ಶನಿವಾರ, ಜೂನ್ 6, 2020

ಪದ್ಯಗಳು-ಪಂಜೆಮಂಗೇಶರಾಯರು

- https://archive.org/details/dli.osmania.3627
148 
ತೂಕಡಿಕೆಯನು ಕಳಿಯದೇಕೆ ಕುಳಿತಿಹೆ ಗೆಳೆಯ? 

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? 
ಸಾಕು, ಸುತ್ತಲು ನೋಡು ಕಣ್ಣೀರೆದು ನಿಂದು; 
ಲೋಕದಲ್ಲಿ ತಂದೆ ಮಾಟುಂಬದಿಂದ ಮಾ 
ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು. 
 
ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ, 
ಗತಿಗೆಟ್ಟು ಸರ್ವರಲಿ ನೀನಾದೆ ಹಿಂದು; 
ಪತಿತರಿಗೆ ಕೈಗೊಟ್ಟು ಭಾರತ ಧ್ವಜ ನೆಟ್ಟು 
ಪಥದೋರಿ ಬಂಗಾಲಿ ಕಾಯುತಿರೆ ಮುಂದು. 

ನುಗ್ಗು ನುಗ್ಗುತ ಪರರು ನುಗ್ಗುತ್ತೆ ಬರುತಿಹರು; 
ಬಗ್ಗಿರದೆ ಬಾಗುವುದೆ ನಿನಗಾದುದಿಂದು ? 
ಹಗ್ಗವಿಲ್ಲದ ಕಟ್ಟು, ಬೆತ್ತವಿಲ್ಲದ ಪೆಟ್ಟು, 
ಒಗ್ಗಿತೇ ಈ ಗತಿಯು ಸವಿವಿಷವ ತಿ೦ದು ? 

ಕಿತ್ತು ಬಿಡು ಸಂದೇಹ, ಇತ್ತುಬಿಡು ಧನ ದೇಹ, 
ಮಾತೃಭೂಮಿಯ ಪದಾರ್ಚನೆಗೆ ಬಲವಂದು. 
ಹೊತ್ತ ಕಳೆಯಲು ಬೇಡ, ಭ್ರಾಂತಿಗೊಳದಿರು ಮೂಢ! 
ಸತ್ತಿರುರುವೆ ಏತಕೀ ಜೀವನದೊಳಿಂದು ? 

ಚಿತ್ತವ್ಯಸನಾಕುಲೆಯು ಕುತ್ತಿಗೆಯ ಸಂಕಲೆಯ 
ಕತ್ತರಿಸಿ ತನ್ನ ಸೆರೆ ಬಿಡಿಸಬೇಕೆಂದು, 
ನೆತ್ತಿಯಲ್ಲಿ ಬೊಟ್ಟಿಡದೆ, ಬಿರುದುಬಾವಲಿ ತೊಡದೆ, 
ಅತ್ತತ್ತು ಹಲುಬುತಿರೆ ಭೂಮಾತೆ ನೊಂದು. 

ಸತ್ತಿತೇ ಸಾಹಸವು? ಬತ್ತಿತೇ ಧೃತಿರಸವು? 
ಮತ್ತೆ ಮಡಿದಾ ಕರ್ಣನಾ ಬೆನ್ನ ಹಿಂದು 
ಎತ್ತ ಪೋದುದು ಪರಶುರಾಮನಾ ತೋಳ್ವರಿಸು? 
ನೆತ್ತರೊಳಗಿಲ್ಲವೇ ವಿಕ್ರಮದ ಬಿಂದು? 

ಕಳವಾದ ಮೇಲ್ನೀನು ಕಳವಳಿಸಿ ಫಲವೇನು? 
ಕಳೆದಪುದು ನಿನ್ನ ಸ್ವಾತಂತ್ರ್ಯಮಣಿಯೊಂದು. 
ಕೆಳಕೋಟೆ ಕೈಸೋಕೆ ಕಹಳೆ ಕೂಗುವುದೇಕೆ? 
ಕಳಚಿಬಿಡು ಅಧ್ಯಾತ್ಮನಿದ್ರೆ ಮಮ ಬಂಧು. 

ಎದ್ದೇಳು, ಎದ್ದೇಳು! ನಿದ್ದೆಗಣ್ಣನು ಕೀಳು; 
ಹೊದ್ದಿರ್ದ ವೇದಗಂಬಳಿ ಮೂಲೆಗ್ಹೊಂದು. 
ಎದ್ದು ಬರುತಿಹ ಭಾನು, ಎದ್ದಿತೈ ಜಾಪಾನು? 
ಬಿದ್ದುಕೊಂಡಿರುವ ಕತ್ತಲೆಯಲ್ಲಿಂದು? 
-----------------------------
149 


ತಳರು ಭರತ ಕುಮಾರ, ಕೊಳುಗುಳದತಿವೀರ, 
ಸೆಳೆ ಮಿಂಚಿನಸಿಯ ತೆಗೆ, ರಣಕೆ ಬಳಿಸಂದು! 
ಮಳೆ ರಕುತದಲ್ಲಿ ಬೀಳೆ, ಬೆಳೆ ಕಲಿಗಳಿಂದೇಳೆ, 
ಭಳಿರೇ ಭರವರ್ಷ ಸೌಭಾಗ್ಯಮoದು. 
==================================
150 
ಸತ್ಯ ಸೀಮಗೆ ತಾಯೆ ನಡಿಸೆನ್ನ

 ಮಳೆ ಹನಿಯ ಬಿರು ಹೂಗಳಳಿ, ಮರ 
 ಗಳ ಹಸುರು ಹಚ್ಚಿಯ ಕಡಲಿನ 
 ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ, 
ಹೊಳೆಗಳ ಗಳದ ಸರದಲಿ 
ಝಳದ ಹಿಮಗಿರಿಮಕುಟದಲ್ಲಿ ಥಳ 
ಥಳಿವ ರಮಣಿಯೆ! ಜನರಲಯ! ಭರತಭೂಮಣಿಯೇ! 
 
ಹೊತ್ತಿಸಿದನೌ ಮುಂಚಿನಾಳಕೆ 
ವೆತ್ತ ಬೀರರ ಪೂರ್ವದರಸರ 
ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ 
ಹೆತ್ತ ನಿನ್ನೀಬಸುರು, ನನ್ನನು 
ಹೆತ್ತು ಹಡೆಯಿತು ವಿಷವ; ಸೀಗೆಯ 
ಬಿತ್ತು ಮರೆತಂತಾಯ್ತು ಬಾಳಿಯ ಬುಡದಿ ನನ್ನಿಂದ! 

ಕತ್ತಿವೀರರು ನಿನ್ನ ಹಗೆತಲೆ 
ಯೊತ್ತಿ, ರಣದಲಿ ಜಯಿಸಿ, ಕುಂಕುಮ 
ನೆತ್ತರಿನ ಬೊಟ್ಟಿಟ್ಟು ಶೌರ್ಯದ ಹಣೆಯ ನಡುವಿನಲಿ, 
ಮತ್ತೆ ಕೀರ್ತಿಯ ಕಾಲ್ಗೆ ಗೆಜ್ಜೆಯ 
ಸುತ್ತಿ ಬೆಳಗಿದ ನಿನ್ನ ಮುಖದಲಿ 
ಬಿತ್ತು ನನ್ನೆದೆಯೊಳಗೆ ತುಂಬಿದ ಕತ್ತಲೆಯ ನೆರಳು. 

ಮೆರೆದೆನೌ ಹೊಂಗೋಳ ಕೈಯಲಿ 
ಮೆರೆದೆನೌ ಮಾಯಯಲಿ ಹೊಟ್ಟೆಯ 
ಹೊರೆದೆನೌ, ನನ್ನಲುಬು ಮಾಂಸವ ನಾನೆ ಉಂಡುಂಡು! 
ತೊರೆದೆನೌ ನನ್ನವರ ಮುಟ್ಟದೆ 
ಒರೆದೆನೌ ಪರತಂತ್ರ ಪಾಠವ 
ಬರೆದೆನೌ ನಿನ್ನಯ ಲಲಾಟದಿ ದಾಸ್ಯಮುದ್ರೆಯನು! 

ಕದ್ದ ಕಳ್ಳನು ಕೆಡುಕನಾದರು 
ಮುದ್ದು ಮಗನು ತಾಯಿಗಾತನ 
ನೋದ್ದು ಬಿಡುವಳೆ ತಾಯೆ! ನೋಡೌ ಕರುಣದಿಂದೀಗ! 
ನಿದ್ದೆಯಿಂದೆಚ್ಚೆತ್ತೆ, ಹೋ! ಹೋ! 
ತಿದ್ದಿಕೊಳ್ಳಲು ಹೊತ್ತಿದೇ! ನೀ 
ನಿದ್ದು ಕೈಗೊಟ್ಟೆನಗೆ ಕಲಿಸೌ ನಿನ್ನ ಸೇವೆಯನು! 

ನನ್ನ ಹಸಿ ಮೈದೊಗಲ ಜೋಡನು 
ನಿನ್ನಡಿಗೆ ಜೋಡಿಸುವೆ; ಗುಡಿಸುವೆ 
ನನ್ನ ಕೂದಲ ಚೌರಿಯಲಿ ನಿನ್ನಡಿಯ ಧೂಳಿಯನು;  
(151) 
ನನ್ನ ಮನದಲ್ಲಿ ಹಿಡಿವೆ ನಿನ್ನನು! 
ಇನ್ನು ಕುಳ್ಳಿರ್ದೀ ಮನೋರಥ 
ವನ್ನು ಬೇಗನೆ ನೂಕಿ ನಡೆವೆನು ಸುಖವ ಮೇರುವಿಗೆ! 

ಎಲ್ಲಿ ಸಾಹಸ ಸರಳತೆಗೆ 
ಬಳ್ಳವಾಗದೊ ಮೈಯ ಬಣ್ಣವು, 
ಎಲ್ಲಿ ಅನ್ಯಾಯಕ್ಕೆ ಕತ್ತಿಯು ಕೊಡದೊ ಬೆಂಬಲವ, 
ಎಲ್ಲಿ ಆತ್ಮೋನ್ನತಿಯ ಹಾದಿಗೆ 
ಕಲ್ಲು ಮುಳ್ಳನ್ನಿಡಿರೊ, ಆ ಸುಖ 
ಸಲ್ಲಲಿತ ಸಮ ಸತ್ಯ ಸೀಮೆಗೆ ತಾಯೆ ನಡಿಸೆನ್ನಾ! 
152 
ಹಾವಿನ ಹಾಡು 
[ರಗಳೆಯ ಪ್ರಭೇದ] 

ನಾಗರ ಹಾವೆ! ಹಾವೊಳು ಹೂವೆ! | 
ಬಾಗಿಲ ಬಿಲದಲಿ ನಿನ್ನಯ ಠಾವೆ! || 
ಕೈಗಳ ಮುಗಿವೆ, ಹಾಲನ್ನೀವೆ | 
ಬಾ ಬಾ ಬಾ ಬಾ ಬಾ ಬಾ ಬಾ ಬಾ    ||೧||

ಹಳದಿಯ ಹೆಡೆಯನು ಬಿಚ್ಚೋ ಬೇಗಾ! | 
ಹೊಳಪಿನ ಹೊಂದಲೆ ತೂಗೋ ನಾಗಾ! || 
ಕೊಳಲನ್ನೂದುವೆ ಲಾಲಿಸು ರಾಗಾ | 
ನೀ ನೀ ನೀ ನೀ ನೀ ನೀ ನೀ ನೀ     ||೨||
 
ಎಲೆ ನಾಗಣ್ಣ, ಹೇಳೆಲೊ ನಿನ್ನಾ | 
ತಲೆಯಲಿ ರನ್ನವಿಹ ನಿಜವನ್ನಾ! || 
ಬಲು ಬಡವಗೆ ಕೊಪ್ಪರಗೆಯ ಚಿನ್ನಾ |
ತಾ ತಾ ತಾ ತಾ ತಾ ತಾ ತಾ ತಾ         ||೩|| 
 
ಬರಿಮೈ ತಣ್ಣಗೆ ಮನದಲ್ಲಿ ಬಿಸಿ ಹಗೆ | 
ಎರಡೆಳೆ ನಾಲಗೆ ಇದ್ದರು ಸುಮ್ಮಗೆ || 
ಎರಗುವೆ ನಿನಗೆ, ಈಗಲೆ ಹೊರಗೆ | 
ಪೋ ಪೋ ಪೋ ಪೋ ಪೋ ಪೋ ಪೋ ಪೋ || ೪|| 
 
(ಪಠ್ಯ ಪುಸ್ತಕ) 
• 
153 
ತೆಂಕಣ ಗಾಳಿಯ 
(ರಗಳೆಯ ಪ್ರಭೇದ,) 
ಬರಲಿದೆ! ಅಹಹಾ! ದೂರದಿ ಬರಲಿದೆ 
ಬುಸುಗುಟ್ಟುವ ಪಾತಾಳದ ಹಾವೊ? | 
ಹಸಿವಿನ ಭೂತವು ಕೂಯುವ ಕೂವೊ? || 
ಹೊಸತಿದು ಕಾಲನ ಕೋಣನ -ಓವೊ! | 
ಉಸಿರಿನ ಸುಯ್ಯೋ? - ಸೂಸೂಕರಿಸುತ, ||೧||

ಬರುವುದು! ಬರಬರ ಭರದಲ್ಲಿ ಬರುವುದು-  

ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ | 
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ || 
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ, । 
ಅಬ್ಬರದಲಿ ಭೋರ್ ಭೋರೆನೆ ಗುಮ್ಮಿಸಿ, ||೨||

ಬರುತದೆ! ಮೈತೋರದೆ ಬರುತದೆ! ಅದೆ-  

ನಡುಮುರಿಯುತ ನಗನಾವೆಗೆ, ಕೂವೆಗೆ | 
ಉಡಿಸಿದ ಹಾಯಿಯ ಹರಿಯುತ ಬಿರಿಯುತ, ||
ಹಡಗನು ಕೀಲಿಸಿ, ತುಮುರನು ತೇಲಿಸಿ | 
ದಡದಲಿ ಝಾಡಿಸಿ, ದೋಣಿಯನಾಡಿಸಿ, 

ಇದೆ! ಇದೆ! ಬರುತಿದೆ! ಇದೆ! ಇದೆ! ಬರುತಿದೆ -  ||೩||

ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ | 
ಇಕ್ಕುತ, ಹೊಲದೆತ್ತಿಗೆ ದನಕಾಡಿಗೆ || 
ಫಕ್ಕನೆ ಹಟ್ಟಿಗೆ ಅಟ್ಟಿಸಿ, ಕಾಡಿಗೆ | 
ಸಿಕ್ಕಿದ ಕಿಚ್ಚನು ಊದಲು ಹಾರುತ, ||೪||

ಬರುತಿದೆ! ಇದೆ! ಇದೆ! ಇದೆ! ಇದೆ! ಬರುತಿದೆ- 

ಸಡಲಿಸಿ ಮಡದಿಯರುಡಿಯನು ಮುಡಿಯನು, 
ಬಡಕುಡುಕರ ಕೊಡೆಗರಿ ಹರಿದಾರಿಸಿ, 
ಹುಡುಗರ ತಲೆ ತಲೆ ಟೊಪ್ಪಿಯ ಆಟವ 
ದಡಬಡನಾಡಿಸಿ ಮನೆಮನೆತೋಟವ 
ಅಡಿಮೇಲಾಗಿಸಿ, ತೆಂಗನು ಲಾಗಿಸಿ, 
ಅಡಿಕೆಯ ಬಾಗಿಸಿ, ಪನೆ ಇಬ್ಭಾಗಿಸಿ, 
ಬಡದೂಟಾಡಿಸಿ, ತಲೆ ತಾಟಾಡಿಸಿ, 
ಗುಡಿಸಲ ಮಾಡನು ಹುಲುಹುಲುಮಾಡಿಸಿ,  ||೫||
154 
ಬಂತೈ! ಬಂತೈ! ಇದೆ! ಇದು ಬಂತೈ!- 

ಗಿಡಗಿಡದಿಂ--ಚೆಲು ಗೊಂಚಲು ಮಿಂಚಲು-- 
ಮಿಡಿಯನು ಹಣ್ಣನ್ನು ಉದುರಿಸಿ ಕೆದರಿಸಿ 
ಎಡದಲಿ ಬಲದಲಿ ಕೆಲದಲಿ ನೆಲದಲಿ, 
ಪಡುವಣ ಮೋಡವ ಬೆಟ್ಟಕೆ ಗಟ್ಟಕೆ 
ಹೊಡೆದಟ್ಟುತ, ಕೋಲ್‌ ಮಿಂಚನು ಮಿರುಗಿಸಿ, 
ಗುಡುಗನು ಗುಡುಗಿಸಿ, ನೆಲವನು ನಡುಗಿಸಿ, 
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ, 
ಜಡಿಮಳೆ ಸುರಿವೋಲ್‌, ಬಿರುಮಳೆ ಬರುವೋಲ್‌, 
ಕುಡಿ ನೀರನು ಒಣಗಿದ ನೆಲಕೆರೆವೋಲ್. 
ಬಂತೈ ಬೀಸುತ! ಬೀಸುತ ಬಂತೈ! 
ತೆಂಕಣ ಗಾಳಿಯು ಕೊಂಕಣ ಸೀಮೆಗೆ 
ಬಂತೈ! ಬಂತೈ! ಬಂತೈ! ಬಂತೈ! ||೬||
(ಪಠ್ಯ ಪುಸ್ತಕ.) 
======================================

- 185 - 
- ಹುತ್ತರಿ ಹಾಡು 
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? 
ಎಲ್ಲಿ ಮೋಹನಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? 
ಎಲ್ಲಿ ಮುಗಿಲಲಿ ಮಿಂಚಿನೋಲ್‌ ಕಾವೇರಿ ಹೊಳೆ ಹೊಳೆ ಹೊಳೆವಳೋ? 
ಎಲ್ಲ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ? 
ಅಲ್ಲೆ ಆ ಕಡೆ ನೋಡಲಾ! 
ಅಲ್ಲೆ ಕೊಡಗರ ನಾಡಲಾ! 
ಅಲ್ಲೆ ಕೊಡಗರ ಬೀಡಲಾ! 

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು? 
ಕವಣೆ ತಿರಿ ಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು? 
ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್‌ ಭೋರ್ಗರೆದರೊ? 
ಸವೆದು ಸವೆಯದ ಸಾರಸತ್ವದ ಕ್ಷಾತ್ರ ಬೇಟೆಯ ಮೆರೆದರೊ? 
ಅವರೆ ಸೋಲ್‌ ಸಾವರಿಯರು! 
ಅವರೆ ಕಡುಗಲಿ ಗರಿಯರು! 
ಅವರೆ ಕೊಡಗಿನ ಹಿರಿಯರು! 
ತಮ್ಮ ನಾಡಿನ ಕೊರಳು ದಾಸ್ಕದ ನೊಗದ ಭಾರಕೆ ಬಗ್ಗದೊಲ್‌, 
ಹೆಮ್ಮೆಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೊಲ್‌, 
ಬೊಮ್ಮಗಿರಿಯಿ೦ ಪುಷ್ಪಗಿರಿಪರ್ಯoತ ಬೆಳೆದೀ ದೇಶವು 
ಧರ್ಮದಾನದ ಕಟ್ಟುಕಟ್ಟಳೆ ರೀತಿನೀತಿಯ ಕೋಶವು! 
ನಮ್ಮ ಕೊಡಗಿದು ಜಮ್ಮದು; 
ಜಮ್ಮ ಕೊಡಗಿದು ನಮ್ಮದು; 
ನಮ್ಮೊಡಲ್ ಬಿಡಲಮ್ಮದು! 
ಇದು ಅಗಸ್ತ್ಯನ ತಪದ ಮನೆ, ಕಾವೇರಿ ತಾಯ ತವರ್ಮನೆ 
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ! 
ಇದಕೊ! ಚೆಂಗಾಳ್ವರಸರಾಡಂಬರವು ಕುಣೀದ ಶ್ರೀರಂಗವು! 
ಇದೊ! ಇದೊ! ಇಲ್ಲುರುಳ್ದ ಹಾಲೇರಿಯರ ಬಲಗಿರಿಶೃಂಗವು!  
ವಿಧಿಯ ಮಾಟದ ಕೊಡಗಿದು! 
ಮೊದಲೆ ನಮ್ಮದು, ಕಡೆಗಿದು  
ಕದಲದೆಮ್ಮನು; ಬೆಡಗಿದು!  

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ? 
ಸುಮ್ಮನಿತ್ತರೊ ದಟ್ಟಿಕುಪ್ಪಸ! ಹಾಡು ಹುತ್ತರಿಗೇಳಿರಿ? 
ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ! 
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲ್ಲಿ!   
ನೆಮ್ಮದಿಯನಿದು ತಾಳಲಿ! 
ಆಮ್ಮೆಯಾ ಬಲ ತೋಳಲಿ     
ನಮ್ಮ ಕೊಡಗಿದು ಬಾಳಲಿ! 
(ಪದ್ಯ ಪುಸ್ತಕ) 
===================================
- 156 - 
ಭೀಷ್ಮ ನಿರ್ಯಾಣ 
(ಮತ್ತೇಭವಿಕ್ರೀಡಿತ) 

ಇಳಿದಂ ಪರ್ವತದಗ್ರದಿಂದೆ ದಿನಪಂ, ಕೆಂಪೇರ್ದುದಾಕಾಶಮಂ- 
ಡಳಮುಂ ಶೋಭಿಸಿದತ್ತು. ಪೂರ್ವದಿಕಶಯೊಳ್‌ ಕಾಲಿಟ್ಟುದೈ ಕತ್ತಲುಂ.  
ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಗಳಿಂ 
ವಿಳಸದ್ಘಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷೇತ್ರದೊಳ್‌. 

ಶಿರಮಂ ಬಾಗಿಸೆ ಚಿಂತೆಯಿಂ, ಗಳದ ಸಂದೊಳ್ ಸಿಲ್ಕಲಾ ನಿಟ್ಟುಸಿರ್, 
ಸುರಿದುಂ ಕಂಬನಿ ಜಾರೆ ಗಲ್ಲತಟದೊಳ್‌, ಕುಂತೀಕುಮಾರರ್ ವಲಂ 
ಮರಣಾಸನ್ನನ ತಲ್ಪಮಂ ಬಳಸಿ ನಿಂದರ್; ಭೀಷ್ಮನುಂ ಕಂಗಳಂ 
ತೆರೆದುಂ ನೋಡಿದನೊಮ್ಮೆ ಕೃಷ್ಣಮುಖಮಂ ಮಂದಸ್ಮಿತಾಹ್ಲಾದದಿಂ  

“ಆರೆರೇ! ಧರ್ಮಜ! ಮಾತೃಭೂಮಿಯ ಪರಾಧೀನತ್ವದಾಪಾಶಮಂ 
ತರಿದುಂ, ಧರ್ಮಪತಾಕೆಯಂ ಭರತಕ್ಷೋಣೀ ವಕ್ಷದೊಳ್‌ ನೆಟ್ಟಿಹೈ ! 
ಶಿರದೊಳ್‌ ಪಾತಕಮಿಲ್ಲಮಿಲ್ಲಮಿನಿಸುಂ ದುರ್ಯೋಧನ ಧ್ವಂಸದಿಂ, 
ಧರೆಯಂ ಪಾಲಿಸು ಮೆಚ್ಚುವೊಲ್ ಪ್ರಜೆಗಳುಂ! ಕರ್ತವ್ಯದೊಳ್‌ ಕಣ್ಣಿಡೈ !"   

ನುಡಿಯಿಂದುಜ್ವಲಕಾಂತಿ ಭೀಷ್ಕಮುಖದೊಳ್‌ ವಿಭ್ರಾಜಿಸಲ್‌, ಹಸ್ತದಿಂ-- 
ದೊಡನಾಶೀರ್ವದಿಸುತ್ತ ಧರ್ಮಸುತನಂ, ಶ್ರೀಕೃಷ್ಣನುತ್ಸಂಗದೊಳ್  
ಮುಡಿಯಂ ನೀಡಿ, ಮಲಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ 
ದೊಡಲಿಂ ನೀಡಿ, ಮಲಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ 
ದೊಡಲಿಂ ನಂದುದು ಲೇಶಜೀವಕಳೆಯುಂ-ನಿರ್ಯಾಣದಾ ದೀಪದೋಲ್ 
(ಸುವಾಸಿನಿಯಿಂದ ೧೯೦೨) 
======================================== 
157 
ಅಣ್ಣನ ವಿಲಾಪ. 
(ಚೌಪದಿ) 

"ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? । 
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ! || 
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? | 
ತಲ್ಲಣಿಸುತತಿದೆ ಮನವು; ಹೇಳು ಸೀತಮ್ಮಾ! ||೧|| 

"ಹಸೆಯ ಮಗುವನು ಮೊನ್ನೆ ಬಂದವರು ನೋಡಿ, । 
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, || 
ಹಸಿ ಕಳಸಿಗಳ ನೀರ ಒಣ ಬಾಯೊಳೂಡಿ, | 
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,"  ||೨||

"ಸುದ್ದ ನೀರನು ಮೀಸಿ, ಅರಸಿನವ ಪೂA, | 
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, || 
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ | 
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩|| 
 
*ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, | 
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ-- || 
'ಬನ್ನಿ ಬಾ ಬಾ ' ಎಂದು ಮಾಡಿ ಕೈಸನ್ನೆ | 
ನನ್ನೆದುರು ಬಂದು ಹೋದಾ ಪುಟ್ಟನನ್ನೆ." ||೪|| 

'ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ." |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||  
ಉಬ್ಬಸರಿ ಮೊದಲೆ ಬಾಲನ ಮೈಯ ತಾರೆ, | 
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ." || ೫||
 
'ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, , | 
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್‌ ಬಿಸಿಲಲ್ಲಿ ಮುಳುಗಿದಂತಾಗಿ | 
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ?" ||೬||
 
"ತಾಯ್ತನದ ಬಳಿ ಹೋಗದೀ ಕರುವು ನಿಂದು, | 
ಕಾಯ್ದನಂ ಕರೆಯುತಿದೆ ನೆನಸಿ 'ಮ್ಬೇ' ಎಂದು. || 
ನಾಯ್ದಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, | 
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭|| 

“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! | 
ಸವೆಯಿತೇ ಕಾಲವಂಕುರದ ಪರಿಯಲ್ಲೆ! || 
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! 
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||
 
158 
 
"ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, | 
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, || 
 ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, ! 
 ಕೈಪರೆ  ರವದಿಯಲ್ಲಿ ಬರುವುದೇ ಪುಟ್ಟು,?” ||೯|| 
 
“ನರಿಮೊಗರು ಜಾತ್ರೆಯಲ್ಲಿ ನನ್ನನ್ನು ಕಂಡು, | 
ಅರರೆ ತಮ್ಮನನೇಕೆ ನಾನು ಕರಕೊಂಡು | 
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, | 
ಮರುಮಾತು ನಾನೇನು ಕೊಡಲಮ್ಮ ನಾಳೆ?" ||೧೦|| 

'ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. | 
ಇಬ್ಬರಿಲ್ಲದೆ ಈಗ ನಾನಾಡಲಾರೆ, || 
ತಬ್ಬಿಕೊಂಡೆನ್ನ ನೀ೦ ಆಳುವುದೇನಿ೦ತು? | 
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||

ತಾಯಿ-"'ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! | 
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. || 
ಇತ್ತವನಿಗೆ ಎತ್ತಿದನು! ಕೇಳು, ಪುತ್ಥಳಿಯೇ! | 
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨|| 

"ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರ೦. |
ಆಗಲಿ ನಮ್ಮನು ಹೋದ ಹೋದ ಬಹುದೂರಂ || 
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ | 
ಸೋಗನಿದ್ದೆಗೊಂಡವನು ಬರುವನೇ ಇತ್ತ?” ||೧೩|| 

ಮಗು- "ಈಗಲೇ ಹೊರಡುವೆನು, ಕೈ ಬಿಡೌ್, ಅಮ್ಮಾ ! | 
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! || 
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! | 
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ!" || ೧೪ || 
 
ತಾಯಿ-"ಚಂದು ಕೇಳ್‌! ದಾರಿಯಲಿ ನಾ ಪೋಪೆ ಮುಂದೆ, । 
ಬಂದವನು ಬಳಿಕ ನಿನ್ನಯ ಮುದ್ದು ತಂದೆ, || 
ಮಂದಿ ಮಕ್ಕಳು ಪಡೆುರು ಬಾ ನೀನು ಹಿಂದೆ." | 
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||  

ಆರಲಿಲ್ಲವು ತಾಯ ಮನದ ಪರಿತಾಪಂ | 
ಆರಿದುದು ಮಾತೆಯ ಮನೆಯ ಮಣಿದೀಪಂ. || 
ಆರಲಿಲ್ಲವು ತಾಯ ಕಂಬನಿಯ ಕೂಪಂ | 
ಆರಿದುದು ಭಾಗ್ಯಾಬ್ಧಿ , ಅಯ್ಯಯ್ಯೋ ಪಾಪo! ||೧೬|| 
(ಪದ್ಯ ಪುಸ್ತಕ) 
================================ 
159 
ಡೊಂಬರ ಚೆನ್ನೆ 
(ಗೋವಿನ ಕಥೆಯ ಮಟ್ಟು) 

ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | 
ಅರಸನಿದ್ದನು ದೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| 

ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; | 
ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು.             ||೨||  

ಗುಲ್ಲು ಮಾಡರು; ಸೊಲ್ಲ ನಾಡರು; ಎಳ್ಳು ಬಿದ್ದರೆ ಬೊಬ್ಬೆಯು, | 
ಅಲ್ಲಿ ಜನಗಳ ನುಗ್ಗುನುಗ್ಗಿಗೆ ಇಲ್ಲಿ ಸಾಸಿವೆ ಹಾಕಲು,            ||೩||

ಅತ್ತಲಿದ್ದರು ಸೆಟ್ಟಿಮುದ್ಕರು, ಗುತ್ತಿನಡ್ಕಂತಾಯರು | 
ಇತ್ತ ಪೊಕ್ಕುಳ ಆರಸುಮಕ್ಕಳ ಒತ್ತಿನಲಿ ಕಳದೆಡದಲಿ.     ||೪|| 

ಗುರು ಸುಮಂಗಳ, ಬುಧ ಗ್ರಹಂಗಳ ನಡುವೆ ತಿಂಗಳ ಚೆಲುವಿನಾ | 
ಅರಸು ಅಂಗಳದಲಿ ಜನಂಗಳ ನಡುವೆ ಸಂಗಳಿಸಿದ್ದನು. ||೫|| 

ಆಗ ಬಡಿಯಿತು ಡೋಲು ಬಡಬಡ, ಬಾಗಿ ಅರಸಿಗೆ ತಲೆಯನು | 
ಬೇಗ ತೊರ್ರನೆ ತಿರುಗಿ, ಸರ್ರನೆ ಲಾಗ ಹಾಕಿದ ಡೊಂಬನು. ||೬|| 

ನೀರಿನೊಂದಿಗೆ ಆರು ಬಿಂದಿಗೆ ಹೇರಿ ನೆತ್ತಿಯ ಮೇಲಕೆ, | 
ಹಾರಿ ಧಿಕ್ಕಟ, ಕುಣಿದನಕ್ಕಟ ನೀರು ಹೊರಗಡೆ ಚೆಲ್ಲದೆ!               ||೭||

ತೆಗೆದು ಡೊಂಬನು ಹುರಿಯ ಸುಂಬನು ಬಿಗಿದು ಬಟ್ಟಲನೇರಿಸಿ, | 
ಬೊಗರಿಯಂತೆಯೆ ತಿಗರಿಯಂತೆಯೆ ನೆಗೆದು ಕುಣಿದನು ಧಿಮಿಧಿಮಿ, ||೮|| 

ಮಾವಿನಾಟದ ಹಾವಿನಾಟದ ಸೋವುಸೋಜಿಗ ತಿಳಿಯದು; | 
ಯಾವ ತಂತ್ರವೋ? ಮೋಡಿಮಂತ್ರವೋ? ನಾವು ಅರಿಯವು ಎಂದರು. ||೯|| 

ಬಿದಿರು ಒಂದನು ಹೊತ್ತು ತಂದನು ಮುದುಕ ಡೊಂಬನು ಹೆಗಲಲಿ. | 
ಅದನು ಬಲದಲಿ ಹೂಡಿ ನೆಲದಲಿ, ಚದುರೆ ಮಗಳನು ಕರೆದನು. ||೧೦|| 

ಹೆಣ್ಣು ಬಂದಳು ಹಣ್ಣು ಬಿಡದಾ ಸಣ್ಣ ಬಳ್ಳಿಯ ಬೆಡಗಿನಾ | 
ಮಣ್ಣೊಳಾಡುವ ಬೆಣ್ಣೆಯಂತಹ, ಕಣ್ಣು ಕಟ್ಟಿನ ಸೊಬಗಿನಾ, ||೧೧||  

ಮಣಿದು, ಹಗ್ಗಕೆ ಹಾರಿ ಸಿಡಿದಳು ಕುಣಿವ ಮರಿಸಿಡಿಲಂತೆಯೇ, | 
ಹೆಣೆದು ಮೈಯನು, ಹಾವಿನಂತೆಯೆ ಗಣೆಗೆ ಸರಿದಳು ಸರ್ರನೆ. ||೧೨|| 
ಬಳಿಕ ಬೆನ್ನನು ಕೋದು, ಕೈಕಾಲ್ಗಳನ್ನು ತೇಲಿಸಿ, ಹೊಳೆದಳು-- । 
ಮಳೆಯ ಬಿಲ್ಲಿನ ಹಾಗೆ, ಸ್ಥಾಣುವಿನೆಳೆಯ ಚಂದ್ರನ ಚ೦ದದಿ, ||೧೩|| 

ಕೊರಳು ಮಾಲಿತು, ಹೆರಳು ಜೋಲಿರು, ಕುರುರು ತೇಲಿತು ತರಲೆಯಾ.| 
ಉರುಳುತಲೆ ಕಾಲ್‌ಬೆರಳ ಕೊನೆಯಲಿ ಮರಳಿ ಹೊಲಿದಳು ಜಡೆಯನು, ||೧೪|| 
----------- 
– 160  
ಗೆಳೆಯ ಡೊಂಬತಿಯಾಟದಾ ಪರಿ, ಗಾಳಿ ಕೈಗಿರಿಗಿಟಗಿರಿ, | 
ಸುಳಿಯ ನೀರಿನ ತಲೆಯ ಹೂಗರಿ, ಸೆಳೆಯ ಮಿಂಚಿನ ತೋಳ್‌ ಸರಿ ||೧೫|| 
 
ಆರರೆ! ಡೊಂಬರ ಹೆಣ್ಣು ಮರಿ ಗರಗರನೆ ಎತ್ತರ ಭರದಲಿ | 
ತಿರುಗುವಾ ತೆರ ಹುಡಿಯು ಅರಸಿನ ಎರಚಿತೆರಚಿತು ಕಣ್ಣಿಗೆ. ||೧೬|| 

ಇದ್ದು ನೋಡಿದ, ಎದ್ದು ನೋಡಿದ, ಕದ್ದು ನೋಡಿದ ಹುಡುಗಿಯಾ; | 
ಮುದ್ದು ಗಿಳಿಯಲಿ ಅರಸಿನಾ ಮನ ಹೆದ್ದು ಹಾರಿತು ಬೇಗನೆ. ||೧೭|| 

ಬಿಗಿದು ಬಿಟ್ಟು ಬಿಚ್ಚಿ ಬಿಗಿಯುವ ಮುಗಿಲಕೂದಲ ಬಲೆಯಲಿ | 
ಇಗೊ! ಇಗೊ! ಸಿಲುಕಿದುದು ಆರಸನ ಮಿಗದ ಕಣ್ಗಳ ಜೋಡಿಯ. ||೧೮|| 

'ಏಕೆ ಡೊಂಬನೆ! ನಿಲ್ಲಿಸಾಟವ! ಈಕೆಯಲಿ ಮನ ಸೋತುದು, । 
ಸಾಕು! ಬಂಗರು ನಾನೆ! ಕೈಸರ ಹಾಕುವೀಕೆಯ ಕೊರಳಲಿ." ||೧೯|| 

ಎಂದು ನಂದಾವರದ ಬಂಗರು ನೊoದು ನಂದದ ತಾಪದಿ | 
ಮುಂದೆ ನಿಂದಾ ಡೊಂಬನೊಂದಿಗೆ 'ಸಂದಿಸಿವಳನು' ಎಂದನು.  ||೨೦|| 

ನುಡಿದ ಮಾತಿನ ಮಾನಭಂಗದ ಹೊಡೆತ ನುಂಗಿದ ಸಿಡುಕಿನಾ | 
ಕಿಡಿಯ ಕಣ್ಣೀರಿಂದ ನಂದಿಸಿ, 'ಒಡೆಯ ! ಬನ್ನಹ ಲಾಲಿಸು!' ||೨೧|| 

"ಮಗಳ ಹೆಸರಿನ ಮೈಗೆ ಸೂಳೆಯ ಬೆಡಗ ಸೀರೆಯ ಉಡೆಸೆನು. | 
ನಗರೆ ಹೆಸರಿನ ತಲೆಗೆ ಪಾದರಿ ಮುಗುಳು ಹೂವನು ಮುಡಿಸೆನು."  ||೨೨ ||

 ಉಲಿಯೆ ಡೊoಬನು ಕೆಲರ ಪಿಸಿಪಿಸಿ, ಕೆಲರ ಗುಜುಗುಜು ಕೆಲವರಾ | 
ಗಲಭೆ ಕಳಕಳ ಆಟದಾ ಕಳದಲಿ ವಿಶಾಲಕೆ ತುಂಬಿತು. ||೨೩|| 

ಒಡನೆ ಡೊಂಬನು ಡೋಲು ಬಡಿದನು, ಬಡಿದು ಗುಡುಗುಡು ಗುಡುಗಿದಾ |
ಗುಡುಗಿ ಓಡಿದ, ಓಡಿ ತೋರಿದ ಗಿಡುಗನನು ಗಳೆ ಗುಬ್ಬಿಗೆ. ||೨೪||  

 
ಹೀಗೆ ತೋರಿಸಿ, ಮಾಯವಾದನು ಲಾಗದಲ್ಲಿ ಕಳದಾಚೆಗೆ. | 
ಹೋಗಿ ಹೋದನು ಸನ್ನೆ ಮಾಡುತ ಕೈಗಳಿ೦ದಾ ಹುಡುಗಿಗೆ. ||೨೫|| 


ಕಣ್ಣು ಕತ್ತಲೆಗೊಳಿಪ ಗಣೆಯಿಂ ದ ಗಡಿಯಿಂ ಹೆಣ್ಣು ದುಮುಕಿತು ಹಳಿಯಲಿ- | 
ಬಣ್ಣ ಕಿಡಿಯಲ್ಲಿ ಬಿದ್ದು ಬಾನಿಂ ತಣ್ಣಗಾಗುವ ಬಿರುಸಿನೋಲ್. ||೨೬||

ಎಲ್ಲಿ? ಹೋ! ಹೋ! ಹೋಯ್ತು ! ಹೋಗಿರಿ! ಎಲ್ಲಿ? ಎಲ್ಲೆಂಬರಸನಾ |  
ತಲ್ಲಣದ ಕಟ್ಟಾಜ್ಞೆಗಾಗಲೆ ಎಲ್ಲರೋಡಿದರ್‌ ಅರಸುತಾ. ||೨೭|| 

ಆಳು ನಾಲ್ವರು ದಡಕೆ ಹಾಯ್ದರು, ಆಳಿವಿಹ ಹೊಳೆನೀರಲಿ | 
ಆಳುವೇಳುವ ಇಬ್ಬರನು ತಮ್ಮಾಳುವವನೆಡೆಗೊಯ್ದರು. ||೨೮|| 

ಗದ್ದಿಗೆಯ ಬಳಿ ಕೆಡವಿದರು-ನೀರ್ ಮೆದ್ದ ಉದ್ದಿನ ತೊಗಲಿನಾ, | 
ಬಿದ್ದ ಮೋರೆಯ ನಿದ್ದೆಗಣ್ಣಿನ, ಒದ್ದೆ ಕೂದಲ ಡೊಂಬನಾ. ||೨೯|| 
 
- 161 - '
ದೇವ ಬಂಗರೆ! ಕರೆವುದೆನ್ನನು ಸಾವು; ಬಾಗಿಲು ತೆರೆದಿದೆ. | 
ಜೀವ ನಿಲ್ಲದು, ಅರಿಕೆ ಮಾಡುವೆ ಕಾವುದನ್ನಪರಾಧವ."  ||೩೦|| 

“ಹಿಂದೆ ನಾಲ್‌ಕೈ ವರ್ಷಗಳ ಕೆಳಗೊಂದು ಸಲ ನಾನಿಲ್ಲಿಗೆ | 
ಬಂದು, ಗೈದಾಟಕೆ ಪಾದದ ತಂದೆ ತoಗಿ ಸುನಂದೆಯು -" ||೩೧|| 

ಎಂದು ನಿಲ್ಲಲು ಡೊಂಬೆನರೆನುಡಿ "ಮುಂದೆ ಮುಂದೆ"ನೆ ಬಂಗರು; | 
"ಮುಂದೆ ತಮ್ಮ ಸುನಂದೆ ಕಿರುಮಗಳೊಂದಿಗರಮನೆ ಬಿಟ್ಟಳು." ||೩೨|| 

 'ಆಂದು ರತ್ನಾವತಿಗೆ ತುಂಬದು ಒಂದು ವರ್ಷವು, ಕೂಸಿನಾ | 
ಮುಂದು ಎಣಿಸದೆ ನಿಂದೆ ಗಣಿಸದೆ ಹಿಂದೆ ಬಂದಳು ಪಾಪಿಯಾ" }}೩೩|| 

"ಸಂದವಿಂದಿಗೆ ವರ್ಷಗಳು ಹನ್ನೊಂದು-ಸತ್ತು ಸುನಂದೆಯು. | 
ಅಂದಿನಿಂದಿದು ಕೋಗಿಲೆಯ ಮರಿ ಕಾಗೆ  ನಾನೆನೆ ಆಯಿತು." ||೩೪|| 
 
"ಇವರೆ ರತ್ನಾವತಿಯು; ಮುಂಚಿನ ಇವರ ಹೆಸರದು ರನ್ನೆಯು, | 
ಇವಳೆ ಕೊಳೆ ಸೋಕದ ಸುಕನ್ಯೆಯು ಇವಳೆ ಡೊಂಬರ ಚೆನ್ನೆಯು" || ೩೫|| 
 
"ಅರಿ ದೂರಕೆ ಅಲೆದ ಕಡಲಿನ ನೀರೆ ಕಡಲನೆ ಕೂಡಿತು, |
ಬೇರೆ! ಹಾ! ಹಾ!” ಎಂದು ಡೊಂಬನು ತೀರಿಸದೆ ಕಣ್ಮುಚ್ಚಿದ, ||೩೬||  

ಆಳಿದ ಡೊಂಬಗೆ ಉತ್ತರಕ್ರಿಯೆಗಳನು ಬoಗರು ಮಾಡಿಸಿ, । 
ಗಳೆಯ ಡೊಂಬರ ಚೆನ್ನೆಯನು ಮದವಳಿಗ ಕೈಯಲಿ ಹಿಡಿದನು. ||೩೭|| 

ತನ್ನ ರಾಜ್ಯರ ಪಾಲು ಬಳುವಳಿಯನ್ನು ಕೊಟ್ಟನು ರನ್ನೆಗೆ, | 
ಚೆನ್ನೆ ಸಂತತಿಗಾಯ್ತು ಆದರಿ೦ ಹೆಸರು ಡೋಂಬಾ ಹೆಗ್ಗಡೆ, ||೩೮|| 
(ಪದ್ಯ ಪುಸ್ತಕ ) 
==============================
162 
ಕಡೆಕಂಜಿ 
ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;|| 
ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧||

ಅರಸು ಒ೦ದಿನ ತಿರುಗುತಿರೆ,ಆ | ಚ್ಚರಿಯ ಒಂದನು ಕಂಡನು- || 
ಮರುಕ ತೋರುವ, ಕರೆದು ಚೀರುವ ! ಬಿರುಮ ಸೆಟ್ಟಯ ಕಂಡನು . || ೨|| 
 
ಕಂದು ಮೋರೆಯ ನಾಂದ ಕಣ್ಣಿನ | ಮಿಂದ ಕೆನ್ನೆಯ ಮಸುಕಿನಾ || 
ಬೆಂದು ಹೊರಡುವ ಮೂಗುಸುಯ್ಲಿನ | ನೊಂದು ನೋಯುವ ಸೆಟ್ಟಿಯಾ. ||೩||  

ದಿಟ್ಟ ಕೈಯಲಿ ಪುಟ್ಟ ಕರುವನು | ಕಟ್ಟಿಕೊಂಡಿಹ ಸೆಟ್ಟಿಯು || 
"ಕೆಟ್ಟೆನಯ್ಯೋ! ಕೆಟ್ಟೆನಯ್ಯೋ! | ಕಟ್ಟೆ!" ಎಂದಳುತಿದ್ದನು. ||೪|| 

ದೊರೆಯ ಕಂಡನು, ನಾಚಿಕೊಂಡನು; | ಬಿರುಮ ಅರಿಯನು ದೊರೆಯನು; || 
ಇರದೆ ನಡೆದನು ಮೆಲ್ಲ ನುಡಿದನು; | ಒರಸಿಕೊಂಡನು ಕಣ್ಣನು. ||೫|| 

'ಏನು ಸೆಟ್ಟಿಯ? ಹೇಗೆ ಕೆಟ್ಟೆಯೆ? | ಏನು ನೀರಿದು ಕಣ್ಣಲಿ? || 
ಏನು ಬೇಸರು? ಏತಕೀ ಕರು? ಏನು? ಹೇಳ್‌! ಹೇಳ್‌!" ಎಂದನು. ||೬|| 
 
“ನನ್ನ ಬಾಳುವೆ ಏನು ಹೇಳುವೆ | ನನ್ನ ಹಣೆಯಲಿ ಬರೆದುದಾ? || 
ಚಿನ್ನ ಕರುವಿಗೆ ಬನ್ನಬಡುವನು | ಕಣ್ಣನೀರನು ನೀಡಿವೆನು." ||೭||  
 
(ಹಿಂಡಿ ಹುಲ್ಲನು ತಿಂಡಿ ಕಾಳನು | ಉಂಡು ಬೆಳೆದೀ ಕರುವಿದು || 
ಗಂಡು ಅವು ಕೊಂಡು ಬಂದೆನು. ಹಿಂಡಿನಲಿ ಕಡೆಕಂಜಿಯು." ||೮||  
 
“ಮಕ್ಕಳಿಲ್ಲದ ಮಡದಿ ಇಲ್ಲದ | ಚಿಕ್ಕತನದಲಿ, ಹಿಂದಕೆ || 
ರೊಕ್ಕ ಎರಡು ವರಹ ಕೊಟ್ಟು, | ಅಕ್ಕರೆಯ ಕರು ಸಾಕಿದೆ."  ||೯||

"ಗಬ್ಬವಾಯಿತು, ಅಬ್ಬೆಯಾಯಿತು, ಹಬ್ಬವಾಯಿತು ಹಾಲಿನಾ. || 
ಒಬ್ಬಳನು ನಾ ಮದುವೆಯಾದನು, । ಇಬ್ಬರಿದ್ದೆವು ಸುಖದಲಿ." ||೧೦|| 

"ಒಡಕು ಕಟ್ಟಿಗೆ ಹಿರಿಯಲಾರದು,| ನಡೆಗಳಿಪ್ಪತ್ತಾದವು. || 
ಮಡದಿುಮಕ್ಕಳ ಹಡೆದು, ಸೌಖ್ಯವು | ಬಿಡದೆ ಬೆಳೆಯಿತು ಮನೆಯಲಿ." ||೧೧|| 

ಮೂಡು ಬೈಲನು ಮಾಡಿಕೊಂಡೆನು;| ಜೋಡು ಎತ್ತನು ಕಟ್ಟಿದೆ; " || 
ಓಡು ಹೊಚ್ಚಿದೆ ಮಾಡು ಹುಲ್ಲಿಗೆ; 1 ಜೋಡು ಹಾಕಿದ ಕಾಲಿಗೆ." ||೧೨ || 
 
ಏನು ಹೇಳಲಿ? ಬಾನಿನ ಹಸು| ತಾನೆ ಬಂದಂತಾಯಿತು.||  
ಸ್ಥಾನ ಸ್ಥಾನದಿ ನಮಗೆ ಮದಿಪು | ಮಾನ ಕೊಟ್ಟರು ಚೌಟರು." ||೧೩ || 
 
ಒರಕು ಹಣೆಯಿದು; ಕೆಡುಕು ಗ್ರಹನಿದು; | ಕುಡತನದಾ ಫಲವಿದು." 
ಒಡನೆ ಸುಯ್ಯುತ ಹಣೆಯ ಬರೆಯುತ | ನುಡಿದ ಮುಂದಕೆ ಸೆಟ್ಟಿಯು- || ೧೪ ||
163 
"ಸಾಲವಾಯಿತು ಸೋಲವಾಯಿತು. ಶಾಲು ಸೀರೆಯ ಮಾರಿದೆ,|| 
ಬೈಲು ಬಿಟ್ಟಿನು, ತೋಟ ಕೊಟ್ಟೆನು. | ಮೂಲೆಕಸದಂತಾದೆನು." ||೧೫||  

"ಮನೆಯು ಮಾನ್ಯವು ಧನವು ಧಾನ್ಯವು ಕನಸು ಕಂಡಂತಾಯಿ:ತು. ||  
ಇನಿಸು ಭಾಗ್ಯವು ಮಳೆಯ ನೀರಿನ | ಹೊನಲ ನರೆಯಂತಾಯಿತು. ||೧೬|| 

“ಹಾಳು ಕಾಲವು! ಕೂಳು ದೊರೆಯದು. | ಏಳು ಮಕ್ಕಳು ಸೆರಗಿಗೆ! || 
ಕಾಳುಕಡ್ಡಿಯ ತಿಂದ ದನಗಳ ಕೂಳಿಗೋಸುಗ ಮಾರಲೇನ್? "                       ||೧೭|| 
 
"ನಾಡು ಸೇರಿದೆ ಬೇಡಲೋಸುಗ. | ನೋಡಿ ನನ್ನನು ಹಳಿದರು- || 
"ಮೂಡು ಬೈಲಿನ ಬಿರುಮ ಸೆಟ್ಟಿಯು | ಬೀಡುವನು ಬಲು ನಾಚಿಕೆ." || ೧೮ || 

ಕೆಲಸ ಮಾಡಲು ಮಾರಿ ಇವನಿಗೆ!! ಬಲುಹು ಮೈಯಲ್ಲಿ ತುಂಬಿದೆ! || 
ಹಲವು ಕಾಲ್ನಡೆ ಇವನಿಗೆ | ಸುಲಿದು ತಿನ್ನಲು ಬಂದಿಹ." || ೧೯|| 

“ಎಂದು ಮೊನೆನಗೆಯಿಂದ ಆಡಿದ | ಮಂದಿ ಮಾತನು ಮನ್ನಿಸಿ, || 
ಕಂದರಂತಿಹ ಚೆoದ ದನಗಳ | ಲೊಂದುಮಾರಲು ಬಗೆದೆನು." ||೨೦|| 

“ಅಕ್ಕಿ ತಂದೆನು ರೊಕ್ಕದಿ೦ದಲಿ, | ಮಕ್ಕಳನು ಅರೆ ಸಾಕಿದೆ, | 
ಒಕ್ಕಲೊಂದು ಮನೆಯೊಳಿಲ್ಲವು, | ದುಕ್ಕ ಗಂಜಿಯ ಉಂಡೆನು.” ||೨೧ || 

"ದುಡಿತಹೋಯಿತು ಮಗೆಯ ಮಳೆವೋಲ್, | ಬಿಡದೆ ಸಲಹಿದ ಸಾಕಿದಾ ||  
ನಡೆಗಳೊಂದೊಂದಾಗಿ ಹೋದವು | ಕಡೆಯ ಸಂಜೆಯ ಬಿಸಿಲವೋಲ್" ||೨೨||  

“ಮುದ್ದು ದನ ಇನ್ನೊಂದು ಎಳೆ ಕರು | ಇದ್ದ ಹಸು ಮತ್ತೊಂದು, ಹಾ! 
ಮದ್ದೆ ನೆತ್ತರ ನನ್ನ ಮೈಯನು | ಗುದ್ದಿ ತೆಗೆದಂತಾಯಿತು" || ೨೩ || 

"ಬೇರೆ ಒಂದೊಂದಾಗಿ ದನಗಳ | ಮರಿ ತಿಂಬುದಕಿಂತಲೂ, || 
ಮಾರಿ ತಿಂಬುದೆ ಹಿಂಡೆ ಅಳಿವುದೆ | ಭಾರಿ ಲೇಸನೆ ತೋರಿತು. ||೨೪|| 

"ಹೆಂಡತಿಯ ಬಳಿಕೆನ್ನೆ ಕೊರಲಿಗೆ | ಗುಂಡು ಕಲ್ಲಂತಾದಳು. || 
ಚೆಂಡಿನಂತಹ ಮಕ್ಕಳನ್ನು | ಕಂಡು ಕಲ್ಲೆದೆ ಹಾರದು.” ||೨೫|| 
"ಹಾರುವೆನೊ ನೀರ್ಬಾವಿಯೊಳಗೆ? : ಹೀರುವೆನೂ ಕಹಿ ವಿಷವನು? || 
ಸೇರುವೆನೊ ಹುಲಿಗವಿಯ? ಚಟ್ಟವ | ಏರುವೆನೊ? ಎನೆ ಬಗೆದೆನು." ||೨೬|| 
 
"ಕಾಸು ಕೈಯಿಂ ಲೇಸು ಮೈಯಿಂ | ಮಾಸಿ ಎಲ್ಲವು ಹೋಯಿತು || 
ಮೋಸ ಮಾಡಲು ಘಾಸಿ ಮಾಡಲು | ಆಸೆಯಾಯಿತು ಮನದಲಿ." ||೨೭|| 
 
"ಕದ್ದ ಕಳ್ಳನ ಹಾಗೆ ಕಾಂಬರೊ | ಇದ್ದವರು ಎಂದಿರುಳಲಿ || 
ನಿದ್ದೆ ಬಾರದು; ಬುದ್ಧಿ ತೋರದು | ಹೊದ್ದ ದುಗುಡದ ಹೊರೆಯಲಿ" || ೨೮ || 

"ಹುಚ್ಚನೆಂದರು, ಲುಚ್ಚನೆಂದರು, | ಮುಚ್ಚುಮರೆಯವನೆಂದರು, || 
ಕಚ್ಚಿ ನುರಿದರು, ಚುಚ್ಚಿ ನುಡಿದರು. | ಪಚ್ಚೆ ದೇವರೆ ಬಲ್ಲನು" ||೨೯|| 
 
- 164 - 
"ಬಡವನಾದರೂ ಬೇಡಲೊಲ್ಲನು. | ಹಡೆದ ಮಕ್ಕಳ ಮಾರೆನು, || 
ಕಡವ ಪೆರರಿ೦, ಒಡವೆ ಹೆರರಿಂ ಪಡೆಯೆ ಪಡೆಯದೆಂದಿಗೂ." ||೩೦|| 

"ಈವರಿಲ್ಲವು, ಕಾವರಿಲ್ಲವು. | ಗೋವು ಕಣ್ಮರೆಯಾದವು.|| 
ನೋವು ತೀರದು; ಸಾವು ಬಾರದು. ! ದೈವ ಮುನಿಸಿದಂತಾಯಿತು.” ||೩೧|| 

"ನಿನ್ನೆಯೋ ಎಂಬಂತೆ ಕಾಣವ | ನನ್ನದಾಗಿಹ ಹಿoಡೊಳು || 
ಇನ್ನು ಕರು ಒಂದೆ ಬದುಕಿದೆ; | ನನ್ನ ಹೆಗಲಿಗೆ ಮಲಗಿದೆ." || ೩೨|| 

ಕರುವು ಚೊಚ್ಚಲು; ತೊರೆದ ಕೆಚ್ಚಲು | ಸುರಿದು ಕುಡಿಯುವ ಮುಂಚೆಯೇ || 
ತುರುವ ಮಾರಿದ ಬರಿದೆ ಚೀರಿದ | ಬಿರುಮ ಕಟುಕನು ನಾನಲೇ!           || ೩೩|| 

ಎರಡು ತಿಂಗಳ ಹರೆಯ-ಮಂಗಳೆ | ಬರಲು-ತುಂಬಿತು ವತ್ಸಗೇ. | 
ಬರುವನಂಗಳ ಸಿರಿಯು; ಕಂಗಳ | ಪುರಲಿದೇ ಕಡೆಕಂಜಿಯು! || ೩೪|| 

ಎಂದು ಸೆಟ್ಟಿಯು ಮುಗಿಸಿ ಕಥೆಯನು, | ಮುಂದು ನಡೆದನು ದಾರಿಯಾ. || 
ಬಂದುದಾಗಲೆ ಚ೦ದ್ರನಾಥಗೆ | ಬಿಂದು ನೀರ್ಗಳು ಕಣ್ಣಲಿ. || ೩೫| | 

"ಅಲ್ಲೆ ಸೆಟ್ಟಿಯೆ ನಿಲ್ಲು! ತಡೆ! ತಡೆ! | ಸೊಲ್ಲನೊಂದನು ಹೇಳುವೆ! || 
ಕಲ್ಲು ನಿನ್ನಯ ಕಥೆಗೆ ಕರಗದೆ | ಮೆಲ್ಲನಿರುವುದೆ? ಬಿರುಮನೆ!” ||೩೬|| 

"ಬಿದ್ದುದಿಲ್ಲವು ಗದ್ದಿಗೆಯ ಮೇ   | ಲಿದ್ದ ನಮ್ಮೀ ಕಿವಿಯಲ್ಲಿ || 
ಗದ್ದೆ ಉಳುವರ ಉದ್ದ ಗೋಳಿನ | ಸದ್ದು ಸುದ್ದೀತನಕವಾ." ||೩೭||  

“ಬೇಡು! ಬೇಗನೆ ಮೂಡು ಬೈಲನು 1 ಮಾಡಿಕೊಡುವೆನು, ಕೊಡುವೆನು | | 
ನಾಡಿಗೊಡೆಯನು ಚಂದ್ರನಾಥನು | ಬೀಡುಮದಿಪನು ಇಡುವನು." || ೩೮ || 

ಒಡನೆ ಸೆಟ್ಟಿಯು ಕೆಡವಿ ಮೈಯನು. | ಅಡಿಗೆ ಚಾಚಿದ ರಾಯನಾ. || 
"ಒಡೆಯ! ಕಾರ್ಕಳದೊಡೆಯ  ಚೌಟರೆ! | ನುಡಿದ ತಪ್ಪನು ಕಾವುದು.? || ೩೯ || 

ಹೊಗಳುತಿರುವನ ನೆಗಹಿ ಅರಸನು | ನೆಗೆವ ಕರುವನು ಹಿಡಿದನು, || 
"ತಗೆದುಕೊಳ್ಳೈ ಮಗುವ" ಎನ್ನುತ | ಸೊಗದಲಿತ್ತನು ಕೈಯಲಿ. ||೪೦||  

ಆರರಿ! ಬಿರುಮನೆ! ಮರೆಯದಿರು ಮನೆ | ಮರಿಯ ಮಕ್ಕಳ ಮಡದಿಯಾ.|| 
ಬರಿದೆ ಕೊಡುವೆನು ಬರೆದು ಕೊಡುವೆನು | ಸ್ಥಿರ ಚರಾಸ್ತಿಯ ಉಂಬಳಿ" ||೪೧ || 

ಎಂದುಸುರಿ ಮನೆತಂದು ಬಿರುಮನ | ಕಂದನಹ ಕಡಕಂಜಿಯಾ || 
ಒಂದನುಳುಹಿದ ಹಿoದೆ ಕಳುಹಿದ | ಇಂದುನಾಥದೀಶನೂ. ||೪೨ || 
===============================================
- 165- 
ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ 
ಚತಷ್ಪದಿ, 

ಸಾಧ್ಯವಿಲ್ಲವ ಪರೀಕ್ಷೆಯೊಳಗೆ ಜಯವು; | 
ವಿದ್ಯಾಪರೀಕ್ಷಕರಿಗಿಲ್ಲವೈ ದಯವು|| 

ಆರು ವರ್ಷಗಳಿಂದ ಪೋಗುವೆನು ನಾನು: | 
ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. || 
ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು | 
ನೀರೊಳಗೆ ಹೋಮ ಗೈದಂತದುದೇನು? ||೧||
 
ನೊಸಲ ಪೊರೆಯಾಯ್ತು ಪಾಠದ ಭಾರ ಚಿಂತೆ, । 
ಹಸಿವು ನೀರಡಿಕಯಿರದಾ ವೊಂಟೆಯಂತೆ, || 
ಉಸುಬೆಂಬ ಜೀವಕಾಲದಿ ನಡೆದು ಮುಂತೆ | 
ಬಸವಳಿದು ಬರಿದೆ ಸೇರ್ದೆನು ಪರಿಕೆ1 ಸಂತೆ. ||೨|| 

ಆಟಗಳ ಬರಿದೆ ನಾನಾಡದೇ ಬಿಟ್ಟು, |
ಪಾಟದಲಿ ಬಯಲಾಗಿ ಪೂರ್ಣ ಮನವಿಟ್ಟು, || 
ಮೂಟೆ ಹೊರುವಾ ಎತ್ತಿನೊಲ್ ನಿದ್ದೆಗೆಟ್ಟು, । 
ಓಟವೋಡಿದೆ. ನೋಡಲಿದು ಕಣ್ಣು ಕಟ್ಟು?! ||೩|| 

ಹಲವು ಪುಸ್ತಕಗಳನ್ನು ಪರರೊಡನೆ ಬೇಡಿ | 
ಕೆಲವನ್ನು ಕೊಂಡೆನೈ ಹಣವನು ಬಿಸಾಡಿ || 
ಕಲಿತೆನಾನೆಲ್ಲವನು ಪೂರ್ಣ ಮನಮಾಡಿ, | 
ಗೆಲಲಿಲ್ಲವಿದು ಪರೀಕ್ಷೆಯ ಮಂತ್ರಮೋಡಿ! ||೪|| 
 
ತಂದೆ ಮನೆಯನ್ನು ಬಿಟ್ಟು, ಪರರ ಕಳುoಡು | 
ಚೆಂದದಾ ಸತಿಯ ನೋಡದೆ ಸಾಸಗೊಂಡು, || 
ಬಂದು ಕಲಿತುದುದೆಲ್ಲ ಇಂಗ್ಲೀಷು ಬಂಡು | 
ಸಂದ ಸಂಬಳವು ಸರಕಾರಕ್ಕೆ  ದಂಡು!2 ||೫|| 

ನೆನೆಯದಿರ್ದೆನು ಸ್ನಾನಜಪಯೋಗವೆಲ್ಲ;  | 
ಮನೆಯ ಹಬ್ಬವ ಬಿಟ್ಟರೂ ಸಾಗಲಿಲ್ಲ; || 
ಅನುಜನಿಗೆ ಮದುವೆಯಾಗಲು ಪೋಗಲಿಲ್ಲ; | 
ವನಿತೆ ಬಳಿದಾಗ ಸುಖದನುರಾಗವಿಲ್ಲ. ||೬|| 

ಮರುಗುವನು ಗುರು ನಾನು ಬಹುಮೂರ್ಖನೆಂದು | 
ಹುರುಳಿಲ್ಲ3ವೆನುt ಹೀನಿಪರು ಜನರಿಂರು.|| 
ಬರಿದೆ ಹಣ ತಿಂದೆನೆಂದಾ ತಂದೆ ನೊಂದು,|  
ಜರೆಯುವನು, ಜಾರುವುದು ಸ್ತ್ರೀಪ್ರೇಮಬಿಂದು, ||೭|| 
.................... 
 
1 ಪರೀಕ್ಷೆ ಎಂಬ ಸಂತ್ೆ, 2ಜುರುಮಾನೆ 3 ಸತ್ವ. 
===========================================
- 166 - 
ಕಬ್ಬಿಣದ ಬುದ್ದಿವಾದ 
(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ 
ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು 
ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಆನುಕೂಲವಿದೆ.) 

“ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದ ತುಡುಕಿ, 
ಪೊಲೆಗೈದುದೇತಕೆನ್ನಯ ಮೈಯನಿಂದು? | 
ಕಲಿಯುಗದ ಪೊಲೆಯ ಸತ್ಕುಲದ್ವಿಜನ ಸೋಂಕುವೊಲ್, 
ಖಲನೆ! ಮುಟ್ಟಿದುದೇತಕನ್ನೆಡೆಗೆ ಬಂದು? || ೧ || 

ಈ ತೆರದಿ ಕಂಚನಂ1 ಖಾತಿಯಿಂ ಘುಡುಘುಡಿಸಿ, 
ಮಾತಿರದ ಬಡ ಕಬ್ಬುನವ ಜರೆದುಜರೆದು, । 
ಭೂತಳದಿ ತಾನೆ ವಿಖ್ಯಾತನೆಂದೆನುತ, ಮಹಿ 
ಮಾತಿಶಯವನು ಜೃಂಭಿಸಿತು ಮಂದುಮೆರೆದು, ||೨|| 

“ಕರೆವುದು ಸುವರ್ಣಮೆಂದಿರದೆ ಧರಣೀಮುಖಂ, 
ಮಿರುಗುವುದು ನಾಮದoತೆನ್ನ ಮೈವಣ್ಂಣ. | 
ತರಣಿರಶ್ಮಿಯ ಕವಿವ ಕುರುಡುಕತ್ತಲಿನಂತೆ, 
ಭರದಿ ಒದೆಯಲ್ಕೆ ನಿನಗೊಡೆದುದೇ ಕಣ್ಣುಂ? ? ||೩|| 

"ಲೋಹರಾಜನು ನಾನು ಮೋಹಿಸುವೆ ಜನಮನವ,  
+ಆಹವಂ ನಿರ್ವಹಿಸದೆನ್ನಾಜ್ಞೆ ಇರದೆ, | 
ಈ ಹಸ್ತಲಾಗಕ್ಕೆ2 ದಾಹಗೊಳ್ಳುತ್ತ, ತಮ್ಮ 
ದೇಹವಂ ದಂಡಿಪರ್ ಜನರು ತರತರದೆ, ||೪||

"ಕನಕಮಣಿ ನಿಗಳೆಯರ್? 'ಕನಕಾಬ್ಜವದನೆ" 'ಕಾಂ  
ಚನಲತಾಕೋಮಲಾಂಗಿ,' 'ಸುವರ್ಣಕಾಯೆ,' 
ವನಿತೆಯರನಿಂತು ಭೂವಿನುತೆ ಕವಿ ಕೀರ್ತಿಪರ್‌. 
ಕನಕಭೂಷಣರಹಿತ ಸ್ತ್ರೀ ನೋಡೆ ಸ್ತ್ರೀಯೆ? ||೫|| 

"ಅಂಗನೆಯ ಕೇಶಾತರಂಗದೊಳ್‌ ಕ್ರೀಡಿಸುವೆ; 
ತುಂಗವಕ್ಷದಿ ಬಿಗಿವೆ ಮುತ್ತುಗಳ ನಾನು, । 
3ಭೃಂಗಕುಂತಲಕೊಯ್ದ ಮಂಗಲವ ಗೈಯ್ದು, ವನಿ 
ತಾoಗಸೌoದರ್ಯ ಕೆಡಿಸುವ ಪಾಪಿ ನೀನು. || ೬ || 

“ದ್ವಿಜಹಸ್ತ ಸೇರಿ, ನೀರಜ ಮುಖಿಯ ಶಿರವೇರಿ, 
ರಜನಿಯೊಳ್‌ ಭದ್ರವಾಗಿಹೆ ಪಿಟಕದೊಳಗೆ.4 | 
ದ್ವಿಜನ ಕೆರ5 ಸೇರ್ವ ನೀರಜ ಮುಖಿಯ ತಲೆಗಳೆವ 
 ರಜನಿಸನ್ನಿಭನೆ !6 ನಿಲ್ಲದಿರೆನ್ನ ಬಳಿಗೆ ! ||೭||
................... 
  1 ಚಿನ್ನ. +ಈ ಪದದಲ್ಲಿ ಪೂರ್ವ ಸ್ವರವಿದೆ.  ಛಂದೋದೋಷವಾಗದಂತೆ 
  'ನಾಹವಂ' ಎಂದು ತಿದ್ದಲುಬಹುದು  2 ಹಸ್ತಸ್ಪರ್ಶ, 3 ತುಂಬಿಯಂತೆ ಕಪ್ಪಾದ ಕೂದಲು, 4 ಪೆಟ್ಟಿಗೆ 5 ಮೆಟ್ಟು 6 ರಾತ್ರಿಯoತೆ ಕಾಪ್ಪಾದವದನೆ.
------------------------
167   
- 12 - "ಬಿಡದೆನ್ನನಾಶ್ರಯಿಸೆ ಕಡು ಮೂಢ ಪ್ರೌಢನಹ; 
ಬಡವ ಬಲ್ಲಿದ, ದುಷ್ಟನರ ಶಿಷ್ಯನಹನು | 
ಪಿಡಿದು ನಿನ್ನಂ ಕರದಿ, ಕಡಿದು ನರತರುಮೃಗವ,  
ಕೆಡಿಪ ಮಾನವಶ್ರೇಷ್ಟನತಿ ಭ್ರಷ್ಟನಹನು. ||೮|| 

"ಅಗ್ರಾಸನಕ್ಕೆ ನಾಂ ಸಮಗ್ರ ವಸ್ತುಗಳೊಳಗ  
ವ್ಯಗ್ರದಿಂದರ್ಹನೆಂಬುದು ಲೋಕಸಿದ್ದ೦. | 
ಉಗ್ರತೆಯಿನೆನ್ನೊಡನೆ ವಿಗ್ರಹವ7 ಬಯಸಿ, ಕೋ  
ಪಗ್ರಾಸವಾಗಲ್ಕೆ ನೀನಪ್ರಬುದ್ಧಂ." ||೯|| 

ಉಬ್ಬಟೆಯೊಳುಬ್ಬಿ, ತನ್ನಬ್ಬರವ ಬೊಬ್ಬಿಡುತ, 
ಕಬ್ಬುನವ ದೊಬ್ಬಿಬಿಡೆ ಕಾಲಿಂದ ಚಿನ್ನಂ; | 
ತಬ್ಬಿಕೊಳ್ವಬ್ಬೆಯಾ8 ಕಿಬ್ಬದಿಗೆ ಮಗನೊದೆಯ 
ಲುಬ್ಬೆಗಂಗೊಳ್ವಂದದಿತ್ತು ಕಾರ್ಬೋನ್ನುಂ, || ೧೦|| 

ಆರೆಗಳಿಗೆ ತಲೆವಾಗಿ, ಸುರಿವ ಕಂಬನಿಯೊರಸಿ, 
ಮರುಗುವದನುಳಿದು, ನುಡಿದುದು ದೀನರೋಹಂ, | 
"ಅರರೆ ! 9 ಧಾತಪ್ರಕರದರಸನೆನಿಸುವ ಕನಕ! 
ಅರಿಯೆಯಾ ನಿನಗೆಂತು ಬಂದು ದೇಹಂ? ||೧೧ || 

"ಬಡವನಾ ಬಿನ್ನಹದ ನುಡಿಗುತ್ತರವ ನೀಡು! 
ಪೊಡವಿಯಂ ನಡಯಿಸುವರಾರೆಂದು ಪೇಳು? | 
ಘುಡುಘುಡಿಸಿ ನುಡಿಯದಿರ್! ಹುಡುಗ ನೀನೆಲೆ ಚಿನ್ನ! 
ಬಿಡುಬಿಡೀ ಮೂರ್ಖತೆಯ! ಬುದ್ಧಿಯನೆ ತಾಳು!” ||೧೨ || 

ಇ೦ತು ಕಬ್ಬುನ ನುಡಿದ ಪಂತದಾ ನುಡಿಗೇಳ್ದು,  
ಸಂತಪ್ತನಾಗಿ ನುಡಿದುದು ಕನತ್ಕಕನಕಂp10 | 
"ನಾಂ ತಳೆದು ಗುಪ್ತವೇಷಂ , ತಿಕಿಯೊಳಡಗುವೆಂ. 
ಎಂತು ನಡೆವುದು ಜಗಂ ನಾನಿಲ್ಲದನಕ೦? ||೧೩|| 
 
"ಲೋಕದೊಳ್‌ ನಾನೋರ್ವನೇಕಾಧಿಪತಿಯಾಗಿ, 
ಲೋಕಮಂ ನಡೆಯಿಪೆಂ ಚಿರಕಾಲದಿಂದಂ, | 
ಲೋಕದೊಳಗುವರಾರ್ || ಕಾಕವರ್ಣನನಿಂದು? "
ಲೋಕಮಂ ನಡೆಯಿಪೆಯೆ ಎನ್ನ೦ದದಿಂದಂ?" ||೧೪|| 

ಈ ಪ್ರಕಾರದೊಳು ಧಾತುಪ್ರಕರದರಸ ತ 
ನ್ನ ಪ್ರತಾಪವ ಕೊಚ್ಚಿ, ಭೂಲೋಕದಿಂದ | 
ಕ್ಷಿಪ್ರದಿ೦ ಮೈಮರೆದುದು12 ಪ್ರಲಾಪಿಸಿತು ಜನ 
ಮಪ್ತಿಮ ಕನಕನಾಶದ ಶೋಕದಿಂದ, ||೧೫|| 
.................
 7 ಯುದ್ಧ . 8 ತಾಯಿ , 9 ಖನಿಜ , 10 ಬೆಳಗುವ ಚಿನ್ನ 11ಕಾಗೆಯಂತೆ ಕಪ್ಪಾದವ  12 ಮಾಯವಾಯಿತು, 
---------------------------- 
168 - 
ಹೇಮರಹಿತಮದಾಯ್ತು ಶ್ರೀಮಂತಮಂದಿರಂ;  
ಭೂಮೀಶ ಕರದಂಡ ಗುರುದಂಡಮಾಯ್ತು; | 
ಕಾಮಿನೀಜನರ ಕೈ ಮುರದ ಕೈಯಾಯ್ತು, 
18 ಚಾಮೀಕರವನೆಲ್ಲರರಸಿದರ್ ಸೋತು. | |೧೬ || 

ಟಂಕಸಾಲೆಯೊಳು ಕನಕಂ ಕಾಣದಿರಲು, ಮು 
ದ್ರಾಂಕಿತದ ಪತ್ರ ಚಲಿಸಿತು ನಾಣ್ಯಮಾಗಿ, | 
ಅಂಕೆಯಿಲ್ಲದ ರತ್ನಸಂಕುಲವ ತೊಟ್ಟು, ದಿವ 
ಸಂ ಕಳೆದರಾ ಧನಾಢ್ಯರ್‌ ದುಃಖ ನೀಗಿ. ||೧೭|| 

ತಾಳಿ ಕಿವಿಯೋಲೆ ಹಿತ್ತಾಳಿಯಿಂ ವಿರಚಿಸುತ 
ತಾಳಿದರ್ ವನಿತೆಯರ್, ಕನಕದಾ ಮಾತು | 
ಕೇಳಿಸದು, ಪರಿಣಯದ ಕೇಳಿಗಳ್ ನಡೆದು ಸುಖ 
14 ಕೇಳಿಗೆ ಜನಕ್ಕೆ ಮುದಮೆಂದಿನಂತಾಯ್ತು. ||೧೮|| 

ತಾನಿಲ್ಲದಿರ್ದೊಡಂ ಮಾನವರ್‌ ಚಿರಕಾಲ 
ಹಾನಿಗೊಳ್ಳದೆ, ಸುಖಿಪ ಬಗೆನೋಡಿನೋಡಿ, । 
ಮನಗಳೆದುಂ ಕನಕ ಮೀನೆಲಕೆ ಮಗುಳೆ ಬಂ  
ದಾನಮ್ರ ಭಾವ ತಳೆದುದು ಚಿ೦ತೆಗೂಡಿ. ||೧೯|| 

ಮೈಗರೆದು ಕಬ್ಬುನಂ ಕೈಗಾಣದಂತಾದು 
ದೈಗಳಿಗೆಯೊಳ್‌ ಜಗಂ ದುಖಸಾಗರದಿ | 
ಮೈಗೊಟ್ಟು ಮುಳುಗಿದುದು-ತ್ರೈಗುಣಾತ್ಮಕನೆ! ಸಲ 
ಹೈ! ಗತಿಯ ದೋರಂದು ಬಹು ದೀನಸ್ವರದಿ. || ೨೦ || 

ತೆರಳದೈ ಹಡಗಳಟ! ಪೊರಳದೈ ಶಿಖಿಶಕಟ15 
ಉರುಳದೈ ಯಂತ್ರದೊಳ್‌ ಚಕ್ರಗಳ್‌ ಭರದಿ! | 
ಪರಿದು ವಿದ್ಯುತ್‌ತಂತಿ,* ಮುರಿದು ಕಂಬದ ಹಂತಿ, 
ಕೊರಲು ಕಟ್ಟದೊಲಾಯ್ತು ವ್ಯಾಪಾರ ಪುರದಿ. ||೨೧|| 

ಹೊರಬರವು ವಸ್ತ್ರಗಳ್‌! ತರಿಯವಾ ಶಸ್ತ್ರಗಳ್‌! 
ಪರಿಯವಾ ಪತ್ರಗಳ್‌ ಮುದ್ರಣಾಲಯದಿ! | 
ಗೊರಸೆ ಸಮೆದುಂ ಕುದುರೆ ಪೂರೆಯೆತ್ತು ನೆಲಕುದುರೆ,  
ಧರೆಯ ಕೈ ಬಿಗಿದುದೈ ಕಬ್ಬುನದ ಲಯದಿ! ||೨೨|| 

ಅರಿವೆ ನೇಯಂ ಜೇಡ ಕರಿಯ ಕೊಲ್ಲನು ಬೇಡ! 
ಮರವ ಸಿಗಿಯಂ ಬಡಗಿಯುಳನೊಕ್ಕಲಿಗನು! | 
ಧುರವ ಸೇರಂ ವೀರ! ನರಳುವಂ ಕಮ್ಮಾರ | 
ಬರಿಯ ನೂಲ್‌ ಪಿಡಿದು ಚಿಂತಿಪನು ಚಿಪ್ಪಿಗನೂ! ||೨೩|| 
...................
13 ಚಿನ್ನ .14 ಸುಖದ ವೃದ್ಧಿ, 15 ಹೊಗೆಯ ಬಂಡಿ *ತಂತ್ರಿಎ೦ದಾಗ ಬೇಕಿತ್ತು, 
---------------------------------- 

-169 - 

ಸುರಿಗೆಯದು ತರಿಯದಿರೆ, ತುರಿಪ ಮಣೆ ತುರಿಯದಿರೆ, 
ವರಶಾಕಪಾಕಗಳುಮಿಲ್ಲ ಭೋಜನಕೆ! 
ಧರಣಿಯೊಳ್‌ ಕಬ್ಬುನಂ ಮೆರೆವಾಗೆ, ದಿನದಿನಂ 
ಮರಣ ಜೀವಿತಮಾಯ್ತು ಸಕಲ ಭೂಜನಕೆ. ||೨೪|| 

"ದೇವದೇವನೆ! ಸತ್ಕೃಪಾವಲೋಕನದಿಂದ 
ಕಾವುದೆಮ್ಮಯ ಪಾಪಗಳನೆಲ್ಲ ಹರಿಸಿ, 
ಈ ವೇಳೆಯೊಳ್‌ ಲೋಹದಾ ವರವನಿತ್ತು ನ 
ಮ್ಮೀ ವಿಪತ್ತಂ ಬೇಗ ನೀನೆ ಪರಿಹರಿಸಿ" ||೨೫|| 

ಶೋಕದಿಂದಿಂತುಲಿವ ಲೋಕಮಂ ಕಂಡು, ತಾ 
ನೀ ಕಬ್ಬುನಂ ದಯದಿ ಮೈದೋರಿ ಬಂದು, 
ವ್ಯಾಕುಲಿತ ಹೃದಯಕೆ ವಿವೇಕದಿಂದುತಚರಿಸು 
ತಾಕನಕದೊಡನೆ ನುಡಿಗುಡು ನುಡಿಯನೊಂದು, ||೨೬|| 

“ಎಲೆ! ಅಣ್ಣ! ಬೇಸರದಿ ತಲೆವಾಗಿಸಲು ಬೇಡ! 
ಒಲಿದೆನ್ನ ನುಡಿಗೆ ಕಿವಿಗುಡು ಮನವನಿಟ್ಟು! 
ತಲೆದೋರಿಪ೦ತೆ ನೀo, ಬಲಿದ ಭೂಗರ್ಭದಿಂ 
ಸೆಳೆದು ನಾಂ ತಂದೆ ನಿನಗೆನ್ನ ಕೈಗೊಟ್ಟು. ||೨೭|| 

“ಬಳಿಕ ದುಸ್ಸಂಗದಿಂ ಬಳೆವ ಮಲಿನತೆಯ ನಾಂ 
ಕಲೆಯಲ್ಕೆ ನಿನ್ನ ಪುಡಿಗೈದೊಡಂ, ಬಿಡದೆ । 
ತಳೆದಿರಲದಂ ನೀನು, ಮುಳಿದು ನಿನ್ನ ಕಿಚ್ಚಿ  
ನೋಳು ಕೆಡವಿದೆನು ನಿನ್ನಸುವಿನಾಸೆಯಿಡದೆ.         ||೨೮|| 
 
“ಇಕ್ಕುಳದಿ ಪಿಡಿದು ನಾ೦, ಚೊಕ್ಕಟಮದಾಗೆ ನೀಂ  
ತಕ್ಕನಿತು ಬಡಿದು ನಿನ್ನಯ ಮೈಯನೆಲ್ಲಂ ! 
16ಅಕ್ಕರವ ಕಲಸಲ್ಕೆ ತಿಕ್ಕಿದೆಂ ಮಳಲೊಳಗೆ. 
ಮಕ್ಕಳಂ ಕಲಿಸದಿಹ ಪಿತನು ಪಿತನಲ್ಲಂ.          ||೨೯||

"ಪೆಟ್ಟಿಗೆಯೊಳಿರುಳು ನಾನಿಟ್ಟು ನಿನ್ನಂ, ಕಾವು 
ಕೊಟ್ಟು ಕೈದುಗಳಿಂದ ಸಲಹುವೆಂ ಬಿಡದೆ, | 
ಸಿಟ್ಟುಗೊಳಬೇಡ ಮೈಮುಟ್ಟಿದೆಂ ನಾನೆಂದು! 
ನಿಟ್ಟುರವ ನುಡಿಯದಿರ್ ಕೋಪಗೆಡೆಗೊಡದೆ! ||೩೦|| 
 
"ನಗರದರಸಾದೊಡಂ ಮಗನಲವೆ ತಾಯ್ಗೆ? ನಿ 
ನ್ನುಗುವ ಕಾಂತಿಯ ದೇಹಮೆನಗೆ ಪಿರಿದೇನು? 
ಜಗದೊಳ್‌ ಕೃತಘ್ನತೆಯನುಗಿವೌ‍ಧಂ ಕಣ್ಣು 
ಬಿಗಿವ ಮದರೋಗಾಂಜನಂ ಕಾಣೆ ನಾನು. ||೩೧|| 
...................... 
16 ಪೂರ್ವದಲ್ಲಿ ಮಕ್ಕಳಿಗೆ ಪ್ರಥಮದಲ್ಲಿ ಮಳಲಿನ ಮೇಲೆ  
ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. 
--------------------------
170 
ಈ ಜಗದಿ ನಮಗಾ ನಿಯೋಜಿಸಿದ ಕಾರ್ಯಂಗ 
ಳೋಜೆ ತಪ್ಪದೆ ನಿರ್ವಹಿಪುದೇ ಮಹತ್ವಂ. | 
ರಾಜ ನಾಡನು ಜನಂ ರಾಜನಂ ಸೇವಿಸುತ, 
ನೈಜದಿಂ ಸುಖಿಸುವುದೆ ನರ ಲೋಕತತ್ವಂ" ||೩೨|| 

ಉದ್ದತೆಯ ತರಿದಪ್ರಬುದ್ಧತೆಯ ಪೋಗೊಳಿಸಿ,  
ರುದ್ಧ ಕಂಠದಿ ಬರ್ಪ ಶೋಕಾರ್ತಸ್ವರಮಂ | 
ವೃದ್ಧ ಲೋಹಂ ನಿಲಿಸಿ, ಬುದ್ಧಿವಾದವ ಕಲಿಸಿ, 
ಶುದ್ಧವರ್ತನಕೆ ತಂದುದು17 ಕರ್ತಸ್ವರಮಂ || ೩೩| | 
........................
 
17 ಚಿನ್ನ  
=========================== 
171 
ಕಮಲ 
(ಮತ್ತೇಭವಿಕ್ರೀಡಿತ) 

ನಳಿನೀ! ನೀ೦ ನಲಿವೈ ವಿಲೋಲಜಲಕಲ್ಲೋಲದುಯ್ಯಾಲೆಗೊಂ 
ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ! 
ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗೆವ ತೀಡಲ್ ಮೋದಮಂ ಪೊಂದುವೈ !  
ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯ೦ ಬಾನಿಂ ಮುಳುಂಗಲ್ಕೆ ನೀಂ!     ||೧|| 

ಸಲಿಲೋತ್ಸಂಗ ವಿನೋದಿನೀ! ಕಮಲನೀ! ಮನ್ಮಾನಸೊಲ್ಲಾಸಿನೀ! 
ಕಲಿಸೈ ನಿನ್ನವೊಲಂ ಮುದಂ ತಳೆವವೊಲ್, ಸಂತಾಪಮಂ ನೀಗುವೋಲ್! 
ವಿಲಸದ್ರಮ್ಯತೆಯಿಂ ಸುವಾಸನೆಯಿನಾನಾನಂದಿಪಂತಾವಗಂ,  ಜಲಾಂದೋಲನದಿಂದೆ ನೀಂ ಸೊಗಸು ತೋರೈ! ಪುಷ್ಪಕಾಂತಾಮಣೀ! ||೨|| 

ಸರಮಂ ಸಿoಗರಿಪೈ ವಿಶಾಲದಳದಾ ಸೌಂದರ್ಯದಿಂ ವರ್ಣದಿಂ, 
ನರರಂ ರಂಜಿಸುವೈ ನಿರಂತರ ಲಸನ್ಮಾಧುರ್ಯದಿಂ ಲೀಲಿಯಿಂ, 
ಧರೆಯೊಳ್‌ ವರ್ಧಿಸುವೈ ಮಹಾದ್ಭುತಕರ ಶ್ರೀಸೃಷ್ಟಿವೈಚಿತ್ರ್ಯಮಂ.  ಧರಣೀಕರ್ಣದಿನೀಂ ಜಿನುಂಗಿಪೆ ಹರೇರ್ಲೀಲಾ ಮಹತ್ವ೦ಗಳ೦!     ||೩||

ಎಲೆಲೇ! ಮಾನವ ಮೂಢ! ನೋಡು! ಕೆಸರೊಳ್‌ ನಾಳಂ ಮುಳುಗಿರ್ದೊಡಂ, ಜಲಮಂ ಸೋoಕಿದೊಡಂ ದಳಂ, ಕಮಲಮುಂ ನಿರ್ಲಿಪ್ತಮಾಗುತ್ತೆ ಬಾಂ 
ದಳಕಂ ಕಣ್ಣಿಡುವೋಲ್‌-ಮಹಾ ಭವದಿ ನೀನುಂ ಮಗ್ನನಾಗಿರ್ದೊಡಂ, 
ಮಲಿನಗೊಳ್ಳದಿರೆಂದು ಮೀಶನ ಪದಾಂಭೋಜಾತಮಂ ದೃಷ್ಟಿಸೈ!          ||೪||
====================================
172 
ಪಾ ಣಿ ಪ ತ 
(ಒಂದು ಯಕ್ಷಗಾನ ದೃಶ್ಯ) 
[ವಾರ್ಧಿಕ ಷಟ್ಪದಿ] 

ಜಂಬುದ್ದೀಪದ ಹೊರಗೆ ನೆಲಸಿದ್ದ ಅಫ್ಘಾನ 
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್ 
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ 
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು 
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು 
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ 

[ಸೌರಾಷ್ಟ್ರ ತ್ರಿವಿಡೆ] 
 ಆ ಸಮರದಲ್ಲಿ ಭಾವ ಓಲಗ 
 ದಾ ಸಭೆಯ ರಚಿಸಿದನು ಸಿಂಧ್ಯ ವಿ  
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ || 

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು; 
ತುಳಿದೆವಫ್ಘಾನ್‌ ಸರ್ಪವನು ? ಇ 
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ || 

[ಭಾಮಿನಿ ಷಟ್ಪದಿ] 
ಭಾವವಿನ ನುಡಿಕೇಳಿ ಮಂತ್ರಿ ಸ 
ಭಾವಲಯ ಭಟರಂತರಂಗದ 
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; | 
ನಾವು ತಳುವುದೊ? ತಳರುವುದೂ? ಮೇಣ್ 
ಸಾವಿಗಂಜುತ ಹಿಂದುಳಿವುದೋ? 
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ | 

(ಕಾಂಬೋಧಿ-ಝಂಪೆತಾಳ) 
ಹೋಳಕರ:, ದಳವಾಯಿ ಲಾಲಿಪುದು ಹಳಬರ ನುಡಿಯೆಂದು 
ಹುಲುಗಡಹಿ ಹೊಳೆಯ ದಾಟಿರುವೆ! 
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ 
ತಿಳಿಗೇಡಿ ಹೊರ ಕುರುಬನಿಗೆ ಕುರಿಯ ಕೊಟ್ಟೆ ! 
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ 
ವೀರರಿಂ ಕಾದಾಡಿ ಹಗರಯಾ 
ಮರಾಯ ಮೇಲ್ಬಿದ್ದು ಹಾರಿಸುವುದನು ತೋರೆದೆ. 
ದೂರ ಸೀಮೆಯು! ದವಸ ಪೂರೈಕ ಅಹುದೆ | 

{ಸಾರಂಗ-ಾಷ್ಟತಾಳ} 
ಗಾರ್ಡಿ:-ವಂಚನಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ 
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, | 
173
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ 
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;-ಭಾವುಕೇಳು, ||

(ಮಾರವಿ-ಏಕತಾಳ) 
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ, || 
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ? || 
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು|| 
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು || 
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ  
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ ||
 
[ವಾಧೀಕ ಷಟ್ಪದಿ] 
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ 
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ 
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ || 
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು 
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ 
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು || 

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ 
ಮಳೆ ಹೊಯ್ವ ಹೊಯ್ಲಿನಲ್ಲಿ ಹಸಿ ಮಡಕೆ ಅದ್ದಂತೆ, 
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ || 
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ 
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು 
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು 

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ, 
ನೆತ್ತರ ಮೂಲಕ ಧರ್ಮವನು-ಹಾ! 
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ. 
ಬಿತ್ತರಿಸುವ ದುಷ್ಕರ್ಮವನು || 
ಎತ್ತಲು ಮುಂದಕೆ ಸಲ್ಲದು ಎಂಬೀ 
ಉತ್ತಮ ಭೇಧವ ತಂದವಗೆ, || 
ಬಲವಂತರು ತಮ್ಮಯ ಬಲದೆ-ದು 
ರ್ಬಲರನು ಕಾಳಗದಲಿ ಕೊಲದೆ, || 
ಒಲಿದವರವರಾತ್ಮೋನ್ನತಿಯನು ಗಳಿ 
ಸಲು ಬೇಕನ್ನುತ ಸಾರುವಗೆ || 
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ 
ನಾಂಧ್ರ ಕಿರಿಸ್ತಾನ್ ಫಾರಸಿ ತೀಕ್ || 
ಇಂದಾ ಐದನೆ ಜೋರ್ಜರ ಕೊಡೆಯಲಿ 
ಒಂದಾಗಿರಿಸಿದ ಮಹಿಮನಿಗೆ, ||
-------------------------------
- 174 - 
ಸನ್ನುತ ಜನತೆ ಪ್ರಮುಖವೆಂದು-ರಾ 
ಷ್ಟ್ರೋನ್ನತಿಯೇ ಇಹಸುಖವೆಂದು, || 
ಇನ್ನೀ ಮಂತ್ರವನೆಲ್ಲರು ಪಠಿಸಲಿ 
ಎನ್ನುತ ಉಪದೇಶಿಸಿದವಗೆ || 
-ಭಕ್ತಿಸಂದೇಶ 
(ರೌದ್ರಿ ಸಂವತ್ಸರ) 
-------------------------------
- 175- 
ಚ೦ದ್ರೋದಯ 

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- 
ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ 
ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭಿಕುಂ || ೧|| 
 
ಒಲವಿಂ ಚುಂಬಿಸಿ ನಾಡೆ ಬೆಟ್ಟದುದಿಯಂ, ವಾರೀತರಂಗಗಳೊಳ್‌ 
ನಲವಿಂ ನರ್ತಿಸಿ, ಚಂದ್ರಕಾಂತಿ ದಡದೊಳ್‌ ಮೆಲ್ನಿದ್ದೆಯಂಗೊoಡುದೈ. 
ಎಲೆಯೊಳ್‌ ನಿಟ್ಟುಸಿರಿಟ್ಟು ಸಂಚರಿವುದೈ ತಂಗಾಳಿಯುಂ; ಕೂಡೆ ಮೆ 
ಲ್ಲುಲಿಯಂ ಗೈವ ತರಂಗದಿಂ ಪ್ರವಹಿಸುತ್ತಂ, ಪಾರ್ವುದೈ ನಿರ್ಝರಂ       ||೨||

ಅಮೃತಂ ನಿನ್ನೊಳಗಿರ್ಪುದೆಂದು ನುಡಿವರ್‌, ನೋಡಲ್ಕಿದೇಂ ಸತ್ಯಮೇಂ! 
ಅಮಮಾ! ಚಂದ್ರನೆ! ಶುಕ್ಷ ಚಂದ್ರ! ರಜನೀ ಕಂಠಾವಲಂಬೀಮಣೀ! 
ಭ್ರಮೆಯಿಂ ಜೀವನಮಾರ್ಗದೊಳ್‌ ನಡೆದು ಗಾಯಂ ಪೊoದದೆಂ ಕಂದಿದೆಂ  
ತಮಮಂ ನೀಗುತೆ ತಣ್ಪನೊಂದಿಸು! ನಿಶಾಕಾಂತ ಪ್ರಶಾಂತಪ್ರಭಾ          ||೩|| 

ಅಹಹಾ! ಸತ್ಯಮೆ ಸತ್ತವರ್‌ ಬಿಡದೆ ನಿನ್ನಂ ಸೇರ್ವರೆಂಬುಕ್ತಿಯುo?  ಗೃಹದಾರಾತನುಜರ್ಕಳo ತೊರದು, ನಿನ್ನಾ ಲೋಕಮಂ ಸೇರಿ ಮೇ 
ಣಿಹದೊಳ್‌ ದುಃಖಿಪ ಮರ್ತ್ಯರಂ ನಗುವಿನಿಂ ನೋಡುತ್ತೆ, ನಿನ್ನಂತೆವೊಲ್‌  ಮಹಿಯೊಳ್‌ ದೇವಮಹತ್ವಮಂ ತಿರುವಲೆಂತೋ ಪಾರ್ವುದೆನ್ನೀ ಮನಂ ||೪|| 
(ಸುವಾಸಿನಿ ೧೯೦೨) 
=============================== 
178 
ಲಕ್ಷ್ಮೀಶ ಕವಿ 

ಎle ಕರ್ಣಾಟವೀoದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ! |  ಗಾ 
ವಿಲನಾದೆನ್ನ ಬಳಿ ಬಂಜೆ ನುಡಿಯಂ ನೀನಲಿಸೈ ಲಾಲಿಸೈ!  | 
ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್‌, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? || ೧ || 
 
ಮುಗಿಲು ಮುಟ್ಟಿದ ಶೃ೦ಗಮಂ ಗಗನದೊಳ್‌ ಪ್ರಚ್ಛನ್ನ ಗೈದುಂ ವಲಂ | 
ಜಗಕಂ ಕನ್ನಡಿಯಂತೆ ತೋರಿ ಬೆಳೆದುಂ, ಪ್ರೌನ್ನತ್ಯ೦ ನಿಂದು, ನು |
ಣ್ಬೋಗರಿಂ ಶೋಧಿಪ ಸತ್ಯವೀಂದ್ರ ಗಿರಿ! ನಿನ್ನಂ ನೋಡಲೇನೆಂದಿಪೆಂ? | 
ಮಿಗೆಯುತ್ಸಾಹದಿ ನೀರವಂ ನಿರಧಿಕಂ ನಿಷ್ಪಂದಮಾನಂದಿಪೆಂ          ||೨||

ಅಳಿವರ್ ಕಬ್ಬಿಗರೆಂದು ಪೇಳ್ವ ನುಡಿಯುಂ ಚೆನ್ನಪ್ಪುದೇ ಲೋಕದೊಳ್ | 
ಅಳಿವಿಲ್ಲ೦ ಕೃತಿಗಳ್ಗೆ, ನಿನ್ನಜಸಮುಂ ಕರ್ಣಾಟದೊಳ್‌ ಶಾಶ್ವತಂ | 
ತಿಳಿಯಲ್‌ ನಿನ್ನಯ ಷಟ್ಪದಂಗಳೊಲವಿಂ ಸಾಹಿತ್ಯ ವಿದ್ವಾಂಸಮಂ | 
ಡಳಕಾಸರದೊಳೀಗಳುಂ ಮೊರೆವುವೈ-ನಿನ್ನಿಚ್ಛೆಯಂ ಪಾಲಿಸಲ್          ||೩|| 

ಬೆಳದೆಂ ಬಾಲಕನಾಗಿ ನಿನ್ನವಿಲಸತ್ಷಟ್ಪಾದ ಝೇಂಕಾರದೊಳ್‌, | 
ಕಳೆದೆಂ ಜವ್ವನಮಂ ವಿಲಾಸ ಕವಿತಾ ಸಂಭೂತ ಶೃಂಗಾರದೊಳ್‌, | 
ತಳೆದುಂ ಮಾನಸತೃಪ್ತಿಯಂ ಕೃತಿಯ ಸದ್ದರ್ಮೋಪದೇಶoಗಳಿಂ, | 
ಕಳಿವೆಂ ಸಂಸ್ಕೃತಿ ದುಃಖದಿ೦ ನುರಿದ ಮುಪ್ಪಂ ನಿನ್ನ ವಾರ್ಧಕ್ಯದೊಳ್ || ೪ || 

(ಸುವಾಸಿನಿ ೧೯೦೩,) 
------------------------------------ 
177 
ಶೋಕಗೀತೆ 
 
ಹೋದುದಲ್ಲಾ ಎಲ್ಲಾ ಹೋದುದಲ್ಲಾ । 
ಹೋದುದೆಲ್ಲವು ಕಣ್ಣ ಹಿoದೆ ||
ಖೇದವಿನ್ನೆನಗುಳಿದುದೊಂದೆ | 
ಹೇದಯಾನಿಧೆ ಪ್ರೇಮದಿಂದೆ 
ಹಾರಿ ತೋರಿಸಿ ನಡಸು ಮುಂದೆ 
ಹೋದುದಲ್ಲಾ ||೧|| 

ತೊಡೆಯ ತೊಟ್ಟಿಲೊಳೆನ್ನನಿಟ್ಟು | 
ಕುಡಿಸಿ ಮಮತೆಯ ಗುಣವ ನೆಟ್ಟು || 
ಬಿಡದೆ ವಿದ್ಯೆಯ ಬಾಯ್ಗೆಕೊಟ್ಟು | 
ನಡೆದನೆನ್ನನು ಮರುಗಬಿಟ್ಟು 
ಹೋದನಲ್ಲಾ ಅಪ್ಪ ಹೋದನಲ್ಲಾ ||೨|| 

ಆಟದಿಂದೆನ್ನೊಡನೆ ಬೆಳೆದು | 
ಊಟಕೂಟದ ಪ್ರೇಮ ತಳೆದು || 
ಕೋಟಲೆಯ ಸಂಸಾರ ಕಳೆದು | 
ದಾಟಿದನು ಮಮಹೃದಯ ಸೆಳೆದು 
ಹೋದನಲ್ಲಾ ತಮ್ಮ ಹೋದನಲ್ಲಾ || ೩ || 

ಮನದಿ ಕೃಷ್ಣತೆಯನ್ನು ಮುಚ್ಚಿ | 
ಕನಕಶನುಸೌಂದರ್ಯ ಬಿಚ್ಚಿ 
ಧನದ ಕಪಟಸ್ನೇಹ ಹಚ್ಚಿ | 
ಕೊನೆಗೆ ಮಿತ್ರಭುಜಂಗ ಕಚ್ಚಿ 
ಹೋದನಲ್ಲಾ ಮಿತ್ರ ಹೋದನಲ್ಲಾ || ೪ || 

ಅಲೆಯ ಬಡಿತಕೆ ಜಾರ್ವ ಮಳಲೊಲ್‌ | 
ಕೆಳಗಿಳಿವ ಹೊತ್ತರೆಯ ನೆಳಲೋಲ್‌, || 
ತಳದ ತೂತಿನ ಗಡಿಗೆ ಜಲದೋಲ್‌ | 
ತಿಳಿದು ತಿಳಿಯದೆ ನೂರಬುದದೋಲ್  
ಹೋದುದಲ್ಲಾ ಪ್ರಾಯ ಹೋದುದಲ್ಲಾ ||೫ || 
 
ತೋರದಂದದಿ ಸೇರಿ ತೋರುತ  | 
ಭೂರಿ ಸುಖಸಂತಸವ ಕೋರುತ || 
ನೀರಿನೋಲ್ ಕೈಯಿಂದ ಜಾರುತ | - 
ಹಾರಿ ಹೋದುದು ದುಃಖಕಾರುತ 
ಹೋದುದಲ್ಲ ದ್ರವ್ಯ ಹೋದುದಲ್ಲಾ ||೬|| 
-------------------------
೧೭೮
ಆಳಟ ಸಂಸಾರದೊಳಗೆ | 
ಸಕಲ ನಾಶಕೆ ಮೂರುಗಳಿಗೆ || 
ಶಕಟನಂದದಿ ತಿರುಗಿ ಕೆಳಗೆ | 
ವಿಕಟ ಭಾರತನಾದೆ ನಿಳೆಗೆ ||೭|| 
 
ಹೋದುದನು ನಾ ಮರುಗದಂದವ | 
ಗೈದು ಬಿಗಿ ವೈರಾಗಬಂಧವ, | 
ಓ ದಯಾನಿಧೆ ಭಕ್ತಬಾಂಧವ | 
ಮೋದದಿoದವತರಿಸಿ ಬಂದವ ||೮||

(ಕಂಠೀರವ, ೧೯೩೫.) 
=============================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ