ಬುಧವಾರ, ಫೆಬ್ರವರಿ 7, 2024

ಅಂತರಂಗ ಮೊದಲನೆಯ ಭಾಗ ದೇವುಡು.

https://archive.org/details/dli.osmania.3851

(ಮಧ್ಯದಲ್ದೆ)

 ಅಂತರಂಗ 

ಮೊದಲನೆಯ ಭಾಗ 

ದೇವುಡು. 



=============================================


ಅಂತರಂಗ. 




ಒಂದನೆಯ ಪರಿಚ್ಛೇದ. 



ಮಧ್ಯಾನ್ಹ ಮೂರುಘಂಟಿ ಇರಬಹುದು. ಭಟ್ಟರು ಆಗತಾನೇ 

ಎದ್ದು ಹಾಸಿಗೆಯಮೇಲೆ ಕುಳಿತಿದ್ದರು. ನಿದ್ರೆಮಾಡಿ ಎದ್ದಮುಖ. ಗಂಭೀರ 

ವಾಗಿ, ಏನೋ ಯೋಚನೆಯಲ್ಲಿ ಮಗ್ನವಾದಂತೆ ತೋರುತ್ತಿತ್ತು. ಹಾಗೆ 

ಯೇ ನಡುವೆ ಹತಾತ್ಮಾಗಿ ನಕ್ಕು " ಆಗಬೇಕಾಗಿದ್ದರೆ ಆಗಿ ಹೋಗಲಿ ” 

ಎಂದುಕೊಂಡರು. 



ಅವರೆಂದು ಕೊಂಡಿದ್ದಂತೆ ಮನಸ್ಸಿನ ಯೋಚನೆ ಮನಸಿ ನಲ್ಲಿಯೇ 

ಇದ್ದಿದ್ದರೆ ಚೆನ್ನಾಗಿತ್ತು. ಆದರೆ ಹಾಗಾಗದೆ ಬಾಯಲ್ಲಿ ಬಂದು ಬಿಟ್ಟಿತು. 

ಆ ವೇಳೆಗೆ ಸರಿಯಾಗಿ ಅತ್ತಕಡೆ ಬಂದ ಭಟ್ಟರ ಕುಟುಂಬ ಪಾತಮ್ಮನವರು 

ಅದನ್ನು ಕೇಳಿಬಿಟ್ಟರು. ಅವರು ತಮ್ಮನ್ನು. ಕುರಿತು ಏನಾದರೂ ಹೇಳಿದ 

ರೇನೋ ಎಂದು ಕೊಂಡು " ಏನೆಂದಿರಿ? ? ಎಂದರು. 



ಭಟ್ಟರಿಗೆ ತಾವು ಏನೆಂದಹಾಗೂ ನೆನಪಿಲ್ಲ. ತಟ್ಟನೆ ಹೆಂಡತಿ ಕಡೆಗೆ 

ತಿರುಗಿ " ಆ " ಎಂದರು. 



ಪಾತಮ್ಮನನರು ಹೋಗುತ್ತಿದ್ದವರು ಹಾಗೆಯೇ ನಿಂತುಕೊಂಡು 

" ನೀವೇ ಏನೋ ಎಂದಿರಿ. ಏನು ಎಂದು ಕೇಳಿದರೆ ಹಿಂತಿರುಗಿಕೊಂಡು 

ನೀನೇ " ಆ” ಎಂದರೆ, ನಾನು ಏನು ಹೇಳಲಿ?” ಎಂದರು. 



ಭಟ್ಟರಿಗೆ ಕಷ್ಟಕ್ಕೆ ಬಂತು: ಸಭೆಯಲ್ಲಿ ಕುಳಿತಾಗ ಬೇಕಾದರೆ ಹತ್ತು 

ಜನ ವಿದ್ವಾಂಸರಿಗೆ ಬಾಯಿಕೊಟ್ಟು ಅವರ ಬಾಯಿ ಕಟ್ಟಿಸುತ್ತಿದ್ದ ಪುಣ್ಯಾತ್ಮ 





ನಿಗೆ, ಪಾತಮ್ಮನವರ ಶಬ್ದಕೇಳಿದರೆ ಗಂಟಲು ಒಣಗಿಹೋಗುತ್ತಿತ್ತು. 

ನಾಲಗೆಯಲ್ಲಿ ದ್ರವವೇ ಬತ್ತಿಹೋಗುತ್ತಿತ್ತು. ಮತ್ತೊಮ್ಮೆ ಗಣಪತಿ 

ಶಾರದಾಗುರುಭ್ಯೋನಮಃ ಎಂದು ಆರಂಭಿಸಿಯೇ ಹೆಂಡತಿಯ 

ಕೈಯಲ್ಲಿ ಮಾತನಾಡಬೇಕು. ಇಷ್ಟಾದರೂ, ಅವರು ಮೂವರಲ್ಲಿ 

ಯಾರೂ ಭಟ್ಟರ ಸಹಾಯಕ್ಕೆ ಒದಗುತ್ತಿರಲಿಲ್ಲ. ಭಟ್ಟರಿಗೆ ತಬ್ಬಿಬ್ಬಾಗಿ 

ಹೋಗುತ್ತಿತ್ತು. ಒಂದೆರಡು ವೇಳೆಯಾದರೆ ಏನೋ ಕಾರಣವೆನ್ನಬಹುದು.  

ಕಂಡಾಗಲೆಲ್ಲ ಹೀಗೆಯೇ ಆಗುತ್ತಿತ್ತು. ಅದನ್ನು ಚೆನ್ನಾಗಿ ತಿಳಿದ ಭಟ್ಟರು 

"ಮದುವೆಯಲ್ಲಿ ಎಲ್ಲೋ ಅವಳೇ ಜೀರಿಗೆ ಬೆಲ್ಲ ಮೊದಲು ಹಾಕಿರಬೇಕು.” 

ಎಂದು ನಿರ್ಧರಿಸಿಬಿಟ್ಟಿದ್ದರು. "ಅವರ ಮರದುದ್ದದ ಮಾವಯ್ಯನವರು 

ಇದ್ದರಲ್ಲ, ಅವರು ಅವಳನ್ನು ಎತ್ತಿದರು. ತಾನು ಕೈಯೆತ್ತುವುದಕ್ಕೆ ಮೊದಲೇ 

ಅವಳು ತಮ್ಮ ತಲೆಯ ಮೇಲೆ ಜೀರಿಗೆ ಬೆಲ್ಲ ಹಾಕಿಬಿಟ್ಟಿದ್ದಳು ಎಂದು 

ಅವರ ನಂಬಿಕೆ. ಆಕೆಯು ಮನೆಗೆ ಬಂದಾಗ ಹೊಸಹುಡುಗಿಯ ಸೊಬಗಿಗೆ 

ಸೋತ ಭಟ್ಟರ ರಸಿಕಮನಸ್ಸು ಸೋತು ಸೋತು ಕೊನೆಕೊನೆಗೆ ಅಂಜುವ 

ದಕ್ಕೂ ಆರಂಭಿಸಿತ್ತು, ಎಂಬುದು ಅವರ ಬಗೆಗೆ ಬಂದಿರಲಿಲ್ಲ. ಹೆದರುವ 

ಹೆಂಗುಸು ಹೆದರಿಸುವಳೆಂಬದು, ಸೋತ ಹೆಣ್ಣು ಸೋಲುವಳೆಂಬುದು 

ಭಟ್ಟರ ಶಾಸ್ತ್ರಗಳಲ್ಲಿ ಎಲ್ಲಿಯೂ ಬಂದಿರಲಿಲ್ಲ ಅದರಿಂದ, ತಾವು ತಮ್ಮ 

ಕುಟುಂಬದ ವಿಚಾರದದಲ್ಲಿಟ್ಟುಕೊಂಡಿರುವ ಭಾವನೆಗೆ ಜೀರಿಗೆಬೆಲ್ಲವೇ ಕಾರಣ 

ವಾಯಿತು. ಎಷ್ಟೋ ಸರ್ತಿ ಇರಬೇಕು ಇರಬೇಕು ಎಂದುಕೊಂಡು, 

ಎಂದುಕೊಂಡು, ಅದು ಹೌದೇ ಹೌದು ಆಗಿಹೋಗಿತ್ತು. 


ಭಟ್ಟರು ಎಂದಿನಂತೆ ಹೆಂಡಿತಿಯ ಮುಖವನ್ನು ನೋಡಿದರು. ಹೇಳ 

ಬೇಕೆಂದು ಹೊರಟಿದ್ದ ಎರಡು ಮಾತೂ ಮರೆತುಹೋಯಿತು. ಅವರು 

ಏನು ಮಾಡಬೇಕು? ಹೆಚ್ಚು ಕಡಿಮೆ ದುಂಡಾಗಿ ಬಟ್ಟನಾಗಿ, ಕೆಂದಾವರೆ 

ಯಂತಿರುವ ಮುಖವನ್ನು ಕಂಡಾಗಲೆಲ್ಲ ಭಟ್ಟರಿಗೆ ಮನಸ್ಸು ಅಸ್ತವ್ಯಸ್ತ 

ವಾಗಿ ಹೋಗುವುದು. ಕಾಲದೇಶವರ್ತಮಾನಗಳೆಲ್ಲವೂ ಮರೆತುಹೋಗಿ, 

ವಿಜನವಾದ ಆಶ್ರಮದಲ್ಲಿ ಲತಾಕುಂಜದಲ್ಲಿ ಶಕುಂತಳೆಯನ್ನು ಒಬ್ಬಂಟಿ

ಗಳನ್ನಾಗಿ,--ಪತ್ರಲೇಖನದ ಆಮೇಲೆ ಕಂಡದು ದುಷ್ಯಂತನಂತೆ ಆಗಿ 

ಹೋಗುವರು. ಭಟ್ಟರು. ಅದು ಸಿರಿಸಿರಿಯಾಗಿ ಮೆರೆಯುತ್ತಿದ್ದ ಆ ಸುಂದರ 





ಮುಖದ ಪ್ರಭಾವವೋ ಅಥವಾ ಅದೂ ಜೀರಿಗೆ ಬೆಲ್ಲದ ಪ್ರಭಾವವೋ 

ದೆವರು ಬಲ್ಲ.


ಇಂದೂ ಹಾಗೆಯೇ ಆಯಿತು. ಮೊಂಕಾದರೂ ಭಟ್ಟರ ಬುದ್ಧಿಯು 

ಮೋಸಹೋಗಲಿಲ್ಲ. ಹೆಂಡತಿಯ ಮುಖವನ್ನು ಕಂಡು ಪರವಶರಾದಂತೆ 

ಒಂದು ಗಳಿಗೆ ದುರಮರನೆ ನೋಡಿ, ಮತ್ತೆ ಹಾಗೆಯೇ ನೋಟವನ್ನು ಅತ್ತ 

ಕಡೆಗೆ ತಿರುಗಿಸಿಕೊಂಡು "ಅಷ್ಟಲ್ಲದೆ ಹೇಳಿದ್ದಾರೆಯೇ ದಾರೇಷಣವೆಂದು” 

ಎಂದುಕೊಂಡರು ದಾರೇಷಣ, ಪುತ್ರೇಷಣ, ಧನೇಷಣವೆಂದು ಮೂರು 

ಹಾರೈಕೆಗಳು ಮೋಕ್ಷಮಾರ್ಗದಲ್ಲಿ ಇವು ಕೆಡಕುಗಳಂತೆ. 



ಪಾತಮ್ಮನವರಿಗೆ ಆಶ್ಚರ್ಯವಾಯಿತು. ಅಧವಾ ಮನಸ್ಸಿಗೆ ಸರಿ 

ಹೋಗಿಲ್ಲ; ನಿಂತವರು ಇನ್ನು ಒಂದು ಹೆಜ್ಜೆ ಹಾಸಿಗೆಯ ಕಡೆಗೆ ಬಂದು, 

" ಅದೇನಂದರೆ ನಿವು ಅಂದುಕೊಂಡದ್ದು?” ಎಂದರು. 



ಭಟ್ಟರು " ಅದೇ |? ಎಂದು, ಒಂದು ಸಣ್ಣ ನಗೆಯನ್ನು ನಕ್ಕು 

" ಇರಲಿ! ಹೇಳುತ್ತೇನೆ. ಹೋಗಿ ಒಂದಿಷ್ಟು ಅಡಕೆಲೆ ತೆಗೆದುಕೊಂಡು 

ಬಾ? ಎಂದು, ಹೆಂಡತಿಯನ್ನು ಕಳುಹಿಸಿಕೊಟ್ಟರು. 



ಪಾತಮ್ಮನವರಿಗೆ ಸುಮಾರು ೨೫ ವಯಸ್ಸು. ಗಂಡನಿಗಿಂತ ಒಂದು 

ಎಂಟುವರುಷ ಚಿಕ್ಕವರು ಅಷ್ಟೆ! ಮೂರು ಮಕ್ಕಳಾಗಿದ್ದರೂ, ತಲೆಯಲ್ಲಿ 

ಒಂದೊಂದು ನೆರೆಗೂದಲು ಕಂಡಿದ್ದರೂ, ಅವರ ಮನಸ್ಸಿನ ಉತ್ಸಾಹದಿಂದ 

ಅವರ ವಯಸ್ಸನ್ನು ಅಳೆಯುವುದಾದರೆ, ಅವರಿಗೆ ಇನ್ನೂ ಹತ್ತು ತಪ್ಪಿದರೆ, 

ಹನ್ನೆರಡುವರುಷ ಎನ್ನಬಹುದು. ಅಧವಾ ನೀವು ಯಾರಾದರೂ ಗಾಡಿಗೆ 

ಕಟ್ಟಿರುವ ಎತ್ತಿನ ಹಾಗೆ ಹಾಗೂ ಹೀಗೂ ತಲೆಯನ್ನು ಅಲ್ಲಾಡಿಸಿ ಉಂಟೇ 

ಎಂದು ತೆಗೆದರೆ ನಾವೂ " ಹೋಗಲಿ ಹದಿನಾಲ್ಕು ತಪ್ಪಿದರೆ ಹದಿನೈಯ್ದು 

ಇದ್ದೀತು. ಹದಿನಾರಂತೂ ಇಲ್ಲವೇ ಇಲ್ಲ" ಎನ್ನುವೆವು. ಆಕೆಯ ದೇಹ 

ವನ್ನು ಕಂಡವರು ಇನ್ನೂ ಇಪ್ಪತ್ತು ಇರಲಾರದು ಎನ್ನುವರು. ಕುರುಡರಿಗೂ 

ಕಾಣುವುದು ಸಾಧ್ಯವಾಗಿದ್ದಾದರೆ ಅವರೂ ಹೌದು ಹೌದು ಎಂದಾರು, 





ಬಹುಶಃ ನಮ್ಮ " ಸ್ಪೇಟ್‌ಮೆಂಟಿ ” ಗೆ ಅದೂ " ಎವಿಡೆನ್‌ಸೊ "

ಏನೋ? ಅಂತೂ ಭಟ್ಟರು ಅಡಕೆಲೆಯನ್ನು ಕೇಳಿದಾಗೆಲ್ಲ ಒಳ್ಳೆಯೆಲೆಯೇ 

ಬರುತ್ತಿತ್ತು. ಬಣ್ಣಕಟ್ಟಿದ ಗಮ್ಮೆನ್ನುವ ಉಜ್ಜಡಿಕೆಯೇ ಬರುತ್ತಿತ್ತು. ದಿವ 

ಸಕ್ಕೆ ಮೂರು ಸಲವಂತೂ ಖಂಡಿತ; ಇನ್ನೂ ನಾಲ್ಕು ಸಲ ಕೇಳಲಿ, ವೀಳ್ಯವು 

ಬೆಳ್ಳಿಯ ತಟ್ಟಿಯಲ್ಲಿಯೇ ಬರಬೇಕು. ಪಾತಮ್ಮತನರು ತಾನೇ ತರಬೇಕು,

ಜೊತೆಯಲ್ಲಿ ತಂದಿದ್ದ ಅಷ್ಟುದ್ದದ ಪನ್ನರುಕಡ್ಡಿ ಉರಿದುಹೋಗುವವರೆಗೂ, 

ಕೈಯಬಳೆಗಳ ಸಣ್ಣ ಸದ್ದಿನ ಸಂಗೀತದಿಂದ ಕಿರುಮನೆಯನ್ನೆಲ್ಲ ತುಂಬುತ್ತ 

ಆ ಯೆಲೆಯನ್ನೆಲ್ಲ ತಾವೇ ಮಡಿಸಿ ಮಡಿಸಿ ಕೊಡಬೇಕು. ಇನ್ನೂ , ಆ

ಭಟ್ಟರ ಕಿರುಮನೆಯ ಗೋಡೆಯಮೇಲೆ ಕಟ್ಟಿದ್ದ ಸರಸ್ವತಿಯ ಪಟದಲ್ಲಿ  

ಕುಳಿತಿದ್ದ ನವಿಲನ್ನು ಕೇಳಿದ್ದರೆ, ಆದೂ ಇನೂ ಅ ದೂರಹೋಗಿ, 

"ಪಾತಮ್ಮನವರ ಬಾಯತಂಬುಲನವು ಅಷ್ಟು ಕೆಂಪಾಗಿರುವುದಕ್ಕೆ ಅರೆಯಗಿದ  

ತಂಬುಲವು ಮತ್ತೆಲ್ಲಿಂದಲೋ ಬಂದು ಸೇರುವುದೇ ಕಾರಣ. ಉತ್ತರದೇಶ 

ದವರ ಸಂಗೀತ ನೋಡಿ,  ರಾಗ ಕೊಂಚ " ದೂನ್‌ '' ಮಾಡಿಬಿಡುತ್ತಾರೆ. 

ಎಷ್ಟುಸೊಗಸಾಗಿ ಬಿಡುತ್ತದೆ. ಹಾಗೆ " ಎನ್ನುವುದು. ನಾವು ಅದನ್ನು 

ನಂಬುವುದಿಲ್ಲ. ದೇವಿ ಸರಸ್ವತಿಯ ಬಳಿಯಿದ್ದರೆ ತಾನೆ ಏನು? ಹಕ್ಕಿಯು 

ಹಕ್ಕಿಯೇ ? ಅದಕ್ಕೆ ಭಟ್ಟರು ಧರ್ಮಶಾಸ್ತ್ರಜ್ಞರು. ಪಾರ್ವತಮ್ಮನವರು 

ಸಂಪ್ರದಾಯ ಶೀಲರು ಎಂದೇನು ಗೊತ್ತು ? ಅವರು ಉಚ್ಛಿಷ್ಟ ದೋಷ

ವನ್ನುಅಷ್ಟಾಗಿ ಗಣಿಸುವುದಿಲ್ಲನೆಂದರೆ. ಹೇಗೆ ನಂಬುವುದು : ಹಕ್ಕಿಯ 

ಮಾತು ನಂಬಿ ಹೆಬ್ಬಾರುವರಲ್ಲಿ ಅನುಮಾನನಡುವನುದೇ? 



ಎರಡನೆಯ ಪರಿಚ್ಛೇದ 


ಅಂತೂ ಭಟ್ಟರು ಹೋಗಿ ಕೈಕಾಲು ತೊಳೆದುಕೊಂಡು ಬರುವವೇಳೆಗೆ 

ಅಡಕೆಲೆಯು ಸಿದ್ಧವಾಗಿತ್ತು. ಭಟ್ಟರು ಅಡಕೆಲೆಯನ್ನು ಹಾಕಿಕೊಳ್ಳುತ್ತಾ 

" ಒಂದು ಕನಸಾಯಿತು." ಎಂದರು. ಪಾತಮ್ಮನವರು ತಲೆಯನ್ನು ಸೊಟ್ಟ 

ಗಿಟ್ಟು "ಸರಿ! ಮಧ್ಯಾನ್ಹದ ಕನಸು ಅರ್ಥವಿಲ್ಲ ಪರ್ಥವಿಲ್ಲ " ಎಂದರು. 




ಭಟ್ಟರು " ಉಂಟೆ? ನಮಗೆ ಗೊತ್ತಿಲ್ಲದ ಮಾತ್ರಕ್ಕೆ ಅದಕ್ಕರ್ಥವಿಲ್ಲವೆಂದ 

ರೇನು? ಅದಿರಲಿ ಕೇಳು” ಎಂದು ಅಡಕೆಲೆಯನ್ನು ಅಗಿಯುತ್ತ ಅಗಿಯುತ್ತ 

ಕನಸನ್ನು ಹೇಳಿದರು 



" ಒಂದು ದೊಡ್ಡಕಾಡು, ನಾನೊಬ್ಬನೇ ಹೋಗುತ್ತಿದ್ದೇನೆ. ಎಲ್ಲಿಗೆ 

ಎನ್ನುವುದು ಅಷ್ಟು ವಶದವಾಗಿ ಮನಸ್ಸಿಗೆ ತಿಳಿದ ಹಾಗಿರಲಿಲ್ಲ. ಅಂತೂ 

ಎದುರಿಗಿದ್ದ ಬೆಟ್ಟವನ್ನು ಹತ್ತಿ ಹೋಗಬೇಕು ಎಂಬುದು ಮಾತ್ರ ಮನಸ್ಸಿಗೆ 

ತಿಳಿದಿತ್ತು. ಅಷ್ಟರಲ್ಲಿ ಅದೇನೇನೋ ಆಗಿ ಕೊನೆಗೆ ಸುಬ್ರಹ್ಮಣ್ಯಕ್ಕೆ 

ಹೋಗಿದ್ದೇನೆ. ಅಲ್ಲಿ ಒಂದು " ಘಟಸರ್ಪ " 


ಪಾರ್ವತಮ್ಮನವರು ಗಾಬರಿಯಿಂದ ಬಾಯಿ ನೀರನ್ನು ಅವಸರವಾಗಿ 

ನುಂಗುತ್ತಾ "ಅದು ಹೆಡೆತೋರಿಸಿತೋ ಇಲ್ಲವೋ ಮೊದಲುಹೇಳಿ” ಎಂದರು 



ಭಟ್ಟರು ಸಾವಧಾನವಾಗಿ ಈಸಲ ಮಾತುನೆನಸಿಗೆ ಬಂತು "ಅಯ್ಯೋ 

ಅವಸರವೇ ಸ್ಪಲ್ಪ ಕೆೇಳು" ಎಂದು ಮುಂದಕ್ಕೆ ಹೇಳಿದರು. 


"ದೇವರೆ ಸಾವಿರಹೆಡೆಗಳನ್ನು ತೋರಿಸಿಕೊಂಡು ದರ್ಶನಕೊಟ್ಟಿದ್ದಾನೆ 

ಆಗ ನಾನು ಭಕ್ತಿಯಿಂದ ನಮಸ್ಕಾರಮಾಡಿ ಸ್ತೋತ್ರಮಾಡುತ್ತೇನೆ. ದೇವರು 

"ಇದು ಎಂದು ಸುಮ್ಮನಾಗಬೇ‌ಡೆ. ನೀನು ಒಂದುಸಲ ಬಂದು 

ದಿಟನಾಗಿಯೂ ದರ್ಶನಮಾಡಿಕೊಂಡು ಹೋಗು''ಎಂದು ಆಜ್ಞಾಪಿಸಿದ್ದಾನೆ. 

ನಾನೂ "ಆಗಲಿ ಅಪ್ಪಣೆ' ಎಂದು ಕೈಮುಗಿದೆ. ತಟ್ಟಿನೆ ಎಚ್ಚರವಾಯಿತು. 

ಕೂಡಲೆ ಎದ್ದು, ಹಾಗೆಯೇ ಕುಳಿತುಕೊಂಡು " ಇದೇನೀ ಕನಸು" ಎಂದು 

ಭಾವಿಸಿಕೊಳ್ಳುತ್ತಿದ್ದು " ಆಗಬೇಕಾಗಿದ್ದರೆ ಅದೂ ಆಗಲಿ” ಎಂದೆ. ಆ 

ವೇಳೆಗೆ ನೀನೂ ಬಂದೆ" ಎಂದರು. 


ಪಾತಮ್ಮನವರಿಗೆ ಎಜಮಾನರ ವಿಷಯದಲ್ಲಿ ಎಳ್ಳಷ್ಟೂ ಸಂದೇಹವಿರ 

ಲಿಲ್ಲ. ಆದರೂ ಅವರು ಏನೂ ಹೇಳದೆ ಅಷ್ಟಕ್ಕೇ ಕನಸನ್ನು ಮೊಟಕು 

ಮಾಡಿರುವರು ಎನ್ನಿಸಿತು. ಅದಕ್ಕೆ ಕಾರಣವನ್ನು ಮಾತ್ರ ಹೇಳಲಾರರು. 

ಆಕೆ " ಬಹುಶಃ ಮನಸ್ಸಿನ ಜೊತೆಯಲ್ಲಿ ಮರಿಮನಸ್ಸು ಒಂದಿರಬೇಕು. 

ಅನೇಕ ವೇಳೆ ಅದು ಕಾರಣಗಳನ್ನೆಲ್ಲ ವಿಚಾರಿಸಿ, ಹೀಗೇ ಸರಿಯೆಂದು 



೬ 



ಗೊತ್ತುಮಾಡಿ, ನಿರ್ಧಾರವನ್ನು ಮಾತ್ರ ನಮ್ಮ ಮನಸ್ಸಿಗೆ ಹೇಳುತ್ತದೆ. ಈ 

ಮನಸ್ಸು ಆ ಮರಿಯಲ್ಲಟ್ಟಿರುವ ಮಮತೆಯಿಂದ ಅದನ್ನು ನಂಬಿಬಿಡುತ್ತದೆ'' 

ಎಂದು ಕಾಣುತ್ತದೆ. ಇಲ್ಲವಾದರೆ ಪಾತಮ್ಮನನವರಿಗೆ ಆ ಸಂದೇಹ ಬರುತ್ತಲೂ 

ಇರಲಿಲ್ಲ. ಬಂದಿದ್ದರೂ ಅವರು ಅದಕ್ಕಷ್ಟು ಮಹತ್ವವನ್ನು ಕಲ್ಬಿಸುತ್ತಲೂ 

ಇರಲಿಲ್ಲ.

 

ಸಾತಮ್ಮನವರು - ಇನ್ನೂ ಏನೋ ಇದೆ ಎನ್ನುವ ಹಾಗಿದೆ " 

ಎಂದರು. 

ಭಟ್ಬರು ಹಾಗೇ ಆಕೆಯ ಮುಖವನ್ನು ನೋಡಿ " ಹೌದು, ಇದೆ. 

ನೀನು ಒತ್ತಿ ಕೇಳಬೇಡ... ಅದರಿಂದ ನಿನ್ನ ಮನಸ್ಸಿಗೆ ಕೊಂಚ ವ್ಯಸನ 

ಇಗುತ್ತದೆ. ಇದ್ದುದರಲ್ಲಿ ನಗುನಗುತ್ತಿರುವುದು ಬಿಟ್ಟು ಹಗಲು ಕನಸುಕೇಳಿ 

ಕರೆಕರೆ ಪಡಬೇಡ " ಎಂದರು. 



ಪಾತಮ್ಮನವರೂ “ಸರಿ” ಎಂದು ಒತ್ತಲಿಲ್ಲ ಆದರೆ ಒಂದುಸಲ 

ಮನಸ್ಸು ಆಯ್ಯೋ ಎಂದು ಆಗದ ನಷ್ಟವನ್ನು ಭಾವಿಸಿಕೊಂಡು ಕೊರಗಿತು. 

ಬಾರದ ದುಃಖದಿಂದ ಬಾಡಿ, ಆಡದಮಾತಿಗಾಗಿ ನೊಂದು, ಕಾರಣವಿಲ್ಲದೆ 

ಕುಗ್ಗಿತು. ಮುಖದಕಾಂತಿಯ ಏರಿಳಿತಗಳಿಂದ ಹೃದಯಾಂತರಾಳದ 

ಗುಟ್ಟಿಗೆ ಜಾತಕಬರೆದ ಭಟ್ಟರು, ತಾವೂ ಕೊಂಚ ಖೇದಪಟ್ಟುಕೊಂಡು, 

"ಏನೂ ಯಿಲ್ಲಕಣೆ ! ಹುಚ್ಚಿ!" ಎಂದು ಮಡದಿಯ ಕೆನ್ನೆಯನ್ನೊಮ್ಮೆ 

ಮುಟ್ಟಿದರು. ಪಾತಮ್ಮನವರು ಆಕ್ರಮಿಸುತ್ತಿದ್ದ ಅರಿವಿಗೆ ಸಿಕ್ಕದ, 

ಆಲೋಚನಾತರಂಗದಲ್ಲಿ ತೇಲಿಹೋಗಲು ಸಿದ್ಧವಾಗಿದ್ದ ಮ ನಸ್ಸನ್ನು 

ಹಾಗೆಯೇ ನಿರೋಧಿಸಿದರು. ತೋರಿದಹಾಗೆ ಕುಣಿದು ಕುಪ್ಪಳಿಸಿ ಅಭ್ಯಾಸ 

ವಿಲ್ಲದ ಆಕೆಯ ಮನಸ್ಸೂ ಜಾಗ್ರ ತೆಯಾಗಿಯೇ ಹಿಡಿತಕ್ಕೆ ಸಿಕ್ಕಿತು. 

ಕೂಡಲೆ ನಿಷಣ್ಣ ಭಾವವು ದೂರವಾಗಿ ಮತ್ತೆ ಸೊಬಗಿನ ಸುಗ್ಗಿಯಂತಹ  

ಎಳೆನಗುವು ಮುಖವನ್ನು ಬೆಳಗುತ್ತಿರಲು, ಅವರು " ಹಾಗಾದರೆ 

ಮುಂದಕ್ಕೇನು?” ಎಂದರು. 


ಭಟ್ಟರು "ಅದಕ್ಕೇ ನಾನೂ ಹೇಳಿದುದು. ಸುಬ್ರಹ್ಮಣ್ಯದ ಯಾತ್ರೆ 

ಯು ಹಣೆಯಲ್ಲಿ ಬರದಿದ್ದರೆ, ಆಗಬೇಕಾಗಿದ್ದರೆ ಆಗಿಹೋಗಲಿ ಎಂದುದು” 



೭ 



"ಹಾಗಾದರೆ ಹೊರಡುವುದು ಅಂತಲೇನು? " 

 

ಆಮಾತನ್ನು ಕೇಳಿ ಭಟ್ಟರು ಕೊಂಚ ಅವಾಕ್ಕಾದರು. ಮೊದಲಿನ 

ಮೂಕಭಾವವು ಮತ್ತೆ ತಲೆದೋರಿಬಿಟ್ಟತು. ಒಂದುಗಳಿಗೆ ಸುಮ್ಮನಿದ್ದು 

"ಕಣ್ಣಲ್ಲಿ ನೀರುಬಂತೋ” ಎಂದರು. 


ಆವೇಳೆಗೆ ಬಂದಿರಲಿಲ್ಲ! ಆಮಾತುಕೇಳಿ ಬಂತು. 


ಭಟ್ಟರೂ ಸುಖದ ನಿಟ್ಟುಸಿರುಬಿಟ್ಟು “ಅತಿಸರ್ವತ್ರವರ್ಜಯೇತ್‌"‌* ಎಂದು  

ಶಾಸ್ತ್ರವಾಕ್ಕು. ಪಾತು! ಗಂಡನಮೇಲಿನ ಅಭಿಮಾನ ಧರ್ಮ ಕಾಮವಾದರೂ 

ಇಷ್ಟು ಮಿತಿಮೀರಿದರೆ ಹೇಗೆ? ಇಂಥಾ ಭಾವವು ಸ್ವಾಮಿಯೊಬ್ಬನಲ್ಲಿ ಬಿಟ್ಟು 

ಅನ್ಯತ್ರ ಕೂಡಲೇಕೂಡದು'' ಎಂದರು. ಪಾತಮ್ಮನವರು * "ಸ್ವಾಮಿಯೇ 

ಎದುರಿಗೆ ಇರುವಾಗ ಏತಕ್ಕೆ ಕೂಡದು? '' ಎಂದರು. 


ಭಟ್ಟರಿಗೆ ಸಂಪೂರ್ಣವಾಗಿ ಸೋಲಾಯಿತು. ಸಭೆಯಾಗಿದ್ದರೆ, 

ತುಟಿಸಿಟಕ್ಕೆನ್ನದೆ, ಮೇಲಕ್ಕೆದ್ದು ಕಯ್ಯೆತ್ತಿ ಮುಗಿದು. ""ಜಿತೋಸ್ಮಿ? #

ಎಂದು ದೀರ್ಫದಂಡನಮಸ್ಕಾರ ಹಾಕಬೇಕಾಗಿತ್ತು, 


ಭಟ್ಟರು ಅವಾಕ್ಕಾಗಿ ಹೋದರು. ಅವರ ಉಪದೇಶವು ಪುರಾಣದ 

ಬದನೆಕಾಯಾಯಿತು. ಪತ್ನೀಪ್ರೇಮವು ಅವರ ಅಂತರಂಗದ ವಿವೇಕವನ್ನು  

ಸೂರೆಗೊಳ್ಳಲು, ಪರವಶರಾದ ಭಟ್ಟರು ಪ್ರೇಮಮಯಿಯಾದ ಕಾಂತೆಯನ್ನು 

ಬರಸೆಳೆದಪ್ಪಿಕೊಂಡರು. ಮುಖದಲ್ಲಿ ಮುಖವನ್ನಿಟ್ಟರು. ಪವಿತ್ರಪ್ರೇಮದ 

ಪಾವನಭಾವನಾತರಂಗಿಣಿಯಲ್ಲಿ, ಸಮಾನಕೃತಿಗಳಂತೆ ಬರೆದಿದ್ದ ಅವರ 

ಅಂತರಂಗಗಳು ಕೊಚ್ಚಿ ಹೋದುವು. ಅವರಿಬ್ಬರೂ ಒಬ್ಬರ ತೆಕ್ಕೆಯಲ್ಲಿ 

ಒಬ್ಬರಿದ್ದುದನ್ನು, ಆ ಮಹಾಕವಿ ಭವಭೂತಿಯು ಎಲ್ಲಿಂದಲೊ- ಬಹುಶಃ 

ಬಾಗಿಲಸಂದಿನಿಂದಲೋ ಏನೋ. ಹೇಗೋ ನೋಡಿಯೇ ಇರಬೇಕು. 

ಇಲ್ಲವಾದರೆ, ಆ "ಅದ್ವೈತಂ ಸುಖದುಃಖಯೂೋಳಿ' ಎಂಬ ಪದ್ಯವನ್ನು 

ಬರೆಯಲು ಆತನಿಂದ ಆಗುತ್ತಿರಲಿಲ್ಲ. 



..............

* ಯಾವುದೂ ಅತಿಯಾಗಿರಬಾರದು. 

# ಸೋತೆನು. 



೮ 



ಮೂರನೆಯ ಪರಿಚ್ಛೇದ. 






ಮರುದಿನದಿಂದ ಭಟ್ಟರೆ ಮನೆಯಲ್ಲಿ ಸುಬ್ರಹ್ಮಣ್ಯದ ಯಾತ್ರೆಗೆ 

ಹೊರಡುವುದಕ್ಕೆ ಬೇಕಾದ ವಸ್ತುಗಳೆಲ್ಲ ಸಿದ್ಧವಾಗುವುದಕ್ಕೆ ಆರಂಭವಾ 

ಯಿತು. ಪಾತಮ್ಮನವರಿಗೆ ಬಹಳ ಸಂಭ್ರಮ, ಆದಕ್ಕೆ ಆ ಸಂಭ್ರಮ 

ದಲ್ಲಿ ಒಂದು ಆಶೆ. ಆಶೆಯ ನಡುವೆ ಒಂದು ಸಂದೇಹ. ಆ ಸಂದೇಹಕ್ಕೆ 

ಬಲಗೊಡುವುದಕ್ಕೆ ಒಂದು ಬಿಗುಮಾನ. ಅಥವಾ ಈಗಿನನರ ಮಾತಿನಲ್ಲಿ 

ಅಭಿಮಾನ. 



ತಾವೂ ಸುಬ್ರಹ್ಮಣ್ಯಕ್ಕೆ ಹೋಗಿಬರಬೇಕೆಂಬ ಆಶೆ. ತಾವಾಗಿ 

ಬಾಯಿಬಿಟ್ಟು ಕೇಳುವುದು ಹೇಗೆ? ಕೇಳಿದುದಕ್ಕೆ ಸರಿಯಾಗಿ ಕರೆದುಕೊಂಡು 

ಹೋದರಂತೂ ಸರಿಯಾಯಿತು. ಹಾಗಿಲ್ಲದೆ, ಸರಿ ಯಾತಕ್ಕೆ ಎಂದು 

ಬಿಟ್ಟರೆ! ಎಂದು ಸಂದೇಹ, ಅವರೇ ಕರೆಯಲಿ. ಅವರಿಗೇನು ತಿಳಿಯದೆ? 

ಹೆಂಡತಿಯನ್ನು ಹಿಂಡೆಬಿಟ್ಟು, ಯಾತ್ರೆಹೋದರೆ ಬರುವುದು ಅರ್ಧಪುಣ್ಯ 

ಮಾತ್ರವೇ ಎಂದು ಅವರು ಕಾಣರೇ? ಹೆಂಡಿತಿಯಂದರೆ ಸಮ್ಮನೇನೇ? 

ತಮ್ಮಲ್ಲಿ ಅರ್ಧವೆಂದು ಅಗ್ನಿಸಾಕ್ಷಿಕವಾಗಿ ಪ್ರಮಾಣಮಾಡಿಕೊಟ್ಟಿಲ್ಲವೆ? 

ಹಾಗೆಬೇಕಾದರೆ ಅವರೇ ಹೊರಡು ಎನ್ನಲಿ ಎಂಬ ಬಿಗುಮಾನ ಹೀ 

ಆಶೆ ಸಂದೇಹ, ಬಿಗುಮಾನಗಳಲ್ಲಿ ಸಾತಮ್ಮನವರು ಯಜಮಾನರನ್ನು 

ಕೇಳಲಿಲ್ಲ. "ಕನಸೇನಾದರೂ ದಿಟವಾಗಿ ಹೋಗಿಬಿಟ್ಟರೆ ಏನುಗತಿ? 

ಆದ್ದರಿಂದ, ಏನಾದರೂ ಆಗಲಿ, 'ಕುಟುಂಬ ಮನೆಯಲ್ಲಿಯೇ ಇದ್ದುಬಿಟ್ಟರೆ 

ಕ್ಷೇಮ'' ಎಂದು ಯಜಮಾನರಿಗೆ. ಆದರೂ, ಏನೂ ಯಾರಿಗೂ ಹೇಳಲೂ 

ಲಾರದೆ ತಾವು ಮರೆತೂಬಿಡಲಾರದೆ, ಇರುವ ಯಾವುದೋ ನಗೆಚಾಟಿಕೆಯ 

ವಿಷಯವೊಂದು ಅವರ ಮನಸ್ಸಿನಲ್ಲಿ ನೆಲಸಿ, ಆ ಮನಸ್ಸು ಹಾಗೂ ಹೀಗೂ 

ಹೊಯ್ದಾಡಿ, ಹಿಂದಕ್ಕೂ ಮುಂದಕ್ಕೂ ಶತಪಥಮಾಡಿ, ಅಳೆದೂ ಸುರಿಯೂ 

ಆಯಾಸಗೊಂಡಿತ್ತು. ಅಂತೂ ಆ ಸ್ಥಿತಿಯಲ್ಲಿ ಯಾರೇ ಆಗಲಿ, ಯಾವ 

ವಿಚಾರವಾಗಿಯೇ ಆಗಲಿ, ಸ್ವಲ್ಪ ಒತ್ತಿದ್ದರೆ ಬಲಾತ್ಕಾರ ಮಾಡಿದ್ದರೆ 

ಭಟ್ಟರು ಕಾಟತಪ್ಪಿದರೆ ಸಾಕೆಂದು "ಆಗಬಹುದು'' ಎಂದುಬಿಡುತ್ತಿದರು., 

-ಎಂದರು.





ಆದರೆ ಸಾತಮ್ಮನವರು ಒತ್ತಾಯಮಾಡಲಿಲ್ಲ. ಭಟ್ಟರಿಗಂತೂ, ಸ್ವತಂತ್ರಿಸಿ 

ಕೆಲಸಮಾಡುವ, ಅಥವಾ ಕೆಲಸಮಾಡೆಂದು ಹೇಳುವ ಮನಸ್ಸೇ ಇರಲಿಲ್ಲ. 



ಗಾಡಿಯ ವಿಚಾರವು ಮಾತ್ರ ಹಾಗಾಗಲಿಲ್ಲ. ಅದಕ್ಕೆ ಒತ್ತಾಯದ 

ಮೇಲೆ ಒತ್ತಾಯವಾಗಿ ಕೊನೆಗೆ ಗಾಡಿಯು ಗೊತ್ತಾಯಿತು. ಇನ್ನೇನು 

ನಾಳೆಯದಿನ ಸಂಜೆಗೆ ಹೊರಡುವುದು ಎನ್ನುವಾಗ, ಆದಿನ ಮಧ್ಯಾನ್ನ 

ಸತೀಪತಿಗಳು ಮಾತನಾಡುತ್ತ ಇದ್ದಾಗ ಪಾತಮ್ಮನವರು "ನೀವು ಹೇಳಿದ್ದ 

ಹಾಗೆ ಮಾಡಬೇಡಿ; ಎಲ್ಲಾದರೂ ಗಾಡಿಯಿಳಿದು ಹಿಂದಕ್ಕೆ ಕಳುಹಿಸಿಬಿಟ್ಟು 

ನೀವು ಮುಂದಕ್ಕೆ ನಡೆದುಕೊಂಡು ಹೊರಟುಬಿಟ್ವೀರಿ” ಎಂದರು. 



ಭಟ್ಟರೂ ಆಕೆಯ ಮುಖವನ್ನು ನೋಡಿ, ನಕ್ಕು ಕೇಳಿದರು. 

“ಯಾತ್ರೆ ಹೋಗುವುದು ತನಗೋಸ್ಕರವೋ, ಇನ್ನೊಬ್ಬರಿಗೋಸ್ಕರವೋ?' 



"ತನಗೋಸ್ಟರ'' 


"ಹಾಗಾದರೆ, ಆದಷ್ಟು ಗೋಪ್ಯವಾಗಿ ಹೋಗಿ ಬರಬೇಕು. ಇಲ್ಲದೆ 

ಆಡಂಬರವಾಗಿ ನಾನು ಹೊರಟರೆ, ಆ ಪ್ರಾಂತ್ಯ ಇರುವ ಶಿಷ್ಯರು 

ಬೇಕಾದಷ್ಟು ಉತ್ಸವ ಮಾಡಿಬಿಡುತ್ತಾರೆ. ಯಾತ್ರೆ ಗೀತ್ರೆ ಎಲ್ಲ ಹೋಗಿ 

"ರಾಜಕನ್ಯಾವಿವಾಹೇನ'' ಎಂಬಂತೆ ಆಗಿಹೋಗುತ್ತದೆ. ಇನ್ನೂ ಒಂದು. 

ಹಾಗೆ ಆಡಂಬರವಾಗಿ ಹೋಗಬೇಕು ಎನ್ನುವಹಾಗಿದರೆ, ಅರಮನೆಯಲ್ಲಿ 

ಕೇಳಿಕೊಂಡಿದ್ದರೆ "ಮೇನಾ'' ಬರುತ್ತಿರಲಿಲ್ಲವೆ " 



ನಾನು ನೀವು ಅರಮನೆಯಲ್ಲಿ ಕೇಳುತ್ತೀರಿ, ಮೇನಾ ಬರುತ್ತದೆ. 

ದಾರಿಯಲ್ಲಿ ಬೋಯಿಗಳು, ಆಳು, ಕಾಳು ಎಲ್ಲರಿಗೂ ಬೇಕಾಗುತ್ತದೆ ಎಂದೇ 

ಪರ್ವತದಹಾಗೆ ಇದೆಲ್ಲ ಮಾಡಿಸಿರುವುದು.? 



"ನಾನೂ ಗುಣೆಸುತ್ತಿದ್ದೆ. ಇದೇನು. ಇವಳು ಎಂಟುದಿನದಿಂದ 

ಮದುವೆಗೆ ಮಾಡಿದಹಾಗೆ ಸಿದ್ದಮಾಡುತ್ತಿದ್ದಾಳಲ್ಲ ! ಎಂದು ಯೋಚಿಸು 

ತ್ತಿದೆ ಈಗ ಅರ್ಥವಾಯಿತು.” 



ಹಾಗಾದರೆ "ಮೇನಾ'' ಬರುತ್ತದೆಯೇನು ?'' 



೧೦ 



"ಹಾಗೆ ಬೇಕು ಎನ್ನುವಹಾಗಿದ್ದರೆ ಈವೇಳೆಗಾಗಲೇ, ಬರೆದುಕೊಳ್ಳ 

ಕಾಗಿತ್ತು. ಈಗ ಸಾಧ್ಯವಿಲ್ಲ. 



ಪಾತಮ್ಮನವರ ಅಶೆಯು ಸಮೂಲನಾಗಿ ಭಿನ್ನವಾಗಿಹೋಯಿತು. 

ಇನ್ನೂ ಏನೋ ಹೇಳಬೇಕೆಂದಿದ್ದವರು, ಸುಮ್ಮನಾಗಿ ನಿಟ್ಟುಸಿರು ಬಿಟ್ಟರು. 

ಒಂದುಘಳಿಗೆ ಹಾಗೆ ವಿಮುಖವಾಗಿವು ಮತ್ತೆ "ಹಾಗಾದರೆ ಹೊರಡುವು 

ದಕ್ಕೆ ಏನು ಕಟ್ಟಿಲಿ?'' ಎಂದರು. 


"ತಿಳಿದೇ ಇದೆ. ಧಾವಳಿಯ ಸಣ್ಣ ಹೆಸಿಬೆಯ ಚೀಲದಲ್ಲಿ, ಒಂದು 

ಎರಡುಸೇರು ಅವಲಕ್ಕಿ, ಒಂದು ಸೇರಿನಷ್ಟು ಹುರಿಹಿಟ್ಟು, ಕಟ್ಟಿಬಿಡು. ಆ 

ಹುರಿಹಿಟ್ಟಿನೆ ಚೀಲದಲ್ಲಿ, ಒಂದು ನೂರು ರೂಪಾಯಿನ ನೋಟು, ಐದು 

ರೂಪಾಯಿನದು ಎರಡು ನೋಟು; ಎರಡು ರೂಪಾಯಿನ ಚೆಲ್ಲರೆ ಇಷ್ಟು 

ಒಂದು ಕಾಗದದ ಚೇಲದಲ್ಲಿ ಹಾಕಿಡು. ಮರತೆ - ಚಿಲರೆ ಈಚೆ ಇರಲಿ. 

ಪಂಚೆಕೊನೆಗೆ ಗಂಟುಹಾಕಿದರಾಯಿತು.. ಒಂದು ಚೊಂಬು, ಒಂದು 

ತಾಮ್ರದ ಕೊಳೆಗ-ಉದ್ದರಣೆಯೂ ಬೇಡ? 


ಪಾತಮ್ಮನವರಿಗೆ ರೇಗಿಹೋಯಿತು. "ಬಿಡಿ ಸನ್ಯಾಸಿಗಳ ಹಾಗೆ  

ಒಂದು ದಂಡ ಒಂದು ಕಮಂಡಲು ತೆಗೆದುಕೊಂಡು ಹೊರಟುಬಿಡಿ, ಸುಖ."   


"ಸನ್ಯಾಸವೆಂದರಿ ಬಿಟ್ಟಿಯಲ್ಲ ಅದು ಧರ್ಮಿಷ್ಟರ ಕರ್ಮಸಾಮ್ರಾ  

ಜ್ಯದ ಪರಮಾವಧಿ.'? ತಣ್ಣಗೆ ಆಡಿದ ಭಟ್ಟರ ಮಾತು ಪಾತಮ್ಮನವರ 

ಕೋಪವನ್ನೆಲ್ಲ ನುಂಗಿಬಿಟ್ಟತು. 

 

ಹಾಗೂ ಹೀಗೂ ಎಳೆದಾಟನಾಗಿ, ಭಟ್ಟರು, ಗಾಡಿಯಲ್ಲಿಯೇ ಹೊಗ 

ಬೇಕೆಂದೂ, ಬೇಡವೆಂದು ತೋರಿದಾಗ, ಗಾಡಿಬಿಟ್ಟು ನಡೆದುಕೊಂಡು 

ಹೋಗುವ ಸ್ವಾತಂತ್ರ್ಯವು ಭಟ್ಟರಿಗೆ, ಇರಬೇಕೆಂದೂ ಗೊತ್ತಾಯಿತು. 

ಪಾತಮ್ಮನವರೂ ಒಂದು ನಿಯಮವನ್ನು; ಒಪ್ಪಿಕೊಂಡರು. ಭಟ್ಟರು 

ಹೊರಟರೆಂದು ಒಂದು ವಾರದವರೆಗೂ ಯಾರಿಗೂ ಹೆೇಳಳಕೂಡದು. ತಾವು 

ಯಾತ್ರೆಗೆ ಹೋಗಿಬರಲು ಅಪ್ಪಣೆಯಾಗಬೇಕೆಂದು ಅರಮನೆಗೆ ಬರೆದು 

ಕೊಂಡಿದ ಮನನಿಯು ಅವರ ನೆನಸಿನಲ್ಲಿರಲಿಲ್ಲ. 

--------





೧೧ 



ನಾಲ್ಕನೆಯೆ ಪರಿಚ್ಛೇದ. 

 



ಮೈಸೂರುಬಿಟ್ಟು ನಾಲ್ಕುದಿನವಾಗಿದೆ. ಭಟ್ಟರು ಹಿಂದಿನ ದಿನವೇ 

ಗಾಡಿ ಕಳುಹಿಸಿಬಿಟ್ಟಿರು. ರಾಮನಾಥಪುರದಲ್ಲಿ ಯಾರೋ ಗುರುತು ಕಂಡ 

ವರು ಬಂದು ಉಪಚಾರ ಮಾಡಿದರಂತೆ. ಇನ್ನು ಮುಂದಕ್ಕೆ ಹೀಗೇ ಆಗಿ 

ಹೋದೀತೆಂದು ಭಟ್ಟರು ಗಾಡಿಯವನನ್ನು “ಹಿಂದಕ್ಕೆ ಹೋಗು” ಎಂದ 

ಬಿಟ್ಟರು. ಇಂದು ಭಟ್ಟರು ಪಾದಚಾರಿಗಳು. ಅವರ ಹತ್ತಿರವಿರುವ 

ಸರಸ್ವತೀ ರೂಪಿಣೀ ಲಕ್ಷ್ಮಿಯನ್ನು ಬಿಟ್ಟರೆ, ಮಿಕ್ಕ ಬಟ್ಟೆ ಬರೆ, ಆ ದಪ್ಪ 

ಗಂಟು ಎಲ್ಲವೂ ಸೇರಿದರೂ ಸುಮಾರು ಹತ್ತು ರೂಪಾಯಿ ಆದೀತೋ 

ಇಲ್ಲವೇ ಇಲ್ಲವೋ? 



ತಲೆಗೊಂದು ಸ್ನಾನದ ಪಂಚೆ ಸುತ್ತಿದ್ದಾರೆ. ನಡುವಿಗೊಂದು ಚೌಕ 

ಬಿಗಿದಿದ್ದಾರೆ.  ಉಟ್ಟರುವುದೊಂದು ಪಂಚೆ, ಹೊದ್ದಿರುವುದು ಧಾವಳಿ. 

ಅದರೊಳಗೆ ಆರುಮೊಳದ ಪಂಚೆ ಒಂದು.  ಬೆನ್ನಿನಮೇಲೆ 

ಚೀಲದ ಗಂಟು. ಭಟ್ಟರು ನಡುದುದೇ ನಡುದುದು.  ನಡೆದು ಅಭ್ಯಾಸವಿಲ್ಲದ  

ಭಟ್ಟರಿಗೆ ಒಮ್ಮೊಮ್ಮೆ ದಾರಿಯು ಸವೆಯುವುದೋ ಇಲ್ಲವೋ ಎನಿಸುತ್ತದೆ. 

ಮತ್ತೆ "ದಾರಿಯು ಸಮೆಯುವುದಿಲ್ಲವೆಂದರೆ”ನು? ಇದೊಂದು ಭ್ರಾಂತಿ. 

ಹೆಜ್ಜೆಹಜ್ಜೆಗೂ ಸ್ವಾಮಿಯ ಸಾನ್ನಿಧ್ಯವು ಸಮೀಪವಾಗುತ್ತಿದೆ'' ಎಂದು 

ಕೊಂಡು ಮುಂದೆ ನುಗ್ಗುವರು. ಆದರೂ ಸೋತ ಕೈಕಾಲುಗಳು ಅವರ 

ಮನಸ್ಸಿನ ಆಶೆಯಂತೆ ಮುಂದರಿಯಲಾರದೆ, ಹಿಂದೆ ಬೀಳುವುವು. ಭಟ್ಟರು 

"ಜಡದೇಹ! ನಾವು ಹೇಳಿದಹಾಗೆ ಎಲ್ಲಿ ಕೇಳುತ್ತದೆ? ಏನೋ ಅವಳ 

ಮಾತು ಕೇಳಿ, ಗಾಡಿಯಲ್ಲಿಯೇ ಹೋಗಿದ್ದರೆ ಚೆನ್ನಾಗಿತ್ತು. ಎಂದುಕೊಂಡು 

ನಿಧಾನವಾಗಿಯೇ ಹೋಗುವರು. 



ಹೀಗೆ ಕಾಲೆಳೆದುಕೊಂಡುಹಾಕುತ್ತ ಭಟ್ಟರು ದಿನಕ್ಕೆ ಮೂರುನಾಲ್ಕು 

ಗಾವುದದಂತೆ ನಡೆದರು. ಅಂತೂ ಹೆಜ್ಜೆಹೆಜ್ಜೆಗೂ ಮುಂದಕ್ಕೆ ಹೋಗು 



೧೨ 



ತ್ತಿದ್ದೇನೆಂಬ ನಂಬಿಕೆ. ದೇವರು ದರ್ಶನಕ್ಕೆ ಬಾರೆಂದು ಆಜ್ಞಾಪಿಸಿರುವನೆಂಬ 

ಗೌರವ. ಅಂತೂ ದಾರಿಯು ನಿನಾನನಾಗಿಯಾದರೂ ಸಾಗುತ್ತಿದೆ. 



ಹೀಗೆ ಇನ್ನೂ ಎರಡುದಿನವಾಗಿದೆ. ನಾಳೆಯದಿನ ಅಮಾವಾಸ್ಯೆ. 

ಎಲ್ಲಾದರೂ ನದೀತೀರ ನೋಡಿ ಅಲ್ಲಿದ್ದು ತರ್ಪಣ ಮುಂತಾದುದು ಮಾಡಿ 

ಕೊಂಡು ಮುಂದಕ್ಕೆ ಹೋಗುವುದು ಎಂದುಕೊಂಡರು. ಅವರು ಅದುವರೆಗೂ 

ಅಮಾನಾಸ್ಯೆಯದಿನ ನಿತ್ಯಶ್ರಾದ್ಧವನ್ನು ಮಾಡದೆ ಇದ್ದ ದಿನವಿಲ್ಲ. ಆದರೆ 

ಆ ಕಾಡಿನಲ್ಲಿ ಕುಳಿತು ಶ್ರಾದ್ಧವನ್ನು ಮಾಡುವುದು ಹೇಗೆ? ಹೋಗಲಿ, 

ಈಸಲಕ್ಕೆ ತರ್ಪಣದಲ್ಲಿಯೇ ತೃಪ್ತಿಪಟ್ಟುಕೊಳ್ಳುವುದು ಎಂದುಕೊಂಡರೂ, 

ಅಭ್ಯಾಸವಾಗಿದ್ದ, ರೂಢಮೂಲವಾಗಿದ್ದ ಪದ್ಧತಿಯನ್ನು ಬಿಡುವುದೆಂದು, 

ಬಿಡಲೇಬೀಕೆಂದು, ಬಿಡದಿದ್ದರೆ ಯತ್ನ ವಿಲ್ಲವೆಂದು ನಂಬಿಕೆಯಾದಾಗ 

ಉಂಟಾದ ಒಂದು ವಿಧವಾದ ಕಳವಳವು, ಸಂತಾಪವು, ಎದೆನೋವು, 

ಅವರ ಒಳಬಗೆಯನ್ನು ಕೊರೆಯುತ್ತಿತ್ತು. ಪದಾರ್ಥವು ನಷ್ಟವಾಗಿದೆ 

ಯೆಂದು ನಂಬಿಕೆಯು ಹುಟ್ಟಿದ್ದರೂ, ನಷ್ಟವಾಯಿತೆಂಬ ಸಂಕಟವು ಹೋಗ 

ದಿರುವಂತೆ, ನಾಳೆಯ ಶ್ರಾದ್ಧವಿಲ್ಲದೆ ಹೋಯಿತೆಂಬ ಸಂಕಟವು ಭಟ್ಟರಿಗೆ 

ಬಹಳ ಕಷ್ಟವನ್ನು ಕೊಟ್ಟತು. "ಹೋಗಲಿ ನಾಳೆ ಉಪವಾಸ ಮಾಡು 

ವುದು-ಸುಬ್ರಹ್ಮಣ್ಯಕ್ಕೆ ಹೋದ ದಿವಸವೇ ಪ್ರಾಯಶ್ಚಿತ್ತ ಮಾಡಿಕೊಂಡು 

ಮೊದಲು ಪರ್ವಶ್ರಾದ್ಧ ಮುಗಿಸಿ, ಆಮೇಲೆ, ತೀರ್ಥಶ್ರಾದ್ಧ ಮಾಡುವುದು. 

ಇದೇನೂ ಅಶಾಸ್ತ್ರೀಯವಲ್ಲ'' ಎಂದು ಮುಂತಾಗಿ, ಎಷ್ಟು ಸಮಾಧಾನ 

ಹೇಳಿದರೂ, ಸಾಂಪ್ರದಾಯಶರಣವಾದ ಮನಸ್ಸು ಒಪ್ಪಲೊಲ್ಲದು. ಅದರ 

ಹಾರಾಟವೇ ಹಾರಾಟವಾಗಿ, ಅದನ್ನು ಹದ್ದಿನಲ್ಲಿಟ್ಟು ಕೊಳ್ಳುವುದು, ಹುಚ್ಚು 

ಕುದುರೆಯನ್ನು ಆಳುವುದಕ್ಕಿಂತ ಕಠಿಣವಾಯಿತು. 



ಹೀಗೆ ಒಳಗಿನ ನಾಟಕವನ್ನು ನೋಡುತ್ತಿದ್ದ ಭಟ್ಟರ ಕೈಕಾಲುಗಳು 

ಇದೇ ಸಮಯವೆಂದು ನಡಗೆಯನ್ನು ನಿಧಾನಮಾಡಿಬಿಟ್ಟವು. ನಡೆಯು 

ತ್ತಿದ್ದುದುಂಟು; ಆದರೆ ದಾರಿಯು ಮಾತ್ರ ಸಮೆಯಲಿಲ್ಲ. ಇಷ್ಟವಿಲ್ಲದವರಿಂದ 

ಕೆಲಸಮಾಡಿಸಿಕೊಂಡಹಾಗೆ-ಸಂಜೆಯೇನೊ ಆಯಿತು. ಆರಾತ್ರಿ ತಂಗ 

ಬೇಕೆಂದಿದ್ದ ಊರುಮಾತ್ರ ಇನ್ನೂ ಸಿಕ್ಕಲಿಲ್ಲ. ಸೂರ್ಯಾಸ್ತಮಯ 



೧೩. 



ವಾಗುತ್ತ ಬಂದಿದೆ. ಹಾದಿಯ ಎರಡು ಪಕ್ಕದಲ್ಲಿಯೂ ದಟ್ಟವಾಗಿ, ದಿಟ್ಟ 

ವಾಗಿ, ಪುಟ್ಟವಾಗಿ, ಎತ್ತರವಾಗಿ ಬೆಳದಿರುವ ಮರಗಳ ನೆರಳು ವನಸ್ಥಲಿಯು 

ಚಳಿಯೆಂದು ಹೊದೆದುಕೊಂಡ ಮುಸುಕಿನಂತಿದೆ. ಅಲ್ಲಲ್ಲಿ ಆ ಎತ್ತರವಾದ 

ಗಿಡಗಳ ತಲೆಯಲ್ಲಿ ಒಂದೊಂದಿಡೆಯಲ್ಲಿ ಮಾತ್ರ ಹೊಂಬಣ್ಣದ ಬೆಳಕು 

ಹಕ್ಕಿಪಕ್ಕಿಗಳ ಗಜಿಬಿಜಿಯು ಹೆಚ್ಚಾಗಿದೆ. ಸಂಜೆಗಾಳಿಯು ಮರಗಳನ್ನು 

ಸಣ್ಣಗೆ ಅಲುಗಿಸಿ, ಸುಯ್‌ ಎಂದು ಸಿಳ್ಳುಹಾಕಿಕೊಂಡು, ಶೃಂಗಾರಶೇಖರ 

ನಾದ ತರುಣವಿಟನಂತೆ ಸಂಭ್ರಮವಾಗಿ ತಿರುಗುತ್ತಿದೆ. 



ನಿಷ್ಟರು ಸಾಯಂಸಂಧ್ಯಗೆಂದು ಕೈಕಾಲು ತೊಳೆದುಕೊಳ್ಳುವ ಕಾಲು. 

ಗಂಡನಮೇಲೆ ಸಿಟ್ಟಾಗಿದ್ದರೂ, ಮನೆಯ ಕೆಲಸವನ್ನು ಮಾತ್ರ ನೇರವಾಗಿ, 

ಕಾಲಕ್ಕೆ ಸರಿಯಾಗಿ ಮಾಡಿಕೊಂಡು ಹೋಗುವ ಮಧ್ಯವಯಸ್ಸಿನ ಮಡದಿ 

ಯಂತೆ. ಅವರ ಮನಸ್ಸು, ತನ್ನ ಸುಖದುಃಖಗಳನ್ನೆಲ್ಲ ಒತ್ತಟ್ಟಿಗಿಟ್ಟು, 

ಅವರನ್ನು ಸಂಧ್ಯಾಸಮಯವೆಂದು ಎಚ್ಚರಿಸಿತು. ಭಟ್ಟರ ಕಣ್ಣು ಒಳ  

ಮುಖವಾಗಿ ವಿಚಾರತರಂಗಿಣಿಯಲ್ಲಿ ಮಗ್ನವಾಗಿದ್ದುದು, ತಟ್ಟನೆ ತಿರುಗಿ, 

ಹೊರಮೊಗವಾಗಿ, "ಹೌದು! ಹೌದು! ಸಂಧ್ಯೆಯ ಸಮಯ" ವೆಂದಿತು. 

ಕೂಡಲೇ ಅನವಧಾನನಾಗಿದ್ದ ದೇಹದ ಅಂಗಾಂಗಗಳೆಲ್ಲವೂ ಜಾಗ್ರತ 

ವಾದುವು. ಕೊಂಚಹೊತ್ತಿನೊಳಗಾಗಿ ದಾರಿಯ ಮಗ್ಗುಲಲ್ಲಿದ್ದ ಒಂದು 

ಕೊಳವನ್ನು ಸೇರಿ, ಭಟ್ಟರು ಕೈಕಾಲು ತೊಳೆದುಕೊಂಡು. ಶುದ್ಧಾಚಮನ 

ಮಾಡುತ್ತಿದ್ದರು. 



ಐದನೆಯ ಪರಿಚ್ಛೇದ.


ಏನೂ ವಿಘ್ನವಿಲ್ಲದೆ, ಭಟ್ಟರೆ ಸಂಧ್ಯಾವಂದನೆಯು ನೆರವೇರಿತು, 

" ಇಂದ್ರಾಕ್ಷಿ, ಶಿವಕವಚ ಪಾರಾಯಣಮಾಡಿಬಿಟ್ಟೇ ಹೋಗೋಣ, 

ಹೇಗಾದರೂ ಹೊತ್ತಾಯಿತ್ತು” ಎಂದು ಭಟ್ಟರು ಕುಳಿತುಬಿಟ್ಟರು. ಶಿವ 

ಕವಚವು ಮುಗಿಯಿತು. ಇಂದ್ರಾಕ್ಷಿಯು ಮುಗಿಯುತ್ತ ಬಂದಿದೆ. ಆ  



೧೬ 



ನಾನು ಸುಳ್ಳು ಹೇಳಬಿಟ್ಟೆನಲ್ಲ! ಪರಮೇಶ್ವರ! ಈ ನೂರು ರೂಪಾಯಿ 

ಹೋಗಿದ್ದಕ್ಕೆ, ನನ್ನ ಅದೃಷ್ಟವೆಲ್ಲ ಹೋಗುತ್ತಿತ್ತೆ? ನೀನೇಕೆ ನನ್ನ ಬಾಯಲ್ಲಿ 

ಹೀಗಾಡಿಸಿಬಿಟ್ಟಿ! ಈ ಮೊಂಕು ನನಗೇಕೆ ಇಷ್ಟು ಕವಿದುಕೊಂಡಿತು. 

ಈ ಎಂಟು ದಿನದಿಂದಲೂ ನಿನ್ನ ಪೂಜೆಯಿಲ್ಲದುದರ ಫಲವೋ ಇದು? 

ನಾನು ಬ್ರಾಹ್ಮಣನಾಗಿ ಸುಳ್ಳು ಹೇಳಿದೆನಲ್ಲ ! ಎಂದು ಪಶ್ಚಾತ್ತಾಪದಿಂದ 

ಭಟ್ಟರು ಕುದಿದರು. ಅಸತ್ಯವನ್ನಾಡಿದುದು ಮಹತ್‌ ಪಾಪವೆಂಬ ಭಾವವು 

ಅವರ ಬಗೆಯನ್ನು ಕೊರೆದುಬಿಟ್ಟಿತು ಒಮ್ಮೊಮ್ಮೆ " ಅದು ಭೀತನಾಗಿ  

ಪ್ರಜ್ಞೆಯಿಲ್ಲದೆ ಹೋಗಿ ಹೇಳಿದುದು ಅಲ್ಲದೆ, ಆ ಕಳ್ಳನೊಡನೆ ಸತ್ಯವಾಡುವು 

ದೆಂದರೇನು? "" ಶಠಂಪ್ರತಿಶಾಠ್ಯಂ'' ತಲೆ ಹೊಡೆದು ತಿನ್ನುವನೊಡನೆ 

ದಿಟನಾಡುವುದೇ?'' ಎಂದು ಬಗೆಯೊಂದುಬಗೆಯ ಸಮಾಧಾನವನ್ನು 

ತಂದೊಡ್ಡುವುದು ಆದರೆ ಧರ್ಮದ ತಿರುಳನ್ನರಿತ ಭಟ್ಟರ ಅಂತರಂಗವು 

ಅದನ್ನು ಒಪ್ಪದು. ಅವನು ಕಳ್ಳನಾಗಲಿ, ಸುಳ್ಳನಾಗಲಿ, ತಲೆಹೊಡೆಯುವವ 

ನಾಗಲಿ, ಅದು ಅವನ  ಪ್ರಾರಬ್ಧ ! ಅವನ ಹಣೆಯ ಬರಹ! ಅದನ್ನು 

ಕಟ್ಟಿಕೊಂಡು ನನಗೇನು? ಅವನು ಕಳ್ಳನೆಂದು ನಾನು ಸುಳ್ಳಾಡಿ, 

ಪಾಪವನ್ನು ಕಟ್ಟಿಕೊಳ್ಳುವುದೇ? ಅಸತ್ಯವನ್ನಾಡುವುದು ದುರ್ಗತಿಗೆ ದಾರಿ 

ಯೆಂದು, ಸುಳ್ಳು ಸದ್ಗತಿಗೆ ಬಾಧಕವೆಂದು ಹಾಳುಮನವರಿಯದೆ 

ಸಮಯದಲ್ಲೇಕೆ ಮೋಸ ಹೋಯಿತು? ನನ್ನ ಧರ್ಮವನ್ನು ನಾನು ಅನು 

ರಿಸದೆ, ನನ್ನ ಹಾದಿಯನ್ನು ಹಿಡಿದು ನಾನು ಹೋಗದೆ, ಈ ಸಣ್ಣ 

ದಾರಿಗೇಕೆ ಇಳಿದೆದ? ಮಹಾದೇವ! ಈ ನಾಯಿಯನ್ನು ಈ ಪಾಸಕೂಪಕ್ಕೆ 

ತಳ್ಳಬೇಕೆಂದುಕೊಂಡಿದ್ದೆಯಾ? ಅಥವಾ ಇಂತಹ ಸಂದರ್ಭವೊಂದನ್ನು 

ತಂದೊಡ್ಡಿ ನನ್ನನ್ನು ಪರೀಕ್ಷಿಸಬೇಕೆಂದಿದ್ದೆಯಾ? ಪರಮೇಶ್ವರ ! 

"ಮಮ ಮಾಯಾ ದುರತ್ಯಯಾ " ಎಂದು ಕಂಕೋಕ್ತ ವಾಗಿ ಹೇಳಿದ 

ನೀನೇ, ಹೀಗೆ ನನ್ನಂತಹ ಪಾಮರರನ್ನು ಪರೀಕ್ಷಿಸುವುದೇ? ನಿನ್ನ ಪರೀಕ್ಷೆ 

ಯಲ್ಲಿ ಗೆಲ್ಲುವಷ್ಟು ತ್ರಾ ಣವಿದೆಯೇ ಈ ಕುನ್ನಿಗೇ ಇನ್ನಾದರೂ ಮನಸ್ಸು 

ಮಾಡು, ಆ ಅವನನ್ನು ಮತ್ತೆ ಇಲ್ಲಿಗೆ ಕರೆದುಕೊಂಡುಬಂದು, ಈ ಹಣ  

ವನ್ನು ಅವನಿಗೆ ಕೊಡಿಸಿಬಿಡು. ಹಾಗಾದರೂ ನನ್ನ ತಪ್ಪನ್ನು ಸರಿಮಾಡು. 

ನನ್ನ ಅಪರಾಧಕ್ಕೆ ತಕ್ಕ ಪ್ರಾಯಶ್ಚಿ ತ್ತವಾಗಲಿ, " ಎಂದು ಗೋಳುಗುಟ್ಟಿ



೧೭ 



ಕೊಂಡರು. ಕಣ್ಣುನೀರು ಕಾರಿಕಾರಿ, ಕೆಂಪುಹಿಡಿದಿತ್ತು. ಮೂಗೂ, 

ಭಟ್ಟರ ಮನೋವೃಕ್ತಿಯಂತೆ, ಕಲುಸಿತವೂ ಜಡವೂ, ಆಗಿತ್ತು. ಚೌಕ 

ನೆಲ್ಲವೂ ಕಣ್ಣೂ ಮೂಗೂ ವರೆಸಿವರೆಸಿ ಒದ್ದೆಯಾಗಿತ್ತು. 



ಮತ್ತೆ ಯೋಚನೆಬಂತು. " ಅವನನ್ನು ಕಾಣುವುದೆಲ್ಲಿ?” 

ತಿರುಗಿಯೂ ಅದೇ ಮಾತು. ತರ್ಕವನ್ನು ತಿಕ್ಕಿಮುಕ್ಕುವ ಅಳತೆಗೆ ಸಿಕ್ಕದ, 

ನಂಬಿಕೆಯ ಮಾತು. " ಅವನನೇ ಕರೆತರುತ್ತಾನೆ. ಸ್ಪಾಮಿಯು ಪರೀಕ್ಷಿಸಿದ. 

ನಾನು ಸೋತುಹೋದೆ. ನಾನೂ ಸೋತೆನೆಂದು ಒಪ್ಪಿಕೊಂಡೆ ಇನ್ನು 

ಸ್ವಾಮಿಯೇ ಪರಶಿವನೇ ಅವನನ್ನು ಕರೆದುಕೊಂಡು ಬಂದು ನನ್ನ ಸಾಲವನ್ನು 

ತೀರಿಸುತ್ತಾನೆ'' ಎಂದು ಅಲ್ಲಿಯೇ ಕುಳಿತುಬಿಟ್ಟರು. ಆದುದಾಗಲಿ ಅವನು 

ಬರುವವರೆಗೂ ಅಲ್ಲಿಂದ ಕದಲುದಿಲ್ಲವೆಂದು ಕುಳಿತುಬಿಟ್ಟರು. ಚಿಂತೆಯು 

ಅವರ ಅಂತರಂಗವನ್ನು ಹಿದಿದು ಮೂಟೆಕಟ್ಟಿ, ಹಿಂಡಿ, ಹಿಪ್ಪೆ ಮಾಡಿ, ತನ್ನ 

ಉಡಿಯೊಳಗೆ ಸಿಕ್ಕಿಸಿಕೊಂಡು ಬಿಟ್ಟನು; ಅವರಿಗೆ, ಎದುರಿಗೆ ನೀತಿರುವ 

ಭೀಕರಾಕಾರಿಯೊಬ್ಬನು- ಅವನೆದುರಿಗೆ ಸುಳ್ಳುಹೇಳಿ ಭ್ರಷ್ಟನಾದೆನೆಂದು 

ನಂಬಿ ಗೋಳುಗುಟ್ಟುತ್ತಿರುವನೊಬ್ಬನು. ಈ ಇಬ್ಬರ ವ್ಯಕ್ತಾವ್ಯಕ್ತ 

ವಾದ, ಸ್ಫುಟಾಸ್ಫುಟವಾದ  ಛಾಯಾತೃಗಳು  ಅದನ್ನು ನೋಡಿ, ಅಳುವ 

ಸಂತಾಪದ ಸುಡುನಿಟ್ಟಸಿರುಗರೆವ ಕ್ಷತವಿಕ್ಷತವಾದ ಅಂತರಂಗ, ಇದು 

ಬಿಟ್ಟು ಇನ್ನೇನೂ ಕಾಣಿಸುತ್ತಿರಲಿಲ್ಲ 



ಆರನೆಯ ಪರಿಚ್ಛೇದ


ಮರುದಿನನ ಸಾಯಂಕಾಲವಾಯಿತು. ಭಟ್ಟರು ಇನ್ನೂ ಕೊಳದ 

ದಡದ ಮಂಟಪದಲ್ಲಿಯೇ ಇದ್ದರು. ಆ ದುಃಖದ ತೀವ್ರತೆಯು ಬರುಬರುತ್ತ 

ಕಡಿಮೆಯಾಗುತ್ತ ಬಂದಹಾಗೆಲ್ಲ, ಭಟ್ಟರ ಮನಸ್ಸು ಜಿತವಾಗುತ್ತ ಬಂದು 

"ಆದುದಾಗಲಿ, ಇನ್ನು ಎಂಟುದಿನವೇ ಏಕಾಗಲೊಲ್ಲದು ? ತಿರುಗಿ ಅವನು 



೧೮



ಬಂದು ಈ ಹಣವನ್ನು ಒಪ್ಪಿಸಿಕೊಂಡು ಹೋಗುವವರೆಗೂ ಇಲ್ಲಿಯೇ ಇದ್ದು 

ಬಿಡುವುದು” ಎಂಬ ನಿರ್ಧರಕ್ಕೆ ಬಂದುಬಿಟ್ಟಿತ್ತು. 



ಸಂಜೆಯಾಯಿತು. ಭಟ್ಟರ ಸಂಧ್ಯಾಪಾರಾಯಣಾದಿಗಳು 

ಮುಗಿದುವು. ಅವರಿಗೆ ಬೇರೆ ಯೋಚನೆಯೇ ಇಲ್ಲ. "ಅವರು ಬರಲಿಲ್ಲವಲ್ಲ' 

ಎಂಬುದೊಂದೇ ಯೋಚನೆ. ಮನಸ್ಸು ಅವರನ್ನು ಕುರಿತು ಯೋಚಿಸಿ 

ಯೋಚಿಸಿ, ತಾನರಿತಿದ್ದ ಗುರುತುಗಳನ್ನೆಲ್ಲ ಚಿಂತಿಸಿ ಚಿಂತಿಸಿ, ಆವೃತ್ತಿ 

ಹಾಕಿ, ಗಟ್ಟಿಮಾಡಿಕೊಂಡಿತ್ತು. ಒಂದುವೇಳೆ ಕಣ್ಣು ತಟ್ಟನೆ ಗುರ್ತಿಸದೆ 

ಹೋದರೂ ಕಿವಿಯಾದರೂ ಗುರ್ತಿಸುವುದರಲ್ಲಿ ಏನೂ ಸಂದೇಹವಿರಲಿಲ್ಲ. 

ಭಟ್ಟರು ಕಾದಿದ್ದಾರೆ ಬಂದಾರೇ? ಬಂದಾರೇ ಎಂದು ಕಾದಿದ್ದಾರೆ. 

ಅಷ್ಟು ಹೊತ್ತಾಯಿತು ಇಲ್ಲ. ಇಷ್ಟು ಹೊತ್ತಾಯಿತು ಇಲ್ಲ. ಕೊನೆಗೆ 

ಕಾದು ಕಾದು ವ್ಯರ್ಥವಾಗಿ ಹೋಗುವುದೇನೊ? ಈವೊತ್ತು ಬರುವರೋ 

ಇಲ್ಲವೋ ಎಂಬ ಸಂದೇಹವು ಹುಟ್ಟುವಷ್ಟು ಹೊತ್ತಾಯಿತು. ಕ್ರಮೇಣ 

ಸಂದೇಹವೇ ಖಂಡಿತವಾಗಿ ನಿರಾಶೆಯಾಗುವಷ್ಟು ಹೊತ್ತಾಯಿತು. 



ಆವೇಳೆಗೆ ಕಾಲುಸಪ್ಪಳವು ಕೇಳಿಸಿದಹಾಗಾಯಿತು. ಮಾತಿನಸದ್ದೂ 

ಕೇಳಿದಹಾಗಾಗಿ, ಭಟ್ಟರ ಕಿವಿಗಳು ಆಲೈಸಿದವು. ಹೌದು, ಯಾರೋ 

ಬರುವಂತಿದೆ? ಅವರೆ! ಆಗಿದ್ದರೆ?- ಭಟ್ಟರ ಹೃದಯವು ಒಮ್ಮೆ ಸಂತೋಷ 

ದಿಂದ ನೆಗೆಯಿತು. ಮಾಡಿದ ತಪ್ಪನ್ನು ತಿದ್ದದಿಕೊಳ್ಳ ಲು ಅವಕಾಶ ಕೊಟ್ಟೆಯಲ್ಲ 

ಸ್ವಾಮಿ! ಎಂದು ತಮ್ಮ ದೇವರಿಗೊಮ್ಮೆ ಕೈಮುಗಿದರು. ಸದ್ದು ಕೇಳದು 

ದಕ್ಕೂ, ಅವರು ಬಂದುದಕ್ಕೂ ಸುಮಾರು ಎರಡು ನಿಮಿಷವಿರಬಹುದು. 

ಅದಷ್ಟುಕಾಲವೇ ಭಟ್ಟರಿಗೆ ಒಂದು ಯುಗವಾಗಿ ಪರಿಣಮಿಸಿತು. ಕೊನೆಗೆ 

ಅವರು ಬಂದರು. ಅವರೇ ಹೌದೋ? ಇರಬಹುದು. ಅಲ್ಲದೆ ಹೋದರೆ? 

ಮತ್ತೆ ಅವರಾಡುವಮಾತು ಕೇಳಿಸಿ, ನಂಬಿಕೆಯಾಯಿತು. ಅವರೇ ಹೌದು. 


ನಿನ್ನೆಯದಿನ ಕಳ್ಳರನ್ನು ನೋಡಿದೊಡನೆಯೇ ಮೊದಲಾಗಿದ್ದ 

ಎದೆ ಹಾರುವಿಕೆಯು ಇಂದು ಇಲ್ಲ. ಅದಕ್ಕೆ ಬದಲಾಗಿ ಅವರು ಬರುತ್ತಲೂ 

ಅವರನ್ನು ಕಾಣುತ್ತಲೂ, ಸಂತೋಷವಾಗಿದೆ. ಉತ್ಸಾಹವು ಹೆಚ್ಚಿದೆ. 

ಉಪಕಾರಿಗಳನ್ನು ಕಂಡರೆ, ಕುಣಿಯುನಂತೆ ಬಗೆಯು ಉಬ್ಬುತ್ತಿದೆ. 



೧೯ 



ನಿನ್ನೆಯದಿನ ಅಂಜಿದವರೂ, ಈದಿನ ಉಬ್ಬುತ್ತಿರುವವರೂ ಒಬ್ಬರೇನೇನು? 

ಅಥವಾ ಇಬ್ಬರಿದ್ದು ಆಗ ಒಬ್ಬರು ಈಗ ಒಬ್ಬರು ಕಾಣಿಸಿಕೊಂಡರೇನು? 

ಹಾಗಲ್ಲದೆ, ಒಬ್ಬರೇ ಇದ್ದು, ಸನ್ನಿವೇಶಸಂದರ್ಭಗಳಿಗನುಸಾರವಾಗಿ ಬೇರೆ 

ಬೇರೆ ಬಣ್ಣಗಳಾಗುವರೋ? 


ಭಟ್ಟರೇ ಮುಂದರಿದು ಮಾತನಾಡಿದರು. “ಅಯ್ಯಾ!” ಆಗಂತುಕ 

ರಿಗೆ ಆಶ್ಚರ್ಯವಾಯಿತು. ತಾವಾಗಿ ಮಾತನಾಡಿಸಿದರೆ ಇತರರಿಗೆ ಎದೆ 

ಝಗ್ಗೆಂದು, ನಾಲಗೆಯ ದ್ರವವಾರಿ ಮಾತು ಮರೆತುಹೋಗಬೆೇಕು. 

ಹೀಗಿರುವಾಗ, ತಾನಾಗಿ ಬಂದು ಮಾತನಾಡಿಸುವವನಾದರೂ ಯಾರು? 

ಕಾಳಸರ್ಪವೆಂದು ಅರಿತೂ ಕೆಣಕುವವನಾರು? ಈ ವಿಚಿತ್ರವೇನು? ಎಂದು 

ಬೆರಗಾಗಿಹೋದರು. ಅವರಿಗೆ ಏನು ಹೇಳಬೇಕೋ ತೋರದೆ ಸುಮ್ಮ 

ನಿದ್ದರು. ಭಟ್ಟರು ಮತ್ತೂ ಮುಂದರಿದು "ಆಯ್ಯಾ,! ಎಂದರು. 

ಹಿಂದಿನದಿನ ಭಟ್ಟರನ್ನು ಮಾತನಾಡಿಸಿದ್ದವನು "ನಿನ್ನೆಯ ಹಾರುವಯ್ಯ 

ಎನ್ನುವಹಂಗಿದೆಕಣಪ್ಪಾ !" ಎಂದನು. ಹಾಗೆನ್ನುತ್ತಲೇ ಇಬ್ಬರ ಚಿತ್ತ 

ವೃತ್ತಿಯೂ ಬದಲಾಯಿಸಿತು. ಬಿಗಿದುಕೊಂಡು, ಕೆರಳಿ, ರೌದ್ರವಾಗುತ್ತಿದ್ದ 

ಬಗೆಯು ತಟ್ಟನೆ ಪ್ರಸನ್ನನಾಗಿ, "ಏನೋ ಒಂದು ಆಟ, ಕೊನೆಯವರೆ 

ಗೂ ನೋಡಿಬಿದೋಣ'' ಎಂಬ ಭಾವವು ಖಚಿತವಾಯಿತು. "ಅವನು 

ಏನು ಸೋಮಿ ?'' ಎಂದನು 



ಭಟ್ಟರು ರೆಪ್ಪೆಹೊಡೆಯುವಷ್ಟು ಸುಮ್ಮನಿದ್ದು, ಒಮ್ಮೆ ನಿಟ್ಟುಸಿರು 

ಎಳೆದುಬಿಟ್ಟ, "'ನಿನ್ನೆ ನಾನು ಹಣಕಾಸಿಲ್ಲವೆೇ ಎಂಬ ಪ್ರಶ್ನೆಗೆ ಹೇಳಿದುದು 

ಸುಳ್ಳು ಉತ್ತರವಾಗಿ ಇಲ್ಲವೆಂದೆ. ಅದು ಸುಳ್ಳು. ಇದೋ ನನ್ನಲ್ಲಿದ್ದ ಹಣ" 

ಎಂದು ಒಂದೆರಡು ಕಾಗದಗಳನ್ನು ಕಳ್ಳರಮುಂದೆ ಹಾಕಿದರು. ಕಳ್ಳರ 

ಕಣ್ಣಿಗೆ, ಆ ಕತ್ತಲಲ್ಲಿಯೂ ಎದುರುಬಿದಿರುವ ಕಾಗದಗಳು ನೋಟುಗಳು 

ಎಂಬುದೂ, ಅದರ ಬೆಲೆಯೆಷ್ಟು ಎಂಬುದೂ ಗೊತ್ತಾಯಿತು. ಅವರಿಗೆ 

ಒಂದುಗಳಿಗೆ ತಲೆತಿರುಗಿದಂತಾಯಿತು. 



ಸುಳ್ಳಿ ನಲ್ಲಿ ವ್ಯವಹಾರಮಾಡಿಮಾಡಿ, ಅವರಿಗೆ ಅದರ ಪರಿಚಯವು 

ಸಂಪೂರ್ಣವಾಗಿತ್ತು. ನರನಲ್ಲಿಯೂ, ನಾಯಿಯಲ್ಲಿಯೂ, ಆನೆಯಲ್ಲಿಯೂ, 



೨೦ 



ಸೊಳ್ಳೆಯಲ್ಲಿಯೂ ವ್ಯಾಸಿಸಿಕೊಂಡು ವಿಶ್ವವನ್ನೆ ಬುಗುರಿಯಂತೆ, ಆಡಿಸು 

ತ್ತಿರುವ ಪರತತ್ವವನ್ನು ಕಂಡು, ಯಾವುದೊಂದು ಹೆಚ್ಚು ಕಡಿಮೆಗಳನ್ನು  

ಹೊಂದದೆ, ತನ್ನ ವ್ಯಾಪಾರದಲ್ಲಿ ತಾನು ಮಗ್ನನಾಗರುವ ಪಂಡಿತನಂತೆ ಆ 

ಕಳ್ಳರೂ, ತಮ್ಮ ನಿತ್ಯವ್ಯಾಪಾರದಲ್ಲಿ ಸುಳ್ಳುಹೇಳುವವರನ್ನು ಕಂಡು ಕಂಡು, 

ಹೇಳುವುದೆಲ್ಲ ಸುಳ್ಳು ಎಂಬ ನಿಶ್ಚಿತವಾದರ್ಥವನ್ನು ಕಂಡುಕೊಂಡು ತಮ್ಮ 

ವ್ಯಾಪಾರದಲ್ಲಿ ತಾವು ಪ್ರವೃತ್ತರಾಗಿದ್ದರು ಆದರೆ ನಾನು ಹೆ*ಳಿದುದು 

ಅಭ್ಯಾಸವಿಲ್ಲವಾಗಿ, ಅವರು ಅದನ್ನು ಗ್ರಹಿಸಲಾರದೆಹೋದರು. ಅಪರೂಪ  

ವಾದ ವಸ್ತುವು ಎದುರಿಗೆ ಬಂದಾಗ, ಆದರ ಸ್ವರೂಪವನ್ನರಿಯಲಾರದೆ ಬೆರ 

ಗಾಗುವ ಮನವು ಒಂದುಗಳಿಗೆ ಮೂಕವಾಗುವಂತೆ, ಅವರು ಬೆಪ್ಪಾದರು. 

ಅವರಿಗೆ ಏನು ಹೇಳಬೇಕೆಂಬುದು. ತಿಳಿಯುವುದಿರಲಿ ಭಟ್ಟರು ಹೇಳಿದುದು  

ಅರ್ಥವಾಗಲಿಲ್ಲ ಅವರ ಅರಿವಿಗೆ ಆ ಮಾತಿನ ಅರ್ಥವು ನಿಲುಕಲಿಲ್ಲ. 



ಆದರೂ ಆ ಅರ್ಥವು ಮಾತ್ರ ತನ್ನ ಪ್ರಾಭಾವವನ್ನು  ತೋರಿಸದೆ 

ಬಿಡಲಿಲ್ಲ. ಸತ್ತ್ವಗುಣ ಪ್ರಧಾನವಾಗಿ, ನೊಡುವವರ ಮನಸ್ಸಿಗೆ ತನ್ನಲ್ಲಿ 

ರುವ ಸತ್ಯತೆಯನ್ನು ಪ್ರಕಾಶವಾಗಿ ತೋರಿಸುವ ಭಟ್ಟರ ಮುಖವು, ಬೇರೆ 

ಪ್ರಶ್ನೆಗಳಿಗೆ ಅವಕಾಶವನ್ನು ಕೊಡದೆ ಆಡಿದ ಆ ಮಾತು ದಿಟವೆಂದು ಕೇಳು 

ವವರ ಮನಸ್ಸಿಗೆ ಖಂಡಿತವಾಗುವ ಹಾಗೆ ಮಾಗಿಬಿಟ್ಟಿತು ಕಳ್ಳರು ಪರ 

ವಶರಾದಂತೆ, ಬುದ್ಧಿಯನ್ನು ಇನ್ನೊಬ್ಬರಲ್ಲಿ ಒತ್ತೆಯಿಟ್ಟು ಅವರಧೀನವಾಗಿ 

ರುವ ಮೋಹಭ್ರಾಂತರಂತೆ, ತಟ್ಟನೆದ್ದುನಿಂತುಕೊಂಡರು. ಅಭ್ಯಾಸಾನು  

ಸಾರವಾಗಿ, ಕೈಯು ಚಲಿಸಿ, ದೊಣ್ಣೆಯಕಡೆಗೆ ಹೋದರೂ, ಅದರಲ್ಲಿ  

ಎಂದಿನಂತೆ ಉಗ್ರಕಾರ್ಯದ ದುರುದ್ದೇಶವಿರಲಿಲ್ಲ ಕಣ್ಣು ಅಂಗೈಯ  

ಗಲವಾಗಿ ಅರ೪ದರೂ ಅವರಲ್ಲ ಕ್ರೌರ್ಯದ ಕೆಟ್ಟಬಗೆಯಿರಲಿಲ್ಲ. ಆಶ್ಚರ್ಯ  

ತರಂಗಿಣಿಯಲ್ಲಿ ಕೊಚ್ಚಿಹೋಗಿ, ನೆಲೆಯನ್ನರಿಯದೆ ಅಲೆದ ಅವರ ಮನವು 

ಮೌನವಾಗಿಹೋಗಿ, ಮೌನವನ್ನವಲಂಬಸಿ, ನಿಶ್ಚಬ್ಧವಾಗಿ, ನಿಶ್ಚಲವಾಗಿ  

ಭಟ್ಟರಿಗೆ ಏಳಿ ಏನು ಎಂಬುದನ್ನು ಅರಿಯದೆ, ಮೆಚ್ಚುಗಾಣಿಕೆಯನ್ನು 



೨೧ 



ಕೊಟ್ಟು, ತಾವಾಗಿ ಮುಗಿದ ಕೈಗಳಿಂದ, ತಮ್ಮಂತರಂಗವನ್ನು ಒಪ್ಪಿಸಿ 

ಬಿಟ್ಟರು. ಕಣ್ಣಿಂದ ನೀರೇ ದಾನೋ ಹತವಾಯಿತು.


ಅಷ್ಟು ಹೊತ್ತುಉಭಯರೂ ಮಾತನಾಡಲಿಲ್ಲ. ಭಟ್ಟರಿಗೆ ಎಡೆಯನ್ನು 

ಕೊರೆಯುತ್ತಿದ್ದ ಕರೆಕರೆಯು ತೀರಿತೆಂದು ಹಿಡಿಸಲಾರದಷ್ಟು ಸಂತೋಷ  

ವಾಗಿ, ಆ ಸಂತೋಷದ ಭರದಲ್ಲಿ ದುಃಖದ ಭಾರವು ಜಾರಿದ ಉತ್ತರಕ್ಷಣ 

ದಲ್ಲಿ ತೋರುವ ಆ "ಉಸ್ಸಪ್ಪಾ" ಭಾವದಲ್ಲಿ ಮೈಯ್ಯು ಕೊಂಚ ಬಾಗಿದೆ. 

ಭಾವವು ಸುಖಲೀನನಾಗಿ ಆನಂದಮಯವಾಗುತ್ತ ಕಳೆದುಹೋದ ದುಃಖದ 

ಭಾರದೊಡನೆ, ಇರುವ ದೇಹದ ಭಾರವನ್ನು ಒರಗಿಸಬೇಕೆಂದು ಒಳಗಿರು 

ವವರು ಯಾರೋ ಮಾಡುತ್ತಿರುವ ಯತ್ನದಫಲವಾಗಿ, ಒದಲೂ ಬಾಗುತ್ತ 

ಬಂತು. ನಿದ್ದೆಯ ಝೊಂಪಿಲ್ಲದಿದ್ದರೂ, ನಿದ್ರಾನಟಿಯ ನರ್ತನದ 

ಪೂರ್ವರಂಗಪ್ರಸಾಧನದಲ್ಲಿ ತಲೆದೋರುವ ತೂಕಡಿಯಲ್ಲಿ ಶರೀರವು 

ಆಜ್ಞಾತವಾಗಿ, ವಿವಶವಾಗಿ, ಬಾಗುವಂತೆ ಬಾಗುತ್ತಿರಲು,  ಮೇಲಿನ ಉತ್ತ 

ರೀಯವೂ ಸಂತೋಷದ ಆವೇಶದಲ್ಲಿ ವಿವಶವಾದಂತೆ ಜಾರಿತು. ಹಿಮ 

ಪರ್ವತಗಳಲ್ಲಿ ಜಾರಿ ಜಾರಿ ಕೆಳಕ್ಕಿಳಿಯುವ ಮಂಜುಗಡ್ಡೆಯ ನದಿಯಂತೆ 

ಹೊದೆದಿದ್ದ ಉತ್ತರೀಯವೂ ಧಾವಳಿಯೂ ಜಾರುತ್ತಿರಲು, ಭಟ್ಟರ ಅಂಗ 

ಕಾಂತಿಯೂ, ತೋಳಮೇಲೆ ಸ್ಫುಟವಾಗಿದ್ದ ವಿಭೂತಿಯದಾರವೂ ಕಂಡು 

ಕಳ್ಳರ ಕಣ್ಣನ್ನು ಚಮಕಿಸಿದವು. 


ಕಳ್ಳರಳ ಮನಸ್ಸಿನಲ್ಲಿ ಒಮ್ಮೆ, ಅಜ್ಞಾತವಾಗಿ ಅರಿವಿಗೆ ನಿಲುಕದ 

ಯಾವುದೋ ಸನ್ನಿಧಾನದಲ್ಲಿ, ತಾವು ಎರಡು ಕ್ರಿಮಿಗಳು ನಿಂತಿರುವಂತೆ 

ಭಾಸವಾಯಿತು. ಅವರಿಗೆ ಇದುವರೆಗೂ ಅಪರಿಚಿತವಾಗಿದ್ದ ಯಾವುದೋ 

ಭಾವವು ಮೂಡಿ, ಅವರನ್ನು "ಡಂಗು" ಹಿಡಿಸಿಬಿಟ್ಟು, ಅವರ ಕಾಳಕರ್ಮದ 

ಆಳವನ್ನು ಅವರಿಗೇ ತೋರಿಸಿ, ಅವರೇ ಅಂಜುವಂತೆ ಮಾಡಿಬಿಟ್ಟಿತು.  

ಕಳ್ಳರು ವಿಚಾರದ ಹೆಸರಿಲ್ಲದಿದ್ದರೂ, ಪಶ್ಚಾತ್ತಾಪಕ್ಕೆಡೆಯಿಲ್ಲದ ತೆರದಲ್ಲಿ 

ಅಂತರಂಗವನ್ನು ಒಪ್ಪಿಸಿದವರು ನಡೆದುಕೊಳ್ಳುವ ರೀತಿಯಲ್ಲಿ ಭಕ್ತಿಯ 

ಭರದಿಂದ ಅತ್ಮಾರ್ಪಣಮಾಡಿದವರು ವರ್ತಿಸುವ ಭಂಗಿಯಲ್ಲಿ, ಮೃದುವಾಗಿ, 

ನಯವಾಗಿ, ಮೆತ್ತಗಾಗಿ, ಮೆಲ್ಲಗೆ, ಆರಿಯಬಾರದ ಅಳುಕಿನ ಆಂಕುಶದ



೨.೨ 



ಆಳ್ವಿಕೆಗೆ ಒಳಗಾದವರಂತೆ ಬಾಗಿ, ತಮ್ಮ ಮೈಯನ್ನಿಟ್ಟರು ಭಟ್ಟರ ಚರಣ 

ತಲದಲ್ಲಿ ರೆಪ್ಪೆ ಹೊಯ್ಯುವಷ್ಟರಲ್ಲಿ, ಕಳ್ಳರಿಬ್ಬರ, ಅಥವಾ ಕಳ್ಳರೆನ್ನಿಸಿ 

ಕೊಂಡವರ ದೀರ್ಘದೇಹಗಳು ಭೂಶಾಯಿಗಳಾಗಿ, ಆ ಕಲ್ಲುಮುಳ್ಳುಗ 

ಳನ್ನು ಗಮನಿಸದೆ ಭಟ್ಟರಿಗೆ ದಂಡಪ್ರಣಾಮವನ್ನೆಸಗಿದ್ದವು.  



ಏಳನೆಯ ಪರಿಚ್ಛೇದ 



ಉತ್ತರೀಯವು ಜಾರಿ ಚಳಿಗಾಳಿಯು ತಗಲುತ್ತಲೂ, ಮೈಯ್ಯು 

ನವಿರೆದ್ದು, ಭಟ್ಟರಿಗೆ ವೃತ್ತಿಯೂ ಬಹಿರ್ಮುಖನಾಯಿತು. ನೋಡಿದಕ್ಕೆ, 

ಅವರಿಬ್ಬರೂ ತಮ್ಮ ಪದತಲದಲ್ಲಿ ಪ್ರಣಾಮ ಮಾಡುತ್ತಿದ್ದಾರೆ. ಭಟ್ಟರಿಗೆ 

ಅಂತಹ ಸ್ಥಿತಿಯಲ್ಲಿ ಹೇಗೆ ವರ್ತಿಸಬೇಕೆಂಬುದು ಚಿರಪರಿಚಿತವಾದ ವಿಷಯ. 

ಕೂಡಲೆ, ತಮ್ಮ ಮನೆಯಲ್ಲಿ, ಇಷ್ಟಬಂಧುಪರಿವಾರದ ಮಧ್ಯದಲ್ಲಿ ಇರು 

ವಾಗ, ಪ್ರಕಟವಾಗುವ ಸಾರಳ್ಯವು ತಲೆದೋರಿ " ಇದೇನು? ನೀನು 

ಏನುಮಾಡಲು, ಹೊರಟಿರಿ ? ನನ್ನ ಸುಳ್ಳಿಗೆ ಪ್ರಾಯಶ್ಚಿತ್ತಮಾಡಿಕೊಳ್ಳ 

ಬೇಕೆಂದು ನಾನು ಬಂದರೆ, ನೀವೇ ನನಗನೆ ಅಡ್ಡಬೀಳುವುದೇ?  ಏಳಿ, ಏಳಿ, 

ಚೆನ್ನಾಯಿತು. ಈ ನಾಯಿಯು ಮಾಡಿದ ಪಾಪಕ್ಕೆ ತಕ್ಕ ಪ್ರಯಶ್ಚಿತ್ತ 

ವಾಗಿ, ಈ ಹಾಳು ಮನಸ್ಸಿ ಗೆ ಶಾಂತಿಯಾಗಲಿ. ಚೆನ್ನಾಯಿತು. ಏಳಿ, 

ಏಳಿ "ಎಂದು ಅವರಿಬ್ಬರನ್ನು ಮುಟ್ಟಿಎಬ್ಬಿಸಿದರು. ಭಟ್ಟರಿಗೆ ಅರಿವು 

ನೆರವಾಗಿತ್ತು. ಆದರೂ ಅವರು ವರ್ಣಹೀನರೆಂಬುದು ಅವರಿಗೆ ಬರಲಿಲ್ಲ. 


ಕಳ್ಳರು ನಿನ್ನರು., ವಿದ್ಯಾನಿನಯ ಸಂಸನ್ಹನಾದೆ ಕುಲೀನನಾದ 

ಪುತ್ರನು ತಂದೆಯ ಬಳಿಯಲ್ಲಿ ತೋರುವ ನಯಭಯ ಭಕ್ತಿಗಳಿಂದ 

" ನಮ್ಮಪ್ಪ ! ನೀನು ಯಾರು ಈ ಕಲಿಗಾಲದಲ್ಲೂ ಇಂತಹ ಸತ್ಯವಂತ 

ರುಂಟೆ? ಹಣವು ನಿನ್ನದೋ ನಮ್ಮಪ್ಪ ! ನಾನು ಅದನ್ನು ಕಿತ್ತುಕೊಳ್ಳು 

ವುದಕ್ಕ ಬಂದ ಕಳ್ಳರು. ನಿನ್ನ ಹಣವನ್ನು ನೀನು ಕಾಪಾಡಿಕೊಳ್ಳಲು 



೨೩ 



ನನ್ನಲ್ಲ ಹಣವಿಲ್ಲವೆಂದುದು ತಪ್ಪು ಹೇಗೆ? ಪಾಪ ಹೇಗೆ? ಅದಕ್ಕೆ ಏನು 

ಪ್ರಾಯಶ್ಚಿತ್ತ? ಇದೇನಪ್ಪ ಈ ಹೊಸ ಆಟ ಕಟ್ಟಿ, ನಮ್ಮ ಕಣ್ಣು ಬಿಚ್ಚು 

ವುದಕ್ಕೆ ನೀನೆಲ್ಲಿಂದ ಬಂದೆಯಪ್ಪ ! ” ಎಂದರು. ಭಟ್ಟರು, ಅಕೃತ್ರಿಮ 

ವಾದ, ಸರಳವಾದ, ಕಾಪಟ್ಯದ ಸೋಂಕಿಲ್ಲದ, ಋಜುವಾದ, ಆ ಅಂತ 

ರಂಗದ ಆಟದಿಂದ ದಿಟನಾಗಿಯೂ ತೃಪ್ತರಾದರು ಅವರ ಅಂತಃಕರಣವೂ 

ಆ ಎದುರಾಳಿಗಳ ನಿಷ್ಕಪಟವರ್ತನವನ್ನು ಕಂಡು ಅಥವಾ ನಿರ್ಮಲವಾದ 

ತನ್ನ ಭಾವವನ್ನು ಕನ್ನಡಿಯಂತೆ ಪ್ರತಿಬಿಂಬಿಸಿ ತನಗೆ ತೋರುತ್ತಿರುವ 

ಬಡಪಾಯಿಗಳ ವ್ಯಾಪಾರವನ್ನು ಕಂಡು ಒಳಗೊಳಗೆ ಮೆಚ್ಚಿ ಸತಿಯ 

ಸದ್ವರ್ತನದಿಂದ ತೃಪ್ತನಾಗಿ ತನ್ನನ್ನು ಆಕೆಯ ವಶಕ್ಕೊಪ್ಪಿಸಿಕೊಂಡು 

ಇನ್ನೂ ತೃಪ್ತವಾಗುವ ಪತಿಯಂತೆ, ಅವರ ವಶವಾಯಿತು. 



ಹೊಸ ಮೆಚ್ಚಿನ ಭರದಲ್ಲಿ, ಕುಂದು ಕೊರತೆಗಳನ್ನು ಕಾಣದೆ,

ಕೂರ್ಮೆಯು ತಾನೇತಾನಾಗಿ ಹರಿಯುತ್ತಿರುವ ಕಾಲದಲ್ಲಿ, ಸ್ನೇಹವು ಉಕ್ಕಿ 

ಉಕ್ಕಿ ಜಗತ್ತಿಗೆ ಹೊಸಬಣ್ಣ ಕಟ್ಟಿ, ನೋಡುವ ಕಣ್ಣಿಗೆ ಹಬ್ಬ ಮಾಡುತ್ತಿ 

ರುವ ಸಂದರ್ಭದಲ್ಲಿ, ಯಾವುದೋ ಒಂದು ಗುಣವನ್ನು ಕಂಡು, ಅದರ 

ಮೇಲಿನ ಲೋಭದಿಂದ ಹುಟ್ಟಿದ ಮೋಹವನ್ನು, ಪ್ರತ್ಯಾಶೆಯನ್ನು ಗಾಣದ 

ಪವಿತ್ರ ಪ್ರೇಮವೆಂದು ಭ್ರಾಂತಿಗೊಂಡು ವರ್ತಿಸುವ ಕಾಲದಲ್ಲಿ, ಆಡುವ 

ಮಾತುಗಳು ಇಬ್ಬರಿಗೂ ನಡೆದುವು. ಕೊನೆಗೆ ಭಟ್ಟರು ಕಳ್ಳರ ಊರಿಗೆ 

ಬಂದೇ ತೀರಬೇಕೆಂದು, ಅಲ್ಲಿ ಎರಡುದಿನ 'ಅವರು ಹೇಳಿದಂತೆ' ಅವರ 

ಮನೆಯಲ್ಲಿದ್ದು ಕುಲವನ್ನೆಲ್ಲ ಉದ್ಧಾರಮಾಡಿ ಹೋಗಬೇಕೆಂದು ಗೊತ್ತಾ 

ಯಿತು. ಆ ಕಳ್ಳರ ಉಪಚಾರವು, ಅವರ ಸದ್ವರ್ತನೆಯು ಭಟ್ಟರ ಅಂತ 

ರಂಗವನ್ನು ಸೆರೆಹಿಡಿಯಿತು. ಭಟ್ಟರು ' ಹೂ ಆಗಲಿ' ಎಂದರು. ಕಳ್ಳರ 

ಆತಿಥ್ಯವನ್ನು ಒಪ್ಪಿಸಿದೆಯಾ ? ಎಂದು ಒಂದು ಸಣ್ಣ ಕೂಗು ಕಿವಿಗೆ ಕೇಳಿ 

ಸಿತು. ಆದರೂ, ಅವರಿಗೆ ಅದೇ ಕುಲವೃತ್ತಿ. ಅಲ್ಲದೆ ಅವರೂ ಸಭ್ಯ 

ರಾಗಿದ್ದಾರೆ ಎಂದು ಮತ್ತೊಂದು ಸಮಾಧಾನವೂ ಒದಗಿತು. ಹೀಗೆ 

ಪೂರ್ವಪಕ್ಷ ಸಮಾಧಾನ, ಸಿದ್ಧಾಂತಗಳಾಗುವುದರಲ್ಲಿ, ಭಟ್ಟರು, ಅವ 

ರಿಬ್ಬರ ಜೊತೆಯಲ್ಲಿ ಅಥವಾ ಅವರು ಹಿಂದಿನಿಂದ ತೋರಿಸಿದ ಹಾದಿಯಲ್ಲಿ


೨೪


ಮುಂದಾಳುಗಳಾಗಿ, ಹೊಗುತ್ತಿದ್ದರು. ಭಟ್ಟರ ಅರಳು ಹಿಟ್ಟು ಅವಲಕ್ಕಿಯ 

ಮೂಟೆಯು ಕಳ್ಳನೊಬ್ಬನ ಭುಜದ ಮೇಲಿತ್ತು.


ಭಟ್ಟರೂ ಇದಲ್ಲವೇ ವರಮಾತ್ಮನ ಲೀಲೆ-ಕಿಚ್ಚಿಟ್ಟು, ಊದಿ ಉರಿ 

ಯೆಬ್ಬಿಸಿ, ಅದು ಒಳ ಹೊರಗನ್ನೆಲ್ಲ ವ್ಯಾಪಿಸಿ, ಎಲ್ಲವನ್ನೂ ಬೇಯಿಸಿ 

ದಾಗ, ಕಾಳ ಮೇಘವನ್ನು ಕಳುಹಿಸಿ ಅಮೃತ ವರ್ಷವನ್ನು ಕರೆದು ಹೊಸ 

ಸೃಷ್ಟಿಯನ್ನು ಹುಟ್ಟಿಸುವುದು ! ಅಯ್ಯಾ ! ಇದರಿಂದಲೇ ನೀನು ಸರ್ವ 

ಶಕ್ತ: ನಾವು ಆಶಕ್ತರು, ಏನು, ಆಟವನ್ನು ಹೂಡಿರುವೆಯಯ್ಯಾ! ಈ ಆಟದ 

ಮೊದಲು ತುದಿಗೆ ತೊರಿಸದೆ, ನಿನ್ನ ಮನಸ್ಸಿಗೆ ಒ೦ದ೦ತೆ, ಎಲ್ಲರನ್ನು 

ಕುಣಿಸುವೆಯಲ್ಲ ! ಇದರಿಂದ ನಿನಗೇನು ತೃಪ್ತಿಯಯ್ಯಾ ? ಎಂದು 

ಹರಿಯದ ಮುಗಿಯದ ಪ್ರಪಂಚ ಚಿತ್ರವನ್ನು ಪರಿಭಾವಿಸುತ್ತ ಕಳ್ಳರಿ 

ಗಿಂತಲೂ ಜಾಗ್ರತೆಯಾಗಿಯೇ ನಡೆದರು.


 ಸುಮಾರು ಹತ್ತುಗಂಟೆಯ ಸಮಯ ಇರಬಹುದು ಕಳ್ಳರು  " ಅಪ್ಪ 

 ಎಡಗಡೆಗೆ ತಿರುಗಿಕೊಳ್ಳಿ " ಎಂದರು ಭಟ್ಟರ ಯೋಚನಾತರಂಗವು ಭಂಗ 

 ವಾಗಿ, ಅವರಲ್ಲಿಯೆ ನಿಂತರು, ಅವರು ಹೇಳಿವುದು ಅರ್ಥ ವಾಗದೆ, "ಆ " 

 ಎಂದರು ಆ ವೇಳೆಗೆ ಸರಿಯಾಗಿ ಅಷ್ಟೇ ದೂರದಲ್ಲಿ ಒಂದು ನಾಯಿಯು 

 ಬೊಗಳಿತು. ಭಟ್ಟರ ಊರು ಬಂತೋ ?'' ಎಂಬ ಪ್ರಶ್ನೆಗೆ, ಒಬ್ಬನು 

 " ಹೂ ! ಕಾಣಪ್ಪ ” ಎಂದನು. ಅವನ ಕಣ್ಣೂ ಆ ಬೇಲಿಯಿಂದಾಚೆ 

 ನಿದಾನವಾಗಿ ಚಲಿಸುತ್ತಿರುವ ಏನೋ ಒಂದನ್ನು ಕಂಡು, ಅವನು ತಟ್ಟನೆ 

 ಅವಹಿತನಾಗಿ, ನಿಂತು, ಮಗ್ಗುಲಲ್ಲಿರುವವನನ್ನು ಮುಟ್ಟಿ, ಅದನ್ನು ತೋರಿ 

 ಸಿದನು. ಎರಡನೆಯವನು, ಆಪ್ರತಿಹತವಾಗಿ, ಅಂತರಾಯವನ್ನು 

 ಕಾಣದೆ ಬದಲಾಯಿಸುವ ಪ್ರಭುತ್ವಕ್ಕೆ ಗುರುತಾಗ ದೋರಣೆಯ ದಪ್ಪ 

 ದಾದರೂ ಒರಟಲ್ಲ : ಗಂಭೀರ ಧ್ವನಿಯಿಂದ ಯಾರು ? ” ಎಂದನು.


 ಆ ವ್ಯಕ್ತಿಯು ಸರಳವಾದ, ಮೃದುವಾಗ, ಕೋಮಲವಾದರೂ 

 ಸ್ಫುಟವಾದ, ದೃಢವಾದ, ಅಲೆಯದ ಸ್ವರದಿಂದ, “ ನಾನು ” ಎಂದಿತು. 

 ಕೂಡಲೇ ಪೃಚ್ಛಕನ ಭಾವವು ಅತ್ಯಂತ ಕೋಮಲವಾಗಿ, ವಾತ್ಸಲ್ಯದ

 

 

೨೫ 



ಮಾರ್ದವದಿಂದ ಸುಂದರಮವಾಗಿ " ಬಸವಿ " ಯೆಂದಿತು. ಕೂಡಲೇ ಅನ 

ಳನ್ನು ಕೂಗಿ ಅವಳು ಚಾವಡಿಯಲ್ಲಿ ಬೆಳಕು ಮಾಡಿ, ಕಸ ಆರಿಸಿ, 

ಚಾಪೆ ಬುಡು, ಅಯ್ಯನವರು ಬಂದವರೆ” ಎಂದನು. ಅವಳು, ಕೆಲದಿನದಿಂದ 

ನೊಗವನ್ನು ಕಾಣದೆ ಕತ್ತು ಬಲಿತ ಎತ್ತು ಮತ್ತೆ ನೊಗವನ್ನಿಟ್ಟಾಗ ಮಿಡ 

ಕುವಂತೆ ಮಿಡುಕಿ, ಹೋಗುತ್ತಿದ್ದವಳು ನಿಂತು, ಹಿಂತಿರುಗಿನೋಡಿ ಮತ್ತೆ 

ಹೊರಟು ಹೋದಳು. ಮಾತನಾಡಿ ಇನೂ ಏನೋ ಹೇಳಬೇಕೆಂದು 

ಹೊರಟಿದ್ದು, ಹಾಗೆಯೇ ಸಣ್ಣ ನಗುವಿನಲ್ಲಿ ಎಲ್ಲವನ್ನೂ ಮುಗಿಸಿ ಸುಮ್ಮ 

ನಾದನು. 

 

ಇನ್ನಷ್ಟು ಹೊತ್ತಿನೂಳಗಾಗಿ ಭಟ್ಟರು ಚಾವಡಿಯಲ್ಲಿ ಹಾಸಿದ 

ಚಾಪೆಯ ಮೇಲೆ ಕುಳಿತುಕೊಂಡರು. ಹಸನಾಗಿ ಕಾದು ಗಮಗಮಾಯಿಸುತ್ತಿದ್ದ 

ಹಾಲು, ಒಂದು ತಂಬಿಗೆಯಲ್ಲಿ ಅವರ ಮುಂದಿತ್ತು. ಅವರ ಕಣ್ಣು ಆತ್ತಿತ್ತ 

ಅಲೆಯುತ್ತ, ಅಲ್ಲಿ, ಆಚೆಯ ಕಡಿಗೆ, ವಿಭೂತಿಯ ಗೆರೆಗಳಿಂದ ಮೆರೆಯುವ  

ವಿಶಾಲ ಫಾಲದವಳೋಬ್ಬಳು ಅರಿದಿರುಗಿದ ಮೆಯ್ಯೊಲವಿನಲ್ಲಿ ನಿಂತು ತಮ್ಮ 

ಕಡೆ ನೋಡುತ್ತಿರುವುದನ್ನು ಕಂಡರು. ಇಬ್ಬರ ಕಣ್ಣೂ ಸೇರಿ ಒಬ್ಬರ 

ನೋಟವನ್ನು ಒಬ್ಬರ ನೋಟವು ತಾಕಿತು. ವಿದ್ಯುತ್ತಿನ ಶಾಖೆಯು ತಟ್ಟಿ

ದಂತೆ, ಇಬ್ಬರಿಗೂ ಮೆಯ್ಯು, ಛಳುಕು ಹೊಡಿದಂತೆ, ನಡುಗಿತು 



ಯೇಕೆ? ಏನು? ಎಂಬುದು, ಮುಗ್ಧೆಯಾದ ಆವಳಿಗಂತೂ ತಿಳಿಯ 

ಲಿಲ್ಲ ಹೋಗಲಿ, ವಿದ್ಯವಂತರಾದ ವಾದಜನವರಾಂಕುಶರೆಂದು ಹೆಸ 

ರಾಂತ ಭಟ್ಟರಿಗಾದರೂ ಅರ್ಥವಾಯಿತೇನು? ಆದಂತೆ ತೋರಲಿಲ್ಲ. 




ಎಂಟನೆಯ ಪರಿಚ್ಛೇದ. 



ಆ ವೂರಿನಲ್ಲಿ ಶಿವದೇವಾಲಯವೊಂದುಂಟು. ತಮ್ಮಡಿಯು ದಿನದಲ್ಲಿ 

ಯಾವಾಗಲಾದರೂ ಒಂದು ಸಲ ಬಂದು ಪೂಜೆಮಾಡಿ ಹೋಗುವನು. 



೨೬ 



ಮಿಕ್ಕವೇಳೆಯಲ್ಲೆಲ್ಲಾ ಆ ವೂರಿನ ಬಸವಿ, ಗೌರಿಯೇ ಅಲ್ಲಿದ್ದು ಸೇವೆಮಾಡು 

ವಳು. ದೇವರಿಗೆಂದು ಬಿಟ್ಟಆ ಬಸವಿಯು ದೇವರವಳೇ ಆಗಿಹೋಗಿದ್ದಳು. 

ಅವಳಿಗೆ ಆವೂರಲ್ಲಿ ತೌರುಮನೆಯುಂಟು. ಆದರೆ ತವರ್ಮನೆಗೆ ಹೋಗಿ 

ವರ್ಷಾಂತರಗಳಾಗಿತ್ತು. ಮೊದಮೊದಲು ಊಟಕ್ಕೆ ಹೋಗುತ್ತಿದ್ದಳು, 

ಬರುಬರುತ್ತ ಆದೂ ತಪ್ಪಿಹೋಯಿತು. ತಂದೆತಾಯಿಗಳು ಶಿವನಿಗೆ ಒಂದು 

ಗದ್ದೆಯನ್ನು ಒಪ್ಪಿಸಿದರು. ಅದರಲ್ಲಿ ಬರುವ ಭತ್ತವನ್ನು ತಮ್ಮಡಿಯು 

ತೆಗೆದುಕೊಳ್ಳುವನು. ಅವನು ನಿತ್ಯವೂ ನೈವೇದ್ಯಕ್ಕೆ ತರುವ ಮೊಸರನ್ನ 

ವನ್ನು ಅವಳಿಗೆ ಕೊಟ್ಟುಬಿಡುವನು. ಕೆಲವುದಿನ ಮನೆಯಿಂದ ಉದಕ 

ವನ್ನು ತಂದುಕೊಳ್ಳುತ್ತಿದ್ದಳು. ಒಂದು ದಿನ, ಶಿವನಿಗೆ ಒಪ್ಪಿಸದ ಉದಕ 

ವನ್ನು ತಾನು ಹೇಗೆ ತಿನ್ನುವದು ಎನ್ನಿಸಿತು. ಅಂದಿನಿಂದ ಅದೂ ತಪ್ಪಿ 

ಹೋಯಿತು. ದಿನಕ್ಕೊಂದುಸಲ ಅಷ್ಟು ಮೊಸರನ್ನವನ್ನು ತಿನ್ನುವಳು. 

ಅವಳ ಆಸ್ತಿಯೆಲ್ಲವೂ ಒಂದು ರುದ್ರಾಕ್ಷಿಸರ, ಎರಡು ಸೀರೆ, ಒಂದು 

ಚೊಂಬು, ಒಂದು ವಿಭೂತಿಯ ಬುರುಡೆ. ಅವಳ ಕಾರ್ಯವಾದರೂ ಹೆಚ್ಚಿಗೆ 

ಯಿಲ್ಲ. ಬೆಳಗೆದ್ದು ಮುಖವನ್ನು ತೊಳೆದುಕೊಂಡು, ದೇವಸ್ಥಾನದಲ್ಲಿ ಕಸ 

ವನ್ನು ಗುಡಿಸಿ, ಸಾರಿಸಿ, ರಂಗವಲ್ಲಿ ಹಾಕಿ, ಕೆರೆಗೆ ಹೋಗುವಳು. ಅಲ್ಲಿ 

ಮಿಂದು ಉಟ್ಟ ಬಟ್ಟೆಯನ್ನೊಗೆದುಕೊಂಡು ಹೊರಟುಬಂದು ತನಗೆ ತೋರಿ 

ದಷ್ಟು ಹೊತ್ತು ಶಿವನಾಮವನ್ನು ಜಪಿಸುತ್ತಾ ಕುಳಿತಿರುವಳು. ಮತೆ 

ಸಂಜೆಗೆ ಹೋಗಿ ಮಿಂದು ಬರುವಳು. ಮತ್ತೆ ಶಿವಕೀರ್ತನಗಳನ್ನು ಹಾಡಿ 

ಕೊಳ್ಳುತ್ತಾ ಕುಳಿತುಕೂಳ್ಳುವಳು. ರಾತ್ರಿ ಎಷ್ಟು ಹೊತ್ತಾದರೂ ಆಗಲಿ 

ಅವಳ ಕೀರ್ತನವು ನಡೆದೆ ಇರುವುದು. ದೇವಾಲಯದ ಮೊಂಕುದೀಪ 

ದಲ್ಲಿ, ಇದ್ದ ಆ ನಾಲ್ಕಾರು ಕಂಭಗಳ ನೆರಳುಗಳು, ಕುಣಿಯುವ ದೀಪ 

ಶಿಖೆಯೊಡನೆ ಕುಣಿಯುವುದನ್ನು ಕಂಡು, ಶಿವನು ತನಗೆ ಒಲಿದನೆಂದು 

ಕೊಳ್ಳುವಳು. ಅರೆಮಚ್ಚಿದ್ದ ಆ ಕಣ್ಣುಗಳಲ್ಲಿ ನೀರುತುಂಬಿ, ಆ ನಂದಾ 

ಧಿಕ್ಯದಿಂದ ಮೈಮರೆತು ಹಾಗೆಯೇ ಬರಹಿಕೊಳ್ಳುವಳು. ಇದು ಅವಳ ದಿನ 

ಚರ್ಯೆ. 



ಆವಳ ವಿಚಾರವಾಗಿ ಹೇಳಬೇಕೆಂದರೆ ಹುಡುಗಿಯು ರೂಪವಂತೆ. 

ಹಳ್ಳಿಯವಳು; ಇರುಸರಿಕೆಯನ್ನರಿಯದವಳಾದರೂ, ನಾಗರಿಕ ಸ್ತ್ರೀಯ 



೨೭ 



ಕೃತಕ ಸೌಂದರ್ಯದ ಸೊಂಕಿಲ್ಲವಾದರೂ, ಚೆಲುವೆ. ಮೂರು ಎಳೆಯ 

ವಿಭೂತಿಯು ವಿರಾಜಿಸುತ್ತಿರುವ, ಅಗಲವಾದರೂ ಗಂಡು ಕಳೆಯನ್ನು ತೋ 

ರದ, ಹಣೆ. ನಿತ್ಯವೂ ನೀರು ಮುಳುಗುವುದರಿಂದ ಒರಟಾಗಿದ್ದರೂ ಸ್ವಾಭೌ 

ವಿಕವಾದ ಮೃದುತ್ವವನ್ನು ತೊರೆಯದ ಕಪ್ಪನೆಯ ಗುಂಗುರು ಕುರುಳು  

ಮೆಟ್ಟಲು ಮೆಟ್ಟಿಲಾಗಿ ಇಳಿದು, ಬಂದು ತುರುಬಿನಲ್ಲಿ ಸೆರಗಿನೊಳಗೆ ಮರೆ  

ಯಾಗಿರುವ ತುಂಬುಕೂದಲು. ನೀಳವಾಗಿ, ದೊಡ್ಡವಾಗಿ, ಹಾಲುಬೆಳ್ಳಿಯಂತೆ 

ಬೆಳಗುವ ಕಣ್ಣು ಸ್ಥಿರವಾದರೂ, ಸುಂದರವಾದ ಕಣ್ಣು ನೋಟ. ತೇಜಸ್ವಿ  

ಯಾಗಿ, ಎಳೆಗೆಂಪಿನಿಂದ ಕೂಡಿದ ಬಿಳಿಯ ಬಣ್ಣದಿಂದ ಮನೋಹರವಾಗಿ 

ರುವ ಅಷ್ಟುದೊಡ್ಡದೂ ಅಲ್ಲದೆ ಚಿಕ್ಕದೂ ಅಲ್ಲದಿರುವ ಸುಂದರಮುಖ  

ಆ ಮುಖದಲ್ಲಿರುವ ಸೊಬಗನ್ನೆಲ್ಲ ಸೇರಿಸಿ ತಂದು ಗಂಟಿಕ್ಕಿರುವಂತೆ ತೋರುವ 

ಗಲ್ಲ ಯಥಾಸ್ಥಾನಗಳಲ್ಲಿ ಔಚಿತ್ಯವನ್ನು ಮೀರದ ಕುಲೀನರಂತೆ, 

ಸ್ವಾಭಾನಿಕವಾದ ಸೌಂದರ್ಯದಿಂದ ಒಟ್ಟಿನ ಅಂದಕ್ಕೆ ಒಪ್ಪವಿಡುತ್ತಿರುವ 

ಹುಬ್ಬ. ಮೂಗು, ಬಾಯ್ದೆರೆಗಳು. ಆ ಮುಖಕ್ಕೆ ಅನುಗುಣವಾದ, ಬಟ್ಟೆ 

ಯಲ್ಲಿ ಕಟ್ಟಿದ ರತ್ನದಂತೆ ತೆಳುವಾಗಿ ಬೂದಿಮುಚ್ಚುತ್ತಿರುವ ಕೆಂಡದಂತೆ 

ಆ ಮರೆಯಲ್ಲಿದ್ದರೂ ಮೆರೆಯುತ್ತಿರುವ ಲಾವಣ್ಯವನ್ನು ಬೀರುವ, ದೇಹ  

ಲತೆ. ಅಂತೂ ಚೆಲುವೆ. ನಾಗರಿಕನೂ ಅತೃಪ್ತನಯನಗಳಿಂದ, ಒಂದು  

ಗಳಿಗೆ ನಿಂತು ನೋಡಬೇಕೆನ್ನಿಸುವಂತಹ ರೂಪಿನ ಚೆನ್ನೆಯು ಅವಳು. 



ಚೆಲುವನ್ನು ಕಂಡು ಸೊಲದವರು ಯಾರು? ಶಿವಪೂಜೆಯ ತಮ್ಮ 

ಡಿಯು, ಶಿವನಿಗೊಸ್ಪಿಸಿದ ಬಸವಿಯನ್ನು ಕಂಡು, ಭ್ರಾಂತನಾದನು, 

ಇಬ್ಬರೂ ಶಿವನ ಪರಿವಾರದವರೆಂದುಕೊಂಡು, ಬಸವಿಯು ಬಿಟ್ಟಿಹಿಡಿದ 

ವರ ಸೊಮ್ಮು ಎಂದು ಧೈರ್ಯಗೊಂಡು, ಮನವನ್ನು ಕೊರೆಯುವ ಆಶೆ 

ಯನ್ನು ಅವಳ ಕಿವಿಗೂ ಹಾಕಿದನು. ಅವಳದನ್ನು ಲಕ್ಷಿಸಲಿಲ್ಲ. ತಮ್ಮ 

ಡಿಗೆ ಇನ್ನೂ ಧೈರ್ಯವಾಗಿ, ಚೇಷ್ಟೆಗಳು ಬಲಿತವು. ಅವಳು ಅದಕ್ಕೂ 

ಗಮನಕೊಡದಿರಲು, ಮೌನವನ್ನು ಸಮ್ಮತಿಯೆಂದು ಭಾವಿಸಿ ಒಂದು 

ದಿನ ನಟ್ಟಿರುಳಿನಲ್ಲಿ ತಮ್ಮಡಿಗಳ ಸವಾರಿಯು ಶಿವದೇವಾಲಯಕ್ಕೆ ದಯಮಾ 

ಡಿಸಿತು. ಮರುದಿನ ಬೆಳಗಾಗುವ ವೇಳೆಗೆ, ಗುಡಿಯನ್ನು ಗುಡಿಸುವ ಸಮ್ಮಾ 

ರ್ಜನಿಯು ಬೇರೊಂದು ಬೇಕಾಯಿತು. ಗುಡಿಯ ಬಾಗಿಲಲ್ಲಿ, ಕೈಕಾಲು 



೨೮ 



ಹಿಂಗಟ್ಟು ಮುರಿಕಟ್ಟಿಸಿಕೊಂಡು ಮೈಯೆ.ಲ್ಲಾ ಹುಣ್ಣಾಗುವಂತಣೆ ಒದೆ 

ಗಳನ್ನು ಮೆದ್ದು, ಯಾರೋ ಒಬ್ಬರು ಬಿದ್ದಿದ್ದರು. ಒಂದೂವರೆ ತಿಂಗಳು  

ಶಿವಪೂಜೆಯನ್ನು ಇನ್ನೊಬ್ಬರು ಬಂದು ಮಾಡಿದರು. 



ಅಂದಿನಿಂದ ಊರಿನವರು ಪರ್ಯಾಯನಾಗಿ ಕೂಗುತ್ತಿದ್ದ ಬಸವೀ, 

ಗೌರಿಗಳು ಮಾಯವಾಗಿ ಬಸಮ್ಮ, ಗೌರಮ್ಮ ಬಂದಿದ್ದವು. ಆದರೆ ಅವ 

ಳಿಗೆ ಮಾತ್ರ ಬಸವಿ, ಬಸಮ್ಮ ಎಂದರೆ ಬಹಳ ಸಂತೋಷ‌. ಊರಿನವರು 

ಅವಳನ್ನು ಕಂಡು ಮಾತನಾಡುವುದೇ ಅಪರೂಪ. ಆಡೊದರೂ ಬಸವಿ,  

ಬಸಮ್ಮ ಎನ್ನುವಾಗ, ಅದರಲ್ಲಿ ಯಾವ ಅಪಾರ್ಥದ ಸೊಂಕೂ ಇರು 

ತ್ತಿರಲಿಲ್ಲ. 


ಭಟ್ಟರು ಬಂದ ರಾತ್ರಿ ಎಂದೂ ಇಲ್ಲದೆ ಬಸವಿಗೆ ದೇಹಶಂಕೆಗೆ ಹೋ  

ಗಬೇಕೆನ್ನಿಸಿ, ಹೊರಗೆ ಹೋಗಿದ್ದಳು. ಊರಿನನಾಯಕನೊಡನೆ ಹೊಸಬ  

ರೊಬ್ಬರು ಬರುತ್ತಿರುವುವನ್ನು ಕಂಡು, ಅತ್ತಳಾದಳು. ಅದುವರೆಗೂ 

ಪರಿಚಿತವಲ್ಲದ ಯಾವುದೋ ಒಂದು ತೆರದ ಕುತೋಹಲವು ಮೂಡಿ ಅವಳು  

ಚಾವಡಿಯವರೆಗೆ ಬಂದಳು. ತನ್ನಾಸೆಗಾದರು ನಾಯಕನ ಮಾತೆಂಬ ನೆವ 

ದಿಂದ ಸೇವೆಮಾಡದವಳು, ಚಾವಡಿಯಲ್ಲಿ ಗುಡಿಸಿ ಮಂದಲಿಗೆ ಹಾಕಿದಳು. 

ಅವಳು ತಿರುಗಿ ನೋಡಿದಾಗ ತ್ರಿಪ್ರುಂಡ್ರರಂಜಿತವಾಗಿ, ನಾತಿರೂಢರ್ಮಶ್ರು 

ಶೋಭಿತವಾಗಿ, ತೇಜಃಪುಂಜನಾಗಿದ್ದ ಭಟ್ಟರ ಮುಖವನ್ನು ಕಂಡು, 

ಒಂದುಗಳಿಗೆ ಮೈಮರೆತಳು. ಯಾರಿಗೂ ಮೊಖಗೊಟ್ಟು ಮಾತನಾಡದ  

ಹೆಣ್ಣು ಭಟ್ಟರ ಅಪರಿಚಿತವಾದರೂ ಇಷ್ಟವಾದ ಮುಖವನ್ನು, ಮೊಗವೆತ್ತಿ  

ಕಣ್ಣುಬಿಟ್ಟು ನೋಡಿತು. ಅತ್ತಿತ್ತ ತಿರುಗಿದ ಅವರ ಕಣ್ಣಿನ ನೋಟವು 

ತನ್ನ ನೋಟವನ್ನು ಸಂಧಿಸಲು, ಅದುವರೆಗೂ ಆ ಕಣ್ಣಿನಲ್ಲಿದ್ದ ಅಲೆಯದ 

ಸ್ಥೈರ್ಯವು ಹೋಗಿ ಆಳವಾದರೂ, ಹೂಗಾಳಿಗೂ ಅಲೆಯುವ ನೀರಿನಂತೆ 

ಚಾಂಚಲ್ಯ ವನ್ನು ಪಡೆಯಿತು. ಶಿವಭಕ್ತಿ, ಶಿವಸೇನೆಗಳನ್ನು ಬಿಟ್ಟು ಮತ್ತೇ 

ನನ್ನೂ ಅರಿಯ ಆ ಮುಗ್ಗೆಯ ಮನವು ಅರಿಯದ ಆಶೆಗೆ ಎಡೆಗೊಟ್ಟಿತ್ತು 

ಆ ಹುಡುಗಿಯ, ಹುಡುಗಾಟವರಿಯದ ಬಗೆಯು, ನನ್ನ ಸೆೇವೆಗೊನ್ಬಿ ನನ್ನ 

ಭಾಗದ ಶಿವನು ನನ್ನನ್ನು ಅನುಗ್ರಹಿಸಲು ಬಂದಿದ್ದಾನೆ ಎಂದು ಕೊಂಡಿತು. 



೨೯ 



ಉತ್ತರಕಣದಲ್ಲಿಯೇ, ಹೆಣ್ಣಿನ ಹುಟ್ಟುಗಣವಾದ ನಾಚಿಗೆಯು ತಲೆದೋರಿ 

ಅಲ್ಲಿಯೇ ಇರಬೇಕೆಂಬ ಆಶೆಯು ತುಂಬಿದ್ದರೂ, ನಿಲ್ಲಲಾರದೆ ಹೊರಟು 

ಬಿಟ್ಟಳು. ಅಭ್ಯಾಸವು ಅವಳನ್ನು ದೇವಸ್ಥಾನಕ್ಕೆ ಕರೆದೊಯ್ಯಿತು 


ಅಲ್ಲಿ ಅವಳು ದಡಬಡನೆ ಒಂದಿಷ್ಟು ಕರ್ಪೂರವನ್ನು ಹಚ್ಚಿ ಶಿವನ 

ಮುಂದೆ ಇಟ್ಟು ನಮಸ್ಕಾರ ಮಾಡಿದಳು. ಎನು ಹೇಳುವುದಕ್ಕೂ ತೋರದೆ 

ಇದ್ದರೂ, ಸಂತೋಷ ಸಮುದ್ರದಲ್ಲಿ ಓಲಾಡುತ್ತಿರುವೆನೆಂಬ ಸಂತೃಪ್ತಿ 

ಯಲ್ಲಿ ಬೀಗುತ್ತಿರುವೆನೆಂಬ, ಭಾವವು, ರೋಮಾಂಚವಾಗಿ ಉಬ್ಬುತ್ತಿರುವ 

ಮೈಯ್ಯಿಂದ, ಕರೆಯುತ್ತಿರುವ ಕಂಬನಿಗಳಿಂದ ವೃಕ್ತವಾಗುತ್ತಿತ್ತು. 



ಒಂಭತ್ತನೆಯಪರಿಚ್ಛೇದ 



ಗ್ರಾಮದಲ್ಲಿ 'ಗದ್ದಲವೋ ಗದ್ದಲ. ಎಲ್ಲರೂ ಬಂದು ಭಟ್ಟರನ್ನು 

ನೋಡುವವರೇ ! ಬೆಳಗಾದ ಅಷ್ಟು "ಹೊತ್ತಿನ ಗಾಗಿ ಭಟ್ಟರ ಸಮಾ 

ಚಾರವು ಊರಿಗೆಲ್ಲ ತಿಳಿದು ಹೋಯಿತು. ಚಿಕ್ಕವರು ದೊಡ್ಡವರು ಎಲ್ಲ 

ರಿಗೂ ಭಟ್ಟರೆಂದರೆ ಒಂದು ಅಸಾಮಾನ್ಯವ್ಯಕ್ತಿಯೆನ್ನಿಸಿತು ಆ ಹಳ್ಳಿಯ 

ವರ ಸ್ವಾಭಾವಿಕವೂ, ಸರಳವೂ ಆದ ಮನಸ್ಸಿಗೆ ತಮಗಿಂತಲೂ ಮಿಗಿ 

ಲಾದ, ಉತ್ತಮವಾದ, ತಮಗೆ ಅರ್ಥವಾಗದ ಪ್ರತಿಯೊಂದೂ ದೈವವೇ 

ಆಗುವುದು. ಅದರಂತೆ ಭಟ್ಟರೂ ದೈವವೇ ಅಧವಾ ದೈವಸಮಾನರೇ 

ಆದರು. ಶಿವನಂತಹವರು ಆ ಭಟ್ಟರು, ಅವರನ್ನು ನೋಡಿದ ದಿನವೇ 

ಸುದಿನನೆಂದು ಎಲ್ಲರಿಗೂ, ಯಾರೂ ಹೆೇಳಿಕೊಡದೆಯೇ, ಖಂಡಿತವಾಗಿ 

ಹೋಯ್ತು. 


ಭಟ್ಟರು ಬೆಳಗೆದ್ದು ಚಳಿಯನ್ನು ಲಕ್ಷಿಸದೆ ಊರಮಂದಿನ ಕೆರೆಗೆ 

ಸ್ಥಾನಕ್ಕೆ ಹೊರಟು ಹೋದರು. ಅಲ್ಲಿ ಅವರ ಸ್ನಾನಾದಿಗಲೆಲ್ಲವೂ ಮುಗಿ  



೩೦ 



ಯುವ ವೇಳೆಗೆ ತಕ್ಕಷ್ಟು ಹೊತ್ತಾಯಿತು. ಕುತೂಹಲಿಯಾದ ಜನತಂಡವು 

ಕೆರೆಯ ಮಂಟಪಕ್ಕೇ ಬಂದು ಬಿಟ್ಟಿತು ಆದರೆ ,ಯಾರೂ ಸಮೀಪಕ್ಕೆ 

ಹೋಗರು. ಹೋಗಲೊಲ್ಲರು. ಎಲ್ಲರೂ ದೂರದಿಂದಲೇ ನೋಡುತ್ತಿ 

ದ್ದಾರೆ. ಎಲ್ಲರಿಗೂ ಗೌರವ; ಒಂದು ತೆರದ ಭೀತಿಗೆ ಸರಿದೊರೆಯಾಗುವ 

ಪ್ರೀತಿ. ಸಮೀಪಕ್ಕೆ ಹೋದರೆ ಅಯ್ಕನವರ ಜಪಕ್ಕೆ ತೊಂದರೆ ಯಾದೀ 

ತೆಂದು ಎಲ್ಲರೂ ಹಿಂಜರಿಯುತ್ತಾರೆ ಆದರೂ ಭಟ್ಟರ ಜಪವೇನೋ ಎಂದಿ 

ನಂತೆ ನಿರ್ವಿಘ್ನವಾಗಿ ನಡೆಯಲಿಲ್ಲ. ಅವರ ಮನಸ್ಸು ಜಪದ ಧ್ಯಾನಮೂರ್ತಿ 

ಯನ್ನು ಚಿಂತಿಸುವುದಕ್ಕೆಪ್ರತಿಯಾಗಿ, ಈ ಪ್ರಪಂಚದ ಒಂದು ಸ್ತ್ರೀ ಮೂರ್ತಿ 

ಯನ್ನು ಚಿಂತಿಸುತ್ತಿದ್ದಂತೆ ತೋರುತ್ತಿತ್ತು. ಆ ವ್ಯಕ್ತಿಯ ಪರಿಚಯವು 

ಭಟ್ಟರಿಗೆ ಅಷ್ಟಾಗಿಲ್ಲ ಆದರೂ ಕೆಳೆತನವನ್ನು ಬಯಸಿದಾಗ, ವಹಿಸುವ 

ಸೌಮ್ಯಭಾವವನ್ನು ವಹಿಸಿ, ಬಗೆಯು, ಒಲಿಸುವುದಕ್ಕೆ ನರ್ತಿಸುತ್ತಾ ಹಾವ 

ಭಾವಗಳಿಂದ ಮುಂದರಿಯುವ ಪಾರಿವಾಳದಂತೆ ಮುಂದಕ್ಕೆ ಹೋಗುತ್ತಿದೆ. 



ಭಟ್ಟರು ಹಾಗೂ ಹೀಗೂ ಮಾಡಿ, ಜಪವನ್ನು ಮುಗಿಸಿ ಕಣ್ಣು 

ತೆರೆದರು. ಕೆರೆಯ ಸೋಪಾನಗಳ ಕಡೆಯಲ್ಲಿ ಒಬ್ಬ ತರುಣಿಯು ನಿಂತಿರು 

ವುದು ಕಣ್ಣಿಗೆ ಬಿತ್ತು. ಮೂಡಿ, ಮೇಲಕ್ಕೆ ಹತ್ತುತ್ತಿರುನ ಸೂರ್ಯನ 

ಕೆಂಬಣ್ಣದ ಎಳೆಬಿಸಿಲಿನಲ್ಲಿ, ಪ್ರಪಂಚವೇ ರಾಗರಂಜಿತವಾಗಿ, ಅನುರಕ್ತರ 

ಮುಖದಂತೆ ಮನೋಹರವಾಗಿರುವ ಆ ವೇಳೆಯಲ್ಲಿ ಸ್ವಭಾವರಕ್ತಿಮಾ 

ರಂಜಿತನಾದ ಆ ಮುಖವು ಇನ್ನು ಉಜ್ವಲವಾಗಿತ್ತು. ಬಹಳ ಹೊತ್ತಿ 

ನಿಂದ ಮುಚ್ಚಿಕೊಂಡಿದ್ದು ತಟ್ಟನೆ ಬಿಟ್ಟು ಭಟ್ಟರ ಕಣ್ಣಿಗೆ ನಿಂತಿರುವುದು 

ತಮ್ಮ ಕುಟುಂಬವೆನ್ನಿಸಿತು. ಸತ್ಯವನ್ನು ಹುಡುಕುವುದರಲ್ಲಿ ನಿಪುಣವಾದ 

ಆತನ ಮನಸ್ಸು, ಅದು ಭ್ರಾಂತಿಯೆಂದು ಗೊತ್ತಾದುದಕ್ಕೂ ನಡುವೆ ಆವ 

ಕಾಶವಿದ್ದಿತು. ಹುಡುಕಿದರೂ ಆ ಭ್ರಾಂತಿಯು ಹುಟ್ಟುವುದಕ್ಕೆ ಏನು ಕಾರ 

ಣನೆಂಬುದು ಮಾತ್ರ ತಿಳಿಯಲಿಲ್ಲ. ಭಟ್ಟರು ಮಾತ್ರ ಶಾಸ್ತ್ರದ ಬಲದಿಂದ 

"ಭ್ರಾಂತಿರೇಷಾ ಭ್ರಾಂತಿಃ'' ಎಂದುಕೊಂಡರು. ಆದರೆ ನೀರಿನಲ್ಲಿ ಕಲ್ಲೆಸೆ 

ದಂತಾಯಿತು. ಕಲ್ಲೆಸೆದ ಮೇಲೆ ಹುಟ್ಟುವ ಗುಂಡು ಅಲೆಗಳನ್ನು ನಿಲ್ಲಿಸಲು 

ಯಾರಿಗೆ ಸಾಧ್ಯ ಅದರಂತೆ ಮನಸ್ಸು ಒಮ್ಮೆ ಕಲಕಿಬಿಟ್ಟಿತೆಂದರೆ ತಿಳಿ 

ರಾಗುವುದು ಸುಲಭವೆ ? 



೩೧ 



ಭಟ್ಟರನ್ನು ನಾಯಿಕನು ಬಂದು ಮನೆಗೆ ಕರೆದುಕೊಂಡು ಹೋದನು 

ಭಟ್ಟರ ಪೂರ್ವೋತ್ತರವನ್ನೆಲ್ಲ ವಿಚಾರಿಸಿಯಾಯಿತು. ಅವರ ತೀರ್ಥ 

ಯಾತ್ರೆಯ ಸಮಾಚಾರವನ್ನು ಕೇಳಿ " ಅದಕ್ಕೇನಂತೆ, ಸುಬ್ರಹ್ಮಣ್ಯವಿಲ್ಲಿಗೆ 

೪೦ ಮೈ ಲಿದೂರ. ಒಂದು ರಾತ್ರಿಯು ಅಲ್ಲಿಗೆ ತಲಪಿಸುವ ಎತ್ತುಗಳಿವೆ. 

ತಾವು ಇನ್ನೆರಡು ದಿನ ಇದ್ದು ಹೋಗಿ ಬಿಟ್ಟು ಬನ್ನಿ” ಎಂದನು. 



ಭಟ್ಟರೂ ಕುತೂಹಲದಿಂದ " ನೀವು ಯಾರು?” ಎಂದು ಪರಿಚಯ 

ವನ್ನು ಬಯಸಿದರು. ಆದರೆ ನಾಯಕನು ಆ ವಿಚಾರವಾಗಿ ಬಹಳ ಮಾತ 

ನಾಡಲಿಲ್ಲ " ನಮ್ಮದೇನಪ್ಪ ! ಕಳ್ಳಬಾಳು! ಇದ್ದದ್ದು ಇದ್ದಂಗೆ 

ಹೇಳುವ ಮಾತೇ ನಾವು ಕಾಣೆವು. ತಮ್ಮಲ್ಲಿ ಅಪನಂಬಿಕೆಯಲ್ಲ. ನಾವು 

ನಂಬೋದೆ ಅಷ್ಟುದೂರ ಅಲ್ಲಿಂದಾಚೆಗೆ ನಾವು ನಂಬೋದೆ ಇಲ್ಲ. ಅದ 

ರಿಂದ ನಾವು ತಮಗೆ ಅರಿಕೆ ಮಾಡಿಕೊಳ್ಳುವುದಿಷ್ಟೆ. ತಾವು ನಮ್ಮನ್ನು 

ಹೆಚ್ಚಾಗಿ ಕೇಳಲೇಬೇಡಿ?"



ಭಟ್ಟರು ಮುಂದರಿಸಲಿಲ್ಲ. ಅಲ್ಲಿಗೇ ಬಿಟ್ಟರು. ನಾಮರೂಪಾತ್ಮಕ 

ನಾದ ಪ್ರಪಂಚ,  ರೂಪಕ್ಕೊಂದು ನಾಮವಿರಲೇಬೇಕು. , ನಾಮವೂ 

ವ್ಯವಹಾರಕ್ಕಾಗಿ, ಯಾವುದಾದರೂ ಸಲ್ಲುವಾಗ ಅದಕ್ಕೇನಂತೆ ಎಂದು 

ಕೊಂಡರು. ಆದರೂ ಭಟ್ಟರ ಮನಸ್ಸು ಅವರ ಉಪದೇಶವನ್ನು ಗಮನಿಸದೆ 

ಬೋಧೆಯನ್ನು ಕೇಳದೆ, ಅಂದಿನ ಬೆಳಗ್ಗೆ ನೊಡಿದ ರೂಪರಾಶಿಯನ್ನು 

ಮತ್ತೆ ಮತ್ತೆ ನೆನೆಸಿಕೊಂಡು, ಇದರ ಹೆಸರೇನು? ಅದನ್ನು ತಿಳಿಯುವ 

ಬಗೆ ಹೇಗೆ? ಎಂದು ಯೋಚಿಸುತ್ತಿತ್ತು. 



ಬಸವಿಗೂ ಅಂದಿನದಿನ ಜಸವು ನೇರವಾಗಿ ನಡೆಯಲಿಲ್ಲ. ಹೊರಗಿನ 

ಹಂಬಲಿಲ್ಲದೆ, ತನ್ನ ಹುಚ್ಚಿನಲ್ಲಿ ತಾನು ಕೊಚ್ಚಿಕೊಂಡು ಹೋಗುತ್ತಾ 

ಸುಖವಾಗಿದ್ದವಳಿಗೆ, ಹೊರಗಿನ ಗಾಳಿಯು ಹೊಸದೊಂದನ್ನು ತಂದು 

ತೂರಿ ಅವಳನ್ನು ಬದಲಾಯಿಸಿತು. ಶಿವನನ್ನು ಹೊರತು ಮತ್ತೇನನ್ನೂ 

ಚಿಂತಿಸದೆ ಇದ್ದ ಮನಸ್ಸು, ಶಿವನಂತೆ ಕಾಣುತ್ತಿದ್ದ ಮತ್ತೊಬ್ಬರ ರೂಪ 

ವನ್ನು ಧ್ಯಾನಿಸತೊಡಗಿತು. ಕಣ್ಣುಮುಚ್ಚಿ ಕುಳಿತುಕೊಂಡರೆ, ಒಂದೊಂದು 



೩೨ 



ದಿನ ಸಂಜೆಯವರೆಗೂ ಕಣ್ಣು ಬಿಡದೆ ಇದ್ದವಳಿಗೆ, ಆಂದು ಕಣ್ಣು ಮುಚ್ಚಿ  

ಕುಳಿತುಕೊಳ್ಳುವುದೇ ಕಷ್ಟವಾಯಿತು. ಯಾರೊ ಬಂದರೆಂದು ಸಂಭ್ರ 

ಮದಿಂದ ಕಣ್ಣುಬಿಡುವಳು. ಯಾರೂ ಇಲ್ಲದಿರುವುದನ್ನು ಕಂಡು ಅ 

ಳಾಗಿ ಮತ್ತೆ ಕಣ್ಣು ಮುಚ್ಚಿಕೊಳ್ಳುವಳು. ವಿಷಯಗಳ ಸೆಳೆತವನ್ನು 

ಅರಿಯದ ಇಂದ್ರಿಯಗಳು, ಇ೦ದ್ರಿ ಯಗಳ ದಮನವನ್ನು ಅರಿಯದ 

ಮನಸ್ಸು, ಆ ವಿಹ್ವಲತೆಯಲ್ಲಿ ತಟ್ಟನೆ ಸೋತುಹೋದುವು, ಆದರೆ ಏನು  

ಮಾಡಬೇಕು? ಹೊಸದೊಂದು ಸ್ಥಿತಿಯ ಹುಟ್ಟಿ ಕೊಂಡಾಗ, ಹಿಂದಿನ 

ನೆರವಿನಲ್ಲಿ ಇಲ್ಲದ ಹೊಸದೊಂದು ಬಂದು ಎದುರಿಗೆ ನಿಂತಾಗ, ಅನನುಭವಿ 

ಯಾದ ಮನಸ್ಸು ಏನುಮಾಡಬಲ್ಲುದು? ಏನೂ ತೋರಲಿಲ್ಲ. ಸುಮ್ಮ 

ನಾಗಬೇಕಾಯಿತು. 





ಆದರೆ ಬಸವಿಯ ಮನಸ್ಸಿನ ಬವಣೆಯಳಿಯಲಿಲ್ಲ. ಅವಳಿಗೆ ಉಂಡ 

ಮೊಸರನ್ನದಲ್ಲಿ ಏನೋ ಕಹಿಯಿದ್ದಂತೆ ತೋರಿತು. ಕಣ್ಣಿಗೆ ಎತ್ತ 

ನೋಡಿದರೂ ಬಯಲೇ ಆಗಿರುವಂತೆ ಕಾಣುವುದು, ಎಲ್ಲಿಗೋ ಹೋಗ 

ಬೇಕೆಂದು ಆಶೆ, ಅಭ್ಯಾಸವಿಲ್ಲವಾಗಿ ಸಂಕೋಚ. ಒಮ್ಮೆ ಹೋಗೋಣ 

ವೆಂದು ಹೋಗುವಳು.ಹೋಗುವುದು ಹೇಗೆ ಎಂದಕೊಂಡು ಹಾಗೆಯೇ 

ಕುತುಕೊಳ್ಳವಳು. ಹಾಗಾಗಿ, ಹಿಗಾಗಿ, ತನ್ನ ವರ್ತನವನ್ನು ತಾನೇ 

ಅರಿಯದವಳಾಗಿ ಸಂಜೆಯ ಐದುಗಂಟೆಯ ಸುಮಾರಿನಲ್ಲಿ ಚಾವಡಿಗೆ ಬಂದು 

ಬಿಟ್ಟಳು. ಯಾರನ್ನು ಕಂಡರೂ ಹೆದರದೆ ಇದ್ದವಳಿಗೆ ಇಂದು ಹೆದರಿಕೆ. 

ಯೇಕೆ ಯಂಬುವುದು ಮಾತ್ರ ತಿಳಿಯದು.


ಬಸವಿಯು ಚಾವಡಿಯ ಬಾಗಿಲಿಗೆ ಬಂದಳು. ಅಲ್ಲಿಂದ ಮುಂದೆ 

ಹೋಗುವುದು ಅವಳ ಕೈಯಲ್ಲಾಗಲಿಲ್ಲ. ಏನಾಯಿತೋ ಏನೋ ತಲೆಯು 

ತಿರುಗಿ ಬಂದಂತಾಗಿ, ದೊಪ್ಪನೆ ಬಿದ್ದು ಬಿಟ್ಟಳು.


ಭಟ್ಟರು ಯೇನೋ ಯೋಚಿಸುತ್ತ ಕುಳಿತಿದ್ದವರು ಸದ್ದಾಗುತ್ತಲೇ 

ತಿರುಗಿನೋಡಿದರು. ಹೆಂಗುಸು ಬಿದ್ದು ಬಿಟ್ಟಿದ್ದಾಳೆ.  ತಟ್ಟನೆ ಎದ್ದು 

ಓಡೋಡಿ ಬಂದರು. ಸುತ್ತಲೂ ಯಾರೂ ಇಲ್ಲ. ಭಟ್ಟರಿಗೆ ಕಷ್ಟಕ್ಕೆ ಬಂತು.



೩೩ 



ಯಾರನ್ನಾದರೂ ಕರೆಯುವುದೋ ಅಥವಾ ತಾವೇ ಅವಳಿಗೆ ಉಪಚಾರ 

ಮಾಡುವುದೊ? ಒಮ್ಮೆ ಉಪಚಾರ ಮಾಡುವುದೇ ಸರಿ ಎನ್ನಿಸಿತು. 

ಇನ್ಕೊಮ್ಮೆ, ಉಂಟೆ? ಎಷ್ಟಾಗಲಿ ಹೆಂಗುಸು. ಊರಿನವರು ಯಾರನ್ನಾ  

ದರೂ ಕೂಗಿದರೆ ಬರುತ್ತಾರೆ ಎನ್ನಿಸಿತು. ಭಟ್ಟರೂ ಕೂಗಬೇಕೆಂದು 

ಕೊಂಡರು. ಆದರೆ ಯಾರದೂ ಪರಿಚಯವಿಲ್ಲ. ಯಾರ ಹೆಸರೂ ತಿಳಿಯದು. 



ಅಲ್ಲದೆ ಭಟ್ಟರಿಗೂ ಎದೆಯ ಅಂತರಾಂತರದಲ್ಲಿ ಅವಳನ್ನು ಮುಟ್ಟಿ

ಉಪಚಾರ ಮಾಡಬೇಕು ಎನಿಸಿತು. ವರ್ಣಾಂತರದವಳೆಂಬುದು 

ತೋರಲಿಲ್ಲ. ಮತ್ತಾರಾದರೂ ಕಂಡು ಏನೆಂದುಕೊಂಡಾರು ಎನಿಸಲಿಲ್ಲ.  

ಕೆಟ್ಟಕಣ್ಣಿನವರು ಕಂಡರೆ ಕಳಂಕವನ್ನು ಹೊರಸಿಯಾರು ಎಂಬುದು ಬಗೆಗೆ 

ಬರಲಿಲ್ಲ. ಇದ್ದಿದ್ದ ಹಾಗೆ ಮನಸ್ಸು "ಯಾರೂ ಬರುವಂತಿಲ್ಲ. ನಾನೇ 

ಏಕೆ ನೋಡಿಕೊಳ್ಳಬಾರದು?" ಎನ್ನಿಸಿತ್ತು. ಮರುಮಾತು ಹುಟ್ಟಲಿಲ್ಲ. 

ಕವಲುನುಡಿಯ ಸುದ್ದಯೇ ಇಲ್ಲ. ಇನ್ನೊಂದುಗಳಿಗೆಯೆನ್ನುವುದರೊಳ 

ಗಾಗಿ ಬಸವಿಯನ್ನು ಭಟ್ಟರು ಎತ್ತಿಕೊಂಡು ಚಾವಡಿಯೊಳಕ್ಕೆ ಕರೆದು 

ತಂದಿದ್ದರು. 


ಚಾಪೆಯಮೇಲೆ ಪ್ರಜ್ಞೆಯಿಲ್ಲನ ಬಸವಿಯ ದೇಹವು ಬಿದ್ದಿದೆ. 

ಮಗ್ಗುಲಲ್ಲಿ ಭಟ್ಟರು ಅವಳಿಗೆ ನೀರು ತಟ್ಟುತ್ತಾ ಕುಳಿತಿದ್ದಾರೆ, ಕೈಗಳು 

ಸೇವಿಸುತ್ತಿವೆ. ಆದರೆ ಅವರ ರಸಿಕ ಮನವು "ಮಲಿನಮಪಿ ಹಿಮಾಂಶೋಃ 

ಲಕ್ಷ್ಮಲಕ್ಷ್ಮೀಂತನೊತಿ'' ಎಂದು ಸಣ್ಣಗೆ ಮೃದುವಾಗಿ, ಮತ್ತೊಬ್ಬರಿಗೆ 

ಕೇಳಿಸದಂತೆ ಹಾಡುತ್ತಿದೆ. ಎರಡುಮೂರುಸಲ ಆ "ಮಲಿನಮಪಿ "

ಮಂತ್ರದ ಜಪವಾದಮೇಲೆ ಭಟ್ಟರಿಗೆ ಅರಿವಾಗಿ " ಇದೇನಿದು” ಎಂದು 

ಕೊಂಡರು. ಬಸನಿಯ ಶೆರಗು ತೆರದಿದ್ದ ಎದೆಯ ಆ ಭೋಗವನ್ನು ಎವೆ 

ಯಿಕ್ಕದೆ ತನ್ಮಯನಾಗಿ ಸುಖದ ಸವಿಗನಸಿನಲ್ಲಿ ಓಲಾಡುತ್ತಿದ್ದ 

ಅವರ ಅರೆಮುಚ್ಛದ ಕಣ್ಣು, " ಇದೇನಿದು?' ಎಂದುಕೊಂಡಕೂಡಲೇ 

ನಿಸ್ತಾರವಾಯಿತು. ಮುಖವು ಗಭೀರವಾಯಿತು. ಮುಂದರಿದು ಹೋಗಿ 

ಎದೆಗೆ ನೀರುತಟ್ಟುತ್ತಿದ್ದ ಕಯ್ಯು ಹಿಂಜರಿಯಿತು. ಭಟ್ಟರು ತಾವು ಅಧೀರ 

ರಾದುದಕ್ಕೆ ತಾವೇ ಬೇಸರಸಟ್ಟುಕೊಂಡರು. ಅತ್ತಿತ್ತ ನೋಡಿ, ನೋಡಿ 



೩೪ 



ದವರು ಯಾರೂ ಇಲ್ಲದಿರಲು, ಹೋಗಲಿ ಯಾರೂ ಕಾಣಲಿಲ್ಲನೆಂದು 

ಸಮಾಧಾನಸಟ್ಟುಕೊಳ್ಳಿಲು ಯತ್ನಿಸಿದರು. 


ಬಸವಿಗೆ ಅರಿವು ಬರುವ ಗುರುತು ಕಾಣಿಸಿತು ಕೂಡಲೇ ಅವರು 

ಅವಸರವಸಾಗಿ ಅವಳ ಶೆರಗನ್ನು ಹೊಚ್ಚಿದರು. ಅವರ ಮುಖದಲ್ಲಿ 

ಗಾಬರಿಯ ತಾನೇತಾನಾಗಿದೆ. ಏಕೋ ಏನೋ ಬೆಚ್ಚಿದ್ದಾರೆ. ಎದೆಯು 

ಡವಡನ ಎನ್ನುತ್ತಿದೆ. ಕಣ್ಣುಗಳು ಅಗಲವಾಗಿವೆ. ಬಿಟ್ಟ ಬಾಯಿಯು 

ಮನಸ್ಸಿನ ಅಸ್ತವ್ಯಸ್ತ ಸ್ಥಿತಿಯನ್ನು ಸೂಚಿಸುತ್ತಿದೆ. 


ಬಸವಿಯು ಕಣ್ಣುಬಿಟ್ಟಳು. ಮುಖದಿಂದ ಎದೆಯವರೆಗೂ ಒದ್ದ 

ಯಾಗಿರುವುದು ತಿಳಿಯಿತು. ಕೆಯ್ಯು ಮುಟ್ಟಿನೋಡಿ, ನೀರಿರುವುದನ್ನು 

ಕಣ್ಣಿಗೆ ತಂದು ತೋರಿಸಿ ಮನಸ್ಸಿಗೆ ತೋರಿದುದು ನಿಜವೆಂಬುದನ್ನು  

ನಿರ್ಧರಿಸಿಕೊಟ್ಟಿತು. ಒಂದುಗಳಿಗೆಯೊಳಗಾಗಿ, ಹೆಣ್ಣಿನ ಬಗೆಯು 

ಎಲ್ಲವನ್ನೂ ಗ್ರಹಿಸಿತು, ತಾನು ಬಿದ್ದಮೊದಲು ಅದುವರೆಗೂ ಹೀಗೆ ಹೀಗೆ 

ನಡೆದಿರಬೇಕು ಎಂಬುದು ಅವಳ ಮನಸ್ಸಿಗೆ ಹೊಳೆಯಿತು. ನಾಚಿ ನೀರಾಗಿ 

ತಟ್ಟನೆ ಎದು ಕುಳಿತುಕೊಳ್ಳಲು ಯತ್ನಿಸಿದಳು. ಸಾಗಲಿಲ್ಲ. ಮತ್ತೆ ಬಿದ್ದು 

ಬಿಟ್ಟಳು 

-----




ಹತ್ತನೆಯ ಪರಿಚ್ಬೇದ. 



ಅರಿವಿಲ್ಲದಾಗ್ರ ಧೈರ್ಯವಾಗಿ ಅವಳನ್ನು ಮುಟ್ಟಿಉಪಚಾರ 

ಮಾಡಿದ ಭಟ್ಟರಿಗೆ,  ಅರಿವಿರುವಾಗ ಮುಟ್ಟುವುದಕ್ಕೆ ಸಂಕೋಚವಾಯಿತು.  

ಆಗ ತಡೆಯರಿಯದೆ ಮುಂದರಿದುಹೋಗಿ ಶೆರಗನ್ನು ತೆಗೆದು ಎಡೆಗೆ ನೀರು 

ತಳೆದ ಕೈಗಳು, ಬೀಳುತ್ತಿರುವವಳನ್ನು ಹಿಡಿದುಕೊಳ್ಳಲು ಹೋಗಲು 

ಒಂದುಗಳಿಗೆ ಹಿಂಜರಿದವು. ಆದರೇನು? ಹುಡುಗಿಯ ಆರ್ತತೆಯೊಂದೆಡೆ, 

ಸಹಾಯಶೂನ್ಯತೆಯೊಂದೆಡೆ, ಅವರ ಮರುಕವೊಂದೆಡೆ- ಅಂತೂ, ಎಲ್ಲವೂ 

ಸೇರಿ ಅವಳಿಗೆ ಉಪಚಾರಮಾಡಿಸಿದವು. 



೩೫ 



ಬೀಳುತ್ತಿದವಳನ್ನು ಹಿಡಿದುಕೊಂಡು, ಎಡೆಗೆ ಒರಗಿಸಿಕೊಂಡು 

ಕುಳಿತರು. ಅವರು ಸಮಾಧಾನದ ಮಾತುಗಳನ್ನು ಹೇಳುತ್ತ ತಲೆಯನ್ನು 

ಸವರುತ್ತ ಭುಜಗಳನ್ನು ಹಿಡಿದುಕೊಂಡು ಕುಳಿತಿರುವಾಗ, ಭಟ್ಟರಿಗೆ 

ಏನೇನೋ ನೆನಪು-ಏನೊ ದಿಗಿಲು, ಎಲ್ಲಿಯದೋ ಸಂತೋಷ. ಒಂದು 

ಉತ್ಸಾಹ, ಒಂದು ಆಶೆ. 


ಸಮಾಧಾನದ ಮಾತುಗಳನ್ನು ಆಡುತ್ತ ಆಡುತ್ತ ಭಟ್ಟರು ತಮ್ಮನ್ನು 

ತಾವೇ ಅರಿಯದವರಾಗಿ, "ನಿನ್ನ ಹೆಸರೇನು?'' ಎಂದುಬಿಟ್ಟರು. ಅವಳು 

ನಾಚಿಕೆಯಿಂದ ಕೆಂಪೇರಿದ ಮುಖವನ್ನು ನೆಲದಕಡೆಗೆ ತಗ್ಗಿಸಿಕೊಂಡು 

ಬಿಟ್ಟಳು. ಅವಳಿಗೆ ಏನೋ ಅಭೂತಪೂರ್ಣವಾದ ಸುಖ. ಆ ತೋಳ 

ತೆಕ್ಕೆಯಲ್ಲಿ, ಎದೆಗೆ ಒರಗಿಕೊಂಡು, ತಾನು ಕುಳಿತಿರುವುದರಲ್ಲಿ ಅವಳಿಗೆ 

ಏನೋ ಹಿತ. ಜೊತೆಗೆ ಹೆಸರೇನೆಂದು ಬೇರೆ ಕೇಳಿಬಿಟ್ಟರು. ಅವಳ 

ಆನಂದಕ್ಕೆ ಪಾರವಿಲ್ಲ. ತುಂಬಿದ ಸಂತಸವು ಮೈಯನ್ನೊಮ್ಮೆ ಅಲುಗಿಸಿ  

ಬಿಟ್ಟಿತು. ಕುಲುಕಿಸಿಬಿಟ್ಟಿತು. ಜುಮ್ಮೆನ್ನಿಸಿ ಝೋಕುತೋರಿ, ಗಾತ್ರ 

ವೆಲ್ಲವೂ ಪುಳಕಿತವಾಗುವಂತೆ ಮಾಡಿಬಿಟ್ಟಿತು. 


ಸಂಗದಿಂದ ಗುಣದೋಷಗಳು ಉಂಟಾಗುವುದರಲ್ಲಿ ಅತಿಶಯವೇನು?  

ಅನಂದಿಯಾದ ದೆೇಹದ ಸಂಪರ್ಕದಿಂದ ಅವರಿಗೂ ಒಂದುತೆರನಾದ 

ಆನಂದವಾಯಿತು. ಬಗ್ಗಿರುವ ಮುಖವು ಅಂತಹ ಮತ್ತೊಂದು ಮುಖ 

ವನ್ನು ಮನಸ್ಸಿನ ಕಣ್ಣಿಗೆ ತಂದುತೋರಿತು. 


ಅವರಿಗೆ ಅರಿವು ಉಳಿಯಲಿಲ್ಲ. "ವಿದ್ವುಂಸಮಪಿಕರ್ಷತಿ'' ಎಂಬ 

ಆಚಾರ್ಯವ ವಾಕ್ಯವು ನಿಜವಾಯಿತು. ಅವರಿಗೆ ತಾವು ಏನುಮಾಡುತ್ತಿರುವೆ 

ನೆಂಬುದು ತಿಳಿಯದೆ, ಇಂದ್ರಿಯಗಳು ಮನಸ್ಸನ್ನು ಭ್ರಾಂತಿಗೊಳಿಸಿ ಬುದ್ದಿಗೆ 

ಮೊಂಕುಹಿಡಿಸಿ, ಕರ್ತೃತ್ವವನ್ನು ತಾವು ವಹಿಸಿ, ಅವರನ್ನು ದುಡುಕುವಂತೆ 

ಮಾಡಿಬಿಟ್ಟವು. ಇದುವರೆಗೂ ಕಾಮವಾಸನೆಯ ಚುಂಬನದ ಹೆಸರು 

ಗಾಣದ ಬಸವಿಯ ಅಧರವು ರದನದಂಶರಂಜಿತವಾಯ್ತು 



ಅವರು ಮತ್ತೆ ಆದೇ ಭ್ರಾಂತಮನದಲ್ಲಿ ಪಕ್ವಸ್ನೇಹದ ಆಭಾಸವು 

ತೋರುವ ಮೋಹದ ಆವೇಶದಲ್ಲಿ ಸ್ನಿಗ್ಧವಾಗಿ, ಸರಳವಾಗಿ, ಮುದ್ದಾಗಿ, 



೩೬ 



ಸವಿಯಾಗಿರುವ, ಮನೋಹರ ಗಂಭೀರ ಸೂಕ್ಷ್ಮಸ್ವನದಿಂದ ಅರ್ಥವಿಲ್ಲದ 

ಪ್ರಶ್ನೆಯಾಗಿ "ನಿನ್ನ ಹೆಸರೇನು?" ಎಂದರು. ಬಸವಿಯೂ ಅದೇ 

ಸ್ಥಿತಿಯಲ್ಲಿ, ಅದೇ ಕಾಮರಾಗದ ತಾನದಲ್ಲಿ, ಹಿಂದಿಗೆ ಮಂದ್ರದ ರಣಿತಕ್ಕೆ 

ಅನುರಣಿತವಾಗಿ ನುಡಿಯುವ ಮಧ್ಯತಂತ್ರಿಯಂತೆ, ತಾನೂ ತನ್ನ  

ಹೆಸರನ್ನು ನುಡಿದಳು.  ಸಂತೋಷದ ಭರವೋ , ನಾಚಿಕೆಯ ಅವೇಶವೋ 

ಹೆಸರು ಹೇಳಿದರೆ ಏನಾದರೂ ಅಭಾಸವಾದೀತೆಂಬ ಶಂಕೆಯೊ, ಅಂತೂ 

ಹೆಸರು ಗಂಟಲಿನಿಂದ ಈಚೆಗೇ ಬರಲಿಲ್ಲ ಏನೋ ಗೊರಗೊರ, ಏನೋ  

ಕೊರಕೊರ. ಸದ್ದು ಅಷ್ಟರಲ್ಲಿಯೇ ನಿಂತುಹೋಯಿತು. 


ಮತ್ತೆಯೂ ಅದೆ? ಪ್ರಶ್ನೆ. ಆದರೆ ಅಕ್ಷರಗಳು ಅಥವಾ ಪದಗಳು 

ಹೆಚ್ಚು ಕಡಿಮೆಯಾಗಿವೆ. ಪದಗಳು ಇಲ್ಲದಿದ್ದರೆ ಅರ್ಧವು ತಿಳಿಯುವುದಿಲ್ಲ 

ವೇನು ? ಮನಸ್ಸಿನ ಅರ್ಥ ಸ್ಪುಟವಾಗಿ ವ್ಯಕ್ತವಾಗಬೇಕಾದರೆ, ಪದಗಳ 

ಸಹಾಯವು, ಹೃದಯವು ಬೇರೆ ಬೇರೆಯಾಗಿದ್ದಾಗ, ಬೇಕು. ಹೃದಯಗ 

ಳೆರಡೂ ಸಮರಸವಾಗಿ ಏಕಭಾವವಾಗಿ ಬೆರೆದೊಂದಾಗಿರುವಾಗ ಪದವೇಕೆ? 

ಅಥವಾ ನಿಷ್ಕ್ರಿಯೆಯಿಂದ ಅರ್ಥವು ವ್ಯಕ್ತವಾಗುವಾಗ ಪದಗಳ ಭಾರ 

ವೇಕೆ ? ಇನ್ನೊಮ್ಮೆ ನಗೆ, ನುಣ್ಣಗೆ, ಎಂದ' ಆ' ಒಂದು ಸಾಕಾಯಿತು. 

ಬಸವಿಯು ಮತ್ತೆ ನೀರುನುಂಗಿ ಗಂಟಲನ್ನ ಸರಿಮಾಡಿಕೊಂಡು "ಗೌರಿ" 

ಎಂದಳು.


ಭಟ್ಟರ ಮನಸ್ಸು, ಏನು ಕೇಳಬೇಕೆ೦ದಿತ್ತೋ, ಯಾವ ಪುಣ್ಯನಾಮದ 

ಪವಿತ್ರಾಕ್ಷರಗಳನ್ನು ಕೇಳಿ ಧನ್ಯವಾಗಬೇಕೆಂದುಕೊಂಡಿತ್ತೊ, ತಟ್ಟನೆ 

ಕೆರಳಿತು. ನಿರಶೆಯ ದಳ್ಳುರಿಗೆ ಸಿಕ್ಕಿ, ಸರ್ರನೆ ಸೀದು ಸೀಕರಿಯಾಗಿ, 

ಜಳ್ಳಾಯಿತು. ಅವರು ಅವಳನ್ನು ಅ೦ತು, ಅತ್ತ ತಳ್ಳಿ, ಜಗ್ಗನೆ ಮೇಲ 

ಕ್ಕೆದ್ದರು. ಆಕಾಶವೆಲ್ಲವು ತಟ್ಟನೆ ಬಂದು ಮೇಲೆಬಿದ್ದು ಕವಿದುಕೊಂಡಿದೆ 

ಯೆಂಬಂತೆ, ಯಾರಾದರೂ ಹಿಡಿದು ಅವುಕುತ್ತಿದ್ದರೆ ತಪ್ಪಿಸಿಕೊಳ್ಳುವುದಕ್ಕೆ 

ಏಳುವಂತೆ, ತಟ್ಟನೆ ಎದ್ದರು. ಅಥವಾ ಹಾವು ಹಿಡಿದರೆ, ಚೇಳು ಕುಟುಕಿ 

ದರೆ ಏಳುವಂತೆ ಎದ್ದರು,


೩೭


ಅವರಿಗೆ ತಮ್ಮ ಕಾರ್ಯದ ಆಕರಣೀಯತ್ವವು ಮೂರ್ತಿಮತ್ತಾಗಿ 

ಎದುರಿಗೆ ನಿಂತಂತಾಯಿತು, ಅಕಾರ್ಯವನ್ನು ಮಾಡುವರು ಎಂಬುದನ್ನೇ 

ಅರಿಯದ, ಅವರ ಮನಸ್ಸಿಗೆ ತಾವು ಮಾಡಿರುವ ಮಹಾಪರಾಧ, 

ಪಾತಕ, ಪ್ರಾಯಾಶ್ಚಿತ್ತವಿಲ್ಲದ ಪಾಪವೆನ್ನಿಸಿತು. ಏನು ಮಾಡಬೇಕು 

ಎಂಬುದನ್ನರಿಯದವರಾಗಿ, ಮಾಡಿದುದನ್ನು ಅಳಿಸುವುದು ಹೇಗೆ ಎಂದು 

ತಿಳಿಯದವರಾಗಿ, ಮೊದಲಿನ ಧೀರವೃತ್ತಿಯನ್ನು ಅವಲ೦ಬಿಸಲು 

ಗೊತ್ತಿಲ್ಲ ದವರಾಗಿ, ಭ್ರಾಂತರಾಗಿ, ಮುಗ್ಧರಾಗಿ, ಬಿಟ್ಟ ಕಣ್ಣು ಬಿಟ್ಟಂತೆ, ಗುರಿ 

ಯಿಲ್ಲದ ನೋಟವನ್ನು ಅತ್ತಿತ್ತ ತಿರುಗಿಸುತ್ತಿದ್ದರು. ಅಸ್ಥೈರ್ಯವು, ಅಲೆ 

ತವು ಸರ್ವಾಂಗಗಳಲ್ಲಿ ಮನೆಮಾಡಿರಲು, ಭಟ್ಟರು ಗಾಳಿಗೆ ಸಿಕ್ಕಿದ ಅರಳಿ 

ಯೆಲೆಯಂತೆ ಗಡಗಡನೆ ನಡುಗುತ್ತಿದ್ದುದರಲ್ಲಿ ಆಶ್ಚರ್ಯವೇನು ?


ಗೌರಿಯು ಅವಾಕ್ಕಾಗಿ, ಗಾಬರಿಗೊಂಡು, ಅರೆತಿರುಗಿದ ಮೈಯ್ಯನ್ನು 

ಊರಿದ ತೊಳುಗಂಬದ ಮೇಲೆ ವಾಲಿಸಿ, ಅವರ ದುರುಗುಟ್ಟಿಕೊಂಡು 

ನೋಡುತ್ತಿದ್ದಳು. ಅವಳಿಗೆ ಮನಸ್ಸು ಸ್ವಚ್ಛವಾಗುವದಕ್ಕೆ ಪ್ರತಿಯಾಗಿ 

ಚಂಚಲವಾಯಿತು. ಯೋಚನಗಳು ತರಂಗ ತರಂಗವಾಗಿ ಹೊರಟವು. 

ತನ್ನನ್ನೊಂದುವೇಳೆ ಯಿರುವ ಬೀದಿಯ ಬಸದಿಯೆ೦ದುಕೊ೦ಡಿದ್ದಾರು 

ಎನ್ನಿಸಿ, ಒ೦ದುಗಳಿಗೆ ಕಣ್ಣು ಅರಳಿ ಕೆಂಪಿನ ಕಡೆಗೆ ಹೊರಳಿತ್ತು. ಆದರೆ 

ಲಿದವರಲ್ಲಿ ಮುನಿಯುವುದೆಂತು ? ಕಿನಿಸು ಕನಸಾಗಿ, ತೋರುವುದರಲ್ಲಿದ್ದ

ಕೋಪವು ಮರೆಯಾಗಿ, ಮತ್ತೆ ಸಂಕಟವೇರಿ, ಆ ಸಂಕಟದ ತೊಳಲುದನಿ 

ಯಲ್ಲಿ ಒಡೆದು ತೋರುತ್ತಿರಲು “ ಗಂಡೆಂದು ಈ ಮೈ ಮುಟ್ಟಿದವರಿಲ್ಲ “

ಒಡೆಯಾ ?” ಎಂದಳು.


ಆಡಿದ ಮಾತುಕೇಳಿ ಅವರಿಗೂ ನಾಲಿಗೆಯಾಡಿತು . “ ನಾನೂ 

ಯಾರನ್ನೂ ಮುಟ್ಟಿರಲಿಲ್ಲ” ಎಂದರು.


ಭಾವವು ಒಮ್ಮೆ ಮೂಡಿತೆಂದರೆ, ವೃತ್ತಿಯೊಮ್ಮೆ ಬಾಹ್ಯಮುಖ 

ವಾಯ್ತೆಂದರೆ, ಯೋಚನೆಗಳು ಹೊರಡುವುದಕ್ಕೆ ಸಾವಕಾಶವೇ ? ಮೂಢ 

ವಾಗಿ, ಮುಗ್ಧವಾಗಿ, ನಿಜವಾಗಿ ಅಡಗಿ ಕುಳಿತಿದ ಅವರ ಮನಸ್ಸು 


೩೮



ಏನೇನೋ ಭಾವನೆಗಳನ್ನು ತಂದೊಡ್ಡಿತು. ಸಮೃದ್ಧವಾದ ಮನೆ, ನಗು 

ನಗುತ್ತ ನಲಿಯುವ ಮಕ್ಕಳು, ತನ್ನ ಭಾಗ್ಯಲಕ್ಷ್ಮಿಯಂತೆ ಒಪ್ಪುವ ಮಡದಿ, 

ಎಲ್ಲರಲ್ಲೂ ಅಭಿಮಾನವಿಟ್ಟುಕೊಂಡು ಸಂತೃಪ್ತವಾಗಿರುವ ಹೃದಯದಿಂದ 

ಸಂಸಾರ ಮಾಡಿಕೊಂಡಿದ್ದ ತಾನು, ಎಲ್ಲವೂ ವೊಮ್ಮೆ ಮನೋವೇಗದಲಿ, 

ಮಿಂಚಿನ ಬೆಳಕ೦ತೆ, ಚಿತ್ತಭಿತ್ತಿಯಮೇಲೆ ಕಾಣಿಸಿ ಮರೆಯಾದವು. 

ಉತ್ತರ ಕ್ಷಣದಲ್ಲಿ, ಮುಚ್ಚಂಚೆಯಲ್ಲಿ, ಊರಮಧ್ಯದ ಚಾವಡಿಯಲ್ಲಿ, ಅಜ್ಞಾತಕುಲಗೋತ್ರಳಾದ ಯಾವಳೋ ಒಬ್ಬಳನ್ನು ತಾನು..........ಅದೂ

ಕಾಣಿಸಿತು.


ಭಟ್ಟರ ಬೇಸರವು ಮಟ್ಟು ಮೀರಿತು ಜುಗುಪ್ಸೆಗೆ ಅತಿಯೂ, 

ಆಳವೂ ಇಲ್ಲದಂತಾಯ್ತು. ಸಂಕೋಚವು ತಾನೇ ತಾನಾಯಿತು. ಆತ್ಮ 

ನಿಂದೆಯ ಆಕೆಗೆ ಮೇರೆಯಿಲ್ಲವಾಯ್ತು. ಭಟ್ಟರು ಅ ನಿಲ್ಲದೆ ಹೊರಟು 

ಬಿಟ್ಟರು. ಸುರಿಯುವ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೊದೆದಿದ್ದ 

ಶಾಲನ್ನು ಸವರಿಸಿಕೊಳ್ಳುತ್ತಾ, ಅತ್ತಕಡೆ ಹೊರಟುಹೊದರು. 

-----


ಹನ್ನೊಂದನೆಯ ಪರಿಚ್ಛೇದ 



ಒಂದುಗಳಿಗೆಯೊಳಗಾಗಿ ಬಸವಿಯ ಪ್ರಬಲವಾದ ಬದಲಾವಣೆಯು 

ನಡೆದು ಹೋಯಿತು, ನಟ್ಟಡವಿಯ ಚಿಗುರೆಯಂತೆ ಅಂಕೆಸಂತೆಗಳಿಲ್ಲದೆ 

ತಾನೇ ತಾನಿಗಿದ್ದವಳಿಗೆ ಎಲ್ಲಿಯದೋ ಒಂದು ಸಂಕೋಚವು, ಕೊರತೆಯು 

ಬಂದು ಅವರಿಸಬಿಟ್ಟಿದೆ ಆವರಿಸುತ್ತಿರುವ ಆ ಚಿಂತೆಯಲ್ಲಿ, ಅವಳು ಕುಗ್ಗಿ 

ದ್ದಾಳೆ. ನಿಸ್ತೇಳಾಗಿ ಹೋಗಿದ್ದಾಳೆ. ನಗುವಂತಹ ನಲವಿಲ್ಲದಿದ್ದರೂ 

ಒಲೆಯುವಂತಸ ಸಂತಸವಿಲ್ಲದಿದ್ದರೂ, ತುಂಬಿದ ಕೊಡದಂತೆ ತೃಪ್ತಿಯಿಂದಿ 

ದವಳು, ಹಳು ಹೊಡೆದ ಹೂವಿನಂತೆ ಆಗಿಹೋಗಿದ್ದಾಳೆ. 



೩೯ 



ಬಸವಿಯು ಬಹಳಹೊತ್ತು ಚಾವಡಿಯಲ್ಲೇ ಕುಳಿತಿದ್ದಳು. ಏನೋ 

ಹರಿಯದ ಹತ್ತದ ಆಲೋಚನೆಗಳು. ಅಂತಹ ಆಲೋಚನೆಗಳನ್ನು ಅವಳು 

ಅರಿಯದವಳು. ಅವಳಿಗೆ ತಡೆಯಲಾರದಷ್ಟು ತಲೆನೋವು ಬಂದಿತು. 

ಅಲ್ಲಿಂದ ಎದ್ದಳು. ಸಂಜೆಯ ಹೊತ್ತಿನಲ್ಲಿ ಸ್ನಾನಮಾಡುವುದಕ್ಕೆ ಅವಳು 

ಹೊರಟುಹೋಗಿರಬೇಕು. ಅವಳು ಆ ವೊತ್ತು ಹೋಗಿಲ್ಲ. 


ಬಸವಿಯು ನೇರವಾಗಿ ದೇವಸ್ಥಾನಕ್ಕೆ ಹೋದಳು. ಅಲ್ಲಿ ದೇವರ 

ದೀಪವೂ ಕುಡುಗಟ್ಟಿ ಕೊಂಡು ಅವಳಂತೆಯೇ ಮೊಂಕಾಗಿತ್ತು. ಅಭ್ಯಾಸ 

ಬಲದಿಂದ ಅಲ್ಲಿ ಹೋಗಿ, ಆ ಕುಡುವನ್ನು ಮಿಡಿದು ಬತ್ತಿಯೆತ್ತಿ ದೀಪವನ್ನು 

ಬೆಳಗಿದಳು. ಶಿವನೆ! ನನ್ನ ದುಃಖವನ್ನೂ ಹೀಗೆಯೇ ಮಿಡಿಯಬಾರದೇ"  

ಎಂದುಕೊಂಡಳು. ಕಣ್ಣಿನಲ್ಲಿ ಎರಡು ಹನಿಯುದುರಿ ಒಂದು ಕಂಬ 

ವನ್ನೂರಗಿಕೊಂಡು ಕುಳಿತವು, ನಿರ್ಜನವಾದ ಪ್ರದೇಶವೆಂದು ಖಂಡಿತ 

ಮಾಡಿಕೊಂಡು ಒತ್ತುವ ತನ್ನ ದುಃಖಕ್ಕೆ ಎಡಗೊಟ್ಟಳು. ಕಣ್ಣಿನಲ್ಲಿ 

ನೀರು ಧಾರಾಳವಾಗಿ ಹರೆದು ಹೋದಿತು ನಿರರ್ಗಳವಾಗಿ, ತಡೆಯಿಲ್ಲದೆ, 

ಏಕೆಂದು ಕೇಳುವವರಿಲ್ಲದೆ ಒಂದೇ ಸಮನಾಗಿ ಅತ್ತೂ ಅತ್ತೂ, ಅತ್ತು 

ಬಿಟ್ಟಳು. 



ಅವಳಿಗೆ ಆನೇಗವನಿಳಿದು, ಶಾಂತಿಯಾಗುವ ವೇಳೆಗೆ ಚೆನ್ನಾಗಿ ಕತ್ತ 

ಲಾಗಿತ್ತು. ತಾನು ಹುಟ್ಟಿದುದು ಏಕೆಂದು ನಿಂದಿಸಿಕೊಂಡು, ಹುಟ್ಟಿಸಿದೆ 

ಏಕೆಂದು ಶಿವನನ್ನುದೂರಿ, ಮಾಡುವುದಕ್ಕೆ ಕೆಲಸವಿಲ್ಲದೆ, ಕುಳ್ಳಿರುವುದಕ್ಕೆ 

ಸಾಧ್ಯವಿಲ್ಲದೆ, ಸ್ಥಾನವನ್ನಾದರೂ ಮಾಡಿ ಬರೋಣವೆಂದು ಹೊರಟಳು. 



ಕೆರೆಗೆ ಬಂದಳು. ಎಂದೂ ಇಳಿಯುತ್ತಿದ್ದ ಕಡುವಿಗೆ ಹೋಗಲಿಲ್ಲ 

ಅಲ್ಲಿ ತನಗೆ ಬೇಡವಾದ ಅಥವಾ ಆಗ ತಾನು ನೋಡಲು ಇಷ್ಟಪಡದ 

ಯಾರೋ ಇರುವರೆಂದು ಅದನ್ನು ಬಿಟ್ಟು, ಬೇರೆ ಕಡುವಿಗೆ ಹೋದಳು. 

ಅಲ್ಲಿಗೆ ಸಂಜೆಯಾದ ಮೇಲೆ ಯಾರೂ ಹೋಗುತ್ತಿರೆಲಿಲ್ಲ ಅಲ್ಲಿ ಮೆಟ್ಟಲು 

ಎತ್ತರ, ಸಾಲದೆ ಪದೇ ಪದೇ ಹೋಗಿ ಬರುವವರು ಕಡಿಮೆಯಾಗಿ 

ಪಾಚಿಯು ಹೆಚ್ಚು, ಜಾರಿಕೆ ಬಹಳ. ಇದೆಲ್ಲವೂ ಸೇರಿ, ಅಲ್ಲಿ ಒಂದು 



೪೦ 



ದೆವ್ವವಿರುವುದವಾಗಿಯೂ, ಸಂಜೆಯಾದಮೇಲೆ ಅಲ್ಲಿ ಅದರ ಸಾಮ್ರಾಜ್ಯ 

ವಾಗಿಯೂ ಜನಜನಿತವಾದ ವದಂತಿ. ಅಂತೂ ಅದನ್ನು ವಿಚಾರಿಸುವವ 

ರಿಗಿಂತ, ನಂಬಿವವರೇ ಹೆಚ್ಚು ಸಲಭವಾಗಿ ನಂಬಬಹುದಾದ ಯೆಡೆ 

ಯಲ್ಲಿ, ಕಷ್ಟವಾದ ಸಂದೇಹಕ್ಕೆ ಎಡಗೊಟ್ಟು ವಿಚಾರಿಸುವ ಶ್ರಮವನ್ನೇಕೆ 

ವಹಿಸಬೇಕು ? 



ಸ್ನಾನಕ್ಕಿಳಿದಳು. ಮತ್ತೆ ಅದೇ ಯೋಚನೆ ತಿರುಗಿಯೂ ಅಳು 

ಈ ಹಾಳುಜನ್ಮ ಹೀಗೆಯೇಹೋಗಿಬಿಟ್ಟರೆ, ಎನ್ನಿಸಿತು... ನಡುವಿನುದ್ದ 

ನೀರಿನಲ್ಲಿ ನಿಂತಿದ್ದಳು. ಹಾಗೆಯೇ ಬಿದ್ದು ಬಿಡಲೇ ಎನ್ನಸಿತು ಆದರೆ 

ಆಶೆ ಅಷ್ಟಲ್ಲದೆ ಹೇಳಿದನೆ ಆ ಕವಿಕುಲಗುರುವು "ಆಶಾಬಂಧಃ ಕುಸುಮ

ಸದೃಶೊ ಪ್ರಾಯರೋಹ್ಯಂಗನಾನಾಂ ಸದ್ಯಃ ಪಾತಿ ಪ್ರಣಯಿ ಹೃದಯೇ 

ವಿಪ್ರಯೋಗೇ ಋಣದ್ಧಿ" ಎಂದು. 



ಅವಳಿಂದ ಬೀರಿನಲ್ಲಿ ಬೀಳಲು ಸಾಧ್ಯವಾಗಲಿಲ್ಲ. ಮೈನಡುಗಿತ್ತ 

ಅವಳು ಎಂದೂ ಇಲ್ಲದಷ್ಟು ಹೆದರಿದಳು. ಆಲ್ಲಿ ದೈವತ್ವವಿದ್ದಿತಲ್ಲ ಅದೇ 

ಹೆದರಿಸಿರಬೇಕು ಎನ್ನಿಸಿತು. ಅಂತೂ, ನೀರಿಗೇನೋ ಬೀಳಲಿಲ್ಲ. ಸ್ನಾನ 

ಮಾಡಿಕೊಂಡು ಮೇಲಕ್ಕೆ ಬಂದಳು. 



ಎಂದಿನಂತೆ ಮಡಿಯನ್ನು ತಂದಿರಲಿಲ್ಲ. ಚಳಿಯಲ್ಲಿ ನಡುಗುತ್ತ 

ಹಾಗೆಯೇ ಅಲ್ಲಯೇ, ಬಟ್ಟೆಯಿಂದ ನೀರು ಸೋರುತ್ತಿರುವ ಹಾಗೆಯೇ, 

ಕುಳಿತುಕೊಂಡಳು ಮಗ್ಗುಲಲ್ಲಿದ್ದ ಹಂತದ ಮೇಲೆ. ಅಡ್ಡಗೈ ಮೇಲೆ ತಲೆ 

ಒರಗಿದಳು. ಮತ್ತೆ ಅಳುವಿಗೆ ಮೊದಲಾಯಿತು. ಅಳುವಿನ ಭೀತಿಗೆ 

ಚಳಿಯು ಓಡಿತು. 



ಅಲ್ಲಿಯೂ ಅವಳನ್ನು ಅಳಬೇಡವೆನ್ನುವವರು. ಯಾರೂ ಬರಲಿಲ್ಲ, 

ಅವಳು ಕುಳಿತು ಸುಮಾರು ಅಷ್ಟು ಹೊತ್ತಾಯಿತು. ಭುಜದ ಮೇಲಿನ 

ಬಟ್ಟೆಯು ಆಡುವಗಾಳಿಗೆಸಿಕ್ಕಿ ಒಣಗುವಷ್ಟು ಹೊತ್ತು ಕುಳಿತ್ತಿದ್ದಳು. ಅವ 

ಗೆ ಇಹಲೋಕದ ಚಿಂತೆಯಿಲ್ಲ ಅವಳ ಚಿಂತೆಗೆ ರೂಪವಿಲ್ಲ ಒಂದು 



೪೧ 



ಮುಖವಿಲ್ಲ ಅವಳ ಶಿವನೇ ಎದುರಿಗೆ ಬಂದು ನಿಂತು ಆ ಏನು ಬೇಕು? 

ಹೇಳು ಕೊಡುವೆನು?” ಎಂದರೂ, ಅವಳು ತನ್ನ ಆಶೆಯನ್ನು ಹೇಳಿಕೊಳ 

ಲಾರಳು. ಅದು ಬೇಕೆಂಬ ಹಿಡಿತವೋ ಬೇಡವೆಂಬ ಬಿಡುವಿಕೆಯೋ ಅದೇ 

ಅವಳಿಗೆ ತಿಳಿಯದು. ಅಂತೂ ಗಾಳಿಗೆ ಸಿಕ್ಕಿದ ಎಳೆ ಬಳ್ಳಿಯಂತೆ, ತನ್ನ 

ಭಾರದಿಂದ ತೊನೆಯುವ ಎತ್ತರದಲ್ಲಿರುವ ಮಾವಿನ ಕಾಯಂತೆ, ಅವಳು 

ಅಲ್ಲಾಡುತ್ತ ಇದ್ದಾಳೆ. ಹೃದಯದಲಲ್ಲಿ ಆದ ವಿಕ್ಷೋಭನು, ಕಲ್ಲೋಲವು 

ಕಂಬನಿಯನ್ನು ಹರಿಯಿಸುವ ಕಾರ್ಯದಲ್ಲ ಪ್ರವೃತ್ತವಾಗಿದೆ. ಅಂತೂ 

ಕ್ಷತವಿಕ್ಸತವಾಗಿರುವ ಅವಳ ಹೃದಯವು ಹೇಗಿರಬಹುದು ಎಂದು ಹೇಳಿದರೆ, 

ನೋಡಿದವರು, ಅತ್ತು ಅತ್ತು ಕೆಂಡದಹಾಗಿರುವ ಅವಳ ಕಣ್ಣುಗಳಂತೆಯೇ 

ಇದೆಯೆಂದು ಹೇಳುವರು. 



ಇನ್ನೂ ಅಷ್ಟು ಹೊತ್ತಾಯಿತು. ಬೆನ್ನಿನ ಮೇಲಿನ ಬಟ್ಟೆಯೂ 

ಒಣಗುವಷ್ಟು ಹೊತ್ತಾಯಿತು. ಆಗ, ಅತ್ತಕಡೆಯಿಂದ ಹಳ್ಳಿಯಕಡೆಗೆ 

ಯಾರೋ ಇಬ್ಬರು ಹೋಗುತ್ತಿದ್ದಾರೆ. ಇಬ್ಬರ ಕಯ್ಯಲ್ಲಿಯೂ ಹಣೆ 

ಮಟ್ಟದ ದೊಡ್ಡ ದೊಣ್ಣೆಗಳು. ಕರಿಯ ಕಂಬಳಿಯ ಮುಸುಕು ಬಲವಾಗಿದೆ. 

ಇಬ್ಬರೂ ನಿರವ, ನಿಷ್ಪಂದ. ಇಬ್ಬರ ದೊಣ್ಣೆಗಳ ಸದ್ದೂ ವಿಚಿತ್ರವಾಗಿದೆ. 

ದೂರದಿಂದ ಕೇಳಿದರೆ ಯಾವುದೋ ಮೃಗವು ನಡೆದುಕೊಂಡು ಹೋಗುತ್ತಿ 

ರುವ ಶಬ್ದದಂತೆ ಕೇಳಿಸುವುದು. 



ಇವಳು ತಲೆಯೆತ್ತುವ ವೇಳೆಗೂ ಅವರು ಅಲ್ಲಿಗೆ ಬರುವ ವೇಳೆಗೂ 

ಸರಿಯಾಯಿತು. ಹಿಂದಿನವನ ಕಣ್ಣು ಬಲು ಚುರುಕು. ಆ ಕತ್ತಲಲ್ಲಿಯೂ 

ಸುಮಾರು ಹತ್ತು ಮಾರಿನಷ್ಟು ದೂರದಲ್ಲಿ, ಕೆಳಗೆ, ನೀರಿನ ಸಮೀಪದಲ್ಲಿ, 

ಮೆಟ್ಟಲುಗಳಿಗೆ ಹತ್ತಿಕೊಂಡಂತೆ, ಇರುವ, ವಸ್ತುವೋ, ವ್ಯಕ್ತಿಯೋ ಚಲಿ 

ಸಿದುದನ್ನು ಕಂಡು, ಸಣ್ಣದನಿಯಲ್ಲಿ "ಅಲ್ಲಿಯೇನೋ ಅದೆ ಅನ್ನೊಹಂಗದೆ' 

ಎಂದನು. ಇಬ್ಬರೂ ಹಾಗೆಯೇ ನಿಂತು ಕಣ್ಣಿಕ್ಕಿನೋಡಿದರು. ಹೌದು, 

ಯೇನೋ ಇದೆ. ಮಂದಿನವನು ಒಂದು ಹೆಜ್ಜೆ ಮುಂದಿಟ್ಟು " ಯಾರು” 

ಎಂದನು. ಸಣ್ಣನಿದ್ದರೂ ಗಂಭೀರವಾಗಿ ಮರ್ಮಭೇದಿಯಾದ ಆ ದನಿಗೆ 



೪೨ 



ಉತ್ಕರಕೊಡದಿರಲು ಯಾರಿಗೂ ಸಾಧ್ಯ ವಿಲ್ಲ. ಅಲ್ಲಿಂದ ಉತ್ತರ ಬಂತು. 

ಉಪ್ಪುಕಾರವೇನೂ ಇಲ್ಲದೆ ಒಂದು ಬರಿಯ "ನಾನು" ಅಷ್ಟೆ 



ನಾಯಕನಿಗೆ ಆ ದನಿಯು ಗೊತ್ತಾಯಿತು: ಗುರುತು ಸಿಕ್ಕಿತು. ಆದರೆ 

ಅನುಮಾನ. ಬಸವಿಯು ಆತ್ತುದನ್ನು ಅವನು ಎಂದೂ ಕಾಣ... " ಈ 

ದನಿಯು ಅವಳದೇ. ಆದರೆ ಅತ್ತು ಭಾರವಾಗಿದೆ. ಇದೇನು?" ಎಂದು 

ಕೊಂಡು, ಸರಸರನೆ ಇಳಿದು ಅಲ್ಲಿಗೆ ಹೋದನು. ಹೌದು ಬಸವಿ. 



ನಾಯಕನಿಗೆ ಆಶ್ಚರ್ಯವಾಗಿ " ಇಷ್ಟು ಹೊತ್ತಿನಲ್ಲಿ ಇಲ್ಲಿ 

ಕೂತಿದೀಯೇ?" ಎಂದನು. ಅವಳೂ ಏನೋ ಕೂತುಬಿಟ್ಟೆನೆಂದಳು. 

ಅವನು "ಏನೋ ಹಂಗೆ ನೀರಿನಲ್ಲಿ ಉರುಳಿಕೊಂಡು ಈಗ ಇರೋದೈಯ್ಯದ 

ಜೊತೆಗೆ ನೀನೂ ದೈಯ್ಯವಾಗಿ, ಜನಾನ ಮುರುಕೋಬೇಕೂಂತ ಕೂತು 

ಕೊಂಡಿದೀಯೋ? ಬಾ! ಬಾ! ನಡೀ ಹೋಗೋಣ? ಎಂದನು. 



ಬಸವಿಗೂ ಹೌದು ಎನ್ನಿಸಿತು. ನೀರಿನಲ್ಲಿ ಬಿದ್ದರೆ ದುರ್ಮರಣ. 

ದುರ್ಮರಣವಾದರೆ ದೈಯ್ಯವಾಗುವುದು. ದೈಯ್ಯವಾದರೆ ಇನ್ನೊಬ್ಬ 

ರನ್ನು ಗೋಳು ಹುಯ್ದು ಕೊಳ್ಳುವುದು. ಇದೇಕೆ  ಅನ್ಯಾಯ ಎಂದು 

ಕೊಂಡು ಹೊರಟಳು. 



ದಾರಿಯಲ್ಲಿ ಬರುತ್ತ ನಾಯಕನು ಹಿಂದಿನವನನ್ನು ಕುರಿತು "ಎಲಾ 

ಇವಳನ್ನು ನೋಡುತ್ತಲೂ ನೆನೆಸಾಯಿತು. ನಾಳೆ ಆ ಚುರುಕೆತ್ತು ಯಾವ 

ಗಾಡೀಗೂ ಕಟ್ಟಕೂಡದು. ನಾಳಿದ್ದು ಅಯ್ಯನವರನ್ನು ಕಳಿಗಿಸಿಕೊಡ 

ಬೇಕು ?' ಎಂದನು. 



ಬಸನಿಗೆ ಎದೆಯು ಜಗ್ಗೆಂದಿತು. “ಹಾಗಾದರೆ ನಾಳಿದ್ದು ಹೊರಟು 

ಹೋಗುವರೇ ಮುಂದೇನುಗತಿ?" ಎನ್ನಿಸಿ, ಯೇಕೋ ಯೇನೋ 

ನಾನು ನೀರಿನಲ್ಲಿ ಬಿದ್ದು ಹೋಗಿದ್ದರೆ ಚೆನ್ನಾಗಿತ್ತು. ಯೇಕೆ ಯೆದ್ದು 

ಬಂದೆ? " ಎಂದುಕೊಂಡಳು. ಹಾಗೆಯೇ ಇನ್ನೂ ಒಂದು ಮಾತು ನೆನ 

ಪಿಗೆ ಬಂತು. ಇನ್ನೂ ಒಮ್ಮೆ ಅವಳು ಚಕಿತಳಾದಳು.  " ಈ ಮಾತು 



೪೩ 



ನನ್ನನ್ನು ನೋಡಿ ಯೇಕೆ ನೆನೆಪಾಗಬೇಕು? ಸಂಜೆಯಲ್ಲಿ ಇವನು ಚಾವ 

ಡಿಯ ಬಳಿಯಲ್ಲಿದ್ದನೇ? ಕಂಡನೇ ? ಹುಟ್ಟಿದ ಸಂದೇಹವು ಅಲ್ಲಿಯೇ 

ಅಡಗಿಹೋಯಿತು. " ನೋಡಿದರೇನು?" ಎಂದುಕೊಂಡಳು. ಹೆಣ್ಣು 

ರೇಗಿತು. ಹುಲಿಗೆ ತಾನೇ ಅಷ್ಟು ಥೈರ್ಯವುಂಟೇನು? 


=====



ಹನ್ನೆರಡನೆಯ ಪರಿಚ್ಛೇದ, 



ಭಟ್ಟರು ಹೊರಡುವಾಗ ಆಲೋಜಿಸಿದ್ದಂತೆ, ಷಷ್ಠಿಯದಿನನೇ 

ಸುಬ್ರಮ್ಹಣ್ಯಕ್ಕೆ ಹೋದರು. ಯಥಾಸಾವಕಾಶವಾಗಿ ಸ್ನಾನಾನ್ಹಿಕಗಳು 

ನಡೆದುವು. ಆದರೆ ಮೊದಲಿದ್ದ ಪಾದರಸದಂತೆ ಆಡುತ್ತಿದ್ದ ಗುಡುಗಾಟವಿಲ್ಲ. 

ಬ್ರಹ್ಮೋಪದೇಶವನ್ನು ಪಡೆದ ವಟುವಿನ ಪೂರ್ಣಾಹುತಿಯನ್ನು ಕೈಗೊಂಡ 

ಯಜ್ಞೇಶ್ವರನ ವರ್ಚಸ್ಸು ಅವರ ಮುಖದಲ್ಲಿ ಯಾವಾಗಲೂ ವಿರಾಜಿಸು 

ತ್ರಿತ್ತು ಈಗ ಅದು ಕಡಿಮೆಯಾಗಿದೆ. ಅಂತರಂಗದ ಒಳೆಗುದಿಯು 

ಮುಖಕ್ಕೆ ಒಂದು ಅವರಣವನ್ನು ಹೊಚ್ಚಿದೆ. ಈಗಿನ ಭಟ್ಟರ ಮುಖವು 

ಮಳೆಮೋಡದ ಹಿಂದಿನ ಪ್ರಭಾಕರಮಂಡಲದಂತೆ ತೇಜಸ್ಸುಂಟು; ಆದರೆ 

ಮೊದಲಿನಷ್ಟಿಲ್ಲ. 



ಮಧ್ಯಾನ್ಹದವೇಳೆಗೆ ಹೋಗಿ ದೇವರ ದರ್ಶನಾದಿಗಳನ್ನು ಮಾಡಿ 

ಕೊಂಡು ಬಂದುದಾಯಿತು. ಒಂದು ವಿಶೇಷವೆಂದರೆ, ಭಟ್ಟರು ಏನೋ 

ವಿಷಣ್ಣಭಾವದಲ್ಲಿದ್ದಾರೆ. ದೇವರಮುಂದೆ ನಿಂತು ಕಣ್ಣೀರು ಸುರಿಸಿದರು. 

ಆದರೆ ಅದು ಭಕ್ತಿಯ ಭರದಿಂದ ಉರುಳುವ ಆನಂದಾಶ್ರುಗಳಲ್ಲ. 

ಯಾವನಾದರೊಬ್ಬ ಸಮರ್ಥನು ಆ ಕಂಬನಿಗಳನ್ನು ತೆಗೆದು ಪರೀಕ್ಷಿಸಿದ್ದರೆ 

ಸಮುದ್ರದಲ್ಲಿರುವ ಬಾಡಬನಂತೆ, ಆ ಹನಿಗಳಲ್ಲಿಯೂ ಒಳಗಿನ ಸಂತಾಪಾ 

ನಲದ ಉಷ್ಣವು ಉರಿಯುತ್ತಿರುವುದನ್ನು ಕಾಣಬಹುದಾಗಿತ್ತು. 



೪೬ 



ಭಟ್ಟರು ಉಪಚಾರದ ಮೋಹಕ್ಕೆ ಕಟ್ಟುಬಿದ್ದು, ಹಾಗೂ ಹೀಗೂ 

ಹಣ್ಣುತಿಂದು ಹಾಲು ಕುಡಿದರು... ನಡುನಡುವೆ ಎಳನೀರಿನ ಪಾನೀಯ, 

ಇಟ್ಟುದೆಲ್ಲವನ್ನೂ ಮುಗಿಸಬೇಕೆಂದು ನಾಯಕನ ಬಲವಂತ. "ನನ್ನಂಥ 

ವರು ಮೂವರು ಬಂದರೂ ಅಗುವನ್ನು ಇಟ್ಟು ನನ್ನನ್ನು ಒಬ್ಬನನ್ನು  

ಎಲ್ಲಾ ಮುಗಿಸೆಂದರೆ ಹೇಗೆ ಸಾಧ್ಯ?" ಎಂದು ಅವರು. ನಾಯಕನು  

"ರುಚಿಯಾಗದೆ ಕಣಪ್ಪಾ! ಸಲ್ಲಿಸಿಬಿಡಿ. ಜೀವಾತ್ಮ ತೃಪಿಯಾಗಲಿ” 

ಎಂದನು. ಭಟ್ಟರೂ ತುಂಬಿದ ತೃಪ್ತಿಯ ನ ನಗೆಯ ಬೆಳಕನ್ನು ಪಸರಿಸುತ್ತಾ 

"ಹೌದಪ್ಪಾ! ರುಚಿಯಾಗಿದೆ-ನಾಲಗೆ ಚಪ್ಪರಿಸುವಷ್ಟು ರುಚಿಯಾಗಿದೆ. 

ಹಾಗೆಂದು ತಿಂದರೆ ಹೊಟ್ಟಿ ಹಿಡಿಸಬೇಡವೆ?"ಎಂದು ಲೋಕಾಭಿರಾಮ 

ವಾಗಿ ನುಡಿದರು. 



ಅವರ ಮನಸ್ಸು ಕಾದು ಕುಳಿತಿದ್ದುದು "ಹೌದು, ಹೌದು, ನಾಲಗೆಯ 

ಚಪಲಕ್ಕೆ ಸಿಕ್ಕಿಕೊಂಡು, ಹೊಟ್ಟೆಗೆ ಇಡಿಯುವುದೆ?" ಎಂದಿತು. ಕೂಡ 

ಲೇ ಉತ್ತರಕ್ಷಣದಲ್ಲಿಯೇ, ಉಸಿರು ಮೊಗಚುವುದಕ್ಕಿಂತ ಮುಂಚೆಯೇ 

ಅವರ ಕಿವಿಗೆ ಒಂದು ಪ್ರಶ್ನೆಯು ಕೇಳಿಸಿತು. ಯಾರೋ ಹಿಂದಿನಿಂದ 

"ಹಾಗಾದರೆ ಅವೊತ್ತಿನದು ಚಪಲಕ್ಕೆ ಗಂಟುಬಿದ್ದುದಲ್ಲವೋ? ಅದೇ ಆಗ 

ಬಹುದಂತೆ ಇದೇಕೆ ಆಗಬಾರದು?” ಎಂದಹಾಗಾಯಿತು. "ಇಲ್ಲವೆನ್ನು 

ವುದು ಸಾಧ್ಯವಿಲ್ಲ. ಕಿವಿಯು ಕೇಳಿದೆ. ಎತ್ತೆತ್ತ ನೋಡಿದರೂ ಯಾರೂ 

ಇಲ್ಲವಾಗಿ, ಕೇಳಿದವರು ಯಾರೂ ಇಲ್ಲವೆಂದು ಸಿದ್ದ. ಅಂತೂ ಕೇಳುವವ 

ಲ್ಲದೆ ಬಂದೆ ಪ್ರಶ್ನೆಯು ಕಿವಿಗೆ ಬೀಳುತ್ತಲೂ ಭಟ್ಟರು ಅಧೀರರಾದರು. 

ಮುಖದ ಪ್ರಸನ್ನತೆಯು ಮಸುಕಿತು. ಆಡುತ್ತಿದ್ದ ಮಾತು ಅಲ್ಲಿಗೇ ನಿಂತು 

ಹೋಯಿತು. ಕೆಯ್ಯು ತಲೆಯಮೆಸಲಕ್ಕೆ ಹೋಯಿತು. 



ಅರೆನುಡಿವಲ್ಲಿ ನಿಂತುಹೋದ ಅವರ ಮಾತನ್ನು ಕೇಳಿ ನಾಯಕನು 

ನೆತ್ತಿಹತ್ತಿರಬೇಕೆಂದುಕೊಂಡನು ನಾಯಕನಿಗೆ ನಗುನಿನಲ್ಲಿ ಬಹಳ ಭಕ್ತಿ, 

ನವೆಯಾಗಲಿ, ನೋವಾಗಲಿ ನಗುತ್ತಿದ್ದರೆ ಎಲ್ಲವೂ ಸರಿಹೋಗುವುದೆಂದು 

ಅವನ ನಂಬಿಕೆ ಅದಕ್ಕಾಗಿ ಅವನು "ಎಲ್ಲೋ ಮನೆಯಲ್ಲಿ ನೆಂದುಕೊಂಡಿರ 

ಬೇಕು ಕಣಪ್ವಾ!' ಎಂದನು. ಭಟ್ಟರ ವೃತ್ತಿಯು ಅಸ್ತವ್ಯಸ್ತವಾಯಿತು. 



೪೭. 



ಹೊರಡುವುದಕ್ಕೆ ಮುಂಚೆ ತಮಗಾದ ಕನಸು, ಅದನ್ನು ಹೆಂಡತಿಗೆ ಹೇಳದೆ 

ತಾವು ಮುಚ್ಚಿಟ್ಟು ಕೊಂಡುದು; ಅದರಂತೆಯೇ ನಡೆದಿರುವ, ಸಂಭವಿಸಿ 

ರುವ, ಸಂಘಟನೆಗಳು: ಎಲ್ಲವನ್ನೂ ನನೆದು ಆವರಮನವು ವಿಕಲವಾಯಿತು?" 

"ಇಲ್ಲಿ ನಡೆದುದು ಮನೆಯಲ್ಲಿ ಅವಳಿಗೆ ತಿಳಿದರೆ ಒಂದು ಸಣ್ಣ ಪ್ರಳಯವೇ 

ಆಗಿ ಹೋಗುವುದು." ಎಂದು ಅವರ ಹೃದಯವು ಅಲ್ಲಾಡಹೋಯಿತು. 



ನಮ್ಮಂತರಂಗವು ಇತರರಿಗೆ ಕಾಣದಂತೆ ಇರುವುದು ನಮಗೆಷ್ಟು ಅನು 

ಕೂಲ ! ಹಾಗಲ್ಲದೆ, ನಮ್ಮ ಹ ತಾ ಗಾಜಿನ ಬುರುಡಿಯಂತಿದ್ದು, ಅದ 

ಕೊಳಗಿನ ಆಲೋಚನೆಗಳೆಲನೂ ನೊಸಡುಸವರಿಗೆಲ್ಲ ತಿಳಿಯುವ ಹಾಗೆ ಆಗಿ 

ದ್ದ ರೆ ನಮ್ಮ ಗತಿಏನು? ಎಂತಹ ಪ್ರಮಾದವಾಗುತ್ತಿತ್ತು? ದೊಡ್ಡತನದ 

ಅಂಗಿಯನ್ನು ತೊಟ್ಟು ಮೆರೆಯುತ್ತಿರುವವರು ಎಷ್ಟು ಜನರು ಅಲ್ಪರೆಂದು, 

ಉತ್ತಮರಲ್ಲವೆಂದು ಸಿದ್ದಾಂತವಾಗುತ್ತಿತ್ತು? ಬಹುಶಃ ಹಾಗೆ ಹೃದಯವು 

ಕಾಣುವಂತೆ ಇದ್ದಿದ್ದರೆ, ಪವಿತ್ರ ಹೃದಯಕ್ಕೊಂದು ನೊಬೆಲ್‌ ಪ್ರೈಜ್  

ಇದ್ದಿದ್ದರೆ, ಅದು ನಮಗೇ ಬರುತ್ತಿತ್ತು ಎನ್ನುವವರೂ ಉಂಟೋ ಏನೋ?  

ವ್ಯಕ್ತಿಸ್ಟಾತಂತ್ರ್ಯದ ಈ ಯುಗದಲ್ಲಿ ಅಲೋಚನಾಸ್ಟಾತಂತ್ರ್ಯವೂ 

ಉಂಟಾಗಿ ನಾವು ಪ್ರತಿಯಾಡಲು ಆಶಿಸುವುದಿಲ್ಲ ಆದರೂ ಪ್ರೈಜೂ 

ಇಲ್ಲ. ಇದ್ದರೂ ಅದನ್ನು ಪಡೆಯುವಂತಹವರೂ ಹುಟ್ಟುವುದಿಲ್ಲ, ಎಂದು 

ಮಾತ್ರ ನಮ್ಮಷ್ಟಕ್ಕೆ ನಾವು ಹೇಳಿಕೊಳ್ಳುವೆವು. 



ಅಂತೂ ಭಟ್ಟರ ಅಂತರಂಗವ ನಾಯಕನಿಗೆ ತಿಳಿಯಲಿಲ್ಲ. ಅವನು 

ಆ ಅವರ ಚಿತ್ತವೃತ್ತಿಯ ಬದಲಾವಣೆಯನ್ನು ಬೇರೊಂದು ವಿಧವಾಗಿ ಬಗೆ 

ದನು. ಮನೆಯನ್ನು ಬಿಟ್ಟುಬಂದು, ಹೆಂಡತಿ ಮಕ್ಕಳನ್ನು ನೋಡಿ, 

ಸುಮಾರು ಹದಿನೈದು ದಿನವಾಗಿದೆ. ಅದರಿಂದ ಅವರ ಮನಸ್ಸು ಕ್ಷುಬ್ಧ 

ವಾಗಿರಬಹುದು ಎಂದುಕೊಂಡನು, ಭಟ್ಟರ ಮೌನದಿಂದ, ಅವರ ಹೃದಯ 

ದೊಳಗಿನ ಅಲ್ಲೋಲಕಲ್ಲೋಲನು ತಿಳಿದರೂ, ಅದರ ಕಾರಣವನ್ನು ಮಾತ್ರ 

ಬೇರೆಯಾಗಿ ಭಾವಿಸಿಕೊಂಡನು. ಅಪರಾಧಿಯು ತನ್ನಪರಾಧವು ಲೋಕಕ್ಕೆ 

ತಿಳಿದರೇನುಗತಿ ಎಂದು ಹೆದರಿ ಜಗ್ಗುವಂತೆ, ಭಟ್ಟರು ಬಸವಿಯ ಪ್ರಸಂಗವು 

ಪಾತಮ್ಮನವರಿಗೆ ತಿಳಿದರೇನುಗತಿ ಎಂದು ಬೆದರಿದರೆ ನಾಯಕನು 



೪೮



ಅದನ್ನು ಕಂಡು ಅವರು ತಮ್ಮ ಕುಟುಂಬವನ್ನು ನೆನೆದು ವಿಶ್ವಾಸದಿಂದ, 

ಹಂಬಲದಿಂದ, ವಿರಹದ ಯಾತನೆಯಿಂದ ನೊಂದರೆಂದು ಊಹಿಸಿ 

ಕೊಂಡನು. ಪ್ರಿಯಕಳತ್ರರು ಈ ಭಟ್ಟರು ಎಂದುಕೊಂಢು, ಆದಷ್ಟು ಬೇಗ 

ಇವರನ್ನು ಕಳುಹಿಸಿಬಿಡಬೇಕೆಂದು ನಿರ್ಧರಿಸಿಕೊಂಡು, ""ಆಗಲಪ್ಪಾ ! 

ಯೋಚನೆಮಾಡಬೇಡಿ, ನಾಳೆಯೇ ಹೊರಟು ಬುಡೋರಂತೆ "

ತನ್ನಾಳಿಗೆ ಸನ್ನೆಮಾಡಿದನು. 


===


ಹದಿಮೂರನೆಯ ಪರಿಚ್ಛೇದ 






ಹೋದಆಳು ತುಂಬಿಟ್ಟಿದ್ದ ಎರಡು ತಟ್ಟೆಗಳನ್ನು ತಂದು ಅವರ 

ಮುಂದಿಟ್ಟನು. ಒಂದು ತಟ್ಟೆಯಂತೂ ಕೆಳಗಿಡುವಾಗ ಸದ್ದು ಮಾಡಿ; 

ತನ್ನಲ್ಲಿರುವುದು ಹಣವೆಂದು ಹೇಳಿಕೊಂಡುಬಿಟ್ಟಿತು. ಇನ್ನೊಂದರಲ್ಲಿ 

ಒಂದು ಕುಪ್ಫೆಯಂತೆ ಕಾಣುತ್ತಿದೆ. ಆದರೆ ಏನೆಂಬುದು ಮಾತ್ರ ತಿಳಿಯ 

ಲೊಲ್ಲದು. ಏನಿರಬಹುದು. ಎಂದು ಕೊಳ್ಳುವುದರೊಳಗಾಗಿ, ನಾಯಕ 

ನೆದ್ದು ಬಂದು, ಅದರ ಮೇಲೆ ಇದ್ದ ಮುಸುಕನ್ನು ಎಳೆದುಹಾಕೆ, "ಒಪ್ಪಿಸಿ 

ಕೊಳ್ಳಬೇಕು” ಎಂದು ಹೇಳಿ ಅವರಿಗೆ ಅಡ್ಡ ಬಿದ್ದನು. 



ಭಟ್ಟರು ಅವಾಕ್ಕಾಗಿ ಎಲ್ಲವನ್ನೂ ನೋಡುತ್ತಿದ್ದರು. ಆದರೂ ಅವ 

ರಿಗೆ ಯಾವುದೂ ತಿಳಿಯಲಿಲ್ಲ. ನಾಯಕನು ಪ್ರಪಂಚದಲ್ಲಿ ಕಳ್ಳ. ಅಂಥ 

ವನು ತಮ್ಮ ಮುಂದೆ ನಿಂತು, ತಟ್ಟೆಯ ತುಂಬ ಹಣವನ್ನೂ, ಇನ್ನೊಂದು 

ತಟ್ಟೆಯಲ್ಲಿ ಜವಳಿಯನ್ನೂ, ಅಲ್ಲಿಯೂ ಏನೋ ಥಳಪಳವೆನ್ನುತ್ತಿದೆ, 

ಬಹುಶಃ ಚಿನ್ನದ ಒಡವೆಯೋ? ಹೌದು ಎನ್ನುವ ಹಾಗಿದೆ. ಸುಮಾರು 

ಕೈಬಳೆಗಳಿರಬಹುದು. ತಂದಿಟ್ಟು ಒಪ್ಪಿಸಿಕೊಳ್ಳಬೇಕು ಎನ್ನುತ್ತಿದ್ದಾನೆ. 

ಇದೇನು ಹಗಲು ಕನಸೋ? ಜಾಗ್ರತ್ಸ್ವಪ್ನವೋ? ಎನ್ನಿಸಿತು. ಅದರೆ  

ಎಲ್ಲವೂ ಎದುರಿರುವಾಗ, ಬಗೆಗೆ ತೋರಿದುದು ಕಣ್ಣಿಗೂ ಕಾಣಿಸುತ್ತಿರು 


೪೯


ವಾಗ, ಭಾವನೆಯಲ್ಲಿ ಕಂಡ ವಸ್ತುಗಳನ್ನು ಪ್ರತ್ಯಕ್ಷವಾಗಿ, ಎಲ್ಲರ ಸಮಕ್ಷಮ ದಲ್ಲಿಯೂ ಕಾಣುತ್ತಿರುವಾಗ ಕನಸೆನ್ನುವುದು ಹೇಗೆ?


ಅವರೊಮ್ಮೆ ಮುಗ್ಗರಿಸಿದುದುಂಟು. ಇಲ್ಲವೆನ್ನುವಂತಿಲ್ಲ. ಭ್ರಮೆ 

ಗೊ೦ಡು, ಮೋಹದ ಸೆಳೆತಕ್ಕೆ ಮನವು ಸಿಕ್ಕಿಕೊಂಡು ವಿವೇಕವು ಉಳಿಯದೆ 

ಕೊಚ್ಚಿ ಹೋದಾಗ, ಅವರ ಮನಸ್ಸಿಗೆ ಬೇಸರವಾಗುವಂತಹ ಕಾರ್ಯವನ್ನು 

ಒಮ್ಮೆ ಮಾಡಿದುದುಂಟು. ಅವರ ಮಾತಿನಲ್ಲಿ ಹೇಳಬೇಕೆಂದರೆ " ಅಗ್ನಿ 

ಸಾಕ್ಷಿಕವಾಗಿ ಪರಿಗ್ರಹಿಸಿದ ಪತ್ನಿಗೆ ಎರಡು ಬಗೆದಂತಾಯ್ತು'' ನಿಜ. ಆದರೆ, 

ಈಗ ಮನವು ನೊವಿನಿಂದ ನರಳಿ ಪವಿತ್ರವಾಗಿತ್ತು. ಬೆಂದು ಬೆಂದು, 

ಒಗ್ಗರಣೆಗೆ ಹಾಕಿದ ಕಾಯಿಪಲ್ಯಗಳು ಸೊಗಡುವಾಸನೆಯನ್ನು ಬಿಡುವಂತೆ, 

ತನ್ನ ಕಲ್ಮಷವನ್ನೆಲ್ಲ ತೊಳೆದುಕೊಂಡು ಶುದ್ಧವಾಗಿತ್ತು. ಪಶ್ಚಾತ್ತಾಪದ 

ಬೇಗುದಿಗೆ ಸಿಕ್ಕಿ, ಪುಟವಿಟ್ಟ ಚಿನ್ನದಂತಾಗಿತ್ತು. ಅ೦ತೂ, ಅಭಾವದಲ್ಲಿ 

ಬೇಡವೆಂದುಕೊಂಡಿದ್ದು ನಾನದಲ್ಲಿ ಇರಲೆಂದು ಸಂಗ್ರಹಿಸುವ ಶುಷ್ಕ 

ವೈರಾಗ್ಯದ ಅವಸ್ಥೆಯನ್ನು ಕಳೆದು, ಸದ್ಭಾವದಲ್ಲಿ, 'ನಿನ್ನದು ಮಾಡಿಕೊ' 

ಎಂದು ಪ್ರಪಂಚವೇ ಒಪ್ಪಿಸಿದ ವಸ್ತುವನ್ನೂ ಬೇಡವೆಂದು ನಿರಾಕರಿಸುವ 

ಸ್ಥಿತಿಗೆ ಬಂದಿತ್ತು. ಭೋಗವಸ್ತುವನ್ನು ಗ್ರಹಣಮಾಡಿ, ಧರ್ಮಕ್ಕೆ ಅವಿ 

ರುದ್ಧವೆಂದು ಸಮಾಧಾನ ಹೇಳಿಕೊಂಡು, ಅದರಲ್ಲಿ ಪ್ರವೃತ್ತವಾಗುವ ಮನ 

ಸ್ಸಿನ ಕಡಿವಾಣವನ್ನು ಕಿತ್ತೊಗೆಯುವ ಕೀಳು ತೆರದ ವೇದಾಂತವನ್ನು ತಳ್ಳಿ, 

ಕಣ್ಣೆದುರಿಗೆ ಇದ್ದು ಕೈನೀಡಿದರೆ, ಮುಟ್ಟಿದರೆ ತನ್ನದಾಗುವಂತಹ ವಸ್ತು 

ವನ್ನು, ತಾನೊಪ್ಪಿದರೆ, ಅದರ ಸ್ವಾಮ್ಯವನ್ನು ತನಗೊಪ್ಪಿಸಲು ಇತರರು 

ಸಿದ್ಧರಾಗಿರುವುದನ್ನು, ಕಂಡೂ, ನನಗೇಕೆ ಬೇಡವೆಂದು ಬಿಡುವ ಧೀರ 

ಸ್ವಭಾವವನ್ನು ಅವಲಂಬಿಸಿತ್ತು ಅವರ ಮನಸ್ಸು. ಸಿಕ್ಕಿದರೆ ಸಾಕೆಂದು 

ಗಬಕ್ಕೆನ್ನುವ ಬಕವೃತ್ತಿಯನ್ನು ಬಿಟ್ಟು, ಬಿಟ್ಟಷ್ಟು ತೊಡಕು ತಪ್ಪಿತು 

ಎನ್ನುವ ವಿಶ್ರಾಂತವೃತ್ತಿಯಲ್ಲತ್ತು ಅವರ ಮನಸ್ಸು. 


ತಂಬಿಟ್ಟ ತಟ್ಟೆಗಳನ್ನು ನೋಡಿ, ಭಟ್ಟರು, “ ಅಯ್ಯಾ ! ನೀವೇನೂ ತಿಳಿದುಕೊಳ್ಳಬಾರದು. ಇದನ್ನು ಕಟ್ಟಿಕೊಂಡು ನಾನೇನು ಮಾಡಿಕೊಳ್ಳಲಿ? ನನಗೆ ಬೇಕಾದುದನ್ನು, ಬೇಕಾದಷ್ಟನ್ನು ಕೊಡಲು ಸ್ವಾಮಿಯು ಒಬ್ಬರನ್ನು.


೫೦


ತೋರಿಸಿದ್ದಾನೆ. ಹೀಗಿರಲು, ನೀನು ಕೊಡುವೆಯೆಂದು ಕೊಟ್ಟುದುದನ್ನೆಲ್ಲ 

ನಾನು ತೆಗೆದುಕೊಳ್ಳುವುದು ನ್ಯಾಯವಲ್ಲ. ದೇವರು ನಮ್ಮನ್ನು ಪರೀಕ್ಷಿಸು 

ವುದು ಹಿಂಗೆ, ಆಶೆಪಟ್ಟರೆ ನಾವು ಕೆಟ್ಟೆವು...........” ಎಂದು ಹೇಳುತ್ತಿದ್ದ 

ವರು ಯಾರೋ ಬಂದುದನ್ನು ಕಂಡು, ಹಠಾತ್ತಾಗಿ ಸುಮ್ಮನಾದರು.


ಬಂದವಳು ಬಸವಿ. ಒಬ್ಬರ ಮನೆಯ ಬಾಗಿಲನ್ನು ಮೆಟ್ಟುವುದು ಎನ್ನು 

ವುದೇ ಅಪರೂಪವಾಗಿದ್ದವಳು ಇಂದು ತನ್ನ ಮನೆಗೆ ತಾನಾಗಿ ಬಂದುದನ್ನು 

ಕಂಡು, ನಾಯಕನು ತೃಪ್ತಿಗೊಂಡನು. ಅದೊಂದು ಗೌರವವೆಂದು 

ಕೊಂಡನು. ಬಸವಿಯಂತಹ ವೀರಶಿವಭಕ್ತಳು ಕರೆಯಿಸಿಕೊಳ್ಳದೆ ಮನೆಗೆ 

ಬಂದುದು ಶಿವನ ಅನುಗ್ರಹವೆಂದಿತು ಆತನ ಹೃದಯ. "ಶಿವಸ್ವರೂಪ 

ರಾದ ಅಯ್ಯನವರು ಬಂದರು. ಅವರ ಜೊತೆಯಲ್ಲಿ ಶಿವಕರಣಳೂ 

ಬಂದಳು” 

ಎಂದು ಅವನಿಗೆ ಬಹುಸಂತೋಷವಾಯಿತು ಇದು ತನ್ನ ಮುಂದಿನ 

ಮಂಗಳದ ಸೂಚನೆಯೆಂದು ಹಿಗ್ಗಿದನು.


ಭಟ್ಟರ ಮೇಲಿದ್ದ ಎಲ್ಲರ ಕಣ್ಣುಗಳೂ ಒಂದುಗಳಿಗೆ ಬಸವಿಯ ಕಡೆಗೆ 

ಹೊರಳಿದುವು. ಮನೆಯವರು ಅವಳನ್ನು ಗೌರವದಿಂದ, ಅತ್ಯಾದರದಿ೦ದ, 

ಆಂತರಿಕವಾದ ವಿಶ್ವಾಸದಿಂದ ಬರಮಾಡಿಕೊಂಡರು, ಮರ್ಯಾದೆಯಾಗಿ 

ಕರೆದು ಕುಳ್ಳಿರಿಸಿಕೊಂಡರು. ಅಪರೂಪವಾಗಿ ಬಂದೆಯಲ್ಲ” ಎಂದು 

ಬಾಯಿತುಂಬ ಮಾತನಾಡಿ, ಕೆಳಿ, ವಿಚರಿಸಿದರು. ಆದರೂ ಪ್ರಸಂಗ 

ವಶದಿಂದ, ಎಲ್ಲರ ಗಮನವೂ ಮತ್ತೆ ಭಟ್ಟರ ಕಡೆಗೆ ಹೊರಳಿತು ಬಸ 

ವಿಯೂ ನಗುತ್ತ ನಲಿಯುತ್ತ ಆ ಭಕ್ತವೃಂದದಲ್ಲಿ ತಾನೂ ಒಬ್ಬಳಾದಳು.


ನಾಯಕನು ಪಿಸುಮಾತಿನಲ್ಲಿ ಭಟ್ಟರನ್ನು ಕುರಿತು " ಅವಳು ಮನೆ 

ಬಾಗಿಲು ದಾಟಿ, ಹೊಸಲು ಮೆಟ್ಟಿ, ಎಷ್ಟೋ ದಿನವಾಗದೆ, ಅವಳಾಯಿತು. 

ಗುಡಿಯಾಯಿತು. ಅದೆನೋ ಬಂದವಳೆ ! ನೀವು ಬಂದಿರಿ ಎಂತಲೋ 

ಏನೋ ? ” ಎಂದನು. ಭಟ್ಟರ ಎಳೆಗೆಂಪಿನ ಬಣ್ಣದ ಮುಖವು, ಹೊದೆ 

ದಿದ್ದ ಶಾಲಿಗಿಂತಲೂ ಕೆಂಪಾಯಿತು. ಅದನ್ನು ಕಂಡರೂ ನಾಯಕನು 

ಅದಕ್ಕೆ ಅರ್ಥಮಾಡಲಿಲ್ಲ ತನ್ನ ಮಾತಿನಿಂದ ಅವರಿಗೆ ಅತೃಪ್ತಿಯಾಗಿದ್ದೀ 


೫೧


ತಂದು ಕೊಂಡು, “ ಒಳ್ಳೆಯವರು ಮನೆಗೆ ಬಂದರೆ, ದೇವರು ಬಂದ 

ಹಂಗಲ್ಲವಾ ? ಅದಕ್ಕ೦ದೆ, ಅವಳು ಬಸವೀ ಅಂತ ಯಾರಾದರೂ ಒಂದು 

ತಪ್ಪು ಮಾತಾಡೋಕುಂಟಾ ? ಅವಳು ದೇವರನ್ನು ಕಂಡ ದಿಂಡಳು 

ಕಣಪ್ಪ ! ” ಎ೦ದು ಸಮಾಧಾನ ಹೇಳಿದನು. 


ಅದನ್ನು ಕೇಳಿ ಅವರ ಮನಸ್ಸು ಬಹು ಸಮಾಧಾನಗೊಂಡಿತು. 

ಶಾಂತಚಿತ್ತರಾಗಿ, “ ಆಕೆಯೇನು ಬಂದುದು ಅದನ್ನು ವಿಚಾರಿಸು. ಆ 

ಮೇಲೆ ಇದಾಗಲಿ ” ಎಂದರು.


-----

ಹದಿನಾಲ್ಕನೆಯ ಪರಿಚ್ಛೇದ.

ನಾಯಕನೂ ವಿ ಚಾ ರಿ ಸಿ ದ ನು, ಬಸವಿಯ ನಿರರ್ಗಳವಾಗಿ,

ಏನೊಂದು ತಡೆಯೂ ಇಲ್ಲದ ಮಾತಿನಿಂದ ಹೇಳಿದಳು. " ಮಾವ ! 

ನಮ್ಮವ್ವ ನಿನ್ನ ಕೈಯಲ್ಲಿ ಕೊಟ್ಟಿದ್ದ ಒಡವೆಯೆಲ್ಲ ನಂದೇ ತಾನೇ?” ಎಂದಳು. 

 ಎಲ್ಲವನ್ನೂ ಬಿಟ್ಟವಳು ಬಸವಿಯೆಂದು ಎಲ್ಲರ ನಂಬಿಕೆ. ಅದರಿಂದ ಎಲ್ಲ 

 ರಿಗೂ ಆಶ್ಚರ್ಯವಾಯಿತು. ನಾಯಕನು, " ಇದೇನು ಹಿಂಗೆ ಕೇಳುತೀ ! 

 ಎಲ್ಲನಿಂದೇ ! ಇನ್ನಾರಿಗೆ ಬೇಕದು ?” ಎಂದನು. 

 

" ಹಾಗಾದರೆ ನಾನು ಅದನ್ನು ಏನು ಬೇಕಾದರೂ ಮಾಡಬಹುದು?" 

" ಓ! ಬೇಕಾದರೆ, ತಕೊಂಡು ಹೋಗಿ ಆ ದೈಯ್ಯದ ಕಡುವಿ 

ನಲ್ಲಾದರೂ ಎಸ್ತು ಬುಡಬೋದು. ”


"ಹಾಗಾದರೆ ಅದನ್ನಿಲ್ಲಿ ತರಿಸು ಮತ್ತೆ !”


ನಾಯಕನ ಹೆಂಡತಿಯು ಹೋಗಿ, ಒಂದು ಸಣ್ಣ ಪೆಟ್ಟಿಯನ್ನು 

ತಂದುಕೊಟ್ಟಳು. ಬಸವಿಯು ನಾಯಕನನ್ನು ಮಾವ ! ಇದನ್ನ ನಾನು 

ಬೇಕಾದ್ದು ಮಾಡಬೋದಾ?'' ಎಂದು ಮತ್ತೆ ಕೇಳಿದಳು.


೫೩


ಬಸವಿಯು, ಎದ್ದು ನಿಂತು ಒಂದುಗಳಿಗೆ ಅವರನ್ನೇ ಸ್ಥಿರಳಾಗಿ, 

ವ್ಯಾಕುಲಳಾಗಿ, ನೋಡುತ್ತಿದ್ದು, ಇದು ನಮ್ಮವ್ವ ನನಗೆ ಕೊಟ್ಟಿದ್ದು. 

ಇದು ಯಾರದೂ ಅಲ್ಲ ನಂದು. ಒಳಗಿರುವ ಶಿವನಪ್ಪಣೆಯಾಯ್ತು ತಂದು 

ವಾದಕ್ಕೊಪ್ಪಿಸಿ ತಾವೂ ಒಪ್ಪಿಸಿಕೊಳ್ಳಿ” ಎಂದಳು, ಆ ಮಾತಿನಲ್ಲಿ 

ವಿನಯದೊಡನೆ, ಖಂಡಿತವಾದದ ಗಡುಸೂ ಇತ್ತು. 


ಅವರು ಮತ್ತೆ, ಅಷ್ಟೇ ಖಂಡಿತವಾಗಿ, “ಉಹುಂ, ಸಾಧ್ಯವಿಲ್ಲ, 

ಸಾಧ್ಯವಿಲ್ಲ,” ಎಂದರು.



ಬಸವಿಗೆ ಕಣ್ಣಿನಲ್ಲಿ ನೀರುಬಂತು. ಕೈಮುಗಿದುಕೊಂಡು, ಮುಚ್ಚಿದ 

ಕಣ್ಣಿನಿಂದ ನೀರು ಸುರಿಯುತ್ತಿರಲು, ಹೇಳಿದಳು. ಭಟ್ಟರು ಅವಳಾ 

ಆರ್ತ್ಮಾಣದ ಭಾವವನ್ನು ಕಂಡು ಚಕಿತರಾದರು. ಸುಸಂಸ್ಕೃತವಾದ 

ಅವರ ಅ೦ತರ೦ಗವು ಕೂಡಲೆ, ಅದನ್ನು ಪರಾಭಕ್ತಿ ಎಂದಿತು. ಆದರೂ 

ಅವರ ಮನಸ್ಸು ಚಲಿಸಲಿಲ್ಲ: ತಾರಸ್ವರವನ್ನು ನುಡಿಯುವ ತಂತ್ರಿಯಂತೆ 

ಸ್ಥಿರವಾಗಿ, ದೃಢವಾಗಿ, ಬಿಗಿಯಾಗಿ, ಸೆಡೆದು ನಿ೦ ತು ಕೊ ೦ ಡಿ ತು . 

“ಸೋಮಿ ! ಬಸವಿ ಕೊಟ್ಟಿದ್ದನ್ನ ಬೇಡ ಅನ್ನ ಬೇಡ ನಮ್ಮಪ್ಪ. ಶಿವ 

ನಪ್ಪಣೆ೦ತ ಕೊಟ್ಟ ಎಲ್ಲವ ಕೊಟ್ಟು ಆಯಿತು. ಉಳಿದದ್ದು ಈ 

ಮುಕ್ಕ ಯಾಕೆ ನನಗೆ ? ತಕೊ' ಎಂದಳು. ಅವಳ ಭಾವವನ್ನು ಕಂಡರೆ 

ಇನ್ನೂ ಏನೋ ಹೇಳಬೇಕು ಎಂದಿರುವಂತೆ ತೋರುತ್ತಿತ್ತು. ಆದರೆ ಅಷ್ಟ 

ರಲ್ಲಿಯೆ?, ಅವಳಿಗೆ ಏಕೊ, ಏನೋ, ದುಃಖವು ಉಕ್ಕಿ ಬಂದು, ತಡೆಯ 

ಲಾರದಷ್ಟು ಅಳುಬಂದು, ಗಟ್ಟಿಯಾಗಿ ಅಳುತ್ತಾ ಹೊರಟುಹೋದಳು. 

ಅವಳ ಕಾರ್ಪಣ್ಯದ ಕಿಚ್ಚಿನಿಂದ ನೊಂದ ಹೃದಯದಲ್ಲಿ, ಒಂದು ಮಾತು 

ಮೊಳಗುತ್ತಲಿತ್ತು. 'ಆಶೆಪಟ್ಟರೆ ಕೆಟ್ಟೆವು.” ಎಲ್ಲೋ ಯಾವುದೋ 

ಇನ್ನೊಂದು ಸಣ್ಣ ಧ್ವನಿಯ “ಹೌದು, ಹೌದು” ಎನ್ನುತ್ತಿತ್ತು.


------

ಹದಿನೈದನೆಯ ಪರಿಚ್ಛೇದ.

ಎಲ್ಲರೂ ಅವಾಕ್ಕಾಗಿ, ಬೆರಗು ಪಟ್ಟಂತೆ ಇದ್ದು ಬಿಟ್ಟರು. "ಶಿವನಪ್ಪ 

ಣೇಂತ ಕೊಟ್ಟಿದೀನಿ, ಬೇಡವೆನ್ನ ಬೇಡ, ” ಎಂದ ಬಸವಿಯೊಂದು 

ಕಡೆ. " ಬೇಡ. ನನಗೆ ಬೇಡ ” ಎಂಬ ಹಾರುವಯ್ಯನೊಂದು ಕಡೆ, ಈ 

ಇಬ್ಬರ ತುಯ್ಯಾಟದಲ್ಲಿ, ಅವರ ಬಗೆಯು ದಣಿದುಹೋಯಿತು.


ನಾಯಕನೂ ಬಗೆ ಬಗೆಯಾಗಿ ಹೇಳಿನೋಡಿದನು. ಅವರೊಪ್ಪಲಿಲ್ಲ. 

ಅವನಿಗೆ ಏನು ತೋರಿತೋ ಏನೋ, "ಹೋಗಲಿ ಬಿಡಪ್ಪ" ಎಂದು, 

 ಹೆಂಡಿತಿಯನ್ನು ಕರೆದು, "ಇದೆಲ್ಲ ತೆಗೆದು ವಳಗಿಡು” ಎ೦ ದ ನು . 

 ಆ ಆಜ್ಞಾಕಾಲದಲ್ಲಿ ಹಾರಿಸಿದ ಹುಬ್ಬು, "ಪ್ರತ್ಯೇಕವಾಗಿಡು ಜೋಕೆ !” 

ಎಂಬ ಕಟ್ಟಪ್ಪಣೆಯನ್ನು ಕೊಟ್ಟಿತು.


ಭಟ್ಟರು ಇನ್ನೂ ಎರಡುದಿನವಿದ್ದರು ಅಲ್ಲಿ. ಆದರೆ ಬಸವಿಯು 

ಮತ್ತೆ ಚಾವಡಿಗೆ ಬರಲಿಲ್ಲ. ಕೆರೆಯ ಬಳಿಯಲ್ಲಿಯೂ ಅವರ ಕಣ್ಣಿಗೆ 

ಬೀಳಲಿಲ್ಲ. ಅವರೂ ಅಷ್ಟಾಗಿ ಅವಳನ್ನು ಹುಡುಕಲಿಲ್ಲ. ಆದರೂ ಅವರ 

ಹೃದಯದಲ್ಲಿ ಮಾತ್ರ ಒಂದು ರೂಪರಾಶಿಯು, ಬೀಸುತ್ತಿರುವ ಗಾಳಿಯೊಡನೆ 

ಮೂಡಿ ಮಾಯವಾಗುವ ತಂಗಾಳಿಯ ತನಿಸೋ೦ಕು, ಹುಟ್ಟುತ್ತಿರುವಾಗಲೇ 

ಆಕಾಶದಲ್ಲಿ ಲೀನವಾಗುವ, ಸಣ್ಣದಾದರೂ ಸುಖಕರವಾದ, ಮಧುರ ಕಂಠ 

ಧ್ವನಿಯು ಅಚ್ಚಳಿಯದಂತೆ, ವಜ್ರಖಚಿತವಾದಂತೆ, ನಿಂತಿತ್ತು. ಹೊರಡು 

ವುದಕ್ಕೆ ಮುಂಚೆ, ಶಿವಾಲಯಕ್ಕೊಮ್ಮೆ ಹೋಗಿ, ಅವಳನ್ನು ಕಂಡು 

ಹೋಗಬೇಕೆಂದು ಒಂದು ಸಣ್ಣಾಶೆ ಅವರಿಗೆ. ತಿರುಗಿ, ವಿಷಯೇಂದ್ರಿಯ 

ಸನ್ನಿಕರ್ಷದಿಂದ ವೃತ್ತಿ, ವೃತ್ತಿಯಿಂದ ವಾಸನೆ.” ಬೇಡ ಎಂಬ ಖಂಡಿತ 

ವಾದ ಆಕ್ರೋಪದೇಶ.


ಗಂಡಸಿನ ಹಾಳು ಹೃದಯವನ್ನು ಯಾವ ಕೆಟ್ಟ ವಿಧಿಯು, ಏನು 

ದುರಭಿಪ್ರಾಯದಿಂದ, ಸೃಷ್ಟಿಸಿದನೋ ? ಆ ಗಡುಸುಬಗೆಯನ್ನು ವಿಧಿಯು


೫೫



ಸೃಷ್ಟಿಸಿದಾಗ, ಅವನಿಗೆ ಯಾರಮೇಲೂ ಕಡು ಕೆಟ್ಟ ಕೋಪಬಂದಿರಬೇಕು. 

ಇಲ್ಲವಾದರೆ, ಈ ವಿಚಿತ್ರ ವಸ್ತುವನ್ನು ಹುಟ್ಟಿಸುತ್ತಿರಲಿಲ್ಲ. ಬೇಕೆ೦ದು 

ಆಶೆಗೊಂಡು ಕೈನೀಡಿ ತೆಗೆದುಕೊಂಡು, ಬೇಡವೆಂದ ಕೂಡಲೇ ನೂಕಿಬಿಡುವ 

ನಿಷ್ಟು ರಭಾವದ ದುಷ್ಟ ಹೃದಯವನ್ನು ಹುಟ್ಟಿಸದಿದ್ದರೆ, ಆ ವಿಧಿಗೇನು ನಷ್ಟವಾಗುತ್ತಿತ್ತು ?


ಅಳುವವರ ಅಳುವನ್ನು ತಪ್ಪಿಸುವುದು ಪುಣ್ಯವೆನ್ನುವಹಾಗಿದ್ದರೆ, 

ಅಂತಹ ಪುಣ್ಯವನ್ನು ಭಟ್ಟರು ಕಟ್ಟಿಕೊಳ್ಳಬಹುದಾಗಿತ್ತು. ಒಮ್ಮೆ ಶಿವಾ 

ಲಯಕ್ಕೆ, ಶಿವದರ್ಶನದ ನೆಪದಿಂದಲಾದರೂ ಹೋಗಿ ಬ೦ ದಿ ದ್ದರೆ, 

ನೋವಿನಿಂದ ನರಳುತ್ತಿದ್ದ ಹೃದಯವೊಂದಕ್ಕೆ ಯಾತನೆಯು ಎಷ್ಟೋ 

ಕಡಿಮೆಯಾಗುತ್ತಿತ್ತು. ಅಲ್ಲಿಗೆ ಹೋಗದೆ ಇದ್ದುದರಿಂದ ಅವರ ಮನಸ್ಸಿಗೆ 

ಯಾತನೆಯಾಗಲಿಲ್ಲವೆಂದಲ್ಲ. ಆದರೆ ಅವರು ತಮ್ಮ ಯಾತನೆಯನ್ನು 

ತಡೆಯಬಲ್ಲವರು, ತಡೆಯಬೇಕೆಂದುಕೊಂಡವರು. ಇಂದಲ್ಲದಿದ್ದರೆ ನಾಳೆ 

ಯಾದರೂ ಆ ಯಾತನಾಕಿರಣವನ್ನು ಕಿತ್ತೊಗೆಯಬಲ್ಲವರು. ಆದರೆ, 

ಅವಳು ? ಹೊಳೆಬಂದಿದೆ. ಅದರೇನು ? ಬಂದ ಹೊಳೆ ಇಳಿದು ಹೋಗುವು 

ದಿಲ್ಲವೆ? ಹಾಗೆಯೇ ಅವಳಿಗೆ ಇದೊಂದು ಉದ್ವೇಗ ಬಂದಿದೆ ಇಳಿದು 

ಹೋಗುತ್ತದೆ ಎಂದುಕೊಂಡರು. ಸಾಹಿತಿಗಳಾದರೂ, ಭಾವಸಾಮ್ರಾ 

ಜ್ಯದ ರೀತಿನೀತಿಗಳನ್ನು ಅರಿತವರಲ್ಲ ಆ ಭಟ್ಟರು. ಇಲ್ಲವಾದರೆ ಹಾಗೆನ್ನು 

ತಿದ್ದರೆ ? ಮಳೆಬಂದಾಗ ಬರುವ ರಾಡಿಯನೀರೂ, ಒಳಗಿಂದ ಉಕ್ಕಿ 

ಉಕ್ಕಿ, ಬರುವುದಕ್ಕೆ ಆರಂಭಿಸಿರುವ ಬುಗ್ಗೆಯ ನಿರ್ಮಲೋದಕವೋ 

ಎರಡೂ ಒಂದೇ ಎನ್ನುತ್ತಿದ್ದರೆ ?


ಭಟ್ಟರು ಹೊರಟರು. ಆಗಲೂ, ಎಲ್ಲರನ್ನೂ ಬೀಳ್ಕೊಂಡು ಹೊರ 

ಟಾಗಲೂ, ಭಟ್ಟರ ಅಂತರಾಂತರವು ಯಾರನ್ನೂ ಹುಡುಕಿತು. ಅಲ್ಲಿ 

ಅವರು ಇರಲಿಲ್ಲ. ಭಟ್ಟರು ಗಾಡಿಯ ಮೇಲೆ ಒಂದು ಕಾಲನ್ನಿಟ್ಟು 

ಹತ್ತುವುದಕ್ಕೆ ಸಿದ್ಧವಾಗಿದ್ದವರು, ಮತ್ತೆ ಕಾಲನ್ನು ಹಿಂದಕ್ಕೆ ತೆಗೆದರು. 

ಒಂದುಗಳಿಗೆ ಯೋಚಿಸಿದರು ಕೊನೆಗೆ ಹೋಗಿಯೇಬರಬೇಕೆಂದು 

ನಿಶ್ಚಯಮಾಡಿ ಶಿವಾಲಯಕ್ಕೆ ಹೋದರು. ಅಲ್ಲಿ ಯಾರೂ ಇರಲಿಲ್ಲ.


೫೬


ಅವರಿಗೂ ಒಂದು ರೀತಿಯಾದ ಸಮಾಧಾನವಾಗಿ, " ಹೋಗಲಿ, ಒಳ್ಳೇ 

ದಾಯಿತು' ಎಂದುಕೊಂಡು, ಒಮ್ಮೆ ನಿಟ್ಟುಸಿರುಗರೆದರು. ಆದ 

ಓಟೆಯನ್ನು ತೆಗೆದು ರೊಯ್ಯನೆ ನೀರೊಳಕ್ಕೆ ಎಸೆಯುವಾಗ, ಆ ಬೀಜದ

ಗಿಡವಾಗುವ ಚೇತನವಿದೆಯೆಂದರಿಯದ, ಹುಡುಗನಂತೆ, ಮೇಲೆ ತೋರಿಕೆ 

ಸಮಾಧಾನವಾಗಿ ಕಾಣುವ ಆ ಭಾವದ ಅಡಗಿರುವ ಅಸಮಾಧಾನವನ್ನು  

ಅವರು ಕಾಣಲಿಲ್ಲ.


ಗಾಡಿಯಲ್ಲಿ ಕುಳಿತು ಅವರು, ಹೊರಟ ಗಾಡಿಯ ಊರಬಾ

ಲಿಂದ ಅಷ್ಟು ದೂರ ಬ೦ತು. ಹಿಂದೆ ಬಂದಿದ್ದ ಜನರೆಲ್ಲರೂ ಉಳಿದು 

ಕೊಂಡರು ಗಾಡಿಯು ಇನ್ನಷ್ಟು ದೂರಬಂತು. ಆಗ, ಒಂದು ವ್ಯಕ್ತಿಯು 

ಬಂದು, ಗಾಡಿಯ ಬಳಿಯಲ್ಲಿ ನಿಂತಿತು. ಗಾಡಿಯವನು, ಬಂದವಳು 

ಬಸವಿಯೆಂದು ಗುರುತಿಸಿ, ಗಾಡಿಯನ್ನು ನಿಲ್ಲಿಸಿದನು. ಅದನ್ನರಿತ 

ಭಟ್ಟರೂ ಕೆಳಗಿಳಿದು ಬಂದರು. ಬಸವಿಯು ಬಂದು ಅವರ ಕಾಲಮೇಲೆ 

ಅಡ್ಡ ಬಿದ್ದಳು ಕಣ್ಣಿಂದ ಹರಿಯುತ್ತಿದ್ದ ನೀರು ಅವರ ಕಾಲಮೇಲೆ 

ಬಿದ್ದು, ಅವರಿಗೂ ಅದರ ಅರಿವಾಯಿತು. 


ಕೂಡಲೇ ಭಟ್ಟರು ಅಧೀರರಾಗಿ, ಅವಳನ್ನು ಹಿಡಿದೆತ್ತಿ, ಸಮಾಹಿತ 

ಚಿತ್ತದಿಂದ, ಸಮಾಧಾನಪಡಿಸುವ ಶಾಂತರೀತಿಯಿ೦ದ, "ಅಳದಿರು 

ಈಶ್ವರನಿದ್ದಾನೆ” ಎಂದರು. ಅವರು ಹೇಳಿದ ಮಾತಿನ ಅರ್ಥವೇನೋ 

ಅವರಿಗೇ ತಿಳಿಯದು. ಆದರೂ ಬಸವಿಗೆ ಮಾತ್ರ ಏನೋ ಸಮಾಧಾನ 

ವಾಯಿತು. ಅವಳೂ ಶಾಂತಳಾಗಿ ಹಿಂತಿರುಗಿ ಹೋದಳು.


ಗಾಡಿಯೂ ಮುಂದಕ್ಕೆ ಹೋಯಿತು. ಆದರೆ ಮುಂದಕ್ಕೆ ಹೊಗಿ 

ಭಟ್ಟರ ಆಶೆಯು ಮಾತ್ರ ಹಿ೦ತಿರುಗಿತು. 


೫೭


ಹದಿನಾರನೆಯ ಪರಿಚ್ಛೇದ


ಈ ಸಲ ಗಾಡಿಯು ಭಟ್ಟರ ಮನೆಯವರೆಗೂ ಬ೦ತು. ತ೦ಗಿದ 

ಕಡೆಯಲ್ಲಿಯೂ ಗಾಡಿಯವನು ತಲೆಮರೆಸಿಕೊಳ್ಳಲಿಲ್ಲ. ತ್ಯಾಗಿಯನ್ನು 

ನಂಬದವರಾರು ? ಆದರೆ ಗಾಡಿಯವನು ಎಷ್ಟು ಹೇಳಿದರೂ, ಊಟಕ್ಕೆ 

ಮಾತ್ರ, ನಿಲ್ಲಲಿಲ್ಲ.


ಮನೆಯಲ್ಲಿ ಪಾತಮ್ಮನವರು ಭಟ್ಟರು ಬಂದಾರೆ ಎಂದು ಕಾದಿದ್ದರು. 

ಬಂದು ಕೊಂಚ ಹೊತ್ತಾಗಿ, ತುಸು ಹಳದಾಗುತ್ತಲೂ, “ ನೀವು ನೇರವಾಗಿ

ಸುಬ್ರಹ್ಮಣ್ಯಕ್ಕೆ ಹೋಗಿ ಬಂದಹಾಗಿಲ್ಲ? ” ಎಂದರು. ಭಟ್ಟರಿಗೆ ಆಕಾಶವೇ 

ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಒಂದುಗಳಿಗೆ ಯೋಚಿಸಿ, “ ಇಲ್ಲ 

ನಿನಗೆ ಹೇಗೆ ತಿಳಿಯಿತು ? ” ಎಂದು ಕೇಳಿದರು.


" ನೀವು ಕಳುಹಿಸಿದ ಒಡವೆ, ವಸ್ತು, ಹಣಗಳೇ ಹೇಳಿದವು. ಇದರೂ 

ನಿಮ್ಮ ಧೈರ್ಯ ಎಷ್ಟು ? ಅವನು ಯಾರೋ ಏನೋ ? ಅಪ್ಪನ 

ಕಾಲದಿಂದಲೂ ಗುರುತಿಲ್ಲ. ಅವನ ಕಯ್ಯಲ್ಲಿಕೊಟ್ಟು ಕಳುಹಿಸಿ

ದ್ದೀರಲ್ಲ ?" 


" ಏನು ಒಡವೆ, ವಸ್ತು, ಹಣ ? ಯಾರ ಕಯ್ಯಲ್ಲಿ ಕೊಟ್ಟು ಕಳು 

ಹಿಸಿದ್ದು ? ಏನು ?"


" ನನಗೆ ಗೊತ್ತು. ನೀವು ಹೀಗೇ ಎಂದೀರಿ ಅಂತ ನಾನು ಆಗಲೇ 

ಊಹಿಸಿದೆ. ನಿಮಗೆ ಯಾರೋ ಶಿಷ್ಯರು ಸಿಕ್ಕಿದ್ದಾರೆ. ಅವರು 

ಎಲ್ಲಿಗೋ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬೇಕಾದ ಹಾಗೆ 

ಮರ್ಯಾದೆಯಾಗಿದೆ. ಅದೆಲ್ಲ ಸರಿ. ಆದರೆ ಆ ಹಳೆಯಪೆಟ್ಟಿ 

ಅದೇನು ? ”


೫೮


" ಹಳೆಯ ಪಟ್ಟಿ ? ಯಾವುದು ? ಒಂದೂ ಅರ್ಥವಾಗುವುದೇ ಇಲ್ಲ 

ವಲ್ಲ ? ?”


ಪಾತಮ್ಮನವರಿಗೆ ಕೊಂಚ ಕೋಪವು ಬಂತು. ಭಟ್ಟರ ಹಾಸ್ಯವು 

ಬಹಳವಾಯಿತೆಂದು ಅವರ ಅಭಿಪ್ರಾಯ. "ಬನ್ನಿ ತೋರಿಸುತ್ತೇನೆ.” 

ಎಂದು ಕರೆದುಕೊಂಡು ಹೋಗಿ, ಎಲ್ಲವನ್ನೂ ತೆಗೆದು ಮುಂದಿಟ್ಟರು. 

ಭಟ್ಟರು ನೋಡಿದರು. ಎಲ್ಲವೂ ನೆನೆಪಾಯಿತು.


"ಸರಿ ಸರಿ. ತಂದವನು ಹೇಗಿದ್ದ ? ”


" ಗೊತ್ತೇ ಇಲ್ಲದ ಹಾಗೆ ಮಾತನಾಡುತ್ತಿರಿ? ಕಪ್ಪು, ಕುಳ್ಳು, ಒ೦ದೂ ವರೆ ಗೇಣುದ್ಧ ? ಸರಿಯೇ ? ”


ಭಟ್ಟರಿಗೆ ಹೆಂಡಿತಿಯ ಹಾಸ್ಯದಲ್ಲಿ ಬಹು ಆಶೆ. ಆದರೂ ಈ ಸಲ 

ಏಕೋ ಅಷ್ಟು ಬೇಕಾಗಲಿಲ್ಲ. ಸಾವಧಾನವಾಗಿ, ಶಾಂತರಾಗಿ, ಹೇಳಿದರು. 


" ಅಲ್ಲ ಕಣೆ ! ಹೇಗಿದ್ದ ಹೇಳೇ ? ”


"ಎತ್ತರವಾಗಿದ್ದ ಒಳ್ಳೆ ದುಂಡು ದುಂಡುಗಿದ್ದ, ಗಿರಲುಮಾಸೆ, ಕಣ್ಣು ದೊಡ್ಡದು, ಬಣ್ಣ ಅಷ್ಟು ಕಪ್ಫೂ ಅಲ್ಲ. ಕೆಂಪೂ ಅಲ್ಲ. ಅವನ

ಹೆಸರು -' ದಾಸ ' ಎಂತಲಂತೆ !”


" ಸರಿ. ಹುಬ್ಬು ದಪ್ಪವಾಗಿ ಪೊದೆಯ ಹಾಗಿತ್ತು ಅಲ್ಲವೆ ? ”


"ಹೌದು"


"ಸರಿ. ಅರ್ಥವಾಯಿತು "


ಭಟ್ಟರಿಗೆ ಈಗ ತಿಳಿಯಿತು. ಅಲ್ಲಿ ತಾವು ಬೇಡವೆಂದುದನ್ನು ನಾಯ 

ಕನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಅದಕ್ಕಾಗಿಯೇ ತಮ್ಮನ್ನು ಎರಡು 

ದಿನ ಹೆಚ್ಚಾಗಿ ನಿಲ್ಲಿಸಿಕೊಂಡುದು. ಸಂದೇಹ ನಿವೃತ್ತಿಗಾಗಿ, ಇನ್ನೊಂದು 

ಪ್ರಶ್ನೆ ಕೇಳಿದರು.


೫೯


"ಇದೆಲ್ಲ ತಂದು ಕೊಟ್ಟು ಎಷ್ಟು ದಿನವಾಯಿತು ? ”


"ಮೊನ್ನೆಯಲ್ಲ, ಆಚೆಯ ಮೊನ್ನೆ ಸಾಯಂಕಾಲ "


ತಾಳೆ ಬಿತ್ತು. ತಾವು ಹೊರಟಾಗ ದಾಸನನ್ನು ಅವರು ನೋಡಲಿಲ್ಲ. 


ಎಲ್ಲವನ್ನೂ ನೋಡುತ್ತಲೂ ಭಟ್ಟರು ಗಂಭಿರವಾಗಿ, ಅವಾಕ್ಕಾಗಿ, 

ಏನೋ ಯೋಚಿಸುತ್ತ ಕುಳಿತರು. ಯಾವಾಗಲೂ ಭಟ್ಟರು, ಕೆಲವು ದಿನ, 

ಹೊರಗೆ ಹೋಗಿದ್ದು ಬಂದರೆ, ಹೆಂಡತಿಯೊಡನೆ, ಅಲ್ಲಿಯ ಕಥೆಯನ್ನೆಲ್ಲ 

ಹೇಳಬೇಕು; ಎಷ್ಟೋ ಮಾತನಾಡಬೇಕು. ಹುಡುಗರಂತೆ ಹಾಸ್ಯ ಮಾಡಿ 

ಆಕೆಯನ್ನು ಎರಡು ಗಂಟೆಯ ಹೊತ್ತು ಗೋಳು ಹುಯ್ದುಕೊಳ್ಳಬೇಕು. ಈ 

ಸಲ ಅದೊಂದೂ ಇಲ್ಲ. ಮಾತನಾಡಿದರೆ ಮುತ್ತು ಒಡೆಯಿತೆಂಬ ಭಾವ. 

ಪಾತಮ್ಮನವರಿಗೆ ಅರ್ಥವಾಗಲೊಲ್ಲದು.


ಭಟ್ಟರು, ಬೆಟ್ಟವನ್ನು ಅಗೆದು, ಕಡಲನ್ನು ತುಂಬವ ಯೋಚನೆ 

ಯನ್ನು ಮಾಡುತ್ತಿದ್ದಂತೆ, ಒಂದಷ್ಟು ಹೊತ್ತು ಸುಮ್ಮನೆ ಇದ್ದು, ಒ೦ದು 

ಗಳಿಗೆಯಾಗುತ್ತಲೂ, ಹೆಂಡಿತಿಯನ್ನು ಕರೆದು, “ ನಾನು ಒಂದು ಮಾತು 

ಹೇಳುತ್ತೇನೆ ಕೇಳುತ್ತೀಯಾ?” ಎಂದರು.


ಅವರಿಬ್ಬರಲ್ಲಿ ಈ ಪ್ರಶ್ನೆ ಬೇಕಾಗಿರಲಿಲ್ಲ. ಬೇಕಿಲ್ಲದ ಒಂದು ಪ್ರಶ್ನೆಯು 

ತಲೆಯೆತ್ತಿದರೆ, ಅಲ್ಲೊಂದು ಸಂದೇಹವೂ ಜೊತೆಯಲ್ಲಿಯೇ ಹುಟ್ಟಬೇಕಷ್ಟೆ? 

ಪಾತಮ್ಮನವರು, ಕೂಡಲೇ ಸಂದೇಹಪಟ್ಟು " ಅದೇನು ಇದುವರೆಗೂ 

ನಾನು ನೀವು ಹೇಳಿದ ಮಾತನ್ನು ಕೇಳದೆ ಇರುವುದು ? ಇವೊತ್ತು ಹೀಗೆ 

ಕೇಳುತ್ತೀರಲ್ಲ ?” ಎಂದರು.


ಭಟ್ಟರಿಗೆ ಬೇಸರವಾಯಿತು. ಆದರೂ ಅದನ್ನು ನು೦ಗಿಕೊ೦ಡು, 

" ಈ ಒಡವೆಗಳನ್ನು ನೀನು ಇಟ್ಟು ಕೊಳ್ಳಬೇಡ. ಅವು ಮನೆಯಲ್ಲೂ 

ಬೇಡ. ದೇವಸ್ಥಾನಕ್ಕೆ ಕೊಟ್ಟು ಬಿಡು. ” ಎಂದರು.


ಪಾತಮ್ಮನವರು " ಏಕೆ ? ” ಎಂದು ಕೇಳಿದ್ದರೆ ಚೆನ್ನಾಗಿತ್ತು. ಕೇಳ 

ಲಿಲ್ಲ. ಬಹುದಿನದ ಸದರ, (ಸಾದರ ?) ಅಲ್ಲದೆ, ಹೆಣ್ಣಿಗೆ ಸಹಜವಾಗಿ 


೬೦


ಬಂದ ಒಡವೆಯಾಸೆ, ಅಲ್ಲವೇ ಮತ್ತೆ ? ಮಕ್ಕಳನ್ನೆಲ್ಲ ಬಿಚ್ಚಾಲೆ

ಗೌರಿಯೆನ್ನು............."


ಗೌರಿಯೆನ್ನುತ್ತಲೂ ಭಟ್ಟರು “ ಎಲ್ಲಿ ?” ಎಂದು ತಟ್ಟನೆದ್ದರು. 

ಏನೋ  ಯೋಚನೆಯಲ್ಲಿದ್ದ ಭಟ್ಟರಿಗೆ ಹಿಂದಿನ ಮಾತಾವುದೂ ಅರಿಕೆ 

ಯಾಗಿರಲಾರದು. ಪಾತಮ್ಮನವರಂತೂ ಏನೂ ತಿಳಿಯದೆ ಮೊಂಕಾಗಿ 

ಹೋದರು. ಗೌರಿಯೆಂದರೆ ಇವರೇಕೆ ಹೀಗೆ ಕಕ್ಕು ಬಿಕ್ಕಾದರು ? ” 

ಎನ್ನಿಸಿತು. ಮೊದಲಿನ ಪತ್ನಿ ಸ್ನೇಹದ ಪವಿತ್ರ ಪ್ರವಾಹದಿಂದ ಪತಿಯನ್ನು 

ಆರಾಧಿಸಿದ್ದರೆ, ಆ ಉಪಚಾರದಿಂದ ತೃಪ್ತವಾದ ಅವರ ಅಂತರಂಗದಲ್ಲಿ 

ಏನು ಭಾವ ಹುಟ್ಟುತ್ತಿತ್ತೊ ? ಆದರೆ ಪಾತಮ್ಮನವರು ಹಾಗೆ ಮಾಡಲಿಲ್ಲ 

ಸ್ನೇಹಕ್ಕೆ ಬದಲಾಗಿ ಸಂದೇಹಕ್ಕೆಡೆಗೊಡುತ್ತ, ನಂಬುಗೆಯನ್ನು ತೋರಿಸಿ, 

ಗೆಲ್ಲವುದನ್ನು ಬಿಟ್ಟು, ಸಿಡಿದು ನಿಂತು ಸೋತರು, ಆ ಮಾತು ಮುಂದಕ್ಕೆ 

ಆಡದೆ, ಅಲ್ಲಿಗೆ ಬಿಟ್ಟು, ಒಡವೆ ವಸ್ತುಗಳನ್ನೆಲ್ಲ, ಹಾಗೆಯೇ ಹಾಕಿಬಿಟ್ಟು 

ಹೊರಟುಹೋದರು.


ಭಟ್ಟರು ಕೂಗುತ್ತಿದ್ದರೂ, ಲಕ್ಷಿಸದೆ, ಹೊರಟು ಹೋದರು. ಭಟ್ಟರ 

ಮನಸ್ಸಿಗೆ ಕತ್ತಿಯಿಂದ ಇದು ಗಾಯದಮೇಲೆ ಉಪ್ಪಿನ ನೀರು ಸುರಿ

ದಂತಾಯಿತು.

-----


ಹದಿನೇಳನೆಯ ಪರಿಚ್ಛೇದ.

ಗಂಡಹೆಂಡಿರಿಗೆ ದೂರದೂರವಾಗುತ್ತ ಬಂತು. ಭಟ್ಟರಿಗೆ, ಕುಟುಂಬವು 

ತಮ್ಮ ಮಾತು ಕೇಳಲಿಲ್ಲವೆಂದು ಕೋಪ. ಪಾತಮ್ಮನವರಿಗೆ ಅಲ್ಲಿ ನಡೆದು 

ದನ್ನೆಲ್ಲವನ್ನೂ, ಒಡವೆಗಳೂ ಹಣವೂ ಎಲ್ಲಿಂದಬಂದವೆಂಬುದನ್ನು-ಎಂದಿ 

ನಂತೆ ಹೇಳಲಿಲ್ಲವೆಂದು ಕೋಪ, ಕೋಪವನ್ನು ಕೂಡಲೇ ಕಳೆಯದೆ 


೬೧


ಬಿಟ್ಟರೆ, ಅದು, ನಿಂತರೆ ಕೊಳೆತು, ಕೊಳೆತರೆ ಕಿವಾಗುವ ರಕ್ತದಂತೆ 

ಅನರ್ಥಕಾರಿಯಾಗುವುದು ಎಂಬುದನ್ನು ಇಬ್ಬರೂ ಗಮನಿಸಲಿಲ್ಲ. 


ಎಂಟುದಿನಗಳು ಎನ್ನುವುದರೊಳಗಾಗಿ ಇಬ್ಬರ ಅಸಮಾಧಾನವೂ 

ಒಂದು ರೂಪಿಗೆ ಬಂದು ಪ್ರಕಟವಾಗುತ್ತ ಬಂತು. ಪಾತಮ್ಮನವರು 

ಯಾವುದೋ ಮಾತಿಗೆ, ಯಾವುದೋ ಸಂದರ್ಭದಲ್ಲಿ, ಅಪ್ರಸಕ್ತವಾಗಿ, 

ಏನಾದರೂ ಅಡ್ಡ ಮಾತಾಡುವರು. ಭಟ್ಟರು ಮೌನವಾಗಿದ್ದು ಮಾಡುತ್ತಿದ್ದ 

ಕೆಲಸವನ್ನು ಬಿಟ್ಟು, ಹೇಗಿದ್ದರೆ ಹಾಗೇ ಎದ್ದು ಹೊರಟುಹೋಗುವರು. 

ಅಂತೂ ಗಂಡಹೆಂಡಿರ ಜಗಳದಲ್ಲಿ ಮನೆಯಲ್ಲಿ ಎಲ್ಲರಿಗೂ "ಇರಸು 

ಮುರಸು” ಎಲ್ಲರಿಗೂ ಅನಾನುಕೂಲ. ಅದರಲ್ಲೂ ಹುಡುಗರಿಗಂತೂ 

ಏಕೋ ಬಲು ಮುಜಗರವಾಯಿತು. ಯಾರಾದರೂ ಹೊರಗಿಂದ ಬಂದವರು, 

ದೀಪಾವಳಿಯ ಮುಂದಿನ ಗದ್ದೆಗಳ ಹಾಗೆ ನಲವಿನ ಬಿಡಾಗಿದ್ದ ಪಾತಮ್ಮ 

ನವರ ಮನೆಯು, ಕಲ್ಲುಹೊಲದ ಹಾಗೆ ಆಗಿರುವುದನ್ನು ಕಂಡು ಹತಾಶ 

ರಾಗುವರು. ಎಲ್ಲರೂ ಆರೋಗ್ಯವಾಗಿದ್ದಾರೋ ಇಲ್ಲವೋ ? ” ಎಂದು 

ಕುಶಲ ಪ್ರಶ್ನೆಯನ್ನು ಮಾಡಿದರೆ, ಪಾತಮ್ಮನವರಿಗೆ, ದುಃಖದ ಕಟ್ಟೆಯು 

ಒಡೆದು ಬಿಕ್ಕಿ ಬಿಕ್ಕಿ ಅಳುವು ಬಂದುಬಿಡುವುದು. ಆಕೆಯು ಬಹುಕಷ್ಟದಿಂದ 

ಸಂವರಣಮಾಡಿಕೊಂಡು, ಅಳುವನ್ನು ನುಂಗಿದರೂ, ಕಣ್ಣಿನ ನೀರು 

ಮಾತ್ರ ಈಚೆಗೆ ಬಂದೇಬಿಡುವುದು. ಇದನ್ನು ನೋಡಿದವರು ಏನೋ 

ಎಂತೋ ಎಂದುಕೊಂಡು, “ ಹೋಗಲಿ ಬಿಡೀಮ್ಮಾ! ಪಾಪ ! ಏನೋ ! 

ನಿಮ್ಮಂಥ ಒಳ್ಳೆಯವರಿಗೆ ಹೀಗಾಗಬಾರದಾಗಿತ್ತು,” ಎನ್ನುವರು. ಪಾತಮ್ಮ 

ನವರಿಗೆ ಅದೇ ಒಂದು ಹಿತ. ಆಪ್ಯಾಯನ. ಆಕೆಯ ಮನಸ್ಸಿನಲ್ಲಿ ಎಲ್ಲ 

ರಿಗೂ ತಮ್ಮ ಗಂಡಹೆಂಡಿರ ಅಸಮಾಧಾನ ತಿಳಿದಿದೆಯೆಂದೂ, ಅದಕ್ಕಾಗಿ 

ಹೀಗೆ ಸಮಾಧಾನಮಾಡುವರೆಂದೂ ನಂಬಿಕೆ. ಪ್ರಪಂಚದಲ್ಲಿ ಪ್ರತಿಯೊಬ್ಬ 

ರಿಗೂ ತಮ್ಮ ತಮ್ಮ ದುಃಖವೇ ಹೆಚ್ಚು, ಇತರರ ದುಃಖವನ್ನು ಗಮನಿಸು 

ವುದಕ್ಕೆ ಅವಕಾಶವೂ ಇಲ್ಲ, ಇಷ್ಟವೂ ಇಲ್ಲ ಎಂಬುದನ್ನು ಪಾತಮ್ಮನವರು

ಕಾಣರು.


ಭಟ್ಟರಿಗೂ ಪ್ರಕೃತಿಯು ನೆಟ್ಟಗಿಲ್ಲ ಮೂಗು ನೇರವಾಗಿದ್ದರೂ 

ಶೀತವಾದವರಿಗಿಂತ ಹೆಚ್ಚಾಗಿ ಒರೆಸಿಕೊಳ್ಳುವರು. ಕಣ್ಣು ನೇರವಾಗಿದ್ದರೂ 


೬೨


ಏಕೋ ಉರಿಯುವ ಹಾಗಿದೆ ಯೆಂದುಕೊಳ್ಳುವರು. ಅಂತೂ ಒಂದು ಮಾತ್ರ 

ಆಯಿತು. ಮನಸ್ಸು ಮಾತ್ರ ಶಾಸ್ತ್ರಚಿಂತನವನ್ನು ದೂರಮಾಡಿ, ಆತ್ಮ

ವರ್ತನವನ್ನು, ತಾನು ಮಾಡುತ್ತಿರುವುದು ಸರಿಯೇ ತಪ್ಪೇ ಎಂಬುದನ್ನು 

ಕುರಿತು ಯೋಚಿಸತೊಡಗಿತು ಪ್ರಪಂಚದಲ್ಲಿ ಇಷ್ಟು ವಿಷಯಗಳಿದ್ದರೂ 

ಮನಸ್ಸು ಅವೆಲ್ಲವನ್ನೂ ಬಿಟ್ಟು ಇಬ್ಬರ ವಿಚಾರವಾಗಿ ಮಾತ್ರ ಯೋಚಿಸು 

ತ್ತಿರುವುದು.


ಒಬ್ಬಳು ವಿರಕ್ತಯಾಗಿ ಗುಡಿಯನ್ನು ಸೇರಿದ್ದರೂ ತಮ್ಮ ವಿಷಯ 

ದಲ್ಲಿ ಅನುರಕ್ತ, ಮತ್ತೊಬ್ಬಳು ತಮ್ಮ ಮನೆಯಲ್ಲಿ ಸಂಸಾರಮಾಡಿ 

ಕೊಂಡಿದ್ದರೂ ತಮ್ಮ ವಿಷಯದಲ್ಲಿ ಸದ್ಯದಲ್ಲಿ ವಿರಕ್ತೆ, ಈ ಇಬ್ಬರ ನಡುವೆ, 

ಅನುರಕ್ತರೋ ವಿರಕ್ತರೋ ಅದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ತಾವು 

ಎಷ್ಟು ಯೋಚಿಸಿದರೂ ಬಗೆ ಹರಿಯದ ಈ ವಿಷಯದಲ್ಲಿ, ಭಟ್ಟರ ಮನಸ್ಸು 

ಅಜ್ಞಾತವಾಗಿ ಒಂದನ್ನು ಮಾತ್ರ ಇತ್ಯರ್ಧಮಾಡಿಬಿಟ್ಟಿತು. ವಾದಿ ಪ್ರತಿ 

ವಾದಿಗಳ ಹೇಳಿಕೆಯನ್ನೆಲ್ಲ ಕೇಳಿ, ಸಿದ್ದಾಂತವನ್ನು ಹೇಳುವ ನ್ಯಾಯಾಧಿ 

ಪತಿಯಂತೆ, ಭಟ್ಟರ ಮನಸೂ ಗೊತ್ತು ಮಾಡಿಬಿಟ್ಟಿತು. ಆದರೆ ಅದು 

ನಿಷ್ಪಕ್ಷಪಾತವಾಗಿತ್ತೋ ಇಲ್ಲವೋ ಅದನ್ನು ನಾವು ಕಾಣೆವು. ಬಗೆಗಣ್ಣಿನ 

ಎದುರಿಗಿದ್ದ, ಎರಡು ವ್ಯಕ್ತಿಗಳಲ್ಲಿ “ಅದು ಚಿನ್ನ, ಇದು ಹಿತ್ತಾಳೆ,” ಎಂದು 

ಅವರ ಸಿದ್ಧಾಂತ ಆದರೂ ಮನಸ್ಸಿನಲ್ಲಿಯೇ ಆ ಸಿದ್ಧಾಂತವೂ ಪದೇ ಪದೇ

“ ರಿವಿಜನ್ " ಆಗುತ್ತಲೇ ಇತ್ತು. ಅದು ಇನ್ನೂ ಖಂಡಿತವಾಗಿ, 

ಸ್ಥಿರವಾಗಿದ್ದಂತೆ ತೋರಲಿಲ್ಲ.


 ಭಟ್ಟರ ಮನಸ್ಸು ಒಂದು ಬಗೆಯದು, ಅದಕ್ಕೆ ದುಃಖದ ಅಭಿರುಚಿ 

ಯಿಲ್ಲ. ಇರುವ ಎರಡು ದಿನವೆಲ್ಲ ಒದ್ದಾಟ ಗುದ್ದಾಟಗಳೆ ಆಗಿಹೋದರೆ 

ಹೇಗೆ ? ಎಂಬ ಜಾತಿಗೆ ಸೇರಿದುದು. " ಮರವು ಕಡಿದರೂ ಚಿಗುರು 

ವುದು, ದೂರದೆ ಗಾಯವನ್ನು ಮಾಯಿಸಿಕೊಂಡು ಹೊಸದಾಗಿ ಕೊನರಿಡು 

ವುದು, ನೀರು ಕಲಕಿದರೂ ತಿಳಿದುಕೊಳ್ಳುವುದು. ನಾವು ಅದಕ್ಕಿಂತಲೂ 

ಕಡೆಯೇ ? ಸಂತೋಷವೇ ಜೀವನ ಗುಣ, ಅದನ್ನು ಪ್ರದರ್ಶಿಸುವುದೇ 

ಅಂತಃಕರಣದ ಧರ್ಮ, ಅದಕ್ಕೆ ಎಷ್ಟು ನಿಘ್ನಗಳು ಬಂದರೂ, ಅದನ್ನೆಲ್ಲ 


೬೩


ನಿವಾರಿಸಿಕೊಂಡು, ಸಂತೋಷವಾಗಿರಬೇಕಾಗದುದೇ ಮಾನವನ ಧರ್ಮ"  

ಎನ್ನುವವರು ಅವರು. ಅದರಿಂದ ಬರುಬರುತ್ತ ಎಂದರೆ ಅಮಾವಾಸ್ಯೆಯೊಳ 

ಗಾಗಿ ಮನಸ್ಸು ಪೂರ್ವಸ್ಥಿತಿಗೆ ಬಂದು, ಬರುವ ಪಾಡ್ಯದಿಂದ ಬೆಳೆಯುವ ಚಂದ್ರನೊಡನೆ ತಾನೂ ಕಳಾಪೂರ್ಣವಾಗಲು ಸಿದ್ಧವಾಯಿತು. 


ಪಾತಮ್ಮನವರದು ಹೆಣ್ಣು ಮನಸ್ಸು. ಇಲ್ಲದ ಚಿಂತೆಯನ್ನು ಕಟ್ಟಿ 

ಕೊಂಡು, ಕಟ್ಟಿಕೊಂಡ ಚಿಂತೆಯಲ್ಲಿ ಕುಳಿತುಕೊಂಡು, ಜಿನುಗಿ ಜಿನುಗಿ, 

ಅದನ್ನೇ ಒ೦ದು ರೋಗವಾಗಿ ಮಾಡಿಕೊಳ್ಳುವ ಜಾತಿಯದು, ಅವರಿಗೆ 

ಅದೇ ಒಂದು ಪ್ರಬಲ ರೋಗವಾಗಿ ಹೋಯಿತು. ಹದಿನೈದು ದಿನವೆನ್ನು 

ವುದರೊಳಗಾಗಿ, ಅವರ ಬಣ್ಣವು ಒ೦ದಿಳಿತ ಇಳಿಯಿತು. ಮನಸ್ಸು ಚಿ೦ತೆ 

ಯಲ್ಲಿ ಮುಳುಗಿ ತೇಲುತ್ತಿರಲು, ಮುಖವು ಮೊಂಕಾಗಿಹೋಯಿತು  ಗಂಡ 

ನೊಡನೆ ಮಾತನಾಡಬೇಕೆ೦ಬ ಆಶೆ, ಆದರೆ ಅದೇಕೋ ಸಾಧ್ಯವಾಗಲೊ 

ಲ್ಲದು. ನಿತ್ಯವೂ ತಾವೇ ಅಡಕೆಲೆಯನ್ನು-ಎ೦ದಿನ೦ತೆ-ತೆಗೆದುಕೊಂಡು 

ಹೋಗಬೇಕೆನ್ನುವರು. ತಟ್ಟೆಯನ್ನು ಚೊಕ್ಕಟವಾಗಿ ತೊಳೆದು ಅದರಲ್ಲಿ 

ಎಲೆಯಡಿಕೆ ಸುಣ್ಣದ ಕಾಳನ್ನು ನೇರವಾಗಿಟ್ಟುಕೊಂಡು ಹೊರಡ 

ಬೇಕೆನ್ನುವುದರೊಳಗಾಗಿ, ಏನೋ ಭಾವಾಂತರಕ್ಕೆ ಎಡೆಗೊಟ್ಟು ನಿಂತು 

ಬಿಡುವರು. ಬೇಕು-ಬೇಕು-ಎಂದು ಹಾತೊರೆಯುತ್ತಿದ್ದ ಮನವು ಇದ್ದ 

ಕ್ಕಿದ್ದ ಹಾಗೆಯೇ ಬೇಡವೆಂದು ಬಿಡುವುದು. ಆರು ಹೆಜ್ಜೆಗಳಿಡುವವರೆಗೂ 

ಬೇಕೆಂಬ ಭಾವವಿದ್ದು ಏಳನೆಯ ಹೆಜ್ಜೆಯಲ್ಲಿ ಬೇಡವೆನ್ನಿಸಿಬಿಡುವುದು. 

ಬೆಳಗಿ೦ದ ವಿವೇಕವು ವಿಚಾರದ ಬಲದಿಂದ ಕಟ್ಟಿದ್ದ ದೊಡ್ಡ ಕರುಮಾಡ 

ವನ್ನು ಒಂದು ಸಣ್ಣ, ಸಂಶಯವೆಂಬ ಪಿಶಾಚನ್ನು ತಟ್ಟನೆ ಒದ್ದು ಉರುಳಿಸಿ 

ಬಿಡುವುದು. ಪಾತಮ್ಮನವರು ತಟ್ಟನೆ ತಟ್ಟೆಯನ್ನು ಅತ್ತಿಟ್ಟು, ಸುಮ್ಮನೆ 

ಕುಳಿತುಕೊಳ್ಳುವರು. ಇದೆಯಲ್ಲ ಹೆಂಗಸರಿಗೆ, ಅದರಲ್ಲೂ ಅನಾಥೆಯುರ 

ತಾವು ಎಂದುಕೊಂಡ ಹೆಂಗಸರಿಗೆ ಶರಣೆಂದು ಬ್ರಹ್ಮನು ಸೃಷ್ಟಿಸಿರುವ 

" ಅನಾಥ ರಕ್ಷಕ ” ಕಣ್ಣೀರು ! ಅದು ಬಂದು, ಕೋಡಿಗಟ್ಟಿಕೊಂಡು 

ಹರಿದು ಅವರಿಗೆ ಸಮಾಧಾನವಾಗುವುದು.

----


ಹದಿನೆಂಟನೆಯ ಪರಿಚ್ಛೇದ

ಹೀಗೆಯೇ ಇನ್ನೂ ಒಂದು ವಾರ ಕಳೆಯಿತು ಮತ್ತೂ ಒ೦ದು 

ವಾರ ಕಳೆಯಿತು ಹರಿಯುತ್ತಿರುವ ನದಿಯ ಪಾತ್ರವು ವಿಶಾಲವಾಗುತ್ತ 

ಬಂದಂತೆ, ಪತಿಪತ್ನಿಯರ ವೈಮನಸ್ಯವು ದೊಡ್ಡದಾಗುತ್ತ ಬಂತು. ಬರು 

ಬರುತ್ತ ಪತಿಯು ಅಪರಾಧಿಯೆಂದು ಪಾತಮ್ಮನವರ ಮನಸ್ಸಿಗೆ ದೃಢವಾ 

ಗುತ್ತ ಬಂದು, ಅವರನ್ನು ಕಂಡರೆ ಸಿಡಿಮಿಡಿಗುಟ್ಟುವುದಕ್ಕೆ ಆರಂಭವಾ

ಯಿತು. ಮೊದಲಿಂದಲೂ ಮನೆಯಲ್ಲಿ ಅಪ್ರತಿಹತವಾಗಿ ಅಧಿಕಾರ ನಡೆಸು 

ತಿದ್ದ ಸ್ವಭಾವ ಈಗಲೂ ಹಾಗೆಯೇ ನಡೆಯಬೇಕೆಂಬ ಆಸೆ. ಆದರೆ 

ಪ್ರತಿಪಕ್ಷವು ತಮ್ಮ ಅಧಿಕಾರ ಕ್ಷೇತ್ರದಿಂದ ಹೊರಕ್ಕೆ ಹೊರಟುಹೋಗಿದೆ 

ಯೆಂಬ, ಎದುರಾಳಿನ ಮೇಲೆ ತಮಗಿದ್ದ ಅಧಿಕಾರದ ಹಿಡಿತವು ತಪ್ಪಿ 

ಹೋಯಿತೆಂಬ ನಂಬಿಕೆಯು ಬಂದಮೇಲೆ ಹುಟ್ಟುವ, ಒಂದು ವಿಧ ದಾನವ 

ದರ್ಪವು, ಪ್ರತಿಭಟಿಸಿದವರನ್ನು ಹಾಕಿ ತುಳಿದುಬಿಡಬೇಕೆಂಬ ನಿಷ್ಠುರ 

ಭಾವನೆಯು ಪಾತಮ್ಮನವರ ಮೃದು ಮನಸ್ಸಿಗೂ ವ್ಯಾಪಿಸುತ್ತ ಬಂತು 

ಆದರೂ ಪಾತಮ್ಮನವರಿಗೆ "ತಮ್ಮ ಹಿಂದಿನ ಅಧಿಕಾರವನ್ನು ಗೆದ್ದುಕೊಳ್ಳುವ 

ಸಾಧನವು ತಮ್ಮ ಕಟಾಕ್ಷದಲ್ಲಿ ಅಡಗಿದೆ. ತಮ್ಮ ಸವಿಮಾತಿನ ನಯದಲ್ಲಿ 

ಅದು ಅವಿತು ಕುಳಿತಿದೆ” ಎಂಬುದು ತೋರಲಿಲ್ಲ. ಯಾವುದೋ ರೋಗಕ್ಕೆ 

ಏನೋ ಮದ್ದು ಮಾಡುವ ಅಪ್ರಬುದ್ಧ ವೈದ್ಯನಂತೆ, ಯಾರದೋ ತಪ್ಪಿಗೆ 

ಇನ್ನಾರಿಗೋ ಶಿಕ್ಷೆಯನ್ನು ವಿಧಿಸುವ ದುರಾಗ್ರಹಿಯಾದ ಅಧಿಕಾರಿಯಂತೆ  

ಪಾತಮ್ಮನವರ ಕೋಪವು ಮಕ್ಕಳ ಕಡೆಗೆ ತಿರುಗಿತು.


ಭಟ್ಟರ ಮನೆಯಲ್ಲಿ ಮಕ್ಕಳಿಗೆ ಸ್ವಾತಂತ್ರವಿಲ್ಲದಿದ್ದರೂ, ಪ್ರೀತಿಯು 

ಬೇಕಾದಷ್ಟಿತ್ತು. ಶಿಕ್ಷೆಯ ಭೀತಿಯ ಅಭಾವವಿಲ್ಲದಿದ್ದರೂ, ಶಿಕ್ಷಕರ 

ಕ್ರೋಧದ ಗುರುತಾದ ದುಷ್ಟ ಕಷ್ಟ ಶಿಕ್ಷೆಯ ಹೆಸರಿರಲಿಲ್ಲ. ಗಂಡನು 

ಕೋಪವನ್ನು ನಟಿಸಿದಾಗ ಹೆಂಡತಿಯ, ಪತ್ನಿಗೆ ಕೋಪಬಂದಿತೆಂದು 

ತೋರಿದಾಗ ಪತಿಯ ಬಾಯಿಹಾಕಿಕೊಂಡು ಬಂದು ಶಿಕ್ಷೆಯನ್ನು ತಪ್ಪಿಸು 


೬೫


ತ್ತಿದ್ದರು ಅಂತೂ ಮಕ್ಕಳಿಗೆ, ಶಿಕ್ಷೆಯ ಕಾರ್ಮೋಡದ ಆರ್ಭಟದ ಪರಿ 

ಚಯವಾಗುತ್ತಿದ್ದಿತೇ ಹೊರತು ಶಿಕ್ಷೆಯ ಸಿಡಿಲಿನ ಪರಿಚಯವಾಗುತ್ತಿರ 

ಲಿಲ್ಲ.


ಒಂದು ದಿನ ಮಗುವು-ಸುಮಾರು ಆರುವರುಷದ್ದು ಹೊರಗಿನಿಂದ 

ಬಂದು " ಅಮ್ಮಾ ! ಹಸಿವು ” ಎಂದಿತು, ಪಾತಮ್ಮನವರು ಅಡಿಗೆ 

ಯನ್ನು ಮಾಡುತ್ತಿದ್ದವರು ಹಿಂದಿರುಗಿ ನೋಡಿದರು. ಅಂದು ಎಲ್ಲಿಯೋ 

ಒಂದೆರಡು ಹಸಿಯ ಸೌದೆ ತುಂಡುಗಳಿದ್ದು ಒಲೆಯು ಧಾರಾಳವಾಗಿ 

ಉರಿಯದೆ ಕೊಂಚ ತಂಟೆಯಾಗಿದ್ದು, ಪಾತಮ್ಮನವರ ಕಣ್ಣು ಮೂಗುಗ 

ಳಲ್ಲಿ ಅವರ ಮನಸ್ಸಿನಂತೆಯೇ ಉದ್ರೇಕವಾಗಿತ್ತು. ಮಗುವೇನು ಬಲ್ಲದು 

ಆ ವಕ್ರವನ್ನು ? ಮಗುವಿನ ಸರಳ ಪ್ರಾರ್ಥನೆಗೆ ಋಜುವಾಗಿ ಉತ್ತರ 

ಕೊಡುವುದಕ್ಕೆ ಪ್ರತಿಯಾಗಿ, ವಕ್ರವಾಗಿ, " ಆಗಿದೆ ಬಾ, ತೋಡುತ್ತೇನೆ ” 

ಎಂದರು. ಅಭ್ಯಾಸವಿಲ್ಲದ, ಅಪರಿಚಿತವಾದ ಆ ವಕ್ರತೆಯನ್ನು ಕಂಡು, 

ಮಗುವು ಬಹಳ ನೊಂದುಕೊಂಡು, ಈಚೆಗೆ ಬಂದು ಮೂಲೆಯಲ್ಲಿ ಕುಳಿತು 

ಅಳುವುದಕ್ಕೆ ಆರಂಭಿಸಿತು. ಕೊಂಚ ಹೊತ್ತಿನೊಳಗೆ ಭಟ್ಟರೂ ಹೊರಗಿ 

ನಿ೦ದ ಬ೦ದರು.


ಸುಮಾರು ಹನ್ನೆರಡು ಗಂಟೆ ಇರಬಹುದು. ಬಿಸಿಲಿನಲ್ಲಿ ಅಲೆದು 

ಕೊಂಡು  ಬಂದ ಭಟ್ಟರು ಆಯಾಸದಿಂದ, ಕುಳಿತುಕೊಂಡು, ಕಾಲುಧೂಳಿ 

ಒದರಿಕೊಳ್ಳುತ್ತಿದ್ದಾರೆ. ಅತ್ತಿತ್ತ ತಿರುಗುವುದರೊಳಗಾಗಿ, ಮಗುವು ಅಳು 

ತ್ತಿರುವುದು ಕಣ್ಣಿಗೆ ಬಿತ್ತು. ಅವರು ಅದನ್ನು ಬಳಿಗೆ ಕರೆದು “ ಏನು? ", 

ಎಂದು ವಿಚಾರಿಸುತ್ತಿರುವಾಗ ಪಾತಮ್ಮನವರು ಒಳಗಿನಿಂದಲೇ " ಏನೇ ? 

ಬಿತ್ತಿರಿ ! ಆಗಲೇ ಹೋಗಿ ಚಾಡಿಯನ್ನು ಹೇಳಿದೆಯೋ ? ” ಎಂದು 

ಬಂದು ಬಿಟ್ಟರು.


ಭಟ್ಟರು " ಅವಳೇನು ಹೇಳಿದಳು ಎಂದು ಅವಳನ್ನು ಬಯ್ದೆದೇ?” 

ಎಂದರು. ಮೊದಲಾಯ್ತು. ಬೇಡವೆಂದುಕೊಂಡ ಮೇಲೆ ಹುಟ್ಟುವ 

ಬಿರುಸಿನಿಂದ ಅಸ್ತವ್ಯಸ್ತವಾಗಿ, ಅರ್ಥವಿಲ್ಲದೆ, ಅವರೆರಡು ಇವರೆರಡು ಮಾತ 


೬೬ 


ನಾಡಿದರು. ಒಬ್ಬರಿಗೆ ರೇಗು, ಇನ್ನೊಬ್ಬರಿಗೆ ಬೇಸರ. ಕೊನೆಗೆ 

ಭಟ್ಟರಿಗೂ ಕೋಪ ಬಂದು " ಅವಿವೇಕಕ್ಕೂ ಮಿತಿಯಿರಬೇಕು. ಇಲ್ಲ 

ವಾದರೆ ಬದುಕುವುದೇ ಕಷ್ಟ !” ಎಂದರು.


ಪತಿಯ ಭರ್ತ್ಸನೆಗಳ ಪರಿಚಯವಿಲ್ಲದ ಪಾತಮ್ಮನವರಿಗೆ ಅದಷ್ಟು 

ಸಹಿಸದೆ ಹೋಗಿ ಅವರೂ, " ಹೌದು. ಒಲ್ಲದ ಗಂಡನಿಗೆ ಮೊಸರಲ್ಲಿ 

ಕಲ್ಲು ”ಎಂದರು. ಮಧ್ಯಾಹ್ನದ ಕಾಲದಲ್ಲಿ, ಅದೂ ಹೊರಗಿನಿಂದ ಬಂದು 

ಮೈ ಬೆವರಿನ್ನೂ ಆರದಿರುವ ಸಮಯದಲ್ಲಿ, ಮಾತಿಗೆ ಮಾತು ಜೋಡಿಸುವ 

ಹೆಂಗಸನ್ನು ಯಾರು ಸಹಿಸಬಹುದು ? ಅದರಲ್ಲೂ ಮನಸ್ಸಿನ ಮೋಹವು 

ಸಡಲಿರಲು, ಇಂದ್ರಿಯಗಳು ವಿಷಯಾಂತರವನ್ನು ಬಯಸಿರಲು, ಕಾರ 

ಣಾಂತರಗಳಿಂದ ಉದಾಸೀನತೆಯು ಹೆಚ್ಚು ಹೆಚ್ಚುತ್ತಿರಲು, ಮುನಿಸು 

ಮಟ್ಟುಮೀರದಿರುವುದೆಂತು ? ಹಾಗೆಯೇ ದುಡುಕಿ ಮಾತನಾಡಿಯಾಡಿ 

ಅಭ್ಯಾಸವಾಗಿದ್ದ ಮಡದಿಯು ಗಂಡನ ಮನಸ್ಸಿನಲ್ಲಿ ಆಗಿರುವ ಕ್ಷೋಭವ 

ನ್ನರಿಯದೆ ಇರುವಾಗ, ತನಗೆ ಅಪರಾಧವಾಯ್ತೆಂದು ನಂಬಿರುವಾಗ, 

ಅದೆಂತು ಸುಮ್ಮನಿರುವುದು?


ಇಬ್ಬರಿಗೂ ಹತ್ತಿತು. ಭಾವಜ್ಞನಾದ ಚತುರನಿದ್ದಿದ್ದರೆ, ನೀರು 

ತುಂಬಿದ ಕಾರ್ಮೋಡಗಳೆರಡೂ ಮಸೆಯುತ್ತಿವೆ. ಬಿರುಸಿಡಿಲು ಹೊಡೆಯು 

ವುದು '' ಎನ್ನಬೇಕು. ಅಷ್ಟು ಬಿಗಿಯಾದವು ಅವರ ಬಗೆಗಳು. ಆದರೆ, 

ಆಡಿದ ಮಾತೊಂದೊಂದಕ್ಕೂ ಒಂದೊಂದು ಮುತ್ತು ಒಡೆಯಿತು ಎಂಬ 

ಗಂಡ; ತಾನು ವಿದ್ಯಾವತಿಯಲ್ಲದಿದ್ದರೂ, ವಿದ್ಯಾವಂತನ ಮೋಹದ ಮಡದಿ 

ಯಾಗಿದ್ದು ಕೊಂಡು, ಕೆರೆಯ ಮಗ್ಗುಲಿನ ಭಾವಿಯಂತೆ, ವಿದ್ಯಾಸಾರ 

ವನ್ನು ಗ್ರಹಿಸಿರುವ ಹೆಂಡತಿ ನಿಕಟವಾದ, ಸ್ಪುಟಕೋಪಗಳ ಅಟ್ಟಹಾಸ 

ವೆಲ್ಲಿಂದ ಬರಬೇಕು?

 

ಎರಡು ನಿಮಿಷದೊಳಗಾಗಿ, ಭಟ್ಟರು ಕೋಪವನ್ನೆಲ್ಲ ನುಂಗಿಕೊಂಡು, 

ಬಿರುಗಣ್ಣಿಂದ ದುರದುರನೆ ನೋಡಿ, “ ಇಷ್ಟು ಬೇಗ ಋಣಾನುಬಂಧ ತೀರಿ 

ತೆಂದುಕೊಂಡಿರಲಿಲ್ಲ ಕಣ್ಣೆದುರಿದ್ದು, ಕಿಡಿ ಕಾರುವುದಕ್ಕಿಂತ ಕಣ್ಮರೆ 


೬೭


ಯಾಗಿ ತೆಪ್ಪಗಿರುವುದು ಲೇಸು ” ಎಂದು, ಬಿರುಸಾಗಿ ನುಡಿದು, ನಿಂತಿದ್ದ 

ವರು ಹಾಗೆಯೇ ಹೊರಟುಹೋದರು. ಪಾತಮ್ಮನವರಿಗೆ ಮಾತಿನ 

ಒಂದೊಂದಕ್ಷರವೂ ಒಂದೊಂದು ಸಬಳವಾಗಿ ತಿವಿದುವು. ಮೃದುವಾಗಿ 

ದ್ದರೂ, ಸಂಸ್ಕಾರಾಂತರಗಳಿಂದ ಕಾಠಿಣ್ಯವನ್ನು ಹೊಂದಿರುವ ಮೇಣದಂತಿದ್ದ 

ಅವರ ಮನಸ್ಸು, “ ತನ್ನಲ್ಲಿ ಪ್ರಣಯವಿಟ್ಟು ಕೊಂಡು, ತನ್ನನ್ನು ಆರಾಧಿಸು 

ತ್ತಿರುವ ಪತಿಯು ತಿರಸ್ಕರಿಸುವುದಿಲ್ಲ ” ಎಂಬ ನಂಬಿಕೆಯಿಂದ, ಶೆಠಮ್ಮನೆ 

ಇದ್ದ ಮನಸ್ಸು, ಋಣಾನುಬಂಧವು ತೀರಿತೆಂಬ ಮಾತನ್ನು ಕೇಳಿ ಬೆಚ್ಚಿತು. 

ಕಿವಿಯು ಜಾರಿದರೆ ಕುಸಿದುಬಿದ್ದು ಸಡಿಲವಾಗುವ ವೀಣೆಯ ತಂತಿಯಂತೆ, 

ಆಕೆಯ ಮನಸ್ಸು ಜೋತುಬಿತ್ತು. ತನ್ನದು ಅಪರಾಧವೆಂದು ತಿಳಿಯಿತು. 

ತಾನಷ್ಟು ಮಾತನಾಡಬಾರದಾಗಿತ್ತು ಎನ್ನಿಸಿತು. ಕೂಡಲೇ ಏರುತ್ತಿದ್ದ 

ಕೋಪವು ತಗ್ಗಿ, ಸಂತಾಪದ ಕುದಿಗೆ ಮೊದಲಾಯ್ತು.


ಆದಿನ ಹೆಚ್ಚುತ್ತಿರುವ ಸಂತಾಪದಿಂದ, ಹಣ್ಣಾಗಿದ್ದ ಪಾತಮ್ಮನವ 

ರಿಗೆ, ಸಂಜೆಯು ಸಮೀಪಿಸುತ್ತ ಬಂದಹಾಗೆಲ್ಲ, ಕಳವಳವು ಹೆಚ್ಚಾಯಿತು. 

ಭಟ್ಟರು ಲೋಕವ್ಯವಹಾರಗಳಲ್ಲೆಲ್ಲ, " ಒಂದು ಮಾತು” ಆಡಿಮುಗಿಸ 

ತಕ್ಕವರು. ಅವರ ಇತರ ವ್ಯವಹಾರಗಳಲ್ಲಿ ಕಂಡುಬರುತ್ತಿದ್ದ, ಕ್ಲಿಪ್ತಿಯು 

ತಮಗೂ ಅನ್ವಯಿಸುವುದೋ ? ಇನ್ನು ಭಟ್ಟರು ತಮ್ಮ ಮುಖವನ್ನೇ 

ನೋಡುವುದಿಲ್ಲವೋ? ” ಎಂಬ, ಸಂಶಯವು ಹುಟ್ಟುವಷ್ಟು ಹೆಚ್ಚಾಯಿತು. 

"ಇನ್ನೇನುಗತಿ ” ಎನ್ನಿಸಿ ದಿಗಿಲೂಆಯ್ತು. ಆಟವಾಡುತ್ತ ಆಡುತ್ತ 

ಅರಿಯದೆ ಮಡಕೆಯನ್ನೊಡೆದು ಮಂಕಾದ ಮಗುವಿನಂತೆ, ಪಾತಮ್ಮನವರು 

ಬೆಪ್ಪಾಗಿ ಹೋದರು. ಏನುಮಾಡಿದರೂ ಬಗೆಹರಿಯಲಿಲ್ಲ. ಅತ್ತರು. ಉಪ 

ವಾಸದ ಸಂಕಟದ ಜೊತೆಗೆ, ಅಳುವಿನ ಎದೆಯುರಿಯೂ ಸೇರಿ, ಅವರು 

ಬೆಂದ ಸೊಪ್ಪಿನಂತೆ ಹಿಡಿಯಾಗಿ ಹೋದರು.

-----

ಹತ್ತೊಂಭತ್ತನೆಯ ಪರಿಚ್ಛೇದ

ಸಂಜೆಯಾದರೂ ಭಟ್ಟರು ಮನೆಗೆ ಬರಲಿಲ್ಲ. ಪಾತಮ್ಮನವರಿಗೆ 

ಏನೋ ಭಯ, ಏನೋ ದಿಗಿಲು, ಏನೋ ಆ ಕಾ ಶ ವೇ ಕಳಚಿಕೊಂಡು 

ತಲೆಯ ಮೇಲೆ ಬೀಳುವುದೆಂಬಂತಹ ಭಾವದ ಭಯ. ಬೇಕಾದಷ್ಟು 

ಯೋಚಿಸಿ, "ಆದುದಾಗಲಿ, ಅವರು ಬರದಿದ್ದರೆ, ಭಾವಿಯಲ್ಲಿ ಬಿದ್ದು ಹೋಗು 

ವುದು" ಎಂದುಕೊಂಡರು ಉತ್ತರ ಕ್ಷಣದಲ್ಲಿಯೇ, "ಮಕ್ಕಳ ಗತಿಯೇನು?” 

ಎನ್ನಿಸಿತು. ಎರಡನೆ ಯೋಚನೆಯು ಮೊದಲನೆಯ ಯೋಚನೆಯ ತಿನ್ನಲು 

ಮೂರನೆಯ ಯೋಚನೆಯು ಹುಟ್ಟಿತು. " ಮಕ್ಕಳನ್ನು ಬಿಟ್ಟು ಬರುವ 

ನೆಪದಿಂದ ತವರು ಮನೆಗೆ ಹೋಗುವುದು. ಅವರು ಬೇಕಾದರೆ ಬಂದು 

ಕರೆದುಕೊಂಡು ಬರಲಿ. ಇಲ್ಲವಾದರೆ ಅಷ್ಟು ದಿನ ನೋಡಿ, ಭಾವಿಯಲ್ಲಿಯೋ 

ಕೆರೆಯಲ್ಲಿಯೋ,-” ಆಕೆಯ ಮನಸ್ಸು ಅಳುಕಿತು. ತುಂಬಿದ ಮನೆ, 

ನಗುತ್ತ ನಲಿಯುತ್ತ ನೆಗೆದಾಡುತ್ತಿರುವ ಮಕ್ಕಳು; ಒಗ್ಗಿದ, ಒಪ್ಪಿದ, 

ಒಲಿದ, ಗಂಡ ; ಇದೆಯೆಂದು ಕೊಚ್ಚಿಸುವುದಕ್ಕೆ ಕೊಡುವಷ್ಟು ಇಲ್ಲದಿ 

ದ್ದರೂ, ಬಂದವರಿಗೆ ಹಿಡಿಯ ತುಂಬಾದರೂ ಕೊಡಬಲ್ಲಷ್ಟು ಸಂಪತ್ತು, 

ಇದೆಲ್ಲವನ್ನೂ ಬಿಟ್ಟು, ಭಾವಿ, ಕೆರೆ,.............ಉಹು ; ಆಕೆಗೆ ಮಂದಕ್ಕೆ 

ಯೋಚಿಸಲು ಸಾಧ್ಯವಾಗಲಿಲ್ಲ. ಮೃತ್ಯುವಿಗೆ ಆಮಂತ್ರಣ ಕೊಟ್ಟು ಬರ 

ಮಾಡಿಕೊಳ್ಳುವುದಿರಲಿ ; ಮೃತ್ಯುವು ಬಂದೀತೆಂಬ ಯೋಚನೆಯೇ ಬೇಕಾ 

ದಷ್ಟು ಭಯಪಡಿಸಿಬಿಟ್ಟಿತು.


ದೀಪವು ಹಚ್ಚಿದ ಅಷ್ಟು ಹೊತ್ತಿಗೆ ಭಟ್ಟರು ಮನೆಗೆ ಬಂದರು. 

ಪಾತಮ್ಮನವರಿಗೆ ಹಾರಿಹೋಗಿದ್ದ ಜೀವವು ಮರಳಿ ಬಂದಂತಾಯಿತು ; 

ಅಳಿದಿದ್ದ ಧೈರ್ಯವು ಹಿಂತಿರುಗಿತು. " ಆದುದಾಗಲಿ, ಅವರ ಕೈಕಾಲು 

ಹಿಡಿದುಕೊಂಡು 'ಹಿಂದಿನದೆಲ್ಲ ಮರೆತುಬಿಡಿ ಎಂದರೆ !' ಎಂದು ಹೇಳಿ 

ಕೊಳ್ಳಬೇಕೆಂ"ದು ನಿರ್ಧರವಾಯಿತು. " ಏನಾದರೂ ಮಾಡಿ, ಅವರನ್ನು 

ಮಾತನಾಡಿಸಬೇಕು ” ಎಂದು ಖಂಡಿತವಾಗಿ ಹೋಯಿತು.


೬೯


ಹೆಂಗುಸು ಬೇಕೆಂದ ಕೆಲಸವೇನು ನಡೆಯುವುದಿಲ್ಲ ? ಉಪವಾಸದ 

ಆಯಾಸ ಅಳುವಿನ ಸಂಕಟ, ಎಲ್ಲವನ್ನೂ, ಅತ್ತ ಕಟ್ಟಿಟ್ಟು, ತಟಪಟನೆ 

ರುಚಿಯಾಗಿ, ಶುಚಿಯಾಗಿ, ಸಣ್ಣ ಅಡುಗೆ ಮಾಡಿ ಪೂರಯಿಸಿದರು. 

ಸಂಧ್ಯಾವಂದನಕ್ಕೆ ಮಣೆಹಾಕಿ, ಮಡಿ, ನೀರು, ವಿಭೂತಿಯಿಟ್ಟಾಯ್ತು. 

ತಟ್ಟನೆ ಜಂಝೂ ಮಾರುತವೆದ್ದು, ಎಲ್ಲಿಂದಲೋ ಒಂದು ಮೋಡವನ್ನು 

ತಂದು ಒಂದು ಗಳಿಗೆಯ ಕಾಲ ಎಲ್ಲೂ ಇಲ್ಲದ ಆರ್ಭಟಮಾಡಿ, ಮಳೆಗರೆದು 

ಉತ್ತರ ಕ್ಷಣದಲ್ಲಿಯೇ ಮೋಡದೊಡನೆ ಮರೆಯಾದರೆ, ಮತ್ತೆ ತಿಳಿಬೆಳಕೆ 

ದ್ದಾಗ ನಗುವ ಲೋಕದಂತೆ, ಪಾತಮ್ಮನವರು ಮಧ್ಯಾಹ್ನದ ದುರ್ಘಟನೆ 

ಯನ್ನು ಮರೆತು, ನಗುನಗುತ್ತ ಮೊದಲಿನಂತೆ ತಿರುಗಾಡಲಾರಂಭಿಸಿದರು. 

ಹಿಂತಿರುಗಿದ ಆಕೆಯ ನಗುವಿನೊಡನೆ, ಮನೆಗೊಂದು ಹೊಸಜೀವ ಹುಟ್ಟಿ 

ದಂತಾಗಿ, ಕನ್ನಡಿಯನ್ನು ಒರೆಸಿಟ್ಟಂತಾಯ್ತು.


ಭಟ್ಟರು ಆದ ಬದಲಾವಣೆಯನ್ನು ಕಂಡು “ ಹಾಳು ಪ್ರಾರಬ್ಧ ತೀರಿ 

ತೇನೋ ಮತ್ತೆ ನಗೆ ಮೊಗವನ್ನು ಕಂಡಂತಾಯ್ತು. ಇದಿಷ್ಟರಲ್ಲಿಯೇ ಕಳೆದು 

ಹೋಗುವುದು' ಎಂದುಕೊಂಡಿದ್ದವರಾರು ? ವಿಪತ್ತು ತೊಲಗಿತಲ್ಲ ?” ಎಂದು 

ಕೊಂಡು ಸಮಾಧಾನ ಚಿತ್ತರಾಗಿ, ಪ್ರಸನ್ನಮನಸ್ಕರಾಗಿ ಅಂದು ಸಂಧ್ಯೆ 

ಯನ್ನು ಮಾಡಿದರು. ತಂದೆತಾಯಿಗಳ ಚಿತ್ತ ವೃತ್ತಿಯು ಮಕ್ಕಳ ಮುಖ 

ದಲ್ಲಿಯ ನಗೆಯಾಗಿ ಮೆರೆಯಿತು. ಎಲ್ಲರೂ ತಟಪಟನೆ ತಮ್ಮ ತಮ್ಮ 

ಕಾರ್ಯಗಳಲ್ಲಿ ತೊಡಗಿದ್ದಾರೆ. ಎಲ್ಲವೂ ವ್ಯವಸ್ಥಿತವಾಗಿ, ನಗುವ, ನಚ್ಚಿನ, 

ನಂಟನ ನಲವಿನ ವ್ಯಾಪಾರದಂತೆ ಪ್ರಿಯವೂ ಹಿತವೂ ಆಗಿದೆ.


ಇನ್ನೇನು ಎಲ್ಲರೂ ಊಟಕ್ಕೆ ಕುಳಿತುಕೊಳ್ಳಬೇಕು. ಆ ವೇಳೆಗೆ 

ಸರಿಯಾಗಿ, ಪಾತಮ್ಮನವರ ತವರ್ಮನೆಯಿಂದ ಗಾಡಿಯು ಬಂತು. ಗಾಡಿ 

ಯವನು ಬಂದು, ಅಯ್ಯನವರನ್ನು ಕಾಣಿಸಿಕೊಂಡು, ಒಂದು ಪತ್ರವ 

ನ್ನೊಪ್ಪಿಸಿದನು ಪತ್ರದಲ್ಲಿ ಬಹಳ ಬರೆದಿರಲಿಲ್ಲ " ತೀರ್ಥರೂಪರವರಲ್ಲಿ 

ಸಾಷ್ಟಾಂಗ ನಮಸ್ಕಾರಗಳು. ಇಲ್ಲಿ ಮಾತೃ ಶ್ರಿಯವರಿಗೆ ಇದ್ದಕ್ಕಿದ್ದ ಹಾಗೆಯೇ 

ಬಹಳ ಹೆಚ್ಚುಜ್ವರವು ಬಂದು, ವಿಷಮಿಸಿಕೊಂಡಹಾಗಾಗಿದೆ. ಸೌಭಾಗ್ಯ 


೭೦


ವತಿಯ ಹೊರಗಾಗಿದ್ದಾಳೆ. ಈ ಕಾಗದವನ್ನು ಕಂಡಕೂಡಲೇ ಮಾತೃಶ್ರಿ ಪಾತಕ್ಕನವರನ್ನು ಇದೇ ಗಾಡಿಯಲ್ಲಿಯೇ ಕಳುಹಿಸಿಕೊಡುವುದು.

ಇತಿ ಸಾ|| ನಮಸ್ಕಾರಗಳು.

ನಾರಾಯಣ

ಭಟ್ಟರಿಗೆ ಪತ್ರವನ್ನ ನೋಡಿದ ಕೂಡಲೇ ಏನೋ ಸಿಡಿಲು ಹೊಡೆದ

ಹಾಗಾಯಿತು. ಪ್ರಿಯಕಲತ್ರರಾದ ಭಟ್ಟರು ಪ್ರಸನ್ನೆಯಾದ ಪತ್ನಿಯೊ 

ಡನೆ ಸಂಭವಿಸುವ ಪ್ರಿಯಾಲಾಪವನ್ನು, ಅಜ್ಞಾತವಾಗಿ, ಅಪ್ರಾರ್ಥಿತವಾಗಿ 

ಸಂಭವಿಸಿದ್ದ ಮನಃಕಷಾಯವನ್ನು ಕಳೆಯುವ ಅವಕಾಶವನ್ನು, ಕುರಿತು 

ಯೋಚಿಸುತ್ತಿದ್ದರು "ಮೂಲೇಕುಠಾರಃ ” ಆದಂತಾಗಿ ಅವರ ಕಲ್ಪನಾ 

ಸಾಮ್ರಾಜ್ಯವೆಲ್ಲವೂ ಕ್ಷಣಾರ್ಧದಲ್ಲಿ ಧ್ವಂಸವಾಗಿ ಹೋಯ್ತು.


ಭಟ್ಟರ ಮುಖದಲ್ಲಿ ಚಿತ್ರಗೊಂಡು ಪ್ರಕಟವಾಗಿ ಕಾಣುತ್ತಿದ್ದ ನಿರಾ 

ಶೆಯ ರೂಪವನ್ನು ಕಂಡು, ಆಕೆಯು ಅಪ್ರತಿಭರಾದರು. ಮನಸ್ಸು ಗಾಬರಿ 

ಗೊಂಡಿತು ; ವಿಚಾರಿಸಿ, ತಾಯಿಯ ಅನಾರೋಗ್ಯವನ್ನು ಕೇಳಿ, ಅವರೂ 

ಕಳವಳಗೊಂಡರು. ಅವರೂ ಏನೆನೋ ಯೋಚಿಸಿ, " ಸರಿ ಏನೋ 

ವಿಪತ್ತು ಬಂತು. ಅಮ್ಮನಿಗೆ ಏನು ಆಗುತ್ತದೆಯೋ ಏನೋ ? ನಾಳೆ ಬೆಳಿ 

ಗ್ಗೆಯೇ ಹೊರಟುಬಿಡಬೇಕು ಎಂದರೆ! ಈಗಲೇ ಹೊರಟುಬಿಡಬೇಕು. 

ಆದರೇನು ಮಾಡುವುದು ? ಗಾಡಿ ಈಗ ತಾನೆ ಬಂದಿದೆ. ಎತ್ತುಗಳು 

ಸೋತುಹೋಗಿವೆ. ” ಎಂದು ಗೊಣಗುಟ್ಟಿಕೊಂಡರು. ಆಡಿದ ಮಾತಿನ 

ಧ್ವನಿಯಲ್ಲಿ ವೈಚಿತ್ರವೇನೂ ತೋರದೆ ಇದ್ದರೂ, ಭಟ್ಟರು ಸಮಾ 

ಧಾನದ ಸಂತೋಷದಿಂದ ತಲೆಯೆತ್ತಿ ಹೆಂಡಿತಿಯನ್ನು ನೋಡಿದರು 

ಆಕೆಯು ಸಣ್ಣ ನಗು ನಕ್ಕು, ಎಳೆಯ ಹುಡುಗಿಯಂತೆ, ತಲೆಯನ್ನು 

ಬಗ್ಗಿಸಿದರು. 


ಬಾಗಿಲಲ್ಲಿದ್ದ ಗಾಡಿಯಾಳಿನ ಮಾತು ಎಲ್ಲವನ್ನೂ ಇತ್ಯರ್ಥಮಾಡಿ 

ಬಿಟ್ಟಿತು. ಅವನು “ ಅರಹಾದೀಲಿ ಇನ್ನೊಂದು ಜತೆ ಎತ್ತು ಬಂದಿರು 


೭೧


ಇದೆ ಕಣಮ್ಮಣ್ಣೀ ! ಅಯ್ಯನವರು ಇವತ್ತೇ ಹೊರಡುವ ಹಾಗೆ ಹೇಳಿ 

ದ್ದಾರೆ ” ಎಂದನು.


ಪಾತಮ್ಮನವರು ಒಂದು ನಿಟ್ಟುಸಿರನ್ನು ಬಿಟ್ಟು, " ಹಾಗೇನು ? 

ಆಗಲಪ್ಪಾ !” ಎಂದರು. ಭಟ್ಟರು ತಲೆಯನ್ನು ಮೇಲಕ್ಕೆತ್ತಲೇ ಇಲ್ಲ. 


ಆ ರಾತ್ರಿ ಸುಮಾರು ಹನ್ನೊಂದು ಘಂಟೆಯ ವೇಳೆಗೆ ಗಾಡಿಯು ಪಾತಮ್ಮ 

ವರನ್ನು ಕರೆದುಕೊಂಡು ಹೊರಟಿತು. ಪಾತಮ್ಮನವರ ಕಣ್ಣಿನಲ್ಲಿ ನೀರು 

ಸುರಿಯುತ್ತಾ ದೃಷ್ಟಿಯು ಮಂದವಾಗಿತ್ತು. ಚಿಂತಾಜಡವಾದ ಮನಸ್ಸು 

ಅವರ ಮುಖದಂತೆಯೇ ಕಳೆಗೆಟ್ಟಿತ್ತು. ಗಂಡಹೆಂಡಿರು ಇಬ್ಬರೂ ಏಕಾಂತ 

ವಾಗಿ ಕುಳಿತು ಒಂದಷ್ಟು ಹೊತ್ತು ಮಾತನಾಡಿದ್ದರೆ ಚೆನ್ನಾಗಿತ್ತು. ಹಿಂದಿನ 

ಕೊಳೆಯಲ್ಲವೂ ಕಳೆದು, ಕಳೆಕಿತ್ತ ಕೈ ತೋಟದಂತೆ ಮುಂದಿನ ಸಂತೋ 

ಷದ ಬೆಳೆಗೆ ಅನುಕೂಲವಾಗುತ್ತಿತ್ತು. ಆದರೆ, ಎಲ್ಲವೂ ನಾವು ಹೇಳಿ 

ದಂತೆಯೇ ಆಗುವುದೇ ? ಕೇಳಿದಂತೆಯೆ ನಡೆಯುವುದೇ ?

------


   ಇಪ್ಪತ್ತನೆಯ ಪರಿಚ್ಛೇದ,


ಪಾತಮ್ಮನವರು ತವರುಮನೆಗೆ ಹೋಗಿ ಒಂದುವಾರವಾಯ್ತು. ಮನೆ 

ಯಲ್ಲಿ ಭಟ್ಟರನ್ನು ಬಿಟ್ಟು ಇನ್ನು ಯಾರೂ ಇಲ್ಲ. ಬೆಳಿಗ್ಗೆ " ಶೂದ್ರರವಳು ” 

ಬಂದು ಮನೆಯೆಲ್ಲವನ್ನೂ ಗುಡಿಸಿ ಸಾರಿಸಿ ರಂಗವಲ್ಲಿ ಹಾಕಿ ಹೊರಟು 

ಹೋಗುವಳು. ಸಂಜೆಗೆ ಒಂದು ದೀಪವನ್ನು ಹಚ್ಚುವಳು. ಈ ಮಧ್ಯ 

ಕಾಲದಲ್ಲಿ ಯಾರೂ ಇರುತ್ತಿರಲಿಲ್ಲ. ಹಿಂದೆ ಎಷ್ಟೋಸಲ ಪಾತಮ್ಮನವರು 

ತವರುಮನೆಗೆ ಹೋಗಿದ್ದರು. ಆಗೆಲ್ಲ ಹೀಗೆಯೇ ನಡೆಯುತ್ತಿದ್ದುದು. 

ಒದೊಂದುವೇಳೆ ಅಡುಗೆಮಾಡಿಕೊಳ್ಳುವುದು ಬೇಸರವಾದರೆ, ಭಟ್ಟರು 

ಒಬ್ಬಳು ಅಡಿಗೆಯವಳನ್ನು ಗೊತ್ತು ಮಾಡುವರು.


ಈಸಲ ಭಟ್ಟರಿಗೆ ಹೊಸದೊಂದು ಅನುಭವವಾಯ್ತು. ಹೆಂಡಿತಿ 

ಯನ್ನು ಬಿಟ್ಟಿರುವುದು ಕಷ್ಟವಾದರೂ, ಇದುವರೆಗೂ ಅವರ ನೆಮ್ಮದಿಗೆ 

ಭಂಗವಾಗುವಷ್ಟು ತೊಂದರೆಯಾಗುತ್ತಿರಲಿಲ್ಲ; ಬರಿಯಕಾಲಿನಲ್ಲಿ ನಡೆದು 

ಅಭ್ಯಾಸವಿಲ್ಲದವರಿಗೆ, ಬರಿಯಕಾಲಿನಲ್ಲಿ ನಡೆಯಬೇಕಾದ ಸಂದರ್ಭ ಬಂದರೆ 

ಆಗುವಂತೆ, ಸ್ವಲ್ಪವಾದ ಸಹನೀಯವಾದ ಕಷ್ಟವಾಗುತ್ತಿತ್ತು. ಆದರೆ 

ಅದಕ್ಕಾಗಿ ಅವರು ಎಂದೂ ಅಷ್ಟು ಕಾತರರಾಗುತ್ತಿರಲಿಲ್ಲ ಈಸಲ ಹಾಗಾಗ 

ಲಿಲ್ಲ, ಪಿಶಾಚಿಗಳೆಂದು ಭ್ರಾಂತಿಗೊಂಡವರು, ಮನಸ್ಸಿನಲ್ಲಿರುವ ಅಳುಕು 

ಅಂಜಿಸುತ್ತಿರಲು, ಮುಂದಕ್ಕೆ ಅಡಿಯಿಡುವುದಕ್ಕೆ ಹೆದರಿ, ಮತ್ತೊಬ್ಬರ ನೆರ 

ವನ್ನು ಅಥವಾ ಇರವನ್ನು ಅಪೇಕ್ಷಿಸುವಂತೆ, ಭಟ್ಟರು ಇತರರಿಗೆ ಗೋಚರಿ 

ಸದ ಯಾವುದೋ ಬೆದರಿಕೆಗೆ ಸಿಕ್ಕಿ, ಅದರಿಂದ ತಪ್ಪಿಸಿಕೊಳ್ಳಲು ಪತ್ನಿಯ 

ಸಹಾಯವನ್ನು ಕೋರುವವರಾದರು. ಇದ್ದಕ್ಕೆ ಇದ್ದಂತೆಯೇ ನಿಟ್ಟುಸಿರು 

ಬಿಟ್ಟು  ಸುತ್ತಮುತ್ತ ಗಾಬರಿಯಿಂದ ನೋಡಿ, " ಅಯ್ಯೋ ! ಅವಳಿದ್ದರೆ 

ಚೆನ್ನಾಗಿತ್ತು” ಎಂದುಕೊಳ್ಳುವರು. ದಾರಿನಡೆದು ಆಯಾಸಪಟ್ಟು ಬಂದವರು 

ಹಜಾರದಲ್ಲಿ ಬಂದು ಕುಳಿತುಕೊಳ್ಳಬೇಕೆಂದುಕೊಂಡು ಅಭ್ಯಾಸವಶದಿಂದ 

ಒರಗಿಕೊಳ್ಳಲು ಗೋಡೆಯ ಕಡೆಗೆ ವಾಲಿದರೆ, (?) ಒರಗುದಿಂಬು ಸಿಕ್ಕ 

ದಿದ್ದರೆ ಆಗುವ ಮನಸ್ಸಿನ ಸ್ಥಿತಿಯಂತೆ ಭಟ್ಟರ ಸ್ಥಿತಿಯಾಯ್ತು.


ಅವರ ನಿತ್ಯ ನೈಮಿತ್ತಿಕ ಕರ್ಮಗಳಿಗೆ ಲೋಪವಾಗಲಿಲ್ಲ. ದಿನವೂ 

ಬೆಳಗೆದ್ದು ಆನ್ಹಿಕಾದಿಗಳನ್ನು ಮುಗಿಸಿ ದೇವರ ಪೂಜೆಯನ್ನು ಮಾಡಿ 

ಕೊಂಡು, ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳುವರು. ಮತ್ತೆ ಮಡಿ 

ಯುಟ್ಟು ಮಾಧ್ಯಾನ್ಹಿಕಾದಿಗಳನ್ನು ಮಾಡಿ ಊಟವನ್ನು ಮುಗಿಸುವರು. 

ಮಧ್ಯಾನ್ಹದಲ್ಲಿ ಇಳಿಹೊತ್ತಾಗುವವರೆಗೂ ಗ್ರಂಥವ್ಯಾಸಂಗದಲ್ಲಿದ್ದು, ಬಿಸಿಲು 

ತಂಪಿದಮೇಲೆ ಹೊರಗೆ ಹೋಗಿ ಸಂಜೆಗೆ ಮುಂಚೆ ಮನೆಗೆ ಬರುವರು. 

ಅವರಿಗೆ ಇದುವರೆಗೂ ಈ ಕಾರ್ಯಕ್ರಮದಲ್ಲಿ ಬೆಸರವಾಗಿರಲಿಲ್ಲ. ಆದರೆ 

ಈಸಲ ಹಾಗಾಗಲಿಲ್ಲ. ಮನೆಗೆ ಕಾಲಕ್ಕೆ ಸರಿಯಾಗಿ ಬರುವುದಕ್ಕೆ ಬೇಡ. 

ಒತ್ತುತ್ತಿರುವ ಮನೋಭಾರದಿಂದ ತಪ್ಪಿಸಿಕೊಳ್ಳಲು ಯಾರಾದರೂ, 

ಜೊತೆಯಲ್ಲಿರಬೇಕು ಎನ್ನುವರು ಗ್ರಂಥಗಳಲ್ಲಿ ಶಾಸ್ತ್ರಗ್ರಂಥಗಳ ಮೇಲೆ


೭೩


ಧೂಳು ಕೂರುತ್ತಬಂದು, ಕಾಳಿದಾಸನ ಗ್ರಂಥಗಳು-ಅದರಲ್ಲೂ ಕಾವ್ಯಗಳು

ಪ್ರಿಯವಾದವು. ಪುಸ್ತಕಕ್ಕೆಂದು ಕೈನೀಡಿದರೆ, ಯೇಕೋ ಏನೋ 

ಕುಮಾರಸಂಭವ, ಮೇಘಸಂದೇಶಗಳೇ ಸಿಕ್ಕುವವು. ಭಟ್ಟರು, " ಹುಂ! 

ಈವೊತ್ತು ಆ ಗ್ರಂಥವನ್ನು ನೋಡಬೇಕೆಂದಿದ್ದೆ ! ಇದು ಸಿಕ್ಕಿತು ! 

ಹೋಗಲಿ ಇದನ್ನೇ ನೋಡುವುದು ” ಎನ್ನುವರು.


ಇನ್ನೂ ಒಂದುವಾರವಾಯ್ತು. ಅವರ ಮನಸ್ಸು ಏನನ್ನೋ ನೋಡಬೇ 

ಕೆಂದು, ಯಾರನ್ನೂ ಕಾಣಬೇಕೆಂದು ಒದ್ದಾಡುತ್ತಿದೆ. ಭಟ್ಟರು ಅದನ್ನು 

“ಹೆಂಡಿತಿಯಮೇಲೆ ಗೀಳು” ಯಾಕೊ ಹಿಡಿಯಿತು ಎನ್ನುವರು. ಚಿತ್ತವು 

ಯಾವುದೋ ಪ್ರತಿಮೆಯನ್ನು ಕುರಿತು ಚಿಂತಿಸುವುದು. ಅದನ್ನು ಅವರು 

ಪಾತಮ್ಮನವರ ಪ್ರತಿಬಿಂಬವೆನ್ನುವರು. ಇನ್ನೊಮ್ಮೆ ಸುಖಸ್ಪರ್ಶದ ಅನು 

ಭವದ ಸುಖಸ್ಮರಣೆಯಲ್ಲಿ ಮನಸ್ಸು ತೇಲಿಹೋಗಿ ಒಂದೊಂದುವೇಳೆ ಹೊರ 

ಗಿನ ಪ್ರಪಂಚವು ಮರೆತುಹೋದಾಗ ಮಾತ್ರ, ಭಟ್ಟರು ಪಾತಮ್ಮನವರನ್ನು 

ಸಂಪೂರ್ಣವಾಗಿ ಮರೆತುಬಿಟ್ಟು, ಆ ಇನ್ನಾವುದೋ ಮೂರ್ತಿಯ ಆರಾಧನೆ 

ಯಲ್ಲಿ ಮಗ್ನರಾಗಿ ಹೋಗುವರು. ಆ ಭಾವಸಮಾಧಿಯು ಮುರಿದು, 

ಬಾಹ್ಯಜ್ಞಾನವಾದಾಗ ಆ ಮುದ್ರೆಯನ್ನು ಕಂಡು ನಾನಿಷ್ಟು ಮುಗ್ಧನಾಗು 

ವುದೇ ? ಛೇ ! ಛೇ' ! ಕೂಡದು. ಕೂಡದು.” ಎಂದು ನಿವಾರಿಸಿಕೊಂಡು, 

ಆ ಸ್ಥಳವನ್ನು ಬಿಟ್ಟು ಹೋಗುವರು. ಅಥವಾ, ಮಗ್ಗುಲಲ್ಲಿ ಹಾವನ್ನು ಕಂಡ 

ವರು ಗಾಬರಿಗೊಂಡು ಜಗ್ಗೆಂದು ಎದ್ದು ಆ ಸ್ಥಳವನ್ನು ಬಿಟ್ಟು ಹೋಗುವಂತೆ 

ಹೋಗುವರು. ಆದರೆ, ಮೂರ್ತಿಯು ಮಾತ್ರ ಕದಲುತ್ತಿರಲಿಲ್ಲ ; ಹೃದಯ 

ಪೀಠದಲ್ಲಿ ಅಚ್ಚಳಿಯದೆ, ಅಲ್ಲಾಡದೆ ನಿಂತಿರುವುದು. ಒಳಗಿರುವುದನ್ನು 

ಬಿಡಬೇಕೆಂದು ಇದ್ದೆಡೆಯಿಂದ ಎದ್ದರೆ, ಇದ್ದು ದೆಂತು ದೂರವಾಗುವುದು ?


ಅಂತೂ ಭಟ್ಟರಿಗೆ ವಿಚಿತ್ರದನುಭವಗಳಿಗೆ ಮೊದಲಾಯ್ತು. ಅವರು 

ಒಮ್ಮೊಮ್ಮೆ ತನಗೆ ದೆವ್ವ ಹಿಡಿಯಿತೋ ಎಂದುಕೊಳ್ಳುವರು. ಕೂಡಲೆ 

ಮನಸ್ಸು ಅವಳು ಬಂದರೆ ದೆವ್ವ ಬಿಟ್ಟು ಹೋಗುತ್ತದೆ. ಎನ್ನುವುದು ಒಮ್ಮೆ 

ಹೌದೆಂದರೂ ಇನ್ನೊಮ್ಮೊ ಉಹುಂ ಎಂದು ಖಂಡಿತವಾಗಿ ತೋರುವುದು, 

ಅಂತೂ ಏನಾದರೂ ಆಗಲಿ ಅವಳಿದ್ದರೆ ಒಳ್ಳೆಯದು. ಈವೊತ್ತು ಅವಳಿಗೆ


೭೪


ಹೊರಟುಬರುವಂತೆ ಕಾಗದ ಬರೆದುಬಿಡುವುದು. ” ಎಂದು ಗೊತ್ತುಮಾಡು 

ವರು. ಅದರಂತೆ ಕಾಗದ ಬರೆಯಬೇಕೆನ್ನುವುದರೊಳಗಾಗಿ ಹಗಲೆಲ್ಲ ಮುಗಿದು 

ಸಂಜೆಯಾಗುವುದು. ಸರಿ ನಾಳೆ ಬರೆಯುವುದೆಂದು ಭಟ್ಟರು ಸುಮ್ಮನಾಗು 

ವರು ಹೀಗೆಯೇ ಆ ವಾರವೆಲ್ಲ ಕಳೆದು ಹೋಯ್ತು. ಭಟ್ಟರು ಹೆಂಡ 

ತಿಗೆ ಕಾಗದ ಬರೆಯಲಿಲ್ಲ. ಅವರು ತಮ್ಮ ಮನಸ್ಸನ್ನು ನೇರವಾಗಿ, 

ನಿಜವಾಗಿ, ಚೆನ್ನಾಗಿ ಅರಿತವರಾಗಿದ್ದರೆ, ಹೌದು ! ಹೌದು ! ನಾನು 

ಮಾಡಿದುದೇ ಸರಿ. ನಾನು ಬಾಯೆಂದು ಬರೆಯಬೇಕೆಂದಿರುವುದು ಅವಳಿ 

ಗಲ್ಲ ; ಇನ್ನೊಬ್ಬಳಿಗೆ. ಅದರಿಂದ ಬರೆಯಲಿಲ್ಲ'' ಎಂದು ಒಪ್ಪಿಕೊಳ್ಳುತ್ತಿ 

ದ್ದರು. ಆದರೆ ಹಾಗೆ ಒಪ್ಪಿಕೊಳ್ಳುವ ಸಂಭವವು ಬರಲಿಲ್ಲ 


ಪಾತಮ್ಮನವರು ತವರೂರಿಗೆ ಹೋಗಿ ಇಪ್ಪತ್ತು ದಿನವಾಯ್ತು, 

ಭಟ್ಟರ ಕಳವಳವು ಹೆಚ್ಚಾಯ್ತು. ಒಮ್ಮೊಮ್ಮೆ ಯಾರೋ ಜೊತೆಯಲ್ಲಿ 

ಓಡಾಡಿದಂತಿರುವುದು. ಇನ್ನೊಮ್ಮೆ ಯಾರೋ, ಕಂಬನಿಗಳಿಂದ ಮಲಿನ 

ವಾಗಿದ್ದರೂ ಕೆಂಪು ಕಾಣಿಸುತ್ತಿರುವ ವಿಶಾಲನಯನಗಳಿಂದ, ಎತ್ತಿದ 

ಹುಬ್ಬುಗಳಿಂದ ದುರದುರನೆ ನೋಡಿ ಯೇನೋ ಹೇಳಿ ಹೊರಟುಹೋದಂತೆ 

ಕಾಣಿಸಿದ ಹಾಗಾಗುವುದು. ಮತ್ತೊಮ್ಮೆ ಉದಯಿಸುತ್ತಿರುವ, ಭಗವಂತ 

ನಾದ ಭಾಸ್ಕರನ ಕಿರಣಜಾಲವು ಪ್ರಪಂಚದ ತಮಸ್ಸನ್ನು ಇಷ್ಟಿಷ್ಟಾಗಿ ಕಳೆ 

ಯುವ ಪುಣ್ಯಕಾಲದಲ್ಲಿ ನಿತ್ಯಕರ್ಮದಲ್ಲಿ ಮಗ್ನರಾಗಿದ್ದು ತಾವು ಕಣ್ಣು 

ಬಿಟ್ಟಾಗ ಸ್ನಾನದಿಂದ ಶುದ್ಧಳಾಗಿ ಹೃದಯದ ಪವಿತ್ರತೆಯು ಮುಖದಲ್ಲಿ 

ತಾಂಡವವಾಡುತ್ತಿರಲು ನಿಂತಿದ್ದ ಕನ್ನೆಯೊಬ್ಬಳ ಪಠವನ್ನು ಚಿತ್ರವು 

ತಂದು ಕಣ್ಣೆದುರಿಗೆ ಹಿಡಿದು ಮನಸ್ಸನ್ನು ಚಿತ್ರಗತೆಯಾದವಳಲ್ಲಿ ಹೊಂದಿಸಿ 

ಬಿಟ್ಟು, ತಾನದನ್ನು ನೋಡಿ ಕಲ್ಪನೆಯ ಭೋಗಸಾಮ್ರಾಜ್ಯದ ಸೌಖ್ಯದಲ್ಲಿ 

ಮಗ್ನವಾಗುವುದು. ಹೀಗೆ ನಾನಾವಿಧವಾದ ಆಶಾತರಂಗಗಳು ಮೇಲಿಂದ 

ಮೇಲೆ ಎದ್ದೂ ಎದ್ದೂ ಭಟ್ಟರ ಅ೦ ತ ರ ೦ ಗ ದ ಶಾಂತಿಯು ಅಳಿದು

ಹೋಯಿತು.


ಇಂದಿನ ಭಟ್ಟರೇ ಬೇರೆ; ನೋಡುವರ ಕಣ್ಣಿಗೆ ಕಾಣುವುದು ಬಲು 

ಕೊಂಚ ವ್ಯತ್ಯಾಸ ; ಒಂದು ಎರಡು ಸುತ್ತು ಇಳಿದಂತೆ ತೋರುವುದು


೭೫


ಅಷ್ಟೆ. ಆದರೆ, ಒಳಗೆ ಬೇಕಾದಷ್ಟು ವ್ಯತ್ಯಾಸವಾಗಿ ಹೋಗಿದೆ, 

ಒಂದಷ್ಟು ಗಾತ್ರ ನೀರು ಹರಿಯುವ ನಿರ್ಝರಿಣಿಯ ಮಗ್ಗುಲಲ್ಲಿ ಮೈ 

ಬಗ್ಗಿ ಕೆಲಸಮಾಡುವ ನಿಪುಣನ ಕೈವಾಡದ ಫಲವಾಗಿ ಮೆರೆಯುವ 

ತೋಟದಂತೆ ಕಳಿ ಕಳಿಸುತ್ತಿದ್ದ ಸ್ಥಿತಿಯು ಮಾಯವಾಗಿ, ಹುಚ್ಚು 

ಹೊಳೆಯು ಹರಿದು ಅತ್ತಿತ್ತ, ಎತ್ತೆತ್ತ ನೋಡಿದರೂ ಹಳ್ಳಗಳು ದಿಣ್ಣೆಗಳು, 

ಕಲ್ಲುಮರಳು ಕಾಣಿಸುತ್ತ ಅಸ್ತವ್ಯಸ್ತವಾಗಿ, ಭೀಕರವಾಗಿಲ್ಲದಿದ್ದರೆ ಹೋಗಲಿ, 

ಬಯಲಾಗಿ ಕಾಣುವ ಪ್ರದೇಶದಂತೆ ಆಗಿದೆ.


ಆದರೆ, ಅದನ್ನು ಕಂಡು ಅಯ್ಯೋ ಎನ್ನುವವರಿಲ್ಲ. ದುಃಖವನ್ನು ಕಂಡು 

ಕನಿಕರಪಟ್ಟು ಮರುಗಿ “ ಅದು ಬೇಡ ಇದು ಮಾಡು ” ಎಂದು ಹೇಳುವ 

ಸ್ನೇಹಿತರು ಭಟ್ಟರಿಗೆ ಯಾರೂ ಇರಲಿಲ್ಲ. ಎಲ್ಲರೂ ಭಟ್ಟರು ದೊಡ್ಡವ 

ರೆಂದು ಅವರ ಹತ್ತಿರ ತಾವು ಬಂದು, ತಮ್ಮ ಕಷ್ಟ ನಿಷ್ಟುರಗಳನ್ನು ಅರಿಕೆ 

ಮಾಡಿ ಅವರಿಂದ ಉಪದೇಶಗಳನ್ನು ಪಡೆದು ಹೋಗುವ ವಾಡಿಕೆ. ಭಟ್ಟ 

ರೆಂದರೆ ಎಲ್ಲರೂ ಕೈಯೆತ್ತಿ ಮುಗಿಯುವ ಪದಾರ್ಥವೆಂದುಕೊಂಡಿದ್ದರಲ್ಲದೆ, 

ಕನಿಕರಿಸಬೇಕಾದ ವಸ್ತುವೆಂದು ಯಾರ ಮನಸ್ಸಿಗೂ ತೋರಲೇ ಇಲ್ಲ. 

ತನ್ನ ಸರ್ವಸ್ವವೂ ಪರಬೊಮ್ಮದ ಸೊಮ್ಮೆಂದು ನಂಬಿ, ತ್ರಿಕರಣಶುದ್ಧಿ 

ಯಿಂದ ಕೊಡುಗೈಯ್ಯಾಗಿ, ಮುಕ್ತಹಸ್ತನಾಗಿ ದಾನಮಾಡುವ ಮಹಾ 

ಪುರುಷನು ಎಲ್ಲರ ಕಣ್ಣಿಗೂ ತಮ್ಮ ಸಂಕಟವನ್ನು ಕಳೆಯುವ ಪ್ರಭುವಾಗಿ 

ಮಾತ್ರ ಕಾಣುವಂತೆ, ಭಟ್ಟರು ಎಲ್ಲರ ಕಣ್ಣಿಗೂ ಶಾಂತಿಯ ನಿವಾಸಸ್ಥಾನ, 

ಜ್ಞಾನದ ವಿಕಾಸಸ್ಥಾನ, ವಿಜ್ಞಾನದ ಉಗಮಸ್ಥಾನ, ಎಂದು ಕಾಣಿಸು 

ವರಲ್ಲದೆ, ತರಂಗೋಪತರಂಗವಾಗಿ ಎದ್ದು ಹೃದಯವನ್ನು ವಿಕ್ಷೋಭ 

ಮಾಡುವ ಆಶೋತ್ತರಗಳಿಗೆ ಎದೆಯಲ್ಲಿ ಅವಕಾಶವನ್ನಿತ್ತವರು ಯೆಂದು 

ಯಾರಿಗೂ ಕಾಣಿಸುತ್ತಿರಲಿಲ್ಲ. ಸುತ್ತು ಮುತ್ತಿನ ಗಾಳಿಗೂ ತಂಪನ್ನು ಸಾಲ 

ಕೊಟ್ಟು ತಾನು ಹರಿಯುವ ಪ್ರದೇಶಕ್ಕೆಲ್ಲ ಸೌಖ್ಯವನ್ನು ಒದಗಿಸುವ 

ತರಂಗಿಣಿಗೂ ಅಂತರ್ದಾಹ ಹುಟ್ಟುವುದೆಂದು ಯಾರ ಮನಸ್ಸಿಗೆ ಬಂದೀತು?


ಭಟ್ಟರ ಮನಸ್ಸು ವಿಹ್ವಲವಾಯ್ತು. ಸ್ವಾಭಾವಿಕವಾದ ಶಾಂತಿಯು ಆಳಿಯಿತು ; 

ಶಾಸ್ತ್ರಾಭ್ಯಾಸಬಲಗಳಿಂದ ರೂಢಮೂಲವಾಗಿದ್ದ, ಸ್ಥಿತಪ್ರಜ್ಞ 


೭೬


ನಂತೆ ಕಾಣುತ್ತಿದ್ದ ಸಮಭಾವವು ತಿರೋಹಿತವಾಗಿ, ಬಿರುಗಾಳಿಗೆ ಸಿಕ್ಕಿದ 

ಕಡಲಿನಂತ ಹೃದಯವು ಮೊರೆಯಹತ್ತಿತು 


ಸೋಲಿಸಬೇಕೆಂದು ದೈವವೇ ಮನಸ್ಸು ಮಾಡಿರುವಾಗ ಆಗುವಂತೆ 

ಪ್ರತಿಕ್ರಿಯೆಗಳು ಯಾವುದೂ ಅವರ ಮನಸ್ಸಿಗೆ ತೋರದಾದುವು. ಒತ್ತು 

ತ್ತಿರುವ ಆಶೆಗೆ ಎಡೆ ಕೊಟ್ಟೂ ಕೊಟ್ಟೂ ಶ್ರಾಂತವಾಗಿ, ಮನಸ್ಸು ನಿರೋಧ 

ಕ್ರಿಯೆಗಳನ್ನು ಚಿಂತಿಸಲು ಅಕ್ಷಮವಾಯಿತು. ಒಮ್ಮೊಮ್ಮೆ ವಿವೇಕವು 

ತಲೆದೋರುವುದು. ಆದರೆ ಅದು ಜಯವಾತದಟ್ಟ ದೀಪದಂತೆ ಆಗಲೇ 

ಅಳಿಸಿಹೋಗುವುದು. 


ಭಟ್ಟರು ಒಮ್ಮೊಮ್ಮೆ ಸಾಕ್ಷಿಯಂತೆ ಕುಳಿತು ತಮ್ಮ ಅನುಭವವನ್ನು 

ತಾವೇ ಒರೆಗಿಟ್ಟು "ಇದೇನು ನನಗೀ ಕಾಮವಾಸನೆ? ” ಎಂದು ತಿರ

ಸ್ಕರಿಸಿಕೊಳ್ಳುವರು ; ಇನ್ನೊಮ್ಮೆ ಹೌದು ; ಅಷ್ಟಲ್ಲದೆ ಹೇಳಿದನೆ ? ಮಮ 

ಮಾಯಾದುರತ್ಯಯಾ ಎಂದು ” ಎಂದು ಸಮಾಧಾನವನ್ನು ಹೇಳಿಕೊಳ್ಳು 

ವರು ಹಾಗೆ ಹೀಗೆ ಅಲೆಯುತ್ತಾ ತೊಳಲುತ್ತ ಬಳಲುತ್ತ ಕೊನೆಗೆ  

ಹಾಗೆಂದು ಸುಮ್ಮನಿದ್ದರೆ, ನಮ್ಮ ಪೌರುಷವೆನಾದಹಾಗಾಯಿತು ? ಅಂತ 

ರಂಗದ ಯುದ್ಧದಲ್ಲಿ ಗಣಿಸಬೇಕಾದುದು ಸೋಲುಗೆಲುಗಳು ಅಲ್ಲ. ಮಾಡಿದ 

ಪ್ರಯತ್ನ ವೆಂತಹುದು ? ಎಷ್ಟು ? ಎಂಬುದು. ಅದರಿಂದ ಈ ಹುಚ್ಚು 

ಹೊಳೆಯನ್ನು ಅಡ್ಡಗಿಸಲು ಇನ್ನೆನೂ ಸಾಧನವಿಲ್ಲದಿದ್ದರೂ ಹೋಗಲಿ 

ತೋಳನ್ನಾದರೂ ಅಡ್ಡವಾಗಿರಿಸಬೇಕು. ಹಾಗಿಲ್ಲದೆ ವೃತ್ತಿಯನ್ನು ಅಂದರೆ 

ಪ್ರಪಂಚದ ಮುಖವಾಗಿ ಹೋಗುವ ಮನಸ್ಸಿನ ಲಹರಿಯನ್ನು ಹಾಗೆಯೇ 

ಹರಿಯಬಿಟ್ಟರೆ ಅದು ಕೊನೆಗೆ ವಿವೇಕವನ್ನು ಕೊಂದೇ ಬಿಡುವುದು ವೃತ್ತಿ 

ಯನ್ನು ಅಡ್ಡಗಿಸಿದ ಹಾಗೆಲ್ಲ ವಿವೇಕವು ಬಲಿಯುವುದು. ಅದರಿಂದ ವಿಷ 

ಯದ ಯೋಚನೆಯು ಎಷ್ಟು ಬಲವಾಗಿದ್ದರೂ ಆ ವಿಷಯದಲ್ಲಿ ದೇಹೇ೦ 

ದ್ರಿಯ ವ್ಯಾಪಾರಗಳು ಮಾತ್ರ ನಡೆಯವುದಕ್ಕೆ ಅವಕಾಶ ಕೊಡಕೂ 

ಡದು ” ಎಂದು ಇತ್ಯರ್ಥವಾಗಿ ಹೋಯ್ತು. 


ಭಟ್ಟರೀಗ ನಗುವಿನ ಮೂರ್ತಿ, ಒಳಗೆ ಕೊಳೆತು ಮೆತ್ತಗಾದ ಕಾಯಿ, 

ಇದ್ದರೂ ಮೇಲೆ ಮಾತು ಕಠಿಣತರವಾದ ಚಿಪ್ಪು ಇರುವ ತೆಂಗಿನ


೭೭


ಕಾಯಂತೆ ನೋಡುವವರ ಕಣ್ಣಿಗೆ ಭಟ್ಟರ, ಶಾಂತಿಯ ಅವತಾರ, ಅವರು 

ಮೊದಲಿನಷ್ಟು ಧಾರಾಳವಾಗಿ, ಹೆಚ್ಚುಗಿ ಮಾತ್ರ ಆಡುವುದಿಲ್ಲ. ಈಗ 

ಆಡುವುದು ಒಂದೆರಡು ಮಾತು ಅದೂ ಅತ್ಯವಶ್ಯಕವಾದರೆ ಭಟ್ಟರಿಗೆ 

ಹುಟ್ಟುಗುಣವಾದ ಶಾಂತಿಯು ಹೋಗಿ, ಕಟ್ಟು ಬಣ್ಣದ ಪ್ರಯತ್ನ ಪುರಸ್ಕರ 

ವಾದ ಶಾಂತಿಯು ಹುಟ್ಟಿತು. ಒಳಗೆ ಹೃದಯವು ಅನ್ನದ ತಪ್ಪಲೆಯಂತೆ 

ಕುದಿಯುತ್ತಿದ್ದರೂ, ಮೇಲೆ ಮಾತ್ರ, ಆಲಗದ ಅಲ್ಲಾಡದ ಮಹಾಮೇರು 

ವಿನಂತಹ ಸ್ಥೈರ್ಯ. ನಟನು ನಗಲಿ, ಅಳಲಿ, ತಾನು ಮಾತ್ರ ಅದನ್ನು 

ಆನಂದವಾಗಿಯೇ ಕಾಣುವ ರಸಿಕನಾದ ಪ್ರೇಕ್ಷಕನಂತೆ, ಭಟ್ಟರು ಅ೦ತ 

ರಂಗದ ವಿಕ್ಷೋಭಗಳಿಗೆಲ್ಲ ಒಂದೇ? ಒಂದು ಬಣ್ಣವನ್ನು ಕೊಟ್ಟು ಬಿಡುತ್ತಿ 

ದ್ದರು. ಹೃದಯದ ಕನ್ನಡಿಯಾಗಿರುವ ಮುಖವು, ಬೇರೆ ಬೇರೆ ಭಾವಗ 

ಳನ್ನು ತೋರಿಸುವುದಕ್ಕೆ ಬದಲಾಗಿ, ಒಂದೆ ಒಂದು ಸಣ್ಣ ನಗೆಯನ್ನೆ 

ಮೊದಲಿಂದ ಕೊನೆಯವರೆಗೂ ತೋರಿಸುವುದು. ಭಟ್ಟರು ಸ್ವಬಲದಿಂದ, 

ಇತರರನ್ನು ಕಿರಿಗುಟ್ಟಿಸುವ ಎದೆಯಳಲನ್ನು ತಮ್ಮನ್ನು ನಗಿಸುವ ರಾಗವ 

ನ್ನಾಗಿ ಮಾಡಿದರು.


ಲೋಕವು ಅದನ್ನು ಅರಿಯದು ಇಳಿದು, ಮುಳುಗಿ, ಆಳವನ್ನರಿತು 

ನಲಿಯುವ ಅಭ್ಯಾಸವಿಲ್ಲದ ಜಗತ್ತು, ಮುಟ್ಟಿ ಮುಟ್ಟಿ ಮುಂದೋಡುವ ಈ 

ಪ್ರಪಂಚವು, ಹೊರಗಿನ ನಗೆಯನ್ನು ಮಾತ್ರ ಕಾಣಬಲ್ಲುದಾಗಿ, " ಭಟ್ಟರು 

ಸುಬ್ರಹ್ಮಣ್ಯಕ್ಕೆ ಹೋಗಿ ಬಂದುದೇ ಬದಲಾಯಿಸಿ ಬಿಟ್ಟರು. ಶುದ್ಧವಾಗಿ 

ಅಂತರ್ಮುಖಿಗಳಾಗಿ ಹೋದರು' ಎನ್ನವುದು. ಭಟ್ಟರೂ ಅದನ್ನು ಕೇಳಿ 

ದರು. ಆಗ ಮಾತ್ರ ಅವರಿಗೆ ಕಣ್ಣಲ್ಲಿ ನೀರು ಬಂತು,

-----

೭೮


ಇಪ್ಪತ್ತೊಂದನೆಯ ಪರಿಚ್ಛೇದ


ಮುಟ್ಟಿದುದನ್ನೆಲ್ಲ ಚಿನ್ನವನ್ನಾಗಿ ಮಾಡುವ ಸ್ಪರ್ಶವೆಂಬ ಜಾತಿಯ 

ಶಿಲೆಯೊಂದು೦ಟ೦ತೆ. ವೇದದಲ್ಲಿ ಹೇಳಿರುವ ಸೋಮದಂತೆ, ಕಥೆಗಳಲ್ಲಿ 

ಹೇಳುವ ಎರಡು ತಲೆಯ ಗಂಡಭೇರುಂಡದಂತೆ, ಅದೂ ಒಂದು ಕಟ್ಟು ಕಥೆ 

ಯೆಂದರೂ ತಪ್ಪಿಲ್ಲ ; ಕಂಡುದನ್ನೆ ನಂಬುವುದು ಕಷ್ಟವಾಗಿರುವ ಕಾಲ 

ದಲ್ಲಿ, ಕಾಣದುದನ್ನು ನಂಬುವುದಾದರೂ ಹೇಗೆ ? ಆದರೆ, ಸ್ಪರ್ಶವುಂಟೋ 

ಇಲ್ಲವೋ ಸ್ಪರ್ಶವು ಮಾಡುವ ಕೆಲಸವು ಮಾತ್ರ ಉಂಟು ಎಂದು ಒಪ್ಪಿಕೊ 

ಳ್ಳಬೇಕು. ಇಲ್ಲವಾದರೆ, ಭಟ್ಟರ ಅ೦ತರ೦ಗವು ಅಷ್ಟು ಕಲುಷಿತವಾಗಿದ್ದುದು 

ಅಷ್ಟು ಕೃತವಿಕೃತವಾಗಿ ಹೋಗಿದ್ದುದು, ಮತ್ತೆ ತಿಳಿಯುತ್ತಿತ್ತೆ ? ಮತ್ತೆ 

ಉಪಹಿತವಾಗುತ್ತಿತ್ತೆ ? ಅವರ ಮನಸ್ಸು ನೇರವಾಗುತ್ತ ಬಂತು. ಆದರೆ 

ಅದು ಹುಟ್ಟಿದ ವೃತ್ತಿಯು ಅಳಿಸಿಹೋದುದರಿಂದ ಆದುದೋ ಅಥವಾ 

ಕವಿಯೊಬ್ಬನು ಹೇಳುವಂತೆ, " ಸ್ವಾಂತದಲ್ಲಿ ನಿದ್ದೆಗೈಯುತ್ತಿತೋ ? '' 

ಅದನ್ನು ಮಾತ್ರ, ಹೇಳಲು ಸಾಧ್ಯವಿಲ್ಲ. ಶಕುನ, ಶಾಸ್ತ್ರವನ್ನು ನಂ 

ಬುವ ವರ್ಗದಲ್ಲಿ ಸೇರಿದವರು ಮಾತ್ರ. ಆಗಾಗ ತಪ್ಪಿಸಿಕೊಳ್ಳುವ ಒಂದೆ 

ರಡು ನಿಟ್ಟುಸಿರುಗಳಿಂದ ; ಏಕಾಂತದಲ್ಲಿ, ಇನ್ನೊಬ್ಬರು ಕಂಡಾರೆಂಬ 

ಭೀತಿಯ ತಲೆದೋರದ ವೇಳೆಯಲ್ಲಿ, ಮತ್ತೊಂದು ಕೆಲಸದ ಆತಂಕವಿಲ್ಲದ 

ಸಮಯದಲ್ಲಿ, ಉದುರುವ ಎರಡು ತೊಟ್ಟು ಕಣ್ಣು ನೀರಿಂದ ; ಅಳೆದು 

ನೋಡಿ, ಗುರ್ತು ಹಚ್ಚುವುದಾದರೆ, " ಈ ಹುತ್ತದಲ್ಲಿ ಘೋರಸರ್ಪವು ಅಡಗಿರ 

ಬೇಕು?” ಎ೦ದಾರು. ಹೆಂಡಿತಿಯು ತವರು ಮನೆಗೆ ಹೋಗಿ, ಒಂದು ತಿಂಗ 

ಳಾಗಿದ್ದರೂ, ಆಕೆಯಿಂದ ಒಂದೆರಡು ಕಾಗದಗಳು ಬಂದಿದ್ದರೂ, ಆಕೆಯು 

ನೊಂದುಕೊಳ್ಳುವಳೆಂದು ತಿಳಿದಿದ್ದರೂ, ಆಕೆಗೆ ಒಂದು ಕಾಗದವನ್ನೂ ಬರೆ 

ಯದೆ ಇರುವುದನ್ನು ತಿಳಿದವರು ಯಾರಾದರೂ ಇದ್ದರೆ, ಅವರು ಸಂಸ್ಕೃತ 

ನನ್ನಾಶ್ರಯಿಸಿ " ಭಟ್ಟರು ಅನ್ಯಸಂಕ್ರಾಂತಚಿತ್ತರು ” ಎಂದು ಹೇಳ 

ಬಹುದಾಗಿತ್ತು. " ಇನ್ನೊಬ್ಬಳಲ್ಲಿ ಆಶೆಯಿಟ್ಟು ಕೊಂಡಿದ್ದಾರೆ” ಎಂದು


೭೯


ಕನ್ನಡದಲ್ಲಿ ಹೇಳಿ ಭಟ್ಟರಿಗೆ ಅವಮಾನ ಮಾಡಬಾರದೆಂದು ಸಂಸ್ಕೃತ. 

ಬಯ್ದಾಡಿಕೊಂಡರೂ, ಮೇಲಿನ ಅಂತಸ್ತು ಬಿಟ್ಟು ಕೆಳಗಿಳಿದು ಬೀದಿಗೆ

ಹೋಗಬಾರದು. 


ಭಟ್ಟರ ಕಾರ್ಯಕಲಾಪಗಳು ನಂಜನಗೂಡಿನ ದೊಡ್ಡ ತೇರಿನಂತೆ, 

(ಹಿ೦ದಿನದು ಈಗಿನದಲ್ಲ.) ಅಂತೂ ಇಂತೂ ಪ್ರಯತ್ನ ಬಲದಿಂದ ನಡೆಯು 

ತ್ತಿವೆ. ಆದರೇನು ? ಶಿಸ್ತಿನಿಂದ ಸರಳವಾಗಿ ನಡೆಯುತ್ತಿದ್ದುದನ್ನು ಕಂಡು, 

ಅದರ ರುಚಿಯನ್ನರಿತಿದ್ದ ಮನವು, ಆ ಸ್ಥಿತಿಯನ್ನು ಕಂಡು ಒಪ್ಪದು. ಆದರೆ 

ಒಳಗಿನ ಹೊಯ್ದಾಟದಲ್ಲಿ ದಣಿದ ಮನಸ್ಸು ಹೊರಗಿನ ಕೆಲಸಕ್ಕೆ ಅಷ್ಟು 

ಗಮನಕೊಡಲಾರದು. ಅ೦ತೂ ನಡೆಯುತ್ತಿತ್ತು. 


ಹೀಗೆಯೆ ಅಷ್ಟು ದಿನಗಳು ಕಳೆಯಿತು. ಅತ್ತ ಪಾತಮ್ಮನವರು ಯಜ 

ಮಾನರಿಂದ ಕಾಗದ ಬರಲಿಲ್ಲವೆಂದು ಕೊರಗಿ ಸೊರಗುವಷ್ಟು ಆಯ್ತು. 

ಕೊನೆಗೆ ಅವರಿಂದ ಒಂದು ಕಾಗದವು ಬಂತು ಅದರಲ್ಲಿ ಯೋಗಕ್ಷೇಮ 

ವಿಚಾರವು ಬರೆದಿದೆ. ಮನೆಯ ಕಡೆ ಎಲ್ಲವೂ ಸಮರ್ಪಕವಾಗಿದೆ ಯೆಂದು 

ಬರೆದಿದೆ ಆದರೂ, ಸೂಕ್ಷ್ಮವಾದ ತಕ್ಕಡಿಯ ಮುಳ್ಳು ಸ್ವಲ್ಪವಾದರೂ 

ವ್ಯತ್ಯಾಸವನ್ನು ಸಹಿಸದೆ ಅಲ್ಲಾಡಿ ಬಿಡುವಂತೆ, ಆಕೆಯಮನಸ್ಸು, ಆ ಕಾಗ 

ದದಲ್ಲಿ ಏನೋ ಇಲ್ಲವೆಂದ ಕೊಂಚ ಒದ್ದಾಡಿತು. ಆಕೆಗೆ " ಆದಷ್ಟು ಬೇಗ 

ಮನೆಗೆ ಹೊರಟು ಹೋದರೆ ಒಳ್ಳೆಯದು. ಇಲ್ಲದಿದ್ದರೆ ಏನೋ ಕೆಡಕಾಗು 

ವುದು” ಎ೦ದು ಅ೦ಜಿಕೆಯಾಯ್ತು. ಆದರೆ ತಾಯಿಗೆ ಇನ್ನೂ ಗುಣವಾಗಿಲ್ಲ. 

ಹೊರಡುವುದು ಹೇಗೆ ? ಅದಕ್ಕಾಗಿ, ಒಂದು ಉದ್ದವಾದ ಕಾಗದವನ್ನು 

ಬರೆದರು. " ಕಾಣಬೇಕೆಂಬ ಆಶೆಯು ಬಲವಾಗಿದೆ ಮಕ್ಕಳೆಲ್ಲ ಜರಿದು 

ಕೊಂಡಿದ್ದಾರೆ. ಮಾತೃಶ್ರೀಯವರ ಸದ್ಯದ ಸ್ಥಿತಿಯಲ್ಲಿ ನಾನು ಬರಲು 

ಸಾಧ್ಯವಿಲ್ಲ. ತಾನಾದರೂ ಒಂದುಸಲ ಬಂದು ದರ್ಶನಕೊಟ್ಟು ಹೋಗಬಾ 

ರದೆ ? '' ಎಂಬುದು ಕಾಗದದ ಅಭಿಪ್ರಾಯ 


ಕಾಗದವನ್ನು ಕಂಡು, ಅವರ ಮನಸ್ಸು ಚಂಚಲವಾಯ್ತು. ತುಂಬಿ 

ರುವ ಮದ್ದಿನಮನೆಗೆ ಅಕಸ್ಮಾತ್ತು ಬೆಂಕಿಯಕಿಡಿಯು ಬಿದ್ದು, ತಟ್ಟನೆ ಅಗಿ,


೮೦


ಪುರುಷನ ಆವಿರ್ಭಾವವಾಗುವಂತೆ, ಹೆಂಡಿತಿಯ ಕರುಣಾಕ್ರಂದನದ ಕಾಗದ 

ವನ್ನು ಕಂಡು, ಅವರ ಚಿತ್ರವು, ಭಟ್ಟರು ಪ್ರಯತ್ನ ಪುರಸ್ಕರವಾಗಿ ತನ್ನ 

ಮೇಲೆ ಹೊರೆಸಿದ್ದ ಸಂಯಮದ ಕಟ್ಟನ್ನು ತಟ್ಟನೆ ಕಿತ್ತೊಗೆದು ಸ್ವತಂತ್ರ 

ವಾಗಿ ಕಪಿಯಂತೆ ಕುಣಿಯಲಾರಂಭಿಸಿತು. " ಹೋಗಿ ಅವಳನ್ನು ಒಂದು 

ವೇಳೆ ನೋಡಿಕೊಂಡು ಬರುವುದೇ ಸರಿ ” ಎಂದು ಒಂದುಸಲ ಎನ್ನಿಸಿತು, 

ಇನ್ನೊಮ್ಮೆ ಏಕೋ ಉದಾಸೀನತೆ ಬೇಡ ; ಬೆಳದಿಂಗಳೂಟವನ್ನು ಮಾಡ 

ಬೇಕೆಂದಿರುವವರು ಹಗಲನ್ನು ಕಂಡು ದ್ವೇಷ ಮಾಡದಿದ್ದರೂ, ಏನು 

ಹಗಲೋ ಎಂದುಕೊಳ್ಳುವಂತೆ ; ಭಟ್ಟರು ಪತ್ನಿಯ ವಿಷಯದಲ್ಲಿ ಒಂದು 

ರೀತಿಯಾಗಿದ್ದಾರೆ.


ಮನಸ್ಸನ್ನು ಕೆಣಕುವುದಕ್ಕೆ ಒಂದು ಸಾಧನವು ಸಿಕ್ಕಿದರೆ ಸಾಕು, 

ಅದು ಹೇಗೆ ಹೇಗೆ' ಎಳೆದುಕೊಂಡುಹೋಗಿ, ತಾನು ಮೊದಲು ಯೋಚಿಸಿ 

ಬಿಟ್ಟು ಕೊಂಡಿದ್ದ ವಿಷಯಕ್ಕೆ ಹೊತ್ತುಕೊಂಡು ಹೋಗಿ ನಿಲ್ಲಿಸುವುದು 

ನಾವೆಷ್ಟೇ ಜಾಗರೂಕರಾಗಿರಲಿ, ಮನಸ್ಸು ನನ್ನ ಅಧೀನದಲ್ಲಿ ಇದ್ದಂತೆಯೇ 

ಇದ್ದೂ ಇದ್ದೂ ಎಲ್ಲಿಗೋ ಎದ್ದು ಬಿಡುವುದು. ನಾವು ಅದಕ್ಕೆ ಹೇಳುವ 

ಕೆಲಸವೇ ಬೇರೆ; ಅದು ಮಾಡುವ ಕೆಲಸವೆ? ಬೇರೆ. ಹಾಗಿಲ್ಲದೆ ಹೋಗಿ 

ದ್ದರೆ, ಭಟ್ಟರ ಮನಸ್ಸು ಕಾಗದವನ್ನು ಬರೆದು ತನ್ನ ಶಾಂತಿಯನ್ನು ಭಂಗ 

ಪಡಿಸಿದ ಪಾತಮ್ಮನವರ ಕಡೆಗೆ ಹೋಗದೆ, ಸಂಬಂಧವಿಲ್ಲದ ಆ ಬಸವಿಯ 

ಕಡೆಗೇತಕ್ಕೆ ಹೋಗಬೇಕು ? ಬಹುದಿವಸದ ಪರಿಚಯವು ಪಕ್ವವಾಗಿ ಸ್ನೇಹ 

ವಾಗಿ ಅಂತರಂಗಗಳು ಬೆಸುಗೆ ಬಿದ್ದು ಒಂದಾಗಿರಬೇಕಾಗಿದ್ದ ಆಕೆಯನ್ನು 

ತೊರೆದು, ರೂಪವತಿಯಾದರೂ ಮೋಹಲೀಲೆಗಳ ಗಂಧವನ್ನೇ ಅರಿಯದ 

ಹಳ್ಳಿಯ ಹುಡುಗಿಯ ಕಡೆಗೆ ಓಡಬೇಕೇತಕ್ಕೆ ?


ಅಂತೂ ಭಟ್ಟರ ಚಿತ್ರವು ಮತ್ತೆ ಬಸವಿಯ ಚಿಂತೆಗೆ ಎಡೆಗೊಟ್ಟಿತು. 

ಎಳೆದುಬಿಟ್ಟ ರಬ್ಬರು ರಭಸವಾಗಿ ಹಿಂತಿರುಗಿ ಬಂದು ಹೊಡೆಯುವಂತೆ, ಬೇಡ 

ವೆಂದು ನೂಕಿದ್ದ ಆ ಯೋಚನೆಗಳೆಲ್ಲವೂ ಮತ್ತೆ ಅಂತರಂಗದಲ್ಲಿ ಎದ್ದು 

ನರ್ತಿಸಲಾರಂಭಿಸಿದವು. ಏಕಾಂಗಿಗಳಾಗಿ ಹೋಗುತ್ತಿರುವಾಗ ಭಾವದಲ್ಲಿ 

ಅವಳ ವಿಷಯವು ಹುಟ್ಟಿ, ಜೊತೆಯಲ್ಲಿ ಯಾರೋ ಹೋಗುತ್ತಿದ್ದ ಹಾಗೆ


೮೧


ಮನಸ್ಸಿಗೆ ಅರಿವಾಗುವುದು ; ಕೂಡಲೆ ಭಟ್ಟರು ಗಾಬರಿಯಾಗಿ ಅತ್ತಿತ್ತ 

ತಿರುಗಿನೋಡಲು, ಆ ಮನಸ್ಸು ತನಗೆ ಬೇಕಾದ ವಸ್ತುವು ಇಲ್ಲವೆಂದು 

ಕೊಂಡು, ನಿರಾಶೆಯಿಂದ ಹಿಂತಿರುಗುವುದು. ಇನ್ನೊಮ್ಮೆ ಯಾವುದೋ 

ವಿಚಾರವಾಗಿ ಯೇನೋ ಯೋಚಿಸುತ್ತ ಕುಳ್ಳಿರುವಾಗ, ಅವಳಾಡಿದ ಮಾತು 

ಗಳು ಕೇಳಿಸಿದಂತಾಗಿ, ಭಟ್ಟರು ತಟ್ಟನೆ ಹಿಂತಿರುಗಿನೋಡುವರು. ಜಪ 

ಕ್ಕೆಂದು ಕಣ್ಣು ಮುಚ್ಚಿ ಕುಳಿತಿದ್ದರೆ, ಚಿತ್ರವು ಅವಳ ಪ್ರತಿಮೆಯನ್ನು 

ಮುಚ್ಚಿದ ಕಣ್ಣೆದುರಿಗೆ ತಂದು ನಿಲ್ಲಿಸುವುದು. ಆಗಮಾತ್ರ ಭಟ್ಟರು ಬಹು 

ಸಂಕಟಪಡುವರು. ಪ್ರಾರಬ್ಧವನ್ನು ಕುರಿತು ಚಿಂತಿಸಿ, ತಮ್ಮ ಅಸಾಮರ್ಥ್ಯ 

ವನ್ನು ಹಳಿದುಕೊಳ್ಳುವರು. ಇಷ್ಟು ದಿನ ಮಾಡಿದ ಜಪ, ಪೂಜೆ, ನಿಷ್ಠೆ, 

ಎಲ್ಲವೂ ಬೂದಿಯಲ್ಲಿ ಹೋಮಮಾಡಿದಂತಾಯ್ತು. ಇನ್ನು ನಾನು ಬದುಕಿ 

ದ್ದರೇನು ? ಸತ್ತರೇನು ? ” ಎಂಬ ವ್ಯಥೆಯು ಅವರನ್ನು ಆಗ ಬಹಳ 

ಪೀಡಿಸುವುದು.


ಇಷ್ಟಾದರೂ, ತಮ್ಮನ್ನು ತಾವೇ ಹಳಿದುಕೊಳ್ಳುವಂತಹ ವಿಷಮ 

ಸಂಕಟವು ಪ್ರಾಪ್ತವಾಗಿದ್ದರೂ, ಅವಳ ನೆನೆಹು ಮಾತ್ರ ಏನೋ ಸುಖಕರ 

ವಾಗಿರುವುದು. ಅದರಲ್ಲಿ ಒಂದು ರುಚಿಯನ್ನು ಕಂಡ ಮನಸ್ಸು, ಅವರು 

ಬೇಡ ಬೇಡವೆಂದರೂ, ಬಿಡದೆ ಅದನ್ನೇ ಧ್ಯಾನಿಸುವುದು. ಆ ವೃತ್ತಿಯನ್ನು 

ಮುರಿಯಬೇಕೆಂದು ಭಟ್ಟರು ಎಷ್ಟೋ ಪ್ರಯತ್ನ ಮಾಡುವರು. ಆದರೆ ಅವರು 

ಮಾಡಿದ ಯತ್ನವೆಲ್ಲವೂ, ಆ ಚಿತ್ತವೃತ್ತಿಗೆ ಗೊಬ್ಬರ ಹಾಕಿದಂತಾಗಿ ಅದು 

ಬಲಿಯುತ್ತಲೇ ಹೋಯ್ತು. ಮೊಂಡಹುಡುಗರನ್ನು ಅ೦ಜಿಸಿದರೆ ಅವರು 

ತಮ್ಮ ಮೊಂಡುತನವನ್ನು ಇನ್ನೂ ಹೆಚ್ಚು ಮಾಡುವಂತೆ ಆಯ್ತು. 


ಭಟ್ಟರು ಇಂತಹ ಸ್ಥಿತಿಯಲ್ಲಿ ಏನುಮಾಡಬೇಕು ಎಂಬುದನ್ನು ತಿಳಿ 

ಯದೆ ಹಗಲೂ ಇರುಳೂ ತೊಳಲುತ್ತ ಇದ್ದಾರೆ. ಇಂದ್ರಿಯಗಳಿಗೆ 


೮೨


ಸೋತು, ವಿಷಯವನ್ನು ಹುಡುಕಿಕೊಂಡು ಹೋಗಿ, ಸರ್ವಸ್ವವನ್ನೂ ಅದ 

ಕೊಪ್ಪಿಸಿ, ಆರಾಧಿಸುವ ಹೀನತನಪಿರಲಿ. ತಮ್ಮ ಮನಸ್ಸು ವಿಷಯ 

ವೊಂದನ್ನು ಕುರಿತು ಧ್ಯಾನಿಸುವುದನ್ನೂ ಒಲ್ಲದವರು ಆ ಭಟ್ಟರು. 

ಮನಸ್ಸೇ ಅವರು ಹೇಳಿದ ಹಾಗೆ ಕೇಳದು. ಹೀಗೆ ದುಷ್ಟಾಶ್ವಗಳನ್ನು 

ಕಟ್ಟಿದ ರಥದ ಸಾರಥಿಗೆ ಆಗುವಂತೆ, ವಿವಿಧ ವಿರೋಧ ಭಾವಗಳಲ್ಲಿ ಅಂತ 

ರಂಗವು ಬಿದ್ದೂ ಎಷ್ಟೋ ಅವರಿಗೆ ಆಯಾಸವು ಬಹಳವಾಯ್ತು ರಾತ್ರಿಯಲ್ಲಿ 

ಕಣ್ಣಿಗೆ ನಿದ್ದೆಯಿಲ್ಲ. ಹಗಲಲ್ಲಿ ಕೆಲಸಮಾಡುವ ಚಟುವಟಿಕೆಯಿಲ್ಲ. 

ಹೀಗಾಯ್ತು.


ಒಂದು ದಿನ ರಾತ್ರಿಯಂತೂ ಅವರಿಗೆ ಬಹು ವಿಚಿತ್ರವಾದ ಅನುಭವ 

ವಾಯ್ತು. ಎದ್ದು ಕುಳಿತಿದ್ದರಂತೂ ಯೋಚನೆ. ಅದು ಎ೦ದಿನಂತೆ. 

ಹಾಗೂ ಹೀಗೂ ಮಾಡಿ, ನಿದ್ದೆ ಮಾಡಬೇಕೆಂದು ಮಲಗಿಕೊಂಡರೆ, ಅತಿ 

ಪ್ರಯತ್ನದ ಫಲವಾಗಿ, ಕಣ್ಣು ಮುಚ್ಚಿಕೊಂಡರೆ, ಆಗಲೇ ಯಾರೋ 

ಮನೆಗೆ ಬಂದಿರುವಂತೆಯೂ, ಅವರಿಗೆ ತಾವು ಉಪಚಾರಮಾಡಲು ಹವ 

ಣಿಸಿಕೊಂಡು ಓಡಾಡುತ್ತಿರುವಂತೆಯೂ, ಒಂದು ಕನಸು. ಅಷ್ಟರಲ್ಲಿ 

ಜಾಗ್ರತ ಪ್ರಪಂಚದಲ್ಲಿ ಯಾರೋ ಒಮ್ಮೆ ಕೂಗಿದ ಹಾಗೆ ಆಗಿ, ಕನಸು 

ಮುರಿಯುವುದು, ಅವಸರವಸರವಾಗಿ ಎದ್ದು ನೋಡಿದರೆ, ಎಲ್ಲ ಯಾರದೂ 

ಶಬ್ದವೇ, ಸುಳಿವೇ ಇಲ್ಲ.


ಹೀಗೆ ಕೆಲವು ಸರ್ತಿಯಾಯ್ತು, ಒಂದು ಸಲವಂತೂ, ಕನಸಿನಲ್ಲಿ 

ಕೇಳಿದ ಕೂಗಿನ ಭ್ರಾಂತಿಯು ಜಾಗ್ರತಿನಲ್ಲಿಯೂ ಬಲವಾಗಿಯೇ ಇದ್ದು 

ಅವರು ಎದ್ದು ಹೋಗಿ ಬಾಗಿಲನ್ನು ಕೂಡ ತೆಗೆದು ನೋಡುವಷ್ಟಾಯ್ತು. 

ಬಾಗಿಲಲ್ಲಿ ಯಾರೂ ಇರಲಿಲ್ಲ. ಅಲ್ಲ ಕುಳಿತಿದ್ದ ಬೆಕ್ಕು ವೊಂದು ಇವರು 

ಬಾಗಿಲು ತೆಗೆದ ಸದ್ದು ಕೇಳಿ ಓಡಿಹೋಯ್ತು. 


೮೩


ಅಂತೂ ಇಂತೂ ರಾತ್ರಿಯೆಲ್ಲ ಈ ಕಣ್ಣಾಮುಚ್ಚಾಲೆಯಲ್ಲಿ ಕಳೆ 

ಯಿತು. ಬೆಳಗಾಗ ಶೂದ್ರರವರು ಬಂದು ಬಾಗಿಲಿಗೆ ಹಲವು ಸಾರಿ ಕೂಗಿ 

ದಳು. ಬಾಗಿಲು ತೆರೆಯಲಿಲ್ಲ. ಅವಳೂ ಆಶ್ಚರ್ಯಪಟ್ಟು ಕೊಂಡು ಇನ್ನೆ 

ರಡುಸಲ ಗಟ್ಟಿಯಾಗಿ ಕೂಗಿದಳು. ಬಾಗಿಲು ತೆರೆಯಿತು. ಅವಳು

ಒಳಕ್ಕೆ ಬಂದು, " ಅದ್ಯಾರೋ ಬಂದ ಓದಿ !” ಎಂದಳು. 


ಭಟ್ಟರಿಗೆ ಆ ಮಾತುಕೇಳಿ ಎದೆಯು ಡವಡವ ಎಂದಿತು ; ಸತ್ಯವಂತ 

ನಾದರೂ ಹಣವಿಲ್ಲದೆ ಒಡವನಾದವನು ಸಾಲಗಾರನು ಬಂದಿದ್ದಾನೆ 

ಯೆಂದರೆ ಹೆದರುವಂತೆ ಹೆದರಿದರು ; ಹೊರಗೆ ಹೋಗಿ ನೋಡಿಲು ಬಂದಿ

ರುವವಳು ಬಸವಿ.

-----

ಇಪ್ಪತ್ತೆರಡನೆಯ ಪರಿಚ್ಛೇದ.


ಅವರಿಗೆ ಅವಳನ್ನು ಕಂಡು ಸಂತೋಷವಿಷಾದಗಳೆರಡೂ ಏಕಕಾಲ 

ದಲ್ಲಿ ಮೂಡಿದುವು. ಬಂದವಳನ್ನು ಆಲಿಂಗಿಸಿ ಸೋಪಚಾರವಾಗಿ ಮನೆಯಲ್ಲಿ 

ಕುಳ್ಳಿರಿಸಿ ಕುಶಲ ಪ್ರಶ್ನೆ ಮಾಡಬೇಕೆಂದು ಒಂದು ಮನಸ್ಸು, " ಅಯ್ಯೋ 

ಇವಳು ಬಂದೇ ಬಿಟ್ಟಳಲ್ಲ ! ಇನ್ನು ನೋಡಿದವರು ಏನೆನ್ನುವರೋ ? ” 

ಎಂದು ಲೋಕವನ್ನು ಕಂಡಂಜಿದ ಇನ್ನೊಂದು ಮನಸ್ಸು. ಹೀಗೆ, ಆ ಎರಡು 

ಮನಸ್ಸುಗಳೂ ಏಕಕಾಲದಲ್ಲಿ ಕೆಲಸಮಾಡುತ್ತಿರಲು, ಭಟ್ಟರು, ಬಂದವರು 

ಯಾರೆಂಬುದನ್ನು ಕಂಡಿದ್ದರೂ, ನೇರವಾಗಿ ತಿಳಿದಿದ್ದರೂ, ಇನ್ನೊಮ್ಮೆ 

ಕಣ್ಣು ಹೊಸಕಿಕೊ೦ಡು ನೋಡಿದರು. ಕಣ್ಣನ್ನು ಹೊಸಕಿಕೊಂಡು ನೋಡಿ

ದರೂ ಅದೇ ಬಸವಿ. 


ಏನುಮಾಡಬೇಕೆಂಬುವುದನ್ನು ಇತ್ಯರ್ಥಮಾಡುವುದಕ್ಕೆ ಬಹಳ

ಹೊತ್ತು ಹಿಡಿಯಲಿಲ್ಲ ಅವಳನ್ನು ' ಒಳಕ್ಕೆ ಬಾ' ಎಂದರು ಅವಳೂ 

ಒಳಕ್ಕೆ ಹೋದಳು. ಅವಳನ್ನು ಹಿಂಬಾಲಿಸಿ ತಾವೂ ಒಳಕ್ಕೆ ಹೋಗುವಾಗ, 

ಏಕೋ, " ಬೀದಿಯಲ್ಲಿ ಯಾರುಯಾರು ಇದ್ದಾರೆ ? " ಎಂದು ಅತ್ತಿತ್ತ 

ನೋಡಿ ಒಳಕ್ಕೆ ಹೋದರು.


ಮಾತನಾಡಿಸದಿರುವುದು ಹೇಗೆ ? ಮಾತನಾಡಿಸುವುದು ಹೇಗೆ ? 

ಇಷ್ಟು ದಿನವೂ ಬೇಕೆಂದೋ ಬೇಡವೆಂದೋ ಅಂತೂ, ಮನಸ್ಸು ಏಕಸಮ 

ವಾಗಿ ಆರಾಧಿಸಿದ ದೇವಿ ಇಂದು ಮನೆಗೆ ಬಂದಿದ್ದಾಳೆ. ಏನುಮಾಡಬೇಕು ? 

ಆಕೆಗೆ ಹೇಗೆ ಉಪಚಾರಮಾಡಬೇಕು ? ಅಥವಾ ತನಗೆ ಬೇಕಾದ ವಸ್ತು 

ವೆಂದು ಉಪಚಾರಮಾಡಿದರೆ, ನೋಡಿದ ಲೋಕವೇನೆಂದುಕೊಂಡೀತು ? 

ಹಾಗೆಂದು ಲೋಕಕ್ಕಂಜಿ, ತನ್ನ ಮನಸ್ಸಿಗೆ ವಿರುದ್ಧವಾಗಿ ನಡೆದು, ಆಗು 

ತ್ತಿದ್ದ ಸುಖವನ್ನು ನೀಗಿಕೊಂಡು, ಇಲ್ಲದ ದುಃಖವನ್ನೆಂತು ಗಂಟು ಕಟ್ಟಿ 


೮೫


ಭಟ್ಟರು ಒಳಕ್ಕೆ ಬಂದಾಗ “ ಶೂದ್ರರವಳು " ಮನೆಯನ್ನು ಗುಡಿಸಲು 

ಸಾಯುಧಳಾಗಿ ನಿಂತಿದ್ದಳು. ಭಟ್ಟರಿಗೆ, ಇನ್ನೊಬ್ಬ ಹೆಂಗಸು ಕಣ್ಣಿಗೆ 

ಬಿದ್ದೊಡನೆಯೇ, ಮನಸ್ಸಿನಲ್ಲಿದ್ದ ಮತ್ತೊಬ್ಬ ಸ್ತ್ರೀಯಳ ಬೋಧೆಯಾಗಿ 

ಎದೆಯು ನಡುಗಿತು. ಕಡಿದಾದ ಬೆಟ್ಟವನ್ನು ಹತ್ತುತ್ತಿರುವಾಗ, ಹಿಂದಿ 

ನಿಂದ ಯಾರಾದರೂ ತಟ್ಟನೆ, " ಜಾರೀತು ! ಎಚ್ಚರಿಕೆ ” ಎಂದು ಕೂಗಿ 

ದರೆ, ಜಾರದಿದ್ದರೂ ಜಾರಿದಂತಾಗಿ, ಮಗ್ಗುಲಲ್ಲಿದ್ದ ಆಧಾರವನ್ನು ದೃಢ 

ವಾಗಿ ಅವಲಂಬಿಸುವಂತೆ, ಬಂದ ಬಸವಿಯನ್ನು ಕಂಡು ಬೆದರಿದ ಬಗೆಯು 

ಅಯ್ಯೋ ! ಅವಳಿದ್ದಿದ್ದರೆ ಚೆನ್ನಾಗಿತ್ತಲ್ಲಾ !'' ಎಂದು ಗಾಬರಿಯಿಂದ 

ಕಾತರಿಸಿತು. ಮತ್ತೆ ಉತ್ತರಕ್ಷಣದಲ್ಲಿಯೆ ಗಳಿಗೆಗೊಂದು ಬಣ್ಣವಾಗುವ 

ಓತಿಕ್ಯಾತನಂತೆ, ಬದಲಾಯಿಸಿ, " ಇಲ್ಲ, ಇಲ್ಲ ಅವಳಿದ್ದರೆ, ಏನೇನು 

ಅನರ್ಥ ನಡೆಯುತ್ತಿತ್ತೋ ? ಅವಳಿಲ್ಲದಿರುವುದೇ ಒಳ್ಳೆಯದಾಯ್ತು 

ಎ೦ದುಕೊ೦ಡಿತು.


ಭಟ್ಟರು ಹಿಂಗೆ ಒಳಗೆ ಒಂದು ವಿಧವಾದ ಬೇಗುದಿಯಿದ್ದರೂ, ಹೊರ 

ಗಿನ ಲೌಕಿಕವನ್ನು ಬಿಡದೆ ಅವಳನ್ನು ಮಾತನಾಡಿಸಿದರು ನೀನು 

ಚೆನ್ನಾಗಿದ್ದೀಯಾ ?” ಎಂದು ಕೇಳಿದರು ; " ನಾಯಕನು ಚೆನ್ನಾಗಿದ್ದಾ 

ನೆಯೇ ? ” ಎಂದು ವಿಚಾರಿಸಿದರು. ಇನ್ನೂ ಅವರ ವಿಷಯ ಇವರ ವಿಷ 

ಯಗಳನ್ನೆಲ್ಲ ಕೇಳುತ್ತ ಬಂದರು. ಬಸವಿಯದು ಮಾತ್ರ ಎಲ್ಲದಕ್ಕೂ ಒಂದೇ 

ಒಂದು ಉತ್ತರ. ಒಂದೇ ಅಕ್ಷರದ " ಹೂಂ ” ; ಎರಡಕ್ಷರದ (" ಹೌದು ” 

ಕೂಡ ಇಲ್ಲ. ಹಾಗೂ ಹೀಗೂ ಬೇರೆಬೇರೆ ಮಾತು ಕಥೆಗಳೆಲ್ಲ ಆಡುತ್ತ 

ಆಡುತ್ತ, ಕೊನೆಗೆ ತಮಗೆ ಬೇಕಾದ ಪ್ರಶ್ನೆಯನ್ನು ಕೇಳಿದರು ಅದೇನು ?

ನೀನು ಬಂದುದು ?”


ಬಸವಿಯು ತಟ್ಟನೆ ಉತ್ತರವನ್ನು ಕೊಡಲಿಲ್ಲ. ಮತ್ತೆ ಮತ್ತೆ ಕೇಳಿದ 

ಮೇಲೆ " ಕನಸಾಯ್ತು ” ಎಂದಳು. ಬಾಯಲ್ಲಿ ಮಾತು ಮುಂದಕ್ಕೆ ಹೊರ 

ಡಲಿಲ್ಲ. ಕಣ್ಣಲ್ಲಿ ನೀರುಬಂದು, ಅವಳು ತಲೆಯನ್ನು ಬಗ್ಗಿಸಷಿಬಿಟ್ಟಳು.


೮೬


ಭಟ್ಟರಿಗೆ ಬಹು ಸಮಾಧಾನವಾಯ್ತು, ಆ ಸಮಾಧಾನದಲ್ಲಿ, ಆ ಸಂ 

ತೋಷದಲ್ಲಿಯೂ ಎದೆಯು ಡವಡವ ಎಂದಿತು; ಅವರು ಹಲವು ಸಲ ನೀರು 

ನುಂಗಿದರು. ಅವರಂತಹ ಸಂಯಮಿಗಳಲ್ಲದಿದ್ದರೆ, ಬಸವಿಯನ್ನು, ಕವಿಯು 

ಹೇಳುವಂತೆ " ಜೀವಿತಸರ್ವಸ್ವದಿಂದಲೂ ಆರಾಧಿಸುತ್ತಿದ್ದರು." ಆದರೆ 

ಅವರಿಗೆ ಏನೆನೋ, ಅಡಚಣೆಗಳು. ಕೆಲವು ಒಳಗಿನವು ಕೆಲವು 

ಹೊರಗಿನವು. ಅಂತು ಅವರು ಮಾಡಬೇಕೆಂದಿದ್ದುದನ್ನು ಅವರ ಮನಸ್ಸು 

ಮಾಡಿಬಿಟ್ಟಿತು ಅದಕ್ಕಾಗಿ ಅದಕ್ಕೆ ಬೇಕಾದಷ್ಟು ತಿರಸ್ಕಾರಗಳೂ ಆಯ್ತು. 


ಇನ್ನು ಬಹಳ ಹೊತ್ತ ಅಲ್ಲಿರವದು ಸರಿಯಲ್ಲವೆಂದು ಭಟ್ಟರು, 

ಶೂದ್ರರವಳನ್ನು ಕರೆದು, " ಇವಳನ್ನು ಬಾವಿಯಬಳಿಗೆ ಕರೆದುಕೊಂಡು 

ಹೋಗು ” ಎಂದ ಹೇಳಿ, ತಾವೂ ಸ್ನಾನಕ್ಕೆ ಹೋದರು. ಅವರು ಬೇಕಾ 

ದಷ್ಟು ಯತ್ನಿಸಿದರೂ ಸಫಲವಾಗದೆ, ಮನಸ್ಸು ಸ್ವತಂತ್ರವಾಗಿ ಕುಣಿಯ 

ತೊಡಗಿತು ಅದರ ಮೇಲೆ ದಾಸ್ಯಭಾರವನ್ನು ಹೊರಿಸಬೇಕೆಂದು ಹೆಣಗಿದ 

ಅವರ ಕಷ್ಟಗಳೆಲ್ಲ ವಿಫಲವಾದುವು 


ಶೂದ್ರರವಳಿಗೆ ಬಹಳ ಕುತೂಹಲ ಹೆಂಡಿತಿಯನ್ನುಳಿದು ಇನ್ನಾವ 

ಹೆಂಗಸರೊಡನೆಯ ಮಾತನ್ನೇ ಆಡದ ಭಟ್ಟರು ಮಾತನಾಡಿಸಿದವಳು 

ಇವಳು ಯಾರಿರಬಹುದು ? ಎಂದು ಕುತೂಹಲ, ಕೇಳಿದರೇನು ?

ಬಿಟ್ಟರೇನು ? ಎಂಬ ಸಂಶಯವೇ ಬರಲಿಲ್ಲ. ಬಸವಿಯು ಸ್ನಾನಮಾಡುವ 

ಯತ್ನದಲ್ಲಿರುವಾಗ ಉಪಾಯವಾಗಿ, " ಅಮ್ಮಾ! ನೀನು ಯಾವೂರಮಾ''! 

ಎಂದು ಕೇಳಿದಳು.


ಬಸವಿಯು ಉತ್ತರಕೊಡುವುದಕ್ಕೆ ನಿಧಾನಿಸಿ, ಕೊನೆಗೆ, " ಶಿವಪುರ. 

ಇಲ್ಲಿಗೆ ಬಹಳದೂರ." ಎಂದಳು.


ಇವಳು ಅದನ್ನು ಯಥಾವತ್ತಾಗಿ ಗ್ರಹಿಸಿ, “ ನಮ್ಮ ಅಯ್ಯನೋರ್ನ 

ಎಲ್ಲಿ ಹೇಗೆ ಕಂಡಿದೆ ??” ಎಂದು ಇನ್ನೂ ಒಂದು ಪ್ರಶ್ನೆಯನ್ನು ಹಾಕಿದಳು.


೮೭


ಅವಳು, ಸಾಶ೦ಕವಾಗಿ, ಸಂಶಯಗೊಂಡವತೆ, "ಅದೇಕೆ ?"

ಎಂದು ಕೇಳಿದಳು.


ಅದಕ್ಕೆ ಶೂದ್ರರವು " ಇನ್ಯಾಕೂ ಇಲ್ಲ ಕಣವ್ವ. ನಮ್ಮ ಅಯ್ಯ 

ನೋರು, ಹೆಂಗಸರಕೈಲಿ ಮಾತಾಡೋದೆ ಇಲ್ಲ ಅಂಥಾದ್ದರಲ್ಲಿ ನಿನ್ನ 

ಇಷ್ಟೊತ್ತು ಮಾತನಾಡಿಸಿದರಲ್ಲ ಅ೦ತ ಕೇಳಿದೆ. ” ಎಂದಳು.


ಬಸವಿಗೆ ಚೇಳು ಕುಟುಕಿದಂತಾಯ್ತು, ಆ ಮಾತು ಕೇಳಿ, ಬೆಟ್ಟಕ್ಕೆ

ಹತ್ತುತ್ತಿದ್ದವರಿಗೆ ಕಾಲು ಜಾರಿದಾಗ, ಕೈಗೆ ಏನೂ ಸಿಕ್ಕದಿದ್ದರೆ ಆಗು 

ವಂತಾಯ್ತು. “ ಅಯ್ಯೋ ! ನಾನೇಕೆ ಬಂದೆ ?” ಎಂದುಕೊಂಡಳು. ಅವಳ 

ಮನಸ್ಸು ಕಲಿಕಿಹೋಯ್ತು. ಏನೂ ಹೇಳಲಾರದೆ, ಏನೂ ಯೋಚಿಸಲಾರದೆ 

ಅರೆ ಒದ್ದೆಯ ಸೀರೆಯನ್ನುಟ್ಟಿದ್ದವಳು ಭಾವಿಯ ಕಟ್ಟೆಯನ್ನು ಒರಗಿ 

ಕೊಂಡು ಹಾಗೆಯೇ ನಿಂತುಬಿಟ್ಟಳು.


ಶೂದ್ರರವಳು, ಅಷ್ಟು ಹೊತ್ತು ನೋಡಿ, - ಇದ್ಯಾಕವ್ವ ? ನೀರು 

ಮುಳುಗೋಕಿಲ್ಲವಾ ?'' ಎ೦ದಳು.


ಬಸವಿಯು ತನ್ನ ಸ್ಥಿತಿಯನ್ನು ಅರಿತವಳಾಗಿ, "ಇಲ್ಲ ಕಣವ್ವ! 

ಸೀರೆ ಒಣಗಲಿ೦ತ ಕಾದಿವ್ನಿ.” ಎಂದಳು ಆಡಿದುದು ಸುಳ್ಳೆಂದು ಮನಸ್ಸು 

ಆರಿಕೆಗೊಟ್ಟಿತು.


ಬಸವಿಯು ಬಂದು ಸುಮಾರು ಒಂದು ವಾರವಾಯ್ತು. ಆದರೂ 

ಆಚೆಗೆ ಹೋಗಲಿಲ್ಲ ಊರಿನಲ್ಲಿ ನೋಡಬೇಕಾದ ನೋಟಗಳುಂಟು. 

ಅದನ್ನು ನೋಡಬೇಕೆಂದು ಕೊಳ್ಳಲೂ ಇಲ್ಲ ಬೆಳಗೆದ್ದು ಸ್ನಾನಮಾಡುವಳು, 

ಅಯ್ಯನವರಿಗಿಂತ ಹೆಚ್ಚಾಗಿ ನಡುಮನೆಯಲ್ಲಿ ಕಣ್ಣುಮುಚ್ಚಿ ಕುಳಿತಿರುವಳು. 

ಮಧ್ಯಾನ್ಹದ ಒಪ್ಪತ್ತಿನವರೆಗೂ, ಜಪ್ಪಯ್ಯ, ಎಂದರೂ ಏಳಳು. ರಾತ್ರಿಯ 

ಊಟವಂತೂ ಇಲ್ಲವೇ ಇಲ್ಲ. ಭಟ್ಟರು ಬಲವಂತವಾಡಿದರು 


ಹೊತ್ತು ಹಾಲು ಹಣ್ಣು ಕೂಡ ತೆಗೆದುಕೊಳ್ಳಳು ಶೂದ್ರರವಳಿಗೂ ಅಡುಗೆ 

ಯವಳಿಗೂ ಅವಳನ್ನು ಕಂಡು ಆಶ್ಚರ್ಯವಾಯ್ತು. ಎಲ್ಲಿಯೋ ಭಟ್ಟರ 

ಬಳಿ ಯಾವುದೋ ಮಂತ್ರೋಪದೇಶವನ್ನು ತೆಗೆದುಕೊಂಡಿರಬಹುದೆಂದೂ, 

ಗುರುಪೂಜೆ ಮಾಡುವುದಕ್ಕೆ ಬಂದಿದ್ದಾಳೆಂದೂ, ಇಬ್ಬರೂ ನಿಶ್ಚಯಿಸಿದರು. 

ಈ ಎಂಟುದಿನಕ್ಕೆ ಅವಳಿ೦ದ ಅವರಿಗೆ ತಿಳಿದುದು .. ಅವಳ ಹೆಸರು ಗೌರಿ 

ಅವಳು ಭಟ್ಟರನ್ನು ಕಂಡುದು ಅವಳ ಊರು ಶಿವಪುರದಲ್ಲಿ ” ಅಷ್ಟೆ ! 


ಅದಷ್ಟರಜೊತೆಗೆ ಅವರು ಸ್ವಂತವಾಗಿ ಊಹಿಸಿದ್ದುದು ಇನ್ನಷ್ಟು 

ಸೇರಿಸಿ ಅಂತೂ ಇಂತೂ ತಾವೆಂದುಕೊಂಡಿದ್ದುದೇ ನಿಶ್ಚಯವೆಂದು ಇನ್ನೊ 

ಮ್ಮೆಯೂ ನಿರ್ಧರಿಸಿಕೊಂಡರು ಊರಲ್ಲೆಲ್ಲಾ ಒಳಗೊಳಗೇ ಹಬ್ಬಿತು. 

" ಭಟ್ಟರು ಯಾರಿಗೋ ಉಪದೇಶ ಕೊಟ್ಟಿದ್ದಾರೆ ಅವಳು ಬಂದು ಮನೆ 

ಯಲ್ಲಿಯೆ ಇದ್ದಾಳೆ. ಚೆಲುವೆ, ಅವಳ ಸ್ನಾನ, ಜಪ, ಭಟ್ಟರಿಗಿ೦ತಲೂ 

ಬಲ ಒಂದು ಮಣ ಬೂದಿ ಹುಯ್ದುಕೊಂಡು, ಮೂಗು ಹಿಡಿದುಕೊಂಡು, 

ಸಂಜೆ ಒಪ್ಪತ್ತಿನ ತನಕ ಕುಳಿತುಕೊಂಡಿರುತ್ತಾಳೆ. ತಿನ್ನುವುದು ಅಷ್ಟು 

ಮಜ್ಜಿಗೆ ಅನ್ನ, ಅದೂ ಒಂದು ಹೊತ್ತು. ಉಪ್ಪು ಹಾಕಿದರೆ ಅದೂ ಇಲ್ಲ. ".


ಎಲ್ಲರಿಗೂ ಕುತೂಹಲ. ಚೆಲುವೆಯಾದ ಈ ತಪಸ್ವಿನಿಯನ್ನು ನೋಡ 

ಬೇಕೆಂದು ಎಲ್ಲರಿಗೂ ಆಶೆ, ಆದರದು ಸಾಧ್ಯವಿಲ್ಲ. ಹೆಂಗುಸರು ಯಾರೂ 

ಭಟ್ಟರ ಮನೆಗೆ ಹೋಗುವಂತಿಲ್ಲ. ಗಂಡಸರಿಗೆ ಹೊಗಬೇಕಾದ ಪ್ರಮೇಯ 

ವಿಲ್ಲ ಅ೦ತೂ ಬಸಪಿಯು ಯಾರ ಕಣ್ಣಿಗೂ ಬೀಳಲಿಲ್ಲ. " ಸಂಜೆಯ 

ಹೊತ್ತು ದೇವಸ್ಥಾನಕ್ಕಾದರೂ ಹೋದಾಳೇನೋ ! ಆಗಲಾದರೂ 

ನೋಡೋಣ'' ಎಂದು ಕೆಲವರು ಅನ್ವೇಷಣ ಕುತೂಹಲಿಗಳು, ಕಾದು 

ಕಾದು ನೋಡಿದರು. ಆಶೆಯು ಫಲಿಸಲಿಲ್ಲ.

====================================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ