ಆರೋಗ್ಯ ಪ್ರತಾಪ
https://archive.org/details/dli.osmania.4238
ಕಾಣಿಕೆ
( ರಾಗ- ಕಾಂಭೋದಿ; ತಾಳ- ಝಂಪೆ.)
ಕರ್ಣಾಟಕಾಂಬೆ ನಿನಗರ್ಪಿಸಿರುವೆ|
ಕರ್ಣಕವಚವಿದಾಗೆ ಕನ್ನಡಿಗರಿಂಗೆ|| ಪ ||
ಧರ್ಮಾರ್ಥಕಾಮ್ಯ ಮೋಕ್ಷಾದಿಗಳ ಸಾಧನೆಯ |
ಕರ್ಮಗಳ ಗೈವುದಕೆ ಯೋ ದೇಹದ ||
ಧರ್ಮಮರ್ಮಾದಿಗಳನರಿತು ನಡೆವುದೆ ಮೊದಲ|
ಧರ್ಮವನರುಹಲೀ ಕೃತಿಯ ನಾ ಬರೆದೂ || ೧ ||
(ಕರ್ಣಾಟಕಾಂಬೆ ನಿನಗರ್ಪಿಸಿರುವೆ | , , , , , , , , , , ||
)
ಇದರ ತತ್ವವ ಭ್ರಾತೃ ಭಗಿನಿಯರು ಜೀವನದಿ |
ಆದರಿಸಿ ತನುಸೌಖ್ಯವನು ಪೊಂದುತ ||
ವಿಧವಿಧದಿ ಮಾತೆ ನಿನ್ನಯ ಸೇವೆಯನು ಗೈದು |
ಜನ್ಮಸಾರ್ಥಕಗೊಳಿಸಲೆಂದಿದನು ಬರೆದೂ || ೨ ||
(ಕರ್ಣಾಟಕಾಂಬೆ ನಿನಗರ್ಪಿಸಿರುವೆ 1 . . ... ..... :)
ಸಕಲ ಭಾಗ್ಯಕೆ ಮೂಲವಾರೋಗ್ಯ ಭಾಗ್ಯವದ |
ಪಡೆವ ಸತ್ಪಥದ ಕೈಗಂಬದಂತೆ |
ತಾನಲ್ಪಮಾಗಿರ್ದುಮದರಿಂದ ಸರ್ವೇ |
ಜನಾಸ್ಸು ಖಿನೋ ಭವಂತೆಂದಿದನು ಬರೆದೂ || ೩ ||
(ಕರ್ಣಾಟಕಾಂಬೆ ನಿನಗರ್ಪಿಸಿರುವೆ ! .
The Dramatic Troup, Board High School,
UDIPI.
ಭಾವಚಿತ್ರ
"The high level of success reached by them will do credit even to the best of professional actors. Our hearty congratu lations to these juvenile actors and to the author who is him self responsible for coaching these youngsters."
CV. Kunhiraman Nair,
Dt. Munsiff
-------------------------------------
ವಿಜ್ಞಾಪನೆ.
ಇಲ್ಲಿಯ 'ಶಿಶುಸಪ್ತಾಹ' ಸಂಘದವರ ಕೋರಿಕೆಯಂತೆ 1925ನೆಯ
ಇಸವಿಯ ಮೊದಲಲ್ಲಿ ಈ ನಾಟಕವನ್ನು ಬರೆದೆನು. ನಮ್ಮ ಶಾಲೆಯ
'ಯುವಕ ನಾಟಕಸಭೆ'ಯವರು ಇದನ್ನು ಮೂರು ಸಲ ಅಭಿನಯಿಸಿದರು;
ನೋಡಿದವರು ಮೆಚ್ಚಿ ಕೊಂಡಾಡಿದ್ದರು. ಸಂಘದ ಮೂಲನಿಧಿ ನಿರ್ಮಾ
ಣಕ್ಕೂ ಇದು ಕಾರಣವಾಗಿತ್ತು. ಆದರೆ, ಇತ್ತೀಚೆಗೆ ಈ ಜಿಲ್ಲೆಯ
ಆರೋಗ್ಯ ಶಾಖೆಯ ಪ್ರಧಾನ ಅಧಿಕಾರಿಗಳಾಗಿ ರಾ | ಜಿ.ಸುಬ್ಬರಾಯ
ಬಾಳಿಗರವರು ಬಾರದಿರುತ್ತಿದ್ದರೆ, ನಮ್ಮ ಶಾಲಾ ವರ್ಧಂತಿಯುತ್ಸವಗಳ
ಸಭಿಕ ಜನಮನೋರಂಜನೆಗಾಗಿ ಬರೆಯಲ್ಪಟ್ಟಿದ್ದ ಇತರ ನಾಟಕಗಳಂತೆ
ಇದೂ ಮೂಲೆಯಲ್ಲಿರುತ್ತಿತ್ತು. ರಾ| ಬಾಳಿಗರು ನನ್ನನ್ನು ಧೈರ್ಯ
ಗೊಳಿಸಿ, ಇದು ಮುದ್ರಣಾಲಯವನ್ನು ಸೇರುವಂತೆ ಮಾಡಿದರೂ, ಇದನ್ನು
ಕನ್ನಡಿಗರ ಮುಂದಿಡಲು ಮತ್ತೂ ಅಳುಕಿದೆನು. ಹಲವು ಮಹನೀಯರು
ಈ ನಾಟಕವನ್ನು ಆಮೂಲಾಗ್ರವಾಗಿ ಓದಿನೋಡಿ ತನ್ನ ಸದಭಿಪ್ರಾಯ
ಗಳನ್ನು ಬರೆದು ಕಳುಹಿಸಿದುದರಿಂದ ಮತ್ತೊಂದು ಹೆಜ್ಜೆಯನ್ನು ಧೈರ್ಯ
ದಿಂದ ಮುಂದಿಡುವಂತಾಯಿತು. ಅವರುಗಳ ಮಹದುಪಕಾರಗಳನ್ನು
ತೀರಿಸಲು ಸಾಧ್ಯವೆ? ಅದು ಕಾರಣ ಈ ಕೃತಿಯಿಂದಾಗುವ ಜನತಾ
ಸೇವೆಯ ಪುಣ್ಯಕ್ಕೆ ಅವರೆಲ್ಲರೂ ಇದಕ್ಕೆ ಪ್ರೋತ್ಸಾಹವನ್ನೀಯುವವರೂ
ಭಾಗಿಗಳೆಂದು ಮಾತ್ರ ಹೇಳಿ ಮುಗಿಸುವೆನು. ನನ್ನ ಭ್ರಮ ಪ್ರಮಾದಗ
ಳಿಂದಲೂ ಮುದ್ರಾಂಕನದಿಂದಲೂ ಈ ಪುಸ್ತಕದಲ್ಲಿ ಬಂದಿರುವ
ದೋಷಗ ಳಲ್ಲಿ ಹೆಚ್ಚಿನವುಗಳನ್ನು ತಿದ್ದಿದ್ದರೂ ಇನ್ನೂ ಕೆಲವು ಉಳಿದಿವೆ. ಅವು
ದ್ವಿತೀಯ ಮುದ್ರಣದಲ್ಲಿ ಸರಿಗೊಳ್ಳುವಂತೆಯ ಹಸ್ತಪ್ರತಿಗಳಲ್ಲಿರುವ
ಇತರ ನಾಟಕಾದಿಗಳು ಸಹ ಮುದ್ರಿತವಾಗುವಂತೆಯ ಈ ಪುಸ್ತಕಕ್ಕೆ
ಉದಾರ ಪ್ರೋತ್ಸಾಹವನ್ತಿ ಯಬೇಕಾಗಿ ದೇಶಾಭ್ಯುದಯ ಕಾಂಕ್ಷಿಗಳೆಲ್ಲ
ರಲ್ಲಿ ಯೂ ಅಂಗಲಾಚಿ ಬೇಡಿಕೊಳ್ಳುವೆನು.
ಇತಿ ಸಕಲ ಸಜ್ಜನ ವಿಧೇಯ
ಕಾವ್ಯಕಲಾಮಂದಿರ ಉಡುಪಿ ).
ಪ್ರಮೋದ ವೈಶಾಖ, ಕೊರಡ್ಕಲ್ ಶ್ರೀನಿವಾಸರಾವ್.
--------------------------------------------------------------------------------------------------------------
ಆರೋಗ್ಯ ಪ್ರತಾಪ.
ಪ್ರಥ ಮಾಂಕ
ದೃ ಶ ೧, (ಪುಷ್ಪಾಂಜಲಿ).
ಪದ(ದೇವಿಯೋಲೆ , , , ಎಂಬಂತೆ) ತ್ರಿವುಡೆ ತಾಳ.
ನಮೋ ದೇವ-ಸುಮನರ ಕಾವ-ಕಾಮಿತ ಫಲವೀವ ||
ನಮಿಪೆವು ಈಶ-ಕ್ಷಮಿಸೆಮ್ಮ ದೋಷ-ವಿಮಲ ಮನವಾಸ
ನಮೊ ಶ್ರೀನಿವಾಸ-ಈಶ ||೧||
ಸರ್ವ ಭಯಹರ-ಸರ್ವಸುಖಕರ ತವರೂಪ ಭವ್ಯ-
ಮನಕತಿ ದಿವ್ಯ-ಸೇವ್ಯ || ೨ ||
ಪದ-(ಧನ್ಯ ಧನ್ಯ ವಿಬುಧಮಾನ್ಯ , , ಎಂಬಂತೆ) ರೂಪಕ ತಾಳ.
ದೇವ ದೇವ ಸುಮನ ಪ್ರಿಯ ಕರುಣಸಾಗರ | |
ದೀನಪಾಲ-ಭಯನಿವಾರ-ವಂದಿಸುವೆನು ದೇವ ನಿನ್ನ-ಸನ್ಮಾನದಿ
ನುಶಿಪೆ ನಿನ್ನ ಪ್ರೇಮಸಾಗರ ||೧||
ಶರಣು ಜನರ-ಪೂರೆವ ದೇವ ಸತತ ಸೌಖ್ಯದಾ | ಚಾರುಚರಣ
ದೆಡೆಗೆ ನಾನು ಶಿರವ ಬಾಗಿ ನಮಿಪೆ ದೇವ-ಪ್ರೇಮದಿಂದ
ಲೀಯೊ ನಮಗೆ-ಸದಾ ಮಂಗಲ ||೨||
ದೃಶ್ಯ ೨•
(ನಾರದ ಮಹರ್ಷಿಯು ಶ್ರೀಮನ್ನಾರಾಯಣನ ನಾಮ ಸಂಕೀರ್ತನೆ ಮಾಡುತ್ತ
ಪ್ರವೇಶಿಸುವನು).
(ಇಲ್ಲಿ ಯಾವುದಾದರೂ ನಾರಾಯಣ ಪರವಾದ ಪದವನ್ನು ಹಾಡತಕ್ಕದ್ದು).
-------------------------------------------------------------------------------
- 2 -
ಶ್ರೀಮನ್ನಾರಾಯಣನ ಅಪ್ಪಣೆಯ ಮೇರೆಗೆ ಭಾರತೇಯರ ಸ್ಥಿತಿ
ಗತಿಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಾಮಾನ್ಯ ಭಿಕ್ಷುಕ ವೇಷ
ಧಾರಿಯಾಗಿ ಭರತಖಂಡವನ್ನೆಲ್ಲ ಸಂಚರಿಸಿದೆನು. 'ಶರೀರಮಾದ್ಯಂ ಖಲು
ಧರ್ಮ ಸಾಧನಂ' ಎಂಬದು ಭಾರತೀಯರ ದೃಷ್ಟಿ ಪಥದಿಂದ ಅದೃಶ್ಯ
ವಾದಂತೆ ಕಾಣುವುದು. ಇಹಪರ ಸುಖಸಾಧನವಾದ ದೇಹಾರೋಗ್ಯದ
ಕಡೆಗೆ ಅವರು ತೀರ ಅಲಕ್ಷ್ಯ ಭಾವದಿಂದ ಇರುವರು. ಶರೀರಶಾಸ್ತ್ರ,
ಆರೋಗ್ಯ ಶಾಸ್ತ್ರ, ಇವುಗಳ ವಿಷಯಗಳಲ್ಲಿ ಅವರು ಕೇವಲ ಅಜ್ಞಾನಿ
ಗಳಾಗಿದ್ದು, ನೈಸರ್ಗಿಕ ಜೀವನ ಕ್ರಮವನ್ನು ತ್ಯಜಿಸಿ, ಕೃತಕ ಜೀವನ
ಮಾರ್ಗವನ್ನು ಕಲ್ಪಿಸಿಕೊಂಡು, ಮಾಡಬಾರದುದನ್ನು ಮಾಡಿ, ತಿನ್ನ
ಬಾರ ದುದನ್ನು ತಿಂದು, ಅಕಾಲ ಮೃತ್ಯುವಶರಾಗುತ್ತ ಅತಿ ಶೋಚನೀಯಾ
ವಸ್ಥೆಯಲ್ಲಿ ರುವರು. ಈ ವಿಷಯವನ್ನು ಶ್ರೀಮನ್ನಾರಾಯಣನ ಮುಂದೆ
ನಿವೇದಿಸುವೆನು. ಆತನು ಇವರ ಅಜ್ಞಾನ ನಿವಾರಣೆಗಾಗಿ ಯಾವ
ಉಪಾಯವನ್ನು ಕಲ್ಪಿಸುವನೋ ನೋಡೋಣ.
ಕೀರ್ತನ:- (ಇಲ್ಲಿಯ ನಾರಾಯಣ ಪರವಾದ ಯಾವುದಾದರೊಂದು ಪದ
ವನ್ನು ಹಾಡತಕ್ಕದ್ದು ).
----
ದೃಶ್ಯ ೩.
(ವೈಕುಂಠ ದ್ವಾರದಲ್ಲಿ ನಾರದನ ಪ್ರವೇಶ)
ಕೀರ್ತನ:-( ಇಲ್ಲಿ ಇನ್ನೊಂದು ಕೀರ್ತನೆಯನ್ನು ಹಾಡತಕ್ಕುದು ).
ಟಾನ್ಸ್ ವರ್ ಸೀನ್:- ( ಶೇಷಶಾಯಿಯಾದ ಶ್ರೀಮನ್ನಾರಾಯಣ!
ನಾರದನು ಮೊಣಕಾಲೂರಿ ಕೀರ್ತನವನ್ನು ಪೂರೈಸುವನು).
ನಾರಾಯಣ:-ನಾರದ, ಭರತಭೂಮಿಯನ್ನು ಸಂದರ್ಶಿಸಿ ಅಲ್ಲಿಯ
ಜನರ ಸ್ಥಿತಿಗತಿಗಳನ್ನು ವಿಮರ್ಶಿಸಿದೆಯಾ? ಜನ್ಮದ ಮುಖ್ಯ ಉದ್ದೇಶ
ವಾದ ಮೋಕ್ಷ ಸಾಧನೆಗೇಕೆ ಅವರು ವಿಮುಖರಾಗಿರುವರು?
ನಾರದ:-ದೇವಾಧಿದೇವ, ಏನೆಂದು ಹೇಳಲಿ! ಮೋಕ್ಷ ಸಾಧನೆಗೆ
ಎಷ್ಟೋ ತರದ ಪುಣ್ಯ ಕರ್ಮಗಳನ್ನು ಮಾಡಬೇಕು; ಆದರೆ ದೇಹಾ
ರೋಗ್ಯವಿಲ್ಲದೆ ಸದಾ ವ್ಯಾಧಿಪೀಡಿತರಾಗಿರುವವರಿಂದ ಎಂತಹ ಪುಣ್ಯ
-------------------------------------------------------------------------------
- 3 -
ಕರ್ಮವು ತಾನೆ ಸಾಧ್ಯವಾದೀತು? ಭಾರತೀಯರು ದೇಹದಾರ್ಡ್ಯತೆ
ಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವರು; ತರತರದ ರೋಗರುಜೆ
ಗಳಿಂದ ನರಳುತ್ತಿರುವರು. ಈ ರೀತಿಯಲ್ಲಿ ದೇಹಶಕ್ತಿಯನ್ನು ಕಳಕೊಂಡು
ತನ್ಮೂಲಕ ಮನೋಶಕ್ತಿಗೆ ದೌರ್ಬಲ್ಯವನ್ನು ತಂದುಕೊಂಡಿರುವ ಭಾರ
ತೇಯರಿಂದ ಎಂತಹ ಮೋಕ್ಷ ಸಾಧನೆಯಾದೀತು? ಸ್ತ್ರೀವರ್ಗಕ್ಕೆಂತೂ
ಆರೋಗ್ಯ ಶಾಸ್ತ್ರವೇನೆಂಬುದರ ತಿಳಿವೇ ಇಲ್ಲ. ಎಂದ ಮೇಲೆ ಇವ
ರಿಂದ ಪೋಷಿಸಲ್ಪಡುವ ಮಕ್ಕಳು ಎಷ್ಟೊಂದು ಯೋಗ್ಯ ರೀತಿಯಲ್ಲಿ
ಬಳೆ ದಾರು? ಇಂದಿನ ಶಿಶುಗಳೇ ನಾಳಿನ ಜನಾಂಗವಲ್ಲವೆ? ಇಂದಿನ ಜನಾಂಗ
ವೇ ಕ್ಷಯಿಸತೊಡಗಿರುವದರಿಂದ ನಾಳಿನ ಜನಾಂಗದ ಮಾತೆಲ್ಲಿ ? ದೇಹ
ಬಲವೂ, ಬಲಗೊಂಡ ದೇಹದ ಬುದ್ದಿ ಸಾಮರ್ಥ್ಯವೂ, ಜನಾಂಗದಲ್ಲಿ ನೆಲೆ
ನಿಲ್ಲದಿದ್ದರೆ ಸ್ವಾತಂತ್ರ್ಯದ ಮಾತಿಗೆ ಆಸ್ಪದವೆಲ್ಲಿ ? ನೀನೇನಾದರೂ ಉಪಾ
ಯದಿಂದ ಅವರ ಆರೋಗ್ಯ ರಕ್ಷಣೆಯ ಕಾರ್ಯವನ್ನು ಮಾಡದಿದ್ದರೆ
ಇನ್ನು ಕೆಲವು ವರ್ಷಗಳಲ್ಲಿ ಅವರಿಗೆ ಕೂತು ಏಳುವುದಕ್ಕೂ ಯಂತ್ರ
ಸಹಾಯವು ಬೇಕಾಗುವುದೋ ಏನೋ ಎಂಬ ಸಂಶಯವುಂಟಾಗಿದೆ.
ನಾರಾಯಣ:-ಹಾ! ನನ್ನ ಪ್ರಿಯ ಆರ್ಯಾವರ್ತವ ಇಂತಹ
ಸಂಕಷ್ಟಕ್ಕೆ ಗುರಿಯಾಗಿರುವುದೇ?
ಪದ-(ಪ್ರೇಮಸೇನಾ . . ಎಂಬಂತೆ) ಝಂಪೆ ತಾಳ.
ಪ್ರಿಯ ಆರ್ಯಾಧರೆಯೆ-ಮನ ಸಂತೋಷದ
ಪ್ರಿಯೆ-ನೆಲೆಯ-ಗೆಳೆಯ-ಯೆನ್ನಯ ಪ್ರಾಣವೆ ||
ತವ ಪುತ್ರರಿಗೆ ಕಷ್ಟವಾಗೆ ಯಿದೀವಾರ್ತ-ಬಹಳ
ಅನುತಾಪ-ಯತುನ ಗೈವ-ಪೊರೆವ || ೧ ||
ನಾರದ, ನೀನು ಹೇಳುವುದು ನಿಜ; ಜನಾಂಗದ ದೇಹಶಕ್ತಿಯನ್ನು ಅಳೆ
ಯುವ ಶಕ್ತಿಮಾಪಕ ಯಂತ್ರವು ಯಾವುದು? ತೊಟ್ಟಿಲು ತೂಗುವ
ತೋಳಲ್ಲವೆ? ಆ ರೆಟ್ಟೆಯನ್ನು ನೋಡಿದ ಮಾತ್ರದಿಂದ ಇಂದಿನ ಜನಾಂಗ
ವು ಹೇಗಿದೆ ಎಂದೂ ಮುಂದಿನ ಜನಾಂಗವು ಹೇಗಾದೀತೆಂದೂ ಕ್ಷಣ
ದಲ್ಲಿ ಹೇಳಬಹುದು. ಅಂತೆಯೇ ಸ್ತ್ರೀಯ ಬುದ್ದಿ ಶಕ್ತಿಯನ್ನು ನೋಡಿಯೇ
ಜನಾಂಗದ ಮಾನಸಿಕ ಬಲವನ್ನೂ ಅಳೆಯಬಹುದು. ಮಗುವನ್ನು ಜೋ
-------------------------------------------------------------------------------
- 4 -
ಗುಳಿಸುವ ತಾಯಿಯ ಮೆದುಳು ಜ್ಞಾನಮಯವಾಗಿದ್ದರೆ ಜನಾಂಗದಲ್ಲಿ
ಅಜ್ಞಾನವಾಗಲೀ ಮೂಢಭಕ್ತಿಯಾಗಲೀ ತಲೆಯೆತ್ತಲಾರದು, ಆದುದ
ರಿಂದ ಸ್ತ್ರೀಯರಲ್ಲಿ ಆರೋಗ್ಯ ಜೀವನದ ರಹಸ್ಯವು ನೆಲೆಯಾಗಿ ನಿಂತು
ಮಕ್ಕಳು ಅವರ ಸ್ತನಪಾನದೊಂದಿಗೇ ಆರೋಗ್ಯ ಜೀವನ ಕ್ರಮಗಳಲ್ಲಿ
ಪ್ರೀತಿ ವಿಶ್ವಾಸಗಳನ್ನೂ ಅನಾರೋಗ್ಯ ಕ್ರಮಗಳಲ್ಲಿ ಜಿಗುಪ್ಪೆಯನ್ನೂ
ಹೀರುವಂತೆ ಮಾಡಬೇಕು. ತಾಯಿಯ ಮೊಲೆ ಹಾಲೋಂದಿಗೇ ಆರೋಗ್ಯ
ಜೀವನದ ಕ್ರಮವು ಮಕ್ಕಳ ಮೈಗೆ ಹಿಡಿದು ಹೋದರೆ ಮಾತ್ರ
ಮುಂದಿನ ಜನಾಂಗವನ್ನು ಇಂದೇ ಸಿದ್ಧ ಪಡಿಸಿದಂತಾಗುವುದು. ಇದೊಂ
ದು ಮಹತ್ಕಾರ್ಯವಾಗಿದೆ. ಇದಕ್ಕಾಗಿ ನೀನು ಭೂಲೋಕದಲ್ಲಿ ಜನ್ನ
ವೆತ್ತಬೇಕು, ಇತರ ದೇವರ್ಷಿಗಳೂ ದೇವತೆಗಳೂ ಕೆಲವರು ಗಂಡುಸ
ರಾಗಿಯೂ, ಕೆಲವರು ಹೆಂಗುಸರಾಗಿಯೂ, ಭರತ ಭೂಮಿಯಲ್ಲಿ ಜನ್ಮ
ವೆತ್ತಿ ಆರೋಗ್ಯ ಪ್ರಚಾರ ಕಾರ್ಯವನ್ನು ನಿರ್ವಹಿಸಬೇಕಾಗಿದೆ, ಎಲ್ಲೆಲ್ಲಿ
ದೇಹಶಾಸ್ತ್ರ ಆರೋಗ್ಯಶಾಸ್ತ್ರ ಇವುಗಳ ವಿಷಯ ಅಜ್ಞಾನವು ತಲೆದೋರಿ
ರುವುದೋ ಅಲ್ಲೆಲ್ಲ ಅನೇಕಾನೇಕ ಉಪಾಯಗಳಿಂದ ಜ್ಞಾನಪ್ರಚಾರ
ವಾಗತಕ್ಕದ್ದು. ಭಾರತಿಯು ತನ್ನ ಪುತ್ರರ ಹೀನದೆಶೆಯನ್ನು ಕಂಡು,
ಕಣ್ಣೀರಿಡುತ್ತಿರುವಳು. ಅದನ್ನು ಕಂಡು ನಾನು ಸುಮ್ಮನಿರಲಾಪನೆ?
ಆದುದರಿಂದ, ನಾರದ! ನೀನೇ ಈ ಕಾರ್ಯಕ್ಕೆ ಮುಂದಾಳಾಗಿ ಭರತ
ಭೂಮಿಯಲ್ಲಿ ಆರೋಗ್ಯ ಪ್ರತಾಪ'ನೆಂಬ ಹೆಸರಿಂದ ಆರೋಗ್ಯ ದಿಗ್ವಿಜಯ
ವನ್ನೆ ಸಗಬೇಕೆಂದು ನನ್ನ ಅಪೇಕ್ಷೆ. ಇದಕ್ಕೇನೆನ್ನುವೆ?
ನಾರದ: - ದೇವಾ, ನಿನ್ನ ಅಪೇಕ್ಷೆಯನ್ನು ನೆರವೇರಿಸುವುದೇ ನನಗೆ
ಪರಮಾನಂದ; ದೇವರ್ಷಿಗಳೂ ಮಹರ್ಷಿಗಳೂ ದೇವತೆಗಳೂ ಭರತ
ಭೂಮಿಯಲ್ಲಿ ಜನ್ಮವೆತ್ತುವರು; ನಾನು ಅಲ್ಲಿ ಜನ್ಮವೆತ್ತಿ ಅವರೊಡಗೂಡಿ
ಆರೋಗ್ಯ ದಿಗ್ವಿಜಯದ ಕಾರ್ಯವನ್ನು ಕೈಕೊಳ್ಳುವೆನು. ನಿನ್ನ ಪರ
ಮಾನುಗ್ರಹಕ್ಕೆ ಪಾತ್ರರಾಗುವಂತೆ ನಾವೆಲ್ಲರೂ ಸರ್ವ ಪ್ರಯತ್ನಗಳನ್ನು
ಮಾಡುವೆವು. ನಿನ್ನ ಆಶೀರ್ವಚನದ ಬೆಂಬಲವು ನಮಗಿರಲಿ! (ಎಂದು
ನಮಸ್ಕರಿಸುವನು).
--------------------------------------------------------------------------
-5-
ನಾರಾಯಣ:- ಪದ (ಮಾನಭಂಗದಾ , , ಎಂಬಂತೆ) ಆದಿ ತಾಳ.
ಪೊಗು ನಾರದ-~ಯೀ-ಧರೆಯಾ-ಜನರಾ |
ಭಾರಿ ರೋಗವ-ದೂಡಿ- ದಿನರಾ-ಪೊರೆಯೊ ||
ಮನದಲಿ ಶಾಂತಿ-ಸ್ಟಾಪಿತ-ವಹದೀ-ತೋಪಾ || ೧ ||
ದೃಶ್ಯ ೪
( ಆರೋಗ್ಯ ಪ್ರತಾಪನ ದರ್ಬಾರ- ಆರೋಗ್ಯ ಪ್ರಚಾರ ಕಾರ್ಯದ ದಳದವ
ರಾದ ಆರೋಗ್ಯ ಮಾತೆ, ಆರೋಗ್ಯ ಸು೦ದು, ರೋಗಾಂತಕ, ಆರೋಗ್ಯ ಪಾಲಕ
ಮುಂತಾದ ಸಭಿಕರು ಕುಳಿತಿರುವರು).
ಆರೋಗ್ಯ ಪ್ರತಾಪ:- ಪದ-ರಾಗ-ತುವಾರಿ,
(ಖರತೋ ಪ್ರೇಮ , .... ಎಂಬಂತೆ) ತಾಳ ಪಂಜಾಬಿ,
ಸ್ತ್ರೀ ಪಾಲಕರೇ ಮಾಡಿರಿ ಬಹು ಯತುನ |
ಮನೆ ಮನೆಗಳ ಸಂ | ದರ್ಶಿಸಿ ಸಾರಿರಿ | ಸುಖದಲಿ
ಯಿಹ ಬಗಯ || ೧ || ಶಿಶುಗಳು ಸುಖಸಂ | ತೋಷದಿ
ಬಾಳುವ | ಕ್ರಮವನ್ನು ತಿಳುಹುತಲಿ ||೨||
ಈ ಭರತ ಖಂಡದಲ್ಲಿ ಆರೋಗ್ಯ ಪ್ರಚಾರದ ಮಹಾ ಕಾರ್ಯವನ್ನು
ನಾನು ಹೊತ್ತಿರುವೆನು. ಆದರೆ ಈ ಕಾರ್ಯಕ್ಕೆ ನಾನು ಬರೇ ಮಾರ್ಗ
ದರ್ಶಿಯು. ಕಾರ್ಯವೆಲ್ಲವೂ ಆರೋಗ್ಯ ಪ್ರಚಾರಕ ಮಂಡಳಿಯವ
ರಾದ ನಿಮ್ಮಿಂದಲೇ ಆಗತಕ್ಕದ್ದು, ಪ್ರಕೃತ ಶಿಶುಸಪ್ತಾಹವನ್ನು ಪ್ರತಿ
ಯೊಂದು ಪಟ್ಟಣದಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಆಚರಿಸು
ವಂತೆ ಜನತೆಗೆ ಪ್ರೋತ್ಸಾಹಗೊಟ್ಟು, ಅದರ ಪ್ರಯೋಜನವನ್ನು ಬೋಧಿಸಿ,
ಅವರ ಸಹಾನುಭೂತಿಯನ್ನು ಪಡೆದು, ಆ ಕಾರ್ಯವು ಸಾಂಗವಾಗಿಯೂ
ಸಫಲವಾಗಿಯೂ ನೆರವೇರುವಂತೆ ಮಾಡುವುದೇ ನಮ್ಮ ಪ್ರಥಮ ಕರ್ತವ್ಯ..
ಈ ಮಂಡಳಿಯ ಸ್ತ್ರೀ ದಳವು ವಿಶೇಷತಃ ಸ್ತ್ರೀಯರ ಅಜ್ಞಾನ ಅವರ
ಮೂಢ ಭಕ್ತಿ, ಅವರ ಅನಾರೋಗ್ಯಕರವಾದ ಜೀವನ ಕ್ರಮ ಇವುಗಳನ್ನು
ಹೋಗಲಾಡಿಸಿ, ಶಿಶುಪಾಲನೆಯು ಯೋಗ್ಯ ರೀತಿಯಲ್ಲಿ ನಡೆಯುವಂತೆ
ತಕ್ಕಷ್ಟು ಜ್ಞಾನಪ್ರಚಾರವನ್ನು ಮಾಡತಕ್ಕದ್ದು. ಈ ಮಂಡಳಿಯ
----------------------------------------------------------------------------
-೬-
ಪುರುಷರೆಲ್ಲರೂ ಮಿಕ್ಕುಳಿದವರಲ್ಲಿ ಆರೋಗ್ಯಾಭಿಲಾಷೆಯನ್ನು ಹೆಚ್ಚಿಸಿ,
'ಆರೋಗ್ಯ ಭಾಗ್ಯವೇ ಭಾಗ್ಯ'ವೆಂದು ಜನರು ತಿಳಿದುಕೊಂಡು ಅದನ್ನು
ಗಳಿಸಿಕೊಳ್ಳುವ ವಿಷಯದಲ್ಲಿ ವಿಶೇಷ ಜಾಗ್ರತರಾಗುವಂತೆ ಮಾಡಿರಿ.
ಕೆಲವೆಡೆಗಳಲ್ಲಿ ಶಿಶು ಸಪ್ತಾಹವೆಂದು ಮಾಡುವರು.:'ಆ ಇಲಿಯನ್ನು
ಹಿಡಿಯಿರಿ, ಈ ನುಶಿಯನ್ನು ಕೊಲ್ಲಿರಿ' ಎಂದು ವಿಜಾತೀಯ ಭಾಷೆಯ
ಜಾಹೀರಾತುಗಳನ್ನೋ ಚಿತ್ರಪಟಗಳನ್ನೂ ಎತ್ತಿ ಹಿಡಕೊಂಡು ಪೇಟಿ
ಗೊಂದು ಸುತ್ತು ಮೆರವಣಿಗೆ ಬಂದ ಮಾತ್ರದಿಂದ ಶಿಶುಸಪ್ತಾಹವಾಗಲಿಲ್ಲ.
ನಲ್ಲಿಯ ನೀರಿನ ಉಪಯೋಗವಿಲ್ಲದ ಸ್ಥಳಗಳಲ್ಲಿ, ಪ್ಲೇಗು ರೋಗದ
ಸೋಂಕು ತಗಲದ ಕಡೆಗಳಲ್ಲಿ, ಆ ವಿಷಯಗಳ ಕುರಿತು ಮಾಯಾ
ಲಾಂದ್ರ ಪ್ರದರ್ಶನ ಮಾಡಿದರೂ ಪ್ರಯೋಜನವಿಲ್ಲ. ಬೆರಳು ಮಡಚು
ವಷ್ಟು ಮಕ್ಕಳಿಗೆ ಬೆಳ್ಳಿಯ ಲೋಟೆಗಳನ್ನು ಹಂಚಿ ಶಿಶು ಪ್ರದರ್ಶನವೆಂತ
ಮಾಡಿದರೂ ಸಾರ್ಥಕವಿಲ್ಲ. ಅಲ್ಪ ಸ್ವಲ್ಪ ಜನರಿಗೆ ಆರೋಗ್ಯ ಸಂಬಂಧ
ವಾದ ಒಂದೆರಡು ಉಪನ್ಯಾಸಗಳನ್ನು ಕೊಟ್ಟರೂ ಶಿಶು ಸಪ್ತಾಹವು
ಸಾಂಗವಾಯಿತೆಂದು ನಾವು ತಿಳಿಯಕೂಡದು. ಟಿಕೇಟು ಇಟ್ಟು ಆರೋ
ಗ್ಯ ವಿಷಯವಾದ ನಾಟಕಗಳನ್ನು ಆಡುವುದು ಶಿಶು ಸಪ್ತಾಹದ ಉದ್ದೇಶ
ವಲ್ಲ. ವರುಷಕ್ಕೊಂದು ವಾರ ಕಣ್ತೆರೆದಂತೆ ನಟಿಸಿ ಅನಂತರ ಕುಂಭ
ಕರ್ಣನೊಡನೆ ದೀರ್ಘ ನಿದ್ರಾ ಸ್ಪರ್ಧೆಗಿಳಿಯುವುದೂ ಲೇಸಲ್ಲ. ಇವು
ಗಳೆಲ್ಲಾ ಶಿಶು ಸಪ್ತಾಹದ ವರದಿಯನ್ನು ಅಲಂಕರಿಸುವುದಕ್ಕೆ ಮಾತ್ರ-
ಪ್ರಶಸ್ತಿ ಪತ್ರಿಕೆಗಳನ್ನೂ ಬಿರುದು ಬಾವಲಿಗಳನ್ನೂ ಹೊಂದುವುದಕ್ಕೆ
ಮಾತ್ರ ಮಾಡುವ ಕಣ ಕಟ್ಟಿನ ಆಟಗಳಾಗುವುವಲ್ಲವೆ? ಇವುಗಳಿಂದ
ಜನತೆಗಾಗುವ ಪ್ರಯೋಜನವು ಅಷ್ಟಷ್ಟೆ. ಮಾತ್ರವಲ್ಲದೆ ಇಂತಹವು
ಗಳ ದೆಸೆಯಿಂದ ಜನತೆಯಲ್ಲಿ ಶಿಶು ಸಪ್ತಾಹದ ಪ್ರಯೋಜಕತೆಯ ಕುರಿತು
ಅವಿಶ್ವಾಸವುಂಟಾಗಿ ನಮ್ಮ ಕಾರ್ಯಕ್ಕೆ ತಡೆಗಟ್ಟಿದಂತಾಗುವುದು. ಕೆಲ
ವರು ಇಂತಹ ಶಿಶು ಸಪ್ತಾಹಗಳನ್ನು ಕುರಿತು ಗೇಲಿ ಮಾಡುವರು. ಅದು
ಕಾರಣ ನಿಮ್ಮ ಕಾರ್ಯನಿರ್ವಾಹದಲ್ಲಿ ಇಂತಹ ಕುಂದುಗಳು ತಲೆದೋರ
ದಿರಲಿ. ಈಗ ಶಿಶು ಸಪ್ತಾಹದ ಮುಖ್ಯ ಲಕ್ಷಣಗಳನ್ನು ಹೇಳುವೆನು;
ಅವುಗಳನ್ನು ಲಕ್ಷ್ಮದಲ್ಲಿಟ್ಟು ಕೊಂಡು ನೀವು ಕಾರ್ಯನಿರತರಾದರೆ ನನಗೂ
--------------------------------------------------------------------------------
- 7 -
ನಿಮಗೂ, ದೇಶಕ್ಕೂ ಖ್ಯಾತಿಯಿದೆ. ನೋಡಿ, ಇಂದಿನ ಶಿಶುಗಳೇ ನಾಳಿನ
ಜನಾಂಗ; ತೊಟ್ಟಿಲು ದೂಗುವ ರಟ್ಟೆಯಲ್ಲಿ ಶಕ್ತಿ ಇದ್ದರೆ ರಾಷ್ಟ್ರದಲ್ಲಿ
ಶಕ್ತಿಯಿದೆ. ಈ ಮಾತುಗಳನ್ನು ಮರೆಯಬೇಡಿರಿ, ಎಂದಿನ ತನಕ ಸ್ತ್ರೀ
ಯರಿಗೆ ಆರೋಗ್ಯ ಶಾಸ್ತ್ರದ ವಿಷಯ, ಗರ್ಭಿಣಿ ರಕ್ಷ ಣೆಯ ವಿಷಯ, ಶಿಶು
ಪಾಲನೆಯ ವಿಷಯ, ಸಾಮಾನ್ಯ ಚಿಕಿತ್ಸೆಗಳ ವಿಷಯ, ಅಗಾಧವಾದ
ಅಜ್ಞಾನವಿರುವುದೋ ಅಂದಿನ ವರೆಗೆ ದೃಢಕಾಯರಾದ ಮಕ್ಕಳಿಂದ
ದೇಶವು ಶೋಭಿಸಲಾರದು; ಇಂದು ದೃಢಕಾಯರಾದ ಮಕ್ಕಳಿಲ್ಲದಿದ್ದರೆ
ನಾಳೆ ಜನಾಂಗವಿಲ್ಲ; ಆದುದರಿಂದ ಪದೇ ಪದೇ ಬೀದಿ ಬೀದಿಗಳಲ್ಲಿ ಹಳ್ಳಿ
ಪಳ್ಳಿಗಳಲ್ಲಿ ಸ್ತ್ರೀಯರಿಗೆ ಈ ವಿಷಯವಾದ ಉಪನ್ಯಾಸಗಳನ್ನು ಕೊಡ
ಬೇಕು. ಆರೋಗ್ಯ ವಿಷಯವಾದ ಭಾಷಣಗಳು ನಿರಸವಾಗುವ ಕಾರಣ
ನಡುನಡುವೆ ಹಾಡುಗಳನ್ನು ಹಾಡಿ ಹರಿಕಥೆಯ ರೂಪವಾಗಿ, ಭಜನಾ
ರೂಪವಾಗಿ ನಾಟಕ ರೂಪವಾಗಿ, ಮಾಯಾಲಾಂದ್ರ ಪ್ರದರ್ಶನ ರೂಪ
ವಾಗಿ, ಚಿತ್ರಪಟ ಮುಂತಾದ ವಸ್ತುಪ್ರದರ್ಶನ ರೂಪವಾಗಿ ಆರೋಗ್ಯ
ಸೂತ್ರಗಳನ್ನೂ, ಶಿಶುಪಾಲನೆಯ ಕ್ರಮಗಳನ್ನೂ ಜನಸಾಮಾನ್ಯಕ್ಕೆ ಮಂದ
ಟ್ಟಾಗುವಂತೆ ಪ್ರಚಾರ ಮಾಡಬೇಕು. ಸ್ತ್ರೀಯರಿಗಂತೂ ಹಾಡುಗಾರಿಕೆ
ಯ ಮೇಲಿನ ಪ್ರೀತಿಯು ಸಹಜವಾಗಿಯೇ ಇದೆ. ಅದನ್ನೇ ನಾವು
ಬೆಂಬಲವಾಗಿ ಮಾಡಿಕೊಂಡು ಆರೋಗ್ಯ ಸೂತ್ರಗಳ, ಶಿಶುಪಾಲನೆಯ,
ರೋಗನಿವಾರಣೆಯ, ಕುರಿತಾಗಿ ಸುಲಭ ಶೈಲಿಯಿಂದ ಹಾಡುಗಳನ್ನು
ಕಟ್ಟಿ ಸಿ ಛಾಪಿಸಿ ಪ್ರತಿಯೊಂದು ಸ್ತ್ರೀಯ ಕೈಗೆ ಹಾಕಲೇ ಬೇಕು. ಹೀಗೆ
ಆರೋಗ್ಯ ವಿಷಯವಾದ ಜೋಗುಳ ಹಾಡುಗಳು ತಾಯಿಯ ಮನಸ್ಸಿ
ನಲ್ಲಿಯೂ ಕಾರ್ಯದಲ್ಲಿಯೂ ಮೂರ್ತಿಮತ್ತಾಗಿ ಮಗುವಿನ ತೊಟ್ಟಿಲ ಬಳಿ
ಯಲ್ಲಿ ಹೊರಬಿದ್ದು ದಾದರೆ ಶಿಶುವಿಗೆ ಆರೋಗ್ಯ ಜೀವನ ಕ್ರಮದಲ್ಲಿ
ಪ್ರೀತಿಯ ಅನಾರೋಗ್ಯ ಕ್ರಮದಲ್ಲಿ ಜಿಗುಪ್ಪೆಯ ಶೈಶವದಲ್ಲೇ
ಉಂಟಾಗಿ ಸ್ತನಪಾನದಂತೆ ಮೈಗೆ ಹಿಡಿದು ಹೋಗುವುದು, ಈ ತರದ
ಮನೋ ವೃತ್ತಿಯುಳ್ಳ ಜನತೆಯನ್ನು ಸಿದ್ಧಗೊಳಿಸಿದರೆ ಅನಂತರ ನಿಮ್ಮ
ಕಾರ್ಯವು ಸುಗಮವಾಗುವುದು. ಆದರೆ ಆ ತನಕ ನೀವು ಅವಿಶ್ರಾಂತ
ಕಾರ್ಯ ತತ್ಪರರಾಗಿರಲೇ ಬೇಕಾಗಿದೆ. ನಮ್ಮ ಸ್ತ್ರೀ ದಳದವರು ಮನೆ
----------------------------------------------------------------------------
- 8 -
ಮನೆಗೆ ಹೋಗಿ ಅಲ್ಲಿಯ ಸ್ತ್ರೀಯರಿಗೆ ಉಪದೇಶಿಸಬೇಕಾಗುವುದು. ಅಂತಹ
ಸಂದರ್ಭದಲ್ಲಿ ಅಲ್ಲಿಯ ಗೃಹಿಣಿಯರ ಅಜ್ಞಾನವನ್ನು ಕಂಡು ಪರಿಹಾಸ್ಯ
ಗೈಯಬಾರದು. ಅವರಲ್ಲಿ ಸಹಾನುಭೂತಿಯನ್ನು ತೋರಿಸಿ, ಅವರಲ್ಲಿ
ವಿಶ್ವಾಸವನ್ನು ಹುಟ್ಟಿಸಿ, ನೀವು ಅವರ ಗೆಳತಿಯರೆಂದು ತಿಳಿವಂತೆ ವರ್ತಿಸಿ
ಅವರ ಅಜ್ಞಾನವನ್ನು ಹೋಗಲಾಡಿಸಬೇಕು. ಅವರ ಅನಾರೋಗ್ಯಗಳ
ವಿಷಯ, ಅವರು ನಿಮ್ಮೊಡನೆ ಹೇಳುವ ಸಂಗತಿಗಳನ್ನು ನೀವು ಬಹಿರಂಗ
ಪಡಿಸಬಾರದು. ಈಗ ನಾನೆಂದಂತೆ ನೀವು ವರ್ತಿಸಿದರೆ ಪ್ರತಿಯೊಬ್ಬ
ಗೃಹಿಣಿಯೂ ನಿಮ್ಮ ಆಗಮನಕ್ಕೆ ಸುಸ್ವಾಗತವನ್ನಿಯದಿರಲಾರಳು. ನೀವು
ಕೈಕೊಂಡ ಕಾರ್ಯದಲ್ಲಿ ಈ ರೀತಿ ಜನತೆಯ ಸಹಾನುಭೂತಿಯನ್ನೂ
ಗೌರವವನ್ನೂ ಪ್ರೇಮವನ್ನೂ ಸಂಪಾದಿಸುವುದು ನಿಮ್ಮ ಕೈಯಲ್ಲೇ ಇದೆ.
ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟು ಕೊಂಡು ಕಾರ್ಯರಂಗದಲ್ಲಿ ಕಾಲಿಡಿರಿ.
ಆಗ ನಿಜವಾಗಿಯೂ ಆರೋಗ್ಯ ದಿಗ್ವಿಜಯವು ಆಗಿಯೇ ಆಗುವುದು.
ನಾವು ನಮ್ಮ ಕಾರ್ಯದಲ್ಲಿ ವಿಶೇಷ ವಿಜಯಿಗಳಾದರೆ ಯಮಧರ್ಮ
ರಾಜನೂ ಕೂಡ ತನ್ನ ಶೈಮಿನೀ ಪುರಕ್ಕೆ ಎಂದಿನಂತೆ ಜನರೇಕೆ ಗುಂಪು
ಗುಂಪಾಗಿ ಬರುವುದಿಲ್ಲ ಎಂದು ಆಶ್ಚರ್ಯ ಚಕಿತನಾಗಲೇ ಬೇಕು. ಇವೆಲ್ಲ
ವನ್ನೂ ಲಕ್ಷದಲ್ಲಿಟ್ಟು ಕೊಂಡು ಕಾರ್ಯತತ್ಪರರಾಗಿರಿ.
ಪದ- ಸ್ವಕುಲ ತಾರಕ . . . ಎಂಬಂತೆ) ತ್ರಿವಟಿ,
ಯತುನ ಗೈಯುರಿ ಸದಾ-ಜಗದಾ | ಜನತೆ ಪಾಸದ ಮಾರ್ಗವ ನೀಗಿ ||
ಸುಖವಿಲಾಸಪಿ ! ಬದುಕುವ ರೀತಿ | ದೇಹಾರೋಗ್ಯ ಲಭಿಸಲು ನೀವ್ ||.
ದೃಶ್ಯ ,5 ೫
(ರಂಗರಾಯನ ಮನೆ)
(ಮುನ್ಸಿಫ್ ಕೋರ್ಟು ಗುಮಾಸೆಯಾದ ರಂಗರಾಯನ ಹೆಂಡತಿಯು ಶಿಶುಪ್ರದ
ರ್ಶನಕ್ಕೆ ತನ್ನ ಮಗುವನ್ನು ಕಂಡುಹೋಗುವಳೆಂದು ಪೂರ್ವಾಚಾರ ಸಂಪ್ರದಾಯದ
ಆಕೆಯ ಅತ್ತೆ ಗೌರಮ್ಮ ನು ಸಿಟ್ಟುಗೊಂಡು ಪ್ರವೇಶಿಸುವಳು.) .
ಗೌರಮ್ಮ:- ನಾಲ್ಕು ದಿವಸಗಳಿಂದ ಮನೆಯೆಲ್ಲ ಗಲಾಟೆ! ಸೊಸೆಯ
ತಲೆ ತಿರುಗಿ ಹೋಗಿದೆ! ಇಷ್ಟೆಲ್ಲಾ ಗೊಂದಲವಾದರೂ ಏಕೆ? ಇಂದು
--------------------------------------------------------------------------
- ೯ -
ನಮ್ಮ ಪುಟ್ಟು ಮರಿಯನ್ನು ಎಲ್ಲೋ ಒಂದು ಸಭೆಯಲ್ಲಿ ಪ್ರದರ್ಶನ ಮಾಡ
ಲಿಕ್ಕಿದೆಯಂತೆ! ಬಹುಮಾನ ಸಿಗುವ ಸಂಭವವಂತೆ! ಇಂದು ಆ ಬಹುಮಾನ;
ನಾಳೆ ನನ್ನ ಪ್ರಾಣಕ್ಕೆ ಸಂಚಕಾರ! ರಂಗನಿಗೂ ಈ ಮರುಳು ಎಂದು ಹಿಡಿ
ಯಿತೋ ಏನೊ! ಅವನು ಏನು ಹೇಳಿದನೊ; ಇವಳೀಗ ಕುಣಿಯತೊಡಗಿ
ದ್ದಾಳೆ. ಅಬ್ಬಬ್ಬಾ! ಏನು ವೈಯ್ಯಾರ!
ಪದ-ಆದಿತಾಳ,
ಏನಿದುವೈಯಾರದಗಲಭೆ | ಮಾನಿನಿಮಾನವ ಮಾರುವುದಿದುವೆ |
ಗಂಡು ಬೀರುಗಳಂತೆ ಸತಿಯರ | ಪೋಗಲುಬಿಡುವರದಂತಹ ಜನರೈ! || ೧ ||
ಇಂತಹ ನಾಚಿಕೆಗೇಡು ಕೆಲಸಕ್ಕೆ ರಂಗನೂ ಏಕೆ ಕೈಹಾಕಿದನೆಂದು ತಿಳಿ
ಯಲೇಬೇಕು. (ಎಂದು ರಂಗನಿರುವ ಕೋಣೆಗೆ ಹೋಗುವಳು.)
------...
ದೃ ಶ್ಯ ೬.
(ರಂಗನ ಆಫೀಸುಕೋಣೆ-ರಂಗನು ಬರೆಯುತ್ತಿರುವನು. ಗೌರಮ್ಮ ನು ಪ್ರವೇ ಶಿಸುವಳು.)
ಗೌರಮ್ಮ:-ರಂಗ, ಆ ಕೆಲಸವನ್ನೆಲ್ಲ ನಿನ್ನ ಹೆಂಡತಿಗೆ ಒಪ್ಪಿಸಿಬಿಡು,
ಇನ್ನು ಮುಂದೆ ನಿನ್ನ ಕೆಲಸ-ಅಡಿಗೆ ಮಾಡುವುದು, ಮುಸರೆ ತಿಕ್ಕುವುದು,
ಮಕ್ಕಳ ಚಾಕರಿ! ಆ ಕೋರ್ಟಿನ ಗುಮಾಸ್ತೆ ಅವಳೇ ನೋಡಲಿ!
ಪದ-(ಜಯಸಲೇಜಗವೀಗಲಿ . . . ಎಂಬಂತೆ) ಆದಿತಾಳ.
ನಡೆಯೆಲೊ ಒಳಗೀಗಲೆ 1 ಬಲುಪೇಚಾಟವಿದೇತಕ ಸಾರು || ಪ !!
ಸಸೂತ್ರಗೈಯುವಳಿದೆಲ್ಲ ವ | ನಿನ್ನಯ ಪಿಯುನಿಸ್ಸಂಶಯ |
ತಡೆಯದೆ-ನುಡಿಯದೆ-ನಡೀಗಲೆ ||
ರಂಗ:- ಅಮಾ, ಏನೆನ್ನುವೆ? ನನಗೇನೂ ಅರ್ಥವಾಗುವುದಿಲ್ಲ.
ಗೌರಮ್ಮ:- ಅರ್ಥವಾಗದು, ಅರ್ಥವಾಗದು! ಆಗುವುದಾದರೂ
ಹೇಗೆ? ಅದೂ ಈ ಹೆಂಗಸರೊಳಗಿನ ಗಂಡಸರ ಕಾಲದಲ್ಲಿ!
ರಂಗ:- ಅಮ್ಮಾ, ನೀನು ಹೇಳುವುದನ್ನೆಲ್ಲ ಕೇಳುತ್ತೇನೆ, ಕೂತುಕೊ,
ಸಾವಧಾನವಾಗಿ ಹೇಳು, ಅವಳೇನು ಮಾಡಿದಳು? ಅವಳಿಗೆ ತಕ್ಕ ಶಿಕ್ಷೆ
ಕೊಡುತ್ತೇನೆ. (ಗೌರಮ್ಮ ನು ಅಲ್ಲೇ ಒಂದು ಬೆಂಕಿಯ ಮೇಲೆ ಕುಳಿತುಕೊಳ್ಳುವಳು.)
-------------------------------------------------------------------------------------
- 10 -
ಗೌರಮ್ಮ:- ಅವಳು ಮಾಡುವುದೇನೆಂದು ಹೇಳಬೇಕೆ? ಈಗ ನಾ
ಲ್ಕಾರು ದಿವಸಗಳಿಂದ ಆಗಾಗ ಮನೆಯಲ್ಲೇ ಇಲ್ಲ. ಏನೋ ಒಂದು
ಆಂ........ಆ ಸುಟ್ಟ ಹೆಸರು ನನ್ನ ಬಾಯಿಗೆ ಬರುವುದಿಲ್ಲ, ಇಂದು ಏನೋ
ಅಲ್ಲಿ, ಎಲ್ಲರೂ ಹೋಗುತ್ತಾರಂತೆ, ಏನದು?
ರಂಗ:-ಬೇಬೀ ಶೋ (Baby show).
ಗೌರಮ್ಮ:- ಹೂಂ. ಅದೇ, ಅದಕ್ಕೆ ಹೋಗಲಿಕ್ಕೆ ಸನ್ನಾಹವಂತೆ!
ಬೆಳಗ್ಗಿನಿಂದ ನೋಡುತ್ತೇನೆ. ಅವಳಿಗೆ ಮನೆಗೆಲಸಕ್ಕೆ ಬಿಡುವೇ ಇಲ್ಲ. ಹಲ್ಲು
ಉಜ್ಜಲಿಕ್ಕೆ ಒಂದು ಗಂಟೆ! ಸ್ನಾನದಲ್ಲಿ ತಾಯಿ ಮಕ್ಕಳಿಗೆಂದು ಒಂದು
ಉಂಡೆ ಸಾಬೂನೇ ಮಾಯವಾಯಿತು! ಅನಂತರ ಆ ಪೌಡ್ರು-ಬೂದಿ
ಬಡುಕರಂತೆ ವೇಷ. ಇನ್ನು ತಲೆ ಬಾಚುವ ಸಂಭ್ರಮ --- ಎದುರಲ್ಲಿ ಕನ್ನಡಿ,
ಕೂದಲಿಗೊಂದು ಅಂಟಿನಲೇಪ, ಒಮ್ಮೆ ಎಲ್ಲಾ ಮೇಲಕ್ಕೆ ಬಾಚಿಯಾಯಿತು;
ಅನಂತರ ಎಡದಿಂದ ಬಲಕ್ಕೆಬಲದಿಂದ ಎಡಕ್ಕೆ! ಕುತ್ತಿಗೆ ಓರೆಓರೆಮಾಡಿ
ಕನ್ನಡಿಯಲ್ಲಿ ನೋಡಿಯಾಯಿತು. ಸರಿಯಾಗಲಿಲ್ಲವೆಂದು ಪುನಃ ಮೇಲ್ಮುಖ,
ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ! ನನ್ನ ಹತ್ತಿರ ಹೇಳುತ್ತಿದ್ದರೆ ಒಂದೇ
ಒಂದು ಕ್ಷಣದಲ್ಲಿ ಹೆರಳುಹಾಕಿ ಬಿಡುತ್ತಿದ್ದೆ! ಆ ಮೇಲೆ ಆ ಮಗುವಿಗೆ
ಇದ್ದ ಅಂಗಿ ಇಜಾರುಗಳನ್ನೆಲ್ಲಾ ಒಂದೊಂದಾಗಿ ತೊಡಿಸಿಯಾಯಿತು,
ನೋಡಿಯಾಯಿತು, ತೆಗೆದುಹಾಕಿಯೂ ಆಯಿತು! ಪುನಃ ಎರಡನೆಯ
ಸರ್ತಿಗೆ ಪ್ರಾರಂಭ, ತನ್ನ ಶೀರೆಕುಪ್ಪಸಗಳಿಗೂ ಎರಡನೆಯ ಸರ್ತಿಯ
ಸೇವೆ ನಡೆಯುತ್ತಿದೆ! ಇಷ್ಟೆಲ್ಲಾ ಗೊಂದಲವು ಅಲ್ಲಿಗೆ, ಆ ಸಭೆಗೆ ಹೋಗ
ಲಿಕ್ಕಂತೆ! ಅದಕ್ಕೇ ಹೇಳಿದ್ದು ಆ ಸಭೆ, ಆ ಲೆಚ್ಚರು, ಅವುಗಳಿಗೆಲ್ಲ ಅವಳು
ಹೋಗಲಿ, ನೀನು ಒಲೆಯ ಮುಂದೆ ಕೂತುಕೊ-ಎಂದು.
ರಂಗ:-ಅವಳು ಮಾಡಿದ್ದೇನೋ ಅತಿರೇಕವಾಯಿತು; ನಾನೂ
ಒಪ್ಪುತ್ತೇನೆ. ಅಷ್ಟೆಲ್ಲಾ ಬೇಕಾಗಿದ್ದಿಲ್ಲ. ಆದರೆ.....
..
ಗೌರಮ್ಮ:-- ಬಂತು! ನಿನ್ನ ಆ--ದ-ರೆ! ಅವಳ ವಿಷಯ ಏನೇ
ಹೇಳಲಿ; ತೊಡಗಿದೆ---ಅವಳು ಮಾಡಿದ್ದು ತಪ್ಪು, ಹಾಗೆ ಮಾಡಬಾರದಿತ್ತು;
ಆ--ದ---ರೆ, ಅನಂತರ ಬರುವದೇನೆಂದು ಗೊತ್ತೇವುಂಟು. ಏನಾದರೂ ಹೇಳಿ
-------------------------------------------------------------------------------
- 11 -
ಹೇಳಿ ಕಡೆಗೆ ಅವಳು ಮಾಡಿದ್ದೇ ಸರಿ ಎಂದು. ಮುಚ್ಚು ಬಾಯ್,
ನನಗೆಲ್ಲಾ ಗೊತ್ತು. 'ನಾನು ಹೋಗಲೆ? ಆ೦, ಊಂ,' ಎಂದು ನಿನ್ನ
ಹತ್ತರ ವೈಯಾರ ಮಾಡಿದಳು. ನೀನು 'ಹೂಂ' ಎಂದೆ. ಅಲ್ಲಿ ಬಂದವ
ರೆಲ್ಲ 'ನೋಡಿ, ರಂಗರಾಯರ ಮಗು! ಎಷ್ಟು ಸೊಗಸಾಗಿದೆ! ರಂಗರಾಯರ
ಹೆಂಡತಿ ಮಗುವನ್ನು ಸಾಕುವುದರಲ್ಲಿ ಬಲು ಜಾ--ಣೆ' ಎಂದು ಹೇಳಿದರೆ
ನಿನಗೆ ಇಂದ್ರಪದವಿಯೇ ದೊರೆಯುತ್ತದೆಂದು ತಿಳಿದಿರುವೆ. ಮಗುವನ್ನು
ಸಾಕಿ ದೊಡ್ಡದು ಮಾಡಲಿಕ್ಕೆ ನಾನು! ಈಗ 'ರಂಗರಾಯರ ಹೆಂಡತಿ!
ಬಲು ಜಾಣೆ!' ಹತ್ತು ಜನರ ಬಾಯಿಯಿಂದ ನಿನ್ನ ಹೆಂಡತಿಯ ಹೆಸರು
ಬಂದರೆ ನಿನಗೊಂದು ಖ್ಯಾತಿ! ಅಲ್ಲವೇ? ಆ ಖ್ಯಾತಿಯ ಮೋರೆಗೆ.
ಬೆಂಕಿ ಬೀಳ!
ಪದ-( ಅನೀಚಕಮಲಾಕರ . . . ಎಂಬಂತೆ) ಝಂಪೆತಾಳ.
ಧಿಕ್ಕಾರ ಬಹುಮಾನಕ | ಪರಿಹಾಸ್ಟಕಡೆಯು | ನೆರೆದಿಹರ
ನುಡಿಯು | ತರವಲ್ಲ ನಡೆಯು | ನಾರಿಗಿರೀತಿಯು || ೧ ||
' ನೋಡಿವಳು ಚದುರೆ-ಪಡದಿಹಳುಖ್ಯಾತಿ'-ನುಡಿವು
ದನು ಕೇಳ್ವ | ಸುಡುಬಾಳ್ಳೆಯದನು || ೨ ||
ನೀವು ಹೇಗೆ ಬೇಕಾದರೂ ಕುಣಿಯಿರಿ; ಆದರೆ ಆ ಮಗುವನ್ನು ಮಾತ್ರ
ಹಾಳು ಮಾಡುತ್ತೀರಿ; ಆ ಸಭೆಯ ಹೆಸರನ್ನು ಕೇಳಿದರೆ ಅದರ ಹಾನಿಯೇ?
ನೆಂದು ಗೊತ್ತಾಗುತ್ತದೆ. ನೀನು ಅಷ್ಟೂ ಯೋಚಿಸಿಲ್ಲ !
ರಂಗ:-ಏನು! ಅದರ ಹೆಸರಲ್ಲೇನಿದೆ?
ಗೌರಮ್ಮ-ನನಗೆ ಆ ಸುಟ್ಟ ಇಂಗ್ಲೆಜು ಬಾರದಿದ್ದರೂ ಕೇಳಿದರೆ
ಯಾರಾದರೂ ಹೇಳುವುದಿಲ್ಲವೆ? ಇದ್ದಾನಲ್ಲ..ನಿನ್ನ ದೊಡ್ಡ ಮಗ!
ಒಂದು ವರುಷದಿಂದ ಇಂಗ್ಲಜಿ ಓದುತ್ತಾನಲ್ಲ! ಕೇಳಿದೆ; ಸರಿಯಾಗಿ ಹೇಳಿದ.
ರಂಗ:- ಏನು ಹೇಳಿದ? ನಾನೂ ಕೇಳಿಬಿಡುತ್ತೇನೆ.
ಗೌರಮ್ಮ:- ಹೇಳುವುದೇನು! ಇದ್ದದ್ದು ಹೇಳಿದ ಬೇಬಿ.ಅಂದರೆ ಮಗು,
ವೀಕ್-ಅಂದರೆ-ಬಲಗುಂದುವುದು. ಅದರಿಂದ ನಿಜವಾಗಿ ಆಗುವ
ಪ್ರಯೋಜನವೂ ಅಷ್ಟೆ! ಅಲ್ಲಿಗೆ ಬಂದವರಲ್ಲಿ ಅನಿಷ್ಟ ಕಣ್ಣಿನವರು ಎಷ್ಟೋ
ಇರಬಹುದು. ಕೆಟ್ಟ ಕಣ್ಣು ಬಂಡೆಯೊಡೆಯುತ್ತದೆ! ತಿಳಿಯಿತೆ? ಅಂತವ
-----------------------------------------------------------------------------------
- 12 -
ರಲ್ಲಿ ಒಬ್ಬರು ನಮ್ಮ ಪುಟ್ಟು ವಿನಂತಹ ಪುತ್ತಲಿಗೊಂಬೆಯನ್ನು ನೋಡಿದರೆ
ಸಾಕು, ಮತ್ತು ಮಗುವು ಆರು ತಿಂಗಳು ಏಳಲಿಕ್ಕಿಲ್ಲ! ಇನ್ನು ಅಂತಹವರ
ತಂಡದ ಕಣ್ಣೆ ಬಿತ್ತೆಂದರೆ ಹೇಳುವುದೇನು? ಹೇಳುವದೇನು! ಆಗುವುದೇನು!
ಕಡೆಗೆ ಬರುವುದು ನನ್ನ ಕುತ್ತಿಗೆಗೆ ಪಾಶಿ! ಹಗಲುರಾತ್ರೆ ದಣಿಯಲಿಕ್ಕೆ
ಇದ್ದಾಳಲ್ಲ ಮನೆಗೊಂದು ಮುದುಕಿ_ಅಂತ? ನಿಮಗೆ ಆಟ, ನನಗೆ
ಪ್ರಾಣಸಂಕಟ!
ರಂಗ:-ಅಮ್ಮ, ಆ ಫೋರನು ತನ್ನ ಅರ್ಥ ಹೇಳಿ ಇಷ್ಟೆಲ್ಲಾ
ಗದ್ದಲ ಹಚ್ಚಿದಂತೆ ಕಾಣುತ್ತದೆ.
ಗೌರಮ್ಮ:-ಆಗಲಿ, ಅವನು ಹೇಳಿದುದು ತಪ್ಪು! ನೀನು ಹೇಳು
ವದೇನು?
ರಂಗ:-ಅದರ ಅರ್ಥ ತಿಳಿಯಬೇಕಾದರೆ ಸಾವಧಾನದಿಂದ ಕೇಳ
ಬೇಕು. ಹೇಳುತ್ತೇನೆ.
ಗೌರಮ್ಮ:-ಸರಿ. ಇನ್ನು ಉದ್ದುದ್ದ ಹೇಳಿ ಸತ್ಯ ಸುಳ್ಳು, ಸುಳ್ಳು
ಸತ್ಯ, ಎಂತ ಮಾಡಲಿಕ್ಕಿರುವೆ! ವಕೀಲರುಗಳ ವಾದ ದಿನನಿತ್ಯವೂ ಕೇಳಿದ್ದಕ್ಕೆ
ಇಷ್ಟಾದರೂ ಬಾರದಿದ್ದರೆ? ಆಗಲಿ, ಹೇಳು.
ರಂಗ:- ಅಮ್ಮಾ, ಯೋಚಿಸು, ಕಳೆದ ವರ್ಷ 'ಆರೋಗ್ಯ ಚಂದ್ರಿಕೆ'
ಯನ್ನು ಅವಳ ಕೈಗೆ ಹಾಕಿದಾಗ ನಿನೇನು ಹೇಳಿದೆ? ನೆನಪಿದೆಯೆ? ಈಗ
ಅದು ಬರುವುದೇ ತಡ, ನೀನೇ ಅವಳಿಂದ ಓದಿಸಿಕೊಳ್ಳುವೆ!
ಗೌರಮ್ಮ:- ಹೌದು, ಅದು ಒಳ್ಳೆಯ ಪತ್ರಿಕೆ; ಅದರಲ್ಲಿ ನಮ್ಮ
ಪೂರ್ವಿಕರ ಪದ್ದತಿ, ಉಡಿಗೆ ತೊಡಿಗೆ, ಆಹಾರ, ಜೀವನಕ್ರಮ, ಇವೆಲ್ಲ
ಆರೋಗ್ಯಕ್ಕೆ ಎಷ್ಟೊಂದು ಯೋಗ್ಯವಾಗಿವೆ ಎಂಬುದನ್ನು ಅವನ್ನೆಲ್ಲ ಬಿಟ್ಟ
ನಿನಗೂ ಮನಸ್ಸಿಗೆ ನಾಟುವಂತೆ ಸಕಾರಣವಾಗಿ ವಿವರಿಸಿ ಬರೆದದೆ. ಅಲ್ಲದೆ,
ಮಕ್ಕಳನ್ನು ಸಾಕುವ ಮಾತಂತಿರಲಿ, ಹೆರುವುದಕ್ಕೂ ಗೊತ್ತಿಲ್ಲದ, ನಿನ್ನ
ಹೆಂಡತಿಯಂತಹ ಈಗಿನ ಹೆಮ್ಮಕ್ಕಳಿಗೆ ಬೇಕಾದಷ್ಟು ಯೋಗ್ಯ ಬುದ್ದಿ
ವಾದವಿದೆ. ಅವಳು ಅದನ್ನು ಓದಿ ತಿಳಕೊಂಡರೆ ನನ್ನ ಭಾರವು ಸ್ವಲ್ಪ
ಕಡಿಮೆಯಾಗುವುದು, ನೋಡು, ಒಂದು ಸಲ ಅದರಲ್ಲಿ ಏನು ಹೇಳಿತ್ತು?
---------------------------------------------------------------------------------
-13-
'ಗರ್ಭಿಣಿಯರನ್ನು ಕುಳ್ಳಿರಿಸಿ ಪೂಜೆಮಾಡಿದಷ್ಟು ಅವರ ಪ್ರಸವ ಕಷ್ಟ' ಎಂದು.
ನಾನು ಅದನ್ನು ನನ್ನ ಸ್ವಂತ ಅನುಭವದಿಂದಲೇ ಎಷ್ಟೋಸಲ ಹೇಳಿದ್ದೆ.
ಆದರೆ ನಿನ್ನ ಹೆಂಡತಿಗೆ ಅದರಲ್ಲಿ ಓದಿದ ನಂತರವೇ ವಿಶ್ವಾಸವುಂಟಾಯಿತು,
ಹಾಗೆಯೇ ಮಕ್ಕಳ ಸಾಕಣೆಯ ವಿಷಯ. ಅವೆಲ್ಲ ಅತ್ತೆಯಂದಿರು ಹೇಳಿ
ದರೆ ಕೆಲಸ ಮಾಡಿಸಲಿಕ್ಕೆ ಹೇಳುತ್ತಾರೆಂತ ಮನಸ್ಸಿಗೆ ನೋವಾಗಿಬಿಡುತ್ತದೆ.
ಆದರೆ ಅಂತಹ ಪತ್ರಿಕೆಗಳೇ ಹೇಳಿದರೆ --- ಆಚಾರಿ ಕಿವಿ ಚುಚ್ಚಿದಂತೆ---
ನೋವೇ ಆಗುವುದಿಲ್ಲ. ಹೀಗೆ ಅದರಿಂದ ಪ್ರಯೋಜನ ಉಂಟು. ಆದುದ
ರಿಂದ ಅದನ್ನು ಓದಲಿಕ್ಕೆ ಹೇಳಿದೆ. ಆದರೆ ಅದಕ್ಕೂ ಇದಕ್ಕೂ ಏನು
ಸಂಬಂಧ?
ರಂಗ:-ಸರಿ, ಹಾಗಾದರೆ ಅದೇ ಇದು; ಇದೇ ಅದು.
ಗೌರಮ್ಮ:-ಹಾಗಾದಮೇಲೆ ಅವುಗಳನ್ನೆಲ್ಲ ಪುನಃ ಪುನಃ ಓದಿದ.
ರಾಗದೆ? ಇಷ್ಟೆಲ್ಲಾ ಗೊಂದಲವೇಕೆ? ಜನಮರುಳೋ ಜಾತ್ರೆ ಮರುಳೋ!
ರಂಗ:-ಅಮ್ಮಾ ಅದೇ ಇದು, ಇದೇ ಅದು, ಆದರೂ ರೂಪದಲ್ಲಿ
ಬೇರೆ, ಆಕರ್ಶಣೆಯಲ್ಲಿ ಬೇರೆ. ಆದಕಾರಣ ಪ್ರಯೋಜನವು ಹೆಚ್ಚು .
ಪದ-ರಾಗ-ಮೂಲಕಂಸ (ನೋಡೆಹರಿಯಾಲೀಲೆಯಾ) ಆದಿತಾಳ.
ಕೇಳೆಮಮತಾಮಾತೆಯೆ | ತಿಳಿಸುವೆನವರೂ | ಯೆಸಗುವ ಕಾರ್ಯ
ಆರೋಗ್ಯಾ ವಿಜ್ಞಾನದ-ವಿಚಾರವಂ | ಪ್ರಚಾರವಂ | ಮಾಳ್ಪರವರು -
ವಿಶೇಷವು-ಸುಯೋಗವಿದೈಸೆ ||೧||
ಪತ್ರಿಕೆಗಳಲ್ಲಿ ಹೆಚ್ಚು ಬರೆಯಲು ಆಗುವುದಿಲ್ಲ. ರಾಮಾಯಣ ಪಾರಾಯಣ
ಮಾಡುವುದಕ್ಕೂ ಅದನ್ನೇ ಹರಿಕಥೆಯ ರೂಪದಲ್ಲಿ ಹೇಳುವುದಕ್ಕೂ ಎಷ್ಟು
ಅಭ್ಯಂತರವಿದೆ ನೋಡು! ಹರಿಕಥೆಯಲ್ಲಿ ತತ್ವಗಳು ಎಷ್ಟು ಸುರಸವಾಗಿ
ಮನಸ್ಸಿಗೆ ನಾಟುತ್ತವೆಂದು ನೀನೇ ಹೇಳುವೆಯಲ್ಲ! ಹಾಗೆಯೇ ಈ ಸಂಸ್ಥೆ
ಯವರು ಆರೋಗ್ಯ ಸಾಧನೆಗೆ ಸಂಬಂಧಪಟ್ಟ ಅನೇಕಾನೇಕ ವಿಷಯಗಳನ್ನು
-ರೋಗಗಳ ಕಾರಣನಿವಾರಣ, ಗರ್ಭಿಣಿಬಾಣಂತಿಯರ ಆರೈಕೆ, ಶಿಶು.
ಪಾಲನೆ--- ಮುಂತಾದುವುಗಳನ್ನೆಲ್ಲ ಏನೂ ತಿಳಿಯದ ಹೆಡ್ಡು ಹೆಂಗಸರಿಗಾ
ದರೂ ಮಂದಟ್ಟಾಗುವಂತೆ ಉಪನ್ಯಾಸ, ಚಿತ್ರ ಪಠ, ನಾಟಕ, ಮಾಯಾ
ಲಾಂದ್ರ ಪ್ರದರ್ಶನ, ವಸ್ತುಪ್ರದರ್ಶನ, ಶಿಶುಪ್ರದರ್ಶನ ಮುಂತಾದ ಹಲವು
------------------------------------------------------------------------------
-14-
ಸಾಧನಗಳಿಂದ ಪ್ರತ್ಯಕ್ಷವಾಗಿ ಬೋಧಿಸುವರು. ಈ ಕೆಲಸವನ್ನು ಪತ್ರಿ
ಕೆಯು ಮಾಡಲಾರದು. ಅವಳು ಹೋಗಿ ಇವನ್ನೆಲ್ಲಾ ನೋಡಿ ಕೇಳಿ
ತಿಳಿದುಕೊಂಡು ಬಂದರೆ ನಿನಗೆ ಈ ಕುಟುಂಬದ ಆರೋಗ್ಯ ರಕ್ಷಣೆಯ `
ಭಾರವು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುವುದಿಲ್ಲವೆ? ಇನ್ನೂ ಇನ್ನೂ
ನೀನೇ ಎಲ್ಲವನ್ನೂ ನೋಡಿಕೊಳ್ಳುವುದೆಂದರೆ ನಿನ್ನಿಂದಾದರೂ ಎಷ್ಟು ತಾನೆ
ಸಾಧ್ಯವಾದೀತು! ಕಷ್ಟ ಪಟ್ಟು ಪಟ್ಟು ಹಣ್ಣಾಗಿರುವೆ!
ಗೌರಮ್ಮ:-ಹೌದು ಮಗೂ, ಇತ್ತೀಚೆಗೆ ನನ್ನಿಂದೇನೂ ಸಾಗುವು
ದಿಲ್ಲ. ಹಾಗೆಂದು ಯಾವುದನ್ನು ಬಿಡಲಿ! ಯಾವುದನ್ನು ಹಿಡಿಯಲಿ! ಒದೆ
ದಾಡುತ್ತೇನೆ. ಇರಲಿ, ನಮ್ಮ ಪುಟ್ಟುವನ್ನು ಅಲ್ಲಿ ಎಲ್ಲರ ಮುಂದೆ ತೋರಿ
ಸುವುದೇಕೆ? ಕೆಟ್ಟ ಕಣ್ಣು ಬಿದ್ದರೆ? ಏನೊ, ಇದಾದರೂ ಒಂದು ವಿಚಿತ್ರ
ವಲ್ಲವೆ? ನಮ್ಮ ಕಾಲದಲ್ಲಿ ಇದೆಲ್ಲ ಇತ್ತೆ? ನಾವೇನು ಮಕ್ಕಳುಮರಿಗ
ಳನ್ನು ದೊಡ್ಡದು ಮಾಡಿಲ್ಲವೆ?
ರಂಗ:-ಇದ್ದೇ ಇಲ್ಲವೆಂದು ಹೇಳಲಿಕ್ಕಾಗುವುದಿಲ್ಲ. ಬೇರೊಂದು
ರೂಪದಲ್ಲಿದ್ದಿರಬಹುದು ಮಗು ಹುಟ್ಟಿತೆಂದು ಕೇಳಿದರೆ ಎಷ್ಟೋ ಜನರು
ಬಂದು ನೋಡುತ್ತಿದ್ದರು. ಬಂದವರಿಗೆ ಹೊಸಮನುಷ್ಯನನ್ನು ನೋಡಿ
ರೆಂದು ಎತ್ತಿ ಎತ್ತಿ ತೋರಿಸುತ್ತಿದ್ದಿಲ್ಲವೆ? ದೃಷ್ಟಿ ಬೀಳುವುದೆಂದು ಮಗು
ವನ್ನು ಯಾರಾದರೂ ಅಡಗಿಸಿಡುತ್ತಿದ್ದರೇನು? ಮದುವೆ ಮುಂಜಿಗಳಿಗೆ
ಹೋಗುವಾಗ ಮಕ್ಕಳನ್ನು ಎಷ್ಟೊಂದು ಮುದ್ದು ಮುದ್ದಾಗಿ
ಸಿಂಗರಿಸಿ ಕೊಂಡು ಹೋಗುತ್ತಿದ್ದಿಲ್ಲ! ಅವುಗಳ ಮುಖಕ್ಕೆ ಪರದೆಯೆಳೆಯುತ್ತಿದ್ದ
ರೇನು? ಎಂತೆಂತಹ ದೊಡ್ಡ ದೊಡ್ಡ ಸಭೆಗಳಲ್ಲಿ ಜನರು ತಮ್ಮ ಅದ್ಭುತ ದೇಹ
ಶಕ್ತಿ, ಗಾನಶಕ್ತಿ, ವಾಗ್ದಾಲತ್ವ ಮುಂತಾದುವನ್ನು ಪ್ರದರ್ಶಿಸುವುದಿಲ್ಲವೆ?
ಅವರಗೆ ದೃಷ್ಟಿ ತಾಗುವುದೆ? ಆರೋಗ್ಯ ನಿಯಮಕ್ಕೆ ವಿರುದ್ಧವಾಗಿ ನಡೆ
ದರೆ ಅಸ್ವಸ್ಥವು ಬಂದೇಬರುವುದು; ಅಲ್ಲದೆ, ದೃಷ್ಟಿಯೇನುಮಾಡೀತು ಅಮ್ಮ?
ನೀನು ಹೇಳುವಂತೆ ನಿಮ್ಮ ಕಾಲದಲ್ಲಿ ಇಷ್ಟೆಲ್ಲ ಅಗತ್ಯವಿದ್ದಿಲ್ಲ. ಆಗಿನ
ಜೀವನಕ್ರಮವು ಆರೋಗ್ಯಕ್ರಮಕ್ಕೆ ಸರಿಬೀಳುತ್ತಿತ್ತು. ಈಗ ಅನೇಕಾನೇಕ
ಕಾರಣಗಳಿಂದ ನಮ್ಮ ಜೀವನ ಕ್ರಮವೇ ಬದಲಾಗಿ ಹೋಗಿದೆ. ನನ್ನ
---------------------------------------------------------------------------------
-15-
ಬಾಲ್ಯದ ಹಳ್ಳಿವಾಸವನ್ನೂ ನನ್ನ ಮಕ್ಕಳ ಈ ಚಿಂತಾದ್ರಿಪೇಟೆಯು,
ಅದ ರಲ್ಲೂ ಈ ಪಚೀತಿಗಲ್ಲಿಯ, ವಾಸವನ್ನೂ ಯೋಚಿಸಿದರೇ ಗೊತ್ತಾಗು
ವುದು. ನನ್ನನ್ನು ಸಾಕಿದವಳೂ ನೀನೆ; ನನ್ನ ಈ ಮಕ್ಕಳನ್ನು ಸಾಕುವ
ವಳೂ ನೀನೆ. ಆದರೆ ನೀನೇ ಹೇಳುವೆ, 'ಈ ಮಕ್ಕಳು ಅಸ್ವಸ್ಥ ಬಿದ್ದು
ದರ ಹತ್ತರಲ್ಲೊಂದು ಪಾಲೂ ನಾನು ಬಿದ್ದಿಲ್ಲ' ಎಂದು. ಆದುದರಿಂದ ಆರೋ
ಗ್ಯದ ವಿಷಯ ಈಗ ಎಷ್ಟು ತಿಳ ಕೊಂಡರೂ ಸಾಲದಾಗಿದೆ. ಅದಕ್ಕಾ
ಗಿಯೇ ಜನಾಂಗಾರೋಗ್ಯದ ಮತ್ತು ಶಿಶುಪಾಲನೆಯ ಕುರಿತಾದ ಜ್ಞಾನ
ಪ್ರಚಾರಕ್ಕಾಗಿಯೇ ಈ ವಾರವನ್ನು ಮೀಸಲಾಗಿಟ್ಟು ಅದಕ್ಕೆ 'ಬೇಬಿ
ವೀಕ್' ಅನ್ನು ವರು. ಆ ಫೋರಕಿಟ್ಟು ನಿನಗೆ ತಪ್ಪು ಅರ್ಥ ಹೇಳಿ ಅದರ
ಉದ್ದೇಶವೇ ತಿಳಿಯದಂತೆ ಮಾಡಿದ
ಗೌರಮ್ಮ:-ಸರಿ, ಉದ್ದೇಶವೇನೋ ಒಳ್ಳೆಯದೇ. ಆದರೆ ನಿನ್ನ
ಹೆಂಡತಿಯಂತಹ ಹೆಂಗುಸರೆಲ್ಲ ಅವುಗಳನ್ನು ನೋಡಿ, ಕೇಳಿ ತಿಳಕೊಳ್ಳಬೇ
ಕೆಂಬ ಆಶೆಯಿಂದ ತಾನು ಮುಂದು, ತಾನು ಮುಂದು ಎಂದು ಹೊಗು
ತಾರೆಂತ ನೀವು ಗಂಡಸರು ತಿಳಿದುಕೊಂಡಿರುವಿರಿ.
ಪದ-ಆದಿತಾಳ.
ಅರಿವನು ತಿಳಿಯಲು ತೆರಳ್ವರೆ ||ಪ ||
ತರುಣಿಯರಾ-ರೂಪವನು | ಬೆಡಗಿನ ವೇಷವ ನೋಡಲು ತಾವ್ | ತೆರಳ್ವರು || ೧ ||
ಉಟ್ಟಿರುವ -ಶೀರೆಯನು ! ತೊಟ್ಟಿ ಹ ನಗಗಳ ನೋಡಲು ತಾವ್ | ತೆರಳ್ವರು || ೨ ||
ಇವರಿಗೆಲ್ಲ ಅಲ್ಲಿ ಬಂದಿದ್ದವರ ಶೀರೆ ಕುಪ್ಪಸ, ಆಭರಣ, ಮಕ್ಕಳ ಉಡಿಗೆ
ತೊಡಿಗೆ, ಹೆಮ್ಮಕ್ಕಳ ಬಿನ್ನಾಣ ವೈಯಾರ, ಇವುಗಳ ಮೇಲೆಯೇ
ಮನಸ್ಸು, ಜನ ಮರುಳೋ ಜಾತ್ರೆ ಮರುಳೋ ಎಂಬಂತೆ. ಏನಾ
ದರೂ ಪ್ರಯೋಜನ ಸಿಕ್ಕಬೇಕಾದರೆ ನಾನೂ ಅವಳೊಡನೆ ಹೋಗಬೇಕು.
ಎಲ್ಲ ವಿಷಯಗಳನ್ನು ತಿಳಕೊಂಡು ಆಗಾಗ ಮನೆಯಲ್ಲಾದರೂ ಎಚ್ಚರಿ
ಸುತ್ತಿರಬಹುದು
ರಂಗ:- ಹಾಗೆಯೇ ಮಾಡಮ್ಮಾ; ನೀನೇ ಅವಳನ್ನು ಕರೆದುಕೊಂಡು
ಹೋಗು; ಮತ್ತಷ್ಟು ಒಳ್ಳೆಯದೇ ಆಯಿತು.
---------------------------------------------------------------------------------------------
-16 -
ಗೌರಮ್ಮ:- ಕೆಟ್ಟ ದೃಷ್ಟಿಯ ವಿಷಯ ನೀನು ಹೇಳಿದ್ದು ಸರಿಯಾಗಿ
ರಬಹುದು, ಆದರೆ ನನ್ನ ಮನಸ್ಸಿಗೇನೋ ಸ್ವಲ್ಪ ಹಾಗೆ, ಹಾಗೆ, ಆದುದ
ರಿಂದ ಪುಟ್ಟುವಿನ ಕೆನ್ನೆ ಗಳಿಗೆರಡು ಕಾಡಿಗೆ ಬೊಟ್ಟುಗಳನ್ನಾದರೂ ಹಾಕಿ
ಕೊಂಡು ಹೋಗಬೇಕು, ಅದರಿಂದೇನು ಕೇಡು?
ರಂಗ:- ನಿನಗೆ ಇಷ್ಟವಿದ್ದಂತೆ ಮಾಡಮ್ಮ; ಆದರೆ ಬರೇ ವಿಕಲ್ಪ
ಮಾಡಬೇಡ.
ಗೌರಮ್ಮ:- ಛೇ, ಛ, ಹಾಗೆ ಮಾಡಲಿಕ್ಕೆ ನನಗೇನು ಹುಚ್ಚೆ? ಹತ್ತು
ಜನರ ಮುಂದೆ ಕೊಂಡುಹೋಗುವ ಮಗು ಮುದ್ದು ಮುದ್ದಾಗಿರಬೇಕು,
ಆದರೆ ದೃಷ್ಟಿ ಪರಿಹಾರಕ್ಕೆ ಮಾತ್ರ, ಎರಡೇ ಎರಡು, ಚಿಕ್ಕ, ಸಣ್ಣ,
ಕಾಡಿಗೆ ಬೊಟ್ಟು, ಅಷ್ಟೆ! ( ಪರದೆಯೊಳಗಿನಿಂದ ಆರೋಗ್ಯ ಭಜನಾ ಮೆರವಣಿಗೆಯ
ತಾಳ ತಂಬೂರಿಗಳ ಧ್ವನಿ ಕೇಳಬರುವುದು) ಅದೇನು ಗೌಜಿ?
ರಂಗ:~. ಅದೇ, ಶಿಶು ಸಪ್ತಾಹದ ಆರೋಗ್ಯ ಭಜನೆಯ ಮೆರವಣಿಗೆ.
ಅಮ್ಮ ಜಗುಲಿಗೆ ಹೋಗಿ ಕಿವಿಗೊಟ್ಟು ಕೇಳು. ಆ ಪದಗಳು ಎಷ್ಟು
ಬೋಧನಾ ಪ್ರದವಾಗಿವೆ! ಎಷ್ಟು ಸುರಸವಾಗಿವೆ! ಅವುಗಳನ್ನೆಲ್ಲ ಹೆಂಗು
ಸರು ಕಲಿತು ಹಾಡುತ್ತಿದ್ದರೆ ಆಬಾಲವೃದ್ದರಿಗೂ ಆರೋಗ್ಯ ನಿಯಮ
ಗಳನ್ನು ಪದೇ ಪದೇ ಲಕ್ಷಕ್ಕೆ ತಂದಂತಾಗುವುದಲ್ಲವೆ? ಆ ಪದಗಳನ್ನು
ಛಾಪಿಸಿ ಉಚಿತವಾಗಿ ಹಂಚುತ್ತ ಬರುತ್ತಿರುವರು. ನಮ್ಮ ಮನೆ
ಬಾಗಲಲ್ಲೂ ಕೆಲವನ್ನು ಕೊಟ್ಟು ಹೋಗುವರು. ಅಗೋ, ಕಿಟ್ಟು
ಓಡಿದ. ಆ ಪದಗಳ ಕಾಗದವನ್ನು ತರುವನು. ಓದಿಸಿ ಕೇಳು. ಮೆರ
ವಣಿಗೆ ನಮ್ಮ ಬೀದಿಗೆ ಬಂತು. ಹೋಗಿ ನೋಡಮ್ಮ.
ದೃಶ್ಯ ೩
(ತಾಳ ತಂಬೂರಿ ಮುಂತಾದ ಸಂಗೀತ ಸಾಹಿತ್ಯಗಳನ್ನು ಪ್ರಯೋಗಿಸುತ್ತ ಆರೋಗ್ಯ
ಗೀತೆಯನ್ನು ಹಾಡುತ್ತ ಶಿಶು ಸಪ್ತಾಹದ ಭಜನಾ ಮಂಡಳಿಯವರು ಪ್ರವೇಶಿಸುವರು).
ಪದ-ಮದಲಾಸಿ ಮಟ್ಟು-( ಭಾರತೇಯರೆ ನಮ್ಮ ಭಾಗ್ಯ ಸಂಪತ್ತು .. ಎಂಬಂತೆ)
ಚಾಪು ತಾಳ,
ಅಕ್ಕಂದಿರಣ್ಣಂದಿರೆಲ್ಲ ಕೇಳಿ | ಸಿಕ್ಕದೆ ರೋಗಕ್ಕೆ ಸುಖದಿಂದ ಬಾಳಿ || ಪಲ್ಲ||
ಮುಚ್ಚದೆ ಯಿಟ್ಟಿಹ ತಿಂಡಿಯ ತಟ್ಟೆ , ಬಚ್ಚಲ ರೊಚ್ಚಿನ ಮೊಣಕದು ಕಟ್ಟೆ ||
ಬೀದಿಯ ಬಳಿಯಿಹ ತಿಂಡಿಗೆ ಸೋತು | ವ್ಯಾಧಿಯ ಕೊಳ್ವಿರಿ ನಿಜವಾದ ಮಾತು ||
------------------------------------------------------------------------------------------------------
-17-
ಶಾಲೆಯ ಮಕ್ಕಳ ಹೋಟೆಲು ವಾಸ | ಶೀಲಕ್ಕೆ ವಿದ್ಯೆಗೆ ಸೌಖ್ಯಕ್ಕೆ ಮೋಸ ||
ಹೋಟೆಲ ಕಜ್ಜಾಯ ಕಾಫಿಯು ಊಟ | ನೋಟಕ್ಕೆ ಸೊಂಪಿವೆ ದೇಹಕ್ಕೆ ಮಾಟ ||
ದೇಹದ ವಿಷಯವ ತಿಳಿಯದ ಮನುಜ | ವಿದ್ಯೆಯು ಎಷ್ಟಿರೆ ಪಶುಸಮ ಸಹಜ ||
ಆರೋಗ್ಯ ಲೆಕ್ಚರು ಕೇಳಲು ಬೇಕು | ನಿರೋಗಿ ನೀವಾಗಿ ಬಾಳಲು ಬೇಕು ||
ಸಿಂಗಾಲು ಚಾಹವು ಸಿಂಗಾಲು ಕಾಫಿ | ಅಂಗಾಂಗ ಶಕ್ತಿಯ ಕೊರೆಯುವ ಪಾಪಿ ||
ಬೀಡಿಯು ಸಿಗರೇಟು ಎದೆಗೊಂದು ಶೂಲ | ಗುಂಡಿಗೆ ರೋಗಕ್ಕೆ ಸೈಕಲ್ಲು ಮೂಲ !!
ನಾಲಿಗೆ ದಾಸರು ನೀವಾಗಿ ಹೋಗೆ | ಸೆಳೆವುದು ನಿಮ್ಮನು ರೋಗದ ಬಲೆಗೆ ||
ಸೊಗಸಿನ ಜೀವನ ಸೊಗಸಿನ ಊಟ | ನಗರದ ವಾಸಗಳ ತನುವಿಗೆ ಕಾಟ ||
ಕತ್ತಲೆ ಕವಿದಿಹ ದೂಳಿನ ಕೋಣೆ | ಕುತ್ರಕ್ಕೆ ಮತ್ತಷ್ಟು ಹಿತವಾದ ಠಾಣೆ ||
ನಿರ್ಮಲ ಗಾಳಿಯು ಬೆಳಕಿನ ಜಾಗ | ರೋಗಿಯ ಮದ್ದಿನೊಳದುವೆ ಮುಪ್ಪಾಗ ||
ಮಕ್ಕಳ ರೆಟ್ಟೆಗೆ ಹಾಕಿಸೆ ದಾಕ | ಸೋಂಕದು ಸಿಡುಬಿನ ಸಾವಿನ ಶೋಕ ||
ಕ್ಷಯ ರೋಗಿ ಯುಗುಳುವ ಕಮ್ಮವ ಜಾಗ | ಬಿಟ್ಟರೆ ತಟ್ಟದು ನಿಮಗದು ರೋಗ ||
ಕೊಲೆರದ ರೋಗಿಯಿಂ ದೂರವಾಗಿರಿರಿ | ಹೊಲಸಾದ ಅರಿವೆಯ ದೂರದೊಳ್ ಸುಡಿರಿ ||
ಬಾವಿಯೊಳವುಗಳ ಮುಳುಗಿಸ ಬೇಡಿ | ಸಾವಿರ ಸಾವಿಗೆ ಕೋಣೆ ನೀವು ನೋಡಿ ||
ಬೆಳಕುಗಾಳಿಯು ಮನೆಯೊಳು ಬರಬೇಕು | ತಿಳಿನೀರ ಪಾನವು ಸ್ವಾನವ ಬೇಕು ||
ಬದುಕಲು ತಿನುವವ- ನವನತಿ ಚಾಣ | ತಿನ್ನಲು ಬಾಳ ವನವ ಕಡು ಕೋಣ !!
-------:
----------------------------------------------------------------------------------------------------
ದ್ವಿತೀಯಾಂಕ
••••••••
ದೃಶ್ಯ೧ .
(ವಿನೋದರಾಯನೆಂಬ ಹುಡುಗನು ಯುರೋಪಿಯನ್ ಡ್ರಸ್ ತೊಟ್ಟುಕೊಂಡು
ತನ್ನ ಮನೆಯ ತೋಟದಲ್ಲಿ ತಿರುಗುವನು.)
ಪದ- ಮಂದರಗಿರಿಧರನೇ • • • ಎಂಬಂತ) ತಾಳ ಪಂಜಾಬಿ.
ದೊಡ್ಡವರನುಕರಿಸ-ಇದೀಯುಡಿಗೆ ಹ- || ಪ ||
ಗೌರವಕಾರೀ-ಮಾನಕದಾರೀ-ಶೋಕನು ತಾ ಬೀರಿ |
ವಾಕಿಂಗ್-ಗೀಕಿಂಗ್, ಮಾಡುವೆ ನಾನೈ-ಬೀದಿಯ ಸೇರಿ || ೧ ||
ಈ ರೀತಿ ಮಾಡಿದರೇನೇ-ಜಂಟೀಲ್ ಮ್ಯಾನ್ ಆಗ್ವೆ ||
ದೊಡ್ಡವರನುಕರಿಸ- ಇದೀಯುಡಿಗೆ ಹ || ೨ ||
ಶಾಲೆಯಲ್ಲಿ ಮಾಸ್ತರ್ ಹೇಳಿದ್ದಾರೆ_'ತಂದೆಯೆಂದರೆ ದೇವರಿಗೆ ಸಮ.
ಅವರು ಮಾಡಿದ ಹಾಗೆ ಮಾಡಬೇಕು. ಯಾರಿಗೆ ಊರಿನಲ್ಲಿ ಹೆಚ್ಚು
ಮರ್ಯಾದೆ ಕೊಡುತ್ತಾರೋ ಅವರು ನಡೆಯುವ ಹಾಗೆ, ಅವರು ಮಾಡುವ
ಹಾಗೆ, ನೀವೂ ಮಾಡಲು ಈಗಿನಿಂದಲೂ ಕಲಿಯಬೇಕು, ನಾಳೆಯೆಂದರೆ
ಅದು ಬಾರದು. ಗಿಡವಾಗಿ ಬೊಗ್ಗದ್ದು ಮರವಾಗಿ ಬೊಗ್ಗಿ ತೆ?' ಎಂದು.
ಇದಕ್ಕಾಗಿ ನಾನು ಎಷ್ಟೋ ದಿವಸಗಳಿಂದ ಪ್ರಯತ್ನ ಮಾಡುತ್ತಿದ್ದೆ.
ದೊಡ್ಡವರ ಹಾಗೆ, ಮರ್ಯಾದೆವಂತರ ಹಾಗೆ, ನಾನು ನಡೆಯಬೇಕೆಂದು
ನಾನೆಷ್ಟು ಪ್ರಯತ್ನ ಪಟ್ಟಿ! ಇಂದಿಗೆ ನನ್ನ ಅಭಿಲಾಷೆಯು ತೀರಿದಂತೆ ಕಾಣು
ತ್ತದೆ. ನಾನು ದೊಡ್ಡವರಂತೆ ಕಾಣುವುದಿಲ್ಲವೆ? ಈ ಕ್ರೋಪ್, ಈ
ನೆಕ್ಕಟೈ, ಕೊಲ್ಲರ್, ಹ್ಯಾಟ್, ಕೋಟ್', ಟ್ರುಜರ್, ಬೂಟ್ಸ್, ವಾಕಿಂಗ್
ಸ್ಟಿಕ್_ಇನ್ನೇನು ಬೇಕು? ಸರಿ, ದೊಡ್ಡವರಂತೆಯೇ ಕಾಣುತ್ತೇನೆ.
ಆದರೆ ಇಂದಿನ ತನಕ ಇದೊಂದು ಮಾತ್ರ ಕಡಿಮೆಯಾಗಿತ್ತು (ಜೇಬಿಗೆ ಕೈ
ಹಾಕುತ್ತ) ತಂದೆಯವರು ಇಂದು ಡ್ರೋವರಿಗೆ ಬೀಗಹಾಕದೆ ಅವಸರದಿಂದ
ಹೋದುದು ಒಳ್ಳೆಯದೇ ಆಯಿತು. ಇದಕ್ಕಾಗಿ ಎಷ್ಟೋ ದಿವಸಗಳಿಂದ
------------------------------------------------------------------------------
-
-19-
ಹೊಂಚು ಹಾಕುತ್ತಿದ್ದೆ. ಇಂದು ಸಿಕ್ಕಿತು (ಎನ್ನುತ ಸಿಗರೇಟ ಪೆಟ್ಟಿಗೆಯನ್ನು
ತೆಗೆದು, ಒಂದು ಸಿಗರೇಟನ್ನು ಬಾಯಿಂದ ಕಚ್ಚಿ, ಆಚೆಯಾಚೆ ನೋಡಿ ಅದಕ್ಕೆ ಬೆಂಕಿ
ಪೆಟ್ಟಿಗೆ ಗೀಚಿ ಬೆಂಕಿಹಚ್ಚಿ ಸಿಗರೇಟು ಸೇದುವನು.) ಸರಿ, ದೊಡ್ಡವರು ನಡೆಯುವು
ದೆಂದರೆ ಹೀಗೆ (ಎಂದು ಠೀವಿಯಿಂದ ನಡೆಯುತ್ತ, ಹೊಗೆ ಬಿಡುತ್ತ, ಬೆತ್ತವನ್ನು
ಬೀಸುತ್ತ ನಡೆದು ತೋರಿಸುವನು.) ನನ್ನ ತಂದೆಯವರಿಗೆ ದಿನಕ್ಕೆ ಒಂದು ಪೆಟ್ಟಿಗೆ
ಸಿಗರೇಟು ಬೇಕು, ನಾನೆಂತೂ ಅವರ ಮಗನಲ್ಲವೆ? ಒಂದುತೂಕ ಹೆಚ್ಚಾಗ
ಬೇಕು! ನಾನು ದೊಡ್ಡವನಾದಾಗ ದಿನಕ್ಕೆ ಮೂರು ಪೆಟ್ಟಿಗೆ ಕರ್ಚು ಮಾಡ
ಬೇಕು! ತಂದೆಯವರು ಡ್ರೆಸ್ ಹಾಕಿ, ಸ್ಪೆಕ್ಸ್ ಇಟ್ಟು, ಈಚೀಚೇರಿನಲ್ಲಿ
ಬಿದ್ದು ಆಚೆಗೊಂದು ಕಾಲು ಈಚೆಗೊಂದು ಕಾಲು ಹಾಕಿ, ಸಿಗರೇಟ್ ಸೇದುತ್ತ,
ನ್ಯೂಸ್ ಪೇಪರು ಓದುವುದನ್ನು ಕಂಡಾಗ ನನಗೆ ಇಂದೇ ಹಾಗೆ
ಮಾಡಬೇಕೆಂತ ತುಡುವಾಗುತ್ತದೆ. ಆಹಹಾ! ಹೊಗೆಯು ಎಷ್ಟು ಸೊಗ
ಸಾಗಿ ಏಳುತ್ತದೆ!
ಪದ-(ಸವಮಾನಾತ್ಮಜಾ ... ಎಂಬಂತೆ) ಆದಿತಾಳ.
ಮದುರಾ ಯೇನದೊ- ಇದರಾ- || ಪ ||
ದೂಮದರಾಶಿಯರಾಶಿ- ಇದರ ಮಹದಾನಂದಕರಿ: || ಅ.ಪ ||
ಬಾಲಕನನ ನಿಜ-ಜಂಟೀಲ್ ಮಾನನ-ಮಾಡುವುದೈ ಸಿಗ |
ರೇಟಿದುವು-ಮಾಡುವುದೈ ಸಿಗರೇಟಿದುವು ||೧||
ಸುರುಳಿ ಸುರುಳಿಯಾಗಿ ಹೊಗೆ ಬಿಡುವುದೂ ಒಂದು ಕಸ್ರತ್ ! ಕೆಲವರು
ದೊಡ್ಡವರು ಮೂಗಿನಿಂದ ಹೊಗೆಬಿಡುವರು. ಅದನ್ನು ಕಲಿಯಬೇಕು.
ಆದರೆ ಈ ಸಿಗರೇಟು ನನಗೆ ಸಿಗುವುದೇ ಅಪರೂಪ! ಬೀಡಿ ಅಗ್ಗವಂತೆ.
ಅಮ್ಮ ನನ್ನು ಕಾಡಿಬೇಡಿ ಪೆನ್ಸಿಲಿಗೆ, ಕಾಗದಕ್ಕೆ, ರಬ್ಬರಿಗೆ ಎಂತ ಒಂದೊಂದು
ಪಾವಣೆ ತಕ್ಕೊಂಡು ಬೀಡಿ ಕೊಂಡುಕೊಳ್ಳಬೇಕು. ಹೇಗಾದರೂ ಮಾಡಿ
ದೊಡ್ಡವರು ಮಾಡಿದಂತೆ ಮಾಡಲಿಕ್ಕೆ ಈಗಿನಿಂದಲೂ ಕಲಿಯಬೇಕು
ಮಾಸ್ತರ್ ಹೇಳಿದ್ದಾರೆ! ಆದರೆ ಅವರು ಚುಟ್ಟಸಿಗ್ರೆಟ್, ಬೀಡಿ ಸೇದಬಾರ
ದೆಂದೂ ಹೇಳಿದ್ದಾರೆ. ಅದು ಕೆಟ್ಟ ಅಭ್ಯಾಸವಂತೆ' ಅದು ಹೇಗೆ? ನನ್ನ ತಂದೆಗೆ
ಕೆಟ್ಟ ಅಭ್ಯಾಸವುಂಟೆ? ದೊಡ್ಡ ದೊಡ್ಡ ಸಭೆಯಲ್ಲಿ ಕೂಡ ಪ್ಲೇಟಿನಲ್ಲಿ ಸಿಗ
ರೇಟು ಇಟ್ಟು ಹಂಚುತ್ತಾರೆ, ನಾನು ನೋಡಿದ್ದೇನೆ. ಅದು ಕೆಟ್ಟ ಅಭ್ಯಾಸ
----------------------------------------------------------------------------------
-20-
-
ವಾದರೆ ಅವರೆಲ್ಲ ದೊಡ್ಡ ದೊಡ್ಡವರು ಹಾಗೆ ಮಾಡುತ್ತಾರೆಯೆ? ಕೆಟ್ಟ
ಅಭ್ಯಾಸವೆಂದು ಮಾಸ್ತರು ಹೇಳಿದ್ದು ಅದೊಂದು ಮಾತ್ರ ಸರಿಯಲ್ಲ-
ನನ್ನ ತಂದೆ, ನನ್ನ ಮಾವ, ನನ್ನ ಕಕ್ಕ ಇವರೆಲ್ಲ ಸೇದುತ್ತಾರೆ! ಇವರೆಲ್ಲರೂ
ಕೆಟ್ಟ ಅಭ್ಯಾಸದವರೆ? ಛೇ, ಅದೆಂದೂ ಆಗದು. ಅಷ್ಟೇಕೆ? ನನ್ನ ಸಣ್ಣ
ಬಾವಾಜಿ ಮಂಗಳೂರಲ್ಲಿ ಬಿ. ಎ ಕಲಿಯುತ್ತಾರೆ.ಮೊನ್ನೆ ಬಂದಿದ್ದರು.
ನನ್ನ ತಂದೆಯೇ ಅವರಿಗೊಂದು ಸಿಗರೇಟು ಕೊಟ್ಟಿದ್ದರು. ಬಾವಾಜಿಯ
ಅಂಗಿಕಿಸೆಯಲ್ಲಿ ಬೀಡಿಯ ಕಟ್ಟು ಕಟ್ಟುಗಳೇ ಇದ್ದುವು. ಅಹಹಾ! ಆ
ಕಟ್ಟುಗಳು ಎಷ್ಟು ಚಂದ! ನನಗೆ ಒಂದು ದಿನ ಅಂತಹ ಇಡೀ ಕಟ್ಟು
ತಕ್ಕೊಳ್ಳಬೇಕು. ಅವರೂ ಕಲಿಯುವವರು. ನಾನೂ ಕಲಿಯುವವನು,
ನಾನೇಕೆ ಬೀಡಿ ಸೇದಬಾರದು?
ಪದ-( ಅಗಾದಮಹಿಮೆಯ ತೋರಿದ ... ಎಂಬಂತೆ) ದುಮಾಳಿ ಶಾಳ.
ವಿಶೇಷಗೌರವಕಾರಿಯು | ಹೇಟು ಬೂಟ್ನ ಟ್ರಸರು ||
ವಿಶೇಷಗೌರವಕಾರಿಯು 1 ಕೋಪೂ ನೆಕ್ ಟಾೈ ಕೊಲ್ಲರು ||
ವಿಶೇಷಗೌರವಕಾರಿಯು | ಸಿಲ್ವರ್ ಕ್ಲೌಡೂ ಸೀಗರು ||
ವಿಶೇಷಗೌರವಕಾರಿಯು 1 ಇಂಪಿರಿಯಲ್ ಸೀಗರು || ಪ ||
ವಿದ್ಯೆಯ ಕಷ್ಟವ ನೋಡದೆ-ಬುದ್ಧಿ ಯ ವೆಚ್ಚವ ಮಾಡದೆ-
ಪದವಿಮಾನಮರ್ಯಾದೆಯ- ಸಾ ನಂದದಿ ತಾ ತೋರುವ || ೧ ||
-------
ದೃಶ್ಯ ೨
(ರಾತ್ರೆ 9 ಘಂಟೆಯ ಸಮಯ ವಕೀಲ್ ಸುರೇಂದ್ರರಾಯನು ತನ್ನ ಕೊಠಡಿಯಲ್ಲಿ
ಕುಳಿತಿರುವನು. ಎದುರು ಮೇಜಿನ ಮೇಲೆ ಬ್ರಾಂಡಿಯ ಬಾಟ್ಲಿ ಮತ್ತು ಗ್ಲಾಸು ಇರು
ವುದು. ತಾನು ಮಾಡಲಿಕ್ಕಿರುವ ಕಾರ್ಯಕ್ಕಾಗಿ ತಾನೇ ವ್ಯಸನಪಡುವಂತಿರುವನು.)
ಸುರೇಂದ್ರ:- ಛೇ! ಛೇ! ನಾನೆಂತಹ ಮೂರ್ಖ! ಹಾ, ಸುರೆ! ನೀನೆಂತಹ
ರಾಕ್ಷಸಿ! ಜ್ವರದಿಂದ ಪೀಡಿತನಾಗಿ ನರಳುತ್ತಿದ್ದಾಗ ತತ್ಕಾಲ ಉತ್ತೇಜನ
ಕಾಗಿ ನಿನ್ನ ಸೇವನೆಯನ್ನು ಮಾಡಿದುದೇ ಗೊತ್ತು, ನಾನು ನಿನ್ನ ಗುಲಾಮ
ನಾಗಿ ಹೋದೆನಲ್ಲ! ಸೌಖ್ಯ ಹೊಂದಿದ ಮೇಲೂ ನಿನ್ನನ್ನು ಬಿಡಲು ಅಸ
ಮರ್ಥನಾಗಿ ಹೋದೆ; ನನ್ನ ಪ್ರಿಯ ಪತ್ನಿಯು ಕಿಂಚಿತ್ ಮಾತ್ರ ಕೊಡು
-----------------------------------------------------------------------------
--21-
ತಿದ್ದ ಸರೆಯಿಂದ ತೃಪ್ತನಾಗದೆ ನಾನು ಗೋಪ್ಯವಾಗಿ ಕುಡಿಯುತ್ತಿದ್ದು
ದನ್ನು ಕಂಡು ಅವಳೆಷ್ಟು ಸಲ ತನ್ನ ಕಣ್ಣೀರಿಂದ ನನ್ನ ಪಾದವನ್ನು ತೊಳೆ
ದಳು! “ಪ್ರಿಯೆ, ಇನ್ನು ಮುಂದೆ ನಾನು ಸುರಾಪಾನ ಮಾಡಿದರೆ ನಿನ್ನ ರಕ್ತ
ಪಾನಕ್ಕೆ ಸಮ' ಎಂದು ನಾನೆಷ್ಟು ಸಲ ಭೀಷ್ಮ ಪ್ರತಿಜ್ಞೆಯನ್ನು ತೊಟ್ಟಿಲ್ಲ!
ಆದರೆ ಸಾಯಂಕಾಲವಾಗಲು, ಅಯ್ಯೋ, ಆ ಪ್ರತಿಜ್ಞೆಗಳೆಲ್ಲಿ ? ನಾನೆಲ್ಲಿ ?
'ಹೇ ಸುರೆ, ಇಂದು ನಿನ್ನ ಕೊನೆಯ ಸೇವೆ, ಇನ್ನು ಈ ಜನ್ಮದಲ್ಲಿ ನಿನ್ನ
ಸಮಾಗಮ ನನಗಿಲ್ಲ. ಅದುಕಾರಣ ಯಥೇಚ್ಛ ಮನದಣಿಯೆ ಪಾನಮಾಡಿ
ಬಿಡುವೆನು' ಎನ್ನುತ್ತ ದಿನದಿನವೂ ಎಷ್ಟೆಷ್ಟು ಕುಡಿಯುತ್ತ ಹೋದೆನು! ನಿನ್ನೆ
ಸಾಯಂಕಾಲ ಮತ್ತನಾಗಿ ಕಕ್ಷಿಗಾರರನ್ನು ಬೈದು ಓಡಿಸಿದುದಕ್ಕೆ ಇಂದು
ಬೆಳಗ್ಗೆ ಪಶ್ಚಾತ್ತಾಪಪಟ್ಟು ಇನ್ನು ಎಂದೆಂದಿಗೂ ಮದ್ಯಪಾನ ಮಾಡುವು
ದಿಲ್ಲವೆಂದು ಭಾಷೆ ಕೊಟ್ಟಿದ್ದ ನಾನೇ ಈಗೇನು ಮಾಡುತ್ತಿರುವೆನು? ಹೇ,
ಸುರೇಂದ್ರ! ಹೇ ಪಾಪಿ ಸುರೇಂದ್ರ! ನಿನ್ನೆದುರಿಗಿರುವ ಈ ಸುರೆಯನ್ನು
ಕಾಲಿಂದ ಒದ್ದು ಬಿಡು! ನಿನ್ನ ಸ್ನಾನ ಮಾನ ವಿದ್ಯೆ, ತನುಮನಧನ ಇವೆಲ್ಲ
ವನ್ನೂ ನಾಶಮಾಡಲು ಬಂದಿರುವ ಪಿಶಾಚಿಯೇ ಅದು! ಅದು ಸರಿಯಲ್ಲ
--ನಿನ್ನ ಪತ್ನಿ ಯ ರಕ್ತ! ಜ್ಞಾಪಿಸಿಕೋ ಸುರೇಂದ್ರ! ಅದನ್ನು ಒದೆ!
ಕಾಲಿಂದ ಒದೆ! ತೆಗೆದು ಬಿಸುಡು! (ಎನ್ನುತ ಎದ್ದು ಬಿಸಾಡಲು ಬಾಟ್ಟಿಯನ್ನು
ಎತ್ತುವನು. ರಭಸದಿಂದ ಎತ್ತಿದ ಕೈಯು ಮೆಲ್ಲನೆ ಕೆಳಗೆ ಬಂದು, ಬಾಟ್ಲಿಯು ಪುನಃ
ಮೇಜಿನ ಮೇಲೆ ಬರುವುದು ) ಆದರೆ, ಸುರೆ, ನಿನ್ನ ನ್ನು ಹೇಗೆ ಬಿಡಲಿ! ಬಿಟ್ಟು
ನಾನೆಂತು ಬದುಕಲಿ! ನಿನ್ನನ್ನು ಬಿಟ್ಟರೆ ನನಗೆ ಉತ್ಸಾಹವೆಲ್ಲಿ? ಸುಖವೆಲ್ಲಿ?
ಆದರೆ ಬಿಡದೆ ಯತ್ನ ವಿಲ್ಲ; ನಾನು ಅಧೋಗತಿಗಿಳಿಯುವೆನು, ಇಳಿಯುತ್ತಾ
ಇರುವೆನು. ಅದಕಾರಣ ಬಿಡಲೇಬೇಕು-ಬಿಡುವೆನು. ನಿಶ್ಚಯವಾ
ಗಿಯೂ ಬಿಡುವೆನು. ನಾಳೆಯಿಂದ ಖಂಡಿತವಾಗಿಯೂ ನಿನ್ನ ಬಳಿ ಸಾರೆನು,
ನಿನ್ನ ಮುಖ ನೋಡೆನು. ಇದೇ ನಿನ್ನ ಕೊನೆಯ ಸೇವೆ! ಬಾ, ಸುರೆ
ಇದೇ ನನ್ನ ಕೊನೆಯ ಪಾನ! (ಎಂದು ಕುಡಿಯಲಿಕ್ಕೆ ಗ್ಲಾಸನ್ನು ಎತ್ತುವನು. ಅಷ್ಟ
ರಲ್ಲಿ ಮರೆಯಲ್ಲಿ ನಿಂತು ನೋಡುತ್ತಿದ್ದ ಆತನ ಪತ್ನಿ ರಮೆಯು ಪ್ರವೇಶಿಸಿ ಆತನ ಎತ್ತಿದ್ದ
ಕೈಯನ್ನು ಹಿಡಿದು ಗ್ಲಾಸನ್ನು ಕಿತ್ತುಕೊಂಡು ಮೇಜಿನ ಮೇಲಿಡುವಳು.)
ರಮೆ:-ಪ್ರಿಯಾ, ಏನಿದು?
----------------------------------------------------------------------------------
- 22-
ಪದ-(ಶ್ರೀವರನೆ ... ಎಂಬಂತೆ) ತ್ರಿವಟ ತಾಳ,
ಏನಿದುವು ವಿಪರೀತವಗೈವಿರೈ | ಯೋಚಿಸು ಪ್ರಿಯಾ ಗೈದಿಹ ಅಣೆಯ |
ಅನುದಿನವನ್ನ-ಪ್ರಾಣದ || ತ್ಯಜಿಸು ಪಾನವಾ-ಪಾದಕೆ ಬೀಳುವೆ |
ಸಲ್ಲಿಸು ಪ್ರಾರ್ಥನೆ ನಾಥನೆ ||೧||
ದೇವಾ, ನಿಮ್ಮ ಬೆಳಗ್ಗಿನ ದೃಢ ಪ್ರತಿಜ್ಞೆಯೆಲ್ಲಿ?
ಸುರೇಂದ್ರ:-ರಮಾ, ಕ್ಷಮಿಸು, ನನ್ನ ಕೈ ಬಿಡು, ನಾಳೆಯಿಂದ
ನಿಜವಾಗಿಯೂ ಬಟ್ಟೆ, ಬಿಟ್ಟೇಬಿಟ್ಟೆ! ಇಂದು ಕಿಂಚಿತ್ ಮಾತ್ರ, ಕೊನೆಯ
ಸಲ, ಕಿಂಚಿತ್ ಕಿಂಚಿತ್ ಮಾತ್ರ! ತಡೆಯಬೇಡ ರಮಾ, ಬರೇ ಒಂದೇ
ಒಂದು ಗುಟುಕು!
ರಮೆ:-( ದುಃಖಿಸುತ್ತ) ನನ್ನ ಜೀವನ ಸರ್ವಸ್ವ! ದಿನಾಲೂ ಇದೇ
ಹಾಡು! ನಾಳೆ ನಾಳೆಯೆಂದು ಈ ಅವಸ್ಥೆಗೆ ಬಂದಿರಿ! ಬಂದ ಕಕ್ಷಿಗಾರ
ರನ್ನು ಮತ್ತರಾಗಿ ಓಡಿಸತೊಡಗಿದಿರಿ! ಇನ್ನೂ ಇನ್ನೂ 'ನಾಳೆ' ಎನ್ನು
ವಿರಾ? ಬೇಡ, ಸುಳ್ಳು ಹೇಳಬೇಡಿರಿ, ನನ್ನನ್ನು ಕೊಂದುಬಿಡಿರಿ, ಅನಂತರ
ಎಷ್ಟು ಬೇಕಾದರೂ ಕುಡಿಯಿರಿ. ನಿಮ್ಮನ್ನು ತಡೆಯುವವರಾರೂ ಇಲ್ಲ
ಸದ-(ಹಾ ವಿಧಿವಿಧಿ • • • ಎಂಬಂತೆ) ಪಂಜಾಬಿ ತಾಳ.
ಹಾ, ಬಿಡುಬಿಡು ಮಮ ಪ್ರಿಯರಮಣನೆ |
ಈ ತರದಿಂದ. ಮದ್ಯವ ಸೇವಿಸೆ |
ಸುಕೀರ್ತಿಯ ಹಾನಿ ಬಾರದೇನೈ |
ತಿಳಿಯೆಯೆಂತಕಟ | ಮದ್ಯದ ವಿಕಟ | ಫಲದ ಸಂಕಟ |
ವೆಂತು ಸಹಿಸಲಯವಯೊ ||೧||
ಸುರೇಂದ್ರ:-ರಮಾ, ನಿನ್ನನ್ನು ಕೊಂದೂ ನನಗೆ ಇದು ಬೇಕಾ
ಗಿದೆಯೇ?
ರಮಾ:- ಹಾಗಾದರೆ ಅದನ್ನು ಬಿಡಲೇಬೇಕು. ನಾನು ಈ ಗ್ಲಾ
ಸನ್ನೂ ಬಾಟಿ ಯನ್ನೂ ಈಗಲೇ ಒಡೆದು ಹಾಕುವೆನು (ಎನ್ನು ತ್ರ ಅವುಗಳನ್ನು
ತೆಗೆಯಲು ಹೋಗುವಳು.)
ಸುರೇಂದ್ರ:-( ರಮೆಯನ್ನು ತಡೆದು) ರಮಾ, ಒಡೆದು ಹಾಕಬೇಡ,
ನಾಳೆಯಿಂದ ಅದನ್ನು ಮುಟ್ಟುವುದೇ ಇಲ್ಲ. ನೋಡು, ಮುಟ್ಟುವುದೇ
----------------------------------------------------------------------------
- 23 -
ಇಲ್ಲ, ಇಂದು ಮಾತ್ರ, ಕೊನೆಯ ಸರ್ತಿ, ಒಂದೇ ಒಂದು ಗುಟುಕು,
ಕೋಪಿಸಬೇಡ, ತಡೆಯಬೇಡ, ಅಂಗಲಾಚಿ ಬೇಡಿಕೊಳ್ಳುತ್ತೇನೆ.
ರಮೆ:-ನಾನು ಎಷ್ಟು ಬೇಡಿಕೊಂಡರೂ ನೀವು ಕೇಳುವುದಿಲ್ಲ
ವಲ್ಲವೆ? ನೀವು ಕುಡಿಯುವುದನ್ನು ನಾನು ನೋಡಲಾರೆ, ನಾನಿಲ್ಲಿ ನಿಲ್ಲ
ಲಾರೆ. ಅದು ನನ್ನ ರಕ್ತಕ್ಕೆ ಸಮ. ಕುಡಿಯುವುದಾದರೆ ಕುಡಿಯಿರಿ!
(ಎನ್ನುತ್ತ ಸಿಟ್ಟುಗೊಂಡು ಹೋಗುವಳು. ಸುರೇಂದ್ರನು ಆಕೆಯು ಎಲ್ಲಾದರೂ ಪುನಃ ಬರು
ವಳೋ ಎಂದು ನೋಡುತ್ತ ನೋಡುತ್ತ ಕುಡಿಯುತ್ತಿರುವನು, ಪರದೆಯು ಬೀಳುವುದು.)
---
ದೃಶ್ಯ ೩, (ಬೀದಿಯಲ್ಲಿ ಮುದಿ ಬ್ರಾಹ್ಮಣನೊಬ್ಬನು ಹೋಗುತ್ತಿರುವನು. ಹಿಂದಿನಿಂದ
ವೆಕ್ಸಿನೇಟರ್ ಬರುವನು).
ವೆಕ್ಸಿನೇಟರ್:- ಅಯ್ಯಾ, ಸ್ವಾಮಿ, ನಿಲ್ಲಿ.
ಮುದುಕ:-ಯಾರಪ್ಪ! ಏನು! ನೀವ್ಯಾರು?
ವೆಕ್ಸಿನೇಟರ್:- ನಾನೊಬ್ಬ ವೆಕ್ಸಿನೇಟ್ರು.
(ಕಿವಿ ಸರಿಯಾಗಿ ಕೇಳದ ಮುದುಕನು ಇನ್ಸ್‌ಪೆಕ್ಟರು ಎಂತ ತಿಳಿದು ಗಡಗಡನೆ
ನಡುಗುತ್ರ)
ಮುದುಕ:- ಏನು! ಇನ್ಸ್ ಪೆಟ್ರೆ? ಪೋಲೀಸು ಇನ್ಸ್ ಪೆಟ್ರೆ? ಅಯ್ಯೋ!
ನಾನು ಬಡವ, ಮುದುಕ, ಸ್ಮಶಾನ ಯಾತ್ರೆಗೆ ಹೊರಟವ! ಪ್ರಾಯ
ಕಾಲದಲ್ಲೂ ಅನ್ಯಾಯ ಮಾಡಿದವನಲ್ಲ ಈಗ ಹೊಳೆಗೆ ಬಾಗಿದ ಮರ,
ಅಯ್ಯೋ, ಸಾಯುವ ಕಾಲಕ್ಕೆ ನನಗೆ ಜೈಲು! ಯಾಕಪ್ಪ! ನಾನು ನಿರಪ
ರಾಧಿ! ನಿರಪರಾಧಿ! ತಾವು ಧರ್ಮಾವತಾರರು, ಚೆನ್ನಾಗಿ ಪರಾಂಬರಿಸ
ಬೇಕು; ಯಾರೋ ಪೋಕಾಟಿಗೆ ಜನರು ನನ್ನ ಮೇಲೆ ಸುಳ್ಳು ತಕ್ಷೀರು
ತಂದಿರಬಹುದು,
ವೆಕ್ಸಿನೇಟರ್:- ಹೆದರ ಬೇಡಿರಿ ಸ್ವಾಮಿ, ನಾನು ಪೋಲೀಸು
ಇನ್ಸ್ ಪೆಕ್ಟ್ರು ಅಲ್ಲ.
ಮುದುಕ:- ಏನು? ಅಲ್ಲವೆ? ಪೋಲೀಸು ಇನ್ಸ್ ಪೆಕ್ಟ್ರು ಅಲ್ಲವೆ?
-------------------------------------------------------------------------------
- 24 -
ವೆಕ್ಸಿನೇಟರ್:- ಅಲ್ಲ; ನಿಜವಾಗಿಯೂ ಅಲ್ಲ.
ಮುದುಕ:-ಅಬ್ಬಬ್ಬ! ಒಮ್ಮೆಗೆ ಹಾರಿಹೋದ ಪ್ರಾಣ ಬಂತು!
ಅಯ್ಯಾ ಎಲ್ಲಾ ಮಾತಾಡೋಣ ಸ್ವಲ್ಪ ಉಸುರು ತೆಗೆದುಕೊಳ್ಳುತ್ತೇನೆ
--ಬಹಳ ಗಾಬರಿ ಬಿದ್ದು ಬಿಟ್ಟೆ ನೋಡಿ; ಪ್ರಾಣ ಹಾರಿಹೋಗದೆ ಇದ್ದ
ದ್ದು ಪುಣ್ಯ! ಕೆಲವು ಪೋಲೀಸಿನವರು ಹಾಗೆ ಮಾಡಿಬಿಡ್ತಾರಂತೆ ಸ್ವಾಮಿ;
ಅಪರಾಧಿಗಳನ್ನು ಬಿಟ್ಟು ನಮ್ಮಂತಹ ಬಡವರನ್ನು ಕೈದುಮಾಡಿಕೊಂಡು
ಹೋಗಿ ಬಿಡುತ್ತಾರೆಂತ ಕೇಳಿದ್ದೆ. ಆದ್ರಿಂದ ಇನ್ಸ್ ಪೆಟ್ರು-ಪೊಲಿಸ್
ಇನ್ಸ್ ಪೆಟ್ರು ಎಂದ ಕೂಡಲೆ ನನ್ನ ಮೈ ಗಡಗಡಗಡ ಗಡಗಡಗಡಗಡ
ಗಡಗಡಗಡ-ಗಡಾಯಮಾನವಾಯಿತು! ಎಡೆ ಬಡಬಡಬಡ, ಬಡಬಡ,
ಬಡಬಡ, ಬಡ್, ಎನ್ನುವ ಹಾಗಾಯಿತು ನೋಡಿ. ನೀವು ಇನ್ಸ್ ಪೆಕ್ಟ್ರು
ಅಲ್ಲ ಎಂತ ಹೇಳುವುದು ಇನ್ನು ತುಸ ತಡವಾಗುತ್ತಿದ್ದರೆ ನನ್ನ ಹೆಣ
ನಿಮ್ಮ ಪಾದದ ಬಳಿ ಬೀಳುತ್ತಿತ್ತು-ಏನೋ ಆ೦-ಏನಂದ್ರಿ? ನೀವು ಪೋಲೀಸು
ಇನ್ಸ್ ಪೆಕ್ಟ್ರು ಅಲ್ಲ? ಮತ್ತೇನೆಂದಿರಿ? ನೀವು ಯಾರು?
ನೆಕ್ಸಿನೇಟರ್:- ನಾನು ವೆಕ್ಸಿನೇಟರ್ - ವೆಕ್ಸಿನೇಶನ್ ಮಾಡುವವ?
ಮುದುಕ:-ಏನು! ವಕ್ಷ ನಾಶನ ಮಾಡುವವರೆ? ವಕ್ಷ ನಾಶ
ಮಾಡಿದರೆ ಮತ್ತೆ ಬಾಳುವುದು ಹೇಗೆ ಸ್ವಾಮಿ?
ನೆಕ್ಸಿನೇಟರ್:-ಅದಲ್ಲ ಸ್ವಾಮಿ, ನಾನು ದಾಕ್ತಾರ್,
ಮುದುಕ: ಅಯ್ಯೋ! ಹುಲಿಯ ಬಾಯಿಯಿಂದ ಸಿಂಹದ ಬಾಯಿ
ಗೆ! ಇನ್ನೇನು! ನನ್ನನ್ನು ಜೀವವಿದ್ದಂತೆ ಅಡ್ಡ ನೀಟ ಕೊಯ್ಯಬೇಕೆ? ನನ
ಗೇನೂ ರೋಗವಿಲ್ಲ, ದಮ್ಮಯ್ಯ, ನನ್ನನ್ನು ಬಿಟ್ಟು ಬಿಡಿ! ನನ್ನ ದಾರಿ ಹಿಡ
ಕೊಂಡು ಹೋಗಿಬಿಡುತ್ತೇನೆ.
ಎಕ್ಸಿನೇಟರ್:-ಅಲ್ಲ ಸ್ವಾಮಿ! ಅಂಥ ಡಾಕ್ಟರ್ ಅಲ್ಲ. ಸುಮ್ಮನೆ
ಗಾಬರಿಯಾಗಬೇಡಿರಿ, ನಾನು ದಾಕು ಹಾಕುವವ. ನಿಮಗೂ ದಾಕು
ಹಾಕಲೆ?
ಮುದುಕ:- ಯಾಕಪ್ಪಾ ದಾಕು? ಅದರಿಂದೇನಾಗುವುದು?
------------------------------------------------------------------------------------------
- 25 -
ವೆಕ್ಸಿನೇಟರ್:- ನೋಡಿರಿ, ಊರಲ್ಲೆಲ್ಲ ಸಿಡುಬು ರೋಗ ಹರಡ
ತೊಡಗಿದೆ. ಅನೇಕರು ಸಾಯುತ್ತಾರೆ. ಆದುದರಿಂದ ಬೀದಿ ಬೀದಿ
ತಿರುಗಿ ಜನರು ದಾಕು ಹಾಕಿಸಿಕೊಳ್ಳುವಂತೆ ನಾವು ಉಪದೇಶ ಮಾಡು
ತ್ತಿದ್ದೇವೆ.
ಮುದುಕ:- ಅದರಿಂದಲೇ ಸಾವು ಎಂತ ಬ್ರಹ್ಮ ಬರೆದಿದ್ದರೆ ನಿಮ್ಮ
ಡಾಕುಗೀಕಿನಿಂದ ತಡೆಯಲಿಕ್ಕಾಗುತ್ತದೆಯೇ? ನಾವು ಪೂರ್ವ ಜನ್ಮದಲ್ಲಿ
ಮಾಡಿದ ಕರ್ಮದ ಫಲ ಈ ಜನ್ಮದಲ್ಲಿ ಅನುಭವಿಸಲೇ ಬೇಕು. ತಪ್ಪಿಸ
ಲಿಕ್ಕೆ ಯಾರಿಗೆ ಸಾಧ್ಯ ಸ್ವಾಮಿ?
ಎಕ್ಸಿನೇಟರ್:-ಆ ಮಾತು ಆತ್ಮೋನ್ನತಿಯ ವಿಷಯದಲ್ಲಿ ಸರಿ
ಇರಬಹುದು. ಶರೀರ ಧರ್ಮಶಾಸ್ತ್ರ ಪ್ರಕಾರ ಹಾಗಲ್ಲ ನೋಡಿ-- ದೇಹ
ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ನಡೆದುದರ ಫಲವನ್ನು ದೇಹವೇ ಅನುಭವಿಸ
ಬೇಕು. ಇದೇ ಜನ್ಮದಲ್ಲಿ ಅನುಭವಿಸಲೇ ಬೇಕು. ಶರೀರ ಶಾಸ್ತ್ರ
ಪ್ರಕಾರ ನಾವು ಅನುಸರಿಸತಕ್ಕೆ ಕೆಲವು ನಿಯಮಗಳಿವೆ--ನೋಡಿ, ರಾತ್ರೆ
ನಿದ್ದೆ ಮಾಡಬೇಕೆಂಬುದೊಂದು ನಿಯಮ-ಈ ನಿಯಮವನ್ನು ಎರಡು ದಿನ
ಉಲ್ಲಂಘಿಸಿ ನೋಡಿರಿ ಅದರ ಫಲ ಕೂಡಲೇ ಈ ಜನ್ಮದಲ್ಲೇ ಬಂತೇ
ಬಂತು! ಇನ್ನು ಮಿತ ತಪ್ಪಿ ಊಟಮಾಡಬಾರದೆಂಬುದು ಮತ್ತೊಂದು
ನಿಯಮ. ಇದನ್ನು ಮೀರಿದರೆ ಕೂಡಲೇ ನಿಮಗೆ ಅಜೀರ್ಣ ಅತಿಸಾರಾದಿ
ರೂಪದಲ್ಲಿ ಶಿಕ್ಷೆ ಬಂದೇ ಬರುವುದು. ಈ ರೀತಿ ಶರೀರ ಧರ್ಮಕ್ಕೆ
ವಿರುದ್ದವಾಗಿ ವರ್ತಿಸಿ ಮಾಡುವ ಪಾಪಕ್ಕೆಲ್ಲ ಈ ಜನ್ಮದಲ್ಲಿ ಕ್ಷಿಪ್ರದಲ್ಲೇ
ಕಠಿಣ ಫಲವನ್ನು ನಾವು ಅನುಭವಿಸುತ್ತೇವೆ. ಆದುದರಿಂದ ರೋಗ
ರುಜೆಗಳೆಲ್ಲ ಬರುವುದು ಪೂರ್ವ ಜನ್ಮದ ಕರ್ಮಫಲದಿಂದಲ್ಲ. ಈ ಜನ್ಮ
ದಲ್ಲೇ ನಾವು ಆರೋಗ್ಯ ಶಾಸ್ತ್ರದ ನಿಯಮಕ್ಕೆ ವಿರುದ್ಧವಾಗಿ ಮಾಡಿದ
ಯಾವುದೋ ಒಂದು ಕರ್ಮದ ಫಲವಾಗಿ ನಮಗೆ ವ್ಯಾಧಿಗಳು ಬರುವವು.
ನಾವು ಅಂತಹ ನಿಯಮಗಳನ್ನು ತಿಳಕೊಂಡು ಅವುಗಳನ್ನು ಮೀರದಂತೆ
ಜಾಗ್ರತೆಯಿಂದಿದ್ದರೆ ನಮಗೆ ವ್ಯಾಧಿಗಳು ಬರಲಾರವು. ಸಿಡುಬಿನ ವಿಷ
ಯವೂ ಅಂತೆಯೇ, ಹಣೆಯಲ್ಲಿ ಬರದ್ದಾಗುತ್ತದೆಂದು ಬೆಂಕಿಯ ಮೇಲೆ
ಹಾರುವುದೇ? ವಿಷವನ್ನು ತಿನ್ನುವುದೆ? ನೋಡಿ, ದಾಕು ಹಾಕಿಸಿಕೊಂಡು
-------------------------------------------------------------------------------
- 26 -
ಬಿಟ್ಟರೆ ಸಿಡುಬು ರೋಗದ ಬಾಧೆಯಿಲ್ಲ. ಈ ರೋಗವು ಪ್ರಾರಂಭವಾದಂದಿ
ನಿಂದ ಯಾರಾರು ದಾಕು ಹಾಕಿಸಿಕೊಂಡಿರುವರೋ ಅವರಲ್ಲನೇಕರಿಗೆ
ಸಿಡುಬು ತಗಲಲೇ ಇಲ್ಲ. ಇನ್ನು ಒಬ್ಬಿಬ್ಬರಿಗೆ ಕಂಡುಬಂದರೂ ನಾಲ್ಕಾರು
ಬೊಕ್ಕೆ ಗಳು ಮಾತ್ರ. ಅಂತೂ ಪ್ರಾಣಹಾನಿಯಾದುದೇ ಇಲ್ಲಆದರೆ
ದಾಕು ಹಾಕಿಸಿಕೊಳ್ಳದಿದ್ದವರಲ್ಲಿ ನೂರಾರು ಜನರು ಸತ್ತಿರುವರು. ನೀವು
ಮುದುಕರು ನಿಮಗೆ ಜೀವದ ಮೇಲೆ ಅಷ್ಟೊಂದು ಆಶೆಯಿಲ್ಲದಿರಬಹುದು.
ಆದರೆ ಪೇಚಾಡುವುದು, ನರಳುವುದು ಯಾರಿಗೆ ಬೇಕು, ಸ್ವಾಮಿ! ಅದ
ರಲ್ಲೂ ಸಿಡುಬು ಎಂದರೆ ಆತ್ಮೀಯರೂ ಕೂಡ ಹತ್ತಿರ ಬರಲಿಕ್ಕೆ ಅಂಜು
ವರು. ಹತ್ತಿರವಿದ್ದವರೂ ಬಿಟ್ಟು ದೂರ ಓಡುವರು, ಎಲ್ಲಾದರೂ
ಈ ರೋಗವು ನಿಮಗೆ ಸೋ೦ಕಿತೆಂದರೆ ನಿಮ್ಮ ಗತಿ ಏನು? ಯೋಚಿಸಿ.
ಆದುದರಿಂದ ನಿಮ್ಮಂತವರು ದಾಕು ಹಾಕಿಸಿಕೊಳ್ಳಲೇ ಬೇಕು.
ಮುದುಕ:-ಅದು ಹೌದು ಸ್ವಾಮಿ ಈಗ ಸಾವಿಗೆ ನಾನು
ಅಂಜುವುದಿಲ್ಲ. ಎಂತೂ ಹಣ್ಣಾದ ಎಲೆ, ಬೀಳಲೇ ಬೇಕು. ಆದರೆ
ತಾವೆಂದಂತ ಸಿಡುಬಿನಿಂದ ಸಾಯುವುದು ಬೇಡ; ನನ್ನ ಹೆಣ ಮಣ್ಣೊ
ಳಗೆ ಕೊಳೆಯುವದೂ ಬೇಡ; 40 ದಿವಸಗಳ ಮೇಲೆ ಕ್ರಿಯೆ ತೊಡಗ
ಬೇಕಾಗುತ್ತೆ; ಸತ್ತು ಮೂರೂ ಮುಕ್ಕಾಲು ಗಳಿಗೆಯೊಳಗೆ ಈ ದೇಹ
ಮೂರು ಮುಷ್ಟಿ ಬೂದಿಯಾಗಬೇಕು ಸಿಡುಬಿನಿಂದ ಸತ್ತರೆ ಹಾಗಾಗು
ತ್ತದೆಯೆ? ಅಲ್ಲದೆ ಶವ ತೆಗೆಯಲಿಕ್ಕೆ ಜನ ಸಿಗುವದೂ ಸಂಶಯ: ಕಡೆಗೆ
ಕೃಷ್ಣ ಪಾದ ಬ್ರಾಂಬ್ರೇ ಗತಿಯೋ ಏನೋ! ಅದೆಲ್ಲಾ ಯೋಚಿಸಿದರೆ
ಭಯವಾಗುತ್ತದೆ. ಹೂಂ ಹಾಕಿ, ಡಾಕ್ಟ್ರಾರರೇ ಹಾಕಿ, ದಾಕು
ಹಾಕಿಬಿಡಿ (ಎಂದು ಕೈ ಕೆಡುವನು).
ಎಕ್ಸಿನೇಟರ್:-[( ಸ್ವಗತ) ಶಹಬಾಸ್-ಇಂತಹ ಪೂರ್ವಾಚಾರದ ಮುದುಕ
ಬ್ರಾಹ್ಮಣನು ದಾಕು ಹಾಕಿಸಿಕೊಳ್ಳುವಂತೆ ಮಾಡಿದ ನನ್ನ ವಾಗ್ಜಾಲವೇ ವಾಗ್ವಾಲ!
ಏನು ಮಾಡಲಿ, ನಾನು ಹುಟ್ಟುವಾಗ ಬೆಳಗಾಗಿತ್ತು! ನಾನೊಬ್ಬ ಬಿ.ಎ, ಬಿ.ಎಲ್. ಆಗಿ
ದ್ದರೆ ಊರು ಅಡಿ ಮೇಲು ಮಾಡಿ ಬಿಡುತ್ತಿದ್ದೆ!]
ಬನ್ನಿ ಸ್ವಾಮೀ, ಆ ಜಗಲಿಗೆ ಹೋಗೋಣ. ಒಂದು ಕ್ಷಣದೊಳಗೆ
ದಾಕು ಹಾಕಿ ಬಿಡುತ್ತೇನೆ; ಬನ್ನಿ ಸ್ವಾಮಿ,
(ಪರದೆಯು ಬೀಳುವುದು )
--------------------------
--------------------------------------------------------------------------------------
- 27 -
ದೃಶ್ಯ ೪-ಬೀದಿ.
(ಆನಂದನೆಂಬ ಎಲ್ಲೊ ಪತಿ ಚಿಕಿತ್ಸಾಕ್ರಮ ಪ್ರಿಯನಾದ ತುಂಟಹುಡುಗನ ಪ್ರವೇಶ.
ದೇಶೀಯ ಚಿಕಿತ್ಸಾ ಕ್ರಮವನ್ನು ಹೀನೈಸಿ ಮಾತಾಡುವನು.)
ಪದ-(ಶಾರದಾಂಬೆ ಪಾಲಿಸೆನ್ನ . . . ಎಂಬಂತೆ) ರಾಗ ಜಂಜೂಟಿ ರೂಪಕ.
ನಾಡುವೈದ್ಯರಾಯುರ್ವೇದ ವಿದ್ಯೆ ಸೋಜಿಗ || ಪ ||
ಕಾಡುಗಡ್ಡೆ ಬೇರುಬಳ್ಳಿಗಳಲ್ಲಿಯೇನಿದೆ || ಅ. ಪ. ||
ನಾಡಿಜ್ಞಾನದಿಂದಲೆಲ್ಲ ರೋಗತಿಳಿವುದೆ ||
ಮೂಢಜನರು ಯೇತಕವರ ಬಲೆಗೆ ಬೀಳ್ವರೋ || ೧ ||
ಈ ಪಂಡಿತರುಗಳಿಗೆಲ್ಲ ರೋಗಜ್ಞಾನ, ಚಿಕಿತ್ಸಾಕ್ರಮ ಇವೆಲ್ಲ ಏನು.
ಗೊತ್ತುಂಟು? ಇವರ ಹತ್ತಿರ ಥರ್ಮೋಮೀಟರ್ ಇಲ್ಲ; ಸ್ಟೆತೆಸ್ಕೋಪ್
ಇಲ್ಲ; ಇಂಜೆಕ್ಷನ್ ಏನೆಂದು ಗೊತ್ತಿಲ್ಲ. ಇನ್ನು ಸರ್ಜಿರಿಯೆಂದರೆ ಇವರು
ಮುಂಡಾಸಿನ ಜರಿಯ ಭರ್ಜರಿಯೇ ಸರಿ, ಇವರ ಒಪರೇಶನ್ ಮಾಡು
ವುದೆಲ್ಲ ನಾರುಬೇರುಗಳಿಗೆ! ನಾರುಬೇರುಗಳನ್ನೆಲ್ಲ ಕೊರಡಿನ ಮೇಲಿಟ್ಟು
ಕೊಂಡು ಬಡ್ಡು ಚೂರಿಯಿಂದ ಕಟಾ, ಕಟಾ, ಕಚಾ ಕಚಾ ಎಂದು ಕೊಚ್ಚು
ವುದೇ ಇವರು ಮಾಡುವ ಒಪರೇಶನ್! ಎಲ್ಲದಕ್ಕೂ ಇವರ ಹತ್ತಿರ ಇರು
ವುದು ನಾಡೀ ಪರೀಕ್ಷೆ! ರೋಗಿಯ ಕೈ ಹಿಡಿದುಕೊಂಡು ಇಂದ್ರಲೋಕ
ದಿಂದ inspiration ನಿರೀಕ್ಷಣೆ ಮಾಡುವವರಂತೆ ಮೇಲೆ ನೋಡಿಬಿಟ್ಟರೆ
ರೋಗ ಪರೀಕ್ಷೆಯಾಗುವುದೆ? ನನಗೇನೋ ಈ ವಿಷಯದಲ್ಲಿ ಬಹಳ
ಸಂಶಯ! ಒಂದುಸಲ ಇದರ ಪರೀಕ್ಷೆ ಮಾಡಬೇಕೆಂದಿದ್ದೇನೆ. ಈ ಊರ
ಲೊಬ್ಬರು ಆಯುರ್ವೇದ ಪಂಡಿತರಿದ್ದಾರೆ! ಜನರೇನು ಮರುಳುಗಟ್ಟಯೋ
ಏನೊ ಅಲ್ಲೇ ನುಗ್ಗುತ್ತಿದ್ದಾರೆ! ಈ ಊರ ಆರೋಗ್ಯವರ್ಧಕ ಸಭೆಯವರೂ
ಪ್ರಚಾರಕಾರ್ಯಕ್ಕೆ ಅವರನ್ನು ಸೇರಿಸಿಕೊಂಡಿದ್ದಾರೆ. ಏನು ಕಾರಣ!
ಅವರಲ್ಲೇನಾದರೂ ಜಿಂದಿಗೆಯಿದೆಯೆ? ಅಥವಾ ಎಲ್ಲಾ ಗಿಲೀಟೊ! ಗಿಲೀ
ಟಾದರೆ ಇಷ್ಟು ಸಮಯದ ವರೇಗೂ ನಡೆಯುವುದೆ? ಓಹೋ! ಅವರೇ
ಈ ಮಾರ್ಗವಾಗಿ ಬರುತ್ತಿದ್ದಾರೆ. ಅವರನ್ನೀಗ ಪರೀಕ್ಷೆ ಮಾಡಿಬಿಡು
ತ್ತೇನೆ; ನನ್ನ ನಟನಾಚಾತುರ್ಯ ಪ್ರದರ್ಶನಕ್ಕಿದೊಂದು ಸುಸಂದರ್ಭ!
(ಎನ್ನುತ್ತ ನೋವಿಂದ ನರಳುತ್ತಿರುವಂತೆ ನಟಿಸುತ್ತ ಪಂಡಿತರು ಸವಿಸಿದಂತ ಅತಿರೇಕವಾ
--------------------------------------------------------------------------------------------
- 28 -
ದಂತೆ ತೋರಿಸಿ ಅವರು ಹತ್ತಿರ ಬಂದಾಗ) ಅಯ್ಯಯ್ಯೋ! ನೋವು, ನೋವು!
ಹೂಂ, ಹೂಂ ಅಯ್ಯಬ್ಬ! ಅಯ್ಯಯ್ಯೋ! ಸತ್! ಸತ್! ತಾಳೆನು! (ಎಂದು
ಎದೆಯಮೇಲೆ ಕೈ ತಿಕ್ಕುತ್ತ ಅಲ್ಲೇ ಕೂತುಬಿಡುವನು.)
ಪಂಡಿತ:-ಏನಪ್ಪಾ? ನಿನಗೇನಾಗುತ್ತದೆ?
ಆನಂದ:- (ದೀರ್ಘ ಶ್ವಾಸಬಿಡುತ್ತ ನರಳುತ್ತ) ದಮ್ಮಯ್ಯ, ಬದುಕಿಸಿ,
ಸಾಯುತ್ತೇನೆ; ಬೇಗ, ಸರಿಯಾಗಿ ಪರೀಕ್ಷೆ ಮಾಡಿ, ಔಷಧಿ ಕೊಡಿರಿ,
ಅಯ್ಯಯ್ಯೋ, ನೋವು, ನೋವೂ! ಎದೆಯಲ್ಲಿ, ಒಳಗೆ ಒಳಗೆ, ಕಠಿಣ
ನೋವು! ತಾಳಲಾರೆನಪ್ಪಾ! ಸಾಣಹೋಗುತ್ತದೆ! ಅಯ್ಯಬ್ಬ, ಸತ್ತೆ!
ಅಯ್ಯಯ್ಯೋ! ಕಾಪಾಡಿ, ಪಂಡಿತರೆ, ಬದುಕಿಸಿ, ಪುಣ್ಯ ನಿಮಗೆ?
ಪಂಡಿತ :- (ಕೈಹಿಡಿದು ನಾಡೀ ಪರೀಕ್ಷೆ ಮಾಡಿ ಆಶ್ಚರ್ಯಚಕಿತರಾಗಿ, ಸ್ವಗತ)
ಇವನು ಬಲೇ ಠಕ್ಕ! ನಾನು ಇವನನ್ನು ಪರೀಕ್ಷೆ ಮಾಡುವುದಲ್ಲ; ಇವನೇ
ನನ್ನನ್ನು ಪರೀಕ್ಷೆ ಮಾಡ ತೊಡಗಿರುವನು; ತೀರ ನಿರೋಗಿ! ಸುಖನಾಡಿಯ
ಬಡಿತದ ಅನುಭವ ಮಾಡಬೇಕಾದರೆ ಈ ಹುಡುಗ ಸಿಗಬೇಕು! ಹ; ಏನು
ನಟನೆ! ಪ್ರಾಣ ಹಾರಿಹೋಗುತ್ತಿದೆಯಂತೆ ಕಠಿಣ ನೋವಂತೆ! ಇರಲಿ,
ಇವನ ಈ ಪರೀಕ್ಷೆಯಲ್ಲಿ ನಾನು ತೇರ್ಗಡೆ ಹೊಂದಲೇಬೇಕು. (ಪ್ರಕಾಶವಾಗಿ)
ಹೌದಪ್ಪಾ ಹೌದು; ನಿನಗೊಂದು ಕಠಿಣ ರೋಗ ಹಿಡಿದಿದೆ, ಅದನ್ನು ಬೇಗನೆ
ಗುಣಮಾಡುವೆನು, ಇನ್ನೆಂದೆಂದಿಗೂ ಈ ರೋಗ ಬಾರದಂತೆ ಮಾಡಿ
ಬಿಡುವೆನು. ಆದರೆ ಮೊದಲಾಗಿ ಇನ್ನೂ ಚೆನ್ನಾಗಿ ನಾಡಿಪರೀಕ್ಷೆ ಮಾಡ
ಬೇಕು. ನೋವನ್ನು ಸ್ವಲ್ಪ ಸಹಿಸಿಕೊಂಡಾದರೂ ಸ್ವಲ್ಪ ನೆಟ್ಟಗೆ ನಿಲ್ಲ
ಬಹುದೊ?
ಅನಂದ:- ಪ್ರಯತ್ನ ಮಾಡುತ್ತೇನೆ ಸ್ಮಾ ಮೀ, ಹೇಗಾದರೂ,
ನೋವು ಸಹಿಸಿಕೊಂಡಾದರೂ, ನಿಲ್ಲಲೇಬೇಕು; ಸರಿಯಾಗಿ ನಾಡಿ ಪರೀಕ್ಷೆ
ಯಾಗಬೇಕಲ್ಲವೆ! (ಎಂದು ದೀರ್ಘ ಶ್ವಾಸಬಿಡುತ್ತ ನರಳುತ್ತ ಮೆಲ್ಲ ಮೆಲ್ಲಗೆ ಎದ್ದು
ನಿಲ್ಲುವನು.)
ಪಂಡಿತ:- ಹೂಂ, ಸರಿ, ಸರಿ, ಸಾಕು; ಈಗ ನೀನು ತುಸ ಕಣ್ಣು
ಮುಚ್ಚಿಕೊಳ್ಳಬೇಕು, ಕಣ್ಣು ಮುಚ್ಚಿಕೊಳ್ಳದಿದ್ದರೆ ನಾಡಿಯ ಗತಿ ಸರಿ
ಯಾಗಿ ತಿಳಿಯುವುದಿಲ್ಲ. ಏಕೆಂದರೆ ಕಣ್ಣಿನಿಂದ ಮನಸ್ಸಿಗೆ, ಮನಸ್ಸಿಂದ
------------------------------------------------------------------------------
--
-29-
ನಾಡಿಗೆ, ಸಂಬಂಧವಿದೆ. ಕಣ್ಣೆದುಕೊಂಡಿದ್ದರೆ ಅದು ನೋಡುವ ವಸ್ತು
ಗಳಿಂದ ಮನಸ್ಸು ವಿಲವಾಗಿ ಅದಕ್ಕನುಸಾರವಾಗಿ ನಾಡಿಯು ಬಡಿಯು
ತ್ತದೆ. ಹೆದರಿಕೆಯಾಗುವ ವಸ್ತುವನ್ನು ನೋಡಿದರೆ ಎದೆ ಹೇಗೆ ಒಡೆಯು
ತ್ತದೆ? ಹಾಗೆಯೇ. ಆದುದರಿಂದ ನಿಜವಾದ ದೇಹಸ್ಥಿತಿಯು ತಿಳಿಯ
ಬೇಕಾದರೆ ಕಣ್ಣು ಮುಚ್ಚಬೇಕು. ಶ್ವಾಸೋಚ್ಛಾಸ ಸರಿಯಾಗಿ ನಡೆಯ
ಬೇಕು. ಅದಕ್ಕೆ ನುಕೂಲವಾಗುವಂತೆ ಬಾಯಿ ತೆರೆಯಬೇಕು, ನಾಲಿಗೆ
ಹೊರದೂಡಬೇಕು, (ಆನಂದನು ಹಾಗೆಯೇ ಮಾಡುವನು.) ಸರಿ, ಸರಿ, ಹಾಗೆ,
ಹಾಗೆ, ಟೊಪ್ಪಿ ಕೈಯಲ್ಲಿರಲಿ, ಹೂಂ, ಈಗ ಸರಿ, ನಾನು ಕಣ್ಣೆರೆ ಎಂದು
ಹೇಳುವ ತನಕ ಇದೇ ರೀತಿ ಇರಬೇಕು! ನಾನು ನಿನ್ನ ಎದೆ ಹಾರುವುದನ್ನೇ
ನೋಡಿ ಇಂತಹ ರೋಗವೇ ಎಂದು ನಿರ್ಧರಿಸಿಬಿಡುತ್ತೇನೆ. ಈ ಕ್ರಮವು
ಆಯುರ್ವೇದದಲ್ಲಿ ನಾಡಿ ಪರೀಕ್ಷೆಗಿಂತಲೂ ಉತ್ತಮ ಶೋಧನೆ ಕೊಡು
ತ್ತದೆ. ಈಗೋ, ಸ್ವಲ್ಪ ಬಾಯಿ ಅಗಲ ತೆರೆಯಬೇಕು-ನಾಲಗೆ ಹೊರಗೆ.
--ಮುಖ ಸರೀ ಎದುರು! ಸರಿ - ಹಾಗೆ-ಹಾಗೇ ನಿಲ್ಲು. ನಾನು ಸಾಕು
ಎನ್ನುವ ವರೇಗೆ ಹೇಗೆಯೋ ನಿಲ್ಲಬೇಕು. ನಡುವೆ ಗಡಿಬಿಡಿಮಾಡಿದರೆ
ರೋಗ ಪರೀಕ್ಷೆಯಾಗದು. ನೆನಪಿರಲಿ, ಸರಿ. ಹಾಗೇ ನಿಲ್ಲು! ( ಪಂಡಿತರು
ಸದ್ದು ಮಾಡದೆ ಹೋಗಿಬಿಡುವರು.)
ದಾರಿಗರು:- ( ಬಂದು ನೋಡುವರು. ನಗುವರು) ಯಾರೋ ಇದು?
(ಕೆಲವು ಪೋಕಾಟಿಗೆ ಹುಡುಗರು ಟೊಪ್ಪಿಯಲ್ಲಿ ಪುಟ್ಟ ಕಲ್ಲುಗಳನ್ನು ಹಾಕುವರು.) ಇದೇನೋ ವಿಚಿತ್ರ? ಬಿಕ್ಷಾಟಣೆಯ ಹೊಸಮಾದರಿ!
ಆನಂದ:-( ಕಣ್ಣು ಮುಚ್ಚಿಕೊ೦ಡೇ) ಛೇ! ಛೇ! ಛೇ! ಮಹಾಪಂಡಿತರು.
ನನ್ನ ರೋಗ ಪರೀಕ್ಷೆ ಮಾಡುತ್ತಿರುವರು! ಗಲಭೆ ಮಾಡಬೇಡಿ! ಪಂಡಿತರೆ,
ಕ್ಷಮಿಸಿ-ಇಗೊಳ್ಳಿ ಕಣ್ಣು ಮುಚ್ಚಿಕೊಂಡೇ ಇದ್ದೇನೆ. ಆದರೆ ಬಾಯಿ
ಮಾತ್ರ-ಈಗ, ಸರಿಯಾಯಿತೆ? ಇನ್ನು ಮಾತಾಡುವುದಿಲ್ಲ-ಜನರನ್ನು
ನೀವೇ ದೂರಮಾಡಿಸಿ, ಹೂ೦, ಪರೀಕ್ಷೆಯಾಗಲಿ! (ಎಂದು ಪುನಃ ವಿಕಲ್ಪ
ವಾಗಿ ಬಾಯಿತೆರೆದು ಕೈಯಲ್ಲಿ ಟೊಪ್ಪಿ ಹಿಡಕೊಂಡು ನಿಲ್ಲುವನು.)
ದಾರಿಗರು:- ಏನೋ! ಹುಚ್ಚು ಹಿಡಿದೆಯೇನೋ! ಪಂಡಿತರೆಲ್ಲಿದ್ದಾರೋ?'
-------------------------------------------------------------------------------------
- 30 -
ಇದೇನು ಪೋಕಾಟಿಕೆಯೋ? ಮರುಳೊ ಭಿಕ್ಷಾಟಣಾಕ್ರಮದಲ್ಲೊಂದು
ಸುಧಾರಣೆಯೊ? ಏನಾದರೂ ಕಾಸುದುಡ್ಡು ಟೊಪ್ಪಿಗೆ ಬೀಳಲೆಂದೋ?
ಅನಂದ:-(ಕನ್ನರದು ಸುತ್ತ ನೋಡುವನು, ಪಂಡಿತರು ತನ್ನನ್ನು ಬೀದಿ
ಯಲ್ಲಿ ಪರಿಹಾಸ್ಯಕ್ಕೆ ಬಲಿಕೊಟ್ಟಿದ್ದಕ್ಕಾಗಿ ನಾಚುವನು.)
ದಾರಿಗರು:- ನಿನಗೇನಾಗಿತ್ತೊ? ಹೀಗೇಕೆ ನಿಂತಿದ್ದೆಯೋ?
ಅನಂದ:-(ಕೋಪಗೊಂಡು) ಏನೂ ಇಲ್ಲ! ಯಾಕೂ ಇಲ್ಲ! ಅದೆಲ್ಲ
ನಿಮಗೇಕೆ? ನೀವು ನಿಮ್ಮ ದಾರಿಹಿಡಕೊಂಡು ಹೋಗಿ, ನೋಡುವ!
(ದಾರಿಗರು ಹೋಗುವರು.)
ಆನಂದ:- (ಸ್ವಗತ) ಸರಿ, ಪಂಡಿತರು ನನ್ನ ರೋಗ ಗುಣಪಡಿಸಿದರು.
ಇನ್ನು ಎಂದೆಂದಿಗೂ ಈ ರೋಗ ಬಾರದು!
ದೃಶ್ಯ ೫-ರಸ್ತೆ
(ಮಧ್ಯಪಾನದ ದ್ವಿತೀಯವಸ್ಥೆ)
(ಸುರೇಂದ್ರನು ಕುಡಿದು ಮತ್ತನಾಗಿ ಮಾಲುತ್ತ ಕಿಸೆಯಲ್ಲಿ ಬ್ರಾಂಡಿಬಾಟಿಯನ್ನು
ಹಾಕಿ ಕಂಡು ಬರುವನು.)
ಸುರೇಂದ್ರ:- (ಬಾಟ್ಟಿ ಯನ್ನು ಹೊರತೆಗೆದು ಅದನ್ನು ನೋಡುತ್ತ.)
ಸದ-ರೂಪಕತಾಳ.
ಅಹ ಈ ಮದುವು ಮನೋಹರ, ಯೇನೆಂಬೆ |
ಅಹ ಈ ಸುರೆಯು ಸುವಾಸಿನಿ-ನಾನೆಂಬೆ |
ಆಹಾ, ಬಾ, ಸುರೆಯೆ, ವಿಲಾಸಿನಿ, ಹೇ ರಂಬೆ ||
(ಕುಡಿಯುವನು.) ಆ ಲೆಕ್ಚರಿನವನು ಹೇಳಿದ್ದು ಸರಿಯಲ್ಲ. ಅವನತಲೆ ಬುರುಡೆ!
ನಾನು ಲೆಕ್ಟರ್ ಕೊಡುತ್ತೇನೆಂದು ಮುಂದೆ ಹೋದಾಗ ಆ ಜನರು--
ಹುಚ್ಚರು-ಪುಂಡರು-ನನ್ನ ನ್ನು ದೂಡಿಬಿಟ್ಟರಲ್ಲ! ಆಂ, ಏನನರ್ಥ! ಆ
ಲೆಕ್ಟರಿನವನು ಜಾತಿಭೇದ ಮರೆಯಲಿಕ್ಕಿ-ಅಸ್ಪೃಶ್ಯತೆ ನಿವಾರಣೆಗೆ ಅನೇಕ
ದಾರಿ ತೋರಿಸಿಕೊಟ್ಟ. ಅವನ ಕರ್ಮದ ದಾರಿ! ಜಾತಿಭೇದ ನಿವಾರಣೆಗೆ,
---------------------------------------------------------------------------------
-31-
ಮುಟ್ಟು ಚಟ್ಟು ಸುಟ್ಟು ತೆಗೆಯಲಿಕ್ಕೆ ಇದೊಂದೇ ಮಾರ್ಗ-ಈ ಸುರಾ
ಪಾನ! ಇದೊಂದಿದ್ದರೆ ರೋಗರುಜೆ ಸಹ ಸೋ೦ಕಲಾರದು.
ಪದ-(ಎಲ್ಲಿ ಹ ನಮ್ಮೆಲ್ಲರ ತಾಯಿತಂದ ... ಎಂಬಂತೆ) ಚಾಪು ತಾಳ,
ಅಂಟುರೋಗದ ತಂಟೆಬಾರದು ಕೇಳಿ, ಮದ್ಯದ ಗುಟುಕೂಂದು ಕುಡಿರೈಯ್ಯಾ||
ಒಂದೊಂದು ಗುಟುಕಿಗೆ-ರೋಗಗಳೂರಾರು- ತಟ್ಟನೆ ನಿಂತಿವೆ-ನಿಜವೈಯ್ಯಾ ||
ನನ್ನ ಲೆಕ್ಟರ್ ಬೇಡವಂತೆ! ನಾನೇನು ಕಡಿಮೆಯವನೇ? ಸುರೇಂದ್ರರಾವ್
ಎಮ್. ಎ., ಎಮ್. ಎಲ್.! ನನ್ನ ಸನ್ನದ್ದು ಹೋದರೇನಾಯಿತು! ಒಂದು
ದಿನ ಈ ಸುರಾದೇವಿಯನ್ನು ಬಿಟ್ಟಿರಲಾರದೆ ಬಾಟ್ಲಿಯನ್ನು ಕಿಸೆಯಲ್ಲಿ ತುರುಕಿ
ಕೊಂಡು ಕೋರ್ಟಿಗೆ ಹೋದೆ! ಏನೇನೋ ಮಾತಾಡಿದೆನಂತೆ! ಹುಚ್ಚರು
ಅವರೆಲ್ಲ! ನಾನು ಮಾತಾಡುವುದು sense! solid sense! ಅವರಿಗೆ
nonsense! nuisense! ಆಯಿತಂತೆ! ಸನ್ನದ್ದು ರದ್ದಾಯಿತು.
ಹೋಗಲಿ! ಯಾರಿಗೆ ಬೇಕು? ನನಗೆ ಬೇಕಾದುದು ಈ ಸುರಾದೇವಿ.
(ಕುಡಿಯುವನು) ಆ ಲೆಕ್ಕರಿನವನು ಏನು ಬೇಕಾದರೂ ಹೇಳಲಿ! 1 main-
tain any point, ಜಾತಿಭೇದ ನಿವಾರಣೆಗೆ ಇದು, ಇದು, ಇದೇ
ಒಂದು ದಾರಿ, most effective means, ಆಹಾ! ಈ ಸುರೆ,
ಇದೇನು ರುಚಿ! ನೀವು ನಗಾಡಬೇಡಿರಿ. ನನ್ನ ಒಟ್ಟಿಗೆ ಬ್ರಾಂಡಿ ಅಂಗ
ಡಿಗೆ ಬನ್ನಿ, ಅಲ್ಲಿ ತೋರಿಸುತ್ತೇನೆ-ಈಶ್ವರ ಶಾಸ್ತ್ರಿ, ನಾನು, ಹುಸೇನ್
ಸಾಯ್‌ಬ, ಗಿರ್ಗೋರಿನ್ನಾಯ್‌ಕ, ಫಕೀರ, ಇಚಾಕಯ್ಯ-ನಾವೆಲ್ಲ ಅಲ್ಲಿ ಒಂದೇ
ಜಾತಿ! ಒಂದೇ ಪಾತ್ರದಲ್ಲಿ ಕುಡಿಯುತ್ತೇವೆ! ಅಷ್ಟು ಸಹೋದರತ್ವ!
Brotherhood! ನೋಡಬೇಕು ಅಲ್ಲಿ! ನನ್ನ point ಏನಂದರೆ ಜಾತಿ
ಭೇದ ಮುಟ್ಟು ಚಟ್ಟು ಎಲ್ಲ ಹೊf) ಈ ಲೋಕ ಸ್ವರ್ಗಲೋಕ ಆಗ
ಬೇಕಾದರೆ ಈ ಸುರಾದೇವಿ ಸದಾ ಬಾಯೊಳಿರಬೇಕು
ಪದ-ಜಾದು ಬರೀ ಮುರ , , ಎಂಬಂತೆ)
ಆದಿತಾಳ. ಬಾಯೊಳಿರೆ ಸುರೆ ಸ್ವರ್ಗವೆ ನೀ ಖರೆ ||
ಸೇವೆಯ ಬಿಡದೆ..ನಡಸುವ ಬಾರೆ |
ಕ್ಲೇಶಾ ವಿನಾಶಾಕಾರೀ ಸುರೆ ! ಸ್ವರ್ಗವೇ ನೀ ಖರೆ .
(ಹಾಡುತ್ತ ಹೋಗುವನು. ಹಿಂದಿನಿಂದ ಸೈಕಲ್ ಬೆಲ್ ಆಗುವುದು! ಅಡ್ಡಾ
-----------------------------------------------------------------------------
- 32 -
ದಿಡಾ ನಡೆದು ಗಡಿಬಿಡಿಯಾಗಿ ಸ್ಕಾಕಲಿನ ಅಡಿಗೆ ಬೀಳುವನು ಕಾಲಿಗೆ ಪೆಟ್ಟಾಗುವುದು.
ಅಷ್ಟರಲ್ಲಿ ಅಲ್ಲಿಗೆ ಬಂದ ಜನರು ಅವನನ್ನು ಹಿಡಿದು ಕುಳ್ಳಿರಿಸುವರು.)
ಜನರಲ್ಲೊಬ್ಬ:- ಇದೆಲ್ಲ ಹೆಂಡದ ಮಹಾತ್ಮ ಚಿನ್ನದಂತಹ ಮನು
ಷ್ಯನನ್ನು ಈ ಗತಿಗೆ ತಂದಿಳಿಸಿತು! ಧರ್ಮಾಸನದಲ್ಲಿ ಕುಳಿತು ವಿರಾಜಿಸುವ
ಯೋಗ್ಯತೆಯುಳ್ಳ ರತ್ನ ವನ್ನು ಚರಂಡಿಯಲ್ಲಿ ಹಾಕಿತು! ಮದ್ದಿಗಾದರೂ
ಬ್ರಾಂಡಿ ಕುಡಿಯುವವರಿಗೆ ಈ ದೃಶ್ಯ ನೆನಪಿನಲ್ಲಿರಲಿ! ( ಇನ್ನೊಬ್ಬನನ್ನು
ಕುರಿತು) ಆಯ್ತಾ ಏನು ನೋಡುತ್ತೀರಿ! ನಮ್ಮ ಸುರೆಂದ್ರರಾಯರಲ್ಲವೆ?
ಒಂದು ವ್ಯಾಜ್ಯದಲ್ಲಿ ನನ್ನ ಮರ್ಯಾದೆ ಹೋಗುವುದನ್ನು ಕಾಪಾಡಿಸಿ
ಕೊಟ್ಟ ಪುಣ್ಯಾತ್ಮರು ಇವರು! ಇವರನ್ನು ಮನೆಗಾದರೂ ಕೊಂಡು
ಹೋಗಿಬಿಟ್ಟು ಬರಬೇಕು; ಒಂದು ಕುದುರೆ ಗಾಡಿಯನ್ನು ತನ್ನಿ ರಯ್ಯಾ!
ಮತ್ತೊಬ್ಬನು:-(ಆಚೆ ಈಚೆ ನೋ ಡಿ) ಏ, ಏ, ಗಾಡಿ! ಗಾಡಿ!
ಇತ್ತ ತಾ! ಎಂದು ಗಾಡಿಯವನನ್ನು ಕರೆಯುವನು).
(ಪರದೆಯು ಬೀಳುವುದು )
--------
--
ದೃಶ್ಯ ೬.
(ಆರೋಗ್ಯ ಮಾತೆ ಎಂಬ ಲೇಡಿ ಡಾಕ್ಟರಳ ಆಪೀಸು - ಆರೋಗ್ಯ ಸುಂದರಿ
ಎಂಬ ಮತ್ತೊಬ್ಬ ಡಾಕ್ಟರಳೂ ಕುಳಿತಿರುವಳು. ಆರೋಗ್ಯ ಪ್ರಚಾರದ ವಿಷಯ
ಮಾತಾಡುತ್ತಿರುವರು).
ಆರೋಗ್ಯ ಮಾತೆ:-ಆರೋಗ್ಯ ಸುಂದರಿ! ಆರೋಗ್ಯ ಪ್ರತಾಪ
ರಾಯರ ಅನುಜ್ಞೆಯಂತೆ ನಾವೂ ನಮ್ಮ ದಳವೂ ಪ್ರಚಾರ ಕಾರ್ಯ
ವನ್ನು ಇದೇ ರೀತಿಯಲ್ಲಿ ಮುಂದುವರಿಸುತ್ತ ಹೋದರೆ ಪ್ರತಾಪರಾಯರು
ಹೇಳಿದಂತೆ ಒಂದು ದಿನ ಯಮಧರ್ಮರಾಯನೂ ಬೆರಗಾಗಲೇ ಬೇಕು,
ಆರೋಗ್ಯ ಸುಂದರಿ:-ಅದೇನು? ಅಷ್ಟೊಂದು ಧೈರ್ಯದಿಂದ
ಹೇಳುವೆ?
ಆರೋಗ್ಯ ಮಾತೆ:-ಇಗೋ, ನನ ಕೈ ಕೆಳಗೆ ಕೆಲಸ ಮಾಡುತ್ತಿ
ರುವ ಕೆಲವು ಆರೋಗ್ಯ ರಕ್ಷಕಿಯರ ಡೈರಿಗಳನ್ನು ಪರಾಮರ್ಶಿಸಿದರೆ ಅವ
----------------------------------------------------------------------------------
-
-33 -
ರೆಷ್ಟು ಯೋಗ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವರೆಂಬುದು ಸ್ವಯಂ
ವ್ಯಕ್ತವಾಗುವುದು. ಈ ಡೈರಿಗಳು. ಪೋಲೀಸು ಡೈರಿಗಳು-ಇವೆಲ್ಲ
ವನ್ನೂ ನಿಲ್ಲಿಂದ ಕದಲದೆ, ಬೇಕಾದರೆ ಮನೆಯ ಮೆಟ್ಟಿಲು ಇಳಿ
ಯದೆಯೇ ತುಂಬಿಸಲಿಕ್ಕೆ ಬರುವುದೆಂಬುದೇನೋ ನಿಜ. ಆದರೆ ಈ ಡೈರಿ
ಗಳು ಅಂಥವು. ಅನೇಕ ವೇಳೆ ನಾನು ಆರೋಗ್ಯ ರಕ್ಷಕಿಯರ ಕಾರ್ಯ
ಕ್ಷೇತ್ರಕ್ಕೆ ಹೊಸ ಇವುಗಳ ಯತಾರ್ಥತೆಯನ್ನು ಪರಿಶೀಲಿಸಿರುವೆನು.
ಅವರಲ್ಲಿ ವಂಚನೆಯಿಲ್ಲ. ತುಂಬ ಶ್ರದ್ದೆಯಿಂದ ಕೆಲಸ ಮಾಡುವ ಅವರು
ಈ ರೀತಿ ಡೈರಿತುಂಬಿಸಬೇಕಾದರೆ ಅವಿಶ್ರಾಂತವಾಗಿ ದಣಿಯುತ್ತಿರಲೇ
ಬೇಕು.
ಆರೋಗ್ಯ ಸುಂದರಿ:-ನೀನು ಹೊಗಳುವದನ್ನು ಕೇಳುವಾಗ
ಆರೋಗ್ಯ ರಕ್ಷಕಿಯರು ಮಾಡಿರುವ ಕಾರ್ಯಗಳ ವ್ಯತ್ಯಾಂತವನ್ನು ಕೇಳ
ಬೇಕೆಂದು ಆಶೆಯಾಗುತ್ತಿದೆ.
ಆರೋಗ್ಯ ಮಾತೆ:-ಹಾಗೆ, ಈ ಡೈರಿಯಿಂದ ಕೆಲವು ವೃತ್ತಾಂತ
ಗಳನ್ನು ಎತ್ತಿ ಹೇಳುತ್ತೇನೆ, ಕೇಳು. Case No. 1. ಉಗುರು ಉದ್ದುದ್ದ
ಬೆಳೆದು ಅದರೆಡೆಯಲ್ಲಿ ಕಷ್ಮಲವು ಸೇರಿಸಿಕೊಂಡಿದ್ದ ಬೆರಳನ್ನು ಬಾಯಿಗೆ
ಹಾಕಿಕೊಂಡಿದ್ದ ಮಗು ಉಗುರು ಕತ್ತರಿಸುವ ಅವಶ್ಯಕತೆ; ಈ ವಿಷಯ
ದಲ್ಲಿ ಮಗುವಿನ ತಾಯಿಗೆ ಉಪದೇಶ...-Case No. 2, ಒಂದಿಷ್ಟಾ
ದರೂ ಕೆಲಸ ಮಾಡದೆ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದ
ಶ್ರೀಮಂತ ಗರ್ಭಿಣಿ-ಈ ಅಭ್ಯಾಸದಿಂದ ಪ್ರಸವಕಾಲದಲ್ಲಿ ಉಂಟಾ
ಗುವ ಕಷ್ಟ; ಗರ್ಭಿಣಿಯರಿಗೆ ಯಾವುದಾದರೊಂದು ತರದ ಲಘುವಾಯಾ
ಮದ ಅವಶ್ಯಕತೆಯ ಕುರಿತು ಉಪದೇಶ. Case No. 3, ಮಗುವಿನ
ಬಾಯಿಗೆ ಮುತ್ತು ಕೊಡುವುದರ ದುಷ್ಪರಿಣಾಮ-ರೋಗಿಯ ಮುದ್ದು
ಭಯಂಕರ ರೋಗದ ಸಿಡಿಮದ್ದು ! ಈ ವಿಷಯ ಬೋಧನೆ. Case
No. 4. ಜ್ವರದಿಂದ ನರಳುತ್ತಿದ್ದವಳ ಹಾಸಿಗೆಯಲ್ಲಿರುವ ಮಗು; ಕೆಮ್ಮು
ವವನ ಮಗ್ಗುಲಲ್ಲಿ ಮಗು, ಮೈಯೆಲ್ಲಾ ಕಜ್ಜಿ ಹಿಡಿದವನು ಎತ್ತಿಕೊಂಡಿ
ರುವ ಮಗು, ಹುಣ್ಣಾದ ನಾಯಿಯ ಮರಿಯೊಡನೆ ಆಡುತ್ತಿದ್ದ ಮಗು--
ಇಂತಹ ಸಂಸರ್ಗಗಳಿಂದ ಮಗುವಿನ ಎಳೆಯ ದೇಹಕ್ಕೆ ರೋಗ ಹೇಗೆ
------------------------------------------------------------------------------------
- 34 -
ಅಂಟಿಕೊಳ್ಳುತ್ತದೆಂಬುದರ ಕುರಿತು ಆಯಾಯಾ ಮಗುವಿನ ತಾಯಿಗೆ
ಉಪದೇಶ.
ಆರೋಗ್ಯ ಸುಂದರಿ:-ಶಹಬಾಸ್-ಕೆಲ ಸ ಮ ಡ ಬೆಕೆ೦ದರೆ
ಹೀಗೆ! ಆರೋಗ್ಯ ಮಾತೆ, ನಾವೂ ನಮ್ಮ ದಳದವರೂ ಇದೇ ರೀತಿ
ಯಲ್ಲಿ ಪ್ರಚಾರಕಾರ್ಯವನ್ನು ನಿರ್ವಹಿಸುತ್ತ ಬಂದರೆ ನೀನೆಂದುಂತಾಗು
ವುದು ಆಶ್ಚರ್ಯವಲ್ಲ. 'ಇದೇನು! ಎಂದಿನಂತೆ ಜನರು ಹಿಂಡುಹಿಂಡಾಗಿ
ನನ್ನ ಶೈಮುನೀ ನಗರಕ್ಕೆ ಬರುವುದಿಲ್ಲ' ಎಂದು ಯಮನೂ ಮೂಗಿನ
ಮೇಲೆ ಬೆರಳಿಟ್ಟು ಬೆರಗಾಗಲೇ ಬೇಕು. ಇರಲಿ, ಅತ್ತ ನೋಡು, ಹುಡುಗ
ನೊಬ್ಬನು ಬರುತ್ತಿರುವನು. ಅವನ ಮುಖವನ್ನು ಬಿಳುಪೇರಿ ಹೋಗಿದೆ!
ದುರಭ್ಯಾಸದ ಫಲವಾಗಿರಬೇಕು. (ಬೀಡಿ ಸೇದುವ ಅಭ್ಯಾಸದಿಂದ ದೇಹ
ದುರ್ಬಲತೆ ಹೊಂದಿದ ವಿನೋದರಾಯನ ಪ್ರವೇಶ)
ವಿನೋದ:-( ಆರೋಗ್ಯ ಮಾತೆಯನ್ನು ಕುರಿತು ) ಅಮ್ಮಾ, ನನ್ನನ್ನು
ಪರೀಕ್ಷಿಸಿರಿ; ನನಗೇನೂ ಕೂಡುವುದಿಲ್ಲ.
ಆರೋಗ್ಯಮಾತೆ:-ಮಗೂ, ನಿನಗೇನಾಗುತ್ತದೆ?
ವಿನೋದ:-ಏನಾಗುತ್ತದೆಂದು ಹೇಳಲಿ! ಏನೇನೋ ಆಗುತ್ತದೆ--
ತಲೆ ತಿರುಗುತ್ತದೆ; ಏನು ಮಾಡಲಿಕ್ಕೂ ಶಕ್ತಿಯಿಲ್ಲ; ಒಂದಿಷ್ಟು ನಡೆದರೆ
ಎದೆ ಬಡಿದಾಡುವುದು, ಉಸುರುಗಟ್ಟಿದಂತಾಗುವುದು, ಉಬ್ಬಸ ಬರುವುದು.
ಆರೋಗ್ಯಮಾತೆ:-ನಿನಗೆ ಮೊದಲಿಂದಲೂ ಹೀಗಾಗುತ್ತಿತ್ತೆ?
ವಿನೋದ:- ಇಲ್ಲ, ಇತ್ತೀಚೆಗೆ ಆರು ತಿಂಗಳಿಂದ. ಒಂದು
ವರುಷದ ಹಿಂದೆ ನಾನು ಬಲು ಗಟ್ಟಿಮುಟ್ಟಾಗಿದ್ದೆ. ಜೂನಿಯರ್ ರೇಸ್
ನಲ್ಲಿ ನಾನು frst; Long jump, high jumpಗಳಲ್ಲಿ ನನಗೆ ಮೆಡ
ಲು! ಈಗ ಮಾತ್ರ ಮೆಲ್ಲಗೆ ನಡೆದರೂ ಮೇಲುಬ್ಬಸ ಬರುತ್ತದೆ. ತಲೆ
ತಿರುಗುತ್ತದೆ. ಓದಿದ್ದು ನೆನಪು ಉಳಿಯುವುದಿಲ್ಲ!
ಆರೋಗ್ಯಮಾತೆ:-ಇತ್ತ ಬಾ (ಸೊತೆಪ್ ಇಟ್ಟು ) take deep breath;
ಸರಿಯಾಗಿ ಉಸಿರಾಡು.
-----------------------------------------------------------------------------------
-35 -
ವಿನೋದ:-( ಪ್ರಯತ್ನ ಮಾಡಿ) ಇಲ್ಲ, ಆಗುವುದಿಲ್ಲಮ್ಮ.
ಆರೋಗ್ಯಮಾತೆ:- ಪ್ರಯತ್ನ ಮಾಡು; ಹೂಂ, ಇನ್ನೊ ಮ್ಮೆ.
ವಿನೋದ:-ಇಲ್ಲ, ಆ....ಗು....ವು....ದಿಲ್ಲ. ಅಯ್ಯೋ, ತಲೆ
ತಿರುಗುತ್ತದೆ. ಬೀಳುತ್ತೇನೆ! (ಎಂದು ಕುಳಿತುಬಿಡುವನು)
ಆರೋಗಮಾತೆ:- ನಿನ್ನ ಶಾಸಕೋಶಗಳು ಬಹಳ ಬಲಗುಂದಿವೆ.
ಈ ಪ್ರಾಯದಲ್ಲಿ ಹೀಗಾಗಬೇಕಾದರೆ ಸೈಕಲ್ ಸವಾರಿ ಇಲ್ಲವೆ ಬೀಡಿ
ಸೇವನೆ ವಿಶೇಷವಾಗಿರಬೇಕು. ನೀನು ಸೈಕಲ್ ಸವಾರಿ ಮಾಡು
ತ್ತೀಯಾ?
ವಿನೋದೆ: -- ಇಲ್ಲ. ಅದನ್ನು ಕಲಿಯಬೇಕೆಂದಿದ್ದೆ. ಅಷ್ಟರಲ್ಲಿಯೇ
ಹೀಗಾಯಿತು!
ಆರೋಗ್ಯವಾತೆ:- ಹಾಗಾದರೆ ಬೀಡಿ ಸೇದುತ್ತೀಯಾ? ಅದೇನು?
ನಿನ್ನ ತುಟಿಗಳು ಸುಟ್ಟ ಹಾಗೆ ಕಪ್ಪಾಗಿವೆ?
ವಿನೋದ:-ಬೀಡಿ! ಬೀಡಿ ಸೇದುವದು!! ಆಂ-ಹೂ೦-ಬೀಡಿ!
ಎಲ್ಲಾದರೂ -ಊಂ-ಬೀಡಿ! ಅದರಿಂದ ಹೀಗೆಲ್ಲಾ ಆಗುವುದೆ? ದೊಡ್ಡ
ದೊಡ್ಡವರೆಲ್ಲ ಸೇದುತ್ತಾರೆ! ನಾನು ಬೀಡಿ! ಹೂಂ, ಬೀಡಿ! ಎಲ್ಲಾದರೂ....
ಆರೋಗ್ಯ ಮಾತೆ:- ಎಲ್ಲಾದರೂ? ಏಕೆ? ಸದಾ- ನೋಡು,
ನಿನ್ನ ತುಟಿಗಳು ಕಪ್ಪು ಕಟ್ಟಿ ಹೋಗಿವೆ! ನಿನ್ನ ಬಾಯಿಯಲ್ಲಿ ಬೀಡಿಯ
ಹೊಗೆಯ ವಾಸನೆ ಹೊಡೆಯುತ್ತದೆ! ಅದೇಕೆ ಆ ಕಿಸೆಯ ಕಡೆಗೆ ನೋಡುವೆ?
ಅಲ್ಲೇನಿದೆ ನೋಡೋಣ! (ಎಂದು ಆತನ ಕಿಸೆಗೆ ಕೈ ಹಾಕಿ ಬಿಡಿಯ ಕಟ್ಟನ್ನು
ತೆಗೆಯುವಳು) ಇದೇ ನಿನ್ನ ನ್ನು ಈ ಅವಸ್ಥೆಗೆ ತಂದ ವಿಷ! ಈ ದುರಭ್ಯಾಸ
ವನ್ನು ಪ್ರಾರಂಭಿಸುವ ಮೊದಲು ಚೆನ್ನಾಗಿದ್ದೀಯಲ್ಲವೆ? ಇದು ಚಿಕ್ಕ ಮಕ್ಕಳ ಶ್ವಾಸಕೋಶವನ್ನು ಸಂಪೂರ್ಣ ಕೆಡಿಸಿಬಿಡುವುದು
ವಿನೋದ:- ಅಮ್ಮ, ನನಗೆ ಗೊತ್ತಾಗಲಿಲ್ಲ! ದೊಡ್ಡವರು ಮಾಡು
ತ್ತಾರೆಂದು ನಾನೂ ಮಾಡಿಬಿಟ್ಟೆ! ಇದನ್ನು ಬಿಟ್ಟರಾದರೂ ನಾನು ಮೊದ
ಲಿನಂತೆ ಆದೇನೆ?
---------------------------------------------------------------------------------------------
- 36 -
ಪದ-ತ್ರಿವಟೆ ತಾಳ.
ನಾನರಿಯದೆ, ಮೋಸಪೋದೆ || ಬೀಡಿಯ ಸೇದಿ ಬಲವಳಿಯಿತು ಹಾ ||
ಬೀಡಿಯ ದೋಷವ-..ತಿಳಿಯದೆ ಕುಮತಿ-ಯಾಗಿನಾ
ಬರಿಮರುಳಾಗುತಲಿ....ಈ ತೆರದೀ ಬಲಗುಂದಿದೆನು ||
ಆರೋಗ್ಯ ಮಾತೆ:- ಇನಾದರೂ ನಾನು ಹೇಳಿದಂತೆ ನೀನು
ನಡೆದರೆ ಮುಂಚಿನಂತೆಯೇ ಆಗುವಿ. ಇಂದಿನಿಂದ ಈ ಕ್ಷಣದಿಂದ
ಈ ಅಭ್ಯಾಸವನ್ನು ಬಿಟ್ಟೇ ಬಿಡಬೇಕು. ಇದನ್ನು ಸರ್ವತಃ ಮುಟ್ಟಬೇಡ
(ಎಂದು ಬೀಡಿಯ ಕಟ್ಟನ್ನು ತೆಗೆದು ಬಿಸುಡುವಳು) ಶುದ್ಧವಾದ ವಾಯುಸೇವನೆ-
ಮಿತವಾದ ಆರೋಗ್ಯಕರವಾದ ಆಹಾರ-ಮಿತ ವ್ಯಾಯಾಮ- ಇದೋ
ಈ ಶಕ್ತಿವರ್ಧಕ ಔಷಧ, ಇವುಗಳಿಂದ ನಿನ್ನ ಶಕ್ತಿಯು ಬರುವುದು. ಆದರೆ
ನೆನಪಿರಲಿ, ಬೀಡಿ ಸೇದುವುದನ್ನು ಬಿಟ್ಟರೆ ಮಾತ್ರ! ಬೀಡಿ ಬಿಟ್ಟು ಸಾಯ್‌ಕ
ಲ್ ಹಿಡಿದರೂ ಆಗುವದು ಇದೇ ಗತಿ. ಮರೆಯಬೇಡ!
ಪದ. ಆದಿ ಶಾಳ.
ಕುವರ ಲಾಲಿಸು ಮಾತ-ಬೀಡಿ ಸೌಖ್ಯನಾಶಿನಿ ||
ಬಿಡುವುದು ತನು ಸೌಖ್ಯಕೆ ನಿಜವಾರಿ ಕುವರ ||
ಬಿಡದೆ--ಬರಿದೆ-- ಕೆಡುವ ಕಡೆಗೆ-- ಒಡಲ-- ಬಿಡುವೆ ||
ಬೇಡಿ ಸೌಖ್ಯ ನಾಶಿನಿ ||೧ ||
ವಿನೋದ:- ನಿಮ್ಮ ಮಾತುಗಳನ್ನೆಂದಿಗೂ ಮರೆಯೆನು. ಅಂತೆ
ಯೇ ವರ್ತಿಸುವೆನು, ಹೇಗಾದರೂ ನಾನೊಮ್ಮೆ ಮೊದಲಿನಂತಾದರೆ ಸಾಕು.
- ಆರೋಗ್ಯ ಮಾತೆ:-ಈ ದುರಭ್ಯಾಸವನ್ನು ಬಿಡು, ಬೇರೆ ದುರ
ಭ್ಯಾಸಕ್ಕೆ ಬಲಿಬೀಳಬೇಡ, ನಾನು ಹೇಳಿದುದನ್ನು ನೆನಪಿನಲ್ಲಿಡು. ಇನ್ನು
ಗಟ್ಟಿ ಮುಟ್ಟಾಗುವೆಯೆಂದು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊ, ವಾರ
ಕೊಮ್ಮೆ ಇಲ್ಲಿಗೆ ಬಾ, ನೀನು ಏನೇನು ಮಾಡಬೇಕೆಂಬುದನ್ನೆಲ್ಲ
ಆಗಾಗ ಹೇಳುತ್ತೇನೆ.
ವಿನೋದ:-ಆಗಲಮ್ಮಾ! ನಾನು ಹೋಗಲೆ? ಇನ್ನೊಂದು ವಾರ
ಬರುವೆನು,
-----------------------------------------------------------------------------------
-37 -
ಆರೋಗ್ಯ ಮಾತೆ:-- ಮಗೂ, ಹೋಗು, ನೀನು ಗಟ್ಟಿ ಮುಟ್ಟಾಗಿ
ಸೌಖ್ಯದಿಂದ ಬಾಳುವೆ. ಧೈರ್ಯಮಾಡಿಕೊ. (ಹೋಗುವನು).
ಆರೋಗ್ಯ ಸುಂದರಿ:- ಆರೋಗ್ಯ ಮಾತೆ, ಇಂದಿನ ಪ್ರಚಾರಕ್ಕಾಗಿ
ಹೊರಡೋಣವೇ?
ಆರೋಗ್ಯಮಾತೆ:- ಹೋಗೋಣ (ಎಂದು ಇಬ್ಬರೂ ಹೊರಡುವರು )
ಪದ-(ಪ್ರೇಮ ನೇಮ . . . ಎಂಬಂತೆ) ಆದಿತಾಳ.
ಕೇರಿ ಕೇರಿ ಸೇರಿ ಸಾರಿ | ಸತತ ಸುಖವ ಗಳಿಸ ಮಾರ್ಗವ ||
ಇಹದೆ--..ಸುಖದೆ ಬಾಳೇ ಗೃಹದೆ | ಜೀವನವ ನಡೆಸಿ ಸಂಸಾರದೆ ||
ಸುಖದಾದಾರಿ ಬಿಡ ಸೇರಿ ಸುಖದಿಂ ಬಾಳಿ, ವಿಮಲತೆ ದೋರಿ |
ತಿಳಿದು ನಡೆದು ಕಡುಸುಖದ ಪದದ ರುಚಿಯರಿತು ನಡೆಯಲು || ೧ ||
ದೃಶ್ಯ ೬-ಬೀದಿ.
ಸೇಕರ ಮಿಠಾಯಿವಾಲ ತಿಮ್ಮಣ್ಣನು ದೇವದಾರದ ಮುರುಕು ಪೆಟ್ಟಿಗೆಯ
ಮೇಲೆ ಒಂದು ಹಲಿಗೆಯನ್ನಿಟ್ಟು, ಅದರಲ್ಲಿ ಸೇಕರ್ ಮಿಠಾಯಿ, ಚಕ್ಕುಲಿ, ಅಪ್ಪ ದಡ್ಡೆ,
ಸುಕುನುಂಡ ಮುಂತಾದ್ದನ್ನು ಹಿಡಕೊಂಡು ಪ್ರವೇಶಿಸುವನು).
ಪದ_ದಾದರ ತಾಳ.
ಸೇಕರ್ ಮಿಠಾಯಿ! ಮಿಠಾಯಿ ಸಿಹಿ ಬೆಲ್ಲದಿ!
ತಿಂದ ಮೇಲೇ ಬಾಲರು ಮಾಡ್ವರು ತಕ್ಕ ತೈ!
ಚಿಕ್ಕ ಮಕ್ಕಳಿರ, ದೊಡ್ಡ ಮಕ್ಕಳಿರ, ಬನ್ನಿರಿ, ತಿನ್ನಿರಿ,
ಸೇಕರ್ ಮಿಠಾಯಿ ಮಿಠಾಯಿ ಸಿಹಿಬೆಲ್ಲದಿ |
ಸೇಕರ್ ಮಿಠಾಯಿ! ಸೇಕರ್ ಮಿಠಾಯಿ! (ಎಂದು ಕುಳಿತುಕೊಳ್ಳುವನು, ಎದು
ರಲ್ಲಿ ಪೆಟ್ಟಿಗೆಯ ಮೇಲೆ ಹಲಗೆಯನ್ನು ಇಟ್ಟುಕೊಳ್ಳುವನು) ಸೇಕರ್ ಮಿಠಾಯಿ!
ಸೇಕರ್ ಮಿಠಾಯಿ!
ತಿಮ್ಮಣ್ಣ:- (ಸ್ವಗತ) ಈ ಸೇಕರ್ ಮಿಠಾಯಿಯ ರುಚಿಯೊ ಇಲ್ಲವೆ
ನನ್ನ ಪುಣ್ಯದ ಮಹಾತ್ಮ ಯೋ ಯಾವುದೋ ಬಲವಾಗಿರಬೇಕು! ಹಾಗಿಲ್ಲ
ದಿದ್ದರೆ ಮಕ್ಕಳು ನನ್ನ ತಲೆ ನೋಡುವುದೇ ತಡ, ಈ ಸೇಕರ್ ಮಿಠಾ
ಯಿಗೆ ನೊಣಗಳು ಮುತ್ತಿಕೊಳ್ಳುವಂತೆ. ಅವರು ನನ್ನನ್ನು ಸುತ್ತಿಕೊಳ್ಳು,
-----------------------------------------------------------------------------------
- 38 -
ವರು. ಎಷ್ಟು ಸಲ ತರಲಿ ಹೇಗೆ ಮಾಡಿ ತರಲಿ, ತಡು ದೂಳಿ ಪಾಕ
ಮಾಡಿ ತರಲಿ-ಕ್ಷಣದೊಳಗೆ ಕರ್ಚು! ಅಬ್ಬಬ್ಬಾ ನೊಣಗಳೆ! (ಎಂದು ತನ್ನ
ಮೈಯ ಕಜ್ಜಿ ಹುಣ್ಣುಗಳ ಮೇಲೆ ಕಂತ ನೊಣಗಳನ್ನು ಓಡಿಸುವನು, ಆ ಹುಣ್ಣು
ಗಳನ್ನು ನೋಡುತ್ತ) ಇದು ನಮ್ಮ ಕಷ್ಟಾರ್ಜಿತದ್ದು ! ಬಹಳ ಪೇಚಾಡಿ ಒಟ್ಟು
ಗೂಡಿಸಿದ ದುಡ್ಡನ್ನು ಆ ಪಕೀತಿ ಗಲ್ಲಿಯಲ್ಲಿ ಅಪ್ಪಿರಂಗಿಗೆ ಸುರಿದು
ಕ್ರಯಕ್ಕೆ ಪಡದ್ದು! ಸುಖ ಸಂಪಾದನೆ ಮಾಡಿದ್ದು ! ಕೆಟ್ಟರಂತೆ! ನನ್ನ
ದುಡ್ಡು, ರಕ್ತ ಎಲ್ಲ ಹೀರಿಕಡೆಗೆ ಕೊಟ್ಟಿದ್ದು ಈ ಹುಣ್ಣು! ಮೂರು
ತಿಂಗಳು ಆಸ್ಪತ್ರೆಯಲ್ಲಿ ಬಿದ್ದಿದ್ದೆ! ನರಕಯಾತನೆಯೆಲ್ಲ ಅನುಭವಿಸಿದೆ.
ಇನ್ನೂ ಮುಕ್ತಿಯಿಲ್ಲ. ನನ್ನ ಜನ್ಮ ಜನ್ಮಾಂತರಕ್ಕೆ ಬೇಡ ಆ ಚಿಣ್ಕಿ
ಮಿಣ್ಕಿಯರ ಸಂಗ! ಅಬ್ಬಬ್ಬಾ ನೊಣಗಳೇ! (ಎಂದು ಪುನಃ ಹುಣ್ಣಿನ ಮೇಲೆ
ಕೂತ ನೊಣಗಳನ್ನು ಹೊಡೆಯುವನು) ಸೂಳೆರ ಸಂಗ ಮಾಡುವವರು ನನ್ನನ್ನು
ಕಂಡು ಮರೆಯಬೇಕು. ಈ ಸೇಕರ್ ಮಿಠಾಯಿ ನನ್ನ ಬಳಿಯಲ್ಲಿ ಯಾವಾ
ಗಲೂ ಇದ್ದುದರಿಂದ ಬದುಕಿಕೊಂಡೆ-ಇಲ್ಲವಾದರೆ ಈ ನೋಣಗಳು
ನನ್ನ ಒಂದೊಂದು ಹುಣ್ಣನ್ನು ಬಾವಿಯಂತೆ ಕೊರೆದು ತಿಂದುಬಿಡುತ್ತಿ
ದ್ದವು! ಏ ನೊಣಗಳೆ! ನಿಮಗೆ ಎಲ್ಲವೂ ಒಂದೇ! ಈ ಹುಣ್ಣಿನಿಂದ
ಸೇಕರ್ ಮಿಠಾಯಿಗೆ-ಚಕ್ಕುಲಿಗೆ ಅಲ್ಲಿಂದ ಈ ಚರಂಡಿಯಲ್ಲಿರುವ
ಆ ಹೇಸಿಕೆಯ ಮೇಲೆ! ಅನಂತರ ಆ ಕಾಫಿಯಂಗಡಿಯ ತಿಂಡಿಯ ಮೇಲೆ
--ಬೀದಿಯಲ್ಲಿ ಕೆಮ್ಮಿನವರು ಉಗುಳಿದ್ದುದರ ಮೇಲೆ! ಪುನಃ ಈ ಹುಣ್ಣಿನ
ಮೇಲೆ! ಸರ್ವ ವ್ಯಾಪಿಗಳೆಂದರೆ ನೀವೇ! ನಿಷ್ಪಕ್ಷಪಾತಿಗಳೆಂದರೆ ನೀವೇ,
ಎಲ್ಲಿ ಬೇಕಾದರೂ ಕೂತುಕೊಳ್ಳಿರಿ! ಈ ಹುಣ್ಣಿನ ಮೇಲೆ ಮಾತ್ರ ಬರ
ಬೇಡಿರಿ (ಎಂದು ಹೊಡೆಯುವನು, ಹೊಡೆಯುವಾಗ ಕಾಲು ಹಲಿಗೆಗೆ ತಾಗಿ ಸೇಕರ್
ಮಿಠಾಯಿಗಳೆಲ್ಲ ನೆಲಕ್ಕೆ ಬೀಳುವವು.) ಅಯ್ಯೋ! ಎಲ್ಲಾ ದೂಳಿಗೆ ಬಿದ್ದು ವಲ್ಲ!
ಇನ್ನು ಹುಡುಗರು ಬಂದು ನೋಡಿದರೆ!! ( ಬೇಗ ಬೇಗನೆ ಅವುಗಳನ್ನೆಲ್ಲ ಹೆಕ್ಕಿ
ತಿಕ್ಕಿ ಒರಸಿ ಹಲಗೆಯ ಮೇಲೆ ಇಡುವನು.) ಪುಣ್ಯಕ್ಕೆ ಈ ಸೇಕರ್ ಮಿಠಾಯಿ
ಅಂಟಾಗಿದ್ದುದು ಒಳ್ಳೆಯದೇ ಆಯಿತು. ದೂಳಿನಲ್ಲಿ ಹೊರಳಿದಷ್ಟು
ಇವಕ್ಕೆ ಒಂದೊಂದು ಬಣ್ಣ ಬರುವುದು! (ಎಂದು ತಿಕ್ಕಿ ತಿಕ್ಕಿ ಹಲಗೆಯ ಮೇಲೆ
ಇಡುವನು. ಅಷ್ಟರಲ್ಲಿ ಖರ್ಜೂರ ಮಾರುತ್ತ ಮಂಜಣ್ಣ ನು ಬರುವನು.)
-------------------------------------------------------------------------------------
-39 -
-
ತಿಮ್ಮಣ್ಣ :-ಓ ಹೋ ಹೋ ! ಗಜ್ಜಳದ ಹಣ್ಣಿನ ಮಂಜಣ್ಣಾ,
ನೀನೇನು ಬರಲಿಲ್ಲ ಎಂತ ಯೋಚಿಸುತ್ತಿದ್ದೆ. ಬಾ-ಬಾ-ಬಾ, ಒಬ್ಬನೇ
ಕುಳಿತು ಬೇಸರವಾಗಹತ್ತಿದೆ. (ಮಂಜಣ್ಣನು ತನ್ನ ಕುಕ್ಕೆಯನ್ನು ಎದುರಲ್ಲಿಟ್ಟು
ಕಂಡು ತಿಮ್ಮಣ್ಣನ ಎದುರು ಕೂತುಕೊಳ್ಳುವನು),
ಮಂಜಣ್ಣ:-(ರಾಗದಿಂದ ಹಾಡುವನು ) ಚಾಪು ತಾಳ.
ಖರ್ಜೂರ ನೋಡಿರಿ ಬಣ್ಣದಿ ಹೊನ್ನು!
ತಿಮ್ಮಣ್ಣ :-- (ಕುಟೋದ್ಯ ಮಾಡುತ್ತ) ಅದರೂಳಗಿರುವುದು ಬೀದಿಯ
ಮಣ್ಣು ||
ಮಂಜಣ್ಣ:- ಸಿಹಿ ಸಿಹಿ ಗಜ್ಜಳ ನೀವೀಗ ತಿನ್ನಿ ! |
ತಿಮ್ಮಣ್ಣ :- ಕಸಕಡ್ಡಿ ನೊಣಗಳ ಗಬಗಬ ಉಣ್ಣಿ! ||
ಮಂಜಣ್ಣ:-ಏನೋ ತಿಮ್ಮಣ್ಣ, ನನ್ನ ಖರ್ಜೂರವನ್ನು ಗೇಲಿ
ಮಾಡುವೆಯಾ? ನಿನ್ನ ಸೇಕರ್ ಮಿಠಾಯಿ ಮಾತ್ರ ಬಹಳ ಚಲೋದಲ್ಲವೆ?
ಅದರಲ್ಲಿ ದೂಳು ಮಣ್ಣು ಇಲ್ಲವೆ?
ತಿಮ್ಮಣ್ಣ :- ಬರೇ ಕುಶಾಲು! ಈಗ ಇಲ್ಲಿ ಯಾರೂ ಇಲ್ಲ.
ಗಿರಾಕಿಗಳು ಒಂದಾಗ ಹಾಗೆ ಹೇಳಿಯೇನೆ? ಅವರೆದುರಿಗೆ ನಿನ್ನ ಸರಕನ್ನು
ನಾನು ಹೊಗಳಬೇಕು. ನನ್ನ ದನ್ನು ನೀನು ಹೊಗಳಬೇಕು.
ಮಂಜಣ್ಣ:-ಸರಿ, ನಿನ್ನ ಬಳಿಗೆ ಗಿರಾಕಿಗಳು ಒಂದಾಗ ನಿನ್ನ ಸೇಕರ್
ಮಿಠಾಯಿ ತಿಂದರೆ ನಿಜವಾಗಿಯೂ ಆ ರೋಗ ಬರುವದು ಎಂತ ನಾನು
ಬೊಬ್ಬೆ ಇಡುತ್ತೇನೆ, ನೀನು...
ತಿಮ್ಮಣ್ಣ :-ಏನೆಂದೆ? ರೋಗ ಬರುವ ತಿಂಡಿಯನ್ನು ಯಾರು
ಮುಟ್ಯಾರು?
ಮಂಜಣ್ಣ :-ರೋಗದ ಸಂಗತಿ ಯಾರು ಮಾತಾಡಿದರು! ನಾನೆಂ
ದುದ್ದು ಆರೋ....ಗ್‌ಯ! ನಿನ್ನ ಸೇಕರ್ ಮಿಠಾಯಿ ತಿಂದರೆ ನಿಜವಾ
ಗಿಯ ಆರೋಗವಿಲ್ಲದವರಿಗೆ ಆರೋಗ ಬರುವುದು ಎಂದು.
-----------------------------------------------------------------------------
- 40 -
ತಿಮ್ಮಣ್ಣ:-ಸರಿ, ಈ ರೀತಿ ನನ್ನೆ ಹುಣ್ಣನ್ನು ತೋರಿಸುತ್ತ ನಿನ್ನ
ದಪ್ಪ ನಾಲಿಗೆಯಿಂದ ಹೇಳಿಬಿಟ್ಟರೆ ಒಂದಕ್ಕೊಂದು ಅರ್ಥವಾದೀತು
ಮಂಜಣ್ಣಾ! ನಿನ್ನ ನಾಲಿಗೆಗೆ ಅರ ಹಾಕಿಕೊ!
ಮಂಜಣ್ಣ:- ಹೂಂ. ಆರೋಗ್ಯ, ಆರೋಗ್ಯ, ಆರೋಗಯ, ಆರೋ
ಗ್‌ಯ, ಆರೋಗ್ಯ! ಅಬ್ಬಬ್ಬ! ಎಷ್ಟು ಕಷ್ಟ! ಆ ಸುಟ್ಟ ಹೆಸರು! ಸರಿ “
ಆರೋಗ್ಯ ಇಲ್ಲದವರಿಗೆ ಆರೋಗ್ಯ” ಬರುವುದು. ಸರಿಯಾಯಿತೆ?
ತಿಮ್ಮಣ್ಣ :--ಸರಿ, ಸು, ಮರೆಯ ಬೇಡ, ಮರೆತರೆ ನಾನೂ ಹೇಳಿ
ಬಿಟ್ಟೇನು, ಜಾಗ್ರತೆ!
ಮಂಜಣ್ಣ:- ಏನೆಂದು?
ತಿಮ್ಮಣ್ಣ:- ನಿನ್ನ ಗಜ್ಜಳದ ಹಾಡಿನ ಸೊಲ್ಲಿಗೊಂದು ಅಡ್ಡ ಸೊಲ್ಲು.
ಮಂಜಣ್ಣ:- ಹೇಗೆ?
ತಿಮ್ಮಣ್ಣ:- ನಿನ್ನ ಸೊಲ್ಲಾಗಲಿ, ಮತ್ತೆ ನನ್ನ ಅಡ್ಡ ಸೊಲ್ಲು!
ಮಂಜಣ್ಣ:-“ಖರ್ಜೂರ ನೋಡಿರಿ ಬಣ್ಣ ದಿ ಹೊನ್ನು
ತಿಮ್ಮ:- 'ಅದರೊಳಗಿರುವುದು ಬೀದಿಯ ಮಣ್ಣು”
ಮಂಜಣ್ಣ:- “ಸಿಹಿ ಸಿಹಿ ಗಟ್ಟಳ ನೀವೀಗ ತಿನ್ನಿ
ತಿಮ್ಮ:- “ಕಸಕಡ್ಡಿ ನೊಣಗಳ ಗಬಗಬ ತಿನ್ನಿ”
ತಿಮ್ಮ: ಹ ಹಾ ಹ್ಯಾಹೇಗೆ? ನಿನ್ನ ಆರೋಗ ಬಂದರೆ ಅದಕ್ಕೆ
ಇದು ಮದ್ದು! (ಮಂಜಣ್ಣನು ಬೆರಳು ಲೆಕ್ಕ ಮಾಡುತ್ತಿರುವನು. ಅದನ್ನು ಕಂಡು)
ಮಂಜಣ್ಣಾ ಅದೇನು ಲೆಕ್ಕ?
ಮಂಜಣ್ಣ :-ಇಂದಿನ ವ್ಯಾಪಾರದಲ್ಲಿ ಕಲ್ಲು ಕಟಿಗದೇವರ ಚಮ
ತ್ಕಾರ ಇರಬೇಕು ನೋಡು! ಕಲ್ಲು ಕುಟಿಗ ದೇವರೇ, ನಿನ್ನ ಕಂಭದ ಎದುರು
ಹಣ್ಣು ಕಾಯಿ ಇಟ್ಟು ಅಡ್ಡ ಬೀಳುತ್ತೇನೆ. ಇದೇ ರೀತಿ ನಡೆಸಪ್ಪಾ!
ಬಡವನನ್ನು !
ತಿಮ್ಮ:-ಅದೇನು ಚಮತ್ಕಾರ? ಹೇಳು! ಹೇಳು! ನಾನೂ ಹಣ್ಣು
ಕಾಯಿ ಇಡುತ್ತೇನೆ.
---------------------------------------------------------------------------------------
- 41-
ಮಂಜಣ್ಣ :-- ನೋಡು, ನಾನು ಮನೆಯಿಂದ ಹೊರಡುವಾಗ
ಮೂರು ಮೂರು ಸಲ ಸರೀ ತೂಕ ಮಾಡಿ 20 ಸೇರು ಗಟ್ಟಳ ತಂದಿದ್ದೆ.
ಸೇರು ಕಲ್ಲಿನ ಬದಲಿಗೆ ಅರ್ಧ ರಾತ್ತು ಕಲ್ಲೆ ಇಟ್ಟು ಮಾರಿದೆ. ಹಾಗೆ
ಮಾಡಿದರೆ 5 ಸೇರಿಗೆ ಆರು ಸೇರು ಆಗುತ್ತದೆ. ನಾನು ತೂಕ ಮಾಡಿ
ನೋಡಿದ್ದೇನೆ. ಸಂಶಯವೇ ಇಲ್ಲ. ಎಂದ ಮೇಲೆ 5 ಸೇರಿಗೆ 6 ಸೇರು 10 ಸೇರಿಗೆ?
ತಿಮ್ಮ:~-12 ಸೇರು.
ಮಂಜಣ್ಣ:- 20 ಸೇರಿಗೆ?
ತಿಮ್ಮಣ್ಣ :-12 ಸೇರು, 12 ಸೇರು? 24 ಸೇರು.
ಮಂಜಣ್ಣ:- ಈಗ ನಾಲ್ಕು ಸೇರು ಉಂಟು. ಹಾಗಾದರೆ ನಾನು ಮಾರಿದ್ದು?
ತಿಮ್ಮಣ್ಣ :-20 ಸೇರು.
ಮಂಜಣ್ಣ:-ಸೇರಿಗೆ ಒಂದಾಣೆಯಂತೆ ಮೂರಿದೆ. ಯಾರೂ ಒಂದು
ಕಾಸೇನಾದರೂ ಪರಾಮೋಶಿಯಿಂದ ಹೆಚ್ಚು ಕೊಡಲಿಲ್ಲ. ಎಂದ ಮೇಲೆ
ನನ್ನ ಕೈಯಲ್ಲಿ ಎಷ್ಟು ದುಡ್ಡಾಗಬೇಕು'
ತಿಮ್ಮಣ್ಣ :-20 ಆಣೆ; ಒಂದು ರೂಪಾಯಿ, ನಾಲ್ಕಾಣೆ !
ಮಂಜಣ್ಣ :- ಅದೇ ಈಗ! ಒಂದು ರೂಪಾಯ. ಎಂಟಾಣೆ ಉಂಟು!
ಕೆಲವು ದೇವಸ್ಥಾನಗಳಲ್ಲಿ ದೇವರು ಬೆಳೆಯುವಂತೆ ನನ್ನ ಖರ್ಜೂರವೇ ಇದ್ದ
ಕ್ಕಿದ್ದ ಹಾಗೆ ಬೆಳೆಯಿತೆ? ಈ ಖರ್ಜೂರಕ್ಕೆ ಪೂಜೆ ಮಾಡಲೆ? ಕಲ್ಲು ಕುಟ್ಟಿ
ಗನಿಗೆ ಹಣ್ಣು ಕಾಯಿ ಮಾಡಲೆ? ಯಾರಿಗೆ ಹರಕೆ ಮಾಡಲಿ!
ತಿಮ್ಮಣ್ಣ :-( ಆಲೋಚಿಸುತ್ತ ; ತಡೆ, ಹೇಳುತ್ತೇನೆ. ಮೊದಲಾಗಿ
ಹೇಳು--ನೀನು ಬೆಳಗ್ಗೆಯಿಂದ ಈ ವರೇಗೂ ಎಲ್ಲಿ ಕೂತಿದ್ದೆ?
ಮಂಜಣ್ಣ:-ದೂಳೀಗಲ್ಲಿಯಲ್ಲಿ!
ತಿಮ್ಮಣ್ಣ:-ಸು, ಆ ಮಾರ್ಗದಲ್ಲಿ ಮೋಟರ್ ಕಾರುಗಳು ಓಡುತ್ತಿ
ದ್ದುವೆ?
-----------------------------------------------------------
- 42 -
ಮಂಜಣ್ಣ:- ಅವುಗಳಿಗೆ ಗಡಿಮಿತಿಯುಂಟೆ? ಕ್ಷಣಕ್ಷಣಕ್ಕೂ ಅತ್ತ
ಇತ್ತ-“ಪೇಂಕ್, ಪೇಂಕ್" ಮಾಡುತ್ತಲೇ ಇದ್ದುವು.
ತಿಮ್ಮಣ್ಣ :- ಹಾಗಾದರೆ, ಮಂಜಣ್ಣಾ, ನೀನು ಪೂಜೆಮಾಡಬೇ
ಕಾದ್ದು ಖರ್ಜೂರಕ್ಕೂ ಅಲ್ಲ, ಕಲ್ಲು ಕುಟ್ಟಿಗನಿಗೂ ಅಲ್ಲ! ಆ ಮೋಟಾರ್
ಕಾರುಗಳಲ್ಲಿ ಕೂತುಕೊಂಡು ಓಡುವ ಮಹಾರಾಯರುಗಳಿಗೆ
ಇನ್ನಷ್ಟು ಕಾರಿಗಳು ಹೆಚ್ಚಾಗಲೆಂದು ದೇವರಿಗೆ ಹರಕೆ ಹೇಳಿಕೊ!
ಮಂಜಣ್ಣ :- ಯಾಕಪ್ಪಾ! ಅದಕ್ಕೂ ಇದಕ್ಕೂ ಏನು ಗಂಟು!
ತಿಮ್ಮಣ್ಣ:-ನಿನ್ನ ಅಂಟು ಖರ್ಜೂರಕ್ಕೂ ಅವರ ಕಾರಿನಿಂದೇಳುವ
ದೂಳಿಗೂ ಗಂಟು! ನಿನ್ನ ಅಂಟು ಮದೈ ವಿರ್ಜೂರವು ಸೋಳೆಸೋಳೆ
ಯಾಗಿ ಕಾಣಲೆಂದು ಕ್ಷಣಕ್ಷಣಕ್ಕೂ ಅದನ್ನು ಬಿಡಿಸುತ್ತಾ ಮಗುಚುತ್ತಾ
ಇದ್ದೆ, ದೂಳು ಬಂದು ಅದರಲ್ಲಿ ಬೆರೆಯುತ್ತಾ ಇತ್ತು. ಮಂಜಣ್ಣಾ, ನಿನ್ನ
ಖರ್ಜೂರ ಬೆಳೆಯಲಿಲ್ಲ. ಅದಕ್ಕೆ 4 ಸೇರಿ ದೂಳು ಬಂದು ಸೇರಿತು.
ಅಷ್ಟೆ! ಸರಿ, ತಕ್ಕೊಂಡು ತಿಂದರು. ದೊಡ್ಡವರ ಸವಾರಿಯ ಡೌಲು, ಬಡವರ
ಬಾಯಿಗೆ ದೂಳು!
ಮಂಜಣ್ಣ:- ಈಗ ತಿಳಿಯಿತು. ಹಾಗೆಯೇ ಆಗಿರಬೇಕು. ಇನ್ನು ನಾಳೆ
ಮಾತಾಡೋಣ!
ತಿಮ್ಮ: ಏನು? ಇನ್ನೂ 4 ಸೇರು ಎರ್ಜೂರವಿದೆಯಲ್ಲ? ಮಾರುವು
ದಿಲ್ಲವೆ?
ಮಂಜಣ್ಣ:- ಅದಕ್ಕೆ ಬೆಳಗ್ಗೆಯೇ ಗಿರಾಕಿಯಾಗಿದೆ. ಅಲ್ಲಿ ಕೊಟ್ಟು
ಹೋದರಾಯಿತು. ಗಿರಾಕಿಯಾದ್ದು ಬಿಟ್ಟು ಇಲ್ಲೇಕೆ ಕಾಯಬೇಕು?
ತಿಮ್ಮ:- ನಿನ್ನ ಖರ್ಜೂರವನ್ನು ಬೆಳಗ್ಗೆ ತೆಗೆದುಕೊಳ್ಳದೆ ಸಾಯಂಕಾ
ಲಕ್ಕೆ ಸಾಟೆ ಮಾಡಿ ಇಟ್ಟವರು ಯಾರಪ್ಪ?
ಮಂಜಣ್ಣ :-ಇಲ್ಲೇ ಸವಿಾಪ ಆ ಪಚೀತಿಗಲ್ಲಿಯ ಆಪ್ಪಿರಂಗಿ,
ತಿಮ್ಮಣ್ಣ :-ಮಂಜಣ್ಣಾ! ದಮ್ಮಯ್ಯಾ ಮಹಾರಾಯ! ಈಗ
ಕತ್ತಲಾಗುವಾಗ ಅಲ್ಲಿಗೆ ಹೋಗಬೇಡ. ಸಾಯಂಕಾಲದ ಸಾಟೆಯ
ಗುಟ್ಟು ಈಗ ಗೊತ್ತಾಯಿತು! ನಿನಗೂ ಬಲೆ ಬೀಸಿದಾ ಳೆಯೆ? ಸಲ 'ಮಂಜ
----------------------------------------------------------------------------
-43 -
-
ಣ್ಣಯ್ಯಾ, ಸಾಯಂಕಾಲ ಹೋಗುವಾಗ ಇತ್ತಲಾಗಿಂದ ಬನ್ನಿ , ಖರ್ಜೂ
ರ ಬೇಕು' ಬನ್ನಿ ಬನ್ನಿ ಕಾದು ಕೂತುಕೊಳ್ಳುತ್ತೇನೆ' ಎಂದು ವೈಯಾರ
ದಿಂದ ಹೇಳಿದ್ದಳು. ನೀನು ನಂಬಿದ್ದೆ ಅಲ್ಲವೆ? ಹೋಗು-- ಕೈಯಲ್ಲಿದ್ದ
ಒಂದೂವರೆ ರೂಪಾಯಿಯ ಇಲ್ಲ. ಖರ್ಜೂರವೂ ಇಲ್ಲ. ನಾಳೆ
ಆಸ್ಪತ್ರೆಯೇ ಗತಿ!
ಮಂಜಣ್ಣ:-ಹಾಗೆ ಹೇಳಿದಳೆಂದು ನಿನಗೆ ಹೇಗೆ ಗೊತ್ತಾಯಿತು?
ತಿಮ್ಮಣ್ಣ ನನಗೂ ಹಾಗೇ ಹೇಳಿದ್ದಳು. ನಾನು ನಂಬಿ ಕೆಟ್ಟೆ.
ಸಾಯಂಕಾಲ ಮಾರದೆ ಉಳಿದ ಸೇಕರ್ ಮಿಠಾಯಿಗೊಂದು ಸಾಟೆ
ಉಂಟೆಂತ-ಈಗ ನೀನು ಹೋಗುವಂತೆ-- ನಾನೂ ಹೋಗಿ ಈ ಅವಸ್ಥೆಗೆ
ಬಂದೆ! ನೋಡು, ಈ ಹುಣ್ಣುಗಳು! ಇಷ್ಟು ಮಾತ್ರ ತಾನೆ? ಮರು
ತಿಂಗಳು ಆಸ್ಪತ್ರೆಯಲ್ಲಿದ್ದೆ ! ಅಯ್ಯೋ! ಆಗಿನ ನನ್ನ ನರಕಯಾತನೆಯನ್ನು
ಯೋಚಿಸಿದರೆ ಮೈ ಈಗಲೂ ಜುಮ್ ಎನ್ನು ವುದು. ಪೈಲ್ವಾನ್ ನಂತೆ
ಗಟ್ಟಿ ಮುಟ್ಟಾಗಿದ್ದ ನಾನು ಈಗ ಹೇಗಾಗಿದ್ದೇನೆ ನೋಡು! ನನ್ನ ಬಾಳು
ಹಾಳಾಯ್ತು! ನಿನ್ನ ಖರ್ಜೂರ ಮಾರಾಟವಾಗದಿದ್ದರೆ ಉಪವಾಸವಾದರೂ
ಬೀಳು! ಅವಳ ಆ ಸಾಯಂಕಾಲದ ಸಾಟೆಗೆ ಮಾತ್ರ ಮರುಳಾಗಬೇಡ!
ಮಂಜಣ್ಣ:-ಏನು? ಅವಳಿಗೆ ಅಂತಹ ಭಯಂಕರರೋಗಗಳಿರು
ವುವೆ? ನೋಡಲಿಕ್ಕೆ ದುಂಡುದುಂಡಾಗಿದ್ದಾಳೆ!
ತಿಮ್ಮಣ್ಣ :-ಮಂಜಣ್ಣಾ, ಸ್ವಲ್ಪ ಕೂತುಕೊ, ಎಲ್ಲ ಹೇಳುತ್ತೇನೆ.
ಈ ಸೂಳೆರು ದುಂಡುದುಂಡಗಾಗಿ ಚಂದವಾಗುವುದೇ ರೋಗ ಹಿಡಿದ
ಮೇಲೆ. ಕೊಳೆತ ಕುಂಬಳಕಾಯಿಯಂತೆ ಹೊರಗೆಲ್ಲಾ ಸರಿ ನಾನು ತಿಳಿ
ಯದೆ ಕೆಟ್ಟೆ! ನೀನು ತಿಳಿದೂ ಕೆಡಬೇಡ, ಜೋಕೆ! ಜೋಕೆ! ಈ ಅಪ್ಪಿರಂಗಿ
ವಿಷಯ ಮಾತ್ರ ನಾನು ಹೇಳುತ್ತೇನೆಂತ ತಿಳಿಯಬೇಡ, ದೊಡ್ಡ ಸೂಳೇ
ರು, ಭಾರೀ ಸೂಳೇರು, ಸಣ್ಣ ಸೂಳೇರುತುಂಡು ಸೂಳೇರುಗುಟ್ಟಿನ
ಸೂಳೆರು ಎಲ್ಲರೂ ಒಂದೇ. ಬಿಳೀ ಕಾಗೆ ಸಿಕ್ಕೀತು, ಅತ್ತೀ ಹೂ
ಸಿಕ್ಕೀತು, ಆದರೆ ರೋಗವಿಲ್ಲದ ಸೂಳೆ ಸಿಕ್ಕಲಿಕ್ಕಿಲ್ಲ! ಸೂಳೆಯೆಂದರೆ ಕಾಫಿ
ಹೋಟೆಲಿನಲ್ಲಿ ಕಪ್ ತೊಳೆಯುವ ನೀರಿನ ಬಾಲ್ಸಿಯಂತೆ! ಊರ ಕೆರೆಯಂತೆ!.
ಪಬ್ಲಿಕ್ ಲೇಟ್ರಿನ್‌ನಂತೆ!
---------------------------------------------------------------------------------
- 44-
ಮಂಜಣ್ಣ-ಆದರೆ ನಾನು ಖರ್ಜೂರ ಮಾರಲಿಕ್ಕೆ ಹೋಗುವದ
ಲ್ಲವೆ? ಅವಳಿಗೆ ರೋಗವಿದ್ದರೆ ನನಗೇನು?
ತಿಮ್ಮಣ್ಣ :-ನಾನೂ ಹಾಗೇ ಯೋಚಿಸಿ ಹೋಗಿ ಕೆಟ್ಟೆ! ನಾನೇಕೆ
ನೀನೇಕೆ? ಎಂತೆಂತಹ ದೊಡ್ಡ ಬುದ್ದಿವಂತರೂ ಈ ಸಂಜೆ ಸಾಟಿಯ ಬಲೆಗೆ
ಸಿಕ್ಕಿಬಿದ್ದಿದ್ದಾರಂತೆ! ಡಾಕ್ಟರ್, ವಕೀಲರು, ಜವಳಿ ಸಾಹುಕಾರ್, ಸರಾ
ಫರು ಇಂಥವರೆಲ್ಲ ಈ ಗಾಳಕ್ಕೆ ಸಿಕ್ಕುತ್ತಾರಂತೆ! ನೀನು ಬೀಳುವುದು
ದೊಡ್ಡದೆ?
ಮಂಜಣ್ಣ:-ಅದು ಹೇಗೆ ತಿಮ್ಮಣ್ಣಾ?
ತಿಮ್ಮಣ್ಣ :-ಕೇಳು ಹೇಳುತ್ತೇನೆ. ಯೋಚಿಸು-ಭಾರೀ ದೊಡ್ಡ
ಸೂಳೆ ರಾತ್ರಿ 8 ಗಂಟೆಗೆ ತನಗೆ ಅಸ್ವಸ್ಥ ಕಠಿಣ ಅಸ್ವಸ್ಥ-ಕೂಡಲೆ
ಬರಬೇಕು ಅಂತ ಡಾಕ್ಟರರಿಗೆ ಜನ ಓಡಿಸುತ್ತಾಳೆ. ಡಾಕ್ಟರು ಹೋಗ
ಬೇಕೋ ಬೇಡವೋ?
ಮಂಜಣ್ಣ:-ಹೋಗದೆ ಇದ್ದರೆ ಅವರು ಡಾಕ್ಟರರೇ ಅಲ್ಲ.
ತಿಮ್ಮಣ್ಣ:-ಸರಿ, ಡಾಕ್ಟರರು ಹೋದರು, ಹೆಂಗಸರ ದೇಹ
ಪರೀಕ್ಷೆಯಲ್ಲಿ ವೇ? ಬೇರೆ ಯಾರೂ ಇರಕೂಡದು, ಡಾಕ್ಟರರೂ ಅವಳೂ
ಮಾತ್ರ ಆ ಕೋಣೆಯಲ್ಲಿ ! ಅಗಲವಾದ ಮಂಚದ ಮೇಲೆ ಆಚೆ ಬದಿಯಲ್ಲಿ
ಅವಳು ಮಲಗಿದ್ದರೆ ಡಾಕ್ಟರರು ಪರೀಕ್ಷೆ ಮಾಡುವುದು ಹೇಗೆ? ಮಂಚದಲ್ಲಿ
ಅವಳ ಬಳಿಯಲ್ಲಿ ಕೂತುಕೊಳ್ಳಲೇಬೇಕು. ಆಗ ಅವಳು “ಎದೆ ನೋವು
ಬದಿನೋವು, ಬೆನ್ನು ನೋವು, ಕಿಬ್ಬೊಟ್ಟೆ ನೋವು, ತೊಡೆ ನೋವು, ಕೆನ್ನೆ
ನೋವು-ಅಲ್ಲಿ ಒತ್ತಿ ನೋಡಿ, ಇಲ್ಲಿ ಹಿಡಿದು ನೋಡಿ, ಕಣ್ಣು ಪರೀಕ್ಷೆ
ಮಾಡಿ, ಬಾಯಿ ಪರೀಕ್ಷೆ ಮಾಡಿ' ಎಂದು ಉಟ್ಟುಕೊಂಡಿದ್ದ ಸಣ್ಣ
ವಸ್ಯದ ತುಂಡನ್ನು ಓರೆ ಓರೆ ಮಾಡಿ ಅಂಗಾಂಗಗಳ ಸೌಂದರ್ಯವನ್ನು
ಬೀರಿ ಲಜ್ಜೆ ವೈಯಾರಗಳನ್ನು ತೋರಿ, ಕಣ್ಣಿನಿಂದಲೂ ಮುಗುಳು ನಗೆ
ಯಿಂದಲೂ ನಾಲ್ಕು ಬಾಣ ಹೊಡೆದಳೆಂದರೆ ಬೀಳದ ಮೃಗ ಬೀಳಲೇ
ಬೇಕು! visiting fees ಪಡೆಯುವ ಆಶೆಯಿಂದ ಹೋದ ಡಾಕ್ಟರರು
ತಾನೇ ವಿಸಿಟಿಂಗ್ ಪೀಸ್ ಕೊಟ್ಟು ಪುನಃ ಪುನಃ ವಿಸೀಟ್ ಕೊಟ್ಟು
------------------------------------------------------------------------
- 45 -
ಕಡೆಗೆ ಕಟ್ಟು ಬರುವರು! ರೋಗಗಳ ಭಯಂಕರ ಸ್ಥಿತಿಯನ್ನು ತಿಳಿದ
ಡಾಕ್ಷರರೇ ಅನೇಕ ವೇಳೆ ಇಂತಹ ಬಲೆಗೆ ಬೀಳುವಾಗ ಜವಳೀ ಸಾಹು.
ಕಾರರು, ಚಿನ್ನದ ವ್ಯಾಪಾರಿಗಳು ಇವರನ್ನು ಕಡೆ ಹಾಕುವುದು ದೊಡ್ಡದೆ?
150 ರೂಪಾಯಿಯ ಶೀರೆ ತಕೊಳ್ಳಬೇಕೆಂದಿದೆ, 500 ರೂಪಾಯಿಯ.
ವಜ್ರದ ಉಂಗುರ ಬೇಕೆಂದಿದೆ, ನನಗೆ ಬರಲಿಕ್ಕೆ ನಾಚಿಕೆ ಆಗುತ್ತದೆ. ದಯ
ಮಾಡಿ ನಮೂನೆವಾರು ಹಿಡಕೊಂಡು 8 ಗಂಟೆಗೆ ಬರಬೇಕು' ಎಂದು
ಹೇಳಿಕಳುಹಿಸುವುದೇ ತಡ: ಲಾಭದ ಆಸೆಗೆ ಓಡಿ ಓಡಿ ಹೋಗುತ್ತಾರೆ.
ಹೋದ ಮೇಲೆ ಸವಿ ಸವಿ ಮಾತು-ಒಲವು ಒಯ್ಯಾರ-ಗಾಯನ--
ಕಾಫಿ ಟಿಪ್ಪಿನ್-ವೀಳ್ಯ, ಕೊನೆಗೆ 'ಇದು ಸರಿಯಾಗಲಿಲ್ಲ. ಈ ನಮೂನೆ.
ಬೇಡ ಬೇರೆ ನಮೂನೆಯದಾಗಬೇಕು-ನಾಳೆ ಖಂಡಿತ ತರಬೇಕು--
ಬರಬೇಕು-ನನ್ನಾಣೆ ಉಂಟು-ಬರಬೇಕು-ಕಾದುಕೂತುಕೊಳ್ಳುತ್ತೇನೆ
ಹೀಗೆ ನಾಳೆ ಅಲ್ಲದಿದ್ದರೆ ನಾಡದಿನೊಳಗೆ ಮೃಗ ಬಳೆಯೊಳಗೆ ಬಿದ್ದೆ ಬಿಡು
ವುದು! ವಕೀಲರಿಗೆ ಗಿಲೀಟು ಹಚ್ಚಿ ಬಿಡುತ್ತಾರೆ! ಹೇಗೆಂಬೆಯಾ? 'ಏನೋ
ಒಂದು ಅತ್ಯಗತ್ಯ ಆಲೋಚನೆ ಕೇಳಲಿಕ್ಕಿದೆ; ಬಹಳ ಜರೂರಿದ್ದು; ಖಾಸಗಿ;
ಆಫೀಸಿಗೆ ಬರಲಿಕ್ಕೆ ಸಂಕೋಚವಾಗುತ್ತದೆ. ದಯಮಾಡಿ ಈಗಲೇ ಬರ
ಬೇಕು' ಎಂತ 9 ಗಂಟೆಗೆ ವಕೀಲರಲ್ಲಿಗೆ ಜನ ಕಳುಹಿಸಿ ಬಿಡುವರು.
'ಏನೋ ಕ್ರಿಮಿನಲ್ ನಡೆದಿರಬೇಕು ಭಾರಿ ಫೀಸು ಸಿಕ್ಕುವ ಸಂದರ್ಭ'
ಎಂತ ಬಾಯಿ ಕಳೆದುಕೊಂಡು ವಕೀಲರು ಹೋಗುವರು, ಅಲ್ಲಿ ಉಪ
ಚಾರವೇ ಉಪಚಾರ ನೆವನಕ್ಕೆ ಮಾತ್ರ ಯಾವುದೋ ಒಂದು ಬಾಡಿಗೆ
ಚೀಟಿನ ವಿಷಯ ಏನೋ ಒಂದು ಪ್ರಶ್ನೆ ಅಂತೂ ಕೊನೆಗೆ ಮಗ ಬಲೆಗೆ.
ಬಿತ್ತೆಂದಾದ ಮೇಲೆ 'ನಾಳೆ ಬರಬೇಕು-ಖಂಡಿತ ಬರಬೇಕು ನನ್ನಾಣೆ
ಉಂಟು-ಹೂಂ ಊಂ, ಬರಬೇಕು-ಕಾದು ಕೂತುಕೊಳ್ಳುತ್ತೇನೆ-ಕಕ್ಷಿ.
ಗಾರರ ನಡುವೆ ತಮಗೆ ನಮ್ಮಂತವರ ನೆನಪಾಗುತ್ತದೆ? ಆದರೆ ನನ್ನಾಣೆ
ಉಂಟು! ಬರಬೇಕು' ಎಂದು, ಮುಗಿಯಿತೆ? ಹೆಚ್ಚು ಕಡಿಮೆ ಇದೇ ರೀತಿ
ಯಲ್ಲಿ ಎಂತೆಂತಹವರು ಈ ಸಂಜೆ ಸಾಟಿಗೆ ಸಿಕ್ಕಿ ಬೀಳುವಾಗ ಎಳೆಪಾಯದ
ಹುಡುಗರನ್ನು ಒಂದೇ ಒಂದು ನೋಟದಿಂದ ಎದೆ ತಳಮಳ ಮಾಡಿ ತಮ್ಮ
ಬಗಲೊಳಗೆ ಹಾಕಿಕೊಳ್ಳುವುದು ಅವರಿಗೊಂದು ಕ್ಷಣದ ಲೀಲೆ.ಮಂಜ
----------------------------------------------------------------------------
- 46 -
ಣ್ಣಾ, ಆದುದರಿಂದ ಜಾಗ್ರತೆ! ಜಾಗ್ರತೆ! ಎಷ್ಟೇ ಬುದ್ದಿವಂತನಾಗಲಿ!
ಅವರ ಬಳಿಗೆ ಒಮ್ಮೆ ಹೋದನೆಂದರೆ ಕೂಡಲೆ ಬುದ್ದಿ ನಾಶ, ಅನಂತರ ಧನ
ನಾಶ, ಆ ಮೇಲೆ ದೇಹನಾಶ - ಇಷ್ಟು ಮಾತ್ರವೇ? ಪಿತ್ರಾರ್ಜಿತ ಹಾಗೂ
ಸ್ವಾರ್ಜಿತ ಆಸ್ತಿಪಾಸ್ತಿಗಳನ್ನು ಈ ಸೂಳೆಯರ ಎದೆ ಮೇಲೆ ಹಾಕಿ
ಕೊನೆಗೆ ಪ್ರತಿಫಲ ರೂಪವಾಗಿ ತಾನು ಪಡೆದ ತರತರದ ರೋಗಗಳನ್ನು
ತನ್ನ ಹೆಂಡತಿಯ ಮೂಲಕ ಸಂತಾನ ಪಾರಂಪರ್ಯುದ ರಕ್ತದಲ್ಲೇ
ತುಂಬಿಸಿ ಬಿಡುವರಂತೆ! ಹೀಗೆ ಆ ಬಡ ಸಂಸಾರಕ್ಕೆ ಪಿತ್ರಾರ್ಜಿತವೆಂದು
ಸಿಗುವುದು ಈ ರೋಗಗಳು ಮಾತ್ರ! ತಿಳೀತೆ. ಎಷ್ಟೋ ಮಕ್ಕಳ ಕಣ್ಣು
ದೋಷ, ಕುರುಡುತನ, ಕಿವುಡುತನ, ಬುದ್ಧಿ ಮಾಂದ್ಯ, ವೃಣ ಶರೀರ ಇವೆ
ಲ್ಲವೂ ಅವುಗಳ ಪಿತ್ರಾರ್ಜಿತ ಪ್ರಸಾದವಂತೆ! ಪಿತ್ರಾರ್ಜಿತ ಪ್ರಸಾದ
ಮೊನ್ನೆ ಆರೋಗ್ಯ ವರ್ಧಕ ಸಭೆಯವರೊಬ್ಬರು ಈ ವಿಷಯ ಲೆಕ್ಟರ್
ಕೊಡುತ್ತಿದ್ದರು. ಅದನ್ನು ಕೇಳಬೇಕಿತ್ತು ನೀನು!
ಮಂಜಣ್ಣ:-ಸರಿ, ಈಗ ಗೊತ್ತಾಯಿತು, ಇಷ್ಟೆಲ್ಲಾ ವಿಷಯ
ನಿನಗೆ ಹೇಗೆ ತಿಳಿಯಿತೆಂದು, ಮೊದಲು ಅನುಭವಿಸಿದ ಮನಸ್ಸಿಗೆ ಲೆಚ್ಚರ್
ನವರ ಪ್ರತಿಯೊಂದು ಮಾತು ಹೌದೆಂದು ಕಂಡಿತು. ಅಲ್ಲವೆ? ಅವರ
ಮಾತುಗಳನ್ನು ನಿನ್ನ ಅನುಭವದ ಒರೆಗಲ್ಲಿನಲ್ಲಿ ಹಾಕಿ ತಿಕ್ಕಿದೆ ರೂಪಾಯಿಗೆ
ಹದಿನಾರಣೆ ಮಾತು, ಎಂತ ತಿಳಿದುಬಂತು. ಇಷ್ಟೆಲ್ಲಾ ತಿಳಿದುಕೊಂಡೂ
ನಾನು ಆ ಸಂಜೆ ಸಾಟೆಗೆ ಹೋದೆನೆ? ಖರ್ಜೂರ ಮಾರಾಟವಾಗದಿದ್ದರೆ
ನಾಳೆ ಆಗುತ್ತದೆ. ಇಲ್ಲೇ ಕೂತುಕೊಳ್ಳುತ್ತೇನೆ. ಇದೇನು? ತಿಮ್ಮಣ್ಣ,
ಇನ್ನೂ ಇಷ್ಟು ಸೇಕರ' ಮಿಠಾಯಿ ಉಳಿದಿದೆ. ನಿಜವಾಗಿಯೂ ಇದು
ಬೆಳಗ್ಗೆ ತಂದುದಲ್ಲ. ಒಂದು ಸರ್ತಿ ತಂದದ್ದು ಕೆರ್ಚಾಗಿ ಎರಡನೇ ಸಲ
ತಂದದ್ದಾಗಿರಬೇಕು.
ತಿಮ್ಮಣ್ಣ :- ಹ ಹ ಹ್ಯಾ! ನಿನ್ನ ಕಣ್ಣು ಕುಟ್ಟಿಗನ ಚಮತ್ಕಾರದಂತೆ
ನನಗೂ ಆಯಿತು. ಇಂದಿನ ವ್ಯಾಪಾರದಂತೆ ಇಷ್ಟರ ವರೇಗೆ ಆಗಲಿಲ್ಲ.
ಇದು ಎರಡನೇ ಸಲ ತಂದದ್ದಲ್ಲ! 5ನೇ ಸಲದ್ದು ! ನೋಡು ರೊಕ್ಕ.!
5 ರೂಪಾಯಿಗೆ ಕಡಿಮೆ ಆದೀತೆ?
-----------------------------------------------------------------------------------------
- 47 -
ಮಂಜಣ್ಣ:-ಅದೇನಪ್ಪಾ! ಇಂದು ಅಷ್ಟು ಸೇಕರ' ಮಿಠಾಯಿ
ಮಾಡಿದೆ?
ತಿಮ್ಮಣ್ಣ:- ಹೇಳುತ್ತೇನೆ, ಕೇಳು ಇಂದು ಬೆಳಗ್ಗೆ ಸೇ ಕರ್
ಮಿಠಾಯಿ ಮಾಡಲಿಕ್ಕೆ ತೊಡಗಿದೆ. ಎಂದೋ ಅಗ್ಗದಲ್ಲಿ ಸಿಕ್ಕಿತೆಂದು
ಜೋಲುಬೆಲ್ಲ ತಂದಿಟ್ಟಿದ್ದೆ. ಯಾವಾಗಲೋ ತಂದಿದ ಗೋದಿ ಹಿಟ್ಟು
ಇತ್ತು, ಪಾಕಕ್ಕೆ ಪಾತ್ರ ಒಲೆಯ ಮೇಲಿಟ್ಟು ಬೆಲ್ಲ ಹೊಯಿದೆ-ಕುದಿ
ಸಿದೆ. ಒಂದಿಷ್ಟು ನೀರೂ ಹೊಯಿದೆ. ಮಗುಚತೊಡಗಿದೆ, ಗಟ್ಟಿ ಬೆಲ್ಲದ
ಉಂಡೆಗಳಂತೆ ಏನೋ ತೋರಿಬಂದುವು; ಸಟ್ಟುಗದಿಂದ ಬಡಿದೆ; ಡುಂ, ಡುಂ
ಎಂದಿತು. ಇದೇನು ಮಲಾಮತ್ ' ಇದೇನಪಾ! ಎಂದು ಸಟ್ಟುಗದಿಂದಲೇ
ಎತ್ತಿನೋಡಿದೆ! ನೋಡುವುದೇನು? ಒಂದು ಹೆಗ್ಗಣ! ಮತ್ತೊಂದು ಇಲಿ!
ಇನ್ನೊಂದು ಮರಿ! ಏನು ಮಾಡಲಿ: ತೆಗೆದು ಬಿಸಾಡಲೆ? ಅವುಗಳ
ಮೈಮೇಲಿನ ಬೆಲ್ಲದ ನಷ್ಟ ಯಾರು ಕೊಡುವುದು ಕಡಿಮೆ ಎಂದರೆ
ನಾಲ್ಕು ಸೇರ. ಆದೀತು! ಒಂದಿಷ್ಟು ನೀರು ತಂದ, ಅವುಗಳನ್ನೆಲ್ಲ
ಪಾತ್ರಕ್ಕೇ ತೊಳೆದು ಗಿವುಚಿ ಹಿಂಡಿ ಬಿಸಾಡಿಬಿಟ್ಟೆ
- ಪದ-ಆದಿತಾಳ.
ಬೆಲ್ಲದ ಪಾಕ ಕುದಿಸಲು ಬಂತೈ ಹೆಗ್ಗಣ ಒಂದು.
ಹಿಂದಿಲಿ ಹೆಂಡತಿಯಾ ನೋಡೋ.
ಒಂದಕೆ ಕಾಲಿಲ್ಲ | ಮತ್ತೊಂದಕ ತಲೆಯಲ್ಲಾ ಲೇ ಲೇ ಲೇ ||
ಬೆಲ್ಲದ ಪಾಕ ಕುದಿಸಲು ಬಂತೈ ಹೆಗ್ಗಣ ಒ೦ದು ||
ಅನಂತರ ಬೆಲ್ಲ ಕದಿಯತೊಡಗಿತು. ಆಗ ಮೇಲೆ ಬರತೊಡಗಿ
ದುವು-ಎಕ್ಕಳೆಯ ರೆಕ್ಕೆಗಳು! ಎಕ್ಕಳೆಗಳು ಮಾತ್ರ ಕಾಣಸಿಗಲೇ ಇಲ್ಲ.
ಎಲ್ಲಿಗೆ ಹೋಗಿದ್ದವೊ--ರೆಕ್ಕೆಗಳನ್ನೆಲ್ಲಾ ಸಟ್ಟುಗದಿಂದ ಬಳಿಗೆ ಮಾಡಿ
ಬಾಚಿ ಬಿಸಾಡಿದೆ. ಆ ಮೇಲೆ ಹಿಟ್ಟು ಸುರಿದೆ! ಅನಂತರ ಗೊತ್ತಾಯಿತು,
ಹಿಟ್ಟಿನಲ್ಲಿ ಹುಳ ಆಗಿತ್ತೆಂದು. ಆದರೆ ಅವುಗಳಿಂದ ತೊಂದರೆಯಿಲ್ಲ.
ಚೆನ್ನಾಗಿ ಮಗುಚಿದರೆ ಸರಿಯಾಗಿ ಪಾಕ ಆಗಿಹೋಗುತ್ತವೆ. ಆದರೆ ಒಂದು
ಮೋಸ ಆಯಿತು! ಹಿಟ್ಟು ಕಡಿಮೆಯಾಯಿತು! ಬೆಲ್ಲ ಹೆಚ್ಚಾಯಿತು.
ಏನು ಮಾಡಲಿ! ಪಾಕವನ್ನು ಆ ಸಮಯದಲ್ಲಿ ಒಲೆಯ ಮೇಲೆ ಬಿಟ್ಟು
-------------------------------------------------------------------
- 48 -
ಹಿಟ್ಟು ತರಲಿಕ್ಕೆ ಅಂಗಡಿಗೆ ಓಡುವುದೆ? ಎಲ್ಲಿ ಹಾಳಾಗಿ ಹೋದೀತು!
ಏನು ಮಾಡುವುದು ಎಂತ ಯೋಚಿಸಿದೆ. ತಟ್ಟನೆ ಒಂದು ಉಪಾಯ
ಹೊಳೆಯಿತು. ಫಕ್ಕನೆ ಜಗಲಿಯಿಂದ ಬೀದಿಗೆ ಹಾರಿದೆ; ಮೋಟಾರುಕಾರು
ಗಳ ಓಡಾಟದಿಂದ ನಯನಯವಾದ ದೂಳು ಯಥೇಚ್ಚವಿತ್ತು, ಒಂದಷ್ಟು
ಗೋಚಿ ಪಾಕಕ್ಕೆ ಹಾಕಿ ಮಗುಚಿಬಿಟ್ಟೆ! ಅವಲ' ಪಾಕ ಬಂತು! ಆ ರೀತಿ
ಪಾಕ ಈ ವರೇಗೆ ಆಗಲಿಲ್ಲ. ನೂರು ಮಾರು ಎಳೆದರೂ ತುಂಡಾಗಬೇಕೆ?
ಒಮ್ಮೆ ತಂದೆ, ಮಾರಿದೆ; ಇನ್ನೊಮ್ಮೆ, ಮತ್ತೊಮ್ಮೆ, ಇದು 5ನೇ ಸಲದ್ದು.
ಆದುದರಿಂದ ಇಂದು ನನ್ನ ತಲೆಯಲ್ಲಿ ದೂಳಿನ ಪ್ರತಾಪವೇ ಮತ್ತೂ
ಮತ್ತೂ ತೋರುತ್ತದೆ. ಹಾಗಲ್ಲದಿದ್ದರೆ ನಿನ್ನ ಖರ್ಜೂರ ಹೆಚ್ಚಾದ್ದಕ್ಕೆ
ಕೂಡಲೆ ಕಾರಣ ತಿಳಿಯುತ್ತಿತ್ತೆ?
ಮಂಜಣ್ಣ:-ಸರಿ, ಸರಿ ಈಗ ಗೊತ್ತಾಯಿತು! ಹಾಗಾದರೆ ಇಂದು
ಒಳ್ಳೆಯ ವ್ಯಾಪಾರ ನಮಗಾಗಿದೆ. ಇದಿಷ್ಟು ನಾಳೆ ಮಾರೋಣ. ಈಗ ಹೋಗೋಣವೆ?
ತಿಮ್ಮಣ್ಣ :-ಆಗಲಿ, ನಾಳೆಯೂ ಇಲ್ಲಿಗೇ ಬಾ, ಒಟ್ಟಿಗೆ ಕೂತು
ಕೊಳ್ಳೋಣ.
ಮಂಜಣ್ಣ :- ನಾಳೆ ಹೀಗೆ ಮಾಡಿದರೆ ಜುಲ್ಮಾನೆ! ಕೇಳಲಿಲ್ಲವೇ? ಆ
ಆರೋಗ್ಯ ಪ್ರಚಾರ ಮಂಡಳಿಯವರ ಡಂಗುರ! ತಿಂಡಿ ಸಾಮಾನು ಮಾರು
ವವರು ಬೀದಿಯ ಬಳಿಯಲ್ಲಿ ಕೂತುಕೊಳ್ಳಬಾರದಂತೆ ಕನ್ನಡಿಯ ಪೆಟ್ಟಿಗೆ
ಯೊಳಗಿಟ್ಟು ಕೊಂಡು ತಿರುಗಬೇಕಂತೆ, ಬೇಕಾದವರ ಮನೆಯೊಳಗೆ
ಹೋಗಿ ಕೊಡಬೇಕಂತೆ. ಇದಕ್ಕೆ ತಪ್ಪಿದರೆ 50 ರೂಪಾಯಿ ವರೆಗೆ
ಜುಲ್ಮಾನೆಯಾಗಲಿ 2 ತಿಂಗಳ ವರೆಗಿನ ಸಜೆಯಾಗಲೀ ಕೊಡುವ ಅಧಿ
ಕಾರ ಅವರಿಗೆ ಸಿಕ್ಕಿದೆಯಂತೆ! ನಾನು ಕನ್ನಡಿಯ ಪೆಟ್ಟಿಗೆ ಮಾಡಿಸಲಿಕ್ಕೆ
ನಿನ್ನೆಯೇ ಹಾಕಿದ್ದೇನೆ, ಕಾಫಿ ಹೋಟೆಲಿನವರಿಗೂ ಇದೇ ತರದ ಕಾನೂನು
ಬರಲಿಕ್ಕಿದೆಯಂತೆ. ಕಾಫಿ ತಿಂಡಿಯಂಗಡಿಗಳಲ್ಲಿ ಮನೆಯೊ
ಳಗೆ ಬೀದಿ ಬದಿಯಲ್ಲಿ ಒಂದು ಸಾಯನ್ ಬೋರ್ಡು ಮಾತ್ರ! ಅಂತೆ.
--------------------------------------------------------------------
- 49 -
ತಿಮ್ಮಣ್ಣ:- ಹಾಗಾದರೆ ನನಗೂ ಒಂದು ಪೆಟ್ಟಿಗೆ ಆಗಬೇಕಾ
ಯಿತು! ಹೂಂ, ಏಳು, ಹೋಗೋಣ (ಇಬ್ಬರೂ ಏಳುವರು.)
ತಿಮ್ಮಣ್ಣ:-(ಹಾಡು) ಸೇಕರ್ ಮಿಠಾಯಿ ಮಿಠಾಯಿ ಸಿಹಿ ಬೆಲ್ಲ ದಿ: ||
ಮಂಜಣ್ಣ :-( ಹಾಡುತ್ತ) ಸೇಕರ್ ಮಿಠಾಯಿ ಮಿಠಾಯಿ ಕಹಿ
ಬೆಲ್ಲ ದಿ! |
ತಿಮ್ಮಣ್ಣ:-ತಿಂದ ಮೇಲೆ ಬಾಲರು ಮಾಡ್ತೀರ ತಕ್ಕ ತೈ, ||
ಮಂಜಣ್ಣ :--ತಿಂದ ಮೇಲೆ ಬಾಲರ ಹೊಟ್ಟೆ ಗುಳುಗುಳು ತೈ ||
ಹ ಹ ಹಾತಿಮ್ಮ ಣ್ಣಾ, ಆಗಿನ ನಿನ್ನ ಅಡ್ಡ ಸೊಲ್ಲಿಗೆ ಇದೂ ಒಂದು
ಅಡ್ಡ ಸೊಲ್ಲು! ಹ ಹ ಹ್ಯಾ (ಎನ್ನುತ್ತ ಹೋಗುವರು.)
ದೃಶ್ಯ ೭--ಬಾಲಿಕಾ ಪಾಠಶಾಲೆ.
(ಶಾಲಾ ಬಾಲಿಕೆಯರು ಕೋಲಾಟಕ್ಕೆ ಸಿದ್ಧವಾಗಿ ನಿಂತಿರುವರು. ಉಪಾ
ಧ್ಯಾಯಿ ನಿಯು ಕುಳಿತಿರುವಳು)
ಉಪಾಧ್ಯಾಯಿನಿ:-ಬಾಲಿಕೆಯರೆ, ಮೊನ್ನೆ ಆರೋಗ್ಯ ಸಂಜೀವಿನೀ
ಯಮ್ಮ ನವರು ಬಂದು ನಿಮಗೆ ಕಲಿಸಿದ ಶಿಶುಪಾಲನಾ ಗೀತವನ್ನು
ಹಾಡುತ್ತ ಕೋಲಾಟವಾಡಿರಿ.
(ಬಾಲಿಕೆಯರು ಹಾಡುತ್ತ ಕೋಲಾಟವಾಡುವರು.)
ಪದ-(ಭಾರತೆಯರೆ ನಮ್ಮ ... ಎಂಬಂತೆ) ಮದಲಾಸಿ ಮಟ್ಟು ಚಾಪು-ತಾಳ.
ಶಿಶುಸಪ್ತಾಹದ ದಿನ ಬಾಲೆಯರ್ಕೂಡಿ | ಶಿಶುಪಾಲನೆಯ ಕ್ರಮ ಪ್ರಚಾರಮಾಡಿ
|| ಪ ||
ಸ್ತನ ಶಿಶುವಿಗೆ ದೇವನಿರ್ಮಿತಾಹಾರ | ತನುಬೆಳೆವಣಿಗೆಗೆ ಅದು ಸರ್ವಸಾರ ||
ಮಿತಿಯಿಂದ ಕ್ರಮದಿಂದ ಅನುಭವದಿಂದ | ಮೊಲೆಯುಣಿಸೆ ಮಗು
ಬೆಳೆವುದು ಸುಖದಿಂದ || ೧ | |
ಮೊಲೆ ಹಾಲು ಸಿಗದಿರೆ ಹಸುವಿನ ಹಾಲು | ತೆಳುಗೈದು ಬಿಸಿಗೈದು
ಕೊಡುವುದು ಮೇಲು ||
-----------------------------------------------------------
-50-
ಪೇಟೆಯ ಪೇಟೆಂಟು ಹಾಲಿನ ಪುಡಿಯು | ಮಗುವನ್ನು ಪುಷ್ಟಿಗೈಯದು
ಬರಿ ಭ್ರಮಯು || ೨ ||
ಮಗು ಹಸಿವಿಗೆ ಮಾತ್ರ ಕೂಗುವುದಲ್ಲ | ತಗೆದುಣಿಸಲಾಗದು ಕೂಗಿದಾಗೆಲ್ಲ||
ಕೂಗಿನ ಕಾರಣ ತಿಳಿಯಲು ಬೇಕು ! ಶಿಶು ಮನವನು ತಿಳಿಯೆ
ತಾಳ್ಮೆಯು ಬೇಕು || ೩ ||
ಬೇಗೆಯು ಬೇನೆಯು ಕತ್ತಲೆ ಕೋಣೆ | ಕಟ್ಟಿಟ್ಟ ಗಾಳಿಯು ಚುಚ್ಚುವ ತಗಣೆ |
|
ಹೆಟ್ಟುವ ಹಾಸಿಗೆ ಭಾರದ ಹೊದಿಕ | ಪಟ್ಟು ಹಿಡಿದು ಮಗು
ಕೂಗುವುದಿವಕೆ|| ೪ ||
ಮೊಲೆಯೀವ ತಾಯಿಯು ಹಾಲೀವ ಪಶುವು | ನಿರೋಗಿಯಾಗಿರೆ
ಶಿಶುವಿಗೆ ಸುಖವು ||
ಮಗುವಿನ ಬಾಯಿಗೆ ಮುದ್ದಿಡುವ ಜನರ | ಜೊಲ್ಲಿನ ರೋಗಾಣು
ಸೇರ್ವುದು ಶಿಶುವ || ೫ ||
ಕೆಮ್ಮುವ ರೋಗಿಯ ಬಳಿಯಲ್ಲಿ ಶಿಶುವ | ದಮ್ಮಯ್ಯ ಬಿಡಬೇಡಿ
ಕೊಲ್ವಿರಿ ಮಗುವ ||
ಗುಮ್ಮ ಬೇತಾಳ ಭೂತವು ಬಂತುಯೆಂದು | ಎಳೆ ಹೃದಯದಿ
ಭಯ ನಡಬೇಡಿರೆಂದು || ೬ ||
ಸಕ್ಕರೆ ಮುಂತಾದ ಸಿಹಿ ತಿಂಡಿಯಧಿಕ | ಅಕ್ಕರೆಯಿಂದೀಯೆ ಕೆಡುವುದು ಸೌಖ್ಯ ||
ಬಿಸ್ಕೀಟು ಹಲ್ಲಿನ ವಸಡಿಗೆ ಅಂಟು | ಮಕ್ಕಳ ಹಲ್ಲು ನೋವಿಗೆ
ಅದು ಗಂಟು || ೭ ||
ಸಡಿಲಾದ ಉಡಿಗೆಯ ಮೂಡಿಸಲು ಬೇಕು | ಮಡಿ ಯಾದ ಹಾಸಿಗೆ
ಮಲಗಲು ಬೇಕು ||
ತೋಯ್ದಿಹ ಅರಿವೆಯ ಕೊಳಕಾದ ಉಡಿಗೆ | ಹುದುಗಿಸಿಯಿಡಬೇಡಿ
ಹಾಸಿಗೆಯಡಿಗೆ | | ೮ ||
ನಡೆಯುವ ಮೊದಲಾಗಿ ನಡೆಸುವ ಮಂಕು | ಬಿಡದೆಗೈವುದು ಶಿಶುವಿನ
ಕಾಲ ಡೊಂಕು ||
ಕುಳಿತುಕೊಳ್ಳುವ ಮೊದಲಾಗಿ ಕುಳ್ಳಿರಿಸಿ | ಬಳುಕುವ ಬೆಂಗೋಲು
ಬಾಗುವದೈಸೆ || ೯ ||
----
------------------------------------------------------------
ತೃತೀಯಾ೦ಕ.
ದೃ ಶ ೧.
(ಮದ್ಯಪಾನದ ತೃತೀಯಾವಸ್ಥೆ)
(ಸುರೇಂದ್ರನು ಮಲಿನವಾದ ಹರಕು ಕೋಟನ್ನು ಹಾಕಿಕೊಂಡು ಪ್ರವೇಶಿಸು
ವನು- ನೋಡಿದರೆ ಹುಚ್ಚನಂತೆ ಕಾಣುವನು. ಕುಡಿತದಿಂದ ಮತ್ತನಾದವನಂತೆ ಅಸ್ಥಿರ
ವಾದ ಹೆಜ್ಜೆಗಳನ್ನಿಡುವನು, ಕಿಸೆಯಲ್ಲೊಂದು ಬಾಟ್ಲಿ -ಕೈಯಲ್ಲೊಂದು ಬಾಟ್ಲ ! ತಡವರಿಸಿ ಮಾತುಗಳು.)
ಸುರೇಂದ್ರ: ಪದ-ಏಕತಾಳ.
ನನಗೇನಾದರು-ಕಡಿಮೆಗಳಿಲ್ಲ-ಸರಿಯಾರೆನಗೀಗ | ಆಹಾಹಾ |
ಸುರಯೆಂಬಾಕೆ ಮೋಹಿಪಳೆನ್ನ |
ಮೀರುವರುಂಟೆ ಧರಣಿಯೊಳೆನ್ನ |
ತರತರದಲಿ ಸುಖಿಸುವಯೆನ್ನ |
ನಾನೇ ನೋಡಿರಿ ಇಂದ್ರಾ ! ಆಹಾಹಾ |
ಇಂದು ಅಲ್ಲೊಬ್ಬ "ಹೆಂಡ ಕೆಟ್ಟದು” ಎಂದು ಲೆಚರ್ ಮಾಡು
ತಿದ್ದ. ಅವನ ಆ ಗೊಡ್ಡು ತಲೆಬುರುಡೆಯ ಮೇಲೆ ಈ ಬಾಟ್ಲಿಯನ್ನೇ
ಒಡೆದು ಅವನಿಗೆ ಸುರಾಭಿಷೇಕಮಾಡಬೇಕೆಂದು ಮುಂದೆ ನುಗ್ಗಿದೆ.
ಅಲ್ಲಿದ್ದವರು ನನ್ನನ್ನೇ ದೂಡಿಬಿಟ್ಟರು! ಆ೦! ಏನನ್ಯಾಯ! ಹೆಂಡ
ಒಳ್ಳೇದೋ ಕೆಟ್ಟದೋ ಹೇಳಬೇಕಾದರೆ ಕುಡಿದು ನೋಡಬೇಕು! ಸ್ವಂತ
ಅನುಭವವಿಲ್ಲದವರು ಲೆಕ್ಕರ್ ಕೊಟ್ಟರೆ ಏನು ಪ್ರಯೋಜನ! All book-
ish! all inmaginary ಅವನು ಹೇಳುತ್ತಾನೆ! ಹೆಂಡ ಕುಡಿಕರಿಗೆ ಪ್ರೇಮ
ವೇನೆಂದು ಗೊತ್ತಿಲ್ಲ---ಅಂತ. ಆ ಪ್ರೇಮದಲ್ಲಿ ಏನಿದೆ! ಏನು ಸ್ವಾರಸ್ಯವಿದೆ?
ಪ್ರೇಮದ ದೆಸೆಯಿಂದ ರಾಜನೂ ಗುಲಾಮನಾಗುವನು; ಆದರೆ ಸುರೆಯ
ಪ್ರಭಾವದಿಂದ ಗುಲಾಮನೂ ಕೂಡ ರಾಜನಂತೆ ಸ್ವತಂತ್ರನಾಗುವನು!
---------------------------------------------------------------
- 52 -
ಸ್ವರಾಜ್ಯ ಪ್ರಾಪ್ತಿಗೆ, ಸ್ವಾತಂತ್ರಪ್ರಾಪ್ತಿಗೆ-ಈ ಸುರೆಯೇ ಸಾಧನ! ಈಗ
ನಾನೇ ರಾಜ!
ಪದ-ಆದಿತಾಳ, (ಹಿಂದುಸ್ಥಾನಿ ಮಟ್ಟು)
ಧರಿತ್ರಿಗೀಗಾ-ನಾನೇ ರಾಜಾ-ಠೀವಿಯಿಂದ ಪೋಗುವೆ ||
ಅಮರಸುಖವನೀವ ಸುರೆಯಾ ವಾ ಸವೆನ್ನ-ನಾಲಗೆ ||
ರಾಜತನವೂ ತೋರದಿರುವ-ಭಾರಿ ಸುಖದಿ--ನಾನಿಹೆ ||
ಪ್ರೇಮವು ಯಾಚಕತ್ವವನ್ನು ಬೋಧಿಸುವುದು, ಹೆಂಡವಾದರೋ
ಜಗತ್ತನ್ನೇ ಧಿಕ್ಕರಿಸುವ ಶಕ್ತಿಯನ್ನು ಕೊಡುವುದು. ಪ್ರೇಮದಿಂದ ಏನೂ
ತೋಚದಂತಾಗುವುದು. ಆದರೆ ಸುರೆಯಿಂದ ಕಲ್ಪನಾಶಕ್ತಿ ಉದ್ರೇಕ
ಗೊಳ್ಳುವುದು. ನೋಡಿ, ನನ್ನ ಈ ಲೆಕ್ಚರಿಗೆ ಅವನ ಲೆಚ್ಚರೆ ಸರಿಯೆ?
ಪ್ರೇಮದಿಂದ ಲಾಭ ಹೊಂದಿದರೂ ಅದೊಂದು ಸ್ತ್ರೀ ಲಾಭ! ಆದರೆ ಸುರಾ
ಪಾನದಿಂದ ತಾನೇ ಕಾಂತಿಯುಕ್ತಳಾದ ಸ್ತ್ರೀಯೆಂದೂ ತಿಳಕೊಳ್ಳಬಹುದು.
ಈಗ ನಾನು ಸ್ತ್ರೀ-ವೈಯಾರಿ, ಸುಂದರೀಮಣಿ! (ಎಂದು ಬಿನ್ನಾಣ ಮಾಡುತ್ತ
ಕುಣಿಯತೊಡಗುವನು.)
ಪದ- ದಾದರತಾಳ
ಕಾಂತಿಯ ನೀವುದು-ಕಂದಿದ ಮೇರೆಗೆ || ಒಂದು ಗುಟುಕು ಕುಡಿದರೆ ಚಿಂತೆ ||
ಬತ್ತಿಸೋದು-ಹೆಂಡ | ಕುಡಿದರೆ ತೋರ್ವುದು ಸ್ವರ್ಗಾದ ಮಹಾತ್ಮ || ೧ ||
ಹೆಣ್ಣಿಗಿಂತ ನೂರು ಪಾಲು ಹೆಚ್ಚು ಸುಖ ತೋರು ತೈತೆ | ಯಾಕಪ್ಪ
ಹೆಣ್ಣಿಗೆ ಕಷ್ಟವ ಬಿಡುವದು ||
ಅಂ, ಏನು ಹೇಳಿದೆ! ಎಷ್ಟ ಕುಡಿದರೂ ತಲೆಗೇರುವುದೇ ಇಲ್ಲ! ಕಲ್ಪನಾ
ಶಕ್ತಿ ಬರುವುದೇ ಇಲ್ಲ! ಕ್ಷಣದೊಳಗೆ ಇಳಿದುಬಿಡುತ್ತೆ (ಎಂದು ಕುಡಿಯುವನು)
ಇದೇನು ರುಚಿ! ಅಮೃತ! ಹಹ್ಹಹಾ! ಅಮೃತ! ಹಾಂ! ನೆನಪಾಯಿತು!
ಆ ಲೆಕ್ಚರಿನವನು ಹೇಳುತ್ತಾನೆ-ಕುಡಿಕನು ಅವಿಶ್ವಾಸಿ, ಸುಳ್ಳುಗಾರ,
ಚಾಡಿಗಾರ-ಕಳ್ಳ-ಕೊಲೆಪಾತಕಿ ಎಂದು. ಎಲ್ಲಾ ಸುಳ್ಳು, ಸುಳ್ಳು!
ಕೊಲೆ ಮಾಡಿದ್ದರೂ ಮದ್ಯವು ತಲೆಗೇರಿದಾಗ ಅದನ್ನು ಹೇಳಿಬಿಡುವ
ಸತಂಭಟ್ಟನೆಂದರೆ ಸುರಾಪಾನಿಯೇ ಸರಿ! ಮನಸ್ಸಿನಲ್ಲಿಯೂ ಬಾಯಿಯಲ್ಲಿ
ಯೂ ಒಂದೇ ರೀತಿ ಇರುವುದು ಅವನಿಗೇ ಸರಿ! ಇನ್ನು ಚಾಡಿಗಾರನಂತೆ!
--------------------------------------------------------------
- 53 -
ಹೇಗೆ? ಯಾರು ಏನು ಹೇಳಿದರೆಂಬುದರ ಜ್ಞಾಪಕವಿದ್ದರಲ್ಲವೆ ಚಾಡಿ
ಹೇಳುವುದು! ಕಳ್ಳತನ-ಅದು ಹೇಗೆ? ಕೇಳಿ, ಒಂದು ಸಣ್ಣ ಕಥೆ--
ಒಂದು ಸಲ ನಮ್ಮ ಮದ್ಯದ ಬೈಟಕ್ಕಿನಲ್ಲಿ ಒಬ್ಬನ ನನ್ನ ಉಂಗುರವನ್ನು
ಕದ್ದುಬಿಟ್ಟನು. ಆದರೆ ಅನಂತರ ಸುರೆಯ ಅಲ್ಲಕಲ್ಲೋಲತೆಯಲ್ಲಿ ತಲ್ಲೀನ
ನಾದಾಗ ಅದನ್ನೆ ನನ್ನ ಹತ್ತಿರ ತಂದುಕೊಟ್ಟು--ಇಗೋ, ಇದು ನಾನು
ಕಳವು ಮಾಡಿದ್ದು, ಭದ್ರವಾಗಿ ಇಟ್ಟಿರು!' ಎಂದು ಗಂಭೀರವಾಗಿ ಹೇಳಿ
ದನು. ನಾನು ಉಂಗುರವನ್ನು ನೋಡಿ, ಅಣ್ಣಾ ಇದು ನನ್ನ ದಲ್ಲವೆ?'
ಎಂದೆ. ಆಗ ನಮ್ಮಿಬ್ಬರ ನಗಾಟ! ಹಹ್ಹಹಾ! ಯೋಚಸಿದರೇ ನಗೆ
ಬರುತ್ತದೆ.ಹಹ್ಹ-ಹಹ್ಹಹ್ಹಾ ಹಹ್ಹಹ್ಹಾಹ್ಹಾ! ನಾವಿಬ್ಬರೂ ಸಂತೋ
ಷದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡು ನೆಲದ ಮೇಲೆ ಹೊರಳಾಡಿ
ದೆವು. ಈ ಭಾತೃಪ್ರೇಮ Brotherhood ಯಾರಲ್ಲಿ ಬಂದೀತು!
(ತಲೆಕಿರುಬುವನು) ಆಂ.ಏನೆಂದೆ? ಎಲ್ಲಾ ಮರೆತು ಹೋಯಿತು!
(ಹೆಂಡದ ಮತ್ತತ ಇಳಿದಂತೆ ತೋರಿಸಿಕೊಳ್ಳುವನು ಬಾಟ್ಟಿಗಳನ್ನು ನೋಡುವನು)
ಇದೇನು? ಖಾಲಿ ಬಾಟಿ ಯನ್ನೆ ತಂದೆನೆ? ಚೆನ್ನಾಗಿ ಕುಡಿದು ಇವುಗಳಲ್ಲಿ
ತುಂಬಿಸಿಕೊಂಡು ಬರಬೇಕೆಂದು ಹೊರಟಿದ್ದೆ? ತುಂಬಿಸಿಕೊಂಡು ಬಂದಂತೆ
ಸ್ವಲ್ಪ ನೆನಪಾಗುವುದು! ಏನೇ ಇರಲಿ, ಪುನಃ! ಅಲ್ಲಿಗೇ ಹೋಗಬೇಕು.
(ಎಂದು ತಿರುಗುವನು- ಪರದೆಯೊಳಗಿಂದ ಹುಡುಗರ ನಗಾಟ ಕೇಳಿಬರುವುದು )
ಯಾರದು? ವಿದ್ಯಾರ್ಥಿಗಳೆ! ಏನು, ಹೆಂಡಕುಡಿಕನೆಂಬಿರಾ? ಹೌದು, ಹೌದು,
ಹೆಂಡಕುಡಿಕ ಹೌದು! ಈಗ ಮಾತ್ರ ಹೆಂಡ ಇಳಿದಿದೆ! ಹೆಂಡ ಕೆಟ್ಟದ್ದು--
ಹೌದು-ಕೆಟ್ಟದ್ದು ! ನಾನು ಕೆಟ್ಟೆ-ನೀವು ಕೇಡಬೇಡಿ! ಹೆಂಡ ಕುಡಿಕ
ನಾದರೂ ನಿಮಗೊಂದು ಬುದ್ದಿ ವಾದ-ನನ್ನ ಸ್ವಂತ ಅನುಭವದ
ಬುದ್ದಿವಾದ ಹೇಳುತ್ತೇನೆ ಕೇಳಿ! ನಗಾಡಬೇಡಿ--
ಪದ-ಚಾಪುತಾಳ.
ಮಕ್ಕಳಿರಾ ಕಲಿತುಕೊಳ್ಳಿ | ಸುಮ್ಮನೆ ನಗಾಡಬೇಡಿ |
ಕೆಟ್ಟು ಹೋದೆ ನಾನು ಸುಳ್ಳಲ್ಲ | ಈ ಮದ್ಯದಿಂದ | ಕೆಟ್ಟು ಹೋದೆ ನಾನು ಸುಳ್ಳಲ್ಲ | |
ಎಮ್ ಎ ಎಮ್ ಎಲ್ ಆಗಿ ಇದ್ದೆ | ಡೇನ್ಯಲ್‌ನಂತೆ ಇರುತ್ತಿದ್ದೆ |
ಯಾರು ನೋಡಿ | ನಾನೆ ಸುರೇಂದ್ರ || ನಿಮ್ಮಾಣೆ ಹೌದು | ಯಾರು ನೋಡಿ
ನಾನೆ ಸುರೇಂದ್ರ ||
------------------------------------------------------------------
- 54 -
ಕೆಟ್ಟದ್ದೆಂದು ಗೊತ್ತು ಉಂಟು | ಜೀವವಾದರು ಬಿಡುತ್ತೇನೆ |
ಹೆಂಡ ಮಾತ್ರ ಬಿಡಲಾರೆ || ಕೆಟ್ಟು ಪೋದೆ | ಹೆಂಡಮಾತ್ರ ಬಿಡಲಾರೆ ||
ಆಣೆ ಗೀಣೆ ಇಟ್ಟು ಕೊಂಡೆ | ಮೇರೆದಪ್ಪಿ ಕುಡಿಯೆನೆಂದು |
ಸಂಜೆಯಾಗಲು ಆಣೆ ಕಾಣೆ! ಸತ್ಯವಿದು | ಸಂಜೆಯಾಗಲು ಆಣೆ ಕಾಣೆ! ||
ಹೇ | ಮಕ್ಕಳಿರ ಕಲಿತುಕೊಳ್ಳಿ • • • • • • • • • ||
------------
ದೃಶ್ಯ೨ -ಬೀದಿ.
(ಕಾಫಿ ಹೋಟೆಲುಗಾರ ಶ್ಯಾಮನು ಕೋರ್ಟಿಗೆ ಹೋಗುತ್ತ ದಾರಿಯಲ್ಲಿ)
ಪದ-ದಾದರ ತಾಳ,
ಎಷ್ಟುದ್ದ ನಾಲಗೆ | ವಿನಾಯ್ಕನದುಹ- |
ಲಕ್ಷರ ಭರದಲಿ ಹೊಟೇಲ ದೂರಿದ ||
ಎನಗಾದ ನಷ್ಟಕ-ಕೋರ್ಟಿಗೆ ಎಳೆದು--
ಬುದ್ದಿಯ ಕಲಿಸುವೆ-ಚಂದದೆ ಅವಗೆ || ೧ ||
ಶ್ಯಾಮ:-ಆ ವಿನಾಯಕರಾಯನು ತಾನೊಬ್ಬ ಆರೋಗ್ಯವರ್ಧಕ
ಸಭೆಯ ಮೆಂಬರ, ತನಗೆ ನಾಲಗೆ ಸ್ವಲ್ಪ ಉದ್ದ ಉಂಟು, ಎಂತ ನನ್ನ
ಹೋಟೆಲಿನ ಬಳಿಯಲ್ಲಿ ನಿಂತು ದೊಡ್ಡ ಲೆಕ್ಚರ್ ಮಾಡಿ ಜನರಿಗೆಲ್ಲಾ ನನ್ನ
ಹೋಟೆಲಿನಲ್ಲಿ ಅಸಹ್ಯ ಹುಟ್ಟುವಂತೆ ಮಾಡಿದ. ಈಗ ನನಗೆ ಮೊದಲಿನ
ಅರ್ಧ ಗಿರಾಕಿಗಳೂ ಇಲ್ಲ! ಇರಲಿ, ಅವನನ್ನು ಸುಮ್ಮನೆ ಬಿಟ್ಟೆನೇ? ಕೋ
ರ್ಟಿನಲ್ಲಿ 1000 ರೂಪಾಯಿಯ ನಷ್ಟಕ್ಕೆ ವ್ಯಾಜ್ಯ ದಾಕ್ಲು ಮಾಡಿದ್ದೇನೆ;
ನಾಲ್ಕು ಜನ ವಕೀಲರುಗಳನ್ನು ಕಟ್ಟಿದ್ದೇನೆ! ನನ್ನದೆಂತೂ ಹೋಟೆಲಿನ
ದುಡ್ಡು ! ನೀರಿನಿಂದ ಬಂದದ್ದು ; ನೀರಿನಂತೆ ಹೋಗಲಿ! ಆದರೆ ಅವನಿ
ಗೊಂದು ಬುದ್ದಿ ಕಲಿಸಿಯೇ ಬಿಡಬೇಕು! ಇಂದು ನಂಬರ ವಿಚಾರಣೆ
ವಕೀಲರು ಬೇಗನೆ ಬರಲಿಕ್ಕೆ ಹೇಳಿದ್ದಾರೆ (ಕಿಸೆಗೆ ಕೈ ಹಾಕಿ ನೋಡಿ) ಹೂಂ,
ಮರೆತು ಹೋಗಲಿಲ್ಲ! ದುಡ್ಡಿನ ಚೀಲ ಬಿಟ್ಟು ಬಂದರೆ ಕೋರ್ಟಿನಲ್ಲಿ
ಮಾತಾಡಿಸುವವರೇ ಇಲ್ಲ!
ಫದ-ಆದಿತಾಳ.
ಕೋರ್ಟಿನ ಬಳಿಯೋಳ್ | ಗಡಿಬಿಡಿ ಬಹಳ |
ದುಡ್ಡಿನ ಚೀಲ-ಸಡಿಲಿಸದಿರ ಕೂಪಾಟೋಪ ||
ಭಕ್ಷೀಸು-ತಾರ-ದಂಥ | ಕಕ್ಷೀಯ-ಬೇಡ-ವೆಂತ |
ಕೋರ್ಟಿನ ಕಂಭ-ನುಡಿವುದು ತುಂಬ | ಆದರಿ೦ ಸುರಿವೇ ಕೈ ತುಂಬ || ೧ ||
---------------------------------------------------------------------
- 55 -
ದೃ ಶ್ಯ ೩-ಮುನ್ಸಿಸ್ ಕೋರ್ಟು .
(ಮುನ್ಸಿಪರು-ವಕೀಲರು-ಗುಮಾಸ್ತೆಯರು-ಶ್ಯಾಮ-ವಿನಾಯಕರಾಯರೂ
ಇತರ ಪ್ರೇಕ್ಷಕರೂ - ಕಕ್ಷಿಗಾರರೂ-ಇತ್ಯಾದಿ ಇರುವರು, ಗುಮಾಸ್ತೆಯರು ಕೈ
ಸನ್ನೆ ಬಾಯಿಸನ್ನೆ ಪಿಸುಪಿಸು ಮಾತುಗಳಿಂದ ಕಕ್ಷಿಗಾರರಿಂದ ದುಡ್ಡು ಸೆಳೆಯಲು ಪ್ರಯತ್ನಿ
ಸುವರು. ಪೇದೆಯರು ಆಗಾಗ “ಸದ್ದು ಮಾಡಬೇಡಿ ಯಾರದು ಗುಟ್ಟು ಮಾಡು
ವುದು' ಎಂದು ಹೇಳುತ್ತಿರುವರು, 'ಸದ್ದು ! ಸದ್ದು' ಎಂದು ಕೈಯೆತ್ತಿ ಹೇಳುವರು.
ದುಡ್ಡಿಗಾಗಿ ಮತ್ತೊಂದು ಕೈ ನೀಡುವರು -- ಇತ್ಯಾದಿ ನಟನೆಗಳು ಈ ದೃಶ್ಯದಲ್ಲಿ ಹೊರ
ಗಿಂದ ಹೊರಗೆ ನಡೆಯುತ್ತಿರಬೇಕು).
ಶ್ಯಾಮನ ಕಡೆಯ ಪ್ರಮುಖ ವಕೀಲ ಮಾಧವರಾವ್:-(ಮುನ್ಸಿ
ಪರನ್ನು ಉದ್ದೇಶಿಸಿ) ಮಹಾಪ್ರಭೋ! ಈ ವ್ಯಾಜ್ಯವು ಈ ಪಟ್ಟಣದ ದೂಳೀ
ಗಲ್ಲಿಯ ಭೀಮವಿಲಾಸವೆಂಬ ಕಾಫೀ ಹೋಟೆಲ್ ಪ್ರೊಪಾಯ್‌ಟರ್
ಶ್ಯಾಮರಾಯರು ಆರೋಗ್ಯವರ್ಧಕಸಭೆಯ ಮೆಂಬರರೆಂದು ಹೇಳಿ
ಕೊಳ್ಳುವ ವಿನಾಯಕರಾಯರಿಂದ ತನಗುಂಟಾದ ಸುಮಾರು 1000
ರೂಪಾಯಿಗಳ ನಷ್ಟಕ್ಕಾಗಿ ತಂದದ್ದಾಗಿರುತ್ತದೆ, ಮಹಾಸ್ವಾಮೀ! ಸದ್ರಿ
ವಿನಾಯಕರಾಯರು ತಾ. 2-2-1929ರಲ್ಲಿ ವಾದಿಯ ಹೋಟೆಲಿನ ಸಮೀಪ
ನಿಂತು ವಾದಿಗೆ ನಷ್ಟ ಮಾಡುವ ದುರುದ್ದೇಶದಿಂದ ಹೋಟೆಲಿಗೆ ಬರುವ ಜನ
ರಲ್ಲಿ ಜುಗುಪ್ಪೆ ಹುಟ್ಟುವಂತೆ ಅಲ್ಲಸಲ್ಲದ ಸಂಗತಿಗಳನ್ನು ಸೇರಿಸಿ ತನ್ನ
ಅಸಾಮಾನ್ಯ ವಾಕಾತುರ್ಯದಿಂದ ಲೆಕ್ಚರ್ ಮಾಡಿದುದರಿಂದ ವಾದಿಗೆ
ಬಹಳ ನಷ್ಟವಾಗಿದೆ. ಮಹಾಪ್ರಭೋ! ಪ್ರತಿವಾದಿಯ ಈ ಕೃತ್ಯವು
ಕೇವಲ ದ್ವೇಷಸ್ವಭಾವದ್ದು, ಅಸಂಬದ್ದವಾದ್ದು, ಆಧಾರವಿಲ್ಲದ್ದು, ಹಾನಿ
ಕರವಾದ್ದು, ನ್ಯಾಯಕ್ಕೂ ನೀತಿಗೂ ವಿರುದ್ಧವಾದ್ದು ಎಂದೂ ಮನ್ನಿಸ
ತಕ್ಕುದಲ್ಲ. ಈ ವಿಷಯವು P. W. 1, P. W, 2, P. W - 3,
P. W, 4, up to P. W - 25. ಇವರ ಸಾಕ್ಷಿಗಳಿಂದಲೇ ವ್ಯಕ್ತ
ವಾಗುತ್ತದೆ. ಅಲ್ಲದೆ I. L R. Case No. 25, Nov 30,
No. 728 2233 780des Madras Law Journal Case
No. 58, No. 91, No. 576, No. 767 ಈ ಕೇಸುಗಳ ಇತ್ಯ
ರ್ಥದ ಆಧಾರದಿಂದ ಸಹಾ ವಾದಿಯು ಕೇಳಿದ ನಿವೃತ್ತಿಯನ್ನು ಹೊಂದ
ಲಿಕ್ಕೆ ಅರ್ಹನಾಗಿರುತ್ತಾನೆ, ಮಹಾ ಸ್ವಾಮೀ!
--------------------------------------------------------------
- 56 -
ಮುನ್ಸಿಪ್:-ವಿನಾಯಕರಾವ್, ಇದಕ್ಕೆ ನೀವೇನು ಹೇಳುತ್ತೀರಿ?
ವಿನಾಯಕ:-ನಾನು ಲೆಕ್ಚರ್ ಮಾಡಿದ್ದು ಹೌದು, ಮಹಾ
ಸ್ವಾಮಿ! ಆದರೆ ವಾದಿಯ ಹೋಟೆಲಿಗೆ ಹೋಗಬಾರದೆಂದು ನಾನು
ಯಾರನ್ನೂ ನಿರ್ಬಂಧಿಸಲಿಲ್ಲ. ವಾದಿಯನ್ನಾಗಲೀ ಆತನ ಹೋಟೆಲನ್ನಾ
ಗಲೀ ಎತ್ತಿ ಮಾತಾಡಿದುದೂ ಇಲ್ಲ. ಕಾಫಿ ಕುಡಿಯುವ ಅಭ್ಯಾಸವೇ
ಕೆಟ್ಟದೆಂದೂ ಅಭ್ಯಾಸವಿದ್ದು ಚೊಕ್ಕಟವಾಗಿ ಮನೆಯಲ್ಲೇ ಮಾಡಿಸಿಕೊಳ್ಳ
ಲಿಕ್ಕೆ ಅನುಕೂಲವಿಲ್ಲದೆ ಹೋಟೆಲಿಗೇ ಹೋಗಬೇಕೆಂದಾದರೆ ಕಣ್ಣು
ಚೆನ್ನಾಗಿ ತೆರೆದು ನೋಡಿ ಹೋಗಿರೆಂದೂ ನನ್ನ ಉಪನ್ಯಾಸದ ಸಾರಂಶ
ವಾಗಿತ್ತು, ಮಹಾ ಪ್ರಭೋ!
ಮುನ್ಸಿಪ್:- ನೀವಾಗಲೇ ನಿಮ್ಮ ಆರೋಗ್ಯವರ್ಧಕ ಮಂಡಳಿಯ
ಇತರ ಸದಸ್ಯರಾಗಲೀ ಇಂತಹ ಲೆಕ್ಷರ್ ಮಾಡುವ ಮೊದಲು ಹೋಟೆಲು
ಗಳಲ್ಲಿ ಕಂಡುಬರುವ ಕುಂದುಕೊರತೆಗಳನ್ನು ತಿದ್ದಿಕೊಳ್ಳಬೇಕೆಂದು ಹೋಟೆ
ಲುಗಾರರಿಗೆ ಬೋಧಿಸಿರುವಿರೋ?
ವಿನಾಯಕ:- ಹೌದು ಸ್ವಾಮಿ, ನಾವು ಅನೇಕ ಹೋಟೆಲು
ಗಳನ್ನು ಸಂದರ್ಶಿಸಿ ಅಲ್ಲಿಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ತಿಳ
ಕೊಂಡು ಜನರ ಆರೋಗ್ಯದ ಕಡೆಗೆ ದೃಷ್ಟಿಯಿಟ್ಟು ವ್ಯಾಪಾರವಾಡ
ಬೇಕೆಂದು ಹೋಟೆಲಿನ ಮಾಲೀಕರಿಗೆ ಪದೇ ಪದೇ ತಿಳಿಸಿದ್ದೆವು. ಅನಂತರ
ಜನತಾಹಿತದೃಷ್ಟಿಯಿಂದ ಜನತೆಗೂ ಎಚ್ಚರಕೊಡುವುದಕ್ಕಾಗಿ ಲೆಕ್ಚರು
ಗಳನ್ನು ಕೊಟ್ಟೆವು. ಕಳದ ಫೆಬ್ರವರಿಯಲ್ಲಾದ ಶಿಶುಸಪ್ತಾಹ ಕಾರ್ಯ
ಕ್ರಮಕ್ಕನುಸರಿಸಿ ದೂಳಿಗಲ್ಲಿಯ ತೇರುಬೀದಿಯಲ್ಲಿ ನಾನು ಪ್ಲೇಂಟಿನಲ್ಲಿ
ಕಾಣುವ ಲೆಕ್ಟರ್ ಮಾಡಿದ್ದು ಹೌದು. ಆದರೆ ವಾದಿಗೆ ನಷ್ಟವುಂಟು
ಮಾಡುವ ಉದ್ದೇಶದಿಂದಲ್ಲ, ಮಹಾಸ್ವಾಮಿಾ!
ಮುನ್ಸಿಸ್:- ಇರಲಿ, ನೀವು ಅನೇಕ ಹೋಟೆಲುಗಳನ್ನು ಸಂದರ್ಶಿ
ಸಿದರೆಂದು ಹೇಳಿದಿರಲ್ಲ! ಅವುಗಳಲ್ಲಿ ಏನೇನು ದೋಷಗಳನ್ನು ಕಂಡಿರಿ,
ಹೇಳಿ ನೋಡೋಣ. ಈ ವ್ಯಾಜ್ಯದ ಇತ್ಯರ್ಥಕ್ಕೆ ಅವೆಲ್ಲ ಅವಶ್ಯವಿವೆ.
ವಿನಾಯಕ:-ಮಹಾಪ್ರಭೋ! ಲಾಲಿಸೋಣಾಗಲಿ; ನಾವು ಪಚೀತಿ
-------------------------------------------------------------
- 57 -
ಗಲ್ಲಿಯ ನಿರ್ಮಲವಿಲಾಸ ಎಂಬ ಕಾಫಿಕ್ಲಬ್ ನ್ನು ಸಂದರ್ಶಿಸಿದೆವು.
ಹೆಸರೇ “ನಿರ್ಮಲ” ವಿಲಾಸವೆಂದಿದ್ದ ಬಳಿಕ ಅಲ್ಲಿ ಎಲ್ಲ ವೂ ನಿರ್ಮಲ
ವಾಗಿರಬೇಕೆಂದು ಯೋಚಿಸುತ್ತ ಒಳಗೆ ಹೋಗಿ ನೋಡಿದೆವು. ಆದರೆ
ಆ ನಿರ್ಮಲತೆ ಮಾತ್ರ ಎಲೋ ಅಡಗಿ ಕೂತಂತೆ ತೋರಿತು-ಹುಡುಕತೊಡಗಿ
ದೆವು-ತಿಂಡಿ ಮಾಡುವ ಸ್ಥಳದಲ್ಲಿ, ಮಾಡುವವರ ಮೈ ಬಟ್ಟೆ ಬರೆಗಳಲ್ಲಿ,
ಕಾಫಿ ನೀರು ಗಾಳಿಸುವ ಅರಿವೆಯಲ್ಲಿ ತಿಂಡಿ ಸೊರಿನಲ್ಲಿ, ಕೆಳಗಿನ
ಚರಂಡಿಯಲ್ಲಿ ತಿಂಡಿ ಪ್ಲೇಟುಗಳಲ್ಲಿ ಅಲ್ಲಿ ಇಲ್ಲ ಎಂದಲ್ಲ; ಎಲ್ಲೆಲ್ಲಿ
ನೋಡಿದರೂ ಆ ನಿರ್ಮಲತೆ ಮಾತ್ರ ಕಾಣೆ! ಹಾಗಾದರೆ ಆ ಸೈನ್
ಬೋರ್ಡಿನಲ್ಲಿ 'ನಿರ್ಮಲ ವಿಲಾಸ'ವೆಂದು ಬರೆದುದರ ಅರ್ಥವೇನೆಂದು
ಯೋಚಿಸಿದಾಗ ನಮ್ಮಲ್ಲೊಬ್ಬ ರಸಿಕರು ವಿವರಿಸಿದರು.
ಮುನ್ಸಿಪ್:- ಏನೆಂದು?
ವಿನಾಯಕ:-ಸಂಸ್ಕೃತ ಶಬ್ದಗಳಲ್ಲಿ ಲ, ಳ, ಇವುಗಳಿಗೆ ಬೇಧವಿಲ್ಲ
ವಂತೆ! 'ವಿಲಾಸ'ವನ್ನು 'ವಿಳಾಸ' ಎಂದೂ ಓದಬಹುದಂತೆ. 'ನಿರ್ಮಲ
ವಿಳಾಸ!' ದಿನನಿತ್ಯವೂ ತಿಕ್ಕಲ್ಪಟ್ಟು ಮಿರುಗುತ್ತಿರುವ ಈ ಸೈನ್ ಬೋ
ರ್ಡಿನ ನಮ್ಮ ವಿಳಾಸದಲ್ಲಿ ಮಾತ್ರ ನಿರ್ಮಲವಿದೆಯಲ್ಲದೆ ಮತ್ತೆಲ್ಲಿಯೂ
ಇಲ್ಲ; ನಿರ್ಮಲತೆ ನೋಡಬೇಕಾದರೆ ಸ್ಯಾನ್ ಬೋರ್ಡು ನೋಡಿ, ಎಂದೇ
ಅದರ ಅರ್ಥವಂತೆ!
ಮುನ್ಸಿಪ್:- ಬೇರೆ ಹೋಟೆಲುಗಳಲ್ಲಿ ಏನು ನೋಡಿದಿರಿ?
ವಿನಾಯಕ:-ಮಹಾಪ್ರಭೋ! ಯಾರಾದರೊಂದು ಕೆಲಸವನ್ನು
ಬಹು ಕಷ್ಟ ಪಟ್ಟು ಮಾಡಿದರೆ ಆ ಕೆಲಸವನ್ನು ಕುರಿತು 'ಇದು ನನ್ನ ಮೈ
ಬೆವರಿಂದಾದುದು. ಮೈ ಬೆವರು ಸುರಿಸಿ ಇದನ್ನು ಮಾಡಿದ್ದೇನೆ' ಎನ್ನು
ವುದುಂಟು. ಆದರೆ ಅಂತಹ ಮಾತುಗಳು ಅಕ್ಷರಶಃ (literally) ನಿಜ
ವಾಗುವುದನ್ನು ಪ್ರತ್ಯಕ್ಷ ನೋಡಬೇಕೆಂದಿದ್ದವರು ಕಾಫಿ ಹೋಟೆಲಿನಲ್ಲಿ
ತಿಂಡಿ ಮಾಡುವ ಸ್ಥಳಕ್ಕೆ ಹೋಗಿ ನೋಡಬೇಕು. ಇನ್ನು ಆ ತಿಂಡಿಯ
ಸ್ಟೋರ್_ಅದಿರುವುದು ಬೀದಿಯ ದೂಳಿಗೆ ಮೈ ಗೊಟ್ಟು ಚರಂಡಿಯ
ಮೇಲ್ಗಡೆಯಲ್ಲಿ. ಆ ಚರಂಡಿಯಾದರೂ ಸಾಮಾನ್ಯವಾದುದೆ? ಆ ಬೀದಿಯ
--------------------------------------------------------------
- 58 -
ಹಟ್ಟಿ ಕೊಟ್ಟಿಗೆ ಬಚ್ಚಲುಗಳ ತೀರ್ಥವನ್ನು ಸೇಕರಿಸಿ ಕಾದಿಟ್ಟು ಕೊಂಡಿ
ರುವ ಪುಣ್ಯ ಪುಷ್ಕರಣಿ ಎಂದರೆ ಅದೇ ತಾನೆ ಅದರಲ್ಲಿ ಬರೇ ಕಣ್ಣಿಗೂ
ಕಾಲು ಇಂಚಿನಿಂದ ನಾಲ್ಕು ಇಂಚಿನ ವರೆಗೂ ಉದ್ದದ ತರಾಂತರ ಕ್ರಿಮಿ
ಕೀಟಗಳು ಸದಾ ನರ್ತನಮಾಡುತ್ತಿದ್ದು ವು. ನೊಣಗಳು ಈ ಪುಣ್ಯ
ತೀರ್ಥದಲ್ಲಿ ಸ್ನಾನಮಾಡಿ ಗಂಧವನ್ನು ಲೇಪಿಸಿಕೊಂಡು ತಿಂಡಿಗಳ ಮೇಲೆ
ಕುಳಿತು ಮೈಯೊರೆಸಿಕೊಂಡು ಪುನಃ ಸ್ನಾನಕ್ಕೆ ತೆರಳುತ್ತಲೇ ಇದ್ದುವು.
ಎದುರಿನಲ್ಲಿ ಧೂಳಿಮಯ ಬೀದಿ! ಬೆಳಗ್ಗೆ ಪ್ಲೇಟಿನಲ್ಲಿ 2 ಇಂಚು ದಪ್ಪಕ್ಕೆ
ಹಲವಾ ಹರಡಿಸಿಟ್ಟರೆ ಮಧ್ಯಾಹ್ನದ ಒಳಗೆ 2 ಇಂಚಿಗೆ ಕಡಿಮೆಯಾಗದೆ
ದಪ್ಪ ಬೆಳೆದು ಬಿಡುವುದು! ಆ ಮೇಲೆ ಅಲ್ಲಿಯ ಎನೆಮೆಲ್ ಕಪ್ಪು ಸೋಸರು
ಗಳನ್ನು ನೋಡುವಾಗ ಆ ಪ್ರತಾಪಿ ಸಂಗ್ರಾಮಸಿಂಗನ ನೆನಪು ಹಠಾ
ತಾಗಿ ಆಯಿತು. ಅವನ ಮೈ ಮೇಲೆ 80 ಗಾಯಗಳಿದ್ದುವಂತೆ. ಇವು
ಗಳಲ್ಲಿ ಪ್ರತಿಯೊಂದಕ್ಕೂ ಮತ್ತೂ 26 ಹೆಚ್ಚು! ಈ ಗಾಯಗಳಿಗೊಂದು
ಲೇಪ; ಅಮೃತಾಂಜನವಲ್ಲ, ಓರಿಯಂಟಲ್ ಬಾಮೂ ಅಲ್ಲ, ಜಾಂಬಕ್ಕೂ
ಅಲ್ಲ-ಅದೇ ಅರ್ಧ ಡಬ್ಬಿ ನೀರಿನಲ್ಲಿ ನಾಲ್ಕಾರು ದಿವಸಗಳ ಪರಿಯಂತರವೂ
ನೂರಾರು ಕಪ್ಪು ಸೈಟು ಸೋಸರುಗಳು ದಿನವಹಿ ನೂರಾರು ಸಲ ಕಾಗೆ
ಮಿಂದಂತೆ ಮಿಂದುದರಿಂದುಂಟಾದ ಅದೊಂದು ದಿವ್ಯ ಲೇಪ! ಕೆಲವು
ವೇಳೆ ಕಪ್ ಸೋಸರುಗಳು ಕಪ್ಪೆಯಂತೆ ಕೈಯಿಂದ ಜಾರಿ ಹೋಗುವುದೂ
ಈ ಲೇಪದ ಮಹಾತ್ಮ ಯಿಂದಲೇ, ಆ ನೆಲವೋ! ಬೆಂಚು ಕುರ್ಚಿಗಳೊ!
ಅವುಗಳಿಗೂ ಕಸಬರಿಕೆಗೂ ಕಡಿಮೆಯೆಂದರೆ ಆರೇಳು ತಿಂಗಳುಗಳಿಂದ
ಬದ್ಧ ದ್ವೇಷವಿದ್ದಿರಬೇಕೆಂದು ಕಣ್ಣಿದ್ದವರು ಹೇಳುತ್ತಿದ್ದರು. ಒಳಗಿನಿಂದ
ಹೊಗೆಯ ದೂಪ ಹೊರಗಿನಿಂದೊಳಗೆ ಧೂಳೀ ದೂ ಪ! ಇವುಗಳಿಂದ ಅತಿಥಿ
ಪೂಜೆ! ಈ ಅತಿಥಿಗಳೂ ಆಲಸ್ಯದ ಮುದ್ದೆ ಗಳೆಂದೇ ತೋರುತ್ತಿದ್ದರು. ಇವರು
ಸೇವಿಸಿದ ಚುಟ್ಟಾ ಬೀಡಿ ಬೀಡಾ ಮುಂತಾದುವುಗಳ ಚೂರುಗಳೂ
ಅಲ್ಲೇ ನೆಲವನ್ನಲಂಕರಿಸಿದ್ದುವು. ಅಷ್ಟು ಮಾತ್ರವೆ? ವೀಳ್ಯದೆಲೆ ಸೇವನೆ
ಯಾದ ಮೇಲೆಯೂ ತಿಂಡಿಯಲ್ಲಿ ಸಹಜವಾಗಿ ಬರುವ ಕಸಕಡ್ಡಿ ಕಲ್ಲು
ಗಳು ಬಾಯಿಗೆ ಬಂದಾಗಲೂ ಉಗುಳಲಿಕ್ಕೆ ಕೂತಲ್ಲಿಂದ ಏಳಲು ಮನ
ಸ್ಸಾಗದೆ ಅಲ್ಲೇ ತಲೆಬಗ್ಗಿಸಿ ಬೆಂಚಿನ ಅಡಿಗೆ ಉಗುಳಿದುದೂ ಕಾಣಬರು
-------------------------------------------------------------
- 59 -
ತಿತ್ತು! ಹೀಗೆಯೇ ಆನಂದ ವಿಲಾಸ, ಕೋಮಲ ವಿಲಾಸ, ಶುಚಿರುಚಿ,
ತೃಶಾಶಾಂತಿ ಗೃಹ ಇತ್ಯಾದಿ ಇತ್ಯಾದಿ ಆಕರ್ಶಣೀಯವಾದ ಹೆಸರಿನ
ನರಕಕುಂಡಗಳೆಲ್ಲ ಒಂದೇ ಅಚ್ಚಿನಿಂದ ಮಾಡಿದ ಚಿತ್ರಗಳಂತೆ ಇದ್ದುವು.
ಹೆಸರು ಉತ್ತರ ಧ್ರುವದಲ್ಲಿ ! ವಿದ್ಯಮಾನಗಳು ದಕ್ಷಿಣ ಧ್ರುವದಲ್ಲಿ!
ಒಂದು ಕಡೆ ಮಾತ್ರ ಹೆಸರಿಗೂ ವಿದ್ಯಮಾನಕ್ಕೂ ಸರಿಯಿತ್ತು, ಮಹಾಪ್ರಭೊ'
ಮುನ್ಸಿಪ್:- ಹಾಗಾದರೆ ಯೋಗ್ಯವಾದ ಹೋಟೆಲ್ ಒಂದಾ
ದರೂ ಇದೆಯೆಂದಾಯಿತು. ಅದರ ಹೆಸರೇನು? .
ಶ್ಯಾಮು ವಕೀಲ:- ಅದೇ ನಮ್ಮ ವಾದಿಯ ಭೀಮವಿಲಾಸ
ಯಾರಾದರೂ ಅದನ್ನು ಕ್ರಮವಾಗಿ ಸಂದರ್ಶಿಸುತ್ತ ಬಂದರೆ ಭೀಮನಂತಾ
ಗುವರೆಂಬುದು ವಾದಿಯ ನಿಸ್ಸಂದೇಹವಾದ ನಂಬಿಕೆ, ಮಹಾಪ್ರಭೋ!
ವಿನಾಯಕ:- (ಸ್ವಗತ) ಓಜಿಯಸ್‌ನ ಕುದುರೆ ಲಾಯದ ಹೋಲ
ಸನ್ನು ತೆಗೆಯಲಿಕ್ಕೆ ಹೆರ್ಕಲಿಯಸ್ ನೇ ಬರಬೇಕಾಯಿತಂತೆ! ಅಂತೆಯೇ ಈ
ಭೀಮವಿಲಾಸ ಆಂಜನೇಯ ವಿಲಾಸ ಇವುಗಳ ಕೊಳಕನ್ನು ತೆಗೆಯಲಿಕ್ಕೆ
ಭೀಮಾಂಜನೇಯರೇ ಬರಬೇಕು ಎಂದರಾದರೂ ಅರ್ಥ ಸರಿಯಾದೀತು!
(ಪ್ರಕಾಶವಾಗಿ) ಅಲ್ಲ, ಮಹಾಸ್ವಾಮಿಾ , ಅದಲ್ಲ; ಅದರ ಹೆಸರು “ಲಕ್ಷ್ಮಿ
ವಿಲಾಸ'' ಅದರ ಪ್ರೊಪ್ಯಾಟರನ ಪೆಟ್ಟಿಗೆಯಲ್ಲಿ ಲಕ್ಷ್ಮಿವಿಲಾಸವು ತೋರಿ
ಬರುತ್ತಿತ್ತು.
ಮುನ್ಸಿಸ್:- ಹಾಗೋ, ಎಲ್ಲವೂ ಒಂದೇ; ಜನರ ಆರೋಗ್ಯವನ್ನು ಕೆಡಿಸಿ ದುಡ್ಡು ಸುಲಿಯುವ ಸಂಸ್ಥೆಗಳೇ ಎಲ್ಲ!
ವಿನಾಯಕ:-ಮಹಾಪ್ರಭೋ! ಲಾಲಿಸೋಣಾಗಲಿ-ನೊಣ, ನುಶಿ,
ದೂಳು, ಉಗುಳು, ಅಜೀರ್ಣಕರವಾದ ತಿಂಡಿ, ಕೊಳಕುತನ, ಇವೇ ಸರ್ವ
ರೋಗಗಳಿಗೂ ಮೂಲವಾಗಿರುತ್ತ ಇವುಗಳಿಗೆ ಮಾತೃಸ್ಥಾನದಂತಿರುವ
ಸುಮಾರು 300 ಹೋಟೆಲುಗಳು ಈ ಸಣ್ಣ ಪೇಟೆಯಲ್ಲಿದ್ದರೂ ಅವುಗಳ
ಸುವ್ಯವಸ್ಥೆಯ ಕಡೆಗೆ ನಾವು ದೃಷ್ಟಿ ಯಿಡದೆ ಪಟ್ಟಣದ ಬಹು ದೂರದ
ನಾಲ್ಕು ಮೂಲೆಗಳಲ್ಲಿ ಅದೂ ಬೀದಿಗಳನ್ನು ಬಿಟ್ಟು ದೂರದಲ್ಲಿ-- ಇರುವ
--------------------------------------------------------------------------
-60-
ನಾಲ್ಕು ಹೆಂಡದಂಗಡಿಗಳಿಂದುಂಟಾಗುವ ಆರೋಗ್ಯ ಹಾನಿ ಧನ ಹಾನಿ
ಗಳನ್ನು ಕುರಿತು ನಾವು ಬೊಬ್ಬೆಯಿಡುತ್ತೇವೆ. ಅವುಗಳಷ್ಟೇ ಧನ ನಾಶ
ಆರೋಗ್ಯ ನಾಶಕಾರಕಗಳಾದ ಕಾಫಿ ಹೋಟೆಲುಗಳು ಮಾರಿಗೊಂದರಂತಿ
ದ್ದರೂ ನಾವು ಕಣ್ಣು ಮುಚ್ಚಿಕೊಂಡಿರುವೆವು ಅದುಕಾರಣ ಅವುಗಳನ್ನು
ಸಂದರ್ಶಿಸುವರು ಚೆನ್ನಾಗಿ ಕರೆದು ನೋಡಿಕೊಂಡು ಹೋಗಿ ಎಂದು
ನಾನು ಹೇಳಿದುದು ಉಂಟು, ಮಹಾಸ್ವಾಮಿ! ವಾದಿಯ ಕ್ಲಬ್
ಆರೋಗ್ಯ ನಿಯಮಕ್ಕೆ ಆದರ್ಶಪ್ರಾಯವಾಗಿದ್ದರೆ ನನ್ನ ಉಪನ್ಯಾಸದಿಂದ
ಆತನಿಗೆ ಲಾಭವಾಗಬೇಕಿತ್ತೇ ಹೊರತು ಎಂದೂ ನಷ್ಟವಾಗುತ್ತಿದ್ದಿಲ್ಲ.
ಈಗ ಆತನು ನನ್ನ ಮೇಲೆ ರೇಗಿಬಿದ್ದುದನ್ನು ಯೋಚಿಸಿದರೆ ನಾನು ನನ್ನ
ಉಪನ್ಯಾಸದಲ್ಲಿ ತೋರಿಸಿಕೊಟ್ಟ ಕುಂದುಕೊರತೆಗಳಿಗೆಲ್ಲ ಆತನ ಹೊಟೇಲು ಆಶ್ರಯಸ್ಥಾನವಾಗಿರಬೇಕು.
ಶ್ಯಾಮು ವಕೀಲ:-ಹಾಗೆಂದೂ ಇಲ್ಲ, ಮಹಾಸ್ವಾಮೀ, ತನ್ನ
ಕ್ಲಬ್ ನಿರ್ಮಲತೆಯಲ್ಲಿ ಕೊನೆಯ ಮಾತು (Last Word in cleanli-
ness) ಎಂದೂ ಪ್ರತಿವಾದಿಯು ಅಲ್ಲಸಲ್ಲದ ಸಂಗತಿಗಳನ್ನು ಆರೋಪಿಸಿ
ತನಗೆ ನಷ್ಟ ಪಡಿಸಿರುವನೆಂದೂ ವಾದಿಯು ವಾಕ್ಷಮಾಣ ಮಾಡಿ ಅಫೀದಾ
ವೀತು ಕೊಟ್ಟಿದ್ದಾನೆ, ಮಹಾಪ್ರಭೊ! ಅಲ್ಲದೆ 25 ಜನ ಸಾಕ್ಷಿಗಾರರು
ಸತ್ಯ ರಕ್ಷಣೆಗಾಗಿ ಬಂದಿರುತ್ತಾರೆ.
ಮುನ್ಸಿಪ್:-ವಿನಾಯಕರಾವ್, ನಿನ್ನ ಕಡೆಯ ವಕೀಲರೂ ಇಲ್ಲ.
ಸಾಕ್ಷಿಗಳೂ ಇಲ್ಲವೆ?
ವಿನಾಯಕ:- ಮಹಾಪ್ರಭೋ! ಧರ್ಮಾವತಾರರು ತಾವಾಗಿರುವಿರಿ,
ಸನ್ನಿಧಾನಕ್ಕೆ ಸತ್ಯಾಂಶವನ್ನು ತಿಳಕೊಳ್ಳುವದು ಕಷ್ಟವಲ್ಲ. ಕಾಫಿ ಕುಡಿಸಿ
ದರೆ ಎಷ್ಟೋ ಸಾಕ್ಷಿಗಳು ಸಿಕ್ಕಿಯಾವು. ಸಾಕ್ಷಿಗಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಮಹಾಪ್ಪಭೋ, ಬಡವನ ಮೇಲೆ ದಯೆಯಿಟ್ಟು
ಇಲ್ಲೇ ಆಚೆ ಬೀದಿಯಲ್ಲಿರುವ ಆ ಭೀಮವಿಲಾಸವನ್ನು ಸ್ವತಹ ಸಂದರ್ಶಿ
ಸೋಣಾಗಲಿ, ಆಗ ವಾದಿಯ ಹೋಟೆಲಿನ ನಿರ್ಮಲತೆಯೂ ಅಫಿದಾವೀ.
ತಿನ ಯಥಾರ್ತತೆಯೂ ಎಲ್ಲವೂ ಗೊತ್ತಾಗುವುದು ಮಹಾಪ್ರಭೂ.
ಅಷ್ಟೊಂದು ಅನುಗ್ರಹಿಸೋಣಾಗಲಿ!
-------------------------------------------------------------------------
- 61 -
ಮುನ್ಸಿಪ್:- ಅದಕ್ಕೇನು ಅಡ್ಡಿ ! ಈಗಂತೂ ಸಾಯಂಕಾಲವಾ
ಯಿತು; ಇನ್ನು ವಿಚಾರಣೆಗಳೆಲ್ಲ ನಾಳೆ, Mr. ಮಾಧವರಾವ್, ಈಗ
ನೆಟ್ಟಗೆ ನಿಮ್ಮ ವಾದಿಯ ಆ ಭೀಮವಿಲಾಸವನ್ನು ಸಂದರ್ಶಿಸೋಣ.
ಮಾಧವರಾವ್:-ಮಹಾಪ್ರಭೂ, ತಾವು ಅಷ್ಟೊಂದು ಶ್ರಮ
ಪಡಬೇಕಾಗಿಲ್ಲ; ಕಮಿಶನ್ ಫೀಸು ಕಟ್ಟಲಿಕ್ಕೆ ವಾದಿಯು ಸಿದ್ಧನಿದ್ದಾನೆ!
ಮುನ್ಸಿಸ್:-ಶ್ರಮವೇನು? ಈಗಂತೂ walking ಗೆ ಹೋಗುವ
ಸಮಯ. ಆ ಮಾರ್ಗವಾಗಿ ಹೋದರಾಯಿತು. ಹೊಗುತ್ತ ದಾರಿಯಲ್ಲಿ.
ಆಸ್ಪತ್ರೆಯಿಂದ ಡಾಕ್ಟರರನ್ನೂ ಕರೆದುಕೊಂಡು ಹೋಗೋಣ, ದಫೇದಾರ್
ಮೋಟರ್ ಕಾರ್ ತರಿಸು! (ಎಲ್ಲರೂ ಏಳುವರು. ಮುನ್ಸಿಪರು ಎದ್ದು ಹೋಗುವರು. ಕೋರ್ಟಿನಲ್ಲಿ ಗುಮಾಸ್ತೆಯರು ಕಕ್ಷಿಗಾರರು ವಕೀಲರು ಪೇದೆಗಳು ಇವರೊಳಗೆ ಫೀಸು.
ರುಸುಂ ಭಕ್ಷಿ ಸುಗಳ ಬಗ್ಗೆ ಗಜಬಜವಾಗುವುದು.) .
ಮಾಧವರಾಯರ ಗುಮಾಸ್ತ್ರ:-ಶ್ಯಾಮರಾಯರೆ, ಎಲ್ಲಿ ನಿಮ್ಮ
ಜನಗಳು? ಹೋಟೆಲಿಗೆ ಓಡಿಸಿ: ಬೇಗಬೇಗನೆ ಎಲ್ಲವನ್ನೂ ನಿರ್ಮಲಗೊಳಿ
ಸಿರಿ; ಇಲ್ಲವಾದರೆ ಸುಳ್ಳು ಅಫೀದಾವೀತು ಕೊಟ್ಟಿದ್ದಕ್ಕೆ ನಿಮಗೆ ಶಿಕ್ಷೆ
ಯಾದೀತು' ವ್ಯಾಜ್ಯವೆಂತೂ ನಿಮಗೆ ಸೋಲೇ, ಮತ್ತೇನು!
ಶ್ಯಾಮ:- ಸರಿ, ಇಷ್ಟು ತಿಂಗಳುಗಳಿಂದ ನಿಮ್ಮ ಕೋರ್ಟು
ಕೋರ್ಟಿಗೇ ಧರ್ಮಾರ್ಥ ಕಾಫಿ ತಿಂಡಿ ಕೊಟ್ಟುದಕ್ಕೆ ಇಷ್ಟಾದರೂ
ಹೇಳಿದಿರಲ್ಲವೆ? ಸಾಕು! ಹೀಗೆಲ್ಲಾ ಬಂದೀತೆಂದು ನೀವು ಮೊದಲಾಗಿ.
ಸೂಚನೆ ಕೊಡದೆ ಈಗ ಎಲ್ಲಾ ನಿರ್ಮಲ ಮಾಡಿರಿ!'' ಅದು ಕಾಫಿ ಕುಡಿ
ದಂತೆ ಅಲ್ಲ! ಎಲ್ಲರೂ ಒಟ್ಟಿಗೆ ನನ್ನನ್ನು ಕೊಂದಿರಿ! ಸೇಸೋ, ಕಿಟ್ಟೋ,
ರಾಮ, ಎಲ್ಲಿ ಸತ್ತಿದ್ದೀರಿ! ಸಾಯ್ಕಲ್ ಗಳು ಎಲ್ಲಿ? ಓಡಿಸಿರಿ, ಓಡಿಸಿರಿ,
ಎಲ್ಲಾ ನಿರ್ಮಲ ಮಾಡುವಂತೆ ಹೇಳಿರೊ!
ರಾಮು:-ಅವರೆಲ್ಲಾ ಇಷ್ಟರ ವರೇಗೆ ಇಲ್ಲಿ ಕಾದು ಬಿದ್ದು ಬಿದ್ದು
ಬೇಸರ ಹಿಡಿದು ಈಗ ತಾನೇ ಒಂದು round ರೌಂಡ್ ಹೊಡೆದು. ಬ
ರುತ್ತೇವೆಂತ ಫ್ಯಾಕಲ್ ಹ ಹೋದರು-ಈಗ ಬಂದಾರು!
-------------------------------------------------------------------
- 62 -
ಶ್ಯಾಮು:-ಬರಲಿ, ಸಾಯಲಿ, ನಿಮ್ಮ ರೌಂಡು ನನ್ನ ಕುತ್ತಿಗೆಗೆ ಪಾಶಿ!
ಪದ-ರೂಪಕ ತಾಳ.
ಅಹ, ಕೋರ್ಟಿಗೆ ನಾ ಹತ್ತಿದನು-ಕೆಟ್ಟೆನು!
ಸಾಲಗೀಲ ಮಾಡಿ ನಾನು ದುಡ್ಡು ವೆಚ್ಚಗೈದೆನು ||
ಕೆಲಸಗಿಲಸ ಬಿಟ್ಟು ಕೋರ್ಟು ಜಗಲಿಯನ್ನ ಕಾದೆನು |
ಕಳೆವುದು-ತೊಳೆವುದು ಹೇಗೆಹಾ! ನಾನೀ--
ವ್ಯಾಜ್ಯಕ್ಕೆ ಮಾಡಿದ ಸಾಲವ
(ಪರದೆಯು ಬೀಳುವುದು)
ದೃಶ್ಯ ೪-ಭೀಮವಿಲಾಸ ಕಾಫಿ ಕ್ಲಬ್,
(ಹಿಂದಿನ ವರ್ಣನೆಗೆ ತಕ್ಕಂತೆ ದೃಶ್ಯಗಳನ್ನು ಸಿದ್ಧಗೊಳಿಸತಕ್ಕುದು- ಚರಂಡಿಯ
ಬಳಿಯಲ್ಲಿ ಬಾಗಲಿಲ್ಲ ದ ಮುರುಕು ತಿಂಡಿ ಕವಾಟು, ಹೋಟೆಲಿನ ಬಾಗಲಲ್ಲಿಯೇ ಕೊಳ ಕಾದ ಹುಡುಗನು ಪ್ಲೇಟುಗಳನ್ನು ತಳೆಯುವನು, ಹೊಲಸು ನೀರನ್ನು ಚೆಲ್ಲುತ್ತಿರು
ವನು, ತಿಂಡಿಯ ಕವಾಟಿನ ಬಳಿಯಲ್ಲಿ ಹೊಗೆಸೊಪ್ಪು ಜಗಿಯು ತಕ್ಕಡಿ ಹಿಡಿದು
ಒಬ್ಬನು ಕೂತಿರುವನು. ಗುಪ್ತ ಭಾಗಗಳನ್ನು ತುರಿಸುತ್ತಿರುವನು. ಆಗಾಗ ಕೆಮ್ಮುತ್ತ ಲಿರುವನು. ಒಳಗೆ ಅಲ್ಲಲ್ಲಿ ಜನರು ಕೂತುಕೊಂಡು ಕಾಫಿ ಕುಡಿಯುತ್ತಿರುವರು, ಉಗುಳುತ್ತಿರುವುದು ಇತ್ಯಾದಿ ಇತ್ಯಾದಿ)
ಒಬ್ಬ ಗಿರಾಕಿ:-(ತಿಂಡಿಯ ಕವಾಟಿನ ಬಳಿಗೆ ಬರುವನು)
ಅಲ್ಲಿದ್ದವನು:- ನಿಮಗೇನು ತಿಂಡಿ ಕೊಡಲಿ ಸ್ವಾಮಿಾ, ರುಲಾಂ,
ದೋಸೆ, ಚಟ್ಟಿ ಅಂಬೊಡೆ, ಖಾರಬುಂದಿ, ವಾಂಗೇಪಾತು! ಹಲವಾ,
(ಇತ್ಯಾದಿ ಹೆಸರುಗಳನ್ನು ಹೇಳುವನು, ಮತ್ತೊಂದು ಬದಿಯಲ್ಲಿ ಕೊಳಕು ಅರಿವೆಯಿಂದ
ಕಾಫಿ ನೀರು ಹಿಂಡುತ್ತ, ಮುಖದ ಬೆವರನ್ನು ಬೆರಳಿಂದ ಕೆರೆದು ಸಿಡಿಯುತ್ತಲಿರುವವ
ನನ್ನು ನೋಡಿ) ಮಂಜಣಾ-ಇವರಿಗೆ ಸಿಂಗಲ್' ಚಾ, ಅಲ್ಲವೆ? ಸ್ವಾಮಿ.
ತಿನ್ನಲಿಕ್ಕೇನು ಕೊಡಲಿ? "
ಗಿರಾಕಿ:-ಏನಾದರೂ ಒಂದಾಣೆದ್ದು ಕೊಡಿ.
ಅಲ್ಲಿದ್ದವ:- ಆಗಲಿ, ಸ್ವಾಮಿಾ, ಹೋಗಿ ಕೂತುಕೊಳ್ಳಿ-ಈಗಲೇ
ಕಳುಹಿಸಿಕೊಡುವೆನು. (ಸ್ವಗತ) ಹೀಗೆಯೇ ಎಲ್ಲರೂ ಹೇಳಿದರೆ ಬಹಳ
-----------------------------------------------------------------------
- 63 -
“ಒಳ್ಳೇದು. ಕರ್ಚಾಗದೆ ಇನ್ನೂ ಉಳಿದಿರುವ-ಹಳಸಿಹೋಗಿರುವ--
ಮೊನ್ನೆ ಆಚೆ ಮೊನ್ನೆ ಮಾಡಿರುವ-ತಿಂಡಿಗಳನ್ನೆಲ್ಲಾ (Grand clearance
sale) ಗ್ರಾಂಡ್ ಕಿಯರೆನ್, ಸೇಲ್ ಮಾಡಲಿಕ್ಕೆ ನಮಗೆ ಬಹಳ ಅನು
ಕೂಲ (ಎನ್ನು ಪ್ಲೇಟೊಂದನ್ನು ತೆಗೆದು ಅದರಲ್ಲಿ ಕೆಲವು ತಿಂಡಿಗಳನ್ನು ಹಾಕಿ)
ವೆಂಕ್ಟೂ ! ಎಲ್ಲಿ ಸತ್ತಿದ್ದಿಯೋ, ಬೇಗ ಬಾ, (ವೆಂಕ್ಟು ಸೊಂಟಕ್ಕೆ ಮಾತ್ರ ಕೊಳಕು
ವಸ್ತ್ರದ ಚೂರೊಂದನ್ನು ಸುತ್ತಿಕೊಂಡು ಬೀಡಿ ಎಳೆಯುತ್ತ ಮೈ ತುರಿಸಿಕೊಳ್ಳುತ್ತ ಬಂದು ಪ್ಲೇಟನ್ನು ತಕ್ಕೊಳ್ಳುವನು) ಆ ರಾಯರಿಗೆ ಕೊಂಡುಹೋಗಿ ಕೊಡು; ನಮ್ಮ
ರಾಯರು, ಎಷ್ಟು ಹೊತ್ತಿನಿಂದ ಕಾಯುತ್ತಾ ಇದ್ದಾರೆ! ಬೇಗ
ಮುನ್ಸಿಪರು, ವಕೀಲರು, ಡಾಕ್ಟರರು ಪ್ರವೇಶಿಸುವರು. ಹಿಂದಿನಿಂದಲೇ ಶ್ಯಾಮ,
ಸೇಸು, ಕಿಟ್ಟು, ರಾಮು ಮುಂತಾದವರು ಓಡಿ ಓಡಿ ದೀರ್ಘ ಶ್ವಾಸ ಬಿಡುತ್ತ ಬರು
ವರು. ಶ್ಯಾಮ ತಲೆಬಡಕೊಳ್ಳುವನು. ಬೇರೆಯವರು ಪಿಳಿ ಪಿಳಿ ನೋಡುವರು.)
ಮುನ್ಸಿಪ್:- (ಹೋಟೆಲಿನ ಬಾಗಲಿನ ಬಳಿ ನೋಡಿ ಸ್ವಗತ) ಇದು ಹೋ
ಟೆಲಿನ ಬಾಗಲೋ ನರಕದ ಬಾಗಲೋ! (ಒಳಗೆ ಹೋಗಿ ಅಲ್ಲಲ್ಲಿ ನೋಡುತ್ತ)
Most horrible! a den of rubbish & filth! oh, awful
stench! suffocated with smoke & dust! (ಎಂದು ಡಾಕ್ಟರರ
ಹತ್ತಿರ ಹೇಳುವರು) ಡಾಕ್ಟರರೆ, ನಿಮ್ಮ ಅಭಿಪ್ರಾಯವೇನು? Do you
like to have any refreshment here?
ಡಾಕ್ಟರ್: - Refreshment! in this hell of hells!
God forbid! neither for love nor for money! ಒಂದು
ಸಾವಿರ ರೂಪಾಯಿಯ ಗಂಟನ್ನು ನನ್ನ ಮುಂದಿಟ್ಟರೂ, ಅಷ್ಟೇಕೆ, ಈಗಲೇ
ನನ್ನ ಪ್ರಾಣ ಹಾರಿಹೋಗುವಂತಾದರೂ ಈ ಹೊಲಸಿನ ತಿಪ್ಪೆಯ
ಯಾವುದೊಂದನ್ನೂ ನನ್ನ ಬಾಯಿಯ ಬಳಿಗೆ ಬರಗೊಡಿಸೆನು.
ವಿನಾಯಕ:- (ತಿಂಡಿಯ ಕವಾಟಿನ ಎಡೆಯನ್ನು ತೋರಿಸಿ) ಇಲ್ಲಿ ನೋ
ಡೋಣಾಗಲಿ, ಮಹಾಸ್ವಾಮಿ, ಎಕ್ಕಳೆಗಳು! (ಅಲ್ಲೇ ಒಂದು ತಿಂಡಿಯ ರಾಶಿ
ಯನ್ನು ತೋರಿಸಿ) ಇಲ್ಲಿ ಅವುಗಳ ಪಿಷ್ಟೆ! ಈ ಹಲವಾದ ಮೇಲೆ ಗುಬ್ಬ
ಚ್ಚಿಯ ಹಿಕ್ಕೆ! ಈ ತಿಂಡಿಯಲ್ಲಿ ಅಂಟಿಹೋಗಿದ್ದ ನೊಣಗಳೆಷ್ಟು! ಈ ಶರ
ಬತ್ತು ಬಾಟ್ಲಿ ಯಲ್ಲಿ ಸತ್ತು ತೇಲುತ್ತಿರುವ ಇರುವೆಗಳು! ಇದು ತಟ್ಟೆ ತೊಳೆ
----------------------------------------------------------------
- 64 -
ಯುವ ಬಾಲ್ಡಿ! ಇದರ ನೀರು ನಾರುತ್ತದೆ! ಸ್ವಾಮಿ, ಇತ್ತ ದಯಮಾಡೋ
ಣಾಗಲಿ, spittings (ಉಗುಳು!) ಇದು ಕಾಪಿ ನೀರು ಗಾಳಿಸುವ ದಿವ್ಯ
ವಸ್ತ್ರ! ಇನ್ನು ಈ ಹೋಟೆಲ್ ಸಿಬಂದಿ! ನಿರ್ಮಲತೆಗೆ ಮೆಡಲ್ ಕೊಡ
ಬೇಕು ಇಂಥವರಿಗಲ್ಲವೆ! (ಎಂದು ಮುಂತಾಗಿ ಅನೇಕ ಅಸಹ್ಯ ದೃಶ್ಯಗಳನ್ನು ತೋರಿಸುವನು).
ಡಾಕ್ಟರ್: No, 10, enough of it (ಮುನ್ಸಿಪರ ಕಡೆಗೆ ತಿರುಗಿ)
That man over there-caughing over every thing
is really consumptive; th:1t with blisters in his lips and
fingers is a dangerous leper; this plate bearer
scratching his itches is full of venerial diseases.
This in my opinion is the nursery for all sorts of
disease germs.
ಮುನ್ಸಿಸ್:-ಸಾಕು! ಇನ್ನೂ ಇಲ್ಲಿ ನಿಲ್ಲಲು ಸಾಧ್ಯವಿಲ್ಲ. The
sooner we quit this place the better for us. I can't
bear this scene any longer. ಈ hotel ಗಳನ್ನು hot-hell
(ನರಕದ ಕಂಡ) ಎಂದು ಕರೆದರೆ ಅರ್ಥಕ್ಕೂ ವಿದ್ಯಮಾನಗಳಿಗೂ
ಬಹಳ ಸರಿಬೀಳುವುದು. ಇಂತಹ ಅಸಹ್ಯ ದೃಶ್ಯವನ್ನು ನೋಡುತ್ತ ಇಲ್ಲಿ
ನಿಲ್ಲುವುದೂ ಕ್ಷೇಮಕರವಲ್ಲ, ಹೋಗೋಣ!
-------------------
ದೃಶ್ಯ ೫-ಬೀದಿ.
(ಸುರೇಂದ್ರನು ಮದ್ಯಪಾನದ ಚತುರ್ಥಾವಸ್ಥೆಯಲ್ಲಿ ಬರುವನು. ಹರಕು
ಶರ್ಟು-ದೂಳಿನಿಂದ ಕೂಡಿದ ಹರಕು ವಸ್ತ್ರವನ್ನು ಹೇಗೋ ಹೇಗೋ ಸೊಂಟಕ್ಕೆ
ಸುತ್ತಿರುವನು- ನೆಟ್ಟಗೆ ನಿಲ್ಲಲೂ ಸಾಧ್ಯವಿಲ್ಲದೆ ಒಂದು ಕಡೆಯಿಂದ ಮತ್ತೊಂದು
ಕಡೆಗೆ ಒಲವು ನಾಲಿಗೆ ಚಲಿಸದವನಂತೆ ಮಾತಾಡುವನು- ನಿದ್ದೆ ಬಂದಂತಾಗುವುದು.)
ಪದ-ಆದಿತಾಳ.
ಬಲು ಪುಣ್ಯ ವಿದೀದಿನ ಮದ್ಯದ ಪಾನಾ-.
ಮೋಜುಗೀಜನಾ ಕಾಲ | ಸುರೇಂದ್ರರಾಯನ ಪಾನಾ |
ಸ್ವರ್ಗವ ತೋರುವ ಯೀ ಪಾನ_ ಇದೀಗಾ ಬಲ್, ವಿಶೇಷಾ
ಬಲ್..ತಮಾಷಾ ಬಲ್_ದೇವಿಯ ನಿಲ್ಲಲೆ ಬಾಯೊಳಗೆ || ೧ ||
---------------------------------------------------------------------
- 65 -
ಬಲು ಪುಣ್ಯದ ದಿನ ಇದು. ಇ-ಈ -ದು ! ಇ-- ಇಷ್ಟು ಕುಡಿದ ದಿನವೇ
ಇಇಲ್ಲ! ಆ...........ರೂ ಕಿಂಚಿತ್ತು ಕಿಂಚಿತ್ತು ಮಾತ್ರ ಇನ್ನೂ ಬೇಕೆಂದೇ
ತೋರುತ್ತದೆ! ದ್ದೇವರಿಗೆ ಬುದ್ದಿ ಯಿಲ್ಲ! ಈ-ಈಸ್ಸಮುದ್ರ, ಈ ಹೊಳೆ,
ಕೆರೆ- ಎಲ್ಲಿ ಈ-ಈ.ಸುರಾಮಯ ಮಾಡಬಾರದಿತ್ತೆ? ಹಾಂ! ನಿ-ನ್ನಿ
ನ್ನಿಷ್ಪ್ರಯೋಜಕ ನೀರಿನಿಂದ ತುಂಬಿದ್ದು ಏಕೆ? ಹ್ಹೆಡು! ದ್ದೇವ್ರು!
(ಡಾಕ್ಟರರೊಬ್ಬರ ಶೋಪನ್ನು ನೋಡಿ) ಈ-ಈ -ಡಾಕ್ಟರರು ಶೋಪ್ ತುಂಬ
ಮದ್ದಿನ ಬಾಟ್ಲಿ ತುಂಬಿಸಿದ್ದಾರೆ! ಹುಚ್ಚರು - ಬ್ರಾಂಡಿ ತುಂಬಿಸಿಡುತ್ತಿದ್ದರೆ
ಒಂದು ಡ್ರಾಮಿಗೆ ನ್ನೂ ನ್ನೂರು ರ್ರೋಗ ಚಚ್ಚಟ್ಟನೆ ವಾಸಿ! ರ್ರೋಗ
ಅಂಟಲ್ಲಾರದು.
ಪದ-ಚಾಪು ತಾಳ.
ಅಂಟುರೋಗದ ತಂಟೆ ಬಾರದು ಕೇಳಿ |
ಬ್ರಾಂಡಿಯ ಗುಟುಕೊಂದು ಕುಡಿರೈಯ್ಯ ||
ಒಂದೊಂದು ಡ್ರಾಮಿಗೆ ನೂರಾರು ರೋಗಾಗಳ್ |
ತಟ್ಟನೆ ನಿಂತಿವೆ ನಿಜವೈಯ್ಯಾ ||೧||
ಅಂ! ಏನೆಂದೆ! ಅಯ್ಯೋ! ತಲೆಯೆಲ್ಲ ಸಪ್ಪೆಯಾಯಿತು; ಯಾರಪ್ಪಾ!
ಒಂದಿಷ್ಟು ಒಂದಿಷ್ಟು ಬ್ಯಾಂದಿ ಕೊಡಿ! ಯಾರೂ ಕೊಡುವುದಿಲ್ಲವೆ?
ದಮ್ಮಯ್ಯಾ! ಒಂದಾಣೆ ಕೊಡಿ! ಯಾರೂ ಕೊಡುವುದಿಲ್ಲ! ಮನೆಗೆ
ಹೋಗಿ ಏನಾದರೂ ಕಾಸು ತರಲೇ ಬೇಕು-( ಹೋಗುತ್ತ)
ಪದ-ಲಾವಣಿ ಮಟ್ಟು.
ಬ್ರಾಂಡಿಕುಪ್ಪಿಯ ಬಿಡದೆ ಸೇವಿಸೀ | ಮುಕುತಿ ಪಡೆಯಿರಿ-ನೀವೆಲ್ಲ || ಪ ||
ಸಗ್ಗದ ಸೌಖ್ಯ-ತಿಳಿವಿರಿ ಆಗ | ಸುಳ್ಳು ಮಾತು ನಾನಾಡೆ || ಅ ಪಲ್ಲ ||
ಹದಿನಾಲ್ಕು ಲೋಕಕೆ ಖ್ಯಾತಿ | ಬ್ರಾಂಡಿ ಸೇವಿಪರ ಜಾತಿ ||೧||
ಜನುಮಮರಣದ ಭೀತಿ | ತೊರೆಯಲು ತ್ತುಮದ ಯುಕ್ತಿ || ೨ ||
ದೃಶ್ಯ ೬-ಸುರೇಂದ್ರರಾಯನ ಮನೆ.
(ಸುರೇಂದ್ರನ ಹೆಂಡತಿ ರಮೆಯು ಹರಕು ಬಟ್ಟೆಯನ್ನು ಟ್ಟುಕೊಂಡು ಮಂಗಲ
ಸೂತ್ರದ ತಾಳಿಯೂ ಇಲ್ಲದೆ ಅತಿ ದರಿದ್ರಾವಸ್ಥೆಯಲ್ಲಿರುವಳು.)
-------------------------------------------------------------------
- 66 -
ಪದ-( ದೀನಪಾಲಮಾನುನೀಯ . . . ಎಂಬಂತೆ) ದಾದರತಾಳ.
ದೀನಳಾದೆ ನಕಟನಾನೇನ ಮಾಡಲೀಗಹಾ || ಪ | |
ಪ್ರಾಣವೇ ಉಳಿಯಲಿನ್ನು ಬದುಕಿಯೇನು ಸಾರ್ಥಕ || ಅ. ಪ ||
ಸರ್ವನಾಶವಾದುದಕಟ | ಪತಿಯ ಮದ್ಯ ಪಾನದಿ |
ಪ್ರೇಮ ಭಂಗ-ಮಾನ ಭಂಗವಿತ್ತ ಭಂಗವಾದುದೇ || ೧ ||
ಶ್ರೀಮಂತನ ಮಗಳಾಗಿ ಶ್ರೀಮಂತ ವಿದ್ಯಾವಂತನ ಕೈಹಿಡಿದೂ
ಏನು ತಾನೇ ಸಾರ್ಥಕ! ಈ ಕುಡಿಕನ ಸಹವಾಸವನ್ನು ಬಿಟ್ಟು ಬಾ ಎಂದು
ತಂದೆಯು ಎಷ್ಟು ಹೇಳಿದರೂ ಕೇಳದೆ ಪತಿಯೇ ಪರದೈವವೆಂದು ಬಗೆದು,
ಇಲ್ಲಿಯೇ ಉಳಿದುಕೊಂಡುದಕ್ಕೆ ಹೇ, ದೇವಾ! ಇದೇಯೋ ನೀನು
ತೋರುವ ಅನುಗ್ರಹ? ನನ್ನ ಸುಖಸಂಪತ್ತಿನ ಕಾಲದಲ್ಲಿ ನಾನು ಯಾರನ್ನು
ದಾಸಿಯನ್ನಾಗಿ ಇಟ್ಟು ಕೊಂಡಿದ್ದೆನೋ ಅವಳನ್ನೇ ಈಗ 'ದೇವಿ, ನಿನ್ನಿಂದ
ನನ್ನ ಆ ಮುದ್ದು ಶಿಶುವಿನ ಪಾಲನೆಯಾಗಬೇಕು, ಎಲ್ಲಾದರೂ ದೊಡ್ಡ
ವರ ಮನೆಯಿಂದ ಗೋದಿ ಬೀಸುವುದಕ್ಕೆ ತಂದು ಕೊಡು, ಅದರ
ಕೂಲಿ ಯಿಂದಾದರೂ ದಿನ ದೂಡುತ್ತೇನೆ' ಎಂದು ಅಂಗಲಾಚಿ ಬೇಡಿಕೊಳ್ಳುವ
ಅವಸ್ಥೆಯನ್ನೂ , ಹೇ ದೇವಾ, ನೀನು ಕೊಟ್ಟೆಯಾ! ಆದರೂ ನೀನು
ಅಪಾರ ಕರುಣಾಳು ಎಂಬುದರಲ್ಲಿ ನನಗೆ ಸಂಶಯವಿಲ್ಲ. ಪತಿಯನ್ನು
ಸನ್ಮಾರ್ಗಕ್ಕೆ ತರುವುದಕ್ಕಾಗಿ ಸತಿಯಾದವಳು ಏನೆಲ್ಲಾ ಯತ್ನಗಳನ್ನು
ಮಾಡಬಹುದೋ ಅವೆಲ್ಲವನ್ನೂ ಮಾಡಿರುವೆನೆಂಬುದು, ದೇವಾ, ನೀನೇ
ಬಲ್ಲೆ! ಆದರೂ ಔಷಧಿಗಾಗಿ ಕಿಂಚಿತ್ರ ಮಾತ್ರ ಸೇವಿಸಿದ ಮದ್ಯವು ಇಂದು
ನನ್ನ ಪ್ರಿಯ ಪತಿಯನ್ನು ಸುರಾಪಾನದ ಅಂತ್ಯಾವಸ್ಥೆಯಲ್ಲಿ ತಂದು ಬಿಟ್ಟಿರು
ವುದು! ಧನವು ಹೋಯಿತು, ಹುದ್ದೆಯು ಹೋಯಿತು, ಮಾನವ ಹೋ
ಯಿತು-ಆಸ್ತಿಪಾಸ್ತಿ ಮೈ ಮೇಲಿದ್ದ ಚಿನ್ನಾಭರಣ ಎಲ್ಲವೂ ಮಾಯವಾ
ದುವು! ಇರಲಿಕ್ಕೆ ಇದೊಂದು ಮಾಡಾದರೂ ಇತ್ತು; ಅದೂ ನಿನ್ನೆ ಸಾಲ
ಗಾರರ ವಶವಾಯಿತು! ನನ್ನ ಜೀವನ ಸರ್ವಸ್ವವನ್ನು ಇನ್ನು ಆ ಸುರಾ
ರಾಕ್ಷಸಿಯಿಂದ ಬಿಡಿಸಲು ಸಾಧ್ಯವಿಲ್ಲ! ಅಯ್ಯೋ! ಹೇಗಿರಲಿ? ಮರ್ಯಾದೆ
ತೊರೆದು ಬೀದಿಗಿಳಿದು ಕೊಲೀಗೆಲಸ ಮಾಡಲೆ? ಅದಕ್ಕೂ ಶಕ್ತಿಯಲ್ಲಿದೆ?
ಪೆಟ್ಟು ತಿಂದುತಿಂದು ಎಲುಬುಗಳು ಪುಡಿಯಾದುವು! ನನಗೆ ಇನ್ನು ಒಂದು
------------------------------------------------------------
- 67 -
ಗಳಿಗೆಯಾದರೂ ಬದುಕಬೇಕೆಂದಿಲ್ಲ. ಆದರೆ ಈ ದೇವಾ! ಆ ನನ್ನ
ಮುದ್ದು ಶಿಶುವನ್ನು ಯಾರ ಕೈಯಲ್ಲಿ ಹಾಕಿ ಹೋಗಲಿ! ಅವರು ಎಲ್ಲಿ
ಕುಡಿದು ಬಿದ್ದಿದ್ದರೂ ಹುಡುಕಿ ತಂದು ಮನೆಯಲ್ಲಿ ಹಾಕುತ್ತಿದ್ದೆನು ; ನಾನು
ಹೋದರೆ ಅವರನ್ನು ನೋಡಿಕೊಳ್ಳುವರಾರು? ಇಲ್ಲ, ಇಲ್ಲ, ದೇವಾ, ನೀನು
ಕರೆದರೂ ನಾನೊಬ್ಬಳೇ ಬರಲಾರಸು. ಹೇ ದೇವಾ, ಹೇ ಕರುಣಾಮಯ!
ನಾನು ನಿನ್ನನ್ನು ನಿಶ್ಚಲ ಮನಸ್ಸಿನಿಂದ ನಂಬಿದುದು ನಿಜವಾದರೆ, ಇಹದಲ್ಲಿ
ನಿನ್ನ ಪ್ರತಿನಿಧಿಯೇ ಪತಿಯೆಂದು ತಿಳಿದು ಭಕ್ತಿಯಿಂದ ಪೂಜಿಸಿದುದು ಸತ್ಯ
ವಾದರೆ, ನನ್ನ ಈ ಒಂದೇ ಒಂದು ಪ್ರಾರ್ಥನೆಯನ್ನು ಸಲ್ಲಿಸು-ನಮ್ಮನ್ನು
ಮೂವರನ್ನೂ ಒಂದೇ ಸವನೆ ಕೊಂಡುಹೋಗು-ದಯಾಮಯ! ಅನಾಥ
ಳಾಗಿ ನಿನ್ನ ಮರೆಹೊಕ್ಕಿದವಳ ಈ ಪ್ರಾರ್ಥನೆಯನ್ನು ಕೇಳಲಾರೆಯಾ?
ಪದ-ತ್ರಿವಳಿ ತಾಳ.
ಅವರನೆ ಬಯಕೆಯನ್ನು ಪಾಲಿಸೈ ! ಪ ||
ಕರುಣಿಸು ದೇವಾ... ಇಷ್ಟ ವಸೀಯುತ ಸತಿಸುತರನ್ನ ಸೇರುತ |
ಬರುವೆ ನಿನ್ನಯ ಪಾದದ ಸೇವೆಗೆ ಸಲ್ಲಿಸು ಪ್ರಾರ್ಥನೆ ಮಾಧವ || ೧ ||
(ಸುರೇಂದ್ರನು ಪ್ರವೇಶಿಸುವನು.)
ಸುರೇಂದ್ರ:-ಇನ್ನು ಕಿಂಚಿತ್ತು ಮಾತ್ರ ಕುಡಿಯುವದಿದೆ; ಸ್ವಲ್ಪ
ದುಡ್ಡನ್ನು ಕೊಡು.
ರಮೆ:-ಆಯ್ಯೊ: ಎಲ್ಲಿಂದ ಕೊಡಲಿ? ನನ್ನ ಮಂಗಲಸೂತ್ರದಲ್ಲಿ
ಒಂದೇ ಒಂದು ತಾಲಿಯನ್ನಿಟ್ಟು ಕೊಂಡಿದ್ದೆ, ಅದನ್ನೂ ನಿನ್ನೆ ಕೊಂಡು
ಹೋದಿರಿ!
ಸುರೇಂದ್ರ:-ಸುಳ್ಳನ್ನಾಡುವೆಯಾ? ಗೋದೀ ಬೀಸಿದ್ದಕ್ಕೆ ದುಡ್ಡು
ಸಿಕ್ಕಲಿಲ್ಲವೆ? ಅದನ್ನು ಕೊಡು.
ರಮೆ:- ತನ್ನ ಚರಣಸಾಕ್ಷಿ ಯಾಗಿ ಹೇಳುವೆನು ಇಂದಿಗೆ ಎರಡು
ದಿವಸಗಳಾದುವು-ನನ್ನ ಭಾಗ್ಯಕ್ಕೆ ಆ ಕೆಲಸವೂ ದೊರೆಯಲಿಲ್ಲ! ಉಪ
ವಾಸ ಬಿದ್ದಿರುವೆನು. ಒರೇ ನಾಲ್ಕು ಪಾವಾಣೆಗಳಿದ್ದು ವು. ದಿನಕ್ಕೆ ಎರ
ಡೆರಡು ಸಾವಾಣೆಗಳ ಹಾಲನ್ನು ತಂದು ಆ ಮಗುವಿಗೆ ಕುಡಿಸುತ್ತಿದ್ದೇನೆ.
-----------------------------------------------------------
- 68 -
ಆಗ ತಾನೇ ಆ ಕಡೆಯ 2 ಪಾವಾಣೆಯ ಹಾಲೂ ಮುಗಿಯಿತು! ಆ
ಮಗುವಿನ ಕೊರಳಾಣೆಯಾಗಿಯೂ ಏನೂ ಇಲ್ಲ.
ಸುರೇಂದ್ರ:- ಆ ಮಗುವಿನ ಕೊರಳನ್ನು ಹಿಸುಕಿಬಿಡು! ಒಂದಾಣೆ
ವ್ಯರ್ಥಮಾಡಿದೆ!
ರಮೆ:-ಒಂದಿಷ್ಟು ಹಾಲೂ ಕೊಡದಿದ್ದರೆ ಅದೆಂತು ಬದುಕೀತು?
ಸುರೇಂದ್ರ:- ಏನು! ನನಗಿಲ್ಲದ ದುತ್ತು ಆ ಬಾಲಕನಿಗೇ? ಅದು
ಬದುಕುವುದು ಬೇಡ; ಕೊಂದೇ ಬಿಡುವೆನು! ಎಲ್ಲಿದೆ? (ಎಂದು ಒಳಗೆ ಓಡುವನು)
ರಮೆ:-ಅಯ್ಯೋ! ದಮ್ಮಯ್ಯ! ಅದನ್ನು ಮುಟ್ಟಬೇಡಿರಿ (ಎಂದು
ಕೂಗುತ್ತ ಒಳಗೆ ಓಡುವಳು, ಅಷ್ಟರಲ್ಲಿ ಪೆಟ್ಟಿನ ಶಬ್ದವೂ ಮಗುವಿನ ಚೀತ್ಕಾರವೂ ಕೇಳಬರುವುದು, 'ಅಯ್ಯೋ ದೇವರೇ! ಅಯ್ಯೋ ನನ್ನ ಕಂದಾ! ಹೊದೆಯಾ! ನನ್ನನ್ನೂ ಕೊಂದುಬಿಡಿರಿ! ಅಷ್ಟೊಂದು ದಯೆತೋರಿ' ಎಂದು ರಮೆಯು ದುಃಖಿಸುವುದೂ ಕೇಳು
ವುದು, 'ಅದೂ ಸಾಯಲಿ, ನೀನೂ ಸಾಯು' ಎಂದು ಸುರೇಂದ್ರನ ಕೋಪದ ನುಡಿಯೂ
ಪೆಟ್ಟಿನ ಸದ್ದೂ ರಮೆಯ: 'ಅಯ್ಯೋ! ಸತ್ತೆ!” ಎಂದು ಕೂಗಿದ ಆರ್ತಧ್ವನಿಯ ಕೇಳಬರು
ವುದು, ಅಷ್ಟರಲ್ಲಿ ನೆರೆಕರೆಯವರು ಓಡಿಬರುವರು, ಪರದೆಯು ಮೇಲಕ್ಕೆತ್ತಲ್ಪಟ್ಟು
ಭೀಕರ ದೃಶ್ಯವು ತೋರುವುದು, ರಮೆಯ ತಲೆಗೆ ಪೆಟ್ಟಾಗಿ ಮುಖವೆಲ್ಲ ರಕ್ತಮಯ ವಾಗಿರುವುದು. ಉಟ್ಟ ವಸ್ತ್ರವು ರಕ್ತದ ಬಿಂದುಗಳಿಂದ ತೊಯ್ದಿರುವುದು. ರಕ್ತ
ತಾಗಿದ ಒಂದು ದೊಣ್ಣೆಯು ರಮಯ ಬಳಿಯಲ್ಲಿ ಬಿದ್ದಿರುವುದು, ತಲೆಯೊಡೆದು ರಕ್ತ ಮಯವಾದ ಮಗುವು ಸ್ವಲ್ಪ ದೂರದಲ್ಲಿ ಬಿದ್ದಿರುವುದು. ಸುರೇಂದ್ರನು ಒಂದು ಬದಿ
ಯಲ್ಲಿ ಬ್ರಾಂತನಾಗಿ ನಿಂತಿರುವನು, ನೆರೆಯವರಲಲೊಬೃನು ಮಗುವಿನ ಬಳಿಗೆ ಓಡು
ವನು, ಮತ್ತೊಬ್ಬನು ರಮೆಯ ಬಳಿಗೆ ಬಂದು ನೋಡಿ) 'ಅಯ್ಯೋ! ತಲೆ ಒಡೆದು ಹೋಗಿದೆಯಪ್ಪಾ, ಸ್ಮೃತಿಯಿಲ್ಲ, ಸ್ವಲ್ಪ ನೀರು ತನ್ನಿ!'
ಮಗುವಿನ ಬಳಿಗೆ ಹೋದವ:- “ಅಯ್ಯೋ! ಖೂನಿ! ಈ ದುಷ್ಟನೇ
ಇದೆಲ್ಲಾ ಮಾಡಿರಬೇಕು. (ಅಷ್ಟರಲ್ಲಿ ಮತ್ತೊಬ್ಬನು ನೀರು ತಂದು ರಮೆಯ ಹಣೆಗೆ
ಕಣ್ಣಿಗೆ ಮುಟ್ಟಿಸುವನು, ರಮೆಯ ತಲೆಗೆ ಬೆಂಡೆಜ್ ಕಟ್ಟುವನು, ಕಟ್ಟುತ್ತ ಮತ್ತೊ
ಬ್ಬನನ್ನು ಕುರಿತು) 'ರಾಮಯ್ಯ, ನೀವು ಓಡಿ ಹೋಗಿ ಡಾಕ್ಟರರನ್ನು ಕರೆತನ್ನಿ (ಇನ್ನೊಬ್ಬನನ್ನು ಕುರಿತು ) ನೀವು ಹೋಗಿ ಕೂಡಲೇ ಪೋಲೀಸು ಸ್ಟೇಶನಿಗೆ
--------------------------------------------------------------------
- 69 -
ತಿಳಿಸಿ, ಈ ದುಷ್ಟ ಪಿಶಾಚಿಯನ್ನು ಪಾಶಿಗೆ ಹಾಕಿಸಬೇಕು' (ಎನ್ನು ವನು ಅಷ್ಟ
ರಲ್ಲಿ ರಮೆಯು ಚೇತರಿಸಿ, ಕೊನೆಯ ಮಾತನ್ನು ಕೇಳಿ-)
ರಮೆ:-ಅಯ್ಯಾ, ಪೊಲೀಸು ಬೇಡ-ಇವರೇನೂ ಮಾಡಲಿಲ್ಲ,
ಹಾಗೆಂದು ಯಾರು ಹೇಳಿದರು? ಡಾಕ್ಟರರೂ ಬೇಡ, ಅಷ್ಟೊಂದು
ಗಾಬರಿಯಿಲ್ಲ
ನೆರೆಯವರಲ್ಲೊಬ್ಬ:-ಅಮ್ಮ, ಮಗುವನ್ನು ಹೊಡೆದು ಕೊಂದವ
ರಾರು? ನಿಮ್ಮ ತಲೆಯೊಡೆದವಾರಾರು? ಈ ದುಷ್ಟನಲ್ಲವೆ?
ರಮೆ:-ಅಲ್ಲ! ಅಲ್ಲ! ಅವರಲ್ಲ! ದೇಹಾಲಸ್ಯದಿಂದ ಆಗಾಗ ನನಗೆ
ಮೂರ್ಛೆ ಆಗುವದಿತ್ತು-ಎರಡು ದಿನಗಳಿಂದ ಉಪವಾಸ! ತಲೆ ತಿರುಗು
ತಿತ್ತು; ಮಗುವನ್ನು ಹಿಡಕೊಂಡು ಉಪ್ಪರಿಗೆ ಮೆಟ್ಟಿಲಿಂದ ಕೆಳಗಿಳಿಯುತ್ತಿದ್ದೆ
-ತಲೆತಿರುಗಿ ಬಿದ್ದೆ! ಮಗುವು ಅಪ್ಪಳಿಸಿದಂತಾಗಿ ಮೃತಿಯನ್ನೆದಿರಬ
ಹುದು. ನನಗೂ ಪೆಟ್ಟಾಯಿತು!
ಮತ್ತೊಬ್ಬ:- ಹಾಗಾದರೆ ಈ ದೊಣ್ಣೆಗೆ ಹೇಗೆ ರಕ್ತವಾಯಿತು!
ರಮೆ:-ದೊಣ್ಣೆಯನ್ನು ಆಧಾರಕ್ಕಾಗಿ ಹಿಡಕೊಂಡಿದ್ದೆ. ಬಿದ್ದ
ಭರಕ್ಕೆ ಏಳಲಾರದಾದೆನುಬಳಿಯಲ್ಲೇ ಬಿದ್ದಿದ್ದ ದೊಣ್ಣೆಯನ್ನು ಹಿಡಿದು
ಏಳಲಿಕ್ಕೆ ಯತ್ನಿಸಿದೆ. ಆದರೆ ಅಲ್ಲೇ ಸ್ಮೃತಿತಪ್ಪಿ ಬಿದ್ದೆ! ನನ್ನ ತಲೆಯ ರಕ್ತ
ದಿಂದ ಅದು ತೊಯ್ದಿರಬಹುದು. ಇವರು ಹೊರಗಿದ್ದವರು ನಾನು
ಬಿದ್ದುದು ಕೇಳಿ ಒಳಕ್ಕೆ ಓಡಿಬಂದು ಇದೆಲ್ಲಾ ನೋಡಿ ಬ್ಯಾಂತರಂತೆ ನಿಂತಿ
ದ್ದಾರೆ!
ಮತ್ತೊಬ್ಬ:- ಅಮ್ಮಾ, ಇದೆಲ್ಲಾ ನಿಜವೆ? ಈ ಪಿಶಾಚಿಯ ಮೇ
ಲೂ ಇಷ್ಟು ಕರುಣೆಯೆ? ಇಷ್ಟು ಪತಿಭಕ್ತಿಯೆ?
ರಮೆ:-(ಮರಣೋನ್ಮುಖರಾದವರು ಮಾತಾಡುವಂತ ಅರ್ಧಮರ್ಧವಾಗಿ)
ನಿಜವಲ್ಲದೆ ಮತ್ತೇನು? ನನ್ನ ಮಾತಿನಲ್ಲಿ ವಿಶ್ವಾಸವಿಲ್ಲವೆ? ನನ್ನ
ದೊಂದು ಪ್ರಾರ್ಥನೆಯಿದೆ-ನಾನೆಲ್ಲಾದರೂ ಸತ್ತರೆ ಅದಕ್ಕೆ ನನ್ನ ಈ
ಸರ್ವಸ್ವವನ್ನು ಗುರಿಪಡಿಸಬೇಡಿರಿ! ನನ್ನನ್ನು ನಿಮ್ಮ ಒಡಹುಟ್ಟೆಂದು ತಿಳಿದು
ಸ್ಮಶಾನಯಾತ್ರೆ ಮಾಡಿಸಿ; ಹೆಣ್ಣು ಜನ್ಮದ ಮರ್ಯಾದೆಯನ್ನು ಕಾಪಾಡಿರಿ!
-------------------------------------------------------------
- 70 -
ಇನ್ನೊಬ್ಬ:-( ಸುರೇಂದ್ರನನ್ನು ಕುರಿತು) ಏ ಪಾಪೀ! ಕೇಳು, ಪತಿ
ವೃತೆಯ ಮಾತನ್ನು ಕೇಳು-ಇವಳಿಂದು ಹೀಗೆ ಪ್ರಾರ್ಥಿಸಿಕೊಳ್ಳದಿದ್ದರೆ
ನಿನ್ನ ಈ ಘೋರಕೃತ್ಯಕ್ಕೆ ಏನಾಗುತಿತ್ತು? ಯೋಚಿಸುಮರ್ಖ!
ನೋಡು, ಇನ್ನಾದರೂ ಕಣ್ಯರದು ನೋಡು ಚೆನ್ನಾಗಿ ನೋಡು-ಈ
ನಿನ್ನ ದುಷ್ಕೃತ್ಯದ ದೃಶ್ಯವನ್ನು ! (ಎಂದು ಹೋಗುವರು.)
(ಅಷ್ಟರಲ್ಲಿ ಸುರೇಂದ್ರನ ಮತ್ತತೆಯು ಇಳಿದು ಹೋಗಿ-ತಾನು ಮಾಡಿರುವ
ಘೋರ ಕೃತ್ಯವನ್ನು ಮನಕಾಣುವನು. ರಮೆಯು ಆಡಿದ ಮಾತುಗಳು ತೀಕ್ಷಣವಾಗಿ ನಾಟುವವು. ಸುರಾಪಾನದಿಂದ ಬಲಗುಂದಿದ ಆತನ ಮನಸ್ಸಿಗೆ ಭೀಕರ ದೃಶ್ಯಗಳು ತೋರಿಬರುವವು.)
ಸುರೇಂದ್ರ:-- ತೆರೆಯಿತು, ನನ್ನ ಕಣ್ಣು ತೆರೆಯಿತು: ಈ ಪತಿವೃತೆಯು
ನನ್ನ ಕಣ್ಣುಗಳನ್ನು ತೆರೆದಿರುವಳು! ಅಯ್ಯೋ! ರಮಾ ನಿನ್ನ ಈ ದಿವ್ಯ ಜ್ಯೋ
ತಿಯು ಆರಿಹೋದ ಬಳಿಕ ನನಗೆ ಎಲ್ಲಾ ಗಾಡಾಂಧಕಾರ! ಅಯ್ಯೋ! ನನ್ನ
ಭೀಕರ ಚರಿತೆಯ ಮೂರ್ತಿವತ್ತಾಗಿ ನನ್ನ ಕಣ್ಣೆದುರಿಗೆ ನಿಂತಿರುವುದು!
ನೋಡಲಾರೆ! ಬದುಕಲಾರೆ! ರಮಾ, ನಾನು ನಿನ್ನೊಂದಿಗೇ ಬರುವೆನು.
ರಮಾ:-ನಾಥಾ, ನನ್ನ ಬಳಿಗೆ ಬಂದು ಕೂತುಕೊಳ್ಳಿರಿ.
ಸುರೇಂದ್ರ:-ನಿನ್ನ ಬಳಿಗೆ ಬರಲೆ? ಈ ಪಾಪಿಯು ಬರಲೆ?
ರಮಾ:- ಬನ್ನಿ, ಬನ್ನಿ, ನನ್ನ ಪ್ರಾಣ ಸರ್ವಸ್ವ, ಬನ್ನಿ , (ಸುರೇಂದ್ರನು
ಬಳಿಗೆ ಬಂದು ಕೂತುಕೊಳ್ಳುವನು) ನನ್ನ ತಲೆಯನ್ನು ನಿಮ್ಮ ತೊಡೆಯ ಮೇ
ಲಿಟ್ಟು ಕೊಳ್ಳಿ! ನಿಮ್ಮ ಕೈಗಳಿಂದ ನನ್ನ ಕೈಗಳನ್ನು ಹಿಡಿದುಕೊಳ್ಳಿ.! ಪುಣ್ಯ
ಮೂರ್ತಿಯಾದ ನಿಮ್ಮ ಮುಖವನ್ನು ನಾನು ನೋಡುತ್ತ ನೋಡುತ್ತ ನಿಮ್ಮಿಂದ ಬೀಳ್ಕೊಳ್ಳುವೆನು!
ಸುರೇಂದ್ರ:- ರಮಾ, ದೇವತಾಸ್ವರೂಪಿ! ನಿನ್ನನ್ನೆಂತಹ ದುರವಸ್ಥೆಗೆ
ತಂದೆನು! ನಾನು ಪಾಪಿ! ತ್ರಿಲೋಕವನ್ನು ಬೆಳಗುವ ಪುಣ್ಯಶಾಲಿಯು
ನೀನು! ಅದೋ, ನನ್ನ ಜನ್ಮದ ಸಂಚಿತ ಪಾಪವು ಭಯಂಕರ ಸ್ವರೂಪದಿಂದ
ನನ್ನೆ ದುರಿಗೆ ಬಂದು ನಿಂತಿರುವುದು! ಅಯ್ಯೋ ಬಾಯಿಯನ್ನು ತೆರೆದು
ನನ್ನನ್ನು ನುಂಗಲು ಬರುವುದು! ನಿನ್ನ ಪುಣ್ಯ ಮೂರ್ತಿಯ ಭಯದಿಂದ
-----------------------------------------------------------------------
- 71 -
ಸಮೀಪಿಸದೆ ನಿಂತಿರುವುದು! ನೀನು ಹೋದರೆ, ಅದು ನನ್ನನ್ನು
ಬಿಡದು! ರಮಾ, ನನ್ನ ನ್ನು ರಕ್ಷಿಸು! ನಿನ್ನೊಡನೆಯೇ ನಾನೂ ಬರುವೆನು!
ರಮೆ-( ಪ್ರಾಣೋತ್ಕ್ರಮಣದ ವೇಧನೆಯನ್ನು ಸಹಿಸಿಕೊಳ್ಳುತ್ತ ನಿಧಾನ
ನಿಧಾನವಾಗಿ) ದೇವಾ, ತಾವು ಸುಮ್ಮನೆ ಕಳವಳ ಪಡಬೇಡಿರಿ! ಮೊದಲೇ
ಕ್ಷೀಣವಾಗಿರುವಿರಿ! ನನಗಾಗಿ ವ್ಯಸನಪಡುವುದೇಕೆ? ಹೀಗೆ ತಮ್ಮ
ತೊಡೆಯ ಮೇಲೆ ತಲೆಯಿಟ್ಟು ಕೊಂಡು, ತಮ್ಮ ಮುಖವನ್ನು ನೋಡುತ್ತ,
ನನ್ನ ಗುಣವನ್ನು ನೀವು ಹೊಗಳುವುದನ್ನು ಕೇಳುತ್ತ, ಪ್ರಾಣಬಿಡುವ ಈ
ಭಾಗ್ಯವೂ ಯಾರಿಗೆ ಇರುವುದು? ನಾನು ಕೃತಾರ್ಥಳಾದೆ! ಅದಕ್ಕಾಗಿ
ನಾನು ದುಃಖಿಸುವುದಿಲ್ಲ! ಆದರೆ ಇದುವರೆಗೆ ನಾನು ತಮ್ಮ ಸೇವೆ ಮಾಡ
ಲಿಕ್ಕಿದೆ. ಇನ್ನಾರು ಇರುವರು? ನಿಮ್ಮ ಗತಿಯೇನು? ಆದರೂ ಚಿಂತೆ
ಯಿಲ್ಲ; ನನ್ನ ಈ ಕೊನೆಯ ಪ್ರಾರ್ಥನೆಯನ್ನು ತಾವು ಸಲ್ಲಿಸುವುದಾದರೆ
ನೀವು ನನ್ನೊಡನೆ ಬರಬೇಕಾಗಿಲ್ಲ-ತಮಗೆ ಸರ್ವ ಮಂಗಳವಾಗುವುದು
ಸಲ್ಲಿಸುವಿರಾ?
ಸುರೇಂದ್ರ:-ಅದೇನು? ಹೇಳು..ರಮಾ, ಹೇಳು!
ರಮಾ:-( ಬಹು ಮಂದಗತಿಯಿ೦ದ ಅಲ್ಲಲ್ಲಿ ನಿಲ್ಲಿಸಿ )ಇನ್ನು ಮುಂದೆ
ತಾವು ಸುರಾಪಾನವನ್ನು ನೋಡುವುದಿಲ್ಲವೆಂದು ನನ್ನ ತಲೆಯ ಮೇಲೆ
ಕೈಯಿಟ್ಟು ಪ್ರಮಾಣ ಮಾಡಿರಿ! ಸಂತೋಷದಿಂದ ತೆರಳುವೆನು! ಏನು!
ಮಾತಾಡುವುದಿಲ್ಲವೇಕೆ? ಹೇಳಿರಿ! ಹೇಳಿರಿ!
ಸುರೇಂದ್ರ:- ರಮಾ-ಹಿಂದೆ ನಾನು ಸುರಾಪಾನದ ಪ್ರಥಮಾ
ವಸ್ಥೆಯಲ್ಲಿದ್ದಾಗ ಎಷ್ಟೋ ಸಲ ಪ್ರತಿಜ್ಞೆ ಮಾಡಿದ್ದೆನು; ಆಗ ಅದನ್ನು ಪಾಲಿ
ಸಲೂ ಸಾಧ್ಯವಿತ್ತು; ಆದರೆ ಈ ಅಧಮನಿಂದ ಅದೂ ಆಗದೆ ಹೋಯಿತು!
ಈಗ ಸುರಾಪಾನದ ಪರಮಾವಸ್ಥೆಯಲ್ಲಿರುವೆನು-ಇಂತಹ ಉನ್ಮಾದಾ
ವಸ್ಥೆಯಲ್ಲಿ ಸುರೆಯೂ ನಾನೂ ಅನ್ಯೋನ್ಯ ಬೆರೆತುಹೋಗಿರುವೆವು-
ಒಂದು ಕ್ಷಣವಾದರೂ ಅದನ್ನು ಬಿಟ್ಟಿರಲು ಸಾಧ್ಯವಿಲ್ಲ-ಇಲ್ಲ-ಇಲ್ಲ.
ಅದನ್ನು ಮಾತ್ರ ಬಿಟ್ಟು ಬದುಕಲು ಸಾಧ್ಯವಿಲ್ಲ ರಮಾ, ಕ್ಷಮಿಸು!
----------------------------------------------------------
-72-
ರಮೆ:-ಹಾ! ಹಾ! ಹಾ! ಹಾ-ಗಾ-ದ-ರೆ-ಪ್ರಿಯಾ , ನಾ--ಥಾ,
ಬನ್ನಿ, ಬನ್ನಿ , ನನ್ನೊಡನೆ ಬನ್ನಿ, ಇದೋ ನಾನು ಹೊ-ರ-ಟೆ-ನು-
ಸು-ರೇಂ-ದ್ರ! (ಪ್ರಾಣ ಬಿಡುವಳು.)
ಸುರೇಂದ್ರ:-- ಏನು! ನನ್ನನ್ನು ಬಿಟ್ಟು ಹೋದೆಯಾ! ಅಯ್ಯೋ ಅಯ್ಯೋ!
ಆ ಭಯಂಕರ ರೂಪವು ನನ್ನನ್ನು ಸಮಾಸುತ್ತಿರುವುದು! ಆದರೆ
ಕಣ್ಣುಗಳು! ಅದರ ಬಾಯಿ! ಅದರ ದಾಡೆಗಳು! ಭಯಂಕರ, ಭಯಂಕರ!
ರಮಾ, ರಮಾ! ರಕ್ಷಿಸು! ರಕ್ಷಿಸು! ಬಂದೆ, ಬಂದೆ! ಆ ಪಿಶಾಚಿಯನ್ನು
ಒಂದು ಕ್ಷಣ ಹಿಂದೋಡಿಸು! (ಎಂದು ದೂರದಲ್ಲಿ ಟ್ಟಿದ್ದ ಬಾಟಿ ಯ ಕಡೆಗೆ ಓಡಿ
ಹೋಗಿ ಅದರಲ್ಲಿದ್ದ ಬ್ರಾಂಡಿಯನ್ನು ಕುಡಿಯುತ್ತ) ರಮಾ! ನಿಲ್ಲು! ಬಂದೆ! ಆ
ಪಿಶಾಚಿ! ಭಯಂಕರ! ಸಿಗಿಯುವುದಕ್ಕೆ ಬರುವುದು! ಕುದಿಯುವ ಲೋಹ
ವನ್ನು ಬಾಯಿಗೆ ಸುರಿಯುವುದಂತೆ! ರಮಾ! ಇಗೋ ಬಂದೆ! (ಎಂದು ಮತ್ತೊಂ
ದು ಕಡೆಗೆ ಓಡಿಹೋಗಿ ಅಲ್ಲಿದ್ದ ಚೂರಿಯನ್ನು ತೆಗೆದು ) ರಮಾ, ರಕ್ಷಿಸು! ಇಗೋ!
ಬಂದೆ! (ಎಂದು ಎದೆಗೆ ಚೂರಿ ಹಾಕಿಕೊಂಡು ) ರ--ಮಾ-ಪ್ರೀಯೆ-ದೇವತಾ
ಸ್ವರೂಪಿ! ದಯೆ-- ತೋ--ರು (ಎನ್ನುತ ಬೀಳುವನು.)
(ಪರದೆಯು ಬೀಳುವುದು.)
--------------------------
ದೃಶ್ಯ 2 -ಬೀದಿ.
(ಆರೋಗ್ಯ ಭಜನಾ ಮಂಡಳಿಯವರು ತಾಳತ೦ಬರಿಗಳನ್ನು ಹಿಡಕಂಡು
ಆರೋಗ್ಯ ಗೀತೆಯನ್ನು ಹಾಡುತ್ತ ಹಸ್ತಪ್ರತಿಗಳನ್ನು ಹಂಚುತ್ತ ಆರೋಗ್ಯ ಸೂತ್ರಗ
ಳನ್ನು ಬರೆದ ಪತಾಕೆಗಳನ್ನು ಎತ್ತಿ ಹಿಡಿದುಕೊಂಡು ಬರುವರು.)
ಪದ-ಮದಲಾಸಿ ಮಟ್ಟು.
ಗರ್ಭಿಣಿಯರೆ ನೀವು ಬೆದರಲುಬೇಡಿ ಪ್ರಸವವೆಂಬುದು ನೈಸರ್ಗಿಕ ಕಾರ್ಯ ನೋಡಿ || ಹದಗೆಲಸ ಹದದೂಟ ಸಡಿಲಾದ ಉಡಿಗೆ | ಒದಗಿಸಿಕೊಡುವುದು ಸುಲಭದ ಹೆರಿಗೆ ||೧||
ನಡುಬೆಳವಣಿಗೆಗೆ ಎಡಗೂಡ ಸುಖವು | ನಡುಗಟ್ಟು ಬಿಗಿಗೈವರಿಗೆ ಪ್ರಸವ ನೋವು || ನಡುಕತರುವ ಹೆರಿಗೆಯ ಕಥೆಗಳಿಗೆ | ಕೊಡಬೇಡಿ ಕಿವಿಗಳ ಗುಡುಗುವ ದನಿಗೆ || ೨ || ನಿರ್ಮಲ ಯೋಚನೆ ಕುಶಲದುದ್ಯೋಗ | ಧರ್ಮಬುದ್ಧಿಯ ಶಿಶುಜನಿಸುವ ಯೋಗ || ಭಾರದ ವಸ್ತುವನೆತ್ತಲುಬೇಡಿ ! ಬರೆಗೊಂಬೆಯಂತೆ ಕುಳಿತುಕೊಳ್ಳಬೇಡಿ || ೩ ||
--------------------------------------------------------------------
- 73 -
ಪ್ರಸವದ ದಣುತಾಳೆ ಧೈರ್ಯವು ಬೇಕು | ಅರಿವಿದ್ದ ಸೂಲಗಿತ್ತಿಯು ಬಳಿಬೇಕು || ಉಲ್ಬವು ಸರಿಯಾಗಿ ಹೊರಬೀಳಬೇಕು | ಗರ್ಭಾಶಯದ ಕೊಳೆ ಪ್ರವಿಸಲುಬೇಕು ||೪||
ಗರ್ಭಕೋಶವು ನಿಜಸ್ಥಿತಿ ಹೊಂದಬೇಕು | ನಿರ್ಭಯನಿನಗಾಗ ಯಿವನೋಡಬೇಕು || ಪ್ರಸವದ ದಣುವಾರ ವಿಶ್ರಾಂತಿ ಮುಖ್ಯ.! | ಜೀರ್ಣಿಸಹಿತವಾದ ಆಹಾರ ಸೌಖ್ಯ || ೫ || ಗಾಳಿಬೆಳಕುಬಹ ಕೋಣೆಯೋಳ್ಮಲಗಿ | ಕೊಳಕು ಬಟ್ಟೆಗಳಲ್ಲಿ ಇಡಬೇಡಿ ಹುದುಗಿ || ತಲೆಯಿಂದ ಹಾಸಿಗೆ ಇಳಿಯಾಗಿ ಹಾಸಿ | ಮಲಗಿರಿ ಬಹುತರ ಬೇನೆಗೆ ವಾಸಿ || ೬ ||
ಬೆಚ್ಚಗೆ ತನುವನು ಇರಿಸಲು ಬಟ್ಟೆ ! ಮುಚ್ಚಿಕೊಳ್ಳಲುಬೇಕು ಮುಖವನು ಬಿಟ್ಟೆ ||ಬೆನ್ನಡಿಬೀಳ್ವಂತೆ ಉದ್ದಂಡ ಶಯನ | ಉನ್ನತ ಶಿರೋರ ವಿವುಬೇನೆ ಶಮನ || ೭ ||
-----------------------------------------------------------------
ಚತುರ್ಥಂಕ.
•••••••••
ದೃಶ್ಯ ೧
(ಆರೋಗ್ಯ ಪ್ರತಾಪನ ಆಸ್ಥಾನ-ಆರೋಗ್ಯ ಪ್ರಚಾರ ಮಂಡಳಿಯ ಸ್ತ್ರೀಪುರುಷ
ರೆಲ್ಲರೂ ಇರುವರು.)
ಆರೋಗ್ಯ ಪ್ರತಾಪ:
ಪದ-ರಾಗ ಕೇದಾರ-ಝಂದ ತಾಳ.
ಬಾಲಾವಳಿ ಪ್ರೀತೆ | ಸ್ತ್ರೀಲೋಕ ವಿಖ್ಯಾತೆ | ಗೈದಾ ಮಹಾ
ಕಾರ್ಯ ವರುಹೌ ವಿಚಾರ || ಪ ||
ಸುಕ್ಷೇಮಪ್ರಚಾರ-ಯತುನ ವಿಶಾಲದಿ-ನಾರೀ ನೀ ಗೈದಿಹ
ವಿಹಿತ ಸುಕಾರ್ಯ ||೧||
ಆರೋಗ್ಯ ಸುಂದರಿ, ಈ ಶಿಶುಸಪ್ತಾಹದಲ್ಲಿ ಸೀನೂ ನಿನ್ನ ದಳದವರೂ ಏನೇನು ಪ್ರಚಾರಕಾರ್ಯ ಮಾಡಿದಿರಿ?
ಆರೋಗ್ಯ ಸುಂದರಿ:-ಮಹಾರಾಜ, ನಾವು ಅನೇಕ ಮನೆಗಳನ್ನು
ಸಂದರ್ಶಿಸಿದೆವು. ಅಲ್ಲಿಯ ಸ್ತ್ರೀಯರ ಅಜ್ಞಾನವನ್ನು ಏನೆಂದು ಹೇಳಲಿ!
ಒಂದು ಮನೆಯಲ್ಲಿ ಎಷ್ಟೋ ದಿವಸಗಳಿಂದ ಮಗುವನ್ನು ತೊಟ್ಟಿಲಲ್ಲಿ ಇಟ್ಟ
ಕೂಡಲೆ ಅದು ಕೂಗುತ್ತಿತ್ತಂತೆ; ವಿಭೂತಿ ಹಾಕಿಯಾಯಿತು, ಯಂತ್ರ
ಕಟ್ಟಿಯಾಯಿತು, ತೊಟ್ಟಿಲ ಅಡಿಯಲ್ಲಿ ಹೊಗೆಯೊಡ್ಡಿಯಾಯಿತು, ನಿಮಿತ್ತ
ಕೇಳಿ ತಹತಟ್ಟು ಮಾಡಿಯಾಯಿತು, ಆ ಕೋಣೆಯೊಳಗೆ ಏನೋ ಪಿಶಾಚಿ
ಇದೆಯೆಂದು ಬೇರೆ ಕೋಣೆಯಲ್ಲಿ ತೊಟ್ಟಿಲು ಕಟ್ಟಿ ಮೀಡಿಯಾಯಿತು,
ಕಡೆಗೆ ಆ ತೊಟ್ಟಿಲನ್ನು ಮಾಡಿದ ಮರದಲ್ಲೆ ಏನೋ ಪಿಶಾಚವ ವಾಸ
ವಾಗಿರಬೇಕೆಂದು ಅದಕ್ಕೊಂದು ಹಳೆಯ ಪಾದರಕ್ಷೆ ಯನ್ನು ತೂಗಿಸಿಯೂ
ಆಯಿತು! ಆದರೆ ತೊಟ್ಟಿಲಲ್ಲಿ ಮಗುವನ್ನಿಟ್ಟ ಕೂಡಲೆ ಅದು ಕೂಗುವುದು
ಮಾತ್ರ ಬಿಡಲಿಲ್ಲವಂತೆ! ಇದೊಂದು ಪರಮಾಶ್ಚರ್ಯವೆಂದು ಅನೇಕ ಸ್ತ್ರೀ
ಯರು ಗುಂಪು ಕೂಡಿದ್ದರು. ಅವರೆಲ್ಲರೂ ನನ್ನನ್ನು ಸುತ್ತಿಕೊಂಡು--
“ಏನಮ್ಮಾ, ಆರೋಗ್ಯ ಸುಂದರಿಯಮ್ಮನವರೇ, ದೈವದ ಉಪದ್ರವಿದೆಯೆಂದು
------------------------------------------------------------------
- 75 -
ಈಗಲಾದರೂ, ಇದನ್ನು ನೋಡಿಯಾದರೂ, ನಂಬುವಿರಾ? ಏನು?' ಎಂದು
ಪರಿಹಾಸ್ಯಗೈದರು. ಇಂತಹ ಸ್ತ್ರೀಯರ ಆಜ್ಞಾನವನ್ನು ಏನೆಂದು ಬಣ್ಣಿಸಲಿ:
ಪದ-ದುಮಾಳಿ ತಾಳ.
ಸ್ತ್ರೀಯರತೀ ಅಜ್ಞಾನಿಗಳಾಗಿಹರ್ | ಸ್ತ್ರೀಯತಿ ಅಜ್ಞಾನಿ || ಪ ||
ತಿಳಿಯರು ಶಿಶುಗಳ | ಕ್ಷೇಮದ ಮರ್ಮವ | ಮುಳುಗಿಹರೈಯ |
ಜ್ಞಾನದಿ ತೊಳಲುತ || ೧ || ದೈವದ ನೋಟದಿ-ದೃಷ್ಟಿಯ
ಮಾಟದಿ-ಕುಂದಿತು ಮಗುವೆಂದೆಂಬುವರವರು ॥ ೨ ॥
ಆರೋಗ್ಯ ಪ್ರತಾಪ:-ಆಗ ನೀನು ಬಲು ಸಂಕಟಕ್ಕೆ ಬಿದ್ದಿರಬೇಕು;
ಅನಂತರವೇನಾಯಿತು?
ಆರೋಗ್ಯ ಸುಂದರಿ:- ಆ ಕೋಣೆಗೆ ಹೋಗಿ ನೋಡಬೇಕೆಂದೆನು,
ಕರೆದುಕೊಂಡು ಹೋದರು. ಕತ್ತಲಾದ ಪಡಸಾಲೆಯಿಂದ ಅದರೊಳಗೆ
ಹೋಗಲಿಕ್ಕೆ ಚಿಕ್ಕದೊಂದು ಬಾಗಿಲು, ಕೋಣೆಯಲ್ಲಿ ಹಗಲಲ್ಲೂ ಅಮವಾ
ಸೆಯ ರಾತ್ರೆ! ಕಿಟಿಕಿಗಳೇ ಇಲ್ಲ. ಬಾಣಂತಿಗೆ ಶೀತತಾಗುವುದಂತೆ! ಅವಳ
ಹಾಸಿಗೆಯ ಅಲ್ಲೇ, ಗುಮ್ಮೆಂದು ಸೂತಕದ ವಾಸನೆ ಹೊಡೆಯುತ್ತಿತ್ತು
ತೊಟ್ಟಿಲನ್ನು ಹೊರಗೆ ಅಂಗಳಕ್ಕೆ ತರಿಸಿ ಪರೀಕ್ಷಿಸಿದೆನು ಅದರಲ್ಲಿ ಉದ್ದ
ಕ್ಕೊಂದು ಬಿರುಕು! ಅದರಲ್ಲಿ ಸಿಪಾಯಿಗಳನ್ನು ಲಾಯಿನ್ ಮಾಡಿದಂತೆ ತಗಣೆ
ಗಳ ಒಂದು ಸಾಲು!! 'ನೋಡಿರಮಾ, ಉಪದ್ರವ ಕೊಡುವ ದೈವಗಳ
ತಂಡವೇ ಇಲ್ಲಿದೆ' ಎಂದು ಅವರಿಗೆಲ್ಲ ತೋರಿಸಿದೆ; ಎಲ್ಲರೂ ಅವಾಕ್ಕಾದರು.
ಶಿಶುಗಳು ಮಲಗುವ ಬಹು ಜಾಗರೂಕರಾಗಿರುವಂತೆ ಅವರಿಗೆ ಈ ಜೋ
ಗುಳ ಪದವನ್ನು ಕಲಿಸಿಕೊಟ್ಟೆನು
ಪದ-( ಹೇಗೆ ಪಾರಮಾಡುವೀ ... ಎಂಬಂತೆ) ರೂಪಕ ತಾಳ.
ಜಾಗರೂಕರಾಗಿರಿ-ಮಗುವು ಮಲಗುವಲ್ಲಿ |
ಬರಿದೈವದ ಕಾಟವು-ಯೆನ್ನಬೇಡಿ || ಪಲ್ಲ ||
ತೊಟ್ಟಿಲೊಳಗೆ ನೋಡಿ-ಬಟ್ಟೆಗಳಲ್ಲಿ ನೋಡಿ
ಕಿಟಕಿ ಕದಗಳನು-ವಾಯು ಚಲನೆಗಾಗಿ
ತೆರೆಯುತ ಮಗುವಿನ-ಮೈಗೆ ಹೊದಿಕೆಯಿಟ್ಟು || ೧ ||
--------------------------------------------------------------------------
– 76 -
ಮತ್ತೊಂದುಕಡೆ ವೈಯಾರಿಯೊಬ್ಬಳು ತನಗೆ ಎದೆಹಾಲಿದ್ದರೂ ಮಗುವಿಗೆ
ಬುಡ್ಡಿಯ ಹಾಲನ್ನೇ ಕೊಡುತ್ತಿದ್ದಳು. ಕಾರಣವೋ, ತನ್ನ ಸೌಂದರ್ಯ ಕೆಡು
ವುದಂತೆ! ವಕ್ಷಸ್ಥಳದ ಉಪ್ಪಿನ ಸೊಬಗು ಹೋಗುವುದಂತೆ! ರಗಳೆಯಾಗು
ವದಂತೆ! ಹಾಲಿನ ಪುಡಿಯಿಂದ ಶಕ್ತಿ ಬರುವುದೆಂದು ಜಾಹೀರಾತುಗಳಲ್ಲಿ
ನೋಡಿದ್ದಳಂತೆ! ಮತ್ತು ಕೆಲವರು ತಮ್ಮ ಮಕ್ಕಳು ಪುಷ್ಟಿ ಯಾಗಬೇಕೆಂದು
ಮೆಂತೆಯ ಹಿಟ್ಟೋ ರಾಗಿಯ ಹಿಟ್ಟೋ ಇನ್ನೂ ಏನೇನೋ ಮಗುವಿನ
ಹೊಟ್ಟೆಯೆಂದರೆ ಗೋಣಿಯ ಚೀಲವೋ ಎಂಬಂತೆ ದಿನಕ್ಕೆ 10 12 ಸಲವೂ
ತುಂಬಿಸುತ್ತಿದ್ದರು. ಹಲ್ಲು ಬಾರದ ಆ ಶಿಶುಗಳು ಆ ಆಹಾರವನ್ನು ಜೀರ್ಣಿ
ಸಲಾರದೆ, ಗೊರಬು ಎದೆ, ಡೊಳ್ಳು ಹೊಟ್ಟಿ, ಚಾಟು ಅಂಡು, ಚೋಟು
ಕೈ, ಮೋಟು ಕಾಲು, ಗೊರಬಣ್ಣನಂತಿದ್ದುವು: ಶಿಶುಗಳು ಚಳಿಯಾಗಿ
ಕೂಗಲಿ, ಸೆಖೆಯಾಗಿ ಕೂಗಲಿ, ಮಲಗಿಸಿದುದು ಸರಿಯಾಗದೆ ಕೂಗಲಿ,
ಕತ್ತಲೆ ಕೋಣೆಯ ಕಾರಾಗೃಹವಾಸವನ್ನು ಸಹಿಸದೆ ಕೂಗಲಿ, ಏನಾದರೂ
ದೇಹಪೀಡೆಯಿಂದ ಕೂಗಲಿ-- ತಟ್ಟನೆ ಬಂತೇ ಬಂತು! ಪಾಪ, ಬಾಯಿ
ಬಾರದ ಆ ಮಕ್ಕಳ ಬಾಯಿಗೊಂದು ಬಿರಿಡೆ! ಮೊಲೆಯೋ, ಹಾಲಿನ
ಬುಡ್ಡಿಯೊ, ಅಥವಾ ಕುದಿಸಿ ತಣ್ಣಗಾಗಿ ಹೋದ ಹಿಟ್ಟಿನ ಮುದ್ದೆಯೋ!
ಇದೊಂದೇ ದುರಭ್ಯಾಸದಿಂದ ಎಷ್ಟೋ ಮಕ್ಕಳು ತರತರದ ರೋಗಗಳಿಗೆ
ತುತ್ತಾಗುತ್ತಿರುವರು! ಅವರೆಲ್ಲರಿಗೂ ಎದೆಹಾಲಿನ ಮಹತ್ವವನ್ನು ಹೀಗೆಂದು
ಬೋಧಿಸಿದೆನು
ಪದ ( ಕೋವಿದ ಪರಿಚಯ ... ಎಂಬಂತೆ) ದೀಪಚಂದಿ ತಾಳ.
ಶಿಶುಗಳಿಗತಿ ಹಿತವಾದುದು-ತಾಯಹಾಲಿಗೆ ಸರಿಯಾದುದಿಲ್ಲವು || ಪ ||
ಹೋರ್ಲಿನ್ನು, ಮೇಲಿನ್ನು, ಕಂಡೆನ್ಸ್ಡು ಮಿಲ್ಕೆಂದು |
ನೀವೆಂದೂ ಮರುಳಾಗಬೇಡಿರಿ ||೧||
ಮಗುವಿದು ಸದ್ದನು ಮಾಡದೆ | ಬಹುಸೌಖ್ಯದಿ ಮಲಗಲಿ
ಯೆನ್ನುತೆ-ಹೊಟ್ಟೆಯೆಂಬುದು ಚೀಲವೆನ್ನುತ ತುಂಬಿಸಿ |
ರೋಗಕ್ಕೆ ಸ್ಥಾನವ ನೀವಿರಿ | || ೨ ||
ಆರೋಗ್ಯಪ್ರತಾಪ:-ಸರಿ, ಬಹಳ ಶ್ಲಾಘನೀಯವಾದ ಕೆಲಸವನ್ನು
ಮಾಡುತ್ತಿರುವಿರಿ, ಆರೋಗ್ಯ ಮಾತೆ, ನಿನ್ನ ದೃಷ್ಟಿಗೆ ಏನೆಲ್ಲ ದೋಷ
ಗಳು ಕಂಡುಬಂದುವು?
---------------------------------------------------------------------------
- 77 -
ಆರೋಗ್ಯ ಮಾತೆ:- ಪ್ರಭೋ! ಲಾಲಿಸೋಣಾಗಲಿ! ಒಬ್ಬಳು ತನ್ನ
ಮಗುವನ್ನು ರೋಗಿಷ್ಟನ ಹಾಸಿಗೆಯಲ್ಲಿ ಬಿಟ್ಟಿದ್ದಳು; ಇನ್ನೊಂದು ಕಡೆ ಮೈ
ಯೆಲ್ಲಾ ಕಜ್ಜಿಯಿದ್ದ ಹುಡುಗನೊಬ್ಬನು ಮಗುವನ್ನು ಎತ್ತಿಕೊಂಡಿದ್ದನು.
ಒಂದು ಮನೆಯಲ್ಲಿ ಪ್ರೇಮರೋಗದಿಂದ ತುಂಬಿರುವವಳೊಬ್ಬಳು ಮಗುವಿನ
ಬಾಯಿಗೆ ಮುದಿ ಡುತ್ತಿದ್ದಳು. ಇನ್ನೊಂದು ಕಡೆಯಲ್ಲಿ ಮೈಯೆಲ್ಲಾ
ಹುಣ್ಣಾಗಿದ್ದ ನಾಯಿಯ ಮರಿಯನ್ನು ಮಗುವ ತಬ್ಬಿಕೊಂಡು ಆಡುತ್ತಿತ್ತು.
ಇಂತಹ ವಿಷಯಗಳ ಸಂಬಂಧದಿಂದ ಮಗುವಿನ ಎಳೆಯ ದೇಹದಲ್ಲಿ ಭಯಂಕರ
ರೋಗಗಳು ಹೇಗೆ ಒಲವಾಗಿ ಬೇರೂರಿಕೊಳ್ಳುತ್ತವೆಂಬುದನ್ನು ಅವರಿಗೆ
ಹೀಗೆಂದು ವಿವರಿಸಿದೆನು---
ಪದ... ಆದಿತಾಳ.
ಶಿಶುವಿಂಗೆ ರೋಗಗಳ್ ಬಹುಬೇಗ ಹಾರುವುವೌವ್ವಾ | ಬಹುಬೇಗ
ಹಾರುವುವೌವ್ವಾ | ಬಹಬೇಗ ಹಾರುವುವೌವ್ವಾ ||
ತಿಶುಸಮೀಪದಿ ರೋಗೀ | ಬಾರದತೆರದಿ ತಡಿರೇ | ಬಾರದ
ತೆರದಿ ತಡಿರೇ | ಬಾರದ ತೆರದಿ ತಡಿರೇ || ಮುಟ್ಟಲು
ರೋಗಗಳ್ | ಬಹುಬೇಗ ಹಾರುವುರ್ವವ್ವಾ || ೧ ||
ಮತ್ತೊಂದು ಮನೆಯಲ್ಲಿ ದೂಳು ತುಂಬಿದ್ದ ನೆಲದ ಮೇಲೆ ಮಗುವನ್ನು ಬಿಟ್ಟು
ಎದುರಿನಲ್ಲಿ ತಾಂಬದ ಸೌಟು ತುಕ್ಕು ಹಿಡಿದ ಬೀಗದ ಕೈಗೊಂಚಲು ಇನ್ನೂ
ಏನೇನೋ ಕೊಳಕು ಹಿಡಿದ ಆಟದ ಸಾಮಾನುಗಳನ್ನು ಚೆಲ್ಲಿದ್ದರು- ಮಗುವು
ಮೂತ್ರವನ್ನು ಮಾಡಿ, ಆ ಕೆಸರಲ್ಲಿ ಅವುಗಳನ್ನು ಕಲಸಿ ಬಾಯಿಗೆ ಇಟ್ಟು
ಕೊಳ್ಳುತ್ತಿತ್ತು. ನಾನು ಆ ಮಗುವಿನ ತಾಯಿಯನ್ನು ಕರೆದು “ಅಮ್ಮಾ,
ನೀವೂ ಇವನ್ನು ಬಾಯಿಗೆ ಇಟ್ಟು ಕೊಳ್ಳುವಿರಾ?' ಎಂದೆ. ಆಗ ಆ
ತಾಯಿಯ ಕಣ್ಣು ತೆರೆಯಿತು. ಅಂತಹ ಕಾರ್ಯಕ್ಕೆ ಇನ್ನೆಂದಿಗೂ ಎಡೆ
ಗೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದಳು. ಹೀಗೆಯೇ ಅನೇಕ ವಿಷಯ
ಗಳನ್ನು ಬೋಧಿಸುತ್ತಿದ್ದೇವೆ, ಮಹಾಪ್ರಭೋ!
ಆರೋಗ್ಯ ಪ್ರತಾಪ:-ಶಿಶುಗಳ ಆರೋಗ್ಯದ ವಿಷಯ ವಿಶೇಷ ಪ್ರಯ
ತ್ನವು ನಿಮ್ಮಿಂದ ನಡೆಯುತ್ತಿದೆಯೆಂಬುದನ್ನು ನೋಡಿ ನಾನು ತುಂಬ
ಸಂತೋಷಪಡುತ್ತೇನೆ. ಆರೋಗ್ಯ ಸಂಜೀವಿನಿ, ಸ್ತ್ರೀಯರ ವಿಷಯವೇನು?
------------------------------------------------------------
- 78 -
ಆರೋಗ್ಯ ಸಂಜೀವಿನಿ:- ಪ್ರಭೋ! ಯೌವನಾವಸ್ಥೆಗೆ ಕಾಲಿಡುವ
ಮೊದಲೇ ವೃದ್ದಾಪ್ಯವ್ಯವನ್ನು ಹೊಂದಿದ ಹಲವು ಸ್ತ್ರೀಯರನ್ನು ಸಂದರ್ಶಿಸಿ
ದೆವು. ತಾನೇ ಮಗು, ಅವಳಿಗೊಂದು ಮಗು! ಮದುವೆಯಾದ ಮರು
ದಿನವೇ ಋತೂಮತಿಯೆಂದೆನಿಸಿ ಗಂಡನೊಡನೆ ಮದ್ರಾಸಿಗೋ ಬೊಂಬಾ
ಯಿಗೋ ಹೋಗಿ ಬೊಂಬೆಯಂತೆ ಕುಳಿತು ವರುಷದೊಳಗೆ ಮಗುವೊಂದನ್ನು ಹೆ
ತ್ತು 13 ವಯಸ್ಸಿನಲ್ಲಿಯೇ ಮುದುಕಿಯಾದವರು ಅವರಲ್ಲಿ ಅನೇಕರು--
ಮತ್ತೂ ಒಂದೆರಡು ವರುಷ ಬದುಕಿ ಇನ್ನೂ ಒಂದೆರಡು ರೋಗಿಗಳ ಅವ
ತಾರಕ್ಕೆ ಪುಣ್ಯಕ್ಷೇತ್ರವೆನಿಸಿಕೊಂಡು ಸನ್ನಿಪಾತ ಜ್ವರದಿಂದ ಹೇಗೋ
ಮೇಲೆ ಬಿದ್ದು ಕ್ಷಯರಾಜನ ದವಡೆಯೊಳಗೆ ಪ್ರವೇಶಿಸುತ್ತಿರುವವರು ಇನ್ನೂ
ಕೆಲವರು --
ಪದ-(ಬೀರುವರು ಇವರು . . . ಎಂಬಂತೆ) ಪಂಜಾಬಿ ತಾಳ.
ಸೇರುವರೂಯಿವರು... ಕ್ಷಯರಾಜನ-ದವಡಯೊಳು... || ಪ ||
ಬಲಿಯದ ತನುವ | ರತಿಸುಖ ತಿಳಿಸಿ |
ತನುವಿನ ದಾರ್ಡ್ಯತೆಗೆ 1 ವಿಷವಾಗುವ | ತೆರನಡೆದು || ೧ ||
ಆರೋಗ್ಯ ಪ್ರಚಾರಿಣಿ:-ಅವೆಲ್ಲವೂ ಮದ್ರಾಸು ಬೊಂಬೈಯ ಬೊಂ
ಬೆಗಳ ವಿಷಯ, ನಮ್ಮ ಈ ಊರ ಗೊಂಬೆಗಳ ಕುರಿತು ನಾನು ಕಂಡು
ದನ್ನು ಬಿನ್ನವಿಸುವೆನು, ಲಾಲಿಸೋಣಾಗಲಿ ಒಂದಿಷ್ಟು ಮೈಯಲ್ಲಾ
ಡಿಸಿ ಕೆಲಸ ಮಾಡಿದರೆ ತಮ್ಮ ಮೇಣದ ಮೈಯೆಲ್ಲಾದರೂ ಕರಗಿ ಹೋಗು
ವದೆಂಬ ಭಯದಿಂದಲೋ, ತಮ್ಮ ಸೌಂದರ್ಯದ ಕಾಂತಿ ಕುಂದುವು
ದೆಂದೋ, ಇಲ್ಲವೇ ಮನೆಗೆಲಸ ಮಾಡುವುದು ಗೌರವಕ್ಕೆ ಕಡಿಮೆಯೆಂಬ ದುರ್ಭಾವನೆಯಿಂದಲೋ, ಊಟಮಾಡಿದ ಬಟ್ಟಲಲ್ಲೇ ಕೈ ತೊಳೆಯಿಸಿ
ಕೊಂಡು ತಮ್ಮ ಶೃಂಗಾರದಲ್ಲೇ ಕಾಲಕಳೆಯುತ್ತ ಅಕಾಲಮೃತ್ಯುವಿಗೆ
ತುತ್ತಾಗುವವರು ಕೆಲವರು ಡಬ್ಬಿ ಡಬ್ಬಿಗಳಲ್ಲಿ ತಿಂಡಿಗಳನ್ನು ಮಾಡಿಸಿಟ್ಟು
ಕೊಂಡು ಬಾಯಿಯೆಂಬುದು ಬೀಸುವ ಕಲ್ಲೊ ಎಂಬಂತೆ ಯಾವಾಗಲೂ
ಮೆಲುಕು ಹಾಕುತ್ತಿರುವವರು ಹಲವರು. ಬೀದಿಗಿಳಿಯಬೇಕಾದರೆ
ಮೋಟರ್ ಕಾರ್ ಇಲ್ಲವೇ ಕುದುರೆಬಂಡಿ ಬರಬೇಕೆನ್ನುವವರು ಅನೇಕರು.
ಆದರೆ ಇಂತಹ ಸುಖಜೀವಿಗಳ ಸಂಕಷ್ಟಗಳನ್ನು ಕೇಳಲಿಕ್ಕೆ ಮಾತ್ರ ನೂರು
--------------------------------------------------------
-
79
-
ಕಿವಿಗಳಿದ್ದರೂ ಸಾಲದು! ಒಬ್ಬಳಿಗೆ ತಲೆಸಿಡಿತ, ಇನ್ನೊಬ್ಬಳಿಗೆ ಮಲಬದ್ಧತೆ,
ಮತ್ತೊಬ್ಬಳಿಗೆ ಬೆನ್ನು ನೋವು, ಮಗದೊಬ್ಬಳಿಗೆ ಕೈಕಾಲು ಬತ್ತಿ ಬರುವುದು;
ಒಂದು ಗೊಂಬೆಗೆ ಸಾಯಂಕಾಲ ಸ್ವಲ್ಪ ಜ್ವರ, ಕೆಮ್ಮು, ಮತ್ತೊಂದು
ಮೇಣದ ಮೂರ್ತಿಗೆ ಗರ್ಭಿಣಿಯಾದಷ್ಟು ಸಲವೂ ಗರ್ಭಸ್ರಾವ! ಇನ್ನೊಂದು
ವಿಜ್ಞಾನಿಗೆ ತಿಂದುದು ಜೀರ್ಣವೇ ಆಗುವುದಿಲ್ಲವಂತೆ! ಹೇಳಿದೆನಲ್ಲ,
ಮಹಾಸ್ವಾಮಿ, ಅವುಗಳನ್ನೆಲ್ಲಾ ಕೇಳಲು ನೂರು ಕಿವಿಗಳೂ ಸಾಲವು;
ವಯಸ್ಸಿನಲ್ಲಿ ಸುಕುಮಾರಿ, ನೋಟಕ್ಕೆ ವೃದ್ಧಾಂಗಿ!
ಪದರಾಗ-ಭೂಪಾಳಿ-ಝಂಪೆತಾಳ.
ವೃದ್ದಾಂಗಿ ಸುಕುಮಾರಿ! | ಸುಖಪೋರಿ ವೈಯ್ಯಾರಿ || ಪ ||
ಭೋಗಿ ಅನುದಿನ ರೋಗಿ | ವ್ಯಾಯಾಮ ನೀಗಿ || ೧ ||
ನೋವಸಹಿಸದ ಜೀವ | ಬಹುಬೇಗ ಸಾವ || ೨ ||
ಶಿಶುಸಂರಕ್ಷಿಣಿ:-ಆದರೆ ಇವರೆಲ್ಲರೂ ಕೇವಲ ಹೆಡ್ಡರೆನ್ನಲೂ ಆಗು
ವುದಿಲ್ಲ. ಒಂದು ರೀತಿಯಲ್ಲಿ ಯೋಚಿಸಿದರೆ ಪ್ರತಿಯೊಬ್ಬಳನ್ನೂ 'ಲೇಡಿ
ಡಾಕ್ಟರ್' ಎಂದೇ ಹೇಳಬೇಕು. ಅವರ ಶಯನಾಗಾರದ ಒಂದು ಕವಾಟು
ಔಷಧದ ಸೀಸೆಗಳಿಂದ ತುಂಬಿಹೋಗಿರುವುದು!' ವೃತ್ತಪತ್ರಿಕೆಗಳ ಜಾಹೀ
ರಾತಿನಿಂದ ಪ್ರಸಿದ್ಧ ಹೊಂದಿದ 'ಪೇಟೆಂಟ್' ಔಷಧಗಳೆಲ್ಲವೂ ಅಲ್ಲಿವೆ!
Pain balm, headache cure, caugh tablets, electric pills,
kidney pills, nerve tonic, lung tonic, asthma pills,
ಹೀಗೆ ಏನುಂಟು ಏನಿಲ್ಲ ಎಂದು ಹೇಳಲು ಅಸಾಧ್ಯ ಸ್ವಾಮಿ, ನಾವು ಅವು
ಗಳ ನಿಷ್ಟ್ರಯೋಜಕತೆಯನ್ನು ಹಲವು ಬಗೆಗಳಿಂದ ತೋರಿಸಿಕೊಟ್ಟು--
“ಅಮ್ಮಾ, ದೇಹಾರೋಗ್ಯಕ್ಕೆ ದೇವರು ನಿಯಮಿಸಿರುವ ಮಾರ್ಗವನ್ನು
ದಯಮಾಡಿ ಅನುಸರಿಸಿರಿ; ಪ್ರತಿದಿನವೂ ಒಂದಿಷ್ಟು ಮನೆಗೆಲಸ ಮಾಡಿರಿ,
ಮೈಯೊಂದಿಷ್ಟು ಬೆವರಲಿ, ಅದರಿಂದ ಗೌರವಕ್ಕೆ ಹಾನಿಯಿಲ್ಲ; ನಿಮಗೆ ಕೈ
ಗೊಂದು ಕಾಲಿಗೊಂದು ಜನವಿದ್ದರೂ ವಿನೋದಕ್ಕಾಗಿಯಾದರೂ
ಒಂದಿಷ್ಟು ಕೆಲಸಮಾಡಿರಿ. ಅದರಲ್ಲಿ ಇಷ್ಟವಿಲ್ಲವೆಂತಾದರೆ ಒಂದು ಸಣ್ಣ
ಹೂದೋಟವನ್ನು ಮಾಡಿ ಅದರಲ್ಲಿ ದಿನಕ್ಕೊಂದೆರಡುಗಳಿಗೆ ಕೆಲಸ ಮಾಡಿರಿ;
----------------------------------------------------------------------------
- 80 -
ನಿಮ್ಮ ಅಕ್ಕರೆಯ ಹೂವಿನ ಗಿಡಬಳ್ಳಿಗಳಿಗೆ ನೀರುಸೇದಿ ಹಾಕಿರಿ' ಎಂದು
ಪದೇಪದೇ ಉಪದೇಶಿಸುತ್ತ ಬರುತ್ತಿರುವೆವು.
ಶಿಶುಸಂಜೀವಿನಿ:-ಅದಕ್ಕೂ ಕೆಲವರು ಹೀಗೆಂದು ಆಕ್ಷೇಪಿಸಿ
ದರು-'ಯೂರೋಪಿಯ ಸ್ತ್ರೀಯರು ಮನೆಗೆಲಸ ಮಾಡುತ್ತಾರೆಯೆ? ಅವ
ರೆಷ್ಟು ಆರೋಗ್ಯವಂತೆಯರಾಗಿಲ್ಲ! ಅವರಂತೆ ನಾವೂ ಐಶ್ವರ್ಯವಂತರು:
ನಾವೇಕೆ ಮನೆಗೆಲಸಕ್ಕೆ ಕೈ ಹಚ್ಚಬೇಕು?' ಎಂದು ತರ್ಕಿಸಿದರು.
ಪದ.- (ಶರಣಕರುಣ ಮಾತೆ ... ಎಂಬಂತೆ) ರೂಪಕತಾಳ.
ತನುವದಣಿಸಲೇಕ 1 ಶ್ರಮವೇಕೆ || ಪ ||
ಯುರೋಪಿಯರಾ ನೋಡಿದಿರಾ ಮಾಡರಾವ ಕೆಲಸವನ್ನು | ನಾವೇಕೆ || ಅ ಪ ||
ಸೌಖ್ಯರಾಶಿ ಧನದರಾಶಿ...ಸುಖಿಸೆವು ನಂಬಿಹೆವು... ಮನಗಂಡಿಹೆವು ||
ವಸನ ಭೂಷಣ-ಧನದರಾತಿ_ಜಗದ_ಸುಖದ ನಿಲಯ ||
ಬರಿದೇಕೆ ಕೆಲಸ-ಅಸಹ್ಯ --ದುಣುವೇಕೆ.ಶ್ರಮವೇಕೆ? || ೧ ||
ಅದಕ್ಕೂ ಈ ರೀತಿ ಸಮಾಧಾನಗೊಟ್ಟೆವು-'ಯುರೋಪಿಯ ಸ್ತ್ರೀಯರು
ಅಂಗಸಾಧನೆಗಾಗಿ ಮನೆಗೆಲಸ ಮಾಡುವುದಿಲ್ಲವೆಂಬುದೇನೋ ನಿಜ.
ಆದರೆ ಅದರ ಬದಲಾಗಿ ಕುದುರೆಸವಾರಿ, ತರತರದ ಚಂಡಾಟ, ದಿನಾಲೂ
ವಾಯುಸೇವನೆಗೆಂದು ಒಂದೆರಡು ಮೈಲು ತಿರುಗಾಟ, ಅಲ್ಲದೆ ಆಗಾಗ `Ball,
Dance' ಎಂಬ ವಿಶೇಷವಾದ ನರ್ತನೆ, ಇವೆಲ್ಲವನ್ನೂ ಮಾಡು
ತಾರೆ. ನನಗಾದರೋ ಅದು ಬೇಡ, ಇದು ಊಂ ಹುಂ ಎಂದು
ತ್ರಿಶಂಕು ಸ್ವರ್ಗವಾಗಿದೆ' ಎಂದ ಮೇಲೆ ನಮ್ಮ ಮಾತಿನಲ್ಲಿ ಅವರಿಗೆ ವಿಶ್ವಾಸ
ಹುಟ್ಟಿತು. ಹೀಗೆಯೇ ಅನೇಕ ರೀತಿಯಲ್ಲಿ ಪ್ರಚಾರಕಾರ್ಯವನ್ನು
ಮಾಡುತ್ತಿರುವುದರಿಂದ ಇತ್ತೀಚೆಗೆ ಸ್ತ್ರೀಯರ ಅಜ್ಞಾನವು ಮಾಯವಾಗ
ತೊಡಗಿದೆ. ಶಿಶುಗಳ ಮರಣವು ಕಡಿಮೆಯಾಗಹತ್ತಿದೆ. ಮನೆಮನೆಗಳಲ್ಲಿ
ರೋಗರುಜೆಗಳು ತಲೆದೋರುವುದು ಅಪರೂಪವಾಗುತ್ತಲಿದೆ. ನಾವು
ಪ್ರಚಾರಪಡಿಸಿರುವ ಈ ಆರೋಗ್ಯಗೀತೆಯು ಪ್ರತಿಯೊಂದು ಮನೆಯ
ಲ್ಲಿಯೂ ಕೇಳಬರುತ್ತಿದೆ--
-----------------------------------------------------------------------
. 81 -
ಪದ-ಸದಾ ಶ್ರೀಹರಿಚೆನಾಮ ... ಎಂಬಂತೆ) ರೂಪಕತಾಳ.
ಸದಾಸಿರ್ಮಲತೆ ತೋರಿ-ಸುಖಕೇದಾರೀ ||
ಶುದ್ದವಾರಿ ಶುದ್ದ ನಾರಿ-ಸುಖಕ ದಾರೀ-ಸದಾ||
ನಿದ್ರಾಸುಖ ವಿಮಲವಾಯು | ಚಲನೆದೇಹ ಸುಖಕೆ ದಾರಿ-
ಮಿತಾಹಾರವು-ನಿತ್ಯಗೆಲಸ-ಸುಖಕೆ ದಾರೀ ಸದಾ ||
ಆರೋಗ್ಯಪ್ರತಾಪ:-ಆರೋಗ್ಯ ಮಾತೆ, ಆರೋಗ್ಯ ಸುಂದರಿ,
ಆರೋಗ್ಯ ಸಂಜೀವಿನಿ, ಶಿಶು ಸಂರಕ್ಷಿಣಿ, ಶಿಶು ಸಂಜೀವಿನಿ ನೀವೂ ನಿಮ್ಮ
ಸ್ತ್ರೀದಳವೂ ಶೃದ್ದೆಯಿಂದ ಆರೋಗ್ಯ ಪ್ರಚಾರ ಕಾರ್ಯವನ್ನು ನಿರ್ವಹಿಸು
ತಿರುವುದು ತುಂಬ ಶ್ಲಾಘನೀಯವಾಗಿದೆ. ನಿಮ್ಮ ಈ ಬೋಧನೆಯನ್ನು
ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಂದು ಬಾಲಿಕಾ ಪಾಠಶಾಲೆಗಳ
ಲ್ಲಿಯೂ ಸಾರುತ್ತಲಿರಿ; ಇಂತಹ ವಿಷಯಗಳನ್ನೆಲ್ಲ ಸ್ತ್ರೀಯರೂ ಬಾಲಿಕೆ
ಯರೂ ಸಂತೋಷದಿಂದ ಸುರಸವಾಗಿ ಹಾಡುತ್ತ ಆರೋಗ್ಯ ಜೀವನದ
ಸೂತ್ರಗಳನ್ನು ಸದಾ ನೆನಪಿನಲ್ಲಿಟ್ಟು ಕೊಂಡಿರುವಂತೆ ಹಾಡುಗಳನ್ನು ಕಟ್ಟಿಸಿ ಸಾವಿರಗಟ್ಟಳೆಯಲ್ಲಿ ಛಾಪಿಸಿ ನಿಮ್ಮ ವಶ ಕೊಡುವೆನು. ಅವುಗಳು ಪ್ರತಿ
ಯೊಂದು ಸ್ತ್ರೀಯ ಕೈಗೂ ಸಿಕ್ಕಿ ಜೋಗುಳ ಪದವಾಗಿ ಪರಿಣಮಿಸಲಿ,
ಅಂತಹ ಜೋಗುಳವನ್ನು ಕೇಳುತ್ತ ಬೆಳೆದ ಮಕ್ಕಳಿಂದಲೇ ಮುಂದೆ ನಮ್ಮ
ಆರೋಗ್ಯ ದಿಗ್ವಿಚಯವಾಗಬೇಕು, ಇರಲಿ, ಇನ್ನು ರೋಗಾಂತಕ,
ಆರೋಗ್ಯ ಪ್ರಚಾರಕ, ಆರೋಗ್ಯ ಪಾಲಕರೇ ಮೊದಲಾದವರು ಎಷ್ಟರ
ಮಟ್ಟಿಗೆ ತಮ್ಮ ಕಾರ್ಯದಲ್ಲಿ ವಿಜಯಿಗಳಾಗಿರುವರೆಂಬುದನ್ನು ತಿಳಿ
ಯೋಣ!
ಆರೋಗ್ಯ ಪ್ರಚಾರಕ:-ಸ್ವಾಮಿಾ, ಹಳ್ಳಿ ಹಳ್ಳಿಗಳಲ್ಲಿ, ಪಟ್ಟಣ
ಪಟ್ಟಣಗಳಲ್ಲಿ, ಬೀದಿ ಬೀದಿಗಳಲ್ಲಿ, ಶಾಲೆಗಳಲ್ಲಿ, ಕಾರ್ಖಾನೆಗಳಲ್ಲಿ, ಗಲ್ಲಿ
ಗಳಲ್ಲಿ ಉತ್ಸವ ಜಾತ್ರೆಗಳಲ್ಲಿ ಎಲ್ಲೆಲ್ಲಿಯೂ ಆರೋಗ್ಯ ಜೀವನ ಕ್ರಮ
ವನ್ನು ವಿವಿಧ ರೀತಿಯಲ್ಲಿ ಜನತೆಗೆ ಬೋಧಿಸುತ್ತ ಬಂದಿರುವೆವು. ಹಳ್ಳಿ
ಹಳ್ಳಿಗಳನ್ನೇ ಪಾಳುಗೆಡಹುವ ಅಂಟುರೋಗಗಳು ತಲೆಯೆತ್ತದಂತಾಗಿವೆ.
ಜನತೆಗೆ ನಿರ್ಮಲವಾದ ಸರಳ ಜೀವನದಲ್ಲಿ ಪ್ರೇಮವೂ ಸೊಗಸಿನ ಕೃತಕ
ಜೀವನಕ್ರಮದಲ್ಲಿ ವೈರಾಗ್ಯವೂ ಅನಾರೋಗ್ಯ ಕಾರಕವಾದ ಜೀವನದಲ್ಲಿ
--------------------------------------------------------------
- 82 --
ದ್ವೇಷವೂ ಹುಟ್ಟಿವೆ. ವ್ಯಭಿಚಾರ ಸುರಾಪಾನ ಮುಂತಾದ ದುರಭ್ಯಾಸ
ಗಳ ಭೀಕರ ಚಿತ್ರವನ್ನು ನಾಟಕಗಳ ಮೂಲಕ, ಮಾಯಾಲಾಂದ್ರಗಳ
ಮೂಲಕ, ಪ್ರದರ್ಶಿಸಿ ಅಂತಹವುಗಳಿಂದ ಜನರು ವಿಮುಖರಾಗುವಂತೆ ಮಾಡಿ
ರುವೆವು. ಶಾಲೆಗಳಲ್ಲಿ ಬ್ರಹ್ಮಚರ್ಯದ ಮಹತ್ವ, ದೇಹಶಾಸ್ತ್ರ, ಆರೋಗ್ಯ
ಶಾಸ್ತ್ರ ಮುಂತಾದ ವಿಷಯಗಳನ್ನು ಪರೀಕ್ಷಾ ಪಾಠಗಳಾಗಿ ಇರಗೊಡಿಸಿ
ರುವುದರಿಂದ ಪ್ರತಿಯೊಬ್ಬ ಯುವಕನ ಶಾಲೆಗಳಲ್ಲಿ ಅವುಗಳನ್ನು ತಿಳಿ
ಯಲೇ ಬೇಕಾಗಿದೆ. ದೇಹಶಕ್ತಿಯನ್ನು ಊರ್ಜಿತಗೊಳಿಸುವುದಕ್ಕಾಗಿ
ಅಲ್ಲಲ್ಲಿ ವ್ಯಾಯಾಮ ಮಂದಿರಗಳು ತೆರೆಯಲ್ಪಟ್ಟಿವೆ. ನಮ್ಮ ಕಾರ್ಯಕ್ಕೆ
ಜನತೆಯ ಸಹಕಾರ ಸಹಾನುಭೂತಿಯೂ ದಿನೇದಿನೇ ಹೆಚ್ಚು ಹೆಚ್ಚಾಗಿ
ದೊರೆಯತೊಡಗಿವೆ. ಪರಿಪೂರ್ಣವಾಗಿ ಆರೋಗ್ಯ ದಿಗ್ವಿಜಯವಾಗಬೇ
ಕೆಂಬ ಧೈಯದಿಂದ ನಾವೂ ನಮ್ಮ ದಳಗಳೂ ಅವಿಶ್ರಾಂತವಾಗಿ ಕೆಲಸ
ಮಾಡುತ್ತಿರುವೆವು. ಈ ವಿಷಯಗಳನ್ನೆಲ್ಲ ಸವಿಸ್ತಾರವಾಗಿ ಆಗಾಗ ನಮ್ಮ
ದಳದವರು ಸನ್ನಿಧಾನಕ್ಕೆ ವರದಿಯ ರೂಪದಲ್ಲಿ ಶೃತಪಡಿಸಿರುವರು. ತಾವೂ
ನಮ್ಮ ಕಾರ್ಯಕ್ಷೇತ್ರಗಳನ್ನು ಸಂದರ್ಶಿಸಿದಾಗಲೆಲ್ಲ ಆರೋಗ್ಯ ದಿಗ್ವಿಜ
ಯದ ಕಾರ್ಯವು ಸ್ಥಿರವಾದ ಹೆಜ್ಜೆಗಳನ್ನಿಡುತ್ತ ಮುಂದುವರಿಯುತ್ತಿರುವ
ದೆಂಬ ಸಂಗತಿ ದಿವ್ಯಚಿತ್ರಕ್ಕೆ ವೇದ್ಯವಾಗಿರಬಹುದು, ಮಹಾಸ್ವಾಮೀ.
ಆರೋಗ್ಯ ಪ್ರತಾಪ:-ಸರಿ, ಈ ವಿಷಯಗಳೆಲ್ಲ ನನಗೆ ತಿಳಿದೇ ಇದೆ.
ಇವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಾತ್ರ ಈ ಸಭೆಯನ್ನು ಕೂಡಿಸಿ
ದುದಲ್ಲ. ಇನ್ನು ಮುಂದಿನ ಕಾರ್ಯಕ್ರಮವನ್ನು ನಾವೆಲ್ಲರೊಂದಾಗಿ
ನಿಶ್ಚಯಿಸಬೇಕಾಗಿದೆ. ಅದಕ್ಕಾಗಿ ನಿಮ್ಮೆಲ್ಲರನ್ನು ಕರೆತರಿಸಿದೆನು. ಆ ವಿಷಯ
ವನ್ನು ಸಾವಧಾನವಾಗಿ ನಾಳೆ ತರ್ಕಿಸಿ ಇತ್ಯರ್ಥಿಸೋಣ. (ಎಂದು
ಏಳುವನು.)
ಎಲ್ಲರೂ ಎದ್ದು:- ಆರೋಗ್ಯ ಪ್ರತಾಪಕೀ ಜೈ! (ಎಂದು ಮೂರು
ಮೂರು ಸಲ ಕೂಗುವರು )
(ಪರದೆಯು ಬೀಳುವುದು.)
-----
-------------------------------------------------------------------
– 83 -
ದೃ ಶ್ಯ ೨. ಯಮಧರ್ಮರಾಜನ ದರ್ಬಾರ್.
(ಪ್ಲೇಗು, ಕೆಎಲೆರಾ, ಸಿಡುಬು, ಜ್ವರ ಮುಂತಾದ ಸೇನಾನಾಯಕರು ಕುಳಿತಿರು
ವರು. ಯಮಧರ್ಮರಾಯನು ಪ್ರವೇಶಿಸುವನು. ಎಲ್ಲರೂ ಎದ್ದು ನಿಲ್ಲುವರು. ಯಮಧರ್ಮರಾಜಕೀ ಜೈ' ಎಂದು ಆತನನ್ನು ಪ್ರಾರ್ಥಿಸುವರು.)
ಪದ-ದಾದರ ತಾಳ.
ರೋಗಜನಕಾಲಯಕ ಸಖಾ-ಧರ್ಮಪಾಲಕ ||
ಧರ್ಮಪಾಲ, ಧರ್ಮಪಾಲ, ಧರ್ಮಪಾಲಕಾ ||
ಜೈಜಯ ಧರ್ಮಪಾಲಕ-ಜೈಜಯ ಧರ್ಮಪಾಲಕ |
ಸದಾ-ಧರ್ಮಪಾಲಕ ||೧||
ಯಮಧರ್ಮರಾಯ:- ಅಮಾತ್ಯರೆ, ಇದೇನು? ಭೂಲೋಕದ
ಮಾನವ ಸಂಹಾರ ಕಾರ್ಯಕ್ಕೆ ನಿಮ್ಮನ್ನು ನಿಯಮಿಸಿರುತ್ತ, ಅದನ್ನು
ನೀವು ಬಿಟ್ಟು ದಳಸಹಿತರಾಗಿ ಹಿಂದಿರುಗಿ ಬಂದುದರ ಕಾರಣವೇನು? ಇತ್ತೀ
ಚೆಗೆ ನನ್ನ ಈ ಶೈಮುನಿ ಪುರಕ್ಕೆ ಭೂಲೋಕದಿಂದ ಅದರಲ್ಲೂ ಭರತ
ಭೂಮಿಯಿಂದ ಜನರು ಬರುವದು ದಿನೇದಿನೇ ಕಡಿಮೆಯಾಗುತ್ತಿರುವುದೇಕೆ?
ನಿಮ್ಮ ಉತ್ಸಾಹವೆಲ್ಲ ಕುಂದಿಹೋಯಿತೆ? ಯಾರಾದರೂ ನಿಮ್ಮ
ಕಾರ್ಯಕ್ಕೆ ಭಂಗವನ್ನುಂಟುಮಾಡುತ್ತಿರುವರೆ? ಅವನತಮುಖರಾಗಿರುವಿ
ರೇಕೆ? ಹೇಳಿರಿ.
ಪದ-ರಾಗ ಮಧ್ಯಮಾವತಿ-ಆದಿತಾಳ.
ನುಡಿಯರೇ ತಡಮಾಡದೆ | ಇಳೆಯೊಳ್ ಹಾವಳಿಗೈವಿರೇ ಭಾರಿ ||
ಅಕಾಲಮೃತ್ಯುವ ವಿಶೇಷದೆ-ಸಂಹಾರ ಕಾರ್ಯದೊಳು
ತ್ಸಾಹದೆ-ಬಿಡುವುತ-ಹರಡುತ-ವಿಶಾಲದೆ ||೧||
ಸರ್ವಸೇನಾಪತಿ:-ಮಹಾರಾಜ, ನಾವೆಂದಾದರೂ ಉತ್ಸಾಹ
ರಹಿತರಾದುದುಂಟೆ? ಆದರೆ ಮಾಡುವುದೇನು? ಭೂಲೋಕದಲ್ಲಿ ಆರೋಗ್ಯ ಪ್ರತಾಪನೆಂಬವನೊಬ್ಬನು ತಲೆಯೆತ್ತಿರುವನು. ಆತನ ಆರೋಗ್ಯ ಪ್ರಚಾರ
ಮಂಡಳಿಯ ಶಾಖೆಯು ಎಲ್ಲೆಲ್ಲಿಯೂ ಹಬ್ಬಿರುವುದು. ಜನರು ನಮ್ಮ
ಬಲೆಗೆ ಬೀಳದಂತೆ ಅವರಿಗೆಲ್ಲ ಆ ಮಂಡಳಿಯವರು ಆರೋಗ್ಯ ವಿಜ್ಞಾನವನ್ನು ಬೋಧಿಸುತ್ತಿರುವರು. ಅಷ್ಟು ಮಾತ್ರವೆ? ನಮ್ಮ ದಳಗಳನ್ನು ನಾಶಮಾ
-----------------------------------------------------------
- 84 -
ಡುವ ಉಪಾಯಗಳನ್ನು ಸಹ ಕಲಿಸಿಕೊಟ್ಟಿರುವರು. ಹೀಗಾಗಿ ನಮ್ಮ
ದಳವೇ ಅಲ್ಲಿ ಬದುಕುವುದು ಕಷ್ಟವಾಗಿದೆ. ಈ ವಿಷಯವನ್ನು ಸನ್ನಿಧಾನ
ದಲ್ಲಿ ಅರಿಕೆಮಾಡಿಕೊಳ್ಳೋಣವೆಂದು ನಾವೆಲ್ಲ ಬಂದಿರುವೆವು, ಮಹಾರಾಜ.
ಯಮಧರ್ಮರಾಜ:- ಪರಮಾಶ್ಚರ್ಯ! ಪರಮಾಶ್ಚರ್ಯ!
ಪದ-(ಲಲನಾಮನಾ . . . ಎಂಬಂತೆ) ಆದಿತಾಳ.
ಜಗದಾಜನಾ | ಅಜಾಗರುಕರೆಂದು |
ತಿಳಿದು ನಾ ಸೂಕ್ಷ್ಮದಾ- |
ಕೃತಿಯ ಸೇನೆ-ರಚಿಸಿ ವಿಫಲಾ |
ವೆನಲು ಮಹದಾ-ಶ್ಚೈರ್ಯ ವೈಸೇ ನುಡಿಯು || ೧ ||
ನಮ್ಮ ದಳವೆಂದರೆ ಸಾಮಾನ್ಯವೆ? ಮಾನವದೃಷ್ಟಿಗೆ ಅಗೋಚರವಾದುದು;
ಅವರ ಕತ್ತಿ, ಕೋವಿ, ಫಿರಂಗಿ), ಬೊಂಬು ಇವುಗಳ ಬಾಯಿಗೆ ಸಿಗಲಾರದು.
ಆದರೆ ಸೃಷ್ಟಿ ನಾಶಕಾರ್ಯದಲ್ಲಿ ಮಾತ್ರ ಅವುಗಳಿಗಿಂತ ಸಾವಿರಪಾಲು
ಮಿಗಿಲಾದುದು. ಮಾನವದೇಹವೆಂಬ ಕೋಟೆಯನ್ನು ಲಗ್ಗೆ ಹತ್ತಿ ವಶ ಪಡಿಸಿಕೊಳ್ಳುವುದಕ್ಕಾಗಿ ಅಸಮಾನಶಕ್ತಿಯುಳ್ಳ ಅಣುಗಾತ್ರವಾದ ಅನೇ
ಕಾನೇಕ ಜಾತಿಯ ದಳಗಳನ್ನು ನಾನು ನಿರ್ಮಿಸಿಲ್ಲವೆ? ಪ್ಲೇಗುಸೇನೆ,
ಕೊಲೆರಾಸೇನೆ, ಕ್ಷಯಸೇನೆ, ಸನ್ನಿ ಪಾತದಳ ನಿಮೊಸಿಯಾದಳ, ಸಿಡುಬು
ದಳ-ಮಕ್ಕಳ ರೋಗ, ಬಾಣಂತಿ ರೋಗ, ಪ್ರೇಮ ರೋಗ-ಇವೇನು
ಸಾಮಾನ್ಯ ದಳಗಳೆ? ಎಲ್ಲಿ ನಿರ್ಮಲ ವಾಯು ಸಂಚಾರವಿಲ್ಲವೋ, ಎಲ್ಲಿ
ನೀರು ಅಶುದ್ದವಾಗಿದೆಯೋ, ಎಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲವೋ,
ಎಲ್ಲಿ ಶುಚಿಯಿಲ್ಲವೋ ಅಲ್ಲಿ ಈ ದಳಗಳ ಕೆಲವೇ ಕೆಲವು ಅಣುಗಳನ್ನು ಮಾತ್ರ ಇಳಿಯಬಿಟ್ಟರೆ ನಿಮ್ಮ ಕೆಲಸವು ತೀರಿತು. ಅವು ತಮ್ಮಷ್ಟಕ್ಕೆ ಕ್ಷಣಕ್ಷಣ
ದಲ್ಲಿ ಅಭಿವೃದ್ಧಿ ಹೊಂದಿ, ಹತ್ತು ನೂರಾಗಿ ನೂರುಲಕ್ಷವಾಗಿ ಲಕ್ಷಲಕ್ಷೋ
ಪಲಕ್ಷವಾಗಿ ಊರು ಊರುಗಳನ್ನೇ ಹಾಳುಗೆಡಹುವುದಿಲ್ಲವೆ? ಇಂತಹ
ಅಗೋಚರವೂ, ಅದ್ಭುತ ಶಕ್ತಿಯುತವೂ ಆದ ದಳಗಳನ್ನು ಅಸಹಾಯ
ಶೂರಾದ ನಿಮ್ಮ ವಶ ನಾನು ಕೊಟ್ಟೂ ವ್ಯರ್ಥವಾಯಿತೆ? ಪರ
ಮಾಶ್ಚರ್ಯ!
-------------------------------------------------------------
- 85 -
ಪದ-ತ್ರಿವುಡೆ ತಾಳ.
ಮನಕತಿ ಚೋದ್ಯ ನಿನ್ನಯ ವಾರ್ತೆ-ನಿನ್ನಯ ವಾರ್ತೆ | ಪ ||
ಪ್ಲೇಗುದಳದ-ಅಮಿತಶಕ್ತಿ-ಅಡಗಿಪೋದುದೆಂತು || ೧ ||
ಸೃಷ್ಟಿ ನಾಶ-ಕಾರ್ಯವಿಂತು-ತಡೆದರೆಂತು ಪೇಳು || ೨ ||
ಸರ್ವಸೇನಾಪತಿ:- ಮಹಾಪ್ರಭೋ, ಅದ್ಭುತಶಕ್ತಿಯ ದಳಗಳನ್ನು
ನಮ್ಮ ವಶ ಕೊಟ್ಟಿರುವುದು ನಿಜ. ಎಷ್ಟರ ತನಕ ಮಾನವ ವರ್ಗಕ್ಕೆ ಈ
ದಳಗಳ ಗೊತ್ತುಗುರಿಯಿಲ್ಲದೆ ಎಲ್ಲವೂ ಕಾಳಿಯ ಉಪದ್ರವವೆಂದು ಕುರಿ
ಕೋಣಗಳನ್ನು ಬಲಿಕೊಡುವುದರಲ್ಲೇ ಅವರು ಮಗ್ನರಾಗಿದ್ದರೋ ಅಂದಿನ
ತನಕ ನಮ್ಮ ಕಾರ್ಯವು ಬಹು ಸರಾಗವಾಗಿ ನಡೆಯುತಿತ್ತು. ಈಗಲಾ
ದರೋ ಅವರು ಆ ದಾರಿಯನ್ನು ಬಿಟ್ಟು ನಮ್ಮ ದಳವನ್ನು ಕೊಲ್ಲುವುದರಲ್ಲೇ ನಿರತರಾಗಿದ್ದಾರೆ ನನ್ನ ಪ್ಲೇಗುದಳದ ಪ್ರಮುಖ ವಾಹನಗಳಾದ ಇಲಿ
ಗಳನ್ನು ವಿಧವಿಧದಿಂದ ಕೊಲ್ಲುತ್ತಿರುವರು. ಗಣಪತಿಯ ವಾಹನವೆಂಬ
ಆ ಅಭಿಮಾನವೂ ಈಗ ಅವರಿಗಿಲ್ಲ! ನಮ್ಮ ಭಾದೆಯು ತಗಲಿದೆಯೆಂದು
ಒಂದಿಷ್ಟು ಗೊತ್ತಾದರೆ ಸಾಕು, ಕೂಡಲೆ ಅಂಥವನನ್ನು ನಿರ್ಜನವಾದ ಪ್ರದೇಶದಲ್ಲಿಟ್ಟುಕೊಂಡು ಅನೇಕ ತರದ ಔಷಧಗಳನ್ನು ಕೊಟ್ಟು ಆತನ
ದೇಹದಲ್ಲಿ ಹೊಕ್ಕಿದ್ದ ನನ್ನ ದಳವನ್ನು ನಾಶಪಡಿಸುವರು. ಒಂದು ವೇಳೆ
ಆ ಹೋರಾಟದಲ್ಲಿ ನಾವು ಗೆದ್ದರೂ ನಮ್ಮ ಜಯವೂ ನಮ್ಮ ನಾಶವೂ ಏಕ
ಕಾಲದಲ್ಲೇ ಆಗಿಹೋಗುವುದು.
ಯಮಧರ್ಮರಾಜ: - ಅದು ಹೇಗೆ?
ಸರ್ವಸೇನಾಪತಿ:- ನಾವು ಗೆದ್ದ ದೇಹದಲ್ಲಿ ನಮ್ಮ ದಳವು ಅಭಿ
ವೃದ್ಧಿ ಹೊಂದಿ ಬೇರೆ ದೇಹಗಳಿಗೆ ಸೇರಬೇಕು. ಆದರೆ ಆ ನಿರ್ಜನವಾದ
ಪ್ರದೇಶದಲ್ಲಿ ಯಾರಮೇಲೆ ಹಾರಲಿ: ಪಟ್ಟಣಕ್ಕೆ ಹಿಂತಿರುಗಿ ಓಡೋಣ
ವೆಂದರೆ ವಾಹನವೆಲ್ಲಿಯದು? ಅದರಲ್ಲೂ ಬಿಸಿಲೆಂದರೆ ನಮ್ಮ ದಳವು
ಸತ್ತೇ ಬಿದ್ದು ಬಿಡುವದು. ಆ ರೋಗಿಯ ಮೃತಶರೀರದಲ್ಲೊ ಬಟ್ಟೆಬರೆ
ಗಳಲ್ಲೂ ಅಡಗಿದ್ದು ಕೊಂಡು ಅನುಕೂಲವಾದಾಗ ಹೊರಡೋಣವೆಂದರೆ
ಮರುಕ್ಷಣದಲ್ಲೇ ಆ ಮೃತ ಶರೀರದೊಡನೆ ಸುಣ್ಣ ಬೆರೆಸಿ ನಮ್ಮ ದಳಕ್ಕೂ
----------------------------------------------------------------
- 85 -
ಸಮಾಧಿಯಾಗಿಯೇ ಬಿಡುವದು ಪಟ್ಟಣದಲ್ಲೆಲ್ಲಾದರೂ ನಾವು ವಿಜಯಿ
ಗಳಾದರೂ ಅಲ್ಲಿಯ ನಮ್ಮ ಅವಸ್ಥೆಯು ಇದೇ.
ಯಮಧರ್ಮರಾಜ:- ಅದು ಹೇಗೆ? ಒಂದು ದೇಹದಿಂದ ಮ
ತ್ತೊಂದು ದೇಹಕ್ಕೆ, ಒಂದು ಮನೆಯಿಂದ ಮತ್ತೊಂದು ಮನೆಗೆ ಹಾರಲು
ಅಲ್ಲಿಯೂ ಎಡೆಯಿಲ್ಲವೆ?
ಸರ್ವಸೇನಾಪತಿ:- ರೋಗಿಯ ಬಟ್ಟೆಬರೆಗಳಲ್ಲಿ ಅಡಗಿರೋಣವೆಂದರೆ
ಪೂರ್ವಕಾಲದ ಸಹಗಮನದಂತೆ ನಮ್ಮ ದಳ ಬಲತ್ಕಾರದ ಚಿತಾರೋ
ಹಣವು ಆಗಿಯೇ ಬಿಡುವುದು. ಮನೆಯ ಸಂದುಗೊಂದು ಬಿರುಕುಗಳಲ್ಲಿ
ಅಡಗಿದ್ದು ಬೇರೆಯವರ ಮೇಲೆ ಸಮಯ ನೋಡಿ ಹಾರೋಣವೆಂದರೆ ಅವ
ರಲ್ಲಿ ಮನೆಬಿಟ್ಟು ಓಡಿಹೋಗುವರು ಪುನಃ ಹಿಂತಿರುಗಿ ಬರುವ ತನಕ
ಕಾಯೋಣವೆ? ನಮ್ಮ ದಳಕ್ಕೆ ಕೇವಲ ವಿಷಪ್ರಾಯವಾದ ದ್ರಾವಕ
ಗಳಿಂದ ಮನೆಯನ್ನೆಲ್ಲಾ ತೊಳೆದು ಗಂಧಕದ ಹೊಗೆಯೊಡ್ಡಿ ಸುಣ್ಣ ಬಳೆದು
ತಾರು ಹಚ್ಚಿ ನಮ್ಮ ಒಂದು ಒಳ್ಳೆಯ ಉಳಿಯದಂತೆ ಮಾಡುವರು.
ಇನ್ನು ಮನೆಯ ಹಿತ್ತಲಿನ ಕಸದ ರಾಶಿಯಲ್ಲಿಯಾದರೂ ಅಡಗಿರೋಣ
ವೆಂದರೆ ಲಂಕಾಪಟ್ಟಣಕ್ಕೆ ಹನುಮಂತ ಬಂದಂತೆ ಅಲ್ಲಿಗೂ ಬಂದೇ ಬಿಡು
ವರು! ನಮ್ಮ ದಳದ ಅಭಿವೃದ್ಧಿಗೆ ಕತ್ತಲೆ ಹಿತ, ಕಶ್ಮಲ ಹಿತ, ದೂಳು ಹಿತ,
ನಮ್ಮ ಬಲೆಗೆ ಬಿದ್ದವನ ಹಾಗೂ ಅವನು ಉಪಯೋಗಿಸಿದ ವಸ್ತುಗಳ
ಸಂಪರ್ಕವನ್ನು ಜನರು ಮಾಡಿದಷ್ಟು ಹಿತ; ಆದರೆ ಇವಕ್ಕೆಲ್ಲ ಒಂದಿಷ್ಟಾ
ದರೂ ಎಡೆಗೊಡಬಾರದೆಂದು ಆರೋಗ್ಯ ಪ್ರತಾಪನ ಸೇನೆಯು ಪ್ರತಿ
ಯೊಂದು ಮನೆಗೂ ಹೋಗಿ ಪದೇ ಪದೇ ಸಾರುತ್ತಿರುವುದು. ಅಲ್ಲದೆ
ನಮ್ಮ ದಳಕ್ಕೆ ವಿಷಪ್ರಾಯವಾದ ಸೂರ್ಯನ ಬೆಳಕು, ಶುದ್ಧ ವಾಯು,
ನಿರ್ಮಲವಾದ ನೀರು ಇವೆಲ್ಲ ಮನೆಮನೆಗೂ ಸಿಕ್ಕುವಂತೆ town plann
ing, house building, water supply ಎಂಬ ಹೊಸಹೊಸ ಕ್ರಮ
ಗಳನ್ನು ರೂಢಿಗೆ ತರುತ್ತಿರುವರು. ಮೊದಮೊದಲು ನನ್ನ ಈ ಪ್ಲೇಗುದಳ
ಬಾಯಿಗೆ ವಾರಕ್ಕೆ ಸಾವಿರಾರು ಜನರು ತುತ್ತಾಗುತ್ತಿದ್ದರು. ಈಗಲೋ
ಒಂದೆರಡು ಸಿಗುವುದೂ ಪ್ರಯಾಸವಾಗಿದೆ, ಮಹಾಸ್ವಾಮಿ! ಆದುದ
----------------------------------------------------------
- 87 -
ರಿಂದಲೇ ಹೇಳುವೆನು-ನನ್ನ ಈ ಸೇನಾಧಿಪತ್ಯಕ್ಕೆ ರಾಜೀನಾಮೆ ಕೊಡು
ವೆನೆಂದು, ನಾವು ನಮ್ಮ ಕಾರ್ಯದಲ್ಲಿ ನಿರುತ್ಸಾಹಿಗಳಾಗಿರುವೆವೆಂಬ
ಆರೋಸಣೆಗೇಕೆ ವೃಥಾ ಗುರಿಯಾಗಬೇಕು, ಮಹಾರಾಜ್!
ಯಮಧರ್ಮರಾಜ:- ಅಷ್ಟೊಂದು ಹತಾಶನಾಗಬೇಡ.
ಪದ-ದುರಾಳಿ ತಾಳ.
ಮಂತ್ರಿವರ್ಯ-ಶಾಂತತೆ ತಾಳೈ | ಯೋಚಿಸಿ ಪೇಳುವೆನೈ |
ವಿಘ್ನಗಳ್ಯಾವುವು-ಇತರರಿಗಿಹುದೈ | ನಮ್ಮಯ ಕಾರ್ಯಕ ಹಾನಿಗಳೇನೈ ||
ಇನ್ನುಳಿದವರ ಸಂಕಷ್ಟಗಳನ್ನು ಕೇಳಿ ಏನಾದರೊಂದು ನಿರ್ಧಾರಮಾಡೋಣ; ಸಮಾಧಾನವನ್ನು ತಾಳು.
ಕೊಲೆರಾ ಸೇನಾಪತಿ:- ಇನ್ನುಳಿದವರ ಸಂಕಷ್ಟಗಳನ್ನು ನಾನೇ
ಹೇಳುವೆನು-ನನಗೆ ಈ ಕೊಲೆರಾ ದಳವನ್ನು ವಹಿಸಿರುವಿ; ನನ್ನ ದಳವೇ
ಆಗಲಿ ಇತರರ ದಳವೇ ಆಗಲಿ, ಅವುಗಳ ಹಾನಿ ವೃದಿಗಳ ಕಾರಣಗಳು
ಹೆಚ್ಚಿನ ಮಟ್ಟಿಗೆ ಒಂದೇ ತೆರನಾಗಿರುವವು. ನನ್ನ ಈ ಕೊಲೆರಾ ದಳವು
ಕುಡಿಯುವ ನೀರು, ತಿನ್ನುವ ಆಹಾರ ಇವುಗಳ ಮೂಲಕ ಮನುಷ್ಯನ
ಕರುಳನ್ನು ಸೇರಿ ಅದನ್ನು ನಾಶಪಡಿಸಿ ಅದರಿಂದ ಅಭಿವೃದ್ಧಿ ಹೊಂದಿ
ಹೊರಬಿದ್ದು ಪುನಃ ನೀರು ಆಹಾರಗಳ ಮೂಲಕ ಮತ್ತೊಂದು ದೇಹವನ್ನು
ಸೇರಬೇಕೆಂಬುದೇ ತನ್ನ ನಿಯಮ. ಆದರೆ ನನ್ನ ಈ ಸೈನ್ಯವ ಎಲ್ಲಾ
ದರೂ ತಲೆಯೆತ್ತಿತೆಂದರೆ, ಎಲ್ಲಾದರೂ ಒಂದೇ ಒಂದು ನರಾಹುತಿಗೊಂಡಿ
ತೆಂದರೆ, ಆ ಆರೋಗ್ಯ ಪ್ರತಾಸನ ಕಡೆಯವರ ತಂಡತಂಡವೇ ಅಲ್ಲಿಗೆ ಬಂದು--
ಪದ-ದಾದರ ತಾಳ.
ರೋಷದಿ ಬರ್ಸರೈ | ನಾಶವ ಮಾಳ್ಪರೈ |
ಕಲಡಿನೀರೊಳೈ | ಔಷಧಗಳನೈ |
ಬಹಳ ರೀತಿಯೋಳ್ | ಸಾರುತ ನಾಡಿನೊಳ್ |
ಹಾನಿಯ ಕ್ರಮವನೈ | ಯೇನದ ಪೇಳಲೈ.||
ಕುಡಿಯುವ ನೀರಿನ ಆಶ್ರಯಗಳಾದ ಕೆರೆಬಾವಿಗಳಲ್ಲೆಲ್ಲಾ ಒಂದು ಪುಡಿ
ಯನ್ನು ಕಲಡಿಸುವರು. ಮರುಕ್ಷಣದಲ್ಲಿ ಅಲ್ಲಿ ಅಡಗಿಕೊಂಡಿದ್ದ ನಮ್ಮ
ದಳವೇ ಸತ್ತುಬೀಳುವದು! ನಮ್ಮ ಬಲೆಗೆ ಸಿಕ್ಕಿದವನ ದೇಹದಿಂದ ಹೊರ
--------------------------------------------------------------
- 88 -
ಬಿದ್ದು ಮನೆಯಲ್ಲಿದ್ದ ನೀರು, ಅನ್ನ, ಹಾಲು ಇವುಗಳೆಲ್ಲಾದರೂ ಅಡಗಿ
ರೋಣವೆಂದರೆ ಅವುಗಳನ್ನೆಲ್ಲ ಚೆನ್ನಾಗಿ ಕುದಿಸಿ ಬೇಯಿಸಿ ಬಿಸಿಬಿಸಿಯಾಗಿ
ರುವಾಗಲೇ ಉಪಯೋಗಿಸಿರೆಂದು ಊರಲ್ಲೆಲ್ಲ ಸಾರುತ್ತಾ ಬರುತ್ತಾರೆ.
ಈ ರೀತಿ ಆ ಆರೋಗ್ಯ ಪ್ರತಾಪನ ದೆಸೆಯಿಂದ ಕಾಲವು ಕೆಟ್ಟಿದೆ ಮಹಾ
ಸ್ವಾಮಿ, ಮೊದಲು ಇವರ ಸುಳಿವೇ ಇದ್ದಿಲ್ಲ; ಈಗಲಾದರೋ ಜನರು
ಪದ-ತ್ರಿವಳಿ ತಾಳ.
ನಾಶಗೈವಾರು-ಹೊಯ್ವಾರು-ಕೋಪದಿ |
ಅಶೇಷವಿಶೇಷ-ತೋಪದಿ ||
ಸೋತುಹತಾಶಾ-ರಾಗಿ ಪೋದೆವು-ಭೀತಿಯೊಳಿದೆ ದಳವೈ |
ಆಹಾರ ವಿಹಾರ ಕಾಣೆವು ||೧||
ನಮ್ಮ ನ್ನು ಹುಡುಕಿ ಹುಡುಕಿ ಕೊಲ್ಲುವಂತೆ ಪ್ರೇರೇಪಿಸುತ್ತಿರುವರು. ಮೊದ
ಲಾದರೋ ಜನರು ಹಾಗಿದ್ದಿಲ್ಲ. ಅಜ್ಞಾನದಲ್ಲಿ ಮುಳುಗಿದ್ದರು. ರೋಗಿ
ಯು ಉಪಯೋಗಿಸಿದ ಒಟ್ಟೆ ಬರೆಗಳನ್ನೂ, ಪಾತ್ರೆಗಳನ್ನೂ ಮನೆಯವ
ರೆಲ್ಲರೂ ಉಪಯೋಗಿಸುತ್ತಿದ್ದರು. ಊರಿನ ಕುಡಿಯುವ ಜಲಾಶಯಗಳಲ್ಲಿ
ಅದ್ದಿ ತೊಳೆಯುತ್ತಿದ್ದರು. ನಮ್ಮ ಭಾದೆ ಬಂತೆಂದರೆ ಏನೋ ದೈವದ
ಪೆಟ್ಟೆಂದು ಮಂತ್ರವಾದಿಯ ಮನೆಗೆ ಓಡುತ್ತಿದ್ದರು. ಅವರು ಹಿಂತಿರುಗಿ
ಬರುವಷ್ಟರಲ್ಲೆ ಮತ್ತಿಬ್ಬರನ್ನು ಮಲಗಿಸಿಬಿಡುತ್ತಿದ್ದೆವು. ಒಬ್ಬನನ್ನು ಸಮಾಧಿ
ಮಾಡಿ ಬರುವಷ್ಟರಲ್ಲಿ ಮತ್ತಿಬ್ಬರನ್ನು ಸಿದ್ದ ಪಡಿಸಿಕೊಡುತ್ತಿದ್ದೆವು . ನಮ್ಮ
ದಳದ ಮರ್ಮವೇ ಅವರಿಗೆ ಗೊತ್ತಿಲ್ಲದಿದ್ದುದರಿಂದ ಅವರು ಮಾಡುತ್ತಿದ್ದು
ದೆಲ್ಲವೂ ನಮ್ಮ ಸೈನ್ಯದ ಅಭಿವೃದ್ಧಿಗೆ ಸಹಾಯವೇ ಆಗುತ್ತಿತ್ತು. ಆದುದ
ರಿಂದ ನಾವು ಊರುಊರನ್ನೆ ಪಾಳುಬೀಳಿಸಲು ಶಕ್ತರಾಗಿದ್ದೆವು. ಆಗ
ನಮ್ಮ ಕಾಲ, ಈಗ ಅವರ ಕಾಲ; ನಮ್ಮದೇನೂ ಸಾಗುವುದಿಲ್ಲ. ಅವರ
ಉಪಟಳವನ್ನು ಎಷ್ಟೆಂದು ಹೇಳಲಿ.
ಜ್ವರ ಸೇನಾಪತಿ:-ಮಹಾಪ್ರಭೋ! ನನ್ನ ವಶದಲ್ಲಿರುವ ಮಲೆಜ್ವರ
ಸೇನಾಂಗ, ಕ್ಷಯಸೇನೆ, ಸನ್ನಿಪಾತ ಜ್ವರಸೇನೆ, ಬಾಣಂತಿ ಜ್ವರದ ದಳ,
ಸಿಡುಬು ದಳ, ಇನ್‌ಫ್ಲುಯೆಂಜಾ ನಿಮೋನಿಯಾ ದಳಗಳು-ಇವುಗಳೆಲ್ಲವೂ
ಅರ್ಧಕ್ಕಿಂತ ಮಿಕ್ಕಿ ನಾಶವಾಗಿ ಹೋದುವು. ಸೂಕ್ಷ್ಮದರ್ಶಕವೆಂಬ
-------------------------------------------------------------
-89-
ಅದೊಂದು ಕನ್ನಡಿಯಂತೆ! ಅವುಗಳಿಂದ ನಮ್ಮ ಈ ಸೂಕ್ಷಾಕಾರದ ದಳ
ಗಳನ್ನೂ ಅವುಗಳ ಜೀವನ ಮತ್ತು ವೃದ್ಧಿಕ್ಷಯ ಕ್ರಮಗಳನ್ನೂ ತಿಳಿದು
ಕೊಂಡು ನಮ್ಮ ದಳಗಳ ಅನುಭವವನ್ನೂ ನಾಶಮಾಡುವ ಕ್ರಮಗಳನ್ನೂ
ಹಳ್ಳಿ ಹಳ್ಳಿಗಳಲ್ಲಿಯೂ ಸಾರುತ್ತಾ ಇದ್ದಾರೆ. ಇನ್ನೊಂದು ದಾಕಿನ ಕ್ರಮ
ವಂತೆ. ಸಿಡುಬು ದಾಕು, ಕೊಲೆರಾ ದಾಕು, ಪ್ಲೇಗು ದಾಕು! ಇವು
ಗಳನ್ನು ಹಾಕಿಸಿಕೊಂಡ ಮನುಷ್ಯನ ದೇಹವನ್ನು ನಮ್ಮ ದಳಗಳಿಗೆ ಪ್ರವೇಶಿ
ಸುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಪ್ರವೇಶಿಸಿದರೂ ಪ್ರಾಣಹಾನಿ
ಯನ್ನುಂಟುಮಾಡುವ ಶಕ್ತಿಯುಂಟಾಗುವುದಿಲ್ಲ. ಮತ್ತೊಂದು ಇಂಜೆ
ಕ್ಷನ್ ಕ್ರಮವಂತೆ! ಮಾನವ ಶರೀರದೊಳಗೆ ಹೊಕ್ಕ ನಮ್ಮ ದಳವನ್ನು
ಕ್ಷಣಾರ್ಧದೊಳಗೆ ನಾಶಮಾಡಿ ದೇಹವನ್ನು ರಕ್ಷಿಸುವ ವಿಧಾನ! ಒಂದು
ವೇಳೆ ಗಂಡಸರ ಅಜ್ಞಾನವು ಹೋಗಿದ್ದರೂ ಚಿಂತೆಯಿಲ್ಲ; ಹೆಂಗುಸರು
ಮಾತ್ರ ಮುಂಚಿನಂತೆಯೇ ಅಜ್ಞಾನಿಗಳಾಗುತ್ತಿದ್ದರೆ ನಮ್ಮ ಕಾರ್ಯವನ್ನು
ಸರಾಗವಾಗಿ ನಡೆಸುತ್ತಿದ್ದೆವು. ಹೆಂಗಸರ ಅಜ್ಞಾನವೆಂದರೆ ನಮಗೆ ಪರ
ಮಾನ್ನದಂತೆ! ಹೆಂಗಸರು ಮಕ್ಕಳೆಂದರೆ ನಮ್ಮ ಲೆಕ್ಕದಪಟ್ಟಿಗೆ ದಾಕಲಾ
ದವರೆಂದೇ ಅರ್ಥ! ಇದನ್ನು ತಿಳಿದೇ ಇನ್ನೂರೆನ್ಸ್ ಕಂಪೆನಿಗಳು ಈ ಎರಡು
ವರ್ಗದ ಪ್ರಾಣಗಳಿಗೆ ಹೊಣೆಯಾಗಿ ನಿಲ್ಲುವುದೇ ಇಲ್ಲ. ಆದರೆ ಇತ್ತೀ
ಚೆಗೆ ಹಳ್ಳಿ ಹಳ್ಳಿಯ ಹೆಣ್ಣು ಪಿಳ್ಳೆಯೂ ಶಾಲೆಗೆ ಹೋಗತೊಡಗಿದೆ. ಶಾಲೆ
ಗಳಲ್ಲಿ ಉಪಾಧ್ಯಾಯರುಗಳಲ್ಲೊಂದು ತಂಡ, ಹೊರಗೆ ಈ ಆರೋಗ್ಯ
ಪ್ರತಾಪನ ಪ್ರಚಾರ ಮಂಡಳಿಯವರ ತಂಡವೇ ತಂಡ! ಇವರೆಲ್ಲ ಹೇಳಿ
ಕೊಡುವುದು ನಮ್ಮ ದಳಗಳನ್ನು ಈ ರೀತಿಯಿಂದ ನಾಶಮಾಡಿರಿ-- ಎಂದು.
ಮೂರನೆಯದಾಗಿ ಪತ್ರಿಕೆಗಳು-ಇವೆಗಳು ಸಹ ಕ್ಷಯ ನಿವಾರಣೆ, ಶಿಶು
ಸಂರಕ್ಷಣೆ, ಗರ್ಭಿಣಿ ಪಾಲನೆ, ಬಾಣಂತಿ ಸಂರಕ್ಷಣೆ, ಆರೋಗ್ಯ ಜೀವನ
ಕ್ರಮ, ಸರಳ ಜೀವನ ಕ್ರಮ, ಬ್ರಹ್ಮಚರ್ಯದ ಮಹತ್ವ ಇತ್ಯಾದಿ ಇತ್ಯಾದಿ
ನಮ್ಮ ಕಾರ್ಯಕ್ಕೆ ವಿರುದ್ದವಾದ ವಿಷಯಗಳನ್ನೇ ಎತ್ತಿ, ಪದೇಪದೇ ಬರೆದು
ಅವರೂ ಪ್ರಚಾರ ಕಾರ್ಯವನ್ನು ಮಾಡತೊಡಗಿರುವರು. ತಮ್ಮ ಪ್ರಚಾರ
ಕಾರ್ಯಕ್ಕೆ ತಕ್ಕಂತೆ ನಾಟಕಗಳನ್ನು ಬರೆಯಿಸಿ ಅಭಿನಯಿಸುವರು. ನಮ್ಮ
ನಾಶಕ್ಕೂ ಆರೋಗ್ಯಾಭಿವೃದ್ಧಿಗೂ ಅನುಕೂಲವಾಗುವ ತರತರದ ಆರೋಗ್ಯ
----------------------------------------------------------------
- ೧೧ -
ಗೀತೆ, ಜೋಗುಳ ಹಾಡು-ಮುಂತಾದ ಕವನಗಳನ್ನು ತೊಟ್ಟಿಲಿಂದೆದ್ದು
ಬರುವ ಚೋಕ್ರಿಯ ಹಾಡತೊಡಗಿರುವದು! ನಮ್ಮ ದಳದ ಸುರಾರಾಕ್ಷ
ಸಿಯ ಪರವಶನಾಗಿ ಸುರೇಂದ್ರನೆಂಬೊಬ್ಬನು ಮಾಡಿದ ಭೀಕರ ಕೃತ್ಯವನ್ನು
ನಾಟಕ ರೂಪವಾಗಿ ಹಳ್ಳಿ ಹಳ್ಳಿಗಳಲ್ಲಿ ಆಡಿ ತೋರಿಸಿ, ಸುರೆಯು ಮಾನವ
ವೈರಿ ಎಂಬುದನ್ನು ಮುಂದಿಟ್ಟು.ಮೂಡುತ್ತಿರುವರು. ಸಾಲದುದಕ್ಕೆ ವರ್ಷಂಪ್ರತಿ
ಇದೊಂದು ವಾರವನ್ನು 'ಶಿಶುಸಪ್ತಾಹ' ಎಂದು ಆ ವಿಷಯದ ಜ್ಞಾನ
ಪ್ರಚಾರಕ್ಕಾಗಿಯೇ ಮೀಸಲಾಗಿಟ್ಟು ಕೊಂಡಿರುವರು. ಇವರ ಪ್ರಯತ್ನ
ಗಳೆಲ್ಲ ಎಷೋ ಮಟ್ಟಿಗೆ ಫಲಕಾರಿಯಾಗುತ್ತ ಬರುತ್ತಿವೆ. ಇವರೆಲ್ಲ ಇದೇ
ರೀತಿ ಅವಿಶ್ರಾಂತವಾಗಿ ನನ್ನ ನಾಶದ ಕಾರ್ಯದಲ್ಲಿ ಇನ್ನೂ ಕೆಲವು
ವರ್ಷಗಳನ್ನು ಕಳೆದರೆ ಕೊನೆಗೆ ಬೀಜಕ್ಕಾದರೂ ನವ ದಳಗಳ ರೊಳೆಗಳು.
ಉಳಿಯಲಾಪವೇ ಎಂದು ನನಗೆ ಸಂದೇಹವಾಗಹತ್ತಿದೆ, ಮಹಾಸ್ವಾಮೀ.
ಪದ-ಆದಿತಾಳ.
ವಿಪರಿತ ಹತಾಶಿಯಾದೆ | ಮಮ ಕಾರ್ಯಗಳಲಿನು |ನುಡಿವೆ ಸಿಜವನಾ |
ಸಹಿಸೆಸಿದನುನಾ | ಸಹಿಸಸಿದನುನಾ | ಸಹಿಸೆ || ಪ ||
ಮಮಸೇನೆಯಾ ಹಾನಿನಾಶ | ವನು ಹೇಳಲಾರೆನು ರಾಜ || ೧ ||
ಯಮಧರ್ಮರಾಜ:- ಸೇನಾಪತಿಗಳಿರಾ ? ಹತಾಶರಾಗಬೇಡಿರಿ.
ನಮ್ಮ ಸೇವೆಗಳ ರಹಸ್ಯವನ್ನು ಮಾನವರು ಕಂಡುಹಿಡಿದರೆಂಬುದನ್ನು
ನಾನು ನಂಬುವುದಿಲ್ಲ. ನಾವು ಹಾಕಿದ ಗಂಟನ್ನು ನಮ್ಮಂತೆಯೇ ಅಮರರಾದ
ವರು ಬಿಡಿಸಬೇಕಲ್ಲದೆ ಮತ್ತಾರಿಗೆ ತಾನೇ ಸಾಧ್ಯ? ಈಗ ನೀವು ಹೇಳುವ
ಆ ಆರೋಗ್ಯ ಪ್ರತಾಪನ ವಿಷಯದಲ್ಲಿ ನನಗೆ ಸಂಶಯ ಉಂಟಾಗ ತೊಡ
ಗಿದೆ. ಆ ಶ್ರೀಮನ್ನಾರಾಯಣನೇ ಏನೋ ಕುಚೇಷ್ಟೆಗೆ ಇಳಿದಿರಬೇಕು.
ಆರೋಗ್ಯ ಪ್ರತಾಪನ ಮಂಡಳಿಯೆಂದರೆ ಆ ಮಾಯಾವಿಯಾದ ಹರಿಯ ನಾಟಕ ಮಂಡಳಿಯಲ್ಲದೆ ಮತ್ತೇನು?
ಪದ-ತ್ರಿವಳಿ ತಾಳ.
ಹರಿಯವನ ಬಹುಮೋಸದಿಂದ | ವಿಶೇಷ ಛಾ೦ತರಾದರವನ
ಬಹುಮೋಸದಿಂದ ||
ಮಾಯಾವಿಯೋ ತೆರದಿಯೆನ್ನಯ-ಸೇನೆಯಂ | ದಿಗಿಲು
ಗೊಳಿಪ-ಮಾಯಾಜಾಲ ವೇತಕೆ ಹರಡಿದನೋ |
ತಡೆಗಟ್ಟದಿರೆನು-ಪೋಗಿಯಾಗ ||೧||
----------------------------------------------------------------
- 91 -
ಆದರೆ ಆತನಿಗೆ ಆಟ! ನಿಮಗೆ ಪಾಣಸಂಕಟ! ಇರಲಿ, ನಾನೇ ಆತನ
ಸಂದರ್ಶನವನ್ನು ಮಾಡಿ, ಇನ್ನಾದರೂ ಆತನ ಮರುಳಾಟವನ್ನು ಹಿಂತೆಗೆ
ವಂತೆ ಹೇಳುವೆನು. ನೀವು ಧೈರ್ಯಗೊಂಡು ಭರತಭೂಮಿಗೆ ಹಿಂತೆರಳಿರಿ.
ನಿಮ್ಮ ಕಾರ್ಯದಲ್ಲಿ ನಿರತರಾಗಿರಿ. ಆ ಆರೋಗ್ಯ ಪ್ರತಾಪನ ಕಡೆಯವರು
ಎಷ್ಟು ಬೋಧನೆ ಕೊಟ್ಟರೂ ಮಾನವರು ಮಾನವರೇ. ಅವರಲ್ಲಿ ಹುಟ್ಟು
ಗುಣಗಳಿಂದ, ಅಭ್ಯಾಸಬಲದಿಂದ, ಮೂಢಭಕ್ತಿ ಮೂಢಾಚಾರಗಳಿಂದ--
ನೆಲೆನಿಂತ ಅನೇಕ ಜೀವನಕ್ರಮಗಳು ನಮಗೆಷ್ಟೋ ಅನುಕೂಲವಾಗಿಯೇ
ಇವೆ. ಅವುಗಳೆಲ್ಲವೂ ಮಾಯವಾಗಲು ಇನ್ನೂ ಹಲವು ವರ್ಷಗಳು
ಬೇಕು. ಕಸಾಯಿ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ, ವೇಶ್ಯಾಗೃಹಗಳಲ್ಲಿ ಸಂತೆಜಾತ್ರೆಗಳಲ್ಲಿ, ಈ ಸ್ಥಳಗಳಲ್ಲಿ ತೀವ್ರ ಎಷ್ಟೋ ಪ್ರಾಣನಾಶಮಾಡ
ಬಹದು. ಇಲ್ಲಿ ನಿಮ್ಮ ಬಲೆಗಳನ್ನು ಬಿಸಿ ಕಾದು ಕೂತುಕೊಳ್ಳಿ--ಆ
ಮಾನವ ಮೃಗಗಳು ತಾವಾಗಿಯೇ ಬಂದುಬಂದು ಮೇಲೆಮೇಲೆ ಬೀಳು
ವುವು. Hotels’ cups and harlots' lips are such tempt-
ing places where men crowd like locusts inspite of
all health lectures! Watch there, my dear generals,
watch there day and night, and you can knockdown
thousands in no time! ಅನೇಕರು ಹೆಲ್ತ್, ಕರುಗಳನ್ನು ಕೇಳಿ
ಕೇಳಿ ಕೊನೆಗೆ ನೆಟ್ಟಗೆ ಹೋಗುವುದು ಇಂತಹ ಸ್ಥಳಗಳಿಗೆ! ತಿಳಿಯಿತೆ?
ಮರೆಯದಿರಿ. ನಾನೀಗಲೇ ವಿಷ್ಣು ಲೋಕಕ್ಕೆ ಹೋಗಿ ನಮ್ಮ ಕಾರ್ಯವು.
ಸರಾಗವಾಗುವಂತೆ ಮಾಡುವೆನು, ಧೈರ್ಯರಾಗಿರಿ.
ಪದ-( ಪ್ರೇಮಸೇವಾ ... ಎಂಬಂತೆ) ಝಂಪೆತಾಳ.
ಪ್ರೀಯ ಮಂತ್ರಿವರರೆ ನಿಜಸಂಧಾನವ-ಮಾಡೆ-ನಡವೆ-
ನುಡಿವೆ-ನೀತಿಯಾ ವಿಷ್ಣುಗೆ || ಮಮಕಾರ್ಯದಲಿ
ಭಂಗ-ವಾಗೇಯಿಳಾ ಭಂಗ- ವೆರಥಾಮನಕೇಶ
ವೇಕೆ-ಎನುತುಸುರಿ
(ಪರದೆಯು ಇಳಿಯುವುದು )
------------------------------------------------------
- 92 -
ದೃ ಶ ೩-ಆರೋಗ್ಯ ಭಜನಾ ಮಂಡಳಿಯ ಮೆರವಣಿಗೆ.
ಪದ-ಮದಲಾಸಿ ಮಟ್ಟು-ಗೃಹಿಣೀ ಹಿತೋಪದೇಶ.
ಭಗಿನಿಯರಿದಕೇಳಿ ತೆಗಳಲು ಬೇಡಿ |
ಸೊಗಸಿನ ಬಾಳ್ಕೆಗಿ ಮರುಳಾಗ ಬೇಡಿ ||
ಕುಂದದು ಗೌರವ ಮನೆಗೆಲಸದಿಂದ !
ಅಂದವಾಗುದು ದೇಹ ಗೃಹಕೃತ್ಯದಿಂದ ||೧||
ಮೊಗ ತೊಳೆವ ನೀರಿಗೆ ದಾಸಿಯು ಬೇಕೆ? \
ಪೋಗಲು ದೇಗುಲಕೆ ಮೋಟಾರುಯೇಕೆ? ||
ಬಳಸದ ಕಬ್ಬಿಣ ಬಳಸದ ದೇಹ |
ಗೆಲವಿಲ್ಲ ಕ್ಷಯಿಪವು ಇದು ನಿಸ್ಸಂದೇಹ ||೨||
ಹೆಂಗಳ ನಿರ್ಮಲ ಮೋಜಿನೊಳಿಲ್ಲ |
ಅಂಗಳ ಕಂಡರೆ ತಿಳಿವುದು ಯೆಲ್ಲ ||
ನಿರ್ಮಲದಂಗಳದೊಳು ನಗುತಿಹಳು |
ನಿರ್ಮಲೆಯಾರೋಗ್ಯ ಲಕ್ಷ್ಮೀತಾನಿಹಳು ||೩||
ಜೆಡಗಿಗೆ ಮಾತ್ರವೆ ಮನಗೊಡುತಿರುವ |
ಅಡಿಗೆಯ ಮನಯೊಳು ಮಲಿನತ ಬಿಡುವ ||
ಮಡಿ ಮನಯೊಳಗೆಂದರೇನೆಂದು ನಗುವ |
ಮಡದಿಯು ಸುಡುವಳು ಗೃಹಕೃತ ಸುಖವ || ೪ ||
ಚೊಕ್ಕಟವಿರೆ ಮನೆ ಕೆರೆಬಾವಿತೋಟ |
ಸಂಕಟಬಾರದ ತರಗೈವ ಮಾಟ ||
ಹಿತ್ತಲ ಕಸಕಡ್ಡಿ ಕೊಳಕಿನ ಜಾಗ |
ಹುತ್ತವು ರೋಗಕ್ಕೆ ಸುಡಿರವ್ವ ಬೇಗ ||೫||
ಅಟ್ಟುದ ಮುಚ್ಚದೆ ಯಿಟ್ಟರೆ ಪಾಪ |
ಸಟ್ಟುಗ ತೊಳೆಯದೆ ಬಳಸಲು ಪಾಪ ||
ನೀರಿನ ಮುಚ್ಚಳ ತೆಗದಿಡೆ ಪಾಪ |
ನೀರೊಳು ಲೋಟೆಯ ಮುಳುಗಿಸೆ ಪಾಪ || ೬ ||
ಅಡಿಗೆಯ ಕೂಳಯು ನಿರ್ಮಲವಿರಲಿ |
ಗಡಿಗೆಪಾತ್ರಗಳನ್ನು ವಿಮಲವಿರಲಿ ||
ಗುಡಿಸಿದ ಕವಾಟ ಹಲಿಗೆಗಳಿರಲಿ |
ಮಡಗಿರಿ ಬಳಕೆಯ ಪಾತ್ರಗಳಲ್ಲಿ || ೭ ||
ಕೈಯುಗುರು ಬೆಳೆಸಿಹಳ ಅಡುಗೆಯು ಬೇಡ |
ಮೈಯನ್ನು ತುರಿಸಿಕೂಂಬವಳಡುಗೆ ಬೇಡ ||
ಮೈ ಬೆವರು ಸುರಿಸುತ್ತ ಅಡುವವಳ್ಬೇಡ |
ಕೈಯದ್ದಿ ಪಾಕಗೈವವಳೆಂದು ಬೇಡ
-------------
-----------------------------------------------------------
- 93 -
ದೃಶ್ಯ ೪. ವೈಕುಂಠ ದೃಶ್ಯ, ಶ್ರೀಮನ್ನಾರಾಯಣ.
ದ್ವಾರಪಾಲಕ:-ದೇವಾಧಿದೇವ, ಯಮಧರ್ಮರಾಯರು ತಮ್ಮ
ದರ್ಶನಾಪೇಕ್ಷೆಯಾಗಿ ಬಂದಿರುವರು.
ಶ್ರೀಮನ್ನಾರಾಯಣ:- (ಸ್ವಗತ) ಸರಿ, ನಾರದನ ಆರೋಗ್ಯ ಪ್ರ
ಚಾರ ಕಾರ್ಯವು ಭರತಭೂಮಿಯಲ್ಲಿ ಬಹಳ ರಭಸದಿಂದ ನಡೆಯುತ್ತಿರ
ಬೇಕು, ಯಮನೂ ಕಣ್ತೆರೆವಂತಾಯಿತು! ಈ ಪ್ರಸ್ತಾಪಕ್ಕಾಗಿಯೇ
ಆತನು ಬಂದಿರಬೇಕು. (ಪ್ರಕಾಶವಾಗಿ) ಆತನನ್ನು ಸನ್ಮಾನಪೂರ್ವಕವಾಗಿ,
ಒಳಗೆ ಕರೆದುಕೊಂಡು ಬನ್ನಿರಿ. (ಯಮಧರ್ಮರಾಯನ ಪ್ರವೇಶ)
ನಾರಾಯಣ:- ಧರ್ಮರಾಜ್, ಸುಸ್ವಾಗತ್!
ಪದ - (ಪುಪ್ಪ ಪರಾಗ ... ಎಂಬಂತೆ) ದುಮಾಳಿ ತಾಳ.
ಧರ್ಮಸುರಾಜ-ಸುವಂದನ-ಸ್ವಾಗತ || ಪ ||
ಅಪರೂಪದಲಿ ದಯಮಾಡಿಹ-ಬಹಳ ವಿಶೇಷದ
ಕಾರ್ಯವಿದೇನೈ ! ಸ್ನೇಹಬಳಕೆಯ ಮೈತ್ರಿಯೆ || ೧ ||
ಜಗದ ಸೌಖ್ಯವನು-ತೋರಿ ವಿಚಾರ-ಕಲಿಸೆ-
ನಿಲಿಸೆ-ನಾನಿಹೆ | ವಿಧಿಯ ನಿಯಮವಿದು-
ಗೆಳೆಯಭಾವದಿ ಯಿರುವುದು ಯೋಗ್ಯವು-ಸ್ವಾಗತ || ೨ ||
ಧರ್ಮರಾಚ್, ಅಪರೂಪದಲ್ಲಿ ದಯಮಾಡಿಸಿರುವೆ. ಬಹಳ ಸಂತೋಷ!
ಇದು ಸ್ನೇಹಭಾವದ ಸಂದರ್ಶನವೆ? ಅಥವಾ ಏನಾದರೂ ಕಾರ್ಯ
ಕಾರಣಗಳಿವೆಯೆ?
ಯಮ:- ದೇವಾ, ಪ್ರಪಂಚದ ಸೃಷ್ಟಿ ಸ್ಥಿತಿಲಯ ಕಾರ್ಯಗಳಲ್ಲಿ
ಸ್ಥಿತಿಕಾರ್ಯಕ್ಕೆ ನೀನು ಹೇಗೋ, ಹಾಗೇ ಲಯಕಾರ್ಯಕ್ಕೆ ನಾನು ಅಧಿ
ಪತಿಯಾಗಿರುವೆನು. ಸೃಷ್ಟಿ ಕಾರ್ಯದಿಂದ ಹೆಚ್ಚಿ ಹೋಗುತ್ತಿರುವ ಪ್ರಾಣಿ
ವರ್ಗವನ್ನು ಆಯಾಯ ಪ್ರಮಾಣಕ್ಕೆ ತಕ್ಕಂತೆ ಇಳಿಸುವ ಸಂಹಾರ
ಕಾರ್ಯವೇ ನನ್ನ ದಾಗಿದೆ.
ಪದ-(ಛಳಿತಿಯಾ . . . ಎಂಬಂತೆ) ಝಂಪೆತಾಳ.
ಮಿಗುತಿಹ- ಜಗದಾ-ಸದಾ- ಭಾರ ವಿಮೋಚನೆಯಾ-
ಕಾರ್ಯವನ-ಗೈವೆ-ನಾ ಸದಾ- ತಡೆವದು ತರವೆ. ನ್ಯಾ
ಯಾ- ಮೀರಿ ನಡೆವುದಿದು- ಯೃತಕೆಲೈ || ೧ ||
----------------------------------------------------------------
- 94 -
ಭೂಲೋಕದಲ್ಲಿ ನಾನು ನನ್ನ ಕಾರ್ಯದಲ್ಲಿ ಪ್ರವರ್ತಿಸದೆ ನಿಂತುಬಿಟ್ಟರೆ
ಹುಟ್ಟಿದ ಪ್ರಾಣಿಗಳಿಗೆಲ್ಲ ಸಿಲ್ಲುವುದಕ್ಕೂ ಸ್ಥಳವು ಸಾಲದೆ ಜೀವನಕ್ಕೆ ಆಹಾ
ರವೂ ಇಲ್ಲದೆ ಎಂತಹ ಕಠಿಣವಾದ ಜೀವನ ಸಮಸ್ಯೆಯು ಬಂದೊದಗೀತು!
ಆದುದರಿಂದ ನಾನು ಪ್ರಪಂಚದ ಹಿತಕ್ಕಾಗಿಯೇ ಕೆಲಸಮಾಡುತ್ತಿರುವೆ
ನೆಂಬುದು ವ್ಯಕ್ತವಲ್ಲವೆ? ಹೀಗಿರುತ್ತ ನೀನು ನಾರದಾದಿ ಋಷಿಗಳನ್ನೂ,
ದೇವತೆಗಳನ್ನೂ ಭೂಲೋಕದಲ್ಲಿ ಜನ್ಮವೆತ್ತುವಂತೆ ಮಾಡಿ, ಅವರಿಂದ ನನ್ನ
ಕಾರ್ಯಕ್ಕೆ ವಿಘ್ನ ವನ್ನು ತಂದೊಡ್ಡುತ್ತಿರುವೆ! ನನ್ನ ಅಖಿಳ ಸೇನಾಪತಿ
ಗಳು ಬಂದು ಬೊಬ್ಬಿಡುತ್ತಿರುವರು. ಹೀಗೇಕೆ ಮಾಡುತ್ತಿರುವೆ? ಇನ್ನಾ
ದರೂ ಅವರನ್ನು ಹಿಂದಕ್ಕೆ ಕರೆಯಬಾರದೆ?
ನಾರಾಯಣ:- ಯಮಧರ್ಮರಾಯ, ನಿನೆಗೂ ಈ ಭಾಂತಿ ಎಲ್ಲಿಂದ
ಬಂತು? ಲಯಕಾರ್ಯಕ್ಕೆ ನೀನು ನಿಯಮಿಸಲ್ಪಟ್ಟಿರುವುದು ಯಾರಲ್ಲ
ವೆಷ್ಟು ವರು. ಆದರೆ
ಪದ-( ಧನರಾಶಿದಿಸತಾ ... ಎಂಬಂತೆ) ದುಮಾಳಿ ತಾಳ.
ತವಸೇನಾವಳಿ ತಾ-ಸದಾ ಹಾನಿಯನು ಮೋದದಿ-
ಬಲು ಮೊಸದಿ-ಗೈವುತಲೇ ಇಹುದೀ ತೆರದಿ
ನ್ಯಾಯವದೇನೂ-ನಾಶಕಾರಿ ||೧||
ಆದರೆ ಇತ್ತೀಚೆಗೆ ನೀನು ನಿನ್ನ ಕಾರ್ಯದ ಮೇರೆಯನ್ನು ಮಿಕ್ಕಿ ಸ್ಥಿತಿ
ಕಾರ್ಯಕ್ಕೆ ಛಂಗವನ್ನು ತರುತ್ತಿರುವೆಯೆಂಬುದನ್ನು ತಿಳಿದು ನನ್ನ ಸ್ಥಿತಿ
ಕಾರ್ಯರಕ್ಷಣೆಗಾಗಿ ನನ್ನವರು ಅಲ್ಲಿ ಜನ್ಮವೆತ್ತುವಂತೆ ಮಾಡಿರುವೆನು.
ಅಲ್ಲದೆ ನೀನು ಕೂಡ ನನ್ನ ಕರ್ತವ್ಯವನ್ನು ತಪ್ಪಾಗಿ ತಿಳಕೊಂಡು ನಿನ್ನ
ಕಾರ್ಯದ ಮೇರೆಯನ್ನು ಮೀರಿ ವರ್ತಿಸುತ್ತಿದ್ದುದರಿಂದ ನಿನ್ನ ದಳದ ಉಪ
ಟಳವನ್ನು ತಡೆಗಟ್ಟುವುದಕ್ಕಾಗಿ ನಾನು ಹಾಗೆ ಮಾಡಿರುವೆನು.
ಧರ್ಮರಾಜ:- ಏನು? ನಾನು ನನ್ನ ಕಾರ್ಯದ ಮೇರೆಯನ್ನು
ಮೀರಿರುವೆನೆ? ಭೂಲೋಕದಲ್ಲಿ ಈಗ ಜನರು ಮಿತಸಂತತಿಯ ವಿಷಯ
ವಿಶೇಷ ವಿಚಾರವನ್ನು ಮಾಡುತ್ತಿರುವುದೇ ನಿನ್ನ ಮಾತು ಸುಳ್ಳೆಂಬುದಕ್ಕೆ
ನನ್ನ ಕಡೆಯ ಬಲವಾದ ಸಾಕ್ಷಿ! ನಾನು ಲಯಕಾರ್ಯದಲ್ಲಿ ಅಷ್ಟೊಂದು ಬಿಗುವಾಗಿಲ್ಲದಿದ್ದುದರಿಂದಲೇ ಸತತಿಯು ಮಿಗುವಾಯಿತಲ್ಲವೆ? ಅದು
ಕಾರಣ ಈಗ ಅವರೇ ಮಿತಸಂತತಿಯ ವಿಷಯ ಪ್ರಯತ್ನ ಮಾಡಬೇಕಾಗಿದೆ.
ಹೀಗಿರುತ್ತ ನಾನು ನನ್ನ ಕಾರ್ಯದಲ್ಲಿ ಮಿಗುವುದೆನೆಂದು ಎಂತಹ
-------------------------------------------------------------------------
-95-
ಮಾತು! ನ್ಯಾಯಾನ್ಯಾಯ ಸ್ಥಾಪನೆಗೆ ನಾನು ಅಧಿಕಾರಿಯಾಗಿರುತ್ತ
ನಾನು ನನ್ನ ಕರ್ತವ್ಯವನ್ನು ತಪ್ಪಾಗಿ ತಿಳಿದಿರುವೆನೆ?
ಪದ(ಶಿಶುಪಾಲನೇಪಾಲ ... ಎಂಬಂತೆ)
ಸರಿಯಾದುದೆ ಮಾತು ನಾನರಿಯನ ಹಾನ್ಯಾಯ! ||
ಕುಮತಿಯಹೆನೆ-ಜಗದನ್ಯಾಯ ಸ್ಥಾಪನಾಕಾರಿ |
ಧರ್ಮ ಮೂರುತಿ ನಾ ನೆಂಬುದು ಲೋಕ--
ನ್ಯಾಯವರಿಯೆನೆ ನಾನು ||೧||
ನಾರಾಯಣ:- ಧರ್ಮರಾಜ, ಯೋಚಿಸಿ ನೋಡು; ಸೃಷ್ಟಿ ಸ್ಥಿತಿ
ಕಾರ್ಯಗಳು ಸಾಂಗವಾಗಿ ನಡೆಯುವಂತೆ ಕೆಲವು ನಿಯಮಗಳಿವೆ ಅವು
ಗಳಿಗನುಸಾರವಾಗಿ ಪ್ರತಿಯೊಬ್ಬ ಮಾನವನೂ ನಡೆದುಕೊಂಡು ಸ್ಥಿತಿ
ಕಾರ್ಯವು ಸಂಪೂರ್ಣವಾದ ಮೇಲೆ ಆತನ ಲಯಕಾರ್ಯವು ನಿನ್ನಿಂದಾಗ
ತಕ್ಕದ್ದು. ಅಲ್ಲದೆ ಸೃಷ್ಟಿ ಸ್ಥಿತಿಕಾರ್ಯಗಳಿಗೆ ವಿರುದ್ಧವಾಗಿ ನಡೆದವರಿಗೆ
ರೋಗರೂಪವಾಗಿ ಶಿಕ್ಷಿಸುವುದೂ ನಿನ್ನ ಕೆಲಸವೇ
ಯಮ:- ನಾನು ಮಾಡುವ ಕೆಲಸವೂ ಅಷ್ಟೆ! ನನ್ನ ತಪ್ಪೆಲ್ಲಿದೆ?
ನಾನು ನನ್ನ ಕರ್ತವ್ಯವನ್ನು ಮಾಡುತ್ತಿರುವಲ್ಲಿ ನೀನೇಕೆ ನನ್ನ ದಾರಿಗೆ ಅಡ್ಡ
ಬರುತ್ತಿರುವೆ?
ನಾರಾಯಣ:-ಜನರು ಅಜ್ಞಾನವಶರಾಗಿ ಮೂಡಿದ ಅತ್ಯಲ್ಪ
ತಪ್ಪಿಗೂ ಇತ್ತೀಚೆಗೆ ನಿನ್ನ ಜನರು ಮರಣದಂಡನೆ ವಿಧಿಸುತ್ತಾ ಬರು
ತ್ತಾರೆ. ಬರಬರುತ್ತ ನಿನ್ನವರಿಗೆ ಅದೊಂದು ವಿನೋದವಾಗಿ ಪರಿಣಮಿ
ಸಿರುವುದು. ಅವರು ಎಲ್ಲೆಲ್ಲಿಯೂ ಹೊಂಚುಹಾಕುತ್ತಿದ್ದು ಆರೋಗ್ಯ
ನಿಯಮಗಳನ್ನು ಯಾರಾದರೂ ಒಂದಿಷ್ಟು ಸಾರಿ ನಡೆದರೆ ಕೂಡಲೆ ಶಿಕ್ಷಾ
ರೂಪವಾಗಿ ಭಯಂಕರ ರೋಗಗಳನ್ನು ತಂದೊಡ್ಡು ತಿರುವರು. ಕೊನೆಗೆ
ಅಕಾಲ ಮರಣವೇ ಅಂತಹ ಶಿಕ್ಷೆಯ ಪರಿಣಾಮವಾಗಿದೆ. ಹಾಗೆ ಎಲ್ಲರೂ
ನಿನ್ನ ದಳದವರಿಂದ ಮರಣ ಶಿಕ್ಷೆಯನ್ನೇ ಹೊಂದುತ್ತಾ ಬಂದರೆ ಸೃಷ್ಟಿ ಸ್ಥಿತಿಕಾರ್ಯಗಳಾದರೂ ನಡೆವುದು ಹೇಗೆ? ಆದುದರಿಂದ ಶರೀರ ಧರ್ಮ
ಶಾಸ್ತ್ರ, ಆರೋಗ್ಯ ಶಾಸ್ತ್ರ ಇವುಗಳನ್ನೆಲ್ಲಾ ಮಾನವರಿಗೆ ತಿಳುಹಿಸಿ, ಅವು
ಗಳ ನಿಯಮಗಳನ್ನು ಮೀರಿದವರಿಗೆ ರೋಗರೂಪವಾಗಿ ಎಂತೆಂತಹ
ಭಯಂಕರ ರೋಗಗಳು ಬರುವನೆಂದೂ, ಅವಗಳಿಂದ ಹೇಗೆ ದೂರವಾಗಿರ
ಬೇಕೆಂದೂ ಮಾನವ ವರ್ಗಕ್ಕೆ ಬೋಧಿಸುವುದಕ್ಕಾಗಿಯೇ ನಾನು ನಾರದ
---------------------------------------------------------
- 96 -
ನನ್ನು ಭೂಲೋಕಕ್ಕೆ ಕಳುಹಿಸಿರುವುದೇನೋ ನಿಜ, ಅವನು 'ಆರೋಗ್ಯ
ಪ್ರತಾಪ'ನೆಂಬ ಹೆಸರಿಂದ ಭರತಭೂಮಿಯಲ್ಲಿ ಅವತರಿಸಿರುವನು, ಅಲ್ಲದೆ
ಈ ಉದ್ದೇಶ ಸಾಧನೆಗಾಗಿಯೇ ಅನೇಕ ದೇವರ್ಷಿಗಳೂ, ದೇವತೆಗಳೂ
ಅಲ್ಲಿ ಅವತರಿಸಿರುವರುಅವರು ನನ್ನ ಅನುಜ್ಞೆಯಂತೆ ಆರೋಗ್ಯ ಜೀವ
ನದ ನಿಯಮಗಳನ್ನು ಜನಗಳಿಗೆ ಬೋಧಿಸಿ, ಅವುಗಳನ್ನು ಮೀರಿ ನಡೆಯ
ಬಾರದೆಂದು ಆಗಾಗ ಎಚ್ಚರಿಸುತ್ತಿರುವರು. ತಿಳಿತಿಳಿದೂ ಅವರವುಗಳನ್ನು
ಮೀರಿ ನಡೆದರೆ ಅವರೂ ಇರುವರು--ನೀನೂ ಇರುವೆ. ಆ ನಡುವೆ ನಾನಾ
ಗಲೇ ನನ್ನವರಾಗಲೀ ಪ್ರವೇಶಿಸುವುದಿಲ್ಲ. ನಮ್ಮವರದು ಬರೇ ಆರೋಗ್ಯ
ಜ್ಞಾನ ಪ್ರಚಾರಕಾರ್ಯ; ಕೇವಲ ಸೃಷ್ಟಿ ಸ್ಥಿತಿ ರಕ್ಷಣಾಕಾರ್ಯ! ಆದರೆ
ಜನರ ಅಜ್ಞಾನವನ್ನು ನಿನ್ನ ವರು ಪರಮಾವೆಂದು ಭಾವಿಸಿಕೊಂಡು ಅಕಾಲ
ಮರಣವನ್ನೇ ವಿಧಿಸುತ್ತ ಸೃಷ್ಟಿ ಸ್ಥಿತಿ ಕಾರ್ಯಗಳಿಗೆ ವಿಘ್ನವನ್ನುಂಟುಮಾಡ
ಲಿಕ್ಕಾಗಿ ಎಲ್ಲಿ ಅನ್ಯಾಯವಾಗಿ ಜನರ ಮೇಲೆ ಬೀಳಲು ಬರುವರೋ ಅಲ್ಲಿ
ನಿಮ್ಮನ್ನು ವಿಜಯಿಗಳಾಗಲು ನಮ್ಮವರೆಂದೂ ಬಿಡರು. ಅಂತಹ ಪ್ರದೇಶ
ದಲ್ಲೆಲ್ಲಿ ಆರೋಗ್ಯ ಪ್ರತಾಪನಿಗೆ ದಿಗ್ವಿಜಯ! ಆದುದರಿಂದ ನಿನ್ನ ಈ ದುರಭಿ
ಪ್ರಾಯವನ್ನು ಬಿಟ್ಟು, ನ್ಯಾಯಮಾರ್ಗದಲ್ಲಿ ನಿನ್ನ ಕರ್ತವ್ಯ ನಿರ್ವಾಹವನ್ನು
ಮಾಡುತ್ತಿರು ಅದಕ್ಕಾರೂ ಅಡ್ಡ ಬರುವಂತಿಲ್ಲ.
ಪದ(ಮಹಾವಿಹಾರ ... ಎಂಬಂತೆ) ರಾಗ-ವಸಂತ ಆದಿತಾಳ.
ಮಹಾವಿರೋದ ಸಂವಾ... ದ || ಮನಕೇಶವ ನೀಡಾಡಿದೂ
ಡಿಬಿಡು | ಮೇರೆಯೋಳಿಡುತ ನಾಶಕಾರ್ಯ ವನು- ನ್ಯಾಯ
ಗತಿಯನು ಮೀರದೆ. ಈ || ಮಹಾ ವಿರೋದ ... ||
-------------
ಮಂಗಲ- (ಶ್ರೀಹರಿನವವರ ಕೌಸ್ತುಭ . . . ಎಂಬಂತೆ) ರಾಗ-ಕಲ್ಯಾಣಿ-ರೂಪಕ.
ಶ್ರೀವರನರಹರಿ ಮಂಗಲವನು ಯೀಯೋದಯ | ಸಾರನೆ
ಸುರವರನುತ ಮಹಿಮಾಲೋಲ || ರಮಾನಾಥ ಭಜಕನಾಥ |
ನತಜನವರದಾಸುನಾಥ | ಶಾಂತಿಕಾಂತಿ ಪ್ರೀತಿಯುತ || ೧ ||
ಸುಖಂದಾತ-ನಿಖಿಲನಾಥ | ಜಯಜಯ ಕರುಣಾ ವಿದಾತ |
ಶ್ರೀವಿಲೋಲ ಮಾರಪಿತ || ದಯಾಸಾರ ಜಗದಾಧಾರ | ಸುಜನ
ಜನಮನೋನ ವಿಹಾರ | ನಮೋರಮೇಶ ಈಶ ಪೊರೆ || ೨ ||
ಸಂ ಪೂರ್ಣಂ
--------------------------------------------------------------
ವಿ. ಸೂ. ಪದಗಳನ್ನು ಹಾಡುವ ರೀತಿಯನ್ನು ಸಾಧ್ಯವಿದ್ದಷ್ಟು ತೋರಿಸುವುದ
ಕ್ಕಾಗಿ ಹ್ರಸ್ವಗಳನ್ನು ದೀರ್ಘವಾಗಿಯೂ, ತಾಳದ ಗತಿಯನ್ನು ಸೂಚಿಸುವುದಾಗಿ ಶಬ್ದ
ಗಳನ್ನು ಬಿಡಿಸಬಾರದ ಕಡೆಗಳಲ್ಲಿ ಬಿಡಿಸಿಯೂ, ಅಲ್ಲಲ್ಲಿ ಆಡ್ಡಗೆರೆ - ಹಾಕಿಯೂ ಬರೆ ದುದುಂಟು.
---------------------------------------------------------------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ