ಕ್ಷಣಾರ್ಧದಲ್ಲಿ ಕಡುಗೋಪಕ್ಕೆ ತಿರುಗಿತು.
“ ಅಯ್ಯೋ! ಇವರು ಬಡವರ- ತೀರ ಬಡವರು ಇವರಿಗೆ ಸಹಾನು
ಭೂತಿ ತೋರಿಸೋಣವೆಂದು ಬಂದರೆ-ಇವರು ಇಂತಹ ಪಾಪಿಗಳಾ
ದರೆ ! "- ಎಂದು ಅವನ ಹೃದಯ ಕ್ಷೋಭೆಯಿಂದ ತಲ್ಲಣಿಸಿಹೋಯಿತು.
• • • " ಎಂತಹ ಪಾಪಿಜನ್ಮ ಈ ನಾಯಿಗಳದು ! ಎಷ್ಟು
ಮನೆಗಳು ಹಾಳು! ಎಷ್ಟು ಸಂಸಾರಗಳು ಒಡಕು! -ಈ-ಈ- ಪಿಶಾಚಿಗಳಿಂದ!
ಎಷ್ಟು ಕಲಹ ! ಎಷ್ಟು ಖೂನಿ ! ... ಎಷ್ಟು ರೋಗ ! ಎಷ್ಟು
ಸಾವು! . . . ಹುಂ! ಏನು ಉಪಾಯ -ಅದೆಂತಹ ಕೃತ್ರಿಮ-
ಈ ಮುಂಡೆಯರದು ! ವಸ್ತ್ರ ಮಾರಿಸುವ ನೆವದಲ್ಲಿ ಹುಡುಗನನ್ನಟ್ಟಿ
ಜನರನ್ನು ಬರಮಾಡಿಕೊಳ್ಳತಾರಲ್ಲಾ ! ಈ-ಈ ಸಮಾಜದ ಬಂದಳಿಕೆ
ಗಳನ್ನು ಈ ರಕ್ಕಸಿಯರನ್ನು ಹಿಡಿದು ಸುಟ್ಟುಬಿಡಬೇಕು ಜೀವಸಹಿತ !
ಈ ಪಾಪಿಗಳ ಸೊಂಕನ್ನು ತೊಳೆಯುವದಕ್ಕೆ ಒಂದು ನೂರು ಗಂಗಾ
ನದಿಗಳಾದರೂ ಸಾಲದು! ಇವರು ಹೋಗಬೇಕು-ನಿಶ್ಶೇಷವಾಗಿ
ತೊಡೆದು ಹೋಗಬೇಕು !! ಅಲ್ಲಿಯ ವರೆಗೂ ಏಳಿಗೆಯಿಲ್ಲ ನಮಗೆ!!..."
ಈ ಧಗಧಗಿಸುವ ಯೋಚನೆಗಳ ಜ್ಯಾಲೆಯಲ್ಲಿ ರಾಜನ ಹೃದಯ
ಸೀದ ಹಾಗಾಯಿತು. ಪಾಪ, ರಾಜ ಅದರ್ಶಪ್ರಿಯ : ಅವನ ಅಂತರಂಗವು
ಆದರ್ಶತೆಯಿಂದ ತುಂಬಿತುಳುಕುತ್ತಿತ್ತು, ಅದು ಅನುಭವದಿಂದ ಮೂಡಿದು
ದಲ್ಲ ಅನುಕರಣದಿಂದ ಮೂಡಿದುದು. ಆದುದರಿಂದ ನಿಸರ್ಗದಲ್ಲಿ ಅವನಿಗೆ
ಅಭಿರುಚಿ ಕಡಿಮೆ-ಅದರ ವಿಷಯದಲ್ಲಿ ಅವನು ಯಾವಾಗಲೂ ಅತೃಪ್ತ.
ತನ್ನ ಅಂತರಿಕ ಕಲ್ಪನೆಯ ಆದರ್ಶದಿಂದ ಅವನು ಹೊರಗಿನ ಪ್ರಪಂಚದ
ಸ್ಥಿತಿಗತಿಗಳನ್ನಳೆಯಲು ಪ್ರಯತ್ನ ಪಡುತ್ತಿದ್ದ. ಆದುದರಿಂದ ಹೆಜ್ಜೆ ಹೆಜ್ಜೆಗೂ
ಅವನ ಆದರ್ಶದ ಗೋಪುರಕ್ಕೆ ಬರಸಿಡಿಲು ಬಡಿಯುತ್ತಿತ್ತು, ಬಾಹ್ಯ
ಪ್ರಪಂಚದಲ್ಲಿ ಅವನಿಗಿದ್ದ ಅನಾಸಕ್ತಿ-ಅತೃಪ್ತಿಗಳ ಫಲವಾಗಿ ಅವನ
ಬದುಕು! ೬೧
ಹೃದಯದಲ್ಲಿ ಆದರ್ಶ ಪ್ರಪಂಚವೊಂದು ರೂಪುಗೊಂಡಿತ್ತು, ಅಲ್ಲಿ ರೋಗ ವಿಲ್ಲ-ಕಳವಿಲ್ಲ-ಖೂನಿಯಿಲ್ಲ-ದರೋಡೆ ಬಡತನವು ಅಲ್ಲಿಂದ ಗಡೀ
ಪಾರಾಬಿಟ್ಟಿದ್ದಿತು! ಅಲ್ಲಿ ವೇಶ್ಯೆಯರ ನೆರಳಿಗೂ ಸ್ಥಳವಿಲ್ಲ! ಅಂತಹ
ವನು-ವಿಧಿಯ ಪರಿಹಾಸ್ಯವೋ ಎಂಬಂತೆ ಇಂದು ವೇಶ್ಯಾಸನ್ನಿ ಧಾನ
ದಲ್ಲಿದ್ದಾನೆ.
ಮೂರ್ತಿ ಒಂದು ಕಡೆ ಪಟ್ಟಿ ಮಣಿಯ ರೂಪರಾಶಿಯಿಂದ ಅದ
ಷ್ವನ್ನು ತನ್ನ ಕಣ್ಣುಗಳಿಂದ ಶೇಖರಿಸುತ್ತಿದ್ದ, ಇನ್ನೊಂದು ಕಡೆ, ರಾಜನ
ಹೃದಯದ ಭಾವನೆಗಳನ್ನು ಊಹಿಸಲು, ಪ್ರಯತ್ನ ಪಡುತ್ತಿದ್ದ. " ಪುಟ್ಟ
ದಿಹ ನಾಳೆ-ಮಡಿದಿರುವ ನಿನ್ನೆ ! ಇಂದು ಸೊಗುಮಿರಲು ಅವಕಾಗಿ
ಕಳವಳವೇಕೆ ? " ಎನ್ನುವ ಪ್ರಕೃತಿ ಅವನದು.
ರಾಜನಿಗೆ ಪುಟ್ಟನಣೆ ತಂದಿಟ್ಟ ತಾಂಬೂಲವೇ ಆಗಲಿ, ಅವಳ ಒನಪು
ಒಯ್ಯಾರಗಳೇ ಅಗಲಿ, ಅವಳ ನಮಸ್ಕಾರವೇ ಆಗಲಿ ಒಂದ ಬೇಕಾ
ಗಿರಲಿಲ್ಲ. ಅವನು ಇಲ್ಲಿಗೆ ತನ್ನ ಕನಿಕರವನ್ನು ತೋರಿಸುವದಕ್ಕಾಗಿ
ಬಂದಿದ್ದ. ಆದರೆ ಇಲ್ಲಿ ಅದಕ್ಕೆ ಅಗತ್ಯವಿರಲಿಲ್ಲ; ಸ್ಥಳಮಾಹಾತ್ಮ್ಯೆ ತಿಳಿದ
ಮೇಲೆ ಅದು ಗುರುತಿಲ್ಲದ ಹಾಗೆ ಆಯಿತು ! ಈಗ ಇದ್ದುದು
ಕೋಪ-ಕಡುಗೋಪ! ಅದನ್ನು ಅವರಿಗೆ ಹೇಗಾದರೂ ತೋರಿಸಬೇಕು!
ಹೇಗೆ ? ಅದು ಅವನಿಗೆ ತೋರದೆ ಮಹಾಸಾಗರದಲ್ಲಿ ಪ್ರಚಂಡ ಬಿರುಗಾಳಿ
ಏಳುವ ಮೊದಲು ತೋರಿದ ಶಾಂತತೆಯಂತೆ-ಮೂಕನಾಗಿದ್ದ. ಈ ಸಮ
ಯದಲ್ಲಿಯೇ ಪುಟ್ಟಮಣಿ ತಾಂಬೂಲ ತಂದಿಟ್ಟು ನಮಸ್ಕಾರ ಮಾಡಿದ್ದು.
ಇವರಿಬ್ಬರೂ ಮಾತನಾಡದೆ ಇದ್ದುದನ್ನು ನೋಡಿ ಹಿರಿಯವಳೇ
ಪುನಃ ಮಾತಿಗೆ ಪ್ರಾರಂಭಿಸಿದಳು, ಸೆರಗಿನ ತುದಿಯನ್ನು ತಿರುಚುತ್ತ,
ಕೊರಳನ್ನು ಕೊಂಕಿಸಿ, ನೆಲದ ಮೇಲೆ ದೃಷ್ಟಿಯಿಟ್ಟು, ಮಧ್ಯೆ ಮಧ್ಯೆ
ಮುಗುಳ್ಳಗೆಯನ್ನು ಮಿಂಚಿಸುತ್ತ ಮಾತಿಗೊಂದು ಸಲ ತುದಿನಾಲಗೆ
ಯಿಂದ ತುಟಿಯನ್ನು ಸವರಿಕೊಳ್ಳುತ್ತ ಮಾತನಾಡಿದರು-
"ಏನೋ-ಬಡವರ ಸೇವೆ: ನಿಮ್ಮ ದಯದಿಂದ-ಒಂದು-
ಬದುಕು • • • ನಮ್ಮದು."
ರಾಜ ಕುಳಿತಿದ್ದವನು ಎದ್ದ ! ಬಿರುಗಾಳಿಯೆದ್ದ ಹಾಗೆ! ಅವನ
ಶಕ್ತಿಗೆ ಮೀರಿತು ಕೋಪ ! ಮುಷ್ಟಿಗಟ್ಟಿ, ಹುಬ್ಬುಗಂಟಿಕ್ಕಿ ಅತಿ ತುಚ್ಛ
ವಾದ ಧ್ವನಿಯಿಂದ ಒದರಿದ-
ಬದುಕು !
" ಥತ್ ನಾವಿಲ್ಲಿಗೆ ಒರಬಾರದಾತ್ತು ! ಶುದ್ದ ಹಲ್ಕಾ ಸಹವಾಸ !!"
ಈ ಮಾತನ್ನು ಕೇಳಿದೊಡನೆ ಪುಟ್ಟಮಣಿ, ಹಲ್ಲುಕಚ್ಚಿ-ಹುಬ್ಬು
ಗಂಟಿಕ್ಕಿ, ಮುಖತಿವಿಕೊಂಡು, ಒಳಕೊಡಿಗೆ ಮಿಂಚಿಹೋದಳು ಚಿಗರಿ
ಮರಿಯ: ಹಾಗೆ ಹಿರಿಯವಳು ರಾಜನ ಮಾತಿನಿಂದಲೂ ಅವನ ರೀತಿ
ಯಿಂದಲೂ ಕ್ಷಣಕಾಲ ಅಪ್ರತಿಭಳಾದಳು, ಅಧೀರಳಾಗಲಿಲ್ಲ ! ಅವಳಿಗೆ
ಒಂದು ಸಲ ಆಶ್ಚರ್ಯ! ಒಂದು ಸಲ ಕೋಪ. ಮೀನು ಬುಟ್ಟಿಗೆ
ಬಿತ್ತು ಅಂದುಕೊಂಡರೆ, ಇದೇನು ಈತನ ಪರಿ!-ಎಂದು ಆಶ್ಚರ್ಯ,
ಹಲ್ಕಾ ಸಹವಾಸ ಅಂದನಲ್ಲಾ ಎಂದು ಕೋಪ. ಅವಳಿಗೆ ಭಯವುಂಟಾಗ
ಲಿಲ್ಲ; ಇದುವರೆಗೆ ಎಷ್ಟೋ ಜನ ಅವಳ ಮನೆಯ ಹೊಸಿಲನ್ನು ದಾಟಿ
ದ್ವರು! ಇದು ಹೇಗೆ ಕೊನೆಗಾಣುತ್ತದೆ ನೋಡಿಯೇ ಬಿಡಬೇಕೆಂದು,
ಮುಖದ ಮೇಲೆ ಮನಸ್ಸಿನ ಅಸಮಾಧಾನವನ್ನು ಸೂಚಿಸುತ್ತ, ಎದ್ದು ನಿಂತು
ಸೊಂಟದ ಮೇಲೆ ಕೈಯಿಟ್ಟು ಹುಬ್ಬು ಗಂಟಿಕ್ಕಿ “ಏನು ಸ್ವಾಮಿ!-
ಹಲ್ಕಾಗಿಲ್ಕಾ ಎಂದು ಬಹಳ ದೊಡ್ಡ ಮಾತನಾಡುತ್ತೀರಿ ! " ಎಂದಳು. ಹೆಂಗುಸು-ಅದರಲ್ಲೂ ಸೂಳೆ ಧೈರ್ಯಮಾಡಿದಳೆಂದರೆ ಗಂಡಸಿನ ಅವಸ್ಥೆ ನೋಡಬಹುದೆ ! ರಾಜ ನಿಂತಿದ್ದವನು ಕುಳಿತುಬಿಟ್ಟ ! ಕುಳಿತು ಮೂರ್ತಿಯ
ಮುಖವನ್ನು ನೋಡಿದ. ಆ ಕಡೆಯಿಂದ ಏನೂ ಸಹಾಯ ಬರುವಂತೆ
ತೋರಲಿಲ್ಲ. ಮೂರ್ತಿ ತಮಾಷೆ ನೋಡುವುದಕ್ಕೆ ಬಂದಿದ್ದ-ಸಹಾಯ
ಮಾಡುವುದಕ್ಕಲ್ಲ. ರಾಜ ಏಕಾಂಗಿಯಾಗಿ ನಾಗುದ್ಧಕ್ಕೆ ನಿಲ್ಲಬೇಕಾ
ಯಿತು.
"ಅಷ್ಟಲ್ಲದೆ ಏನು! ನಾವು ಬಂದದ್ದು ಸೂಳೇರ ಮನೆಗೆ ಎಂದಲ್ಲ ! "
"ಆದ. ನಮ್ಮ ತಪ್ಪೆ ?"
“ಹೌದು ನಿಮ್ಮ ತಪ್ಪು!"
“ಅದು ಹೇಗೆ- ಅಪ್ಪಣೆ ಕೊಡಿಸಿ"
" ಅದು ಹೀಗೆ ! ” ಎಂದು ಹೇಳಿ, ರಾಜ ಆಕೆ ಕಳಿಸಿದ್ದ ವಸ್ತ್ರವನ್ನು
ಮುಂದಕ್ಕೆ ಹಿಡಿದು "ವಸ್ತ್ರ ಮಾರಿಸುವ ನೆನದಲ್ಲಿ ಜನರನ್ನು ಸೆಳೆಯು
ವುದು ! ಎಂದ. ಆಕೆ ವ್ಯಂಗ್ಯವಾಗಿ ನಗುತ್ತ-
" ನೀವು ತಿ೦ಡಿ ಕಳಿಸಿದರಲ್ಲ ! ಅದರ ಅರ್ಥವೇನು ? ” ಎಂದು
" ಹೌದು ಕಳಿಸಿದೆ ! ಆದರೆ ಆ ಹುಡುಗ ಎಲ್ಲಿ ಹುಡುಗ!-ಪಾಪ,
ಮನೆತನಸ್ತರ ಹುಡುಗನಿರಬೇಕು-ತೀರ ಬಡವರೆಂದು ತೋರುತ್ತದೆ-
ಬದುಕು! ೬೩
ಎಂದು ತಿಳಿದು ಕಳಿಸಿದೆ- ತಿಳಿಯಿತೆ ? ಆ ಹುಡುಗ ಕರೆದಾಗಲೂ
ನಾನು ಸಂಸಾರೊಂದಿಗರ ಮನೆಗೆ ಹೋಗುತ್ತಿದ್ದೇನೆಂದೇ ಭಾವಿಸಿ
ಬಂದೆ.
“ ಈಗ ಆದ ಪ್ರಮಾದವೇನು ?"
* ಛೇ! ಛೇ! ಯಾದರ ಉಂಟೆ !! ಸೂಳೇರ ಮನೆ ಬಹಳ
ಪವಿತ್ರ!"
" ಸ್ವಾಮಿ, ನಿಮ್ಮ ಮನೆಯೇ ಪವಿತ್ರವಾಗಲಿ ! ನಾವು ಪತಿತರು-
ಅಪವಿತ್ರರು! ಪವಿತ್ರ ಅಪವಿತ್ರ ಹೊಟ್ಟೆದ್ದವರಿಗೆ ಸ್ವಾಮಿ! ಹೊಟ್ಟೆಯ
ಕೂಗಿನ ಮುಂದೆ-"
"ಹೊಟ್ಟೆ ! ಹೊಟ್ಟೆ !!-ನಿಮ್ಮ ಹೊಟ್ಟೆಗೆ ಬೆಂಕಿ ! ಮೈ ಮಾರಿ
ಹೊಟ್ಟೆ ತುಂಬೋಕಿಂತ ಸಾಯೋದು-"
" ಅಲ್ವೆ ?-ಸ್ವಾಮಿ, ನೀವು ಹೊಟ್ಟೆ ತುಂಬಿದವರು ! ನಿಮಗೆ ಇನ್ನೂ
ಬ್ಬರ ಸಾವು ಬಲು ಸುಖವಾಗಿ ತೋರಬಹುದು ! ಹೊಟ್ಟಿಲ್ಲದವರಿಗೆ
ಹಸಿವು ಎಷ್ಟೆಷ್ಟು ಹೆಚ್ಚಾದರೆ ಅಷ್ಟಷ್ಟು ಹೆಚ್ಚಾಗುತ್ತೆ ಜೀವದ ಮೇಲೆ
ಆಸೆ! ಸ್ವಾಮಿ, ನಮ್ಮ ಜೀವದ ಮೇಲೆ ನಿನಗೆ ಇರುವ ಅಭಿಮಾನ
ಕ್ಕಿಂತ ನಮಗೆ ಹೆಚ್ಚಾಗಿದೆ ! "
" ಬದುಕುವುದಕ್ಕೆ ಬೇರೆ ಮಾರ್ಗವೇ ಇಲ್ಲವೆ! "
" ನನಗೆ ದೇವರು ತೋರಿಸಿದ ಮಾರ್ಗ ಇದು! "
"ಅಯ್ಯೋ ! ನಿಮ್ಮ ಕೈಲಿ ಸಿಕ್ಕು, ದೇವರೂ ಪತಿತನಾದ ! "
“ಸ್ವಾಮಿ, ಗಂಡಸರಿಗೆ ನೂರಾರು ಮಾರ್ಗಗಳಿರಬಹುದು-ಇವೆ;
ಆದರೆ ಹೆಂಗಸರಿಗೆ -ನಿರ್ಗತಿಕಳಾದ ಹೆಂಗಸಿಗೆ : ... ಅವಳಿಗೆ ಎರಡೇ
ಮಾರ್ಗ ಸ್ವಾಮಿ ! ದೇಹವನ್ನು ನೀಡಿಕೊಳ್ಳಬೇಕು ಅಥವಾ ಮಾರಿಕೊಳ್ಳ
ಬೇಕು ! . . . ನೀವು ಬ್ರಾಹ್ಮಣರ ಹಾಗೆ ಕಾಣುತ್ತೀರಿ ಸ್ವಾಮಿ, ನಾನೂ
ಒಂದು ಕಾಲದಲ್ಲಿ ಬ್ರಾಹ್ಮಣಳಾಗಿದ್ದೆ !! ಅಷ್ಟು ಇಷ್ಟು ಓದುಬರಹ
ಕಲಿತಿದ್ದೆ ! ಈಗ ಅದೆಲ್ಲಾ ಯಾವುದೋ ಜನ್ಮದ ಕನಸಿನ ಹಾಗೆ ಕಾಣು
ತ್ತಿದೆ!"
" ಅಯ್ಯೋ ಬ್ರಾಹ್ಮಣ್ಯವೇ !”
“ಹೌದು, ಹುಟ್ಟುತ್ತಾ ನಾವು ಬ್ರಾಹ್ಮಣರು, ಅಯ್ಯಾ, ಈ ಕಸಬಿ
ನಲ್ಲಿ ಅಪಾರ ಸುಖವಿದೆ!- ಆ ಸುಖವನ್ನು ಮನದಣಿಯೆ ಸವಿಯಬೇಕು-
೬೪ ಬದುಕು!
ಎಂದು ಈ ದಾರಿ ಹಿಡಿಯಲಿಲ್ಲ ; ಹಸಿದು ಹಸಿದು, ದಾರಿ ತಪ್ಪಿದ ಭಿಕಾರಿ
ಯಾಗಿದ್ದಾಗ, ವಿಧಿ ನಮ್ಮನ್ನು ಈ ದಾರಿಗೆ ನೂಕಿತು! "
ರಾಜ ಕೋಪ ಇಳಿದು, ಅದರ್ಶ-ನಿಸರ್ಗಗಳೆರಡೂ
ಮುಖಕ್ಕೆ ಮುಖಕೊಟ್ಟು ನಿಂತಿದ್ದವು-ಜೇವಿತದ ರಂಗಭೂಮಿಯು
ಮೇಲೆ ! ರಾಜ "ಸರಿ " ಎಂದ.
"ಸ್ವಾಮಿ, ಇಷ್ಟು ಮಾತು ಇರು ಯಾರೊಡನೆಯೂ ಆಡಿರಲಿಲ್ಲ.
ಇಂದು ಏನೋ ಓದು ಒಂದಿದೆ ಕಾಲ-ಆಡಿಬಿಡುತ್ತೇನೆ ! . . . ನನಗೆ
ತಿಳಿವು ಒರುವುದಕ್ಕೆ ಮುಂಯೇ ತಬ್ಬಲಿಯಾದೆ. ಮದುವೆಯ ವಯ
ಸ್ಸಿಗೆ ಬರವವರೆಗೂ ಯಾರೋ ದೂರದ ನೆಂಟರ ಮನೆಯಲ್ಲಿ ಬೆಳೆದೆ.
ಏನೋ ನನ್ನ ಪುಣ್ಯ-ಮದುವೆಯಾಯಿತು. ಸಂಸಾರ ಎರಡು ವರ್ಷ
ಸಾಗುವುದರೊಳಗಾಗಿ ನನ್ನ ಪುಣ್ಯ ಖರ್ಚಾಯಿತೂಂತ ಕಾಣತ್ತೆ ! ಈ
ಪುಟ್ಟ ಮಣಿ ಹುಟ್ಟಿದ ಒಂದು ವರ್ಷದಲ್ಲೇ ತಂದೆಯನ್ನು ಕಳೆದುಕೊಂಡಳು.
ಅವರಿಗೆ ಅಲ್ಪಸ್ವಲ್ಪ ಆಸ್ತಿ ಇತ್ತು. ಆದರೆ ಅದು ನನಗೆ ದಕ್ಕಲಿಲ್ಲ-
ದಾಯಾದಿಗಳ, ದೋಚಿಕೊಂಡರು, ನಾನು ನಿಲ್ಲುವುದಕ್ಕೆ ನೆರಳೂ ಇಲ್ಲದ
ಬೀದಿಯ ಭಿಕಾರಿಯಾದೆ ! ಸ್ವಾಮೀ, ಪ್ರಾಯದ- ರೂಪದ- ಭಿಕಾರಿ
ಣಿಗೆ ಗತಿಯಾವದು? ಬದುಕು ಹೇಗೆ ? ... ಕೂಲಿಯೇ ? ಈ ರೂಪ
ವನ್ನು ಇಟ್ಟು ಕೊಂಡು ಎಲ್ಲಿ ಕೂಲಿಗೆ ಹೋಗಲಿ ? . . . ಸ್ವಾಮಿ, ದಿನ
ಕಳೆಯುವುದು ಬಹಳ ಕಷ್ಟವಾಯಿತು ; ಅನ್ನಲ್ಲದೆ ಸಾಯುವ ಹೊತ್ತು
ಬಂತು. ದೇವರು ಪ್ರಾಯಕೊಟ್ಟ-ರೂಪ ಕೊಟ್ಟ- ಕಷ್ಟ ಕೊಟ್ಟ-
ಹಸಿವು ಕೊಟ್ಟ! ಆದರೆ ಆತ್ಮಹತ್ಯಮಾಡಿಕೊಳ್ಳುವ ಕಲ್ಲು ಮನಸ್ಸು
ಕೊಡಲಿಲ್ಲ ಧೈರ್ಯಕೊಡಲಿಲ್ಲ ! ... ಎಲ್ಲೆಲ್ಲೋ ಅಲೆದಲೆದು ಕೊನೆಗೆ
ಒಬ್ಬ ದೊಡ್ಡ ಮನುಷ್ಯರ ಮನೆಯಲ್ಲಿ ದಾಸಿಯಾದೆ ... ಸರಿ, ಆ ದೊಡ್ಡ
ಮನುಷ್ಯ ರೂಪವನ್ನು ನೋಡಿ ದಾಸಿ ಅನ್ನುವುದನ್ನು ಮರೆತ. ಮಾನಾ
ಭಿಮಾನಗಳು ದುಡ್ಡಿದ್ದವರಿಗೆ ಎಂದು ನನಗೆ ಖಂಡಿತವಾಯಿತು- ನಾನು
ಅವುಗಳನ್ನು ತೊರೆದೆ ? . . . ಅಲ್ಲಿಯ ಹೆಚ್ಚು ದಿನಗಳು ನಿಲ್ಲಲಿಲ್ಲ. ಯಜ
ಮಾನಿಗೆ ಗೊತ್ತಾಗಿ, ನನಗೆ ಅಲ್ಲಿಂದ ಉದ್ಘಾಟನೆಯಾಯಿತು. ಪುನಃ
ಬೀದಿಯೇ ಮನೆಯಾಯಿತು ಈ ಭಿಕಾರಿಣಿಗೆ ಈ ಸಲ ಮೂರು ಜೀವ
ಗಳು-ಈ ಪುಟ್ಟಮಣಿ-ನಾನು-ನನ್ನ ಹೊಟ್ಟೆಯಲ್ಲೊಂದು! ಸ್ವಾಮೀ
ಹಸಿವಿನ ಫಲವನ್ನು ಹೊತ್ತು, ಬೀದಿ ಬೀದಿ ಅಲೆದ ಆ ದಿನಗಳನ್ನು ಈಗ
ಬದುಕು! ೬೫
ನೆನೆಸಿಕೊಂಡರೆ, ಕಣ್ಣಲ್ಲಿ ನೀರಲ್ಲ-ರಕ್ತ ಬರುತ್ತದೆ ! . . . ನನ್ನ ಜಾತಿ
ಹೋಯ್ತು !-ಕುಲ ಹೋಯ್ತು -ಮಾನ ಹೋಯ್ತು !! • • • ಪ್ರಾಯ
ಒಂದು ಉಳಿಯಿತು ರೂಪ ಒಂದು ಉಳಿಯಿತು-ಹಸಿವೊಂದು ಉಳಿ
ಯಿತು !! ನನಗೆ ಚೆನ್ನಾಗಿ ಮಂದಟ್ಟಾಯಿತು-ಈ ರೂಪ. ಈ ಪ್ರಾಯ
ಇರುವವರೆಗೂ ಉಳಿಗಾಲವಿಲ್ಲವೆಂದು ನೀರಿಗೆ ಬಿದ್ದೆ- ಅಲ್ಲಾ ತಳ್ಳಿ
ದರು!- ಇನ್ನು ಚಳಿಯೇನು-ಗಾಳಿಯೇನು? ಮುಳಿಗಿದೆ! ಏಳದ
ಹಾಗೆ ಮುಳುಗಿದೆ ! ಈ ಪ್ರಾಯ-ಈ ರೂಪ ಇರುವವರೆಗೂ ಅವು
ಗಳಿಂದಲೇ ಹಸಿವನ್ನು ಅಡಗಿಸುವುದು ಎಂದು ನಿರ್ಧರಿಸಿದೆ. ಪಾಪವೋ
ಪುಣ್ಯವೋ ನಮಗೆ ಒಂದೂ ಗೊತ್ತಿಲ್ಲ! ನಮಗೆ ಗೊತ್ತಿರುವುದು
ಹಸಿವು ! ನಮಗೆ ಸುಖದ ಆಸೆ ಇಲ್ಲ ಇರುವುದು ಜೀವದ ಆಸೆ! ಬದುಕ
ಬೇಕು ಹೇಗಾದರೂ ಬದುಕಬೇಕು ಅಷ್ಟೆ ! ನಮ್ಮಲ್ಲಿರುವುದು ರೂಪ-
ಪ್ರಾಯ ; ನಮಗೆ ಬೇಕಾಗಿರುವುದು ಅನ್ನ ! . . . ನಮಗೆ ಯಾರು ಅನ್ನ
ಕೊಡುತ್ತಾರೋ ಅವರಿಗೆ ಈ ರೂಪ ಈ ಪ್ರಾಯ ಮೀಸಲು ! ...
ಹೊಟ್ಟೆ ತುಂಬಿದವರಿಗೆ, ಹೊಟ್ಟೆಗಿಲ್ಲದವರು ಸಾಯಬೇಕೆಂದು ಹೇಳಲು
ಏನು ಅಧಿಕಾರ? ಅವರಿಗೆ ಏನು ಗೊತ್ತು ಹಸಿವಿನ ಕೂಗು-ಅರ್ಧಟ
ಗಳು !!. . . ಸ್ವಾಮಿ, ನಾಯಿಯ ಜನ್ಮವಾದರೂ ಮೇಲು ! . .
ಬೇಡ, ಏಳೇಳು ಜನ್ಮಕ್ಕೂ ಬೇಡ ! ನಿರ್ಗತಿಕಳ ಜನ್ಮ !
ಆಕೆಯ ಮಾತು ನಿಂತಿತು ರಾಜ ಮೊದಮೊದಲು ಆಕೆಯು ಮುಖ
ನೋಡುತ್ತಿದ್ದವನು ಆ ಮೇಲೆ ತಲೆ ತಗ್ಗಿಸಿಕೊಂಡು, ಆಕೆ ಹೇಳಿದುದ
ನ್ನೆಲ್ಲಾ ತುಬಿಪಿಟಕ್ಕೆನ್ನದೆ ಕೇಳಿದ. ಎಲ್ಲಿ ಹೋಯ್ತು ಅವನ ಕೋಪ!
ಎಲ್ಲಿ ಹೋಯ್ತು ಅವನ ಜುಗುಪ್ಪೆ ?-ಎಲ್ಲಿ ಮಾಯವಾಯ್ತು ಅವನ
ಆದರ್ಶಪ್ರಪಂಚ ! ಆಕೆಯ ಗೋಳಿನ ಕಥೆಯನ್ನು ಕೇಳಿ ಅವನ ಎದೆ
ತಳಮಳಗೊಂಡಿತು. " ಹಸಿವಿನ ಕೂಗು ! ಜೀವದ ಆಸೆ! ಬದುಕಬೇಕು !
-ಹುಂ! . . . ಬ-ದು-ಕೇ-ಸರಿ! " ಎಂದು ಮನದಲ್ಲಿಯೇ ಹೇಳಿ
ಕೊಳ್ಳುತ್ತ ನಿಟ್ಟುಸಿರು ಬಿಟ್ಟ, ತಾನು ಆಡಿದ ಮಾತುಗಳಿಗಾಗಿ ಬಲು
ನೊಂದುಹೋದ ಆಕೆಯನ್ನು ನೋಡುತ್ತ, ಅತಿ ಮೃದುವಾದ ದನಿ
ಯಿಂದ ನಿಧಾನವಾಗಿ ಹೇಳಿದ.-
" ಇಲ್ಲಿ ನೋಡಿ, ನಾನು . . . ನನ್ನಿಂದ ತಪ್ಪಾಯಿತು-ಬಹಳ ತಪ್ಪಾ
ಯಿತು! ಬದುಕಿನ ಹೋರಾಟದ ಕಷ್ಟವನ್ನು ಇಂದು ಕಣ್ಣಾರೆ ಕಂಡೆ-
೬೬ ಬದುಕು!
ಕಿವಿಯಾರೆ ಕೇಳಿದೆ . . - ಹೌದು ಬದುಕು ಎನ್ನುವದು ಬಲು ತೊಡಕು.
ಅವರವರಿಗೆ ತೋರಿದ ಹಾಗೆ, ಸಂಸ್ಕಾವಿದ್ದ ಹಾಗೆ-ಶಕ್ತಿಯಿದ್ದ ಹಾಗೆ
-ಯುಕ್ತಿ ಇದ್ದ ಹಾಗೆ ಅವರವರು ಬಿಡಿಸಿಕೊಳ್ಳುತ್ತಾರೆ. ಅದು ತಪ್ಪು-
ಇದು ಸರಿ ; ಅದು ಹಾಗೇ ಇರಬೇಕು- ಇದು ಹೀಗೇ ಇರಬೇಕು- ಎಂದು
ಒಬ್ಬರು ಇನ್ನೊಬ್ಬರಿಗೆ ಹೇಳಲು ಯಾವ ಅಧಿಕಾರವೂ ಇಲ್ಲ ! ... ನನ್ನ
ಕೊನೆಯ ಮಾತು'ಕ್ಷಮಿಸಿ ' ಎಂದು ಅಷ್ಟೆ. ಹೋಗಿ ಬರುತ್ತೇವೆ.''
ಇಬ್ಬರೂ ಎದ್ದು ಮನೆಯಿಂದ ಹೊರಟರು. ಅವಳು ಇವರನ್ನು
ಕಳಿಸಿ, ಬಾಗಿಲು ಹಾಕಿಕೊಂಡು ಹೋಗಿ ಸೋಫಾದ ಮೇಲೆ ಕುಳಿತು
ಕೊಂಡಳು. ಪುಟ್ಟ ಮಣಿ ಒಳನಿಂದ ಬರುತ್ತ, ಆಹತಗರ್ವದಿಂದ
“ಏನಮ್ಮ !-ಕಂತೇ ಪುರಾಣ- ಗಾಂಧೀ ತೋಪಿ ಗುಗ್ಗು ಹತ್ರ !"
ಎಂದು ಸಿಡಿದಳು. ತಾಯಿ ಮಾತನಾಡಲಿಲ್ಲ, ಅವಳು ಸೋಫಾದ ಮೇಲೆ
ಕುಳಿತಾಗ ಕೈಗೆ ಏನೋ ಕಾಗದದ ಚೂರು ಸೋಕಿದ ಹಾಗಾಯಿತು;
ತೆಗೆದುಕೊಂಡು ನೋಡುತ್ತಾಳೆ-ಐದು ರೂಪಾಯಿನ ನೋಟು !
"ಎಲ್ಲಿತ್ತಮ್ಮಾ?” ಎಂದು ಹತ್ತಿರ ಬಂದಳ, ಹಸನ್ಮುಖಿ.
ತಾಯಿ ಕೂಡಲೆ ಉತ್ತರ ಕೊಡಲಿಲ್ಲ-ಅವಳ ಮುಖ ಗಂಭೀರ
ವಾಗಿತ್ತು, ನಟ್ಟಿ ದೃಷ್ಟಿಯಿಂದ ನೋಟನ್ನು ನೋಡುತ್ತಿದ್ದಳು. ಮಗಳು
ಅವಳ ಹತ್ತಿರ ಕುಳಿತು ನೋಟನ್ನು ಸರ್ರನೆ ಕಿತ್ತುಕೊಂಡು, ಭುಜದ ಮೇಲೆ
ಕೈಯಿಟ್ಟು " ಎಲ್ಲಿತ್ತು, ಹೇಳಮ್ಮ !” ಎಂದು ಪುನಃ ಕೇಳಿದಳು ತಾಯಿ
ಎಲ್ಲಿಯೋ ನೋಡುತ್ತ ಒಂದು ಸಲ ನಿಟ್ಟುಸಿರು ಬಿಟ್ಟು, ಮೆಲ್ಲಗೆ
ಹೇಳಿದಳು..
"ಆ... ಗಾಂಧೀ ತೋಪಿ...
"ಗುಗ್ಗು...."
"ಬಿಟ್ಟು ಹೋಗಿರಬೇಕು" ಎಂದು ಕೇಳಿ, ತಾಯಿ ಪುನಃ
ನಿಟ್ಟುಸಿರು ಬಿಟ್ಟಳು.
ಹುಡುಗಿ ಮುಂದೆ ಮಾತನಾಡಲಿಲ್ಲ.
* * * *
ದಾರಿಯುದ್ದಕ್ಕೂ ರಾಜ ಮೂರ್ತಿ ಇಬ್ಬರೂ ಬಹಳ ಹೊತ್ತು ಮೌನ
ವಾಗಿಯೇ ನಡೆದರು, ಆ ಮೇಲೆ ಮೂರ್ತಿ ಇದ್ದಕ್ಕಿದ್ದ ಹಾಗೆ ನಕ್ಕ.
“ ಏನು ಬಹಳ ಉಕ್ಕುತಾ ಇದೆ-ನಗು ?” ಎಂದ ರಾಜ.
ಬದುಕು! ೬೭
." ಏ-ನೂ-ಇಲ್ಲಾ ; ನೀನು ಹುಡುಗನ ಕೈಲಿ ನಮಸ್ಕಾರ ಹೇಳಿ ಕಳಿ
ಸಿದೆಯಲ್ಲಾ ಅದರ ನೆನಪಾಯಿತು !"
" ಮೂರ್ತಿ, ಅವಳು ಹೊಟ್ಟೆಗಾಗಿ ಮೈಮಾರಿಕೊಳ್ಳುವ ಸೂಳೆ
ಎಂದು ಮಾತ್ರ ನಿನಗೆ ಕಾಣುತ್ತಾಳೆ . . . '
"ನಿನಗೋ?"
“ ನನಗೆ ಅವಳು ಸಮಾಜದಿಂದ ತ್ಯಜಿಸಲ್ಪಟ್ಟು, ತುಳಿಯಲ್ಪಟ್ಟು-
ಅಲಕ್ಷ್ಯ ಅವಹೇಳನಗಳಿಗೆ ತುತ್ತಾದ ಪಶುಕಾಮದ ಕ್ರೀಡಾವಸ್ತು
ವಾದ-ಬೆಂಬಲವಿಲ್ಲದ ಭಾರತ ಸ್ತ್ರೀತ್ವದ ಕುರುಹು ! "
" ಎಲ್ಲಿ ಎಲ್ಲಿ! ಇನ್ನೊಂದು ಸಲ ಮೊದಲಿಂದ ಹೇಳು"
" ಥ !-ನೀನು ಕೆಟ್ಟೆ ! ”
ಇನ್ನು ನಾಲ್ಕು ಹೆಜ್ಜೆ ಪುನಃ ಮೌನವಾಗಿ ನಡೆದರು, ಮೂರ್ತಿ
ಪುನಃ ನಕ್ಕ.
" ಏನು ಹುಚ್ಚು-ಚ್ಚು ಹಿಡೀತೇನೋ ನಿನಗೆ ? " ಎಂದ ರಾಜ.
" ಏನೂ ಇಲ್ಲ ; ಆ ವಸ್ತ್ರದ ಜ್ಞಾಪಕವಾಯಿತು! ಅದನ್ನ ಇಟ್ಟು
ಕೊಳ್ಳುತ್ತೀಯೋ -ಬಿಸಾಡುತ್ತೀಯೋ ? "
" ಇಲ್ಲ; ಇಟ್ಟು ಕೊಳ್ತೀನಿ."
" ಹಾಗಾದರೆ ಅದರ ಜೊತೆಯಲ್ಲಿ ಇದನ್ನು ಇಟ್ಟುಕೊ" ಎಂದು
ಮೂರ್ತಿ ಅವನ ಕೈಗೆ ಏನನ್ನೋ ಕೊಟ್ಟ, ರಾಜ ನೋಡುತ್ತಾನೆ
ಪುಟ್ಟಮಣಿಯ ಫೋಟೋ ಮೇಜಿನ ಮೇಲಿದ್ದುದು ! "
ಅಯ್ಯೋ! ರ್ಯಾಸ್ಕಲ್ ! (Rascal) ಅದನ್ಯಾಕೆ ಕದ್ದುಕೊಂಡು
ಬಂದೆಯೋ?"
" ವಿನಯಪೂರ್ವಕವಾಗಿ ನಿನಗೆ ಒಪ್ಪಿಸೋಣ ಅಂತ !
* * * *
ಬೆಳಗಾಗುವದರೊಳಗಾಗಿ ರಾಜನ ಆದರ್ಶ ಪ್ರಪಂಚದಲ್ಲಿ ಸ್ವಲ್ಪ
ತಿದ್ದುಪಡಿ ಅಂತಾರಲ್ಲ ಅದು ಆಯಿತು ! ಆ ಫೋಟೋನ ಆ ವಸ್ತ್ರದಲ್ಲಿ
ಸುತ್ತಿ, ಎರಡನ್ನೂ ಒಟ್ಟು ಜೋಪಾನವಾಗಿಟ್ಟು ಕೊಂಡಿದ್ದಾನೆ ಹುಡುಗ !
೬೮===================================================
ಅಶ್ವಾರೋಹಿ *
(* ಈ ಕಥೆಯು ಅಮೆರಿಕಾ ದೇಶದ ಪ್ರಸಿದ್ಧ ಕತೆಗಾರವಾದ ಆಂಟಿಸ್ ಬಿಯರ್ಸ್ ಎಂಬಾತನ "A Horseman in the Sky" ಎಂಬ ಕಥೆಯ ಮೂಲಭಾವವನ್ನು ತೆಗೆದುಕೊಂಡು ಔರಂಗಷಹನ ಕಾಲದಲ್ಲಿ ನಡೆಯಿತೆಂಬಂತೆ ತೋರಲು ಬೇಕಾದ ಮಾರ್ಪಾಟುಗಳನ್ನು ಮಾಡಿ ಬರೆದುದಾಗಿದೆ.)
"ದಾದಾ-"
" ಏನು ? • • • ಏನು ರಸೂಲ್ ?"
" ಏನು ? • • • ಹೇಳು ?"
“ ಔರಂಗಷಹನು ಹಿಂದೂ ಯಾತ್ರಿಕರಮೇಲೆ ಜೆಸಿಯ ತೆರಿಗೆಯನ್ನು
ಹಾಕಿರುವುದನ್ನು !"
"ಕೇಳಿದೆ-ರಸೂಲ್....ಕೇಳಿದೆ!"
" ಅದನ್ನು ತಡೆಯುವವರು ಯಾರೂ ಇಲ್ಲವೆ?"
" ಯಾರು ತಡೆಯುವವರು-ಬೇಟಾ ? ಅವನು ಸರ್ವಶಕ್ತ
ದ್ದಾನೆ!"
" ಏನಂದಿರಿ ದಾದಾ ? • • • ಸರ್ವ ಶಕ್ತನೆ?...ಸ-ರ್ವ-ಶ-ಕ್ತ!!
ಇಂತಹ ನೂರು ಔರಂಗನನ್ನು ನುಚ್ಚುನುರಿ ಮಾಡುವನನೊಬ್ಬನಿದ್ದಾನೆ!
• • • ದಾದ ಅವನು ಸರ್ವಶಕ್ತ!
ಕ್ಷಣಕಾಲ ಇಬ್ಬರಲ್ಲಿ ನೀರವ. ಆ ಮೇಲೆ-
" ಇಲ್ಲ ದಾದ, ಇನ್ನು ಒಂದು ದಿನವೂ ನಾನು ಈ ದೇಶದಲ್ಲಿರಲಾರೆ."
"ಬೇಟಾ!-ಬೇಟಾ!-ಏನಂದೆ?"
" ಇನ್ನು ಒಂದು ದಿನವೂ ನಾನು ಈ ದೇಶದಲ್ಲಿರಲಾರೆ. "
“ಎಲ್ಲಿಗೆ ಹೋಗುವೆ ? ಕಂದಾ ಏನು ಮಾಡುವೆ?"
" ಈ ರಾಕ್ಷಸ ಚಕ್ರಾಧಿಪಹ್ಯದ ಗಡಿಯನ್ನು ದಾಟಿಹೋಗುತ್ತೇನೆ!
ನಮ್ಮ ಜನರು ಮತಾಭಿಮಾನದಿಂದ ಹಿಂದುಗಳ ಮೇಲೆ ಮಾಡುತ್ತಿರುವ
ಅತ್ಯಾಚಾರವು ಸಹನಾತೀತವಾಗಿದೆ ! "
ಅಶ್ವಾರೋಹಿ ೬೯
“ ಅತ್ಯಾಚಾರವೇನು ? "
“ಅ-ತ್ಯಾ-ಚಾ-ರ-ವೇನು! ... ಅಯ್ಯೋ, ಎಲ್ಲವೂ ಅತ್ಯಾಚಾರವೇ !!
ಇದು ಅವರ ದೇಶ, ನಾವು ಇಲ್ಲಿಗೆ ಬಂದಿರುವುದು ಆಳುವುದಕ್ಕಲ್ಲ!-
ಡಕಾಯಿತಿಮಾಡುವುದಕ್ಕೆ !! ಇಲ್ಲಿ ನೆಲೆಸಿ, ಇಲ್ಲಿಯವರನ್ನು ಕಾಲಿನಿಂದ
ತುಳಿದು ಮಣ್ಣು ತಿನ್ನಿಸುತ್ತಿದ್ದೇವೆ! . . . ಇದು ಅತ್ಯಾಚಾರವಲ್ಲವೇನು?
ಸ್ನೇಹದಿಂದ ಸಾಧಿಸುವುದನ್ನು ಕತ್ತಿಯಿಂದ ಸಾಧಿಸುತ್ತಿದ್ದೇವೆ! ವಿಜ
ಯೋನ್ಮತ್ತರಾದ ನಮ್ಮ ಜನರ ಹಾವಳಿಯಲ್ಲಿ ಅವರ ಹೆಂಗಸರ ಮಾನ
ಮರ್ಯಾದೆಗಳಿಗೆ ಉಳಿಗಾಲವಿಲ್ಲದಂತಾಗಿದೆ -ಅವರ ಗುಡಿಗೋಪುರ
ಗಳು ನೆಲಸಮವಾಗುತ್ತಿವೆ!! • • • ಮಾನಾಪಹಾರವೂ ಜಾತಿದ್ವೇಷವೂ
ನಮ್ಮ ಮತಕ್ಕೆ ಚಿಹ್ನೆಯಾಗುವುದಾದರೆ ಇದೋ ಇಂದೇ ಅದನ್ನು
ಬಿಟ್ಟುಬಿಡುತ್ತೇನೆ! ಅಯ್ಯೋ- ದಾದಾ, ಹೆಸರಿನಲ್ಲಿ ಮಾತ್ರ ಮುಹಮ್ಮದೀ
ಯರು ನಮ್ಮವರು ! . . . ಈ ಸಮಯದಲ್ಲಿ ದೇವಪುರುಷನಾದ ಮಹ
ಮ್ಮದನು ಸ್ವರ್ಗೀಯವಾದ ತನ್ನ ಉಚ್ಚ ಸ್ಥಾನದಿಂದ ಕ್ಷಣಕಾಲ ಮಾತ್ರ
ಈ ನಿರ್ಭಾಗ್ಯ ಹಿಂದೂಸ್ಥಾನದ ಮೇಲೆ ತನ್ನ ಕರುಣಾಮಯವಾದ
ದೃಷ್ಟಿಯನ್ನು ಬೀರಿದುದೇ ಆದರೆ, ಅವನ ಧರ್ಮಾನುಚರರೆಂದು ಹೇಳಿ
ಕೊಳ್ಳುತ್ತ ನಮ್ಮವರು ಮಾಡುತ್ತಿರುವ ಅತ್ಯಾಚಾರಗಳನ್ನು ನೋಡಿ
ಅವನ ಎದೆ ಒಡೆದುಹೋದೀತು !! . . - ದಾದಾ ಆಗದು! ಇನ್ನು ಇಲ್ಲಿ
ಇದ್ದುಕೊಂಡು ಇವರ ಅತ್ಯಾಚಾರಗಳಲ್ಲಿ ಭಾಗಿಯಾಗಲಾರೆ ! "
ಮಗನ ಈ ವಾಕ್ಸರಣಿಯಿಂದ ತಂದೆ ಅವಾಕ್ಕಾಗಿ ದೃಷ್ಟಿಯನ್ನು
ಬೇರೆ ಕಡೆಗೆ ತೇಲಿಸಿದರು. ಹುಬ್ಬುಗಳು ಗಂಟಿಕ್ಕಿದವು, ನಿಟ್ಟುಸಿರೊಂದು
ಹೊರಟಿತು. ಆ ಮೇಲೆ ಮಗನನ್ನು ನೋಡುತ್ತ ಹೇಳಿದನು-
“ಬೇಟಾ-ರಸೂಲ್, ನಾನು ಬಾದಷಹನ ಉಪ್ಪನ್ನು ತಿಂದಿದ್ದೇನೆ.
ಅವನ ಉಪ್ಪುತಿಂದ ಈ ದೇಹವು ಅವನಿಗಾಗಿ ಮೀಸಲು. ನಾವು
ಮಾಡುವ ಪಾಪದ ಅಥವಾ ಪುಣ್ಯದ ಕೆಲಸಗಳು ಅವನ ಆಜ್ಞೆ ; ಅದರ
ಫಲಾಫಲಗಳು ಅವನಿಗೆ. ರಸೂಲ್, ನೀನು ಸ್ವತಂತ್ರ ; ನಿನಗೆ ತೋರಿ
ದಂತೆ ಮಾಡು ನಿನ್ನ ಯೋಜನೆ ತಪ್ಪು ಎಂದು ಹೇಳಲು ನನಗೆ
ಬಾಯಿಲ್ಲ. ಆದರೆ ಇಷ್ಟು ಮಾತ್ರ ಸತ್ಯ-ನೀನು ಮೊಗಲ್ ಸಾಮ್ರಾಜ್ಯಕ್ಕೆ
ದ್ರೋಹಿ ! • • • ಹೋಗು ! - - - ನಿನ್ನಿಂದ ಅದಕ್ಕೆ ಆಗಬೇಕಾದು
ದೇನೂ ಇಲ್ಲ. ಆದರೆ . . . ರಸೂಲ್, • • • ರಲ್, ನೀನು ಯಾವು
೭೦
ದನ್ನು ಕರ್ತವ್ಯ ಎಂದು ತಿಳಿಯುವೆಯೋ ಅದನ್ನು ಏನು ಬಂದರೂ
ಬಿಡದೆ ಮಾಡು!...ತಿಳಿಯಿತೇ!... ಹೋಗು!... ಹೋಗು!!
ಬಾದಷಹನು ರಜಪುತರ ಮೇಲೆ ಯುದ್ದ ಸನ್ನಾಹಮಾಡುತ್ತಿದ್ದಾನೆ.
ಯುದ್ಧ ಮುಗಿದ ಮೇಲೆ ನೋಡೋಣ! . ಬದುಕಿದರೆ ! "
ರಸೂಲ್ ಖಾನನ ಮುಖವು ಗಂಭೀರವಾಯಿತು. ಕ್ರಮೇಣ ಆರಕ್ತ
ಮಯವಾಯಿತು. ಅವನು ಉಕ್ಕಿ ಬರಲೆಳಸುತ್ತಿದ್ದ ದುಃಖವನ್ನೂ ಕೋಪ
ವನ್ನೂ ಹೃದಯದಲ್ಲಿಯೇ ದಮನಮಾಡಲು ಸರ್ವಪ್ರಯತ್ನ ಮಾಡುತ್ತಿ
ದ್ದನು ಅವನ ಕಣ್ಣುಗಳು ಅಪೂರ್ವವಾದ ಹೊಳಪಿನಿಂದ ಮಿಂಚಿದುವು.
ಮನಸ್ಸ್ಥೈರ್ಯವು ಮುಖದಲ್ಲಿ ಒಡೆದು ಮೂಡಿತು ನೀಳವಾಗಿ ನಿಟ್ಟು
ಸಿರು ಬಿಟ್ಟು ಗಂಭೀರವಾಗಿಯೂ ನಿಧಾನವಾಗಿಯೂ ಹೇಳಿದನು.
“ಹೌದು, ದಾದಾ ನಾನು ದ್ರೋಹಿ | ಯಾರಿಗೆ ? - ದ್ರೋಹಿ
ಗಳಿಗೆ !! ಯಾರು ದೇವಪುರುಷನಾದ ಪೈಗಂಬರನ ಧರ್ಮಕ್ಕೆ ದ್ರೋಹಿ
ಗಳೂ ಅವರಿಗೆ !"
ಕ್ಷಣಕಾಲ ಸುಮ್ಮನಿದ್ದು ಕಂಪಿತ ಕಂಠದಿಂದ ಕೇಳಿದ-
“ಅಪ್ಪಾ, ನಿನಗೆ ನನ್ನ ಮೇಲೆ ಸಿಟ್ಟಿಲ್ಲವಷ್ಟೆ ?”
" ಕಂದಾ, ನಿನ್ನ ಮಾತುಗಳು ಒಂದೊಂದೂ ಯಾವ ಉತ್ತರಕ್ಕೂ
ಆಸ್ಪದ ಕೊಡುವಂತಿಲ್ಲ, ಇನ್ನು ಸಿಟ್ಟು ಹೇಗೆ ಒಂದೀತು ರಸೂಲ್ ? • • •
ಸಿಟ್ಟಿಲ್ಲ....ಮಗೂ, ಸಿಟ್ಟಿಲ್ಲ!"
ಮರುದಿನ ಪ್ರಭಾತದಲ್ಲಿ ರಸೂಲ್‌ಖಾನನು ದೇಶತ್ಯಾಗಿಯಾಗಲನು
ವಾದನು. ಅವರ ಮನೆಯ ಮುಂದೆ ಸುಂದರವೂ ಬಲಿಷ್ಟವೂ ಆದ
ಕುದುರೆಯೊಂದು ಸವಾರಿಗೆ ಸಿದ್ಧವಾಗಿ ನಿಂತಿತ್ತು. ಮನೆಯೊಳಗಿನಿಂದ
ತಂದೆ ಮಕ್ಕಳಿಬ್ಬರೂ ಹೊರಗೆ ಬಂದರು. ಬಂದವರೇ ಒಬ್ಬರನ್ನೊಬ್ಬರು
ತಬ್ಬಿಕೊಂಡರು. ರಸೂಲನು ಅವನ ತಂದೆಗೆ ಏಕಮಾತ್ರ ಪುತ್ರ. ಇಪ್ಪತ್ತು
ವರ್ಷಗಳು ತಂದೆಯ ಕಣ್ಣಿಗೆ ರತ್ನದಂತಿದ್ದ ಆ ವೀರಯುವಕನು, ಕ್ಷಿಪ್ರ
ದಲ್ಲಿಯೇ ತಾಯಿ ತಂದೆ, ಮನೆಮಠ, ಬಂಧು-ಮಿತ್ರರು ಇವರೆಲ್ಲರನ್ನೂ
ತೊರೆದು-ಹಿಂತಿರುಗಿ ನೋಡದೆ ಹೊರಟುಹೋಗುವುದರಲ್ಲಿದ್ದಾನೆ!
ಮಿತಿಮೀರಿದ ದುಃಖದಿಂದ ಇಬ್ಬರೂ ಮಾತುಮುರೆತಿದ್ದಾರೆ, ಮಗಳು
ಆಲಿಂಗನವನ್ನು ಬಿಟ್ಟು, ತನ್ನ ತಲೆಯ ರುಮಾಲನ್ನು ತೆಗೆದು ಪಿತನ ಪಾದ
೭೧
ಗಳಿಗೆ ಸೋಂಕಿಸಿ ಪುನಃ ಭರಿಸಿದನು. ಆಮೇಲೆ ಆ ವೀರಯುವಕನು ತನ್ನ
ಲ್ಲಿದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಎರಡು ಮಾತನಾಡಿದನು-
''ಹೊರಡುತ್ತೇನೆ. ಆಶೀರ್ವಾದ ಮಾಡಲಾರೆಯಾ ನನಗೆ-ದಾದಾ?''
"ರಸೂಲ್ ! ರಸೂಲ್!!... ರಸೂಲ್!!!"
"ಏನು-ದಾದಾ?"
" ಹೊರಡು- ರಸೂಲ್, ಹೊರಡು, ಏನು ಬಂದರೂ ಕರ್ತವ್ಯದಿಂದ
ಪರಾಙ್ಮುಖನಾಗಬೇಡ ! . . . . ಇದೇ ನಮ್ಮ ಆಶೀರ್ವಾದ ! . . . .
ಹೊರಡು."
ಕುದುರೆಯು ತನ್ನ ಸೊಗಸಾದ ಕುತ್ತಿಗೆಯನ್ನು ಅವರ ಕಡೆಗೆ ತಿರು
ಗಿಸಿ, ಗೊರಸಿನಿಂದ ಭೂತಾಡನೆ ಮಾಡುತ್ತ ತನ್ನ ಅವಸರವನ್ನು ಸೂಚಿ
ಸಿತು. ರಥೋಲನು ಕುದುರೆಯನ್ನು ನೋಡಿದನು. ಅದು “ಬಾ ಹೊತ್ತಾ
ಯಿತು. ವೀರವರ !" ಎಂದು ಹೇಳಿದಂತೆ ತೋರಿತು. ರಸೂಸು
ಕೊನೆಯಸಲ ತಂದೆಯನ್ನಾಲಿಂಗಿಸಿ, ರಭಸದಿಂದ ಕುದುರೆಯನ್ನು ಸಮೀ
ಪಿಸಿ, ಒಂದೇ ನೆಗೆತಕ್ಕೆ ಅದನ್ನು ಬಂದು ಕುಳಿತಿದ್ದ ಹಾಗೆಯೇ ತಿರುಗಿ
ತಂದೆಯನ್ನೆಮ್ಮೆ ಕೊನೆಯ ಸಲ-ನೋಡಿದರು. ಶಿಲಾಪ್ರತಿಮೆಯಾಗಿ
ದ್ದಾನೆ-ತಂದೆ. ರಸೂಲ್‌ಖಾನನು ಕಡಿವಾಣವನ್ನು ಸಡಿಲಬಿಡುತ್ತ "ಛಲ್
ಗುಲಾಬ್ ! " ಅಂದನು. ಕುದುರೆಯು ಕುಣಿಯುತ್ತ, ಕುಣಿಯುತ್ತ ಹೊರ
ಟಿತು. ನಾಲ್ಕುಮಾರು ಹೋಗುವುದರಲ್ಲಿ ತಂದೆ ಕೂಗಿದಂತಾಯಿತು.
ರಸಲನು ಕುದುರೆಯನ್ನು ನಿಲ್ಲಿಸಿ ಹಿಂತಿರುಗಿ ನೋಡಿದನು. ತಂದೆ
ಕೈಯೆತ್ತಿ ಎತ್ತಿದ ಕಂಠದಿಂದ ಕೂಗಿ ಹೇಳಿದನು. " ಬೇಟ, ರಸೂಲ್,
ಜ್ಞಾಪಕವಿರಲಿ ! . . . ಮೊದಲು ಕರ್ತವ್ಯ . . . ಆ ಮೇಲೆ ..."
ಕುದುರೆ ನಾಲೋಟದಿಂದ ಓಡಲಾರಂಭಿಸಿತು, ಅದರ ಗೊರಸಿನ
ಹೊಡೆತದಿಂದೆದ್ದ ಧೂಳಿನ ತೆಲೆಯಲ್ಲಿ ತಂದೆಯ ಕಣ್ಣುಗಳಿಗೆ ರಸೂಲನೂ
ಅವನ ಕುದುರೆಯು ಮಬ್ಬು ಮಬ್ಬಾಗುತ್ತ ಬಂದು ಕೊನೆಗೆ ಮಾಯ
ವಾದರು, ಗೊರಸಿನ ಧ್ವನಿಮಾತ್ರ ಕೇಳಿಬರುತ್ತಿದ್ದು, ಅದೂ ಬರಬರುತ್ತ ಕ
ಕ್ಷೀಣವಾಗಿ- ಕೊನೆಗೆ ನಿಂತೇ ಹೋಯ್ತು, ರಸೂಲನ ತಂದೆಯ ಕಣ್ಣು
ಗಳಲ್ಲಿ ನೀರು ಉಕ್ಕಿಹರಿಯಿತು ಗದ್ಗದ ಕಂಠದಿಂದ ನಿದಾನವಾಗಿ
" ರಸೂಲ್-ರಸೂಲ್ ! . . . ನೀನು ಕೆಟ್ಟ ಕಾಲದಲ್ಲಿ ಕೆಟ್ಟಜನರ ಮಧ್ಯೆ
ಹುಟ್ಟಿದೆ ! ..... ಬೇಟಾ, ನಿನಗೆ ಮಂಗಳವಾಗಲಿ" ಎಂದು ಹೇಳುತ್ತ
ಮೈನ ಮನೆಯೊಳಕ್ಕೆ ಹೊರಟುಹೋದನು
೭೨ ಆರೋಹಿ
೨
ಅದ್ಭತ ಕಾಯದಿಂದ ತಲೆಯೆತ್ತಿ ಮೆರೆಯುತ್ತಿರುವ ಆರಾವಳೀ
ಪರ್ವತಮಲೆಯು ಹಿಂದುಗಳಲ್ಲಿ ಅಪ್ರತಿಮ ವೀರರೆಂದೆನಿಸಿಕೊಂಡ ರಜ
ಪೂತರು ಸನಾತನವಾದ ಆರ್ಯಧರ್ಮವನ್ನೂ ಸ್ತ್ರೀಯರ ಮಾನವನ್ನೂ
ಕಾಪಾಡುವುದರಲ್ಲಿ, ಮೇಲಿಂದ ಮೇಲೆ ತೋರಿದ ಶೌರ್ಯಸಾಹಸಗಳಿಗೆ
ಚಿರಸಾಕ್ಷಿಯಾಗಿರುವುದು. ಇಂದಿಗೆ ಸುಮಾರು ಇನ್ನೂರೆಪ್ಪತ್ತು ವರ್ಷ
ಗಳ ಹಿಂದೆ ರಜಪೂತರಿಗೂ ಮೊಗಲರಿಗೂ ಯುದ್ಧ ಪ್ರಾಪ್ತವಾಗಿ ಆರಾವಳೀ
ಪರ್ವತದ ಉಪತ್ಯಕೆಯು ಆ ನರಬಲಿಯ ವೇದಿಕೆಯಾಯಿತು, ಔರಂಗಷಹನ
ತಡೆಯಿಲ್ಲದ ಕ್ರೂರವರ್ತನೆಯಿಂದ ಖತಿಗೊಂಡ ರಜಪೂತಕುಲ ಚೂಡಾ
ಮಣಿಯಾದ ಉದಯಪುರದ ರಾಣಾಜಸಿಂಹನು ಅವನ ಸೊಕ್ಕನ್ನು
ಮುರಿಯಲು ಸೊಂಟಕಟ್ಟಿದನು. ಅತ್ಯಲ್ಪ ಕಾಲದಲ್ಲಿಯೇ “ಹರ- ಹರ-
ಮಹದೇವ್ ! . . . ಅಲ್ಲಾ-ಹೋ-ಅಕ್ಟರ್ !” ಎಂಬ ಸಮರಗರ್ಜನೆ
ಗಳ ಘಾತಪ್ರತಿಘಾತದಿಂದುಂಟಾದ ಭೀಷಣನಿನಾದವು ಪರ್ವತಮಾಲೆಯ
ಮೂಲೆಮೂಲೆಗೂ ಪ್ರಸರಿಸಿ ಪ್ರತಿಧ್ವನಿಗೈಯುವುದರಲ್ಲಿತ್ತು.
ಅಂದು ನಡುಬೇಸಗೆಯ ಮಧ್ಯಾಹ್ನ ರಜಪೂತಪರಕ್ಷಕ್ಕೆ ಸೇರಿದ ಸೈನಿಕ
ನೊಬ್ಬನು ಆರಾವಳೀ ಪರ್ವತಮಾಲೆಯ ಇಕ್ಕಟ್ಟಾದ ಕಣಿವೆಯ ದಾರಿ
ಯೊಂದರಲ್ಲಿ, ನಿಬಿಡವಾದ ಪೊದರಿನ ಮರೆಯಲ್ಲಿ ಮಲಗಿ ನಿದ್ರೆ ಹೋಗುತ್ತಿ
ದ್ದನು. ಎಡದ ಮುಂದೋಳನ್ನು ತಲೆಗೆ ಒತ್ತಾಗಿಟ್ಟುಕೊಂಡು ಬೋರ
ಲಾಗಿ ಮಲಗಿದ್ದನು. ಬಲದ ತೋಳು ಸ್ವಲ್ಪ ಚಾಚಿದಂತಿದ್ದು, ಅದರ ಸಡಿಲ
ಗೊಂಡ ಹಿಡಿತದಲ್ಲಿ ಕೋವಿಯೊಂದಿತ್ತು, ಆ ಯೋಧನು ಮಲಗಿದ್ದ
ರೀತಿಯಿಂದಲೂ ಮತ್ತು ಅವನು ಬೆನ್ನಿಗೆ ಕಟ್ಟಿ ಕೊಂಡಿದ್ದ ಸಣ್ಣ
ದೊಂದು ಗಂಟು ಅವನ ಉಸಿರಿನ ಏರಿಳಿತಗಳಿಗೆ ಸಮವಾಗಿ ಚಲಿಸು
ತ್ತಿದ್ದುದರಿಂದಲೂ ಅವನು ಸಜೀವಿಯಂತೆ ತೋರುತ್ತಿದ್ದನೇ ಹೊರತು,
ಅಕಸ್ಮಾತ್ತಾದ ದೃಷ್ಟಿಗೆ ಮೃತನಂತೆಯೇ ತೋರುತ್ತಿದ್ದನು.
ರಜಪೂತರು ಆ ಸೈನಿಕನನ್ನು ಆ ಕಣಿವೆಯ ದಾರಿಯಲ್ಲಿ ಕಾವಲಿಟ್ಟಿದ್ದರು.
ಯಾವ ಸ್ಥಳದಲ್ಲಿ ಬಹು ಎಚ್ಚರಿಕೆಯಿಂದ ಬಾಗರೂಕತೆಯಿಂದಲೂ
ಪಹರೆ ಇರಬೇಕಾಗಿತ್ತೋ ಅಲ್ಲಿ ಆ ನಿರ್ಭಾಗ್ಯ ಸೈನಿಕನು ಮೈಮರೆತು ನಿದ್ದೆ ಹೋಗುತ್ತಿದ್ದನು. ಸೈನಿಕವೃತ್ತಿಯಲ್ಲಿ ಅದರಲ್ಲಿ ಯುದ್ಧ ಕಾಲದಲ್ಲಿ-
ಈ ತೆರನಾದ ಅಜಾಗರೂಕತೆಯು ಗುರುತರವೂ ಅಕ್ಷಮ್ಯವೂ ಆದ ಅಪ
ಅಶ್ವಾರೋಹಿ ೭೩
ರಾಧ ! ಈ ಅಪರಾಧವು ಅವನ ಮೇಲಿನ ಅಧಿಕಾರಿಗಳಿಗೆ ತಿಳಿದರೆ ಅವನ
ಆಯುಸ್ಸು ಅಲ್ಲಿಗೆ ಮುಗಿಯುವುದು, ಸೈನ್ಯದ ಶಿಕ್ಷಾ ಪ್ರಕರಣದಲ್ಲಿ ಆ
ಅಪರಾಧಕ್ಕೆ ಮರಣವು ಯಥಾರ್ಥವಾದ ಶಿಕ್ಷೆ.
ಹತಭಾಗ್ಯ ಸೈನಿಕನು ಮಲಗಿದ್ದ ಸ್ಥಳವು ಡೊಂಕುಡೊಂಕಾಗಿ
ಹರಿದುಹೋಗಿದ್ದ ಹಾದಿಯ ಒಂದು ಮುರುವಿನಲ್ಲಿತ್ತು. ಆ ಪ್ರದೇಶದಲ್ಲಿ
ರಸ್ತೆಯು ಸ್ವಲ್ಪ ದರ ದಕ್ಷಿಣಕ್ಕೆ ಹತ್ತಿ ಹೋದಂತೆ ಇದ್ದು, ಬಲ
ಗಡಗೆ ತಿರುಗಿ ಪಶ್ಚಿಮಕ್ಕೆ ಸ್ವಲ್ಪ ದೂರ ಸಾಗಿ, ಪುನಃ ದಕ್ಷಿಣಕ್ಕೆ
ತಿರುಗಿ ಹರಿದುಹೋಗಿ ಮುಂದಿದ್ದ ಕಣಿವೆಯಲ್ಲಿ ಬಳಸಿಕೊಂಡು ಇಳಿದು,
ಕೆಳಗಿನ ನಿಬಿಡ ವನರಾಶಿಯಲ್ಲಿ ಮಾಯವಾಗಿತ್ತು. ಮಾರ್ಗವು ಎರಡ
ನೆಯ ಕಡೆ ತಿರುಗಿದ ಮೂಲೆಯಲ್ಲಿ, ದೊಡ್ಡ ಚಪ್ಪಟೆಯಾದ ಬಂಡೆಯೊಂದು
ಉತ್ತರದಿಕ್ಕಿಗೆ ಕೊ೦ಡಿತ್ತು. ಅದರ ಮೇಲೆ ನಿಂತು ನೋಡವವ
ರಿಗೆ ಎದುರಿನಲ್ಲಿ ಆಳವಾದ ಕಣಿವೆಯೂ, ಅದರಿಂದ ಅಲ್ಲಿ ತಿರುಗಿ ಇಲ್ಲಿ
ಬಳಸಿ ಹತ್ತಿ ಬರುವ ಇಕ್ಕಟ್ಟಾದ ಮಾರ್ಗವೂ ಗೋಚರಿಸುವುದು. ಆ
ಚಾಚಿದ ಬಂಡೆಯು ಪರ್ವತದ ಅತ್ಯಂತಕಡಿದಾದ ಉತ್ತರ ಪಾರ್ಶ್ವದ
ತುತ್ತತುದಿಯಲ್ಲಿತ್ತು. ಪ್ರಪಾತದ ಆಳವು ಸುಮಾರು ಒಂದು ಸಾವಿರ ಅಡಿ
ಗಳಿಗೆ ಮೀರಿದ್ದಿತು. ಸೈನಿಕನು ಮಲಗಿದ್ದ ಪ್ರದೇಶವು ಆ ತುದಿಬಂಡೆಯ
ಪೂರ್ವಕ್ಕೆ, ಸ್ವಲ್ಪ ದೂರವಾಗಿ ಒಂದು ತಗ್ಗಿನಲ್ಲಿತ್ತು. ಆ ಸ್ಥಳದಿಂದ,
ಮೇಲೆ ಹರಿದು ಬರುತ್ತಿದ್ದ ರಸ್ತೆಯ ಸ್ವಲ್ಪ ಭಾಗವೂ, ಆ ಕುಡಿಬಂಡೆಯೂ
ಮತ್ತು ಆ ಘೋರವಾದ ಪ್ರಪಾತದ ತಲೆತಿರುಗಿಸುವಂತಹ ಆಳವೂ
ಕಾಣಿಸುತ್ತಿದ್ದುವು.
ಸುತ್ತಮುತ್ತಲಿನ ಬೆಟ್ಟ ಪ್ರದೇಶವೆಲ್ಲಾ ದಟ್ಟವಾದ ವನರಾಶಿಯಿಂದ
ತುಂಬಿ ಅತ್ಯಂತ ದುರ್ಗಮವಾಗಿತ್ತು. ಪ್ರಪಾತದ ಉತ್ತರದ ಕಣಿವೆಯ
ತಳದಲ್ಲಿ ಮಾತ್ರ ಸ್ವಲ್ಪ ಪ್ರದೇಶವು ಸ್ವಭಾವವಾದ ಹುಲ್ಲುಗಾವಲಿನಂತೆ
ಕಂಗೊಳಿಸುತ್ತಿತ್ತು. ಬೆಟ್ಟದ ತುದಿಯಲ್ಲಿ ನಿಂತವರಿಗೆ ಕಂಡೂ ಕಾಣದ
ಹಾಗೆ, ಸಣ್ಣದೊಂದು ತೊರೆಯು ಅಲ್ಲಿ ಹರಿದು, ಇಲ್ಲಿ ಸುಳಿದು ಆ
ಹಸುರು ಕಾವಲನ್ನು ಸೀಳಿಕೊಂಡು ಹರಿಯುತ್ತಿತ್ತು, ಆ ಬಯಲಿನ
ಆಚೆ ಮೊದಲು ಹೇಳಿದ ಪ್ರಪಾತಕ್ಕೆ ಎದುರಾಗಿ, ಸುಮಾರು ಅಷ್ಟೇ
ಎತ್ತರದ ಇನ್ನೊಂದು ಪ್ರಪಾತವು ಪ್ರತಿಸ್ಪರ್ಧಿಯಂತೆ ಎಡೆಗೊಟ್ಟು
ಎದ್ದಿತ್ತು. ನಾವು ಹೇಳುವ ಸ್ಥಳದಲ್ಲಿ ನಿಂತು ನೋಡಿದರೆ ಪ್ರಕೃತಿಯು
೭೪ ಅಶ್ವಾರೋಹಿ
ಎಲ್ಲೆಲ್ಲಿಯೂ ಭೀಷಣಾಕಾರವನ್ನು ತಾಳಿದ್ದಂತೆ ತೋರುತ್ತಿತ್ತು. ಪ್ರದೇ
ಶವು ಅಷ್ಟು ದುರ್ಗಮವೂ ಭಯಂಕರವೂ ಆಗಿದ್ದರೂ ಅದು ಮಾನವರಿಗೆ
ಸಮರಾಂಗಣವಾಗಿದ್ದಿತು. ಕಣಿವೆಯನ್ನು ತುಂಬ ಮಾಲೆಮಾಲೆಯಾಗಿ
ಹಬ್ಬಿದ್ದ ಘೋರಾಟವಿಯಲ್ಲಿ ಸಶಸ್ತ್ರರಾದ ಐನೂರುಮಂದಿ ರಜಪೂತ
ವೀರರು ಅವಿತುಕೊಂಡಿದ್ದರು. ಬೋನಿನಂತಹ ಆ ಪ್ರದೇಶದಿಂದ ಹೊರ
ಹಾಯ್ದು ಹೋಗುತ್ತಿದ್ದ ಇಕ್ಕಟ್ಟಾದ ಹಾದಿಯನ್ನು ಆಕ್ರಮಿಸಿಕೊಂಡು,
ಐವತ್ತೇ ಜನರ ಒಂದು ಸಣ್ಣ ದಳವು ಶತ್ರುವಿನ ದೊಡ್ಡ ಪಡೆಯನ್ನಾದರೂ
ಅನ್ನ ನೀರಿದೆ. ಕಂಗೆಡಿಸಬಹದು. ರಜಪೂತ ಸೈನಿಕರು ಹಿಂದಿನ
ದಿನ ಹಗಲೂ ರಾತ್ರಿ ನಡೆದುಬಂದು, ಈಗ ಆ ಅಡವಿಯಲ್ಲಿ
ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ರಾತ್ರಿಯಾದೊಡನೆಯೇ ರಸ್ತೆಯನ್ನು
ಸೇರಿ- ಈಗ ಅವರ ಅಜಾಗರೂಕನಾದ ಸೈನಿಕರು ಎಲ್ಲಿ ಮೈಮರೆತು
ಮಲಗಿದ್ದನೋ ಅಲ್ಲಿಗೆ ಹತ್ತಿ ಬಂದು ದಕ್ಷಿಣದ ಕಣಿವೆಯಲ್ಲಿಳಿದು ನಡು
ರಾತ್ರೆಗೆ ಸರಿಯಾಗಿ ಕೆಳಗಿದ್ದ ಶತ್ರು ಶಿಬಿರದ ಮೇಲೆ ಬೀಳಬೇಕೆಂದು
ಅವರ ಅಭಿಪ್ರಾಯವಿತ್ತು, ಅಜಾಗರೂಕತೆಯಿಂದಲಾಗಲಿ, ಅಕಸ್ಮಾ
ತ್ತಾಗಿಯಾಗಲಿ ರಜಪೂತರ ಈ ರಹಸ್ಯವು ಮೊಗಲರಿಗೆ ತಿಳಿಯಿತೆಂದರೆ
ರಜಪೂತರ ಅಭೀಷ್ಟವ ಕೈಗೂಡುವಂತಿರಲಿಲ್ಲ.
* * * *
ನಿದ್ರಿಸುತ್ತಿದ್ದ ಆ ನಿರ್ಭಾಗ್ಯ ಸೈನಿಕಸು ತನ್ನ ಶೌರ್ಯ ಸಾಹಸ
ಗಳಿಂದಲೂ ಸೌಜನ್ಯದಿಂದಲೂ ರಜಪೂತ ಸೈನ್ಯದಲ್ಲಿ ಹೆಸರು ಪಡೆದಿದ್ದನು.
ಅರಾವಳೀ ಪರ್ವತಮಾಲೆಯ ಕಣಿವೆಗಳ ಹಾದಿಗಳೂ ಅವನಿಗೆ ಚೆನ್ನಾಗಿ
ಪರಿಚಿತವಾಗಿದ್ದುದರಿಂದ ಇವನನ್ನು ಇಂತಹ ಗುರುತರವಾದ ಕೆಲಸದಲ್ಲಿ
ನೇಮಿಸಿ ಆ ಸ್ಥಳದಲ್ಲಿ ಕಾವಲಿಟ್ಟಿದ್ದರು. ಆದರೂ ಆಯಾಸವು ಮನಸ್ಸ್ಥೈ
ರ್ಯವನ್ನು ಮೀರಿದ್ದರಿಂದ ಆ ಹತಭಾಗ್ಯನ್ನು ತಡೆಯಲಾರದೆ ನಿದ್ರೆಯಲ್ಲಿ
ಮುಳುಗಿದನು. ಈ ಅಜಾಗರೂಕವಾದ ನಿದ್ರೆಯ ಆಳದಿಂದ ಎತ್ತಲು, ಆ
ಕ್ಷಣದಲ್ಲಿ ಅವನ ಕನಸಿನಲ್ಲಿ ಸುಳಿದ ರೂಪವು ಮೋಹಿನಿಯ ಪಿಶಾಚಿಯೋ
ಹೇಳುವರಾರು ? ಆ ದಿನ ಮಧ್ಯಾಹ್ನದಲ್ಲಿ ಅಗೋಚರವಾದ ವಿಧಿಯು
ನಿಶ್ಯಬ್ದವಾಗಿ ಬಂದು, ಅವನ ನಿದ್ರೆಯ ಮುಚ್ಚಳದಂತಿದ್ದ ಕಣ್ಣಿವೆಗಳನ್ನು
ಅರಿಯದಂತೆ ಬಿಡಿಸಿ, ಅವನ ಜೀವಾತ್ಮನ ಕಿವಿಯಲ್ಲಿ ಉಚ್ಚರಿಸಲೂ
ಆಗದ, ಜ್ಞಾಪಕಕ್ಕೆ ತಂದುಕೊಳ್ಳಲೂ ಆಗದ, ಅಪೂರ್ವವೂ-ಗೂಢ
ಅಶ್ವಾರೋಹಿ ೭೫
ತಮವೂ ಆದ ಎಚ್ಚರದ ಶಬ್ಬವನ್ನು ಊದಿಹೇಳಿತು! • • • ಎಚ್ಚರಗೊಂಡ
ಸೈನಿಕನು ನಿಶ್ಯಬ್ದವಾಗಿ ತಲೆಯನ್ನು ಮುಂದೋಳಿನಿಂದ ಎತ್ತಿ, ಕೋವಿ
ಯನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತ, ಮಲಗಿದ್ದ ಹಾಗೆಯೇ ತನಗೆ ಮರೆಯಾ
ಗಿದ್ದ ಪೊದರಿನ ಸಂದಿನಲ್ಲಿ ನೋಡಿದನು ನೋಡಿದೊಡನೆಯೇ ಸೊಗಸಾದ
ಚಿತ್ರವೊಂದನ್ನು ಕಂಡಂತಾಗಿ ಅವನ ಹೃದಯವ ಹಿಗ್ಗಿತು! ಎದುರಿಗೆ,
ಪೀಠದಂತಿದ್ದ ಆ ತುದಿಬಂಡೆಯ ಮೇಲೆ, ನೀಲ ಗಗನಕ್ಕೆದುರಾಗಿ ಅಶ್ವಾ
ರೋಹಿಯ ಆಕೃತಿಯೊಂದು ಕಾಣಿಸಿತು. ನಿಶ್ಚಲವಾಗಿದ್ದ ಆ ಅಪೂರ್ವ
ಚಿತ್ರದಲ್ಲಿ ಕುದುರೆಯ ಗಂಭೀರ ! ಸವಾರ ಗಂಭೀರ ! ದೃಢಾಂಗ
ನಾದ ಆ ಯೋಧನ ಭೀಮಕಾಯವುಳ್ಳ ಆ ಕುದುರೆಯ ಮೇಲೆ ಕುಳಿತಿದ್ದ
ಠೀವಿಯನ್ನು ನೋಡಿದರೆ, ಈಗ ಕಾಲದ ಗ್ರೀಕರ ಸಂದರವಾದ
ದೇವತಾ ಪ್ರತಿಮೆಯಂತೆ ಕಂಗೊಳಿಸುತ್ತಿತ್ತು ! ಶುಭ್ರವಾದ ಗಗನದ
ಪ್ರಭೆಗೆ ಎದುರಾಗಿದ್ದುದರಿಂದ, ಕುದುರೆಯಲ್ಲಿಯೂ ಸವಾರನಲ್ಲಿಯೂ
ಅಂಗರಚನೆಯ ಉಬ್ಬುತಗ್ಗುಗಳು ಕಾಣದೆ ದೃಶ್ಯವು ಕಪ್ಪಾದ ನೆರಳಿನಂತೆ
ತೋರುತ್ತಿತ್ತು. ಆಕಾಶಕ್ಕೆ ಅಂಟಿಸಿದಂತಿದ್ದ ಆ ಛಾಯಾಚಿತ್ರದ ಅಂಚು
ರೇಖೇಗಳು, ಹರಿತವಾದ ಕತ್ತಿಯಿಂದ ಕತ್ತರಿಸಿ ಎಳೆದಂತೆ ಕಾಣುತ್ತಿತ್ತು.
ಕುದುರೆಯು ತಾನು ನಿಂತಿದ್ದ ಸ್ಥಳದಿಂದ ಮುಂದಿನ ಆಳವಾದ- ವನಾ
ವೃತವಾದ-ಕಣಿವೆಯನ್ನೂ, ಅದರಾಚೆಯಿದ್ದ ಇನ್ನೊಂದು ಪ್ರಪಾತ
ವನ್ನೂ ನೋಡಿ, ಆ ರುದ್ರ ರಮಣೀಯವಾದ ದೃಶ್ಯದಿಂದ ಸ್ತಂಭಿತ
ವಾದಂತೆ ಕಾಣುತ್ತಿತ್ತು. ಸವಾರನೂ ಕದಲದಂತೆ ಕುಳಿತು, ಎದುರಿನ
ಕಣಿವೆಯನ್ನೇ ನೋಡುತ್ತಿದ್ದನು. ಸೈನಿಕನ ಮನಸ್ಸಿನಲ್ಲಿ ಸನ್ನಿಹಿತ
ರಾಗಿದ್ದ ಶತ್ರುಗಳು ಪ್ರಬಲರಾಗಿದ್ದಾರೆಂಬ ಹೊಸಭಾವನೆಯೊಂದು ಹರಿದು
ಬರುತ್ತಿತ್ತು, ಈ ಕಾರಣದಿಂದ ಮತ್ತು ಉಜ್ಜ್ವಲವಾದ ಆಕಾಶದಲ್ಲಿ
ಎತ್ತಿ ಕಾಣುತ್ತಿದ್ದುದರಿಂದಲೂ ಅಶ್ವಾರೋಹಿಯ ಚಿತ್ರವು ಅವನ
ಕಣ್ಣಿಗೆ ಅದ್ಭುತವಾದ ವೀರಾಕೃತಿಯಂತೆ ಕಾಣಸುತ್ತಿತ್ತು !
ಕ್ಷಣಕಾಲ ಸೈನಿಕನ ಮನಸ್ಸಿನ, ಅಪೂರ್ವವೂ ಅರ್ಧ ಸ್ಪೂರ್ತಿಯ
ಆದ ಭಾವನೆಯೊಂದು ತಲೆದೋರಿತು. ಯುದ್ಧ ಮುಗಿಯುವವರೆಗೂ
ತಾನು ನಿದ್ರಾವಸ್ಥೆಯಲ್ಲಿಯೇ ಇದ್ದ ಹಾಗೂ ಈಗ ಎಚ್ಚರವಾಗಿ ತಾನು
ನೋಡುತ್ತಿರುವ ಆ ಅದ್ಭುತವೂ ಗಂಭೀರವೂ ಆದ ಅಶ್ವಾರೋಹಿಯ
ಪ್ರತಿಮೆಯು ವಿಜಯದ ಕುರುಹಿಗಾಗಿ ಆ ಉಚ್ಚಸ್ಥಾನದಲ್ಲಿ ಸ್ಥಾಪಿಸ
೭೬ ಅಶ್ವಾರೋಹಿ
ಲ್ಪಟ್ಟ ಶಿಲ್ಪದ ಕೆಲಸವೆಂದೂ ತಾನು ಅವಿವೇಕಿಯ ಅಯೋಗ್ಯನೂ
ಆಗಿ ಅಂತಹ ವಿಜಯದಲ್ಲಿ ಭಾಗಿಯಾಗಲಿಲ್ಲವೆಂದೂ ಭಾವಿಸಿಕೊಂಡನು. ಆದರೆ
ಆ ಭಾವನೆಯು ಅವನ ಮನದಲ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಪ್ರತಿಮೆ
ಯಂತಿದ್ದ ಆ ರೂಪವು ಸ್ವಲ್ಪ ಚಲಿಸಿದ್ದರಿಂದ ಸೈನಿಕನ ವಿಚಿತ್ರವಾದ
ಭಾವನೆಯ ಚೆದುರಿಹೊಯಿತು. ಕುದುರೆಯು ತನ್ನ ಕಾಲುಗಳನ್ನು
ಚಲಿಸದೆ ದೇಹವನ್ನು ಮಾತ್ರ ಸ್ವಲ್ಪ ಹಿಂದಕ್ಕೆ ಎಳೆದುಕೊಂಡಿತು;
ಸವಾರನು ಮಾತ್ರ ಮೊದಲಿನಂತೆಯೇ ನಿಶ್ಚಲವಾಗಿದ್ದನು. ಈಗ ಸೈನಿ
ಕನು ಸಂರ್ಪೂವನ್ನು ಎಚ್ಚೆತ್ತು, ಸಂದರ್ಭವನ್ನು ತಿಳಿದುಕೊಂಡನು!
ನಿಶ್ಚಬ್ಬವಾ ಕೋವಿಯನ್ನು ಕೈಗೆ ತೆಗೆದುಕೊಂಡು, ಕುದುರೆಯನ್ನು
ಎಳೆದು, ಅಶ್ವಾರೋಹಿಯ ಎದೆಗೆ ಸರಿಯಾಗಿ ಗುರಿಯಿಟ್ಟನು ಕೀಲನ್ನು
ಒತ್ತು ವದೇ ತಡ, ಕಾರ್ಯವು ಮುಗಿದುಹೋಗುತ್ತಿತ್ತು ಆ ಸಮಯದಲ್ಲಿ
ಅಶ್ವಾರೋಹಿಯು ರಜಪೂತ ಸೈನಿಕನು ಅವಿತುಕೊಂಡಿದ್ದ ದಿಕ್ಕಿಗೆ
ಮುಖವನ್ನು ತಿರುಗಿಸಿದನು. ಸೈನಿಕನಿಗೆ ಆ ಅಶ್ವಾರೋಹಿಯ ದೃಷ್ಟಿಯು
ಹೃದಯವನ್ನು ಭೇದಿಸುವಂತೆ ಅನುಭವವಾಯಿತು! ಅವನ ಮುಖದಲ್ಲಿ
ರಕ್ತವು ಇಂಗಿಹೋಗಿ ವಿವರ್ಣವಾಯಿತು !! ಅಂಗಾಂಗಗಳು ತರತರನೆ
ನಡುಗಲಾರಂಭವಾಯ್ತು ! ಸ್ಮೃತಿ ಜಾರತೊಡಗಿತು !! ಕುದುರೆಯೂ
ಸವಾರನೂ ಅವನ ಕಣ್ಣುಗಳಿಗೆ ಕಪ್ಪಾಗಿಕಂಡು, ಜ್ವಾಲಮಯವಾದ
ಗಗನದಲ್ಲಿ ಏಳುತ್ತ ಬೀಳುತ್ತ, ಚಕ್ರಾಕಾರವಾಗಿ ಸುತ್ತುತ್ತಿರುವಂತೆ
ತೋರಿತು! ಕೋಳಿ ಕೈಯಿಂದ ಜಾರತು. ಎತ್ತಿದ್ದ ಅವನ ತಲೆ ಮೆಲ್ಲನೆ ಬಾಗಿ
ಭೂಸ್ಪರ್ಶಮಾಡಿತು. ಈ ಧೀರನೂ, ಶೂರರೂ ಆದ ಸೈನಿಕರು ಉಕ್ಕಿ
ಬಂದ ಹೃದಯದ ಕ್ಷೋಭೆಯಿಂದ ಮೂರ್ಛೆ ಹೊಗುವುದರಲ್ಲಿದ್ದನು!...
ಹಾಗಾದರೆ ಯುದ್ಧ ಕಾಲದಲ್ಲಿ ಶತ್ರುವನ್ನು ಸಂಹರಿಸುವುದು ಅಷ್ಟು
ಭಯಾನಕವ್ಯಾಪಾರವೆ ? ಯಾವ ಶತ್ರುವು ತನ್ನ ಮತ್ತು ತನ್ನ ಕಡೆ
ಯುವರ ಗುಟ್ಟನ್ನರಿತಿರುವುದರಿಂದ- ಹೆಚ್ಚು ಭಯಂಕರನೋ ಆ ಶತ್ರುವನ್ನು
ಕೊಲ್ಲುವುದು ಅಷ್ಟು ಕಷ್ಟವೇ ? . . . ಆದರೆ ಸೈನಿಕನು ಬಹಳ ಹೊತ್ತು
ಹಾಗೆ ಇರಲಿಲ್ಲ : ಮರುಕ್ಷಣದಲ್ಲಿಯೇ ಚೇತರಿಸಿಕೊಂಡು, ತಲೆಯನ್ನೆತ್ತಿ
ಕೋವಿಯನ್ನು ತೆಗೆದುಕೊಂಡು ಪುನಃ ಗುರಿಯಿಟ್ಟನು. ಮನಸ್ಸು ತಿಳಿ
ಗೊಂಡು, ಹೃದಯವು ದೃಢವಾಗಿ ದೃಷ್ಟಿಯ ಸ್ಥಿರವಾಯಿತು.
ನಿರ್ದೋಷವಾದ ವಿವೇಚನೆ-ನಿರಲವಾದ ಆತ್ಮ ! ಅವನಿಗೆ ಆ ಶತ್ರುವನ್ನು
ಅಶ್ವಾರೋಹಿ ೭೭
ಸೆರೆಹಿಡಿಯುವ ಆಸೆ ಕಾಣಲಿಲ್ಲ, ಸ್ವಲ್ಪ ಸುಳುವು ಕೊಟ್ಟರೂ ಅವನು
ಇವರ ರಹಸ್ಯವನ್ನು ತಿಳಿದುಕೊಂಡು ತನ್ನ ಶಿಬಿರಕ್ಕೆ ದೌಡಾಯಿಸಿಬಿಡು
ತ್ತಾನೆ ! ಸೈನಿಕನು ಕ್ಷಣಮಾತ್ರದಲ್ಲಿ ತನ್ನ ಕರ್ತವ್ಯವನ್ನು ಅರಿತುಂಕೊಂ
ಡನು ಆ ಅಶ್ವಾರೋಹಿಯನ್ನು ತಾನು ಅವಿತಿದ್ದ ಸ್ಥಳದಿಂದಲೇ ಸ್ವಲ್ಪವೂ
ಎಚ್ಚರಿಕೆ ಕೊಡದೆ, ಕ್ಷಣಹೊತ್ತೂ ಯೋಚಿಸದೆ ಕೋವಿಯಿಂದ ಸುಟ್ಟು
ಬಿಡಬೇಕೆಂದು ನಿರ್ಧರಿಸಿದನು, ಆದರೆ ಉತ್ತರಕ್ಷಣದಲ್ಲಿಯೇ ಇನ್ನೊಂದು
ಯೋಚನೆ ತಲೆದೋರಿತು. “ನಿಲ್ಲ!-ನಿಲ್ಲು! ... ಇನ್ನೂ ಆಸೆ ಇದೆ-
ಅಂದ ಹಾಗಾಯಿತು. "ಆ ಅಶ್ವಾರೋಹಿಗೆ ಏನೂ ಗೊತ್ತಿಲ್ಲದೆ ಇರ
ಬಹುದು ! ಸುಮ್ಮನೆ ಅಲ್ಲಿ ನಿಂತು ಸುತ್ತಮುತ್ತಲಿನ ಪರ್ವತಮಾಲೆಯನ್ನೂ
ವನರಾಶಿಯನ್ನೂ ನೋಡಿ ಆನಂದಪಡುತ್ತಿರಬಹುದು! ಸುಮ್ಮನಿದ್ದರೆ
ಅವನು ಬಂದ ದಾರಿಯಲ್ಲಿ ತನ್ನಷ್ಟಕ್ಕೆ ತಾನು ಹೋಗುವನೋ ಏನೋ?
ಅವನು ಹಿಂತಿರ ಹೋಗುವುದರಲ್ಲಿ ನಿಜಾಂಶವು ತಿಳಿದೇ ತಿಳಿಯುವುದು.
ಆ ಸವಾರನ ಆಚಂಚಲವಾದ ದೃಷ್ಟಿಯು - - " ಸೈನಿಕನು ಈ ರೀತಿ
ಯೋಚಿಸುತ್ತ ಹಾಗೆಯೇ ಆ ಕ್ಷಣದಲ್ಲಿ ತನ್ನ ತಲೆಯನ್ನು ಮೆಲ್ಲನೆ ತಿರು
ಗಿಸಿ ಆಳವಾದ ಕಣಿವೆಯ ತಳಕ್ಕೆ ದೃಷ್ಟಿಯನ್ನು ಬೀರಿದನು. ಕೆಳಗೆ
ದೂರದ ಹಚ್ಚನೆಯ ಮೈದಾನದಲ್ಲಿ ತನ್ನ ಕಡೆಯ ಸೈನಿಕರ ಕುದರೆ
ಗಳೂ ಸಾಲುಗಟ್ಟಿ ಹೋಗುತ್ತಿದ್ದುದು ಕಂಡಿತು ! ಯಾರೋ ಅವಿವೇಕಿ
ಯಾದ ದಳಪತಿಯ ಸುತ್ತಮುತ್ತಲಿನ ಸೂರಾರು ಶಿಖರಗಳಿಂದ ಕಾಣುವ
ಹಾಗೆ ಕುದುರೆಗಳಿಗೆ ನೀರು ಕುಡಿಸಲು ತನ್ನ ಕಡೆಯವರಿಗೆ ಅಪ್ಪಣೆ
ಕೊಟ್ಟಿದ್ದಂತೆ ತೋರಿತು! ಸೈನಿಕರು ತಲೆಯನ್ನು ತಿರುಗಿಸಿ, ದೃಷ್ಟಿಯನ್ನು
ಪುನಃ ಕೋವಿಯ ನಲ್ಲಿಗೆ ಜೋಡಿಸಿ ಆಶ್ವಾರೋಹಿಯ ಮೇಲೆ ನೆಟ್ಟನು.
ಈ ಬಾರಿ ಕುದುರೆಗೆ ಗುರಿಯಿಟ್ಟನು, ಗೃಹತ್ಯಾಗಿಯಾದ ಸಮಯದಲ್ಲಿ
ತಂದೆಯು ಹೇಳಿದ್ದ ಮಾತುಗಳು ಅವನ ಹೃದಯಾಂತರಾಳದಲ್ಲಿ ಭಗನ
ದ್ವಾಕ್ಯದಂತೆ ಧ್ವನಿಗೈದುವು. " ನೀನು-ಯಾವುದನ್ನು ಕರ್ತವ್ಯವೆಂದು
ತಿಳಿಯುವೆಯೋ ಅದನ್ನು -ಏನು ಬಂದರೂ ಬಿಡದೆ ಮಾಡು!" ....ಈಗ ಅವನು ಶಾಂತನಾದನು, ಔಡುಗಚ್ಚಿದನು. ಅವನ ನರಗಳು ನಿದ್ರಿ
ಸುವ ಹಸುಳೆಯ ನರಗಳಂತೆ ಪ್ರಶಾಂತವಾದುವು, ಶಿಲಾಮೂರ್ತಿಯಂತೆ
ನಿಶ್ಚಲವಾದನು. ಸಮವಾಗಿ ನಿಧಾನವಾಗಿ ಉಸಿರಾಡುತ್ತಿದನು.
ಆತ್ಮವು ಹೇಳಿತು. "ಅಲುಗಬೇಡ !-ಶಾಂತನಾಗಿರು" ಎಂದು
೭೮ ಅಶ್ವಾರೋಹಿ
ಕರ್ತವ್ಯವು ಕರುಳನ್ನು ಮೆಟ್ಟಿತು! ಸೈನಿಕನು ಗೋಲಿಯನ್ನು ಹಾರಿ
ಸಿದನು.
ಆ ಸಮಯದಲ್ಲಿ ರಜಪೂತರ ದಳತಿಯೊಬ್ಬನು ಪ್ರಕೃತಿಸೌಂದರ್ಯ
ವನ್ನು ನೋಡಬೇಕೆಂತಲೋ, ಅಥವಾ ಅಲ್ಲಿಯ ಸನ್ನಿವೇಶವನ್ನು ಚೆನ್ನಾಗಿ
ತಿಳಿದುಕೊಳ್ಳಬೇಕೆಂತಲೋ, ತನ್ನ ಶಿಬಿರವನ್ನು ಬಿಟ್ಟು ಅಲ್ಲಿ ಇಲ್ಲಿ ಸಂಚಾರ
ಮಾಡುತ್ತ, ಪ್ರಪಾತದ ಬುಡವನ್ನು ಸಮೀಪಿಸಿ, ಅಲ್ಲಿ ಒಂದು ಸಣ್ಣ ತಿಟ್ಟಿನ
ಮೇಲೆ ನಿಂತು ಮುಂದೆ ಯಾವ ದಾರಿಯನ್ನು ಹಿಡಿಯಬೇಕೆಂದು ಯೋಚಿಸು
ತ್ತಿದ್ದನು. ಅವನಿಗೆ ಎದುರಾಗಿ, ಸುಮಾರು ಕಾಲುಮೈಲಿ ದೂರದಲ್ಲಿದ್ದರೂ
ಕೇವಲ ಸಮೀಪದಲ್ಲಿಯೇ ಇದೆ ಅನ್ನುವಹಾಗೆ ತೋರುತ್ತಿದ್ದ ಆ ಪ್ರಪಾ
ತದ ಶಿಲಾಮಯ ಪಾರ್ಶ್ವವು, ದುರ್ಗಮವಾದ ಕೋಟೆಯ ಗೋಡೆಯಂತೆ
ಎದ್ದು ಕಾಣುತ್ತಿತ್ತು. ಗೊತ್ತುಗುರಿಯಿಲ್ಲದೆ ಸಂಚಾರಾರ್ಥಿಯಾಗಿ ಬಂದ
ಆ ದಳಪತಿಯು ಸುತ್ತಮುತ್ತಲಿನ ವನಶ್ರೀಯ ಸೊಬಗನ್ನೂ ಪ್ರಪಾತ
ವನ್ನೂ ನೋಡುತ್ತ ನೋಡುತ್ತ ಹಾಗೆಯೇ ಕತ್ತೆತ್ತಿ, ಆ ಪ್ರಪಾತದ
ಮೇಲಿನ ಅಂಚೆಗೆ ದೃಷ್ಟಿಯನ್ನು ಬೀರಿದನು. ಆ ಕ್ಷಣದಲ್ಲಿ ಅವನು ಒಂದು
ಅತ್ಯಂತ ವಿಸ್ಮಯಕರವಾದ ದೃಶ್ಯವನ್ನು ನೋಡಿ ಸ್ವಂಭೀಭೂತನಾದನು !
ಅಶ್ವಾರೋಹಿಯೋರ್ವನು ವಾಯುಮಂಡಲದಲ್ಲಿ ಅತಿವೇಗದಿಂದ ಕೆಳಗಿನ
ಕಣಿವೆಗೆ ಇಳಿಯುತ್ತಿದ್ದುದನ್ನು ನೋಡಿದನು! ಪಳಗಿದ ಯೋಧನಂತೆ
ಕುಳಿತು, ಕಡಿವಾಣವನ್ನು ಬಿಗಿಯಾಗಿ ಹಿಡಿದೆಳೆದುಕೊಂಡಿದ್ದ ಸವಾರನ
ತಲೆಯ ಕೂದಲೂ ಬಟ್ಟೆಯೂ ಗಾಳಿಯ ರಭಸಕ್ಕೆ ಹಾರಾಡುತ್ತಿತ್ತು!
ಕುದುರೆಯ ರೀತಿಯನ್ನು ನೋಡಿದರೆ ಅದರ ಪ್ರತಿಯೊಂದು ಗೊರಸೂ
ಸ್ಥೂಲವಾದ ಭೂಮಿಯನ್ನು ತಾಡನೆಮಾಡುತ್ತ ನಾಲ್ಕಾಲೋಟದಿಂದ
ಓಡುತ್ತಿರುವಂತೆ ತೋರುತ್ತಿತ್ತು! ದಳಪತಿಯು ನೋಡುತ್ತಿದ್ದ ಹಾಗೆಯೇ
ಕುದುರೆಯು ಭೂಮಿಗಿಳಿಯುವದೋ ಎನ್ನುವಂತೆ ನಾಲ್ಕು ಕಾಲು
ಗಳನ್ನು ಒಟ್ಟಿಗೆ ಮುಂದಕ್ಕೆ ಚಾಚಿತು. ಕ್ಷಣಮಾತ್ರದಲ್ಲಿ ನಡೆದ ಈ
ಭೀಕರ ದೃಶ್ಯವನ್ನು ನೋಡಿ, ದಳಪತಿಯು ದಿಗ್ಧಮೆಯಿಂದ ಎದೆಯನ್ನು
ತಟ್ಟಿಕೊಂಡು " ಅಬ್ಬಾ!" ಎನ್ನುತ್ತ, ಆಶ್ಚರ್ಯದಿಂದಲೂ-ಭಯ
ದಿಂದಲೂ ತುಂಬಿದವನಾಗಿ, ಮನದಲ್ಲಿ ಸಹಿಸಲಸಾಧ್ಯವಾದ ಭಾವನೆ
ಯೊಂದು ಮೂಡಿ, ನಿಲ್ಲಲಾರಜಿ ಕೆಳಗೆ ಬಿದ್ದುಬಿಟ್ಟನು. ಆ ಮುಹೂರ್ತ
ದಲ್ಲಿಯೇ ದೂರದಲ್ಲಿ ವನಾಂತರಾಳದಿಂದ ಏನೋ ಅಪ್ಪಳಿಸಿಬಿದ್ದ ಶಬ್ದ
ಅಶ್ವಾರೋಹಿ ೭೯
ವೊಂದು ಕೇಳಿ ಒಂದು, ಪ್ರತಿಧ್ವನಿಯಿಲ್ಲದೆ ಉಡ ಹೋಯಿತು ! ಎಲ್ಲವೂ
ದಳಪತಿಯು ಒಂದೆರಡು ಕ್ಷಣಗಳ ಮೇಲೆ ಚೇತರಿಸಿಕೊಂಡಿದ್ದು -
ಚೆದರಿದ ಬುದ್ಧಿಯನ್ನು ಆಯ್ದುಕೊಳುತ್ತ ನೆಲ್ಲಮೆಲ್ಲನೆ ಹೆಜ್ಜೆಯಿಡುತ್ತ
ಅರ್ಧ ಗಂಟೆಯ ಮೇಲೆ ತನ್ನ ಶಿಬಿರವನ್ನು ಸೇರಿದನು.
೩
ಸೈನಿಕನು ಗೋಳಿಯನ್ನು ಹಾರಿಸಿದೊಡನೆಯೇ ಪುನಃ ಕೋವಿಗೆ
ಗೋಲಿಯನ್ನು ತುಂಬಿ ಮೊದಲಿನಂತೆಯೇ ಕಾವಲಿದ್ದನು. ಹತ್ತು ನಿಮಿಷ
ಕಳೆಯುವುದರೊಳಗಾಗಿ ರಜಪೂತ ಹವಾಲ್ದಾರನೊಬ್ಬನು ಇವನ ಸಮೀ
ಪಕ್ಕೆ ಮೆಲ್ಲನೆ ಹರಿದು ಒಂದನ್ನು ಸೈನಿಕನ ತಲೆಯನ್ನಾಗಲಿ, ದೃಷ್ಟಿಯ
ನ್ನಾಗಲಿ ಅವನ ಕಡೆಗೆ ತಿರುನಗೆ, ಅವರನ್ನು ಗುರ್ತಿಸಿದ ಹಾಗೂ
ತೋರಿಸಿಕೊಳದೆ ನಿಶ್ಚಲನಾಗಿದ್ದನು. ಬಂದವರು ಪ್ರಶ್ನೆ ಮಾಡಿದನು-
" ನೀನು ಗುಂಡ ಹಾರಿಸಿದೆಯಾ ? ” ಎಂದು.
"ಹೌದು."
* ಯಾರ ಮೇಲೆ?"
ಹಾಗೂ
* ಒಂದು ಕುದರೆಯ ಮೇಲೆ- ಅದೋ ಆ ತುದಿಬಂಡೆಯ ಮೇಲೆ
ನಿಂತಿತ್ತು. ನಿಸಿದ್ದು ಮುಂದಕ್ಕೆ ಹಾರಿತು."
" ಕುದುರೆಯು ಮಾತ್ರ ಇದ್ದಿತೆ ?"
"ಇಲ್ಲ-"
"ಹಾಗಾದರೆ?..."
ಸೈನಿಕನು ಮಾತನಾಡಲಿಲ್ಲ. ಅವನ ಮುಖವು ಬಿಳುಪೇರಿಹೋಗಿದ್ದಿತು;
ಆದರೆ ಅದರಲ್ಲಿ ಇನ್ನಾವ ಕಳವಳದ ಚಿಹ್ನೆಯೂ ತೋರಲಿಲ್ಲ, ಹವಾಲ್ದಾ
ರನ ಪ್ರಶ್ನೆಗೆ ಉತ್ತರ ಹೇಳಲಾರದೆ ಮುಖವನ್ನು ಬೇರೆ ಕಡೆಗೆ ತಿರುಗಿಸಿ
ಕೊಂಡನು. ಹಮಾಲರನ್ನು ಕ್ಷಣಕಾಲ ಸುಮ್ಮನಿದ್ದು ಆ ಮೇಲೆ “ ಇಲ್ಲಿ
ಕೇಳು, ಗುಟ್ಟು ಮಾಡುವುದರಿಂದ ಪ್ರಯೋಜನವಿಲ್ಲ : ನಾನು ಆಜ್ಞೆಮಾಡು
ತ್ತೇನೆ ಹೇಳು ; ಆ ಕುದುರೆಯ ಮೇಲೆ ಯಾರಾದರೂ ಇದ್ದರೆ?" ಎಂದು
ಸ್ಥಿರದೃಷ್ಟಿಯಿಂದ ಕೇಳಿದ. ಸೈನಿಕನು ಅರೋದೃಷ್ಟಿಯಿಂದ " ಇದ್ದರು. "
ಎಂದನು.
೮೦ ಅಶ್ವಾರೋಹಿ
"ಯಾರು?"
ನನ್ನ ತಂದೆ "
"ಹ!-ಯಾರು?"
“ ಏನು ಹಾಗೆಂದರೆ, ವಿಕ್ರಮ ? "
* ನಾನು ವಿಕ್ರಮನಲ್ಲ !"
ಯಾರು ಹಾಗಾದರೆ ನೀನು ? "
" ನಾನು ಔರಂಗನನ್ನು ತ್ಯಜಿಸಿ ಒಂದ ರಸೂಲ್ ! "
ಹೀಗೆಂದು ಹೇಳಿ ರಸೂಲ್ ಖಾನನು ದೊಡ್ಡದಾಗಿ ನಿಟ್ಟುಸಿರು ಬಿಟ್ಟು
ದೃಷ್ಟಿಯನ್ನು ಬೇರೆ ಕಡೆಗೆ ತಿರುಗಿಸಿದನು. ಹವಾಲ್ದಾರನು "ಅಬ್ಬಾ"
ಎನ್ನುತ್ತ ಎದೆಯನ್ನು ತಟ್ಟಿಕೊಂಡು, ಮರುಮಾತಿಲ್ಲದೆ ಎದ್ದು ಹೊರಟು
ಹೋದನು.
೮೧=================================================
ಹಂಡತಿಯ ಕಾಗದ
ಅಂದು ಭಾನುವಾರ ! ಭಾನುವಾರ ವಾರಕ್ಕೊಂದು ಸಲ ಹೇಗೆ
ಬರುತ್ತೆಯೋ ಹಾಗೆಯೇ ರಾಮನಾಥನಿಗೆ ಅವನ ದೇವಿಯಿಂದ ವಾರ
ಕ್ಕೊಂದು ಸಲ ಕಾಗದ ಬರುತ್ತಿತ್ತು, ಅದೂ ಭಾನುವಾರವೇ ಬರುತ್ತಿತ್ತು.
ಭಾನುವಾರ ಒಂದುವೇಳೆ ತಪ್ಪಿದರೂ ತಪ್ಪಬಹುದು ; ಆದರೆ ಅವನ
ಹೆಂಡತಿಯ ಕಾಗದ ಬರುವುದು ಮಾತ್ರ ತಪ್ಪುತ್ತಿರಲಿಲ್ಲ. ಅದು ಅವನು
ವಾಣಿಯ ಸಂಗಡ ಮಾಡಿಕೊಂಡಿದ್ದ ಕಾರಾರಿನಲ್ಲಿ ಒಂದು ಮುಖ್ಯವಾದ
ಷರತ್ತು. ಈಗ ವಾಣಿ ಮೈಸೂರಿನಲ್ಲಿ ತನ್ನ ತೌರುಮನೆಯಲ್ಲಿದ್ದಳು.
ಇವರು ಬೆಂಗಳೂರಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದುಕೊಂಡು
ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
ರಾಮನಾದ ಪೂರಾ ರಸಿಕ. ಅವನ ರಸಿಕತೆ ಕಲಿತುದಲ್ಲ ; ಅದು
ಜನ್ಮ ಜನ್ಮಾಂತರಗಳಿಂದಲೂ ಒಟ್ಟುಗೂಡಿ ಅವನ ಜೀವಕ್ಕೆ ಅಂಟಿ ಬಂದ
ಗುಣ, ಮಾವಿನ ಹಣ್ಣನ್ನು ತಿನ್ನುತ್ತಾ ಮುಖದಲ್ಲಿ ಸಂತೋಷದ ಭಾವ
ವನ್ನು ತೋರುವುದು ಹೆಚ್ಚಲ್ಲ; ಬೇವಿನ ಕಾಯನ್ನು ತಿನ್ನುತ್ತಾ ಮುಖ
ದಲ್ಲಿ ಮಾವಿನ ಹಣ್ಣಿನ ಸವಿಯ ಭಾವವನ್ನು ತೋರುವುದೀಗ ರಸಿಕತೆ !
ರಾಮನಾಥನ ರಸಿಕತೆ ಈ ಜಾತಿಗೆ ಸೇರಿದುದು. ಒಂದು ದಿನ ವಾಣಿಗೆ
ಇವನ ಮೇಲೆ ಯಾತಕ್ಕೂ ಬಹಳ ಕೋಪ ಬಂತು, ಇವನೂ ಬಹಳ
ರೇಗಿಸಿದ. ಅವಳು ಎಷ್ಟು ಕೋಪಮಾಡಿಕೊಂಡರೂ ಇವನು ಒಂದು
ಮಾತೂ ಆಡಿಸದೆ ಸುಮ್ಮನೆ ಮುಗುಳ್ಳಗೆ ನಗುತ್ತಿದ್ದ. ಅವಳ ಕೋಪವನ್ನು
ಮತ್ತೂ ಕೆಣಕಿದ ಹಾಗಾಯಿತು. ಅದು ಕರಗಿ ಕಣ್ಣಿನಲ್ಲಿ ಕಾಣಿಸಿ
ಕೊಂಡಿತು. ಬರೀ ಕೋಪದಲ್ಲಿದ್ದಾಗ ಅವಳು ಗಂಡನಿಂದ ಸ್ವಲ್ಪ ದೂರ
ವಾಗಿಯೇ ಇದ್ದಳು. ಕಣ್ಣು ನೀರಿನಲ್ಲಿ ತೇಲಿತೋ ಇಲ್ಲವೋ ಬೇಗ ಬಂದು
ಅವನ ದೇಹಕ್ಕೆ ಹಬ್ಬಿದಹಾಗೆ ನಿಂತು, ಅವನ ಎದೆಗೆ ತನ್ನ ತಲೆಯನ್ನು
ಒತ್ತಿ ಬಿಕ್ಕಳಿಸಿ ಅಳಲಾರಂಭಿಸಿದಳು. ಆ ಮೇಲೆ ಶಾಂತಿಸಮಾಧಾನಗಳ
ಪ್ರಯತ್ನಕ್ಕೆ ಪ್ರಾರಂಭ. ರಾಮನಾಥ ಅವಳ ಸೆರಗಿನ ತುದಿಯಿಂದಲೇ
.....................................
• Dedicated to my pals of my college cricket team, 1930.
೮೨ ಹೆಂಡತಿಯ ಕಾಗದ
ಅವಳ ಕಣ್ಣೀರನ್ನು ಒರಿಸತೊಡಗಿದ. ವಾಣಿ ಮುಖವನ್ನ ಕೋಪವನ್ನೂ
ಸಮತೂಕದಲ್ಲಿ ಬೆರೆಸಿ, ಮಧ್ಯೆ ಮಧ್ಯೆ ಬಿಕ್ಕಳಿಸುತ್ತ " ಈಗ
ಬಂದ್ರೇನೋ ಮುದ್ದಿಸೋಕೆ ! ಹೋಗೀ ಅಂದ್ರೆ-ನೀವು ನನ್ನ
ಮುಟ್ಬೇಡಿ !" ಅಂದವಳು, ಅವನನ್ನು ಬಿಟ್ಟು ಒಂದಂಗುಲವೂ ಕದಲ
ಲಿಲ್ಲ. ಅವನ ಹೆಗಲ ಮೇಲೆ ಕೈಹಾಕಿ ಪುನಃ ಆಳತೋಡಗಿದಳು, ರಾಮ
ನಾಥನಿಗೆ ಅವಳ ಆಟವನ್ನು ನೋಡಿ ನಗು ಬಂತು. ಅವನು ಒಂದು
ಕೈಯಿಂದ ಅವಳ ಬೆನ್ನು ತಟ್ಟುತ್ತ, ಇನ್ನೊಂದು ಕೈಯಿಂದ ಅವಳ
ಮುಂದಲೆಯನ್ನು ಸವರುತ್ತ, “ ವಾಣೀ, ನಾನು ಮೊದಲೇ ಸಮಾಧಾನ
ಮಾಡಿದರೆ ನಿನ್ನ ಕೋಪ ನೋಡೋಕು ? ನಿನ್ನ ರೇಗಿಸಿ ಕೋಪ
ದಲ್ಲಿ ನಿನ್ನ ರೂಪ ಹೇಗಿರುತ್ತೆ-ನೋಡ್ಬೋಕೂಂತಿದ್ದೆ ! ಅದಕ್ಕೆ ಮೊದಲು
ಸಮಾಧಾನ ಮಾಡಲಿಲ್ಲ. ಅಬ್ಬಬ್ಬಾ! ಅದೇನು ಕೋಪ ! ಆ ಕಣ್ಣು
ಗಳೋ !-ಆ ಹುಬ್ಬುಗಂಟೋ!-ಆ ತುಟಿಗಳೋ ! ನಿಲುವಿನ
ಠೀವಿಯೋ !- - - - " ಅವನ ಮಾತು ಮುಗಿಯುವುದಕ್ಕೆ ಮೊದಲೇ
ವಾಣಿ ತನ್ನ ಕೈಯಿಂದ ಅವನ ಬಾಯನ್ನು ಒತ್ತಿ, " ಸಾಕು ನಿಲ್ಲಿಸಿ!
ನೀವೇನೀಗ ವರ್ಣಿಸಬೇಕಾಗಿಲ್ಲ!-ಮೂಗಂತೆ!-ಕಿವಿಯಂತೆ! ಹೋಗಿ
ಅಂದ್ರೆ ! ನೀವು ನನ್ನ ಮುಟ್ಟಬೇಡಿ ! " ಅಂದಳು. ಈಗಲೂ ಅವನನ್ನು
ಬಿಟ್ಟು ಕದಲಲಿಲ್ಲ. ರಾಮನಾಥ ನಕ್ಕು, " ಅಲ್ವೇ, ' ನನ್ನ ಮುಟ್ಬೇಡಿ'
ಅಂತೀಯ ; ನೀನೇ ನನ್ನ ಮುಟ್ಕೊಂಡಿದಿಯಲ್ಲೇ! ಅಂದ. ಅವಳಿಗೂ
ಸ್ವಲ್ಪ ನಗು ಬಂತು. ಒಂದು ಒಯ್ಯಾರದಿಂದ ತನ್ನ ದೇಹಲತೆಯನ್ನು
ಬಳುಕಿಸುತ್ತಾ " ನಾನು ಹೇಳಿದ್ದೇನು?" ನೀವು-ನನ್ನ -ಮಟ್ಬೇಡಿ_
ಅಂತ ' ಎಂದಳು ನಗುಅವಳ ದೇಹವನ್ನೆಲ್ಲಾ ವ್ಯಾಪಿಸಿತ್ತು. ಅವಳು
ರಾಮನಾಥನ ತೋಳುಗಳಲ್ಲಿ ಸೆರೆಯಾದಳು. ಅವನು, ''ಅಹ-ಹ-ಹ-ಹ!
ಎಷ್ಟು ಚಾಣತನ! ಒಪ್ಪಿಗೆ ವಾಣಿ ಎಲ್ಲಿ ಹೀಗೆ ತಿರುಗು!" ಎಂದು
ಮೆಲ್ಲಗೆ ಅವಳ ಗಲ್ಲವನ್ನು ಎತ್ತಿದ ವಾಣಿ ನಗುತ್ತ ಬಳುಕುತ್ತ " ಯಾಕೆ ? "
ಎಂದಳು.
" ಇಷ್ಟು ಜಾಣತನದಿಂದ ಮಾತಾಡಿದೆ ! ಸ್ವಲ್ಪ ಬಹುಮಾನ ಕೊಡ
ದಿದ್ರೆ ಆಗುತ್ತದೆಯೇ ? "
"ಎಲ್ಲಾ ಆಗುತ್ತೆ ! "
" ಛೇ! ಎಲ್ಲಾದರೂ ಉಂಟೇ!"
ಹೆಂಡತಿಯ ಕಾಗದ ೮೩
" ಅಬ್ಬಾ ! ಎಷ್ಟು ಆಸೆಯೋ !
ಅವನ ಆಸೆಯನ್ನು ಎಷ್ಟು ಎಂದು ಹೇಳೋಣ! ಶಬ್ದಗಳಿಗೆ ಸಿಲುಕದ
ಅವನ ಆಸೆಯ ಪರಿಣಾಮವನ್ನು ಶಬ್ದಗಳಿಂದ ವರ್ಣಿಸಲು ಪ್ರಯತ್ನಿಸು
ವುದು ಸಮುದ್ರವನ್ನು ಬೊಗಸೆಯಲ್ಲಿ ಅಳಿಯಲು ಹೊರಟಹಾಗೆ, ರಾಮ
ನಾಥ ರಸಿಕ ; ಅವನು ಆ ಹುಚ್ಚು ಕೆಲಸಕ್ಕೆ ಹೋಗಲಿಲ್ಲ. ವಾಣಿಗೆ
ತನ್ನ ಆಸೆಯ ಆಳವನ್ನು ನಿಶ್ಚಬ್ಬವಾಗಿಯೇ ತೋರಿಸಿದ.
* * * *
ದೇವರು, ರಾಮನಾಥ ವಾಣಿ-ಇವರ ಜೀವನವನ್ನು ಒಂದಾಗಿ
ಸೇರಿಸುವುದರಲ್ಲಿ ಬಹಳ ಮುತುವರ್ಜಿ ವಹಿಸಿದಂತೆ ತೋರುತ್ತದೆ. ವಾಣಿ
ರಾಮನಾಥನ ರಸಿಕತೆಗೆ ತಕ್ಕ ಹೆಣ್ಣು ; ಅವನ ಮೆಚ್ಚಿನ ಮಡದಿ, ಇತ
ರರು ಜೀವನವನ್ನು ಒಂದು ಪ್ರಯಾಣ ಎಂದು ತಿಳಿದಿದ್ದರೆ, ಇವರು
ತಮ್ಮ ಜೀವನವನ್ನು ಒಂದು ಆಟ ಎಂದು ತಿಳಿದಿದ್ದರು. ಅವನ ಪ್ರೇಮ
ಮೇರೆಯಿಲ್ಲದ ಮಹಾಸಮುದ್ರ : ಅವಳ ಒಲವು ತಡೆಯಿಲ್ಲದ ತುಂಬಿದ
ಪ್ರವಾಹ.
ವಾಣಿ ಓದುಬರಹ ಚೆನ್ನಾಗಿ ಬಲ್ಲಳು. ಗಂಡನನ್ನು ಮರಳು
ಮಾಡುವ ಹಾಗೆ ಕಾಗದ ಬರೆಯುತ್ತಿದ್ದಳು. ರಾಮನಾಥ ನಾಲ್ಕು ಪುಟ
ಬರೆದರೆ ಅವಳು ಎಂಟು ಪುಟ ಬರೆಯುವಳು, ಎಲ್ಲಾ ಹುಚ್ಚು- ಹಚ್ಚು !-
ಎನ್ನುವಿರೋ ? ಹೌದು ಹುಚ್ಚುತನವೇ ಸರಿ ಆದರೆ ಇದು ಪ್ರೇಮಿ
ಗಳಾದ ಎಲ್ಲಾ ದಂಪತಿಗಳೂ ಅನುಭವಿಸುವ ಹುಚ್ಚುತನ! ಯೌವನದ
ದಾಂಪತ್ಯದ ಎಳೆಯ ದಿನಗಳು ಈ ವಿಧವಾದ ಹುಚ್ಚಿನಿಂದ ತುಂಬಿರುತ್ತವೆ.
ರಾಮನಾಥನಿಗೆ ಅವನ ಮೋಹದ ಮಡದಿ ಈ ಹುಚ್ಚನ್ನು ಚೆನ್ನಾಗಿ
ಹಿಡಿಸಿಬಿಟ್ಟಿದ್ದಳು.
* * * *
ಸರಿ, ಅಂದು ಭಾನುವಾರ ಎಂದು ಹೇಳಿದೆನಲ್ಲವೆ ? ಅಂದು ವಾಣಿಯ
ಕಾಗದ ಬರುವ ದಿನ ರಾಮನಾಥ ಬಹಳ ಆಸೆಯಿಂದ ಕಾದಿದ್ದ. ಅವನ
ಆಸೆ ಶನಿವಾರ ರಾತ್ರೆಯಿಂದಲೇ ಪ್ರಾರಂಭವಾಗಿತ್ತು. ಆ ರಾತ್ರಿ ನಿದ್ರೆ
ಬರುವ ಮೊದಲು ವಾಣಿಯ ಕಾಗದದ ಯೋಚನೆಯು ಕೊನೆಯ
ದಾಗಿತ್ತು. ಭಾನುವಾರ ಬೆಳಗಿನ ಜಾವ ಒಂಭತ್ತು ಗಂಟೆಗೆ ಎದ್ದಾಗ ಅದೇ
ಮೊದಲನೆಯ ಯೋಜನೆ! ಹಿಂದಿನವಾರ ವಾಣಿಯ ಕಾಗದ ಬಹಳ
೮೪ ಹೆ೦ಡತಿಯ ಕಾಗದ
ಸಂಕ್ಷೇಪವಾಗಿತ್ತು, ಅದರಲ್ಲಿ " . . . ಈಗ ಹೆಚ್ಚು ಬರೆಯಕೆ
ಪುರಸತ್ತಿಲ್ಲ ; ಮುಂದಿನವಾರ ದೊಡ್ಡದಾಗಿ ಕಾಗದ ಬರೀತೀನಿ, ಕ್ಷಮಿಸ
ಬೇಕು ..." ಎಂದು ಕೊನೆಯಲ್ಲಿ ಆಸೆಹುಟ್ಟಿಸುವ ಒಂದು ಮಾತು
ಸೇರಿಸಿದ್ದಳು. ಅವನಿಗೆ ಆ ಕಾಗದ ಓದಿದಾಗ ವಿಪರೀತ ಕೋಪಬಂತು.
ಆದರ ಕೊನೆಯಲ್ಲಿ ಬರೆದಿದ್ದ ಮಾತುಗಳನ್ನು ಓದಿ ಕೋಪವನ್ನು
ನುಂಗಿಕೊಂಡ. ವಾಣಿ ಚತುರೆ! ರಾಮನಾಥ ಹೇಗೆ ಹೇಗೋ ಒಂದು
ವಾರವನ್ನು ಕಳೆದು, ಅಂದು ಪುನಃ ಭಾನುವಾರ ! ವಾಣಿ ಹಿಂದಿನ ಭಾಗದ
ದಲ್ಲಿ ಒಪ್ಪಿದ್ದ ಆಸೆ ಅವನ ಮನಸ್ಸಿನಲ್ಲಿಯೇ ಸುಳಿದಾಡುತ್ತಿದ್ದುದು ಅಂದು
ಅವನ ಮನಸ್ಸನ್ನೆಲ್ಲಾ ತುಂಬಿತು. ಅಲ್ಲದೆ ಅವಳ ಆ ಸಂಕ್ಷೇಪವಾದ
ಕಾಗದಕ್ಕೆ ಉತ್ತರಗಳ, ಇವನು ಹುಚ್ಚಾಪಟ್ಟೆ ರೇಗಿ ಆರು ಪುಟಗಳಷ್ಟು
ಕಾಗದ ಬರೆದಿದ್ದ, ಅದರ ಯೋಚನೆ ಬೇರೆ! ತಾನು ರೇಗ ಬರೆದಿದ್ದಕ್ಕೆ
ವಾಣಿ ಏನೇನು ಸಮಾಧಾನ ಹೇಳಿ ಯಾವ ಯಾವ ಪ್ರೇಮದ ಮಾತು
ಗಳನ್ನು ಬರೆದು ತನ್ನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೋ !--
ಎಂದು ಯೋಚಿಸ ತೊಡಗಿದ. ಅಂದು ಭಾನುವಾರವಾದ್ದರಿಂದ ಅಂಚೆಯ
ವನು ಬರುವುದು ಎಂದಿಗಿಂತಲೂ ಸ್ವಲ್ಪ ಹೊತ್ತು, ನೋಡಿ, ಭಾನುವಾರ
ದಲ್ಲಿ ಅದೊಂದೇ ಕುಂದಕ! ಅದರ ಬೇರೇ ಊರಲ್ಲಿರುವ ಪ್ರೇಯಸಿ
ಯಿಂದ ಪ್ರೇಮದ ಕಾಗದವನ್ನು ನಿರೀಕ್ಷಿಸುವವರ ಗಣನೆಯಲ್ಲಿ ಆ
ಕುಂದಕ ಅಷ್ಟಿಷ್ಟಲ್ಲ ! ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಅಂಚೆಯ
ವನು ಬಂದ. ಅವನು ದೂರದಲ್ಲಿದ್ದಾಗಲೇ ರಾಮನಾಥ “ಏನಪ್ಪಾ,
ರಾಮಯ್ಯ, ಏನಾದರೂ ಉಂಟೇ ?” ಎಂದು ಕೇಳಿದ. ಅವನು " ಇದೆ
ಸ್ವಾಮಿ " ಎಂದು ಹೇಳುತ್ತಾ, ದೂರದಲ್ಲಿದ್ದ ಹಾಗೆಯೇ ಒಂದು ಕಾಗದವನ್ನು
ಆರಿಸಿ ತೆಗೆದ. ವಾಣಿಯ ಕಾಗದದೇ ಇರಬೇಕು ! ವಾಣಿ ಎಷ್ಟು
ಒಳ್ಳೆಯವಳು! ರಾಮಯ್ಯ ಹತ್ತಿರ ಒಂದು ಕಾಗದವನ್ನು ಕೈಗೆ ಕೊಟ್ಟ.
ಹೌದು-ವಾಣಿಯ ಕಾಗದ ! ದಪ್ಪವಾಗಿತ್ತು ! ಇನ್ನೇನು ಕಾಗದವನ್ನು
ಒಡೆಯುವದರಲ್ಲಿದ್ದ ಆ ಸಮಯಕ್ಕೆ ಸರಿಯಾಗಿ ಗಣೇಶ ಅವಸರವಾಗಿ
ಬೈಸಿಕಲ್ ಮೇಲೆ ಬರುತ್ತಿದ್ದವನು ದೂರದಲ್ಲಿಯೇ ಇವನನ್ನು ನೋಡಿ,
"ರಾಮನಾಥ" ಎಂದು ಕೂಗಿದ, ರಾಮನಾಥ ಕಾಗದ ಒಡೆಯುವು
ದನ್ನು ನಿಲ್ಲಿಸಿ ತಿರುಗಿ ನೋಡಿದ. ಗಣೇಶ ಇವನ ಹತ್ತಿರ ಒಂದು ಇಳಿದು
“ಲೋ ಹೊತ್ತಾಗ್ಲಿಲ್ವೇನೋ ಮ್ಯಾಚಿಗೆ ! ಇನ್ನೂ ಬಟ್ಟೇನೇ ಹಾಕ್ಕೊಂಡಿ
ಹೆಂಡತಿಯ ಕಾಗದ ೮೫
ಲ್ವಲ್ಲೋ ನೀನು !" ಎಂದ. ರಾಮನಾಥ ಹೆಂಡತಿಯ ಕಾಗದದ
ನಿರೀಕ್ಷಣೆಯಲ್ಲಿ ಅಂದು ಇದ್ದ ಕ್ರಿಕೆಟ್ ಮ್ಯಚನ್ನೇ ಮರ್ಎತು ಬಿಟ್ಟಿದ್ದ!
ಸರಿ, ಇನ್ನು ಕಾಗದ ಓದೋದು ಹೇಗೆ ? ಮ್ಯಚಿಗೆ ಹೊತ್ತು ಮೀರಿದೆ;
ಅಲ್ಲದೆ ಗಣೇಶ ಬೇರೆ ಜೊತೆಯಲ್ಲಿದ್ದಾನೆ. ಕಾಗದ ದೊಡ್ಡದಾಗಿರುವ
ಹಾಗಿದೆ ! ಓದುವುದಕ್ಕೆ ಸಮಯವಿಲ್ಲ. ಬೇಗ ಬೇಗ ಬಟ್ಟೆಹಾಕಿಕೊಂಡು,
ವಾಣಿಯು ಕಾಗದವನ್ನು ಷರಾಯಿ ಬೇಜನಲ್ಲಿ ತುರುಕಿಕೊಂಡು, ಸೈಕಲ್
ಹತ್ತಿ ಗಣೇಶನ ಜೊತೆಯಲ್ಲಿ ಹೊರಟ. ಮ್ಯಾಚಿಗೆ ಬಹಳ ಹೊತ್ತಾಗಿ
ಬಿಟ್ಟಿತ್ತು. ಅದರ ಯೋಚನೆ ಬೇರೆ. ಇತ್ತ ಮಧ್ಯೆ ಮಧ್ಯೆ ಗಣೇಶ ನೂರೆಂಟು
ಪ್ರಶ್ನೆಗಳಿಗೆ ಪ್ರಾರಂಭಿಸಿದ. ಇವನ ಮನಸ್ಸೋ ವಾಣಿಯ ಕಾಗದದ
ಸೆಳೆತದಲ್ಲಿ ಸಿಕ್ಕು ಲಿಬಿಲಿಬಿ ಒದ್ದಾಡುತ್ತಿತ್ತು, ಕಾಗದ ದಪ್ಪವಾಗಿತ್ತು.
ಸುಮಾರು ಹತ್ತು ಹನ್ನೆರಡು ಪುಟ ಬರೆದಿರಬಹುದು!-ವಾಣಿ ಬಲು
ಒಳ್ಳೆಯ ಹುಡುಗಿ!-ಮಾತುಕೊಟ್ಟಿದಕ್ಕೆ ಸರಿಯಾಗಿ ಬರೆದಿದ್ದಾಳೆ!-
ಏನೇನು ಬರದಿದ್ದಾಳೋ ! ಅವಳು ಮನಸ್ಸಿಟ್ಟು ಬರೆದರೆ ಬಲು ಸುಖವಾಗಿ
ರುತ್ತೆ ಶೈಲಿ ! ... ಇನ್ನೇನು ಒಂದು ಮುದಕಿಯ ಮೇಲೆ ಬಿಟ್ಟುಬಿಡು
ತ್ತಿದ್ದ ಬೈಸಿಕಲ್ಲನ್ನ ! ಅನಾಹುತ ಆಗೋಕೆ ಮುಂಚೇನೇ ಈ " ಲೋ
ಮುದುಕಿ !- ಮುದುಕಿ !- ಎಲ್ನೋಡ್ತೀಯೋ ?" ಎಂದ. ದೈವಾಧೀನ !
ರಾಮನಾಥ ಹೇಗೋ ತಪ್ಪಿಸಿಕೊಂಡು ಮುಂದಕ್ಕೆ ಹೋದ. ಆದರೆ
ಮುಂದಿನ ಚಕ್ರ, ಇವನ ಸಮೇತ ಚರಂಡಿಗೆ ಇಳೀತು. ರಾಮನಾಥ,
" ಇವತ್ತು ಎದ್ದ ಹೊತ್ತು ಚೆನ್ನಾಗಿಲ್ಲ ! " ಅಂದುಕೊಂಡು ಬೈಸಿಕಲ್ಲಿಂದ
ಇಳಿದು, ಅದನ್ನು ಪುನಃ ರಸ್ತೆಗೆ ಎಳೆದುಕೊಂಡು ಹತ್ತಿದ. ಗಣೇಶ
" ಏನೋ ರಾಮು, ಇದು ನಿನ್ನ ಬುದ್ದಿ ನೆಟ್ಗಿರೋಹಾಗೆ ಕಾಣೋಲ್ಲ !
ಈಗಲೇ ಹೊತ್ತಾಗಿದೆ ಮ್ಯಾಚಿಗೆ ! ಈ ಮಧ್ಯೆ ನೀನು ಪೋಲೀಸ್ ಸ್ಟೇಷನ್
ದಾರಿ ಹಿಡಿದಿದ್ದೆಯಲ್ಲ ! ಸ್ವಲ್ಪ ರಸ್ತೆಯ ಮೇಲೆ ನಿಗಾ ಇರ್ಲಿ" ಎಂದ.
ರಾಮನಾಥ" ಏನು ಇಲ್ಲಾ ಕಣೇ, ಇವತ್ತು ಊರಿಂದ ದುಡ್ಡು
ಬರಬೇಕಾಗಿತ್ತು, ಬರ್ಲಿಲ್ಲ- ಯೋಚಿಸ್ತಾ ಇದ್ದೆ ಅಷ್ಟೆ ! " ಎಂದ.
“ಗುಗ್ಗೂ, ಇವತ್ತು ಭಾನುವಾರಾ ಅಲ್ವೇನೋ!"
" ಓ ಇವತ್ತು ಭಾ-ನು-ವಾ-ರಾ-ನೇ ! ನಾನು ಶನಿವಾರಾಂತಿದ್ದೆ !
ಸರಿ, ಹುಂ! " ಸುಳ್ಳಿಗೆ ತಡೆಯುಂಟೆ!
* * *
೮೬ ಹೆಂಡತಿಯ ಕಾಗದ
ಇಬ್ಬರೂ ಸೆಂಟ್ರಲ್ ಕಾಲೇಜು ತಲುಸಿದರು, ಅಲ್ಲೇ ಆಟ ಇದ್ದದ್ದು.
ಆಗಲೇ ಪ್ರಾರಂಭವಾಗಿ ಬಿಟ್ಟಿತ್ತು, ಇವರು ಹೊತ್ತಾಗಿ ಬಂದದ್ದಕ್ಕೆ
ಎಲ್ಲರೂ ಆಕ್ಕೇಪಿಸುವವರೇ ! ಗಣೇಶ ತಾನು ಹೊತ್ತಾಗಿ ಬಂದದಕ್ಕೆ
ರಾಮನಾಥನ ಮೇಲೆ ತಪ್ಪು ಹೊರಿಸಿದ ರಾಮನಾಥ ಏನು ಹೇಳಬೇಕು?
ವಾಣಿಯ ಕಾಗದದ ಮೇಲೆ ತಪ್ಪು ಹಾಕಬೇಕು ! ಛೇ! ಪಾಪ, ಆ ಕಾಗದ
ಏನುಮಾಡೀತು. ಅಂಚೆಯವರು ಹೊತ್ತಾಗಿ ಬಂದ. ಅದು ಅವನ ತಪ್ಪಲ್ಲ.
ಭಾನುವಾರ ಒಂದೇ "ಡೆಲಿವರಿ " ಮಧ್ಯಾಹ್ನದ ಮೇಲೆ ತಪ್ಪು ಅಂಚೆಯ
ಇಲಾಖೆಯಿದು ! ತರ್ಕವೇನೋ ಸರಿಯಾಗಿದೆ! ಆದರೆ ಕೇಳುವವರಾರು?
ರಾಮನಾಥನ ಎದುರು ಪಕ್ಷದವರು ಆಡುತ್ತಿದರು. ಆದ್ದರಿಂದ
ಇವರು ಹೋದೊಡನೆ ಅಂಗಿ ಬಿಚ್ಚಿ "ಫೀಲ್ಡಿ " (field) ಗೆ ಇ
ಳಿಯಬೇಕಾಗಿ ಬಂತು. ಇಬ್ಬರೂ ಹೋಗಿ ತಮ್ಮ ತಮ್ಮ ಸ್ಥಳದಲ್ಲಿ
ನಿಂತುಕೊಂಡರು. ಕಾಗದವೇನೋ ರಾಮನಾಥನ ಷರಾಯಿ ಜೇಬಿನಲ್ಲೇ
ಇತ್ತು. ಅದರ ದೆಸೆಯಿಂದ ಅವನ ಮನಸ್ಸು, ಗಾಳದ ಕೊಕ್ಕೆಯನ್ನು
ಕಚ್ಚಿದ ಮೀನಿನ ಹಾಗೆ ಆಗಿತ್ತು ! ಅದರ ವಿಷಯವಾಗಿ ಯೋಚಿಸ
ತೊಡದ. ಯೋಚನೆಗೂ ಭಂಗ ಬರತ್ತಿತ್ತು ! ಮಧ್ಯೆ ಮಧ್ಯೆ ಇವನ
ಕಡೆ ಚೆಂಡು ಬಂದು, ತೋಳ ಕುರಿಮಂದೇನ ಚದರಿಸಿದ ಹಾಗೆ ಇವನ
ಯೋಚನೆಗಳನ್ನೆಲ್ಲಾ ಚೆದುರಿಸಿಬಿಡುತ್ತಿತ್ತು. ಭಂಗ ಬಂದ ಹಾಗೆಲ್ಲಾ
ಇವನು ಪುನಃ ಪುನಃ ಮೊದಲಿನಿಂದ ಪ್ರಾರಂಭಿಸುತ್ತಿದ್ದ- "ಏನೋ
ಈ ಸಲ ಪೂರಾ ಬರೆದಿರೋ ಹಾಗೆ ಕಾಣುತ್ತೆ ! -ನಾನು ಆರು ಪೇಜು
ಬರೆದಿದ್ದೆ -ರಾಣಿ ಕಡೆಯ ಪಕ್ಷ ಹತ್ತು ಪೇಜಾದರೂ ಬರೆದಿರಬೇಕು ?-
ಹತ್ತು ಪೇಜುಗಳು ಅದೆಷ್ಟು ಪ್ರೇಮವನ್ನು ನೆಯ್ದಿದ್ದಾಳೋ ! ಈ ಸಲ
ಏನು ಹೆಸರಿಟ್ಟು ಕರೆದಿದ್ದಾಳೋ ನನ್ನ -ಹೋದಸಲ 'ಸುಂ-ದ-ರಾ'
ಎಂದು ಬರೆದಿದ್ದಳು! ಈ ಸಲ ಏನಿರ . . .” ಯೋಜನೆಗೆ ದೊಡ್ಡ
ಭಂಗಬಂತು ! ಇದ್ದಕ್ಕಿದ್ದ ಹಾಗೆಯೇ ಅವನ ಕಡೆಯವರೆಲ್ಲಾ ಒಂದೇ
ಕಂಠದಿಂದ " ರಾಮನಾಥ ?" ಎಂದು ಕೂಗಿದರು. ರಾಮನಾಥ ಇದ್ದ
ಕಡೆಗೆ ಒಂದು "ಕ್ಯಾಚ್ '' (catch) ಹೋಗಿ, ಅವನು ಅದನ್ನು ಹಿಡಿಯಲಿ
ಎಂದು ಎಲ್ಲರೂ ಅವನ ಹೆಸರನ್ನು ಕೂಗಿದರು. ಆದರೆ ರಾಮನಾಥ
ಭೂಮಿಯ ಮೇಲೆ ಇರಲಿಲ್ಲ. ಆಕಾಶದಲ್ಲಿ ಮಂಟಪ ಕಟ್ಟುತ್ತಿದ್ದ ! ಅಷ್ಟು
ಜನರ ಒಂದೇ ಕೂಗಿನಿಂದ ಆ ಮಂಟಪ ಒಂದೇ ಸಲಕ್ಕೆ ಕಳಚಿ ಭೂಮಿಗೆ
ಹೆಂಡತಿಯ ಕಾಗದ ೮೭
ಬಿದ್ದಂತಾಯಿತು! ಅವನು ಚೆಂಡನ್ನು ಹಿಡಿಯಲಿಲ್ಲ. ಸುತ್ತುಮುತ್ತಲಿಂದ
ಎಲ್ಲಾ “ಸ್ಟೆಡೀ (steady) ರಾಮು!- ರಾಮನಾಥ್!" ಎಂಬ
ಕೂಗು ಕೇಳಿಬಂತು. ರಾಮನಾಥ ಅಂದು ಏಕೋ ತನ್ನ ಗ್ರಹಚಾರ
ಚೆನ್ನಾಗಿಲ್ಲ ಅಂದುಕೊಂಡ. ಸ್ವಲ್ಪ ಹೊತ್ತಾದ ಮೇಲೆ ಅವನ
"ಕ್ಯಾಪ್ಟನ್" (captain) ಚಂಡನ್ನು ಅವನ ಕೈಗೆ ಕೊಟ್ಟು " ಬೋಲ್
(bowl ಮಾಡಹೇಳಿದ. “ಕ್ಯಾಚ್" ಬಿಟ್ಟಿದೆ ಅವನ ಮನಸ್ಸು ಭೂಮಿಗೆ
ಇಳಿದುಹೋಗಿತ್ತು, " ಬೋಲಿಂಗ್ " (bowling) ನ ಅವನ ಅದೃಷ್ಟ
ಜಳ್ಳಾಯಿತು! ಒಂದು "ವಿಕೆಟ್ಟೂ "(wicket)ಬರಲಿಲ್ಲ !
ನಾಲ್ಕು ಗಂಟೆಯ ಹೊತ್ತಿಗೆ ಟೀ (tea) ಗೋಸ್ಕರ ಆಟ
ನಿಲ್ಲಿಸಿದರು. ಎಲ್ಲರೂ "ಟೀ ''ಗೆ ಕುಳಿತರು. ಅವರಲ್ಲಾ ಅಲ್ಲಿ ಕುಳಿತಿದಾಗ
ರಾಮನಾಥನಿಗೆ ತಾನು ಎಲ್ಲಾದರೂ ಗಲಾಟೆಯಿಲ್ಲದ ಸ್ಥಳಕ್ಕೆ ಹೋಗಿ
ವಾಣಿಯ ಕಾಗದವನ್ನು ಓದೋಣವೆನ್ನಿಸಿತು. ಆದರೆ ಎಲ್ಲಿ ಹೋಗು
ವುದು ? ಅಲ್ಲದೆ " ಟೀ * ತಪ್ಪಿಹೋಗುತ್ತೆ, ಬಿಟ್ಟಿ ಟೇ ಬಲುರುಚಿ! ಎಲ್ಲಿ
ನೋಡಿದರೂ ಗಡಿಬಿಡಿ ! ಹೊರಗಿನ ಗಡಿಬಿಡಿಗಿಂತ ಅವನ ಒಳಗಿನ
ಗಡಿಬಿಡಿಯೇ ಅಸಾಧ್ಯವಾಗಿತ್ತು ! ಹತ್ತು ಪೇಜು ಪ್ರೇಮದ ಕಾಗದವನ್ನು
ಓದಿ ಮುಗಿಸುವದಕ್ಕೆ ಅಲ್ಪ ಸ್ವಲ್ಪ ಕಾಲ ಸಾಲದು ! ಅಲ್ಲದೆ ವಾಣಿಯ
ಕಾಗದವನ್ನು ಓದುತ್ತಾ ಬಿರಬೇಕಾದರೆ ಇನ್ನೊಬ್ಬರ ಸುಳುವಿರಕೂಡದು!
ಮುಖ್ಯವಾಗಿ ಮನಸ್ಸಿನಲ್ಲಿ ಶಾಂತಿರಬೇಕು. ಎಷ್ಟು ಸಲ ಓದಿದರೂ
ಯಾರೂ ಅಡ್ಡಿ ಬರುವವರಿಲ್ಲ !- ಎಂಬ ಭಾವನೆಯಿದ್ದರೆ, ಆಗ ಪ್ರೇಮ
ಪತ್ರದ ರುಚಿ ಹೆಚ್ಚುತ್ತದೆ. ಇಲ್ಲ! ವಾಣಿಯ ಪತ್ರವನ್ನು ಓದುವುದಕ್ಕೆ
ಈಗ ಎಷ್ಟು ಮಾತ್ರ ಸಮಯವಲ್ಲ! ಆಟ ಮುಗಿದ ಕೂಡಲೆ ಎಲ್ಲಾ
ದರೂ ಒಂದು ಏಕಾಂತವಾದ ಸ್ಥಳಕ್ಕೆ ಹೋಗಿ, ನಿದಾನವಾಗಿ-ತಡೆ
ತಡೆದು-ಒಂದೊಂದು ಮಾತು ಸವಿಯುತ್ತ ಓದಬೇಕು. ಅದೇ
ಸರಿ!-ಮನಸ್ಸಿನಲ್ಲಿ ಹೀಗೆ ತೀರ್ಮಾನಿಸಿಕೊಂಡು, ರಾಮನಾಥ ಎಲ್ಲ
ರೊಡನೆ ತಾನೂ "ಟೀ"ಗೆ ಕುಳಿತ. ಜೊತೆಯವರೆಲ್ಲಾ ಇವನನ್ನು ಹಾಸ್ಯಮಾಡತೊಡಸಿದರು. ಗಣೇಶ, ಇವತ್ತು ರಾಮಗೆ ಗ್ರಹಣ
ಹಿಡಿದಿದೆ !" ಅಂದ ನಾಣಿ “ಪಿಶಾಚಿ ಹಿಡಿಯೋದು ಬಾಕಿ ” ! ಅಂದ.
ವಿಜು-ಅವನ ' ಕ್ಯಾಪ್ಟನ್'- ಏನೋ ರಾಮು 'ಕ್ಯಾಚ್ ' ಬಂದಾಗ
ಎಲ್ನೋಡ್ತಿದ್ಯೋ?" ಎಂದು ಕೇಳಿದ. ಗೋಪಾಲೈಂಗಾರಿ-" ಆಕಾಶ
೮೮ ಹೆಂಡತಿಯ ಕಾಗದ
ದಲ್ಲಿ ನಕ್ಷತ್ರಾ ಎಣಿಸ್ತಿದ್ದ ಕಣ್ರೋ.!” ಎಂದು ಕೃಷ್ಣ- ಇಲ್ಲಾ! ಇಲ್ಲಾ!
ಸ್ವರಾಜ್ಯ ಯಾವಾಗ ಕೊಡ್ತಾರೆ ಅಂತ ಯೋಚಿಸ್ತಿದ್ದ! ಅಲ್ವೇನೋ
ರಾಮು " ಎಂದು ಕೇಳಿದ. ಹೀಗೆ ಒದೊಬ್ಬರದು ಒಂದೊಂದು ತರಹ
ಟೀಕೆ. ರಾಮನಾದೆ ಒಂದು ಮಾತೂ ಆಡಲಿಲ್ಲ. ಒಳಗೊಳಗೇ ನಗುತ್ತಿದ್ದ.
ಅವನ ಗುಟ್ಟು ಅವನಲ್ಲಿಯೇ ಇತ್ತು, ಏನು ಮಾಡುವುದು! ಇವತ್ತು ವಾಣಿ
ಕಾಗದ ಬಂದು ಅದನ್ನು ಅವನು ಇನ್ನೂ ಓದದೇ ಇದ್ದದ್ದೇ ಇಷ್ಟು
ಅನಾಹುತಕ್ಕೆ ಕಾರಣವಾಯಿತು! ಏನು ಬೇಕಾದರೂ ಆಗಲಿ, ಅವಳ
ಕಾಗದ !- ಪ್ರೇಮದ ಕಾಗದ !-ಹತ್ತು ಪುಟಗಳ ಕಾಗದ! ಅವನ
ಷರಾಯಿ ಬೇಬಿನಲ್ಲಿ ಭದ್ರವಾಗಿತ್ತು! ಆದರೇನು ? ಅವಳ ಪ್ರೇಮಭರಿತವಾದ
ಕಾಗದವನ್ನು ಅಷ್ಟು ಸಮೀಪದಲ್ಲಿ ಇಟ್ಟುಕೊಂಡೂ ಅದನ್ನು ಓದಿ ಸವಿದು
ತೃಪ್ತಿಪಡಲಾಗದಿರುವುದು ದುರದೃಷ್ಟ ! ಎಷ್ಟು ಸಂಕಟಕರ!
" ಟೀ " ಮುಗಿಯಿತು. ರಾಮನಾಥನ ಕಡೆಯವರ ಆಟಕ್ಕೆ ಪ್ರಾರಂಭ
ವಾಯಿತು. ರಾಮನಾಥನಿಗೆ ಅದರ ಕಡೆ ಗಮನವೇ ಇಲ್ಲ. ಅವನಿಗೆ
ವಾಣಿಯ ಕಾಗದ ಕಣ್ಣ ಮುಂದೆ ಕುಣಿಯುತ್ತಿದ್ದಂತೆ ತೋರಿತು. ಒಂದು
ಸಲ ಅದು ಕಾಗದವಳ ಕಾಣುವದು ; ಒಂದು ಸಲ ವಾಣಿಯಾಗಿ
ಕಾಣುವುದು, ಅವನ ಕಡೆಯವರು ಆಡುತ್ತಿದ್ದಾಗ ಅವನಿಗೆ ಕಾಗದ
ಓದುವದಕ್ಕೆ ಸ್ವಲ್ಪ ಪುರಸತ್ತು ಇತ್ತು. ಆದರೆ ಓದಲು ಪ್ರಾರಂಭಿಸು
ವುದಕ್ಕೆ ಹೆದರಿದ. ಸುತ್ತಮುತ್ತಲ ಸ್ನೇಹಿತರಿದ್ದಾರೆ! ದೂರ ಎಲ್ಲಾ
ದರೂ ಹೋಗಿ ಓದಬೇಕು. ಅರ್ಧ ಓದಿದಾಗ ಇವನ ಆಟದ ಸರ್ತಿ
ಬಂದುಬಿಟ್ಟರೆ! ಪ್ರೇಮದ ಕಾಗದವನ್ನು ಅರ್ಥ ಓದಿಬಿಡುವುದು, ಒಣಗಿದ
ಗಂಟಲಲ್ಲಿ ಅನ್ನದ ತುತ್ತು ಸಿಕ್ಕಿಕೊಂಡಹಾಗೆ! ನುಂಗುವದಕ್ಕೆ ಆಗುವು
ದಿಲ್ಲ ! ಉಗುಳುವುದಕ್ಕೆ ಮನಸ್ಸಿಲ್ಲ! ಬಲು ಸಂಕಟಕ್ಕೆ ಕಾರಣ ! ಇಷ್ಟು
ಹೊತ್ತೇ ತಡೆದಿದ್ದನಂತೆ, ಇನ್ನು ಸ್ವಲ್ಪ ಹೊತ್ತು ಕಾಯಲಾರನೆ ? ಅಷ್ಟ
ರಲ್ಲಿ ಏನು ಕೊಳ್ಳೆ ಹೋಗುವುದು ? ಕಾಯುವದೇ ಸರಿ! ಕಾದ. ಓದು
ವುದಕ್ಕಾಗದಿದ್ದರೆ ಹೋಗಲಿ, ಕಾಗದವನ್ನು ಮುಟ್ಟುತ್ತಾ ಇರಬಹು
ದಲ್ಲ! ಅದಕ್ಕೆ ಏನು ಅಡ್ಡಿ ? ಏನೂ ಇಲ್ಲ. ಷರಾಯಿ ಜೇಬಿನಲ್ಲಿ ಕೈಹಾಕಿ,
ಬೆರಳಿನಿಂದ ಕಾಗದವನ್ನು ಮೆಲ್ಲಗೆ ಸವರತೊಡಗಿದ !, ಏನು ಸುಖವೋ
ಅವನಿಗೆ !
* * * *
೮೯ ಹೆಂಡತಿಯ ಕಾಗದ
ರಾಮನಾಥ ಆಟದ ಸರ್ತಿಯಲ್ಲಿ ಹನ್ನೊಂದನೆಯವನಾಗಿದ್ದ-
ಅಂದರೆ ಕೊನೆಯವನಾದ. ಅವನ ದರದೃಷ್ಟದ ಗಾಳಿ ಅವನ ಕಡೆಯವ
ರಗೂ ತಟ್ಟಿತ್ತೆಂದು ಕಾಣುತ್ತೆ! ಮೊದಲು, ಹೋದವರೆಲ್ಲಾ, ಒಬ್ಬಬ್ಬರಾಗಿ
ಬೇಗ ಬೇಗ " ಔಟ್ " (out) ಆಗಿ ಹಿಂತಿರುಗಿದರು. ರಾಮನಾಥನ
ಸರ್ತಿ ಬೇಗ ಬಂದು ಇವನ ಕಡೆಯವರು ಗೆಲ್ಲುವುದಕ್ಕೆ ಇನ್ನೂ
ಮೂವ್ವತ್ತು " ರನ್ಸ್ " (runs) ಬೇಕಾಗಿತ್ತು. ಇದರೇ ಕಡೆಯ ಆಟ
ಗಾರರು ! ಇವನ ಕಡೆಯವರ ಭರವಸೆಯೆಲ್ಲಾ ಈಗ ಇವನ ಮೇಲೆ ಇತ್ತು. ರಾಮನಾಥನಿಗಾದರೋ ತನ್ನ ಮೇಲಿದ್ದ ಜವಾಬ್ದಾರೀರ ಭಾರಕ್ಕಿಂತ,
ತನ್ನ ಷರಾಯಿ ಜೇಬಿನಲ್ಲಿದ್ದ ವಾಣಿಯ ಕಾಗದದ ಭಾರ ಹೆಚ್ಚಾಗಿದ್ದಂತೆ
ತೋರಿತು, ಈ ಎರಡು ಭಾರಗಳನ್ನೂ ಹೊತ್ತು ಅದನ್ನು ದೃಢಪ್ರತಿಜ್ಞೆ
ಯಿಂದ ಹೊರಟ! ತನ್ನಿಂದ ತನ್ನ ಕಡೆಯವರಿಗೆ ಸೋಲಾಗಬಾರದೆಂದು
ಕೊಂಡ. ಅರ್ಧಗಂಟೆ ತನ್ನ ಮನಸ್ಸು ವಾಣಿಯ ಕಾಗದವನ್ನು ಮರೆತಿ
ದ್ದರೆ ಅದೀತಲ್ಲಾ !-ಎಂದೆಣಿಸಿದ. ವಾಣಿಯ ಕಾಗದ ಇವತ್ತು ಬರದೆ
ಇದ್ದಿದ್ದರೂ ಚೆನ್ನಾಗಿತ್ತು !-ಎಂದು ತೋರಿತು. ಇಲ್ಲ ! ಇಲ್ಲ, ಬಂದದ್ದು
ಸರಿ ; ಆದರೆ ಸ್ವಲ್ಪ ಮುಂಚೆ ಬರಬೇಕಾಗಿತ್ತು. ಮುಂಚೆ ಹೇಗೆ ಬಂದೀತು? +
ಇವತ್ತು ಭಾನುವಾರ ಹುಂ! ಹಾಳು ಭಾನುವಾರ!-ಹೀಗೆಲ್ಲಾ ಯೋಚಿ
ಸುತ್ತಾ ಹೋಗಿ ಆಟಕ್ಕೆ ಪ್ರಾರಂಭಿಸಿದ. ಆಟ ನಿದಾನವಾಗಿ ಸಾಗಿತು.
ಕಾಲುಗಂಟೆ ಹಾಗೂ ಹೀಗೂ ಕಷ್ಟ ಪಟ್ಟು ಕೊಂಡು ಆಡಿದರು. ಅಷ್ಟು
ಹೊತ್ತಿಗೆ ಗೆಲ್ಲುವುದಕ್ಕೆ ಇನ್ನೂ ಹತ್ತು "ರನ್ " ಬೇಕಾಗಿತ್ತು.
ಎಲ್ಲರೂ “ ಸ್ಟೆಡೀ ರಾಮೂ - ರಾಮೂ" ಎಂದು ಎಚ್ಚರಿಕೆ
ಕೊಡಲಾರಂಭಿಸಿದರು. ರಾಮನಾಥನ ಮನಸ್ಸಿಗೆ ವಿಶ್ವ ಪ್ರಯತ್ನ ! ಒಂದು
ಕಡೆ ಜಯಲಕ್ಷ್ಮಿ ಸಿಕ್ಕೂ ನಿಲುಕದ ಹಾಗೆ ಆಟವಾಡಿಸುತ್ತಿದ್ದಾಳೆ !
ಇನ್ನೊಂದು ಕಡೆ ಪ್ರೇಯಸಿಯ ಕಾಗದ! “ಇತ್ತದರಿ-ಅತ್ತಪುಲಿ
" ಅಂದಳಂತೆ ಕೌರವನ ರಾಜ್ಯಲಕ್ಷ್ಮಿ. ಇಲ್ಲಿಯೂ ಸ್ವಲ್ಪ ಹಾಗೇ ಆಗಿತ್ತು !
ಆ ಸಂಕಟ ಅನುಭವಿಸಿದವನೇ ಬಲ್ಲ! ಶತ್ರುವಿಗೂ ಬೇಡ ! ಆಟ ಇನ್ನೂ
ಸ್ವಲ್ಪ ಮುಂದೆ ಸಾಗಿತು, ಗೆಲ್ಲುವುದಕ್ಕೆ ಇನ್ನೂ ನಾಲ್ಕು " ರನ್ಸ್"
ಬೇಕಾಗಿದೆ ಅನ್ನಬೇಕಾದರೆ ರಾಮನಾಥನ ಜೊತೆಯವನು ಆಡುತ್ತಿದ್ದ.
ಈ ಒಂದೆರಡು ಕ್ಷಣಗಳಲ್ಲಿ ವಾಣಿಯ ಕಾಗದ ರಾಮನಾಥನನ್ನು ಕೆಣಕ
ತೊಡಗಿತು. ಯೋಚಿಸಲಾರಂಭಿಸಿದ. “ ಇನ್ನು ಮೇಲೆ ವಾಣಿಯ
೯೦ ಹೆಂಡತಿಯ ಕಾಗದ.
ಕಾಗದ ಸೋಮವಾರ ಬರೋಹಾಗೆ ಏರ್ಪಾಡುಮಾಡ್ಬೇಕು ಸಾಕು
ಈ ಭಾನುವಾರದ ಸಹ .. '' ಯೋಚನೆ ಕತ್ತರಿಸಿದ ಹಾಗಾ
ಯಿತು! ಇದ್ದಕಿದ್ದ ಹಾಗೆಯೇ ಇವನ ಜೊತೆಯನನು ಚೆಂಡನ್ನು ಒಂದು
ಪಕ್ಕಕ್ಕೆ ಹೊಡೆದು ಇವನ ಕಡೆಗೆ ಓಡಿಬಂದ. ರಾಮನಾಥ ಆ ಓಟಕ್ಕೆ
ಸಿದ್ದವಾಗಿರಲಿಲ್ಲ ; ಅದರೂ ಜೆತೆಯವನು ಓಡಿಬಂದದ್ದರಿಂದ ಇವನೂ
ಅವನಿದ್ದ ಸ್ಥಳದ ಕಡೆಗೆ ಓಡಬೇಕಾಗಿ ಬಂತು. ಓಡಿದ! ಆದರೆ ಸಮ
ಯಕ್ಕೆ ಸರಿಯಾ ಓಡದೆ ಇದ್ದದ್ದರಿಂದ " ರನ್ ಔಟ್ "(run out)
ಆಗಿ ಬಿಟ್ಟ! ದುರದೃಷ್ಟ ! ಇವನ ಕಡೆಯವರು ನಾಲ್ಕು " ರ ನ್ನಿ"
ನಲ್ಲಿ ಸೋತುಬಿಟ್ಟರು! ಜಯಲಕ್ಷ್ಮಿ ಜಾರಿಕೊಂಡಳು! ಎಲ್ಲರೂ ಇವನ
ಕಡೆಯವರು ಸೋತಿದ್ದಕ್ಕೆ ಇವನ ಮೇಲೆ ತಪ್ಪು ಹೊರಿಸಿದರು. ಮೇಲೆ
ತನ್ನದು -ಎಂದು ಒಪ್ಪಿಕೊಂಡ ರಾಮನಾಥ ತನ್ನ ಮನಸ್ಸಿನಲ್ಲಿಯೇ
ಮೆಲ್ಲಗೆ ಆ ತಪ್ಪನ್ನು ವಾಣಿಯ ಕಾಗದದ ಮೇಲೆ ಹೊರಿಸಿದ.
ಆಟ ಮುಗಿದ ಮೇಲೆ ರಾಮನಾದ, ಮುಖ ತೊಳೆದುಕೊಂಡು ಅಂಗಿ
ತೊಟ್ಟು ಕೊಂಡು ಮನೆಗೆ ಹೊರಡಲು ಸಿದ್ಧವಾದ. ಮನೆಯೇ ಸರಿಯಾದ
ಸ್ಥಳ ವಾಣಿಯ ಕಾಗದವನ್ನು ಓದುವುದಕ್ಕೆ ! ಅದಕ್ಕೆ ಸಂಶಯವಿಲ್ಲ !
ತನ್ನ ಕೊಠಡಿಯಲ್ಲಿ ಬಾಗಿಲು ಮುಚ್ಚಿ ಆಗಣಿ ಹಾಕಿಕೊಂಡು ಕುಳಿತರೆ-
ಸೊಳ್ಳೆ ಒಂದು ಬಿಟ್ಟು !-ಇನ್ಯಾರ ಅಡ್ಡಿಯೂ ಇಲ್ಲ! ಮನೆಯೇ ಸರಿ!
ಆದರೆ ಮನುಷ್ಯನ ಯೋಚನೆಗಳೆಲ್ಲಾ ಅಷ್ಟು ಸರಾಗವಾರ ನೆರವೇರು
ತ್ತದೆಯೇ ? ಅದು ಶುದ್ಧ ಭ್ರಮೆ ! ಗಣೇಶ ಬಂದ " ಲೋ ರಾಮು!
ಇವತ್ತು 'ಅಪೆರಾ ಹೌಸ್ ನಲ್ಲಿ 'ದಿ ಸೋಲ್ ಆಫ್ ಲಿಲಿತ್ ' ಅಂತೆ
ಕಣೋ! ಬಾರೋ ಹೋಗಿ ನೋಡೋಣ !" ಅಂದ ರಾಮನಾಥ
ಹೋಗಲು ಮನಸ್ಸಿಲ್ಲದೆ. "ಬೇಡಾ ಕಣೋ ಬಹಳ ಆಯಾಸವಾಗಿದೆ;
ಮನೆಗೆ ಹೋಗೋಕು '' ಅಂದ. ಗಣೇಶ-ಇಲ್ಲಾ, ಬಾ ಹೋಗೋಣ!
ನಿದಾನವಾಗಿ ಹೋಗೋಣ ; ಇನ್ನೂ ಆರುಗಂಟೆ, ಆ ' ಪಿಕ್ಟರ್ '
ನೋಡ್ಬೇಕಮ್ಮಾ" ನೀನು! ಎಂದು ಪುಸಲಾಯಿಸಿದ.
"ನನ್ನತ್ರ ದುಡ್ಡಿಲ್ವಲ್ಲೋ” ಎಂದ ರಾಮನಾಥ. ಅದು ಮಾತ್ರ
ಸುಳ್ಳು! ಜೇಜಿನ ಐದು ರೂಪಾಯಿ ನೋಟು ಇತ್ತು, ಅದರೆ ಅವನಿಗೆ
ತನ್ನ ಗುಟ್ಟನ್ನು ಬಿಟ್ಟು ಕೊಡುವುದಕ್ಕಿಂತ ಸುಳ್ಳು ಹೇಳುವದೇ ಮೇಲಾಗಿ
ತೋರಿತು. ಗಣೇಶ ತಾನು ಕೊಡುವುದಾಗಿ ಹೇಳಿದ. ಇನ್ನು ನಿರ್ವಾಹ
ಹೆಂಡತಿಯ ಕಾಗದ ೯೧
ವಿಲ್ಲ ! " ಹುಂ ನಡಿ," ಎಂದು ಹೊರಟ ನೋಟದ ಪ್ರಾರಂಭಕ್ಕೆ ಇನ್ನೂ
ಹತ್ತು ನಿಮಿಷ ಇದೆ ಅನ್ನುವ ಹಾಗೆ ಇಬ್ಬರೂ " ಸಿನಿಮಾ"
ಮಂದಿರವನ್ನು ಸೇರಿದರು.
ಇನ್ನೂ ಹತ್ತು ನಿಮಿಷಗಳಿವೆಯಲ್ಲ! ಅಷ್ಟರಲ್ಲಿ ವಾಣಿಯ ಕಾಗದ
ವನ್ನು ಓದಲಾಗುವಲ್ಲವೇ ? ಇಲ್ಲ! ಆಗ ! ಆ ಗಲಾಟೆಯಲ್ಲಿ
ಹೊರಗೆ ನಿಂತು ಓದುವುದು ಹೇಗೆ? ಅಲ್ಲದೆ ಗಣೇಶನನ್ನೊಬ್ಬನನ್ನೇ ಬಿಟ್ಟಿರು
ವುದು ಸರಿಯಲ್ಲ! ಅವನೇ ಟಿಕೇಟಿಗೆ ದುಡ್ಡು ಕೊಟ್ಟಿದ್ದಾನೆ! ಕಾಗದ
ವಾದರೋ ಹತ್ತು ಪುಟಗಳಿಗೆ ಕಡಿಮೆ ಇರಲಾರದು. ಪುಟಕ್ಕೆ ಒಂದು
ನಿಮಿಷ ಎಷ್ಟು ಮಾತ್ರಕ್ಕೂ ಸಾಲದು ! ಔತಣದ ಊಟವನ್ನು ಅವಸರ
ದಲ್ಲಿ ನುಂಗುವದೇ ? ನುಂಗಿದರೂ ರಸಾನುಭವವಲ್ಲ ? ಜನಗಳ ನೂಕು
ನುಗ್ಗಲು ಹೆಚ್ಚಾಗಿದೆ ; ಮುಂಚೆಯೇ ಒಳಗೆ ಹೋಗದಿದ್ದರೆ ಆಮೇಲೆ ಸರಿ
ಯಾದ ಸ್ಥಳ ಸಿಕ್ಕುವಂತೆ ತೋರಲಿಲ್ಲ. ವಾಣಿಯ ಕಾಗದವನ್ನು ಓದು
ವುದಕ್ಕೆ ಇದು ಸಮಯವಲ್ಲ! ರಾಮನಾಥ ಆ ಯೋಚನೆ ಬಿಟ್ಟ.
ಇಬ್ಬರೂ ಒಳಗೆ ಹೋಗಿ ಕಳಿತುಕೊಂಡರು. ಜನ ಒಳಗೆ ಕಿಕ್ಕಿರಿದು
ತುಂಬಿದ್ದರು. ಹತ್ತು ನಿಮಿಷ ವಾಣಿಯ ಕಾಗದವನ್ನು ಓದುವದಕ್ಕೆ
ಸಾಲದಾಗಿ ತೋರಿದರೂ ಕಾಯುವುದಕ್ಕೆ ವಿಪರೀತವಾಗಿ ಕಂಡಿತು!
ಆ ಮಾತು ಈ ಮಾತಿನಲ್ಲಿ ಆ ಹತ್ತು ನಿಮಿಷಗಳನ್ನು ಕಳೆದರು. ಆರೂ
ವರೆಗೆ ಸರಿಯಾಗಿ ನೋಟ ಪ್ರಾರಂಭವಾಯಿತು. ಅದಕ್ಕೆ ಮುಂಚೆಯೇ
ವಾಣಿಯ ಕಾಗದ ರಾಮನಾಥನ ಮನಸ್ಸನ್ನು ಸೆಳೆಯುವುದಕ್ಕೆ ತೊಡ
ಗಿತು. ಇನ್ನೂ ಷರಾಯಿ ಜೇಬಿನಲ್ಲೇ ಇದ ಆ ಕಾಗದವನ್ನು ಮೆಲ್ಲಗೆ
ಕೈಗೆ ತೆಗೆದುಕೊಂಡು ಹಾಗೆಯೇ ತೂಗಲಾರಂಭಿಸಿದ ; ಭಾರವಾಗಿತ್ತು.
ಹತ್ತು ಪುಟಗಳ ಕಾಗದ ಭಾರವಾಗಿರದೆ ಮತ್ತೇನು ? ಆದರೆ ರಾಮನಾಥ
ನಿಗೆ ಆ ಕಾಗದದ ಭಾರದ ಜೊತೆಗೆ ತನ್ನ ರಾಣಿಯ ಪ್ರೇಮದ ಭಾರವೇ
ಸೇರಿದ್ದ ಹಾಗೆ ತೋರಿತು. ಕಾಗದದ ಭಾರಕ್ಕಿಂತ ಪ್ರೇಮವೇ ಮೀರಿ
ತೂಗುತ್ತಿದ೦ತೆ ಎಣಿಕೊಂಡ.
ಆ ದಿನದ ದೃಶ್ಯ ಬಹಳ ಚೆನ್ನಾಗಿತ್ತು. ಮನದಲ್ಲಿ ನಾಟುವ ನೋಟ
ಗಳು! ಹೃದಯವನ್ನು ಕರಗಿಸುವ ಸನ್ನಿವೇಶಗಳು 1 ಗಣೇಶ ಅವಾಕ್ಕಾಗಿ
ಆದನ್ನೇ ನೋಡುತ್ತಿದ್ದ, ರಾಮನಾಥನ ಗಮನವ ಮಾತ್ರ ಬೇರೆ ಕಡೆ
ಇತ್ತು. ಅವನ ಮನಸ್ಸಿನ ಪರದೆಯ ಮೇಲೆ ಅವನ ಜ್ಞಾಪಕವು
೯೨ ಹೆಂಡತಿಯ ಕಾಗದ
ಬೇರೇ ದೃಶ್ಯಗಳನ್ನು ಹರಡುತ್ತಿತ್ತು, ಅದೃಶ್ಯಗಳಲ್ಲಿ ವಾಣಿ ನಾಯಕಿ-
ರಾಮನಾಥ ನಾಯಕ! ಒಂದೊಂದು ಚಿತ್ರವನ್ನೂ ತಡೆತಡೆದು ನೋಡ
ತೊಡಗಿದೆ. ಎಂತಹ ಸುಖದ ಆಟಗಳು ಅವು ! ಎಂತಹ ಮೈಮರೆಸುವ
ಸನ್ನಿವೇಶಗಳು ! ತಾನು ವಾಣಿಯೊಡನೆ ಆಡಿದ ಆಟಗಳನ್ನು ಸರಸ
ವಿನೋದಗಳನ್ನೂ ಮನದಲ್ಲಿ ಪುನಃ ಪುನಃ ಆಡಿದ. ವಾಣಿಯ ಓನಪು-
ಒಯ್ಯಾರ, ಬಿಂಕ-ಬಿನ್ನಾಣಗಳ ನೆನಪು ಪ್ರವಾಹದಂತೆ ಅವನ ಚಿತ್ತ
ವನ್ನು ತೇಲಿಸಿತು. ಯೋಚನೆಯು ತರಂಗಗಳು ಏಳತೊಡಗಿದವು. "ಕಾಗ
ದದಲ್ಲಿ ಇನ್ನೆಷ್ಟು ಪ್ರೇಮವನ್ನು ತುಂಬಿದ್ದಾಳೋ ! ಎನೇನು ಬಿನ್ನಾಣದ
ನುಡಿಗಳನ್ನು ಬರೆದಿದ್ದಾಳೋ ಇವತ್ತು ಹಾಳು ಭಾನುವಾರ!- ಸಾಲ
ದುದಕ್ಕೆ ಆಟ ಬೇರೆ! ಇಲ್ಲದೆ ಇದ್ದಿದ್ದರೆ ಕಾಗದ ಓದಿ ಎಷ್ಟೋ
ಹೊತ್ತಾಗುತ್ತಿತ್ತು! . . . ನನ್ನ ಕೋಪದ ಕಾಗದಕ್ಕೆ ಸರಿಯಾಗಿ ಅವಳೂ
ಕೋಪದಿಂದ ಬರೆದಿದ್ದಾಳೋ ಏನೋ ! ಹತ್ತು ಪೇಜು ತುಂಬಬೇಕಲ್ಲ!
ಕೋಪದಿಂದ ಬರೆದಿದ್ದರೆ ಏನಾಯ್ತು ? ಅದೂ ಚೆನ್ನಾಗೇ ಇರುತ್ತೆ!
ಕೋಪದ ವಾಣಿ, ವಾಣಿಯ ಕೋಪದ ಕಾಗದ -ಎರಡು ಸೊಗಸು !
• • • ವಾಣಿಯದು ಪ್ರೇಮದಲ್ಲಿ ಹೇಗೆ ದೊಡ್ಡ ಮಾರ್ಗವೋ ಕೋಪ
ದಲ್ಲೂ ಸ್ವಲ್ಪ ಹಾಗೆಯೇ! ಕೋಪ ಮೂಗಿನ ತುದೀಲೇ ಇರುತ್ತೆ ಅವಳಿಗೆ!
ಕೋಪದಲ್ಲಿ ಮಾತಾಡುವಾಗಲೂ ಅವಳ ಧ್ವನಿಯ ಸಂಗೀತ ಕೆಡೋಲ್ಲ! "
ಅವಳ ಧ್ವನಿಯ ನೆನವಾದೊಡನೆಯೇ, ಅದು ಮೆಲ್ಲನೆ ಅವನ ಹೃದಯದ
ಅಂತರಾಳದಲ್ಲಿ ಅತಿ ಸೂಕ್ಷ್ಮವಾದ ಒಂದು ತಂತ್ರಿಯನ್ನು ಮೀಟಿದ
ಹಾಗಾಯಿತು. “ವಾಣಿ ವೀಣೆ ನುಡಿಸೋದರಲ್ಲಿ ಈಚೆಗೆ ಇನ್ನೆಷ್ಟು
ಕಲಿತಿದ್ದಾಳೋ ? ಕಲ್ಯಾಣಿ ಅವಳ ರಾಗ ! ಭೈರವಿ? ಅದೂ ಪರವಾಗಿಲ್ಲ!
ಅವಳ ಕಂಠ ಯಾವ ರಾಗಕ್ಕಾದರೂ ಕಳೆಕಟ್ಟುತ್ತೆ ! ಮುಂದಿನ ಸಲ
ಮೈಸೂರಿಗೆ ಹೋದಾಗ ಎಲ್ಲಾ ರಾಗಾನೂ ಮೊದಲಿಂದ ಹೇಳಬೇಕು.
ಆದರೆ ಅವರ ಮನೇಲಿ ಅವಳನ್ನು ಕೂರಿಸಿಕೊಂಡು ವೀಣೆ ಕೇಳೋಕೆ
ಸ್ವಲ್ಪಾನೂ ಅನುಕೂಲವಿಲ್ಲ! ನಿಂತಂಕವಾಗಿರೋ ಹಾಗೆ ಒಂದು
ಕೊಠಡಿ ಇಲ್ಲ ಮುಖ್ಯವಾಗಿ ! ಏನು ಮನೆಯೋ! ಅವರಾದರೂ ಏನು
ಮಾಡಿಯಾರು ? ಬಾಡಿಗೆ ಮನೆ! ಇನ್ನು ಹೇಗೆ ಇದ್ದೀತು? ಊರಲ್ಲಿ
ನಮ್ಮನೆ ಆದರೆ ಸರಿ ! ಮಹಡಿ ಮೇಲಿನ ಕೊಡಿಯೆಲ್ಲಾ ನಮ್ಮದೇ
ಆಗಿರುತ್ತೆ. ನಮ್ಮೂರಿಗೆ ಬಂದರೆ ಅವಳ ವೀಣೆಗೆ ಬಿಡುವಿಲ್ಲ! ವಾಣಿ!-
ಹೆಂಡತಿಯ ಕಾಗದ ೯೩
ವೀಣೆ! ವಾಣಿಯಿಂದ ವೀಣೆಗೆ ಕಳೆ! ವೀಣೆಯಿಂದ ವಾಣಿಗೆ ಕಳೆ! ..
ಏಪ್ರಿಲ್ ಹದಿನೈದಕ್ಕೆ ರಜ ಬರುತ್ತೆ, ಹದಿನಾರು ಮೈಸೂರು ; ಇಪ್ಪತ್ತು
ಅಥವಾ ಇಪ್ಪತ್ತೆರಡಕ್ಕೆ-ವಾಣೀನೂ ಕರಕೊಂಡು ನನ್ನೂರು ..."
ಹೀಗೆ, ನಡೆದದ್ದು- ನಡೆಯದೆ ಇದ್ದದು- ನಡೆಯಬೇಕಾದ್ದು ಎಲ್ಲ
ವನ್ನೂ ಕಲ್ಪಿಸಿಕೊಳ್ಳಲಾರಂಭಿಸಿದ! ಅವನ ಮನವನ್ನು ಹೊಕ್ಕು, ಅವನ
ಕಲ್ಪನೆಯ ಚಿತ್ರಗಳನ್ನು ನೋಡುವುದಕ್ಕೆ ಸಾಧ್ಯವಾಗಿದ್ದಿದ್ದರೆ, ಆ ಪ್ರೇಮಿ
ಗಳ ಎಣಿಯಲ್ಲದ ಪ್ರಣಯದ ಪರಾಕಷ್ಟತೆಯನ್ನು ನೋಡಬಹುದಾಗಿತ್ತು.
* * * *
ಎಂಟೂವರೆ ಗಂಟೆ ಹೊತ್ತಿಗೆ ನೋಟ ಮುಗಿಯಿತು ಇಬ್ಬರೂ ಸೈಕಲ್
ಹತ್ತಿ ಮನೆಯ ಕಡೆ ಹೊರಟರು. ದುರದೃಷ್ಟ ಇನ್ನೂ ರಾಮನಾಥನ
ಬೆನ್ನು ಬಿಟ್ಟಿರಲಿಲ್ಲ ! ಅರ್ಧದಾರಿ ಬಂದಿದ್ದರು, ಆಗ ರಾಮನಾಥನ
ಸೈಕಲ್ಲಿನ ಮುಂದುಗಡೆಯ ಚಕ್ರ " ಠಿಸ್" ಎಂದು ಶಬ್ದ ಮಾಡಿತು
" ಇದೇನು ಬಂತಪ್ಪಾ !!!" ಎಂದು ಗೊಣಗುತ್ತ ಇಳಿದ. ಗಣೇಶನೂ
ಇಳಿದ, ನೋಡಿದರೆ, ಮೊಳೆಸಹಿತವಾಗಿದ್ದ. ಒಂದು ಕುದುರೆಯ
ಲಾಳ " ಟಯರ್ " (tyre) ನ ಚೆನ್ನಾಗಿ ಊರಿಹೋಗಿದೆ ! ರಾಮನಾಥ
“ಅಯ್ಯೋ, ನನ್ನ ಪುಣ್ಯವೇ " ಎಂದು ಅದನ್ನು ಕಿತ್ತು, ಅದರ ಮೇಲೆ
ಸಿಟ್ಟಿನಿಂದ ಉಗುಳಿ, ಚರಂಡಿಗೆ ಎಸೆದು ಗಣೇಶನನ್ನು ಕುರಿತು-
"ಗಣೇಶಾ ಇವತ್ತೆಲ್ಲಾ ಹೀಗೇ ಆಗಿದೆ ನೋಡು !ನನ್ನ ಗ್ರಹಚಾರ !-
ಬೆಳಗಿನಿಂದ ಒಂದಲ್ಲಾ ಒಂದು ಕಿರಿ ಕಿರಿ! " ಎಂದ.
"ಯಾಕೋ?" ಎಂದು ಕೇಳಿದ ಗಣೇಶ.
" ನಮ್ಮ ಮನೇ ಹತ್ತಿರ ಒಂದು ಕರೀಬೆಕ್ಕು ಸುಳಿದಾಗುತ್ತೆ, ನೋಡು,
ಅದು ಎಂದೂ ಇಲ್ಲದ್ದು ಇವತ್ತು ಬೆಳಿಗ್ಗೆ, ನಾನು ಕಣ್ಣು ಬಿಡೋ
ಹೊತ್ತಿಗೆ ಸರಿಯಾಗಿ ನನ್ನ ರೂಮಿನ ಕಿಟಕೀಲಿ ಕೂತಿತ್ತು-ನೋಡು !
ನೋಡಿದೆ ಕೂಡೆ ಮತ್ತು ಮಸುಕು ಹಾಕಿಕೊಂಡೆ! ಆದರೆ ಏನ್ಮಾ
ಡೋದು! -ಮೊದಲೇ ನೋಡ್ಬಿಟ್ಟಿದ್ದೆ ! ಇಷ್ಟಕ್ಕೆಲ್ಲಾ ಆ ಹಾಳು ಬೆಕ್ಕು
ಕಾರಣ, ನೋಡು! ಒಂದಲ್ಲ ಒಂದು ದಿನ ಅದನ್ನೆ ಸಾಯಿಸಿಬಿಡ್ತೀನಿ
-ಬಿಡೊಲ್ಲ: ಕೊಂದ್ರೆ ಪಾಪ ಅಂತಾರೆ! ಪಾಪವೋ ಪುಣ್ಯವೋ!
ಆ ಕಾಣದ ಪಾಪಾನಾದರೂ ಕಟ್ಕೋಬಹುದು- ಈ ಕಂಡ ಗ್ರಹಚಾರ
ಸಹಿಸೋದು ಕಷ್ಟ!"
೯೪ ಹೆಂಡತಿಯ ಕಾಗದ
"ಪಾಪ! ಅದೇನ್ಮಾಡತ್ತೋ ? ನೀನೊಬ್ಬ ಹುಚ್ಚ!"
"ನಾನೂ ನಂಬ್ತಿರ್ಲಿಲ್ಲಕಣೋ! ಆದರೆ ಇತ್ತೀಚೆಗೆ ನಂಬಿಕೆ
ಪ್ರಾರಂಭವಾಗಿದೆ ! -
* * *
ಇಬ್ಬರೂ ಸೈಕಲ್ಲುಗಳನ್ನು ತಳ್ಳಿಕೊಂಡು ನಡೆದುಕೊಂಡು ಹೋರಟರು.
ರಾಮನಾಥ ಮನೆಗೆ ಬಂದಾಗ ಒಂಭತ್ತೂವರೆಯಾಗಿಬಿಟ್ಟಿತ್ತು. ಮನೆಯಲ್ಲಿ
ಎಲ್ಲರದ್ದೂ ಊಟವಾಗಿ, ಅವನ ಚಿಕ್ಕಮ್ಮ ಅವನಿಗಾಗಿ ಕಾದಿದ್ದರು.
ರಾಮನಾಥ ಬೇಗ ಬೇಗ ಬಟ್ಟೆ ಬಿಚ್ಚಿ ಪಂಚೆ ಉಟ್ಟು ಕೊಂಡು- ಕೈಕಾಲು
ಮುಖ ತೊಳೆದುಕೊಂಡು ಊಟಕ್ಕೆ ಕುಳಿತ. ಹಸಿವಾಗಿತ್ತು. ಬೇಗ
ಬೇಗ ಊಟಮಾಡಿ ತನ್ನ ಕೊಠಡಿಗೆ ಬಂದ. ಊಟದಿಂದ ಹೊಟ್ಟೆಯ
ಹಸಿವು ಅಡಗಿತು ಅಷ್ಟೆ. ಹೃದಯದ ಹಸಿವು ನೂರ್ಮಡಿಯಾಯಿತು!
ತನ್ನ ಕೊಠಡಿಗೆ ಬಂದವನೇ ಬಾಗಿಲು ಮುಚ್ಚಿ ಅಗಣಿ ಹಾಕಿದ. ಇನ್ನು
ಯಾರ ಆತಂಕವೂ ಇಲ್ಲ ! ಯಾರೂ ಬರುವಹಾಗಿಲ್ಲ: ಜೇಬಿನಿಂದ
ವಾಣಿಯ ಕಾಗದವನ್ನು ತೆಗೆದುಕೊಂಡು "ಈಸೀಛೇರ್" (easy chair)
ಮೇಲೆ ಕುಳಿತುಕೊಂಡ, ಅವನ ಮುಖ ಉಲ್ಲಾಸದಿಂದ ಅರಳಿತು.
ಪ್ರೇಯಸಿಯ ಪ್ರೇಮವನ್ನು ಎದುರುಗೊಳ್ಳಲು ಅವನ ಹೃದಯ ತೆರೆದ
ಹಾಗಾಯಿತು ಆಸೆ ಕಣ್ಣುಗಳಲ್ಲಿ ಒಟ್ಟುಗೂಡಿತು ಕಾಗದವನ್ನು
ಒಡೆಯ ತೊಡಗಿದ, ಅದನ ದೇಹದಲ್ಲಿ ರಕ್ತವು " ವಾಣೀ !- ವಾಣೀ!"
ಎಂದು ಹಾಡುತ್ತ ಹರಿಯಲಾರಂಭಿಸಿತು. ಈಗ ಒಂದೊಂದು ಪುಟವನ್ನೂ
ಹತ್ತು ಹತ್ತು ನಿಮಿಷ ಓದಬಹುದು. ಕೇಳುವವರು ಯಾರು? ಅವಳ
ಪತ್ತದ ಪ್ರೇಮವನ್ನು ಸವಿಯುತ್ತ ರಾತ್ರಿಯನ್ನೆಲ್ಲಾ ಕಳೆಯಬಹುದು!
ತಡೆಯುವವರಾರು? ನನ್ನ ವಾಣಿಯ ಕಾಗದ" ಎಂದು ಮೆಲ್ಲನೆ
ಹೇಳುತ್ತ, ಕಾಗದವನ್ನು ಹೊರಕ್ಕೆ ತೆಗೆದ ಬಹಳ ಪುಟಗಳಿದ್ದವು.
ಅವುಗಳ ಮಡಿಕೆಯನ್ನು ಬಿಚ್ಚಿದ ಮೊದಲನೆಯ ಹಾಳೆ ಬರೀದು! ...
" ಇದೇನು !-ಎರಡನೇ ಹಾಳೆ? ಅದೂ ಬರೀದು ! • • • ಮೂರನೆ
ಯದೋ? ಅದೂ ಬರೀದೇ ! ನಾಲ್ಕು-ಐದು-ಆರು-ಏನೂ ಇಲ್ಲ !
ತಿರುವಿ ಹಾಕಿದ ಹಾಗೆಲ್ಲಾ ಬರೀ ಹಾಳೆಗಳು ಒರುತ್ತಿವೆಯಲ್ಲಾ! ಇದೇನು
ಹುಚ್ಚು ವಾಣಿಗೆ ! ಅದೆಷ್ಟು ಬರೀ ಹಾಳೆಗಳನ್ನಿಟ್ಟಿದ್ದಾಳೆ ! . . .”
ರಾಮನಾಥನ ಮೈ ತಣ್ಣಗಾಯಿತು, ಹುಬ್ಬು ಗಂಟಾಯಿತು. ಹಾಳೆಗಳನ್ನು
ಹೆಂಡತಿಯ ಕಾಗದ ೯೫
ತಿರುವಿಹಾಕಿದ, ಏಳು-ಎಂಟು-ಒಂಭತ್ತು ಎಲ್ಲಾ ಬರೀ ಹಾಳೆಗಳೇ!
ಹತ್ತನೆಯದು ? ಅದೇ ಕೊನೆಯದು. ಅದರಲ್ಲಿ ಏನೋ ಬರೆದಿರುವ
ಹಾಗಿದೆ ! ಏನೆಂದು ಬರೆದಿದ್ದಾಳೆ?
". . ನಿಮ್ಮ ಕೋಪದ ಕಾಗದ ತಲ್ಪಿತು. ಆದರೆ ಸಾಲದು
ಕೋಪ!
ಈ ದೊಡ್ಡ ಕಾಗದ ನೋಡಿದಾಗ ನಿಮಗೆ ಎಷ್ಟು ಸಿಟ್ಟು
ಬಂತೋ ಅದನ್ನೆಲ್ಲಾ ತುಂಬಿ, ದಯವಿಟ್ಟು ಇನ್ನೊಂದು ಕಾಗದ ದಯ
ಪಾಲಿಸಬೇಕು.
ನಿಮ್ಮ ವಾಣಿ"
-ಎಂದು. ಇದೇನು ಹುಡುಗಾಟ! ಬರೀಹಾಳೆಗಳನ್ನು ತುಂಬಿ !
ಈ ಕಾಗದದ ದೆಸೆಯಿಂದ ಮುದುಕಿಯ ಮೇಲೆ ಬೈಸಿಕಲ್ ಬಿಟ್ಟು ಬಿಡ
ವುದರಲ್ಲಿದ್ದ! " ಕ್ಯಾಚ್ " ಹಿಡೀಲಿಲ್ಲ! ಗೆಲ್ಲೋ ಸಮಯದಲ್ಲಿ "ರನ್
ಔಟ್ ' ಆಗಿಬಿಟ್ಟ! ಎಲ್ಲಾ ಈ ಕಾಗದದ ದೆಸೆಯಿಂದ ! ವಾಣಿಯ
ಹುಡುಗಾಟ ! ರಾಮನಾಥನ ಮನಸ್ಸಿಗೆ ಹೇಗೆ ಆಯಿತೋ ಅದನ್ನು
ಹೇಳುವದು ಕಷ್ಟ ! ಅನುಭವಿಸಿ ತಿಳಿದುಕೊಳ್ಳತಕ್ಕ ವಿಷಯ
ಅದು! ಅವನ ನಿರೀಕ್ಷೆಯಲ್ಲಿ ಒಂದು ವಿಷಯು ಮಾತ್ರ ನಿಜವಾಗಿತ್ತು-
ನೋಡಿ! ವಾಣಿಯ ಕಾಗದದಲ್ಲಿ ಹತ್ತು ಪೇಜುಗಳಿರಬಹುದು ಅಂದು
ಕೊಂಡಿದ್ದ ; ಹತ್ತು ಪೇಜುಗಳಿದ್ದ ! ಆ ಬರೀ ಹಾಳೆಗಳನ್ನೆಲ್ಲಾ ಪುನಃ
ತಿರುವಿಹಾಕುತ್ತಾ ತನ್ನಷ್ಟಕ್ಕೆ ತಾನೇ ನಕ್ಕ ಅವನಿಗೆ ಆ ಒಂದೊಂದು
ಬರಿಯ ಹಾಳೆಯೂ ಅವನನ್ನು ಅಣಕಿಸಿ ನಗುವಂತೆ ಬೋಧೆಯಾಯಿತು.
ವಾಣಿ ಇದನ್ನು ಯೋಚಿಸುತ್ತಾ ಎಷ್ಟು ನಲಿಯುತ್ತಿದ್ದಾಳೋ! ರಾಮ
ನಾಥ, ಅವಳು ಎದುರಿಗೆ ನಿಂತು, ಹಾಸ್ಯದಿಂದ ನಗುತ್ತ ಬಳುಕಿ ನಲಿಯು
ತ್ತಿದ್ದಾಳೆಂದೇ ಭಾವಿಸಿಕೊಂಡ, ಅವನ ನಿರಾಶೆ- ಕೋಪ -ಎಲ್ಲಾ ಮಾಯ
ವಾಯಿತು ! ಕೊನೆಯ ಹಾಳೆಯಲ್ಲಿ “ ನಿಮ್ಮ ವಾಣಿ " ಎಂದಿದ್ಧ ಸ್ಥಳ
ವನ್ನು ಮೆಲ್ಲನೆ ತನ್ನ ತುಟಿಗೆ ಒತ್ತಿಕೊಂಡ !
ಎಷ್ಟಾದರೂ ರಸಿಕ ನೋಡಿ !!
PRINTED AT THE WESLEY PRESS AND PUBLISHING House, Mysore.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ