https://archive.org/details/dli.osmania.3100
https://archive.org/details/dli.osmania.3100
OU _198096
=====================================
Palayagar Sevies.
PALAYAGARS.
OF
CHITRADURG
BY
M S PUTTANNA B A
ಚಿತ್ರದುರ್ಗದ
ಪಾಳಯಗಾರರು
ಎಂ. ಎಸ್. ಪುಟ್ಟಣ್ಣ, ಬಿಎ,
ರಚಿಸಿದ್ದು
1924,
[All Rights Reserved]
di ಪವರ್ ಪ್ರಿಂಟಿಂಗ್ ಪ್ರೆಸ್, ಚಿಕ್ಕಪೇಟೆ ಬೆಂಗಳೂರು ಸಿಟಿ
=====================================
PREFACE.
py
Chitradurga was a small prinepalty before the
Battle of Talikota 1.0. 1505 A. (1. Under a system of
palayaputs or military vassalage organised by the Em-
perors that preceded the Vijayanagar Empurc, a number
01 potty states had como into existence, and Chitra-
durga was onc ೧1 such statos established during the
declining days ೦1 that Enipirc. Maththi Tunmanna
Nayaka was the origmal foander of that Stato, who
practically earned the kingdom through his own person-
al valour though a nominal distinction of the Nayak of
Chitradurga was conferrod on him by the titular Suze-
rains. Subscqucntly, Vobanna Nayaka the second chief
of the 1100, severed 1118 connection with the Vijayanagar
Sovercigns and declared his independence.
Two hncs of kings viz Maththi dynasty and Bila-
chode dynasty ruled together for 211 years over a pretty
large area comprising the present District of Chitra-
durga together with some outlying tracts. These
princes were invariably valorous in battle, merciful and
oencrous to their enemies, wise and discrcet in their
adnrinistration, far-sighted in their policy, thoroughly
religious and orthodox in their belief, and lberal to a
fault. Thesc powerful chieftains had some French
Engineers in their service and built very strong fort-
resses and other works of public utility as the standing
monuments of their glory. Had these Palayagars
routed Hyder’s army and become victorious, what
change there would have been in the history of South-
orn India, it is difficult to tell.
The important part played by these Palayagar
vassals in the southern part of the Peninsula fills up
2
a large portion of the history of our southern Hindus-
tan. The all absorbing conquests of Hyder Ali des-
troyed every vestige of these useful little states. Fully
conscious though I am of my own inability to write the
histories of these several states, 1 have yet made a hum-
ble attempt in this direction and the History of Chitra-
durg is intended to be the first of the series as this
Principality is the first and about the best among these
states otherwise called Palayaputs.
In the course of my inquiry regarding the Palaya-
gars of this State, I came by the following materials:—
I. A copy ofa manuscript on palmyra leaves
kindly lent by Chinnadamane Ramanna, Sanboguc of
the Sultanipur Firka of the present Taluk of Chitra-
durg. By virtue of the peeuharly influential position
held by the ancestors of this person, they may be pre-
sumed to have made an ("0117110 record of the events
as thoy occurred.
Il. Another manuscript copy on paper kindly
furnished to me by Basappiu Nayak an aged descendant
of the great Palayagars. ‘This copy contains a large
number of minor incidents which have the form of
mere brief notes and without which the work would be
dry and uninteresting. lu some places such as the re-
bellion of the army and the consequent revolution on
two occasions and the wars with Nawab Hyder Al, the
account is fuller.
IIT. Another copy of a manuscript giving the
history of the reign of Madakari Nayak the last.
IV. The Mysore Gazetteer and other records.
My history is based on these important records
written by contemporary historians connected with the
Palace of Chitradurg, who there is every reason to be-
lieve, might have lived at the time of the fall of Chi-
tradurg, and on some Inscriptions published by the
Mysore Government, and also on some 10081 traditions
in support of which there are certain tangible evidences
at the place.
3
In comparing these manuscripts, 1. experienced
some difficulty which I had to wade through with
the assistance of Mr. Girimaji Rao, Inspector of
Vaccination in the Mysore District, to whom my
thanks are due. T have further to thank the members
of the Mysore University Publication Board for
pointing out some inadvertent errors of 0111165102. and
commission in my unrevised manuscripts written
carclessly as a literary recreation. Besides 7 shall be
entirely wanting 1 my duty if 1 fal to mention
here niy thanks to Rayakaryaprasakta, Rao Bahadur
M. Shama Rao Esq., 31.೩. who encouraged me to give
a readable shape to the unhewn materials lying with
me for a long time.
In mentioning the dates, I have followed the Saka
years as well as the names of the Hindu Sanvath years
as found in the original source materials. Extracts
from songs or ballads in praise of Bharmappa Nayaka’s
cong nests are also inserted. A chronological lst with
the corresponding Samvat years and years of the
Christian era, a list of kings with dates, a 20060101081
trec and a glossary of peculiar terms with their mocan-
ings as used in the book, ure alsv given. No scparate
map 18 insorted as the map of 11378010 or of the Chitra-
durg District will serve the purpose. Prompted by a
sense of respect to the departed worthies who played
important parts in the history of the country, I have
inserted a few names perhaps too many. Names such
೩ ಗುದಗತ್ತಿ, ಭೂನಪ್ಪ, ದೇಮೈಯ್ಯ, ಕಂರಮಾಲೆ, 000, which are
not generally found now-a-days, are given as mere
curiosities to be noted by students of history as to how
even names of persons change with the change of the
times.
Basavanagudi, Bangalore City.
October 29, 1924. 14. 5. PUTTANNA.
==========================================
ಪೀರಿಕೆ.
ಚಿತ್ರದುರ್ಗದಲ್ಲಿ ಕೆಲವು ವರುಪಗಳವರೆಗೆ ನಾನು ವಾಸವಾಗಿದ್ದೆ,
ಅಲ್ಲಿನ ಬೆಟ್ಟದ ಮೇಲೂ ಅದರ ಸುತ್ತಲೂ ನಿರ್ಣಯವಾಗಿ ಕಟ್ಟದ
ಕೋಟೆಕೊತ್ತಲಗಳೂ, ಎಂಣೆ ತುಪ್ಪವನ್ನು ತುಂಬುವ ಭಾವಿಗಳೂ,
ಧಾನ್ಯದ ಕಣಜಗಳೂ, ಮದ್ದು ಗುಂಡು ಫಿರಂಗಿ ಇವುಗಳನ್ನು ತಯಾ
ರ್ಮಾಡಲು ಬಂಡೆಗಳನ್ನು ಕೊರೆದು ಮಾಡಿದ್ದ ಏರ್ಪಾಡುಗಳೂ, ಇವೇ
ಮೊದಲಾದ ಅನೇಕ ಸಂಗತಿಗಳನ್ನು ನೋಡಲಾಗಿ, ಅಲ್ಲಿ ಆಳುತಿದ್ದ
ದೊರೆಗಳ ಐಶ್ವರ್ಯ ಎಂಥಾದ್ಹಾಗಿರಬಹುದೆಂದು ಆಶ್ಚರ್ಯ ಹುಟ್ಟಿತು.
ಇವರ ಚರಿತ್ರೆಯನ್ನು ಯಾರು ಬರೆದಿರಿಸಿದಾರೆ ಅದು ಎಲ್ಲಿ ದೊರೆಯ
ಬಹುದು ಎಂದು ವಿಚಾರ ಮಾಡಿದ್ದರಲ್ಲಿ,
೧ ಚಿತ್ರದುರ್ಗದ ತಾಲ್ಲೋಕು ಸುಲ್ತಾನಿಪುರದ ಕಾನುಭೋಗ
ಚಿನ್ನದ ಮನೆ ರಾಮಂಣನವರಲ್ಲಿ ಲಕ್ಷಣವಾಗಿ ಬರೆದ ಓಲೆ
ಪ್ರತಿ ಯೊಂದು ದೊರಕಿತು. ಈಶಾನುಭೋಗರ ಪೂರ್ವಿ
ಕರಿಗೆ ಅರಮನೆಯಲ್ಲಿದ್ದ ಅಧಿಕಾರದ ಗೌರವವನ್ನು ನೋ
ಡಿದರೆ, ಈ ಪ್ರತಿಯನ್ನು ಪೂರ್ವದಲ್ಲಿಯೇ ಆಗಾಗ್ಗೆ ಬರೆದ
ಹಾಗೂ ಅದರಲ್ಲಿರತಕ್ಕ ವಿಷಯಗಳು ನಂಬಿಕೆಗೆ ಅರ್ಹವಾಗಿ
ಯೂ ಕಂಡುಬರುವುದು.
೨ ೨ನೇ ಪ್ರತಿಯೊಂದು ದೊರೆಯಿತು. ಇದನ್ನು ಪಾಳಯ ಗಾ
ರರ ವಂಶಸ್ಥರಾದ ಬಸಪ್ಪನಾಯಕರೆಂಬುವರು ತಮ್ಮಲ್ಲಿ
ದ್ದ ಒಂದು ಬಖ್ಯೆರಿಗೆ ಪ್ರತಿ ಬರೆಯಿಸಿ ಕೊಡಿಸಿದರು.
೩ ಕಡೇ ಮದಕರಿನಾಯಕನ ಚರಿತ್ರೆ ಪ್ರತಿ.
೪ ಮೈಸೂರ ಗೆಜೆಟೀರು ಮೊದಲಾಗಿ ಇತರ ಸಾಧನಗಳು,
ಇವು ದೊರೆತವು.
ಮೇಲೆಕಂಡ ಚಿನ್ನದಮನೆ ರಾಮಂಣನವರಿಗೂ ಬಸಪ್ಪನಾಯ
ಕರು ಮುಂತಾದವರಿಗೂ ಇದಕ್ಕಾಗಿ ನಾನು ಕೃೃತಜ್ಞನಾಗಿದೇನೆ. ಇದ
-------------------------------------
೫
ಲ್ಲದೆ ಸ್ಥಳದಲ್ಲಿ ಜನವಾರ್ತೆಯಿಂದ ಗತಾನುಗತಿಕವಾಗಿ ತಿಳಯಬಂದು
ಪುಷ್ಬೀಕರಿಸಲ್ಪಟ್ಟಿ ರುವ ಕೆಲವು ವಿದ್ಯುಮಾನಗಳೂ ಪೂರ್ವದ ಕಥಾ ಸಂದ
ರ್ಭಗಳನ್ನು ವಿಶದಮಾಡಿದವು.
ಇವುಗಳ ಮತ್ತು ಶಾಸನಗಳ ಆಧಾರದಮೇಲೆ ಈಗಿನ ಕಾಲದ ಪುಸ್ತ
ಕಗಳ ರೀತಿಯಲ್ಲಿ ಒಂದು ಪ್ರತಿಯನ್ನು ಬರೆದಿದೇನೆ. : ಸನ್ ೧೫೬೫ನೇ
ಈಸವಿಯಲ್ಲಿ ನಡೆದ ತಾಳೀಕೋಟೆಯುದ್ದದಲ್ಲಿ ತುರಕರು ವಿಜಯನಗರದ
ಸಂಸ್ಥಾನವನ್ನು ಮುರಿದಾಗಿನಿಂದ ಶ್ರೀಮನ್ ಮೈಸೂರ ಮಹಾರಾಜರ
ವರ ಪೂರ್ವೀಕರು ಹೊಂದಿದ ವಿಜಯ, ನವಾಬ ಹೈದರಲ್ಲಿಖಾನ್ ಈತನ
ಮಗ ಟೀಪುಸುಲ್ತಾನ್ ಈ ತಂದೆ ಮಕ್ಕಳು ಎಲ್ಲವನ್ನೂ ಆಕ್ರಮಿಸುವ
ರೀತಿಯಲ್ಲಿ ಮಾಡಿದ ಒಟ್ಟು ಗಾಗಳ, ಸಹಾ ಜರಗುವವರೆಗೂ, ದಕ್ಲಿಣದೇಶ
ದಲ್ಲಿ ನಡೆದ ಸುಮಾರು ೨೫೦ ವರುಪಗಳ ಚರಿತ್ರೆಯು ಇದುವರೆಗೆ ಹೊರ
ಪಟ್ಟಿಲ್ಲ. ಇದು ಕೃಪ್ಲಾನದಿಗೆ ದಕ್ಷಿಣದಲ್ಲಿ ವಿಶೇಷವಾಗಿದ್ದ ಪಾಳಯಪಟ್ಟು
ಗಳ ಚರಿತ್ರೆಯೇ ಆಗಿದೆ. ಅದನ್ನು ಒಂದೊಂದಾಗಿ ತೆಗೆದುಕೊಂಡು
ಬರೆಯಬೇಕೆಂದು ಯತ್ನಮಾಡಿರುವ ನನಗೆ ಈ ಶಾರ್ಭುಕ್ಕೆ ಬೇಕಾದ
ಯೋಗ್ಯತೆ ಕಡಮೆಯಿದ್ದಾಗ್ಯೂ ಔತ್ಸುಕ್ಯ ಹೆಚ್ಚಾ ಗಿದೆ. ಆದರೂ ಕೈಲಿ
ಸಾಗದ ಪ್ರಯತ್ನವನ್ನುಮಾಡಿದೇನೆ. ಈ ಚರಿತ್ರೆಯ ಸರಣಿಗೆ ಚಿತ್ರದು
ರ್ಗದ ಸಂಸ್ಥಾನದ ಈಥೆಯೇ ಮೊದಲನೆಯದಾಗಿರಲೆಂದು ನಿಷ್ಕಷ್ಪೆಮಾ
ಡಿದೆ. ಇಲ್ಲಿನ ರಾಜರು ಯುದ್ದದಲ್ಲಿ ತಪ್ಪದೆ ಪರಾಕ್ರಮಿಗಳಾಗಿಯೂ
ಶತ್ರುಗಳಲ್ಲಿ ದಯ ಉಳ್ಳವರಾಗಿಯೂ, ರಾಜ್ಯಭಾರದಲ್ಲಿ ಅಧಿಕವಾದ ವಿತ
ರಣೆಯುಳ್ಳವರಾಗಿಯೂ, ರಾಜಕೀಯವ್ಯಾಪಾರದಲ್ಲಿ ದೂರದೃಷ್ಟಿಯುಳ್ಳ
ವರಾಗಿಯೂ, ಕೇವಲ ದೈವಭಕ್ತರಾಗಿಯೂ, ಅತಿಯಾಗಿ ಉದಾರಿಗಳಾ
ಗಿಯೂ ಇದ್ದರು. ಲೋಕೋಪಕಾರಾರ್ಥವಾಗಿ ಇವರು ಮಾಡಿದ
ಕೆಲಸಗಳು ಶಾಶ್ವತವಾಗಿ ನಿಂತಿವೆ. ಈ ಸಂಸ್ಥಾನವನ್ನು ಹೈದರನು
ಆಗ ಜೈಸದೆ ಇದ್ದರೆ, ದಕ್ಷಿಣದೇಶದ ಚರಿತ್ರೆಯು ಹೇಗೆ ಬದಲಾಯಿಸು
ತಿತ್ತೋ ಈಗ ಹೇಳುವುದು ಕಷ್ಟವಾಗಿದೆ.
ಇದನ್ನು ಬರೆಯುವಾಗ್ಗೆ ಮಾತ್ರುತೆಗಳು ಒಂದಕ್ಕೆ ಒಂದನ್ನು
ಹೋಲಿಸುವುದರಲ್ಲಿ ಮೈಸೂರು ಡಿಸ್ಟ್ರಿಕ್ಟು ಸಿಡಬಿನ ಇನ್‌ಸ್ಪೆಕ್ಟರ್
-----------------------------------
೬
ಮ|| ರಾ|| ಗಿರಿಮಾಜಿರಾಯರಿಗೂ, ಹೊತ್ತು ಕಳೆಯುವದಕ್ಕಾಗಿ ಬರೆದ
ಈ ಪುಸ್ತಕದಲ್ಲಿ ಬೇಕಾಬಿಟ್ಟಿಯಾಗಿ ನನ್ನಿಂದ ಬಿದ್ದಿದ್ದ ಕೆಲವು
ಸ್ಖಾಲಿತ್ಯಗಳನ್ನು ತೋರಿಸಿ ಕೊಟ್ಟಿದ್ದಕ್ಳಾಗಿ ಮೈ ಸೂರು ಯೂನಿವ
ರ್ಸಿಟಿಯ ಗ್ರಂಥಪ್ರಕಟನ ಮಂಡಲಿಯವರಿಗೂ ನನ್ನ ಕೃತಜ್ಞತೆಯನ್ನು
ಇಲ್ಲಿ ಸೂಚಿಸಿದೇನೆ. ಕರಟುಮುರಟಾಗಿ ಬಿದ್ದಿದ್ದ ಈ ಚರಿತ್ರೆಗೆ ನನ್ನ
ಕೈಲಾದಮಟ್ಟಿಗೆ ಒಂದು ರೂಪವನ್ನು ಕೊಡಲು ಪ್ರೊತ್ಸಾಹಿಸಿದ ವಿದ್ಯಾ
ಭ್ಯಾಸದ ಇಲಾಖೆಯ ಮೊಖ್ತೇಸರ್ ಅಧಿಕಾರಿಗಳಾಗಿದ್ದ ಮ|| ರಾ|| ರಾ॥
ಶ್ರೀ ರಾಜಕಾರ್ಯ ಪ್ರಸಕ್ತರಾವ್ ಬಹಾದುರ್ ಏಂ. ಶಾಮರಾವ್ ಎಂ. ವಿ.
ಯವರಿಗೆ ನನ್ನ ಕೃತಜ್ಞತೆಯನ್ನು ಇಲ್ಲಿ ನಮೂದಿಸದೆ ಬಿಟ್ಟಲ್ಲಿ ನಾನು
ನ್ಯಾಯವಾಗಿ ಮಾಡಬೇಕಾದ ಕರ್ತವ್ಯಕ್ಕೆ ಶುದ್ಧವಾಗಿ ಲೋಪಉಂಟಾ
ಗುವುದೆಂದು ನಂಬಿದೇನೆ.
ಬೆಂಗಳೂರು ಬಸವನಗುಡಿ,
ರಕ್ತಾಕ್ಷಿ ಸಂ|| ಕಾರ್ತೀಕ ಶು|| ಎಂ. ಎಸ್. ಪುಟ್ಟಣ್ಣ.
ಬಲಿಪಾಡ್ಯಮಿ.
-------------------------------------
ಉಪೋದ್ಘಾತ.
ತುಂಗಭದ್ರಾ ತೀರದಲ್ಲಿದ್ದ ವಿಜಯನಗರದ ಸಂಸ್ಥಾನದ ಚಕ್ರಾಧಿ
ಪತಿಗಳು ಬಹು ಖ್ಯಾತಿಯಿಂದ ಆಳುತಾ ಇರುವಾಗ ಈಗಿನ ಹೈದರಾ
ಬಾದು ಪ್ರಾಂತಗಳಲ್ಲಿ ಆಳಕೊಂಡಿದ್ದ ತುರುಕರ ಕಡೆಯಿಂದ ರಾಜಿಕ
ಗಳು ಬಹಳವಾಗಿದ್ದವು. ಅದರಿಂದ ಯಾವಾಗಲೂ ತಯಾರಾದ ಸೇನೆ
ಯು ಿದ್ದವಾಗಿರುವದಕ್ಕಾಗಿಯೂ, ವಿಸ್ತಾರವಾದ ತಮ್ಮರಾಜ್ಯುದ ದೊರೆ
ತನವು ಬೆಗಿಯಾಗಿ ನಡೆಯುವದಕ್ಕಾ ಗಿಯೂ, ಆ ಕಾಲದಲ್ಲಿ ಅನುಕೂಲ
ವಾದದ್ದೆಂದು ವೀಣಿಸಲ ಲ್ಪಟ್ಟು ಸ 002 ಅಲ್ಲಲ್ಲಿ ರೂಢಿಗೆ ಬಂದಿದ್ದ
ಒಂದು ಏರ್ಪಾಡನ್ನ್ನು ಉಪಯೋಗಮಾಡಿಕೊಂಡಿದ್ದ ರು. ಇವರ ಚಕ್ರಾ
ಧಿಪತ್ಯದ ಮುಖ್ಯವಾದ ಸ್ಥಳಗಳಲ್ಲಿ ಅಧಿಕಾರ ಮಾಡಲು ಪ್ರಮುಖರಾದ
ಜನರನ್ನು ನೇಮಿಸಿದ್ದರು. ಈ ಅಧಿಕಾರಿಗಳಗೆ ನಾಯಕರು ಎಂದು
ಸರ್ವಸಾಧಾರಣವಾಗಿ ಅನೇಕ ಸ್ಥಳಗಳಲ್ಲಿ ಹೆಸರಾಗಿತ್ತು. ಈ ನಾಯ
ಕರು ತಂತಮ್ಮ ಅಧಿಕಾರಕ್ಕೆ, ಒಳಪಟ್ಟ ಸೀಮೆಗಳಲ್ಲಿ ದೊರೆಗಳಂತೆ
ಇರುತಾ, ಅಲ್ಲಿನ ಪ್ರಜೆಗಳಂದ ಕಂದಾಯ ಮೊದಲಾದ್ದನ್ನು ವಸೂಲ್ಮಾಡಿ
ಕೊಂಡು ಚಕ್ರಾಧೀಶ್ವರರಿಗೆ ನಿಗದಿಯಾದ ಕಪ್ಪವನ್ನು ವರುಷ ವರು
ಷವೂ ಕೊಡುತಾ, ತಯಾರಾದ ಸೇನೆಯನ್ನಿಟ್ಟು ಯುದ್ಧಪ್ರ,ಸಕ್ತಿಬಿದ್ದಾಗ
ವಿಜಯನಗರದ ಅಧೀಶ್ವರರಿಗೆ ಸಹಾಯ ಮಾಡುತಾ ಇದ್ದರು. ಈ
ಕಾರಣದಿಂದ ಈ ನಾಯಕರಿಗೆ ಪಾಳಯಗಾರರೆಂದು ಹೆಸರುಬಂತು.
ಪಾಳಯಗಾರರೆಂದರೆ, ದಂಡಿನೊಡನೆ ಪಾಳಯವನ್ನು ಹಾಕಿ ಇಳಿದು
ಕೊಂಡು ಕದನಕ್ಕೆ ಸಿದ್ಧವಾಗಿರತಕ್ಕವರೆಂದು ಅರ್ಥ. ಇವರು ಮೊಗ
ಲಾಯಿ ಸೇನೆಯವರಮೇಲೆಯೂ ಯುದ್ಧಮಾಡಿ ಜಯವನ್ನು ಹೊಂದಿ
ದರು. ಸಾಧಾರಣವಾಗಿ ಈ ಪಾಳಯಗಾರರಲ್ಲಿ ಅನೇಕರು ಬೇಡರು,
ಅಥವಾ ವ್ಯಾಧರು. ಈ ಜಾತಿಯವರಲ್ಲಿ ನಿರತರು ಮೇಸಬೇಡರು
ಎಂದು ಎರಡು ಪಂಗಡ ಉಂಟು, ಇವರಲ್ಲಿ ಮೇಸಬೇಡರು ಪರಿಶುದ್ಧ
-------------------------------------
೨
ರಂತೆ. ಇವರು ಪಾನಮಾಡುವುದಿಲ್ಲ, ಈಚಲನ್ನು ಮುಟ್ಟುವುದಿಲ್ಲ,
ಈಚಲುಚಾಪೆಯನ್ನು ಕೂಡಾ ಹಾಸಿಕೊಂಡು ಅದರಮೇಲೆ ಕೂತು
ಕೊಳ್ಳ ವುದಿಲ್ಲ. ಊರಬೇಡರಲ್ಲಿ ಇಂಥಾನಿಯಮಗಳು ವಿಶೇಷವಾಗಿ
ಲ್ಲವಂತೆ. ಈ ಎರಡು ಪಂಗಡದವರೂ ಪರಸ್ಪರ ಕೊಟ್ಟು ತಂದುಮಾಡು
ವುದಿಲ್ಲ. ಈ ಬೇಡರ ಜಾತಿಯವರಿಗೆಲ್ಲಾ ನರಸಿಂಹಸ್ವಾಮಿ, ಕಂಪಳ
ದೇವರು, ಸಿದ್ಧಯ್ಯ, ರಂಗೈಯ್ಯ, ಚಿತ್ರದೇವರು, ಎಂಬ ಮನೆದೇವರು
ಗಳುಂಟು.
ಅಂಣತಮ್ಮಂದಿರಾದ ಮೂರು ಜನ ನಾಯಕರು ದಿಳ್ಳಿಯ ದೊರೆಗ
ಳಲ್ಲಿದ್ದಂತೆಯೂ ಅಲ್ಲಿಂದ ಗುನಗು ಸಮೇತ ದಕ್ಷಿಣಕ್ಕೆ ದುರ್ಗದ ಸೀಮೆ
ಗೆ ಬಂದಂತೆಯೂ ತಿಳಿಯಬಂದಿದೆ. ಚಿತ್ರದುರ್ಗದಲ್ಲಿ ಈ ಇಬ್ಬರು
ಸಹೋದರರ ಸಂತತಿಯವರು ಆಳುತಿದ್ದರು. ಮೊದಲನೇದು ಮತ್ತಿ
ಸಂತತಿ, ಎರಡನೇದು ಬಿಳಚೋಡುಸಂತತಿ. ಮತ್ತಿ ಸಂತತಿಗೆ ಮೂಲ
ಪುರುಷ ಮತ್ತೀ ತಿಮ್ಮಂಣನಾಯಕ, ಈತನಿಗೆ ವಿಜಯನಗರದ ಸಂಸ್ಥಾ
ನದಿಂದ ಶ॥ ೧೫೯೦ ರಲ್ಲಿ ದುರ್ಗದನಾಯಕತನ ಅಪ್ಪಣೆಯಾಯಿತು.
ಇದಕ್ಕೆ ಮುಂಚಿನಿಂದಲೂ ತಿಮ್ಮಂಣನಾಯಕನೂ ಅವನ ಹಿರಿಯರೂ
ಶ॥ ೧೪೭೪ ನೇ ನಳ ಸಂವತ್ಸರದಿಂದ ಈ ದೇಶದಲ್ಲಿ ಗರಿಗಟ್ಟಿಕೊಂಡು
ಇದ್ದರು. ತಿಮ್ಮಂಣನಾಯಕನೇ ಮೊದಲು ಮೇಲ್ ದುರ್ಗದ ಕೋಟೆ
ಯನ್ನು ಕಟ್ಟಿಸಿದವನು. ಇವನ ಪರಾಕ್ರಮವು ಅಭಿಮನ್ಯು ಮೊದ
ಲಾದ ಮಹಾವೀರರ ಶೌರ್ಯವನ್ನು ಜ್ಞಾಪಕಕ್ಕೆ ತರುತಿದೆ. ಇವನ
ತರುವಾಯ ಬಂದ ಅರಸುಗಳೆಲ್ಲರೂ ಅತ್ಯಂತವಾದ ಶೌರ್ಯವನ್ನು ತೋ
ರಿಸುತಾ ಸಮಪಾಠಿಗಳಾಗಿ ಶತ್ರುಗಳಾದ ಪಾಳಯಗಾರರನ್ನು ಗೆದ್ದು
ತಮ್ಮ ಸೀಮೆಯನ್ನು ವಿಸ್ತರಿಸುತಾ ಬಂದರು. ಈ ಮತ್ತೀ ಸಂತ
ತಿಯು ಒಟ್ಟು ಆರು ತಲೆಗೆ ಶ॥ ೧೬೧೦ನೇ ಶುಕ್ಲ ಸಂ|| ದಲ್ಲಿ ನಿರ್ವಂಶ
ವಾಯಿತು. ಇವರಲ್ಲಿ ೨ನೇ ದೊರೆಯಾದ ದಧ್ಯನ್ನದ ಓಬಂಣನಾಯ
ಕನಿಗೆ ರಸಸಿದ್ಧರು ಮದಕರಿ ಎಂಬ ಬಿರುವನ್ನು ಕೊಟ್ಟರು. ಈ
ಬಿರುದು ಉಚ್ಚಾರಣೆಯಲ್ಲಿ ಕೆಟ್ಟು ಮೆದಕೆರಿ ಎಂಬ ರೂಪವನ್ನು
ಹೊಂದಿತು,
--------------------------------------
೩
ತರುವಾಯ ಬಿಳಚೋಡು ಮನೆತನಕ್ಕೆ ದೊರೆತನಬಂತು. ಹಿಂದಿ
ನವರಂತೆಯೇ ಈ ಸಂತತಿಯ ಪಾಳಯಗಾರರೂ ಸಹಾ ಯುದ್ಧದಲ್ಲಿ
ಶೂರರು, ರಾಜ್ಯ ಭಾರಕ್ರಮದಲ್ಲಿ ವಿವೇಕಿಗಳು, ಬಿಳಿಚೋಡು ವಂಶಸ್ಥ
ಪ್ರಥಮರಾಜನಾದ ಭರಮಪ್ಪನಾಯಕನೇ ವಿಶೇಷವಾಗಿ ಪ್ರಸಿದ್ಧನಾದ
ವನು. ಈತನ ಆಳಿಕೆಯಲ್ಲಿ ರಾಜ್ಯವು ಬಹಳವಾಗಿ ವಿಸ್ತರಿಸಲ್ಪಟ್ಟಿತು.
ದಿಳ್ಳೀ ಚಕ್ರವರ್ತಿಗಳ ಕಡೆ ಸುಬೇದಾರರೂ, ಮರಾಟೆಯವರೂ, ಇತರ
ಚಿಕ್ಕ ಸಂಸ್ಥಾನೀಕರೂ ಸಹಾ ಈ ದೊರೆಯಲ್ಲಿ ಸ್ನೇಹವನ್ನು ಮಾಡಿ
ಕೊಂಡು ಯುದ್ಧಕಾಲಗಳಲ್ಲಿ ಈ ದೊರೆಯ ಸಹಾಯವನ್ನು ಪಡೆಯುತಾ
ದುರ್ಗದ ಸಂಸ್ಥಾನಕ್ಕೆ ತಾವು ತೆಗೆದುಕೊಂಡಿದ್ದ ಕೆಲವು ರಾಷ್ಟ್ರ ಗ
ಳನ್ನೂ ಕೂಡ ಬಿಟ್ಟು ಕೊಡುತಾ ಬಂದರು. ಈ ಭರಮಪ್ಪನಾಯಕನ
ಆಳಿಕೆಯಲ್ಲಿ ಮುಲಕಿ ಕಂದಾಯ ಮೊದಲಾದ ಭಂಡಾರದ ಸುವರ್ಣಾದಾ
ಯಗಳು ಕ್ರಮಪಟ್ಟದ್ದಲ್ಲದೆ ಪ್ರಜಾ ಸೌಖ್ಯಕ್ಕೆ ಬೇಕಾದ ಏರ್ಪಾಡು
ಗಳೂ, ಕಟ್ಟಡಗಳೂ ಕೆರೆಗಳೂ, ಹೆಚ್ಚಾಗಿ ನಿರ್ಮಾಣಮಾಡಲ್ಪಟ್ಟವು.
ತಿಂಮ್ಮಂಣನಾಯಕನನ್ನೂ ಇವನ ಹಿರಿಯರನ್ನೂ ಅನುಸರಿಸಿ
ಕೊಂಡು ಆನೆಗೊಂದಿ ಸಂಸ್ಥಾನದಿಂದ ಬೆನ್ನ ಹತ್ತಿಬಂದ ವಿರೂಪಾಕ್ಷ
ಜೋಯಿಸನ ಮಗ ಪರುಶುರಾಮಪ್ಪನು “ಹರಿಯದ ಹಚ್ಚಡ ಮುರಿಯದ
ಒಡವೆ” ಕೊಡಿಸಬೇಕೆಂದು ಕೇಳಿ ಕೊಂಡಪ್ರಕಾರ, ಆ ಪಾಳಯಗಾರನು
ಆತನ ಮಕ್ಕಳಗೆ ಶಾನುಭೋಗತನವನ್ನು ನೇಮಕಮಾಡಿ ಅವನಿಗೆ ರೈತ
ರಿಂದ ಆಯ ಮೊದಲಾದ್ದು ಸಲ್ಲಬೇಕೆಂದು ನಿಗದಿಮಾಡಿಕೊಡಿಸಿದನು.
ಅದೇಕಾಲದಲ್ಲಿ ಈ ದೊರೆಯು ಆಯಾ ಗ್ರಾಮಗಳಿಗೆ ಗೌಡ, ತಳವಾರ,
ಬೇಗಾರ ಮೊದಲಾದ ಆಯಗಾರರನ್ನು ನೇಮಿಸಿದನು. ಭರಮಪ್ಪನಾ
ಯಕನ ದಿವಸದಲ್ಲಿ ಆಯಗಾರರು ಅರಮನೆಗೆ ಬಿಟ್ಟಿಚಾಕರಿಯನ್ನು
ಮಾಡಬೇಕೆಂದು ನಿರ್ಣಯಮಾಡಿದನು. ಮತ್ತು ಸುವರ್ಣಾದಾಯವು
ಸುಮಾರು ಎಲ್ಲಾಬಾಬುಗಳೂ ಸೇರಿ ೪೦೦೦೦೦ ವರಹ ವಾಗಬಹು
ದೆಂದು ತಿಳಿಯಬರುವುದು. ಈ ನಾಲ್ಕು ಲಕ್ಷ ವರಹವೂ ಸುಮಾರು
ಈಗಿನ ಬೆಲೆ ಕಡಮೆಯಾದ ನಾಣ್ಯದಲ್ಲಿ ೫೦ ಲಕ್ಷ ರೂಪಾಯಿಗೆ ಹೆಚ್ಚಾ
ಗಬಹುದು. ಇದರಲ್ಲಿ ಗದ್ದೆ, ಬೆದ್ದಲು, ಕಾಡಾರಂಬ, ಮಾರ್ಗಸುಂಕ,
----------------------------------------
೪
ಸ್ಥಳಸುಂಕ, ಹುಲ್ಲು ಬನ್ನಿ, ಇಟ್ಟಿಗೆ ಗುತ್ತಿಗೆ, ಎಲೆಮನೆ, ತಂಬಾಕು,
ಗಾಂಜ, ಷರಾಬು, ಉಬ್ಬಿನಮೋಳೆ, ಆಚಾರಗಾಣಿಕೆ ಇವೇ ಮೊದಲಾ
ದವುಗಳು ಸೇರಿದ್ದವು. ಇದೂ ಅಲ್ಲದೆ, ಭಾರತದ ಹುಣುಮೆಯಲ್ಲಿ ರಾಜ
ಸಂಸಾರದವರು ಜೋಗಿವೇಷದಲ್ಲಿ ಹೊರಟಾಗ ಗ್ರಾಮದ ಗೌಡರು
ಮುಂತಾದವರು ಕೊಡಬೇಕಾದ ಉಲುಪೆ ಮೊದಲಾದ ಚಿಲ್ಲರೆ ಬಾಬು
ಗಳೂ ಆದಾಯಕ್ಕೆ ಸೇರುತಿದ್ದುವು. ಈ ರಾಜರುಗಳು ಒಬ್ಬಳಿಗಿಂತಲೂ
ಹೆಚ್ಚುಜನ ಹೆಂಗಸರನ್ನು ಮದುವೆಯಾಗುತಿದ್ದರು. ಆಯಾ ದೊರೆಯು
ತೀರಿಹೋದಕೂಡಲೆ ಜೇವಂತರಾಗಿರಲು ಇಷ್ಟಉಳ್ಳವರು ವಿನಾ ಉಳ
ದವರೆಲ್ಲಾ ತಂತಮ್ಮ ಗಂಡಂದಿರೊಡನೆ ಸಹಗಮನಮಾಡಿಸಿಡುತಿದ್ದರು.
ಇದು ತಮ್ಮ ಮನಃ ಪೂರ್ವಕವಾಗಿ ಆಯಾ ರಾಣಿಗಳು ಮಾಡುತಿದ್ದ
ಕೆಲಸವಾಗಿತ್ತೇ ಹೊರತು ಯಾರಬಲವಂತಕ್ಕೂ ಮಾಡತಕ್ಕಾಗಿರಲಿಲ್ಲ
ವೆನ್ನುವುದಕ್ಕೆ ಕೆಲವು ರಾಣಿಗಳು ಜೇವಂತರಾಗಿ ಉಳದುಕೊಳ್ಳುತಿದ
ದ್ದೇ ದೃಷ್ಟಾಂತವಾಗಿದೆ. ಆಯಾ ಪತಿವ್ರತೆಯರ ಮನೋ ನಿಶ್ಚಯವನ್ನ
ರಿಯದವರು ಇದು ಒಂದು ಬಗೆಯಾದ ಕೊಲೆ ಎಂದು ಹೇಳಕೊಳ್ಳುವು
ದೇನೂ ಆಶ್ಚರ್ಯವಲ್ಲ. ದೊರೆಯನ್ನು ಮದುವೆಯಾಗಿ ಬೇಕಾದ ಸೌಖ್ಯ
ವನ್ನು ಅನುಭವಿಸಿ, ಮಹಾಪದವಿಯ ಗೌರವವನ್ನು ಕಾಪಾಡಿಕೊಂಡಿದ್ದು,
ಕೈ ಹಿಡಿದ ಪತಿಯು ಪರಂಧಾಮವನ್ನೈದಿದಮೇಲೆ ವೈಧಮ್ಯದುಃಖಗ
ಳಿಗೆ ಗುರಿಯಾಗಿ, ಇತರರ ಹಂಗಿನ ಕೂಳನಲ್ಲಿ ಜೇವಿಸುವುದಕ್ಕಿಂತಲೂ
ತನ್ನ ಕೈಮೇಲಾಗಿರುವಾಗ ನಿರ್ವಾಣವನ್ನು ಹೊಂದುವುದು ಮೇಲಾ
ದ್ದೆಂಬ ವ್ಯಾವಹಾರಿಕ ವೈರಾಗ್ಯದಿಂದಲೋ, ಅಥವಾ ಪತಿಲೋಕವನ್ನು
ಹೊಂದಿ ತನ್ಮೂಲಕ ಮೋಕ್ಷಕ್ಕೆ ಭಾಗಿಯಾದೇನೆಂಬ ಆ ಮುಷ್ಕಿಕ
ಸಂಬಂಧವಾದ ವೈರಾಗ್ಯ ದಿಂದಲೋ, ಗಂಡನದಾರಿಯನ್ನು ಹಿಡಿಯತಕ್ಕ
ಪತಿವ್ರತೆಯರು ಲೋಕದಲ್ಲಿದ್ದರು. ಅಂಥವರು ಇಲ್ಲವೇ ಇಲ್ಲವೆಂದು
ಹೇಳುವುದಕ್ಕೆ ಈ ಕಾಲದಲ್ಲಿಯೂ ಈಗೀಗಲೂ ಪತಿಗೆ ಪ್ರಾಣೋತ್ಕ್ರ
ಮಣಕಾಲ ಪ್ರಾಪ್ತವಾಯಿತೆಂದು ಈಕೇಳದಕೂಡಲೆ ತಾವಾಗಿ ಪ್ರಾಣತ್ಕಾಗ
ಮಾಡಿಕೊಂಡ ಪತಿವ್ರತೆಯರ ಚರಿತ್ರೆಯು ಅಡ್ಡಿಯಾಗಿದೆ.
ಈ ಚಿತ್ರದುರ್ಗದ ಪಾಳಯಗಾರರು ಸಾಧಾರಣ ಪುಂಡು ಪಾಳಯ
ಗಾರರ ಹೋಲಿಕೆಯವರಲ್ಲ. ಈ ಎರಡು ಸಂತತಿಯಿಂದ ೨೧೧ ವರುಷ
------------------------------------
೫
ಗಳು ಆಳಿದರು. ಪ್ರತಿಯೊಬ್ಬ ದೊರೆಯೂ ಪರಾಕ್ರಮಕಾಲಿ. ಇವರೆಲ್ಲಾ
ತಮ ಪ್ರಾಣದ ಮೇಲೆ ಆಸೆಯನ್ನು ಬಿಟ್ಟು ಯುದ್ಧಮಾಡಿ ರಾಜ್ಯವನ್ನು
ವಿಸ್ತರಿಸುತ್ತಲೇ ಇದ್ದರು. ಆಳಿಕೆ ಆಳಿಕೆಗೆ ಹಸ್ತಾಂತರದ ಸುವರ್ಣಾದಾ
ಯಹೆಚ್ಚುತ್ತಲೇ ಬಂತು ಇವರು ಎಲ್ಲರೂ ಸ್ವತಃ ವಿವೇಕಿಗಳು. ಆಲೋ
ಚನಪರರಾದ ಮಂತ್ರಿಗಳನ್ನು ಹತ್ತರ ಇರಿಸಿಕೊಂಡು ಅವರೊಡನೆ
ಮಂತ್ರಾಲೋಚನೆಯನ್ನು ಮಾಡುತ್ತಲೇ ಇದ್ದರಲ್ಲದೆ ತಮ್ಮ ಪ್ರೌಢಿಮೆ
ಯೇ ಹೆಸರುಗೊಳ್ಳಬೇಕು, ತಮ್ಮ ಹಠವೇ ಸಾಧನೆಯಾಗಬೇಕು
ಎಂಬದಾಗಿ ಮುಷ್ಕರ ಮಾಡಿಕೊಂಡಿದ್ದರೆಂದು ಹೇಳುವುದಕ್ಕೆ ಯಾವ
ಗುರುತೂ ಕಂಡು ಬರುವುದಿಲ್ಲ. ಇವರಲ್ಲಿ ದೈವಭಕ್ತಿಯೂ, ಮಹಾತ್ಮರ
ಪ್ರಭಾವದಲ್ಲಿ ಭಕ್ತಿಯೂ ವಿಶೇಷವಾಗಿತ್ತು. ಇವರು ಅನೇಕ ದೇವ
ಸ್ಥಾನಗಳನ್ನು ಕಟ್ಟಿಸಿದರು. ತಟಾಕ ಪ್ರತಿಷ್ಠೆ ಗಳನ್ನು ಮಾಡಿದರು.
ಇವರಲ್ಲೆಲ್ಲಾ ಹಿರೀ ಮದಕರಿನಾಯಕನ ಆಸ್ತಿಕ್ಯವನ್ನೂ ಕರ್ಮ ಶ್ರದ್ಧೆ
ಯನ್ನೂ, ಪಾರಮಾರ್ಥಿಕತೆಯನ್ನೂ ಮೀರಿಸಿದವರು ಕಾಣಿಸಲಿಲ್ಲ. ಈ
ರಾಜರ ಔದಾರ್ಯವೂ ದಯಾರಸವೂ ಲೇಖನದಲ್ಲಿ ಶಾಶ್ಲಿತವಾಗಿ ಚಿತ್ರಿತ
ವಾಗಲು ಯೋಗ್ಯವಾದವುಗಳಾಗಿವೆ. ಒಳ್ಳೇಸಮಾಚಾರವನ್ನು ತಂದು
ಹೇಳದವರಿಗೆ ಅವರ ಬಾಯಿತುಂಬ ಹೊನ್ನನ್ನು ಹಾಕಿಸುತಿದ್ದರು.
ದಾತ್ರುವು ಹೊಡುತೇನೆಂದರೂ, ಪ್ರ)ತಿಗ್ರಹೀತರು ಸಾಕು, ಒಲ್ಲೆನೆಂದು
ಹೇಳುವಮಟ್ಟಿನ ಧಾರಾಳವು ಈ ಅರಸುಗಳಲ್ಲಿತ್ತು. ಧಣಿಯ ಅಪ್ಪಣೆ
ಯಂತೆ ಭೃತ್ಯರು ಯಾವ ಕಾರ್ಯುವನ್ನು ನಿರ್ವಾಹ ಮಾಡಿದಾಗ್ಯೂ, ಕಡೆ
ತೋಡೆ, ಪಾಲ್ ಜೋಡಿ ಮೊದಲಾದ ಇನಾಮುಗಳು ತಪ್ಪುತಿರಲಿಲ್ಲ.
ಯುದ್ಧ ರಂಗದಲ್ಲಿ ಕೂಡ ಶತ್ರುಗಳನ್ನು ಕೊಂದವರಿಗೆ ತಲೆ ಒಂದಕ್ಕೆ
೧, ೨ ವರಹ ಇನಾಮೆಂದು ಕರಣೀಕರ ಕೈಯಲ್ಲಿ ಲೆಕ್ಕಾ ಬರೆಯಿಸಿ ಬಹು
ಮಾನವನ್ನು ಕೊಡುತಿದ್ದರು. ಯಾವಾಗ ಯುದ್ಧಪ್ರಸಕ್ತಿ ಬಂದರೂ
ನಿಮ್ಮನ್ನು ಬಿಟ್ಟು ಕೊಡುವುದಿಲ್ಲ, ಎಂದು ಪ್ರಜೆಗಳೂ ಉದ್ಯೋಗಸ್ಥರೂ
ಹೇಳುವಷ್ಟು ಸ್ಫಾಮಿಭಕ್ತಿ ಅವರಲ್ಲಿತ್ತು. ಅನೇಕ ಸದ್ಗುಣಗಳು ಈರಾಜ
ರಲ್ಲಿದ್ದುದರಿಂದ ತುರುಕರು, ಮರಾಟೆಯವರು, ರಾಜಪೂತರು, ಪೂರಭಯ್ಯ
ಜನರು, ರೋಹಿಲೆಯವರು, ಬೇಡರು ಮುಂತಾದ ಶೂರರು, ತಾವು ತಾವಾ
ಗಿಬಂದು ಪಾಳಯಗಾರರ ಸೇನೆಯಲ್ಲಿ ಉದ್ಯೋಗಮಾಡಿಕೊಂಡಿದ್ದರು,
-----------------------------------------
೬
ಈ ಸೀಮೆಯ ಜನರೇ ಅಲ್ಲದೆ ದ್ದೀಪಾಂತರದ ಜನರೂ ಬಂದು
ಈ ದೊರೆಗಳಲ್ಲಿ ಆಶ್ರಯವನ್ನು ಹೊಂದಿ, ತಂತಮ್ಹ ಯೋಗ್ಯೃತೆಗ
ಳನ್ನು ತೋರ್ಪಡಿಸಿ ಕಷ್ಟತರವಾದ ಕೆಲಸಗಳನ್ನು ಮಾಡಿದಾರೆ. ಫರಂ
ಗಿ ಜಾನ ಎಂಬುವನು ಈ ದೊರೆಗಳಲ್ಲಿ ಚಾಕರಿ ಇದ್ದನು. ಇವನು
ಉಚ್ಚಂಗಮ್ಮನ ಉಯ್ಯಾಲೆ ಕಂಬ, ದೀಪಮಾಲೆಕಂಬ, ಇವುಗಳನ್ನು
ತನ್ನ ಸಾಹಸದಿಂದಲೂ ಯುಕ್ತಿಯಿಂದಲೂ ಒಂದು ದಿವಸದಲ್ಲಿ ನಿಲ್ಲಿಸಿ
ದನು. ಈ ಜಾನನೆಂಬುವನು ಫ್ರಾನ್‌ಸುದೇಶದವನಾಗಿರಬಹುದು ಎಂದು
ತೋರುತ್ತೆ. ಹೊಸದುರ್ಗದ ತಾಲ್ಲೋಕಿನಲ್ಲಿರುವ ಜಾನಕಲ್ ಎಂಬ
ಬಲವಾದ ಕೋಟೆಯನ್ನು ಈ ಜಾನನೇ ಕಟ್ಟಿಸಿದನೆ, ಇದರಿಂದ ಜಾನ
ಕಲ್ ಎಂದು ಹೆಸರಾಯಿತೆ, ಗೊತ್ತಾಗಲಿಲ್ಲ ಜಾನಕೊಂಡವೆಂಬ
ಗ್ರಾಮಕ್ಕೆ ಹೇಗೆ ಹೆಸರುಬಂದಿತು ?
ಮೊಗಲಾಯಿ ಸುಬೇದಾರರು, ಮರಾಟೆಯವರು ಮತ್ತು ಈ ಕಾಮ
ಗೇತಿ ವಂಶದ ದೊರೆಗಳ ಏಳಿಗೆಯನ್ನು ನೋಡಿ ಅಸೂಯಪಡುತಾಇದ್ದ
ನೆರೆಪಾಳಯಗಾರರು, ಇವರೇ ಮೊದಲಾದವರ ಕಾಟಕಾಯಗಳು ಪದೇ
ಪದೇ ಸಂಭವಿಸುತ್ತಲೇ ಇದ್ದವು ಯಾವ ದೊರೆಯ ಆಳಿಕೆಯಲ್ಲಿಯೂ
ಯುದ್ಧವಿಲ್ಲದೆ ಸಮಾಧಾನವಾದ ಸ್ಥಿತಿ ಇರುತಿರಲಿಲ್ಲ. ಇದ್ದ ರಾಜ್ಯದ
ಗಡಿಗಳು ಶತ್ರುಗಳ ಕೈಗೆ ಇಕ್ಕುವುದು, ಅಥವಾ ಶತ್ರುರಾಜರ ಸೀಮೆ
ಗಳು ದುರ್ಗದವರ ವಶವಾಗುವುದು ಯಾವಾಗಲೂ ಜರುಗುತ್ತಲೇ
ಇತ್ತು. ಇಂಥಾ ಯುದ್ಧ ಪ್ರಮೇಯಕ್ಕಾಗಿ ಚಿತ್ರದುರ್ಗದ ಪಾಳಯ
ಗಾರರು ಯಾವಾಗಲೂ ಹೆಚ್ಚಾದ ಸೇನೆಯನ್ನು ಜಗಳಕ್ಕೆ ಸಿದ್ಧವಾಗಿ
ರಿಸಿಕೊಂಡಿರಲೇಬೇಕಾಗಿತ್ತು. ಇವರು ಕದನಗಳಲ್ಲಿಯೂ, ಕೋಟೆ
ಗಳ ಮುತ್ತಿಗೆಯಲ್ಲಿಯೂ, ಪುರಾತನ ಪದ್ಧತಿಪ್ರಕಾರ ಅಂಬು ಬಿಲ್ಲುಗ
ಳನ್ನು ಉಪಯೋಗಿಸುತಿದ್ದರು, ಫಿರಂಗಿ ಮತ್ತು ತುಪಾಕಿಗಳನ್ನು
ಹಾರಿಸುವುದು, ಸುರಂಗಹಾಕಿ ಕೋಟೆಗಳನ್ನು ಹಾರಿಸುವುದು, ಕೋ
ಟೆಗೋಡೆಗೆ ಸರಿಯಾಗಿ ಮೊಹರ್ಚೆ ಕಟ್ಟಿ ಫಿರಂಗಿಗಳನ್ನು ಹಾರಿಸು
ವುದು, ಉಡುಗಳನ್ನು ಹಾಕಿ ಹಲ್ಲಾ ಹತ್ತುವುದು, ಇವೆಲ್ಲಾ ಕದನಗ
ಳಲ್ಲಿ ವಾಡಿಕೆಯಾಗಿ ಉಪಯೋಗದಲ್ಲಿದ್ದವು. ದಂಡಿನವರ ತಿಳುವಳಿ
------------------------------------
೭
ತೆಗೆ ಕೂಚು ನಗಾರಿ, ಧರ್ಮಕಹಳೆ, ಮೊದಲಾದ್ದನ್ನು ಉಪಯೋಗಿಸುತಿ
ದ್ದಂತೆ ತಿಳಯಬರುವ ಸಂಗತಿಯು ಈ ಪಾಳಯಗಾರರ ಸೇನೆಯಲ್ಲಿ
ಒಂದು ವಿಧವಾದ ತರಬಿಯತ್ನು ಇತ್ತೆಂದು ತೋರಿಸುವುದು
ಸೇನೆಯವರಿಗೆ ಇನಾಮು ಮೊದಲಾದ್ದನ್ನು ಕೊಡುವುದು, ಸೇನೆಗೆ
ಜನರನ್ನು ಆಕರ್ಪಣೆಮಾಡುವುದಕ್ಕೆ ಒಂದೇ ಮಾರ್ಗವಲ್ಲ ಯುದ್ಧದ
ವೀರರಮಕ್ಕಳು ತಬ್ಬುಲಿಗಳಾಗಲು ಅವರ ಸಂರಕ್ಷ ಣೆಗಾಗಿ ಹಾಲು, ಬೆಂಣೆ
ಹಣವೆಂದು ಬಾಲ್ಯಾವಸ್ಥೆ ತೀರುವತನಕ ಸಂಬಳದ ಹಾಗೆ ಕೊಡುತ್ತಾ
ಅವರು ದೊಡ್ಡವರಾದಮೇಲೆ ಸೇನೆಯಲ್ಲಿ ಅವರಿಗೆ ಚಾಕರಿಯನ್ನು
ಕೊಟ್ಟು ಇರಿಸಿಕೊಳ್ಳುತಾ ಇದ್ದರು. ಇಂಥಾ ಸಿಪಾಯಿಗಳು ಯುದ್ಧ
ಕಾಲದಲ್ಲಿ ಸಿಡಿಹೋದರೆ ಅವವರನ್ನು ಹಿಡಿಯಸಿ ಹೀಗೆ ಹೇಡಿಗಳಾದ
ಇತರ ಸಿಪಾಯಿಗಳಿಗೆ ಕೊಡುವದಕ್ಕಿಂತಲೂ ಹೆಚ್ಚಾದ ಶಿಕ್ಷೆಯನ್ನು
ಕೊಡುತಿದ್ದರು. ಈ ಕಾರಣದಿಂದ ಇಂಥಾ ಭಟರು ಯಾವಾಗಲೂ
ದೊರೆಗೆಕೃತಜ್ಞರಾಗಿರುತಾ ಪ್ರಾಣವನ್ನು ಒಪ್ಪಿಸಲು ಸಿದ್ದವಾಗಿರುತಿ
ದ್ದರು. ಇಂಥಾ ಪದ್ಧತಿಯು ಈಗಿನ ಕಾಲದ ರಾಜರಿಂದ ಕೂಡ ಅನು
ಸರಿಸಲ್ಪಡುವದಕ್ಕೆ ಯೋಗ್ಯವಾಗಿದೆ.
ಈ ಪ್ರಕಾರ ಸೇನೆಯವರಿಗೆ ವಿಶೇಷವಾಗಿ ಕೊಡುತಿದ್ದ ಪ್ರೋತ್ಸಾ
ಹವು ಅವರ ಕೊಬ್ಬನ್ನು ಹೆಚ್ಚಿಸಿತು. ಇಮ್ಮುಡಿ ಮದಕರಿನಾಯಕ ಸತ್ತು
ಹೋದಮೇಲೆ ದಂಡಿನವರು ತಿರುಗಿಬಿದ್ದು ಓಬಂಣನೆಂಬ ಒಬ್ಬ ಚಿಕ್ಕ
ದೊರೆಯನ್ನು ಹಿಡಿದು ಬಹಿರಂಗವಾಗಿ ಕೊಂದುಹಾಕಿದರು. ರಾಜ್ಯ
ಭಾರವೆಲ್ಲಾ ಅಲ್ಲೋಲಕಲ್ಲೋಲವಾಯಿತು. ಪುನಃ ಕೆಲವು ವರುಷದ
ತರುವಾಯ ಶ|| ೧೬೦೫ರಲ್ಲೂ ೩ನೇ ಮದಕರಿನಾಯಕನೆಂಬವನಿಗೆ ಪಟ್ಟ
ವಾಗಲು, ಪುನಃ ಎದುರು ಕಕ್ಷಿಯ ದಳವಾಯಿಗಳಲ್ಲಾ ಸೇರಿ ಆ ಮದಕರಿ
ನಾಯಕನೆಂಬ ದೊರೆಯನ್ನು ಸೆರೆ ಹಿಡಿದು ಸೆರೆಮನೆಯಲ್ಲಿ ಅವನ
ಪ್ರಾಣವನ್ನು ತೆಗೆದರು. ದಂಡಿನವರ ಏಳಗೆ ಅತಿಯಾದ್ದರಿಂದ ಇಂಥಾ
ಅವಾಂತರಗಳು ನಡೆದವು.
ಸಂತತವಾದ ಯುದ್ಧಪ್ರಮೇಯಗಳಿಂದ ಶ|| ೧೬೪೮ನೇ ಪರಾಭವ
ಸಂ॥ ದಲ್ಲಿ ಭರಮಪ್ಪನಾಯಕನ ಆಳಿಕೆಯಲ್ಲಿ ವೀರಕ್ಷಾಮ ಪ್ರಾಪ್ತವಾ
---------------------------------------
೮
ಯಿತು. ಇದಕ್ಕೆ ಡೆಂಕೆ ಬರವೆನ್ನುತಾರೆ. ಹೀಗೆಯೇ ಶ|| ೧೬೫೪ನೇ
ಪರೀಧಾವಿ ಸಂ|| ದಲ್ಲಿಯೂ ಬರಬಿದ್ದು ಬಹು ಜನ ಲಯವಾಯಿತು.
ಶ|| ೧೬೬೩ನೇ ದುರ್ಮತಿ ಸಂ ||ಅಶ್ವೀಜ ಶುದ್ದ ೧೦ಯಿಂದ ಕಾರ್ತಿಕ
ಶು|| ೫ ವರೆಗೆ ಹುಚ್ಚುಮಳೆ ಹೂಯಿತು. ಆ ಭರಮಪ್ಪನಾಯಕನ
ಆಳಕೆಯಲ್ಲಿ ಕ್ರಿ.ಶ|| ೧೭೦೩-೪ ರಲ್ಲಿಗುಳ್ಳೇರೋಗ ಪ್ರಾಪ್ತವಾಯಿತು.
ಈ ದೈವಿಕಗಳಂದ ಅನೇಕ ಜನ ಲಯವಾಯಿತು.
ಯುಗಾಂತರದಲ್ಲಿ ನಡೆಯುತಾ ಇದ್ದ ಹಾಗೆಯೇ ದೊರೆಯ ಚಂದ್ರಾ
ಯುಧವನ್ನು ದೊರೆಗೆ ಬದಲಾಗಿ ಕೂರಿಸಿ ಮದುವೆಮಾಡಿಕೊಡುವ ಪದ್ದ
ತಿಯು ಚಿಕ್ಕಂಣನಾಯಕನ ಆಳಿಕೆವರೆಗೆ ನಡೆದು ಬಂತೆಂದು ತಿಳಯ
ಬಂದಿದೆ.
ಈ ಪಾಳೆಯಗಾರರ ಆಳಿಕೆಗಳಲ್ಲಿ ಗ್ರಾಮಗಳ, ಬಾರಾಬಲೂತಿ
ಕೆಲಸದವರಿಗೆ ಮಾನ್ಯ ಮಿರಾಸಿ ಬ ಆಗತೆಗಳನ್ನು೦ಟುಮಾಡಿ
ಕೊಟ್ಟು, ಖಂಡಿತವಾಗಿ ಸರ್ಕಾರದಿಂದ ನೇಮಕಮಾಡಿದ ವಿವರ
ಹೇಗಂದರೆ:
ನಿಜ ಆಯಗಾರರು. ಅರೆ ಆಯಗಾರರು.
೧ ಗೌಡ. ೧ ಜೋಯಿಸ.
೧ ಶಾನುಭೋಗ. ೧ ಕುಲಾಲ (ಕುಂಬಾರ).
೧ ಬಡಗಿ. ೧ ನಾಪಿತ (ಕ್ಷೌರದವನು).
೧ ಕಮ್ಮಾರ. ೧ ರಜಕ (ಅಗಸ).
೧ ತಳವಾರ, ೧ ಬಾರಿಕ (ನೀರಗಂಟಿ).
೧ ಬೇಗಾರ, ೧ ಅಕಸಾಲೆ.
ಈ ದೊರೆಗಳಿಗೆ ಬ್ರಾಹ್ಮಣರು ಯಾವಾಗಲೂ ಪ್ರಧಾನಿಗಳಾಗಿರು
ತಿದ್ಬರು. ಮಂತ್ರಾಲೋಚನ ಸಭೆ ಎಂಬ ಮನ್‌ಸಬ್‌ದಾರರೂ ಸಹಾ
ಇರುತಿದ್ದರು. ರಾಜನ ಸಮೀಪಸಂಬಂಧಿಗಳಗೆ ದಂಡಿನಲ್ಲಿಯೂ ಗಡಿ
ದುರ್ಗಗಳಲ್ಲಿಯೂ ಭಾರಿಯಾದ ಹುದ್ದೆಗಳನ್ನು ಕೊಟ್ಟು ಸ್ಥಳಾಂತರಗ
ಳಗೆ ಕಳುಹಿಸುತಿದ್ದರು.
----------------------------------------
೯
ಈ ರಾಜರ ಸುಗುಣಗಳ ದೆಸೆಯಿಂದ ಪ್ರಜೆಗಳೆಲ್ಲಾ ಸಂತುಷ್ಫರಾ
ಗಿರುತಿದ್ದ ರು. ಹೈದರಲ್ಲಿಯ ಸಂಗಡ ಯುದ್ಧ ತೊಡಗಿದ ಕಾಲದಲ್ಲಿ
ಮದಕರಿನಾಯಕನು ಮುಖಂಡರಾದ ಜನರನ್ನು ಕರೆಯಿಸಿ ಒದಗಿರುವ
ರಾಜಕಾರ್ಯವನ್ನು ವಿವರಿಸಿ ಹೇಳಲಾಗಿ, ಒಂದುವರುಷದವರೆಗೂ ಆಗುವ
ಯುದ್ಧದ ವೆಚ್ಚವನ್ನು ಪ್ರಜೆಗಳಾದ ತಾವೆಲ್ಲರೂ ಸೇರಿಕೊಡುವುದಾಗಿ
ಆ ಪ್ರಮುಖರು ಅರಿಕೆಮಾಡಿದರು.
ಈ ರಾಜರೆಲ್ಲರೂ ಮೊದಲಿನಿಂದಲೂ ಬ್ರಾಹ್ಮಣ ಮತಾವಲಂಬಿ
ಗಳು. ಶ|| ೧೬೦೦ನೇ ಕಾಳಯುಕ್ತಿ ಸಂ॥ ದಲ್ಲಿ ದೊರೆಯೂ ರಾಜನ
ಮನೆತನದವರೂ ಸಹಾ ಶಿವದೀಕ್ಷೆಯನ್ನು ತೆಗೆದುಕೊಂಡು ಲಿಂಗಾಕಟ್ಟಿ
ಕೊಂಡೆರು. ಕಡೆಗೆ ಇದು ಸರಿಬೀ೪ಬೆ ಹೋದಕಾರಣ ಇವರು ಕೆಲವು
ತಿಂಗಳಲ್ಲಿಯೇ ಲಿಂಗವನ್ನು ತೆಗೆದುಹಾಕಿಬಿಟ್ಟರು.
ಸಾಧಾರಣವಾಗಿ ಈ ದೊರೆಗಳೆಲ್ಲರೂ ಶೂರರು. ಯಾವ ದೊರೆ
ಯ ಆಳಕೆಯಲ್ಲಿಯೂ ಹೊರಗಿನ ಶತ್ರುಗಳೊಡನೆ ಯುದ್ಧವಿಲ್ಲದೆ ಇರುತಿ
ರಲಿಲ್ಲ. ಯಾವಪಾಳಯಗಾರನ ದಿವಸದಲ್ಲಿಯೂ ಹೊಸದಾಗಿ ರಾಜ್ಯವನ್ನು
ಜೈಸದೆ ಇರಲಿಲ್ಲ ಇವರು ಯುದ್ಧಕಾಲದ ವೀರಾವೇಶದಲ್ಲಿ ಹೊರತು ಉಳಿ
ದಎಲ್ಲಾ ಕಾಲಗಳಲ್ಲಿಯೂ ದಯಾರಸ ಉಳ್ಳವರು, ಪಾಪಭೀತರು, ಪ್ರಜಾ
ರಂಜಕರು, ದೊರೆತನ ಬದಲಾಯಿಸೆಬೇಕಾದಾಗಲೂ ಭಾರಿಯಾಗಿ ಯುದ್ಧ
ಪ್ರಮೇಯ ಬಿದ್ದಾಗಲೂ, ಮಂತ್ರಿಗಳ ಮತ್ತು ಪ್ರಜೆಗಳ ಅನುಮತಿ
ಯನ್ನು ಕೇಳಿ ಕೆಲಸಗಳನ್ನು ಜರುಗಿಸುತಿದ್ದರು.
ಈ ಸಂಸ್ಥಾನವು ಬಲು ಬಲವಾದ್ದು, ಫಿತೂರಿಯೂ ದ್ರೋಹಿತ
ನವೂ ಇಲ್ಲದಿದ್ದ ಈ ಹೈದರನಿಗೂ ಜೈಸಲಸಾಧ್ಯವಾದ್ದು. ಕ್ರಿ.ಶ॥
೧೭೭೮ ರಲ್ಲಿ ಈ ಸಂಸ್ಥಾನ ಹೋಯಿತು. ಆಗ ಈ ರಾಜ್ಯ ಹೋಗದೆ
ಇನ್ನು ವರುಷ ಮಾತ್ರ ತಡವಾಗಿದ್ದರೆ ಈ ಪಾಳಯಪಟ್ಟು
ಸ್ಥಿರವಾಗಿನಿಲ್ಲುವ ಸಂಭವವಿದ್ದರೂ ಇರಬಹುದಾಗಿತ್ತು. ಸನ್ ೧೭೮೦
ರಲ್ಲಿ ಹೈದರಲ್ಲಿಯೂ ಸತ್ತುಹೋದನು. ಅವನ ಮಗನಾದ ಟೀಪ್ಪುಸು
ಲ್ತಾನನಿಗೆ ಇಂಗ್ಲಿಷರು, ಮರಾಟಿಯವರು ಮೊದಲಾದ ಹೊರ ಶತ್ರುಗ
ಳಲ್ಲಿಯೂ ಅಲ್ಲದೆ ಒಳದೇಶದ ಶತ್ರುಗಳಲ್ಲಿ ಕೂಡ ಇದ್ದ ವೈಷಮ್ಯವು
-----------------------------------------
೧೦
ಇತರ ಸಂಸ್ಥಾನಗಳ ಮೇಲೆ ದಂಡೆತ್ತಿಹೋಗಿ ಜಯವನ್ನು ಹೊಂದುವ
ಮಟ್ಟಿನ ಅವಕಾಶವನ್ನು ಕೊಟ್ಟಿರಲಿಲ್ಲ. ಆದಕಾರಣ ಸಂಸ್ಥಾನವು
ಉಳಿದುಕೊಳ್ಳುವ ಸಂಭವ ಇತ್ತೆ ? ಇದಕ್ಕಿಂತಲೂ ಚಿಕ್ಕದಾಗಿರುವ
ಎಷ್ಟೊ ರಾಜಪುತ್ರ ಸಂಸ್ಥಾ ನಗಳು ಉಳಿದುಕೊಂಡಂತೆಯೇ ದುರ್ಗದ
ಸಂಸ್ಥಾನವೂ ನಿರಂತರವಾಗಿ ನಿಲ್ಲುತ್ತಿತ್ತೆ? ಇದನ್ನು ಈಗ ಖಂಡಿತವಾಗಿ
ನಿರ್ಧರಿಸಿ ಹೇಳಲು ಸಾಧ್ಯವಿಲ್ಲ. ಒಂದುವೇಳೆ ದುರ್ಗದವರ ಸಹಾಯ
ಕ್ಕೆಂದು ಬಂದ ಮರಾಟೆ ಸರದಾರರು ಹೈದರಲ್ಲಿಯ ಲಂಚಕ್ಕೆ ಕೈ ಒಡ್ಡದೆ
ಮದಕರಿನಾಯಕನ ಸ್ನೇಹವನ್ನು ಬಲಮಾಡಿಕೊಂಡಿದ್ದಲ್ಲಿ, ಪೇಶ್ವೆಯ
ಕಕ್ಷಿ ದಕ್ಷಿಣದೇಶದಲ್ಲಿ ಕೇವಲ ಬಲವಾಗಿ ಟೀಪುಸುಲ್ಲಾನನನ್ನು ಮೂ
ಲೋತ್ಪಾಟನ ಮಾಡುತಿದ್ದ ಅಂಶವು ಸಂಶಯದಿಂದ ವಿಶೇಷವಾಗಿ ಬಾಧಿ
ತವಾಗಿಲ್ಲ. ಹಾಗಾಗಿದ್ದಲ್ಲಿ ಚರಿತ್ರೆಯ ಬಳ್ಳಿಯು ಹೇಗೆ ತಿರುಗಿಕೊಳ್ಳು
ತ್ತಿತ್ತೆಂದು ಈಗ ಹೇಳಲು ಕಷ್ಪವಾಗಿದೆ.
ಈ ದೊರೆಗಳು ಅನೇಕ, ಗ್ರಾಮಗಳನ್ನು ಜೇರ್ಣೊದ್ಧಾ ರಮಾಡಿ
ಅನೇಕ ಗ್ರಾಮಗಳನ್ನು ಹೊಸದಾಗಿ ಕಟ್ಟಿಸಿದರು. ಹಲವು 'ಗ್ರಾಮಗ
ಳಿಗೆ ರಾಜನ ಮನೆತನದ ಹೆಂಗಸರ ಹೆಸರನ್ನು ಇಟ್ಟರು ಹೇಗೆಂದರೆ,
ಸಿದ್ಧವನ ಹಳ್ಳಿ, ಇದ್ದವ್ವನ ದುರ್ಗ, ರಂಗವ್ವನಹಳ್ಳಿ, ವೀರವ್ವನಾಗತಿ
ಹಳ್ಳಿ, ಓಬವ್ವನಾಗತಿ ಹಳ್ಳಿ, ಮೊದಲಾದವು.
ದೊರೆಯ ಹೆಂಡತಿಯರಿಗೆ ನಾಯಕಿತಿ, ಅಥವಾ ನಾಗತಿ ಎಂದು
ಹೆಸರು.
ಇತರ ಸಂಗತಿಗಳನ್ನು ಆಯಾ ಸ್ಥಳಗಳಲ್ಲಿ ಸಂದರ್ಭಾನುಸಾರ
ವಾಗಿ ಬರೆದಿದೆ.
-----------------------------------
ವಿಷಯ ಸೂಚಿ ಕೆ.
ಆಧ್ಯಾಯ
೧ ಪೂರದ ಕಥೆ
೨ ದಕ್ಷಿಣದೇಶಕ್ಕೆ ಕಾಮಗೇತಿಯವರು ಬಂದದ್ದು...
೩ ಸಾಳ್ವ ನರಸಿಂಗರಾಯನ ಮುತ್ತಿಗೆ
೪ ೨ನೇ ದೊರೆ ಓಬಳ೦ಣನಾಯಕ
೫ ೩ನೇ ದೊರೆ ಕಸ್ತೂರಿ ರಂಗಪ್ಪನಾಯಕ
೬ ಇಮ್ಮಡಿ ಮದಕರಿನಾಯಕ ....
೭ ಓಬಳ೦ಣನಾಯಕ ....
೮ ಮುಮ್ಮುಡಿ ಮದಕರಿನಾಯಕ
೯ ಮತ್ತಿ ಸಂತತಿ ನಿರ್ವಂಶವಾದ್ದು
೧೦ ಭರಮಪ್ಪನಾಯಕ
೧೧ ಭರಮಪ್ಪನಾಯಕ (ಸಾಗುವುದು)
೧೨ " (ಪೂರೈಸಿತು)
೧೩ ಹಿರೀ ಮದಕರಿನಾಯಕ ....
೧೪ " (ಸಾಗುವುದು)
೧೫ ಇಮ್ಮುಡಿ ಕಸ್ತೂರಿ ರಂಗಪ್ಪನಾಯಕ
೧೬ ಕಡೇ ಮದಕರಿನಾಯಕ ...
೧೭ " (ಸಾಗುವುದು)
೧೮ ಕಡೇ ಮದಕರಿನಾಯಕ, ಹೈದರನೊಡನೆ ಯುದ್ಧ
ಸನ್ನಾಹ
೧೯ ಕಡೇ ಮದಕರಿನಾಯಕ, ದುರ್ಗದ ಮುತ್ತಿಗೆ ...
೨೦ ಸಾಮಾನ್ಯ ವಿಚಾರ
-----------------------------------
https://archive.org/details/dli.osmania.3100
ಶ್ರೀಲಕ್ಷ್ಮೀನರಸಿಂಹಾಯನಮಃ
ಚಿತ್ರದುರ್ಗದ ಪಾ ಳಯಗಾ ರ ರು
೧ ನೇ ಅ ಧ್ಯಾ ಯ .
ಪೂರ್ವದಕಥೆ,
ಹೆಸರು.
ಚಿತ್ರದುರ್ಗಕ್ಕೆ ಚಿನ್ಮೂಲಗಿರಿದುರ್ಗವೆಂದು ಒಂದು ಹೆಸರಿಟ್ಟಿದಾರೆ.
ಸ್ಥಳಕ್ಕೆ ವಿಶೇಷವಾಗಿ ಪ್ರಾಶಸ್ತ್ಯ ಉಂಟಾಗಲೆಂದು
ಸಂಸ್ಕೃತ ವಿದ್ಯಾಂಸರು. ಯಾರೋ ಆವೂರಿಗೆ ಈ
ನಾಮಕಣವನ್ನು ಮಾಡಿದ್ದರೂ ಇರಬಹುದು. ಬೇಡರು ತಮ್ಮ ಚಿತ್ರ
ದೇವರ ಹೆಸರನ್ನು ಇದಕ್ಕೆ ಇಟ್ವರೆಂತಲೂ ಜನವಾರ್ತೆ ಇದೆ. ಪ್ರಾ
ಯೇಣ ಹೀಗಿದ್ದರೂ ಇ ರಬಹುದೆಂದು ನಂಬುವುದಕ್ಕೆ ಹೆಸರಿನ ಹೋಲಿ
ಕೆಯಿಂದ ಕಾರಣಕಂಡುಬರುವುದು. ಇದರ ಪುರಾತನವಾದ ಹೆಸರು
ಬೆಮ್ಮಚ್ಚನೂರು, ಅಥವಾ ಬೆಮ್ಮತ್ತನೂರು ಎ೦ದು ಇದ್ದಹಾಗೆ ತಿಳಯ
ಬರುವುದು. (ರೈಸ್‌ಸಾಹೇಬರ ಮೈಸೂರು ಶಾಸನಗಳಲ್ಲಿ ಚಿತ್ರದುರ್ಗ--
ವೆಂಬ ಸಂಪುಟದ ೩೪ನೇ ಶಾಸನವನ್ಟು ನೋಡಬಹುದು.) .
ಸ್ಥಳಪುರಾಣ.
ದ್ವಾಪರಯುಗದಲ್ಲಿ ಕೌರವರು ದಾಯಾದಮತ್ಸರದಿಂದ ಪಾಂಡವ
ರನ್ನು ಲಾಕ್ಷಾ ಗೃಹಪ್ರವೇಶ ಮಾಡಿಸಿದಕಾಲದಲ್ಲಿ,
ಭೀಮನು ಕುಂತೀಯುಕ್ತನಾಗಿ ಐದು ಮಂದಿಯನ್ನು
ಹೊತ್ತುಕೊಂಡು ರಾತ್ರಿವೇಳೆಯಲ್ಲಿ ಹೊರಟುಹೋಗುತಾ ದಾರಿಯಲ್ಲಿ
ಹಿಡಿಂಬಾಶ್ರಮವೆಂಬ ಈ ಪರ್ವತವನ್ನು ಸೇರಿದನಂತೆ. ಆಗ ಹಿಡಿಂ
----------------
೨ ಚಿತ್ರದುರ್ಗದ ಪಾಳಯಗಾರರು.
ಬಾಸುರನು ಈ ಪಾಂಡವರನ್ನು ತಿನ್ನಬೇಕೆಂದು ಬಂದನು. ಭೀಮ
ಸೇನನು ಈ ಅಸುರನೊಡನೆ ಕಾಳಗವನ್ನು ಮಾಡಿ, ಅವನನ್ನು ಗುದ್ದಿ
ಸಂಹಾರವಮಾಡಿ ಅವನ ಹಲ್ಲುಗಳನ್ನುಕಿತ್ತುಬಿಟ್ಟನು. ತರುವಾಯ ಪಾಂಡ
ವರು ಬೆಟ್ವಕ್ಕೆ ಸಮಾಪದಲ್ಲಿ ಇಳಿದುಕೊಂಡರು. ಆ ಸ್ಥಳಕ್ಕೆ ಪಂಡರ
ಹಳ್ಳಿ ಎಂದು ಹೆಸರಾಯಿತಂತೆ, ತರುವಾಯ ಈ ಗುಡ್ಜಕ್ಕೆ ಸೇರಿದ ಹುಲೀ
ಗೊಂದಿ ಎಂಬ ಸ್ಥಳದಲ್ಲಿ ಪಾಂಡವರು ಪಂಚಲಿಂಗಗಳನ್ನು ಪ್ರತಿಷ್ಠೆ
ಮಾಡಿದರಂತೆ. ಈಗಲೂ ಆ ಸ್ಥಳದಲ್ಲಿ ಐದು ದೇವಸ್ತಾನಗಳೂ ಅಲ್ಲಿ
ಧರ್ಮೇಶ್ವರ, ಭೀಮೇಶ್ವರ, ಫಲ್ಗುಣೇಶ್ವರ, ನಕುಲೇಶ್ವರ, ದೇವೇಶ್ವರ
ಎಂದು ಹೆಸೆರುಳ್ಳ ಐದು ಲಿಂಗಗಳೂ ಪ್ರತಿಷ್ಠೆಯಾಗಿವೆ. (ರೈಸ್‌ಸಾಹೇ
ಬರ ಚಿತ್ರದುರ್ಗದಶಾಸನ ಸಂಖ್ಯೆ ೮೨ನ್ನು_ ನೋಡಬೇಕು.
ಜನಮೇಜಯನ ಕಾಲ
ಪಾಂಡವರ ಮರಿಮಗನಾದ ಜನಮೇಜಯ ರಾಯನು ತಮ್ಮ ಹಿರಿ
ಯ ಯರಿಗೆ ಪುಣ್ಯಬರಲೆಂದು ಗೋಪಾಲದೇವರ ಗುಡಿ
ಯನ್ಟು ಕಟ್ಟಿಸ ದೇವರ ಪ್ರತಿಪ್ಟೆಮಾಡಿದನಂತೆ. ಈ
ದೇವರಿಗೆ ಅಮೃಪಡಿ ನಂದಾದೀವಿಗೆ ಮುಂತಾದ ವಿನಿ
ಯೋಗಕ್ವೆ ಅಗ್ರಹಾರವಾಗಿ ಗೋಪಾಲಪುರ ಗ್ರಾಮವನ್ಜು ಧಾರಾಫೂ
ರ್ವಕವಾಗಿ ಈಚೆಗೆ ಕೊಟ್ಟದಾರೆ. ಇದರ ಶಿಲಾಶಾಸನವು ಶೃ೦ಗಾರ
ತೋಟದಲ್ಲಿದೆ. (ರೈಸ್‌ಸಾಹೇಬರ ಚಿತ್ರದುರ್ಗದ ಶಾಸನ ಸಂಖ್ಯೆ
೬ನ್ನು. ನೋಡಬೇಕು.) ಇದು ವೀರ ಬಲ್ಲಾಳರಾಯನ ಪ್ರಧಾನಿ
ರಾಮಯ್ಯ ಡಣಾಯಕನ ಮಗ ಹಿರಿಯಬಲ್ಲಪ್ಪ ಡಣಾಯಕನು ಶ|| ೧೨೬೦
ಬಹುಧಾನ್ಯದಲ್ಲಿ ಕೊಟ್ಟಿದ್ದು. (ಮತ್ತು ಹುಲಿಗೊಂದಿ ಗ್ರಾಮ ಶಾಸನ
ಸರಿಖ್ಯೆ ೩೨ ನ್ನು ನೋಡಿ). ಈಚೆಗೆ ವಿಕ್ರಮ ಶಕ ,೨೩ರಲ್ಲಿ *ಗೋಎಂದ
ದಂಡಾಧಿಪನೆಂಬ ರಾಜನು ಇಲ್ಲಿ ಆಳುತಿದ್ಬಹಾಗೆ ತಿಳಯಬಂದಿದೆ.
, ತರುವಾಯ ಈ ದೇಶದಲ್ಲಿ ಬಿಜ್ಜಳ ಕಾಲಭೂರ್ಯರೂ ಚೋಳ
ರಾಜರೂ ಆಳಿದರು. ಚಿತ್ರದುರ್ಗದಲ್ಲಿರುವ ಚೋಳೇಶ್ವರನ ದೇವ
ಸ್ಥಾನ, ಬೆಂಡೋಣೇಶ್ವರನ ಗುಡಿ, ಜಂಬುಕೇಶ್ವರನ ಗುಡಿ ಇವು
.....................
*ಲೆಕ್ಕಾಚಾರ ನೋಡಲಾಗಿ ಇದು ಉಜ್ಜಯನಿ ವಿಕ್ರಮಮ ಶಕೆಯಾಗಿ ಕಂಡು ಬರುವುದಿಲ್ಲ,
ಪ್ರಾಯಶಃ ಚಾಳುಕ್ಯ ವಿಕ್ರಮ ಇರಬಹುದೆ೦ದು ತೋರುತ್ತೆ.
---------------------------------------
ಈಚಿನ ದೊರೆಗಳ ಕಾಲ, ೩
ಗಳನ್ನು ಕಟ್ಟಿಸಿದರು. (ರೈಸ್ ಸಾಹೇಬರ ಚಿತ್ರದುರ್ಗ ಶಾಸನ
ಸಂಖ್ಯೆ ೩೮,.
ಈಚಿನ ಕಾಲದ ದೊರೆಗಳು
ವೀರಮಲ್ಲಂಣ ಒಡೆಯನು, ೧ ಸಂಪಿಗೇ ಸಿದ್ದೇಶ್ವರನ ಗುಡಿ,
೨ ದೆೊಡ್ಲಮಲ್ಲೇಶ್ವರನ ಗುಡಿ, ೩ ಚಿಕ್ಕಮಲ್ಲೇಶ್ಫ
ರನ ಗುಡಿ, ಮುಂತಾದ್ದನ್ನು ಕಟ್ಟಿಸಿ, ಅವುಗಳ ಪಡಿ
ತರ ದೀಪಾರಾಧನೆಗೆ ೧ ಮುಸಂಡಿಹಾಳು -೨ ಚಿಕ್ಕ
ಪುರ, ಈ ಎರಡು ಗ್ರಾಮಗಳನ್ನು ಕೆೊಟ್ಟನು. ಇದಕ್ಕೆ ಶಿಲಾಶಾಸನ
ಬರೆಯಿಸಿಕೆೊಟ್ಟಿದಾರೆ. (ರೈಸ್ ಸಾಹೇಬರ ಚಿತ್ರದುರ್ಗದ ೧೪ನೇ
ಸಂಖ್ಯೆ ಶಾಸನವನ್ನು ನೋಡಿ). ಈ ವೀರಮಲ್ಲಂಣನ ಕಾಲದಲ್ಲಿ
ಚಿತ್ರದುರ್ಗದ ಏಕನಾಥಮ್ಮನ ಗುಡಿಯನ್ನು ಕಟ್ಟಿದರು. ಈ? ವೀರ
ಮಲ್ಬಂಣ ಒಡೆಯನ ಕುಮಾರ ಗಣಪತಿರಾಯನು ಹಿಡಿಂಬೇಶ್ವರನ ಗುಡಿ
ಯನ್ನು ಕಟ್ಟಿಸಿ, ಈ ದೇವರ ಪಡಿತರ ದೀಪಾರಾಧನೆಗೆ ಮಲ್ಲಾಪುರ,
ಆಯತೊಳಲು, ಈ ಎರಡು ಗ್ರಾಮಗಳನ್ನು ತಮ್ಮ ತಾಯಿಯ ಹೆಸರಿ
ನಲ್ಲಿ ಕೊಟ್ಟನು. (ರೈಸ್ ಸಾಹೇಬರ ಚಿತ್ರದುರ್ಗದ ಶಾಸನ, ೧೨_೧೩).
ಈ ಹಿಡಿಂಬ ರಾಕ್ಷಸನ ಹಲ್ಲೆಂಬುವುದು ಹಿಡಿಂಬೇಶ್ವರನ ಗುಡಿಯಲ್ಲಿದೆ.
ಇವರ ಮನೆದೇವರು ಗವೀ ವೀರಂಣ. ವೀರಂಣನ ಗುಡ್ಡದಲ್ಲಿ
ಈಶ್ವರ ದೇವಸ್ಧಾನ ವಿದೆ. (ರೈಸ್ ಸಾಹೇಬರ ಚಿತ್ರದುರ್ಗದ ಶಾಸನ
ಸಂಖ್ಯೆ ೧೪).
ತರುವಾಯ ಕುರುಬರ ಕಾಲದಲ್ಲಿ ಈ ಪ್ರಾಂತವು ಬುಕ್ಕರಾಯನಿಗೆ
ಸೇರಿತ್ತು. (ಮೂಕ ಶಿವಾಲೆ ಶಿರದಬಳಿ ಬಂಡೇ ಮೇಲೆ ಬುಕ್ಕರಾಯನ
ಸೇವೆ ಎಂದು ಬರೆದಿದೆ.)
ಈ ಗುಡ್ಡದಲ್ಲಿ ರಸಸಿದ್ಧರು ಇದ್ದರೆಂತಲೂ ಇವರು ಭಂಗೀನೀ
ರನ್ನು ಕಲ್ಲಿನ ಮೇಲೆ ಚೆಲ್ಲಿ ಕರೆಹತ್ತಿದ್ದರಿಂದ ಚಿತ್ರಕಲ್ಲು ಎಂದು ಹೆಸ
ರಾಯಿತೆಂತಲೂ ಜನ ಹೇಳಿಕೆೊಳ್ಳುತಾರೆ.
-----------------------------------
೪ ಚಿತ್ರದುರ್ಗದ ಪಾಳಯಗಾರರು.
೨ ನೇ ಅ ಧ್ಯಾ ಯ .
ದಕ್ಸಿ ಣದೇಶಕ್ಳೆ ಕಾಮಗೇತಿಯವರು ಬಂದದ್ಧು
ಶಳ ೧೪೭೮ ನೇ ನಳ ಸಂ||
ದಿಳ್ಳಿಯಿಂದ ನಾಡ ತಳವಾರರು ಬಂದದ್ದು
ಉತ್ತರ ದೇಶದಲ್ಲಿ ಚಡಕಲ್ಲು* ದುರ್ಗ ದಿಂದ ದಿಳ್ಳೀ ನಾಡ ತಳವಾ
ರರಾದ ವಾಲ್ಮೀಕಿ ಗೋತ್ರದವರೆಂದು ಹೇಳಲ್ಪಡುವ
ಕಾಮಗೇತಿವಂಶದ ೧ ಸಬ್ಧಗಡಿ. ಓಬನಾಯಕ್, ೨
ಜಡವಿನಾಯಕ, ೩ ಬುಳ್ಳನಾಯಕ, ಈ ಮೂರುಜನ
ಅಂಣ ತಮ್ನ್ರಂದಿರು ಉತ್ತರ ದೇಶದ ಅವಾಂತರದಿಂದ
ತಮ್ಮ ಮನೆದೇವರು ಅಹೋಬಲ ನರಸಿಂಹಮೂರ್ತಿಯ ಪೆಟ್ಟಿಗೆ, ತುರು,
ಕುರಿ`, ಕೊಲ್ಲಾರಿ, ಮುಂತಾದ ಕಂಪಳವನ್ನು ತೆರಳಿಸಿಕೊಂಡು ದಕ್ಷಿಣ
ದೇಶಕ್ಕೆ ಬಂದರು. ದಾರಿಯಲ್ಲಿ ವಿಜಯನಗರದಲ್ಲಿ ಇಳಿದು, ಹಂಪೆ ವಿರೂ
ಪಾಕ್ಷೇಶ್ವರನ ದರ್ಶನ ನಾಡಿಕೊಂಡು ಬರುವಾಗ, ಅನೇಗೊಂದಿ ಸ್ಥಳ
ದವರಾಗಿ ವಿರೂಪಾಕ್ಷೇಶ್ವರನ.ಗುಡಿಯಲ್ಲಿ ಮಂತ್ರಪುಷ್ಪದ ಕೆಲಸವನ್ನು
ಮಾಡುತಿದ್ದ ೧ ಕರಿಜೋಯಿಸ - ವಿರೂಪಾಕ್ಷ ಜೋಯಿಸ ಈ
ಇಬ್ಬರು ಹುಡುಗರು ಈ ನಾಡತಳವಾರರ ಬೆನ್ನಹತ್ತಿ ಬಂದರು.
ಮೇಲೆ ಕಂಡ ಮೂರುಜನ ನಾಯಕರೂ ಬಿಳಿಚೋಡಿಗೆ ಬಂದು ರೊಪ್ಪ
ಹಾಕಿಕೊಂಡು ಮೂರು ತಿಂಗಳು ಇದ್ದರು. ಬಿಳಿಚೋಡು ಸ್ಥಳದ
ಪಂಚಾಂಗದ ಜೋಯಿಸರು ನಷ್ಟ ಸಂತಾನರಾಗಿದ್ಧದರಿಂದ ಗ್ರಾ್ಮದಲ್ಲಿದ್ದ
ಗೌಡ, ಸೇನಭೋಗ, ನಾಯಕವಾಡಿ ಮುಂತಾದವರಿಗೆ ಹೇಳಿ ಈ ಈರಿ
ಜೋಯಿಸ ವಿರೂಪಾಕ್ಷ ಜೋಯಿಸರಿಗೆ: ಭೋಗಪಟ್ಟೆ ಬರಸಿಕೊಟ್ಸು
ಅವರನ್ಜು ಸ್ಥಳ'ಕ್ಕೆ ಜೋಯಿಸರನ್ನಾಗಿ ನೇಮಿಸಿದರು. ತರುವಾಯ
ಮೇಲೆ ಕಂಡ ನಾಯಕರು ನೀರುತಡಿ ಎಂಬ ಗ್ರಾಮದ ಬಳಿಯಲ್ಲಿ
ರೊಪ್ಪಹಾಕಿ-ಕೊಂಡಿದ್ದರು. ಇವರ ಮನೆದೇವರು ಸ್ವಪ್ನದಲ್ಲಿಪಚಾ
ರಿಸಿ_ಸನ್ನ ಹೊತ್ತುತೊಂಡು ಕಂಡಕಂಡ ಕಡೆಗೆ ಹೋಗಬೇಡ,
ನಾನು ಈ ಗ್ರಾಮದಲ್ರಿ ವಾಸವಾಗಿರುತೇನೆ; ಎಂದು ಅಪ್ಪಣೆಕೊಡಿಸಿದ
....................
1 ರೈಸ್ ಸಾಹೇಬರ ಚಿತ್ರದುರ್ಗದ ಶಾಸನ ಇಂಗ್ಲೀ ಷ್ ಉಪೋದ್ಘಾತ ೨೮ನೇ ಪುಟದ
ಕೆಳಗಡೆ ನೋಡಿ.
------------------------------------
ತಿಮ್ಮಂಣನಾಯಕ. ೫
ನಂತೆ, ಆಗ ಈ ಗ್ರಾಮದಲ್ಲಿ ಗುಡಿಕಟ್ಟಿಸಿ ದೇವರನ್ನಿಟ್ಟು ತಾವು ಎಡಬ
ಲದ . ಗ್ರಾಮಗಳಲ್ಲಿ ಕಾದುಕೊಂಡಿದ್ದರು. ಜಡಕಲ್ಲು . ನಾಯಕನ
ಮಗ ಹಿರೀಹನುಮನಾಯಕನು ಸಾಗಲೆ ಗ್ರಾಮದಲ್ಲಿ ನಿಂತನು. ಸಬ್ಬ
ಗಡಿ ಓಬನಾಯಕನ ಮಗ ತಿಮ್ಮಣ್ಣನಾಯಕನು ಮತ್ತಿಗ್ರಾಮದಲ್ಲಿ ನಿಂ.
ತನು. ಬುಳ್ಳನಾಯಕನ ಮಕ್ಕಳು ೧ ಚಿಕ್ಕಹನುಮನಾಯಕ ೨ ಓಬಂಣ
ನಾಯಕ ಬಿಳಚೋಡಲ್ಲಿಯೇ ನಿಂತರು.
ತಿಮ್ಮಣ್ಣನಾಯಕನ ಅಭಿವೃದ್ಧಿ
ಈ ಮತ್ತಿ ಗ್ರಾಮದಲ್ಲಿದ್ದ. ತಿಂಮಣನಾಯಕನ ಬಳಗೆ. ವಿರೂ
ಪಾಕ್ಷ ಜೋಯಿಸರು ಯಾಚನ ನಿಮಿತ್ತವಾಗಿ ಬಂದು
ಮುಂದೆ ಸ್ವಲ್ಪ ದಿವಸದಲ್ಲಿ ಉನ್ನತವಾದ ಪದವಿ
ಬರುವುದು, ಎಂದು ಹೇಳಿದರು. ಈ ತಿಂಮ್ಮಂಣ
ನಾಯಕನು ತನ್ನ ಕುಟುಂಬ ಕಂಪಳ ಸಮೇತನಾಗಿ ಬಂದು ಹಡವನ
ಹಾಳಲ್ಲಿ ನಿಂತನು. ಅಚ್ಯುತರಾಯ ಕೃಷ್ಣರಾಯರ ಸಂತತಿಯ ಸಾಳೋ
ನರಸಿಂಗರಾಗರಾಯನು ಈ ತಿಂಮ್ಮಂಣನಾಯಕನನ್ನು ಕರೆಯಿಸಿ ಹೊಳಲ
ಕರೆಯ ನಾಯುಕ ತನವನ್ನು ಕೊಟ್ಟನು. ಶಕ ೧೪೮೫ನೇ ರುಧಿರೋ
ದ್ಗಾರಿ ಸಂ| ವೈಶಾಖ ಶುದ್ಧ ೧೦ ಮಂಗಳವಾರದಲ್ಲೂ ಈ ತಿಂಮಣ್ಣ ನಾ
ಯಕನು ಗೋಪಾಲದೇವ ರ ಗುಡಿಯನ್ನು ಕಟ್ಟಿಸಿದನು. ಶಕ ೧ ೪೭೮ನೇ
ಬಹುಧನ್ಯ ಸಂ|| ದಲ್ಲಿ ಈತನಿಗೆ ಹಿರಿಯೂರನಾಯಕತನವಾಯಿತು.
ಇಲ್ಲಿ ವೀರಭದ್ರನ ಗುಡಿ ಕಟ್ಜಸಿದನು.
ರಂಗಪಟ್ಟಣ ಕಟ್ಟಿದ್ದು/ರಾಯದುರ್ಗದಲ್ಲಿ ಅನಾವೃಷ್ಟಿ
ಹೆಡವನಹಾಳಲ್ಲಿ ತಿಮ್ಮಂಣನಾಯಕನು ನಾಲ್ಯುವರುಷ ಇದ್ದು
ರಂಗಪಟ್ಟಣವನ್ನು ಕಟ್ಟಿಸಿದನು. _ಈ ವೂರನ್ನು
ಕಟ್ಜಲು ಪ್ರಮೋದೂತ ಸಂ|| ಮಾಗ೯˜ಶರ ಶುದ್ಧ ೧೦
ಗುರುವಾರ ರೋಹಿಣೀ ನಕ್ಷತ್ರದಲ್ಲಿ ಆರಂಭಮಾಡಿ ಈ ಸಂ|| ಮಾಘ
ಮಾಸದಲ್ಲಿ ಗ್ರಾಮಪ್ರವೇಶಮಾಡಿದರು. ಇದಕ್ಕೆ ಮುಂಚೆ ಶುಕ್ಲ ಸಂ||
ದಲ್ಲಿ ರಾಯದುರ್ಗದ ಸೀಮೆಗೆ ಜ್ಯೇಷ್ಠ ಮಾಸದಿಂದ
ಆಶ್ವಯುಜ ಬ|| ೩೦ ವರೆಗೂ ಮೆಳೆಹೊದ್ದರಿಂದ, ಬರ
ಬಂದು ಬಹಳ ಜನ ಕಂಗೆಟ್ಟರು, ಅಲ್ಲಿನ ದೊರೆ
ಯಾದ ಹಾಲಪ್ಪನಾಯಕನು ಬಿಳಿಜೋಡಿನಲ್ಲಿ ದ್ದ ವಿರೂಪಾಕ್ಷ ಜೋಯಿಸ
----------------------------------
೬ ಚಿತ್ರದುರ್ಗದ ಪಾಯಗಾರರು,
ನನ್ನು ಕರೆಯಿಸಿ ಅನಾವೃಷ್ಟಿಯಾಗಿದೆ, ಪರ್ಜನ್ಯ ಜಪಮಾಡಿಸಬೇ
ಕೆಂದು ಹೇಳದನು. ಆಗ ಈ ಸೀಮೆಯಲ್ಲಿದ್ವ ಬ್ರಾಹ್ಮಣರನ್ನು ಕರೆ
ಯಿಸಿಕೊಂಡು, ವಿರೂಪಾಕ್ಲ ಜೋಯಿಸ ಮುಂತಾದವರು ನೇಮದಿಂದ
ದಿನ ಒಂದಕ್ಕೆ ಏಳು ಯಾಲಕ್ಕಿಕಾಳು ಸಕ್ಕರೆ ಹಾಲು ಈ ಮೇರಿಗೆ ಸೇವಿ
ಸುತಾ ಒಂಭತ್ತು ದಿನ ಜಪಮಾಡಿದರು. ಆಗ ಏಕಾರ್ಣವವಾಗಿ ಅತಿವೃ
ಷ್ಟಿಯಾಗಿ ಕೆರೆಗಳೆಲ್ಹಾ ತುಂಬಿದವು. ಈ ಜಪಕ್ಕೆ ಮೆಚ್ಹಿ ಈ ವಿರೂ
ಪಾಕ್ಷಜೋಯಿಸರನ್ನು ಆನೆಯಮೇಲೆ ಕೂರಿಸಿ, ಮೆರವಣಿಗೆ ಮಾಡಿಸಿ
ತುಂಬ ಉಡುಗರೆಯನ್ನು ಕೊಟ್ವರು. ಈ ವಿರೂಪಾಕ್ಷ ಜೋಯಿಸರ
ಮಗ ಪರಶುರಾಮಪ್ಪನು ದುರ್ಗದಲ್ಲಿ ತಿಮ್ಮಣನಾಯಕರ ಬಳಿಯಲ್ಲಿ
ಸರ್ವಾ ಧಿಕಾರಕ್ಳೆ ನಿಂತನು.
ದೊರೆಯ ಮದುವೆ
ಪ್ರಮೋದೂತ ಸಂ|| ದಲ್ಲಿ ಚಿಲ್ಲಹಳ್ಳಿಯ ಹೆಂಣುಮಗಳು
ಓದುವ ತಿಮ್ಮವ್ವ ಎಂಬ ಹುಡಿಗಿಯ ತಿಮ್ಮಂಣ
ನಾಯಕನಿಗೆ ಕೊಟ್ಬು ಮದುವೆಯಾಯಿತು. ಶಕ
೧೪೯೪ನೇ ಆಂಗೀರಸ ಸಂ|| ವೈಶಾಖಮಾಸದಲ್ಲಿ ತರೀಕೆರೆಯ ಪೂವಳ
ಹನುಮಪ್ಪನ ದಂಡು ಬಂದು ೫ ಗ್ರಾಮಗಳನ್ನು ತೆಗೆದುಕೊಂಡು ರಂಗ
ಪಟ್ಟಣಕ್ಕೆ ಲಗ್ಗೆ ಹತ್ತುತಿದಾರೆಂಬ ವರ್ತಮಾನ ತಿಳಿಯಿತು. ತಿಮ್ಮಂಣ
ನಾಯಕನು ರಾತೋರಾತು ನಾಗತಿಯವರೊಡನೆ ಉಗ್ರಾಣ ಸಮೇತ
ನೂಲೋಕಣಮೆಹಾದು ದುರ್ಗದ ಗುಡ್ಡಕ್ಕೆ ಬಂದನು. ರಂಗಪಟ್ವಣ
ವೇನೊ ಲಗ್ಗೆ ಯಾಯಿತು.
ಮೇಲುದುರ್ಗದಲ್ಲಿ ಅರಮನೆ ಕಟ್ಟಿದ್ದು/
ತಿಮ್ಮಂಣನಾಯಕನಿಗೆ ದುರ್ಗದ ನಾಯಕತನವಾದ್ದು
ಶಕ ೧೪೯೬ ನೇ ಶ್ರೀಮುಖ ಸಂ|| ದಲ್ಲಿ ಮೇಲ್ದುರ್ಗದಲ್ಲಿ ಅರಮ
ನೆಯನ್ನೂ ಅದರ ಸುತ್ಸಿನ ಕೋಟೆಯನ್ನೂ ಸಹ
ಕಟ್ಟಿಸಿದರು. ತರುವಾಯ ತಿಮ್ಮಂಣವಾಯಕನಿಗೆ ವಿಜ
ಯನಗರದ ಸಂಸ್ಥಾನದವರು ಶ|| ೧೪೯೫-೬ನೇ ಭಾವ
ಸಂ|| ದಲ್ಲಿ ದುರ್ಗದ ನಾಯಕತನವನ್ನು ಕೊಟ್ವರು. ಆಗ ತಿಮ್ಮಂಣ
ನಾಯಕನು ನೆಲ್ಲಿಕಾಯಿ ಸಿದ್ಧಪ್ಪನ ಗುದ್ಡದ ಸುತ್ತಿ
ನಕೋಟೆ, ರಣಮಂಡಲದ ಸುತ್ತಿನಳೋಟೆ, ವನಕೇ
ಕಂಡೀಬಗಿಲ ಸುತ್ತಿನ ಕೋಟೆ, ಇವುಗಳನ್ನು ಕಟ್ಟಿ
ಸಿದನು. ಬೆಳಗಿನಿಂದ ಸಾಯಂಕಾಲದವರೆಗೆ ಕಟ್ಟಿದೆ ಕೋಟೆಯು
-----------------------------------
ಸಿದ್ಧರ ದರ್ಶನ. ೭
ಗುರುತೇ ಇಲ್ಲದಹಾಗೆ ಬಿದ್ದುಹೋಯಿತಂತೆ, ಪುನಃ ಮಾರನೇ ದಿವಸ
ಕಟ್ವಿಸಿದ್ದು ಆ ದಿನ ಸಾಯಂಕಾಲಕ್ಕೇ ಬಿದ್ದುಹೋಯಿತಂತೆ. ಈ ಮೇರೆ
ಹದಿನೈದು ದಿವಸ ಕಟ್ಟಿದಾಗ್ಯೂ ನಿಲ್ಲದಿರಲು, ಇದೇನಾಶ್ಚರ್ಯವೆಂದು
ಪುಸ್ತಕನೋಟ, ಶಕುನ ಮೊದಲಾದ್ದನ್ನು ನೋಡಿಸಲಾಗಿ, ಯಳವರ್ತಿ
ಹಳೇವೈಕದ ಗಿರಿಯನೆಂಬ ದಂಡಿಗೇ ದಾಸನ ಮೈ ಮೇಲೆ ದೇವತೆಯು
ಬಂದು, “ ಈ ಕೋಟೆ ನಿಲ್ಲದಂತೆ ಮಾಡಿರುವವಳು ನಾನು, ನನ್ನಭೂ
ಮಿಗೆ ಬಂದು ನನ್ನ_ ದರ್ಶನವನ್ನು ಮಾಡದೆ ನನ್ನ ಅಪ್ಪಣೆ
ಇಲ್ಲದೆ ನೀನು ಗ್ರಾಮ ಕಟ್ವಕೂಡದು" ಎಂದುಪಚಾರಿಸಿದಳಂತೆ.
ನೀನು ಯಾರು ಎಂದು ವಿಚಾರಮಾಡುವಲ್ಲಿ ಆಗ ದೇವತೆಯು_ಇಲ್ಲಿದ್ದ
ಇಷ್ಟದೇವತೆಗಳು ನನ್ನೊಳಗೆ ಇದಾರೆ. .ನಾನು ಐಕನಾಥಿ, ಇಲ್ಲಿ
ಒಂದು ಬಂಡೆಯಲ್ಲಿ ಒಡೆದು ಮೂಡಿದೇನೆ, ಎಂದು ಬಂಡೇತೋರಿಸಿ
ಅಪ್ಪಣೆ ಕೊಟ್ವಳಂತೆ. ಆಗ ದೇವರಿಗೆ ಹರಸಿಕೊಂಡು ಮೀಸಲ ಕಟ್ಟಿ
ದ್ದರಿಂದ ಕೋಟೆಯು ನಿಂತಿತಂತೆ. ಈ ಮೂರು ಸುತ್ತಿನ ಕೋಟೆ,
ವನಕೆ ಕಂಡಿ ಬಾಗಿಲು, ಹನುಮಂತದೇವರ ಗುಡಿ, ಏಕನಾಥಮ್ಮನ ಗು
ಡಿ ಇವುಗಳನ್ನು ಕೂಡಲೆ ಕಟ್ಟಿಸಿದರು. ತರುವಾಯ ಸಂಪಿಗೆಸಿದ್ಧೇ
ಶ್ವರನು ತಿಮ್ಮಂಣನಾಯಕನಿಗೆ ಪ್ರಸನ್ನ ನಾದನಂತೆ,
ಅಲ್ಲಿ ರಸಸಿದ್ಭರು ೭ ಮಂದಿ ಕಿನ್ನರಿ ಕಲ್ಲಿನಮೇಲೆ
ಇದ್ದರು. ದೊರೆಯು ಅವರ ದರ್ಶನವನ್ನು ಮಾಡಿ
ನಮಸ್ಕಾರ ಮಾಡಲಾಗಿ ಆ ಮಹಾತ್ಮರು, " ಬಾರೈ ಮಗನೆ, ಮುಂದೆ
ನಿನಗೆ ಈಸ್ಥಳದಲ್ಲಿ ಮಹಾ ಪದವಿ ಬರುವುದು. ಅರಿತು ನಡೆದರೆ
ಆರು ಪಟ್ವ, ಮರೆತು ನಡೆದರೆ ಮೂರುಪಟ್ಟ" ಎಂದು ಹೇಳಿ ತಿಮ್ಮಂಣ
ನಾಯಕನಿಗೆ ದೆಸೆಗಟ್ಟಿನ ದೂಳಿತ, ಸಿದ್ಧ ಮೂಲಿಕೆ, ಕೈ ಅಂಬು, ಇವು
ಗಳನ್ನು ಕೊಟ್ಬು ಸಂಪಿಗೇ ಸಿದ್ಧೇಶ್ವರನ ಗುಡಿಗೆ ದೊರೆಯನ್ನು ಕರೆ
ತಂದು “ ಈ ದೇವರ ವಿಷಯದಲ್ಲಿ ಭಕ್ತಿಯಾಗಿರು ಎಂದು ಬುದ್ಧಿ
ಹೇಳಿ ಹೊರಟುಹೋದರಂತೆ. ಆ ತರುವಾಯ ದೊರೆಯು ಅದೇ
ಪ್ರಕಾರ ನಡೆದುಕೊಳ್ಳುತ್ತಾ ಇದ್ದನು. ತಿಮ್ಮಂಣನಾಯಕನ ದೊರೆ
ತನ ದಿನೇ ದಿನೇ ವೃದ್ಧಿಯಾಗುತಾ ಬಂತು.
--------------------------------------
೮ ಚಿತ್ರದುರ್ಗದ ಪಾಳಯಗಾರರು.
ಅಮಾನುಷ ವ್ಯಾಪಾರ ವಿಷಯ
ಯಾವ ಪುಣ್ಯವಂತನ ಅಭಿವೃದ್ಧಿಯನ್ನು, ಯಾವ ದೊಡ್ಡ ರಾಜ್ಯ
ದ ಏಳಗೆಯ ಮೂಲವನ್ನೂ ವಿಚಾರಿಸಿಕೊಂಡು ಹೋ
ದಾಗ್ಗೂ, ಆಯಾ ದೊರೆಗಳಲ್ಮಿಆದಿಪುರುಪೆರ ಗಳಲ್ಲಿ ವಿಶೇ
ಷವಾದ ದೈವಭಕ್ತಿಯೂ ಯಾವ್ರದಾದರೂ ಒಂದು
ವಿಧವಾದ ಮಹತ್ತನ್ನುಳ್ಳ ಸಿದ್ಧರಕೃಪೆಯೂ, ಇತ್ತೆಂತಲೂ, ಆಮೂಲಕ
ಮಹತ್ತರವಾರ ಕಾರ್ಯಗಳನ್ನು ಜರುಗಿಸುವ ಸಾಮರ್ಥ್ಯವು ಅಂಥಾ
ಮೂಲಪುರುಪರುಗಳಲ್ಲಿ ಹುಟ್ಟದ್ದು ಅಮಾನುಷ ಚೈತನ್ಯದ ವ್ಯಾಪಾರ
ವೆಂತಲೂ ಹೇಳುವುದು ಎಲ್ಲಾ ಚರಿತ್ರ ˜ಕರ್ತರುಗಳ ಅನುಭವಕ್ಕೂ
ವೇದ್ಯವಾದ ವಿಚಾರವಾಗಿದೆ. ಆದರೆ ಅಂಥಾ ಸಂಗತಿಗಳನ್ನು ಕೆಲ
ವರು ಸ್ಪಷ್ಟವಾಗಿ ಬರೆದು ವಿವರಿಸಿದಾರೆ, ಮತ್ತೆ ಕೆಲವರು ಕುಚೋದ್ಯ
ವಾಗಿ ಕಾಣಿಸಿದಾರೆ. ಇದು ಎಂತಾದರೂ ಆಗಲಿ, ಆಕಾಲದಲ್ಲಿ ಸಾಧಾರಣ
ಜನರಿಗೂ ಪದವಿಯಲ್ಲಿದ್ದವರಿಗೂ ಈವಿಧವಾದ ನಂಬಿಕೆ ಇತ್ತು ಎಂದು
ತೋರಿಸುವುದೂ ಕೊಡ ಚರಿತ್ರ ಕರ್ತರ ಧರ್ಮವಾಗಿದೆ, ಎಂದು ತೋ
ರುವುದು.
'ಹರಿಯದ ಹಚ್ಚಡ ಮುರಿಯದ ಒಡವೆ'
ವಿರೂಪಾಕ್ಷ ಜೋಯಿಸರ ಮಗ ಪರಶುರಾಮಪ್ಪನಿಗೆ ಸರ್ವಾಧಿ
ಕಾರವಾಯಿತಷ್ಟೆ ಈ ಪರಶುರಾಮಪ್ಪನು ದೊರೆಯ
ಲ್ಲಿಯೂ ನಾಗತಿಯರಲ್ಲಿಯೂ ಬಹು ನಂಬಿಕೆಯಾಗಿ
ರುತಾ ಒಂದುದಿನ ನಮ್ಮಹಿರಿಯರಾದಿಯಾಗಿ ನಮ್ಮನ್ನು
ಸಂರಕ್ಷಣೆ ಮಾಡುತಿದೀರಿ, ಮುಂದೆ ನಮ್ಮ ಮಕ್ಕಳು ಬದುಕಿಕೊಳ್ಳಲು
“ಹರಿಯದ ಹಚ್ಚಡ, ಮುರಿಯದ ಒಡೆವೆ“ ಎಂಬದೊಂದು ಉದ್ಯೋಗ
ವನ್ನು ಪಾಲಿಸಬೇಕು ಖಎಂದು ತಿಮ್ಮಂಣ್ಣನಾಯಕನಿಗೆ ಅರಿಕೇವಾಡಿದನು.
ಇದು ದೊರೆಯ ಚಿತ್ತಕ್ಕೆ ಬಂತು. ಆಗ ಲಿಂಗದಹಳ್ಳಿ ಪಟ್ಟಡಿ ೧ಕ್ಕೆ ೧೬
ಗ್ರಾಮದ ಸೇನಭೋಗ ತನತಶ್ವೆ. ಪರಷುರಾಮಪ್ಪನನ್ನು_ ನೇಮಿಸಿ ಆಯಾ
ಗ್ರಾಮದ, ಗೌಡ ತಳವಾರ ಮುಂತಾದ ಆಯಗಾರರನ್ನು ಕೈವಾಡದವ
ರನ್ಜೂ ಕರೆಯಿಸಿ ಅವರ ಪಟ್ವಡಿಯ ಸೇನುಭೋಗತನಕ್ಕೆ ಪರಶುರಾಮ
ಪ್ಪನ ಮಕ್ಕಳು ಯಲ್ಲಪ್ಪ. ಭೂನಪ್ಪ ಇವರಿಗೆ ನಿರೂಪಕೊಡಿಸಿದೆ, ಎಂದು
ಹೇಳಿ ಅರಮುನೆ ಕೆಲಸ, ಸ್ಥಳ ಮನೇಸಾಗು, ಸಂತು, ಎತ್ತುವಳಿ,
ಮೊದಲಾದ ಕೆಲಸಗಳನ್ನು ಮಾಡುತಾ, ಆ ಸೇನುಭೋಗರ ಸಮ್ಮತಿ
----------------------------------
ಸೇನಾಯ ೯
ಯಿಂದ ನಡೆದು ಕೊಳ್ಳುವುದೆಂದು ನೇಮಕ ಮಾಡಿದ್ದೂ ಅಲ್ಲದೆ ಅವರಿಗೆ
ಸ್ಥಳದಲ್ಲಿ ನಡೆಯಿಸಬೇಕಾದ ಮರ್ಯಾದೆಯೆನ್ನು ನಿಗದಿ ಮಾಡಿಸಿದ್ಧು
ಹೇಗೆಂದರೆ :
ಗ್ರಾಮ ಒಂದಕ್ಕೆ
೧ ಹೊಲ
೧ ಕೆರೆಹಿಂದೆ ಗದ್ದೆ
೧ ತೋಟ
೧ ಮಳಲು ಗ್ರಾ,ಮದಲ್ಲಿ ಎರಡು ಎತ್ತಿನ ಗಳೆ ೧ಕ್ಕೆ ಅಳವತ್ತ
(ಅಳೆಯುವ ಬತ್ತ σ|. ಐದು ಕೊಳಗ
೧ ಎರೆ ಗ್ರಾಮದಲ್ಲಿ ಎಂಟೆತ್ಮಿನ ಗಳೆ ೧ಕ್ಕೆಅಳೆವತ್ತ σ |.
ಹತ್ತು ಕೊಳಗ, ಹೊರೆಹುಲ್ಲು , ಮೊರಬತ್ತ, ಬೊಗೆವತ್ತ
ಬೊಗಸೆಬತ್ತ) ಸೊಲಗೆ ೩
೧ ರೈತರು ತೆರುವ ಕರಿದಿಠಯಕ್ಕೆ_ ದುರ್ಗಿ ೧σ. ವರಹ ೧ಕ್ಕೆ
ರುಸುಮು σ.|. ಹಾಗದ ಕಾಸು.
೧ ಜಾಡರ ಮಗ್ಗ ೧ ಕ್ಕೆ σ .|. ಹಾಗದ ಕಾಸು.
೧ ಅಂಗಡಿ ೧ಕ್ಕೆ ದಿನ ೧ಕ್ಕೆ ದುಗ್ಗಾಣಿ ತೂಕ ಅಡಕೆ ೧೦ ವೀಳ
ಯದೆಲೆ,
೧ ಗೊಲ್ಲರ ಹಟ್ಟಿ ೧ಕ್ಕೆ ವರುಪ ೧ಕ್ಕೆ ೧ ಕುರಿ.
ಮತ್ತು ಅಗಸರು ಹಡದಿ ಸೀರೆ ಮುಂತಾಗಿ ನಡಿಸಿಕೊಡಬೇಕೆಂದು
ದೊರೆಯು ತಾನೇ ಅಪ್ಪಣೆಮಾಡಿದನು.
ಇದಣ್ಯೆ, ಬರಸಿಕೊಟ್ಜ ಶಾಸನಕ್ರಮ ಹೇಗೆಂದರೆ :
ಸೇನಭೋಗ ತನದ ಶಾಸನ
" ಶ್ರೀ ನಮಸ್ತುಂಗ ಶಿರಶ್ಚುಂಬಿ ಚಂದ್ರ/ಚಾಮುರ ಚಾರವೆ |
“ತ್ರೈಲೋಕ್ಯ ನಗರಾರಂ ಮೂಲಸ್ತಂಭಾಯ
"ಶಂಭವೆ || || ಸ್ವದತ್ತಾ ದ್ದ್ವಿಗುಣಂ ಪುಣ್ಯಂ ಪರದ
“ತ್ತಾನುಪಾಲನಂ ಪರದತ್ತಾಪಹಾರೇಣ ಸ್ವದತ್ತಂ
"ನಿಷ್ಫುಲಂ ಭವೇತ್|| ಸ್ವಸ್ತಿಶ್ರೀ ವಿಜಯಾಭ್ಯುದಯ ಕಾಲೀವಾಹನ
----------------------------------------
೧೦ ಚಿತ್ರದುರ್ಗದ` ಪಾಳಯಗಾರರು:
“ಶಕ ವರುಷಗಳು ೧೫೦೨ ನೇ ವಿಕ್ರಮ ಸಂ|| ಆಶ್ವೀಜ ಶು|| ೧೦.ಗುರು
" ವಾರ ವಿಜಯ ದಶಮಿ ಮಹೋತ್ಸವ ಕಾಲದಲ್ಲಿ ಶ್ರೀಮನ್ಮಹಾನಾಯ
“ಕಾಚಾರ್ಯ ಕಾಮಗೇತಿ ಕಸ್ತೂರಿ ವೀರ ಮತ್ತಿ ತಿಂಮಣ್ಣನಾಯಕರು
" ಶ್ರೀವಿರೂಪಾಕ್ಷದಲ್ಲಿ ಮಂತ್ರಪುಷ್ಪಕರಾದ ಕಾಶ್ಯಪಗೋತ್ರದ ಆಪ
“ಸ್ತಂಬಸೂತ್ರದ ಕರೇಜೋಯಿಸ ವಿರೂಪಾಕ್ಷ ಜೋಯಿಸರ ಪೌತ್ರ
" ರಾದ ಪರಶುರಾಮಪ್ಪನ ಪುತ್ರರಾದ ಯಲ್ಲಪ್ಪ ಭೂನಪ್ಪಗೆ ಈ ಮಹಾ
" ನವಮಿ ಉತ್ಸವ ಕಾಲದಲ್ಲು ನಮ್ಮ ಹಿರಿಯರಿಗೆ ಪುಣ್ಯಬರಬೇಕೆಂದು
"ಲಿಂಗದ ಹಳ್ವಿ ಪಟ್ಟಡಿ ಸೇನಭೋಗತನವನ್ನು ನೇಮಿಸಿ ಆಯ,
" ಸ್ವಾಮ್ಯ, ರಸುಮು, ವರ್ತನೆಮುಂತಾದನ್ನು ನಿರ್ಣಯಿಸಿ ದಾನ
“ ಧಾರಾಪೂರ್ವಕವಾಗಿ ಬರಸಿಕೊಟ್ವ ಶಾಸನ ನಿರೂಪ ಅದಾಗಿ.
“ ನೀವು ನಮ್ಮ ಹಿರಿಯರ ದಿವಸದಾರಭ್ಯ ನಮ್ಮ ಮನೆತನವನ್ನು
" ಹೊಂದಿ ಬಂದವರಾದ ಕಾರಣ ಧರ್ಮಪೂರ್ವಕವಾಗಿ ನಿಮ್ಮ ವಂಶಪಾರಂ
"ಪರ್ಯವಾಗಿ ಸಂರಕ್ಷಣಾರ್ಥವಾಗಿ ಲಿಂಗದಹಳ್ವೆ ಪಟ್ಸ್ಕಡಿಯ ಶಾನುಭೋ
“ ಗತನವನ್ನು ಧಾರಾಪೂರ್ವಕವಾಗಿ ನಿರ್ನಯಿಸಿ ಅಪ್ಪಣೆಕೊಡಿಸಿದೇವೆ
" ಯಾಗಿ, ಗ್ರಾಮಾಂತರಗಳ ಗದ್ಧೆ, ಬೆದ್ದಲು, ತೋಟ, ರುಸಂ, ಆಯ
"ಸ್ವಾಮ್ಯ ಮುಂತಾದ್ದನ್ಜು ಭುಂಜಿಸಿಕೊಂಡು, ಆ ಚಂದ್ರಾರ್ಕವಾಗಿ
“ ಪಾರಂಪರ್ಯವಾಗಿ ಅಪೋಹವಿಲ್ಲದೆ ಅನುಭವಿಸಿಕೊಂಬುವುದೆಂಬದಾಗಿ
" ಶಿಖಾಮೊಹರು ರುಜುವಿನಿಂದ ಬರೆದುಕೊಟ್ಟ ಶಾಸನ." ಈಪ್ರಕಾರ
ಶಾಸನವನ್ನು ಒರೆಯಿಸಿ ದೊರೆಯು ಅಪ್ಪಣೆ ಕೊಡಿಸಿದನು.
------
೩ ನೇ ಅ ಧ್ಯಾ ಯ .
ಸಾಳೋನರಸಿಂಗರಾಯನ ಮುತ್ತಿಗೆ.
ಶಕ ೧೫೦೨ನೇ ಸಂ|| ದ ವರ್ತಮಾನವಾದ ವಿಕ್ರಮ ಸಂ|| ದಲ್ಲು
ಮತ್ತೀ ತಿಮ್ಮಣ್ಣನಾಯಕನು ಬಹಳವಾಗಿ ಪ್ರಬಲಿಸಿ
ದಾನೆಂದೂ, ಇವನನ್ಜು ಮುರಿಯಬೇಕೆಂದೂ ವಿಜಯ
ನಗರದ ಸಂಸ್ಥಾನದವರು ವೀರಸಾಳೋ ನರಸಿಂಗ
ರಾಯನೊಡನೆ ಸೇನೆಯನ್ನು ಕಳುಹಿಸಿದರು. ಈ ದಂಡು . ಮೂಡಲ
----------------------------------
ಸಾಳೋನರಸಿಂಗರಾಯನ ಮುತ್ತಿಗೆ ೧೧
ದಿಕ್ಕಿನ ಕಾನಾಪುರದ ಬಳಿಯಲ್ಲಿಬಂದು ಇಳಿಯಿತು. ಇದನ್ನು ತಿಳಿದು ತಿ
ಮ್ಮಂಣನಾಯಕನು ವಿಶೇಷಪರಾಕ್ರಮದಿಂದಶತ್ರುಗಳನ್ನು ಜಯಿಸಿದನು.
ತಿಮ್ಮಂಣ್ಣ ನಾಯಕನ ಸಾಹಸ ಮಹಾ ಪರಾಕ್ರಮ
ಈ ಯುದ್ಧದಲ್ಲಿ ಆಚಂದ್ರಾರ್ಕವಾಗಿ ಎಲ್ಲರೂ ಜ್ಞಾಪಕದಲ್ಲಿಡ
ಬೇಕಾದ ಒಂದು ಮಹಾಪರಾಕ್ರಮದ ಸಂಗತಿ ಜರು
ಗಿತು. ಶತ್ರು ಗಳು ದುರ್ಗದ ಬೆಟ್ಟಕ್ಕೆ ಮುತ್ತಿಗೇ
ಹಾಕಲು ಬಂದು ಕಾನಾಪುರದ, ಬೈಲಿನಲ್ಲಿಳಿದಿರುವಾಗ,
ಒಂದು ದಿನ ಅರ್ಧರಾತ್ರೆಯಲ್ಲಿ ಸೇನೆಯವರು ಪಾಳಯದಲ್ಲಿ ಮಲಗಿ
ಕೊಂಡು ನಿದ್ರೆಮಾಡುತಿರಲು, ತಿಮ್ಮಂಣನಾಯಕನು ಒಂಟಿಯಾಗಿ ಆ
ಪಾಳಯಕ್ಕೆ ನುಗ್ಗಿ ಸೇನಾಪತಿಯಾದ ಸಾಳೋ ನರಬಂಗರಾಯನ
ಖಾಸಾಕುದುರೆಯನ್ನು ಕಟ್ಟಿದ್ದ ಕಡೆಗೆ ಹೋಗಿ ಸ್ಪಲ್ಪವೂ ಗದ್ದಲವಾಗ
ದಂತೆ ಅದರ ಅಗಾಡಿಯನ್ನೂ ಪಿಚಾಡಿಯನ್ನೂ ಬಿಚ್ಚುತ್ತಾ ಇದ್ಬನು.
ಆಗ ಕುದುರೆಯು ಕುಣಿದು ಶಬ್ದಮಾಡಿತು. ಕಾಸದಾರನಿಗೆ ಎಚ್ಚರವಾ
ಯಿತು. ಅವನು ಕಣ್ಣನ್ನು ಹೆೊಸಗಿಕೆೊಳ್ಳುತಾ ಎದ್ಬನು. ಆಗ ತಿಮ್ಮಂ
ಣ್ಣನಾಯಕನು ಅವನಿಗೆ ಕಾಣದ ಹಾಗೆ ನೆಲದಮೇಳೆ ಮಲಗಿಕೊಂಡು
ಅಲ್ಲಿದ್ದ ಹುಲ್ಲನ್ನು ತನ್ನ ಮೇಲೆ ಹಾಕಿ ಕವಿಚಿಕೊಂಡನು. ಕುದುರೆ
ಯವನು ಕಿತ್ತುಹೋಗಿದ್ದ ಕುದುರೆಯ ಗೂಟವನ್ನು ನೆಲದಮೇಲೆ ಇರಿಸಿ
ಗಟ್ವಯಾಗಿ ಪೆಟ್ಟಿದನು. ಆ ಗೂಟವು ಅಂಗೈಯನ್ನು ಅಗಲವಾಗಿ
ಚಾಚಿಕೊಂಡು ಮಲಗಿದ್ದ ತಿಮ್ಮಂಣನಾಯಕನ ಬಲದ ಹಸ್ತದ ಮಧ್ಯೆ
ಹಾದು ನೆಲಕ್ಕೆ ಬಲವಾಗಿ ಇಳಿಯಿತು. ತರುವಾಯ ಕುದುರೇ ಚಾಕರ
ನು ಅದನ್ನು_ ಆ ಗೂಟಕ್ಕೆ ಕಟ್ಟಿ ಮಲಗಿಕೊಂಡನು. ಅವನಿಗೆ ನಿದ್ರೆ
ಬಂದುದನ್ನು ಕಂಡು, ಪಾಳಯಗಾರನು ತನ್ನ ಎಡಗೈಯಿಂದಾ ಸೊಂಟ
ದಲ್ಲಿದ್ದ ಬಾಕನ್ನು ಹಿರಿದುಕೊಂಡು ತನ್ಫು ಬಲಗೈಮಣಿಕಟ್ಟನ್ನು
ಕುಯಿದು ಮೇಲಕ್ಕೆ ಎದ್ದು ಮೋಟಕೈಗೆ ಬಟ್ಟೆಯನ್ನು ಸುತ್ತಿ ಅದೇ
ಕುದುರೆಯನ್ನು ಬಿಚ್ಚಿ ಅದರ ಮೇಲೆ ಏರಿಕೊಂಡು ಮೇಲು ದುರ್ಗಕ್ಕೆ
ಹೋದನು. ಈ ಸಾಹಸ ಇಲ್ಲಿಗೇ ನಿಲ್ಲಲಿಲ್ಲ. ಮಾರನೇ ದಿವಸ,
ಸಾಳೋ ನರಸಿಂಗರಾಯನು, ಕೂತು ಕೊಳ್ಳುತಿದ್ದ ಖಾಸಾ ಆನೆಯನ್ನು
ದುರ್ಗದ ತಪ್ಪಲಲ್ಲಿರುವ ತಿಮ್ಮಂಣನಾಯಕನ ಕೆರೆಗೆ ನೀರು ಕುಡಿಸಲು
ಹಿಡತಂದರು. ಇದು ಪಾಳಯಗಾರನಿಗೆ ತಿಳೆಯಿತು. ಅವನು-ಆ ಕ್ಷಣ
-------------------------------------
೧೨ ಚಿತ್ರದುರ್ಗದ ಪಾಳಯಗಾರರು
ದಲ್ಲಿಯೇ ಎದ್ದು ತನ್ನ_ ಬಿಲ್ಲನ್ನು ತರಿಸಿ ಅದನ್ನು ಕಾಲಲ್ಲಿ ಮೆಟ್ಟಿ ಬಾಣ
ವನ್ನು ಹೆದೆಗೆ ಏರಿಸಿ, ಅದನ್ನು ಆನೆಯ ಹಣೆಗೆ ಗುರಿಕಟ್ಟಿ ಎಡಗೈಯಲ್ಲಿ
ತುಯಿದು ಬಿಟ್ಟನು. ಅಲಗು ಆನೆಯ ಭ್ರೂಮಧ್ಯಕ್ಕೆ ತಗಲಿ ಅದು
ಕಿರ್ರನೆ ಅರಚಿಕೊಂಡು ಒಂದೇಟಿಗೆ ನೆಲಕ್ಕೆಬಿದ್ದು ಪ್ರಾಣವನ್ನು
ಬಿಟ್ವಿತು. ,
ಸೇನೆಯವರ ನಂಬಿಕೆ
ಆಗ ಶತ್ರುಗಳು ಪುನಃ ಮುತ್ತಿಗೆ ಹಾಕಿದರು ತಿಮ್ಮಂಣನಾಯ
ಕನು ತನ್ನ ನಾಗತಿಯರನ್ನು ಗುಡ್ಡದ ಹಿಂದಕ್ಕೆ ಕಳು
ಹಿಸಿ ತನ್ನ_ ಬಳಯಿದ್ದ ಗುರಿಕಾರರನ್ನೂ ಮಕ್ಕ
ಳನ್ನೂ ಕರಸಿ ಏನು ಮಾಡಬೇಕೆಂದು ಕೇಳಲಾಗಿ, ಅವರು ದೊರೆ
ಯನ್ನು ಕುರಿತು, ಮಹಾಸ್ವಾಮಿ, ನಾವು ನಿಮ್ಮನ್ನು_ಒಪ್ಪಿಸಿಕೊಡುವು
ದಿಲ್ಲ, ಕೌಲಿಗೂ ಮಾತನಾಡುವುದಿಲ್ಲ, ನಿಮ್ಮ ಸಂಗಡ ಪ್ರಾಣವನ್ನು
ಬಿಡಲು ಸಿದ್ಧವಾಗಿದ್ದೇವೆ, ಇದಕ್ಕೆ ನಾವು ತಪ್ಪಿದರೆ ಸಿದ್ದಯ್ಯ, ರಂಗ
ಯ್ಯ, ಚಿತ್ರದೇವರು, ಇವರಿಗೆ ತಪ್ಪಿದಂತೆ ಭಾವಿಸಬೇಕು, ಎಂಬದಾಗಿ
ಅರಿಕೇ ಮಾಡಿ ಭಾಷೆಕೊಟ್ಟು ಕ್ರೂರವಾಗಿ ಲಡಾಯಿ ಮಾಡಿದರು.
ಶತ್ರುಗಳಗೆ ದುರ್ಗವಶವಾಗಲಿಲ್ಲ
ಕಲ್‌ಬುರ್ಗಿಯಲ್ಲಿ ತಿಂಮ್ಮಣ ನಾಯಕನ ಪರಾಕ್ರಮ
ಈ ಸಮಯದಲ್ಲಿ ಕಲ್ ಬರ್ಗಿಯವರು ಕೇವಲ ಹಗೆ ತನದ
ಆಟೋಪವನ್ನ ತೋರಿಸಲಾಗಿ, ಪಟ್ಟಣಕ್ಕೆ ಮುತ್ಸಿಗೆ
ಹಾಕಿ ಅದನ್ನು ತೆಗೆದುಕೊಳ್ಳುವುದೆಂದು ಆನೇಗೊಂ
ದಿಯ ರಾಯರು ಸಾಳೋ ನರಸಿಂಗರಾಯನಿಗೆ ನಿರೂ
ಪವನ್ನು ಬರೆಯಿಸಿದರು. ಅದರಂತೆ ಆತನು ಹೋಗಿ
ಆ ಪಟ್ಟಣವನ್ನು ಮುತ್ತಿದನು. ಆದರೆ ಕೋಟೆಯೊಳಗಿನ ದಳಪತಿಯು
ಘಟಕನಾದ್ದರಿಂದ ಅವನ ಮೇಲೆ ನರಸಿಂಗರಾಯನ ಕೈ ಏನೂ ನಡೆಯ
ಲಿಲ್ಲ. ಈ ಕಾರಣದಿಂದ ಆನೇಗೊಂದಿಯ ರಾಜರು ತಿಮ್ಮಂಣನಾಯಕ
ನಿಗೆ "ನಿಮ್ಮ ಕೈ ನೋಡಬೇಕೆಂದಿದೇವೆ, ನೀವು ಕಲ್‌ಬರ್ಗಿಗೆ
ಹೋಗಿ ಆ ವೂರನ್ನು ಲಗ್ಗೆ ಹಾಕಿ ತೆಗೆದುಕೊಳ್ಳುವುದು," ಎಂದು ನಿರೂ
ಪವನ್ಹು ಬರೆಯಿಸಿದರು. ಅದಕ್ಕೆ ತಿಮ್ಮಂಣನಾಯಕನು “ಸಾಳೋ ನರ
ಸಿಂಗರಾಯರು ಕಲ್‌ಬರ್ಗಿಗೆ ಮುತ್ವಿಗೆಹಾಕಿ ೬ ತಿಂಗಳಾಯಿತು, ಇನ್ನೂ
---------------------------------
ತಿಮ್ಮ ಣ್ಣನಾಯಕನ ಪರಾಕ್ರಮ ೧೩
ಅದನ್ನು ಸಾಧಿಸಲಿಲ್ಲ, ದೇವರು ನನ್ನ ಕೈ ನೋಡಬೇಕಾದರೆ ನಾನು
ಕಲ್ ಬರ್ಗಿಯನ್ನು ತೆಗೆದುಕೊಳ್ಳಲು ಆಸ್ಪದ ಕೊಡಬೇಕು ; ಆವೂರನ್ನು
ನಾನು ತೆಗೆದುಕೊಳ್ಳ.ವ ವರೆಗೂ ತಮ್ಮ ದರ್ಶನಕ್ಕೆ ಬರಲಾರೆ“ ಎಂದು
ಉತ್ತರ ಬರೆಯಿಸಿದನು. ಹಾಗೇ ಮಾಡಬಹುದೆಂದು ರಾಯರು ಅಪ್ಪ
ಣೇಕೊಟ್ವರು. ಇದರಂತೆ ಶಕ ೧೫೦೪ನೇ ಚಿತ್ರಭಾನು ಸಂ|| ವ್ಯೆಶಾಖ
ಮಾಸವಲ್ಲಿ ತಿಮ್ಮಂಣನಾಯಕನು ತಮ್ಮ ಮಗ ಮದಕರಿ ಎಂಬ ಬಿರು
ದುಳ್ಳದಧ್ಯನ್ನದ ಓಬಳಂಣ, ದೆೊಡ್ಡಂಣ, ಗುಲುಪಿನಾಯಕ, ಇನ್ನೂಕೆಲ
ವುಮಂದಿಯನ್ನು ಸಹಾ ದುರ್ಗದಲ್ಲಿ ಇಟ್ಟು ತನ್ನ ಸಂಗಡ ಅಂಣಗಾರ
ಓಬಳಂಣ ಮತ್ತು ೨೦೦೦ ಮಂದಿಯನ್ನೂ ಸಹಾ ತೆಗೆದುಕೊಂಡು ತನ್ನ
ಮನೆದೇವರಿರುವ ನೀರು ತಡಿಗೆ ಹೊರಟು ಬಂದು ಶ್ರೀರಂಗನಾಥಸ್ವಾಮಿ
ಯಸೇವೆಮಾಡಿ ಕಲ್‌ಬರ್ಗಿಗೆ ಹೋದನು. ಅಲ್ಲಿ. ಸಾಳೋನರಸಿಂಗ
ರಾಯರನ್ನುಕಂಡು ಮಾತನಾಡಿ ಅವರ ಮುತ್ತಿಗೆ ತೆಗೆಯಿಸಿ ಕಲ್‌ಬರ್ಗಿ
ಯನ್ಶು ಲಗ್ಗೆಗೆ ತೆಗೆದುಕೊಳ್ಳುತ್ತೇನೆ, ಅಪ್ಪಣೆ ಕೊಡಿಎಂರು ಕೇಳದನು.
ಇದಕ್ವೆ, ನರಬಂಗರಾಯನು ಒಪ್ಪಿ ಅಪ್ಪಣೆಕೊಟ್ಟ್ರನು.
ಕಲ್‌ಬರ್ಗಿಗೆ ಮುತ್ತಿಗೆ
ಆಗ ದುರ್ಗದ ನಾಯಕನು ಅರಳೆ ನಗ ೨೦೦೦ ಮೂಟೆಯನ್ನು
ತರಿಸಿ ಹೊಂಡು ಕಲ್‌ಬರ್ಗಿಯ ಅಗಳಿಗೆ ಹಾಕಿಸಿ
ಜೇಷ್ಠ ಶು || ೫ ದಿವಸ ಬೆಳಗಿನ ಜಾವಕ್ಕೆ ಯುದ್ಧಕ್ಕೆ
ಆರಂಭಿಸಿದನು. ಮಂದಿ ಮತ್ತು ಅಂಣಗಾರ ಓಬಳಂಣ, ಇವರು
ಒಂದು ನಿಟ್ಟಗೂ, ಉಳಿದ ಕೆಲವು ಮಂದಿ ಮತ್ತು ಪಾಳೆಯಗಾರ ಒಂದು
ನಿಟ್ಟಿಗೂ ನಿಂತು ಲಗ್ಗೆಹತ್ತಿ ಸುರ್ಯೋದಯವಾದ ಅರೆಗಳಿಗೆಗೆ ಕೋಟೆ
ಯನ್ನು_ ತೆಗೆದುಕೊಂಡರು ತಿಮ್ಮಂಣನಾಯಕನ ಕಡೆ ಜನರು ಊ
ರೊಳಗೆ ಜನರನ್ನು ಕಡಿದ ರಕ್ತವು ಊರಬಾಗಿಲಲ್ಲಿ ಮೊಣಕಾಲು
ಮಟ್ವ ಹರಿಯಿತು. ಆಗ ಸಾಳೋ ನರಬಂಗರಾಯನು ಬಂದು-ಇಲ್ಲಿಗೆ
ಸಾಕುಮಾಡಿ ಎಂದು ತಿಮ್ಮಂಣ್ಣನಾಯಕನನ್ನು ಕರೆದುಕೊಂಡುಹೋಗು
ವಾಗ ಧರ್ಮಕ ಹಳೆಯನ್ನು ಹಿಡಿಸಿದರು. ಕೋಟೆ ಠಾಣ್ಯವಾದ ವಿಪಯ
ವನ್ನು ಗೋವಿಂದರಾಯರಿಗೆ ಬಿನ್ಸ್ಫವತ್ತ್ವಳೆ ಬರೆದು ಕಳುಹಿಸಲಾಗಿ ಆತ
ನು ತಿಮ್ಮಂಣನಾಯಕನನ್ನು ವಿಜಯನಗರಕ್ಕೆ ಕರೆದು ಕೊಂಡು
-------------------------------------
೧೪ ಚಿತ್ರದುರ್ಗದ ಪಾಳಯಗಾರರು.
ಹೋಗಿ ರಾಯರ ಭೇಟಿಮಾಡಿಸಿದನು. ಆಗ ರಾಯರು ಬಹು ಪ್ರೀತಿ
ಯಿಂದ ಕಂಡು ೩ ತಿಂಗಳವರೆಗೂ ದುರ್ಗದ ಪಾಳಯಗಾರನನ್ನು
ಇರಿಸಿಕೊಂಡಿದ್ದು ಚಿನ್ನದ ಮುಲಾಮಿನ ದೊಡ್ಡಶಂಖಚಕ್ರದ ಜೊತೆ -೧
ಅಂದಳಮತ್ತು ಮೊಸಳೆ ಬಾಯಿ ಜೋಡು ೧, ಫಿರೂಗಿ೧, ಸತ್ತಿಗೆ ೧,
ಚಿನ್ನದ ಹಸ್೧, ಹಗಲದೀವಟಗೆ ೧, ಮತ್ತು ಉಡುಗರೆ ಸಹಾಕೊಟ್ಬು
" ಹಗಲು ಗೊಲೆಮಾನ್ಯಾ" ಎಂದು ಹೊಗಳಲು ಭಟರನ್ನು ಕೊಟ್ಬು
ದುರ್ಗಕ್ಕೆ `ಕಳುಹಿದಿದನು.
ಕ್ಷುದ್ರದ ಫಲ, ನಿರ್ಯಾಣ
ಈಪ್ರ)ಕಾ ರ ತಿಮ್ಮಂಣನಾಯಕನು ದುರ್ಗದ ನಾಯಕತನವೆನ್ನು
ಮಾಡಿಕೊಂಡು ಇರಲಾಗಿ, ಇವನ ಮೇಲೆ ಕೆಲವು
ಕೆಟ್ಟ ಜನರು. ಕ್ಲುದ್ರಹೇಳಿದ್ದರಿಂದ ವಿಜಯನಗರದ
ರಾಯರು ಬೇಸರಗೊಂಡು ತಿಮ್ಮಂಣನಾಯಕನನ್ನು
ಕರೆಯಿಸಿ ಸೆರೆಯಲ್ಲಿಟ್ಟು, ಅವನ ಕಡೆ ಅಂಣಗಾರ ಓಬಳಂಣ, ದಾದ
ನಾಯಕ ಮತ್ತು ಇತರ ಮಂದಿಯನ್ನು ಸಹಾ ಅಂಕೆಯಲ್ಲಿ,ಟ್ಟರು, ಆಗ
ತಿಮ್ಮಂಣ ನಾಯಕನು ಅಂಣಗಾರ ಓಬಳಂಣ ದಾದನಾಯಕ ಮುಂತಾ
ದವರಿಗೆ ರಸಬದ್ಬರಿಂದ ಪ್ರಸಾದವಾಗಿ ತನಗೆ ಬಂದಿದ್ದ ದೆಸೆಗೆಟ್ಟಿನ
ವಿಭೂತಿ, ಬಿಲ್ಲಿನ ದಟ್ಟೆ, ಕೈ ಅಂಬು ಸಹಾಕೊಟ್ಬು, ತನ್ನ ಕೋರಿಕೆ
ಯನ್ನ ನೆರವೇರಿಸಬೇಕೆಂದು ಹೇಳ ಅವರನ್ನು ದುರ್ಗಕ್ಕೆ ಕಳುಹಿಸಿ
ದನು. ಇವರು ತಮ್ಮ ತಲೆಯನ್ನು ತಪ್ಪಿಸಿಕೊಂಡು ದುರ್ಗಕ್ಕೆ ಬಂದು
ಪೇರಿದರು. ತಿಮ್ಮಣ್ಣನಾಯಕನು ರಾಜಾಜ್ಞೆಯನ್ನು ಮೀರಬಾರದೆಂತ
ವಿಜಯನಗರದಲ್ಲಿಯೇ ಇದ್ದು ಮರಣಹೊಂದಿದನು.
ಆತನ ಮರಣಕಾಲದಲ್ರಿ ಅವನ ಬಳಯಲ್ಲಿಯೇ ಇದ್ದ ಮಗನಾದ
ಓಬಳಂಣನಾಯಕನು ತಮ್ಮ ತಂದೆಯ ಶವವನ್ನು ದಹನ ಮಾಡಿ ತುಂಗ
ಭದ್ರಾನದಿಯನ್ಜು ಕಾಣಿಸಿ ಉತ್ತ ರ ಕ್ರಿಯಾದಿಗಳನ್ನುಮಾಡಿ, ತಂದೆಯ
ಅಸ್ಥಿಯನ್ನು ತೆಗೆದುಕೊಂಡು ಯಾರೂ ಅರಿಯದಂತೆ ತಪ್ಪಿಸಿಕೊಂಡು
ದುರ್ಗಕ್ಕೆ ಬರುತಾ ದಾರಿಯನಲ್ತಿ ಮತ್ತಿ ಗ್ರಾಮದೊಳು ಗುಡ್ಡೆಮಾಡಿಸಿದನು.
ಶ|| ೧೫೧೦ ನೇ ಸರ್ವಧಾರಿ ಸಂ|| ಮಾಘ ಬಹುಳ ೬ ಯಲ್ಲು
ಓಬಳಂಣನಾಯಕ, ದಾದನಾಯಕ, ಇವರು ವಿಜಯನಗರದಿಂದಹೊರಟು
----------------------------------
ಓಬಳಂಣನಿಗೆ ಪಟ್ಟಾಭಿಷೇಕ ೧೫
ಬೆಳಗಸೂರು ಗ್ರಾಮಕ್ಶೆ ಬಂದರು. ಈ ಗ್ರಾಮದಗೌಡ ಗಿರಿಯಂಣನು
ಇವರನ್ಹು ತನ್ನ ಮನೆಯಲ್ಲಿ ನಾಲ್ಕುದಿವಸ ಇರಿಸಿಕೊಂಡಿದ್ದು ಉಪಚಾ
ರಮಾಡಿ ತನ್ನ ಕಡೆ ಮನುಷ್ಯರನ್ನು ಕೊಟ್ಬು ಆವರನ್ನು ದುರ್ಗಕ್ಕೆ
ಕಳುಹಿಸಿದನು. ಆಗ ಓಬಳಂಣನಾಯಕನು ಹಡವನ ಹಾಳಿಗೆ ವಳಿತ
ವಾದ ಕಾಳಲಗಟ್ಟೆ ಎಂಬ ಗ್ರಾಮದ ಭೂಮಿಯನ್ನು ೩೦೦ σ ವರಹಕ್ಕೆ
ಕ್ರಯಕ್ಕೆ ತೆಗೆದುಕೊಂಡು, ಗ್ರಾಮ ಕಟ್ಟಿಸಿ ಆ ಸ್ಥಳದ ಗೌಡಿಕೆಯನ್ನು
ಈ ಗಿರಿಯಂಣನಿಗೆ ಕೊಟ್ಟನು. ತರುವಾಯ ಗಿರಿಯಂಣನು ಹಡವನ
ಹಾಳಿನಲ್ಲಿ ಒಂದು ಮನೆ, ದುರ್ಗದಲ್ಲಿ ಒಂದುಮನೆ ಸಹಾ ಮಾಡಿಕೊಂಡು
ಇರುತಿದ್ಬನು. ಓಬಳಂಣನಿಗೆ ದುರ್ಗದ ನಾಯಕತನವನ್ನೂ ದೊಡ್ಡಂಣ
ನಿಗೆ ಉಚ್ಚಂಗೀ ದುರ್ಗದ ನಾಯಕತನವನ್ನೂ ವಿಜಯನಗರದ ರಾಜರ
-ಕಾಲದಲ್ಲಿ ಕೊಟ್ಟರು.
---
೪ ನೇ ಅ ಧ್ಯಾ ಯ .
- ೨ನೇ ದೊರೆ ಓಬಳಂಣನಾಯಕ
ಶ|| ೧೫೧೦ ನೇ ಸರ್ವಧಾರಿ ಸಂ|| ದಿಂದ ೧೫೨೫ ನೇ
ಶೊಭಕೃತುಸಂ|| ದವರೆಗೆ.
ಓಬಳಂಣನಿಗೆ ಪಟ್ಟಾಭಿಷೇಕ,
ಈ ಓಬಳಂಣನಾಯಕನು, ವಿಜಯನಗರದಿಂದ ದುರ್ಗಕೈ ಬಂದ
ಮೇಲೆ ಸಿದ್ಧರು ಇವನ ಮೇಲಿನ ಅಭಿಮಾನದಿಂದ
ಇವನಿಗೆ "ಮದಕರಿನಾಯ“ ಎಂದು ಬಿರುದನ್ನು
ಕೊಟ್ವರು. ಇ.ದು ಉಚ್ಚಾರಣೆಯಲ್ಲಿ ಕೆಟ್ಬು ಮೆದ
ಕೆರಿನಾಯಕ ಎಂದಾಯಿತು, ಎಂದು ತೋರುತ್ತೆ, ಈ ಸಿದ್ಧರು ನಾಗ
ತೇರ ಹರವಿನಲ್ಲಿಯೂ, ಕಿನ್ನರಿ ಕಲ್ಲಿನಲ್ಲಿಯೂ, ಬಾಳೇಕಾಯಿ ಸಿದ್ಧೇಶ್ವ
ರನ ಗುಡಿಯಲ್ಲಿಯೂ, ಮಲಗಿರುತಾ ಯಾರೂ ಕಾಣದ ಹಾಗೆ ಮಾಯ
--------------------------------
೧೬ ಚಿತ್ರದುರ್ಗದ ಪಾಳಯಗಾರರು.
ಸಿದ್ದರ ಮಹಿಮೆ
ವಾದರಂತೆ. ಎರಡು ವರುವದಮೇಲೆ ಯಾರೂ ಕಾಣದಹಾಗೆ ಬಂದು ಸಂ
ಪಿಗೇ ಸಿದ್ದೇಶ್ವರನ ಗುಡಿಯಲ್ಲಿ ತಮ್ಮ ಆವಿಗೆಯನ್ನುಬಿಟ್ಟಿದ್ದಹಾಗೂ, ಈ
ಆವಿಗೆಯು ಸಿದ್ಧರದೇ ಎ೦ದು ಗುಂಟನೂರಲ್ಲಿದ್ದ ಓಬಳಂಣನಾಯಕರಿಗೆ
ವರ್ತಮಾನ ಬಂದಹಾಗೂ ಹೇಳುವರು. ಆದೊರೆಯು
ಬಂದು ಆವಿಗೆಗಳನ್ನು ಫೂಜೆಮಾಡಿ ಮೂರು ಸೋಮ
ವಾರಅಲ್ಲಿಯೇ ಇದ್ದುಪೂಜಾರಿ ಮಹಂತಮಲ್ಲಯ್ಯನಮನೆಯಲ್ಲಿ ಮಲಗಿರ
ಲಾಗಿ, ಈ ಸಿದ್ಧರು ಯಾರೂ ಕಾಣದಹಾಗೆ ಬಂದು ನೆಲದಮೇಲೆ ಕುಳಿ
ತಿದ್ಬರಂತೆ; ಓಬಳಂಣನಾಯನು ಎಚ್ಚತ್ತು ನೋಡಿ, ಸಿದ್ಧರು ನೆಲದ
ಮೇಲೆ ಕೂತಿದ್ದದನ್ನು ಕಂಡು-ಸ್ಟಾಮಿ, ನನ್ನ ತಪ್ಪನ್ಪು ಪಾಲಿಸಬೇಕೆಂರು
ಅವರ ಪಾದಕ್ಕೆ ಬಿದ್ಧನು. ಅಷ್ಟರಲ್ಲಿ ಸಿದ್ಧರು ಮಾಯವಾದರು. ಮತ್ತೆ
ಈ ಮದಳಕರಿನಾಯಕ (ಮೆದಕೆರಿ ಎಂಬ ಓಬಳಂಣನು) ಸೋಮವಾರದ
ಸೇವೆಗೆ ಬಂದು ದೇವರ ಸೇವೆಯೆನ್ನು ಮಾಡಿ ಸಿದ್ಧರಮೇಲಿನ ಪದಗ
ಳನ್ಟು. ಹೇಳುತಾ ಕೋಲುಗಳನ್ನು_ ಹುಯ್ಯುತಾ ಮಲ್ಲಿದೇವಿಗುಡಿಯಲ್ಲಿ
ಮಲಗಿರಲು, ಸಿದ್ಧರು ಬಂದು ಪ್ರತ್ಯಕ್ಷರಾದರು. ಓಬಳಂಣನು ಅವರಿಗೆ
ಅಡ್ಡಿಬಿದ್ದು ಕೈಮುಗಿದು ನಿಂತುಕೊಂಡು,-ಸ್ವಾಮಿ ಇಷ್ಟು ದಿವಸ ಎಲ್ಲಿ
ಹೋಗಿದ್ವಿರಿ ಎಂದು ಕೇಳಲಾಗಿ, ನಾವು ಈ ಗುಡಿಯಲ್ಲಿರುವ ಹಲಸಿನ
ಮರದಲ್ಲಿ ಇಂದು ಮೊದಲು ಫಲಾಹಾರವಾಡಿಕೊಂಡಿರುತ್ತೇವೆ ಎಂದು
ಹೇಳ ಹೊರಟುಹೋದರಂತೆ,. ಈಚೆಗೆ ಭರಮಪ್ಪನಾಯಕನ ದಿವಸ
ದಲ್ಲಿ ಈ ಮರದಿಂದ ರಕ್ತದಹಾಗೆ ಸೋನೆ ಸುರಿದು ಮರಬಿದ್ದು ಹೋ
ಯಿತು, ಎಂದು ಹೇಳುತಾರೆ. ಈ ಮಧ್ಯೆ ವಿಜಯನಗರದ ರಾಜ್ಯಪೂತಿಃ-
ಯಾಗಿ ಹೋಯಿತು.
ವಿಜಯನಗರದವರ ಅಧಿರಾಜತ್ವ ನಿಂತು ಹೋದದ್ದು
ಶ|| ೧೫೧೧ ನೇ `ವಿರೋಧಿ ಸಂ|| ದಲ್ಲಿ ಓಬಳಂಣ ನಾಯಕನಿಗೆ
ಪಟ್ಟವಾಯಿತು. ಇವನಿಗೆ ಬಿಚ್ಚು ಫಿರಂಗಿ ಹಿಡಿಸಿ
ದರು, ಇವನು ದುರ್ಗದ ಸೀಮೆಯನ್ನು ಸ್ಎತ್ತರ
ವಾಗಿ ಆಳಲು ಆರಂಭಿಸಿದನು. ವಿಜಯನಗರದ
ವರ ಅಧಿರಾಜತ್ವ ಈ ಸೀಮೆಯಮೇಲೆ ಇಲ್ಲಿಗೆ ನಿಂತಹಾಗಾಯಿತು.
ಜಯ ಸಂ|| ದಲ್ಲಿ ಗುಂಟನೂರ ಮ್ಲಿಪ್ಪನಿಗೆ ಪ್ರಧಾನಿತನವಾಯಿತು.
---------------------------------
ರಾಣಿಕನಕವ್ವ ೧೭
ರಾಣಿ ಕನಕವ್ವನಸ್ಥೈರ್ಯ/ಓಬಳಂಣ ಸ್ವರ್ಗಸ್ಥನಾದ್ದು
ಈ ಮದಕರಿನಾಯಕನಿಗೆ ಕನಕಗಿರಿ ರಂಗಪ್ಪನಾಯಕನ ಮಗಳು
ಕನವ್ವನನ್ನು ತಂದು ಮದುವೆಯಾಯಿತು, ಋತು
ಶಾಂತಿಗಾಗಿ ಅಂತಃಪುರದಲ್ಲಿ ಪ್ರವೇಶಮಾಡಲು,
ಆಕೆ ಬಹಳ ಸಿಟ್ಟುಮಾಡಿ--ನಾನು ನಿನಗೆ ದಕ್ಕುವಳಲ್ಲ, ನಾನು ದುಗಾ
ದೇವಿ, ನನ್ನನ್ನು ಶಿಲಾ ಪ್ರತಿಮೆಮಾಡಿ, ವೆರುವವರುಷಕ್ಕೂ ೧೦೧ ಕುರಿ
ಕೋಣಗಳಂದ ಬಲಿ ಕೊಡಿಸಿ ಕ್ರಮಗೊಂಡು ಪೂಜೆ ಮಾಡಿದಲ್ಲಿ, ನಿನ್ನ_
ದೌಲತ್ತು ಬಡಾಯಿಸುತ್ತೆ, ಇಲ್ಲದೇ ಇದ್ದಲ್ಲಿ ನಾಶವಾದೀತು, ಎಂದು
ಹೇಳಿ ಸತ್ತುಹೋದಳಂತೆ. ಇವಳ` ಹೆಣವನ್ನು ದಹನಮಾಡಿಸಿ, ಕಲ್ಲು
ಕಂಬದಮೇಲೆ ಪ್ರತಿಮೆಮಾಡಿಸಿ ಏಕನಾಥಮ್ಮನ ಗುಡೀಮುಂದೆ ಸ್ಥಾಪ
ನೆಮಾಡಿ ಕಂಬದಮ್ಮ ಎಂದು ಹೆಸರಿಟ್ಟು ಪ್ರತಿವರುಪದಲ್ಲಿಯೂ ಸೇವೆ
ನಡಿಸುತಾಬಂದರು. ತಿಂಮಣನಾಯಕನ ಮಗಳು ಹೊನ್ನವ್ವನನ್ನು
ದಾದನಾಯನಿಗೆ ಕೊಟ್ಟು ಮುದುವೆಯಾಯಿತು. ಈಕೆಗೆ ಉಚ್ಚಂಗೀ
ದುರ್ಗವನ್ನು ಬಳುವಳಿಯಾಗಿ ಕೊಟ್ವರು. ಈ ಮದಕರಿನಾಯಕನೆಂಬ
ಓಬಳಂಣನಾಯಕನು ಶೋಭಕೃತು ಸಂ|| ದಲ್ಲಿ ಸ್ವರ್ಗ
ನಾದನು, . ಇವನಆಸ್ಥಿಯನ್ನು ಈತನ ಮಗ
ಕಸ್ತೂರಿರಂಗಪ್ಪನಾಯಕನು. ಹಡವನಹಾಳಲ್ಲಿ ಸ್ಥಾ
ಪನೆಮಾಡಿಸಿ ಅಲ್ಲಿ ಸಮಾಧಿಮಾಡಿಸಿದನು. ಇವನ ಸಂಗಡ ೫ ಜನ
ನಾಗತಿಯರು ಸಹಗಮನ ಮಾಡಿದರು. ಇಬ್ಬರು ನಾಗತಿಯರು ಉಳಿದು
ಕೊಂಡರು.
ಇವನ ಆಳಿಕೆಯಲ್ಲಿ ಅದ ಭಾರಿಕಟ್ಟಡ.
ಈ ಮದಕರಿನಾಯಕನು ತನ್ಫು ಉಂಬಳಗ್ರಾಮವಾದ ಹುಲ್ಲೂರಲ್ಲಿ
ಕೆರೆಯನ್ಪೂ ಪುರದ ಸೀಮೆಯಲ್ಲಿ ಗುಂಡೀ ಕೆರೆಯ
ನ್ನೂ ಮಾಡಿಸಿದನು. ಇವನ ಕಾಲದಲ್ಲಿ ದುರ್ಗದಲ್ಲಿ
ದೊಡ್ಡಂಣನ ಕೆರೆಯನ್ನು ದೊಡ್ಡ ತಿಮ್ಮಂಣನಾಯಕ
ಮಾಡಿಸಿದನು.
----
---------------------------------------
೧೮ ಚಿತ್ರದುರ್ಗದ ಪಾಳಯಗಾರರು.
೫ ನೇ ಅ ಧ್ಯಾ ಯ .
೩ನೇ ದೊರೆ ಕಸ್ತೂರಿ ರಂಗಪ್ಪನಾಯಕ.
೩ನೇ ದೊರೆ ಕಸ್ತೂರಿ ರಂಗಪ್ಷನಾಯಕನಿಗೆ ಪಟ್ಟ./ತರಿಕೆರೆಯವರ ಗಾಗಳ
ಶ|| ೧೫೨೫ ನೇ ಶೋಭಕೃತು ಸಂ|| ದಿಂದ ೧೫೭೪ನೇ ನಂದನ
ಸಂ|| ದ ವರೆಗೆ.
ಮದಕರಿ ಓಬಳಂಣನಾಯಕ್ನ ಮಗ ಕಸ್ತೂರಿ ರಂಗಪ್ಪನಾಯಕ
ನಿಗೆ ಈ|| ೧೫೨೫ ನೇ ಶೋಭಕೃತು ಸಂ|| ಆಪಾಢ ಶು||
೫ರಲ್ಲೂ. ಪಟ್ಟವಾಯಿತು. ಈ ಕಸ್ತೂರಿ ರಂಗಪ್ಪ
ನಾಯಕನು ಹಡವನಹಾಳಲ್ಲಿ ನಾಲ್ಕು ವರುಷ ಇದ್ದು
ಶ|| ೧೫೨೮ ನೇ ಪರಾಭವ ಸಂ|| ದ ಮಾರ್ಗಶಿರ ಶು|| ೧೧ ಗುರುವಾರ
ರಂಗಪಟ್ಟಣವನ್ನು ಕಟ್ಟಿಸಲು ಆರಂಭಿಸಿ ಇದೇ ಸಂ|| ದ ಮಾಘ ಮಾಸ
ದಲ್ಲಿ ಪೂರ್ತಿಮಾಡಿದನು. ಈ ಸಂ|| ದಲ್ಲಿ, ಚಿಲ್ಲಹಳ್ಳಿಯವರ ಹೆಂಣು
ಮಗಳು ಓದೋ ತಿಮ್ಮವ್ವನಾಗತಿಯನ್ನು ಕೊಟ್ಬು ದೊರೆಗೆ ಮದುವೆ
ಯಾಯಿತು. ಈ|| ೧೫೫೪ ನೇ ಆಂಗೀರಸ ಸಂ|| ವೈಶಾಖ ಮಾಸದಲ್ಲಿ
ತರೀಕೆರೆ ಪೂವಲ ಹನುಮಪ್ಪನಾಯಕನು ದಂಡಿನೊ
ಡನೆ ಬಂದು ದುರ್ಗದ ಸೀಮೆಗೆ ಸೇರಿದ ದೇವಪುರದ
ಕೋಟೆ, ಜಾನಕಲ್ಲುದುರ್ಗ, ಹೊಳ್ಲಹೆರೆ, ಮಾಯ
ಕೊಂಡ, ಚಿತ್ರಹಳ್ಳಿ, ಈ ಗಡಿಗಳಗೆ ಮುತ್ತಿಗೆ ಹಾಕಿ ತೆಗೆದುಕೊಂ
ಡದ್ದೂ ಅಲ್ಲದೆ ರಂಗಪಟ್ಟಣವನ್ನು ಮುತ್ತಿ ಲಗ್ಗೆಯಿಂದ ತೆಗೆದುಕೊಂ
ಡನು. ಆಗ ಕಸ್ತೂರಿ ರಂಗಪ್ಪನಾಯಕನು ನಾಗತಿಯರನ್ನಶು ಕರೆದು
ಕೊಂಡು ಬೊಕ್ಕಸದೊಡೆನೆ ನೂಲೋಕಣವೆಯಲ್ಲಿ ಹಾಯಿದು ದುರ್ಗಕ್ಕೆ
ಬಂದನು. ಈ|| ೧೫೫೫ ಕ್ಕೆ, ಸಲ್ಲುವ ಶ್ರೀಮುಖ ಸಂ|| ದಶ್ಲಿ ದುರ್ಗದ
ಅರಮನೆಯನ್ನು ಕಟ್ಟಿಸಿದನು. ಮತ್ತು ಭಾವ ಸಂ|| ದಲ್ಲಿ ಅರಮನೆ
ಸುತ್ತಿನ ಸೋಟೆಯನ್ನು ಕಟ್ಟಿಸಿದರು, ಆಗ ತರೀಕೆರೆಯವರು
ದುರ್ಗಕ್ಕೂ, ಮುತ್ತಿಗೆಹಾಕಬೇಕೆಂದು ಆಡನೂರಬಳಿಯಲ್ಲಿ ಇಳಿದು
ಕೊಂಡರು.
--------------------------------------
ದೊರೆಗೆ ಜಯವಾದ್ಧು. ೧೯
ದೊರೆಗೆ ಜಯವಾದ್ಗು .
ಇದನ್ಶು. ತಿಳಿದು ಕಸ್ತೂರಿ ರಂಗಪ್ಪನಾಯಕನು, ಆ ಶತ್ರುಗಳ
ಮೇಲಿನ ಕಾರ್ಯಭಾಗಕ್ಕೆ ಮಾಘ ಶು|| ೫ ಯಲ್ಲು ಹೊ
ರಟು ಹುಲ್ಲೂರ ಬಳಯಲ್ಲಿಳಿದು, ತನ್ನ_ ಸಕಲ ಬಲ
ವೆನ್ನೂ ಕರೆದು ಕೇಳಲಾಗಿ, ಆಗ ಬಿಳಚೋಡು ಬಾಲಯ್ಯ, ಬೆನ್ನೂರ
ಸಿದ್ಧಯ್ಯ, ಹಿರಿ ಸೇರೋಗಾರ ಕೆಂಚಯ್ಯ, ಸಹಾ ತಂತಮ್ಮ ಮಂದಿಯೊ
ಡನೆ ತಾವು ಹೋಗಿ ಬಾಣಗಳನ್ನು ಹಾಕಿ ಶತ್ರುಗಳನ್ನು ಹೊಡೆ
ದುಬರುತೇವೆಂದು ಹೇಳಿದರು. ಆಗ ದೊರೆಯು __ನಿಮ್ಮ ಕಳುಹಿ
ನಾವು ಎಲ್ಲಿರಬೇಕು, ಎ೦ದು ತಿಂಗಳಗಟ್ಟಲೆ ಕೈ ಜೀತದ ಮಂದಿ
ಯನ್ನು `ಕರೆದುಕೊಂಡುಹೋಗಿ ಕಂದವಾಡಿ ಗುಡ್ಡದಲ್ಲಿ ನಿಂತು ಇದೇ
ಶು|| ೧೦ ಗುರುವಾರದಲ್ಲೂ ಹಗೆಗಳ ದಂಡಿನಮೇಲೆ ಬಾಣಗಳ ಹಾಕಿ
ಯುದ್ಧಮಾಡಿ ಜಯವನ್ಜು ಹೊಂದಿದನು. ಡೊಂಕಪುರದ ಬಳಿ ಪುನಃ
ಕದನವಾಯಿತು. ಅದರಲ್ಲಿಯೂ ಕಸ್ತೂರಿ ರಂಗಪ್ಪನಾಯಕನೇ. ಜಯ
ಶೀಲನಾದನು. ರಣರಂಗದಲ್ಲಿ ಮುಕ್ಕಂಣಸುತ್ತು ಭಲ್ಯ, ಕಂಚಿನ ನಗಾರಿ
೪ ಜೊತೆ, ಕುದುರೆ೫, ಇವು ಸಿಕ್ಕಿದವು. ತರೀಕೆರೆ ಹನುಮಪ್ಪನಾಯ
ಕನು ಇವನ ಕಡೆ ೧೫ ಜನ ಸಮೇತವಾಗಿ ಕೈಸೆರೆ ಸಿಕ್ಕಿದನು, ಇವ
ರನ್ನು ದುರ್ಗಕ್ಕೆ ತಂದು ತಿಂಗಳು ಇರಿಸಿಕೊಂಡು ಇದ್ಧರು. ದೊರೆಗೆ
ಮದಕರಿಯಂಣ (ಸರ್ಜೆರಾಯ) ನೆಂಬ ಮಗಹುಟ್ಟಿ ಪುತ್ರೋತ್ಲವವಾಯಿ
ತು. ಈಸಂತೋಷಕಾಲದಲ್ಲಿ ಸೆರೆಯಲ್ಲಿದ್ದ ಪೂವಲ ಹನುಮಪ್ಪನಾಯಕ್
ನನ್ನೂ ಇವನ ಕಡೆಮಂದಿಯನ್ನೂ ಸಹಾ ಸೆರೆಯಿಂದ ಧರ್ಮಕ್ಕೆ ಬಿಟ್ಬು
ಬಿಟ್ಟರು. ಮತ್ತು ಶತ್ರುಗಳು ಹಿಡಿದಿದ್ದ ಗಡಿ ದುರ್ಗಗಳನ್ಜು ಧಾತು ಸಂ
ವತ್ಸರರಲ್ಲಿ ತಾವು ತೆಗೆದುಕೊಂಡು ವಶಮಾಡಿಕೊಂಡರು. ಈ ಕಾಲ
ದಲ್ಲಿ ಈ ಕಸ್ತೂರಿ ರಂಗಪ್ಪನಾಯಕನು, “ ಗಾದ್ರಿಮಲೆ ಹೆಬ್ಬುಲಿ "
ಎಂಬ ಬಿರುದಿನಿಂದ ಹೊಗಳಸಿಕೊಂಡನು.
ಚಿತ್ರಹಳ್ಳಿ ಜಯಿಸಿ ದ್ದು
ತರುವಾಯ ಚಿಕ್ರಹಳ್ಳಿ ನೀಲಯ್ಯನೆಂಬ ಗ್ರಾಮದ ಗೌಡನು, ತಾಕು
ಮೇಕಿನಿಂದ ಹೆಮ್ಮೆ ಮಾತನಾಡಲಾಗಿ ಈಸಮಾಚಾ ರ
ವನ್ಜು ಕೇಳಿ ಕಸ್ತೂರಿ ರಂಗಪ್ಪನಾಯಳನು ಈ ಕೊ
---------------------------------
೨೦ ಚಿತ್ರದುರ್ಗದ ಪಾಳಯಗಾರರು.
ಟೆಯನ್ನು ಲಗ್ಗೆ ಮಾಡಿ ತೆಗೆದುಹೊಂಡು, ನೀಲಯ್ಯನನ್ನು ಹಿಡತರಿಸಿ
ಅವನ ಹಲ್ಲನ್ನು ಕೀಳಿಸಿ ತಲೆಯನ್ನು ಒಡೆಯಿಸಿ ಸಮ್ಮಾಳಿಗೆಗೆ ಹಾಕಿಸಿ,
ಆ ವೂರಿಗೆ ಠಾಣ್ಯ ಇಟ್ಟು ದುರ್ಗಕ್ಕೆ ಬಂದನು. ಇದೇ ಧಾತು ಸಂ||
ಶ|| ೧೫೫೯ ರಲ್ಲಿ ಹರಪನಹಳ್ಳಿಯವೆರಿಗೂ ಕಸ್ತೂರಿ ರಂಗಪ್ಪನಾಯಕ
ನಿಗೂ ಯುದ್ಧವಾಗಿ ಚಿತ್ರದುರ್ಗದ ವೀರರೇ ಜಯವನ್ನು ಹೊಂದಿದರು.
ಅಳಿಯ ಸೀರ್ಯದ ಕೃಷ್ಣಪ್ಪನ ಸ್ಪಾ ಮಿದ್ರೋಹಿತನ,/ಮದಕೇರಂಣ (ಸರ್ಜೆ
ರಾಯನ) ಪರಾಕ್ರಮ.
ಅದೇ ಸಂ|| ದಲ್ಲಿ ಸೀರ್ಯದ ರಂಗಪ್ಪನ ಕೃಪ್ಮಪ್ಷನಿಗೆ ಕಸ್ತೂರಿ
ರಂಗಪ್ಪನಾಯಕಕನ ಮಗಳು ಓಬವ್ವನನ್ನು ಕೊಟ್ಬು
ಮದುವೆಯಾಯಿತು. : ಈ ಕುಮಾರತಿಗೆ ದುರ್ಗದ
ಲ್ಲಿಯೇ ಅರಮನೆ ಮಾಡಿಕೊಟ್ಟು ಇರಿಸಿಕೊಂಡಿ
ದ್ದರು. ಹೀಗಿರುವಲ್ಲಿ ಅಳಿಯ ಕೃಷ್ಣಪ್ಪನು ಸ್ವಾಮಿ
ದ್ರೋಹಿತನದಿಂದ ತನ್ನ ಕಡೆ ಮಂದಿಯನ್ನು ಕರೆಯಿಸಿಕೊಂಡು ರಾತ್ರೆ
೮ ಗಳಗೆ ಕಾವಲಗಾರರ ಸಂಗಡ ಸೇರಿಕೊಂಡು, ಕಾವಲ ನೆಪ
ಮಾಡಿಕೊಂಡು ಕೋಟೆ ತೆಗೆದುಕೊಳ್ಳುವ ಸನ್ನಾಹ ನಡಿಸುತಾ ಇರ
ಲಾಗಿ, ನಡುವಣಬಾಗಿಲಲ್ಲಿ ರಾಜರ ಬಗೆ ಕಾವಲಮಂದಿಗಳು ಇವರನ್ನು
ಕಂಡು ಬಾಗಿಲ ಕದಗಳ ಹಾಕಿ ಹಗೆಗಳನ್ನು ಮರ ಬಿಲ್ಲಿನಲ್ಲಿ ಇಟ್ಟು
ಗುಲ್ಲುಮಾಡಿದರು. ಈ ಸಮಾಚಾರವು ಬಂಣದ ಚಾವಡಿಯಲ್ಲಿ ಮಲ
ಗಿದ್ದ ಕುಮಾರ ಮದಕೇರಂಣ, ಬಾಣದ ಬೊಮ್ಮಯ್ಯ, ಹಿರೀಸೇರೋ
ಗಾರ ಕೆಂಚಯ್ಯ, ಸರಳೆಮ್ಮ ಕಾಟಂಣ, ಬೆನ್ನೂರ ಚಿಕ್ಕಯ್ಯ, ಬಿಳಿ
ಚೋಡಬಾಲಯ್ಯ, ಇತರ ಕಾವಲುಗಾರರು, ಇವರಿಗೆ ತಿಳೆಯಿತು.
ಅವರು ಹೊರಟು ಕೋರೆಬಂಡೆ ದಿಡ್ಡಿಯೊಳಗೆಹಾದು ಮೇಲು ದುರ್ಗಕ್ಕೆ
ಬಂದು ನಡುವಣಬಾಗಿಲಿನಿಂದಾ ಕಸ್ತೂರಿ ರಂಗಪ್ಪನಾಯಕರ ಬಾಗಿಲತ
ನಕ ಕಾದಿದರು.ಅಲ್ಲಿಯವರೆಗೆ ರಕ್ತದಕೋಡಿ ಹರಿಯಿತು, ಕುಮಾರ ಮ
ದಕೇರಂಣನು ತನ್ನ ಕೈಯ್ಯಲ್ಲಿದ್ದ ಗಂಡುಗೊಡಲಿಯಿಂದ ಲೆಕ್ಕವಿಲ್ಲದಷ್ಟು
ಮಂದಿಯನ್ಪು ಕಡಿದನು. ರಾಯನುತನ್ನ ಅರಮನೆಯ
ಲ್ಲಿದ್ಗು ಈವರ್ತಮಾನವನ್ನು ಕೇಳಿದನು, ಕುಮಾರ
ಮದಕೇರಂಣನಿಂದ ದುರ್ಗಉಳಿಯಿತು, ಎಂದು ಎಲ್ಲ
ರೂ ಹೊಗಳದರು. ರಾಯನು ಬಹಳ ಸಂತೋಷಪಟ್ಟು ಮಂದಿಗಳಗೆಲ್ಲಾ
----------------------------
ಸೀರ್ಯದವರ ಮುತ್ತಿಗೆ ೨೧
ಜನ ೧ಕ್ಕೆ ೨σ೦ ವರಹಪ್ರಕಾರ ಇನಾಮುಕೊಟ್ಬು ದೇವರುಗಳಿಗೆ ಕಾಣಿ
ಕೆ ಮೀಸಲು ಸಹಾ ಕೆೊಟ್ಟು ಈ ಕುಮಾರ ಮದಕೇರಂಣನಿಗೆ “ಗಂ ಡು
ಗೊಡಲಿ ಸರ್ಜ" ಎಂದು ಹೆಸರುಕೊಟ್ಜನು. ಈ ಕೃಷ್ಣಪ್ಪನಾಯಕನು
ಚೋರದಿಡ್ಡಿಯಲ್ಲಿ ಅಡಗಿಕೊಂಡಿದ್ದು ತಪ್ಪಿಸಿಕೊಂಡು ಹೋದನು.
ಇವನು ಓಡಿಹೋಗಿ ಐಮಂಗಲದ ಹಿರೀಕೆರೆಯಲ್ಲಿ ಮೈತೊಳೆದುಕೊಂಡು
ಹೋದ್ದನ್ನು ಕಂಡುಬಂದು ಒಬಬ್ಬಮನುಷ್ಯನು ರಾಯನಿಗೆ ವರ್ತವನಾನ
ತಿಳಿಸಿದನು. ಇವನಿಗೆ ೨೪σ೦ವರಹ ಇನಾಮು ಕೊಟ್ಟರು. ಈ ವೃ
ತ್ತಾಂತವನ್ನು ಕಸ್ತೂರಿ ರಂಗಪ್ಪನಬಾಗಿಲ ಕಲ್ಲುಬಂಡೆಮೇಲೆ ಬರೆದಿದೆ.
ಸೀರ್ಯದವರು ಹಿರಿಯೂರ ಮುತ್ತಿದ್ದು/ಜಯವಾದ್ದು
ಶ| ೧೫೬೦ ಈಶ್ವವರ ಸಂ|| ದಲ್ಲಿ ಸೀರ್ಯದ ರಂಗಪ್ಪನಾಯಕನು
ಹಿರಿಯೂರಿಗೆ ಮುತ್ತಿಗೆ ಹಾಕಿದನು. ಹಿರಿಯೂರ ಕಂ
ಚಣ್ಗನಾಯಕನು ಕಳ್ಳಭಂಟರ ಸಂಗಡ ತನ್ನ ನಾಗತಿ
ಯರ ವೋಲೆಗಳ ಕೊಟ್ಟು ಕಳುಹಿಸಿದನು. ಕಸ್ತೂ
ರಿರಂಗಪ್ಪನಾಯಕನು ಈ ಸಮಾಚಾರವನ್ನುಕೇಳಿ ಆಕ್ಷಣವೇಹೊರಟು
ಕೂನನ ಕೆರೇ ಬಳಿಯಲ್ಲಿ ಇಳೆದು ಕೊಂಡನು. ಸೀರ್ಯದ ರಂಗಪ್ಪ
ನಾಯಕನು ೧೨೦೦೦ ಕಾಲಾಳು ೩೦೦೦ ಕುದುರೆ ಸಹಾ ತನ್ನೊಡನೆ ಕರೆ
ದುಕೊಂಡು ಬ೦ದಿದ್ವನು ಇದೇ ಈಶ್ವರ ಸಂ|| ಫಾಲ್ಗುಣ ಶು| ೧೨
ಸಾಯಂಕಾಲ ೨೫ ಗಳಗೆಗೆ ಜಗಳ ಮೊದಲುವಾಡಿ ಬೆಳಗಾದ ಮೇಲೆ
೧೮˜ಗಳೆಗೆ ವರೆಗೆ ಕಾದಿದರು. ಸೀರ್ಯದರಂಗಪ್ಪನು ಗುಂಡು ತಗಲಿ ಮೃತ
ನಾದನು. ಶತ್ರುಗಳ ಬಲ ಮುರಿದು ಮಸಗಲ್ಲ ಬಳಿ ನಿಂತಿತು. ಕಸ್ತೂರಿ
ರಂಗಪ್ಪನಾಯಕನು ಬಲಸಹಿತ ಅವರ ಬೆನ್ನಹತ್ತಿಹೋಗಿ ಮುತ್ಲಿಕೊಳ್ಳ
ಲು ಅವರ ಬಗೆ ಭಟರು ಬಂದು ಹೊಗಳಿ "ದೊರೆಬಿದ್ದಮೇಲೆ ನಾವು ತ
ಮಗೆ ಭಂಟರು, ಅವರಿಗೂಭಂಟರು. ನಮ್ಮಮೇಲೆಹಗೆ
ತನವೇಕೆ“?ಎಂದು ಹೇಳಿಕೊಂಡರು. ಅವರನ್ನು ಬಿಟ್ಟು
ಅವರ ದೊರೆಯನ್ನು ಕೆಂಚಣ್ಣ ನಾಯಕನು ಹಿರಿಯೂರಿಗೆ ಕರೆದುಕೊಂಡು
ಹೋದನು, ದೊರೆಯು ತೇರ ಮಲ್ಲೇಶ್ವರನ ಗುಡಿಯನ್ಹಾ ಹೊಕ್ಕು
ದೇವರ ದರ್ಶನವನ್ನು_ ಮಾಡಿಕೊಂಡು ಕೆಂಚಂಣನಾಯಕನ ಅರಮನೆಗೆ
----------------------------------------
೨೨ ಚಿತ್ರದುರ್ಗದ ಪಾಳಯಗಾರರು.
ಹೋದನು, ಆ ಈಕೆಂಚಂಣನಾಯಕನ ನಾಗತಿಯರು ತಮ್ಮ ಓಲೆಯನು
ತಟ್ಟೆಯಲ್ಲಿರಿಸಿ ಆರತಿ ಎತ್ತಿದರು. ಆಗ ಕಸ್ತೂರಿ ರಂಗಪ್ಪನಾಯಕನು
ಆ ನಾಗತಿಯರಿಗೆ ೨೦೦೦σ೦ ವರಹ ಇನಾಮು ಕೊಟ್ಟನು. ಆಗ ಕೆಂಚ
ಣ್ಣನಾಯಕನು ದುರ್ಗದ ದೊರೆಗೆ ೨೦೦೦σ೦ ವರಹ, ನೆಟ್ಟಫಿರಂಗಿ, ಉಡು
ಗರೆಸಹಾಕೊಟ್ಟು ರಾಜನನ್ನು ದುರ್ಗಕ್ಕೆ ಪ್ರಯಾಣ ಮಾಡಿಸಿ ಕ
ಳುಹಿಸಿದನು.
ದೊರೆ ಮಕ್ಕಳ ಮದುವೆ
`ಆಗ ದೊರೆಯು ಚಿತ್ರದುರ್ಗಕ್ಕೆ ಬಂದು “ಶ್ರೀಮನ್ ಮಹಾನಾಯ
ಕಾಚಾರ್ಯ ನಾಯಕಶಿರೋಮಃಣಿ ಕಾಮಗೇತಿ ಕಸ್ತೂರಿ
ರಾಜ ಹಗಲು ಕಗ್ಗೋಲೆಮಾನ್ಗ ಗಾದ್ರಿ ಮಲೆ ಹೆಬ್ಗುಲಿ
ಗಂಡುಗೊಡಲಿ ಸರ್ಜೆಂಸ್ಥಾನ ಚಿತ್ರದುರ್ಗ, ಮದಕರಿ
ನಾಯಕರ ಕಸ್ತೂರಿರಂಗಪ್ಪನಾಯಕರು“ ಎಂಬ ಹೆಸರಿನಿಂದ ಈಶ್ಸ್ರರಸಂ||
ದಲ್ಲಿ ಇತರ ಪಾಳೆಯಗಾರರಿಗೆ ಲೇಖನಗಳನ್ನು ಬರಸಿದನು. ಬಹು
ಧಾನ್ಯ ಸಂ|| ದಲ್ಲಿ ಕೃಷ್ಣಪ್ಪನ ಮಗಳು ರಾಮವ್ವ ಬೆನ್ನೂರ ತಳವಾರನ
ಮಗಳು ಓಬವ್ವ, ಇವರಿಬ್ಬರನ್ನೂ ಯುವರಾಜನಾದ ಸರ್ಜೆರಾಯನಿಗೂ,
ಹಿರೀಸೇರುವಗಾರ ಕೆಂಚಯ್ಯನ ಮಗಳನ್ನು ರಾಜಪುತ್ರನಾದ ಕುಮಾರ
ಪ್ಪನಿಗೂ, ಬಾಣದವರ ಮನೆ ಓಬವ್ವನನ್ನು ಸಾದರಹಳ್ಳಿ ತಳವಾರನ
ಮಗಳು ಈರವ್ವನನ್ನೂ ಮದಕರಿನಾಯಕನಿಗೂ ಕೊಟ್ಬು ಮದುವೆಯಾ
ಯಿತು.
ಕಸ್ತೂರಿರಂಗಪ್ಪನಾಯಕನ ಮರಣ
ಆರು ವರುಪದ ತರುವಾಯ ತಾರಣ ಸಂ||ರದ ಆಪಾಢ ಶು |೧೨
ಯಲ್ಲು ಸರ್ಜೆರಾಯನು ದೈವಾಧೀನನಾದನು. ಈ ದುಃ
ಖದಲ್ಲಿ ಕೊರಗಿ ಕಸ್ತೂರಿ ರಂಗಪ್ಪನಾಯಕನು
ಶ| ೧೫೭೪-೫ ನೇ ನಂದನ ಸಂ|| ಮಾರ್ಗಶಿರ ಶು|೧೪
ಯಲ್ಲು ಮೃತನಾದನು, ಈ ದೊರೆಯ ದೇಹವನ್ನು ಅರಮನೆಯಲ್ಲಿಯೇ
ದಹನ ಮಾಡಿದರು. ಈತನ ಹೆಂಡಿರು ೭ಜನ ಸಹಗಮನ ವಮಾಡಿದರು.
೫ಜನ ಉಳಿದುಕೊಂಡರು. ಈ ಪಾಳಯಗಾರನು ಆಳಿದ ಸೀಮೆ ೨೨ಕ್ಕೆ
ಸಕಲ ಬಾಬೂ ಸಹಾ ೬೫೦೦೦σ೦ ಸುವರ್ಣಾದಾಯವಿತ್ತು.
----------------------------------
ಇಮ್ಮುಡಿ ಮದಕರಿನಾಯಕ. ೨೩
೬ ನೇ ಅ ಧ್ಯಾ ಯ .
ಇಮ್ಮುಡಿ ಮದಕರಿನಾಯಕ.
ಶ| ೧೫೭೪-೭೫ ನೇ ನಂದನ ಸಂ| ದಿಂದ ಆನಂದ ಸಂ|| ದ ವರೆಗೆ
೨೨ ವರುಷ.
ಇಮ್ಮುಡಿ ಮದಕರಿ ನಾಯಕ /ತರೀಕೆರೆಯವರ ಮುತ್ತಿಗೆ
ಕಸ್ತೂರಿ ರಂಗಪ್ಪನಾಯಕನು ಜೀವಂತನಾಗಿರುವಾಗಲೇ ಹಿರೀ
ಮಗ ಸರ್ಜೆರಾಯ ಎರಡನೇ ಮಗ ಕುಮಾರಪ್ಪ ಇವ
ರಿಬ್ಬರೂ ತೀರಿ ಹೋಗಿದ್ದ. ಕಾರಣ, ೩ನೇ ಮಗನಾದ
ಇಮ್ಮುಡಿಮದಕರಿನಾಯಕನಿಗೆ ಶ|| ೧೫೭೪-೫ ನೇ
ನಂದನ ಸಂ|| ಮಾರ್ಗಶಿರ ಬ|| ೫ ಯಲ್ಲೂ ಸಂಪಿಗೇ ಸಿದ್ದೇಶ್ವರನ ಗುಡಿ
ಯಲ್ಲಿ ಪಟ್ವಕಟ್ಜದರು. ಇದುವರೆಗೆ ಕಟ್ಜದ ಕೋಟೆಯೆಲ್ಲಾ ವಿಶೇಷ
ವಾಗಿ ಬಲವಾಗಿಯೇ ಇದ್ದಾಗ್ಯೂ ಶತ್ರುಗಳ ಭೀತಿಯು ತಪ್ಬಿರಲಿಲ್ಲ.
ಆದ್ದರಿಂದ ದುರ್ಬಲವಾಗಿದ್ದ ಕಡೆ ಬಲವಾಡಲು ಟೀಕಿನಬಾಗಿಲು ಇದರ
ಸುತ್ತಿನ ಕೋಟೆ, ಸಹಾ ಕಟ್ಟಿಸಿದರು. ಇದು ಜಯ ಸಂ|| ದಲ್ಲಿ ಮುಗಿ
ಯಿತು. ವಿಜಯ ಸಂ|| ದಲ್ಲಿ ಇನ್ನೊಂದು ಯುದ್ಧಪ್ರಾರಂಭವಾ
ಯಿತು. ಚಿತ್ರದುರ್ಗದ ವೀರರ ಏಳಗೆಯನ್ನು_ ನೋ
ಡಿಸಹಿಸಲಾರದೆ ಸುತ್ತಲಪಾಳಯಗಾರರು ದಂಡಿನೊಡನೆ
ಬಂದು ದೇವಪುರದ ಕೋಟೆಗೆ ಮುತ್ತಿಗೆ ಹಾಕಿ
ದರು. ಅದೇ ಸಂ|| ಮಾರ್ಗಶಿರ ಶು||೫ ಯಲ್ಲು ಈ ಮುತ್ತಿಗೆಯನ್ನು
ಎಬ್ಬಿಸುವುದಕ್ಕೆ ದುರ್ಗದ ಸೇನೆ ಹೊರಟು ಹೊರಕೆರೆ ದೇವರ ಪುರದ
ಬಳಿ ಇಳಿದು ಮುಂದಕ್ಕೆ ದೇವ ಪುರದ ಕೋಟೆಯೊಳಕ್ಕೆಹೋಗಲಾಗಿ,
ಹಗೆಗಳುದುರ್ಗದ ದಂಡನ್ನು ಸುತ್ತಿಕೊಂಡರು. ಆಗ ಸೇನಾಪತಿಗಳು ದೊ
ರೆಯನ್ನುಕುರಿತು ನಮಗೆಅಪ್ಪಣೆಯಾದರೆ ನಾವುಶತ್ರು
ಸೇನೆಯನ್ನು_ ಹೊಡೆಯುತೇವೆ ಎಂದು ಕೇಳಿಕೊಳ್ಳ
ಲು, ಅದಕ್ಕೈ, ಮದಕರಿನಾಯಕನು__ನಾವೂ ನೀವೂ
ಉಭಯರೂ ಒಟ್ಟಿಗೆ ನಿಂತಬಳಿಯಲ್ಲಿಯೇ ಜಗಳವಾಡಬೇಕು ಎಂದು
-------------------------------
೨೪ ಚಿತ್ರದುರ್ಗದ ಪಾಳಯಗಾ
ಕೋಟೆ ಕೊತ್ತಲ ಕಟ್ಟಿಸಿದ್ದು
ಅಪ್ಪಣೆ ಕೊಡಿಸಿದನು. ಅದಕ್ಕೆ ೧ ಬಿಳಜೋಡು ಹನುಮಯ್ಯ
೨ ಬಾಣದಲಿಂಗಯ್ಯ, ೩ ಹಿರೀಸೇರುವೆಗಾರ ಕೆಂಚಯ್ಯ, ೪ ಸರಳೆಮ್ಮೆ
ಕಾಟಯ್ಯ, ೫ ಅಪ್ಪಪರಸಯ್ಯ, ೬ ನರಸಿಂಹಭಟ್ಟ , ೬ ಅಕ್ಕಸಾಲೆ ಕ೦ಠ
ಮಾಲೆ ಮುಂತಾದವರು-ಸ್ವಾಮಿ, ತಾವು ಕೆಲವು ಮಂದಿಯನ್ನು ಬೆಂಗಾ
ವಲಿಗೆ ಇಟ್ಟು ಕೊಂಡು ಊರೊಳಗೆ ತವಕದ ಮೇಲೆ ಇರಬೇಕು,
ಮತ್ತು ನಾವು ಮಾಡುವ ಊಳಗವನ್ನು ನೋಡಿಕೊಳ್ಳುತಿರಬೇಕು,
ಎಂದು ಅರಿ#ಕೆ ಮಾಡಿದರು. ಅದಕ್ಕೆ ದೊರೆಯು--ನಾವು ನಿಮ್ಮನ್ನು ಕಳು
ಹಿಸಿ ಊರಲ್ಲಿ ನಿಲ್ಲಬಾರದು ಎಂದು ಸಿಟ್ಟುಮಾಡಿ ಛಲದಂಕನೆಂಬ ಕುದು
ರೆಯನ್ನು ಏರಿ ರಸಸಿದ್ಧರು ಕೊಟ್ಸ್ಗ ದೆಸೆಗಟ್ಟಿನ ದೂಳತನವನ್ನು ಧರಿ
ಸಿಕೊಂಡು ಭಟ್ಟರಿಂದ ಹೊಗಳಿಸಿ ಕೊಳ್ಳುತಾ ತರೀಕೆರೆಯ ಪೂವಲವರ
ದಂಡಿನ ಮೇಲೆ ಬಿದ್ದು ಅ ಸೇನಾಪತಿಗಳಾದ ಚಿಕ್ಕಹನುಮಪ್ಪನಾಯಕ
ಕ, ಪಟ್ಟಾಭಿರಾಮನಾಯಕ ಇವರ ಫೌಜೆನನೊಳಕ್ಕೆ ಹೊಕ್ಕು ಲಡಾಯಿ
ಮಾಡಿ ಜಯಹೊಂದಿದನು. ಆಗ ತರೀಕೆರೆ ದಂಡು ಯಲ್ಲಂಬಳಸೆ ಬಳಿ
ಹೋಗಿ ನಿಂತಿತು. ಚಿಕ್ಕ ಹನುಮಪ್ಪ ನಾಯಕನ ಕೈಯಲ್ಲಿದ್ದ ೧ನೆಟ್ಟ
ಫಿರಂಗಿ, ೧ ಕಠಾರಿ, ೨೦ ಕುದುರೆ, ೧೫ ದೆೊಡ್ಡಗುಂಡಿನ ಕೋವಿ, ಇದೆ
ಲ್ಲಾ ದುರ್ಗದವರಿಗೆ ಸಿಕ್ವಿದವು. ದೊರೆಯು ಹೊಳಲ ಕೆರೆಯಮೇಲೆ
ಹಾದು ಚಿತ್ರದುರ್ಗಕ್ಕೆ ಬಂದನು. ಈ ಸಂ||ದ ಮಾಘಮಾಸದಲ್ಲಿ ಕೆಳ
ಗಣಾ ಅರಮನೆ ಕಟ್ಲತು. ಮನ್ಮಥಸಂ|| ದಲ್ಲಿ ಗಾರೇ
ಬಾಗಿಲ ಸುತ್ತಿನ ಕೋಟೆ, ಕೊತ್ತಲಗಳು ಸಹಾ
ಟಿದ ಮುರಿದು ಕಟ್ಟಲ್ಪಟ್ಟವು. ಹೇವಿಳಂಬಿ ಸಂ|| ದಲ್ಲಿ ಬಸ
ಪ್ಮನ ಬುರುಜು ರಾಮದೇವರಗುಡಿ ಹಿಂದಿನ ಸುತ್ತು ಸಹಾ ತಯಾರ್ಮಾಡ
ಲ್ಪಟ್ವವು. ಪ್ಲವ ಸಂ|| ದಲ್ಲಿ ಗೋಡೆ ಕೆರೆ, ನನ್ನಿವಾಳ, ಐಮಂಗಲ,
ಪಾಳತಿ ಈ ಕೋಟೆಗಳನ್ನುಮುತ್ತಿ ಠಾಣ್ಯಹಾಕಿದರು. ತರುವಾಯ
ಶುಭಕೃತು ಸಂ|| ದ ಮಾರ್ಗಶಿರ ಶದ್ಧ ೪ ಶುಕ್ರರವಾರದಲ್ಲು ಹಿರಿಯೂರು
ಕೋಟೆಗೆ ಮುತ್ತಿಗೆ ಹಾಕಿದರು. ದೊರೆಗೆ ತೇರ ಮೆಲ್ಲಢಶ್ವರನ ಸ್ವಪ್ನ
ವಾಯಿತಂತೆ, ತೂಡಲೆ ಇಪ್ಪತ್ತು ದಿವಸದಲ್ಲಿ ಆ ಕೋಟೆಯನ್ಶು ತೆಗೆದು
ಕೊಂಡರು. ಈ ಕಾಲದಲ್ಲಿ ಕಾಮಗೇತಿ ತಿಮ್ಮಣ್ಣನಾಯಕನ ಅರಮ
-----------------------------------
ಇಮ್ಮುಡಿ ಮದಳರಿನಾಯಕ. ೨೫
ನೇಬಳಯಲ್ಲಿರುವ ಮದ್ದಿನ ಕಣಜ, ಪಚ್ಚೇದ ಕಣವೆ, ತುಪ್ಪದ ಕಣಜ,
ಏಕನಾಥಮ್ಮನ ಗುಡಿ ಮುಂತಾದನ್ನು ಕಟ್ಟಿಸಿದರು. ಜಡಕಲ್ಲು ದುರ್ಗದ
ಗೌರವ್ಪ ನಾಗತಿ ಎಂಬ ಹೆಂಣುಮಗಳನ್ನು ತಂದು ದೊರೆಗೆ ಮುದುವೆ
ಯಾಯಿತು. ,
ಮಕ್ಕಳಾಗಲು ದೇವರಿಗೆ ಹರಕೆ/ಇಮ್ಮುಡಿ ಮದಕರಿನಾಯಕನ ಮರಣ
ಈ ಆಳಕೆಯಲ್ಲಿ ಗೋಡೇಕೆರೆಕೋಟೆ, ನನ್ನಿವಾಳ, ಐಮಂ
ಗಲದ ಕೋಟೆ ಮೊದಲಾದ ಸೀಮೆಗಳನ್ಸು ತೆಗೆದು
ಕೆೊಂಡರು. ದೊರೆಯಾದ ಮದಕರಿನಾಯಕನಿಗೆ
ಮಕ್ಕೆಳಲ್ಲದ ಕಾರಣ ಶ|| ೧೫೮೭ ನೇ ವಿಶ್ವವಸು ಸಂ||
ದಲ್ಲಿ ಉಚ್ಚಂಗಮಮ್ಮದೇವರ ಇದೆರೆತ್ತಿ ಸಕಲರೂ ದರ್ಶನಕಟ್ಟಿಕೊಂಡು
ಬೇವನ್ನುಟ್ಟು ದೇವರ ಮಾಡಿದರು. ಮಾರನೇ ವೈಶಾಖ ಮಾಸದಲ್ಲಲಿ
ದೊರೆಗೆ ಕೆಂಚವ್ಪನೆಂಬ ಮಗಳು ಹುಟ್ಟಿದಳು. ಈ ಪಾಳೆಯಗಾರನು
ತಮ್ಮ ತಾಯಿ ಓದೋತಿಮ್ಮವ್ವನ ಹೆಸರಿನ ಮೇಲೆ ಒಂದು ಕೆ#ರೆ, ತಂದೆ
ಹೆಸರಿನ ಮೇಲೆ ಅರಸನ ಕೆರೆ, ಜನಿಗೆ ಹಳ್ಳಕ್ಕೆ ಅಡ್ಡಕಟ್ವೆ ಹಾಕಿ ತನ್ನ
ಹೆಸರಿನಿಂದ ಒಂದು ಕೆರೆ, ಇವುಗಳನ್ನು ಕಟ್ಟಿಸಿದನು. ಪ್ಲವ ಸಂ|| ದಲ್ಲಿ
ಕೆಂಚವ್ವ ಎಂಬ ಮಗಳು ಮೃತವಾದ್ದರಿಂದ ಅವಳ ಜ್ಞಾಪಕಾರ್ಥವಾಗಿ
ಒಂದು ಕೆರೆಯನ್ನು ಮಾಡಿಸಿದರು. ಈ|| ೧೫೯೬-೭ನೇ ಆನಂದ ಸಂ||
ಪುಷ್ಯ ಶುದ್ಧ ೧೫ ಯಲ್ಲಿ ಇಮ್ಮುಡಿ ಮದಕರಿನಾಯಕನು ಈ ಲೋಕ
ವನ್ಸು ಬಿಟ್ಟನು ಈತನ ಅರಮನೆಯಲ್ಲಿಯೇ ಶವ
ವನ್ನು ದಹನ ಮಾಡಿದರು ಇವನ ಸಂಗಡ ೨೩
ಜನ ಹೆಂಡಿರು ಸಹಗಮನ ಮಾಡಿದರು. ಮೂರು
ಜನ ನಾಗತಿಯರು ಜೀವಂತರಾಗಿ ನಿಂತರು. ಈ ಆಳಿಕೆಯಲ್ಲಿ ಒಟ್ಟು
೧೦೦೦೦೦σ೦ ವರಹದ ಸೀಮೆ ಇತ್ತು. ಈ ಸೀಮೆಯನ್ನು_ ಭಾಗ
ಗಳು ಮಾಡಿ ಅಲ್ಲಲ್ಲಿನ ಅಧಿಕಾರಕ್ಕೆ ಹೊಟ್ಟೆ ಗುರುಕಂಣ, ಕರಣೀಕ
ಭೂನಪ್ಪ, ಅಬ್ಬಿಗೆರೆ ಮಲ್ಲಂಣ, ಕರಣೀಕ ಅಪ್ಪಂಣ, ಇವರುಗಳನ್ನು
ನೇಮಿಸಿದರು. ಆಗ ೧ ದೇಶಂಣ, ೨ ರಂಗಪ್ಪ, ೩ ಕಾಟೇಹಳ್ಳಿ
ಚಂದಂಣ, ಇವರು ದಳವಾಯಿಗಳಾಗಿದ್ದರು.
----------
----------------------------------
೨೬ ಚಿತ್ರದುರ್ಗದ ಪಾಳಯಗಾರರು.
೭ ನೇ ಅ ಧ್ಯಾ ಯ .
ಓಬಂಣನಾಯಕ.
ಶ|| ೧೬೯೬ ನೇ ಆನಂದ ಸಂವತ್ಸರ.
ಸೇನಾಪತಿಗಳ ಹಾವಳಿ.
ಸೇನೆಯವರ ದಂಗೆ, ಓಬಂಣನ ತಲೆ ಹುಯಿದದ್ದು
ಶ|| ೧೫೯೬ನೇ ಆನಂದ ಸಂ|| ಮಾಘ ಶು|| ೨ ಯಲ್ಲು ಇಮ್ಮುಡಿ
ಮದಕರಿನಾಯಕನ ಸಾಕುಮಗ ಓಬಂಣನಿಗೆ ಪಟ್ವ
ಕಟ್ಟಿದರು_ ಆದರೆ ರಾಕ್ಷಸ ಸಂ|| ದ ವ್ಯೆಖಾಖ
ಶುದ್ಬ ೫ ದಿವಸ ಠಾಣೇ ಗುರಿಕಾರರು.. ತಮಗೆ
ಪಟ್ಟದ ಕಾಣಿಕೆಯಾಗಿ ಪದ್ಧತಿಪ್ರಕತಾರ ಒಂದು ತಿಂಗಳ ಸಂಬಳ ಇನಾ
ಮಾಗಿ ಕೆೊಡಲಿಲ್ಲವೆಂದು ತಿರುಗಿಬಿದ್ದು, ಚಿಕ್ಕಬಾಗಿಲ ಬಳಿಯಲ್ಲಿ ಹೊಸ
ದೊರೆ ಓಭಂಣನನ್ನು ತಲೆ ಹುಯಿದರು. ಕಾಟಪ್ಪನಾಯಕನ ಮಗ
ಲಿಂಗಂಣನಾಯಕನನ್ನೂ ಕೊಂದುಹಾಕದರು. ಈ ಅವಾಂತರದಲ್ಲಿ
ಹಿರೀಕುವಾರ ಸರ್ಜೇರಾಯನ ಮಗ ಚಿಕ್ಕಂಣನು ಭಯದಿಂದ ತನ್ನ
ತಲೆ ತಪ್ಪಿಸಿ ಕೊಂಡು ಹರಪನಹಳ್ಳಿಗೆ ಓಡಿಹೋಗಿ ತರುವಾಯ ಕಣಕು
ಪ್ಪೆಗೆ ಸೇರಿದನು. ಈ ಲಿಂಗಂಣನಾಯಕನು ಕಸ್ತೂರಿ ರಂಗಪ್ಪನಾಯ
ಕನ ಹಿರೀ ಮಗನಾದ ಸರ್ಜೆರಾಯನ ಜ್ಯೇಷ್ಠಪುತ್ರ. ಕಸ್ತೂರಿ ರಂಗಪ್ಪ
ನಾಯಕನ ತರುವಾಯ ಜ್ಯೇಷ್ಠ ಸಂತತಿಗೆ ಸೇರಿದ ಮೊಮ್ಮಗನಾದ ಈ
ಲಿಂಗಂಣನಿಗೆ ಪಟ್ವವಾಗಬೇಕಾಗಿತ್ತು. ಇದು ತಪ್ಪಿಹೋಗಿ ಕಸ್ತೂರಿ
ರಂಗಪ್ಪನ ಮೂರನೇ ಮಗನಾದ ಇಮ್ಮುಡಿ ಮದಕರಿನಾಯಕನಿಗೆ ದೊರೆ
ತನವನ್ಶು ಕೊಟ್ಟಿದ್ದರು. ಈ ಅನ್ಯಾಯವು ಜನರ ಮನಸ್ಸಿನಲ್ಲಿಯೂ
ಸೇನಾಪತಿಗಳ ಮನಸ್ಸಿನಲ್ಲಿಯೂ ಹೊಗೆಯಾಡುತ್ತಲೇ ಇದ್ದಂತೆ ತೋ
ರುತ್ತೆ, ಇಮ್ಮುಡಿ ಮದಕರಿನಾಯಕನಿಗೆ ಮಕ್ಕಳಿಲ್ಲ. ಆಗಲೂ ಸರ್ಜೆರಾ
ಯನ ಮಕ್ಕಳನ್ನು ಬಿಟ್ಟು ಇಮ್ಮುಡಿ ಮದಕರಿನಾಯಕನಿಗೆ ಒಬ್ಬ ಸಾಕು
ಮಗನನ್ನು ಕಲ್ಲನೆ ಮಾಡಿ ಅವನಿಗೆ ಪಟ್ಟಾಕಟ್ಟದ್ದು ಜನರ ಅಸಮಾ
ಧಾನ ಹೆಚ್ಚಾಗುವುದಕ್ಕೆ ಕಾರಣವಾಯಿತು. ಓಬಂಣನ ಪಟ್ಟಾಭಿಷೇ
ಕದ ಮಹೋತ್ಸವಕಾಲದಲ್ಲಿ ತಮಗೆ ಒಂದು ತಿಂಗಳ ಸಂಬಳ ಇನಾಮು
--------------------------
ಓಬಂಣನಾಯಕ. ೨೭
`ಕೊಡಲ್ಲಿವೆಂಬ ತಾತ್ಕಾಲದ ಆಕ್ರೋಶವು ಸೇನೆಯವರಿಗಿದ್ದ ಹಿಂದಿನ
ಅಸಮಾಧಾನವೆಂಬ ಮದ್ದಿಗೆ ರಂಜಕವಾಯಿತು. ಇದರಿಂದ ಸೇನೆಯ
ಜನರೂ ಇತರರೂ ಗುಂಪೆದ್ದದು ವಿಪರೀತವಾದ ಕೃತ್ಯಗಳನ್ನು ನಡಿಸಿ
ದರು.
ಹೀಗೆ ಅವಾಂತರನಾಗಿದ್ದ ಕಾರಣ ನ್ಯಾಯವಾಗಿ ಹಕ್ಕುದಾರನಾದ
ಸರ್ಜೆರಾಯನಮಗ ಚಿಕ್ಕಂಣನನ್ನುಕರೆದು ತರಲು ದಳವಾಯಿ ದೇಸಂಣ,
ರಂಗಪ್ಪ ಇವರಿಬ್ಬರೂ ಬಿಳಿಚೋಡಿಗೆ ಹೋಗಿ ಇಳದುಕೊಂಡು, ಚಿಕ್ಕಂ
ಣನನ್ನು ಕಣಕುಪ್ಪೆಯಿಂದ ಅಲ್ಲಿಗೆ ಕರೆಯಿಸಿಕೊಂಡು, ಆತನಿಗೆ ಬಹಳ
ವಾಗಿ ನಂಬಿಕೆಕೊಟ್ಟು ಅವನನ್ನು_ ದುರ್ಗಕ್ಕೆ ಕರೆದು ಕೊಂಡುಬಂದರು.
ಆ ಚಿಕ್ಕಂರಂಣನಾಯಕನಿಗೆ ಶ|| ೧೫೯೭ ನೇ ರಾಕ್ಷಸ ಸಂ|| ಜೇಷ್ಠ
ಬಹುಳ ೨ ಸೋಮುವಾರದಲ್ಲೂ ಸಿದ್ದೇಶ್ವರನ ಗುಡಿಯಲ್ಲಿ ಪಟ್ಟಾಕಟ್ಟಿ
ದರು. ಈ ಹೊಸ ದೊರೆಯು ಸಕಲರಿಗೂ ಅರ್ಧಾಯ ಪಟ್ಟಗಾಣಿಕೆ
ಎಂದು ಸಂದಾಯ ವಾಡಿದನು.
ನಳ ಸಂ|| ದಲ್ಲಿ ನಿಡಗಲ್ಲವರು ಸಾಣೇಕೆರೆಗೆ ೨೦ ದಿವಸ ಮುತ್ತಿಗೆ
ಹಾಕಿದರು. ತರುವಾಯ ದುರ್ಗದ ಸೇನೆಯು ಬಲವಾಗಿ ನಿಂತು ಎದುರಿ
ಸಿದ್ಬರಿಂದ ಶತ್ರುಗಳು ಕೌಲು ಮಾಡಿಕೊಂಡು ಕೋಟಿಯನ್ನು ದುರ್ಗದ
ವರ ವಶವಾಡಿದರು.
ಹರಪನಹಳ್ಳಿಯವರು ಅಣಜಿ ಮುತ್ತಿದ್ದು
ಇದೇ ಸಂ|| ಮಾಫಮಾಸವಲ್ಲಿ ಹರಪನಹಳ್ಳಿಯ ಪಾಳಯಗಾರರು
ಅಣಜಿ ಕೋಟೆಯನ್ನು ಹಿಡಿದು ಅಲ್ಲಿ ಅಧಿಕಾರಿಯಾ
ಗಿದ್ಗ ಭೂನಪ್ಪನನ್ನು ತಲೇ ಒಡೆದು ಕೊಂದರು
ಈ ಸಮಾಚಾರವನ್ನು ಕೇಳ ಪಾಳಯಗಾರ ಚಿಕ್ಕಂ
ಣನಾಯಕನು ಸಾಣೇಕೆರೆಯಿಂದ ಅಣಜಗೆ ಹೋದನು. ಅಷ್ಟರೊಳಗೆ
ಅಣಜೆಯಲ್ಲಿದ್ದ ಕೆಂಚನಗೌಡ ಮತ್ತು ಮಂದಿ ಸಹಾ ಸ್ವಾಮಿಕಾರ್ತಾರ್ಥ
ವಾಗಿ ಧೈರ್ಯಮಾಡಿ ನಿಂತು ಹರಪನ ಹಳ್ಳಿಯವರನ್ನು ಸೋಲಿಸಿ ಓಡಿಸಿ
ದರು. ಆಗ ಅವರ ಸಾಹಸಕ್ಕೆ ಮೆಚ್ಹಿ ಚಿಕ್ಕಂಣನಾಯಕನು ಅಣ
ಜೆಯಲ್ಲಿದ್ವ ಮಂದಿಗೆ ಹೊಲವನ್ನು ಮಾನ್ಯಕೊಟ್ಬು ಎಲ್ಲರಿಗೂ ಉಡು
------------------------------
೨೮ ಚಿತ್ರದುರ್ಗದ ಪಾಳಯಗಾ
ಗರೆಯನ್ನಿತ್ತು ಮಾಘ ಬ|| ೧೪ ಶಿವರಾತ್ರೆಯದಿವಸ ಚಿತ್ರದುರ್ಗಕ್ಕೆ
ಬಂದನು. ಈ ಸಂವತ್ಸರದಲ್ಲಿ ಹೊರಕನಾಯಕಳಕನ ಮುಖಾಂತರ ಚಿಕ್ಕಂ
ಣನಾಯಕನ ಸುತ್ತಿನ ಕೋಟೆ, ಕಲ್ಲುಬಾಗಿಲ ಬಳಿಯಣ ಅರಮನೆ,
ಇದರ ಸುತ್ತಿನ ಕೋಟೆ ಇದೆಲ್ಲವನ್ನೂ ಕಟ್ಟಿಸಿದರು.
ಷಂಷೇರ್ ಖಾನನೊಡನೆ ಯುದ್ಧ
ಪ್ಯೆಂಗಳ ಸಂ|| ದಲ್ಲಿ ಷಂಷೇರ್‌ಖಾನನ ದಂಡು ಹರಿಹರ ಮುತ್ತಲು
ಬರು ವುದೆಂದು ಅಲ್ಲಿನ ಸುಬೇದಾರ ಷೇರ್‌ಖಾನನ
ಮೂಲಕ ತಿಳೆಯಿತು. ಷೇರ್‌ಖಾನನು ದುರ್ಗಕ್ಕೆ
ಬಂದು ಈ ಸಂಗತಿ ಎಲ್ಲನನ್ನೂ ರಾಜರಿಗೆ ಅರಿಕೆ
ಮಾಡಿದನು. ಅಷ್ಟರಲ್ಲಿ ಷಂಷೇರ್‌ಖಾನನು ೬೦೦೦ ಕುದುರೆ ೧೨೦೦೦
ಕಾಲುಬಲ ಇದರೊಡನೆ ಬಂದು ಹರಿಹರವನ್ನು ಮುತ್ತಿದನು. ರಾಜನು
ಈ ಸಂಗತಿಯನ್ನು ಕೇಳಿ ಷೇರ್‌ಖಾನನನ್ನು ಕರೆದುಕೊಂಡು ಆ ಮು
ತ್ತಿಗೆಯನ್ನು ಏಳಸಲು ಹೊ ರಟು ಬಾರೆಗುಡ್ಡಕ್ಕೆ ಹೋಗಿ ಸೇನೆಯೊಡನೆ
ಇಳಿದುಕೊಂಡನು ಮತ್ತು ಆ ದಿವಸ ರಾತ್ರೆಯೇ ಆ ಗುಡ್ಡದಲ್ಲಿದ್ವ ಮರ
ಗಳಗೆಲ್ಲಾ ಪಂಜುಕಟ್ಟಿಸಿ ಎತ್ತುಗಳ ಕೋಡಿಗೆ ದೀವಟಿಗೆ ಕಟ್ವಿಸಿ, ನಗಾ
ರಿಯವರನ್ನೂ ಕಹಳೆಯವರನ್ನೂ ವಾದ್ಯದವೆರನ್ನೂ ಗುಡ್ಡದಲ್ಲಿಯೇ
ಇಟ್ಬು, ಏಕಕಾಲದಲ್ಲಿ ಶಬ್ದಮಾಡಿಸಿ ಹುಲ್ಲಹಾಸಿಸಿ ಅದಕ್ಕೂ ನೂರು
ಇನ್ನುರು ಬಾಣಗಳಗೂ ಏಕಕಾಲದಲ್ಲಿ ಬೆಂಕಿ ತೋರಿಸಿದರು. ಈ
ಒಟ್ಬು ಬೇಗೆಯನ್ನು ಕ೦ಡು ಇದಿಷ್ಟೂ ದಂಡೆಂದು ಶತ್ರುಗಳು ತಿಳಿದು
ಕೊಂಡು ಭೀತರಾದರು. ದೊರೆಯು ಸಕಲಬಲಸಮೇತವಾಗಿ ರಾತ್ರೆ
ಹೊಳೇ ಅಂಚಿನಲ್ಲಿಯೇ ಹೊರಟು ಹರಿಹರದ ಪಡವಲಕಡೆ ಕೊಡೆಯಾ
ಲದ ಬಳಿ ಹಾದು ತಳಿಗಳಮೇಲೆ ಬಿದ್ದು ಕಡಿದು,.. ಬಲಸಮೇತನಾಗಿ
ಊರೊಳಕ್ಕೆ ಹೊಕ್ಕು, ಪ್ರತಿ ದಿನವೂ ಹೊರಕ್ಕೆ ಬರುತಾ ಯುದ್ಧಮಾ
ಡುತಾ ಬಂದನು. ಷಂಷೇರ್ ಖಾನನ ದಂಡು ಇದಕ್ಕೆ ತಡೆಯಲಾರದೆ
ಎದ್ದುಓಡಿತು, ಕೋಟೆಯು ಶತ್ರುಗಳ ವಶವಾಗಲಿಲ್ಲ. ಹರಿಹರದ ಷೇರ್
ಖಾನನಿಗೆ ಈ ಕೋಟೆಯ ಅಧಿಳಕಾರವನ್ಟು ಮೊದಲಿನಂತೆ ಇಟ್ವದ್ದರಿಂದ
ಈತನು ದೊರೆಗೆ ಈ ಸೀಮೆಯ ಆಡಳತದ ವರ್ತನೆ, ಎರಡು ಕುದುರೆ
ಉಡುಗರೆ ಇದೆಲ್ಲವನ್ನೂ ಒಪ್ಪಿಸಿದನು,
---------------------------------------
ಇಕ್ಕೇರಿಯವರ ಧಾಳಿ. ೨೯
ಮಲೆನಾಡಿನವರೊಡನೆ ಯುದ್ಧ /ರಾಜಕುಟುಂಬದವರು ಶಿವಾಚಾರದವರಾದ್ದು/ಶಿವಭಕ್ತರಮತ ಬಿಟ್ಟದ್ದು
ಇದೇ ಪೈಂಗಳ ಸಂ|| ದಲ್ಲಿ ಇಕ್ಕೇರಿದೊರೆಗಳ ಬಗೆ ಫೌಸುದಾ ರ
ಕಾಸರಗೋಡು ತಿಮ್ಮಯ್ಯೆನು ದಂಡು ತೆಗೆದು
ಕೊಂಡುಬಂದು ದುರ್ಗದ ಸೀಮೆಯನ್ನು ಧಾಳಿ
ಮಾ ಡಿ ಛಿನ್ನಭಿನ್ನನಾಗಿ ಒಡೆದನು. ಆದರೆ ಇ,
ವನು ಅದವಾನಿಗೆ ಹೋಗುವದರೊಳಗೆ ಮೃತನಾದನು. ಕಾಳಾಯು
ಕ್ತಿ ಸಂ|| ದಲ್ಲಿ ದುರ್ಗದ ಸೇನೆಯು ರಾಯದುರ್ಗದ ತೋಟೆಗೆ ಮುತ್ತಿ
ಗೇ ಹಾಕತು. ಆಗ ಅಲ್ಲಿನ ಪಾಳಯಗಾರನಾದ ಬುಟಕಲ್ ಬೊಂಮಂ
ಣನಾಯಕನು ಊರಬಾಗಿಲ ಬೀಗದಕೈಯನ್ನೂ ಮುದ್ರೆಯನ್ನೂ
ಸಹಾ ತಂದು ಚಿಕ್ಕಂಗನಾಯಕನಿಗೆ ಒಪ್ಪಿಸಿದನು. ಇದೂ ಅಲ್ಲದೆ ಅದೇ
ಬೊಂಮ್ಮಂಣನಾಯಕನು ದುರ್ಗದ ರಾಜನಿಗೆ ಹೆಂಣುಕೊಡುತ್ತೇವೆಂದು
ಒಡಂಲಬಡಿಕೆ ಹೇಳಿಕಳುಹಿಸಿದನು. ಆಗ ಚಿಕ್ಕಂಣನಾಯಕನು ಬೊ
ಮ್ಮಂಣನಾಯಕನನ್ನೂ ಅವನ ಕುಟುಂಬವನ್ನೂ ಸಹಾ ರಾಯದು
ರ್ಗಕ್ಕೆ ಕಳುಹಿಸಿಕೊಟ್ವನು. ಕಾಳಾಯುಕ್ತಿ ಸಂ|| ದಲ್ಲಿ ಚಿಕ್ಕಂಣನಾ
ಯಕನಿಗೆ ಮದುವೆ ಬೆಳೆಯಿತು. ಶ|| ೧೬೦೦ಕ್ಕೆ ಸರಿಯಾದ ಇದೇ
ಕಾಳಾಯುಕ್ತಿ ಸಂ|| ದಲ್ಲಿ ಅರಮನೆಯಲ್ಲಿ ಸರ್ವರೂ
ರಾಜಕುಟಂಬದವರು ಜಂಗಮರ ಕೈಯಿಂದ ಶಿವದೀಕ್ಷೆ ಯನ್ನು ತೆಗೆದು
ಕೊಂಡು, ರಾಜನೂ ನಾಗತಿಯರೂ ಸಹಾ ವಿಶಿ
ಷ್ಟರೂ ಲಿಂಗವನ್ನು ಕಟ್ವಿಸಿಕೊಂಡರು. ಇವರುಗಳಗೆ ಪಾದಾ ಪಾಲಿ
ಸುವುದಕ್ಕೆ ಉಗ್ರಚನ್ನ ವೀರದೇವರೆಂಬ ವಿರಕ್ತಜಂಗಮರಿಗೆ ಗೊತ್ತು
ಮಾಡಿ ಲಾಳಕೋಟೆ ಬಾಗಿಲಲ್ಲಿ ಇವರಿಗೆ ಒಂದು ಕಲ್ಲುಮಠ ಕಟ್ಟಿಸಿ
ಕೊಟ್ಜದ್ವರು. ಆದರೆ ಇದೇ ಸಂ|| ದಲ್ಜಿ ಲಿಂಗವಂತರ ಮತವು ಸರಿ
ಬೀಳದೇಹೋಸದ್ಬರಿಂದ ರಾಜನ ಮನೆತನದವರೆ
ಲ್ಲರೂ ಲಿಂಗವನ್ನು ತೆಗೆದುಬಿಟ್ನರು, ಆದರೆ ಹಟ್ಟಿ
ಮಲ್ಲವ್ವೃನಾಗತಿಮಾತ್ರ ಲಿಂಗಾ ಕಟ್ಟಿಕೊಂಡು ಎಲ್ಲ
ರನ್ನೂ ಬಿಟ್ಬು ಬೇರೆ ವಾಸಮಾಡುತಿದ್ಬಳು.
-------------------------------
೩೦ ಚಿತ್ರದುರ್ಗದ ಪಾಳಯಗಾರರು.
ಚಂದ್ರಾಯುಧಕ್ಕೆ ಮದುವೆ
ಶ|| ೧೬೦೧ ನೇ ಸಿದ್ಧಾರ್ಥಿ ಸಂ|| ದಲ್ಲಿ ತರೀಕೆರೆ ಪಾಳಯಗಾರ
ರು.ತಮ್ಮ ಮನೆಯ ಹೆಂಣುಮಗಳಾದ ಹನುಮವ್ವ
ಬಹಳ ಚಲುವೆ ಎಂತಲೂ ಇವಳನ್ನು ದುರ್ಗದ
ಪಾಳಯಗಾರ ಚಿಕ್ಕಂಣನಾಯಳನಿಗೆ ಮದುವೆಮಾ
ಡಿಕೊಡುತೇವೆಂತಲೂ ಬಿದರೂರು ಚನ್ನಮ್ಮಾಜಿ, ಶಬನಿ ಕೃಷ್ಣಪ್ಪ
ಇವರ ಮಧ್ಯಸ್ಥದ ಮೂಲಕ ಹೇಳಕಳಿಹಿಸಿದರು. ಆಗ ದುರ್ಗದ
ದೊರೆಯು ಪಟ್ಟದ ಆಯುಧಗಳನ್ನು ಕಳುಹಿಸಿ ಅದಕ್ಕೆ ಮದುವೆಮಾಡಿ
ಕೊಡಬೇಕೆಂದು. ಹೇಳಿಕಳುಹಿಸಿದನು. ಚಿಕ್ಕಂಣನಾಯಕ್ನು ತಾನೇ
ಬರದೇ ಮದುವೆಗಾಗಿ ತನ್ನ ಚಂದ್ರಾಯುಧವನ್ನು ಕಳಿಹಿಸಿದಕಾರಣ
ತರೀಕೆರೆಯವರು ತಮಗೆ ಅವಮಾನವಾಯಿತೆಂದು ತಿಳದು, ಶಕುನವ್ವ
ಎ೦ಬ ಬೇರೊಬ್ಬ ಹೆಂಣನ್ನು ಕೊಟ್ಸು ಆ ಚಂದ್ರಾಯುಧಕ್ಕೆ
ಮದುವೆಮಾಡಿದರು. ಈ ಪ್ರಕಾರ ಈ ಮೊದಲು ಕೊಡುವುದಾಗಿ
ವಾಗ್ದಾನಮಾಡಿದ್ಧ ಕನ್ಯವನ್ನು ಬಿಟ್ಟು ಬದಲು ಹೆಂಣನ್ನು ಮದುವೆ
ಮಾಡಿದರೆಂದು ಚಿಕ್ಕಂಣನಾಯಕನು ಕೇಳಿ ತರೀಕೆರೆಯ ಪಾಳೆಯ
ಪಟ್ಟಿನಮೇಲೆ ದಂಡೆತ್ತಿ ಯಗಟ, ಯಲ್ಲಂಬಳಸೆ, ಚೌಳಹಿರಿಯೂರು,
ಈ ಮೂರು ಗಡಿಗಳನ್ನೂ ತೆಗೆದುಕೊಂಡು ತರೀಕೆರೆಯಮೇಳೆ ಹೊರ
ಡಲು ಉದ್ಯುಕ್ತನಾದನು. ಇದು ಆದಮೇಲೆ ತರೀಕೆರೆಯವರಕಡೆ
ನಿಯೋಗಿಗಳು ಬಂದು ಹನುಮವ್ವನಾಗತಿಯನ್ನೇ `ಕೊಡುತೇವೆಂದು
ಸಲಹೆಮಾಡಿಕೊಂಡುಹೋದರು. ತರುವಾಯ ರಾಜನು ತರೀಕೆರೆಗೆ
ಹೋಗಿ ಹನುಮವ್ವನಾಗತಿಯೆನ್ನೇ ಮದುವೆಯಾಗಿ ಬಂದನು. ಈ
ಪ್ರಸ್ತುತಕ್ಕೆ, ೧೦೦೦೦σ೦ ಮುಟ್ಟಿತು, ಈ ಮದುವೆ ಸಂಬಂಧದಿಂದ ಹು
ಟ್ಟಿದ ದ್ವೇಷಕ್ಕಾಗಿ ತೆಗೆದುಕೊಂಡಿದ್ದ ಗಡಿಗಳನ್ನು ದುರ್ಗದವರು ತರೀ
ಕೆರೆಯವರಿಗೆ ಬಿಟ್ಬುಬಿಟ್ವರು. ಇದೇ ಸಿದ್ಧಾರ್ಥಿ ಸಂ|| ದಲ್ಲಿ ಬಾಗೂರ
ಚನ್ನಿಗರಾಯನ ತೇರು, ಚಿನ್ನದಮುಲಾಮಿನ ಗರುಡೋತ್ಸೋವದ ಮೂರ್ತಿ
ಇದನ್ನು ಮಾಡಿಸಿದರು. ಇದೇ ಸಿದ್ಧಾರ್ಥಿ ಸಂ|| ದಲ್ತಿ ಉಚ್ಚಂಗಿ
ದರ್ಗದ ಕೊಟೆಯನ್ನು ಕಟ್ಟಿಸುವಾಗ ಹಳೇ ಶತ್ರುಗಳಾದ ಹರಪನ
ಹಳ್ಳಿಯವರೊಡನೆ ಲಡಾಯಿ ಸಂಭವಿಸಿತು, ದುರ್ಗದವರೇ ಗೆದ್ದರು.
------------------------------------
ರಣದುಲ್ಹಾ ಖಾನನ ಮುತ್ತಿಗೆ. ೩೧
ರೌದ್ರಿ; ಸಂ॥ ದಲ್ಲಿ ಮೇಲ್‌ದುರ್ಗದಮೇಲೆ ವಿನಾಯಕನ ಗುಡಿ, ಹೊಂಡ
ಮೊದಲಾದ ಉಪಯುತ್ತ ವಾದ ಕೆಲಸಗಳನ್ನು ಮಾಡಿಸಿದರು.
ರಣದುಲ್ಲಾ ಖಾನನೊಡನೆ ಯುದ್ಧ.
ಗೋಲಕೊಂಡದವರ ಮುತ್ತಿಗೆ
ಇದೇ ರೌದ್ರಿ ಸಂವತ್ಸರದ ಮಾಘಮಾಸದಲ್ಲಿ ವಿಜಾಪುರದ ರಣ
ದುಲ್ಲಾಖಾನನ ದಂಡು ಬಂತು. ಮೊಳಗೊಂಡನ
ಹಳ್ಳಿಯನ್ನು ಹರಪನ ಹಳ್ಳಿಯವರು ಮುತ್ತಿದರು.
ರಾಜನು ದಂಡಿನೊಡನೆ ಹೋಗಿ ಮುತ್ತಿಗೆಯನ್ನು
ಬಿಡಿಸಿ ಬಂದನು. ರಕ್ತಾಕ್ಷಿ ಸಂ॥ ದಲ್ಲಿ ಬೂದಿಹಾಳ ಮುತ್ತಿಗೆಗಾಗಿ ದಳ
ವಾಯಿ ಚಿಕ್ಕಪ್ಪ, ಹೊರಕೆ ನಾಯಕ, ಕುಂಜಪ್ಪನ ದಾಸೈಯ್ಯ ಇವರ
ಸಂಗಡ ಸಕಲ ಬಲವನ್ನೂ ಕೊಟ್ಟು ಕಳುಹಿಸಿದರು. ಈ ದಂಡು
ಹೋಗಿ ಬೂದಿಹಾಳಗೆ ಮುತ್ತಿಗೆ ಹಾಕಿತು. ಇಷ್ಟರಲ್ಲಿ ಗೋಲಕೊಂ
ಡೆಯ ನವಾಬರ ಕಡೆ ಪೊದಲಿ ಲಿಂಗಪ್ಪನದಂಡು
ಬರುವುದೆಂದು ತಿಳಯಬಂದಕಾರಣ, ಬೂದಿಹಾಳ
ಮುತ್ತಿಗೆಯನ್ನು ಬಿಡಿಸಿ ಅಲ್ಲಿಂದ ದುರ್ಗಕ್ಕೆ ಸೇನೆ
ಯನ್ನು ಕರಸಿಕೊಂಡರು. ಗೋಲಕೊಂಡದವರ ದಂಡು ಬಂದು
ರಾಮಗಿರಿಗೆ ಮುತ್ತಿಗೆ ಹಾಕಿತು. ಆಗ ದುರ್ಗದ ದಂಡು ಬಂದು ಶತ್ರು
ಗಳನ್ನು ಓಡಿಸಿತು. ಶ॥೧೬೦೩ ನೇ ಕ್ರೋಧನ ಸಂ॥ ದ ಭಾದ್ರ
ಪದ ಶು|| ೩ ದಿವಸ ದುರ್ಗದ ದಂಡಿನವರು ವಿನಾಯಕನನ್ನು ಕಳುಹಿಸು
ವುದಕ್ಕೆ ಹೊರಟು ಹೊರಕ್ಕೆ ಹೋಗಿ ಉಜ್ಜನಿಗೆ ಮುತ್ತಿಗೆ ಹಾಕಿ ತೆಗೆ
ದುಕೊಂಡರು. ತರುವಾಯ ೨॥ ತಿಂಗಳಮೇಲೆ ಶತ್ರುಗಳು ಕೌಲು
ಮಾಡಿಕೊಂಡುರು. ಹರಪನಹಳ್ಳಿಯ ಪಾಳಯಪಟ್ಟ ನವರು ಉಜ್ಜನಿ
ಕೋಟೆಯನ್ನು ಇದೇ ಸಂ॥ ಕಾರ್ತೀಕ ಶು|| ೧೨ ದಿವಸ ಮುತ್ತಿ ಆ
ಊರನ್ನು ತೆಗೆದುಕೊಂಡರು. ಆ ಯುದ್ಧದಲ್ಲಿ ದುರ್ಗದ ದಂಡು ಸೋ
ತುಹೋಯಿತು. ಆ ಕೋಟೆಯಲ್ಲಿದ್ದ ಜರಿ ಮಲೆ ಬೊಮ್ಮಂಣನಾಯ
ಕನನ್ನು ಹರಪನಹಳ್ಳಯವರು ಖೈದಿಯಾಗಿ ಹಿಡಿದು ಕೊಂಡಿದ್ದು
ಮೂರು ನಾಲ್ಕು ತಿಂಗಳಮೇಲೆ ಬಿಟ್ಟುಬಿಟ್ಟರು.
---------------------------------------
೩೨ ಚಿತ್ರದುರ್ಗದ ಪಾಳಯಗಾರರು.
ಚಿಕ್ಕನಾಯಕನ ಮರಣ
ಅಕ್ಷಯ ಸಂ॥ ದಲ್ಲಿ ದೊರೆಯಾದ ಚಿಕ್ಕಂಣನಾಯಕನು ೧೨
ವರುಷ ಆಳಿ ಸ್ವರ್ಗಸ್ಥನಾದನು. ಈತನಿಗೆ ಮಕ್ಕ
ಳಿಲ್ಲ, ಇವರ ಅಂಣ ಮುಮ್ಮುಡಿ ಮದಕರಿನಾಯಕ
ನಿಗೆ ಪಟ್ಟವಾಯಿತು.
೮ನೇ ಅಧ್ಯಾಯ,
ಮುಮ್ಮುಡಿ ಮದಕರಿನಾಯಕ (ಠಿಂಗಂಣಮದಕರಿನಾಯಕ)
ಶ ೧೬೦೮ನೇ ಅಕ್ಷಯ ಸಂ||
ಮುಮ್ಮುಡಿ ಮದಕರಿನಾಯಕನಿಗೆ ಪಟ್ಟ
ಸೇನೆಯವರ ೨nಏ ಹಾವಳಿ, ಅದರ ಕಾರಣ
ಅಕ್ಷಯ ಸಂ॥ ಕಾರ್ತೀಕ ಶು|| ೧೧ ಯಲ್ಲು ಚಿಕ್ಕಂಣನಾಯಕನ
ಮುಮ್ಮುಡಿ ಮದಕರಿನಾಯಕನಿಗೆ ಪಟ್ಟ ಕಟ್ಟಿ
ದರು. ಆ ಕಾಲದಲ್ಲಿ ವೀರಕ್ಷಾಮ ಸಂಭವಿಸಿತು.
ಸೇನಾನಾಯಕರ ಅಸಮಾಧಾನವೂ ಆಟೋಪವೂ ದಿನೇ ದಿನೇ ವಿಪರೀ
ತವಾಗುತಾಬಂತು. ಇದಕ್ಕೆ ಕಾರಣವನ್ನು ವಿಚಾ
ರಮಾಡಿದರೆ ಸ್ಪಲ್ಪಮಟ್ಟ್ಟಗೆ ನಿರ್ಧರಿಸಬಹುದಾಗಿ
ತೋರುತ್ತೆ. ಚಿಕ್ಕಂಣನಿಗೆ ಪಟ್ಟವಾಗುವುದಕ್ಕೆ
ಮುಂಚೆ ಇಮ್ಮಡಿ ಮದಕರಿನಾಯಕನ ಸಾಕುಮಗ ಓಬಂಣನಿಗೆ ದೊರೆ
ತನವನ್ನು ಕೊಟ್ಟ ಕಾಲದಲ್ಲಿಯೇ ಹಿರೀ ಸಂತತಿಯಾದ ಸರ್ಜೆರಾಯನ
ವಂಶಕ್ಕೆ ರಾಜ್ಯ ತಪ್ಪಿಹೋಗಿ ಬೇರೇ ಸಂತತಿಗೆ ಬಂತಲ್ಲಾ ಎಂಬ ಅಸ
ಮಾಧಾನ ಉಂಟಾಗಿತ್ತು. ಈ ವಿಚಾರವಾಗಿ ಚರ್ಚೆಹುಟ್ಟಿ ಕೆಲವರು
ಸಾಕುಮಗನ ಪಕ್ಷವನ್ನು ವಹಿಸಿಕೊಂಡಿದ್ದರು. ಆದರೆ ಸರ್ಜೆರಾಯನ
ವಂಶಸ್ಥರ ಪಕ್ಷವನ್ನು ಹಿಡಿದಿದ್ದ ಕಕ್ಷಿಯು ಬಲವಾಗಿದ್ದಕಾರಣ,
ಅವರು ಓಬಂಣನಾಯಕನ ತಲೇ ಹುಯಿದು ಚಿಕ್ಕಂಣನಾಯಕನನ್ನು
ಪಟ್ಟಕ್ಕೆ ಕೂರಿಸಿದರಪ್ಟೆ. ಆಗ್ಲೆ ಅದೇ ಜರುಗಿಹೋಯಿತು. ಓಬಂಣ
ನಾಯಕನ ಪಕ್ಷವನ್ನು ಹಿಡಿದಿದ್ದವರ ಕೈ ನಡೆಯದೇ ಹೋದಾಗ್ಯೂ,
ಆ ಸ್ಪಲ್ಪ ಸಂಖ್ಯೆ ಜನರಿಗೂ ಕೆಲವು ಸೇನಾಪತಿಗಳಗೂ ಹುಟ್ಟಿದ್ದ ಬೆಂಕಿ
-------------------------------------------
ಮುಮ್ಮುಡಿ ಮದಕರಿನಾಯಕನಿಗೆ ಪಟ್ಟ. ೩೩
ಯೇನೋ ಆರಲಿಲ್ಲ. ಅದು ಹೊಗೆಯಾಡುತ್ತಲೇ ಇತ್ತು. ಚಿಕ್ಕಂಣ
ನಾಯಕನಿಗೆ ದೊರೆತನವಾದಮೇಲೆ ಅವನ ಆಳಕೆ ಬಲವಾಗಿಯೇ ಜರು
ಗಿದಕಾರಣ ಬಹುಮಂದಿಯು ಅವನಂತೆಯೇ ನಡೆಯುತಾಇದ್ದರು.
ಅವನ ಮರಣಾನಂತರ ಅವನ ಅಂಣ ಮುಮ್ಮುಡಿ ಮದಕರಿನಾಯಕ
ನನ್ನು ದೊರೆತನಕ್ಕೆ ತಂದರು. ಈ ಸಾಲದಲ್ಲಿ ಹಕ್ಕುದಾರಿ ವಿಚಾರದ
ಚರ್ಚೆಯನ್ನು ಮಾಡುವುದಕ್ಕೆ ಪ್ರತಿಕಕ್ಷಿ ಯವರಿಗೆ ಸಮಯದೊರಕಿತು.
ಹಿರೀ ಸಂತತಿಯವನಾದ ಸರ್ಜೆರಾಯನ ಹಕ್ಕಿನಮೇಲೆ ಅವನ ಹಿರೀ
ಮಗನಾದ ಲಿಂಗಂಣನೆಂಬ ಮುಮ್ಮುಡಿ ಮದಕರಿನಾಯಕನ ನ್ಯಾಯ
ವಾದ ವಾರಸುದಾರನಾಗುತಿದ್ದನು. ಅಂಥವನನ್ನು ಬಿಟ್ಟು ಚಿಕ್ಕವ
ನಾದ ಚಿಕ್ಕಂಣನಾಯಕನನ್ನು ಅಂಗೀಕರಿಸಿದಮೇಲೆ ಈ ಚಿಕ್ಕವನ
ವಂಶದಲ್ಲಿಯೇ ರಾಜ್ಯ ಜರಗಬೇಕು. ಅವನು ಅಪುತ್ರವಂತನಾದ್ದರಿಂದ
ಆ ಚಿಕ್ಕಯಂಣನಿಗೆ ದತ್ತುವಾದರೂ ಕೊಡಿಸಿ ರಾಜ್ಯವನ್ನು ನಿಲ್ಲಿಸಬೇಕಲ್ಲದೆ
ಹಿರಿಯವನೆಂಬ ಕಾರಣದಮೇಲೆ ಈಗ ಲಿಂಗಂಣನನು ತಂದದ್ದು ಸರಿ
ಯಲ್ಲ, ಹಿರಿಯವನಿಗೆ ಮೊದಲು ರಾಜ್ಯಪ್ರಾಪ್ರವಾಗಬೇಕಾದ್ದು ಸರಿ
ಯಾದ ಮಾರ್ಗ; ಅಂಥವನನ್ನು ಮೊದಲು ಅಂಗೀಕರಿಸದೆ ಇರಲು
ಯಾವಕಾರಣವಿತ್ತೋ ಈಗಲೂ ಅವನಿಗೆ ಪಟ್ಟವಾಗಕೂಡದೆಂಬ ಭಾಗ
ದಲ್ಲಿಯೂ ಅದೇ ಕಾರಣವನ್ನೇ ಇಟ್ಟು ಕೊಳ್ಳ ಬೇಕು, ಎಂದು ಮೊದಲಿ
ನಿಂದ ಅಸಮಾಧಾನಪಟ್ಟುಕೊಂಡು ಇಮ್ಮಡಿ ಮದಕರಿನಾಯಕನ ಸಾಕು
ಮಗನ ಪಕ್ಷವನ್ನು ವಹಿಸಿದ್ದವರು ಪುನಃ ತಲೆ ಎತ್ತಿದರು. ಇದೂ
ಅಲ್ಲದೆ ಪದೇ ಪದೇ ಪರರಾಜರ ಮೇಲೆ ಯುದ್ಧ ಪ್ರಸಕ್ತಿಯು ಬೀಳು
ತ್ತಲೇ ಇತ್ತು. ಇದಕ್ಕಾಗಿ ಆಯಾಕಾಲದಲ್ಲಿದ್ದ ರಾಜರು ಸೇನೆಯನ್ನು
ಹೆಚ್ಚಿಸಿ ಸೇನಾಪತಿಗಳನ್ನು ಅನುಸರಿಸಿಕೊಂಡು ಅವರಿಗೆ ಬೇಕಾದನ್ನು
ಕೊಡುತಾ ಬಂದ ಕಾರಣದಿಂದಲೂ, ಅವರು ಆಗಾಗ್ಯೆ ಶತ್ರುಗಳನ್ನು
ಜೈಸಿ ಹೆಸರ ಪಡೆಯುತಾ ಬಂದದರಿಂದಲೂ, ಸೇನಾನಾಯಕರ ಕೊಬ್ಬು
ಹೆಚ್ಚಿತು. ಎದುರು ಕಕ್ಷಿಯವರು ಒಬ್ಬ ದೊರೆಯನ್ನು ಉರುಟನಿದ್ದು
ತಾವೂ ಇನ್ನೊಬ್ಬ ಪ್ರತಿಕಕ್ಷಿ ಯವರಿಂದ ನೇಮಿಸಲ್ಪಟ್ಟವನನ್ನು ತ
ಹಾಕಲು ಧೈರ್ಯಉಂಟುಮಾಡಿತು. ಒಂದು ಬಗೆಯಲ್ಲಿ ನ್ಯಾಯವನ್ನು
--------------------------------------
೩೪ ಚಿತ್ರದುರ್ಗದ ಪಾಳೆಯಗಾರರು.
ನೋಡಿದರೆ ಹಿರೀ ಸಂತತಿಗೆ ರಾಜ್ಯ ದೊರೆಯದೇ ಹೋದತಪ್ಪನ್ನು ಈ
ಚೆಗೆ ಸರಿಮಾಡಿಕೊಳ್ಳ ಬೇಕೆಂದು ಯತ್ನಮಾಡಿದ್ದು ಅಂಗೀಕಾರವಾಗ
ಬಹುದು. ಆದರೆ ತಪ್ಪಿಹೋದ್ದು ತಪ್ಪಿಯೇ ಹೋಯಿತು. ಬೇರೊ
ಬ್ಬದೊರೆ ನೇಮಕವಾದಮೇಲೆ ಅವನು ಯಾರೇ ಆಗಲಿ ಅವನ ಆಳಕೆಗೆ
ಜನರು ಒಳಪಡಬೇಕು. ಹಾಗೆ ಒಳಪಡದೆ ಹಿಂದೆ ತಮ್ಮ ಹಗೆಯವರು
ಓಬಂಣನಾಯಕನನ್ನು ತಲೆ ಒಡೆದುದರಿಂದ ಆ ಶತೃತ್ವವನ್ನು ತೀರಿಸಿ
ಕೊಳ್ಳುವುದಕ್ಕೆ ಈಗ ಲಿಂಗಂಣ ಮದಕರಿನಾಯಕನನ್ನು ತಳ್ಳಿಹಾಕುತ್ತೇ
ವೆಂದು ಕೆಲವು ಹಿಂದಿನ ತುಂಟರು ಹಠಮಾಡಿಕೊಂಡು ದಂಗೆ ಮಾಡಿದರೆ
ನ್ನುವುದಕ್ಕೆ ಸಂದೇಹ ಹಾಣುವುದಿಲ್ಲ.
ದಂಗೆಯ ಸೇನೆಯವ ರಲ್ಲಿ ಕಕ್ಷಿ, ದಳವಾಯಿ ಪಂಚಮರ ಮುದ್ಬಂಣ
ನ ಪ್ರಾಬಲ್ಯ.
ದೊಂಣೆ ರಂಗಪ್ಪನಿಗೆ ಪಟ್ಟ.
ಇದೇ ಮೊದಲಾದ ಉದ್ದೇಶ್ಯದಿಂದ ವಿಭವ ಸಂ॥ ಆಶ್ಪೀಜ ಮಾಸ
ದಲ್ಲಿ ನೂ ಇನ್ನೂ ಕೆಲವು
ಸೇನೆಯವರೂ ತಿರುಗಿಬಿದ್ದು, ದೊರೆಯಾದ ಠಂಗಂಣ
ಮುದ್ದಂಣ ಮದಕರಿನಾಯಕನು (ಮುಮ್ಮುಡಿ ಮದಕರಿನಾ
ಯಕ) ಕಸ್ತೂರಿ ರಂಗಪ್ಪನಾಯಕನ ಅರಮನೆಯಲ್ಲಿ
ದೇವರಪೂಜೆಯನ್ನು ಮಾಡುತ್ತಿರುವಾಗ, ಅರಮನೆಯನ್ನು ಘೇರಾಯಿಸಿ
ಕೊಂಡರು, ಆಗ ರಾಜರ ಬಳಿ ಇದ್ದ ಗುರಿಕಾರ ಹೊರಕೆನಾಯಕ.
ರಾಮಜೋಗಿ, ತಡುಹಿನ ಚಿನ್ನಯ್ಯ, ಪೋತುರಾಜನ ಲಿಂಗಯ್ಯ, ಕೌಲು
ತಮ್ಮಯ್ಯ, ಬೆಂಡೊಣೆ ದಾಸಯ್ಯ ಮುಂತಾದವರು--ಪಟ್ಟಾ ಕಟ್ಟದ
ದೊರೆಯನ್ನು ತಾವು ಒಪ್ಬಿಸಿಕೊಡುವುದಿಲ್ಲವೆಂದು ಬಹಳ ಕಸ್ತುಮಾಡಿ
ಬೆನ್ನುಹಾಕಿಕೊಂಡರು. ಆಗ ಮೆಳೆಕಟ್ಟೆ ಮಾದಯ್ಯ ಮೊದಲಾದವರು
ಮಾಧ್ಯಸ್ಥಮಾಡಿದರು. ದಳವಾಯಿ ಮುದ್ದಂಣನು ರಾಜನ ಕಡೆಯವ
ರ್ಧಾಗಿದ್ದ ಗುರಿಕಾರರನ್ನೆಲ್ಲಾ ಅಂಕೆಯಲ್ಲಿಟ್ಟು ರಾಜನನ್ನು ಮೇಲು ದುರ್ಗ
ಕ್ಕೆ ಕರೆತಂದು ಅವನಿಗೆ ಮೂಗು ಕುಯಿದು ಹುಣಸೇ ಮರದ ಗಿರಿಯಂ
ಣನ ಮನೆಯಲ್ಲಿ ಸೆರೆಹಾಕಿ ಇದೇ ವಿಭವ ಸಂ॥ ಆಶ್ಟೀಜ ಶು|| ೧೨ ಯಲ್ಲಿ
ದೊಂಣೆ ರಂಗಪ್ಪನಾಯಕನೆಂಬ ಬೇರೊಬ್ಬ ಮನುಷ್ಯ
ನನ್ನು ಪಟ್ಟಕ್ಕೆ ಕೂರಿಬದನು. ದಳವಾಯಿ ಮುದ್ಧಂ
ನೇ ಸರ್ವಾಧಿಕಾರವನ್ನೂ ವಹಿಸಿಕೊಂಡು ಚಿಕ್ಕಂಣ
-------------------------------------
ದಳೆವಾಯಿ ಮುದ್ದಂಣ. ೩೫
ನಾಯಕರ ಅರಮನೆಯಲ್ಲಿ ವಾಸಮಾಡುತಾ ಇದ್ದನು. ಆದರೆ ಈ ದಳ
ವಾಯಿ ಮುದ್ದಂಣನ ಮೂರು ಜನ ತಮ್ಮಂದಿರಾದ ಚುಕ್ಕಪ್ಪು, ಚಿಕ್ಕಪ್ಪ,
ರಾಯಂಣ ತಂತಮ್ಮ ಮನೆಯಲ್ಲಿಯೇ ವಾಸಮಾಡಿಕೊಂಡಿದ್ದರು. ಈ
ದಳವಾಯಿ ಮುದ್ದಣನು ಬಿದರಕೆರೇ ಹೊಲಬಿನಲ್ಲಿ ಸಂತೇ ಮುದ್ದಾಪು
ರದ ಗ್ರಾಮವನ್ನೂ ಅಲ್ಲಿ ಹನುಮಂತರಾಯನ ದೇವಸ್ಥಾನ,ಕೆರೆಗ
ಳನ್ನೂ ದುರ್ಗದಲ್ಲಿ ಶಿರಗಿರಿ ಮಲ್ಲಿಕಾರ್ಜುನನ ದೇವಸ್ಥಾನವನ್ನೂ ಸ್ಥಾ
ಪನೆ ಮಾಡಿದನು. ಇವನ ತಮ್ಮ ಚುಕ್ಕಂಣನು ಬೇರೆ ನಾಲ್ಕು ಗ್ರಾಮ
ಗಳನ್ನು ಮುರಿದು ತನ್ನು ಹೆಸರಿನಲ್ಲಿ ಚುಕ್ಕಂಣನ ಹಳ್ಳಿಯನ್ನು ಕಟ್ಟಿಸಿ
ದನು. ಚಿಕ್ಕಪ್ಪನ ಗಾಣದಹಾಳು ಗ್ರಾಮವನ್ನು ಒಡೆದು ಚಿಕ್ಕಪ್ಪನ
ಹಳ್ಳಿಯನ್ನು ಕಟ್ಟಿಸಿ, ಇದಕ್ಕೆ ಪೂರ್ವಕ್ಕೆ ಇದ್ದ ತಗ್ಗಿನಹಳ್ಳಿ ಎಂಬಗ್ರಾಮ
ಕ್ಕೆ ತನ್ನ ಹೆಂಡತಿ ಮಾಡಲಕ್ಕನ ಹೆಸರಿಗೆ ಮಾಡಲಕ್ಕನ ಹಳ್ಳಿಯನ್ನು
ಮಾಡಿಸಿದ. ರಾಯಂಣನು ಮಲ್ಲಭಟ್ಟರ ಹಳ್ಳಿಗೆ ರಾಯಂಣನ ಹಳ್ಳಿ
ಎಂದು ಹೆಸರಿಟ್ಟನು. ಮತ್ತು ಸಾದರಹಳ್ಳಿ ಕೆರೆ, ದುರ್ಗದ ಬಳಿ ಕಲ್ಲ
ಮಠ ಸಹಾ ಕಟ್ಟಲ್ಳಟ್ಟವು.
ಪಂಚಮರ ಮುದ್ದಂಣನ ಮೇಲೆ ದಳವಾಯಿ ಭರಮಪ್ಪ ತಿರುಗಿ ಬಿದ್ದುದು
ಈ ದಳವಾಯಿ ಮುದ್ದಂಣ ಇವನ ಮೂರು ಜನ ತಮ್ಮಂದಿರೂ
ಸಹಾ ವಿಶೇಷವಾಗಿ ಪ್ರಬಲವಾಗುತಾ ಬಂದದ್ದು
ಇತರ ಜನರಿಗೂ ಮತ್ತು ದಳವಾಯಿ ಭರಮಪ್ಪ
ನಿಗೂ ಸರಿಯಾಗಿ ತೋರದೆ ತಿರುಗಿ ಸೇನಾಪತಿಗ
ಳಲ್ಲಿ ಒಬ್ಬೊಬ್ಬರಿಗೆ ವೈಷಮ್ಯ ಹುಟ್ಟಿತು. ದೊರೆ
ಯಾದ ಲಿಂಗಂಣನನ್ನು ಮುದ್ದಂಣ ಹಿಂಸೆಮಾಡಿ ಕೊಂದ ಫಲಕ್ಕೆ ತಲೆಗೆ
ತಲೆಯನ್ನು ತೆಗೆದುಕೊಳ್ಳುವವರೆಗೆ ಮತ್ಸರ ತೀರುವುದಿಲ್ಲವೆಂದು ಯೋ
ಚಿಸಿ, ದಳವಾಯಿ ಭರಮಪ್ಪನು ಪ್ರಬಲನಾಗಿದ್ದ ಪಂಚಮರ ಮುದ್ದಂಣ
ನನ್ನೂ ಮತ್ತೂ ಇವನ ಮೂರು ಜನ ತಮ್ಮಂದಿರನ್ನೂ ಉಪಾಯದಿಂದ
ಕೈಸೆರೆ ಹಿಡಿದು, ಕೋತಿ ಬಂಡೆಯಬಳಿಯಲ್ಲಿ ಶಿರಶ್ಛೇದನ ಮಾಡಿಸಿ,
ನೆಪಮಾತ್ರಕ್ಕೆ ದೊರೆ ಎಂದು ಕೂರಿಸಿದ್ದ ದೊಂಣೆ ರಂಗಪ್ಪನನ್ನು ಓಬಳ
ದೇವರ ಗುಡೀಬಳಿಯಣ ಅರಮನೆಯಲ್ಲಿ ಸೆರೆ ಇಟ್ಟು ಸರ್ವಾಧಿಕಾರ
-----------------------------------------
೩೬ ಚಿತ್ರದುರ್ಗದ ಪಾಳೆಯಗಾರರು:
ವನ್ನೂ ವಹಿಸಿದನು. ಆದರೆ ಈ ಭರಮಪ್ಪುನು ದೂರದೃಷ್ಟಿಯಿಂದ
ಯೋಚಿಸುತಾ--ಸಂಸ್ಥಾನಕ್ಕೆ ಅರಸುತನವಿಲ್ಲದಿ
ದ್ದರೆ ಕೇಡಾದೀತೆಂದು ತಿಳದು ಬೇರೇ ಏರ್ಪಾಡು
ಮಾಡಬೇಕೆಂದು ನಿಷ್ಕಷ್ಪೆ ಮಾಡಿಕೊಂಡನು.
ದಳವಾಯಿ ಭರಮಪ್ಪನ ದೂರದೃಷ್ಟಿ.
ಮತ್ತೀ ತಿಮ್ಮಂಉನಾಯಕನ ಸಂತತಿಯು ಪಂಚಮರ ಮುದ್ದಂಣನ
ಹಿಂಸೆಯಿಂದ ಮೃತಪಟ್ಟ ಲಿಂಗಂಣ ಮದಕರಿನಾಯಕನ ತಲೆಗೆ ತೀರಿ
ಹೋಯಿತು.
೯ನೇ ಅಧ್ಯಾಯ.
ರಾಜ್ಯಕ್ಕೆ ಉತ್ತರಾಧಿಕಾರಿಗಳು.
ಹೀಗೆ ತಿಮ್ಮಂಣನಾಯಕನ ಸಂತತಿನಿಂತು ಹೋದ್ದರಿಂದ ನ್ಯಾಯ
ವಾದ ವಂಶೀಯರು ಯಾರಿದಾರೆಂದು ಚರ್ಚೆಬಿತ್ತು.
ಹಿಂದೆ ದಿಳ್ಳೀಪ್ರಾಂತದಿಂದ ಬಂದ ಮೂರುಜನ
ಸಹೋದರರಲ್ಲಿ ಜಡಕಲ್ಲು ನಾಯಕನ ಮಗ ಹಿರೀ
ಹನುಮಪ್ಪನಾಯಕನು ಸಾದಲೆಯಲ್ಲಿಯೂ, ಎರಡನೆಯವನಾದ ಸಬ್ಬ
ಗಡಿ ಓಬನಾಯಕನ ಮಗ ತಿಮ್ಹಂಣನಾಯಕನು ಮತ್ತಿಯಲ್ಲಿಯೂ ಸ್ಥಳ
ಮಾಡಿಕೊಂಡರು.
ಮೂರನೆಯವನಾದ ಬುಳ್ಳನಾಯಕನ ಮಕ್ಕಳು ೧ ಚಿಕ್ಕ ಹನು
ಮನಾಯಕ, ೨ ಓಬಂಣನಾಯಕ, ಇವರು ಬಿಳಿಚೋಡಿನಲ್ಲಿ ನಿಂತಿದ್ದ
ರಷ್ಟೆ. ಇವರಲ್ಲೆಲ್ಲಾ ತಿಂಮ್ಮಣನಾಯಕನೇ ಪ್ರಬಲಿಸಿದ್ದನು. ಉಳದವ
ರೆಲ್ಲಾ ಸಾಧಾರಣವಾಗಿ ಬಡತನದಲ್ಲಿಯೇ ಇದ್ದರು. ಆದರೆ ತಿಮ್ಮಂಣನ
ವಂಶ ನಿರ್ವಂಶವಾದಮೇಲೆ, ರಾಜ್ಯವು ಅವನ ಹಿರಿಯ ಸಂತತಿಗೆ ಸೇರ
ಬೇಕಾಗುವುದು. ಮೇಲೆ ಹೇಳದ ಸಾದಲೆ ವಂಶದವರು ಹಿರೀ ಸಂತತಿ
ಯಾದರೂ ಅವರ ವಂಶೀಯರು ಮುಂದಕ್ಕೆ ಏನಾದರೋ ದುರ್ಗದಲ್ಲಿ
ಗೊತ್ತಾಗಿ ತಿಳಿಯಲಿಲ್ಲ. ಇದುವರೆಗೆ ಉಳದಿದ್ದವರ ವಂಶ ವೃಕ್ಷವನ್ನು
ಈ ಕೆಳಗೆ ಕೊಟ್ಟಿದೆ.
-------------------------------
ಓಬಂಣನಾಯಕ. ೩೭
ವಂಶವೃಕ್ಷ.
ಮೂಲ ಪುರುಪ.
|
----------------------------
| | |
ಜಡಕಲ್ಲು ನಾಯಕ ಸಬ್ಬಗಡಿ ಓಬನಾಯಕ ಬುಳ್ಳ ನಾಯಕ.
| | |
-------
| |
ಹಿರೀಹನುಮನಾಯಕ, ಮತ್ತಿತಿಂಮ್ಮಣನಾಯಕ (೧), ಚಿಕ್ಕಹನು ಓಬಂಣ
(ಸಾದಲೆವಂಶ) | ಮನಾಯಕ. ನಾಯಕ
ಈ ಸಂತತಿ ವಿವರ ಗೊತ್ತಿಲ್ಲ. ದಧ್ಯನ್ನದ ಓಬನಾಯಕ (೨) ೦ ಕಸ್ತೂರಿ
ರಂಗಪ್ಪ.
| |
ಕಸ್ತೂರಿ ರಂಗಪ್ಪನಾಯಕ (೩) ಭರಮಪ್ಪನಾಯಕ (೭)
| |
------------------------- |
| | | |
ಸರ್ಜಿರಾಯ, ಕುಮಾರಪ್ಪ, ಇಮ್ಮುಡಿ ಮದಕರಿನಾಯಕ (೪) ಹಿರೀಮದಕರಿನಾ
| ಯಕ (೮)
| |
---------------- -----------
| | | |
೬ನೇ ಮದಕರಿ (ಲಿಂಗಂಣ ಚಿಕ್ಕಂಣ ಮದ ತೊದಲು ಭರ ಇಮ್ಮುಡಿ ಕ
ನಾಯಕ) ಕರಿ ನಾಯಕ (೫) ಮಂಣನಾಯಕ ಸ್ತೂರಿ ರಂಗ
ಪ್ಪನಾಯಕ (೯)
|
ಕಡೇ ಮದಕರಿನಾಯಕ (೧೦)
ಕುರಿ ಕಾಯುವವನಿಗೆ ಐಶ್ವರ್ಯ ಬಂದದ್ದು.
ಮೇಲಿನ ವಂಕವೃಕ್ಷ್ದಲ್ಲಿ ತೋರಿಸಿರುವ ಪ್ರಸಾರ 2 ನೇ ದೊರೆ
ಯಾದ ಭರಮಪ್ಪುನಾಯಕನು ದುರ್ಗದ ಪಾಳಯಗಾರ
ತನಕ್ಕೆ ಹಕ್ಕುದಾರನಾಗಿದ್ದನು. ಇವನ ತಂದೆ ಕಸ್ಲೂ
ರಿರಂಗಪ್ಪನು ಕೇವಲ ಬಡವನಾಗಿ ಬಿಳಿಚೋಡಲ್ಲಿ
ಜೇವನ ಮಾಡಿಕೊಂಡಿದ್ದನು. ಇವನ ಮಗ ಭರಮನು ಮೇಕೆ
ಕಾಯುವುದಕ್ಕೆ ಅಡವಿಗೆ ಹೋಗಿ ಒಂದು ದಿನ ಆಯಾಸದಿಂದ ಒಂದು
ಮರದ ಕೆಳಗೆ ಮಲಗಿಕೊಂಡು ನಿದ್ರೆಮಾಡುತ್ತಿ ರುವಾಗ, ಇವನ ತಲೆ
---------------------------------------
೩೮ ಚಿತ್ರದುರ್ಗದ ಪಾಳಯಗಾರರು.
ಮುರಗಿ ಅಯ್ಯನವರು
ದಸಿಯಲ್ಲಿ ಒಂದು ನಾಗರಹಾವು ಬಂದು ಹೆಡೆ ಎತ್ತಿ ಆಡುತಿತ್ತಂತೆ.
ಉತ್ತರದೇಶದಿಂದ ಮುರಗೇಂದ್ರಯ್ಯನವರು ಪರದೇಶಿಗಳಾಗಿ ದಕ್ಷಿಣ
ದೇಶಕ್ಕೆ ಸಂಚಾರ ನಿಮಿತ್ತ ಬರುತಾ ಮಾರ್ಗದಲ್ಲಿ
ಈ ಭರಮನ ತಲೆಯ ಬಳಿಯಲ್ಲಿ ನಾಗಸರ್ಪ ಹೆಡೆ
ಯಾಡುವುದನ್ನು ಕಂಡು ಇವನ ಬಳಗೆ ಬಂದರು. ಸರ್ಪವು ಮರದ
ಮೇಲೆಕ್ಕೆ ಹತ್ತಿ ಹೋಯಿತು. ಆಗ ಆಯ್ಯನವರು ಈ ಹುಡುಗ
ನನ್ನು ಎಬ್ಛಿಸಿ ನೀನು ಯಾರು? ನಿನ್ನ ಹೆಸರೇನು? ನಿನ್ನು ಜಾತಿ
ಯಾವುದು ಎಂದು ಹೇಳಿದರು. ಭರಮನು ಅಯ್ಯುನವರನ್ನು ನೋಡಿ
ಭಯಪಟ್ಟು ಎದ್ದು ಅವರಿಗೆ ನಮಸಾರವನ್ನು ಮಾಡಿ--ನಾನು ವಾಲ್ಮೀಕಿ
ಕುಲದವ, ನನ್ನ ಹೆಸರು ಭರಮ, ಎಂದನು. ಆಗ ಆ ವಿರಕ್ತರು, ಈ
ದೇಶದ ದೊರೆತನವು ಮೂರು ತಿಂಗಳಲ್ಲಿ ನಿನಗೆ ಆಗುವುದು, ಎಂದು
ಹೇಳಿಹೊರಟುಹೋದರು. ಈ ಭರಮನು ದಂಡಿಗೆಯಲ್ಲಿ ಕೇವಲ
ಬಡತನದಿಂದ ಕಾಲ ಕಳೆಯುತಾ ಇದ್ದನು.
--------
೧೦ನೇ ಅಧ್ಯಾಯ
ಭರಮಪ್ಪನಾಯಕ
ಭರಮಪ್ಪನಾಯಕನಿಗೆ ಪಟ್ಟಾಭಿಷೇಕ.
ಶ|| ೧೬೧೧ನೇ ಶುಕ್ಲ ಸಂ ದಿಂದ ಶ|| ೧೬೪೨ ನೇ ಪ್ಲವ ಸಂ|| ದ
ವರೆಗೆ ದಳವಾಯಿ ಭರಮಪ್ಪ ಮುಂತಾದ ಸೇನಾ
ಪತಿಗಳೂ ಇತರ ಪ್ರ್ರಮುಖರೂ ಸೇರಿ ಯೋಚಿಸಿ
ಈ ದುರ್ಗದ ಸೀಮೆಗೆ ಶತ್ರುಗಳು ಹೆಚ್ಚಾಗಿದಾರೆ,
ಅವರೆಲ್ಲರಿಗೂ ಈ ದೇಶಕ್ಕೆ ದೊರೆಯೇ ಇಲ್ಲವೆಂದು ತಿಳದರೆ ಅವರೆಲ್ಲಾ
ಬಂದು ರಾಜ್ಯವನ್ನು ಹೊಡೆದುತೆಗೆದುಕೊಂಡು ಬಿಡಬಹುದು, ಎಂದು
ದೂರವಾಗಿ ಆಲೋಚನೆಮಾಡಿ ಸರ್ಬಸಮ್ಹತಿಯಿಂದ ಮೇಲೆ ಕಂಡ ಭರ
ಮಂಣಸನ್ನು ಬಿಳಚೋಡಿನಿಂದ ಕರೆದುತಂದು ಶ॥ ೧೬೧೧ ನೇ ಶುಕ್ಲ
ಸಂ||ದ ಆಶ್ವಿಯುಜ ಶು|| ೧೦ ಯಲ್ಲು ಸಂಪಿಗೆ ಸಿದ್ದೇಶ್ವರನ ಗುಡಿಯಲ್ಲಿ
ಅವನಿಗೆ ಪಟ್ಟಾಕಟ್ಟಿದರು ಈ ದಳವಾಯಿ ಭರಮಪ್ಪ ಮಾಡಿದ ಮಹೋ
ಪಕಾರಕ್ಕೆ ಪ್ರ)ಮೋದೂತ ಸಂ|| ದಲ್ಲಿ ಆತನಿಗೆ ಗೌಡಹಳ್ಳಿಯನ್ನು
-------------------------------------
ದಳವಾಯಿ ಭರಮಪ್ಪ. ೩೯
ಶತ್ರುಗಳು ಸಮಯ ಹುಡುಕಿದ್ದು
ಅಣಜಿ ಮುತ್ತಿಗೆ
ಉಂಬಳಿಯಾಗಿ ಕೊಟ್ಟರು. ಶತ್ರುರಾಜರಿಗೆ ಈ ಸೀಮೆಯಮೇಲೆ
ಇದ್ದ ದೃಷ್ಟಿಯನ್ನೂ ಅವರ ಪ್ರಯತ್ನವನ್ನೂ ಮುಂಚಿತವಾಗಿಯೇ
ತಿಳದುಕೊಂಡೇ ದಳವಾಯಿ ಭರಮಪ್ಪನು ದೊರೆ
ಯನ್ನು ನೇಮಿಸಿದ್ದು ವಂದು ಚನ್ನಾಗಿ ಹೇಳಬಹುದು,
ಯಾಕೆಂದರೆ ದುರ್ಗದ ದೊರೆಗಳಗೆ ಆಜನ್ಮ ಶತ್ರುಗಳಾ
ಗಿದ್ದ ಹರಪನಹಳ್ಳಯವರೂ ಮತ್ತೂ ಬಿದರೂರವರೂ ಸಹಾ ಸೇರಿ,
ಚಿತ್ರದುರ್ಗದ ದರ್ಬಾರಿನಲ್ಲಿ ಬಿಗಿ ಕಡಮೆಯಾಗಿದೆ, ಸ್ಫಯೂಧ ಕಲಹ
ಗಳು ಈಚೆಗೆ ಹೆಚ್ಚಾಗಿ ಸೇನಾನಾಯಕರು ತಿರುಗಿಬಿದ್ದಿದಾರೆ, ದಂಡಿನವ
ರಿಗೆ ಸಂಬಳ ಕೊಡಲು ಕೋಶದಲ್ಲಿ ಹಣವಿಲ್ಲದಿರುವುದು ಒಂದು ದೊಡ್ಡ
ಕಾರಣವಾಗಿದೆ, ಈ ಸಮಯದಲ್ಲಿ ಆ ಸೀಮೆಗೆ ಮುತ್ತಿಗೆ ಹಾಕಿದರೆ
ರಾಜ್ಯವು ತವ್ವ ಕೈಗೆ ಸಿಕ್ಕುವುದು ಖಂಡಿತವೆಂದು ಯೋಜಿಸಿ, ಅಣಜೀ
ಕೋಟಿಗೆ ಮುತ್ತಿಗೆ ಹಾಕಿದರು. ದಂಡಿನೊಡನೆ ದಳ
ವಾಯಿ ಭರಮಪ್ಪನು ಹೋಗಿ ಹಗೆಗಳನ್ನು ಎದುರಿಸಿ
ದನು. ದುರ್ಗದ ದಂಡು ಸೋತು ಹೋಯಿತು. ದಳವಾಯಿ ಭರಮ
ಪ್ಪನ ಆಂದಣವನ್ನು ಸಹಾ ಹರಪನ ಹಳ್ಳಿಯವರು ಕಿತ್ತುಕೊಂಡರು.
ಅಣಜೆಯು ಶತ್ರುಗಳ ವಶವಾಯಿತು. ಹೋದ್ದು ಹೋಗಲಾಗಿ ನಿಂತ
ಸೇನೆಯು ಮಾಘ ಶು|| ೬ ದಿವಸ ದುರ್ಗಕ್ಕೆ ಓಡಿಬಂತು.
ಹರಪನಹಳ್ಳಿ ಯವರ ಮೇಲೆ ಕಾರ್ಯಭಾಗ,
ಪಾಳಯಗಾರರು ಸಂಘ ಸೇರಿದ್ದು.
ಈ ಆಹ್ರೋಕವು ದುರ್ಗದ ಸೇನಾನಾಯಕರ ಮನಸ್ಸಿನಲ್ಲಿ ನಾಟಿ
ಕೊಂಡೇ ಇತ್ತು. ಪುನಃ ದಳವಾಯಿ ಭರಮಪ್ಪನು
ಒಳಗೇ ಸಂಧಾನ ಮಾಡಿ ಹರಪನಹಳ್ಳಿಯವರಿಂದ
ಆಣಜೆಯನ್ನು ಕೆತ್ತು ಕೊಳ್ಳ ಬೇಕೆಂದು ಅಗಾಧವಾದ
ಪ್ರಯತ್ನಮಾಡಿದನು. ಹಾವನೂರು, ಗುಡ್ಡೇ ಕೋಟೆ, ಅನಂತಪುರ,
ಜರಿಮಲೆ, ತರೀಕೆರೆ, ಈ ಸಂಸ್ಥಾನಗಳ ಸಹಾಯವನ್ನು ಪಡೆದು ಸಕಲ
ಬಲಸಹಿತ ದಳವಾಯಿ ಭರಮಪ್ಪನು ಅಣಜಿಗೆ ಎರ
ಡನೇ ಸಾರಿ ಮುತ್ತಿಗೆ ಹಾಕಿದನು. . ಕೋಟೆ ಹೊರಗೆ
ಸೂಲದ ಮರದಮೇಲಿನಿಂದ ಫಿರಂಗಿ ಹೂಡಿ ಲಡಾಯಿ
ಮಾಡಿದರು. ಹೊರಗಿನಿಂದ ಹೊಡೆದ ಫಿರಂಗಿಗುಂಡು ಕೋಟೆಯೊಳಗೆ
------------------------------------
೪೦ ಚಿತ್ರದುರ್ಗದ ಪಾಳೆಯಗಾರರು.
ಶತ್ರುಗಳ ಫಿರಂಗಿ ಆಡದೇಹೋದ್ದು.
ಶತ್ರುಗಳು ಹಾರಿಸುತಾ ಇದ್ದಫಿರಂಗಿಬಾಯಿಯೊಳಕ್ಕೆ ಹೋಗಿ ಹೊಕ್ಕಿತು.
ಕೋಟೆಯೊಳಗಿದ್ದ ಹರಪನಹಳ್ಳ ಯವರ ಫಿರಂಗಿಯು
ಆಡಲು ಮಾರ್ಗ ತಪ್ಪಿಹೋದ್ದರಿದ ದುರ್ಗರವರ ಕೈ
ಬಲವಾಯಿತು. ಶತ್ರುಗಳ ಕೈ ನಿಂತುಹೋಯಿತು.
ಅವರು ಒಪ್ಪಂದ ಮಾಡಿಕೊಳ್ಳಲು ಸಲಹೆ ಕಳುಹಿಸಿದರು. ಮತ್ತು
ಮೊದಲು ತಾವು ತೆಗೆದುಕೊಂಡಿದ್ದ ಅಂದಳ ಬಿರುದು ಮುಂತಾದೆಲ್ಲವೆನ್ನೂ
ತಂದು ದಳವಾಯಿ ಭರಮಪ್ಪನಿಗೆ ಒಪ್ಪಿದರು,
ಸೂರ್ಯಕಾಂತೆವ್ವನ ಮಗ ರಂಗಪ್ಪನ ಪಿತೂರಿ
ಆಂಗೀರಸ ಸಂ|| ದಲ್ಲಿ ದುರ್ಗದ ಪಾಳಯಗಾರರು ಅಣಜಿ ಕೋಟೆ
ಯನ್ನು ಸರಿಮಾಡಿಸಿ ಹೊಸದು ಮಾಡಿಸಿ ಬಿಗಿಮಾಡಿದರು. ಆ ವೂರ
ಕೋಟೆಯನ್ನು ಕಟ್ಟಲು ಯತ್ನಮಾಡುವಲ್ಲಿ ಹರಪನಹಳ್ಳಿ ಸಂಸ್ಥಾನದ
ವರು ಈ ಕೋಟೆಯ ಕಟ್ಟಕೂಡದೆಂದು ಬಹಳವಾಗಿ ಕಾದಿದರು. ದಿನ
ವಹಿ ಯುದ್ಧ ನಡೆಯುತ್ತಲೇ ಇತ್ತು. ಶತ್ರುಗಳ ರಕ್ತದ ಕೆಸರಿನಲ್ಲಿ
ಈ ಕೋಟೆಯನ್ನು ದುರ್ಗದವರು ಕಟ್ಟ ಮುಗಿಸಿದರಂತೆ. ಇದೇ
ಆಂಗೀರಸ ಸಂ|| ದಲ್ಲಿ ನರುಗನ ಹಳ್ಳ ಕುಮಾರ ರಘುವಪ್ಪನಿಗೆ ಅಂಪುಕಾ
ಕೊಟ್ಟುಕಳುಹಿಸಿದರು. ಇವನು ಶ್ರೀಮುಖ ಸಂ॥ ದಲ್ಲಿ ತೀರಿಹೋದನು.
ಇವನಿಗೆ ಮಗಳಾಗಿಯೂ ವಿಷಸಮುದ್ರ (ಈಸಾಮುದ್ರ ದ ಮಾದೈನ
ಹೆಂಡತಿಯಾಗಿಯೂ ಇದ್ದ ಸೂರ್ಯ ಹಾಂತವ್ವನ ಮಗ ರಂಗಪ್ಪನೆಂಬು
ವನು ದುರ್ಗದ ಹಿಂದಿನ ಪೊಳಯಗಾರರಿಗೆ ಹೆಂಣು
ಸಂತತಿಯ ಬಾಧ್ಯಸ್ಥನಾಗಿಯೂ ಹರಪನಹಳ್ಳಯವರ
ವಂಶಕ್ಕೆ ಸೇರಿದವನಾಗಿಯೂ ಇದ್ದನು. ಇವನನ್ನು
ಮೇಲು ದುರ್ಗದ ಸೆರೆಯಲ್ಲಿಟ್ಟದ್ದರು, ಧಾತು ಸಂ॥ ಜ್ಯೇಷ್ಠ ಶುದ್ಧ ೧೦
ದಿವಸ ಏಕನಾಥಮ್ಮನ ಉತ್ಸವವಾಯಿತು. ಸೇವಾರ್ಥಕ್ಕಾಗಿ ಜನ
ರೆಲ್ಲಾ ಹೊರಟುಹೋಗಿದ್ದರು. ಆ ಸಮಯದಲ್ಲಿ ಆ ರಂಗಪ್ಪುನು ಸ್ವಾಮಿ
ದ್ರೋಹಿಗುಡ್ಡದಿಂದ ಇಳೀ ಬಿದ್ದು ಓಡಿಹೋಗಿ ಚದುರಗೊಳ ತಲಪಿ
ಶಾನುಭೋಗ ಬಿದರೆ ಕೌಂಚಯ್ಯನ ಕರೆದು ಕೊಂಡು ಹರಪನಹಳ್ಳಿಗೆ
ಹೋಗಿ ಆ ಸಂಸ್ಥಾನದವರಿಂದ ಮಂದಿ ಕುದುರೆ ಮುಂತಾದನ್ನು ತೆಗೆದು
ಕೊಂಡು ದುರ್ಗಕ್ಕೆ ಬಂದು ಠಾಣ್ಯಹಾಕಬೇಕೆಂದು ಯತ್ನಿಸಿದನು.
------------------------------------
ಮರಾಟಿಯವರ ಹಾವಳಿ. ೪೧
ನೊಲೇಣಿಯನ್ನು ಸಹಾ ತೆಗೆದುಕೊಂಡು ಬಂದು ಗರುಗದ ಗುಡ್ಡದಲ್ಲಿ
ಅಡಗಿ ಇಳದುಕೊಂಡಿದ್ದನು. ಹೊಳಲ ಕೆರೆಯವರೂ ಮಾಯ
ಕೊಂಡದವರೂ ಇದನ್ನು ತಿಳಿದು ಬಂದು ರಂಗಪ್ಪನ ದಂಡಿನಮೇಲೆ
ಬಿದ್ದು ಸಿಕ್ಕಿದವರನ್ನೆಲ್ಲಾ ತಲೇ ಹುಯಿದು, ಈ ಸೂರ್ಯಕಾಂತವ್ನನ
ಮಗ ರಂಗಪ್ಪನ ತಲೆಯನ್ನೂ ಚದುರಗೊಳದ ಶಾನುಭೋಗ ಕೆಂಚಯ್ಯ
ನನ್ನೂ ಸಹಾ ದುರ್ಗಕ್ಕೆ ತಂದು ಒಪ್ಪಿಸಿದರು. ದುರ್ಗದ ಭರಮಪ್ಪ
ನಾಯಕನು ಈ ಕಾರ್ಯಮಾಡಿದವರಿಗೆ ಬಾಯಿತುಂಬಾ ಹೊನ್ನನ್ನು
ಹುಯಿದನು. ಬಿದರೆ ಕೆಂಚಯ್ಯನನ್ನು ಗಡೀಪಾರುಮಾಡಿ ಚದುರ
ಗೊಳದ ಪಡಿ ಶಾನುಭೋಗತನಕ್ಕೆ ಈರೇಶ ಭೂನಪ್ಪಯ್ಯನಮಗ
ದೇವಂಣವಿಗೆ ನೇಮಿಬದರು. ಗ್ರಾಮದ ಆಯಗಾರರು ಕೈವಾಡದ
ವರು ಇವರುಗಳನ್ನು ಕರೆಯಿಸಿ, ನಿಮ್ಮ ಶಾನುಭೋಗನು ದಿವಾಣಕ್ಕೆ
ಸ್ವಾಮಿ ದ್ರೋಹ ಮಾಡುವವರ ಜೊತೆಯಲ್ಲಿ ಕೂಡಿದ್ದರಿಂದ ಬ್ರಾಹ್ಮ
ಣನ ತಲೇ ಒಡೆದರೆ ಪಾಪವೆಂದು ಗಡೀಪಾರು ಮಾಡಿ, ಈ ದೇವಂಣ
ನಿಗೆ ನೇಮಕಮಾಡಿದ್ದೇವೆ. ಈ ದೇವಂಣನನ್ನು ಇಟ್ಟು ಕೊಂಡು
ಇವನ ಅನುಮತಿಯಿಂದ ನಡೆದುಕೊಂಡು ಹೋಗುವುದು ಎಂದು
ತಾಕೀತಿಮಾಡಿ ೧೫ ಗ್ರಾಮಕ್ಕೆ ನಿರೂಪಾ ಬರೆಯಿಸಿ ಕೊಟ್ಟರು.
ಮರಾಠೆಯವರ ಹಾವಳಿ
ಈ ಧಾತು ಸಂ! ದಲ್ಲಿ ಸಂತೋಜೇ ಘೊರ್ರಡೆಯು ೨೦೦೦೦ ಕುದು
ರೆಯೊಡನೆ ಬಂದನು.ಸೀರ್ಯಸ ಸುಬೇದಾರ ಕಾಸಿಂ
ಖಾನನು ತಳಕಿನಿಂದ ದೊಡ್ಡೇರೀ ತನಕ ಲಡಾಯಿ
ಮಾಡುತಾ ಹೋಗಿ ದೊಡ್ಡೇರಿ ಕೋಟೆಯೊಳಗೆ
ಹೊತ್ತು ಅವಿತು ಕೊಂಡನು. ದುರ್ಗದ ದೊರೆಯು ಕುಡುತನಿ ವೆಂಕಂಣ,
ಹೊಳಲಕೆರೆ ಬೊಮ್ಮಂಣ, ಇವರಿಗೆ ಫೌಜುದಾರಿಕೊಟ್ಟು ಕುದುರೆಮಂದಿ
ಸಹಾ ಕೊಟ್ಟು ಹಳುಹಿಸಿದನು ಆಗ ಕಾಸಿಂಖಾನನು ಮೃತನಾದನು.
ಕೋಟೆ ದುರ್ಗದವರ ವಶವಾಯಿತು. ಇದೇ ಧಾತು ಸಂ॥ ದಲ್ಲಿ ದಿಲಾ
ವರ ಬಕಷನ ದಂಡು ಬಂದು ರಾಜ್ಜದಮೇಲೆ ಬಿತ್ತು. ಅವನು ಗುಂಟ
ನೂರು ಮಲ್ಲಪ್ಪನ ಮುಖಾಂತರ ೩೦೦೦೦೦ ವರಹಾ ಕೊಡದೇ
ಕೆಂದು ಹೇಳಿಕಳುಹಿಸಿದನು. ಬಹುಧಾನ್ಸೂ ಸಂ|| ದಲ್ಲಿ ಗುಡ್ಡೇ ಕೋಟೆ
----------------------------------------
೪೨ ಚಿತ್ರದುರ್ಗದ ಪಾಳೆಯಗಾರರು.
ಯವರ ಮೇಲೆ ಕಾರ್ಯುಭಾಗಮಾಡಿ ನಾಗಸಮುದ್ರಕ್ಕೆ ಮುತ್ತಿಗೆ ಹಾಕಿ
ದರು. ಇವರ ಕಡೆ ಸಕ್ಕರೆ ನಾರಣಪ್ಪನು ಮಾಧ್ಮಸ್ಥ ಮಾಡಲಾಗಿ
ಗುಡ್ಡೆ ಕೋಟೆ ಹೆಂಣುಮಗಳು ಬಂಗಾರವ್ವ ನಾಗತಿ ಕೊಟ್ಟು ದೊರೆಗೆ
ಮದುವೆಯಾಯಿತು.
ಪಾಳಯಗಾರರ ಐಕಮತ್ಯ.
ಕೊಟ್ಟೂರು ವಿಜಯ
ಹಟ್ಟಿ ಕೋಟೆಯನ್ನು ಹಿಂದೂರಾಯನೂ, ರಾಯಮರ್ಗದವರೂ
ಸಹಾ ಬಂದು ಮುತ್ತಿಗೆ ಹಾಕಿದರು. ಈ ಸಮಾಚಾರವನ್ನು ಪಾಳಯ
ಗಾರ ಭರಮಪ್ಪನಾಯಕ ಕೇಳಿ ಹಾವನೂರು, ಗುಡ್ಡೆ ಕೋಟೆ, ನಿಡ
ಗಲ್ಲು, ರತ್ನ ಗಿರಿ, ಜರಿಮಲೆ, ಸೀರ್ಯ, ಅಲ್ಲಿನ ಪಾಳ
ಯಗಾರರನ್ನೆಲ್ಲಾ ಸೇರಿಸಿ ಹಟ್ಟಿಮಲ್ಪಪ್ಪನಾಯಕನ
ಕರೆದುಕೊಂಡು ಹೋಗಿ ನನ್ನಿ ವಾಳದಬಳಿ ಇಳಿದು
ಇದ್ದನು. ಆಗ ಹಗೆಗಳ ದಂಡು ಬಂದು ದುರ್ಗದಕಡೆಯವರ ಒಟ್ಟು
ದಂಡನ್ನು ಮುತ್ತಿತು. ಮೂರುದಿನ ಪರಿಯಂತ ಜಗಳವಾಗಿ ದುರ್ಗದ
ದಂಡಿನವರು ಅಡಿಗೇಮಾಡಿ ಊಟಾಮಾಡುವುದಕ್ಕೂ ಅವಕಾಕವಿಲ್ಲವಾ
ಯಿತು. ದುರ್ಗದಿಂದ ರೊಟ್ಟಿಯನ್ನು ಮಾಡಿಸಿ ಎತ್ತುಗಳ ಮೇಲೆ ಹೇರಿ
ಕಳುಹಿಸಿ ಠಾಣೇ ರಾಹುತರಿಗೆಲ್ಲಾ ಕೊಡಿಸಿ ಜಗಳವಾಡಿಸಿದರು. ಶತ್ರು
ಗಳ ದಂಡು ವಿಮುಖವಾಯಿತು ಸೀರ್ಯದ ಫಡದುಲ್ಲಾ ಖಾನನ ಫೌಜೂ
ದುರ್ಗದಫೌಜೂ ಸಹಾ ಶತ್ರುಗಳ ಬೆನ್ನಗದಮಿ ಕೊಂಡುಹೋಗಲಾಗಿ
ಹೆಗೆಗಳು ಮುತ್ತಿಗೆ ಬಿಟ್ಟು ಓಡಿಹೋದರು ಆದರೆ ಪುನಃ ದುರ್ಗದ
ದಂಡು ಹೆಗೆಗಳ ಬೆನ್ನುಹತ್ತಿ ಹೋಯಿತು. ಕೊ
ಟ್ಟೂರ ಬಳಿ ಮತ್ತೆಯುದ್ದವಾಯಿತು. ದುರ್ಗದ
ವರೇ ಅಲ್ಲಿಯೂ ಜಯಹೊಂದಿದರು.
----
----------------------------------------
ರಾಯದುರ್ಗದವರ ಹಾವಳಿ ೪೩
೧೧ನೇ ಅಧ್ಯಾಯ.
ಭರಮಪ್ಪನಾಯಕ (ಸಾಗುವುದು)
ರಾಯದುರ್ಗದವರೊಡನೆ ಯುದ್ಧ.
ಭೀಮಸಮುದ್ರದ ಕೆರೆ ಕಟ್ಟಿದ್ದು.
ಶ|| ೧೬೨೦೦ ನೇ ಪ್ರಮಾಥಿ ಸಂ|| ದಲ್ಲಿ ರಾಯದುರ್ಗದವರೊಡನೆ
ಯುದ್ದ ವದಗಿತು. ಇದರಲ್ಲಿ ಭರಮಂಣನಾಯಕನ
ಕಡೆ ದಂಡು, ನರಸಿಂಹನದುರ್ಗ, ಮೆಚ್ಚರೆ, ಇವು
ಗಳನ್ನು ಮುತ್ತಿ ತೆಗೆದುಕೊಂಡದ್ದೂ ಅಲ್ಲದೆ ಧೃವ
ಜಲ ಮಲ್ಲಯ್ಯನ ದುರ್ಗಕ್ಕೂ ಠಾಣ್ಯಾಹಾಕಿದರು. ವ್ಯಯ ಸಂ|| ದಲ್ಲಿ
ಗೌರಸಮುದ್ರದ ಕೋಟೆಯನ್ನು ದುರ್ಗದವರು ಮುತ್ತಿ ಈ ಗ್ರಾವ:ದ
ಪಶ್ಚಿಮದ ಘೆ ಹೊತ್ತ ಲಕ್ಕೈ ತಳ ಸುರಂಗ ಹಾಕಿದರು. ಹೋಟೆ
ಗೋಡೆಯು ಮೋಲಕ್ಕೆ ಹಾರಿ ಹಾಗೆಯೇ ಇದ್ದ ಸ್ಥಳದಲ್ಲಿಯೆ ತೂತು
ಹೋೊಂಡಿತು. ಶತ್ರುಗಳು ಹೌಲು ಮಾಡಿಕೊಂಡರು. ಹೋಟೆಯು
ದುರ್ಗದಸೇನೆಯ ವಕವಾಯಿತು. ಪ್ಯೂ ಕಾಲದಲ್ಲಿ ಹೊಲತಿಹಾಳು
ಕೆರೆಯನ್ನು ಬಿಚ್ಚಿಸಿ ಕಟ್ಟಿಸಿ ಇದಕ್ಕೆ ಭೀಮ
ಸಮುದ್ರವೆಂದು ಹೆಸರಿಟ್ಟದ್ದೂ ಅಲ್ಲದೆ ಆ ಕೆರೆ
ಹಿಂದೆ ಭೀಮೇಶ್ವರನ ಗುಡಿ ಕಟ್ಟಿಸಿ ದೇವರನ್ನು
ಪ್ರತಿಷ್ಠೆ ಮಾಡಿದರು.
ಪುನಃ ರಾಯದುರ್ಗದವರ ಕಾಳಗ
ಸರ್ವಜಿತು ಸಂ॥ ದಲ್ಲಿ ರಾಯದುರ್ಗದವರು ಪುನಃ ಚಿತ್ರದುರ್ಗದ
ವರ ರಾಜದ ಮೇಲೆ ದಂಡೆತ್ತಿ ಬಂದರು. ಶತ್ರು
ಗಳ ಕಡೆ ಹೇಕವಾಚಾರಿಯು ಧನೋಜಿ ಎಂಬ
ಮರಾಟಿ ಸೆರದಾರನನ್ನು ಕರೆದುಕೊಂಡು ಬಂದು
ಒಡ್ಡಿನ ಹಳ್ಳಿ ಬಳಯ ಹಳ್ಳದಲ್ಲಿಳಿದು ಚಿತ್ರದುರ್ಗದವರೆಗೆ ಹಾವಳಿ
ಮಾಡಿದನು. ಆಗ ಭರಮಪ್ಪನಾಯಕನು ಧನೋಜಿಗೆ ಹಣಾ
ಕೊಟ್ಟು ಸಮಾಧಾನ ಮಾಡಿಕೊಂಡನು. ಇದೇ ಸಂ|| ದಲ್ಲಿ ಮಾ
ರ್ಗಶಿರ ಮಾಸದಿಂದ ಸರ್ವಧಾರಿ ಸಂ||ದ ಜ್ಯೇಷ್ಠ ಮಾಸದವರೆಗೆ
ಸೀರ್ಯದ ಸುಬೇದಾರ ಫಡದುಲ್ಲಾಖಾನನ ಸಂಗಡ ಹೋಗಿ ಹೊಳೇ
ಹೊನ್ನೂರಿಗೆ ಮುತ್ತಿಗೇಹಾಕಿ ಅದನ್ನು ಹಿಡಿದು ಫಡದುಲ್ಲನ ವಶಮಾಡಿ
---------------------------------------
೪೪ ಚಿತ್ರದುರ್ಗದ ಪಾಳಯಗಾರರು.
ದರು. ಈ ಉಪಕಾರಕ್ಕೆ ಪ್ರತಿಯಾಗಿ ಅವನು ದುರ್ಗದ ದೊರೆಗೆ
ದೊಡ್ಡೇರಿ ಬೀಮೆ, ಜಾಜೂರು ಸೀಮೆ ಇವುಗಳನ್ನು ಕೊಟ್ಟನು.
ಹರಪನಹಳ್ಳಿಯಲ್ಲಿ ಪ್ರತಿಷ್ಠೆ ಹೊಂದಿದ್ದು.
ಶ॥ ೧೬೩೧ ನೇ ವಿರೋಧಿ ಸಂ|| ದಲ್ಲಿ ಹರಪನಹಳ್ಳಿಯನ್ನು
ದುರ್ಗದ ಭರಮಪ್ಪನಾಯಕನು ಹಿಡಿದುಕೊಂಡು
ಪೇಟೆಯಲ್ಲಿ ಮೇಳಾಕಟ್ಟಿಸಿಕೊಂಡು ಕೂತು, ಕಡೆಗೆ
ದಯದಿಂದ ಧರ್ಮಕಹಳೆಯನ್ನು ಹಿಡಿಸಿ ಶತೃಗಳಗೆ
ಊರನ್ನು ಕೊಟ್ಟು ದುರ್ಗಕ್ಕೆ ಬಂದನು. ಮನ್ಮಥ ಸಂ|| ದಲ್ಲಿ ಕುಮಾರ
ಮದಕರಿನಾಯಕನು ನಿಡಗಲ್ಲವರ ಮೇಲೆ ದಂಡೆತ್ತಿ ಹೋಗಿ ತಳಕು,
ಘಟಪರ್ತಿ ಮೊದಲಾಗಿ ೬ ಕೋಟೆಗಳನ್ನು ಹಿಡಿದುಕೊಂಡನು. ಪುನಃ
ಹರಪನಹಳ್ಳಿಯವರು ತುಂಟತನಕ್ಕೆ ಆರಂಭಮಾಡಿದರು. ವಿರೋಧಿ
ಸಂ॥ ದಲ್ಲಿ ಭರಮಪ್ಪನಾಯಕನು ಅವರ ರಾಜಧಾನಿಯನ್ನು ಹಿಡಿದು
ದಯದಿಂದ ಅದನ್ನು ಹಿಂತಿರುಗಿ ಕೊಟ್ಟದ್ದನ್ನು ಸ್ಮರಿಸದೆ, ಆ ವೂರ
ಪಾಳಯಗಾರನು ಹೊಳಲಕೆರೆ ಕೋಟೆಗೆ ಮುತ್ತಿಗೆ ಹಾಕಿ ಅದನ್ನು
ತೆಗೆದುಕೊಂಡು ಹಾವನೂರ ಹನುಮಂತಗೌಡನಿಗೆ ಕೊಟ್ಟನು. ಪ್ರತಿ
ವರುಷವೂ ಈ ಹರಪನಹಳ್ಳಿಯವರು ದುರ್ಗದವರ ಸೀಮೆಯ ಗಡಿಗ
ಳನ್ನು ತೆಗೆದು ಕೊಳ್ಳುತಾ ವಿಶೇಷವಾದ ಗಲಭೆಯನ್ನು ಮಾಡುತ್ತಲೇ
ಇದ್ದರು.
ಎಲ್ಲಾ ಕಡೆಯಲ್ಲಿಯೂ ದಿಗ್ವಿಜಯ
ಮೊಗಲಾಯರಿಗೆ ಸಹಾಯ ಮಾಡಿದ್ದು,
ಹೇವಿಳಂಬಿ ಸಂ|| ದಲ್ಲಿ ಮೇಲುದುರ್ಗದ ಮುರಗಿ ಮಠ ಕಟ್ಟಿ
ಜಾಗ್ರತೆಯಾಗಿ ಮುಗಿಸಿದರು. ಹೀಗೆಯೇ ಹಲವು
ಸಂಣ ಕದನಗಳು ಆಗಾಗ್ಗೆ ನಡೆಯುತಾ ಇದ್ದಾಗ್ಯೂ
ದುರ್ಗದವರೇ ಎಲ್ಲಾ ಕಡೆಯಲ್ಲಿಯೂ ಜಯಶೀಲ
ರಾಗುತಾ ಬಂದರು. ಶ! ೧೬೪೨ನೇ ಶಾರ್ವರಿ ಸಂ|| ದಲ್ಲಿ ಬಾಗೂರ
ಖಿಲ್ಲೇದಾರನು ಮೊಗಲಾಯರ ತಡೆ ಪುಜೇದಾರ
ದರ್ಗಾಕೂಲಿಖಾನನಮೇಲೆ ತಿರುಗಿ ಬಿದ್ದನು. ಆಗ
ಆ ಷುಬೇದಾರನು ಚಿತ್ರದುರ್ಗದವರ ಸಹಾಯ
ವನ್ನು ಹೇಳಿಕೊಳ್ಳಲು, ಭರಮಪ್ಪನಾಯಕನ ಸೇನೆಯವರು ಹೋಗಿ
ಬಾಗೂರನ್ನು ಹಿಡಿದು ದರ್ಗಹೂಲಿಖಾನನ ವಕಮಾಡಿಕೊಟ್ಟರು. ಈ
------------------------------------
ದಳವಾಯಿ ಮುದ್ಧಂಣ. ೪೫
ಉಪಕಾರಕ್ಕಾಗಿ ಆ ಮೊಗಲ್ ಅಧಿಕಾರಿಯು ಮಾವಿನಕಟ್ಟೆ ಗ್ರಾಮ
ವನ್ನು ಭರಮಪ್ಪನಾಯಕನಿಗೆ ಕೊಟ್ಟನು, ಹೀಗೆ ರಾಜ ಭರಮಪ್ಪ
ನಾಯಕನು ಬಹಳ ಯಶೋವಂತನಾಗಿ ಅನೇಕ ಕೋಟೆಗಳನ್ನೂ ಗ್ರಾ
ಮಗಳನ್ನೂ ಹಿಡಿದು, ಅನೇಕ ಕೆರೆಗಳನ್ನು ಕಟ್ಟಿಸಿ, ಸೀಮೆಯನ್ನು
ಅಭಿವೃದ್ಧಿಮಾಡಿ ಕೊಂಡು ರಾಜ್ಯ ಭಾರಮಾಡುತಾ ಇದ್ದನು. ಈತನ
ಮಕ್ಕಳು, ಒಬ್ಬನಿಗಿಂತ ಒಬ್ಬ ಬಹು ಪರಾಕ್ರಮಶಾಲಿಗಳಾಗಿ ಸೀಮೆಗ
ಳನ್ನು ಸಾಧಿಸುತಾ ಇದ್ದರು.
ವಿಜಾಪುರದವರು ದಂಡೆತ್ತಿ ಬಂದದ್ದು
ಪ್ಲವ ಸಂ॥ ದಲ್ಲಿ ಈ ದುರ್ಗದ ದೊರೆಗಳ ಯಶಸ್ಸನ್ನು ಕೇಳಿ
ಇವರನ್ನು ಮುರಿಯಬೇಕೆಂದು ವಿಜಾಪುರದಲ್ಲಿದ್ದ ದಿಲಾವರ್ ಖಾನ್ ಬಾದ
ಷಹನೂ ಮತ್ತು ಇವನ ಕಡೆಯ ಮನ್ ಸಬ್‌ದಾರರೂ ಸಹಾ ಸೀರಾ
ದಿಂದ ದುರ್ಗದ ಸೀಮೆಯ ಮೇಲೆ ಹೊರಟು
೨೦೦೦೦ ಕುದುರೆ, ೫೦೦೦೦ ಕಾಲು ಬಲ, ೨೦
ಫಿರಂಗಿ ಸಮೇತ ಹಿರಿಯೂರಿಗೆ ಬಂದು ಇಳಿದರು,
ಈ ವರ್ತಮಾನ ತಿಳಿದ ಕೂಡಲೆ ಭರಮಪ್ಪನಾಯಕನು ತನ್ನ
ಸೇನೆಯೊಡನೆ ಹೋದನು. ಈ ಉಭಯ ಸೇನೆಗೂ ಆದಿವಾಲದ ಮೈ
ದಾನದಲ್ಲಿ ಘೋರವಾದ ಯುದ್ಧ ನಡೆಯಿತು. ರಾಜನಿಗೆ ಪೂರಾ ಗಾಯ
ವಾಯಿತು. ಈ ಆ ಕ್ರೋಶದಮೇಲೆ ಭರಮಪ್ಪನಾಯಕನ ಮಕ್ಕ
ಳಾದ ೧ ಮದಕರಿನಾಯಕ, ೨ ದಂಡಿನ ಜಂಪಂಣನಾಯಕ, ೩ ಭರ
ಮಂಣನಾಯಕ, ೪ ಕಾಟಪ್ಪನಾಯ, ೫ ಲಿಂಗಂಣನಾಯಕ, ೬ ಗಂಗಂಣ
ನಾಯಕ, ೭ ಕಿರೀ ಜಂಪಂಪಂಣನಾಯಕ. ಸಹಾ ಶತೃಗಳ ದಂಡಿನ
ಮೇಲೆ ಬಿದ್ದು ೧೮ ಅಂಬಾರಿಗಳಲ್ಲಿ ಕೂತು ಯುದ್ಧ ಮಾಡುತಿದ್ದ ಸರದಾ
ರರನ್ನೂ ಹೊಡೆದು ನವಾಬನನ್ನುು ಸೆರೆಹಿಡಿದರು. ಅಷ್ಟರಲ್ಲಿ ಶತ್ರು
ಸೇನೆಯವರು ಓಡಿಹೋದರು. ಆ ಯುದ್ಧದಲ್ಲಿ ನಾಲ್ಕು ಫಿರಂಗಿ, ೧೦
ಆನೆ, ಮುಂತಾದ ಸಾಮಾನು ಸಹಾ ದುರ್ಗದವರಿಗೆ ಸಿಕ್ಕಿದವು.
ಈ ಪ್ರಕಾರ ಜಯ ಹೊಂದಿದ ಸಮಾಚಾರವು ಎಲ್ಲೆಲ್ಲಿಯೂ ಹರ
ಡಿಕೊಂಡಿತು. ರಾಜಾ ಭರಮಪ್ಪನಾಯಕನ ಮುಂದೆ ಯಾರೂ ನಿಲ್ಲು
-----------------------------------
೪೬ ಚಿತ್ರದುರ್ಗದ ಪಾಳಯಗಾರರು.
ವುದಿಲ್ಲವೆಂದು ಖ್ಯಾತಿ ಬಂತು. ಉಳಿಕೆ ಪಾಳೆಯಗಾರರು ಯಾರೂ
ಇವರ ಗೋಜಿಗೆ ಬರುವುದನ್ನು ಬಿಟ್ಟು ಬಿಟ್ಟರು.
ಭರಮಪ್ಪನಾಯಕನ ನಿರ್ಯಾಣ,
ಶ|| ೧೬೪೨ ನೇ ಪ್ಲವ ಸಂ॥ ಜ್ಯೇಷ್ಠ ಶು|| ೫ ಸ್ಥಿರವಾರ ರಾಜಾ
ಭರಮಪ್ಪನಾಯಕನು ಸ್ಪರ್ಗಸ್ಥನಾದನು.
------
೧೨ನೇ ಅಧ್ಯ್ಯಾ ಯ.
ಭರಮಪ್ಪ ನಾಯಕ (ಪೂರೈಸಿತು.)
|| ರಾಜ್ಯ ಭಾರಕ್ರಮ ||
ದುರ್ಗದ ಸಂಸ್ಥಾನದ ಪ್ರಾಬಲ್ಯ
ಈ ಭರಮಪ್ಪನಾಯಕನು ಒಟ್ಟು ೩೩ ವರುಷ ಆಳಿದನು,
ಈತನ ಆಳಿಕೆಯಲ್ಲಿ ದುರ್ಗದ ಸಂಸ್ಥಾ ನವು ಬಹಳ ಪ್ರಬಲಕ್ಕೆ ಬಂತು.
ಈತನು ದೊರೆಯಾದಾರಭ್ಯ ಕಾಟಕಾಯಗಳು ಬ
ಹಳವಾಗಿದ್ದವು ರಾಯದುರ್ಗದ ಪಾಳಯಗಾರರು,
ಹರಪನಹಳ್ಳಿ ಪಾಲಯಗಾರರು ತರೀಕೆರೆ ಪಾಳಯ
ಗಾರರು, ಗುಡೇ ಕೋಟೆಪಾಳಯಗಾರರು ಮೊದಲಾದ ಸುತ್ತ ಮುತ್ತಿನ
ಸಂಸ್ಥಾನದನರು ಯಾವಾಗಲೂ ನೆವ ನೆವನಲ್ಲಿ ಯುದ್ಧಕ್ಕೆ ಬಂದು ತೊಂ
ದರೆಮಾಡುತ್ತಲೇ ಇದ್ದರು. ಭರಮಪ್ಪನಾಯಕನು ಇವರುಗಳೆಲ್ಲ
ರನ್ನೂ ಜೈಸುತಾ ಬಂದಹಾಗೆಲ್ಲಾ ಈ ನೆರೆ ಹೊರೆ -ಶತ್ರುಗಳು ಮರಾಟಿ
ದಂಡಿನವರನ್ನೂ ಮತ್ತು ಸೀರ್ಯದ ಮೊಗಲಾಯಿ ನವಾಬರುಗಳನ್ನೂ
ಎತ್ತ ಕಟ್ಟದರು. ತಾವು ಸ್ಎತ್ತರವಾಗಿ ದುರ್ಗದವರ ಮೇಲೆ ನಿಲ್ಲಲು
ಭಯಪಟ್ಟು ಹೊರಗಿನ ಮುಸಲ್ಮಾನ್ ಜನರ ಮತ್ತು ಮರಾಟಿಯವರ
ಹಿಂದೆ ನಿಂತು ಸಹಾಯವನ್ನು ಮಾಡುತಾ ಬಂದರು. ಎರಡು ಮೂರು
ಸಾರಿ ತುರುಕರೂ, ಮರಾಟಿಯವರೂ ಭಾರಿಯಾದ ಫೌಜಿನೊಡನೆ ಯು
ದ್ಧಕ್ಕೆ ನಿಂತರು, ಇವರುಗಳೆಲ್ಲರನ್ನೂ ಕೆಲವು ಸಮಯದಲ್ಲಿ ಉಪಾಯ
ದಿಂದಲೂ ಮತ್ತೆ ಕೆಲವು ಸಂದರ್ಭದಲ್ಲಿ ಪರಾಕ್ರಮದಿಂದಲೂ ಭರಮ
ಪ್ಪನಾಯಕನು ಗೆದ್ದನು. ಕಡೆಗೆ ಶತ್ರುಗಳು ಈ ಸಂಸ್ಥಾನದ ಗೋಜಿಗೆ
---------------------------------------
ಗುಳ್ಳೇ ರೋಗ. ೪೭
ಬರಲು ಭಯಪಡುತಿದ್ದರು. ಈ ದೊರೆಗೆ ಮಕ್ಕಳು ವಿಶೇಷವಾಗಿ
ದರು. ಆ ರಾಜಕುಮಾರರ ಪರಾಕ್ರಮವೂ ರಾಜ್ಯಕ್ಕೆ ಹೆಸರುವಾಸಿ
ಯುಂಟಾಗಲು ದೊಡ್ಡ ಕಾರಣವಾಗಿತ್ತು. ಇವನಿಗೆ ದೊರೆತನವಾದಾಗಿ
ನಿಂದ ಇವನು ಮರಣ ಹೊಂದುವವರೆಗೂ ಯುದ್ಧ ವಿಲ್ಲದ ದಿವಸವೇ ಇರ
ಲಿಲ್ಲ. ಇಷ್ಟಾದರೂ ಶತ್ರುಗಳು ಇವನನ್ನು ಕಂಡು ಹೆದರುವಹಾಗೂ
ಉದಾಸೀನರು ಇವನ ಸ್ನೇಹವನ್ನು ಬಳಸುವಹಾಗೂ ಮಾಡಿಕೊಂ
ಡನು. ಇವನ ದಿವಸದಲ್ಲಿ ಹೊಸ ಸೀಮೆಗಳು ಜಯಿಸಲ್ಪಟ್ಟವು, ಮರಾ
ಟೆಯವರೂ ಮೊಗಲಾಯಿ ಸರದಾರರೂ ಇವನ ಸಹಾಯವನ್ನು ಬಯಿಸಿ
ಕೆಲವು ಸೀಮೆಗಳನ್ನು ಇವನಿಗೆ ಕೊಟ್ಟರು.
ಈ ಆಳಿಕೆಯಲ್ಲಿ ಆದ ಕಟ್ಟಡಗಳು
ಈ ದೊರೆಯಕಾಲದಲ್ಲಿ ೩೦ ದೇವಸ್ಥಾನಗಳೂ ೩-೪ ಅರಮನೆ
ಗಳೂ, ಈ ಸೀಮೆಯ ಸರಹದ್ದುಗಳಲ್ಲಿ ಐದಾರು
ಬಲವಾದ ಗಡಿಕೋಟಿಗಳೂ ಭರಮಸಾಗರದಕೆರೆ,
ಅಬ್ಬನಾಯಕನ ಹಳ್ಳಿ ಕೆರೆ ಭೀಮಸಮುದ್ರದಕೆರೆ,
ಮೊದಲಾದ ಭಾರೀಕೆರೆಗಳೂ, ಮತ್ತು ಇನ್ನೂ ಇತರ ಇಪ್ಪತ್ತು ಕೆರೆ
ಗಳೂ, ಚಿತ್ರದುರ್ಗದ ಊರಸುತ್ತ ಇರುವ ಹೊರಸುತ್ತಿನ ಭಾರೀ
ಕೋಟೆ, ಅನೇಕ ಕೋಟೆಬಾಗಿಲಗಳೂ, ಬುರಜುಗಳೂ ಇವೇ ಮೊದ
ಲಾದ ಹಲವು ದೊಡ್ಡ ಕೆಲಸಗಳನ್ನು ಮಾಡಿಸಿದರು. ಗ್ರಾಮಗಳ ಜಲ
ವಸತಿಗಾಗಿ ಅನೇಕ ಭಾವಿಗಳನ್ನೂ, ಕುಂಟೆಗಳನ್ನೂ ತೆಗೆಯಿಸಿದರು.
ಗುಳ್ಳೆರೋಗ,
ಈ ಭರಮಪ್ಪನಾಯಕನ ಆಳಿಕೆಯಲ್ಲಿ ಚಿತ್ರದುರ್ಗದ ಸೀಮೆಗೆ
ದೊಡ್ಡ ಕೇಡು ಸಂಭವಿಸಿತು. ಸ್ವಭಾನು ಸಂ॥
ದಲ್ಲಿ ಎಂದರೆ ಶ|| ೧೬೨೫ ಅಥವಾ ೧೭೦೩ ನೇ ಈ
ಇಸವಿಯಲ್ಲಿ ಮನೆಗಳಲ್ಲಿ ಇಲಿಗಳು ಬಿದ್ದು ಗರ್ರನೆ ತಿರುಗಿ ಸಾಯುತಿ
ದ್ದವು. ಕೂಡಲೇ ಕತ್ತಿನ ಸಂದಿ, ಕಂಕುಳಸಂದಿ, ತೊಡೆಸಂದಿ, ಮೊದ
ಲಾಗಿ ದೇಹದಲ್ಲಿ ಗುಳ್ಳೆ ಎದ್ದು ಜನರು ಸಾಯುತಾ ಇದ್ದರು. ಇದರಲ್ಲಿ
ಪ್ರಜೆಗಳು ಬಹಳ ನಷ್ಟವಾದರು. ಹೀಗಾದಕಾರಣ ಜನರು ಕೊಂಪೆಗ
ಳನ್ನು ಬಿಟ್ಟು ಹೊರಗೆ ಹೋಗಿ ವಾಸಮಾಡುತಿದ್ದರು. ಮತ್ತು ಜನ
ರೆಲ್ಲರೂ ಊರ ಆಚೆ ಚೇಳು ಗುಡ್ಡದ ತಪ್ಪಲಲ್ಲಿ ಗುಡಿಸಲ ಹಾಕಿಕೊಂಡಿ
-----------------------------------------
೪೮ ಚಿತ್ರದುರ್ಗದ ಪಾಳಯಗಾರರು.
ದ್ದರು. ತಾರಣ ಸಂ|| ದಲ್ಲಿ ಈ ರೋಗದಬಾಧೆಯನ್ನು ಸಹಿಸಲಾರದೆ
ದೊರೆ ಮೊದಲಾಗಿ ವಿಶಿಷ್ಟ ಜನರೂ ಚಿತ್ರದುರ್ಗದ ಊರನ್ನು ಬಿಟ್ಟು
ದುರ್ಗದ ಊರಬಾಗಿಲಿಗೆ ಕಲ್ಲು ಮುಳ್ಳುಹಾಕಿ ಯಾರೂ ಒಳಕ್ಕೆ ಪ್ರವೇ
ಶಮಾಡದಹಾಗೆ ಊರಿನ ಸುತ್ತಲೂ ಕಾವಲು ಇಟ್ಟರು. ಊರೊಳಗೆ
ದೇವರುಗಳಿಗೆ ಪೂಜೆಕೂಡಾ ಇಲ್ಲವಾಯಿತು.
ಹೊಸ ಏರ್ಪಾಡುಗಳು
ಈ ದೊರೆಯಕಾಲದಲ್ಲಿ ಕೆಲವು ಹೊಸ ಏರ್ಪಾಡುಗಳನ್ನು ಮಾಡಿ
ದರು ಈ ದೊರೆಗಳ ಸಂಸಾರವೆಲ್ಲಾ ಮಹಾಲಯ
ಅಮಾವಾಸ್ಯೆ ಕಟ್ಟಲೆ ಮಾಡುವುದಕ್ಕಾಗಿ ಪ್ರತಿವ
ರುಷವೂ ಕಣಕುಪ್ಪಗೆ ಹೋಗುತಾ ಇದ್ದರು. ಈ ಆಳಿಕೆಯಲ್ಲಿ ಅದನ್ನು
ತಪ್ಪಿಸಿ ಆ ಸ್ಥಳಕ್ಕೆ ಭಾರತದ ಹುಂಣುಮೆಯಲ್ಲಿ ಹೋಗಲು ಆರಂಭ
ಮಾಡಿದರು. ಆ ಕಾಲದಲ್ಲಿ ರಾಜಕುಮಾರರೂ ರಾಜಕುಮಾರಿಯರೂ
ಸಹಾ ಬೇವಿನ ಉಡಿಗೆ ಉಟ್ಟು ಬಳಗಸಮೇತ ಹೊರಡುತಿದ್ದರು.
ಹಾಗೆ ಹೋಗಿ ಉತ್ಸವಾಂಬನಿಗೂ, ತಾಟಮ್ಮ ದೇವರಿಗೂ, ಸೇವೆಮಾಡಿ
ಬರುತಿದ್ದರು. ಹಾಗೆ ಹೋಗುವಾಗ,
೧) ಗ್ರಾಮದ ತಳವಾರರು ಗ್ರಾಮ ೧ಕ್ಕೆ ೧ ಟಗರು, ಒಂದು
ತುಪ್ಪದ ಕುಂಭ ಸಹಾ ತರಬೇಕು.
(-೨)' ದೊರೆಯು ಜೋಗಿಗೆ ಹೊರಟಾಗ ಪ್ರತಿಗ್ರಾಮದ ಗೌಡನೂ
ಗ್ರಾಮಕ್ಕೆ ೧ಕ್ಕೆ ೧ ವರಹ ಹೋಗಿ ಕಾಣಿಕೆಯನ್ನು
ಹಾಕಬೇಕು.
(೩) ಭಾದ್ರಪದ ಮಾಸದ ವಿನಾಯಕನ ಚೌತಿಯಲ್ಲಿ ವಿಶಿಷ್ಟ್ರಮಠದ
ಐಯ್ಯನವರೂ ಕರ್ಜೀಕಾಯಿ ಮಾಡಿಕೊಂಡು ಬಂದು
ಅದನ್ನು ಅರಮನೆಯ ಬೊಕ್ಕಸದ ಮನೆಗೆ ಒಪ್ಪಿ
ಸಬೇಕು.
(೪) ಜಾಡರ ಮಗ್ಗ ೧ಕ್ಕೆ ೧ ನೂಲಹಗ್ಗದಪ್ರಕಾರ ಪ್ರತಿವರು
ಷವೂ ಜಾಡರು ತಂದು ಅರಮನೆಗೆ ಒಪ್ಪಿಸಬೇಕು.
------------------------------------
ಚಿನ್ನದ ಮನೆ. ೪೯
(೫) ಗ್ರಾಮಾಂತರಗಳಂದ ಹಜಾಮರು ತಿಂಗಳಗೆ ಒಂದು ಸಾರಿ
ಸರದೀಮೇರೆ ದುರ್ಗಕ್ಕೆ ಬಂದು ಖಾಸಾಪಾಗದ ಕುದು
ರೆಗಳ ಮೈ ಕೂದಲನ್ನೂ ಅಯಾಲನ್ನೂಕತ್ತರಿಸಬೇಕು.
(೬) ಗ್ರಾಮದ ಬೇಗಾರರು (ಮಾದಿಗರು) ಖಾಸಾ ಕುದುರೆಗೆ
ದಿನ ೧ಕ್ಕೆ ಹಸಿಹುಲ್ಲು ೧೦ ಹೊರೆ ಪ್ರಕಾರ ಸರದೀ
ಮೇರೆ ತರಬೇಕು
(೭) ಗ್ರಾಮ ೧ಕ್ಕೆ ೨ ಆಳುಗಳು ಗ್ರಾಮಾಂತರಗಳಂದ ತಿಂಗ
ಳಿಗೆ ೧ ಸಾರಿ ದುರ್ಗಕ್ಕೆ ಬಂದು ಕರಡ ಹುಲ್ಲನು
ಕುಯಿದು ಬಣವೆ ಹಾಕಬೇಕು,
ಈ ಪ್ರಕಾರ ಏರ್ಪಾಡನ್ನು ಮಾಡಿಸಿದರು.
ಚಿನ್ನದ ಮನೆ.
ವಿರೋಧಿ ಸಂ|| ದಲ್ಲಿ ಖಾಸಾ ನಾಗತಿಯರಿಗೂ, ಕುಮಾರರಿಗೂ,
ಕುಮಾರಿಗಳಗೂ, ಕುದುರೆಗಳಗೂ, ಬೇಕಾದ ಆಭರಣ
ಗಳನ್ನು ಮಾಡಿಸುವುದಕ್ಕೆ ಮೇಲ್‌ದುರ್ಗದ ಅರಮನೆ
ಯಲ್ಲಿ ಒಂದು ಚೌಕಿ ಕಟ್ಟಿಸಿ ಅದರಲ್ಲಿ ಅಗಸಾಲೆಗಳನ್ನು ಇರಿಸಿದರು.
ಅಗಸಾಲೆ ಒಬ್ಬನಿಗೆ ತಿಂಗಳಿಗೆ ದುರ್ಗಿ ವರಹ ೨ ರ ಪ್ರಕಾರ ೮ ಜನ
ರನ್ನು ನೇಮಕಮಾಡಿ ಬೊಕ್ಕಸದಿಂದ ನಾಣ್ಯಗಳನ್ನು ತಂದುಕೊಟ್ಟು
ಚಿನ್ನವಾರದ ಕಟ್ಟಲೇ ಪ್ರಕಾರ ಚಿನ್ನ ಬೆಳ್ಳಿ ಸಹಾ ತೆಗೆದುಕೊಂಡು
ಬೇಕಾದ ವಸ್ತುಗಳನ್ನು ಮಾಡಿಸಿದರು ಈ ವಿಷಯದಲ್ಲಿ ಲೆಕ್ಕಪತ್ರ
ಬರೆಯುವುದಕ್ಕೆ ಬಿಳಿಚೋಡು ಹೇಮಂಣನೆಂಬಾತನನ್ನು ನೇಮಿಸಿದ್ದರು.
ಈ ಕೆಲಸಮಾಡತಕ್ಕ ಮನೆಗೆ ಚಿನ್ನದ ಮನೆ ಎಂದು ಹೆಸರಾಯಿತು,
ಅಲ್ಲಿ ಅಧಿಕಾರಿಯಾಗಿದ್ದವನಿಗೆ ಜೆನ್ನದ ಮನೇ ಗುರಿಕಾರನೆಂದು ಹೆಸ
ರಾಯಿತು.
ಸಮರ ವಿಜಯ
ಈ ಭರಮಪ್ಪನಾಯಕನ ಪರಾಕ್ರಮವನ್ನು ಹೊಗಳ ಭಟರಾ
ಜರು ಹೇಳುವ ಸಮರ ವಿಷಯವೆಂಬ ಕೆಲವು ಪದ್ಯುಗ
ನ್ನು ಬರೆದಿದಾರೆ. ಆ ಪದಗಳಲ್ಲಿ ಕೆಲವನ್ನು ಕೆಳ
ಗೆಹಾಕಿದೆ.
-----------------------------------------
೫೦ ಚಿತ್ರದುರ್ಗದ ಪಾಳಯಗಾರರು.
ಭುವನದೊಳ್ ಚಿನ್ಮೂಲಾದ್ರಿಯ ರಾಜಧಾನಿಯೋಳ್ |
ಯುವರಾಜಸ್ಥಿರಪಟ್ಟಭದ್ರ, ಕರುಣಸಮುದ್ರ, ಪರಸೈನ್ಯ ಛಿದ್ರ ||
ಶರಧಿ ಮಧ್ಯದಲಿ ಚಂದಿರನುಸಿದಂದದಲಿ |
ವರಕಾಮಗೇತಿ ವಂಶದೊಳು ಪುಟ್ಟಿ, ಸೌಖ್ಯೂದೊಳು ಬಾಳು,
ಕೃಪಾಳು ||
ಖಾನಖಾನರನೆಲ್ಲಸದೆದು ಕಪ್ಪವತಂದೆ |
ಈ ನಿನ್ನ ಶೌರ್ಯಕೆಣೆಇಲ್ಲ., ರಣರಂಗಮಲ್ಲ, ನಿನಗೆ ಸರಿಇಲ್ಲ ||
ಅದಕಂಡುಮೆಚ್ಚಿಪಾಛಾವ ದೊಡ್ಡೇರಿಯನು ಮುದದಿಂದ ಕೊ
ಡಲು ಕೈಕೊಂಡ ||
ಕದನ ಪ್ರಚಂಡ |
ಭಾಪುದೋರ್ದಂಡ ॥
ಮೈಲಾರ ಮೊದಲಾದ ಸೀಮೆಗಳ ಜೈಸಿಕೊಂ | ಡೇಳಿಗೆಯ
ಭುಜಶಕ್ತಿಯಿಂದೆ |
ದುರ್ಗ ಕೈತಂದೆ |
ತೂರ್ಯರವದಿಂದೆ ||
ಇದಿರುದಂಡನುಬಿಟ್ಟು ಬದಗಿಸಮನಾಳಗದಿ |
ಕದನವನುಗೆರಿದ ಹಮ್ಮೀರ !
ಭಲರೆಮೊನೆಗಾರ !
ಅಸಹಾಯಶೂರ |
ಚಿನ್ಮೂಲಗಿರೀಶ |
ಚನ್ನಿಗವಿಲಾಸ
ಮೊನ್ನೆಯಲಲಾಮ |
ಅಮಿತಗುಣಧಾಮ ॥
ಕೊಡಗೈಯ್ಯ ಕರ್ಣ |
ಕರುಣಾಸಂಪೂರ್ಣ !
ನುಡಿರಾಮಬಾಣ |
ನೂತನಶರೀರ | ಮಾರನವತಾರ | ನೆರೆಪುಣ್ಯಕಾಂತ |
ಪರಮಾಯುವಂತ ॥
------------------------------
ಹಿರೀ ಮದಕರಿನಾಯಕನ ಪಟ್ಟ. ೫೧
೧೩ನೇ ಅಧ್ಯಾಯ.
ಹಿರೀ ಮದಕರಿನಾಯಕ,
ಹಿರೀ ಮದಕರಿನಾಯಕನಿಗೆ ಪಟ್ಟವಾದ್ದು.
ಶ|| ೧೬೪೨ ನೇ ಪ್ಲವ ಸಂ|| ಜ್ಯೇಷ್ಠ ಶು|| ೧೩ ಸ್ಥಿರವಾರದಲ್ಲು
ಭರಮಪ್ಪನಾಯಕನ ಹಿರೀ ಮಗ ಹಿರೀ ಮದಕರಿ
ನಾಯಕನಿಗೆ ಚಂಪಕಾ ಸಿದ್ಧೇಶ್ವರನ ಗುಡಿಯಲ್ಲಿ
ಪಟ್ಟಾಭಿಷೇಕವಾಯಿತು. ದುರ್ಗದ ಸೇನೆಯು
ನವಲುಬಂಡೆಕೋಟಿ, ಸೋವಿನಹಳ್ಳಿ ಕೋಟೆ, ಇವೆರಡನ್ನೂ ತೆಗೆದು
ಕೊಂಡಿತು.
ಶೋಭಕೃತು ಸಂ॥ ದಲ್ಲಿ ಅಮಕೊಂದಿ ಕೋಟೆಯನ್ನು ಹಲ್ಲಾ
ಮಾಡಿ ತೆಗೆದುಕೊಂಡರು. ಇದೇ ಸಂ|| ದಲ್ಲಿ ಶ್ರೀರಂಗಪಟ್ಟಣದವರು
ಚಿತ್ರದುರ್ಗದ ಪಾಳಯಗಾರರನ್ನು ತನ್ನ ಸಮಾನರಾದ ಮಿತ್ರರಂತೆ
ಭಾವಿಸಿ ಪಾಛಾ ಎಂಬ ರಾಯಭಾರಿಯ ಸಂಗಡ ರಾಜಗೋಪಾಲನೆಂಬ
ಆನೆ ಒಂದು, ಕುದುರೆ ಒಂದು, ಫಿರಂಗಿ, ಮೊಲಾದ್ದನ್ನು ನಸರಾಗಿ ಕಳು
ಹಿಸಿದರು. ಸೀರ್ಯದ ಸುಬೇದಾರನ ಮಗನು ಸಂಣಕ್ಕಿ ಬಾಗೂರ
ಕೋಟೆ, ಹೊದಿಗೆರೆ ಕೋಟಿ ಇವುಗಳನ್ನು ದುರ್ಗದವರಿಗೆ ಕೊಟ್ಟನು.
ರಾಜ್ಯ ಸಂಪಾದನೆ.
ಈ ಕಾಲದಲ್ಲಿ ರಾಯದುರ್ಗದ ಸಂಸ್ಥಾನದವರು ರಾತ್ರೆ ಕಾಲದಲ್ಲಿ
ಮೊಳಕಾಲ್ಮುರುವಿನ ಕೋಟೆಗೆ ಇಳೀ ಬಿದ್ದ ರು. ಆದರೆ ಕೋಟೆಯೊ
ಳಗಿದ್ದ ದುರ್ಗದ ಭಟರು, ಅವರನ್ನು ಹೊಡೆದು
ಓಡಿಸಿದರು. ಇದೇ ಶೋಭಕೃತು ಸಂ॥ ದಲ್ಲಿ ಆನೇ
ಗೊಂದಿರಾಯರ ಮಗಳು ಗಂಡೋಬಳಮ್ಮ ನಾಗತಿಯನ್ನೂ ಕನಕಗಿರಿ
ವೆಂಕಟಾಚಲ ನಾಗತಿಯನ್ನೂ ಸಹಾ ಕೊಟ್ಟು ಹಿರೀ ಮದಕರಿನಾಯಕ
ನಿಗೆ ಮದುವೆಯಾಯಿತು. ಸೀರ್ಯದ ಸುಬೇದಾರನಿಗೆ ಸೇರಿದ್ದ ಅಜ್ಜಂ
ಪುರ, ದೊಂಳ, ಈ ಎರಡು ಕೋಟೆಗಳನ್ನೂ ದುರ್ಗದವರು ಹಿಡಿದು
ಸೇರಿಸಿಕೊಂಡರು. ಕೂಡಲೆ ಸೀರ್ಯದ ಸುಬೇದಾರ ಕಾರಖಾನನೂ,
ಸಿದ್ದೋಜಿ ಮತ್ತು ಮಲೆನಾಡಿನವರೂ ಸಹಾ ಬಂದು ಅಜ್ಜಂಪುರದ
ಕೋಟೆಗೆ ಮುತ್ತಿಗೆ ಹಾಕಿ ಹಿಂತಿರುಗಿ ತೆಗದುಕೊಂಡರು.
------------------------------------
೫೨ ಚಿತ್ರದುರ್ಗದ ಪಾಳಯಗಾರರು.
ಪರಾಭವ ಸಂ|| ದಲ್ಲಿ ದೊಡ್ಡದಾಗಿ ಕ್ಷಾಮ ಪ್ರಾಪ್ತವಾಯಿತು.
ಜನರಿಗೆ ಧರ್ಮಕ್ಕೆ ಅನ್ನಾ ಹಾಕಿಸಲು ದೊರೆಯು
ಏರ್ಪಾಡು ಮಾಡಿದನು. ಇದೇ ಸಮಯದಲ್ಲಿ ಪೀ
ರೋಜಿ ಎಂಬ ಮರಾಟೆ ಸರದಾರನ ದಂಡು ಬಂದು, ಕೂನ ಬೇವಿನ
ಬಳಿಯಲ್ಲಿ ಇಳಿಯಿತು. ದುರ್ಗದ ಸೇನೆಯು ಅವರ ಮೇಲೆ ಜಗಳಕ್ಕೆ
ತೊಡಗಿತು. ಆದರೆ ಮರಾಟೆಯವರಿಗೆ ಜಯವಾಯಿತು, ದಳವಾಯಿ
ಭರಮಂಣನನ್ನು ಶತ್ರುಗಳು ಸೆರೆಹಿಡಿದು ಹೊಂಡು ಹೋದರು ಹಾಗಲ
ವಾಡಿ ಸಂಸ್ಥಾನದವರಿಗೂ ದುರ್ಗದವರಿಗೂ ಹೆ ಸೈ ಸೇರಿತು ಶತ್ರು
ಗಳು ಹರತಿಫೋಟೆಯನ್ನು ಮುತ್ತಿದರು. Sa ಶತ್ರುಗಳಾದ
ಸಮಾಪ ಸಂಸ್ಥಾನದವರೂ, ಇತರ ಮರಾಟೆಯವರೂ, ಸೀರ್ಯದ ಸುಬೇ
ದಾರನ ಕಡೆಯವರೂ, ಸಹಾ ಆಗಾಗ್ಯೆ ದುರ್ಗದ ಗಡಿಕೋಟೆಗಳಮೇಲೆ
ಬೀಳುವುದು, ದುರ್ಗದವೀರರು ಶತ್ರುಗಳನ್ನು ಹೊಡೆದು ಓಡಿಸುವುದು,
ಒಂದೊಂದುವೇಳೆ ತಾವೂ ಸೋತುಹೋಗುವುದು, ಹೀಗೆ ಚಿಲ್ಲರೆ ಕದನ
ಗಳು ಈ ಆಳಿಕೆಯಲ್ಲಿ ವಿಶೇಷವಾಗಿ ಜರುಗಿದವು. ದುರ್ಮತಿ ಸಂ||
ಆಶ್ವೀಜ ಶು॥ ೧೦ ದಿವಸ ಹುಚ್ಚು ಮಳೆ ಆರಂಭವಾಗಿ ಅದೇ ಕಾರ್ತೀಕ
ಶು|| ೫ ವರೆಗೆ ಹುಯಿದು ಒಹಳ ನಷ್ಟವಾಯಿತು.
ರಾಮಗಿರಿಯ ಮುತ್ತಿಗೆ,
ಹಿರೀ ಮದಕರಿನಾಯಕ
ರುಧಿರೋದ್ಗಾರಿ ಸಂ॥ ದಲ್ಲಿ ಮಲೆ ನಾಡಿನವರು ಮೋಸದಿಂದ
ಚಿತ್ರದುರ್ಗದ ಸೀಮೆಗೆ ಸೇರಿದ ರಾಮಗಿರಿ ದುರ್ಗ
ವನ್ನು ಹಿಡಿದು ಕೊಂಡರೆಂದು ಸಮಾಚಾರ ಬಂತು.
ಹಿರೀ ಮದಕರಿನಾಯಕನು ಚಿಳ್ ನಡುವೆಂಬ ಸ್ಥಳದಲ್ಲಿದ್ದನು. ಅಮು
ತ್ತಿಗೇ ಸಂಗತಿ ಕೇಳಿ ದೊರೆಯು ಸೇನೆಯೊಡನೆ ಹೊರಟು ಆ ಸ್ಥಳಕ್ಕೆ
ಹೋಗಿ ಯುದ್ಧಕ್ಕೆ ಸನ್ನದ್ಧನಾದನು. ಇವನನ್ನು ಎದುರಿಸಲು ಮಲೆ
ನಾಡಿನವರು, ಹರಪನಹಳ್ಳೀ ಸೋಮಶೇಖರನಾಯಕ, ಆನೇಗೊಂ
ದಿಯ ಫೌಜು, ರಾಯದುರ್ಗದ ದಂಡು, ಸವಣೂರಿನ ದಂಡು, ಇತರ
ಚಿಲ್ಲರೆ ಪಾಳಯಗಾರರು, ಇವರೆಲ್ಲಾ ಸೇರಿಕೊಂಡು ೮೦೦೦ ಕುದುರೆ
೨೦೦೦೦ ಕಾಲು ಬಲ ಸಮೇತವಾಗಿ ಹೋದಿಗ್ಗೆರೆ ಬಳಿಯಲ್ಲಿ ಬಂದು
ಇಳಿದು ರಾಮಗಿರಿಯ ಮುತ್ತಿಗೇ ಎಬ್ಬಿಸಲು ಉದ್ಭುಕ್ತರಾಗಿ ಕೋಟೆ
--------------------------------------
ಹಿರೀ ಮದಕರಿನಾಯಕನ ಪೌರುಷ ೫೩
ಯೊಳಕ್ಕೆ ಹೊಕ್ಕು ದುರ್ಗದ ಸೇನೆಯೊಡನೆ ಯುದ್ಧಕ್ಕೆ ಆರಂಭಿಸಿದರು.
ಈ ಕದನದಲ್ಲಿ ಚಿತ್ರದುರ್ಗದ ದೊರೆಗೆ ಬಲಗಡೇ ದವಡೆಯಮೇಲೆ ಅಂ
ಬಿನ ಗಾಯವಾಯಿತು. ಆಗ ಆತನು ಡೇರೆಗೆ ಬಂದು ಗಾಯಕ್ಕೆ ಔಪಧಿ
ಹಾಕಿಸಿ ಕಟ್ಟಿಸಿಕೊಂಡು ಆನೆಯನ್ನು ಏರಿ ಪುನಃ ಯುದ್ಧರಂಗಕ್ಕೆ ಹೊ
ರಟು ಫಿರಂಗಿಯನ್ನು ಕೋಟೆಗೆ ಹೊಡೆಯಿಸಿ ಮುತ್ತಿಗೇ ಹಾಕಿದನು.
ಶತ್ರುಗಳು ಕೋಟೆಯನ್ನು ಬಿಟ್ಟು ಓಡಿಹೋದರು ಕೋಟೆಯು ಚಿತ್ರ
ದುರ್ಗದವರ ವಶವಾಯಿತು. ಹಗೆಗಳು ಆ ಕೋಟೆಯಲ್ಲಿ ಬಿಟ್ಟು ಒಡಿ
ಹೋದ ೭ ಕಬ್ಬಿಣದ ಎರಕದ ನಗಾರಿಗಳು ಸಿಕ್ಕಿದವು. ಈ ಯುದ್ಧವು
ಬಹು ಘೋರವಾಗಿ ನಡೆಯಿತು. ಕದನದ ಮಧ್ಯ
ಕಾಲದಲ್ಲಿ ಹರಪನಹಳ್ಳಿಯ ಸೋಮಶೇಖರ ರಾ
ಯನು ಕೂತಿದ್ದ ಅನೆಯೂ, ಹಿರೀ ಮದಕರಿನಾಯ
ಕನ ಆನೆಯೂ ಒಂದಕ್ಕೊಂದು ಸಮಾಪದಲ್ಲಿ ಸೇರಿ ಜಗಳಕ್ಕೆ ಆರಂಭ
ವಾಯಿತು. ಆಗ ಸೋಮಶೇಖರರಾಯನು ತನ್ನು ಕೈಲಿದ್ದ ಉಕ್ಕಿನ
ಅಲಗ ಹಾಕಿದಂಥಾ ಕರೋಲದಿಂದ ದುರ್ಗದ ದೊರೆಯನ್ನು ತಿವಿಯಲು
ಯತ್ನಿಸಿದನು. ಆಗಧೀರನಾದ ಹಿರೀ ಮದಕರಿವಾಯಕನು ಆ ಕರೋ
ಲಿನ ಅಲಗನ್ನೇ ಹಿಡಿದು ಎಳೆದು ತೆಗೆದುಕೊಂಡನು. ಸೋಮಶೇಖ
ರನು ದುರ್ಗದ ದೊರೆಯ ಕೈಯ್ಯಲ್ಲಿದ್ದ ಕತ್ತಿಯನ್ನು ಕಿತ್ತುಕೊಂಡು ಎರ
ಕದ ಕಠಾರಿಯನ್ನು ಉಳ್ಳಂಬಿರಿಸಿಗೊ ವಿಸೆಯಲು, ದುರ್ಗದ ರಾಜನು
ಅದನ್ನು ಫೈಯ್ಯಂಲ್ಲಿಿಡಿದು ಕೊಂಡನು. ಹರಪನಹಳ್ಳ ಯ ದೊರೆಗೆ ಮು
ಕದ ಮೇಲೆ ಅಂಬುತಗಲಿ ಗಾಯವಾಗಿ ಅಲಗು ಮುರಿದು ಮೂಳೆಯೊಳಗೆ
ನಾಟಿಕೊಂಡಿತು. ಶತ್ರುಗಳು ದುರ್ಗದವರ ಏಟನ್ನು ತಡೆಯಲಾರದೆ
ದಿಕ್ಕ ಮುರಿದು ಓಡಿದರು. ಈ ಪ್ರಕಾರ ಜಯಶೀಲನಾದ ಹಿರೀ
ಮದಕರಿನಾಯಕನು ಸೀರ್ಯದ ಸುಬೇದಾರನಿಗೆ ಭೇಟಿಕೊಟ್ಟು ಭಾದ್ರ
ಪದ ಶು|| ೧೦ ಯಲ್ಲು ದುರ್ಗಕ್ಕೆ ಹಿಂತಿರುಗಿ ಬಂದನು,
-------------------------------------
೫೪ ಚಿತ್ರದುರ್ಗದ ಪಾಳಯಗಾರರು.
ದೇಶದಲ್ಲಿ ರಾಜ್ಯಭಾರದ
ಏರ್ಪಾಡು.
ತರುವಾಯ ದೊರೆಯು ಒಳದೇಕದ ಆಡಳತಗಳನ್ನು ನಡಿಸಲು
ಉದ್ಯುಕ್ತನಾದನು. ತನ್ನ ತಮ್ಮ ಗಂಗಂಣನಾಯಕ
ನನ್ನು ಮುರುಗಿ ಸ್ವಾಮಿಗಳ ಸೇವೆಗೆ ನಿಲ್ಲಿಸಿದನು.
ಮೊಳಕಾಲ್ಮೂರು ಪ್ರಾಂತಕ್ಕೆ ಅಧಿಕಾರಿಯಾಗಿ ಕಾಟ
ಪ್ಪನಾಯಕನನ್ನೂ, ಕಣಕುಪ್ಪೆಗೆ ಜಂಪಂಣನಾಯಕನನ್ನೂ, ಹೊಸದು
ರ್ಗದ ಪ್ರಾಂತಕ್ಕೆ ದಂಡಿನ ಜಂಪಂಣನಾಯಕ ಭರಮಂಣನಾಯಕ ಇವ
ರುಗಳನ್ನೂ ನೇಮಕಮಾಡಿದನು. ಹುಚ್ಚಲಿಂಗಂಣನಾಯಕನನ್ನು ಸೇ
ನಾಪತಿಯಾಗಿ ಮಾಡಿ ದುರ್ಗದಲ್ಲಿಯೇ ಇರಿಸಿಕೊಂಡನು. ಈ ಲಿಂಗಂಣ
ನಾಯಕನು ಗರಡೀ ಸಾಧನೆಯಲ್ಲಿ ಬಹಳ ನಿಸ್ಸೀಮ, ದೇಹದಲ್ಲಿ ಬಹು
ಶಕ್ತಿಯುಳ್ಳವನು. ಅರಮನೆಗೆ ನಂಟರು ಮೊದಲಾದ ಜನರು ಬಂದು
ಕಂಬವನ್ನು ವರಗಿಕೊಂಡು ಕೂತಿದ್ದರೆ, ಆ ಕಂಬವನ್ನು ರಹಸ್ಯವಾಗಿ
ಮೇಲಕ್ಕೆ ಎತ್ತಿ ಅದರ ಪಕ್ಕದಲ್ಲಿ ಕೂತಿದ್ದವರ ಅಂಗಿಬಟ್ಟೆಯನ್ನು ಅದರ
ಕೆಳಕ್ಕೆ ಸಿಕ್ಕಿಸುತಿದ್ದನು. ಇದನ್ನು ಅರಿಯದೆ ಆ ಜನರು ಮೇಲಕ್ಕೆ
ಏಳುವಾಗ ಬಟ್ಟೆ ಎಳೆದು ಮುಗ್ಗರಿಸುವಹಾಗಾಗುತಿತ್ತು. ಇದನ್ನು ಕಂಡು
ದರ್ಬಾರಿನವರೆಲ್ಲಾ ನಗುವಹಾಗೆ ವಿನೋದವಾದ ಸಾಹಸಗಳನ್ನು ಮಾಡು
ತಿದ್ದನು,
ಉಳಿಕೆ ಅಂಣತಮ್ಮಂದಿರು ಗಡಿ ದುರ್ಗಗಳಲ್ಲಿ ಸೇನಾಪತಿಗಳಾಗಿ
ದ್ಭರು. ಇವರಿಗೆಲ್ಲಾ ಯುದ್ಧದ ಸಾಮಾನುಗಳನ್ನು ದೊರೆಯು ವಿಶೇಷ
ವಾಗಿ ವದಗಿಸಿಕೊಟ್ಟಿದ್ದನು. ಕ್ರೋಧನ, ಅಕ್ಷಯ ಸಂ॥ ಗಳಲ್ಲಿ ರಾಯ
ದುರ್ಗದ ಪಾಳಯ ಪಟ್ಟಿಗೆ ಸೇರಿದ್ದ ೮-೧೦ ಗಾ ಮಗಳೂ ಆ
ಕೋಟಿಗಳೂ ಜೈಸಲ್ಪಟ್ಟು ಚಿತ್ರದುರ್ಗದ ಆಳಕೆಗೆ ಬಂದವು.
ಶ|| ೧೬೬೯ನೇ ವಿಭವ ಸಂ॥ಪುಷ್ಯ ಶು|| ೧೦ ಗುರುವಾರ ಭೂ
ಕಂಪವಾಗಿ ಗರ್ಜನೆ ಯಾಯಿತು.
------------
-------------------------------------
ಮಾಯಕೊಂಡದ ಮುತ್ತಿಗೆ. ೫೫
೧೪ನೇ ಅಧ್ಯಾಯ.
ಹಿರೀ ಮದಕರಿನಾಯಕ (ಸಾಗುವುದು)
ಮಾಯಕೊಂಡದ ಮುತ್ತಿಗೆ
ಶಕ|| ೧೬೭೦ ನೇ ವಿಭವ ಸೆಂ॥ ದಲ್ಲಿ ದೊರೆಯು ಮರಾಟಿ ಸಿದ್ಧೋ
ಜಿರಾಯನನ್ನೂ ಕರೆದುಕೊಂಡು ದಂಡಿನೊಡನೆ
ಅಣಜಿಬಳಿಯಲ್ಲಿ ಹೋಗಿ ಇಳದುಕೊಂಡನು.
ಶತ್ರುಗಳ ಹಾವಳಿಯ ಆಕಡೆ ಬಲವಾದ್ದರಿಂದ
ಹಾಗೆ ಹೋಗಬೇಕಾಯಿತು. ಅಷ್ಟರಲ್ಲಿ ನಗರದವರು, ಸವಣೂರವರು,
ಹರಪನಹಳ್ಳಿಯವರು, ರಾಯದುರ್ಗದವರು, ಇವರೆಲ್ಲಾ ಪುನಃ ಸೇರಿ
ಹೊಂಡು ಮಾಯಕೊಂಡಕ್ಕೆ ಮುತ್ತಿಗೆ ಹಾಕಿದಾರೆಂದು ವರ್ತಮಾನ
ಬಂತು ಆಗ ದೊರೆಯು ಸೇನಾಸಮೇತನಾಗಿ ಹೊರಟು ವಿಭವ ಸಂ॥
ಫಾಲ್ಗುಣ ಶು|| ೧೩ ಸ್ಥಿರವಾರದಲ್ಲು ಮಾಯಕೊಂಡದ ತೆವರಿನಮೇಲೆ
ನಿಂತು ಶತ್ರುಸೇನೆಯನ್ನು ನೋಡಿ ಆನೆಯನ್ನೇರಿ ಸೊನ್ನೇ ಬಾಣಗ
ಳನ್ನು ಹೊಡೆಯಿಸಿ ಸ್ವಾರಿ ಫಿರಂಗಿ ಹೊಡೆದು ಎದುರು ದಂಡಿನಮೇಲೆ
ಬಿದ್ದು ಕಡಿಯಲಾಗಿ, ಹೆಗೆಗಳು ತಡೆಯಲಾರದೆ ನಾಲ್ಕು ಕಡೆಗೂ ಓಡಿ
ಹೋದರು ಆಗ ರಾಜನು ಆನೇ ನಡಿಸಿಕೊಂಡು ಹೋಗಿ ಎದುರು
ಸೇನೆಯ ಡೇರೇ ಬಳಿಯಲ್ಲಿ ನಿಂತನು. ಕಾಲುಬಲವು ಲೂಟಿಗೆ ಕೈ
ಹಾಕಿದರು. ಆಗ ಹಗೆಯವರ ಕುದುರೇ ದಂಡು ಜಿತ್ರುದುರ್ಗದ ಫೌಜಿನ
ಮೇಲೆ ಬಿದ್ದು ಕಡಿಯಲು ಆರಂಭಿಸಿತು. ದುರ್ಗದ ಕಾಲು ಬಲವು ಮು
ರಿದು ಮಾಗಡಿಕೆರೆ ಹಿಂದಕ್ಕೆ ಹೋಯಿತು. ರಾಜನು ತನ್ನು ಫೌಜು
ಮುರಿದುಹೋದ್ದನ್ನು ಕಂಡು ಆನೇಕಾಲಿಗೆ ದಬಕ ಹಾಕಿಸಿ ನಿಂತು
ಹೊಂಡು ಚಂದಾ ಸಾಬಿಯ ಕುದುರೆ ೨೦೦೦, ಕಾಲುಮಂದಿ ೨೦೦ ಇಷ್ಟು
ಘೌಜು ಸಮೇತ ೬ ತಾಸಿನಿಂದ ೧೦ ತಾಸಿನವರೆಗೂ ಯುದ್ಧಮಾಡುತಿ
ದ್ದನು. ಶತ್ರುಸೇನೆ ವಿಶಿಷ್ಟವೂ ಹಿರೀ ಮದಕರಿನಾಯಕನ ಆನೆಯೊಂ
ದನ್ನು ಮುತ್ತಿ ಅದನ್ನು ಹಡಿದು ಕೆಡವಿದರು. ಆಗ ರಾಜನು ಖಾಸಾ
ಮಾವುತ ಸಂಕನಿಗೆ ಅಪ್ಪಣೇ ಮಾಡಿ ಬೇರೆ ಆನೆ
ಯನ್ನು ತರಿಸಿ ಅದನ್ನೇರಿಕೊಂಡು ಮಾವುತನನ್ನು
ಕುರಿತು--ನಮ್ಹ ಆನೆಯನ್ನು ಹರಪನಹಳ್ಳ ದೊರೆಯ ಆನೆ ಬಳಿಗೆ ತೆಗೆ
ದೊರೆಯ ಪರಾಕ್ರಮ.
------------------------------------
೫೬ ಚಿತ್ರದುರ್ಗದ ವಾಳಯಗಾರರು.
ದುಕೊಂಡು ಹೋಗು, ಎಂದು ಅಪ್ಪಣೇ ಮಾಡಿದನು. ಅದಕ್ಕೆ ಮಾವು
ತನು--ಮಹಾಸ್ಟಾಮಿ ನಮ್ಮ ಫೌಜು ಯಾವತ್ತೂ ಮುರಿದು ಹೋಯಿತು.
ಅವರ ಪೌಜು ನಾಲ್ಕು ಕಡೆಯಿಂದಲೂ ಹೊಡೆಯುತಾ ಬರುತಿದೆ, ನಮ್ಮ
ಖಿಲ್ಲೆ ಹಿಂಭಾಗ ಹತ್ತರವಾಗಿದೆ. ಅಪ್ಪಣೆಯಾದರೆ ಮಾಯ ಕೊಂಡದ
ಖಿಲ್ಲೆಯೊಳಕ್ಕೆ ಆನೆಯನ್ನು ತಿರುಗಿಸುತೇನೆ ಎಂದು ಅರಿಕೇ ಮಾಡಿದನು.
ಈ ಮಾತು ಕೇಳ ದೊರೆಯು ಈಶ್ವರನ ಕೃಪೆಯಿಂದ ನಾವು ಲಡಾ
ಯಿಮಾಡಿದಾಗೆಲ್ಲಾ ಶತ್ರುಜನರಿಗೆ ಬೆನ್ನು ಕೊಟ್ಟಲ್ಲ, ಈ ವರೆಗೂ ಭಗ
ವಂತನು ಯಶಸ್ಸು ಕೊಟ್ಟಿದಾನೆ. ಈ ದಿವಸ ಹರಪನ ಹಳ್ಳಿಯವರಿಗೆ
ಬೆನ್ನ ಕೊಟ್ಟು ಎಷ್ಟ್ರದಿವಸ ಬದುಕಬೇಕು? ನಮಗೂ, ಹರಪನಹಳ್ಳಿ
ಯವರಿಗೂ ಪರಸ್ಪರ ವಿಶೇಷವಾದ ಕ್ರೋಧವಿದೆ. ಒಬ್ಬರಮೇಲೆ
ಒಬ್ಬರು ಮತ್ಸರ ತೀರಿಸಿಕೊಳ್ಳುವುದರಲ್ಲಿ ಅನೇಕ ಪ್ರಾಣಿಗಳು ಹತರಾ
ಗುವರು. ಅಂಥಾ ಕ್ರೋಧವನ್ನು ಉಪಾಯಾಂತರದಿಂದ ಸಾಧಿಸಿಕೊ
ಳ್ಳದೆ ನಾವು ಇಬ್ಬರೂ ಕಾದುವುದರಲ್ಲಿ ಇಷ್ಟು ಪ್ರಾಣಿಗಳನ್ನೂ ಬಲಿಕೊ
ಡಬೇಕಾಗುವುದು. ಇದು ನಮಗೆ ಧರ್ಮವಲ್ಲ, ನಾವಿಬ್ಬರೂ ಪರಾಕ್ರ,ಮ
ದಿಂದ ಕಾಯುವಾಗ ಯಾರೂ ಸೋಲವಹಾಗಿಲ್ಲ. ಒಬ್ಬ ಮಡಿದರೆ ಅವ
ನಿಗೆ ವೀರಸ್ವರ್ಗ ಬರುವುದು, ಅವನು ಗೆದ್ದ ಹಾಗಾಯಿತು. ಎದುರಾ
ಳಗೆ ರಾಜ್ಯ ದೊರೆಯಿತು, ಅವನೂ ಗೆದ್ದ ಹಾಗಾಯಿತು ನಾವು ಈಶ್ವರ
ಪೂಜೆಮಾಡಿದ್ದಕ್ಕೆ ಈ ದಿನ ವೀರಸ್ವರ್ಗವೇ ಪರಂತು ಎರಡನೇ ಮಾತೇ
ಇಲ್ಲ. ಪರಾಕ್ರಮಕಾಲಿಗಳು ವೀರಸ್ವರ್ಗ ಭೋಗವನ್ನು ಅನುಭವಿಸು
ವರು, ಶತ್ರುಜನರು ತುಷ್ಟಿಯಾದರೆ ಅದೇ ಒಳ್ಳೆ ಯದು. ಇನ್ನುಮೇಲೆ
ಸಾವಕಾಕಮಾಡದೆ ಆನೆಯನ್ನು ನಡಿಸಬೇಕು ನಿನಗೆ ಏನಾದರೂ
ಭಯವಾದರೆ ಇಳಿದುಹೋಗಬಹುದು. ನಾನೇ ಮಾವುತನಾಗಿ ಲಡಾಯ
ನ್ನೂ ಮಾಡಿ ಕೊಳ್ಳುತೇನೆಯೇ ಪರಂತು ಸರ್ವಾತ್ಮನ ಹಿಂತಿರುಗುವುದಿಲ್ಲ,
ಎಂದು ಹೇಳಿದನು. ಇದಕ್ಕೆ ಮಾವುತನು--ಮಹಾರಾಜ ಛತ್ರಪತಿ,
ತಾವು ಹೋದಮೇಲೆ, ನಾನು ಯಾರಿಗೆ ಮುಖಾತೋರಿಸಲಿ ? ತಮ್ಮ
ಪಾದದ ಹತ್ತರ ನನ್ನಪ್ರಾಣ ಎಂದು ಖಚಿತವಾಗಿ ವಿಜ್ಞಾಪನೆ ಮಾಡಿ
ದುರ್ಗದ ರಾಜನ ಆನೆಯನ್ನು ಹರಪನಹಳ್ಳಿಯ ಸೋಮಶೇಖರರಾಯರ
ಆನೇಬಳಗೆ ನಡಿಸಿದನು. ಆ ದೊರೆಯು ಈ ಆನೆ ಬರುವುದನ್ನು
ಹಿರೀ ಮದಕರಿನಾಯಕನ ಮರಣ. ೫೬
ದೊರೆಗಳಿಬ್ಬರಿಗೂ ಕೈ ಕೈಸೇರಿ ಸಮಯುದ್ಧ.
ಹಿರೀ ಮದಕರಿನಾಯಕನಿಗೆ ವೀರಸ್ವರ್ಗ
ನೋಡಿ ತನ್ನು ಹಸ್ತಿಯನ್ನು ಈ ಕಡೆಗೆ ನಡಿಸಿದನು. ಬೆಟ್ಟಕ್ಕೆ ಬೆಟ್ಟ
ಎದುರಾದಂತೆ ಎರಡು ಆನೆಗಳೂ ಎದುರಾದವು. ಆಗ ಉಭಯರಾ
ಯರೂ ಎದುರೆದುರಿಗೆ ನಿಂತು, ಝಾವದ ಪರ್ಯಂತ
ಘೋರವಾಗಿ ಲಡಾಯಿ ಮಾಡಿದರು. ಮೊದಲು
ತರಕಪ್ ಸರ್ಮಾ ಲಡಾಯಿ ಆಯಿತು. ತರುವಾ
ಯ ಕೋವಿಗಳಂದ ಗೋಲಿವಗೈರೆ ಹಾರಾಡಿದವು. ಇದೆಲ್ಲಾ ಬರಿದಾದ
ಮೇಲೆ ಸೋಮಶೇಖರನಾಯಕನು ಹೊಸದಾಗಿ ಥಳಥಳಿಸುವ ಹಯೋ
ಮುಖವೆಂಬ ಹೊಸ ಭರ್ಜಿಯನ್ನುು ತೆಗೆದುಕೊಂಡು ಆನೇಮೇಲಿನಿಂದ
ಬಗ್ಗಿ ಮಸ್ತಕದಮೇಲೆ ಕಾಲಿಟ್ಟು ಹಿರೀ ಮದಕರಿನಾಯಕನನ್ನು ತಿವಿ
ದನು. ಆಗ ಚಿತ್ರದುರ್ಗದ ಭೂಪನು ಆ ಬಹಲೆಯನ್ನು ಕಿತ್ತು ಕೊಳ್ಳ
ಬೇಕೆಂದು ಬಗ್ಗಿ ತನ್ನು ಆನೆಯ ಮಸ್ತಕದಮೇಲೆ ಕಾಲಿಟ್ಟು ನಿಂತು,
ಆ ಭರ್ಜೆಗೆ ಕೈ ಹಾಕಿ ಹಿಡಿದುಕೊಳ್ಳಲು, ಸೋಮಶೇಖರರಾಯನು
ಅದನ್ನು ಹಿರಿದು ಕೊಳ್ಳುವುದಕ್ಕೆ ಯತ್ನಮಾಡಿ ವಿಶೇಷವಾಗಿ ತಿನಕಾಡಿ
ದನು. ಮದಕರಿನಾಯಕನ ಕೈ ಗಾಯವಾಯಿತೇ ಹೊರತು ಭರ್ಜೆಯ
ಅಲಗನ್ನು ಆ ಶೂರನು ಬಿಡದೆ ಹಿರಿದುಕೊಂಡನು. ಉಭಯ ಕಕ್ಷಿಯ
ಮಾವುತರೂ ಸತ್ತು ಬಿದ್ದರು. ಉಭಯರಾಯರಿಗೂ ಗಾಯ ಬಹಳವಾ
ಯಿತು. ಸೋಮಶೇಖರರಾಯನು ಮೂರ್ಛೆ ಬಂದು ಮಲಗಿದನು.
ಮದಕರಿನಾಯಕನಿಗೆ ಭಾರಿಯಾಗಿ ಗಾಯವಾದ್ದರಿಂದ ಅವನು ಸೂರ್ಯ
ಮಂಡಲವನ್ನು ಭೇದಿಸಿಕೊಂಡು ವೀರಸ್ವರ್ಗಕ್ಕೆ
ಹೋದನು. ಚಿತ್ರದುರ್ಗದ ಆನೆ ೮, ಫಿರಂಗಿ ೨,
ದೊರೆಯ ಬಳಿಯಲ್ಲಿದ್ದ ಬಹಲೆ ೧, ಗುರುದಾಕತ್ತಿ ೧,
ಇನ್ನೂ ಕೆಲವು ಸಾಮಾನುಗಳು ಇವೆಲ್ಲವೂ ಹರಪನಹಳ್ಳಿಯವರ
ವಶವಾಯಿತು.
ನೀರತಡಿ ಬಳಿಯಲ್ಲಿ ಇಳದುಕೊಂಡಿದ್ದ ನಾಗತಿಯರು, ಕುಮಾರಿ
ತಿಯರು, ಕುಮಾರರು ಮುಂತಾದ ಸಕಲಗುನುಗು ಸಹಾ ದುರ್ಗಕ್ಕೆ ಬಂ
ದರು. ಮಾಯಕೊಂಡದ ಬಳಿಯಲ್ಲಿ ದೊರೆಯ ದೇಹವನ್ನು ದಹನ
ಮಾಡಿ ಅಸ್ಥಿಯನ್ನು ತಂದು ರಾಜ ಭರಮಪ್ಪನಾಯಕನ ಸಮಾಧಿ ಬಳಿ
----------------------------------------
೫೮ ಚಿತ್ರದುರ್ಗದ ಪಾಳಯಗಾರರು.
ಯಲ್ಲಿ ಸ್ಥಾಪನೆ ಮಾಡಿದರು. ಇಷ್ಟಾದರೂ ಮಾಯಕೊಂಡದ ಕೋಟೆ
ಯೇನೋ ಶತ್ರುಗಳವಶವಾಗಲಿಲ್ಲ.
ದೊರೆತನದ ಆಡಳತ.
ಈ ದೊರೆಯ ಆಳಕೆಯಲ್ಲಿ ಒಟ್ಟು ಸೀಮೆ ೧೮ಕ್ಕೆ ೬೧ ಪಟ್ಟ
ಡಿಗೆ ಮಾರ್ಗ ಸುಂಕ, ಸ್ಥಳ ಸುಂಕ, ಹುಲ್ಲು ಬನ್ನಿ,
ಇಟ್ಟಿಗೆ ಗುತ್ತಿಗೆ, ಎಲೆಮನೆ, ತಂಬಾಕು, ಗಾಂಜ,
ಷರಾಬು, ಉಪ್ಪಿನ ಮೋಳೆ, ಆಚಾರಗಾಣಿಕೆ, ಸಹಾ ಸೇರಿ ಹುಟ್ಟುವಳಿ
೩೦೦೦೦೦ ವರಹ.
ಈ ದೊರೆಯ ಆಳಕೆಯಲ್ಲಿ ೮ ದೇವಸ್ಥಾ ನಗಳು, ಕಾತರ ಹಾಳು
ಕೆರೆಯ ಅರೆಗೆಲಸದ ಕಟ್ಟೆ, ಮೊದಲಾದ್ದನ್ನು ಮಾಡಿಸಿದರು.
ದೊರೆಯ ಆಚಾರಶೀಲತೆ ದೈವಭಕ್ತಿ.
ಈ ಹಿರೀ ಮದಕರಿನಾಯಕನು ವಿಶೇಷವಾಗಿ ದೈವಭಕ್ತಿಯುಳ್ಳ
ವನು. ರಾಕ್ಷಸ ಸಂ॥ ದಲ್ಲಿ ಚಂದ್ರಮೌಳೇಶ್ವರ
ನೆಂಬ ಸ್ಪಟಿಕದ ಲಿಂಗವನ್ನು ಮಾಡಿಸಿದ್ದರು. ಗುರು
ಮುಖೇನ ಮಂತ್ರೋಪದೇಶವನ್ನು ಮಾಡಿಸಿ
ಕೊಂಡು ಅಡಿಗೆ ಪರಿಚಾರಿಕೆಯನ್ನು ಬ್ರಾಹ್ಮಣರಿಂದಲೇ ಮಾಡಿಸುತಾ
ಬ್ರಾಹ್ಮಣರ ಸಂಗಡ ದೊರೆಯು ರುದ್ರಾಭಿಷೇಕವನ್ನು ಮಾಡಿ ಸಹಸ್ರ
ನಾಮಾರ್ಚನೆಯನ್ನು ಮಾಡಿ ಧೂಪದೀಪ ನೈ ವೇದ್ಯಾದಿಗಳು ಆದನಂತರ
ಊಟಾಮಾಡುತಿದ್ದನು. ಪ್ರತಿ ಸೋಮವಾರವೂ ನಕ್ತಭೋಜನ,
ಪಕ್ಷಪ್ರದೋಪ, ಶ್ರಾವಣಮಾಸ ೧ ತಿಂಗಳು, ಕಾರ್ತಿಕಮಾಸ ೧ ತಿಂ
ಗಳು, ಶನಿಪ್ರದೋಷ , ನವರಾತ್ರೆ ೯ ದಿವಸ, ಉಚ್ಚಂಗಮ್ಮನ ರಥೋ
ತ್ಸವದಲ್ಲಿ ಕಂಕಣಕಟ್ಟದ ದಿವಸ ಮೊದಲುಮಾಡಿ ಕೊಂಡು ಮಹೋತ್ಸವ
ವಾಗುವವರೆಗೂ, ಭಾರತದ ಹುಣುಮೆ ೯ ದಿವಸ, ನವರಾತ್ರೆ ಸಹಾ
ನಕ್ತ ಭೋಜನ. ಮಾಸ ಶಿವರಾತ್ರೆ; ಉಪವಾಸ, ಬೆಳಗಾಗಿ ಸಮಾರಾಧನೆ,
ಈ ಪ್ರಕಾರ ನಡಿಸುತಿದ್ದನು. ಈ ದಿವಸಗಳಲ್ಲಿ ಜಾತ್ಯಾಹಾರಮಾಡು
ತಿರಲಿಲ್ಲ, ತಂದೆ. ತಾಯಿಗಳ ಕಾಲಶ್ರಾದ್ಧಮಾಡೋಣ, ಮಾಸ ಶಿವರಾತ್ರೆ
ದಿವಸ ಒಂದು ತಿಂಗಳಗೆ. ಒಂದು ಬಾರಿ ಪೌರ್ಣಮಿ ದಿವಸ ತಿಂಗಳಗೆ
ಒಂದು ಬಾರಿ ಉಚ್ಚಂಗಮ್ಮನಿಗೆ ಉತ್ಸವ, ವರುಷಕ್ಕೆ ಒಂದು ಬಾರಿ ಸಿಡಿ, `
ಈ ಪ್ರಕಾರ ನಡೆಯುವಂತೆ ಏರ್ಪಾಡು ಮಾಡಿಸಿದ್ದನು.
--------------------------------
ಇಮ್ಮುಡಿ ಕಸ್ತೂರಿ ರಂಗಪ್ಪನಾಯಕನಿಗೆ ಪಟ್ಟ ೫೯
೧೫ನೇ ಅಧ್ಯಾಯ,
ಇಮ್ಮುಡಿ ಕಸ್ತೂರಿ ರಂಗಪ್ಪನಾಯಕ.
ಶ॥ ೧೬೭೦ ನೇ ವಿಭವ ಸಂ||
ಇಮ್ಮುಡಿ ಕಸ್ತೂರಿ ರಂಗಪ್ಪ ನಾಯಕನಿಗೆ ಪಟ್ಟ,.
ಹಿರೀ ಮದಕರಿನಾಯಕನ ಜ್ಯೇಷ್ಠ ಪುತ್ರನಾದ ಕಸ್ತೂರಿ ರಂಗ
ಪ್ಸನಾಯಕನಿಗೆ ಶ|| ೧೬೩೦ನೇ ವಿಭವ ಸಂ|| ಫಾ
ಲ್ಲುಣ ಬ| ೨ ಗುರುವಾರದಲ್ಲು ಸಂಪಿಗೆ ಸಿದ್ದೇಶ್ವ
ರನ ಗುಡಿಯಲ್ಲಿ ಪಟ್ಟವಾಯಿತು.
ಮಾಯಿ ಕೊಂಡದ ಮುತ್ತಿಗೆ ಎಬ್ಬಿಸಿದ್ದು.
ಈ ದೊರೆಯು ಪಟ್ಟಕ್ಕೆ ಬಂದಮೇಲೆ ಯಾತರ ದೆಸೆಯಿಂದ ತಮ್ಮ
ತಂದೆಯು ಮೃತನಾದನೋ ಅಂಥಾ ಮಾಯಿಕೊಂಡದ ಮುತ್ತಿಗೆಯನ್ನು
ಎಬ್ಬಿಸುವುದು ತನ್ನ ಮೊದಲನೇ ಕೆಲಸವೆಂದು
ಯೋಚಿಸಿ, ಗುತ್ತೀ ಮುರಾರಿರಾಯ, ಆದವಾನಿ
ಸುಬೇದಾರ ಹಿದಾಯತ್ತು ಮೋತೀಖಾನ, ಮೊದ
ಲಾದವರನ್ನು ಕರೆಯಿಸಿಕೊಂಡು, ಒಂದು ಲಕ್ಷ ವರಹಾ ಕೊಟ್ಟು ಮಾ
ಯಿಕೊಂಡದ ಮುತ್ತಿಗೆಯನ್ನು ಎಬ್ಬಿಸಲು ಗೊತ್ತುಮಾಡಿದನು. ಶುಕ್ಲ
ಸಂ॥ ಚೈತ್ರ ಶು| ೧ ದಿವಸ ಗುರುವಾರರಾತ್ರೆ ೮ ಗಳಗೆಯಮೇಲೆ ಬಿದ
ನೂರವರ ದಂಡು, ಹರಪನಹಳ್ಳಿಯವರ ದಂಡೂ, ಕಡಮೆ ಪಾಳಯಗಾ
ರರೂ ಸಹಾ ಮಾಯಿ ಹೊಂಡದ ಮುತ್ತಿಗೆ ಬಿಟ್ಟು ಓಡಿದರು.
ಮುರಾರಿರಾಯ, ಆದವಾನಿ ಸುಬೇದಾರ ದ್ರೋಹಿಗಳಾದ್ದು.
ತರುವಾಯ ಅಲ್ಲಿನ ದಂಡೆಲ್ಲವನ್ನೂ ತೆಗೆದುಕೊಂಡು ಸಂತೇ ಬೆ
ನ್ನೂರಿಗೆ ಬಂದು ಆ ಶತೃಗಳೆಲ್ಲಾ ಅಲ್ಲಿ ಮುತ್ತಿಗೇ ಹಾಕಲು, ಮುರಾರಿ
ರಾಯ, ಆದವಾನಿ ಸುಬೇದಾರ ಸಹಾ ಶತ್ರುಗಳ
ಲಂಚಕ್ಕೆ ಆಶೆಬಿದ್ದು ಅವರ ಕಡೆಗೆ ತಿರುಗಿಕೊಂಡ
ಕಾರಣ, ಅವರ ಸಹವಾಸವನ್ನು ಬಿಟ್ಟು ಕಸ್ತೂರಿ
ರಂಗಪ್ಪನಾಯಕನು ತನ್ನ ದಂಡಿನೊಡನೆ ದುರ್ಗಕ್ಕೆ ಬಂದನು. ಆದರೂ
ನಾಚಿಕೆಇಲ್ಲದೆ ಮುರಾರಿ ರಾಯನು ದುರ್ಗಕ್ಕೆ ಬಂದು ರಾಜರ ಭೇಟಿಮಾಡಿ
ಕೊಂಡು ಹೊರಟುಹೋದನು. ಆನೆಗೊಂದಿಯವರಿಗೂ, ದುರ್ಗದವ
ರಿಗೂ ಚಿಲ್ಲರೆ ಕದನ ನಡೆಯಿತು. ಇದೇ ಶುಕ್ಲ ಸಂ|| ದ ಕಾರ್ತೀಕ ಮಾ
---------------------------------------
೬೦ ಚಿತ್ರದುರ್ಗದ ಪಾಳೆಯಗಾರರು.
ಸದಲ್ಲಿ ಬುಕ್ಕಸಾಗರ ಮೊದಲಾದ ಗಡಿಗಳನ್ನು ದುರ್ಗದ ರಾಜನು ಜಯಿಬ
ಕೊಂಡನು.
ಇದೇ ಶುಕ್ಲ ಸಂ|| ದಲ್ಲಿ ದುರ್ಗದ ಅರಮನೇ ಬೊಕ್ಕಸಕ್ಕೆ ಯಾ.
ರೋ ಕನ್ನಹಾಕಿದ್ದರು. ಇತರ ಕಾಟಕಾಯಗಳು ಶತ್ರುಗಳ ದೆಸೆ
ಯಿಂದ ಚಿಲ್ಲರೆ ಚಿಲ್ಲರೆಯಾಗಿ ಜರಗುತ್ತಲೇ ಇದ್ದವು. ಪ್ರಜೋತ್ಪತ್ತಿ ಸಂ॥
ದಲ್ಲಿ " ಶ್ರೀರ್ಮ ಮಹಾನಾಯಕಾಚಾರ್ಯ ಕಾಮಗೇತಿ ಕಸ್ತೂರಿ ರಂಗಪ್ಪ
ರಾಜ ಮದಕರಿನಾಯಕರವರ ಕಸ್ತೂರಿ ರಂಗಪ್ಸನಾಯಕರಿಂದ'' ಎಂದು
ಇತರ ಪಾಳಯಗಾರರಿಗೆ ಪತ್ರಗಳನ್ನು ಒಕ್ಕಣಿಸುತಾ ಬಂದರು. ಆಂಗೀ
ರಸ ಸಂ॥ ದಲ್ಲಿ ನಾನಾಜಿರಾಯನ ದಂಡು ಬಂದು ಅವಾಂತರ ಮಾಡಿ
ಸ್ವಲ್ಪ ಹಣವನ್ನು ತೆಗೆದುಕೊಂಡು ಹೊರಟುಹೋಯಿತು. ಇದೇ
ನಾನಾಜಿರಾಯನು ಪುನಃ ಶ್ರೀಮುಖ ಸಂ॥ ದಲ್ಲಿ ಬಂದು .ಅಣಜೀ ಕೋ
ಟೆಯನ್ನು ಮುತ್ತಿ ಹಣವನ್ನು ತೆಗೆದುಕೊಂಡು ಹೋದನು. ಭಾವ ಸಂ॥
ದ ಆಪಾಢ ಶು||| ೨ ಸ್ಥಿರವಾರದಲ್ಲಿ ಕಸ್ತೂರಿ ರಂಗಪ್ಪನು ಮೃತಪಟ್ಟನು.
ಈ ದೊರೆಗೆ ಮಕ್ಕಳಿಲ್ಲ ಈತನು ದುರ್ಗದಮೇಲೆ ಕೆಲವು ಕಣಜ,
ಒಂದು ಬಂಣದ ಚಾವಡಿ ಸಹಾ ಮಾಡಿಸಿದನು.
-----
೧೬ನೇ ಅಧ್ಯಾಯ.
ಕಡೇ ಮದಕರಿನಾಯಕ.
ಶ|| ೧೬೩೬ನೇ ಭಾವ ಸಂ||
ದೊರೆಯನ್ನು ಚುನಾಯಿಸಲು ಸಭೆ ಸೇರಿದ್ದು
ಕಸ್ತೂರಿ ರಂಗಪ್ಪನಾಯಕನಿಗೆ ಸೆಂತಾನವಿಲ್ಲವಾದ್ದರಿಂದ ಯಾರಿಗೆ
ಪಟ್ಟಾಭಿಷೇಕಮಾಡಬೇಕು, ಎಂಬ ವಿಷಯದಲ್ಲಿ ಚರ್ಚೆ ಬಂತು. ಕಸ್ತೂ
ರಿರಂಗಪ್ಪನಾಯಕನ ತಾಯಿ ಓಬಳಮ್ಮ ನಾಗತಿ, ಮುರಗಿಸ್ವಾಮಿಗಳು,
ಸಕಲ ದಳವಾಯಿಗಳು, ಪ್ರಧಾನಿಗಳು, ಬಲನಾ
ಯಕರು, ಗುರಿಕಾರರು, ರಾಹುತ ಠಾಣ್ಯದಸೇರು
ವೇಗಾರರು, ಸಾಮಾಜಿಕರು, ಪೇಟಿಸೆಟ್ಟಿ, ಪಟ್ಟಣ
ಸೆಟ್ಟಿ ಮುಂತಾದ ಪ್ರಮುಖವರ್ತಕರು ಸಹಾ ಸಭೆಸೇರಿ ಆಲೋಚನೆ
------------------------------------
ಕಡೇ ಮದಕರಿನಾಯಕನ ಪಟ್ಟ . ೬೧
ಕಡೇ ಮದಕರಿನಾಯಕ ನಿಗೆ ಪಟವಾದ್ದು,
ರಾಯದುರ್ಗ, ಹರಪನಹಳ್ಳಿ ರಾಜರೊಡನೆ ಯುದ್ಧ
ಮಾಡಿ, ಜಾನಕಲ್ಲು ಹೊಸದುರ್ಗದ ಸೇನಾಪತಿಯಾಗಿಯೂ ಹಿರೀ ಮದ
ಕರಿನಾಯಕನ ತಮ್ಮನಾಗಿಯೂ ಇದ್ದ ದಂಡಿನ ಜಂಪಂಣನಾಯಕನ
ಕುಮಾರ ಭರಮಪ್ಪನಾಯಕನಿಗೆ ಪಟ್ಟಾಭಿಷೇಕಮಾಡಬೇಕೆಂಬದಾಗಿ
ನಿಶ್ಚೈಸಿದರು, ಆದಿನರಾತ್ರೆ ಓಳಮ್ಚನಾಗತಿಯ ಸ್ವಪ್ನದಲ್ಲಿ ಹಿರಿ
ಮದಕರಿನಾಯಕನು ಬಂದು "ನಾನು ಈ ಭೂಮಿ
ಯಮೇಲೆ ಜಾನಕಲ್ಲು ದುರ್ಗದ ತೊದಲು ಭರಮಂ
ಣನಾಯಕನ ಹೊಟ್ಟೆಯಲ್ಲಿ ಮದಕರಿನಾಯಕನೆಂಬ
ನಾಮಧೇಯದಿಂದ ಅವತರಿಸಿದೇನೆ, ಈತನಿಗೇ ಪಟ್ಟಾಭಿಪೇಕವಾಗ
ಬೇಕು'' ಎಂದು ಹೇಳಿದನಂತೆ. ಮಾರನೇ ದಿನ ಪ್ರಾತಃಕಾಲಕ್ಕೆ
ಓಬಳಮ್ಮನಾಗತಿಯು ಎದ್ದು ಸಭೆಮಾಡಿಸಿ ಸ್ವಜನರನ್ನು ಕರೆಕಳುಹಿಸಿ
ತನಗೆ ಮುನ್ನಾದಿನ ಆದ ಸ್ಪಪ್ನದ ಸಂಗತಿಯನ್ನು ಹೇಳಿದಳು. ಸರ್ವರೂ
ಸಂತೋಪಪಟ್ಟು ಆನೆಯಮೇಲೆ ಅಂಬಾರಿಹಾಕಿಸಿ ಜಾನಕಿ ದುರ್ಗಕ್ಕೆ
ಬಂದು ತೊದಲು ಭರಮಂಣನಾಯಕನಿಗೆ ಮಗನಾದ ಮದಕರಿನಾಯಕ
ನನ್ನು ಅಂಬಾರಿಯಲ್ಲಿ ಕೂರಿಸಿ ಕೊಂಡು ಉತ್ಸವದಿಂದ ದುರ್ಗಕ್ಕೆ ಕರೆದು
ಕೊಂಡು ಬಂದು ಓಬಳಮ್ಮ ನಾಗತಿ ಯವರಿಗೆ ಒಪ್ಪಿಸಿದರು. ಶ|| ೧೬೭೬
ನೇ ಭಾವ ಸಂ|| ಆಪಾಢ ಶುದ್ಧ ೧೨ ಯಲ್ಲು ಈ ಮದಕರಿನಾಯಕನಿಗೆ
ಚಂಪಕಾ ಸಿದ್ದೇಶ್ವರನ ಗುಡಿಯಲ್ಲಿ ಪಟ್ಟಾಭಿಷೇಕ
ವಾಯಿತು. ಆಗ ಈ ಚಿಕ್ಕ ದೊರೆಗೆ ೧೨ ವರುಷ
ವಯಸ್ಸಾಗಿತ್ತು. ಈತನನ್ನು ರಾಜ ಕಸ್ತೂರಿ ರಂಗ
ಪ್ಪನಾಯಕರಿಗಿಂತ ಹೆಚ್ಚೆಂದು ಭಾವಿಸಬೇಕೆಂತಲೂ, ರಾಜ್ಯದ ಸರ್ವಾಧಿ
ಕಾರವನ್ನೂ ಓಬಳವ್ವನಾಗತಿಯು ವಹಿಸಬೇಕೆಂತಲೂ, ದಳವಾಯಿ
ಚುಕ್ಕಂಣನ ಮಗ ದಳವಾಯಿ ಭರಮಪ್ಪನೂ, ಬಲನಾಯಕರೂ, ಕಂದ
ನಕೋವಿ ಬೊಮ್ಮಂಣ, ಏಕಾಸಿ ಕಾಟಪ್ಪನಾಯಕರ ಭರಮಂಣ,
ಮುಂತಾದವರು ಅರಿಕೇಮಾಡಿದರು. ಆ ಪ್ರಕಾರ ಓಬಳವ್ವ ನಾಗತಿಯು
ಅಧಿಕಾರವನ್ನು ವಹಿಸಿ ರಾಜ್ಯಭಾರ ಮಾಡುತಿದ್ದಳು. ಆಗ ರಾಯದು
ರ್ಗದ ಸಂಸ್ಥಾನೀಕರು ಚಿತ್ರದುರ್ಗದವರ ಪ್ರಾಬಲ್ಯವನ್ನು ನೋಡಿ ಸಹಿ
ಸಲಾರದೆ, ಈ ಸೀಮೆಯಮೇಲೆ ಬೀಳಲು ಸಮ
ಯವನ್ನು ಕಾಯುತಾ ಇದ್ದರು, ರಾಯದುರ್ಗದ
----------------------------------------
೬೨ ಚಿತ್ರ ದುರ್ಗದ ಪಾಳಯಗಾರರು.
ಚಿತ್ರದುರ್ಗದ ಜಯ.
ಓಬಳಮ್ಮ ತೀರಿಹೋದ್ದು
ಪಾಳಯಗಾರರು-- ಚಿತ್ರದರ್ಗದಲ್ಲಿ ದೊಡ್ಡವರು ಬಿದ್ದು ಹೋದರು,
ಸಂಣ ಹುಡುಗನಿಗೆ ಪಟ್ಟಾಕಟ್ಟಿದಾರೆ, ಸೀಮೆಯ ಆಡಳತವನ್ನು
ಒಬ್ಬ ಮುದುಕಿ ನಡಿಸುತಿದಾಳೆ, ಇವರಿಂದ ಏನಾದೀತು? ಎಂದು
ಹರಪನಹಳ್ಳಿ ಸಂಸ್ಥಾನದವರ ಸಹಾಯವನ್ನು ಪಡೆದು ದಂಡು
ತೆಗೆದುಕೊಂಡು ಒಂದು ಚಿತ್ರ ದುರ್ಗದ ಸೀಮೆಯಲ್ಲಿ ಮೆಯ್ಯುತಿದ್ದ ಆ
ರಾಜ್ಯದವರ ದನಗಳನ್ನು ತಿರುಗಿಸಿಕೊಂಡು ಹೋದರು. ಈ ವರ್ತ
ಮಾನವನ್ನು ಕೇಳ ದುರ್ಗದ ಸಂಸ್ಥಾನದವರು ಸೇನೆಯೊಡನೆ ಹೋಗಿ
ಸರಹದ್ದಿನಲ್ಲಿ ಇಳದುಕೊಂಡರು, ಶತ್ರುಗಳ ಕಡೆ ೧೦೦೦ ಕಾಲುಬಲ,
೨೦೦೦ ಕುದುರೆ, ೧೦ ಫಿರಂಗಿ ಸಮೇತ ಅವರ ಸೀಮೆಯಲ್ಲಿ ಎರಡುಕೆರೆ
ಸೀಮೆಗೆ ಬಂದು ಇಳಿಯಿತು. ದುರ್ಗದವರ ದಂಡು ಓಬಳಾಪುರದ
ಕೋಟೆಗೆ ಬಂದು ಇಳಿಯಿತು. ಹಗೆಗಳು ತಮ್ಮ ಸೇನೆಯನ್ನು ನಾಲ್ಕು
ತುಕಡಿ ಮಾಡಿ ನಿಲ್ಲಿಸಿದರು. ಎಡುರಾಳಗಳಂತೆಯೇ ನಾಲ್ಕು ಭಾಗ
ವಾಗಿ ದುರ್ಗದ ಭಟರೂ ನಿಂತರು. ಯುದ್ಧವು ಬೆಳಗ್ಗೆ ಆರಂಭವಾಗಿ
ನಾಲ್ಕು ಗಳಿಗೆ ನಡೆಸಿತು. ` ಜಗಳದಲ್ಲಿ ಶತ್ರು ಸೇನೆಯು ವಿಶೇಷವಾಗಿ
ಹತವಾಯಿತು. ಆಗ ರಾಜರು ಎರಡುಕೆರೆ ಗ್ರಾಮಕ್ಕೆ
ಸೇನೆಯೊಡನೆ ಹೋಗಿ ಠಾಣ್ಯಾ ಹಾಕಿ ಕೋನಾ
ಪುರ, ಕೊಡಗನೂರು, ಇವುಗಳನ್ನು ತೆಗೆದುಕೊಂಡು ರಾಯದುರ್ಗದ
ಪೇಟೆಗೆ ಹೊಕ್ಕು ಕೋಟೆಗೆ ಮೊಹರ್ಚೆ ಹಾಕುತಿದ್ದರು. ಆಗ ಬಸಲ
ತ್ತುಜಂಗನು, ಕರ್ಣಾಟಕ ದೇಶದಿಂದ ಖೆಂಡಣಿ ಹಣ ತೆಗೆದುಕೊಂಡು
ಹೋಗಲು ಬಂದನು. ದುರ್ಗದವರು---ಎರಡುಕಡೆ ಲಡಾಯಿ ಬೀಳು
ವುದು, ನಿರ್ವಹಿಸುವುದು ಕಷ್ಟ, ಬಂದದ್ದಕ್ಕೆ ರಾಯದುರ್ಗದವರ ಮೇಲೆ
ಜಯವಾಯಿತು, ಭಾರಿಕೋಟೆ, ಖಿಲ್ಲೆ ಬಿಟ್ಟು ಇರುವುದಕ್ಕಾಗುವು
ದಿಲ್ಲ ಎಂದು ರಾಯದುರ್ಗವನ್ನು ತೆಗೆದುಕೊಂಡು ಚಿತ್ರದುರ್ಗಕ್ಕೆ
ಬಂದರು. ಧಾತು ಸಂ|| ಜ್ಯೇಷ್ಠ ಶು|| ೩ ಯಲ್ಲು
ಓಬಳಮ್ಚು ನಾಗತಿಯು ತೀರಿಹೋದಳು. ಈಶ್ವರ
ಸಂ॥| ದಲ್ಲಿ ಹುಚ್ಚಂಗಮ್ಚನ ಹೊಂಡದ ಅಗಳನ್ನು
ತೆಗೆಯಲು ಆರಂಭಿಸಿದರು.
ಹೊಸಕೆರೆ ಯುದ್ಧ. ೬೩
ಹರಪನ ಹಳ್ಳಿ ಯವರೊಡನೆ ಯುದ್ಧ
ಹೊಸಕೆರೆ ಯುದ್ಧ
ವಿಕ್ರಮ ಸಂ|| ದಲ್ಲಿ ಹರಪನ ಹಳ್ಳಿಯವರು ತೊಯಿಲ ಹಳ್ಳಿಗೆ
ಬಂದು ಮುತ್ತಿ ಕೊಂಡು ಒಂದು ತಿಂಗಳಿಂದಲೂ ಸಾಧಿಸುತಾ ಇದಾರೆಂಬ
ವರ್ತಮಾನವನ್ನು ರಾಜನು ಕೇಳಿ ದುರ್ಗದಿಂದ ದಂಡಿನೊಡನೆ ಹೋಗಿ
ಕಣಕುಪ್ಪೆಬಳಿ ಮೈದಾನದಲ್ಲಿ ಇಳಿದುಕೊಂಡು,
ಶತ್ರುಗಳ ದಂಡಿನ ಅಂದಾಜನ್ನು ತಿಳದು ಕೊಳ್ಳುವ
ಬಗ್ಗೆ ಗುಪ್ಮಚಾರರನ್ನು ಕಳುಹಿದನು. ಆಚಾ
ರರು ಹೋಗಿ ನೋಡಿಕೊಂಡು ಬಂದು ಸವಣೂರ ಹಾಕಿಂಖಾನ,
ರಾಯದುರ್ಗದವರು, ನಗರದವರು, ಹರಪನಹಳ್ಳಿಯವರು, ಸಹಾಸೇರಿ
೨೦೦೦ ಫೌಜು, ೨o ತೋಫು, ೪೦೦೦ ಕುದುರೆ, ಬಾಣ ವಗೈರೆ ಬಾರಿ
ಸರಂಜಾಂನಿಸಿ ಬಂದು ಇಳಿದಿದಾರೆ ಎಂದು ರಾಜರಿಗೆ ತಿಳಸಿದರು. ಆಗ
ರಾಜರು ತಮ್ಮ ಘೌಜು ಮತ್ತು ಸೇನಾನಾಯಕರು ಇವರೊಡನೆ ಆಲೋ
ಚನೆ ಮಾಡಿದರು. ಆಕಾಲದಲ್ಲಿ ಮನಸಬದಾರ ನೀಲಕಂಠರಾಯನು
ದೊರೆಯನ್ನು ಕುರಿತು" ಶತ್ರು;ಜನ ಪ್ರಬಲವಾಗಿ ಭಾರಿಜಮೀಯತ್ತು
"ನಿಸಿ ಇಳದು ಇದಾರೆ, ನಾವು ಸಾವಕಾಶಮಾಡಿದರೆ ಸಾಧಾರಣವಾಗಿ
" ಬಲವಾಗಿಲ್ಲದೆ ಇರುವ ಈ ಕೋಟೆಗೆ ಠಾಣೆ ಬೀಳುತ್ತೆ, ತರುವಾಯ
"ನಾವು ಹೋದರೂ ವ್ಯರ್ಥವಾಗುವುದು, ಆದ್ದರಿಂದ ದಂಡನ್ನು
“ಕೂಚು ಮಾಡಿ ಅವರ ರೂಬರು ಇಳಿದು ಲಡಾಯಿ ಕೊಡಬೇಕು,''
ಎಂದು ಹೇಳಿದನು. ಇದು ವಿಹಿತಮೆಂದು ತಿಳಿದು ಚಿತ್ರದುರ್ಗದವರು
ಕೂಚು ನಗಾರಿಗೆ ಹುಕುಂ ಮಾಡಿದರು. ದರೋಬಸ್ತುಘೌಜು ಹೊರ
ಟು ಹೊಸಕೆರೆ ಬಳಿ ನಿಂತಿತು. ಈ ವರ್ತಮಾನ
ವನ್ನು ಹರಪನಹಳ್ಳಿಯವರು ಕೇಳಿ ತಮ್ಮ ದಂಡು
ಎಲ್ಲವನ್ನೂ ಸೇರಿಸಿ ಮೈದಾನಕ್ಕೆ ಬಂದು ನಿಂತರು. ಇವರಿಗೆ ದುರ್ಗದ
ಸೇನೆ ಎದುರಾಯಿತು. ಮದಕರಿನಾಯಕನು ನಾಲ್ಕು ತುಕಡಿ ಮಾಡಿ,
ಒಂದು ತುಕಡಿಯನ್ನು ಪೂರ್ವಕ್ಕೆ ನಿಲ್ಲಿಸಿದನು. ಇನ್ನೊಂದು ತುಕಡಿ
ಯನ್ನು ಗುನುಗು ವಗೈರೆ ಕಾವಲಿಗೆ ನಿಲ್ಲಿಸಿದನು. ಒಂದು ತುಕಡಿ
ಖಾಸಾ ಫೌಜು ಹಜರತ್ತು ಮುಕ್ಕಂಣ ಸುತ್ತು, ಪಂಚಕಸೆ ಭಲ್ಲೆದವರು,
ಎಡಭರ್ಜಿ ಬಲಭರ್ಜಿಜನ, ಖಾಸಾ ತಬೇಲಿಜನ, ತೋಫ್ ಮತ್ತು
ಬಂದೂಕ್‌ದಾರರು, ಖಾಸಾಬಿರಾದರಿ, ಮತ್ತು ಪೂರಭಯ್ಯ ಜನರು
---------------------------------
೬೪ ಚಿತ್ರದುರ್ಗದ ಪಾಳೆಯಗಾರರು.
ಮತ್ತು ಬಾರೂತ್ ಜನಗಳು, ಎಂದರೆ ಖುತ್‌ಬಂದೀಖಾನ್, ಸಲಾ
ಬತ್ತುಖಾನ್, ಇಮಾಂಖಾನ್ ಬಕ್ಷಿ, ಮತ್ತು ಸುಭಾರಾವ್ ಘೋರ್ಪಡೆ,
ತಮ್ಮಾಜಿ ಮಾಧವ ವಗೈರೆ ದೊಡ್ಡದೊಡ್ಡ ಸರದಾರರು, ಮತ್ತು
ಎಕ್ಕುಂಡೆಸಿಪಾಯಿ, ಜಿರಾಯಿತುಜನ, ಖಾಸಾಬಾರು, ಕಂದಾಚಾರ ವಗೈರೆ
ಜನರಿಗೆ ಸೇರಿಸಿಕೊಂಡು ನಿಂತರು. ನಾಲ್ಕು ಕಡೆಯಿಂದ ಗೋಲಿ ಷುರು
ವಾಯಿತು. ಒಂದು ಸಾವಿರ ಬಾಣಕ್ಕೆ ಬತ್ತಿ ಕೊಟ್ಟರು. ಮತ್ತು ರೈಫಲ್,
ಜಂಜಾಲು, ಪುತಾರ್ ನಲ್, ಹತ್ಯಾ ರದಲ್, ಬಂದೂಖ್ ವಗೈರೆ ಸಲಾಖಿ
ಒಂದೇ ಆವರ್ತಿ ಆಯಿತು.
ಇದರ ಜೊತೆಗೆ ಕೇಕೆ ಸದ್ದೂ ಸೇರಿಕೊಂಡದ್ದರಿಂದ ಒಬ್ಬರ
ಮಾತು ಒಬ್ಬರಿಗೆ ಕೇಳಲಿಲ್ಲ. ವಿಶೇಷವಾಗಿ ಧೂಳು ಎದ್ದು ಒಬ್ಬರ
ಮುಖ ಒಬ್ಬರಿಗೆ ಕಾಣಲಿಲ್ಲ ಈ ಮೇರೆಗೆ ನಾಲ್ಕು ತಾಸು ಪರ್ಯಂತ
ಲಡಾಯಿ ಆಗುತ್ತಿರುವಾಗ್ಗೆ ಯಾವಕಡೇ ದಂಡೂ ತಿರುಗಲಿಲ್ಲ.
ಹಿಂದಣಿಂದ ಹೊಡೆಯುತಾ ಬಂದದರಿಂದ ಹರಪನಹಳ್ಳಿ ಸೋಮ
ಶೇಖರನಾಯಕರು, ಸವಣೂರ ಹಕೀಂಖಾನರು, ರಾಯದುರ್ಗದ ಕೃಷ್ಣ
ಪ್ಪನಾಯಕರು, ಸಹಿತ ಪ್ರಾಣತ್ರಾಣ ಪರಾಯಣರಾಗಿ ಅಂಬಾರಿಯನ್ನು
ತಿರುಗಿಸಿಕೊಂಡು ಓಡಿಹೋದರು. ಆಗ ಆನೆಯನ್ನು ನೆಟ್ಟಗೆ ನಡಿಸಿ
ದ್ಹರಿಂದ ದುರ್ಗದ ದಂಡು ಅವರ ಬೆನ್ನು ಹತ್ತಿ ಶತ್ರುಗಳನ್ನು ಜಯಿಸಿ
ಅವರು ಇಳಿದ ಜಾಗದಲ್ಲಿ ದಂಡನ್ನು ಮೊಳ್ಳಾಂ ಮಾಡಿ ರುಾಂಡ್ಯ ನಿಲ್ಲಿನಿ
ಹಗೆಗಳ ಸೇನೆಯಲ್ಲಿ ಊಟಿಗೆ ಬಿದ್ದರು.
ದುರ್ಗದವರಿಗೆ ಸೋಲಾದ್ದು.
ಆಗ ಸವಣೂರ ಹೆಕೀಂಖಾನನು ತಮ್ಮ ದಂಡನ್ನು ಕುರಿತು-- ನಾವು
ಶತ್ರುಗಳಗೆ ಬೆನ್ನು ಕೊಟ್ಟು ಬಂದದು ಅಯುಕ್ತವಾಯಿತು, ಇಲ್ಲ ಅವ
ರಿಗೆ ಹೊಡೆಯಬೇಕು, ಇಲ್ಲ ಷಹೀದು ಆಗಬೇಕು,
ಎರಡಲ್ಲಿ ಒಂದು ಕೆಲಸ, ನಮ್ಮ ತೋಫ್‌ಖಾನೆ
ನಗಾರಿ ನಿಪಾನಿ ವಗೈರೆ ಹೋಯಿತು. ನಾವು
ವೂರಿಗೆ 'ಹೋಗುವುದಿಲ್ಲವೆಂದು ಮಸಲತ್ತು ಮಾಡಿ ಪುನಃ ತಿರುಗಿ
ಕೊಂಡು ಹೊಡೆಯುತಾ ಬಂದರು, ದುರ್ಗದ ದಂಡು ಲಡಾಯಿಮಾ
ಡುತಾ ಕಣಕುಪ್ಸೆಗೆ ಬಂದು ಮುಟ್ಟಿತು. ತುಯ್ಯುಲು ಹಳ್ಳಿ ಕೋಟೆಗೆ
-------------------------------------
ಕಡೇ ಮದಕರಿನಾಯಕ. ೬೫
ಮದ್ದು ಗುಂಡು ವಗೈರೆ ಸಹಾಯ ಕೊಟ್ಟು ಜನರನ್ನು ಇಟ್ಟು ಮದಕರಿ
ನಾಯಕನು ದುರ್ಗಕ್ಕೆ ಬಂದನು, ಈ ಯುದ್ಧದಲ್ಲಿ ಶತ್ರುಗಳ ಕೈಗೆ
೩ ಆನೆ, ೪ ಫಿರಂಗಿ ಸಿಕ್ಕಿದವು. ಮತ್ತು ದುರ್ಗದ ದೊರೆಗಳ ಕಡೆ
ಜೋಗೈಯ್ಯನ ಭರಮ್ಟಯ್ಯ, ವಾಸುದೇವನಾಯಕ, ನೀಲಕಂಠರಾವ್,
ಮತ್ತು ಈತನ ಮಗ, ಮಂದಿ ೫೦ ಸಹಾ ಮಡಿದರು.
-----
೧೭ನೇ ಅಧ್ಯಾಯ.
ಕಡೇ ಮದಕರಿನಾಯಕ (ಸಾಗುವುದು)
ಶ॥ ೧೬೮೩ ನೇ ವಿಷು ಸಂ॥ ದಲ್ಲಿ ತರೀಕೆರೆ ಪಾಳಯಗಾರರೂ,
ಜರಿಮಲೆಯವರೂ ಸಹಾ ದುರ್ಗದ ಸೀಮೆಯ ಸರಹದ್ದಿನಲ್ಲಿ ಹಾವಳಿಗೆ
ಆರಂಭಿಸಲು, ಇವರನ್ನು ಅಡಗಿಸಿ ಓಡಿಸುವುದರಲ್ಲಿ ಮದಕರಿನಾಯಕನಿಗೆ
ಸ್ವಲ್ಪ ಕೆಲಸ ಹಿಡಿಯಿತು. ಕಡೆಗೆ ಅವನಿಗೇ ಜಯವಾಯಿತು.
ಹೈದರಲ್ಲಿಯು ಮೊದಲು ದುರ್ಗಕ್ಕೆ ಬಂದದ್ದು.
ಹೈದರನಿಗೆ ಖಂಡಣಿ ಕೊಡಲು ಒಪ್ಪಿದ್ದು
ಶ|| ೧೬೮೪ ನೇ ಚಿತ್ರಭಾನು ಸಂ॥ ದಲ್ಲಿ ಇನ್ನೊಂದು ರಾಜಿಕ
ಸಂಭವಿಸಿತು. ಶ್ರೀರಂಗಪಟ್ಟಣದ ನವಾಬ ಹೈದ
ದರಲ್ಲಿಖಾನನು ಅದುವರಿಗೆ ವಿಶೇಷವಾಗಿ ಪ್ರಬಲಿಸಿ
ಒಂದು ಲಕ್ಷ್ಮ ದಂಡಿನೊಡನೆ ಚಿತ್ರದುರ್ಗಕ್ಕೆ ಮುತ್ತಿ
ಗೆ ಹಾಕಲು ಬಂದನು. ದುರ್ಗದ ಮುಖಂಡ ಸರದಾರರು, ಸೇನಾಪತಿ
ಗಳು, ಮನಸಬ್‌ದಾರರು ಸಹಾ ಸಭೆ ಸೇರಿ--ಹೈದರಲ್ಲಿಖಾನನ ದಂಡು
ಬಲವಾಗಿದೆ. ದುರ್ಗದ ಸೇನೆಯು ೫೦೦೦೦ ಮಟ್ಟಗೆ ಇದೆ, ಮದಕರಿ
ನಾಯಕನಿಗೆ ಇನ್ನೂ ವಯಸ್ಸು ಚಿಕ್ಕದು, ಹೈದರಲ್ಲಿಯೊಡನೆ ಭಾರಿಯಾ
ಗಿಯುದ್ಧಕ್ಕೆ ನಿಲ್ಲಲು ದಕ್ಷರು ಕಡಮೆ. ಆದಕಾರಣ ಬಂದಶತ್ರುವನ್ನು
ಸದ್ಯದಲ್ಲಿ ಹೇಗಾದರೂ ನಿವಾರಣೆ ಮಾಡುವುದು ಉತ್ತಮ. ಇದುವ
ರೆಗೆ ನಡೆದ ಅನೇಕ ಭಾರಿ ಲಡಾಯಿಗಳಂದ ಅನೇಕವಾಗಿ ಯುದ್ದ ಸಾಮ
ಗ್ರಿಗಳು ಕಡಮೆಯಾಗಿರುವುದು ; ಅದೆಲ್ಲವನ್ನೂ
ಭರ್ತಿಮಾಡಿಕೊಳ್ಳುವುದು ಅಗತ್ಯವೆಂದು ಯೋಚಿಸಿ
ರಾಜಿಯಾಗಿ ವರುಷ ೧ಕ್ಕೆ ೧೦೦೦೦೦ ವರಹ ಕೊ
ಡೋಣ, ಎಂದು ಒಪ್ಪಿಕೊಂಡರು.
-------------------------------------
೬೬ ಚಿತ್ರದುರ್ಗದ ಪಾಳಯಗಾರರು.
ದುರ್ಗದವರು ಹೈದರನಿ
ಗೆ ಮಾಡಿದ ಸಹಾಯ.
ಇದಕ್ಕೆ ಒಪ್ಪಿ ಹೈದರಲ್ಲಿಯು ತನ್ನ ದಂಡನ್ನು ಹಿಂತಿರುಗಿಸಿ
ಹೊಂಡು ಕೂಡಲೆ ಬಂಕಾಪುರಕ್ಕೆ ಹೋಗಿ, ಆ
ವೂರಿಗೆ ಮುತ್ತಿಗೆ ಹಾಕಿದನು. ಆ ಕೊಟೆಯು
ಹೈದರನಿಗೆ ಸಾಧ್ಯವಾಗಲ್ಲ. ಆಗ ತನಗೆ ಸಹಾಯ
ಮಾಡಿ ಬಂಕಾಪುರವನ್ನು ಜೈಸಿಕೊಡಬೇಕೆಂತಲೂ, ಯುದ್ಧದವೆಚ್ಚವ
ನ್ನೆಲ್ಲಾ ತಾನು ಕೊಡುವುದಾಗಿಯೂ ಹೈದರನು ಒಪ್ಪಿದ್ದರಿಂದ ದುರ್ಗದ
ದಂಡುಹೋಗಿ ಆ ವೂರನ್ನು ಅವನಿಗೆ ಹಿಡಿದು ಕೊಟ್ಟಿತು. ಅದಕ್ಕೆ
ಹೈದರನು ಸಂತೋಪಪಡುವುದಕ್ಕೆ ಬದಲಾಗಿ ದುರ್ಗದವರ ಪರಾಕ್ರ
ಮಕ್ಕೆ ಅಸೂಯಪಡಲು ಆರಂಭಿಸಿದನು.
ಹೈದರನಿಗಾಗಿ ಮರಾಟಿ
ಯವರಮೇಲೆ ಯುದ್ಧ
ಈ ಆಸೂಯವನನ್ನು ಇನ್ನೂ ಹೆಚ್ಚಿಸುವುದಕ್ಕೆ ಇನ್ನೊಂದು ಸಮ
ಯ ಸಿಕ್ಕಿತು. ಶ್ರೀಮಂತ ಮಾಧವರಾಯನು
೩೦೦೦೦೦ ದಂಡಿನೊಡನೆ ಶ್ರೀರಂಗಪಟ್ಟಣದಮೇಲೆ
ಹೊರಟನು. ಪುನಃ ಹೈದರನ ಅಪೇಕ್ಷೆಯಂತೆ
ಮದಕರಿನಾಯಕನೂ, ಅವನ ಸೇನೆಯೂ, ಬಹು ರೋಷದಿಂದ
ಆ ದಿನ ಸಾಯಂಕಾಲದವರೆಗೂ ಯುದ್ಧ ಮಾಡಿದ್ದರಿಂದ, ಮರಾಟಿ
ಯವರು ಮಾಸೂರು ಕೆರೆಗೆ ಓಡಿಹೋದರು. ಈ ಪ್ರಕಾರ ಶ್ರೀರಂ
ಗಪಟ್ಟಣದವರಿಗೆ ಜಯವನ್ನುಂಟುಮಾಡಿ ಕೊಟ್ಟು ದುರ್ಗದವರು ಹೊ
ರಟು ಬಂದರು.
ಇದು ಜರುಗಿದ ಕೆಲವು ದಿವಸಕ್ಕೆ ಹೈದರನು ಇಫ್ಟೇರಿಯವರ
ಮೇಲೆ ಕದನವನ್ನು ಹೂಡಿದನು. ಅಲ್ಲಿಯೂ ದುರ್ಗದವರ ಸಹಾಯ
ದಿಂದಲೇ ಜಯವಾಯಿತು.
ಗುತ್ತಿ ಮುರಾರಿರಾಯನಿಗೆ ಮಾಡಿದ ಸಹಾಯ.
ಈಚೆಗೆ ಹೈದರನು ಗುತ್ತೀ ಮುರಾರಿರಾಯನಮೇಲೆ ಕದನಕ್ಕೆ ನಿಂ
ತನು, ದುರ್ಗದವರು ಹೈದರನ ಸಹಾಯಕ್ಕೆ
ಹೋಗಿದ್ದರು. ಮುರಾರಿರಾಯನು ರಾತ್ರೆಹೊತ್ತು
ಮದಕರಿನಾಯಕನ ಪಾಳಯಕ್ಕೆ ಬಂದು ದೊರೆ
ಯನ್ನು ಕಂಡು ಪೂರ್ವ ಸ್ನೇಹದಮೇಲೆ ದೃಷ್ಟಿ ಇಡಬೇಕೆಂದು ಹೇಳ
ಕೊಂಡದ್ದರಿಂದ, ಆ ಪಾಳಯಗಾರನಿಗೆ ಯಾವ ಕಡೆಗೂ ಹಾಯದಹಾಗಾ
---------------------------------------
ನಿಜಗಲ್ ಮುತ್ತಿಗೆ. ೬೭
ಯಿತು; ಆಗ ಮುರಾರಿರಾಯನ ಮೇಲಿನ ಅಭಿಮಾನದಿಂದ ಗುತ್ತಿಯನ್ನು
ಸಧ್ಯಕ್ಕೆ ಹೈದರನ ವಶಮಾಡಿಸಿ ಬಿಡಿಸಿಕೊಟ್ಟನು ; ಮುರಾರಿರಾಯನು
ಅವನ ಸಂಸಾರ ಸಮೇತ ಮರೆಹೊಗಲು, ಅವನನ್ನು ದುರ್ಗಕ್ಕೆ ಕರೆದು
ಕೊಂಡುಬಂದು ಸ್ಕಲ್ಪ ದಿವಸ ಇರಿಸಿಕೊಂ ಡಿದ್ದು ಹಿರಿಯೂರ ಬಳಿ
ಇರುವ ಮಸಗಲ್ಲು ಎಂಬ ಗ್ರಾಮವನ್ನು ಆತನಿಗೆ ಇನಾಮಾಗಿ ಕೊಟ್ಟು,
ಆ ವೂರ ಈಶ್ವರನ ಗುಡಿಯಲ್ಲಿ ಶಿಲಾ ಶಾಸನವನ್ನು ಬರೆಯಿಸಿ ಪಾಳಯ
ಗಾರನು ಚಿತ್ರದುರ್ಗಕ್ಕೆ ಬಂದನು.
ನಿಜಗಲ್ ಮುತ್ತಿಗೆ,
ದುರ್ಗದ ರಾಜರು ಸೇನೆಯವರನ್ನು ಕಾಪಾಡಿದ್ದು
ಹೈದರಲ್ಲಿಯು ನಿಜಗಲ್ಲಿಗೆ ಮುತ್ತಿಗೆ ಹಾಕಿದನು. ಆ ಕೋಟೆ
ಬಲವಾಗಿತ್ತು. ಒಂದು ವರುಷ ಸಾಧಿಸಿದಾಗ್ಯೂ ಸಾಧ್ಯ
ವಾಗಲಿಲ್ಲ. ಆಕೋಟೆಯ ಮೇಲಿನಿಂದ ಬಿಸೀ ಎಂಣೆ,
ಅಂಬಲಿ, ಸಹಾ ಕಲ್ಲ ಬಂಡೆಯಮೇಲೆ ಹಾಕುತಾಬಂದರು. ಆ ಕೋಟೆ
ಯನ್ನು ಹಲ್ಲ ಮಾಡುವುದಕ್ಕೆ ಆಗದೇ ಹೋಯಿತು. ಹೈದರನು ಯಥಾ
ಪ್ರಕಾರ ದುರ್ಗದವರ ನೆರವನ್ನು ಹೇಳಿಕೊಂಡನು. ಆಗ ೧೨೦೦೦
ಕಾಲುಬಲವನ್ನು ಕಳುಹಿಸಿದರು. ಈ ಭಟರು ಮುಖಕ್ಕೆ ಕಾವಿಬಂಣ
ಬಳಿದು ಕೊಂಡು ಅದರಮೇಲೆ ಚಿಕ್ಕೀ ಬಟ್ಟಿನ ನಾಮ ಇಟ್ಟು ಮೂರು
ದಿನದ ರೊಟ್ಟಿ ಬುತ್ತಿಯನ್ನು “ವಾಕ್ ಚಾಪ್ ' ಚೀಲದಲ್ಲಿ ಹಾಕಿ
ಬೆನ್ನಿಗೆಕಟ್ಟ ಕೊಂಡು ತಮ್ಮ ಆಯುಧಗಳನ್ನು ತೆಗೆದುಕೊಂಡು ಕೈಯಲ್ಲಿ
ಮುಳ್ಳು ಪೊದೆಗಳನ್ನು ಹಿಡಿದು ಹೊರಟರು... ಈ ಸಂದರ್ಭದಲ್ಲಿ
ಇನ್ನೊಂದು ವಿಚಿತ್ರವಾದ ಕೆಲಸ ನಡೆಯಿತು. ಸರ್ಕಾರದ ಸಂಬಳದಿಂ
ದಲೇ ಜೇವಿಸುತಾ ಇದ್ದ ಸಿಪಾಯಿಗಳಿಗೆ ಮಕ್ಕಳಾದರೆ ಅಂಥಾ ಮಕ್ಕ
ಳಿಗೆ ಹಾಲು ಬೆಂಣೆ ಸಂಬಳವೆಂದು ಧರ್ಮ ಸರ್ಕಾರ
ದಿಂದ ಕೊಡಿಸುವಹಾಗೆ ಪೂರ್ವ ದಿಂದಲೂ ನಡೆದು
ಬಂದ ಒಂದು ವಾಡಿಕೆ ಇತ್ತು. ಅಂಥಾ ಮಕ್ಕ
ಳಗೆ ವಯಸ್ಸು ಬಂದಮೇಲೆ ಅವರಿಗೆ ದಂಡಿನಲ್ಲಿ ಕೆಲಸಹೊಡುತಾ
ಇದ್ದರು ಇಂಥಾ ಸಿಪಾಯಿಗಳಲ್ಲಿ ಭಯದಿಂದ ಹಿಮ್ಮೆಟ್ಟಿದ ಒಬ್ಬೊಬ್ಬ
ಸಿಪಾಯಿಯ ಸೊಂಟಕ್ಕೆ ಕಬ್ಬಿಣದ ಸರಪಣಿ ಹಾಕಿ ಅದನ್ನು ಹಿಡಿದು
ಕೊಂಡು ಹೋಗುವಂತೆ ಮಾಡಿದ್ದರು. ಈ ಯುದ್ದಕ್ಕೆ ಅಂಥವರು
---------------------------------
೬೮ ಚಿತ್ರದುರ್ಗದ ಪಾಳೆಯಗಾರರು.
ಕೆಲವರನ್ನು ಹಿಡಿದುಕೊಂಡು ಬಂದಿದ್ದರು, ಶತ್ರುಗಳ ಕಡೆಯವರು
ಇದೇನೆಂದು ಕೇಳಲಾಗಿ, ಆ ಸಿಪಾಯಿಗಳು-- ಅವರನ್ನು ಬಿಟ್ಟು ಬಿಟ್ಟರೆ
ಅವರು ಮನುಷ್ಯರನ್ನು ತಿನ್ನುತ್ತಾರೆಂದು ಭೀಕರವಾದ ಮಾತುಗಳನ್ನಾ
ಡಿದರು. ಇದನ್ನು ಕೇಳಿ ನಿಜವೆಂದು ಭಾವಿಸಿ ಶತ್ರುಸೇನೆಯವರು
ಓಡುತಿದ್ದರು.
ದುರ್ಗದ ದಂಡಿನ ಸಾಹಸ.
ರಾಜನು ಇಂಥಾ ಸೇನೆಯೊಡನೆ ಹೊರಟು ನಿಜಗಲ್ಲಿಗೆ ಎರಡು ಹರ
ದಾರಿಯಲ್ಲಿ ಡೇರೇ ಹಾಕಿಕೊಂಡು ಇಳದುಕೊಂಡನು.
ಇದರ ಸುತ್ತಲೂ ಬಿಚ್ಚಕತ್ತಿಯವರು ಎಪಹರೆ ಹೊಡು
ತಾ ಇದ್ದರು; ಆಗ ರಾಜನು ನವಾಬನ ಭೇಟಿಮಾಡಿ
ಕೊಂಡು ಬಂದನು. ಚಿತ್ರದುರ್ಗದ ದಂಡಿನಲ್ಲಿ ಅರ್ಧ ನಿಜಗಲ್ ದುರ್ಗದ
ಹಿಂದುಗಡೆಗೆ ಹೋಗಿ ಯುದ್ಧಕ್ಕೆ ನಿಂತಿತು. ರಾತ್ರೆ ೧೭॥ ಗಳಿಗೆ ಪರ್ಯಂತ
ಉಡಗಳನ್ನು ಮೇಲಕ್ಕೆ ಎಸೆದು ಅದರ ಮೂಲಕ ಹಲ್ಲಾಮಾಡಲು
ಯತ್ನಿಸಿದರು. ಹೀಗಿರುವಲ್ಲಿ ಮುಖ್ಯ ಪೊದೆಗಳನ್ನು ತಂದಿದ್ದವರು ಅವು
ಗಳಿಗೆ ಅಲ್ಲಲ್ಲಿ ಬೆಂಕಿ ಹತ್ತಿಸಿದರು. ಈ ದಂಡಿನವರು ಅಡಿಗೇ ಮಾಡಿ
ಕೊಳ್ಳುತಾರೆಂದು ತಿಳಿದು ಕೋಟೆಯೊಳಗಿನವರು ಕೈ ಕಡಮೆಮಾಡಿ
ಮಲಗಿಕೊಂಡರು. ಈ ಸುಳುವನ್ನು ತಿಳಿದು ದುರ್ಗದವರು ನಿಜಗಲ್ಲಿಗೆ
ಹಲ್ಲಾಮಾಡಿ ಕೋಟೆಯೊಳ ಕ್ಕೆ ಇಳಿದು ಕೋಟೆಬಾಗಿಲ ಅಗಣಿಯನ್ನು
ತೆಗೆದರು. ಆಗ ಮದಕರಿನಾಯಕನು ಕುರಚಿಹಾಕಿಸಿಕೊಂಡು ಕೂತು
ಶತ್ರುಗಳ ತಲೆಯನ್ನು ತಂದವರಿಗೆ ತಲೆ ೧ಕ್ಕೆ ೧ ವರಹ ಇನಾಂ ಕೊ
ಡುವುದಾಗಿ ಅಪ್ಪಣೇ ಮಾಡಿದನು. ಅನೇಕ ತಲೆಗಳನ್ನು ಭಟರು
ತಂದು ರಾಶಿ ಹಾಕಿದರು. ಅನೇಕರು ಆ ಬರುಡೆಗಳನ್ನು ಕೈಯಲ್ಲಿ
ಹಿಡಿದು ಬಾಯಲ್ಲಿ ಕಚ್ಚಿ ಕೊಂಡು ಸಹಾ ಬಂದು ದೊರೆಗೆ ನಿವಾಳಿಹಾಕು
ತಿದ್ದರು, ಹೈದರನು ಇದನ್ನು ಕೇಳಿ ರಾಜನ ಬಳಿಗೆ ಬಂದು ನೋಡಿ
ಬಹಳ ಸಂತೋಪಪಟ್ಟು ಆ ಕೊಲೆಯನ್ನು ನಿಲ್ಲಿಸಬೇಕೆಂದು ಹೇಳ
ಕೊಂಡನು. ಆಗ ಆ ಘೋರವಾದ ಕೃತ್ಯ ನಿಂತಿತು. ನಿಜಗಲ್ಲನ್ನು
ಹೈದರನಿಗೆ ವಶಮಾಡಿಕೊಟ್ಟರು. ಇದೇ ಪ್ರಕಾರ ಮದಕರಿನಾಯ
ಕನು ಅನೇಕ ಕೋಟೆಗಳನ್ನು ಆ ನವಾಬನಿಗೆ ಸಾಧಿಸಿ ಕೊಟ್ಟನು,
ಹೈದರನು ಇದಕ್ಕಾಗಿ ದುರ್ಗದವರಿಗೆ ಏನೂ ಕೊಡಲಿಲ್ಲ.
------------------------------------
ಪೂನೆ ಶ್ರೀಮಂತರೊಡನೆ ಸ್ನೇಹ. ೬೯
ಪೂನೆ ಶ್ರೀಮಂತರೊಡನೆ ಸ್ನೇಹ.
ಇಂಥಾ ಅತಿಶಯವಾದ ಚಿತ್ರದುರ್ಗದವರ ಪರಾಕ್ರ್ರಮವನ್ನೂ
ಸಾಹಸವನ್ನೂ ಕೇಳಿ ಪೂನೆ ಶ್ರೀಮಂತದೊಡ್ಡ ಮಾಧವರಾಯನು ಆಶ್ಚ
ರ್ಯಪಟ್ಟು, ದಕ್ಷಿಣದೇಶಕ್ಕೆ ವಿಜಯ ಯಾತ್ರೆಗಾಗಿ
ಬಂದಾಗ ಹೈದರನ ಸೀಮೆಯಮೇಲೆ ನುಗ್ಗಿ ಊರು
ಗಳನ್ನು ತಗೆದುಕೊಳ್ಳುತಾ ಮದಕರಿನಾಯಕನ
ಸಹಾಯವನ್ನು ಅಪೇಕ್ಷಿಸಿ, ಯುದ್ದದ ವೆಚ್ಚ ವನ್ನು ತಾನು ಕೊಡು
ವುದಾಗಿ ಒಪ್ಪಿ ಪತ್ರಬರಿಸಿದನು. ಹೈದರಲ್ಲಿಯೊಡನೆ' ಬಹಳ ಸ್ಟೇಹವಾ
ಗಿಯೇ ಇದ್ದಾಗ್ಯೂ ಶ್ರೀಮಂತರಕಡೆಗೆ ತಿರುಗಿಕೊಳ್ಳಬೇಕೆಂದು ದುರ್ಗ
ದವರು ಮನಸ್ಸುಮಾಡಲು ತತ್‌ಕ್ಷಣಕ್ಕೆ ಏನುಕಾರಣವಾಯಿತೋ ತಿಳಿ
ಯಬರುವುದಿಲ್ಲ. ಹೈದರಲ್ಲಿಯು ದುರ್ಗದವರಿಗಿಂತಲೂ ಬಲವಾದವನು,
ಸಮಾಪದಲ್ಲಿರುವ ಇವನು ಎಂದಾದರೂ ತಮಗೆ ಕಿರುಕೊಳವನ್ನುಂಟು
ಮಾಡದೇ ಇರುವುದಿಲ್ಲ, ಪೂನೇ ಶ್ರೀಮಂತರು ತನ್ನಲ್ಲಿ ಸ್ನೇಹವನ್ನು
ತಾವಾಗಿ ಅಬೇಕ್ಷಿಸಿದಾರೆ, ಈ ಸಮಯದಲ್ಲಿ ಅವರ ಮೈತ್ರಿಯನ್ನು
ಬಿಟ್ಟು ಬಿಟ್ಟರೆ ಅವರೂ ತನಗೆ ಶತ್ರು,ವಾಗಬಹುದು, ಬಲವಾದ ಇಬ್ಬರ
ಹಗೆತನಕ್ಕಿಂತಲೂ ಒಬ್ಬರಲ್ಲಿ ಸ್ನೇಹವನ್ನು ಬಳಸುವುದು ಮೇಲು, ಇವ
ರಿಬ್ಬರಲ್ಲಿ ಪೇಶ್ವೆಗಳು ಬಲವಾದ ಸಂಸ್ಥಾನದವರು, ಇವರ ಮೈತ್ರಿಯಿಂದ
ಸಮೀಪವಾದ ಶತ್ರುವನ್ನು ನಾಶಮಾಡಿದರೆ ಎಂದಾದರೂ ತನಗೆ ಉತ್ತ
ಮವಾಗುವುದು, ಎಂದು ಯೋಚಿಸಿ ಮದಕರಿನಾಯಕನು ಮರಾಟೆಯವ
ರಲ್ಲಿ ಕರಾರು ಮಾಡಿಕೊಂಡು ಅವರಿಗೆ ಸಹಾಯಮಾಡಲು ಒಪ್ಪಿದನು.
ಇದರಂತೆ ಭಾರಿಯಾದ ತನ್ನ ದಂಡನ್ನು ತೆಗೆದುಕೊಂಡು ಹೊರಟು
ಹೈದರನಿಗೆ ಸೇರಿದ್ದು ಮರಾಟೆಯವರಿಗೆ ಸಾಧ್ಯವಿಲ್ಲದೇ ಹೋಗಿದ್ದ
ಸಾಮಂತನಗಿರಿದುರ್ಗ , ಹುತ್ರಿದುರ್ಗ, ನುಗ್ಗೆಹಳ್ಳಿ, ಹಾಗಲ್ವಾಡಿ, ಬಾಣಾ
ವಾರ, ಮೊದಲಾದ ಕೋಟೆಗಳನ್ನು ತೆಗೆದುಕೊಂಡು ಶ್ರೀಮಂತರಿಗೆ
ಠಾಣ್ಯ ಹಾಕಿಸಿಕೊಟ್ಟನು.
ಆನವಟ್ಟಿ ಮುತಿಗೆಯಲ್ಲಿ ಹೈದರನನ್ನು ಗೆದ್ದುದು.
ತರುವಾಯ ಎರಡನೇ ಸಾರಿ ಮಾಧವರಾವ್ ಪೇಶ್ವೆಯು ೩೦೦೦೦೦
ಫೌಜಿನೊಡನೆ ದಕ್ಷಿಣದೇಕಕ್ಕೆ ಹೊರಟು ಹೈದರನ
ಸೀಮೆಗಳನ್ನು ತೆಗೆದುಕೊಳ್ಳುತಾಬಂದನು.. ಈ
ಸಂದರ್ಭದಲ್ಲಿ ಪೂರ್ಪುದ ಸ್ನೇಹವನ್ನು ಮರೆಯದೆ
------------------------------------
೭೦ ಚಿತ್ರದುರ್ಗದ ಪಾಳಯಗಾರರು.
ಮದಕರಿನಾಯಕನ ಕ್ರೌರ್ಯ.
ತನಗೆ ಸಹಾಯಮಾಡಬೇಕೆಂದು ವಿಶೇಷ ಗೌರವವಾಗಿ ಮಾಧವರಾ
ಯನು ದುರ್ಗದ ಪಾಳಯಗಾರರಿಗೆ ಲೇಖನವನ್ನು ಬರೆದುಕಳುಹಿಸಿದನು
ಇದನ್ನು ನೋಡಿಕೊಂಡು ಮುದಕರಿನಾಯಕನು ಸಂತೋಷದಿಂದ ತನ್ನು
ದಂಡನ್ನು ತೆಗೆದು ಕೊಂಡು ಹೋಗಿ ಆನವಟ್ಟಿ ಕೋಟೆಗೆ ಮುತ್ತಿಗೆ
ಹಾಕಿದ್ದ ಮಾಧವರಾಯನಿಗೆ ವಿಶೇಷವಾಗಿ ಸಹಾಯಮಾಡಿ ಆ ಕೋಟೆ
ಯನ್ನು ಹಿಡಿದು ಮರಾಟೆಯವರ ವಶಮಾಡಿದನು. ಈ ಯುದ್ಧದಲ್ಲಿ
ದುರ್ಗದ ಬೇಡರು ನಿಜಗಲ್ಲು ಮುತ್ತಿಗೆಯಲ್ಲಿ ತೋರಿಸದ್ದಕ್ಕಿಂತ ಒಂದಕ್ಕೆ
ಹತ್ತರಷ್ಪು ಕಾರ್ಯವನ್ನು ತೋರಿಸಿದರು. ದೊಡ್ಡ ಜಗುಲಿಯನ್ನು,
ಆ ತಲೇ ಬುರುಡೆಗಳಲ್ಲಿಯೇ ಕಟ್ಟಿಸಿ ಮಾಧವರಾಯನನ್ನು ಅಲ್ಲಿಗೆ ಕರೆ
ದುಕೊಂಡುಹೋಗಿ ದುರ್ಗದ ದೊರೆಯು ಪೇಶ್ವೆಯನ್ನು ಕುರಿತು---
ಸ್ವಾಮಿ ಶತ್ರುಗಳ ಶಿರಸ್ಸಿನಿಂದ ವೀರಾಸನವನ್ನು ಕಟ್ಟಿಸಿದೇನೆ, ಅದರ
ಮೇಲೆ ತಾವು ಕೂತುಕೊಳ್ಳಬೇಕು, ರಕ್ತದಿಂದ ಆಭಿಷೇಕಮಾಡಿಸು
ತೇನೆ ಎಂದನು. ಇದಕ್ಕೆ ಪೇಶ್ವೆಯು ನೀವು ಮಾಡಿದ ಅಧಿಕವಾದ
ಸಹಾಯದಿಂದ ನಾನು ಕೇವಲ ಆನಂದ ಭರಿತನಾದೆ, ಆದರೆ ನಾವು ಬ್ರಾ)
ಹ್ಮಣರು, ನೀವು ಅಪೇಕ್ಷೆಮಾಡಿರುವ ಕೆಲಸಕ್ಕೆ ನಾನು ಒಪ್ಪಲಾರೆ,
ನೀವು ಕ್ಷತ್ರಿಯರು, ನಿಮಗೆ ಇದು ತಕ್ಕದ್ದು, ಕೋಟೆಯೇನೋ ನಮ್ಮ
ಸ್ಪಾಧೀನವಾಯಿತು ಇನ್ನು ಅಂಥಾ ಅಕೃತ್ಯವನ್ನು ನಿಲ್ಲಿಸಬೇಕು, ಎಂದು
ಹೇಳಿದನು. ಆದಾಗ್ಯೂ ಮದಕರಿನಾಯಕನು ಆ ಅತಿ
ಭಯಂಕರವಾದ ವೀರಾಸನದ ಮೇಲೆ ಕೂತುಕೊಂಡು
ಮನುಷ್ಯಯರ ರಕ್ತದಿಂದ ಅಭಿಷೇಕವನ್ನು ಮಾಡಿಸಿ
ಕೊಂಡನು. ಪುನಃ ಶ್ರೀಮಂತನು ಈ ಘೋರವಾದ ಕೃತ್ಯವನ್ನು ನಿಲ್ಲಿ
ಸಬೇಕೆಂದು ಬಲವಂತಮಾಡುವವರೆಗೂ ಈ ಕೆಲಸವನ್ನು ನಡೆಸಿದರು.
ಇಂಥಾ ಪೊತಕವನ್ನು ಯಾರೂ ಯಾವ ಯುದ್ಧದಲ್ಲಿಯೂ “ನಡಿಸಿರರಿ.
ಹಿಂದಿನ ತಳು ಹ ಸಹಿತ ಇಂಥಾ ಕೆಲಸಕ್ಕೆ ಹೋದವರಲ್ಲ ಈ
ಮದಕರಿನಾಯಕನು ಮಾಡಿದ ಅಸಹ್ಕುವಾದ ಫೋರಕ ತ್ಛದಲ್ಲಿ ಇನ್ನೊಂ
ದಿದೆ. ತನ್ನ ಸೇನೆಯವರು ಮೃಗಪಕ್ಷಿಗಳನ್ನು ಕೊಂದು ತಲೆ ಬುರುಡೆ
ಗಳ ಒಲೆಗುಪ್ಪನ್ನು ಇಟ್ಟು ಮಾಂಸಾದಿಗಳನ್ನು ಬೇಸಿಕೊಳ್ಳುವಂತೆ
------------------------------------
ಹೈದರನ ಉಪಾಯ. ೭೧
ಅಪ್ಪಣೆಮಾಡಿದನು. ಇಂಥಾ ಕೃತ್ಯವನ್ನು ನೋಡಿ ಶತ್ರು;ಸೇನೆಯವರು
ಕಡೆಗೆ ಮುಸಲ್ಪಾನರೂ ಸಹಿತ ಭೀತಿಪಟ್ಟು ರೋಸಿಹೋದರು. ಹೈದ
ರನ ದಂಡು ಸೋತು ಶ್ರೀರಂಗಪಟ್ಟಣಕ್ಕೆ ಹೊರಟುಹೋಯಿತು.
ನಂಬಿಕೆಗೆ ಮೋಸ
ಈ ಕಡೇ ಮದಕರಿನಾಯಕನ ನಡತೆಯು ಯಾರಿಗೂ ಸಮಾ
ಧಾನವಾಗಿರಲಿಲ್ಲ ಒಂದು ಸಾರಿ ಒಬ್ಬರ ಸ್ನೇಹವನ್ನು
ಮಾಡಿ ಅವರಿಗೆ ಸಹಾಯಮಾಡುವುದಾಗಿ ಒಪ್ಪಿಕೊಳ್ಳು
ವುದು, ಯುದ್ಧಮಾಡುವಾಗ ಲೇಶವೂ ಧರ್ಮದ ಮೇಲೆ ದೃಷ್ಟಿ ಇಡದೆ
ಘೋರತಮವಾದ ಕೆಲಸಗಳನ್ನು ಮಾಡುವುದು, ನಂಬಿಸಿ ಸಮಯದಲ್ಲಿ
ಮೋಸಮಾಡುವುದು, ಹೀಗೆ ಮಾಡುತಾ ಬಂದನು. ಪರರಾಜರಿಗೆ ಇವ
ನಲ್ಲಿ ಭರವಸೆ ತಪ್ಪಿಹೋಯಿತು. ಹೈದರಲ್ಲಿಗೆ ಇವನಲ್ಲಿ ಪೂರಾ ದ್ವೇಷ
ಹುಟ್ಟಿತು. ಹೇಗಾದರೂ ಇವನಿನ್ನು ಮುರಿಯಬೇಕೆಂದು ಹೈದರನು
ಉದ್ಯುಕ್ತನಾದನು
ಹೈದರನ ಉಪಾಯ
ಆದರೆ ಇದು ನೆರವೇರುವುದು ಹೇಗೆ? ಮದಕರಿನಾಯಕನಿಗೆ
ಪೇಶ್ವೆಗಳ ಬಲ ಚನ್ನಾಗಿದೆ. ಇವನನ್ನು ಕೆಣಕದಲ್ಲಿ
ಮರಾಟೆಯವರ ಪರಶುರಾಂಭಾವು ಸಹಾಯಕ್ಕೆಬಂದು
ಶ್ರೀರಂಗಪಟ್ಟಣದ ಗಡಿಗಳ ಮೇಲೆ ಬಿದ್ದರೆ ಇತ್ತ ಮಾಧವ ರಾಯನೊ
ಡನೆಯೂ ಅತ್ತ ಪಾಳಯಗಾರನೊಡನೆಯೂ ಜಗಳವನ್ನು ಹೂಡಬೇಕಾ
ಗುವುದು. ಇದು ಕಷ್ಪವಾದ ಕೆಲಸ. ಆದಕಾರಣ ಭೇದೋಪಾಯದಲ್ಲಿ
ಕಾರ್ಯಸಾಧನೆ ಮಾಡಿಕೊಳ್ಳಬೇಕು. ಈ ಪಾಳಯಗಾರನು ಚಿತ್ರದು
ರ್ಗದ ಕೋಟೆಯಲ್ಲಿಯೇ ಇದ್ದರೆ ಅಲ್ಲಿ ಹಲ್ಲಾಮಾಡಿ ಸಾಧಿಸಲು ಹೋ
ದಾಗ ಮರಾಟೆಯವರ ಹಾವಳಿಯು ತನ್ನ ಸೀಮೆಗೆ ಚನ್ನಾಗಿ ವ್ಯಾಪಿಸು
ವುದು. ಹೇಗಾದರೂ ಪಾಳಯಗಾರನು ಅತನ ದುರ್ಗದಿಂದ ಈಚೆಗೆ
ಬರುವಹಾಗೆ ಮಾಡಿ ಅವನನ್ನು ಕೈಸೆರೆ ಹಿಡಿಯಬೇಕೆಂದು ಹೈದರ
ಲ್ಲಿಯು ನಿಷ್ಕರ್ಷೆ ಮಾಡಿಕೊಂಡು, ತಾನು ದುರ್ಗಕ್ಕೆಬರಲು ಆಗುವುದಿಲ್ಲ,
ಮದಕರಿನಾಯಕನೇ ಬಂದು ತನಗೆ ಭೇಟಿಕೊಡಬೇಕೆಂದು ಖರೀತಾ
ಬರೆಯಿಸಿ ಖಿಲ್ಲತ್ತನ್ನು ಹೊಟ್ಟು ವಕೀಲರ ಮೂಲಕ ಕಳುಹಿಸಿಿದನು.
ಆಗ ಮದಕರಿನಾಯಕನು ತನಗೆ ದೇಹಕ್ಕೆ ಆಲಸ್ಯುವಾದಕಾರಣ ಬರುವು
----------------------------------
೭೨ ಚಿತ್ರದುರ್ಗದ ಪಾಳಯಗಾರರು.
ದಕ್ಕೆ ಆಗುವುದಿಲ್ಲವೆಂದು ಜವಾಬನ್ನು ಬರಿಸಿದನು. ಈ ಖರೀತ ತಲ
ಏದ ಕೂಡಲೆ ಹೈದರನು ಖಂಡಣೀ ಮೊಬಲಗನ್ನಾದರೂ ಕಳುಹಿಸಬೇ
ಕೆಂದು ಬರಯಿದನು. ಇಷ್ಟರಲ್ಲಿಯೇ ನವಾಬನಿಗೆ ಬೆನ್ನಮೇಲೆ ಅರಸು
ಹುಂಣು ಎದ್ದು ಅವನು ತೀರಿಹೋದನೆಂದು ವರ್ತಮಾನ ಹುಟ್ಟಿತು.
ಆಗ ದುರ್ಗದ ದೊರೆಯು ಖಂಡಣಿಯನ್ನು ಕೊಡದೆ ನಿಲ್ಲಿಸಿದನು. ಇದು
ತಿಳದ ಕೂಡಲೆ ಹೈದರನು ತನ್ನ ದಂಡನ್ನು ಹೊರಡಿಸಿಕೊಂಡು ಮದ್ದ
ಗಿರಿ, ತುರುವೇಕೆರೆ, ಆ ಸಮಾಪಕ್ಯೆ ಬಂದು ಇಳಿದನು.
ಮತ್ತೊಂದು ಹಾಲಪ್ಪ ನಾಯಕನ ದ್ರೋಹ
ಇಷ್ಟರಲ್ಲಿ ದುರ್ಗದ ದೊರೆಯ ಭಾವಮೈ ದನಾದ ಮತ್ತೋಡು
ಹಾಲಪ್ಪನಾಯಕನೆಂಬುವನು ದೊರೆಯಲ್ಲಿ ದ್ವೇಷ
ವನ್ನು ಮಾಡಿಕೊಂಡು--ದುರ್ಗದ ದನಗಳು ತನ್ನ
ಸೀಮೆಯ ಸರಹದ್ದಿನಲ್ಲಿ ಬಂದು ಮೆಯ್ಯುತಾ ಇವೆ,
ಅವುಗಳನ್ನು ತಾನು ಕಟ್ಟಿಹಾಕುತೇನೆ, ತನಗೆ ಸಹಾಯವನ್ನು ಕೊಡ
ಬೇಕು, ಎಂದು ಹೈದರಲ್ಲಿಖಾನನನ್ನು ಹೇಳಿಕೊಂಡನು. ಇದಕ್ಕೆ ಒಪ್ಪಿ
ನವಾಬನು ತನ್ನ ಭಾವಮೈದ ಮೊಖದುಂಸಾಬಿ, ಮೊಹದಿನ್ ಸಾಬಿ ಇವರ
ಸಂಗಡ ಸ್ವಲ್ಪ ದಂಡನ್ನುಕಳುಹಿಸಿ ತಾನು ಸೇನೆಯೊಡನೆ ಸೀರಾಮೊ
ಕ್ಕಾಂಗೆ ಬಂದು ಖಂಡಣಿ ಹಣವನ್ನು ಕಳುಹಿಸಬೇಕೆಂದು ಸಂಡಣಿ
ಸವಾರರನ್ನು ದುರ್ಗಕ್ಕೆ ಕಳುಹಿಸಿದನು.
ಖಂಡಣಿ ಕಳುಹಿದ್ದು
ಈ ವರ್ತಮಾನವೆಲ್ಲಾ ಚನ್ನಾಗಿ ತಿಳದಕೂಡಲೆ ಪಾಳಯಗಾರನು
ತನ್ನ ಕಡೆ ವಕೀಲರಾದ ಬಾಳಪ್ಪ, ಸಾರು ಭೌಮರಾವ್
ಇವರೊಡನೆ ಖಂಡಣಿ ಹಣ ೨೦೦೦೦೦ ವರಹವನ್ನೂ
ಬಿಲ್ಲತ್ತನ್ನೂ ಕೊಟ್ಟು ಕಳುಹಿಸಿದನು. ಹೈದರನು
ಈ ವಕೀಲರನ್ನು ಬಹು ಮರ್ಯಾದೆಯಿಂದ ಕಂಡು, ತನ್ನ ಕೃತ್ರಿಮ
ಸಾಗಲಿಲ್ಲವಲ್ಲಾ ಎಂಬ ವ್ಯಸನವನ್ನು ಮುಚ್ಚಿ ಕೊಂಡು ಅವರನ್ನು
ಕುರಿತು ಮಾಡಿದ ಸಂಭಾಪಣೆಯು ಸ್ವಾರಸ್ಯವಾಗಿದೆ, ಆದ್ದರಿಂದ
ಅದನ್ನು ಇಲ್ಲಿ ಬರೆದಿದೆ.
------------------------------------
ದುರ್ಗದ ವಕೀಲರ ಸಂಭಾಷಣೆ. ೭೩
ದುರ್ಗದ ವಕೀಲರ ಸಂಭಾಷಣೆ.
ಹೈದರಲ್ಲಿಖಾನ್.-- ಈಗಲಾದರೂ ರಾಜಾಸಾಹೇಬರು ಭೇಟಿಗೆ ದಯ
ಮಾಡುತಾರೋ ಇಲ್ಲವೋ?
ವಕೀಲರು.--ಅವರೂ ಖಾವಂದರು, ತಾವೂ ಖಾವಂದರು,
ಧಣಿಯ ಮರ್ಜೆಯು ಸೇವಕರಿಗೆ ಹೇಗೆ ತಿಳಿಯ
ಬೇಕು? ಆರೋಗ್ಯವಾದಮೇಲೆ ಭೇಟಿಗೆ ಹೋ
ಗಬೇಕಂತ ಪ್ರಸ್ತಾಪ ಮಾಡುವುದು ಮಾತ್ರ ಗೊ
ತ್ತಿದೆ. ತಮಗೂ ಅವರ ಭೇಟಿಯನ್ನು ಮಾಡ
ಬೇಕೆಂಬ ಅಪೇಕ್ಷೆ ಬಹಳವಾಗಿದೆ. ಉಭಯತ್ರರ
ಮರ್ಜಿಯೂ ಏಕರೀತಿ ಇರುವಾಗ, ಭೇಟಿಯಾ
ಗಳು ಅಭ್ಯಂತರವೇನೂ ತೋರುವುದಿಲ್ಲ.
ಹೈದರ.--ರಾಜಾ ಸಾಹೇಬರು ಜಂಗಿಸರಂಜಚಾಮು ತಯಾರ್ಮಾಡಿ
ಸುತಾ ಇದಾರಂತೆ, ಪಟ್ಟಣಕ್ಕೆ ಮಳೆ ಬಾರದಿದ್ದರೆ
ನೀರಿನ ಆಮದಾನಿ ಇಲ್ಲವೆಂತ ಕೇಳುತೇವೆ, ಗಡ
ಖಿಲ್ಲೇದ ತಟಾಕದಲ್ಲಿ ತೋಪಿನ ಅವಾಜೆಗೆ ನೀರು
ನಿಲ್ಲುವುದಿಲ್ಲ, ಚಿತ್ರದುರ್ಗದ ಜಾಗ ನಾಮರ್ದ ಎಂತ
ಕೇಳುತೇವೆ. ಸೀವೆ ಎಷ್ಟು ಲಕ್ಷ ವರಹದ್ದು.
ವಕೀಲರು- ಈಗ ಜಂಗೀಸರಂಜಾಮು ಏನೂ ತಯಾರ್ಮಾಡಿಸು
ವುದಿಲ್ಲ. ಚಿತ್ರದುರ್ಗದ ಸಂಸ್ಥಾನಕ್ಕೆ ಆಜೂಬಾಜು
ಬಿದನೂರು, ಹರನಹಳ್ಳಿ, ರಾಯದುರ್ಗ, ನಿಡ
ಗಲ್ಲು, ತರೀಕೆರೆ ವಗೈರೆ ಪಾಳಯಗಾರರು ಶತ್ರುಗ
ಳಾಗಿರುವುದರಿಂದ, ಚಿತ್ರದುರ್ಗದ ಪೂರ್ವದ ದೊರೆ
ಗಳು ತಯಾರ್ಮಾಡಿಸಿ ಹಾಕಿರುವ ಮದ್ದುಗುಂಡು
ತೋಫುಖಾನೆ ಬಾಣ ಮುಂತಾದ್ದರ ಜಖೀರು ಬಹ
ಳವಾಗಿದೆ. ಹಂನೆರಡು ವರುಷ ಕೋಟಿಗೆ ಮುತ್ತಿಗೆ
ಆದಾಗ್ಯೂ ಹಂಗಿಸರಂಜಾಮು ಕಮ್ಮಿಯಾಗುವಹಾ
--------------------------------------
೬೪ ಚಿತ್ರದುರ್ಗದ ಪಾಳಯಗಾರರು.
ಗಿಲ್ಲ. ಖಿಲ್ಲೇದಲ್ಲಿ ಫೌಜು ಆಯುಧ ಸಮೇತ
ಒಂದೇ ಮನಸ್ಸಿನಿಂದ ಯುದ್ಧಾಪೇಕ್ಷೆಯಲ್ಲಿ ಇದೆ.
ಕೋಟೆಯೊಳಗೆ ನೀರು ಕಮ್ಮಿಯಾಗುವುದಿಲ್ಲ.
ಪೂರ್ವದಲ್ಲಿ ರಸಸಿದ್ಧರು ಬಂದು ತಮ್ಮ ಆನ್ಹಿಕಕ್ಕೆ
ಎಂಥಾ ಅನಾವೃಷ್ಟಿ ಕಾಲದಲ್ಲಿಯೂ ನೀರಿರಬೇ
ಕೆಂದು ಪ್ರಾರ್ಥಿಸಿದಪ್ರ ಕಾರ ದೇವರ ವರವಾಗಿದೆ.
ಹಿಂದಿನ ಯುಗದಲ್ಲಿ ಹಿಡಿಂಬಾಸುರನು ಭೀಮನಿಗೆ
ಸೋತುಬಿದ್ದುಕಕೊಂಡಿರುವಾಗ-ನಾನನಕ ಸೋತೆ,
ಮುಂದಕ್ಕೆ ಇಲ್ಲಿನ ಜನರು ಯಾವಾಗಲೂ ಆರೋ
ಗ್ಯವಾಗಿದ್ದು ಯಾರುಬಂದರೂ ಗೆಲ್ಲಬೇಕೇ ಹೊ
ರತು ಸೋಲಕೂಡದು ಎಂದು ಬೇಡಲು, ಭೀಮನು
ಆ ಪ್ರಕಾರ ವರವನ್ನು ಕೊಟ್ಟಿದಾನೆ.
ಆದ್ದರಿಂದ ಚಿತ್ರದುರ್ಗವು ಬಹಳ ಗಂಡುಭೂಮಿಯಾಗಿದೆ. ಹಿಂ
ದಕ್ಕೆ ಅನೇಕರು ಪ್ರಯತ್ನಮಾಡಿದರು. ಅವರಿಗೆ ಇದುಸ್ವಾಧೀನವಾಗ
ಲಿಲ್ಲ. ಸೀಮೆ ಇಷ್ಟು ಲಕ್ಷದ್ದೆಂದು ಲೆಕ್ಕಬರೆಯಲು ದಂಡಕವಿಲ್ಲ. ಖಜಾನೆ
ನೆಲೆ ತಿಳಿಯದು. ಪ್ರಜೆಗಳು ಸಂತೋಷಿಗಳಾಗಿದಾರೆ.
ಹೀಗೆ ಈ ವಕೀಲರು ಕೊಟ್ಟ ಜವಾಬಿನಿಂದ ಏನೂ ಗೊತ್ತಾಗ
ಲಿಲ್ಲವೆಂದು ತಿಳಿದು ಅವರಿಗೆ ಖಿಲ್ಲತ್ತು ಕೊಟ್ಟು ಕಳುಹಿಸಿ, ಚಿತ್ರದುರ್ಗದ
ಪಾಳಯಗಾರರು ತನ್ನು ಭೇಟಿಗೆ ಬರಲೇಬೇಕೆಂದು ಹೈದರಲ್ಲಿಯು ಖಂಡಿ
ತವಾಗಿ ಖರೀತಾ ಬರೆಯಿಸಿದನು ವಕೀಲರು ದುರ್ಗಕ್ಕೆ ಬಂದು ಸೇರಿ
ದೊರೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ಸಂಗತಿಯನ್ನು ಅರಿಕೆ ಮಾಡಿದನು
--------
೧೮ನೇ ಅಧ್ಯಾಯ.
ಕಡೇ ಮದಕರಿನಾಯಕ ಹೈಡರನೊಡನೆ ಯುದ್ಧಸನ್ನಾಹ.
ಹೈದರನ ಮೋಸ
ಮುಸವನ ಕಣಮೆಯಲ್ಲಿ ದುರ್ಗದ ದನ ಹಿಡಿದದ್ದು
ಯುದ್ದಕ್ಕೆ ಹೊರಟದು ,
ಈ ಸಂಗತಿಗಳೆಲ್ಲವನ್ನೂ ನೋಡಿಕೊಂಡಿದ್ದ ಕೆಲವು ಒಳದೇಶಕದ
ಶತ್ರುಗಳು ಇಂಥಾಸ ವದು ನಿರಿ ಕ್ಲಿ ಸಿಕೊಂಡಿದ್ದರು. ದೊರೆ
-------------------------------------
ಹೈದರನ ಮೋಸ. ೭೫
ಯ ಭಾವಮೈದನಾದ ಮತ್ತೋಡು ಹಾಲಪ್ಪನಾಯಕನು ಹೈದರನ ಕಡೆಗೆ
ಸೇರಿಕೊಂಡನು. ದುರ್ಗದ ವಕೀಲರು ಖಂಡಣಿ ಹಣವನ್ನು ಖಿಲ್ಲ
ತ್ತನ್ನೂ ಮದಕರಿನಾಯಕನ ಕಡೆಯಿಂದ ತಂದು ನವಾಬ ಹೈದರಲ್ಲಿನೆ
ಒಪ್ಪಿಸಿ ತಕ್ಕ ಮರ್ಯಾದೆಯನ್ನು ಹೊಂದಿ ಶ್ರೀರಂಗಪಟ್ಟಣದಿಂದ ಹೊರಟು
ಹೋದ ತರುವಾಯ, ಹೈದರನು ತನ್ನು ಭಾವಮೈ ದಂದಿರಾದ ಮಖದುಂ
ಸಾಬಿ, ಮೊಹದಿನ್‌ಸಾಬಿ ಇವರಿಬ್ಬರನ್ನೂ ಕೆಲವು ಸೇನೆಯೊಡನೆ ದುರ್ಗ
ದ ಸರಹದ್ದಿನಲ್ಲಿ ಬಿಟ್ಟು ಹೊರಟು ಹೋದನು. ಆಸಮಯದಲ್ಲಿ
ಮತ್ತೋಡು ಹಾಲಪ್ಪನಾಯಕನು-- ಚಿತ್ರದುರ್ಗದ
ದನಗಳು ಬೂದಿಹಾಳ್ ಚರಾಯದಲ್ಲಿ ಮೆಯ್ಯುವವು,
ಅವುಗಳನ್ನು ತಾನು ಹಿಡಿಯುತ್ತೇನೆ, ಇದಕ್ಕಾಗಿ ತನಗೆ ಸಹಾಯಮಾಡ
ಬೇಕು, ಎಂದು ಹೈದರಲ್ಲಿಯನ್ನು ಹೇಳಿಕೊಂಡನು. ಅದಸ್ಕೆ ನವಾಬನು
ಒಪ್ಪಿ--ದುರ್ಗದ ಪಾಳಯಗಾರನು ನಮ್ಮ ಭೇಟಿಗೆ ಬಾರದೆ ತಫ್ಪಿದಾನೆ,
ನಿಮ್ಮ ಫೌಜು ಸಮೇತ ಹೋಗಿ ಹಾಲಪ್ಪನಾಯಕನಿಗೆ ಸಹಾಯಮಾಡಿ
ದುರ್ಗದ ದನಗಳನ್ನು ಹಿಡಿಯತಕ್ಕದ್ದು ಎಂದು ತನ್ನು ಕಡೆ ಮೊಹದುಂ
ಸಾಬಿ, ಮೊಹರ್ದಿ ಸಾಬಿ, ಇವರಿಗೆ ಬರೆದನು. ಅದ
ರಂತೆ ಆ ಸರದಾರರು ಹೋಗಿ ಮುಸವನ ಕಣವೆ
ಬಳಿ ಮೆಯ್ಯುೂತಿದ್ದ ದುರ್ಗದ ಪಶುಗಳನ್ನು ಹಿಡಿದರು.
ಆ ದನಗಳನ್ನು ಕಾಯುತಾಇದ್ದ ಗೊಲ್ಲರವನು ದುರ್ಗಕ್ಕೆ ಹೋಗಿ
ದಕ್ಷಿಣ ಪ್ರಾಂತದ ಬಾತಮಿದಾರನ ಸಮೇತ ದೊ
ರೆಯ ಸನ್ನಿಧಾನದಲ್ಲಿ ಈ ಸಂಗತಿಯನ್ನು ಅರಿಕೆ
ಮಾಡಿದನು.
ಇದನ್ನು ಕೇಳದಕಕೂಡಲೆ ಮದಕರಿನಾಯಕನು ಅತ್ಯುಂತವಾಗಿ
ಆಗ್ರಹಗೊಂಡು ತನ್ನ ಸೇನೆಯೊಡನೆ ಬಕ್ಷಿ ಚನ್ನುಮಲ್ಲಯ್ಯನನ್ನು ಮುಂ
ದಾಗಿ ಕಳುಹಿಸಿ ೧೦೦೦* ತೋಫ್‌ಖಾನೆ ಅದಕ್ಕೆ ತಕ್ಕದಂಡಿನೊ
ಡನೆ ಹೋಗಿ ರೈಫಲ್ ಬಂದೂಖುಗಳು, ತೋಘುಗಳು ಎಲ್ಲವನ್ನೂ
ಒಂದು ಉಸಿರಿಗೆ ಗೊಲಂದಾಸರ ಮೂಲಕ ಹತ್ತಿಸಿ ಕೊಂಬನ್ನು
.....
* ಇದು ಅನುಮಾನವಾದರೂ ಪೂರ್ವದ ಪ್ರತಿಗಳಂತೆ ಇದೆ.
--------------------------------
೭೬ ಚಿತ್ರದುರ್ಗದ ಪಾಳಯಗಾರರು.
ಊದಿಸಿ ತಮಟೆಯನ್ನೂ ಭೇರಿಯನ್ನೂ ಹೊಡೆಯಿಸಿದನು. ಇದರ ಜೊ
ತೆಗೆ ಸೇನೆಯವರ ಕೇಕೆಯೂ ಸೇರಿ ಏಕಕಾಲದಲ್ಲಿ ಬಹಳ ಸದ್ದಾದ್ದ
ರಿಂದ ದನಗಳೆಲ್ಲಾ ಬೆದರಿ ಕೈಗೆ ಸಿಕ್ಕದೆ ದುರ್ಗದ ದಾರಿಯಲ್ಲಿ ಓಡಿ
ಹೋದವು.
ಈ ಪ್ರಕಾರ ತಮ್ಮ ಕಾರ್ಯ ಭಂಗವಾಗಲು ಶತ್ರು;ಸೇನೆಯು ರೋ
ಷದಿಂದ ಯುದ್ಧಕ್ಕೆ ಆರಂಭಮಾಡಿತು. ಇವರ ಪರಾಕ್ರಮ ಹೆಚಜ್ಚಿದ
ಹಾರಣ ದುರ್ಗದ ದಂಡು ನಿಲ್ಲಲಾರದೆ ಹಿಂತಿರುಗುವಹಾಗಾಯಿತು. ಈ
ಸ್ಥಿತಿಯನ್ನು ನೋಡಿ ಪಾಳಯಗಾರನು ರಣರಂಗದಲ್ಲಿ ನಿಂತು ತಮ್ಮ ಕಡೆ
ಯವರಿಗೆ ಪ್ರೋತ್ಸಾಹಮಾಡಲಾಗಿ ಬೇಡರ ಸೈನ್ಯದವರು ಏಕಕಾಲದಲ್ಲಿ
ಹಗೆಗಳಮೇಲೆ ತಿರುಗಿಬಿದ್ದು ಖಾಡಾಖಾಡಿ ಯುದ್ಧ ಮಾಡಿದರು.
ಹೈದರನ ಸೇನೆ ಸೋ
ತದ್ದು.
ಹೈದರನ ಕಡೆಗೆ ಸೋಲಾಯಿತು, ಮೊಹದಿನ್ ಸಾಬಿ, ಮೊಖದುಂ
ಸಾಬಿ ಇನ್ನೂ ಇತರ ಸೇನೆಯವರೂ ೧೦೦೦
ಕುದುರೆ ಮೊದಲಾದ್ದೆಲ್ಲಾ ದುರ್ಗದವರ ಕೈಗೆ ಸಿಕ್ಕ
ಲಾಗಿ ಮದಕರಿನಾಯಕನಿಗೆ ಪೂರ್ತಿಯಾಗಿ ಜಯ
ಉಂಟಾಯಿತು. ಈತನು ಬಹು ಅಟ್ಟಹಾಸದಿಂದ ರಾಜಧಾನಿಗೆ ಬಂದು
ದೇವರುಗಳಗೆ ಸೇವೆಯನ್ನು ಮಾಡಿಸಿ ಬ್ರಾಹ್ಮಣ ಸಂತರ್ಪಣೆ ಮೊದ
ಲಾದ್ಭನ್ನು ಮಾಡಿಸಿ ದಾನಧರ್ವಾದಿಗಳನ್ನು ಕೊಟ್ಟನು.
ಹೈದರನು ಭಾರಿಯುದ್ದಕ್ಕೆ ಅನುವಾದ್ದು
ಈ ಪ್ರಕಾರ ತಮ್ಮ ಕಡೆಯವರಿಗೆ ಅಪಜಯವಾದ್ದನ್ನು ಹೈದ
ರನು ಹೇಳಿ ವಿಶೇಪವಾಗಿ ಕೋಪಗೊಂಡು ತನ್ನ
ಿಶಿಷ್ಟ ಸೈನ್ಯವೂ ದುರ್ಗ ದಮೇಲೆ ಹೊರಡಬೇ
ಕೆಂದು ಅಪ್ಪುಣೇ ಕೊಟ್ಟನು.
ಮಂತ್ರಿಗಳು ಹೈದರನಿಗೆ ಕೊಟ್ಟ ಸಲಹೆ
ಆ ಸಮಯದಲ್ಲಿ ದಿವಾನ್ ಪೂರ್ಣಯ್ಯ, ತೋಖಖಾನೆ ಬಕ್ಷಿ ಕೃಷ್ಣ
ರಾಯರು, ಬರಕಿ ಶ್ರೀನಿವಾಸರಾವ್, ಗುರಂ
ಕೊಂಡೆ ಮೀರಾಸಾಹೇಬ ಮೊದಲಾದ ಸಾಮಾಜಿ
ಕರು ಸೇರಿ ದೊಡ್ಡನವಾಬ ಹೈದರಲ್ಲಿಗೆ ಅರಿಕೆ
ಮಾಡಿದ್ದೇನೆಂದರೆ :-
--------------------------------------
ಹೈದರನು ದುರ್ಗಕ್ಕೆ, ಬರೆಯಿಸಿದ ಖರೀತ. ೭೭
“ ಖಾವಿಂದ್, ಹುಕ್ಕುಂ ಆದಮೇರೆ ಶ್ರೀರಂಗಪಟ್ಟಣದ ಫೌಜು
“ಹೋಗಿ ದುರ್ಗದಲ್ಲಿ ಠಾಣ್ಯಹಾಕಲು ಅಂತರವಿಲ್ಲ. ಆದರೆ
“ಚಿತ್ರದುರ್ಗದ ರಾಜ ಬಲವಂತ, ಖಿಲ್ಲೆಯು ಬಹಳ ಕುಘುಲ್ ಗಡವಾಗಿದೆ, ಅಲ್ಲಿ ಜಂಗಿ
"ಸರಂಜಾಮು ಬಹಳವಾಗಿದೆ, ಬೆಟ್ಟದಮೇಲೆ, ನೀರುವಗೈರೆ, ಆನು
"ಕೂಲ್ಯ ಭಾರಿಯಾಗಿದೆಯಂತೆ, ಫೌಸು ಸಹಾ ಭಾರಿಯಾಗಿದೆ. ಇದೂ
"ಅಲ್ಲದೆ ಶ್ರೀಮಂತರ ಕಡೆ ಪರಶುರಾಂ ಭಾವುಯವರ ಕುಮಕು ಪೂರಾ
"ಇದೆ, ಮತ್ತು ಆ ಕೋಟೆಯಲ್ಲಿ ಮೊಖದುಂಸಾಬರು, ಮೊಹದಿನ್
“ ಸಾಬರು ಸೆರೆ ಸಿಕ್ಕಿದಾರೆ, ಉಪಾಯಮಾಡಿ ಇವರುಗಳನ್ನು ಈಚೆಗೆ
“ ಬರಮಾಡಿಕೊಳ್ಳಬೇಕು, ನಾವು ದುಡುಕದೆ ಸ್ವಲ್ಪ ಸಾಹಿತ್ಯಮಾಡಿ
“ ಕೊಂಡು ಚಿತ್ರದುರ್ಗದವರಿಗೆ ಶತ್ರುಗಳಾದ ಹರಪನಹಳ್ಳಿ, ರಾಯ
“ ದುರ್ಗ, ಈ ಸಂಸ್ಥಾನದ ಪಾಳಯಗಾರರ ಮೂಲಕ ಆ ಕೋಟೆಯ
"ಭೇದವನ್ನು ತಿಳದುಕೊಂಡು. ಮುತ್ತಿಗೆ ಹಾಕಿದರೆ. ಖಿಲ್ಲೆ ಸ್ವಾಧೀನ
"ವಾಗುವುದು."
ಹೀಗೆಂದು ಆ ಮಂತ್ರಿಗಳು ನವಾಬನಿಗೆ ಅರಿಕಮಾಡಿದರು. ಆಗ
ಹೈದರನು ಇವರ ಮಾತು ಯುಕ್ತವೆಂದು ತಿಳದು ದುರ್ಗದ ದೊರೆಗೆ ಬರೆ
ಯಿಸಿದ ಖರೀತದ. ವಕ್ಕ ಣೆ ಹೇಗೆಂದರೆ:
ಹೈದರ ದುರ್ಗಕ್ಕೆ ಬರೆಸಿದ ಖರೀತ
"ಶೀ್ಮನ್್ ಮಹಾನಾಯಕಾಚಾರ್ಯನಾಯಕ ಶಿರೋಮಣಿ ಕಾಮ
ಗೇತಿ ಕಸ್ತೂರಿ ರಂಗಪುನಾಯಕ ರಾಜ ಮದ
ಕರಿನಾಯಕ ರಾಜ, ಸಂಸ್ಥಾನ ಚಿತ್ರದುರ್ಗ, ದಾಂ
ಮೊಹಬತ್ತುಹು,
ಅಜತರ್ಫೌ ನವಾಬ ಹೈದರಲ್ಲಿಖಾನ್ ಬಹಾದುರ್, ಸಂಸ್ಥಾನ ಶ್ರೀರಂಗ
ಪಟ್ಟಣ --ಸಲಾಂ ಬಾದುಸೆಲಾಂ ಮೊಹೆವಲ್ ಮೊಕಷೂದ್ ಅಂಕಿ, ದರಿ
ವಿಲ್ಲಾ, ಖಾಷ್ ಜೆಲೆಹಿಲಾಯಿ ವೈಶಾಖ ಶು॥ ೧೦ ಮೊಕ್ಕಾಂ ಶಿರಾದಲ್ಲಿ
ಖುಷಿ ಸಾಹೇಬ್ ತಮ್ಮ ಷಾದಮಾನಿದರ ಹಮೇಷ ಕಲಮು ಮಾಡಿ
ಸುತಾಬರಬೇಕು.
ದಿಗರು ನಮ್ಮ ಭಾವಮೈದುನರಾದ ಮೊಖದುಂ ಸಾಹೇಬರು,
೧೦೦೦೦ ಫೌಜುನಿಬ ಮತ್ತೋಡುಹಾಲಪ್ಪನಾಯಕರ ಮಾತಿನ ಮೇಲೆ
ತಮ್ಮ ತುರುಗಳನ್ನು ಹಿಡಿದದರಿಂದ ತಮಗೆ ಕೋಪ ಬಂದು ಲಡಾಯಿ
----------------------------------
೭೮ ಚಿತ್ರದುರ್ಗದ ಪಾಳಯಗಾರರು.
ಮಾಡಲು, ಅವರು ಕೈಸರೆ, ಸಿಕ್ಕಿಧರಂತೆ ಅವರು ನಮ್ಮ ಭಾವಮೈದುನ
ರಲ್ಲ, ತಮ್ಮವರಾಗಿದಾರೆ. ನಮ್ಮ ನಿಮ್ಮ ಯಣಾಸುಬಂಧ ಪೂರ್ವದಿಂದ
ಸರಿಯಾಗಿ ನಡೆದು ಬರುತಿರಲಿಕ್ಕೆ ನಿಮ್ಮಿಂದಾ ಇಂಥಾದ್ದು ಬರಲಿಕ್ಕೆ ಇಲ್ಲ,
ಸಾಹೇಬ ಮೌಸೂಫರಿಗೆ ಬಿಟ್ಟು ಕಳುಹಿಸುವಂತೆ ಮಾಡಿಸಬೇಕು."
ದುರ್ಗದ ದೊರೆಯು ಸೆರೆಸಿಕ್ಕಿ ದವರನ್ನು ಬಿಟ್ಟದ್ದು.
ಹೀಗೆ ಬರೆದ ಪತ್ರವು ಹೈದರಲ್ಲಿಯಿಂದ ದುರ್ಗದ ದೊರೆಗೆ ಬಂದು
ತಲಪಿತು. ಆಗ ಮದಕರಿನಾಯಕನು ದುರ್ಗದಲ್ಲಿ
ಸೆರೆಯಲ್ಲಿದ್ದ ಮೊಖದುಂ ಸಾಬ್, ಮೊಹರ್ದಿಸಾಬ್,
ಎಂಬ ಹೈದರನ ಕಡೆಯ ಇಬ್ಬರು ಸರದಾರರನ್ನೂ
ದರಬಾರಿಗೆ ಕರೆಯಿಸಿ ಮಾನವಾಗಿ ಕೂರಿಬ, ಅವರನ್ನು ಕುರಿತು.
ಆ ಸಾಹೇಬರೆ, ತಾವುಗಳು ದೊಡ್ಡ ಸರದಾರರಾಗಿದೀರಿ, ಜಯಾಪಜಯ
ಯಾರಿಗೂ ಶಾಶ್ವತವಲ್ಲ, ಅದು ಈಶ್ವರಾಧೀನ, ನೀವು ಅಂದೇಶ ಮಾಡ
ಬಾರದು, ಎಂದು ಸಮಾಧಾನ ಹೇಳ ಅವರಿಗೆ ಪಾಲಖಿ ಖಿಲ್ಲತ್ತು ಸಹಾ
ಕೊಟ್ಟು ಅವರ ಅಂಗಸಂರಕ್ಷಣೆಗೆ ೫೦ ಕುದರೆಯೊಡನೆ ಅವರನ್ನು
ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು.
ಇಪ್ಟಾದರೂ ದುರ್ಗವರು ಬಲಿಷ್ಠರೆಂದು ದೊಡ್ಡ ನವಾಬನಾದ
ಹೈದರಲ್ಲಿಯೂ, ಹೈದರಲ್ಲಿ ಬಲವಾದ ಶತ್ರುವೆಂದು ಮದಕರಿನಾಯಕನೂ
ತಂತಮ್ಮ ಮನಸ್ಸಿನಲ್ಲಿ ತಿಳದುಕೊಂಡೇ ಇದ್ದರು.
ಯುದ್ಧ ಸನ್ನಾಹ.
ಬಲವಂತನಾದ ಈ ಪಾಳಯಗಾರನನ್ನು ಹೇಗಾದರೂ ಮುರಿಯ
ಬೇಕೆಂಬ ಕ್ರೋಧವನ್ನು ಹೈದರನು ಮರೆಯಲೇ ಇಲ್ಲ. ಏನ ಮರೆ
ತರೂ ಶಿವನ್ನಮರೆಯೆ ಎಂದ ಹಾಗಾಗಿತ್ತು. ಹೈದರೆಲ್ಲಿಯು ಮದಕರಿ
ವಾಯಕನನ್ನು ಭೇದೋಪಾಯಮಾಡಿ ಕರೆಯಿಸಿ ಅವನನ್ನು ಕೈಸೆರೆ
ಹಿಡಿಯಬೇಕೆಂಬ ಆಶೆಯನ್ನು ಇಟ್ಟುಕೊಂಡೇ ಇದ್ದನು. ಇದಕ್ಕೋ
ಸ್ಕರ ಪುನಃ ತನ್ನ ಭೇಟಗೆ ಬರಬೇಕೆಂದು ಪಾಳಯಗಾರನಿಗೆ ಕಾಗದ
ಬರೆಯಿಸಿದನು. ಆದರೆ ಮದಕರಿನಾಯಕನು ಒಳತಂತ್ರವನ್ನು ಅರಿತು,
ಹೈದರನ ಭೇಟಿಗೆ ಹೋಗದೆ ಏನಾದರೂ ಅನಿವಾರ್ಯವನ್ನು ಬರೆಯುತಾ
ಕಾಲಹರಣ ಮಾಡುತಾ ಒಳಗೇ ಗುಟ್ಟಾ ಗಿ ಯುದ್ಧಸ
ನ್ನಾಹವನ್ನು ಮಾಡಿಕೊಳ್ಳುತಾ, ಬಂದದ್ದೂಅಲ್ಲದೆ--
ದುರ್ಗದಲ್ಲಿ ಮಂತ್ರಾಲೋಚನೆ- ೭೯
೫೦೦೦೦ ಕುದುರೆ ಅದಕ್ಕೆ ತಕ್ಕ ದಂಡೂ ಸಹಾ ತೆಗೆದಕೆೊಂಡು ತನ್ನ ಸಹಾ
ಯಕ್ಕೆ ಬರಬೇಕು, ಆ ಸೇನೆಯ ಖರ್ಚು ಏನಾದರೂ ತಾನೇ ಕೊಡು
ತೇನೆ ಎಂಡು ಫೂನೆ ಶ್ರೀಮಂತರಿಗೂ ಪರಶುರಾಂಭಾವುಯವರಿಗೂ
ನಾನಾ ಫರ್ಣವೀಸರಿಗೂ ಖರೀತಗಳನ್ನು ಬರೆಯಿಸಿ ರಾಯಭಾರಿಗಳ
ಮೂಲಕ ಕಳುಹಿಸಿದನು. ಈ ವರ್ತಮಾನವನ್ನು ಹೈದರನ ಕಡೆಯು
ವನಾಗಿ ದುರ್ಗದಲ್ಲಿದ್ದ ಅಂಚೆ ಮುತ್ಸದ್ಧಿಯು ನವಾಬನಿಗೆ ಬರೆದು ಕಳು
ಹಿಸಿದನು.
ದುರ್ಗದಲ್ಲಿ ಮಂತ್ರಾಲೋಚನೆ.
ಹೈದರನು ಇದೆಲ್ಲವನ್ನೂ ತಿಳದು ಆಗ್ರಹಗೊಂಡು ಪುನಃ--ನೀವು
ನಮ್ಮ ಭೇಟಿಗೆ ಬರಬೇಕು, ಹಾಗಿಲ್ಲವಾದರೆ ಸ್ನೇಹ ಅಭಿವೃದ್ಧಿಯಾಗು
ವುದಿಲ್ಲ; ತಾವು ಬರುವುದಕ್ಕೆ ಮರ್ಜಿ ಇಲ್ಲವಾದರೆ ನಿಮ್ಮ ತಮ್ಮಂದಿರು
ಪರಶುರಾಮಪ್ಪನಾಯಕರನ್ನೂ ಸಾಹೇಬ ಜಾದೆ ಭರಮಪ್ಪನಾಯಕ
ರನ್ನೂ ಕೆಲವು ಘೌಜನ್ನೂ ಕಳುಹಿಸಬೇಕು, ಎಂದು ಖರೀತವನ್ನು ಕಳು
ಹಿಸಿದನು. ಆಗ ರಾಜಾಸಾಹೇಬನು--ನಾವೂ ಬರುವುದಿಲ್ಲ, ತಮ್ಮಂದಿರ
ನ್ನೂಮಕ್ಕಳನ್ನೂ ಸಹಾಕಳುಹಿಸುವುದಿಲ್ಲ, ಗೋಲೀ ಸ್ನೇಹವೇ ಪರಂತು
ಸುಸ್ನೇಹವಾಗುವುದಿಲ್ಲ ಎಂದು ಜವಾಬು ಕೊಟ್ಟು, ದುರ್ಗದ ಗುಟ್ಟಿ
ನ್ನೆಲ್ಲಾ ನವಾಬನಿಗೆ ಬರೆದು ಕಳುಹಿಸುತಾ ಇದ್ದ ಅಂಚೆ ಮುತ್ಸದ್ದಿ
ಯನ್ನು ಕೋಟೆಯಲ್ಲಿ ಸೆರೆ ಇಟ್ಟನು. ದುರ್ಗದಿಂದ ಶ್ರೀರಂಗಪಟ್ಟಣಕ್ಕೆ
ಯಾವ ಸಮಾಂಚಾರವೂ ಬರಲಿಲ್ಲ. ಇದನ್ನು ತಿಳಿದು, ನವಾಖನು ಅನು
ಮಾನಪಟ್ಟು ೪೦೦೦೦೦ ದಂಡಿನೊಡನೆ ದುರ್ಗದ ಮೇಲೆ ಹೊರಟು ಯು
ದ್ಧಕ್ಕೆ ಅನುವಾದನು. ಆಗ ಮದಕರಿನಾಯಕನು ಮುಂದೆ ನಡೆಯಬೇ
ಕಾದ ಯದ್ಧಸಾಮಗಿಗಳೆಲ್ಲಾ ಸಿದ್ಧವಾಗಿದೆಯೇ ಎಂದು ವಿಚಾರಮಾಡಿ,
ಎಲ್ಲವನ್ನೂ ಸಜ್ಜು ಮಾಡಿಸಿದನು. ದೊರೆಯು ಮೊದಲು ಸೇನೆಯ ಸರ
ದಾರರನ್ನೂ ಇತರ ಮಂತ್ರಿ)ಗಳನ್ನೂ ಕರೆಯಿಸಿ
ಹೈದರಲ್ಲಿಯ ಕಡೆಯಿಂದ ಒದಗಿಬಂದಿರುವ ರಾಜ
ಕದ ವಿಚಾರವಾಗಿ ಆಲೋಚನೇ ಕೇಳಲು, ಅವರೆ
ಲ್ಲರೂ ಒಂದೇ ರೀತಿಯಲ್ಲಿ--ನಮ್ಮ ಸೇನೆಯ ಪರಾಕ್ರಮವಾಗಲಿ ಯು
ದ್ಧಕ್ಕೆ ಬೇಕಾದ ಸಾಮಾನಾಗಲಿ ಯಾವುದೂ ಕಡಮೆಯಾಗಿಲ್ಲ, ಇದುವ
----------------------------------------
೮೦ ಚಿತ್ರದುರ್ಗದ ಪಾಳಯಗಾರರು.
ಮುಖಂಡ ಜನರಲ್ಲಿ ಆಲೋಚನೆ.
ರಿಗೂ ಚಿತ್ರದುರ್ಗದ ದಂಡು ಸೋತುಹೋಯಿತೆಂದು ನಾವು ಕೇಳಿಲ್ಲ,
ನವಾಬನು ಭಾರಿಯಾಗಿ ದಂಡು ತಂದಿದಾನೆ, ಆದರೆ ನಮಗೆ ಗಡಿದುರ್ಗ
ಗಳ ಆಸರೆ ಇದೆ, ಅವನಿಗೆ ಮೈದಾನವಾಗಿದೆ, ಶ್ರೀಮಂತರ ಫೌಜ ನಮ್ಮ
ಸಹಾಯಕ್ಕೆ ಬರುತಾ ಇದೆ, ನವಾಬನನ್ನು ಹೊಡೆದು ಶ್ರೀರಂಗಪಟ್ಟಣಕ್ಕೆ
ಠಾಣ್ಯ ಹಾಕಲು ಅಂತರವಿಲ್ಲ, ಈ ಪ್ರಕಾರ ಅರಿಕೆ ಮಾಡಿದರು. ಇದೆ
ಲ್ಲವನ್ನೂ ಕೇಳಿ ದೊರೆಯು ಸಂತೋಪಪಟ್ಟು ಅವರೆಲ್ಲರಿಗೂ ಕಡೆ
ತೋಡೆವಸ ಮೊದಲಾದ್ದನ್ನು ಕೊಟ್ಟದ್ದಲ್ಲದೆ--ಲಡಾಯಿನಲ್ಲಿ ಮಡಿದವರ
ಹೆಂಡರು ಮಕ್ಕಳಗೆ ಸಂಬಳಮಾಡಿರುತೇವೆ, ಕುದುರೆ ಬಿದ್ದವರಿಗೆ ಕುದು
ರೆಕೊಡುತೇವೆ, ಶತ್ರುಜನರ ತಲೆತಂದವರಿಗೆ ದುರ್ಗಿ ೫ ವರಹ ಕೊ
ಡುತೇವೆ , ಗೋಲಿಯಿಂದ ಹೊಡೆದವರಿಗೆ ೫ ರಾಪಾಯಿ ಕೋಟೆಮೇಲಿ
ನಿಂದ ಗೋಲಿಹೊಡೆದವರಿಗೆ ಒಂದು ರೂಪಾಯಿ, ಬಹಲೆ ಭರ್ಜಿಯಿಂದ
ಹೊಡೆದವರಿಗೆ ಕಾಲುಗಗ್ಗರ, ಜೋಮಾಲೆ, ಈ ಮೇರೆಗೆ ಇನಾಂ ಕೊಡು
ತೇವೆ, ವಿಂತ ಡಂಡಿನವರಿಗೆಲ್ಲಾ ಪ್ರೋತ್ಸಾಹ ಕೊಟ್ಟು, ಕದನಕ್ಕೆ ಎಲ್ಲ
ರಿಗೂ ವೀಳಯ ಕೊಟ್ಟು ದರಬಾರನ್ನು ಆ ದಿವಸ ನಿಲ್ಲಿಸಿದನು. ಪುನಃ
ಮಾರನೇ ದಿವಸ ದೇವಸ್ಥಾನಗಳಲ್ಲಿ ಅಭಿಷೇಕ, ಅರ್ಚನೆ ಮೊದ
ಲಾದ ಸೇವೆ ನಡೆಯಲಿ, ಊರಲ್ಲಿ ತ್ರಿಮತಸ್ಥರಿಗೂ ಬ್ರಾಹ್ಮಣ ಸಂತರ್ಪಣೆ
ನಡೆಯಲಿ ಎಂದು ಅಪ್ಪಣೆ ಮಾಡಿದನು. ಕೋಟೆ, ಚೌಕಿ ಮುಂತಾ
ದೆಲ್ಲವನ್ನೂ ಬಂದೋಬಸ್ತುಮಾಡಿಸಿ ಬಕ್ಷಿ ಚನ್ನಮಲ್ಲಪ್ಪ ಮುಂತಾದ
ವರು ಅರಿಕೇಮಾಡಿದ ತರುವಾಯ ಊರಲ್ಲಿರುವ ಸಾಹುಕಾರರು ಸೆಟ್ಟಿ
ಮಹಾನಾಡು ಮುಂತಾದವರನ್ನು ಕರೆಯಿಸಿ ಅಪ್ಪ
ಣೆಯಾದ್ದೇನೆಂದರೆ-"ಹೈದರಲ್ಲಿ ನವಾಬನು ಭಾರಿ
ಯಾದ ದಂಡಿನೊಡನೆ ಚಿತ್ರದುರ್ಗದ ಮೇಲೆ ಬರು
ತಾನೆಂದು ವರ್ತಮಾನಬಂದಿದೆ, ಅವನ ಮೇಲೆ ಯುದ್ಧಕ್ಕೆ ಹೊರಡಲು
ವಾಗಿದ್ದೇವೆ, ನೀವು ಪೀಡಿದರ ಪೀಡಿಯಿಂದ ಈ ವೂರಲ್ಲಿದ್ದುವರು,
ಇಂದಿನವರೆಗೂ ಶತ್ರುಗಳು ಯಾರೂ ಈ ವೂರಿಗೆ ಬರಲಿಲ್ಲ, ನಿಮಗೆ
ತೊಂದರೆ ಇರಲಿಲ್ಲ ಈ ನವಾಬನು ಭಾರಿಯಾಗಿ ಸೇನೆಯನ್ನು ತಂದು
ವೇದಾವತಿ ನದಿಯ ದಡದಲ್ಲಿಳದಿದಾನೆ, ನಾಲ್ಕೈದು ದಿವಸದಲ್ಲಿ ಇಲ್ಲಿಗೆ
ಬರುತಾನೆ, ಭಾರಿಯಾಗಿ ಯುದ್ಧ ಜರುಗುವುದು, ಆದ್ದರಿಂದ ನಿಮ್ಮ
--------------------------------------
ಮುಖಂಡರಲ್ಲಿ ಆಲೋಚನೆ. ೮೧
ಹೆಂಗಸರು ಮಕ್ಕಳು ದನಕರುಗಳು ಸಮೇತ ನೀವು ನಾಲ್ಕು ದಿವಸ
ಹೊರಗೆ ಹೋಗಿ ಇರಬೇಕು, ದೇವರ ಕಟಾಕ್ಷದಿಂದ ನಮಗೆ ಜಯ
ವಾದಮೇಲೆ ಹಿಂದಿನಂತೆ ಎಲ್ಲರೂ ಊರಿಗೆ ಬಂದಿರಬಹುದು," ಎಂದು
ರಾಜನ ಅಪ್ಪಣೆಯಾಯಿತು. ಇದಕ್ಕೆ ಸೆಟ್ಟ ಚನ್ನಮಲ್ಲಪ್ಪುನು “ಮಹಾ
ರಾಜ ಸ್ಪಾಮಿ, ಈ ಸಂಸ್ಥಾನಕ್ಕೆ ಹೆಸರಾದ ಸಾಹುಕಾರರು ಎಲ್ಲಿಗೆ ಹೋ
ದೇವು? ನಾಲ್ಕುದಿಕ್ಕಿನಲ್ಲಿರುವ ಸಂಸ್ಥ್ರನವೆಲ್ಲಾ ಶತ್ರು ಪಕ್ಷವಾಗಿದೆ,
ನಾವುಎಲ್ಲಿಗೆ ಹೋದೇವು? ಪರದೇಶಕ್ಕೆ ಹೋಗಿ ಆ ರಾಜ್ಯದವರನ್ನು
ಹೊಗಳಿ ಈ ರಾಜ್ಯವನ್ನು ನಿಂದಿಸತಕ್ಕವರ ಮಾತನ್ನು ಕೇಳಿಕೊಂಡು
ನಾವು ಸುಮ್ಮನಿರುವುದಕ್ತಾಗುವುದಿಲ್ಲ: ಈ ವೂರಲ್ಲಿ ಜಲಬೇಕಾಷ್ಟಿದೆ,
ಯುದ್ದ ಸಾಮಗ್ರಿಯಂತೂ ವಿಶೇಷವಾಗಿದೆ, ಶತ್ರುಗಳ ಕಡೆಯಿಂದ ಏನಾ
ದೀತು? ತಮ್ಮ ಪಾದವನ್ನು ಬಿಟ್ಟು ನಾವು ಹೊರಗೆ ಹೋಗಲು ಒಡಂ
ಬಡುವುದಿಲ್ಲ ಹೊರಗಿನ ಜನ ಎಷ್ಟು ತೋಫು ಹೊಡೆವಾಗ್ಯೂ ಗುಡ್ಡದ
ಆಸರೆಯಿಂದ ಪ್ರಜೆಗಳಿಗೆ ಏನೂ ಆಗುವುದಿಲ್ಲ, ಈ ಊರು ಬಿಟ್ಟು
ನಾವು ಎಲ್ಲಿಯೂ ಹೋಗುವುದಿಲ್ಲ, ಅಕ್ಕಿ, ಹುರಳಿ ಮೊದಲಾದ ಸೂಮಾನು
ಹಿಂದೆ ಸೇರಿಸಿದ್ದು ಏನೂ ಕಡಮೆಯಾಗಿಲ್ಲ, ಖಜಾನೆ ಜಖೀರು ಕಡಮೆ
ಯಾಗಿ ಸರ್ಕಾರಕ್ಕೆ ಅಗತ್ಯಬಿದ್ದರೆ ನಾವು ಇದ್ದು ಸಾರ್ಥಕವೇನು?
ಸ್ಪಾಮಿಯವರ ದಂಡಿಗೆ ಒಂದು ವರುಷದ ಖರ್ಚನ್ನು ನಾವು ಕೊಡು
ತೇವೆ; ಇದಕ್ಕೆ ವಂಚನೆಇಲ್ಲ, ಈ ಪ್ರಕಾರಸೆಟ್ಟಿ ಚನ್ನುಮಲ್ಲಪ್ಪ ವಿಜ್ಞಾ
ಪಿಸಿದನು. ಆಗ ದೊರೆಯು ಸಂತೋಷಿಯಾಗಿ ಖಡೆ ತೊಡೆ ವಸ್ತ್ರ
ಮುಂತಾದ್ದನ್ನು ಮಾನಾಸು ಗುಣವಾಗಿತ್ತು ಅವರಿಗೆಲ್ಲಾ ವೀಳಯಕೊಟ್ಟು,
ಅವರನ್ನು ಕುರಿತು--ಸರ್ಕಾರಕ್ಕೆ ಏನೂ ಕಮ್ಮಿ ಇಲ್ಲ, ನಿಮ್ಮಧೈರ್ಯುನೋ
ಡಲು ಹೇಳಿದೆವು, ನೀವು ಯಾವ ಅಂದೇಶವೂ ಪಡದೆ ಸ್ಪಸ್ಫವಾಗಿ ನಿಂ
ನಿಮ್ಮ ಮನೆಗಳಲ್ಲಿರಬಹುದು ಹೀಗೆಂದು ಹೇಳಿ ಅವರನ್ನು ಕಳುಹಿಸಿದನು.
ತರುವಾಯ ದೊರೆಯು ಕೋಟೆ, ಬತೇರಿ ಮುಂತಾದ್ದೆಲ್ಲವನ್ನೂ
ಭದ್ರಮಾಡಿಸಿ ಅಲ್ಲಿ ಫಿರಂಗಿಗಳನ್ನು ಹೂಡಿಸಿದನು ; ಮತ್ತು ಎಲ್ಲವೂ
ಸಿದ್ದವಾಗಲು ದುರ್ಗದ ಕೋಟೆಯಮೇಲಿನಿಂದ ಏಕಕಾಲದಲ್ಲಿ ಬಾಣಗ
ಳನ್ನೂ ಫಿರಂಗಿಗಳನ್ನೂ ಹತ್ತಿಸಿದರು. ಭಯಂಕರವಾಗಿ ಕಬ್ಬವಾಯಿತು.
-------------------------------------
೮೨ ಚಿತ್ರದುರ್ಗದ ಪಾಳೆಯಗಾರರು
ಇದನ್ನೆಲ್ಲಾ ಕಂಡು ಶತ್ರುಗಳ ಸೇನೆಯವರು ದೂರವಾಗಿ ಓಡಿಹೋ
ದರು. ಹೈದರನು ದುರ್ಬೀನು ಹಾಕಿ ನೋಡಿ ಕೋಟೆಯನ್ನು ಶ್ಲಾಘನೆ
ಮಾಡಿ, ಹೇವಿಳಂಬಿ ಸಂ॥ ಆಷಾಢ ಶು|| ೧೦ ಪ್ರಾತಃಕಾಲ ಮಲ್ಲಾಪು
ರದಬಳಿ ಡೇರೆ ಹಾಕಿಸಿಕೊಂಡು ನಿಂತನು. ಅವನ ಕಡೆ ಸೇನೆಯೆಲ್ಲಾ
ದುರ್ಗದ ಹತ್ತರ ಬಂದು ಇಳಿಯಿತು. ನವಾಬನು--ಹರಪನಹಳ್ಳಿದಂಡು,
ಮುರಗಿ ಮಠದ ಹತ್ತರ ಇಳಯಿತು. ರಾಯದುರ್ಗದವರು ಬುದ್ಧಿವಂತನ
ಮರಡಿಹತ್ತರ ಇಳಿಯಲಿ; ಅಗಸನ ಕಲ್ಲುದಿಂಣೆ, ಸಂತೆಬಾಗಿಲ ಎದುರು
ದಿಂಣೆ, ವೆಂಕಟರಮಣಸ್ವಾಮಿ ಗುಡಿಯ ಮೈದಾನ ರಂಗಯ್ಯನ ಬಾಗಿಲು
ಎದುರಿಗೆ, ಬುದ್ಧಿವಂತನ ಮರಡಿಬಳಿಯಲ್ಲಿ, ಈಕಡೆಗಳಲ್ಲಿ ಮೊಹರ್ಚೆ
ಕಟ್ಟಿಸಿ ಫಿರಂಗಿಗಳನ್ನು ಹೂಡಿಸತಕ್ಕದ್ದು; ನಮ್ಮ ಶ್ರೀರಂಗಪಟ್ಟಣದ
ದಂಡಿನ ಸುತ್ತಲೂ ಗೊಡಬನ ಹಾಳು, ಗುಂಟನೂರು, ಜನಿಗೆ ಹಳ್ಳ, ಗೋ
ಣೂರ ಕಣವೆ, ದೇಮವ್ವನ ಹಳ್ಳಿಕಣವೆ, ಮೆದಕೆರಿಪುರ, ಕುಂಚಿಗನ
ಹಾಳು, ಇಂಗಳದ ಹಾಳು, ಈ ಪ್ರಾಂತ ಕೆಲವು ದಂಡು ಇರತಕ್ಯದ್ದು.
ಹೀಗೆಂದು ನೇಮಕಮಾಡಿ ಅಲ್ಲಲ್ಲಿ ಬೇಕಾದ ಸರದಾರರಿಗೆ ನೇಮಿಸಿದ್ದೂ
ಅಲ್ಲದೆ, ದುರ್ಗದೊಳಕ್ಕೈ ಹೊರಗಿನಿಂದ ಯಾವ ಕೇಪು ಕಾಗದ ಪತ್ರ
ಗಳೂ ಬಾರದಂತೆ ನೋಡಿಕೊಳ್ಳಲು ನೇಮಕಮಾಡಿದನು. ಯುದ್ಧಕ್ಕೆ
ಎಲ್ಲಾ ಸಿದ್ಧವಾಯಿತು.
ಆಗ ನವಾಬನು ಘಟಿಕರಾದ ವಕೀಲರ ಮೂಲಕ ಮದಕರಿನಾ
ಯಕನಿಗೆ ಕಡೇಸಾರಿ ಹೇಳಿ ಕಳುಹಿದ ಸಲಹೆಗಳು ಏನೆಂದರೆ-
ಹೈದರನ ಕಡೆ ಕರೀತ.
(೧) ಈಗಲಾದರೂ ನಮ್ಮ ಭೇಟಿಗೆ ಬರಬೇಕು.
(೨) ಇದುವರೆಗೆ ದಂಡಿಗೆ ಖರ್ಚಾದ ಆರು ಲಕ್ಷ್ಮ ವರಹವನ್ನು
ಕೊಡಬೇಕು.
(4) ನಿಮ್ಮ ಅಂಣತೆಂಮ್ರಂದಿರ ಸಂಗಡ ಕೆಲವು ಸೇನೆಯನ್ನು
ಕೊಟ್ಟು ಅವರು ಯಾವಾಗ್ಯೂ ನಮ್ಮಲ್ಲಿ ಇರುವಂತೆ
ಕಳುಹಿಸಬೇಕು.
---------------------------------------
ಮದಕರಿನಾಯಕ ಕೊಟ್ಟ ಉತ್ತರ. ೮೩
ಹೀಗಾದರೆ ಮುತ್ತಿಗೆಯನ್ನು ಬಿಟ್ಟು ದುರ್ಗದ ಸಂಸ್ಥಾನವನ್ನು
ಉಳಿಸಿ ಹೊರಟು ಹೋಗುತೇವೆ, ಇಲ್ಲವಾದರೆ ಎರಡು ದಿವಸದಲ್ಲಿ ಕೋ
ಟೆಯನ್ನು ಕಿತ್ತು ಹಾಕಿ ಸಂಸ್ಥಾನವನ್ನು ತೆಗೆದುಕೊಳ್ಳುತೇವೆ.
ಹೀಗೆ ಹೈದರನು ಹೇಳ ಕಳುಹಿಸಿದನು. ಕ್ರ)ಮಪ್ರಕಹಾರ ವಕೀ
ಲರು ಬಂದು ಮದಕರಿನಾಯಕನಿಗೆ ಈ ಸಂಗತಿಯನ್ನು ದರಬಾರಿನಲ್ಲಿ
ಅರಿಕೆ ಮಾಡಿದರು
ಮದಕರಿನಾಯಕನ ತುಂಬಿದ ದರ್ಬಾರು.
ಮದಕರಿನಾಯಕನು ತುಂಬಿದ ದರಬಾರಿನಲ್ಲಿ ಕುಳಿತು, ಆ ವಕೀ
ಲರು ಹೇಳದ ಸಂಗತಿಯನ್ನು ನಿಧಾನವಾಗಿ ಕೇಳಿ, ಉತ್ತರ ಹೇಳಕಳು
ಹಿಸಿದ್ಧರ ಸಂಕ್ಷೇಪವೇನೆಂದರೆ
" ಮೊದರಿನಿಂದಲೂ ಹೈದರಲ್ಲಿಯಾನರ ಸ್ನೇಹವನ್ನು ಬೆಳೆಯಿಸಿ
"ಬಂಕಾಪುರ, ನಗರ ಮೊದಲಾದ್ದನ್ನೂ ಮತ್ತು ಇತರ ಗಡಿ ದುರ್ಗಗ
“ಳನ್ನೂ ಜೈಸಿ ಕೊಟ್ಟೆವು. ಅದಕ್ಕಾಗಿ ನವಾಬರು ನಮಗೆ ಏನೂ
“ಕೊಡಲಿಲ್ಲ. ಇದಕ್ಕೆ ಬದಲಾಗಿ ಜಾನಕಲ್ಲು ಮೊದಲಾದ ಕೋಟಿಗ
" ಳನ್ನು ಹಿಡಿದು ನಮ್ಮ ಪ್ರಜೆಗಳನ್ನು ಹಿಂಸಿಸಿದ್ದು ನಮಗೆ ಗೊತ್ತಾಗಿದೆ.
“ಈಗ ನಮ್ಮ ಭೇಟಿ ಮಾಡಬೇಕೆಂದು ಅಪೇಕ್ಷಿಸುವ ಛದ್ನನೆಯೂ
“ನಮಗೆ ತಿಳಿಯಿತು. ಇಂಥಾ ತಂತ್ರದಿಂದ ಇತರ ಸಂಸ್ಥಾನಗಳನ್ನು
“ನವಾಬರು ತೆಗೆದುಕೊಂಡ ಅಂಶವನ್ನು ನಾವು ಬಲ್ಲೆವು. ಅವರು
" ತಮ್ಮ ಧಣಿಯರನ್ನು ವಶಮಾಡಿಕೊಂಡು ಅವರನ್ನು ಉದ್ಧಾರಮಾಡಿ
“ದಾರೆ. ಅವರ ಸಂಸ್ಥಾನವೇನಾಯಿತು? ಒಳಗೆ ವಿಷವನ್ನು ಕಟ್ಟಿ
" ಕೊಂಡು ಮೇಲೆ ಮಧುರವಾದ ಮಾತನಾಡಿದರೆ ನಾವು ಆ ಭೇಟಿ
“ಕೊಟ್ಟೇವು ? ಲಡಾಯಿನಲ್ಲಿ ಭೇಟಿ ಯಾಗುತ್ತೆ.
" ತಮ್ಮ ಪರಶುರಾಮಪ್ಪ ಮತ್ತು ಸಾಹೇಬಜಾದೇರು ಲಡಾಯಿಗೆ
“ನಿಂತಿರುವಾಗ ಅವರು ಹೇಗೆ ಬಂದಾರು? ಮುಂದಕ್ಕೆ ಮುಂದಕ್ಕೆ
“ಲಡಾಯಿ ಹೊರತು ಸ್ನೇಹವಿಲ್ಲ.
“ಆರು ಲಕ್ಷ ವರಹ ಕೊಡಲು ಕಾರಣವಿಲ್ಲ, ನವಾಬರಿಗೆ ನಾವೇ
“ನೂ ಔತನ ಕೊಟ್ಟಿರಲಿಲ್ಲ, ಅವರು ನಮಗೆ ಸಹಾಯಕ್ಕಾಗಿ ಏನೂ
--------------------------------
೮೪ ಚಿತ್ರದುರ್ಗದ ಪಾಳಯಗಾರರು.
“ಬಂದಿಲ್ಲ, ನಮ್ಮ ಮನೆಯನ್ನು ತೆಗೆದುಕೊಳ್ಳಲು ಸೇನೆಯೊಡನೆ ಬಂದ
“ವರಿಗೆ ನಾವು ಖರ್ಚು ಕೊಡಲು ಆಗಲಾರದು.
“ ನಮ್ಮ ಖಿಲ್ಲೆಯನ್ನು ಎರಡು ದಿವಸದಲ್ಲಿ ತೋಫಿನಿಂದ ಹಾರಿಸಿ
« ಬಿಡುವುದಾಗಿ ಹೇಳುತಾರೆ. ಅವರ ಕೈಲಾದ್ದನ್ನು ಮಾಡಬಹುದು.
« ಈ ಕೋಟೆಯನ್ನು ಮೇಣದಲ್ಲಿ ಮಾಡಿಲ್ಲ. ಅದನ್ನು ಉರುಟಿಸುವು
“ ದಕ್ಕೆ ಯಾರಿಂದಲೂ ಆಗಲಾರದು.
“ ನಮ ದೌಲತ್ತನ್ನು ಬಹಲು ಮಾಡುವುದಕ್ತೆ ಅದನ್ನು ನಮಗೆ
"ಯಾರೂ ಕೊಟ್ಟಿಲ್ಲ. ಅದನ್ನು ನಮಗೆ ಕೊಟ್ಟ ಈಶ್ವರ ದೊಡ್ಡವನು
" ಜಯಾಪ ಜಯ ಇಂಥವರದೆಂದು ಹೇಳಲು ಆಗಲಾರದು. ಹೇಗಾ
" ದರೂ ಭಾರಿ ದಂಡಿನೊಡನೆ ಬಂದಿದೀರಿ. ಲಡಾಯಿ ಆಗುತ್ತೆ. ಹೀಗಿ
"ರುವಲ್ಲಿ ಸ್ನೇಹವಾಗಲಾರದು.''
ಈ ಪ್ರಕಾರ ದೊರೆಯು ಜವಾಬು ಹೇಳ ವಕೀಲರಿಗೆ ಸನ್ಮಾನ
ಮಾಡಿ ಕಳುಹಿಸಿ ತರುವಾಯ ದುರ್ಬಿನಿನಿಂದ ಹೈದರನ ಸೇನೆಯ ಸ್ಥಿತಿ
ನೋಡಿತಿಳದುಕೊಂಡನು,
------------
೧೯ನೇ ಅಧ್ಯಾಯ:
ಕಡೇ ಮದಕರಿನಾಯಕ--ಮರ್ಗದ ಮುತ್ತಿಗೆ.
ಮುತ್ತಿಗೆಗೆ ಆರಂಭ.
ಹೈದರನ ದಂಡಿನವರು ಕೋಟೆಯನ್ನು ಮುತ್ತಿದರು. ಹೋರಾ
ಟ ಬಲವಾಯಿತು. ಹೈದರನ ಕಡೆಯವರು ಏಟು
ತಡೆಯಲಾರದೆ ಸೋತು ಓಡಿಹೋದರು. ಹೀಗೆ
ಎರಡು: ತಿಂಗಳು ಕಳೆಯಿತು. ದುರ್ಗದವರೇ ಜೈಸುತಾ ಬಂದರು.
ಆಗ ನವಾಬನು ಕೇವಲ ಖಿನ್ನನಾಗಿ ತನ್ನ ಕಡೆಯ ಫರಾಸಿಸರ ಸೇನಾ
ಪತಿಯಾದ ಲಾಲಿ ಮೊದಲಾದ ಸರದಾರರನ್ನು ಕರೆಯಿಸಿ ಅವರನ್ನು
ಪ್ರೋತ್ಸಾಹ ಮಾಡಿ ನಮಗೆ ಒಂದು ಲಡಾಯಿನಲ್ಲಿಯೂ ಜಯವಾಗಲಿಲ್ಲ.
ಕೋಟೆ ಬಹು ಬಲವಾದ್ದು. ಪಾಯಿನ ಖಿಲ್ಲೆ ಪೇಟೆಗೆ ಮಾತ್ರ ಒಂದು
--------------------------------------
ದುರ್ಗದ ಮುತ್ತಿಗೆ. ೮೫
ಹೈದರನ ಯತ್ನಸಾಗಲಿಲ್ಲ.
ಸೀನೀರು ಹೊಂಡವಿದೆಯಂತೆ, ಅದನ್ನು ಹಿಡಿದು ಬಿಟ್ಟರೆ ನಮಗೆ ಅನು
ಕೂಲವಾಗುತ್ತೆ ಎಂತ ಹೇಳಿದನು. ಆಗ ಲಾಲಿಯು ತನ್ನ ತುಕಡಿಯವ
ರನ್ನೂ ೧.೨ ತೋಫನ್ನೂ ತೆಗೆದುಕೊಂಹುಹೋಗಿ ಚೋಳು ಗಟ್ಟದ
ಮರೋಲಿಯಿಂದ ಕೋಟೆಗೆ ಪಶ್ಚಿಮ ದಿಕ್ಕಿನಲ್ಲಿರುವ ಬರಗೇರಮ್ಮನ
ದೇವಸ್ಥಾನದ ಮೇಲುಗಡೆ ಇರುವ ಕೋಟೆಗೆ ೧೨೦ ತೋಫಿನಿಂದಲೂ
ಹೊಡೆಯುತಾ ಬಂದನು ಅದರ ಕೆಳಗಿನ ಕಂದಕ ಸಂಣದಾದಕಾರಣ
ಕೋಟೆಗೋಡೆ ಜಗ್ಗಿ ಹೋಯಿತು. ಆಗ ಹೈದರನೂ ಹರಪನಹಳ್ಳ
ಬಸಪ್ಪನಾಯಕ, ರಾಯದುರ್ಗದ ಕೃಷ್ಣಪ್ಪನಾಯಕ, ಇನ್ನೂ ಇತರ
ಸರದಾರರೂ ಸಹ ೩೦೦೦೦ ದಂಡಿನೊಡನೆ ಬಂದು ಬಿದ್ದು ಹೋದ ಕೋ
ಟೆಯಮೇಲಕ್ಕೆ ಹತ್ತುತಾಬಂದರು ಇದು ತಿಳಿದ ಕೂಡಲೆ ಮದಕರಿ
ನಾಯಕನು ತಾನೇ ಬಂದು, ವ್ಯಾಸರಾಯಮಠದ ಬಳಿಯಲ್ಲಿ ಕೂತು,
ಕೋಟೆ ಮೇಲಕ್ಕೆ ಹತ್ತಿ ಹತ್ತಿ ಬರುತಾ ಇದ್ದವರ ತಲೆಯನ್ನು ಹೊಡೆ
ಯಿಸುತಾ ಬಂದನು. ಸಾವಿರಾರುಜನ ಹತವಾಯಿತು ಉಭಯ ಸೇನೆ
ಯಲ್ಲಿಯೂ ೨೦೦೦ ದೊಡ ದೊಡ್ಡ ಸರದಾರರು ಸತ್ತು ಬಿದ್ದರು. ಹೈದ
ರನು ಈ ಖಿಲ್ಲೆಯನ್ನು ಹಲ್ಲಾ ಮಾಡಲು ಆಗುವುದಿಲ್ಲ.
ಇನ್ನು ಹಲ್ಲಾಮಾಡಲು ಯತ್ನಿಸುವದಿಲ್ಲವೆಂದು ತನ್ನ
ತನ್ನ ದಂಡಿಗೆ ಹೊರಟು ಹೋದನು. ದೊರೆಯು ಅಲ್ಲಿ
ಕೋಟೆಯನ್ನುಭದ್ರಮಾಡಿಸಿ ಅರಮನೆಗೆ ಬಂದು ತಮಗೆ ಜಯವಾದ್ದಕ್ಕೆ
ದೇವರುಗಳಗೆ ಬೇಕಾದ ಸೇವೆಗಳನ್ನೂ ಬ್ರಾಹ್ಮಣಸಂತರ್ಪಣೆ ಮುಂ
ತಾದ್ದನ್ನೂ ಮಾಡಿಸಿದನು. ದುರ್ಗದ ಉತ್ಸವಾಂಬನಿಗೆ ಉತ್ಸವಾದಿಗ
ಳನ್ನು ಮಾಡಿಸಿ ರಣಭೇರಿಯನ್ನು ಹೊಡೆಯಿಸುತಾ ಇರುವಾಗ, ಜನರು
ವೀರಾವೇಶದಿಂದ ಹೋಗಿ ಶತ್ರುಗಳ ೨೦೦-೩೦೦ ಶಿರಸ್ಸುಗಳನ್ನು
ತಂದು ದೊರೆಗೆ ನಿವಾಳಹಾಕುತಾ ಇದ್ದರು. ಹೀಗೆ ಆಗಾಗ್ಗೆ ೨ ತಿಂಗ
ಳವರೆಗೂ ನಡೆಯಿತು. ಅಲ್ಲಲ್ಲಿ ಪುನಃ ಪುನಃ ಘೋರವಾಗಿ ಕೋಟೆ
ಯೊಳಗಿನವರಿಗೂ ಹೊರಗಿನವರಿಗೂ ಯುದ್ಧ ನಡೆಯುತಾ ಜನ ಬಹಳ
ನಷ್ಟವಾಯಿತು. ಇಂಥಾ ಚಿಕ್ಕ ಚಿಕ್ಕ ಕದನಗಳು ನಡೆಯುತಾ ಇನ್ನೂ
ಒಂದು ತಿಂಗಳು ಕಳೆಯಿತು.
------------------------------------
೮೬ ಚಿತ್ರದುರ್ಗದ ಪಾಳೆಯಗಾರರು.
ಒಂಟಿ ಶೂರಗುದಗತ್ತಿ
ಈ ಸಂದರ್ಭದಲ್ಲಿ ವೀರಪುತಾಪವನ್ನು ತೋರಿಸಿದ ಒಂದು ಸಂ
ಗತಿ ಜರುಗಿತು. ಬುದ್ಧಿವಂತನ ಮರಡಿಕಡೆ ಮೊ
ಹರ್ಚೆಯನ್ನು ಸರಿಮಾಡಿಸಿ ಹೈದರನ ಕಡೆ ಮುತ್ತಿ
ಗೆ ಸೇನೆಯನ್ನು ಅಲ್ಲಿ ಬಲಮಾಡಿಸಲು ಹೈದರನ ಕಡೆಯ ಒಬ್ಬ ಸರದಾ
ರನು ಪಾಲಕಿಯಲ್ಲಿ ಕೂತು ಛತ್ರಚಾಮರದೊಡನೆ ಮಿತ ಪರಿವಾರಯುಕ್ತ
ನಾಗಿ ಹೋಗುತಿರಲು, ರಂಗಯ್ಯನ ಬಾಗಿಲಕೋಟೆ ಮೇಲಿದ್ದ ದೊರೇ
ತಮ್ಮ ಪರಶುರಾಮಪ್ಪನಾಯಕನು ಆ ಪಾಲಕಿಯಲ್ಲಿ ಹೋಗುತಿದ್ದವನು
ಹೈದರನೆಂದು ಭ್ರಮಿಸಿ ನವಾಬ ಹೋಗುತಾ ಇದಾನೆ, ಅವನ ಫೌಜಿನ
ಮೇಲೆ ಹೋಗಿ ಅವನನ್ನು ಹೊಡೆದು ಬರುವ ವೀರರು ಯಾರಿದಾರೆ
ನಮ್ಮ ದಂಡಿನಲ್ಲಿ? ಎಂದು ಮಾಕರಿಸಿ ಹೇಳಿದನು. ಆಗ ಸಮಾಪದ
ಲ್ಲಿದ್ದ ಸಿಪಾಯಿ ಗುದಗತ್ತಿಎಂಬುವನು ಅದನ್ನು ಕೇಳಿ- ಬುದ್ದಿ, ತಮ್ಮ
ಭವಾನಿಯೆಂಬ ಕುದುರೆಯನ್ನೂ ತಮ್ಮ ಕತ್ತಿಯನ್ನೂ ಕೊಟ್ಟರೆ ನಾನು
ಹೋಗಿ ಆ ಪಲ್ಮಕ್ಕಿಯಲ್ಲಿರುವ ನವಾಜನ ತಲೆಯನ್ನು ಕತ್ತರಿಸಿ ಬರು
ತೇನೆಂದು ಹೇಳಿದನು. ಅದರಂತೆ ಒಪ್ಪಿ ಪರಶುರಾಮಪ್ಪನಾಯಕನು
ಕತ್ತಿಯನ್ನೂ ಕುದುರೆಯನ್ನೂ ಕೊಡಲು, ಆ ಗುದಗತ್ತಿ ಎಂಬವೀ
ರನು ಆ ಕುದುರೆಯನ್ನು ಏರಿ ಕತ್ತಿಯನ್ನು ಹಿಡಿದು ಭರ್ರನೆ ಹೋಗಿ
ಆದಂಡಿನೊಳಗೆ ನುಗ್ಗಿ ಪಲ್ಲಕ್ಕಿಯಲ್ಲಿ ಹೋಗುತಿದ್ದ ಸರದಾರನ ತಲೆ
ಯನ್ನು ಕತ್ತರಿಸಿ ಪುನಃ ಹಿಂತಿರುಗಿ ಬಂದನು. ಆದರೆ ಆ ಸರದಾರನ
ಸಂಗಡ ಹೋಗುತಿದ್ದ ದಂಡಿನವರು ಅವನನ್ನು ಹರಿಸಿಕೊಂಡು ಹೊಡೆ
ಯುತಾಬಂದರು. ಅಷ್ಟರಲ್ಲಿ ಕೋಟೆ ಮೇಲಿನಿಂದ ಫಿರಂಗಿ ಹಾರಿಸಿ
ಆ ಜನರನ್ನು ಓಡಿಸಿದರು. ಪರಶುರಾಮಪ್ಪನಾಯಕನು ಆ ಒಂಟಿ
ಶೂರನನ್ನು ನೋಡಿ ಬಹಳ ಸಂತೋಷಪಟ್ಟನು.
ಪೂನೆ ಜಾಸೋರರನ್ನು ಹೈದರ ಹಿಡಿಸಿದ್ದು.
ಹೀಗೆ ಯುದ್ಧ ಜರುಗುತಾ ಇರುವಲ್ಲಿ ಇಬ್ಬರು ಜಾಸೂದರ ವೇಷಾ
ಹಾಕಿಕೊಂಡು ದುರ್ಗದ ಸಮಾಪಕ್ಕೆ ಬರುತಿದ್ದರು.
ಇವರನ್ನು ನವಾಬರ ಕಡೆ ಬಾತಮಿ ಕುದುರೆಯ
ವರು ಹಿಡಿದು ಹೈದರಲ್ಲಿಯ ಸಮಿಪಕ್ಕೆ ಕರೆದು
ತಂದರು. ಇವರ ಅಂಗಶೋಧನೆ ಮಾಡುವಾಗ, ಅವರಲ್ಲಿ ಒಂದು
----------------------------------
ಹೈದರನ ಕಾಪಟ್ಯ. ೮೭
ಕಾಗದ ಸಿಕ್ಕಿತು. ಅದನ್ನು ಒಡೆದು ನೋಡಿದರು, ಅದು ಮದುಕರಿ
ನಾಯಕನಿಗೆ ಪೂನೆ ಶ್ರೀಮಂತರು ಬರೆದ ಕಾಗದವಾಗಿತ್ತು. ಅದರಲ್ಲಿ
" ನಿಮ್ಮ ಸಹಾಯಕ್ಕೆ ಗೋಪಾಲಹರಿ ಎಂಬ ಸರದಾರರ ಸಂಗಡ
“ ೫೦೦೦೦ ಕುದುರೆ ತೋಘುಖಾನೆ ಮುಂತಾದ್ದನ್ನು ಕಳುಹಿಸಿದೆ, ತಾವು
" ಗಾಬರಿಯಾಗಬೇಕಾದ್ದಿಲ್ಲ. ಹೈದರಲ್ಲಿಯನ್ನು ಹೊಡೆಯುತಾ ಇರು
“ ವುದು. ನಮ್ಮ ಫೌಜು ಬಂದಮೇಲೆ ನೀವೂ ಅವರೂ ಕೂಡಿ ಹೈದ
“ ರಲ್ಲಿಯನ್ನು ಹಿಡಿದು ಪೂನೆಗೆ ಕಳುಹಿಸಬೇಕು ” ಹೀಗೆಂದು ಬರೆದಿತ್ತು.
ಇದನ್ನು ನೋಡಿಕೊಂಡು ಹೈದರನು ಇದುವರೆಗೂ ನಮಗೆ ಜಯವಾ
ಗಿಲ್ಲ. ಮರಾಟೆಯವರೂ ಬಂದು ನಮ್ಮ ಮೇಲೆ ನಿಂತರೆ ನಾವು ಸೋಲು
ವುದೇ ಖಂಡಿತ. ಈಗ ನಾವು ದುರ್ಗದವರಲ್ಲಿ ರಾಜಿಮಾಡಿಕೊಂಡು
ಇವರಿಂದ ಬಂದ ಹಣವನ್ನು ಮರಾಟಿಯವರಿಗೆ ಕೊಟ್ಟುಬಿಟ್ಟರೆ ಅವರು
ಹೊರಟುಹೋಗುತಾರೆ. ತರುವಾಯ ನಾವು ಏಕಾ ಏಕಿ ಬಂದು ಈ
ಕೋಟೆಯನ್ನು ಹಿಡಿದು ಕೊಳ್ಳಬಹುದು, ಎಂದು
ಪರ್ಯಾಲೋಚಿಸಿ ದುರ್ಗದ ದೊರೆಗೆ ಒಂದು ಕಾಗದ
ವನ್ನು ಬರೆಯಿಸಿದನು. ಆದರ ಮುಖ್ಯ ಸಾರಾಂಶವೇನೆಂದರೆ.
ಹೈದರನ ಕುಪಟ್ಯ,
" ತಮ್ಮ ಸಿಪಾಯಿಗಿರಿಯನ್ನು ನೋಡಿ ಬಹಳ ಸಂತೋಷವಾ
“ ಯಿತು. ತಮ್ಮನ್ನು ಪರೀಕ್ಷಿಸಲು ಬಂದೆವು, ತಮ್ಮ ಮನೆಯನ್ನು ತೆಗೆ
" ಕೊಳ್ಳಲು ಬರಲಿಲ್ಲ, ತಮ್ಮ ಮರ್ದುಮಿ, ತಮ್ಮ ಲಡಾಯಿ, ತಮ್ಮ ಪರಾ
" ಕ್ರಮವನ್ನು ನೋಡಿ ಬಹಳ ಸಂತೋಷ ಪಟ್ಟೆವು. ಇತಃ ಪರ ಸ್ನೇ
“ ಹವೇ ಹೊರತು ಜಿದ್ದುಮಾಡುವುದಿಲ್ಲ. ಇಂಥಾ ಲಡಾಯಿ ಮಾಡಿದವ
" ರನ್ನು ನಾನು ಎಲ್ಲಿಯೂ ನೋಡಲ್ಲಿ. ಈಗಲೂ ೯೦೦೦೦೦ ವರಹ
“ ಹಂಡಿ ಕೊಟ್ಟು ನಿಮ್ಮ ತಮ್ಮಂದಿರಿಗೆ ಕಳುಹಿಸಿದರೆ ನಾವು ಕೂಚುಮಾ
“ಡಿ ಹೊರಟು ಹೋಗುತೇವೆ"---ಹೀಗೆಂದು ಆ ಖರೀತದಲ್ಲಿ ಬರೆದಿತ್ತು.
ದುರ್ಗದವರು ಕರಾರಿಗೆ ಒಪ್ಪಲು ಸಲಹೆ
ಮದಕರಿನಾಯಕನು ಇದನ್ನು ನೋಡಿಕೊಂಡು ತನ್ನು ಕಡೇ
ದೊಡ್ಡ ಮಂತ್ರಿಗಳನ್ನೂ ಸರದಾರರನ್ನೂ ಕರೆಯಿಸಿ
ಆಲೋಚನೆ ಮಾಡಲಾಗಿ, ಆ ದೊಡ್ಡಮನುಷ್ಯರು
ನಮಗೆ ಸಹಾಯವನ್ನು ಕಳುಹಿಸಬೇಕೆಂದು ನಾವು
-----------------------------------
೮೮ ಚಿತ್ರದುರ್ಗದ ಪಾಳಯಗಾರರು.
ಪೂನೆಗೆ ಬರೆದು ೩ ತಿಂಗಳಾಯಿತು. ಬರೀ ಉತ್ತರಬಂತೇ ಹೊರತು
ಸಹಾಯಕ್ಕೆ ಸೇನೆ ಬರಲಿಲ್ಲ, ಇದುವರೆಗೆ ನಮಗೇ ಜಯವಾಗಿದೆ, ಭಾರಿ
ಸರದಾರರು ಸತ್ತುಹೋದರು. ಈಗ ಶತ್ರುಗಳೇ ರಾಜಿಗೆ ಬಂದಿದಾರೆ,
ಖಂಡಣಿ ಹಣವನ್ನು ಕೊಟ್ಟು ಬಿಟ್ಟರೆ, ಅವರು ಮುತ್ತಿಗೆ ಬಿಟ್ಟು ಹೊರಟು
ಹೋಗುತಾರೆ, ಆ ಮೇಲೆ ಅಂಥಾ ರಾಜಕಾರ್ಯಬಿದ್ದರೆ ಪರಶುರಾಂಭಾವು
ಯವರ ಲಷ್ಕರನ್ನು ಕರೆಯಿಸಿಕೊಂಡು ನಾವು ನಿಲ್ಲಬಹುದು. ಈಗ ರಾಜಿ
ಮಾಡಿಕೊಳ್ಳುವುದೇ ಯುಕ್ತವಾಗಿ ಕಾಣುತೆ, ಎಂದು ಅರಿಕೆಮಾಡಿದರು.
ಇದನ್ನು ಹೇಳ ದೊರೆಯು ಹೈದರನ ಕಡೆ ವಕೀಲರನ್ನು ಕುರಿತು---
“ನವಾಬರ ಸಲಹೆ ವಿಚಾರವನ್ನು ನಮ್ಮ ಸರದಾರರಿಗೆ ತಿಳಿಸಿದೆವು. ಗಳಿ
ಗೆಗೆ ಸ್ನೇಹ, ಗಳಗೆಗೆ ದ್ವೇಷ ಮಾಡುವುದು ನವಾಬರ ಸ್ವಭಾವವಾಗಿದೆ,
ಒಂದಕ್ಕೆ ಎರಡರಷ್ಟು ಸೇನೆತಂದು ಹನ್ನೆರಡು ವರುಷ ಮುತ್ತಿಗೆ ಹಾಕಿ
ದರೂ ನಮಗೆ ಭಯವಿಲ್ಲ ಈಗಲೂ ನವಾಬರ ಮರ್ಜಿ ಖಾಯಂ
ಇದ್ದಲ್ಲಿ ಶ್ರೀರಂಗಪಟ್ಟಣದ ಸಾಹುಕಾರ ಅಂದಾನ ಸೆಟ್ಫಿ. ರಾಘವೇಂದ್ರ
ನಾಯಕ, ಕಂಕರಸೆಟ್ಟಿ, ಇವರ ಮೂಲಕ ಪ್ರಮಾಣ ಪೂರ್ವಕವಾಗಿ
ಪತ್ರಬರೆದರೆ, ನಾವು ರಾಜಿಗೆ ಒಪ್ಪುತೇವೆ. ಆ ಸಾಹುಕಾರರ ಮೂ
ಲಕ ಖಂಡಣಿ ಕೊಡುತೇವೆ. ನವಾಬರು ಕೂಚು ಮಾಡಿ ಹೊರಟು
ಹೋಗಬೇಕು.” ಹೀಗೆಂದು ಪಾಳಯಗಾರನು ಆ ವಕೀಲರಿಗೆ ತಿಳಿಸಿ
ದನು. ಆ ಮಾತಿಗೆ ಹೈದರಲಲಿಯು ಒಬ್ಬ ಆ ಮೂರು ಜನ ಸಾಹುಕಾರ
ರಿಂದ ಪತ್ರ ಬರೆಯಿಸಿ ಕೊಟ್ಟನು. ಅದನ್ನು ನಂಬಿ ಪಾಳಯಗಾರನು
ನವಾಬನಿಗೆ ೬೦೦೦೦೦ ವರಹವನ್ನು ಕೊಟ್ಟು ಕಳುಹಿಸಿದನು.
ಪರಶುರಾಮಪ್ಪನಾಯಕರಿಗೆ ಅಪ್ಪಣೆಕೊಟ್ಟು ಫೌಜು ಸಮೇತ ಹೈದರನ
ಬಳಿಗೆ ಕಳುಹಿಸುವುದಕ್ಯಾಗಿ ತಕ್ಕ ಪ್ರಯತ್ನ ಮಾಡುವಷ್ಟರಲ್ಲಿ ಮುಂದಿನ
ಕೆಲಸ ಜರುಗದಹಾಗೆ ಮತ್ತೊಂದು ಕಾರ್ಯ ನಡೆಯಿತು.
ಪೂನೆ ಕರೀತ ದುರ್ಗಕ್ಕೆ ತಲಪಿದ್ದು
ಈ ಸಮಯದಲ್ಲಿ ಪೂನೇದಿಂದ ಒಂದು ಪತ್ರ, ಗೋಪನಹರಿ ಸರ
ದಾರನಿಂದ ಒಂದು ಪತ್ರ, ವಕೀಲ ಪುರುಷೋತ್ತಮ,
ಪಂತನಿಂದ ಒಂದು ಪತ್ರ, ಹೀಗೆ ಮೂರು ಪತ್ರಗ
ಳನ್ನೂ ಜಾಸೂದು ವೇಷಧಾರಿಗಳು ತಂದು ಗುಟ್ಟಾ
--------------------------------------
ದುರ್ಗದವರ ದಂಡು ಕಮ್ಮಿಯಾದ್ದು. ೮೯
ಗಿ ದುರ್ಗದ ದೊರೆಗೆ ತಲಪಿಸಿದರು. ಶ್ರೀಮಂತರ ದಂಡು ಕೃಷ್ಣಾನದಿ
ಬಿಟ್ಟು ಕಪೋತನ ಗುಡ್ಡದ ಹತ್ತರ ಇಳದಿರುವುದಾಗಿಯೂ, ಅದು ಎಂಟು
ದಿವಸಕ್ಕೆ ಬರುವುದೆಂತಲೂ ತಿಳಿಯಿತು. ಆಗ ಮದಕರಿನಾಯಕನು
ಸಂತೋಷಪಟ್ಟು, ಕರಾರಿನ ಪ್ರಕಾರ ಹೈದರನ ಪಾಳಯಕ್ಕೆ ಬಾರಿ ಸೇನೆ
ಯೊಡನೆ ಹೋಗಲು ಕೋಟೆಯ ಹೊರಭಾಗದಲ್ಲಿ ಸಿದ್ಧನಾಗಿದ್ದ ತಮ್ಮ
ನಾದ ಪರಶುರಾಮಪ್ಪನಾಯಕನನ್ನು ಹೋಗಬೇಡವೆಂದು ಹಿಂತಿರುಗಿ
ಕರೆಯಿಸಿ, ಶ್ರೀರಂಗಪಟ್ಟಣದ ಸಾಹುಕಾರರಿಗೂ ಏನೋ ನೆಪಹೇಳಿಕಳು
ಯಿಸಿದನು. ನವಾಬನು ಈ ವಾಸನೆಯನ್ನು ಹೇಗೆಯೋ ತಿಳದುಕೊಂಡು
ಮರಾಟೆಯವರ ಸರದಾರ ಗೋಪಾಲಹರಿಯ ಹತ್ತರಕ್ಕೆ ಹೋಗಿ ಅವ
ನೊಡನೆ ಯುದ್ಧವನ್ನು ಮಾಡಿ ಕಡೆಗೆ ರಾಜಿಮಾಡಿಕೊಂಡು ಹತ್ತು ಲಕ್ಷ
ವರಹ ಖಂಡಣಿಯನ್ನು ಶ್ರೀಮಂತರಿಗೆ ಕೊಟ್ಟು ಗೋಪಾಲಹರಿಯ
ದಂಡು ಹಿಂತಿರುಗಿ ಹೋಗುವಹಾಗೆ ಮಾಡಿ ನವಾಬನು ಅಲ್ಲಿ ಮೊಕ್ಕಾಂ
ಮಾಡಿಕೊಂಡಿದ್ದನು.
ಸಹಾಯಕೆ ಬಂದ ಪಾಳಯಗಾರರ ಸೇನೆಯನ್ನು ದುರ್ಗದಿಂದ
ಕಳುಹಿಸಿಬಿಟ್ಟದ್ದು
ನಗರದ ಇರಸಾಲು.
ದುರ್ಗದ ಪಾಳಯಗಾರನು ಯುದ್ಧ ನಿಂತಿತೆಂದು ತಿಳದು, ತನ್ನ
ಸಹಾಯಕ್ಕೆ ಬಂದಿದ್ದ ಕನಕಗಿರಿ, ಆದವಾನಿ, ಜರಿ
ಮಲೆ, ಮೊದಲಾದ ಸಂಸ್ಥಾನಗಳ ದಂಡು, ಮತ್ತು
ಇತರ ಗಡಿಗಳ ದಂಡು, ಇವುಗಳನ್ನು ಅವರವರ
ಸ್ಥಳಕ್ಕೆ ಕಳುಹಿಸಿ ಬಿಟ್ಟನು. ಹೀಗೆ ಮಾಡಿದ್ದು
ಒಂದು ತಪ್ಪು. ದೂರದೃಷ್ಟಿ ಇಲ್ಲದ ಕೆಲಸವಾಯಿತು. ಹಾಲಪ್ಪನಾ
ಯಕ ಓಡಿಹೋದನು. ಮದಕರಿನಾಯಕನು ಎಂದಿನಂತೆ ದರಬಾರು
ಮಾಡಿಕೊಂಡಿರಲಾಗಿ ಶ್ರೀರಂಗಪಟ್ಟಣಕ್ಕೆ ನಗರ
ದಿಂದ ೩೦೦೦೦೦ ವರಹ ಇರಸಾಲು ಹೋಗುತಾ
ಇದೆ ಎಂದು ಕೇಳಿ ಅದನ್ನು ಹಿಡಿಯಲು ತಾನೇ ಸೇನೆಯನ್ನು ತೆಗೆದು
ಹೊಂಡು ಹೋದನು. ಆ ಹಣವು ಇವನಿಗೆ ಸಿಕ್ಕದೆ ಹೊರಟುಹೋ
ಯಿತು. ಆಗ ಪಾಳಯಗಾರನು ದುರ್ಗಕ್ಕೆ ಹಿಂತಿರುಗಿ ಬರುತಾ ಇದಾ
ನೆಂಬ ವರ್ತಮಾನವನ್ನು ಹೇಳ ಅವನನ್ನು ದುರ್ಗಕ್ಕೆ ಬರದಂತೆ ಮಧ್ಯ
ಮಾರ್ಗದಲ್ಲಿ ತಡೆಯಬೇಕೆಂದು ಹೈದರನು ತನ್ನ ಮಗ ಟೀಪುಸುಲ್ಲಾನ
-------------------------------------
೯೦ ಚಿತ್ರದುರ್ಗದ ಪಾಳಯಗಾರರು.
ನನ್ನು ೨೦೦೦೦ ಕುದುರೆಯೊಡನೆ ಕಳುಹಿಸಿದನು. ಟೀಪು ಅಲ್ಲಿಗೆ ಹೋ
ಗುವುದರೊಳಗಾಗಿ ಮದಕರಿನಾಯಕನು ದುರ್ಗಕ್ಕೆ ಬಂದು ಬಿಟ್ಟನು.
ಹೀಗೆ ತನ್ನ ಪ್ರಯತ್ನ ಭಗ್ನವಾದ್ಧನ್ನು ತಿಳಿದು ಹೈದರನು ತನ್ನ
ಮಂತ್ರಿಗಳಾದ ಪೂರ್ಣಯ್ಯ, ಕೃಷ್ಣರಾವ್, ಬರಕಿ ಶ್ರೀನಿವಾಸರಾವ್
ಮೊದಲಾದ ಮೀರ್ ಮೀರಾಗಳನ್ನು ಆಲೋಚನೆ ಹೇಳಲಾಗಿ ಅವರು
ಹೇಳದ್ದೇನೆಂದರೆ :
ಹೈದರನ ಕಡೆಯವರ ಮಂತ್ರಾಲೋಚನೆ
“ಏಕಾ ಏಕಿ ದುರ್ಗಕ್ಕೆ ಮುತ್ತಿಗೆ ಹಾಕಿದರೆ ಅದು ಸಾಧ್ಯ್ಯವಾಗು
"ವುದಿಲ್ಲ. ಅದನ್ನು ಭೇದೋಪಾಯದಿಂದಲೇ
"ಗೆಲ್ಲಬೇಕು. ಆ ಸೀಮೆ ಸುತ್ತಲೂ ಇರುವ ಗಡಿ
"ಗಳಲ್ಲವನ್ನೂ ನಾವು ತೆಗೆದುಕೊಂಡು ನಮ್ಮ ಸ್ವಾ
"ಧೀನದಲ್ಲಿಟ್ಟು ಕೊಂಡರೆ, ಹೊರಗಿನ ಫೌಜು ದುರ್ಗದವರಿಗೆ ಬರಲು
“ಮಾರ್ಗವಿರುವುದಿಲ್ಲ. ಆಯಾ ಗಡಿಗಳಲ್ಲಿರುವ ಜನರಿಗೆ ಭಾರಿಸಂಬಳ
"ವನ್ನೂ ಇನಾಮನ್ನೂ ಸಹಾ ಕೊಟ್ಟು ನಮ್ಮ ಕಡೆಗೆ ತಿರುಗಿಸಿ ಕೊಳ್ಳ
"ಬೇಕು. ಮತ್ತು ದುರ್ಗದಲ್ಲಿ ಮುಸಲ್ಮಾನರು ದೊಡ್ಡಸರದಾರರಾಗಿದಾರೆ,
“ಅವರನ್ನು ನಮ್ಮ ಕಡೆಗೆ ಸೆಳೆದುಕೊಳ್ಳಬೇಕು. ದುರ್ಗದವರಿಗೆ ಪರ
“ಶುರಾಂಭಾವುವಿನ ಸಹಾಯ ಒಂದು ಮಾತ್ರ ಇರುತ್ತೆ. ತುಂಗಭದ್ರಾ
"ನದಿಯ ಹತ್ತರ ೨೦೦೦೦ ದಂಡು ಇಡಿಸಿದರೆ, ಮರಾಟೆ ದಂಡು ಬರುವು
" ದನ್ನು ತಡೆಯಬಹುದು ಎಂದಿದ್ದರೂ ದುರ್ಗದ ಸೀಮೆ ನಮ್ಮ ಕೈಗೆ
“ಸಿಕ್ಕುವುದು ಖಂಡಿತ, ಪಾಳಯಗಾರ ಮಾತ್ರ ನಮ್ಮ ಕೈಗೆ ಜೀವ
“ಸಹಿತ ಸಿಕ್ಕುವನಲ್ಲ, ಜಾತಿ ಸಿಪಾಯಿಯಾಗಿದಾನೆ. ಅವನು ಯುದ್ಧ
" ದಲ್ಲಿ ಮಡಿಯುವುದು ಖಂಡಿತ,” ಎಂಬದಾಗಿ ಹೈದರನ ಮಂತಿ;ಗಳು
ಅರಿಕೆ ಮಾಡಿದರು.
ದುರ್ಗಕ್ಕೆ ಎರಡನೇ ಸಾರಿ ಮುತ್ತಿಗೆ,
ಆಗ ಹೈದರಲ್ಲಿಯು ಪುನಃ ಭಾರಿ ಸೇನೆಯೊಡನೆ ಬಂದು ದುರ್ಗದ
ಕೋಟೆಗೆ ಮುತ್ತಿಗೆ ಹಾಕಿದನು. ಕೋಟೆಯ ಸಮೀ ಪದ
ಲ್ಲಿ ಒಂದು ಲಕ್ಷ ಫೌಜು ಜಮಾಯಿಸಿತು. ಕೋಟೇ
ಮೇಲಕ್ಕೆ ಹಲ್ಲಾ ಹತ್ತತಕ್ಕ ಶತ್ರುಗಳನ್ನು ಪಾಳ
ಯಗಾರನು ತನ್ನ ದಂಡಿನೊಡನೆ ಕತ್ತರಿಸಿ ಹಾಕಿಸುತ್ತಲೇ ಬಂದನು,
-----------------------------------
ಓಬವ್ವನ ಪರಾಕ್ರಮ. ೯೧
ಹಗೆಗಳಿಗೆ ಸ್ವಲ್ಪವೂ ಆಸ್ಪದ ಕೊಡಲಿಲ್ಲ, ಅನೇಕ ಜನ ಸತ್ತುಹೋ
ಯಿತು. ಕಂದಕವೆಲ್ಲಾ ಹೆಣದಲ್ಲಿ ಮುಚ್ಚಿ ಹೋಯಿತು. ನವಾಬನ
ದಂಡು ಕೋಟೇಮೇಲಿನ ಏಟನ್ನು ತಡೆಯಲಾರದೆ ಹಿಂತೆಗೆಯಿತು. ವಿಷ್ಟು
ಗುಂಡು ಹೊಡೆದರೂ ಕೋಟೆ ಜಗ್ಗಲಿಲ್ಲ. ಆ ಕೋಟೆಯನ್ನೂ ಅಲ್ಲಿನ
ಜನರ ಪೌರುಷವನ್ನು ನೋಡಿ ಹೈದರನು ಆಶ್ಚರ್ಯಪಡುತಾ ಭೇದೋ
ಪಾಯಮಾಡಿ ಈ ಕೋಟೆಯನ್ನು ಗೆಲ್ಲಬೇಕೆಂದು ಆಲೋಚಿಸಿ ಬೇರೊಂ
ದು ವಿಧವಾದ ಯತ್ನವನ್ನು ಹೂಡಿದನು.
ಈ ಕದನಗಳಲ್ಲಿ ತಮ್ಮ ದೊರೆಗೆ ಜಯವಾಗಲೆಂದು ವಿಶಿಷ್ಟ ಜನ
ರೂ ಶತ್ರುಗಳನ್ನು ಎದುರಿಸಲು ಉದ್ಯುಕ್ತರಾದರು. ಸ್ತ್ರೀಜನರುಕೂಡ
ತಮ್ಮ ಪರಾಕ್ರಮವನ್ನು ತೋರಿಸುತಾ ಬಂದರು.ಈ ವಿಚಾರವನ್ನು
ಕುರಿತು ಹಳೇ ಬಖೈರುಗಳಲ್ಲಿ ಏನೂ ಬರೆಯದೇ ಇದ್ದಾಗ್ಯೂ, ಚಿತ್ರದು
ರ್ಗದಲ್ಲಿಯೂ ಮತ್ತು ಇತರ ಕಡೆಯಲ್ಲಿಯೂ ಪರಂಪರೆಯಾಗಿ ಜನ
ವಾರ್ತೆಯಾಗಿ ಬಂದಿರುವ ಮತ್ತು ದುರ್ಗದ ಕೋಟೆ ಕಲ್ಲಿನಮೇಲೆ ಈ
ಗಲೂ ಪ್ರತಿಮೆ ಕೆತ್ತಿ ಗುರುತುಮಾಡಿರುವ ಶ್ಲಾಘ್ಟತರವಾದ ಕೆಲವು
ಸಂಗತಿಗಳನ್ನು ಇಲ್ಲಿ ಬರೆಯತಕ್ಕದ್ದು ಆ ಪ್ರಾಂತದ ಜನರ ಪರಾಕ್ರ
ಮಕ್ಕೆ ನ್ಯಾಯವಾದ ಗೌರವವನ್ನು ತೋರಿಸಿದಂತೆ ಆಗುವುದು.
ಓಬವ್ವನ ಪರಾಕ್ರಮ.
ಈ ಕೋಟೆಯೊಳಕ್ಕೆ ಮತ್ತು ದುರ್ಗದೊಳಕ್ಕೆ ಹೋಗಲು ಹೈದ
ರನ ಕಡೆಯವರಿಗೆ ಎಲ್ಲಿಯೂ ದಾರಿಸಿಕ್ಕಲಿಲ್ಲ.
ಕೋಟೆಯನ್ನು ಒಡೆಯುವುದು ಅತ್ಯಂತ ಶ್ರಮ.
ಬಂದು ವೇಳೆ ಅದನ್ನು ಒಡೆದು ಒಳಕ್ಕೆ ನುಗ್ಗಲು ಸಾಹಸಮಾಡಿಯಾರೆ,
ಕೋಟೇಮೇಲಿನಿಂದ ಬೀಳುವ ಏಟು ಕೋಟೆಗೋಡೆಯ ಸಮಾಪಕ್ಕೆ
ಯಾರೂ ಹೊದದ್ದಹಾಗೆ ಮಾಡತಕ್ಕಂಥಾದ್ದು. ಒಂದು ವೇಳೆ ಹೊರ
ಕೋಟೆಯನ್ನು ಹಲ್ಲಾ ಮಾಡಿ ತೆಗೆದುಕೊಂಡಾರೆ, ಪುನಃ ಮತ್ತೊಂದು
ಕೋಟೆಬತೇರಿ ಮೊದಲಿಗಿಂತಲೂ ಹೆಚ್ಚಾದ ತೊಂದರೆಯನ್ನು ಕೊಡ
ತಕ್ಕಂಥಾದ್ದು. ಹೀಗೆ ಬೆಟ್ಟದ ಮೇಲೆ ಬೆಟ್ಟ ಕೋಟೇ ಮೇಲೆ ಕೋಟೆ,
ಇರತಕ್ಕದ್ದನ್ನು ಹಿಡಿದು ತೆಗೆದುಕೊಳ್ಳೋಣವೆಂದರೆ, ಯಾವಕಡೆಯೂ
ದಾರಿಯೇ ಸಿಕ್ಕದು. ಇದನ್ನು ಜೈಸುವುದು ಹೇಗೆ? ಭೇದೋಪಾಯ
----------------------------------------
೯೨ ಚಿತ್ರದುರ್ಗದ ಪಾಳೆಯಗಾರರು
ಮಾಡಿಯೇ ಇದನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಹೈದರನು
ಖಂಡಿತಮಾಡಿಕೊಂಡು ಇದರ ಶೋಧನೆಗಾಗಿ ಜನೆಗಳನ್ನೂ ಸೇನೆಯ
ನ್ನೂ ಬಿಟ್ಟನು. ಈ ಕೆಲಸಕ್ಕಾಗಿ ಬೇಹುಗಾರರು ವೇಷವನ್ನು ಮರೆ
ಯಿಸಿಕೊಂಡು ಬೆಟ್ಟದ ಸುತ್ತಲೂ ಸುತ್ತುತಾ ಇರುವಾಗ, ದೂರದಲ್ಲಿ
ಒಬ್ಬ ಹೆಂಗಸು ಮಡಕೆಯಲ್ಲಿ ಮೊಸರನ್ನು ತೆಗೆದುಕೊಂಡು ಬೆಟ್ಟದ
ತಡೆಗೆ ಹೋಗುತಾ ಒಂದು ಬಂಡೆಯ ಸಂದಿಸಲ್ಲಿ ನುಸುಳಿ ಕೋಟೆಯೊ
ಳಕ್ಕೆ ಸೇರಿ ಬೆಟ್ಟದಮೇಲಕ್ಕೆ ಹೋದಳಂತೆ. ಈ ಸುಳುವನ್ನು ತಿಳಿದು
ಕೊಂಡು ಹೈದರನ ಸೇನೆಯವರು ಆಕಡೆ ಕೋಟೆಗೆ ಏಣಿ, ಉಡು,
ಮೊದಲಾದ್ದನ್ನು ಹಾಕಿ ಹಲ್ಲಾ ಹತ್ತಿದರು.ಎರಡು ಪಕ್ಕದಲ್ಲಿಯೂ
ಮೇಲೂ ಕೆಳಗೂ ಸಹಾ ಬಂಡೆ ಇರುವ ಒಂದು ಸಂಣ ಸಂದು ಕಾಣಿ
ಸಿತು. ಆ ಸಂದಿನೊಳಗೆ ಗಾಢಾಂಧಕಾರವಾಗಿತ್ತು. ಅದರೊಳಕ್ಕೆ
ಒಬ್ಬ ಮನುಷ್ಯಮಾತ್ರ ಹೊಟ್ಟೆಯನ್ನು ಕೆಳಗೆ ಹಾಕಿ ಈಜಿಕೊಂಡು
ಹೋಗುವಹಾಗಿತ್ತು. ಈ ಕಳ್ಳದಾರಿಯನ್ನು ಗೊತ್ತುಮಾಡಿಕೊಂಡು
ಶತ್ರುಗಳು ಒಬ್ಬೊಬ್ಬರಾಗಿ ಒಳಕ್ಕೆ ನುಗ್ಗುವ ಪ್ರಯತ್ನಮಾಡುತಿದ್ದರು.
ಈ ದಾರಿಯ ಸಮೀಪದಲ್ಲಿ ಒಂದು ಸಿಹಿನೀರಿನ ಕೊಳವಿತ್ತು.
ಅರ್ಧ ಬೆಟ್ಟದಲ್ಲಿ ಕಹಳೆಯವನ ಬತೇರಿ ಎಂದು ಒಂದು ಎತ್ತರ
ವಾದ ಗುಂಡು ಜಗಲಿ ಬತೇರಿ ಇದೆ. ಕಹಳೆಯವನು ಅದರ ಮೇಲೆ
ಯಾವಾಗಲೂ ಇರುತಾ, ಆ ಎತ್ತರವಾದ ಸ್ಥಳದಿಂದ ಸುತ್ತಲೂ ನೋಡು
ತಾ, ಹೆಚ್ಚುಗಟ್ಟಲೆ ನಡೆದದ್ದು ದೂರದಲ್ಲಿ ಕಂಡು ಬಂದರೆ, ಮತ್ತು ದೊರೆ
ಯ ಸವಾರಿ ಹೊರಕ್ಕೆ ಹೊರಟರೆ, ತನ್ನ ಕೊಂಬನ್ನು ಊದಿ ಎಚ್ಚರಿಕೆ
ಯನ್ನು ಕೊಡುವ ವಾಡಿಕೆ ಇತ್ತು. ಮಹಾ ಘೋರವಾಗಿ ಯುದ್ಧ
ನಡೆಯುತಾ ಇರುವಾಗ ಈ ಕಹಳೆಯವನ ಕೆಲಸೆ ಹೆಚ್ಚಾಗಿಯೇ ಇತ್ತು.
ಒಂದು ದಿನ ಇವನು ತನ್ನು ಚಾಕರಿಮಾಡಿದ ತರುವಾಯ ಆ ಗುಡ್ಡದ
ಲ್ಲಿಯೇ ಇದ್ದ ತನ್ನ್ನ ಗುಡಿಸಲಿಗೆ ವೂಟಕ್ಕಾಗಿ ಬಂದನು. ಇವನ ಹೆಂಡ
ತಿಯಾದ ಓಬಿ ಎಂಬ ಹೆಂಗಸು ತನ್ನ ಗಂಡನಿಗೆ ಬಡಿಸಿ ಅವನು ಹಿಟ್ಟನ್ನು
ಉಂಣುತಾ ಇರುವಾಗ ನೀರತರಲು ಗಡಿಗೆ ಹಿಡಿದು ಕಳ್ಳದಾರಿಯ ಬಳಿ
ಯಲ್ಲಿರುವ ಕೊಳದ ಹತ್ತರಕ್ಕೆ ಹೋದಳು. ಆಗ ಗವಿಯೊಳಗೆ ಕಂಡಿ
ಓಬವ್ವನ ಪರಾಕ್ರಮ. ೯೩
ಯ ಚೋರಿಯಲ್ಲಿ ಜನದ ಸಪ್ಪಳವಾಯಿತು. ಇದೇನೆಂದು ಗವಿಯೊಳಕ್ಕೆ
ಹೋಗಿ ನೋಡಿದಳು. ಕಳ್ಳಗಂಡಿಯ ಹೊರಗಡೆ ಜನದ ಗಲಗಾಯಿತು.
ಶತ್ರುಗಳು ಕೋಟೆಯೊಳಗೆಕೆ ನುಗ್ಗಲು ಯತ್ನಮಾಡುತಾ ಇದಾರೆಂದು
ತಿಳಿದು ತನ್ನ ಗುಡಿಸಲಿಗೆ ಓಡಿಹೋಗಿ ಬಂದು ವನಕೆಯನ್ನು ತೆಗೆದು
ಹೊಂಡು ಬಂದು ಕತ್ತಲೆಯಾಗಿದ್ದ ಆ ಕಳ್ಳಯಗಂಡಿಯಪಕ್ಕದಲ್ಲಿ ನಿಂತಳು.
ಆ ಕಂಡಿಯಿಂದ ಬಬ್ಬ ಸಿಪಾಯಿ ನುಸುಳಿಕೊಂಡು ಬಂದ. ಓಬಿಯು
ತನ್ನ ಕೈ ವನಕೆಯಿಂದ ಅವನ ತಲೆಯಮೇಲೆ ಹೊಡೆದು ಕೊಂದು
ಹಾಕಿದಳು ಹೆಣ ಹಳ್ಳಕ್ಕೆ ಬಿತ್ತು. ಇನ್ನೊಬ್ಬ ಅದೇ ಕತ್ತಲೇ
ಸಂದಿನಲ್ಲಿ ನುಗ್ಗಿ ಬಂದ. ಅವನಿಗೂ ಅದೇಗತಿಯಾಯಿತು. ಮತ್ತೊಬ್ಬ
ಬಂದ, ಮಗದೊಬ್ಬ ಬಂದ, ಹೀಗೆ 2೦೦-3೦೦ ಜನದವರೆಗೂ ಒಬ್ಬೊ.
ಬ್ಬರಾಗಿ ಬಂದರು. ಒಬ್ಬೊಬ್ಬರನ್ನಾಗಿಯೇ ಓಬಿಯು ಹೊಡೆಯುತಾ
ಬಂದಳು ಹೆಣದರಾಶಿ ಬಿತ್ತು. ರಕ್ತಗುಂಡಿ ಕಟ್ಬಿತು. ಕಳ್ಯಗನ್ನದಿಂದ
ಒಳಗೆಕೆ ಹೋದವರು ಏನಾದರೆಂಬುವುದು ಹೊರಗಿದ್ದ ದಂಡಿನವರಿಗೆ
ತಿಳಿಯಲಿಲ್ಲ. ಕಡೆಗೆ ಬಹಳ ಹೊತ್ತಾಯಿತು. ಕೊಂಬಿನವನು ಚಾಕ
ರಿಗೆ ಹೋಗಲು ಹೊತ್ತುಮೀರಿತು. ಅವನು ಹೆಂಡತಿಯನ್ನು ಹುಡುಕಿ
ಕೊಂಡು ಬಂದು ನೋಡುವಾಗ ವಿರಾವೇಶದಿಂದ ಪ್ರಜ್ಞೆ ತಪ್ಪಿ ಓಬಿಯು
ಗಂಡನನ್ನೂ ಹೊಡೆಯುವುದಕ್ಕೆ ಬಂದಳು. ಅಷ್ಟರೊಳಗೆ ಹೊರಗಡೆ
ಶತ್ರುಗಳ ದಂಡಿನವರು ಹೇಗೆಯೋ ಕೋಟೇಮೇಲಕ್ಕೆ ಹತ್ತುತಿದ್ದರು.
ಇದನ್ನು ಓಬಿಯ ಗಂಡನು ಕಂಡು ಕೊಂಬನ್ನು ಊದಿದನು ಈ ಸಂ
ಗತಿ ದೊರೆಗೆ ತಿಳಯಿತು. ಅವನೂ ಸೇನೆಯೂ ಆಸ್ಥಳಕ್ಕೆ ಬಂದು ಆ
ಹಗರಣವನ್ನು ನೋಡಿ ಆ ಹೆಂಗಸಿನ ಪರಾಕ್ರ್ರಮವನ್ನೂ ಸಾಹಸವನ್ನೂ
ಕೊಂಡಾಡಿದರು. ಅಷ್ಟರೊಳಗೆ ಶತ್ರುಗಳ ಭಟರು ಒಳಕ್ಕೆ ಬಂದು
ಓಬಿಯನ್ನು ಕಡಿದು ಹಾಕಿದರು. ಈ ಕನ್ನಗಂಡಿಯ ಕಳ್ಳಯದಾರಿಯ
ರಹಸ್ಯವನ್ನು ಪೂರ್ವದಲ್ಲಿ ತಿಳಿದುಕೊಂಡಿದ್ದ ರಾಯುದುರ್ಗದವರ ಸೇನೆ
ಯು ಒಳಕ್ಕೆ ನುಗ್ಗಿ ಬಂದಿತ್ತು. ಮದಕರಿನಾಯಕನೂ ಸೇನೆಯೂ ಸಹಾ
ಈ ಶತ್ತ್ರುಸೇನೆಯನ್ನು ಕಡಿಯಲು ಆರಂಭಿಸಿದರು. ರಾಯದುರ್ಗದ
ಹೇಡಿಗಳು ಬಾಯಲ್ಲಿ ಕಡ್ಡಿಕಚ್ಚಿಕೊಂಡು ಶರಣಾಗತರಾದರು. ಅವ
೯೪ ಚಿತ್ರದುರ್ಗದ ಪಾಳಯಗಾರರು.
ರನ್ನು ಬಿಟ್ಟು ಉಳಿದೆ ಸೇನೆಯನ್ನು ದುರ್ಗದ ವೀರರು ಕಡಿದುಹಾಕಿದರು.
ಕೋಟೆಯ ಹೊರಗಿದ್ದವರು ಓಡಿಹೋದರು. ಈ ಓಬಿಯು ಮಾಡಿದ
ಮಹತ್ತರವಾದ ಕಾರ್ಯವನ್ನು ನೋಡಿದರೆ ಸಾಕ್ಷಾತು ಮಹಾ ದುರ್ಗಿಯ
ಅವತಾರವೋ ಎನ್ನುವಹಾಗಿತ್ತು. ಇವಳು ದುರ್ಗಕ್ಕೆ ಸಮಾಪದಲ್ಲಿ
ರುವ ಅಗಸನಕಲ್ಲು ಗ್ರಾಮದವಳು. ಇವಳ ವಂಶೀಯರು ಆವೂರಲ್ಲಿ
ಈಗಲೂ ಇದಾರೆಂದು ಹೇಳುತಾರೆ.
ತುರುಕರೊಡನೆ ಹೈದರ
ನ ಪಿತೂರಿ,
ಇದುವರೆಗೆ ಹೈದರನಿಗೆ ಯಾವರದಿಕ್ಕಿನಲ್ಲಿಯೂ ಜಯವಾಗದಿರಲು
ಮತ್ತೊಂದು ಉಪಾಯವನ್ನು ಹೂಡಿದನು. ದುರ್ಗ
ದ ದೊರೆಯ ಸೇನೆಯಲ್ಲಿಯೂ ಇತರ ಇಲಾಖೆಗಳ
ಲ್ಲಿಯೂ ಅನೇಕ ಮುಸಲ್ವಾನರು ಉದ್ಯೋಗಗ
ಳನ್ನು ಮಾಡಿಕೊಂಡಿದ್ದರು, ಅಂಥಾ ಕುತಬಂದಿರ್ಬ ಮುಂತಾದ ಜನ
ರನ್ನು ತಮ್ಮಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಪಿತೂರಿಮಾಡಬೇಕೆಂದು
ಖಾಜಿ ಅವರಫಖಾನರಿಗೆ ನವಾಬಹೇಳದನು. ಅದರಂತೆ ದುರ್ಗದಲ್ಲಿ
ಮುಖಂಡ ಮುಸಲ್ಟ್ಯಾನರಾಗಿದ್ದ ಕುಂತಬಂದಿಖಾ, ಅಹಮ್ಮದ್ ಖಾ, ಜಮಾ
ಲ್‌ಖಾ, ಇವರನ್ನು ಕರೆಯಿಸಿ--ನಾವು ಆಹಲೆ ಇಸಲಾಂಜನ, ಹಿಂದೂ
ಮುಸಲ್ಮಾನರಿಗೆ ದ್ವೇಷವಿದ್ದೇಇದೆ, ಇನ್ನು ಎಲ್ಲಿಯೂ ಮಾರ್ಗವಿಲ್ಲದ್ದ
ರಿಂದ, ಈ ಪಾಳಯಗಾರನಲ್ಲಿ ಚಾಕರಿಗೆ ಸೇರಬೇಕಾಯಿತು, ಮೊದಲಿ
ನಿಂದಲೂ ಹಿಂದುಗಳನ್ನು ಮುರಿದು ದೀನ್್ದದಾರ್ ಜನರು ಪ್ರಬಲವಾಗುತಾ
ಬರುತಿದಾರೆ, ಹಿಂದೂ ಜನರ ಉಪ್ಪತಿಂದು ಷಹೀದು ಆದರೆ ದೋಜಕು
ಶಿವಾಯಿ ಅನ್ಯಥಾ ಇಲ್ಲ. ಈ ಗರೀಬ ಪಾಳೆಯಗಾರ ಏನು ಕೊಟ್ಟಾನು,
ನವಾಬ ಸಾಹೇಬರು ಜಹಗೀರಿ ಕೊಡುವ ಮನ್್ರ್ಮಸಬು ಮಾಡಿದಾರೆ,
ಈ ಸಂಸ್ಥಾನ ಒಂದು ಠಾಣೆಬಿದ್ದರೆ, ಮಕ್ಕಾ, ಮದೀನ, ಅರಬಸ್ಥಾನ್,
ಕಾಬೂಲ್, ಖಂದಾರೆ ಸೀಮೆ ಸೇರಿ ಎಲ್ಲಾ ಮುಸಲ್ಟ್ಯಾನರದಾಗುತ್ತೆ.
ನೀವು ದೀನ್ ದಾರರಾದರೆ ಅದಕ್ಕೆ ಒಪ್ಪಿ, ಕಾಫರರಾಎದರೆ ಆಜನರಲ್ಲಿ ಸೇರಿ,
ಹೀಗೆಂದು ಖಾಜಿ ಹೇಳಿದನು. ಆಗ ದುರ್ಗದ ಮುಖಂಡ ತುರುಕರಾದ
ಹುತಬಂದಿಖಾ, ಸಲಾಬತ್ತುಖಾ, ಮಾಹಮದಖಾ,ಎ ಬಿಜಲಿಖಾ, ಮೊಹ
ದೀನ್ ಖಾ ಕಲ್ಯಾಣಿ ವಗೈರೆ ತುರುಕರೆಲ್ಲಾ ಹೈದರನಿಗೆ ಸಹಾಯಮಾ
-------------------------------ಎ--------------
ಕಡೇ ಮದಕರಿನಾಯಕ. 9೫
ಡಲು ಒಪ್ಪಿದರು. ಮೊಹರಂ ಹಬ್ಬದಲ್ಲಿ ತಮ್ಮ ಜನರೆಲ್ಲಾ ಸೇರಿ ಪಂಜೆ
ಕೂರಿಸಿದ ವೇಳೆಯಲ್ಲಿ ಈ ಪ್ರಸ್ತಾಪಮಾಡಿ, ಕಡೇದಿವಸ ಪಂಜೆ ತೊಳೆ
ಯಲು ಮಲ್ಲಾಪುರದ ಕೆರೆಬಳಗೆ ಹೋಗಿ ಅಲ್ಲಿ ಹೈದರಲ್ಲಿಯ ಭೇಟಿ
ಮಾಡಿ ಮದಕರಿನಾಯಕನಿಗೆ ಹಿಡಿದುಕೊಡುವುದಾಗಿ ತಮ್ಮ ಕಲಾ
ಮುಲ್ಲಾ ಶಾಸ್ತ್ರಮುಟ್ಟ ಪ್ರಮಾಣಮಾಡಿಕೊಟ್ಟು ದುರ್ಗಕ್ಕೆ ಹಿಂತಿರುಗಿ
ಬಂದರು. ಪಾಳಯಗಾರನ ಚಾಕರಿಯಲ್ಲಿದ್ದ ಮರಾಟೆಯವರೂ ಎರಡು
ವರುಷದಿಂದ ಲಡಾಯಿ ಮಾಡಿ ಸಾಕಾಗಿ, ಅರೆವಾಸಿ ಹೈದರನ ಫಿತೂರಿ
ಬುಟ್ಟಿಗೆ ಬಿದ್ದರು. ಆದಾಗ್ಯೂ ಉಳದ ಜನರು ಬಹಳ ಸಾಹಸಮಾಡಿ
ಪುನಃ ೩ ತಿಂಗಳವರೆಗೂ ಜಗಳ ವಾಡುತ್ತಲೇ ಇದ್ದರು. ಉಳದ ದಂ
ಡಿನ ಸರದಾರರು ಮಾಡಿದ ಸಾಹಸಕ್ಕೆ ದೊರೆಯು ಅವರಿಗೆ ಭಾರಿ ಮುತ್ತಿ
ನಹಾರ, ಖಡೆ ತೋಡ ಕಾಲು ಮೊದಲಾದ ಖಿಲ್ಲತ್ತನ್ನು ತರಿಸಿಕೊಡಲು
ಆ ಸರದಾರರು--ಶಿವಪ್ರಸಾದ್, ಧನಸಿಂಗ್, ರಾಮಸಿಂಗ್, ಲಕ್ಷ್ಮಣ
ಸಿಂಗ್, ಈ ನಾಲ್ಕುಜನ ಸರದಾರರೂ, ದೊರೆಯನ್ನು ಕುರಿತು, ಕೈ
ಮುಗಿದು--ಬುದ್ದಿ, ನಾವು ಯಾವ ಜಯವನ್ನು ಹೊಂದಿದಕ್ಕೆ ನಮಗೆ
ಇನಾಂ ಕೊಡಬೇಕು? ನಾವು ಶತ್ರುಗಳನ್ನು ನಾಶಮಾಡಿ ಓಡಿಸುವ
ತನಕ ನಾವು ಯೇನನ್ನೂ ಅಂಗೀಕರಿಸುವದಿಲ್ಲ. ಅದೂ ಅಲ್ಲದೆ ನಮ್ಮ
ದೇಶದಲ್ಲಿ ಸಿಪಾಯಿ ಜನರು ಇನಾಂ, ಏಕನಾಮು ಮೊಲಾದ್ದನ್ನು
ತೆಗೆದು ಕೊಳ್ಳತಕ್ಕ ದಂಡಕವಿಲ್ಲ ; ಮಹಾರಾಜಾ, ಸಲಾಂ; ಭಾಟ
ಭಟಂಗಿ ಮತ್ತು ತಾಫೇದವರಿಗೆ ಇನಾಂ ಹೊರತು ಓಪಾಯಿಗಳಗೆ ಇನಾಂ
ಮಂಜೂರಿಲ್ಲ, ತಮ್ಮ ದಯ ಒಂದು ನಮಗೆ ಅನಂತವಾಗಿದೆ, ಎಂದು
ಅರಿಕೆ ಮಾಡಿದರು. ಆದರೂ ಮದಕರಿನಾಯಕನು ಬಲವಂತಮಾಡಿ
ಅವರಿಗೆ ಮುತ್ತಿನ ಕಂಠಿ ಮೊದಲಾದ ಇನಾಂ ಕೊಟ್ಟನು, ಇಲ್ಲಿ ಶ್ಲಾಘ
ನೆಗೆ ಅರ್ಹವಾದ್ದು ಆ ದೊರೆಯ ಧಾರಾಳವೋ ಆ ಶೂರರ ನೈಸ್ಪೃ
ಹ್ಯವೋ ಹೇಳುವುದು ಕಷ್ಟ, ಅವರ ಸ್ಪಾಮಿಭಕ್ತಿ ಅಷ್ಟರಮಟ್ಟಗೆ
ಇತ್ತು.
ವಿಳಂಬಿ ಸಂ॥ ಮಾಘ ಬ|| ೨ಯಲ್ಲು ಶತ್ರುಗಳು ಪುನಃ ಹಲ್ಲಾ
ಹತ್ತಲು ಯತ್ನ್ನಮಾಡಿದರು. ಆ ದಿವಸ ಖಾಡಾಖಾಡಿ ಯುದ ವಾಯಿತು.
ಆದಾಗ್ಯೂ ಶತ್ರುಗಳು ಏನೂ ಮಾಡಲಾರದೇ ಹೋದರು.ಎರಡು ಈಚೆ
--------------------------------------------
೯೬ ಚಿತ್ರದುರ್ಗದ ಪಾಳಯಗಾರರು.
ಯಲ್ಲಿಯೂ ಅನೇಕ ಜನ ಸತ್ತರು. ರಾಜರ ಕಡೆ ಬಾಳಾಜಿಪಂತು
ತಮ್ಮಾಜೆ ವೀರಸ್ವರ್ಗವನ್ನು ಹೊಂದಿದನು, ಅದರಿಂದ ಪಾಳಯಗಾರ
ನಿಗೆ ದೊಡ್ಡ ಬಲ ಮುರಿಯಿತು. ರಂಗೈಯ್ಯನಬಾಗಿಲಕಡೆ ಹೈದರನ
ಸೇನೆಯವರು ಭಾರಿಯಾಗಿ ಮೊಹರ್ಚೆ ಕಟ್ಟಿ ಫಿರಂಗಿಯನ್ನೂ, ಮಕರ
ಡಿಬ್ಬಿಯನ್ನೂ ಹೊರಗಿನಿಂದ ಹೊಡೆಯುತಾ ಬಂದರು. ಇದನ್ನು ಕಂಡು
ದುರ್ಗದವರು ಮೊಹರ್ಚೆ ಕೆಳಗೆ ಒಳಗೇ ಸುರಂಗ ಹಾಕಿ ನೂರು
ಬುದ್ಧಲಿಗೆ ಮದ್ದು ತುಂಬಿ ಬತ್ತಿ ಕೊಟ್ಟರು. ಹೊರಗಿನ ಮೊಹರ್ಚೆ
ಹಾರಿಹೋಗಿ ಶ್ರೀರಂಗಪಟ್ಟಣದ ದಂಡು ಬಹಳ ಹತವಾಯಿತು. ಆದರೂ
ಹೊರಗಿನಿಂದ ಏಟು ಬಲವಾಯಿತು. ಹೊರಗಿನ ಕೋಟೆಗೆ ಒಳಗಿನ
ಜನ ಸಾಲಲಿಲ್ಲ. ಆ ಕೋಟೆ ನರಗಾಯಿತು, ಪಟ್ಟಣದ ಜನಹೊಂಡದ
ನೀರಿಗೆ ಹೋಗಲು ಸಾಧ್ಯವಾಗಲಿಲ್ಲ, ಹೊರಗಿನ ಖಿಲ್ಲೆ ಬಿಟ್ಟು, ಗಾರೆ
ಬಾಗಿಲ ಖಿಲ್ಲೆ ಬಲವಾಗಿದ್ದ ಕಾರಣ, ಉಳಿದ ಸೇನೆಯನ್ನು ಆ ಸಜ್ಜು
ಮಾಡಿದರು. ಆತುರದಲ್ಲಿ ಹೊರಗಿನ ಜನ ಹೊರಗೆ ನಿಂತುಹೋಯಿತು.
ಒಳಗಿನ ಜನ ಒಳಗೆ ನಿಂತು ಹೋಯಿತು. ಗಾರೇಬಾಗಲಿಗೂ ನವಾ
ಬಂದರು.
ಜರಿಮಲೆಯವರ ದ್ರೋಹ
ಹೆಬ್ಬುಲಿಕಲ್ಲು ದುರ್ಬಲವಾದ ಸ್ಥಳವೆಂದು ಹೈದರನ ಕಡೆಗೆ ಸೇರಿ
ಕೊಂಡಿದ್ದ ಜರಿಮಲೆಯವರು ಗುಟ್ಟ ತಿಳದಿದ್ದ
ಕಾರಣ ಅವರು ೧2೦೦೦ ದಂಡಿನೊಡನೆ ಅಲ್ಲಿಗೆ
ನುಗ್ಗಿದರು. ಮದಕರಿನಾಯಕನು ೫೦೦೦ ಸೇನೆ
ಯೊಡನೆ ಅಲ್ಲಿಗೆ ಹೋಗಿ ಆ ಶತ್ರುಗಳ ಮೇಲೆ ಬಹಳವಾಗಿ ಯುದ್ಧಮಾ
ಡಿದನು ಉಭಯಪಕ್ಷ ದಲ್ಲಿಯೂ ಬಹಳ ಜನ ಸತ್ತುಹೋದರು. ನವಾ
ಬನ ಸೇನೆಯವರು ಗಾರೇ ಬಾಗಿಲಬಳಿ ಒಂದು ದಬದಬ ಕಟ್ಟಿ 6
ಫಿರಂಗಿ ಏರಿಸಿ ಹೊಡೆಯುತಾಬಂದರು. ಮಕರಡಿಬ್ಬಿ ಏಟು ಜೋರಾ
ಯಿತು. ಫಿತೂರಿಯಿಂದ ಬಸವನ ಬುರುಜನ್ನೂ ಅಲ್ಲಿನ ಸೇನೆಯವರು
ಹಗೆಗಳ ವಶಮಾಡಿದರು. ಶತ್ರುಗಳು ವಿಶೇಷವಾಗಿ ಕೈಯನ್ನು ಬಲ
ಮಾಡುತಾಬಂದರು. ದುರ್ಗ ಉಳಯುವಹಾಗೆ ಕಾಣಲಿಲ್ಲ.
ವೀರಸ್ಪರ್ಗ ಸೂರೆಗೊಳ್ಳುವುದು. 97
ವೀರಸ್ವರ್ಗ ಸೂರೆಗೊಳ್ಳುವುದು ಶ||1700ನೇ ವಿಳಂಬಿ ಸಂ ಮಾಘಮಾಸ,
ಆಗ ಮದಕರಿನಾಯಕನು--ಈ ದಿವಸ ದುರ್ಗ ಉಳಿಯುವುದಿಲ್ಲ,
ಶತ್ರುಗಳ ವಕವಾಗುವುದು ಖಂಡಿತ; ನಾನು ಅವ
ರಿಗೆ ಸೆರೆ ಸಿಕ್ಕಿ ಅವಮಾನ ಪಡುವದಕ್ಕಿಂತಲೂ
ಯುದ್ಧಕ್ಕೆ ಹೋಗಿ ಪರಾಕ್ರಮದಿಂದ ಶತ್ರುಗಳನ್ನು ಎದುರಿಸುತಾ ವೀರ
ಸ್ಫರ್ಗವನ್ನು ಸೂರೆಗೊಳ್ಳುವುದೇ ನನ್ನ್ನ ಶಪಥ, ಹೀಗೆಂದು ನಿಷ್ಕರ್ಪೆ
ಮಾಡಿ ತನ್ನ ಹಿರೀ ರಾಜಪುತ್ರನಾದ ಭರಮಪ್ಪನಾಯಕನಿಗೆ ಪಟ್ಟಾಭಿ
ಷೇಕಮಾಡಿ ತಾನು ಪ್ರಾತಃಕಾಲ ಸ್ನಾನವನ್ನು ಮಾಡಿ ದೇವರಪೂಜೆ
ಮಾಡಿ ದೇವಸ್ಥಾನಗಳಲ್ಲೆಲ್ಲಾ ಪೂಜೆ ಮಾಡಿಸಿ.ಬ್ಹ್ರಾಹ್ಮಣರಿಗೆ
ದಾನಧರ್ಮಾದಿಗಳನ್ನು ಕೊಟ್ಟು ಪ್ರಸಾದವನ್ನು ಸ್ವೀಕರಿಸಿ, ರಾಣಿವಾಸದ
ವರಿಗೆ ಸಮಾಧಾನ ಹೇಳಿ ಉಳದವೆರಿಗೆಲ್ಲಾ ಬುದ್ಧಿವಾದವನ್ನು ಹೇಳಿ, ತರು
ವಾಯ ವೀರರ ಉಡುಪನ್ನುಟ್ಟು, ಮುವತ್ತೆರಡು ಆಯುಧಸಹಿತವಾಗಿ
ವೀರತೊಡಿಗೆಯನ್ನುಟ್ಟು ಜಯಭೇರಿಯನ್ನು ಹೊಡೆಯಿಸಿ, ವೀರ
ಕಂಕಣವನ್ನು ಕಟ್ಟಿ ಅಲ್ಲಿದ್ದವರೆಲ್ಲರ ಸಂಗಡಲೂ, “ ಭರಮಪ್ಪನಾಯಕ
" ರಿಗೆ ಪಟ್ಟ ಕಟ್ಟಿದೆ, ನಾನು ವೀರಸ್ವರ್ಗವನ್ನು ಸೂರೆಗೊಳ್ಳಯಲು ಹೊರ
“ಡುತೇನೆ, ವೀರಸ್ವ್ರರ್ಗಾನಪೇಕ್ಷೆಯುಳ್ಳವರೆಲ್ಲರೂ ನಮ್ಮೊಡನೆ ಬರ
" ಹುದು ” ಎಂದು ಅಪ್ಪಣೆ ಕೊಟ್ಟನು. ಆಗ ಖಾಸಾ ರಾಜಪುತ್ರ ಭರ
ಮಪ್ಪನಾಯಕ, ತಮ್ಮ ಪರುಶುರಾಮಪ್ಪನಾಯಕ ಮೊದಲಾದ ಸಮಾಪ
'ಸಂಬಂಧಿಗಳೆಲ್ಲಾ ಹೊರಟರು. ಇನ್ನೂ ಇತರ ವೀರರೂ ಹೊರಟರು.
ಹೀಗೆ ಸಜ್ಜುಮಾಡಿಕೊಂಡು ಅಂಬಾರಿಮೇಲೆ ಸವಾರಿ ಹೊರಡುವುದರೊ
ಳಗಾಗಿ--ಹತ್ತುಸಾವಿರ ಬಾರು, ಕರ್ನಾಟಕ ವಗೈರೆ ಸಿದ್ಧವಾಗಿದಾರೆ,
ನವಾಬ ಹೈದರಲ್ಲಿಯು ಉತ್ಸವಾಂಬನ ಗುಡಿಯಲ್ಲಿ ಇದಾನೆ, ಮುಂದೆ
ಒಳ ಕೋಟಿಗೆ ಹಲ್ಲಾ ಹತ್ತಲು ಪ್ರಯತ್ನಮಾಡುತಿದಾನೆ, ಎಂದು ವರ್ತ
ಮಾನಬಂತು. ಕೂಡಲೇ ರಾಜನು ಆನೆಯಮೇಲೆ ಸತುವಿನ ಅಂಬಾರಿ
ಯಲ್ಲಿ ಹೂತು ಸವಾರಿ ಹೊರಟನು. ಆಗ ಖಾಸಾಹಜರತ್ತು ಮುಕ್ಕಾ
ಸುತ್ತು ಪಂಚಕಸೆ ಯಡಭರ್ಜಿ ಬಲಭರ್ಜೆಯವರೂ, ಖಾಸಾ ಬಂದೂ
ಖಿನವರೂ, ಪೂರಭಯ್ಯದವರಲ್ಲಿ ಶಿವಪ್ರಸಾದ್, ಧನಬಂಗ್, ರಾಮ
ಬಂಗ್, ಲಕ್ಷ್ಮ್ರಣಸಿಂಗ್, ಉದಯರಾಂ ಈ ವೀರರೆಲ್ಲಾ ಹೊರಟರು,
--------------------------------------
೯೮ ಚಿತ್ರದುರ್ಗದ ಪಾಳಯಗಾರರು.
ರಣಭೇರಿ ಹೊಡೆದರು. ಆಗ ಭಟರು “ ಮಹಾರಾಜ ಛತ್ರಿಪತಿ ಖಡೆಯ
ಶೋವಂತ ಪರಬಲ ಬಡಬಾನಲ ಅರಿರಾಜ ಮಾನಮರ್ದನ ಅರಿಕಲಭ
ಕಂಠೀರವ ವೀರ ಮದಕರಿರಾಜ ಭಾರಿನಿಗಳಾಂಕ ಜಯ ಜಯ" ಎಂದು
ಹೊಗಳಿದರು. ಹೀಗೆ ಸವಾರಿ ಹೊರಟು ಶತ್ರುಗಳನ್ನು ಹೊಡೆಯುತಾ
ಹೋದರು. ತರುವಾಯ ಹಗೆಗಳ ಸಂದಣಿ ಬಲವಾಯಿತು. ಆಗ ರಾಜನು
ಆನೆಯನ್ನಿಳಿದು ಈದುರೆಯನ್ನೇರಿ ಕತ್ತಿ ತೆಗೆದುಕೊಂಡು ಶತ್ರುಸೇನೆ
ಯನ್ನು ಕಡಿಯುತಾ ಹೋದನು. ಬಲವಾಗಿ ಪೆಟ್ಟುಬಿತ್ತು . ಅದನ್ನು
ಲಕ್ಷ್ಯಮಾಡದೆ ಶತ್ರುಗಳ ಮಧೈನುಗ್ಗಿ ಹೋದನು. ಆತನ ಕೀರ್ತಿ,
ಪ್ರತಾಪ, ಯಶೋ, ಧರ್ಮ, ಧೈರ್ಯಾದಾರ್ಯಾದಿ ಗುಣಗಳು ಮಾತ್ರ
ಭೂಮಿಯಲ್ಲಿ ಉಳಿದವು. ದೊರೆಯ ಸಂಗಡ ಬಂದಿದ್ದ ಬಂಧುಜನರಿಗೂ
ಪರಿವಾರದವರಿಗೂ ಬಹಳ ಏಟು ಬಿತ್ತು. ಹೇವಿಳಂಬಿ ಸಂ॥ ದಲ್ಲಿ ಹೈದ
ರನ ಯುದ್ಧ ಮೊದಲಾಗಿ ವಿಳಂಬಿವರೆಗೆ ಎರಡುವರ್ಷ ನಡೆದು ಆ ವರು
ಷ ಮಾಘಮಾಸದಲ್ಲಿ ಚಿತ್ರದುರ್ಗದ ಸಂಸ್ಥಾನ ಹೋಯಿತು. ಮದಕರಿ
ನಾಯಕನು ಹೈದರನ ಕೈಗೆ ಸೆರೆ ಸಿಕ್ಕಿದನೆಂದು ಕೆಲವರು ಹೇಳುತಾರೆ.
------
೨೦ನೇ ಅಧ್ಯಾಯ.
ಮೇಲೆ ಹೇಳಿದ ಪ್ರಕಾರ ಚಿತ್ರದುರ್ಗದ ಸಂಸ್ಥಾನ ಹೋಯಿತು.
ಮದಕರಿನಾಯಕನು ಬಹಳ ಬಲಿಷ್ಠನಾದ ದೊರಯಾಗಿದ್ದ ಕಾರಣ ಹೈದ
ರಲ್ಲಿಯು ಮೊದಲು ಈ ಸಂಸ್ಥಾನದೊಡನೆ ಸ್ನೇಹವನ್ನು ಬೆಳೆಯಿಬದನು.
ಮತ್ತು ಚಿತ್ರದುರ್ಗದವರು ಬಲವಾದ ಸಹಾಯವನ್ನು ಕೊಟ್ಟು ನಗರ,
ಬಂಕಾಪುರ ಮೊದಲಾದ ಹಲವು ಸಂಸ್ಥಾನಗಳನ್ನು ಜೈಸಿ ಕೊಟ್ಟು
ಮಾಡಿದ ಉಪಕಾರಕ್ಕೆ ಹೈದರನು ಮದಕರಿನಾಯಕನಿಗೆ ಕೆಲವು
ಅಲ್ಪವಾದ ನಸರನ್ನು ಕಳುಯಿಸಿದನು. ಆದಿಯಲ್ಲಿ ಈ ದೊರೆಗೂ
ಹೈದರಲ್ಲಿಗೂ ವಿಶೇಷವಾಗಿ ಸ್ನೇಹವಿತ್ತು. ಈ ಮೈತ್ರಿ ಒಡೆದು
ಮಧ್ಯೆ ವೈಮನಸ್ಸು ಹುಟ್ಟು ವುದಕ್ಕೆ ಏನುಕಾರಣವಾಯಿತೋ ಪೂರ್ವದ
ಲೇಖನಗಳಿಂದ ಗೊತ್ತಾಗುವುದಿಲ್ಲ. ಪ್ರಾಯೇಣ ಬಲವಾದ ರಾಜ್ಯಗ
ಳನ್ನು ದುರ್ಗದವರು ತಮ್ಮ ಶ್ಲಾಘ್ಯತರವಾದ ಹೋರಾಟದಿಂದ ಗೆದ್ದು
ಕಡೇ ಮದಕರಿನಾಯಕ. ೯೯
ಹೈದರಲ್ಲಿಯ ವSಮಾಡಿದರಷ್ಟೆ. ಇದಕ್ಟೋಸ್ಕರ ಹಿಂದೆ ನಡೆದಿರಬಹು
ದಾದ ಮಾತಿನಂತೆ ಅವನು ನಡೆಯದೆ ತಪ್ಪಿದನೆಂಬ ಅಂಶವು, ಯುದ್ಧ
ಕಾಲದಲ್ಲಿ ಶ್ರೀರಂಗಪಟ್ಟಣದ ವಕೀಲರು ದುರ್ಗಕ್ಕೆ ಬಂದು ನವಾಬನ
ಆಶಯದ ಉದ್ದುರುಟಿನಮಾತನ್ನು ಹೇಳಿದಾಗ ಉತ್ತರವಾಗಿ ಮದಕರಿ
ನಾಯಕನು ಹೇಳಕಳುಹಿಸಿದ ಸಂಗತಿಯಿಂದ ವ್ಯಕ್ತವಾಗುವುದು. ಈ
ದ್ರೋಹವನ್ನು ಮದಕರಿನಾಯಕನು ಮನಸ್ಬುನಲ್ಲಿಟ್ಟು ಕೊಂಡು ಸಮಯ
ವನ್ನು ನಿರೀಕ್ಷಿ ಸುತಿದ್ದನು
ಈ ಹೈದರನ ಪ್ರಾಬಲ್ಯವನ್ನು ಮುರಿದು ಬಿಟ್ಟರೆ ತಂಜಾವೂರ
ವೆಂಕೋಜಿಯ ರಾಜ್ಯವೂ ಸೇರಿ ಆಸೇತು ಹಿಮಾಚಲ ಪರ್ಯಂತವೂ
ಮರಾಟೆಯವರ ಚಕ್ರಾಧಿಪತ್ಯಕ್ಯೆ ಸೇರುವುದೆಂಬ ಕೋರಿಕೆಯಿಂದ
ಪೂನೆ ಶ್ರೀಮಂತ ದೊಡ್ಡ ಮಾಧವರಾವ್ ಪೇಶ್ವೆಯು ನಾಲ್ಕು ಲಕ್ಷ ಫೌಜಿ
ನೊಡನೆ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಲುಬಂದಾಗ, ಈ ಪ್ರಾಂತ
ದಲ್ಲಿ ಬಲವಾದ ಸಂಸ್ಥಾನೀಕನೆನ್ನಿಸಿಕೊಂಡಿದ್ದ ಮದಕರಿನಾಯಕನ ಸಹಾ
ಯವನ್ನು ಕೇಳಲೇ ಬೇಕಾಯಿತು. ಹೀಗೆ ಸ್ಥಳೀಯಸಂಸ್ಕಾನಿಕರು
ಕೆಲವರನ್ನು ತನ್ನ ಮಿತ್ರರನ್ನಾಗಿ ಮಾಡಿಕೊಳ್ಳತಕ್ಕದ್ದು ದೂರದೇಶದಲ್ಲಿ
ಅತಿ ವಿಸ್ತಾರವಾಗಿರುವ ಮರಾಟೆ ಸಂಸ್ಥಾನದ ಆಳಿಕೆಯ ಬಿಗಿಗೆ ಬಂದು
ಅಂಗವೆಂದು ವೇಶ್ಚೆಯು ದೂರವಾದ ದೃಷ್ಟಿಯನ್ನು ಇಟ್ಟು ಕೊಂಡಿ
ದದ್ದನು. ಇತ್ತ ಮದಕರಿನಾಯಕನಿಗಾದರೋ ಹೈದರಮಾಡಿದ ಮೋ
ಸಕ್ಕೆ ದ್ವೇಷವನ್ನು ಸಾಧಿಸಿಕೊಳ್ಳಲು ಬಲಿಷ್ಠರಾದವರ ಸ್ನೇಹ ಅವ
ಶ್ಯಕವಾಯಿತು.
ಈ ಕೆಲಸಹ್ಯೆ ಹೈದರನಿಗಿಂತಲೂ ನೂರುಪಾಲು. ಪ್ರಬಲಕಕ್ಷಿ
ಯಾಗಿ ಬಂದು ಅವನಿಂದಲೂ ಖಂಡಣಿ ಹಣವನು ವಸೂಲ್ಮಾಡಿಕೊಂ
ಡು ಹೋಗುತಾ ಇದ್ದ ಮರಾಟೆಯವರೇ ತಕ್ಕ್ರಗಂಡು ಎಂದು ಅವರ ನೆರ
ವನ್ನು ಪಡೆಯತಕ್ಕದ್ದು ದೂರದೃಷ್ಟಿಯುಕ್ತವಾದ ಒಂದು ರಾಜಕೀಯ
ವೆಂದು ತಿಳದಿದ್ದದು ಸಹಜವಾಗಿದೆ.
ಈ ಪ್ರಕಾರ ಹೈದರಲ್ಲಿಯ ಶತ್ರುಗಳಾದ ಮರಾಟೆಯವರಲ್ಲಿ ಸಖ್ಯ
ವನ್ನು ಮಾಡಿಕೊಂಡು ಮದಕರಿನಾಯಕನು ಶ್ರೀರಂಗಪಟ್ಟಣದ ಮುತ್ತಿ
----------------------------------------
೧೦೦ ಚಿತ್ರದುರ್ಗದ ಪಾಳಯಗಾರರು.
ಗೆಗೂ, ಚಿನಕುರಳೀಕಾಳಗಕ್ಕೂ ಸೇನೆಯೊಡನೆ ಹೋಗಿ ಜಯವನ್ನು
ಹೊಂದಿಬಂದನು. ನವಾಬನಿಗೆ ಇವನಮೇಲೆ ಇನ್ನೂ ದ್ವೇಷ ಹೆಚ್ಚಿತು.
ಇದಕ್ಕೆ ಮುಂಚೆ ಮದಕರಿನಾಯಕನಿಗೆ ವಯಸ್ಸು ಚಿಕ್ಕದಾಗಿ
ದ್ದಾಗ ಹೈದರಲ್ಲಿಯು ದುರ್ಗದ ಸೀಮೆಯ ಕೆಲವು ಗಡಿಗಳನ್ನು ಹಿಡಿದ
ಕಾರಣ ಆ ಸಂಸ್ಥಾನದವರು ಬೀಸುವ ದೊಂಣೆಯನ್ನು ತಪ್ಪಿಸಿಕೊಳ್ಳು
ವುದಕ್ಕಾಗಿ ಆ ನವಾಬ ಹೇಳಿದಂತೆ ಖಂಡಣಿ ೨೦೦೦೦೦, ವರಹ ಹೊ
ಡುವುದಕ್ಕೆ ಒಪ್ಪಿಕೊಂಡಿದ್ದರು. ಈ ಸೀಮೆಯ ಗೋಜಿಗೆ ಆಗಾಗ್ಯೆ
ಬರಲು ಹೈದರನಿಗೆ ಇದು ಒಂದು ನೆಪವಾಯಿತು. ಪ್ರಬಲ ಕಕಷಿಯಾದ
ಮರಾಟೆಯವರ ಸ್ನೇಹವು ದುರ್ಗದ ನಾಯಕನಿಗೆ ಹೆಚ್ಚಾದ ಧೈರ್ಯ
ವನ್ನು ಹುಟ್ಟಸಿದಕಾರಣ, ಆತನು ವರಡು ವರುಪದ ಖಂಡಣಿಯನ್ನುು
ಹೈದರನಿಗೆ ಕೊಡದೆ ನಿಲ್ಲಿಸಿಬಿಟ್ಟ ನು.
ಹಿಂದುಗಳಲ್ಲಿಯೂ ಅವರ ಮತದಲ್ಲಿಯೂ ಟೇಪುಸುಲ್ತಾನನಿಗೆ ವೈರ
ವಿತ್ತು ಎಂದೂ, ಹೈದರನಿಗೆ ಅಂಥ ಮತಸಂಬಂಧವಾದ ವೈರವಿರಲಿಲ್ಲ
ವೆಂದೂ ಹೇಳುವ ಜನವಾರ್ತೆಯು, ಟೇಪುಸುಲ್ಲಾನನಿಗೆ ಇದ್ದ ಸ್ಥಮತಾ
ಭಿಮಾನದ ಆಧಿಕ್ಯವನ್ನು ತೋರಿಸುವುದೇ ಹೊರತು ಹೈದರನಿಗೆ ಇದ್ದ
ಮತವಿಚಾರದ ಸಮದ್ಭಜಷ್ಟಿಯನ್ನು ತೋರಿಸುವುದಿಲ್ಲ. ಇದಕ್ಕೆ ಮುಂದೆ
ಬೇಕಾದಷ್ಟು ಕಾರಣಗಳು ಸೂಚನೆಯಾಗುವವು.
ಇತರ ಸಂಸ್ಥಾನದವರು ಹೇಗೆ ಮಾಡಿದರೂ ತಪ್ಪು ಎಂದು ತನ್ನ
ರಾಜ್ಯವನ್ನು ವಿಸ್ತರಿಸುವ್ರದಕ್ಕೂ, ಅದಕ್ಕಾಗಿ ಜಗಳ ತೆಗೆಯುವುದಕ್ಕೂ
ಕಾಲ ಕೆರೆಯುತ್ತಲೇ ಇದ್ದ ನವಾಬನಿಗೆ ೨ ವರುಷದ ಖಂಡಣಿ ಹಣ
ವನ್ನು ನಿಲ್ಲಿಸಿ ಕೊಂಡದ್ದು ಯುದ್ಧಕ್ಕೆ ಕಾರಣವಾಯಿತು.
ಹೈದರಲ್ಲಿಯ ಸಹಾಯಕ್ಕಾಗಿ ಮದಕರಿನಾಯಕನು ಅನೇಕ
ಯುದ್ಧಗಳಗೂ, ಮುತ್ತಿಗೆಗಳಗೂ ಹೋಗಿ ಅವನ ಕೈಯಲ್ಲಿ ಆಗದ
ಕೋಟೆಗಳನ್ನೆಲ್ಲಾ ಜೈಸಿ ಆ ನವಾಜನಿಗೆ ವಶಮಾಡಿದ್ದೂ ಆ ಯುದ್ಧಗ
ಳಲ್ಲಿ ದುರ್ಗದ ಬೇಡರು ಮಹಾ ಧೈರ್ಯವಾಗಿ ಶತ್ರುಜನಗಳ ತಲೆಯನ್ನು
ತಂದು ತಮ್ಮ ದೊರೆಗೆ ಒಪ್ಪಿಸುತಿದ್ದದೂ, ಸಹಾ ಹೈದರನ ಮೆಚ್ಚಿಗೆ
-----------------------------------------
ಕಡೇ ಮದಕರಿನಾಯಕ. ೧೦೧
ಯನ್ನೂ ಶ್ಲಾಫನೆಯನ್ನೂ ಹೊಂದುವುದಕ್ಕೆ ಬದಲಾಗಿ ಅಸೊಯವನ್ನು
ಹುತಮಾಡಿದವು. ಈ ನವಾಬನು ದುರ್ಗದಮೇಲೆ ದಂಡೆತ್ತಿ ಬರುವು
ದಕ್ಕೆ ಇದೂ ಒಂದು ಕಾರಣವಾಯಿತೆಂದು ಹೇಳಲು ಸಂದೇಹವಿರು
ವುದಿಲ್ಲ.
ದೊರೆಯ ಭಾವಮೈದನಾದ ಮತ್ತೋಡು ಹಾಲಪ್ಪನಾಯಕನು
ಚಿತ್ರದುರ್ಗದ ನಾಯಕನಮೇಲೆ ಯಾವಾಗಲೂ ದ್ವೇಷವನ್ನು ಮಾಡು
ತಿದ್ದನು. ಮುಖ್ಯವಾಗಿ ಇವನ ಬಲವನ್ನು ನಂಬಿ ಹೈದರನು ಆದಿಯಲ್ಲಿ
ದುರ್ಗದ ಗೋವುಗಳನ್ನು ಹಿಡಿಸಿದನು. ಈ ಒಳಗಂಡಕಳ್ಳನ ಕೀಟಿಲೆ
ಯಿಂದ ಖಂಡಣಿಪಾವತಿಯಾದಮೇಲೂ ಕೂಡಾ ಈ ಹಾಲಪ್ಪನೇ ಮತ್ತೆ
ಜಗಳವನ್ನು ತಂದಿಟ್ಟವನು. ಸ್ವಯೂಧ ಕಲಹಕ್ಕಿಂತಲೂ ಅಧಿಕವಾದ
ವಿಷ ಬೇರೆಇಲ್ಲ.
ಇದೆಲ್ಲವೂ ಪಾಳಯಗಾರನಿಗೆ ಗೊತ್ತಿರಲಿಲ್ಲವೆಂದು ಹೇಳಲು ಆಧಾ
ರಸಾಲದು. ತಿಳಿದು ತಿಳದೂ ಹೈದರನಲ್ಲಿ ಮೊದಲು ಸ್ನೇಹಮಾಡಿದ್ದೂ
ತಪ್ಪು, ತರುವಾಯ ದ್ವೇಷವನ್ನು ಬೆಳಸಿದ್ದೂ ತಪ್ಪು.
ಹೈದರನು ಕೇವಲ ಸಾಹಸಿ, ತಂತ್ರಗಾರ, ಸಮಯಬಂದಹಾಗೆ
ತಿರುಗಿಕೊಂಡು ತನ್ನ ಕಾರ್ಯವನ್ನು ಗೆಲ್ಲುವುದರಲ್ಲಿ ಬಹಳ ಸಮರ್ಥ.
ಮದಕರಿನಾಯಕನ ಕಡೆಯಲ್ಲಿ ಮದಕರಿನಾಯಕ ಬಬ್ಬ ಹೊರತು ಹೈದ
ರನ ಸಮಪಾಠಿ ಮನುಪ್ಯುರು ಬೇರೆ ಯಾರೂ ಇರಲಿಲ್ಲ. ಈ ದೊರೆಯು
ಹೈದರನನ್ನು ಗೆಲ್ಲುವುದಕ್ಕೆ ಮಾಡಿದ್ದ ಪ್ರಯತ್ನಗಳೇನೂ ಕಡಮೆಯಾ
ಗಿರಲಿಲ್ಲ. ಮೊಟ್ಟಮೊದಲು ದುರ್ಗದ ಕೋಟೆಯೇ ಬಲವಾದ್ದು.
ಒಳಗೆ ಎಷ್ಟು ಸ್ಪಲ್ಪಸೇನೆ ಇದ್ದಾಗ್ಯೂ ಹೊರಗಡೆ ಇದ್ದ ನಾಲ್ಕರಷ್ಪು
ಸೇನೆಗೆ ಆಸ್ಪದ ಕೊಡಲಿಲ್ಲ. ಯಾವಾಗ ಯಾವಕಡೆ ಹಲ್ಲಾ ಹತ್ತುವು
ದಕ್ಕೆ ಹೋದರೂ ಶತ್ರುಗಳಿಗೆ ಸೋಲಾಗುತ್ತಲೇ ಬಂತು. ಒಂದು
ವರುಷದವರೆಗೂ ಹೀಗೇ ಆಯಿತು. ಆಗ ನವಾಬನು ಯುಕ್ತಿಯಾಗಿ
ಪೊಳ್ಳುಸಮಾಧಾನವನ್ನು ಮಾಡಿಕೊಂಡು ನಾಲ್ಕು ಲಕ್ಷ ವರಹ ಖಂಡಣಿ
ಯನ್ನೂ ತೆಗೆದುಕೊಂಡು ಹೊರಟು ಹೋದಂತೆ ಮಾಡಿದನು. ಮದಕರಿ
---------------------------------------
೧೦೨ ಚಿತ್ರದುರ್ಗದ ಪಾಳಯಗಾರರು.
ನಾಯಕನಿಗೆ ಮರಾಟೆಯವರ ಸಹಾಯದ ವಾಗ್ದಾನ ಒಂದು ಆಸೆಯನ್ನು
ಹುಟ್ಟಿಸಿತ್ತು. ಆಡಿದ ಮಾತಿನಂತೆ ಪೇಶ್ವೆಯು ೫೦ ಸಾವಿರ ಸೇನೆಯ
ನ್ನೇನೋ ಕಳುಯಿಸಿದ, ಆದರೆ ಅವರ ಕಡೆ ಸೇನಾಪತಿಗಳು, ಕೃಷ್ಣಾ
ತುಂಗಭದ್ರಾತೀರದಿಂದ ಈಚೆಗೆ ಬಂದಿದ್ದವರು, ಲಂಚಕ್ಕೆ ಆಶೆಬಿದ್ದು
ಹಿಂತಿರುಗಿದರು. ದುರ್ಗದವರ ಕಡೆ ಇದ್ದ ಜರಿಮಲೆ ಮೊದಲಾದ
ಚಿಲ್ಲರೆ ಪಾಳಯಗಾರರು ಮೊದಲಿನಿಂದಲೂ ದುರ್ಗದ ಕೋಟೆಯ ಮತ್ತು
ಅಲ್ಲಿನ ರಾಜರ ಗುಟ್ಟನ್ನೆಲ್ಲಾ ತಿಳದುಕೊಂಡಿದ್ದು ಒಳ್ಳೇ ಸಮಯದಲ್ಲಿ
ಹೈದರನ ಕಡೆಗೆ ತಿರುಗಿಕೊಂಡು ದೊಡ್ಡ ಒಳಗಂಡ ಕಳ್ಳರಾಗಿ ಹಗೆತನ
ವನ್ನು ಸಾಧಿಸಲು ನಿಂತರು. ದುರ್ಗದ ತುರುಕ ಪ್ರಜೆಗಳೂ, ತುರುಕ
ಅಧಿಕಾರಿಗಳೂ, ಹಾಸಿಗೆ ಹಾವಾಗಿ ತಮ್ಮ ದ್ರೋಹಿತನವನ್ನು ಮತವೈ
ರಕ್ಕಿಂತಲೂ ಹೆಚ್ಚಾಗಿ ತೋರಿಸಿದರು. ದುರ್ಗದ ಮರಾಟೆತುಕಡಿಯವರೂ
ತುರುಕರ ಜೊತೆಗೆ ಸೇರಿಕೊಂಡರು. ಕಡೆಗೆ ದುರ್ಗದ ೫೦ ಸಾವಿರ ದಂಡಿ
ನಲ್ಲಿ ೫ ಸಾವಿರ ಕೂಡಾ ದೊರೆಯ ಸಂಗಡ ಯುದ್ಧಕ್ಕೆ ಹೊರಡಲು ಇಲ್ಲ
ವಾಯಿತು.
ಈ ಪ್ರಕಾರ ಮೋಸದಿಂದಲೇ ದುರ್ಗವು ಶತ್ರುಗಳ ಪಾಲಾಯಿತು.
ಆಗಿದ್ದ ಪಾಳಯಪಟ್ಟನ ರಾಜರುಗಳಲ್ಲೆಲ್ಲಾ ದುರ್ಗದ ದೊರೆಯೇ ಬಹು
ಬಲಿಷ್ಠ, ಈ ಮದಕರಿನಾಯಕತನು ಸ್ವತಃ ಬಲಶಾಲಿ. ಆಲೋಚನಪರ,
ಸ್ವಜನರಲ್ಲಿಯೂ, ಪ್ರಜೆಗಳಲ್ಲಿಯೂ ವಿಶೇಷವಾಗಿ ಅಭಿಮಾನ ಉಳ್ಳ
ವನು, ದೇವರಲ್ಲಿಯೂ ಬ್ರಾಹ್ಮಣರಲ್ಲಿಯೂ, ಭಕ್ತ ರಲ್ಲಿಯೂ, ಹೆಚ್ಚಾಗಿ
ಭಕ್ತಿಯನ್ನಿಟ್ಟುಕೊಂಡಿದ್ದನು. ಇವನಲ್ಲಿ ಇದ್ದ ಓದಾರ್ಯು ಗುಣವು ಆ
ಕಾಲದಲ್ಲಿದ್ದ ಹೈದರ ಮೊದಲಾಗಿ ಯಾವ ಸಮಪಾಠಿ ಸಂಸ್ಥಾನೀಕರಲ್ಲಿ
ಯೂ ಇರಲಿಲ್ಲ. ಯುದ್ಧನಡೆಯುತ್ತಿ ರುವಾಗ ರಣಧೀರರಾದ ಸರದಾರರಿಗೆ
ಈ ದೊರೆಯು ತೋರಿಸಿದ ಗೌರವವೂ, ಕೊಟ್ಟ ಬಹುಮಾನವೂ ತಾವು
ಮಾಡಿದ ಕಾರ್ಯ ನಿರ್ವಾಹಕ್ಕೆ ಅತಿಯಾಗಿ ಮಿತಿಮೀರಿದ್ದೆಂದು ತಿಳದು
ಕೊಂಡು ಆ ಸರದಾರರು ನಾಚಿಕೆಯಿಂದ ಅದನ್ನು ತಿರಸ್ಕರಿಸಿದರು.
ಇಷ್ಟು ಹೊರತು, ಆ ದೊರೆಯು ನೀಡಿದ ಕೊಡಗೈಯ್ಛುನ್ನು. ಹಿಂದಕ್ಕೆ
ತೆಗೆದುಕೊಂಡವನಲ್ಲ. ಈತನು ಯುದ್ಧದಲ್ಲಿ ಬಹುಶೂರ. ಇವನು ಹಿರಿ
---------------------------------------
ಕಡೇ ಮದಕರಿನಾಯಕ. ೧೦೩
ಯರಂತೆಯೇ ವಿಶಷ ಧೈರ್ಯವಂತ, ಪರಾಕ್ರಮಕಾಲಿ, ಯಾವಕೆಲಸ
ವನ್ನೂ ಸಮಯವರಿತು ಆಕ್ಷಣದಲ್ಲಿಯೇ ಮಾಡತಕ್ಕವನು, ಯಾವಕಡೆ
ಯಲ್ಲಿ ಶತ್ರುಗಳ ಕೈ ಜೋರಾದರೆ ಆಕ್ಷಣದಲ್ಲಿಯೇ ಆ ಸ್ಥಳಕ್ಕೆಹೋಗಿ
ತನ್ನ ಜನರಿಗೆ ಧೈರ್ಯವನ್ನು ಕೊಟ್ಟು ಹಗೆಗಳನ್ನು ಓಡಿಸುತಿದ್ದನು.
ಕಡೆಗೂ ಎಷ್ಟು ಸಾಹಸಮಾಡಿದರೂ ಜನಮಾಡಿದ ದ್ರೋಹದಿಂದಲೂ
ಪಿತೂರಿಯಿಂದಲೂ ದುರ್ಗದ ಸಂಸ್ಥಾನವು ಹೈದರನಿಗೆ ಸ್ಕಾಧೀನವಾ
ಯಿತೇ ಹೊರತು ನವಾಬನ ಪರಾಕ್ರ)ಮದಿಂದಲಾಗಲೀ ಮದಕರಿನಾಯ '
ಘನ ಹೇಡಿತನದಿಂದಲಾಗಲಿ ಖಂಡಿತವಾಗಿಯೂ ಅಲ್ಲವೆಂದು ನಿಸ್ಸಂದೇಹ
ವಾಗಿ ಹೇಳಬಹುದು. ಹೀಗೆ ಅನೇಕ ಸುಗುಣಗಳಿದ್ದಾಗ್ಯೂ ಎಂಥಾ
ವೀರರಿಗೂ ಕೂಡಾ ಅತಿಘೋರವಾಗಿ ಕಾಣುವಂಥಾ ಒಂದು ಭೀಭತ್ಸರ
ಸವು ಇವನ ಕೃತ್ಯದಲ್ಲಿ ಕಂಡು ಬರುತಿತ್ತು. ಒಂದಲ್ಲದೆ ಹಲವುಸಾರಿ
ಹೈದರನ ಸಹಾಯಕ್ಕೆ ಹೋಗಿದ್ದಾಗಲೂ ಮರಾಟೆಯವರ ಸಹಾಯಕ್ಕೆ
ಹೋಗಿದ್ದಾಗಲೂ ಶತ್ರುಸೇನೆಯವರ ಶಿರಸ್ಸನ್ನು ಹುಯಿಸಿ ತರಿಸಿ ಆ
ತಲೇ ಬುರುಡೆಗಳ ಜಗಲಿ ಕಟ್ಟಿಸಿ ಅದರ ಮೇಲೆ ಕೂತು ರಕ್ತದ ಅಭಿ
ಷೇಕವನ್ನು ಮಾಡಿಸಿಕೊಂಡ ಭಯಂಕರವಾದ ಕೃತ್ಯವು ಅತಿಭಯಂಕ
ರವಾಗಿ ಕಾಣುವುದು.
ದುರ್ಗವು ಕೈವಶವಾದಮೇಲೆ ಈ ದೊರೆಯ ಬೊಕ್ಕಸದಲ್ಲಿದ್ದು
ಹೆಗೆಗಳ ಕೈಗೆ ಸಿಕ್ಕಿದ ನಾಣ್ಯಗಳ ವಿವರ:
೬,೪೦೦,೦೦೦ ....... ಬೆಳ್ಳೇನಾಣ್ಯ.
೧೦೦,೦೦೦ ...... ರಾಯಲ್.
೧,೩೦೦,೦೦೦ ...... ಅಪರಥಿ.
೦,೨೦೦,೦೦೦ ..... ದಾಜೋಲಿಕದಕಿ,
೧,೦೦೦,೦೦೦ ..... ಚವುರಿ.
ಇದಲ್ಲದೆ ಇನ್ನೂ ಇತರ ಬಂಗಾರದ ನಾಣ್ಯಗಳು ವಿಶೇಷವಾಗಿ
ದವು, ಯಾವವೆಂದರೆ:
೧ ಗಬರು. ೧ ಪ್ರಿಯಕಾವೇರಿ.
----------------------------------
೧೦೪ ಚಿತ್ರದುರ್ಗದ ಪಾಳಯಗಾರರು.
೧ ಮೊಹರು.
೧ಪುತಲಿ.
೧ಶಿವರಾಯಿ ಹೊನ್ನು.
೧ಬಾದಪಾಹಿಹೊ ನ್ನು.
೧ಸಂಣಗಿರಿ.
೧ಅಚ್ಛುತರಾಯಿ,
೧ದೇವರಾಯಿ,
೧ರಾಮರಾಯಿ.
೧ಜಾತಮಾಹಿಸಾ.
ಧಾರವಾಡಿ.
೧ಪ್ರಳಯಗಲುರ.
೧ಪಾಪನಾಯಕಿ ಹೊ ನ್ನು.
೧ಆದವಾನಿಹೊ ನ್ನು.
೧ತಾಡಪತ್ರೆಹೊnfನು.
೧ಹಿಂದೆಹೊ ನ್ನು.
೧ನಿಷಾನಿಖಲು.
೧ಕಲ್ಲುಕುಂ ಟೆ
೧ದುರ್ಗಿ.
೧ಇಕ್ಟೇರಿ
-----
'ಚಿತ್ರದುರ್ಗದ ಸಂಸ್ಥಾನದ ವಾಲ್ಮೀಕಿ ಕುಲದ ಕಾಮಗೇತಿ ವಂಶದ
ನಾಯಕರು ಚಿತ್ರದುರ್ಗದಲ್ಲಿ ಆಳಿದ್ದು.
ಮತ್ತಿ ಸಂತತಿ,
ವರುಷಗಳು.
೧ ಮತ್ತಿ ತಿಮ್ಮಂಣನಾಯಕ ಮೂಲಪುರುಷ, ಶಕ
೧೪೯೦ನೇ ವಿಭವ ಸಂ॥ ದಿಂದ ೧೫೧೧ ನೇ
ಸರ್ವಧಾರಿ ಸಂ॥ ದ ವರೆಗೆ ಆಳಿದ್ದು ೨೧
೨ ಈತನ ಮಗ ದಧ್ಯನ್ನದ ಓಬಂಣನಾಯಕ, ಶ||
೧೫೧೧ ನೇ ವಿರೋಧಿ ಸಂ|| ದಿಂದ ೧೫೦೫ನೇ
ಶೋಭಕೃತ್ ಸಂ|| ದ ವರೆಗೆ ಆಳಿದ್ದು. (ಈ
ದೊರೆಗೆ ರಸಸಿದ್ದರು “ಮದಕರಿ” ಎಂದು
ಬಿರುದು ಕೊಟ್ಟರು ಈತನನ್ನು ಗುಡ್ಡದ
ಮದಕರಿನಾಯಕ ಎಂತಲೂ ಕರೆಯುತಾರೆ)... ೧೫
೩ ಈತನ ಮಗ ಕಸ್ತೂರಿ ರಂಗಪ್ಪನಾಯಕ, ಶಕ||
೧೫೨೫ ನೇ ಶೋಭಕೃತ್ ಸಂ|| ದಿಂದ ೧೫೭೮
ನೇ ನಂದನ ಸಂ! ದ ವರೆಗೆ ೪೯
೪ ಈತನ ಮಗ ಇಮ್ಮಡಿ ಮದಕರಿನಾಯಕ, ಶ||
೧೫೭೫ ನೇ ನಂದನ ಸಂ|| ದಿಂದ ಶ॥
೧೫೯೬-೩ ನೇ ಆನಂದ ಸಂ|| ದ ವರೆಗೆ ... ೨೨
ಈ ಮದಕರಿನಾಯಕನಿಗೆ ಮಕ್ಕಳಿಲ್ಲ ಈತನ
ತಮ್ಮನ ಸಾಕು ಮಗ ಓಬಂಣನಾಯಕನಿಗೆ
ಪಟ್ಟಾ ಕಟ್ಟಿದರು. ಮಂದಿಗೆ ಪಟ್ಟಗಾಣಿಕೆ
ಕೊಡಲಿಲ್ಲವೆಂದು ದಳವಾಯಿಗಳು ಎದುರು
ಬಿದ್ದು ಓಬಂಣನಾಯಕನ ತಲೇ ಒಡೆದರು.
ಈ ಗಲಭೆಯಕಾಲ ಪರಿಮಿತಿ ೩ || ತಿಂಗಳು
--------------------------------------
೨
೫ ಚಿಕ್ಕಂಣನಾಯಕ ಶ|| ೧೫೯೭ನೇ ರಾಕ್ಷ ಸ ಸಂ॥
ದಿಂದ ಶ॥ ೧೬೦೮ ನೇ ಅಕ್ಷಯ ಸಂ||ದವರೆಗೆ. ೧೨
೬ ಚಿಕ್ಕಂಣನಾಯಕನ ಅಂಣ ಮುಮ್ಮುಡಿ ಮದಕರಿನಾ
ಯಕ, ಶ|| ೧೬೦೮ ನೇ ಅಕ್ಷಯ ಸಂ|| ದಿಂದ
ಶ ೧೬೧೧ನೇ ಶುಕ್ಲ ಸಂ|| ದ ವರೆಗೆ .. ೩
ಈ ಕಾಲದಲ್ಲಿ ದಳವಾಯಿ ಮುದ್ಭಂಣ ಮುಮ್ಮುಡಿ ಮದಕರಿನಾಯಕ
ನನ್ನು ಕೊಲ್ಲಿಸಿ ಹಾವಳಮಾಡಿ ತಾನೇ ರಾಜ್ಯವಾಳಲು ಆರಂಭಿಸಿದ್ದು.
ಇಲ್ಲಿಗೆ ಮತ್ತಿ ಸಂತತಿ ನಿರ್ವಂಶವಾಯಿತು. ಒಟ್ಟು ೬ ಜನ ಆಳಿದ್ದು.
ವರುಪ ೧೨೨
ಬಿಳಿಚೋಡು ಸಂತತಿ.
೭ ಭರಮಪುನಾಯಕ ಶ॥ ೧೬೧೧ನೇ ಶುಕ್ಲ ಸಂ||
ದಿಂದ ಶ॥ ೧೬೪೩. ನೇ ಪ್ಲವ ಸಂ॥ ದವರೆಗೆ... ೩೨
೮ ಈತನ ಮಗ ಹಿರೀ ಮದಕರಿನಾಯಕ ಶ|| ೧೬೪೨
ನೇ ಪ್ಲವ ಸಂ|| ದಿಂದ ಶ ೧೬೭೦ ನೇ ವಿಭವ
ಸಂ॥ದ ವರೆಗೆ ೨೩
೯ ಈತನ ಮಗ ಇಮ್ಮಡಿ ಕಸ್ತೂರಿ ರಂಗಪ್ಪನಾಯಕ
ಶ|| ೧೬೭೦ನೇ ವಿಭವ ಸಂಗ ದಿಂದ ಶ॥
೧೬೭೬ನೇ ಭಾವ ಸಂ|| ದ ವರೆಗೆ ೬
೧೦ ಕಡೇ ಮದಕರಿನಾಯಕ ಶ|| ೧೬೭೬ನೇ ಭಾವ
ಸಂ॥ ದಿಂದ ಶ|| ೧೭೦೦ ನೇ ವಿಳಂಬಿ ಸಂ||ದ
ವರೆಗೆ ೨೪
ಅಂತು ಎರಡು ಸಂತತಿಯಿಂದ ಒಟ್ಟು ೧೦ ಜನ ದೊರೆಗಳು ಆಳದ
ವರುಪ ೨೧೧.
---------------------------------------
ಅಪೂರ್ವವಾದ ಶಬ್ದಗಳ ಅರ್ಥಸಹಿತವಾದ
ಪಟ್ಟಿ.
ಆ
ಅಂಪುಗಕೊಡು--ಅಪ್ಪಣೆ ಕೊಡು,
ಇ
ಏಕನಾಥಮ್ಮನನ್ನು ಇದಿರೆತ್ತು-ಏಕನಾಥಮ್ಹ ದೇವರ ಹೆಸರಿನಿಂದ
ಪೂಜೆ ಮಾಡುವುದು. (ಆ ದೇವರ ಹೆಸರ
ಹೇಳಿ ಬೇರೇ ಸ್ಥಳದಲ್ಲಿ ಆ ದೇವರ ಪೂಜೆ
ಮಾಡುವುದು.)
ಉ
ಉಲುಪೆ- ಒಂದು ಕೆಲಸಕ್ಕೆ ಬೇಕಾಗುವ ಪದಾರ್ಥ
ವನ್ನು ಅಥವಾ ಹಣವನ್ನು ಜನರು ತಂತಮ್ಮ
ಕೈ ಲಾದಮಟ್ಟ ಗೆ ಹಂಚಿಕೊಂಡು ಕೊಡುವ
ಭಾಗ ಅಥವಾ ಚಂದ.
ಎ
ಎಕ್ಕಂಡೆ ಸಿಪಾಯಿಗಳು- ಉದ್ದ, ಗಾತ್ರ, ತಕ್ಕಹಾಗೆ ಬಲವಾಗಿರುವ
ಸಿಪಾಯಿಗಳು.
ಕ
ಕಂಪಳ--ಗುಂಪು ಅಥವಾ ಪರಿವಾರ, ಕೂಟ,
ಕೈ ಜೀತದ ಆಳು- ಸರ್ಕಾರದ ಸಂಬಳವಿಲ್ಲದೆ ಸ್ವಂತವಾಗಿ ಸಂಬಳ
ಕೊಡತಕ್ಕ ಆಳಿಗೆ ಸಂಬಳದಾಳು ಎಂದು
ಹೆಸರು.
ಜೀತ-ಹಣ ಸಾಲಾತೆಗೆದುಹೊಂಡು ಅನ್ನ ಬಟ್ಟೆ ತೆಗೆ
ದುಕೊಳ್ಳುತಾ ಸಾಲಾ ತೀರುವತನಕ ಆಳು
ಚಾಕರಿಮಾಡಿದರೆ ಆ ಚಾಕರಿಗೆ ಜೀತವೆಂದು
--------------------------------
೨
ಹೆಸರು. ಅಂಥಾ ಕೆಲಸವನ್ನು ಮಾಡುವ
ಆಳಿಗೆ ಜೇತಗಾರ ಎಂದು ಹೆಸರು.
ಕೊಲ್ಲಾರಿ--ಮುಖಂಡರು ; ಹುದ್ದೇದಾರರು ; ಪ್ರಮು
ಖರು.
ಕೋವಿ--ಜಾವಿಗೆ ಬತ್ತಿಯನ್ನು ಕಬ್ಬಿಣದ ನಾಳದ ಕಿವಿ
ಗೆ ತೋರಿಸಿ ಹಾರಿಸುವ ಬಂದೂಖು. ಇದ
ಕ್ಕೆ ಕರ್ಣಾಟಿಕ ಬಂದೂಯ ಎಂತಲೂ ಹೇ
ಳುತಾರೆ
ಖ
ಖಂಡಣಿ ಹಣ--ಗೊತ್ತಾದ ಪೊಗದಿ ಹಣ.
ಖಡೆ-- ಕೈಗೆ ಹಾಕುವ ಬೆಳ್ಳಿ ಅಥವಾ ಚಿನ್ನದ ಬಳೆ.
ಒಂದು ಬಿರುದು.
ಗ
ಗುಡ್ಡೆ ಮಾಡು- ಹೆಣವನ್ನು ನೆಲದಲ್ಲಿ ಹೂಳಿ ಮಂಣುಗುಡ್ಡೇ
ಮಾಡುವುದು ಆಥವಾ ಸಮಾಧಿ ಮಾಡು
ವುದು.
ಗುರದಕತ್ತಿ-
ಗೋಲಂದಾಸು--ಫಿರಂಗಿಹಾರಿಸುವ ಸಿಪಾಯಿಗಳು-
ಛ
ಛತ್ರಪತಿ ಖಡೆಯಕೋವಂತ-ಬಿರುದು.
ಜ
ಜಾಸೂದು ವೇಷಧಾರಿಗಳು--ಗೂಢಚಾರರು.
ತ
ತಾಕುವೇಕಿನ ಮಾತು- ಲಕ್ಷ್ಯವಿಲ್ಲದೆ ಅಹಂಕಾರದಿಂದ ಆಡುವ ತಿರ
ಸ್ಕಾರದಮಾತು.
ತಳಿಸುರಂಗ -
-------------------------------
೩
ದ
ದೆಸೆಗಟ್ಚಿನಧೂಳಿತ--ಸಂಣಗಿರುವ ಮಂಣಿನ ಹುಡಿಗೆ ಧೂಳು
ಎಂದು ಹೆಸರು. ಕಡೇತ ಕಾರವು ತದ್ಧಿತ
ಪ್ರತ್ಯಯವಾಗಿ ಬಂದಿದೆ ರೂಢಿಯಲ್ಲಿ ದೇವರ
ಪದದಲ್ಲಿರುವ ಧೂಳು, ಅಥವಾ ವಿಭೂತಿಗೆ
ಈ ಹೆಸರು ಬಂದಿದೆ, ಇದಕ್ಕೆ ಪಾದರೇಣು
ವೆಂದು ಸಹಾ ವಾಡಿಕೆ ಇದೆ.
ದರಶನ ಕಟ್ಟುವುದು- ಜೋಗಿತ್ತೀರಹಾಗೆ ಬಿಳೀಮಣಿ, ಹೆವಳದ
ಮಣಿ ಸರಹಾಕಿಕೊಳ್ಳ ವುದು.
ದಂಡಕ- ವಿಧಿ, ವಾಡಿಕೆ.
ದಬದಬ ಕಟ್ಟುವುದು- ಎತ್ತರವಾದ ತಿಟ್ಟು, ಜಗಲಿ, ಮೇಲೆ ಫಿರಂಗಿ
ಇಡುವುದು.
ಧರ್ಮ ಕಹಳೆ--ಯುದ್ಧ ನಡೆಯುತಿರುವಾಗ ಜಗಳವನ್ನು
ನಿಲ್ಲಿಸಬೇಕೆಂದು ಊದುವ ಕಹಳೆ ಅಥವಾ
ಕೊಂಬು; ಇದು ಅರಿಸಮಾಸವಾದರೂ ರೂಢಿ
ಯಲ್ಲಿ ಪೂರ್ವದಿಂದಲೂ ಪ್ರ'ಯೋಗದಲ್ಲಿದೆ,
ದಿವಾಣ- ಸರ್ಕಾರ (ರೆವಿನ್ಫೂ) ಬೊಕ್ಕಸ.
ನ
ನಾಗತಿ--ನಾಯಕನ ಹೆಂಡತಿ ನಾಯಿಕಿತಿ, ಉಚ್ಚಾರಣೆ
ವೇಗವಾಗಿ ಮಾಡುವುದರಿಂದ ಶಬ್ದವು ಈ
ರೂಪವನ್ನು ಹೊಂದಿದಂತೆ ತೋರುತ್ತೆ.
ನಾಕಚಾಪು--ಚಿಲ್ಲರೆ ಸಾಮಾನುಗಳನ್ನು ಹಾಕಿ ಸಿಪಾಯಿ
ಗಳು ಬೆನ್ನಿಗೆ ಕಟ್ಟಿ ಕೊಳ್ಳುವ ಚೀಲ. ನ್ಯಾ
ಪ್‌ಸ್ಟಾಕ್ ಎಂಬ ಇಂಗ್ಲೀಪ್ ಶಬ್ಬಕೆಟ್ಟು
ಈ ಶಬ್ದ ಹುಟ್ಟರುವಂತೆ ಕಾಣುತ್ತೆ.
ನೆಟ್ಟಫಿರಂಗಿ- ಬಂದು ಕಡೆ ಇಟ್ಟಿರುವ ಫಿರಂಗಿ ಎಂದುಹೇ
ಳುತಾರೆ.
------------------------------------
೪
ಪ
ಪಂಚಮರು-ಬಲಗೈಯವರು ಅಥವಾ ಹೊಲೆಯರಿಗೆ
ಈ ಹೆಸರು ಬಂದಿದೆ. ಆದರೆ ಶಿವಭಕ್ತರಲ್ಲಿ
ಪಂಚಾಚಾರದವರು ಎಂದು ಇದಾರೆ, ಸಾಧಾ
ರಣ ಶಿವಭಕ್ತರಿಗೂ ಪಂಚಮರಿಗೂ ಆಟಾ
ರದಲ್ಲಿ ಸ್ಪಲ್ಪ ಭೇದವಿದೆ ಎನ್ನುತಾರೆ.
ಪಾಯಿನ ಖಿಲ್ಲೆ -ಬಲವಾಗಿರಲು ಚಿತ್ರದುರ್ಗದ ಬೆಟ್ಟದಮೇಲೆ
ಹಿಂಭಾಗದಲ್ಲಿ ಕಟ್ಟಿರುವ ಮೇಲ್ಗಡೆಕೋಟೆ.
ಪ್ರಾಣತಾಣಪರಾಯಣರು-ಪ್ರಾಣವನ್ನು ಕಾಪಾಡಿಕೊಳ್ಳುವುದೇ ಮು
ಖ್ಯೋದ್ದೇಶವಾಗಿರತಕ್ಕವರು.
ಫೌಜುದಾರಿ--ದಂಡಿನ ಒಂದೊಂದು ತುಕಡಿ ಇಟ್ಟುಕೊಂಡು
ಅದಕ್ಕೆ ಅಧಿಕಾರ ಮಾಡುವುದು. ಇದೇ
ಇದಕ್ಕೆ ಮೊದಲ ಅರ್ಥ. ಒಂದೊಂದು ಪ್ರಾಂ
ತದಲ್ಲಿ ರಾಜ್ಯದ ಆಡಳತ ನಡಿಸುವುದಕ್ಕೋ
ಸ್ಕರ ಇರತಕ್ಕ ಅಧಿಕಾರಿಗಳಗೂ ಈಚೆಗೆ
ಈ ಹೆಸರು ಬಂತು. ಇದು ಡೆಪ್ಯುಟಿಕ
ಮಾಷನರ ಹುದ್ದೆಗೆ ಸಮಾನವಾದ್ದು.
ಬ
ಬಿಚ್ಚ ಭರಂಗಿ--ದೊರೆಯ ಸಂಗಡ ತೆಗೆದುಕೊಂಡುಹೋ
ಗುವ ಆಯುಧ,
ಬಿರಾದರಿ--ಕುದುರೇಸೇನೆಯ ಒಂದು ಭಾಗ. ಸವಾರ
ಕಚೇರಿ ಇಲಾಖೆಯಲ್ಲಿ ಬಿರಾದರಿಗೆ ಇರಬೇ
ಕಾದ ಕುದುರೆ ಸಂಖ್ಯೆಯನ್ನು ಗೊತ್ತುಮಾ
ಡಿದಾರೆ,
ಬೇಡೆಹಾಕು-ಮುತ್ತಿಗೆ ಹಾಳು.
ಭ
ಭಾರಿನಿಗಳಾಂಕ-- ಭಾರಿ-ಸಿಂಹ, ನಿಗಳ-ಬೇ ಡಿ.
-------------------------------
೫
ಮ
ಮರೋಲಿ, ಚೇಳುಗಟ್ಟದ--ಮರೆ-ಮರಸು, ತಪ್ಪಲು-ಕಿಬ್ಬೆ.
ಮಕಳ ರಡಿಬ್ಬಿ--
ರ
ರೊಪ್ಪ--ಮನುಷ್ಯುರ ಅಥವಾ ಕುರಿದನ ಮೊದಲಾದ
ಜಂತುಗಳ ಸಂರಕ್ಷಣೆಗಾಗಿ ಸುತ್ತಲೂ ಮು
ಳ್ಳಬೇಲಿ ಹಾಕಿರುವ ಆವರಣ.
ಲ
ಲಡಾಯಿ--ಯುದ್ಧ.
ಲಗ್ಗೆ- ಮುತ್ತಿಗೆ -ಕದನ.
ಷ
ಷುತರ್ ನಾಲ್ -
ಸಮ್ಮಾಳಗೆಗೆ ಹಾಕು. -
ಸರ್ಜ--ಮಣಿ, ರತ್ನ (ಗಂಡುಗೊಡಲಿಯ ಸರ್ಜ- ಗಂಡು
ಗೊಡಲಿ ಹಿಡಿದು ಯುದ್ಧಮಾಡುವವರಲ್ಲಿ
ರತ್ನಪ್ರಾಯ),
ಸಂದಣಿ ಸವಾರ -
ಸೂಲದ ಮರದಮೇಲಿನ ಫಿರಂಗಿ -
ಸೊನ್ನೇಬಾಣ- ಬಿಟ್ಟಿ ಕೂಡಲೇ ಸುತ್ತಿಕೊಂಡು ಸುತ್ತಿ ಕೊಂ
ಡು ಹೋಗಿ ಹೆಚ್ಚಾದ ಅಪಾಯವನ್ನುಂಟು
ಮಾಡುವ ಬಾಣ.
ಸ್ವಾರಿ ಫಿರಂಗಿ- ದೊರೆಯ ಸಂಗಡ ತೆಗೆದುಕೊಂಡು ಹೋಗು
ವ ಕತ್ತಿ. ಇದನ್ನು ಸ್ವಾರಿ ಫಿರಂಗಿ ಎಂ
ತಲೂ ಬರೆಯುತಾರೆ.
ಹ
ಹತ್ಯಾರ್ ದಲ್ -
ಹಜರತ್ತು ಮುಕ್ಕಂಣ ಪಂಚಕಸೆಭಲ್ಲೆ--
ಹೊಲಬು--ಸರಹದ್ದು.
---------------------------------
ಕಾಲಾನುಸರಣಿಕೆ.
ಶ॥- ಶಾಲೀವಾಹನ ಶಕ.
ಕ್ರಿ॥- ಕ್ರಿಸ್ತಶಕ.
ಶ||೧೪೭೮, ಕ್ರ ೧೫೫೫, ನಳಸಂವತ್ಸರದಲ್ಲಿ:
ಚಿತ್ರದುರ್ಗಕ್ಕೆ ನಾಡ ತಳವಾರರು ಬಂದದ್ದು, ರಾಜ್ಯಸ್ಥಾಪನೆ.
ಶ||೧೪೯೦, ಕ್ರಿ|| ೧೫೬೭, ವಿಭವ ಸಂ|| ದಲ್ಲಿ:
ವಿಜಯನಗರದ ರಾಜರು ತಿಮ್ಹಂಣನಾಯಕನನ್ನುು ಚಿತ್ರದುರ್ಗಕ್ಕೆ
ನಾಯಕನನ್ನಾಗಿ ನೇಮಿಸಿದ್ದು.
ಶ||೧೪೯೨, ಕ್ರಿ|| ೧೫೬೯, ಪ್ರಮೋದೂತ:
ತಿಮ್ಹಂಣವಾಯಕನ ಮದುವೆ. ರಂಗಪಟ್ಟಣ ಕಟ್ಟಿದ್ದು.
ಶ||೧೪೯೪, ಕ್ರಿ|| ೧೫೭೧, ಆಂಗೀರಸ ಸಂ|| ದಲ್ಲಿ:
ತರೀಕೆರೆ ದಂಡು ಬಂದು ರಂಗಪಟ್ಟಣಕ್ಕೆ ಲಗ್ಗೆ ಹಾಕಿದ್ದು.
ಶ||೧೪೯೫, ಕ್ರಿ|| ೧೫೭೨, ಶ್ರೀಮುಖಸಂ|| ದಲ್ಲಿ:
ಮೇಲ್ ದುರ್ಗದ ಅರಮನೆ ಕಟ್ಟದ್ದು. ತಿಮ್ಮಂಣನಾಯಕನಿಗೆ
ವಿಜಯನಗರದ ಚಕ್ರವರ್ತಿಗಳು ದುರ್ಗದ ನಾಯಕತನ ಕೊ
ಟ್ಟದ್ದು.
ಶ||೧೫೦೨, ಕ್ರಿ|| ೧೫೬೯, ವಿಕ್ರಮ ಸಂ|| ದಲ್ಲಿ:
ಸಾಳೋ ನರಸಂಗರಾಯ ದುರ್ಗಕ್ಕೆ ಮುತ್ತಿಗೆ ಹಾಕಿದ್ದು.
ಶ||೧೫೦೪, ಕ್ರಿ|| ೧೫೮೧, ಚಿತ್ರಭಾನು ಸಂ|| ದಲ್ಲಿ:
ತಿಮ್ಮಂಣನಾಯ ಕಲ್‌ಬರ್ಗೀಗೆ ಮುತ್ತಿಗೆ ಹಾಕಿದ್ದು; ಇವನಿಗೆ
ವಿಜಯನಗರದ ರಾಜರು “ಹಗಲುಕಗ್ಗೋಲೆಮಾನ್ಯ'' ಎಂದು
ಬಿರದುಕೊಟ್ಟದ್ದು.
ಶ||೧೫೧೦, ಕ್ರಿ|| ೧೫೮೭, ಸರ್ವಧಾರಿ ಸಂ|| ದಲ್ಲಿ:
ಓಬಳಂಣನಾಯಕ ವಿಜಯನಗರದಿಂದ ದುರ್ಗಕ್ಕೆ ಬಂದದ್ದು.
----------------------------------------
೨
ಶ|| ೧೫೧೧, ಕ್ರಿ|| ೧೫೯೮, ವಿರೋಧಿ ಸಂ॥ ದಲ್ಲಿ:
ವಿಜಯನಗರದವರ ಅಧಿರಾಜತ್ಸು ಚಿತ್ತ್ರದುರ್ಗದಮೇಲೆ ತಪ್ಪಿ
ಹೋದ್ದು.
ಶ|| ೧೫೨೫, ಕ್ರಿ|| ೧೬೦೨, ಶೋಭಕೃತು ಸಂ|| ದಲ್ಲಿ:
ಓಬಳಂಇನಾಯಕನ ಮರಣ, ಕಸ್ತೂರಿರಂಗಪ್ಪುನಾಯಕನಿಗೆ
ಪಟ್ಟ.
ಶ॥ ೧೫೨೮, ಕ್ರಿ|| ೧೬೦೫ ಪರಾಭವ ಸಂ|| ದಲ್ಲಿ:
ಕಸ್ತೂರಿ ರಂಗಪ್ಪನಾಯಕನ ಮದುವೆ; ರಂಗಪಟ್ಟಣ ಪುನಃ
ಕಟ್ಟಿದ್ದು.
ಶ॥ ೧೫೫೪, ಕ್ರಿ|| ೧೬೩೧, ಆಂಗೀರಸ ಸಂ ದಲ್ಲಿ:
ತರೀಕೆರೆಯ ಪೂವಲ ಹನುಮಪ್ಪನಾಯಕನು ಚಿತ್ರಹಳ್ಳಿ ಮುಂ
ತಾದ ೫ ಗಡಿ ದುರ್ಗಗಳಿಗೆ ಮುತ್ತಿಗೆ ಹಾಕಿದ್ದು.
ಶ|| ೧೫೫೫, ಕ್ರಿ|| ೧೬೩೨, ಶ್ರೀಮುಖ ಸಂ|| ದಲ್ಲಿ
ದುರ್ಗದ ಅರಮನೆ ಸುತ್ತಿನ ಕೋಟೆ ಕಟ್ಟಿದ್ದು.
ಶ॥ ೧೫೫೮, ಕ್ರಿ|| ೧೬೩೫ ಧಾತು ಸಂ|| ದಲ್ಲಿ:
ತರೀಕೆರೆ ಪಾಳಯಗಾರರು ದುರ್ಗದಮೇಲೆ ದಂಡೆತ್ತಿ ಬಂದು
ಸೋತು ಹೋದದ್ದು.
ಶ॥ ೧೫೫೮, ಕ್ರಿ|| ೧೬೩೬, ಧಾತು-ಈಶ್ವರ ಸಂ ದಲ್ಲಿ.
ಹರಪನ ಹಳ್ಳಿಯವರ ಮೇಲೆ ಯುದ್ಧ. ಅವರು ಸೋತುಹೋ
ದ್ದು. ಕಸ್ತೂರಿ ರಂಗಪ್ಪನಾಯಕನ ಅಳಿಯ ಕೃಷ್ಣಪ್ಪ ಪಿತೂ
ರಿಯಿಂದ ರಾತ್ರೆ ಸೇನೆಯೊಡನೆ ಕೋಟೆಯೊಳಕ್ಕೆ ನುಗ್ಗಿದ್ದು.
ಕುಮಾರ ಮದಕರಿಯಂಣ (ಸರ್ಜೆರಾಯ) ನ ಪರಾಕ್ರಮ.
ಶ॥ ೧೫೬೦, ಕ್ರಿ|| ೧೬೩೭, ಈಶ್ವರ ಸಂ|| ದಲ್ಲಿ,
ಸೀರ್ಯದ ರಂಗಪ್ಪನಾಯಕ ಹಿರಿಯೂರಿಗೆ ಮುತ್ತಿಗೆ ಹಾಕಿದ್ದು,
---------------------------------------
೩
ಶ|| ೧೫೬೧, ಕ್ರಿ|| ೧೬೩೮, ಬಹುಧಾನ್ಯ ಸಂ॥ ದಲ್ಲಿ.
ಸರ್ಜೆರಾಯನ ಮದುವೆ.
ಶ||೧೫೬೭, ಕ್ರಿ|| ೧೬೪೪, ತಾರಣ ಸಂ|| ದಲ್ಲಿ.
ಸರ್ಜೆರಾಯನ ಮರಣ.
ಶ||೧೫೭೫, ಕ್ರಿ|| ೧೬೫೨, ನಂದನ ಸಂ|| ದಲ್ಲಿ.
ಕಸ್ತೂರಿ ರಂಗಪ್ಪನಾಯಕನ ಮರಣ. ಇಮ್ಮಡಿ ಮದಕರಿನಾ
ಯಕನ ಪಟ್ಟಾಭಿಪೇಕ.
ಶ|| ೧೫೬೬, ಕ್ರಿ||! ೧೬೫೩, ವಿಜಯ ಸಂ|| ದಲ್ಲಿ.
ತರೀಕೆರೆ ಪಾಳಯಗಾರರೊಡನೆ ಯುದ್ಧ.
ಶ||೧೫೮೫ ಕ್ರಿ|| ೧೬೬೨, ಶುಭಕೃತ್ ಸಂ॥ ದಲ್ಲಿ.
ಹಿರಿಯೂರ ಕೋಟೆ ಮುತ್ತಿಗೆ.
ಶ|| ೧೫೯೬-೭, ಕ್ರಿ|| ೧೬೭೩-೪. ಆನಂದ-ರಾಕ್ಷಸ ಸಂ||ದಲ್ಲಿ-
ಇಮ್ಮುಡಿ ಮದಕರಿನಾಯಕನ ಮರಣ, ಇವನ ಸಾಕುಮಗ ಓ
ಬಳಂಣನಿಗೆ ಪಟ್ಟವಾದ್ದು, ಠಾಣೆ ಗುರಿಕಾರರೂ, ದಂಡಿನ
ವರೂ ದಂಗೆ ಎದ್ದದು. ಹೊಸದೊರೆ ಓಬಂಣನ ತಲೆ ಹು
ಯಿದದ್ದು. ಚಿಕ್ಕಂಣನಿಗೆ ಪಟ್ಟವಾದ್ದು.
ಶ|| ೧೫೯೮, ಕ್ರಿ|| ೧೬೭೫ ನಳ ಸಂ|| ದಲ್ಲಿ.
ನಿಡಗಲ್ಲವರು ಸಾಣೇಕೆರೆಗೆ ಮುತ್ತಿಗೆ ಹಾಕಿದ್ದು. ಹರಪನಹಳ್ಳಿ
ಯವರೊಡನೆ ಯುದ್ಧ.
ಶ||೧೫೯೯, ಕ್ರಿ|| ೧೬೭೬, ಪೈಂಗಳ ಸಂ॥ ದಲ್ಲಿ.
ಮೊಗಲಾಯರ ಷಂಷೇರ್ ಖಾನನ ದಂಡು ಹೆರಿಹರವನ್ನು ಮು
ತ್ತಿದ್ದು.
ಶ|| ೧೬೦೦, ಕ್ರಿ|| ೧೬೭೭, ಕಾಳಾಯುಕ್ತಿ ಸಂ|| ದಲ್ಲಿ.
ಅರಮನೆಯವರೆಲ್ಲರೂ ಲಿಂಗವಂತರಾಗಿ ನಾಲ್ಯು ತಿಂಗಳಲ್ಲಿ ಆ
ಮತವನ್ನು ಬಿಟ್ಟದ್ದು.
----------------------------------------
೪
ಶ|| ೧೬೦೧, ಕ್ರಿ|| ೧೬೭೮, ಸಿದ್ಧಾರ್ಥಿ ಸಂ] ದಲ್ಲಿ.
ದೊರೆಯ ಚಂದ್ರಾಯುಧಕ್ಕೆ ಮದುವೆಯಾದ್ದು.
ಶ||೧೬೦೨, ಕ್ರಿ|| ೧೬೭೯, ರೌದ್ರಿ ಸಂ ದಲ್ಲಿ.
ರಣದುಲ್ಲಾ ಖಾನನ ಹಾವಳಯೇ ಮೊದಲಾದ ಯುದ್ಧ ಪ್ರಸಕ್ತಿ.
ಶ||೧೬೦೭, ಕ್ರಿ|| ೧೬೮೪, ಕ್ರೋಧನ ಸಂ ದಲ್ಲಿ.
ಹರಪನಹಳ್ಳಿಯವರೊಡನೆ ಕದನ, ದುರ್ಗದವರಿಗೆ ಅಪಜಯ.
ಶ||೧೬೦೮, ಕ್ರಿ|| ೧೬೮೫, ಅಕ್ಷಯ ಸಂ॥ ದಲ್ಲಿ.
ಚಿಕ್ಕಂಣನಾಯಕನ ನಿರ್ವಾಣ. ಇವರ ಅಂಣ ಮುಮ್ಚುಡಿ ಮದ
ಕರಿನಾಯಕನಿಗೆ ಪಟ್ಟ.
ಶ||೧೬೧೦, ಕ್ರಿ||೧೬೮೭, ವಿಭವ ಸಂ॥ ದಲ್ಲಿ.
ದಳವಾಯಿ ಮುದ್ದಂಣನ ಹಾವಳಿ, ಮುಮ್ಮುಡಿ ಮದಕರಿನಾಯಕ
ನನ್ನು ಸೇನೆಯವರು ಕೊಂದದ್ದು, ಮತ್ತಿ ವಂಶ ನಿಸ್ಸಂತತಿ
ಯಾದದ್ದು, ದಳವಾಯಿಯು ರಾಜ್ಯವಾಳಲು ಆರಂಭಿಸಿದ್ಲು,
ದೊಂಣೆ ರಂಗಪ್ಪನನ್ನು ನೆಪಕ್ಕೆ ಪಟ್ಟಕ್ಕೆ ಕೂರಿಸಿದ್ದು.
ಶ||೧೬೧೧, ಕ್ರಿ|| ೧೬೮೮, ಶುಕ್ಲ ಸಂ|| ದಲ್ಲಿ.
ಬಿಳಿಚೋಡುವಂಶಕ್ಕೆ ದೊರೆತನ ಬಂದದ್ದು, ಭರಮಪ್ಪನಾಯಕ
ನಿಗೆ ಪಟ್ಟವಾದ್ದು, ಹರಪನಹಳ್ಳಯವರು ಅಣಜೆಗೆ ಮುತ್ತಿಗೆ
ಹಾಕಿದ್ದು, ದುರ್ಗ ದವರಿಗೆ ಸೋಲಾದ್ದು.
ಶ||೧೬೧೮, ಕ್ರಿ||೧೬೯೫, ಧಾತು ಸಂ|| ದಲ್ಲಿ.
ಸಂತೋಜಿ ಘೋರ್ಪಡೆಯು ಮರಾಟೆ ದಂಡಿನೊಡನೆ ಬಂದು
ಮುತ್ತಿಗೆ ಹಾಕಿ ಸೋತುಹೋದದ್ದು, ಸೂರ್ಯಕಾಂತವ್ವನ ಮಗ
ರಂಗಪ್ಪನ ಪುಂಡು ಹಾವಳಿ.
ಶ||೧೬೨೧, ಕ್ರಿ|| ೧೬೯೮, ಪ್ರಮಾಧಿ ಸಂ|| ದಲ್ಲಿ.
ರಾಯದುರ್ಗದವರೊಡನೆ ಯುದ್ಧ, ದುರ್ಗದವರಿಗೆ ಜಯವಾದ್ದು,
-------------------------------------
೫
ಶ|| ೧೬೨೫, ಕ್ರಿ|| ೧೭೦೩ ಸ್ವಭಾನು ಸಂ||ದಲ್ಲಿ.
ಗುಳ್ಳೇರೋಗ ತಗಲಿ ಜನ ಲಯವಾದ್ದು.
ಶ|| ೧೬೨೮, ಕ್ರಿ|| ೧೭೦೫, ವ್ಯಯ ಸಂ||ದಲ್ಲಿ.
ಅಣಜಿ ಕೋಟಿ ಹಾರಿಕೂತದ್ದು.
ಶ|| ೧೨೫೯, ಕ್ರಿ|| ೧೭೦೬, ಸರ್ವಜಿತು ಸಂ|| ದಲ್ಲಿ.
ಪುನಃ ರಾಯದುರ್ಗದವರ ಯುದ್ದ.
ಶ|| ೧೬೩೧, ಕ್ರಿ|| ೧೭೦೮, ವಿರೋಧಿ ಸಂ|| ದಲ್ಲಿ.
ದುರ್ಗದ ದೊರೆಗೆ ಹರಪನಹಳ್ಳಿಯಲ್ಲಿ ಉಂಟಾದ ಪ್ರತಿಷ್ಠೆ.
ಶ॥ ೧೬೪೧-೨, ಕ್ರಿ|| ೧೭೧೮-೯, ಶಾರ್ವರಿ ಸಂ|| ದಲ್ಲಿ.
ಮೊಗಲಾಯರಿಗೆ ಸಹಾಯಮಾಡಿದ್ದು.
ಶ|| ೧೬೪೨, ಕ್ರಿ|| ೧೭೧೯, ಪ್ಲವ ಸಂ॥ ದಲ್ಲಿ.
ಬಿಜಾಪುರದವರು ದಂಡೆತ್ತಿಬಂದದ್ದಾ, ಭರಮಪ್ಪನಾಯಕನಿಗೆ
ಆದ ವಿಜಯ, ಆತನ ನಿರ್ವಾಣ, ಹಿರೀ ಮದಕರಿನಾಯಕನಿಗೆ
ಪಟ್ಟವಾದ್ದು.
ಶ|| ೧೬೪೪. ಕ್ರಿ|| ೧೭೨೧, ಶೋಭಕೃತು ಸಂ|| ದಲ್ಲಿ.
ಶ್ರೀರಂಗಪಟ್ಟಣದವರು ಹಿರೀ ಮದಕರಿನಾಯಕನಿಗೆ ಮಿತ್ರಭಾವ
ದಲ್ಲಿ ಕರೀತ ಬರೆದದ್ದು, ಸೀರ್ಯುದ ಮೊಗಲ್ ಸುಬೇದಾರನು
ಸಂಣಕ್ಕಿ, ಬಾಗೂರು ಮೊದಲಾದ ಕೋಟೆಗಳನ್ನು ದುರ್ಗದ
ವರಿಗೆ ಕೊಟ್ಟದ್ದು.
ಶ|| ೧೬೪೭, ಕ್ರಿ|| ೧೭೨೪, ಪರಾಭವ ಸಂ॥ ದಲ್ಲಿ.
ದೊಡ್ಡ ಬರ ಬಂದದ್ದು, ಮರಾಟಿ ಸರದಾರ ಪೀರೋಜೀ ದಂಡು
ಬಂದು ಕೂನಬೇವನ್ನು ಹಿಡಿದದ್ದು.
--------------------------------------
೬
ಶ|| ೧೬೬೨, ಕ್ರಿ|| ೧೭೩೯, ದುರ್ಮತಿ ಸಂ॥ ದಲ್ಲಿ.
ಆಶ್ವೀಜ ಶು|| ೧೦ ಯಿಂದ ಕಾರ್ತೀಕ ಶು|| ೫ ವರೆಗೆ ೨೫ ದಿವಸ
ಹುಚ್ಚುಮಳೆ ಹುಯಿದು ನಪ್ಪವಾದ್ದು.
ಶ||೧೬೬೪, ಕ್ರಿ|| ೧೭೪೧, ರುಧಿರೋದ್ಗಾರಿ ಸಂ|| ದಲ್ಲಿ.
ರಾಯದುರ್ಗವನ್ನು ಮಲೆನಾಡವರು ಹಿಡಿದದ್ದು, ಅದನ್ನು ದುರ್ಗ
ದವರು ಮುತ್ತಿ ತೆಗೆದುಕೊಂಡದ್ದು.
ಶ||೧೬೬೯-೭೦, ಕ್ರಿ|| ೧೭೪೬, ವಿಭವ ಸಂ|| ದಲ್ಲಿ.
ಭೂಕಂಪವಾಗಿ ನಷ್ಟವಾದ್ದು.
ಶ||೧೬೭೦, ಕ್ರಿ|| ೧೭೪೭-ಲ|, ವಿಭವ ಸಂ|| ದಲ್ಲಿ.
ಮಾಯಿ ಕೊಂಡಕ್ಕೆ ಶತ್ರುಗಳು ಮುತ್ತಿಗೆ ಹಾಕಿದ್ದು, ಹಿರೀ ಮದ
ಕರಿನಾಯಕ ವೀರ ಸ್ವರ್ಗ ಹೊಂದಿದ್ದು, ಇಮ್ಮುಡಿ ಕಸ್ತೂರಿ
ರಂಗಪ್ಪನಾಯಕನಿಗೆ ಪಟ್ಟವಾದ್ದು.
ಶ||೧೬೭೧, ಕ್ರಿ|| ೧೭೪೮, ಶುಕ್ಲ ಸಂ|| ದಲ್ಲಿ.
ಮಾಯಿಕೊಂಡದ ಮುತ್ತಿಗೆ ಎಬ್ಬಿಸಿದ್ದು.
ಶ||೧೬೭೬, ಕ್ರಿ|| ೧೭೫೩ ಭಾವ ಸಂ|| ದಲ್ಲಿ.
ಇಮ್ಮಡಿ ಕಸ್ತೂರಿ ರಂಗಪ್ಪನಾಯಕನ ನಿರ್ಯಾಣ, ಕಡೇ ಮದಕ
ರಿನಾಯಕನಿಗೆ ಪಟ್ಟ.
ಶ||೧೬೭೮, ಕ್ರಿ|| ೧೭೫೫, ಧಾತು ಸಂ|| ದಲ್ಲಿ,
ಓಬಳವ್ವ ನಾಗತಿಯ ಮರಣ.
ಶ||೧೬೮೨, ಕ್ರಿ|| ೧೭೫೪-೬೦, ವಿಕ್ರಮ ಸಂ|| ದಲ್ಲಿ.
ಹೊಸಕೆರೆ ಯುದ್ಧ.
ಶ||೧೬೮೩ ಕ್ರಿ|| ೧೭೬೦, ವಿಷು ಸಂ|| ದಲ್ಲಿ.
ತರೀಕೆರೆಯವರೂ, ಜರಿಮಲೆಯವರೂ ಹಾವಳಿ ಮಾಡಿದ್ದು.
------------------------------------
೭
ಶ॥ ೧೬೮೪, ಕ್ರಿ|| ೧೭-೧, ಚಿತ್ರಭಾನು ಸಂ||ದಲ್ಲಿ
ಹೈದರಲ್ಲಿಯು ಲಕ್ಷ ದಂಡಿನೊಡನೆ ದುರ್ಗಕ್ಕೆ ಮುತ್ತಿಗೆ ಹಾಕಲು
ಬಂದದ್ದು.
ಶ|| ೧೬೯೯ ಕ್ರಿ|| ೧೭೭೬, ಹೇವಿಳಂಬಿ ಸಂ|| ದಲ್ಲಿ.
ಹೈದರನೊಡನೆ ಕಡೇ ಯುದ್ದ, ಚಿತ್ರದುರ್ಗದ ಮುತ್ತಿಗೆ ಮೊದ
ಲಾದ್ದು.
ಶ॥ ೧೭೦೦, ಕ್ರಿ|| ೧೭೭೭-೮, ವಿಳಂಬಿ ಸಂ||ದಲ್ಲಿ.
ಚಿತ್ರದುರ್ಗದ ಸಂಸ್ಥಾನ ಹೋದ್ದು,
-------
====================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ