ಭಾನುವಾರ, ಜೂನ್ 21, 2020

ನಂದಾದೀಪ-ಕೊರಡ್ಕಲ್ ಶ್ರೀನಿವಾಸ ರಾವ್


https://archive.org/details/in.ernet.dli.2015.362737
 https://archive.org/details/dli.osmania.4444
ತೊದಲ್ನುಡಿ ಗ್ರಂಥಮಾಲೆ-ನುಡಿ -೨
ನಂದಾದೀಪ
(ಹನ್ನೊಂದು ಕಳೆಗಳ ಸಂಗ್ರಹ)
ಕೊರಡ್ಕಲ್ ಶ್ರೀನಿವಾಸ ರಾವ್
ಕಿರಿಯರ ಪ್ರಪಂಚ, ಉಡುಪಿ
೧೯೩೮
------------------------------------------------------------
ಸಂಪಾದಕ
ಕೆ. ಹೊನ್ನಯ್ಯ ಶೆಟ್ತಿ
ಹಕ್ಕುಗಳು ಕಾಯ್ದೆ ಡಲ್ಪಟ್ಟಿವೆ.
ಬೆಲೆ ಎಂಟು  ಆಣೆ
------------------------------------------------------------
ಪ್ರಸ್ತಾವನೆ
ವಾಗ್ಗೇದೇಯ ಪೂಜೆಗೆ ನೆರವಾಗಿ ಬನ್ನಿರೆಂದು ಅಲ್ಲಲ್ಲಿಂದ
ಕರೆ ಬಂದಾಗ ಹೆಚ್ಚಿನ ಸಾಹಾಯ್ಯಯವೇನಾಗದಿದ್ದರೂ ನನ್ನ
ದೊಂದೊಂದು ದೀಪವನ್ನು ಅಲ್ಲೆಲ್ಲ ಉರಿಸುತ್ತಿದ್ವೆ. ಅವು ಭಜಕ
ರಲ್ಲನೇಕರ ದೃಷ್ಟಿಯನ್ನು ವಿಶೇಷವಾಗಿ ಆಕರ್ಷಿಸಿದನೆಂದು ಅವ
ರಾಗಿಯೇ ಸಂತೃಪ್ತಿಯ ನಗುನಿಂದ ನುಡಿದುದನ್ನು ಕೇಳಿದ್ದೆ.
ಮಾತ್ರವಲ್ಲ, ಅಂತಹ ತಾತ್ಕಾಲಿಕ ಪೂಜೆಗಳಾದ ಮೇಲೆ ಅವು
ಮೂಲೆಪಾಲಾಗು ವುದನ್ನು ನೋಡಿ ಅವನ್ನು ಯಾವುದಾದ
ರೊಂದು ಶಾರದೆಯ ಗುಡಿಯ ಎದುರು ತೂಗು ದೀಪಾವಳಿಯಾಗಿ
ರಿಸಿದರೆ ಅದು ನಂದಾದೀಪವಾಗಿ ಉಳಿದಿತೆಂದು ಹಲವರು
ತಿರುತಿರುಗಿ ಸೂಚಿಸುತ್ತಿದರು. ಹಾಗಾಗುವುದಿದ್ದರೆ ನನ್ನ ಅಸಡ್ಡೆ
ಯಿಂದದು ಕೆಡಬಾರದೆಂದು ನನಗೂ ತೋರಿತು, ಆದುದರಿಂದ
ಪರಿಕ್ಷಾರ್ವಾಥವಾಗಿ ಆ ದೀಪಗಳಲ್ಲಿ ಕೆಲವನ್ನು ಆಯ್ದು ತುಸು
ತಿಕ್ಕಿ  ಪೋಣಿಸಿ ಈ ದೀಪಮಾಲೆಯನ್ನು ಸಿದ್ದ ಗೊಳಿಸಿದೆ.
"ತೊದಲ್ನುಡಿ ಗ್ರಂಥಮಾಲಾ''೦ಕಿತ ಶಾರದಾ ಮಂದಿರದಲ್ಲಿ
ಮೊಟ್ಟಮೊದಲು ಇದರ ದೀಪಗಳನ್ನು ಬೇರೆಬೇರೆಯಾಗಿ ತಮ್ಮ ತಮ್ಮ ಪೂಜಾ ಮಂದಿರದಲ್ಲಿಟ್ಟು ಬೆಳಗಿಸಿಕೊಟ್ಟ ವಾಗ್ದೇವಿಯ    ಉಪಾಸಕರುಗಳೆಲ್ಲರಿಗೂ ನಾನು ಚಿರಖಣಿಯಾಗಿರುವೆನು. ಇನ್ನು   ಶಾರದೆಯ ಭಜಕರು ತಾವು ಅರ್ಪಿಸುವ ಹರಕೆಯ ಎಣ್ಣೆ ತುಪ್ಪ   ಗಳಲ್ಲಿ ಒಂದಷ್ಟಿಷ್ಟನ್ನು ಈ ದೀಪ ಮಾಲೆಗೂ ಎರೆಯುತ್ತಲಿದ್ದು    ಇದನ್ನು ‹ನಂದಾದೀಪ`ವನ್ನಾಗಿಸಿದರೆ ನಾನು ಉಪಕೃತನು;   ಕೃತಾರ್ಥನು. ಅಂತಾಗುವಂತೆ ದಯೆಗೈಯಿರೆಂದು ಅವರಲ್ಲೆಲ್ಲ   ನನ್ನ ಸವಿನಯ ಪ್ರಾರ್ಥನೆ. 
ಕಾವ್ಯ ಕಲಾ ಮಂದಿರ,   
ಉಡುಪಿ. |              ಕೊ ರಡ್ಕಲ್ ಶ್ರೀನಿವಾಸ ರಾವ್,
 2-7-1938
---------------------------------------------------------
ಪ್ರಕಾಶಕರ ನುಡಿ 
೧೫-೭-೩೮
ನಮ್ಮ ಗ್ರಂಥಮಾಲೆಯ ಹನ್ನೆರಡನೆ ನುಡಿಯು ಈ 
'ನಂದುದೀಪ`. ಇದನ್ನು ಸಿದ್ಧಗೊಳಿಸಿದವರು ನಮ್ಮ 
ತರುಣ ಮಿತ್ರರಾದ ಶ್ರೀ. ಕೊರಡ್ಕಲ್‌ ಶ್ರೀನಿವಸ ರಾಯರು.
ಶ್ರೀ ರಾಯರ ಕುಸುಮವೊಂದು ನಮ್ಮ ಮಾಲೆಯಲ್ಲಿ ಪೋಣಿಸ
ಬೇಕೆಂದು . ಎಂದಿನಿಂದಲ್ಲೂ ಇದ್ದ. ಆಶೆಯ ಫಲವು ಇಂದು   . 'ನಂದಾದೀಪ`ವಾಗಿ ಮುಂದೆ ಬಂದಿದೆ. . ರಾಯರು ಹೆಸರಾದ   ಸಾಹಿತಿಗಳು . ಸಣ್ಣ ಕತೆಗಳನ್ನು ಬರಿಯುವುದರಲ್ಲಂತೂ 
ಅವರದು ತಿದ್ದಿದ ಕೈ. ಇಂಥವರ ಪರಿಚಯವಲ್ನಿಲ್ಲ ಮಾಡಿ   ಕೊಡುವುದೇ  ಅನಗತ್ಯ. ಅವರ  ಕತೆಗಳು. ಸಂಗ್ರಹವಾಗಿ 
ವಾಚಕರ ಕೈ ಸೇರುವುದು ಇದುವೇ ಮೊದಲಬಾರಿಯಾದರೂ 
ಈ  ವರೆಗೆ.. ನ್ರಕಓಟನಾಗಿರುವ ಇತರ. ಹಲವು ಕಥಾಸಂಗ್ರಹ 
ಗಳ ಮಟ್ಟ ಕ್ಕಿಂತ ಈ ಸಂಗ್ರಹವು ಮೇಲಿನ ಮಟ್ಟದಲ್ಲಿದೆ ಎಂಬ    ಅಭಿಮಾನವು ನಮಗಿದೆ. . ಈ ಅಭಿಮಾನವೂ  'ನಂದಾದೀಪˆದ 
ಬೆಳಕಿಗೆ ಮೂಲವಾಯಿತು. ಇದನ್ನು ನಮ್ಮ 'ತೊದಲ್ನುಡಿ' ಯ  ಒಂದು ನುಡಿಯಾಗಿ ಒಡಗೂಡಿಕೊಳ್ಳಲು ಸದಯಾಂತಃಕರಣ
ಪೂರ್ವಕವಾಗಿ ಕೊಟ್ಟದ್ದಕ್ಕಾಗಿ ನಾವು ಶ್ರೀ.ರಾಯರಿಗೆ ಉಪಕೃತ
ರಾಗಿದ್ದೇವೆ.  ಅಂತೆಯೇ ಇದನ್ನು . ತಮ್ಮ ಮಣಿಪಾಲ ಪವರ್‌
ಪ್ರೆಸ್ಸಿ'ನಲ್ಲಿ ಅಚ್ಚು ಕಟ್ಟಾ ಗಿ ಸಕಾಲದಲ್ಲಿ ಅಚ್ಚು ಹಾಕಿಸಿಕೊಟ್ಟ   ಶೀ. ಯಸ್. .ಯು.  ಪಣಿಯಾಡಿಯವರ  ಉಪಕಾರವೂ ಸ್ಮರ 
ಣೀಯವೆ. ನಮ್ಮ ಸಹಾಯಕ ವರ್ಗಕ್ಕಂತೂ ನಾವು ಸದಾ   ಆಭಾರಿಗಳು. 
ಕನ್ನಡಿಗರು ಎಂದಿನಂತೆ... ಈ . “ನಂದಾದೀಪ'ಕ್ಕೂ    ಪ್ರೋತ್ಸಾಹನೀಯಲು ಹಿಂತೆಗೆಯಲಾರರಿಂದು ನಂಬುತ್ತೇವೆ.
-----------------------------------------------------
  ನ೦ದಾದೀಪ     

 
  ಶ್ರೀ. ಶ್ರೀನಿವಾಸರಾಯರು 
( ಗ್ರಂಥಕ ರ್ತರು)   
--------------------------------------------------------- 
  ಮಾತೃದೇವೋ ಭವ 

ಅರ್ಪಣ
ಹರೆಯದಲ್ಲಿ ಪತಿಯಳಿದ ಅಳಲನ್ನು 
ಏಕಮಾತ್ರ ಪುತ್ರನಾದ ನನ್ನ ಲಾಲನ ಪಾಲನೆಗಳಲ್ಲಿ ಸಹಿಸಿಕೊಂಡು ತಾಯ್ತನದ ತ್ಯಾಗವಿಶೇಷದಿಂದ ನನ್ನನ್ನು ಈ ಮಟ್ಟಕ್ಕೆ ತಂದಿಟ್ಟಿರುವ 
ನನ್ನ ಪೂಜ್ಯ ಮಾತೃ ಶ್ರೀ ಸುಬ್ಬಮ್ಮನವರ ಕಡೆಗೆ   
ನನಗಿರುವ ಅಪಾರ ಸೂಚಕವಾಗಿ
 ಅವರ ಪಾದಗಳಿಗೆ ಸಮರ್ಪಿತ   
ಶ್ರೀನಿವಾಸ
-----------------------------------------------------------
ನಂದಾದೀಪ
ಕಿರಿಯರ ಪ್ರಪಂಚ
------------------------------------------------------------
ಪರಿ ವಿ ಡಿ

೧ ನಂದಾದೀಪ , ,
೨ ಧನಿಯರ ಸತ್ಯನಾರಾಯಣ
೩ ಪದ್ಬಾಂಧವ . .
೪ ಅಜ್ಜ ಯ್ಯನ ಮದುವೆ
೫ ದೇವಸ್ಥಾನ ಪ್ರವೇಶ
೬ ದೊಡ್ಡವರ ವಜ್ರ
೭ ಆಪತ್ತಿನಲ್ಲಿ ಯ ಸಂಪತ್ತು
೮ ಆನಂದನ ಬಿ, ಎ. ಡಿಗ್ರಿ
೯ ಮನೆಯಲ್ಲಿ ಭೂತಸಂಚಾರ
೧೦ ಪಳ್ಟಟ ನಾಯ್ಕ , .
೧೧ ನಿಂಬಾಫಲ ಮಹಾತ್ಮ ,







---------------------------------------------------------------
ನ೦ ದಾ ದೀಪ
ಓಣಿಯು ತಿರುಗುವೆಡೆ ಕೆರೆಯೇರಿಯ ಮೇಲಿರುವ ಆ ದೀಪ ಸಂಭಕ್ಕೆ 'ನಂದಾದೀಪ' ಎನ್ನುವ ಹೆಸರು ವಿಲಕ್ಷಣವಾಗಿ ಕಾಣುವುದಿಲ್ಲವೆ? ಆದರೆ ಹಲವು ವೇಳೆ ವಿಲಕ್ಷಣವಾದ ಹೆಸರೇ ಲಕ್ಷಣವಾಗಿದೆ. ಲಕ್ಷಣವಾಗಿ ತೋರುವ ಹೆಸರೇ ಪರ್ಯಾಲೋಚಿಸಿದರೆ ವಿಲಕ್ಷಣ. ಇದಕ್ಕೊಂದು
ನಿದರ್ಶನವಾಗಿ ನಿಂತಿದೆ ರಾಮಯ್ಯನವರ ಈ 'ನಂದಾದೀಪ'.

ರಾಮಯ್ಯನವರು ನಿಷ್ಟಾವಂತ ಶ್ರೀಮಂತರು, ಅವರದು ದೊಡ್ಡ ಮನೆ, ಅದಕ್ಕೆ ತಕ್ಕಂತೆ ದೊಡ್ಡ ಚಾವಡಿ, ಅದರ ಬಲ ಮಗ್ಗುಲಲ್ಲಿ ದೇವರ ಕೋಣೆ, ಚಾವಡಿಂದ ಕೋಣೆಯೊಳಗೆ ನೋಡಲಾಗುವಂತೆ ನಡುಗೋಡೆ ಯಲ್ಲಿ ಚಿತ್ರ ಕೊರದಿರುವ ರಂಧ್ರಮಯ ಗವಾಕ್ಷ. ಅದರಿಂದ ನೋಡಿದರೆ ಒಳಗೆ ದೇವರ ಕೋಣೆಯಲ್ಲಿ ಕಾಣುವುದು ಅಲಂಕಾರವಾಗಿ ಬೆಳ್ಳಿ, ಮದಾಯಿಸಿದ ದೇವರ ಪೀಠ; ಪೀಠದ ಮೇಲೆ ದೇವರ ಮೂರ್ತಿ; ಉಭಯ ಪಾರ್ಶ್ವಗಳಲ್ಲಿ ಸದಾ ಮಿನುಗುತ್ತಿರುವ ತೂಗು-ದೀಪಾವಳಿ, ದೇವರಿದಿರಲ್ಲಿ ನಂದದ ನಂದಾದೀಪವನ್ನು ತಪ್ಪದ ತುಪ್ಪದಿಂದುರಿಸಬೇಕೆಂಬುದು ರಾಮಯ್ಯ ನವರ ದೀಕ್ಷೆ. ಗಾಳಿ ಬೀಸಿ ದೀಪವು ನಂದವಂತೆ ರಕ್ಷಣಾರ್ಥ ವಾಗಿ ರಂದ್ರಮಯ ಗವಾಕ್ಷ , ಇನ್ನಿತರ ಕಾರಣಗಳಿಂದ ದೀಪವೆಲ್ಲದರೂ ನಂದಿಹೋದರೂ ಒಂದಿಲ್ಲದಿದ್ದರಿನ್ನೊಂದು ಉಳಿದೇ ಉಳಿಯುವಂತೆ ಉ ಭಯ ಪಾರ್ಶ್ವಗಳಲ್ಲಿ ತೂಗು-ದೀಪಾವಳಿ, ಬತ್ತಿ ಯ ಕರಿಗಟ್ಟಿ ಹೋಗಿ ದೀಪವು ಆರದಂತೆ ಒಳ್ಳಯ ಹತ್ತಿಯನ್ನು ತಂದು ತಾನೇ ಹಿಂಜಿ ಕಸಕಡ್ಡಿ ಗಳನ್ನು ತೆಗೆದು ಹದವಾಗಿ ತಿರುಸಿ ಬತ್ತಿಯನ್ನು ಮಾಡುವ ಕೆಲಸವು ರಾಮಯ್ಯನವರದೆ. ಇದೂ ಅವರ ನಿತ್ಯಾನುಷ್ಠಾನದಲ್ಲೊಂದು ಭಾಗ. ಅವರು ದಿನಾಲೂ ದೇವರ ಪೂಜೆಯನ್ನು ಮುಗಿಸಿ ಕೋಣೆಯಿಂದ ಹೊರಗೆ ಬರುವ ಮೊದಲೊಮ್ಮೆ, ಎಲ್ಲ ದಿನಗಳಿಗೂ ತುಪ್ಪ ಸುರಿದ ಬತ್ತಿಗಳನ್ನು ಮುಂದೂಡಿ ಸೊಡರುಗಳನ್ನು ಸರಿಗೊಳಿಸುತ್ತಿದರು. ಲೌಕಿಕ ಕಾರ್ಯ ದಿಂದಾಗಿ ಹೊರಗೆಲ್ಲಾದರೂ ಹೋಗಿ ಹಿಂತಿರುಗಿ ಬಂದೊಡನೆ ಮೊದಲಾಗಿ
-----------------------------------------------
ನಂದಾದೀಪ

ಆ ಕಿಂಡಿಯ ಬಳಿಗೆ ಹೋಗಿ ನಂದಾದೀಪವು ನಂದದೆ ಇದೆಯೋ ಎಂದು ನೋಡಬೇಕು ಅವರಿಗೆ ಮನೆಯಲ್ಲಿದ್ದರೆಂತೂ ಆಗಾಗ ಗವಾದ ಬಳಿಗೆ ಹೋಗಿ ಒಳಗೆ ಇಣಿಕಿನೋಡದೆ ಇರುತ್ತಿದ್ದಿಲ್ಲ. ಅಲ್ಲದೆ ಮನೆಯವರಿಗೆಲ್ಲರಿಗೂ ಈ ವಿಷಯದಲ್ಲಿ ಎಚ್ಚರಿಕೆಯಿಂದಿರುವಂತೆ ಅವರ ಕಟ್ಟಾಜ್ಞೆಯಿತ್ತು. ಆದುದರಿಂದ ರಾಮಯ್ಯ ನವರಲ್ಲಿ ನಂದಾದೀಪವು ನಂದದೆ ಹಲವು ವರುಷ ಗಳಿಂದಲೂ ಉರಿಯುತ್ತಲಿತ್ತು. ಸಾಯಂಕಾಲ ದೇವರ ಮುಂದೆ ದೀಪ ಹಚ್ಚುವಾಗ ಎಷ್ಟೋ ಮನೆಗಳಲ್ಲಿ ರಾಮಯ್ಯನವರ ಮನೆಯ ನಂದಾ ದೀಪದ ಮಾತು ಬಾರದೆ ಇರುತ್ತಿದ್ದಿಲ್ಲ, ಮನಮನೆಯ ಮುದಕಿಯರು ದೇವರ ಕೋಣೆಯ ಹೊಸ್ತಿಲ ಬಳಿ ಗೋಡೆಗೆ ಒರಗಿ ಕುಳಿತು ಆಕಳಿಸುತ್ತ ರಾಮನಾಮಸ್ಮರಣೆ ಮಾಡುವಾಗ ರಾಮಯ್ಯನವರ ಸಿರಿಸಂಪತ್ತಿಗೆಲ್ಲ ಅವರ ನಂದಾದೀಪವೇ ಕಾರಣವೆಂದು ಅಧಿಕಾರವಾಣಿಯಿಂದ ಮೊಮ್ಮಕ್ಕು ಳಿಗೆ ಹೇಳಿಬಿಡುತ್ತಿದ್ದರು. ಹೀಗಾಗಿ ಆ ಊರ ದನಮೇಯಿಸುವ ಹುಡು ಗರೂ ಗೋಳಿಯ ಮರದಡಿ ಕುಳಿತು ಹುರಿದ ಹುಣಸೆಯ ಬೀಜವನ್ನು ಜಗಿಯುತ್ತ ಊರ ಹರಟೆ ಹೊಡೆಯುವಾಗ 'ಅಯ್ಯನೋರ ನಂದಾದೀಪ ದಿಂದ ಸಿರಿಯೋ ಸಿರಿಯಿಂದ ನಂದಾದೀಪವೋ?' ಎಂಬ ವಾದವೆಬ್ಬಿಸು ವುದಿತ್ತು.

ನವರಾತ್ರಿಯು ಬಂತೆಂದರೆ ರಾಮಯ್ಯನವರಲ್ಲಿ ರಾತ್ರಿ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯುತ್ತಲಿತ್ತು. ನೋಡುವುದಕ್ಕಾಗಿ ಊಟಕ್ಕಾಗಿ ಎಂದು ಊರೆಲ್ಲ ಬಂದು ಕೂಡುತ್ತಿತ್ತಲ್ಲಿ. ರಾಮಯ್ಯನವರು ನಂದಾದೀಪಗಳ ಬತ್ತಿಗಳನ್ನೆಲ್ಲ ಮುಂದೂಡಿ ಸರಿಗೊಳಿಸಿ ಇನ್ನೂ ಹಲವು ಬೆಳಕುಗಳನ್ನು ಹೊತ್ತಿಸಿ ಮಂಗಳಾರತಿಯನ್ನೆತ್ತುವಾಗ ಆ ಕೋಣೆಯಲ್ಲಿ ದಿವ್ಯ ಸನ್ನಿ ಧಿಯುಂಟಾಗಿದೆ ಎಂದು ತಿಳಿದುಕೊಳ್ಳುತಿದ್ದರು. ಅದರ ಆರಾ ಧನೆಯಲ್ಲವರು ತಲ್ಲೀನರಾಗುತ್ತಿದ್ದರು, ಅವರು ಪೀಠದ ಮೇಲೆ ನೆಟ್ಟ ದೃಷ್ಟಿಯು ಅಲ್ಲಿ ಆವಾಹಿತವಾಗಿದ್ದ ದೇವತೆಯನ್ನು ತನ್ನ ಹೃದಯಪೀಠದಲ್ಲಿ ಉಪಸ್ಥಿತವಾಗುವಂತೆ ಆಕರ್ಷಿಸುವಂತಿತ್ತು. ಅದೊಂದು ಆವೇಶಸರವಾದ ನೋಟ.

ಮಂಗಳಾರತಿಯು ಮುಗಿದಿತ್ತು. ಅದನ್ನು ನೋಡುತ್ತಿದ್ದ ಜನರು
--------------------------------------------
ನಂದಾದೀಪ

ಪುನಃ ಗುಜುಗುಜು ಮಾತಾಡಹತ್ತಿದ್ದರು. ರಾಮಯ್ಯನವರು ಮೂರ್ತಿಯ ಕಡೆಗೆ ಏಕಾಗ್ರತೆಗೊಂಡಿದ್ದ ತನ್ನ ಮನಸ್ಸನ್ನು ತಿರುಗಿಸಿ ಗುಜುಗುಜು ಮಾತಿನ ಕಡೆಗೆ ಕಿವಿಗೊಟ್ಟಿದ್ದರಷ್ಟೆ. ಇಲ್ಲಿಯದೊಂದು ದೀಪ ಅಲ್ಲಿದ್ದಿ ದ್ದರೆ' ಎಂಬ ಅಸ್ಪಷ್ಟ ವೂ ಅಸಂಪೂರ್ಣವೂ ಆದ ಮಾತು ಅವರ ಕಿವಿಗೆ ಬಿತ್ತು. ತಾನು ದೇವರ ಮುಂದೆ ಹಚ್ಚಿದ್ದ ಯಾವುದೋ ಒಂದು ದೀಪವು ತಕ್ಕ ಸ್ಥಾನದಲ್ಲಿದ್ದಿಲ್ಲವೆಂದೂ ಅದು ಬೇರೊಂದು ಸ್ಥಾನದಲ್ಲಿದ್ದಿದ್ದರೆ ಒಳ್ಳಿ ತಾಗುತ್ತಿದ್ದಿತೆಂದೂ ಪ್ರೇಕ್ಷಕರಲ್ಲಿ ಯಾರೋ ಮಾತಾಡಿಕೊಳ್ಳುತ್ತಿದ್ದರೆಂದು ರಾಮಯ್ಯನವರು ತಿಳಿದುಕೊಂಡರು. 'ಏನು? ಎಲ್ಲಿಯ ದೀಪ? ಎಲ್ಲಿದಿರ ಬೇಕಿತ್ತು?” ಎಂದರು. ತಮ್ಮಲ್ಲೊಬ್ಬ ಸುಧಾರಕರ ಗಾಳಿತಾಗಿದ ತರುಣ ನಾಡಿದ ಅನುಚಿತವಾದ ಹುಚ್ಚು ಮಾತು ರಾಮಯ್ಯನವರ ಕಿವಿಗೆ ಬಿತ್ತೆಂದು ಜನರು ಅವಾಕ್ಕಾದರು. ಅದರಿಂದಾಗಿ ಅವರ ಮೋರೆಯಲ್ಲಾದ ಕಳವಳದ ಕುರುಹು ರಾಮಯ್ಯನವರಿಗೆ ತಿಳಿಯದೆ ಇರಲಿಲ್ಲ. ಅವರ ಕಣ್ಣು ಬಿದ್ದ ಕೆಲವರು, ಏನೂ ಇಲ್ಲ, ಏನೂ ಇಲ್ಲ, ಎಲ್ಲ ಸರಿ!' ಎಂದುಬಿಟ್ಟರು. ರಾಮಯ್ಯನವರಿಗೆ ಅಸಮಾಧಾನವಾಗುತ್ತಿರುವುದನ್ನು ಕಂಡು ಪುರೋಹಿತ ಭಟ್ಟ ರು ಅಲ್ಲಿದ್ದೊಂದು ದೀಪವನ್ನು ತುಸು ದೂರಕ್ಕೂ ಹಿಂದಕ್ಕೂ ದೂಡಿಟ್ಟು (ಈ ದೀಪವು ಇಲ್ಲದಿದ್ದರೆ ದೇವರ ಮುಖದ ಮೇಲೆ ಮತ್ತಷ್ಟು ಪ್ರಭೆ ಬಿದ್ದು ಕಳೆಯೇರುತ್ತಿತ್ತೆಂದು ಮಾತಾಡಿಕೊಳ್ಳುತ್ತಿದ್ದರವರು' ಎಂದರು. ರಾಮಯ್ಯನವರು ಮೂರ್ತಿಯ ಕಡೆಗೆ ನೋಡಿದರು; ದೀಪದ ಸ್ಥಾನಾಂತರದಿಂದ ಅದರ ಮೇಲೆ ಪ್ರಭಾವಿಶೇಷವೇನೂ ಬಿದ್ದ ಹಾಗೆ ತೋರ ಲಿಲ್ಲ. ಆದರೆ ಆ ಮಾತಿಗೇ ಸೈಗುಟ್ಟಿ ದಂತೆ ಜನರು ಮೋರೆಮಾಡಿದ್ದರು. ಅಂತೂ ಜನರು ದಾಕ್ಷಿಣ್ಯವರ್ತಿಗಳಾಗಿ ಹೇಳಬೇಕಾಗಿಲ್ಲೊಂದು ವಿಷಯ ವನ್ನು ತನ್ನಿಂದ ಮರೆಮಾಚಿರಬೇಕೆಂಬ ಸಂಶಯವು ರಾಮಯ್ಯನವರ ಮನಸ್ಸಿನಲ್ಲಿ ಉಳಿಯಿತು. ಇಲ್ಲಿಯದೊಂದು ದೀಪ ಅಲ್ಲಿ ಇದ್ದಿದ್ದರೆ'-ಎಲ್ಲಿ ಇದ್ದಿದ್ದರೆ? ಏನಾಗುತ್ತಿತ್ತು? ಎಂಬುದೊಂದು ಸಮಸ್ಯೆಯಾಯಿತು ಅವರಿಗೆ
ಅದನ್ನೇ ತಿರುತಿರುಗಿ ಯೋಚಿಸುತ್ತಿದ್ದರು ಅವರು.

ಬಂದವರೆಲ್ಲರೂ ಊಟಕ್ಕೆ ಕುಳಿತರು. ಊಟವಾಗುತ್ತಿದ್ದಾಗ ತುತ್ತು ತುತ್ತಿಗೊಂದರಂತೆ ಮಾತುಕತೆಗಳು ಬರುತ್ತ, ಹಿಂದಿನ ರಾತ್ರಿ
-----------------------------------------
ನಂದಾದೀಪ
ಊಟವಾಗಿ ಹೋಗುತ್ತಿದ್ದಾಗ ಸುಬ್ಬಣ್ಣನು ಹೆಜ್ಜೆ ತಪ್ಪಿ ಕೆರೆಗೆ ಬಿದ್ದ ಪ್ರಸ್ತಾಪವು ಬಂತು 'ಈಜು ಗೊತ್ತಿದ್ದುದರಿಂದ ಬದುಕಿಕೊಂಡ!'
 'ಬರೇ ಒಂದು ಕೋಲು ಅಗಲದ ಹಾದಿ!' ಆಚೆ ಹಿತ್ತಲ ಗೋಡೆ ಈಚೆ ಕೆರೆ!” ಕತ್ತಲಲ್ಲಿ ಒಂದು ಹೆಜ್ಜೆ ತಪ್ಪಿ ಇಟ್ಟರೆ ಪ್ರಾಣಕ್ಕೆ ಬಂತು!? “ಹಳ್ಳಿಯಿಂದ ಬರುವ ಹಾದಿಯೂ ಅದೊಂದೇ!' ಹೀಗೆ ಒಬ್ಬೊಬ್ಬರು ಒಂದೊಂದು ಮಾತು ಸೇರಿಸುತ್ತಿದ್ದಾಗ ರಾಮಯ್ಯನವರ ಮನಸ್ಸಿನಲ್ಲಿ ಮಿಂಚಿನಂತೆ ಹೊಂಚಿತು ಆ ಸಮಸ್ಯೆ. ಇಲ್ಲಿದ್ದೊಂದು ದೀಪ ಅಲ್ಲಿ ಇದ್ದಿದ್ದರೆ! ಆಗ ಎಲ್ಲವೂ ಸ್ಪಷ್ಟವಾಯಿತು. ಆ ಮೇಲೆ ಅದು ಸಮಸ್ಯೆಯಾಗಿ ಉಳಿಯಲಿಲ್ಲ. 'ಇಲ್ಲಿಲ್ಲೊಂದು ದೀಪ ಅಲ್ಲಿ ಇದ್ದಿದ್ದರೆ ಎಷ್ಟೋ ಅವಘಡಗಳು ಸಂಭವಿಸುತ್ತಿ ದಿಲ್ಲ' ಎಂದು ಪೂರ್ಣಗೊಂಡಿತು. “ ಹೌದು, ಮಹತ್ತಾದ ಪರೋಪಕಾರ ಕಾರ್ಯವಾಗುತ್ತಿತ್ತು! ಪರೋಪಕಾರವೇ ಪುಣ್ಯ! ಅದೇ ಉತ್ತಮವಾದ ದೇವರ ಸೇವೆ!” ಎಂದಿತು ಅವರ ಹೃದಯ

ಎಷ್ಟೊಂದು ಚಿಕ್ಕ ಮಾತು! ಯಾರೋ ಹುಡುಗಾಟಿಕೆಯಿಂದ ಏನೋ ಹೇಳಿದ ಅಸಂಪೂರ್ಣವಾದ ಮಾತು! ಎಷ್ಟೊಂದು ಸಾಮಾನ್ಯ ಸಂದರ್ಭ! ಆದರೆ ಇವುಗಳಿಂದಲೇ ರಾಮಯ್ಯನವರ ಹೃದಯಪರಿವರ್ತನೆಯಾಯಿತು, ಅವರಿಗಂದು ನಿದ್ದೆ ಹತ್ತಲಿಲ್ಲ. ಬೆಳಗಿನ ತನಕವೂ ಯೋಚಿಸುತ್ತ ಮಲ ಗಿದ್ದರು. ಎಂದೂ ತೋರದ ಹೊಸ ವಿಚಾರವು ಅವರ ಮನಸ್ಸನ್ನು ತುಂಬಿತ್ತು. ಅದೇ ದಿವ್ಯ ಜ್ಞಾನದ ಅರುಣೋದಯ! ಅಜ್ಞಾನದ ಪರಾ ಜಯ! ದೀಪವು ಬೇಕಾಗಿದ್ದುದು ಕರೆದಂಡೆಯಲ್ಲಿ: ಆದರೆ ನಾನು ಉರಿಸಿ ದುದು ಕೋಣೆಯಲ್ಲಿ! ಶತಕೋಟಿ ಸೂರ್ಯರನ್ನು ನಿರ್ಮಿಸಿರುವ ದೇವನಿಗೆ ನನ್ನ ನಂದಾದೀಪ!! ಹಸಿವಿಲ್ಲದ ದೇವರ ಮುಂದೆ ಬಗೆಬಗೆಯ ಭಕ್ಷ ಭೋಜ್ಯಗಳನ್ನಿಟ್ಟೆ, ಆದರೆ ಹಸಿದವರಿಗೇನಿತ್ತೆ? ಸೇವೆ ಬೇಡಾದವನ ಬಳಿ ಯಲ್ಲಿ ಕಾಲ ಕಳೆದೆ; ಆದರೆ ಬೇಕಾದವರ ಕಡೆಗೆ ನೋಡಿಲ್ಲ! ಗೊಂಬೆಯಲ್ಲಿ ಚೇತನಶಕ್ತಿಯನ್ನು ಕಲ್ಪಿಸಿಕೊಂಡು ಮಗುವು ಆಡುವ ಕಾಲಕ್ಕೂ ಮಿತಿ ಯೊಂದಿದೆ. ಆ ಮೇಲೆ ಅದು ವಿಚಾರದ ಮಟ್ಟಕ್ಕೇರಿ ಗೊಂಬೆಯನ್ನು ಗೊಂಬೆಯಾಗಿಯೇ ತಿಳಿಯುವುದು. ನಾನಾದರೋ ಕೋಣೆಯಲ್ಲಿ ಕುಳಿತು ದೇವರ ಪೂಜೆಯೆಂಬ ಗೊಂಬೆಯಾಟವನ್ನು ಕೂದಲು ನರೆಯುವ ವರೆಗೂ
---------------------------------------------------------
ನಂದಾದೀಪ

ಆಡುತ್ತಲಿದ್ದೆ! ಹೌದು, ನಾನೊಬ್ಬ ನರೆತಕೂದಲ ದೊಡ್ಡ ಮಗುವಾಗಿದ್ದೆ...' ಎಂದು ಮುಂತಾಗಿ ರಾಮಯ್ಯನವರಲ್ಲಿ ದಿವ್ಯ ಜ್ಞಾನದ ಭಾವನಾತರಂಗ
ಗಳು ಏಳುತ್ತಲಿದ್ದುವು

ಪರಿಣಾಮವಾಗಿ ಈಗ ರಾಮಯ್ಯ ನವರು ಸ್ಥಾಪಿಸಿರುವ ಅನಾಥ ಬಾಲಕರ ಪಾಲನಾಗೃಹವಿದೆ; ಅದರ ಹೆಸರು ' ಬಾಲಕೃಷ್ಣ ಗುಡಿ'! ವೃದ್ಧಾತುರರ ರಕ್ಷಣಾಲಯವಿದೆ; ಅದನ್ನು 'ಜನಾರ್ದನ ಸನ್ನಿಧಿ' ಎಂದು ಕರೆಯುವರು, ನಿರ್ಬಲರಿಗೂ ಅಂಗಹೀನರಿಗೂ ಅನ್ನ ದಾನದ ವ್ಯವಸ್ಥೆ ಯಿದೆ; ಅದರ ಹೆಸರು 'ದೇವರ ಸೇವೆ'! ಆ ಕೆರೆಯೇರಿಯಲ್ಲಿರುವ ದೀಪ ಸಂಭಕ್ಕೇನು ಹೆಸರೆಂದು ರಾಮಯ್ಯನವರನ್ನು ಯಾರಾದರೂ ಕೇಳಿದರೆ ಮುಗುಳು ಮುಗುಳಾಗಿ ನಗುತ್ತ ಅವರು ಹೇಳುವುದು ' ನಂದಾದೀಪ'!
======================================
ಇದು ಈಗಾಗಲೇ ಪ್ರಕಟವಾಗಿದೆ-ಆದ್ದರಿಂದ ತಿದ್ದಿಲ್ಲ
http://chilume.com/?p=14659

ಚಿಲುಮೆ
ಕನ್ನಡ ಸಾಹಿತ್ಯ ತಾಣ

PUBLISHED ON APRIL 19, 2020
ಧನಿಯರ ಸತ್ಯನಾರಾಯಣ
BY ಕೊರಡ್ಕಲ್ ಶ್ರೀನಿವಾಸರಾವ್



ಆರು ವರ್ಷದ ಹುಡುಗ, ಕಲ್ಲು ಮುಳ್ಳಿನ ಏರುತಗ್ಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲ ಹೆಗಲ ಮಲೇರಿಸುವನು. ಅನಂತರ ಎಡ ಹೆಗಲ ಮೇಲೆ. ಅಲ್ಲಿಯೂ ನೋವಾದಾಗ ಬಲ ಕಂಕುಳಲ್ಲಿಟ್ಟು ಕೈಗಳಿಂದ ಹಿಡಿದುಕೊಳ್ಳುವನು. ಬಳಿಕ ಅದು ಎಡ ಕಂಕುಳಿಗೆ ಹೋಗುವುದು. ಅಲ್ಲಿಂದ ತಿರುಗಿ ತಲೆಯಮೇಲೆ. ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಛಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ ಆ ಆರು ವರುಷದ ಬಳಕೆಯೂ ತೋರದ ಹರಕಂಗಿಯ ಕೌಪೀನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದಾನೆ ಮನೆ ಹಾದಿ ಹಿಡಿದು. ಇನ್ನೂ ಎರಡು ಮೂರು ಗಳಿಗೆ ನಡೆಯಬೇಕು. ಆದರೆ ಈಗಾಗಲೇ ತೀರ ದಣಿದು ಸುಣ್ಣವಾಗಿದ್ದಾನೆ. ಹಣೆ, ಕುತ್ತಿಗೆ, ಎದೆಯಲ್ಲಿ ಬೆವರು. ಮೋರಿ ಕೆಂಪೇರಿ ಕನಲಿದೆ. ಆದರೂ ಆ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ. ಮಾತ್ರವಲ್ಲ, ಬಿಗುವಾಗಿ ಹಿಡಿದರೆ ಅದೆಲ್ಲಿ ಜಜ್ಜಿ ಹೋಗುವುದೋ, ಸಡಿಲವಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜು ಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರುತ್ತಿದ್ದಾನೆ ಅದನ್ನು. ಹೆತ್ತಬ್ಬೆ ತನ್ನ ಮಗುವನ್ನು ಅಷ್ಟು ಜತನದಿಂದ ಹಿಡಿದುಕೊಳ್ಳುವಳೋ ಎಂದು ಸಂಶಯ ಬರಬೇಕು ನೋಡುವವರಿಗೆ.
“ಹೀಗೆ ಒಂದ ಬಿದ್ದರೆ ಹೇಗೆ ಮನೆ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತ್ತೆ! ಯಾವ ಕರ್ಮಕ್ಕೆ ಅದು! ತೆಗೆದತ್ತ ಒಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ, ನೋಡು!” ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರೂ ಆ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ, ಸುಮಾರು ಮೂರು ವರುಷದ ಮಗು! ಬಡ ತೌರಿಗೆ ಸೋಣೇ ತಿಂಗಳ ಬಿದ್ದಿಗೆ ಹೋಗಿ, ಹೊಕ್ಕ ಬಡಮನೆಗೆ ಹಿಂತಿರುಗಿ ಬರುತ್ತಿರುವವಳು ಅವಳು. ಅವಳ ತಾಯಿ ಕೊಟ್ಟ ನಾಲ್ಕು ಹಳೆಯ ಸೌತೆಯಕಾಯಿ, ಒಂದರೆ ಸೇರು ಅವಡೆ, ಒಂದ ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು ಇತ್ಯಾದಿಗಳ ಒಂದು ಕಟ್ಟು ಬಲಗೈ, ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕಳಲ್ಲಿದೆ ಆ ಮಗು-ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು!
ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡೆಯ, ಕಾಡಿಗೆಗಣ್ಣಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು ಕೈ ಕಂಕುಳಗಳನ್ನೆಲ್ಲ ಉಪಯೋಗಿಸಿ ಹೆಣಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಕೊಂಡ ಅಣ್ಣನು ತಿರುಗಿ ತಲೆಗೊಟ್ಟ ಆ ಕಂದಿಗೆ. ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲು ಬಾಗಿಲಲ್ಲಿ.
ಅದೊಂದು ರಸಬಾಳೆಯ ಕಂದು. ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು. ಮೊಮ್ಮಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಅದು ಚೆನ್ನಾಗಿ ಮಾಗಿತ್ತು. ರಸಬಾಳೆಯ ಹಣ್ಣಲ್ಲವೇ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ಹಣ್ಣುಗಳನ್ನು ಎಲ್ಲೊ ಮಡಿಕೆಯೊಳಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕಣ್ಣುತಪ್ಪಿಸಿ ಈ ಮೊಮ್ಮಕ್ಕಳಿಗೆ ಕೊಟ್ಟಳು. ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಷ್ಟು ಕಡು ಬಡತನ ಆ ಮಕ್ಕಳ ತಂದೆ ತೌಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ. ಅಜ್ಜಿಯ ಬಳಿ ಕುಳಿತು ಆದರ ಕತೆ ಕೇಳಿದರು. ಅಜ್ಜಿಯು ಹೇಳಿದಳು, ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತು. ಆದರೆ ಆ ಗೊನೆ ಬೇಗ ಹಣ್ಣಾಯಿತು. ಇವರು ಬಂದುದು ತಡವಾಯಿತು, ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳು ಕಳುಹಿಸಿ ಕೊಡುವಳು…. ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು… ತಾವೂ ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದುರು ಮೋರೆ ತೊಳೆವಲ್ಲಿ ನೆಟ್ಟರಾಗದೆ- ಎಂದು. ಎರಡು ಮೂರು ದಿನ ಅದೇ ಹಂಬಲ ಅವರಿಗೆ. ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆನಂದ! ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?
ತಮ್ಮ ಗುಡಿಸಲು ಸೇರಿದ ಆ ಮಕ್ಕಳು-ಬೂದ ತುಕ್ರಿಯರು-ಮರುದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎಚ್ಚೆತ್ತು ತೌಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು. ತೌಡನು ದಿನಗೂಲಿ ಮಾಡಿ ಸಂಸಾರ ಹೊರುವ ಕಡುಬಡವ. ಆದರೆ ಇರಲಿಕ್ಕೊಂದು ಮಾಡು ಬೇಕಲ್ಲ? ಆದಕ್ಕಾಗಿ ಕೋಟೆಮನೆ ನಾಗಪ್ಪನವರ ನಾಲ್ಕಾರು ಚೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ. ಅದಕ್ಕೂ ಆರು ರೂಪಾಯಿ ಗೇಣಿ ಕೊಟ್ಟು ಗುಡಿಸಲು ಚಾವಣಿ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯಂತೂ ಇದ್ದದ್ದೇ. ಆ ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತೌಡನ ಪಾಳು ತೋಟವು ನೆರೆಹೊರೆಯ ಆಢ್ಯರ ಆಕಳುಗಳ ಆಹಾರ ಕ್ಷೇತ್ರ. ಅವನ್ನು ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಎದೆಗಾರಿಕೆಯು ಬಡ ತೌಡನಿಗೆಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಥ್ಯ ತರಬೇಕಲ್ಲ ಅವನಿಗೆ? ಅಲ್ಲದೆ ಆಢ್ಯರ ಅವಕೃಪೆಗೆ ಈಡಾಗಿ ಬಡವನು ಅವರೆಡೆಯಲ್ಲಿ ದಿನ ದೂಡಲಾಪನೆ? ಅದರಿಂದಾಗಿ ತೌಡನಾವುದನ್ನೂ ನೆಡುತ್ತಿದ್ದಿಲ್ಲ. ಆದರೆ ಈಗ ಈ ಮಕ್ಕಳ ಕಾಟಕ್ಕಾಗಿ ನೆಟ್ಟ. ನೆಟ್ಟ ಮತ್ತೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಅವನು ಮನೆಹೊಕ್ಕಾಗಲೆಲ್ಲ ತಪ್ಪುವಂತಿಲ್ಲ. ಆದುದರಿಂದ ಒಲೆಯೊಟ್ಟುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟು ಗಟ್ಟಿಮುಟ್ಟಿನ ಬೇಲಿ ಮಾಡಿದ, ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.
* * *
ಅಂದಿನಿಂದ ಬೂದ-ತುಕ್ರಿಯರು ಹೊತ್ತಾರೆ ಎದ್ದು ಕಣೋರಸೊರಸಿಕೊಳ್ಳುತ್ತಾ ಹೋಗಿ ಮೊದಲು ನೋಡುವುದು ಆ ಕಂದನ್ನು. ದಿನದಲ್ಲಿ ಅದನ್ನೆಷ್ಟು ಸಲ ನೋಡುತ್ತಿದ್ದರೋ
ಲೆಕ್ಕವಿಟ್ಟವರಾರು? ಮೂಸಂಜೆಗೆ ಗುಡಿಸಲು ಸೇರುವ ಮೊದಲೊಮ್ಮೆ ಅದನ್ನು ನೋಡಿಕೊಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ, ಆ ಕಂದು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು. ಬೇಸಿಗೆಯು ಬಂದಾಗ ಬೂದ-ತುಕ್ರಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು. ಅದರಿಂದಾಗಿ ಆ ಮಕ್ಕಳ ಮೈಯಿಂದೆಷ್ಟು ಬೆವರು ಸುರಿದಿತ್ತೋ ಅಳೆದವರಾರು?
ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರಿ ಬೂದನೆದ್ದು ಅಳತೊಡಗಿದ-“ಅಯ್ಯೋ ಗಾಳಿ! ಗಾಳಿ! ನಮ್ಮ ಬಾಳೆ ಮರಿದು ಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತೌಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ಊತುಕೊಟ್ಟು ಕಟ್ಟಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದ.
ಒಂದು ದಿನ ತುಕ್ರಿಯು ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು “ಅಣ್ಣಾ! ಅಣ್ಣಾ!” ಎಂದು ಕೂಗಿದಳು. ಬೂದನು ಓಡಿಹೋಗಿ ನೋಡುತ್ತಾ ಬಾಳೆಯ ತುದಿಯಲ್ಲಿ ಹೂವಿನ ಮೂತಿ! ದಿನಹೋದಂತೆ ಹೂವು ಹೊರಬಂತು; ಬೆರಳು ಬಿಟ್ಟಿತು. ಬೆರಳುಗಳು ಬಲಿಬಲಿತು ತೋರಕಾಯಿಗಳಾದವು. ಬೂದ-ತುಕ್ರಿಯರೊಂದಿಗೆ ಚಿಕ್ಕದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತುತಂದ ಕಂದು; ಅವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲುಮಾಡಿ ಹಂಚುವವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ.
* * *
“ತಡಾ ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೊ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ. ತೌಡನು ಅವರ ಮೊರೆ ನೋಡದೆ ಕತ್ತು ತಗ್ಗಿಸಿಕೊಂಡು ದೀನತೆಯ ಬೀಳುದನಿಯಲ್ಲಿ “ಈ ಮಳೆಗಾಲ ಸಾಗಲಿ ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ” ಎಂದ. ಧನಿಯರು ಏನೇನೋ ಸಿಟ್ಟು ಮಾಡಿ ಕೊನೆಗೆ, “ಯಾವಾಗ ಕೇಳಿದರೂ-ಇಂದಿಲ್ಲಿ ಮುಂದೆ-ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ, ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ, ನಾಡದು ಹುಣ್ಣಿಮೆ ನಮ್ಮಲ್ಲೊಂದು ಸತ್ಯನಾರಾಯಣ. ನಾಳೆಯೇ ಕಡಿದಿಟ್ಟರೆ ಅಂದಿಗೆ ಹಣ್ಣಾದೀತು, ಹುಣ್ಣಿಮೆಯ ಬೆಳಿಗ್ಗೆ ತಂದುಕೊಟ್ಟುಬಿಡು! ತಿಳೆಯಿತೇ” ಎಂದರು. ತೌಡನಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ. “ಏನು ಹೇಳಿದ್ದು ಕೇಳಿತೇ?” ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು. ತೌಡನು ಅಂಜುತ್ತಂಜುತ್ತ ನಾಲಿಗೆ ತಡವರಿಸುತ್ತಾ, “ಮಕ್ಕಳು ಬಹಳ ಆಸೆಯಿಂದ ಬೆಳೆಸಿದ್ದು, ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗೆ…” ಎನ್ನುವಷ್ಟಲ್ಲೇ ಧನಿಯರು, “ಮಕ್ಕಳಿಗೆ ರಸಬಾಳೆ ಹಣ್ಣೋ, ಮಣ್ಣೋ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈ ಸುಖಕೊಡುತ್ತಾನೆ. ಸತ್ಯನಾರಾಯಣ! ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿಂದ್ಲೆ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ!” ಎನ್ನುತ್ತ ತಿರುಗಿ ಕೆಂಪೇರತೊಡಗಿದರು.
ತೌಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಿಗೆ ಗುಟ್ಟಾಗಿ ಹೇಳಿದ. ಅವಳು “ಅಯ್ಯೋ ದೇವರೇ, ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದೇವೆಂದು ಆಸೆ ಮಾಡಿ ಮಾಡಿ ಕಡೆಗೆ…” ಎನ್ನುವಷ್ಟರಲ್ಲೇ ಅವಳಿಗೆ ಕಣ್ಣೀರು ಬಂತು, ಕುತ್ತಿಗೆ ಬಿಗಿಯಿತು, ಮಾತು ಮುಂದುವರಿಯದಂತಾಯಿತು. ಆದರೇನು ಮಾಡುವುದು? ಹಣ್ಣಿನ ಗೊನೆಯು ಹುಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೌಡನು ಗೊನೆಯನ್ನು ಕಡಿದ. ಮಕ್ಕಳು ಸಂತೋಷದಿಂದ ಕುಣಿದಾಡಿದವು. ಹಲವು ಪ್ರಶ್ನೆಗಳನ್ನು ಕೇಳಿದವು. “ನೀವೆಲ್ಲ ರಗಳೆ ಮಾಡಬೇಡಿರಿ ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ, ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದ. ಮಕ್ಕಳು ದಿನದಿನವೂ ಅದು ಹಣ್ಣಾಯಿತೊ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ
ಇಣಕಿ ನೋಡುತ್ತಿದ್ದವು. ಹುಣ್ಣಿಮೆಗೆರಡು ದಿನ ಮುಂಚೆ ಬಟ್ಟೆಯು ಹರುಕಿನೆಡೆಯಲ್ಲಿ ಕಾಯಿಯೊಂದು ಅರಸಿನ ಬಣ್ಣ ತಾಳಿದುದನ್ನು, ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಿಗೋಡಿ ಹೇಳಿದ. “ಇಲ್ಲ ಅದಿನ್ನೂ ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹೇಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋಡಿಗೆ ಬಿಸಾಡುತ್ತೇನೆ” ಎಂದು ತೌಡನೆಂದುದೇ ತಡ, ಮಕ್ಕಳು ಬೆದರಿ ಮೌನವಾದರು.
ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳೆದ್ದು ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೊಳೋ ಗೋಳು ಮೂರು ಮಕ್ಕಳದು! ದೆಯ್ಯಿಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೋದ ಕತೆ ಹೇಳಿದಳು. ಅದನ್ನು ಕೇಳಿ ಚಿಕ್ಕ ದೂಮನು, “ಆ-ಆ-ಆ-ಆ ಕಾಲ ಬೆಬ್ಬೆಬ್ಬೆಕ್ಕೂ ಸ-ಸ-ಸ್ಸತ್ತೇ ಓ-ಓ-ಓಗ್ಲ್ಯೀ!” ಎಂದರೂ, ಬೂದ ತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಿಯು ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಣದೇವ್ರಿಗೆ ಅದು ಬೇಕಂತೆ!” ಎಂದಳು. “ದೇವ್ರು ಅದನ್ನು ತಿನ್ನುತ್ತಾರೆಯೇ?” ಎಂದು ಬೂದನ ಪ್ರಶ್ನೆ. “ದೇವ್ರಿಗೆ ಆಷ್ಟೂ ಬೇಕಿತ್ತೇ? ನಮಗೆ ಎರಡೆರಡು-ಒಂದೊಂದು ಆದರೂ ಇರಬಾರದಾಗಿತ್ತೆ?” ಎಂದು ತುಕ್ರಿಯ ತರ್ಕ. “ಹೋಗಲಿ, ಆ ಆಲೋಚನೆ ಬಿಡಿ. ಅದರ ಎರಡು ಮೂರು ಕಂದುಗಳಿವೆ. ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕಿತ್ತು. ಅದು ಪೂರಾ ನಿಮಗೆ” ಎನ್ನುತ್ತ ಮಕ್ಕಳ ಆ ಅಳು ಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣೀರೊರೆಸಿಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದುವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂದನಿಗೆ-ನೋಡಿ, ಅವನು ಅಂಗಳಕ್ಕೆ ಹಾರಿದ! “ತುಕ್ರಿ, ಬಾ” ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ. ತುಕ್ರಿಯೂ ಓಡಿ ಸೇರಿದ್ದಾಳೆ. ನೋಡಿ, ಬೂದನು, ಆ ಕಂದುಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ, ‘ಇ ಇ ಇ ಇವು ಗೋನೆ ಹಾಕೋದೂ ಬೇಡಾ! ಆ ಆ ಆ ಆ ಸತ್ಯನಾರಾಣೇ
ತಿತಿತ್ತಿನ್ನೋದೂ ಬೇಡಾ!’ ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿಮುರಿದು ಹಾಕಿ ಅಲ್ಲೆಲ್ಲ ಕಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ. ತುಕ್ರಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಆದಂತಹ ನೃತ್ಯ!
***
೧೯೩೮
======================================

ಆಪದ್ಬಾಧವ ?
"ಒಂದಿಷ್ಟೂ ಕರುಣೆಯಿಲ್ಲದವಳು ಅಂತೀರಲ್ಲಾ ನನ್ನ? ನಿಮ ಗೊಂದಿಷ್ಟು ಮುಂದಿನ ವಿಚಾರ ಯಾಕೆ ಬರಲೊಲ್ಲದೂ ಅಂತೇನೆ ನಾನು! ನಾಗು ನಿಮ್ಮ ತಂಗೀನೂ ಹೌದು; ಗಂಡನ್ನ ಕಳಕೊಂಡು ನಿರ್ಗತಿಕಳಾಗಿ ಕೂತಿರೋದೂ ನಿಜ; ನಾವೇನಾದರೂ ಕೈಲಾದಷ್ಟು ಸಹಾಯಮಾಡಬೇ ಕೆಂಬೊದೂ ನ್ಯಾಯವೆ, ಆದರೆ ನಮಗೇ ತಿಂಗಳನ್ನು ತಿಂಗಳಿಗೆ ಸಾಕಾಗೊದಿಲ್ಲ ಎಂಬಂತಿರುವಾಗ . . . ."

"ಹಾಗಂದರೇನೆ? ತಿಂಗಳಿಗೆ ಒಂದು ನೂರಂತೂ ಬರುತ್ತಾ ಇಲ್ವೆ? ಇರೋದು ನಾವಿಬ್ಬರು, ಎರಡು ಮಕ್ಕಳು, ಸಣ್ಣ ಸಂಸಾರ! . . . . . . .”

ಸಂಸಾರ ಸಣ್ಣದೂಂತ ಇನ್ನೊಬ್ಬರನ್ನು ತಂದು ತುಂಬಿಸಿ ಕೊಂಡು ಪೇಚಾಡಬೇಕೂಂತೀರಾ? ಅದೂ ಒಂದೆರಡು ದಿನವೇ? ಒಂದೆ ರಡು ತಿಂಗಳೆ? ಅವಳಾದರೂ ಒಂದು ಜೀವಾಂತ ಉಂಟೆ? ಬೆನ್ನ ಹಿಂದೇ ಇದ್ದಾನೆ...-ಒಂದು ಹೆಣ್ಣು ಒಂದು ಗಂಡು! ಬಂದ ಮೇಲೆ ಹಿಟ್ಟು, ಬಟ್ಟೆ, ಯೆಲ್ಲ ನಮಗಾದಂತೆ ನಮ್ಮ ಮಕ್ಕಳಿಗಾದಂತೆ, ಅವರಿಗೂ ಆಗ್ಬೇಕು. ಮಾತ್ರವೆ? ನಾಳೆ ಆ ಹುಡುಗನಿಗೆ ವಿದ್ಯೆ! ಆ ಹೆಣ್ಣಿಗೆ ಮದುವೆ! ಅಷ್ಟರಲ್ಲಿ ನಿಮ್ಮ ಈ 'ಸಣ್ಣ ಸಂಸಾರ' ಎಂಬೋದು ಸಣ್ಣದಾಗಿಯೇ ಇದ್ದು ಬಿಡುತ್ತೆಯೇ? ಆಗ ನಿಮ್ಮ ಈ ಒಂದು ನೂರು ಏನೆಲ್ಲ ಮಾಡೀತು? ಏನೋ ಮನೆಯಲ್ಲಿ ಒಂದಿಷ್ಟು ನೆಮ್ಮದಿ ಇತ್ತು ಇಷ್ಟರ ತನಕ, ಮುಂದೆ ಈ ಮನೆ, ಈ ಸಂಸಾರ ಎಂಬೋದರಲ್ಲಿ ಒಂದು ರವಷ್ಟು ಸುಖಶಾಂತಿ ನಾನು ಬೆರೆ ಕಾಣೆ ಅನ್ನೋ ಹಾಗಿನ ಗೋಳಿನ ಬಾಳಲ್ಲಿ ಹೊರಳಾಡ ಬೇಕೂಂತ ಬ್ರಹ್ಮ ನನ್ನ ಹಣೇಲಿ . . . . . .” (ಕಣ್ಣೀರು!)

ಶಂಕರರಾಯನು ತನ್ನ ಹೆಂಡತಿಯ ಮಾತಿನ ಸರಣಿಗೆ ಮೆಚ್ಚಲಿಲ್ಲ. ತನ್ನ ತಂಗಿಯನ್ನೂ ಅವಳ ಮಕ್ಕಳನ್ನೂ ಕರೆದುಕೊಂಡು ಬರುವುದರಿಂದ
-------------------------------------------
ನಂದಾದೀಪ ೧೪

ತಮ್ಮ ಅಚ್ಚುಕಟ್ಟಿನ ಸಂಸಾರದ ಸವಿಗಟ್ಟು ತುಸು ಕೆಡುವುದಿದ್ದರೂ, ಅನಾಥಳಾಗಿ ಸಂಕಷ್ಟದಲ್ಲಿ ಬಿದ್ದಿರುವ ಸೋದರಿಯನ್ನು ಕೈಬಿಟ್ಟು ಬಿಡು ವುದು ಅವನಿಗೆ ಸರಿದೋರಲಿಲ್ಲ. ಆದುದರಿಂದ, ಮುಂದೆ ಅಂತಹ ಬಿಕ್ಕ ಟ್ಟಿನ ಪ್ರಸಂಗ ಬಂದಾಗ ಏನಾದರೊಂದು ದಾರಿ ಯೋಚಿಸಿದರಾಯಿತು. ಈಗೇಕೆ ಕರಕರೆ ಹಚ್ಚಿಕೊಳ್ಳುವೆ?” ಎಂದು ಸಮಾಧಾನವಾಗದ ಹೆಂಡತಿಗೆ ಸಮಾಧಾನ ಹೇಳಿ ಮರುದಿನ ಬೆಳಿಗ್ಗೆ ನಾಗುವಿದ್ದ ಊರಿಗೆ ಹೊರಟು ಹೋದ ಆತ.
* * *
ತಂಗಿಯು ಅಣ್ಣನ ಮೋರೆ ನೋಡಿದುದೇ ತಡ ... ಕಟ್ಟಿಟ್ಟ ಅಳುವು ಏರಿಮುರಿದು ಹರಿಯಿತು. ಅಣ್ಣನ ಕಣ್ಣ ನೀರಾಯಿತು. ಇವರನ್ನು
ಕಂಡು ಮಕ್ಕಳೂ ಮರುಗಿದುವು. ಕೊನೆಗೆ ಅಣ್ಣನೇ ಎದೆಗಟ್ಟಿ ಮಾಡಿ ಕೊಂಡು, ನಾಗೂ, ಈ ಮಕ್ಕಳನ್ನು ನೋಡಿ ದುಃಖವನ್ನು ಮರೆ. ಇವರಿ ಗಾಗಿ ಬಾಳು!” ಎಂದ.

" ಇವರಿಲ್ಲದಿದ್ದರೆ ಅಂದೇ ಅವರೊಂದಿಗೆ ನಡೆಯುತ್ತಿದ್ದೆ. ಆ ದಿನ ಅಳಿಯಲಾರದೆ ಉಳಿದುದು ಇವರಿಗಾಗಿಯೇ. ಆದರೆ ಅಂದು ಮುಗಿಸ ಲಾರದ ಈ ಬಾಳನ್ನು ಮುಂದೆ ಹೇಗೆ ಸಾಗಿಸುವುದೆಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ” ಎಂದು ನಿಟ್ಟುಸಿರುಬಿಟ್ಟಳು ಆಕೆ.

"ಅದೇನೂ ಅಂತಹ ಬಿಡಿಸಲಾಗದ ಸಮಸ್ಯೆಯಲ್ಲ. ಮಕ್ಕಳೊಡನೆ ನನ್ನೊಟ್ಟಿಗೆ ಹೊರಟು ಬಾ, ಇನ್ನು ಮುಂದೆ ನಿನ್ನ ದೂ ನನ್ನದೂ ಎಲ್ಲ ಎಲ್ಲ ಒಟ್ಟು ನನ್ನ ದೊಂದು ಸಂಸಾರ!”

"ಅಣ್ಣ, ಬೇಡ, ನಾನೆಲ್ಲಾದರೂ ಇಲ್ಲಿಯೇ ಇದ್ದು ಕೊಳ್ಳುತ್ತೇನೆ.''

" ಅದು ಹೇಗಾದೀತು? ಬಾವನೇನಾದರೂ ದುಡ್ಡು ಕೂಡಿಟ್ಟಿರಲಾರ; ಈ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಜೀವಿಸಲಾಪೆ ನಾಗೂ?”

"ಕಟ್ಟಿಟ್ಟ ಕಾಸಿಲ್ಲದಿದ್ದರೂ ರೆಟ್ಟೆ ಯಲ್ಲಿ ಕಸುವಿದೆ. ಹೊತ್ತುಗಳೆ ಯುವುದಕ್ಕಾಗಿ ಅವರೇ ಕಲಿಸಿಕೊಟ್ಟ ವಿದ್ಯೆ ಮುಂದೆ ಹೊಟ್ಟೆ ಹೊರುವು ದಕ್ಕೂ ನೆರವಾದೀತು. ಆದೇನೆಂಬೆಯಾ? ರಾಟೆ! ಸಾಕಾಗದಿದ್ದರೆ ಬೀಸು ಗಲ್ಲೂ ಇದೆ!”
----------------------------------------------------------
೧೫ ಆಪದ್ಭಾಂಧವ

" ಅಯ್ಯೋ, ನಾಗೂ, ನಾನಿರುತ್ತ ನೀನು ಹಾಗೂ ದುಡಿದು, ಜೀವಿಸ ಬೇಕಾಗಿದೆಯೆ? ಈ ಹುಚ್ಚುತನ ಬಿಡು. ನನ್ನೊಡನೆ ಹೊರಡು.'

"ಇಲ್ಲಣ್ಣ, ನಾನು ಬರಲಾರೆ ನೀನು ಕೋಪಿಸಿಕೊಳ್ಳ ಬೇಡ. ಅನ್ಯಥಾ ಯೋಚಿಸಬೇಡ, ನಿನ್ನ ಹೃದಯ ಬಲ್ಲೆ; ನಮ್ಮ ದೊಂದು ಕರುಳು ನಿಜ. ಆದರೆ. . . . . .ಆದರೆ. . . . . .ಬೇಡ, ಅಣ್ಣ ನಾನು ಬರಲಾರೆ. ತೌರು ಎಷ್ಟೇ ಒಳ್ಳೆಯದ್ದಿ ರಲಿ, ಸಿರಿವಂತಿಕೆಯದ್ದಿರಲಿ, ಗತಿಗೆಟ್ಟು ತೌರು ಸೇರಬಾರದು, ದೂಡಿದಷ್ಟು ದಿನ ದೂಡುತ್ತೇನೆ. ಆದರೆ ಎಲ್ಲಾದರೂ
ನಾನೂ ಅವರ ದಾರಿ ಹಿಡಿದರೆ, ಆಗ ಮಾತ್ರ, ಅಗಾ, ಈ ಮಕ್ಕಳನ್ನು ನಿನ್ನ ಸೆರಗಿನಲ್ಲಿ ಹಾಕಿ ಹೋಗಿದ್ದೇನೆಂದು ತಿಳಿದು ಓಡಿಬಂದು ಕರೆದು ಕೊಂಡು ಹೋಗು. ನಿನ್ನ ಮಕ್ಕಳೇ ಎಂತ ತಿಳಿ! ಎಂತಹ ಸಂದರ್ಭ ದಲ್ಲಿಯೂ ಮರೆಯಬೇಡ. . . . . . .”( ಕಣ್ಣೀರು)
* * *
ಶಂಕರರಾಯನು ಅನಿರೀಕ್ಷಿತವಾಗಿ ಒಬ್ಬನೇ ಹಿಂತಿರುಗಿ ಬಂದುದು ಅವನ ಹೆಂಡತಿಗೆ ಆಶ್ಚರ್ಯವಾಯಿತು. ಮಾತ್ರವಲ್ಲ, ತುಸು ಸಮಾ ಧಾನವೂ ಆಗಿದ್ದಿರಬೇಕು. ಆದರೆ ಸಮಾಚಾರವೇನೆಂದು ತಾನಾಗಿ ಕೇಳಲು ಧೈರ್ಯ ಬರಲಿಲ್ಲ. ಅ೦ತೂ ಉಣಬಡಿಸುತ್ತಿದ್ದಾಗ ಆತನ ಪ್ರಸನ್ನ ಮುಖಮುದ್ರೆಯನ್ನು ಕಂಡು, ಬಂದು ಇಷ್ಟು ಹೊತ್ತಾದ್ರೂ ಅಲ್ಲಿನ ಸಮಾಚಾರವೇನೂಂತ ತುಟಿಯೆತ್ತಬೇಕೇ ! ಅಷ್ಟು ಬೇಸರ ನನ್ನ ಮೇಲೆ!'' ಎಂದು ಕೊಂಕುನುಡಿದಳು.

ಬೇಸರವೇನೂ ಇಲ್ಲ. ಅವಳು ಎಷ್ಟಕ್ಕೂ ಬರೋದಿಲ್ಲಾಂದ್ರು. ಅಲ್ಲೇ ಇರುವಂತೆ ಏನಾದರೂ ಒಂದಿಷ್ಟು ವ್ಯವಸ್ಥೆ ಮಾಡಿಕೊಟ್ಟು ಬಂದೆ. ಇನ್ನು ಕೆಲವು ದಿನ ಬಿಟ್ಟು ತಿರುಗಿ ಹೋಗಬೇಕಾಗಿದೆ.”

ಚನ್ನಾಯ್ತು! ಇಷ್ಟು ದಿನ ಒಂದು ಮನೆ, ಒಂದು ಸಂಸಾರ ಅಂತ ಇತ್ತು. ಇನ್ನು ಎರಡು ಮನೆ, ಎರಡು ಸಂಸಾರ! ಅತ್ತ ಐವತ್ತು; ಇತ್ಯ ಐವತ್ತು! ಬೇಡಪ್ಪಾ ಈ ಪೀಕಲಾಟ; ಎಲ್ಲ ಇಲ್ಲಿಗೇ ಬರ್ಲಿ. ನೀವು ಹೋದ ಮರುದಿನವೇ ಆ ಅಡಿಗೆ ಹೆಂಗ್ಸೂ ಬಿಟ್ಟು ಹೋದ್ಳು: ಮಕ್ಕಳನ್ನು ಹಿಡಿಯೋ ಹುಡುಗನೂ ಮೈ ಚೆನ್ನಾಗಿಲ್ಲಾಂತ ಊರಿಗೆ ಹೋಗಿಬಿಟ್ಟ!. .”
---------------------------------------------------
ನಂದಾದೀಪ

"ಅದೇನು! ಬರುವವರಿಗೆ ಮೊದಲಾಗಿ ಜಾಗಾ ಸಿದ್ಧ ಮಾಡಿಟ್ಟ, ಹಾಗಿದೆಯಲ್ಲ? ಆದರೆ ಅವಳು ಬರೋದೂ ಇಲ್ಲ: ಅತ್ತ ಐವತ್ತು ಇತ್ತ ಐವತ್ತು ಆಗಬೇಕಾಗಿಯೂ ಇಲ್ಲ! ಬಾವನ ಲೆಕ್ಕದ ಪುಸ್ತಕ ತೆಗೆದು ನೋಡಿ ಯಾರದಾದರೂ ಋಣವಿದ್ದರೆ ತನ್ನ ಚಿನ್ನಾಭರಣ ಮಾರಿ ತೀರಿಸಿಕೊಡು ಅಂದ್ರು. ಲೆಕ್ಕದ ಪುಸ್ತಕ ತೆರೆದು ನೋಡಿದಾಗ ಅದರಲ್ಲೇನಿತ್ತು ಬಲ್ಲೆಯಾ? ಐದು ಸಾವಿರ ರೂಪಾಯಿನ ಲೈಫ್ ಇನ್‌ಷ್ಯೂರೆನ್ಸ್ ಪಾಲಿಸಿ! ಅದು ಬಂದು ಹೆಚ್ಚು ದಿನ ಆಗಿದ್ದಿಲ್ಲ: ನಾಗೀಗೂ ಕೂಡಾ ಗೊತ್ತಿದ್ದಿಲ್ಲ! ಅವಳಿಗೇನೋ ಆ ಹಣ ಸಿಕ್ಕಿಬಿಡುತ್ತೆ. ಆ ಸಂಬಂಧ ತಿರುಗೊಮ್ಮೆ ಹೊಗೋಕೂಂದ್ರೆ ವ್ಯವಸ್ಥೆಂದ್ರೆ ಅದು! ಅತ್ತ ಐವತ್ತು, ಇತ್ತ ಐವತ್ತಲ್ಲ, ತಿಳೀತೆ! ಅಂತೂ ನಿನ್ನಿಂದಾಂತ ಬಾವನಿಂದಾಂತ ಸಂಸಾರಿಯಾದವರೆಲ್ಲ ಒಂದು ಪಾಠ ಕಲಿಯೋಕಿದೆಯೆಂದು ತೋರಿತು ನನಗೂವ! ಹಾಗೆ ಆ ಇನ್‌ಷ್ಯೂರೆನ್ಸ್ ಕಂ ಏಜಂಟರ ಆಫೀಸಿಗೆ ಹೋದವನೇ ನಾನೂ ಒಂದೈದು ಸಾವಿರ ರೂಪಾಯಿನ ವಿಮಾ ಅರ್ಜಿ ಕೊಟ್ಟು ಬಂದು ಬಿಟ್ಟೆ. ಆಪದ್ಧನವಾಗಿ ಇದ್ದು ಕೊಂಡು ಬಿಡ್ಲಿ ! ಈಗಿನ ಕಾಲದಲ್ಲಿ ಆಪದ್ಭಾಂಧ ವಾಂದ್ರೆ ಲೈಫ್ ಇಸ್ಕೂರೆನ್ಸ್ ಪಾಲಿಸಿ!”
=====================================
ಅಜ್ಜಯ್ಯನ ಮದುವೆ

ಅಜ್ಜಯ್ಯಾ!” ಎ೦ದರೆ ರಾಮಯ್ಯನವರಿಗೆ ಬಲು ಸಿಟ್ಟು.
ಅದು ಊರ ಮಕ್ಕಳಿಗೆ ಗೊತ್ತು. ಸಿಟ್ಟಿನ ನೋಟ ನೋಡುವುದೆಂದರೆ
ಅವರಿಗಿಷ್ಟ, ಆದುದರಿಂದ ರಾಮಯ್ಯ ನವರು ಎತ್ತ ಸುಳಿಯಲಿ, ಬೀದಿಯ
ಎಡದಿಂದ ಬಲದಿಂದ, ಮುಂದಿಂದ ಹಿಂದಿ೦ದ. 'ಅಜ್ಜಯ್ಯಾ' 'ಅಜ್ಜಯ್ಯಾ!'
' ಅಜ್ಜಯ್ಯಾ! '.  ತನ್ನ ಊರುಗೋಲನ್ನು ಎತ್ತಿ ಹಿಡಿದು ರಾಮಯ್ಯನವರು
ಆ ಪೋರರನ್ನು ಓಡಿಸಿದರೆ,ಅವು ಮಂಗಗಳಂಗ೦ತೆ ಕಿರಿಚುತ್ತಾ ಬೀದಿ ಬಿಟ್ಟು ಮನೆ
ಹತ್ತುವವು. ಆದರೆ ಬಾಗಿಲ ಎಡೆಯಿಂದ ಹಿತವಡಿಯ ಕಿಡಕಿಯಿಂದ
ಉಪ್ಪರಿಗೆಯ ಮೇಲಿಂದ ಬಚ್ಚಲಿನ ಕಿಂಡಿಯಿಂದ...ಅಲ್ಲಿಂದ---ಇಲ್ಲಿಂದ
ಎಂದನ್ನಲು ಬರುವುದಿಲ್ಲ~ ಎಲ್ಲಿಂದಲೋ -'ಅಜ್ಜಯ್ಯಾ ! ಅಜ್ಜಯ್ಯಾ!
ಕೂಹು!' 'ಕೂಹು' ಎಂದಾಗ ನೆನೆಪಾಯಿತು ಇನ್ನೊಬ್ಬರ ಪೇಚಾಟ :
ನಮ್ಮೂರಲ್ಲಿ 'ಹೇಟುಬೂಟಿ'ನ  ಉದ್ದದವರೊಬ್ಬರಿದ್ದರು. 'ಕುಹೂ' ಎಂದರೆ
ತನ್ನನ್ನು ಗೇಲಿಮಾಡುತ್ತಾರೆಂದು ಅವರ ನಂಬುಗೆ. ಅದು ಹೇಗೋ
ಮಕ್ಕಳಿಗೆ ಗೊತ್ತಾಯಿತು.  ಮತ್ತು ಕೇಳಬೇಕೆ?  ಅವರ ದೊರೆಟೋಪಿ
ಕಾಣುವುದೇ ತಡ , ಎಲ್ಲಿಂದಲೋ 'ಕುಹು! ಕುಹು!'  ಹಾಗೆಯೆ ರಾಮ 
ಯ್ಯನವರ ಪಾಡು. ಮಕ್ಕಳು ಮೊದಮೊದಲು ಅವರನ್ನು 'ಅಜ್ಜಯ್ಯ'
ಎಂದಿದ್ದಾಗ ಅವರು ಸಿಟ್ಟಿಗೇರದೆ ಸುಮಮ್ಮಗಿದ್ದು ಬಿಟ್ಟಿದ್ದರೆ ಈ ಚಟ ಬರು 
ತ್ತಲೇ ಇದ್ದಿಲ್ಲ. ಮಕ್ಕಳು ಅವರನ್ನು ಅfಜಯ್ಯಾ ಎನ್ನಲು ಕಾರಣ 
ವಿತ್ತ. ರಾಮಯ್ಯನವರು ಸಿಟ್ಟಾಗಲೂ ಕಾರಣವಿದ್ದಿಲ್ಲವೆನ್ನಲು ಬರುವು 
ದಿಲ್ಲ.

ಅಜ್ಜನಂತಿದ್ದವರನ್ನು ಮಕಕಳು 'ಅಜ್ಜಯ್ಯಾ' ಎನ್ನು ವುದು ಮುದ್ದಿನ 
ಮಾತು. ಮಕ್ಕಳು ಮೊದಮೊದಲು ರಾಮಯ್ಯನವರನ್ನು ಹಾಗೆಂದು ಕರೆ
ದುದು ಆ ಭಾವದಿಂದಲೆ. ಅವರಿಗೆ ವಯಸ್ಸು ಸುಮಾರು ೬೦ .  ಆ
ವಯೋಧರ್ಮದ ಲಕ್ಷಣಗಳು ಅವರ ಅ೦ಗಾ೦ಗಗಳಲ್ಲಿ ತೊರಿ ಬರು
ತ್ತಿದ್ದುವು. ಎಂದ ಮೇಲೆ ಮಕ್ಕಳು ಅವರನ್ನು 'ಅಜ್ಜಯ್ಯಾ' ಎನ್ನದಿರು
---------------------------------------
ನಂದಾದೀಪ ೧೮
ವರೇ? ಆದರೆ ರಾಮಯ್ಯನವರಿಗೆ ಅದನ್ನೊಪ್ಪಿಕೊಳ್ಳಲಿಕ್ಕೆ ಮನಸ್ಸಿದ್ದಿಲ್ಲ.
ಏಕೆಂದರೆ ಅವರಿಗಿನ್ನೂ ಮದುವೆಯಾಗಬೇಕೆಂದಿತ್ತು. ಈ ವರೆಗೆ ಮದುವೆ
ಯಾಗಿದ್ದಿಲ್ಲವೆಂದಲ್ಲ, ಆಗಿದ್ದ ಮೂರೂ ಕೈತಪ್ಪಿ ಹೋಗಿದ್ದು ವು! ಈಗ ನಾಲ್ಕ
ನೆಯದಕ್ಕಾಗಿ ಕನ್ಯಾನ್ವೇಷಣವು ಭರದಿಂದ ಸಾಗುತ್ತಿದೆ. ಅದು ಕಾರಣ
ಬಾಗಿದ ಬೆನ್ನನ್ನು ಕೂಡಿದಷ್ಟು ಮಟ್ಟಿಗೆ ನೆಟ್ಟಗೆ ಮಾಡಿ ನಡೆಯುತ್ತಾರೆ.
ಬಿದ್ದ ಸಾಲುಹಲ್ಲುಗಳ ಜಾಗದಲ್ಲಿ ಕೃತಕ ಹಲ್ಲುಗಳ 'ಸೆಟ್ಟು' ಇದೆ. ಕೂದ
ಲಿಗೆ ಕಪ್ಪು ರಂಗು ಬಳಿದಿದೆ. ಮೇಲಾಗಿ ತನಗೆ ವೃದಾಪ್ಯವು ಬಂದಿದೆ
ಯೆಂದು ಅವರೆಂದೂ ನಂಬಲಾರರು. ಅದೇನೋ ಒಂದು ಶನಿ, ಕೆಮ್ಮಿ
ನಿಂದ ಕೃಶವಾಗಿದ್ದಾರೆ, ಅಷ್ಟೆ! ಅದು ಬಂತೆಂದರೆ ಪ್ರಚಂಡ ಮಾರುತನೆಬ್ಬಿ
ಸಿದ ಶರಧಿಯ ತರಂಗಮಾಲೆಗಳಂತೆ ಮೇಲುಮೇಲು ಅವರನ್ನಪ್ಪಳಿಸುತ್ತದೆ.
ಆದರೆ ಅದನ್ನು ನಿರ್ಮೂಲಗೊಳಿಸಿ ನವಯೌವನವನ್ನು ಹೊಂದುವುದು
ದೊಡ್ಡದಲ್ಲವೆಂದು ಅವರ ಗ್ರಹಿಕೆ: ಬೇಕಾದಷ್ಟು ದುಡ್ಡಿದೆ, ವೈದ್ಯರಿದ್ದಾರೆ;
ಅವರಿಂದಾಗದಿದ್ದರೆ, ಪತ್ರಿಕೆಗಳ ಜಾಹಿರಾತಿನಿಂದ ಪ್ರಸಿದ್ದಿ ಪಡೆದ ಔಷಧ
ಗಳಿವೆ. ತಾರುಣ್ಯವನ್ನು ಬರಿಸುವ ಗ್ಯಾರೆಂಟೀಯಿರುವ ಮದ್ದುಗಳೆ ಅವೆಲ್ಲ!
ತರಿಸಿಕೊಂಡರಾಯಿತು; ನಿಸ್ಸಂದೇಹವಾಗಿ ಬಂದೇ ಬಿಡುತ್ತೆ ಯೌವನ!
ಈ ವಿಷಯದಲ್ಲಿ ಗಾಬರಿಯೇ ಇಲ್ಲ ಅವರಿಗೆ, ಆದರೆ ಈಗ ಬರಬೇಕಾದುದು
ಆ ಬರುವ ತಾರುಣ್ಯಕ್ಕೆ ಸರಿಹೋಗುವ ತರುಣೀಮಣಿ! ಮೂರಾದ ಮೇಲೆ
ಏಕೆಂಬಿರಾ! ಇನ್ನೂ ಅಪುತ್ರರು! 'ಅಪುತ್ರಸ್ಯ ಗತಿರ್ನಾಸ್ತಿ' ಎಂದು
ಶಾಸೋಕ್ತಿಯಿದೆಯಲ್ಲ! ಅಷ್ಟು ಮಾತ್ರವಲ್ಲ, ಅವರ ಕೈ ಹಿಡಿವವಳಿಗೆ
ಏನೂ ಕಡಮೆಯಾಗದು: ಚಿನ್ನಾಭರಣಗಳು ಪೆಟ್ಟಿಗೆ ತುಂಬ ಇವೆ, ಸೀರೆ ರವಕೆ
ಗಳೂ ರಾಶಿರಾಶಿ ಬಿದ್ದಿವೆ. ನಗದು ಹಣವಿದೆ, ಜಮೀನಿದೆ, ಉಪ್ಪರಿಗೆಯ
ಮನೆಯಿದೆ! ಇನ್ನೇನು ಬೇಕಯ್ಯಾ ಹುಡುಗಿಗೆ? ರಾಮಯ್ಯನವರ ಆಶಾ
ಕಾಂಕ್ಷೆಗಳು ಹೀಗಿರುವಾಗ ಮಕ್ಕಳೆಲ್ಲ 'ಬಾವಯ್ಯಾ! ಬಾವಯಾ!' ಎಂದು
ಕೂಗಿ ಕೂಗಿ ಕರೆಯುವ ಬದಲಾಗಿ ಆಜ್ಜಯ್ಯಾ! ಅಜ್ಜಯ್ಯಾ' ಎಂದರೆ ಆವ
ರಿಗೆ ಕೆಂಡದಂಥಾ ಸಿಟ್ಟು ಬಾರದಿದ್ದೀತೇ, ನೀವೇ ಹೇಳಿ. 'ಆ ಪರಿಸ್ಥಿತಿ
ಯಲ್ಲಿ ಮಕ್ಕಳು ಕೂಗುವುದೂ, ಸಹಜ, ಅವರಿಗೆ ಸಿಟ್ಟು ಬರುವುದೂ
ತಪ್ಪಲ್ಲ, ಆದರೆ ಮುಂದೇನಾಯಿತು ಎನ್ನುವಿರಾ? ಕೇಳಿ:-
-----------------------------------------
೧೯ ಅಜ್ಜಯ್ಯನ ಮದುವೆ

ರಾಮಯ್ಯನವರಿಗೆ ಈ ಚಿಕ್ಕ ಪೋರರ ಕಾಟಕ್ಕಿಂತಲೂ ದೊಡ್ಡ
ಪಟಿಂಗರ ಉಪಟಳವು ಕಳವಳವನ್ನುಂಟುಮಾಡಿತು. ಇವರಲ್ಲಿ ಹೆಣ್ಣಿಗೆ
ಕಣ್ಣಿಟ್ಟ ರೂ ಅಲ್ಲಿ ಅವರ ಕಲ್ಲು ಬೀಳುತ್ತಿತ್ತು. ಈ ಹರೆಯದವರಿಗೆ
ಪಾಪ!ಮುದುಕನ ಸಂಕಷ್ಟ ಒಂದಿಷ್ಟಾದರೂ ಬಗೆಮುಟ್ಟ ಬೇಡವೇ? ಸುಧಾರ
ಕರ ಲೆಕ್ಷರ'ನ್ನು ಕೇಳಿ ತಲೆತಿರುಗಿ ಈ ಚಂದ್ರಪುರದ ಯುವಕರು 'ಕನ್ಯಾ
ಸಂರಕ್ಷಣಾ ಸಂಘ' ಎಂಬುದನ್ನೇರ್ಪಡಿಸಿಕೊಂಡಿದ್ದರು. 'ಶಾರದಾ ಬಿಲ್'
ಅಂಗೀಕೃತವಾದಂದು ಊರಲ್ಲೆಲ್ಲ ಇವರ ಉಪನ್ಯಾಸಗಳೇನು? ಮೆರವಣಿಗೆ
ಯೇನು! ಜಯಘೋಷವೇನು! ಸಾಲದುದಕ್ಕೆ ರಾಮಯ್ಯನವರಲ್ಲಿಗೆ ಹೋಗಿ
ಅವರಿಗೊಂದು 'ಅಲ್ಟಿ ಮೇಟಮ್' ಕೊಟ್ಟೇ ಬಿಟ್ಟರು! 'ನೀವೆಲ್ಲಾದರೂ
ಚಿಕ್ಕ ಹುಡುಗಿಯನ್ನು ಮದುವೆ ಮಾಡಿಕೊಂಡರೆ ಜಾಗ್ರತೆ! ನಮ್ಮ ಸಂಘ
ವಿದೆ! ಹುಡುಗಿಯನ್ನು ನಿಮ್ಮ ಐಶ್ವರ್ಯಕ್ಕೆ ಧಾರೆಯೆರೆಯಿಸಿಕೊಳ್ಳುವ
ಬದಲಾಗಿ ನಿಮ್ಮ ಐಶ್ವರ್ಯವನ್ನೆ ನಮ್ಮದರಂತಹ ಸಾರ್ವಜನಿಕಹಿತ
ಸಂಘಕ್ಕೆ ದಾನಮಾಡಿಬಿಡಬಾರದೇಕೆ? ಸಂಘವು ನಿಮ್ಮನ್ನು ಚೆನ್ನಾಗಿ
ಕಾಪಾಡುವುದು. ನಿಮಗಂತೂ ಮದುವೆಯಾಗಬೇಕೆಂದೇ ಇದ್ದರೆ ನಿಮ್ಮ೦ಥ
ಮುದಿವಿಧುರನಿಗೆ ತಕ್ಕ ಐವತ್ತು ವರುಷದ ವಿಧವೆಯನ್ನು ನಾವು ಗಂಟು
ಹಾಕಿಕೊಡುವೆವು. ....' ಎಂಬಷ್ಟರಲ್ಲಿ ಕೇಳಿ ಸಹಿಸಲಾರದ ರಾಮ
ಯ್ಯ ನಡನಡುಗುತ್ತ-ಐವತ್ತು ವರುಷದ ವಿಧವೆಯನ್ನು ನೀವೇ ಕೈ
ಹಿಡಿದು ಸುಧಾರಕರೆಂಬುದನ್ನು ಕಾರ್ಯತಃ ತೋರಿಸಿ! ಸಾಕು
ನಿಮ್ಮ ಪರೋಪದೇಶಪಾಂಡಿತ್ಯ! ಕಾಸು ಕೈಯಲ್ಲಿಲ್ಲದ ನಿರುದ್ಯೋಗಿ ಪೋಲಿಗಳಿ
ಗೆಲ್ಲ ಸಂಘ! ಇಂತಹ ಒಂದಲ್ಲ-ನೂರು ಸಂಘಗಳು ಈ ಚಂದ್ರಪುರಿಯ
ಲ್ಲೇಳಲಿ, ಅವುಗಳ ಇದಿರಿದಿರೇ ಹುಡುಗಿಯೊಂದನ್ನು ಮದುವೆಯಾಗದಿದ್ದರೆ
ನಾನು ರಾಮಯ್ಯನೇ ಅಲ್ಲ!' ಎಂದು ಗುಡುಗುಡಿಸಿದರು, ಆ ಯುವಕರು
ಬಿಟ್ಟು ಕೊಡುವವರೇ? ಮದುವೆ ಸಾಕೋ ಸಾಕು ಎಂದು ನಿಮ್ಮಿಂದೆನ್ನಿ
ಸದಿದ್ದರೆ ನೀವು ಹೇಳುವಂತೆ ನಾವು ಪೋಲಿಗಳೇ ಸರಿ!' ಎಂದು ಪಂಥ
ತೊಟ್ಟೇ ಹಿಂದೆ ಕಾಲಿಟ್ಟರು.
ಆದುದರಿಂದ ರಾಮಯ್ಯನವರು ಹಲವು ಕಡೆಗಳಲ್ಲಿ ಪ್ರಬಲ ಪ್ರಯತ್ನ
ಮಾಡಿದರು. ಅನೇಕ ಪುರೋಹಿತ ಭಟ್ಟರ ಕಡುಸನಾತನಿಗಳ-ಕೈ
---------------------------------------
ನಂದಾದೀಪ
ಕಾಲು ಕಟ್ಟಿದರು ದುಡ್ಡು ಕೊಟ್ಟು ಅಡ್ಡ ಬಿದ್ದರು. ಬಹು ದೂರದ
ವರೆಗೂ ಅವರ ಕನ್ಯಾನ್ವೇಷಣಯತ್ನ ಸಾಗಿತು. ಬಹಳ ರಹಸ್ಯವಾಗಿಯೂ
ನಡೆಯಿತು ಆದರೆ ಅದೆಲ್ಲ ಆ ಯುವಕ ಕೂಟಕ್ಕೆ ಹೇಗೋ ಗೊತ್ತಾಗಿ ಸಾಗದೆ
ಹೋಯಿತು, ಮಾತ್ರವಲ್ಲ, ಹಣ್ಣಿನ ಮೇಲೆ ಬರೆಯೆಳೆದಂತೆ ಅವರು ರಾಮ
ಯ್ಯನನ್ನು ನೋಡಿದಾಗಲೆಲ್ಲ, ಏನ್ರಿ, ನೀವು ಮದುವೆಮಾಡಿಕೊಂಡಿರೆಂದು
ಊರಲ್ಲಿ ಸುದ್ದಿ! ಹೌದೇ ?' ಎಂದು ಗೇಲಿ ಮಾಡುವುದು ಬೇರೆ. ಆದು
ದರಿಂದ ಎಷ್ಟು ವೆಚ್ಚವಾದರೂ ಆಗಲಿ, ಒಮೆಗೆ ಒಂದು ಹುಡುಗಿಯನ್ನು
ಮದುವೆಯಾಗಿ ಆ ಪೋಲಿಗಳ ಮೂಗು ಮುರಿಯಬೇಕೆಂಬ ಛಲವು ರಾಮ
ಯ್ಯನವರಲ್ಲಿ ದಿನಗಳೆದಂತೆ ಪ್ರಬಲವಾಯಿತು.
* * * *
ಒಂದು ದಿನ ಈ ವಯ್ಯನವರು ತನಗೆ ವಕ್ರಸಿದ ಶನಿ ತೊಲಗಿ
ಹೋಗುವ ಕಾಲ ಬಂತೆಂದು ಹಿಗ್ಗಿದರು. ಏಕೆ೦ದರೆ  ಆದಿನ ಸಾಯಂಕಾಲ
ರುದ್ರಪುರದ ಯಾವುದೋ ಒಂದು ಶಿವಾಲಯದ ಜೀರ್ಣೋದ್ಧಾರ
ಕ್ಕಾಗಿ ಧನಸಂಗ್ರಹ ಮಾಡುತ್ತ ಊರೂರು ತಿರುಗುತ್ತ ಒಬ್ಬ ಬ್ರಾಹ್ಮಣನು
ಅವರ ಮನೆಗೆ ಬ೦ದನು, ಊಟೋಪಚಾರಗಳಾದ ತರುವಾಯ ರಾಮ
ಯ್ಯ ನವರು ಅತಿಥಿಯೊಡನೆ ತನ್ನ ಮನಸ್ಸಿನ ಬಯಕೆಯನ್ನು ಹೇಳಿ
ಕೊಂಡರು.  'ಆ ಶಿವನು ನನ್ನ ಮನೋಭೀಷ್ಟ ನಡೆಸಿಕೊಟ್ಟರೆ, ನಾನೊ
ಬ್ಬನೇ ಆ ಜೀರ್ಣೋದ್ಧಾರ ಕಾರ್ಯವನ್ನು ನೆರವೇರಿಸುವೆನು' ಎಂದು ಹರಕೆ
ಹೊತ್ತರು. ಬ್ರಾಹ್ಮಣನ ಮುಖವರಳಿತು, 'ಹಾಗಾದರೆ ಆ ಶಿವನೇ
ನನ್ನನ್ನು ತಮ್ಮ ಬಗೆ ಕಳುಹಿಸಿರಬೇಕು! ಆ ಶಿವಾಲಯದ ಅರ್ಚಕರಲ್ಲಿ
ಒಂದು ಹೆಣ್ಣಿಗೆ ಅವರ ಸೋದರ ಸೊಸೆ. ತಂದೆತಾಯಿಗಳ್ಯಾರೂ ಇಲ್ಲ.
ಅವರ ಕುತ್ತಿಗೆಗೆ ಕೊರಡಾಗಿದ್ದಾಳೆ;  ಪ್ರಾಯ ತುಂಬಿದೆ. ಲಿಂಬೆಯ
ಹಣ್ಣಿನಂಥ ಬಣ್ಣ ಆ ಹುಡುಗಿಯದು! ರೂವದಲ್ಲಿ ರತಿ . . . . . . .'
ಎಂಬಷ್ಟರಲ್ಲಿ ರಾಮಯ್ಯನವರ ಮೋರೆ ಅರಳಿ ಅರಳಾಯಿತು!

'ಸ್ವಾಮೀ, ಮೆಲ್ಲಗೆ ಮಾತಾಡಿ ಹೇಗಾದರೂ ಮಾಡಿ ಆ ಹುಡುಗಿ
ಯನ್ನು ಈ ಮನೆ ಸೇರಿಸಿ! ಈ ಮನೆಯ ದೀಪ ಉಳಿಸಿ! ನಿಮಗೆ ಏನು
ಬೇಕಾದರೂ . . . . . ."
-----------------------------------
೨೧ ಅಜ್ಜಯ್ಯನ ಮದುವೆ

'ಹಾಗಾದರೆ ಕೇಳಿ, ನಾನೇ ಆ ಅರ್ಚಕ! ತಮಿ ೦ದ ನನ್ನ ದೇವ
ಸ್ಥಾನ  ಉದ್ಧಾರವಾಗಿ ನನಗೊಂದು ಜೀವನದ ಮಾರ್ಗವಾಗುವುದಿದ್ದರೆ....'

'ಸ್ವಾಮಿ, ಮೆಲ್ಲಗೆ ಮಾತಾಡಿ, ಮೆಲ್ಲಗೆ! ಇಲ್ಲಿ ಗೋಡೆಗಳಿಗೂ
ಕಿವಿಯಿದೆ! ಇಲ್ಲೊಂದು ಪೋಲಿಗಳ ಸಂಘ ಉಂಟು! ಅವರಿಗೆ ಗೊತ್ತಾ
ದರೆ ಹುಡುಗಿಯನ್ನೇ ಹಾರಿಸಿಬಿಟ್ಟಾರು: ಸುಧಾರಕರ ಕೂಟ! . . ...'

'ಸತ್ತರಯ್ಯ ಅವರು' ನಮ್ಮೂರಿಗೆ ಬಂದು ನನ್ನ ಸೊಸೆಯನ್ನು
ಹಾರಿಸುವುದೆ? ಏನೋ' ನಿಮ್ಮೂರಲ್ಲಿ, ಅವರ ಬೆಳೆಯಿಸಿಟ್ಟಿದ್ದೀರಿ! ಕೊಬ್ಬಿ
ಹೋಗಿದ್ದಾರೆ! ನಮ್ಮೂರಲ್ಲಾದ್ದರೆ ನಮ್ಮ ಅಗ್ರಹಾರದ ಸನಾತನಿಗಳು
ಅವರ ಟೊಂಕ ಮುರಿದುಹಾಕಿಬಿಡುತ್ತಿದ್ದರು! ಸುಧಾರಕರು! ಧರ್ಮದ್ರೋಹಿ
ಗಳು! ನಾಸ್ತಿಕರು! ನರಕಕ್ಕೆ . . . . . ."

ಅವರೊಳಗಾದ ಉದ್ದದ ಮಾತುಕತೆಯನ್ನು ಗಿಡ್ಡಾಗಿ ಹೆಳುವು
ದಾದರೆ, ಅಂದಿನಿಂದ ಮೂರನೆಯ ದಿನವಾದ ಗುರುವಾರ ಸಾಯಂಕಾಲ
ಎಂಟು ಗಂಟೆಯ ರೈಲಿನಲ್ಲಿ ರಾಮಯ್ಯನವರು ಗುಟ್ಟಾಗಿ ರುದ್ರಪುರದ
ಸ್ಟೇಷನಿನಲ್ಲಿ ಇರಬೇಕು; ಹತ್ತು ಗಂಟೆಗೆ ಮದುವೆ; ಹನ್ನೆರಡು ಗಂಟೆಯ
ಮೈಲು ಹತ್ತಿ ಬೆಳಗಾಗುವುದರೊಳಗೆ ರಾಮಯ್ಯನವರು ಹುಡುಗಿಯೊಡನೆ
ಮನೆಮುಟ್ಟಬೇಕು; ಎಲ್ಲವೂ ರಹಸ್ಯವಾಗಿ ಶೀಘ್ರವಾಗಿ ನಡೆಯಬೇಕೆಂದೇ
ರಾಮಯ್ಯನವರ ಹಟ. ಹಾಗೇನು ಬೆದರಬೇಕಾಗಿಲ್ಲವೆ೦ದೂ ತಾನು ಬಡ
ವನಾದರೂ ತನ್ನಲ್ಲಿಗೆ ರಾಯರು ದಿಬ್ಬಣನಂತೆ ಬಂದು ನಾಲ್ಕು ದಿವಸದ
ಮದುವೆಯನ್ನು ಶಾಸ್ತ್ರೋಕ್ತವಾಗಿ ಮುಗಿಯಿಸಿಕೊಂಡು
ಬ್ರಾಹಣನ ಆಗ್ರಹಪೂರ್ವಕ ವಿನಂತಿ. ಆದರೆ ಜಾಗಟೆಗೊಂದೇ ಸ್ವರ
ವೆಂಬಂತೆ ರಾಮಯ್ಯನವರು ಹಿಡಿದ ಛಲ ಬಿಡಲೊಲ್ಲರು . ಮಾತ್ರವಲ್ಲ,
ತಾನು ಹೇಳಿದಂತೆ ಶೀಘ್ರವಾಗಿ ಹುಡುಗಿಯನ್ನಯ ಮದುವೆಮಾಡಿಸಿ ಕಳು
ಹಿಸಿಕೊಡುವುದಾದರೆ ಅಂದೇ ಅಲ್ಲೇ ಜೀರ್ಣೋದ್ಧರ ಕಾರ್ಯಕ್ಕೆ
ಮ೦ಗಡವಾಗಿ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು ಬರುವುದಾಗಿ
ಬ್ರಾಹ್ಮಣನಿಗೆ ಆಸೆ ಹುಟ್ಟಿಸಿ ತನ್ನ ದಾರಿಗೆ ತಂದುಬಿಟ್ಟರು. ರುದ್ರಪ್ರರವು
ಅಷ್ಟೊಂದು ದೂರವಿದ್ದಿಲ್ಲ-ಚಂದ್ರಪುರದಿಂದ  ಆರು ತಾಸಿನ ರೈಲುಗ್ರಯಾಣ
ದೊಳಗೆ.
-------------------------------------
ನಂದಾದೀಪ ೨೨

ಶುಕ್ರವಾರದ ದಿನ ಬೆಳಗ್ಗೆ ಎಂಟೊಂಬತ್ತು ತಾಸಿನೊಳಗೆ ಊರ
ಲ್ಲೆಲ್ಲ ಸುದ್ದಿ-ರಾಮಯ್ಯನವರ ಕೈ ನನೆಯಿತೆಂದು! ಮದುಮಗಳನ್ನು
ನೋಡುವುದಕ್ಕಾಗಿ ಊರು ಊರೆ ಅಲ್ಲಿ ಕೂಡಿತು. ಮುದುಕನ
ಹೆಂಡತಿಯನ್ನು ನೋಡುವುದರಲ್ಲಿ ಮಂದಿಗಷ್ಟೊಂದು ಕುತೂಹಲ. ಬೆಳ
ಗಿನ ಮನೆಗೆಲಸವನ್ನಲ್ಲೇ ಬಿಟ್ಟು ಓಡಿದರು ಹೆಂಗಸರು; ಹೊಲದತ್ತ ಹೊರಟ
ಗಂಡಸರು ಸುದ್ದಿ ಕೇಳಿ ರಾಮಯ್ಯನಲ್ಲಿಗೆ ನಡೆದರು, ಶಾಲೆಗೆ ಹೊತ್ತಾಗು
ವುದೆಂದೆಣಿಸದೆ ಬಾಲಕ ಬಾಲಕಿಯರೂ ಸಾಗಿದರು ಆ ಕಡೆಗೆ, ರಾಮಯ್ಯ
ನವರಿಗೂ ಊರೆಲ್ಲ ಬರಬೇಕೆಂದಿತ್ತು; ತನ್ನ ಪರಾಕ್ರಮವನ್ನು ತೋರ
ಬೇಕೆಂದಿತ್ತು; ಆ ಪೋಲಿಗಳ ಕೂಟವನ್ನು ಬರೆಯಬೇಕೆಂದಿತ್ತು. 'ಶಾರದಾ
ಬಿಲ್ಲು ! ಅವರ ಎದೆಗೆ ಬಿಟ್ಟು ಕೊಳ್ಳಲಿ! ಹುಡುಗಿಗೆ ೧೫ ವರುಷ ದಾಟಿದೆ;
೧೬-೧೭ ಎಂದರೂ ನೀವೇನೊ ಒಪ್ಪುವಿರಿ; ಹಾಗಿಲ್ಲವೆ ಆ ತುಂಬಿದ
ಮೈಯೊಡ್ಡು? ನಾನು ಮದುವೆಯಾಗಲು ನಿಶ್ಚಿಸಿದ ಹುಡುಗಿಯನ್ನು ಹಾರಿ
ಸಿಯಾದರೂ ಮದುವೆ ತಪ್ಪಿಸುತ್ತಾರಂತೆ! ಇನ್ನು ಬರಲಿ ತಪ್ಪಿಸುವವರು!
ಹಾರಿಸಲಿ ನೋಡೋಣ! ಕ್ರಿಮಿನಾಲ್, ಲೋಕಪ್ಪ್‌! ಹಾರಿಸುವುದ
ಮೈ ದಾನಿಗೆ ಹೋಗಿ ಗಾಳಿಪಟ ಹಾರಿಸಲಿ ಆ ನಿರುದ್ಯೋಗಿ ಪೋಲಿಗಳು!'
ಎಂದೆಲ್ಲ ಬಂದವರೊಡನೆ ರಾಮಯ್ಯನವರು ಆ ಟೋಪದಿಂದ ಮಾತಾಡು
ತಿರಲು ಆ ಕೂಟದ ರಂಗ ಬಂದ, ಗೋಪ ಬಂದ, ಅವರ ಹಿಂದೆ ಶ್ಯಾಮ,
ಭೀಮ, ರಾಮ, ವೆಂಕ್ಟು ಇತ್ಯಾದಿ ಕೂಟಕೂಟವೇ ಬಂದಂತಾಯಿತು.
'ಏನ್ರಿ, ರಾಮಯ್ಯನೋರೇ, ಕಡೆಗೂ ನೀವೇ ಗೆದ್ದು ಬಿಟ್ಟ ರಲ್ಲಾ! ಎಂಥಾ
ಹರೆಯದ ಹುಡುಗಿಯನ್ನೇ ಕೈ ಹಿಡಿದುಬಿಟ್ಟಿರಿ!' ಎಂದ ರಾಮು.

ಅಲ್ಲ ಮತ್ತೆ! ನಿಮ್ಮಂಥ ಪೋಲಿ ಹುಡುಗರ ಬೊಗಳಿಕೆಗೆ ಹೆದರಿ
ಸುಮ್ಮಗೆ ಕೂತುಬಿಡುತ್ತೇನೆಂತ ತಿಳಿದ್ರೋ ನೀವೆಲ್ಲ?' ಎನ್ನುತ್ತ ರಾಮಯ್ಯ
ನವರು ಬಗ್ಗಿದ ಬೆನ್ನು ನೆಟ್ಟಗೆ ಮಾಡಿ ಇಲ್ಲದ ಮೀಸೆಯ ಕಡೆಗೆ ಬೆರಳು
ಏರಿಸಿ ಇನ್ನೇನಾದರೂ ಪೋಕಾಟಿಗೆ ಎಬ್ಬಿಸಿದಿರೆಂದರೆ ಕ್ರಿಮಿನಾಲ್! ನಿನ
ಗೆಲ್ಲ ಲೋಕಪ್! ಜಾಗ್ರತೆ!' ಎಂದು ಎಚ್ಚರಿಸಿದರು.

ಆದರೆ ಭೀಮನು, ನೋಡಿದಿಯಾ, ಶ್ಯಾಮಾ, ರಾಮಯ್ಯನವರ
ಹೆಂಡತಿ ನಾಟಕದ ಪಾರ್ಟನಂತೆ ಎಷ್ಟು ಮುದ್ದು ಮುದ್ದಾಗಿ ಕಾಣುತ್ತಾಳೆ!'
---------------------------------
೨೩ ಅಜ್ಜಯ್ಯನ ಮದುವೆ

ಎನ್ನುತ್ತ ಮುಂದುರಿವದು ಮದುಮಗಳ ಸೆರಗಿಗೇ ಕೈಕೊಟ್ಟ! ಮುದುಕನು
ತನ್ನ ದೊಣ್ಣೆಯ ಕಡೆಗೆ ಕೈಚಾಚಿದ, ನೆರೆದವರು ಭೀಮನನ್ನು ತಡೆಯಲು
ಮುಂದಾದರು, ಮದುಮಗಳು ಬಿಕ್ಕಿ ಬಿಕ್ಕಿ ಅಳುತ್ತ ಮುದುಕನ ಹೆಂಡತಿ
ಯಾಗಿ ಸಿಕ್ಕುವರಿಂದ ಸೆರಗಿಗೆ ಕೈಯಿಕ್ಕಿಸಿಕೊಳ್ಳುವ ಈ ದುಃಖ ಬೇಡಾ!'
ಎಂದು ಮೊರೆಯಿಡುತ್ತಿದ್ದಂತೆಯೇ ಭೀಮನು ಸೆರಗನ್ನು ಎಳೆದುಹಾಕಿ
ಶೀರೆಯನ್ನು ಬಿಚ್ಚುತ್ತಿದಾನೆ! ಅಯ್ಯೋ! ಏನನ್ಯಾಯ! ಏನನ್ಯಾಯ! ಎಂದು
ಅಲ್ಲಿದ್ದವರೆಂದಂತೆ ನೀವೂ ಹೇಳುವಿರಾ? ಅನ್ಯಾಯವೆಲ್ಲಿಂದ ಬಂತು? ನೋಡಿ,
ಶೀರೆಯು ಭೀಮನ ಕೈಯಲ್ಲಿದೆ! ತಾಲೀಮು ಉಡುಗೆಯಿಂದೊಪ್ಪುವ ಹುಡು
ಗನಾಗಿ ನಿಂತಿದ್ದಾನೆ-ಆ ಮದುಮಗಳು! ಕೈ ಚಪ್ಪಾಳೆಯ ಹೊಡೆತವೇ
ಹೊಡೆತ, ಕೆಲವರು ಕಿಬ್ಬದಿ ಹಿಡಕೊಂಡು ನಗುತ್ತಿದ್ದಾರೆ! ಕೆಲವರು ತೆರೆದ
ಕಣ್ಣು ಬಾಯಿ ಮುಚ್ಚದೆ ನೋಡುತ್ತಿದ್ದಾರೆ! ರಾಮಯ್ಯನೋರೇ, ಈ ಹುಡು
ಗನಿಗೆ ಶೀರೆ ಉಡಿಸಿ ಕುಳ್ಳಿರಿಸಿಕೊಂಡು ನಮಗೆಲ್ಲ ಇಷ್ಟು ಗಿಲೀಟು ಹಚ್ಚಿದಿರಿ!
ಇನ್ನು ಇವನನ್ನೇ ದತ್ತ ಸ್ವೀಕಾರಮಾಡಿಕೊಂಡು ಬಿಡಿ! ನಮ್ಮ ಸಂಘವು
ಉದಾರವಾಗುತ್ತೆ'. ಎಂದು ನಗುತ್ತಿದ್ದಾನೆ ಭೀಮ, ನಿಮ್ಮ ಸಂಘ ಹಾಳಾಗಿ
ಹೋಗಲಿ!' ಎನ್ನುತ್ತ ನೆಲಕ್ಕೆ ಕೈ ಹೊಡೆಯುತ್ತಿದ್ದಾನೆ ಮುದುಕ, ಕೂಟದ
ವರು ನಗುತ್ತ ಹೋಗುತ್ತಿದ್ದಾರೆ!
==========================
ದೇವಸ್ಥಾನ ಪ್ರವೇಶ
ಪಡು ಜೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು.
'ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!' ಎಂದು. ಉಳುತ್ತಿದ್ದ ಬೊಗ್ಗು
ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ ಜಾರು ಮುಳು
ಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ಅಂಚಿನಲ್ಲಿ ಹುಲ್ಲು
ಕೆರೆಯುತ್ತಿದ್ದ ರಂಗು ಕೈಯಲ್ಲಿದ್ದ ಪುಟ್ಟ ಹುಲ್ಲನ್ನು ಹಿಡಿದುಕೊಂಡೇ ಹಾರಿ
ದಳು. ಹೀಗೆ ಬೈಲಿನ ನಾಲ್ಕು ಕಡೆಗ೦ದಲೂ ಜನರು ಓಡುತ್ತಿದ್ದರು.
ಧಾನ್ಯದ ಗಣಿಗೆ ಇಳಿದು, ಬಿತ್ತಿದ ಗದ್ದೆಯನ್ನು ತುಳಿದು ಕಬ್ಬಿನ ಏರಿ
ಯನ್ನು ಜರಿದು, ನೇರಾಗಿ ಪಿಜಿನ ಪೂಜಾರಿಯ ಮನೆತೋಟದ ಕಡೆಗೆ
 ಧಾವಿಸುತ್ತಿದ್ದರು. ಬೈಲನ ಜನರೆಲ್ಲ. ಮುದಿ ಉಮ್ಮಕ್ಕು ರೆಡ್ತಿಯೂ ಊರು
 ಗೋಲು ಊರಿಕೊಂಡು ತನ್ನ ಅ೦ಗಳದ ತುದಿಗೆ ಬಂದು ಓಡುವವರನ್ನು
 ಕರೆದು, 'ಯಾರಪ್ಪಾ ಬಿದ್ದದು? ಪಿಜಿನನ? ಬೇಗ conಯ ಬೇಗ, ಗಡಿ ದುದ್ದು
 ಹಾಕಿ' ಎಂದು ಕೂದಷ್ಟು ಕೂಗಿ ಹೇಳಿದಳು, ಆಯ್ಯೋ ?, ಪಿಜಿನಾ, ಅಮಲು
 ತಕ್ಕೊಂಡು ಮರಕ್ಕೇರ ಬೇಡ ಎಂದು ಹೇಳಲಿಲ್ಲವೆ: ನಾನು ಎಷ್ಟೋ ಸಲ'
 ಹಿಂದೊಮ್ಮೆ ಬಿದ್ದೂ ಬುದ್ದಿ ಬಾರದೆ ಹೋಯಿತೆ ನಿನಗೆ?” ಎಂದು ನಿಟ್ಟುಸಿರು
 ಬಿಡುತ್ತಾ ಏನ. ಬರುವುದೆಂದು ಅಲ್ಲೇ ಅ೦ಗಳದ ತುದಿಯಲ್ಲಿ  ಕಾದು
 ಕುಳಿತಳು:; ಕುಳಿತು ಕಾದಳು.

ಪಿಜಿನ ಪೂಜಾರಿಯನ್ನು ಎತ್ತಿಕೊಂಡು ಹೋಗಿ ಚಾವಡಿಯ
ಮಲಗಿಸಿದರು. ಅವನ ಪಕ್ಕೆಲಬು ಮುರಿದಿತ್ತು, ತಲೆಗೆ ಪೆಟ್ಟಾಗಿತ್ತು;
ನೆರೆದ ನೂರಾರು ಮಂದಿ ಸಾವಿರಾರು ಮದ್ದು ಹೇಳಿದರು. ಸಿಕ್ಕಿದ ಏನೇನೋ
ಮದ್ದು ಹಾಕಿ ಕಟ್ಟಿದರು. 'ಏನೋ ದೈವದ ನೆಟ್ಟಗಿಲ್ಲದೆ ಹೀಗೆ ಬೀಳುವು
ದೆಂದರೇನು? ಕೋಳಿ ಸುಳಿದುಬಿಡಿ ' ಎಂದು ಹಲವರು. ಪಿಜನನ ಕ್ಷೀಣ
ಸ್ವರದಿಂದ ತನ್ನ ಮಗನನ್ನು ಕರೆದನು; 'ಚೀಂಕ್ರಾ, ನನ್ನನ್ನು ನೋಡು;
ಆಣೆ ಇಡು  ಹೆಂಡ ಕುಡಿಯುವುದಿಲ್ಲ ಎಂದು, ಸ್ಥಳದ ಆಣೆಯಿದು,' ಎಂದನು.
ಚೀಂಕ್ರನು ಪ್ರತಿಜ್ಞೆ ಮಾಡಿದ; ತಂದೆಯು ತೀರಿಕೊಂಡ.
---------------------------------------
೨೫ ದೇವಸ್ತಾನ ಪ್ರವೇಶ

ಚೀಂಕ್ರನು ತಂದೆಯ ನುಡಿಯಂತೆ ನಡೆದನು. ಮೂರ್ತೆಯನ್ನು
ಬಿಡಲಿಲ್ಲ; ಆದರೆ ಹೆಂಡ ಕುಡಿಯಲಿಲ್ಲ. ಚಿಕ್ಕ ಗುತ್ತಿಗೆಯನ್ನು ವಹಿಸಿ
ಕೊಂಡು ಒಂದು ದಾರಿಗೆ ಬರುವಂತಿದ್ದ. ಆದರೆ ಮಾಡುವುದೇನು? ಪಿಜಿನನು
ಸತ್ತು ನಾಲ್ಕು ವರ್ಷಗಣಗಿಲ್ಲ: ನಿರಪರಾಧಿ ಚೀಂಕ್ರನು ಅಬ್ಯಾರಿ ಮೊಕದ್ದಮೆ
ಯೊಂದರ ತಿಕ್ಕಿನಲ್ಲಿ ಸಿಕ್ಕಿಬಿದ್ದು ಆರು ತಿಂಗಳು ಜೈಲನ್ನು ಸೇರಿದ.
ಹಿಂತಿರುಗಿ ಬರುವಷ್ಟರಲ್ಲಿ ಅವನ ತಾಯಿಯು ತೀರಿಕೊಂಡಿದ್ದಳು. ಇದ್ದ
ಮನೆಜಾಗ ಗುತ್ತಿಗೆಯ ಹಣಕ್ಕೆ ಏಲಂ ಆಗಿ ಹೋಗಿತ್ತು! ಇದನ್ನೆಲ್ಲಾ ಕಂಡು
ಚಿ೦ಕ್ಷನಿಗೆ ತಡೆಯಲಾರದ ದುಃಖವಾಯಿತು. ಸ್ವಲ್ಪ ಸಮಯ
ಅಲ್ಲಿ ಇಲ್ಲಿ ತನ್ನವರೆಂಬವರಲ್ಲೆಲ್ಲಾ ಅಲೆದಲೆದು ಕೊನೆಗೆಲ್ಲೋ ಮಾಯ
ವಾದ.
* * * *
ಅ೦ದಿನಿಂದ ಇಂದಿಗೆ ಇಪ್ಪತ್ತು ವರುಷಗಳು ಜಾರಿ ಹೋಗಿವೆ!
ನೋಡಿರಿ, ಚೀ೦ಕ್ರನು ತಿರುಗಿ ಊರಿಗೆ ಬಂದಿದ್ದಾನೆ. ಈಗ ಚಿ೦ಕ್ರನ
ರೀತಿಯೇ ಬೇರೆ. ತಾನು ಚೀಂಕ್ರನೆಂದು ಹೇಳಿಕೊಳ್ಳದಿರುತ್ತಿದ್ದರೆ ಅವ
ನ್ಯಾರೋ ಮೇಲು ಜಾತಿಯ ದೊಡ್ಡ ಮನುಷ್ಯನೆಂದು ಆ ಹಳ್ಳಿಯವರೆಲ್ಲ
ಅವನೊಡನೆ ಬೆರೆಯುತ್ತಿದ್ದರೋ ಏನೋ! ಹಾಗಿತ್ತು ಅವನ ನಡೆ ನುಡಿ
ವೇಷ! ಈಗ ಅವನಿಗೆ ಹೆಂಡತಿ, ಎರಡ, ಗಂಡು ಮಕ್ಕಳೂ ಇವೆ. ಹೇರಳ
ಹಣವನ್ನು ಸಂಪಾದಿಸಿಕೊಂಡು ಬಂದಿದ್ದನು. ಊರು ಬಿಟ್ಟವನು
ದೂರದ ಸಂಬಂಧಿಕನೊಬ್ಬನಿದ್ದ ರಂಗೂನಿಗೆ ಅವನೊಡನೆ ಹೋಗಿದ್ದ
ನಂತೆ. ಅಲ್ಲಿಂದು ಕಾಮಗಾರಿಕೆಯಲ್ಲಿದ್ದು ದುಡ್ಡು ಗಂಟುಕಟ್ಟಿ
ಕೊಂಡು ಬಂದಿದ್ದನಂತೆ.

ಊರಿಗೆ ಬಂದ ಚಿಂಕ್ರನು ಅದೇ ತನ್ನ ಒಂದು ಮನೆ ಜಾಗವನ್ನು
ಕೊಂಡುಕೊಂಡ. ದೊಡ್ಡ ಮಹಡಿಯ ಮನೆಯನ್ನು ಕಟ್ಟಿಸಿದ; ಆಸ್ತಿ
ಪಾಸ್ತಿ ಮಾಡಿದ. ಈಗ ಚೀಂಕ್ರನು ಊರಲ್ಲಿ ದೊಡ್ಡ ಮನುಷ್ಯ.
ಅವನ ಹಣ, ಅವನ ಸಹಾಯ, ಮೇಲು ಜಾತಿಯವರಿಗೂ ಬೇಕು; ಆವ
ಕ್ಕೆಲ್ಲಾ ಅವನು ಹತ್ತಿರದವ, ಆದರೆ ಹತ್ತು ಕೂಡಿದಲ್ಲಿ ಅವನು ದೂರ
ದವ! ಅನೇಕರಲ್ಲಾಗುವ ಮದುವೆ ಮುಂಜಿಗಳಿಗೆ ಸಾಲ ಕೊಡಬೇಕು
-----------------------------------
ನಂದಾದೀಪ ೨೩

ಚೀಂಕ್ರಪೂಜಾರಿ, ಊರಲ್ಲಿಯ ವರಾಡ ವಂತಿಗೆಯಲ್ಲಿ ಚೀಂಕ್ರಪೂಜಾ
ರಿಯ ಅಂಕೆ ದೊಡ್ಡದು, ಆದರೆ ಅಂತಹ ಕಾರ್ಯಕಲಾಪಗಳಲ್ಲಿ ಮಾತ್ರ
ಚೀಂಕ್ರಪೂಜಾರಿಯು ದೂರದವ! ಚಪ್ಪರದೊಳಗೆ ತಲೆ ಹಾಕಲಿಕ್ಕೂ
ಅಯೋಗ್ಯ! ಅಷ್ಟೇಕೆ? ಆ ಹಳ್ಳಿಯಲ್ಲಿ ಎಲ್ಲರಿಗಿಂತ ಹೆಚ್ಚು ತೀರ್ವೆ
ತೆರುವ ದೊಡ್ಡ ವರ್ಗದಾರ ಚೀಂಕ್ರಪೂಜಾರಿ; ಆದರೆ ಬ್ರಾಹ್ಮಣ ಪಠೇಲ
ರಲ್ಲಿ ಸರಕಾರ ಹಣ ತೆರಲಿಕ್ಕೆ ಹೋದಾಗ ಅವನು ನಿಂತು ಕಾಯಬೇಕು
ಹೊರಗಿನ ಅಂಗಳದಲ್ಲಿ! ಆದರೆ ಚೀಂಕ್ರನು ಇದನ್ನೆಲ್ಲಾ ಸಹಿಸಿಕೊಂಡನು.
ಊರ ಕಟ್ಟಳೆಯೆಂದು ತಲೆ ಬಗ್ಗಿಸಿದನು. ಸಂದು ಬಂದ ರೂಢಿಯೆಂದು
ಸುಮ್ಮಗಿದ್ದನು.
ಒಂದು ದಿನ ಚೀಂಕ್ರನ ಹೆಂಡತಿಯು ಊರ ಜಾತ್ರೆಯ ಸಂತೆಗೆ
ಬಳೆಯಿಡಿಸಿಕೊಳ್ಳಲು ಹೋಗಿದ್ದಳು. ಗಾಳಿಗೆ ಅವಳ ಸೆರಗು ಹಾರಿತು;
ಅಲ್ಲೆ ಬಳೆಯಿಡಿಸಿಕೊಳ್ಳುತ್ತಿದ್ದ ಮೇಲು ಜಾತಿಯವಳೊಬ್ಬಳ ಮೈಗೆ
ತಾಗಿತು! ಕೂಡಲೆ ಗದ್ದಲವೆದ್ದಿತು. ಮೇಲು ಜಾತಿಯ ಹೆಂಗಸರೆಲ್ಲಾ ಒಟ್ಟಾ
ದರು; ಅವಳನ್ನು ಬೈದು ಹಂಗಿಸಿದರು-'ದುಡ್ಡಿನ ಸೊಕ್ಕು! ಹೆಂಡದ
ಸೊಕ್ಕು!” ಎಂದರು. ಚೀಂಕ್ರನ ಹೆಂಡತಿ ಮಾನವಂತೆ; ರಂಗೂನಿನಲ್ಲಿ
ಗೌರವಸ್ಸರ ಸ್ತ್ರೀಯರೊಂದಿಗೆ ತಿರುಗಿದವಳು. ಈ ಅಸಮಾನವನ್ನು
ಸಹಿಸಲಾರದೆ ನೆಟ್ಟಗೆ ಮನೆಗೆ ಬಂದು ನಡೆದ ವಿಚಾರವನ್ನೆಲ್ಲ ತನ್ನ ಗಂಡ
ನೊಡನೆ ಹೇಳಿ ಗೊಳ್ಳೆಂದು ಅತ್ತು ಬಿಟ್ಟಳು. ನನಗೆ ಇಷ್ಟು ಸಂಪತ್ತಿ
ದ್ದರೂ, ನಾವಿಷ್ಟು ನಿರ್ಮಲವಾಗಿದ್ದರೂ, ನಾಯಿಗಿಂತ ಕೀಳಾದೆವಲ್ಲಾ !'
ಎಂದು ಕಣ್ಣೀರಿಟ್ಟಳು. ಈ ಮಾತು ಚೀಂಕ್ರನ ಎದೆಗೂ ನಾಟಿತು.

ಚೀಂಕ್ರನು ಯೋಚಿಸಿ ಯೋಚಿಸಿ ಇಟ್ಟನು. ಕೊನೆಗೊಂದು ಸಂ
ಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳು
ಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾ
ಭ್ಯಾಸದಲ್ಲಿ ನಿಪುಣರಾಗುತ್ತ ಹೋದರು, ಹಿರಿಯವನಾದ ಸುಂದರನು
ಬಿ. ಎ. ಬಿ. ಎಲ್. ಆಗಿ ಮದ್ರಾಸಿನಲ್ಲಿ ಪ್ರಖ್ಯಾತ ವಕೀಲನೆನಿಸಿಕೊಂಡ.
ಚೀಂಕ್ರನ ಊರಿನ ಹಲವು ಮೇಲು ಜಾತಿಯವರೂ ಅವನಲ್ಲಿಗೆ ಹೋಗಿ
'ಆಪೀಲು ನಂಬ್ರ'ಗಳನ್ನು ಕೊಟ್ಟು ಬರುತ್ತಿದ್ದರು.
----------------------------------------
೨೭ ದೇವಸ್ಥಾನ ಪ್ರವೇಶ

ಚೀಂಕ್ರನ ಕಿರಿಯ ಮಗ ರಾಮುವು ಇಂಗ್ಲೆಂಡಿಗೆ ಹೋಗಿ ಐ. ಸಿ.
ಯಸ್, ಪಾಸಾಗಿ ಬಂದನು. ಮದ್ರಾಸಿನಲ್ಲಿ ತನ್ನ ಸಹಪಾಠಿಯಾಗಿದ್ದ
ಮಿಶನ್ ತರುಣಿಯೊಬ್ಬಳಲ್ಲಿ ಅವನಿಗೆ ಪ್ರೀತಿ ಬಿತ್ತು. ಕೊನೆಗೆ ಅವಳನ್ನು
ಮದುವೆಯಾಗಲೂ ಬೇಕಾಯಿತು. ಪರಿಣಾಮವಾಗಿ ಈಗ ಅವನ ಹೆಸರು
ಆರ್. ಜೋರ್ಜ್ ರೋಬರ್ಟ್ಸ್ ಐ. ಸಿ. ಯಸ್. ಕೆಲವು ಸಮಯ ಮಧುರೆ
ಯಲ್ಲಿ ಕಲೆಕ್ಟರನಾಗಿದ್ದು ತನ್ನೂರಾದ ಚಂದ್ರಪುರಿಗೆ ವರ್ಗವಾಗಿ ಬಂದನು.
ಚಂದ್ರಪುರಿಯಲ್ಲಿ ಮೊದಲ ಸಲ ಬಂದಾಗ ಆ ಕಲೆಕ್ಟರರನ್ನು ಇದಿರು
ಗೊಳ್ಳುವ ಸಂಭ್ರಮವೇನು? ಮಠದಿಂದ ಗಗ್ಗರ ಕೋಲು, ಮಕರ ತೋರಣ,
ಆನೆ, ಬ್ಯಾಂಡು ಮುಂತಾದ ಬಿರುದಾವಳಿಗಳು ಜೋಡುಕಟ್ಟೆಯಲ್ಲಿ
ಎದುರುಗೊಳ್ಳಲು ಸಜ್ಜಾಗಿ ನಿಂತಿದ್ದುವು. ಆಚಾರವಂತರು ವಿಚಾರವಂತರು
ಊರ ಪ್ರಮುಖರು ಸಾಹುಕಾರರು ಎಲ್ಲರೂ ಅಲ್ಲಿ ನೆರೆದಿದ್ದರು.

ಕಲೆಕ್ಟರರು ಬರುವ ಆ ಮೂರು ಗಂಟೆಯ ಸಮಯವಾಯಿತು.
ಎಲ್ಲರೂ ಕುತ್ತಿಗೆ ಎತ್ತಿ ಎತ್ತಿ ದಾರಿನೋಡುತ್ತಿದ್ದರು. ಅಷ್ಟರಲ್ಲಿ ಬಂತೇ
ಬಂತು ನಾಗಯ್ಯ ಶೆಟ್ರ ಜಟ್ಕಾ ಕಂಪೆನಿಯ ದೊಡ್ಡ ಜಟ್ಕ. ಎದುರಲ್ಲಿ
ಕುಳಿತಿದ್ದರು ಕಲೆಕ್ಟರ್ ದೊರೆಗಳು! ದೊರೆಗಳು ಜಟ್ಕದಿಂದ ಇಳಿ
ದರು. ಅಲ್ಲೇ ಸಮೀಪ ತನ್ನ ತಂದೆಯು ಇತ್ತೀಚೆಗೆ ಕೊಂಡುಕೊಂಡಿದ್ದ
ಬಂಗಲೆಗೆ ಎಲ್ಲರನ್ನೂ ಕರೆದುಕೊಂಡು ಸಾಗಿದರು, ಆಚಾರವಂತರೂ
ವಿಚಾರವಂತರೂ ತಾನು ಮುಂದು ತಾನು ಮುಂದು ಎಂದು ನಡೆದೇ ಬಿಟ್ಟರು
ಚೀಂಕ್ರಪೂಜಾರಿಯ ಬಂಗ್ಲೆಗೆ!

ಬಂಗ್ಲೆಯ ಮುಂಭಾಗದಲ್ಲಿ ಅಂದವಾದ ದೊಡ್ಡ ಚಪ್ಪರ, ಅದರಲ್ಲಿ
ದೊಡ್ಡ ಸಭೆಗೂಡಿತು. ಚೀಂಕ್ರ ಮತ್ತು ತಹಶೀಲ್ದಾರರ ನಡುವೆ ಕಲೆ
ಕ್ಟರರು ಸುತ್ತು ತಿರುಗಿ ಸಭಿಕರ ಪರಿಚಯ ಮಾಡಿಕೊಂಡರು. ಅನಂತರ
ಚೀಂಕ್ರನು (ಈಗ ಚೀಂಕ್ರಪ್ಪನವರು!) ತನ್ನ ಕೈಯಿಂದಲೇ ಸಭಿಕರಿಗೆಲ್ಲಾ
ಪನ್ನೀರು ಚಿಮುಕಿಸಿ ತಾಂಬೂಲ ಫಲ ಪುಷ್ಪ ಕೊಟ್ಟು ಉಪಚರಿಸಿದನು.

ನಾಲ್ಕು ತಿಂಗಳು ಕಳೆದುವು. ಮಠದಲ್ಲಿ ದೊಡ್ಡ ರಥೋತ್ಸವ.
ಚಂದ್ರಪುರಿಯಲ್ಲಿ ಅಂತಹ ರಥೋತ್ಸವವಾಗುವುದು ಏಳು ವರ್ಷಕ್ಕೊಮ್ಮೆ.
ಭಾರಿ ಜನ ಕೂಡುವುದು. ಅದೊಂದು ದೊಡ್ಡ ಜಾತ್ರೆ, ನೆಮ್ಮದಿ ಭಂಗ
--------------------------------
ನಂದಾದೀಪ ೨೮

ವಾಗದಂತೆ ನೋಡಿಕೊಳ್ಳುವುದಕ್ಕೆ ಕಲೆಕ್ಟರರು ಬರುವ ಪದ್ಧತಿ ಎಂದ
ಮೇಲೆ ಮಠದಿಂದ ಮುಂಚಿತವಾಗಿ ಆಮಂತ್ರಣ ಹೋಗಿತ್ತು. ಹಿಂದಿನಿಂದ
ನಜರು ಕಾಣಿಕೆ ಒಲಿಪೆಯೂ ಸಾಗಿದ್ದವು. ಬೇಸಿಗೆಯ ರಜೆಗೆಂದು
ಮದ್ರಾಸಿನಿಂದ ವಕೀಲ್ ಸುಂದರನ್‌ರವರೂ ಅವರ ಪತ್ನಿಯ ಬಂದಿ
ದ್ದರು. ಎಲ್ಲರೂ ಕಲೆಕ್ಟರರ (ಚೀಂಕ್ರಪೂಜಾರಿಯರ) ಬಂಗ್ಲೆಯಲ್ಲಿದ್ದರು.
ಚೀಂಕ್ರಪ್ಪನವರು ರಥೋತ್ಸವ ನೋಡಲಿಕ್ಕೆ ತನ್ನ ಮಗಂದಿರಿಬ್ಬರೊಡನೆ
ಹೊರಟರು. ಹೆಂಗಸರು ಹೊರಟರು, ಮಕ್ಕಳು ಹೊರಟರು, ಎಲ್ಲರೂ
ಹೊರಟರು! ಕಲೆಕ್ಟರರ ಮನೆಯ ಹೆಂಗಸರೆಂದಾದ ಮೇಲೆ ಅಲ್ಲಿ ಅವರಿಗೆ
ಸನ್ಮಾನವೇನು! ರಥದ ಎದುರಲ್ಲಿ ಎಲ್ಲರಿಗೆ ಮುಂದಾಗಿ ಅವರಿಗೆ ನಿಲ್ಲಲು
ಮಠದಿಂದ ಜಾಗಮಾಡಿಕೊಡುವ ಸಂಭ್ರಮವೇನು! ಮಠದ ಆಚಾರವಂತ
ರಿಬ್ಬರು 'ಅಮ್ಮಾ, ಅಮ್ಮಾ' ಎಂದು ಅವರ ಬಳಿಯಲ್ಲೇ ನಿಂತು ಎಲ್ಲವನ್ನೂ
ವಿವರಿಸಿ ಹೇಳುವ ರೀತಿಯೇನು! ರಥವು ಸುತ್ತು ಬಂದು ಗುತ್ತಿನಲ್ಲಿ ನಿಂತಿತು.
ಬಲಿಮೂರ್ತಿ ಒಳಗೆ ಹೋಯಿತು, ಆಗ 'ನಾವೂ ಒಳಗೆ ಹೋಗಿ ನೋ
ಡೋಣವೆ?' ಎಂದಳು ಕಲೆಕ್ಟರರ ಪತ್ನಿ. 'ಅದಕ್ಕೇನು? ಮೊನ್ನೆ ನನಗೆ ಎಲ್ಲ
ತೋರಿಸಿದ್ದರು, ನಾನು ಹೋಗಿ ನೋಡಿದ್ದೆ; ಅಲ್ಲೆಲ್ಲ ಬಹಳ ಚಂದ ಉಂಟು.
ಬಾ,' ಎಂದು ಮುಂದಾದರು. ತಂದೆಯನ್ನೂ ತಮ್ಮ ನನ್ನೂ ಬನ್ನಿ ಯೆಂದರು.
ಅಕ್ಕಾ ಬನ್ನಿ, ಅತ್ತೆ ಬನ್ನಿ, ಎಲ್ಲಾ ಬನ್ನಿ! ಎಂದು ತನ್ನೊಡನಿದ್ದ ಹೆಂಗಸರು
ಮಕ್ಕಳನ್ನೆಲ್ಲ ಕರೆದುಕೊಂಡು ಕಲೆಕ್ಟರರ ಪತ್ನಿಯು ಗಂಡಸರನ್ನು ಹಿಂಬಾ
ಲಿಸಿದಳು, ಗಲಭೆಯಿಲ್ಲದೆ ಆಯಿತು ದೇವಸ್ಥಾನಪ್ರವೇಶ!
=========================================
ದೊಡ್ಡವರ ವಜ್ರ
"ಹಾಕಿದುದು ಅರಮನೆಯ ಅಡಿಗಟ್ಟು; ಕಟ್ಟಿದುದು ಗುಡಿಸಲು!
ಹೀಗೇಕಾಯಿತು? ವಿಧಾತನ ಕ್ರೂರತನವೊ, ತಂದೆಯ ಬಡತನವೊ?
ವಿಧಿಯನ್ನ ಲೇ? ವಿಧಿಯು ಉದಾರಿಯು; ಸೃಷ್ಟಿಯಲ್ಲಿ ಮೈ ಮರುಳುಗೊಳಿ
ಸುತ್ತ, ಬಗೆಗೆ ಆನಂದ ಬೀರುತ್ತ, ಸೊಬಗಿನ ಆಗರಗಳಾಗಿ ಇರುವವುಗಳ
ಸಾರವನ್ನೆಲ್ಲ ಹೀರಿ ನನ್ನನ್ನು ರೂಪಿಸಿರುವನು ಆ ವಿಧಿಯು! ಬರೇ ಮೂವ
ತೈದು ರೂಪಾಯಿಯ ಗುಮಾಸ್ತೆಯ ಪಾಣಿಗ್ರಹಣಕ್ಕಾಗಿದ್ದರೆ, ವಿವಿಧ
ವಸ್ತುಗಳ ಸೌಂದರ್ಯಸಾರದ ಎರಕದಿಂದ ಈ ಕೈಯನ್ನು ನಿರ್ಮಿಸು
ತಿದ್ದನೆ? ಮುಸುರೆ ತಿಕ್ಕುವ ಸೆಗಣಿಸಾರಿಸುವ ನೀರುಸೇದುವ ಬಟ್ಟೆಯೊಗೆ
ಯುವ ಬೆರಣಿ ತಟ್ಟುವ ಕೈಗಳೇ ಇವು? ಬೆಂಕಿಯೂದಿಯೂದಿ ಹೊಗೆತುಂಬಿ
ಕೆಂಪೇರಿ ಉರಿಗೊಳ್ಳುವುದಕ್ಕಾಗಿ ಈ ಕಣ್ಣುಗಳೇ? ಮನೆಗೆಲಸದಲ್ಲಿ ತೊಳಲಿ
ಬಳಲಿ ಕಂದಿ ಕುಂದುವುದಕ್ಕಾಗಿ ಈ ದೇಹವನ್ನು ತಿದ್ದಿ ಮಿರುಗುಗೊಟ್ಟನೆ
ಆ ವಿಧಿಯು? ಇಲ್ಲ, ಇಲ್ಲ; ಹಾಗಾದರೆ ನನ್ನನ್ನು ದಿಕ್ಕು ತಪ್ಪಿಸಿ ಕೈಹಿಡಿಸಿ
ದುದು ಯಾವುದು? ತಂದೆಯ ಬಡತನವೇ? ಹೌದು, ತಂದೆಯ ಬಡತನ!”
ಇದೀಗ ರಾಮಿಗೆ ಹಲವು ವೇಳೆ ಹೊಳೆದ ವಿಚಾರ.

ರಾಮಿಯು ರಾಮರಾಯನ ಹೆಂಡತಿ; ಆತನು ಚಂದ್ರಪುರ ಮುನ್ಸಿಫ
ಕೋರ್ಟಿನ ನೌಕರ; ಅವರ ಮನೆಯು ಆ ಪಟ್ಟಣದ 'ಅಪ್ರಾಮುಖ್ಯ'
ಬೀದಿಯೊಂದರಲ್ಲಿ. ಆ ಬೀದಿಯಲ್ಲಿ ಮನೆಗಳಿಗೆ ಕಡಿಮೆಯಿದ್ದಿಲ್ಲ; ಜನ
ಸಂಚಾರಕ್ಕೆ ಬಿಡುವಿದ್ದಿಲ್ಲ. 'ಮೋಟರ್ ಬಸ್ಸು'ಗಳಿಗೂ ಅವುಗಳ ಸಹೋ
ದರ ವರ್ಗದ 'ಕಾರು ಲೋರಿ'ಗಳಿಗೂ ಇನ್ನು ಇವುಗಳ ವ್ಯವಸಾಯ
ಬಂಧುಗಳಾದ ಸೈಕಲ್' ಕುದುರೆಗಾಡಿ ಮುಂತಾದ ಬಹುತರದ ವಾಹನ
ಗಳಿಗೂ ಸಂಚಾರಕ್ಕೆ ನಿಶ್ಚಿತವಾದ ಹಾದಿಯು ಬೇರೆ ಇದ್ದರೂ ಅವುಗಳ
ನಿಲ್ದಾಣಕ್ಕೆ ರಾಮರಾಯನ ಬೀದಿಯೇ ಹತ್ತಿರದ ಹಾದಿ; ಆ ಅಡ್ಡದಾರಿ
ಯಲ್ಲಿಯೇ ಅವುಗಳ ಸವಾರಿ; ಹೀಗಿದ್ದೂ ಅದು 'ಅಪ್ರಾಮುಖ್ಯ' ಬೀದಿಯೆ?
--------------------------------------
ನಂದದೀಪ ೩೦

ಎಂದು ಆಕ್ಷೇಪಿಸಬಹುದು, ಆದರೆ ಯಾರೇನು ಮಾಡಲಿ? ಚಂದ್ರಪುರದ
ಮುನಿಸಿಪಾಲಿಟಿಯ ಬೀದಿಯ ಪಟ್ಟಿಯಲ್ಲಿ ಅದು 'ಅಪ್ರಾಮುಖ್ಯ' ಬೀದಿಗಳ
ಸಾಲಿನಲ್ಲಿ ಬಿದ್ದು ಹೋಗಿದೆ! ಹಾಗೆ ಬಿದ್ದು ಹೋದುದನ್ನು ತಿದ್ದಲಾಗುವುದೆ?
ಆದುದರಿಂದ ಮುನಿಸಿಪಾಲಿಟಿಯ ತುಂಬಿದ ನೀರಿನ 'ಲೋರಿ'ಯು
ಆ 'ಅಪ್ರಾಮುಖ್ಯ' ಬೀದಿಗಾಗಿ ಬಂದು ತನ್ನನ್ನು ಹಗುರಮಾಡಿಕೊಳ್ಳ
ಲಾರದು. ಆದರೂ ತಾನು ಬರಿದಾಗಿ ಹಿಂತಿರುಗುವುದಕ್ಕೆ ಅದೇ ಹತ್ತಿರದ
ದಾರಿ ಎಂಬುದನ್ನು ಅದೂ ಮರೆತಿದ್ದಿಲ್ಲ,

ಇಂತಹ ದೂಳೀಗಲ್ಲಿಯಲ್ಲಿ ರಾಮ ರಾಮಿಯರ ಮೂರು ರೂಪಾಯಿ
ಬಾಡಿಗೆಯ ಮನೆ, ಅದರಲ್ಲಿರುವುದು ಎರಡೇ ಕೋಣೆ-ಒಂದು ಅಡಿ
ಗೆಗೆ; ಮತ್ತೊಂದು ಕಾಲಕ್ಷೇಪಕ್ಕೆ; ಹೊಗೆಯದೊಂದು ದೂಳಿಯದೊಂದು
ಎಂದರೇ ಇದ್ದದ್ದು ಇದ್ದಂತೆ ಹೇಳಿದಂತಾಗುವುದು. ಆ ಎರಡನೆಯ
ಕೋಣೆಯ ಬಾಗಿಲ ಮುಂದಿನ ಎರಡು ಮೆಟ್ಟಿಲುಗಳನ್ನಿಳಿದರೆ ಮೂರನೆಯ
ಹೆಜ್ಜೆಯನ್ನಿಡಬೇಕು ಆ ಬೀದಿಯಲ್ಲಿಯೆ. ಬಾಗಿಲ ಎಡಕ್ಕೆ ಗೋಡೆಯಲ್ಲಿ
ರುವ ಕಿಟಕಿಯಿಂದ ನೋಡಿದರೆ ಕಾಣುವುದೂ ಆ ಬೀದಿಯೆ, ಆ ಹಾದಿ
ಯಲ್ಲಿ ಬಗೆಬಗೆಯ ವಾಹನಗಳನ್ನೇರಿ ಸಂಚರಿಸುವ ಶ್ರೀಮಂತ ಸ್ತ್ರೀಯರ
ವಿಲಾಸವ ಭವಗಳನ್ನು ಕಂಡಾಗಲೆಲ್ಲ ರಾಮಿಯು ತನ್ನ ಪಾಡು ಹೀಗೇ
ಕಾಯಿತು? ಎಂದು ನಿಟ್ಟುಸಿರುಗರೆಯುತ್ತಿದ್ದಳು.

ರಾಮಿಯು ಸುಂದರಿ; ಅವಳಂತಹ ಚಲುವೆಯು ನೋಡಸಿಗುವುದು
ದುರ್ಲಭ; ರೂಪವತಿಯರು ಎಂದೆನಿಸಿಕೊಂಡವರ ಅಂದವೆಲ್ಲಿದೆಯೆಂದು
ಪರಿಶೀಲಿಸಿದರೆ ಒಬ್ಬಳದು ಮೋರೆಯಲ್ಲಿ, ಮತ್ತೊಬ್ಬಳದು ಮೈಗಟ್ಟಿನ
ಸೌಷ್ಠವದಲ್ಲಿ ಇನ್ನೊಬ್ಬಳದು ಬಿಳಿಗೆಂಪಿನ ಮೈ ಬಣ್ಣದಲ್ಲಿ, ಮಗುದೊಬ್ಬ
ಳದು ಲಜ್ಜೆಯೇ ಬಲ್ಲ ಬೆಡಗಿನಲ್ಲಿ! ಇನ್ನು ಮುಗುಳ್ನಗುವಿನ ಕಿರುಬಾಯಿ
ಯಿಂದ, ಮಿಂಚುಗಣ್ಣಿನಿಂದ ಮುಂಗುರುಳ ಹಣೆಯಿಂದ, ನುಣ್ಗಲ್ಲದಿಂದ
ಸುಳಿಗೆನ್ನೆಯ ಮಿರುಗಿಂದ, ಇವುಗಳೊಂದೊಂದರಿಂದಲೇ ಸುಂದರಿಯರೆಂದೆ
ನಿಸಿಕೊಂಡವರೂ ಇರುವರು. ತೆರೆಯಂತ ಬಿದ್ದೇಳುವ ಕೊಂಕುಗೂದಲ
ಸಿರಿಯಿಂದಾಗಲಿ, ಬಡನಡುವಿಂದಾಗಲಿ, ಬೆಡಗಿನ ನಡೆಯಿಂದಾಗಲಿ,
ಅಲ್ಲವೇ ದುಂಡುದುಂಡಾದ ಕೈಕಾಲುಗಳಿಂದಲೋ, ಸಿಡಿದರೆ ಕೆನ್ನೀರು
------------------------------------------
೩೧ ದೊಡ್ಡವರ ವಜ್ರ

ಮಿಡಿಯಬಹುದೆಂಬ ಭ್ರಮೆಗೊಳಿಸುವ ತುಂಬಿದ ತನುಕಾಂತಿಯಿಂದಲೋ,
ಕೊಳಲ ಮೆಲುನುಡಿಯಿಂಪಿನಿಂದಲೋ, ಓರೆನೋಟಕ್ಕೆ ಕಳೆಯೇರಿಸುವ
ಹುಬ್ಬಿನ ಹಬ್ಬುಗೆಯಿಂದಲೋ, ಅವುಗಳ ನಡುವಿಂದ ಸರಕ್ಕನೆ ಜಗುಳ್ದು
ಜಗ್ಗನೆದ್ದು ನೇರಾಗಿ ಮುಂದರಿದು ನಸುವರಳಿದ ತೆನಮೂಗಿಂದಲೋ,
ಮನಮೋಹಿನಿಯರಾದವರು ಇರುವರು. ಹೀಗೆ ಹಲವರು ಸೌಂದರ್ಯದ
ಒಂದೊಂದು ಲಕ್ಷಣದಿಂದಲೆ ಚಲುವೆಯರಾಗಿದ್ದರೆ ನಮ್ಮ ರಾಮಿಯು
ಆವೆಲ್ಲವುಗಳ ಯೋಗದಿಂದಾದ ಸರ್ವಾಂಗ ಸುಂದರಿಯು, ಅವಳಲ್ಲಿ ಕೆತ್ತ
ಬೇಕಾದುದಾಗಲಿ ಮೆತ್ತುವಂತಹದಾಗಲಿ ಕೀಸಿಪೂಸಿಯೊಪ್ಪೆಗೊಡತಕ್ಕು
ದಾಗಲಿ ಯಾವುದೂ ಉಳಿದುಹೋಗಿದ್ದಿಲ್ಲ: ಅವಳು ಚಲುವಿನ ರಾಣಿ.
ಹಾಗೆಂದು ಅವಳಿಗೆ ತಿಳಿದಿತ್ತು. ಮಾತ್ರವಲ್ಲ, ಚಂದ್ರಪುರದ ಕನ್ಯಾಮಠ
(ಕನೈಂಟ್) ಶಾಲೆಯಲ್ಲಿ ಆರು ವರುಷ ಓದಿದ್ದುದರಿಂದ ಮೃದುಮಧುರವಾಗಿ
ಇಂಗ್ಲೀಷು ಮಾತಾಡಲು ಅವಳು ಬೆದರುತ್ತಿದ್ದಿಲ್ಲ. ಅದು ಕಾರಣ ಎಂತಹ
ಸಿರಿವಂತನಿರಲಿ, ಕುಲವಂತನಿರಲಿ, ಪದವೀಧರನಿರಲಿ, ತಾನು ಆತನ ಮಡದಿ
ಯಾಗಿ ನಡೆಯಲು ನಡುಗಬೇಕಾದ್ದಿಲ್ಲವೆಂದೂ ಅವಳಿಗೆ ನಿಶ್ಚಯವಿತ್ತು.

ತನ್ನ ತಂದೆಯು ಧನಿಕನಿರುತ್ತಿದ್ದರೆ, ತನಗಾಗಿ ಹತ್ತಾರು ಸಾವಿರ
ರೂಪಾಯಿಗಳನ್ನು ವರದಕ್ಷಿಣೆಯಾಗಿ ಕೊಡಲು ಸಮರ್ಥನಿರುತ್ತಿದ್ದರೆ,
ತಾನಿಂದು ಸುಂದರೋದ್ಯಾನದ ನಡುವ ಮಂಟಪದಂತೂಪ್ಪುವ ಉಪ್ಪರಿ
ಗೆಯ ಮನೆಯಲ್ಲಿ ವಿವಿಧ ಚಿತ್ರಪಠಗಳಿಂದಲಂಕೃತವಾದ ಕಡೆಗಟ್ಟಿನ
ಮೇಲೆ, ಎದುರು ಪುಪ್ಪ ಪಾತ್ರಗಳಿಂದ ಸಿಂಗರಿಸಿದ ದುಂಡು ಮೇಜನ್ನಿಟ್ಟು,
ಮೆತ್ತನೆಯ ಸುಂದರಾಸನದಲ್ಲೊರಗಿ, ಮಿರುಮಿರುಗಿ ಮರೆಯುತ್ತಿದ್ದನಲ್ಲದೆ,
ಈ ದೂಳಿನ ಕೋಣೆಯ ದೂಳೊರಸಾಗಿ ಹೊರಳಾಡುತ್ತಿದ್ದೆನೆ? ಎಂಬ
ಯೋಚನೆಯು ಕಿಟಕಿಯಿಂದ ರಾಮಿಯು ಬೀದಿಯನ್ನು ನೋಡಿದಾಗ
ಹಲವು ಸಲ ಹೊಳೆಯುತ್ತಿತ್ತು. ಏಕೆಂದರೆ, ಅವಳ ಆ ಕನ್ಯಾಮಠದ ಗೆಳತಿ
ಯರಲ್ಲನೇಕರು ಅಂದದ ಮೋಟಾ‌ಕಾರಿನ ಮೆದುವಾಸಿನಲ್ಲಿ ಕುಳಿತು ನೆಗ್ಗಿ
ಜಗ್ಗಿ ತಲೆಯನ್ನೊಲೆದೊಲೆದು, ಮೈಯನ್ನಲುಗಿಸಿ, ಕುಲುಕಿಸಿ, ಕೊರಳ
ಹಾರಗಳನ್ನು ಯ್ಯಲೆಯಾಡಿಸಿ, ಸೀರೆಯ ಸೆರಗಿಂದ ಗಾಳಿಪಟವಾಡಿಸಿ,
ವಿಲಾಸದ ಬಾಳಿನ ಸಿರಿಯನ್ನು ಮರೆಸುತ್ತ, ಅದೇ ಬೀದಿಯ ಹಾದಿಯಾಗಿ
-------------------------------------------
ನಂದಾದೀಪ ೩೨

ಹಾದುಹೋಗುತ್ತಿದ್ದರು, ಅವರು ಕಿಟಕಿಯ ಎದುರಲ್ಲಿ ಮಿಂಚಿ ಮುಂದೆ
ಸಂಚರಿಸಿದರೂ ರಾಮಿಗೆ ಅವರ ಗುರುತಾಗದೆ ಇರುತ್ತಿದ್ದಿಲ್ಲ. ಆಗ
ರಾಮಿಯಲ್ಲಿ ತಾನೂ ಹಾಗಾಗಿರುತ್ತಿದ್ದರೆ ಎಂಬೊಂದು ವ್ಯಾಕುಲವು ಬಗೆ
ಯಲ್ಲಿ ಮೂಡಿ ಕ್ಷಣದಲ್ಲಿ ಬಾಡಿ ನಿಟ್ಟುಸಿರೊಡನೆ ಇಳಿದು ಕಂಬನಿಯೊಡನೆ
ಅಳಿದು ಹೋಗುತ್ತಿತ್ತು.

ಕುಲವೆಣ್ಣಾದ ರಾಮಿಯು ಬೆಲೆವೆಣ್ಣಿನಂತೆ ಹೀಗೆಲ್ಲ ಯೋಚಿಸ
ಬಹುದೇ ಎಂದು ಆಕ್ಷೇಪಿಸುವಿರೇನು? ರಾಮಿಯ ಕನಸು ನೆನಸುಗಳೆಲ್ಲ
ನಿರ್ದೋಷವಾದುವು. ಅವಳಿಗೆ ರಾಮರಾಯನಲ್ಲಿ ಅಸಂತೃಪ್ತಿಯಿದ್ದಿಲ್ಲ;
ಅವಳ 'ಇದ್ದರೆ' ಗಳೆಲ್ಲ ರಾಮರಾಯನ ಪತ್ನಿಯಾಗಿದ್ದುಕೊಂಡೇ ಅನು
ಭವಕ್ಕೆ ಬಂದಿದ್ದರೆ ಎಂದಲ್ಲದೆ ಬೇರೆ ಬಗೆಯಲ್ಲಲ್ಲ. ರಾಮರಾಯನಲ್ಲಿ
ಯೌವನವಿದೆ, ರೂಪವಿದೆ, ಪ್ರೇಮವಿದೆ, ಬುದ್ದಿಯಿದೆ. ಅಂತಹ ಪತಿ
ಯಿಂದೊಡಗೂಡಿದ ತನಗೆ ಸೊಬಗಿನ ಜೀವನದ ಸೊಗಸೂ ದೊರಕಿದ್ದರೆ,
ಎಂಬುದೇ ಅವಳ 'ರೆ' ಯ ರಹಸ್ಯ. ಚುಟುಕಿನಿಂದ ಹೇಳಲೆ? ತಾನೂ
ಶ್ರೀಮಂತಳಾಗಿ, ಶ್ರೀಮಂತರ ಆಟ ಕೂಟ ಆಗುಹೋಗುಗಳಲ್ಲಿ ಸೇರಿ,
ಬೆರೆದು ಮೆರೆದು, ಸ್ತ್ರೀಪುರುಷರೆನ್ನದೆಲ್ಲರನ್ನೂ ದೂರದಿಂದಲೇ ತನ್ನ
ರೂಪಧನದ ಮಿರುಗಿಂದ ಬೆರಗುಗೊಳಿಸಿ, ಆ ಅನುಭವದಿಂದ ಉದ್ಭವಿ
ಸುವ ಅದೊಂದಾನಂದವನ್ನು ಹೊಂದಬೇಕೆನ್ನುವ ಹಂಬಲೊಂದು ಲಗ್ನ
ವಾದ ಮೇಲೆಯೂ ರಾಮಿಯನ್ನು ಬೆಂಬಿಡದೆ ಹಿಂಬಾಲಿಸಿ ಬಂದಿತ್ತು. ಆ
ಆಶಾಪಾಶದ ಉರುಲಿಂದ ಕೊರಳನ್ನು ತಪ್ಪಿಸಿಕೊಳ್ಳಲು ಅವಳಿಂದಾಗಿದ್ದಿಲ್ಲ:
ಆ ತೃಷೆಯನ್ನೊಮ್ಮೆ ಮನದಣಿಯೆ ನಿವಾರಿಸಿಕೊಳ್ಳುವ ಅನುಕೂಲವೂ
ದೊರೆತಿದ್ದಿಲ್ಲ; ಇಷ್ಟೆ ರಾಮಿಯ ಅವ್ಯವಸ್ಥಿತ ಮನಸ್ಸಿನ ರಹಸ್ಯ. ರಾಮ
ರಾಯನಿಗೆ ರಾಮಿಯ ಮನದೊಲವು ತಿಳಿದಿತ್ತು. ಅದಕ್ಕಾಗಿ ಅವನು
ಕೃತ್ರಿಮವಾದರೂ, ಪಟ್ಟೆಯ ಬಟ್ಟೆ ಯಂತಿರುವ ಹೊಳಪಿನ ಉಡುಗೆಗಳನ್ನೇ
ಅವಳಿಗೆ ತಂದು ಕೊಡುತ್ತಿದ್ದ, ಚಿನ್ನದೊಡವೆಗಳ ನಡುವೆ ಮಿರುಗು
ಗೊಟ್ಟವುಗಳನ್ನೂ ಬೆರಕೆ ಹಾಕುತ್ತಿದ್ದ. ತಿಂಗಳಿಗೆರಡು-ಮೂರು
ಸಲವಾದರೂ ನಾಟಕಗೃಹಕ್ಕೋ ಸಿನಮಾ ಮಂದಿರಕ್ಕೂ ಅವಳನ್ನು
ಕರೆದುಕೊಂಡು ಹೋಗುವುದಿತ್ತು. ಆದರೆ ಇಂತಹ ವಿನೋದ ಗೃಹಗಳಲ್ಲಿ
-----------------------------------
೩೩ ದೊಡ್ಡವರ ವಜ್ರ

ಸೇರುವ ಸಿರಿವಂತರ ಸಿಂಗಾರಗಳನ್ನು ಕಂಡು ರಾಮಿಯು ಒಮ್ಮೊಮ್ಮೆ
ಬೆಪ್ಪಾಗಿ ಅವರನ್ನೇ ದಿಟ್ಟಿಸುತ್ತ, ನಿಟ್ಟಿ ಸಿರುಗರೆಯುತ್ತ ಬಗೆ ಬಂದಂತೆ
ಯೋಚಿಸುತ್ತ, ಕುಳಿತುಬಿಡುತ್ತಿದ್ದಳು. ಒಮ್ಮೊಮ್ಮೆ ಅಲ್ಲಿ ನೆರೆದಿದ್ದ ಸ್ತ್ರೀ
ಲೋಕವು ತನ್ನನ್ನೆ ತಿರುತಿರುಗಿ ನೋಡಿ ಬೆರಗುಗೊಳ್ಳುತ್ತಿದೆ ಎಂದು
ಅವಳಿಗೆ ಬೋಧೆಯಾದರೆ, ತಾನಿನ್ನೂ ಚೆಲುವಿನ ರಾಣಿಯಾಗಿಯೇ
ಇರುವೆನೆಂದು ಹಿರಿಹಿಗ್ಗುತ್ತಿದ್ದಳು. ಅವಳ ಅಂದಿನ ಆನಂದಕ್ಕೆ ಹಿಂದು
ಮಂದಿರುತ್ತಿದ್ದಿಲ್ಲ.
* * * *
ಚಂದ್ರಪುರದ ಮುನ್ನಿಫರಲ್ಲಿ ಮದುವೆಯ ಗದ್ದಲವೆದ್ದಿದೆ. ಆ
ಮುನ್ನಿಫರಿಗಿರುವದು ಒಂದೇ ಒಂದು ಮಗಳು ಇದೀಗ ಆ ಮಗಳ
ಮದುವೆ. ಅವಳನ್ನು ಧಾರೆಯೆರೆದು ಕೊಡುವುದು ರಂಗಪುರದ ಜಡ್ಜರ
ಮಗನಿಗೆ, ಅವನೀಗ ತಾನೆ ಐ, ಸಿ, ಯಸ್, ಪರೀಕ್ಷೆಗೊಟ್ಟು, ಇಂಗ್ಲಾಂಡಿ
ನಿಂದ ಮರಳಿರುವನು. ಅವನು ಅಲ್ಲಿಂದೊಬ್ಬಳು ಬಿಳಿಗುವರಿಯ ಕರಹಿಡಿದು
ಕರೆತಾರದೆ, ತನ್ನವರಿಗೆಲ್ಲ ಕರಕರೆಗೊಳಿಸದೆ, ಊರು ಸೇರಿದುದು ನಮ್ಮ
ಮುನ್ಸಿಫಪುತ್ರಿಯ ಪುಣ್ಯವೆಂದು ಕೆಲವರನ್ನುತ್ತಿದ್ದರು. 'ಇಂದಿಲ್ಲ
ದಿದ್ದರೆ ಮುಂದಾದರೂ ಎಂದಾದರೊಂದು ದಿನ ಗೌರಾಂಗಿಯೊಬ್ಬಳು
ಅವನ ಅಲ್ಲಿಯ ಅರಸಿಯೆಂದು ಇಲ್ಲಿಗೂ ಅರಸುತ್ತ ಬಂದು ಐ. ಸೀ. ಯಸ್.
(I see yes! ಹೌದು! ಹುಡುಕಿ ಹಿಡಿದೆ!) ಎನ್ನುತ್ತ ಕಿರಿಚಿ, ತನ್ನ
ಅರಸಿತನವನ್ನು ಮೆರೆಸಿ, ಅವನ ಮೋರೆಗೆ ಮಸಿಯೆರಚಿ, ಈ ಮದುವೆಯ
ಗದ್ದಲಕ್ಕಿಂತಲೂ ಮಿಗಿಲಾದ ಸುದ್ದಿಯ ಗದ್ದಲವನ್ನು ಎಬ್ಬಿಸದಿದ್ದರೆ!'
ಎಂಬ ಮುನ್ಮೂತಿನ ಗುಜುಗುಜೂ ಇತ್ತು. ಅಂತೂ ಪ್ರಕೃತದ ಗದ್ದಲವು
ಮದುವೆಯದೇ, ಮುನ್ನಿಫರ ಮನೆಯ ಮದುವೆಯೆಂದ ಮೇಲೆ ಅದನ್ನು
ಬಣ್ಣಿಸತೊಡಗಿದರೆ ಅದೇ ಒಂದು ಪುರಾಣದುದ್ದವಾಗಿ ವಾಚಕರೋಚಕ
ವಾಗಬಹುದು, ಅದುಕಾರಣ ಚುಟುಕಿಂದ ದಿಗ್ಧರ್ಶನ ಮಾತ್ರ--
ಲಕ್ಕಯ್ಯನ ಚಪ್ಪರ, ಮುಕ್ಕಯ್ಯನ ಮಂಟಪ, ಚಂದಯ್ಯನ ವಾಲಗ;
ಮುಕ್ಕಣ್ಣನ ತಿಂಡಿ, ಸುಬ್ಬಣ್ಣನ ಅಡಿಗೆ, ಶೇಷಣ್ಣನ ಹೋಳಿಗೆ 'ವಿಮಾನ್
ಎಂಡ್ ಕೋ'ರವರು ಕಾರುಗಳಿಗೆ, 'ಸೂರ್ಯ ಎಂಡ್ ಕೋ'ರವರು ದೀಪ
------------------------------------------
ನಂದಾದೀಪ ೩೪
ಗಳಿಗೆ, ಇನ್ನು ಬಾಣ ಬಿರುಸುಗಳ ಜಳಕಕ್ಕೆ 'ದಿ ಶೂಟಿಂಗ್ ಸ್ಟಾರ್
ಎಂಡ್ ಕೋ'ರವರು! ಎಂದ ಮಾತ್ರಕ್ಕೆ ಆ ಜಿಲ್ಲೆ ಯವರಿರಲಿ, ಹೊರಗಿ
ನವರೂ ಈ ವಿವಾಹದ ವೈಭವದ ಬಗೆಯನ್ನು ತನ್ನ ಬಗೆಯ ಹಲಗೆಯಲ್ಲಿ
ಚಿತ್ರಿಸಿಕೊಳ್ಳಬಹುದು.

ಈ ಲಗ್ನ ಕಾರ್ಯನಿರ್ವಾಹಕ ಮಂಡಳಿಯು ಸ್ವಯಂಪ್ರೇರಿತ
ವಾಗಿಯೇ ನಿರ್ಮಿತವಾದುದು, 'ಸೇವಕನಿಂದೇನಾದರೂ ಆಗಬೇಕೆಂದಿದ್ದರೆ
ಅಪ್ಪಣೆಯಾಗಲಿ!' ಎಂದು ದೊಡ್ಡ ದೊಡ್ಡವರ ಬಾಯಿಯಿಂದಲೂ ಬಾಯಿ
ಯುಪಚಾರಕ್ಕಾಗಿಯಾದರೂ ಮುತ್ತಿನಂತಹ ಮಾತುಗಳು ಉದುರುತ್ತಿ
ದ್ದುವು. 'ಆಗಬೇಕಾದುದೇನೂ ಇಲ್ಲ, ತಾವೆಲ್ಲ ಬಂದು ಚಂದಗಾಣಿಸಿ
ಗೊಟ್ಟರೆ ಸರಿ, ಎಂದು ಬಾಯಿಯುಪಚಾರಕ್ಕಾಗಿಯೆ 'ಖಾವಂದ'ರೆಂದರೂ
'ಅಮ್ಮ ನವರು' (ಮುನ್ಸಿಫರ ಪತ್ನಿ) ಜನನೋಡಿ, ಪತಿಯ ಕಣ್ಣು ನೋಡಿ,
ಏನಾದರೊಂದು ಆಡಿಬಿಡುತ್ತಿದ್ದರು. ಅದು ನಿರಾಯಾಸವಾಗಿ ನೆರವೇರಿಯೆ
ಹೋಗುತ್ತಿತ್ತು.

ಚಂದ್ರಪುರದ ಅರುವತ್ತನಾಲ್ಕು ವಕೀಲರಲ್ಲಿ ಮೂರೂ ಮುಕ್ಕಾಲುವೀಸ
ಈ ಮದುವೆ ಮುಗಿಯುವ ತನಕ ಬೇಕುಬೇಕೆಂದಾದರೂ ಕಕ್ಷಿಗಾರರಿಗೆ ತಡ
ವಾಗಿಯೆ ಕಾಣಿಸಿಕೊಳ್ಳುತ್ತಿದ್ದರು, 'ನೋಡಿ, ನಮ್ಮ ಮುನ್ಸಿಫರಲ್ಲಿ ಭಾರೀ
ಗೌಜಿಯ ಮದುವೆಯೆದ್ದಿದೆ, ಅಲ್ಲಿ ನಾನಿಲ್ಲದೆ ಯಾವುದೂ ನಡೆಯುವುದಿಲ್ಲ;
ಮುನ್ಸಿಫರು ಏಳಲಿಕ್ಕೆ ಬಿಡುವುದಿಲ್ಲ ನನ್ನನ್ನು ತನ್ಮಧ್ಯೆ ಮರ್ಯಾದೆ
ಗಾಗಿ ಒಂದು ಹೊರೆಯ ಶಾಸ್ತ್ರವಾಗಬೇಕಾಗಿದೆ' ಎಂದಿಷ್ಟಾದರೂ
ವಕೀಲರ ಬಾಯಿಯಿಂದ ಬಾರದೆ ಹೋದರೆ ಕಕ್ಷಿಗಾರರು ಕೂಡಲೆ ತೀರ್ಪು
ಬರೆದೇ ಬಿಡುತ್ತಿದ್ದರು. ಈ ವಕೀಲರ ಕಕ್ಷಿಯಲ್ಲಿ ಮುನ್ಸಿಫರು ಇಲ್ಲ'
ಎಂದು! ವಕೀಲರಿಗೆ ಇಷ್ಟು ಹೇಳುವುದರಿಂದ ಕಷ್ಟವೂ ಇಲ್ಲ: ನಷ್ಟವೂ
ಇಲ್ಲ. ಬದಲಾಗಿ ಕಕ್ಷಿಗಾರರ ದೃಷ್ಟಿಯಲ್ಲಿ ಅವರ ಇಷ್ಟ ಸಿದ್ಧಿಗೊಳಿಸಲಾಪ
ಪ್ರತಿಷ್ಠೆಯುಳ್ಳ ಭಾ ರೀ ಷ್ಟ ರ್ (ಭಾರಿ ಇಷ್ಟರು-- ಮುನ್ಸಿಫರಿಗೆ)
ಎಂದಾಗಿ ಹೋಗುತ್ತಿದ್ದರು. ಹಾಗಾಗುವುದು ಯಾರಿಗೆ ಬೇಡವೆನಿಸೀತು?
ಮಾತ್ರವಲ್ಲ, ಹಿಂದಿನಿಂದಲೇ ಬರುತಿತ್ತು ಹೊರೆಗಳ ಸಾಲೇ ಸಾಲು! ಇನ್ನು
ಮೂರು ತಿಂಗಳೊಳಗೆ ಚಂದ್ರಪುರಿಯ ಸುತ್ತು ವಳಯದ ಹಳ್ಳಿ ಹಳ್ಳಿಗಳಲ್ಲಿ
--------------------------------------
೩೫ ದೊಡ್ಡವರ ವಜ್ರ

ಕಂದಾಳಿಯ ಮಾತಿರಲಿ, ಕರಿದಾಳಿ ಸೀಯಾಳವಾಗಲಿ ಬಾಳೆಯ ಗೊನೆ
ಯಾಗಲಿ ತದಿತರ ಫಲವಸ್ತುಗಳಾಗಲಿ ನೋಡಸಿಕ್ಕಿದರೆ ಅಲ್ಲಿ ಕೋರ್ಟಿನ
ಮೆಟ್ಟಲೇರುವ ಧನಿಯು ಇಲ್ಲವೆಂದು ಅದೇ ನೇರಾಗಿ ಸಾರುತ್ತಿತ್ತು.

ಇನ್ನು ಕೋರ್ಟಿನ ನಾಕರರು ಮಣಿದು ಕುಣಿದು ಸೇವೆಯೊಪ್ಪಿಸು
ವುದು ದೊಡ್ಡ ವಿಷಯವೆ? ಅದರಲ್ಲಿಯೂ ರಾಮರಾಯನು 'ಖಾವಂದರಿಗೆ
ಸ್ವಜಾತಿಯವನು, ಸ್ವಜಾತಿಯ ನೌಕರರು ಇಂತಹ ಸಮಯದಲ್ಲಿ ಸೊಂಟ
ಗಟ್ಟದಿದ್ದರೆ! ರಾಮರಾಯನೆಂತೂ 'ಅಮ್ಮನವರ' (ಖಾಸಾ' ಬಂಟ! ಇತರ
ಸಮಯದಲ್ಲಿಯೂ 'ಅಮ್ಮ ನವರ' ಚಿಕ್ಕ ಪುಟ್ಟ ಕೆಲಸಗಳಿಗೆಲ್ಲ ಪೇಟೆಗೋಡಿ
ಚೀಟಿನೋಡಿ ನುಡಿಹಿಡಿದು ಮಾಡಿಕೊಡುವ 'ರಾಮು' 'ಅಮ್ಮನವರು
ಪೋಷಕ ದೃಷ್ಟಿಯಲ್ಲಿಯೂ ವಯೋವೃಷ್ಟಿಯಲ್ಲಿಯೂ ರಾಮರಾಯನಿಗೆ
ಮಾತುಃ ಶ್ರೀಸಮಾನರಾಗಿ ರುವುದರಿಂದ) ಈಗಂತೂ ಒಳಗೂ ಹೊರಗೂ
ಎಲ್ಲೆಲ್ಲಿಯೂ ಬೇಕೇಬೇಕು. 'ಅಮ್ಮನವರು' ನಿಜವಾಗಿಯೂ ಅಮ್ಮನವರೇ
(A fairly old dame!). ಕೋಮಲಕಾಯವಾಗಲಿ ಹೊಳಪಿನ
ಹೊಸ ಪ್ರಾಯವಾಗಲಿ ಆವರಲ್ಲಿ ತೋರದು, ಆದರೂ ಹಾಗೆಂದರೆ ಅವರು
ಒಪ್ಪುವ ಹಾಗಿದ್ದಿಲ್ಲ. ಅದುಕಾರಣ ಅವರು ಹಿರಿಹೆಂಗಳ ಸೇರುಗೆಯಲ್ಲಿ
ಬೆರೆಯುತ್ತಿದ್ದಿಲ್ಲ. ಅವರ ಹಿಂದೆ ಮುಂದೆ ಸುಳಿಯುವುದಕ್ಕೆ ಬೇಕಾದುದು
ಚೆಲುವಿನ ಚಲ್ಲೆಯರೇ, ಆದುದರಿಂದ ಅಮ್ಮನವರ ಅಪ್ಪಣೆಯಾಯಿತು--
'ರಾಮ' ಲಗ್ನದ ದಿನ ನಿನ್ನ ಹೆಂಡತಿಯು ನನ್ನ ಬಳಿಯಲ್ಲಿಯೇ
ಇರಬೇಕು, ಎಲ್ಲಿಯಾದರೂ ಬಿಟ್ಟು ಬಂದೀಯೆ!' ಇದನ್ನು ಕೇಳಿ ರಾಮ
ರಾಯನಿಗೆ ಉಸಿರುಗಟ್ಟಿದಂತಾಯಿತು. ಅಮ್ಮನವರಿಗೆ ಅದು ತಿಳಿಯದೆ
ಹೋಗಲಿಲ್ಲ. ಕೂಡಲೆ ಅವರು 'ಖಾವಂದ'ರನ್ನು ಉದ್ದೇಶಿಸಿ,
'ನೋಡಿದಿರಾ? ರಾಮೂಗೆ ನನ್ನ ಹೇಳಿಕೆ ಸಾಕಾಗಿಲ್ಲವೋ ಏನೊ! ನಮ್ಮ
ಮಹಿಳಾ ಸಭೆಯಲ್ಲಿ ಅಡ್ಡಾಡುವುದಕ್ಕೆ ಅಂತಹ ಚದುರೆಯರೇ ಬೇಕು.
ಮೊನ್ನೆ ಕಾರಿನಲ್ಲಿ ಜವಳಿ ಸೇಟರ ಅಂಗಡಿಗೆ ಹೋಗುತ್ತಿದ್ದಾಗ ರಾಮೂನ
ಬಿಡಾರ ತೋರಿಸಿದ ಶ್ಯಾಮು, ಒಳಗೆ ಇಣಿಕವಷ್ಟರಲ್ಲಿ ಬಾಗಿಲ ಬಳಿಗೆ
ಬರುತ್ತಿದ್ದಳು ಇವನ ಹೆಂಡತಿ, ಎಷ್ಟು ಲಕ್ಷಣವಾಗಿದ್ದಾಳೆ! ಸುಳಿಬಾಳೆಯ
ಒಲವು! ಎಳೆ ಕಳಿಲೆಯ ಹೊಳವು!” ಎಂದರು. ರಾಮುಗೆ ಮತ್ತೊಮ್ಮೆ
-------------------------------------------
ನಂದಾದೀಪ ೩೬

ಉಸಿರುಗಟ್ಟಿ ದಂತಾಗಿ ಮೋರೆ ಕೆಂಪೇರಿತು. ಅಷ್ಟರಲ್ಲಿ, 'Did you
hear, Rama Rao?” (ರಾಮರಾವ್, ಕೇಳಿದಿಯಾ?) ಎಂದು
ಖಾವಂದರ ಮಾತೂ ಸೇರಿ ಬರಲು ಗಡಿಬಿಡಿಯಿಂದ ಸ್ವರಸರಿಗೈಯುತ್ತ
'ಹೂಂ' ಎನ್ನಲೇ ಬೇಕಾಯಿತು ರಾಮರಾಯ,
* * * *
ಇಳಿಹೊತ್ತು. ಇನ್ನೂ ಒಂದೆರಡು ತಾಸು ಇರಬಹುದು, ರಾಮರಾ
ಯನು ಕೋರ್ಟಿನಲ್ಲಿಯೋ ಖಾವಂದರ ಮನೆಯಲ್ಲಿಯೋ ಇನ್ನೆಲ್ಲಿಯೋ
ಇದ್ದನು. ಹೊರಬಾಗಿಲೋರೆಮಾಡಿ ರಾಮಿಯು ಅಡುಗೆಗೆ ಒಲೆ ಹೊತ್ತಿ
ಸುತ್ತಿದ್ದಳು. ಅಷ್ಟರಲ್ಲೊಂದು ಮೋಟರ್ ಕಾರ್ ಕೊಂಬು ಊದಿತು;
ಬಂದು ನಿಂತಿತ್ತು, ತನ್ನ ಬಿಡಾರಕ್ಕೆ ಕಾರ್ ಬರುವುದೆಂಬ ಹಂಬಲಾದರೂ
ರಾಮಿಗಿತ್ತೆ? ಅವಳು ಮತ್ತೂ ಮತ್ತೂ ಬೆಂಕಿ ಹತ್ತಿಲೊಪ್ಪದ ಹಸಿ ಕಟ್ಟಿ
ಗೆಗೆ ಉಸ್ಸೆಂದು ಊದುತ್ತಿದ್ದಳು. ಆದರೆ ಯಾರೋ ಬಾಗಿಲು ತೆರೆದು
ಕೊಂಡು ಒಳಗೆ ಬಂದಂತಾಯಿತು. ನೆಟ್ಟಗೆ ಅಡಿಗೆಯ ಕೋಣೆಗೇ ಬರು
ವಂತಿತ್ತು. ರಾಮಿಯು ಚಟ್ಟನೆದ್ದು ಬರುವಷ್ಟರಲ್ಲಿ ಅಲ್ಲಿಗೇ ಬಂದು ಬಿಟ್ಟಿ
ದ್ದರು ಮುನ್ಸಿಫರ ಪತ್ನಿ 'ಅಮ್ಮನವರು'! ದೊಡ್ಡವರು ಬಡವರು ಎಂದರೆ
ಹೀಗುಂಟು ನೋಡಿ! ಬಡವರಿಗೆ ದೊಡ್ಡವರ ಸಂದರ್ಶನವಾಗಬೇಕಾದರೆ
ತಲೆಬಾಗಿಲ (ಗೇಟನ) ದಳಿಯೊಳಗಿಂದ ಚೀಟಿಯು ಮುಂದೆ ಸಾಗಬೇಕು.
ಆ ಮೇಲೆ ಅಪ್ಪಣೆ ದೊರೆತರೆ ಮುಂದುವರಿದು ದ್ವಾ ರ ಮ ೦ ಟ ಪ
(Portico)ದ ಮೆಟ್ಟಲಲ್ಲಿ ನಿಂತು ಕಾಯಬೇಕು, ಕಾದು ನಿಲ್ಲಬೇಕು,
ಎಂದಿಗೆ ತೆರೆಬಾಗಿಲ ಪರದೆಯು ಸರಿದು ಅಮ್ಮನವರು ನಡುವೆ ಪ್ರತ್ಯಕ್ಷ
ವಾಗುವರೋ ಎಂದು ತೆರೆಗಣ್ಣಿಂದಲೆ ನೋಡುತ್ತಿರಬೇಕು ಬಾಗಿಲ
ಕಡೆಗೆ! ಆದರೆ ದೊಡ್ಡವರು ಬಡವರ ಮೆಟ್ಟಿಲೇರುವುದೇ ಪರಮಾನುಗ್ರಹ!
ಅವರ ಆಗಮನಕ್ಕೆ ಕಾಲಾಕಾಲವೆಂಬ ನಿರ್ಬಂಧವೇನೂ ಇಲ್ಲ. ಅವರು
ಬಂದುದೇ ಸುಮುಹೂರ್ತ! ಅವರ ನಡೆಯ ಚಂದ, ನುಡಿಯೂ ಚಂದ!
ಅವರು ಇಳಿದಷ್ಟು ಬಡವರ ಹೃದಯದಲ್ಲಿ ಏರುವರು ಈ ರಹಸ್ಯವನ್ನು
ತಿಳಿದ ಹಲವು ಸಿರಿವಂತರು ತಮ್ಮ ಸಂದರ್ಶನದಿಂದ ಬಡವರ ಮನೆಯನ್ನು
ಬೆಳಗಿನೊಳಗಿ ಅವರ ನೆನಸುಕನಸಿನ ಇನಿಸಿನ ತಿನಿಸಾಗಿ ಬಾಳುವರು.
--------------------------------------
೩೬ ದೊಡ್ಡವರ ವಜ್ರ

ನಮ್ಮ ಅಮ್ಮನವರಿಗೂ ಈ ಮರ್ಮವು ತಿಳಿದೇ ಇತ್ತು. ಆದುದರಿಂದಲೆ
ಅವರು ನಟ್ಟಿಗೆ ಅಡಿಗೆಯ ಕೋಣೆಗೇ ಇಳಿದುಬಿಟ್ಟುದು. ಆದರೆ
ರಾಮಿಗೆ ಮಂಕುಬಡಿದಂತಾಯಿತ್ತು; ಅವಳು ಕಂಗೆಟ್ಟು ಮುಂಗಾಣದಾದಳು.
ಅವಳನ್ನು ಹಾಗೆ ಬೆರಗುಗೊಳಿಸಿ ಸಲುಗೆ ತೋರಿಸಿ ಸೆರಗಿನಲ್ಲಿ ಹಾಕಿಕೊಳ್ಳ
ಬೇಕೆಂದೇ ಅಮ್ಮನವರ ಯತ್ನ, ಅದು ಕಾರಣ ಗೊಂದಲಗೊಂಡ ರಾಮಿ
ಯನ್ನು ಕಂಡಾಕ್ಷ ಣವೆ ಅವಳ ಕೈ ಹಿಡಿದಾಯಿತು, ಬೆನ್ನು ತಟ್ಟಿಯಾ
ಯಿತು, ಅವಳ ಕುತ್ತಿಗೆಯ ಮೇಲೆ ಇವರ ಸೊಂಡಿಲುಗೈ ಮಂಡಿಸಿಯೂ
ಆಯಿತು! ಆಕೆಯ ಗಲ್ಲವನ್ನು ಹಿಡಿದೆತ್ತುತ್ತ 'ಏನೆ, ಏಕಿಷ್ಟು ಗಲಿಬಿಲಿ?
ಇಷ್ಟು ಸಂಕೋಚ? ನಾನೂ ನಿನ್ನಂತೆ ಹೆಂಗುಸಲ್ಲವೆ? ದೇವಲೋಕದಿಂದಿ
ಳಿದು ಬಂದವಳೆಂದು ಬಗೆದೆಯಾ?' ಎಂದರು, ಪುನಃ ಅವಳ ಬೆನ್ನ ಮೇಲೆ
ಕೈಯಾಡಿಸಿದರು. ಅವಳ ಮನಸ್ಸಿನ ಕಳವಳವನ್ನು ನೋಡಿ ಅವಳನ್ನೇ
ಒತ್ತಿ ಆತುಕೊಂಡು ಗೊಳ್ಳೆಂದು ನಕ್ಕುಬಿಟ್ಟರು! ರಾಮಿಯ ಮೋರೆಯು.
ಒಮ್ಮೆ ಕೆಂಪೇರಿತು; ಮತ್ತೊಮ್ಮೆ ಬಿಳಿಪಿಗಿಳಿಯಿತು. ಒಳಗೆ ಮೊಳೆತ
ಭಾವನೆಗೆ ತಕ್ಕಂತೆ ಕೆಂಪು, ಬಿಳಿಪು, ನಸುಬಿಳಿಗೆಂಪು, ಹೀಗೆ ಏನೇನೋ
ವರ್ಣವ್ಯತ್ಯಾಸವನ್ನು ಹೊಂದುತ್ತ ಚಂದಚಂದವಾಗುತ್ತಿತ್ತು ಆ ವದ
ನಾರವಿಂದ. ಅವಳ ಕಣ್ಣುಗಳು ಅರೆದೆರೆದು ಸುಳಿಸುಳಿದು ಸಿಕ್ಕೆಡೆಗೆ ಮಿಂಚು
ಬೆಳಗು ಬೀಸುತ್ತಿದ್ದುವು. ಆ ಅನಿರೀಕ್ಷಿತ ಕೂಟದಚ್ಚರಿಯಲ್ಲಿ, ಆ ಅರೆ
ಬಟ್ಟೆಯ ನಾಚಿಕೆಯಲ್ಲಿ, ಆ ಅರ್ಧಮರ್ಧ ಮುಸುಕಿನ ಮರೆಯಿಂದ ತೋಳಗಿ
ಬೆಳಗುವ ಆ ಹುಟ್ಟು ಚೆಲುವಿನ ಸೊಬಗಿನಲ್ಲಿ, ರಾಮಿಯು ಚಲುವಿನ
ಕಣಿಯಂತಿದ್ದಳು. ಅವಳು ತನ್ನ ಬಳಿಯಿಂದ ಸರಿಯಲೆತ್ನಿಸುವುದನ್ನೂ
ಅವಳ ದೃಷ್ಟಿ ಹರಿದ ಕಡೆಯನ್ನೂ ಕಂಡು ಅಮ್ಮ ನವರು, 'ಚಾಪೆಗೀಪ
ಏನೂ ಬೇಡ, ನೀನು ನನ್ನ ಬಳಿ ಹೀಗೆಯೆ ನಿಂತರೆ ಎಲ್ಲ ಬಂದಂತಯೆ.
ಅದಿರಲಿ, ನಾನು ಬಂದುದೇಕೆಂದು ತಿಳಿದೆಯಾ? ನಮ್ಮಲ್ಲಿಯ ಮದುವೆಗೆ
ನಿನಗೆ ಅಕ್ಷತೆ ಕೊಡುವುದಕ್ಕೆ, ಇಗೋ' ಎಂದು ಮಡಿಲಿಂದ ಬೆಳ್ಳಿಯ
ಬಳ್ಳಿಯ ಕಿರಿಕರಡಿಗೆಯೊಂದನ್ನು ಹೊರತೆಗೆದು ಬದಿಯ ಬೊಟ್ಟ
ನ್ನೊತ್ತಲು ಚಟ್ಟನೆ ಚಿಗಿಯಿತು ಅದರ ಮುಚ್ಚಳ! ಒಳಗೆ ಕುಂಕುಮಾಂ
ಕಿತ ಮಂಗಲಾಕ್ಷತೆ! 'ಹಿಡಿಯೇ ಅಕ್ಷತೆಯನ್ನ' ಎಂದು ಆಕೆಯ ಕೈಯ
-------------------------------------
ನಂದಾದೀಪ ೩೮
ಳೆದು ಮುಟ್ಟಿಸಿಯಾಯಿತು. ಮಗಳೆ, ಇನ್ನೂ ನಾಲ್ಕು ಕಡೆ ಹೋಗ
ಲಿಕ್ಕಿದೆ, ಹೊತ್ತಾಯಿತು!” ಎನ್ನುತ್ತ ಹೊರ ಬಾಗಿಲ ಕಡೆಗೆ ಸರಿದೇ
ಬಿಟ್ಟರು ಇಷ್ಟೆಲ್ಲ ನಡೆದುದು ಎರಡೇ ಎರಡು ನಿಮಿಷದೊಳಗೆ! ರಾಮಿಯು
ಈ ಅಚ್ಚರಿಯಿಂದ ಎಚ್ಚೆತ್ತು ಬಾಗಿಲ ಬಳಿಗೋಡಿ ಅರೆಮರೆಯಲ್ಲಿ ನಿಂತು,
'ಆಹಾ! ಹೀಗೆಯೆ ಹೋಗುವ ಹಾಗಾಯಿತಲ್ಲ!' ಎನ್ನುವಷ್ಟರಲ್ಲಿ ಅಮ್ಮನ
ವರು ಕಾರಿನಲ್ಲಿ ಕುಳಿತಾಯಿತು, ಕೆಲಬಲದ ಮನೆಯ ಹೆಂಗಸರೂ ಮಕ್ಕ
ಳೂ ತಮ್ಮ ತಮ್ಮ ಬಾಗಿಲ ಮರೆಯಲ್ಲಿ ಕಿಟಕಿಯ ಎಡೆಯಲ್ಲಿ ನೋಡುತ್ತಿ
ದ್ದಂತೆ, ಅವರೆಲ್ಲ ಕೇಳುವಂತೆ, ಅಮ್ಮ ನವರು, ಹೀಗೆಯೇ ಎಂದರೇನೆ?
ನಾನು ಬಂದುದಕ್ಕೆ ಸನ್ಮಾನವೆ? ಅದಕ್ಕೆ ನೀನು ಮದುವೆಗೆ ಬಂದುದೇ ಗೊತ್ತು!
ಎಲ್ಲಾದರೂ ಬಾರದೆ ಕುಳಿತೀಯೆ!' ಎನ್ನುತ್ತ ದೊಡ್ಡವರ ಸಲುಗೆಯ ಪುಸಿ
ಮುನಿಸಿನ ನೋಟವನ್ನು ರಾಮಿಗೆ ಬೀರಿ ಡ್ರಾವರ ಶ್ಯಾಮಗೆ ಹುಬ್ಬಿನಿಂದ
ಪ್ಪಣೆಗೊಡಲು, ಊದಿತು ಕೊಂಬು, ಹೊರಟಿತು ಕಾರು!

ರಾಮಿಯು ಬಾಗಿಲಿಕ್ಕೆ ಅಡಿಗೆಯ ಕೋಣೆಗೆ ಹೋದಳು. ಅಲ್ಲಿಂದೀ
ಚೆಗೆ ಬಂದಳು. ತಿರುಗಿ ಆಚೆಗೆ, ತಿರುಗಿ ಈಚೆಗೆ ಅವಳಿಗೇನು ಮಾಡುವು
ದೆಂದು ತಿಳಿಯಲಿಲ್ಲ. ಅಷ್ಟು ತಳಮಳವಾಗಿಹೋಗಿತ್ತು ಅವಳ ಮನಸ್ಸು.
ನೆರೆಹೊರೆಯವರೆಲ್ಲರೂ ನೋಡಿ ಮಚ್ಚರದ ಕಿಚ್ಚನಿಂಗುರಿದು ಹುಚ್ಚೇಳುವಂತೆ
ಮುನ್ನಿಫರ ಪತ್ನಿಯು ತನ್ನೊಡನೆ ಅಷ್ಟೊಂದು ಸಲುಗೆಯಿಂದ ಮಾತಾ
ಡಿದುದು ತಲೆಯಲ್ಲೇ ಸುಳಿಯುತ್ತಿತ್ತು. ಅವಳ ಕಣ್ಣೆದುರಿಗೆ ಕಟ್ಟಿದಂತಿದ್ದವು-
ಅಮ್ಮ ನವರ ಹಮ್ಮರಿಯದ ನುಡಿ, ಬಗೆಗೊಳ್ಳುವ ಸಲುಗೆ, ಭೀತಿಗಳೆವ
ಮಾತಿನ ರೀತಿ! ಅವರ ಇದೊಂದೇ ಸಂದರ್ಶನದಿಂದ ತಾನು ಸ್ತ್ರೀಲೋಕ
ದಲ್ಲಿ ಒಮ್ಮೆಗೇ ಎಷ್ಟು ಮೇಲಕ್ಕಡರಿಬಿಟ್ಟೆನೆಂದು ರಾಮಿಯು ಹಿಗ್ಗಿ
ಹೋದಳು. ಅಷ್ಟರಲ್ಲಿ ರಾಮಕ್ಕಾ' ಎಂದು ಹೊರಬಾಗಿಲ ಬಳಿಯಿಂದ
ಕೂಗಿದಳು ಮಾತಿನ ವೆಂಕಮ್ಮ, ರಾಮಿಯು ಬಾಗಿಲು ತೆರೆಯುವ ಮೊದಲೇ
ಮೆಟ್ಟಿಲ ಮೇಲಿಂದಲೆ ಅವಳು ಮಾತು ತೊಡಗಿದಳು, 'ಮದ್ವೀಪ್ರಸ್ಥ
ಶುಭ ಶೋಭನದಾಗೆ ಅರಸಿನ ಕುಂಕುಮ, ಹೂವುಗೀವು, ಗಂಧಕಸ್ತೂರಿ,
ತಾಂಬೂಲ ಕೊಡೋಕೆ, ಮಾನಮರ್ಯಾದೆ ಮಾಡೋಕೆ, ನಿನ್ನಂಥ ಹುಡು
ಗೇರು ಇದ್ದರೇನೇ ಚಪ್ಪರ ಬೆಳಗೀತು! ಎಲ್ಲೋರು ಹೆಂಗಳೇನು? ಯಾಕಾ
-----------------------------------
೩೯ ದೊಡ್ಡವರ ವಜ್ರ

ದಾರು ಮಾರೀಗೊಂಬೆಗಳು! ನಿನ್ನಂಥಾ ಪುತ್ಲಿಗೊಂಬೆ ಎಲ್ಲಿ ಸಿಕ್ಕೀತು?
ಸುಮ್ಮಗೆ ಬಂದಾರೇನು ಮುನ್ಸೂಪ್ರ ಹೆಣ್ತಿ ಇಲ್ಲಿತನಕಾವು? ಇಲ್ಲಿ ಕಾರು
ನಿಂತಮ್ಯಾಲೆ ಇನ್ನು ತಮ್ಮ ಮನೀಗೆ ಬಾರದಿರೋರೆ ಅಂತ ತಯಾರಮಾ
ಡ್ಯಾರ ಆ ಕಂಕಮ್ಮ --ಬಣ್ಣದ ಚಾಪೆ ಹಾಸಿ, ಲೋಡುಗೀಡು ಇಟ್ಟು,
ಬೆಳ್ಳಿ ಹರಿವಾಣದೊಳಗೆ ತಾಂಬೂಲ, ಇನ್ನು ತಿಂಡಿಗಿಂಡಿ! ಬೋಡ್ಡ್‌
ಪ್ರಜೇಂಟ್ರು ಧನಶೆಟ್ರ ಹೆಂಣ್ತಿ ಕಂಕಮ್ಮನ ಠೀವಿನ ಮುನ್ಸುಪ್ರ ಹೆಣ್ತಿಗೆ
ಕಾಣ್ಸೋಣ ಅಂತ! ಆದ್ರೆ ಮುನ್ಸೂಪ್ರ ಹೆಂಣ್ತಿ ಆ ಕಡೆ ಮೊಗ ತಿರುಗಿಸ
ಬೇಕೆ? ಸರಸರನೆ ಮುಂದೇ ಸರೀತು ಕಾರ, ಆಗೆ ಆಯಿತು ಕಂಕಮ್ಮನ
ಮೋರೆ.-ಉಪ್ಪಿಲಿಟ್ಟ ಮಾವಿನ ಮಿಡಿ'! ಆ ಬೀದಿಯ ಮೊದಲಲ್ಲಿ ಮುನ್ಸೀ
ಫರ ಮನೆಯ ಕಾರ್ ತಲೆದೋರಿದಾಗ ವೆಂಕಮ್ಮನಿದ್ದಳು ಕನಕಮ್ಮನ
ಮನೆಯ ಜಗುಲಿಯಲ್ಲಿ. ಅನಂತರ ಅದು ಆ ಬೀದಿಯ ಕೊನೆಯಲ್ಲಿ
ಕಣ್ಮರೆಯಾಗುವ ವರೆಗೂ 'ಅದರ ಮೇಲಿಟ್ಟ ಕಣ್ಣನ್ನು ಅವಳು ತೆಗೆಯ
ಲಿಲ್ಲ. ಅದು ಕಾರಣ ಅದು ಮತ್ತೆಲ್ಲಿಯೂ ನಿಲ್ಲಲಿಲ್ಲವೆಂಬುದು ಅವಳಿಗೆ
ನಿಶ್ಚಯ, ಆದರೂ ವೆಂಕಮ್ಮನು ಆ ಬೀದಿಯಲ್ಲಿ ದೊಡ್ಡವರೆಂಬ ದುಡ್ಡಿನ
ಹೆಮ್ಮೆಯ ಏಳೆಂಟು ಹೆಮ್ಮಕ್ಕಳ ಮನೆಬಾಗಿಲಿಗೆ ಹೋಗಿ, 'ಏನಮ್ಮಾ,
ಮುನ್ಸೂಪರ ಹೆಂಣ್ತಿ ಅಕ್ಷತೆ ಕೊಡೋಕೆ ಬಂದರೇನು ನಿಮ್ಮಲ್ಲಿಗೆ? ಅವರ
ಕಾರು ನಿಮ್ಮ ಮನೀಕಡಿಯಿಂದಲೇ ಕೆಳಗೆ ಹೋತು. ನಮ್ಮ ರಾಮೂ
ಹೆಣ್ತಿಗೆ ಬಹಳ ಒತ್ತಿ ಹೇಳಿರೂ ಅಂದ ಮೇಲೆ ತಮ್ಮಂಥವರಿಗೆ ಅಕ್ಷತೆ
ಕೊಡೋದು ಮಾತ್ರವೆ? ನಾಡದು ಕಾರೂನೂ ಕಳ್ಸ್ಯಾರು ನಿಮ್ನಾ ಕರೆ
ದೊಯ್ಯೋಕೆ!' ಎಂದು ತನ್ನ ಅಧಿಕಪ್ರಸಂಗದಿಂದ ಅವರನ್ನು ಮುಚ್ಚು
ಮರೆಯಿಲ್ಲದೆ ಚುಚ್ಚುತ್ತ ನಡೆದಳು.

ಅಂದು ರಾತ್ರಿ ರಾಮರಾಯನು ಮನೆಗೆ ಬಂದಾಗ ತುಸು ತಡ
ವಾಗಿತ್ತು. ಮದುವೆಯ ಮುಂದಿದ್ದುದು ಮರುದಿನವೊಂದೆ. ಅಕ್ಷತೆ
ಕೊಡಲಿಕ್ಕೆ ಹೋಗಿದ್ದ ಅಮ್ಮನವರು ಹಿಂತಿರುಗಿ ಚಪ್ಪರದೊಳಗೆ ಕಾಲಿಟ್ಟ
ವರೆ ಅಲ್ಲಿದ್ದ ರಾಮರಾಯನನ್ನು ಕಂಡು ರಾಮೂ, ನಿನ್ನ ಮನೆನುಗ್ಗಿ
ಬಂದೆ!' ಎಂದಿದ್ದರು. 'ಶ್ಯಾಮುನ ಕೈಗೆ ಬೇನೆ ಬಡಿಯಲಿ' ಎಂದು
ತನ್ನೊಳಗೇ ಹೇಳಿದ್ದ ರಾಮರಾಯ. ಇನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ
---------------------------------------
ನಂದಾದೀಪ  ೪೦

ಎಂದೂ ಆಗಲೆ ನಿಟ್ಟುಸಿರುಬಿಟ್ಟಿದ್ದ. ಗಂಡನಿಗೆ ಉಣಬಡಿಸುತ್ತ ರಾಮಿಯು
'ಅಮ್ಮನವರ' ಸಂದರ್ಶನದ ಪರಿಯನ್ನು ತನ್ನ ಟೀಕೆ ಟಿಪ್ಪಣಿಗಳೊಡನೆ
ಹೇಳಿ ಮುಗಿಸಿದಳು. ರಾಮಿಗೆ ಊಟವೇ ಸೇರದು, ಇಬ್ಬರಿಗೂ
ಯೋಚನೆ -ರಾಮಿ ಮದುವೆಗೆ ಹೋಗಬೇಕೋ ಬೇಡವೋ ಎಂಬುದು
ವಿಷಯವಲ್ಲ: ಹೇಗೆ ಹೋಗುವುದು ಎಂಬುದೇ. ಉಡುವುದಕ್ಕೊಂದು
ಸಜ್ಜಿನ ಸೀರೆ ತೊಡುವುದಕ್ಕೊಂದು ಅಚ್ಚುಗಟ್ಟಿನ ರವಕೆ, ಇವೆರಡಾದರೂ
ಇರಬೇಡವೆ? ಸೀರೆ ರವಕೆಗಳನ್ನು ಎರವಾಗಿ ಕೇಳುವುದೆಂತು, ತರುವು
ದೆಂತು!

ರಾಮರಾಯನು ಸೇವಿಂಗ್ಸ್ ಬ್ಯಾಂಕಿನಲ್ಲಿ ತೆರೆದ ಲೆಕ್ಕವು ಸುಮಾರು
ಆರವತ್ತೈದು ರೂಪಾಯಿಗೆ ಬಂದಿತ್ತು. ಬೆಳಗಾದರೆ ಅದು ಬರಿದಾಗದೆ
ಗತ್ಯಂತರವಿಲ್ಲವೆಂದು ನಿರ್ಧಾರವಾಯಿತು. ಅದರಿಂದ ನಸು ಮೇಘವರ್ಣದ
ಜರಿಯಂಚಿನ ಗಚ್ಚು ಸೆರಗಿನ ಕಾಶೀರೇಶ್ ಶೀರೆಗಾಗಿ ತಕ್ಕಷ್ಟು ವಿನಿಯೋಗಿ
ಸಿರಿ, ಉಳಿದುದರಿಂದ ಅದಕ್ಕೊಪ್ಪುವ ತೆರೆಕೊರಳಿನ (open neck)
ರೇಲ್ವೆ ಯ ರವಕೆ, ತರೆಕೊರಳ ಬಳಿಗೆ ಮಿರುಗುವ ಜರಿ, ಕೈಗೆ ಲೇಸ್‌!
ಮತ್ತೇನಾದರೂ ಉಳಿದರೆ ನಡುವೆ ಹರಳ ಕಮಲಿನ ರೋಲ್ಡ್ ಗೋಲ್ಡ್
ಬೂಚ್, ಇಷ್ಟಿರಲಿ' ಎಂದಳು ರಾಮಿ, ಮತ್ತು .. ಮತ್ತು ..ಕೋಪಿಸ
ಬೇಡಿ , , , , ಇನ್ನೇನಾದರೂ ಉಳಿದರೆ, ಮಾದರಿಸೀಸೆಗಳಾದರೂ ಸಾಕು,
ಒಂದಿಷ್ಟು ಹೆರೋಯಿಲ್, ಒಂದಿಷ್ಟು ಸೆಂಟ್ಸ್, ಒಂದಿಷ್ಟು ಪೌಡರ್!
ಮತ್ತು . . . ಮತ್ತು ... ವೆಸ್ಸಿನ್‌, ಹಾ! ಮರೆತೆ, ಸಾಧ್ಯವಿದ್ದರೆ,
ಒಂದು ಚಲೋ ಸಿಲ್ಕ್ ಟವೆಲ್!' ಎಂದು ಅಳುಕುತ್ತ ಅಳುಕುತ್ತ ಪತಿಯ
ಮುಖವನ್ನ ನೋಡಿ ನೋಡಿ ಕೂಡಿಸಿದಳು. 'ಸರಿ, ಆಯಿತೆ?” ಎಂದನು
ರಾಮರಾಯ. 'ಆದಂತೆಯೆ, ಇನ್ನೇನು? ಕೈಗೆ ನನ್ನದೆ ನಾಲ್ಕು
ಬಳೆಗಳಿವೆ, ಸಾಕು! ಕೊರಳಿಗೆ ಗೋಧಿಮಣಿ ಸರವಿದೆ, ಕೆಳಗೆ ತರೆಕೊರಳ
ರವಕೆಯ ಜರಿ ಬರುತ್ತದೆ, ಸಾಕು! ಬೆರಳಿಗೆ ನಿಮ್ಮ ಉಂಗುರವಿದೆ; ಸಾಕು!
ಕಣಗಾಲನ್ನಪ್ಪುಗೈಯುತ್ತ ಅಂಕುಡೊಂಕಾಗಿ ಬಿದ್ದೇಳುವ ಕಾಲಂದುಗೆ ಇದೆ,
ಸಾಕು! ಸಾಕು! ಯಾವುದೂ ಹೆಚ್ಚಿಗಿದ್ದರೆ ಸಜ್ಜಾಗುವುದಿಲ್ಲ. ಆದರೆ ಈ
ಕೆಂಪಿನ ಬೆಂಡೋಲೆಯ ಬದಲಾಗಿ ವಜ್ರದ ಕಮಲು ದೊರಕಿದ್ದರೆ,
-----------------------------------
೪೧ ದೊಡ್ಡವರ ವಜ್ರ

ಮೂಗಿಗೊಂದು ಚಿಕ್ಕ ವಜದ ಬೊಟ್ಟು ಇದ್ದಿದ್ದರೆ! . .'  'ನೀನು ಚಲುವಿನ
ರಾಣಿಯೇ ಆಗಿಬಿಡುವೆ!” ಎಂದು ಮಾತು ಮುಗಿಸಿದನು ರಾಮರಾಯ,
ಹಾಗೆ ಬೇಕೆಂದಿದ್ದರೂ ಇದೇ ಬೀದಿಯ ತುದಿಯಲ್ಲಿ ತವರುಮನೆಯಲ್ಲಿ
ಹೆತ್ತು ಮಲಗಿರುವಳು ನಿನ್ನ ಶಾಲೆಯ ಅಚ್ಚು ಮೆಚ್ಚಿನ ಗೆಳತಿ, ಮದ್ರಾಸಿನ
ಡಾಕ್ಟರರ ಹೆಂಡತಿ, ಎನ್ನುತ್ತಿದ್ದೆಯಲ್ಲ! ಕೇಳಿದರೆ ಒಂದು ಗಳಿಗೆಯ
ಮಾತಿಗೆ ಕೊಡಲೊಲ್ಲಳೇನು?' ಎಂದು ರಾಮರಾಯನು ಸೂಚಿಸಲು ಕಮಲ
ವರಳಿತು ರಾಮಿಯ ಮುಖದಲ್ಲಿ! ಅದಕ್ಕೆ ಮರುದಿನ ಕಳೆಯೇರಿತ್ತು, ಅದ
ರಾಚೆಯ ದಿನ ಅದು ಕಳಕಳಿಸಿ ಕಂಡವರನ್ನೆಲ್ಲ ನಗಿಸಿತು.
* * * *
ಅರಳಿದ ಹೂವು ನಗುವುದು, ನಗಿಸುವುದು, ಘಮಘಮಿಸಿ ಸಮೀ
ಪಿಸಿದವರನ್ನೆಲ್ಲ ಆನಂದಗೊಳಿಸುವುದು, ಆದರೆ ಹಾಗೆಯೆ ಅರಳಿಯೆ ಪರಿ
ಮಳಿಸಿಯೆ ಆನಂದಬೀರಿಯ ಎಂದಂದೂ ಇರಲಾಗುವುದೆ? ಅದರದು
ಗಳಿಗೆಯ ಬಾಳು. ಆ ಮೇಲೆ ಅದು ಸೊರಗಿ ಹೊರಳುವುದು ದೂಳಲ್ಲಿ!
ರಾಮಿಯ ಆರಳಿದ ಮುಖದ ಪಾಡೂ ಹಾಗೆಯೇ ಆಗಿಹೋಯಿತು.
ನೋಡಿರಿ, ಮೊನ್ನೆ ತಾನೆ ಮದುವೆಗೆ ಹೊರಡುವ ಸನ್ನಾಹದಲ್ಲಿ ಅರೆಬಿರಿದ
ಅರಳಂತಿದ್ದ ಅವಳ ಮುಗುಳು ಮುಖದ ಸೊಬಗಾಗಲಿ, ನಿನ್ನೆ ಮದುವೆಯ
ಚಪ್ಪರದಲ್ಲಿ ಅರಳರಳಿ ಎಲ್ಲರ ಮನಸ್ಸನ್ನೂ ಮರುಳುಗೊಳಿಸಿದ್ದ ಮಲ್ಲಿ
ಗೆಯರಳಿನಂಥ ಆವಳ ಸಿರಿಮೋರೆಯ ಬೆಡಗಾಗಲಿ, ಇಂದು ಅರುಣೋ
ದಯಕ್ಕೆ ಉಳಿದಿದೆಯೆ? ಬೆಳಗಾಗುತ್ತ ಬರುತ್ತಿದೆಯಷ್ಟೆ, ಅಷ್ಟರಲ್ಲಿ ರಾಮಿ
ಯು ಹೊರಬಾಗಿಲ ಬಳಿಯಲ್ಲಿ ನಿಂತಿರುವಳು; ಮುಖವು ಬಾಡಿ ಮುದುಡಿ
ಹೋಗಿದೆ! ಕೈಯ್ಯಲ್ಲಿದೆ ಕಿರಿಕರಡಿಗ ಬೆಟ್ಟಂದ ಅದರ ಬೊಟ್ಟೊಂದನ್ನು
ಆಗಾಗ ಒತ್ತುವಳು, ಚಟ್ಟನೆ ಮುಚ್ಚಳವು ಪುಟನೆಗೆವುದು, ಆಗ ಬೆಟ್ಟವೇ
ಕಳಚಿಬಿದ್ದಂತಾಗುವುದು ಅವಳ ತಲೆಯ ಮೇಲೆ. ಕಾರಣ, ಅದರೊಳ
ಗಿಂದ ಮಿಂಚು ಬೆಳಗನ್ನು ಹೊರಸೂಸುತ್ತಿದ್ದುದು ಒಂದೇ ಒಂದು ಕಮಲು
ಡಾಕ್ಷರರ ಪತ್ನಿಯಿಂದ ಎರವಾಗಿ ತಂದಿದ್ದ ಎರಡು ಕವಲುಗಳಲ್ಲಿ ಈಗಿರು
ವುದು ಒಂದೇ ಒಂದು! ರಾಮಿಯು ನಿಂತಿದ್ದಂತೆ ಅವಳ ಹೃದಯವು
ಮೊರೆಯಿಡುತ್ತಿತ್ತು-ದೇವರೇ ಸಲಹು!' ಎಂದು.
------------------------------------------
ನಂದಾದೀಪ ೪೨

ನಿನ್ನೆ ಮದುವೆಯ ಚಪ್ಪರದಿಂದ ರಾಮರಾಮಿಯರು ತಮ್ಮ ಮನೆಗೆ
ಹೊರಡುವಷ್ಟರಲ್ಲಿ ಕತ್ತಲಾಗಿತ್ತು. ಚಪ್ಪರವು ಬರಿದಾಗುತ್ತ ಬಂದಿತ್ತು.
ಆದರೂ ಮುನ್ಸಿಫರ ಕಡೆಯಿಂದ ಮನೆಗೆ ಕೊಂಡುಬಿಡುವ ಕೊನೆಯ
ಆತಿಥ್ಯ ಸತ್ಕಾರವಿನ್ನಾರಿಗಾದರೂ ಆಗಲಿಕ್ಕಿದೆಯೋ ಏನೋ ಎಂದು ಕಾದು
ನಿಂತಿತ್ತು 'ವಿಮಾನ್ ಎಂಡ್ ಕೋ'ರವರ ಅಲಂಕರಿಸಿದ ಕಾರುಗಳ
ಲ್ಲೊಂದು. ರಾಮರಾಮಿಯರು ಅದನ್ನೇರಿದರು. ರಾಮಿಗೆ ಅಂದಿನ
ಆನಂದದ ಅಮಲು ಹದಮಾರಿ ತಲೆಗೇರಿತ್ತು. 'ಹಿಂದಿನಾಸನದಲ್ಲಿ ನಾವು
ಸತಿಪತಿಗಳು; ಮುಂದಿನದರಲ್ಲಿ ಡ್ರ್ಯಾವರ್; ಪತಿಪತ್ನಿಯರು ಗಾಳಿಗಲೆ
ದಾಡುವ ರೀತಿಯೇ ಇದು!' ಎಂದು ಮಿಯ ಮದವೇರಿದ ತಲೆಯಲ್ಲಿ
ಮಿಂಚಿತು. ಆಗವಳು ಮೇಲೆ ನೋಡಿದಳು, ಆಚೆ ನೋಡಿದಳು, ಈಚೆ
ನೋಡಿದಳು, ತಮ್ಮ ಸುತ್ತು ಮುತ್ತು ನೋಡಿದಳು-ಮಲ್ಲಿಗೆಯ ಮಾಲೆ
ಗಳಿಂದೊಪ್ಪಿ ಘಮಘಮಿಸುವ ಕಾರು! ಮೇಲಿರುವನು ನಗುತ್ತ ಜಗವನ್ನೇ
ನಗಿಸುವ ಚಂದಿರ! ಸುತ್ತಲೂ ಮಂದಮಂದವಾಗಿ ಬೀಸುವ ತಂಗಾಳಿ!
ಮದುವೆಯ ಚಪ್ಪರದಲ್ಲಿ ಬೇಗೆ ಹಿಡಿದು ಬೆಂದು ಬೆವರಿಂದ ಮಿಂದ
ರಾಮಿಯ ಮೈಗೆ ಬೀಸಿತು ತಂಪಾಗಿ ಇಂಪಾಗಿ ಆ ಕಂಪುಗೊಂಡ ಸಂಜೆಯ
ತಂಗಾಳಿ! ಗಿಡಬಳ್ಳಿಗಳು ನಗುತ್ತಿವೆ, ಮನೆಮರಗಳು ನಗುತ್ತಿವೆ, ಎಲ್ಲವೂ
ನಗುತ್ತಿವೆ ತೊಳಗಿ ಬೆಳಗುವ ಆ ಬೆಟ್ಟಿಂಗಳಲ್ಲಿ! ಹೀಗೆ ಎಲ್ಲಿ ಕಣ್ಣೆಸೆದರೂ
ಅಲ್ಲಿ ಆನಂದೋದ್ರೇಕಗೊಳಿಸುವ ಸನ್ನಿವೇಶಗಳೇ, ರಾಮಿಯು ಪೂರ್ಣ
ಮತ್ತಳಾಗಿಯೇ ಹೋದಳು, ತಮ್ಮದೇ ಆ ಕಾರು ಎಂದು ಬಗೆದಳೋ
ಏನೋ, ಅಂತೂ ಡ್ರ್ಯಾಯಾವರಗೆ ಹೇಳಿಯೇ ಬಿಟ್ಟಳು-ಬೀದಿ ಬೀದಿ ಹಾದು
ಹೋಗುವುದು ಬೇಡ ತುಸು ಸುತ್ತಾದರೂ ವ್ಯಥೆಯಿಲ್ಲ, ಗಾಳಿಗೋಪುರದ
ಹಾದಿಯಿಂದ ಕಾರು ಹೋಗಲಿ!-ಎಂದು. ಸರಿ, ಕಾರು ಉರುಳಿತು;
ಗಾಳಿಯು ತನ್ನಾಟವನ್ನು ತೊಡಗಿತು, ರಾಮಿಯ ಸೆರಗಿಂದೊಮ್ಮೆ ರಾಮ
ರಾಯನ ಕೆನ್ನೆಗೊಂದೇಟು! ಮತ್ತೊಮ್ಮೆ ಅದರಿಂದಲೆ ಅವನ ಕೊರಳಿಗೆ
ಮಾಲೆ! ಸೆರಗಿನ ಕರೆಯೆಳೆಗಳಿಂದ ರಾವಿಯ ಕಮಲಕ್ಕೆ ಸಿಕ್ಕಿನ ಗಂಟು!
ಅನಂತರ ಹಾಗೆಯೆ ರಾಮರಾಯನ ಕಿವಿಯೊಂಟಿಗೆ! ಇವರದನ್ನು ಬಿಡಿಸಿ
ಕೊಂಡು ನಗುವಾಗ ತಾನೂ ಅವರೊಡನೆ ಹಗ್ಗ ಕ್ಲಾ! ಎನ್ನುವಂತೆ
------------------------------------------
೪೩ ದೊಡ್ಡವರ ವಜ್ರ

ರಾಮಿಯ ಸೆರಗನ್ನು ಹಿಡಿದು ಹಿಂದೆಳೆದು ಧ್ವನಿ ಹುಟ್ಟುವಂತ ಕೊಡಹು
ತಿತ್ತು ಆ ತುಂಟಗಾಳಿ! ರಾಮಿಯು ಅದಾವ ವಿಲಾಸ ವೈಭವದ ಸುಖಾನು
ಭವಕ್ಕಾಗಿ ಅನುದಿನವೂ ಬಾಯಾರಿ ಹಾದೊರೆಯುತ್ತಿದ್ದಳೋ ಅದನ್ನಿಂದು
ಮನದಣಿಯೆ ಕುಡಿದು ಮೈದಣಿಯೆ ಪಡೆದು ಮದವೇರಿ ತನ್ನೊಳಗಂದು
ಕೊಂಡಳು. ಇಂದಿನ ದಿನ ನನ್ನದು! ಎಂದು.

ರಾ ಮ ರಾ ಮಿ ಯ ರು ಕಾರಿನಿಂದ ಇಳಿದು ಮನೆಹೊಕ್ಕರು.
ರಾಮಿಯು ಆ ಡಿ ಗೆ ಯ ಕೋಣೆಗೆ ಹೋಗಿ ದೀಪ
ಹಚ್ಚಿಕೊ ೦ ಡು ಈಚೆಯ ಕೋಣೆಗೆ ಬಂದಳು, ದೀಪಕ್ಕಾಗಿ
ಕಾಯುತ್ತ ಅಲ್ಲಿ ನಿಂತಿದ್ದ ತನ್ನ ಪತಿಯನ್ನು ಕಂಡು,-ಆರ್ಯಪುತ್ರಾ,
ಏನಪ್ಪಣೆ?” ಎಂದು ರಂಗಭೂಮಿಯ ಭೂಮಿಕೆಯನ್ನು ವಹಿಸುವಷ್ಟ
ರಲ್ಲಿಯೇ ಆತನು ಗಾಬರಿಗೊಂಡು ಚೀರಿಬಿಟ್ಟನು...ಅಯ್ಯೋ, ನಿನ್ನ
ಕಮಲು ಎಲ್ಲಿ? ಎರವಿನ ಕಮಲು!' ತಟ್ಟನೇ ಕಿವಿಗೆ ಹಾರಿದವು ರಾಮಿಯ
ಕೈಗಳು, ಹೌದು, ಎಡಗಿವಿಯಲ್ಲಿ ಕಮಲು ಇರಲಿಲ್ಲ! ಆಗ
ಅವರಿಬ್ಬರ ಮನಸ್ಸಿನಲ್ಲಿ ಒಮ್ಮೆಗೇ ಹೊಳೆಯಿತು. ಆ ಗಾಳಿಯ ಉಪಟಳ
ದಿಂದ ಸೀರೆಯ ಕರೆಯು ಕಮಲಕ್ಕೆ ಸಿಲುಕಿಕೊಂಡುದು; ಅದನ್ನೆಳೆದು
ಬಿಡಿಸಿದುದು; ಆಗ ಅದರ ತಿರುಪು ಸಡಿಲಾಗಿ ಮತ್ತೆಲ್ಲೋ ಅದು ಬಿದ್ದು
ಹೋಗಿರಬಹುದೇ? ಅಲ್ಲಿಂದಲೆ ರಾಮರಾಯನು ನೆಟ್ಟಗೋಡಿದನು ವಿಮಾನ್
ಎಂಡ್ ಕೋರವರ ಗ್ಯಾರೇಜಿಗೆ, ಆ ಡವರನನ್ನು ಕರೆದು--ನಾವು
ಕುಳಿತ್ತಿದ್ದಲ್ಲಿ ಏನಾದರೂ ಬಿದ್ದಿತೇ?” ಎಂದ. 'ಗ್ಯಾರೇಜಿನೊಳಗೆ ಕಾರು
ಉರುಳಿದರೆ ಸಾಕೆಂದಿದ್ದೆ ನಾನು ಸೋತುಸುಣ್ಣವಾಗಿ ಹೋಗಿ ರಟ್ಟೆಗಳ
ರಡೂ ಸಿಡಿಯತೊಡಗಿವೆ. ನಾಳೆ ನೋಡಿ ಹೇಳಿದರೆ ಸಾಕೆಂದಿದ್ದರೆ ಹಾಗೆ,
ಇಲ್ಲವಾದರೆ ಈಗಲೇ ಹೋಗಿ ನೋಡಿಕೊಂಡು ಬನ್ನಿ' ಎಂದು ಡ್ರಾವರನು
ಗ್ಯಾರೇಜಿನ ಬೀಗದ ಕೈಯನ್ನೂ ಮಿಂಚುಬೆಳಕನ್ನೂ ಕೊಟ್ಟನು.

* ಅಲ್ಲೇನು ಸಿಕ್ಕಿತು? ರಾಮರಾಯನು ಮನೆಗೆ ಹಿಂತಿರುಗಿ ಬಂದು
ಉಸ್ಸೆಂದು ನಿಟ್ಟಿಸಿರುಗರೆದು ತಲೆಗೆ ಕೈಗೊಟ್ಟು ಕುಳಿತುಬಿಟ್ಟನು. ಎಲ್ಲಾ
ದರೂ ಹಾದಿಯಲ್ಲಿ ಬಿದ್ದಿರಬಹುದೆ? ಎಂಬೊಂದಾಶೆಯ ತಂತುವನ್ನು ನಿರಾ
ಶೆಯಾಗಲೊಪ್ಪದ ಮನಸ್ಸು ಹೊಸೆಯಿತು. ತನ್ನ ಮನೆಯಿಂದ ಗಾಳಿಗೋ
----------------------------------------
ನಂದಾದೀಪ ಪುರದ ೪೪

ಮಾರ್ಗವಾಗಿ ಮುನ್ನಿಫರ ಮನೆಯ ವರೆಗೆ, ಅಲ್ಲಿಂದ ಅದೇ ಹಾದಿ
ಯಾಗಿ ಹಿಂದಕ್ಕೆ ಮನೆಗೆ ಹೀಗೆ ಎರಡು ಸಲ ಸುತ್ತಿದನು ರಾಮರಾಯ,
ಅಷ್ಟರಲ್ಲಿ ಅರ್ಧರಾತ್ರಿ ಮೀರಿಯ: ತಿಂಗಳು ಕ೦ತಿತು. ಇಬ್ಬರಿಗೂ ನಿದ್ದೆಯಿ
ಲ್ಲದೆಯೇ ಬೆಳಕು ಹರಿಯಿತು. ಮುಂಜಾನೆ ಒಂದು ಸುತ್ತು ಹುಡುಕಿ ಬರುವೆ
ನೆಂದು ರಾಮರಾಯನು ಹೋಗಿದ್ದನು, ಅದೊಂದು ಆಶಾತಂತುವನ್ನು
ಹೊಸೆಯುತ್ತ “ದೇವರೇ ತೋರಿಸಿಕೊಡು!”ಎಂದು ಮೊರೆಯಿಡುತ್ತ
ಬಾಗಿಲ ಬಳಿ ನಿಂತಿದ್ದಳು ರಾಮಿ.

ರಾಮರಾಯನು ದೂರದಲ್ಲಿ ಬರುವ ಪರಿಯನ್ನು ಕಂಡೇ ರಾಮಿಯ
ಆ ಆಶಾಪಾಶವೂ ಹರಿದು ಚೂರಾಯಿತು, ಅವನು ಒಳಗೆ ಬಂದು ಉಸ್ಸೆಂದು
ಕುಳಿತಾಗ ಅವಳ ಎದೆಯ ಬಿರಿದು ಬಿದ್ದಂತಾಯಿತ್ತು. ಇನ್ನೇನು
ಗತಿ? ರಾಮರಾಯನು ಕರಡಿಗೆಯನ್ನು ಪರೀಕ್ಷಿಸಿದಅದರಲ್ಲಿ ಮದ್ರಾಸಿನ
ದೊಂದು ಕಂಪೆನಿಯ ಹೆಸರು ಇತ್ತು. ಅಲ್ಲಿಯ ದಳ್ಳಾಳಿಯೊಬ್ಬನೂ ಆ ಸಮ
ಯದಲ್ಲಿ ಚಂದ್ರಪುರದಲ್ಲಿ ಬಂದಿಳಿದಿದ್ದನು, ರಾಮರಾಯನು ಆತನನ್ನು ಕಂಡು
ಉಳಿದಿದ್ದೊಂದು ಕಮಲನ್ನೂ ಕರಡಿಗೆಯನ್ನೂ ಅವನಿಗೆ ತೋರಿಸಿ ಅಂತ
ಹದೇ ಮತ್ತೊಂದು ವಜ್ರದ ಕಮಲನ್ನು ತರಿಸಿಕೊಡಬೇಕೆಂದನು. ಎಲ್ಲ
ವನ್ನೂ ರಹಸ್ಯವಾಗಿಟ್ಟು ತನ್ನ ಮಾನ ಕಾಪಾಡಿಕೊಡಬೇಕೆಂದೂ ಬಡವ
ನನ್ನು ನಡೆಸಿಕೊಡಬೇಕೆಂದೂ ಅಂಗಲಾಚಿ ಬೇಡಿಕೊಂಡನು ರಾಮರಾಯ.
ದಳ್ಳಾಳಿಯು ಬಹಳ ಸಹಾನುಭೂತಿ ತೋರಿಸಿದ, ಕನಿಕರಗೊಂಡು ಮಾತಾ
ಡಿದ, ಮುಂಗಾಣಿಕೆಕೊಳ್ಳದೆಯೆ ತಂತಿಕೊಟ್ಟು ಮೂರೇದಿವಸದಲ್ಲಿ ತರಿಸಿ
ಕೊಡುವೆನೆಂದ, ಹೆಚ್ಚೇನು? ತನ್ನ ದಳ್ಳಾಳಿತನದ ಲಾಭಾಂಶವನ್ನೂ ಬಿಟ್ಟು
ಕೊಡಲು ಸಿದ್ದನಾದ! ಬೇರೆ ಯಾರೇ ಆಗಲಿ ಕಡಿಮೆಯೆಂದರೆ ನಾಲ್ಕು
ನೂರು ರೂಪಾಯಿಗಳನ್ನು ಮೊದಲು ಮಡಗಬೇಕಿತ್ತು. ಆದರೆ ನೀವು
ಬಡವರು, ನಿಮ್ಮ ಅವಸ್ಥೆ ಕೇಳಿ ಎದೆ ಕರಗಿ ನೀರಾಯಿತು. ಅದುಕಾರಣ
ನಾಡದು ಮೂರುನೂರು ರೂಪಾಯಿಗಳನ್ನು-ಅದರ ಯಥಾರ್ಥ ಮೌಲ್ಯ
ವನ್ನು ಮಾತ್ರ ತನ್ನಿರಿ' ಎಂದನು ಆ ಪುಣ್ಯಾತ್ಮ ಮಹಾರಾಯ.

ಮೂರು ನೂರು ರೂಪಾಯಿಗಳು! ಮೂರು ದಿವಸದೊಳಗೆ! ಎಲಿಂದ
ತಾವೇ ಬಂದಾವು? ರಾಮಿಯು ತನ್ನ ಮಂಗಳ ಸೂತ್ರದ ತಾಳಿಯೊಂದನ್ನಿಟ್ಟು
----------------------------------------
೪೫ ದೊಡ್ಡವರ ವಜ್ರ

ಕೊಂಡು ಉಳಿದ ತನ್ನ ಆಭರಣವನ್ನೆಲ್ಲಾ ರಾಮರಾಯನ ಕೈಯಲ್ಲಿ ಕೊಟ್ಟು
'ಇವೆಲ್ಲ ಮಾರಿಹೋಗಲಿ, ನಮ್ಮ ಮಾನ ಉಳಿಯಲಿ!” ಎಂದಳು. ಆದರೆ
ಮತ್ತೂ ಬೇಕಾಯಿತು ಒಂದುನೂರಎಪ್ಪತ್ತೈದು ರೂಪಾಯಿ! ಕೊನೆಗೆ ಪರ
ಸ್ಪರ ಸಹಾಯಕ ಸಂಘಕ್ಕೆ ಶರಣುಹೋಗುವೆನೆಂದು ನಿಶ್ಮಿಸಿ ಪ್ರಕೃತ
ಅಲ್ಲಿ ಇಲ್ಲಿ ಇಷ್ಟಿಷ್ಟು ಕೈಕಡಮಾಡಿ ಮೂರನೆಯ ದಿನಕ್ಕೆ ಹಣದ ಗಂಟೂ
ಆಯಿತು; ಒಂಟ ಕಮಲೂ ಜೋಡಾಯಿತು. ಅವುಗಳಲ್ಲಿ ಇದ್ದುದು
ಯಾವುದು ಬಂದುದು ಯಾವುದು ಎಂದು ಹೇಳಲು ಬರುತ್ತಿದ್ದಿಲ್ಲ: ಅಷ್ಟು
ಜೊತೆ ಸರಿಹೋಗುತ್ತಿದ್ದು ವು ಅವು! ರಾಮಿಯು ಅವನ್ನು ಕೊಟ್ಟು ಬಂದಳು.

ಆದರೆ ಎರವಾಗಿ ಬಂದುದು ಸ್ಥಿರವಾಗಿದ್ದುವುಗಳನ್ನೂ ಮುಕ್ಕು
ನೀರು ಕುಡಿದು ಹಾರಿಹೋಯಿತಲ್ಲ! ಆ ಮೂರು ನೂರು ರೂಪಾಯಿಗಳನ್ನು
ಪುನಃ ಒಟ್ಟು ಗೂಡಿಸಬೇಕಾದರೆ ರಾಮರಾಮಿಯರು ಅರೆಹೊಟ್ಟೆಯುಂಡು
ಕಿರಿಬಟ್ಟೆಯುಟ್ಟು ಬಡತನದ ಹಿಡಿತದಲ್ಲಿ ಮಿಡುಕಬೇಕಾಯಿತು. ಆ ಉದ್ದದ
ಮೂರು ವರುಷಗಳ ಕಾಲ! ಅಂದಿನಿಂದ ಇಂದಿನ ವರೆಗೆ ರಾಮಿಯು
ಮನೆಮೆಟ್ಟಲಿಳಿಯಲಿಲ್ಲ, ಮದ್ರಾಸಿನ ಡಾಕ್ಟರರ ಹೆಂಡತಿಯು ಮೂರ
ನೆಯ ಸಲ ತವರು ಮನೆಗೆ ಬಂದರೂ ರಾಮಿಯು ಕಾಣಸಿಗಲಿಲ್ಲ. ಅದು
ಕಾರಣ ಅವರಾಗಿಯೆ ಬಂದರು ರಾಮಿಯ ಮನೆಗೆ, ಅವರನ್ನು ಕಂಡೊ
ಡನೆ ರಾಮಿಗೊಮ್ಮೆ ಮೈ ಜುಮ್ಮೆಂದಿತು! ಅಂದು ಮರೆಸಿದ್ದನ್ನು ಇಂದು
ಮೊದಲಾಗಿ ತಾನಾಗಿ ಹೇಳಿಬಿಡುವುದೊಳ್ಳಿತೆಂದು ಅವಳಿಗನ್ನಿಸಿತು. ಹಿಂಜ
ರಿಯುವ ಸ್ವರವನ್ನು ಮುಂದೆಳೆದೆಳೆದು ಹಿ೦ಬೀಳುವ ನಾಲಗೆಯನ್ನು
ಮುಮ್ಮಾಡಿಮಾಡಿ ತೊಡಗಿದಳು--'ಅಂದು ... ನಾನು ... ಎರವಾಗಿ
ತಂದಿದ್ದ... ನಿಮ್ಮ ... ವಜ್ರದ ಕಮಲು . . .. ಎನ್ನುವಷ್ಟರಲ್ಲಿ ಆ
ಗೆಳತಿಯು ಅವಳ ನುಡಿ ತಡೆದು, 'ಹ್ಹ! ವಜ್ರದ ಕವಲುಗಳೆ ಅವು? ಕೆಮಿ
ಕಲ್ ಡ್ಯಾ ಮಂಡ್!” ಎಂದಳು, ರಾಮಿಯು ಆಶ್ಚರ್ಯಗೊಂಡು, 'ಕೆಮಿ
ಕಲ್ ಡೈಮಂಡ್ಸ್? ನಿಮ್ಮ ತಂದೆಯು ನಿಮಗೆ ವಜ್ರದ ಕಮಲುಗಳನ್ನು
ಹಾಕಿದ್ದರಲ್ಲ?' ಎಂದು ಕೇಳಲು, “ಹೌದು, ಆದರೆ ಕಾರು ಕೊಂಡುಕೊಳ್ಳ
ಲಿಕ್ಕೆ ಹಣ ಕಡಿಮೆಯಾಯಿತು. ಅವುಗಳನ್ನು ಮಾರಲೇಬೇಕಾಯಿತು.
ಆ ಕಾರಿನೊಡನೆ ನನ್ನ ಕಿವಿಗೆ ಬಂತು ಈ 'ದೊಡ್ಡವರ ವಜ್ರ' ಇದೇ ಅಂದು
-------------------------------------
ನಂದಾದೀಪ ೪೬

ನಿನಗೆ ಎರವಾಗಿ ಕೊಟ್ಟಿದ್ದ ಮೂವತ್ತು ರೂಪಾಯಿಯ ಕಮಲಿನ ಜೊತೆ!”
ಎಂದು ಪ್ರತ್ಯುತ್ತರ ಬಂತು! ವಾಚಕ ಮಹಾಶಯ, ರಾಮಿಯ ಮನಸ್ಸಿ
ನಲ್ಲಿ ಆಗ ಏನೇನು ತೋರಿಸಬಹುದು! ನೀವೇ ಕಲ್ಪಿಸಿಕೊಳ್ಳಿರಿ; ನಮ
ಗಂತೂ ಲೇಖನಿಯು ಮುಂದುವರಿಯಲು ಕೇಳುವುದಿಲ್ಲ. ಅವಳು 'ದೊಡ್ಡ
ವರ ವಜ್ರ! ಹ್ಹ, ದೊಡ್ಡವರ ವಜ್ರ!' ಎನ್ನುತ್ತ ಪ್ರಯತ್ನದ ಕಿರುನಗೆ
ಯಿಂದ ಬೇರೆ ಮಾತೆತ್ತಿದಳು. ಅದೂ ಮುಂದುವರಿಯದಾಯಿತು, ತನ
ಗೇನೋ ಅಂದು ವಿಪರೀತ ತಲೆನೋವೆಂದು ಗೆಳತಿಯನ್ನು ಕಳುಹಿಕೊಟ್ಟು
ಬಾಗಿಲಿಕ್ಕೆ ಬಂದು ನೆಲದ ಮೇಲೆ ಬಿದ್ದಂತೆ ಗೋಡೆಗೊರಗಿ ಕುಳಿತು
ಬಿಟ್ಟಳು. ದೊಡ್ಡವರ ವಜ್ರ! ದಳ್ಳಾಳಿಯ ಸುಳ್ಳು ವಜ್ರ! ನನ್ನನ್ನು
ಗೋಳುಗುಡಿಸಿ ಬಾಳುಗೆಡಿಸಿದ ಆ ಹಾಳು ವಜ್ರ!' ಎನ್ನುತ್ತ ರಾಮಿಯು
ಗಳಗಳನೆ ಅತ್ತು ಬಿಟ್ಟಳು.
[* ಮೊಪಾಸಂತನ ಕಥಾವಸ್ತು (plot) ವನ್ನು ಆಧರಿಸಿ ಬರೆದುದು.]
========================================
ಆಪತ್ತಿನಲ್ಲಿಯೂ ಸಂಪತ್ತು

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ
ಹೋಗದೆ ಇಲ್ಲ. ಬೆಟ್ಟ ದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ
ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ,
ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ ಕಂಡು ಕೆರೆಯಲ್ಲಿ
ಮಿಂದು ದೇಗುಲವನ್ನು ಹೊಕ್ಕು ಬಂದುಬಿಟ್ಟನೆಂದರೆ ಅವನ ಮನಸ್ಸಿ
ಗಷ್ಟೊಂದು ಆನಂದ, ಮೈಗೆಷ್ಟೋ ಸುಖ, ದಿನವೆಲ್ಲ ಉತ್ಸಾಹವೇ
ಉತ್ಸಾಹ!

ಹೀಗೊಂದು ದಿನ ಮಿಂದ ಉಲ್ಲಾಸದಿಂದ ರಾಮರಾಯನು ಕದ್ರೆಯ
ಬೀದಿಗಿಳಿದು ಬರುತ್ತಿದ್ದ-ಬೀದಿಯ ಇಕ್ಕಡೆಯಲ್ಲಿಯೂ ತುಸು ಹಿಂದೆ
ಸರಿದು ತೆಂಗಿನ ತೋಟಗೆಳ ಆರೆಮರೆಯಲ್ಲಿ ಮಂಟಪದಂತೆ ಕಂಗೊಳಿಸುವ
ಮನೆಗಳು, ಅವುಗಳ ಎದುರು ಬಗೆಬಗೆಬಣ್ಣದ ಗಿಡಬಳ್ಳಿಗಳಿಂದೊಪ್ಪುವ
ಹೂ ದೋಟಗಳು, ಅವುಗಳ ನಡುವೆ ಮುದ್ದು ಚಿಟ್ಟೆಗಳಂತೆ ಚಂದಾಗಿ ಅಡ್ಡಾ
ಡುತ್ತಾ ಹೂವುಗಳನ್ನು ಕೊಯ್ಯುವ ಚಿಕ್ಕ ಬಾಲಕಿಯರು! ಇವನ್ನೆಲ್ಲ
ನೋಡುತ್ತ ರಾಮರಾಯನು ಮಲ್ನಡೆಯಿಂದ ಮುಂದುವರಿಯುತ್ತಿದ್ದ.
ಹಿಂದಿನಿಂದ ಇ೦ಪಾದೊಂದು ಧ್ವನಿಯು 'ಅಮ್ಮ ಕರೀತಾಳೆ' ಎಂದಂತಾ
ಯಿತು. ತಿರುಗಿ ನೋಡಿದ, ಚಿಕ್ಕ ಚೆಲುವಿನ ಹುಡುಗಿ! ನಾಚಿಕೆಯೊಡನೆ
ಹೋರಾಡುತ್ತ ಹೋರಾಡುತ್ತ ಮತ್ತೂ ಚೆಲುವಾಗಿ ಹೇಳಿದಳು-- ' ಅಮ್ಮ
ಕರೀತಾಳೆ ನಿಮ್ಮನ್ನ 'ಎಂದು, “ಮಗೂ, ನಿನ್ನಮ್ಮನೆಂದರೆ ಯಾರು, ಎಲ್ಲಿ?'
ಎಂದ ರಾಮರಾಯ. 'ನನ್ನಮ್ಮ? ನನ್ನಮ್ಮ!' ಎನುತ್ತ ಆ ಮುದ್ದುಗುವ
ರಿಯು ಅಲ್ಲೇ ತುಸು ಹಿಂದೆ ಎಡಗಡೆಗೆ ನೋಡಿದಳು. ರಾಮರಾಯನ
ಕಣ್ಣೂ ಆ ದಿಕ್ಕಿಗೆ ಹರಿಯಿತ್ತು ಅಲ್ಲಿ ಚಿಕ್ಕ ತಲೆಬಾಗಿಲ (Gate)
ಒಳಗಡೆ ಅಂಗೈಯಂಗಳದ ತುದಿಯಲ್ಲಿ ಚಿಕ್ಕ ಚೊಕ್ಕ ಮನೆಯೊಂದು.
ಅದರ ಜಗಲಿಯ ಮೆಟ್ಟಿಲಿನ ಬಳಿಯ ದುಂಡುಗಂಬವನ್ನು ನಮ್ಮ ಅರೆಮರೆ
-------------------------------------
ನಂದಾದೀಪ ೪೮

ಯಾಗಿ ನಡು ಹರೆಯದ ಬೆಡಗಳಿಯದ ನೀರೆಯೊಬ್ಬಳು ನಿಂತು ತನ್ನ
ಮಗಳ ಬೇಡಿಕೆಗೆ ಸೈಗೊಟ್ಟಂತ ರಾಮರಾಯನ ಕಣ್ಣನ್ನು ಹಿಡಿದು ನಸು
ತಲೆ ಬಾಗಿಸಿ ಕರೆಕೊಟ್ಟಳು.

ಕರೆಬಾರದೇ ತೂರುವ ಸ್ವಭಾವದವನು ರಾಮರಾಯ, ಅವನ ದಿನ
ಚರ್ಯವೇ ಅಂತಹದು. ಹೀಗಿರುವಲ್ಲಿ 'ಬನ್ನೀ' ಎಂದ ಕಡೆಗೆ ಹಾರ
ದಿರುವವನೆ? ಅಂಗಳ ಹತ್ತಿದ, ಜಗಲಿ ಏರಿದ, ಒಮ್ಮೆ ಕಣ್ಣು ಸುಳಿಸಿ ಆ ಚೊಕ್ಕ
ಮನೆಯ ಒಳಗೆ ಹೊರಗೆ ಎಲ್ಲ ನೋಡಿಬಿಟ್ಟ. ಅಂತಹ ಚಿಕ್ಕ ಚೊಕ್ಕ
ಮನೆಯನ್ನು ಅವನು ಆ ವರೆಗೆ ಕಂಡಿಲ್ಲವೆಂದೇ ತೋರಿತು- ಕಳಕಳನೆ
ನಗುವ ನೆಲ, ಮಲ್ಲಿಗೆಯ ಬಿಳುಪಿನ ಗೋಡೆ, ಅದಕ್ಕಂದವಾದ ಹಸುರುರಂಗಿನ
ಅಂಚು, ನಡುವೆ ಅಲ್ಲಲ್ಲಿ ಕಳೆಯೇರುವಂತೆ ಸಮಸೂತ್ರದಲ್ಲಿ ತೂಗಿಸಿರುವ
ಚಿತ್ರಪಠಗಳು, ಹೊರಗೆ ಚೊಕ್ಕವಾಗಿರಿಸಿದ್ದ ಆ ಚಿಕ್ಕ ಅಂಗಳದ ಅಂಚಿನ
ಸುತ್ತ ಹೂವರಳಿ ನಗುತ್ತಿರುವ ಬಗೆಬಗೆಯ ಗಿಡಬಳ್ಳಿಗಳು! ಹೀಗೆ ಎತ್ತ
ನೋಡಿದರೂ ಸಂತುಷ್ಟಿಯ ಸರಳ ಸುಖಜೀವನದ ಲಕ್ಷಣಗಳೇ. ಅವು
ಗಳ ನಡುವೆ, ಸವಿಗಟ್ಟಾದ ಚೌಕಟ್ಟಿನಲ್ಲಿ ಬಿಗಿದ ಚಿತ್ರದಂತೆ ಕಂಗೊಳಿಸು
ತ್ತಿದ್ದಳು ಮಗಳಿಂದೊಡಗೂಡಿ ನಿಂತಿದ್ದ ಆ ನಡುಹರೆಯದ ಸಡಗರವಳಿಯದ
ತಾಯಿ ಅಲ್ಲಿ ಆ ಕಿರಿಜಗಲಿಯಲ್ಲಿ ನಿಂತು ಇಂತಹ ನೋಟಗಳ ಮೇಲೆಲ್ಲ
ರಾಮರಾಯನು ದೃಷ್ಟಿ ಹರಿಸುತ್ತಿದ್ದಾಗಲೇ ಆ ವ್ಯಕ್ತಿ ಯಾರಾಗಿರಬಹು
ದೆಂದು ಹಲವು ಹದಿನೆಂಟು ಊಹೆಗಳು ಅವನ ತಲೆಯಲ್ಲಿ ಮಿಂಚಿ
ಮಾಯವಾಗದೆ ಇದ್ದಿಲ್ಲ.

ಅಷ್ಟರಲ್ಲಿ ಲಲಿತೂ, ಮಾಮನನ್ನು ಒಳಗೆ ಕರೆದುಕೊಂಡು ಬಾರೇ,
ಅಲ್ಲೇ ಎಷ್ಟು ಹೊತ್ತು ನಿಲ್ಲಿಸಿಕೊಳ್ಳುವಿಯೆ?' ಎನ್ನುತ್ತ ಆ ಹೆಂಗಸು ಒಳಗೆ
ಕಾಲಿಟ್ಟಳು. ಅನಿರೀಕ್ಷಿತವಾಗಿ ಬರುತ್ತಿದ್ದ ಈ ಹೊಸಹೊಸ ಸನ್ನಿವೇಶಗಳಿಂದ
 ರಾಮರಾಯನು ಬಗೆಗೆಟ್ಟು ಆ ಚಿಕ್ಕ ಹುಡುಗಿಯ ಕೈಗೊಂಬೆಯಂತಾಗಿ
 ಒಳಗೆ ಎಳೆಯಲ್ಪಟ್ಟ, ಅಲ್ಲಿ ಚಿಕ್ಕ ಪಡಸಾಲೆಯ ಒಂದು ಮಗ್ಗುಲಲ್ಲಿ
 ಹಾಸಿದ್ದ ಬಣ್ಣದ ಚಾಪೆಯ ಮೇಲೆ ಕುಳಿತುಕೊಂಡ, ಎದುರಿನ ಗೋಡೆ
 ಯಲ್ಲಿ ಕೆಳಗಡೆಯಿತ್ತು ದೇವರಕಂಡಿ, ಅದರ ಮುಂದೆ ಹೂವಿನ ತಟ್ಟೆ
 ಬೆಳಗಿ ತೊಳಗುತ್ತಿರುವ ಪೂಜಾ ಪಾತ್ರೆಗಳು ಕಂಡಿಯ ಇಬ್ಬದಿಯಲ್ಲಿ
--------------------------------------
೪೯ ಆಪತ್ತಿನಲ್ಲಿ ಯೂ ಸಂಪತ್ತು
ಹಾಗೂ ಮೇಲೆ ಗೋಡೆಯಲ್ಲಿ ಸ್ತೂಪಾಕಾರವಾಗಿ ದೇವತಾಪಠಗಳು, ತುದಿ
ಯಲ್ಲಿ ಲಕ್ಷ್ಮಿ ಚಿತ್ರದ ಹಳೆಯದೊಂದು ಕೆಲೆಂಡರ್, ನಡುವಿನಲ್ಲೊಂದು
ಪುರುಷನ ಭಾವಚಿತ್ರ! ಅದರ ಕಡೆಗೆ ರಾಮರಾಯನ ಕಣ್ಣು ಬಿದ್ದಾಗ
'ಅದು ನನ್ನಪ್ಪ!” ಎಂದಳು ಹುಡುಗಿ, ಆ ಮಾತಿಗೆ ಸೈಗುಟ್ಟಿ ದಂತೆ
ನಿಟ್ಟುಸಿರೊಂದು ಬಂತು ಆ ತಾಯಿಯಿಂದ, ಅವನು ನಿಂತಿದ್ದ ಆಕೆಯನ್ನು
 ಮುಖವೆತ್ತಿ ನೋಡಿದ, ಮೋರೆಯಲ್ಲಿ ಕುಂಕುಮವಿದ್ದಿಲ್ಲ. ಮೂಗಿನಲ್ಲಿ....
 ಹಾ! ಕಣ್ಣಿನಲ್ಲಿ ನೀರು ತುಂಬಿತ್ತು! ಆಕೆಯ ವಿಷಯವಾಗಿ ಆತನು
 ಮಾಡಿದ್ದ ಆ ಹಲವೊಂದು ಊಹೆಗಳೆಲ್ಲ ಒಮ್ಮೆಗೇ ಕುಸಿದು ಬಿದ್ದು
 ಹೋದವು! ಅವನ ಹೃದಯವು ಕರಗಿ ನೀರಾಯಿತು. 'ಅಮ್ಮಾ, ಕುಳಿತು
 ಕೊಳ್ಳಬಾರದೇ? ನಿಂತಿರುವಿರೇಕೆ? ಏನೋ ಆಪತ್ತಿನಲ್ಲಿರುವಂತೆ ತೋರು
 ವಿರಲ್ಲ? ನನ್ನಿಂದೇನಾದರೂ ಉಪಕಾರವಾಗುವುದಿದ್ದರೆ ಹೇಳಿಯಮ್ಮ,
 ಸಂಕೋಚ ಬೇಡ' ಎಂದ.

'ನಿಮ್ಮಿಂದಾಗುವ ಮಹದುಪಕಾರವು ಈ ಮೊದಲೇ ಆಗಿಹೋಗಿದೆ.
ಅದರ ದೆಸೆಯಿಂದಲೇ ನಮಗೆ ಆಪತ್ತಿನಲ್ಲಿಯೂ ಈ ಸಂಪತ್ತು! ನಿಮ್ಮ ಕೈ
ಕಾಲಿಗೆ ಸುಖವಿರಲೆಂದು ನಾನು ದಿನಾಲೂ ಈ ದೇವರ ಮುಂದೆ ಬೇಡು
ತಿದ್ದೇನೆ. ನಿಮ್ಮ ಮೈ ಮೈ ಕಂಡು ಉಪಕಾರ ಹೇಳಬೇಕೆಂದು ನನ್ನ
ಹೃದಯವು ಈ ಎರಡು ವರುಷಗಳಿಂದಲೂ ಕೂಗುತ್ತಿತ್ತು. ಆದರೆ ನಿಮ್ಮ
ಊರಾಗಲಿ ಹೆಸರಾಗಲಿ ಯಾವುದೂ ಗೊತ್ತಿಲ್ಲದೆ ಪೇಚಾಡುತ್ತಿದ್ದೆ.
ಇಂದು ಅನಿರೀಕ್ಷಿತವಾಗಿ ದೇವರೇ ನಿಮ್ಮನ್ನು ತೋರಿಸಿಕೊಟ್ಟ! 'ಲಲಿತೂ,
ಅಡ್ಡ ಬೀಳೆ ಮಾಮಂಗೆ, ನಮ್ಮ ಹಿಟ್ಟು ಬಟ್ಟೆ ಯ ಪಾಡು ಇಂದು ಮಾನ
ಮರ್ಯಾದೆಯಿಂದ ಸರಾಗವಾಗಿ ಸಾಗುತ್ತಿರುವುದು ಈ ಮಾವನ ಉಪ
ಕಾರದಿಂದ!' ಎನ್ನುತ್ತ ಆಕೆಯು ಕೃತಜ್ಞತೆಯ ಕಣ್ಣೀರ ಕಾಣಿಕೆಯಿಟ್ಟು
ರಾಮರಾಯನ ಪಾದಕ್ಕೆರಗಿ ಎದ್ದು ನಿಂತಳು, ಲಲಿತೆಯೂ ಅಡ್ಡ ಬಿದ್ದಳು.
ಅವನು ಆ ಬಾಲಿಕೆಯನ್ನು ತನ್ನ ಬಳಿಗೆಳೆದು ಕುಳ್ಳಿರಿಸಿಕೊಂಡು ಆಕೆಯ
ಬೆನ್ನ ಮೇಲೆ ಕೈಯಾಡಿಸುತ್ತ ಆ ತಾಯಿಯನ್ನು ಕುರಿತು 'ಅಮ್ಮಾ,
ಅಂತಹ ಉಪಕಾರವು ನನ್ನಿಂದ ನಿಮಗಾಗಿದ್ದರೆ ನನ್ನ ಜನ್ಮವೇ ಸಾರ್ಥಕ
ವಾಯಿತೆನ್ನುತ್ತಿದ್ದೆ! ಆದರೆ ನಿಮ್ಮನ್ನೆಲ್ಲೋ ಎಂದೋ ನೋಡಿದ್ದ ಅರೆ
ಯರೆ ನೆನಪಾಗುವುದಲ್ಲದೆ ಬೇರಾವುದನ್ನೂ ನಾನರಿಯೆನಲ್ಲ!' ಎಂದ.
--------------------------------------
ನಂದಾದೀಪ ೫೦
'ನಿಮಗೆ ನೆನಪಿರಲಾರದು, ಎಂಟು ವರ್ಷಗಳ ಹಿಂದೆ ನಾವು ಉಡುಪಿ
ಯಲ್ಲಿದ್ದೆವು. ಅವರಿಗೆ ಕಚೇರಿಯಲ್ಲಿ ಕೆಲಸವಿತ್ತು. ನೀವು ಎಷ್ಟೋ ಸಲ
ಬಂದು ಅವರನ್ನು ಯಾವುದಕ್ಕೆ ಒತ್ತಾಯಪಡಿಸುತ್ತಿದ್ದಿರಿ. ಒಂದು
ದಿನ ಆದಿತ್ಯವಾರ- ನೀವು ಬಂದು ಬಹಳ ಹೊತ್ತು ಅವರೊಡನೆ ಚರ್ಚಿಸಿ
ಹೋಗಿದ್ದಿರಷ್ಟೆ ಅವರು ಕಾಫಿ ಕುಡಿಯಲಿಕ್ಕೆ ಒಳಗೆ ಬಂದರು. ಆಗ
ನಾನು, ಅವರೊಬ್ಬರು ಆಗಾಗ ಬಂದು ಒತ್ತಾಯಪಡಿಸುವುದೇನು?'
ಎಂದೆ, ಅವರಿಗೇನು! ನಾನು ಲ್ಯಾಫ್ ಇನ್ನೂರು ಮಾಡಬೇಕಂತೆ!
ಮುಂದಕ್ಕೊಂದು ಗಂಟಾಗುವುದಂತೆ! ಕೈಯಲ್ಲಿ ಕಾಸು ಉಳಿದರಲ್ಲವೆ
ಮುಂದಿನ ಗಂಟನ ಯೋಚನೆ?' ಎಂದರು ಅವರು, 'ಅಗಲಿ, ಏಕೆ ಪ್ರಯ
ತ್ನಿಸಬಾರದು?' ಎಂದೆ ನಾನು. ಈ ಊರಲ್ಲಿ ಆಗ ಅಕ್ಕಿಯ ವ್ಯಾಪಾರ
ಮಾಡುತ್ತಿದ್ದ ಅವರ ಅಣ್ಣನ ಹೆಂಡತಿಯು ಅಂದು ನಮ್ಮಲ್ಲಿದ್ದಳು. ಅವಳು
'' ಹಣವನ್ನುಳಿಸಲಿಕ್ಕೆ ಇನ್ಶೂರ್‌ ಕಂಪ್ಪಿಯಂತೆ! ಅದಕ್ಕೆ ಹಣ ಸುರಿ
ಯುತ್ತಾ ಬರುವುದಂತೆ! ಅದಕ್ಕೆ ಹಾಕುವ ಹಣವಿದ್ದರೆ ನನಗೆ ಚಿನ್ನ
ಮಾಡಿಸಿ ಕೊಟ್ಟುಬಿಡಿ' ಎಂದು ನಿಮ್ಮಣ್ಣನವರಿಗೆ ಹೇಳಿ ಎಷ್ಟೋ
ಇನ್ಶೂ‌ ಏಜಂಟುಗಳನ್ನು ಹಿಂದೆ ಕಳುಹಿಸಿದೆ ನಾನು!' ಎಂದಳು. ಅದ
ಕುತ್ತರವಾಗಿ, ಹಾಗೆ ಹೇಳಬೇಡ, ಚಿನ್ನ ಮಾಡಿಸುವುದಕ್ಕಿಂತ ವಿಮೆ
ಮಾಡುವುದು ಎಷ್ಟೋ ಮೇಲು' ಎಂದರು ನಮ್ಮವರು, ಅದನ್ನು ಕೇಳಿದ
ನಾನು, “ಹಾಗಾದರೆ ನೀವು ಸೇರಿಯೇ ಬಿಡಿರಿ, ದುಂದುಗಾರಿಕೆ ಬಿಡೋಣ,
ವೆಚ್ಚ ಕಡಿಮೆ ಮಾಡೋಣ, ಹೇಗಾದರೂ ಮಾಡಿ ಅಷ್ಟು ಹಣವನ್ನು ಉಳಿ
ಸುತ್ತ ಬರಲೇ ಬೇಕು” ಎಂದು ಧೈರ್ಯದಿಂದ ಹೇಳಿಬಿಟ್ಟೆ. ಮರುದಿನವೇ
ಅವರು ಎಂಟು ಸಾವಿರ ರೂಪಾಯಿಗೆ ಇನ್ನೂರು ಮಾಡಿದರು. .....”
ಎನ್ನುವಷ್ಟರಲ್ಲಿ ರಾಮರಾಯನು, ಹೌದು, ಈಗ ನೆನಪಾಯಿತು! ಶ್ಯಾಮ
ರಾಯರೆಂದು ಅವರ ಹೆಸರಲ್ಲವೆ? ಅಲ್ಲಿಂದ ಪುತ್ತೂರಿಗೆ ವರ್ಗವಾಗಿದ್ದಾಗ....”

ಆಕೆ-'ಹೌದು, ಆಕಸ್ಮಿಕವಾಗಿ, ಮೂರೇ ದಿವಸ ಜ್ವರ! ಯಾರೂ
ಯೋಚಿಸಿದ್ದಿಲ್ಲ ಅಷ್ಟು ಬೇಗನೆ ಎಲ್ಲ ಮುಗಿದು ಹೋಗುವುದೆಂದು ....”

ರಾಮರಾಯ-ಅಮ್ಮಾ, ಚೆಲ್ಲಿಹೋದ ಹಾಲಿಗಾಗಿ ದುಃಖಿಸಿ ಫಲ
ವೇನು? ಆದರೆ ನಮ್ಮ ಕಂಪನಿಯು ಹಣವನ್ನು ಕೊಡಲಿಲ್ಲವೆ? ಏನಾದರೂ
ಮೋಸ ಮಾಡಿತೆ?”
---------------------------------------
೫೧ ಆಪತ್ತಿನಲ್ಲಿ ಯ ಸಂಪತ್ತು
ಆಕೆ,-ಅಯ್ಯೋ! ಎಲ್ಲಿಯ ಮೋಸ? ಎಂಟು ಸಾವಿರಕ್ಕೂ
ಮಿಕ್ಕಿಯೇ ಕೊಟ್ಟಿತು. ಆದುದರಿಂದಲೇ ಹೇಳಿದೆ-ನಮಗೆ ಆಪತ್ತಿನಲ್ಲಿ
ಯೂ ಈ ಸಂಪತ್ತು ನಿಮ್ಮಿಂದಾಯಿತು ಎಂದು. ಈ ಮನೆ, ಈ ದೊಡ್ಡ
ತೋಟ, ಇದರಲ್ಲಿರುವ ಬೇರೆ ನಾಲ್ಕು ಮನೆಗಳು- ತಿಂಗಳಿಗೆ ಐವತ್ತು
ರೂಪಾಯಿಗಳ ಬಾಡಿಗೆ ಬರುತ್ತಿದೆ- ಎಲ್ಲವೂ ಆ ಹಣದಿಂದ ಇತ್ತೀಚೆಗೆ
ಕೊಂಡುಕೊಂಡುದು! ಅಂದು ನೀವು ಪದೇ ಪದೇ ಬಂದು ಅವರನ್ನು
ಒತ್ತಾಯಪಡಿಸದೆ ಇರುತ್ತಿದ್ದರೆ ಇಂದು ನನ್ನ ಗತಿ? ಈ ಮಗುವಿನ ಗತಿ?
ಅವರ ಅಣ್ಣನ ಹೆಂಡತಿಯ ಗತಿಯಂತೆ, ಅವಳ ಮಕ್ಕಳ ಗತಿಯಂತ, ಆಗಿಹೋಗುತ್ತಿತ್ತು!”

ರಾಮರಾಯ-'ಏನಾಯಿತು ಅವರಿಗೆ?'

ಆಕೆ-ಬಾವನವರಿಗೆ ಅಕ್ಕಿಯ ವ್ಯಾ ಪಾ ರ ದ ಲ್ಲಿ ಸೋಲಾ
ಯಿತು, ಸಾಲಹಿಡಿಯಿತು. ಆ ಸಾ ಲ ಸೊ ಲು ಗಳಲ್ಲಿ ಅವಳ
ಚಿನ್ನಾಭರಣಗಳೆಲ್ಲವೂ ತೇಲಿಹೋದುವು. ಚಿಂತೆ ಹಿಡಿದು ಬಾವ
ನವರು ತೀರಿಕೊಂಡರು. ಅವಳು ಮೂವರು ಹೆಮ್ಮಕ್ಕಳೊಡನೆ ಬಡ
ತೌರುಮನೆಯನ್ನು ಸೇರಿಕೊಂಡಿದ್ದಾಳೆ! ತೌರು ದೊಡ್ಡದಿರಲಿ, ಬಡತನ
ದ್ದಿರಲಿ, ಗತಿಗೆಟ್ಟು ತೌರು ಸೇರಬಾರದು; ಅತ್ತಿಗೆ ನಾದಿನಿಯರ ಕಾಲ ಕಸ
ಕ್ಕಿಂತಲೂ ಕೀಳಾಗಿ ಬಾಳಬಾರದು. ನಮ್ಮ ಮಕ್ಕಳು ಅವರ ಮಕ್ಕಳ
ಕೈರೊಟ್ಟಿಯ ಚಾರುಚೂರಿಗೆ ಬಾಯಿ ತೆರೆಯುವಂತಾಗಬಾರದು, ಆದರೆ
ಅವಳ ಅವಳ ಮಕ್ಕಳ ಬಾಳು ಈಗ ಹಾಗಾಗಿ ಹೋಗಿದೆ! ಮಾತ್ರವೆ?
ಮುಂದೆ ಆ ಬಡ ತಾಯಿಯು ಕಾಸಿಲ್ಲದೆ ಆ ಮೂರು ಹೆಮ್ಮಕ್ಕಳನ್ನು ಯಾರ
ಕೈಗೆ ಹಾಕಿಯಾಳು? ಅಂದು ಬಾವನವರ ಸಂಪಾದನೆಯ ಕೈ ಯು ಸ್ಥಿರ
ವೆಂದು ನಂಬಿ ಇನ್ಸೂರೆನ್ಸ್ ಏಜಂಟರನ್ನು ಹಿಂದೆ ಕಳುಹಿಸಿಕೊಟ್ಟಳು.
ಇಂದು ಕಣ್ಣೀರಿಂದ ಕೈ ತೊಳೆಯುವಳು, ಗಂಡಂದಿರ ಸಂಪಾದನೆಯ
ಕೈಯೆಂದರೆ ಗಾಳಿಗಿಟ್ಟ ದೀಪದಂತೆ, ಅದು ಸಂಸಾರವನ್ನು ಸಂತೋಷ
ದಿಂದ ನಗಿಸಿ ನಗಿಸಿ ಬೆಳಗಿಸುತ್ತಿದ್ದಂತೆಯೆ ಒಮ್ಮೆಗೇ ನಂದಿಹೋಗಿ
ಅದನ್ನು ನಂಬಿದ್ದ ಕುಟುಂಬವನ್ನು ಗಾಢ ದುಃಖಾಂಧಕಾರದಲ್ಲಿ ತಳ್ಳಿ
ಬಿಡುವುದು. ಅಂತಹ ಕಗ್ಗತ್ತಲಲ್ಲಿ ಕಂಗೆಟ್ಟಾಗ ಕೈಕೆಳಗಾಗಿ ದಾರಿ
-----------------------------------
ನಂದಾದೀಪ ೪೨

ತೋರಿಸುತ್ತದೆ ಲ್ಯಾಫ್ ಇನ್ಸೂರೆನ್ಸ್ ಕಂಪೆನಿ! ಆದರೆ ಇದನ್ನರಿಯದೆ
ನನ್ನಕ್ಕನಂತೆ ಕೆಟ್ಟು ಕಣ್ಣೀರಿ ಡು ವ ಹೆಂಗಳೆಷ್ಟು! ಏನೋ
ಅಂತಹ ದುರವಸ್ಥೆಯಿಂದ ದೇವರೆಂದು ನೀವೆಂದು ಅವರೆಂದು ನಿಮ್ಮ
ಕಂಪೆನಿಯೆಂದು ನಮ್ಮನ್ನು ಕಾಪಾಡಿದಿರಿ. ಅದರ ನೆನವರಿಕೆಗಾಗಿ, ನೋಡಿ
ಅಲ್ಲಿ, ನಿಮ್ಮ ಕಂಪೆನಿಯ ಆ ಕೆಲಂಡರನ್ನು ದೇವರ ಕಂಡಿಯ ಮೇಲೆ ತೂಗಿ
ಸಿದ್ದೇನೆ. ಹೀಗೆ ನಿಮಗೆ ತಿಳಿಯದೆಯೆ? ನೀವೆಷ್ಟೋ ಸಂಸಾರಗಳನ್ನು
ಭಯಂಕರ ದಾರಿದ್ರದಿಂದ ರಕ್ಷಿಸಿ ಉದ್ಧರಿಸಿರುವ ಪುಣ್ಯವು ನಿಮ್ಮ ಪಾಲಿ
ಗಿದೆ. ನೀವು ಸಮಾಜದ ತಾಯಿ. ಆದರೆ ಮದ್ದು ಕೊಡ ಬಂದ ತಾಯಿಯನ್ನು
ದೂಡುವಂತೆ ಬುದ್ದಿಯಿಲ್ಲದ ಸಮಾಜವು ನಿಮ್ಮನ್ನು ತಳ್ಳುತ್ತಿದೆ! ಅದನ್ನು
ಲಕ್ಷಿಸದೆ ನೀವು ಮೂರ್ತಿಮತ್ತಾದ ಸಹನೆಯಂತೆ ಉತ್ಕೃಷ್ಟವಾದ ಸಮಾಜ
ಸೇವೆಯನ್ನು ಅರ್ಪಿಸುತ್ತಿರುವಿರಿ. ಅದಕ್ಕಾಗಿ ದೇವರು ನಿಮ್ಮನ್ನು ಚಿರಕಾಲ
ವಿಡಲಿ! ಲಲಿತೂ, ಮಾವನನ್ನು ಹೋಗಲಿಕ್ಕೆ ಬಿಡಬೇಡ, ಇವರು ಕೆರೆಗೆ
ಹೋದುದನ್ನು ಕಂಡು ಇಷ್ಟು ಹೊತ್ತು ಕಾದುನಿಂತು ನಿಂತುಕಾದು ಹಿಡಿ
ದಿದ್ದೇವೆ, ಎಲ್ಲಾದರೂ ಬಿಟ್ಟಿಯೇ, ಜಾಗ್ರತೆ! ನಾನು ಮಾಮನಿಗೆ ಒಂದಿ
ಷ್ಟು ಕಾಫಿ....” ಎನ್ನುತ್ತ ಆಕೆಯು ಅಡಿಗೆಯ ಕೋಣೆಗೆ ಕಾಲಿಟ್ಟಳು.
ಇತ್ತ ರಾಮರಾಯನು ಇನ್ನೂರೆನ್ಸ್ ಏಜಂಟನನ್ನು ಪಿಶಾಚಿಯೆಂದೂ
ನ್ಯೂಸೆನ್ಸ್ ಏಜಂಟನೆಂದೂ ಹಲವರು ಗೇಲಿಮಾಡಿದರೂ ಅವನೊಬ್ಬ
ಲೋಕೋಪಕಾರಿಯೆಂದು ತಿಳಿದು ಕರೆದು ಆದರಿಸುವ ಮನೆಗಳೂ ಇವೆ,
ಎಂದು ಯೋಚಿಸುತ್ತ ಹಿಂದೆಂದೂ ಹೊಂದದ ಅದೊಂದು ದಿವ್ಯ ಮನ
ಶ್ಯಾಂತಿಯ ಆನಂದವನ್ನು ಹೊಂದುತ್ತಿರಲು ಲಲಿತೆಯು, ಮಾಮಾ, ನನ್ನ
ಹಾರ್ಮೋನಿ! ಎಷ್ಟು ಚಂದ! ಮೊನ್ನೆ ಅಮ್ಮ ತೆಕ್ಕೊಂಡಿದ್ದು ! ಮೂವತ್ತು
ರೂಪಾಯಿಗೆ!' ಎನ್ನುತ್ತ ದೇವರ ಕಂಡಿಯ ಬಳಿಯಲ್ಲಿದ್ದ ಅಂದವಾದೊಂದು
ಹಾರ್ಮೊನಿಯಮನ್ನು ತೋರಿಸಿದಳು. ಆಗ ಒಳಗಿಂದ ತಾಯಿಯು, 'ಲಲಿ
ತೂ, ಸುಮ್ಮನೆ ಹಾರೊನಿ ತೋರಿಸಿ ಏನು ಪ್ರಯೋಜನ? ಒಂದು ಪದ
ಹೇಳಮ್ಮಾ, ಮಾಮ ಕೇಳಲಿ' ಎಂದಳು, ಲಲಿತೆಯು ಹಾರೊನಿಯನ್ನು
ತೆಗೆದಳು, 'ನಂಬ ಬೇಡವೋ ಈ ತನುವ ನೀ| ನಂಬ ಬೇಡವೊ...' ಎಂದು
ಅದಕ್ಕೆ ಸ್ವರಗೂಡಿಸಿ ಮೃದು ಮಧುರವಾಗಿ ಹಾಡತೊಡಗಿದಳು,
====================================

ಆನಂದನ ಬಿ. ಎ. ಡಿಗ್ರಿ

ಆನಂದನಿಗಿಂದು ಆನಂದವಿಲ್ಲ, ಆತನ ಮೋರೆಯಲ್ಲಿ ನಿರಾಶೆಯು
ರೂಪುಗೊಂಡು ನೆಲೆನಿಂತಂತಿದೆ. ತಾನಿದ್ದ ಹೋಟೆಲಿನ ಕೋಣೆಯೊಂದ
ರಲ್ಲಿ ಮೊಣಕೈಗಳನ್ನು ಮೇಜಿಯ ಮೇಲೂರಿ ಚಿಂತೆಯ ಕಂತೆಯಂತಿದ್ದ
ತನ್ನ ತಲೆಯನ್ನು ಅಂಗೈಗಳಿಂದಾಧರಿಸಿ ಮುರುಕು ಕುರ್ಚಿಯ ಮೇಲೆ ಕುಳಿ
ತಿದಾ ನೆ ಆತ, ಅವನ ತಲೆಯೊಳಗೆ ಹಾಲಾಹಲದ ತೆರೆಗಳೇ ಏಳುತ್ತ
ಲಿವೆ.

ಒಂದು ನೌಕರಿಯ ಪ್ರಾಪ್ತಿಗಾಗಿ ಆಫೀಸಿಂದ ಆಫೀಸಿಗೆ ಹತ್ತಿ
ಇಳಿದು, ಇಳಿದು ಹತ್ತಿ, ದೊಡ್ಡವರ ಮನೆಬಾಗಿಲ ಮೆಟ್ಟಿಲಲ್ಲಿ ಕಾದು
ನಿಂತು, ನಿಂತುಕಾದು, ಕೊನೆಗೆ ಹತಾಶನಾಗಿ ಹಿಂತಿರುಗುವುದು ಆನಂದನಿ
ಗೊಂದು ಹೊಸ ಅನುಭವವಾಗಿದ್ದಿಲ್ಲ. ಅದಲ್ಲದೆ, ಪ್ರತಿದಿನವೂ ವಾರ್ತಾ
ಪತ್ರಿಕೆಗಳ (ಬೇಕಾಗಿದೆ' (Wanted Column) ಎಂಬ ರಿಖಾನೆ
ಯನ್ನು ನೋಡಿ ಎಷ್ಟೋ ಅರ್ಜಿಗಳನ್ನು ಬರೆದು ಹಾಕಿದ್ದ-ರಂಗೂನೆಂದು
ಬಿಡಲಿಲ್ಲ, ಆಫ್ರಿಕನೆಂದು ಬೆದರಲಿಲ್ಲ, ಮೆಸೊಪೊಟೇಮಿಯಾ ಎಂದು ಹಿಂಜರಿ
ಯಲಿಲ್ಲ. ಸ್ವಾಫ್ ಸಿಲೆಕ್ಕನ್ ಬೋರ್ಡಿನ ಮುಂದೆ ಒಂದು ಸಲ ಹಾಜ
ರಾದುದೂ ಇತ್ತು. ಇವುಗಳಿಂದೆಲ್ಲ ಎಷ್ಟೊ ನೌಕರಿಯ ಪ್ರಾಪ್ತಿಯನ್ನು ಮನ
ಸ್ಸಿನಲ್ಲೇ ಹೊಂದಿದ್ದ; ಕನಸಿನಲ್ಲೆಷ್ಟೋ ಹುದ್ದೆಗಳನ್ನು ನೋಡಿದ್ದ. ಹೀಗೆ
ಆಶಾತಂತುವನ್ನು ಸಾಧ್ಯವಿದ್ದಷ್ಟು ಉದ್ದಕ್ಕೆ ಎಳೆದೆಳೆದು ಇಂದು ಅದು
ತುಂಡಾಗಿತ್ತು: ತನಗೊಂದು ನೌಕರಿಯು ದೊರಕೀತೆಂಬ ಪ್ರಬಲವಾದ ಭರ
ವಸೆಯುಳ್ಳವನಾಗಿದ್ದು ಕಳೆದ ಮೂರು ತಿಂಗಳುಗಳಿಂದ ಅದಾವ ಮಹನೀಯ
ರೊಬ್ಬರ ಆಶ್ರಯವನ್ನು ಮಾಡುತ್ತಲಿದ್ದನೋ ಅವರಿಂದು (Very
sorry, I can't give you any job.)
'ನಿಮಗೊಂದು ನೌಕರಿಯನ್ನು ಕೊಡಲಾಗುವುದಿಲ್ಲವೆನ್ನಲು ವಿಷಾದಿಸುತ್ತೇನೆ'
ಎಂದು ಬೆಣ್ಣೆಯಂತಹ ಮಾತುಗಳಿಂದ ತಮ್ಮ ಸೌಜನ್ಯ(Gentleman-
liness)ವನ್ನು ವ್ಯಕ್ತಪಡಿಸಿದ್ದರು!

ನಂದಾದೀಪ ೫೪

ಆದುದರಿಂದ ಆನಂದನ ಹೃದಯದಲ್ಲಿದ್ದ ಆ ಕೊನೆಯದೊಂದು
ಆಶಾಕಿರಣವೂ ಇಂದು ಅದೃಶ್ಯವಾಗಿತ್ತು. ಆತನ ಮುಂದಿನ ಜೀವನದ
ಹಾದಿಯಲ್ಲಿ ಕಗ್ಗತ್ತಲು ಕವಿದಿತ್ತು. ನಾಳಿನ ಗತಿಯೇನೆಂಬುದನ್ನು ಯೋಚಿ
ಸಲೂ ಭಯವಾಗುತ್ತಿತ್ತು ಆತನಿಗೆ! ಆದರೆ ಹೀಗಾದೀತೆಂದು ಎರಡು ವರುಷ
ಗಳ ಹಿಂದೆ ಅವನು ಕನಸಾಮನಸಾ ಎಣಿಸಿದ್ದನೇ? ಆಗಿನ ಆ ಸುಖಮಯ
ವಾದ ಭಾವೀಜೀವನದ ಕಲ್ಪನೆಯೆಲ್ಲಿ! ರೆಕ್ಕೆಗೊಂಡು ಹಾರಿ ಹೋಯಿತೇ!

ಎರಡೇ ಎರಡು ವರುಷಗಳ ಹಿಂದೆ ಆನಂದನು ಬಿ. ಎ. ಪಾಸಾ
ದಂದು ಅವನ ಹೆತ್ತವರಿಗಾದ ಆನಂದ! ತಾವು ಅರೆಹೊಟ್ಟೆ ಯುಂಡು ಅರೆ
ಬಟ್ಟೆ ಉಟ್ಟಾದರೂ ತಮ್ಮ ಮಗನನ್ನು ಬಿ. ಎ. ಉತ್ತೀರ್ಣನಾಗುವಂತೆ
ಮಾಡಿದುದುರಿಂದ ಅಂದೇ ತಮ್ಮ ಮುರುಕು ಮನೆಯ ಹೊಸ್ತಿಲಿಂದ
ದಾರಿದ್ರದೇವಿಯು ಕೆಳಗಿಳಿದು ಹೋದಳೆಂದೂ ಭಾಗ್ಯಲಕ್ಷ್ಮಿಯು
ಮೆಟ್ಟಿಲು ಹತ್ತಿ ಬಂದಳೆಂದೂ ಅವರು ಹೊಂದಿದ ಸಂತೋಷವೇನು!
ಆನಂದನೂ ಕಲ್ಪಿಸಿಕೊಂಡ ತನ್ನ ಭಾವೀ ಜೀವನದ ಆ ಆನಂದಮಯ
ವಾದ ದೃಶ್ಯಗಳೇನು! ತನಗೆ ದೊರಕಬಹುದಾದ ದೊಡ್ಡ ದೊಡ್ಡ ಹುದ್ದೆಗಳು;
ಅವುಗಳಿಂದ ಮೇಲು ಮೇಲಕ್ಕೆ ಪ್ರೊಮೋಶನ್; ಕೊನೆಕೊನೆಗೆ ಬರೇ
ದಸ್ತತು ಹಾಕಿದುದಕ್ಕೆ ದೊಡ್ಡ ಸಂಬಳದ ಗಂಟು! ದೊಡ್ಡ ಬಂಗಲೆ!
ಜವಾನರು! ಮೋಟಾರ್ ಕಾರ್! ಹೂಮಾಲೆಗಳು! ಮಾನಪತ್ರಗಳು!.......
ಇವೆಲ್ಲ ಮರುಮರೀಚಿಕೆಗಳಾದುವೆ? ಶ್ರೀಮಂತಪುತ್ರಿಯೊಂದಿಗೆ ತನ
ಗಾಗಬಹುದಾದ ಮದುವೆ ಆ ಮುಂಗುರುಳು ಮೋರೆಯ, ಮಿಂಚು
ಬೀರುವ ತೇಲುಗಣ್ಣಿನ, ಕಿರುನಗುವಿನ ಹೊಳಪೇರಿದ ಗುಲಾಬಿ
ಗೆನ್ನೆಯ ಎಳೆಗುವರಿಯು ವಜ್ರದ ಕಮಲಗಳ ಕಿವಿಯಿಂದ ಜಗ್ಗೆನಿಸುವ
ಮೂಗು ಬೊಟ್ಟಿ೦ದ, ಮಿರುಗುಟ್ಟುವ ಮುಂಗೈ ಬಳೆಗಳ ಇಂಪಿನ ಧ್ವನಿ
ಯಿಂದ, ಚಿನ್ನದ ಪಟ್ಟಿಯ ನಡುಗಟ್ಟಿಂದ, ಅಳುಕು ಬಳುಕುತ್ತ ಮೂರ್ತಿ
ಮತ್ತಾದ ಪ್ರೇಮದಂತೆ ಸೌಂದರ್ಯದಾಗರದಂತೆ ಸುಖಸಾಮಾಜ್ಯದಂತೆ
ತನ್ನ ಬಳಿಗೆ ತೇಲಿಬರುವ ಆ ಚೆಲುವಿನ ಮುದ್ದು ಮಡದಿ! ಈ ರೀತಿ ಆತನು
ಅಂದು ಕನಸಿನಲ್ಲಿ ಏರಿದ್ದ ಆ ಆನಂದದ ಸುಖಶಿಖರವೆಲ್ಲಿ! ಇಂದಾತನು
ಬಿದ್ದಿರುವ ಅಗಾಧ ದುಃಖದ ಕಂದರವೆಲ್ಲಿ!
------------------------------------------

೫೫ ಆನಂದನ ಬಿ. ಎ. ಡಿಗ್ರಿ
ಆ ಎರಡೇ ವರುಷಗಳಲ್ಲಿ ಎಂತಹ ಪರಿವರ್ತನೆಗಳಾಗಿ ಹೋದುವು!
ಹಳ್ಳಿಯ ಶಾಲೆಯ ಉಪಾಧ್ಯಾಯನಾಗಿದ್ದ ಆತನ ತಂದೆಯ ವೃದ್ಧಾಪ್ಯದ
ದೆಸೆಯಿಂದ ಉದ್ಯೋಗನಿವೃತ್ತನಾದ ಆತನ ಪ್ರೋವಿಡೆಂಟ್ ಫಂಡಿನ ಚಿಕ್ಕ
ಮೊತ್ತವು ತಂಗಿಯಂದಿರಿಬ್ಬರ ಮದುವೆಗಳಲ್ಲಿ ಕರಗಿ ನೀರಾಗಿಹೋಯಿತು.
ದುರ್ದೈವವಶದಿಂದ ಹಿರಿಯಕ್ಕನೊಬ್ಬಳು ನಿರ್ಗತಿಕ ವಿಧವೆಯಾಗಿ ತನ್ನ
ಮೂವರು ಹೆಮ್ಮಕ್ಕಳೊಡನೆ ಬಂದು ಸೇರಿದಳು, ಸಂಸಾರ ನಿರ್ವಾಹದ
ಗುರುತರವಾದ ಭಾರವು ಆನಂದನ ತಲೆಯ ಮೇಲೇ ಇಳಿಯಿತು, ಒಂದು
ನೌಕರಿಗಾಗಿ-ಬರೇ ೨೫ ರೂಪಾಯಿಯ ನೌಕರಿಗಾಗಿ- ಆನಂದನು ಭಗೀರಥ
ಪ್ರಯತ್ನ ಮಾಡಿದ. ಆದರೆ ಆ ಯತ್ನಗಳಲ್ಲಿ ಸಹಾಯದ ಕೈನೀಡುವವ
ರಿದ್ದಿಲ್ಲ. ಆಶೆಯಿಂದ ಮಾಡಿದ ಪ್ರಯತ್ನಗಳೆಲ್ಲ ನಿರಾಶೆಯಿಂದ ಕೊನೆ
ಮುಟ್ಟಿದುವೆಂದರೆ ಆನಂದನ ತಲೆಯೊಳಗೆ ಹಾಲಾಹಲದ ಅಲೆಗಳೇಳುತ್ತಿದ್ದು
ಸರಲ್ಲಿ ಆಶ್ಚರ್ಯವೇನು?

ಅವನು ಯೋಚಿಸುತ್ತ ಕುಳಿತ್ತಿದ್ದ: ನಾನು ಬಿ. ಎ.! ಎಷ್ಟೋ
ಪ್ರಶಸ್ತಿ ಪತ್ರಿಕೆಗಳನ್ನೂ ಪಡೆದಿರುವೆನು. ನಾಲ್ಕನೆಯ ಫಾರ್ಮಿನಲ್ಲಿ
ಪಾಸಾಗಲಾರದ ರಾಮರಾಯನು ಇನ್ನೂರೆನ್ಸ್ ಏಜಂಟನಾಗಿ ಸ್ವಂತ
ಕಾರಿನಲ್ಲಿ ಹಾರಾಡುತ್ತಿಲ್ಲವೇ? ಸ್ಕೂಲ್ ಫ್ಯಾನಲಿನಲ್ಲಿ ಮೂರು ಸಲ ಲಾಗ
ಹೊಡೆದ ಕೇಶವನು ಪ್ರಸಿದ್ದ ಹೊಮ್ಯೋಪೆಥಿಕ್ ಡಾಕ್ಟರನಾಗಿ ಹೇಗೆ
ಮೆರೆಯುತ್ತಿದ್ದಾನೆ! ಎರಡನೇ ಫಾರ್ಮಿನಲ್ಲೇ ಶಾಲೆಗೆ ಶರಣು ಹೊಡೆದ
ಕರುಣಾಕರನ ಸೋಡಾ ಫೇಕ್ಟರಿಯು ಎಷ್ಟೊಂದು ಲಾಭದಾಯಕವಾಗಿದೆ!
ಅಷ್ಟೇಕೆ? ನಮ್ಮೂರಿನ ಹಸನಬ್ಬಾ ಬ್ಯಾರಿಯು ಬರೇ ಹತ್ತು ರೂಪಾಯಿಯ
ಭಂಡವಾಳದಿಂದ ಹುರಿಯ ವ್ಯಾಪಾರವನ್ನು ತೊಡಗಿ ಈಗ ಬೊಂಬಾಯಿಗೆ
ಹುರಿ ತುಂಬಿದ ಹಡಗು ಹಡಗುಗಳನ್ನೇ ಕಳುಹಿಸುತ್ತಿಲ್ಲವೆ? ಇವರಿಗಿರುವ
ಸ್ನಾನಮಾನ ಸುಖಸಂತೋಷಗಳು ನನ್ನ ಬಿ. ಎ.ಗೆ ಇವೆಯೇ? ಯಾವು
ದಕ್ಕೂ ಆಗದವನೆಂದು ಸಿದ್ಧಾಂತವಾಗಿ ಹೋಗಿದ್ದ ಆ ರಾಮು ಬಳ್ಳಾರಿ
ಯಲ್ಲಿ ಕಾಫಿ ಹೋಟೆಲಿಟ್ಟು ಐದೇ ವರುಷದೊಳಗೆ ಐವತ್ತು ಸಾವಿರ
ರೂಪಾಯಿಯ ಜಮಾನನ್ನು ಕೊಂಡುಕೊಳ್ಳಲಿಲ್ಲವೆ? ಅವರ ಮಾತೇಕೆ?
ಬೀದಿಯಲ್ಲಿ ಬಂಡಿ ಹೊಡೆಯುವವನೂ ಕೂಲಿಯವನೂ ನನಗಿಂತ ಮಿಗಿ
ಲಲ್ಲವೆ? ಅವರಿಗೆ ಸ್ವಾವಲಂಬನದ ಧೈರ್ಯವಿದೆ. ನನಗೆ? ಇಲ್ಲ, ಅದಿಲ್ಲ!
-------------------------------------
ನಂದಾದೀಪ ೫೬

ನಾನು ಉಸಿರಾಡುವ ಗುಮಾಸ್ತಗಿರಿಯ ಯಂತ್ರ ಮಾತ್ರ! ಅದೂ ಗ್ರಾಹಕ
ರಿಲ್ಲದ ಯಂತ್ರ! ನನ್ನಿಂದೇನಾದರೂ ಆಗದೇ? ಆದೀತು! ನಾನು ಗ್ರಾಜು
ವೇಟನೆಂಬುದನ್ನು ಮರೆತುಬಿಟ್ಟರೆ! ಪ್ರಾಮಾಣಿಕತನದ ಯಾವ ವೃತ್ತಿ
ಗಾಗಲೀ ಕೈನೀಡಲು ನನ್ನನ್ನು ತಡೆಗಟ್ಟುವುದು ಯಾವುದು? ಡಿಪ್ಲೊಮಾ !
ಹೌದು ಆ ಡಿಪ್ಲೋಮಾ! ಅದನ್ನು ಮರೆತು ಸಾಮಾನ್ಯ ಮಾನವನಂತೆ
ಪ್ರಪಂಚದಲ್ಲಿಳಿಯಬೇಕು. 'ಗ್ರಾಜುವೇಟ'ನೆಂಬ ಮಿಥ್ಯಾಭಿಮಾನವನ್ನು
ಬಿಟ್ಟು ಬಿಡಬೇಕು, ಆಗ ನಾನೊಂದು ದಾರಿಯನ್ನು ಹಿಡಿಯಲೂ ಬಹುದು!
ಹಿಡಿದು ಇತರರನ್ನು ಹಿಂದೆ ಹಾಕಲೂ ಬಹುದು! ವಿಜ್ಞಾನ ವಿಚಾರಗಳಿಂದ
ನನ್ನ ಬುದ್ಧಿಯು ಮನೆಯಲ್ಪಡಲಿಲ್ಲವೇ?

ಮರುದಿನ ಬೆಳಿಗ್ಗೆ ನೋಡಲು ಆನಂದನು ಆ ಹೋಟೆಲಲ್ಲಿದ್ದಿಲ್ಲ.
ಎಲ್ಲಿಗೆ ಹೋದನೆಂದು ಯಾರಿಗೂ ಗೊತ್ತಿದ್ದಿಲ್ಲ. ಗುಮಾಸ್ತಗಿರಿಯ ಸಂತೆ
ಯಲ್ಲಿ ಬಿ, ಎ. ಯ ಬೇಡಿಕೆಯು ಬಹಳ ತಗ್ಗಿದ್ದುದರಿಂದ ಒಂದು ಬಿ, ಎ.
ಯು ಅಗೋಚರವಾದುದು ಯಾರ ಲಕ್ಷಕ್ಕೂ ಬೀಳಲಿಲ್ಲ. ಕಾಲವು ತನ್ನ
ಸಹಜಗತಿಯಿಂದ ಮುಂದುವರಿಯಿತು.
* * * *
ರಾತ್ರಿ ಒಂಬತ್ತು ತಾಸಿನ ಹೊತ್ತು, ಬೊಂಬಾಯಿಯ ಮಲಬಾರ್
ಹಿಲ್ಸಿನಲ್ಲಿ ಚಿಕ್ಕ ಚೊಕ್ಕ ಬಂಗಲೆಯೊಂದು, ಅದರೆದುರು ಅಚ್ಚುಕಟ್ಟಾಗಿ
ಬೆಳೆಯಿಸಿದ್ದ ಹೂದೋಟ, ನಡುವೆ ಅಮೃತಶಿಲೆಯ ಆಸನದ ಮೇಲೆ
 ದಂಪತಿಗಳಿಬ್ಬರು ಕುಳಿತಿದ್ದಾರೆ. ಆತನು ತನ್ನ ಹೂದೋಟವನ್ನು ಕಣ್ಣು
 ಬೀಸಿ ನೋಡಿದ. ಅಂದಿನ ಬೆಲ್ದಿಂಗಳಲ್ಲಿ ಅದು ನವಯೌವನವು ಮೂಡಿ
 ಬರುತ್ತಿದ್ದ ಮುಗ್ಗೆಯಂತೆ ಮುದ್ದು ಮುದ್ದಾಗಿ ನಗುವಂತಿತ್ತು. ಆಕೆಯ
 ಮುಖವನ್ನು ನೋಡಿದ-ಅದು ಆ ಉದ್ಯಾನವನ್ನು ನಾಚಿಸುವಷ್ಟು
 ಮುದ್ದಿನ ಮುದ್ದಾಗಿ ತೋರಿತು, 'ರಮಾ! ನನ್ನ ಈ ಸಂಪತ್ತು, ಈ ಸುಖ,
 ಇವುಗಳಿಗೆಲ್ಲ ಕಾರಣರಾರೆಂದು ಹೇಳಲಾರೆಯಾ?' ಎಂದ ಆತ, 'ಯಾರು
 ಕಾರಣರು, ನೀವೇ!' ಎಂದು ಮೃದು ಮಧುರವಾಗಿ ನುಡಿದಳು ಆಕೆ.
 'ನಾನೆಲ್ಲ! ಇವೆಲ್ಲಕ್ಕೂ ಕಾರಣಳಾದವಳೊಬ್ಬಳಿರುವಳು! ಮೊನ್ನೆ ತಾನೆ
 ಈ ಊರಿಗೆ ಬಂದಿರುವಳು! ಅವಳೇ ನನ್ನ ಪ್ರಾಣದ ಪ್ರಾಣ.  ....?
 ಮಾತು ಮುಗಿವುದರೊಳಗಾಗಿ ರಮಯು ಹಾಗಾದರೆ ಇಲ್ಲೇಕಿರುವಿರಿ?
---------------------------------------
೫೭ ಆನಂದನ ಬಿ, ಎ. ಡಿಗ್ರಿ

ಅಲ್ಲಿಗೇ ದಯಮಾಡಿಸಬಹುದಲ್ಲ?' ಎಂದು ತುಸು ಮುನಿಸಿನ ಕೋರೆ ನೋಟ
ದಿಂದ ಆತನನ್ನು ಚುಚ್ಚುತ್ತ ದೂರ ಸರಿಯಲು ಯತ್ನಿಸಿದಳು. 'ಅವಳ
ಬಳಿಯಲ್ಲೇ ಇರುವೆನಲ್ಲ! ಮತ್ತೆಲ್ಲಿಗೆ ಹೋಗಲೇ? ಅವಳು ಇವಳೇ!
ಇವಳೇ ನನ್ನ ಮೈ ಮೇಲೆ ಗೆರಟೆಯ ಚೂರನ್ನು ಒಗೆದ ನನ್ನ ಭಾಗದ
ಭಾಗ್ಯದೇವತೆ! ನನಗೆ ಅಕ್ಷಯ ಪಾತ್ರೆಯನ್ನಿತ್ತ ದೇವಿ!' ಎನ್ನುತ್ತ
ಆಕೆಯ ಕೈಗಳನ್ನು ಹಿಡಿದಿರಲು, ಇಸ್ಸೀಯಪ್ಪ! ಎಲ್ಲಿಯ ಗೆರಟೆ ಚೂರು!
ಯಾರು ಒಗೆದುದು? ನಾನೇ? ಅದೂ ನಿಮ್ಮ ಮೇಲೆಯೇ? ಕುಚೋದ್ಯ
ಮಾಡುವಿರಾ? ಈ ವಿನೋದವೆಲ್ಲ ನಿಮ್ಮ ಆ ಭಾಗ್ಯದ ದೇವತೆ ಆ ಪ್ರಾಣದ
ಪ್ರಾಣ-ಅವಳ ಬಳಿಯಲ್ಲಾಗಲಿ!' ಎನ್ನುತ್ತ ಕೈಯೆಳೆದುಕೊಳ್ಳಲು
ಮನಸ್ಸಿಲ್ಲದ ಯತ್ನ ಮಾಡುತ್ತಿದ್ದಳು,

'ಅವಳೇ ನೀನೆಂದೆನಲ್ಲ? ಹೇಗೆಂಬೆಯೊ? ಕೇಳು' ಎಂದ ಆತ.
ಆಕೆ ಕುತೂಹಲದಿಂದ ಕೇಳತೊಡಗಿದಳು. 'ಐದು ವರ್ಷಗಳ ಹಿಂದೆ
ನೀವೆಲ್ಲರು ನಿಮ್ಮ ತಂದೆಯವರೊಡನೆ ಸ್ವೀಮರಿನಲ್ಲಿ ಬರುತ್ತಿದ್ದಿರಿ.
ನೀವು ಮಂಗಳೂರಿಂದ ಇಲ್ಲಿಗೆ ಬರುತ್ತಿದ್ದುದು ದೀಪಾವಳಿ ಹಬ್ಬ ನೋಡುವುದ
ಕ್ಯಾಗಿ; ನಾನೋ ಗ್ರಾಜುವೇಟನಾಗಿ ನಮ್ಮ ಮಂಗಳೂರಲ್ಲೇ ಶ್ರಮಜೀವ
ನಕ್ಕೆ ಕೈಗೊಡಲು ನಾಚಿ ಪರಿಚಿತರಿಲ್ಲದ ಈ ಬೊಂಬಾಯಿಯಲ್ಲಿ ಅದನ್ನಾ
ದರೂ ಅಳುಕದೆ ನಿರ್ವಹಿಸಿಯೇನೆಂಬ ಭರವಸೆಯಿಂದ ಅದೇ ಸ್ವೀಮರು
ಹತ್ತಿದ್ದೆ. ಆದರೆ ಸ್ವೀಮರು ಮುಂದುವರಿದಂತೆ ನನ್ನ ಆ ಧೈರ್ಯವು
ಹಿಂದೆ ಸರಿಯಿತು! ರೊಕ್ಕಪ್ಪನಿದ್ದರೆ ಚಿಕ್ಕಪ್ಪನಂತಿರುವ ನಗರದಲ್ಲಿ ಕಾಸಿಲ್ಲದ
ನಾನು ಯಾರಲ್ಲಿಳಿಯುವುದು? ಏನಾದರೊಂದು ಉದ್ಯೋಗವನ್ನು ಹೇಗೆ
ಪಡೆಯುವುದು? ಏನಾದರೂ ಮಾಡಿ ಕೈಯಲ್ಲೆರಡು ಕಾಸಾಗುವ ತನಕ
ಮನೆಯವರ ಪಾಡೇನು? ಎಂಬ ಯೋಚನೆ ಹೊಳೆದೊಡನೆ ಬದುಕುವ
ಎಲ್ಲ ನಿರ್ಧಾರವನ್ನು ಬಿಟ್ಟೆ. ಆತ್ಮಹತ್ಯೆಯ ಹಾದಿ ಹಿಡಿದೆ. ಅದಕ್ಕಾ
ದರೂ ಸ್ವೀಮರು ಹದುದು ಅನುಕೂಲವೇ ಆಯಿತೆಂದುಕೊಂಡೆ, ಕತ್ತ
ಲಾಗುವುದನ್ನು ಕಾಯುತ್ತಲಿದ್ದೆ. ಆಗ ಸಟಕ್ಕನೆ ಗೆರಟೆಯ ಚೂರೊಂದು
ನನ್ನ ಮೈ ಮೇಲೆ ಬಿತ್ತು. ಅದು ಬಂದ ಕಡೆಗೆ ನೋಡಿದೆ-ನೀನಲ್ಲಿ
ನಿಂತಿದ್ದೆ ನಿನ್ನ ತುಂಟ ತಮ್ಮನ ಕೈಹಿಡಿದು! ಯಾರೋ ತೆಂಗಿನ ಹೋಳನ್ನು
ಜಜ್ಜಿ ತಿಂದು ಬಿಸುಟಿದ್ದ ಗೆರಟೆಯ ಚೂರಿಂದ ಆತ ನಿನ್ನ ಕೈಯನ್ನು ಕೀರಿದ್ದ.
-----------------------------------------
ನಂದಾದೀಪ ೫೮

ನೋವಿನ ಭರದಿಂದ ನೀನದನ್ನು ಕಿತ್ತುಕೊಂಡು ಎತ್ತ ಕಡೆಯೆಂದು
ನೋಡದೆ ಬಿಸುಟಿದ್ದೆ. ಆದರೆ ಅದು ನನಗೆ ತಾಗಿದುದಕ್ಕಾಗಿ ಸಂತಾಪ
ಪಡುತ್ತ ನಿಂತಿದ್ದೆ! ನೆನಪಾಗುತ್ತದೆಯೇ ರಮಾ?'

'ಏನೋ ಕನಸಿನಲ್ಲಿ ಕಂಡಿದ್ದಂತೆ ಆರೆಯರೆ ಕಣ್ಣೆದುರು ಬಂದಂತಾ
ಗುತ್ತೆ ಆ ದೃಶ್ಯ! ಆದರೆ, ಆದರೆ...'

'ಹೇಳುತ್ತೇನೆ, ನೀನು ಅತ್ತ ತಿರುಗಿದ ಮೇಲೆ ಆ ಚೂರನ್ನೇ
ನೋಡುತ್ತ ಕುಳಿತೆ. ಆತ್ಮ ಹತ್ಯೆ ಮಾಡದಿದ್ದರೆ ಮುಂದೆ ದೊರಕುವುದು
ಭಿಕ್ಷಾಪಾತ್ರೆಯೆಂಬ ಸಂಕೇತವನ್ನು ನನ್ನ ದುರ್ವಿಧಿಯು ಗೆರಟೆಯ
ಮೂಲಕ ಕೊಟ್ಟಿತೇ? ಎಂದುಕೊಂಡೆ. ಹಾಗಿದ್ದರೆ ಚಿನ್ನದಂತಹ ಕನ್ನೆಯ
ಕೈಯಿಂದೇಕೆ ಕೊಡಿಸಬೇಕೆಂದು ಶಂಕಿಸಿದೆ. ಅಂತೂ ಅದೇಕೋ ಅದ
ರಲ್ಲೊಂದು ಆದರ ಹುಟ್ಟಿ ಅದನ್ನೇ ನೋಡುತ್ತಲಿದ್ದೆ. ತುಸು ಕೆತ್ತಿದರೆ
ಅದೇನೋ ಒಂದು ಚೆನ್ನಾದ ಆಕೃತಿಯನ್ನು ಕೊಡುವಂತಿತ್ತು. ತಟ್ಟನೆ
ಒಂದು ಯೋಚನೆ ಹೊಳೆಯಿತು. ಪ್ರಯೋಗಾರ್ಥವಾಗಿ ಚೂರಿಯನ್ನು
ತೆಗೆದು ಆ ಚೂರಿನ ಕೊಂಕನ್ನು ಕೆತ್ತಿ ತೆಗೆದೆ; ಮೈಯನ್ನು ಕೆರೆದು ನುಣು
ಪುಗೈದೆ. ನನ್ನ ಯೋಚನೆಯು ತಪ್ಪಲ್ಲವೆಂದು ಕಂಡಿತು ಮರುಕ್ಷಣದಲ್ಲಿ
ಆತ್ಮಹತ್ಯೆಯ ಯೋಚನೆಯು ದೂರ ಹಾರಿಹೋಯಿತು, ಸೀಮರಿನಿಂದ
ಇಳಿದಾಗ ಅನಿರೀಕ್ಷಿತವಾಗಿ ನನ್ನ ಬಾಲ್ಯದ ಗೆಳೆಯನೊಬ್ಬ ಸಿಕ್ಕಿದ.
ಒಂದೆರಡು ಕಡೆ ಟ್ಯೂಶನ್ (Tution) ದೊರಕಿಸಿಕೊಟ್ಟ. ಬಿಡುವಿನ
ಸಮಯವನ್ನು ಅಂಗಿ ಗುಂಡಿಯ ಕಾರ್ಖಾನೆಯೊಂದರಲ್ಲಿ ಔದ್ಯೋಗಿಕ
ವಿದ್ಯಾರ್ಥಿ(Apprentice)ಯಾಗಿ ಸೇರಿ ಕಳೆದು ನನ್ನ ಯೋಜನೆಗೆ
ಬೇಕಾದ ಅನುಭವವನ್ನು ಹೊಂದಿದೆ. ತಕ್ಕ ಯಂತ್ರ ಸಲಕರಣೆಗಳ
ನೋಟ ನೋಡಿಕೊಂಡೆ, ಆ ಮೇಲೆ ಪಾಲು ಭಂಡವಾಳವೆ ಈ ನನ್ನ
ಕಾಮಗಾರಿಕೆಯನ್ನು ತೊಡಗಿದೆ. ಇದೀಗ ನನ್ನ ಈ 'ಆನಂದಾ ಬಟನ್
ಫ್ಯಾಕ್ಟರಿ'ಯ ಕತೆ. ಈಗ ಹೇಳು ರಮಾ, ಸಮುದ್ರಕ್ಕೆ ಹಾರಿ ಪ್ರಾಣ
ಕಳೆದುಕೊಳ್ಳಬೇಕೆಂದು ಹೊತ್ತು ನೋಡುತ್ತಿದ್ದವನನ್ನು ತಿರುಗಿ ಜೀವನಕ್ಕೆ
ಹಿಡಿಸಿದವಳು-ಆ ನನ್ನ ಭಾಗದ ಭಾಗ್ಯದೇವತೆ-ಯಾರೇ ರಮಾ?'
======================================
ಮನೆಯಲ್ಲಿ ಭೂತ ಸಂಚಾರ

''ಅಯ್ಯೋ! ಆ ಮನೆಯನ್ನು ಬಾಡಿಗೆಗೆ ಹಿಡಿದಿರಾ? ಈ ಪೇಟೆ
ಯಲ್ಲಿ ಬೇರೆಲ್ಲಿಯೂ ನಿಮಗೆ ಮನೆ ಸಿಗಲಿಲ್ಲವೆ"?

"ಆ ಮನೆಗೇನಾಗಿದೆ? ಅಚ್ಚುಕಟ್ಟಾದ ಮನೆ! ದೊಡ್ಡ ಅದೆಗಳು;
ಗಾಳಿಬೆಳಕು ಚೆನ್ನಾಗಿ ಬರುವಂತಿದೆ; ಅಡಿಗೆ ಕೋಣೆ, ಬಚ್ಚಲು, ಹಟ್ಟಿ
ಕೊಟ್ಟಿಗೆ, ಇವೆಲ್ಲಾ ಈಗಿನ ರೀತಿಗೆ ಹೇಗೆ ಬೇಕೋ ಹಾಗೆ! ಮೇಲಾಗಿ,
ವಿಸ್ತಾರವಾದ ವಟಾರ; ತಂಪಗೆ ಇರುವಷ್ಟು ಮರಮಟ್ಟು ಗಳು! ಅಂತಹ
ಮನೆಗಳು ಪೇಟೆಯಲ್ಲಿ ಎಷ್ಟಿವೆ? ಬಾಡಿಗೆ ಕೂಡಾ . . . . ”

"ಹೌದು, ಬಾಡಿಗೆ ಕಡಿಮೆ ಸೌಕರ್ಯ ಹೆಚ್ಚು ಎಂದು ನಿಮ್ಮಂತೆ
ಎಷ್ಟು ಜನ ಆ ಮನೆ ಕಂಡು ಮರುಳಾಗಿ ಹೊಕ್ಕರು! ಎಷ್ಟು ಜನ ಒಂದೆ
ರಡು ತಿಂಗಳಲ್ಲಿ ಮುಂಗಡ ಕೊಟ್ಟ ಬಾಡಿಗೆಯನ್ನೂ ಬಿಟ್ಟೋಡಿದರು,
ಗೊತ್ತೇ? ಅಂತೂ ನೀವು ವಹಿಸಿಕೊಂಡಾಯಿತಲ್ಲ! ಇದ್ದು ನೋಡಿ ಕ
ೆಲವು ದಿವಸ, ಮತ್ತೇನು ಮಾಡಲಿಕ್ಕಾಗುತ್ತೆಇನ್ನು?”

ನಿವೃತ್ತ ಪೋಲೀಸ್ ಇನ್ಸ್ ಪೆಕ್ಟರ್ ವಿಠಲರಾಯರು ಅಂದೇ ಆ
ಮನೆಯಲ್ಲಿ ತನ್ನ ಸಂಸಾರವನ್ನಿಳಿಸಿದ್ದರು. ಸಾಯಂಕಾಲ ಪೇಟೆಗೆ ಬಂದಿ
ದ್ದಾಗ ನೋಡ ಸಿಕ್ಕಿದ ಅವರ ಪೂರ್ವ ಪರಿಚಿತರೊಬ್ಬರಿಗೂ ಅವರಿಗೂ
ನಡೆದ ಮಾತುಗಳೇ ಮೇಲಿನವು. ವಿಠಲರಾಯರು ಆ ಮನೆಯನು, ೧೫
ದಿವಸಗಳ ಹಿಂದೆ ಬಾಡಿಗೆಗೆ ಹಿಡಿದು ತನ್ನ ಗೃಹಕೃತ್ಯದ ಯಾವತ್ತು
ಸಾಮಾನುಗಳನ್ನು ತರಿಸಿ ತಕ್ಕ ಸ್ಥಳಗಳಲ್ಲಿ ಅವುಗಳ ವ್ಯವಸ್ಥೆ ಮಾಡಿಸಿದ್ದರು.
ವಾಸ್ತವ್ಯಕ್ಕೆ ಎಲ್ಲವೂ ಸಿದ್ಧವಾಯಿತೆಂದ ಮೇಲೆ ಅವರ ಸಂಸಾರವು
ಅಂದು ಬೆಳಿಗ್ಗೆ ಬಂದಿಳಿದಿತ್ತಷ್ಟೆ, ಸಂಸಾರವೆಂದರೆ, ಅವರ ಹೆಂಡತಿ,
ಅತ್ತೆ, ಐದು ಮಕ್ಕಳು-ಮೂರು ಹೆಣ್ಣು, ಎರಡು ಗಂಡು, ಬಂದವರು
ಮನೆ ನೋಡಿ ತುಂಬಾ ಸಂತೋಷಪಟ್ಟಿದ್ದರು. ಅಂತಹ ಮನೆಯನ್ನು
ಚುನಾಯಿಸಿ ಎಲ್ಲ ವ್ಯವಸ್ಥೆಯನ್ನೂ ಮಾಡಿಸಿಟ್ಟು ದಕ್ಕಾಗಿ ಅವರ ಪತ್ನಿ
--------------------------------------
ನಂದಾದೀಪ ೬೦

ಶಾಂತಿಗಾದ ಸಂತೋಷವು ಅಷ್ಟಿಷ್ಟಲ್ಲ. ಅದನ್ನು ಕಂಡು ರಾಯರು
ತಾನು ಕೃತಕೃತ್ಯನಾದನೆಂದು ಹಿರಿಹಿಗ್ಗಿದ್ದರು.

ರಾಯರು ಪೇಟೆಯಿಂದ ಮನೆ ಸೇರಿದಾಗ ದೀಪ ಹಚ್ಚುವ ಹೊತ್ತಾ
ಗಿದ್ದಿತು, ಪೋರ್ಟಿಕೊ (ಮುಖಮಂಟಪ)ದಲ್ಲಿ ಮೇಜಿನ ಮೇಲೆ ದೀಪ
ವಿತ್ತು. ಸುತ್ತಲೂ ಮಕ್ಕಳು ಕುಳಿತಿದ್ದರು. ಆದರೆ ಅವರು ನಿರೀಕ್ಷಿಸಿ
ದಷ್ಟು ಉತ್ಸಾಹವು ಅಲ್ಲಿರಲಿಲ್ಲ. ರಾಯರು ಬಂದವರು ಕುರ್ಚಿಯೊಂದ
ರಲ್ಲಿ ಕುಳಿತು ಕಮಲಾ, ಆಚೆ ಕೋಣೆಯೊಳಗೆ ದೀಪ ಹಚ್ಚು' ಎಂದರು.
ಹಿರಿ ಮಗಳಿಗೆ. 'ರಮಾ ನೀನೂ ಬಾ' ಎಂದು ಅವಳು ಕಿರಿಯಳನ್ನು
ಕೇಳಿದಳು. 'ಊಂ, ಹೂಂ! ನೀನೇ ಹೋಗು' ಎಂದಳವಳು, “ಅಮ್ಮಾ,
ಕೋಣೆಯಲ್ಲಿ ದೀಪಹಚ್ಚಬೇಕಂತೆ' ಎಂದು ಕಮಲೆಯು ತಾಯನ್ನು ಕರೆ
ದಳು, “ಏನೇ ಕಮಲಾ! ದೀಪಹಚ್ಚಲಿಕ್ಕೆ ತಾಯಿ ಬೇಕೇ' ಎನ್ನುತ್ತಾ
ರಾಯರು ಅಸಮಾಧಾನ ತೋರಿದರು. ಕಮಲೆಯು ಮರುಮಾತಾಡದೆ
ಒಳಗೆ ಹೋದಳು. ಅವಳ ಹಿಂದೆ ರಮೆಯೂ ಸಾಗಿದಳು, ಚಿಕ್ಕಮಕ್ಕ
ಇಲ್ಲೊಬ್ಬ 'ಪಪ್ಪಾ, ಭೂತಾಂದ್ರೆ ಹೇಗಿರುತ್ತೆ?' ಎಂದ. ಅಷ್ಟರಲ್ಲಿ
ರಾಯರ ಹೆಂಡತಿ ಶಾಂತಾ ಬಾಯಿಯು 'ಕೈದೀಪ ಹಿಡಿದುಕೊಂಡು ಬಂದು
ಕೋಣೆಗೆ ಹೋಗಿ ದೀಪ ಹಚ್ಚಿದಳು. ರಾಯರು ಅಲ್ಲಿಗೆ ಹೋಗಿ
ಅಂಗಿ ತೆಗೆದಿಡುತ್ತಾ 'ಮಕ್ಕಳಿಗಿಂದೇನಾಗಿದೆ? ದೀಪ ಹಚ್ಚಲಿಕ್ಕೆ ಹೇಳಿದರೆ
ಮುಖ ಮುಖ ನೋಡುತ್ತಾರಲ್ಲ!' ಎಂದರು.

"ಏನೂ ಇಲ್ಲ, ಆದರೆ ಹುಡುಕಿ ಹುಡುಕಿ ನಿಮಗೆ ಇದೇ ಮನೆ ಸಿಕ್ಕ
ಬೇಕೆ?''

"ಈಗೇನಾಯಿತು ಈ ಮನೆಗೆ? ಆಗ ನೀನೆ ಅಷ್ಟು ಹೊಗಳಿದ್ದೆಯಲ್ಲ?”

"ಹೌದು ಆದರೆ ಇದರಲ್ಲಿ ಅಜನೆ' ಆಗುತ್ತಂತೆ!”

"ಅಂದರೆ?”

"ಮಾಡಿನಲ್ಲಿ, ಅಟ್ಟದಲ್ಲಿ ಎಲ್ಲಾ ಶಬ್ದ ಆಗುತ್ತದಂತೆ.”

"ಇಲಿ ಹೆಗ್ಗಣ ಬೆಕ್ಕು ಏನಾದರು ಓಡಿದರೆ ಶಬ್ದ ಆಗುತ್ತೆ.”

"ಹಾಗಲ್ಲ, ರಾತ್ರೆಗೆ ಮಧ್ಯಾಹ್ನಕ್ಕೆ ಠಕ್! ಠಕ್' ಚಟಕ್ ಹೀಗೆಲ್ಲ
ಶಬ್ದ ಆಗುತ್ತಂತೆ”
----------------------------------
೬೧ ಮನೆಯಲ್ಲಿ ಭೂತ ಸಂಚಾರ

"ಆಗಬಹುದು. ಮನೆ ಬಹಳ ಹಳೇದಾಗಿಲ್ಲ; ಹಂಚು ಚಾವಣಿಯ
ಮನೆ; ಬಿಸಿಲು ಚೆನ್ನಾಗಿ ಕಾದಾಗ ರಾತ್ರೆ ತಣ್ಣಗಾದಾಗ ನೂರಾರು ಕೀಲು
ಸಂದುಗಳ ಸಾವಿರಾರು ಹಂಚುಗಳ ಬಿಗಿತವಿರುವ ಮನೆಯಲ್ಲಿ ಶಬ್ದ ವಾಗು
ವುದು ಆಶ್ಚರ್ಯವೆ?”

" ಕಿಟಕಿ ಬಾಗಿಲು, ಗುದ್ದಿದಂತಾಗುತ್ತದೆಯಂತೆ.”

"ಬಿಗಿಯಾಗಿ ಆಗಳಿಹಾಕಿದರೆ ಕಿಟಕಿ ಬಾಗಿಲುಗಳ ಅವಸ್ಥೆಯೇ
ಹಾಗೆ! ಅದಿರಲಿ, ನಿನಗೆ ಇದೆಲ್ಲಾ ಹೇಳಿದವರಾರು?”

ಆಚೆ ಮನೆಯ ಕೆಲಸದವಳು ಆಗ ಬಂದಿದ್ದಳು. ಅಲ್ಲದೆ ಆ
ಮನೆಯವರ ಹೆಂಡತಿ ನಮ್ಮನ್ನು ನೋಡಲಿಕ್ಕೆಂದು ಬಂದರು. ಆಗ
ಮಾತಾಡುತ್ತ ಹಿಂದೆ ಈ ಮನೆಯಲ್ಲಿದ್ದವರ ಸಂಗತಿ ಬಂತು, ಯಾರೂ
ಒಂದೆರಡು ತಿಂಗಳ ಮೇಲೆ ನಿಂತಿದ್ದಿಲ್ಲವಂತೆ ಇಲ್ಲಿ.”

"ಅವರೆಲ್ಲ ಅ೦ಜುಬುರುಕರು! ಅಜ್ಞಾನಿಗಳು! ಇಲಿಯೋಡಿ
ದರೆ ಹುಲಿಯೋಡಿತೆಂದು ಬಣ್ಣ ಕೊಟ್ಟವರು!"

"ಹಾಗೇ ನಾನೂ ಹೇಳಿದೆ. ಆದರೆ ನಡುರಾತ್ರೆ ಪಕ್ಕದ ಹಲಸಿನ
ಮರದಿಂದ ಹೊಯಿಗೆ ಉದುರುವುದಂತೆ! ಮನೆ ಸುತ್ತೂ ಗಗ್ಗರಗೆಜ್ಜೆ ಕಟ್ಟಿ
ಕೊಂಡು ಭೂತ ತಿರುಗುತ್ತದಂತೆ! ಬಾಗಿಲ ಸರಪಳಿ ಅಲಗಿಸುತ್ತದಂತೆ.
ಒಂದೊಂದು ಸಲ ಬಾವಿಗೆ ಹುಳುಂ ಎಂದು ಹಾರುತ್ತದಂತೆ! ಹೀಗೆಲ್ಲ
ಹಿಂದಿನವರು ಹೇಳಿಹೇಳಿ ಮನೆಬಿಟ್ಟು ಹೋಗಿದ್ದಾರಂತೆ.”

"ಆ ಅಂತೆ-ಕಂತೆ ನಮಗೆ ಬೇಡ. ಅವರೆಲ್ಲ ಹುಚ್ಚರು, ಸುತ್ತ
ಮುತ್ತಲಿನವರು ಹೇಳಿದ್ದನ್ನು ಕೇಳಿ ಅದನ್ನೇ ಕನಸು ಕಂಡಿರಬೇಕವರು.”

ಏನೇ ಇರಲಿ, ನಾವಿದನ್ನು ಕ್ರಯಕ್ಕೆ ತೆಗೆದುಕೊಳ್ಳಬೇಕಾದರೆ
ಆರು ತಿಂಗಳಾದರೂ ಇದರಲ್ಲಿದ್ದು ನೋಡಬೇಕು. ಅವಸರ ಮಾತ್ರ
ಮಾಡಬೇಡಿ ಇದರಲ್ಲಿ.”

"ಆಗಲಿ, ಹಾಗೇ ಮಾಡೋಣವಂತೆ, ಆದರೆ ನೀನೂ ಮಕ್ಕಳೂ
ಪುಕ್ಕಾದುದು ಆಶ್ಚರ್ಯ! ಪೋಲಿಸ್ ಅಧಿಕಾರಿಯಾಗಿದ್ದವರ ಬಳಿಗೆ ಭೂತ
ಬರುವುದು ಉಂಟೆ? ಅವರೇ ದೊಡ್ಡ ಭೂತ! ತಿಳಿಯಿತೇ."
-----------------------------------
ನಂದಾದೀಪ ೬೨

"ಸರಿ, ಆದರೆ ನೀವು ಮಾತ್ರ ಕೆಲವು ದಿನಗಳ ವರೆಗೆ ಎಲ್ಲಿಗೂ
ಹೋಗಬಾರದು.''

"ನಿಮ್ಮ ಈ ಹೆದರಿಕೆಯು ಹೋಗುವ ತನಕ ಸಾಯಂಕಾಲ ೬ ಘಂ
ಟೆಗೇ ನಾನು ಮನೆಯಲ್ಲಿದ್ದೇನೆ. ಕಮಲಾ, ರಮಾ, ಇದಕ್ಕೆನೇ ಕೋಣೆಯೊಳಗೆ
ಹೋಗಿ ದೀಪಹಚ್ಚಲಿಕ್ಕೆ ಹೆದರಿದುದು? ಕೊಣೆಯ ಕತ್ತಲಲ್ಲಿ ಭೂತವಿದೆ
ಯೇನೇ? ಭೀತನ ಹಿಂದೆ ಭೂತ! ಯಾರ ಹೃದಯದಲ್ಲಿ ಕತ್ತಲೆಯಿ
ದೆಯೋ ಅಲ್ಲಿದೆ ಭೂತ! ಭೂತ ನಲಿಯುವುದು ಅಜ್ಞಾನಸಾಗರದಲ್ಲಿ! ಇಲ್ಲಿ
ಗೇಕೆ ಬರುತ್ತದೆ? ಮೇಲಾಗಿ, ರಿಟಾಯರ್ಡ್ ಪೋಲೀಸು ಇನ್ಸ್‌ಪೆಕ್ಟರ
ನನ್ನು ಕಂಡರೆ ಭೂತ ತಾನೇ ರಿಟಾಯರ್ ಆಗುತ್ತೆ! ಈ ಮನೆಸೂತ್ರಕ್ಕೆ
ಬರಲಾರದು ಅದು!?”

"ಪಪ್ಪಾ, ಭೂತಾಂದ್ರೆ ಹೇಗಿರುತ್ತೆ ಅಪ್ಪ?” ಎಂದನು ತಿರುಗಿ ಸಣ್ಣ
ಹುಡುಗ.

"ಕಳ್ಳನಾಯಿಯನ್ನು ಕಂಡಿದ್ದೀಯಲ್ಲಾ? ನಮ್ಮನ್ನು ಕಂಡರೆ ಬಾಲ
ಅಡಿಗಿಟ್ಟು ಕೊಂಡು ಕಂಪೌಂಡಿಂದ ಓಡಿಹೋಗುತ್ತೆ ನೋಡು! ಅದಕ್ಕೇ
ಭೂತಾಂತಾರೆ ಇಲ್ಲಿಯವರು!"

ಆದರೆ ಈ ಭೂತದ ಸಮಸ್ಯೆಯು ವಿಠಲರಾಯರು ಯೋಚಿಸಿದಷ್ಟು
ಸುಲಭವಿದ್ದಿಲ್ಲ. ಅಂದು ಸುಮಾರು ಅರ್ಧರಾತ್ರಿಯ ಸಮಯ ಬಾಗಿಲಿಗೋ
ಮಾಡಿಗೋ ಏನೋ ಬಿದ್ದಂತಾಗಿ ರಾಯರಿಗೆ ಎಚ್ಚರವಾಯಿತು. ಆಲೈಸಿ
ದರು. ತಾನು ಮಲಗಿದ್ದ ಕೊಠಡಿಯ ಬಳಿಯಲ್ಲಿದ್ದ ಹಲಸಿನ ಮರದಿಂದ
ದರದರನೆ ಹೊಯಿಗೆಯ ಮಳೆಗರೆಯಿತು. ಅನಂತರ ಎಲ್ಲ ನಿಶ್ಯಬ್ದ! ಇದೇನು
ಪಿಕಲಾಟ ಎಂದು ರಾಯರು ಯೋಚಿಸುತ್ತಿದ್ದರು. ಅಂತೂ ಶಾಂತಿ
ನಿದ್ದೆಯಲ್ಲಿದ್ದುದು ಚೆನ್ನಾಯಿತೆಂದು ಸಮಾಧಾನಗೊಂಡರು. ಆದರೆ
"ನೋಡಿದಿರಾ ಹೊಯಿಗೆ ಬಿದ್ದುದು?” ಎಂದಳು ಆ ತನಕ ಗಾಬರಿಯಿಂದ
ಮೌನವಾಗಿದ್ದ ಶಾಂತಿ, ಮರುದಿನ ರಾಯರಿಗೂ ಅವರ ಪತ್ನಿಗೂ ಈ
ವಿಷಯವಾಗಿ ಬಹಳ ಚರ್ಚೆ ನಡೆಯಿತು. ರಾಯರು ಇದನ್ನು ಶೋಧನೆ
ಮಾಡುತ್ತೇನೆಂದರು. ಎಂತಂತಹ ಪತ್ತೆ ಮಾಡಿ ಕೀರ್ತಿಗೊಂಡಿದ್ದ
ತನಗೆ ಈ ಭೂತವನ್ನು ಹಿಡಿಯಲಿಕ್ಕಾಗದೆ? ಎಂದೇ ಅವರ ವಾದ, ಆದರೆ
--------------------------------------
೬೩ ಮನೆಯಲ್ಲಿ ಭೂತ ಸಂಚಾರ
ಶಾಂತಿಯು ಮಾತ್ರ ಕಾಡಿ ಬೇಡಿ ಕಣ್ಣೀರಿಟ್ಟು ರಾತ್ರಿ ಹೊರಗೆ ಹೋಗ
ಕೂಡದೆಂದು ಆಣೆ ಹಾಕಿದಳು, “ನಿಮಗೆಷ್ಟು ಧೈರ್ಯವಿದ್ದರೆ ಇನ್ನೂ
ಕೆಲವು ದಿನ ವಾಸವಾಗಿದ್ದು ನೋಡೋಣ, ಇದರ ಉಪಟಳ ಹೆಚ್ಚಿದರೆ
ಮನೆ ಬಿಟ್ಟು ಹೋಗಿಬಿಡೋಣ; ಬಾಡಿಗೆ ಕೊಟ್ಟರೆ ಬೇರೆ ಮನೆ ಸಿಗುವು
ದಿಲ್ಲವೆ? ಶೋಧನೆ-ಗೀದನೆಯ ಕೆಲಸವನ್ನೆಲ್ಲ ಮನೆಯ ಧನಿಯೇ ನೋಡಿ
ಕೊಳ್ಳಲಿ! ನೀವು ಮಾತ್ರ ರಾತ್ರಿ ಎಷ್ಟಕ್ಕೂ ಹೊರಗೆ ಹೋಗಕೂಡದು,”
ಎಂದು ಶಾಂತಿಯ ತೀರ್ಮಾನವಾಯಿತು. ಈ ತೀರ್ಮಾನವು ಶಾಂತಿ
ಯಿಂದ ಮನೆಗೆಲಸದವಳಿಗೆ ತಿಳಿಯಿತಂದ ಮೇಲೆ ಅದೇನೂ ಗುಟ್ಟಿನದ್ದಲ್ಲ
ವೆನ್ನಿ. ಅಂತೆಯೇ ದಿನದಿನದ ಸುದ್ದಿ ಅವಳಿಂದ 'ಬೊಡ್ಕಾಸ್ಟ್' ಆಗಿ
ಹಬ್ಬುತಿತ್ತು. ಆ ಸುದ್ದಿ ಗಳೇನೆಂಬಿರಾ! ಸಂಕ್ಷಿಪ್ತವಾಗಿ ಹೇಳುವುದಾದರೆ,
ಮರುದಿನ ರಾತ್ರಿ ಬಾವಿಯಲ್ಲಿ ಡುಳುಂ' ಎಂದು ಶಬ್ದ! ಮೂರನೆಯ ದಿನ
ಮನೆಯ ಸುತ್ತು ಯಾರೋ ನಡೆದಂತಾಗಿ ಎದುರಿನ ಬಾಗಿಲ ಸರಪಣಿ ಅಲುಗಿ
ಸಿದ ಸದ್ದು ! ನಾಲ್ಕನೆಯ ದಿನ ಗಗ್ಗರಗೆಜ್ಜೆ ಕಟ್ಟಿಕೊಂಡು ಮನೆಗೊಂದು
ಸುತ್ತು ಬಂದು ಬಾವಿಗೆ ಹಾರಿದಂತೆ!"ಐದನೆಯ ದಿನ ಮಧ್ಯಾಹ್ನದ
ಮೇಲೆ ರಾಯರು ತನ್ನ ಪತ್ತೆದಾರಿಯ ಬುದ್ದಿಯನ್ನೆಲ್ಲ ಉಪಯೋ
ಗಿಸಿ ಈ ಸಮಸ್ಯೆಯನ್ನು ಬಿಡಿಸಲಿಕ್ಕ ಕುಳಿತಿದ್ದರು. ಅಂದು ಶಾಂತಿಯೂ
ಮಕ್ಕಳೂ ಅವಳ ಅಣ್ಣನ ಮನೆಗೆ ಹೋಗಿದ್ದರು, ಬರುವುದು ಮರುದಿನ
ಆದರೆ ಅಂದು ರಾತ್ರಿ ತಾನು ಆಳುಗಳನ್ನಿಟ್ಟು ಕೊಳ್ಳುತ್ತೇನೆಂದು ಶಾಂತಿ
ಯನ್ನು ಶಾಂತಪಡಿಸಿ ರಾಯರು ಕಳುಹಿಸಿದ್ದರು, ನೆರಮನೆಯ ಕೊಗ್ಗಣ್ಣ
ಕಮ್ತಿರು ಬೀದಿಯಲ್ಲಿ ಹೋಗುತ್ತಾ ರಾಯರೊಬ್ಬರೇ ಕುಳಿತಿರುವುದನ್ನು
ಕಂಡು ಒಳಗೆ ಬಂದರು, ರಾಯರಿಗೂ ಅವರೊಡನೆ ಮಾತನಾಡಬೇಕೆಂದಿತ್ತು.

"ಬನ್ನಿ, ನಿಮ್ಮೊಡನೆ ಒಂದು ವಿಚಾರ ಕೇಳಬೇಕೆಂದಿತ್ತು. ನೀವೇ
ಬಂದುಬಿಟ್ಟಿರಿ! ಚೆನ್ನಾಯಿತು ಈ ಮನೆಯ ಭೂತದ ಕಾಟದ ವಿಷಯ
ನಿಮಗೇನಾದರೂ ಗೊತ್ತಿದೆಯೆ?”

“ಅಯ್ಯೋ, ನಿಮ್ಮ ಕಿವಿಗೂ ಆದು ಬಿದ್ದಿದೆಯೇ? ನಾನು ನಮ್ಮವಳ
ಹತ್ತಿರ ಜಾಗ್ರತೆ ಹೇಳಿದ್ದೆ-ಎಲ್ಲಾದರೂ ಬಾಯಿತಪ್ಪಿಯಾದರೂ ಬಾಯಿ
ಬಿಟ್ಟು ಬಿಡಬೇಡಾಂತ! ಆದರೆ ಅವೆಲ್ಲ ಚಿಲ್ಲರೆ ಜನರ ಮಾತು. ಇತ್ತೀಚೆಗೆ
------------------------------------
ನಂದಾದೀಪ ೬೪

ಸುಮಾರು ಒಂದು ಒಂದೂವರೆ ವರ್ಷದಿಂದ ನಾಲ್ಕಾರು ಸಂಸಾರಗಳು
ಬಂದವು; ಬಿಟ್ಟು ಹೋದುವು! ಅಜ್ಞಾನಿಗಳಯ್ಯ ಎಲ್ಲ! ಅವರ ಹೇಳಿಕೆ
ನಂಬತಕ್ಕದ್ದಲ್ಲ ಸ್ವಾಮಿ, ಬರೇ ಭ್ರಮೆಯಾಗಲಿಕ್ಕೂ ಸಾಕು! ನಾನು ನಂಬ
ಬೇಕಾದರೆ ತಮ್ಮಂಥವರ ಬಾಯಿಂದ ಏನಾದರೂ ಬರಬೇಕು. ತಮಗೇ
ನಾದರೂ ತೋರಿಬಂತೇ ಹೇಳಿ. "

"ಬಾರದೆ ಕೇಳುತ್ತೇನೆಯೆ? ಏನೇನು ಸುದ್ದಿಯುಂಟೋ ಅದೆಲ್ಲ ನಡೆ
ಯುತ್ತೆ ಇಲ್ಲಿ! ನನಗದರಲ್ಲಿ ನಂಬಿಕೆ ಇಲ್ಲದಿದ್ದರೂ ಈಗ ನಂಬಬೇಕಾಗಿದೆ.”

"ತಾವು ಹೇಳಿದ ಮೇಲೆ ನನಗಿನ್ನು ಸಂಶಯವಿಲ್ಲ; ಭೂತಗಳ ರೀತಿ
ಯೇ ವಿಚಿತ್ರ! ಅದರಲ್ಲಿ ನಮ್ಮ ತರ್ಕದ ಬೇಳೆ ಬೇಯುವುದಿಲ್ಲ. ಅದನ್ನು
ಪರೀಕ್ಷೆ ಮಾಡಹೋಗುವುದೂ ವಿಷ ಪರೀಕ್ಷಿಸುವುದೂ ಒಂದೇ. ಒಟ್ಟಾರೆ,
ಹಾಗಾಗುತ್ತದೆಂದಾದ ಮೇಲೆ ತಾವು ಜಾಗ್ರತೆಯಿಂದಿರುವುದೊಳ್ಳಿತು!
ಏನೇ ಆಗಲಿ, ತಾವು ಬಾಗಿಲು ತೆರೆದು ಹೊರಗೆ ಬರಬೇಡಿ, ಈ ಸುದ್ದಿ
ಕೇಳಿದಂದಿನಿಂದ ನಾವ್ಯಾರೂ ರಾತ್ರಿ ಹೊರಗೆ ಬರುವುದೇ ಇಲ್ಲ. ಆದರೆ
ಹಿಂದಿನವರಂತೆ ತಾವು ಇಷ್ಟು ಬೇಗನೇ ಮನೆ ಬಿಡಬಾರದು. ಮಕ್ಕಳು
ಮರಿಗಳಿಗೇನಾದರೂ ಕೆಡಕಿಲ್ಲವಷ್ಟೆ? ಹಾಗೇನಾದರೂ ಆದರೆ ಆ ಮೇಲೆ
ನಿಲ್ಲಬಾರದು. ಒಟ್ಟಿನ ಮೇಲೆ, ಈ ಭೂತದ ಕಾಟದಿಂದ ಈ ಮನೆಯು
ಮಕ್ಕಳು ಮರಿಗಳಿಗೆ ಜನಜಾನುವಾರುಗಳಿಗೆ ಆಗುವುದಿಲ್ಲವೆಂದು ಹಿಂದಿ
ನವರು ಹೇಳುತ್ತಿದ್ದರು. ಆದರೆ ನಾನಿಂದಿನ ವರೆಗೆ ನಂಬಿದ್ದಿಲ್ಲ. ಈಗ
ತಮ್ಮಂತಹರ ಬಾಯಿಂದ ಬಂದ ಮೇಲೆ ನನಗೂ ಪುಕಪುಕು ಹಿಡಿದಿದೆ.
ನನ್ನ ದುರದೃಷ್ಟವೆನ್ನ ಬೇಕು!”

"ನಿಮ್ಮ ದುರದೃಷ್ಟ ಇದರಲ್ಲಿ ಎಲ್ಲಿಂದ ಬಂತು? ನಿಮ್ಮ ಮನೆಗೂ
ಭೂತ ಬರುವುದೆಂದೊ!”

"ಇಷ್ಟರ ವರೆಗೆ ಹಾಗೇನೂ ಇಲ್ಲ, ಆದರೆ ಈ ಮನೆ ನನಗೆ ಒಂದೂ
ವರೆ ಸಾವಿರ ರೂಪಾಯಿಗೆ ಈಡಾಗಿತ್ತು. ಇದನ್ನು ಯಾರಿಗಾದರೂ
ಮಾರಿ ನನ್ನ ಸಾಲ ತೀರ್ಮಾನಮಾಡಬೇಕೆಂದು ಇದರ ಯಜಮಾನನ
ಯೋಚನೆಯಿತ್ತು. ಯಾರಾದರೂ ಐದಾರು ಸಾವಿರ ರೂಪಾಯಿ ಕೊಡು
ವಂತಹ ಮನೆ ಇದು! ಆದರೆ ಸಿಕ್ಕಾಬಟ್ಟಿ ಜನರಿಗೆ ಬಾಡಿಗೆಗೆ ಕೊಟ್ಟು
-------------------------------------
೬೫ ಮನೆಯಲ್ಲಿ ಭೂತ ಸಂಚಾರ

ಭೂತಸಂಚಾರದ ಮನೆಯೆಂಬ ಹೆಸರು ಹಾಕಿಸಿಕೊಂಡ! ಮಾರಾಟವಾಗ
ಲಿಲ್ಲ. ಆದರೆ ನನಗೆ ದುಡ್ಡು ಬೇಕಿತ್ತು. ದಾವಾ ಹೂಡಿ ಡಿಕ್ರಿಮಾಡಿಕೊಂಡೆ.
ಈಗ ಅದು ಸುಮಾರು ಎರಡೂವರೆ ಸಾವಿರ ಆಗಬಹುದು, ಹರಾಜಿಗೆ ಇಡಿ
ಸಿದ್ದೇನೆ ಇದನ್ನು! ನೀವು ಬಂದದ್ದು ಕೇಳಿ ನನಗೆ ತುಂಬಾ ಸಂತೋಷ
ಆಗಿತ್ತು! ನಿಮ್ಮಂತಹರ ಬಾಯಿಂದ ಈ ಸುದ್ದಿ ಯು ಸುಳ್ಳೆಂದಾಗಿ ನೀವಾ
ಗಲೀ ಬೇರೆಯವರಾಗಲೀ ಕ್ರಯಕ್ಕೆ ಪಡಕೊಂಡು ನನ್ನ ದುಡ್ಡು ನನಗೆ
ಬಂದೀತೆಂಬ ಆಶೆಯಿತ್ತು! ನೀವೂ ಹೀಗೆ ಹೇಳಿದುದರಿಂದ ಇದೆಲ್ಲಾದರೂ
ನನ್ನ ತಲೆಯ ಮೇಲೆ ಬಂದು ಬಿಡುತ್ತೆ ಎಂದು ಈಗ ಭಯವಾಗತೊಡ
ಗಿದೆ! ಹಾಗೇನಾದರೂ ಬಂದುಬಿಟ್ಟರೆ ನಾನು ನನ್ನ ಮಕ್ಕಳುಮರಿಗ
ಳನ್ನು ಹಾಕಿಕೊಂಡು ಇದರಲ್ಲಿ ಹೇಗೆ ಇರಲಿ, ಯಾವ ಮಂತ್ರವಾದಿಯ
ಕಾಲಿಗೆ ಬೀಳಬೇಕೋ! ಏನು ಖರ್ಚೂ ! ಆ ಪರಮಾತ್ಮನೇ ಬಲ್ಲ!”

"ಹಾಗಾದರೆ ನೀವಿರುವ ಆ ಮನೆ ನಿಮ್ಮ ಸ್ವಂತದ್ದಲ್ಲವೆ?”

"ಬಾಡಿಗೆಯದು ಸ್ವಾಮಿ, ಈ ಸಾಲದ ದುಡ್ಡು ಬರಮಾಡಿಕೊಂಡು
ಎಲ್ಲಾದರೂ ಚಿಕ್ಕದೊಂದು ಗುಡಿ ಕಟ್ಟಿ ಕೊಳ್ಳಬೇಕೆಂದಿದ್ದೆ. ಬಾಡಿಗೆ
ಕೊಟ್ಟೂ ಕೊಟ್ಟೂ ಸಾಕಾಯಿತು! ಆದರೆ ನನ್ನ ಹಣೆಯಲ್ಲಿ ಏನು ಬರೆದಿ
ದೆಯೋ, ಆ ದೇವರಿಗೇ ಗೊತ್ತು! ಯಾರ ಸಂಗವಾದರೂ ಬೇಕು-ಭೂತದ
ಸಂಗ ಬೇಡ! ಆದುದರಿಂದ ತಮಗೊಂದು ಮಾತು ಹೇಳುತ್ತೇನೆ. ಆ 'ಅಜನೆ'
ಆದಾಗ ಹೊರಗೆ ಮಾತ್ರ ಬರಬೇಡಿ! ಎಂಥ ಭಯಂಕರ ರೂಪ ಕಾಣಿ
ಸುತ್ತೋ! ಏನು 'ತಾರ್ಕಣೆ' ಆಗಿಬಿಡುತ್ತೊ! ನಮಗೆಷ್ಟು ಎದೆ ಧೈರ್ಯ.
ವಿದ್ದರೂ ಆ ಸಮಯಕ್ಕೆ ನೀರಾಗಿ ಹೋಗಿಬಿಡಬಹುದು! ಆದಕ್ಕೆ ಈ
ಸುದ್ದಿ ಕೇಳಿದಂದಿನಿಂದ ನಾನದನ್ನು ನಂಬದಿದ್ದರೂ ಒಂದೇ ಒಂದು ರಾತ್ರಿ
ಹೊರಗೆ ಬಂದವನಲ್ಲ!”

"ಹಾಗೆಲ್ಲ ಹೊರಗೆ ಬರಲಿಕ್ಕೆ ನನಗೇನಾದರೂ ಜೀವಭಾರವಾಗಿಲ್ಲ!
ಇಲ್ಲವೆ, ನಾನೇನಾದರೂ ಸಂಸಾರಬಿಟ್ಟ ಬೈರಾಗಿಯೂ ಅಲ್ಲವೆನ್ನಿ! ನಮ್ಮ
ಪ್ರಾಣಕ್ಕೂ ಈ ಮನೆಗೂ ಗಂಟಿಲ್ಲ. ಇನ್ನೂ ಸ್ವಲ್ಪ ದಿವಸ ನೋಡು
ತ್ತೇನೆ. ಹೀಗೇ ಹೆಚ್ಚಾಗುತ್ತಾ ಬಂದರೆ ಬಿಟ್ಟು ಹೋಗಿ ಬಿಡುವುದು!
ದುಡ್ಡು ಕೊಟ್ಟೂ ಹೊಳೆ ಈಸಿ ಮೊಸಳೆ ಬಾಯಿಗೆ ತುತ್ತಾಗುವ ಹುಚ್ಚುತನ
ನನ್ನಲ್ಲಿಲ್ಲ! ಆ ಎದೆಗಾರಿಕೆಗೆ ಹೋಗುವವನೂ ನಾನಲ್ಲ!”
-------------------------------------
ನಂದಾದೀಪ ೬೬

"ಚಿನ್ನದಂಥಾ ಮಾತು! ಹ್ಯಾ ಕೋರ್ಟು ಇಸ್ಮಿಸ್ಸಾಲ್ ತೀರ್ಪಿನ
ಹಾಗೆ ತಮ್ಮ ನುಡಿಗಟ್ಟು! ಸುಮ್ಮನೆ ಬಹುಮಾನಪಟ್ಟ ಇನ್ಸ್ ಪೆಕ್ಟರಿಕೆ
ಸಿಕ್ಕಿತ್ತೇ? ಆಗಾಗ ಬರುತ್ತೇನೆ ಸ್ವಾಮಿ, ಸಾವಧಾನವಾಗಿ ವಿಚಾರಮಾ
ಡೋಣ, ಅಂತೂ ಅವಸರ ಮಾಡಬೇಡಿ; ಅಪ್ಪಣೆಯಾಗಲಿ!”
* * * *
ಅಂದು ಕಗ್ಗತ್ತಲೆ, ರಾತ್ರಿ ರಾಯರೊಬ್ಬರೇ ಪೋರ್ಟಿಕೋದಲ್ಲಿ
ಕೂತು ಓದುತ್ತಿದ್ದರು. ಹತ್ತೂವರೆ ಗಂಟೆ ಹೊಡೆಯಿತು. ಆಗ ಅವರಿ
ಗೇನು ಹುಚ್ಚು ಬುದ್ದಿ ಬಂತೋ! ಆ ಭೂತವನ್ನು ನೋಡಿಬಿಡಬೇಕೆಂದು
ಛಲತೊಟ್ಟು ಎದೆ ಗಟ್ಟಿ ಮಾಡಿಕೊಂಡರು! ಕೈಯಲ್ಲಿ ಕಪ್ಪು ಸವರಿದ ಬಲಿಗೆಯ
ದೊಣ್ಣೆ. ಆ ದೊಣ್ಣೆ ಬೀಸಿ ಎಷ್ಟೋ ಕಳ್ಳರ ಕೈಯಕಗಳನ್ನು ಕೆಳ
ಗುರುಳಿಸಿದ ಖ್ಯಾತಿ ಅವರಿಗಿತ್ತು. ಅದನ್ನು ಹಿಡಕೊಂಡು ಒಳಗಿನ
ಬಾಗಿಲುಗಳನ್ನು ಹಾಕುತ್ತಾ ಬಂದರು. ದೀಪಗಳನ್ನು ನಂದಿಸಿದರು.
ಎದುರಿನ ಬಾಗಿಲಿನ ಕೀಲಿಕ್ಕೆ ತಿರುಗಿಸಿದರು. ತಾನು ಕಪ್ಪು ಬಟ್ಟೆ ಹೊದ್ದು
ಬಾಗಿಲ ಎದುರು ಪೋರ್ಟಿಕೊದ ಕಂಬಕ್ಕೆ ಆಂತು ನಿಂತರು. ಹೊದ್ದ
ಕಪ್ಪು ಬಟ್ಟೆ ಯಿಂದಾಗಿ ಅವರ ಮೈ ಯೇ ಅವರಿಗೆ ಕಾಣುತ್ತಿದ್ದಿಲ್ಲ. ಅವರೂ
ಕತ್ತಲೂ ಅಷ್ಟು ಚೆನ್ನಾಗಿ ಒಂದುಗೂಡಿ ಹೋಗಿದ್ದು ವು!

ಸುಮಾರು ೧೨ ಗಂಟೆಯ ಸಮಯ, ಭೂತ ಬರುವ ಹೊತ್ತು.
ಬಂತೇ ಬಂತು! ಮನೆಯ ಹಿಂಬದಿಯಲ್ಲಿ ಗಗ್ಗರ ಗೆಜ್ಜೆಯ ಧ್ವನಿ ಕೇಳಿಸಿತು!
ಸದ್ದು ಮುಂದೆ ಮುಂದೆ ಬಂತು! ಕಿಟಕಿಗಳನ್ನು ಗುದ್ದಿದಂತಾಯ್ತು! ಹಲ
ಸಿನ ಮರದಿಂದ ಹೊಯಿಗೆ ಉದುರಿತು! ಗಗ್ಗರ ಗೆಜ್ಜೆಯ ಧ್ವನಿ ಮತ್ತೂ
ಹತ್ತಿರ ಬಂತು! ಇನ್ನೂ ಹತ್ತಿರ, ಪೋರ್ಟಿಕೋದ ಮೇಲೆ! ಬಾಗಿಲ
ಸರಪಳಿಯೂ ಗಗ್ಗರಗೆಜ್ಜೆಯೂ ಒಟ್ಟಿಗೆ ;ಘುಲ್ ಘಲ್ ಘಲ್'
ಎಂದಿತು ಮೂರು ಬಾರಿ! ರಾಯರೆಲ್ಲ? ನಿದ್ದೆಹೋಗಿದ್ದರೇ? ಮೂರ್ಛೆ ಬಿದ್ದಿ
ದ್ದರೇ? ಇಲ್ಲ! ಆಲಿಸಿ, 'ಚಟ್! ಘೈಲ್'ಅದೇನು? ರಾಯರು ದೊಣ್ಣೆ ಯನ್ನು
ಬೀಸಿ ಸರಪಳಿಯು ಕುಲಕುವ ಕಡೆಗೆ ಗುರಿಯಿಟ್ಟು ಹೊಡೆದಿದ್ದರು.
ಅದೇ ಚಟ್! ಭೂತದ ಕೈಯಲ್ಲಿದ್ದ ಗಗ್ಗರ ಗೆಜ್ಜೆಯು ಘೈಲ್ ಎಂದು
ಕೆಳಗೆ ಬಿದ್ದಿರಬೇಕು! ಭೂತವು ಓಡುವ ಸದ್ದನ್ನು ರಾಯರು ಕೇಳಿದರು!
ಬಂದ ಹಾದಿಯಾಗಿಯೇ ಓಡಿತು ಭೂತ! ರಾಯರು ಹಿಂದಿನಿಂದೋಡಿದರು.
--------------------------------------
೬೭ ಮನೆಯಲ್ಲಿ ಭೂತಸಂಚಾರ

ಆದರೆ ಅವರು ಮನೆಯ ಹಿಂದೆ ಹೋಗುವಷ್ಟರಲ್ಲಿ ಅದೆಲ್ಲೋ ಕತ್ತಲೊ
ಳಗೆ ಮಾಯವಾಗಿತ್ತು! ಅಲ್ಲೇ ನಿಂತು ಆಲಿಸಿದರು. ಅದು ಪಾಗಾರಹಳ್ಳಿ
ಕೊಗ್ಗ ಕಮ್ಮಿರ ಹಿತ್ತಲಿಗೆ ಹಾರಿದ ಸದ್ದು ಕೇಳಿಸಿತು!
* * * * * * *
ಎಂಟು ದಿವಸ ಕೊಗ್ಗ ಕಮ್ತಿರು ಮನೆಯಿಂದ ಹೊರಗೆ ಬಂದಿಲ್ಲ.
ಅವರ ಎರಡು ಮುಂಗೈ ಗಂಟುಗಳೂ ಅಷ್ಟು ಬೀಗಿಕೊಂಡಿ
ದ್ದುವಂತೆ! ಏನೇನೋ ಲೇಪಹಾಕಿ ಹಾಕಿ ಕೊನೆಗೆದು ಗುಣವಾಯಿತೆನ್ನಿ.
ಇತ್ತ ಈ ಮನೆಗೆ ಭೂತದ ಕಾಟವೂ ತಪ್ಪಿತೆನ್ನಿ! ಮೊನ್ನೆ ರಾಯರೇ ಅದನ್ನು
ಐದು ಸಾವಿರ ರೂಪಾಯಿ ಕೊಟ್ಟು ಕ್ರಯಕ್ಕೆ ಪಡ ಕೊಂಡರು, ಕಮ್ಮಿ
ರಿಗೆ ಇಂದು ಹಣವನ್ನು ತೆತ್ತು ರಶೀದಿ ಪಡೆದಾಗ "ಅಂತೂ ಅದು ನಿಮ್ಮ
ತಲೆಯ ಮೇಲೆ ಬೀಳದಿದ್ದುದು ನಿಮ್ಮ ಪುಣ್ಯವೋ ನನ್ನ ಭಾಗ್ಯವೋ
ಆ ಪರಮಾತ್ಮನಿಗೇ ಗೊತ್ತು!” ಎಂದರು. ಅಂತೂ ನನ್ನ ತಲೆಯಿಂದ
ತಪ್ಪಿತಲ್ಲ!” ಎನ್ನುತ್ತ ಕೊಗ್ಗ ಕಮ್ತಿ ರು ಅಲ್ಲಿಂದೆದ್ದು ಹೋದರು. ಅದು
ಎಂದರೆ ಯಾವುದು? ಆ ಮನೆಯೋ? ರಾಯರ ದೊಣ್ಣೆಯೊ?
======================================
ಪಳ್ಪಟನಾಯ್ಕ

ಉ ಡು ಪಿ ಯ ಅನಂತೇಶ್ವರ ದೇವಸ್ಥಾನದ ಪೌಳಿಯಲ್ಲಿ
ಜನರದೊಂದು ಗುಂಪು. ಗಂಡಸು ಹೆಂಗಸರೆಂದು ಸುಮಾರು ಐವತ್ತು
ಮಂದಿ ಗಂಟುಮೂಟೆಗಳನ್ನು ಕಟ್ಟಿ ಕೊಂಡು ಕುಳಿತಿರುವರು. ಅವರ
ಬಳಿಯಲ್ಲಿ ಅವರ ಬಂಧುಬಾಂಧವರಿಷ್ಟಮಿತ್ರರ ವರ್ಗಕ್ಕೆ ಸೇರಿದವರನೇಕರು
ಕುಳಿತು ಮಾತಾಡುತ್ತಿರುವರು. ಅಲ್ಲಿ ನಡೆಯುತ್ತಿರುವ ಮಾತುಕತೆಗಳನ್ನು
ಕೇಳಿದರೆ ಅವರಲ್ಲನೇಕರು ಯಾತ್ರಾರ್ಥಿಗಳಾಗಿ ಹೊರಟವರೆಂದೂ
ಮತ್ತುಳಿದವರು ಅವರನ್ನು ಕಳುಹಿಸಿಕೊಡಲು ಬಂದವರೆಂದೂ ತಿಳಿದು
ಬರುವುದು. ಸರಿ, ನಿಶ್ಚಿತ ಮುಹೂರ್ತವು ಒದಗಿತು. 'ತಿರುಪತಿವಾಸ!
ಶ್ರೀನಿವಾಸ, ಶ್ರೀಮದ್ರಮಾರಮಣಗೋವಿಂದಾ ಗೋವಿಂದ!' ಎಂದು
ಹೇಳುತ್ತ ಎಲ್ಲರೂ ಎದ್ದು ನಿಂತರು, ಯಾತ್ರಿಕರಾಗಿ ಹೊರಟವರು ತಮ್ಮ
ತಮ್ಮ ಗಂಟು ಮೂಟೆಗಳನ್ನು ಹೊತ್ತುಕೊಂಡು, “ಶ್ರೀಮದ್ರಮಾರಮಣ
ಗೋವಿಂದಾ ಗೋವಿಂದ' ಎಂಬ ನಾಮಸಂಕೀರ್ತನೆಯನ್ನು ಒಟ್ಟಾಗಿ
ಹೇಳುತ್ತ ಹೇಳುತ್ತ ಕಿನ್ನಿಮೂಲ್ಕಿಯತ್ತ ಕಡೆಯ ದಾರಿಹಿಡಿದರು.
ಅವರಲ್ಲೊಬ್ಬನು ಅತಿ ದೊಡ್ಡದೊಂದು ಮೂಟೆಯನ್ನು ಹೊತ್ತಿದ್ದನು.
ಅದನ್ನು ಪರೀಕ್ಷಿಸಿ ನೋಡಿದರೆ ಅದು ನಾಲ್ಕಾರು ಗಂಟುಗಳನ್ನು ಒಟ್ಟು
ಮಾಡಿ ಕಟ್ಟಿದ್ದ ದೊಡ್ಡ ಮೂಟೆಯೆಂದು ಭಾ ಸ ವಾ ಗುತಿ ತು.
ಆತನಾದರೋ ಹರುಕು ಪಂಚೆಗಳನ್ನು ಸೊಂಟಕ್ಕೆ ಸುತ್ತಿಕೊಂಡಿದ್ದನು.
ಮತ್ತೊಂದೆರಡು ಪಂಚೆಯ ಸಣ್ಣದೊಂದು ಗಂಟನ್ನು ಪ್ರತ್ಯೇಕವಾಗಿ
ಬಗಲಿಂದ ತೂಗಹಾಕಿದ್ದನ್ನು ಇದು ಮಾತ್ರ ಅವನದು. ಹಾಗಾದರೆ
ತಲೆಯ ಮೇಲಿನ ಆ ದೊಡ್ಡ ಮೂಟಿ? ಬೇರೆ ಯಾತ್ರಿಕರ ಗಂಟು
ಮೂಟೆಗಳನ್ನು ಹೊತ್ತಾದರೂ ಶ್ರೀನಿವಾಸನ ದರ್ಶನ ಮಾಡಬೇಕೆಂದು
ಇವನೇನು ಹೊರಟಿರುವನೆ? ಅಷ್ಟೊಂದು ಭಕ್ತಿ ಇವನಲ್ಲಿರುವುದೆ?
ಏಕಿರಬಾರದು! ಆಲಿಸಿರಿ, ಬೇರೆ ಯಾತ್ರಿಕರು 'ಶ್ರೀಮದ್ರಮಾರಮಣ
-------------------------------------
೬೯ ಪಳ್ಳವನಾಯ್ಕ

ಗೋವಿಂದಾ' ಎನ್ನುವಷ್ಟರಲ್ಲಿ ಈತನ ಬಾಯಿಯಿಂದ ಅತ್ಯುತ್ಸಾಹ
ಪೂರ್ವಕವಾಗಿ ಹೊರಡುವ “ಗೋೕೕೕೕ ವಿ೦ ದ' ಎಂಬುದು ಆತನ
ಹೃದಯದ ಎಷ್ಟೊಂದು ಆಳದಿಂದ ಹೊರಟೇಳುತ್ತಿದೆ! ಇಷ್ಟೊಂದು
ಪರ್ಯಂತ ತಡೆಗಟ್ಟಿ ಹೃದಯದೊಳಗೆ ಒತ್ತೊತ್ತಿಟ್ಟಿದ್ದ ಆ ಭಕ್ತಿಯು
ಇಂದು ಏರಿಮುರಿದು ಹೊರಹರಿಯುವ ನದಿಯ ಪ್ರವಾಹದಂತ ಹೊರ
ಹೊಮ್ಮುತ್ತಿದೆಯೆಂದು ವ್ಯಕ್ತವಾಗುವುದಿಲ್ಲವೆ! ಆ ಗೋೕೕವಿಂದ
ಎಂಬ ನಾಮೋಚ್ಛಾರಣೆಯನ್ನು ಮಾಡುವಾಗ ಆತನಿಗೆ ತನ್ನ ತಲೆಯ
ಮೇಲಿನ ಆ ದೊಡ್ಡ ಹೇರಿನ ಭಾರವಾಗಲಿ ಮಾರ್ಗಾಯಾಸವಾಗಲಿ ತಿಳಿ
ಯುತ್ತಿದ್ದಿಲ್ಲ. ಬದಲಾಗಿ ಹೊಸತೊಂದು ಬಗೆಯ ಶಕ್ತಿಯು ಅವನ ನರನಾಡಿ
ಗಳಲ್ಲಿ ತುಂಬುತ್ತಿತ್ತು; ಅವನು ಕುಣಿಕುಣಿದು ಓಡುವಂತೋಡಿ ಮುಂದಾ
ದವರನ್ನು ಹಿಂದಿಕ್ಕಿ ಆ ಯಾತ್ರಿಕರನ್ನೆಲ್ಲ ಬೆರಗುಗೊಳಿಸುತ್ತಿದ್ದನು.

ಕಾಲು ನಡೆ ಯ ತಿರುಪತಿ ಯಾತ್ರೆ! ಹಾದಿಯುದ್ದಕ್ಕೂ
'ಶ್ರೀಮದ್ರಮಾರಮಣ ಗೋವಿಂದಾ ಗೋವಿಂದ' ಎಂದು ಕೂಗುತ್ತ
ಹೋಗುವುದು! ಹೀಗೆಲ್ಲಾದರೂ ಇದೆಯೆ? ಯಾತ್ರಿಕರು 'ಮೋಟಾರ್
ಸ್ಟೇಶನಿ'ಗೆ ಹೋದರಾಯಿತು, ಬೇಕಾದರೆ ಮೊಟಾರ್ ಬಂಡಿಯೇ
ಯಾತ್ರಿಕರು ಹೊರಡುವಲ್ಲಿಗೆ ಬಂದೇ ಬಿಡುವುದು, ಇಂತಿರಲು ಇದೇನು
೨೦ನೆಯ ಶತಮಾತದಲ್ಲಿ ನಡೆದುದೊ? ೧೦ನೆಯ ಶತಮಾನದಲ್ಲಿ ಆದುದೋ
ಎಂದು ಕೇಳುವಿರಾ? ನಮ್ಮ ಈ ಯಾತ್ರಿಕರು “ಶ್ರೀಮುದ್ರಮಾರಮಣ
ಗೋವಿಂದಾ ಗೋವಿಂದ' ಎಂದು ಹೇಳುತ್ತ ಹೋಗಲು ನಾಚುವಷ್ಟು
ಶಿಥಿಲ ಭಕ್ತಿಯ ಸುಖಪ್ರವಾಸಾಪೇಕ್ಷೆಯ ೨೦ನೆಯ ಶತಮಾನದ
ಯಾತ್ರಿಕರಲ್ಲ. ನಮ್ಮ ಕಥೆಯು ಸುಮಾರು ಒಂದು ಸಾವಿರ ವರ್ಷಗಳ
ಹಿಂದಿನದು.

ಆಗ ಉಡುಪಿಯ ವಾಯವ್ಯ ಬದಿಯ ಬನ್ನಿಂಜೆಯಲ್ಲಿ ಕಡು
ಬಡವನೊಬ್ಬನಿದ್ದನು. ಬರೇ ಗರೀಬನೆಂದೋ ಏನೋ ಆತನನ್ನು
ಉಡುಪಿಯವರೆಲ್ಲ ಪಳ್ಪಟ್ ನಾಯ್ಕ' ಎಂದು ಕರೆಯುತ್ತಿದ್ದರು. ಲೌಕಿಕ
ಸ್ಥಿತಿಗತಿಯಲ್ಲಿ ತುಲನೆ ಮಾಡಿದರೆ ಅವನು ಬಡವರಲ್ಲಿ ಬಡವನೆಂಬು
ದಕ್ಕೇನೂ ಸಂಶಯವಿಲ್ಲ, ಗುಡ್ಡೆಯ ಬದಿ ಯಾರೂ ಬೇಡವೆಂದು
----------------------------------
ನಂದಾದೀಪ

ಬಿಟ್ಟಿದ್ದ ಅದೊಂದು ಸ್ಥಳದಲ್ಲಿ ಅವನ ಮನೆ, ಮನೆಯೆಂದರೆ ಮುಳಿ ಹಳೆ
ಮಾಡಿನ ಎರಡನೆಯ ಚಿಕ್ಕದೊಂದು ಗುಡಿಸಲು; ಅದಕ್ಕೆ ಹರು
ಮುರುಕಾದ ಮಡಲುತಟ್ಟಿಯ ಗೋಡೆ ಬೇಸಿಗೆಯಲ್ಲಿ ಸೂರ್ಯ
ಕಿರಣಗಳೂ ಮಳೆಗಾಲದಲ್ಲಿ ನೀರೂ ಒಳಗೆ ಪ್ರವೇಶಿಸುವುದಕ್ಕೆ ಅಡ್ಡಿ
ಯೇನೂ ಇದ್ದಿಲ್ಲ. ಆದರೆ ಎದುರಲ್ಲಿದ್ದ ದನಕರುಗಳ ಕೊಟ್ಟಿಗೆಗೆ,
ಮಾತ್ರ ಕಬ್ಬಿನ ಸೋಗೆಗಳನ್ನು ಎಲ್ಲಿಂದಾ ದರೂ ಬೇಡಿ ತಂದು ಹೊರ
ತಾಳಿಯ ಮಡಲುಗಳಿಂದ ತಟ್ಟಿ ಕಟ್ಟಿ ಅದನ್ನು ಆದಷ್ಟು ಬೆಚ್ಚಗೆ
ಚೊಕ್ಕಟವಾಗಿ ಇಟ್ಟಿದ್ದನು. 'ಅಯ್ಯೋ, ಪಾಪ! ಮೂಕ ಪ್ರಾಣಿಗಳು.
ಅವುಗಳಿಗೆಂದೂ ಪೀಡೆಯಾಗಬಾರದು' ಎಂಬುದು ಪಳ್ಪಟನ ಸೊಲ್ಲು.
ಬಡ ಪಲ್ಲಟನಿಗೆ ಆ ನಡೆಗಳೆಲ್ಲಿಂದ? ಒಂದೊಮ್ಮೆ ಉಡುಪಿಯ ಆಚಾರ್ಯ
ರೊಬ್ಬರ ದನವನ್ನು ಸಾಕಿ ಕ ರು ಹಾಕಿ ಸಿ ಕೊ ಟ್ಟಿ ದ್ದ ನು.
ಅದಕ್ಕವರು ಆ ಹೆಂಗರುವನ್ನು ಇವನಿಗೆ ಉಚಿತವಾಗಿ ಕೊಟ್ಟಿದ್ದರು
ಅದು ದನವಾಯಿತು. ಅದಕ್ಕೆ ಕರುಗಳಾದವು; ಕರುಗಳಿಗೆ ಕರುಗಳಾದ
ಈ ನಡೆಗಳೇ ಇವನ ಲೌಕಿಕ ಸೊತ್ತುಗಳು.

ಬಡ ಪಟನಾಯ್ಕನು ಬಡವರ ಗೆಳೆಯ, ನೆರೆಹೊರೆಯ
ಬಡವರ್ಯಾರೇ ಆಗಲಿ ಅಸ್ವಸ್ಥ ದಲ್ಲಿದ್ದರೆ ಅಲ್ಲಿಗಾತನು ದಿನಾಲೂ ಹೊಗಿ
ವಿಚಾರಿಸದೆ ಇರುತ್ತಿದ್ದಿಲ್ಲ. “ಅಣ್ಣಾ, ಅಕ್ಕಾ, ಮದ್ದಿಗೋ ಅನುಪಾನಕೋ
ಹಾಲು ಬೆಣ್ಣೆ ತುಪ್ಪಗಳೇನಾದರೂ ಬೇಕಾದರೆ ತಂದು ಕೊಡುತ್ತೆನೆ.
ಹೇಗಾದರೂ ದೇವರು ಒಮ್ಮೆಗೆ ನಿನಗೆ ಸೌಖ್ಯವನ್ನು ದಯಪಾಲಿಸಲಿ
ಎಂಬುದು ರೋಗಿಯ ಹಾಸಿಗೆಯ ಬಳಿಯಲ್ಲಿ ಪಳ್ಳಟನ ಪ್ರಾರ್ಥನೆ ಆ
ತಾಯಿಯ ನರಳುವ ಮಗುವಿಗೆ ಹಾಲು ಬೇಕಾಗಿದ್ದರೆ ಅವಳು ಪಳ್ಪಟಳ
ನಾಯ್ಕನಲ್ಲಿಗೇ ಹೋಗಬೇಕು, ಬಡಕೂಲಿಗೆ ಒಂದಿಷ್ಟು ಮಜ್ಜಿಗೆ-ನೀರು
ಕುಡಿಯಬೇಕೆಂದಾಶೆ ಹುಟ್ಟಿದರೆ ಅದರ ಸಾರ್ಥಕ್ಯವೂ ಪಳ್ಪಟನಾಯ್ಕ
ನಲ್ಲಿಯೆ! ಕುರುಡರು ಕುಂಟರು ಹಸಿವಿಂದ ಕಂಗೆಟ್ಟ ಬಡಪಾಯಿಗಯಿ
ಇವರ್ಯಾರೇ ಬರಲಿ, ತನ್ನ ಊಟ ವನ್ನಾದರೂ ಅವರಿಗೆ ಬಡಿಸಿ
ತಾನೊಂದಿಷ್ಟು ಮಜ್ಜಿಗೆ ಕುಡಿದು ತೃಪ್ತಿ ಪಡುತ್ತಿದ್ದನು. ಆಗ ಪಳ್ಪಟ ನಾಯ್ಕ
ನಿಗಾಗುವ ಆನಂದವು ಹೊಟ್ಟೆ ತುಂಬ ಉಂಡ ದಿನವೂ ಆಗುತ್ತಿದ್ದಿಲ್ಲ.
-----------------------------------------
೭೧ ಪಳ್ಪಟನಾಯ್ಕ

ಪಳ್ಪಟನಿಗೂ ಚಿಕ್ಕದೊಂದು ಸಂಸಾರವಿತ್ತು. ಆತನ ಹೆಂಡತಿ,
ಎರಡು ಮೂರು ಮಕ್ಕಳು, ಇಷ್ಟೆ. ಎಲ್ಲರಂತೆ ಆತನಿಗೂ ಸಂಸಾರದಲ್ಲಿ
ಸಂಕಷ್ಟಗಳು ಬಾರದೆ ಇರುತ್ತಿದ್ದಿಲ್ಲ. ಮುದ್ದು ಮುದ್ದಾಗಿದ್ದ ಎರಡು ಮಕ್ಕಳು
ತೀರಿಕೊಂಡಿದ್ದರು. ಹಟ್ಟಿಯಲ್ಲಿ ದನವೊ ಕರುವೋ ಸಾಯುತ್ತಿತ್ತು,
ಆದರೆ ಅದಕ್ಕಾಗಿ ಅವನು ಅತ್ತು ರಂಬಾಟ ಮಾಡುತ್ತಿದ್ದಿಲ್ಲ. ಅದನ್ನೆ
ಹಂಬಲಿಸುತ್ತ ಅನ್ನ ನೀರು ಬಿಟ್ಟು ಕಣ್ಣೀರಿಡುತ್ತಿದ್ದಿಲ್ಲ. ಅವನೇ
ಕೊಟ್ಟು ದು; ಅವನೆ: ಕೊಂಡುಹೋದುದು; ಎಲ್ಲವೂ ಅವನ ಇಚ್ಛೆ!
ನನ್ನಿಂದೇನಾಗುವುದು?' ಎನ್ನುತ್ತಿದ್ದನಲ್ಲದೆ ಮರುಗುತ್ತಿದ್ದಿಲ್ಲ. ಬಡತನ
ದಿಂದ ನರಳುತ್ತಿದ್ದವರನ್ನು ಕಂಡರೆ ಮಾತ್ರ ಅವನ ಎದೆ ಕರಗಿ ನೀರಾಗು
ತ್ತಿತ್ತು. ಆಗ ಅವನು, “ಅಯ್ಯೋ, ನನ್ನೊಡೆಯಾ! ನನ್ನ ಕೈಯನ್ನೇಕೆ
ಗಿಡ್ಡು ಮಾಡಿದೆ?” ಎಂದು ಉದ್ಗಾರವೆತ್ತುತ್ತಿದ್ದನು.

ಪಟ್ಟ ಟನಿಗಿದ್ದುದು ಎರಡೇ ಎರಡು ಆಶೆಗಳು-ನನ್ನೊಡೆಯಾ! ತಿರು
ಪತಿ ವೆಂಕಟೇಶಾ, ಬಡವರ ಕಡೆಗೆ ಕೈನೀಡುವಂತೆ ಮಾಡು! ಸಾಯುವ
ಮೊದಲೊಮ್ಮೆ ನಿನ್ನ ದರ್ಶನವಾಗುವಂತೆ ದಾರಿ ಕಾಣಿಸು' ಇವೇ ಆತನ
ಜನ್ಮದ ಬಯಕೆಗಳು. ಶ್ರಾವಣ ಮಾಸದ ಶನಿವಾರಗಳಲ್ಲಿ ಮನೆ ಮನೆ
ಬೇಡಿ ಶ್ರೀನಿವಾಸನ ಕಾಣಿಕೆಯ ಮುಡಿಪನ್ನು ಮಾಡಿದ್ದನು. ಪ್ರತಿ
ವರ್ಷವೂ ಶ್ರಾವಣ ಮಾಸದ ಕೊನೆಯ ಶನಿವಾರ ಮುಡಿವನ್ನು ಕಟ್ಟುವಾಗ
'ಸ್ವಾಮಿಾ, ಬೆಟ್ಟದೊಡೆಯಾ, ಇದನ್ನು ನಾನೇ ನನ್ನ ಕೈಯಿಂದ ನಿನಗೆ
ಅರ್ಪಿಸುವಂತಾಗಲಿ,' ಎಂದು ಅದಕ್ಕೆ ಅನನ್ಯ ಭಕ್ತಿಭಾವದಿಂದ ನಮಸ್ಕರಿಸು
ತ್ತಿದ್ದನು.

ಕೆಲವು ವರ್ಷಗಳ ಮೇಲಾದರೂ ಶ್ರೀನಿವಾಸನು ಪಳ್ಪಟನ ಕಡೆಗೆ
ಕೃಪಾದೃಷ್ಟಿಯನ್ನು ಬೀರಿದಂತಾಯಿತು, ಉಡುಪಿಯಲ್ಲನೇಕರು ತಿರು
ಪತಿ ಯಾತ್ರೆಗೆ ಹೊರಡುವರೆಂಬ ಸುದ್ದಿಯು ಪಲ್ಲಟನಿಗೆ ಮುಟ್ಟಿತು.
ಅವನು ಅವರಲ್ಲಿ ಕೆಲವರ ಬಳಿಗೆ ಹೋಗಿ, 'ಸ್ವಾಮಿ, ತಮ್ಮ ಗಂಟು
ಮೂಟೆಗಳನ್ನು ಹೊರುತ್ತೇನೆ. ತಮ್ಮ ಕಾಲೊತ್ತುತ್ತೇನೆ. ಬಿದ್ದ ಯಾವ
ಕೆಲಸಕ್ಕೂ ಸಿದ್ಧನಿದ್ದೇನೆ ದಯಮಾಡಿ ನನಗೊಮ್ಮೆ ಬೆಟ್ಟ ದೊಡೆಯನ
ದರ್ಶನ ಮಾಡಿಸಿರಿ, ನಿಮ್ಮ ಕಾಲಿಗೆ ಅಡ್ಡ ಬಿದ್ದೆ, ದಮ್ಮಯ್ಯ!' ಎಂದು
--------------------------------------
ನಂದಾದೀಪ ೭೨

ಅಂಗಲಾಚಿ ಬೇಡಿಕೊಂಡನು. ಆ ಕಾಲದಲ್ಲಿ ಯಾತ್ರಾರ್ಥಿಗಳಿಗೆ ಪಳ್ಪ
ಟನಂತಹ ಜನರು ತಮ್ಮೊಡನಿದ್ದರೆ ಬಹಳ ಪ್ರಯೋಜನ ಎಂದ ಮೇಲೆ
ಪಳ್ಪಟನನ್ನು ಕರೆದುಕೊಂಡು ಹೋಗಲು ಆ ಯಾತ್ರಿಕರು ಸಂತೋಷ
ದಿಂದ ಒಪ್ಪಿಕೊಂಡರು. ಆಗ ಆತನಿಗಾದ ಆ ಮಹದಾನಂದ! ಅಂತಹ
ಹೃದಯಕ್ಕೇ ಗೊತ್ತು!

ಉಡುಪಿಯಿಂದ ಹೊರಟ ಆ ಯಾತ್ರಿಕರ ಗುಂಪಿನಲ್ಲಿ ಅತ್ಯುತ್ಸಾಹ
ದಿಂದ 'ಗೋೕೕೕೕೕ ವಿಂದ' ಎನ್ನುತ್ತ ದೊಡ್ಡ ಮೂಟೆಯನ್ನು ಹೊತ್ತು
ಕೊಂಡು ಮುನ್ನಡೆಯುತ್ತಿದ್ದ ವನ್ಯಾರೆಂದು ಈಗ ತಿಳಿಯಿತೇ? ಅವನೇ
ನಮ್ಮ ಪಳ್ಪಟನಾಯ್ಕ! ಅವನ ಬಗಲಲ್ಲಿ ತೂಗಾಡುತ್ತಿರುವುದೇ ಶ್ರೀನಿ
ವಾಸನ ಮುಡಿಪು!

ಸುಮಾರು ಮೂರು ತಿಂಗಳ ಪಯಣದ ಮೇಲೆ ಯಾತ್ರಿಕರು ತಿರು
ಪತಿಯನ್ನು ಸೇರಿದರು. ಅವರೊಡನೆ ಪಳ್ಪಟನಿಗೂ ಬೆಟ್ಟ ದೊಡೆಯನ
ದರ್ಶನವಾಯಿತು, ಯಾತ್ರಿಕರಲ್ಲಿ ಒಬ್ಬೊಬ್ಬರು ಒಂದೊಂದು ಬಯಕೆ
ಯನ್ನು ಬೇಡಿ ಹರಕೆಯನ್ನು ಹೊತ್ತರು: ಕೆಲವರು ಸಂತಾನ ಕೇಳಿದರು,
ಕೆಲವರು ಐಶ್ವರ್ಯ ಕೊಡೆಂದರು, ಇನ್ನು ಕೆಲವರು ತಮ್ಮ ರೋಗ
ನಿವಾರಿಸೆಂದರು. ನಮ್ಮ ಪಳ್ಪಟನು ತನ್ನ ಕೈಯಿಂದಲೇ ಬೆಟ್ಟದೊಡೆಯ
ನಿಗೆ ಮುಡಿವನ್ನು ಸಮರ್ಪಿಸಿ 'ನನ್ನೊ ಡೆಯಾ! ಇಂದಿಗೆ ನನ್ನ ಒಂದಾಶೆ
ಯನ್ನು ನೀನು ತೀರಿಸಿದೆ! ನಿನ್ನ ಇಚ್ಚೆಯಿದ್ದರೆ ನನ್ನ ಮತ್ತೊಂದು ಬಯಕೆ
ಯನ್ನೂ ತೀರಿಸಲಾಪೆ! ನಿನ್ನ ಮನ ಬಂದಂತಾಗಲಿ!' ಎಂದು ಹೇಳಿ ಕಣ್ದ
ಣಿಯೆ ಶ್ರೀನಿವಾಸನ ದಿವ್ಯ ಮೂರ್ತಿಯನ್ನು ನೋಡಿ ಹೊರಗೆ ಬಂದು
ಮರದ ಕೆಳಗೆ ಕುಳಿತುಕೊಂಡನು.

ಪಟನು ಅಲ್ಲಿ ಕುಳಿತು ಯೋಚನಾಪರನಾದ, ಶ್ರೀನಿವಾಸನ
ದರ್ಶನದಿಂದ ನನ್ನ ಸರ್ವ ಪಾಪವು ದೂರವಾಯಿತು. ಇನ್ನು ಊರಿಗೆ
ಹೋದೆನೆಂದರೆ ತಿಳಿದೋ ತಿಳಿಯದೆಯೋ ಪಾಪ ಸಂಘಟನೆಯು ಆಗಿಯೇ
ಆಗುವದು. ಇದಲ್ಲದೆ ಇನ್ನು ಜೀವಿಸಿಯಾದರೂ ಮಾಡತಕ್ಕುದೇನಿದೆ?
ಯಾವುದಕ್ಕಾಗಿ ಬಾಳಬೇಕು? ಸಂಸಾರ? ಅವನೇ ಕೊಟ್ಟು ದು! ಅವನೇ
ನೋಡಿಕೊಳ್ಳುವನು! ಅದೆಲ್ಲಾ ಗೊಂದಲ ಹಚ್ಚಿ ಕೊಳ್ಳಲು ನಾನ್ಯಾರು?
------------------------------------
೭೩ ಪಳ್ಪಟನಾಯ್ಕ

ನಾನೆಷ್ಟರವನು? ಎಷ್ಟರ ತನಕ ಬಂದೇನು? ಬಡವರ ಸಂಕಷ್ಟ ನಿವಾರಣೆ
ಮಾಡುವ ಶಕ್ತಿಯು ನನ್ನಲ್ಲಿದ್ದರೆ ನಾನಿನ್ನು ಬದುಕಿ ಮಾಡುವ ಮಹತ್ಕಾ
ರ್ಯಗಳಿವೆಯೆಂದಾದರೂ ಹೇಳಬಹುದಿತ್ತು. ಆದರೆ ನನ್ನ ಕೈ ಗಿಡ್ಡಾಗಿ
ರುವುದು-ಎಂದಮೇಲೆ ನನಗೆ ಈ ಪುಣ್ಯ ಕ್ಷೇತ್ರದಲ್ಲಿ ಮರಣವುಂಟಾದರೆ
ನಾನೆಂತಹ ಧನ್ಯನು' ಎಂದು ಮುಂತಾದ ಯೋಚನೆಯಲ್ಲಿ ಪಳ್ಪಟನು
ಮಗ್ನನಾಗಿರಲು ಮೇಲಿನಿಂದ ಆತನ ಮೈ ಮೇಲೆ ಗೋಲಿಯ ಗಾತ್ರದ
ಕಲ್ಲೊಂದು ಬಿತ್ತು! ಮೇಲೆ ನೋಡಲು ಮರದ ರೆಂಬೆಯ ಮೇಲೆ ತಿಮ್ಮಣ್ಣ
ನೊಬ್ಬನು ಕುಳಿತು ಆತನನ್ನೇ ನೋಡುತ್ತಿದ್ದ ನು! ಆಗ ಪಳ್ಪಟನು ಆ
ಮಂಗನಿಗೆ ಹೊಡೆಯದೆ ನಗುತ್ತ, 'ತಿಮ್ಮಣ್ಣಾ, ಬಡವನೆಂದರೆ ನಿನಗೂ
ಅಷ್ಟೊಂದು ತಾತ್ಕಾರವೆ?' ಎಂದು ಆ ಕಲ್ಲನ್ನು ತೆಗೆದು ದೂರ
ಬಿಸುಟು ತನ್ನ ವೀಳೆಯದ ಸಂಚಿಯನ್ನು ಬಿಚ್ಚಿ ಎಲೆಯಡಕೆ
ಯನ್ನು ಹಾಕಿ ಜಗಿಯುತ್ತ ಕುಳಿತುಕೊಂಡನು. ಒಂದು ಚೂರು
ಅಡಕೆಯು ಬೇಕೆಂದು ತೋರಿತು. ಚೀಲದಿಂದೊಂದು ಅಡಕೆಯನ್ನು ತೆಗೆದು
ಅದನ್ನು ಚೂರಿಯಿಂದ ತುಂಡು ಮಾಡುವಷ್ಟರಲ್ಲಿ ಚೂರಿಯ ಮೇಲೆ
'ಕಟ್' ಎಂದು ಅದೆ ಕಲ್ಲು ಮತ್ತೊಮ್ಮೆ ಮೇಲಿಂದ ಬಿತ್ತು! ಮೇಲೆ
ನೋಡಲು ಅದೇ ತಿಮ್ಮ ನು ಅದೇ ರೆಂಬೆಯ ಮೇಲೆ ಕುಳಿತು ಪಳ್ಪಳಟನನ್ನೇ
ದಿಟ್ಟಿಸಿ ನೋಡುತ್ತಿದ್ದನು! ಆ ತಿಮ್ಮನ ಮುಖದಲ್ಲಿ ಪಳ್ಪಟನಿಗೇನು ಕಾಂತಿ
ತೋರಿ! ಮತ್ತೇನನ್ನು ಕಂಡನೋ ಅವನಿಗೇ ಗೊತ್ತು. ಚೂರಿಯು
ಕೈಯಲ್ಲಿದ್ದಂತೆಯೇ ಕೈಗಳನ್ನು ಮುಗಿಯಲು ಮೇಲಕ್ಕೆತ್ತಿದನು. ಆಗ
ನೋಡುವುದೇನು? ಕಬ್ಬಿಣದ ಚೂರಿಯು ಬಂಗಾರದ್ದಾಗಿತ್ತು! ದೇವಾ!
ಬೆಟ್ಟದೊಡೆಯಾ, ಪಳ್ಪಟನ ಜನ್ಮವನ್ನಿ೦ದಿಗೆ ಸಾರ್ಧಕ ಗೈದೆ!' ಎನ್ನುತ್ತ
ಪಳ್ಳಟನು ಅನನ್ಯ ಭಕ್ತಿಭಾವದಿಂದ ಮೇಲಕ್ಕೆ ನೋಡಿದನು. ಆದರೆ
ರೆಂಬೆಯ ಮೇಲಿನ ಮಂಗನೆಲ್ಲಿ? ಎಲ್ಲಿಯೂ ಇಲ್ಲ!! ಪಳ್ಪಟನು “ ಶ್ರೀ ಮದ್ರ
ಮಾರಮಣ ಗೋವಿಂದಾ, ಗೋೕೕೕೕೕವಿಂದ'' ಎನ್ನುತ್ತ ಆ ಕಲ್ಲನ್ನು
ತೆಗೆದು ತಾನು ತಂದಿದ್ದ ಮುಡುಪಿನ ಬುಟ್ಟಿಯಲ್ಲಿ ಚೂರಿಯೊಡನಿಟ್ಟು
ಬಗಲ ಗಂಟಿನಲ್ಲಿ ಕಟ್ಟಿ ಕೊಂಡನು.
-----------------------------------------

ನಂದಾದೀಪ ೭೪

ಯಾತ್ರಿಕರು ತಿರುಪತಿಯಿಂದ ಹೊರಟರು, ಪಳ್ಪಟನೂ ಅವರೊಡ
ನಿದ್ದ, ಅವರಲ್ಲಿ ಶ್ರೀ ಮದ್ವಾಂಭೀರ್ಯವುಳ್ಳ ಕೆಲವರು ಪಳ್ಪಟನನ್ನು
ಕುರಿತು, ಏನೋ ಪಳ್ಪಟ, ನಿನಗೆ ಶ್ರೀನಿವಾಸನ ದರ್ಶನ ಮಾಡಿಸಿದೆವಲ್ಲ
ವೇನೋ?' ಎಂದರು, ಪಳ್ಪಟನು, “ಹೌದೊಡೆಯಾ ತಮ್ಮಿಂದಾಯಿತು.
ಬಡವನ ಮೇಲೆ ಬೆಟ್ಟದೊಡೆಯನ ಕೃಪಾಕಟಾಕವು ಬಿತ್ತು' ಎಂದು ಸವಿ
ನಯದಿಂದ ನುಡಿದನು. ಅದಕ್ಕವರು ಗೊಳ್ಳನೆ ನಕ್ಕು 'ಏನೋ, ನೂರಾರು
ರೂಪಾಯಿಗಳನ್ನು ನೀರಿನಂತೆ ಚೆಲ್ಲಿ ಶ್ರೀನಿವಾಸನಿಗೆ ತರತರದ ಸೇವೆಗಳನ್ನು
ಮಾಡಿಸಿದ ನಮಗೆ ಆತನು ಒಲಿದುದೋ? ದೇವರ ಮುಂದೆ ಬರಿಗೈ ಬೀಸಿ
ಬಂದ ನಿನಗೋ? ಬಲು ಸೊಗಸಾದ ಮಾತು!' ಎಂದು ಪರಿಹಾಸ್ಯಗೈದರು.
ಪಳ್ಪಟನು, ಒಡೆಯರೆ, ತಮ್ಮಂತಹರಿಗೆ ದೇವರೊಲಿಯದೆ ಇದ್ದಾನೆಯೆ?
ಆದರೆ ಬೆಟ್ಟದೊಡೆಯನಿಗೆ ಬಡ ಪಕ್ಷಟನ ಮೇಲೂ ಅನುಗ್ರಹವಿದೆ'
ಎಂದನು. ಹಾದಿಯುದ್ದಕ್ಕೂ ಯಾತ್ರಿಕರಲ್ಲಿ ಒಬ್ಬರಲ್ಲದಿದ್ದರಿನ್ನೊಬ್ಬರು-
'ಪಳ್ಳಟನಿಗೆ ದೇವರೊಲಿದಿರುವರು, ಇನ್ನು ಪಳ್ಪಟನು ಶ್ರೀಮಂತನಾಗು
ವನು- ದೊಡ್ಡ ಮನೆ ಕಟ್ಟಿಸುವನು! ಏನೋ, ಪಟ್ಟಟ, ನೀನು ಕಟ್ಟಿಸುವ
ಮನೆ ಮೂರು ಅಂತಸ್ತಿನ, ನಾಲ್ಕರದೊ? ನಿನಗಿನ್ನು ಪಳ್ಕಟ
ಸುದಾಮನೆಂದು ಹೆಸರಿಡೋಣವೆ? ಅಥವಾ ಸುದಾಮಪಳ್ಪಟನೆಂದು ಕರೆ
ಯೋಣವೇ?' ಎಂದು ಗೇಲಿಮಾಡುತ್ತ ಬಂದರು, ಪಳ್ಪಟನು ಶಾಂತ
ಚಿತ್ತದಿಂದ ನಗುತ್ತ, 'ಸ್ವಾಮಿ, ಬೆಟ್ಟದೊಡೆಯನು ನನ್ನ ಕೈಯಿಂದ
ದೊಡ್ಡದೊಂದು ಮನೆ ಕಟ್ಟಿಸಲಿಕ್ಕಿರುವನು! ಆದರೆ ಆ ಮನೆಯು ನನ್ನದೋ
ಅವನದೋ, ಈ ಲೋಕದಲ್ಲೋ ಮತ್ತೆಲ್ಲೋ, ಹೇಳಲಿಕ್ಕೆ ಬಾರದು'
ಎನ್ನುತ್ತಿದ್ದನು. ಅದನ್ನು ಕೇಳಿ ಎಲ್ಲರೂ ಗೊಳ್ಳೆಂದು ನಗುತ್ತಿದ್ದರು.
ಆಗ ಪಳ್ಪಟನು ' ಶ್ರೀಮದ್ರಮಾರಮಣ ಗೋವಿಂದಾ' ಎನ್ನುತ್ತ ಅವ
ರೆಲ್ಲರಿಂದಲೂ 'ಗೋವಿಂದ' ಎನ್ನಿಸುತ್ತಿದ್ದನು. ಇಂತಹ ವಿನೋದ
ದಿಂದ ಹಾದಿಯು ಸುಗಮವಾಗಿ ಸಾಗಲು ಯಾತ್ರಿಕರು ಉಡುಪಿಗೆ ಬಂದು
ಸೇರಿದರು.

ಅನೇಕ ಶ್ರೀಮಂತ ಯಾತ್ರಿಕರಲ್ಲಿ ;ತಿರುಪತಿಸಮಾರಾಧನೆ' ಬಹು
ವಿಜೃಂಭಣೆಯಿಂದ ನೆರವೇರಿತು. ದೊಡ್ಡ ದೊಡ್ಡವರಿಗೆ ಭಾರೀ ಊಟ.
-----------------------------------
೭೫ ಪಳ್ಪಟನಾಯ್ಕ .

ಭಾರೀ ಸನ್ಮಾನ! ಆದರೆ ಅವರ ಮನೆಬಾಗಲಲ್ಲಿ ಎಷ್ಟೋ ಬಡಜನರು ದೇವರ
ಪ್ರಸಾದವೆಂದು ಅಮಟೆಯ ಗೊರಟೊಂದಾದರೂ ನೆಕ್ಕಲಿಕ್ಕೆ ಸಿಕ್ಕಿದರೆ
ಸಾಕೆಂದು ಸಾಯಂಕಾಲದ ತನಕ ಕಾದುಕೂತು ಕೂತುಕಾದ್ದು ಹತಾಶರಾಗಿ
ಹಿಂತೆರಳಬೇಕಾಗಿತ್ತು.

ಕೆಲವು ದಿವಸಗಳಾದ ಮೇಲೆ ಪಳ್ಪಟನೂ ತಿರುಪತಿಸಮಾರಾಧನೆ
ಮಾಡಿದನು. ಆದರೆ ಅದು ದೊಡ್ಡವರ ಆಡಂಬರದ ಸಮಾರಾಧನೆಯಲ್ಲ.
ಗೌಜಿಯ ಪೂಜೆಯಲ್ಲ. ಶ್ರೀಮಂತ ಅತಿಥಿಗಳ ಆಗಮನದ ನಿರೀ
ಕ್ಷಣೆ, ಆತಿಥ್ಯ ಸತ್ಕಾರಾದಿಗಳ ವೈಭವ, ಅವರನ್ನು ಬೀಳ್ಕೊಳ್ಳುವ
ಸಂಭ್ರಮ, ಇವೇನೂ ಇದ್ದಿಲ್ಲ. ಪಳ್ಪಟನ ಸಮಾರಾಧನೆಯು 'ಉಂಬವರಿಗೆ
ಉಣಿಸಬೇಕು ತಿಂಬವರಿಗೆ ತಿನಿಸಬೇಕು' ಎಂಬಂತೆ ಬಡ ಜನರ ಸಂತ
ರ್ಪಣೆ- ಅಮಟೆಯ ಗೊರಟಗಾಗಿ ಕಾದುಕೂತು ಹಿಂದೆ ಬಂದಿದ್ದ ಆ
ಮಂದಿಗಿಂದು ಮುಂದಾಗಿ ಊಟ! ಅದೂ ದೊಡ್ಡ ಔತಣದ ಊಟ!

ಅಂದಿನಿಂದ ಪಳ್ಪಟನ ದಾನಧರ್ಮಗಳು ಹೆಚ್ಚುತ್ತಾ ಹೋದುವು.
ಅವನ ಮನೆಯು ಬಡಜನರ ಆಶ್ರಯಸ್ಥಾನವಾಗಹತ್ತಿತು. ಅದಕ್ಕಾಗಿ
ಆದನ್ನು ಸ್ವಲ್ಪ ದೊಡ್ಡದು ಮಾಡಿ ಕಟದ ತಟ್ಟಿಯ ಗೋಡೆಯ
ಬದಲು ಮಣ್ಣಿನ ಗೋಡೆಯಾಯಿತು, ಒಳಗೆ ಗೋಡೆಯಲ್ಲೊಂದು
ಕಂಡಿ; ಅದರಲ್ಲಿ ತಾನು ತಿರುಪತಿಯಿಂದ ತಂದಿದ್ದ ಶ್ರೀನಿವಾಸನ ಪಠ
ವನ್ನೂ ಅದರ ಹಿಂದೆ ಒಂದು ಬುಟ್ಟಿ ಯನ್ನೂ ಇಟ್ಟು ದಿನಾಲೂ ಪೂಜಿ
ಸುತ್ತಿದ್ದ. 'ಬುಟ್ಟಿಯಲ್ಲಿ ಬೆಟ್ಟದೊಡೆಯನ ಪ್ರಸಾದವಿದೆ' ಎಂಬುವ
ಅವನ ಮಾತಿಗೆ ಯಾರೂ ವಿಶೇಷ ಅರ್ಥಕಲ್ಪಿಸಲಿಲ್ಲ. ತನ್ನ ಮನೆಯ
ಎದುರಲ್ಲಿದ್ದ ಭೂಮಿಗಳನ್ನು ಸ್ವಲ್ಪ ಸ್ವಲ್ಪವಾಗಿ ಕೊಂಡುಕೊಂಡು
ಬಡಬಗ್ಗರಿಗೆ ದಾನಮಾಡುತ್ತ ಬಂದ. ಅಲ್ಲಿಯ ತಿರುಕರು ಸಿರಿವಂತ
ರಾದರು. ಅವರ ತಿರಿಬೀಡು ಸಿರಿಬೀಡಾಯಿತು! ಬೆಟ್ಟದೊಡೆಯನು
ತಿಮ್ಮನ ರೂಪದಿಂದ ತನಗೆ ಮೈದೋರಿ ಅನುಗ್ರಹಿಸಿದನೆಂಬುದರ ಸ್ಮಾರ
ಕವಾಗಿ ಶಿಲೆಯಲ್ಲಿ ತಿಮ್ಮನ ರೂಪವನ್ನು ಕೆತ್ತಿಸಿ ತಾನು ಧರ್ಮಮಾಡಿದ
ಭೂಮಿಯ ನೆತ್ತಿಯಲ್ಲಿ ನೆಡಿಸುತ್ತಿದ್ದ.
-------------------------------------

ನಂದಾದೀಪ ೭೮

ಪಳ್ಪಟನ ಈ ರೀತಿಯ ಧರ್ಮದ ಕೈಯನ್ನು ಕಂಡು ಉಡುಪಿಯ
ಕೆಲವು ಪುಂಡುಗಾರರು ಆತನಿಗೆ ಬರಮಗುಡ್ಡೆಯ ಬಳಿಯಲ್ಲೆಲ್ಲೊ
ನಿಧಿಯ ಕೊಪ್ಪರಿಗೆ ಸಿಕ್ಕಿರಬೇಕೆಂದು ಒಂದು ದಿನ ರಾತ್ರಿ, ಅವನ ಮನೆ
ಯನ್ನು ನುಗ್ಗಿ ಹುಡುಕಿನೋಡಿದರು-ಅವನ ಮುರುಕು ಪೆಟ್ಟಿಗೆಯೊಳಗೆ
ಒಂದೆರಡು ಕಬ್ಬಿಣದ ತುಂಡುಗಳೂ ಒಂದಿಷ್ಟು ಪುಡಿಕಾಸೂ ಅಲ್ಲದೆ
ಮತ್ತೇನೂ ಇದ್ದಿಲ್ಲ. ಬೆಟ್ಟದೊಡೆಯನ ಮುಡುಪಿನ ಗಂಟಿನಿಂದ ಇಂದು
ಕೋಳಿಯ ಪಡೆಗೋ ಜುಗಾರಾಟ ಹಣವು ಹಾರಿಹೋಗುತ್ತಿರುವು
ದಾದರೂ ಅಂದಿನ ಆ ಪುಂಡುಗಾರರಿಗೆ ಕಂಡಿಯಲ್ಲಿದ್ದ ಬುಟ್ಟಿಗೆ ಕೈ ಹಾಕು
ವಷ್ಟು ಎದೆಗಟ್ಟಿ ಇರಲಿಲ್ಲ. ಒಂದು ವೇಳೆ ಕೈಹಾಕಿದ್ದರೂ ಅದರಲ್ಲಿ
ದುಡ್ಡು ಕಾಸೇನೂ ಸಿಗುತ್ತಿರಲಿಲ್ಲ ಅಲ್ಲಿದ್ದುದು ಬರೇ ಗೋಲಿಯಾಕಾ
ರದ ಕಲ್ಲು ! ಅದನ್ನು ಕೊಂಡುಹೋಗಲು ಅವರೇನು ಆಡುವ ಮಕ್ಕಳೆ?
ಮರುದಿವಸ ಇದನ್ನು ತಿಳಿದು ಪಳ್ಪಟನು, ಅಯ್ಯೋ! ತಿಳಿಗೇಡಿಗಳೆ,
ಸುಮ್ಮನೆ ನನ್ನ ಗುಡಿಯನ್ನು ಹೊಕ್ಕು ಹುಡುಕಿ ಶ್ರಮೆಗೊಂಡಿರಿ! ಅವನೇ
ಪ್ರೇರೇಪಿಸಬೇಕು, ಅವನೇ ಕೊಡಬೇಕು, ಹಾಗೆ ಕೊಟ್ಟರೆ ಉಂಟು; ಇಲ್ಲ
ದಿದ್ದರಿಲ್ಲ!” ಎಂದೊಂದು ನಿಟ್ಟುಸಿರು ಬಿಟ್ಟ.

ಪಳ್ಪಟನಿಗೆ ಮತ್ತೊಮ್ಮೆ ಬೆಟ್ಟದೊಡೆಯನ ದರ್ಶನವನ್ನು ಮಾಡ
ಬೇಕೆಂದು ತೋರಿತು. ಅಲ್ಲಿಗೆ ಹೋಗಿ ಅಲ್ಲಿಯೂ ಗದ್ದೆ ತೋಟಗಳನ್ನು
ಕಂಡುಕೊಂಡು ಬಡವರಿಗೆ ಹಂಚಿಕೊಟ್ಟ. ಅಲ್ಲಿಂದ ಒಂದೊಂ
ದಾಗಿ ಎಲ್ಲ ಪುಣ್ಯಕ್ಷೇತ್ರಗಳ ಬಳಿಯ ಗ್ರಾಮಗಳಲ್ಲಿ ಹೊಲಗದ್ದೆಗಳನ್ನು
ಕ್ರಯಕ್ಕೆ ಪಡೆದು ನಿರ್ಗತಿಕರಿಗೆ ದಾನಮಾಡುವುದೂ ಅವುಗಳ ನೆತ್ತಿಕಟ್ಟಿ
ನಲ್ಲಿ ಹನುಮಂತನ ಮೂರ್ತಿಯು ಕೆತ್ತಲ್ಪಟ್ಟ ಕಲ್ಲನ್ನು ನೆಡುವುದೂ ಅವನ
ಕಟ್ಟಳೆ. ಪಳ್ಪಟನಾಯ್ಕನ ಕಾಲವು ಮುಗಿದು ಸುಮಾರು ಒಂದು
ಸಾವಿರ ವರಷಗಳಾಗಿರಬಹುದು. ಆದರೂ ಅವನು ನೆಡಿಸಿದ ಕಲ್ಲುಗಳಲ್ಲಿ
ಕೆಲವು ಇನ್ನೂ ಹೊಲಗದ್ದೆಗಳ ಬಳಿಯಲ್ಲಿ ನಿಂತಿವೆ. ಅಲ್ಲಿಯ ಮುದಿ
ಯಜ್ಜಂದಿರನ್ನು ಕುರಿತು, “ಇದೇನು ಕಲ್ಲು ?' ಎಂದು ಕೇಳಿದರೆ, ಅದು
ಪಳ್ಪಟನಾಯ್ಕನ ಧರ್ಮ' ಎನ್ನುವರು ಅವರು.
=======================================
ನಿಂಬಾಫಲ ಮಹಾತ್ಮ್ಯೆ

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು
ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ
ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ
ಪ್ರಕರಣವೇ ಉದ್ದ ಬೆಳೆದು ಮಹಾತ್ಮ ಯನ್ನು ಕೇಳುವಷ್ಟರಲ್ಲಿ ನಿಮಗೆ
ಹಾಕಳಿಗೆ ತೊಡಗಿ ತೂಕಡಿಕೆ ಹಿಡಿದೀತು. ಆದುದರಿಂದ ಸಂಕ್ಷಿಪ್ತವಾಗಿ
ಹೇಳಿಬಿಡುತ್ತೇನೆ. ಊರುಕೇರಿಯ ಪ್ರತಿಯೊಂದು ದೇಗುಲಕ್ಕೂ ಹೊಳೆ
ಕೆರೆಕುಂಟೆಗೂ ತಿರುಳರಿಯದ ಮರುಳರಿಂದಾಚರಿಸ್ಪಡುವ ವ್ರತಕ್ಕೂ ಮಹಾ
ತ್ಮ್ಯೆಯು ವಿರಚಿತವಾದಂತೆ ಇದೂ! ಎಂದ ಮೇಲೆ, ಹೇಳುವಂಥಾ ದಾವ
ಲಿಂಬಾಫಲ ಮಾಹಾತ್ಮ್ಯೆಯಿದೆಯೋ ಅದನ್ನು ಶ್ರದ್ಧಾ ಭಕ್ತಿಗಳಿಂದ ಕೇಳು
ವಂಥಾವರಾಗಬೇಕು, ಏನೆಂದರೇ:

ವಿಧಾತನೆಂದೆನಿಸಿಕೊಂಡಿರುವ ದಾವ ಶ್ರೀಮನ್ನಾರಾಯಣನ ನಾಭಿ
ಕಮಲಸಂಜಾತನಾದ ಬ್ರಹ್ಮನಿದ್ದಾನೆಯೋ ಆತನು ಸೃಷ್ಟಿಯ ಅಂತ್ಯ
ಭಾಗದ ಪೂರ್ವಾರ್ಧದಲ್ಲಿ ಉತ್ಕೃಷ್ಟ ಫಲವೊಂದನ್ನು ಸೃಷ್ಟಿಸಬೇಕೆಂದು
ಸಂಕಲ್ಪಿಸುವಂಥವನಾದ, ಆಕಾರದಿಂದ ವರ್ಣದಿಂದ, ಸುವಾಸನೆಯಿಂದ
ಸ್ಪರ್ಶದಿಂದ ಜಗತ್ತಿಗೆ ಅತುಲಾನಂದವನ್ನೀಯುವಂಥಾದ್ದಾಗಿ, ಮೂರ್ತಿ
ಚಿಕ್ಕದಾದರೂ ಕೀರ್ತಿ ದೊಡ್ಡದಾಗಿ, ಬಾಳಲೆಂದು ನಿಂಬಾಫಲವನ್ನು
ಸೃಷ್ಟಿಸಿ ಭೂಲೋಕದಲ್ಲಿ ಹರಡಿಬಿಡುವಂಥವನಾಗಲು, ಜನರದನ್ನು
ಕಂಡು ಮೋಹಿತರಾಗುವಂಥವರಾದರು. ಹೀಗೆ ಸಕಲ ಗುಣ ಸಂಪನ್ನ
ವಾಗಿ ಬಂದಿರುವ ಅದಾವ ಲಿಂಬೆ ಹಣ್ಣಿದೆಯೋ ಅದನ್ನು ವೈದ್ಯರು 'ಬಾ
ಬಾ' ಎಂದರು, ಆಡಿಗೆ ಭಟ್ಟರು 'ಬಾರಯ್ಯಾ' ಎಂದು ಕೂಗಿ ಕರೆದರು.
'ಥಂಡಾಪಾನ' ಗೃಹಗಳೆಲ್ಲ 'ಬಾ! ಬಾ, ಬಾ!' ಎಂದು ಎದ್ದೋಡಿ ಹಸ್ತ
ಲಾಘವಕೊಟ್ಟು ಸ್ವಾಗತೀಕರಿಸಿಕೊಂಡವು. ಕಂಡವರು ಆದರದಿಂದ
ಆಘ್ರಾಣಿಸಿ ಕಣ್ಣಿಗೆ ಒತ್ತಿಕೊಳ್ಳುವಂಥವರಾದರು. ಅಲ್ಲದೆ ಅದು ಕಲೆಕ್ಟ್ರು,
ಥಾಶೀಲ್ದಾರರು, ಇನ್ಸ್ ಪೆಕ್ಟ್ರು, ಪ್ರೆಸಿಡೆಂಟರು, ಚೀರ್ಮಾನರು, ಇತ್ಯಾದಿ
---------------------------------------

ನಂದಾದೀಪ ೭೮

ದೊಡ್ಡ ಮುಂಡಾಸಿನವರ ಮೇಜುಗಳನ್ನೆಲ್ಲ ಹತ್ತಿ Thanks!
Thanks!” (ಥೇಂಕ್ಸ್! ಥೇಂಕ್ಸ್!) ಎಂದು ಕೇಳಲ್ಪಡುವಂಥದ್ದಾ
ಯಿತು ಈ ನಿಂಬಾ ಫಲ!

ಹೀಗೆ ನಡೆಯುತ್ತಾ ಶತಮಾನ ಶತಮಾನಗಳೇ ಕಾಲಚಕ್ರವೆಂಬಂಥಾ
ದ್ದಾವದಿದೆಯೋ ಅದರ ಗತಿಯಲ್ಲಿ ಉರುಳುತ್ತಾ ಹೋಗುವಂಥಾದ್ದಾದವು.
ಆಗ ನಮ್ಮಂಥಾ ಶ್ರೋತ್ರಿಯರಿಗೂ ಸದಾ ಪರಮಾನ್ನವೇ ದೊರೆಯುತ್ತಾ
ಹೋದರೆ (ದೇವರು ಹಾಗೇ ನಡೆಯಿಸಲಿ!) ಅದರಲ್ಲೂ ಹೇಗೆ ಜುಗುಪ್ಸೆ
ಯುಂಟಾಗಬಹುದೋ ಯಥಾ ತಥಾ ಪ್ರಕಾರವಾಗಿ ದಾವ ನಿಂಬಾಫಲ
ವಿದೆಯೋ ಅದಕ್ಕೂ ಸದಾ ಸಾರ್ವದಾ ಏಕಪ್ರಕಾರವಾಗಿ ನಿರಂತರ ದೊರೆ
ಯತ್ತಿದ್ದಂಥಾ ಆ ಆದರದಲ್ಲಿ ಅಭಿರುಚಿಯಿಲ್ಲದಂತಾಗುತ್ತಾ ಬಂತು!
ಆಗ ಅದು 'ಅಯ್ಯೋ! ಎಲ್ಲಿ ಹೋದರೂ ಈ 'ಬಾಬಾ' ಕೇಳಿ ಬೇಸತ್ತೆನಲ್ಲಾ.
ಒಬ್ಬರಾದರೂ ಇದೇಕೆ ಬಂತಪ್ಪಾ ಎನ್ನುವವರಿಲ್ಲವಲ್ಲಾ! ಹಿಡಿಯದೆ ಬಿಡು
ವವನೊಬ್ಬನೂ ಇಲ್ಲವಲ್ಲಾ! ಮಾನವನ ತಿರಸ್ಕಾರ ದೃಷ್ಟಿಯನ್ನು
ನಾನೆಂದು ನೋಡುವುದು! ಗಂಟುಮೋರೆ ಹಾಕಿದರೆ ಮನುಷ್ಯನು ಹೇಗೆ
ತೋರುತ್ತಾನೆಂಬುದನ್ನು ನಾನು ಕಾಣುವುದು ಬೇಡವೇ?' ಎಂದು ಯೋಚಿಸಿ
ಯೋಚಿಸಿ ಯಾವ ಉಪಾಯವೂ ಹೊಳೆಯದಿರಲು, ತನ್ನನ್ನು ಸೃಷ್ಟಿಸಿದ
ದಾವ ಬ್ರಹ್ಮನಿದ್ದಾನೆಯೋ ಆತನ ಬಳಿಗೇ ಹೋಗಿ ತನ್ನ ಸಂಕಷ್ಟಗಳ
ನ್ನೆಲ್ಲ ನಿವೇದಿಸಿಕೊಳ್ಳಬೇಕೆಂದು ನಿರ್ಧರಿಸಿ ಕ್ಷೀರಸಾಗರದ ತಡಿಗೆ ಉರು
ಳುರುಳುತ್ತಾ ಹೋಗಿ ಅಲ್ಲಿಂದ ಶರಧಿಗೆ ಹೊರಳಿ ಕ್ಷೀರ ತರಂಗಗಳಲ್ಲಿ
ಏಳುತ್ತ ಬೀಳುತ್ತ ತೇಲುತ್ತ ಮಾಲುತ್ತ ಸಾಗರ ಮಧ್ಯದಲ್ಲಿ ಶ್ರೀ
ಮಹಾವಿಷ್ಣುವಿನ ಹಾಸಿಗೆಯಾಗಿರುವ ಅದಾವ ಮಹಾಶೇಷನಿರುವನೋ
ಅವನ ಬಳಿಸಾಗಿ ಧಕ್ಕೆ ಹೊಡೆಯಲು, ಆ ಫಣೀಂದ್ರನು ಅದನ್ನು ತನ್ನ
ಬಾಲದಿಂದೆತ್ತಿ ಬಿಸುಡಲಾಗಿ ಅದು ವಿಷ್ಣುವಿನ ನಾಭೀಕಮಲದಲ್ಲಿ ಕುಳಿತಿದ್ದ
ಬ್ರಹ್ಮನ ಮೂಗಿಗೆ ತಾಗಿ ಆತನು ಬರೆಯುತ್ತಿದ್ದ ಪುಸ್ತಕದ ಮೇಲೆ ಬೀಳು
ವಂಥಾದ್ದಾಯಿತು! ಆಗ ಆ ನಿಂಬಾಫಲವು ಬ್ರಹ್ಮ ಸ್ತೋತ್ರವನ್ನು ಮಾಡ
ತೊಡಗಿ, 'ಹೇ ಸೃಷ್ಟಿಕರ್ತನೇ! ವಿಧಿಯೇ! ಬ್ರಹ್ಮನೆ ......' ಎನ್ನು
ವಷ್ಟರಲ್ಲೇ ಬ್ರಹ್ಮನು ತಲೆಯೆತ್ತಿ, "ಎಲೆ ನಿಂಬಾಫಲವೇ! ನಿನ್ನ ಸ್ತೋತ್ರ
----------------------------------
೭೯ ನಿಂಬಾಫಲ ಮಹಾತ್ಮ್ಯೆ
ಗಳನ್ನು ಕೇಳಲು ಇದೀಗ ಕಾಲವಲ್ಲ. ರಾವಣ, ಹಿರಣ್ಯಕಶ್ಯಪು, ಮುಂತಾ
ದವರ ಕಾಲದಲ್ಲಿ ನನಗೇನೋ ತುಂಬ ವಿರಾಮವಿತ್ತು. ಅವರ ವರ್ಷ
ಗಟ್ಟಳೆಯ ಸ್ತೋತ್ರಗಾನವನ್ನು ಪಾನಮಾಡುತ್ತ ಕುಳಿತು ಸಂತುಷ್ಟನಾಗಿ
ವರಗಳನ್ನಿತ್ತಿದ್ದೆ, ಈಗಲಾದರೋ ಅದಕ್ಕಲ್ಲ ಬಿಡುವಿಲ್ಲ; ನೋಡು, ಇಟೇಲಿ,
ಅಬಿಸೀನಿಯಾ, ಸ್ಪೇನ್, ಜರ್ಮನಿ, ರಸ್ಯಾ, ಜಪಾನ್ ಮುಂತಾದ ದೇಶ
ಗಳಲ್ಲಿ ನಾನೀಗ ಸೃಷ್ಟಿಸಬೇಕಾಗಿರುವ ಜನರ ಆಯುಷ್ಯ ಪ್ರಮಾಣವನ್ನು
ಅಲ್ಲಿ ಈ ಮೊದಲು ಸೃಷ್ಟಿಸಿರುವವರ ಆಯುಷ್ಯಾಂತ್ಯಕ್ಕೆ ಅಂತ್ಯವಾಗು
ವಂತೆ ತರಾಂತರದಲ್ಲಿ ಕಿರಿದು ಮಾಡಬೇಕಾಗಿದೆ. ಆದುದರಿಂದ ಹಿಂದಿನ
೫೦ ವರ್ಷಗಳ ಜನನ ಲೇಖನಗಳನ್ನೆಲ್ಲ ತೆಗೆದು ಅಲ್ಲಿ ಲಿಖಿತವಾದ ಆಯುಷ್ಯ
ಸಂಖ್ಯೆಗಳಿಗೆ ಇನ್ನು ಮುಂದಿನವೂ ತಾಳಿಬಿದ್ದು ಒಂದೊಂದು ದಿನದಲ್ಲಿ
ಸಾವಿರಗಟ್ಟಲೆ ಜನರು ತೀರಿಕೊಳ್ಳುವಂತ ಮರಣದ ದಿನ, ವಾರ, ಗಳಿಗೆ
ವಿಗಳಿಗೆಗಳನ್ನೆಲ್ಲ ಲೆಕ್ಕಮಾಡಿ ಹಾಕಬೇಕಾಗಿದೆ. ಈ ಕ್ಷೀರ ಸಾಗರದ
ತಂಪಾದ ವಾತಾವರಣದಲ್ಲಿ ಕುಳಿತಿರುವೆನಾದ ಕಾರಣ ನನ್ನ ತಲೆಗಳಿನ್ನೂ
ಬಿಸಿಯೇರದೆ ಸಿಡಿಯದೆ ಉಳಿದಿವೆ, ಆದುದರಿಂದ ನಿನ್ನ ಸ್ತೋತ್ರಪೀಠಿಕೆ
ಯಿಂದಲೇ ನಾನು ಸಂತುಷ್ಟನಾಗಿದ್ದೇನೆ. ಬಂದಂಥಾ ಕಾರ್ಯವೇನೆಂಬು
ದನ್ನು ಸಂಕ್ಷೇಪವಾಗಿ ಹೇಳುವಂಥವನಾಗು” ಎಂದು ಬ್ರಹ್ಮನು ಹಣೆಗಳ
ಮೇಲಿನ ಬೆವರು ಹನಿಗಳನ್ನು ಒರಸೊರಸುತ್ತ ಹೇಳುವಂಥವನಾಗಲು,
ನಿಂಬಾಫಲವು ಬಿನ್ನಹಮಾಡುವಂಥಾದ್ದಾಯಿತು. ಅದೆಂತಂದರೇ -
"ಬ್ರಹ್ಮನೇ, ನಿನ್ನ ಪರಮಾನುಗ್ರಹದಿಂದ ಭೂಲೋಕದಲ್ಲಿ ನನಗೆ ಸದಾ
ಸಾರ್ವದಾ ಸ್ವಾಗತವೇ ಎಲ್ಲೆಲ್ಲಿಯೂ! ಆದರೆ ದೊಡ್ಡ ದೊಡ್ಡ ಅಧಿಕಾರಿ
ಗಳು ಊರು ಸಂಚಾರಕ್ಕೆ ಹೊರಟು ನಿಂತಲ್ಲಿ ಕೂತು ಎದ್ದಲ್ಲಿ ಹೊಕ್ಕಲ್ಲಿ
ಹೊರಬಂದಲ್ಲಿ ಬಾಲಿಕೆಯರ ಸ್ವಾಗತ ಹಾಡುಗಳನ್ನು ಕೇಳಿ ಕೇಳಿ
ಅವರಿಗೆ ಜುಗುಪ್ಪೆ ಬಂದಂತೆ ನನಗೂ ಅಂಥಾ ದೊಡ್ಡ ದೊಡ್ಡ
ಜಂಟೀಲ್ ಮ್ಯಾನರ ಮೇಜಿಯ ಮೇಲೆ ಚಿಕ್ಕ ಮನುಷ್ಯರು ನನ್ನನ್ನು ಇರಿ
ಸಿದಾಗ ಅವರು ಹೇಳುವ Thanks ಥೇಂಕ್ಸ್ ಥೇಂಕ್ಸ್ ಕೇಳಿ ಕೇಳಿ
ಬೇಸರವಾಗುತ್ತ ಬಂದದೆ. ಆದುದರಿಂದ ದೊಡ್ಡವರೆಂಬವರೆಲ್ಲ ಕೆಲವು
ದಿವಸಗಳ ಮಟ್ಟಿಗಾದರೂ ನನ್ನನ್ನು ಕಂಡಾಗ 'ಇದೇಕೆ ಬಂತಪ್ಪಾ ಶನಿ!'
---------------------------------------

೮೦ ನಂದಾದೀಪ

ಎಂದು ಮೋರೆ ಗಂಟಿಕ್ಕುವ ಚಂದ ನನಗೆ ನೋಡಬೇಕಾಗಿದೆ. ನಾನವರ
ಮೇಜಿನ ಮೇಲೆ ಏರಿ ಕುಳಿತರೂ ಅವರೆನ್ನನ್ನು ಮುಟ್ಟದೆ ಹಿಂದೆ ಕಳುಹು
ವಂಥವರಾಗಬೇಕು, ನಾನು ಬರುವ ಸಂಚು ಮುಂಚಿತವಾಗಿ ಗೊತ್ತಾದರೆ
ನನಗೆ ಭೇಟಿಕೊಡದೇ ತಲೆಮರೆಸಿಕೊಳ್ಳಬೇಕು .... ಎಂದು ಹೇಳು
ತ್ತಿರುವಷ್ಟರಲ್ಲೇ ಬ್ರಹ್ಮ ನು (ಸಾಕು! ಸಾಕು! ಹೆಚ್ಚಿಗೆ ಹೇಳಲೂ ಕೇಳಲೂ
ಇದು ಸಮಯವಲ್ಲ. ಆದರೆ ನಿನ್ನ ಬಯಕೆಯೇನೆಂದು ಗೊತ್ತಾಯಿತು.
ಅದನ್ನು ನೆರವೇರಿಸಿಕೊಡುತ್ತೇನೆ. ಮುಂದೆ ಧಾತೃ ಸಂವತ್ಸರದಲ್ಲಿ ವ್ಯಾಪಾ
ರದ ಮುಗ್ಗ ಟೂನಿಂದ ಸಾಹುಕಾರರು ಹಾಕಳಿಸುತ್ತ ಅಂಗಡಿಯಲ್ಲಿ ಕುಳಿತು
ಕೊಳ್ಳುತ್ತಲೂ, ರೋಗಿಗಳು ಕೈಯಲ್ಲಿ ಕಾಸಿಲ್ಲದೆ ಹಾಸಿಗೆಯಲ್ಲಿ ನರಳು
ತಿದ್ದು ಡಾಕ್ಟರರು ಚಿಕಿತ್ಸಾಲಯದಲ್ಲಿ ವಾಯುಸೇವನೆ ಗೈಯ್ಯುತ್ತಲೂ,
ಕುಕ್ಷಿಗಿಲ್ಲದೆ ವಕೀಲರು ಕಕ್ಷಿಗಾರರ ಹಾದಿ ನೋಡುತ್ತಲೂ, ನೌಕರರು
ಸಂಬಳದ ಪಾರ್ಸೀಬಡ್ಡಿಯ ಹೊಡೆತಕ್ಕೋ 'ಕಟ್ಟಿನ' ಪೆಟ್ಟಿಗೋ ಚಟ್ಟಾಗಿ
ಕೊರಗುತ್ತಲೂ, ಧನಿಗಳು ಹುಟ್ಟುವಳಿಯಿಂದ ಕಂದಾಯ ತೆರುವುದೇ ಕಷ್ಟ
ವಾಗಿ ಸಾಲದ ಬಡ್ಡಿ ಬೆಳೆಯಿಸುತ್ತಲೂ, ಮನೆಮನೆಗಳಲ್ಲಿ ಮುನ್ಸಿಪಾಲಿಟಿಯ
ತೆರಿಗೆ ತೆರಲಿಕ್ಕೆ ಚೆರಿಗೆ ಮಾರೋಣವೇ ಎಂದು ಯೋಚಿಸುತ್ತಲೂ ಇರು
ವಾಗ ದಸರಾ ಬರುತ್ತದೆ! ಆಗ ನೀನು ತಾಲೂಕು ಪೇದೆಗಳ ಮುನ್ಸಿಫ್
ಕೋರ್ಟು ಜವಾನರ, ಟಪ್ಪಾಲ್ ಬಟವಾಡೆಯವರ ಇತ್ಯಾದಿ ವರ್ಗಕ್ಕೆ
ಸೇರಿದವರೆಲ್ಲರ ಜೇಬಿನಲ್ಲಿ ಮೂಗೊರಸಿದ ಕರವಸ್ತ್ರದಡಿಯಲ್ಲಿ ಅಡಗಿದ್ದು
ಪೂರ್ವೋಕ್ತ ಮಹಾಶಯರ ಮೇಜುಗಳ ಮೇಲೆ ಹಾರಿ ಕುಳಿತುಕೊಳ್ಳು
ವಂಥವನಾಗು, ಆಗ ನಿನ್ನ ಮನೋಭಿಷ್ಟವು ನೆರವೇರುತ್ತದೆ” ಎಂದು
ಬ್ರಹ್ಮನು ಅಭಯವಚನವನ್ನು ದಯಪಾಲಿಸಿ ನಿಂಬಾಫಲವನ್ನು ಕಳುಹಿಸಿ
ಕೊಡುವಂಥವನಾದ. ಇತಿ ಉತ್ತರ ಭವಿಷ್ಯತ್ಪುರಾಣೇ ನಭೂತೋನ
ಭವಿಷ್ಯತ್ಖಂಡೇ ಮಧ್ಯಾಂತ್ಯೆ ನಿಂಬಾಫಲ ಮಾಹಾತ್ಮ ಪರಿಪೂರ್ಣಮಸ್ತು!
ವಾಚಕಹೃದಯಾಮೋದಮಸ್ತು! ಸರ್ವೇ ಜನಾಸ್ಸುಖಿ ನೋ ಭವಂತು !
ಓಂ! ಶಾಂತಿ ಶಾಂತಿಶ್ಯಾಂತಿಃ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ