https://archive.org/details/in.ernet.dli.2015.364845/mode/2up
ತಿರುಪತಿ ಮುು ಡು ಪಿ ನ ಕ ಳ ವು
ನಡುಗುತ್ತಿನ ಗುಡ್ಡ ಶೆಟ್ಟರೆಂದರೆ ಪಡು ಗ್ರಾಮದಲ್ಲೆಲ್ಲಾ ಭಾರಿ
'ಕಾರ್ಬಾರಿ', ಈ 'ಭಾರಿ ಕಾರ್ಬಾರಿ' ಎಂಬ ಶೆಟ್ಟರ ಕರಿ
ಕೀರ್ತಿಲತೆಯು ನಾಚಿಕೆ ಮುಳ್ಳಿನಂತೆ ನೋಡನೋಡುತ್ತ
ಪ್ರಬಲವಾಗಿದ್ದಿತು. ಕಳೆಯೆಂದು ಕೀಳಲು ಶಕ್ತಿಯಿಲ್ಲದೆ,
ಬೆಳೆಯೆಂದು ಬೆಳೆಸುವ ಅನ್ಯಾಯಕ್ಕಂಜಿ ಜನರೆಲ್ಲಾ ಮೂಗಿಗೆ
ಬೆರಳಿಟ್ಟು, "ಮನುಷ್ಯನ ಅವಸ್ಥೆ ಹೀಗೇ ಎಂದು ಹ್ಯಾಗೆ ಹೇಳುವುದು!
ಬೂದಿರಾಶಿಯಲ್ಲಿದ್ದ ಬೆಳ್ಳುನಾಯಿ ಗಾದಿ ಮೇಲೇರಿದಂತೆ ಈ ಗುಡ್ಡ,
ಎಲ್ಲಿದ್ದವ ಎಲ್ಲಿಗೆ ಬಂದ! ಈ ಕಲಿಕಾಲದಲ್ಲಿ ನ್ಯಾಯ ನೀತಿಗೆ ಬೆಲೆಯಿಲ್ಲಪ್ಪ!
ಅನ್ಯಾಯ ಮಾಡಿದವರಿಗೇನೇ ಕಾಲ!'' ಎ೦ದು ಒಳಗೊಳಗೆ ಗೊಣಗುತ್ತಿ
ದ್ದರೇ ಹೊರತು ಗುಡ್ಡಶೆಟ್ಟರ ಅಬ್ಬರದ ಇದಿರಲ್ಲಿ ಎಲ್ಲರೂ ಸ್ವಂಭಿತ
ರಾಗಿ ಕಣ್ಣಲ್ಲಿ ಮಾತ್ರ ಜೀವವುಳ್ಳವರಾಗುತ್ತಿದ್ದರು. ಒಂದೊಮ್ಮೆ ಬೂದಿ
ಬುರುಕನಾಗಿ ಭಂಡ ಉಂಡಾಡಿಯೆನಿಸಿದ್ದ ಗುಡ್ಡ ಶೆಟ್ಟಯು ಗಂಡುಗಲಿ
ಯೆನಿಸಿ ಪ್ರಚಂಡ ದರ್ಪ ಬೀಗಲು ಕಾರಣವೇನೆಂದು ಒಂದೆ: ಶಬ್ದದಲ್ಲಿ
ಹೇಳಿ ಬಿಡುವುದಾದರೆ, ಪುಂಡರೊಡೆಯನಾದ.ದು. ಬ್ರಿಟಿಷ್ ಸರಕಾರದ ಆಡಳಿತ
ಯಂತ ವು ಮೋಟರ್ ವಾಹನಗಳಂತೆ ಪೇಟೆಯಲ್ಲಿ ಎಷ್ಟೊಂದು ತೀವ್ರಗತಿ
ಯಿಂದ ಚಲಿಸಿ ದೂಳಿನ ಧೂಮವೆಬ್ಬಿಸಿ ಜನರನ್ನು ಕುರಡಗೊಳಿಸಿದರೂ,
ಪಡು ಗ್ರಾಮದಂತಹ ದೂರದ ಹಳ್ಳಿಗಳಲ್ಲಿ ಗಾಲಿ ಮುರಿದು ಬಿದ್ದು, ತಾನೇ
ದೂಳಲ್ಲಿ ಹೊರಳಾಡುತ್ತಿದ್ದಿತು! ಉಂಡಾಡಿಯಾದ ಗುಡ್ಡನು ಗಂಡುಗಲಿ, ಗುಡ್ಡ
ಶೆಟ್ಟರೆನಿಸಿ ಪ್ರತಾಪ ಬೀರಲು ಇದೇ ಕಾರಣ. 'ಅಡ್ನಾಡಿ'ಯಾಗಿ ಮನೆಮನೆ
ಅಡ್ಡಾಡಿ, ವಿಭೂತಿ ಪೆಟ್ಟಿಗೆಯಲ್ಲಿದ್ದ ವೆಂಕಟ್ರಮಣ ಗಂಟನ್ನೋ, ಭೂತದ
ಗುಡಿಯಲ್ಲಿದ್ದ ಕಂಚಿನ ಮೂರ್ತಿ, ಘಂಟಾಮಣಿಗಳನ್ನೋ ಕದ್ದೊಯ್ಯುವ
--------------------------------
- 2 –
ಚಿಕ್ಕ ಚೋರನಾಗಿ, ತನ್ನ ಮುಂದಿನ ಪ್ರಭಾವದ ಪ್ರಬಲ ಕಟ್ಟಡಕ್ಕೆ ಕೆಸರು
ಕಲ್ಲು ಹಾಕಿದಾಗ, "ಇಷ್ಟು ಧೈರ್ಯದ ಕಳ್ಳನಾರು? ಅವನಿಗೆ ಭೂತವೇ
ತಕ್ಕ ಪ್ರತಿಫಲ ಕೊಡದಿರದೆ”ಂದು ಶಪಿಸಿ, ಜನರು ಸುಮ್ಮನಿದ್ದರೇ ಹೊರತು
ಬೂದಿಬುರುಕ ಗುಡ್ಡನ ಮೇಲೆ ಒಂದಿಷ್ಟು ಸಂಶಯಪಡಲಿಲ್ಲ.
ಹೀಗಿರುತ್ತಾ ಒಂದು ದಿನ ಪಡು ಗ್ರಾಮದ ವಿಷ್ಣುಮೂರ್ತಿ ದೇವಾಲ
ಯದ ಚಿನ್ನಾಭರಣ, ಬಂಗಾರದ ವಿಗ್ರಹ ಕೂಡ ಕದ್ದೊಯ್ಯಲ್ಪಟ್ಟಿರುವುದೆಂಬ
ಹಾಹಾಕಾರವೆದ್ದಿತು. ಪೋಲೀಸರು ಬಂದರು, ೨, ೩ ದಿವಸ ಪತ್ತೆ ನಡೆಸಿ
ದರು. ವಿಚಾರಿಸಿದರು, ರಿಕಾರ್ಡು' ಮಾಡಿದರು, ಕಂಕುಳಲ್ಲಿಟ್ಟರು; ಬಂದ
ದಾರಿ ಹಿಡಿದರು.
ಜನರಿಗೆಲ್ಲಾ ದೇವಸ್ಥಾನದ ಹತ್ತಿರದಲ್ಲಿರುವ, ಮುಂಜಾನೆಯಿಂದ ಮೂ
ಸಂಜೆಯ ವರೆಗೆ ಸಜೀವ ಸೈಕಲ್ಲಿನಂತೆ, ಓಡಾಡಿ ಮೀನು ಮಾರಿ ದಿನದ ಪಥ್ಯ
ನಡಿಸುವ ಅಬ್ದುಲ್ ಖಾದ್ರಿ, ಬ್ಯಾರಿಯ ಮೇಲೆ ಬಲವಾದ ಸಂದೇಹ! ಹಿಂದು
ವಾದ ಯಾರಿಗಾದರೂ ಹೀಗೆ ದೈವದೋಹ ಮಾಡಲು ಎದೆ ಸಾಲದೆಂದೂ,
ಒಂದೊಮ್ಮೆಗೆ ಎದೆಗೊಂಡರೂ ರಕ್ತಕಾರಿ ಸತ್ತೇ ಹೋದಾನೆಂದೂ, ತಲೆಗೆಟ್ಟು
ಬೀದಿಬೀದಿ ಅಲೆದಾಡಿಯಾನೆಂದೂ ಜನರ ದೃಢ ವಿಶ್ವಾಸ! ಅಂತೆಯೇ ವಿಷ್ಣು
ಮೂರ್ತಿಯಿದಿರಲ್ಲಿ ಅವರೆಲ್ಲರ ಶಾಪ. ಪೋಲೀಸರು ಬಡ ಅಬ್ದುಲ್ ಖಾದ್ರಿಯ
ಮನೆ ಜಡ್ತಿಮಾಡಿ ನಾರುವ ಒಣ ಮಾನಿನ ಕಟ್ಟಷ್ಟನ್ನು ಹೊರಹಾಕಿದರು.
ಖಾದ್ರಿಯನ್ನು "ಮೇಲೆ ಕೆಳಗೆ'' ಮಾಡಿದರು, ಅವನು 'ಅಲ್ಲ'ನ ಸಾಕ್ಷಿ
ಯಾಗಿ ''ನಾನು ಕಳಲಿಲ್ಲ'' ಎಂದು ಹತ್ತಿಪ್ಪತ್ತು ಸಲಾಮು ಕೊಟ್ಟ ಮೇಲೆ
ಬಿಟ್ಟು ಬಿಟ್ಟರು, ಮುಂಚಿನ ರಾತ್ರಿ ದೇವಸ್ಥಾನದೊಳಗೆ ಬಂದು, ಒಂದು
ಮೂಲೆಯಲ್ಲಿ 'ಬೋದಾಳಶಂಕರ'ನಂತೆ ಬಿದ್ದುಕೊಂಡಿದ್ದ ಗುಡ್ಡನೇ ರಾತ್ರಿ
ದೇವಸ್ಥಾನದ ಸಿಂಹದ್ವಾರ ತೆರೆದು, ತನ್ನ ಸಂಗಾತಿಗಳನ್ನು ಒಳ ಬಿಟ್ಟು, ಗರ್ಭ
ಗುಡಿಯ ಬೀಗದ ಕಳ್ಳ ಕೈಯಿಂದ ಈ ದೊಡ್ಡ 'ಚೋರಿ' ನಡಿಸಿದುದೆಂಬ
ಸಂಶಯ ಯಾರಿಗೂ ಉಂಟಾಗಲಾಸ್ಪದವಿರಲಿಲ್ಲ, ಕೆಲ ಸಮಯದ ನಂತರ
ಪಡು ಗ್ರಾಮದ ಬೀಡಿನ ಬಲ್ಲಾಳರ ಮನೆಗೆ ಕಳ್ಳರು ನುಗ್ಗಿದಾಗಲೂ ಗುಡ್ಡನ
ಸಂಗಾತಿಗಳು ಕೆಲವರು ಕೈದುಮಾಡಲ್ಪಟ್ಟು ಶಿಕ್ಷೆಗೆ ಗುರಿಯಾದರು. ಆದರೆ
ಸುದೈವಿ ಗುಡ್ಡನಿಗೇನೂ ತೊಂದರೆಯಾಗಲಿಲ್ಲ.
------------------------------------
-3-
ಗುಡ್ಡನಿಂದ ಗುಡ್ಡಶೆಟ್ಟರಾದ ಹೆಸರಿನ ಉತ್ತcತಿಯ ಹಿಂದಿನ ಚರಿ
ತ್ರೆಯು ಅದೆಷ್ಟು ಕಳಂಕಿತವಾದರೂ, ಪೈಶಾಚಿಕವಾದರೂ, ಅದನ್ನೆಲ್ಲಾ
ಇಂದಿನ ಪ್ರಕಾಶವು ಉಜ್ವಲಗೊಳಿಸಿಬಿಟ್ಟರುವುದು ಯಾರದೋ ಗಂಟು
ಸಿಕ್ಕಿತೆಂದು ಕೆಲವರೂ, ಕೊಪ್ಪರಿಗೆ ದೊರೆತಿರುವುದೆಂದು ಇನ್ನು ಕೆಲವರೂ
ಗುಡ್ಡನ ಪ್ರಾಬಲ್ಯದ ಕುರಿತು ನಾನಾ ಕಥೆಗಳನ್ನು ಕಲ್ಪಿಸುತ್ತಿದ್ದರೇ ಹೊರತು
ಕಳ್ಳತನವೇ ಅವನ ಪ್ರಾಬಲ್ಯಕ್ಕೆ ಮೂಲ ಕಾರಣವೆಂಬುದರ ರಹಸ್ಯವನ್ನು
ಅರಿತು ಕೊಂಡವರು ಬರೇ ಕೆಲವರು, ಅವರೇನಾದರೂ ಆ ಕುರಿತು ಉಸುರೆತ್ತಿದರೆ
ಮತ್ಸರಿಗಳೆಂಬ ಗುಣನಾಮವು ಅವರಿಗೆ ಒಡನೆಯೇ ದೊರೆತು, ಗುಡ್ಡಶೆಟ್ಟರ
ವಕ್ರದೃಷ್ಟಿಯು ಅವರ ಮೇಲೆ ಬಿದ್ದು, ಅವರ 'ಕಾರುಬಾರಿ'ನ ಕಡ್ಗಿಚ್ಚಿಗೆ
ಸಿಕ್ಕಿ, ಬೇಯುವ ಗಂಡಾಂತರಗೊಳಗಾಗಬೇಕಿದ್ದಿತು, ತಾನು ಬೀಡಿನ
ಬಲ್ಲಾಳ; ತನಗೆಲ್ಲರೂ ತಲೆ ಬಾಗಬೇಕೆಂಬ ಅಹಂಕಾರದಿಂದ ಶೆಟ್ಟರನ್ನು
ತಿರಸ್ಕರಿಸಿದ ಪಡು ಗ್ರಾಮದ ಬಲ್ಲಾಳರ ಮನೆಯೇ 'ಗುಂಡಾಂತರ'ವಾದ ಉದಾ
ಹರಣೆಯು ಜನರ ಕಣ್ಣೆದುರಲ್ಲಿ ಕುಣಿದಾಡುತ್ತಿದ್ದಿತು. ಶೆಟ್ಟರ ಇಕ್ಕಣ್ಣಿನ
ಬೆಂಕಿಯಲ್ಲಿ ಹಾತೆಗಳಂತೆ ಉರಿಯುವುದಕ್ಕಿಂತ ಆಶ್ರಯಛಾಯೆಯ ಸೊಂಪಿ
ನಲ್ಲಿ ಇರಲೆಳಸುವವರೇ ಹೆಚ್ಚಿ, ಅವರ ಮಾತಿಗೆ ಚಕಾರ ಎತ್ತುವವರು
ಪಡು ಗಾವದಲ್ಲೇ ಇಲ್ಲದಂತಾದುದರಲ್ಲಿ ವಿಚಿತ್ರವೇನು?
ಅನ್ಯಾಯಕ್ಕೆ ಒಂದಲ್ಲೊದು ದಿನ ಅಪಾಯ ತಪ್ಪದೆಂಬ ನಿಯಮದ
ಹುರುಳನ್ನು ಶೆಟ್ಟರು ಗಾಳಿಗೊಡ್ಡಿ ಬಿಟ್ಟರು. ಅವರ ಮನೆಯ ನಡುಗುತ್ತೆನಿಸಿ
ಪಡುಗ್ರಾಮದಲ್ಲಿ ಒಂದನೇ ಮನೆಯಾಯಿತು. ಯಾರ ತಲೆ ಬಡೆದಾಗಲಿ,
ಯಾರ ಸೊತ್ತನ್ನು ಅಪಹರಿಸಿಯಾಗಿ, ಗುಡ್ಡಶೆಟ್ಟರ ಆಸ್ತಿ ಬದುಕು ದಿನೇ
ದಿನೇ ಬೆಳೆಯಿತು. ವರ್ಷ ೫೦ರ ಗಡಿ ದಾಟಿದರೂ, ನಡು ಪ್ರಾಯದ ಮೈ
ಕಟ್ಟುಳ್ಳ ಅವರಲ್ಲಿ ಯೌವನವು ಕಳೆಯೇರುವ೦ತಿದ್ದಿತು. ಅವರು ದೊಡ್ಡ
ಮನೆತನದ ಜಕ್ಕ ಜವ್ವನೆ ಹುಡುಗಿಯೋರ್ವಳನ್ನು ಎರಡನೇ ವಿವಾಹವಾದರು.
ಅವರ ಮೊದಲನೇ ಹೆಂಡತಿಯ ಮಗನಿಗೆ ಹೆಣ್ಣು ಕೊಡಲು ತಾನು ಮುಂದೆ
ತಾನು ಮುಂದೆ ಎಂದು ಅತಿ ಘನವಂತರೆನಿಸುವ ಮನೆಯವರೆಲ್ಲಾ ಮೇಲಾಡ
ತೊಡಗಿದರು. ವಂಶಪಾರಂಪರ್ಯವಾದ ಮನೆತನ, ಘನಸ್ತಿಕೆ, ಮರ್ಯಾದೆ
ಯೆಂಬುದೆಲ್ಲಾ ಎಂತಹ ಭಾ೦ತಿಯೆಂಬುದನ್ನು ಶೆಟ್ಟರು ಬಯಲುಮಾಡಿ
---------------------------------------
-೪-
ಬಿಟ್ಟರು, ಅವೆಲ್ಲಾ ಅವರು ಬೇಡವೆಂದರೂ ಅವರ ಕಾಲ ಬುಡದಲ್ಲಿ ಬಿದ್ದು
ಹೊರಳಾಡುತ್ತಿದ್ದವು.
೨
ಶೆಟ್ಟರ ಐಶ್ವರ್ಯದ ಭರತಕ್ಕೆ ಇಳಿತವಿಲ್ಲದಾಯಿತು, ಪ್ರಾಯ ಹೋ
ದಂತೆ ಆಸ್ತಿ ಬದುಕಿನ ಹಸಿವು ಆರಿ, ಮನಸ್ಸು ದೈವಭಯ ಕಡೆಗೆ ಹರಿ
ಯಿತು. ತಾನು ಯಾವ ಮೂರ್ತಿಯನ್ನು ಸ್ವಹಸ್ತದಿಂದ ಕದ್ದೊಯ್ದಿದ್ದರೋ,
ಅದೇ ವಿಷ್ಣುಮೂರ್ತಿ ದೇವಸ್ಥಾನವನ್ನು ಶೆಟ್ಟರು ಜೀರ್ಣೋದ್ಧಾರ ಮಾಡಿಸಿ,
ರಾಶಿಪೂಜೆ ನಡಿಸಿ, ದೈವಭಕ್ತಿಪರಾಯಣರೆಂದು ಪ್ರಸಿದ್ಧರಾದರು. ಎಡೆಬಿಡದೆ
ರಾಮಾಯಣ ಭಾರತ ಪಾರಾಯಣ, ಸತ್ಯನಾರಾಯಣ ಕಥಾದಿಗಳನ್ನು
ನಡಿಸಿದರು. ಒಂದು ಕಾಲದಲ್ಲಿ ಮುಖ ಸಹ ತೊಳೆಯದೆ ತಂಗಳನ್ನ ನುಂಗು
ತ್ತಿದ್ದ ಶೆಟ್ಟರು ಈಗ ಬೆಳಿಗ್ಗೆ "ನಾರಾಯಣ! ನಾರಾಯಣ!!” ಎಂದು ಎದ್ದು,
ಮುಖ ತೊಳೆದು, ಮಿಂದು, ತುಳಸಿಪೂಜೆ ಮಾಡಿ, ಮೈ ತುಂಬ ವಿಭತಿ
ಬಳೆದು, ಜಪಮಾಡಿ ಊಟಕ್ಕೆ ಹೋಗುವಾಗ, ಅಪರಾಹ್ನ ಗಂಟೆ ೨ ಆಗುತ್ತಿ
ದ್ದಿತು, ಶೆಟ್ಟರ ೬೦ನೇ ಶಾ೦ತಿಯು ಸಂಭ್ರಮವನ್ನು ಇಲ್ಲಿ ವಿವರಿಸುತ್ತಾ ಹೋದರೆ
ಶಿರೋನಾಮವೇನು, ಕೆಳಗೆ ಬರೆದುದೇನೆಂದು ವಾಚಕರು ಟೀಕಿಸಬಹುದಾದ
ದರಿಂದ ಅದನ್ನಿಲ್ಲಿ ನಿಲ್ಲಿಸಿ ಕಥೆಯ ತಿರುಳಿಗೆ ಗಮನ ಕೊಡಬೇಕಾಗಿದೆ.
ಇಷ್ಟೊಂದು ಧರ್ಮನಿಷ್ಠರಾದ ಶೆಟ್ಟರು ತಿರುಪತಿಯಾತ್ರೆ ಮಾಡಿ, ತನ್ನ
ಪಾಪವನ್ನೆಲ್ಲಾ ತಿರುಪತಿಯ ಪಾಪನಾಶಿನೀ ತೀರ್ಥೋದಕದಲ್ಲಿ ಮೈಕೊಳೆ
ಯಂತೆ ತೆಳೆದು ಬಿಡಬಹುದೆಂದು ಪಡು ಗಾನದ ಸುಬ್ಬಾಭಟ್ಟರು ಅವರ
ಕಿವಿಗೂದಿದರು. ಶೆಟ್ಟರ ಮನೆಯು ತಿರುಪತಿಯ ಮುಡುಪೂ ಅಧಿಕವಾಗಿ
ಇದ್ದಿತು. ಶೆಟ್ಟರು ಸಕುಟುಂಬವಾಗಿ ತಿರುಪತಿಯಾತ್ರೆ ಮಾಡುವರೆಂದಾ
ಯಿತು. ಕೂಡಲೇ ಊರ ಒಂದೊಂದು ಮನೆಯವರಿಗೇನೇ ವೆಂಕಟ್ರಮಣನ
ನೆನಪಾಯಿತು. ಕೆಲವರಿಗೆ ಯಾವಾಗಲೋ ಮಾಡಿದ ಹರಕೆಯ
ಸ್ಮರಣೆ ಬಂತು. ತುಕ್ಕು ಹಿಡಿದ ಕಾಲುಸರಿಗೆಯು ಕೆಲವರನ್ನು ಆಗಲೇ
ಎಚ್ಚರಿಸಿತು. ಅಂತೂ ಶೆಟ್ಟರೊಡನೆ ತಿರುಪತಿ ಯಾತೆ ಗಾಗಿ ೧೦೦ಕ್ಕಿಂತಲೂ
ಮಿಕ್ಕಿದ ಜನರ ದೊಡ್ಡ ಪರಸೆಯೆದ್ದಿತು, ಆಸುಪಾಸಿನಿಂದ ತಿರುಪತಿಗೆ
--------------------------------------
-೫-
ಹೋಗುವವರ ಕುರಿಮಂದೆಯನ್ನೆಲ್ಲಾ ನಡಿಸುವ ಕುರುಬನಂತಿದ್ದ, ಕಾಸು
ಖರ್ಚಿಲ್ಲದೆ ಹತ್ತಿಪ್ಪತ್ತು ಸಲ ತಿರುಪತಿಗೆ ಹೋಗಿಬಂದಿದ್ದ ಸುಬ್ಬಾ ಭಟ್ಟರು
ಹಿರಿಹಿರಿ ಹಿಗ್ಗಿದರು, ಶೆಟ್ಟರ ಅನುಮತಿ ಪಡೆದು, ಪಾಂಡುಚೆರಿಗೆ ಹೋಗುವ
ವನೆಂದು ತನ್ನ ಅಳಿಯ.ನನ್ನ ತಮ್ಮೊಂದಿಗೆ ಕರದೆದ್ದರು, ಶೆಟ್ಟರು ತಿರುಪತಿ
ಯಾತ್ರೆಗೆ ಹೊರಟಾಗ ಇಡೀ ಊರೇ ಎದ್ದಂತಾಯಿತು, ಪ್ರಮುಖರಾದ
ಶೆಟ್ಟರ ಹೆಗ್ಗಳಿಕೆಗೆ ತುದಿ ಮೊದಲಿಲ್ಲದಾಯಿತು.
ಶೆಟ್ಟರ ಪರಸೆಯು ರೈಲ್ವೇ ಸ್ಟೇಶನಿನಲ್ಲಿ ಮಾಡಿದ ಗದ್ದಲ, ಟೈನ್
ಹತ್ತುವ ಗಲಾಟೆ, ಸ್ಟೇಶನಗಳಲ್ಲಿ ಅವರಿಗೂ ಒಳಹೊಕ್ಕುವ ಇತರ ಪ್ರಯಾ
ಣಿಕರಿಗೂ ನಡೆದ ಜಟಾಪಟಿಯನ್ನೆಲ್ಲಾ ವಿಸ್ತರಿಸುತ್ತಾ ಹೋದರೆ ಅದೇ ಒಂದು
ಮನೋರಂಜಕ ಕಥೆಯಾಗಬಹುದು. ಈ ಗಲಾಟೆ ನಡೆಯುವಾಗ ಸುಬ್ಬಾ
ಭಟ್ಟರು ಅದೊಂದು ಕುಟಿಲ ವಂಚನೆಯ ತಂತ್ರ ಹೂಡಿ ಬಕಧ್ಯಾನಪರರಾಗಿ
ಇದ್ದರು. ಅದಕ್ಕಾಗಿ ತನ್ನ ಅಳಿಯನನ್ನು ಸಂಗಡ ಕರದೊಯ್ದಿದ್ದರು.
ಪ್ರತಿದಿನ ಪಾನಕ ಪೂಜೆ ಮಾಡಿ ಪವಿತ್ರವಾಗಿ ಇರಿಸಬೇಕಾಗಿದ್ದ ತಿರುಪತಿಯ
ಮುಡುಪನ್ನು ವರಸೆಯವರೇ ಇಟ್ಟಕೊಂಡಲ್ಲಿ ಅದು ಮೈಲಿಗೆಯಾಗಬಹು
ದಾದುದುಂದ, ಅದನ್ನೆಲ್ಲಾ ಒಟ್ಟು ಮಾಡಿ ಒಂದು ದೊಡ್ಡ 'ಪಿಟಾರಿ'ಯೊಳಗೆ
ಇಟ್ಟು, ತಾನೆ ಇಟ್ಟುಕೊಳ್ಳುತ್ತಿದ್ದರು. ಪ್ರತಿದಿನ ಪಿಟಾರಿಯ ಬಾಯಿ
ತೆಗೆದು ಪೂಜೆಮಾಡಿ, ಬೀಗ ಹಾಕುತ್ತಿದ್ದರು.
'ಟೈನು' ರಾತ್ರಿ ಕಾಟ್ಪಾಡಿ 'ಸ್ಟೇಶನಿ'ಗೆ ಮುಟ್ಟಿತು. ತಿರುಪತಿಗೆ
ಹೋಗುವವರೆಲ್ಲರೂ ಅಲ್ಲಿ ಇಳಿದು, ಬೇರೆ 'ಟ್ರೈನು' ಹತ್ತಬೇಕು. ಪಾಂಡು
ಚೆರಿಗೆ ಹೋಗುವವರು ಮತ್ತೊಂದು 'ಟ್ರೈನು' ಹಿಡಿಯಬೇಕು, ಪರಸೆಯೆಲ್ಲಾ
ಇಳಿಯಿತು. ಸುಬ್ಬಾಭಟ್ಟರ ಆವರ ಅಳಿಯನೂ ಮುಡುಪಿನ 'ಪಿಟಾರಿ'
ಯನ್ನು ಹೊತ್ತು ಒಂದು ಮೂಲೆಗೊಯ್ದಿಟ್ಟರು. ಪರಸೆಯವರು ತಮ್ಮ ಮು
ಡುಪೆಲ್ಲಾ ಸುಬ್ಬಾಭಟ್ಟರ ಹಸ್ತ ಸುರಕ್ಷಿತವಾಗಿದೆಯೆಂದು ಅದರ ಗೊಡವೆ
ಯನ್ನೇ ಬಿಟ್ಟು, 'ಟೈನಿ' ನಿಂದ ಇಳಿದು, ಇನ್ನೊಂದಕ್ಕೆ ಹತ್ತುವ ಗಲಾಟೆಯಲ್ಲಿ
ಬಿದ್ದರು. ಸುಬ್ಬಾಭಟ್ಟರ ಅಳಿಯನು "ನಾನು ಪಾಂಡುಚೆರಿಗೆ ಹೋಗುತ್ತೇನೆ"
ಎಂದು ಶೆಟ್ಟರನ್ನು ಬೀಳ್ಕೊಟ್ಟನು. ಅವನು ಪಾಂಡುಚೆ 'ಟ್ರೈನ್' ಹತ್ತಿದ
ನೋ, ಇಲ್ಲವೋ ಎಂದು ಪರೀಕ್ಷಿಸುವವರಾರು? ಅವನು ಮುಡುಪಿನ
------------------------------------------
- 6 -
ಪಿಟಾರಿಯ ಮೇಲೆ ತನ್ನ ಧೋತರವನ್ನು ಮುಚ್ಚಿ ಸುಮ್ಮಗೆ ಕಣ್ಣುಗೂರುತ್ತಾ
ಕುಳಿತುಬಿಟ್ಟನು.
ಇತ್ತ ಸುಬ್ಬಾಭಟ್ಟರು ಯಾವಾಗಲೂ ಶೆಟ್ರೊಡನೆಯೇ ಇರುವವರು
ಇವತ್ತು ಬೇರೆ ಎಲ್ಲಿಯೋ ಒಂದೆಡೆ ಟ್ರೈನು ಹತ್ತಿಬಿಟ್ಟರು. ಟ್ರೈನು ತಿರುಪತಿ
ಸ್ಟೇಶನಿಗೆ ಮುಟ್ಟಿತು, ಪರಸೆಯವರೆಲ್ಲಾ ಕೆಲವರು ಇಳಿದರು. ಇನ್ನು
ಕೆಲವರು ಇಳಿಯುವ ಅವಸರದಲ್ಲಿದ್ದರು. ಆಗ ಹಠಾತ್ತಾಗಿ, “ಅಯ್ಯೋ!
ನನ್ನ ಮುಡುಪಿನ ಪೆಟ್ಟಿಗೆ! ಎಲ್ಲಿ ಹೋಯಿತು.! ಅಯ್ಯೋ ದೇವರೇ!
ಯಾರೋ ಕದ್ದೊಯ್ದರು! ಶೆಟ್ರೆ! ಇನ್ನೇನು ಗತಿ!” ಎಂದು ಮೊರೆಯಿಡುತ್ತಾ
ಸುಬ್ಬಾಭಟ್ಟರು ಆಗತಾನೇ ಟೈನಿನಿಂದ ಇಳಿದು ಶೆಟ್ರ ಕಡೆಗೆ ಓಡಿದರು.
“ಎನು? ಏನಾಯಿತು? ಮುಡುಪಿನ ಪಿಟಾರಿಯೇ ಕಳವಾಯಿತೇ?
ಅಯ್ಯೊಯ್ಯೊ!”ಎಂದು ತಳಮಳಗೊಂಡು ಎಲ್ಲರೂ ಸಬ್ಬಾಭಟ್ಟರ 'ಕಂಪಾರ್ಟ್
ಮೆಂಟನ' ಕಡೆಗೆ ಧಾವಿಸಿದರು. ಶೆಟ್ರೂ ಇನ್ನು ಕೆಲವರೂ, ಭೂತ ಹಿಡಿದ
ಪಾತ್ರಿಯಂತೆ ತಲೆಬಿಚ್ಚಿ ಕಣ್ಣು ಕೆರಳಿಸಿ ನಖಶಿಖಾಂತ ಗಡಗುಟ್ಟಿ ನಡುಗು
ತ್ತಿದ್ದ ಸುಬ್ಬಾಭಟ್ರೊಂದಿಗೆ ಒಳಹೊಕ್ಕು ಹುಡುಕತೊಡಗಿದರು.
ಭಟ್ರು, “ಪಿಟಾರಿಯನ್ನು ಇಲ್ಲೆ ಇಟ್ಟು ಸ್ವಲ್ಪ ಕಣ್ಣಿನ ಣುವಾರಿಸಿದೆ.
ಎದ್ದು ನೋಡುವಾಗ ಪಿಟಾರಿಯಿಲ್ಲ!?” ಎಂದು ಒಂದು ಸ್ಥಳ ತೋರಿಸಿದರು.
ಕೂಡಲೆ ಟೈನ್ ಹೊರಡುವ ಬಿಗಿಲಾಯಿತು. ಎಲ್ಲರೂ ದಡಬಡನೆ ಕೆಳಗಿಳಿ
ದರು. ಮುಂದೆ ಮಾಡುವುದೇನೆಂದು ತೋಚದೆ ಎಲ್ಲರೂ ಭಯಚಕಿತರಾಗಿ
ಮೂರ್ತಿಗಳಂತಾಗಿದ್ದರು. ವೆಂಕಟ್ರಮಣನು ಇನ್ನು ಎಂತಹ ಉಪದ್ರವ
ಕೊಡುವನೋ ಎಂಬ ಭಯದಿಂದ ಎಲ್ಲರೂ ಕಂಪಿಸುತ್ತಿದ್ದರು.
ಆಗ ಸುಬ್ಬಾಭಟ್ರು ಧೈರ್ಯಗೊಂಡಂತೆ ನಟಿಸಿ ಶೆಟ್ರನ್ನು ಕರೆದು,
"ಆಗಲಿ ಶೆಟ್ರೇ! ಯಾರೋ ದೈವದ್ರೋಹಿ ದುರಾತ್ಮನು ನಮ್ಮ ಮುಡು
ಪನ್ನೆಲ್ಲಾ ಕದ್ದೊಯ್ದನು, ಅವನಿಗೆ ಆ ವೆಂಕಟ್ರಮಣನೇ ತಕ್ಕ ಫಲವೀಯ
ದಿರನು! ಅವನು ಹುಚ್ಚು ತಾಗಿ ಊರೂರು ಅಲೆದಾಡದಿರನು! ನಾವೀಗ
ಎಲ್ಲರೂ ಕೂಡಿ ಏನಾದರೂ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಸಿ ವೆಂಕಟ್ರಮಣ
ನಿಗೆ ಅರ್ಪಿಸಿ, ಅವನ ಸನ್ನಿಧಿಯಲ್ಲಿ ನಮ್ಮ ಮುಡುಪಿನ ಕಳ್ಳನನ್ನು ಶಪಿಸ
ಬೇಕು!” ಎಂದು ತೀವ್ರ ಆಕ್ರೋಶದಿಂದ ನುಡಿದರು.
------------------------------------
- 7 -
ಎಲ್ಲರೂ ಅದಕ್ಕೆ ಸೈಗುಟ್ಟ ತಾವು ಉಳಿಸಬಹುದಾದ ಅಲ್ಪ ಸ್ವಲ್ಪ
ಹಣವನ್ನು ಒಟ್ಟು ಮಾಡಿ ಭಟ್ರ ಹಸ್ತ ಕೊಟ್ಟರು. ಹತ್ತಿಪ್ಪತ್ತು ಸಲ ಹೋಗಿ
ತಿರುಪತಿ ವೆಂಕಟ್ರಮಣ ಗಂಟಿನ ಗುಟ್ಟನ್ನೆಲ್ಲಾ ಬಲ್ಲ ಭಟ್ಟರು, "ವೆಂಕಟ್ರಮ
ಣನ ಕುಬೇರಸಾಲ ತೀರಿಸಿಕೊಳ್ಳಲು ಎಷ್ಟೋ ಹಣ ಬರುತ್ತದೆ. ಇದೀಗ ನನ್ನ
ಸಾಲ ತೀರಿಸಲಿಕ್ಕಾಯಿತೆ''೦ದು ಒಳಗೊಳಗೆ ನಕ್ಕು ಸಂಗ್ರಹವಾದ ಸ್ವಲ್ಪ
ಹಣಕ್ಕೆ ಪಾನಕ ಪೂಜೆ ಮಾಡಿದರು, ಗಿರಿ ಹತ್ತುವಾಗ ಕದ್ದು ಹೋದ ಮು
ಡುಪಿನ ಹಣ ಒಟ್ಟು ರೂ. ೨, ೩ ಸಾವಿರವಾಗಬಹುದೆಂದು ಕೆಲವರೂ,
೧, ೧!! ಸಾವಿರವೆಂದು ಕೆಲವರೂ ಪಶ್ಚಾತಾಪಪೂರ್ವಕವಾಗಿ ವಾದಿಸುವಾಗ
ಭಟ್ಟರು, “ಇಲ್ಲಪ್ಪಾ! ಹೆಚ್ಚಾದರೆ ೫೦೦ ರೂಪಾಯಿ ಆಗಬಹುದು, ಹೋಗಲಿ
ನಮ್ಮ ಹೆಸರಲ್ಲಿ ಆ ಕಳ್ಳನ ಉದ್ಧಾರವಾಗಲಿ!” ಎಂದು ಒಮ್ಮೆ ವಿಕಾರನಗೆ
ಬೀರಿಬಿಟ್ಟರು. ಶೆಟ್ಟರು ಕ್ರುದ್ರರಾಗಿ ಭಟ್ಟರನ್ನೊಮ್ಮೆ ದಿಟ್ಟಿಸಿದರು. ನಂತರ
ಭಟ್ಟರು ತಲೆಬಾಗಿ ಸುಮ್ಮನಿದ್ದರು.
* * * *
ತಿರುಪತಿಯಾತ್ರೆ ಮುಗಿದು ಕೆಲವು ವರ್ಷಗಳು ಉರುಳಿದವು. ಇಂದು
ಸುಬ್ಬಾಭಟ್ಟರು ತನ್ನ ಹರಕು ಗುಡಿಸಲನ್ನು ಬಿಟ್ಟು, ಹೊಸ ಮಾಳಿಗೆ ಮನೆ
ಕಟ್ಟಸಿ, ಅದರಲ್ಲಿ ಸುಖವಾಗಿರುವರು. ಹಟ್ಟಿಯಲ್ಲಿ ಜೋಡೆಮ್ಮೆ! ಏನೂ
ಲೋಪವಿಲ್ಲದ ಸುಖಾನಂದ.
ಆದರೆ ಇವರ ಆಕಸ್ಮಿಕ ದೊಡ್ಡಸ್ತಿಕೆಯನ್ನು ನೋಡಿ, ಜನರಲ್ಲಿ ನಾನಾ
ಊಹಾಪೋಹೆಗಳುಂಟಾದುವು. "ಅಂದು ವೆಂಕಟ್ರಮಣನೆ ಗಂಟನ್ನು
ಇವರೇ ಜಾರಿಸಿ, ಅಳಿಯನ ವಶ ಕೊಟ್ಟರಬೇಕೆಂದೂ, ಅವನು ಪಾಂಡುಚೆರಿಗೆ
ಹೋಗಬೇಕೆಂಬ ನೆವನದಿಂದ ಕಾಟ್ಪಾಡಿಡಿಯಲ್ಲಿ ಇಳಿದು ಮಂಗಳೂರಿಗೆ ಬಂದು,
ಕೆಲ ದಿನ ಅಲ್ಲುಳಿದು, ಊರಿಗೆ ಬಂದಿರಬೇಕೆ೦''ದೂ ಜನರು ತರ್ಕಿಸಿದರು.
ಅಳಿಯನ "ಕೋಮಲ ವಿಲಾಸ''ದ ನೀರಿನ ಹಣವು ಹೀಗೆ ಒಂದೇ ಸವನೆ ಏರಿರ
ಲಾರದೆಂದು ಅವರು ತಿಳಿದರು. ಮುಡುಪಿಗೆ ಸಂಚಕಾರ ಕೊಟ್ಟು ತಮಗೆಲ್ಲ
ನಾಮ ಎಳೆದ ಭಟ್ಟರ ಮೇಲೆ ಜನರೆಲ್ಲ ಕಣ್ಣಿಡಹತ್ತಿದರು.
ಗುಡ್ಡ ಶೆಟ್ಟರಿಗೂ ಈ ಸುದ್ದಿ ಮುಟ್ಟಿತು. ಅವರು ಭಟ್ಟರ
ಮೇಲೆ ಮೊದಲೇ ಉರಿ ಕಾರುತ್ತಿದ್ದರು. ಒಮ್ಮೆ ಶೆಟ್ಟರು ತನಗೆ
---------------------------------------
-೮-
೫೦೦ ರೂಪಾಯಿ ಬೇಕೆಂದಾಗ ಭಟ್ಟರು ಅದನ್ನು ನಿರಾಕರಿಸಿದುದೇ
ಇದಕ್ಕೆ ಕಾರಣ. ಆಗಲೇ ಅವರಂದಿದ್ದರು-'ನಿನ್ನ ಘನಸ್ತಿಕೆಯನ್ನೊಮ್ಮೆ
ನೋಡುವೆ'ನೆಂದು!
“ಏನು ಆ ಸುಬ್ಬಾಭಟ್ಟನೇ ಮುಡುಪು ಕದ್ದವನೊ? ಅವನ ಸೊಕ್ಕಿನ
ಕಾರಣ ತಿಳಿಯಿತು. ಅವನ ಧಿಮಾಕೆ! ಇಂದೇ ಅವನಿಗೆ ಪಾಠ ಕಲಿಸುವೆನು.”
"ಅಗತ್ಯವಾಗಿ! ಅವನಿಗೆ ತಕ್ಕ ಪ್ರಾಯಶ್ಚಿತ್ತವು ಇಂದೇ ಆಗಬೇಕು.”
ರಾತ್ರಿ! ನಿಶ್ಯಬ್ಬ !! ಆದರೆ ಆ ನೀರವತೆಯನ್ನು ಹಾ! ಸತ್ತೆನು, ನಾನೇ
ಮುಡುಪು ಕ...ದ್ದ...ವ.....ನು, ಸ...ತ್ತೆ” ಎಂಬ ರೋದ ಧ್ವನಿಯು
ಒಂದೊಮ್ಮೆಯೋ ಭೇದಿಸಿಬಿಟ್ಟಿತು. ಸುಬ್ಬಾಭಟ್ಟಂಗೆ ಪೆಟ್ಟು ಮರ್ಮ
ಸ್ಥಾನಕ್ಕೆ ಬಿದ್ದುದರಿಂದ, ಅವರು ಚೀರುತ್ತಾ ಇಹಲೋಕಯಾತ್ರೆಯನ್ನು
ಕೊನೆಗಾಣಿಸಿದರು.
ಈ ಕೊಲೆಯ ವಾರ್ತೆಯು ಮಿಂಚಿನಂತೆ ಸತಲೂ ಹರಡಿತು. ಆಗ
ಶೆಟ್ಟರ ಕಾರ್ಬಾರೂ' ಕಡಿಮೆಯಾಗುತ್ತ ಬಂದಿತ್ತು. ಮೊದಲೇ ಹೊಂಚು
ಹಾಕಿಕೊಂಡಿದ್ದ ಅಧಿಕಾರಿಗಳು, ಶೆಟ್ಟರ ಮೇಲೆ ಉರಿ ಕಾರುತ್ತಿದ್ದ ಜನರ
ಬೆಂಬಲ ಪಡೆದು, ಅವರನ್ನು ಹೇಗೂ ಹಿಡಿದರು. ವಿಚಾರಣೆ ನಡೆಯಿತು,
“ಶೆಟ್ಟರು ಅಪರಾಧಿ"ಯೆಂದು ನ್ಯಾಯಸ್ಥಾನದ ತೀರ್ಮಾನವಾಯಿತು.
ಅಪರಾಧಿಯಾಗಿ ಕೈದಿಯಾದ ಗುಡ್ಡನನ್ನು ಸರಕಾರವು ಪಾಶಿಶಿಕ್ಷೆಗೆ
ಒಳಪಡಿಸಿತು.
=================================
ನಮ್ಮ ಶಾಸ್ತ್ರಗಳು
೧
ಒಮ್ಮಿಂದೊಮ್ಮೆಗೆ ರಾಮಕೃಷ್ಣನ ಮನೆಯಲ್ಲಿ ಒಂದು ಹೊಸರೀತಿಯ
ಗೊಂದಲವೆದ್ದಿತು, ಪಾಂಡುರಂಗಾಚಾರ್ಯರು, ಮಗನಿಗೆ ಸಂ
ಬಂಧಿಕರೊಬ್ಬರ ಮಗಳನ್ನು ತಂದು ಮದುವೆ ಮಾಡಬೇಕೆಂಬ ಹಟವನ್ನು
ಎಷ್ಟು ಮಾತ್ರಕ್ಕೂ ಬಿಡಲಾರರು. ರಾಮಕೃಷ್ಣನು "ಏನೇ ಆಗಲಿ, ಆ
ಹುಡುಗಿಯನ್ನು ಖಂಡಿತವಾಗಿಯೂ ಮದುವೆಯಾಗೆ"ನೆಂದು ಗಟ್ಟಿ ಮನಸ್ಸು
ಮಾಡಿರುವನು. ಹೀಗಾಗಿ ದೊಡ್ಡ ಗೊಂದಲವೆದ್ದು ಆಚಾರ್ಯರು ತಮ್ಮ
ಅಧಿಕಾರಬಲದಿಂದ 'ಹಾಗಾದರೆ ನೀನು ನನ್ನ ಮನೆಯಲ್ಲೇ ಇರಲಾಗದು:
ಹೊರಟುಹೋಗು' ಎಂದು ಗರ್ಜಿಸಿದರು, ಅದಕ್ಕೆ ಮಗನು ಬೆದರುವನೆ?
ಅವನೇನು ಆಗ ತಾನೆ ಬಿ, ಎ, ಪ್ಯಾಸುಮಾಡಿಲ್ಲವೆ? ಅಂದ ಬಳಿಕ ಮತ್ತೇಕೆ
ನಿಂತಾನು? 'ಹುಂ' ಎಂದು ಹೊರಟೇಬಿಟ್ಟ. ಮಂಗಳೂರಲ್ಲಿ ಒಂದು ಉ
ದ್ಯೋಗವನ್ನು ಸಂಪಾದಿಸಿ, ತಾನೊಲಿದ ಬಡವರ ಹುಡುಗಿಯನ್ನೇ ಮದುವೆ
ಯಾಗಿ ಇರತೊಡಗಿದ.
ಆ ಚಿಕ್ಕ ಸಂಸಾರವು ಸುಖದ ಮಾರ್ಗದಲ್ಲಿ ಇನ್ನೂ ಕಾಲಿಟ್ಟಲ್ಲ, ಅಷ್ಟ
ರಲ್ಲಿ ದುಃಖದ ಛಾಯೆಯು ಕವಿಯಿತು. ರಾಮಕೃಷ್ಣನು ಅಕಸ್ಮಾತ್ತಾಗಿ
ಕಾಯಿಲೆ ಬಿದ್ದನು. ಆ ಕಾಯಿಲೆಯೇ ಪ್ರಬಲವಾಗುತ್ತ ಬಂದಿತು. ಅಂತೆಯೇ
ಜೀವಿತವೂ ಸಂದೇಹದ ಸ್ಥಿತಿಯಲ್ಲಿ ಬಂದು ನಿಂತಿತ್ತು. ಈ ವರ್ತಮಾನವನ್ನು
ಕೇಳಿ, ತಂದೆ ತಾಯಿ ಮೊದಲಾದ ಸಂಬಂಧಿಕರೆಲ್ಲ ಬಂದು ಕೂಡಿದರು. ಅವ
ರೊಂದಿಗೆ ಯಮನೂ ಬಂದು ತನ್ನ ಕೆಲಸವನ್ನು ಕೊನೆಗಾಣಿಸಿದನು.
೨
ಸರಸಿಯ ಜೀವನದ ನಡು ಹಗಲಿನಲ್ಲೇ ಕಗ್ಗತ್ತಲೆಯು ತಲೆದೋರಿತು.
ಸಮಾಜದ ಮುಸುಕಿನ ಮರೆಯಲ್ಲಿ ನೊಂದು ಬೇಯುವ ಸಾವಿರಾರು ಬಡ
--------------------------------------
-೧೦-
ಜೀವಿಗಳಲ್ಲಿ ಅವಳೂ ಒಬ್ಬಳು, ಆದರೆ ಅದನ್ನು ಕೇಳುವವರಾರು? ಎತ್ತ
ನೋಡಿದರೂ ಅವಳ ಕಡೆಗೆ ತಾತ್ಸಾರದ ನೋಟ! ಮಾತುಮಾತಿಗೆ 'ಕಲಿ!
ಯಾವ ಗಳಿಗೆಯಲ್ಲಿ ಆ ಹುಡುಗನ ಕೈ ಹಿಡಿದಳೋ' ಎಂದು ಎಲ್ಲರೂ ಗುಣು
ಗುಟ್ಟುವರು! ಆದರೆ ಮಾಡುವುದೇನು? ಬಡವರ ಹೆಣ್ಣು ಎಲ್ಲವನ್ನೂ
ಕೇಳಿಯೇ ತೀರತಕ್ಕುದು, ಸಾಲದುದಕ್ಕೆ ಮಾವನ ಮನೆ ಸೇರಿದ ಮರು
ವರುಷದಲ್ಲೇ ಅತ್ತೆಯ ದೈವಾಧೀನಳಾದಳು, ಅದೂ ಸೊಸೆಯ ತಪ್ಪೆಂದೇ
ನಿರ್ಣಯಿಸಲ್ಪಟ್ಟು, ಆ ಸಲುವಾಗಿ ಯಥೋಚಿತ ಉಡುಗರೆಯ ಸಲ್ಲದಿರಲಿಲ್ಲ.
ಗೃಹಿಣಿಯು ಸತ್ತು ಕೆಲವು ತಿಂಗಳುಗಳು ಕಳೆದಂತೆ ಆಚಾರ್ಯರು
ವಿಧುರತನದ ಘೋರ ಜೀವನವನ್ನು ನೆನೆನೆನೆದು ಒಂದೇ ಸವನೆ ಅಳತೊಡಗಿ
ದರು, 'ನಾಲ್ಕು ಮಕ್ಕಳಾದರೇನು? ಇನ್ನು ಮದುವೆಯಾಗಬಾರದೆ? ಗಂಡು
ಸರಿಗೆ ಆ ಅಧಿಕಾರವಿಲ್ಲವೆ? “ನಮ್ಮ ಶಾಸ್ತ್ರಗಳು'' ಹಾಗೆಯೇ ಹೇಳಿಲ್ಲವೆ?
ಮತ್ತೇನು?' ಎಂದು ಆಚಾರ್ಯರು ತರ್ಕಿಸತೊಡಗಿದರು. ಅದಕ್ಕೆ ' ಅಲ್ಲ
ಎನ್ನುವವರಾರು? ಅಡ್ಡಿಯಿಲ್ಲದೆ ಆಗಬಹುದು, ಇಲ್ಲವಾದರೆ ನೋಡಿ! ನಿಮಗೆ
ಇನ್ನು ಮುಂದೆ ಬಹಳ ತೊಂದರೆಯಾದೀತು' ಎಂದು ಕೃಷ್ಣಶಾಸ್ತ್ರಿಗಳು ತಮ್ಮ
ಮಗಳಿಗೆ ಪ್ರಯಾಸವಿಲ್ಲದೆ ವರ ದೊರೆಯಬಹುದೆಂಬ ಆಶೆಯಿಂದ ಬಹಳವಾಗಿ
ಸಾಧಿಸಿದರು. ಕೊನೆಗೆ ಹಾಗೆಯೇ ನಿರ್ಣಯವಾಯಿತು ಹುಡುಗಿಗೆ
ವರ್ಷ ಹದಿನೈದು, ಬಹಳ ಅನುಕೂಲ, ಸ್ವಲ್ಪ ಕಪ್ಪು, ಹುಡುಗಿ ಚೆಂದವಿಲ್ಲ
ವಂತೆ, ಅಷ್ಟೆ ತಾನೆ? ಅದರಿಂದೇನು? ಕುಡಿಮಿಾಸೆಯ ಜವ್ವನಿಗರು
ಕಣ್ಣಿಡಲಾರರು ಅತ ಏವ ಸರ್ವತೋಮುಖದಿಂದ ಶಾಸ್ತ್ರಿಗಳ ಮಗಳೇ
ಯೋಗ್ಯ ವಧುವೆಂದು ಸಿದ್ಧಾಂತವಾಯಿತು. ಮದುವೆಗೆ ದಿನವಿಟ್ಟೂ ಆಯಿತು.
ಮದುವೆಯ ದಿನ ಆಚಾರ್ಯರು ಬೇಗನೆ ಎದ್ದು ನೂತನೋತ್ಸಾಹದಿಂದ
ಮಹಡಿಯಿಂದ ಕೆಳಗಿಳಿದು ಬಂದರು. ಬಂದವರೇ ಕೆಳಗಡೆ ಗುಡಿಸುತಿದ್ದ
ಸರಸಿಯನ್ನು ನೋಡಿ, 'ಛೇ! ಕಲಿ! ಬೆಳಗಾಗುವ ಮುಂಚೆ ಸುಟ್ಟ ಮೋರೆ
ಯನ್ನು ತೋರಿಸಿಯಾಯಿತು, ನಡೆಯಾಚೆ, ಇನ್ನೆಲ್ಲಿಯಾದರೂ ಇದಿರು
ಬಂದರೆ-ಹುಂ!' ಎಂದು ಗರ್ಜಿಸಿ, ಆ ದೋಷನಿವೃತ್ತಿಗಾಗಿ ಹರಿಸ್ಮರಣೆ
ಮಾಡುತ್ತ ಮುನ್ನಡೆದರು
ದಿಬ್ಬಣ ಹೊರಡಲು ಇನ್ನು ಹೆಚ್ಚು ಹೊತ್ತಿಲ್ಲ. ಆಚಾರ್ಯರು ಕಿರಿಯ
ಮಗನನ್ನು ಕರೆದು, 'ಶ್ಯಾಮೂ! ನಿನ್ನೆ ಕೊಟ್ಟ ಆ ರೊಕ್ಕದ ಚೀಲ ಈಚೆ
ತಾ' ಎಂದರು.
---------------------------------------
- 11 -
ಶ್ಯಾಮು ಒಳಗೆ ಓಡಿದನು. ಆದರೆ ಬೇಗ ಬರಲಿಲ್ಲ.
“ಬೇಗ ತಾರಾ' ಎಂದು ಆಚಾರ್ಯರು ಕೂಗಿದರು.
ಕವಾಟನ ಬೀಗದಕ್ಕೆ ಸಿಕ್ಕುವುದಿಲ್ಲ'.
“ಎಲ್ಲಿಗೆ ಹೋಯಿತು?
"ಯಾರಿಗೆ ಗೊತ್ತು? ಮೇಜಿನ ಮೇಲಿಟ್ಟಿದ್ದೆ. ಅತ್ತಿಗೆಗೆ ಗುಡಿಸುವಾಗ
ಸಿಕ್ಕಿತ್ತೊ ಕೇಳುತ್ತೇನೆ' ಎಂದು ಶ್ಯಾಮುವು ಅತ್ತಿಗೆಯನ್ನು ಹಲವು ತಡವೆ
ಕರೆದನು, ಆದರೆ ಉತ್ತರ ಬರಲಿಲ್ಲ.
'ಸಾಯಲಿ ಅವಳು ಅಲ್ಲೇ ಎಲ್ಲಾದರೂ ಬಿದ್ದಿದೋ ನೋಡೋ!'
ಎಂದು ಸಿಟ್ಟಿನಿಂದ ಆಚಾರ್ಯರೇ ಹೊರಟರು.
ಶ್ಯಾಮುವು ಬೇಗಬೇಗನೆ ಹುಡುಕಿದನು. ಕೀಲಿಯು ಸಿಗಲಿಲ್ಲ. ಆದರೆ
ಒಂದು ಕಾಗದವು ಸಿಕ್ಕಿತು.
ಆಚಾರ್ಯರು ಒಳಗೆ ಬಂದು 'ಏನು ಸಿಕ್ಕಲಿಲ್ಲವೆ? ಏನದು?' ಎಂದು
ಕಾಗದವನ್ನು ತೆಗೆದುಕೊಂಡರು. ಕಾಗದವೇನೊ ಚಿಕ್ಕದು,
'ಶ್ಯಾಮೂ -
ನಾನೀಗ ಹೋಗುತ್ತೇನೆ. ಚಿಂತಿಸಬೇಡ, ನಿಜವಾ
ಗಿಯಾದರೆ ಅಂದು ಹೋಗದಿದ್ದುದೇ ನನ್ನ ತಪ್ಪು, ಆದರೆ
ಸಮಾಜದ ನರಕಯಾತನೆಗಳನ್ನು ಅನುಭವಿಸುವುದು ನನ್ನ
ಹಣೆಯಲ್ಲಿ ಬರೆದಿದ್ದಿತೋ ಏನೋ, ;ನಮ್ಮ ಶಾಸ್ತ್ರಗಳಿ'ಗೆ
ತಿಳಿಯಲಾರದ ಯಾತನೆಗಳವು. ಇನ್ನೂ ಈ ಸುಟ್ಟ ಮೊರೆ
ಯನ್ನು ಇತರರಿಗೆ ತೋರಿಸಲಾರೆನು. ನಾನು ಹೋಗುವೆನು.
ನೀನು ಒಳ್ಳೆಯವನಾಗಿ ಸುಖದಿಂದ ಬಾಳಪ್ಪ'
ನಿನ್ನ ಅತ್ತಿಗೆ.'
ಮದುವೆಯ ಗದ್ದಲವಡಗಿತು, ಎಲ್ಲರೂ 'ಸರಸೀ-ಸರಸೀ' ಎಂದು
ಹುಡುಕತೊಡಗಿದರು. ಹಲವರು ಬಾವಿಗಿಳಿದರು. ಶ್ಯಾಮುವು ತೋಟದ
ಕೊಳದ ಕಡೆಗೊಡಿದನು. ನೀರಿನ ಮೇಲೆ ಘನ ಪದಾರ್ಥವೊಂದು ತೇಲುತಿ
ದ್ದಿತು, ಅದನ್ನು ಕಂಡು ಬೆಚ್ಚಿ ಬಿದ್ದು 'ಅಯ್ಯೋ! ಅತ್ತಿಗೆ!' ಎಂದು ಬೊಬ್ಬಿ
ಟ್ಟನು, ಜನರೆಲ್ಲರೂ ಆ ಕಡೆಗೋಡಿಬಂದರು. ಆದರೇನು ಫಲ? ಕಾರ್ಯವು
ಮಿಂಚಿರುವುದು, ಇನ್ನವಳು ಎಂದೆಂದಿಗೂ ಯಾರ ಇದಿರೂ ಬರಲಾರಳು
ತನ್ನ ಸುಟ್ಟ ಮೊರೆಯನ್ನು ತೋರಿಸಲಾರಳು!
==========================================
ಶೆಟ್ರ ಮನೆಯ ಮದುವೆ
೧
ಇಂದು ಹಲಸಿನ ಕೆರೆಯ ಸೆಟ್ರ ಮನೆಯಲ್ಲಿ ವಿವಾಹ ಸಮಾ
ರಂಭದ ಭಾರಿ ಗೌಜಿ! ಅವರ ಪ್ರಸಿದ್ದಿಯು ಆ ಊರಿನಲ್ಲೆಲ್ಲಾ
ಜನಜನಿತವಾಗಿ ಅವರ ಕೀರ್ತಿ ಪ್ರವಾಹದಲ್ಲಿ ನಿಜವಾದ ಹೆಸರು ಮುಳುಗಿ
ಹೋಗಿ, 'ಸೇಟ್ರು' ಎಂದು ಅದರ ತಲೆ ಮಾತ, ತೇಲಾಡುತ್ತಿದ್ದುದರಿಂದ ಊರಿನ
ವರ ಮಾದರಿಯನ್ನನುಸರಿಸಿ ನಾವೂ ಅವರನ್ನು ಹಾಗೆಯೇ ಸಂಬೋಧಿಸೋಣ!
ಸೆಟ ಮನೆಯ ಮದುವೆ. ಅದರಲ್ಲೂ ಅವರ ಮನೆಯಲ್ಲಿ ಸುಮಾರು
ಅರ್ಧ ಶತಮಾನದಿಂದೀಚೆಗಿನ ವಿವಾಹವೆಂದರೆ ಇದೊಂದೇ! ಆದ್ದರಿಂದ
ಇಂದಿನ ಸಂಭ್ರಮ ಆಡಂಬರಗಳನ್ನು ವರ್ಣಿಸುವ ಅಗತ್ಯವೇ ಇಲ್ಲ. ಆ ಊ
ರಲ್ಲಿ ಎತ್ತ ಹೋದರೂ ಸೆಟ್ರ ಆಸ್ತಿ ಒಕ್ಕಲುಗಳ ಬೆರಿಕೆಯಿಲ್ಲದ ಸ್ಥಳವೇ ಇಲ್ಲ
ವೆನ್ನಬಹುದು. ಇನ್ನು ಆಪ್ತೇಷ್ಟರುಗಳಂತೂ ಈ ವರೆಗೆ ಸೆಟ್ರಿಂದ ಪಡೆದ
ಸಹಾಯ ಸಂಪತ್ತಿಗೆಲ್ಲಾ ಬಡ್ಡಿ ಕೂಡಿಸಿ ಹಿಂದೆ ಸಲಾಯಿಸಲು ಇದೊಂದೇ
ಸಂದರ್ಭವೆಂದು ವಿವಾಹದ ದಿನವನ್ನು ಮೊದಲೇ ಕಾದಿದ್ದರು. ಹಲವು
ವರ್ಷಗಳಿಂದ ಅನೇಕ ಕಡೆಗಳಲ್ಲಿ ಮದುವೆಯ ಮುಯ್ಕೆಯ ರೂಪದಿಂದ
ಚದರಿದ್ದ ಹಣವು ಇಂದು ಒಟ್ಟಾಗಿ ಸೆಟ್ರ ಕಿಸೆಯನ್ನು ಸೇರಲು ಕಾಯುತ್ತಿದೆ.
ಒಂದೆಡೆಯಲ್ಲಿ ನೀರಿನಂತೆ ವ್ಯಯವಾಗುತ್ತಿರುವ ಸಂಪತ್ತಿನ ಇಳಿತ! ಇನ್ನೊಂದೆ
ಡೆಯಲ್ಲಿ ಆಪ್ತೇಷ್ಟರುಗಳಿಂದ ತುಂಬಿ ಬರುವ ಧನದ ಭರತ!! ಬೇರೊಂದೆಡೆ
ಯಲ್ಲಿ ಕೂಡಿಬಂದ ಜನಸಮುದಾಯದ ಕೋಲಾಹಲ! ಇವುಗಳಿಂದ ಸೆಟ್ರ
ಮನೆಯು ಇಂದು ಮಹಾಸಾಗರದಂತೆ ಕಂಗೊಳಿಸುತ್ತಿದ್ದಿತು. ಎಲ್ಲೆಡೆಯಲ್ಲು
ಸುಳಿದು, ಘರ್ಜಿಸಿ ಸಮದಾಯಿಸಿ, ಸಕಲ ಪಾತ್ರಗಳಿಗೂ ಒಬ್ಬನೇ ನಟ
ನಾಗಿ ಅಭಿನಯಿಸುತ್ತಿದ್ದ ಸೆಟ್ರ ಇಂದಿನ ಅವಸ್ಥೆಯನ್ನು ನೋಡುವಾಗ,
ರಾವಣನ ಕೈ ಬಾಯಿಗಳಿದ್ದರೂ ಅವರಿಗೀಗ ಹೆಚ್ಚಾಗುತ್ತಿದ್ದಿಲ್ಲವೆಂಬಂತೆ
ತೋರುತ್ತಿತ್ತು.
-----------------------------------
- 13 -
ಸೆಟ್ರ ಮನೆಯಲ್ಲಿ ಒಂಭತ್ತು ಧಾರೆಯ ಮದುವೆಯೆಂದು ಸುಮಾರು
ಆರು ತಿಂಗಳುಗಳಿಂದಲೂ ಎಲ್ಲೆಲ್ಲಿಯೂ ಸುದ್ದಿ, ವಕ್ಕಲುಗಳಿಂದ ಬಿದಿರು,
ಕಂಗು, ಸೋಗೆ ಮುಂತಾದವುಗಳ ಆಮದು ಅಂದಿನಿಂದಲೇ ಸುರು. ಧನಿಯ
ಮನೆಯ ಮದುವೆಗೆಂದು ಅವರ ಹಿತ್ತಿಲುಗಳ ಕಾಯಿಪಲ್ಯಗಳು ಕಾದಿಡಲ್ಪ
ಟ್ಟಿದ್ದು ಸುಮುಹೂರ್ತವನ್ನು ಕಾಯುತ್ತಿವೆ. ಈ ವರೆಗೆ ತಿಂಗಳಿಗೆರಡು ದಿನ
ದಂತಿದ್ದ ಬಿಟ್ಟಯು ಈಗ ದಿನಂಪ್ರತಿ ಸುರುವಾಗಿ ವಕ್ಕಲುಗಳ ಮನೆಯ ಕೆಲ
ಸಗಳು ಬಾಕಿಯಿವೆ.
ಇತ್ತ ಒಂಭತ್ತು ಧಾರೆಯ ಗುರಿಯನ್ನು ಮುಟ್ಟುವ ಮಹದಿಚ್ಛೆಯಿಂದ
ಸೆಟ್ರ ಆಪ್ತೇಷ್ಟರು ವರಾನ್ವೇಷಣದ ದಿಗ್ವಿಜಯಕ್ಕಾಗಿ ನಾಲ್ಕೂ ಕಡೆ ಹೊರಟಿ
ದ್ದಾರೆ. ತ್ರೇತಾಯುಗದಲ್ಲಿ ವಾನರಸೇನೆಯು ಇದೇ ರೀತಿ ಸೀತಾನ್ವೇಷಣಕ್ಕೆ
ಹೊರಟರಬಹುದು, ದ್ವಾಪರದಲ್ಲಿ ರಾಜಸೂಯಾಧ್ವರದ ಧರ್ಮರಾಯನ
ಪರಿವಾರವು ಇದರಂತೆಯೇ ಸಂಚರಿಸಿರಬಹುದು, ಆದರೆ ಕಲಿಯುಗ
ದಲ್ಲಿಯೂ ಅವುಗಳ ಸರಿಹೋಲನೆಗೆ ನಿಲ್ಲುವ ದಿಗ್ವಿಜಯವೆಂದರೆ ಸೆಟ್ರ .
ಪರಿವಾರದ್ದೇ ಸರಿ, ಅಂತೂ ಅಕ್ಕಿಯ ಬೆಲೆಯಿಳಿಯುವ ಸಮಯದಲ್ಲಿ
ಪರ ಬಂದರುಗಳ ದಲಾಲರು ನುಗ್ಗಿ ಒಮ್ಮೆಯೇ ದರ ಏರಿಸುವಂತೆ ಅಲ್ಲ
ಲ್ಲಿಯ ಯುವಕರ ವರದಕ್ಷಿಣೆಯ ದರವನ್ನು ಕೊಂಚಮಟ್ಟಿಗೆ ಈ ಪರಿ
ವಾರವು ಏರಿಸಿಬಿಟ್ಟಿತೆಂಬುದು ನಿಜ. ವರನ ಸಂಬಂಧಿಕರನ್ನೋ, ಸಂಬಂಧಿಕರ
ಸಂಬಂಧಿಕರನ್ನೋ ಹಿಡಿದು ಮಾತಾಡಿಸಿ ಸಮೀಪಬಂತು ಎಂಬಷ್ಟರಲ್ಲಿ
ಅಡ್ಡಬಂದ ವರದಕ್ಷಿಣಾ ಪ್ರವಾಹದ ಆಳವನ್ನು ಕಂಡು ಬೆದರಿ, ಹಲವೆಡೆ
ಗಳಲ್ಲಿ ಹಿಂಜರಿದರು. ಇನ್ನು ಕೆಲವೆಡೆಗಳಲ್ಲಿ ವರನ ಕುಲ, ಗೋತ್ರ, ಆಸ್ತಿ
ಪಾಸ್ತಿಗಳನ್ನು ಕಂಡು ಹಿಂಜರಿಯಬೇಕಾಯಿತು. ಕುಲ, ಬಲಿ, ವರನ
ಯೋಗ್ಯತೆ, ಮುಖ್ಯವಾಗಿ ವರದಕ್ಷಿಣೆ ಇವುಗಳಲ್ಲೆಲ್ಲಾ ಕೂಡಿಬಂದ ಕೆಲವು
ಯುವಕರನ್ನು ಆರಿಸಿ ನಿಶ್ಚಯಸೂತ್ರದಿಂದ ಜಿಗಿಯುವುದನ್ನು ಮಾತ್ರ
ಬಾಕಿಯಿಟ್ಟು ಸೆಟ್ರ ಪರಿವಾರವು ಹಿಂತಿರುಗಿತು.
ಆದರೆ ಅನಿಶ್ಚಿತ ವರರಿಗೆ ಇತರ ಕಡೆಗಳಿಂದ ತುಂಬಿದ ವರದಕ್ಷಿಣೆಯ
ಹಸ್ತಗಳ ಎಳೆದಾಟವು ಬಲವಾದ ರಿಂದ ಸೆಟ್ರ ಒಪ್ಪಂದದ ಸಿಡಿಲಾದ ಸೂತ್ರವು
ತುಂಡಾಗಿ ಇಂದು ಅವರ ಮನೆಯಲ್ಲಿ ಎರಡೇ ಧಾರೆ! ಒಂದು ಅವರ ಐದನೇ
------------------------------------
- 14 -
ಮಗಳು ಶಾಂಭವಿಗೆ, ಇನ್ನೊಂದು ಮಗಳ ಮಗಳು ರಾಜೀವಿಗೆ, ೬೫
ವರ್ಷ ಪ್ರಾಯದ ಸೆಟ್ರಗೆ ಶಾಂಭವಿಯು ಐದನೇ ಮಗಳಾದರೂ ಅವರ
೩೫ನೇ ವರ್ಷದಲ್ಲಿ ಹುಟ್ಟಿದವಳಂತೆ, ಬಹುಕಾಲದಿಂದ ದಹಿಸುತ್ತಿದ್ದ ವಿರ
ಹಾಗ್ನಿಯ ಕುರುಹಾಗಿ ಅವಳ ಮುಖವೆಲ್ಲಾ ನೆರಿಗೆ ಬಿದ್ದಿತ್ತು. ಮಗಳ
ಮದುವೆಯ ವಿಷಯದಲ್ಲಿ ಶೆಟ್ಟರು ಈ ವರೆಗೂ ಉದಾಸೀನದಿಂದಿದ್ದರೆನ್ನ
ಲಾಗುವುದಿಲ್ಲ. ಈ ಕುರಿತು ಬಹಳ ವರ್ಷಗಳಿಂದಲೂ ಮಂದಗಮನದಿಂದ
ನಡೆಯುತ್ತಿದ್ದ ಶೆಟ್ರ ಆಲೋಚನೆಯು ಕೆಲವು ವರ್ಷಗಳಿಂದೀಚೆಗೆ ತೀವ್ರ
ಸಂಚಾರಿಯಾಗಿತ್ತು. ಆದರೆ ಪ್ರತಿಸಲವೂ ಯಾವುದಾದರೊಂದು ಎಡರು
ಗಳು ತಪ್ಪದೆ ಬರುತ್ತಿದ್ದು, ಈ ವಿವಾಹವನ್ನು ಸೆಟ್ರು ವರ್ಷದಿಂದ ವರ್ಷಕ್ಕೆ
ಮುಂದೂಡುತ್ತಿದ್ದರು. ಇತ್ತೀಚೆಗೆ ಅವರ ಇತರ ಸೊಸೆ ಮಕ್ಕಳ ವಿವಾ
ಹಕ್ಕೆ ಬೆಳೆದುದರಿಂದ ದೊಡ್ಡ ಧಾರೆಯ ಮದುವೆಯೊಂದನ್ನ ಬಿಸಿ ಕೊಪ್ಪರಿಗೆ
ಯೊಡನೆ ಕವಳಿಗೆಗಳನ್ನೆಲ್ಲಾ ತೊಳೆದುಬಿಡಬೇಕೆಂದು ನೆನಸಿದ್ದರು. ಆದರೆ
ಹೊಸ ನೆಂಟಸ್ತಿಕೆಗಳೆಲ್ಲಾ , ಒಂದೊಂದೇ ಸಡಿಲಾಗಿ ಇನ್ನು ಮುಂದರಿಸಲಸಾಧ್ಯ
ವಾದ ಶಾಂಭವಿಯ ಮದುವೆಯನ್ನಾದರೂ ಮಾಡಿ ಬಿಡುವದೆಂದು ನಿಶ್ಚಯಿಸಿ
ದರು. 'ಉಡಲು ಪೀತಾಂಬರವೇ ಆಗಬೇಕು. ಕ್ರಯ ಎರಡ ರೂಪಾಯಿ'
ಎಂಬಂತೆ ಧನವಂತ ವಿದ್ಯಾವಂತ ಹುಡುಗನಾಗಬೇಕು. ವರದಕ್ಷಿಣೆ ಎರಡು
ಸಾವಿರದೊಳಗಿರಬೇಕು. ಎಂದು ಈ ವರೆಗೆ ಹುಡುಕುತ್ತಿದ್ದ ಸೆಟ್ಟರು ಈಗ
ಹ್ಯಾಗಾದರೂ ವಿವಾಹವನ್ನೊಮ್ಮೆ ಮಾಡಿಬಿಡುವೆನೆಂದು ಚಡಪಡಿಸಹತ್ತಿದರು.
ಕಡೆಗೆ ಅವರಿವರನ್ನು ಬಿಟ್ಟು ಹತ್ತಿರದ ಸಂಬಂಧಿಯೊಬ್ಬನನ್ನು ಹಿಡಿಯ
ಬೇಕಾಯಿತು. ಶಾಂಭವಿಯ ಅಕ್ಕಂದಿರಲ್ಲಿ ಒಬ್ಬರನಂತರ ಒಬ್ಬರನ್ನು ಕ್ರಮ
ಪ್ರಕಾರವಾಗಿ, ಮೆಟ್ಟಿಲು ಇಳಿದಂತೆ ಮೂರು ಮಂದಿಯನ್ನೂ ವಿವಾಹವಾಗಿ
ಐದಾರು ಮಕ್ಕಳ ತಂದೆಯೆನಿಸಿ, ಸಂಸಾರಸುಖದ ಹಳೆ ಅನುಭವಿಯ
ಶಾಂಭವಿಯ ಕುಟುಂಬದ ಸ್ತ್ರೀಯರ ಆಳ್ವಿಕೆಯಲ್ಲಿ ತೇರ್ಗಡೆ ಹೊಂದಿದವರೂ
ಆದ, ನವವಿಧುರ ಲಿಂಗಪ್ಪ ಹೆಗ್ಡೆಯವರೇ ಪುನಃ ಚುನಾಯಿಸಲ್ಪಟ್ಟರು.
ಒಂದಲ್ಲ ಎರಡಲ್ಲ ಮೂರುಸಲ ಪದಚ್ಯುತರಾದರೂ ಪುನಃ ಸೆಟ್ರ ಅಳಿಯತನದ
ಗದ್ದುಗೆಗೆ ಹೆಗ್ಡೆಯವರೇ ಆರಿಸಲ್ಪಟ್ಟದ್ದನ್ನು ನೋಡುವಾಗ ಲಿಂಗಪ್ಪಹೆಗ್ಡೆ
ಯವರ ಮೇಲೆ ಅವರ ನೆಂಟರಿಗಿರುವ ವಿಶ್ವಾಸವು ವ್ಯಕ್ತವಾಗುತ್ತದೆ! ಬೇಗನೆ
--------------------------------------
- 15 -
ಮುರಿದುಬಿದ್ದು ತನ್ನನ್ನು ಶೋಕವೆಂಬುವ ಕೆಳಗಿನ ಮಡುವಿಗೆ ಹಾಕುವ ಈ
ಕುಂಬು ಕಟ್ಟಿಗೆಯನ್ನೇ ತನಗೆ ಆಧಾರಕ್ಕೆ ಕೊಡುವರೇ ಎಂದು ಶಾಂಭವಿಯು
ಎಲ್ಲಿಯಾದರೂ ಕಣ್ಣೀರು ಸುರಿಸಿದರೆ ನಿನ್ನನ್ನು-ಮುದುಕಿಯನ್ನು ಇನ್ನು
ಯಾರು 'ಕಾರ್ಕಳ'ದವನು ಕೊಂಡು ಹೋಗುವುದೋ?'' ಎಂದು ಇಷ್ಟರ ತನಕ
ತಾಳ್ಮೆಯಿಂದ ಇದ್ದುದೂ ಅವಳ ಅಪರಾಧವೆಂಬಂತೆ ತಾಯಿಯೊಮ್ಮೆ ಗದರಿಸಿ
ಬಿಟ್ಟಳೆಂದರೆ, ಪಾಪ! ಆ ಅನಾಥೆಯು ನಿರುಪಾಯಳಾಗಿ ಕೂತುಕೊಳ್ಳ
ಬೇಕಾಗುತ್ತಿತ್ತು. ಇನ್ನೊಂದು ಧಾರೆಯೆಂದರೆ ಸೆಟ್ರ ಮಗಳ ನಾಲ್ಕು
ವರ್ಷದ ಮಗುವಿಗೆ, ಅವರ ಮಗನ ಒಂಭತ್ತು ವರ್ಷದ ಹುಡುಗನೇ
ವರನು, ತಾನು ಸಾಯುವ ಮೊದಲು ಮೊಮ್ಮಗಳ ಮದುವೆಯನ್ನು ನೋಡ
ಬೇಕೆಂದು ಮುತ್ತಜ್ಜಿಯ ಒತ್ತಾಯ. ನೆಲಮುಟ್ಟಲು ಆರೇ ಇಂಚು ಇರುವ
ವರೆಗೆ ಬಾಗಿದ ಬೆನ್ನಿನಿಂದ ಅಲ್ಲಿಂದಲೇ ಮೊಮ್ಮಗಳಿಗೊಮ್ಮೆ ಸೇಸೆ ಹಾಕಿಸು
ತ್ತೇನೆಂದರೆ ಸ್ವರ್ಗವನ್ನೇ ಸೇರುವೆನೆಂದು ಮುದುಕಿಯ ಆಶೆ. ಧಾರೆಯ
ಮಣೆಯಲ್ಲಿ ಕುಳಿತ ಸುಖವು ಮರೆಯಾಗುತ್ತಾ ಬರುತ್ತಿರುವಾಗ ಇನ್ನೊಮ್ಮೆ
ಮಗಳೊಡನೆ ಶೃಂಗರಿಸಿಕೊಂಡು ಮಣೆಯಲ್ಲಿ ಕುಳಿತುಕೊಳ್ಳುವ ಸಂತೋಷ
ವನ್ನು ಮಗುವಿನ ತಾಯಿ ಬೇಡವೆನ್ನುವಳೇ?
ಸೆಟ್ಟರಂತೂ ಚಿಕ್ಕಂದಿನಲ್ಲಿಯೇ ಮದುವೆಮಾಡಿ ಬಿಡದಿದ್ದರೆ ಆಗುವ
ಪೇಚಾಟವನ್ನು ಅನುಭವದಿಂದಲೇ ಕಂಡುಕೊಂಡಿರುವರು. ಇನ್ನು ಈ ವರೆಗೆ
ಮದುವೆಯಾಟ ಮಾಡಿ ಮಣ್ಣಿನಲ್ಲಿ ಆಡುತ್ತಿದ್ದ ಮಕ್ಕಳು ಇಂದು ಗಂಡಹೆಂಡಿ
ರಾಗಿ ಮುಂಡಾಸು ಜಡೆಗೊಂಡೆಗಳ ಅಲಂಕಾರದಿಂದ ಮುದ್ದಾಗಿ ಧಾರಣೆ
ಯಲ್ಲಿ ಕುಳಿತುಕೊಳ್ಳುವುದನ್ನು ನೋಡುವ ನಯನಾನಂದವು ಯಾರಿಗೆ ಬೇಡ?
"ಂದೆತಾಯಿಗಳಂತೂ “ಹೋಗುವ ದೋಣಿಯಲ್ಲಿ ಸಾಗುವ ಸರಕ"ಂಬಂತೆ
ಈ ದೊಡ್ಡ ಖರ್ಚಿನೊಡನೆ ಇದೊಂದೂ ತಿಳಿಯದಂತೆ ಸೇರಿಹೋದ ಹಾಗಾ
ಯಿತು. ಇಲ್ಲಿ ಆಕ್ಷೇಪ ಬರಬೇಕಾದರೆ ಹುಡುಗನ ತಂದೆಯ ಕಡೆಯಿಂದ.
ಮುಂದಕ್ಕೆ ಬೆಳೆದು ದೊಡ್ಡದಾಗತಕ್ಕೆ ವರದಕ್ಷಿಣೆಯ ಫಲವನ್ನು ತೆನೆ
ಯಲ್ಲಿಯೇ ಕೊೈದುಬಿಡಲು ಅವನಿಗಿಷ್ಟವಿಲ್ಲದಿರುವುದು ಸ್ವಾಭಾವಿಕ.
"ಹುಡುಗನಿಗಾಗಲೀ ಹುಡುಗಿಗಾಗಲೀ ಇಷ್ಟು ಬೇಗನೇ ವಿವಾಹವಾಗುವ
ಅವಶ್ಯಕತೆಯೇನು?'' ಎಂಬ ನೆವನವನ್ನೊಡ್ಡಿ ಆತನು ಎಲ್ಲಿಯಾದರೊಮ್ಮೆ
----------------------------------------
- 16 -
ಮಾತುಕಥೆಗಳ ಮಧ್ಯದಲ್ಲಿ ತನ್ನ ಅಸಮ್ಮತಿಯನ್ನು ಸೂಚಿಸಿದರೆ, "ಅದಲ್ಲದೆ,
ಅನಾವಶ್ಯಕ ಆಗುವ ಎರಡು ಖರ್ಚನ್ನು ಉಳಿಸಿದಂತಾಗುವುದಿಲ್ಲವೆ? ಆಗು
ತ್ತದೆ ಒಟ್ಟಗೆ'' ಎಂದು ಸೆಟ್ರು ಮಧ್ಯದಲ್ಲಿಯೇ ಬಾಯಿ ಹಾಕುತ್ತಿದ್ದರು, ಹುಡುಗನ
ತಾಯಿಯಂತೂ ಮುಂದರಿದು “ಮುಂದೆ ಯಾರೋ ಏನೋ?
ಮನೆಯಲ್ಲಿ ವಿವಾಹವಾಗುವಾಗ ನಮ್ಮ ಹುಡುಗನಿಗೂ ಆಗುವುದು ಚಂದ
ವಲ್ಲವೆ? ಇವನಿಗೀಗ ಒಂಬತ್ತು ವರ್ಷ ತುಂಬಿದೆ. ನೆರೆಯ ಸುಬ್ಬಕ್ಕನ ಮಗ
ನಿಗೆ ಏಳೇ ವರ್ಷದಲ್ಲಿ ಮದುವೆಯಾಗಿದೆ" ಎಂದು ಉತ್ಸಾಹದಿಂದ ಮುಗುಳ್ಳಗೆ
ನಕ್ಕು ಸೆಟ್ರ ಸೂಚನೆಯನ್ನು ಅನುಮೋದಿಸುತ್ತಿದ್ದಳು.
ಅಂತೂ ಇಂದೇ ವಿವಾಹ ದಿನ. ಧಾರೆಗಿಂತ ಸ್ವಲ್ಪ ಮೊದಲು ತನ್ನ
ಕುತ್ತಿಗೆಯಲ್ಲಿದ್ದ ಮಿರಿಮಿರಿ ಮಿಂಚುವ ಕಂಠೀಸರವನ್ನು ಮೆಲ್ಲಗೆ ತೆಗೆದು
ಆಡುತ್ತಿದ್ದ ಅಂದಿನ ಮದುವಣಿಗ ಹುಡುಗನೊಡನೆ ಅದನ್ನು ತನಗೆ ಕೊಡ
ಬೇಕೆಂದು ವಧುವಾಗ ತಮ್ಮ ಮಗುವು ಛಲಹಿಡಿದು ಎರಡೂ ಕಚ್ಚಾಡಿಕೊಂಡು
ಬೊಬ್ಬೆಯೆಬ್ಬಿಸಿ ಅಳುತ್ತಿರುವಾಗ ಆ ಮಕ್ಕಳ ತಾಯಂದಿರಿಗೆ ಅವನ್ನು
ಸಂತೈಸಲು ಸಾಕುಸಾಕಾಯಿತಂತೆ.
ಔತಣಸಮಾರಂಭವು ಮುಗಿದು ರಾತ್ರಿ ಹತ್ತು ಘಂಟೆಗೆ ಧಾರೆ, ವಧ
ವರರನ್ನು ಶೃಂಗರಿಸಿ ಧಾರೆಯ ಮಂಟಪದಲ್ಲಿ ಕುಳ್ಳಿರಿಸಿದ್ದಾರೆ. ಸಣ್ಣ
ವಧು ವಿನ ತಾಯಿಯು ಮಣೆಯಲ್ಲಿ ಕುಳಿತು ಮಗುವನ್ನೆತ್ತಿಕೊಂಡು, ಆಳದಂತೆ
ಸಂತೈಸುತ್ತಿದ್ದಾಳೆ. ತನ್ನ ಜೀವನವನ್ನೇ ಕೆಡಿಸುವ ದೊಡ್ಡ ಬಂಧನವಿದು
ಎಂಬುದನ್ನರಿಯದ ಆ ಎಳೇ ಮಗುವು, ಸ್ನೇಚ್ಛೆಯಿಂದಾಡುತ್ತಿದ್ದ ತನ್ನನ್ನು
ಈ ರೀತಿ ಏನೇನೋ ಮಾಡಿ ಹಿಡಿದುಬಿಟ್ರದಾರೇಕೆಂಬ ಸದ್ಯದ ಬಂಧನಕಾಗಿ
ಯೇ ಒಂದೇ ಸವನೆ ರೋದಿಸುತ್ತಿದೆ. ವರನಾದ ಹುಡುಗನಿಗಾದರೂ ಯಾವ
ಸಮುದಾಯಿಸುವಿಕೆಯ ಅಗತ್ಯವೂ ಇರಲಿಲ್ಲ. ಧಾರೆಯ ಮಣೆಯಲ್ಲಿ ಎತ್ತಿ
ಕುಳ್ಳಿರಿಸಿದೊಂದೇ ತಡ, ತನ್ನ ಮೈ ಕೈಯ ಆಭರಣಗಳ ಚಂದ, ತಲೆಯ
ಜರಿ ಮುಂಡಾಸಿನ ಹೊಳಪು, ಮದುವೆ ಚಪ್ಪರದ ಕನ್ನಡಿ, 'ಗ್ಲಾಸು,' ಗ್ಯಾಸ್'
ದೀಪಗಳ ಪ್ರಕಾಶ, ಇವುಗಳ ಆಕರ್ಷಣದಿಂದ ತಟಸ್ಥವಾಗಿ ದುರದುರನೆ
ನೋಡುತ್ತಿದ್ದನು.
ಹತ್ತಿರದ ಇನ್ನೊಂದು ಮಣೆಯಲ್ಲಿ ಕೆಂಪು ಮುಂಡಾಸು, ಬಿಳಿ ಮೀಸೆ
--------------------------------------
- 11 -
ಗಳ ಹೊಳಪಿನ ಲಿಂಗಪ್ಪ ಹೆಗ್ಡೆಯವರು ನಾಲ್ಕನೇ ಸಲದ ಹೊಸ ಮದುವಣಿಗ
ನಾಗಿ 'ತನಗೆ ಧಾರೆಯ ಮಣೆಯೆಂದರೆ ನಿತ್ಯದ ಕಾಲುಮಣೆಯಷ್ಟು ಸುಲಭ'
ಎಂಬಂತೆ ಅಲಕ್ಷ್ಯಭಾವದಿಂದ ಕುಳಿತಿದ್ದಾರೆ, ಈ ವರೆಗೆ ಅನುಭವಿಸುತ್ತಿದ್ದ
ಹಳೆಯ ದುಃಖದ ಮಡುವಿನಿಂದೆದ್ದು, ಇನ್ನೊಂದು ಹೊಸ ಶೋಕದ ಕುಂಡ
ದಲ್ಲಿ ಬೀಳಲಿಕ್ಕಿರುವ ವಧುವು ಬಳಿಯಲ್ಲೇ ಕುಳಿತು ತಲೆ ಬಗ್ಗಿಸಿ, ಕಣ್ಣೀರು
ಸುರಿಸುತ್ತಿದ್ದಾಳೆ. ಅಲ್ಲೇ ಚಪ್ಪರದ ಒಂದು ಮೂಲೆಯಲ್ಲಿ ಈಗ ತಾನೇ ಬಿಸಿ
ಕಾಫಿಯನ್ನು ಕುಡಿದು, ಸಾಲದುದಕ್ಕೆ ಸಿಗರೇಟಿನ ಹೊಗೆಯನ್ನು ಬಿಡುತ್ತಿದ್ದ
ನವನಾಗರೀಕ ತರುಣರದೊಂದು ಸಭೆ, ಒಬ್ಬೊಬ್ಬರೇ ಹರಟೆ ಹೊಡಿಯು
ತ್ತಿದ್ದಾಗ "ಅದಿರಲಿ'' ಅಲ್ಲಿ ನೋಡಿ ಆ ನವವಧುವನ್ನು! ಮುದುಕಿಗೂ
ಮುದುಕನಿಗೂ ಮದುವೆ! ಹಲ್ಲು ಮುರಿದ ಆ ಮುದುಕನಿಗೇಕಯ್ಯಾ
ಈ ಕಾರ್ಬಾರು? ಮದುವೆಯಾಗಿ ಹುಡುಗಿ ತರುವುದೆಂದರೆ ಎಲೆ ಅಡಿಕೆ ಪುಡಿ
ಮಾಡಲು ಒಂದ, ಜನ ತರುವುದೆಂದೇ ಇವನ ಭಾವನೆಯೋ ಹೇಗೆ? ಎಂದು
ಒಬ್ಬ ತರುಣನು ಪ್ರಶ್ನಿಸಿದನು. ಎಲ್ಲರೂ ಗೊಳ್ಳೆಂದು ನಕ್ಕುಬಿಟ್ಟರು.
"ನಿಮಗೆ ತಮಾಸೆಯಾಗುತ್ತದೆ,'' ಏನಂದರಿಯದ ಆ ಎಳೆಮಕ್ಕಳನ್ನು ಈ
ರೀತಿಯಲ್ಲಿ ವಿವಾಹಪಾಶದಿಂದ ಬಂಧಿಸಿಬಿಡುವುದು ಎಂತಹ ಅನ್ಯಾಯ
ನೋಡಿ!'' ಎಂದನೊಬ್ಬ ವಿಚಾರಿ. ''ಈ ರೋಗಕ್ಕೆ ಒಂದು ಒಳ್ಳೇ ಮದ್ದು
ತಯಾರಾಗಿದೆ. ಶಾರದರ ಬೀಲನ್ನು ಸರಕಾರವು ಕೈಗೆ ತೆಗೆದುಕೊಂಡು
ಇಂಥಾ ವಿವಾಹಕರ್ತರ ಮೇಲೆ ತೀವ್ರ ಬಾಣಬಿಡಲು ಆ ಕರ್ಣಾಂತವಾಗಿ
ಸೆಳೆದು ತಯಾರಾಗಿ ಕುಳಿತಿದೆ. ಆದರೆ ಇಷ್ಟರ ವರೆಗೆ ಕೊರಗಿಕೊರಗಿ ಈಗ
ಆ ಮುದುಕನ ಕೈಹಿಡಿದು ಪಾವ! ಆ ಬಡೆ ಪ್ರಾಣಿಯು ಯಾವ ಸುಖವನ್ನು
ಉಣ್ಣಬಹುದ?” ಎಂದು ಒಬ್ಬತರುಣನು ಉದ್ಧರಿಸಿದನು. 'ಇದಕ್ಕೂ ಒಂದು
ಕಾನೂನಾಗಬೇಕಯ್ಯ, ವಿವಾಹವಾಗಲಿಚ್ಚಿಸುವ ಸ್ತ್ರೀಯರಿಗೆ ೨೦ ವರ್ಷ
ದೊಳಗೆ ವಿವಾಹವಾಗಬೇಕು, ಹಾಗೆಯೇ ೪೦ ವರ್ಷ ದಾಟದ ಮುದುಕನೂ
ವಿವಾಹವಾಗಬಾರದು.” ಎಂದು ಒಬ್ಬ ಸುಧಾರಕ ತರುಣನು ಹೇಳುತ್ತಲೇ
“ಅದು ಹೌದು. ಈ ಆನ್ಯಾಯವು ಹೋಗಲೇ ಬೇಕು'' ಎಂದು ಎಲ್ಲರೂ
ಅನುಮೋದಿಸಿದರು. ಈ ತರುಣರ ಸಭೆಯೇ ಎಸೆಂಬ್ಲಿಯಾಗುತ್ತಿದ್ದರೆ?......
ಸೆಟ್ಟರ ಮನೆಯ ಮದವೆಯಂತೂ ಆಗಿಹೋಯಿತು.
=======================================
ನಮ್ಮೂರ ಐಗಳು
ನಮ್ಮ ವಿಶ್ವನಾಥ ಐಗಳೆಂದರೆ ಸಕಲ ಜ್ಞಾನಸಂಗ್ರಹವುಳ್ಳ ಸಜೀವ
ವಿಶ್ವಕೋಶವೆಂದೇ ಜನಸಾಮಾನ್ಯರ ಮಾತು, ಅವರಿಗೆ ಓದುಬರ
ಹವು ಚೆನ್ನಾಗಿ ಗೊತ್ತಿತ್ತು. 3 ಭಾಷೆಗಳ ಅಕ್ಷರಮಾಲೆಯು ಸರಿ
ಯಾದ ಜ್ಞಾನವಿತ್ತು; ೩ ನುಡಿಗಳ ವ್ಯವಹಾರಜ್ಞಾನವಿತ್ತು. ಕೂ
ಳೂರ ಗ್ರಾಮದ ಜನರೆಲ್ಲಾ ಐಗಳನ್ನು ತಮ್ಮ ಪಾಲಿನ ಬೃಹಸ್ಪತ್ಯಾಚಾರ್ಯ
ರೆಂದೇ ನಂಬಿಕೊಂಡು ಸನ್ಮಾನಿಸುತ್ತಿದ್ದರು ಯಾವನಾದರೊಬ್ಬ ಗ್ರಾಮ
ಸ್ಥನು ಯಾರಿಗಾದರೊಂದು, ಯಾವುದೇ ಒಂದು ವಿಧದ ಕಾಗದ ಬರಿಯುತ್ತಿ
ದ್ದರೂ ಅದು ವಿಶ್ವನಾಥ ಐಗಳ ಗಮನಕ್ಕೆ ಬಾರದೆ ಹೋಗುತ್ತಿದ್ದಿಲ್ಲ, ಐಗಳು
ಕೂಳೂರು ಗ್ರಾಮಸ್ಥರ ಗುಮಾಸ್ತರು, ಶಾಲೆಯ ಶಿಕ್ಷಕರು, ಟಪಾಲು
ಕಟ್ಟೆಯ ಪೋಸ್ಟು ಮಾಸ್ತರರು, ವ್ಯಾಜ್ಯಗಳಲ್ಲೆಲ್ಲಾ ಒಳ ವಕೀಲರು. ಸಾಲ
ದುದಕ್ಕೆ ವಾಚನ ಪಾರಾಯಣ ಭಟ್ಟರು! ಜಾತಕ ನೋಡುವ ಜೋಯಿಸರು!
ನಿಮಿತ್ತ ಮಾಟಾದಿಗಳ ಮಂತ್ರವಾದಿಯ ಆವರೇ! ಅರ್ಜಿ, ನೋಟ,
ರಶೀದಿ, ವಿಳಾಸಗಳಲ್ಲದೆ ತಳ್ಳಿ ಅರ್ಜಿ, ಸಳ ಕಾಗದ ಪತ್ರ ಮೊದಲಾದವುಗಳಿ
ಗೆಲ್ಲಾ ಆ ಹಳ್ಳಿಗರಿಗೆ ಐಗಳೇ ಆಶ್ರಯದಾತರು. ಅನೇಕ ವೇಳೆ ನಮ್ಮ
ಐಗಳು ತನ್ನ ಐಗಳ ಮಠದಲ್ಲಿ ಸೊಂಡಿಲಿದ ಲಂಬೋದರನಂತೆ ಕುಳಿತು
ಬಾಳೆಹಣ್ಣು, ತೆಂಗಿನ ಕಾಯಿ, ಸೂರಣ ಗಡ್ಡೆ, ಹಲಸಿನ ಹಣ್ಣು ಮೊದಲಾದ
ಕಾಣಿಕೆಗಳನ್ನು ಸಂತೋಷದಿಂದ ಸ್ವೀಕರಿಸಿ, ತನ್ನ ಭಕ್ತವೃಂದದಿಂದಾವರಿತ
ರಾಗಿ, ದೊರಗು ಕಾಗದದ ಮೇಲೆ, ಗರಿಯಿಂದ ಕರಕರನೆ ಬರಿಯುತ್ತಿರುವು
ದನ್ನು ನೋಡಬಹುದು. ಐಗಳು ಒಮ್ಮೊಮ್ಮೆ ತನ್ನ ತಳ್ಳಿ ಅರ್ಜಿಗಳ ಬ್ರಹ್ಮಾಸ್ತ್ರ
ಉಪಯೋಗಮಾಡಿ ಶ್ಯಾನುಭಾಗ ಮಳೆಗಾರರುಗಳನ್ನು ಗಡುಟ್ಟ ನಡುಗಿಸಿ
ಬಿಡುತ್ತಿದ್ದರು, ಇಡೀ ಗ್ರಾಮದ ಅಧಿದೇವತೆಯೇ ತಾನೆಂಬಂತೆ ಗ್ರಾಮದಲ್ಲಿ
ಹುಟ್ಟಿದಕ್ಕೂ ಸತ್ತುದಕ್ಕೂ ಐಗಳ ಉಪಾಸನೆ ನಡೆಯಬೇಕು. ಕೂಳೂರು
ಶ್ಯಾನುಭಾಗರಿಗೆ ವಿಶ್ವನಾಥ ಐಗಳೆಂದರೆ ಹಾವು ಮುಂಗಸಿಯನ್ನು ಕಂಡಂತಾ
----------------------------------------
- 19 -
ಗುತ್ತಿತ್ತು. ಅವರನ್ನವರು ಸದಾ ದೂಷಿಸಿ ಸಂದರ್ಭ ದೊರೆತಾಗಲ್ಲೆಲ್ಲಾ ಐಗಳೆ
ಕೇವಲ 'ಡೋಂಗಿ' ಜನವೆಂದು ದೃಢಪಡಿಸಲು ಹಲವು ವಿಧದಿಂದ ಪ್ರಯತ್ನಿಸು
ತ್ತಿದ್ದರು. ಆದರೆ ಏಗಳು ಎಲ್ಲಾ ಜನರಿಗೂ ಬೇಕಾದವರಾಗಿದ್ದರು. ನಾಳೆ
ಐಗಳು ತೀರಿಹೋದರೆ ನಾದದು ಕೂಳೂರು ಗ್ರಾಮವೇ ಕಾಲಚಕ್ರದ ಉರು
ಳಾಟದಿಂದ ಕಳಚಿಬಿದ್ದ ಕಾರ್ಯಕಲಾಪಶೂನ್ಯನಾಗುವುದೋ ಎಂಬ ಸಂಶ
ಯವುಂಟಾಗುತ್ತಿತ್ತು, ಐಗಳು ಇನ್ನೊಂದು ಪ್ರಮುಖರಾಗಿದ್ದರೂ ಅಧಿ
ಕಾರ ದರ್ಸವೂ, ಶ್ರೀಮಂತಿಕೆಯ ದೌಲತ್ತೂ, ಹಳ್ಳಿಗರ ಆಡಂಬರವೂ ಅವ
ರಲ್ಲಿರಲಿಲ್ಲ. ಅವರು ಬರೇ ಸರಳ ಐಗಳಾಗಿದ್ದು, ಹಳ್ಳಿಯ ಮಕ್ಕಳಿಗೆಲ್ಲಾ
ಕನ್ನಡ ಸಂಸ್ಕೃತಿಗಳನ್ನು ಕಲಿಸುತ್ತಿದ್ದರು. ಆದರೆ ಕೆಲವೊಮ್ಮೆ ಗ್ರಾಮಸ್ಥರ
ಬಲವಂತದಿಂದ ಅವರಿಗೆ ಇಂಗ್ಲಿಷನ್ನೂ ಕಲಿಸದೆ ನಿರ್ವಾಹವಿಲ್ಲದಾಗಿತ್ತು, ಆಗ
ಎ, ಬಿ, ಸಿ, ಡಿ. ಎಂಬ ಕಂಬಳ ಕಾಯಿಯ೦ತಹ ಅಕ್ಷರಗಳು ಬೋರ್ಡಿನಲ್ಲಿ
ಕಂಗೊಳಿಸುತ್ತಿದ್ದವು.
ತನ್ನ ಶಿಷ್ಯರಾಗಿದ್ದು ಉಚ್ಚ ಉದ್ಯೋಗಪಡೆದವರ ಕುರಿತೆಲ್ಲಾ ವಿಶ್ವನಾಥ
ಐಗಳರಿಗೆ ಹೇಳಿ ಹೆಗ್ಗಳಿಕೆ ಪಟ್ಟಷ್ಟು ಸಾಲದು, ಅವರ ವಿದ್ಯೆ, ಬದ್ಧಿವಂತಿಕೆ;
ಗೌರವಗಳಿಗೆಲ್ಲಾ ತನ್ನ ಚಿಕ್ಕಂದಿನ ತರಬೇತೆ ಮಲಕಾರಣವೆಂಬುದು ಐಗಳ
ಪಲ್ಲವಿಯಾಗಿದ್ದಿತು. 'ಬೆತ್ತ ಉಳಿಸಿ, ಮಗುವ ಕೆಡಿಸಿ' ಎಂಬ ತತ್ವವು ಐಗಳ
ಶಿಕ್ಷಣದ ಬೀಜಮಂತ್ರವು. ವಿಶ್ವನಾಥ ಐಗಳ ಬೆತ್ತದ ಸವಿನೋಡದ ಕಳೂ
ರಿನ ಜನರೆಂದರೆ ಅತಿ ವೃದ್ದರೇ ಸರಿ. ವೇತ್ರಹಸ್ತನಾದ ಶಿಕ್ಷಕನು ಮಂತ್ರ
ಕೋಲು ಹಿಡಿದ ಮಾ೦ತ್ರಿಕನಂತೆಂದು ಐಗಳ ದೃಢನಿರ್ಧಾರ. 'ಮರ್ದನಂ
ಗುಣ ವರ್ಧನಂ' ಎಂಬುದೇ ಅವರ ಶಿಕ್ಷಣ ಸಂಗೀತದ ಪಲ್ಲವಿ.
ವಿಶ್ವನಾಥ ಐಗಳ ೬೦ ವರ್ಷಗಳ ಅಧ್ಯಾಪಕತನವು ಕೂಳೂರಿಗರನ್ನು
ನಾಗರೀಕತನಕ್ಕೆ ಒಂದಿಷ್ಟಾದರೂ ಹತ್ತಿರ ಇರಲಿಲ್ಲ, ಐಗಳು ಪುರಾತನತ್ವದ
ಭದ್ರವಾದ ಕೋಟೆಯನ್ನು ಕಾಯುವ ದ್ವಾರಪಾಲಕರಾಗಿ ನಿಂತು, ತನ್ನ ಹಳಿ
ಯಲ್ಲಾರಿಗಾದರೂ ಪಟ್ಟಣದ ಗಾಳಿ ಬೀಸಿತೆಂದರೆ ಅದಕ್ಕೆ ತಕ್ಕ ನಿವಾರಣೋ
ಪಾಯವನ್ನು ತಕ್ಷಣ ಕೈಕೊಳ್ಳುತ್ತಿದ್ದರು. ಶಾಲೆಯಲ್ಲಿ ಐಗಳು ಕರಾಳ
ರುದ್ರಾವತಾರಿಯೇ ಸರಿ, ಆವರೇನಾದರೂ ಕಲಿಸಿದುದನ್ನು ಹುಡುಗರು
ಒಮ್ಮೆಯೇ ತಿಳಿದುಕೊಳ್ಳಬೇಕು. ಹಾಗೆ ತಿಳಿಯದ ಮಂದಬುದ್ದಿಯವರಾರಾ
----------------------------------------
- 20 -
ದರೂ ಇದ್ದರೆ ಅವರ ಬುದ್ದಿ ತೀಕ್ಷ್ಯಗೊಳಿಸಲು ಕೈಗಳನ್ನು ಸರಿ ಬೆತ್ತದ
ಸಾಣೆಗೆ ಕೊಡುತ್ತಿದ್ದರು.
ಆದರೆ ಈ ಲೋಕದಲ್ಲಿ ಯಾವುದೂ ಸ್ಥಿರವಾಗಿರುವದಿಲ್ಲ. ವಿಶ್ವ
ಚಕ್ರದ ಉರುಳಾಟದಲ್ಲಿ ಉನ್ನತಿ ಅವನತಿ ಎಂಬ ದ್ವಂದ್ವದ ನಿಯಮಕ್ಕೆ
ಎಲ್ಲರೂ ಒಳಗಾಗಲೆಬೇಕು, ನಮ್ಮ ಅಧಿದೇವತೆಗೂ ಈ ದುರ್ದೈವವು ತಪ್ಪ
ಲಿಲ್ಲ. ಅವರ ಗತವೈಭವವು ಹೊಸ ನಾಗರೀಕತೆಯ ಸೂರ್ಯನಿದಿರಲ್ಲಿ ಮಂಜಿ
ನಂತೆ ಮಾಯವಾಯಿತು. ಮೊದಲಿನ ಗೌರವವು ಕುಂದಿತು. ಅವರ ಐಗಳ
ಮಠವು 'ಗ್ರೇಂಟ್' ಕೊಡಲ್ಪಡುವ ಶಾಲೆಯಾಗಿದ್ದಿತು. ಐಗಳು ಕೊಡುವ
'ಪಸ್ಟ್ ಕ್ಲಾಸ್' ತುಪ್ಪದ ಆಶೆಯಿಂದ ಇನ್ ಸ್ಪೆಕ್ಟರರು ಆಗಾಗ್ಗೆ 'ವಿಸಿಟ್'
ಕೊಡುತ್ತಿದ್ದರು. ವಿಶ್ವನಾಥ ಐಗಳರ ದುರದೃಷ್ಟ ದೆಸೆಯಿಂದ ಈ ಹಳೆ
ಇನ್‌ಸ್ಪೆಕ್ಟರರೂ 'ಪೆನ್ಶನ್' ಪಡೆದು ನವತರುಣ ಇನ್‌ಸ್ಪೆಕ್ಟರರೊಬ್ಬರು
ಐಗಳ ಶಾಲೆಗೆ ಬಂದು ಸೂರ್ಯಗ್ರಹಣದ ಕುರಿತು ಹುಡುಗರಿಗೊಂದು
ಪಾಠಕೊಡಬೇಕೆಂದು ಅವರೊಡನೆ ಹೇಳಿದರು, ಐಗಳು ಹಳೆಯ ಪಂಚಾಂಗ
ವೊಂದನ್ನು ತೆಗೆದು, ಮಕ್ಕಳೆ! ಸೂರ್ಯಗ್ರಹಣವೆಂದರೆ ಸೂರ್ಯನ ವೈರಿ
ಯಾದ ರಾಹುವೆಂಬ ರಾಕ್ಷಸನು ಸೂರ್ಯಬಿಂಬವನು ಸ್ವಲ್ಪ ಸ್ವಲ್ಪವಾಗಿ
ನುಂಗುವುದೆಂದು ಹೇಳಿದರು, ಹೊಸ ಇನ್‌ಸ್ಪೆಕ್ಟರರು ಗಹಗಹಿಸಿ ನಕ್ಕು
ಬಿಟ್ಟರು. ಶಾಲೆಯ ಸುತ್ತಮುತ್ತೂ ನೆರೆದಿದ್ದ ಜನರೆಲ್ಲಾ "ಇಂದೇನು
ಐಗಳು ತಪ್ಪಿ ಬಿದ್ದರು? ಏನು ಸಂಗತಿಯಿದು"? ಎಂದು ವಿಸ್ಮಯಪಟ್ಟರು.
ಐಗಳ ತುಪ್ಪವು ಹೊಸ ಇನ್ಸ್ ಪೆಕ್ಟರರಲ್ಲಿ ವಿಪರೀತಪರಿಣಾಮವನ್ನುಂಟು
ಮಾಡಿತು. ಶಾಲೆಯ 'ಗ್ರೇಂಟು' ನಿಲ್ಲಿಸಲ್ಪಟ್ಟಿತು. ಆದರೆ ವಿಶ್ವನಾಥ ಭಟ್ಟರು
ಶಾಲೆಯನ್ನು ಎಂದಿನಂತೆ ನಡಿಸುತ್ತಿದ್ದರು.
ಆದರೆ ಪರಿಸ್ಥಿತಿಯು ತೀರಾ ಮಾರ್ಪಾಟವಾಯಿತು. ಕೊನೆಗೆ ಐಗಳ
ರಿಗೂ ಜೀವನದಲ್ಲಿ ಜುಗುಪ್ಪೆ ಹುಟ್ಟಿತು. ಅವರ ಹಳೆಯ ಶಿಷ್ಯರಾದ 'ರಾವ್
ಬಹದೂರ್ 'ದಿವಾನರ್ ಬಹದೂರು'ಗಳಾರೂ ಐಗಳನ್ನು ಕಣ್ಣೆತ್ತಿ ನೋಡಲಿಲ್ಲ.
ಅವರ ವಿಶ್ವಕೋಶದಂತಹ ಜ್ಞಾನಕ್ಕೆ ಈಗ ಬೆಲೆಯಿಲ್ಲದಂತಾಯಿತು, ಹುಡುಗ
ಪ್ರಾಯದ ತರುಣನೊಬ್ಬನು ತಾನು ತರಬೇತಾದ ಅಧ್ಯಾಪಕನೆಂದು ಐಗಳ
ಪಟ್ಟವನ್ನೇರಿದನು, ಅವನು ಸದಾ ವಿನೋದಪ್ರಿಯನು, ಕ್ಲಾಸಿನಲ್ಲಿ ಹುಡುಗ
--------------------------------------
- 21 -
ರಿಗೆ ಚಡಿ, ಪೆಟ್ಟು, ಕೋಲ್ ದಂಡೆ, ಪರಂಗಿಮಂಚ ಮೊದಲಾದ ಯಾವತರದ
ಶಿಕ್ಷೆಯನ್ನೂ ಕೊಡದೆ ಇಚ್ಛಾನುಸಾರ ಬಿಟ್ಟು ಅವರನ್ನೆಲ್ಲಾ ಕೂಡಿಸಿಕೊಂಡು
ಮೈದಾನ, ತೋಟ, ನದಿ, ದೇವಸ್ಥಾನಗಳಿಗೆ ಕರೆದೊಯ್ದು ಮಕ್ಕಳಾಟಕೆ
ಮಾಡುವನು. ಬಿದಿರು ಕಡ್ಡಿಗಳಿಂದ ಕಿಂಡರ್ ಗಾರ್ಟನ್ ಪಾಠಕೊಡುವನು.
ಹುಡುಗರೊಂದಿಗೆ ರಬ್ಬರ್ ಚೆಂಡಾಡುತ್ತಾ ಗುಡ್ಡೆಯಲ್ಲೆಲ್ಲಾ ಓಡಾಡುವನು.
ಕ್ರಾಂತಿಕಾರಕ ಅಭಿಪ್ರಾಯವನ್ನು ಮಕ್ಕಳಿಗೆ ಬೋಧಿಸಿ, ಅವಿಧೇಯತೆಯ
ನ್ಯೂ, ಅಧಿಕಪ್ರಸಂಗವನ್ನೂ ಪ್ರೋತ್ಸಾಹಿಸುವನು, ಈ ಮಕ್ಕಳಾಟಕೆಯ
ಉಪಾಧ್ಯಾಯನನ್ನು ನೋಡಿ, ವಿಶ್ವನಾಥ ಐಗಳಿಗೆ ಅಸಹನೀಯವಾಯಿತು.
"ಇದು ಕಲಿಕಾಲವೆಂದೂ, ಹೊಸ ಅಧ್ಯಾಪಕನೆಂದರೆ ಇಡೀ ಗ್ರಾಮಕ್ಕೊಂದು
ಮಾರಿ ಸ್ವರೂಪ'ನೆಂದೂ ಐಗಳು ಎಷ್ಟೊಂದು ಹೇಳಿದರೂ ಕೇಳುವವರಾರು?
ಹುಡುಗರು ಯಾವ ಒತ್ತಾಯ ಬೈಗಳು ಪೆಟ್ಟು ಇಲ್ಲದೇನೇ ಶಾಲೆಗೆ ಓಡುತ್ತಿ
ದ್ದರು, ಅಷ್ಟಾದರೆ ಸರಿಯೆಂದು ಹೆತ್ತವರು ಸುಮ್ಮನಿದ್ದರು.
ವಿಶ್ವನಾಥ ಐಗಳು ತೀವ್ರ ವೈರಾಗ್ಯಪಟ್ಟು, ಇಡೀ ಬ್ರಹ್ಮಗಿರಿ ಗ್ರಾ
ಮವೇ ದುರ್ಗ ತಿಗಿಳಿಯುತ್ತಿರುವುದೆಂದು ಕಣಿ ಹೇಳುತ್ತಿರುವರು. ಇನ್ನು
ಮುಂದೆ ಬಾಲಕರು ಮೊದಲಿನಂತೆ ಶ್ರದ್ಧೆ ಭಯ ಭಕ್ತಿಯುಳ್ಳವರಾಗಿರದೆ ತಮ್ಮ
ಗುರುಹಿರಿಯರನ್ನು ತೃಣಸಮಾನ ಕಾಣದಿರರೆಂದು ಐಗಳ ನಿರ್ಧಾರವಾಣಿ.
ಹುಡುಗರಲ್ಲಿ ತೀವ್ರ ಅಧಿಕಪ್ರಸಂಗವೂ, ಅಧಿಕಾರ ನಿರಾಕರಣ ಮನೋವೃತ್ತಿ
ಯೂ ಪ್ರಬಲವಾಗಿ ತಾನು ಅಷ್ಟೊಂದು ಕಷ್ಟ ಪಟ್ಟು ರಕ್ಷಿಸಿಕೊಂಡುಬಂದಿದ್ದ
ಪುರಾತನ ಸಂಪತ್ತಿಯು ಕೋಟೆಯು ಈಗ ನೆಲಸಮವಾಗುವುದನ್ನು ಕಣ್ಣಾರೆ
ಕಾಣುವ ಮೊದಲು ಸಾಯುತ್ತಿದ್ದರೇನೇ ಒಳ್ಳೇದಿತ್ತೆಂಬುದೇ ಐಗಳ ಈಗಣ
ಅನನಿತ್ಯದ ಗೋಳು, ಈಗ ವಿಶ್ವನಾಥಐಗಳು ಓಲೆಯ ಪುಸ್ತಕವೊಂದನ್ನು
ಹಿಡಿದು ಮನೆಚಾವಡಿ ಮೂಲೆಯೊಂದರಲ್ಲಿ ಕುಳಿತು ಏನೋ ಮಣಮಣ ಜಪಿ
ಸುತ್ತಾ ಹಳೆಯ ಆ ವೈಭವವ' ಪುನಹ ಬರುವುದೆಂಬ ಪ್ರಿಯ ಆಶೆಯುಳ್ಳವ
ರಾಗಿರುತ್ತಾರೆ.
========================================
ಅ೦ ದು-ಇಂದು
ಅಂದು ಅದೊಂದು ದಿನ-ಯಾವ ದಿವಸವೆಂದು ನೆನಪಿಲ್ಲ-ನಮ್ಮೂರ
ರಥೋತ್ಸವವಾಗಿತ್ತು. ಎಲ್ಲೆಲ್ಲಿಯೂ ಗದ್ದಲ, ಭಕ್ತ ಜನರು
ದೇವರ ದರ್ಶನದಲ್ಲಿ ನಿರತರಾಗಿದ್ದರು. ಹೆಂಗುಸರು ಹೊಸ ಸೀರೆ ಉಟ್ಟು,
ಹಣೆಗೆ ಕುಂಕುಮದ ಬೊಟ್ಟಿಟ್ಟು ಮೈತುಂಬ ಚಿನ್ನಾಭರಣ ತೊಟ್ಟು ಹಣ್ಣು
ಕಾಯಿ ಮಾಡಿಸುತ್ತಿದ್ದರು. ಅಂತೂ ಇಡೀ ಊರೇ ಲೀನವಾಗಿತ್ತು ಊರ
ಉತ್ಸವದ ಉತ್ಸಾಹದಲ್ಲಿ.
ಆಗ ದೇವಸ್ಥಾನದ ಮುಖದ್ವಾರದಲ್ಲಿ ಒಮ್ಮಿಂದೊಮ್ಮೆ ಯೇ ಒಂದು
ಗದ್ದಲವೆದ್ದಿತು, ಈ ಹಾಹಾಕಾರವೇನೆಂದು ತಿಳಿಯಲು ಜನರೆಲ್ಲಾ ಚಲ್ಲಾ
ಪಿಲ್ಲಿಯಾಗಿ ಆ ಕಡೆಗೆ ಧಾವಿಸಿದರು. ಅಲ್ಲಿ ಒಬ್ಬಳು ಹುಡುಗಿಯನ್ನು ಇಬ್ಬರು
ಯುವಕರು ಹಿಡಿದಿದ್ದರು. ಒಬ್ಬನು ರಟ್ಟೆ ಹಿಡಿದು ಕುಲುಕಿಸುತಿದ್ದ, ಇ
ನ್ನೊಬ್ಬನು ಕಿವಿ ಹಿಡಿದು ಹಿಂಡುತಿದ್ದ. ಹುಡುಗಿಯು ಪಾಪ! ಒಂದೇ ಸವನೆ
ಚೀರುತ್ತಿತ್ತು. ಆದರೂ ಅನೇಕರು ದೂರದಲ್ಲಿ ನಿಂತು, “ಹೊಡೆಯಿರಿ ಅವ
ಳಿಗೆ! ಬಡೆಯಿರಿ ಅವಳನ್ನು” ಎಂದು ನಿರ್ದಯರಾಗಿ ಹೇಳುತ್ತಿದ್ದರು.
ಹುಡುಗಿಯ ಹೆಸರು ಉಮ್ಮು, ನೆರೆಗ್ರಾಮದ ಬಿಲ್ಲವ ಸುಬ್ಬನ ಮ
ಗಳು ಅವಳು, ಇದೇ ಊರ ಹೆಮ್ಮಕ್ಕಳ ಶಾಲೆಯಲ್ಲಿ ಓದುತ್ತಿದ್ದಳು. ಅವ
ಳಿಂದು ತಿಳಿಯದೆ ತನ್ನ ಸಂಗಾತಿಗಳೊಂದಿಗೆ ದೇವಸ್ಥಾನ ಪ್ರವೇಶಿಸಿಬಿಟ್ಟಿದ್ದಳು.
ಅದನ್ನು ನೋಡಿದ ಯಾರೊ ಈ ಗಲಾಟೆಯೆಬ್ಬಿಸಿಬಿಟ್ಟರು.
ಉಮ್ಮುವನ್ನು ನಿತ್ಯಾನಂದತೀರ್ಥರ ಸನ್ನಿಧಿಗೆ ಎಳೆದೊಯ್ಯಲಾಯಿತು.
ಇವರು ದೇವಸ್ಥಾನದ ಅಧಿಕಾರಿಗಳು, ಅವರ ವಸತಿಗೆ ಅರಮನೆಯಂತಹ
ಮನೆಗೆ-ಮಠವೆಂದು ಹೆಸರು. ಈ ಗದ್ದಲ' ತಿಳಿದ ಊರ ಪ್ರಮುಖರನೇ
ಕರು ಬಂದು ಮಠದಲ್ಲಿ ನೆರೆದರು, ಹುಡುಗಿಯು ಬೇಡರ ಬಲೆಯಲ್ಲಿ ಸಿಲು
ಕಿದ ಚಿಗರಿಯಂತೆ ಕಂಗಾಲಾಗಿ ಅಂಗಣದ ಒಂದು ಮೂಲೆಯಲ್ಲಿ ಸೆರೆಯಾಗಿ
ನಿಂತಿದ್ದಳು. ಅಷ್ಟರಲ್ಲಿ ತನ್ನ ಮಗಳ ಸಮಾಚಾರವನ್ನು ಕೇಳಿದ ಸುಬ್ಬನೂ
ಅಲ್ಲಿಗೆ ಬಂದು ಮುಟ್ಟಿದ.
----------------------------------
- 23 -
"ಇದಕ್ಕೊಂದು ನಿವೃತ್ತಿಯಾಗಬೇಕಲ್ಲ'' ಎಂದು ಗುತ್ತಿನ ಮುತ್ತಯ್ಯ
ಶೆಟ್ಟರು ಪೀಠಿಕೆಯನ್ನೆತ್ತಿದರು-ನಾಟಕದ ಸೂತ್ರಧಾರನಂತೆ!
(ಅಬ್ಬ ಬಿಲ್ಲರ ಹುಡುಗಿಯ ಸೆಕ್ಕೆ! ದೇವಸ್ಥಾನ ಪ್ರವೇಶಿಸುವಷ್ಟು
ಧೈರ್ಯ ಬಂತಲ್ಲ ಅವಳಿಗೆ!?' ಎಂದು ಬೀಡಿನ ಬಲ್ಲಾಳರು ಉದ್ಧಾರವೆತ್ತಿದರು.
'ಕಲಿಕಾಲ! ಆಧುನಿಕ ವಿದ್ಯಾಭ್ಯಾಸದ ಫಲ'ವೆಂದರೊಬ್ಬರು ಪಂಡಿತರು.
“ಏನು ಸುಬ್ಬ! ನಿನ್ನ ಮಗಳ ದರ್ಪದಿಂದ ದೇವಸ್ಥಾನವೆಲ್ಲಾ ಭ್ರಷ್ಟವಾ
ಯಿತಲ್ಲ! ನಾವಿದ್ದು ಫಲವೇನು? ಮಗಳ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತವನ್ನು
ನೀನು ಅನುಭವಿಸಬೇಕಾಗಿಬಂತಲ್ಲ!” ಎಂದು ನಿತ್ಯಾನಂದರು ಸ್ವರವೆತ್ತಿದರು.
ಬುದ್ದಿ! ಹುಡುಗಿ ಬುದ್ದಿಯಿಲ್ಲದೆ ಮಾಡಿದ ಕಾರ್ಯ; ಆದರೂ
ತಮ್ಮ ಚಿತ್ತ! ಅಪ್ಪಣೆಯಾದಂತೆ ನಡೆವನು ಈ ಬಡವನು' ಎಂದು ಕೈ ಜೋ
ಡಿಸಿ ಸುಬ್ಬ ವಿಜ್ಞಾಪಿಸಿಕೊಂಡ.
'ಸಂಪ್ರೋಕ್ಷಣೆಗೆ ಎರಡು ವರಹ; ದಂಡವಾಗಿ ಭಂಡಾರಕ್ಕೆ ಹತ್ತು
ವರಹ ಕೊಡಬೇಕು'' ಎಂದರು ನಿತ್ಯಾನಂದರು.
ಬುದ್ದಿ! ಬಡವನ ಮೇಲೆ ಕರುಣೆದೋರಬೇಕು,'' ಕಾಲಿಗೆ ಬಿದ್ದು
ಸುಬ್ಬ ಬೇಡಿದ.
ಇವನದೆಲ್ಲಾ ಠಕ್ಕು, ಏನಿವನಿಗೆ ಮಂಡೆಮಾರಿ! ಅಷ್ಟು ದಂಡ ಕೊ
ಟ್ಟೇ ತೀರಬೇಕು. ಹೆಂಡದ ದುಡ್ಡು ದಂಡಕ್ಕೆ,” ಎಂದು ಶೆಟ್ಟರು ಬಿರು
ನುಡಿದರು.
ಕರುಣೆಯಿಡಿ! ನಾಳೆ ಎರಡು ವರಹಾ ಒಪ್ಪಿಸುವೆನು' - ದೀನತೆ
ಯಿಂದ ಸುಬ್ಬ ಅರುಹಿದ.
"ಅದಾಗದು. ಅಪ್ಪಣೆಯಾದಷ್ಟನ್ನು ತಪ್ಪದೆ ಒಪ್ಪಿಸಬೇಕೀಗ.”
"ನಗದಿ ಇಲವಾದರೆ ನಗವಿದೆಯಲ್ಲ! ನಿನ್ನ ಕಿವಿ ಒಂಟಿ ತೆಗೆ,
ಕೈಯ ಬಳೆ ಜಾರಿಸು, ಮಗಳ ಬೆಂಡೋಲೆ ತಪ್ಪಿಸು, ನಿಮಗೆ ಬಿಲ್ಲವರಿಗೆ ಇ
ಷ್ಟೊಂದು ಆಡಂಬರ, ಎಷ್ಟೊಂದು ಸೊಕ್ಕು!”
ಸಲಿಗೆ ಕೊಟ್ಟರೆ ನಾಯಿ ನೊಸಲು ನೆಕ್ಕಿತು, ಹಿಡಿಯಿರಿ ಅವ
ನನ್ನು!' ಕಿತ್ತುಕೊಳ್ಳಿ ನಗವನ್ನು!”
ಸೇವಕರು ತಂದೆ ಮತ್ತು ಮಗಳ ಆಭರಣಗಳನ್ನು ನಿಮಿಷಮಾತ್ರದಲ್ಲಿ
---------------------------------------
- 24 -
ಅಪಹರಿಸಿಕೊಂಡರು! ಅವರನ್ನು ಬೀದಿಗೆ ದಬ್ಬಿ ಬಿಟ್ಟರು! ಹುಡುಗಿಯು
ಪೆಟ್ಟಾಗಿ ಬೀದಿಯಲ್ಲಿ ಬಿತ್ತು, ಬಿದ್ದವಳನ್ನು ಇಬ್ಬರು ಬಾಲವೀರರು ಎತ್ತಿ
ಕೊಂಡುಹೋಗಿ ಮನೆಯಲ್ಲಿ ಬಿಟ್ಟುಬಂದರು, ಸುಬ್ಬನು ಎಲ್ಲವನ್ನೂ ಜೀರ್ಣಿಸಿ
ಕೊಂಡ.
* * * * * * * *
* * * *
ಅಂದಿನಿಂದ ಶಾಲೆಗೆ ಹೋಗಬಾರದೆಂದು ತಂದೆಯ ಕಟ್ಟಪ್ಪಣೆ-
ಮಗಳಿಗೆ! ಆದರೂ, ಅವಳು ಮನೆಯಲ್ಲಿ ತಾನೇ ಓದುತ್ತಲೆ ಇದ್ದಳು.
ಜೊತೆಗೆ ತುಸು ಸಂಗೀತವನ್ನೂ ಅಭ್ಯಾಸಿಸುತ್ತ ಬಂದಳು, ಅವಳೀಗ ವಿದ್ಯಾ
ಬುದ್ದಿ ಗಳಲ್ಲಿ ಚತುರೆ, ಗಾಯನದಲ್ಲಿ ಅತ್ಯಾತುರೆ, ಪ್ರಾಯದಲ್ಲಿ ೧೪ ತುಂಬಿದ
ಹೆಂಗುಸು.
ಸುಬ್ಬನು, ನೆರೆ ಹಳ್ಳಿಯ ಜಾರಪ್ಪನ ಮಗ ರಾಮನಿಗೆ ತನ್ನ ಮಗಳು
ಉಮ್ಮುವನ್ನು ಧಾರೆಯೆರೆದುಕೊಟ್ಟ, ರಾಮನು ಕರ್ರಗಿನವನಾದರೂ
ಸುಂದರ, ಆದರೆ ವ್ಯಭಿಚಾರಿ. ಕುಡುಕನೂ ಆಗಿದ್ದ. ಮಾತ್ರ ಹಿರಿಯರು
ಮಾಡಿಟ್ಟ ಆಸ್ತಿ ಬದುಕು ಸ್ವಲ್ಪ ಮಟ್ಟಿಗೆ ಇತ್ತು. ಇದನ್ನು ನೋಡಿಯೇ
ಸುಬ್ಬ ತನ್ನ ಒಬ್ಬಳೇ ಮಗಳನ್ನು ಅವನಿಗೆ ಕೊಟ್ಟುದು. ಆದರೆ ಮದುವೆ
ಯಾಗಿ ಒಂದು ವರ್ಷದೊಳಗೆ-ಒಂದೇ ಒಂದು ವರ್ಷದೊಳಗೆ- ಇದ್ದುದು
ಬದ್ದುದನ್ನೆಲ್ಲಾ ಕಳಕೊಂಡ. ಈ ವ್ಯಥೆಯೊಂದಿಗೆ ಸ್ತ್ರೀಸಂಬಂಧವಾದ ರೋ
ಗವೂ ಹೆಚ್ಚಿ ಕಾಲವಾದನಾತ, ಮಗಳು ಬೇಡವೆಂದರೂ ಒತ್ತಾಯದಿಂದ
ಕುಡುಕ ವ್ಯಭಿಚಾರಿಯ ಕೈಹಿಡಿಸಿದುದು ತಂದೆ; ಅದನ್ನು ಬಿಡಿಸಿದುದು ವಿಧಿ!
ವಿಧವೆ ಉಮ್ಮುವನ್ನು ಪುನಃ ಓರ್ವ ಧನವಂತ ಮುದುಕನ ಕೊರಳಿಗೆ
ಕಟ್ಟಬೇಕೆಂದು ಹವಣಿಸಿದನು ಇವಳ ತಂದೆ, ಆದರೆ ಉಮ್ಮುವು ಮದುವೆಯ
ಮುಂಚಿನ ರಾತ್ರಿ ಹೇಳದೆ ಕೇಳದೆ ಓಡಿಬಿಟ್ಟಿದ್ದಳು.
ಉಮ್ಮುವು ಬೊಂಬಾಯಿಗೆ ತೆರಳಿದಳು. ಅಲ್ಲಿ ಓರ್ವ ಪ್ರಸಿದ್ಧ ಗಾಯ
ಕಿಯ ಆಶ್ರಯ ಪಡೆದಳು, ಕೆಲವು ವರ್ಷಗಳಲ್ಲಿ ಇವಳು ಸಂಗೀತದಲ್ಲಿ ಪ್ರವೀ
ಣೆಯಾದಳು, ಕಚೇರಿ ನಡೆಸತೊಡಗಿದಳು, ಇವಳ ಮೊದಲ ಗಾಯನಕಚೇರಿ
ಯು ಜರಗಿದುದು ಮುಂಬಾಯಿಯ ಜಹಾಂಗೀರ್ ಹೋಲಿನಲ್ಲಿ, ಅಂದಿನ
ಇವಳ ಉತ್ಸಾಹವು ಅತಿಯಾಗಿತ್ತು. ಜನರ ಪ್ರೋತ್ಸಾಹವು ಮಿತಿಮೀರಿತ್ತು.
------------------------------------
- 28 - .
ಆಗ ಪತ್ರಿಕೆಗಳಲ್ಲೆಲ್ಲಾ ಇವಳ ಸಂಗೀತ ಪ್ರೌಢಿಮೆಯ ಸುದ್ದಿಯೆ ಬಹಳ.
ಬರೇ ಉಮ್ಮುವಲ್ಲ-ಅವಳೀಗ-ಉಮಾಬಾಯಿ!
ಉಮಾಬಾಯಿಗೆ ಈಗ ೨೫ ವರ್ಷ ಪ್ರಾಯ, ಅವಳ ಸೌಂದರ್ಯ
ಸೊಂಪು, ತುಟಕೆಂಪು, ಮೈಕಟ್ಟು ಚೊಕ್ಕ, ದೇಹ ಬಿಳುಪು, ಮುಖ
ಹೊಳಪು, ದೃಷ್ಟಿ ಚಪಲ, ಮೂಗು ಮೊಗ್ಗು, ನಡು ಸಪುರ, ಇವು ಯೋಗಿ
ಯನ್ನಾದರೂ ಭೋಗಾಭಿಲಾಷಿಯನ್ನಾಗಿ ಮಾಡುವಂತಿದ್ದವು.
ಈಗ ಅವಳ ಗುರುತು ಹಚ್ಚುವುದು ಸಾಗದ ಕಾರ್ಯ; ಆಗದ ಮಾತು, ಇಂತಹುದರಲ್ಲಿ
ಪ್ರವಾಸಕ್ಕೆ ತೆರಳಿದ್ದ ನಮ್ಮ ನಿತ್ಯಾನಂದ ತೀರ್ಥರು ಇವಳ ಬಲೆಯೊಳಗೆ
ಸಿಲುಕಿದುದು ಹೆಚ್ಚಲ್ಲ ಮೆಚ್ಚು. ಇವರು ಸ್ವಭಾವತಃ ವಿಷಯಪ್ರೇಮಿಗಳು.
ಮಾನವನು ಯೋಗಿಯಿರಲಿ, ಭೋಗಿಯಿರಲಿ ಎಂದಿನ ವರೆಗೆ ತನ್ನ ಕಾಮ
ವಾಸನೆಯನ್ನು ಬಚ್ಚಿಡಬಲ್ಲನು? ಮುಚ್ಚಿಡಬಲ್ಲನು? ಮೇಲಾಗಿ ನಿತ್ಯಾನಂದರು
ಗಾಯನಪ್ರಿಯರು. ಆದಕಾರಣ ಬೊಂಬಾಯಿಯಲ್ಲಿ ಇಳಿದಿದ್ದ ಇವರು
ವೇಷಪಲ್ಲಟಸಿ ಉಮಾಬಾಯಿಯ ಗಾಯನ ಕಚೇರಿಗೆ ತೆರಳಿದ್ದರು. ಇವರು
ಪ್ರವಾಸ ಮುಗಿಸಿ ಊರಿಗೆ ಬರುವಾಗ ಬಹು ಪ್ರಯಾಸದಿಂದ ಉಮಾಬಾಯಿ
ಯನ್ನು ಕಟ್ಟಿಕೊಂಡೇ ಬಂದರು.
ಉಮಾಬಾಯಿಯು ನಮ್ಮೂರಿಗೆ ಬರುತ್ತಲೆ ಅವಳು ಉಮಾದೇವಿ
ಯಾಗಿ ರೂಪಾಂತರ ಹೊಂದಿದಳು. ಇಲ್ಲಿ ಅವಳ ಹಲವು ಕಚೇರಿಗಳು
ಜರಗಿದುವು. ಒಂದು ದಿನ ಮುಕುಂದರಾಯರಲ್ಲಿ! ಇನ್ನೊಂದು ದಿನ
ಗೋವರ್ಧನ ಶಾಸ್ತ್ರಿಗಳಲ್ಲಿ! ಮತ್ತೊಂದು ದಿನ "ಮಾರುತ ಮಹಲಿ''ನಲ್ಲಿ!
ಒಂದು ದಿನ ಊರದೇವಸ್ಥಾನದ ಪೌಳಿಯಲ್ಲಿ! ಎಲ್ಲಕ್ಕೂ ಪ್ರೋತ್ಸಾಹ ಬಹಳ.
ಇಂದು ನಿತ್ಯಾನಂದ ತೀರ್ಥರ ಮಠದಲ್ಲಿ ಖಾಸಗಿ ಗಾಯನಕಚೇರಿ,
ಇತರ ಕಡೆಗಳಂತೆ "ಪಬ್ಲಿ ಕ್?” (Public) ಅಲ್ಲವಿದು. ಆಮಂತ್ರಿತರಿಗೆ
ಮಾತ್ರ ಪ್ರವೇಶ, ಗಾಯನ ಮುಗಿದ ಮೇಲೆ ಉಚಿತ ಉಡುಗರೆಗಳು
ಬಂದುವು-ಗಾಯಿಕೆದೇವಿಗೆ! ಜರತಾರಿ ಸೀರೆ, ಕುಪ್ಪಸ, ಕಂಠಹಾರ ಇತ್ಯಾದಿ.
ಆಗಂತುಕರು ಹಿಂತಿರುಗಿ ಹೋದಮೇಲೆ ಉಪಾಹಾರ ಸತ್ಕಾರವೂ ನಡೆಯಿತು.
ಪರಸ್ಪರ ಸಮೀಪದಲ್ಲಿ ಕಿಳಿತು ತಿಂಡಿ ತೀರ್ಥಗಳ ಸ್ಪೀಕಾರವಾಯಿತು.
ಅಂದಿನ ರಾತ್ರಿಯು ಸುಖವಾಗಿ ಕಳೆದುಹೋಯಿತು.
---------------------------------------
- 26 -
೨
ಉಮಾದೇವಿಯು ಮುಂದಕ್ಕೆ ಪ್ರಯಾಣವನ್ನು ಬೆಳೆಸಲಿಲ್ಲ, ನಮ್ಮ
ರಲ್ಲಿಯೇ ವಾಸಿಸಹತ್ತಿದಳು, ನಿಮ್ಮ ಮನಸೆಳೆವ ಬ್ರಹ್ಮಗಿರಿಯ ಆ ಸೌಧಾ
ಗೃಹವೇ ಅವಳ ವಸತಿ, ಅದನ್ನು ಕಟ್ಟಿಸಿಕೊಟ್ಟವರು ನಿತ್ಯಾನಂದರೆಂದು
ಜನರ ಮಾತು, ಅದು ಸುಳ್ಳೆಂದು ನಾನು ನಂಬಲಾರೆ.
ಇಂದು ಉಮಾದೇವಿಯು ನಿತ್ಯವೂ ನಮಗೆ ಅದೇ ದೇವಸ್ಥಾನಕ್ಕೆ
ಹೋಗುತ್ತಾಳೆ! ದೇವದರ್ಶನ ಮಾಡುತ್ತಾಳೆ! ಆದರೆ ತಡೆವವರಿಲ್ಲ: ಹಿಡಿದು
ಹೊಡೆವವರಿಲ್ಲ! ನಿತ್ಯಾನಂದರೆ ಕೊಡುತ್ತಾರೆ- ಅವಳಿಗೆ ಗಂಧಪ್ರಸಾದ!
ದೇವರ ದರ್ಶನಕ್ಕಿಂತಲೂ ಹೆಚ್ಚಿನ ಪ್ರಮೋದವು ದೇವೀದರ್ಶನದಲ್ಲಿ- ತೀರ್ಥ
ರಿಗೆ, ಅವಳ ಚಪಲದೃಷ್ಟಿಯು ಇವರ ಅಚಲ ಮನಸ್ಸನ್ನಾದರೂ ಒಮ್ಮೊಮ್ಮೆ
ಕುದುರಿಸಿಬಿಡುವುದುಂಟು. ಇಲ್ಲವಾದರೆ ಕೊಡೆನೆಂದು ಹೇಳಿದ ನಿತ್ಯಾನಂದರೆ
''ಡಿಪ್ರೆಸ್ಟ್ ಕ್ಲಾಸ್ ಮಿಶ್ಯನಿ''ಗೆ ೫೦೦ ರೂಪಾಯಿಗಳನ್ನು 'ಠಣೆ ಠಣ್'
ಎಂದು ಸುರುವುತ್ತಿದ್ದರೇ?
ಇಂತಿರಲು ದೇಶದಲ್ಲೆಲ್ಲಾ ಹರಿಜನ ದೇವಸ್ಥಾನಪ್ರವೇಶ ಚಳವಳ
ವೆದ್ದಿತು, " ಈ ಹೊಸ ಭೂತವು ನಮ್ಮೂರಿಗೂ ಕಾಲುಚಾಚಿತು. ನಮ್ಮೂರಲ್ಲಿ
ಪ್ರಬಲ ಜನಜಾಗೃತಿಯೊಂದಿಗೆ ದೇವಸ್ಥಾನ ಪ್ರವೇಶ ಸತ್ಯಾಗ್ರಹವೂ ಆರಂಭ
ವಾಗಿಯೆ ಹೋಯಿತು. ಇದರಿಂದ ಕಳವಳಗೊಂಡವರು ಚಳವಳಿಗಾರರನ್ನು
ಸದೆಬಡಿಯಲು ಎದುರೊಡ್ಡಿದ ಕೃತ್ರಿಮೋಪಾಯಗಳು ಸೂರ್ಯನಿದಿರ ಮಂಜಿ
ನಂತೆ ಕರಗಿ ನೀರಾದುವು. ಚಳವಳವು ನೋಡನೋಡುತ್ತ ಪ್ರಬಲವಾಗಿ
ಬಿಟ್ಟಿತು. ನಿತ್ಯಾನಂದರೂ ಅವರ ಅನುಯಾಯಿಗಳಲ್ಲಿ ಕೆಲವರೂ ತಬ್ಬಿಬ್ಬಾಗಿ
ಹೋದರು.
ರಾತ್ರಿಕಾಲ! ಮಠದ ಮಾಳಿಗೆಯ ಅಂತರಂಗ ಕೊಠಡಿಯಲ್ಲಿ ಮಂತ್ರಾ
ಲೋಚನೆ ನಡೆಯುತ್ತಿದೆ. 'ದೇವೀ ತೀರ್ಥ'ರೆ ಚರ್ಚಕರು.
"ಅದೆಲ್ಲಾ ಇರಲಿ, ನೀವು ಇಷ್ಟೊಂದು ಗಲಿಬಿಲಿಯಾಗುವುದೇಕೆ?
ವಿಚಾರಪರರಾಗಿರಿ, ದೇವರಿಗೆ ಸ್ಪೃಶ್ಯಾಸ್ಪೃಶ್ಯ ಭೇದವಿದೆಯೆ? ಅವನಿಗೆ
ಎಲ್ಲರೂ ಸರಿಸಮಾನ, ಎಲ್ಲರಲ್ಲೂ ಅವನ ಅಂಶವಿದೆ.”
-----------------------------------
- 27 -
ಆದರೆ ಹಿಂದಿನ ರೂಢಿ ಕವಚವನ್ನು ಒಮ್ಮೆಯೇ ಕಳಚಿ ಬಿಡುವು
ದೆಂತು?''
"ಅನೈಸರ್ಗಿಕವಾದುದನ್ನು ಎಂದಾದರೂ ಬಿಡಲೇಬೇಕು. ಇಲ್ಲದಾದರೆ
ಅದು ತಾನಾಗಿ ಅಳಿಯುವುದು, ಉಳಿಸಬೇಕಾದರೆ ಬೆಳೆಸುವುದೊಂದೆ
ಯುಕ್ತಿ. ಹಿಂದಿನ ರೂಢಿಗಿಂತಲೂ ಇಂದಿನ ಕಾಲಸ್ಥಿತಿಗೆ ಆವಶ್ಯಕವಾದ
ಪ್ರಾಜ್ಞ ಬಹುಜನ ಸಮ್ಮತವಾದ ಆಹಾರ ಪದ್ಧತಿಗಳೇ ಮಿಗಿಲು.”
ಆದರೂ ಪೂರ್ವಾಚಾರವನ್ನು ಹೇಗೆ ಬಿಡಲಾದೀತು?"
''ನಿಮ್ಮ ಮೇಲಿದ್ದ ನೈಸರ್ಗಿಕ ವಿರುದ್ಧವಾದ ಸಮಾಜ ಕಟ್ಟೋಂದನ್ನು
ಮುರಿದು ಸುಧಾರಕರಾಗಿರುವ ನೀವು ಈ ದೇಶ ಕಾರ್ಯಕ್ಕಾಗಿ ಚಡಪಡಿಸುವ
ಅಗತ್ಯವಿಲ್ಲ, ಉಚ್ಚ ವರ್ಣಿಯರೆನಿಸಿ ತುಚ್ಛ ಕಾರ್ಯವೆಸಗುವ ಚಂಡಾಲರು
ದೇವಸ್ಥಾನ ಪ್ರವೇಶಿಸುವುದಿಲ್ಲವೇ?"
"ಆದರೆ ಅವರು ಜಾತಿಯಲ್ಲಿ ಮೇಲು,''
“ಜಾತಿಗಿಂತಲೂ ನೀತಿಯು ಶ್ರೇಷ್ಠ, ಅಸ್ಪೃಶ್ಯರು ಜಾತಿಗೆಟ್ಟು
ಪರಜಾತಿಗೆ ಸೇರಿ ಕ್ರೈಸ್ತ, ಮಹಮ್ಮದಿಯ ಮತಾವಲಂಬಿಕರಾದರೆ ನಾವವ
ರನ್ನು ಮುಟ್ಟುವುದಿಲ್ಲವೇ?"
''ಸ್ಪರ್ಶಿಸುವುದುಂಟು.''
"ನೀವೇ ಈಗ ಅಸ್ಪೃಶ್ಯಳೆಣಿಸುವವಳೊಡನೆ ಭೋಗತೃಷ್ಣೆಯನ್ನು
ನೀಗಿಸಿಕೊಳ್ಳುವುದಿಲ್ಲವೇ?''
'ಯಾರವಳು?''
"ನಾನೇ ಅವಳು, ೧೨ ವರ್ಷಗಳ ಹಿಂದೆ ದೇವಸ್ಥಾನ ಪ್ರವೇಶಿಸಿ
ದಂಡನೆಗೊಳಗಾಗಿದ್ದ ಆ ನೀಚ ಉಮ್ಮುವೇ ನಾನು, ಈಗೇನೆನ್ನುವಿರಿ?"
ನಿತ್ಯಾನಂದರು ನೀರವ, ಉಮಾದೇವಿಯು ತನ್ನ ಎಲ್ಲಾ ವೃತ್ತಾಂತ
ವನ್ನು ವಿವರಿಸುವಳು, ತೀರ್ಥರು ವಿಷಣ್ಣ ವದನರಾಗಿ ತಲೆಬಾಗುವರು.
ಅವರ ಕಣ್ಣಿನಲ್ಲಿ ಎರಡು ಹನಿಗಳದುರಿದವು. ಅವರ ಮನೋರಾಜ್ಯದಲ್ಲಿ
ಒಮ್ಮಿಂದೊಮ್ಮೆ ಯೇ ತೀವ್ರ ಮಾರ್ಪಾಟವುಂಟಾಯಿತು.
(ಉಮಾ! ನೀನೇ ನನ್ನ ಗುರು, ಇದುತನಕವೂ ನಾನು ಮಂದ
ಬುದ್ದಿಯ ಅಂಧನಾಗಿದ್ದೆ. ನಮ್ಮ ಜನರೂ ಪೂರ್ವಾಚಾರವೆಂಬ ರೂಢಿಯ
--------------------------------------------
- 28 -
ಗೂಡಿನಲ್ಲಿ ಸೆರೆಯಾಗಿದ್ದರು. ಅವರು ಸಮಾಜ ಬಂಧನವನ್ನು ಕಳಚಿ
ಅವರನ್ನು ಸ್ವತಂತ್ರವಾಗಿ ಹಾರಾಡಬಿಡುವೆನು, ನಾನು ಅಂತ್ಯಜೋದ್ದಾರೆ
ಕಾರ್ಯವನ್ನು ಕೈಕೊಳ್ಳುವನು, ಆದರೆ ಉಮಾ! ನಾನು ಅಂದು ಮಾಡಿದ
ಅಪರಾಧವನ್ನು ನೀನು ಇಂದು ಆದರೂ ಮನ್ನಿಸುವೆಯಾ?''
“ಬಳೆಗಳನ್ನು ಅಪಹರಿಸಿದ ನೀವೇ ಅವುಗಳನ್ನು ತೊಡಿಸಿರುವಾಗ ಇನ್ನು
ನಿಮ್ಮ ದೋಷವೇನಿದೆ? ದೋಷಿಯನ್ನೇ ಪಾವನೆಯಾಗಿ ಸ್ವೀಕರಿಸಿರುವಾಗ
ನಿಮ್ಮ ಅಪರಾಧವೆಲ್ಲಿ ಉಳಿಯಿತು?”
"ನಿಶ್ಚಯ, ನಿಶ್ಚಯ, ಯಾವುದಕ್ಕೂ ಹೇಸದ ನನ್ನಂತಹ ದೋಷಿಗಳು
ನಾಶವಾಗುವುದೇ ವಾಸಿ.''
* * * *
ಮರುದಿನ ಉಮಾದೇವಿಯ ನೇತೃತ್ವದಲ್ಲಿ ದೇವಸ್ಥಾನ ಪ್ರವೇಶ
ವಾಯಿತು." ತೀರ್ಥರಿಗೆ ಹುಚ್ಚು” ಎಂದರು ಕೆಲವರು. "ಕಲಿಕಾಲ!
ವಿನಾಶಕಾಲ!'' ಎಂದು ಉದ್ಗರಿಸಿದರು ಹಲವರು. "ತೀರ್ಥರ ಜನ್ಮಸಾರ್ಥಕ
ವಾಯಿತೆ''ಂದು ವಾರ್ತಾಪತ್ರಿಕೆಗಳು ವಾರ್ತೆಕೊಟ್ಟುವು.
ಒಂದು ದಿನ ರೇಗಿದ ಕೆಲವು ಶ್ರದ್ಧಾಳುಗಳು ತೀರ್ಥರನ್ನು ಕೊಲೆಮಾಡಿ
ಬಿಟ್ಟರು, ಉಮಾದೇವಿಯು ಸರಿಯಾದ ರುಜುವಾತಿನಿಂದ ಕೊಲೆಪಾತಕಿ
ಗಳನ್ನು ದಂಡನೆಗೆ ಗುರಿಪಡಿಸಿದಳು, ಸಾರ್ವಜನಿಕ ಸಭೆ ನೆರೆಸಿ ತನ್ನ
ನಿಜ ವೃತ್ತಾಂತವನ್ನೆಲ್ಲಾ ವಿವರಿಸಿದಳು. ಅಂದಿನಿಂದ ಉಮಾದೇವಿಯು ನಮ್ಮೂ
ರಲ್ಲಿ ಪೂಜ್ಯಳಾದಳು. ಅವಳು ಸನ್ಯಾಸದೀಕ್ಷೆಯನ್ನು ಕೈಕೊಂಡು ಪತಿತೋ
ದ್ವಾರ ಕಾರ್ಯವನ್ನು ಭರದಿಂದ ಮುಂದೊತ್ತುತ್ತಾ ನಡೆದಳು. ಜಿಲ್ಲೆಯ
ಪತ್ರಿಕೆಗಳೆಲ್ಲಾ ಉಮಾದೇವಿಯ ಆತ್ಮಕಥೆಯನ್ನು ಭಾವಚಿತ್ರದೊಂದಿಗೆ
ಪ್ರಕಟಿಸಿ ಅವಳನ್ನು ಬಹಳ ಕೊಂಡಾಡಿದುವು.
=========================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ