https://archive.org/details/dli.osmania.4205/
ಸು ಭ ದ್ರೆ
ಅಮರಸೇನ, ಮಹಾಲಕ್ಷ್ಮಿ, ಶ್ಯಾಮಕುಬ್ಜ,
ನವೀನಭರತಖಂಡ ಎಂಬ ಗ್ರಂಥಗಳ
ಪ್ರಣೇತರಾದ
ಬಿ.ವೆಂಕಟಕೃಷ್ಣಪ್ಪ ಬಿ.ಎ.
ಇವರಿಂದ ರಚಿಸಲ್ಪಟ್ಟಿದೆ.
ಎರಡನೆಯ ಛಾಪೆ, ೧ಂಂ ಪ್ರತಿಗಳು
ಚಿಕ್ಕಪೇಟೆ ಪುಸ್ತಕ ವ್ಯಾಪಾರಿಗಳು ಹೆಚ್. ಎನ್. ರಾವ್ ಬ್ರದರ್ಸ್
ಇವರಿಂದ ಪ್ರಕಟಿಸಲ್ಪಟ್ಟ ದೆ.
ಬೆಂಗಳೂರು ಸಿಟಿ,
1919
All rights rteserved
ಬೆಲೆ ೬ ಆಣೆ,] | ಅಂಚೆ ವೆಚ್ಚ ಬೇರೆ,
-----------------------------
ಕೆ. ಎಸ್. ಕೃಷ್ಣಯ್ಯರ್ , ಬಿ. ಎ.. ಯವರ
`ಐರಿಷ್` ಮುದ್ರಾಲಯದಲ್ಲಿ ಮುದ್ರಿಸಲ್ಪಟ್ಟಿತು,
ಬೆಂಗಳೂರು ಸಿಟಿ
---------------------------------
ಸು ಭ ದ್ರೆ
ಅಮರಸೇನ, ಮಹಾಲಕ್ಷ್ಮಿ, ಶ್ಯಾಮಕುಬ್ಜ,
ನವೀನಭರತಖಂಡ ಎಂಬ ಗ್ರಂಥಗಳ
ಪ್ರಣೇತರಾದ
ಬಿ.ವೆಂಕಟಕೃಷ್ಣಪ್ಪ ಬಿ.ಎ.
ಇವರಿಂದ ರಚಿಸಲ್ಪಟ್ಟಿದೆ.
ಎರಡನೆಯ ಛಾಪೆ, ೧ಂಂ ಪ್ರತಿಗಳು
ಚಿಕ್ಕಪೇಟೆ ಪುಸ್ತಕ ವ್ಯಾಪಾರಿಗಳು ಹೆಚ್. ಎನ್. ರಾವ್ ಬ್ರದರ್ಸ್
ಇವರಿಂದ ಪ್ರಕಟಿಸಲ್ಪಟ್ಟ ದೆ.
ಬೆಂಗಳೂರು ಸಿಟಿ,
1919
All rights rteserved
ಬೆಲೆ ೬ ಆಣೆ,] | ಅಂಚೆ ವೆಚ್ಚ ಬೇರೆ,
-----------------------------
ಕೆ. ಎಸ್. ಕೃಷ್ಣಯ್ಯರ್ , ಬಿ. ಎ.. ಯವರ
`ಐರಿಷ್` ಮುದ್ರಾಲಯದಲ್ಲಿ ಮುದ್ರಿಸಲ್ಪಟ್ಟಿತು,
ಬೆಂಗಳೂರು ಸಿಟಿ
---------------------------------
ಸುಭದ್ರೆ ,
--- ಮೊ ದ ಲ ನೆ ಯ ಅ ಧ್ಯಾಯ _
ಪುನಹೆಗೆ ಸ್ವಲ್ಪ ದೂರದಲ್ಲಿ ಸಣ್ಣ ಅಗ್ರಹಾರ
ವಿರುವುದು. ಈ ಅಗ್ರಹಾರದಲ್ಲಿ ವಿಶ್ವನಾಥನೆಂಬ ಬ್ರಾಹ್ಮ
ಣನು ವಾಸವಾಗಿದ್ದನು. ಅವನಿ ಗೆ ಒಬ್ಬಳೇ ಮಗಳು .. ಅವಳ
ಹೆಸರು ಸುಭದ್ರೆ.
ಸುಭದ್ರೆಗೆ ೧೩ ವರ್ಷ ತುಂಬಿದ್ದಿತು; ಇನ್ನೂ ಮದುವೆಯಾ
ಗಿರಲಿಲ್ಲ. ವಿಶ್ವನಾಥನಿಗೂ. ಅವನ ಹೆಂಡತಿ. ರಮಾಬಾಯಿಗೂ
ಹಗಲೂ ಇರುಳೂ ಮಗಳ ಮದುವೆಯ ಚಿಂತೆ. ಸುಭದ್ರೆಗೆ ಎಂಟು
ವರ್ಷ ತುಂಬಿದಾಗಿನಿಂದ ಅವರು ಪ್ರಯತ್ನ ಪಡುತ್ತಿದ್ದರೂ ಅವಳಿಗೆ
ಒಬ್ಬ ವರನು ದೊರೆಯುವುದು ಅಸಾಧ್ಯವಾಗಿದ್ದಿತು.
ಸುಭದ್ರೆಯು ಚಲುವಿಕೆಯಲ್ಲಿಯೂ, ಒಳ್ಳೆಯತನದಲ್ಲಿಯೂ,
ಬುದ್ಧಿ ಕುಶಲತೆಯಲ್ಲಿಯೂ, ಅವಳ ಓರಗೆಯ ಹುಡುಗಿಯರೆಲ್ಲರಿ
ಗಿಂತಲೂ ಮೇಲಾಗಿದ್ದಳು. ಆದರೇನು ? ಬಡವನ ಮಗಳು. ಅದು
ದರಿಂದಲೇ ಯಾರೂ ಅವಳನ್ನು ತಂದುಕೊಳ್ಳಲು ಒಪ್ಪುತ್ತಿರಲಿಲ್ಲ.
ಒಂದು ದಿನ. ಸಾಯಂಕಾಲ. ವಿಶ್ವನಾಥನೂ ರಮಾಬಾ
ಯಿಯೂ ಇದೇ ವಿಚಾರವಾಗಿ ಹಲವು ಒಗೆಯಲ್ಲಿ ಯೋಚನೆಯನ್ನು,
ಮಾಡುತ್ತಾ ಕುಳಿತಿದ್ದರು. . ಅಗ ಒಬ್ಬ ದೊಡ್ಡ ಮನುಷ್ಯನು ಅವರ
------------------------------------
4
ಮನೆಗೆ ಬಂದನು. ಅವನು ಕನ್ಯಾನ್ಕೇಷಣಕ್ಕಾ ಗಿ ಬಂದಿರುವುದಾಗಿ
ತಿಳಿಯಬಂದಿತು. . ಅವನ ವಜ್ರದ ಹತ್ತಕಡಕು, ಪಚ್ಚೆ, ಕೆಂಪು,
ವಜ್ರಗಳು ಕೆತ್ತಿದ ಉಂಗುರಗಳು, ಕುತ್ತನಿಯ ಅಂಗರೇಕು, ಜರತಾ
ರಿಯ ರುಮಾಲು, ಇವುಗಳಲ್ಲವನ್ನೂ ನೋಡಿ ಆ ಬಡ ದಂಪತಿಗಳು
ಬೆಕ್ಕಸ ಬೆರಗಾದರು. ವಿಶ್ವನಾಥನು, "ನಿಮ್ಮಂತಹ ದೊಡ್ಡ ಮನು
ಷ್ಯರ ಸಂಗಡ ಬಾಂಧವ್ಯವು ದೊರಕಿದುದೇ ಆದರೆ ನಮ್ಮ್ರ ಪೂರ್ವ
ಜನ್ಮದ ಸುಕೃತದ ಫಲವೇ ಸರಿ. ನಕ್ಷತ್ರಾನುಕೂಲವನ್ನು ನೋಡಿ
ಅನಂತರ ಮುಂದಣ ಮಾತನ್ನಾ ಡಬಹುದು`` ಎಂದನು. ಹೊಸಬನು, .
ನಾನು ಮೊದಲು ಕನ್ಯೆಯನ್ನು ನೋಡಬೇಕು`` ಎಂದನು, ರಮಾ
ಬಾಯಿಯು ಕಿರುಮನೆಯಲ್ಲಿ ಓದುತ್ತ ತುಳಿತಿದ್ದ ಸುಭದ್ರೆಯನ್ಶು
ಕರೆದುಕೊಂಡು ಬಂದಳು. ಅನಳನ್ನು. ನೋಡಿ. ಹೊಸಬನಿಗೆ ಬಲು
ಸಂತೋಷವಾಯಿತು. "ಇಂತಹ ಚೆಲುವೆಗೆ, ವರನು ಸಿಕ್ಕಲಿಲ್ಲವೇ“
ಎಂದನು ಸುಭದ್ರೆಯು ನಾಚಿಕೊಂಡು ಒಳಗೆ ಹೋದವಳು ಹಾಗೆಯೆ
ಕೊಠಡಿಯ ಬಾಗಿಲಲ್ಲಿ ಇವರ ಮಾತುಗಳನ್ನು ಅಳಿಸುತ್ತಾ ನಿಂತು
ಕೊಂಡಳು. . ವಿಶ್ವನಾಥನು. “ರಾಯರೆ, ವರನ. ಜಾತಕವನ್ನು
ಕೊಡೋಣಾಗಲಿ, ನೋಡುತ್ತೇನೆ. ನನಗಗ ಸ್ತಲ್ತ ಜ್ಯೋತಿಷ್ಯ
ಪರಿಚಯವುಂಟು`` ಎಂದನು.
ಶ್ರೀಧರರಾಯ ( ಅದೇ ಹೊಸಬನ ಹೆಸರು) __ಜಾತಕವನ್ನ
ನೋಡಬೇಕಾದುದೇನು, ಸ್ವಾಮಿ, ಮನಸ್ಸು ಒಪ್ಪಿ
ದರೆ ಸರಿ.
ವಿಶ್ವನಾಥ-_ಮನಸ್ಸು ಒಪ್ಪಿತೆಂದು ಕುಲಗೋತ್ರ ತಿಳಿಯದೆ
ಕೊಡುವುದಕ್ಕಾ ಗುವುದೆ ?
ಶ್ರೀಧರ-- ವರನು ದೇಶಸ್ಥ ಬ್ರಾಹ್ಮಣ, ಕಾಶ್ಯಪಗೋತ್ರ,
ಬೇಕಾದಷ್ಟು ಹಣವಿದ್ಯೆ, ನಿಮ್ಮ ಮಗಳಿಗೆ ಮೈತುಂಬ
-------------------------------
೫
ಒಡವೆಯನ್ನುಕ್ಕುವುದಲ್ಲದೆ, ನಿಮ್ಮ ಮನಸ್ಸಿಗೂ ತೃಪ್ತಿ
ಯಾಗುವಂತೆ ಸನ್ಮಾನವನ್ನು ಮಾಡುತ್ತಾನೆ.
ವಿಶ್ವನಾಥ.--ಇದೇನೊ ನಮಗೆ, ಕನಸಿನಂತೆ ತೋರುತ್ತಿದೆ,
ಅಂತಹ
ವರನು. ಸಿಕ್ಕುವಷ್ಟು ಪುಣ್ಯವನ್ನು ನಾವು ಮಾಡಿರುವೆವೆ ?
ಶ್ರೀಧರ-- ವರನು ನಿಮ್ಮೆದುರಿಗೇ ಕುಳಿತುಕೊಂಡು ಮಾತು
ಕೊಡುತ್ತಿರುವಾಗ ನಿಮಗೆ ಅಪನಂಬಿಕೆಯೇ ?
ವಿಶ್ವನಾಥ -- ಅದೇನು ಸ್ನಾಮಿ, ಹೀಗೆ ಮಾತನಾಡುತ್ತೀರಿ,
ನನಗಾವುದೂ ಅರ್ಥವಾಗುವುದಿಲ್ಲ.
ಶ್ರೀಧರ-- ನಿಮ್ಮ ಲ್ಲಿ. ಮುಚ್ಚು ಮರೆಯೇಕೆ,
ಕನ್ಯೆ ಬೇಕಾಗಿರುವುದು ನನಗೇ-
ವಿಶ್ವನಾಥ- ಏನು, ಏನು, ನಮಗೆ ?
ಶ್ರೀಧರ---ಅದೇನು ಅಷ್ಟು ಆಶ್ಚರ್ಯ ಪಡುತ್ತೀರಿ ? ನಾನು
ಹೇಳುವುದನ್ನು ಪೂರಾ ಕೇಳಿ! ನಾನೇನೋ ವಯ
ಸ್ಸಾದವನಂತೆ ತೋರಿದರೂ ನನಗಿನ್ನೂ ಐವತ್ತು
ವರ್ಷ ಕೂಡ ಆಗಿಲ್ಲ. ನನಗೆ ನಿಮ್ಮ ಹುಡುಗಿಯನ್ನು
ಮದುವೆ ಮಾಡಿಕೊಳ್ಳಬೇಕೆಂಬ ಇಷ್ಟವಿದೆ. ಇದ
ಕ್ಕೋಸ್ಕರ ನೀವೇನು ಕೇಳಿದರೂ. ಕೊಡಲು ಸಿದ್ಧ
ನಾಗಿದ್ದೇನೆ-
ವಿಶ್ವನಾಥ--ಅಯ್ಯೋ ! ನಾನು ಮಗಳನ್ನು ಮಾರಲೆ ?
ನಾನು ಹುಟ್ಟಿದುದಕ್ಕೆ ಸಾರ್ಥಕವಾಯಿತು.
ಶ್ರೀಧರ-ನೀವು ಆರೀತಿ ಯೋಚನೆ ಮಾಡಕೂಡದು
ನಿಮ್ಮ ಮಗಳನ್ನು ನನಗೆ ಕೊಟ್ಟರೆ ನೀವು ನನಗೆ
ಕೇವಲ ಆತ್ಮೀಯರಾಗುವಿರಿ, ನಾನು ಕೊಡುವ
-------------------------
೬
ಹಣವು ನಿಮ್ಮ ಪೋಷಣೆಗೋಸ್ಕರವೆಂದು ತಿಳಿಯ
ಬೇಕಲ್ಲದೆ ನಿಮ್ಮ ಮಗಳಿಗೋಸ್ಕರ ಕೊಡುವ ಕ್ರಯ
ವೆಂದು ಭಾವಿಸಕೂಡದು .
ವಿಶ್ವನಾಥ_(ಹೆಂಡತಿಯಕಡೆನೋಡಿ) ನೀನೇನು ಹೇಳುವೆ?
ರಮಾಬಾಯಿ_ ಇಂತಹ ದೊಡ್ಡ ಮನುಷ್ಯರ ಮಾತನ್ನು
ತೆಗೆದುಹಾಕುವುದು . ಹೇಗೆ ? ಎಷ್ಟೋ ಜನರು
ಪಷ್ಠ ಪೂರ್ತಿಶಾಂತಿಯಾದ ಮೇಲೆ ಕೂಡಾ ಮದುವೆ
ಮಾಡಿಕೊಂಡು ಮಕ್ಕಳು ಮರಿಗಳನ್ನು ಪಡೆದು
ಸುಖವಾಗಿದ್ದಾರೆ.
ವಿಶ್ವನಾಥ -ಸರಿ, ನಿನಗೆ ಒಪ್ಪಿಗೆಯೆಂಬುದು ಗೊತ್ತಾ
ಯಿತು. ಇನ್ನು ನನ್ನದೇನಿದೆ. (ಶ್ರೀಧರರಾಯನನ್ನು
ಕುರಿತು) . ರಾಯರೆ, ನಿಮ್ಮ ಇಷ್ಟದಂತೆ ಆಗಲಿ,
ನಾಳೆ ಶುದ್ದ ಸಪ್ತಮೀ ದಿನವೇ ಲಗ್ನವಿದೆ, ನಮಗೂ
ಕಾಲವಿಳಂಬಕ್ಕೆ ಅವಕಾಶವಿಲ್ಲ.--
ಈ ಮಾತನ್ನು ಕೇಳಿದೊಡನೆಯೇ ಶ್ರೀಧರರಾಯನ ಸಂತೋ
ಷಕ್ಕೆ ಪಾರವೇ ಇರಲಿಲ್ಲ. ಸ್ವಾಮಿ, ನನಗೆ ಬೇಕಾಗಿರು ವುದೂ
ಅದೇ "ಶುಭಸ್ಯ ಶೀಘ್ರಂ" ಎಂದನು.
ರಮಾಬಾಯಿಯು ---`ಮಾತು ನಿಶ್ಚಯವಾಗಲಿ“ ಎಂದಳು.
ಶ್ರೀಧರ ~--ಅದಕ್ಕೇನು ನೀವು ಹೇಳಿದಷ್ಟು ಕೊಡಲು ಸಿದ್ದ
ನಾಗಿದ್ದೇನೆಂದು. ಆಗಲೇ ಹೇಳಿದೆನಷ್ಟೆ.
ರಮಾಬಾಯಿ..... ನಮಗೆ ಎರಡುಸಾವಿರರೂಪಾಯಿ ಕೃಷ್ಣಾ
ರ್ಪಣವಾಗಿ.. ಕೊಡಬೇಕು, ಅಲ್ಲದೆ ಹುಡುಗಿಗೆ
ಒಂದ್ದು. ತೊಡಿಗೆ. ನಗಗಳು ಒಂದು ಪೀತಾಂಬರ
ಇಷ್ಟೂ ಆಗಬೇಕು .
-------------------------------
೭
ಶ್ರೀಧರ-=~ಇಷ್ಟೇ ತಾನೆ, ಇದೋ ನಾಲ್ಕು ಸಾವಿರ ರೂಪಾ
ಯಿನ "ನೋಟು`` ಗಳನ್ನು ಈಗಲೇ ಕೊಡುತ್ತೇನೆ,
ನಿಮಗೆ ಬೇಕಾದಷ್ಟು ಇಟ್ಟುಕೊಂಡು, ಮಗಳಿಗೆ
ಬೇಕಾದಷ್ಟು ನಗವನ್ನು ಮಾಡಿಸಿ ಉಳಿದುದನ್ನು
ಮದುವೆಗೋಸ್ಟ್ರರ ವೆಚ್ಛ ಮಾಡಿ. ಇದರಲ್ಲೊಂದು
ಕಾಸನ್ನೂ ನಾನು ಕೇಳುವುದಿಲ್ಲ.
ವಿಶ್ವನಾಥನಿಗೆ ಅಷ್ಟೊಂದು ನೋಟುಗಳನ್ನು ನೋಡುತ್ತಲೆ
ಕಣ್ಣುಗಳರಳಿದುವು. " ಏನಾದರೂ ಆಗಲಿ, ಈ ನನ್ನ ಹುಟ್ಟು ಬಡ
ತನವಾದರೂ ಮುಕ್ತಾಯವಾಗುವುದು`` ಎಂದಂದುಕೊಂಡು ಅವು
ಗಳನ್ನು ತೆಗೆದಿಟ್ಬುಕೊಂಡನು.
ಇವರಸಂಭಾಷಣೆಯುನಡೆಯುತ್ತಿದ್ದಾಗಸುಭದ್ರೆಗೆ ಮೊದಲು
ಕೊಂಚಹೊತ್ತು ಸಂತೋಷವೂ ಅನಂತರ ಸ್ವಲ್ಪ ಸಂದೇಹವೂ
ಉಂಟಾಗಿದ್ದಿತು. ಕೊನೆಯ ಮಾತುಗಳು ಕಿವಿಗೆಬಿದ್ದೊಡೆನೆಯೆ ಅವಳಿಗೆ
ಸಿಡಿಲು ಬಡಿದಂತಾಯಿತು. ನಿಲ್ಲಲು ತ್ರಾಣವಿಲ್ಲದೆ ಕೂತುಬಿಟ್ಗಳು.
ಶ್ರೀಧರರಾಯನು ಲಗ್ನಕ್ಕೆ ಎರಡು ದಿವಸಮುಂಚಿತವಾಗಿ ಬರು
ವುದಾಗಿ, ಹೇಳಿ ಹೊರಟುಹೋದನು. ಆನಂತರ . ರಮಾಬಾಯಿಯು
ಸುಭದ್ರೆ, ! ಸುಭದ್ರೆ ! ಎಂದು ಕೂಗಿದಳು --ಉತ್ತರ ಬರಲಿಲ್ಲ, ಕಿರು
ಮನೆಯೊಳಕ್ಕೆ ಹೋಗಿ " ಸುಭದ್ರೆ ! ಊಟಕ್ಕೇಳಮ್ಮ“ ಎಂದಳು.
ಸುಭದ್ರೆಯು “ಅಮ್ಮ ! ಹಸಿವಿಲ್ಲ, ತೊಂದರಮಾಡಬೇಡ“` ಎಂದು
ಖಂಡಿತವಾಗಿ ಹೇಳಿಬಿಟ್ಟಳು.
ಸುಭದ್ರೆ ಯಾವಾಗಲೂ ಈ ರೀತಿ ಮಾತನಾಡಿದವಳಲ್ಲ.
ಆದರೂ ರಮಾಬಾಯಿ ಕಾರಣವೇನೆಂಬುದನ್ಟು ಯೋಚಿಸಲೇ ಇಲ್ಲ.
ವಿಶ್ವನಾಥನು ಊಟಕ್ಕೆ ಕುಳಿತುಕೊಳ್ಳುವಾಗ್ಗೆ "ಸುಭದ್ರೆ ಎಲ್ಲಿ ?
--------------------------------------
೮
ಊಟಕ್ಕೆ ಬರುವುದಿಲ್ಲವೆ" ಎಂದು ಹೆಂಡತಿಯನ್ನು ಕೇಳಲಾಗಿ
ಅವಳು “ ಇಲ್ಲವಂತೆ, ಹಸಿವಿಲ್ಲವೆನ್ನುತ್ತಾಳೆ`? ಎಂದಳು.
ವಿಶ್ವನಾಥ -- ನಾವುಮಾತನಾಡುತ್ತಿದ್ದ ವಿಷಯದಲ್ಲಿ ಅವಳಿ
ಗೇನಾದರೂ ಅಸಮಾಧಾನವೂ ? ಈ ಕಾಳಕ್ಕೆ ತಕ್ಕ
ಹಾಗೆ ಅವಳಿಗೂ ತಿಳಿಸಿ ಮಾತು ಕೊಟ್ಟಿದ್ದರೆ ಚೆನ್ನಾ
ಗಿತ್ತು-ಆ ಮೇಲೆ ನಮ್ಮ ಭಾರವು ತಪ್ಪುತ್ತಿತ್ತು.
ರಮಾಬಾಯಿ---"ಒಳ್ಳೇಕಾಲ. ಅಷ್ಟಿಲ್ಲದೆ ಹೆಂಗಸರು ದರ್ಬಾ
ರು ಮಾಡುತ್ತಾರೆಯೆ? ಅದು ಹೇಗಾದರೂ ಇರಲಿ,
ನಮ್ಮ ಸುಭದ್ರೆ ಪೂರ್ವಕಾಲದವಳು ಈ ಕಾಲದವರ
ಹಾಗಲ್ಲ. ಮೈತುಂಬಾಒಡವೆಯನ್ನಿಟ್ಟು ಬಿಟ್ಟರೆ ಎಲ್ಲಾ
ಅಸಮಾಧಾನವೂ. ಹೋಗುತ್ತದೆ " ಎಂದಳು
ಗಂಡನು ಸುಮ್ಮನಾದನು
ಸುಭದ್ರೆಗೆ ಹುಚ್ಚು ಹಿಡಿದಂತಾಯಿತು, ಏನೊಂದೂ ತೋಚದೆ
ಸುಮ್ಮನೆ ಅಳತೊಡಗಿದಳು. ಯಾವರೀತಿಯಲ್ಲಿಯೋಚಿಸಿದರೂ ಮನ
ಸ್ಸೊಪ್ಪಲಿಲ್ಲ. ತಂದೆತಾಯಿಗಳೆ ತನಗೆ ಮೃತ್ಯುಗಳೆಂಬುದು ಈಗ
ತಿಳಿಯಿತು. ಅವರು ಹಣದ ಆಸೆಗೆ ತನ್ನನ್ನು ಮಾರಿ ಬಿಡುವರೆಂದು
ಎಂದಿಗೂ ಅವಳು ಯೋಚಿಸಿರಲಿಲ್ಲ. ಅದರಲ್ಲಿಯೂ ಆ ವಕ್ರಾಕಾರ
ವುಳ್ಳ ಮುದುಕನಿಗೆ ಕೊಡುವರೆಂದು ಕನಸಿನಲ್ಲಿಯೂ ನೆನಸಿರಲಿಲ್ಲ.
'ಓಡಿ ಹೋಗೋಣವೆಂದರೆ ಅಬಲೆಯಾದ ಹುಡುಗಿ, ಅಲ್ಲದೆ. ಎಲ್ಲಿ
ಹೋಗುವುದು? ಹೀಗೆ ಹೋಗುವುದು :ಅಯ್ಯೋ ! ಭಗವಂತನೆ |
ಏತಕ್ವೆ ಸೃಷ್ಟಿಸಿದೆ? ಅವನನ್ನು ಮದುವೆಯಾಗುವ ಮೊದಲು ಸಾವಾ
ದರೂ ಬರಬಾರದೆ ?" ಎಂದು ಅನೇಕ ವಿಧವಾಗಿ ಹಂಬಲಿಸಿದಳು.
ತಾಯಿಯ ಭಯದಿಂದ ಗಟ್ರಿಯಾಗಿ ಅಳಲಾರದೆ ಸುಮ್ಮನೆ ಕಣ್ಣೀರು
ಸುರಿಸುತ್ತಿದ್ದಳು. ಅಷ್ಟರಲ್ಲಿಯೇ ತಾಯಿಯು ಬರುವ ಸದ್ದನ್ನು ಕೇಳಿ
------------------------------------
೯
ಕಣ್ಣೊರಸಿಕೊಂಡು ಸುಮ್ಮನಾದಳು.ರಮಾಬಾಯಿ ಸುಭದ್ರೆಯನ್ನು
ಪುನಃ ಊಟಕ್ಕೆಬ್ಬಿಸಿದಳು. ಅವಳು ಏಳಲಿಲ್ಲ. ಈಗರಮಾಬಾಯಿಯ
ಮನಸ್ಸಿಗೆ ಸ್ವಲ್ಪ ಹೊಳೆಯಿತು. ಆದರೂ ಕೆಣಕಬಾರದೆಂದಂದು
ಕೊಂಡು. ಹೊರಟು ಹೋದಳು.
ಸುಭದ್ರೆಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಯಾವಾಗಲೂ
ಆ ಮುದುಕನ ಸ್ವರೂಪವೇ ಕಣ್ಣೆದುರಿಗೆ ಬಂದು ನಿಂತು, ಭಯವನ್ನುಂ
ಟುಮಾಡುಮಾಡುತ್ತಿತ್ತು. ಮಹಾಭಾರತದಲ್ಲಿ ಉಳ್ತಳಾದ ಸುಭದ್ರೆಯ ಪರಿ
ಣಯವನ್ನು ಚೆನ್ನಾಗಿ ಕೇಳಿದ್ದಳು. ಹಾಗೆಯೆ ಯಾವನಾದರೂ
ಮಹಾತ್ಮನು ಕಷ್ಟನಿವಾರಣೆಮಾಡುವನೆ ? "ಅಯ್ಯೋ ! ಇದ್ದು ಕಲಿ
ಯುಗ! ಆಗಿನ ಅರ್ಜುನನನ್ನು ಈಗ ಬಾರಂದರೆ ಎಲ್ಲಿಂದ ಬಂದಾನು?
ಸುಮ್ಮನೆ ಭ್ರಾಂತಿ.“ ಎಂದು ನಾನಾ ವಿಧವಾಗಿ. ಯೋಚನೆ ಮಾ
ಡುತ್ತಾ ಆ ರಾತ್ರಿಯನ್ನು ಬಹು ಪ್ರಯಾಸದಿಂದ ಕಳೆದಳು.
---
ಎ ರ ಡ ನೆ ಯ ಅ ಧ್ಯಾ ಯ
ಮಾರನೆಯ ದಿನ ಬೆಳಗಾಗುತ್ತಲೆ ಸುಭದ್ರೆಯು ಎಂದಿನಂತೆ
ಪಾಠಶಾಲೆಗೆ ಹೋದಳು. ಅಲ್ಲಿ ಆಕೆಯ ಮುಖವು
ಬಾಡಿರುವುದನ್ನು ಉಪಾಧ್ಯಾಯೆಯೂ, ಸುಭಧ್ರೆಯಸಂಗಾತಿಯರೂ
ನೋಡಿದರು. ಕಾರಣವು ಯಾರಿಗೂ ತಿಳಿಯದು. ಸುಭದ್ರೆ ಯಾವಾ
ಗಲೂ ಪಾಠವನ್ನು ತಪ್ಪುತ್ತಿದ್ದವಳಲ್ಲ. ಈ ದಿನ ಉಪಾಧ್ಯಾಯೆ
ಯೊಂದನ್ನು ಕೇಳಿದರೆ ಇವಳೊಂದನ್ನು ಹೇಳುವಳು. ಹೀಗಿದ್ದುದ
ರಿಂದ ಇವಳಮನಸ್ಸಿ ನಲ್ಲಿ ಏನೋ ವ್ಯಸನವಿರಬಹುದೆಂದು ಉಪಾಧ್ಯಾ
ಯೆಯು ಊಹಿಸಿ ಸುಭದ್ರೆಯನ್ನು ಕರೆದು, "ಸುಭದ್ರೆ! ನೀನು ಈಗ
------------------------------------
೧೦
ಮನೆಗೆ ಹೋಗು, ನಾನೂ ಪಾಠಗಳನ್ನೆಲ್ಲಾ ಮುಗಿಸಿಕೊಂಡುಬರು
ತ್ತೇನೆ ಎಂದು ಹೇಳಿ ಕಳುಹಿ ಸಿಬಿಟ್ಟ್ಗಳು, ಸುಭದ್ರೆಯು ಮನೆಗೆ
ಬಂದಳು. ತಾಯಿಯು :, ಇದೇನು ಇಷ್ಟು ಬೇಗ ಬಂದೆ " ಎಂದು
ಕೇಳಲು “ಮೈಯಲ್ಲಿ ಸ್ಕರಸ್ಥ್ರವಿಲ್ಲ`“ ಎಂದು ಉತ್ತರಕೊಟ್ಟು ತನ್ನ
ಚಿಕ್ಕ ಮನೆಗೆ ಹೋಗಿ ಕೂತುಕೊಂಡು ಉಪಾಧ್ಯಾಯೆ ಬರುವುದನ್ನ
ಎದುರುನೋಡುತ್ತಿದ್ದಳು. ೧೦|| ಗಂಟಿಗೆ ಸರಿಯಾಗಿ ಉಪಾಧ್ಯಾ
ಯೆ ಬಂದಳು. ರಮಾಬಾಯಿಯ ಸಂಗಡ ಹೇಳಿ ಸುಭದ್ರೆಯನ್ನು
ಮನೆಗೆ ಕರೆದುಕೊಂಡು ಹೋದಳು.
ಈ ಉಪಾಧ್ಯಾಯೆಯ ಹೆಸರು ಗಂಗಾಬಾಯಿ. ಈಕೆ ವಯ
ಸ್ಸಾದವಳಾಗಿಯೂ, ವಿದ್ಯಾವತಿಯಾಗಿಯೂ ಇದ್ದಳು, ಈಕೆಗೆ
ಚಿಕ್ಕಂದಿನಲ್ಲಿಯೆ ಪತಿವಿಯೋಗವುಂಟಾದುದರಿಂದ ತನ್ನ ಕಾಲವನ್ನು
ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರಲ್ಲಿ ಕಳೆಯುತ್ತಿದ್ದಳು.
ಮತ್ತು ಮಳ್ಳಳಿಲ್ಲದವಳಾದಕಾರಣ ವಿದ್ಯಾರ್ಥಿನಿಯರನ್ನೆ ತನ್ನ ಮಕ್ಕ
ಳೆಂದು ಭಾವಿಸಿಕೊಂಡಿದ್ಗಳು . ಸುಭದೆ,ಯಲ್ಲಿ ಮಾತ್ರ, ಉಳಿದೆಲ್ಲರ
ಲ್ಲದ್ದುದಕ್ಕಿಂತಲೂ ಅತಿಶಯವಾದ ಪ್ರೇಮವಿದ್ದಿತು.
ಸುಭದ್ರೆಯೂ ಗ೧ಗಾಬಾಯಿಯ್ಗೂ. ಮನೆಗೆ ಬಂದಕೂಡಲೆ
ಉಯ್ಯಾ ಲೆ ಮಣೆಯ ನಮೇಲೆ ಕುಳಿತುಕೊಂಡರು. ಗಂಗೆಯು -
ಏಕಮ್ಮ ಸುಭದ್ರೆ ! ಮಂಕಾಗಿದ್ದೀಯೆ ! ಎಂದು ಕೇಳಿದೊಡನೆಯೆ
ಸುಭದ್ರೆಯ ಮುನಸ್ಸಿನಲ್ಲಿದ್ದ ದುಃಖಕ್ಕೆ ತಡೆಯಿಲ್ಲದಂತಾಗಿ ಬಿಕ್ಕಿ
ಅಳತೊಡಗಿದಳು. . ಅಳುವು ನಿಲ್ಲುವತನಕ ಗಂಗಾಬಾಯಿ ಸುಮ್ಮ
ನಿದ್ದಳು, ಅಳುವು ನಿಂತಮೇಲೆ "ತಾಯಿ ! ನೀನು ಸ್ವಲ್ಪವೂ
ಹೆದರಬೇ ಡ, ನಿನ್ನ ಮನಸ್ಸಿನಲ್ಲಿ ಯಾವ ಗುಟ್ಟಿನ ಸಂಗತಿಯಿದ್ದರೂ
ನನ್ನೊಡನೆ ಹೇಳು, . ನಾಚಿಕೆ ಪಡಬೇಕಾದುದಿಲ್ಲ`` ಎಂದಳು.
--------------------------
೧೧
ಸುಭದ್ರೆ--ಏನು ಹೇಳಲಿ, ಮದುವೆ. ಮಾ. . .. . .. . -"
ಪುನಃ ಅಳತೊಡಗಿದಳು
ಗಂಗಾ .-(ಕಣ್ಣೊರಸಿ) ,,ಯಾರಿಗೆ ಕೊಡುತ್ತಾರಂತೆ ?"
ಸುಭದ್ರೆ__ಬಿಕ್ಕಿ ಬಿಕ್ಕಿ ಅಳುತ್ತಾ " ಒಬ್ಬ ಭೂ. ಊ-ತ-ನಿಗೆ“
ಗಂಗೆಯು ಎಲವನ್ನೂ ಊಹಿಸಿದಳು, ಹಿಂದಿನ ದಿನ ಸಾಯಂ
ಕಾಲ ನಾವು ಹಿಂದೆ ವಿವರಿಸಿದ ವ್ಯಕ್ತಿಯು ವಿಶ್ವನಾಥನ ಮನೆಯನ್ನು
ಕಂಡು ಹಿಡಿಯುವುದಕ್ಕೋಸ್ಕರ ಗಂಗಾಬಾಯಿಯನ್ನೆ ಬಂದು ಕೇಳಿ
ದ್ದನು. ಆಗ ಅವನನ್ನು ಚೆನ್ನಾಗಿ ನೋಡಿ ಅವನ ಆಡಂಬರದಿಂದ
ಕಾರಣವನ್ನು ಸ್ವಲ್ಪಮಟ್ಟಿಗೆ ಊಹಿಸಿದ್ದಳು. ಈಗ ಸ್ಥಿರಪಟ್ಟಿತು.
ಗಂಗಾಬಾಯಿ__ಸುಭದ್ರೆ ! ನೀನು ಸ್ವಲ್ಫವೂ ಹೆದರಬ್ಗೇಡ,
ಆ ಭೂತನಿಗೆ ನಿನ್ನನ್ನು ಕೊಡದಹಾಗೆ ಮಾಡುವ
ಭಾರ ನನ್ನದು.
ಸುಭದ್ರೆ__=-ಅಮ್ಮಾ ನೀವೇ ನನ್ನನ್ನು ಕಾಪಾಡಬೇಕು,
ನಮ್ಮ ತಂದೆ ತಾಯಿಗಳೇನೊ ನನ್ನನ್ನು ಹಣದ ಆಶೆಗೆ
ಮಾರಿ ಬಿಡುತ್ತಾರೆ.
ಹೀಗೆ ಮಾತನಾಡುತ್ತಲಿರುವ ಹೊತ್ತಿಗೆ ಸರಿಯಾಗಿ, ಒಬ್ಬ
ತರುಣನು ಮನೆಯೊಳಕ್ಕೆ ಪ್ರವೇಶಮಾಡಿದನು. ಸುಭದ್ರೆಗೆ ಒಂದು
ತೇಜೋಮಯವಾದ ರೂಪವು ಬಂದು ಎದುರಲ್ಲಿ ನಿಂತಂತಾಯಿತು.
ತರುಣನ್ಸು ಸುಭದ್ರೆಯನ್ನು . ನೋಡಿದಕೂಡಲೆ ಸಂಭ್ರಾಂತನಾಗಿ
ಸುಮ್ಮನೆ ದೃಷ್ಟಿಸುತ್ತಾ ನಿಂತುಬಿಟ್ಟನು, ಇವರ ಮನೋಭಿಪ್ರಾಯ
ಗಳನ್ನು ತಿಳಿದ ಗಂಗೆಯು ಸ್ವಲ್ಪ ಹೊತ್ತು ಸುಮ್ಮ ನಿದ್ದುಅನಂತರ ---
` ಮಾಧವಾ ಸೌಖ್ಯವಾಗಿದ್ದೀಯಾ ಎಂದು ಕೇಳಿದಳು.
ಮಾಧವನಿಗೆ ಜ್ಞಾನೋದಯವಾಯಿತು. ತನ್ನ
ಚಿಕ್ಕಮ್ಮನಿರುವುದು ಆಗ ಗೊತ್ತಾಯಿತು. . ಮನಸ್ಸಿನಲ್ಲಿ ತನ್ನನ್ನು
-------------------------------------
೧೨
ತಾನೆ ಬೈದುಕೊಂಡು " ಈಗ ತಾನೆ ಟಪಾಲುಗಾಡಿಯಲ್ಲಿ ಬಂದೆ“
ಎಂದನು. ಗಂಗೆಯು - "ಬಾ ಕೂತುಕೊ. “ ಎಂದು. ಹತ್ತಿರ
ಕುಳ್ಳಿ ರಿಸಿಕೊಂಡಳು. ಸುಭದ್ರೆಯು ಅಲ್ಲಿಂದೆದ್ದು "ನಾನು ಮನೆಗೆ
ಹೋಗುತ್ತೇನಮ್ಮ`` ಎಂದಳು, ಗಂಗೆಯು ..ಹೋಗಿ ಬಾ ನಾನು
ಹೇಳಿದುದನ್ನು ಮರಿಯಬೇಡ“ ಎಂದು ಹೇಳಿ ಕಳುಹಿಸಿಕೊಟ್ಟಳು.
ಸುಭದ್ರೆಗೆ ಮನೆಗೆ ಹೋಗಲು ಕಾಲೇ ಬಾರದು. ಆಗ ತಾನೆ
ಕಂಡ ತರುಣನ ರೂಪವೂ ಹಿಂದಿನರಾತ್ರಿ ಕಂಡ ಮುದುಕನರೂಪವೂ
ಕಣ್ಣೆದುರಿಗೆ ನಿಂತುಕೊಂಡಿದ್ದುವು. ಆ ತರುಣನನ್ನು ಕಂಡಕೂಡಲೆ
ಏನೊ ಒಂದು ವಿಧವಾದ ಭಾವನೆಯುಂಟಾಯಿತು. ಅದು ಇಂತಹು
ದೆಂಬುದು ಸುಭದ್ರೆಗೆ ತಿಳಿಯಲಿಲ್ಲ. ಆದರೆ ಆ ವಿಧವಾದ ಭಾವನೆಯು
ಮೊದಲೆಂದಿಗೊ ಆಗರಲಿಲ್ಲವೆಂಬುದುಮಾತ್ರ ಗೊತ್ತಾಗಿದ್ದಿತು. ಸುಭ
ದ್ರೆಗೆ ಯಾವಾಗಲೂ ಆತನ ಧ್ವನಿಯನ್ನೇ ಕೇಳುತ್ತಾ ಆತನ... ಬಳಿ
ಯಲ್ಲೇ ಇರಬೇಕೆನ್ನಿಸುತ್ತಿದ್ದಿತು.
ಮೂ ರ ನೆ ಯ ಅ ಧ್ಯಾ ಯ __
ಇತ್ತ ಮಾಧವನಿಗಾದರೊ ಮನಸ್ಸೆ ವಿರೂಪವನ್ನು ಹೊಂದಿದುದ
ರಿಂದ ಅವನು ಚಿಕ್ಕ ತಾಯಿ ಕೇಳುತ್ತಿದ್ದ ಪ್ರಶ್ನೆ ಗಳಿಗೆಲ್ಲಾ
ಏನೋ ಒಂದು ವಿಧವಾದ ಉತ್ತರಗಳನ್ನು. ಕೊಡಲಾರಂಭಿಸಿದನು.
ಇದನ್ನು ಅವಳು ತಿಳಿದು --"ಮಗು ! ನಿನ್ನೆ ರಾತ್ರೆ ನಿನಗೆ ನಿದ್ದೆ
ಸಾಲಲಿಲ್ಲವೆಂದು ತೋರುತ್ತದೆ, ಸ್ವಲ್ಪ ಹೊತ್ತು ಮಲಗು , ನಾನು
ಅಡಿಗೆಮಾಡಿ ಎಬ್ಬಿಸುತ್ತೇನೆ`` ಎಂದಳು,
-------------------------------------
೧೩
ಮಾಧವ---ಅಮ್ಮಾ ! ಅದೆಲ್ಲಾ ಇರಲಿ, ಒಂದು. ಮಾತು
ಕೇಳಲು ನಾಜಿಳೆಯಾಗುತ್ತದೆ,ಕೇಳಲೊ ಬೇಡವೊ?
ಗಂಗಾ--ನೀನು ಕೇಳುವುದಕ್ಕೆ ಮುಂಚೆ ನಾನೇ ಹೇಳು
ತ್ತೇನೆ ಕೇಳು , ಆ ಹುಡುಗಿಯು--
ಮಾಧವ__ಛೆ!ಛೆ! ಅದಲ್ಲವಮ್ಮ , ನಾನು ಬೇರೆ
ಗಂಗಾ -- ಓಹೊ ! ಮಗು ! ಹೇಗಾದರೂ ಆಗಲಿ ಗುರು
ವಿಗೇ ತಿರುಮಂತ್ರ ಹೇಳುತ್ತೀಯಲ್ಲ! ನಮ್ಮ ದೇವರ
ಸತ್ಯ ನಾನರಿಯೆನೆ ?
ಮಾಧವನಿಗೆ ನಾಚಿಕೆಯಿಂದ ಮುಖವು ಕೆಂಪೇರಿತು. "ನಿನ್ನ
ಇಷ್ಟ ನಾನೇನು ಹೇಳಲಿ" ಎಂದನು.
ಗಂಗಾ---ಆಹುಡುಗಿಯ ಹೆಸರು ಸುಭದ್ರೆ, ಬಹಳ ದೊಡ್ಡ
ಮನೆತನಕ್ಕೆ ಸೇರಿದವಳು. ಅವಳ ತಂದೆಯು ಪೂರ್ವಿ
ಕರ ಆಸ್ತಿಯನ್ನೆಲ್ಲಾ ಕಳೆದು. ಅನ್ನ ವಸ್ತ್ರಕ್ಕೂ ಗತಿ
ಯಿಲ್ಲರಂತೆ ಅಗಿದ್ದಾನೆ, ಆದುದರಿಂದ ಅವೆಳು ಹೀಗಿ
ದ್ದಾಳೆ, ಆದರೆ ವಿದ್ಯದಲ್ಲಿಯೂ, ಗುಣದಲ್ಲಿಯೂ ಈ
ಹುಡುಗಿಗೆ ಸಮಾನರಾದವರನ್ನೇ ಕಾಣೆ.
ಮಾಧವ __ ನಾನು ಬಂದಾಗ್ಗೆ ಆಕೆ ಅಳುತ್ತಿದ್ದುದು ಏತಕ್ಕೆ?
ಗಂಗಾ_ಅಪ್ಕಾ! ಏನು ಹೇಳಲ್ಲಿ ಆ ಹುಡುಗಿಯ ತಂದೆ
ತಾಯಿಗಳು ಹಣದ ಆಸೆಗೆ ಆಕೆಯನ್ನು ಒಬ್ಬ ಮುದು
ಕನಿಗೆ ಕೊಟ್ಟು ಮದುವೆಮಾಡಬೇಕೆಂದಿದ್ದಾರೆ.
ಮಾಧವ-~-ಅಯ್ಯೊ ಪಾಪ! ಏನು ಅನ್ಯಾಯ ! ಲೋಕದಲ್ಲಿ
ಇಂತಹ ಕಟಿಗರೂ ಉಂಟೆ ?
ಗಂಗೆಯು . ಒಳಗೆ ಹೋದಳು. ಮಾಧವನು ಉಯ್ಯಾಲೆ
ಮಣೆಯನ್ಲೆ ಏನನ್ನೊ ಯೋಚಿಸುತ್ತಾ ಕುಳಿತಿದ್ದನು.
-----------------------------------
೧೪
ಮಾಧವರಾಯನಿಗೆ ಈಗ ೨೦ ವರುಷ ವಯಸ್ಸು. . ಅವನ
ತಂದೆಯ ಹೆಸರು ಶಂಕರರಾಯ. ಆತನು ಪುನಹೆಯಲ್ಲಿ ಭಾರಿ
ಜಮೀನ್‌ದಾರನಾಗಿ ಹೆಸರುವಾಸಿಯಾಗಿದ್ದನು. ಮಾಧವನು ಹುಡುಗ
ನಾಗಿದ್ದಾಗಲೆ ಅವನ ತಾಯಿ ಸತ್ತುಹೋಗಿದ್ಗಳು. ಅವನಿಗೆ ಗಂಗಾ
ಬಾಯಿ ಹೊರತು. ತಾಯಿಯ ಕಡೆಯ ಬಂಧು ಗಳೇ ಇರಲಿಲ್ಲ. ಅವ
ಳನ್ನು ನೋಡಿಕೊಂಡು ಬರುವುದಕ್ಕೋಸ್ಕರ ತಂದೆಯ ಅಪ್ಪಣೆ
ಪಡೆದು ರಾಮ ಪುರಕ್ಕೆ ಬಂದಿದ್ದನು .
ಮಾಧವನು ಶ್ರೀಮಂತನ ಮಗನಾಗಿದ್ದರೂ ಸ್ವಲ್ಪವಾದರೂ
ದಂಭವಾಗಲಿ, ಅಹಂಕಾರವಾಗಲಿ ಅವನಲ್ಲಿರಲಿಲ್ಲ. ಎಲ್ಲರಲ್ಲಿಯೂ
ಕೇವಲ ವಿನಯದೊಡನೆ ಮಾತನಾಡುವನು. ಮನೆಯ ಆಳುಗಳೊಡ
ನೆಯೂ ಅವನ್ನು ಕಠಿಣವಾಗಿ ಮಾತನಾಡಿದವನೇಅಲ್ಲ. ಯಾರಾ
ದರೂ ತಮ್ಮ ಇಷ್ಟಗಳನ್ನು ಹೇಳಿಕೊಂಡರೆ ಅವುಗಳನ್ನು ಕೇಳಿದಮಾ
ತ್ರಕ್ಕೇ ಅವನ ಕಣ್ಣಿನಲ್ಲಿ ನೀರು ಬಂದು ಬಿಡುವುದು. ಸರ್ವಪ್ರಯತ್ನ
ದಿಂದಲೂ ಇತರರ ಕಷ್ಟವನ್ನು ನಿವಾರಣೆಮಾಡುವನು. ತಂದೆಯನ್ನು
ಪರಮ ಗುರುವೆಂದು ಭಾವಿಸಿದ್ದನು. ಶ೧ಕರರಾಯನಿಗೆ ಇವನಲ್ಲಿದ್ದ
ವಾತ್ಸಲ್ಯ ವು ಅಷ್ಟಿಷ್ಟೆಂದು ಹೇಳಬೇಕಾದುದೆ ಇಲ್ಲ. ಆತನು ಯಾವ
ಕೆಲಸ ಮಾಡಬೇಕಾದರೂ ಮಗನ ಅಲೋಚನೆಯನ್ನು ಕೇಳದೆ
ಮಾಡುತ್ತಿ ರಲಿಲ್ಲ.
ಇಂತಹ ಮಾಧವನಿಗೆ ಸುಭದ್ರೆಯ ವೃತ್ತಾಂತವನ್ನು ಕೇಳಿದ
ಕೂಡಲೆ ಮನಸ್ಸಿನಲ್ಲಿ ಬಹು ಸಂಕಟವುಂಟಾಗಿ ಹೇಗಾದರೂ ಆಕೆಯ
ಕಷ್ಟವನ್ನು ನಿವಾರಣೆಮಾಡಬೇಕೆಂಬ ಕುತೂಹಲವು ಹುಟ್ಟಿತು.
ನಾನಾ ಮಾರ್ಗಗಳನ್ನು ಯೋಚಿಸುತ್ತಾ ಉಯ್ಯಾಲೆಯ ಸರಪಳಿಗಳ
ನ್ನೊರಗಿಕೊಂಡು ಕುಳಿತಿದ್ದ ಹಾಗೆಯೆ ತೂಕಡಿಕೆ ಬರಲು ಮಲಗಿ
ಕೊಂಡನು. ನಿದ್ರೆ ಬಂದಿತು. ಕನಸಿನಲ್ಲಿಯೂ ಸುಭದ್ರೆಯ ಮನೋಹರ
---------------------------------------
೧೫
ವಾದ ರೂಪವೆ ಇವನೆದುರಿಗೆ ನಿಂತು ನಲಿದಾಡುತ್ತಿತ್ತು. ಹೀಗಿರು
ವಾಗ್ಗೆ ಉಯ್ಯಾಲೆ ಸರಪಣಿಯು ಕರಕಿರ ಎಂದು ಶಬ್ದ ಮಾಡಲು
ಥಟ್ಟನೆ ಎಚ್ಚರವಾಯಿತು, ಮನಸ್ಸಿನ ಆನಂದವಲ್ಲಾ ಭಗ್ನವಾಯಿತು.
ಅಷ್ಟು ಹೊತ್ತಿಗೆ ಚಿಕ್ಕಮ್ಮನು ಬಂದು ಊಟಕ್ಕೆ ಎಬ್ಗಿಸಿದಳು, ಮಧ್ಯಾ
ಹ್ನವಾಗಿತ್ತು. ಊಟವಾದನಂತರ ಚಿಕ್ಕಮ್ಮ ನೊಡನೆ ಊರಿನ ಯೋಗ
ಕ್ಷೇಮಗಳನ್ನು ಮಾತನಾಡುತ್ತ ಆ ದಿನವನ್ನು ಕಳೆದನು.
---
ನಾ ಲ್ಕ ನೆ ಯು ಅ ಧ್ಯಾ ಯ -
ರಾಮರಾಯನು ರಾಮವುರದಲ್ಲಿ ಅಗ್ರಗಣ್ಯನಾದ ಮನುಷ್ಯ ;
ದೊಡ್ಡ ಮನೆತನಕ್ವೆ ಸೇರಿದವನು. ತನ್ನ ಮಗಳನ್ನು
ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಶೆ
ಯಿದ್ದಿತು. ಶಂಕರರಾಯನಿಗೂ ರಾಮರಾಯನಿಗೂ ಪೂರ್ವದಿಂದ
ಲೂ ಸ್ನೇಹ, ಅಲ್ಲದೆ ಸ್ವಲ್ಪ ಬಂಧುತ್ವವೂ ಇದ್ದಿತು. ಆದುದರಿಂದ
ಕಮಲೆಯನ್ನು ಮಾಧವನಿಗೆ ತಂದುಕೊಳ್ಳಬೇಕೆಂದು ೩-೪ ವರ್ಷಗಳ
ಹಿಂದೆಯೆ ಶಂಕರರಾಯನಿಗೆ ಕಾಗದ ಬರೆದಿರಲಾಗಿ ಆತನು, ನಮ್ಮ
ಹುಡುಗನಿಗೆ ೨೦ ವರ್ಷ ತುಂಬಿದಲ್ಲದೆ. ಮದುವೆಮಾಡುವುದಿಲ್ಲ
ವೆಂದು ಉತ್ತರಕೊಟ್ಟಿದ್ದನು. ಆಗ್ಗೆ ರಾಮರಾಯನು ಸುಮ್ಮನಿದ್ಧು
ಬಿಟ್ಟನು. ಹುಡುಗಿಗೆ ೧೨ ವರ್ಷವಾಗಲು, ಇನ್ಸು 'ನಿಲ್ಲಿಸುವುದ
ಕ್ಕಾಗುವುದಿಲ್ಲ, ಈ ವರ್ಷ ಖಂಡಿತವಾಗಿಯೂ ವಿವಾಹವನ್ನು ನೆರ
ವೇರಿಸಲೇಬೇಕು` ಎಂದು ತಿರಿಗಿ, ಬರೆದನು. ಶಂಕರರಾಯನಿಗೆ ಸಕಾ
ಲವಾಗಿ, ಕಂಡುದರಿಂದಲೂ, ರಾಮರಾಯನಿಗಿಂತ ಯೋಗ್ಯರೂ,
ಕುಲೀನರೂ ಸಿಕ್ಕುವುದು ಕಷ್ಟವಾಗಿದ್ದುದರಿಂದಲೂ - "ನಮ್ಮ
ಹುಡುಗನು ರಾಮ ಪುರಕ್ವೆ ಬಂದಿದ್ದಾನೆ, ಅವನಿಗೆ ವಯಸ್ಸಾಗಿರು
-----------------------------------
೧೬
ವುದರಿಂದ ಕನ್ಯೆಯನ್ನೊವ ಭಾರವು ಅವನದಾಗಿದೆ, ಅವನೊ
ಪ್ಪಿದರೆ ನನ್ನ ಅಡ್ಡಿಯೇನೂ ಇಲ್ಲ. ನಕ್ಷತ್ರಾನುಕೂಲವಾದರೆ ಸರಿ“.
ಎಂದು ಪ್ರತ್ಯುತ್ತರವನ್ನು ಬರೆದನು. ಅದು ಮಾಧವನು ರಾಮ ಪು
ರಕ್ಕೆ ಬಂದ ಮಾರನೆಯದಿನ ರಾಮರಾಯನ ಕೈಸೇರಿತು, ಆ˜ಕಾಗದ
ವನ್ನು, ತೆಗೆದುಕೊಂಡು ರಾಮರಾಯನು ಮಾಧವನನ್ನು ನೋಡುವು
ದಕ್ಕೋಸ್ಕರ ಗಂಗಾಬಾಯಿಯ ಮನೆಗೆ ಹೋದನು. . ಗಂಗಾಬಾ
ಯಿಯು ಪಾಠಶಾಲೆಗೆ. ಹೋಗಿದ್ದಳು, ಮಾಧವನೊಬ್ಬನೇ ಮನೆಯ
ಲ್ಲಿದ್ದನು. ಮಾಧವನಿಗೂ ರಾಮರಾಯನಿಗೂ ಕುಶಲಪ್ರಶ್ನೆಗಳು
ನಡೆದ ಬಳಿಕ ರಾಮರಾಯನು, ಶಂಕರರಾಯನ ಕಾಗದವನ್ನು ತೆಗೆದು
ಮಾಧವನ ಕೈಲಿಟ್ಟನು. ಅದನ್ನು ನೋಡಿದಕೂಡಲೆ ಮಾಧವನು
"ಸ್ವಾಮೀ ! ನಮ್ಮ ತಂದೆಗಳ ಮಾತಿಗೆ ನಾನುಯಾವಾಗಲೂ ಪ್ರತಿ
ಹೇಳುದುದಿಲ್ಲ. ಇದರಲ್ಲಿ ನನಗೆ ಅಭಿಪ್ರಾಯವು ಅನ್ಯಥಾ ಇದ್ದಾಗ್ಗೂ
ಅವರ ಅಪ್ಷಣೆಯಾದರೆ ನನ್ನ ಯತ್ನವೇನಿದೆ" ಎಂದನು. ಅದಕ್ಕೆ
ರಾಮರಾಯನು --“ಹಾಗಲ್ಲ, ನಮ್ಮ ಮನೆಗೆ ಬಂದು ಕನ್ಯೆಯನ್ನು
ನೋಡಿಕೊಂಡು. ಹೋಗುವುದು ಈಗಿನ ಕಾಲದ ಪದ್ಬತಿ. ದಯ
ವಿಟ್ಟು ಬಂದು ನೋಡಿಕೊಂಡು ಹೋಗಬೇಕು“ ಎಂದನು. ಮಾಧ
ವನು 'ಮಧ್ಯಾಹ್ನ ಒಂದು ತಮ್ಮ ದರ್ಶನ ತೆಗೆದು ಕೊಳ್ಳುತ್ತೇನೆ“`
ಎಂದು ಹೇಳಿ ರಾಮರಾಯನನ್ನು ಕಳುಹಿಸಿಕೊಟ್ಟನು.
ಗಂಗಾಬಾಯಿ ಪಾಠಶಾಲೆಯಿಂದ ಬಂದಕೂಡಲೆ ಮಾಧ
ವನ್ನು ಆಕೆಗೆ. ಈ ವೃತ್ತಾಂತವನ್ನು ತಿಳಿಸಿದನು. ಅವಳು --"ಅಪ್ಪಾ
ಕಮಲೆಯು ಗರ್ವಿತಳು, ನಿನಗೆ ತಕ್ಕವಳಲ್ಲ, ನಿಮ್ಮ ತಂದೆಯು ರಾಮ
ರಾಯನ ಭಾಗ್ಯಕ್ಕೆ ಬೆರಗಾಗಿ ಬಂಧುತ್ವ ಬಳೆಸಬೇಕೆಂದು ಇಷ್ಟ
ಪಟ್ಟಿರಬಹುದು,, ಮಧ್ಯಾಹ್ನ ಹೋಗಿ ನೋಡಿಕೊಂಡ್ಲು. ಬಾ.
ಮುಂದಿನ ಕೆಲಸ ನೋಡೋಣ" ಎಂದಳು.
----------------------------------
೧೭
ಮಧ್ಯಾಹ್ನ ರಾಮರಾಯನು ಬಂದು ಮಾಧವನನ್ನು ಮನೆಗೆ
ಕರೆದುಕೊಂಡು ಹೋಗಿ ಉಪ್ಪರಿಗೆಯಮೇಲೆ "ಸೋಫಾ"ದ
ಮೇಲೆ ಕುಳ್ಳಿರಿಸಿದನು. ಅನಂತರ ಹೆಂಡತಿಯನ್ನು ಕರೆದು "ನಿನ್ನ
ಅಳಿಯನನ್ನು ನೋಡು ಬಾ" ಎಂದನು. ಆಕೆಯು ಎಷ್ಟಾವೃತ್ತಿ
ನೋಡಿದರೂ ತೃಪ್ತಿಯಾಗದೆ ನೆರೆಹೊರೆಯವರನ್ನು ಕರೆದುಕೊಂಡು
ಬಂದಳು. ಹಾಗೆಯೆ ಕಮಲೆಯನ್ನು ಮಾಧವನ ಬಳಿ ನಿಲ್ಲಿಸಿ ಅನಂ
ತರ ಸೋಘಾದ ಮೇಲೆ ಕುಳ್ಳಿರಿಸಿದರು. ಮಾಧವನಿಗೆ, ಅವಳನ್ನು
ನೋಡಿದೊಡನೆಯೆ ಜಿಗುಪ್ಸೆಯುಂಟಾಯಿತು. ಅವಳ ರೂಪಲಾವ
ಣ್ಯವೆಲ್ಲವೂ ಉಡಿಗೆ, ತೊಡಿಗೆಗಳನ್ನು ಸೇರಿದ್ದಿತೇ ಹೊರತು ಅವಳಲ್ಲಿ
ನೈಜವಾದ ಸೊಬಗಾವುದೂ ಕಂಡುಬರಲಿಲ್ಲ, ಅಲ್ಲದೆ ಮುಖದಲ್ಲಿ
ಗರ್ವವು ಉಕ್ಕಿ ಬರುವಂತಿದ್ದಿತು. ಕೂಡಲೆ ಮಾಧವನಿಗೆ ಸುಭದ್ರೆಯ
ಜ್ಞಾಪಕವು ಬಂದಿತು. ಆವಳಿಗೂ ಇವಳಿಗೂ ಇರುವ ತಾರತಮ್ಯ
ವನ್ನು ಮನಸ್ಸಿನಲ್ಲೆ ಗಣಿಸುತ್ತಿದ್ದನು.
ನೆರಹೊರಿಯ ಹೆಂಗಸರಲ್ಲರೂ ಬಂದು ನೋಡಿ ವರಸಾಮ್ಯ
ವನ್ನು ಬಹಳ ಶ್ಲಾಘನೆಮಾಡಿದರು. ಕಮಲೆಯ ತಾಯಿಯ ಸಂ
ತೋ ಷವೆಷ್ಟೆಂದು ಹೇಳಬೇಕಾದುದೇ ಇಲ್ಲ. ಬಂದಿದ್ದವರೆಲ್ಲರಿಗೂ
ಯಥೋಚಿತವಾಗಿ ಸತ್ಕಾರಮಾಡಿ ಕಳುಹಿಸಿದಳು.. ಮಾಧವನೂ
ರಾಮರಾಯನ ಅಪ್ಪಣೆ ತೆಗೆದುಕೊಂಡು. ಹೊರಟುಹೋದನು.
---
--ಐ ದ ನೆ ಯ ಅ ಧ್ಯಾ ಯ __
ರಾಮರಾಯರ ಮಗಳನ್ನು ಜಹಗೀರ್ದಾರ ಶಂಕರರಾಯರ ಮಗ
ನಿಗೆ ಕೊಢುತ್ತಾರಂತೆ-- ಎಂಬ ವದಂತಿಯು ಊರಲ್ಲೆಲ್ಲಾ
-----------------------------------
೧೮
ಹರಡಿಕೊಂಡಿತು. ರಾಮರಾಯನ ಮನೆಗೆಹೋಗಿ ಕನ್ಯೆಯನ್ನೂ
ವರನನ್ನೂ ನೋಡಿಕೊಂಡು ಬಂದಿದ್ದ ಹೆಂಗಸರು ಅಲ್ಲಲ್ಲಿ ತಮ್ಮ
ಪರಿಚಿತರೊಡನೆ ವರಸಾಮ್ಯವನ್ನು ವರ್ಣಿಸತೊಡಗಿದರು.
ಒಂದನೆಯವಳು.-ಏನು ಪುಣ್ಯವಂತಳಮ್ಮಾ ಕಮಲೆ !
ಅಂತಹ ಗಂಡನನ್ನು. ಪಡೆಯಬೇಕಾದರೆ ಪೂರ್ವಜನ್ಮ
ದಲ್ಲಿ ಎಷ್ಟು; ಒಳ್ಳೆಯ ಪೂಜೆಯನ್ನು ಮಾಡಿದ್ದಳೊ !
ಎರಡನೆಯವಳು--ಅಲ್ಲವೇನಮ್ಮ--ಮತ್ತೆ ! , ಕಮಲೆ ಆ
ಹುಡುಗನ ಉಂಗುಷ್ಪವನ್ನೂ ಹೋಲಲಾರಳು.
ಮೊರನೆಯವನಳು _ ಹಾಗುಂಟಿ ? ಕಮಲೆಯು ಸೌಂದರ್ಯ
ದಲ್ಲೇನು ಈಡಿಮೆ ? . ಈ ಜರತಾರಿ ಸೀರೆಯನ್ನುಟ್ಟು
ಕೊಂಡು ಸೋಫಾದ ಮೇಲೆ ಕೂತಿದ್ದರೆ ಸುಮ್ಮನೆ
ವರಲಕ್ಷ್ಮಿಯಹಾಗೆ ಕಾಣುತ್ತಿದ್ದಳಲ್ಲ ! ಅವಳ
ವಜ್ರದ ಬುಲಾಕೊಂದೇ ಸಾಲದೆ?
ನಾಲ್ಟ್ರನೆಯವಳು~-ಸರಿ ! ಸರಿ ! ನೀವು ಹೇಳಿದ್ದು ನಿಜವೆ ;
ಕಲಾಬತ್ತಿನ ಪೀತಾಂಬರ, ವಜ್ರದ ಬುಲಾಕು, ಕೆಂಪಿ
ನೋಲೆ, . ಅಡ್ಡಿಕೆ, ವಂಕಿ. ಇವುಗಳಲ್ಲವೂ
ಬಹು ಚೆನ್ನಾಗಿದ್ದವು.
ಐದನೆಯವಳು---- ನೀವೇನು ಬೇಕಾದರೂ ಹೇಳಿ, ಭಾಗ್ಯವೇ
ಸೊಬಗು.
ಹೀಗೆಲ್ಲರೂ ಮಾತನಾಡುತ್ತಿರುವಾಗ್ಗೆ ರಮಾಬಾಯಿ ಅಲ್ಲಿಗೆ
ಬಂದಳು . ಆಕೆಯ ಮನೆಯ ಎದುರುಮನೆಯಲ್ಲಿ . ಈ ಮಾತು ಗಳು
ನಡೆಯುತ್ತಿದ್ದವು, ಅವಳು ಬರುವ ಹೊತ್ತಿಗೆ ಸರಿಯಾಗಿ ಕಮಲೆಯ
ಸೌಂದರ್ಯ ಪ್ರಶಂಸೆಯಾಗುತ್ತಿತ್ತು. ಕಮಲೆಯ ಮಾತು ಬರಲು
----------------------------------
೧೯
ಕಾರಣವೇನೆಂದು ಪುನಹೆಯಲ್ಲಿರುವ ಜಹಗೀರ್ದಾರ ಶಂಕರ
ರಾಯರ ಮಗನಿಗೆ ಆಕೆಯನ್ನು ಕೊಡುತ್ತಾರೆಂದು ತಿಳಿಯಬಂದಿತು.
ಆ ಹುಡುಗನ ಹೆಸರೇನು ? ಎಂದು ರಮಾಬಾಯಿ ಕೇಳಿ
ದಳು, “ಅದೇನೋಮ್ಮ ನಮಗೆ ತಿಳಿಯದು. ಗಂಗಾಬಾಯಿಯ
ಅಕ್ಕನ ಮಗನಂತೆ. ಆಕೆಯ ಮನೆಯಲ್ಲಿ ಇಳಿದುಕೊಂಡಿದ್ದಾನಂತೆ.
ಅದುಸರಿ, ರಮಾಬಾಯಿ! ನಾನು ಆ ಹುಡುಗನನ್ನು ಚೆನ್ನಾ ಗಿ ನೋ
ಡಿದೆ. ಎಷ್ಟು ನೋಡಿದರೂ ತೃಪ್ತಿಯಾಗಲಿಲ್ಲ. ಕಮಲೆಯನ್ನೂ ನೋ
ಡಿದೆ. ಅವನಿಗೂ ಅವಳಿಗೂ ಸಾಮ್ಯವೆ ಇರಲಿಲ್ಲ. ಹಾಗೆಯೆ ಅಲ್ಲಿ
ನಿಮ್ಮ ಸುಭದ್ರೆಯನ್ನು ಯಾವ ಒಡವೆವಸ್ತು ಇಲ್ಲವೆ ಕುಳ್ಳಿರಿಸಿದ್ದರೂ
ಎಷ್ಟೊ ಜೆನ್ನಾಗಿರುತ್ತಿತ್ತು ಎಂದಂದುಕೊಂಡೆ. ನೀವು ಏನೇ ಹೇಳಿ.
ಆ ಹುಡುಗನಿಗೆ ಸುಭದ್ರೆಯನ್ನು ಬಿಟ್ಟರೆ ಸರಿಯಾದ ಕನ್ನೆಯೇ ಇಲ್ಲ“,
ರಮಾಬಾಯಿ-ಹೌದ್ರಮ್ಮಾ ! ನೀವು ಹೇಳಿದುದೆಲ್ಲಾ
ಸರಿಯೆ. ನಮ್ಮಂತಹ ಬಡವರನ್ನು ಅವರು ಕಣ್ಗೆತ್ತಿ
ನೋಡುವರೆ ? ನೀವೇಹೇಳಿ.
ನಾಗೂಬಾಯಿ-- ಅದೇನೋ ನಿಜ. ಹಲ್ಲಿದ್ದರೆ ಕಡಲೆಯಿಲ್ಲ,
ಕಡಲೆಯಿದ್ದರೆ ಹಲ್ಲಿಲ್ಲ, ಎಂಬುವ ಗಾಧೆಗೆ ಸರಿಯಾ
ಗಿದೆ, ಅದು ಹಾಗಿರಲಿ, ನಾನೊಂದು ವರ್ತಮಾನ
ವನ್ನು ಕೇಳಿದೆನಲ್ಲಾ?
ರಮಾ___ಏನದು ?
ನಾಗು-ಸುಭದ್ರೆಗೆ ಮದುವೆಯೆಂದು ಕೇಳಿದೆ.
ಯಾರಿಗೆ ಕೊಡುತ್ತೀರಿ ?
ರಮಾ-- ಆದಕಾಲಕ್ಕೆ ಹೇಳುತ್ತೇನಮ್ಮ . ಪ್ರತಿವರ್ಷವೂ
ಪ್ರಯತ್ನ ಮಾಡುವುದು, ನಿಂತುಹೋಗುವುದು, ಹೀ
ಗೆಯೆ ಆಗುತ್ತಿದೆ.
--------------------------------
೨೦
ನಾಗು--(ತಾನು ಪ್ರತ್ನೆ ಗೆ ಉತ್ತರ ಬರದಿರಲು )
ಆದಕ್ಕಲ್ಲವಮ್ಮ , ನಿನ್ನೆ ಒಬ್ಬ ಮುದುಕನು ನಿಮ್ಮ ಮನೆ
ಯನ್ನು ಹುಡುಕಿಕೊಂಡು ಬಂದಿದ್ದನು. ಅವನ
ಪಟಾಟೋಪವನ್ನು ನೋಡಿ ಭಯವುಂಟಾಗಿದ್ದಿತು.
ರಮಾ.__ಸರಿ! ಸರಿ! . ಮುದುಕರೆ? . ಯಾರಂದರು? ಅವರಿ
ಗಿನ್ನೂ ನಲವತ್ತೊಂಬತ್ತು ವರ್ಷ ತುಂಬಿ ಐವತ್ತನೆಯ
ವರ್ಷ ನಡೆಯುತ್ತಿದೆ.
ನಾಗು-- ಓಹೊ ! ಹಾಗಾದರೆ ನನ್ನ ಊಹೆಯು ಸರಿಯಾ
ಯಿತು. ರಮಾಬಾಯಿ ! ಆ ಮುದಿಗೃದ್ಧ್ರನಿಗೆ
ಕೊಡುವುದಕ್ಕಿಂತ ಹುಡುಗಿಯನ್ನು ಮಡುವಿನಲ್ಲಾ
ದರೂ ಹಾಕಿಬಿಡಬಾರದೆ?
ರಮಾ_~-ಇದೇನ್ರಮ್ಮ ! ಹೀಗೆಹೇಳುತ್ತೀರಿ? ನಮ್ಮ ಮನೆಯ
ಸುದ್ದಿಯನ್ನು ಕಟ್ಟಿಕೊಂಡು ನಿಮಗೇನು? ಸುಮ್ಮನಿರಿ.
ನಾಗು-(ಗಮನಕೊಡದೆ) ನಾನು ನಿಮಗೆ ಒಳ್ಳೇದಕ್ಕೋ
ಸ್ಕರವೆ ಹೇಳುವುದು. ದಾರಿಯಲ್ಲಿ ಹೋಗುವ ಯಾವ
ನಾದರೂ ಬ್ರಹ್ಮಚಾರಿಯನ್ನು ಕರೆದು ಕನ್ಯಾದಾನ
ಮಾಡಿ. ನಿಮಗೆ ಪುಣ್ಯವುಂಟು. ಅನ್ಯಾಯವಾಗಿ
ಆ ಹುಡುಗಿಯ ತಲೆಯಮೇಲೆ ಕಲ್ಲು ಹಾಕಬೇಡಿ.
ನನ್ನನ್ನು ನೋಡಿದರೆ ನಿಮಗೆ....
ರಮಾಬಾಯಿಗೆ ರೇಗಿಹೋಯಿತು . "ಸಾಕಮ್ಮ --ನಿಮ್ಮ
ಧರ್ಮ, ಏನಾದರೂ. ನುಡಿಯಬೇಡಿ`` ಎಂದು ಬಹು ವೇಗವಾಗಿ
ಹೋದಳು.
ನಾಗೂಬಾಯಿಯ ತಂದೆತಾಯಿಗಳು ಆಕೆಯನ್ನು ಹಣದ
ಆಶೆಗೋಸ್ಕರ ಒಬ್ಬ ಮುದುಕನಿಗೆ ಕೊಟ್ಟು ಮದುವೆಮಾಡಿದ್ದರು .
----------------------------------
೨೧
ಮದುವೆಯಾದ ಮೂರುವರ್ಷಗಳೊಳಗೆ ಆಕೆ ವಿತಂತುವಾಗಿ ತಿನ್ನು
ವುದಕ್ಕೂ ಗತಿಯಿಲ್ಲದೆ ತಂದೆಯ ಮನೆಯಲ್ಲಿ ಸೇರಿಕೊಂಡಿದ್ದಳು.
ಆದುದರಿಂದಲೇ ಆಕೆ ತನ್ನ ಸಾಮತಿಯನ್ನು ಹೇಳುವುದಕ್ಕೆ ಪ್ರಾರಂ
ಭಸಿದೊಡನೆಯೆ ರಮಾಬಾಯಿಗೆ ಶಿಟ್ಟುಬಂದುದು.
ರಮಾಬಾಯ್ದಿ ಹೋಗುವುದನ್ನು. ನೋಡುತ್ತಾ ನಾಗೂ
ಬಾಯಿ ತನ್ನೊಳಗೆ ತಾನು, “ಕೆಟ್ಟ ಮೇಲೆ ಬುದ್ಧಿ ಬರಬೇಕಾದುದು
ಲೋಕಧರ್ಮ. ನೀವೇನು ಮಾಡೀರಿ? ` ಎಂದಂದುಕೊಂಡು
ಮನೆಗೆ ಹೊರಟುಹೋದಳು.
---. ಆ ರ ನೆ ಯು ಅ ಧ್ಯಾ ಯ---
ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ
ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ
ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ
ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ
ನೋಟಗಳೂ ಸಂಧಿಸಿದುವು. ಸುಭದ್ರೆ ಲಜ್ಜೆಯಿಂದ ಕೆಂಪೇರಿದಮುಖ
ವುಳ್ಳವಳಾಗಿ ತಲೆಯನ್ನು ತಗ್ಗಿ ಸಿಕೊಂಡು ಹೊರಟು ಹೋದಳು .
ಅವಳ ಹೃದಯವು ಅನಿರ್ವಚನೀಯವಾದ ಆನಂದದಿಂದ ಪರಿಪೂ
ರ್ಣವಾಗಿದ್ದಿತು.
ಮಾಧವನೂ ಏನೋ ಯೋಚಿಸುತ್ತಾ ಮನೆಯೊಳಕ್ಕೆ
ಹೋದನು. . ಗಂಗಾಬಾಯಿ-- "ಏನಪ್ಪಾ ಸಮಾಚಾರ ? ಏನೇನು
ಕಾರುಬಾರು . ಮಾಡಿಕೊಂಡು . ಬಂದೆ ? " . ಎಂದು ಕೇಳಿದಳು.
ಮಾಧವನು ಅಲ್ಲಿ ನಡೆದ ವೃತ್ತಾಂತವನ್ನೆ ಲ್ಲಾ ಹೇಳಿದನು.
---------------------------------------
೨೨
ಗಂ ಗಾಬಾಯಿ--ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವೇನು?
ಮಾಧವ-- ಅದು ಹಾಗಿರಲಿ, ದಿನ ನಿನ್ನ ಬಳಿ ಕುಳಿ
ತುಕೊಂಡು ಅಳುತ್ತಿದ್ದ . ಹುಡುಗಿಗೆ ಯಾವಾಗ
ಮದುವೆಯಂತೆ ?
ಗಂಗಾ--ಇನ್ನೇನು ಹತ್ತಿರಕ್ಕೆ ಬಂದಿತು.
ಮಾಧವ-- ಅದನ್ನು ತಪ್ಪಿ ಸುವುದಕ್ಕಾಗುವುದಿಲ್ಲವೆ?
ಗಂಗಾ_-ತಪ್ಸಿ ಸಿ ಆಗುವುದೇನು? ಅವಳಿಗಂತೂ ಮದುವೆ
ಯಾಗಲೇ ಬೇಕಷ್ಟೆ,
ಮಾಧವ---ಆದರೆ ಮುದುಕನಿಗೆ ಕೊಡುವುದೆ ?
ಗಂಗಾ_--ಮಾಡುವುದೇನು ? ಬೇರೆ ವರನೆಲ್ಲಿ ಸಿಕ್ಕುವನು ?
ಮಾಧವ__ಅಷ್ಟು ಚೆಲುವೆಯಾದ ಹುಡುಗಿಗೆ ವರನು ಸಿಕ್ಕು
ವುದಿಲ್ಲವೆ?
ಗಂಗಾ--- ಈಗಿನ ಕಾಲದಲ್ಲಿ ವರದಕ್ಷಿಣೆ ಮುಖ್ಯುವಲ್ಲದೆ
ರೂಪವಾಗಲಿ, ಗುಣವಾಗಲಿ, ಕುಲೀನತೆಯಾಗಲಿ
ಗಣನೆಗೆ ಬರುವುದಿಲ್ಲ.
ಮಾಧವ-ಅವಳಿಗೆ ವರದಕ್ಷಿಣೆಯನ್ನು ವರ
ನನ್ನು ಹುಡುಕಿಕೊಡಲಾರೆಯಾ ?
ಗಂಗಾ-- (ಮಾಧವನ ಮುಖವನ್ನು ಚೆನ್ನಾ ಗಿ ನೋಡಿ
ನಗುತ್ತ) ನೀನು ಮನಸ್ಸುಮಾಡಿದರಾಗುತ್ತದೆ.
ಮಾಧವ__ನಾನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡೇ ಇದ್ದೇನೆ
ಗಂಗಾ--ಏನೆಂದು ?
ಮಾಧವ- ಆ ಹುಡುಗಿಗೆ ನಾನೇ ವರನಾಗುವೆನೆಂದು.
ಗಂಗಾ--ಇದು ಬರಿಯಮಾತು.
ಮಾಧವ __ಎಂದಿಗೂಅಲ್ಲ. ನೀನುಮಾತ್ರ ಈಮದುವೆಯನ್ನು
----------------------------------
೨೩
ನಿಲ್ಲಿಸಿದರೆ ಈಶ್ವರಸಾಕ್ಷಿ ಯಾಗಿಯೂ ನಾನು ಅವಳನ್ನ
ಲ್ಲದೆಬೇರೊಬ್ಬರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ.
ಗಂಗಾ_ಹಾಗೆ ಪ್ರತಿಜ್ಞೆ ಮಾಡಬೇಡ. ನಿನ್ನ ಅಂತಸ್ತಿಗೂ
ಅವಳ ಅಂತಸ್ತಿಗೂ ಬಲು ದೂರವಿರುವದು, ಅಲ್ಲದೆ ನಿಮ್ಮ ತಂದೆಯವರಅಭಿಪ್ರಾಯವನ್ನು ಕೇಳಬೇಡವೆ
ಮಾಧವ.--ಅವರು ನನಗೆ ಈವಿಚಾರದಲ್ಲಿ ಸ್ವಾತಂತ್ರ್ಯವನ್ನು
ಕೊಟ್ಟಿರುವರಲ್ಲ
ಗಂಗಾ_ ಅವರು. ನಿನಗೆ ಅಷ್ಟೊಂದು ಸ್ನಾತಂತ್ರ್ಯವನ್ನು
ಕೊಟ್ಟಿಲ್ಲ. ಕುಲಗೋತ್ರ ಮುಂತಾದುವು ಗಳನ್ನು
ಅವರು ಒಪ್ಪಬೇಕು.
ಮಾಧವ__ನಾನಂತೂ ಪ್ರತಿಜ್ಞೆ ಮಾಡಿಬಿಟ್ಟೆ. ಇನ್ನು ನನ್ನ
ಜೀವವಿರು ವವರಿಗೂ ಅದಕ್ಕೆ ತಪ್ಪಲಾರೆ.
ಗಂಗಾಬಾಯಿಯು ಸುಮ್ಮನಾದಳು.
ಅತ್ತ ಸುಭದ್ರೆಯು ಮನೆಯನ್ಪು ಸೇರಿದಮೇಲೆ ಪುಸ್ತಕವನ್ನು
ತೆಗೆದುಕೊಂಡು ಓದುವುದಕ್ಕೆ ಕುಳಿತಳು. ಪುಸ್ತಕವನ್ನು ನೋಡಲಿ,
ಆಕಾಶವನ್ನು ನೋಡಲಿ,ಗೋಡೆಯನ್ನು ನೋಡಲಿ, ಒಂದೇರೂಪವಾಗಿ
ಕಾಣುತ್ತಿದ್ದಿತು. ಎಲ್ಲಿ ನೋಡಿದರೂ ಆಪರಮಸುಂದರವಾದ ಮುಖ!
ಆನಂತರ ಊಟಕ್ಕೆ ಕುಳಿತಾಗ್ಗೆ ರಮಾಬಾಯಿ ಗಂಡನೊಡನೆ
“ರಾಮರಾಯರ ಮನೆಯಲ್ಲಿಮಗಳಿಗೆ ಮದುವೆಯಂತೆ, ಕೇಳಿದಿರಾ?“
ಎಂದಳು.
ವಿಶ್ವನಾಥ__-ನನಗೆ ತಿಳಿದಿರಲಿಲ್ಲ ವರನು ಯಾರು ?
ರಮಾಬಾಯಿ-~ ಪುನಹೆ ಶಂಕರರಾಯರಮಗ
ನಂತೆ, ಆ ಹುಡುಗನೂ ಇಲ್ಲಿ. ಬಂದು ಗಂಗಾಬಾಯ
ಮ್ಮನವರ ಮ ನೆಯಲ್ಲಿಳಿದಿದ್ದಾನಂತೆ.
-------------------------------------
೨೪
ವಿಶ್ವ---ಗಂಗಾಬಾಯಿಯ ಅಕ್ಕನನ್ನೆ ಶಂಕರರಾಯರಿಗೆಕೊ
ಟ್ಟಿದುದು. ಅದುದರಿಂದ ಅಲ್ಲಿಗೆ ಬಂದಿರಬಹುದು.
ಸುಭಿದ್ರೆಯು ಒಂದು ತುತ್ತನ್ನು ಬಾಯಿಹತ್ತಿರ ತೆಗೆದು
ಕೊಂಡು ಹೋಗಿದ್ದವಳು ಈ ಮಾತು ಕೇಳುತ್ತಲೆ ಚಮಕಿತಳಾಗಿ
ಕೆಳಕ್ಕೆ ಬಿಟ್ಟು ಬಿಟ್ಟ್ಗಳು ?
ವಿಶ್ವ-~-ಲಗ್ನ ಯಾವಾಗಲೊ ?
ರಮಾ ___ಕೂಡಲೆ ಆಗಬಹುದು .
ಅಲ್ಲಿಗೆ ಮಾತು ನಿಂತಿತು. ಸುಭದ್ರೆಯಮನಸ್ಸು ವಿಕಾರವನ್ನು
ಹೊಂದಿತು. ಅವಳು ತನ್ಮೊಳಗೆತಾನೆ__"ಇದೇನಾಶ್ಚರ್ಯ ? ಕಮ
ಲೆಗೆ ಮದುವೆಯಾದರೆ ನನಗೇನು ಸಂಕಟ?" ಎಂದಂದುಕೊಂಡಳು .
ಆದರೂ. ಮನಸ್ಸಿನ ವಿಷಾದವು ಹೋಗಲಿಲ್ಲ. ಊಟವು ರುಚಿಸಲಿಲ್ಲ
ರಾತ್ರಿ ನಿದ್ರೆಯೂಬರಲಿಲ್ಲ, ಒಂದು ಸಲ " ಅಯ್ಯೋ! ಹುಚ್ಚ ಳೆ!
ನಿನಗೇತಕ್ಕೆ ಬರಿಯಾಸೆ? ತಿಕುಕನು ಕನಸು ಕಂಡಹಾಗೆಯಾವುದೊ
ಒಂದು ಉತ್ಕೃಷ್ಟ ಪದಾರ್ಥವನ್ನು ನೆನಸಿಕೊಂಡ ಮಾತ್ರಕ್ಕೆ ನಿನಗೆ
ಸಿಕ್ಕಿ ಬಿಡುವುದೆ? ಏತಕ್ಕೆ ವೃಥಾಮನಃಕ್ಲೇಶ`` ಎಂದು ತನ್ನನ್ನು ತಾನೆ
ಬೈದುಕೊಳ್ಳುವಳು. ಉತ್ತರ ಕ್ಷಣದಲ್ಲಿಯೇ ಆ ಪ್ರೇಮಪೂರಿತ
ವಾದ ವಿಶಾಲನೇತ್ರಗಳೊ ? ಆ ಮಂದಹಾಸಯುಕ್ತವಾದ
ಮುಖವೂ? ಇವುಗಳನ್ನು ನಾನು ನೋಡಿದುದು ಸುಳ್ಳೆ "? ಎಂದು ಸಮಾಧಾನಮಾಡಿಕೊಳ್ಳುವಳು. ಹೀಗೆ ಒಂದು. ರಾತ್ರಿಯನ್ನು
ಒಂದು ಯುಗವಾಗಿ ಕಳೆದಳು .
----
----------------------------------- ೨೫
---ಏ ಳ ನೆ ಯ ಅ ಧ್ಯಾ ಯ __
ವಿಶ್ವನಾಥನ ಮನೆಯಲ್ಲಿ ಈದಿನ ದೇವರ ಸಮಾರಾಧನೆ. ನಾಳೆ
ಧಾರಾಮುಹೂರ್ತ. . ರಮಾಬಾಯಿಯ ಕಡೆ ಬಂಧು ಬಳಗವೆ
ಲ್ಲವೂ ಬಂದು ಸೇರಿದೆ. ವಿಶ್ವನಾಥನ ಕಡೆಯವರೂ ಕೆಲವು ಮಂದಿ
ಬಂದಿದ್ದಾರೆ. ಬಹಳ ಗದ್ದಲವಾಗಿದೆ.
ಮಧ್ಯಾಹ್ನ ಭೋಜನವಾಯಿತು. ರಾತ್ರಿ ವರನನ್ನು ಏದುರು
ಗೊಳ್ಳುವುದು, ವರಪೂಜಿ, ಮುಂತಾದ ಶಾಸ್ತ್ರಗಳು ನಡೆಯಬೇಕು
ಎಲ್ಲರೂ ಅವರವರಿಗೆ ತಕ್ಕ ಷ್ಟು ಶೃಂಗಾರಗಳನ್ನು ಮಾಡಿಕೊಂಡರು.
ಊರಹೊರಗಿನ ಸತ್ರದಲ್ಲಿ ವರನನ್ನಿಳಿಸಿದ್ದರು. ಅಲ್ಲಿಗೆ ಹೋಗಲು
ಎಲ್ಲರೂ ಸಿದ್ಧರಾದರು. ರಾತ್ರಿ ೮ ಗಂಟಿಸಮಯ, ಶುಭವಾದ್ಯಗಳೊ
ನೆ ಮೆರವಣಿಗೆಯು ಹೊರಟಿತು. ಅಷ್ಟು ಹೊತ್ತಿಗೆ ಸರಿಯಾಗಿ
ಇಬ್ಬರು ಕರೀ ನಿಲುವಂಗಿಗಳನ್ನು ಹಾಕಿಕೊಂಡು ಕೇಂಪು ಪಗಡಿ
ಯನ್ನು ಸುತ್ತಿಕೊಂಡು, ಕೈಯಲ್ಲಿ ದೊಡ್ಡ ದೊಣ್ಣೆ ಗಳನ್ನು ಹಿಡಿದು
ಕೊಂಡು ಬಂದು ವಿಶ್ನನಾಥನ ಮನೆಯೆದುರಿಗೆ ನಿಂತರು. ಪೋಲೀಸಿ
ನವರನ್ನು ನೋಡಿದ ಕೂಡಲೆ ಎಲ್ಲರಿಗೂ ದಿಗ್ಬ್ರಮೆಯುಂಟಾಯಿತು.
ಪೋಲೀಸಿನವರು . ಆ ಊರಿನವರಾಗಿರಲಿಲ್ಲ , ಅವರ ಭಾರವಾದ
“ಬೂ ಟ್ಸು,“ ಕರೀನಿಲುವಂಗಿ, ಪಗಡಿಗಳನ್ನು. ನೋಡಿದರೆ ಪಟ್ಟಣದ
ಪೋಲೀಸು ಶಿಬ್ಬಂದಿಗೆ ಸೇರಿದವರಾಗಿರಬೇಕು. . ಇವರ ಆಗಮನಕ್ಕೆ
ಕಾರಣವೇನಿರಬಹುದು? ಗುಜುಗುಜನೆ ಅಲ್ಲಿನವರೆಲ್ಲರೂ ಮಾತನಾಡ
ತೊಡಗಿದರು. ಯಾರಿಗೂ ಪೋಲೀಸಿನವರನ್ನು ಕೇಳಲು ಧೈರ್ಯವಿಲ್ಲ,
ಕೆಲವರು ಯಾವದೊ ಕೊಲೆಪಾತಳದ ಮೊಕದ್ದಮೆಯ ವಿಷಯವಿರ
ಬಹುದು ಎಂದುಕೊಂಡರು. ಕೆಲವರು ಕಳುವು. ದರೋಡೆ, ಸಮಾ
ಚಾರವಿರಬಹುದು ಎಂದರು. "ಅಹುದು _ ಅಹುದು, ಮೊನ್ನೆ ಪಂ
ಡರವುರದ ಜಾತ್ರೆಗೆ ಹೋಗುವ ಕೆಲವರನ್ನು ಯಾರೊ ದರೋಡೆ
------------------------------------
೨೮
ಮಾಡಿ ಕೊಳ್ಳೆ ಹೊಡೆದರಂತೆ`` ಎಂದು ಮತ್ತೆ ಕೆಲವರು ಹೇಳಿದರು.
“ಯಾವದಿದ್ದರೂ ಗೊತಾಗುತ್ತದೆ, ಯಾತಕ್ಕೆ ಯೋಚನೆ`` ಎಂದು
ಇನ್ನು ಕೆಲವರು ಅಂದು ಕೊಂಡರು.
ಪೋಲೀಸಿನವರು ಒಂದುಕ್ಷಣ ಅಲ್ಲಿ ನಿಂತಿದ್ದವರು ಎಲ್ಲಿಯೊ
ಹೊರಟುಹೋದರು. ಎದುರುಗೊಳ್ಳಲು ಹೊರಬಿದ್ದ ವರಿಗೆಲ್ಲಾ ಧೈರ್ಯ
ಬಂದಿತು. ಮೆರವಣಿಗೆಯು ಮುಂದಕ್ಕೆ ನಡೆಯಿತು. ಸತ್ರದಬಳಿ ಬರುವ
ಹೊತ್ತಿಗೆ ಸರಿಯಾಗಿ ಆ ಇಬ್ಬರು ಪೋಲೀಸಿನವರೂ ಮಧ್ಯೆ ಒಬ್ಬ
ನನ್ನು ಹಿಡಿದುಕೊಂಡು ಬರುವುದು ಗೋಚರವಾಯಿತು. ಆ ಮೂರನೆ
ವ್ಯಕ್ತಿಯು ಸ್ಕಯಂ ಮದವಣಿಗನಾಗಿದ್ದನು. ಅವನ ಸೌಂದರ್ಯ
ವನ್ನು ಬಣ್ಣಿಸಲು ಯಾರಿಗೆ, ತಾನೆ ಶಕ್ಯ ! ಆ ಕೃಷ್ಣವರ್ಣದ ಮೂ
ರ್ತಿಯು ಒಳ್ಳೆ ಬೆಲೆಯುಳ್ಳ ಪಾಗು ಉತ್ತರೀಯ ಗಳಿಂದಲೂ, ಕಿವಿ
ಯಲ್ಲಿ ವಜ್ರದ ಕಡಕ್ಕು ಬೆರಳುಗಳಲ್ಲಿ ನಾನಾ ಜಾತಿಯ ಅಮೂಲ್ಯ
ಗಳಾದ ಉಂಗುರಗಳು, ಇವುಗಳಿಂದಲೂ ಶೋಭಿಸುತ್ತಿದ್ದನು, ಬಂದಿ
ದ್ದ ವರೆಲ್ಲರೂ ಬೆರಗಾಗಿ ಅಲ್ಲಲ್ಲಿಯೇ ನಿಂತುಬಿಟ್ಟರು. ಮದವಣಿಗನ
ಮುಖವು ಕುಂದಿ ಬೆಳ್ಳಗಾಗಿ ಹೋಗಿತ್ತು. ಇದಕ್ಕೆಲ್ಲಾ ಕಾರಣವನ್ನು
ವಿಚಾರಿಸಬೇಕೆಂದು ಎಲ್ಲರೂ ಗುಜುಗುಜುಗುಟ್ಟಿ ಕೊಂಡರು. ಅವರ
ಲ್ಲೊಬ್ಬನು ಧೈರ್ಯಮಾಡಿ ಕಾನ್‌ಸ್ಟೇಬಿಲನನ್ನು ಕುರಿತು "ದಫೇ
ದಾರರೆ, ಇದೇನು ಸಮಾಚಾರ, ನಮಗೂ ತಿಳಿಯಬಹುದೆ ` `
ಎಂದು ಕೇಳಿದನು.
೧ನೇ ಕಾನ್‌ಸ್ಟೇಬಿಲ್ __ "ಎಲ್ಲರಿಗೂ ತಿಳಿಯದೆ ಎಲ್ಲಿಹೋ
ಗುವುದು ? . ಈ ಮಹಾನುಭಾವರ ನಿಜವಾದ ಹೆಸ
ರೇನು ಕೇಳಿರಿ-- ನಿಮಗೇ ಗೊತ್ತಾಗುವುದು"
"ಅವರಿಗೆ ನಿಜವಾದ ಹೆಸರೂಂದು, ಸುಳ್ಳಾದ ಹೆಸರೊಂದೆ?
ಅದು ನಮಗೆ ತಿಳಿಯದು."
-------------------------------------
೨೭
೧ನೇ ಕಾನ್--"ಅಡಿಗೆ ಪರಿಚಾರಕ ಆತ್ಮಾರಾಮರು
ಶ್ರೀಧರರಾಯರಾಗಿ ಬಂದಿದ್ದಾರೆ“` (ಮದುವಣಿಗನು
ಬೆಚ್ಚಿದನು. ಮೈಯೆಲ್ಲಾ ನಡುಗಲಾರಂಭಿಸಿತು. )
ಕಾನ್ ---ಏನು ರಾಯರೆ ? ನಾನು ಹೇಳಿದುದು ನಿಜವೆ ?
( ಜನರಕಡಿಗೆ ತಿರಿಗಿ) ಇವರು ಈಗ ೧೫- ೨೦ ವರು
ಷದಕೆಳಗೆ, ಜಹಗೀರ್ದಾರ್ ಶಂಕರರಾಯರಮನೆಯಲ್ಲಿ
ಭಾರಿ ಕಳುವು ಮಾಡಿಕೊಂಡು ತಪ್ಕಿಸಿಕೊಂಡುಓಡಿ
ಹೋಗಿದ್ದರು. ಈಗ ಸಿಕ್ಕಿ ಕೊಂಡರು. ಧರ್ಮಸ್ಥಾನ
ದ ವಾಹಾತ್ಮ್ಯವು ಎಂದಿಗೆ ಕಡಿಮೆಯಾದೀತು?
ಶಂಕರರಾಯರು ಮಾತ್ರ ಆಗಲೆ ಮಾನಸಿಕಮಾಡ
ದಿದ್ದರೆ ಇಷ್ಟು ದಿನಕ್ಕೆ ಇವರಿಗೆ ಜೈಲಿನಲ್ಲಿ ಬಹಳ
" ಸರ್ವಿಸ್“ ಅಗುತ್ತಿತ್ತು,
೨ನೇ ಕಾನ್-- "ಅಹಹ! ಒಳ್ಳೆ ಸಮುಯದಲ್ಲಿ ಸಿಕ್ಕಿ ಬಿದ್ದನು. ನಾವಿ
ನ್ನೊಂದು ದಿನತಡವಾಡಿದ್ದರೆ ಒಬ್ಬ ಮುದ್ದುಮಗಳ
ತಲೆಯಮೇಲೆ ಚಪ್ಪಡಿಯೆಳದು ಬಿಡುತ್ತಿದ್ದನು."
ಎಂದು ಹೇಳುತ್ತಾ ಮದವಣಿಗನನ್ನು ಕುರಿತು
“ರಾವ್ ಜಿ__ದಯವಿಟ್ಟು ತಮ್ಮ ಚಿನ್ನ ದ ಬಳೆಯನ್ನು
ತೆಗೆಯಿರಿ__ಬೇರೆ ಬಳೆಯು ಸಿದ್ದ ವಾಗಿದೆ" ಎಂದನು.
ವಿಶ್ವನಾಥನಿಗೂ ರಮಾಬಾಯಿಗೂ ಉಂಟಾದನಾಚಿಗೆಯು
ಹೇಳಲಸಾಧ್ಯವಾಗಿತ್ತು. ಅವರು ಯಾರೊಡನೆಯೂ ಮಾತನಾಡದೆ
ಮನೆಗೆ ಹೊರಟುಹೋದರು. ಅವರಿಗೆ ತಮ್ಮ ನೆಂಟರೆಲ್ಲರನ್ನೂ ಕರೆ
ಸಿದಮೇಲೆ ನಾಚಿಗೆಗೇಡಾದುದಕ್ಕೆ ಬಹಳ ವ್ಯಥೆಯುಂಟಾಗಿದ್ದರರೂ
ಪರಮ ನೀಚನಿಗೆ ತಮ್ಮ ಮಗಳನ್ನು ಸಂಕಟಪಡು
ವುದನ್ನು ಭಗವಂತನು ತಪ್ಪಿಸಿದುದಕ್ಕಾಗಿ ಬಹಳಮಟ್ಬಿ ಗೆ ಸಮಾಧಾನ
--------------------------------------
೨೮
ವುಂಟಾಗಿತ್ತು. ಸುಭದ್ರೆ ಗಾದರೊ ಮನಸ್ಸಿನಲ್ಲುಂಟಾದ ಸಂತೋ
ಷಕ್ಕೆ ಪಾರವೇ ಇರಲಿಲ್ಲ .
ಇತ್ತಲಾಗಿ ಪೋಲೀಸಿನವರು ಅಲ್ಲಿ ನೆರೆದಿದ್ದ ಜನರಲ್ಲಿ
ಕೆಲವರನ್ನು ನಿಲ್ಲಿಸಿಕೊಂಡು ಒಡವೆ ಮುಂತಾದುವುಗಳ ವಿಷಯದಲ್ಲಿ
ಪಂಚಾಯಿತರಂದ 'ಮಹಜರು' ಮಾಡಿಸಿಕೊಂಡು ಆತ್ಮಾ ರಾಮ
ನನ್ನು ಕರದುಕೊಂಡು ಹೊರಟುಹೋದರು. ಬಂದಿದ್ದ ಬಂಧು ಬಳಗ
ವೆಲ್ಲವೂ ಮಾರಣೆದಿನ ಯಥಾ ಯಥಾ ಹೊರಟುಹೋಯಿತು.
ಮದುವೆಯ ಸಂಭ್ರಮವೆಲ್ಲವೂ ಈ ರೀತಿಯಲ್ಲಿ ಪರಿಣಮಿಸಿತು.
ಇದಕ್ಕೆ ಕಾರಣವೇನು? ಸಕಾಲದಲ್ಲಿ ಸಹಾಯ ಒದಗಿದುದು
ಹೇಗೆ? ಗಂಗಾಬಾಯಿಯು ಮೊದಲು ಶ್ರೀಧರರಾಯನನ್ನು ನೋಡಿ
ದೊಡನೆಯೆ ಅವನನ್ನು ಹಿಂದೆ ಎಲ್ಲಿಯೊ ನೋಡಿದ್ದಂತೆ ಸ್ಫೂರ್ತಿಗೆ
ಬಂದಿತ್ತು. ಇಂತಹ ಸ್ಥಳವೆಂಬುದುಮಾತ್ರ ನೆನಪಿಗೆಬರಲಿಲ್ಲ;ಹಾಗೆಯೆ
ಯೋಚಿಸುತ್ತ ಯೋಚಿಸುತ್ತ ತನ್ನ ಅಕ್ಕನ ಮನೆಯಲ್ಲಿ ೧೫-೨೦
ವರುಷಗಳಹಿಂದೆ ಆತ್ಮಾರಾಮನೆಂಬೊಬ್ಬ ಪರಿಚಾರಕನು ನಾಲ್ಕೈದು
ಸಾವಿರ ರೂಪಾಯಿನ ರೊಕ್ಕವನ್ನೂ ನಗಗಳನ್ನೂ ಕಳವುಮಾಡಿ
ಕೊಂಡು,ಶಂಕರರಾಯನ ಸೇವಕರಲ್ಲೊ ಕೊಲೆಮಾಡಿ ಓಡಿ
ಹೋಗಿದ್ದುದು ಜ್ಞಾಪಕಕ್ಕೆ ಬಂದಿತು. “ಆತ್ಮಾರಾಮನೇ ಇವನಾ
ಗಿರಬಹುದೆ? ಇವನ ನಡಿಗೆ, ಮುಖದ ಹೋಲಿಕೆಯನ್ನು ನೋಡಿದರೆ
ಅವನಿಗೂ ಇವನಿಗೂ ಏನೂ ಭೇದ ತೋರುವುದಿಲ್ಲ. ಆದರೆ ಇವನ
ಆಡಂಬರವನ್ನು ನೋಡಿದರೆ ಧನವಂತನಾಗಿ ಕಾಣುತ್ತಾನೆ. ಅಲ್ಲದೆ
ಆತ್ಮಾ ರಾಮನು ಧೈರ್ಯವಾಗಿ ಪುನಹೆ ಹತ್ತಿರ ಹೇಗೆಬಂದಾನು ?
ಅಥವಾ ಬಹಳಕಾಲವುಕಳದುಹೋಗಿರುವುದರಿಂದ ಯಾರಿಗೂ ತನ್ನ
ಗುರುತು ಸಿಕ್ಕರಲಾರದೆಂಬ ಧೈರ್ಯದಮೇಲೆ ಬಂದಿರಬಹುದು. ಆದರೆ
ಇವನು ವಿಶ್ವನಾಥನಮನೆಯನ್ನು ಯಾತಕ್ಕೋಸ್ಕರ ವಿಚಾರಿಸುತಾನೊ
---------------------------------------
೨೯
ತಿಳಿಯದು, ಇವನ ಅಟ್ಟಹಾಸವನ್ನು ನೋಡಿದರೆ ಭಯವಾಗುತ್ತದೆ.
ಕನ್ಯಾರ್ಥಿಯಾಗಿ ಬಂದಿರಬಹುದೆ ? ಎಂದು ಮುಂತಾಗಿ ಯೋಜಿಸಿ
ಕೊಂಡಳು. ಮಾರಣೆಯ ದಿನ ಸುಭದ್ರೆಯು ತನ್ನ ವೃತ್ತಾಂತವನ್ನು
ಹೇಳಲಾಗಿ ,ಗಂಗಾಬಾಯಿಯು ಹೀಗೆಂದು ಯೋಚಿಸಿದಳು. "ಇವ
ನನ್ನು ಸಂಶಯದನಮೇಲೆ ಹಿಡಿಸಿಬಿಡುವುದು ಒಳ್ಳೆಯದು.
ಆತ್ಮಾರಾಮನೆ ಇವನಾದರೆ ಸರಿಯೆಸರಿ, ಇಲ್ಲದಿದ್ದರೆ ನ್ಯಾಯಸ್ಥಾನ
ದಲ್ಲಿ ರುಜುವಾತಿಲ್ಲವೆಂದು ಬಿಟ್ಟುಬಿಡಲಿ ಬಾಧಕವಿಲ್ಲ. ಸದ್ಯ !
ಮ ದುವೆಯೊಂದು ತಪ್ಪಿದರೆ ಸಾಕು.
ಮಾಧವನು ರಾಮಪುರದಲ್ಲಿ ಒಂದೆರಡು ದಿನವಿದ್ದು ಪುನಹೆಗೆ
ಹಿಂದಿರುಗಿಹೋದನು. ಗಂಗಾಬಾಯಿಯೂ ಆವನೊಡನೆ ಹೋದಳು.
ಕೂಡಲೆ ಆತ್ಮಾ ರಾಮನವೃತ್ತಾಂತವನ್ನೆಲ್ಲಾ ಶಂಕರರಾಯನಿಗೆ ತಿಳಿಸಿ
ಮದುವೆಗೆ ಗೊತಾಗಿದ್ದ ಮುಂದಿನ. ದಿನವೇ ರಾಮಪುರಕ್ಕೆ
ಹೋಗಿ ಆತ್ಮಾರಾಮನನ್ನು ಹಿಡಿತರುವಂತೆ ಏರ್ಪಾಟುಮಾಡಿ ಪೋಲೀಸಿ
ನವರನ್ನು ಕಳುಹಿಸಿಕೊಟ್ಟರು. ಅನಂತರ ನಡೆದುದು ತಿಳಿದೇ ಇದೆ.
ಪೋಲೀಸಿನವರು ಅತ್ಮಾ ರಾಮ ನನ್ನು ಮ್ಯಾಜಿಸ್ಸೆ ಟರ ಮುಂದೆ
ಹಾಜರ್ಮಾಡಿದರು. ಅಲ್ಲಿ ವಿಚಾರಣೆ ನಡೆದು ಮ್ಯಾಜಿಸ್ಟ್ರೇಟರು
ಸಷನ್ -ಕೋರ್ಟಿಗೆ ಮೊಕದ್ದಮೆಯನ್ನು ' ಕಮಿಟ್ ' ಮಾಡಿದರು.
ಆತ್ಮಾರಾಮನು ಪುನಹೆ ಜೈಲಿನಲ್ಲಿ ದಾಖಲಾಗಿ ಅಲ್ಲಿನ ಸುಖ
ಗಳನ್ನೆಲ್ಲಾ ಅನುಭವಿಸುತ್ತಾ, ಸೆಷನ್ ಕೋರ್ಟಿನಲ್ಲಿ ತನ್ನ ಗತಿಯೇ
ನಾಗುವುದೋ ಎಂದು ಹಂಬಲಿಸುತಿದ್ದನು.
----
__ ಎಂಟನೆಯ ಅಧ್ಯಾಯ ___
ವಿಶ್ವನಾಥನಿಗೂ ರಮಾಬಾಯಿಗೂ ಬಹು ಯೋಚನಿಗಿಟ್ಟಿತು.
ಸುಭದ್ರೆ ಗಾದರೂ ವಯಸ್ಸು ಮೀರುತ್ತಾಬಂದಿತು. ಇದು
-------------------------------------
೩೦
ವರೆಗೆ ವಿವಾಹವು ಸಾವಕಾಶವಾದುದೇ ಊರಿನವರಿಗೆಲ್ಲರೂ ನಾನಾ
ವಿಧವಾಗಿ ಆಡಿಕೊಳ್ಳಲು ಮಾರ್ಗವನ್ನುಂಟುಮಾಡಿದ್ದಿತು. ಇನ್ನೂ
ಸಾವಕಾಶಮಾಡಿದ ಪಕ ದಲ್ಲಿ ಪ್ರಮಾದಕ್ಕೇ ಬರಬಹುದು.
ಈಗಿನ ಸಮಾಜದಸ್ಥಿತಿಯಲ್ಲಿ ಹೆಣ್ಣುಮಕ್ಕಳನ್ನು ಪಡಿದವರ ಕಷ್ಟ
ವನ್ನು ಬಣ್ಣಿಸುವುದುಅಸಾಧ್ಯ. ಸರಿಯಾದ ವರನು ಬೇಕಾದರೆ ಮಿತಿ
ಮೀರಿ ವರದಕ್ಷಿಣೆಯನ್ನು ಕೊಡಬೇಕು. ಹೊಟ್ಟೆಯನ್ನು ಹೊರೆಯು
ವುದೇ ಕಷ್ಟ್ರವಾಗಿರುವವರು ವರದಕ್ಷಿಣೆಯನ್ನೆಲ್ಲಿಂದ ತರಬೇಕು? ಅದು
ದರಿಂದಲೇ ವಿಶ್ವನಾಥನ ಪ್ರಯತ್ನಗಳೆಲ್ಲವೂ ನಿಷ್ಫಲವಾದವು. ಕೊನೆಗೆ
ಅವನಿಗೆ, ಜುಗುಪ್ಸೆಹುಟ್ಬಿ, ವರನನ್ನು ಕೊಂಡುಕೊಳ್ಳುವುದಕ್ಕೆ ಬದಲಾಗಿ
ಮಗಳನ್ನು ಮಾರಲು ಸಿದ್ದ ಮಾಡಿಕೊಂಡಿದ್ದನು; ಅದೂ ನೆರವೇರ
ಲಿಲ್ಲ. ಈಗ ಬೇರೆ ಯಾವಮಾರ್ಗವೂ ತೋರದೆ ತನ ತಂಗಿಯ ಮಗ
ನಾದ ರಘುರಾಮನೆಂಬವನಿ ಗಾದರೂ ಕೊಟ್ಟು ಲಗ್ನ ಬಳೆಯಿಸಿಬೇ
ಕೆಂದು ನಿಶ್ಚಯಿಸಿಕೊಂಡನು. ರಘುರಾಮನು ಪುನಹೆಯಲ್ಲಿ ಪ್ರವೇಶ
ಪರೀಕ್ಷೆಯ (ಮೆಟ್ರಿಕ್ಯುಲೇಷನ್) ತರಗತಿಯಲ್ಲಿ ಓದುತ್ತಿದ್ದನು. ಅವ
ನಿಗೆ ತಂದೆತಾಯಿ. ಯಾರೂ ಇಲ್ಲ, ಆಸ್ತಿ ಮೊದಲೇ ಇಲ್ಲ. ಕೆಲವರು
ಉದಾರರಾದ ದೊಡ್ಡ ಮನುಷ್ಯರ ಮನೆಗಳಲ್ಲು ವಾಸಮಾಡಿಕೊಂಡು
ವಿದ್ಯಾಕಾಲಕ್ಷೇಪ ಮಾಡುತ್ತಿದ್ದನು. ಅವನಿಗಿನ್ನೂ ೧೬ ವರುಷ
ವಯಸ್ಸು. ಶುದ್ಧ ಕುರೂಪಿ. ಸುಭದ್ರೆಗೂ ಅವನಿಗೂ ವರಸಾಮ್ಯ
ಸರಿಯಾಗಿರಲಿಲ್ಲ. ಈ ಕಾರಣಗಳಿಂದಲೇ ಮೊದಲಿನಿಂದಲೂ ಅವನ
ವಿಷಯವನ್ನ ಯೋಚಿಸಿರಲಿಲ್ಲ. ಈಗ ಯತ್ನವಿಲ್ಲದೇ ಹೋಯಿತು.
ವಿಶ್ವನಾಥನಿಗೆ ತಂಗಿಯಮಗನು ಎಂದಿಗೂ ತನ್ನ ಮಾತನ್ನು
ತೆಗೆದುಹಾಕುವುದಿಲ್ಲವೆಂಬ ಭರವಸೆಯಿದ್ದಿತು. ಮನೆಯಲ್ಲಿ ಅಣಿಮಾ
ಡಿದ ಸಾಮಗ್ರಿಯೆಲ್ಲವೂ ಹಾಗೆಯೆ ಇದ್ದುದರಿಂದ ಒಂದು ವಾರ
ದಲ್ಲೆ ಮದುವೆಯನ್ನು ಅಗಮಾಡಿಸುವುವಾಗಿ ನಿಶ್ಚಯಿಸಿಕೊಂಡು,
-----------------------------------
೩೧
ರಘುರಾಮನಿಗೆ. ಕೂಡಲೆ ಹೊರಟು ಬರುವಂತೆ ಕಾಗದವನ್ನು ಬರೆ
ದನು. ಮೂರು ದಿನದಲ್ಲಿ ಪ್ರತ್ಯುತ್ತರವು ಬಂದಿತು.. ಬಿ. ಎ. ಪರೀಕ್ಷೆ
ಯಾದ ಹೊರತು ತನಗೆ ಮದುವೆಮಾಡಿಕೊಳ್ಳಲು ಇಷ್ಟವಿಲ್ಲವೆಂತಲೂ,,
ಹಾಗೆ ಬಲವಂತಮಾಡುವ ಪಕ್ಷಕ್ಕೆ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ
ತಕ್ಕ ಸಹಾಯವನ್ನು ಮಾಡುವುದಾಗಿ ಕಾಗದ ಬರದುಕೊಟ್ಟು,
೧೦೦೦ ರೂಪಾಯಿಗಳು ವರದಕ್ಷಿಣೆಯನ್ನು ಕೊಡುವುದಾದರೆ
ಒಪ್ಪುವುದಾಗಿಯೂ ರಘುರಾಮನು ಬರೆದನು. ಅವನ ಕಾಗದವನ್ನು
ನೋಡಿ ವಿಶ್ವನಾಥನಿ ಗುಂಟಾದ ಆಶ್ಚಾರ್ಯವನ್ನು ವಿವರಿಸಲು ಸಾಧ್ಯ
ವಿಲ್ಲ. ನಾನು ಸಾಕಿ ದೊಡ್ಡವನನ್ನಾಗಿ ಮಾಡಿದ ಹುಡುಗನೇ ನನಗೆ
ಈ ರೀತಿಯಾಗಿ ಉತ್ತರವನ್ನು ಕೊಟ್ಟಬಳಿಕ, ನನ್ನ ಯಾವ ಪ್ರಯತ್ನ
ತಾನೆ ಫಲಕಾರಿಯಾಗುವುದು ? ದೈವಚತ್ತಹೀಗಿದೆಯೊ ? ಜಾತಿಕೆಡ
ಬೇಕಂದೇ ನಮ್ಮ ಹಣೆಯಲ್ಲಿ ಬರೆದಿದೆಯೋ? ವೃಥಾ ಚಿಂತಿಸಿ. ಫಲ
ವಿಲ್ಲ, ಮಿತಿ ಮಿರಿದರೆ ಕಾಶೀಯಾತ್ರೆ, ಇದ್ದೇಇದೆ“ ಎಂದಂದು
ಕೊಂಡು ಸುಮ್ಮ ನಾದನ್ನು ಮನಸ್ಸಿನ ಕೊರತೆಮಾತ್ರ ತಪ್ಪಲಿಲ್ಲ.
ಅತ್ತ ಪುನಹೆಯಲ್ಲಿ ಆತ್ಮಾ ರಾಮನಮೊಕದ್ದಮೆಯು- "ಸೆಷನ್
ಕೋರ್ಟ್“ ನಲ್ಲಿ ವಿಚಾರಣೆಗೆ ಪ್ರಾರಂಭವಾಯಿತು. ಸರಕಾರದಪಕ್ಷ
ದಲ್ಲಿ ಮುಖ್ಯಸಾಕ್ಷಿ ಯಾದ ಶಂಕರರಾಯನ ವಿಚಾರಣೆಯು ಒಂದು
ಮಧ್ಯಾಹ್ನವೆಲ್ಲಾ ಹಿಡಿಯಿತು. ಅದಿನ ಶಂಕರರಾಯನು ಸರಕಾರದ
ಪಕ್ಸ್ಯದ ವಕೀಲನ ಸವಾಲು ಗಳಿಂದಲೂ ಎದುರು ಪಕ್ಷಯದ ವಕೀಲನ
"ಪಾಟೀಸವಾಲು“ಗಳಿಂದಲೂ ತಾಡಿ ಸಲ್ಪಟ್ಟವನಾಗಿ, ಜೀವದೊಂದಿಗೆ
ಕೋರ್ಟಿನಿಂದ ಹೊರಗೆ ಹೋದರೆ ಸಾಕೆಂದಂದುಕೊಂಡು ಕೊನೆಗೆ
ಬಿಡುಗಡೆ ಮಾಡಲ್ಪಟ್ಟವನಾಗಿ ಮನೆಗೆಬಂದನು. ರಾಮರಾಯನಿಂದ
ಆಗತಾನ ಒಂದು ಕಾಗದವು ಬಂದಿತ್ತು. ಅದನ್ನು ನೋಡಿದ ಕೂಡಲೆ
ಗಂಗಾಬಾಯಿ ಇದ್ದಲ್ಲಿಗೆ ಬಂದು "ಗಂಗೂ!ನಾವುಮೊಕದ್ದಮೆಯ
--------------------------------
೩೨
ಅವಾಂತರದಲ್ಲಿ ಮಾಧವನಮದುವೆಯ ವಿಚಾರವನ್ನೆ ಮರೆತು ಬಿಟ್ಟೆವು.
ಇಗೊ! ರಾಮರಾಯರು ತಿರಿಗಿ ಕಾಗದ ಬರದಿದ್ದಾರೆ, ಅವರಿಗೇನು
ಉತ್ತರವನ್ನು ಕೊಡೋಣ?" ಎಂದನು.
ಗಂಗಾಬಾಯಿ_-ಬಾವ! ಆ ಸ್ಥಳವನ್ನು ಬಿಟ್ಟು ಬೇರೆಕಡೆ
ಸಂಬಂಧ ಬೆಳೆಯಬಾರದೆ.
ಶಂಕರರಾಯ _ ಏತಕ್ಕೆ ?. ಏನುಸಮಾಜಾರ ?
ಗಂ__ಏನೂ ಇಲ್ಲ. ಹುಡುಗಿಯ ವಿಷಯ.
ಶಂ-~ಹುಡುಗಿ ಹೇಗಿದ್ದಾಳೆ ?
ಗಂ--ಭಾಗ್ಯವಂತರ ಮನೆಗೆ ತಕ್ಕವಳಾಗಿದ್ದಾಳೆ.
ಶಂ _ ಸರಿ, ಹಾಗಾದರ ಅಲಂಕಾರದ ಗೊಂಬೆಯೊ ?
ಗಂ----ಹೌದು. ಉಡಿಗೆ ತೊಡಿಗೆಯಲ್ಲಿದ್ದಾಗ.
ಶಂ-ಇಲ್ಲದಿದ್ದರೆ ?
ಗಂ - ಚಂದನದಗೊಂಬೆ! ಅಷ್ಟು ಮಾತ್ರವೇಅಲ್ಲ ಅ, ವಳಂ
ತಹ ಮೂರ್ಖಳನ್ನು ನೋಡಲೇ ಇಲ್ಲ.ಅವಳಗುಣಕ್ಕೂ
ನಮ್ಮ ಮಾಧವನಗುಣಕ್ಳೂ ಏನೇನೂ ಸಂಬಂಧವಿಲ್ಲ.
ಶಂ--ಮಾಧವನೇ ನೋಡಿದ್ದಾನಷ್ಟೆ. ಅವನ ಅಭಿಪ್ರಾಯ
ವೇನಾದರೂ ನಿನಗೆ ತಿಳಿಯುವುದೊ ?
ಗಂ--.- ನನ್ನ ಅಭಿಪ್ರಾಯವೇ ಅವನ ಅಭಿಪ್ರಾಯ. ನೀವಾ
ಗಿಯೆ ಈ ವಿಷಯದಲ್ಲಿ ಅವನಿಗೆ ಸ್ವಾತಂತ್ರ್ಯವನ್ನು
ಕೊಟ್ಟಿ ರುವುದರಿಂದ ಅವರಿಗೆ ಮನಸ್ಸು ಬಂದಕಡೆ
ಕನ್ಯೆಯನ್ನು ನೋಡಿಳೊಳ್ಳಬಹುದಷ್ಟೆ ?
ಶಂ-ಅದರೆ ಜಾತಿ, ಕುಲ, ಗೋತ್ರ ಮುಂ
ತಾದ ವಿಷಯಗಳಲ್ಲಿ ಮಾತ್ರ _
-------------------------------
೩೩
ಗಂ--ನಿಮ್ಮ ಅಭಿಪ್ರಾಯವನ್ನು ಬಿಟ್ಟು ಬೇರೆ ಉಂಟೆ?
ಅದೂ ಅಲ್ಲದೆ ನಾನೊಪ್ಪುವೆನೆ ?
ಶಂ__ ಸರಿ, ನೀನೂ ಮಾಧವನೂ ಒಪ್ಪಿದಮೇಲೆ ನನ್ನ
ದೇನೂ ಅಡ್ಡಿ ಇಲ್ಲ.
ಗಂ_ನಿಮ್ಮ ಸಮಾನಸ್ಕರಂಧರಲ್ಲದವರಲ್ಲಿ ಸಂಬಂಧ ಬಳೆಸು
ವುದರಲ್ಲಿ ಅಡ್ಡಿ ಯಿಲ್ಲವೆ ? “
ಶಂ-~ ಇದೇನು ಗಂಗೂ, ನನ್ನ. ಪ್ರಕೃತಿಯನ್ನು ತಿಳಿಯದವ
ಳಂತೆ ಮಾತನ್ನಾಡುವೆ ? ನಾನು ಯಾವಾಗಲಾ
ರೂ ಯಾರಲ್ಲಿಯಾದರೂ ಅಂತಹ ಭೇದವನ್ನೆಣಿಸಿ
ರುವುದನ್ನು ನೋಡಿರುವಿಯಾ ?
ಗಂ__ ಇಲ್ಲ, ನಮ್ಮ ಮನೆಯಲ್ಲಿ ನೀವು ಹೆಣ್ಣುತಂದುಕೊಂ
ಡದ್ಬೇ ಸಾಕ್ಷಿಯಲ್ಲವೆ ? ನಮ್ಮ ಮಾಧವನು ಒಬ್ಬ
ಬಡ ವೈದಿಕ ಬ್ರಾಹ್ಮಣನ ಮಗಳನ್ನು ನೋಡಿ
ಕೊಂಡು ಬಂದಿದ್ದಾನೆ.
ಶಂ__ ನಷ್ಟವೇನು ? ಹುಡುಗಿಯು ಗುಣವಂತಳು ತಾನೆ ?
ಗಂ_-ಆಹಾ ! ಗುಣದಲ್ಲಿ, ವಿದ್ಯೆಯಲ್ಲಿ, ರೂಪದಲ್ಲಿ, ಅವಳ
ಸಮಾನಳಾದ ಕನ್ಗೆಯನ್ನೇ ನಾನು ನೋಡಲಿಲ್ಲ
ಮಾಧವನು ಅವಳನ್ನಲ್ಲದೆ ಬೇರೆಯಾರನ್ನೂ ವರಿಸ
ಲಾರನೆಂದು ನನಗೆ ತೋರುವುದು.
ಶಂ~ಹುಡುಗಿಗೆ ತಂದೆ ತಾಯಿಗಳಿದ್ದಾರಷ್ಟೆ ? ಸ್ಥಳ
ವಾವುದು
ಗಂ-_ಸ್ಥಳ ರಾಂಫ್ರುರ, ನನ್ನ ಪಾಠಶಾಲೆಯಲ್ಲೇ ಚಿಕ್ಕ
ಮಗುವಾಗಿದ್ದಾಗಿನಿಂದ ನಾನೆ ವಿದ್ಯಾಬುದ್ದಿ ಕಲಿಸಿ
ದ್ದೇನೆ. ನನಗೆ ಮಗಳಿಗಿಂತೆ ಹೆಚ್ಚು, ಆದುದರಿಂದಲೇ
ಸೊಸೆಯನ್ಟು ಮಾಡಿಳೊಳ್ಳಬೇಕೆಂದು ಆಛಿಲಾಷೆ.
--------------------------------
೩೪
ಶಂ-ಹಾಗಾದರೆ ಜಾಗ್ರತೆಮಾಡಬೇಕು. ರಾಮರಾಯನು
ಅಸಾಧಾರಣನಾದ ಮನುಷ್ಯ,. ನಮ್ಮ ಅಭಿಪ್ರಾ
ಯವು ಅವನಿ ಗೆ ತಿಳಿಯುವುದಕ್ಕೆ ಮುಂಚೆಯೆ ಕನ್ಯೆ
ಯನ್ನು ಕರೆದುಕೊಂಡು ಅವರು ಇಲ್ಲಿಗೆ ಬಂದು
ಬಿಡಲಿ, ಈಗಲೆ ಅವರಿಗೆ ಕಾಗದ ಬರೆದುಬಿಡೋಣ!
ಹುಡುಗಿಯ ಹೆಸರೇನು ?
ಗಂ-ಸುಭದೆ,.
ಶಂ __ತಂದೆಯ ಹೆಸರು ?
ಗಂ-ವಿಶ್ವನಾಥ ಪಂತರು.
ಶಂ-ವಿಶ್ವನಾಥಪಂತರೆ ? ಯಾವ ವಿಶ್ವ ನಾಥಪಂತರು ?
ಗಂ _ಪೇಷ್ವೆಯವರ ಕುಲಪುರೋಹಿತರಾಗಿದ್ದ ಕೃಷ್ಣ್ಯಪಂತರ
ವಂಶೀಯರು, ಒಳ್ಳೆಯ ದೊಡ್ಡ ಮನೆತನ, ಈಗ--
ಶಂ_-ಸಾಕು ! ಸಾಕು ! ಅಲ್ಲಿಗೆ ನಿಲ್ಲಿಸು. ಆ ಸರ್ಪವಂಶವು
ಇನ್ನೂ ಇದೆಯೆ ? ಈ ಮಾತನ್ನು ಇಲ್ಲಿಗೆ. ಬಿಡು.
ಅವರ ಪೂರ್ವಿಕರು . ನಮ್ಮವರ ಪ್ರಧಾನತ್ವವನ್ನು
ಕಿತ್ತುಕೊಳ್ಳಲು ಮಾಡಿದ ತಂತ್ರಗಳನ್ನೂ ದೈವಕೃಪೆ
ಯಿಲ್ಲದಿದ್ದರೆ ನಾವು ಯಾವಗತಿಗಿಳಿಯುತ್ತಿದ್ದೆ ವೆಂ
ಬುದನ್ನೂ ಯೋಜಿಸಿಕೊಂಡರೆ ಅವರ ವಂಶೀಯರ
ಮುಖದರ್ಶನವನ್ನೆ ಮಾಡಕೂಡದು, ಇಂತಹುದರಲ್ಲಿ
ಸಂಬಂಧ ಬಳೆಸುವುದೆ ? ಎಂದಿಗೂ. ಆಗಲಾರದು.
ಗಂ-ಬಾವ ! ನೀವು ಇಷ್ಟುತಿಳಿವಳಿಕೆಯುಳ್ಳವರಾಗಿಯೂ
ಈ ರೀತಿ ಮಾತನ್ನಾ ಡುವಿರೆಂದು ನಾನೆಣಿಸಿರಲಿಲ್ಲ
ಶಂ-- ಎಲ್ಲಾ ವಿಷಯದಲ್ಲಿಯೂ ನೀನು ಹೇಳಿ
ದಂತೆ ಕೇಳುತ್ತೇನೆ, ಇದೊಂದರಲ್ಲಿ ಮಾತ್ರ--
-------------------------------
೩೫
ಗಂ--ನಿಮಗೆ ವಿಶ್ವನಾಥನೇನೂ ದ್ರೋಹಮಾಡಲಿಲ್ಲವಷ್ಟೆ?
ಶಂ--~ಆದರೇನು ? ಅವನ. ಪೂರ್ವಿಕರು ಮಾಡಿದುದು
ಸಾಲದೆ? ಅವರಿಗೂ ನಮಗೂ ವಂಶಪಾರಂಪರ್ಯ
ವಾಗಿ ದ್ವೇಷವಿದ್ದೇ ಯಿರುವುದು.
ಗಂ-~ಸರಿ, ಹಾಗಾದರೆ-ನೀವುಂಟು ನಿಮ್ಮ ಮಗನುಂಟು,
ಮಧ್ಯೆ ನನ್ನದೇನು ?
ಶಂಕರರಾಯನು ಮಗನನ್ನು ಏಕಾಂತವಾಗಿ ಕರೆಸಿಕೊಂಡು.
ಅವನೊಡನೆ ವಿಶ್ವನಾಥನ ವಂಶೀಯರಿಗೂ ತಮ್ಮ ವಂಶೀಯರಿಗೂ
ಪಾರಂಪರ್ಯವಾಗಿ ದ್ವೇಷ ಬಂದಿರು ವುದನ್ನೂ ಅವರ ಮನೆಯಲ್ಲಿ
ಸಂಬಂಧವನ್ನು ಬಳೆಯಿಸುವುದರಿಂದ ಸ್ಕರ್ಗಸ್ಕರಾಗಿರುವ ತಮ್ಮ
ಪಿತೃಪಿತಾಮಹ ಮುಂತಾದವರಿಗೆ ದ್ರೋಹಮಾಡಿದಂತಾಗಿ ಅವರು
ಶ್ರಾದ್ಧ ದಲ್ಲಿ ಪಿಂಡವನ್ನು ಸಹಮುಟ್ಟದೆ ಹೋದಾರೆಂಬ ಶಂಕೆಯನ್ನೂ
ತಿಳಿಸಿ ಈರೀತಿ. ಮುಗಿಸಿದನು:--- "ರಾಮರಾಯನ ಮಗಳನ್ನು
ವಿವಾಹಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ಬೇಡ_ಅವನಿಗೆ ಆರೀತಿ
ಉತ್ತರವನ್ನು ಬರೆದುಬಿಡೋಣ. ವಿಶ್ವನಾಥನ ಮಗಳೊಬ್ಬಳುವಿನಾ
ನೀನು ಬೇರೆ ಯಾರನ್ನು ಬೇಕೆಂದರೂ ವಿವಾಹಮಾಡಿಕೊಡುತ್ತೇನೆ.
ನೀನು ಅವಳೇಆಗಬೇಕೆಂದು ಮುಷ್ಕರ ಹಿಡಿದರೆ ನನ್ನ ಅಡ್ಡಿಯೇನೂ
ಇಲ್ಲ.. ಆದರೆ ಮದುವೆಯಾದ ಉತ್ತರಕ್ಷಣದಲ್ಲಿಯೆ ನೀನೂ ನನ್ನ
ಶತ್ರು ಪಕಷಕ್ಕೆ ಸೇರಿದವನಾಗುವೆಯಾದುದರಿಂದ ನನ್ನ ಮನೆಯಲ್ಲಿ
ನಿನಗೆ ನೆಳಲುದೊರಿಯಲಾರದು. ಯೋಚನೆಮಾಡಿ ಹೇಳು. “
ಮಾಧವನು ತಂದೆಯ ಎದುರಿಗೆ ವಿಶೇಷವಾಗಿ ನಿಂತು ಮಾತ
ನ್ನಾಡಿದವನೆ ಅಲ್ಲ. ಅವನ ಉಪನ್ಯಾಸವು ಪೂರೈಸುವವರೆಗೂ
ಸುಮ್ಮನೆ ತಲೆ ಬಗ್ಗಿಸಿಕೊಂಡು ನಿಂತಿದ್ದು ಹೊರಟುಹೋದನು.
ಇವನ ಮುಖವು ಬಾಡಿಹೋಗಿರುವುದು ಶಂಕರರಾಯನಿಗೆ ಗೋಚ
----------------------------------
೩೬
ರವಾಗಲಿಲ್ಲ. ತನ್ನ ಮಗನಂತಹ ವಿಧೇಯನಾದ ಮಗನನ್ನು ಯಾರೂ
ಪಡೆಯಲಿಲ್ಲವೆಂದೂ ಆ ವಿಷಯದಲ್ಲಿ ತಾನು ತುಂಬಾ ಅದೃಷ್ಟ್ರಶಾಲಿ
ಯೆಂದೂ ತನ್ನನ್ನು ತಾನೆ ಹೊಗಳಿಕೊಂಡನು,
----
__ಒಂಬತ್ತನೆಯ ಅಧ್ಯಾಯ_ _
ಮಾಧವನು ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೆ ಮುಖಮಜ್ಜ
ನವಾದ್ದ ಬಳಿಕ ತಂದೆಗೆ ನಮಸ್ಕಾರವನ್ನು ಮಾಡಿ
ಆತನ ಆಶೀರ್ವಾದವನ್ನು ಪಡೆದು ಅನಂತರ ಇತರ ಕೆಲಸಗಳಿಗೆ
ಗಮನ ಕೊಡುತ್ತಿದ್ದನು.
ಆದಿನ ಬೆಳಿಗ್ಗೆ ಏಳುಗಂಟಿಯಾದರೂ ಮಾಧವನು ಶಂಕರ
ರಾಯನ ಕೊಠಡಿಗೆ ಬರಲಿಲ್ಲ. ಶಂಕರರಾಯನಿಗೆ ಮೊದಲು ಸ್ವಲ್ಪ
ಆಶ್ಚರ್ಯವೂ ಅನಂತರ ಕೊಂಚ ಭಯವೂ ಉಂಟಾಯಿತು. ಏಕಂ
ದರೆ, ಊರಲ್ಲಿಲ್ಲದಿರುವಾಗ ಮತ್ತು ಏಳಲಾರದಷ್ಟು ಅಸ್ವಸ್ಥನಾಗಿರು
ವಾಗ ಹೊರತು ಬೇರೆಯಾವಾಗಲೂ ಈ ಕರ್ತವ್ಯವನ್ನು ಮಾಧವನು
ತಪ್ಪುತ್ತಿರಲಿಲ್ಲ. ಶಂಕರರಾಯನು ಮಗನಿಗೇನೋ ವ್ಯಾಧಿಯು ಸಂ
ಭವಿಸಿರಬಹುದಿಂದು ಗಾಬರಿಗೊಂಡು ತಡಮಾಡದೆ ಮಾಧವನ ಕಿರು
ಮನೆಗೆ ಹೋದನು. ಬಾಗಿಲು ಮುಚ್ಚಿತ್ತು, ಅಗಳಿ ಹಾಕಿರಲಿಲ್ಲ.
ಒಳಗೆಹೋಗಿ ನೋಡಲಾಗಿ ಹಾಸಿಗೆಯು ಹಾಸಿದಹಾಗೆಯೆ ಇತ್ತು.
ಅದರ ಮೇಲೊಂದು ಕಾಗದದ ಲಕೋಟಿಯು ಬಿದ್ದಿತ್ತು. ಶಂಕರರಾ
ಯನು ಅದನ್ನು ಕೈಗೆ ತೆಗೆದುಕೊಂಡು ನೋಡಿದನು. ಮೇಲ್ವಿಳಾಸವು
ಮಾಧವನ ಕೈಯ ಅಕ್ಷರದಲ್ಲಿತ್ತು. ಶಂಕರನ ಕೈ ನಡುಗಲಾರಂಭಿ
ಸಿತು, ನಿಲ್ಲಲಾರದೆ ನೆಲದಮೇಲೆ ಕೂತುಕೊಂಡು ಪಟಪಟನೆ ಸಿಡಿಯು
-------------------------------------
೩೭
ತ್ತಿದ್ದ ತಲೆಯನ್ನು ಎಡಗೈಯಲ್ಲಿ ಭದ್ರವಾಗಿ. ಹಿಡಿದುಕೊಂಡನು.
ಮೈಯೆಲ್ಲಾ ಬೆವತುಹೋಗಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಸೇವ
ಕನೊಬ್ಬನು ಬೇಗನೆ ಗಂಗಾಬಾಯಿಯನ್ನು ಕರೆದುಕೊಂಡು ಬಂ
ದನು. ಆಕೆ ಬಂದು "ಏನು ಬಾವ! ಏನು ಸಮಾಚಾರ?“ ಎಂದುದಕ್ಕೆ
ಶಂಕರರಾಯನು ಯಾವ ಮಾತನ್ನೂ ಆಡದೆ ಕಾಗದವನ್ನು ತೋರಿಸಿ
ದನು. ಅವಳು ಲಕೋಟೆಯನ್ನು ತೆಗೆದುಕೊಂಡು ಬಿಚ್ಹಿ ನೋಡಿ,
"ಹೆದರಬೇಡಿ, ಬಾವ! ಜೀವಕ್ಕೇನು ಭಯವಿಲ್ಲ, ನಿಧಾನಮಾಡಿ
ಕೊಳ್ಳಿ" ಎಂದು ಹೇಳಿ ಶಂಕರರಾಯನನ್ನು ಸ್ಕಲ್ಪ ಸಮಾಧಾನಗೊ
ಳಿಸಿ ಕಾಗದವನ್ನೋದಿದಳು. ಅದರ ಅಭಿಪ್ರಾಯವೇನಂದರೆ:_
“ನಾನು ದೈವಸಾಕ್ಸಿಯಾಗಿ ಸುಭದ್ರೆಯನ್ನು ವರಿಸಿರುವುದ
ರಿಂದ ತಮ್ಮ ಶತ್ರು ಪಕ್ಷಕ್ಕೆ ಸೇರಿದವನಾದೆನು. ಆದುದರಿಂದ ತಮ್ಮ
ಗೃಹದಲ್ಲಿ ಒಂದುಕ್ಷಣವೂ ನನಗೆ ಬಾಧ್ಯತೆಯಿರುವುದಿಲ್ಲ.
ಅಲ್ಲದೆ ತಮ್ಮ ಅನುಮತಿಯಿಲ್ಲದೆ ನಾನು ಸ್ವತಂತ್ರಿಸಿದ ತಪ್ಪಿತಕ್ಕೂ
ಪ್ರಾಯಶ್ಚಿತ್ತವಾಗಲೇ ಬೇಕು. ಆದಕಾರಣ ನಾನು ಈಗ ಸದ್ಯಕ್ಕೆ
ದೇಶಾಂತರದಲ್ಲಿ ಅಜ್ಞಾತವಾಸವನ್ನು ಮಾಡುವೆನು.
ತಮ್ಮ ಆಜ್ಞೆಯನ್ನು ಮೀರಿಮನಸ್ಸಿ ಗೆವ್ಯಥೆಯನ್ನುಂಟುಮಾಡಿದು
ದಕ್ಕೆ ಕ್ಷಮೆಯನ್ನು ಕೇಳಿಕೊಳ್ಳು ತ್ತೇನೆ.ಆದರೆತಮ್ಮ ಆಜ್ಞೆಯಂತೆನಡೆದಿ
ದ್ದರೆ ಸರ್ವಸಾಕ್ಷಿಯಾದ ಭಗವಂತನಿಗೆ ಉತ್ತರವಾದಿಯಾಗುತ್ತಿದ್ದೆನು.
ಆದುದರಿಂದ ಕ್ಷಮಿಸಬೇಕೆಂದು ಪುನಃ ಪುನಃ ಬೇಡಿಕೊಳ್ಳುತ್ತೇನೆ.``
ಈ ವಿನಯಪೂರ್ವಕವಾದಮತ್ತು ಮನೋನಿಶ್ಚಯಪ್ರದರ್ಶಕ
ವಾದ ಒಕ್ಕಣೆಯನ್ನು ಫೇಳಿದಕೂಡಲೆ ಶಂಕರರಾಯನು ಗಟ್ಟಿಯಾಗಿ
ಅಳುತ್ತಾ ನೆಲದಮೇಲೆ ಹೊರಳಾಡಲು ಪ್ರಾರಂಭಿಸಿದನು. ಗಂಗಾ
ಬಾಯಿಗೂ ಕಣ್ಜಿನಲ್ಲಿ ನೀರುಸುರಿಯುತ್ತಿತ್ತು. ಆದರೂ ಸಮಾಧಾನ
ಮಾಡಿಕೊಂಡು "ಬಾವ ! ಇದೇನು ನಾಚಿಕೆಗೇಡು? ಅತ್ತುದರಿಂದ
----------------------------------
೩೮
ಪ್ರಯೋಜನವೇನು? ಸುಮ್ಮನೆ ಗಲಭೆಯಾಗುತ್ತದೆ.``ಎಂದಳು ಶಂಕರ
ರಾಯನು“ಅಯ್ಯೊ !ಅಯ್ಯೊ ನನ್ನ ಮಗನನ್ನು ಯಾವಾಗ ನೋಡುವೆ
ನಪ್ಪಾ ! ನನಗೇನು ದುರ್ಬುದ್ಧಿ ಬಂದಿತು? ಎಲ್ಲಿ ಅನ್ನ ವಿಲ್ಲದೆ ನಿಲ್ಲಲು
ಸ್ಥಳವಿಲ್ಲದೆ ಅಲೆಯುತ್ತಾನೊ? ಏನುಮಾಡಲಿ? ನನ್ನ ದ್ವೇಷಾಸೂಯೆ
ಗಳನ್ನು ಸುಡು! ನನ್ನ ಮಗನನ್ನು ಯಾರಾದರೂ ಕರದುಕೊಂಡು
ಬನ್ನಿ .ನೀವುಕೇಳಿದಷ್ಟು ಹಣವನ್ನು ಸುಭದ್ರೆಯನ್ನೂ
ಮನೆಗೆ ಅವಳೇ ನನ್ನ ಮಗಳು. ನನಗಿನ್ನು ಯಾರೂ ದಿಕ್ಕಿಲ್ಲ,
ನನ್ನ ಪ್ರಾಣವೆಲ್ಲಾ ಒಬ್ಬ ಮಗನಲ್ಲಿತ್ತು. ಅವನನ್ನು ನಾನಾಗಿಯೇ
ಕಾಡುಪಾಲು ಮಾಡಿದ ಹಾಗಾಯಿತು. ಇನ್ನು ನಾನೇಕೆ ಬದುಕಿರಲಿ"
ಎಂದು ಮುಂತಾಗಿ ಉನ್ಮತ್ತನಂತೆ ಹಲುಬಿದನು. ತಂದೆಗೆ ಸಚ್ಜರಿತ್ರ
ನಾಗಿಯೂ, ವಿಧೇಯನಾಗಿಯೂ, ವಿದ್ಯಾವಂತನಾಗಿಯೂ ಇರುವ
ಮಗನಿಗಿಂತಲೂ ಬೇರೆ ಭೂಷಣವೊಂದುಂಟೆ? ಶಂಕರರಾಯನಿಗೆ ಮಗನೆ
ಸರ್ವಸ್ವವೂಆಗಿದ್ದನು. ಅವನ ಸೌಖ್ಯಕ್ಕೆ ಕುಂದು ಬಂದೀತೆಂಬ ಭೀತಿ
ಯಿಂದ ಶಂಕರರಾಯನು ಎರಡನೆಯ ಮದುವೆಯನ್ನು ಸಹಮಾಡಿಕೊಳ್ಳ
ಲಿಲ್ಲ. ಮಾಧವನಿಗೆ ಸ್ವಲ್ಪ ಮೈಆಲಸ್ಯವುಂಟಾದರೂ ತಂದೆಗೆ ಈ
ಲೋಕವೇ ಮುಳುಗಿಹೋದಂತಾಗುವುದು . ಹೀಗಿರುವಲ್ಲಿ ಅವನು
ದೇಶಾಂತರ ಹೊರಟುಹೋದರೆ ಶಂಕರರಾಯನು ಜೀವಿಸುವ ಬಗೆಹೇಗೆ?
ಗಂಗಾಬಾಯಿಗೆ ಅವನನ್ನು ಸಮಾಧಾನಪಡಿ ಸುವುದು ಅತ್ಯಂತ
ಶ್ರಮಸಾಧ್ಯವಾದ ಕೆಲಸವಾಯಿತು. ಕೊನೆಗೆ, ಬಾವಾಜಿ! ಮಾಧ
ವನನ್ನು ಆಕರ್ಷಣೆ ಮಾಡುವ ಶಕ್ತಿಯೊಂದನ್ನು ನಾವು ಭದ್ರಪಡಿಸಿ
ಕೊಂಡಿದ್ದರೆ ಅವನೆಲ್ಲಿದ್ದರೂ ಬರುವನು. ಯೋಚನೆಮಾಡಬೇಡಿ.
ನಾನು ತಕ್ಕ ಸನ್ನಾಹವನ್ನು ಮಾಡುತ್ತೇನೆ`` ಎಂದಳು.
ಶಂಕರ---ಎಲ್ಲಿ! ಆಕಾಗದವನ್ನು ಕೊಡು. ಮದುವೆಯಾವಾಗ
ಆಯಿತು? ಅದೇನು ಸಮಾಚಾರ ನಿನಗೆಗೊತ್ತೊ ?
------------------------------------
೩೯
ಗಂಗಾ---ಮದುವೆಯಾಗಿಲ್ಲ. ಕಾಗದವನ್ನು ನೋಡಿ, 'ದೈವ
ಸಾಕ್ಷಿಯಾಗಿ ಸುಭದ್ರೆಯನ್ನು ವರಿಸಿರುವುದರಿಂದ`
ಎಂದಿದೆ.
ಗಂ ಗಾಬಾಯಿಯು ರಾಂಪುರಕ್ಟೆ ಮಾಧವನು ಬಂದಿದ್ದಾಗ್ಗೆ
ನಡೆದ ಸಂಗತಿಯೆಲ್ಲವನ್ನೂ ಸವಿಸ್ತಾರವಾಗಿ ಹೇಳಿದಳು.
ಶಂಕರರಾಯನು,,,ಆಹಾ! ಮೊದಲೇ ನನಗೆ ಈ ಸಂಗತಿಗಳೆ
ಲ್ಲವೂ ತಿಳಿಯದೇಹೋದುವಲ್ಲ. ನನ್ನ ಮಗನು ಈಶ್ವರಸಾಕ್ಟಿ ಯಾಗಿ
ಮಾಡಿಕೊಂಡಿರುವುದು ನನ್ನ ಹುಚ್ಚುತನಕ್ಕೋಸ್ಥ್ರರ ಬಿಡು
ವನೆ? ಶಹಬಾಸ್ !ಮಗನೆ! ನೀನು ಹರಿಶ್ಪಂದ್ರನ ವಂಶದಲ್ಲಿ ಹುಟ್ಟಲು
ತಕ್ವ್ರವನು, ಅಂಥಾ ಮಗನನ್ನು ತಿರಿಗಿ ಕಾಣುವೆನೆ?" ಎಂದು ನಾನಾ
ವಿಧವಾಗಿ ವರ್ಣಿಸಿ ಅಳತೊಡಗಿದನು.
ಗಂಗಾಬಾಯಿಯು "ಸಮಾಧಾನ ಹೇಳಿದಷ್ಟೂ ದುಃಖವು
ಹೆಚ್ಚುವುದು. ತನ್ನೊಳಗೆ ತಾನೇ ಶಾಂತವಾಗಲಿ``ಎಂದಂದುಕೊಂಡು
ಬೇರೆ ಕೆಲಸಕ್ಕೆ ಹೊರಟುಹೋದಳು.
ಆದಿನ ಭಾನುವಾರವಾದುದರಿಂದ ಕೋರ್ಟಿನ ಕೆಲಸವಿರಲಿಲ್ಲ.
ಶಂಕರರಾಯನ ಸರಕಾರದ ಪಕ್ಷಯದವಕೀಲನನ್ನು ಮನೆಗೆಕರೆಸಿಕೊಂಡು
ತನಗೆವ್ಯಾಜ್ಯವನ್ನು ಮುಂದಕ್ಕೆ ನಡೆಸುವುದರಲ್ಲಿ ಸಮ್ಮತಿಯಿಲ್ಲವೆಂದೂ
ಹೇಗಾದರೂಮಾಡಿ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಯತ್ನ
ಮಾಡಬೇಕೆಂದೂ ಹೇಳಿದನು. ಅದಕ್ಕೆ ವಕೀಲನು ಆಶ್ಲ ರ್ಯಪಟ್ಟು
"ಇದೆ(ನು ಜಹಗೀರ್ದಾರರೆ, ಹೀಗೆ ಅಪ್ಷಣೆ ಕೊಡಿಸೋಣವಾಗುತ್ತದೆ?
ಅಂತಹ ಘಾತುಕನನ್ನು ಬಿಡುವುದುಂಟಿ? " ಎಂದು ಕೇಳಿದನು.
ಶಂಕರರಾಯರು, “ಸ್ಕಾಮಿ! ಅವನ ಹೊಟ್ಟೆಯುರಿ ತಗಲಿದುದರಿಂದಲೆ
ನನಗೆ ಮಗನ ವಿಯೋಗವುಂಟಾಗಿರಬಹುದು. ಅದುದರಿಂದ ಅವನಿಗೆ
ಶಿಕ್ಷೆಮಾಡಿಸುವುದು ನನಗೆ, ಇಷ್ಟವಿಲ್ಲ. ದಯವಿಟ್ಟು ಹೀಗಾದರೂ
---------------------------------
೪೦
ವ್ಯಾ ಜ್ಯವನ್ನು ಸಾಕುಮಾಡೋಣವಾಗಲಿ`` ಎಂದನು. ವಕೀಲನು,
“ಸರಕಾರದವರು ವ್ಯಾಜ್ಯವನ್ನು ಪ್ರಾರಂಭಿಸಿದ ಮೇಲೆ ಅದನ್ನು ಬಿಡು
ವುದಕ್ಕೆಂದಿಗೊ ಆಗುವುದಿಲ್ಲ, ಸಾಕ್ಷಿಗಳ ಹೇಳಿಕೆಯಿಂದೇನಾದರೂ
ಗುಣವಾದರೆಆಗಬಹುದು``ಎಂದು ತಿಳಿಸಿ ಶಂಕರರಾಯನಿಗುಂಟಾದ
ಮನೋವ್ಯಥೆಗೋಸ್ಕ್ರರ ಬಹಳ ಕನಿಕರಪಟ್ಟು ಹೊರಟುಹೋದನು.
--೦--
ಹ ತ್ತ ನೆ ಯ ಅ ಧ್ಯಾ ಯ
ರಾಮರಾಯನು ಪ್ರತಿನಿತ್ಯವೂ ಶಂಕರರಾಯನ ಕಾ ಗದವನ್ನೆ ನಿ ರೀ
ಕ್ಷಿಸುತ್ತಿದ್ದನು. ಮಾಧವನು ರಾಂಪುರದಿಂದ ಪುನಹೆಗೆ
ಹೋದಮೇಲೆ ೧೦-೧೨ ದಿನಗಳವರೆಗೂ. ನೋಡಿದರೂ ಉತ್ತರ
ಬರಲಿಲ್ಲ. ಅನಂತರ ಒಂದು ತಗಾದೆಯ ಕಾಗದವನ್ನು. ಬರೆದು ಟಪ್ಪಾ
ಲಿಗೆ ಹಾಕಿದಮೇಳೆ ಏನೋ ಒಂದು ಯೋಚನೆಯುತೋರಿತಾನೂ
ಅದೇದಿನದ ಟಪ್ಪಾಲುಬಂಡಿಯಲ್ಲಿ ` ಕೂತುಕೊಂಡು ಫುನಹೆಗೆ ಬಂ
ದನು. ಆದರೆ ಶಂಕರರಾಯನ ಮನೆಗೆ ಹೋಗಲಿಲ್ಲ. ಒಬ್ಬ ಸ್ನೇಹಿತನ
ಮನೆಯಲ್ಲಿಳಿದುಕೊಂಡು ಸಮಾಚಾರವನ್ನು ಗುಟ್ಟಾಗಿ ಮೊದಲು
ತಿಳಿದು ಅನಂತರ ಶಂಕರರಾಯನನ್ನು ಕಾಣಬೇಕಂದು ನಿಶ್ಲಯಿಸಿದನು.
ಮಾರಣೆಯದಿನ ಕಂಕರರಾಯನ ಮನೆಯಲ್ಲಿ ನಡೆದ ಸಮಾಚಾರವೆ
ಲ್ಲವೂ ಮನೆಯ ಆಳುಗಳಮೂಲಕ ಹೊರಗೆ ಬಂದುಬಿಟ್ಟಿತು. ರಾಮ
ರಾಯನು ತನ್ನ ಕಿವಿಯನ್ನು ತಾನು ನಂಬಲಾರದೆ ಹೋದನು. . ಅವ
ನಿಗೆ ತನಗಿಂತಲೂ ಭಾಗ್ಯವಂತರಾರೂ ಇಲ್ಲದುದರಿಂದ. ಶಂಕರರಾ
ಯನು ತನ್ನನ್ನು ಬಿಟ್ಟು ಬೇರೆ ಎಲ್ಲಿಯೂ ಬಂಧುತ್ವ ಮಾಡಲಾರನೆಂದು
ಚೆನ್ನಾ ಗಿ ನಂಬಿಕೆಯಿತ್ತು. ಈಗ ನೋಡಿದುದರಲ್ಲಿ . ಆ ಅಯೋಗ್ಯ
-------------------------------------
೪೧
ನಾದ ಹುಡುಗನಿಂದ ಎಲ್ಲವೂ ಕೆಟ್ಟುಹೋಯಿತು. “ ಇಂಗ್ಸೀಷ್
ಕಾದಂಬರಿಗಳನ್ನು ಓದಿ ಹುಡುಗರಿಲ್ಲರೂ ಪೂರ್ವಾಚಾರ, ಘನತೆ,
ಗಾಂಭೀರ್ಯ, ಇವುಗಳೆಲ್ಲವನ್ನೂ ಮರೆತುಬಿಟ್ಟರು. ಶ್ರೀಮಂತನ ಮಗ
ಳನ್ನು ಬಿಟ್ಟು ಹುಟ್ಟುದರಿದ್ರನಾದ ಪುರೋಹಿತನ ಮಗಳನ್ನು ವರಿಸಿ
ದನೆ ? ಇದೇನು ಕಾಲಮಹಿಮೆಯೊ ? ಇಲ್ಲವೆ. ಆ ಹುಡುಗನಿಗೆ
ಬುದ್ಧಿ ಸ್ಥಿಮಿತವಿಲ್ಲವೊ? ಆ ತಿರುಕನ ಮಗಳ ರೂಪವನ್ನು ನೋಡಿ
ಮರುಳಾದನೆ ? ಆಹಾ ! ಏನುರೂಪ ! ಆ ಹರುಕುಸೀರೆಯನ್ನುಟ್ಟು
ಒಂದು ಚಿನ್ನ ದ ಕರ್ಣಾಭರಣಕ್ಳೂ ಗತಿಯಿಲ್ಲದೆ ಇರುವ ಹುಡುಗಿ
ಗೂ ನನ್ನ ಮಗಳಿಗೂ ಸಾಮ್ಯವೆ ? ಅವನಿಗೆಯಾರೋ ಮರುಳಿಕ್ಕಿರ
ಬೇಕು, ಇಲ್ಲದಿದ್ದರೆ ಅವನೆಂದಿಗೂ ನನ್ನ ಮಗಳನ್ನು ಬಿಟ್ಟು ಸುಭ
ದ್ರೆಯನ್ನು ಒಪ್ಪುತ್ತಿರಲಿಲ್ಲ. " ಎಂದು. ರಾಮರಾಯನು ನಾನಾ
ವಿಧವಾಗಿ ತರ್ಕವಿತರ್ಕಗಳನ್ನು ಮಾಡಿ ಕೊನೆಗೆ ಹೀಗೆಂದು ನಿಶ್ಚ
ಯಿನಿದನು :-- ಇದಕ್ವೆ ಲ್ಲಾ ಕಾರಣವಾದವಳಾರು ? ಆ ತಿರುಕನ
ಮಗಳಲ್ಲವೆ ? ಅವಳು ಕಣ್ಣಿಗೆ ಕಾಣಿಸದಿದ್ದರೆ ನನ್ನ ಮಗಳಿಗೆ, ಜಹ
ಗೀರ್ದಾ ರನ ಹೆಂಡತಿಯಾಗುವ ಅದೃಷ್ಟವು ತಪ್ಪುತ್ತಿತ್ತೆ? ಇಲ್ಲ. ಆದು
ದರಿಂದ ಆ ಗೋಮುಖವ್ಯಾಘ್ರಕ್ಕೆ ತಕ್ಕ ಪ್ರತೀಕಾರವನ್ನು ಮಾಡ
ಬೇಕು. ಮಾಧವರಾಯನು ತಂದೆಯ ಮಾತನ್ನೂ ಉಲ್ಲಂಘಿಸಿ ಮನೆ
ಬಿಬ್ಬು ಹೋದನಲ್ಲನೆ? ಯಾರಿಗೋಸ್ಥ್ರರ ? ಇರಲಿ! ಅವಳು ಅವನಿಗೆ
ಎಂದೆಂದಿಗೂ ದೊರಕದಹಾಗೆಮಾಡದಿದ್ದರೆ ನನ್ನ ಹೆಸರು ರಾಮರಾ
ಯನೇ ಅಲ್ಲ. ಈಕ್ಷಣವೆ ಅದಕ್ಕೆ ತಕ್ಕ ಸನ್ನಾಹವನ್ನು ನಡೆಸುವೆನು."
ರಾಮರಾಯನು ಕುವಿದ್ಯೆಯಲ್ಲಿ ಬಹುನಿಪುಣ. ಅವನ ತಂದೆ
ಯು ಕೇವಲ ದರಿದ್ರನಾಗಿದ್ದನು. ರಾಮರಾಯನ ಐಶ್ವರ್ಯವೆಲ್ಲವೂ
ಅವನೇ ಸ್ವಂತವಾಗಿ ಆರ್ಜಿಸಿದುದು. ಮೋಸ, ತಂತ್ರ, ಕಾಪಟ್ಯ,
ಈ ಮೊದಲಾದ ಕುಮಾರ್ಗಗಳಲ್ಲಿ ಅವನಿಗೆ ತುಂಬಾ ಅನುಭವ.
------------------------------------
೪೨
ಇವುಗಳಿಂದಲೇ ಅವನು ದೊಡ್ಡ ಒಕ್ಕಲಾದವನೆಂದು ಜನಗಳೆಲ್ಲರೂ
ಅಡಿಕೊಳ್ಳುತ್ತಿದ್ದರು. ಆದರೆ ದ್ರವ್ಯದಮುಂದೆ ಯಾರಮಾತು ತಾನೆ
ಏನು ಪ್ರಯೋಜನಕ್ಕೆ ಬರು ವುದು ? ರಾಮರಾಯನು ಸ್ವಭಾವತಃ
ಬುದ್ಧಿ ಶಾಲಿ, ಅರ್ಜಿಸಿದುದನ್ನಲ್ಲಾ ಚೆನ್ನಾ ಗಿ ಕಾಪಾಡಿ ವೃದ್ಧಿ ಪಡಿ
ಸುತ್ತಿದ್ದನು. ಅಲ್ಲದೆ ಹೊಸಹೊಸ ತಂತ್ರಗಳನ್ನು ಏರ್ಪಡಿಸಿ ಒಬ್ಬ
ರಮೇಲೊಬ್ಬರಿಗೆ ವ್ಯಾಜ್ಯವನ್ನು ತಂದುಹಾಕಿ ತಾನುವಾತ್ರ ಬೇರೆ
ಇದ್ದು ಕೊಂಡು ಉಭಯ ಪಕ್ಷದಿಂದಲೂ ಪ್ರಯೋಜನವನ್ನು ಹೊಂ
ಡುತ್ತಿದ್ದನು. ಇಂತಹ ರಾಮುರಾಯನಿಗೆ ಈಗಿನ ಸಂದಭದಲ್ಲಿ ಹೇಗೆ
ನಡೆಯಬೇಕೆಂದು ನಿರ್ಧರಿಸುವುದು ಸ್ವಲ್ಪವೂ ಕಷ್ಟ್ರವಾದ ಕಾರ್ಯವಾ
ಗಿರಲಿಲ್ಲ. ಅತ್ಮಾ ರಾಮನ ಮೊಕದ್ದಮೆಯ ವಿಚಾರವು ಅವನಿ ಗೆ ಚನ್ನಾಗಿ
ತಿಳಿದಿತ್ತು. ಆ ದಿನವೆ ಜೈಲಿನಲ್ಲಿದ್ದ ಆತ್ಮಾರಾಮನನ್ನು ನೋಡಲು
ಅಪ್ಪಣೆ ಚೀಟಿಯನ್ನು ಪಡೆದು ಅವನನ್ನು ಕಂಡು ಕಾರಣಾಂತರ
ದಿಂದ ಅವನಿಗೆ ಸಹಾಯಮಾಡಲು ತಾನು ಬಂದಿರುವರದಾಗಿಯೂ
ಅವನು ಸ್ವಲ್ಪವೂ ಹೆದರಬೇಕಾದುದಿಲ್ಲವೆಂದೂತಿಳಿಸಿದನು. ತನಗೆನಿರಂ
ತರ ಕಾರಾಗೃಹವಾಸವೇ ಹಣೆಯಲ್ಲಿ ಬರೆದಿರುವುದೆಂದು ತಿಳಿದುಕೊಂಡಿ
ದ್ದ ಆತ್ಮಾ ರಾಮನಿಗೆ ರಾಮರಾಯನ ವಾಗ್ಜಾನವು ಸಾಯುವ ರೋಗಿ
ಗೆ ಅಮೃತವನ್ನು ಕುಡಿಸಿದಹಾಗಾಯಿತು. ಆತ್ಮಾ ರಾಮನಿಗೆ ವ್ಯಾಜ್ಯ
ವನ್ನು ಗೆಲ್ಲುವೆನೆಂಬ ಆಶೆಯು ಲೇಶಮಾತ್ರವೂ ಇರಲಿಲ್ಲ.ಅವನು "ಪಾಪ
ರ್" ಆದುದರಿಂದ ಸರಕಾರದವರೇ ಅವನಿಗೋಸ್ಥರ ಒಬ್ಬ ವಕೀಲನ
ನ್ನು ಗೊತ್ತುಮಾಡಿಟ್ಬಿದ್ದರು. ಆ ವಕೀಲನಿಗೆ ವ್ಯಾಜ್ಯವು ಗೆದ್ದರೂ,
ಸೋತರೂ, ಎರಡೂ ಒಂದೇ ! ಅವನ "ರುಸುಂ" ಮಾತ್ರ ಅವನಿಗೆ
ತಪ್ಪುತ್ತಿರಲಿಲ್ಲ. ಎದುರು ಕಕ್ಷಿಯಾದರೊ ಬಹುಬಲವತ್ತಾದುದು. ಶಂಕ
ರರಾಯನ ಮಾತಿನಲ್ಲಿ ಗವರ್ನರ್ ಸಾಹೇಬರು, ಜಡ್ದಿಗಳು, ಕಲೆಕ್ಬರು
ಇವರೆಲ್ಲರಿಗೂ ಬಹಳಗೌರವ, ಆತನೆ ಮೊದಲನೆಯ ಸಾಕ್ಷಿ. ಅಪರಾಧಿ
------------------------------------
೪೩
ಸ್ಮಾನದಲ್ಲಿ ನಿಂತಿರುವ ಆತ್ಮಾ ರಾಮನನ್ನು ಶಂಕರರಾಯನು ವಿಚಾ
ರಣೆಯ ಕಾಲದಲ್ಲಿ ಒಂದೆರಡಾವರ್ತಿಕ್ರೂರವಾಗಿ ನೋಡಿದಮಾತ್ರ
ದಿಂದಲೆ ಆತ್ಮಾ ರಾಮನಿಗೆ ಕೈಕಾಲು ನಡುಗಲಾರಂಭಿಸಿ ಮುಖವು
ಬೆಳ್ಳಗಾಗಿಹೋಯಿತು. ಇದನ್ನು,"ಜಡ್ದಿ``ಯು ನೋಡಿ ತನ್ನಷ್ಟಕ್ಕೆ ತಾನೆ
ನಕ್ಕನು. ಇದರಿಂದ ಅವನಿ ಗೆ, ಮತ್ತಷ್ಟು ಭಯವುಂಟಾಗಿ ನಿಲ್ಲಲಾರದೆ
ಕೂತುಬಿಟ್ಟನು. ಹತ್ತಿರದಲ್ಲೆ ಇದ್ದ. ಪೋಲೀಸಿನವನು ಕೂಡಲೆ
ತೋಳನ್ನು ಹಿಡಿದು ಮೇಲಕ್ಕೆ ಎಬ್ಬಿಸಿದನು. ಪುನಃ . ಅವನು ಕೂತು
ಕೊಳ್ಳಲ್ಲ ಪ್ರಯತ್ನ ಮಾಡಿದುದಕ್ಕೆ ಪೋಲೀಸಿನವನ್ನು. ಬಿಡಲಿಲ್ಲ,
ಜಡ್ಜಿಯು ಕನಿಕರದಿಂದ ಕೈಯಾಡಿಸಿ ಪೋಲೀಸಿನವನನ್ನು ಸುಮ್ಮ
ನಿರುವಂತೆ ಸೂಚಿಸಿದನು. ಕಾನ್‌ಸ್ಟೇಬಿಲನು ಸುಮ್ಮನಾದನು.
ಈ ಸಂಗತಿಗಳೆಲ್ಲವೂ ಆತ್ಮಾ ರಾಮನ ನೆನಪಿನಲ್ಲಿ ಹೊಸದಾಗಿ
ದ್ದುದರಿಂದ ಅವನು ತನಗೆಂದಿಗೂ ವಿಮೋಚನೆಯಿಲ್ಲವೆಂದು ದೃಢವಾಗಿ
ತಿಳಿದಿದ್ದನು. ಇಂತಹ ಸ್ಥಿತಿಯಲ್ಲಿ ಅಪ್ರಾರ್ಥಿತನಾಗಿ ರಾಮರಾಯನು
ಸಹಾಯಕ್ಕೆ ಬಂದುದರಿಂದ ಆತ್ಮಾ ರಾಮನಿಗೆ ಎಷ್ಟುಸಂತೋಷವುಂ
ಟಾಗಿರಬಹುದೋ ವಾಚಕರೇ ಊಹಿಸಬಹುದು. ಅವನುರಾಮರಾ
ಯನಿಗೆ ದಂಡಪ್ರಣಾಮವನ್ನು ಮಾಡಿ, .ನೀವೇ ನನ್ನ ಭಾಗದದೇವರು.
ನಾನು ಪ್ರಾಣವಿರುವವರೆಗೂ ತಮ್ಮ ಉಪಕಾರವನ್ನು ಮರೆಯೆನು.
ಅದರೆ ಜಹಗೀರ್ದಾರರು ಎದುರು ಕಕ್ಷಿಯಲ್ಲಿರುವಾಗ್ಗೆ ನಮ್ಮ ವ್ಯಾಜ್ಯವು
ಹೀಗೆ ಗೆಲ್ಲುವುದೊ ತಿಳಿಯದು`` ಎಂದನು. ಅದಕ್ಳೆ ರಾಮರಾಯ
ನು "ಅವಿಷಯದಲ್ಲಿ ಯೋಚನೆಬೇಡ. ಶಂಕರರಾಯರ ಮಗನು
ನಿನ್ನೆ ರಾತ್ರೆ ದೇಶಾಂತರ ಹೊರಟುಹೋದನಂತೆ. ಅದರಿಂದ ಅವರಿಗೆ
ಬಹಳ ವ್ಯಥೆಯುಂಟಾಗಿದೆ. ಪ್ರಾಯಶಃ ಈ ವ್ಯಾಜ್ಯಕ್ಕೆ ಗಮನ
ಕೊಡಲಾರರು" ಎಂದು ಧೈರ್ಯಹೇಳಿ ಅಲ್ಲಿಂದ ಪುನಹೆಯಲ್ಲೆಲ್ಲಾ
----------------------------------
44
ಪ್ರಸಿದ್ಬನಾಗಿದ್ದ “ಅಡ್ವೊಕೇಟ್“ ನನ್ನು ಈ ವ್ಯಾಜ್ಯವನ್ನು ನಡೆ
ಸಲು. ಗೊತ್ತುಮಾಡಿ, ತಾನೆ ಅದಕ್ಕೆ ಮುಖಂಡನಾಗಿ ನಿಂತನು.
----
-ಹ ನ್ನೊಂ ದ ನೆ ಯ ಅ ಧ್ಯಾ ಯ-
ಅದೇದಿನ ರಾತ್ರಿ ಸುಮಾರು ೮ ಗಂಟೆಯ ಸಮುಯದಲ್ಲಿ ವಿಶ್ವ
ನಾಥನು ಹಜಾರದಮೇಲಿ ದೀಪದಿದುರಿಗೆ ಕುಳಿತುಕೊಂಡು
ರಾಮಾಯಣದ ಪುಸ್ತಕದ ಪುಟಗಳನ್ನು ಮಗುಚಿ ಹಾಕುತ್ತಾ ಮಧ್ಯೆ
ಮಧ್ಯೆ ಕಿವಿಕೊಟ್ಟುಕೇಳುತ್ತ ನಿಟ್ಟುಸಿ ರುಬಿಡುತ್ತಿದ್ದನು. ಹಾಗೆಯೇ
ಏನನ್ನೋ ಯೋಜಿಸಿ ಪುಸ್ತಕವನ್ನು ಮುಚ್ಚಿಕೊಂಡು ಒಂದು ಪುಟ
ವನ್ನು ತೆರದು ಪ್ರಶ್ನೆಯನ್ನು ನೋಡಿದನು. ಕೂಡಲೆ ಮುಖವು ವಿಕಾಸ
ವಾಯಿತು. . ಸರಿಸರಿ ಈಗಲೆ ಬರಬೇಕು`` ಎಂದಂದುಕೊಂಡನು. ಆಗ್ಗೆ
ಸರಿಯಾಗಿ ಬೀದಿಯಬಾಗಿಲನ್ನು ತಟ್ಟಿದ ಶಬ್ಧ ವಾಯಿತು. ವಿಶ್ವ
ನಾಥನು ಝಗ್ಗನೆ ಎದ್ದು "ಅಗೋ ಆ ಪ್ರಶ್ನೆ ಸುಳ್ಳಲ್ಲ. ಕನಸೂ ಸುಳ್ಳ
ಲ್ಲ".. ಎಂದಂದುಕೊಂಡು ಬಾಗಿಲುತೆರೆದು "ಒಳಗೆ ದಯಮಾಡಿ
ಸ್ಕಾಮಿ“ ಎಂದನು. ಕೂಡಲೆ ಒಬ್ಬ ಸುಂದರಾಕಾರನಾದ ಯುವಾ
ಪುರುಷನು ಮನೆಯೊಳಗೆ ಪ್ರವೇಶಮಾಡಿದನು. ಅವನನ್ನು ಕರೆದು
ಕೊಂಡುಹೋಗಿ ಚಾಪೆಯಮೇಲೆ ಕಳ್ಳಿರಿಸಿ, “ ತಮ್ಮ್ರನ್ನು ಕಂಡು
ನಾನು ಧನ್ಯನಾದೆನು. ನನಗೆ ನಿನ್ನೆಯರಾತ್ರಿ ಕನಸಿನಲ್ಲಿಯೆ ದೇವರ
ಅಪ್ಪಣೆಯಾಗಿತ್ತು` ಎಂದನು. ಅಗಂತುಕನು ವಿಶ್ವನಾಥನ ಮಾತಿಗೆ
ಸ್ನಲ್ಪ ಆಶ್ಚರ್ಯಪಟ್ಟು *ಸ್ನಾಮಿ, ನಾನು ಯಾರೆಂಬುದನ್ನು ನೀವು
ಬಲ್ಲಿರೆಂದು. ತೋರುತ್ಕದೆ`? ಎಂದನು.
---------------------------------
೪೨
ವಿಶ್ವ__ಇಲ್ಲ. ಆದರೆ ತಾವು ಕನ್ಯಾರ್ಥಿಯಾಗಿ ಬಂದಿರುವಿ
ರೆಂಬುದು ಮಾತ್ರ ತಿಳಿಯುವುದು.
ಆಗಂತುಕ__-ಅದುಹೇಗೆ ?
ವಿಶ್ವ--ಮೊದಲೇ ಹೇಳಿದೆನಷ್ಟೆ, ನಮ್ಮ ಕುಲದೈವವಾದ
ಅಂಬಾಭವಾನಿಯು ಸ್ವಪ್ನ ದಲ್ಲಿ ಬಂದು " ನಾಳೆ
ಸಾಯಂಕಾಲವಾದ ಎರಡುಗಳಿಗೆಗೆ ಸರಿಯಾಗಿ ನಿನ್ನ
ಮಗಳಿಗನು ರೂಪನಾದ ತರುಣನು ಕನ್ಯಾರ್ಥಿಯಾಗಿ
ಬರುವನು. ನೀನು ಯೋಜಚನೆಮಾಡಬೇಡ`` ಎಂದು
ಹೇಳಿ ಹೋದಳು. ಸಾಯಂಕಾಲವಾದಾಗಿನಿಂದ
ತಮ್ಮ ನಿರೀಕ್ಷಣೆಯಲ್ಲಿಯೆ ಕೂತಿದ್ದೇನೆ:
ಅಗಂ---ಹಾಗಾದರೆ ನನಗೆ ತಮ್ಮ ಮಗಳನ್ನು ಲಗ್ನ ಮಾಡಿ
ಕೊಡುವಿರಾ? ನನ್ನ ಕುಲಗೋತ್ರ ತಿಳಿಯಬೇಕಾದು
ದಿಲ್ಲವೆ?
ವಿಶ್ವ--ಕುಲವನ್ನು ತಮ್ಮ ಮುಖವು ಹೇಳುವುದು .
ತಾವು ಬೇರೆ ಗೋತ್ರದವರಾಗದಿದ್ದರೆ ಅಂಬಾಭವಾ
ನಿಯು ಸೂಚನೆಯನ್ನೆ ಕೊಡುತ್ತಿರಲಿಲ್ಲ. ನಾನು
ಲಗ್ನ ವತಾಡಿಕೊಡು --
( ಸುಭದ್ರೆಯುಯಾವುದೊ ಕೆಲಸದನಿಮಿತ್ತವಾಗಿ ಹಜಾರದ ಮೇಲಕ್ಕೆ
ಬಂದವಳು ತರುಣನನ್ನು ನೋಡಿ ಚಮುಕಿತಳಾಗಿ ಕೈಯಲ್ಲಿದ್ದ ಕಂ
ಚಿನಪಂಚಪಾತ್ರೆಯನ್ನು ಕೆಳಗೆಹಾಕಿ`ಬಿಟ್ಸ್ಗಳು. ಅದು ಹಜಾರದಳಲ್ಲಿನ ಮೇಲೆಶಬ್ದಮಾಡಿಕೊಂಡುಬಿದ್ದುಉರುಳಿಕೊಂಡುಹೋಯಿತು. )
ವಿಶ್ವ--ಏಕಮ್ಮಾ ! ಸುಭದ್ರೆ ! ನೆಲವನ್ನು ನೋಡಿಕೊಂಡು
ನಡೆಯಬಾರದೆ? (ಸುಭದೆ, ಹೊರಟು ಹೋದಳು. )
ಇವಳೇಸ್ಫಾಮಿ ನನ್ನ ಮಗಳು. ನಾನು ಲಗ್ನ ಮಾಡಿ
-----------------------------------
೪೬
ಕೊಡುವೆನೊ ಇಲ್ಲವೂ ಎಂಬುದಕ್ಕೆ__-ತಾವು ಬರು
ವುದಕ್ಕೆ ಮುಂಚೆಯೆ ಸಕಲ ಸಲಕರಣೆಯೊಂದಿಗೆ
ಪಂಡರಾಪುರಕ್ವೆ ಈ ರಾತ್ರಿಯ ಹೊರಡಲು ಗಾಡಿ
ಗಳನ್ನೂ ಸಿದ್ದ ಮಾಡಿದ್ದೇನೆ, ದಯವಿದ್ದರೆ
ನಾಳೆಯೆ ಶ್ರೀಪಾಂಡುರಂಗನ ಸನ್ನಿ ಧಿಯಲ್ಲಿ ವಿವಾ
ಹವು ನಡೆಯುವುದು. ಆ ನಾನು ಇಷ್ಟುಸುಲಭವಾಗಿ
ಕಾರ್ಯವು ನೆರವೇರುವುದೆಂದು ನೆನಸಿರಲಿಲ್ಲ. ದೇವರಸಹಾಯವಿದ್ದು
ದರಿಂದ ಆಯಿತು, "ಶುಭಸ್ಯ ಶೀಘ್ರಂ. "
ಮಾತು ಅಲ್ಲಿಗೆ ನಿಂತಿತು. ಆಗಂತುಕನು ೨೦ ವರ್ಷ ಗಳಿಗೆ
ಮೀರದ ವಯಸ್ಸುಳ್ಳವನಾಗಿಯೂ ಅತಿಶಯ ತೇಜಸ್ವಿಯಾಗಿಯೂ
ಇದ್ದನು. "ಇಂತಹ ವರನು ತಾನಾಗಿಯೆ ಒಂದುದು ಹೇಗೆ? ಇವ
ನನ್ನು ನೋಡಿದರೆ ಸಾಮಾನ್ಯಪುರುಷನಂತೆ ತೋರುವುದಿಲ್ಲ. ಇವ
ನಿಗೆ ಇನ್ನೆಲ್ಲಿಯೂ ಕನ್ಯೆ ಸಿಕ್ಕಲಿಲ್ಲವೆ? ಇಲ್ಲದೆ ಇವನೇ ಏತಕ್ಕೆ ಕನ್ಯಾ
ರ್ಥಿಯಾಗಿ ಬಂದನು? ತಂದೆ ಯಿಲ್ಲವೊ? ಅಥವಾ ಜಾತಿಯಲ್ಲೇನಾ
ದರೂ ಕಡಿಮೆಯೊ ? ಇಲ್ಲವೆ, ಅಂಬಾಭವಾನಿಯ ಅಪ್ಪಣೆಯು ಅವ
ನಿಗೂ ಆದುದರಿಂದ ನೆಟ್ಟಗೆ ಇಲ್ಲಿಗೆ ಹೊರಟುಬಂದನೊ?`` ಹೀಗೆ
ನಾನಾ ವಿಧವಾಗಿ ಅನುಮಾನಗಳು ವಿಶ್ನನಾಥನಿಗೆ ತೋರಿ ಬಂ
ದಾಗ್ಗೂ ಯಾವ ಪ್ರಶ್ನೆ ಯನ್ನಾ ದರೂ ಕೇಳಿದರೆ. ತರುಣನಿಗೆ ಅಸ
ಮಾಧಾನ ಉಂಟಾಗಿ "ನಿಮ್ಮ ಮಗಳೇ ಬೇಡ“? ಎಂದು. ಹೇಳಿ
ಹೊರಟುಹೋದಾನಂಬ ಭೀತಿಯಿಂದ ಆ ಸಮಾಚಾರವನ್ನೆ ಎತ್ತದೆ
ಸುಮ್ಮನಿದ್ದನು.
ಭೋಜನವಾದ ಅನಂತರದಲ್ಲಿಎಲ್ಲರೂರಾಂಫುರವನ್ನು ಬಿಟ್ಟು
ಹೊರಟು ಪಂಡರಾ ಫುರವನ್ನು ಸೇರಿದರು, ಅಲ್ಲಿ ಯಥಾವಿಧಿಯಾಗಿ
------------------------------------
47
ವಿವಾಹವು ನಡೆಯಿತು. _ ವರನು ತನ್ನ ಹೆಸರನ್ನು "ಲಕ್ಷ್ಮೀಪತಿ"
ಯೆಂದೂ, ತಂದೆಯ ಹೆಸರನ್ನು 'ಮಹಾದೇವನೆಂದೂ ಹೇಳಿದನು.
ರಮಾಬಾಯಿಗೆ, ದೂರುವುದಕ್ಕೆ ಬೀಗಿತಿಯರು ಇಲ್ಲದೆ ಇದ್ದುದರಿಂ
ದಲೂ,ತನ್ನ ಕಡೆಯನೆಂಟರೊಬ್ಬರಾದರೂ ಬಾರದೆ ಲಗ್ನವುನೆರವೇರಿದು
ದರಿಂದಲೂ ಮನಸ್ಸಿನಲ್ಲಿ ಬಹಳ ಅಸಮಾಧಾನವಾಗಿತ್ತು. ಅದರೂ
ಅದನ್ನು ಹೊರಗೆ ಹೇಳದೆ ಬಹಳ ಉಲ್ಲಾಸವನ್ನು ತೋರ್ಪಡಿಸುತ್ತಾ,
ಆಊರಿನ ಮುತ್ತೈದೆಯರಲ್ಲಿ ನಾಲ್ಕಾರು ಮಂದಿಯನ್ನು ಆರತಿ
ಉರಟಣೆ ಬಾಗಿಲುತಡೆಯುವುದು, ಮುಂತಾದ ಹೆಂಗಸರ ಶಾಸ್ತ್ರಗಳ
ನ್ನೊಂದನ್ನೂ ಬಿಡದಂತೆ ನಡೆಸಿದಳು. ಊಟದಕಾಲದಲ್ಲಿ ಅವರಲ್ಲಿಯೆ:
ಇಬ್ಬರನ್ನು ಎದುರುಪಕ್ಷದವರನ್ನಾಗಿ ಏರ್ಪಡಿಸಿ ತಾನು ಕಲಿತಿದ್ದ
ಬೀಗರ ಹಾಡು ಗಳನ್ನೆ ಲ್ಲಾ ಹೇಳಿ. ಮುಗಿಸಿದಳು . ಹೀಗೆ, ವಿಶೇ
ಷವಾಗಿ ಜನಗಳ ಕೂಟವಿಲ್ಲದಿದ್ದರೂ, ಮದುವೆಯು ಸಂಭ್ರಮ
ವಾಗಿಯೆಜರುಗಿತು. ಇದೆಲ್ಲವೂ ಮುಗಿದಮೇಲೆ ಒಂದುದಿನ ಲಕ್ಷ್ಮೀ
ಪತಿಯು ತಾನು ಒಂದುಕಾರ್ಯಾರ್ಥವಾಗಿ ದೇಶ ಸಂಚಾರಮಾ
ಡಬೇಕಾಗಿದೆಯೆಂದೂ , ನಿಲ್ಲುವುದಕ್ಕೆ ಆಸರೆ ಸಿಕ್ಕಿ ದೊಡನೆಯೆ ಎಲ್ಲ
ರನ್ನೂ ಕರೆಸಿಕೊಳ್ಳುವೆನೆಂದು ವಿಶ್ನನಾಥನಿಗೆ ತಿಳಿಸಿ, ಹೊರಡಲು
ಅಪ್ಪಣೆಯನ್ನು ಕೇಳಿದನು. . ವಿಶ್ನನಾಥನು, ಅಳಿಯನನ್ನು ಬಿಡಲಾರ
ದೆ "ಹೊರಡದಿದ್ದರಾಗುವುದಿಲ್ಲವೆ ?. ಎಂದು ಕೇಳಿದನು.
ಲಕ್ಷ್ಮೀಪತಿ-ನನ್ನಿಂದಾಗಬೇಕಾದ ಕಾರ್ಯವೇನಾದರೂ
ಇದೆಯೆ ?
ವಿಶ್ವನಾಥ--ಏನೂ ಇಲ್ಲ ನಮಗಿರುವವಳೊಬ್ಬಳೇ ಮಗ
ಳು . ನಾವುಭಾಗ್ಯವಂತರಲ್ಲದಿದ್ದರೂ ತಿನ್ನುವುದಕ್ಕೆ
ತಕ್ಕಷ್ಟು ಅನುಕೂಲತೆಯನ್ನು ದೇವರು ಉಂಟು
ಮಾಡಿ ಕೊಟ್ಟರುವನು. ಆದುದರಿಂದ ನೀವೂ--
---------------------------------
೪೮
ಲಕ್ಷ್ಮೀ --ತಮಗೆ ಈಗಿರುವ ಭಾರದಜತೆಗೆನಾನೂ ಒಬ್ಬನು
ಸೇರಬೇಕೆ? . ಎಂದಿಗೂ. ಆಗಲಾರದು. . ನಾನು ಈ
ಚಿಕ್ಕ ವಯಸ್ಸಿ ನಲ್ಲಿಯೆಯಾವ ಉದ್ಯೋಗವೂ ಇಲ್ಲದೆ
ತಿಂದುಕೊಂಡು ಕೂತಿರುವುದು ನ್ಯಾಯವಲ್ಲ, ನನ
ಗೂ ದೇವರುಯಥೇಚ್ಛವಾಗಿ ಕೊಟ್ಟಿದ್ದಾನೆ, ಅದರೆ
ಕಾರಣಾಂತರದಿಂದ ಅದನ್ನು ಅನುಭವಿಸಲುಮಾರ್ಗ
ವಿಲ್ಲ. ನನ್ನ ಸ್ವಂತ ಕಷ್ಟದಿಂದ ಸಂಪಾದಿಸಿ ಹೆಂಡತಿ
ಯನ್ನು ಸಾಕಬೇಕೆಂಬ ಉದ್ದೇಶವಿದೆ. ಆದುದರಿಂದ
ದಯೆಯಿಟ್ಟು ಅಪ್ಪಣೆಕೊಡಬೇಕು.
ವಿಶ್__ಹಾಗಿದ್ದ ಮೇಲೆ ನಾನು ತಡೆಯುವುದಿಲ್ಲ , ನಿಮಗೆ
ದೇವರು ಮಂಗಳವನ್ನುಂಟುಮಾಡಲಿ.
ಲಕ್ಷ್ಮೀಪತಿಯು ಅತ್ತೆಮಾವಂದಿರನ್ನು ನಮಸ್ಕರಿಸಿ ಅವರ
ಆಶೀರ್ವಾದವನ್ನು ಪಡೆದು ಪ್ರಯಾಣಮಾಡಿದನು. ಮಾರಣೆಯದಿನ
ವಿಶ್ವನಾಥನು ಹೆಂಡತಿಮಗಳೊಂದಿಗೆ ರಾಮ ಪುರವನ್ನು ಸೇರಿದನು .
----
---ಹ ನ್ನೆ ರ ಡ ನೆಯ ಅ ಧ್ಯಾ ಯ----
ಶಂಕರರಾಯನ ದೇಹಸ್ಮಿತಿಯು ದಿನೆ ದಿನೆ ಕೆಡುತ್ತಾ ಒಂದು
ವಾರದೊಳಗೆ ಅವನನ್ನು ಹಾಸಿಗೆಹಿಡಿದು. ಮಲಗುವಂತೆ ಮಾಡಿ
ಬಿಟ್ಟಿತು.ಡಾಕ್ಟರುಗಳೆಲ್ಲರೂ ಬಂದುನೋಡಿ ಶಾರೀರಿಕಜಾಡ್ಯವಾವು
ದೂ ಗೋಚರವಾಗದಿದ್ದುದರಿಂದ ಏನುಮಾಡುವುದಕ್ಕೂ ತೋಚದೆ
ಅವನು ಅಸ್ಕಳವನ್ನು ಬಿಟ್ಟು ಮಸಸ್ಸಿಗೆ ಹರ್ಷವುಂಟಾಗುವಹಾಗೆ
ಅಲ್ಲಲ್ಲಿ ಸಂಚಾರಮಾಡುವುದೊಳ್ಳೆಯದೆಂದು ಅಭಿಪ್ರಾಯಪಟ್ಟರು.
-----------------------------------
೪೯
ಅದರೆ ಅವನ ಆಗಿನಸ್ಥಿತಿಯಲ್ಲಿ ಪುನಹೆಯನ್ನು ಬಿಟ್ಟು ಹೊರಡುವುದೇ
ಕಷ್ಟವಾಗಿತ್ತು. ಆದುದರಿಂದ ಶರೀರದ ಬಲವು ಕುಗ್ಗದಂತೆ ಔಷಧ
ಗಳನ್ನು ಕೊಟ್ಟು ಸ್ವಲ್ಪ ಗುಣಮುಖವಾದೊಡನೆಯೆ ಬೊಂಬಾಯಿಗೆ
ಕಳುಹಿಸುವುದಾಗಿ ನಿಶ್ಚಯಿಸಿಕೊಂಡರು. ಆದರೆ ಶಂಕರರಾಯನಿಗೆ
ಸ್ವಲ್ಪ ಮಾತ್ರವೂ ಗುಣವಾಗಲಿಲ್ಲ. ಅವನಿಗೆ ಬುದ್ಧಿಯೇ ವಿಕಲ್ಪವಾಗಿ
ಹೋಗಿದ್ದ ಹಾಗಿತ್ತು. ಒಂದೊಂದು ಸಲ "ಹಾ ! ಮಾಧವಾ !
ಬಂದೆಯಾ ಅಪ್ಪ ಬಾ ಕೂತುಕೊ`` ಎನ್ನುವನು. ಒಂದೊಂದು ಸಲ
" ಇವಳೇ ನಮ್ಮ ಸುಭದ್ರೆ, ನಮ್ಮ ಮಾಧವನ ಹೆಂಡತಿ ಸುಭದ್ರೆ,
ಸುಭದ್ರೆ, ಸುಭದ್ರೆ`` ಎಂದು ತನ್ನಷ್ಟಕ್ಕೆ ತಾನೆ ಗುಣಗುಟ್ಟಿಕೊಳ್ಳು
ವನು. ಗಂಗಾಬಾಯಿಯೊಬ್ಬಳನ್ನು ಮಾತ್ರ ಗುರ್ತಿಸುತ್ತಿದ್ದನು.
ಅವಳು ಬಂದಾಗ "ಯಾಕೆ ಸುಭದ್ರೆಯನ್ನು ಕರತರಲಿಲ್ಲ`` ಎಂದು
ಕೇಳುವನು. ಗಂಗಾಬಾಯಿಗೆ ವಾಸ್ತವವಾಗಿ ಸುಭದ್ರೆಯು ಬಂದರೆ
ಸ್ವಲ್ಪ ಗುಣಮುಖವಾದೀತೆಂಬ ಭರವಸೆಯು ಹುಟ್ಟಿತು. ತಾನು
ಅವನನ್ನು ಬಿಟ್ಟುಹೋಗಿ ಸುಭದ್ರೆಯನ್ನು ಕರೆತರಲು ಧೈರ್ಯ
ಸಾಲದೆ, ಒಬ್ಬ ಆಳಿನ ಕಾಗದವನ್ನು ಕೊಟ್ಟು ರಾಂಪುರಕ್ಕೆ
ಕಳುಹಿಸಿದಳು, ಆ ಆಳು ಅಲ್ಲಿಗೆ ಹೋಗಿ ಬಂದು ವಿಶ್ವನಾಥನ ಮನೆಗೆ
ಬೀಗ ಹಾಕಿದ್ದಿತೆಂದೂ ನೆರೆಹೊರೆಯಲ್ಲಿ ವಿಚಾರಿಸಲಾಗಿ ಅವರೆಲ್ಲಿಯೊ
ದೇಶಾಂತರ ಹೋದಂತೆ ತಿಳಿಯಿತೆಂದೂ, ಇಂತಹ ಕಡೆ ಹೋದ
ರೆಂಬುದು ಯಾರಿಗೂ ಗೊತ್ತಿಲ್ಲವೆಂದೂ. ಹೇಳಿದನು . ಗಂಗಾ
ಬಾಯಿಗೆ ಮನಸ್ಸಿನಲ್ಲಿ ಸ್ವಲ್ಪ ಪೇಚಾಟಕ್ಕೆ ಬಂದಿತು. ಶಂಕರ
ರಾಯನನ್ನು ಮಾತ್ರ ಎಡೆಬಿಡದೆ ಉಪಚರಿಸುತ್ತಿ ದ್ದಳು.
ಆತ್ಮಾ ರಾಮನ ಮೊಕದ್ದಮೆಯು ಸೆಷನ್ ಕೋರ್ಟಿನಲ್ಲಿ
ತೀರ್ಮಾನವಾಯಿತು. ಶಂಕರರಾಯನ ಔದಾಸೀನ್ಯದಿಂದಲೋ,
ರಾಮರಾಯನ ದ್ರವ್ಯ ಬಲದಿಂದಲೊ, ಹೊಸ ಅಡ್ವೊಕೇಟನ ಶಕ್ತಿ
---------------------------------
೫೦
ಯಿಂದಲೊ, ಅಥವಾ ಇವೆಲ್ಲವೂ ಸೇರಿದುದರಂದಲೂ, ಆತ್ಮಾ ರಾಮ
ನಿಗೆ ಬಿಡುಗಡೆಯಾಯಿತು. ಅವನಿಗೆ, ರಾಮುರಾಯನಲ್ಲಿ ಉಂಟಾದ
ಬಕ್ತಿ ವಿಶ್ವಾಸಗಳನ್ನು ಹೇಳುವ ಹಾಗಿರಲಿಲ್ಲ. ಅವನು
ರಾಮರಾಯನನ್ನು ಒಹಳವಾಗಿ ವಂದಿಸಿ, ಯಾವಜ್ಜೀವವೂ ಅವನ
ದಾಸಾನುದಾಸನಾಗಿರುವುದಾಗಿ . ಹೇಳಿದನು. . ರಾಮರಾಯನು,
"ಇನ್ನೂ ನಮ್ಮ್ ಕೆಲಸವು ಮುಗಿಯಲಿಲ್ಲ. ನಿನ್ನಲ್ಲಿದ್ದ ಹಣವನ್ನೂ
ನಗಗಳನ್ನೂ ಕಸುಕೊಂಡ ಆ ವಿಶ್ವನಾಥನನ್ನು ಸುಮ್ಮನೆಬಿಡುವುದೆ?
ಅವನ ಮಗಳು ನಿನ್ನ ಮನೆಯ ತೊತ್ತಾದುದನ್ನು ನೋಡಿದ ಹೊರತು
ನನಗೆ ನಿದ್ರೆಬರುವುದಿಲ್ಲ. ನೀನು ಸ್ನಲ್ಪವೂ ಶ್ರಮಪಡಬೇಕಾದುದಿಲ್ಲ.
ನಾನು ಹೇಳಿದ ಹಾಗೆ ಕೇಳು? " ಎಂದನು. ಅತ್ಮಾ ರಾಮನು,
"ಮಹಾ ಪ್ರಸಾದ. ತಮ್ಮಂತಹ ಪ್ರಭುವು ನನಗೆ ದೊರಕಿದುದು ನನ್ನ
ಪೂರ್ವಜನ್ಮದ ಸುಕೃತಶೇಷಪದಿಂದಲ್ಲದೆ ಬೇರೆಯಿಲ್ಲ ," ಎಂದು ಬಹಳ
ವಾಗಿ, ರಾಮರಾಯನನ್ನು ಕೊಂಡಾಡಿದನು.
ರಾಮರಾಯನು ಶ್ರೀಧರರಾಯನ ಹೆಸರಿನಲ್ಲಿ ( ಇದೇ ಆತ್ಮಾ
ರಾಮನ ಈಗಿನ ಹೆಸರಷ್ಟೆ) ವಿಶ್ವನಾಥನಿಗೆ ಲಾಯರು ನೋಟೀ
ಸ" ನ್ನು ಕೊಡಿಸಿದನು. ವಿಶ್ವನಾಥನು ಕೂಡಲೆ ಮಗಳನ್ನು ಕರೆದು
ಕೊಂಡು ಬಂದು ಮದುವೆಮಾಡಿಕೊಡಬೇಕೆಂದೂ ತಪ್ಪಿದರೆ ದಾವಾ
ಮಾಡುವುದಾಗಿಯೂ ಅದರಲ್ಲಿ ಬರೆದಿತ್ತು. ವಿಶ್ತನಾಧನು ಪಂಡರ
ಪುರದಿಂದ ಆ ದಿನವೆ ರಾಂಪುರಕಕ್ಕೆ ಬಂದಿದ್ದನು. ಅವನಿಗೆ ಆ
"ನೋಟೀಸ`“`ನ್ನು ನೋಡಿ ಅಶ್ಲರ್ಯವಾಯತು. ತನ್ನ ತಪ್ಪಿತದಿಂದ
ಮದುವೆ. ನಿಂತುದಲ್ಲವೆಂದೂ, ಶ್ರೀಧರರಾಯನನ್ನು " ಕ್ರಿಮಿನಲ್
ಕೋರ್ಟಿ"ನಲ್ಲಿ ವಿಚಾರಣೆಗೆ ಗುರಿಮಾಡಿದಮೇಲೆ ಮಗಳಿಗೆ
ಬೇರೆಕಡೆ ವಿವಾಹವಾಯಿತೆಂದೂ, ಆದುದರಿಂದ ಯಾವ ಪರಿಹಾರ
ವನ್ನು. ಕೊಡು ವುದಕ್ಕಾ ಗಲಿ ಹುಡುಗಿಯನ್ನೊಪ್ಪಿಸುವುದಕ್ಕಾಗಲಿ
----------------------------------
೫೧
ಕಾರಣವಿಲ್ಲವೆಂದು ವಿಶ್ವನಾಥನು ಉತ್ತರಕೊಟ್ಟನು, ಅನಂತರ
ಶ್ರೀಧರರಾಯನು ವಿಶ್ನನಾಥನಮೇಲೆ ಪುನಹ “ಡಿಸ್ಟ್ರಿಕ್ಟ್‌ಜಡ್ಜಿ "
ಯವರ ಕೋರ್ಟನಲ್ಲಿ ವ್ಯವಹಾರ ನಡಿಸಲು ಅರ್ಜಿಯನ್ನು ಕೊಟ್ಟನು
ವಿಶ್ವನಾಥನೂ ಪುನಹೆಗೆ ಬಂದು ವಕೀಲನ್ನಿ ಟ್ಬು ವಾದಿಸಿದನು.
ಸಫಲವಾಗಲಿಲ್ಲ. ಅವನ ಕಡೆಯ ಸಾಕ್ಷಿಗಳಾದ ಪುರೋಹಿತ ಮತ್ತು
ಇನ್ನೂ ಕೆಲವರು ಮದುವೆಯಲ್ಲಿ ಚೆನಾ ಗಿ ತಿಂದು ತೇಗಿದ್ದರೂ
ರಾಮರಾಯನ ದ್ರವ್ಯಬಲದಿಂದ ಅಪಸಾಕ್ಷ್ಯವನ್ನು ನುಡಿದು ತಾವು
ಯಾವ ಸಂಗತಿಯನ್ನೂ ಕಾಣೆವೆಂದು ಹೇಳಿ ಬಿಟ್ಟರು. ಇದರಿಂದ
ಸುಭದ್ರೆಗೆ ವಿವಾಹನೇ ಆಗಿಲ್ಲವೆಂಬದಾಗಿ ಸ್ಥಾಪಿತವಾಯಿತು. ವಿಶ್ವ
ನಾಥನು ಹುಡು ಗಿಯನ್ನು ಶ್ರೀ ಧರರಾಯ ನವಶಕ್ಕೊಪ್ಪಿಸಬೇಕೆಂದೂ,
ಅಥವಾ ಅದಕ್ಳ ಬದಲಾಗಿ ಶ್ರೀಧರರಾಯನೊಪ್ಪುವುದಾದರೆ ೨೦೦೦
ರೂಪಾಯಿಗಳನ್ನು ಪರಿಹಾರ ರೂಪವಾಗಿ ಕೊಡುವುದಲ್ಲದೆ ಅವನು
ಕೊಟ್ಟ ನಗಗಳನ್ನು ಹಿಂದಿಕ್ಕೆ ಕೊಟ್ಟು ಬಿಡಬೇಕೆಂದೂ ? "ಜಡ್ಜಿ"
ಮಹಾಶಯರು ತೀರ್ಮಾನ ಮಾಡಿದ್ದರು. ಕ್ರೀಧರರಾಯನಿಗೆ ಹಣ,
ನಗ, ಬಂದರೆ ಸಾಕೆಂದು ಮನಸ್ಸಿನಲ್ಲಿದ್ದರೂ ರಾಮರಾಯನ ಬಲುಮೆ
ಯಿಂದ, ತನಗೆ ಹಣವೂ ನಗವೂ ಬೇಕಲ್ಲವೆಂದೂ, ಹುಡುಗಿಯನ್ನು
ಸ್ವಾಧೀನ ಪಡಿಸಿಕೊಳ್ಳಲು "ಡಿಕ್ರಿ" ಯಾ ಗಬೇಕೆಂದೂ ಕೇಳಿಕೊಂ
ಡನು. ಅದ ರಂ ತೆ " ಡಿಕ್ರಿ“ ಯಾಯಿತು.
ಇಲ್ಲಿ ನಾವು ತಿಳಿಸಬೇಕಾದದ ವಿಶೇಷ . ವಿಷಯವೇನೆಂದರೆ,
"ಸಿವಿಲ್ ಕೋರ್ಟ್"ಗಳಲ್ಲಿ ವ್ಯಾಜ್ಯಗಳು ಆನೇಕ ವರ್ಷ ಗಳು-ಕೆಲವು
ಸಾರಿ ಕಕಿ.ಗಾರರ ಜೀವಮಾನವಿರುವ ಪರ್ಯಂತ.ನಡೆದರೂ ತೀರ್ಪಾ
ಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ವ್ಯವಹಾರಗಳು ಮಕ್ಳಳ್ಳು ಮು
ಮ್ಮಕ್ಕಳು, ಮರಿಮಕ್ಕಳ ಕಾಲದ ವರೆಗೂ ನಡೆದು ಅನೇಕ ನ್ಯಾಯಾ
ಧಿಪತಿಗಳ ಕೈ ಮುಟ್ಟಿ, ಕೊನೆಗೆ ತೀರ್ಪಾಗುವಾಗ್ಗೆ ಕಕ್ಷಿಗಾರರು
-------------------------------------
೫೨
ಇಂಥವರೀ ಎಂಬುದು ಕೂಡ ಮರೆತು ಹೋಗಿರುವುದೂ ಉಂಟು,)
ಹೀಗಿದ್ದಾಗ್ಗೂ ವಿಶ್ವನಾಥನ ಮೇಲಿನ ಮೊಕದ್ದಮೆಯು ಮಾತ್ರ ಎರ
ಡೇ ತಿಂಗಳಕಾಲದಲ್ಲಿ ತೀರ್ಮಾನವಾಯಿತು. ಇದಕ್ಕೆ ಕಾರಣ ಬೇರೆ
ಯಿಲ್ಲ. . ರಾಮರಾಯನ ಸಾಹಸವೇ ಕಾರಣ,
ಪುನಹೆಯ ಳೋರ್ಟನತೀರ್ಮಾನವು ರಾಂಫುರದಲ್ಲಿ ತಿಳಿಯು
ವುದಕ್ವೆ ಮುಂಚೆಯೆ ರಾಮರಾಯನೂ, ಶ್ರೀಧರರಾಯನೂ ``ಅಮೀ
ನ"ನನ್ನು ಕರೆದುಕೊಂಡು ಅಲ್ಲಿಗೆ ಬಂದು ಬಿಟ್ಟರು. ವಿಶ್ವನಾಥನೂ
ಆದಿನವೇ ಬಂದು ಸೇರಿದನು. ಕೂಡಲೆ ಹುಡುಗಿಯನ್ನು ತನ್ನ ಸ್ವಾಧೀ
ನಕ್ಕೆ ಕೊಡಬೇಕೆಂದು ಕ್ರೀಧರರಾಯನ್ನು ಕೇಳಿದನು. ಅ ದಿನ ವಿಶ್ವ
ನಾಥನ ಮನೆಯಲ್ಲಿ ಉಂಟಾದ ಕೋಲಾಹಲವು ವರ್ಣನಾತೀತವಾ
ಗಿದ್ದಿತು.ಒಂದುಕಡೆ ವಿಶ್ವನಾಥನೂ ಮತ್ತೊಂದುಕಡೆ ರಮಾಬಾಯಿ
ಯೂ ಅಳುತ್ತು ನೆಲದಮೇಲೆಬಿದ್ದು ಹೊರಳಾಡುತ್ತಿದ್ದರು. ಸುಭದ್ರೆ,
ಮಾತ್ರ ಮಂಕು ಹಿಡಿದವಳಂತೆ ಕುಳಿತುಕೊಂಡಿದ್ದಳು. ಆ ಊರಿನ
ಜನರೆಲ್ಲರೂ ಬಂದು ವಿಶ್ವನಾಥನ ಮನೆಯೆದುರಿಗೆ ಸೇರಿ ಬಿಟ್ಟರು.
ಅನೇಕ ಜನರು ಆ ತಂದೆ ತಾಯಿಗಳ ಗೋಳನ್ನು ನೋಡಲಾರದೆ
ಕಣ್ಣಿನಲ್ಲಿ ನೀರುಸುರಿಸುತ್ತಿದ್ದರು. ಮತ್ತೆ ಕೇವರು ವಿಶ್ನನಾಥನಿ ಗೂ
ರಮಾಬಾಯಿಗೊ ಸಮಾಧಾನ. ಹೇಳುತ್ತಿದ್ದರು. ವಿಶ್ವನಾಥನು
ಮಗಳ ಕಡೆಗೆ ಕೈನೀಡಿ . "ಕರದುಕೊಂಡು ಹೋಗಿ“ ಎಂಬಂತೆ
ಸನ್ನೆ ಮಾಡಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿದನು: ಶ್ರೀಧರರಾ
ಯನು ಸುಧದ್ರೆಯನ್ನು ಬಾರೆಂದು ಕರೆದು, ಕೈ ಹಿಡಿದನೋ ಇಲ್ಲ
ವೊ, ಅವಳು ಕಿಟ್ಟನೆ ಕಿರಿಚಿಕೊಂಡು ಸ್ಮೃತಿ ತಪ್ಪಿ ನೆಲದ ಮೇಲೆ
ಬಿದ್ಧು ಬಿಟ್ಬ್ಗಳು . ಶ್ರೀಧರರಾಯನಂತಹನಿಗೂ ಕೂಡ ಕನಿಕರ ಹುಟ್ಟಿ
ಹಿಂದೆ ಸರಿದನು. ಉಳಿದವರೆಲ್ಲರಗೂ ಕಣ್ಣೀರು ಕೋಡಿಗಳು ಹರಿ
ಯುತ್ತಿದ್ದುವು ಆದರೆ ಆ ಪಾಷಾಣ ಹೃದಯನಾದ ರಾನುರಾಯನ
----------------------------------------
೫೩
ಮನಸ್ಸು ಮಾತ್ರ ಕರಗಲಿಲ್ಲ. ಮೂರ್ಛೆ ಹೋಗಿರುವ ಹುಡುಗಿ
ಯನ್ನೆ ಎತ್ಕಿ ಕೊಂಡು ಹೋಗಿ ಗಾಡಿಯಲ್ಲಿ ಮಲಗಿಸುವಂತೆ ಶ್ರೀಧ
ರರಾಯನಿಗೆ ಸೂಚಿಸಿದನು. . ಅವನು ಅದರಂತೆಯೇ ಮಾಡಿದನು.
ಹೀಗೆ ವಿಶ್ವನಾಥನ ಯಾವ ಕುಟೀರವು ಸುಭದ್ರೆಯ ಮೃದು
ವಾದ ಮಾತಿನಿಂದಲೂ, ಮನೋಹ್ಲಾದಕರವಾದ ನಗುವಿನಿಂದಲೂ,
ಇಂಪಾದ ಗಾನದಿಂ ದಲೂ, ಶೋಭಿಸುತಲಿದ್ದಿತೋ ಅದೇ ಕುಟೀ
ರವರು ಈಗ ಶೋಕಮಯವಾಗಿ ಸ್ಮಶಾನ ಸದ್ಭಶವಾಯಿತು.
---
-- -ಹ ದಿ ಮೂ ರ ನೆ ಯ ಅ ಧ್ಯಾ ಯ----
ದಕ್ಷಿಣ ಹಿಂದೂಸ್ಥಾನದಲ್ಲಿ ಪ್ರಧಾನರಾಜ್ಯವಾಗಿರುವ ನಿಜಾಮ
ರಾಷ್ಟ್ರದ ರಾಜಧಾನಿಯಾದ ಹೈದರಾಬಾದಿನ ಒಂದಾ
ನೊಂದು ರಾಜಬೀದಿಯಲ್ಲಿ ಒಂದಾನೊಂದು ಉಪ್ಪರಿಗೆಯ ಮನೆ.
ಆ ಮನೆಯ ದಿವಾನ್ ಖಾನೆಯಲ್ಲಿ ಒಬ್ಜ ತರುಣನು ಆದಿನದ ಅಂಚೆ
ಯಲ್ಲಿ ಬಂದ ಕಾಗದವೊಂದನ್ನು ಹಿಡಿದುಕೊಂಡು ಶತಪಥ
ತಿರುಗುತ್ತಾ ತನ್ನಲ್ಲಿತಾನೆ, "ಇದೇನು ಆಶ್ಲರ್ಯ! ವಿಳಾಸದಾರರು
ಊರುಬಿಟ್ಟುಹೋದುದಾಗಿ ತಿಳಿಯಬಂದುದರಿಂದ ವಾಪಸು ಎಂದು
'ಷರಾ` ಬರೆದಿದೆ. ಊರುಬಿಟ್ಟುಹೋದುದೆಲ್ಲಿಗೆ? ತೀರ್ಥಯಾತ್ರೆ ಗಳಿ
ಗೋಸ್ಥ್ರರ ಹೋಗಿರಬಹುದೆ? ಇಲ್ಲವೆ ವಿಪತ್ತೇನಾದರೂ ಸಂಭವಿಸಿ
ತೊ ? ತಿಳಿಯ ಹೇಳುವವರಾರು ? ಮನಸ್ಸಿನಲ್ಲೀನೋ ಒಂದು
ಬಗೆಯ ಕಳವಳವುಂಟಾಗಿದೆಯಲ್ಲ ! ಏನುಮಾಡಲಿ ?`` ಎಂದು
ಹೇಳಿಕೊಳ್ಳುತ್ತಿದ್ದನು., ಹಾಗೆಯೆ ಸ್ವಲ್ಪ ಹೊತ್ತು ನಿಂತುಕೊಂಡು
ಯೋಚಿಸಿ , ಆಗಬೇಕಾದುದು ಆಗಲೇಬೇಕು. ವೃಥಾಚಿಂತಿಸಿ ಫಲ
ವೇನು`` ಎಂದಂದುಕೊಂಡು ಕುರ್ಚಿಯಮೇಲೆ ಕುಳಿತು, ಆದಿನದ
------------------------------------
೫೪
ವರ್ತಮಾನ ಪತ್ರಿಕೆಗಳನ್ನು ತೆಗೆದುಕೊಂಡನು. ಮೊದಲನೆಯ
ಪತ್ರಿಕೆಯಲ್ಲಿಯೆ "ಎಡಿಟರ“`ವರ ಲೇಖನದಮೇಲ್ಗಡೆ ಹೀಗೆಂದಿತ್ತು:--
" ಪುನಹೆಯಲ್ಲಿರುವ ಜಹಗೀರ್ದಾರ್ ಶಂಕರರಾಯರಿಗೆ ಅವ
ಸಾನ ಕಾಲವು ಸಮೀಪಿಸಿದೆ. ಅವರು ತಮ್ಮ ಏಕಮಾತ್ರನಾದ ಪುತ್ರ
ನನ್ನು ನೋಡಲು ಬಹಳವಾಗಿ ಅಪೇಕ್ಷಿಸುತ್ತಾರೆ. ಆತನಿ ಗೋಸ್ಕರ
ಕಳೆದ ಎರಡುತಿಂಗಳಿಂದಲೂ ಕೊರಗುತ್ತಿದ್ದಾರೆ. ಅವರ ವ್ಯಾಧಿಗೆ ಪುತ್ರ
ವಿಯೋಗವೇ ಮೂಲಕಾರಣವಾದುದರಿಂದ ಕೈಮಿಂಚುವುದಕ್ಕೆ
ಮುಂಚೆಯೆ ಪುತ್ರನಾದವನು ಬಂದು ನೋಡಿದುದೇ ಅದರೆ, ಅವರ
ವ್ಯಾಧಿಯು ಬಹುಶಃ ಗುಣವಾಗಬಹುದು.
ಪೂನಾ | ಕೆಪ್ಟನ್ ಕಾಕ್ಸ್ ಎಂ.ಡಿ., ಐ, ಎಮ್, ಎಸ್
ತಾ|| - - ೧೮೯- | ಸಿವಿಲ್ˆ ಸರ್ಜನ್. ``
ಯುವಕನ ಕೈಯಿಂದ ಪತ್ರಿಕೆಯು ಕೆಳಗೆಬಿದ್ದಿತು ಕಣ್ಣಿ
ನಿಂದ ಧಾರೆಯಾಗಿ ನೀರು ಹರಿಯಲು ಪ್ರಾರಂಭವಾಯಿತು. ಎದು
ರಿಗಿದ್ದ ಗಡಿಯಾರವನ್ನು ನೋಡಿದನು, ೯|| ಗಂಟಿಯಾಗಿತ್ತು. ತಡ
ಮಾಡದೆ ಎದ್ದು. ಉಡುಪನ್ನು. ಹಾಕಿಕೊಂಡು ಆ “ನ್ಯೂಸ್ ಪೇಪರ``
ನ್ನು ತೆಗೆದುಕೊಂಡು ಎಲ್ಲಿಯೋ ಹೋಗಿಬಂದನು. ಅನಇತರ ಸೇವ
ಕನಿಗೆ ಫುನಹೆಗೆ ಹೊರಡಬೇಳಕೆಂದು ತಿಳಿಸಿ ಸಾಮಾನುಗಳನ್ನು ಕಟ್ಟಿ
ಅರ್ಧಗಂಟೆಯಲ್ಲಿ ಸಿದ್ದಮಾಡಿ ಗಾಡಿಯಲ್ಲಿಟ್ಟು ಕರೆಯಬೇಕೆಂದು
ಹೇಳಿದನು. ಹಾಗೆಯೆ ಆ ಪತ್ರಿಕೆಯನ್ನು ಸ್ವಲ್ಪ ಹೊತ್ತು ನೋಡುತ್ತಿ
ದ್ವರೂ ಅನ್ಯಮನಸ್ಕನಾಗಿದ್ದುದರಿಂದ ಯಾವುದೂ ಮನಸ್ಸಿಗೆ ಹಿಡಿ
ಯಲಿಲ್ಲ. ಆದುದರಿಂದ , "ರೈಲ` ಗಾಡಿಯಲ್ಲಿ ನೋಡೋಣ`` ವೆಂದಂ
ದುಕೊಂಡು ಇಟ್ಬುಬಿಟ್ಟ ನು. ಅನಂತರ ಸ್ನಾನಸಂಧ್ಯಾವಂದನೆಗಳನ್ನು
ಮಾಡಿ ಸ್ವಲ್ಪ ಆಹಾರವನ್ನು ತೆಗೆದುಕೊಂಡು ರೇಲ್ವೇಸ್ಟೇಷನ್ನಿ ಗೆ
ಹೋಗಿ ಸೇರಿದನು. ಮನಸ್ಸಿನಲ್ಲಿ ವೃತ್ತಾಂತಪತ್ರಿಕೆಯ ವರ್ತಮಾ
-------------------------------------
೫೫
ನದಿಂದುಂಖಾದ ವೃಥೆಯ ಜತೆಗೆ ತಾನು ಬರೆದಿದ್ದ ಕಾಗದವು ಹಿಂದಿ
ರುಗಿ ಬಂದುದರಿಂದುಂಟಾದ ವ್ಯಥೆಯೂ ಸೇರಿದ್ದಿತು. ಆದುದರಿಂದ
ಆಹಾರವು ಅದಿನ ಅವನಿಗೆ ರುಚಿಸಲಿಲ್ಲ. ೧೧ ಗಂಟೆಗೆ ಸರಿಯಾಗಿ
ರೇಲ್ ಗಾಡಿಯು ಸಿದ್ದವಾಯಿತು. ಮೊದಲನೆಯ ತರಗತಿಯ ಗಾಡಿ
ಯಲ್ಲಿ ಸಾಮಾನುಗಳು ಇಡಲ್ಪಟ್ಟುವು. ನಮ್ಮ ಯುವಕನು ಗಾಡಿ
ಯಲ್ಲಿ ಕುಳಿತುಕೊಂಡು ಸೇವಕನಿಗೆ ಮನೆಯನ್ನು ಎಚ್ಚರವಾಗಿ
ನೋಡಿಕೊಂಡಿರಬೇಕೆಂದ್ದೂ ತಾನು ಬೇಗನೆ. ಹಿಂದಿರುಗುವುದಾಗಿ
ಯೂ ತಿಳಿಸಿದನು. ಗಾಡಿಯು ಮುಂದಕ್ಳೆ ಹೊರಟಿತು. ಯುವಕನು
ವೃತ್ತಾಂತಪತ್ರಿಕೆಯನ್ನು ಪುನಹಾ ತೆಗೆದುಕೊಂಡು ಮೊದಲಿ
ನಿಂದಲೂ ಕ್ರಮವಾಗಿ ಓದತೊಡಗಿದನು. ಓದುತ ಓದುತೆ ಒಂದು
ಕಡೆ " ಒಂದು ವಿಚಿತ್ರವಾದ ಸಿವಿಲ್ ಮೊಕದ್ದಮೆ`` ಎಂಬ ಅಭಿಧಾನ
ವುಳ್ಳ ಒಂದು ಲೇಖನವನ್ನು. ಸೋಡಿದನು, ಅದನ್ನೋದುತ್ತಲೆ ಅವನ
ಮುಖವೆಲ್ಲವೂ ಬೆಳ್ಳಗಾಗಿ ಹೋಗಿ ಕೂತಿದ್ದವನು ಹಾಗೆಯೆ ಮಲಗಿ
ಕೊಂಡನು. ಮನಸ್ಸಿನ ಯಾತನೆಯು ಬಹಳವಾಗಿದ್ದಿತು. ಅ ಗಾಡಿ
ಯಲ್ಲಿ ಅವನೊಬ್ಬನೇ ಪ್ರಯಾಣ ಮಾಡುತ್ತಿದ್ದರಿಂದ ಅಶ್ರುಧಾರೆ
ಗಳು ನಿರ್ಭಯವಾಗಿ ಕಪೋಲಗಲನ್ನು ತೋಯಿಸುತ್ತಿದ್ದವು. ಬಹಳ
ಶ್ರಮದಿಂದ ಆ ಹಗಲನ್ನೂ ರಾತ್ತಿಯನ್ನೂ ಕಳೆದು ಮಾರಣೆಯದಿನ
ಪುನಹೆ ಪಟ್ಟಣವನ್ನು ಸೇರಿದನು.
----
-= ಹದಿನಾಲ್ಕನೆಯ ಅಧ್ಯಾಯ . -=
ಹಿಂದಿನ ಅಧ್ಯಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ
ಕಥಾನಾಯಕನಾದ ಮಾಧವನಲ್ಲದೆ ಬೇರಿಯಲ್ಲವೆಂಬುದ
ನ್ನು. ನಮ್ಮ ವಾಚಕಮಹಾಕಯರಿಗೆ ತಿಳಿಯಹೇಳಬೇಕಾದುದಿಲ್ಲ.
--------------------------------------
೫೬
ಆದರೆ ತಂದೆಯ ಮನೆಯನ್ನು ಬಿಟ್ಟು ಏಕಾಂಗಿಯಾಗಿ ಹೊರಟು
ಬಂದವನಿ ಗೆ ಹೈದರಾಬಾದಿನಲ್ಲಿ ಅಷ್ಟು ಶೀಘ್ರವಾಗಿ ಸುಖಸಂಪದ
ಗಳು ಹೀಗೆ ದೊರೆತುವೆಂಬುದನ್ನು ಮಾತ್ರ ನಾವು ಇಲ್ಲಿ ತಿಳಿಸುವುದು
ಅವಶ್ಯಕವಾಗಿರುವುದು.
ಆದಿನ ರಾತ್ರೆ ತಂದೆಯ ಕ್ರೂರವಾದ ಆಜ್ಞೆಯನ್ನು ಕೇಳಿ ಮಾ
ಧವನಿಗೆ ಬಹಳ ಸಂಕಟವುಂಟಾಯಿತು. ತಮ್ಮ ವಂಶಕ್ಕೂ ವಿಶ್ವನಾ
ಥನ ವಂಶಕ್ಕೂ ಪಾರಂಪಕವಾಗಿ ದ್ವೇಷಬಂದಿರುವುದು ಇವನಿಗೆ
ತಿಳಿದಿದ್ದ ರೆ ಎಂದಿಗೂ ಸುಭದ್ರೆಯನ್ನು ವರಿಸುವುದಾಗಿ ಪ್ರತಿಜ್ಞೆಮಾ
ಡುತ್ತಿರಲಿಲ್ಲ. ಈಗ ತಂದೆಯ ಅಭಿಪ್ರಾಯದಂತೆ ತನಗೆ ಒಂದು ಕ್ಷಣ
ವೂ ಆ ಮನೆಯಲ್ಲಿ ನಿಲ್ಲಲು ಬಾಧ್ಯತೆಯಿಲ್ಲವೆಂಬುದು ವ್ಯಕ್ತವಾಯಿ
ತು. ಮುಂದೆ ಮಾಡುವುದೇನು ? ತಂದೆಯ ಮಾತಿನಂತೆ ನಡೆದು
ಪ್ರತಿಜ್ಞಾಭಂಗಮಾಡಿಕೊಳ್ಳುವುದೆ ? ಅಥವಾ ಪ್ರಾಯಶ್ಚಿತ್ತರೂಪ
ವಾಗಿ ಮನೆಯನ್ನು ಬಿಟ್ಟು ಹೋಗುವುದೆ? ಅಥವಾ ಪ್ರಾಣತ್ಕಾಗ
ಮಾಡಿಕೊಂಡು.. ಸಮಸ್ತ ಬಾಧೆಗಳನ್ನೂ ಪರಿಹರಿಸಿಕೊಳ್ಳುವುದೆ ?
ಮೂರನೆಯ ಮಾರ್ಗವು ಪುರುಷನಿಗೆ ತಕ್ಕುದಲ್ಲ. ಮೊದಲನೆಯ
ಮಾರ್ಗವನ್ನನು ಸರಿಸುವುದರಿಂದ ತಂದೆಯ ಪ್ರೀತಿಯು ಇದ್ದಂತೆಯೇ
ಇರುವುದು. ಅದರೆ ಅದರಿಂದ ತಾನು ಮಿಥ್ಯಾವಾದಿಯಾಗುವನಲ್ಲದೆ
ಒಬ್ಬ ಬ್ರಾಹ್ಮಣ ಕನ್ಯೆಯನ್ನು ದುರ್ಮರಣಕ್ಕೆ ಗುರಿಮಾಡುವ ಸಂಭ
ವವೂ ಉಂಟು, "ಛಿ! ಛಿ! ಆತ್ಮ ಸುಖಕ್ಕೋಸ್ಕರ ಪ್ರತಿಜ್ಞಾಭಂಗಮಾ
ಡಕೊಳ್ಳುವುದೆ? ತಪ್ಪು ತಪ್ಪು. ಈ ಕೂಡಲೆ ಈ ಮನೆಯನ್ನು ಬಿಟ್ಟು
ಹೋಗುವೆನು. ಭಗವಂತನು ತೋರಿಸಿದಂತಾಗಲಿ.`` ಬಂದು ಯೋ
ಚಿಸಿಕೊಂಡು ತಂದೆಗೆ ಕಾಗದವನ್ನು ಬರೆಯಲು ಕುಳಿತನು. ಬಾಗಿ
ಲು ಕರ್ರೆಂದ ಶಬ್ದವಾಯಿತು. ತಿರಿಗಿ ನೋಡಲಾಗಿ ಗಂಗಾಬಾಯಿ
ಯು ಮೆತ್ತಗೆ ಒಳಗೆ, ಬಂದು ಮಾಧವನನ್ನು " ಏನುಮಾಡುವೆ``
---------------------------------------
೫೭
ಎಂದು ಕೇಳಿದಳು. ಮಾಧವನು ಅವಳನ್ನು ಕುರಿತು, "ಎಲ್ಲಾ ಸಂಗ
ತಿಯೂ ನಿನಗೆ ತಿಳಿಯುವುದೆ?`` . ಎಂದು ಕೇಳಿದನು.
ಗಂ-- ತಿಳಿಯುವುದು, ನಾನು ನಿಮ್ಮ ತಂದೆಯ ಬಾಯಿಂದಲೆ
ಎಲ್ಲವನ್ನೂ ಕೇಳದೆ. ನಿನ್ನ ವಿಧೇಯನಾದ ಮಗನೆ
ಇಲ್ಲವೆಂದು ಅವರು ಶ್ಲಾಘನೆ ಮಾಡಿದರು.
ಮಾ__ಆಮೇಲೆ ?
ಗಂ--ಅದರೆ. ನನಗೆ. ಮಾತ್ರ ಏನೋ ಒಂದು ವಿಧವಾದ ಆತಂ
ಕವು ಹುಟ್ಟಿದುದರಿಂದ ರಾತ್ರಿ ಸ್ವಲ್ಪವೂ ನಿದ್ದೆ ಹತ್ತದೆ
ಈಗ ನಿನ್ನನ್ನು ನೋಡಲು ಬಂದೆ.
ಮಾ--ನಿನ್ನ ಆಜ್ಞೆ ಏನು?
ಗಂ_ನಿನ್ನ ಅಭಿಪ್ರಾಯವೇನು?
ಮಾ_-ಇದೊ, ತಂದೆಯವರಿಗೆ ಕಾಗದವನ್ನು ಬರೆದಿಟ್ಟು ನಾನು
ದೇಶಾಂತರ ಹೊರಟು ಹೋಗುತ್ತೇನೆ.
ಗಂ --- ಹೊರಟು ಹೋಗಿ ?
ಮಾ--ಸ್ವತಂತ್ರವಾಗಿ ಸಂಪಾದಿಸಲು ಶಕ್ತಿಯುಂಟಾದೊಡ
ನೆಯೆ ಸುಭದ್ರೆಯನ್ನು ಕರೆಸಿಕೊಂಡು ಮದುವೆಮಾಡಿ
ಕೊಳ್ಳುತ್ತೇನೆ.
ಗಂ_--ನೀನು ಕರೆಸಿಕೊಳ್ಳು ವವರಿಗೂ ಸುಭದ್ರೆಯುನಿನ್ನ ವಳೇ
ಆಗಿರುವಳೆಂಬ ನಂಬಿಕೆಯೇನು?
ಮಾ.-ಅವಳ ತಂದೆಯೇ ನಾದರೂ ಬೇರೆಕಡೆ ವಿವಾಹಮಾಡಿ
ಯಾರೆಂಬ ಭೀತಿತಾನೆ? ಅವರಿಗೂ ಒಂದು ಕಾಗದವನ್ನು
ಬರೆದರಾಯಿತು.
ಗಂ-~-ಹಾಗಾಗುವುದಿಲ್ಲ. . ಅವನು ನಿನ್ನ ಬರಿಯ ಕಾಗ
ದದ ಮೇಲೆ ನಂಬಿಕೆಯಿಟ್ಟು ತನ್ನ ಪ್ರಯತ್ನವನ್ನು
---------------------------------
೫೮
ಬಿಡಲಾರನು. ನೀನು ಇಲ್ಲಿಂದ. ಹೊರಟು ನೆಟ್ಟಗೆ
ರಾಂಪುರಕ್ಕೆ ಹೋಗಿ ವಿಶ್ವನಾಥನನ್ನು . ಕಂಡು
ಕನ್ಯಾರ್ಥಿಯಾಗಿ ಬಂದಿರುವುದಾಗಿ ಹೇಳಿಕೊ .
ಅವನು ನಿನ್ನ ನ್ನು ನೋಡಿದ ಕೂಡಲೆ ಸಂತೋಷದಿಂದ ಸುಭದ್ರೆ
ಯನ್ನು ಮದುವೆ ಮಾಡಿಕೊಡುವನು . ಅಥವಾ ಅವ
ನೇನಾದರೂ ಅನುಮಾನಪಟ್ಟರೆ ಇಗೋ ಈ ಕಾಗದ
ವನ್ನು ಅವನಿಗೆ ಕೊಡು. . ಅನಂತರ ಳೆಲವು ದಿನ ದೇಶ
ಸಂಚಾರವೂಡುತ್ತಿರು. ಅಷ್ಟರೊಳಗೆ ನಿಮ್ಮ ತಂದೆ
ಯವರು ಸುಭದ್ರೆಯಮೇಲಿನ ದ್ವೇಷವನ್ನು ಬಿಟ್ಟು
ಬಿಟ್ಟರೆ ಹಿಂದಿರುಗಿ ಬಂದು ಅವರ ಸೇವೆಯನ್ನು ಮಾಡ
ಬಹುದು.
ಮಾಧವನು ಚಿಕ್ಟಮ್ಮನಿಗೆ ನಮಸ್ಕರಿಸಿ ಆಕೆಯನ್ನು ಕಳುಹಿಸಿ
ತಂದಿಗೆ ಕಾಗದವನ್ನು ಬರಿದಿಟ್ಟನು. ಅನಂತರ ತನ್ನ ಪ್ರೇಮ
ಪಾತ್ರವಾದ, "ಶ್ವೇತ``ನೆಂಬ ಕುದುರಿಯನ್ನೇರಿ ಮಧ್ಯ ರಾತ್ರಿಯಲ್ಲಿಯೆ
ಪುನಹೆಯನ್ನು ಬಿಟ್ಟು ಹೊರಟನು. ಬೆಳಗಾಗುವುದರೊಳಗಾಗಿರಾಂ
ಪುರಕ್ಕೆ ಆರ್ಥ ದಾರಿಯು ಸಾಗಿತು. ಮಾರ್ಗಕ್ಕೆ ಸ್ವಲ್ಪದೂರದಲ್ಲಿದ್ದ
ಒಂದು ಅಗ್ರಹಾರದಲ್ಲಿ ಅ ದಿನ ಮಧ್ಯಾಹ್ನೆ ಭೋಜನಮಾಡಿಕೊಂಡು
ಸ್ಕಲ್ಸ ಹೊತ್ತುವಿಶ್ರಾಂತಿಯನ್ನು ಹೊಂದಿ ಸಾಯಂಕಾಲಕ್ಕೆ ಸರಿಯಾಗಿ
ರಾಂಫುರವನ್ನು ಸೇರಿದನು. ಗಂಗಾಬಾಯಿಯ ಸೇವಕಳಾದ ಕಾಳಿ
ಯೆಂಬವಳ ಮನೆಯಲ್ಲಿ ಕುದುರೆಯನ್ನು ಕಟ್ಟ ಹಾಕಿ, ತಾನು ಮಾತ್ರ
ವಿಶ್ವನಾಥನ ಮನೆಗೆ ಸುಮಾರು ೮ ಗಂಟೆಯ ಸಮುಯದಲ್ಲಿ ಬಂದನು.
ಅಲ್ಲಿಂದಾಜಿಗೆ ನಡಿದುದು ತಿಳಿದೇ ಇದೆ. ಮಾಧವನೆ ಲಕ್ಷ್ಮೀ ಪತಿ
ಯೆಂಬ ಹೆಸರಿನಿಂದ ಸುಭದ್ರೆಯನ್ನು ವಿವಾಹಮಾಡಿಕೊಂಡವನು .
ಪಂಡರಫುರದಿಂದ . ಅತ್ತೆಮಾವಂದಿರ ಅನುಜ್ಜೆಯನ್ನು . ಪಡೆದು
-------------------------------------
೫೯
ಮಾಧವರಾಯನು ಹಿಂದಿರುಗಿ ರಾಂಪುರಕ್ಕೆ ಬಂದು ಕಾಳಿಗೆ ಕುದುರೆ
ಯನ್ನು ಕಾಪಾಡಿಕೊಂಡಿದ್ದುದಕ್ಕಾಗಿ ಐದುರೂಪಾಯಿಗಳನ್ನು ಬಹು
ಮಾನವಾಗಿ ಕೊಟ್ಟು ಅಲ್ಲಿಂದ ಆದಿನರಾತ್ರಿಯೆ ಮುಂದಕ್ಕೆ ತೆರಳಿದನು.
ಅವನಿಗೆ ಇಂತಹ ಕಡೆಯೇ ಹೋಗಬೇಕೆಂಬ ಉದ್ದೇಶವಾವುದೂ
ಇರಲಿಲ್ಲ. ಆದುದರಿಂದ ಕುದುರೆಯನ್ನು ಅದರ ಮನಸ್ಸು ಬಂದಕಡೆ
ಹೋಗುವುದಕ್ವೆ ಬಿಟ್ಟನು. ಅದು ಒಂದಾನೊಂದು ಭಾಟಾಮಾರ್ಗವ
ನ್ನನುಸರಿಸಿ ನಡೆಯಿತು, ಬೆಳಗಾದಮೇಲೆ ದಾರಿಯಲ್ಲಿ ಹೋಗುವವರ
ನ್ನು ವಿಚಾರಿಸಿದುದರಲ್ಲಿ ಅದು ಹೈದರಾಬಾದಿಗೆ ಹೋಗುವ ಮಾ
ರ್ಗವೆಂದೂ, ಆರಾಜ್ಯದ ಎಲ್ಲೆಯನ್ನು ಅವನು ಸಮೀಪಿಸಿರುವುದಾಗೆ
ಯೂ ತಿಳಿಯಬಂದಿತು. ಮಾಧವನು,ನೀರು ಸಿಕ್ಕಿದಸ್ಥಳದಲ್ಲಿ ಸ್ನಾನ
ಸಂಧ್ಯಾವಂದನೆಗಳನ್ನು ಮಾಡಿಕೊಂಡು ಕುದುರೆಗೆ ಸ್ವಲ್ಪ ವಿಶ್ಯಾಂತಿ
ಕೊಟ್ಟು ಮುಂದೆ ಹೊರಡುವುವಾಗಿ ಯೋಜಿಸಿ ಬಿಸಿಲು ಇನ್ನೂ
ಕ್ರೂರವಾಗಿಲ್ಲದುದರಿಂದ ಸ್ವಲ್ಪ ಚುರುಕಾಗಿ ಕುದುರೆಯನ್ನು ನಡೆಯಿಸಿ
ದನು. ಸ್ವಲ್ಪ ಹೊತ್ತಿನಲ್ಲಿಯೆ ಭೀಮಾನದಿಯ ಒಂದು ಸಣ್ಣ ಶಾಖೆಯ
ಬಳಿಗೆಬಂದನು. ಅಲಿ ಸ್ನಾನಕ್ತೆ ಪ್ರಶಸ್ತವಾಗಿದ್ಸುದರಿಂದ ಸೇತುವೆಯ
ಮೇಲೆ ನದಿಯ ಅಚೆಯದಡಕ್ಕೆ ಹೋಗಿ, ಕುದುರೆಗೆ ನೀರು ಕುಡಿಸಿ
ಅದನ್ನು ಹತ್ತಿರವಿದ್ದ ತೋಪಿನಲ್ಲಿ ಮೇಯುವುದಕ್ಕೆ ಬಿಟ್ಟನು. ಅಲ್ಲಿಂದ
ನದಿಯಬಳಿಗೆ ಹೋಗಲು ಹಿಂದಿರುಗುವಾಗ್ಗೆ ರಸ್ತೆಯಿಂದ ಹೆಂಗಸರು
ಮಕ್ಕಳು ಕೂಗಿಕೊಳ್ಳುವಶಬ್ಬವೂ ಕುದುರಿಯ ಗಾಡಿಯೊಂದು ಬಹು
ರಭಸದಿಂದ ಬರುವ ಶಬ್ದವೂ ಕೇಳಿಬಂದಿತು. ಮಾಧವನು ಅಂಬಿನವೇ
ಗದಿಂದ ರಸ್ತೆಗೆ ಓಡಿದನು. ಎದುರಿಗೆ ಮುಹಾವೇಗದಿಂದ ಸಾರಥಿಯಿ
ಲ್ಲದ ಗಾಡಿಯನ್ನು ಬಹಳವಾಗಿ ಬೆದರಿ ಕಂಗೆಟ್ಟ ಕುದುರೆಯು ಎಳೆದು
ಕೊಂಡು ಬರುತ್ತಿದೆ. ಹಿಂದುಗಡೆ ಸೇತುವೆಯಿದೆ.ಸ್ನಲ್ಲ ಸಾವಕಾಶವಾ
ದರೂ ಗಾಡಿ ಕುದುರೆ, ಗಾಡಿಯೊಳಗಿದ್ದ ಜನಗಳು, ಎಲ್ಲರೂ ಒಂದೇ
-------------------------------------
೬೦
ಆವರ್ತಿ ನದಿಯೊಳಕ್ಕೆ ಉರುಳಿಹೋಗುವ ಸಂಭವವುಂಟು. ಮಾಧ
ವನು ತನ್ನ ಜೀವದ ಆಶೆಯನ್ನೂ ಮರೆತನು. ಧೈರ್ಯವಾಗಿ ರಸ್ತೆಯ
ನಡುವೆ ನಿಂತು ರಭಸದಿಂದ ಬರುತ್ತಿರುವ ಕುದುರೆಯಕಡಿವಾಣವನ್ನು
ಹಿಡಿದು ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ನಿಲ್ಲಿಸಿದನು. ಅನಂತರ ಆ
ಗಾಡಿಯೊಳಗಿದ್ದ ವರನ್ನೆಲ್ಲ ಒಬ್ಬೊಬ್ಬರನ್ನಾಗಿ ಕೆಳಗೆ ಇಳಿಸಿ ಒಂದು
ಮರದ ನೆರಳಿನಲ್ಲಿ ಮಲಗಿಸಿದನು. ಅದರಲ್ಲಿಒಬ್ಬ ವೃದ್ಧ ಮುಸಲ್ಮಾನನು,
ಒಬ್ಬ ಹೆಂಗಸು , ಇಬ್ಬರು ಮಕ್ಕಳೂ ಇದ್ದರು. ಯಾರಿಗೂ ಮೈಮೇಲೆ
ಪ್ರಜ್ಞೆಯಿರಲಿಲ್ಲ. ಮಾಧವನನು ನದಿ ಹೋಗಿ ತನ್ನ. ಹೊದಿಯುವ
ಪಂಚೆಯನ್ನು ನೆನಸಿಕೊಂಡು ಬಂದು ಎಲ್ಲರ ತಲೆಯ ಮೇಲೂಹಾಕಿ
ದನು. ಅವರಲ್ಲರೂ ಚೇತರಿಸಿಕೊಳ್ಳುವ ಸಮಿತಿಯು ಕಂಡುಬಂದೊಡ
ನೆಯೆ ಮುಸಲ್ಮಾ ನರ ಹೆಂಗಸಿನ"ಘೋಷಾ“ಕ್ಕೆ ಭಂಗ ಬರಬಾರದೆಂ
ದುಕೊಂಡು ತಾನು ಮರೆಯಾಗಿ ನಿಂತನು. ಮೊದಲು ಮಕ್ಕಳಿಬ್ಬರೂ
ಎಚ್ಚತ್ತರು. ಅನಂತರ ಹೆಂಗಸು, ಆಮೇಲೆ ವೃದ್ಧನೂ ಎದ್ದು ಕುಳಿ
ತರು, ಆ ವೃದ್ದನಿಗೆ,ಪರಲೋಕರಲ್ಲಿರುವೆನೊ ಈ ಭೂಮಿಯ ಮೇ
ಲೆಯೇ ಇ ರುವೆನೊ`` ಎಂಬ ಭ್ರಾಂತಿಯುಂಟಾಯಿತು. ಹಾಗೆಯೆ
ಸುತ್ತಲೂ ನೋಡಿದುದರಲ್ಲಿ ಭೂಲೋಕದ ಗಿಡಮರಗಳೂ ಕಲ್ಲು ಗು
ಡ್ಡಗಳೂ ಕಂಡುಬಂದುವು. ಹತ್ತಿರದಲ್ಲಿ ನದಿಯ ಘರ್ಜನೆಯೂ,ಪಕ್ಷಿ
ಗಳ ಕಲಕಲಧ್ವನಿಯೂ ಕೇಳಿಬಂದುವು. ಎದುರಿಗೆ ತನ್ನ ಜತೆಯಲ್ಲಿದ್ದ
ಹೆಂಗಸುಮಕ್ಕಳು ಸೌಖ್ಯವಾಗಿ ತುಳಿತುಕೊಂಡಿರುವುದನ್ನು ನೋಡಿ
ಮನಸ್ಸಿಗೆ ಧೈರ್ಯವಾಯಿತು. "ಯಾ ! ಅಲ್ಲಾ! ಏನು ಪುಣ್ಣಮಾಡಿ
ದ್ದೆವೊ | ಈದಿನ ನಮ್ಮ ಪ್ರಾಣವುಳಿಯಿತು" ಎಂದು ಅನಂದಬಾಷ್ಪ
ಗಳನ್ನು ಸುರಿಸಿದನು. ರಸ್ತೆಯಲ್ಲಿ ಗಾಡಿಯು ಬಿಟ್ಟ ರುವುದನ್ನೂ ಕುದು
ರೆಯು ಮರಕ್ಕೆ ಕಟ್ಟಿ ಹಾಕಲ್ಪಟ್ಟಿ ರುವುದನ್ನೂ ನೋಡಿ, ಯಾವನೋ
ಧೈರ್ಯಶಾಲಿಯು ಗಾಡಿಯನ್ನು ಹಿಡಿದೇನಿಲ್ಲಿಸಿರಬೇಕೆಂದು ತಿಳಿದು
------------------------------------
೬೧
ಕೊಂಡು, " ನಮ್ಮ ಪ್ರಾಣಗಳನ್ನುಳಿಸಿದ ಮಹಾತ್ಮನು ನಮಗೆ ದರ್ಶನ
ಕೊಡಬಾರದೆ`` ಎಂದು ಗಟ್ಟಿಯಾಗಿ ಕೂಗಿದನು. ಉತ್ತರ ಬರಲಿಲ್ಲ.
“ ಇದೇನಾಶ್ಚರ್ಯ, ದೇವರೇ ಬಂದು ಸಮ್ಮ್ರನ್ನು ಕಾಪಾಡಿದನೊ ?
ಇಗೋ ಇಲ್ಲಿ ಪಂಚೆಯು ಬಿದ್ದಿದೆ. ಯಾರೋ ಹಿಂದೂ ಮಹಾನು
ಭಾವನು ನಮ್ಮ ಪ್ರಾಣಗಳನ್ನುಳಿಸಿರಬೇಕು. ಎಂದಂದುಕೊಂಡು
ಅಲ್ಲಿಂದ ಎದ್ದು ಸ್ವಲ್ಪ ಮುಂದಕ್ಕೆ ಹೋಗುತ್ತಲೆ,ಮಾಧವನು ಕಂಡು
ಬಂದನು. "ಏನು, ಮಹಾರಾಜ್ ! ಇಷ್ಟುಮಟ್ಟಿಗೆ ನಮ್ಮಲ್ಲಿ ದಯೆ
ಯನ್ನು ತೋರಿಸಿಯೂ ನಿರ್ದಯರಾಗಬಹುದೆ ? ನಿಮ್ಮ ದರ್ಶನ
ನ್ನೇಕೆ ಕೊಡಲಿಲ್ಲ?“ ಎಂದು ವೃದ್ಧನು ಕೇಳಿದುದಕ್ಕೆ "ಘೋಷಾ``
ಹೆಂಗಸಿಗೋಸ್ಕರ ತಾನು ಮರೆಯಲ್ಲಿ ನಿಂತಿದ್ದುದಾಗಿಯೂ ತಾನು
ಕರ್ತವ್ಯವನ್ನು ಮಾಡಿದನೆ ಹೊರತು. ಬೀರೆ ಯಾವ ಮಹತ್ಕಾರ್ಯ
ವನ್ನೂ ಮಾಡಿದಂತೆ ಎಣಿಸಕೂಡದೆಂದೂ ಮಾಧವನು ಉತ್ತರವನ್ನು
ಹೇಳಿದನು, ಆ ವೃದ್ದನಿಗೆ ಮಾಧವನ್ನ ಮಾತನ್ನು. ಕೇಳಿದೊಡನೆಯೆ
ಅಪರಿಮಿತವಾದ ವಿಸ್ವಾಸವು ಹುಟ್ಟಿ, "ಮಹಾನುಭಾವ, ನೀನೆ ನನ್ನ
ಭಾಗಕ್ಕೆ ತಂದೆತಾಯಿ, ಸಮಸ್ತ ಬಂಧುಬಳಗವು. ಒಂದಲ್ಲದೆನಾಲ್ಡು
ಪ್ರಾಣಿಗಳನ್ನು ಸಂರಕ್ಷ ಣೆಮಾಡಿರುವೆ. ಆದುದರಿಂದ ನಾವು ನಮ್ಮ
ಜೀವಾವಧಿ ನಿನ್ನ ಸೇವೆಯನ್ನು ಮಾಡಲು ಅನುಜ್ಞೆಯನ್ನು ಕೊಡು.
ನನ್ನ ಸಮಸ್ತವಾದ ಐಶ್ಕರ್ಯವೂ ನಿನ್ನದೇ. ನಮ್ಮ ಸಂಗಡ ಬಂದು
ನಮ್ಮ ಕೃತಜ್ಞತೆಯನ್ನು ಪ್ರಕಾಶಮಾಡಿಳೊಳ್ಳಲು ಅವಕಾಶವನ್ನು
ಕೊಡು“ ಎಂದನು. ಮಾಧವನಿಗೆ ಅತನ ಕೋರಿಕೆಯು ಮೀರಲಾರ
ದಂತಹುದಾಗಿ ತೋರಿದುದರಿಂದ ಅವನ ಜತೆಯಲ್ಲಿ ಹೋಗಲು ಇಷ್ಟ
ಪಟ್ಟ್ರನು, ಆ ವೃದ್ಧನು ನೈಜಾಮನ ಮುಖ್ಯಮಂತ್ರಿ ಗಳಲ್ಲೊ ಬ್ಬನಾ
ಗಿದ್ದು ಕೆಲಸದಿಂದ ವಿಶ್ರಾಂತನಾದ ನವಾಬ್ ವಿಕಾರ್-ಉಲ್-ಮು
ಲ್ಕನೆಂದೂ, ಆತನ ಜಹಗೀರಿಯು ಅಲ್ಲಿಗೆ ೭ಮ್ಶೆಲಿಗಳ ದೂರದಲ್ಲಿರು
--------------------------------------
೬೨
ವುದಾಗಿಯೂ ತಿಳಿಯಬಂದಿತು. ಸ್ವಲ್ಪ ಹೊತ್ತಿನಲ್ಲೆ ನವಾಬನಕಡೆಯ
ಅನುಚರರು ಪಲ್ಲಕ್ಕಿ ಗಳನ್ನೂ ಮೇನಾಗಳನ್ನೂ ಹೊರಸಿಕೊಂಡು
ಅದೇ ಮಾರ್ಗದಲ್ಲಿ ಬರುತ್ತಾ ತೋಪಿನಲ್ಲಿ ಇ ವರು ಸ್ವಲ್ಪ ಮಾತ್ರವೂ
ಗಾಯವಿಲ್ಲದೆ ಸುರಕ್ಷಿತರಾಗಿರುವುದನ್ನು ಕಂಡು ಪರಮಾನಂದಭರಿ
ತರಾದರು . ಒಂದೆರಡು ಗಂಟೆಯೊಳಗೆ ನವಾಬನೂ ಅವನ ಹೆಂಡತಿ
ಮಕ್ಕಳೂ ಮಾಧವನೂ ಜಹಗೀರಿಯ ಮುಖ್ಯಗ್ರಾಮವನ್ನ ಸೇರಿ
ದರು. ಅಲ್ಲಿ ಒಂದು ವಾರವಿದ್ದು ಅನಂತರ ಎಲ್ಲರೂ ಹೈದರಾಬಾದಿಗೆ
ಪ್ರಯಾಣಮಾಡಿದರು. ಅಲ್ಲಿ ನವಾಬನು ಮಾಧವನಿಗೆ ಸಕಲವಿಧ
ವಾದ ಸೌಕರ್ಯವನ್ನೂ ಕಲ್ಪಿಸಿಕೊಟ್ಟು. ಅವನ ಸೌಖ್ಯಕ್ಕೆಸ್ವಲ್ಪವೂ
ಕುಂದುಬಾರದಂತೆ ತಾನೆ ಸ್ವಂತವಾಗಿ ನೋಡಿಕೊಳ್ಳುತ್ತಿದ್ದ ನು.
ಮಾಧವನು ತಾನು ಯಾವ ಉದ್ಗೋಗವೂ ಇಲ್ಲದೆ ಸುಮ್ಮನೆ ಉಂ
ಡಾಡಿಭಟ್ಟನೋತಿರುವುದು ಸರಿಯಲ್ಲವೆಂದು ಸೂಚಿಸಿದುದರ ಮೇಲೆ
ನವಾಬನುತನ್ನ ಸಮಸ್ತವಾದಆಡಳಿತವನ್ನೂ ಅವನೇ ನೊಡಿಕೊಳ್ಳು
ವಂತೆ ಮೊಃಖ್ತೇಸರನನ್ನಾಗಿ ನೇಮಿನಿದನು. ಹೀಗೆ ಒಂದೆರಡು ತಿಂಗಳು
ಕಳೆಯಿತು. ಮಾಧವನಮೇಲೆ ನವಾಬನ ಪ್ರೀತಿಯು ದಿನೆದಿನೆ ಹೆಚ್ಚು
ತ್ತ ಲಿದ್ದಿತೆ ಹೊರತು ಕಡಿಮೆಯಾಗಲಿಲ್ಲ.. . ಮಾಧವನ ನಮ್ರತೆ,
ಪ್ರಾಮಾಣಿಕತೆ, ಔದಾರ್ಯ,. ಮುಂತಾದ ಗುಣಗಳು . ಅನ್ಯಾದೃಶ
ವಾದುವಾಗಿದ್ದುದರಿಂದ ಏಲ್ಲರೂ ಅವನನ್ನು ಪ್ರೀತಿಸುತ್ತಿದ್ದ ರು.
ಆ ದಿನ ವರ್ತಮಾನ ಪತ್ರಿಕೆಯಿಂದ ತಂದೆಯ ಕಾಯಿಲೆಯ
ಸುದ್ದಿಯು ತಿಳಿಯಬರುತ್ತಲೆ ಮಾಧವನು ನವಾಬನಲ್ಲಿಗೆ ಹೋಗಿ ಆ
ಪತ್ರಿಕೆಯನ್ನು ತೋರಿಸಿ ಪುನೆಹೆಗೆ ಹೋಗಲು ಅಪ್ಪಣೆಯನ್ನು ಕೇಳಿದನು.
ಅದುವರಿಗೆನವಾಬನಿಗೆ ಮಾಧವನ ಪೂರ್ವೋತ್ತರವುತಿಳಿದಿರಲಿಲ್ಲ ಈಗೆ
ಅವನು ಸಾಮಾನ್ಯಮನುಷ್ಯನಲ್ಲವೆಂದು,ತನ್ನಂತಹ ಶ್ರೀಮಂತನಮಗ
ನೆಂದೂ ತಿಳಿಯಬಂದಿತು. ಅನಂತರ ಅವನಿಂದಲೇ ನಡೆದ ಸಂಗತಿಯೆಲ್ಲ
----------------------------------------
೬೩
ವನ್ನೂ ವಿಚಾರಿಸಿ ಅವನು ಪ್ರತಿಜ್ಞೆಯನ್ನುಳಿಸಿ ಕೊಳ್ಳಲು ಅಪರಿಮಿತವಾದ
ಐಶ್ವರ್ಯವನ್ನೂ ಸಹಬಿಟ್ಟು ಬಂದುದಕ್ಕೆ ಬಹಳ ಅಶ್ಲರ್ಯಪಟ್ಟು ಅವ
ನನ್ನು ಶ್ಲಾಘಿಸಿದನ್ನು. ತಾನು ಸರ್ವದಾ ಮಾಧವನ ಕ್ಷೇಮಚಿಂತಕ
ನಾಗಿರುವುದಾಗಿಯೂ, ಯಾವುದಾದರೂ ಸಮಯವು ಒದಗಿದಾ ಗ
ತನಗೆ, ಕೃತಜ್ಞತೆಯನ್ನು ಪ್ರಶಾಶಪಡಿಸಲು ಅವಕಾಶ ಕೊಡದಿರಕೂಡ
ದೆಂದೂ,ನವಾಬನು ಮಾಧವನಿಗೆ ತಿಳಿಸಿ ಅವನನ್ನು ಕಳುಹಿಸಿಕೊಟ್ಟನು.
ಸುಭದ್ರಗೆ ಸಂಭವಿಸಿದ ವಿಪತ್ತುಮಾಧನನಿಗೆ ರೈಲ್‌ಗಾಡಿಯಲ್ಲಿ ವೃತ್ತಾಂ
ತಪತ್ರಿಕೆಯಿಂದ ತಿಳಿಯಬಂದಿತು. . ತಾನು ವಿಶ್ತನಾಥನಿಗೆ ಬರೆದಿದ್ದ
ಕಾಗದವು ಹಿಂದಿರುಗಿ ಬಂದುದಕ್ಕೆ ಅವರು ಪುತ್ರೀ ವಿಯೋಗವನ್ನು ತಡೆ
ಯಲಾರದೆ ದೇಶಾಂತರ ಹೊರಟುಹೋಗಿರುವುದೆ ಕಾರಣವಿರಬಹು
ದೆಂದು ಊಹಿಸಿದನು. ಮಾಧವನ ಭವಿಷ್ಯವು ಕೇವಲ ಅಂಧಕಾರಮ
ಯವಾಗಿ, ತೋರಿತು.
----
---ಹ ದಿ ನೈ ದ ನೆ ಯ ಅ ಧ್ಯಾ ಯ---
ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ
ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ.
ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ
ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ
ಕೊಟ್ಟನು. ಕಾಕ್ಸ್ ಸಾಹೇಬನು ಶಂಕರರಾಯನ ಸ್ಥಿತಿಯನ್ನು ನೋಡಿ
ಔಷದವನ್ನು ಕೊಡುವುದರಿಂದ ಯಾವ ಉಪಯೋಗವೂ ಇಲ್ಲವೆಂದು
ತಿಳಿದು ಹಿಂದೆಹೇಳಿದ ರೀತಿಯಲ್ಲಿಎಲ್ಲಾ ವಾರ್ತಾಪತ್ರಿಕೆಗಳಲ್ಲಿಯೂ
ಪ್ರಕಟಿಸಿ ಶಂಕರರಾಯನಿಗೆ ಮಗನು ಶೀಘ್ರದಲ್ಲಿಯೆ ಬರುವನೆಂಬ ಆಶೆ
---------------------------------------
೬೪
ಯನ್ನು ಹುಟ್ಟಿಸಿ ಮಾಧನನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದನು.
ಅವನ ಯುಕ್ತಿಯು ಕೈಗೂಡಿತು. ಮಾಧವನು ಬಂದೇ ಬಂದನು.
ಮಾಧವನು ಮನೆಗೆಬಂದಾಗ್ಗೆ ಕಾಕ್ಸ್ ಸಾಹೇಬನ ಶಂಕರ
ರಾಯನಕೊಠಡಿಯಲ್ಲಿ ಅವನೊಡನೆ ನಾನಾಮಾತುಗಳನ್ನಾಡುತ್ತಾ
ಕುಳಿತಿದ್ದನು. ನಿಮ್ಮ ಮಗನು ಕೂಡಲೆ ಬರುವನು. ಇವತ್ತಿನ ರೈಲಿ
ನಲ್ಲಿಯೇ ಬಂದಿರಬಹುದು. ಮನಸ್ಸಿನ ಕೊ ರತೆಯನ್ನು ಬಿಡಿ; ಅವನನ್ನು
ನೋಡಿದಕೂಡಲೆ ನಿಮ್ಮ ಕಾಯಿಲೆಯು ಗುಣವಾಗುವುದು.``ಎಂದು
ಹೇಳುತ್ತಿರುವಾಗಲೆ ಮಾಧವನು ಕೊಠಡಿಯೊಳಕ್ಕೆ ಬಂದನು. ಅವ
ನನ್ನು ನೋಡಿದೊಡನೆಯೆ ಶಂಕರರಾಯನು ಕಣ್ಣುಗಳನ್ನು ಮುಚ್ಚಿ
ಕೊಂಡು ನಿಶ್ಚೇಷ್ಟನಾಗಿ ಮುಲಗಿಕೊಂಡನು. ಮಾಧವನು ಕೂಡಲೆ
ಹೋಗಿ ತಂದೆಯ ಕಾಲುಗಳನ್ನು ಹಿಡಿದುಕೊಂಡನು. ಕಣ್ಣಿನಲ್ದಲಿ ನೀರು
ಸುರಿಯುತ್ತಿತ್ತು ಡಾಕ್ಟರ ಸಾಹೇಬನು ಶಂಕರರಾಯನ ನಾಡಿಯನ್ನು
ಹಿಡಿದು ನೋಡಿ, "ಪ್ರಮಾದವೇನೂ ಇಲ್ಲ. ಹೆದರಬೇಡಿ`` . ಎಂದು
ಮಾಧವನಿಗೆತಿಳಿಸಿ ಶಂಕರರಾಯನ ಎದೆಯಮೇಲೂ ನೆತ್ತಿಯಮೇಲೂ
ಒದ್ದೆಯಒಟ್ಜೆಯನ್ನು ಹಾಕಿದನು ಸ್ವಲ್ಪಹೊತ್ತಿನಲ್ಲಿಯೆಶಂಕರರಾ ಯುನು
ಕಣ್ದೆರೆದು ಮಾಧವನನ್ನು ಚೆನ್ನಾ ಗಿನೋಡಿ, ನನ್ನ ನ್ನು ಮನ್ನಿಸಿರುವೆಯಾ
ಎಂದು ಕೇಳಿದನು. ಮಾಧವನು "ನಾನು ತಮ್ಶ್ರನ್ನು ಬಿಟ್ಟು ಹೋಗಿ
ಇಷ್ಟರ ಮಟ್ಟಿನ ಮನೋವ್ಯಥೆಗೂ ಶಾರೀರಕಜಾಡ್ಯಕ್ಳೂ ಗುರಿಮಾಡಿ
ದುದಕ್ಕೆ ತಮ್ಮ ಲ್ಲಿ ಎಷ್ಟು ಕ್ಷಮೆಯನ್ನು ಬೇಡಿದರೂ ಸ್ವಲ್ಪವೆ ಇದೆ“
ಎಂದನು. ಶಂಕರರಾಯನು, " ಖಂಡಿತವಾಗಿ ನಿನ್ನ ತಪ್ಪು ಎಳ್ಳಷ್ಟೂ
ಇಲ್ಲ. . ನೀನು ಈಶ್ವರಸಾಕ್ಸಿ,ಯಾಗಿ ಪ್ರತಿಜ್ಞಿಮಾಡಿರುವುದು ನನಗೆ
ತಿಳಿಯದೇ ಹೋದುದರಿಂದ ಇಷ್ಟು ಅನರ್ಥಕ್ಕೆ ಕಾರಣವಾಯಿತು.
ನೀನು ಇಲ್ಲಿಂದ ಹೊರಟು ಹೋಗಿ ಕಷ್ಟಗಳನ್ನ ನುಭವಿನಿ
ದೆಯೊ`` ಎಂದು ನಿಟ್ಟುಸಿರು ಬಿಟ್ಟನು. ಮಾಧವನು ತಂದೆಯ ಪಾದಾ
---------------------------------------
೬೫
ರವಿಂದದಪ್ರಭಾವದಿಂದ ತನಗೆಯಾವನತೊಂದರಿಯೂ ಆಗಲಿಲ್ಲವೆಂದೂ,
ಹೈದರಾಬಾದಿನಲ್ಲಿ ಒಬ್ಬ ಶ್ರೀಮಂತನ ಸಹಾಯವು ದೊರೆತಿರುವು
ದೆಂದೂ ತಾನು ಹೊರಟ ಮೊದಲು ನಡೆದ ಸಂಗತಿಯನ್ನೆ ಲ್ಲಾ ವಿಶದವಾಗಿ
ತಿಳಿಸಿದನು. ಶಂಕರರಾಯನು ಮಗು, ನೀನೂ ನಿನ್ನ ಹೆಂಡತಿಯೂ
ಸುಖವಾಗಿರುವುದನ್ನು ನೋಡಬೇಕೆಂದು ಬಹುಳುತೂ ಹಲವಿದೆ. ಈ
ಕ್ಷಣವೆ ಅವಳನ್ನು ಬರಮಾಡು. ಎಂದು ಹೇಳಿದುದಕ್ಕೆ ಮಾಧವನು
`ನಮ್ಮ ಮಾವನವರು ಊರು ಬಿಟ್ಟು ಎಲ್ಲಿಯೋ ಹೋಗಿದ್ದಾರೆಂದು
ವರ್ತಮಾನ. ಅವರು ಊರಿಗೆ ಬಂದಮೇಲೆ ಆಗಬಹುದು. ಈಗ
ತಾವು ಸ್ವಸ್ಥಚಿತ್ತರಾಗಿ ಶರೀ ರಕ್ಕೆ ಆರೋಗ್ಯವನ್ನುಂಟ:ಮಾಡಿಕೊಳ್ಳ
ಬೇಕೆಂದು ನನ್ನ ಪ್ರಾರ್ಥನೆ“ಎಂದನು. ಅಷ್ಣುಹೊತ್ತಿಗೆ ಗಂಗಾಬಾಯಿ
ಯೂ ಅಲ್ಲಿಗೆ ಬಂದಳು. ಮಾಧವನು ಎದ್ದು ಆಕೆಗೆ ನಮಸ್ತ್ರರಿಸಿದನು
ಅವಳು ಶಂಕರರಾಯನನ್ನು ಕುರಿತು " ಭಾವ! ಇನ್ನು ನಿಮ್ಮ ಕಾಯಿಲೆ
ಹೋಯಿತು. ನಿಮ್ಮ ಮಗನು ಅನ್ನ ವಿಲ್ಲದೆ ಎಲ್ಲಲ್ಲಿ ಅಲೆಯುತ್ತಾನೊ
ಎಂದು ಯೋಚನೆ ಮಾಡುತ್ತಿದ್ದಿರಿ. ಅವನ ಮುಖವನ್ನು ನೋಡಿ!
ಇಲ್ಲಿದ್ದುದಕ್ಕಿಂತ ಎಷ್ಟೋ ಗೆಲುವಾಗಿದೆ. ದೇಶವನ್ನು ಸುತ್ತಿದುದ
ರಿಂದ ಅವರಿಗೆ ಅನುಕೂಲವಾಯಿತೆ ಹೊರತು ಪ್ರತಿಕೂಲವಿಲ್ಲ` ` ಏಂ
ದಳು, ಶಂಕರರಾಯನು “ ಸುಭದ್ರೆಯನ್ನು ನೋಡಿದಮೇಲೆ ನನ್ನ
ಕಾಯಿಲೆಯು ಸಂಪೂರ್ಣವಾಗಿ ಗುಣವಾಗುವುದು“ಎಂದನು.ಕಾಕ್ಸ್
ಸಾಹೇಬನು. ಸ್ವಾಮಿ! ಇನ್ನು ನನಗೆ ಅಪ್ಪಣೆ ಕೊಟ್ಟರೆ ನಾನು ಹೋಗು
ವೆನು. ವಾರಕ್ಕೊಂದಾವರ್ತಿ ತಮ್ಮನ್ನು ಬಂದು ನೋಡಿಕೊಂಡು
ಹೋಗುತ್ತೇನೆ. ತಮ್ಮ ರಕೋಗವೇನೋ ಶೀಘ್ರದಲ್ಲಿಯೆ ಗುಣವಾಗು
ವುದರಲ್ಲಿ ಸಂದೇಹವಿಲ್ಲ" ಎಂದನು. ಶಂಕರರಾಯನು ತನ್ನ ತಲೆದಿಂಬಿನ
ಕೆಳಗಿನಿಂದ ನೂರು ಸವರನ್ ಗಳನ್ನು ತೆಗೆದು. ಕಾಕ್ಸ್ ಸಾಹೇಬನಿಗೆ
ಕೊಡುವುದಕ್ಕೆ ಹೋದನು. ಅವನು ತೆಗೆದುಳೊಳ್ಳಲಿಲ್ಲ. ನಾನು
-------------------------------------
೬೬
ಯಾವ ಜಿಕಿತ್ಸೆಯನ್ನೂ ಮಾಡದೆ ತೆಗೆದುಕೊಳ್ಳುವುದು ಸರಿಯಲ್ಲ
ವೆಂದು ಹೇಳಿ ಶಂಕರರಾಯನ ಅಪ್ಪಣೆಪಡೆದು, ಮಾಧವರಾಯನ ಕೈ
ಕುಲಿಕಿ. .ನೀವೇ ನಿಮ್ಮ ತಂದೆಗೆ“ಔಷಧಿ“ ಎಂದು ಹೇಳಿ. ಹೊರಟು
ಹೋದನು . ಒಂದು ವಾರ ಕಳೆಯಿತು. ಕಾಕ್ಸ್ ಸಾಹೇಬನು ಬಂದುನೋಡಿ
ಶಂಕರರಾಯನ ದೇಹಸ್ಥಿತಿಯು ಬಹಳ ಮಟ್ಟಿಗೆ ಗುಣಮುಖವಾಗಿರು
ವುದನ್ನು ಕಂಡು ಸಂತೋಷವಪಟ್ಟನು. ಮಾಧವನಿಗೂ ಗಂಗಾಬಾ
ಯಿಗೂ ಶಂಕರರಾಯನ ದೇಹಸ್ಥಿತಿಯ ವಿಷಯದಲ್ಲಿ ಉಂಟಾಗಿದ್ದ
ಕೊರತೆಯು ಕಡಮೆಯಾಯಿತು. ಅದರೆ ಅದಕ್ಕೆ ಬದಲಾಗಿ ಸುಭದ್ರೆ
ಯ ವಿಚಾರದಲ್ಲಿ ಬಹು ಯೋಚನೆಗೆ ಪ್ರಾರಂಭವಾಯಿತು. ಗಂಗಾ
ಬಾಯಿಗೆ ಮಾಧವನು ವರ್ತಮಾನಪತ್ರಿಕೆಯಿಂದ ಸುಭದ್ರೆಯ ಸಮಾ
ಚಾರವನ್ನು ಓದಿ ಹೇಳುವವರೆಗೆ ಅವಳಿಗೆ ಯಾವ ಸಂಗತಿಯೂತಿಳಿದಿ
ರಳಿಲ್ಲ. ಈಗ ಏನುಮೌಡುವುದಕ್ಳೂ ತಿಳಿಯದು. ಶ್ರೀಧರರಾಯ
(ಆತ್ಮ ರಾಮ) ನು ಸುಭದ್ರೆಯನ್ನು ಕರೆದುಕೊಂಡು ಹೋಗಿರುವ
ಸ್ಥಳವು ಗೊತ್ತಾದರೆ ಅನಂತರ ಏನಾದರೂ ಪ್ರಯತ್ರ ವನ್ನು ಮಾಡಬ
ಹುದು, ಅದು ತಿಳಿಯುವ ಬಗೆ ಹೇಗೆ? ಗಂಗಾಬಾಯಿಯು ಗುಟ್ಟಾ ಗಿ
ರಾಂಪುರಕ್ಕೆ ಹೋಗಿ ಅಲ್ಲಿನ ಸಮಾಚಾ ರಗಳನ್ನೆಲ್ಲಾ ತಿಳಿದುಕೊಂಡುಬರ
ಬೇಕೆಂದುಯೋಚಿಸಿ ಏನೋ ಒಂದು ನೆಪವನ್ನು ಹೇಳಿ ಶಂಕರರಾಯನ
ಅನುಮತಿಯನ್ನು ಪಡೆದು ಹೊರಟುಹೋದಳು. ಅಲ್ಲಿವಿಚಾರಿಸಿದುದರಲ್ಲಿ ರಾಮರಾಯನು ತನ್ನ ಮಗಳಿಗೆ ಪ್ರತಿಕಕ್ಶಿ ಯಾಗಿ ಸುಭದ್ರೆಯು ಬಂ
ದಳೆಂಬ ಅಸೂಯೆಯಿಂದ ಹೇಗಾದರೂಮಾಡಿ ಅವಳು ಮಾಧವನಿಗೆ
ದೊ ರೆಯದಂತೆ ಮಾಡಬೇಕೆಂದು ಉದ್ದೇ ಶಪಟ್ಟು ಶ್ರೀಧರರಾಯನಿಗೆ
ಸಹಾಯಮಾಡಿ ಅವನಿಗೆಕಾರಾ ಗೃಹವಿಮೋಚನೆ ಮಾಡಿಸಿದುದಲ್ಲದೆ
ಸಿವಿಲ್ ಕೋರ್ಟಿನಲ್ಲಿಯೂ ದಾವಾ ಹಾಕಿಸಿ ಗೆಲ್ಲಿಸಿದನೆಂತ ತಿಳಿಯ
--------------------------------------
೬೭
ಬಂದಿತು. ಅನಂತರ ಗಂಗಾಬಾಯಿಯು ರಾಮರಾಯನ ಸೇವಕ
ರಲ್ಲಿ ಮುಖ್ಯನಾದವನನ್ನು ಗೋಪ್ಯವಾಗಿ ಕರೆಯಿಸಿಕೊಂಡು ಅವನ
ಕೈಯಲ್ಲಿ ನೂರು ರೂಪಾಯಿಗಳ ಒಂದು ಚೀಲವನ್ನಿಟ್ಟು ಸುಭದ್ರೆಯ
ಸಮಾಚಾರವನ್ನು ಕೇಳಲು, ಆವನು ಒಂದುಕಡೆ ಯಜಮಾನನಪ್ಪಣೆ
ಯೂ ಮತ್ತೊಂದುಕಡೆ ಭಾರವಾದ ಹಣದಚೀಲವೂ ತ್ತಿ
ರಲು, ಕೊನೆಗೆ ಹಣವನ್ನು ಬಿಡಲಾರದೆ ಶ್ರೀಧರರಾಯನು ಸುಭದೆ,
ಯೊಡನೆ ಹೈದರಾಬಾದು ರಾಜ್ಯಕ್ಕೆ ಸೇರಿದ 'ನಿರ್ಮಲ್ `ಎಂಬ ಸ್ಥಗಳದಲ್ಲಿ
ರುವನೆಂದೂ, ಅವನಿ ಗೆ ಯಾವುದಕ್ಕೂ ಯೋಚನೆಯಿಲ್ಲದಂತೆ ರಾಮ
ರಾಯನುಯಥೇಚ್ಛವಾಗಿ ಹಣವನ್ನು ಕೊಟ್ಟು ಕಳುಹಿಸಿರುವನೆಂದೂ
ಹೇಳಿದನು. ಗಂಗಾಬಾಯಿಯು ಮಾರಣೆಯದಿನವೇ ಪುನಹೆಗೆ
ಹಿಂದಿರುಗಿದಳು. ಅವಳೂ. ಮಾಧವನೂ ಬಹಳಹೊತ್ತು ಯೋಚನೆ
ಮಾಡಿ. ವಿಕಾರ್-ಉಲ್-ಮುಲ್ಕನ ಸಹಾಯವನ್ನು ಪಡಿಯುವುದೇ
ಒಳ್ಳೆಯದೆಂದು ನಿರ್ಧರಿಸಿದರು. ಮಾಧವನು ಅವನ ಸಹಾಯವನ್ನು
ಬೇಡಿ, ಉಪಚಾರೋಕ್ತಿಗಳಿಂದ ಕೂಡಿದ್ದ ಒಂದು ಕಾಗದವನ್ನು
ಸವಿಸ್ಠಾರವಾಗಿ ಬರೆದನು.
----
ಹದಿನಾರನೆಯ ಅಧ್ಯಾಯ
ಮಾಧವರಾಯನ ಕಾಗದವು ಮುಟ್ಟಿ ದಾಗ್ಗೆ ವಿಕಾರ್-ಉಲ್-
ಮುಲ್‌ಕನು ಬೊಂಬಾಯಿನಲ್ಲಿದ್ದನು. ಅವನು ಆ ಕಾಗದವನ್ನು
ನೋಡಿದೊಡನೆಯೆ ತನ್ನ ಕೆಲಸವನ್ನೆಲ್ಲಾ ಆದಷ್ಟು. ಬೇಗನೆ ಮುಗಿಸಿ
ಕೊಂಡು ಹೈದರಾಬಾದಿಗೆ ಹಿಂದಿರುಗಿ ಅಲ್ಲಿನ ಪೋಲೀಸಿನವರೊಂದಿಗೆ
ಮಾತಾಡಿ ಗಂಗಾರಾಮನೆಂಬೊಬ್ಬ ಪೋಲೀಸು ದರೋಗನನ್ನು
ನಿರ್ಮಲಕ್ಕೆ ಕಳುಹಿಸಿಕೊಟ್ಟನು, ಗಂಗಾರಾಮನು ನಿರ್ಮಲವನ್ನು ಸೇರಿ,
---------------------------------------
೬೮
ಭಿಕ್ಷುಕನ ವೇಷದಿಂದ ಊರನ್ನೆಲ್ಲಾ ಸುತ್ತುತ್ತಿದ್ದನು, ಹೀಗೆ ಎರಡುದಿನ
ಗಳಾದುವು, ಅವನಿಗೆ ತಿಳಿಯಬಂದಿರುವ ಕುರುಹುಗಳುಳ್ಳ ಮನುಷ್ಯ
ನಾಗಲಿ ಹುಡುಗಿಯಾಗಲಿ ಎಲ್ಲಿಯೂ ಗೋಚರವಾಗಲಿಲ್ಲ. ಅನಂತರ
ಬ್ರಾಹ್ಮ್ರಣರ ಮನೆಗಳಳ್ಲಲ್ಲಾ ವಿಚಾರಿಸಿ ನೋಡಿದನು. ಯಾರೂ
ಶ್ರೀಧರರಾಯನೆಂಬ ಹೆಸರನ್ನು ಕೇಳಿದವರೇ ಇರಲಿಲ್ಲ. ಕೊನೆಗೆ ಬಹಳ
ಬೇ ಸರಪಟ್ಟು ಒಂದು ಮುರುಕು ಮನೆಯ ಜಗುಲಿಯಮೇಲೆ ಕೂತು
ಕೊಂಡು ಮುಂದಿನ ಕರ್ತವ್ಯವನ್ನು ಯೋಜಿಸುತ್ತಿದ್ದನು. ಆಗ ರಾತ್ರಿ
೮ಗಂಟೆಯ ಸಮಯ. ಅಕಸ್ಮಿಕವಾಗಿ ಆ ಮನೆಯೊಳಗಿನಿಂದ ನರಳುವ
ಶಬ್ದವು ಕೇಳಿಬಂದಿತು. ಗಂಗಾರಾಮನು ಬೆಚ್ಚಿದನು. ಆ ಮನೆಯನ್ನು
ನೋಡಿದರೆ. ಯಾರೂ ವಾಸಮಾಡುವಂತೆ ತೋರಲಿಲ್ಲ. ಬೀದಿಯ
ಬಾಗಲಿಗೆ ಬೀಗವನ್ನು ಹಾಕಿದ್ದಿತು. ಮತ್ತು ಬಾಗಿಲ ಬಳಿ.ಸಾರಿಸಿ
ರಂಗೋಲಿ ಹಾಕಿದ ಗುರುತೆ ಇರಲಿಲ್ಲ. ಗಂಗಾರಾಮನಿಗೆ ದೆವ್ವಭೂತ
ಗಳ ಭಯವು ಲಶಮಾತ್ರವೂ ಇಲ್ಲದಿದ್ದರೂ ಆ ಸಮುಯದಲ್ಲಿ ಸ್ವಲ್ಪ
ಭಯವುಂಟಾಗದೆ ಬಿಡಲಿಲ್ಲ. ಆದರೂ ಧೈರ್ಯವನ್ನು ತಂದುಕೊಂಡು,
ಎದ್ದು ಬಾಗಿಲ ರಂಧ್ರಕ್ಕೆ ಕಿವಿಯನ್ಷಿ ಟ್ಟು ಕೊಂಡು ನಿಂತನು. . ನರಳು
ವಿಕೆಯ ಶಬ್ದವು ಜೆನ್ನಾಗಿ ಕೇಳಿಬಂದಿತು. ಅನಂತರ ಗಟ್ಟಿಯಾಗಿ
ಮಾತನಾಡುವ ಶಬ್ದವು ಕೇಳಿಸಿತು. ಹಾಗೆಯೆ ಬೈಗಳ ಪ್ರಾರಂಭ
ವಾಯಿತು. "ಅಯ್ಯೊ ! ನೀನು ಹಾಳಾಗ ! ಎಣ್ಣೆಯನ್ನು ಸರಿ
ಯಾಗಿ ನೀವೆ ! ಅಯ್ಯೊ! ಅಯ್ಯೊ ! ಹೋಯಿತಲ್ಲಪ್ಪ ? ಪ್ರಾ
ಣವೇ ಹೋಯಿತು. ಇಂತಹ ಒರಟು ಹೆಣ್ಣನ್ನು ಕಟ್ಟಿ ಕೊಂಡುಬಂದೆ
ನಲ್ಲಪ್ಪ. ಹಾ!ಹಾ |! ಅಲ್ಲಿ ಬೇಡವೆ ! ಈ ಕಡೆ ನೀವೆ.! ಅಯ್ಯೊ ! ಈ
ವಾಯು ಎಲ್ಲಿಂದ ಹಿಂದಿತಪ್ಪ. ನಾನು ಈ ಹೆಣ್ಣನ್ನು ಯಾವ ಘಳಿ
ಗೆಯಲ್ಲಿ ಕರೆದುಕೊಂಡು ಬಂದೆನೊ! ಮಾರಿ ಬಂದಹಾಗೆ ಬಂದಳಲ್ಲ!
ಪ್ರಾಣವೂ ಹೋಗುವುದಿಲ್ಲವಲ್ಲ[“ಎಂದು ಮುಂತಾಗಿ ನಾನಾಬಗೆಯ
------------------------------------
೬೯
ಮಾತುಗಳು ಕೇಳಿ ಬಂದುವು. ಗಂಗಾರಾಮನು ಆ ಮನೆಯೊಳಗೆ
ವಾತರೋಗವಪೀಡಿತನಾದ ಮನುಷ್ಯನೊಬ್ಬನೂ ಅವನ ಅನುಬಂಧಿ
ಯಾದ ಹೆಂಗಸೊಬ್ಬಳೂ ಇರಬೇಕೆಂದು ಊಹಿಸಿದನು. ಆ ಹೆಂಗಸು
ಹೊಸದಾಗಿ ಬಂದವಳಾಗಿರಬೇಕೆಂಬುದೂ ವ್ಯಕ್ತವಾಯಿತು. ಗಂ
ಗಾರಾಮನು ಹುಡುಕುತ್ತಿದ್ದವರು ಇವರೇ ಆಗಿರಬಾರದೇತಕ್ಕೆ ?
" ಹೊರಬಾಗಲಿಗೆ ಬೀಗಹಾಕಿರುವುದನ್ನು ನೊ €ಡಿದರೆ ಇವರಿಗೆ ಸಂ
ಬಂಧಪಟ್ಟವರು. ಇನ್ನೂ ಯಾರೋ ಇರಬೇಕೆಂದು ತೋರುತ್ತದೆ.
ಈಮನೆಯ ಪೂರ್ವೋತ್ತರರವನ್ನೆ ಲ್ಲಾ ಚೆನ್ನಾಗಿ ವಿಚಾರಿಸಿಬಿಡೋಣ``
ಎಂದಂದುಕೊಂಡು ಎದುರುಮನೆಯ ಜಗುಲಿಮೇಲೆ ಒಂದು ಕಂಬಳಿ
ಯನ್ನು ಹಾಸಿಕೊಂಡು ಎಚ್ಚರವಾಗಿ ಮಲಗಿದ್ದನು. ಎಷ್ಟು ಹೊತ್ತಾ
ದರೂ ಯಾರೂ ಬರಲೇ ಇಲ್ಲ.ಫುನಃ ಆ ಮುರುಕು ಮನೆಯಬಾಗಿಲಿಗೆ
ಕಿವಿಗೊಟ್ಟುಕೊಂಡು ನಿಂತನು. ಒಳಗೆ ನಿಶ್ಕಬ್ಬನಾಗಿತ್ತು. ರೋಗಿಗೆ
ಸ್ವಲ್ಪನಿದ್ದೆ ಹತ್ತಿರಬಹುದೆಂದಂದು ಕೊಂಡು ತನ್ನ ಬಿಡಾರಕ್ಕೆ ಹೋದನು.
ಮಾರಣೆಯದಿನ ಬೆಳಗಾಗುವುದರೊಳಗಾಗಿ ಆ ಮುರುಕು
ಮನೆಯು ಫೋಲೀನಿನವರಿಂದ ಸುತ್ತುವರಿಯಲ್ಪಟ್ಟಿತು ನಿರ್ಮಲದ
ಪೋಲೀಸುದರೋಗನೂ ಗಂಗಾರಾಮನೂ ಬೀದಿಯಬಾಗಿಲ ಬಳಿ
ನಿಂತುಕೊಂಡು ಕಮ್ಮಾರನ ಕೈಯಿಂದ ಉಪಾಯವಾಗಿ ಬೀಗವನ್ನು
ತೆರೆಸಿ ಮೆತ್ತಗೆ ಒಳಗೆಹೋದರು.ರೋಗಿಯು ಹಾಸಿ ಗೆಯಮೇಲೆ ಬಿದ್ದಿ
ದ್ದನು. ಒಬ್ಬಹುಡುಗಿಯು ಅವನಕಾಲುಗಳಿಗೆ ಶಾಖವನ್ನು ಕೊಡುತ್ತಾ
ಕುಳಿತಿದ್ದಳು. ಮನೆಯೆಲ್ಲವೂ ಸ್ಮಶಾನಸದೃಶವಾಗಿದ್ದಿತು. . ಎಲ್ಲಿನೋ
ಡಿದರೂ ಕಶ್ಮಲ, ದುರ್ವಾಸನೆ. ಶಾಖವನ್ನು ಕೊಡುವಾಗ್ಗೆ ರೋಗಿಯು
ಹಾ!ಹಾ!.ಎಂದು ಆನಂದ ಪಡುತ್ತಿದ್ದವನು ಬೀದಿಯಬಾಗಿಲುಕಿರುಗು
ಟ್ಟಿದ ಶಬ್ದವನ್ನು ಕೇಳಿದೊಡನೆಯೆ ಥಟ್ಟನೆ ಅತ್ತ ಕಡೆನೋಡಿದನು. ಯ
ಮದೂತರಂತೆ ಇಬ್ಬರು ದೀರ್ಘಾಕಾರರಾದ ಪುರುಷರು ಗೋಚರ
---------------------------------------
7೦
ವಾಗಲು . "ಈಗಲೀಗ ನಾನುಕೆಟ್ಟೆ" ಎಂದು ಎದೆಯನ್ನು ಬಡಿದು
ಕೊಂಡು ಎದ್ದೋಡಲು ಪ್ರಯತ್ನ ಮಾಡಿದನು. ಆದರೆಸಾಧ್ಯವಾಗದೆ
ನಿಶ್ಚೇಷ್ಟನಾಗಿ ಬಿದ್ದುಕೊಂಡನು. ಅಲ್ಲಿ ಕುಳಿತಿದ್ದ ಹುಡುಗಿಯೂ
ಕಣ್ಣೀರುಸುರಿಸುತ್ತಾ ಜ್ಞಾನತಪ್ಪಿರವಳಂತೆ ಬಿದ್ದುಕೊಂಡಳು. ಗಂಗಾ
ರಾಮನು ಥಟ್ಟನೆಅವಳಕಡೆಗೆ ಓಡಿ ಅವಳನ್ನೆತ್ತಿ ಕೊಂಡುಹೊರಗೆಸಿದ್ದ
ವಾಗಿದ್ದ. ಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟನು. ಆ
ರೋಗಿಯು ಮತ್ತೊಂದು ಗಾಡಿಯಲ್ಲಿ ಪೋಲೀಸು ಠಾಣೆಗೆ ಒಯ್ಯಲ್ಪ
ಟ್ಟನು. ಅನಂತರ ಗಂಗಾರಾಮನೂ ನಿರ್ಮಲದ ದರೋಗನೂ
ಪಂಚಾಯಿತದುರಿಗೆ ಮನೆಗೆ ಬೀಗವನು ಹಾಕಿ ಮೊಹರುಮಾಡಿ ಹು
ಡುಗಿಯ ದೇಹಸ್ಥಿತಿಯನ್ನು ವಿಚಾರಿಸಲು ಆಸ್ಪತ್ರಗೆ ಹೋದರು. ಅಲ್ಲಿ
ಆಕೆಯನ್ನು. ನೋಡಿ ಅವರಿಬ್ಬರಿಗೂ ಕಣ್ಣಿನಲ್ಲಿ ನೀರು ಸುರಿಯಲಾ
ರಂಭಿಸಿತು. “ನಿನ್ನ ಹೆಸರೇನು ತಾಯಿ`` ಎಂದು ಗಂಗಾರಾಮನು
ಕೇಳಿದುದಕ್ಕೆ ಅವಳು ಕೊಟ್ಟ ಉತ್ತರವು ಹೊರಗೆ ಕೇಳಿಸಲೇ ಇಲ್ಲ.
ಅಷ್ಟರಲ್ಲಿಯೇ ಆಸ್ಪತ್ರೆಯ ಮುಖ್ಯಸ್ದನು ಅಲ್ಲಿಗೆ ಬಂದು, ಆ
ಹುಡುಗಿಯ ದೇಹಸ್ಬಿತಿಯನ್ನು ನೋಡಿ , “ಈಕೆಯ ಪ್ರಾಣಕ್ಕೆ
ಯಾರು ಬಾಧ್ಯರು?“ ಎಂದು ಗಂಗಾರಾಮನ ಕಡೆಗೆ ತಿರಿಗಿ ಶಿಟ್ಟ
ನಿಂದ ಕೇಳಿದನು. ಅದಕ್ಕವನು ತಾನು ನಿರ್ಮಳಕ್ಕೆ ಬಂದಮೇಲೆ
ನಡೆದ ಸಂಗತಿಯನ್ನೆಲ್ಲಾ ತಿಳಿಸಿದುದಕ್ಳೆ. ವೈದ್ಯನು, " ಈಕೆಯನ್ನು
ಅನ್ನಾ ಹಾರವಿಲ್ಲದೆ ಕೊಲ್ಲಬೇಕೆಂದು ಆ ನೀಚನು ಪ್ರಯತ್ನ ಪಟ್ಟಿರ
ಬಹುದು. ಈಕೆಯು ಭೋಜನಮಾಡಿ ೪ ದಿನಗಳಮೇಲಾಗಿರಬೇಕು.
ನಿದ್ರೆಯನ್ನು ಕಂಡು ಒಂದು ವಾರವಾಗಿರಬಹುದು. ಈಕೆಗೆ ಈಗ
ಸರಿಯಾದ ಆಹಾರವೂ ಶುದ್ಧಾಂಗವಾಗಿ ವಿಶ್ರಾಂತಿಯೂ ಬೇಕಾ
ಗಿದೆ. ಈಕೆ ಈ ರಾತ್ರಿಯವರೆಗೆ ಇದೇರೀತಿ .ಆ ಮನೆಯಲ್ಲಿದ್ದಿದ್ದರೆ
ಇನ್ನು ಆಶೆಯೇ ಇರುತ್ತಿ ರಲಿಲ್ಲ. ಈಗ ಜೀವಕ್ಕೇನು ಭಯವಿಲ್ಲ.
-------------------------------------
71
ಆ ನೀಚನನ್ನು. ಮಾತ್ರ ಬಿಡಬೇಡಿರಿ. ಅವನ ಮೇಲೆ ನನ್ನ ದೇ
ಮುಖ್ಯವಾದ ` ಫಿರ್ಯಾದನ್ವಾ ಗಿಟ್ಸುಕೊಳ್ಳಿ`` ಎಂದು ಹೇಳಿ
ಅವರನ್ನು . ಕಳುಹಿಸಿಕೊಟ್ಟನು.
ದರೋಗರಿಬ್ಬರೂ ಆಸ್ತತ್ರೆಯಿಂದ ಠಾಣೆಗೆಹೋದರು. ಅಲ್ಲಿ
ವಾತರೋಗಿಯು 'ಲಾಕಪ್ಪಿ' ನ ಒಂದುಮೂಲೆಯಲ್ಲಿ ಕೂತು ಅಳು
ತ್ತಿದ್ದನು. ಇವರನ್ನು ಕಂಡೊಡನೆಯೆ ದಂಡಪ್ರಣಾಮವನ್ನು ಮಾಡಿ,
" ಪ್ರಭೋ ! [ ನಾನು ಕೆಟ್ಟ ಪಾಪಿ. ನನಗೆ ಸ್ಫಲ್ಮವೂ ಕನಿಕರವನ್ನು ತೋರಿ
ಸಬೇಡಿರಿ, ಆ ದೇವತಾಸ್ವರೂಪಳಾದ, ಮಾತೃ ಸದೃಶಳಾದ ಕನ್ನಿಕೆ
ಯನ್ನು ಬಹಳವಾಗಿ ಕಷ್ಟಪಡಿಸಿದ್ದೇನೆ. ಆಕೆಯ ಮುಖಸಂದರ್ಶನ
ವನ್ನುಮಾಡಿ, ಕ್ಷಮೆಯನ್ನು ಬೇಡುವುದಕ್ಕೆ ಒಂದಾವರ್ತಿ ಅವಕಾಶ
ಕೊಟ್ಟರೆ ನಾನು. ಯೋಚನೆಯಿಲ್ಲದೆ ಪ್ರಾಣವನ್ನು ಬಿಡುತ್ತೇನೆ.
ಸಾಧ್ಯವಾದರೆ ನಮ್ಮ ಯಜಮಾನರಾದ ಶಂಕರರಾಯರನ್ನೂ
ನೋಡಬೇಕೆಂದು ಕುತೊಹಲವಿದೆ. ಇಷ್ಟನ್ನು ಮಾತ್ರ ನೆರವೇರಿಸಿ
ಕೊಡಬೇಕು “ ಎಂದನು, ಗಂಗಾರಾಮನು, "ನೀನೇ ಆತ್ಮಾ
ರಾಮನು ತಾನೆ ಈಚೆಗೆ ಶ್ರೀಧರರಾಯನಾದವನು?“ ಎಂದನು.
ರೋಗಿ- ನನ್ನ್ರನ್ನು ಎಷ್ಟು ತುಚ್ಛೀಕರಿಸಿ ಮಾತನಾ
ಡಿದರೂ ನನ್ನ ತಪ್ಪಿತಕ್ಕೆ ತಕ್ಕಷ್ಟಾಗಲಾರದು. ಆ
ಪರಮುನೀಚನು ನಾನೇ.
ಗಂಗಾ---ಆ ಹುಡುಗಿಯು ಸುಭದ್ರೆಯೊ !
ಆತ್ಮಾ ರಾಮು--ಹೌದು.
ಗಂಗಾ-ಆಕೆಗೆ ನೀನು ಕೊಟ್ಟಿರುವ ಕಷ್ಪರದಿಂದರುಂಟಾದ
ರೋಗವು . ಇನ್ಯೂ . ಒಂದು ತಿಂಗಳ
ಕಾಲಹಿಡಿಯುವದು. ಈಗ ಆಕೆಯನು ನೋಡಲಾರೆ.
--------------------------------------
೭೨
ಆತ್ಮಾ -~~-ಹಾಗಾದರೆ ಕಂಕರರಾಯರನ್ನಾ
ದರೂ ದಯವಿಟ್ಟು ಬರಮಾಡಬೇಕು.
ಗಂಗಾ_ಅಗಲಿ ನೋಡೋಣ.
ಗಂಗಾರಾಮನು, ಸುಭದ್ರೆಯೂ ಆತ್ಮಾ ರಾಮನೂ ಸಿಕ್ಕಿದ
ರೆಂದೂ ನಿರ್ಮಲದಲ್ಲಿಯೇ ಇರುವರೆಂದೂ, ಅಪ್ಪಣೆಯಾದಂತೆ
ಮುಂದೆ ನಡೆಯುವುದಾಗಿಯೂ, ವಿಕಾರ್-ಉಲ್-ಮುಲ್ಲನಿಗೆ
ತಂತೀವರ್ತಮಾನನನ್ನು ಕೊಟ್ಟನು.
---
-- ಹ ದಿ ನೇ ಳ ನೆ ಯ ಅ ಧ್ಯಾ ಯ --
ಶಂಕರರಾಯನಿಗೆ ಕ್ರಮಕ್ರಮವಾಗಿ ಆರೋಗ್ಗಭಾಗ್ಯವು ಒದಗಿ
ಬಂದಿತು. ಮಾಧವನನ್ನು ಬಂದ ಎರಡು ವಾರದೊಳಗಾಗಿ ಕೋ
ಲೂರಿಕೊಂಡು ನಡೆಯುವಷ್ಟು ಶಕ್ತಿಯುಂಟಾಯಿತು. ಒಂದು ದಿನ
ಅವನು ಮಾಧವನನ್ನು ಕುರಿತು .ಅಪ್ಪಾ! ಮಾಧವ! ವಿಶ್ವನಾಥಪಂತ
ರಿಗೆ ಸುಭದ್ರೆಯನ್ನು ಕೂಡಲೆ ಕಂದುಕೊಂಡು ಬರುವಂತೆ ನನ್ನ ಹೆಸ
ರಿನಲ್ಲೊಂದು ಕಾಗದವನ್ನು ಬರೆ“ ಎಂದನು, ಮಾಧವನು ಕಂಬನಿ
ದುಂಬಿದವನಾಗಿ, "ಅಪ್ಪಾಜಿ ! ನನ್ನ ವಿಷಯದಲ್ಲಿ ತಾವು ತೋರಿಸಿ
ರುವ ಮಮತೆಯು ಅನಾದೃಶವಾದುದು, ಅದಕ್ಕೆ ನಾನು ಎಷ್ಟು
ಕೃತಜ್ಞನಾಗಿದ್ದರೂ ಸ್ವಲ್ಪವೇ ಇದೆ. ಆದರೆ ನಾವು ಒಂದನ್ನು
ಯೋಚಿಸಿದರೆ “ದೈವವು ಬೇರೊಂದನ್ನು ಯೋಚಿಸುವುದು ಎಂ
ದನು. ಶಂಕರರಾಯನು ಗಾಬರಿಯಿಂದ, ,,ಏನು ಸಮಾಚಾರ? ನನ
ಗೇತಕ್ಕೆ ಇದುವರೆಗೆ ತಿಳಿಸಲಿಲ್ಲ?`` ಎಂದನು.
ಮಾಧವ -"ತಮ್ಮ ಶರೀರ ಸ್ಕಿ ತಿಯು ವೃತ್ಕಾ ಸವಾದೀ
ತೆಂಬ ಭಯದಿಂದ ಯಾವುದನ್ನೂ ಹೇಳಲಿಲ್ಲ.``
----------------------------------
೭೩
ಅಷ್ಟು ಹೊತ್ತಿಗೆ ಸರಿಯಾಗಿ, ಸೇವಕನೊಬ್ಬನು ಒಂದು ಹಳ
ದಿಯ ಲಕೋಟೆಯನ್ನು ತಂದು ಮಾಧವನ ಕೈಯಲ್ಲಟ್ಟನು. ಅವನ
ದನ್ನು ಅತ್ಯಾತುರದಿಂದ ಒಡೆದುನೋಡಿ, "ಸಿಕ್ಕಿದಳು, ಸಿಕ್ಕಿದಳು``
ಎಂದು ಕೂಗಿಕೊಂಡನು. ಶಂಕರರಾಯನ್ನು ಆ “ಟೆಲಿ ಗ್ರಾಮ"
ನ್ನು ಕೈಗೆ ತೆಗೆದುಕೊಂಡು ನೋಡಿದನು. . ಮಾಧವನು ಅದನ್ನು
ತಂದ ಸೇವಕನಿಗೆ ತನ್ನ ತಲೆಯಮೇಲಿನ ಬಿಲೆಯುಳ್ಳ ಪೇಟಾವನ್ನೆ
ತೆಗೆದು ಕೊಟ್ಟುಕಳು ಹಿಸಿದನು.
ಶಂಕರರಾಯನು, "ಮಗು ! ಇದೇನು ? ಸುಭದ್ರೆಯು
ಹೈದರಾಬಾದಿಗೇತಕ್ಕೆ ಹೋದಳು ? " ಎಂದನು . ಮಾಧವನು ಆ
ದಿನ ರಾತ್ರಿ ತಂದೆಯು ಆಜ್ಞೆಮಾಡಿದುದು ಮೊದಲ್ಗೊಂಡು ನಡೆದ
ಸಮಸ್ತವನ್ನೂ ತಂದೆಗೆ ಅರಿಕೆಮಾಡಿದನು. ಶಂಕರರಾಯನು
“ನನ್ನ ಅವಿವೇಕದಿಂದಲ್ಲವೆ ಇಷ್ಟು ಆನರ್ರಥಕ್ಕೆ ಕಾರಣವಾಯಿತು! "
ಎಂದು ನಿಟ್ಸುಸಿರುಬಿಟ್ಟನು.
ಮಧ್ಯಾಹ್ನ ಮಾಧವನೂ ಗಂಗಾಬಾಯಿಯೂ ಹೈದರ
ಬಾದಿಗೆ ಹೋಗಿ ಸುಭದ್ರೆಯನ್ನು ತರೆತರುವುದಾ?\ ಶಂಕರರಾಯ
ನಿಗೆ. ಹೇಳಿದರು. . ಅವನು ತಾನೂ. ಬರುತ್ತೇನೆಂದನು.
ಗಂಗಾ ಬಾಯಿಯು ನಿಮಗೆ. ಇನ್ನೂ ಸಂಪೂರ್ಣವಾಗಿ ಗುಣವಾಗಿಲ್ಲ.
ಈಗ ಪ್ರಯಾಣಮಾಡಿದರೆ ತೊಂದರೆಯಾಗುವುದಿಲ್ಲವೆ! " ಎಂ
ದಳು. ಅದಕ್ಕವನು *ಆದರಾಗಲ್ಲಿ, ನಾನು ಬಂದೇ ತೀರಬೆಕು“
ಎಂದು ಮುಷ್ಣರ ಹಿಡಿದನು.
ಆದಿನವೇ . ಮೂವರೂ ಪುನಹೆಯಿಂದ ಹೊರಟು ಮಾರ
ಣೆಯ ದಿನ ಸಾಯಂಕಾಲಕ್ಕೆ ಮುಂಚೆ ಹೈದರಾಬಾದನ್ನು ಸೇರಿ
ದರು. ರೈಲ್ವೆ ಸ್ಟೇಷನ್ ನಲ್ಲಿ ನವಾಬನ್ಜು ಕಾದಿದ್ದನು. . ಅವನೂ
ನಿರ್ಮಲಕ್ಕೆ ಹೊರಡಲು ಸಿದ್ದನಾಗಿಯೆ ಇದ್ದನು. ಮಾಧವನು
------------------------------------
೭೪
ನವಾಬನನ್ನು ಸ್ತೋತ್ರಮಾಡಿ, ತಂದೆಗೂಅವನಿಗೂ ಪರಿಚಯವನ್ನು
ಮಾಡಿಸಿದನು. ಶಂಕರರಾಯನೂ ನವಾಬನನ್ನು ಶ್ಲಾಘಿಸಿ “ನೀವು
ಮಾಡಿದ ಉಪಕಾರಕ್ಕೆ ಎಂದೆಂದಿಗೂ ನಾವು ಕೃತಜ್ಞರಾಗಿರಬೇಕು"
ಎಂದನು. ನವಾಬನು, “ಮಹರಾಜ್ ! ಇದರಲ್ಲಿ ನಾನು ಮಾಡಿದು
ದೇನೂ ಇಲ್ಲ. ತಮ್ಮ ಮಗನಿಂದ ನಾನು ಪಡೆದಿರುವ ಉಪಕಾರದಲ್ಲಿ
ಇದು ಸಾವಿರದಲ್ಲೊಂದುಪಾಲೂ ಆಗಲಾರದು. ತಮ್ಮ ಮಗನನ್ನು
ನನ್ನ ಕುಟುಂಬದವರೆಲ್ಲರೂ ತಂದೆಯೆಂದೇ ಭಾವಿಸಿದ್ದೇವೆ“ ಎಂದನು.
ಹೈದರಾಬಾದಿನಿಂದ ಅವರಲ್ಲರೂ ಆ ರಾತ್ರಿಯೆ ಮುಂದಕ್ಕೆ
ಪ್ರಯಾಣಮಾಡಿ ನಿರ್ಮಲವನ್ನು ಸೇರಿದರು. . ನವಾಬನು ಪೋಲೀಸು
ಠಾಣೆಗೆ ಆಳನ್ನು ಕಳುಹಿಸಿ ಗಂಗಾರಾಮನನ್ನು ಬರಮಾಡಿಕೊಂಡನು.
ಗಂಗಾರಾಮನು ನಡೆದ ಸಂಗತಿಯನ್ನೆಲ್ಲಾ ತಿಳಿಸಿದನು. ಅವನು ಸುಭ
ದ್ರೆಯ ಸ್ಥಿತಿಯನ್ನು ವಿವರಿಸುತ್ತಿದ್ದಾಗ್ಗೆ ನವಾಬನು ಮೊದಲಾಗಿ
ಎಲ್ಲರೂ ಕಣ್ಣೀರುಬಿಟ್ಟರು. ಗಂಗಾರಾಮನಿಗೇ ಗದ್ಗದಸ್ವರ
ವುಂಟಾಯಿತು. ಅನಂತರ ಆಸ್ಪತ್ರೆಗೆ ಹೋಗಿ ಸುಭದ್ರೆಯನ್ನು
ನೋಡಲು ಮುಖ್ಯವೈದ್ಯನ ಅಪ್ಪಣೆಯನ್ನು ಕೇಳಲಾಗಿ ಅವನು
ತಲೆಯನ್ನಲ್ಲಾಡಿಸಿ “ಈಗ ಆಕೆಗೆ ಶುದ್ರಾಂಗವಾಗಿ ವಿಶ್ರಾಂತಿ ಬೇ
ಕಾಗಿದೆ. ಒಂದು . ವಾರದದಿನ ದಯವಿಟ್ಟು ವಿರಾಮವನ್ನು ಕೊಡಿ"
ಎಂದನು. ಶಂಕರರಾಯನು, .ಆಕೆಯ ದೇಹಸ್ಸಿತಿ ಹೇಗಿದೆ? ತಿಳಿಯ
ಬಹುದೆ ? " ಎಂದು ಕೇಳಿದುದಕ್ಕೆ ವೈದ್ಯನು, “ಮೊದಲು ನಾನು
ಬರೀಉಪವಾಸದಿಂದ ಬಂದ ವ್ಯಾಧಿಯೆಂದು ತಿಳಿದು ೨-೩ ದಿನದ
ಲ್ಲಿಯೇ ಗುಣವಾಗುವುದಾಗಿ ತಿಳಿದಿದ್ದೆನು, ಈಗ ನೋಡುವಲ್ಲಿ ಆಕೆಗೆ
ಯಾವುದೋ ಮನೋವ್ಯಾವ್ಯಥೆಯಿರುವಂತೆ ಕಾಣುವುದು. ಎಷ್ಟು
ಉಲ್ಲಾಸವನ್ನುಂಟುಮಾಡುವ ಮಾತನಾಡಿದರೂ ಹಸನ್ಮುಖಿಯಾಗು
ವುದೇ ಇಲ್ಲ. ಅನ್ನಾ ಹಾರಗಳನ್ನೂ. ತೆಗೆದುಕೊಳ್ಳುವುದಿಲ್ಲ. ನನಗೆ
-----------------------------------
೭೫
ಯಾವುದೂ ಮುಂತೋಚುವುದೇ ಇಲ್ಲ. ಎಂದನು. ಶಂಕರರಾ
ಯನು ಅವನೊಂದಿಗೆ ಏಕಾಂತವಾಗಿ . ಕೆಲವು ಮಾತುಗಳನ್ನು
ಹೇಳಿ ಮಾಧವನನ್ನು ಅವನ ಜತೆಯಲ್ಲಿ ಕಳಿಹಿಸಿ ಕೊಟ್ಟನು. ಶಂಕ
ರರಾಯನೂ, ನವಾಬನೂ, ಗೆಂಗಾಬಾಯಿಯನ್ನು ಬಿಡಾರದಲ್ಲಿ
ಬಿಟ್ಟು, ಪೋಲೀಸುಕಾಣೆಗೆ ಹೋದರು.
ಆತ್ಮಾ ರಾಮನು ಶಂಳರರಾಯನನ್ನು ಕಂಡೊಡನೆಯೆ ಅವನ
ಕಾಲುಗಳ . ಮೇಲೆಬಿದ್ದು " ಸ್ವಾಮಿ | ನನ್ನಂತಹ ಪಾಪಿಯನ್ನು
ನೋಡಲು ದಯೆಮಾಡಿದಿರಾ ! ನನ್ನನ್ನು ನಿಮ್ಮ ಕೈಯಿಂದಲೇ ಸಂಹ
ರಿಸಿ ನನ್ನ ಜನ್ಮವನ್ನು. ಪುನೀತವಾದುದನ್ನಾ ಗಿ ಮಾಡುವುದಿಲ್ಲವೆ !
ನಾನು ಸ್ವಾಮಿದ್ರೋಹಿ | ನನ್ನನ್ನು ಕಾಲಿನಿಂದಾದರೂ ಒದೆಯಿರಿ“
ಎಂದು . ಬಹಳವಾಗಿ ರೋದನಮಾಡಿದನು. ಶಂಕರರಾಯನು,
'ಅತ್ಮಾ ರಾಮ ! ಸುಮ್ಮನೆ ಏತಕ್ಕೆ ರೋದಿಸುವೆ ? ನೀನು ಏನು
ಮಾಡಿದರೂ ಈ ಸಾರಿ ನ್ಯಾಯಸ್ಥಾನದ ಕೈಯಿಂದ ತಪ್ಪಿಸಿಕೊಂಡು
ಹೋಗಲಾರೆ. ಸುವ್ಮನೆ ಮರುಳುಮಾಡುವ ಮಾತುಗಳನ್ನೇತಕ್ಕಾ
ಡುವೆ?" ಎಂದನು.
ಆತ್ಮಾ ರಾಮ -~ಮಹಾಪ್ರಭೋ! ನನ್ನ ಹೃದಯವನ್ನು
ಬಿಚ್ಛಿ ತೋರಿಸಲವಶಾಶವಿದ್ದರೆ ಎಲ್ಲನೂ ತಮಗೆ ವ್ಯಕ್ತ
ವಾಗುತ್ತಿತ್ತು. ಸರ್ವಾತ್ಮನಾ ಈ. ಪಾಪಿ ಶರೀರವ
ನ್ನಿಟ್ಟುಕೊಂಡು ನನಗೆ ಜೀವಿಸಲು ಇಷ್ಟವಿಲ್ಲ. ತಾವು
ನನ್ನ ಪೂರ್ವದ ತಪ್ಪಿತಗಳನ್ನು ಮನಸ್ಸಿನಲ್ಲಿಡುವುದಿಲ್ಲ
ವೆಂದೂ ನನ್ನ ಹೆಸರಿನ ಮನುಷ್ಯನೊಬ್ಬನು ಇದ್ದ ನೆಂ
ಬುದನ್ನು. ಮರೆತು ಬಿಡುವುದಾಗಿಯೂ ವಾಗ್ದಾನ
ಮಾಡಿದರೆ ನಿರಾಳವಾಗಿ ಪ್ರಾಣವನ್ನು ಬಿಡುವೆನು,
ಶಂ- ಸುಭದ್ರೆಯ ವಿಷಯದಲ್ಲಿ ನೀನು. ತೋರಿಸಿರುವ
---------------------------------
೭೬
ನಿಷ್ಕಾ ರುಣ್ಯವನ್ನು ಎಂದಿಂದಿಗೂ ಕ್ಷಮಿಸಲಾರಿನು.
ನೀನು ಅವಳನ್ನು ನಿನ್ನ ಮನೆಯಲ್ಲಿಟ್ಟುಕೊಂಡಿದ್ದುದ
ರಿಂದ ನನ್ನ ವಂಶಕ್ಕೆ ಅಪಕೀರ್ತಿಯುಂಟಾಗಿದೆ.
ಇದನ್ನು. ಹೇಗೆ ಸಹಿಸಲಿ ?
ಅತ್ಮಾ-ಮಹಾಸ್ನಾಮಿ ! ನಾನು ಅರಿಕೆಮಾಡುವುದನ್ನು
ಲಾಲಿಸಬ್ಗೇ ಕು. ನಾನು ಸುಭದ್ರಾಬಾಯಿಯವರನ್ನು
ಬಹಳವಾಗಿ ಹಿಂಸೆಪಡಿಸಿದುದೇ ನೋ ನಿಜ. ಅವರು
ನನಗೆ ತಾಯಿಯು ಮಗುವಿಗೆ ಶುಶ್ರೂಷೆಮಾಡುವಂತೆ
ಮಾಡುತ್ತಿದ್ದರೆ ಹೊರತು ಅನ್ಯಥಾ ಇಲ್ಲ. ಅಲ್ಲದೆ
ಅವರು ಇನ್ನೂ ಕನ್ಕಾವಸ್ಥೆಯಲ್ಲಿರುವುದರಿಂದ ತಮಗೆ
ಲೋಕಾಪವಾದವೆಂದಿಗೂ ಬರಲಾರದು.
ಶಂ---ನಿನಗೆ ಓದು ಬರಹೆ ಬರುತತದೆಯೆ ?
ಅತ್ಮಾ__ಈಚಿಗೆ ಕಲಿತುಕೊಂಡಿದ್ದೇನೆ.
ಶಂ_-ಹಾಗಾದರೆ ಯಥಾರ್ಥವಾಗಿ, ನಡಿದ ಸಂಗತಿಯನ್ನು
ಯಾವವಿಧವಾದ ಸಂದೇ ಹಕ್ಕೂ ಅಸ್ಪದವಿಲ್ಲದಂತೆ, ವಿವ
ರಿಸಿ ಒಂದು ಕಾಗದವನ್ನು ಬರೆದು, ಒಬ್ಬ "ಮ್ಯಾಜಿ
ಸ್ಟ್ರೇಟರ ಸಮಕ್ಷಮ ರುಜುವನ್ನು ಹಾಕಿ, ನನ್ನ ಕೈ
ಯಲ್ಲಿ, ಕೊಟ್ಟಕೂಡಲೆ ನಿನ್ನ ತಪ್ಪಿತಗಳನ್ನೆ ಲ್ಲವನ್ನೂ
ಮನ್ತಿ ಸುವುದಲ್ಲದೆ ಪುನಃ ನನ್ನ ಸೇವೆಯಲ್ಲಿರಲು ನಿನಗೆ
ಇಷ್ಟವಿದ್ದ ರೆ ಅದಕ್ಕೂ, ಅವಕಾಶವನ್ನು ಕೊಡುವೆನು.
ಆತ್ಮಾ--ತಮ್ಮ ವಾಗ್ದಾನಕ್ಕೋಸ್ಕರ ನನ್ನ ಹೃದಯವು
ಕೃತಜ್ಗತೆಯಿಂದ ಉಬ್ಬಿಬಿರಿಯುತ್ತಿದೆ. ದಯವಿಟ್ಟು
' ಮ್ಯಾಜಿಸ್ಟ್ರೇಟ' ರನ್ನು ಕರೆದುತರೋಣಾಗಲಿ.
ಶಂಕರರಾಯನೂ ನವಾಬನೂ ಹೊರಟು ಹೋದರು.
----
-------------------------------
77
---ಹ ದಿ ನೆಂ ಟ ನೆ ಯ ಅ ಧ್ಯಾ ಯ- --
ಮಾಧವನು ಮುಖ್ಯ ವೈದ್ಯನೊಡನೆ ರೋಗಿಗಳಿರುವ ಸ್ಥಳಕ್ಕೆ
ಹೋದನು. ಸುಬದ್ರೆಯು ಮಲಗಿದ್ದ ಕೊಠಡಿಯಬಳಿಗೆ
ಬರುತ್ತಲೆ, ವೈದ್ಯನು ಮಾಧವನನ್ನು ಸ್ಕಲ್ತ. ಹೊತ್ತು ಮರೆಯಾಗಿರ
ಹೇಳಿ ತಾನೊಬ್ಬನೆ ಒಳಗೆ ಹೋದನು. ಆಗ ಸುಭದ್ರೆಯು ಸಂಪೂ
ರ್ಣವಾಗಿ ವಿಕಾಸವಾದ ಕಣ್ಣುಗಳಿಂದ ಮೇಲ್ಚಾವಣಿಯನ್ನು ನೋ
ಡುತ್ತಾ ಮಲಗಿದ್ದಳು. ವೈದ್ಯನು "ಸುಭದ್ರಾಬಾಯಿ! " ಎನ್ನುತ್ತಲೆ
ಗಕ್ಕನೆ ತಿರುಗಿ ನೋಡಿದಳು. ಅಯ್ಯೊ! ನೀವೇ? ಅವರು ಬಂದರೇನೋ
ಎಂದಿದ್ದೆ.“ ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು.
ವೈದ್ಯ-- "ಅವರು ಎಂದರೆ ಯಾರು“
ಸುಭದ್ರೆ_-ಇನ್ನಾ ರು? ನನ್ನ ಕಣ್ಣೆದುರಿಗೆ ಇದುವರೆಗೂ
ನಿಂತಿದ್ದವರು.
ವೈದ್ಯ_-ಅವರಾರು?
ಸುಭದ್ರೆ-- ನಾನು ಹೇಗೆ ಹೇಳಲಿ?
ವೈದ್ಯ-ನಿಮ್ಮ ಭರ್ತನೆ ?
ಸುಭದ್ರೆ ಸುಮ್ಮನಿದ್ದಳು.
ವೈದ್ಯ -~~ಅವರ ಹೆಸರೇನು ?
ಸುಭದ್ರೆ--ಹೇಗೆ ಹೇಳಲಿ ?
ವೈದ್ಯ---ನಾನು ಹೇಳುತ್ತೇನೆ ಕೇಳಿ, "ಮಾಧವರಾಯರು. "?
ಸುಭದ್ರೆ___(ಆಶ್ಚರ್ಯದಿಂದ) ನಿಮಗೆ ಯಾರುಹೇಳಿದರು?
ವೈದ್ಯನು ---(ತನ್ನಷ್ಟಕ್ಕೆ ತಾನೆ) "ಇದುವರೆಗೂ ಕಾಣದ
ನಗುವು ಈಗ ತೋರಿಬರುತ್ತಿದೆ. . ನಾನು. ಇಷ್ಟನ್ನು
ಕಂಡು ಹಿಡಿಯಲಾರದೆ ಹೋದೆನಲ್ಲಾ --ಎಂತಹ
-------------------------------------
76
ಮೂಢ!`` ಎಂದಂದುಕೊಂಡು. ಸುಭದ್ರೆಯ ಪ್ರಶ್ಕೆ ಗೆ
ಉತ್ತರವಾಗಿ "ಅವರೇ" ಎಂದನು.
ಸುಭದ್ರೆ---ಅವರನ್ನೆಲ್ಲಿ ನೋಡಿದ್ದಿರಿ! “
ವೈದ್ಗ --- ಇಲ್ಲಿಯೇ !
ಸುಭದ್ರೆ-_~ಅವರೇತಕ್ಕೆ ಇಲ್ಲಿಗೆ ಬರುವರು ? ಕುಚೋದ್ಯ
ಮಾಡುತ್ತೀರಾ?
ವೈದ್ಯ---ಈಗ ಮಾಯಾಮಂತ್ರಮಾಡಿ ಅವರನ್ನು ನಿಮ್ಮೆ
ದು ರಿಗೆ ಬರುವಂತೆಮಾಡಲೆ!
ಸುಭದ್ರೆ -_-ಎಲ್ಲಿ ನೋ ಡೋಣ
ವೈದ್ಯ ---ನೀವು ಎದ್ದು ಕೂತುಕೊಳ್ಳಿ....ಸರಿ.. ಹಾಗೆ....
ಕಣ್ಣುಮುಚ್ಚಿಕೊಳ್ಳಿ ಈಗ ನಾನು ಮಂತ್ರಮಾಡುತ್ತೇನೆ.
ಒಂದು, ಎರಡು, ಮೂರು,ಎಂದಕೂಡಲೆ ಕಣ್ಣುಬಿಡಬೇಕು
ಅದಕ್ಕೆ ಮುಂಚೆ ಬಿಟ್ಟರೆ ಎಲ್ಲವೂ ಮಾಯವಾಗುವುದು.
ಸುಭದ್ರೆ_~ಇದೇನೋ ಬ್ರಾಹ್ಮಣಿತಿಯು ಗಂಡನಿಗೆ ವಡೆ
ಮಾಡಿಕೊಟ್ಟ ಕಥೆಯಂತಿದೆ.
ವೈದ್ಗ--ಒಂದು ಸಾರಿ ನನ್ನನ್ನು ಪರೀಕ್ಷೆ ಮಾಡಿ ನೋಡಿದರೆ
ನನ್ನ ಮಂತ್ರದ ಮಹಿಮೆಯು ಗೊತ್ತಾಗುವುದು.
ಸುಭದ್ರೆಯುಎದ್ದು ದಿಂಬನ್ನೊರಗಿಳಕೊಂಡು ಕುಳಿತಳು, ಎರಡು ಕೈಗ
ಳಿಂದಲೂಕಣ್ಣು ಗಳನ್ನು ಮುಚ್ಛಿ ಕೊಂಡಳು. ವೈದ್ಯನು, "ಹುಂ !
ಮಹಂಕಾಳಿ ! ಚಂಡಿ! ಚಾಮುಂಡಿ " ಹ್ರೀಂ, ಹ್ರೂಂ, ಪಟಪಟ
ಝುಂಕಾರಧ್ವನಿಭೈರವಿ, ನನ್ನ ಇಷ್ಠಾರ್ತವನ್ನು ನೆರವೇರಿಸು“ ಎಂದು,
ಸುಭದ್ರೆಯನ್ನು ಕುರಿತು "ಸುಭದ್ರಾಬಾಯಿ! ಒಂದು, ಎರಡು,
ಮೂರು. ಎಂದು ಚಿಟಿಕಿಯನ್ನು ಹೊಡೆದನು. ಸುಭದ್ರೆಯು ಕಣ್ದೆ
ರೆಯಲಾಗಿ ತನ್ನ ಪ್ರಾಣಸ್ಕ್ರರೂಪನಾದವನೆ ಸ್ವಯಂ ನಿಂತಿದ್ದನು.
---------------------------------------
೭೯
ಸುಭದ್ರೆಯು ತನ್ನ ಕಣ್ಣನ್ನೆ ತಾನು ನಂಬಲಾರದೆ ಹೋದಳು. ಹಾಗೆಯೆ
ಪತಿಯ ಬಾಹುಗಳು ಸ್ಪರ್ಶವಾದುದರಿಂದ ಕನಸಲ್ಲವೆಂದೂ ವ್ಯಕ್ತವಾ
ಯಿತು. ದಂಪತಿಗಳಿಬ್ಬರೂ ಆನಂದಾತಿಶಯದಿಂದ ಅವಾಕಕ್ಕಾದರು.
ಸುಭದ್ರೆಯು ಆಹಾರನಿದ್ರೆಗಳಿಲ್ಲದೆ ಬಹಳ ಬಡವಾಗಿದ್ದರೂ ಅವಳ ಸೌಂ
ದರ್ಯವು ಸ್ನಲ್ಲವೂ ಕಡಿಮೆಯಾಗಿರಲಿಲ್ಲ. ತಲೆಯನ್ನು ಬಾಚಿಕೊಂಡು
ಏಷ್ಲೋ ದಿನಗಳಾಗಿ ಹೋಗಿದ್ದುವು. ಹಳೆಯದಾದ ಮಾಸಲು
ಬಣ್ಣದ ಸೀರೆಯನ್ನುಟ್ಟಿದ್ದಳು. ಆಭರಣದ, ಸೊಲ್ಲೇ ಇಲ್ಲ. ಹೀಗಿದ್ದ
ರೂ ಆ ವಿಶಾಲವಾದ ಕಾಂತಿಯುಳ್ತವಾದ ನೇತ್ರದ್ವೆಯವೂ, ಶುಭ್ರ
ವಾದ ದಂತ ಪಂಕ್ತಿಯೂ, ವಿಶಾಲವಾದ ಹಣೆಯೂ, ನಸುನೀಟ
ವಾದ ಮೂಗೂ, ಮೇಲಾಗಿ, ಸ್ಕ್ರರ್ಣಕಾಂತಿಗೆ, ಸಮವಾದ ಶರೀರ
ಕಾಂತಿಯೂ ಎಂತಹ ವಿರಕ್ತನನ್ನಾ ದರೂ ಮರುಳುಮಾಡುವಂತಿ
ದ್ದುವು. ಮಾಧವನ್ನು ತಾನೇ ಧನ್ಯನೆಂದುಕೊಂಡನ್ನು ವೈದ್ಯನು
“ನಾನೆಲ್ಲಿಯೂ ಇಂತಹ ಯುಗ್ಮವನ್ನು ನೋಡಲಿಲ್ಲ“ ಎಂದಂದು
ಕೊಂಡು, ಮಾಧವನನ್ನು ಕುರಿತು , “ರಾಯರೆ ! ನಾನು ಇನ್ನು
ಸ್ವಲ್ಪ ಹೊತ್ತು ಬಿಟ್ಟುಕೊಂಡು ಬರುತ್ತೇನೆ. ಇಲ್ಲಿಯೇ ಇರೋಣಾ
ಗಲಿ“ ಎಂದು ಹೇಳಿ ಹೋದನು .
ಸುಭದ್ರೆಯೂ ಮಾಧನನೂ ಏನೇನುಮಾತಾಡು ತ್ತಿದ್ದ ರೋ
ನಾವರಿಯಿವು. ಸುಭದ್ರೆಯು ತನ್ನ ಕಷ್ಟಗಳನ್ನೆಲ್ಲಾ ಹೀಳಿಕೊಂಡಿರಬ
ಹುದು. ಮಾಧವನೂ ತಾನು ಪಂಡರಾಪುರವನ್ನು ಬಿಟ್ಟು ಹೊರಟ
ಮೇಲೆ ನಡೆದು ದೆಲ್ಲನನ್ನೂ ತಿಳಿಸಿರಬಹುದು. ಸ್ವಲ್ಪ ಹೊತ್ತು ಕಳೆದ
ಅನಂತರ ಗಂಗಾಬಾಯಿ, ಶಂಕರರಾಯ, ನವಾಬ, ಈ ಮೂರು ಜನವೂ
ಆಸ್ಪತ್ರೆಗೆ ಬಂದು ದಂಪತಿಗಳದುರಿಗೆ ನಿಂತರು. ಅವರನ್ನು ವೈದ್ಯನು
ಕರೆಯಕಳುಹಿಸಿದ್ದನು. ಸುಭದ್ರೆಗೆ ಅವರನ್ನು ಕಂಡೊಡನೆಯೆ ಎಲ್ಲಿಂದ
ಲೋ ಹೊಸ ಶಕ್ತಿಯುಂಟಾಯಿತು.. ಸರಾಗವಾ[\, ಎದ್ದುಕೂರಲಾ
----------------------------------------
೮೦
ರದವಳು ಮಂಚದಿಂದ ಕೆಳಗೆ ಜಗ್ಗನೆ ಇಳಿದು ಮೊದಲುಶಂಕರರಾಯ
ನಿಗೂ, ಅನಂತರ ಗಂಗಾಬಾಯಿಗೂ ನಮಸ್ಥಾ ರ ಮಾಡಿದಳು. ಇದ
ನ್ನೆ ಲ್ಲಾ ನೋಡುತ್ತಿದ್ದ ವೈದ್ಯನಿಗೆ ಪರಮಾಶ್ಚರ್ಯವುಂಟಾಯಿತು.
“ಮನಸ್ಸಿನ ಶಕ್ತಿಯ ಮುಂದೆ ಔಷಧದ ಶಕ್ತಿ ಎಷ್ಟರದು?“ ಎಂದನು.
ಶಂಕರರಾಯನು ಸುಭದ್ರೆಯ ರೂಪಲಾವಣ್ಯವನ್ನು ನೋಡಿ ಮುಗ್ಧ
ನಾದನು. "ಮನೆಗೆ ಮಹಾಲಕ್ಸ್ಮೀ ಸ್ವರೂಪಳಾದವಳ ಮೇಲೆ
ನಿಷ್ಕಾ ರಣವಾಗಿ ದ್ವೇಷಮಾಡಿ ಅಮೃತವನ್ನು ವಿಷಮಾಡಿಕೊಂಡಿ
ದದೆನಲ್ಲಾ ! ಭಗವಂತನ . ಕರುಣೆಯು ಅಪರಿಮಿತವಾದುದು``
ಎಂದಂದುಕೊಂಡನು.
ಮುಖ್ಯವೈದ್ಗನು ಆಸ್ಪತ್ರೆಯಿಂದ ಸುಭದ್ರೆಯನ್ನು ಕರೆದು
ಕೊಂಡು ಹೋಗಬಹುದಿಂದೂ, ಅಳೆಗೆ ಸ್ವಲ್ಪ ಸರಿಯಾದ ಆಹಾರ,
ವಿಶ್ರಾಂತಿಗಳನ್ನು ಕೊಟ್ಟರೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುವುದೆಂದೂ ಹೇಳಿದನು, ಅದರಂತೆಯೆ ಸುಭದ್ರೆಯನ್ನು ಕರದುಕೊಂಡುಹೋದರು.
----
--- ಹ ತ್ತೊಂ ಬ ತ್ತ ನೆ ಯ ಆ ಧ್ಯಾ ಯ.----
ಮಧ್ಯಾಹ್ನ, ಭೋಜನವಾದ ಕೂಡಲೆ, ಶಂಕರರಾಯನೂ, ನವಾ
ಬನೂ, ಮಾಧವರಾಯನೂ ಫೋಲೀಸು ಠಾಣೆಗೆ ಹೋ
ದರು ಅಷ್ಟುಹೊತ್ತಿಗೆ ನವಾಬನ ಮಾತಿನಮೇರೆ ಒಬ್ಬ
“ಮ್ಯಾಜಿಸ್ಟ್ರೇಟನೂ" ಬಂದು ಕುಳಿತಿದ್ದ ನು. ಆತ್ಮಾ ರಾಮನು
ಒಂದು “ಹೇಳಿಕೆ“? ಯನ್ನು ಬರೆದು ಸಿದ್ಧ ಮಾಡಿಕೊಂಡಿದ್ದನು. ಅದು
ಬಹಳ ಲಂಬವಾಗಿದ್ದುದರಿಂದ ಅದರ ಸಾರಾಂಶವನ್ನು ಮಾತ್ರ ಇಲ್ಲಿ
ತಿಳಿಸುವೆವು.
-------------------------------------
೮೧
ಆತ್ಮಾ ರಾನುನು ಶಂಕರರಾಯನ ಮನೆಯನ್ನು ಬಿಟ್ಟು ಓಡಿ
ಹೋಗಿ ಇಪ್ಪತ್ತುವರ್ಷಗಳಾದಮೇಲೆ ಮದುವೆಯನ್ನು ಮಾಡಿಕೊಳ್ಳ
ಬೇಕೆಂದು ಇಷ್ಟಹುಟ್ಟಿ ಹೆಣ್ಣು ಹುಡುಕಿಕೊಂಡು ರಾಂಪುರಕ್ಕೆ
ಬಂದನು. ಅಲ್ಲಿ ಮದುವೆಗೆ ಎಲ್ಲವೂ ಸಿದ್ದವಾಯಿತು. ಆದರೆ ಮದು
ವೆಯ ಹಿಂದಿನದಿನ ಎದುರುಗೊಳ್ಳವ ಸಮಯದಲ್ಲಿ ಪೋಲೀಸಿನವರು
ಹಿಡಿದುಕೊಂಡುಹೋಗಿ ಪುನಹೆಯಲ್ಲಿ ಸೆಷನ್ ಕೋರ್ಟಿಗೆ ದಾಖ
ಲ್ಮಾ ಡಿಸಿದರು. ಅನಂತರ ರಾಂಪುರದ ರಾಮರಾಯರು ಬಹಳದ್ರವ್ಯ
ವನ್ನು ವ್ಯಯಮಾಡಿ ಆತ್ಮಾ ರಾಮನಿ ಗೆ ಬಿಡುಗಡೆಮಾಡಿಸಿದಲ್ಲದೆ ಸಿವಿ
ಲ್ ಕೋರ್ಟಿನಲ್ಲಿ ಹುಡುಗಿಯನ್ನು ಸಾಧೀನಕ್ಕೆ ಕೊಡಿಸಬೇಕೆಂದು
ದಾವಾಹಾಕಿಸಿದರು ಅದಕ್ಕೂ ಅವರು ಸಾಕ್ಷಿಗಳಿಗೆಲ್ಲಾ ಲಂಚಕೊಡ
ಬೇಕಾಯಿತಾದುದರಿಂದ ಬಹಳ ಹಣವು ವೆಚ್ಚವಾಯಿತು. ಸಿವಿಲ್
ಕೋರ್ಟಿನ 'ಡಿಕ್ರಿ'ಯಂತೆ ಹುಡುಗಿಯನ್ನು ಸ್ವಾಧೀನಪಡಿಸಿಕೊಂಡು
ರಾಮರಾಯರ ಅಪ್ಪಣೆಯಂತೆ ಯಾರಿಗೂ ಪತ್ತೆಯಾಗದ ಸ್ಥಳದಲ್ಲಿ
ಕೆಲವು ಕಾಲವಿರಬೇಕೆಂದು ಆತ್ಮಾ ರಾಮನು ಗೊತ್ತು ಮಾಡಿಕೊಂಡು
ನಿಜಾಮ ರಾಷ್ಟ್ರಕ್ಕೆ ಹೋಗಿಸೇರದನು ಅಲ್ಲಿಯೂ ರೈಲ್ವೆಸ್ಟೇಷನ್
ಗಳಬಳಿ ವಾಸಮಾಡಿದರೆ ತೊಂದರಿಯಾದೀತೆಂಬ ಭೀತಿಯಿಂದ ರೈಲ್ವೆ
ಸ್ಟೇಷನ್‌ಗೆ ಒಂದುದಿನದ ದಾರಿಯಲ್ಲಿರುವ ನಿರ್ಮಲಕ್ಕೆ ಹೋದನು. ಅಲ್ಲಿ
ವಿಶೇಷ ಜನಸಂಚಾರವಿಲ್ಲದ ಬೀದಿಯಲ್ಲಿ ಒಂದುಮುರುಕು ಮನೆಯನ್ನು
ಬಾಡಿಗೆಗೆ ತೆಗೆದುಕೊಂಡನು. ನಿರ್ಮಲವನ್ನು ಸೇರಿದಮೇಲೆ ಸುಭ
ದ್ರೆಯುಒಂದೆರಡುದಿನ ಸ್ವಲ್ಪ ಮುಷ್ಟರ ಸ್ವಭಾವವನ್ನು ತೋರಿಸಿದಳು.
ಅನಂತರ ಪ್ರಯೋಜನವಿಲ್ಲವೆಂದು ತಿಳಿದು ಕೇವಲ ವಿಧೇಯಳಾದಳು.
ಆತ್ಮಾ ರಾಮನು ಆ ಮನೆಯಹೊರಬಾಗಿಲಿಗೆ ಬೀಗವನ್ನು ಹಾಕಿಹಿತ್ತ
ಲ ಬಾಗಿಲಿನಿಂದ ಸಂಚಾರಮಾಡುತ್ತಿದ್ದನು. ಹಿತ್ತಲಬಾಗಿಲಿಗೂ ಒಳ
ಗಡೆ. ಬೀಗವನ್ನು ಹಾಕಿಕೊಳ್ಳುತ್ತಿದ್ದನು. ಹೀ ಗೆ ಸುಭದ್ರೆಗೆ ಅ ಮನೆಯು
---------------------------------------
೮೨
ಪ್ರತ್ಯಕ್ಷ ಕಾರಾಗೃಹವಾಗಿಯೆ ಪರಿಣಮಿಸಿತ್ತು. ಅತ್ಮಾ ರಾಮನು
ಒಂದು ಶುಭಮುಹೂರ್ತವನ್ನು ಕಟ್ಟಿಸಿ ಸುಭದ್ರೆಯನ್ನು ಮದುವೆಮಾಡಿ
ಕೊಳ್ಳಯಬೇಕೆಂದು ಪ್ರಯತ್ನ ಮಾಡಿದನು. ಲಗ್ನವು ಇನ್ನೂ ಎರಡು
ಮೂರು ದಿನವಿರುವಾಗ ಒಂದುದಿನ ರಾತ್ರೆಅವನಿಗೆ ಭಯಂಕರವಾದ
ಕನಸಾಯಿತು. ಒಬ್ಬ ಕೃಷ್ಣವರ್ಣದ ಪುರುಷನು ದೊಡ್ಡ ದೊಡ್ಡ
ಗೋಪೀಚಂದನದ ನಾಮಗಳನ್ನು ಧರಿಸಿಕೊಂಡು. ನಿಂತಂತಿತ್ತು.
ಒಂದೊಂದುಸಾರಿ ಆ ಮೂರ್ತಿಯ ಮುಖವು ಸಿಂಹದ ಮುಖದಂತೆ
ತೋರುತ್ತಿತ್ತು. ಆ ಮೂರ್ತಿಯ ಕಣ್ಣುಗಳನ್ನು. ಕೆಂಪಗೆ ಮಾಡಿ
ಕೊಂಡು ಆತ್ಮಾ ರಾಮನನ್ನು ದುರುದುರನೆ ನೋಡುತ್ತಾ "ನಿನಗೆ
ಬಂದಿದೆ ಕೇಡು`` ಎಂದು ಅರ್ಭಟಿಸಿ, "ಅ ಹುಡುಗಿಯನ್ನು ಮನೆ
ಯಿಂದ ಕಳುಹಿಸುವೆಯಾ ಇಲವೆ? " ಎಂದು ಕೇಳಿದನು. ಆತ್ಮಾ
ರಾಮನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನಿಗೆ ಥಟ್ಟನೆ ಎಚ್ಚ
ರವಾಯಿತು. ಮೈ ಬೆವತುಹೋಗಿತ್ತು. ಹಾಗೆಯೆ "ಇದು ಬರೀ
ಕನಸು“ ಎಂದಂದುಕೊಂಡು ಎದ್ದು ಕುಳಿತನು. ಅದರೂ ಮನಸ್ಸಿ
ನಲ್ಲಿ ಭೀತಿಯು ತಪ್ಪಲಿಲ್ಲ. ಎದ್ದು. ತಿರುಗಾಡಿದರೆ ಸರಿಯಾಗಬಹು
ದೆಂದುಕೊಂಡು ಏಳಲು ಪ್ರಯತ್ನ ಮಾಡಿದನು. ಸಾಧ್ಯವಾಗಲಿಲ್ಲ.
ಕಾಲುಗಳೆರಡರ ಕೀಲುಗಳೂ ಕಟ್ಟಿಕೊಂಡು ಹೋಗಿದ್ದುವು. ಅಂದಿ
ನಿಂದ ಹಾಸಿಗೆ ಹಿಡಿದು ಮಲಗಿಬಿಟ್ಟನು. ಮನೆಯೊಳಗೆ ಒಂದೆರಡು
ವಾರಕ್ಕೆ ಸಾಕಾ ಗುವಷ್ಟು ಆಹಾರಪದಾರ್ಥಗಳಿದ್ದುವು.ಅದುವರೆಗೂ
ಅತ್ಮರಾರಾಮನೆ ಅಡಿಗೆಯನ್ನು ಮಾಡಿ ಸುಭದ್ರೆಗೂ ಬಡಿಸುತ್ತಿದ್ದ
ನು. ಆಗ ಸುಭದ್ರಿಯು ಅಡಿಗೆಮಾಡಬೇಕಾಯಿತು ಅಡಿಗೆ ಮಾಡಬೇಕಾ
ದರೆ ನೀರಿಗೆ ಹೊರಗೆ ಹೋಗಬೇಕಾಗುತ್ತಿತ್ತು. ಸುಭದ್ರೆಯನ್ನು ಹೊರಗೆ
ಬಿಟ್ಟರೆ ಕೈಗೆ ಸಿಕ್ಕುವಳೆ? ಮನಸ್ಸಿಗೆಬಹಳ ಯೋಚನೆಯುಂಟಾಯಿತು.
ಕೊನೆಗೆ ಅವಳನ್ನು ನಿರ್ಬಂಧದಿಂದಿಡುವುದು ಅಸಾಧ್ಯವೆಂದು ತಿಳಿದು
--------------------------------------
೮೩
ಅವಳನ್ನು ಕರೆದು “ಸುಭದ್ರೆ! ನನಗೆ ಏಳುವುದಕ್ಳೂ ಕೂರುವುುದಕ್ಕೂ
ಆಗುವುದಿಲ್ಲ. ನಿನಗೇನಾದರೂ ಕನಿಕರವಿದ್ದು ನನ್ನ ಪ್ರಾಣವನ್ನುಳಿಸಿ
ನಿನ್ನ ಪ್ರಾಣವನ್ನೂ ಉಳಿಸಿಕೊಳ್ಳಬೇಕೆಂದಿದ್ದರೆ, ಇಗೋ ಈ ಬೀ ಗದ
ಕೈಯನ್ನು ತೆಗೆದುಕೊ. ಬಾವಿಗೆ ಹೋಗಿ ನೀರು ತಂದು ಸ್ವಲ್ಪ
ಅನ್ನ ವನ್ನು ಮಾಡಿಹಾಕು ನನ್ನ್ನ ನ್ನು ಬಿಟ್ಟು ಓಡಿಹೋಗಲು ಇಷ್ಟವಾ
ದರೆ ಹಾಗೂಮಾಡಬಹುದು. ಆದರೆ ನಿನಗೆ ಅದರಿಂದ ಅನೇಕ ತೊಂದರೆ
ಗಳುಂಟಾಗುವುವು ನೋಡಿಕೊ“ಎಂದನು . ಸುಭದ್ರೆಯು ಅಂದಿನಿಂದ
ಆತ್ಮಾ ರಾಮನಿಗೆ ಅಡಿಗೆಮಾಡಿಹಾಕುವುದಲ್ಲದೆ, ಅವನು ಮನಸ್ವಿ
ಯಾಗಿ ಬೈಯು ಬೈಗಳನ್ನೂ ಸಹಿ ಸಿಕೊಂಡು ಅವನ ಕಾಲುಗಳಿಗೆ
ಎಣ್ಣೆಯನ್ನು ನೀವುವುದು, ಸೇಕವನ್ನು ಕೊಡುವುದು. ಮುಂತಾದ
ಶುಶ್ರೂಷೆಗಳನ್ನು ಬೇಸರವಿಲ್ಲದೆ ಮಾಡುತ್ತಿದ್ದಳು. ಕಾಯಿಲೆಯು
ಹೆಚ್ಚುತಹೆಚ್ಚುತ ಆತ್ಮಾ ರಾಮನ ಹಿಂಸೆಯೂ ಹೆಚ್ಚುತ್ತಿತ್ತು. ಅದರೂ
ಸುಭದ್ರೆಯು ಅದನ್ನು ಸಹಿಸಿಕೊಂಡಿದ್ದಳು. ಕೊನೆಗೆ, ಮೊರುದಿನ
ಗಳು ಅವಳಿಗೆ ಸ್ವಲ್ಬವೂ ವಿಶ್ರಾಂತಿಯಿಲ್ಲದಂತಾಯಿತು. ಅದನ್ನೂ
ಸಹಿಸಿಕೊಂಡಿದ್ದಳು. ನಾಲ್ಕನೆಯ ದಿನ ಬೆಳಗ್ಗೆ ಪೋಲೀಸಿನವರು
ಮನೆಯೊಳಗೆ ನುಗ್ಗಿ ಆತ್ಮಾ ರಾಮನನ್ನು ಹಿಡಿದುಕೊಂಡುಹೋದರು.
“ಸುಭದ್ರಾಬಾಯಿಯವರನ್ನು ನಮ್ಮ ತಾಯಿಗೆ ಸಮಾನರನ್ನಾಗಿ
ಭಾವಿಸಿದ್ದೇನೆ. ಅವರು ನಿಷ್ಕಲ್ಮಷ ಹೃದಯರಾದ ಕನ್ನಿಕೆಯಾದು
ದರಿಂದ ಮಾಧವರಾಯರು. ಸ್ವಲ್ಪವೂ ಸಂದೇಹಪಡದೆ ಅವರನ್ನು
ಪರಿಗ್ರಹಿಸಬಹುದು. ನಾನು ನಿರ್ಮಲದ ಮನೆಯಲ್ಲಿ ಹೂತಿಟ್ಟಿ
ರುವ. ೧೦೦೦ ರೂಪಾಯಿಗಳನ್ನು ಸುಭದ್ರಾಬಾಯಿಯವರಿಗೆ
ಬಳುವಳಿಯಾಗಿ ಕೊಟ್ಟಿದ್ದೇನೆ. ನಾನು ಇನ್ನು ಒಂದು ಕ್ಷಣವೂ
ಈ ಪಾಪಿ ಶರೀರವನ್ನಿ ಟ್ಟು ಕೊಂಡು ಬಾಳಲು ಇಷ್ಟವಿಲ್ಲ ಆದರೆ
ಒಂದುಸಾರಿ ಸುಭದ್ರಾ ಬಾಯಿಯವರನ್ನು ದರ್ಶನ ಮಾಡಿಕೊಂಡು
----------------------------------------
೮೪
ಅವರಿಗೆ ಕೊಟ್ಟ ಹಿಂಸೆಯನ್ನು ಕ್ಷಮಿಸುವಂತೆ ಕೇಳಿಕೊಳ್ಳಲು ಅವ
ಕಾಶಕೊಟ್ಟರೆ ಬಹಳ ಕೃತಜ್ಞನಾಗಿರುವೆನು``. ಹೀಗೆಂದ್ದು. ಆ
" ಹೇಳಿಕೆ“`ಯು ಮುಗಿಸಲ್ಪಟ್ಟಿತ್ತು. ಆತ್ಮಾ ರಾಮನು ಅ ಕಾಗದಕ್ಕೆ
ಮ್ಯಾಜಿಸ್ಟ್ರೇಟಿನ ಮುಂದೆ ರುಜುಹಾಕಿದನು. ನವಾಬನು ಸಾಕ್ಷಿ
ಹಾಕಿದನು. ಮ್ಯಾಜಿಸ್ಟೈಟನೂ ರುಜುಮಾಡಿದನು. " ನಾಳೆ
ಬೆಳಗ್ಗೆ ಸುಭದ್ರೆಯನ್ನು ನೀನು ನೋಡಬಹುದು“ ಎಂದು ಹೇಳಿ
ಶಂಕರರಾಯನು ನವಾಬ್, ಮಾಧವನೊಡನೆ ಬಿಡಾರಕ್ಕೆ ಹೋದನು.
ಮ್ಯಾಜಿಸ್ಟ್ರೇಟನು ಠಾಣೆಯ ದರೋಗನಿಗೆ . ಆತ್ಮಾ ರಾಮನು ಅತ್ಮ
ಹತ್ಯೆ ಮಾಡಿಕೊಳ್ಳದಂತೆ. ಎಚ್ಚರವಾಗಿ ನೋಡಿಕೊಂಡಿರಬೇ
ಕೆಂದು ಸೂಚನೆ ಹೊರಟುಹೋದನು .
ಬಿಡಾರಕ್ವೆ ಬಂದೊಡನೆಯೆ ಕಂಕರರಾಯನು ಸುಭದ್ರೆ ಮತ್ತು
ಗಂಗಾಬಾಯಿ ಇವರೆದುರಿಗೆ ಆತ್ಮಾ ರಾಮನ ಹೇಳಿಕೆಯನ್ನು ಒದುತ್ತ,
ಸುಭದ್ರೆಯು ಅವಕಾಶ ಸಿಕ್ಕಿದರೂ ಓಡಿಹೋಗದೆ ಇದ್ದುದು ಆಶ್ಚರ್ಯ
ಎಂದನು. ಅದಕ್ಕೆ ಗಂಗಾಬಾಯಿಯು "ಈ ವಿಚಾರವನ್ನು . ನಾನು
ಮೊದಲೇ ಕೇಳಿದೆನು. ನಮ್ಮ ಸುಭದ್ರೆಯು ಹುಡುಗಿಯಾದರೂ
ದೂರದೃಷ್ಟಿಯುಳ್ಳವಳು. ರಾಮರಾಯನು ತನಗೆ ಶತ್ರುವಾಗಿ ನಿಂತಿ
ರುವುದು ಅವಳಿಗೆ ತಿಳಿದಿದ್ದುದರಿಂದ ತಪ್ಸಿಸಿ ಕೊಂಡುಹೋಗುವುದು.
ಮತ್ತಷ್ಟು ಅನರ್ಥಳ್ಳ ಕಾರಣವಾಗಬಹುಬಿಂದು ತಿಳಿದು ಆತ್ಮಾ ರಾಮ
ನಿಗೆ ವಿಧೇಯಳಾಗಿದು, ಶುಶ್ರೂಷೆ ಮಾಡುವುದರ ಮೂಲಳ ಅವನಲ್ಲಿ
ಕನಿಕರವನ್ನು ಹುಟ್ಟಿಸಿ ತನ್ನ ಪತಿಯನ್ನು ಸೇರಲು ಅವನಿಂದಲ್ಲೇ
ಸಹಾಯವನ್ನು ಪಡೆಯುವ ಉದ್ದೇಶದಿಂದ ನಿಂತುಬಿಟ್ಟಳಂತೆ. ಆದರೆ
ಅವನಿಗೆ ರೋಗವು ಗುಣವಾಗುವ ಸಂಭವವು ತೋರಲಿಲ್ಲವಾದುದ
ರಿಂದಲೂ, ಕೊನೆಕೊನೆಗೆ ಅವನ ಹಿಂಸೆಯು ಸಹಿಸಲಸಾಧ್ಯವಾಗಿ
--------------------------------------
೮೫
ಪರಿಣಮಿಸಿದುದರಿಂದಲೂ ಪ್ಲಾಣತ್ಯಾಗ ಮಾಡಲು ನಿಶ್ಚಯಿಸಿ
ಆಹಾರವನ್ನು ಬಿಟ್ಟ್ಗಳಂತೆ“ ಎಂದು ಹೇಳಿದಳು.
ಕಾಗದವನ್ನೋದಿ ಪೂರೈಸುತ್ತಲೆ ಸುಭದ್ರೆಗೆ ಮನಸ್ಸಿನಲ್ಲಿದ್ದ
ಆತಂಕವು ದೂರವಾಯಿತು. ಅತ್ಮಾ ರಾಮನು ಯಥಾರ್ಥವನ್ನು ಬರೆ
ದು ತನ್ನ ಮೇಲೆ ಸಂದೇಹಕಕ್ಕೆ ಆಸ್ಪದವಿಲ್ಲದಂತೆ ಮಾಡಿದುದಕ್ಕೋಸ್ಫರ
ಅವಳ . ಹೃದಯವು ಕೃತಜ್ಞತೆಯಿಂದ ತುಂಬಿ ತುಳುಳಾಡುತ್ತಿತ್ತು.
ಕಣ್ಣುಗಳು ಅನಂದಾಶ್ರುನನ್ನು ಸುರಿಸಿದುವು. ಶಂಕರರಾಯನು
ಸುಭದ್ರಯ ಸಹನಗುಣವನ್ನೂ ದೂರಾಲೋಚನೆಯನ್ನೂ ಬಹಳ
ವಾ ಗಿ ಶ್ಲಾಗಿಸಿದನು.
---
--- ಇ ಪ್ಪ ತ್ತ ನೆಯ ಅ ಧ್ಯಾ ಯ---
ಮಾರಣೆಯ ದಿನ ಗಂಗಾಜಿಯಿ, ಸುಭದ್ರೆ, ಮಾಧವ, ಶಂಕರ
ರಾಯ, ನವಾಬ, ಈಐದುಜನನೂ ಠಾಣೆಗೆ ಹೋದರು.
ಸುಭದ್ರೆಯನ್ನು ಕಂಡೊಡನೆಯೆ ಆತ್ಮಾ ರಾಮುನು ಅವಳ ಕಾಲುಗಳ
ಮೇಲೆಬಿದ್ದು "ನನ್ನನ್ನು ಕ್ಷಮಿಸಿ ರುವೆನೆಂದು ಒಂದುಮಾತು ಹೇಳಿ,
ತಾಯೆ! ನಾನು ನಿಮ್ಮನ್ನು ಬಹಳವಾಗಿ ಕಷ್ಟಪಡಿಸಿದೆ ಎಂದನು.
ಸುಭದ್ರೆಯು ಮನಃಪೂರ್ವಕವಾಗಿ ನಿಮ್ಮನ್ನು ಕ್ಷಮಿಸಿರುವುದಲ್ಲದೆ
ನಿಮಗೆ ಬಹಳ ಕೃತಜ್ಞಳಾಗಿದ್ದೇನೆ." ಎಂದಳು. ಅದನ್ನು ಕೇಳಿ ಆತ್ಮಾ
ರಾಮನು ಗಟ್ಟಿಯಾಗಿ ನಕ್ಕು, “ನಾನೇ ಧನ್ಯ, ನಾನೇ ಧನ್ಯ“ ಎಂದು
ಕೂಗಿಕೊಂಡು ಸ್ಮೃತಿ ತಪ್ಪಿದವನಂತೆ ಬಿದ್ದುಕೊಂಡನು. ಠಾಣೆಯ
ದರೋಗನು ಅವನ ಸಹಾಯಕ್ಕೆ ಓಡಿದನು. ಆದರೆ ಆತ್ಮಾ ರಾಮನು
ಗತಾಸುವಾಗಿದ್ದನು ಕೂಡಲೆಒಬ್ಬಜವಾನನು ಆಸ್ಪ ತ್ರೆಗೆಓಡಿಹೋಗಿ
-------------------------------------
೮೬
ಡಾಕ್ಟ್ರರನ್ನು ಕರೆತಂದನು. ಮ್ಯಾಜಿಸ್ಟ್ರೇಟನನ್ನೂ ಅಲ್ಲಿಗೆ ಬರಮಾಡಿ
ದರು; ಅವರಿಬ್ಬರೂ ನೋಡಿದರು. ಕೊಂಚ ಹೊತ್ತಿನಲ್ಲಿಯ ಶವವು
ಹಸುರು ಬಣ್ಣಕ್ಕೆ ತಿರುಗಿದ್ದುದರಿಂದ ಸಂದೇಹವುಂಟಾಗಿ ಆಸ್ಪತ್ರೆಗೆ
ಅದನ್ನು ತೆಗೆದುಕೊಂಡು ಹೋದರು. ಅಲ್ಲಿ ಪರೀಕ್ಷೆ ಮಾಡಲಾಗಿ
ಅನ್ನ ಕೋಶದಲ್ಲಿ ವಿಷವಿತ್ತು. ಅದು ನಿಧಾನವಾಗಿ ಕೊಲ್ಲುವ
ವಿಷವೆಂದು ತಿಳಿಯಬಂದಿತು. ಅತ್ಮಾ ರಾಮನು ಅದನ್ನು ಹಿಂದಿನ
ರಾತ್ರೆ ನುಂಗಿರಬೇಕೆಂದು ನಿರ್ಧರಿಸಿದರು. ಅನಂತರ ಆತ್ಮಾ ರಾಮನ
ಮರಣವನ್ನು “ಅತ್ಮ ಹತ್ಕೆ" ಯೆಂದು ತೀರ್ಮಾನಿಸಿ ಶವವನ್ನು ಶಂಕ
ರರಾಯನ ಕೋರಿಕೆಯಂತೆ ಅವನ ವಶಕ್ಕೆ ಕೊಡಿಸಿದರು.. ಶಂಕರರಾ
ಯರಿಗೆ ಆತ್ಮಾ ರಾಮನು ಪ್ರಾಣಬಿಟ್ಟುದಕ್ಕಾ [\ ಬಹಳ ವ್ಯಥೆ
ಯುಂಟಾಯಿತು. ಅವನ ಅಪರಕರ್ಮಕ್ಕೆ ತಕ್ವ ಏರ್ಪಾಡು ಮಾಡಿ,
ಎಲ್ಲರೂ ನಿರ್ಮಲವನ್ನು ಬಿಟ್ಟು ಪ್ರಯಾಣಮಾಡಿದರು. ಅಸ್ತತ್ರೆಯ
ಮುಖ್ಯವೈದ್ಯನಿ ಗೂ ಗಂಗಾರಾನುನಿಗೂ . ಅತಿಶಯವಾದ ಬಹು
ಮಾನಗಳು ದೊರಕಿದುವು. ಶಂಕರರಾಯನೂ ಅವನ ಕುಟುಂಬದ
ವರೂ ಹೈದರಾಬಾದಿನಲ್ಲಿ ನವಾಬನ ಕೋರಿಕೆಯಂತೆ. ೩-೪
ದಿನಗಳು ನಿಂತು ಅವನ ಅನುಮತಿಯನ್ನು . ಪಡೆದ್ದು ಪುನಹೆಗೆ,
ತಲಪಿದರು.
ಶಂಕರರಾಯನು ಒಂದುದಿನ ಏಕಾಂತವಾಗಿ . ರಾಮುರಾ
ಯನನ್ನು . ರಾಂಪುರದಿಂದ ಕರೆಸಿಕೊಂಡು ಆತ್ಮಾ ರಾಮನ
ಹೇಳಿಕೆಯ ನಕಲೊಂದನ್ನು ತೆಗೆದು ಕೈಯಲ್ಲಿಟ್ಟ್ರನು. ರಾಮರಾ
ಯನಿಗೆ ಯಾವ ಸಂಗತಿಯೂ ಗೊತ್ತಾಗಿರಲಿಲ್ಲ ಆ ಹೇಳಿಕೆಯನ್ನು
ನೋಡುತ್ತಲೇ ನಡುಗಲಾರಂಭಿಸಿ ಶಂಕರರಾಯನ ಎರಡು
ಕಾಲುಗಳನ್ನೂ. ಹಿಡಿದುಕೊಂಡು “ನನ್ನ ನ್ನು ಉದ್ಧಾರಮಾಡ
ಬೇಕು ಎಂದನು. ಶಂಕರರಾಯನು ಅವನ ಕೈಗಳನ್ನು ಬಿಡಿಸಿ,
--------------------------------------
೮೭
"ಸ್ವಾಮಿ ! ತಾವು ಹೆದರಬೇಡಿ. ನಾನು ಹಾಗೆ ತಮಗೆ
ತೊಂದರೆ.. ಕೊಡಬೇಕಂದಿದ್ದರೆ ಈ ಕಾಗದವು ನ್ಯಾಯಸ್ಥಾನ
ದಲ್ಲಿರುತ್ತಿತ್ತು. ಇನ್ನು ಮೇಲಾದರೂ ತಾವು ನಮ್ಮಲ್ಲಿ ಪ್ರಸನ್ನರಾಗು
ವುದಾಗಿ ವಾಗ್ದಾನಮಾಡುವಿರಾ?“ ಎಂದು ಕೇಳಿದನು. ರಾಮ
ರಾಯನು, "ನಾನು ತಮ್ಮ ದಾಸಾನುದಾಸನಾಗಿರುವೆನು.“
ಎಂದನು. ಶಂಕರರಾಯನು "ನಮಗೇನಾದರೂ ವಿರೋಧವಾಗಿ
ನಡೆದರೆ ಗೊತ್ತೇ ಇದೆಯಷ್ಟೆ“ ಎಂದು ಹೇಳಿ ಕಳುಹಿಸಿಕೊಟ್ಟನು.
ಶಂಕರರಾಯನು ಒಂದು ಶುಭಲಗ್ನವನ್ನು ಗೊತ್ತುಮಾಡಿ
'ಗೃಹಪ್ರವೇಶ' ವೆಂಬ ಶಾಪ್ತವನ್ನು ನೆರವೇರಿಸಿದನು. ಅ ದಿನ ಬ್ರಾ
ಹ್ಮಣರು ಮಾತ್ರವಲ್ಲದೆ ಯೂರೋಪಿಯನರು, ಮುಹವಮದೀಯರು
ಮುಂತದ ಎಲ್ಲಾ ಜಾತಿಯ ಜನರಿಗೆ ಅಂತ್ಯದಾದರದಿಂದ
ಔತಣವು ನಡೆಯಿತು. ೮ ದಿನದ ವಿಜೃಂಭಣೆಯು ವರ್ಣಿಸಲಸದಳ
ವೆಂಬಂತಿತ್ತು. ಅದರೆ ಮಾಧವನೂ ಸುಭದ್ರೆಯೂ ಹಸೆಯಮೇಲೆ
ಕುಳಿತಿದ್ದಾಗ್ಗೆ ಅವರ ಸೊಬಗನ್ನು ನೋಡುವುದರಿಂದುಂಟಾದ
ತೃಪ್ತಿಗೆ ಇದಾವುದೂ ಸರಿಬರಲಿಲ್ಲ. ಗಂಗಾಬಾಯಿಯೂ ಶಂಕರ
ರಾಯನೂ ಮಗನನ್ಗೂ ಸೊಸೆಯನ್ನೂ ನೋಡಿ ನೋಡಿ ಸಂತೊ
ಷದಿಂದ ಹಿಗ್ಗುತಲಿದ್ಗರು.
ಸಂತೋಷದ ಮೇಲೆ ಸಂತೋಷ! ವಿಶ್ವನಾಥನೂ ರಮಾಬಾ
ಯಿಯೂ ಪುನಹೆಯಹತ್ತಿರ ಯಾವುದೋ ಹಳ್ಳಿಪಳ್ಳಿಗಳಲ್ಲಿ ಭಿಕ್ಟಾ ಟನೆ
ಮಾಡುತ್ತಿದ್ದವರು ಆಕಸ್ಮಿತವಾಗಿ ಪುನಹೆಗೆ ಆದಿನ ಬಂದರು. ಅಲ್ಲಿ
ಶಂಕರರಾಯರ ಮನೆಯಲ್ಲಿ ದೊಡ್ಡ ಔತಣ ನಡೆಯುವುದಾಗಿ ತಿಳಿದು
ಭೋಜನಕ್ಕೆ ಬಂದರು. ಭೋಜನ ನಡೆಯುವಾಗ್ಗೆ ಜನಸಂದಣಿಯಲ್ಲಿ
ದ್ದುದರಿಂದ ಇವರಿರುವುದು ಯಾರಿಗೂ ಗೋಚರವಾಗಲಿಲ್ಲ. ಭೋಜ
ನಾನಂತರ ಸಭೆಸೇರಿ ಹಸೆಯಮೇಲೆದಂಪತಿಗಳು ಕುಳಿತಿದ್ದಾಗ್ಗೆ, ರಮಾ
--------------------------------------
೮೮
ಬಾಯಿಎದ್ದುನಿಂತು ಸುಮ್ಮನೇ ಬೆರಗಾಗಿ ನೋಡುತ್ತಿದ್ದಳು. ಅವಳ
ಆಶ್ಚರ್ಯಕ್ಕೆ ಮಿತಿಯೇ ಇರಲಿಲ್ಲ. ಹಸೆಯಮೇಲೆ ಳುಳಿತಿರುವರಾರು ?
ಮಗಳು, ಅಳಿಯ. ಎಷ್ಟು ನೋಡಿದರೂ ಅವರೆಲ್ಲ ಅಷ್ಟುಹೊತ್ತಿಗೆ
ಯಾವುದೋ ಕೆಲಸದ ನಿಮಿತ್ತವಾಗಿ ಗಂಗಾಬಾಯಿಯು ರಮಾ
ಬಾಯಿ ನಿಂತಿದ್ದ ಕಡೆ ಬಂದು, ಅವಳನ್ನು ಕಂಡು "ಇದೇನು ರಮಾ
ಬಾಯಿ! ಯಾವಾಗ ಬಂದಿರಿ ? ಇದೀಗ ಸುದಿನ!` ಎಂದುಹೇಳುತ್ತಾ
ನೆಟ್ಟಗೆ ದೊಡ್ಡ ಮನುಷ್ಯರ ಹೆಂಗಸರು ಸುಳಿತಿದ್ದ ಕಡೆಗೆ ಕರೆದು
ಕೊಂಡು ಹೋಗಿ ಕಳ್ಳಿ ರಿಸಿ "ಏಲ್ಲಿ ಯಜಮಾನರು ?“ ಎಂದು
ಕೇಳಿದಳು. ರಮಾಬಾಯಿಯು ವಿಶ್ವನಾಥನನ್ನು ತೋರಿಸಿ
ಕೊಟ್ಟಳು. ಅವನೂ ಹೆಂಡತಿಯಂತೆಯೆ ಎದ್ದುನಿಂತು ಆಶ್ತರ್ಯ
ಪರವಶನಾಗಿ ನೋಡುತ್ತಿದ್ದನು. ಗಂಗಾಬಾಯಿ ಅವನನ್ನು
ಮೇಲಕ್ಕೆ ಕರೆಸಿಕೊಂಡು . ಶಂಕರರಾಯನಿಗೆ ಪರಿಚಯಮಾಡಿಸಿ
ದಳು. ವಿಶ್ವನಾಥನು ಆ ಸಮಯಕ್ಕೆ ಸರಿಯಾಗಿ ಬಂದುದಕ್ಕೆ
ಶಂಕರರಾಯನು ಬಹಳವಾಗಿ ಸಂತೋಷಪಟ್ಟನು. ತಂದಿತಾಯಿ
ಗಳನ್ನು ಕಂಡೊಡನೆಯೆ ಸುಭದ್ರೆಗುಂಟಾದ ಸಂತೋಷವೆಷ್ಟೆಂದು
ಹೇಳಬೇಕಾದುದೇ ಇಲ್ಲ. ಮಾಧವಗೂ ಸ್ಪಲ್ಪಮಟ್ಟಿಗೆ ಅಪೂ
ರ್ಣವಾಗಿದ್ದ ಸುಖಪರಂಪರೆಯು ಸಂಪೂರ್ಣವಾಯಿತು.
--- ಸಂಪೂರ್ಣಂ ---
==================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ