https://ia802807.us.archive.org/23/items/dli.osmania.4302/200324_OU_Chan%27dramati_56.pdf
https://ia802807.us.archive.org/23/items/dli.osmania.4302/200324_OU_Chan%27dramati_5
================================
ಚಂದ್ರಮತಿ
ಆಸ್ಥಾನವಿದ್ವಾನ್
ನಂಜನಗೂಡು ಶ್ರೀಕಂಠಶಾಸ್ತ್ರಿ
ಅವರಿಂದ ಬರೆಯಲ್ಪಟ್ಟುದು
ಎಂ. ಎಸ್ . ರಾವ್ ಕಂಪನಿ - ಪುಸ್ತಕ ವ್ಯಾಪಾರಿಗಳು ಅವರಿ೦ದ ಪ್ರ ಕ ಟಿ ಸಲ್ಪಟ್ಟಿ ತು
==========================================
ಪಾಠಕಮಹಾಶಯರೇ,
ರಾಜಮಹೇಂದ್ರದಲ್ಲಿರುವ ರಾವ್ ಬಹದ್ದೂರ್ ಶ್ರೀಮಾನ್ ಶ್ರೀಮಾನ್ ಕಂದು
ಕೂರಿ ವೀರೇಶಲಿಂಗಂ ಪಂತುಲುಯವರು ಪ್ರಸಿದ್ಧ ಲೇಖಕರೆಂಬುದು ತಮಗೆ
ಲ್ಲರಿಗೂ ತಿಳಿದೇ. ಇರುವುದಷ್ಟೆ? ಈ ಲೋಕೋಪಕಾರಕರು ನನ್ಪಲ್ಲಿ ಅನು
ಗ್ರಹನಿಟ್ಟು ತಾವು ಆಂದ್ರಭಾಷೆಯಲ್ಲಿ ವಿರಚಿಸಿರುನ ಗ್ರಂಥಗಳನ್ನೆಲ್ಲ ಕನ್ನ
ಡಿಸಲು ಅನುಜ್ಞೆಯಿತ್ತರು. . ಶ್ರೀಮನ್ಮಹಾರಾಜ ಕರ್ನಲ್ . ಶ್ರೀ
ಕೃಷ್ಣರಾಜೇಂದ್ರ ಒಡೆಯರ್ ಬಹದ್ದೂರ್, ಜಿ. ಸಿ. ಎಸ್. ಐ.,
ಅವರ ಪ್ರೋತ್ಸಾಹಬಲದಿಂದ ಕರ್ಣಾಟಕ ಗ್ರಂಥರಚನೆಯಲ್ಲಿ ತತ್ಪರನಾಗಿ
ರುವ. ನಾನು ಇದನ್ನು ಕನ್ನಡಿಸಿ ನನ್ನಿಂದ ರಚಿಸಲ್ಪಟ್ಟಿರುವ ಇಪ್ಪತ್ತು
ಮೂವತ್ತು ಪುಸ್ತಕಗಳೊಂದಿಗೆ ತಮ್ಮ ಸನ್ನಿಧಿಯಲ್ಲಿ ಸಮರ್ಪಿಸಿರುವೆನು.
ಇದರಲ್ಲಿ. ಉಕ್ತವಾಗಿರುವ ಗುಣಾತಿಶಯಗಳನ್ನು ಪಾಠಕಮಹಾಶಕಯರು
ಪರಿಗ್ರಹಿಸಬೇಕೆಂದು ಬೇಡುವೆನು.
ಪ್ರತಿಮಾಸದಲ್ಲಿಯ್ಲೂ ಪ್ರಕಟವಾಗುತ್ತಿರುವ “ ಕರ್ಣಾಟಕ ಗ್ರಂಥ
ಮಾಲೆಯಲ್ಲಿ“ ಇದನ್ನು ಮುದ್ರಿಸಿಕೊಟ್ಟುದಕ್ಕೋಸುಗ ಆ ಪತ್ರಿಕಾಸಂಪಾ
ದಕರಾದ ಶ್ರೀಯುತ ಬಿ. ಸುಬ್ಬರಾವ್, ಬಿ. ಎ.. ಅವರ ಉಪಕಾರವು ಚಿರಸ್ಮ
ರಣೀಯವಾಗಿರುವುದೆಂಬುದನ್ನು ಅತ್ಯಾನಂದದಿಂದ ತಿಳಿಸಲು ಕುತೂಹಲ
ಪಡುತ್ತಿರುವ,
ಮೈಸೂರು | ನಂಜನಗೂಡು ಶ್ರೀಕಂಠಶಾಸ್ತ್ರಿ,
" ಕರ್ನಾಟಕ ಚಂದ್ರಿಕೆ “ ಯ ಸಂಪಾದಕ.
ಬಿಕರಿಗೆ ಸಿದ್ಧವಾಗಿದೆ.
ಸಂತಾಪಕ-[ ದ್ವಿ ತೀಯಮುದ್ರಣ. | ಬೆಲೆ ೬ . ಅಣೆ,
ವಿಳಾಸ :- ಎಂ. ಎಸ್. ರಾವ್ ಕಂಪೆನಿ, ಪ್ರಸ್ತಕ ವ್ಯಾಪಾರಿಗಳು,
ಅವೆನ್ಯೂರೋಡ್,. ಬೆ೦ಗಳೂರು... ಸಿ ಟಿ.
-----------------------------------------
ಶ್ರೀ
ಚಂ ದ್ರ ಮತಿ
ಮೊದಲನೆಯ ಪ್ರಕರಣ.
ಪೂರ್ವಕಾಲದಲ್ಲಿ ಚೇದಿದೇಶಕ್ಕೆ ಪ್ರತಿಷ್ಪಾನವೆಂಬ ದ ನಗರವು ರಾಜ
ಧಾನಿಯಾಗ್ಗಿದ್ದಿತು ಅದನ್ನು ಉಶೀನರನೆಂಬ ರಾಜನು ಪರಿಪಾಲಿಸುತ್ತಿದ್ದನು.
ಈತನಿಗೆ ಸುನಂದೆಯೆಂಬ ನಾರೀಮಣಿಯು ಪತ್ನಿಯಾಗಿದ್ದಳು. ಈ ದಂಪತಿ
ಗಳಗ .ಬಹುಕಾಲ ಮಕ್ಕಳೇ ಇಲ್ಲದೆ ಕಡೆಗೆ ಒಂದು ಹೆಣ್ಣು ಮಗುವು
ಹುಟ್ಟಿತು. ಉಶೀನರನು ಆ ಮಗುವಿಗೆ ಚಂದ್ರಮತಿಯೆಂದು ನಾಮಕರ
ಮಾಡಿ, ಲೋಕೈಕಸುಂದರಿಯಾಗದ್ದ ಆ ಮಗುವನ್ನು ಬಹು ಪ್ರೀತಿಯಿಂದ
ಪೋಷಿಸುತ್ತಿದ್ದನು. ಆ ಮಗುವಿನ ಕಾಲಾದರೂ ನೆಲಕ್ಕೆ ಸೋಕದಂತೆ
ಮಾತಾಪಿತೃಗಳಿಬ್ಬರೂ ತನ್ನು ತೊಡೆಯಮೇಲೆಯೇ ನಿರಂತರವೂ ಅದನ್ನೆತ್ತಿ
ಕೊಂಡು ಸಾಕುತ್ತ, ತಮ್ಮಮುಂದೆ ಮೆಲ್ಲಮೆಲ್ಲನೆ ದಟ್ಟಡಿಗಳನ್ನಿಟ್ಟು ನಡೆ
ದಾಡುವ ಮಗುವನ್ಟು ಮನದಣಿಯೆ ನೋಡಿ ನೇತ್ರೋತ್ಸವವನ್ನು ಹೊಂದಿ
ಪರಮಾನಂದಭರಿತರಾಗುತ್ತಿದರು. ಅವಳ ಅಸ್ಪಷ್ಟವಾದ ಮುದ್ದುಮಾತಾ
ದರೋ ತಾಯ್ತಂದೆಗಳ ಕಿವಿಗಳಿಗೆ ಸುಶ್ರಾವವಾದ ಸಂಗೀತನಾದ
ಕ್ಕಿಂತ ಇಂಪಾಗಿದ್ದಿತು. ರೂಪದಲ್ಲಿ ರಂಭೆಗಿಂತ ಸುಂದರಿಯರಾದ ಸ್ತ್ರೀ
ಯರೂ ಆ ಚಂದ್ರಮತಿಯ ಸೊಬಗನ್ನು ಕಂಡ್ಲು ತಲಿಬಾಗಿಸುತ್ತಿದ್ದರು.
ಸುನಂದೆಯು ತಾನು ವಿದ್ಯಾವತಿಯಾಗಿದ್ದುದರಿಂದ, ವಿದ್ಯೆಯಿಂದುಂಟಾ
-------------------------------------------------------------
೨ ಚಂದ್ರಮತಿ
ಗುವ ಪ್ರಯೋಜನಗಳನ್ನರಿತು, ಚಂದ್ರಮತಿಗೆ ಗ್ರಹಣಶಕ್ತಿಯುಂಟಾದಕಾಲ
ಮೊದಲ್ಗೊಂಡು ಸಣ್ಣ ಸಣ್ಣ ನೀತಿಪದ್ಯಗಳನ್ನು ಕಲಿಸತೊಡಗಿದಳು ; ಸುಗುಣ
ಗಳನ್ನು ಸ್ತನ್ಯದೊಡನೆಯೇ ಅರೆದು ಕುಡಿಸತೊಡಗಿದಳು. ಆದುದರಿಂದ
ಚಂದ್ರಮತಿಯು ತನ್ನ ಆರನೆಯ ವರ್ಷದಲ್ಲಿಯೇ ಒಡನಾಡಿಯರಿಗಿಂತ
ವಿವೇಕವತಿಯೂ, ಗುಣವತಿಯೂ ಆದಳು. ಮೃದುವಲ್ಲದ ಮಾತಾವುದೂ
ಅವಳ ಬಾಯಿಂದ ಹೊರಡುತ್ತಿರಲಿಲ್ಲ. ಜನನೀಜನಕರು ಪ್ರೇಮಪೂರ್ವಕ
ವಾಗಿ ಆವುದನ್ನು ಕೊಟ್ಟರೆ ಅದನ್ನು ತೆಗೆದುಕೊಂಡು ಸಂತೋಷಪಡು
ದಳಲ್ಲದೆ, ಇಲ್ಲದ ಪದಾರ್ಥಗಳನ್ನ ವೀಕ್ಷಿಸಿ ಅದೇ ಬೇಕೆಂದು ಯಾವಾ
ಗಲೂ ಚಲಹಿಡಿಯುತ್ತಿರಲಿಲ್ಲ, ತನ್ನೊಡನಾಡುವ ಬಾಲೆಯರನ್ನು ಎಂದಾ
ದರೂ ಬಯ್ಯುತ್ತಿರಲಿಲ್ಲ, ತನ್ನ ಬಳಿಯಲ್ಲಿರುವ ಹಣ್ಣು ಹಂಪಲುಗಳನ್ನೇ
ಆದರೂ ಮೊದಲು ಅವರಿಗೆ ಕೊಟ್ಟು ಉಳಿದುದನ್ನು ತಾನು ತಿನ್ನುತ್ತಿದ್ದು
ದಲ್ಲದೆ ಅವರನ್ನು ತನ್ನ ಸೋದರಿಯರಂತೆ ಭಾವಿಸಿ ನಿರಂತರವೂ ಪ್ರೀತಿಸು
ತ್ತಿದ್ದಳು ಎಂದಾದರೂ ತಾನು ಪ್ರಮಾದವಶದಿಂದ ಒಂದು ತಪ್ಪನ್ನು ಮಾಡಿ
ದಪಕ್ಷದಲ್ಲಿ ಮರುಮಾತಾಡದೆ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು
ಬೇಡುತ್ತಿದ್ದಳು. ತನ್ನ ತಪ್ಪನ್ನು ಮರೆಮಾಡುವುದಕ್ಕೋಸುಗ ಇಲ್ಲದು
ದನ್ನೆಲ್ಲ ಕಲ್ಪಿಸಿ ಬೊಂಕುವುದಕ್ಕೆ ಸ್ವಲ್ಪವಾದರೂ ಪ್ರಯತ್ನಿಸುತ್ತಿರಲಿಲ್ಲ.
ಒಂದಾನೊಂದು ದಿವಸ ಉಶಿನರಮಹಾರಾಜನು ವಿದ್ವಾಂಸರ ಮಧ್ಯ
ದಲ್ಲಿ ಕುಳಿತು ವಿದ್ಯಾವ್ಯಾಸಂಗದಲ್ಲಿ ಕಾಲಹರಣ ಮಾಡುತ್ತಿದ್ದಾಗ ಆತನ
ಆಸ್ಥಾನ ವಿದ್ವಾಂಸರಲ್ಲಿ ಅಗ್ರಗಣ್ಯನಾದ ವಿದ್ಯಾಸಮುದ್ರನೆಂಬ ಬ್ರಾಹ್ಮಣನು
ರಾಜನ ಅಪ್ಪಣೆಯಪ್ರಕಾರವಾಗಿ ಈ ಕೆಳಗೆ ವಿವರಿಸುವ ರೀತಿಯಲ್ಲಿ ವಿದ್ಯಾ
ವಿಷಯಕವಾದ ಒಂದು ಉಪನ್ಯಾಸವನ್ನು ಮಾಡಿದನು
" ಲೋಕದಲ್ಲಿ ಸ್ಥೂಲದೇಹವನ್ನು ಬಳೆಯಿಸುವುದಕ್ಕೆ ಆಹಾರವು
ಹೇಗೆ ಆವಶ್ಯಕವೋ ಹಾಗೆಯೇ ಜ್ಞಾನವೆಂಬ ದೇಹವನ್ನು ಬಳೆಯಿಸುವುದಕ್ಕೆ
ವಿದ್ಯೆ ಯೆಂಬ ಆಹಾರವು ಆವಶ್ಯಕವು. ವಿದ್ಯೆಯಿಂದ ವಿನಯವಿವೇಕಾದಿಗ
ಳುಂಟಾಗುವುವು : ಅದರಿಂದ ಸಮಸ್ತ ಸದ್ಗುಣಗಳೂ ಉಂಟಾಗುವುವು.
ಓದಿರತಕ್ಕವರು ಸಾಧಾರಣವಾಗಿ ತಮ್ಮ ವಿದ್ಯೆಗೆ ತಕ್ಕ ಬುದ್ದಿಯನ್ನೂ
-----------------------------------------------------
ಮೊದಲನೆಯ ಪ್ರಕರಣ. ೩
ಸತ್ಪ್ರವರ್ತನವನ್ನೂ ಹೊಂದಿ ಆವುದೋ ಒಂದು ಬಗೆಯಲ್ಲಿ ಗೌರವದಿಂದ
ಜೀವನಮಾಡುತ್ತಿರುವುದನ್ನೂ. ಓದದೆ ಇರುವವರು ಬುದ್ದಿಶಕ್ತಿಯು
ಸಾಲದೆ ಒಳ್ಳೆಯ ನಡೆನುಡಿಗಳನ್ನರಿಯವೆ. ಕಟ್ಟಗೆಯೊಡೆದು ಮಾರುವುದೇ
ಮೊದಲಾದ ಕಾರ್ಯಗಳಲ್ಲಿ ನೀಚವಾಗಿ ಜೀವನಮಾಡುತ್ತಿರುವುದನ್ನೂ ,
ನಾವು ಸಮಸ್ತ ದೇಶಗಳಲ್ಲಿಯೂ ನೋಡುತ್ತಿರುವವಲ್ಲವೆ ? ಕಳ್ಳತನ
ಕೊಲೆ ಮೊದಲಾದ ದೊಡ್ಡ ತಪ್ಪುಗಳನ್ನು ಮಾಡತಕ್ಕವರು ಸಂಪೂರ್ಣ
ವಾಗಿ ವಿದ್ಯಾಹೀನರಾದ ಹೀನಜಾತಿಯನರೇ ಎಂಬುದು ಸಕಲರಿಗೂ ತಿಳಿದಿ
ರುವುದು ಸಭೆಗಳಿಗೆ ಹೋಗಿ ಉದ್ಯೋಗಗಳನ್ನು ಮಾಡಲಾರರಾದುದರಿಂದ,
ಸ್ತ್ರೀಯರಿಗೆ ವಿದ್ಯೆಯು ಅನಾವಶ್ಯಕವೆಂದೂ, ಅನರ್ಧದಾಯಕನೆಂದೂ
ಕೆಲವರು ಅಭಿಪ್ರಾಯಪಡುನರಲ್ಲದೆ ಆದನ್ನು ವಿವೇಕಿಗಳಾದವರು ಮೆಚ್ಚರು.
ವಿದ್ಯೆಯನ್ನು ಜ್ಞಾನಾಭಿವೃದ್ಧಿಕ್ಕೋಸುಗ ಅಭ್ಯಾಸಮಾಡಬೇಕಲ್ಲದೆ ಉದ್ಯೋಗ
ಗಳನ್ನು ಮಾಡುವುದಕ್ಕೋಸುಗವಲ್ಲ. ಫಲಾಪೇಕ್ಷೆಯಿಂದ ನಟ್ಟ ಹಲಸು
ಮೊದಲಾದ ಗಿಡಗಳು ನೆಳಲನ್ನು ಕೊಡುವುದೇ ಮೊದಲಾದ ಅನೇಕ
ಕಾರ್ಯಗಳಿಗೆ. ಉಪಯೋಗನಾಗುವಂತೆಯೇ ತಿಳಿವಿಗೋಸುಗ ಏರ್ಪಟ್ಟ
ವಿದ್ಯೆಯು ಇನ್ನೂ ಇತರ ಕಾರ್ಯಗಳಿಗೂ ಉಪಯೋಗವಾಗುವುದು.
ಪಶುವಿಗಿಂತ ಮನುಷ್ಯನು ಉತ್ತಮನಾಗುವುದಕ್ಕೆ ಜ್ಞಾನವೇ ಮುಖ್ಯವಾದ
ಕಾರಣವಾದುದರಿಂದಲೂ, ಜ್ಞಾನಾಭಿವೃದ್ಧಿಗೆ ವಿದ್ಯೆಯೇ ಸಾಧನವಾದುದ
ರಿಂದಲೂ ನಮ್ಮ ಹಿರಿಯರು ವಿದ್ಯಾಹೀನನನ್ನು ಎರಡುಕಾಲಿನ ಪಶುವೆಂದೆಣಿ
ಸುತ್ತಿದ್ದುದು ಯುಕ್ತವೇಸರಿ . ಮಾನುಷಧರ್ಮವನ್ನು ಬಿಟ್ಟು ಪಶುವೃತ್ತಿ
ಯಲ್ಲಿರಬೇಕೆಂದು ಬಯಸುವನನೊಬ್ಬನಲ್ಲದೆ ಮತ್ತಾವನೂ ಜ್ಞಾನೈಕ
ಸಾಧನವಾದ ವಿದ್ಯೆಯನ್ನು ಅನಾನಶ್ಯಕವಾದುದೆಂದು ಅಲೆಗಳೆಯನು.
ಹೊರಗೆ ಬೇರೆಬೇರೆಯಾಗಿ ಕಾಣಿಸುತ್ತಿದರೂ ಭಾರ್ಯಾಭರ್ತರಿಬ್ಬರ ಶರೀ
ರವೂ ಒಂದೇ ಎಂದು ಎಲ್ಲಾದೇಶದವರೂ ಹೇಳುವರು. ಹಾಗಾದಪಕ್ಷದಲ್ಲಿ
ಗಂಡನು ವಿದ್ಯಾವಂತನಾಗಿ ನಲಿಯಬೇಕಂದೂ. ಹೆಂಡತಿಯು ಅವಿದ್ಯಾವತಿ
ಯಾಗಿ. ನರಲಬೇಕೆಂದೂ ಹೇಳುವವರು ಅರ್ಧಶರೀರವು ಮನುಷ್ಯನಾಗಿ
ಯೂ, ಉಳಿದ ಅರ್ಧಶರೀರವು ಪಶುವಾಗಿಯೂ ಇರಬೇಕೆಂದು ಹೇಳಿದಂತಾ
ಯಿತು. ವಿದ್ಯಾಗಂಧನೇ ಇಲ್ಲದ ವಶುಪ್ರಾಯನೊಡನೆ ವಿದ್ಯಾವಂತನಾದನ
---------------------------------------------------------------------
೪ ಚ೦ದ್ರಮತಿ.
ನಾವನೂ ನಿಮಿಷಮಾತ್ರವಾದರೂ ಸೇರಲೊಲ್ಲನು.-- ಹೀಗಿರುವಾಗ ಸ್ತ್ರೀ
ಯರಿಗೆ ವಿದ್ಯೆಯನ್ನು ಕಲಿಸದೆ, ಪಶುಗಳೊಡನೆ ಸಹವಾಸಮಾಡುವಂತೆ
ತ್ರಿಕಾಲದಲ್ಲಿಯೂ ಅವಿದ್ಯಾವತಿಯರಾದ ಅ೦ಥವರೊಡನೆ ಸಹವಾಸಮಾಡ
ಬೇಕೆಂದು ಉಪದೇಶಿಸುವವನು ಎಂತಹ ಬುದ್ದಿವಂತನೆನಿಸುವನೋ ಅದನ್ನು
ನಾನು ತಿಳಿಸತಕ್ಕೆ ಅವಶ್ಯಕವಿಲ್ಲ. ನಿಷ್ಪಕ್ಷಪಾತವಾಗಿ ಆಲೋಚಿಸಿದರೆ,
ವಿದ್ಯೆಯಿಲ್ಲದವರಿಗೂ ವಿದ್ಯೆಯನ್ನು ಕಲಿತವರಿಗೂ ಕತ್ತಲೆಗೂ ಬೆಳಕಿಗೂ
ಇರುವಷ್ಟು ಭೇದವಿರುವುದು. ಐಕಮತ್ಯದಿಂದ ಇಬ್ಬರಿಗೂ ಶುಭಉಂಟಾಗು
ವಂತೆ ರಹಸ್ಯವಾಗಿ ಸಂಸಾರವನ್ನು ನಡೆಯಿಸಿಕೊಳ್ಳಬೇಕಾದವರಾದ
ಭಾರ್ಯಾಭರ್ತರಲ್ಲಿ ವಿದ್ಯಾ ವ್ಯತ್ಯಾಸದಿಂದ ಒಬ್ಬರ ಮಾರ್ಗವು ಮತ್ತೊಬ್ಬರಿಗೆ
ಸರಿಬೀಳದೆ ಒಬ್ಬರು ಊರಿಗೆಳೆದರೆ ಒಬ್ಬರು ನೀರಿಗೆಳೆಯುವಂತಹರಾದರೆ
ಪ್ರಪಂಚದಲ್ಲಿ ಅವರು ಹೇಗೆ ಸುಖಿಸುವರೋ ನಾನರಿಯೆನು. ಸ್ತ್ರೀ ಪುರುಷರು
ಕೆಲವಿಷಯಗಳಲ್ಲಿ ಮಾತ್ರ ಭಿನ್ನರಾಗಿದ್ದರೂ, ಜ್ಞಾನ, ಬುದ್ಧಿ, ಮೊದಲಾ
ದುವುಗಳು ಮಾತ್ರ ಇಬ್ಬರಿಗೂ ಸಮಾನಗಳಾಗಿಯೇ ಇರುವುವು. ಆದುದ
ರಿಂದ ಜ್ಞಾನಾಭಿವೃದ್ಧಿಗೆ ಕಾರಣಭೂತವಾದ ವಿದ್ಯೆಯು ಪುರುಷರಿಗೆ
ಹೇಗೋ ಸ್ತ್ರೀಯರಿಗೂ ಹಾಗೆಯೇ ಪರಮ ಪ್ರಯೋಜನಕರವಾಗಿರುವುದ
ರಲ್ಲಿ ಸಂದೇಹವಿಲ್ಲ. ಜ್ಞಾನನೇತ್ರಕ್ಕೆ ಸಹಾಯಕಾರಿಯಾದ ವಿದ್ಯೆಯಿಂದ
ಪುರುಷರಿಗೆ ಶುಭವೂ ಸ್ತ್ರೀಯರಿಗೆ ಅಶುಭವೂ ಉಂಟಾಗುವುದೆಂದು
ವಾದಿಸುವುದು, ಬಾಹ್ಯನೇತ್ರಕ್ಕೆ ಸಹಾಯಕಾರಿಯಾದ ಬೆಳಕನ್ನು ಪುರುಷರಿಗೆ
ಪ್ರಯೋಜನಕಾರಿಯಾದುದನ್ನಾಗಿಯೂ ಸ್ತ್ರೀಯರಿಗೆ ಅನರ್ಥಕಾರಿಯಾದು
ದನ್ನಾಗಿಯೂ ಭಾವಿಸಿ ವಾದಿಸುವಂತೆ ಹಾಸ್ಯಾಸ್ಪದವಾದುದಲ್ಲವೆ ? ಸಸಿಗಳಿ
ಗೆರೆದ ನೀರು ಕಳೆಗಳು ಬೆಳೆಯುವುದಕ್ಕೂ ಉಪಯೋಗಕರವಾಗುವಂತೆ,
ಸನ್ಮಾರ್ಗಪ್ರವರ್ತನೆಗೋಸುಗ ವಿನಿಯೋಗಿಸಲ್ಪಡಬೇಕಾದ ವಿದ್ಯೆಯು
ಒಂದೊಂದುವೇಳೆ ಸ್ತ್ರೀ ಪುರುಷರ ದುರ್ಮಾಗಪ್ರವರ್ತನೆಗೂ ಸಹಾಯಕಾರಿ
ಯಾಗಬಹುದು. ಕಳೆಯು ಬೆಳೆದೀತೆಂಬ ಶಂಕೆಯಿಂದ ನೀರೆರೆಯದೆಯೇ
ಬೆಳೆಯನ್ನು ಒಣಗಿಸಿ ಹಾಳುಮಾಡುವುದು ಹೊಲದ ಯಜಮಾನನಿಗೆ ಹೇಗೆ
ಧರ್ಮವಲ್ಲವೋ ಹಾಗೆಯೇ ಯಾವಾಗಲೋ ದುಷ್ಕಾರ್ಯಗಳಿಗೆ ಸಹಾಯ
ಕಾರಿಯಾಗುವುದೆಂಬ ಶಂಕೆಯಿಂದ ಜ್ಞಾನಮೂಲವಾದ ವಿದ್ಯೆಯನ್ನು
----------------------------------------------------------
ಮೊದಲನೆಯ ಪ್ರಕರಣ. ೫
ತಾಯ್ತಂದೆಗಳು ತಮ್ಮ ಮಕ್ಕಳಿಗೆ ಕಲಿಸದೆ ಬಿಡುವುದು ಧರ್ಮವಲ್ಲವು.
ಕಳೆಗಳನ್ನು ಬೆಳೆಯಗೊಡಿಸಿದರೆ ಸಸ್ಯಗಳಿಗೇ ಅಪಾಯವುಂಟಾಗಿ ಫಲವು
ಲಭಿಸಲಾರದೆಂಬುದನ್ನರಿತು ಹೊಲದ ಯಜಮಾನನು ಯುಕ್ತಕಾಲಗಳಲ್ಲಿ
ಕಳೆಯನ್ನು ಕಿತ್ತು ಹಾಕಿ ಸಸ್ಯಗಳನ್ನು ಕಾಪಾಡುವಂತೆಯೇ, ಮಕ್ಕಳಿಗೆ
ಕಲಿಸುವ ವಿದ್ಯೆಯು ದುಷ್ಕಾರ್ಯಗಳಿಗೆ ಉಪಯೋಗಕರವಾಗದಂತೆ ಅವರ
ನ್ನು ಜಾಗರೂಕತೆಯಿಂದ ನೋಡಿಕೊಂಡು ಯುಕ್ತ ಕಾಲಗಳಲ್ಲಿ ಶಿಕ್ಷೆರಕ್ಷೆ
ಗಳನ್ನು ಮಾಡುತ್ತೆ ಅದರ ಫಲವನ್ನನುಭವಿಸುವುದಕ್ಕೆ ಪ್ರಯತ್ನಿಸಬೇಕು.
“ ಸಸಿಯಾಗಿ ಬಾಗದುದು ಮರವಾಗಿ ಬಾಗೀತೇ ? ” ಎಂಬ ನಾಣ್ಣುಡಿಯನ್ನು
ಜ್ಞಾಪಕದಲ್ಲಿರಿಸಿ, ಮರ್ಮಾರ್ಗದಲ್ಲಿರುವ ಮನಸ್ಸನ್ನು ಸನ್ಮಾರ್ಗಕ್ಕೆ ತಿರು
ಗಿಸಬೇಕಾದರೆ ಬಾಲ್ಯದಶೆಯೇ ಉತ್ತಮವಾದ ಕಾಲವೆಂದರಿತು ಹಾಗೆಮಾ
ಡುವುದಕ್ಕೆ ಪ್ರಯತ್ನಿಸಬೇಕು. ಬಾಲ್ಯದಲ್ಲಿ ಕಲಿತ ದುರ್ಗುಣವೇ ಆಗಲಿ
ಸುಗುಣನೇ ಆಗಲಿ ವಯಸ್ಸಾದ ಬಳಿಕ ಮಾರ್ಪಡಲಾರದು. ಒಂದು ವೇಳೆ
ಮಾರ್ಪಟ್ಟರೂ ಎಷ್ಟೊಶ್ರಮದಿಂದ ಸಾಧ್ಯವಾದಿತು. ಆದುದರಿಂದ ಬಾಲಕ
ರನ್ನಾಗಲಿ ಬಾಲಿಕೆಯರನ್ನಾಗಲಿ ಚಿಕ್ಕಂದಿನಲ್ಲಿಯೇ ಯುಕ್ತ ಪ್ರವರ್ತನ
ವುಳ್ಳವರನ್ನಾಗಿ ತಿದ್ದುವುದಕ್ಕೆ ಮಾತಾಪಿತೃಗಳು ಶಕ್ತಿವಂಚನೆಯಿಲ್ಲದೆ
ಶ್ರಮಪಡುವುದು ಅತ್ಯವಶ್ಯಕವಾದ ಕರ್ತವ್ಯವಾಗಿರುವುದು. ಅದರಲ್ಲಿಯೂ
ಬಾಲರ ವಿಷಯಕ್ಕಿಂತ ಬಾಲೆಯರ ವಿಷಯದಲ್ಲಿ ಹೆಚ್ಚಾದಶ್ರಮವನ್ನು
ವಹಿಸಬೇಕು. ನಿರಂತರವೂ ಗಂಡುಮಕ್ಕಳು ತಾಯ್ತಂದೆಗಳ ಮನೆಯ
ಲ್ಲಿಯೇ ಇರತಕ್ಕವರು. ಹೆಣ್ಣು ಮಕ್ಕಳಾದರೋ ಎಂದಾದರೂ ಮತ್ತೊ
ಬ್ಬರ ಮನೆಗೆ ಹೋಗಿ ಸೇರತಕ್ಕವರಾಗಿರುವರಲ್ಲದೆ ನಿರಂತರವೂ ತವ
ರ್ಮನೆಯಲ್ಲಿ ಇರತಕ್ಕವರಲ್ಲ. ಆದುದರಿಂದ ಸಾಕಿದವರು ತಮಗೆ
ಅಪಖ್ಯಾತಿಯು ಬಾರದಂತೆ, ಹೆಣ್ಣು ಮಕ್ಕಳು ಅತ್ತೆಯಮನೆಗೆ ಹೋಗುವ
ಕಾಲವು ಸಮೀಪಿಸುವುದಕ್ಕೆ ಮೊದಲೇ ಅವರನ್ನು ಉತ್ತಮಗುಣವುಳ್ಳವ
ರನ್ನಾಗಿಯೂ, ತಿಳಿವುಳ್ಳವರನ್ನಾಗಿಯೂ ಮಾಡಿರಬೇಕು. ತಮ್ಮ ಪುತ್ರಿ
ಯರಿಗೆ ಮೊದಲು ಸುಗುಣಗಳನ್ನು ಕಲಿಸಿ ಜ್ಞಾನವತಿಯರನ್ನಾಗಿ ಮಾಡದೆ
ಸಂಸಾರಸಾಗರದಲ್ಲಿ ಈಜುವುದಕ್ಕೋಸುಗ ಅವರನ್ನು ಪುರುಷರ ಮನೆ
ಗಳಿಗೆ ಕಳುಹಿಸುವಂತಹ ತಾಯ್ತಂದೆಗಳು, ಈಜು ಕಲಿಯದವರನ್ನು ಸಮು
--------------------------------------
೬ ಚಂದ್ರಮತಿ,
ದ್ರಕ್ಕೆ ತಳ್ಳಿ. ಅವರು . ಮುಳುಮುಳುಗಿ ಎದ್ದು ಗೋಳಾಡುತ್ತಿರುವಾಗ
ಕಣ್ಣಾರೆ ಕಂಡು ಪಶ್ಚಾತ್ತಾಪಪಟ್ಟು ಆಗ ಏನನ್ನೂ ಮಾಡಲಾರದೆ
ನಿಂದೆಗೆ ಗುರಿಯಾಗಿ ವ್ಯಸನಪಡುವಂತಹ ಮೂಢರಂತೆ ಅಪಕೀರ್ತಿಯನ್ನು
ಹೊಂದಿ ಪಶ್ಚಾತ್ತಾಪಪಡುವರು. “
----
ಎರಡನೆಯ ಪ್ರಕರಣ.
ವಿದ್ಯಾಸಮುದ್ರನು ಈಯುಪನ್ಯಾಸವನ್ನು ಪ್ರಾರಂಭಿಸಿದ ಸ್ವಲ್ಪಕಾಲ
ದೊಳಗಾಗಿ ಚಂದ್ರಮತಿಯು ಅಲ್ಲಿಗೆ ಬಂದು ತಂದೆಯ ತೊಡೆಯಮೇಲೆ
ಕುಳಿತುಕೊಂಡು ಅದು ಮುಗಿಯುವವರೆಗೂ ತದೇಕಧ್ಯಾನದಿಂದ ಕಿವಿ
ಗೊಟ್ಟು ಕೇಳುತ್ತಿದಳು. ಉಶೀನರನು ತನ್ನ ಮುದ್ದುಗುವರಿಯ ಈ ಬಗೆಯ
ಉತ್ಸಾಹವನ್ನು. ಕಂಡು,. ಉಪನ್ಯಾಸವೆಲ್ಲ. ಮುಗಿದೊಡನೆಯೇ ಅವಳನ್ನು
ಮುದ್ದಿಸಿ ಬೆನ್ನನ್ನು ನೇವರಿಸುತ್ತ “ ಮಗೂ ! ನೀನೇನೋ ಬಲು ತಿಳಿದವ
ಳಂತೆ ಇಷ್ಟು ಹೊತ್ತೂ ಅತ್ತಿತ್ತ ತಿರುಗಿನೋಡದೆ ಬಹು ಶ್ರದ್ಧೆಯಿಂದ
ಉಪನ್ಯಾಸವನ್ನೆಲ್ಲ ಕೇಳುತ್ತಿದೆಯಲ್ಲವೆ ? ಅದರಲ್ಲಿ ನಿನಗೇನಾದರೂ
ತಿಳಿಯಿತೋ ? “ ಎಂದು ಕೇಳಿದನು.
ಚಂದ್ರ--ನಾನು ಕೇಳಿದುದರಲ್ಲಿ ಬಾಲೆಯರಿಗೂ ವಿದ್ಯೆಯನ್ನು ಕಲಿ
ಸುವುದು ಉಪಯೋಗಕರವಾದುದೆಂದು ಅವರು ತಿಳಿಸಿದಂತೆ ತೋರುವುದು.
ಅವರು ಹೇಳಿದುದರ ಮುಖ್ಯತಾತ್ತರ್ಯವು ಅಷ್ಟೇ ಅಲ್ಲವೆ ?
ಉಶೀನರ--ಅಹುದು. ಅವರು ಈಗ ವಿವರಿಸಿದುದು ಅಷ್ಟು ವಿಷಯ
ವನ್ನೇ, ನೀನು ಎವೆಯಿಕ್ಕದೆ ಜಾಗರೂಕತೆಯಿಂದ ಕಡೆಯವರಗೂ
ಕೇಳುತ್ತಿದುದನ್ನು ನೋಡಿದಾಗಲೇ, ಅದರ ಅರ್ಥವನ್ನೆಲ್ಲ ಗ್ರಹಿಸಿ, ವಿದ್ಯೆ
ಯನ್ನು ಕಲಿಯಬೇಕೆಂಬ ಅಭಿಲಾಸೆಯುಳ್ಳನವಳಾದೆಯೆಂದು ನನ್ನ ಮನಸ್ಸಿಗೆ
-----------------------------------------------------------
ಎರಡನೆಯ ಪ್ರಕರಣ. ೭
ತೋರಿ ಬಹು ಸಂತೋಷವುಂಟಾಯಿತು. . ನೀನು ವಿದ್ಯೆಯನ್ನು ಕಲಿಯು
ಮೊದಲುಮಾಡಿ ನನಗೂ ನಿಮ್ಮ ತಾಯಿಗೂ ಎಂದು ಸಂತೋಷ
ವನ್ನುಂಟುವಾಡುವೆಯೋ !
ಚಂದ್ರ---ಅವರು ಹೇಳಿದುದನ್ನು ಕಳಿದ ಬಳಿಕ ನನಗೆ ನೀವು ಯಾ
ವಾಗ ವಿದ್ಯೆಯನ್ನು ಕಲಿಸತೊಡಗುವವಿರೋ ಎಂಬ ಬುದ್ದಿಯು ಹುಟ್ಟಲು,
ನಿನ್ಮುನ್ನು ಆ ವಿಷಯವಾಗಿಯೇ ಕೇಳಬೇಕೆಂದು ನಿಶ್ಚಯಿಸಿದನು. ಇಷ್ಟ
ರೊಳಗಾಗಿ ನೀವು ನನ್ನಮನಸ್ಸಿನಲ್ಲಿದ್ದುದನ್ನೇ ಕೇಳಿದಿರಿ. ನೀವು ನನ್ನನ್ನು
ಎಷ್ಟು ಜಾಗ್ರತೆಯಾಗಿ ವಿದ್ಯಾಭ್ಯಾಸಕ್ಕೆ ಬಿಡುವಿರೋ ಅಷ್ಟುಸಂತೋಷ
ದಿಂದ ನಾನೂ ವಿದ್ಯೆಯನ್ನು ಕಲಿಯುವುದಕ್ಕೆ ಸಿದ್ಧಳಾಗಿರುವೆನು. ಇದು
ವರೆಗೆ ನಮ್ಮ ತಾಯಿಯು ಕೆಲವಕ್ಷರಗಳನ್ನೂ ಬರೆಯುವಕ್ರನುವನ್ನೂ
ಸ್ವಲ್ಪಸ್ವಲ್ಪವಾಗಿ ಕಲಿಸಿರುವಳು.
ಎಂದು ಚಂದ್ರಮತಿಯು ಪ್ರತ್ಯುತ್ತರವನ್ನು ಕೊಡಲು ರಾಜನು ಅಪರಿ
ಮಿತಾನಂದವನ್ನು ಹೊಂದಿ, ತತ್‌ಕ್ಷಣವೇ ವಿದ್ಯಾಸಮುದ್ರನಿಗೆ ಆಕೆಯನ್ನು
ತೋರಿಸಿ, “ ನಿಮ್ಮ ಶಿಷ್ಯಳಾದ ಇವಳಿಗೆ ವಿದ್ಯಾಬುದ್ಧಿಗಳನ್ನು ಕಲಿಸಿ
ಸನ್ಮಾರ್ಗದಲ್ಲಿರುವಂತೆ ತಿದ್ದುವ ಭಾರವು ನಿನುಗೇ ಸೇರಿರುವುದು ` ಎಂದು
ಹೇಳಿ ಚಂದ್ರಮತಿಯನ್ನೊಪ್ಪಿಸಿ, ಧನಕನಕವಸ್ತ್ರಾದಿಗಳಿಂದ . ಆತನನ್ನು
ಕಳುಹಿಸಿದನು. ಬಳಿಕ ವಿದ್ಯಾಸಮುದ್ರನು ಒಂದು ಒಳ್ಳೆಯ
ಮುಹೂರ್ತವನ್ನು ನೋಡಿ ಅಂದಿನಿಂದ ಚಂದ್ರಮತಿಗೆ ವಿದ್ಯೆಯನ್ನು ಕಲಿಸು
ವುದಕ್ಕೆ ಮೊದಲುಮಾಡಿ, ಎರಡುವರ್ಷಗಳೊಳಗಾಗಿ ಹೇಳಿದುದನ್ನೆಲ್ಲ ತಪ್ಪಿ
ಲ್ಲದೆ. ಬರೆಯುವುದನ್ನೂ. ಕೊಟ್ಟ ಪುಸ್ತಕನನ್ನು ಚೆನ್ನಾಗಿ . ಓದುವುದನ್ನೂ,
ಸುಲಭನಾದ ಪದ್ಯಗಳನ್ನು ಇತರರ ಸಹಾಯನಿಲ್ಲದೆಯೇ ಅರ್ಥಮಾಡಿಕೊ
ಳ್ಳುವುದನ್ಮೂ ಸಾಮಾನ್ಯವಾಗಿ ಕುಶಲಪತ್ರಿಕೆಗಳನ್ನು ಬರೆಯುವುದನ್ಮೂ,
ನಿರಾಯಾಸವಾಗಿ ಕಲಿಸಿದನು. ಮಕ್ಕಳನ್ನು ಅಟಪಾಬಗಳಿಗೆ ಸ್ವಲ್ಪಕಾಲ
ವಾದರೂ ಬಿಡದೆ ನಿರ್ಬಂಧಪಡಿಸಿ ಓದಿಸಿದಪಕ್ಷದಲ್ಲಿ ಮನಸ್ಸಿಗೆ ಹಿಡಿಯದೆ
ಅದರಿಂದ ಅವರಿಗೆ ಲಾಭವುಂಟಾಗಲಾರದೆಂದೂ, ಪ್ರತಿದಿನವೂ ಸ್ವಲ್ಪ ಕಾಲ
ಆಟಪಾಟಗಳನ್ನಾಡುವುದು ದೇಹಾರೋಗ್ಯಕ್ಕೆ ಆವಶ್ಯಕವಾದುದಿಂದೂ ವಿದ್ಯಾ
----------------------------------------------------------
೮ ಚಂದ್ರಮತಿ.
ಸಮುದ್ರನು ಚೆನ್ನಾಗಿ ತಿಳಿದವನಾಗಿದುದರಿಂದ, ಚಂದ್ರಮತಿಗೆ ಯಾವಾಗ
ಲೂ ಶ್ರಮೆಯೆಂದು ತೋರದಂತೆ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾಹ
ಪಡಿಸಿ ಉಪಾಯವಾಗಿ ಓದಿಸುತ್ತೆ, ಸ್ವಲ್ಪಕಾಲ ಆಡುವುದಕ್ಕೆ ಬಿಟ್ಟು ಆ
ಆಟದಲ್ಲಿಯೂ ಆವುದೋ ಒಂದು ಉಪಯುಕ್ತನಾದ ವಿಷಯವನ್ನೇ ಕಲಿ
ಸುತ್ತಿದನು ; ಮಕ್ಕಳಿಗೆ ಗೊಂಬೆಗಳನ್ನು. ನೋಡುವುದರಲ್ಲಿ ಅತ್ಯುತ್ಸಾಹ
ವೆಂಬುದನ್ನರಿತು, ಗೋಡೆಯಲ್ಲಿ ಚಿತ್ರಪಟಗಳ ಬಳಿಗೆ ಅವಳನ್ನು ಆಗಾಗ
ಕರೆದುಕೊಂಡುಹೋಗಿ, ಅಲ್ಲಿಯೂ ಕಲ್ಲುಕಂಭಗಳ ಮೇಲೆಯೂ ಕೆತ್ತಲ್ಪ
ಟ್ಟಿದ್ದ ವಿಗ್ರಹಗಳನ್ನು ತೋರಿಸಿ ಅವುಗಳ ವಿಷಯದಲ್ಲಿ ವಿನೋದಕರ
ಗಳಾದ ಕೆಲವು ಕಥೆಗಳನ್ನು ಹೇಳಿ ತನ್ಮೂಲನಾಗಿಯೂ ನೀತಿಯನ್ನು
ಕಲಿಸುತ್ತಿದನು. ಆ ಬಾಲೆಯು ಗ್ರಹಿಸಲಾರದಂತಹ ವಿಷಯವನ್ನೆಂದೂ
ಆತನು ಹೇಳುತ್ತಿರಲಿಲ್ಲ; ಹೇಳಿದುದರ ಅರ್ಧವೇ ತಿಳಿಯದಂತೆ ಕುರುಡು
ಪಾಠವಾಗಿ ಒಂದು ಪದ್ಯವನ್ನಾಗಲಿ ಹಾಡನ್ನಾಗಲಿ ಹೇಳಿಕೊಡಲಿಲ್ಲ. ಓದಿ
ಸಿದ. ವ್ಯಾಕರಣಾದಿಲಕ್ಷಣಗಳೊಡನೆ ಭಾಷಾಭಿವೃದ್ದಿಗೋಸುಗ ಲಕ್ಷ್ಯ
ಗಳನ್ನೂ ಕಲಿಸಿ ಓದುವುದೆಲ್ಲವೂ ಪ್ರಯೋಜನಕರವಾಗುವಂತೆ ಮಾಡಿದನು.
ಬುದ್ಬಿವಿಕಾಸವೂ, ವಿಭಾಗಜ್ಞಾನವೂ ಉಂಟಾಗಲೆಂಬ ಅಭಿಪ್ರಾಯದಿಂದ,
ಸಾಧಾರಣನಾಗಿ ಗೃಹಕೃತ್ಯವನ್ನು ನಿರ್ವಹಿಸುವುದಕ್ಕೆ ಬೇಕಾಗುವುದಕ್ಕಿಂತ
ಸ್ವಲ್ಪ ಹೆಚ್ಚಾಗಿಯೇ ಗಣಿತಶಾಸ್ತ್ರವನ್ನು ಕಲಿಸಿದನು. ಮುಂದೆ ಸಂಸಾರ
ಭಾರವೆಲ್ಲ ಮೇಲೆಬಿದ್ದದು ಅನೇಕ ಕಷ್ಟಗಳು ಸಂಭವಿಸಿ ಶರೀರವನ್ನು ಧರಿಸಿ
ರುವುದೇ ದುಸ್ಸಹವಾಗಿ ತೋರುವಂತಹ ಕಾಲದಲ್ಲಿ ಮನಸ್ಸಿಗೆ ಉಲ್ಲಾಸ
ವನ್ನೂ, ವಿಶ್ರಾಂತಿಯನ್ನೂ ಉಂಟುಮಾಡುವುದಕ್ಕೋಸುಗ ಗಾನವಿದ್ಯಾ
ಭ್ಯಾಸವನ್ನು ಮಾಡಿಸಿ ಭಕ್ತಿರಸಪುಷ್ಪಗಳಾದ ಹಾಡುಗಳನ್ನೂ, ಪದ್ಯಗಳನ್ನೂ
ಬಗೆಬಗೆಯ ರಾಗಗಳಿಂದ ಕಿವಿಗಿಂಪಾಗಿರುವಂತೆ ಹಾಡುವುದಕ್ಕೂ ಸಾಮರ್ಥ್ಯ
ವನನ್ನುಂಟುಮಾಡಿದನು. ಲೋಕದಲ್ಲಿ ಸಾಧಾರಣವಾಗಿ ಬಾಲಕರಾಗಲಿ
ಬಾಲಕಿಯರಾಗಲಿ ತಾವು ಕಲಿತುದನ್ನು ಇತರರಿಗೆ ಕಲಿಸತಕ್ಕ ಅಶ್ಚರ್ಯಕರ
ವಾದ ಸ್ವಭಾವವುಳ್ಳವರಾಗಿರುವರಾದುದರಿಂದ, ಈಗ ಚಂದ್ರಮತಿಯೂ
ತಾನು ಗುರುವೆಂದೆಣಿಸಿ ತನ್ನ ಒಡನಾಡಿಯರನ್ನಾಗಲಿ, . ಅವರಿಲ್ಲದಿದ್ದರೆ
ಗೊಂಬೆ ಮೊದಲಾದುವುಗಳನ್ನಾಗಲಿ ಶಿಷ್ಯರಂತೆ ಏರ್ಪಡಿಸಿಕೊಂಡು, ತಾನು
----------------------------------------------------
ಎರಡನೆಯ ಪ್ರಕರಣ. ೯
ಗುರುವಿನ ಬಳಿಯಲ್ಲಿ ಬೋಧಿಸಿ ಆಡಿಕೊಳ್ಳುತ್ತ ಮತ್ತಷ್ಟು
ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಳು. ಹಿರಿಯರೂ ಮತ್ತು ತಿಳಿದವರೂ
ಹೇಗೆ ಪ್ರವರ್ತಿಸುವರೋ ಮಕ್ಕಳೂ ಮತ್ತೂ ತಿಳಿಯದವರೂ ಹಾಗೆಯೆ
ನೋಡಿ ನಡೆಯುವುದು ಲೋಕಸ್ವಭಾವವಾದುದರಿಂದ, ಮನೆಯಲ್ಲಿ
ತಾಯ್ತಂದೆಗಳ ಸತ್ವಪ್ರದರ್ಶನವನ್ನೂ ಹೊರಗೆ ಗುರುವಾದ ವಿದ್ಯಾಸಮು
ದ್ರನ. ಒಳ್ಳೆಯ ನಡಿನುಡಿಗಳನ್ನೂ ಕಂಡು ಚಂದ್ರಮತಿಗೆ ಉಂಟಾದ
ಸುಗುಣ ಸಂಸತ್ತುಗಳಷ್ಟೆಂದು ಹೇಳಲು ಶಕ್ಯವಲ್ಲ. ಬಾಯಿಂದ ಆಡುವ
ಬರಿಮಾತುಗಳೆಗಿ೦ತ ಕೈಯಿಂದ ಮಾಡಿ ತೋರಿಸುವ ಕಾರ್ಯಗಳೇ ಮನಸ್ಸಿಗೆ
ಚೆನ್ನಾಗಿ ನಾಟತಕ್ಕುವುಗಳಾದುದರಿಂದ, ಗುರುವು ಬೋಧಿಸಿದ ಉಪದೇಶ
ಗಳಿಗಿಂತ ಅತನ ಸದ್ವರ್ತನನೇ ಚಂದ್ರಮತಿಯನ್ನು ವಿಶೇಷ ನೀತಿಯುಕ್ತೆ
ಯನ್ನಾಗಿ ಮಾಡಿತು.
ಅತನು ಚಂದ್ರಮತಿಗೆ ಇಹಲೋಕಾನುಕೂಲಗಳಾದ ಸಂಗತಿಗ
ಳನ್ನು ಹೆಚ್ಚಾಗಿ ಬೋಧಿಸುತ್ತನಾದರೂ, ಪರಲೋಕಸಾಧಕನಾದ ಭಗವ
ದ್ವಿಷಯಕಜ್ಞಾನವನ್ನೂ ಉಂಟುಮಾಡಿಸದಿರಲಿಲ್ಲ. ಒಂದುದಿವಸ ಚಂದ್ರ
ಮತಿಯು ಒಂದು ಚೆತ್ರಪಟವನ್ನು ಕೈಯಲ್ಲಿ ಹಿಡಿದುಕೊಂಡು ಅದರ
ಸೊಗಸನ್ನು ಕಂಡು ಅಚ್ಚರಿಗೊಂಡು ತಲೆದೂಗುತ್ತಿರುವಾಗ ಅವಳ
ಗುರುವು ಅಲ್ಲಿಗೆ ಬಂದನು.
ಗುರು - - ಮಗೂ !. ನಾನು ಬಂದಿರುವ ಸಂಗತಿಯನ್ನೇ ಅರಿಯದೆ
ನೀನು ಅ ಪಟವನ್ನು ಬಹುಶ್ರದ್ಧೆಯಿಂದ ನೋಡುತ್ತಿರುವೆಯಲ್ಲವೆ? ಅದ
ರಲ್ಲಿ ನಿನ್ನ ಮನಸ್ಸನ್ನು ಅಕರ್ಷಿಸುವಷ್ಟು ವಿಚಿತ್ರವಾದುದಾವುದಿರುವುದು ?
ಚಂದ್ರ---ಈ ಪಟದಲ್ಲಿರುವ ಸರಸ್ವತೀ ವಿಗ್ರಹವು ಬಲು ಸೊಗಸಾ
ಗಿರುವುದಾದರೂ, ಈ ವಿಗ್ರಹದ ಕೈಯಲ್ಲಿರುವ ತಾವರೆಯ ಪುಷ್ಪನನ್ನು ಕಂಡ
ಬಳಿಕ ನನ್ನ ಮನಸ್ಸು ಮತ್ತೆ ಲ್ಲಿಯೂ ಚಲಿಸದೆ ಎಷ್ಟುಹೊತ್ತು ನೋಡಿ
ದರೂ ತೃಪ್ತಿಯೊಂದದಿರುವುದು.
ಗುರು---ಇದುವರೆಗೆ ನೀನು ಎಂದೂ ನೋಡದಿರುವ ಸುಂದರತರ
ವಾದ ಆ ಸರಸ್ವತೀ ವಿಗ್ರಹಕ್ಕಿಂತ ಪ್ರಕಿದಿನವೂ ನೀನು ಕೃಯಲ್ಲಿ ಹಿಡಿದು
---------------------------------------
೧೦ ಚಂದ್ರಮ ತಿ.
ಕೊಂಡೇ ಇರುವಂತಹ ಆ ತಾವರೆಯ ಹೂವು ನಿನಗಿಷ್ಟು. ವಿಚಿತ್ರವಾಗಿ
ತೋರುವುದಕ್ಕೆ ಕಾರಣವೇನು ?
ಚಂದ್ರ--ಇದು ಬಟ್ಟೆಯಮೇಲೆ ಬರೆಯಲ್ಪಟ್ಟರುವುದಾದರೂ, ನಿಶ್ಚ
ಯವಾದ ತಾವರೆಯ ಹೂವಿನಂತೆಯೇ ಕಾಣಿಸುತ್ತಿರುವುದು. _ ಇದೊ,
ನನಗೆ ಆಟಕ್ಕೋಸುಗ ನಮ್ಮ ದಾಸಿಯು ಸರೋವರದಿಂದ ಕೊಯ್ಪುತಂದಿ
ರುವಂತಹ ಈ ತಾವರೆಯಂತೆಯೇ, ನಸಳುಗಳೂ, ನಾಳವೂ, ಬಣ್ಣವೂ ಸ್ವಲ್ಪ
ವಾದರೂ ವ್ಯತ್ಯಾಸವಿಲ್ಲದಿರುವುವು. . ಇನ್ಟು ಬರಿದಿರುವ ಆ
ಚಿತ್ರಕಾರನ ಬುದ್ದಿ ಮೆಚ್ಚದಿರುವುದಕ್ಕಾದೀತೇ?
ಗುರು---ಇದರಲ್ಲಿ ನಿನಗಿಷ್ಟು. ಸಂತೋಷವುಂಟಾಗುವುದಕ್ಳು ಇದು
ನಿಶ್ಚಯವಾದ ತಾವರೆಯ ಹೊವಿನಂತಿರುವುದೇ ಕಾರಣವೆಂದು ನೀನೆ
ಹೇಳುತ್ತಿರುವೆಯಲ್ಲವೆ ? ಇದು ಮತ್ತೊಂದು ತಾವರೆಯನ್ನು ಸ್ವಲ್ಪವಾ
ದರೂ ವ್ಯತ್ಯಾಸವಿಲ್ಲದೆ ಹೋಲುತ್ತಿರುವ ಮಾತ್ರಕ್ಕೇ ಇಷ್ಟು ಸಂತೋಷ
ಪಡಬೇಕಾಗಿರುವಾಗ,. ಅ ಮತ್ತೊಂದು ತಾವರೆಯನ್ನು ನೋಡಿ ಸಂತೋಷ
ಪಡದೆಯೂ ಅದನ್ನು ಮಾಡಿದ ದಿವ್ಯ ಚಿತ್ರಕಾರನ ಶಕ್ತಿಯನ್ನು ಪರ್ಯಾ
ಲೋಚಿಸಿ ಅಶ್ಚರ್ಯಪಡದೆಯೊ ಇರುವುದು ಬಹು ವಿಸ್ಮಯಕರವಾಗಿರು
ವುದಲ್ಲವೇ ?
ಚಂದ್ರ-- ಈಗ ನಾನು ಮುಡಿಯಲ್ಲಿಟ್ಟುಕೊಂಡಿರುವ ಈ ತಾವರೆಯ
ಹೂವೂ ಒಬ್ಬರಿಂದ ಮಾಡಲ್ಪಟ್ಟುದೇ?
ಗುರು -- ಈ . ಪಟದಲ್ಲಿರುವ ತಾವರೆಯ ಹೂವನ್ನು ಯಾರಾದರೂ
ಬರೆದಿರುವರೋ ಇಲ್ಲದೆ ತಾನಾಗಿಯೇ ಹುಟ್ಟತೋ ?
ಚಂದ್ರ---ಇದನ್ನು ಬರೆದವರಾರೋ ನಾನರಿಯೆನಾದರೂ, ಇದು,
ಆವನೋ ಒಬ್ಬನಿಂದ ಬರೆಯಲ್ಪಟ್ಟುದೆಂದು ಮಾತ್ರ ನಾನು ಬಲ್ಲೆ, ಯಾರೂ
ಬರೆಯದಿದ್ದ ಪಕ್ಷದಲ್ಲಿ, ಈ ಹೂವು ಇಲ್ಲಿ ಹೇಗೆ ಇರುತ್ತಿದಿತು?
ಗುರು---ನೀನು ಹೇಳಿದ್ದ ಪ್ರತ್ಯುತ್ತರವು ಬಲು ಚೆನ್ವಾಗಿರುವುದು.
-------------------------
ಎರಡನೆಯ .. ಪ್ರಕರಣ, ೧೧
ಒಬ್ಬರು ಮಾಡಿದಲ್ಲದೆ ಒಂದು ವಸ್ತುವಾಗುವುದಿಲ್ಲವೆಂದು ನೀನು ತಿಳಿದು
ಕೊಂಡಿರುವೆಯೆಂಬುದು ನಿನ್ಕ ಮಾತಿನಿಂದಲೇ ಸ್ಪಷ್ಟವಾಯಿತು. ಅದ
ಕಾರಣದಿಂದಲೇ . ಈಗ ನೀನು ಮುಡಿಯಲ್ಲಿಟ್ಟುಕೊಂಡಿರುವ ತಾವರೆಯ
ಹೂವನ್ನೂ ಒಬ್ಬರು ಮಾಡದಿದ್ದ ಪಕ್ಷದಲ್ಲಿ, ಇದೂ ಇರುತ್ತಿರಲಿಲ್ಲ.
ಚಂದ್ರ--.ಹಾಗಾದರೆ ಇದನ್ನು ಮಾಡಿದವರಾರೋ ಆವರನ್ನು ನನಗೆ
ತೋರಿಸುವಿರಾ ?
ಗುರು ---ಆ ಮಹಾನುಭಾವನು ನಮ್ಮ ಕಣ್ಣುಗಳಿಗೆ ಕಾಣಿಸತಕ್ಕ
ವನಲ್ಲ. ಅವನು ಕಾಣಿಸದಿರರೂ ಈಗ ಇಲ್ಲಿಯೇ ಇದು ನಾವಾಡುತ್ತಿ
ರುವ ಮಾತುಗಳನ್ನೆಲ್ಲ ಕೇಳುತ್ತಲೇ ಇರುವನು. ಅತನಿಲ್ಲದ ಸ್ಥಳವಾ
ವುದ್ಧೂ ಇಲ್ಲ. . ಅತನು ಮಾಡಿರುವ . ವಸ್ತುಗಳೆಲ್ಲವೂ. ಸರ್ವೋತ್ತಮ
ಗಳಾಗಿಯೇ . ಇರುವುವು. . ಅತನೇ ಎಲ್ಲಕ್ಯೂ ಅಧಿಪತಿಯಾಗಿರುವನು.
ನಾವು ಮಾಡಿದ ವಸ್ತುಗಳು ಎಷ್ಟು ಸೊಗಸಾದುವುಗಳಾಗಿದ್ದರೂ, ಅತನು
ಮಾಡಿರುವ . ವಸ್ತುಗಳೊಡನೆ. ಹೋಲಿಸಿನೋಡಿದರೆ ಕೋಟ್ಯಂಶದಲ್ಲಿ
ಒಂದಂಶಕ್ಕೂ ಸರಿಬಾರವು. . ಈ ಪಟದಲ್ಲಿ ಬರೆಯಲ್ಪಟ್ಟರುವ ಕಮಲವು
ಎಷ್ಟು ಮನೋಹರವಾಗಿರುವುದಾದರೂ ಈಶ್ವರನಿರ್ಮಿತವಾದ ಅ ಕಮಲ
ದೊಡನೆ ಹೋಲಿಸಿದರೆ ಸ್ವಲ್ಪವೂ ಸರಿಬಾರದು. ಬಣ್ಣ ದಲ್ಲಿಯೂ. ರೂಪ
ದಲ್ಲಿಯೂ ಸ್ನಲ್ರಮಾತ್ರ ಸರಿಬರಬಹುದಾವರೂ, ಅದರಲ್ಲಿರುವ ತಂಪೂ,
ಮಾರ್ದನವೂ. ಪರಿಮಳವೂ, ಮಕರಂದವೂ, . ಇದರಲ್ಲೆಲ್ಲಿರುವುವು ?
ಅದನ್ನು. ನಾವು ಸುಮ್ಮನೆ ನೋಡಿ ಸಂತೋಷಸಪಡಬೇಕಾಗಿರುವುದಲ್ಲದೆ,
ಅದರಂತೆ ಇದನ್ನು ಮುಡಿಯಲ್ಲಿಟ್ಟುಕೊಳ್ಳುವ್ರದಕ್ಕೂ, ಔಷಧಾದಿಗಳೊಡನೆ
ಉಪಯೋಗಿಸುವುದಕ್ಕೂ ಹೇಗೆತಾನೆ ಆದೀತು ? ಹೀಗೆ ನಮಗೆ ಮಹೋಪ
ಯೋಗಿಗಳಾಗುವಂತೆ ಸಮಸ್ತ ಪದಾರ್ಧಗಳನ್ನೂ ಸೃಷ್ಟಿಸಿರುವ ಸರ್ವೇಶ್ವರನ
ವಿಚಿತ್ರಸ್ಪಷ್ಟಿಗೆ ಆಶ್ಟರ್ಯಪಡುತ್ತೆ ನಾವು ಆತನ ವಿಷಯದಲ್ಲಿ ಭಕ್ತಿಕೃತಜ್ಞತೆ
ಗಳುಳ್ಳವರಾಗಿರಬೇಕು.
ಚಂದ್ರ--ತಾವು ಹೇಳಿದ ಆ ಸರ್ವೇಶ್ವರನಂಬ ಚಿತ್ರಕಾರನು
ಮಾಡಿದ ಪದಾರ್ಥಗಳು ಮತ್ತಾವುವಿರುವುವು?
------------------------------------
೧೨ ಚ೦ದ್ರಮತಿ.
ಗುರು -- ಅತನು ಮಾಡದಿರುವ ಪದಾರ್ಥವಾವುದೂ ಇಲ್ಲ. ನೀನು
ಭೂಮಿಯಲ್ಲಿ . ನೋಡಿದರೂ, ಅಂತರಿಕ್ಷದಲ್ಲಿ ನೋಡಿದರೂ, ಮತ್ತೆಲ್ಲಿ
ನೋಡಿದರೂ, ಅತನು ಮಾಡಿರುವ ಅನೇಕ ಸುಂದರಪದಾರ್ಧಗಳು ಕಣ್ಣು
ಗಳಿಗೆ ಅನಂದವನ್ನುಂಟುಮಾಡುತ್ತಿರುವುವು. ನಮಗೆ ಕಾಣಿಸುತ್ತಿರುವ
ಪದಾರ್ಥಗಳನ್ನೆಲ್ಲ ಸೃಷ್ಟಿಸಿದವನಾತನೇ.
ಚಂದ್ರ---ನೀವು ಹೇಳುವುದನ್ನು ಕೇಳಿದರೆ, ಈ ವೃಕ್ಷರಾಜಿಯನ್ನೂ,
ಸೂರ್ಯಚಂದ್ರರನ್ಕೂ ಆತನೇ ಸೃಷ್ಟಿಸಿದವನೆಂದು ತೋರುವುದು.
ಗುರು---ಸೂರ್ಯಚಂದ್ರಾದಿ ಜಡಸದಾರ್ಧಗಳನ್ನು ಮಾತ್ರವಲ್ಲದೆ.
ಪಶುಪಕ್ಷ್ಯಾದಿ ಸಮಸ್ತ ಜೀವರಾಶಿಗಳನ್ನೂ, ನಿನ್ನನ್ನೂ, ನನ್ನನ್ನೂ, ಸಮಸ್ತ.
ಮನುಷ್ಯಕೋಟಿಯನ್ನೂ ಸೃಷ್ಟಿಸಿ ಕಾಪಾಡುತ್ತಿರುವವನಾಮಹಾತ್ಮನೇ
ಚರಾಚರಗಳಾದ ಸಮಸ್ತ ಪದಾರ್ಧಗಳೂ ಆತನಿಂದಲೇ ಸೃಷ್ಟಿಸಲ್ಪಟ್ಟುವು
ಗಳಾಗಿವೆ. ಇವುಗಳಲ್ಲದೆ ನಮ್ಮ ಕಣ್ಣುಗಳಿಗೆ ಕಾಣಿಸದಿರುವಂತಹ ವಸ್ತು
ಗಳನ್ನೂ ಅಸಂಖ್ಯಾಕವಾಗಿ ಸೃಷ್ಟಿಸಿರುವನು.
ಚಂದ್ರ----ಇಂತಹ ಆದ್ಬುತಶಕ್ತಿಯನ್ನುಳ್ಳ ಆ ಸರ್ವೇಶ್ವರನ ಮಹ
ತ್ವಾದಿಗಳನ್ನು ಸಂಪೂರ್ಣವಾಗಿ ಕೇಳಬೇಕೆಂದು ನನಗೆ ಅಸೆಯುಂಟಾಗಿರು
ವುದು. . ತಾವು ಅದನ್ನು ನನಗೆ ವಿವರಿಸಬೇಕು.
ಗುರು---ಅತನ ದಿವ್ಯಗುಣಗಳಲ್ಲಿ ಸಹಸ್ರಾಂಶಗಳಲ್ಲೊಂದನ್ನಾದರೂ
ನಾನು ವರ್ಣಿಸುವುದಕ್ಕೆ ಸಮರ್ಧನಲ್ಲ. . ಈಗ ಇನ್ವೇ ಸಾಕು. . ನಿನಗೆ
ಜ್ಞಾನಾಭಿವೃದ್ಧಿಯುಂಟಾದಹಾಗೆಲ್ಲ, ನೀನೇ ಆತನ ಗುಣಗಳನ್ನು ತಿಳಿದು
ಕೊಂಡು. ಸಂತೋಷಪಡುವೆ.
=========================================
ಮೂರನೆಯ ಪ್ರಕರಣ
ಮತ್ತೊಂದುದಿನ ಚಂದ್ರಮತಿಯು ಗುರುವಿನ ಬಳಿಯಲ್ಲಿ ಓದಿಕೊ
ಳ್ಳುತ್ತಿರುವಾಗ, . ಅಲ್ಲಿಗೆ. ಒಬ್ಬ. ಇಂದ್ರಜಾಲಿಕನು ಬಂದು ತನ್ಶ್ನ ಚೀಲ
ವನ್ನು ತೆರೆದು ತನ್ಕ ವಿದ್ಯಾತಿಶಯವನ್ನು ನೋಡಬೇಕೆಂದು ಪ್ರಾರ್ಥಿಸಿ
ದನು. ಅವನನ್ನು ಕಂಡು ಅಲ್ಲಿ ಓದಿಕೂಳ್ಳುತ್ತಿದ ಬಾಲೆಯರೆಲ್ಲರೂ
ಓದಿನ ಮೇಲಣ ಆಸೆಯನ್ನುಳಿದು ಅವನಕಡೆಯೇ ನೋಡತೊಡಗಿದರು.
ವಿದ್ಯಾಸಮುದ್ರನು ಅವರ . ಅಭಿಪ್ರಾಯವನ್ನು ಗ್ರಹಿಸಿ ಬುದ್ದಿಯು
ಮತ್ತೊಂದು ವಿಷಯದಲ್ಲಿ ಪ್ರವರ್ತಿಸಿರುವಾಗ ಓದಿಸುವುದರಿಂದ ಪ್ರಯೋ
ಜನವಿಲ್ಲವೆಂಬುದನ್ನು ತಿಳಿದವನಾದುದರಿಂದ, ತತ್‌ಕ್ಪಣವೇ ಓದುಗಲಿಸು
ವುದನ್ನು ನಿಲ್ಲಿಸಿ, ಮಕ್ಕಳನ್ನೆಲ್ಲ ತನ್ನ. ಮುಂದೆ ಒಟ್ಟುಗೂಡಿಸಿಕೊಂಡು,
ಕೆಲವು ವಿನೋದಗಳನ್ನು ತೋರಿಸುವಂತೆ ಐಂದ್ರಜಾಲಿಕನಿಗಾಜ್ಜಾಪಿಸಿ, ಆ
ಐಂದ್ರಜಾಲಿಕನು ತಾನು ಕಲಿತಿದ್ದ ವಿಷಯಗಳಲ್ಲಿ ಕೆಲವನ್ನು . ತೋರಿಸಿದ
ತರುವಾಯ. ಅವನಿಗೆ . ತಕ್ಕ ಬಹುಮಾನವನ್ನು. ಮಾಡಿ, ಸಂತೋಷ
ಗೊಳಿಸಿ ಕಳುಹಿಸಿದನು. . ಆಗಳಾಬಾಲೆಯರಿಲ್ಲರೂ. ಅವನು ಮಾಡಿದ
ಅದ್ಬುತಕಾರ್ಯಗಳನ್ನು ಪರಸ್ಪರವಾಗಿ ಹೇಳಿಕೊಂಡು ಆಶ್ವರ್ಯಪಡತೊಡ
ಗಿದರು. ಐಂದ್ರಜಾಲಿಕನು ಎಲ್ಲರಿದಿರಾಗಿ ಮಾವಿನ ಓಟೆಯನ್ನು ನೆಲದಲ್ಲಿ
ಹೂತು ನಿಮಿಷಮಾತ್ರದಲ್ಲಿ ಅದು ಮೊಳೆತು ಹೂಗಚ್ಚಿ ಫಲಿಸುವಂತೆ
ಮಾಡಿದುದನ್ನೂ, ಒಂದು ಕಾಸನ್ನು ಚೀಲದೊಳಕ್ಕೆ ಹಾಕಿ ಅದೇ ಚೀಲ
ದಿಂದ ಹೊರಕೈ ಹಲವು ಕಾಸುಗಳನ್ನು ತೆಗೆದು ತೋರಿಸಿದುದನ್ನೂ, ಅವನು
ಮಾಡಿದ ಕಾರ್ಯಗಳೊಳಗೆಲ್ಲ ಬಹು ಶ್ಲಾಘ್ಯವಾದುವುಗಳೆಂದು ಚಂದ್ರಮ
ತಿಯು ಮೆಚ್ಚಿ ಗುರುವಿನೊಡನೆ ಪ್ರಸ್ತಾಪಿಸಿದಳು. ಆತನಾದರೋ ಅದನ್ನೇ
ನೆಪವನ್ನಾಗಿಟ್ಟುಕೊಂಡು ಚಂದ್ರಮತಿಗೆ ತನ್ಮೂಲವಾಗಿ ಕೆಲವುಪಯುಕ್ತ,
ವಿಷಯಗಳನ್ನು ಬೋಧಿಸಲೆಳಸಿ ಇಂತೆಂದನು :---
ಗುರು---ಎಲೌ ವತ್ಸೇ ! ಹಿಂದೆ ನಾನು ನಿನ್ನೊಡನೆ ಹೇಳಿರುವ ಆ
----------------------------------
೧೪ ಚಂದ್ರಮತಿ.
ಸೃಷ್ಟಿಕರ್ತನೊಬ್ಬನಿಗಲ್ಲದೆ ಮತ್ತಾರಿಗೂ. ಹೊಸಬಗೆಯ ಸೃಷ್ಟಿಯನ್ನು
ಮಾಡುವುದಕ್ಕೆ ಶಕ್ತಿಯಿಲ್ಲ. ಈಗ. ಬಂದಿದ್ದ ಐಂದ್ರಜಾಲಿಕನು ಮಾಡಿದು
ದೆಲ್ಲವೂ ಮೋಸವೇ ಅಲ್ಲದೆ ಮತ್ತೆ ಬೇರೆಯಲ್ಲ. ಅವನ ತನ್ನ ಬಳಿಯ
ಲ್ಲಿಟ್ಟುಕೊಂಡಿದ ನಾಲ್ವುಕಾಲಿನ ದೊಡ್ಡ ಬಿದಿರುಬುಟ್ಟಿಯನ್ನೂ ಅದರಮೇಲೆ
ಹೊದಯಿಸಿದ ಬಟ್ಟೆಯನ್ನೂ ತೆಗೆದುಬಿಟ್ಟರೆ, ಮಾವಿನ ಓಟೆಯನ್ನು ನೆಲ
ದಲ್ಲಿ ಬಹಿರಂಗವಾಗಿ ಹೊತಿಟ್ಟು ಮೊಳೆತು. ಫಲಿಸುವಂತೆ ಮಾಡಲಾರನು.
ಅವನು ಇಲ್ಲಿಗೆ. ಬರುವಾಗಲೇ ಚಿಗುತಿದ್ದ ಮಾವಿನಕೊನೆಯೊಂದನ್ನೂ,
ಹೂಗಚ್ಚಿದ್ದ ಕೊನೆಯೊಂದನ್ನೂ, ಹೀಚುಗಳಿಂದ ತುಂಬಿದ ಕೊನೆಯೊಂ
ದನ್ನೂ ರಹಸ್ಯವಾಗಿ ತನ್ನೊಡನೆ ತಂದು ಬಹು ಜಾಗರೂಕತೆಯಿಂದ ಅವು
ಗಳನ್ನು ತನ್ನ ಬಳಿಯಲ್ಲಿ ಬಚ್ಚಿಟ್ಟುಕೊಂಡಿದ್ದನಾದುದರಿಂದ ಮಧ್ಯೆಮಧ್ಯೆ
ಮೇಲೆ ಬಟ್ಟೆಯನ್ನು ತೆರೆಹಾಕಿ ನಾವು ನೋಡುತ್ತಿರುವಂತೆಯೇ ಮೊದಲು
ನೆಲದಲ್ಲಿ ಹೂತಿದ್ದ ಓಟೆಯನ್ನು ತೆಗೆದುಹಾಕಿ ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ
ಚಿಗುತಮಾವಿನಕೊನೆಯನ್ನೂ ತರುವಾಯ ಕಾಯಿಗಳಿಂದ ತುಂಬಿದ ಕೊನೆ
ಯನ್ನೂ ಅಲ್ಲಿ ನಾಟಿ ತೋರಿಸಿದನು. ಅವನು ಬುಟ್ಟಿಯಮೇಲೆ ತೆರೆ
ಯನ್ನು ಹಾಕಿ ಮಧ್ಯೆ ಮಧ್ಯೆ ಒಳಗೆ ಕೈಯಿಟ್ಟು ಮಾಡುತ್ತಿದ್ದುದು ಇದೇ
ಕೌಶಲವು. ಅವನು ಕಾಸುಗಳನ್ನು ಮಾಡಿ ತೋರಿಸಿದುದೂ ಇಂತಹ ಮೋಸ
ದಿಂದಲೇ. ಅವನು ತನ್ನ ಹಸ್ತಲಾಘವದಿಂದ ನಮಗೆ ಕಾಣಿಸದಿರುವಂತೆ
ಕೆಲವು ಕಾಸುಗಳನ್ನು ಕೈಯಲ್ಲಿ ಮುಚ್ಚಿಟ್ಟುಕೊಂಡಿದ್ದು, ಅವುಗಳಲ್ಲಿ
ಒಂದನ್ನು ಮಾತ್ರ ಮೊದಲು ನಮಗೆ ತೋರಿಸಿ, ಉಳಿದುವನ್ನೆಲ್ಲ ಆ ಒಂದೇ
ಕಾಸಿನಿಂದಲೇ ಮಾಡಿದಂತೆ ನಮಗೆ ಭ್ರಮೆಯನ್ನುಂಟುಮಾಡಿದನು. ಅವ
ನು ಮತ್ತೆಲ್ಲಿ ಹೋಗಿ ಈ ವಿನೋದವನ್ನು ಮಾಡಿದರೂ. ತನ್ನ. ಬಳಿಯಲ್ಲಿ
ಹತ್ತು ಕಾಸುಗಳನ್ನು ಮಾತ್ರ ತೋರಿಸಬಲ್ಲನಲ್ಲವೆ ಅದಕ್ಕಿಂತ ಹೆಚ್ಚಾಗಿ
ತೋರಿಸಲಾರನು. . ಅವನಿಗೆ ಕಾಸುಗಳನ್ನು ಮಾಡುವಂತಹ ಶಕ್ತಿಯಿರುವ
ಪಕ್ಷದಲ್ಲಿ, ಈ ವಿಧವಾಗಿ ಅವನು ಮನೆಮನೆಗೂ ತಿರುಗಿ ಯಾಚಿಸುವ ಅವ
ಶ್ಯಕವಿಲ್ಲದೆ, ತನ್ನ ಮನೆಗೆ ಚಿನ್ನದ ಗೋಡೆಗಳನ್ನು ಹಾಕಿಸಿ ನಮ್ಮಂತಹರಿಗೂ
ಅಪೇಕ್ಷಿಸಿದಷ್ಟು ಧನವನ್ನು ಕೊಡುವುದಕ್ಕೆ ಸಮರ್ಥನಾಗಿರುತ್ತಿದನು.
ನಡುಹಗಲಲ್ಲಿ ಅವನು ನಮ್ಮೆಲ್ಲರ ಕಣ್ಣನ್ನೂ ಮುಚ್ಚಿ ಭ್ರಮಿಸುವಂತೆ
-----------------------------------------
ಮೂರನೆಯ ಪ್ರ ಕ ರಣ. ೧೫
ಮಾಡಿದುದರಿಂದ ಅವನ ಸಾಮರ್ಥ್ಯಕ್ಕೆ ಬೇಕಾದರೂ, ನಾವು ಪ್ರತಿ
ದಿನವೂ ನೋಡುತ್ತಲೇ ಇರುವ ಈಶ್ವರನ ಪರಮಾದ್ಗುತ ಮಹಿಮೆಯ
ಮುಂದೆ ಇದು ಪರಮಾಣುಪರ್ವತನ್ಯಾಯವಾಗಿರುವುದು. ನಮಗೆ ಕಣ್ಣು
ಗಳಿದೂ ನಾವು ಪರಮೇಶ್ವರನ. ವಿಚಿತ್ರಗಳನ್ನು ಕಂಡು. ಆನಂದಿಸಲಾರದಿ
ರುವೆವು. . ಅತಿ ತುಚ್ಛಗಳಾದ ಇಂತಹಮೋಸಕೃತ್ಯಗಳನ್ನು ಕಂಡು ಮೆಚ್ಚು
ತ್ತಿರುವೆನಲ್ಲದೆ, ಈಶ್ವರನೆಂಬ ಐಂದ್ರಜಾಲಿಕನು ಮಾಡುವ ನಿಶ್ಚಯವಾದ
ಅದ್ಭುತಕಾರ್ಯಗಳನ್ನು ನೋಡಿ ಆಶ್ಚರ್ಯಪಡದಿರುವೆವು. ಈಗ ನಾವು
ಅದ್ಭುತಗಳೆಂದು ಭಾವಿಸಿದ ಈ ಕಾರ್ಯಗಳನ್ನೇ ಭಗವಂತನು ಪ್ರತಿದಿನವೂ
ನಿನ್ನಿಂದಲೂ ನನ್ನಿಂದಲ್ಲೂ ಪ್ರಪಂಚವಲ್ಲಿರುವ ಸಕಲರಿಂದಲೂ ಮಾಡಿಸು
ತ್ತಿರುವನು. ಇಂದಿಗೆ ನಾಲ್ಕು ತಿಂಗಳಲ್ಲಿ ನಿನ್ನ ಕಿರುಮನೆಯ ಮುಂದೆ
ನಿನ್ನ ಕೈಗಳಿಂದಲೇ . ನೀನು ನಾಟಿದ ನೀರುಕಾಯಿಯ ಮರವು ಈಗಾ
ಗಲೇ ಹೂಕಾಯಿಗಳಿಂದ ತುಂಬಿ ಕಣ್ಗೊಳಿಸುತ್ತಿರುವುವಲ್ಲವೆ ? ಭಗವಂ
ತನು ಈ ಇಂದ್ರಜಾಲವನ್ನು ನಿನ್ಯ ಕೈಯಿಂದಲೂ ಮಾಡಿಸಿರುವನಲ್ಲ!
ನೀನು ಇದಕ್ಕೇಕೆ ಅಶ್ಯರ್ಯಪಡದಿರುವೆ ? ನೆಲದಲ್ಲಿ ಬಿತ್ತಿದ ಹೆಸರಕಾಳಿನ
ಗಾತ್ರದ ಕಪ್ಪಾದ ಬೀಜದಿಂದ ಹಸುರಾಗಿಯೂ, ಸುಂದರವಾಗಿಯೂ ಇರುವ
ಎಲೆಗಳೂ, ಮೃದುನಾದ ಕೊನೆಗಳೂ, ಚಿತ್ರವರ್ಣವುಳ್ಳ ಪುಷ್ಪಗಳೂ
ಮತ್ತೆ ಅನೇಕ ವೃಕ್ಷಗಳೂ ಹುಟ್ಟುವುದಕ್ಕೆ ಆಧಾರಗಳಾದ ಬೀಜಗಳನ್ನೊಳ
ಗೊಂಡ ಕಾಯಿಗಳೂ ಉಂಟಾಗುವುದು ಆಶ್ಷರ್ಯವಲ್ಲವೆ - ಇದಕ್ಕಿಂತ
ಆಶ್ಚರ್ಯಕರವನಾದುದು ಮತ್ತಾವುದಿರುವುದು? ಕೆಲವರ್ಷಗಳ ಹಿಂದೆ
ನಮ್ಮ ತೋಟದಲ್ಲಿ ನನ್ನ ಕೈಯಿ೦ದ ನಾನೇ ಒಂದು ಮಾವಿನ ಬೀಜವನ್ನು
ನೆಟ್ಟೆನು; ಈಗ ಅದ್ದು ದೊಡ್ಡ ಗಿಡವಾಗಿ ಪ್ರತಿ ಸಂವತ್ಸರವೂ ಮಿತಿಯಿಲ್ಲ
ದಷ್ಟು ಫಲಗಳನ್ನು ಕೊಡುತ್ತಿರುವುದು. ಸರ್ವೇಶ್ವರನಾದ ಐಂದ್ರಜಾ
ಲಿಕನು ತಾನು ಸ್ವಲ್ಪವಾದರೂ ಮುಟ್ಟದೆ ನಮ್ಮ ಕ್ರೈಯಿಂದಲೇ ಈ ಅದ್ಬುತ
ವನ್ನು ಮಾಡಿಸಿರುವುದಕ್ಕೆ ಎಷ್ಟು ಆಶ್ವರ್ಯಪಟ್ಟರೂ ಸಾಲದು. ಪ್ರಪಂಚ
ದಲ್ಲಿ ಕೆಲವು ಭತ್ತದ ಕಾಳುಗಳನ್ನು ಗದ್ದೆಯಲ್ಲಿ ನಾಟಿ, ಕೆಲ
ತಿಂಗಳೊಳಗಾಗಿ ಕೋಟ್ಯಂಶದಷ್ಟು ಹೆಚ್ಚಾದ ಫಲವನ್ನು ಹೊಂದುತ್ತಿರು
ವರು. ಎತ್ತೆತ್ತ ನೋಡಿದರೂ ನಮಗೆ ನೇತ್ರೋತ್ಸವವನ್ನುಂಟುಮಾಡು
--------------------------------------
೧೬ ಚಂದ್ರಮತಿ.
ತ್ತಿರುವ. ವೃಕ್ಷಗಳು, ಸಸ್ಯಗಳು ಮೊದಲಾದುವೆಲ್ಲವೂ ಹೀಗೆಯೇ ಅತ್ಯ
ದ್ಬುತಜನಕಗಳಾಗಿರುವುವು. _ ಈಗ ನಮ್ಮಿಂದ ಧನವನ್ನು ತೆಗೆದುಕೊಂಡು
ಹೋದ ಐಂದ್ರಜಾಲಿಕನಂತೆ ಧನಲಾಭವನ್ನಪೇಕ್ಷಿಸದೆಯೇ ಭಗವಂತನೆಂಬ
ಐಂದ್ರಜಾಲಿಕನು ತಾನು ಮಾಡಿರುವ ವಸ್ತುಗಳನ್ಶೆಲ್ಲ ಸ್ವೇಚ್ಛೆಯಾಗಿ ಅನು
ಭವಿಸಲೆಂಬ ಅಭಿಪ್ರಾಯದಿಂದ ನಮಗೆ ಕೊಟ್ಟುಬಿಟ್ಟರುನನು. ಇಂತಹ
ದಯಾಪರನ ವಿಷಯದಲ್ಲಿ ನಾವು ಎಷ್ಟು ಕೃತಜ್ಞತೆಯೂ ಭಕ್ತಿಯೂ
ಉಳ್ಳವರಾಗಿರಬೇಕು!
ಚಂದ್ರ---ತಾವು ಭಗವಂತನ ದಿವ್ಯಮಹಿಮೆಯನ್ನು ವಿವರಿಸಿ ಹೇಳಿದ
ಹಾಗೆಲ್ಲ ನನ್ನ ಮನಸ್ಸಿಗೆ ಆಶ್ಬರ್ಯವುಂಟಾಗಿ ಸಂತೋಷವನ್ನು ತಡೆಯ
ಲಾರದವಳಾಗಿರುವೆನು. . ನಾನು ಪ್ರತಿದಿನವೂ ನಿದ್ರೆಯಿಂದೆಚ್ಚೆತ್ತುದು
ಮೊದಲ್ಗೊಂಡು ನಿದ್ರಿಸುವವರಿಗೂ ಭಗವಂತನ ಸೃಷ್ಟಿಯನ್ಶೇ ನೋಡುತ್ತಿ
ದ್ದರೂ ಕುರುಡಿಯಂತೆ ಅವುಗಳಲ್ಲಿರುವ ವಿಚಿತ್ರವನ್ನು ಕಂಡುಹಿಡಿಯ
ಲಾರದವಳಾಗಿರುವೆನು. ನಿಮ್ಮ ಮಾತುಗಳನ್ನು ಕೇಳಿದುದರಿಂದ ಪರಮೇ
ಶ್ವರನ ದಿವ್ಯಗುಣಾದಿಗಳನ್ನು ತಿಳಿದು ಸಂತೋಷಸಡಬೇಕೆಂಬ ಕುತೂಹಲವು
ಅಷ್ಟಕ್ಕಷ್ಟೆ ಹೆಚ್ಚುತ್ತಿರುವುದು. ತಾವು ನನ್ನಲ್ಲಿ ಅನುಗ್ರಹವಿಟ್ಟು ನನ್ನ
ಬಯಕೆಯನ್ನು ಸಫಲಮಾಡಿ ನನ್ನನ್ನು ಧನ್ಯಳನ್ನಾಗಿ ಮಾಡಬೇಕು.
ಗುರು ---ಆತನ ಗುಣಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವು
ದಕ್ಕೆ ಮನುಷ್ಯಮಾತ್ರವಾದವನಿಗಾವನಿಗೂ ಸಾಧ್ಯವಲ್ಲ. ಆದರೆ ಕೆಲವು
ಮಂದಿ ಮುಹನೀಯರಿಗೆ ಮಾತ್ರ ಹೆಚ್ಚಾಗಿ ತಿಳಿದಿರುವುದು. ನೀನು ನನ್ನನ್ನು
ಬಹಳವಾಗಿ. ಬೇಡಿಕೊಳ್ಳುವೆಯಾದುದರಿಂದ, ನನಗೆ ತಿಳಿದಿರುವಷ್ಟರಲ್ಲಿ
ಸ್ವಲ್ಪ ಭಾಗವನ್ನು ನಿನ್ನ ಮನಸ್ಸಿಗೆ ಹಿಡಿಯುವಂತೆ ವಿವರಿಸುವೆನು. ಅತನ
ದಿವ್ಯಗುಣಗಳಲ್ಲಿ ನಾವು ತಿಳಿದುಕೊಳ್ಳಬಹುದಾಗಿರುವ ಸ್ವಲ್ಪಭಾಗದಿಂದಲೇ
ನಮಗುಂಟಾಗುವ ಅನಂದವು ಅಪರಿಮಿತವಾಗಿರುವುದು. _ ಭೂಮಿಯ
ನ್ನೊಂದನ್ನೇ ಅಲ್ಲದೆ ಸೂರ್ಯಚಂದ್ರಾದ್ಯನೇಕಗಳಾದ _ ಗೋಳಗಳನ್ನೂ
ನಿರ್ಮಿಸಿರುವ ಆ ಮಹಾಪುರುಷನಿಗೆ . ಶರೀರವೇ . ಇದ್ದಪಕ್ಷದಲ್ಲಿ . ಆ
ರೂಪವು ಬ್ರಹ್ಮಾಂಡವಾಗಿ ನಮ್ಮ ಕಣ್ಣುಗಳಿಗೆ ಕಾಣಿಸುತ್ತಲೇ ಇದ್ದಿತು.
----------------------------------------
ಮೂ ರ ನೆಯ ಪ್ರ ಕ ರಣ. ೧೭
ಹಾಗೆ ಕಾಣಿಸುತ್ತಿಲ್ಲವಾದುದರಿಂದ ಆತನು ರೂಪವಿಲ್ಲದವನೆಂದೇ ನಾವು
ಊಹಿಸಬೇಕು. ಅಣುಮೊದಲ್ಗೊಂಡು ಬ್ರಹ್ಮಾಂಡದವರೆಗಿರುವ ಸಮಸ್ತ
ಪದಾರ್ಥಗಳೂ, ಅನೇಕಗಳಾದ ಸೂರ್ಯಚಂದ್ರಾದಿಗೋಳಗಳೂ ಪರಸ್ಪರ
ಸಂಬಂಧವನ್ನು ಹೊಂದಿರುವುದರಿಂದಲೂ, ಪ್ರತಿ ಒಂದು ವಸ್ತುವೂ ಆವುದೊ
ಒಂದು ಪ್ರಯೋಜನವನ್ನು ಉದ್ದೇಶಿಸಿಯೇ ಆಲೋಚನೆಮಾಡಿ ನಿರ್ಮಿತವಾಗಿ
ರುವಂತೆ ತೋರುತ್ತಿರುವುದರಿಂದಲೂ, ಸಮಸ್ತ ಸೃಷ್ಟಿಯನ್ನೂ ಮಾಡಿದವ
ನೊಬ್ಬನೇ ಎಂಬುದೂ, ಆತನು ಆತ್ಮಸ್ವರೂಪನೆಂಬುದೂ ಸ್ಪಷ್ಟವಾಗುವುದು.
ರೂಪವಿಲ್ಲದ ವಸ್ತುವು ಅವಾಗಲೂ ನಾಶವನ್ನು ಹೊಂದದಾದುದರಿಂದ
ಅತನು ನಾಶರಹಿತನು , ಆದುದರಿಂದಲೇ ಶಾಶ್ವತನೆನಿಸಿಕೊಂಡನು. ಸೃಷ್ಟಿಯ
ಧರ್ಮಗಳು ಸ್ಪಷ್ಟಿ ಕರ್ತನಿಗೆ ತಿಳಿಯದಿರವಾದುದರಿಂದ ಆತನು ಸರ್ವಜ್ಞ
ನೆಂದೂ, ಎಲ್ಲೆಡೆಯಲ್ಲಿಯೂ ಒಬ್ಬನೇ ಇದ್ದು ನಡೆಯಿಸುವಂತೆ ಸೃಷ್ಟಿ
ಯೆಲ್ಲವೂ ಎಲ್ಲೆಲ್ಲಿಯೂ ಕ್ರಮವಾಗಿ ನಡೆಯುತ್ತಿರುವುದರಿಂದ -- ಸರ್ವಶಕ್ತ
ನೆಂದೂ, ಸುಲಭವಾಗಿ ತಿಳಿದುಕೊಳ್ಳಬಹುದು. ಸ್ಪಷ್ಟಿಯಲ್ಲಿರುವ ಆವ
ವಸ್ತುವನ್ನು ನೋಡಿದರೂ, ಸೃಷ್ಟಿಕರ್ತನ ಬುದ್ಧಿಯೂ ತಿಳಿವೂ ಪ್ರಕಾಶಿಸು
ತ್ತಿರುವುವಾದುದರಿಂದ, ಅತನು ಅಪರಿಮಿತಬುದ್ಧಿಯುಳ್ಳವನೆಂದೂ, ಜ್ಞಾನ
ಸ್ವರೂಪನೆಂದೂ, ತಿಳಿದುಕೊಳ್ಳಬಹುದು. ಸೃಷ್ಟಿಯಲ್ಲಿರುವ ಸಮಸ್ತ ಜೀವ
ರಾಶಿಗಳೂ ಸಾಧಾರಣವಾಗಿ ಸೌಖ್ಯವನ್ನೇ ಅನುಭವಿಸುತ್ತಿರುವುದರಿಂದಲೂ,
ಎಂದಾದರೂ. ದುಃಖವುಂಟಾದಪಕ್ಕದಲ್ಲಿ ಅದು ನಮ್ಮ ಲೋಪದಿಂದಲೋ
ಇತರರ ದೋಷದಿಂದಲೋ ಉಂಟಾಗುವುದಾದುದರಿಂದಲೂ, ಸೃಷ್ಟಿಕರ್ತನು
ಜೀವಕಾರುಣ್ಯವುಳ್ಳವನೆಂದೂ, ದಯಾಸ್ವರೂಪನಂದೂ ವಿಶದವಾಗಿ ತಿಳಿ
ಯುವುದು. ಸ್ವಭಾವವಾಗಿ ಒಂದು ಜಂತುವಿಗೆ ದುಃಖವೂ, ಒಂದು
ಜಂತುವಿಗೆ ಸಂತೋಷವೂ ಉಂಟಾಗಲಾರದಾದುದರಿಂದ ಪರಮೇಶ್ವರನು
ಪಕ್ಷ ಪಾತವಿಲ್ಲದವನೆಂದೂ ವ್ಯಕ್ತವಾಗುವುದು. ಲೋಕದಲ್ಲಿ ಆರಾದರೂ
ದುಷ್ಕಾರ್ಯಗಳನ್ನು ಮಾಡಿದರೆ ಅದಕ್ಕೆ ಭೀತಿಯೋ, ಶಕ್ತಿಹೀನತೆಯೋ,
ಭ್ರಮೆಯೋ, ಪ್ರಮಾದವೋ, ಅವುದೋ ಕಾರಣವಾಗಿರುವುದು. ಭಗವಂತ
ನಲ್ಲಿ ಅಂತಹ ಲೋಪವಾವುದೂ ಇಲ್ಲವಾದುದರಿಂದ, ಆತನಲ್ಲಿ ನೀಚಗುಣ
ಗಳಾವುವೂ ಇಲ್ಲ. ಆದುದರಿಂದ ಆತನು ಪರಿಶುದ್ಧನೆಂದೂ, ಸಮಸ್ತ ಸದ್ಗುಣ
---------------------------------------------
೧೮ ಚ೦ದ್ರಮತಿ
ಪರಿಪೂರ್ಣನೆಂದೂ ಕರತಲಾಮಲಕದಂತೆ ವಿಶದವಾಗುವುದು. ನಮ್ಮ
ಸಮಸ್ತಾಂಗಗಳೂ ಅವುಗಳ ವ್ಯಾಪಾರವೂ, ನಮ್ಮ ಸುತ್ತಲಿರುವ ಸಕಲ
ವಸ್ತುಗಳೂ .ನಮ್ಮ ಸೌಖ್ಯಕ್ಕೇ ಸಹಾಯಕಗಳಾಗಿರುವುವು. ಈಶ್ವರನು
ನಮಗಿಷ್ಟು ಮೇಲ್ಮೆಯನ್ನುಂಟುಮಾಡುವುದಕ್ಕೆ ಅತನಿಗೆ ನನ್ಮು ಮೇಲಿರುವ
ಪ್ರೇಮವೇ ಕಾರಣವಲ್ಲದೆ ಮತ್ತೆ ಬೇರೆಯಲ್ಲವೆಂದು ಸ್ಪಷ್ಟವಾಗಿ ತೋರು
ವುದು. ಹೀಗೆ ನಮ್ಮಮೇಲೆ ಅವ್ಯಾಜನಾಗಿರುವ ಪ್ರೀತಿಯಿಂದಲೇ ನಮ
ಗಿಷ್ಟು ಮಹೋಪಕಾರಗಳನ್ನು . ಮಾಡುತ್ತಿರುವ ಆ ಪರಮೇಶ್ವರನನ್ನು
ನಾವು ಯಾವಾಗಲೂ ನಿರ್ಮಲಹೃದಯದಿಂದ ಅರಾಧಿಸುತ್ತಿರಬೇಕು.
ಚಂದ್ರ_--ಸಾಧಾರಣವಾಗಿ ಸಮಸ್ತ ಜೀವರಾಶಿಗಳೂ ಸೌಖ್ಯವನ್ನೇ
ಹೊಂದುತ್ತಿರುವುನೆಂದು ಈಗ ತಾವು ಹೇಳಿದಿರಲ್ಲವೆ ? ಕೆಲವರು ಸಾಧಾ
ರಣನಾಗಿ ನಿರಂತರವೂ ರೋಗಕ್ಕೆಡೆಯಾಗಿ ದುಃಖವನ್ಯೇ ಹೊಂದುತ್ತಿಲ್ಲವೆ ?
ಗುರು---ರೋಗಗಳ್ಳೂ . ಸ್ವಾಭಾವಿಕನಾಗಿ . ಬರತಕ್ಕುವುಗಳಲ್ಲ.
ನಾವು ತಿನ್ನುವ ಅಹಾರಪದಾರ್ಥಗಳು . ಒಳ್ಳೆಯವಾಗಿಲ್ಲದುದರಿಂದಲೋ,
ಬಚ್ಚಲು ಮೊದಲಾದುವುಗಳ ದುರ್ಗಂಧದಿಂದ ಗಾಳಿಯು ಕೆಟ್ಟುಹೋಗಿರು
ವುದರಿಂದಲೋ ಇಂತಹ ಮತ್ತೆ ಬೇರೆ. ಕಾರಣಗಳಿಂದಲೊ ರೋಗಗಳು
ಸಾಧಾರಣವಾಗಿ ಸಂಭವಿಸುವುವು. . ಅವು ಯಾವಾಗಲ್ಲೂ ಸ್ವದೋಷ
ದಿಂದಲೆಯೋ, ಅನ್ಯರ ದೋಷದಿಂದಲೆಯೋ ನನ್ಮುನ್ನು ಅಶ್ರಯಿಸುವ್ರವು.
ಈ ವಿಷಯದಲ್ಲಿ ಮುಂದೆ ಸ್ವಲ್ಪಸ್ವಲ್ಪವಾಗಿ ನಿನಗೆ ವಿವರಿಸಿ ತಿಳಿಸುವೆನು.
ಚಂದ್ರ---ತಮ್ಮ ಅನುಗ್ರಹದಿಂದ ಭಗವಂತನ ದಿವ್ಯಚರಿತ್ರೆಯನ್ನು
ಸ್ವಲ್ಫ ಮಾತ್ರ ತಿಳಿದುಕೊಂಡರೂ. ನನ್ನ ಮನಸ್ಸಿಗಿನ್ನೂ ತೃಪ್ತಿಯುಂಟಾಗ
ದಿರುವುದು. ಅತನ ವಿಷಯದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೋ ಆ
ಕ್ರಮವನ್ನೂ ತಿಳಿಸಿ ನನ್ಸ್ರನ್ನು ಕೃತಾರ್ಥೆಯನ್ಮಾಗಿ ಮಾಡಬೇಕು.
ಗುರು---ಈಗ ನಾನು ಹೇಳಿದುದೆಲ್ಲವೂ ನಿನ್ನ ಮನಸ್ಸಿನಲ್ಲಿ ಚೆನ್ನಾಗಿ
ನಾಟಿದ್ದರೆ ಇಂದಿಗೆ. ಇಷ್ಟೇ ಸಾಕು. ಮತ್ತೊಂದುಬಾರಿ ಈಗ ಕೇಳಿದ
ಪ್ರಶ್ನೆಗೆ ಉತ್ತರವನ್ನು ಕೊಡುವುದಕ್ಕೆ ಪ್ರಯತ್ನಿಸುವೆನು.
------------------------------------
ನಾಲ್ಕನೆಯ ಪ್ರಕರಣ,
ಒ೦ದುದಿನ ಚಂದ್ರಮತಿಯು ಪಾಠಶಾಲೆಗೆ ಹೊತ್ತುಮೀರಿ ಬಂದು,
ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ತೋರದೆ. ಖಿನ್ನ
ಳಾಗಿ ನೆಲವನ್ನು ನಿಟ್ಟಿಸುತ್ತೆ ಕುಳಿತಿದಳು. ವಿದ್ಯಾಸಮುದ್ರನು ಅದನ್ನು
ಕಂಡು ಮಕ್ಕಳಿಗೆ ಮನಸ್ಪೈರ್ಯವಿಲ್ಲದಿರುವಾಗ ಓದಿಸುವುದರಿಂದ
ಪ್ರಯೋಜನನಿಲ್ಲವೆಂದು ಅರಿತವನಾದುದರಿಂದ ಅನಳನ್ನು ನಿರ್ಬಂಧಪಡಿ
ಸದೆ, ಅವಳ ಮನೋವ್ಯಥೆಯ ಕಾರಣನ್ನರಿತವನಾಗಿದ್ದರೂ ಆ ವಿಷಯ
ವನ್ನವಳ ಬಾಯಿಂದಲೇ ಹೊರಡಿಸಿ ಸಂದರ್ಭಾನುಸಾರವಾಗಿ ಮತ್ತೆ ಕೆಲ
ನೂತನವಿಷಯಗಳನ್ನು ತಿಳಿಸಬೇಕೆಂಬ ಅಭಿಲಾಷೆಯಿಂದ ಇಂತೆಂದನು ---
ಗುರು :- ಚಂದ್ರಮತೀ! ನೀನು ಯಾವಾಗಲೂ ಕಾಲಕ್ಕೆ ಸರಿಯಾಗಿ
ತಪ್ಪದೆ. ಬರುತ್ತಿದ್ದೆ. ಎಷ್ಟು ಕೆಲಸವಿದ್ದರೂ ನೀನು ಇಂದಿನವರೆಗೂ,
ಯಾವಾಗಲೂ ಕಾಲವನ್ನತಿಕ್ರಮಿಸಿ ಬಂದವಳಲ್ಲ. ಇಂತಹ ನೀನು
ಈದಿನ ಕಾಲವನ್ನು ಮೀರಿ ಆಲಸ್ಯವಾಗಿ ಬರುವುದಕ್ಕೆ ಕಾರಣವೇನು ?
ಚಂದ್ರ--ನನ್ನನ್ನು ಬಾಲ್ಯದಿಂದಲೂ ಮೊನ್ನೆ ಮೊನ್ನೆಯವರೆಗೂ
ಎತ್ತಿಕೊಂಡು. ಆಡಿಸುತ್ತಿದ್ದ ವೃದ್ಬಳಾದ ಒಬ್ಬ ಪರಿಚಾರಿಣಿಯು ರಾತ್ರಿ
ಆಕಸ್ಮಿಕವಾಗಿ ಮೃತಳಾದಳು. ಅವಳನ್ನು ಹಾವು ಕಚ್ಚಿತಂತೆ. ನಮ್ಮ
ತಾಯಿಯು ಅತ್ತೆಯಮನೆಗೆ ಬಂದಾಗ ಅವಳ ತವರ್ಮನೆಯವರು ಆ ದಾಸಿ
ಯನ್ನು ಬಳುವಳಿಯೊಡನೆ ಇಲ್ಲಿಗೆ ಕಳುಹಿಸಿದರಂತೆ. ಅವಳು ನನ್ನನ್ನು
ತನ್ಯ ಪಂಚಪ್ರಾಣಗಳೊಳಗೆ ಒಂದು ಪ್ರಾಣವೆಂದಿಣಿಸಿ ನೋಡಿಕೊಳ್ಳು
ತ್ತಿದ್ದಳು. ಇಷ್ಟು ಪ್ರೇಮವುಳ್ಳ ಸೇವಕಿಯು ಮೃತಳಾದಳೆಂಬ ವ್ಯಥೆ
ಯಿಂದ. ನಾನು ಕಾಲಕ್ಕೆ ಸರಿಯಾಗಿ ಬಾರದೆ ತಪ್ಪಬೇಕಾಯಿತು. ಈ
ಅಪರಾಧವನ್ನು ದಯವಿಟ್ಟು ಮನ್ನಿಸಿರಿ. ಈಗಲೂ ನನ್ನ ಮನಸ್ಸು ಅಲ್ಲಿಯೇ
ನಾಟಿರುವುದು.
------------------------------------------
೨೦ ಚಂದ್ರಮತಿ
ಗುರು.--ಈಗ ನೀನು ಮಾಡಿದುದರಲ್ಲಿ ಯಾವದೋಷವೂ ಇಲ್ಲ.
ನಂಬುಗೆಯಾಗಿ ಕೆಲಸಮಾಡುತ್ತಿದ್ದ ದಾಸಿಯ ವಿಷಯದಲ್ಲಿ ನಿನಗಿಷ್ಟು
ಕನಿಕರವುಂಟಾಗಿರುವುದನ್ನು ಕಂಡು ನನಗೂ ಬಹು ಸಂತೋಷವಾಯಿತು.
ಅವಳು ನೆನ್ನೆಯರಾತ್ರಿ ಮೃತಳಾದಳೆಂದು ಹೇಳುವೆಯಲ್ಲನೆ ? ಸ್ವಲ್ಫ
ಹೊತ್ತಿಗೆಗೆ ಮೊದಲು ನಾನು ನಿಮ್ಮ ತಂದೆಯವರ ದರ್ಶನನನ್ನು ಮಾಡಿ
ಕೊಂಡು ಇಲ್ಲಿಗೆ ಬರುತ್ತಿರುವಾಗ ಮಾರ್ಗದಲ್ಲಿ ಹಸುನಿನ ಕೊಟ್ಟಿಗೆಯ
ಬಳಿಯಲ್ಲಿ ಅವಳನ್ನು ನೋಡಿದ್ದೆನು. ನಾನು ಕ್ಷಣಕಾಲಕ್ಕೆ ಮೊದಲು `
ನೋಡಿದ್ದುದು, ಮೊದಲು ನಿನ್ನೊಡನೆ ಪ್ರತಿದಿನವೂ . ಬರುತ್ತಿದ್ದಾಗ `
ನೋಡುತ್ತಿದ ಕಣ್ಣು, ಮುಖ, ತಲೆ ಮೊದಲಾದ ಸಕಲಾಂಗಗಳೂ ಇದ್ದ
ದೇಹವೇ ಅಹುದೆನ್ನುವುದಕ್ಕೆ ಸಂದೇಹವಿಲ್ಲ. ಈಗ ನೀನು ಅವಳು ಮೃತ
ಳಾದಳೆಂದು ಹೇಗೆ ಹೇಳುವೆ ?
ಚಂದ್ರ---ಈಗ ಅವಳ ಶರೀರವು ಮಾತ್ರ ಈ ಲೋಕದಲ್ಲಿರುವುದು
ಅದೂ ಇನ್ನೆರಡು ಗಳಿಗೆಯೊಳಗಾಗಿ ಕಾಣಿಸದೆ ಹೋಗುವುದು.
ಅದರೊಳಗಿದ್ದ ಜೀವಾತ್ಮವು ಹಾರಿಹೋಯಿತು.
ಗುರು--~-ಈ ವಿಷಯವು ನಿನಗೆ ತಿಳಿದಿರುವುದೋ ಇಲ್ಲವೋ ಎಂಬು
ದನ್ನರಿಯಬೇಕೆಂದೇ ಈ. ಪ್ರಶ್ನೆಯನ್ನು ಹಾಕಿದೆನು. . ನಮ್ಮ ದೇಹವೂ
ಜೀವಾತ್ಮವೂ ಬೇರೆಬೇರೆಂಬುದನ್ನೂ, ದೇಹವು ಯಾವ ಕ್ಲಣದಲ್ಲಿಯೋ
ನಶಿಸಿಹೋಗುತಕ್ಕುದೆಂಬುದನ್ನೂ, ನೀನು ತಿಳಿದುಕೊಂಡಿರುವುದರಿಂದ ನನಗೆ
ಬಹುಸಂತೋಷವುಂಟಾಯಿತು. ನಮ್ಮ ಆತ್ಮವು ಶರೀರದೊಡನೆಯೇ ನಾಶ
ವನ್ನು ಹೊಂದದೆ ಪರಲೋಕಕ್ಕೆ ಹೋಗುವುದೆಂದು ನಿನಗೆ ತಿಳಿದಿರುವುದಾದುದ
ರಿಂದ ಈ ವಿಷಯವನ್ನು ನಿರ್ಧರಿಸುವುದಕ್ಕೋಸುಗ ನಾನು ಶ್ರಮಪಟ್ಟು
ನಿದರ್ಶನಗಳನ್ನು ತೋರಿಸಬೇಕಾದವಶ್ಯಕತೆಯಿಲ್ಲವಷ್ಟೆ ? ಸಕಲ ಚರಾ
ಚರಕರ್ತನಾದ ಪರಮೇಶ್ವರನೊಬ್ಬನೇ ಶಾಶ್ವತನಾದವನೆಂದು ಮೊದಲು
ನಾನು ತಿಳಿಸಿರುವೆನಲ್ಲವೆ ? ಈ ಎರಡು ವಿಷಯಗಳೂ ತಿಳಿದ ತರುವಾಯ
ನಿನಗೆ.. ತಿಳಿಸಬೇಕಾದ ವಿಷಯಗಳು ಇನ್ನೂ ಹಲವಿರುವುವು. . ನಾವು
ಈ ಲೋಕದಲ್ಲಿ ನೂರುವರ್ಷಗಳು ಬದುಕಿದರೂ ಅದು ಬಹುಸ್ವಲ್ಪಕಾಲವೇ
-------------------------------------------
ನಾಲ್ಕನೆಯ ಪ್ರಕರಣ. ೨೧
ಸರಿ. ನಾವು ಪರಲೋಕದಲ್ಲಿರಬೇಕಾದ ಕಾಲವಾದರೋ ಪರಿಮಿತಿಯಿಲ್ಲದು
ದಾಗಿರುವುದು. . ನಾವು ಇರುವಂತೆಯೇ ಇದು ಯಾವಾಗಲೋ ಈ ಲೋಕ
ವನ್ನು ಬಿಟ್ಟು ಪರಲೋಕವನ್ನು ಸೇರತಕ್ಕವರಾಗಿರುವೆವು. ಪರಲೋಕ
ದಲ್ಲಿ ನಿತ್ಯಸುಖವನ್ನುನುಭವಿಸಬೇಕಾದರೆ ಧರ್ಮವೊಂದೇ ನಮಗೆ ಸಾಧಕ
ವಾದುದಲ್ಲದೆ ಮತ್ತೊಂದಿಲ್ಲವು. ನಾವು ಶಾಶ್ವತವಾದ ಪರಲೋಕಸುಖ
ವನ್ನು ಅಪೇಕ್ಷಿಸುವುದಾದರೆ ಈ ಲೋಕದಲ್ಲಿರುವ ತುಚ್ಬಗಳಾದ ನಿಮಿಷ
ಸೌಖ್ಯಗಳಿಗೆ ಆಶೆಪಡದೆ ಎಂತಹ ಕಷ್ಟ್ರಗಳು ಸಂಭವಿಸಿದರೂ ಸೈರಿಸಿಕೊಂಡು
ಧರ್ಮಮಾರ್ಗವನ್ತನುಸರಿಸಿ ನಡೆಯಬೇಕು.
ಚಂದ್ರ--ನಮಗೆ ಶಾಶ್ವತಸುಖವುಂಟಾಗುವಂತೆ ಸಹಾಯಕಗಳಾ
ಗುವ ಧರ್ಮಗಳಾವುವೋ ಅವುಗಳನ್ನಾಚರಿಸುವ ಬಗೆಹೇಗೋ ಇವುಗಳ
ನ್ನೆಲ್ಲಾ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.
ಗುರು---ಧರ್ಮಸ್ವರೂಪನಾದ ಭಗವಂತನು ನಮಗೆ ಹೀಗೆಯೇ
ನಡೆದುಕೊಳ್ಳಬೇಕೆಂದು ಉದ್ದೇಶಿಸಿ ವಿಧಿಸಿರುವ ಆಜ್ಞೆಗಳೇ ಧರ್ಮಗಳು.
ಅಂತಹ . ಧರ್ಮಗಳನ್ನು ಅನುಸರಿಸುವುದರಿಂದ ಸೌಖ್ಯವೂ, ಮೀರುವುದ
ರಿಂದ ದುಃಖವೂ ಸಂಭವಿಸುವುವು. ನಾವು ಅನುಸರಿಸಬೇಕಾದ ಧರ್ಮ
ಗಳೆಲ್ಲವೂ ಬಗೆಯಾಗಿರುವುವೆಂದು ಹೇಳಬಹುದು. ಮೊದಲನೆಯ
ಬಗೆಯವು--ಸ್ಪಷ್ಟಿಕರ್ತನಾದ ಪರಮೇಶ್ವರನ ವಿಷಯದಲ್ಲಿ ನಡೆದುಕೊಳ್ಳ
ಬೇಕಾದ ಕ್ರಮಗಳು. ಎರಡನೆಯಬಗೆಯವು--ನಮ್ಮ ದೇಹರಕ್ಷಣಾದಿ
ಗಳಿಗೋಸುಗ. ಸ್ವವಿಷಯವಾಗಿ ನಡೆದುಕೊಳ್ಳಬೇಕಾದ ಕ್ರಮಗಳು.
ಮೂರನೆಯಬಗೆಯವು -- ಭಗವತ್ಕುಟುಂಬದಲ್ಲಿ ನಮಗೆ ಸಹಜಾತಸಮಾನ
ರಾಗಿರುವ ಮನುಜರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು.
ನಾಲ್ದನೆಯಬಗೆಯವು--ಜೀವದಯಾಪರನಾದ ಈಶ್ವರನಿಂದ ನಿರ್ಮಿತ
ಗಳಾದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳಬೇಕಾದ
ಕ್ರಮಗಳು.
ಚಂದ್ರ---ಮೊದಲು ಭಗವಂತನ ವಿಷಯದಲ್ಲಿ ನಾವು ನಡೆದುಕೊಳ್ಳ
------------------------------------------
೨೨ ಚಂದ್ರಮತಿ.
ಬೇಕಾದ. ಕ್ರಮಗಳನ್ನು ತಿಳಿಸಿ, ತರುವಾಯ ಉಳಿದ ಧರ್ಮಗಳನ್ನೂ
ನನಗೆ ಕ್ರಮವಾಗಿ ತಿಳಿಸಬೇಕು.
ಗುರು---ಪರಮದಯಾಪರನಾದ ಈಶ್ವರನು ತನ್ಕ್ನ ಕುಟುಂಬವಾದ
ಮನುಷ್ಯಕೋಟಿಯು ವಾಸಮಾಡಲೋಸುಗ ಭೂಮಿಯೆಂಬ ದಿವ್ಯವಾದ
ಮನೆಯನ್ನು ನಿರ್ಮಿಸಿ ಅವರ ಸುಖಕ್ಕೆ ಬೇಕಾಗುವ ಸಕಲಪದಾರ್ಧ
ಗಳನ್ನೂ. ಅಣಿಮಾಡಿರುವನು. ಅಂಗಡಿಯಲ್ಲಿರುವುವುಗಳನ್ನು ಕೊಂಡು
ಕೊಳ್ಳುವಂತೆಯೇ, ನಾವು ಸಸ್ಯಗಳಿಂದಲೂ, ಫಲವೃಕ್ಷಗಳಿಂದಲೂ ಭೋಜನ
ಪದಾರ್ಥಗಳನ್ನು ಪಡೆಯುತ್ತಿರುವೆವು; ನಮಗೆ ಸೂರ್ಯಬಿಂಬವು ಎಣ್ಣೆಯಿ
ಲ್ಲದೇ ಉರಿಯತಕ್ಕ ದೊಡ್ಡ ಬೆಳಕಾಗಿರುವುದು; ನದಿಯೇ ಮೊದಲಾದು
ವುಗಳು ನೀರನ್ನು ತುಂಬಿ ಇಟ್ಟುಕೊಳ್ಳುವಂತಹ ದೊಡ್ಡ. ಹರವಿಗಳಾಗಿರು
ವುವು. . ನಮ್ಮ ಸುತ್ತಲಿರುವ ಸಮಸ್ತಜಂತುಗಳೂ, ಲತಾವೃಕ್ಷಾದಿಗಳೂ,
ಲೋಹಗಳೂ ಸರ್ವಪ್ರಕಾರದಲ್ಲಿಯೂ ನಮಗೆ ಉಪಯುಕ್ತಗಳಾಗಿರು
ವುವು. ವಾಯುವು, ಬೆವರೇರಿರುವಾಗ ನಮಗೆ ತಣ್ಣ ಗಾಗುವಂತೆ ಬೀಸುತ್ತೆ
ಸಂಬಳವಿಲ್ಲದ ಪರಿಚಾರಕವಾಗಿರುವುದು. ಮಧುರಧ್ವನಿಗಳನ್ನು ಮಾಡುವ
ಕೋಗಿಲೆ ಮೊದಲಾದ ಪಕ್ಷಿಗಳು ಸಂಗೀತಪಾಠಕರಂತೆ ಕಿವಿಗಳಿಗೆ ಸಂತೊ
ಷವನ್ನುಂಟುಮಾಡುತ್ತಿರುವುವು. _ ಇವೆಲ್ಲವೂ . ಭಗವಂತನ ಅನುಗ್ರಹ
ದಿಂದಲೇ ಲಭಿಸಿರುವುವಲ್ಲದೆ ಮತ್ತೆ ಬೇರೆಯಲ್ಲ. ಅದುದರಿಂದ ಇಷ್ಟು
ಮಹೋಪಕಾರವನ್ನು . ಮಾಡಿರುವ ಅ ಮಹಾನುಭಾವನ ವಿಷಯದಲ್ಲಿ
ನಾವೆಷ್ಟು ಕೃತಜ್ಞರಾಗಿ ಆತನನ್ನು ಸ್ಮರಿಸಿದರೂ ಸಾಲದಿರುವುದು. ಸದ್ಗುಣ
ವುಳ್ಳವರನ್ನು ಪ್ರೀತಿಸುವುದೂ ದುರ್ಗುಣವುಳ್ಳವರನ್ನು ದ್ವೇಷಿಸುವುದೂ
ಲೋಕದಲ್ಲಿರುವ ಸಕಲರಿಗೂ ಸಹಜಗುಣಗಳಾಗಿರುವುವು. ಸಮಸ್ತ
ಸದ್ಗುಣಗಳಿಗೂ ನೆಲೆಯಾಗಿದ್ದು ನಮ್ಮನ್ನು ನಿತ್ಯವೂ ಪುತ್ರವಾತ್ಸಲ್ಯದಿಂದ
ಕಾಪಾಡುತ್ತಿರುವ ಅ ಕರುಣಾಕರನನ್ನು ನಾವು ಪ್ರೀತಿಸಬೇಕೆಂದು ಮತ್ತೆ
ಹೇಳತಕ್ಕ ಅವಶ್ಯಕವಿಲ್ಲ. ನಮ್ಮ ಜನನಕ್ಕೆ ಕಾರಣಭೂತರಾದ ತಾಯ್ತಂದೆ
ಗಳ ಆಜ್ಞೆಗೂ ನಮ್ಮನ್ನು ಸರಿಪಾಲಿಸುತ್ತೆ. ನ್ಯಾಯವನ್ನು ತೀರಿಸುವ
ರಾಜನ ಆಜ್ಞೆಗೂ ಅಧೀನರಾಗಿ ನಡೆದು ಕೊಳ್ಳ ಬೇಕೆಂಬುದನ್ನು ನೀನೇ ಬಲ್ಲೆ
ಯಲ್ಲವೆ ? ಹೀಗಿರುವಾಗ ನಮ್ಮೆಲ್ಲರ ಜನನಕ್ಕೂ ಅದಿಕಾರಣನಾಗಿ ನಮ್ಮ
-----------------------------------------
ನಾಲ್ಕನೆಯ ಪ್ರ ಕ ರಣ. ೨೩
ಪುಣ್ಯಪಾಪಗಳನ್ನು ಪರಿಶೀಲಿಸಿ ನ್ಯಾಯವನ್ನು ನಿರ್ಣಯಿಸಿ ಸುಖವನ್ನುಂಟು
ಮಾಡತಕ್ಕ ಆ ಮೋಕ್ಷದಾತನಿಗೆ ನಾವು ಪರಮವಿಧೇಯರಾಗಿ ನಡೆದು
ಕೊಳ್ಳಬೇಕೆಂದು ಮತ್ತೊಂದುಬಾರಿ ಹೇಳಬೇಕೆ ? ನಾವು ಯಾವಾಗಲೂ
ನಿರ್ದೋಷವಾಗಿ ನಡೆದುಕೊಳ್ಳಲಾರೆವಾದುದರಿಂದ ನಮ್ಮ ಅಪರಾಧಗಳನ್ನು
ಕ್ಷಮಿಸುವುದಕ್ಕೋಸುಗವೂ, ನಮಗೆ ಬೇಕಾದುವುಗಳನ್ನು ದಯಪಾಲಿಸುವು
ದಕ್ಟೋಸುಗವೂ, ನಮ್ಮ ಅಪದಗಳನ್ನು ಪರಿಹರಿಸುವುದಕ್ಕೋಸುಗವೂ
ಸರ್ವಶಕ್ತನಾದ ಆ ಈಶ್ವರನನ್ನು ಗೌರವಪೂರ್ವಕವಾಗಿಯ್ಗೂ ನಿಶ್ಚಲಭಕ್ತಿ
ಯೊಡನೆಯೂ ಪ್ರತಿದಿನವೂ ಪ್ರಾರ್ಥಿಸುತ್ತಿರಬೇಕು. ಇದೇ ನಾವು ಭಗ
ವಂತನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಮುಖ್ಯಧರ್ಮಗಳು
ಚಂದ್ರ--ಈರೀತಿಯಾಗಿ ನಾವು ಭಗವಂತನ ವಿಷಯದಲ್ಲಿ ನಡೆದು
ಕೊಳ್ಳದಿರುವ ಪಕ್ಬದಲ್ಲಿ ನಮ್ಮನ್ನು ಆತನು. ಶಿಕ್ಷಿಸುವನೆ ?
ಗುರು--ಭಗವಂತನು ಅತ್ಮಸ್ತುತಿಗೆ ಸಂತೋಷಪಡತಕ್ಕವನಲ್ಲ.
ದೂಷಣೆಗೆ ಕೋಪಿಸತಕ್ಕವನೂ ಅಲ್ಲ ; ಅದುದರಿಂದ ನಾವು ಈ ವಿಷಯವಲ್ಲಿ
ಪ್ರತ್ಯೇಕವಾದ ಶಿಕ್ಷೆಯನ್ನು ಹೊಂದದಿದ್ದರೂ, ನಮಗಿಷ್ಟು ಉಪಕಾರ
ಗಳನ್ನು ಮಾಡಿರುವ ಪ್ರೇಮನಿಧಿಯ ವಿಷಯದಲ್ಲಿ ಕೃತಘ್ನರಾಗಿ ವಿಧಾಯಕ
ಕೃತ್ಯಗಳನ್ನು ಬಿಟ್ಟು ಉಪಕಾರಸ್ಮೃತಿಯಿಲ್ಲದ ಕಠಿನಾತ್ಮರರಾಗುನೆವಾದು
ದರಿಂದ ಸಾಮಾನ್ಯಜನರ ವಿಷಯದಲ್ಲಿಯೂ ಸಂಪೂರ್ಣವಾದ ದುಷ್ಪ್ರವ
ರ್ತನವುಳ್ಳವರಾಗುವೆನಾದುದರಿಂದ ಹಾಳಾಗುವೆವು. . ಅದುಕಾರಣ ಶಿಕ್ಷೆ
ಯನ್ನು. ಹೊಂದುವೆವು.
ಚಂದ್ರ---ದುಮಾರ್ಗದಲ್ಲಿ ಪ್ರವರ್ತಿಸದೆ ಸೂಕ್ತವಾದ ಮಾರ್ಗದಲ್ಲಿ
ಪ್ರವರ್ತಿಸುವವರಿಗೆ ಭಗವದ್ದ್ಯಾನಾದಿಗಳಿಂದ ಪ್ರಯೋಜನವಿಲ್ಲವೆ ?
ಗುರು--ಬೇಕಾದಷ್ಟು ಪ್ರಯೋಜನವಿರುವುದು. ಈಶ್ವರಧ್ಯಾನದಿಂದ
ನಮ್ಮ ಮನಸ್ಸಿಗೆ ಅನಂದವುಂಟಾಗುವುದು ಮಾತ್ರವಲ್ಲದೆ, ಸತ್ಕಾರ್ಯಾ
ಚರಣೆಯಲ್ಲಿ ಪ್ರೋತ್ಸಾಹವೂ ದುಷ್ಕಾರ್ಯಗಳಲ್ಲಿ ವಿರಕ್ತಿಯೂ ಉಂಟಾಗುವುವು.
ಅದುದರಿಂದ ಸಕಲವಿಧನಾದ ಶ್ರೀಯಸ್ಸೂ ನಮಗೆ ಕರಗತವಾಗುವುದು.
-----------------------------------------
೨೪ ಚಂದ್ರಮತಿ
ಅದುಕಾರಣ ನಾವು ಪ್ರತಿದಿನವೂ ತ್ರಿಕಾಲದಲ್ಲಿಯೂ ಭಕ್ತಿಯಿಂದ ಈಶ್ವರಾ
ರಾಧನೆಯನ್ನು ಮಾಡುತ್ತಿರಬೇಕು.
ಚಂದ್ರ---ನಿಮ್ಮ ಹಿತಬೋಧಿಗಳಿಂದ ನನ್ನ ಅಜ್ಞಾನಾಂಧಕಾರವು
ಪರಿಹೃತವಾಗಿ ಮುಕ್ತಿಮಾರ್ಗದ ಲಕ್ಷಣವನ್ನು ಸ್ವಲ್ಪಮಾತ್ರ ತಿಳಿದು
ಕೊಳ್ಳುವಂತಾಯಿತು. ಇನ್ನುಮೇಲೆ ಪ್ರತಿದಿನವೂ ತಮ್ಮ ಉಪದೇಶಾನುಸಾರ
ವಾಗಿ ತ್ರಿಕರಣಶುದ್ದಿ ಯಾಗಿಯೂ ಈಶ್ವರನನ್ನು ಉಪಾಸಿಸುತ್ತಿರುವೆನು.
ಐದನೆಯ ಪ್ರಕರಣ
ಮರುದಿನ ಚಂದ್ರಮತಿಯು ಪಾಠವನ್ನೊಪ್ಪಿಸುತ್ತಿದ್ದಾಗ ನಡುನಡುನೆ
ಎಡಗೈಯನ್ನು ಕೆರೆದುಕೊಳ್ಳುತ್ತೆ ಬೆರಲನ್ನು ಮುರಿದುಕೊಳ್ಳುತ್ತಿದಳು.
ವಿದ್ಯಾಸಮುದ್ರನು ಅದನ್ನು ಕಂಡು ಪಾಠವೆಲ್ಲ ಮುಗಿಯುವವರೆಗೂ
ಸುಮ್ಮನಿದ್ದು ತರುವಾಯ ಈ ಪ್ರಕಾರವಾಗಿ ಸಂಭಾಷಿಸುವುದಕ್ಕೆ ಮೊದಲು
ಮಾಡಿದನು.
ಗುರು---ಮಗೂ! ಈದಿನ ನೀನೇಕೋ ಹಲವುಬಾರಿ ಕೈಬೆರಲುಗಳನ್ನು
ಹಿಸುಕಿಕೊಳ್ಳುತ್ತಿದೆ. ಹೀಗೆಮಾಡಲು ಕಾರಣವೇನು?
ಚಂದ್ರ---ನನ್ಕ ಬೆರಲಸಂದಿಯಲ್ಲಿ ಸಣ್ಣ ಸಣ್ಣ ಕಜ್ಜಿ ಗುಳ್ಳೆಗಳು ಎದ್ದು
ಕೈಯೆಲ್ಲ ಬಲುನವೆಯಾಗಿರುವುದಾದುದರಿಂದ ಕರೆದುಕೊಳ್ಳುತ್ತಿದ್ದನು.
ಅದರಲ್ಲಿಯೂ . ನಡುಬೆರಲಸಂದಿನಲ್ಲಿ ಎದ್ದಿರುವ ಈ ಸಣ್ಣ ಗುಳ್ಳೆಯು
ನನ್ನನ್ನು ಅತಿಯಾಗಿ ಬಾಧಿಸುತ್ತಿರುವುದು.
ಗುರು---ನಮಗೆ. ವಿಧಾಯಕಗಳಾಗಿರುನ . ಧರ್ಮಗಳನ್ನು . ನೀನು
ಮೀರಿರುವೆಯಾದುದರಿಂದ ನಿನಗೆ ಈ ಬಗೆಯ ಶಿಕ್ಷೆಯುಂಟಾಗಿರುವುದು.
------------------------------------------
ಐದ ನೆಯ ಪ್ರಕ ರಣ. ೨೫
ನೀನು ಕೈಗಳನ್ನು ಚೆನ್ನಾಗಿ. ತೊಳೆದುಕೊಳ್ಳದಿದ್ದುದರಿಂದಲೇ ಈಗ. ನಿನ್ನ
ಬೆರಲಮೇಲೆ ಕಜ್ಜಿಯೆದ್ದಿರುವುದು. ಭಗವಂತನ ಆಜ್ಞಾರೂಪಗಳಾದ
ಯಾವ ಧರ್ಮಗಳನ್ನು ಮೀರಿದರೂ, ಅದಕ್ಕೆ ಅನುಸಾರವಾಗಿ ತಕ್ಕ ಶಿಕ್ಷೆ
ಗಳುಂಟಾಗದಿರವು.
ಚಂದ್ರ---ಓದುವುದರಲ್ಲಿಯೇ ಆಸಕ್ತೆಯಾಗಿ ನಾನು ಇಂದಿನ ದಿನ
ಗಳಲ್ಲಿ ನನ್ನ ದೇಹಸೌಖ್ಯವನ್ನು ಕುರಿತು ಅಷ್ಟುಶ್ರದ್ಧೆಯನ್ನು ವಹಿಸಲಿಲ್ಲ.
ಆದರೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದೂ ಧರ್ಮಾತಿಕ್ರಮಣ
ವೆನಿಸಿಕೊಳ್ಳುವುದೇ?
ಗುರು -. ನಾವು ಶುಚಿಯಾಗಿರಬೇಕಾದುದೂ ನಮಗೆ ವಿಧಾಯಕನಾದ
ಕೃತ್ಯವೇ ಅಹುದು. ಇದರಲ್ಲಿ ಸಂಶಯವಿಲ್ಲ. ನೆನ್ನೆಯದಿನ ನಾನು ನಿನ್ಮೊ
ಡನೆ ಎರಡನೆಯ ಧರ್ಮವೆಂದು ತಿಳಿಸಿದ ಸ್ವವಿಷಯಿಕನಾದ ಧರ್ಮಗಳಲ್ಲಿ
ಇದೊಂದಾಗಿರುವುದು. ಓದುವುದರಲ್ಲಿ ಶ್ರದ್ಧೆಯನ್ನು ವಹಿಸುವುದು ಮುಖ್ಯವೇ
ಅದರೂ, ಅದಕ್ಕೋಸುಗ ದೇಹಾರೋಗ್ಯವನ್ನು ಕೆಡಿಸಿಕೊಳ್ಳ ಬಾರದು. .
ಚಂದ್ರ_-ಹಾಗಾದರೆ ಸ್ವವಿಷಯದಲ್ಲಿ ಪ್ರವರ್ತಿಸಬೇಕಾದ ಧರ್ಮ
ಗಳಾವುವೋ ಅವುಗಳನ್ನತಿಕ್ರಮಿಸುವುದರಿಂದ . ಆವಕೇಡುಗಳುಂಟಾಗು
ವುವೋ, ಅದನ್ನೆಲ್ಲ ನನ್ನಲ್ಲಿ ಅನುಗ್ರಹನಿಟ್ಟು ವಿವರಿಸಿರಿ
ಗುರು -- ಶರೀರಸಂರಕ್ಷಣೆಗೋಸುಗ ನಾವು ಅಚರಿಸಬೇಕಾಗಿರುವ
ಕೃತ್ಯವೆಲ್ಲ ಸ್ವವಿಷಯಕನಾದ ಧರ್ಮವೇ. ಅವುಗಳನ್ನು ಮೀರಿ ನಡೆಯುವುದ
ರಿಂದ ಹಲವುಬಗೆಯ ವ್ಯಾಧಿಗಳು ಸಂಭವಿಸಿ ಬಹುಬಾಧೆಯುಂಟಾಗುವುದು.
ದೇಹವು ಅರೋಗ್ಯದಶೆಯಲ್ಲಿರುವವರೆಗೆ ಮಾತ್ರವೇ ನಾವು ಆವ ಧರ್ಮ
ಕಾರ್ಯವನ್ನಾದರೂ ಮಾಡುವುದಕ್ಕೆ ಸಮರ್ಥರಾಗಿರುವೆವು. ಅದಕ್ಕೆ ಸ್ವಲ್ಪ
ವಿಘಾತವುಂಟಾಗುವ ಪಕ್ಷದಲ್ಲಿ, ಸಮಸ್ತಧರ್ಮಗಳೂ ತ್ಯಜಿಸಲ್ಪಡುವುವು.
ಆದುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸೌಖ್ಯವನ್ನು ನೋಡಿ
ಕೊಂಡು ದೇಹವನ್ನು ಕಾಪಾಡಿಕೊಳ್ಳುತ್ತಿರಬೇಕು. ದೇಹಾರೋಗ್ಯಕ್ಕೆ
ಶುದ್ಧವಾಯುವೂ, ನಿರ್ಮಲೋದಕವೂ, ಯುಕ್ತಾಹಾರವೂ, ಶುಭ್ರವಸ್ತ್ರ
--------------------------------------
೨೬ ಚ ೦ದ್ರಮತಿ,
ಧಾರಣೆಯೂ,ನಿತ್ಯಸ್ನಾನವೂ, ಸುಖನಿದ್ರೆಯೂ, ಮುಖ್ಯಾಂಗಗಳಾಗಿರುವುವು.
ಚಂದ್ರ-~ನಮ್ಮ ದೇಹಾರೋಗ್ಯಕ್ಕ ವಾಯುವೂ ಅಷ್ಟು ಅವಶ್ಯಕ
ವಾದುದೇ ?
ಗುರು---ನಾವು ಆಹಾರವಿಲ್ಲದೆಯೇ ಕೆಲದಿನಗಳು ಜೀವಿಸಬಲ್ಲೆವಾ
ದರೂ ವಾಯುವಿಲ್ಲದೆ ಒಂದುನಿಮಿಷವಾದರೂ ಜೀವಿಸಲಾರೆವು. ನಾವು
ಆಘ್ರಾಣಿಸುವ ವಾಯುವಿನಲ್ಲಿ ಒಂದುಭಾಗವೆಲ್ಲ ಪ್ರಾಣವಾಯುವು ಸೇರಿರು
ವುದು. ನಮ್ಮ ಉಚ್ಛ್ವಾಸ ನಿಶ್ವಾಸಗಳಿಂದ . ಪ್ರಾಣವಾಯುವು ಒಳಕ್ಕೆ
ಪ್ರವೇಶಿಸಿ, ರಕ್ತವನ್ನು ಶುದ್ಬಿ ಗೊಳಿಸುವುದರಿಂದ ಒಳಗಿರುವ ಕೆಟ್ಟ ಗಾಳಿಯು
ಹೊರಕ್ಕೆ ಬರುವುದು. . ಅಂತಹ ಗಾಳಿಯು ವಿಷಸ್ವಭಾವವನ್ನುಳ್ಳುದಾದುದ
ರಿಂದ, ಜೀವಜಂತುಗಳು ಹೊರಕ್ಕೆ ಬಿಡುವ ನಿಶ್ವಾಸವಾಯುವನ್ನೇ ಆರಾ
ದರೂ ಪ್ರತ್ಯೇಕವಾಗಿ ಸೇವಿಸುವಪಕ್ಷದಲ್ಲಿ, ಅಂತಹರು ಕೆಲನಿಮಿಸಗಳೊಳ
ಗಾಗಿ ಮರಣವನ್ನು ಹೊಂದುವರು. . ಆದುದರಿಂದ ಪ್ರತಿಮನುಷ್ಯನೂ
ತಾನು ವಾಸಮಾಡುವಮನೆಗೂ, ಮಲಗುವಮನೆಗೂ ತಕ್ಕಷ್ಟು ಶುದ್ಧವಾ
ಯುವು ಪ್ರವೇಶಿಸುವಂತೆ ಅವಕಾಶವನ್ನುಂಟುಮಾಡಿರಬೇಕು. . ಹೊಸ
ವಾಯುವು ಹೆಚ್ಚಾಗಿಬರುವುದಕ್ಕೆ ಅವಕಾಶವಿಲ್ಲದಂತಹ ಒಂದು ಕಿರುಮನೆ
ಯಲ್ಲಿ ಹಲವುಮಂದಿ ಮಲಗಿದಪಕ್ಷದಲ್ಲಿ, ಸ್ವಲ್ಪನಿಮಿಷಗಳೊಳಗಾಗಿ
ಪ್ರಾಣವಾಯುವೆಲ್ಲ ಕಡಿಮೆಯಾಗಿ ಕಡೆಗೆ ಕೆಟ್ಟ ಗಾಳಿಯನ್ನೇ ಸೇವಿಸ
ಬೇಕಾಗುವುದಾದುದರಿಂದ, ಬಹು ರೋಗಗಳು ಸಂಭವಿಸುವುದಲ್ಲದೆ
ಒಂದೊಂದುವೇಳೆ ಮರಣವೂ ಸಂಭವಿಸಬಹುದು. ಸಾಧಾರಣವಾಗಿ
ನಮ್ಮವರಲ್ಲಿ ಕೆಲವರು ಹೆರಿಗೆಯ ಮನೆಗಳಿಗೆ ಒಳ್ಳೆಯ ಗಾಳಿಯನ್ನು
ಬರಗೊಡದೆ ಬಾಗಿಲುಗಳನ್ನು ಮುಚ್ಚಿ ಬಿಡುವರಾದುದರಿಂದಲೇ ಹೆತ್ತ ಹತ್ತು
ದಿನಗಳೊಳಗಾಗಿ ಮಗುವೋ ಬಾಣಂತಿಯೋ ಮರಣಕ್ಕೆ ಗುರಿಯಾಗುವರು.
ಚಂದ್ರ --ಮೊನ್ನೆ ನಾನಿಲ್ಲಿಗೆ ಹೊರಟುಬರುವಾಗ ಎಲ್ಲಿಯಾದರೂ
ಹಾರಿಹೋದೀತೆಂಬ . ಶಂಕೆಯಿಂದ ನನ್ನ ಗಿಳಿಯಮರಿಯನ್ನು ಪೆಟ್ಟಿಗೆ
ಯಲ್ಲಿಟ್ಟು ಭದ್ರನಾಗಿ ಮುಚ್ಚಳವನ್ನು ಹಾಕಿಬಂದೆನು. ಒಳ್ಳೆಯ ಗಾಳಿಯು
ಬಾರದಿದುದರಿಂದಲೆಯೋ ಏನೋ, ಆಮರಿಯು ನಾನು ಪೆಟ್ಟಿಗೆಯನ್ನು
----------------------------------
ಐದ ನೆಯ ಪ್ರಕರಣ. ೨೭
ತೆರೆದು ನೋಡಿದಾಗ ಸತ್ತು ಬಿದ್ದಿದಿತು. ಆಗ. ನನಗೆ ಅದರಕಾರಣ
ವೇನೆಂಬುದು ತಿಳಿಯಲಿಲ್ಲ. ಇದೂ ಅಲ್ಲದೆ ನೆನ್ನೆ ನಾನು ಕಣ್ಣುಮುಚ್ಚಾಟ
ವನ್ನು ಅಡುವಾಗ ಹೊಸಗಾಳಿಯು ಬರುವುದಕ್ಕೆ ಸಂಪೂರ್ಣವಾಗಿ ಅವ
ಕಾಶವೇ ಇಲ್ಲದಿರುವ ನಮ್ಮ ನಡುಮನೆಯಲ್ಲಿ ಒಂದು ಗಳಿಗೆಯಹೊತ್ತು
ಅವಿತುಕೊಂಡಿದ್ದು ತರುವಾಯ ಹೊರಕ್ಕೆ ಬರಲು ದೇಹವೆಲ್ಲಾ ಬೆವರೇರಿ
ಉಸಿರಾಡುವುದಕ್ಕೂ ಆಗದಂತೆ ಕಷ್ಟವಾದುದಕ್ಕೆ ಇದೇಕಾರಣವಾಗಿರಬಹು
ದಲ್ಲವೇ ?
ಗುರು... ಅಹುದು. ಶುದ್ಧವಾಯುವು ಇಲ್ಲವಾದರೆ ಜೀವಜಂತುಗಳ
ಅರೋಗ್ಯಕ್ಕೆ ಹಾನಿಯುಂಟಾಗುವುದು ಮಾತ್ರವೇ ಅಲ್ಲದೆ, . ಬೆಂಕಿಯೂ
ಉರಿಯಲಾರದು.
ಚಂದ್ರ----ನಾಲ್ಸುತಿಂಗಳ ಕೆಳಗೆ ಒಂದಾನೊಂದುದಿನ ನಮ್ಮದೇವತಾ
ರ್ಚನೆಯ ಪೆಟ್ಟಗೆಯಲ್ಲಿ ದೀಪವನ್ನು ಉರಿಯುತ್ತಿದಂತೆಯೇ ಬಿಟ್ಟು ಬಾಗಿಲ
ನ್ನೆಳೆದು ಚಿಲುಕವನ್ನು ಹಾಕಿದವು. ಅಷ್ಟರೊಳಗಾಗಿ ಅದರಲ್ಲಿದ್ದ ಗಂದದ
ಬಟ್ಟಲು ಬೇಕಾಗಲು ಬಾಗಿಲನ್ನು ತೆರೆದು. ನೋಡಿದಾಗ ಹಣತೆಯಲ್ಲಿ
ಎಣ್ಣೆಯೂ ಬತ್ತಿಯೂ ವಿಶೇಷವಾಗಿದ್ದರೂ, ದೀಪವು ಆರಿಹೋಗಿದ್ದುದನ್ನು
ಕಂಡು ನನಗೆ ಎಷ್ಟೋ ಆಶ್ಚರ್ಯವಾಯಿತು. ನಾವು ಉಸಿರಾಡುವುದರಿಂದ
ಮಾತ್ರವೇ ಅಲ್ಲದೆ ಮತ್ತಾವುದರಿಂದಲಾದರೂ ಗಾಳಿಯು ಕೆಟ್ಟು ಹೋಗಿ
ವಿಷಸ್ವಭಾನವುಳ್ಳುದಾಗುವುದುಂಟೇ?
ಗುರು----ಬಚ್ಮಲ ನೀರಿಂದ ಹೊರಕ್ಕೆಬರುವ ದುರ್ಗಂಧವೂ, ಸತ್ತ
ಜಂತುಗಳ ಶರೀರವು ಕೊಳೆತು ನಾರುನಾಗ ಉಂಟಾಗುವ ದುರ್ವಾಸನೆಯೂ,
ಹಸುಗಳನ್ನು ಕಟ್ಟುವಸ್ಥಳದಲ್ಲಿ ಹುಟ್ಟುವ ರೊಚ್ಚಿನ ದುರ್ವಾಸನೆಯೂ,
ಕಾಯಿಪಲ್ಲೆಯ ಸೆಗಣಿಯಕುಪ್ಪೆ ಮೊದಲಾದುವು ಕೊಳೆಯುವುದರಿಂದ
ಹುಟ್ಟುವ ಕೆಟ್ಟಗಂಧವೂ, ಗಾಳಿಯನ್ನು . ವಿಷಯುಕ್ತವನ್ನಾಗಿಮಾಡಿ,
ನಮ್ಮ ದೇಹಾರೋಗ್ಯಕ್ಳೆ ಭಂಗವನ್ನುಂಟುಮಾಡುವುವು. ಬೆಂಕಿಯುರಿಯು
ವುದರಿಂದಲೂ, ವಾಸಸ್ಥಳವನ್ನು ತೇವವಾಗಿಟ್ಟುಕೊಂಡಿರುವುದರಿಂದಲೂ,
ಮನೆಯ ಸಮೀಪದಲ್ಲಿಯೇ ಮಲಮೂತ್ರಾದಿಗಳನ್ನು ವಿಸರ್ಜಿಸುವುದ
------------------------------------------
೨೮ ಚಂದ್ರಮತಿ.
ರಿಂದಲೂ, ಹೊಗೆಮೊದಲಾದುವುಗಳಿಂದಲೂ, ಗಾಳಿಯು ಕೆಟ್ಟುಹೋಗಿ
ಬಹುವಿಧಗಳಾದ ವ್ಯಾಧಿಗಳನ್ನು ಹುಟ್ಟಸುವುದಾದುದರಿಂದ, ವಾಸಗೃಹಗಳ
ಸಮೀಪದಲ್ಲಿ ಇಂತಹ ಪದಾರ್ಥಗಳನ್ನಾವುವನ್ನೂ ಇರಗೊಡದ ಜಾಗರೂಕ
ರಾಗಿ ವಾಸಸ್ಥಾನಗಳನ್ನು ನಿರಂತರವೂ ಶುಚಿಯಾಗಿಲ್ಟಿರಬೇಕು.
ಚಂದ್ರ -- ಇಷ್ಟುಬಗೆಯಲ್ಲಿ ಪ್ರತಿದಿನವೂ ಗಾಳಿಯು ಕೆಟ್ಟುಹೋಗಿ
ಹಾನಿಕರನಾಗುತ್ತಿದ್ದರೂ ಭಗವಂತನು ಈ ಭಾದೆಯನ್ನು ಪರಿಹರಿಸುವುದಕ್ಕೆ
ಆವ ಸಾಧನವನ್ನೂ ಕಲ್ಲಿಸಿಲ್ಲವೇ ?
ಗುರು---ನಾವು ಹೊರಕ್ಕೆ ಬಿಡುವ ಕೆಟ್ಟಗಾಳಿಯನ್ನು ವೃಕ್ಷಾದಿಗಳು
ಗ್ರಹಿಸಿ ನಮಗೆ ಅನವಶ್ಯಕವಾದ ಪ್ರಾಣವಾಯುವನ್ನು ಹಗಲ. ಹೊತ್ತಿ
ನಲ್ಲಿ ಕೊಡುವುವು. ಹೀಗೆ, ವೃಕ್ಷಾದಿಗಳು ಶುದ್ಧಿ ಗೊಳಿಸುತ್ತಿರುವುದರಿಂದಲೂ,
ಗಾಳಿಯು ಬಹುದೂರ. ವ್ಯಾಪಿಸಿರುವುದರಿಂದಲೂ, ಹೊಸಗಾಳಿಯು ಹಳೆ
ಯದುದನ್ನು ಹೊರಕ್ಕೆ ಎತ್ತಿಕೊಂಡು. ಹೋಗುವುದರಿಂದಲೂ, ವಿಷವಾಯು
ವಿನಿಂದ ನಮಗುಂಟಾಗುವ ಹಾನಿಯು ಪರಿಹಾರವಾಗುವುದು. ಉಸಿರಾಡು
ವುದೇ ಮೊದಲಾದ ಅನಿವಾರ್ಯಕಾರ್ಯಗಳನ್ನುಳಿದು ಇತರ ದುಷ್ಕಾರ್ಯ
ಗಳಿಂದ ನಾವು ಗಾಳಿಯನ್ನು ಕೆಡಿಸದಿರುನ ಪಕ್ಷದಲ್ಲಿ, ನಮ್ಮ ಆರೋಗ್ಯಕ್ಕೆ
ಭಗವಂತನು ಕಲ್ಪಿಸಿರುವ ಸಾಧನಗಳೇ ಸಾಕಾಗಿರುವುವು, ಅದುದರಿಂದ
ಮೇಲೆ ತಿಳಿಸಿದ ಲೋಪಗಳನ್ನು ಕುರಿತು ನಾವು ಶ್ರದ್ಧೆಯನ್ನು ವಹಿಸಬೇಕು.
ಚಂದ್ರ-=-ನಾವು ಶ್ರದ್ಧೆಯನ್ನು ವಹಿಸಿ ಮಾಡಬೇಕಾಗಿರುವ ಕಾರ್ಯ
ಗಳಾವುವು?
ಗುರು --ಗೃಹಾದಿಗಳನ್ನು ನಿರಂತರವೂ ಶುಚಿಯಾಗಿಟ್ಟುಕೊ೦ಡು,
ಗಾಳಿಯ. ದುರ್ಗಂಧ ಮೊದಲಾದುವುಗಳೆಲ್ಲಾ ಹೋಗುವಂತೆ ಗೋಡ
ಗಳಿಗೆ ಅಗಾಗ. ಸುಣ್ಣವನ್ಶು ತೊಡೆಯಿಸುತ್ತೆ, ಶುದ್ಧವಾಯುವು ಧಾರಾಳ
ವಾಗಿ ಒಳಕ್ಕೆ ಪ್ರವೇಶಿಸುವುದಕ್ಕೆ ಅವಕಾಶವಿರುವಂತೆ ಗೋಡೆಗಳ ಮೇಲ್ಬಾಗ
ದಲ್ಲಿ ದೊಡ್ಡ ಕಿಟಕಿಗಳನ್ನಿಡಿಸಿ, ಹೊಗೆ ಮೊದಲಾದುವುಗಳು ಹೊರಕ್ಕೆ
ಹೋಗುವುದಕ್ಕೆ ತಕ್ಕ ಮಾರ್ಗಗಳನ್ನೇರ್ಪಡಿಸಿ, ನಮ್ಮ ದೇಹ ಸಂರಕ್ಷಣೆ
ಗೋಸುಗ ತಕ್ಕಷ್ಟು ಶ್ರದ್ಧೆಯನ್ನು ವಹಿಸಬೇಕು.
----------------------------------
ಐದನೆಯ ಪ್ರಕರಣ. ೨೯
ಚಂದ್ರ-=ಇನ್ನು ನೀರನ್ನುಪಯೋಗಿಸಬೇಕಾದ ಕ್ರಮವನ್ನೂ ದಯೆ
ಯಿಟ್ಟು ತಿಳಿಸುವಿರಾ?
ಗುರು---ದೇಹಾರೋಗ್ಯವನ್ನು ಕಾಪಾಡಿಕೂಳ್ಳಬೇಕಾದಪಕ್ಷದಲ್ಲಿ
ನಿರ್ಮಲವಾಯುವು ಹೇಗೆ ಅವಶ್ಯಕವೋ ಸ್ನಾನಮಾಡುವುದಕ್ಕೆ ನಿರ್ಮಲ
ವಾದ ನೀರೂ ಹಾಗೆಯೇ ಆವಶ್ಯಕವು. . ಅದುದರಿಂದ ನದಿಗಳಲ್ಲಿಯಾಗಲಿ,
ಕೆರೆಗಳಲ್ಲಿಯಾಗಲಿ ಕೊಳೆಯಿಂದ ಕೂಡಿರುವ ನೀರನ್ನು ಯಾವಾಗಲೂ
ಕುಡಿಯದೆ ಚೆನ್ನಾಗಿ ಶೋಧಿಸಲ್ಪಟ್ಟ ತಿಳಿನೀರನ್ನೇ ಪಾನಮಾಡಬೇಕು.
ನಾವು ಕುಡಿಯುವನೀರನ್ನು ತೆಗೆದುಕೊಂಡು ಬರುವಂತಹ ಜಲಾಶಯ
ಗಳಲ್ಲಿ ಸ್ನಾನಮಾಡುವುದು ಮುಸುರೆಯ ಪಾತ್ರೆಗಳನ್ನು ತೊಳೆಯುವುದು
ಬಟ್ಟೆಗಳನ್ನೊಗೆಯುವುದು, ಇವೇ ಮೊದಲಾದ ಕೆಲಸಗಳನ್ನು ಮಾಡ
ಬಾರದು. . ಹೀಗೆ ಮಾಡುವುದರಿಂದ ನೀರು ಕೆಟ್ಟುಹೋಗಿ ಅದನ್ನು ಕುಡಿಯು
ವವರಿಗೆ ರೋಗಾದಿಗಳು ಉಂಟಾಗುವುವು.
ಚಂದ್ರ-ನಾವು ತೆಗೆದುಕೊಳ್ಳಬೇಕಾದ ಅಹಾರವೆಂತಹುದೋ,
ಅವಾವಕಾಲದಲ್ಲಿ ಭೋಜನವನ್ನು. ಮಾಡಬೇಕೋ ಅದನ್ನೂ ನನ್ನಲ್ಲಿ
ಅನುಗ್ರಹವಿಟ್ಟು. ತಿಳಿಸಬೇಕು.
ಗುರು---ಆರೋಗ್ಯಕರವೂ, ಪುಷ್ಟಿಕರವೂ ಆದ ಪದಾರ್ಥವನ್ನು
ಮಾತ್ರವೇ ದೇಹಕ್ಕೆ ಆಲಸ್ಯವನ್ನುಂಟುಮಾಡುವಂತಹ
ಅಜೀರ್ಣಕರಗಳಾದ ಪದಾರ್ಥಗಳನ್ನಾವಾಗಲೂ ತಿನ್ನದಿರಬೇಕು. ಸಾಧ್ಯವಾ
ದಷ್ಟು ಮಟ್ಟಗೆ ಸೊಪ್ಪಿನ ತರಕಾರಿಗಳನ್ನು ತಿನ್ಕಕೂಡದು. ಒಳ್ಳೆಯಪದಾರ್ಥ
ವೆಂದಿಣಿಸಿ ನಾವು ಮಿತಿಮೀರಿ ತಿಂದುಬಿಟ್ಟರೆ. ಅಜೀರ್ಣಾದಿ ವ್ಯಾಧಿಗಳು
ಸಂಪ್ರಾಪ್ತನಾಗುವುವು. ಎಳೆಮಕ್ಳುಳು ದಿನಕ್ಕೆ ಮೂರುನಾಲ್ಟು ಬಾರಿ
ಊಟಮಾಡಬೇಕು. ದೊಡ್ಡವರು ಪ್ರತಿದಿನವೂ ಎರಡುಬಾರಿ ಕ್ರಮಕಾಲ
ದಲ್ಲಿ, ಊಟಮಾಡುತ್ತೆ ಯಾವಾಗಲೂ ಒಂದೇಪದಾರ್ಥವನ್ನೇ ತಿನ್ನುತ್ತಿರದೆ
ಬೇರೆಬೇರೆ ಬಗೆಯ ಕಾಯಿಪಲ್ಲೆಯಗಳನ್ನೂ ರಸವರ್ಗಗಳನ್ಯೂ ತಿನ್ನಬೇಕು.
ವ್ರತನಿಯಮಗಳೆಂಬ ವ್ಯಾಜದಿಂದ ಕ್ರಮತಪ್ಪಿ ಊಟಮಾಡುವುದೂ,
ಒಂದುಹೊತ್ತು ಮಾತ್ರ ಭುಜಿಸುವುದೂ, ಉಪವಾಸಗಳನ್ನು ಮಾಡುವುದೂ,
----------------------------------------
೩೦ ಚಂದ್ರಮತಿ.
ಇವೇಮೊದಲಾದ ಆಚಾರಗಳನ್ನು ಬಿಡಬೇಕು. ಇಲ್ಲದಪಕ್ಬದಲ್ಲಿ ಅಂಥವರು
ರೋಗಾದಿಗಳಿಗೆ ನೆಲೆಯಾಗಿ ಶರೀರವನ್ನು. ಹಾಳುಮಾಡಿಕೊಳ್ಳುವರು.
ಚಂದ್ರ---ನಾವು ಧರಿಸಬೇಕಾದ ವಸ್ತ್ರಗಳನ್ನು ಕುರಿತು. ಹೇಳತಕ್ಕು
ದೇನಾದರೂ ಇರುವುದೇ ?
ಗುರು. . ನಾವು ಧರಿಸಿಕೊಳ್ಳುವ ವಸ್ತ್ರಗಳು ಬೆವರು ಮೊದಲಾದುವು
ಗಳಿಂದ ಬಹು ಜಾಗ್ರತೆಯಾಗಿ ಮಾಸಿಹೋಗುವುವು. ಮಾಸಿದ ಬಟ್ಟೆ
ಯನ್ಶೇ ಮತ್ತೆ ಧರಿಸುವುದರಿಂದ ಕಜ್ಜಿಯೇ ಮೊದಲಾದ ಚರ್ಮರೋಗಗಳು
ಹುಟ್ಟುವುವು. ಆದುದರಿಂದ ಬಟ್ಟೆಯು ಸ್ವಲ್ಪ ಮಾಸಿದೊಡನೆಯೇ ಅದನ್ನು
ತೆಗೆದುಹಾಕಿ ಒಗೆದು ತಂದಿರುವ ಬೇರೆ ಬಟ್ಟೆಯನ್ನು ಉಡಬೇಕು. ದೇಹಾ
ರೋಗ್ಯಕ್ಕೆ ಶುಭ್ರವಾದ ವಸ್ತ್ರಗಳು ಅವಶ್ಯಕಗಳಲ್ಲದೆ. ಹೆಚ್ಚು ಬೆಳೆಯ
ವಸ್ತ್ರಗಳಲ್ಲ. ಅದುದರಿಂದ ಬಡವರ ಹೆಂಗಸರು ಧನಿಕರ ಹೆಂಗಸರನ್ನು
ನೋಡಿ, ತಮಗೂ ಅವರಿಗಿರುವಂತೆ ಬೆಲೆ ಬಾಳುವ ವಸ್ತಗಳೇ
ಬೇಕೆಂದು ಹಟಹಿಡಿಯದೆ ಬುದ್ಧಿ ಹೀನತೆಯನ್ನು ಬಿಡಬೇಕು.
ಚಂದ್ರ--ಪ್ರತಿದಿನವೂ ಸ್ನಾನಮಾಡುವುದರಿಂದ ಪ್ರಯೋಜನನೇನು?
ಗುರು---ಕುಡಿಯುವ ನೀರಿನಂತೆಯೇ ಸ್ನಾನಮಾಡುನ ನೀರೂ
ನಿರ್ಮಲವಾಗಿರಬೇಕು. ಪುಣ್ಯವು ಬರುವುದೆಂದು ನದಿಗಳಲ್ಲಿರುವ ಕೆಸರು
ನೀರಿನಲ್ಲಿ ಮುಳುಗಿ ಅಚಾರವೆಂದು ಒದ್ದೆಯ ಬಟ್ಟಿಯನ್ನುಟ್ಟು ಕುಳಿತು
ಕೊಂಡರೆ. ರೋಗಾದಿಗಳು ಉಂಟಾಗುವುವು. ಮೈಮೇಲೆಲ್ಲ ಇರುವ
ಸೂಕ್ಷ್ಮಗಳಾದ ರಂಧ್ರಗಳಿಂದ ಬೆವರು, ಮಣ್ಣು ಇವೇ ಮೊದಲಾದಕಲ್ಮಷ
ಪದಾರ್ಥಗಳು ಯಾವಾಗಲೂ ಹೊರಕ್ಕೆ ಬರುತ್ತಿರುವುವು. ಮೈಯನ್ನು
ಚೆನ್ನಾಗಿ ಉಜ್ಜಿ ಕೊಂಡು ಸ್ನಾನಮಾಡದಿರುವಪಕ್ಷದಲ್ಲಿ ಆ ರಂಧ್ರಗಳು
ಮುಚ್ಚಿಹೋಗಿ ಬೆವರು ಮೊದಲಾದವುಗಳು ಹೊರಕ್ಕೆ ಸರಿಯಾಗಿ ಬಾರದೆ
ಕಜ್ಜಿಮುಂತಾದುವಕಕ ಆಸ್ಬದವುಂಟಾಗುವುದು. ಆದುದರಿಂದ ಸ್ನಾನಮಾಡು
ವಾಗ...ಕೊಳೆ ಹೋಗುವಂತೆ ಚೆನ್ನಾಗಿ ಮೈಯನ್ನುಜ್ಜಿಕೊಂಡು, ದಿನ
ಕ್ಯೊಂದುಬಾರಿಯಾದರೂ ತಪ್ಪದೆ ಸ್ನಾನಮಾಡುತ್ತಿರಬೇಕು. . ಮೈ ಮೇಲೆ
ಸುಮ್ಮನೆ ನೀರನ್ನು ಸುರಿದುಕೊಳ್ಳುವುದರಿಂದ ಆವ ಪ್ರಯೋಜನವೂ
ಉಂಟಾಗಲಾರದು. ಪ್ರತಿದಿನವೂ ಬಾಲಕರೂ ದೇಹದಾರ್ಢ್ಯವುಳ್ಳವರೂ
-------------------------------------------
ಐದನೆಯ ಪ್ರಕರಣ. ೩೧
ಪ್ರಾತಃಕಾಲಗಳಲ್ಲಿ ತಣ್ಣೀರಿನ ಸ್ನಾನವನ್ನು ಮಾಡಬೇಕು; ಬಲಹೀನರೂ
ವ್ಯಾಥಿಗ್ರಸ್ತರೂ. ಉಗುರುಬಿಸಿಯಾದ ನೀರಿನಲ್ಲಿ ಸ್ನಾನಮಾಡಬೇಕು ;
ಬಲುಬಿಸಿಯಾದ ನೀರಿನಲ್ಲಿ ಸ್ನಾನಮಾಡುವುದು ಮೈಗೆ ಒಳ್ಳೆಯದಲ್ಲ
ಅದುದರಿಂದ ಮಕ್ಕಳು ನಿದ್ರೆಹೋಗುವರಿಂದು ಭ್ರಮಿಸಿ ಬಲುಬಿಸಿಯಾದ
ನೀರನ್ನೆರೆಯುವ ದುರಾಚಾರವನ್ನು ತಿಳಿವುಳ್ಳವರೆಲ್ಲರೂ ಬಿಡಬೇಕು.
ಚಂದ್ರ ---ಇನ್ನು ನಿದ್ರೆಯ ವಿಚಾರವೊಂದುಳಿಯಿತು. ಅದನ್ನೂ
ಅಪ್ಪಣೆಕೊಡಿಸುವಿರಾ ?
ಗುರು---ಪ್ರತಿದಿನವೂ ರಾತ್ರಿ ಹತ್ತುಗಂಟಿಗೆ ಮಲಗಿ ಪ್ರಾತಃಕಾಲ
ದಲ್ಲಿ ಸೂರ್ಯೋದಯವಾಗುವುದಕ್ಕೆ ಮೊದಲೆ ಏಳಬೇಕು. ಸಾಧಾರಣ
ವಾಗಿ ದಿನವೊಂದಕ್ಕೆ ಎರಡುಜಾವ ನಿದ್ರಿಸಬೇಕು. ಹಗಲುಹೊತ್ತಿನಲ್ಲಿ
ನಿದ್ರಿಸುವುದು ಒಳ್ಳೆಯ ಸದ್ಧತಿಯಲ್ಲ. ಸಣ್ಣಮಕ್ಕಳಿಗೆ ಹೆಚ್ಚಾದನಿದ್ರೆಯು
ಆವಶ್ಯಕವಾದುದರಿಂದ ಅವರನ್ನು ಹಗಲಲ್ಲಿ ನಿದ್ರಿಸುವಂತೆ ಮಾಡಬೇಕು.
ನಿದ್ರಾಭಂಗದಿಂದ ಆಲಸ್ಯವುಂಬಾಗುವುದಾದುದರಿಂದ ಜಾಗರಣೆ ಮಾಡ
ಲಾಗದು.
ಚಂದ್ರ . ಈಗ, ತಿಳಿಸಿದುವುಗಳಲ್ಲದೆ ದೇಹಾರೋಗ್ಯದ ವಿಷಯವಾಗಿ
ಹೇಳಬೀಕಾದುದು ನುತ್ತೇನಾದರೂ ಇರುವುದೇ -
ಗುರು .-ಮುಖ್ಯವಾದುದು ಇನ್ನೊಂದಿರುವುದು. ಪ್ರತಿದಿನವೂ ಸ್ವಲ್ಪ
ಕಾಲ ದೇಹಪರಿಶ್ರಮವನ್ನು ಮಾಡುವುದು ಅತ್ಯಾವಶ್ಗಕವು. . ಅವಕಾರ್ಯ
ವನ್ನೂ ಮಾಡದೆ ಸುಮ್ಮನೆ ಕುಳಿತಿದ್ದ ಪಕ್ಷದಲ್ಲಿ, ದೇಹವು ಬಲಹೀನವಾಗಿ
ವ್ಯಾಧಿಗಳುಂಟಾಗುವುವು. . ಈಕಾರಣದಿಂದಲೇ, ಕಷ್ಟಪಡದೆ ತಿಂದು ತಿಂದು
ಕುಳಿತುಕೊಳ್ಳುವ ಧನಿಕರ. ಸ್ತ್ರೀಯರಿಗಿಂತ ಕಷ್ಟಪಟ್ಟು ಕೆಲಸಮಾಡುವ
ಬಡವರ ಸ್ತ್ರೀಯರು ಬಲಶಾಲಿನಿಯರಾಗಿರುವರು. ಆದುದರಿಂದ ದಾಸದಾಸಿ
ಜನರಿರುವ ಧನಿಕರಾದವರೂಕೂಡ. ಮನೆಗಳಲ್ಲಿ ಕೆಲಸಕಾರ್ಯಗಳನ್ನು
ಮಾಡಿಕೊಂಡು ಚಿರಕಾಲಾಯುರಾರೋಗ್ಯಗಳನ್ನು ಅನುಭವಿಸಬೇಕು.
---------------------------------------
ಆರನೆಯ ಪುಕರಣ.
ಮತ್ತೆ ಕೆಲದಿನಗಳು ಕಳೆದಬಳಿಕ ಚಂದ್ರಮತಿಯೊಂದುದಿನ ಪದ್ಧತಿಯ
ಪ್ರಕಾರ ಓದಬೇಕಾದ ಪಾಠಗಳನ್ನೋದಿ ಲೆಕ್ಕಗಳನ್ನುಮಾಡಿ, ಅಕ್ಷರ
ಗಳು ಲಕ್ಷಣಯುಕ್ತವಾಗುವುದಕ್ಕೋಸುಗ ಗುರುವು ಬರೆದ ಮೇಲ್ಪಙ್ತಿಯ
ನ್ನನುಸರಿಸಿ ಬರೆಯುತ್ತಿದ್ದಳು. ಅವಳು ಬರೆಯುತ್ತಿದ್ದಾಗ ವಿದ್ಯಾಸಮು
ದ್ರನು ಶಿಷ್ಯೆಯನ್ನು ಚೆನ್ನಾಗಿ ದೃಷ್ಟಿಸಿ, ಆಕೆಯ ಮುಖದಲ್ಲಿ ಸ್ವಲ್ಪವತ್ಯಾಸ
ವನ್ನು ಕಂಡು, ಅವಳು ಬರೆದುಮುಗಿಸುವವರೆಗೂ ಸುಮ್ಮನಿದ್ದು “ ಮಗೂ,
ನಿನ್ನ ಮುಖವನ್ನು ನೋಡಿದರೆ, ನೀನೇನೋ ಬಹು ವಿಚಾರಗ್ರಸ್ತಳಾಗಿರು
ವಂತೆ ತೋರುವುದು. ಇಷ್ಟೇ ಅಲ್ಲದೆ ನಿನ್ನ ಶರೀರವೂ ಮೊದಲಿನಂತೆ ಇಲ್ಲದೆ
ಸ್ವಲ್ಪ ಬಡವಾಗಿರುವುದು, ಇದಕ್ಕು ಕಾರಣವೇನು?“ ಎಂದು ಕೇಳಿದನು.
ಚಂದ್ರ----ನೆನ್ನೆಯದಿನ ನಮ್ಮತಾಯಿಯೂ ನೀವು ಕೇಳಿದಂತಿಯೇ
ಕೇಳಿದಳು. ಶರೀರಾರೋಗ್ಯವನ್ನು ಕುರಿತ ಧರ್ಮಗಳನ್ನು ಮೊನ್ನೆ ನೀವು
ತಿಳಿಸಿದಾಗಳಿಂದಲೂ ನಾನು ಅನ್ನಪಾನಾದಿಗಳ ವಿಷಯದಲ್ಲಿಯೂ ದೇಹ
ಪರಿಶುದ್ಧತೆಯ ವಿಷಯದಲ್ಲಿಯೂ ಹೆಚ್ಚಾದ ಶ್ರದ್ಧೆಯನ್ನು ವಹಿಸಿರುವೆನು.
ಈಗ ನನ್ಕ ಕೈಮೇಲಿದ್ದ ಕಜ್ಜಿಯೆಲ್ಲ ಹೋಯಿತು. ಹೀಗಿದ್ದರೂ ಈಗ ನಾನು
ಬಡವಾಗಿರುವುದಕ್ಕೆ ಕಾರಣವೇನೆಂಬುದನ್ನು ನಾನೂ ಕಾಣೆನು.
ಗುರು--ನೀನಾವುದಾದರೂ ಮನೋವ್ಯಾಧಿಯಿಂದ ಬಡನಾಗಿರುವೆ
ಯೇನೋ?
ಚಂದ್ರ---ಈಗ ನೀವು ಆಡಿದ ಮಾತಿಗೆ ಅರ್ಥವೇನೋ ನನಗೆ ತಿಳಿ
ಯದು. ಹೊಟ್ಟೆತುಂಬುವುದಕ್ಕೆ ಸಾಕಾದಷ್ಟು ಯುಕ್ತವಾದ ಭೋಜನನವಿಲ್ಲ
ದಿದ್ದರೂ ಕೆಟ್ಟಪದಾರ್ಥಗಳನ್ನು ತಿಂದರೂ ದೇಹಕ್ಕೆ ವ್ಯಾಧಿಯುಂಟಾಗುವು
ದೆಂದು ನಿಮ್ಮಿಂದಲೇ ಕೇಳಿಬಲ್ಲೆನು; ಆದರೆ ಮನಸ್ಸಿಗೆ ವ್ಯಾಧಿಯು ಏತರಿಂ
ದುಂಟಾಗುವುದೋ ಅದು ಹೇಗಿರುವುದೋ ಈ ವಿಷಯವು ಮಾತ್ರ ನನಗೆ
ತಿಳಿಯದಿರುವುದು. . ನೀವು ಆ ವಿಷಯವನ್ನು ಕುರಿತು. ಸ್ವಲ್ಪ ಮುಟ್ಟಗೆ
ತಿಳಿಸ ಬೇಕು.
-----------------------------------------
ಅರನೆಯ ಪ್ರಕರಣ ೩೩
ಗುರು --ಯುಕ್ತವಾದ ಆಹಾರವವಾಗಲಿ ಪರಿಶುದ್ಧತೆಯಾಗಿಲಿ ಇಲ್ಲ
ದಿದ್ದರೆ ಶರೀರಕ್ಕೆ ಹೇಗೆ ವ್ಯಾಧಿಯು ಸಂಭವನಿಸುವುದೋ, ಆತ್ಮಕ್ಕೂ ಹಾಗೆಯೇ.
ಅದಕ್ಕು ತಕ್ಕ ಆಹಾರವೂ ಪರಿಶುದ್ಧತೆಯೂ ಇಲ್ಲದಿದರೆ ವ್ಯಾಧಿಯು
ಸಂಭವಿಸುವುದು. ಆತ್ಮಕ್ಕೂ ಶರೀರಕ್ಕೂ ಪರಸ್ಪರಸಂಬಂಧವಿರುವುದ
ರಿಂದ ಆತ್ಮಕ್ಕೆ ಅವುದಾದರೂ ಬಾಧೆಯುಂಟಾದಾಗ ಶರೀರವು ಬಡವಾಗು
ವುದು.
ಚಂದ್ರ--- ಸ್ವಲ್ಪದಿನಗಳಿಗೆ ಮೊದಲ. ಕಾಲಾಧೀನಳಾದ ನಮ್ಮ
ದಾಸಿಯ ವಿಷಯವಾಗಿ ನನ್ನ ಮನಸ್ಸಿಗೆ ವ್ಯಥೆಯುಂಟಾಗಿರುವುದು. ಬಾಲ್ಯ
ದಿಂದಲೂ ನನ್ನನ್ನೆತ್ತಿಕೊಂಡು ಆಡಿಸಿದ ಆ ದಾಸಿಯವವಿಷಯವಾಗಿ ಹೇಗೆ
ತಾನೆ ವ್ಯಸನಪಡದೆ ಇರಲಾದೀತು ? ಈಗ ನೀವು ಕೇಳಿದಂತೆ. ನಾನು ಬಡ
ವಾಗಿರುವುದಕ್ಕೆ ಅದೇ ಕಾರಣವಾಗಿರಬಹುದು. ಇದುವರೆಗ್ಗೂ ನೀವು
ತಿಳಿಸಿದ ಧರ್ಮಗಳಲ್ಲ ಶರೀರವನ್ನು ಕುರಿತವುಗಳೇ ಆಗಿರುವುದರಿಂದ, ಅತ್ಮಕ್ಕೆ
ಸಂಬಂಧಿಸಿದ ಧರ್ಮಗಳನ್ನೂ ಸ್ವಲ್ಪ ವಿವರಿಸಬೇಕೆಂದು ಬೇಡುವೆನು
ಗುರು . ಅತ್ಮವೆಂಬ ನಮ್ಮ ಜ್ಞಾನದೇಹವು ವೃದ್ಧಿ ಹೊಂದುವುದಕ್ಕೆ
ವಿದ್ಯೆಯೇ ಅಹಾರವು. ನಮ್ಮ ಜ್ಞಾನಕ್ಕೆ ಸಾಧನವಾದ ಗ್ರಂಥಾವನಲೋಕ
ನೆಗೆ ವಿದ್ಯೆಯೆಂದು ಹೆಸರು. ಜ್ಞಾನಸಂಪಾದನೆಯನ್ನು ಸಂಪೂರ್ಣವಾಗಿ
ಮಾಡದವವರು ಯಾವವಿಷಯದಲ್ಲಿ ಹೇಗೆ ಪ್ರವರ್ತಿಸಬೇಕೆಂಬುದನ್ನರಿಯದೆ.
ಕಷ್ಟಕ್ಳೊಳಗಾಗಿ ಸುಖವಿಲ್ಲದಿರುವರಾಗುವರು. ದೇಹಶುದ್ದಿಯಂತೆಯೇ ಅತ್ಮ
ಶುದ್ಧಿ ಯೂ ನಮ್ಮ ಸೌಖ್ಯಕೈ ಅತ್ಯಂತಾವಶ್ಯವಾದುದು. ನಾವು ಅತ್ಮಾ
ನಂದವನ್ನು ಅನುಭವಿಸಬೇಕಾದರೆ, ಸಾಧ್ಯವಾದಷ್ಟುಮಟ್ಟಿಗೆ, ಜ್ಲಾನಾಭಿ
ವೃದ್ಧಿಯನ್ನುಂಟುಮಾಡಿಕೊಂಡು, ಚಿತ್ತಶುದ್ದಿಯನ್ನು ಹೊಂದಿರಬೇಕು.
ಚಂದ್ರ--ಜ್ಞಾನಾಭಿವೃದ್ಧಿಯುಂಟಾಗುವುದಕ್ಕೆ ವಿದ್ಯೆಯು ಅವಶ್ಯಕ
ವಾದುದೆಂದು ಹೇಳಿದಿರಲ್ಲವೇ ! ಸ್ತ್ರೀಯರು ಕಲಿಯಬೇಕಾದ ವಿದ್ಯೆಯು
ಎಷ್ಟುಮಟ್ಟಗಿರಬೇಕು ?
ಗುರು---ಪುರುಷರಿಗೆ ಹೇಗೋ ಹಾಗೆಯೇ ನಿಮಗೂ ಈಗ ನಾನು
ಪ್ರತಿದಿನವೂ ಹೇಳುತ್ತಿರುವಂತೆ ಭಾಷಾವಿಷಯಿಕವಾದ ಜ್ಞಾನವನ್ನು ವೃದ್ಧಿ
ಗೊಳಿಸುವ. ವ್ಯಾಕರಣಸಾಹಿತ್ಯಗಳೂ, ವಸ್ತುವಿವೇಚನಶಕ್ತಿಯನ್ನುಂಟು
------------------------------------------
೩೪ ಚಂದ್ರಮತಿ.
ಮಾಡತಕ್ಕ ಗಣಿತಶಾಸ್ತ್ರವೂ, ದಶಕಾಲವರ್ತಮಾನಗಳನ್ನು ತಿಳಿಸತಕ್ನ
ಚರಿತ್ರೆಗಳೂ ಅವಶ್ಯಕಗಳಾಗಿರುವುವು. ನಿಮ್ಮ ನಡೆನುಡಿಗಳು ಕ್ರಮವಾ
ಗಿರುವುದಕ್ಕೋಸುಗ ಎಲ್ಲವುಗಳಿಗಿಂತ ಮುಖ್ಯವಾಗಿ ನೀತಿಗ್ರಂಥಗಳನ್ನೋದ
ಬೇಕು. . ಭಗವಂತನ ಮಹಿಮೆಯನ್ನು ತಿಳಿಸತಕ್ಕ ಗ್ರಂಥಗಳನ್ನೂ, ಪಾತಿ
ವ್ರತ್ಯಧರ್ಮ, ಗೃಹಕೃತ್ಯಗಳ ಕ್ರಮ ಮುಂತಾದುವುಗಳನ್ನು ಬೋಧಿಸತಕ್ಕ
ಗ್ರಂಥಗಳನ್ನೂ ಅವಶ್ಯಕವಾಗಿ ಓದಬೇಕು. . ಇದಲ್ಲದೆ ಸ್ತ್ರೀಯರೇ ಪ್ರತ್ಯಕ್ಷ
ವಾಗಿ ಕಲಿತುಕೊಳ್ಳಬೇಕಾದ ವಿಷಯಗಳು ಕೆಲವಿರುವುವು. _ ಅವುಗಳಲ್ಲಿ
ಹೊಲಿಗೆಯ ಕೆಲಸ, ಅಡಿಗೆ ಮಾಡುವ ವಿಧಾನ, ಶಿಶುಪೋಷಣಕ್ರಮ
ಮುಂತಾದುವುಗಳನ್ನು ಅತ್ಯವಶ್ಯವಾಗಿ ಅಭ್ಯಾಸಮಾಡಬೇಕು. . ಭಗವಂ
ತನು ಸಾಧಾರಣವಾಗಿ ಪುರುಷಕಂಠಕ್ಕಿಂತ ಸ್ತ್ರೀಯರ ಕಂಠದಲ್ಲಿ ಹೆಚ್ಚಾದ
ಮಾಧುರ್ಯವನ್ನಿಟ್ಟರುವನಾದುದರಿಂದ, ಸಂಗೀತಶಾಸ್ತ್ರನನ್ನು ಅಭ್ಯಾಸ
ಮಾಡಿ, ಪತಿಯು ಕಷ್ಟಪಟ್ಟು ಮನೆಗೆಬಂದಾಗ ಇಂಪಾದ ಹಾಡುಗಳನ್ನು
ಹಾಡಿ, ಅತನ ಮನಸ್ಸಿಗೆ ಅಯಾಸವು ತೋರದಂತೆ ಮಾಡುವ ಭಾರವು
ಸ್ತ್ರೀಯರನ್ನೇ ಸೇರಿರುವುದು. . ಪುರುಷರು. ಹೊರಗೆಹೊರಟು ಕಷ್ಟಪಟ್ಸು
ಕೆಲಸಮಾಡತಕ್ಕವರು ; ಸ್ತ್ರೀಯರಾದರೋ . ಸಾಧಾರಣವಾಗಿ ಮನೆ
ಯಲ್ಲಿಯೇ ಇದ್ದುಕೊಂಡು ಮಕ್ಕಳು ಮೊದಲಾದವರ ಯೋಗಕ್ಷೇಮವನ್ನು
ವಿಚಾರಿಸತಕ್ಕವರು ; ಆದುದರಿಂದ ಮಕ್ಕಳಿಗೆ ಬರುವ ಸಾಧಾರಣ ವ್ಯಾಥಿ
ಗಳಿಗೆ ಮಾಡಬೇಕಾದ ಚಿಕಿತ್ಸೆಗಳನ್ನೂ, . ದೇಹಾರೋಗ್ಯವು ಕೆಡದಂತೆ
ಕಾಪಾಡುವುದಕ್ಕೋಸುಗ ಮಾಡಬೇಕಾದ ಕಾರ್ಯಗಳನ್ನೂ,ಮನೆಯಲ್ಲಿ
ಆರಾದರೂ ಗರ್ಭಿಣಿಯರಾದರೆ ಅವರು ಪ್ರಸವಿಸುವಾಗ ಮಾಡಬೇಕಾದ
ಕಾರ್ಯಗಳನ್ನೂ ಚೆನ್ನಾಗಿ ಕಲಿತಿರಬೇಕು. ಅಷ್ಟುಮಟ್ಟಿ ಗಾದರೂ ವೈದ್ಯ
ವನ್ನು ಕಲಿಯದ ಪಕ್ಬದಲ್ಲಿ, ಪುರುಷರು ಮನೆಯಲ್ಲಿಲ್ಲದಿರುವಾಗ ಮನೆಯ
ವರಿಗಾರಿಗಾದರೂ ಆಕಸ್ಮಿಕವಾಗಿ ರೋಗವೋ ಬಾಧೆಯೋ ಉಂಟಾದರೆ
ಅದಕ್ಕೆ ಪ್ರತಿಕ್ರಿಯೆಯನ್ನು ಮಾಡುವುದಕ್ಕೆ ಸ್ತ್ರೀಯರು ಅಸಮರ್ಥೆಯ
ರಾದಾರು !
ಚಂದ್ರ -- ಈಗ.. ಹೇಳಿದುದು. ಸ್ವಲ್ಪಮಟ್ಟಿಗೆ ತಿಳಿಯಿತು. . ನೀವು
ಹೇಳಿದುದರಲ್ಲಿ ಕೆಲವು ನಮ್ಮ ನಡೆಗಳನ್ನು ಕ್ರಮಪಡಿಸಿಕೊಳ್ಳುವುದಕ್ಕೂ,
-------------------------------------------
ಅರನೆಯ ಪ್ರಕ ರಣ. ೩೫
ಸಂಸಾರಸಂಬಂಧಗಳಾದ ಕೆಲವು ವಿಷಯಗಳನ್ನು ನಿರ್ವಹಿಸುವುದಕ್ಳೂ
ಯುಕ್ತಗಳಾಗಿರುವುವು. ಇನ್ನು ಆತ್ಮಶುದ್ದಿಯೆಂದರೇನೋ ಅದನ್ನೂ
ದಯೆಯಿಟ್ಟು ತಿಳಿಸಿರಿ.
ಗುರು---ಆತ್ಮಕೈ ದುಃಖವನ್ನುಂಟುಮಾಡತಕ್ಕ ದುರ್ಗುಣಗಳಾವುವೂ
ಇಲ್ಲದಿರುವ ಕಾಲದಲ್ಲಿ ಅದು ಪರಿಶುದ್ಧವಾದ ದೆಶೆಯಲ್ಲಿರುವುದು. ಶರೀ
ರಕ್ಕೆ ರೋಗಕಾರಣಗಳಾದ ಅಪಥ್ಯಪದಾರ್ಧಗಳು ಹೇಗೋ ಆತ್ಮಕ್ಕೆ ಈ
ದುರ್ಗುಣಗಳೂ ಹಾಗೆಯೇ. ಆರೋಗ್ಯಕರಗಳಾದ ಪಥ್ಯಪದಾರ್ಥಗಳಂತೆ
ಯೇ ಸುಗುಣಗಳು ಅತ್ಮಕ್ಕೆ ಅವಶ್ಯಕವಾದವುಗಳು. ಯಾವಾಗಲೂ
ಸುಗುಣಗಳು ಸಂತೋಷವನ್ನೂ ದುರ್ಗುಣಗಳು ದುಃಖವನ್ನೂ ಉಂಟು
ಮಾಡುವುವು. ಸತ್ಯ, ಶಾಂತತ್ವ, ಧೈರ್ಯ, ವಿನಯ, ದಯೆ, ತೃಪ್ತಿ
ಮೊದಲಾದುವು ಅತ್ಮಾನಂದವನ್ನುಂಟುಮಾಡತಕ್ಕ ಸುಗುಣಗಳು. ಇವು
ಗಳಿಗೆ ವ್ಯತಿರಿಕ್ತಗಳಾಗಿರುವ, ಅನೃತ, ಕೋಪ, ಅಹಂಕಾರ, ಶ್ರೂರತ್ವ,
ಆಶೆ ಮೊದಲಾದುವುಗಳು ಆತ್ಮಕ್ಕೆ ಆಯಾಸವನ್ನುಂಟುಮಾಡತಕ್ಕ
ದುರ್ಗುಣಗಳು.
ಚಂದ್ರ---ಈಗ ನೀವು ತಿಳಿಸಿದ ಸುಗುಣದುರ್ಗುಣಗಳ ವಿಷಯದಲ್ಲಿ
ಮತ್ತೇನಾದರೂ ಹೇಳತಕ್ಕುದಿರುವುದೇ !
ಗುರು---ಇವೆಲ್ಲವೂ ಇತರರ ವಿಷಯನಾಗಿ ನಾವು ನಡೆದುಕೊಳ್ಳ
ಬೇಕಾದ ಧರ್ಮಗಳಲ್ಲಿ ಸೇರುವುವು. ಈಗ ಅವುಗಳ ವಿಷಯದಲ್ಲಿ ಸ್ವಲ್ಲ
ತಿಳಿಸುವೆನು. ಸಮಸ್ತ ಶುಭಗಳಿಗೂ ಸತ್ಯವೇ ಮೂಲವಾದುದು ; ನಾವು
ಪ್ರಾಣಾಂತಕರವಾದ ವಿಪತ್ತುಸಂಭವಿಸಿದಾಗಲೂ ಸತ್ಯವನ್ನು ತಪ್ಪಬಾರದು ;
ಸರ್ವಧನವೂ ನಾಶವಾಗಿಹೋಗುವಂತಹ ಕಾಲದಲ್ಲಿಯಾದರೂ ನಿಶ್ಚಯ
ವನ್ನೇ ಹೇಳಬೇಕು. ಸುಳ್ಳಾಡಿದರೆ ಪರಲೋಕಹಾನಿಯುಂಟಾಗುವು
ದೊಂದಲ್ಲದೆ, ನಾವು ಅಸತ್ಯವನ್ನಾಡಿದೆನೆಂದು ಇಹಲೋ˜ಕದಲ್ಲಿರುವವರೂ
ನಮ್ಮಲ್ಲಿ ವಿಶ್ವಾಸವನ್ನಿಡದಿರುವರು
ಚಂದ್ರ---ನಾವು `ಯಾವ ವಿಷಯದಲ್ಲಿಯೂ ಅನೃತನನ್ನಾಡಲೇ
ಬಾರದೇ ?
-------------------------------------
೩ ೬ ಚಂದ್ರಮತಿ.
ಗುರು---ಆಡಲೇಬಾರದು. ಅಸತ್ಯಕ್ಕೆ ನಾವು ಒಂದುವಿಷಯದಲ್ಲಿ
ಅವಕಾಶವನ್ನು ಕೊಟ್ಟರೆ, ಮತ್ತೊಂದು ವಿಷಯದಲ್ಲಿಯೂ ಹಾಗೆಯೆ
ಅಸತ್ಯನನ್ನಾಡಬೇಕೆಂಬ ಬುದ್ಬಿಯು ಹುಟ್ಟಿ ಕ್ರಮಕ್ರಮವಾಗಿ ನಾವು ಅಸ
ತ್ಯಕ್ಕೆ ತವರ್ಮನೆಯಾಗಿ ದುರ್ಗತಿಯನ್ನು ಹೊಂದುವೆವು.
ಚಂದ್ರ - ಈಗ ನೀವು ಸತ್ಯದ ವಿಷಯದಲ್ಲಿ ಹೇಳಿದುದನ್ನು ಪರಿಶೀಲಿ
ಸಿದರೆ, ನಾವು ಯಾವಾಗಲೂ ಶಾಂತತ್ವ ಮೊದಲಾದ ಗುಣಗಳನ್ನೇ ಹೊಂ
ದಿರಬೇಕೆಂದೂ, ಕೋಪಾದಿಗಳಿಗೆ ಯಾವಾಗಲೂ ಅವಕಾಶವನ್ನು ಕೊಡ
ಲಾಗದೆಂದೂ ತೋರುವುದು
ಗುರು--ಅನೃತ, ಅಹಂಕಾರ,. ಕ್ರೂರತ್ವ. ಮೊದಲಾದುವುಗಳನ್ನು
ಕೈಲಾದಷ್ಟು ಮಟ್ಟಿಗೆ ಯಾವಾಗಲೂ ನಾವು ದೂರೀಕರಿಸಿರಬೇಕಾದರೂ
ಆಗಾಗ ಒಂದೊಂದುಬಾರಿ ಯುಕ್ತರೀತಿಯಲ್ಲಿ ಕೋಪ ಮೊದಲಾದ ಕೆಲ
ವನ್ನು. ತೋರಿಸುತ್ತಿರಬೇಕು. . ಒಬ್ಬ ಸೇವಕನಾಗಲಿ, . ಬಾಲಕನಾಗಲಿ,
ತಪ್ಪುಮಾಡಿದಾಗ ಅವನಮೇಲೆ . ನಾವು . ಕೋಪವನ್ನು ತೋರಿಸದಿದ್ದರೆ
ಅವನ ನಡೆಯು ಕೆಟ್ಪುಹೋಗಿ ಅವನು ದುರ್ಮಾರ್ಗಪ್ರವರ್ತಕನಾಗುವನು
ಆದುದರಿಂದ ಕ್ರೂರೋದ್ದೇಶವಾವುದೂ ಇಲ್ಲದೆ ಪರರಿಗೆ ಮೇಲ್ಮೆಯುಂಟಾ
ಗುವುದಕ್ಕೋಸುಗ ಯುಕ್ತಕಾಲಗಳಲ್ಲಿ ನಾವು ಕೋಪವನ್ನು
ಮಾಡಬೇಕು. ಅದರಂತೆಯೇ ನಾವು ನ್ಯಾಯವಾದ ಸಕಲ ಮನೋರಥ
ಗಳನ್ನೂ ಅಪೇಕ್ಷಿಸಬಹುದು. ಅತ್ಯಾಶೆಯನ್ನು ಮಾತ್ರ ತ್ಯಜಿಸಬೇಕು.
ಚಂದ್ರ---ಉಳಿದ ಸುಗುಣಗಳನ್ನು ಕುರಿತು ತಿಳಿಸಬೇಕಾದುದೇನು
ದರೂ ಇರುವ ಪಕ್ಷದಲ್ಲಿ ನನ್ನಲ್ಲಿ ಅನುಗ್ರಹವಿಟ್ಟು ಅದನ್ನೂ ತಿಳಿಸಬೇಕು.
ಗುರು---ವಿಸ್ತಾರವಾಗಿ ತಿಳಿಸಬೇಕಾದುದಾವುದೂ ಇಲ್ಲ. ಶಾಂತತೆ
ಯೊಂದಿದ್ದರೆ ನಮ್ಮ ಇತರ ಸುಗುಣಗಳೆಲ್ಲ ಮತ್ತಷ್ಟು ಪ್ರಕಾಶನನ್ನು ಹೊಂ
ದುವುವು. ಭೃತ್ಯರೂ, ನೆರೆಹೊರೆಯವರೂ, ಮನೆಯವರೂ ನಮ್ಮವಿಷಯ
ದಲ್ಲಿ ಅಧಿಕಾನುರಾಗವುಳ್ಳವರಾಗುವರು. ಆಪತ್ಕಾಲಗಳಲ್ಲಿ ನಾವು ಮುಖ್ಯ
ವಾಗಿ ಧೈರ್ಯವನ್ನವಲಂಬಿಸಿರಬೇಕು. ಅಂತಹ ಥೈರ್ಯವನ್ನು ಕಳೆದು
ಕೊಂಡರೆ, ಅದರಿಂದ . ನಮಗೆ ಯಾವಲಾಭವೂ ಉಂಟಾಗದಿದ್ದರೂ,
ವಿಪತ್ತುಗಳು ಇಮ್ಮಡಿಯಾಗಿ ತೋರಿ ಅಧಿಕ ದುಃಖವನ್ನುಂಟುಮಾಡುವುವು ;
------------------------------------------
ಏಳನೆಯ ಪ್ರಕರಣ. ೩೭
ಧೈರ್ಯವನ್ನವಲಂಬಿಸಿರುವುದರಿಂದ, ಸಂಭವಿಸಿದ ವಿಪತ್ತಿನಲ್ಲಿ ಅರ್ಧಪಾಲು
ಕಡಿಮೆಯಾಗಿ ಹೋಗುವುದು ; ವಿನಯವನ್ನು ಕೈಗೊಂಡು ನಡೆದುಕೊಂ
ಡರೆ ಸಕಲರೂ ನಮ್ಮ ವಿಷಯದಲ್ಲಿ ಒಳ್ಳೆಯ ಅಭಿಪ್ರಾಯವುಳ್ಳವರಾಗು
ವರು. ನಾವು ತಗ್ಗಿ ನಡೆದರೆ ಇತರರು ನಮ್ಮ ದುರ್ಗುಣಗಳನ್ನೂ ಲಕ್ಷಿ
ಸದೆ ಅವುಗಳನ್ವೆಲ್ಲ ಸುಗುಣಗಳನ್ನಾಗಿಯೇ ಭಾವಿಸುವರು ; ಗರ್ವವನು,
ಹೊಂದಿ ಬೆರತು ಬೀಗಿದರೆ ನಮ್ಮ ಸುಗುಣಗಳ್ಳೂ ದುರ್ಗುಣಗಳಾಗಿಯೆ
ತೋರುವುವು. ಸದ್ಗುಣಗಳೊಳಗೆಲ್ಲ ದಯೆಯೇ ಅತ್ಯುತ್ಕೃಷ್ಟವಾದುದು :
ಅದನ್ನು ಮೀರಿದ ಧರ್ಮವು ಮತ್ತೊಂದಿಲ್ಲ. ನಾವು ತೃಪ್ತರಾಗದೆಯಿದ್ದರೆ
ನಮ್ಮ ಮನಸ್ಸಿಗೆ ಯಾವಾಗಲ್ಲೂ ಸುಖವುಂಟಾಗುವುದೇ ಇಲ್ಲ. ಅದುದ
ರಿಂದ ನಾವು ಧರ್ಮ ಕಾರ್ಯಗಳನ್ನು ಮಾಡುವುದರಲ್ಲಿಯೂ ವಿದ್ಯೆಯನ್ನು
ಸಂಪಾದಿಸುವದರಲ್ಲಿಯೂ ಮಾತ್ರ ಅಲ್ಪತೃಪ್ತರಾಗದೆ ಉಳಿದ ಸಮಸ್ತ ವಿಷ
ಯಗಳಲ್ಲಿಯೂ ಭಗವಂತನು ನಮಗೆ ಎಷ್ಟು ಕೊಟ್ಟರುವನೋ ಅಷ್ಟರಿಂ
ದಲೇ ತೃಪ್ತರಾಗಿರಬೇಕು.
ಏಳನೆಯ ಪ್ರಕರಣ
-----------
ಮತ್ತೆರಡು ದಿನಗಳು ಕಳೆದಬಳಿಕ ಒಂದುದಿನ ಸಾಯಂಕಾಲ ಚಂದ್ರ
ಮತಿಯು ತನ್ನ ಒಡನಾಡಿಯರೊಡನೆ ಓದಿಕೊಳ್ಳುವುದಕ್ಕೋಸುಗ ಬಂದಳು.
ಆಗ ವಿದ್ಯಾಸಮುದ್ರನು ಯಾರೊಡನೆಯೋ ಅಂತರಂಗದಲ್ಲಿ ಮಾತನಾಡು
ತ್ತಿರಲು, ಆತನು ಹೊರಕ್ಕೆ ಬರುವವರೆಗೂ ಬಾಗಿಲ ಬಳಿಯಲ್ಲಿದ್ದ ಕಾಲು
ಮಣೆಯ ಮೇಲೆ ಕುಳಿತುಕೊಂಡು ತಂಗಾಳಿಯನ್ನು ಸೇವಿಸುತ್ತ ಬೇಸ
ಗೆಯ. ಸೆಗೆಯನ್ನು ಪರಿಹರಿಸಿಕೊಂಡು,ಕೈಲಿದ್ದ ಪುಸ್ತಕವನ್ನು ತೆರೆದು
ಹಿಂದಣ. ಪಾಠಗಳನ್ನು . ಓದಿಕೊಳ್ಳುತ್ತಿದಳು. ಆಗ. ಕೆಲವು ವೈಷ್ಣವರು
ಶಂಖಚಕ್ರಗದಾಂಕಿತವಾದ ಮೈಯುಳ್ಳವರಾಗಿ ಅಲ್ಲಿಗೆ ಬಂದು ವಿಷ್ಣುಗೀತ
ಗಳನ್ನು. ಹಾಡುತ್ತ ತಮಗೇನಾದರೂ ದಾನಮಾಡಬೇಕೆಂದು ಚಂದ್ರಮತಿ
ಯನ್ನು ಬಹು ದೈನ್ಯದಿಂದ ಬೇಡಿಕೊಂಡರು. ಇಷ್ಟರಲ್ಲಿ ವಿದ್ಯಾಸಮುದ್ರನು
--------------------------------------
೩೮ ಚಂದ್ರಮತಿ
ಒಳಗಿಂದ ಬಂದು, ಚಂದ್ರಮತಿಯು ಏನುಮಾಡುವಳೋ ನೋಡಬೇ
ಕೆಂದು ಮರೆಯಲ್ಲಿ ನಿಂತು ನೋಡುತಲಿದ್ದನು. ಚಂದ್ರಮತಿಯು ಸ್ವಲ್ಪ ಕಾಲ
ಆಲೋಚಿಸಿ, ತಾನು ಹಣ್ಣುಗಳನ್ನು ಕೊಂಡುಕೊಳ್ಳಬೇಕೆಂದು ತಂದಿದ್ದ
ದುಡ್ಡನ್ನು ಸೆರಗಿನಿಂದ ಬಿಚ್ಚಿ ತೆಗೆದು, ಅವರಲ್ಲಿ ತರುಣರಾಗಿದ್ದವರಿಗಾರಿಗೂ
ಕೊಡದೆ ಒಬ್ಬ ಮುದುಕನಿಗೆ ಕೊಟ್ಟು ಕಳುಹಿಸಿಬಿಟ್ಟಳು. _ ಅನಂತರ
ವಿದ್ಯಾಸಮುದ್ರನು ಹೊರಕ್ಕೆಬಂದು ಚಂದ್ರಮತಿಯನ್ಶು ನೋಡಿ “ ಎಲೌ!
ಇಲ್ಲಿ ನಿಂತಿದ್ದ ಆ ಜನರೊಡನೆ ಏನು ಮಾತಾಡುತ್ತಿದೆ? “ ಎಂದು ಕೇಳಿದನು.
ಚಂದ್ರ--ಅವರು ಇಲ್ಲಿಗೆಬಂದು ತಮಗೇನಾದರೂ ಕೊಡಬೇಕೆಂದು
ನನ್ಶನ್ನು ಬಹುವಾಗಿ ಪೀಡಿಸಿದರು. ಎಲ್ಲರೂ ಕಷ್ಟಪಟ್ಟು ಕೆಲಸಮಾಡ
ಬೇಕೆಂದು ಜೀವನೋಪಾಯಕ್ಕೋಸುಗ ಕಷ್ಟಪಡಲು ಸಮರ್ಥರಾಗಿರ
ಲೆಂದೇ ಭಗವಂತನು ಎಲ್ಲರಿಗೂ ಕೈ ಕಾಲು ಮೊದಲಾದ ಅವಯವಗಳನ್ನು
ದಯೆಪಾಲಿಸಿರುವನೆಂದೂ ಮೊನ್ನೆಯದಿನ ತಾವು ಅಪ್ಪಣೆಕೊಡಿಸಿರಲಿಲ್ಲವೆ ?
ಅದುದರಿಂದ ಒಬ್ಬರಿಗೊಬ್ಬರು ಕೊಡಬೇಕಾದ ಅವಶ್ಯಕವಿಲ್ಲವೆಂದು ನನಗೆ
ತೋರಿತು. ಆದರೂ ಅವರ ಸಮೂಹದಲ್ಲಿದ್ದ ಒಬ್ಬ ವೃದ್ಧನನ್ನು ನೋಡಿ
ದಾಗ ಅವನನ್ನು ಸುಮ್ಮನೆ ಕಳುಹಿಸಿ ಬಿಡುವುದಕ್ಕೆ ಮನಸ್ಸು ಬಾರದೆ ತಿಂಡಿ
ಗೋಸುಗ ತಂದಿದ್ದ ದುಡ್ಬ ನ್ನು ಅವನಿಗೆ ಕೊಟ್ಟುಬಿಟ್ಟೆನು.
ಗುರು--ನೀನು ತಿಳಿಯದೇ ಮಾಡಿರುವದಾದರೂ ಆ ಮುದುಕನಿಗೆ
ಕೊಟ್ಟುದು ಬಲು ಒಳ್ಳೆಯದಾಯಿತು. ಅನ್ಯರನ್ನೇ ನಂಬಿಕೊಂಡಿರದೆ
ತನ್ನ ಜೀವನಕ್ಕೋಸುಗ ತಾನೆ ಪಾಡುಪಡಬೇಕಾದುದು ಪ್ರತಿಮನುಷ್ಯ
ನಿಗೂ ಆವಶ್ಯಕವೇ ಆಗಿದ್ದರೂ, ಮಹಾರಾಜನು ಮೊದಲ್ಗೊಂಡು ಗರ್ಭ
ದರಿದ್ರನವರೆಗೂ ಅನ್ಯೋನ್ಯಸಾಹಾಯ್ಯವು ಆವಶ್ಯಕವವಾಗಿ ಬೇಕಾಗಿರು
ವುದು. ನೀವು ಪ್ರತಿದಿನವೂ ಭುಂಜಿಸುವ ಪಂಚಭಕ್ಷ್ಯಪರಮಾನ್ನಗಳಿಗೆ
ಬೇಕಾಗುವ ಪದಾರ್ಥಗಳು ಹೇಗೊ, ಬಡವರು ಕುಡಿಯುವ ಗಂಜಿಗೆ
ಬೇಕಾಗುವ ಅಕ್ಕಿಯೊ ಹಾಗೆಯೇ ಹಲವರು ಶ್ರಮಪಟ್ಟಲ್ಲದೆ ಲಭಿಸದು
ಒಬ್ಬ ಭಗವಂತನಿಂದಲೇ ಸಕಲರೂ ಸೃಜಿಸಲ್ಪಟ್ಟು ರಕ್ಷಿತರಾಗಿರುವುದರಿಂದ
ಜನರೆಲ್ಲರೂ ಏಕಕುಟುಂಬದವರಂತೆ ಇರಬೇಕಾದುದು ಪರಮಾವ
-------------------------
ಏಳ ನೆ ಯೆ ಪ್ರ ಕ ರಣ. ೩೯
ಶ್ಯಕವು. ಒಂದು ಕುಟುಂಬದಲ್ಲಿ ಸಂಪಾದಿಸಲಾರದವನಾದ ಒಬ್ಬ ಅಶಕ್ತ
ನಿದ್ದ ಪಕ್ಷದಲ್ಲಿ ಅವನನ್ನು ಪೋಷಿಸಬೇಕಾದುದು ಸಮರ್ಥನಾದವನಿಗೆ
ಹೇಗೆ ಆವಶ್ಯಕವೋ, ಹಾಗೆಯೇ ಭಗವತ್ಕುಟುಂಬವಾದ ಈ ಪ್ರಪಂಚದಲ್ಲಿ
ಶಕ್ತವಂತರು ಅಶಕ್ತರನ್ನು ಕಾಪಾಡುವುದು ಮುಖ್ಯ ಕರ್ತವ್ಯವಾಗಿರುವುದು.
ಆದುದರಿಂದ ಅಂಗವೈಕಲ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ರೋಗದಿ೦
ದಾಗಲೀ, ಶ್ರಮಪಟ್ಟು ಗಳಿಸಲಾರದಂತಹ ಬಡವರಿಗೆಲ್ಲ ನಮ್ಮ ಕೈಲಾದ
ಸಾಹಾಯ್ಯವನ್ನು ಮಾಡಬೇಕು. ಶಕ್ತಿಯಿದ್ದರೂ ಶ್ರಮಪಡುವುದಕ್ಕೆ ಮನ
ಸ್ಸಿಲ್ಲದೆ ಮೈಗಳ್ಳರಾಗಿ ಯಾಚನೆಯನ್ಶೇ ಜೀವನೋಪಾಯವನ್ನಾಗಿ ಮಾಡಿ
ಕೊಂಡು ತಿರುಗುವ ದೃಢಗಾತ್ರರಿಗೆ ಮಾತ್ರ ನಾವೇನನ್ನೂ ಕೊಡಲಾಗದು.
ದೇಶಕ್ಕೆ ಕ್ಷಾಮಪ್ರಾಪ್ತಿಯಾದಕಾಲದಲ್ಲಾಗಲೀ, ಪರದೇಶದಿಂದ ಮಾರ್ಗಾ
ಯಾಸವನ್ನು ಹೊಂದಿಬಂದಿರುವಾಗಲಾಗಲೀ, ದೈವವಶದಿಂದ ಯಾವುದಾ
ದರೂ ವಿಪತ್ತುಸಂಭವಿಸಿದಾಗಲಾಗಲೀ, ದೃಢಕಾಯರಾಗಿರುವಂತಹರಿಗೂ
ಕೊಡಬೇಕು. ಪಾತ್ರವನ್ನರಿತು ಈಪ್ರಕಾರವಾಗಿ ಮಾಡುವ ದಾನದಿಂದಲೆ
ಫಲವಾಗುವುದು. _ ಸಾಧ್ಯವಾದಷ್ಟುಮಟ್ಟಗೆ ಎರಡನೆಯವರಿಗೆ ತಿಳಿಯ
ದಂತೆ ರಹಸ್ಯವಾಗಿ ದಾನಮಾಡಬೇಕು. ಪುಷ್ಪವು ಮನೆಯಲ್ಲಿದ್ದರೂ ಅದರ
ಪರಿಮಳವು ಎಲ್ಲರಿಗೂ ತಿಳಿಯುವಂತೆ, ಯೋಗ್ಯವಾದವನು ಎಲ್ಲಿದರೂ
ಅವನ ಸುಗುಣಗಳು ಬಹಿರಂಗಕ್ಕೆ ಬಾರದಿರವು. ಪ್ರಸಿದ್ಧಿಯನ್ನು
ಪಡೆಯುವುದಕ್ಕೋಸುಗ, ಮುಖಸ್ತುತಿಯನ್ನು ಮಾಡುವವರಿಗೂ ಮೋಸ
ಗಾರರಿಗೂ ಮಾಡತಕ್ಕ ದಾನಗಳು ನಿರರ್ಥಕಗಳು.
ಚಂದ್ರ--ನಾವು ಇತರಜನರ ವಿಷಯದಲ್ಲಿ ನಡೆದುಕೊಳ್ಳಬೇಕಾದ
ಧರ್ಮಗಳನ್ನು ಕುರಿತು ತಿಳಿಸುವೆನೆಂದು ಕೆಲವುದಿನಗಳಹಿಂದೆ ವಾಗ್ದಾನ
ಮಾಡಿದ್ದರಲ್ಲವೆ ? ಈಗ ದಯೆಯಿಟ್ಟು ಅವುಗಳನ್ನೆಲ್ಲಾ ಸಮಗ್ರವಾಗಿ ತಿಳಿಸ
ಬೇಕು.
ಗುರು--ಹಿಂದೆ ನಾನು ತಿಳಿಸಿದ ಸತ್ಯ ಮೊದಲಾದುವೂ, ಈಗ ತಿಳಿ
ಸಿದ ದಾನವಿಷಯವೂ, ಜನರ ವಿಷಯಿಕಗಳಾದ ಧರ್ಮಗಳಲ್ಲಿಯೇ ಸೇರು
ವುವು. ಅಂತಹ ಧರ್ಮಗಳನ್ನೆಲ್ಲ ಸಂಪೂರ್ಣವಾಗಿ ಹೇಳಬೇಕಾದರೆ
ಬಹುದಿನಗಳು ಬೇಕಾಗುವುವು. ಸಾಮಾನ್ಯವಾಗಿ ಜನರ ವಿಷಯದಲ್ಲಿ ನಡೆದು
----------------------------------------
೪೦ ಚಂದ್ರಮತಿ.
ಕೊಳ್ಳಬೇಕಾದ . ಧರ್ಮಗಳೊಳಗೆ ಕೆಲವನ್ನು ಮಾತ್ರ ಈಗ. ಸಂಗ್ರಹಿಸಿ
ಹೇಳಿ, ಬಂಧುಗಳ ವಿಷಯದಲ್ಲಿ ಆಚರಿಸಬೇಕಾದ ಧರ್ಮಗಳನ್ನು ಮತ್ತೊಂದು
ಬಾರಿ ತಿಳಿಸುವೆನು. ಮಳೆಗೂ ಬಿಸಲಿಗೂ ತಾನು ಗುರಿಯಾಗಿದ್ದರೂ
ಇತರರಿಗೆ ನೆಳಲನ್ಮೂ ಹಣ್ಣುಗಳನ್ನೂ ಕೊಡುವ ವೃಕ್ಷಗಳಂತೆಯೇ ಸಕಲರೂ
ತಾವು ಕಷ್ಟಪಡುತ್ತಿದರೂ ಸೈರಿಸಿಕೊಂಡು ಪರೋಪಕಾರವನ್ನು ಮಾಡುವು
ದಕ್ಕೆ ಪ್ರಯತ್ನಿಸಬೇಕು.
ಚಂದ್ರ---ಯೋಗ್ಯಾಯೋಗ್ಯ ವಿಚಾರವನ್ನು ಮಾಡದೆ ಸಕಲರಿಗೂ
ಉಪಕಾರವನ್ನು ಮಾಡುತ್ತಿರಬೇಕೆ?
ಗುರು--ಸಜ್ಜನರಿಗೆ ಮಾಡುವ. ನ್ಯಾಯವಾದ ಸಾಹಾಯ್ಯವೇ
ಉಪಕಾರವೆನಿಸಿಕೊಳ್ಳುವುದಲ್ಲದೆ . ಶಿಷ್ಟದುಷ್ಟರೆಂಬ . ವಿಚಕ್ಷಣೆಯಿಲ್ಲದೆ
ಮಾಡುವ ಸಾಹಾಯ್ಯುವು ಉಪಕಾರವೆನಿಸಿಕೊಳ್ಳುವುದಿಲ್ಲ. ಆದುದರಿಂದಲೆ
ಕಳ್ಳರು ಮೊದಲಾದವರಿಗೆ ನಾವು ಸಾಹಾಯ್ಯವನ್ನು ಮಾಡಿದರೆ, ಉಪಕಾರ
ಮಾಡಿದವರಾಗದಿರುವುದೊಂದಲ್ಲದೆ ಶಿಕ್ಪಾರ್ಹರೂ ಅಗುವೆವು.
ಚಂದ್ರ---ಉಳಿದ ಧರ್ಮಗಳನ್ನು ತಿಳಿಸುವಿರಾ ?
ಗುರು---ನಾವೆಷ್ಟು ಬಡತನದಲ್ಲಿದರೂ. ಕಂಡವರ ಪದಾರ್ಥವನ್ನು
ಮುಟ್ಟಬಾರದು. ಕಳ್ಳತನ ಮಾಡಿದವರನ್ನು ಇಹಲೋಕದಲ್ಲಿ ರಾಜನು
ಶಿಕ್ಷಿಸುವನು ; ನಾವು ಕದ್ದಾಗ ಯಾರೂ ನೋಡಲಿಲ್ಲವೆಂದು ತಿಳಿದುಕೊಂ
ಡರೂ ಕಳ್ಳತನವು ಮಾತ್ರ ಯಾವಾಗಲೋ ಬಯಲಾಗದಿರದು. ಒಂದು
ವೇಳೆ ರಹಸ್ಯವಾಗಿದ್ದರೂ ಸರ್ವಜ್ಞ ನಾದ ಭಗವಂತನನ್ನು ಮೋಸಗೊಳಿಸು
ವುದಕ್ವಾಗುವುದಿಲ್ಲ. . ಅದುದರಿಂದ ಪರಲೋಕದಲ್ಲಿಯಾದರೂ ಶಿಕ್ಷೆಯಾಗ
ದಿರದು. . ಅದುಕಾರಣ ಎಷ್ಟು ಕಷ್ಟಗಳು ಸಂಭವಿಸಿದರೂ, ಪ್ರಾಣಾಪಾ
ಯವೇ ಉಂಟಾದರೂ ಕಳ್ಳತನವನ್ನು ಮಾತ್ರ ಮಾಡಬಾರದು. ನಮಗೆ
ಯಾರಾದರೂ ಹೆಚ್ಚಾದ ಉಪಕಾರವನ್ನು ಮಾಡಿದರೆ ಅದನ್ನು ನಾವು ಮರೆ
ಯದೆ ಸಾಧ್ಯವಾಗುವ ಪಕ್ಬದಲ್ಲಿ ಪ್ರತ್ಯುಪಕಾರವನ್ಶು ಮಾಡಬೇಕು ; ಕೃತ
ಘ್ನನಾದವನನ್ನು ಸಕಲರೂ ದ್ವೇಷಿಸಿ ಅವನಿಗೆ ಕೇಡನ್ನೇ ಬಗೆಯುವರು.
ಪರರ. ಸಂಪತ್ತನ್ನು ಕಂಡು ನಾವು ಯಾವಾಗಲೂ ಕರುಬಬಾರದು ; ಈ
ಅಸೂಯಾಗುಣವನು ತಾನು ಸೇರಿದ ಸ್ಕಳವನ್ನೆಲ್ಲ ನಿರಂತರವೂ ಬೆಂಕಿಯಂತೆ
--------------------------------------------
ಏಳನೆಯ ಪ್ರಕರಣ. ೪೧
ನಾಶಗೊಳಿಸುವುದು. ನೆರೆಯವರ ಸಂತೋಷವನ್ನು ಕಂಡು ಸೈರಿಸದವರು
ರೋಗವಿಲ್ಲದೆಯೇ ಬಾಧೆಪಡುವರು. . ನಾವು ಆರನ್ನೇಯಾದರೂ ಆವವಿಷ
ಯದಲ್ಲಿಯೂ ಮೋಸಗೊಳಿಸಬಾರದು. ಸಕಲ ವಿಷಯಗಳಲ್ಲಿಯೂ
ನ್ಯಾಯವಾಗಿ ಪ್ರವರ್ತಿಸಬೇಕು. ನಾವು ಆರಿಗಾದರೂ,ಆವುದಾದರೊಂದು
ನ್ಯಾಯ್ಯಯುಕ್ತವಾದ ವಿಚಾರದಲ್ಲಿ ವಾಗ್ದಾನಮಾಡಿದ ಪಕ್ಷದಲ್ಲಿ, ಎಷ್ಟು
ಶ್ರಮಪಟ್ಟಾದರೂ ನಾವಾಡಿದಂತೆ ನಡೆದುಕೊಳ್ಳಬೇಕು. ಎಲ್ಲಕ್ಕೂ
ವಾಗ್ದಾನಮಾಡದೆ ನಮ್ಮ ಸಾಮರ್ಥ್ಯವನ್ನು ನೋಡಿಕೊಂಡು ಜಾಗರೂಕತೆ
ಯಿಂದ ಮಾತನಾಡಬೇಕು. ವೈರವೂ ಮೈತ್ರಿಯೂ ಮಾತುಗಳಿಂದಲೇ
ಹುಟ್ಟುವುವಾದುದರಿಂದ, ಯಾವಾಗಲ್ಲೂ ಬಿರುನುಡಿಗಳನ್ನಾಡದೆ, ಮೃದು
ವಾದದ ಮಾತುಗಳನ್ನಾಡುತ್ತಿರಬೇಕು. . ತಿಳಿವಿಲ್ಲದವರು . ದುಡುಕಿ ನಮ್ಮ
ನ್ನೇನಾದರೂ ನಿಂದಿಸಿದರೂ ಸೈರಿಸಿಕೊಂಡು ಸುಮ್ಮನಿರಬೇಕು. ಯಾವಾ
ಗಲೂ ಯಾರನ್ಮೂ ಅವರಿಲ್ಲದ ಕಾಲದಲ್ಲಿ ದೂಷಿಸಲಾಗದು ; ಇವರಾಡಿದ
ಮಾತನ್ನು ಅವರಬಳಿಯಲ್ಲಿಯೂ ಅವರಾಡಿದಮಾತನ್ನು ಇವರಬಳಿಯ
ಲ್ಲಿಯೂ ಹೇಳದೆ ಆಯಾ ಮಾತುಗಳನ್ನು ಅಲ್ಲಲಿಯೇ ಮರೆತಂತಿರಬೇಕು ;
ಸಕಲರನ್ನೂ ಗೌರವಿಸಬೇಕು; ನಮಗಿಂತ ಹೆಚ್ಚಾದವರ ವಿಷಯದಲ್ಲಿ
ಭಕ್ತಿಯುಳ್ಳವರಾಗಿ, . ಅವರು. ಹೇಳುವ. ನ್ಯಾಯ್ಯವಾದ ವಿಷಯಗಳಿಗೆ
ಅಧೀನರಾಗಿ ನಡೆದುಕೊಳ್ಳಬೇಕು ; ನಮ್ಮ ಸೇವಕರು. ಮೊದಲಾದವರ
ಮೇಲೆ ನಿಷ್ಠಾರಣವಾಗಿ ಕೋಪಿಸದೆ ಒಳ್ಳೆಯ ಮಾತುಗಳನ್ನಾಡಿಯೇ ಅವ
ರಿಂದ ಕೆಲಸಗಳನ್ನು ಮಾಡಿಸಬೇಕು. ಆವ ವಿಷಯದಲ್ಲಿಯೇ ಅದರೂ
ದುಡುಕಲಾಗದು ; ಎಲ್ಲ ಕೆಲಸಗಳನ್ನೂ ಚೆನ್ನಾಗಿ ಆಲೋಚಿಸಿ ಯುಕ್ತ
ವೆಂದು ತೋರಿದಬಳಿಕ ಮಾಡಬೇಕು. ಎಲ್ಲರ ವಿಷಯದಲ್ಲಿಯೂ ಸಮ
ಬುದ್ಧಿ ಯುಳ್ಳವರಾಗಿ, ಇತರರು ಆವುದಾದರೊಂದು ವಿಷಯದಲ್ಲಿ ನಮ
ಅಭಿಪ್ರಾಯವನ್ನು ಕೇಳಿದಕ್ಕೆ, ಅವರೊಡನೆ ನಿಷ್ಪಕ್ಷಪಾತವಾಗಿ ನಮಗೆ
ತೋರಿದ ವಿಷಯವನ್ನು ಕಪಟವಿಲ್ಲದ ಹೇಳಬೇಕು. ನಿಷ್ಕಾರಣವಾಗಿ
ಇತರರಿಗೆ ನೋವನ್ನುಂಟುಮಾಡದಂತೆ ಜಾಗರೂಕರಾಗಿರಬೇಕು. ದೈವಾ
ಜ್ಞೆಯಿಂದ ಇತರರಿಗಾರಿಗಾದರೂ . ಸಂಘಟಸಿರಬಹುದಾದ ಅಂಗವಿಕಾರ
ಗಳನ್ನು ನೋಡಿ ಯಾವಾಗಲೂ ಪರಿಹಾಸಮಾಡಲಾಗದು. ಆರಾದರೂ
-----------------------------------------
೪೨ ಚಂದ್ರಮತಿ.
ನಮಗೆ ಕೇಡನ್ನೇ ಮಾಡಿದರೂ ಮಾತಿನಿಂದಾಗಲೀ ಮುಖಭಾವದಿಂದಾಗಲಿ
ಆವ ವಿಕಾರವನ್ನೂ ತೋರಿಸಲಾಗದು. ಅಹಂಕಾರವೇ ಮೊದಲಾದ ಇತರ
ದುರ್ಗುಣಗಳನ್ನು ಬಿಟ್ಟು ಸರ್ವರಿಗೂ ನಮ್ಮಮೇಲೆ ಪ್ರೀತಿಯುಂಟಾಗುವಂತೆ
ನಡೆದುಕೊಳ್ಳಬೇಕು. ನಾವು ಸುಗುಣವುಳ್ಳವರೇ ಆಗಿದ್ದರೂ, . ನಾವು
ಮಾಡುವ ಸಹವಾಸಗಳನ್ನು. ನೋಡಿಯೇ ಜನರು ನಮ್ಮ ಗುಣಗಳಿಂತಹು
ದೆಂದು ನಿರ್ಣಯಿಸುವರು ; ದುಸ್ಸಹವಾಸಗಳಿಂದ ಸಜ್ಜನರು ಕೆಟ್ಟುಹೋಗಿರು
ವುದನ್ನೂ, ಒಳ್ಳೆಯವರ ಬೋಧನೆಯಿ೦ದ ದುಷ್ಪರು ಸುಜನರಾಗಿರುವು
ದನ್ನೂ ಎಷ್ಟೋಸ್ಥಳಗಳಲ್ಲಿ ನಾವೇ ನೋಡಿರುನೆವು. . ಅದುದರಿಂದ ಅವಾ
ಗಲೂ ದುಸ್ಸಹವಾಸವನ್ನು ಬಿಟ್ಟು ಸತ್ಸಾಂಗತ್ಯವನ್ನು ಹೊಂದಿ ಬಾಳುವುದೇ
ಯುಕ್ತವಲ್ಲವೆ ?
ಚಂದ್ರ---ಸಮಸ್ತ ಕಾರ್ಯಗಳಲ್ಲಿಯೂ ನಾವು ಹೀಗೆಯೇ ಪ್ರವರ್ತಿಸ
ಬೇಕೆಂದ ತಿಳಿಸುವಂತಹ ವಿಧಿಯು ಅವುದಾದರಿರುವುದೇ ?
ಗುರು ---ನಿರಂತರವೂ ಸತ್ಯವನ್ನು ಹೇಳಬೇಕೆಂದು ನಾನು ತಿಳಿಸುವು
ದಕ್ಕೆ ಮೊದಲೇ ನಿನಗಾವಿಷಯವು ತಿಳಿದಿದ್ದಿತಲ್ಲವೆ ? ನಾನು ಅಸತ್ಯವನ್ನು
ಹೇಳೆಂದು ನಿನಗೆ. ಬೋಧಿಸಿದರೂ ನೀನು ನನ್ನ ಮಾತುಗಳನ್ನು ನಂಬ
ಲಾರೆ. ಯುಕ್ತಾಯುಕ್ತತೆಗಳನ್ನು ಬೋಧಿಸುವ ಅಂತರಾತ್ಮನು ಹೃದಯ
ದೊಳಗಿರುವುದು. ಅದು ನಮಗೆ ಧರ್ಮಾಧರ್ಮಗಳನ್ನು ಬೋಧಿಸು
ವುದು ಮಾತ್ರವೇ ಅಲ್ಲದೆ, ಪಾಪಕಾರ್ಯಗಳನ್ನು ಮಾಡಿದಾಗ ಸಂತಾಪ
ವನ್ನೂ, ಪುಣ್ಯಕಾರ್ಯಗಳನ್ನು ಮಾಡಿದಾಗ ಸಂತೋಷವನ್ನೂ ಉಂಟು
ಮಾಡುವುದು. ಸ್ವವಿಷಯದಲ್ಲಿ ಅವಾವುದನ್ನು ನಮಗಿತರರು ಮಾಡ
ಬೇಕೆಂದು ಬಯಸುವೆವೋ ಅಯಾ ಫಲಗಳನ್ನು ನಾವೂ ಇತರರಿಗೆ ಮಾಡ
ಬೇಕು ; ಅವಾವುದನ್ನು ನಮಗೆ ಇತರರು ಮಾಡಬಾರದೆಂದು ಅಪೇಕ್ಷಿಸುವೆ
ವೋ ಆಯಾಕಾರ್ಯಗಳನ್ನು ನಾನೂ ಇತರರಿಗೆ ಮಾಡಲಾಗದು. ಇದೊಂದೇ
ಸರ್ವನೀತಿಗಳ ಸಾರವು. ಸಾಧಾರಣವಾಗಿ ಸಂತೋಷಸಮಯಗಳಲ್ಲಿ
ಎಲ್ಲರೂ ಸನ್ಮಾರ್ಗಿಗಳಾಗಿಯೇ ಇರಬಹುದು. ಅಪತ್ಸಮಯಗಳಲ್ಲಿಯೂ
ಕಷ್ಪಗಳನ್ನೆಲ್ಲ ಸೈರಿಸಿಕೊಂಡು, ಧರ್ಮಚ್ಯುತರಾಗದೆ ಇರುವಂತಹ ಮಹ
ನೀಯರು ಮಾತ್ರ ಸಾಣೆ ಹಿಡಿದಷ್ಟೂ ಬೆಳಗುವ ವಜ್ರದಂತೆ ಪ್ರಕಾಶಮಾನ
ರಾಗಿ ಕೀರ್ತಿವಂತರಾಗುವರಲ್ಲದೆ ಉಳಿದವರು ಕೇಡಿಗೀಡಾಗುವರು.
------
----------------------------------------------
ಎ೦ಟನೆಯ ಪ್ರಕರಣ
---
ಒಂದುದಿನ ಚಂದ್ರಮತಿಯ ಒಡನಾಡಿಯೊಬ್ಬಳು ಗೊಂಬೆಯಾಟ
ಕ್ಕೋಸುಗ ತಂದಿದ್ದ ಕಡಲೆಯು ನೆಲದಮೇಲೆ ಚೆಲ್ಲಿಹೋಯಿತು. _ ಆಗ
ಸಮೀಪದಲ್ಲಿಯೇ ಒಂದು ಗಿಡದಮೇಲೆ ಕುಳಿತುಕೊಂಡು ನೋಡುತ್ತಿದ್ದ
ಒಂದು ಕಾಗೆಯು ಕೆಳಗಿಳಿದುಬಂದು, ಆಹಾರಪದಾರ್ಥವು ಒರೆತಿರುವು
ದೆಂದು ತನ್ನ ಜೊತೆಕಾಗೆಗಳಿಗೆ. ತಿಳಿಸುವುದಕ್ಕೋಸುಗ ಕಾ, ಕಾ, ಎಂದು
ಕೂಗಲಾರಂಭಿಸಿತು. ತತ್‌ಕ್ಷಣವೇ ಅದರ ಅಭಿಪ್ರಾಯವನ್ನರಿತು. ದೂರ
ದಲ್ಲಿದ್ದ ಅದರ ಬಂಧುವರ್ಗವೆಲ್ಲ ನಿಮಿಷಮಾತ್ರದಲ್ಲಿ ಅಲ್ಲಿಗೆಬಂದು ಕಾಳು
ಗಳನ್ನೆಲ್ಲಾ ತೆಗೆದುಕೊಂಡು ಹೋದುವು. ಅವುಗಳಲ್ಲಿ ಒಂದು ಕಾಗೆಯು
ಕೆಲಕಾಳುಗಳನ್ನು . ಎತ್ತಿಕೊಂಡುಹೋಗಿ, . ಆಹಾರಕ್ಕೋಸುಗ ಬಾಯ್ತೆ
ರೆದುಕೊಂಡು ತಾಯಿಯ ಅಗಮನವನ್ಕೇ. ಇದಿರುನೋಡುತ್ತ ಬಾರಿ
ಬಾರಿಗೂ. ಕೂಗುತ್ತ ಗೂಡಿನಿಂದ ಹೊರಗೆಬರುವುದಕ್ಕೆ ಪ್ರಯತ್ನಿಸುತ್ತಿ
ರುವ, ತನ್ನ ಮರಿಯ ಬಾಯಲ್ಲಿ ಇಟ್ಟು ತಾನು ಮತ್ತೆ ಹಿಂತಿರುಗಿಬಂದು
ಕಾಳುಗಳನ್ನಾಯ್ದು ತೆಗೆದುಕೊಂಡಿತು. ಇಷ್ಟು ಹೊತ್ತೂ ಚಂದ್ರಮತಿಯು
ಆ ಕಾಗೆಗೆ ತನ್ನ ಮರಿಯಮೇಲಿರುವ ಆದರಾತಿಶಯಕ್ಕೂ ಸ್ವಜಾತಿ ಪಕ್ಷಿ
ಗಳಿಗೆಲ್ಲ ಸಾಹಾಯ್ಯವನ್ನು ಮಾಡಬೇಕೆಂದು ಕೂಗಿದ ಮೊದಲನೆಯ
ಕಾಗೆಯ ಉಪಕಾರಚಿಂತೆಗೂ ಆಶ್ಚರ್ಯಪಟ್ಟುಕೊಂಡು ನೋಡುತ್ತಿದಳು
ತರುವಾಯ ವಿದ್ಯಾಸಮುದ್ರನು ಇದನ್ನೆಲ್ಲ ಮರೆಯಲ್ಲಿ ನಿಂತು ನೋಡಿ,
ನಂಟರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮವನ್ನು ಬೋಧಿಸುವು
ದಕ್ಕೆ ಇದೇ ತಕ್ಕ ಸಮಯವೆಂದಿಣಿಸಿ ಚಂದ್ರಮತಿಯ ಬಳಿಗೆಬಂದು
ಇಂತೆಂದನು :-
ಗುರು---ಮಗೂ ! ನೀನು ಕಾಗೆಗಳನ್ನು ಇಷ್ಟು ಆಶ್ಚರ್ಯದಿಂದ
ನೋಡುತ್ತಿರುವೆಯೇಕೆ ?
ಚಂದ್ರ--ಆ ಕಾಗೆಯು ತನ್ನ ಮರಿಗೆ ಅಷ್ಟು ಪ್ರೇಮದಿಂದ ಗುಟುಕು
ಕೊಡುವುದನ್ನೂ ಆ ಮತ್ತೊಂದು ಕಾಗೆಯು ಕಡಲೆಯ ಕಾಳನ್ನು ತಿನ್ನು
------------------------------------------
೪೪ ಚಂದ್ರಮತಿ.
ವುದಕ್ಯೋಸುಗ ತನ್ನ ಜೊತೆಕಾಗೆಗಳನ್ನು ಕೂಗಿದುದನ್ನೂ ಕಂಡು ನನಗೆ
ಅಶ್ಚರ್ಯವುಂಟಾಯಿತಾದುದರಿಂದ ನೋಡುತ್ತಿರುವೆನು.
ಗುರು--- ಆ ಕಾಗೆಯು ಬಂಧುಗಳ ವಿಷಯದಲ್ಲಿ ಮನುಷ್ಯರೂ
ಹೀಗೆಯೇ ನಡೆದುಕೊಳ್ಳಬೇಕೆಂದು ಬುದ್ಧಿ ಗಲಿಸುವುದು. ಬುದ್ದಿವಂತರಾ
ದವರಿಗೆ ಭಗವತ್ಸೃಷ್ಟಿಯಲ್ಲಿರುವ ಪ್ರತ್ಯಲ್ಪವಸ್ತುವಿನಿಂದಲೂ ತಿಳಿದುಕೊಳ್ಳ
ತಕ್ಕ ವಿಷಯಗಳಷ್ಟೋ ಕಾಣಿಸುವುವು.
ಚಂದ್ರ--ಹಿಂದೆ ನೀವು ನಂಟರವಿಷಯದಲ್ಲಿ ನಡೆದುಕೊಳ್ಳಬೇಕಾದ
ಧರ್ಮಗಳನ್ನು ಕುರಿತು.. ತಿಳಿಸುವೆನೆಂದು ಅಪ್ಪಣೆ ಕೊಡಿಸಿದ್ದಿ ರಲ್ಲವೇ ?
ಈಗ.. ನನಗಾವಿಷಯವನ್ನು ಚೆನ್ನಾಗಿ ಬೋಧಿಸಬೇಕೆಂದು ಬೇಡಿಕೊಳ್ಳು
ವೆನು.
ಗುರು--ನಾವು ಸಾಧಾರಣವಾಗಿ ನಂಟರೆಲ್ಲರ . ವಿಷಯದಲ್ಲಿಯೂ
ಪ್ರೀತಿಯುಳ್ಳವರಾಗಿ ಸಾಧ್ಯವಾದಷ್ಟು ಮಟ್ಟಿಗೂ ಅವರಿಗೆ ನಮ್ಮ ಕೈಲಾದ
ಸಾಹಾಯ್ಯವನ್ನು ಯುಕ್ತಸಮಯಗಳಲ್ಲಿ ಮಾಡುತ್ತಿರಬೇಕು. ಅಶಕ್ತರಾಗಿ
ಹುಟ್ಟಿ, ನಮಗಿಂತಹುದು ಬೇಕೆಂಬುದನ್ನಾದರೂ ಹೇಳಲಾರದೆ, ಅಳುವು
ದೊಂದನ್ನುಳಿದು ಮತ್ತಾವುದನ್ನೂ ಮಾಡಲಾರದಿರುವಂತಹ ಬಾಲ್ಯದಶೆ
ಮೊದಲ್ಗೊಂಡು, ನಮ್ಮನ್ನು ಹಲವುಬಗೆಯಾಗಿ ಪೋಷಿಸಿ, ನಮ್ಮ ಇಂಗಿತ
ವನ್ನರಿತು ಹಸಿವಾದಕಾಲದಲ್ಲಿ ಅಹಾರವನ್ನುಣಿಸಿ ನಮ್ಮ ಕಾಲಲ್ಲಿ ಮುಳ್ಳು
ಚುಚ್ಷಿಕೊಂಡರೂ ತಾವು ನಿದ್ರಾಹಾರಗಳಿಲ್ಲದೆ ಪರಿತಪಿಸುತ್ತೆ ಚಿಕಿತ್ಸೆಮಾ
ಡಿಸಿ, ನಮಗೆ ವಿದ್ಯಾಬುದ್ಧಿ ಗಳನ್ನು ಕಲಿಸಿ, ಬೆಳಸಿ, ದೊಡ್ಡವರನ್ನಾಗಿ
ಮಾಡಿದ ತಾಯ್ತಂದೆಗಳ ವಿಷಯದಲ್ಲಿ ನಾವು ಬಹು ಕೃತಜ್ಞತೆಯುಳ್ಳವ
ರಾಗಿ, ಅವರಲ್ಲಿ ಅತಿಶಯವಾದ ಪ್ರೇಮವನ್ನೂ ಭಕ್ತಿಯನ್ನೂ ಇಟ್ಟು ನ್ಯಾಯ್ಯ
ವಾದ ಅವರ ಆಜ್ಞೆ ಗಳನ್ನೆಲ್ಲಾ ಶಿರಸಾವಹಿಸಿ ನಡೆಯಿಸಬೇಕು. . ಅವರು
ವೃದ್ಧರಾದಾಗಲೂ, . ಅಶಕ್ತರಾದಾಗಲೂ ಅವರಿಗೆ ಸಮಸ್ತೋಪಚಾರ
ಗಳನ್ನೂ . ಮಾಡುತ್ತೆ ಅವರನ್ನು. ಪೋಷಿಸಬೇಕು. ಒಡಹುಟ್ಜಿ, ಒಡ
ನುಂಡು, ಒಡನಾಡಿ, ಒಡವೆಳೆದು, ಒಡನೆನಿದ್ರಿಸುವ ಅಣ್ಣಂದಿರು, ತಮ್ಮಂ
ದಿರು, ಅಕ್ಕ ತಂಗಿಯರು ಮೊದಲಾದವರನ್ನು ಅತಿಶಯವಾದ ಅನುರಾಗ
ದಿಂದ ಗೌರವಿಸಿ ಕನಸಿನಲ್ಲಾದರೂ ಕಲಹವಾಡದೆ ಬಾಳಬೇಕು. ಅತ್ತೆ,
--------------------------------------
ಎ೦ಟನೆಯ ಪ್ರಕರಣ. ೪೫
ಮಾವ, ಚಿಕ್ಕಪ್ಪ, ದೊಡ್ಡಪ್ಪ. ಮೊದಲಾದ ನಂಟರನ್ನು ಪ್ರೀತಿಯಿಂದ
ಕಾಣುತ್ತೆ ಅವರ ಮನಸ್ಸಿಗೆ ನೋವನ್ನುಂಟುಮಾಡದಿರಬೇಕು. ದೂರ
ಬಂಧುಗಳಾದವರಿಗೂ ಆಕಸ್ಮಿಕವಾಗಿ ಅವುದಾದರೂಂದು ಆವದವೊದವಿ
ದಾಗ ನಾವು ಅವರಿಗೆ ಒಳ್ಳೆಯ ಮಾತುಗಳಿಂದಲೂ ಧನದಿಂದಲೂ ಕೈಲಾದ
ಸಾಹಾಯ್ಯವನ್ನೂಮಾಡುತ್ತಿರಬೇಕು; ಹಾಗೆ ಮಾಡದ ಪಕ್ಷದಲ್ಲಿ ನಮಗೆ
ಅವದವೊದವವಿದಾಗ ಅವರೂ ತಕ್ಕಸಾಹಾಯ್ಯವನ್ನು ಮಾಡದಿದ್ದಾರು.
ಚಂದ್ರ---ಈಗ ನೀವು ತಿಳಿಸಿದವರು ಮಾತ್ರವಲ್ಲದೆ ಮತ್ತಾರಾದರೂ
ಮುಖ್ಯ ಬಂಧುಗಳಿರುವರೇ ?
ಗುರು-- ಸತಿಪತಿಯರಿರುವರಾದರೂ ಅವರನ್ನು ಬಂಧುಗಳೆಂದು
ಹೇಳುವುದಕ್ಕಿಂತ ಬೇರೆಬೇರೆದೇಹಗಳಾಗಿದರೂ ಅವರಿಬ್ಬರೂ ಒಂದೇ
ಎಂದು ಹೇಳಬೇಕು. ಸತಿಯು ಪತಿಯ ಅರ್ಧಶರೀರವೆಂದು ಸಕಲಮತದ
ವರೂ ಸಮ್ಮತಿಸುವರು. ಅವರು ತಂತಮ್ಮಲ್ಲಿ ಭೇದವನ್ನಣಿಸದೆ ಸಮಸ್ತ
ಕಾರ್ಯಗಳಲ್ಲಿಯೂ ಒಂದಾಗಿ ಪ್ರವರ್ತಿಸಬೇಕು. ಒಂದು ಕುಟುಂಬಕ್ಕೆ
ಇಬ್ಬರು ಯಜಮಾನರಾದರೆ ಸರಿಬಾರದಾದುವರಿಂದ, ಭಗವಂತನು ಪತಿ
ಯನ್ಶು ಯಜಮಾನನನ್ನಾಗಿಯೂ ಪತ್ನಿಯನ್ನು ಅವನಾಜ್ಞೆಗಧೀನಳಾಗಿರು
ವಂತೆಯೂ ಸೃಷ್ಟಿಸಿರುವನು. ಅರಸನಿಗಿಂತ ಪ್ರಜೆಗಳು ಒಂದುವೇಳೆ
ಬುದ್ದಿ ವಂತರಾಗಿದರೂ, ಆತನಿಗೆ. ಅಧೀನರಾಗಿಯೇ ನಡೆದುಕೊಳ್ಳಬೇಕೆಂ
ಬುದು ಹೇಗೆ ವಿಧಾಯಕವಾದುದೋ, ಹಾಗೆಯೇ ಪತ್ನಿಯು ಒಂದುವೇಳೆ
ಪತಿಗಿಂತ ಬುದ್ದಿ ಶಾಲಿನಿಯಾಗಿಯೂ, ರೂಪವತಿಯಾಗಿಯೂ, ವಿದ್ಯಾಸಂ
ಪನ್ನೆಯಾಗಿಯೂ ಇರುವಂತಹ ಸಂದರ್ಭದಲ್ಲಿಯೂ, ತನ್ನ ಪತಿಗೆ ಅಧೀನ
ಳಾಗಿಯೇ ನಡೆದುಕೊಳ್ಳಬೇಕು. ಒಂದು ವೇಳೆ ಪುರುಷನು ಕೋಪಶೀಲ
ನಾಗಿ ಅಕ್ರಮವಾಗಿ ಹೊಡೆದು ಬಯ್ದರೂ ಆತನಿಗಿದಿರಾಡದೆ ಸೈರಣೆ
ಯನ್ನು ವಹಿಸಿ ಅತನನ್ನು ಯುಕ್ತರೀತಿಯಲ್ಲಿ ಅನುವರ್ತಿಸಬೇಳು. ಪತಿಯು
ದುಡುಕಿ. ಆವುದಾದರೊಂದು ಅಯುಕ್ತವಾದ ಕಾರ್ಯವನ್ನು ಮಾಡುತ್ತಿ
ದ್ದರೂ ಕೋಪವು ಶಾಂತವಾದ ಬಳಿಕ ಒಳ್ಳೆಯಸಮಯದಲ್ಲಿ ಆತನಿಗೆ
ಮೆಲ್ಲನೆ ಹಿತಬೋಧನೆಯನ್ನು ಮಾಡಿ ಒಳ್ಳೆಯ ಮಾರ್ಗಕ್ಕೆ ತಿರುಗುವಂತೆ
ಮಾಡಬೇಕು. . ಪತಿಯು ಹೊರಗೆ ಶ್ರಮಪಟ್ಟು ಕಿರುಗಿ.. ಮನೆಗೆ. ಬರುವ
--------------------------------------
೪ ೬ ಚಂದ್ರಮತಿ,
ವೇಳಗೆ ತಲೆಯನ್ನು ಬಾಚಿಕೊಂಡು ಒಳ್ಳೆಯಸೀರೆಯನ್ನುಟ್ಟು ಶುಚೆಯಾ
ಗಿದ್ದು, ಅತನಿಗೆ ಬೇಕಾದ ಪದಾರ್ಥಗಳನ್ನು ಅಣಿಮಾಡಿಕೊಟ್ಟು. ಉಪಚ
ರಿಸಬೇಕಲ್ಲದೆ, ನೆರೆ .ಹೊರೆಯವರೊಡನೆ ನಡೆದ ಜಗಳಗಳನ್ನೂ ಮನೆ
ಯಲ್ಲಿರುವ ದುಃಖಗಳನ್ನೂ ಹೇಳಬಾರದು ; ಮನೆಯನ್ನು ಶುಚಿಯಾಗಿಟ್ಟು
ಕೊಂಡು, ನಾಲಗೆಗಿಂಪಾಗಿರುವಂತೆ ಅಡಿಗೆಮಾಡಿ ಬಡಿಸಿ ಪತಿಯನ್ನು ಮೆಚ್ಚಿ
ಸಬೇಕು. ಒಡವೆಗಳನ್ನಾಗಲೀ ಅನರ್ಘಗಳಾದ. ವಸ್ತ್ರಗಳನ್ನಾಗಲಿ ತರ
ಬೇಕೆಂದು ಪೀಡಿಸಬಾರದು. ಸ್ತ್ರೀಯರಿಗೆ ಯಾವಾಗಲ್ಲೂ ಸುಗುಣಗಳೇ
ಅಲಂಕಾರಗಳೆನಿಸುವುದಾದುದರಿಂದ ರತ್ನಭೂಷಣಗಳೂ ಹೆಚ್ಚುಬೆಲೆಯ
ವಸ್ತ್ರಗಳ ಅಲಂಕಾರಗಳಲ್ಲ. ಸಾಧಾರಣವಾಗಿ ಹತ್ತುಹದಿನ್ಹೆದು
ರೂಪಾಯಿಗಳಿಂದ ಒಬ್ಜ ಬಡವನ ಕುಟುಂಬವು ಒಂದುತಿಂಗಳವರಿಗೆ ಸುಖ
ವಾಗಿ ಜೀವಿಸಬಹುದು ; ಸಹಸ್ರಸಹಸ್ರ ಕುಟುಂಬಗಳು ಸುಖವಾಗಿ ಜೀವಿ
ಸುವುದಕ್ಕ ಉಪಯೋಗಿಸಬಹುದಾದ ಧನವನ್ಟು ನಿಷ್ಪ್ರಯೋಜನವಾಗಿ
ಒಬ್ಬ. ಅಬಲೆಯು ದೇಹದಮೇಲೆ ಧರಿಸಿಕೊಂಡು ತಿರುಗುವುದು ಯಾವ
ನ್ಯಾಯ ? ಮನೆಗೆ ಬೇಕಾದುದನ್ನು ಗಳಿಸಿತರುವುದು. ಪುರುಷರ ಕಾರ್ಯ,
ತಂದುದನ್ನು ಮಿತವಾಗಿಬಳಸುತ್ತೆ ಹುಲ್ಲುಕಡ್ಡಿಯಾದರೂ ವ್ಯರ್ಥವಾಗದಂತೆ
ಜಾಗರೂಕತೆಯಿಂದ ನೋಡಿಕೊಳ್ಳುವುದು ಸ್ತ್ರೀಯರಕಾರ್ಯ. ಆದುದ
ರಿಂದ ಸ್ತ್ರೀಯರು ಮಿತಿಮೀರಿ ವ್ಯಯಮಾಡದೆ ಉಚಿತರೀತಿಯಿಂದ ನಡೆದು
ಕೊಳ್ಳಬೇಕು. ಅತಿ ಭೋಜನದಿಂದ ಅಜೀರ್ಣಾದಿರೋಗಗಳು ಹುಟ್ಟು
ವಂತೆಯೇ ಅತಿನಿದ್ರೆಯಿಂದಲೂ ಮಾಂದ್ಯ ಬಲಹೀನತೆ ಮೊದಲಾದುವು
ಉಂಟಾಗಿ ದೇಹದಾರ್ಢ್ಯವು ತಪ್ಪಿ ಹೋಗುವುದು. ಸೋಮಾರಿತನವನ್ನು
ಬಿಟ್ಟು ಮನೆಗೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವಂತಹ ಸ್ತ್ರೀಯರಿಗೆ
ಇಂತಹ ಕೇಡುಗಳಾವುವೂ ಉಂಟಾಗಲಾರವು. ಕಬ್ಬುಣವನ್ನು ಮಣ್ಣು
ತಿನ್ನುವಂತೆಯೇ ಸೋಮಾರಿತನವು ನಮ್ಮ ದೇಹದ ಸಾರವನ್ನೆಲ್ಲ ತಿಂದು
ಬಿಡುವುದು. ತಾನು ಮಹಾರಾಜನ ಕುಮಾರಿಯಾಗಿದ್ದರೂ ಗಂಡನಿಗೆ
ದಾಸಿಯೇ ಅಗುವಳಾದುದರಿಂದ, ಎಷ್ಟುಮಂದಿ ಪರಿಚಾರಿಣಿಯರಿದ್ದರೂ
ಪತಿಗೆ ಬೇಕಾದ ಉಪಚಾರಗಳಕ್ನೆಲ್ಲ ಸ್ತ್ರೀಯು ತಾನೇ ಮಾಡಬೇಕು.
ಸ್ತ್ರೀಯು ಪುರುಷನನ್ನು ವಶಗೊಳಿಸಿಕೊಳ್ಳುವುದಕ್ಕೆ ಮಾಡಬೇಕಾದ
---------------------------------------
ಎ೦ಟನೆಯ ಪ್ರಕರಣ ೪೭
ಪ್ರಯತ್ನಗಳಲ್ಲಿ ಯೋಗ್ಯವಾದ ನಡೆನುಡಿಯೂ, ಪತಿಯನ್ನು ಅನುಸರಿಸು
ವುದೂ ಇವುಗಳೇ ಮುಖ್ಯವಲ್ಲದೆ ವಶ್ಯೌಷಧಗಳೆಂಬ ಕಂಡಕಂಡ ಕಸಗಳಲ್ಲ.
ಈ ಕೆಟ್ಟ ಕಸಗಳಿಂದ ಮಾಡುವ ಔಷಧಗಳಿಂದ ಪತಿಗೆ ಪೂರ್ವದಲ್ಲಿದ ಪ್ರೇಮ
ವೂ ಹೋಗುವುದಲ್ಲದೆ ಒಂದೊಂದು ವೇಳೆ ಅತನಿಗೆ ಅಪರಿಹಾರ್ಯಗಳಾದ
ರೋಗಗಳೂ ಸಂಭವಿಸಬಹುದು. ಆದುದರಿಂದ ಸ್ತ್ರೀಯರು ಯಾವಾಗಲೂ
ತಮ್ಮ ಸತಿಗೆ ಮರುಳುಮುದ್ದುಗಳನ್ಷಿಟ್ಟು ಆತನನ್ನೇ ವಶಪಡಿಸಿಕೊಳ್ಳುವುದಕ್ಕೆ
ಕನಸಿನಲ್ಹಾದರೂ ಪ್ರಯತ್ನಿಸಲಾಗದು. ತವರ್ಮನೆಯವರು ಎಷ್ಟು ಧನಿಕ
ರಾಗಿದ್ದರೂ, ಉತ್ತಮಳಾದ ಸ್ತ್ರೀಯು ಪತಿಯನ್ನು ಬಡವನೆಂದು ಅಲ
ಗಳೆದು ತನ್ನ ತಂದೆಯ ಮನೆಗೆ ಹೋಗಿರುವುದಕ್ಕೆ ಸಮ್ಮತಿಸಳು. ಸ್ತ್ರೀಗೆ
ತವರ್ಮನೆಯಲ್ಲಿಡುವ ಪಂಚಭಕ್ಷ್ಯಗಳಿಗಿಂತ ಗಂಡನ ಮನೆಯಲ್ಲಿ ಕೊಡುವ
ತಿಳಿಗಂಜಿಯೇ ಮೇಲಾದುದು. ಸ್ತ್ರೀಯು ತನ್ನ ಮನೆಯ ರಹಸ್ಯವನ್ನಾ
ವಾಗಲೂ ಬಹಿರಂಗಗೊಳಿಸದೆ, ತನ್ನ ಪತಿಯು ಅನುರಾಗಾತಿಶಯದಿಂದ
ಹೇಳಿದ ಸಂಗತಿಯನ್ನಾವುದನ್ನೂ ತನ್ನ ಆಪ್ತರೊಡನೆಯಾದರೂ ತಿಳಿಸದೆ
ಬಹುರಹಸ್ಯವಾಗಿಡಬೇಕು. ಸಾವಿರವೇಕೆ ? ಸಾಧ್ವಿಯಾದ ಸ್ತ್ರೀಯು ಅಲೊ
ಚನೆಗಳನ್ನು ಹೇಳುವಾಗ ಮಂತ್ರಿಯಂತೆಯೂ ಉಪಚರಿಸುವಾಗ ದಾಸಿ
ಯಂತೆಯೂ ಕಷ್ಟಕಾಲಗಳಲ್ಲಿ ಮಿತ್ರನಂತೆಯೂ ಇದ್ದು, ಪತಿಗೆ ಹಿತವಾಗು
ವಂತೆ, ಸಮಸ್ತ ವಿಷಯಗಳಲ್ಲಿಯೂ ಪ್ರವರ್ತಿಸುತ್ತೆ, ಆತನ ವಿಷಯದಲ್ಲಿ
ಪ್ರೇಮವೂ ಭಕ್ತಿಯ ಉಳ್ಳವಳಾಗಿ ಕುಸುಮದಲ್ಲಿರುವ ಕೇಸರದಂತೆ
ಅತನನ್ನು ಬಿಟ್ಟಗಲದಿರಬೇಕು. ಈಗ ತಿಳಿಸಿದ. ಸದ್ಗುಣಗಳನ್ನೆಲ್ಲ ಹೊಂದಿ
ಪರಪುರುಷನನ್ನು ಕನಸಿನಲ್ಲಾದರೂ ಸ್ಮರಿಸದೆ. ಇರುವಂತಹ ಸ್ತ್ರೀಯೇ
ಪತಿವ್ರತೆಯೆನಿಸುವಳು. “ಸಾವಿರ ಚಿತ್ತಾವನ್ನೊಂದುಮಸಿ ಮುಚ್ಚಿತು “
ಎಂಬಂತೆ ಪುಣ್ಯಕಾರ್ಯಗಳನ್ಸೆಲ್ಲಾ ಜಾರತ್ವವೊಂದೇ ಕೆಡಿಸಿ ಪಾಪಹೇತು
ವಾಗುವುದು. ಸ್ತ್ರೀಯರಿಗೆ ವ್ಯಭಿಚಾರಕ್ಕಿಂತ ಪ್ರಬಲವಾದ ದೋಷವು
ಮತ್ತೊಂದಿಲ್ಲ. ಆದುದರಿಂದ ಪರಪುರುಷರು ಎಷ್ಟು ಸುಂದರರಾಗಿದ್ದರೂ
ಅವರನ್ನು ತೃಣವನ್ನಾಗಿ ಭಾವಿಸಿ ಅವರಮೇಲೆ ಬೀಸುವ ಗಾಳಿಯಾದರೂ
ತಮ್ಮಮೇಲೆ ಸೋಕದಂತೆ ಪ್ರವರ್ತಿಸಬೇಕು. ವ್ಯಭಿಚಾರ ಮಾಡುವುದ
ರಿಂದ ಪರಲೋಕಹಾನಿಯುಂಟಾಗುವುದು ಮಾತ್ರವೇ ಅಲ್ಲದೆ ಜನರ ಆಡಿ
----------------------------------
೪೮ ಚಂದ್ರಮತಿ,
ಕೆಗ್ಗೂ ಗುರಿಯಾಗಿ ಮಾನಪ್ರಾಣಗಳೂ ನಷ್ಟವಾಗುವುವು. ಮಾನನಂತ
ನಾದವನನು ತನ್ನ ಪತ್ನಿಯು ಆವ ಅಪರಾಧವನ್ನು ಮಾಡಿದರೂ ಸೈರಿಸಬಲ್ಲ
ನಲ್ಲದೆ ಅವಳು ವ್ಯಭಿಚರಿಸಿದಾಗ ಮಾತ್ರ ತಿಳಿದು ಸೈರಿಸಿಕೊಂಡಿರಲಾರನು.
ಅದುದರಿಂದ ಸ್ತ್ರೀಯು ಸಕಲ ವಿಧಗಳಲ್ಲಿಯೂ ಪಾತಿವ್ರತ್ಯಕ್ಕೆ ಹಾನಿ
ಯುಂಟಾಗದಂತೆ ಜಾಗರೂಕಳಾಗಿರಬೇಕು.
-------
ಒಂಭತ್ತನೆಯ ಪುಕರಣ
ವಿದ್ಯಾಸಮುದ್ರನು. ಚಂದ್ರಮತಿಗೆ ಹೇಳಿದ. ವಿದ್ಯೆಯೆಲ್ಲ ಪುಸ್ತಕ
ಮಾತ್ರದಿಂದಲೇ ಅಲ್ಲ ಆತನು ಸಾಯಂಕಾಲದ ವೇಳೆಗಳಲ್ಲಿ ಪ್ರತಿದಿನವೂ
ಚಂದ್ರಮತಿಯನ್ನು ಕರೆದುಕೊಂಡು. ಹೋಗಿ, ಜಗದೀಶ್ವರನ ದಿವ್ಯ ಹಸ್ತ
ರಚಿತಗಳಾದ ವಸ್ತುಸಮೂಹಗಳಿಂದ ಪ್ರಕಾಶಿಸುವ ಉದ್ಯಾನಗಳಲ್ಲಿ ನೇತ್ರೋ
ತ್ಸವವನ್ನುಂಟುಮಾಡುವ ಫಲವೃಕ್ಬಗಳನ್ನೂ ಹೂವಿನ ಗಿಡಗಳನ್ನೂ
ಕಿವಿಗಿಂಪಾಗಿರುವಂತೆ ಮಧುರಧ್ವನಿಯನ್ನು ಮಾಡುವ ಕೋಗಿಲೆ ಗಿಳಿ
ಮೊದಲಾದ ಪಕ್ಷಿಗಳನ್ನೂ ತೋರಿಸಿ, ಅವುಗಳ ಮೂಲವಾಗಿ ಭಗನಂತನ
ಸಮಸ್ತ ನಿರ್ಮಾಣಕೌಶಲವನ್ನೂ ನೀತಿಗಳನ್ನೂ ಅವಳ ಮನಸ್ಸಿಗೆ ನಾಟು
ವಂತೆ ಸಮಯೋಚಿತನಾಗಿ ಬೋಧಿಸುತ್ತಿದನು. ತಂಗಾಳಿಗಳಲ್ಲಿ ತಿರುಗು
ವುದರಿಂದಲೂ ದೇಹಪರಿಶ್ರಮವನ್ನು ಚೆನ್ನಾಗಿ ಮಾಡುವುದರಿಂದಲೂ
ಉಂಟಾಗುವ ಸಂತೋಷವನ್ನು ಚಂದ್ರಮತಿಯು ಚೆನ್ನಾಗಿ ಅರಿತವಳಾಗಿ,
ನೂರಾರುಮಂದಿ ದಾಸಿಯರಿದ್ದರೂ ತನ್ನ ಕೈತೋಟದಲ್ಲಿರುವ ಪುಷ್ಪಲತೆ
ಗಳಿಗೆ ತಾನೇ ನೀರೆರೆಯುತ್ತೆ, ತಾನು ಬೆಳೆಯಿಸಿದ ಮಲ್ಲಿಗೆಯಲ್ಲಿ ಒಂದು
ಹೂವು ಅರಲಿದರೂ, ದಾಳಿಂಬೆಯ. ಗಿಡದಲ್ಲಿ ಒಂದು ಕಾಯಿ ಕಂಡರೂ,
ಹೊರಗಣ ತೋಟಗಳಿಂದ ಗೂಡೆಯತುಂಬ ಹೂಗಳೂ ಕಾಯಿಗಳೂ
ಬಂದುದಕ್ಕಿಂತ ಅತಿಶಯವಾದ ಆನಂದವನ್ನು ಹೊಂದುತ್ತಿದ್ದಳು. ಒಂದು
ದಿನ ಸಾಯಂಕಾಲ ಚಂದ್ರಮತಿಯು ಗುರುವಿನೊಡನೆ ಹೂದೋಟದಲ್ಲಿ
--------------------------------------------
ಒಂಭತ್ತನೆಯು ಪ್ರಕರಣ. ೪೯
ವಿನೋದವಾಗಿ ಸಂಚರಿಸುತ್ತಿರುವಾಗ ಉದ್ಯಾನಪಾಲಕನು ಎತ್ತುಗಳನ್ನು
ಹೂಡಿ ಏತದಿಂದ ನೀರೆನ್ನೆತ್ತಿ ಗಿಡಗಳಿಗೆ. ತಿರುಗಿಸುತ್ತೆ, ಜಾಗ್ರತೆಯಾಗಿ
ಏತವನ್ನೆಳೆಯದಿದ್ದಾಗ ಆ ಎತ್ತುಗಳನ್ನು ತನ್ನಕೈಯಲ್ಲಿದ್ದ ಬಿದಿರುಕಡ್ಡಿಯಿಂದ
ರಕ್ತ ಬರುವಂತೆ ಗಟ್ಟಿಯಾಗಿ ಹೊಡೆದನು. ಆಗ ಸಮೀಪದಲ್ಲಿಯೇ ಸಂಚ
ರಿಸುತ್ತಿದ ಚಂದ್ರಮತಿಯು ಅವನ ಕ್ರೂರಕ್ಬತ್ಯವನ್ನು ಕಂಡು . ಬಹುಕೋ
ಪಿಸಿ ಇನ್ನೊಂದು ಬಾರಿ ಆ ಎತ್ತುಗಳನ್ನು ಅಷ್ಟು ಕ್ರೂರವಾಗಿ ಹೊಡದ
ಪಕ್ಷದಲ್ಲಿ ತನ್ನ ತಂದೆಯೊಡನೆ ಹೇಳಿ ಅವನ ಕೆಲಸವನ್ನು ತೆಗೆಯಿಸಿಹಾಕು
ವೆನೆ೦ದು ಹೆದರಿಸಿದಳು. ಚಂದ್ರಮತಿಗೆ ಅವುದಾದರೂ ನೂತನ ವಿಷಯ
ವನ್ನು ಬೋಧಿಸಬೇಕೆಂದಾಲೋಚಿಸುತ್ತೆ ಸಮಾಪದಲ್ಲಿಯೇ ಇದ್ದ ವಿದ್ಯಾ
ಸಮುದ್ರನು, ಇದನ್ನೊಂದು ಲಕ್ಷ್ಯವನ್ನಾಗಿ ಮಾಡಿಕೊಂಡು ಚಂದ್ರಮತಿ
ಯನ್ನು “ಅವನಮೇಲೆ ನೀನಿಷ್ಟು ಕೋಪಮಾಡುವುದಕ್ಕೆ ಕಾರಣವೇನು"
ಎಂದು ಕೇಳಿದನು.
ಚಂದ್ರ- ನನಗೆ ಇದುವರೆಗೂ ಯಾರೂ ಹೇಳದಿದ್ದರೂ, ನಿಷ್ಕಾರಣ
ವಾಗಿ ಪಶುವನ್ನು ಹೊಡೆಯುವುದು ನನ್ನ ಮನಸ್ಸಿಗೆ ಬಲುತಪ್ಪಾಗಿ ತೋರಿ
ದುದರಿಂದ ಅವನಮೇಲೆ ಕೋಪಿಸಿಕೊಂಡೆನು. ಮನುಷ್ಯನಲ್ಲದ ಇತರ
ಜಂತುಗಳ ವಿಷಯದಲ್ಲಿ ನಾವು . ನಡೆದುಕೊಳ್ಳಬೇಕಾದ ಧರ್ಮಗಳನ್ನು
ಕುರಿತು ತಿಳಿಸುವುದಾಗಿ ತಾವು ಮೊದಲೇ ಅಪ್ಪಣೆ ಕೊಡಿಸಿದಿರಿ. ಈಗ
ಅದನ್ನು ನನ್ನ ವಿಷಯದಲ್ಲಿ ಅನುಗ್ರಹಿಸಿ ಅಪ್ಪಣೆ ಕೊಡಿಸುವಿರಾ?
ಗುರು-.ಪಶು ಮೊದಲಾದ ಪ್ರಾಣಿಗಳು ನಮ್ಮ ಉಪಯೋಗಕ್ಕೋ
ಸುಗವೇ ನಿರ್ಮಿತವಾದುವುಗಳಾದರೂ, ಅವುಗಳು ನಮ್ಮ ಬಳಿಯಲ್ಲಿರು
ವಷ್ಟು ಕಾಲವೂ ಹೊಟ್ಟೆಯ ತುಂಬ ಆಹಾರವನ್ನು ಕೊಟ್ಟು ನೀರನ್ನು
ಕುಡಿಯಿಸಿ, ಅವುಗಳ . ಪೋಷಣೆಯನ್ನು ಕ್ರಮವಾಗಿ ವಿಚಾರಿಸಿಕೊಳ್ಳುತ್ತ
ಪ್ರೇಮದಿಂದಾದರಿಸುವುದು ನಮಗೆ ಧರ್ಮವಾಗಿರುವುದು. ಯಾವಾಗಲೂ
ಅವುಗಳಿಂದ ಶಕ್ತಿಗೆ ಮಾರಿದ ಕಾರ್ಯವನ್ನು ಮಾಡಿಸಲಾಗದು; ಪ್ರಾಣಿಗಳು
ಮುದಿತನದಿಂದಾಗಲಿ, ಆಯಾಸದಿಂದಾಗಲಿ, ರೋಗದಿಂದಾಗಲಿ, ಅಹಾರಾದಿ
ಗಳ ಲೋಪದಿಂದಾಗಲಿ, ಚೆನ್ನಾಗಿ ಕೆಲಸಮಾಡಲಾರದಂತಹಕಾಲದಲ್ಲಿ ವೇಗ
ವಾಗಿ ನಡೆಯಲಿಲ್ಲವೆಂದೂ, ಕೆಲಸಮಾಡಲಿಲ್ಲವೆಂದೂ ಅವುಗಳನ್ನು ಹೊಡೆ
-------------------------------------------
೫೦ ಚಂದ್ರಮತಿ.
ಯುವುದಕ್ಕಿಂತ ಕ್ರೂರಕೃತ್ಯವು ಮತ್ತೊಂದಿಲ್ಲ. ಕೆಲವರು ಪಶುಗಳಿಗೆ
ತಾನೇ ಜ್ಯೇಷಪುತ್ರರಾದವರಂತೆ ಎಳೆಗರುಗಳಿಗಾದರೂ ಹಾಲನ್ನುಳಿಸದೆ
ಜ್ಯೇಷ್ಟಾಂಶವನ್ನು ತೆಗೆದುಕೊಂಡಂತೆ ಎಲ್ಲವನ್ನೂ ತಾವೇ ಕರೆದುಕೊಳ್ಳು
ವರು: ಎಳೆಗರುಗಳು ಚೆನ್ನಾಗಿ ಹುಲ್ಲುಮೇಯುವ ವರೆಗೂ ಅವುಗಳಿಗೆ
ಬೇಕಾಗುವಷ್ಟು ಹಾಲನ್ನು ಬಿಟ್ಟು ಉಳಿದ ಹಾಲನ್ನು ಕರೆದುಕೊಳ್ಳುವುದೇ
ಮಾನುಷಧರ್ಮವು. . ಹಸು, ಎಮ್ಮೆ, ಎತ್ತು, ಆಡು, ಕುದುರೆ, ನಾಯಿ
ಮೊದಲಾದ ಜಂತುಗಳು ನಮಗೆಷ್ಟೋ ಪ್ರಯೋಜನಕಾರಿಗಳಾಗಿರುವುವು.
ಅವಿಲ್ಲದಪಕ್ಷದಲ್ಲಿ, ಈಗ ನಮಗಿರುವ ಸೌಖ್ಯದಲ್ಲಿ ಅರ್ಧವಾದರೂ ಇಲ್ಲದೆ
ಹೋಗುತ್ತಿದ್ದಿತು. ಕೆಲ ದುರ್ಮಾರ್ಗರು ಕಪ್ಪೆ, ಆಡು ಮೊದಲಾದ ಸಾಧು
ಜಂತುಗಳನ್ನು ನಿಷ್ಕಾರಣವಾಗಿ ಹಿಂಸಿಸುವರು. ಇಂಧವುಗಳಿಗೆ ಹಿಂಸೆ
ಮಾಡುತ್ತಿದ್ದರೆ ದುಶ್ಚೇಚ್ಟೆಗಳು ಕ್ರಮಕ್ರಮವಾಗಿ ಅಭ್ಯಾಸವಾಗಿಹೋಗಿ ಮನು
ಷ್ಯರ ವಿಷಯದಲ್ಲಿಯೂ ಕ್ರೌರ್ಯವನ್ನು ತೋರಿಸುವಂತಹ ಸ್ವಭಾವವುಂ
ಟಾಗುವುದು. ನಾವು ನಿರ್ಲಕ್ಷಮಾಡುವ ಸಣ್ಣ ಪ್ರಾಣಿಗಳನ್ನೂ ನಮ್ಮನ್ನು
ಸೃಷ್ಟಿಸಿದ ಈಶ್ವರನೇ ಸೃಷ್ಟಿಸಿ, ನಮ್ಮ ಮೇಲಿಟ್ಟಿರುವಂತೆಯೇ ಅವುಗಳ
ಮೇಲೆಯೂ ಪ್ರೇಮವನ್ಷಿಟ್ಟು ಕಾಪಾಡುತ್ತಿರುವನು. ಅದುದರಿಂದ ಅವುಗ
ಳನ್ನು ಬಾಧಿಸಿದರೆ ನಾವು ಭಗವಂತನ ವಿಷಯದಲ್ಲಿ ಮಹಾಪರಾಧವನ್ನು
ಮಾಡಿದವರಾಗುವೆವು. ಈ ಕಾರಣದಿಂದಲೇ ಜೀವಕಾರುಣ್ಯವೆಂಬುದು
ನಮಗೆ ವಿಧಾಯಕಗಳಾದ ಮುಖ್ಯಧರ್ಮಗಳಲ್ಲಿ ಒಂದೆನ್ನಬಹುದು. ಅದರೆ
ಮನುಷ್ಯರಲ್ಲಿ ದುಷ್ಬರನ್ನು ಶಿಕ್ಷಿಸುವುದು ಹೇಗೆ ಧರ್ಮವೋ ಹಾಗೆಯೇ ಜಂತು
ಗಳಲ್ಲಿ ಹಾವು, ಚೇಳು, ಹುಲಿ ಮುಂತಾದುವುಗಳನ್ನು ಕೊಲ್ಲುವುದೂ ಧರ್ಮ
ವಾಗಿರುವುದು. ಕೆಲವರು ಹೇನು, ತಿಗಣೆ, ಚೇಳು . ಮೊದಲಾದುವರ
ಗಳಲ್ಲಿಯೂ ದಯೆಯುಳ್ಳವರಾಗಿ ಅವುಗಳನ್ನು ಕೊಲ್ಲದೆ ಬಿಟ್ಟುಬಿಡುವರು.
ಹಾಗೆ ಮಾಡುವುದು ಸರಿಯಾದುದಲ್ಲ. ನಮಗೆ ಬಾಥೆಯನ್ನುಂಟುಮಾಡುವ
ಜಂತುಗಳನ್ನು ಅವಶ್ಯವಾಗಿ ನಾಶಮಾಡಲೇಬೇಕು. ಚೇಳು ಮೊದಲಾದುವು
ಗಳನ್ನು ಕೊಲ್ಲುವ್ರದು. ದೋಷವಲ್ಲದಿದರೂ, ಅವುಗಳನ್ನು . ಬಾಧೆಸಡಿಸಿ
ಕೊಲ್ಲುವುದು ಮಾತ್ರ ಒಳ್ಳೆಯದಲ್ಲ. ಸಾಧ್ಯವಾದಷ್ಟುಮಟ್ಟಿಗೆ ಅವು
ಗಳನ್ನು ಬಹುಕಾಲ ಬಾಧಿಸದೆ ಜಾಗ್ರತೆಯಾಗಿ ಕೊಂದುಹಾಕಬೇಕು.
------------------------------------------
ಒಂಭತ್ತನೆಯ ಪ್ರಕರಣ, ೫೧
ಚಂದ್ರ---ತಮ್ಮ ಅನುಗ್ರಹದಿಂದ ಈಗ ನನಗೆ ಸಮಸ್ತ ಧರ್ಮಗಳೂ
ತಿಳಿದುವು. ಆವವಿಷಯದಲ್ಲಿ ಹೇಗೆ ನಡೆದುಕೊಳ್ಳ ಬೇಕೋ ಲೇಶವಾದರೂ
ತಿಳಿಯದೆ ಕುರುಡಿಯಂತಿದ್ದ ನನಗೆ ತಾವು ಜ್ಞಾನೋಪದೇಶಮಾಡಿ ಕಣ್ಣು
ಗಳನ್ನು ತೆರೆಯಿಸಿ. ಕಾಪಾಡಿದಿರಿ. ತಮ್ಮ ಋಣದ ಉಪಕಾರವನ್ನು ಹೇಗೆ
ತಾನೇ ನಾನು ತೀರಿಸಲಾದೀತು ?
ಗುರು -- ನಾನು ಹೇಳಿದರೀತಿಯಲ್ಲಿ . ನಡೆದುಕೊಳ್ಳುತ್ತೆ ಮುಂದೆ
ನೀನು ಹೆಸರನ್ನು ಹೊಂದುವುದೇ ನನ್ನ ಸಾಲಕ್ಕೆ ಪರಿಹಾರ. ಧರ್ಮವನ್ನು
ಸುಮ್ಮನೆ ಕೇಳುವುದರಿಂದ ಪ್ರಯೋಜನವೇನೂ ಇಲ್ಲ; ಕೇಳಿದುವುಗಳನ್ನು
ಮರೆಯದೆ ಅದರಂತೆ ನಡೆದುಕೊಳ್ಳು ವುದರಿಂದ ಇಹಪರಗಳೆರಡರಲ್ಲಿಯೂ
ಸಕಲ ಶ್ರೇಯಸ್ಸೂ ಉಂಟಾಗುವುದು. ಕೆಲವರು ಸತ್ಪ್ರವರ್ತನ
ವುಳ್ಳವರಾಗಿ ಬಾಳುವುದು ಬಹುಕಷ್ಟಕರವಾದುದೆಂದು ಭಾವಿಸಿರುವರು.
ಅಭ್ಯಾಸವಾದ ಬಳಿಕ ಅದರಷ್ಟು ಸುಲಭವಾದ ಕಾರ್ಯವು ಮತ್ತಾವುದೂ
ಇಲ್ಲ. ಗೇಣುದ್ದದ ಹೊಟ್ಟೆಗೋಸುಗ ಮಹಾಸಮುದ್ರಗಳನ್ನು ದಾಟಯೂ,
ಹೊರಲಾರದಷ್ಟು. ಭಾರವನ್ನು . ಹೊತ್ತೂ, ಪ್ರಾಣದಾಸೆಯನ್ನು ಬಿಟ್ಟು
ಯುದ್ಧಗಳಲ್ಲಿ ಕಾದಾಡಿಯೂ, ಕಷ್ಟಪಡುವಂಥವರಿಗೆ ಸತ್ಯ, ಶಾಂತತೆ, ಭೂತ
ದಯೆ ಇವುಗಳನ್ನು ಹೊಂದಿ ಬಾಳುವುದಸಾಧ್ಯವೆಂದರೆ ಯಾರಾದರೂ ನಗ
ದಿರುವರೆ? ಮನಸ್ಸಿಗೆ ಅಯಾಸವನ್ನುಂಟುಮಾಡಿ ಇಲ್ಲದುದನ್ನು. ಹೊಸ
ದಾಗಿ ಕಲ್ಪಿಸಿಕೊಂಡು ಹೇಳುವುದಕ್ಕಿಂತ ನಾಲಗೆಯ ಕೂನೆಯಲ್ಲಿದು ತನ್ನ
ಷ್ಟಕ್ಕೆ ತಾನೇ ಅಪ್ರಯತ್ನವಾಗಿ ಹೊರಕ್ಕೆ ಬರುವುದಕ್ಕೆ ಸಿದ್ಧವಾಗಿರುವ
ಸತ್ಯವನ್ನು ಆಡುವುದು ಕಷ್ಟವೆಂದರೆ ಯಾರು ನಂಬಬಲ್ಲರು? ಲೋಕದಲ್ಲಿ
ಎಲ್ಲರಿಗೂ. ಸಾಧುಗಳನ್ನು ಪ್ರೀತಿಸುವುದೂ ದುಷ್ಟರನ್ನು ದ್ವೇಷಿಸುವದೂ
ಸಹಜಗುಣಗಳಾಗಿರುವುವು. ಈಗ ನಾವು ನೋಡುತ್ತಿರುವವರನ್ನು ಮಾತ್ರವೆ
ಅಲ್ಲದೆ ಯಾವಾಗಲೋ ಇದ್ದು ಕಥೆಗಳಲ್ಲಿ . ಉಕ್ತರಾದ . ಯೋಗ್ಯರನ್ನು
ಭೂಷಿಸುತ್ತೆ ಅಯೋಗ್ಯರನ್ನು ದೂಷಿಸುತ್ತಿರುವೆವು. ನಮಗೆ ಅಂತಹ
ಅಭಿಪ್ರಾಯವುಂಟಾಗುವುದಕ್ಕೆ ಯೋಗ್ಯರು ನಮಗೆ ಮಾಡಿದ ಉಪಕಾರ
ವಾವುದು ? ಅಯೋಗ್ಯರು ಮಾಡಿದ ಅಪಕಾರವಾವುದು ? ಜನರು ಆಯಾ
ಜನರನ್ನು . ಪ್ರೀತಿಸುವುದಕ್ಕೂ ದ್ವೇಷಿಸುವುದಕ್ಕೂ . ಅವರವರ ಸುಗುಣ
----------------------------------------
೫೨ ಚಂದ್ರಮತಿ.
ದುರ್ಗುಣಗಳೇ ಕಾರಣಗಳಾಗಿರುವುವು. ಲೋಕದಲ್ಲಿ ನಮ್ಮ ಶರೀರಗಳು
ಸ್ಥಿರವಲ್ಲವಾದುದರಿಂದ ಬದುಕಿರುವ ನಾಲ್ಕುದಿನಗಳಾದರೂ ನ್ಯಾಯಮಾರ್ಗ
ದಲ್ಲಿ ಪ್ರವರ್ತಿಸುತ್ತೆ ಈ ಲೋಕದಲ್ಲಿ ಕೀರ್ತಿಯನ್ನೂ ಪರಲೊ{ಕದಲ್ಲಿ
ಶಾಶ್ವತವಾದ ಅನಂದವನ್ನೂ ಹೊಂದುವುದಕ್ಕೆ ಪ್ರಯತ್ನಿಸಬೇಕು.
ಚಂದ್ರ--ನೀವು ನನಗೆ. ಮಾಡಿದ ಉಪದೇಶವು ಶಿಲಾಕ್ಷರಗಳಂತೆ
ನನ್ನ ಮನಸ್ಸಿನಲ್ಲಿ ನಾಟಿರುವುದು. ನಾನಿದನ್ನೆಂದೂ ಮರೆಯದೆ ಯಾವಜ್ಜೀ
ವವೂ ತಮ್ಮ ವಿಷಯದಲ್ಲಿ ಕೃತಜ್ಞತೆಯುಳ್ಳವಳಾಗಿ ಯುಕ್ತಮಾರ್ಗದಲ್ಲಿ
ಪ್ರವರ್ತಿಸುವುದಕ್ಕೆ ವ್ರಯತ್ಶಿಸುವೆನು.
ಈ ಸಂಭಾಷಣೆಯು ಮುಗಿದಬಳಿಕ ಗುರುವೂ ಶಿಷ್ಯೆಯೂ ತೋಟ
ದಿಂದ ಮನೆಗೆ ಹೊರಟುಹೋದರು. ಹೀಗೆಯೇ ವಿದ್ಯಾಸಮುದ್ರನು ಎರಡು
ಮೂರು ವರ್ಷಗಳಲ್ಲಿ ಚಂದ್ರಮತಿಯನ್ನು ಸಮಸ್ತವಿದ್ಯೆಗಳಲ್ಲಿಯೂ ಪಾರಂ
ಗತೆಯನ್ನಾಗಿ ಮಾಡಿದನು. . ಈ ಕಾಲದಲ್ಲಿಯೇ ಚಂದ್ರಮತಿಯು ಪ್ರವೀಣ
ರಾದ ಇತರ ಗುರುಗಳ ಬಳಿಯಲ್ಲಿ ಸಂಗಿತ ಮೊದಲಾದ ಸ್ತ್ರೀಜನೋಪ
ಯುಕ್ತಗಳಾದ ವಿದ್ಯೆಯನ್ನೆಲವನ್ನೂ ಕಲಿತುಕೊಂಡಳು.
------
ಹತ್ತನೆಯ ಪ್ರಕರಣ
ಉಶೀನರ . ಮಹಾರಾಜನೊಂದಾನೊಂದುದಿನ ತನ್ನ ಮಗಳೊಡನೆ
ಆಸ್ಥಾನಕ್ಕೆ ಬಂದು ಸಿಂಹಾಸನಾಸೀನನಾಗಿ, ವಿದ್ಯಾಸಮುದ್ರನನ್ಶು ಕರೆಯಿಸಿ
ಉಚಿತಾಸನದಲ್ಲಿ ಕುಳ್ಳಿರಿಸಿ, ಸಕಲವಿದ್ವಜ್ಜನರ ಇದಿರಾಗಿ ಚಂದ್ರಮತಿಯ
ಸದ್ವಿದ್ಯೆಯನ್ನೆಲ್ಲ ಪರೀಕ್ಸಿಸುವುದಕ್ಕಾರಂಭಿಸಿದನು. ಅವಳು ಎಲ್ಲ ಪ್ರಶ್ನೆಗ
ಳಿಗೂ ಸದುತ್ತರಗಳನ್ನು ಕೊಟ್ಟು ತನ್ಸ್ನ ಬುದ್ಧಿಶಕ್ತಿಯನ್ಶು ತೋರಿಸಲು,
ಅವಳಾ ವಿದ್ಯಾವಿವೇಕಾದಿಗಳಿಗೂ ಗುರುವಿನ ಬೋಧನಾಶಕ್ತಿಗೂ ಸಭೆಯವ
ರೆಲ್ಲರೂ ಆನಂದಾಶ್ಚರ್ಯಭರಿತರಾದರು. ತನ್ನಮಗಳಿಗೆ ವಿದ್ಯೋಪದೇಶ
ವನ್ನು ಮಾಡಿ ನೀತಿವಂತೆಯನ್ನಾಗಿ ಮಾಡಿದುದಕ್ಳೋಸುಗ ಆಗ ರಾಜನು
---------------------------------------
ಹತ್ತನೆಯ ಪ್ರಕರಣ, ೫೩
ವಿದ್ಯಾಸಮುದ್ರನನ್ನು ಹಲವುಬಗೆಯಾಗಿ ಸ್ತೋತ್ರಮಾಡಿ ಅತನಾವಾಗಲೂ
ನೋಡಲಾರದಷ್ಟು ಧನವನ್ನೂ ಅಮೂಲ್ಯವಸ್ತುಗಳನ್ನೂ ಪಾರಿತೋಷಕವಾಗಿ
ಇತ್ತು ಒಂದು ಅಗ್ರಹಾರವನ್ನು ಧಾರಾಪೂರ್ವಕವಾಗಿ ಕೊಟ್ಟನು. ಅರ
ಸನ ಗುಣಗ್ರಹಣಶಕ್ತಿಗೂ ಔದಾರ್ಯವಿಶೇಷಕ್ಯೂ ವಿದ್ಯಾಸಮುದ್ರನು ಪರ
ಮಾನಂದಭರಿತನಾಗಿ ಯೋಗ್ಯವಾದ ರೀತಿಯಲ್ಲಿ ತನ್ಸ ಕೃತಜ್ಞತೆಯನ್ನು
ಸೂಚಿಸತಕ್ಕ ಕೆಲಮಾತುಗಳನ್ನಾಡಿದನು. ಅಷ್ಚರಲ್ಲಿ ಅರಸನು ಸಭೆಯನ್ನು
ಬೀಳ್ಕೊಟ್ಟು ಸಮುಚಿತಪರಿವಾರದೊಡನೆ ಅಂತಃಪುರಕ್ಕೆ, ಹೊರಟುಹೊ
ದನು. ಮಂತ್ರಿ ಮೊದಲಾದ ಸಭಾಸದರೂ ತಂತಮ್ಮ ಮನೆಗಳಿಗೆ ಹಿಂತಿ
ರುಗಿ ಹೊರಟುಹೋದರು.
ತರುವಾಯ ಚಂದ್ರಮತಿಯು ತಾನು ಕಲಿತ ವಿದ್ಯೆಯನ್ನು ದಿನಕ್ರಮ
ವಾಗಿ ಅಭಿವೃದ್ಧಿಮಾಡಿಕೊಂಡು ಪುಸ್ತಕದಲ್ಲಿ ಓದಿ ಕಲಿತುದಕ್ಕಿಂತ ಬುದ್ಧಿ
ಬಲದಿಂದ ಹತ್ತರಷ್ಟು ಜ್ಞಾನವನ್ನು ಪಡೆದು ಎಂತಹ ಕಠಿನ ಪುಸ್ತಕವನ್ನಾ
ದರೂ ಓದಿ ಅರ್ಧಮಾಡಿಕೊಳ್ಳುತ್ತೆ ಎಂತಹ ತೊಡಕಾದ. ಲೆಕ್ಕವನ್ನಾ
ದರೂ ಆಲೋಚಿಸಿ ಸರಿಯಾದ ಉತ್ತರವನ್ನು ಕಂಡುಹಿಡಿಯುತ್ತೆ, ಮನೋ
ಹರನಾದ ಲಲಿತಶೈಲಿಯ ಪದ್ಯಗಳನ್ನೂ ಹಾಡುಗಳನ್ನೂ ರಚಿಸುತ್ತೆ, ಆವ
ರಾಗವನ್ನಾದರೂ ಆಲಾಪನೆಮಾಡಿ ಕೇಳುವವರ ಮನಸ್ಸು ಕರಗುವಂತೆ
ಮಾಡುತ್ತೆ, ಆವುದಾದರೂ ನೂತನನಿಷಯವನ್ನು ತೆಗೆದುಕೊಂಡು ಇಂಪಾಗಿ
ಉಪನ್ಯಾಸಮಾಡುತ್ತೆ ಬಹುಸಮರ್ಧೆಯೆಂದು ಪ್ರಸಿದ್ಧಳಾದಳು. ಅಕೆಗಿದ್ದ
ವಿದ್ಯಾವಿವೇಕಾದಿಗಳಿಗೆ ಪ್ರಕಾಶನನ್ನುಂಟುಮಾಡತಕ್ಕ ವಿನಯಾದಿ ಸದ್ಗುಣ
ಗಳು ಆಕೆಯನ್ನು ಲೋಕದಲ್ಲಿರುವ ಸಮಸ್ತನಾರೀಮಣಿಗಳಲ್ಲಿಯೂ ಉತ್ತಮ
ಳನ್ನಾಗಿ ಮಾಡಿದುವು. ಅದುದರಿಂದ ಎಲ್ಹಾ ಕಡೆಗಳಲ್ಲಿಯೂ ಈಕೆಯ ಗುಣ
ಸಂಪತ್ತನ್ಬೂ ವಿದ್ಯಾವಿಶೇಷವನ್ನೂ ಜನರೆಲ್ಲರೂ ಮನವಾರೆ ವರ್ಣಿಸಿ
ವರ್ಣಿಸಿ ಹೇಳಿಕೊಳ್ಳುತ್ತಿದ್ದರು. ಅಕೆಯ ಕೀರ್ತಿಯು ಕ್ರಮಕ್ರಮುನಾಗಿ
ದೂರದೇಶಗಳಲ್ಲಿಯೂ ವ್ಯಾಪಿಸಿ ಎಲ್ಲರಿಂದಲೂ ಶ್ಲಾಘನೀಯವಾಯಿತು
ಇವಳಂತೆಯೇ ಕೋಸಲದೇಶಾಧೀಶನಾದ ತ್ರಿಕಂಕುಮಹಾರಾಜನಮಗನಾದ
ಹರಿಶ್ಚಂದ್ರನ ಕೀರ್ತಿಯೂ ಸಮಸ್ತ ದೇಶಗಳನ್ನೂ ವ್ಯಾಪಿಸಿದ್ದಿತು. ಅಸೇತು
ಹಿಮಾಚಲದವರೆಗಣ ದೇಶಗಳಲ್ಲೆಲ್ಲ ಅವನ ಧೈರ್ಯಶೌರ್ಯಾದಿಗಳೂ, ವಿನಯ
------------------------------------------
೫೪ ಚಂದ್ರಮತಿ.
ವಿವೇಕಾದಿಗಳೂ, ವಿದ್ಯಾಕೌಶಲವೂ . ಜನಜನಿತವಾಯಿತು. ಚಂದ್ರ
ಮತಿಯು ಪಾಠಶಾಲೆಯಲ್ಲಿ ಓದಿಕೊಳ್ಳುತ್ತಿದ್ದಾಗಳೇ ಅತನ ಸುಗುಣಸಂಪ
ತ್ತನ್ನು ಹಲವುಬಾರಿ ತನ್ಸ ಗುರುವಿನ ಬಾಯಿಂದಲೂ, ಇತರರ ಬಾಯಿಂ
ದಲೂ ಕೇಳಿದಳಾದುದರಿಂದ ತಾನು ಆತನನ್ನೇ ವರಯಿಸಬೇಕೆಂದು ಮನ
ಸ್ಸಿನಲ್ಲಿ ನಿಷ್ಕರ್ಷೆಮಾಡಿಕೊಂಡಿದ್ದಳು. ವಯಸ್ಸು ಬಂದಹಾಗೆಲ್ಲ. ಅತನ
ಸುಚರಿತ್ರೆಯನ್ನು ಶ್ರವಣಾನಂದನಾಗುವಂತೆ ಒಡನಾಡಿಯರಿಂದ ಕೇಳಿಕೇಳಿ
ಅವಳ ಆಸೆಯು ಅಷ್ಟಕ್ಕಷ್ಟೆ ಪ್ರಬಲವಾಗುತ್ತೆ ಬಂದಿತು. ಹರಿಶ್ಚಂದ್ರನೂ
ಚಂದ್ರಮತಿಯ ಸದ್ಗುಣಸಮೃದ್ಧಿಯನ್ನು ಕೇಳಿ ಅವಳನ್ಶೇ ಮದುವೆಮಾಡಿ
ಕೊಳ್ಳ ಬೇಕೆಂದು ದೃಡಸಂಕಲ್ಪನಾಗಿದ್ದನು. ಹೀಗೆ ಸ್ವಲ್ಪಕಾಲ ಕಳೆದ
ಬಳಿಕ ಚಂದ್ರಮತಿಯೊಂದುದಿನ ತನ್ಸ ಅಭಿಪ್ರಾಯನನ್ರು ತಾಯಿಯೊಡನೆ
ಮೆಲ್ಲನೆ ಉಸಿರಿದಳು. ಅಕೆಯ. ಮಗಳ ಅಭಿಪ್ರಾಯವನ್ನು ತಿಳಿದು
ಕೊಂಡು ಒಂದಾನೊಂದು ದಿನ ರಹಸ್ಯವಾಗಿ ಗಂಡನಿಗೆ ತಿಳಿಸಲು ಆತನು
ತನ್ನ ಮಗಳ ಮನಸ್ಸು ಯೋಗ್ಯನಾದ ವರನನ್ನು ಸೇರಿದುದರಿಂದ ಪರಮಾ
ನಂದಭರಿತನಾಗಿ, ಯೌವನವತಿಯಾಗಿದ ಚಂದ್ರಮತಿಯನ್ನು ಜಾಗ್ರತೆ
ಯಾಗಿ ಆತನಿಗೆ ಕೊಟ್ಟು ಮದುವೆಮಾಡುವುದು ಯುಕ್ತವೆಂದು ನಿಶ್ವಯಿಸಿ.
ತತ್ ಕ್ಷಣನೇ ದೃಢವ್ರತನೆಂಬ ಬ್ರಾಹ್ಮಣನನ್ನು ಕರೆಯಿಸಿ. ಹೇಳಬೇಕಾದ
ಸಂಗತಿಗಳನ್ನೆಲ್ಲ ಹೇಳಿ ತನ್ನ ಮಗಳನ್ನು ಹರಿಶ್ಚಂದ್ರನಿಗೆ ಕೊಡಬೇಕೆಂದು
ಉದೇಶಿಸಿರುವ ವಿಷಯವನ್ನು ಬರೆದು ತ್ರಿಶಂಕುಮಹಾರಾಜನಿಗೆ ಬಿನ್ನವ
ತ್ತಲೆಯನ್ನು ಕಳುಹಿಸಿದನು. ತ್ರಿಕಂಕುಮಹಾರಾಜನಾದರೋ ಮಗನಿಗೆ
ಚಂದ್ರಮತಿಯಲ್ಲಿ ಮನಸ್ಸು ಅನುರಕ್ತನಾಗಿರುವುದೆಂಬ ವಿಷಯವನ್ನು ಮೊದ
ಲೇ ಅರಿತಿದ್ದನಾದುದರಿಂದ, ಮರುಮಾತಾಡದೆ ಅದಕ್ಕೆ ಸಮ್ಮತಿಸಿ, ದೃಢವ್ರತ
ನಿಗೆ ಉಡುಗೆರೆಯನ್ನು ಕೊಟ್ಟು ಮದವಣಗಿತ್ತಿಯನ್ನು ನೋಡಿಕೊಂಡು ಬರ
ಲೋಸುಗ ಮತ್ತೊಬ್ಬ ಬ್ರಾಹ್ಮಣನನ್ನು ಆತನೊಡನೆ ಉಶೀನರಮಹಾರಾ
ಜನ ಬಳಿಗೆ ಕಳುಹಿಸಿದನು. ಮುಹೂರ್ತನಿಶ್ಚಯವಾದ ಬಳಿಕ ಚಂದ್ರಮತಿ
ಹರಿಶ್ಚಂದ್ರರಿಗೆ ಮಹಾ ವೈಭವದಿಂದ ವಿವಾಹವು ನಡೆಯಿತು. ಸುಗುಣ
ಸಂಪತ್ತುಗಳನ್ನು ಕೇಳಿಯೇ ಮೋಹಿಸಿದನರಾದರೂ ರೂಪಸಂಸತ್ತುಗಳು
ಅಯೀರ್ವರನ್ನೂ ಅತ್ಯಧಿಕವಾಗಿ ಒಲಿದಿದುದರಿಂದ ಅವರಾಪ್ರೀತಿಯು ದೃಢ
-------------------------------------------
ಹತ್ತನೆಯ ಪ್ರಕ ರಣ ೫೫
ಮೂಲವಾಯಿತು. ಆ ದಂಪತಿಗಳ ಸೌಂದರ್ಯವನ್ನು ಕಣ್ಣಾರ ನೋಡಿ
ದವರಿಲ್ಲರೂ ಕಥೆಗಳಲ್ಲಿ ಕೇಳುತ್ತಿರುವ ರತಿ ಮನ್ಮಥರು ಇವರಷ್ಟು
ಸೌಂದರ್ಯಶಾಲಿಗಳಾಗಿದ್ದರೇ ಎಂದು ಸಂಶಯಪಡುತ್ತಿದ್ದರು. ಲೋಕದಲ್ಲಿ
ಆರಿಗಾದರೂ ಸುಗುಣಾಲಂಕಾರವೇ ನಿಶ್ಚಯವಾದ ಅಲಂಕಾರವಲ್ಲದೆ
ಅದನ್ನುಳಿದು ಕೇವಲ ವಿದ್ಯೆಯೂ ರೂಪವೂ ಭೂಷಣವೂ ಅಲಂಕಾರಗಳಲ್ಲ.
ಮದುವೆಯೆಲ್ಲ ನಡೆದಬಳಿಕ ಚಂದ್ರಮತಿಯ ತಾಯ್ತಂದೆಗಳು ಅವಳಿಗೆ
ಹೇಳಬೇಕಾದ ಬುದ್ಧಿ ವಾದಗಳನ್ನು ಹೇಳಿ, ಹುಟ್ಟಿದಮನೆಗೂ ಸೇರಿದಮನೆಗೂ
ಕೀರ್ತಿಯನ್ನು ತರಬೇಕೆಂದು ಬೋಧಿಸಿ, ಅಕೆ ಯಾವುದಾದರೊಂದು
ತಪ್ಪನ್ನು ತಿಳಿಯದೇ ಮಾಡಿದರೂ ಅದನ್ನು ತಿದ್ದಿ ಅವಳನ್ನು ಆದರಿಸಬೇಕೆಂದು
ಅಳಿಯನಿಗೆ ಹೇಳಿ ಮಗಳನ್ನು ಅತ್ತೆಯಮನೆಗೆ ಕಳುಹಿಸಿಕೊಟ್ಟರು.
ಅವರಿಬ್ಬರೂ ಓದಿದವರಾದುದರಿಂದಲ್ಲೂ. ಸುಗುಣಸಂವತ್ತುಗಳುಳ್ಳವ
ರಾದುದರಿಂದಲೂ ಆ ದಂಪತಿಗಳ ಇಂತಹ ಐಕಮತ್ಯವೂ ಪರಸ್ಪರಾನು
ರಾಗವೂ ಎಲ್ಲಿಯೂ ಆರಿಗೂ ಉಂಟಾಗುವುದೆಂದು ಹೇಳುವುದಕ್ತಾಗುವುದಿಲ್ಲ
ಹೀಗೆ ಕೆಲದಿನಗಳು ಕಳೆದಬಳಿಕ ತ್ರಿಶಂತುಮಹಾರಾಜನು ರಾಜ್ಯಭಾರವನ್ನೆಲ್ಲ
ಸಮರ್ಥನಾದ ಮಗನಿಗೆ ವಹಿಸಿ ತಾನು ತಪಸ್ಸು ಮಾಡುವುದಕ್ಕೋಸುಗ
ಸತಿಯೊಡನೆ ಋಷ್ಯಾಶ್ರಮಕ್ಕೆ ಹೊರಟುಹೋದನು ಹರಿಶ್ಚಂದ್ರನಾದರೋ
ಪ್ರಜೆಗಳನ್ನೆಲ್ಲ ತನ್ಸ ಕುಟುಂಬವೆಂದು. ಭಾವಿಸಿ ನೋಡಿಕೊಳುತ್ತೆ,
ಅವರ ಕ್ಷೇಮಕ್ಕೋಸುಗವೇ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸುತ್ತ ತಪ್ಪು
ಮಾಡಿದವರಲ್ಲಿ ದ್ವೇಷವನ್ನಿಡದೆ ಅವರಮೇಲ್ಮೆಗೋಸುಗವೇ ಮಕ್ಕಳನ್ನು
ತಂದೆಯಂತೆ ದಂಡಿಸುತ್ತೆ, ಪ್ರಜೆಗಳನ್ನು ನೋಯಿಸದೆ, ನೀತಿ
ವಂತನಾಗಿ ರಾಜ್ಯದಲ್ಲಿ ಚೋರಭಯವಿಲ್ಲದಂತೆ ಕಾವಾಡಿಕೊಳ್ಳುತ್ತೆ, ಬಹು
ಪ್ರಜಾರಂಜಕನೆನಿಸಿದನು. ಚಂದ್ರಮತಿಯೂ ವಿದ್ಯಾವತಿಯಾದುದರಿಂದ
ತಿಳಿವುಳ್ಳವಳಾಗಿ ಗೃಹಕ್ಫತ್ಯನಿರ್ವಹಣಭಾರವನ್ನು ತನ್ನ ಪತಿಗೆ ವಹಿಸದೆ
ಸಮರ್ಥೆಯಾಗಿ ತಾನೇ ನಿರ್ವಹಿಸಿಕೊಳ್ಳುತ್ತೆ, ನಿಷ್ಕಾರಣವಾಗಿ ಯಾರಿಗೂ
ಯಾವವಿಧನಾದ ಬಾಧೆಯನ್ನೂ ಉಂಟುಮಾಡದೆ ಎಲ್ಲರನ್ನೂ ಸಮದೃಷ್ಚಿ
ಯಿಂದ ನೋಡುತ್ತೆ ಸದ್ಗುಣವತಿಯಾಗಿದಳು. ದಾಸದಾಸೀಜನರಲ್ಲಿ ಅವಳು
ಬಹುದಯೆಯುಳ್ಳವಳಾಗಿ ಅನ್ನಪಾನಿದಿಗಳಲ್ಲಿ ಲೋಪವಿಲ್ಲದೆ . ಅವರ
----------------------------------------
೫೬ ಚಂದ್ರಮತಿ.
ನ್ನೆಲ್ಲಾ ಸಂರಕ್ಷಿಸುತ್ತಿದ್ದುದರಿಂದ ಭೃತ್ಯವರ್ಗವೆಲ್ಲವೂ ಅಕೆಯ ವಿಷಯದಲ್ಲಿ
ತಮ್ಮ ಪ್ರಾಣವನ್ನಾ ದರೂ ಕೊಡುವುದಕ್ಕೆ ಸಿದ್ಧರಾಗಿದ್ದರು. ಅಷ್ಟು ಕನಿ
ಕರವುಳ್ಳವಳಾದರೂ ಆಕೆ ಯಾವಾಗಲೂ ತಪ್ಪುಮಾಡಿದವರಿಗೆ ತಕ್ಕ ಶಿಕ್ಷೆ
ಯನ್ನು ಮಾಡದೆ ಬಿಡುತ್ತಿರಲಿಲ್ಲ. ಅವಳಿಗೆ ವಿದ್ಯಾಗರ್ವವಾಗಲೀ ಧನಗರ್ವ
ವಾಗಲೀ ಲೇಶಮಾತ್ರವಾದರೂ ಇರಲಿಲ್ಲ. ನಂಟರ ವಿಷಯದಲ್ಲಿಯೂ ಹಿರಿ
ಯರ ವಿಷಯದಲ್ಲಿಯೂ ಗೌರವವುಳ್ಳವಳಾಗಿ ಅವರು ಮೆಚ್ಚುವಂತೆ ನಡೆದು
ಕೊಳ್ಳುತ್ತಿದಳು. ಕನಸಿನಲ್ಲಾದರೂ ಸುಳ್ಳನ್ನಾಡಳು. ಪರಪುರುಷರನ್ನು
ಸೋದರರಿಂದೂ ಸ್ತ್ರೀಯರನ್ನು ಒಡಹುಟ್ಟದ ಅಕ್ಕತಂಗಿಯರೆಂದೂ
ಭಾವಿಸುತ್ತಿದಳು. ಪರರು ಎಷ್ಟು ಉತ್ತಮಸ್ತಿತಿಯಲ್ಲಿದರೂ ಅವರನ್ನು
ನೋಡಿ ಸಂತೋಷಪಡುತ್ತಿದಳಲ್ಲದೆ. ಅಸೂಯೆಪಡುತ್ತಿರಲಿಲ್ಲ. ಸಮಸ್ತ
ಜಂತುಗಳ ವಿಷಯದಲ್ಲಿಯೂ ಕೃಪಾಶೀಲೆಯಾಗಿದಳು. ಬಡಬಗ್ಗರಿಗೆ
ಯಾವಾಗಲೂ ಸಾಹಾಯ್ಯವನ್ನೇ ಮಾಡುತ್ತಿದಳು. ನಿರಂತರವೂ ತನ್ನನ್ನು
ಸನ್ಮಾರ್ಗದಲ್ಲಿಯೇ ಪ್ರವರ್ತಿಸುವಂತೆ ಮಾಡಬೇಕೆಂದು ಭಗವಂತನನ್ನು
ಧ್ಯಾನಿಸುತ್ತಿದಳು. ಅವಕಾಶವೊದವಿದಾಗ ವ್ಯರ್ಥವಾಗಿ . ಕಾಲಹರಣೆ
ಮಾಡದೆ ಸದ್ಗ್ರಂಥಗಳನ್ನು ಓದುವುದರಲ್ಲಿಯೇ ಕಾಲಕಳೆಯುತ್ತಿದಳು.
ಹೀಗೆ ಕೆಲದಿನಗಳು ಕಳೆದ ಬಳಿಕ ಚಂದ್ರಮತಿಯು ಗರ್ಭಿಣಿಯಾಗಿ ಒಂದು
ಗಂಡುಮಗುವನ್ಟು ಹೆತ್ತಳು. ಸುಂದರವಾಗಿದ್ದಾಮಗುವಿಗೆ ತಾಯ್ತಂದಿಗಳು
ಲೋಹಿತಾಸ್ಯನೆಂದು ನಾಮಕರಣಮಾಡಿದರು. ಪುತ್ರಜನನದಿಂದ ಆ
ದಂಪತಿಗಳಿಗುಂಟಾದ ಸಂತೋಷವು ಅಷ್ಟಿಷ್ಟೆಂದು ಹೇಳಲಳವಲ್ಲ. ಹೀಗೆ
ಚಂದ್ರಮತಿಯೂ ಹರಿಶ್ಚಂದ್ರನೂ ಸಕಲ ಸುಖಸಾಮ್ರಾಜ್ಯವನ್ನು ಹೊಂದಿ
ಸ್ವಲ್ಪಕಾಲ ಸುಖವಾಗಿ ಸಂಸಾರಮಾಡಿಕೊಂಡಿದ್ದರು
-------
ಹನ್ನೊಂದನೆಯ ಪ್ರಕರಣ.
ಮಹರ್ಷಿಗಳೆಲ್ಲರೂ. ಒಂದುದಿನ ಸಭೆ ಸೇರಲು ಯಾವಾಗಲೂ
ಸತ್ಯಕ್ಕೆ ತಪ್ಪದ ಮಹಾನುಭಾವನಾನನಾದರೂ ಇರುವನೇ ಎಂದು ಅವರವ
ರಲ್ಲಿಯೇ. ವಿವಾದವುಂಟಾಯಿತು. ಆಗ ವಸಿಷ್ಠನು. ಮಾನವಕೋಟಿಯ
---------------------------------------------
ಹನ್ನೊಂದನೆಯ ಪ್ರ ಕ ರಣ, ೫೭
ಲ್ಲೆಲ್ಲ ಆಡಿದಮಾತಿಗೆ ತಪ್ಪದವನು ಹರಿಶ್ಚಂದ್ರನೊಬ್ಬನೇ ಎಂದು ಆತನ
ಯೋಗ್ಯತೆಯನ್ನು ಶ್ಲಾಘಿಸಿದನು. . ಅತನ ಪ್ರತಿಕಕ್ಷಿಯಾದ ವಿಶ್ವಾಮಿತ್ರನು
ಈ ಮಾತುಗಳನ್ನು ಕೇಳಿ ಸೈರಿಸಲಾರದೆ, “ ಆಃ ! . ವಿವಿಧಮಾಯೋಪಾಯ
ಗಳಿಂದ ಶತ್ರುಗಳನ್ನು ವಂಚಿಸಿ ರಾಜ್ಯತಂತ್ರನನ್ನು ನಿರ್ವಹಿಸಿಕೊಳ್ಳಬೇಕಾ
ಗಿರುವ ರಾಜರಲ್ಲಿ ಸತ್ಯಸಂಧರೂ ಇರುವರಂತೆ ! ಸೂರ್ಯವಂಶಜರಾದ
ಅರಸರಮನೆಗೆ ಪುರೋಹಿತನಾದ ನೀನು ಅಕ್ಕಿಬೇಳೆಯ ಅಸೆಗೋಸುಗ
ಹೀಗೆ ಹೇಳುತ್ತಿರಬಹುದು ! ಹರಿಶ್ಚಂದ್ರನಿಂದ ಸುಳ್ಳಾಡಿಸುವುದೆಷ್ಟರ
ಕಾರ್ಯ? ಸಾಕುಸಾಕು, ಸುಮ್ಮನಿರು “ ಎಂದು ವಸಿಷ್ಟನನ್ನು ನಿಂದಿಸಿದನು.
ಆಗ ವಸಿಷ್ಟನು ಕೋಪಾಕ್ರಾಂತನಾಗಿ “ ಎಲ್ಬೆ, ವಿಶ್ವಾಮಿತ್ರನೇ ! ನೀನು
ಸಾವಿರವರ್ಷ ತಲೆಕೆಳಗಾಗಿ ನಿಂತು. ತಪಸ್ಸುಮಾಡಿದರೂ ಹರಿಶ್ಮಂದ್ರನಿಂದ
ಅಸತ್ಯವನ್ನಾಡಿಸಲಾರೆ. ಸುಮ್ಮನೇಕೆ ಕೂಗುವೆ ? “ ಎಂದನು. . ವಿಶ್ವಾ
ಮಿತ್ರನು “ ನಿಮಿಷಮಾತ್ರದಲ್ಲಿ ನಾನು ಅಸತ್ಯವನ್ನಾಡಿಸದೆ ಬಿಡುವೆನೇ ? “
ಎಂದನು. . ಹೀಗೆ ಈರ್ವರೂ ಪಂತಗಟ್ಟಿ ತಮ್ಮಲ್ಲಿ ಗೆದ್ದವರಿಗೆ ಸೋತವರು
ತಾವು ಅದುವರಿಗೂ ಮಾಡಿದ ತಪಸ್ಸನ್ನೆಲ್ಲಾ ಧಾರಾಪೂರ್ವಕವಾಗಿ
ಕೊಟ್ಟು ಹೊರಟುಹೋಗುವುದಿಂದು ನಿಷ್ಕರ್ಷಿಸಿ, ತಂತಮ್ಮ ಆಶ್ರಮಗಳಿಗೆ
ಹೊರಟುಹೋದರು.
ಕೆಲದಿನಗಳು ಕಳೆದಬಳಿಕ ಹರಿಶ್ಚಂದ್ರನು ಒಂದು ಯಾಗವನ್ನು
ಮಾಡಿ ಭೂರಿದಕ್ಷಿಣೆಗಳನ್ನು ಕೊಡುವನೆಂದು ಕೇಳಿ ವಿಶ್ವಾಮಿತ್ರನಿ
ಅಯೋಧ್ಯೆಗೆ ಬಂದು, ಸಭಾಮಂಟಪದಲ್ಲಿ ಸುಖಾಸೀನನಾಗಿದ ಹರಿಶ್ಚಂದ್ರ
ನನ್ನು ಕಂಡನು. ಅಗ ಹರಿಶ್ಚಂದ್ರನು ಈ ಮಹರ್ಷಿಯನ್ನು ದೂರದಿಂದಲೇ
ಕಂಡು ಮಹಾತ್ಮನು ಬರುತ್ತಿರುವನೆಂದು ಸಿಂಹಾಸನವನ್ನು ಬಿಟ್ಟು ಕೆಳಗೆ
ಬಂದು ಆತನಿಗೆ ಅರ್ಘ್ಯವಾದ್ಯಾದಿಗಳನ್ನು ಕೊಟ್ಟು ಕರೆತಂದು. ಯೋಗ್ಯ
ವಾದ ಪೀಠದಲ್ಲಿ ಕುಳ್ಳಿರಿಸಿ ಕುಶಲಶ್ರಶ್ನೆಯನ್ನು ಮಾಡಿದನು. ವಿಶ್ವಾಮಿ
ತ್ರನೂ ಆತನೊಡನೆ ಸ್ವಲ್ಪಕಾಲ ಸಂಭಾಷಿಸಿ, ತಾನೊಂದು ಯಜ್ಞವನ್ನು
ಮಾಡಬೇಕಾಗಿರುವುದಿಂದೂ, ಅದಕ್ಕೆ ಬೇಕಾಗುವಷ್ಟು ಧನವನ್ನು ಕೊಟ್ಟು
ಯಜ್ಞ ಫಲವನ್ನು ಹೊಂದಬೇಕೆಂದೂ ಹರಿಶ್ಚಂದ್ರನೊಡನೆ ಹೇಳಿದನು.
ರಾಜನು ಅದಕ್ಕೆ ಮುರುಮಾತಾಡದೆ ಯಜ್ಞಕ್ಕೆ ಬೇಕಾಗುವಷ್ಟು ಧನವನ್ನೆಲ್ಲ
------------------------------------------
೫೮ ಚಂದ್ರಮತಿ.
ತಾನು ಕೊಡುವೆನೆಂದು ವಾಗ್ದಾನವನ್ನು ಮಾಡಲು, ಅಪರಿಮಿತನಾದ ಧನ
ವನ್ನು ಅತನಿಂದ ತೆಗೆದುಕೊಂಡು, ತಾನು ತಿರುಗಿ ಬಂದು ಕೇಳುವವರೆಗೂ
ಅವನ್ನೆಲ್ಲ ರಕ್ಷಿಸಿಕೊಂಡಿರಬೇಕೆಂದು ಹೇಳಿ ಆ ಹಣವನ್ನೆಲ್ಲ ಅಲ್ಲಿಯೆ
ಇಟ್ಟು ಹರಿಶ್ಚಂದ್ರನನ್ನೊಪ್ಪಿಸಿ ಹೊರಟುಹೋದನು.
ಒಂದೆರಡುದಿನಗಳಾದ ಬಳಿಕ ಅರಣ್ಯಪ್ರಾಂತಗಳಲ್ಲಿರುವ ಗ್ರಾಮಸ್ಥ
ರೆಲ್ಲರೂ . ಒಟ್ಟಾಗಿ. ಬಂದು . ಒಡ್ಡೋಲಗದಲ್ಲಿರುವ ಹರಿಶ್ಚಂದ್ರನನ್ನು
ಕಂಡು “ ಎಲೈ, ಮಹಾಪ್ರಭುವೇ ! ನನ್ಮು ಗ್ರಾಮಗಳಲ್ಲಿ ದುಷ್ಟಮೃಗಗಳ
ಬಾಧೆಯು ಸಹಿಸಲಸಾಧ್ಯವಾಗಿರುವುದು. ಅವುಗಳನ್ನು ಸಂಹರಿಸಿ, ನಮ್ಮನ್ನೂ
ನಮ್ಮ ಬೆಳೆಗಳನ್ನೂ ಸಂರಕ್ಷಿಸಬೇಕು. " ಎಂದು ಮೊರೆಯಿಟ್ಟರು.
ಹರಿಶ್ಚಂದ್ರನು ಅವರ ಮೊರೆಯನ್ನು ಕೇಳಿ. ಅಭಯವನ್ನು ಕೊಟ್ಟು ಎಲ್ಲ
ರನ್ನೂ ಕಳುಹಿಸಿ, ಬಲೆ ಬೋನು ಮೊದಲಾದ ಸಾಧನಗಳೊಡನೆ ಬೇಟೆಯ
ನಾಯಿಗಳನ್ನು ಸಂಗಡ ಬಿಟ್ಟುಕೊಂಡು ಬರಬೇಕೆಂದು ಬೇಟೆಗಾರರಿಗಾ
ಜ್ಞಾಪಿಸಿ, ವಿನೋದವನ್ನು ನೋಡಲೋಸುಗಪತ್ನಿಯನ್ನೂ ಪುತ್ರನನ್ನೂ
ಕರೆದುಕೊಂಡು ತಾನೂ ಬೇಟಿಗೆ ಹೊರಟನು.
ಹೀಗೆ ಮೃಗಯಾವಿಹಾರಾರ್ಧಿಯಾಗಿ ಹೋಗಿ ಹರಿಶ್ಚಂದ್ರನು ಹುಲಿ
ಗಳನ್ನೂ ಕಾಡುಹಂದಿಗಳನ್ನೂ ಚಿರತೆಗಳನ್ನೂ ಕೊಂದು, . ನಾನಾನಿಧ
ಮೃಗಗಳನ್ನು ಆ ಬೇಟೆಗಾರರಿಗೆ. ಬಹುಮಾನವನ್ನಾಗಿ ಕೊಟ್ಟು ಕಳುಹಿಸಿ
ಸಮುಚಿತವರಿವಾರದೊಡನೆ ಹೊರಟು. ಒಂದು ದೊಡ್ಡ. ಗುಡಾರವನ್ನು
ಹಾಕಿಸಿ, ವನಸಂಚಾರದಿಂದ ಬಳಲಿದವನಾದುದರಿಂದ ಆ ಹೊತ್ತು ಅಲ್ಲಿಯೇ
ನಿಂತು ಪತ್ನೀಪುತ್ರರೊಡನೆ ಸುಖಿಸುತ್ತಿದನು. ಪತ್ನಿಯು ಯೋಗ್ಯಳಾದರೆ
ಪತಿಗೆ ಮಹಾರಣ್ಯವಾದರೂ ದಿವ್ಯಭವನವಾಗಿ ತೋರುವುದೂ, ಪತ್ಚಿಯು
ಅಯೋಗ್ಯಳಾಗಿದ್ದರೆ ಪತಿಗೆ. ಸುಂದರವಾದ ಭವನವೂ ಮಹಾರಣ್ಯವಾಗಿ
ತೋರುವುದ್ದೂ ಸಹಜವೇ ಅಲ್ಲವೇ ? ಹರಿಶ್ಚಂದ್ರನು ಪತ್ಚಿಯೊಡನೆ
ವಿನೋದವಾಗಿ ಸಲ್ಲಾಪಮಾಡುತ್ತಿರುವಾಗ, ಲೋಹಿತಾಸ್ಯನು ಸಮೀದಲ್ಲಿ
ಅಡಿಕೊಳ್ಳುತ್ತೆ ದೂರದಲ್ಲಿದ್ದ ಒಂದು ಹುಲ್ಲೆಯಮರಿಯನ್ನು ಕಂಡು
ಅದನ್ನು ತಂದುಕೊಡೆಂದು ತಂದೆಯನ್ನು ಕೇಳಿದನು. ಹರಿಶ್ವಂದ್ರನು ತತ್
ಕ್ಷಣನೇ ಎದ್ದು ಹುಲ್ಲೆಯ ಮರಿಯನ್ನು ಸಜೀವನಾಗಿಯೇ ತಂದುಕೊಡ
----------------------------------------
ಹನ್ನೊಂದನೆಯ ಪ್ರಕರಣ. ೫೯
ಬೇಕೆಂಬ ಅಭಿಪ್ರಾಯದಿಂದ ಬಿಲ್ಲನ್ನೂ ಬಾಣಗಳನ್ನೂ ಧರಿಸಿ ಅದನ್ನು ಬೆನ್ನ
ಟ್ಟಿದನು. ಅದು ಬೆದರಿ ಮಹಾವೇಗದಿಂದ ಓಡುತ್ತೆ ಅತನನ್ನು ಬಹುದೂರಕ್ಕೆ
ಕರೆದುಕೊಂಡುಹೋಗಿ ಕಡೆಗೆ ವಿಶ್ವಾಮಿತ್ರನ ಆಶ್ರಮಕ್ಕೆ ನುಗ್ಗಲು ಹರಿ
ಶ್ಚಂದ್ರನು ಬೇಸರಗೊಂಡು ಬಿಲ್ಲಿಗೆ ಬಾಣವನ್ನು ಹೂಡಿ ಅದನ್ನು ಪ್ರಯೋಗಿ
ಸಿದನು. ಆದರೆ ಹುಲ್ಲೆಮರಿಯು ಅದನ್ನು ತಪ್ಪಿಸಿಕೊಂಡು ಅದೃಶ್ಯವಾ
ಯಿತು. ಹರಿಶ್ಚಂದ್ರನು ಬಿಸಿಲಿನಲ್ಲಿ ಓಡಿ ಬಲುಬಳಲಿದ್ದುದರಿಂದ ದಾಹ
ಗೊಂಡು ಸಮೀಪದಲ್ಲಿದ್ದ ಒಂದು ಸರೋವರದಲ್ಲಿ ಜಲಪಾನಮಾಡಿ ತೀರ
ದಲ್ಲಿದ್ದ ಒಂದು ವಟವೃಕ್ಷದ ನೆಳಲಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿ
ದ್ದನು. ಇಷ್ಟರಲ್ಲಿ ಮಂತ್ರಿಯಾದ ಸತ್ಯಕೀರ್ತಿಯೂ ಚಂದ್ರಮತಿಯೂ ಸಪರಿ
ವಾರರಾಗಿ ಲಛೋಹಿತಾಸ್ಯನನ್ನು ಕರೆದುಕೊಂಡು ಅಲ್ಲಿಗೆ ಬಂದರು.
ಹರಿಶ್ಚಂದ್ರನು ವಿಶ್ರಮಿಸಿಕೊಳ್ಳುತ್ತಿರುವುದನ್ನು ವಿಶ್ವಾಮಿತ್ರನ ವನ
ಪಾಲಕಿಯರಾದ ಇಬ್ಬರು. ಮಾತಂಗತರುಣಿಯರು ಕಂಡು ಆತನಿಂದ
ಏನಾದರೂ ವಸ್ತಾಭರಣಗಳನ್ನು ಉಚಿತವಾಗಿ ತೆಗೆದುಕೊಂಡು ಬರಬೇ
ಕೆಂದು ಹರಿಶ್ಚಂದ್ರನ ಬಳಿಗೆ. ಬಂದು ತಮ್ಮ ಸಾಮರ್ಥ್ಯವನ್ನೆಲ್ಲ ತೋರಿಸಿ
ಇಂಪಾಗಿ ಹಾಡತೊಡಗಿದರು. ಅವರ ಗಾನವು ಆಹ್ಲಾದಕರವಾಗಿದ್ದುದ
ರಿಂದ ಅರಸನು ಸ್ವಲ್ಪಕಾಲ ಅದನ್ನು ಕೇಳುತ್ತಿದ್ದು ಅವರಿಗೆ ತಕ್ಕ ಬಹು
ಮಾನವನ್ನು ಕೊಟ್ಟು ಹೋಗಿರೆಂದು . ಹೇಳಿದನು. ಆ ತರುಣಿಯ
ರಾದಳೋ ಅರಸನ ದಿವ್ಯಸುಂದರವಾದ ರೂಪವನ್ನು ಕಂಡು ಕಾಮ ಪರ
ವಶೆಯರಾಗಿ ಮೈಮರೆತು ಉಚಿತಾನುಚಿತವಿವೇಕವಿಲ್ಲದೆ ಆ ಹಣವನ್ನು
ತೆಗೆದುಕೊಳ್ಳದೆ ಆತನ ಸಂಗವನ್ನು ಹೊಂದುವ ಇಚ್ಚೆಯಲ್ಲದೆ ಮತ್ತೆ
ಬೇರೆ ಯಾವ ಇಚ್ಬೆಯೂ ಇಲ್ಲವೆಂದೂ, . ತಮ್ಮರ ಮನೋರಥವನ್ನು
ಪೂರ್ತಿಗೊಳಿಸಿ ತಮ್ಮನ್ನು ಕಾಪಾಡಬೇಕೆಂದೂ ಲಜ್ಜೆಯಿಲ್ಲದೆ ಕೇಳಿ
ಕೊಂಡರು. ಇಂತಹ ಅನುಚಿತವಾದ ಪ್ರಾರ್ಥನೆಯನ್ನು ಕೇಳಿ ಅರಸ
ನಿಗೆ ಅವರಮೇಲೆ ಆಗ್ರಹವುಂಟಾಗಲು ಆತನು ಅವರನ್ನು ಕೋಪದೃಷ್ಟಿ
ಯಿಂದ ನೋಡುತ್ತೆ ತತ್‌ಕ್ಷಣವೇ ಅಲ್ಲಿಂದ ಹೊರಟುಹೋಗಿರೆಂದು ಗರ್ಜಿ
ಸಿದನು. ಆ ಸ್ತ್ರೀಯರು ಆಗಲೂ ತಮ್ಮ ಚಲವನ್ನು ಬಿಡದೆ ತಮ್ಮ
ಮನೋರಥವನ್ನು ಪೂರ್ತಿಮಾಡಿದಲ್ಲದೆ ಅಲ್ಲಿಂದ ಹೊರಡುವುದಿಲ್ಲ ವೆಂದು
-------------------------------------------
೬೦ ಚಂದ್ರಮತಿ.
ಹೇಳಿದರು. ಆಗ ಅರಸನು. ಕೋಪವನ್ನು ಸೈರಿಸಲಾರದವನಾಗಿ ತುಚ್ಛ
ರಾದ ಅ ಯುವತಿಯರನ್ಶು ಹೊಡೆದು ನೂಕುನಂತೆ ಭಟರಿಗಾಜ್ಞಾಪಿಸಿ
ದನು. ಸೇವಕರು ತತ್‌ಕ್ಷಣವೇ ಸ್ವಾಮಿಯಾಜ್ಞೆಯನ್ನು ಶಿರಸಾವಹಿಸಿ
ಆ ಸ್ತ್ರೀಯರನ್ನು ಚಮ್ಮಟಿಗೆಗಳಿಂದ ಹೊಡೆಯಲು, ಕರುಣಾಶೀಲೆಯಾದ
ಚಂದ್ರಮುತಿಯು ಒಳ್ಳೆಯ ಮಾತುಗಳಿಂದ ಹರಿಶ್ಚಂದ್ರನ . ಕೋಪವನ್ನು
ಶಾಂತಗೊಳಿಸಿ ಆ ಸ್ತ್ರೀಯರನ್ನು ಬಿಡಿಸಿ ಕಳುಹಿಸಿದಳು. ಅ ಮಾತಂಗ
ಕನ್ಯೆಯರು ಕಣ್ಣೀರುಸುರಿಸುತ್ತೆ ತಲೆಯನ್ನು ಕೆದರಿಕೊಂಡು. ಸೆರಗನ್ನು
ಜಾರಿಸಿ ಗಟ್ಟಿಯಾಗಿ ಅಳುತ್ತೆ ವಿಶ್ವಾಮಿತ್ರನ ಆಶ್ರಮಕ್ಕೆ ಹೋದರು.
ಹರಿಶ್ಟಂದ್ರನು ದುಡುಕಿ ಅವರನ್ನು ಹೊಡೆಯಿಸಿದುದಕ್ಕೋಸುಗ ಪಶ್ಚಾತ್ತಾಸ
ಪಡುತ್ತೆ, ಪತ್ನಿಯ ಹಿತವಚನಗಳಿಂದ ಸಂತುಷ್ಟನಾಗಿ ಪುತ್ರಾದಿಗಳೂ
ಡನೆ ವಿನೋದವಾಗಿದ್ದನು.
ಹನ್ನೆರಡನೆಯ ಪ್ರಕರಣ
ಅನಂತರ . ಮಾತಂಗಯುವತಿಯರು ವಿಶ್ವಾಮಿತ್ರನ ಆಶ್ರಮವನ್ನು
ಪ್ರವೇಶಿಸಿ ಶೀತಲವಾದ ಮಂದಮಾರುತಕ್ಕೆ ಮೈಯೊಡ್ಡಿ ಕುಳಿತಿದ್ದ ವಿಶ್ವಾ
ಮಿತ್ರನಿಗೆ ನಮಸ್ಕರಿಸಿ, ತಮಗೆ ಹರಿಶ್ಚಂದ್ರನು ಮಾಡಿದ ಅಪಮಾನವನ್ನು
ಅತಿ ದೈನ್ಯದಿಂದ ವಿಜ್ಞಾಪಿಸಿ ಸೊರಸೊರನ ಅಳತೊಡಗಿದರು. . ಅತನಾ
ಸ್ತ್ರೀಯರ. ಪ್ರಲಾಪವನ್ನು ಕೇಳಿ ಸಿಟ್ಟೇರಿದ ಹಾವಿನಂತೆ ಎದ್ದು ನಿಂತು,
ತತ್‌ಕ್ಷಣವೇ ತನ್ನ ಶಿಷ್ಯರನ್ನೆಲ್ಲ ಕರೆದುಕೊಂಡು ದಾರಿಯುದ್ದಕ್ಕೂ ಪರು
ಷೋಕ್ತಿಗಳನ್ನೇ ಆಡುತ್ತೆ ಹರಿಶ್ಚಂದ್ರನ ಬಳಿಗೆ. ಹೋದನು. ಹರಿಶ್ಚಂದ್ರನು
ಈ ಮಹರ್ಷಿಯನ್ನು ದೂರದಿಂದಲೇ ನೋಡಿ ತನ್ನ ಹೆಂಡತಿಯೊಡನೆ
ಸಮಾಪಕ್ಕೆ ಬಂದು ನಮಸ್ಕರಿಸಲು, ವಿಶ್ವಾಮಿತ್ರನು ಅತನ ನಮುಸ್ಥಾರ
ವನ್ನು ಪರಿಗ್ರಹಿಸದೆ ಕೆಂಡವನ್ನುಗುಳುತ್ತಿರುವ ದೃಷ್ಟಿಯಿಂದ ನೋಡಿ
ಇಂತೆಂದನು :--
-------------------------------------------
ಹನ್ನೆರಡನೆಯ ಪ್ರಕರಣ. ೭೧
ವಿಶ್ವಾ-- ಎಲಾ ! ನೃಪಾಧಮನೇ ! ಪೂರ್ವದಲ್ಲಿ ರಾಜರು ಬೀಟೆ
ಯಾಡುವುದಕ್ಕೆ ಎಂದೂ ಬಂದಿರಲಿಲ್ಲವೆ? ಅವರೆಂದಾದರೂ ನಿನ್ನಂತೆ
ಋಷ್ಯಾಶ್ರಮಗಳಿಗೆ ಬಾಧೆಯನ್ನುಂಟುಮಾಡಿರುವರೇ ? ಹೀಗೆ ನೀನು ನಮ್ಮ
ತಪೋವನಗಳನ್ನು ಪ್ರವೇಶಿಸಿ ನಿಷ್ಠಾರಣನಾಗಿ ಆಶ್ರಮಮೃಗಗಳಗೆ ನಿಷ್ಕಾರಣವಾಗಿ
ಬಾಧೆಯನ್ನುಂಟುಮಾಡಿದುವಲ್ಲದೆ ನಮ್ಮ ವಿಷಯದಲ್ಲಿಯೂ ಮಹಾಪರಾಧ
ವನ್ನೇ ಮಾಡಿರುವೆ. ಇದೂ ಅಲ್ಲದೆ ಹೆತ್ತಮಕ್ಕಳಂತೆ ನಾವು ನೋಡುತ್ತಿ
ರುವ ಈವುದ್ಯಾನಪಾಲಕಿಯರು ನೀನೇನೋ ಮಹೋದಾರಿಯೆಂದು ತಿಳಿದು
ನಿನ್ನನ್ನು. ಯಾಚಿಸುವುದಕ್ಕೆ ಬಂದಾಗ ಅವರನ್ನು ನಿಷ್ಟಾರಣವಾಗಿ ಹೊಡೆ
ಯಿಸಿ. ಘೋರಪಾತಕವನ್ನು ಸಂಗಳಿಸಿಕೊಂಡೆ. ಇಂತಹ ನಿನ್ನನ್ನೇನು
ಮಾಡಿದರೂ ಪಾಪಬಾರದು!
ಹರಿ---ಸ್ವಾಮೀ ! ತಿಳಿದೋ ತಿಳಿಯದಿಯೋ ನಾನು ತಮ್ಮ ವಿಷಯ
ದಲ್ಲಿ. ಅಪರಾಧವನ್ನು ಮಾಡಿ. ತಮ್ಮ ಆಗ್ರಹಕ್ಕೆ ಪಾತ್ರನಾದೆನು. . ಹಾಗಿ
ದ್ದರೂ ಶರಣಾಗತರಕ್ಷಕರಾದ ತಾವು ಮರೆಹೊಕ್ಕಿರುವ ನನ್ನನ್ನು ಕಾಪಾಡ
ಬೇಕೆಂದು ಬೇಡಿಕೊಳ್ಳುವೆನು. ಹಾಲಿನಲ್ಲಿ ಮುಳುಗಿಸಿದರೂ. ನೀರಿನಲ್ಲಿ
ಮುಳುಗಿಸಿದರೂ ಅನುಗ್ರಹಾಗ್ರಹಗಳು . ತಮಗೇ ಸೇರಿದುದಾಗಿರುವುವು.
ವಿಶ್ತಾ----ನಿಶ್ಚಯವಾದ ಅನುತಾಪವುಳ್ಳವನಾಗಿ ನೀನು ಬಹುದೀನ
ತ್ವದಿಂದ ಬೇಡಿಕೊಳ್ಳುತ್ತಿರುವೆಯಾದಕಾರಣ ನೀನು ಮಾಡಿರುವ ಆ ಕ್ರೂರ
ಕಾರ್ಯವನ್ನು ಕ್ಷಮಿಸಿರುವೆವು. ಇನ್ನು ನೀನು ನಮ್ಮ ಮಾತನ್ನು
ಕೇಳಿ .ನಮಗೆ ಪುತ್ರಿಕಾಪ್ರಾಯರಾದೀ. ಈರ್ವರನ್ನೂ . ಪಾಣಿಗ್ರಹಣ
ಮಾಡಿಕೋ.
ಹರಿ---ನನಗಿರುವ ರಾಜ್ಯಸಂಪತ್ತುಗಳನ್ನೆಲ್ಲ ಕೊಡೆಂದರೂ ಕೊಡುವೆ
ನಲ್ಲದೆ ಅಗ್ನಿಸಾಕ್ಷಿಯಾಗಿ ಮದುವೆಯಾದ ಧರ್ಮಪತ್ನಿಯನ್ನು ಅಧರ್ಮ
ಮಾರ್ಗಾವಲಂಬನೆಯಿಂದ ತ್ಯಜಿಸಿ ಚಂಡಾಲಸ್ತ್ರೀಯರನ್ನು ವರಯಿಸ
ಲಾರೆನು.
ವಿಶ್ವಾ---ಹಾಗಾದರೆ ನೀನು ಆಡಿದ ಮಾತಿಗೆ ತಪ್ಪದವನಾದುದರಿಂದ
ನಿನ್ನ ರಾಜ್ಯವನ್ನೂ ಐಶ್ವರ್ಯವನ್ನೂ ನನಗೆ ಕೊಟ್ಟು ಉಟ್ಟ ಬಟ್ಟೆಯೊಂದ
ರೊಡನೆ ಪತ್ರೀಪುತ್ರಸಮೇತನಾಗಿ ಹೊರಟುಹೋಗು :-
--------------------------------------------
೬೨ ಚಂದ್ರಮತಿ.
ಎ೦ದು ವಿಶ್ವಾಮಿತ್ರನು ನುಡಿದ ತತ್‌ಕ್ಷಣವೇ ಹರಿಶ್ಚಂದ್ರನು ತನ್ನ
ಹೆಂಡತಿಯೇನನ್ನುವಳೋ ಎಂಬ ಅಭಿವ್ರಾಯದಿಂದ ಆಕೆಯ ಕಡೆಗೆತಿರುಗಲು,
ಚಂದ್ರಮತಿಯು ಅಡಿದಮಾತಿಗೆ ತಪ್ಪಿ ಅಪಕೀರ್ತಿಯನ್ನು ಹೊಂದುವುದಕ್ಕಿಂತ
ಸಮಸ್ತರಾಜ್ಯವನ್ನೂ ವಿಶ್ವಾಮಿತ್ರನಿಗೆ ಧಾರೆಯೆರೆದುಕೊಟ್ಟು ಹೊರಟು
ಹೋಗುವುದೇ ಯುಕ್ತವೆಂದೆಣಿಸಿ ಸತಿಯ ಅಭಿಪ್ರಾಯಕ್ಕೆ ಅನುಗುಣನಾಗಿ
ಪ್ರೋತ್ಸಾಹವಚ`ನಗಳನ್ನಾಡಿದಳು. ಒಡನೆಯೇ ರಾಜನು ಸರ್ವಧನವನ್ನೂ
ಸರ್ವರಾಜ್ಯವನ್ಮೂ ವಿಶ್ವಾವಿತ್ರನಿಗೆ ಧಾರಾಪೂರ್ವಕನಾಗಿ ದಾನಮಾಡಿ,
ತರುವಾಯ ರಾಜಧಾನಿಗೆ ಬಂದು ನಡೆದ ವರ್ತಮಾನವನ್ನೆಲ್ಲ ಮಂತ್ರಿಗಳಿಗೆ
ತಿಳಿಸಿ, ವಿಶ್ವಾಮಿತ್ರನ ಆಜ್ಞೆಗಧೀನರಾಗಿರತಕ್ಳುದೆಂದು ಅವರಿಗೆಲ್ಲ ಹೇಳಿ,
ಪೌರರೆಲ್ಲರೂ ಒಟ್ಟುಗೂಡಿ ಬಂದು ಈ ವೃತ್ತಾಂತದಿಂದ ದುಃಖಿತರಾಗಿ
“ ನಮ್ಮನ್ನೆಲ್ಲ ಯಾರಿಗೆ ಒಪ್ಪಿಸಿ ಹೋಗುವೆ?“ ಎಂದು ಕೇಳುತ್ತಿರಲು ಅವರ
ನ್ನೆಲ್ಲ ಸಂತವಿಸಿ ಹಿಂದಕ್ಕೆ ಕಳುಹಿ, ಪತ್ನೀಪುತ್ರರಿಂದೊಡಗೂಡಿ ಉಟ್ಟಬಟ್ಟೆ
ಯೊಂದರೊಡನೆ ಹೊರಟನು. ಇಷ್ಟರಲ್ಲಿ ವಿಶ್ವಾಮಿತ್ರನು ಹರಿಶ್ಚಂದ್ರನನ್ನು
ಕರೆತರುವಂತೆ ಶಿಷ್ಗರಿಗಾಜ್ಞಾಪಿಸಲು ಅವರು ಅವನನ್ನು ಕರೆದುಕೊಂಡು
ಹೋದರು. ವಿಶ್ನಾಮಿತ್ರನು . ಅಗಳಾ ಹರಿಶ್ಚಂದ್ರನನ್ನು ಕುರಿತು
" ಎಲ್ಬೆ ! ಯಜ್ಞಕ್ಕೋಸುಗ ನಾನು ಪೂರ್ವದಲ್ಲಿ ನಿನ್ಕನ್ನು ಯಾಚಿಸಿ
ಪಡೆದು ನಿನ್ಕ ಬಳಿಯಲ್ಲಿಯೇ ಇಟ್ಟದ . ಧನವನ್ನೂ ಕೊಟ್ಟು ಹೋಗು “.
ಎಂದು ನಿರ್ಬಂಧ ಪಡಿಸಿದನು. _ ಹರಿಶ್ಚಂದ್ರನಾ ವಿಶ್ವಾಮಿತ್ರನನ್ನು ಕುರಿತು
“ಎಲೈ ಮುನಿಶ್ರೇಷ್ಠನೇ ! ಮೂವತ್ತು ದಿನಗಳ . ಅವಕಾಶವನ್ಷಿತ್ತರೆ
ಅದನ್ನೂ ಸಮರ್ಪಿಸುವೆನು “ ಎಂದು ಹೇಳಲು, ಆ ಋಷಿಯು ಅದಕ್ಕೆ
ಸಮ್ಮತಿಸಿ, ಪರಮ ಧೂರ್ತಾಗ್ರಗಣ್ಯನಾದ ನಕ್ಷತ್ರಕನೆಂಬ ಶಿಷ್ಯನೊಬ್ಬ
ನನ್ನು. ಕರೆದು “ ಎಲಾ, ನಕ್ಷತ್ರಕಾ ! ನಮ್ಮ ಗಡುಬದೊಳಗಾಗಿ ಹಣ
ವನ್ನು ಕೊಡುವವರೆಗೂ ನೀನೀ ಕ್ಷತ್ರಿಯನೊಡನಿದ್ದು ನಿನ್ನ ಬಹುಮಾನ
ದೊಡನೆ ನಮ್ಮ ಹಣವನ್ನು ಭದ್ರನಾಗಿ ತೆಗದುಕೊಂಡು ಬಾ “ ಎಂದು
ಹೇಳಿ ಚಂದ್ರಮತೀಹರಿಶ್ವಂದ್ರಕೊಡನೆ ಕಳುಹಿಸಿದನು.
ಹರಿಶ್ಚಂದ್ರನು ಕಾಶೀಪಟ್ಟಣಕ್ಕೆ ಹೋಗಬೇಕೆಂದು ಭಾರ್ಯಾಪುತ್ರ
ರೊಡನೆ ಹೊರಟು, ಅರಣ್ಯಮಾರ್ಗದಲ್ಲಿ ಪ್ರಯಾಣನಾಡುತ್ತಿರಲು, ನಕ್ಷ
--------------------------------------
ಹನ್ನೆರಡನೆಯ ಪ್ರಕರಣ. ೬೩
ತ್ರಕನು ಕಪಟಸಂಕಟವನ್ನು ಸೂಚಿಸಿ ನರಲುತ್ತೆ ನಡುನಡುವೆ. ಕುಳಿತು
ಕೊಳ್ಳುತ್ತೆ, ತನ್ನ ಕಾಲು ನೋಯುತ್ತಿರುವುದಿಂದೂ, ನಾಲಗೆಯೊಣಗಿ .
ಹೋಗುತ್ತಿರೆವುದೆಂದೂ ಹೇಳಿಕೊಂಡು ಹಲವು ಬಗೆಯಾಗಿ ಅವರನ್ನು
ನಿಂದಿಸುತ್ತೆ, ಕಾಲುಗಳನ್ನೊತ್ತಬೇಕಂದೂ, ಒಳ್ಳೆಯ ನೀರನ್ನು ತಂದುಕೊಡ
ಬೇಕೆಂದೂ ಬಹುವಾಗಿ ಪೀಡಿಸತೊಡಗಿದನು. ಅದಂಪತಿಗಳಾತನ ಹಿಂಸೆ
ಯನ್ನು ಸೈರಿಸಿಕೊಂಡಿದು ತಮ್ಮ ಕಷ್ಟವನ್ನು ಪರಿಗಣಿಸದೆ ಅವನನ್ನು ಉಪ
ಚರಿಸತೊಡಗಿದರು. . ಹೀಗೆಯೇ ಮುಂದೆಹೋಗುತ್ತೆ ಭೇತಾಳವಟವೆಂಬ
ಒಂದು ಅಲದಮರದಬಳಿಗೆ ಹೋಗಿ ಆರಾತ್ರಿ ಅಲ್ಲಿಯೇ ವಿಶ್ರಮಿಸಿಕೊಳ್ಳ
ಬೇಕೆಂದು ನಿಶ್ಚಯಿಸಿ, ನಕ್ಷತ್ರಕನಿಗೆ ಚಿಗುರಿನಲ್ಲಿ ಒಂದು ಹಾಸಿಗೆಯನ್ನು
ಕಲ್ಪಿಸಿಕೊಟ್ಟು ತಾವು ಆ ಕಲ್ಲುನೆಲದಮೇಲೆಯೇ ಒಂದು ಬಟ್ಟೆಯನ್ನು ಹಾಸಿ
ಮಲಗಿದರು. ಅತ್ಯಾಯಾಸಗೊಂಡಿದ್ದರಾದುದರಿಂದ ಚಂದ್ರಮತಿಯೂ
ನಕ್ಷತ್ರಕನೂ ಜಾಗ್ರತೆಯಾಗಿ ನಿದ್ರೆಗೊಳಗಾದರು. ಹರಿಶ್ಚಂದ್ರನಾದರೋ
ಮನಸ್ತಾಪದಿಂದ ನಿದ್ರೆಯಿಲ್ಲದೆ, ಕತ್ತಲೆಯಾಗಿದುದರಿಂದ ಖಡ್ಗವನ್ನು
ಹಿಡಿದುಕೊಂಡು ಅವರಿಗೆ ಕಾವಲಾಗಿದ್ದನು. ಸುತ್ತಮುತ್ತ ವಾಸನಾಗಿದ್ದ
ಕಳ್ಳರಲ್ಲೊಬ್ಬನು ಅವರನ್ನು ಕಂಡು, ಆಲದಮರದ ಅಡಿಯಲ್ಲಿ ಮಾರ್ಗಸ್ಥ
ರಾರೋ ಮಲಗಿರುವರಿಂದು ತನ್ನ ಸಮೂಹಕ್ಕೆ ತಿಳಿಸಲು ಅವರಿಲ್ಲರೂ
ಒಂದುಗೂಡಿ. ಬಂದು ಬಟ್ಟೆ ಬರೆಗಳನ್ನು ಅಸಹರಿಸಬೇಕೆಂದು ಪ್ರಯತ್ನಿಸಿ
ದರು. ಹರಿಶ್ಚಂದ್ರನು ಆ ದಾರಿಹೋಕರನ್ನು ದೂರದಲ್ಲಿಯೇ ನೋಡಿ,
ಅವರ ಉದ್ದೇಶವನ್ನೂಹಿಸಿ, ಅವರನ್ನಿದಿರಿಸಿ ಹೋರಾಡಿ ಅವರಲ್ಲಿ ಕೆಲವರನ್ನು
ಸಂಹರಿಸಿಯೂ, ಕೆಲವರನ್ನು ಗಾಯವಡೆಯಿಸಿಯೂ ಓಡಿಸಿಬಿಟ್ಟನು.
ಸ್ವಲ್ಪ ಹೊತ್ತಿನೊಳಗಾಗಿ ಮೇಘಗಳೆಲ್ಲ .ಒಟ್ಟುಗೂಡಿ ಕೊಪ್ಪರಿಗೆಗಳಿಂದ
ಸುರಿದಂತೆ ದೊಡ್ಡ ಮಳೆಯನ್ನು ಕರೆಯಲು ನಕ್ಷತ್ರಕನು ಕಟಕ್ಕನೆ ಬೆಚ್ಚಿ
ಎದ್ದನು. ಹರಿಶ್ಚಂದ್ರನೂ ಚಂದ್ರಮತಿಯೂ ಅತನನ್ನು ಧೈರ್ಯಗೊಳಿಸಿ,
ಗಿಡದ ಬುಡದಲ್ಲಿ ಮಲಗಿಸಿ ತಮ್ಮ ಬಟ್ಟಿಗಳನ್ನು ಅತನಿಗೆ. ಹೊದೆಯಿಸಿ,
ಒಬ್ಬೊಬ್ಬರು. ಸ್ವಲ್ಪ ಸ್ವಲ್ಫ ಕಾಲ ಲೋಹಿತಾಸ್ಯನನ್ನು ನನೆಯದಂತೆ ಎತ್ತಿ
ಕೊಳ್ಳುತ್ತೆ ಮಳೆಯಲ್ಲಿ ನನೆಯುತ್ತೆ. ಬೆಳಕು ಹರಿಯುವವರೆಗೂ ಬಹು
ಶ್ರಮಪಟ್ಟರು. ಮತ್ತೊಂದುದಿನ ಪ್ರಯಾಣವು ಅರ್ಧಕಳೆದಿರುವಾಗ
---------------------------------------
೬೪ ಚ೦ದ್ರಮತಿ,
ನಕ್ಷತ್ರಕನು ಮಾರ್ಗದಲ್ಲಿ ಮಲಗಿಬಿಟ್ಟು, ತಾನು ಇನ್ನು ಮುಂದಿ ಬರಲಾರೆ
ನೆಂದೂ, ಬಲು ಬಾಯಾರಿಕೆಯುಂಟಾಗಿರುವುದಿಂದೂ ಚಲವಿಡಿದು
ಕುಳಿತನು. ಆ ರಾಜದಂಪತಿಗಳು ತಮ್ಮ ಪುತ್ರನನ್ನು ಕೆಳಗಿಳಿಸಿ ನಡಿಯಿ
ಸುತ್ತ ಈ ನಕ್ಷತ್ರಕನನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಮುಂದೆ
ಹೊರಟು ತಣ್ಣೆಳಲಿಂದ ಮನೋಹರವಾದ ಒಂದು ಆಲದ ಮರದ ಕೆಳಗೆ
ಮಲಗಿಸಿದರು. ಆಗ ಚಂದ್ರಮತಿಯು ತನ್ನ ಸೆರಗಿನಿಂದ ನಕ್ಷತ್ರಕನಿಗೆ
ಗಾಳಿಹಾಕುತ್ತ. ಉಪಚರಿಸುತ್ತಿರಲು, ಹರಿಶ್ಚಂದ್ರನು ನಕ್ಷತ್ರಕನಿಗೋಸುಗ
ಸಿಹಿನೀರನ್ನು ತರಬೇಕೆಂದು ಎಲ್ಲಿಯೋ. ಹೊರಟುಹೋದನು. ಬಳಿಕ
ನಕ್ಷತ್ರಕನು ಎದ್ದು ಕುಳಿತುಕೊಂಡು . ಚಂದ್ರಮತಿಯೊಡನೆ. ಪ್ರಸಂಗಿಸ
ಲಾರಂಬಿಸಿದನು.
ನಕ್ಷ--ಅಮ್ಮಾ` ನೀನು ಅಗರ್ಭಶ್ರೀಮಂತರಾದ ಮಾತಾಪಿತೃಗಳ
ಹೊಟ್ಟೆಯಲ್ಲಿ ಜನಿಯಿಸಿದೆ. ಬಾಲ್ಯದಲ್ಲೂ ಬಹುಮಂದಿ ಪರಿಚಾರಿಣಿಯ
ರಿಂದ ಸೇವಿತಳಾಗಿ ಕಷ್ಟವೆಂಬುದನ್ನರಿಯದೆ ಬೆಳೆದೆ. ಇಂತಹ ನಿನಗೆ
ಈತನನ್ನು ಮದುವೆಯಾದುದರಿಂದ ಘೋರಾರಣ್ಯಗಳಲ್ಲಿ ಹಲವುಬಗೆಯ
ಕಷ್ಪಗಳನ್ನನುಭವಿಸಬೇಕಾದ ಗತಿಯು ಸಂಭವಿಸಿತಲ್ಲಾ!
ಚಂದ್ರ----ಎಲಾ ! ಹುಚ್ಚನೇ! ಪತಿಯಸಾನ್ನಿಧ್ಯದಲ್ಲಿರುವ ನನಗೆ
ಇದಾವುದೂ ಕಷ್ಬವಲ್ಲ. ಮಹಾರಾಜನ ಪುತ್ರಿಯೇ ಆಗಿದ್ದರೂ ಪತ್ನಿಯು
ಪತಿಗೆ ಪರಿಚಾರಿಣಿಯೇ ಅಲ್ಲವೆ? ರಾಜ್ಯವನ್ನು ಕಳೆದುಕೊಂಡು ಅಡವಿ
ಗಳಲ್ಲಿ ಅಲೆಯುತ್ತಿರುವುದರಿಂದಲೇ ಈಗ ನನ್ನಪತಿಯ ಸೇವೆಯನ್ನು ನಾನೇ
ಮಾಡುವಂತಹ ಭಾಗವು ಲಭಿಸಿರುವುದು. ಎಂತಹ ಕಷ್ಟವನ್ಮಾದರೂ
ಸಹಿಸಿಕೊಂಡು ನೀತಿಬಾಹಿರನಾಗದೆ ಇರುವಂತಹ ಸತಿಯನ್ನು ಹೊಂದಿರು
ವುದರಿಂದ ಲೋಕದಲ್ಲಿ ನನಗಿಂತ ಧನ್ಯಳಾದ ಸ್ತ್ರೀಯು ಮತ್ತಾವಳಿರುವಳು ?
ನಕ್ಷ--ಅಮ್ಮಾ! ನೀನು ನನಗೋಸುಗ ಪಡುತ್ತಿರುವ ಶ್ರಮೆಯನ್ನು
ಕಂಡ ನಾನು ಮೆಚ್ಚಿದೆನು. ನನ್ನ ಮಾತನ್ನು ಕೇಳಿ ನೀನೂ ನಿನ್ನ ಮಗನೂ
ಅಯೋಧ್ಯೆಗೆ ಬನ್ಕಿರಿ. ನಾನು ವಿಶ್ವಾಮಿತ್ರರಿಗೆ ತಿಳಿಸಿ ನಿನ್ನ ಮಗನಿಗೇ
ಪಟ್ಟಾಭಿಷೇಕವನ್ನು ಮಾಡಿಸುವೆನು.
------------------------------------------
ಹ ನ್ನೆರಡನೆಯ ಪ್ರಕರಣ. ೬೫
ಚಂದ್ರ---ನನಗೆ ಪತಿಯ ಸಾನ್ನಿಧ್ಯವೇ ಸೌಖ್ಯಪ್ರದವು. ಅತ
ನೆಲ್ಲಿರುವನೋ ನಾನೂ ಅಲ್ಲಿಯೇ ಇರತಕ್ಕವಳು.ಪತಿಯನ್ನಗಲಿದ್ದಪಕ್ಷ
ದಲ್ಲಿ ದಿವ್ಯಮಂದಿರಗಳೆಲ್ಲವೂ ನನಗೆ. ಮಹಾರಣ್ಯಗಳಾಗುವುವು. ಈಗ
ನೀನಾಡಿದುದು ಅಂತಿರಲಿ, ಇನ್ನು ಮುಂದೆ ನೀನೆಂದೂ ನನ್ನೊಡನೆ ಇಂತಹ
ಮಾತುಗಳನ್ನಾಡಬೇಡ.
ಚಂದ್ರಮತಿಯ ಮಾತು. ಮುಗಿದೊಡನೆಯೇ ಹರಿಶ್ಚಂದ್ರನು ಸಿಹಿ
ನೀರನ್ನು ತೆಗೆದುಕೊಂಡುಬಂದು. ನಕ್ಷತ್ರನಿಗೆ ಕೊಟ್ಟನು. ಇಷ್ಟರಲ್ಲಿ
ಕಾಳ್ಗಿಚ್ಚು ನಾಲ್ಕುದಿಕ್ಕುಗಳಲ್ಲಿ ವ್ಯಾಪಿಸಿ ಅಂತರಿಕ್ಷವನ್ನು ಸೋಂಕುತ್ತಿರುವ
ಜ್ವಾಲೆಗಳಿಂದ ಅವರಿದ್ದ ಪ್ರದೇಶವನ್ನೂ ಸುಡತೊಡಗಿತು. ಹರಿಶ್ಚಂದ್ರನು
ಅವದಿಕ್ಕಿಗೆ ಹೋಗುವುದಕ್ಕೂ ಏನುಮಾಡುವುದಕ್ಕೂ ತಿಳಿಯದೆ ಕಳವಳಿಸು
ತ್ತಿದ್ದನು. ಅಷ್ಟರಲ್ಲಿ ಚಂದ್ರಮತಿಯು ಪತಿಯ ಸಮೀಪಕ್ಕೆ ಬಂದು
“ ನೀವು ನನಗೋಸುಗ ಚಿಂತಿಸದೆ ಮೊದಲು ಈ ಬ್ರಾಹ್ಮಣಕುಮಾರನನ್ನು
ಹೊರಕ್ಕೆ ಬಿಟ್ಟು. ಪ್ರಾಣರಕ್ಷಣೋಪಾಯವನ್ನು ಮಾಡಿರಿ, ಸಾಧ್ಯವಾದರೆ
ಲೋಹಿತಾಸ್ಯನನ್ನೂ ರಕ್ಷಿಸಿ. ನನಗೆ ಆಯುಷ್ಯವಿದ್ದು ನಿಮ್ಮ ಸೇವೆಯನ್ನು
ಮಾಡುವ ಭಾಗ್ಯವು ಸ್ಥಿರವಾಗಿರುವುದಾದರೆ ಹಿಂದೆಯೇ ನಾನೂ ಬಂದು
ನಿಮ್ಮನ್ನು ಸೇರುವೆನು. ಹಾಗಿಲ್ಲದಿದ್ದರೆ ಈ ಯಜ್ಞೇಶ್ವರನಿಗೆ ಆಹಾರ
ವಾಗಿ ಪುಣ್ಯಲೋಕವನ್ನು ಸೇರುವೆನು. “ ಎಂದು ನುಡಿಯಲು ಹರಿಶ್ಚಂದ್ರ
ನಿಗೆ ದುಃಖವು ಮಿತಿಮಾರಿತು. . ಮುಳ್ಳು ಚುಜ್ವಿಕೊಂಡು ಬಾಧೆಪಡುತ್ತಿ
ರುವ ಹೆಂಡತಿಯನ್ನು ಅಗಲಲಾರದೆ ಅಗಳಾತನು ಅತ್ಯಂತ ಶೋಕಾಕ್ರಾಂತ
ನಾದನು. ಇಷ್ಟರಲ್ಲಿ ದೈವಾನುಗ್ರಹದಿಂದ ಗಾಳಿಯು ಮತ್ತೊಂದು ದಿಕ್ಲಿಗೆ
ಬೀಸಿದುದರಿಂದ, ಉರಿಯು ಬೇರೆ ದಿಕ್ಕಿಗೆ. ತಿರುಗಿ ಇವರಿದ್ದ ಪ್ರದೇಶವನ್ನು
ಬಿಟ್ಟುಬಿಟ್ಟತು. ಹೀಗೆ ಬಹು ಕಷ್ಟಗಳನ್ನನುಭವಿಸುತ್ತೆ ನಿತ್ಯ ಪ್ರಯಾಣ
ಗಳನ್ನು ಮಾಡಿ ಅವರೆಲ್ಲರೂ ಹತ್ತು ದಿನಗಳಲ್ಲಿ ಕಾಶೀಪಟ್ಟಣವನ್ನು
ಸೇರಿದರು.
------
---------------------------------------
ಹದಿಮೂರನೆಯ ಪುಕರಣ.
ಹರಿಶ್ಚಂದ್ರನು ಕಾಶೀಪಟ್ಟಣವನ್ನು ಸೇರಿದ ತರುವಾಯ ಕೆಲದಿನಗಳು
ಪ್ರತಿದಿನವೂ ಮಣಿಕರ್ಣಿಕಾದಿ ಘಟ್ಟಗಳಲ್ಲಿ ಗಂಗಾಸ್ನಾನವನ್ನು ಮಾಡುತ್ತೆ,
ವಿಶ್ವೇಶ್ವರನನ್ನು ಭಜಿಸುತ್ತೆ, ಇತರ ಮಹಾಸ್ಥಳಗಳನ್ನು ಸೇವಿಸಿ. ಕಾಲ
ಯಾಪನ ಮಾಡುತ್ತಿದನು. ಅತ್ತ ವಿಶ್ನಾಮಿತ್ರನೂ ರಾಜ್ಯವನ್ನು ಪೂರ್ವದ
ಮಂತ್ರಿಗಳ ವಶದಲ್ಲಿಯೇ ಪ್ರಜೆಗಳನ್ನು ನ್ಯಾಯವಾಗಿ ಪರಿವಾಲನೆ
ಮಾಡುವಂತೆ ನಿಯಮಿಸಿ, ತಾನು ವೇಷಾಂತರದಿಂದ ಹರಿಶ್ಚಂದ್ರನ ಚರ್ಯೆ
ಗಳನ್ನು ಪರೀಕ್ಷಿಸುತ್ತೆ ಆತನ . ಹಿಂದೆಯೇ ಇದ್ದು, ಸನುಯ ದೊರೆತಾಗ
ಲೆಲ್ಲ ರಹಸ್ಯವಾಗಿ ಶಿಷ್ಯನಿಗೆ ಕರ್ತವ್ಯವನ್ನು ಬೋಧಿಸುತ್ತೆ, ಬಗೆಬಗೆಯ
ಮಾಯೋಪಾಯಗಳನ್ನು ಮಾಡಿ ಹೇಗಾದರೂ ಹರಿಶ್ಚಂದ್ರನಿಂದ ಅಸತ್ಯವ
ನ್ನಾಡಿಸಬೇಕೆಂದು ನಿಶ್ಚಯಿಸಿಕೊಂಡು ಕಾಶೀಪಟ್ಟಣದಲ್ಲಿಯೇ ರಹಸ್ಯವಾಗಿ
ಅಡಗಿದನು. ಹೀಗಿರುವಾಗ. ಒಂದುದಿನ. ನಕ್ಷತ್ರಕನು ಹರಿಶ್ಚಂದ್ರನನ್ನು
ನೋಡಿ “ ಎಲ್ಬೆ, ಅರಸೇ ! ನೀನು ಹೇಳಿದ. ಒಂದು ತಿಂಗಳು ಗಡು ಬದಲ್ಲಿ
ಒಂದೆರಡು ದಿನಗಳು ಮಾತ್ರ ಉಳಿದಿರುವುದು. ನೀನಿದುವರೆಗೂ ನಮಗೆ
ಒಂದು ಹಣವನ್ನಾದರೂ ಕೊಡಲಿಲ್ಲ. ಹಣವನ್ನು ಕೊಡಲಾರೆ
ನೆಂದು ನೀನು ಮೊದಲೇ ಹೇಳಿದ್ದಪಕ್ಷದಲ್ಲಿ ನಾನಿದುವರೆಗೂ ತಪಸ್ಸಂಧ್ಯಾ
ದ್ಯನುಷ್ಠಾನಗಳನ್ನು ಬಿಟ್ಟು ನಿನ್ಕ ಹಿಂದೆ ಕಾಡುಮೇಡುಗಳಲ್ಲಲೆದು ಅಯಾಸ
ಪಡುತ್ತೆ ವ್ಯರ್ಥಕಾಲಕ್ಷೇಪವನ್ನು ಮಾಡುತ್ತಿರಲಿಲ್ಲ. ಈಗಲಾದರೂ
'ನಾನು ಹಣವನ್ನು ಕೊಡಲೊಪ್ಪಲಿಲ್ಲ` ಎಂದು ಹೇಳಿಬಿಡು. ಇನ್ನು ನಾನು
ನಿನ್ನನ್ನು ನಿಂದಿಸಿ ಕಠಿನೋಕ್ತಿಗಳನ್ನಾಡದಿದ್ದರೆ ಮಹಾನುಭಾವರಾದ ನಮ್ಮ
ಗುರುಗಳ ಕೋಪಕ್ಕೆ ಪಾತ್ರನಾಗಬೇಕಾದೀತು ! ಪತ್ನಿಯನ್ನೋ ಪುತ್ರ
ನನ್ನೋ ಮಾರಿ ಜಾಗ್ರತೆಯಾಗಿ ನಮ್ಮ ಧನವನ್ನು ಕೊಟ್ಟು ಕಳುಹಿಸಿ ಬಿಡು “
ಎಂದ. ಮುಂತಾಗಿ. ಬಹು ವಿಧಗಳಿಂದ ಬಿರುಮಾತುಗಳನ್ನಾಡಿದನು
ಹರಿಶ್ಚಂದ್ರನಿಗೆ ದಿಕ್ಕೇ ತೋರದಂತಾಗಲು ಅವನು ಮರುಮಾತನ್ನಾಡದೆ
ನೆಲವನ್ನು ನೋಡುತ್ತೆ ತಲೆಬಾಗಿಸಿಕೊಂಡು ಅತನ ಪರುಷವಾಕ್ಯಗಳನ್ನೆಲ್ಲ
-----------------------------------------
ಹದಿಮೂರನೆಯ ಪ್ರಕರಣ, ೬೭
ಕೇಳುತ್ತೆ ಸುಮ್ಮನಿದ್ದನು. ಅಗ. ಚಂದ್ರಮತಿಯು ಪತಿಗೆ ಧೈರ್ಯವನ್ನು
ಹೇಳುತ್ತೆ ಮೃದುವಚನಗಳಿಂದ ಇಂತೆಂದಳು :-
ಚಂದ್ರ----ಎಲೈ, ಪ್ರಾಣವಲ್ಲಭನೇ! ನಿಮ್ಮ ಧನವಾದ ನಾನು ಬದು
ಕಿರುವಾಗ ನೀವು. ಋಣವನ್ನು ತೀರಿಸಲಾರದೆ ಹೀಗೆ ಚಿಂತಿಸುವುದೇಕೆ ?
ನನ್ನನ್ನು ಆರಿಗಾದರೂ ವಿಕ್ರಯಿಸಿ ಬಂದ ಹಣದಿಂದ ಋಣವಿಮುಕ್ತರಾಗಿ
ಸತ್ಯವನ್ನುಳಿಸಿ ಶಾಶ್ವತವಾದ ಕೀರ್ತಿಯನ್ನು ಹೊಂದಿರಿ.
ಹರಿಂಶ್ಚಂದ್ರ--ಎಲೆ ಮನೋವಲ್ಲಭೇ! ಇಂತಹ ಶಲ್ಯಸಮವಾದ
ಮಾತನ್ನು ನನ್ನ ಕಿವಿಗೆ ಸೋಕಿಸಿ ಸಂಕಟಗೊಳಿಸುವುದು ನಿನಗೆ ಧರ್ಮವೇ ?
ಎಷ್ಟು ಕ್ರೂರಾತ್ಮನಾದರೂ ಸಮಸ್ತ ಕಷ್ಟಗಳನ್ನೂ ಸೈರಿಸಿ ಪತ್ನಿಯನ್ನು ಸಂರ
ಕ್ಷಿಸುವುದಕ್ಕೆ ಪ್ರತಿಯಾಗಿ, ಸ್ವಪ್ರಯೋಜನವನ್ನು ಗಮನಿಸಿ ಧರ್ಮಪತ್ನಿ
ಯನ್ನು ಮಾರಿಕೊಳ್ಳಲೆಳಸುವನೇ ? ಸಾಲವನ್ನು ಪರಿಹರಿಸಿಕೊಳ್ಳುವುದಕ್ಕೆ
ತಕ್ಕ ಉಪಾಯವಾವುದೂ . ತೋರದೆ ಸಂಕಟಪಡುತ್ತಿದ್ದ ನನ್ನ ಮನಸ್ಸನ್ನು
ನೀನು ಮತ್ತಷ್ಟು ನೋಯಿಸುವೆಯಲ್ಲ!
ಚಂದ್ರ---ಪ್ರಾಣಕಾಂತನೇ ! ನಿಮ್ಮ ಪಾದದಾಣೆ! ನನ್ನ ಮಾತಿಗೆ ನೀವು
ಪ್ರತಿಯಾಡದೆ ನಡೆಯಿಸಬೇಕು. ಸಮಯವೊದವಿದಾಗ ಪತಿಗೆ ಸಾಹಾಯ್ಯ
ವನ್ನು ಮಾಡದ ಪತ್ನಿಯು ಇದ್ದರೇನು ? ಸತ್ತರೇನು? ನೀವು ಹೇಳದಿದ್ದರೂ
ನಾನೇ ಮನಃಪೂರ್ವಕವಾಗಿ ದಾಸಿಯಂತೆ ವಿಕ್ರಯಿಸಲ್ಪಟ್ಟು ಬಂದ ಹಣ
ದಿಂದದ ನಿಮ್ಮ ಸಾಲವನ್ನು . ತೀರಿಸಬೇಕೆಂದಿರುವೆನಾದುದರಿಂದ ನೀವು
ಸ್ವಲ್ಪವೂ ಸಂಕೋಚ ಪಡಬೇಕಾದುದಿಲ್ಲ. ಸಾಧನಗಳಾವುವೂ ಇಲ್ಲದಿರುವಾಗ
ನಿಮಗೆ ಅಸತ್ಯದೋಷವನ್ನು ಉಂಟುಮಾಡಿಸಿ ಸುಖಪಡುವುದಕ್ಕಿಂತ ದಾಸಿ
ಯಾಗಿದ್ದಾದರೂ ನಿಮ್ಮ ಸತ್ಯವನ್ನುಳಿಸುವುದೇ ನನಗೆ ಪರಮಸಮ್ಮತವು.
ಹೀಗೆ ಚಂದ್ರಮತಿಯು ಪಲತೆರನಾಗಿ ಒತ್ತಿಹೇಳಲು ಹರಿಶ್ಚಂದ್ರನು
ಕಟ್ಟಕಡೆಗೆ ಹೆಂಡತಿಯ ನಿರ್ಬಂಧವನ್ನು ಸಮ್ಮತಿಸಿ, ಅವಳನ್ನು ಆರಿಗಾದರೂ
ದಾಸಿಯನ್ನಾಗಿ . ಮಾರುವುದಕ್ಕೊಪ್ಪಿಕೊಂಡು “ ನಿಮಗೆ ದಾಸಿಬೇಕೇ ?
ದಾಸಿ ? “ ಎಂದು ಕಾಶೀಪಟ್ಟಣದ ಕೇರಿಕೇರಿಗಳಲ್ಲಿಯೂ . ಸಾರತೊಡಗಿ
ದನು. ಕೆಲವರು ನಮುಗೆ ಬೇಡವೆಂದೂ, ಕೆಲವರು ಅಷ್ಟು ಹಣವನ್ನು ಕೊಡ
ಲಾರೆವೆಂದೂ, ಹೇಳಿ ಒಬ್ಬರಾದರೂ ಕೊಳ್ಳದಿದ್ದರು. ಹೀಗೆ ಹಲವರನ್ನು
---------------------------------------
೬೮ ಚಂದ್ರಮತಿ.
ಕೇಳಿ ಬೇಸತ್ತು ಹಿಂತಿರುಗಿತ್ತಿರಲು ಕಾಲಕೌಶಿಕನೆಂಬ ಬ್ರಾಹ್ಮಣನೊಬ್ಬನು
ಇದಿರಾಗಿ ಬಂದನು. ಆತನಾ ಪಟ್ಟಣದ ಪುರೋಹಿತನು , ಲುಬ್ಧಾಗ್ರೇಸರ
ಚಕ್ರವರ್ತಿ ; ಹೆಚ್ಚುಬಡ್ಡಿಗೆ ಹಣವನ್ನು ಕೊಟ್ಟು ನಿಷ್ಕರುಣನಾಗಿ ಮನೆ
ಬಾಗಿಲುಗಳನ್ನು ಮಾರಿಸಿ ಹಣವನ್ನು ತೆಗೆದುಕೊಳ್ಳುತ್ತಿದನು. ಆತನಿಗೆ
ಕಲಹಕಂಟಕೆಯೆಂಬ ಭಾರ್ಯೆಯಿದ್ದಳು ; ಲೋಕದಲ್ಲಿರುವ ಸ್ತ್ರೀಯ
ರಲ್ಲೆಲ್ಲಿಯೂ ಇಂತಹ ಗಯ್ಯಾಳಿಯು ಹುಟ್ಟಿಯೂ ಇಲ್ಲ, ಹುಟ್ಟುವುದೂ
ಅಸಂಭವ. ಕೆಲಸಕಾರ್ಯಗಳಿಲ್ಲದೆ ಮನೆಯಲ್ಲಿ ತಿಂದು ಕುಳಿತು ಗಂಡನನ್ನು
ಬಯ್ಯುತ್ತಿದ್ಗಳು. ಆತನು ಯಾವ ದಾಸಿಯನ್ನು ಕರೆತಂದರೂ ಅವಳವರನ್ನು
ನಿಮಿಷದಲ್ಲಿ ಹೋರಾಡಿ ಓಡಿಸಿಬಿಡುತ್ತಿದಳಾದುದರಿಂದ ಹೆಂಡತಿಗೆ ಗಂಡನೇ
ನಿಕೃಷ್ಟಪರಿಚಾರಕನಾಗಿದ್ದನು. ಈಗ ಹರಿಶ್ಚಂದ್ರನು ಹೆಂಡತಿಯನ್ನು
ಮಾರುವೆನೆಂದು ಸಾರಲು ಕಾಲಕೌಶಿಕನು ಸಂತೋಷಿಸಿ ಹಣವನ್ನುಕೊಟ್ಟು
ಕೊಂಡಬಳಿಕ ಅವಳ ತನ್ನಯ ಹೆಂಡತಿಯ ಹಿಂಸೆಯನ್ನೆಲ್ಲ ಸೈರಿಸಿಕೊಂಡು
ಕೆಲಸಕಾರ್ಯಗಳನ್ನು ಮಾಡುವಳೆಂದು ನಿಶ್ಚಯಿಸಿ, ಹರಿಶ್ಚಂದ್ರನು ಕೇಳಿ
ದಷ್ಟು ಹಣವನ್ನು ಕೊಟ್ಟು ಚಂದ್ರಮತಿಯನ್ನು ದಾಸಿಯನ್ಮಾಗಿ ಕೊಂಡನು.
ಹಣವನ್ನು ಕೊಟ್ಟಬಳಿಕ ಆ ಬ್ರಾಹ್ಮಣನು ಚಂದ್ರಮತಿಯನ್ನು ಕರೆದು
ಕೊಂಡು ಹೋಗಲೆಳಸಲು ಹರಿಶ್ಚಂದ್ರನಾಕೆಯನ್ನು ನೋಡಿ ಕಣ್ಣೀರು
ತುಂಬಿದನು. . ಆ ಬ್ರಾಹ್ಮಣನು ತಾನು ತಿರುಪೆಯೆತ್ತಿ ತಂದಿದ್ದ ಮೂಟೆ
ಗಳನ್ನು ಚಂದ್ರಮತಿಯಿಂದ ಹೊರಿಸಿಕೊಂಡು ತನ್ನ ಮನೆಗೆ ಹೋದನು.
ಚಂದ್ರಮತಿಯೂ ಗಂಡನನ್ನಗಲಿ ಹೋಗಬೇಕಾಯಿತಲ್ಲಾ ! ಎಂದು ಕಣ್ಣೀ
ರ್ಮಳೆಯನ್ಯು ಕರೆಯುತ್ತೆ, ಪತಿಯನ್ನು ಸತ್ಯಸಂಧನನ್ನಾಗಿಯೇ ಇಟ್ಟಿರ
ಬೇಕೆಂದೂ, ಜಾಗ್ರತೆಯಾಗಿಯೇ ತನಗೆ ಮತ್ತೆ ಪತಿಪಾದಸೇವಾಭಾಗ್ಯವು
ಲಭಿಸುವಂತೆ ಮಾಡಬೇಕೆಂದೂ, ಪರಮೇಶ್ವರನನ್ನು ಕುರಿತು. ಪ್ರಾರ್ಥಿ
ಸುತ್ತೆ ಆ ಬ್ರಾಹ್ಮಣನ ಹಿಂದೆ. ಹೊರಟುಹೋದಳು. ಪರಸ್ಪರ ಅಗಲಿದು
ದರಿಂದ ಆ ದಂಪತಿಗಳಿಗೀರ್ವರಿಗೂ ಅಂದಿನಿಂದ ನಿಶ್ಚಯವಾದ ದುಃಖವು
ಮೊದಲಾಯಿತು.
ಹೀಗೆ ಹೆಂಡತಿಯನ್ನು ಮಾರಿ ಸಂಪಾದಿಸಿದ ಹಣವನ್ನು ಕೈಯಲ್ಲಿ
ಟ್ಟೊಡನೆಯೇ ನಕ್ಷತ್ರಕನು ಅ ಹಣವೆಲ್ಲ ತನ್ನ ಕೂಲಿಗೂ ಸಾಲದಲ್ಲಿ
-------------------------------------
ಹದಿಮೂ ರ ನೆಯ ಪ್ರಕರಣ. ೬೯
ಸ್ವಲ್ಫ ಭಾಗಕ್ಳೂ ಸಮನಾಯಿತೆಂದೂ, ಉಳಿದ ಹಣವನ್ನೂ ಹೇಗಾದರೂ
ಮಾಡಿ ಈಗಲೇ ಕೊಡಬೇಕೆಂದೂ, ನಿರ್ಬಂಧಗೊಳಿಸಿದನು. ಹರಿಶ್ಚ್ಯಂ
ದ್ರನ ತನಗೆ ಮತ್ತಾವ ಯುಕ್ತಿಯೂ ತೋರದಿರಲು ತನ್ನನ್ನು ಕರೆದು
ಕೊಂಡು ಹೋಗಿ ಮಾರಿ ಸಾಲವನ್ನು ತೀರಿಸಿಕೊಳ್ಳೆಂದು ಆ ಧೂರ್ತ ಬ್ರಹ್ಮ
ಚಾರಿಗೆ. ಹೇಳಿದನು. ನಕ್ಷತ್ರಕನು ಒಳ್ಳೆಯದೆಂದೊಪ್ಲಿಕೊಂಡು ಆ ರಾಜ
ಶ್ರೇಷ್ಠನನ್ನು ತನ್ನ ಹಿಂದೆ ಕರೆದುಕೊಂಡು ಹೋಗಿ ಬೀದಿಬೀದಿಗಳಲ್ಲಿಯೂ
ಅಲೆಯಿಸಿ ವಿಕ್ರಯಿಸುವೆನೆಂದು ಎಲ್ಲರಿಗೂ ತೋರಿಸಿ ಎಲ್ಲಿಯೂ ಬೆಲೆ
ಯನ್ಶು ಸರಿಗೊಳಿಸದೆ ಕಡೆಗೆ ವೀರಬಾಹುವೆಂಬ ಒಬ್ಬ ಚಂಡಾಲನ ಬಳಿ
ಯಲ್ಲಿ ಬಹು ಧನವನ್ನು ತೆಗೆದುಕೊಂಡು ಅವನಿಗೆ ಸೇವಕನನ್ಕಾಗಿ ಮಾರಿ
ದನು. ವೀರಬಾಹುವು ಹಣವನ್ನು ಕೊಡುವುದಕ್ಕೆ ಮೊದಲು “ ನಾನಿಷ್ಟು
ಹಣವನ್ನು ಕೊಟ್ಟು ಕೊಂಡಪಕ್ಷದಲ್ಲಿ ಈತನೊಂದುವೇಳೆ . ರಾತ್ರಿಕಾಲ
ದಲ್ಲಿ ಹೇಳದೆ ಕೇಳದೆ ನನ್ನನ್ನು ವಂಚಿಸಿ. ಓಡಿಹೋಗುನನೇನೋ ? ನನ್ನ
ಹಣಕ್ಕೆ ಯಾರು ಗುರಿಯಾಗುವರು ? “ ಎಂದು ಕೇಳಿದನು. ಹರಿಶ್ಚಂದ್ರನು
ಸತ್ಯವನ್ನು ಪರಿಪಾಲಿಸುವುದಕ್ಕೋಸುಗನೇ ಇಂತಹ ಕಷ್ಟಗಳಿಗೆಲ್ಲ ನೆಲೆ
ಯಾಗಿರುವನೆಂದೂ, ಆತನು ಪರರನ್ನು ಯಾವಾಗಲೂ ವಂಚಿಸತಕ್ಕವ
ನಲ್ಲನೆಂದೂ, ನಕ್ಷತ್ರಕನು . ಅತನ ಚರಿತ್ರೆಯನ್ನೆಲ್ಲ ವೀರಬಾಹುವಿಗೆ
ನಂಬುಗೆಯುಂಟಾಗುವಂತೆ ಮೊದಲಿಂದ. ತಿಳಿಸಿದನು. ಹರಿಶ್ಚಂದ್ರನೂ
ತಾನಾಡಿದ ಮಾತಿಗೆ ತಪ್ಪದೆ ಎಂತಹ ಕಷ್ಟಗಳು ಸಂಭವಿಸಿದರೂ ಎಲ್ಲವನ್ನೂ
ಸೈರಿಸಿ ಅವನನ್ನು ಸೇವಿಸುವನೆಂದು ಮಾತುಕೊಟ್ಟನು. ಆಗಳಾ ಚಂಡಾಲ
ನಿಗೂ ಹರಿಶ್ಚಂದ್ರನ ವಿಷಯದಲ್ಲಿ ಸ್ವಲ್ಪ ಮರುಕವುಂಟಾಗಿ, ಆ ಬ್ರಾಹ್ಮ
ಣನು ಕೇಳಿದಷ್ಟು. ಹಣವನ್ನು ಕೊಟ್ಟು ಅತನು ಯಾವಾಗ ಬೇಕಾದರೂ
ತಾನು ಕೊಟ್ಟ ಹಣವನ್ನು ಹಿಂದಕ್ಕೆ ಕೊಡುವಪಕ್ಷದಲ್ಲಿ ತತ್‌ಕ್ಷಣವೇ
ದಾಸ್ಯದಿಂದ ಬಿಡುತೆ ಮಾಡುವೆನೆಂದು ವಾಗ್ದಾನ ಮಾಡಿದನು. ನಕ್ಷತ್ರ
ಕನು ಆ ಧನವನ್ವೆಲ್ಲ ತೆಗೆದುಕೊಂಡ್ಮು ಸಾಲವೂ ತನ್ನ ಕೂಲಿಯೂ ಎರಡೂ
ಪೂರ್ತಿಯಾಗಿ ಸಂದಿತೆಂದು ಹೇಳಿ ಚಂದ್ರಮತೀ ಹರಿಶ್ಚಂದ್ರರನ್ನು ಆಶೀರ್ವ
ದಿಸಿ. ಹೊರಟುಹೋದನು.
` ----
------------------------------------------
ಹದಿನಾಲ್ಕನೆಯ ಪ್ರಕರಣ,
ಹೀಗೆ ನಕ್ಷತ್ರಕನು ಹೊರಟುಹೋದ ತರುವಾಯ ವೀರಬಾಹುವು
ಹರಿಶ್ಚಂದ್ರನನ್ನು. ತನ್ನೊಡನೆ ಕರೆದುಕೊಂಡು. ಹೋಗಿ, ಆ ಪಟ್ಟಣದಲ್ಲಿ
ರುವ ಸ್ಮಶಾನಕ್ಕೆ ತಾನು ಅಥಿಕಾರಿಯೆಂದೂ, ಅಲ್ಲಿ ಶವಗಳನ್ನು ದಹನಮಾ
ಡುವವರೆಲ್ಲರೂ ಒಂದು ಹಣ ತೆರಿಗೆಯನ್ನು ಕೊಟ್ಟು ಅಪ್ಪಣೆಯನ್ನು ಪಡೆದ
ಬಳಿಕ ತಮ್ಮ ಕಾರ್ಯವನ್ನು ನೆರವೇರಿಸಬೇಕೆಂದ್ದೂ ತಿಳಿಸಿ ಅತನಿಗೆ
ವೀರದಾಸನೆಂಬ ಹೊಸ ಹೆಸರನ್ನಿಟ್ಟು, ತನಗೆ ಪ್ರತಿಯಾಗಿ ಹಗಲಿರುಳೂ
ಅಲ್ಲಿದ್ದು. ಕಾರ್ಯವನ್ನು ನಿರ್ವಹಿಸಬೇಕೆಂದು ನಿಯಮಿಸಿ ಪ್ರತಿದಿನದ
ಊಟಕ್ಕೆ ಬೇಕಾಗುವ ಧಾನ್ಯವನ್ನು ಅಳೆದುಕೊಡುತ್ತಿದನು. ಹರಿಶ್ಚಂದ್ರನು
ರುದ್ರಭೂಮಿಯಲ್ಲಿಯೇ ಒಂದು. ಗುಡಿಸಲನ್ನು ಹಾಕಿಕೊಂಡು ವಾಸಮಾ
ಡುತ್ತೆ, ತನ್ನ ಯಜಮಾನನು ಕೊಟ್ಟ ಅಕ್ಕಿಯನ್ನು ತಾನೇ ಅಡಿಗೆಮಾಡಿ
ಕೊಂಡು ಊಟಮಾಡುತ್ತೆ ದಿವಾರಾತ್ರಿಯಲ್ಲಿಯೂ ಸ್ವಾಮಿಭಕ್ತಿಯುಳ್ಳವ
ನಾಗಿ ಅಲ್ಲಿಯೇ ಕಾದಿದ್ದು, ಶಕ್ತಿವಂಚನೆಯಿಲ್ಲದ ಸ್ವಕೃತ್ಯವನ್ನು ಚೆನ್ನಾಗಿ
ನಿರ್ವಹಿಸುತ್ತಿದ್ದನು.
ಅತ್ತ ಚಂದ್ರಮತಿಯೂ ಹಂಸನಾರಿಯೆಂಬ ಹೆಸರಿನಿಂದ ಬ್ರಾಹ್ಮಣನ
ಮನೆಯಲ್ಲಿ ವಾಸಮಾಡುತ್ತ, ಅತನ ಪತ್ನಿಯು ನಿಯಮಿಸುವ ಕಾರ್ಯಗ
ನ್ನೆಲ್ಲ ಮಾಡುತ್ತೆ, ಹೊಟ್ಟೆತುಂಬ ಅನ್ವವಿಡದಿದರೂ, ಬಟ್ಟೆಯನ್ನು ಕೊಡ
ದಿದರೂ, ಅದನ್ಶು ಕುರಿತು ಇತರರೊಡನೆ ಪ್ರಸ್ತಾಪಿಸದೆ, ಅ ಬ್ರಾಹ್ಮಣ
ದಂಪತಿಗಳು ಎಂತಹ ಕೆಟ್ಟಮಾತುಗಳನ್ನಾಡಿದರೂ ಸೈರಿಸಿಕೊಂಡು ಭಯ
ಭಕ್ತಿಯುಳ್ಳವಳಾಗಿ ನಡೆದುಕೊಳ್ಳುತ್ತಿದಳು. ಬ್ರಾಹ್ಮಣನು ಲೇಶವಾದರೂ
ದಯೆಯಿಲ್ಲದವನನಾಗಿ ಲೋಹಿತಾಸ್ಯನನ್ಮೊಬ್ಬನನ್ನೇ ಫಲಪುಷ್ಪಾದಿಗಳನ್ನು
ತರಲೋಸುಗ ಮಳೆಬಿಸಿಲೆನ್ನದೆ ಕಾಡಿಗೆ ಕಳುಹಿಸುತ್ತಿದ್ದನು. ಹೀಗೆ
ಆ ರಾಜಕುಮಾರನೊಂದು ದಿನ ಕೆಲವುಂದಿ ಬ್ರಾಹ್ಮಣಕುಮಾರಕೊಡನೆ
ಕಾಡಿಗೆ ಹೋಗಿ, ಹುತ್ತದಮೇಲೆ ಬೆಳೆದು ಹೂಬಿಟ್ಟದ ಒಂದು ಆಲದಮರದ
ಕೊಂಬೆಯನ್ನು ಮೆಲ್ಲಗೆ ಬಾಗಿಸಿ. ಅದರೆಲೆಗಳನ್ನು . ಕೊಯ್ಯುತ್ತಿರಲು,
-----------------------------------------
ಹದಿನಾಲ್ಕನೆಯ ಪ್ರಕ ರಣ. ೭೧
ಹುತ್ತದೊಳಗಣದಿಂದ ಒಂದು ನಾಗರಹಾವು ಹೊರಕ್ಕೆ ಬಂದು ಆ ರಾಜಕುಮಾ
ರನ . ಕಾಲನ್ನು ಕಚ್ಚಿತು. ತತತ್‌ಕ್ಷಣವೇ ಲೋಹಿತಾಸ್ಯನು “ ಹಾ !
ಮಾತೆಯೇ! “ ಎಂದು ಕೂಗುತ್ತ,. ಬಾಯಿಂದ ನೊರೆಸುರಿಯುತ್ತಿರಲು
ನೆಲದಮೇಲೆ ಬಿದ್ದು ಮೂರ್ಛೆಗೊಂಡನು. ಆ ಬ್ರಾಹ್ಮಣಬಾಲಕರದನ್ನು
ಕಂಡು ಭಯವಟ್ಟು ಒಡನೆಯೇ ಓಡಿಹೋಗಿ ಅಳುತ್ತ ಚಂದ್ರಮತಿಗೆ ಈ
ಸಂಗತಿಯನ್ನು ತಿಳಿಸಿದರು. ಎಂದಿನಂತೆ ಮಗನು ಕಾಲಕ್ಕೆ ಸರಿಯಾಗಿ ಮನೆಗೆ
ಬಾರದಿದುದರಿಂದಲೇ ಕಳವಳಗೊಂಡಿದ ಚಂದ್ರಮತಿಯು ಸಿಡಿಲಂತಹ ಈ
ದುರ್ವಾರ್ತೆಯನ್ನು ಕೇಳಿ ಮೂರ್ಛಿತೆಯಾಗಿ, ಬಳಿಕ ಎಚ್ಚತ್ತು ಗಟ್ಟಿಯಾಗಿ
ಅಳುತ್ತೆ, ಕಲಹಕಂಟಕೆಯಬಳಿಗೆ ಹೋಗಿ ಮಗನ ವಿಷಯವನ್ನು ತಿಳಿಸಿ,
ಹೋಗಿ ನೋಡಿಕೊಂಡು ಬರುವುದಕ್ಕೆ ಅನುಜ್ಞೆಯನ್ನು ಕೇಳಲು ಕಠಿನ
ಚಿತ್ತೆಯಾದ ಆ ಮದವತಿಯು ಕೆಲಕಾಲ ಎನೇನೋ ಹೇಳಿ ಮನೆಗೆಲಸಗ
ಳೆಲವೂ ಮುಗಿಯುವವರಿಗೂ ಹೋಗಕೂಡದೆಂದು ನಿರ್ಬಂಧಗೊಳಿಸಿದಳು.
ಅ ಉತ್ತಮಾಂಗನೆಯು ಉಕ್ಕಿಉಕ್ಕಿ ಬರುತ್ತಿದ್ದ ದುಃಖವನ್ನು ತಡೆದು
ಕೊಂಡು ತಾಳ್ಮೆಯಿಂದ ರಾತ್ರಿ ಹತ್ತುಗಂಟೆಯವರಿಗೂ ಮನೆಗೆಲಸಗಳನ್ನು
ಮಾಡಿ, ತರುವಾಯ ಕಲಹಕಂಟಕಿಯಿಂದ ಅಪ್ಪಣೆಯನ್ನು ಪಡೆದು,
ಗಾಡಾಂಧಕಾರದಲ್ಲಿ ಒಬ್ಬಳೇ ಹೊರಟು ಬ್ರಾಹ್ಮಣಬಾಲಕರು ತಿಳಿಸಿದ ಕುರುಹಿ
ನಿಂದ ಹುಡುಕುತ್ತ ಅಲದಮರದಬಳಿಗೆ ಹೋಗಿ, ಅಲ್ಲಿ ನಿದ್ರಿಸುತ್ತಿರುವವ
ನಂತೆ ನೆಲದಮೇಲೆ ಮಲಗಿದ ಲೋಹಿತಾಸ್ಯನನ್ನು ಕಂಡು ಎದೆಯನ್ನು
ಬಡಿದುಕೊಳ್ಳುತ್ತೆ ಸ್ವಲ್ಪಕಾಲ ಅಳುತ್ತಿದು, ಅಷ್ಟರಲ್ಲಿ ಸ್ವಲ್ಪ ಧೈರ್ಯವನ್ನು
ತಂದುಕೊಂಡು, ಮುಂದೆ ಮಾಡಬೇಕಾದ ಕಾರ್ಯವನ್ನಾಲೋಚಿಸುತ್ತ,
ಲೋಹಿತಾಸ್ಯನು ಮೃತನಾದನೆಂದು ನಿಷ್ಯರ್ಷಿಸಿ ಆ ರಾತ್ರಿಯೇ ದಹನ
ಸಂಸ್ಯಾರವು ನಡೆಯಬೇಕಾದುದರಿಂದ, ಸುತ್ತಮುತ್ತಲೂ ಇದ ತೋಪಿನಲ್ಲಿ
ಕಾಷ್ಠಗಳನ್ನು ಆಯ್ದು ಹೊರೆಕಟ್ಟಿ ತಲೆಯಮೇಲೆ ಹೊತ್ತುಕೊಂಡು,
ಮಗನನ್ನು ಹೆಗಲಮೇಲೆ ಹೊತ್ತುಕೊಂಡು ಪ್ರೇತಭೂಮಿಗೆ ಹೊರಟಳು.
ನಡುಹಗಲಲ್ಲಿಯಾದರೂ ಮನೆಯನ್ನು ಬಿಟ್ಟು ಎಂದೂ ಹೊರಕ್ಕೆ ಹೊರಡ
ಲರಿಯದಿದ್ದ ಈ ಸುಕುಮಾರಿಯು ನಿಶಾಸಮಯದಲ್ಲಿ ಒಂಟಯಾಗಿ ಅರಣ್ಯ
ಮಾರ್ಗದಲ್ಲಿ ಮಿತಿಮಾರಿದ ದುಃಖದಿಂದ ನಡೆಯುತ್ತ, ಪಿತೃಭೂಮಿಯನ್ನು
------------------------------------------
೭೨ ಚಂದ್ರಮತಿ.
ಸೇರಿ, ತಂದಿದ್ದ ಕಟ್ಟಿಗೆಯಿಂದ ಚಿತೆಯನ್ನೇರ್ಪಡಿಸಿ ಪುತ್ರನನ್ನು ಅದರಮೇಳ
ಮಲಗಿಸಿ ದುಃಖವನ್ನು ಸೈರಿಸಲಾರದೆ ಅಳತೊಡಗಿದಳು. ಆ ರೋದನ
ವನ್ನು ಕೇಳಿ ಹರಿಶ್ಚಂದ್ರನು ಗುಡಿಸಿಲಿಂದ ಹೊರಕೈಬಂದು ಶವವನ್ನು ತಂದಿ
ರುವರಾರೆಂದು ಕೇಳಿದನು. ತನ್ನ ಹೆಸರು ಹಂಸನಾರಿಯೆಂದೂ, ತನ್ನಮಗನು
ಸರ್ಪದಷ್ಟನಾಗಿ ಮೃತಿಯನ್ನಿದಿರುನೋಡುತ್ತಿರುವನೆಂದೂ ವಿಷವೈದ್ಯವು
ತಿಳಿದಿದ್ದ ಪಕ್ಷದಲ್ಲಿ ಬಾಲಕನಿಗೆ ಪ್ರಾಣದಾನವನ್ನು ಮಾಡಬೇಕೆಂದೂ,
ಚಂದ್ರಮತಿಯು ಆರ್ತಸ್ವರದಿಂದ ಹೇಳಿಕೊಂಡಳು. ಗದ್ಗದಸ್ವರದಿಂದ
ಆಡಿದಮಾತುಗಳಾದುದರಿಂದ ಹರಿಶ್ಚಂದ್ರನು ಪತ್ನಿಯ ಕಂಠವನ್ನು ಗುರುತಿಸ
ಲಾರದೆ, ತಾನು ವೀರದಾಸನೆಂಬುವನೆಂದೂ, ಸ್ಮಶಾನಾಧಿಕಾರಿಯ ಸೇವಕ
ನೆಂದೂ, ವಿಷವೈದ್ಯವನ್ನರಿಯೆನೆಂದೂ, ಹಣವನ್ನು ಕೊಟ್ಟಲ್ಲದೆ ಶವವನ್ನು
ಅಲ್ಲಿ ದಹನಮಾಡಲಾಗದೆಂದೂ ಗಂಭೀರವಾಗಿ ನುಡಿದನು. ಆತನಾ ಅವಸ್ಥೆ
ಯಲ್ಲಿರುವ ವಿಷಯವನ್ನು ಅದುವರೆಗೂ ಅವಳು ಕೇಳಿ ತಿಳಿಯಳಾದುದರಿಂದ,
ದೂರದಲ್ಲಿದ್ದು ಮಾತನಾಡಿದುದರಿಂದ, . ತನ್ಸ. ಗಂಡನೆಂದು . ಗುರುತಿಸ
ಲಾರದೆಯ್ಗೂ ಹೋಗಿ “ ಸಮಸ್ತಭೂಮಂಡಲವನ್ನೂ ಏಕಛತ್ರಾಧಿಪತ್ಯ
ದಿಂದಾಳುತ್ತಿದ ಸಾರ್ವಭೌಮನ ಮಗನಿಗೆ ದಹನಕ್ರಿಯೆಗೋಸುಗ ಒಂದು
ಹಣವನ್ನು ತರುವ ಶಕ್ತಿಯೂ ಇಲ್ಲದೇಹೋಯಿತಲ್ಲಾ! “ ಎಂದು ಅತ್ತಳು. ಆ
ರೋದನವನ್ನು ಕೇಳಿದ ತತ್‌ಕ್ಷಣವೇ ಅವಳು ತನ್ನ ಪತ್ನಿಯೇನೋ ಎಂದು
ಹರಿಶ್ಚಂದ್ರನು ಸಂಶಯಪಟ್ಟು ಕಳವಳಗೊಂಡು ತಿರುಗಿ ಧೈರ್ಯವನ್ನು
ತಾಳಿ, ಮತ್ತಷ್ಟು ಸಮಾಪಕ್ಕೆ ಬಂದು “ ನೀನು ಅಂತಹ ಮಹಾರಾಜನಿಗೆ
ಧರ್ಮಪತ್ನಿಯಾಗಿದ್ದರೆ ನಿನಗೀ ದಾರಿದ್ರ್ಯವು ಸಂಘಟಸುವುದಕ್ಕೆ ಕಾರಣ
ವಿಲ್ಲವಲ್ಲಾ ! ನಿನ್ನ ಕೊರಳಲ್ಲಿ ಪ್ರಕಾಶಿಸುತ್ತಿರುವ ತಾಳಿಯನ್ನಾ ದರೂ
ಮಾರಿ. ಹಣವನ್ನು ಕೊಡು “ ಎಂದು ನುಡಿದನು. ಅಷ್ಟರಲ್ಲಿ ಚಂದ್ರ
ಮತಿಯು ಅತನನ್ನು ಗುರ್ತಿಸಿ ಅವನಿಗೆ ಸಂಭವಿಸಿದ ದುರವಸ್ಥೆ
ಯನ್ನೂ ಲೋಹಿತಾಸ್ಯನು ಮೃತನಾದುದನ್ನೂ ಕುರಿತು ಪ್ರಲಾಪಿಸಿ
“ ಮೊದಲು ನಿಮ್ಮ ತೊಡೆಯಮೇಲೆ ಮಲಗಿ ನಿದ್ರಿಸುತ್ತಿದ ಮುದ್ದು
ಮೊಗದ. ಲೋಹಿತಾಸ್ಯನನ್ನು ನೋಡಿ " ಎಂದಾತನ ಕಾಲಮೇಲೆ
ಕಡಹಿ ಅಳತೊಡಗಿದಳು. ಅಮಾತು ಕಿವಿಗೆ ಬಿದ್ದೊಡನೆಯೇ ಎದೆಯೊಡೆದು
-----------------------------------------
ಹದಿನಾಲ್ಕನೆಯ ಪ್ರಕರಣ. ೭೩
ಪುತ್ರಶೋಕದಿಂದ ಮೂರ್ಛೆಗೊಂಡು ನೆಲದಮೇಲೆ ಬಿದ್ದನು. ಚಂದ್ರಮ
ತಿಯು ತನ್ನ ದುಃಖವನ್ನು ಮರೆತು ಗಂಡನನ್ನು ಎಚ್ಚರಗೊಳಿಸಿ ಉಪಚಾರ
ಮಾಡಿ, ಧೈರ್ಯವನ್ನು ಹೇಳಿ, ಸ್ವಾಮಿಕಾರ್ಯದಲ್ಲಿ ಹಿಂತೆಗೆಯುವುದು
ಉಚಿತವಲ್ಲವೆಂದೂ ಆಪತ್ಕಾಲಗಳಲ್ಲಿ ಧೈರ್ಯವನ್ನು ಬಿಟ್ಟು ಶೋಕಿಸು
ವುದು ವಿವೇಕಿಗಳ ಧರ್ಮವಲ್ಲವೆಂದೂ, ಬೋಧಿಸಿ, ಹಣವನ್ನು ಸಂಪಾ
ದಿಸಿಕೊಂಡು ಬರುವುದಕ್ಕೆ ತಕ್ಕ ಉಪಾಯವನ್ನು ತಿಳಿಸಬೇಕೆಂದೂ ಪತಿ
ಯನ್ನು ಪ್ರಾರ್ಥಿಸಿದಳು. ಪತ್ನಿಯ ಹಿತಬೋಧನೆಯಿಂದ ಹರಿಶ್ಷಂದ್ರನು
ದುಃಖವನ್ನು ತ್ಯಜಿಸಿ ಧೈರ್ಯವನ್ನು ಹೊಂದಿ ಸ್ವಲ್ಪಕಾಲದವರೆಗೂ ಆಲೊ
ಚಿಸಿ “ ನೀನು ಹೇಗಾದರೂ ಮಾಡಿ ನಿನ್ನ ದಾಸ್ಯಕ್ಕೆ ಅಧಿಪತಿಯಾಗಿರುನ
ಆ ಬ್ರಾಹ್ಮಣನಿಗೆ ಕರುಣೆಯುಂಟಾಗುವಂತೆ. ಪ್ರಾರ್ಥಿಸಿ ಒಂದು ಹಣವನ್ನು
ಅತನಿಂದ . ತೆಗೆದುಕೊಂಡು ಬಂದು ಈ ಬಾಲಕನ ದಹನಕಾರ್ಯವನ್ನು
ಮಾಡು “ ಎಂದು ಹೇಳಿ ಹೆಂಡತಿಯನ್ನು ಕಳುಹಿಸಿದನು. ಆಕೆಯೊಬ್ಬಳೇ
ಕತ್ತಲೆಯಲ್ಲಿ ಅಳುತ್ತೆ ಪಟ್ಟಣದ ಬೀದಿಗಳನ್ನು ಹಾದು ಬರುತ್ತಿರುವಾಗ
ಒಬ್ಬ ಬ್ರಾಹ್ಮಣನು ಇದಿರಾಗಿ ಬಂದು, ಅಕೆಯ ದುಃಖಕ್ಕೆ ಕಾರಣವನ್ನು
ವಿಚಾರಿಸಿ ತಿಳಿದುಕೊಂಡು, ಮುರುಕಗೊಂಡವನಂತೆ . ನಟಸಿ ಆಭರಣದ
ಒಂದು ಗಂಟನ್ನು ಆಕೆಯ ಕೈಗೆಕೊಟ್ಟು, ಚಂದ್ರಮತಿಯು ಬೇಡವೆನ್ನು
ತ್ತಿದರೂ ಕೇಳದೆ ಹೊರಟುಹೋದನು. ಸ್ವಲ್ಪ ಕಾಲದೊಳಗಾಗಿ ಅದೇ
ಬ್ರಾಹ್ಮಣನೇ ಮತ್ತೆ ಬಂದು “ ರಾಜಕುಮಾರನನ್ನು ಸಂಹರಿಸಿ, ಅವನ
ಅಭರಣಗಳನ್ನು ಅಪಹರಿಸಿಕೊಂಡುಬಂದ ಪಾಪಾತ್ಮಳು ಇವಳೇ. ಇದೊ,
ಓಡಿಹೋಗುತ್ತಿರುವಳು “ ಎಂದು ರಾಜಭಟರಿಗೆ ತಿಳಿಸಿ ಹೊರಟುಹೋದನು .
ಅ ರಾಜಭಟರಾಕೆಯಾಡುವ ಮಾತುಗಳನ್ನು ಅಲಿಸದೆ, ಆಭರಣಸಹಿತಳಾದ
ಆ ಚಂದ್ರಮತಿಯನ್ನು ಕರೆದುಕೊಂಡುಹೋಗಿ, ಅರಸನಿದಿರಾಗಿ “ ಇವಳೇ
ಶಿಶುಹತ್ಯೆ ಮಾಡಿದ ರಾಕ್ಷಸಿ " ಎಂದು ಹೇಳಿ ನಿಲ್ಲಿಸಿದರು. ಮಗನನ್ನು
ಕೊಂದಳೆಂಬ ಕೋಪದಿಂದ ಅರಸು ಅವುದನ್ನೂ ವಿಮರ್ಶಿಸದೆ, ರಾಜಸಭೆ
ಯಲ್ಲಿ ಮಾತಾಡಲುಸಿರಿಲ್ಲದೆ ಮೌನನಾಗಿದ್ದ ನಿರಪರಾಧಿನಿಯಾದಾ ಚಂದ
ಮತಿಗೆ ಶಿರಶ್ಛೇದನವನ್ನು ಮಾಡುವಂತೆ ಆಜ್ಞಾಪಿಸಿ, ರಾಜಭಟರೊಂದಿಗೆ
ಅವಳನ್ನು ಕಳುಹಿಸಿಬಿಟ್ಟನು. . ಅವರಾಕೆಯನ್ನು ಕರೆದುಕೊಂಡು ಹೋಗಿ
ರಾಜಾಜ್ಞೆಯನ್ನು ತಿಳಿಸಿ ವೀರಬಾಹುನಿಗೊಪ್ಪಿಸಿದರು.
-----
--------------------------------------------
ಹದಿನೈದನೆಯ ಪ್ರಕರಣ.
ರಾಜಭಟರು ಚಂದ್ರಮತಿಯನ್ನು ಕರೆದುಕೊಂಡುಹೋಗಿ ವೀರ
ಬಾಹುವಿಗೊಪ್ಪಿಸಿ, ರಾಜಾಜ್ಞೆಯನ್ಶು ತಿಳಿಸಲು, ಅತನವಳನ್ನು ತನ್ಸ
ಸೇವಕರೊಡನೆ ಹರಿಶ್ಚಂದ್ರನ ಬಳಿಗೆ ಕಳುಹಿಸಿ ಶಿರಶ್ಛೇದನವನ್ನು ಮಾಡಿಸು
ವಂತೆ ಆಜ್ಞಾಪಿಸಿದನು. ಆ ಪಟ್ಟಣದಲ್ಲಿಯೇ ರಹಸ್ಯವಾಗಿದು ಅಲ್ಲಿ ನಡೆ
ಯುತ್ತಿದ್ದ ವಿಷಯಗಳನ್ನೆ ನೋಡುತ್ತಿದ ವಿಶ್ತಾಮಿತ್ರನು, ಮುಂದೇನು
ನಡೆಯುವುದೋ ನೋಡಬೇಕೆಂದು ಚಂದ್ರಮತಿಯ ಹಿಂದೆಯೇ ಸ್ಮಶಾನ
ವಾಟಗೆ. ಹೊರಟನು. ವೀರಬಾಹುನಿನ ಸೇವಕರು ಚಂದ್ರಮತಿಯನ್ನು
ಕರೆದುಕೊಂಡು ಹೋಗಿ ತಮ್ಮ ಸ್ವಾಮಿಯ ಆಜ್ಞೆಯನ್ನು ಹರಿಶ್ಚಂದ್ರನಿಗೆ
ತಿಳಿಸಿ ತಾವು ದೂರವಾಗಿ ನಿಂತುಕೊಂಡರು. ಆ ಮಾತುಗಳನ್ನು ಕೇಳಿದ
ತತ್ ಕ್ಷಣವೇ ಹರಿಶ್ಚಂದ್ರನು ಧೈರ್ಯಹೀನನಾಗಿ ಸ್ವಲ್ಪಕಾಲ ಮುಂದುಗಾ
ಣದವನಾಗಿದ್ದು ಏನುಮಾಡುವುದಕ್ಕೂ. ತೋರದೆ ಕಣ್ಣೀರು ಸುರಿಸುತ್ತೆ
ತಲೆಬಾಗಿ ನಿಂತಿದ್ದನು. ಆ ಸಮಯದಲ್ಲಿ ಚಂದ್ರಮತಿಯು ಗಂಡನಿಗೆ ಧೈರ್ಯ
ವನ್ನು ಸ್ವಾಮಿಕಾರ್ಯವನ್ನು ನಿರ್ವಹಿಸುವುದು ಅವಶ್ಯಕರ್ತವ್ಯ
ವೆಂದೂ, ಮನುಷ್ಯರೂ ದೇವತೆಗಳೂ ಮೆಚ್ಚುವಂತೆ ಸ್ವಕೃತ್ಯವನ್ನು ಕ್ರಮ
ವಾಗಿ ನೆರವೇರಿಸಬೇಕೆಂದೂ, ತನ್ನಮೇಲಣ ಪ್ರೇಮಾನುಬಂಧವನ್ನು
ಮರೆತು ಧರ್ಮದಲ್ಲಿಯೇ ಬುದ್ದಿಯನ್ನು ನಿಲ್ಲಿಸಬೇಕೆಂದೂ, ಹಲವುಬಗೆ
ಯಾಗಿ ಬೋಧಿಸಿ, ಅತನನ್ನೊಪ್ಪಿಸಿ, ತನ್ನ ಪ್ರಾಣಕಾಂತನು ಯಾವಾಗಲೂ
ಸತ್ಯಚ್ಯುತನಾಗದೆ ಇಹಲೋಕದಲ್ಲಿ ನಿತ್ಯಸುಖವನ್ನು . ಹೊಂದುವಂತೆ
ಅನುಗ್ರಹಿಸಬೇಕೆಂದು ಜಗದೀಶ್ವರನನ್ನು ಪ್ರಾರ್ಥಿಸಿ, ತನ್ನ ಮನಸ್ಸನ್ನು
ಪರಮಾತ್ಮನಲ್ಲಿ ನಿಲ್ಲಿಸಿ, ನಿಶ್ನಲಳಾಗಿ ಕತ್ತಿಯಪೆಟ್ಟಿಗೆ ಹೆದರದೆ ತಲೆಬಾಗಿಸಿ,
ವಧ್ಯಶಿಲೆಯಲ್ಲಿ ಕುಳಿತುಕೊಂಡಳು. ಹರಿಶ್ಚಂದ್ರನೂ ಒಳಗಿಂದ ಉಕ್ಕಿ
ಬರುತ್ತಿದ ದುಃಖವನ್ನು ಅಡಗಿಸಿಕೊಂಡು, ಸ್ವಾಮಿಕಾರ್ಯವನ್ನು ಮಾಡ
ದಿರಲಾಗದೆಂದು ನಿರ್ಧರಿಸಿ ಖಡ್ಗವನ್ನು ಹಿರಿದು ಆಕೆಯ ತಲೆಯನ್ನು ಕಡಿ
ಯುವುದಕ್ಕೆ ಗುರಿನೋಡುತ್ತೆ ಕೈಯನ್ನು ಮೇಲಕ್ಹೆತ್ತಿದನು.
ಅಗ ನೋಡುವುದಕ್ಕೆ ಬಂದಿದ್ದ ಜನಸಂದಣಿಯೊಳಣಿಂದ ವಿಶ್ವಾ
----------------------------------------
ಹದಿನೈದನೆಯ ಪ್ರಕರಣ. ೭೫
ಮಿತ್ರನು ಓಡಿಬಂದು ಹರಿಶ್ಚಂದ್ರನ ಕೈಯನ್ನು ಹಿಡಿದು ನಿಲ್ಲಿಸಿ ಹೀಗೆಂದನು.
ವಿಶ್ವಾ-- ಎಲೈ ರಾಜೋತ್ತನುನೇ ! ಇದುವರೆಗೂ ನೀನು ಭೂತ
ದಯಾಪರನೆಂದೂ, ಪುಣ್ಯಚರಿತ್ರನೆಂದೂ ಪ್ರಸಿದ್ಧಿಯನ್ನು ಹೊಂದಿ, ಕಟ್ಟ
ಕಡೆಗೆ. ಇಂತಹ. ಕ್ರೂರಕೃತ್ಯವನ್ನು . ಮಾಡುವುದಕ್ಕೆ ಸನ್ನದ್ಧನಾಗಿ ಸ್ತ್ರೀ
ಹತ್ಯೆಯನ್ನು. ಮಾಡುವುದು ನಿನ್ನಂತಹ ಧರ್ಮಶೀಲನಿಗೆ ಉಚಿತವಲ್ಲ.
ಉತ್ತವಮಳಾದ ಕುಲಾಂಗನಿಯನ್ಶು ಕೊಂದು ಮಂದೆ ಆವ ಸುಖವನ್ನು
ಹೊಂದೀಯೆ? ಈಗಲಾದರೂ ನನ್ನ ಮಾತನ್ನು ಕೇಳಿ ನೀನೊಂದು ಸುಳ್ಳನ್ನು
ಹೇಳು. ತತ್‌ಕ್ಷಣವೇ ನಾನು ನಿನ್ನ ಮಗನನ್ನು ಜೀವಿಸುವಂತೆ ಮಾಡಿ,
ನಿನ್ನ ಕ್ಷಮಿಸುವಂತೆ ಅರಸನನ್ನು ಪ್ರಾರ್ಥಿಸಿ, ನಿನ್ನನ್ನು ಪತ್ನೀ
ಸಮೇತನನ್ನಾಗಿ ನಿನ್ನ ರಾಜ್ಯಕ್ಕೆ ಮತ್ತೆ ಕಳುಹಿಸುವೆನು. ಇನ್ನು ಮರು
ಮಾತಾಡದೆ. ನಾನು ಹೇಳಿದಂತೆ. ಮಾಡು.
ಹರಿ--ಎಲೈ, ಮುನಿವರ್ಯನೆ ! ಅಧರ್ಮಕ್ಕೆ ಸೆಳೆಯಬೇ
ಕೆಂದು ಪ್ರಯತ್ನಿಸುವುದು ನಿನ್ನಂತಹ ಸಮಸ್ತಧರ್ಮವೇತ್ತನಿಗೆ ನ್ಯಾಯವೇ ?
ಧರ್ಮಮಾರ್ಗವನ್ಟು ತ್ಯಜಿಸುವುದರಿಂದ ಲಭಿಸಬಹುದಾದ್ದರೆ ಆ ಸ್ವರ್ಗ
ಲೋಕವೂ ನನಗೆ ಬೇಡ. ಮನಸ್ಥೈರ್ಯವಿಲ್ಲದೆ ವಿಪತ್ತು ಸಂಭವಿಸಿದ
ಕಾಲದಲ್ಲ ಹರಿಶ್ಚಂದ್ರನು ಧರ್ಮಚ್ಯುತನಾದನೆಂದು ನಿಂದೆಯನ್ನು ಹೊಂದಿ
ಅತಿತುಚ್ಛವಾದ ಸುಖವನ್ನು ಹೊಂದುವುದಕ್ಕಿಂತ ಸಾಯುವುದೇ ಲೇಸು.
ತಾವು ನನ್ನಲ್ಲಿ ಅನುಗ್ರಹನಿಟ್ಟು ಇನ್ನು ಮುಂದೆ ಇಂತಹ ಮಾತುಗಳನ್ನು
ಅಪ್ಪಣೆಕೊಡಿಸಲಾಗದು. ಈಗ ನನ್ನ ಕೈಯಲ್ಲಿರುವ ಖಡ್ಗವನ್ನು ತಡೆಯದೆ
ತಾವು ಸ್ವಲ್ಫಕಾಲ ಹೊರಕ್ಕೆ ದಯೆಮಾಡಿಸಿರಿ. ಸ್ತ್ರೀವಥೆಯು ನಡೆಯು
ತ್ತಿರುವಾಗ ಇದಿರಾಗಿನಿಂತು ನೋಡುವುದು ಸರ್ವಸಂಗಪರಿತ್ಯಾಗವನ್ನು
ಮಾಡಿ ತಪಸ್ವಿಗಳಾಗಿರುವ ತನ್ಮುಂತಹರಿಗೆ ಸಲ್ಲದು.
ಎಂದು ನಿಶ್ಶಂಕೆಯಾಗಿ ನುಡಿವ ಹರಿಶ್ಚಂದ್ರನ ಸತ್ಯತೆಯನ್ನೂ ಧರ್ಮ
ಚಿಂತೆಯನ್ನೂ ಕಂಡು ವಿಶ್ವಾಮಿತ್ರನು ಆಶ್ಚರ್ಯಪಟ್ಟು, ಇನ್ನು ಅತನಿಂದ
ಅಸತ್ಯವನ್ನಾಡಿಸುವೆನೆಂಬ ದುರ್ಭಾವನೆಯನ್ನು ಬಿಟ್ಟು, ಇಂತಹ ಅಪತ್ಸ
ಮಯದಲ್ಲಿ ಉಪೇಕ್ಷಿಸುವುದು ಕ್ರೂರಕಿರಾತಕೃತ್ಯವಾಗುವುದಲ್ಲದೆ ಮಾನುಷ
ಕೃತ್ಯನಲ್ಲ ನೆಂದು ನಿಕ್ಚಯಿಸಿ, ಹರಿಶ್ಚಂದ್ರನ ಕೈಯನ್ಶು ಹಿಡಿದುಕೊಂಡು,
-------------------------------------------
೭೬ ಚಂದ್ರಮತಿ.
ತನ್ಕ ಶಿಷ್ಯರಲ್ಲಿ ಒಬ್ಬನನ್ನು ಕರೆದು ತತ್‌ಕ್ಷಣವೇ ಆ ಪಟ್ಟಣದ ರಾಜನ
ಬಳಿಗೆ ಕಳುಹಿಸಿದನು. ಕೆಲಹೊತ್ತಿನೊಳಗಾಗಿ ಅರಸನು ಮಂತ್ರಿಗಳೇ
ಮೊದಲಾದ ಸಮಸ್ತ ಪ್ರಕೃತಿವರ್ಗದೊಡನೆ ರುದ್ರಭೂಮಿಗೆ ಬಂದನು.
ಆಗ ಸಮಸ್ತಜನರೂ ಕೇಳುತ್ತಿರಲು ವಿಶ್ವಾಮಿತ್ರನು ಆ ದಂಪತಿಗಳೇ ಚಂದ್ರ
ಮತೀ ಹರಿಶ್ಚಂದ್ರರೆಂದೂ, ತನಗೂ ವಸಿಷ್ತನಿಗೂ ಪಂತವುಂಟಾಗಿ ಅವರಿಂದ
ಅಸತ್ಯವನ್ನಾಡಿಸಬೇಕೆಂದು ತಾನು ಅವರನ್ನು ಹಲವುಬಗೆಯಾಗಿ. ಶ್ರಮೆ
ಗೊಳಿಸಿ ಕಡೆಗೆ ತಾನೇ ಪರಾಜಿತನಾದೆನೆಂದೂ, ಚಂದ್ರಮತಿಯು ನಿರಪರಾ
ಧಿನಿಯೆಂದೂ, ಅರ್ಧರಾತ್ರೆ ಸಮಯದಲ್ಲಿ ತಾನೇ ತನ್ನ ಶಿಷ್ಯರಿಂದ ರಾಜಾಂ
ತಃಪುರಕ್ಕೆ ಕನ್ನವನ್ನು ಹಾಕಿಸಿ ರಾಜಪುತ್ರನನ್ಶು ತರಿಸಿದಿನೆಂದೂ, ಆ ಮಗು
ವಿನ ಅಭರಣಗಳನ್ನು ಅಕೆಯುಡಿಯಲ್ಲಿ ಹಾಕಿ ಬಳಿಕ ರಾಜಭಟರನ್ನು ಕರೆ
ತಂದು ಅವಳನ್ನವರ ಅಧೀನೆಯನ್ದಾಗಿ ಮಾಡಿದವನು ತನ್ನಶಿಷ್ಯನೇ ಎಂದೂ,
ನಂಬುಗೆಯುಂಟಾಗುವಂತೆ ಹೇಳಿ, ಅ ಕುಮಾರನನ್ನು ಕರೆಯಿಸಿ ಅರಸನಿಗೆ
ಸಮರ್ಪಿಸಿದನು. ರಾಜನೂ ವಿಸ್ಮಿತನಾಗಿ ಆ ದಂಪತಿಗಳನ್ಟೂ ವಿಶ್ವಾಮಿತ್ರ
ನನ್ನೂ ಬಹುವಿಧನಾಗಿ ಶ್ಲಾಘಿಸಿ ಹರಿಶ್ಚಂದ್ರನನ್ನಾಲಿಂಗಿಸಿದನು. ಆಗ ಅಲ್ಲಿ
ನೋಡುವುದಕ್ಕೋಸುಗ ಬಂದಿದ್ದವರಲ್ಲಿ ಕಾಲಕೌಶಿಕನೂ, ವೀರಬಾಹುವೂ
ಇದ್ದರು. ವಿಶ್ವಾಮಿತ್ರನು ಅವರಿಬ್ಬರನ್ನೂ ಅರಸನ ಸಮ್ಮುಖಕ್ಕೆ ಕರೆ
ತಂದು, ಅವರಿಂದ. ತೆಗೆದುಕೊಂಡಿದ್ದ ಹಣವನ್ನು ಅವರಿಗೆ ಹಿಂತಿರುಗಿಸಿ,
ಚಂದ್ರಮತೀ ಹರಿಶ್ಚಂದ್ರರನ್ನು ದಾಸ್ಯದಿಂದ ವಿಮುಕ್ತರನ್ನಾಗಿ ಮಾಡಿದನು.
ತರುವಾಯ ಸರ್ಪದಷ್ಟನಾಗಿ ಮೂರ್ಛೆಯನ್ನು ಹೊಂದಿ ಮೃತನಾದಂತೆ
ಮಲಗಿದ ಲೋಹಿತಾಸ್ಯನ ಬಳಿಗೆಹೋಗಿ ತನ್ನ ಸಮಾಪದಲ್ಲಿದ್ದ ದಿವ್ಯೌಷಧ
ಗಳನ್ನು ಪ್ರಯೋಗಿಸಿ ಆತನನ್ನು ಸಜೀವನನ್ನಾಗಿಮಾಡಿ ಚಂದ್ರಮತೀ ಹರಿ
ಶ್ವಂದ್ರರಿಗೆ ಅಪರಿಮಿತಾನಂದನನ್ನುಂಟುಮಾಡಿಸಿದನು. ಆಗಳಲ್ಲಿಗೆ ಬಂದಿ
ದ್ದವರೆಲ್ಲರೂ . ಚಂದ್ರಮತೀ ಹರಿಶ್ಚಂದ್ರರ ಧೈರ್ಯಸ್ಥೈರ್ಯಗಳಿಗೂ,
ಧರ್ಮಪರಾಯಣತೆಗೂ ಮೆಚ್ಚಿ ಬಗೆಬಗೆಯಾಗಿ ಕೊಂಡಾಡಿದರು. . ಕೆಲ
ದಿನಗಳಲ್ಲಿ ಅವರ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸಿತು. ಅಷ್ಟರಲ್ಲಿ ಆ
ಕಾಶೀದೇಶದ ರಾಜನು ಚಂದ್ರಮತೀ ಹರಿಶ್ಚಂದ್ರರನ್ನು ತನ್ನ ಹಿಂದೆ ಕರೆದು
ಕೊಂಡುಹೋಗಿ.ಕೆಲದಿನಗಳವರೆಗ್ಗೂ ತನ್ನ ಮನೆಯಲ್ಲಿಟ್ಟುಕೊಂಡಿದ್ದು,
ಸರ್ವವಿಧಗಳಲ್ಲಿಯೂ ಅವರನ್ನು ಸತ್ಕರಿಸಿ, ಅವರಿಗೆ ತನ್ನ ಸೈನ್ಯವನ್ನು
----------------------------------------
ಹದಿನೈದನೆಯ ಪ್ರಕರಣ, ೭೭
ಬೆಂಗಾವಲನ್ಜಾಗಿ ಕೊಟ್ಟು ವಿಶ್ವಾಮಿತ್ರನೊಡನೆ ಅವರನ್ನು ಅಯೋಧ್ಯಾ
ಪುರಕ್ಕೆ ಕಳುಹಿಸಿದನು. ನಾಲ್ಜಾರುದಿನಗಳು ಪ್ರಯಾಣಮಾಡಿ ಅವರೆಲ್ಲರೂ
ಅಯೋಧ್ಯಾಪುರವನ್ನು ಸುಖವಾಗಿ ಸೇರಿದರು. ಚಂದ್ರಮತೀ ಹರಿಶ್ಚಂದ್ರರು
ಬರುತ್ತಿರುವರೆಂಬ ಮಾತನ್ಶು ಪೌರರೆಲ್ಲರೂ ಮೊದಲೇ ಕೇಳಿ, ಮೃತರಾದ
ತಮ್ಮ ಮುಖ್ಯಬಂಧುಗಳು ಮತ್ತೆ ಬದುಕಿಬಂದಂತೆಣಿಸಿ ಸಂತೋಷಿಸುತ್ತೆ
ಪಟ್ಟಣವನ್ನೆಲ್ಲ ಅಲಂಕರಿಸಿದರು ; ಮಂತ್ರಿಗಳು ಮೊದಲಾದವರೆಲ್ಲರೂ
ಪರಮಸಂತೋಷದಿಂದ ಇದಿರ್ಗೊಂಡರು. ವಿಶ್ವಾಮಿತ್ರನು ಆ ರಾಜದಂಪತಿ
ಗಳನ್ನು ರಾಜಭವನಕ್ಕೆ ಕರೆದುಕೊಂಡುಹೋಗಿ, ಅಲಂಕೃತವಾಗಿದ್ದಾ ಅರ
ಮನೆಯಲ್ಲಿ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು, ಸಮುಸ್ತಮಂತ್ರಿ
ಬಾಂಧವನಿಯೋಗಿಜನಗಳಿದಿರಾಗಿ ಹರಿಶ್ಚಂದ್ರನನ್ನು ಮತ್ತೆ ಸಕಲರಾಜ್ಯಕ್ಯೂ
ಪಟ್ಟಾಭಿಷಿಕ್ತನನ್ನಾಗಿ . ಮಾಡಿದನು. . ಈ ಮಹೋತ್ಸವವನ್ನು ಕೇಳಿ
ವಸಿಷ್ಠನೂ ಅಲ್ಲಿಗೆ ಬಂದಿದ್ದನು.
ವಿಶ್ವಾ - ನಿನ್ನ ಸತ್ಯಶೀಲತೆಯನ್ನು ಪರೀಕ್ಷಿಸಲೋಸುಗ ನಿನ್ನನ್ನೂ
ನಿನ್ನ ಹೆಂಡತಿಯನ್ನೂ ನಾನು ಅನೇಕ ಕಷ್ಟಗಳಿಗೆ ಗುರಿಮಾಡಿದೆನು. ನಿಮ್ಮ
ವಿಷಯದಲ್ಲಿ ನಾನು ಮಾಡಿರುವ ಅಪರಾಧಗಳನ್ನೆಲ್ಲ ಮುರೆತುಹೋಗಿ
ನೀವೀರ್ವರೂ ನನ್ನನ್ನು ಕ್ಷಮಿಸಬೇಕು.
ಹರಿ---ನೀವು ನನಗೆ ಮಹೋಪಕಾರವನ್ನೇ ಮಾಡಿರುವಿರಿ. ನಿಮ್ಮಿಂದ
ಲೇ ನನಗೆ ಈ ಲೋಕದಲ್ಲಿ ಸತ್ಯಸಂಧನೆಂಬ ಖ್ಯಾತಿಯುಂಟಾಯಿತು. ನೀವು
ಮಾಡಿರುವೀ ಉಪಕಾರವನ್ನು ನಾನೆಂದಿಗೂ ಮರೆಯೆನು. ನನಗೆ ಬಾಧೆ
ಯನ್ನುಂಟುಮಾಡಿದೆನೆಂದು ನೀವು ಮನಸ್ಸಿನಲ್ಲಿ ಸ್ವಲ್ಪವಾದರೂ ಕಿಂಕೃತಿ
ಯನ್ನು ಹೊಂದಲಾಗದು.
ಎ೦ದು ಈ ರೀತಿಯಾಗಿ ಈರ್ವರಿಗೂ ಸ್ವಲ್ಪಕಾಲ ಉಚಿತಪ್ರಶ್ನೋತ್ತರ
ಗಳು ನಡೆದ ಬಳಿಕ ವಿಶ್ವಾಮಿತ್ರನು ಮನಸ್ಸಿನಲ್ಲಿ ಸಂಕೋಚವನ್ನುಳಿದು
ಸಂತೋಷದಿಂದ ಸಮಸ್ತರ ಇದಿರಾಗಿ, ತನ್ನ ತಪಸ್ಸಿನಲ್ಲಿ ಅರ್ಧಭಾಗವನ್ನು
ವಸಿಷ್ಠನಿಗೆ ಧಾರೆಯೆರದುಕೊಟ್ಟು ಶಿಷ್ಯರೊಡನೆ ತನ್ನ ಆಶ್ರಮಕ್ಕೆ ಹೊರಟು
ಹೋದನು. ತನ್ನ ಮಾತು ಅಸತ್ಯವಾಗದೆ ಗೆದ್ದುದಕ್ಕೋಸುಗ ವಸಿಷ್ಕನು
ಪರಮಾನಂದಭರಿತನಾಗಿ ತನ್ನ ತಪೋವನಕ್ಕೆ ಹೊರಟುಹೋದನು. ಹರಿ
ಶ್ಚಂದ್ರನು ತನ್ನ ಪ್ರಜೆಗಳೆಲ್ಲರೂ ಅತ್ಯಾನಂದದಿಂದಿರಲು ಬಹುಕಾಲ ರಾಜ್ಯ
-------------------------------------------
೭೮ ಚಂದ್ರಮತಿ,
ವಾಳುತ್ತಿದ್ದು, ಕೆಲಕಾಲವಾದ ಬಳಿಕ ರಾಜಸೂಯಯಾಗವನ್ನು ಮಾಡಿ
ದೇಶಾಂತರಗಳಲ್ಲಿಯೂ ತನ್ನ ಕೀರ್ತಿಯನ್ನು ಸ್ಥಾಪಿಸಿದನು. ಚ೦ದ್ರ
ಮತಿಯೂ ಹರಿಶ್ಚದ್ರನೂ ಪುಷ್ಪಪರಾಗನ್ಯಾಯದಿಂದ ಅತ್ಯಂತವಾಗಿ
ಅನೋನ್ಯತೆಯನ್ನು ಹೊಂದಿ, ಅನುರಾಗದಲ್ಲಿ ಸ್ವಲ್ಪವಾದರೂ ಕುಂದಿಲ್ಲದೆ,
ವಿವಾದವೆಂಬ ಮಾತನ್ನು ಕನಸಿನಲ್ಲಾದರೂ ಕಾಣದೆ, ಅವಕಾಶಸಿಕ್ಕಿದಾಗ
ಲೆಲ್ಲ ಸದ್ಗ್ರಂಥಶ್ರವಣದಲ್ಲಿಯೂ, ಲೋಕೋಪಕಾರಕಗಳಾದ ವಿಷಯ
ಗಳಲ್ಲಿಯೂ ನಿರತರಾದರು. ಲೋಕದಲ್ಲಿ ಯಾರಾದರೂ ದ೦ಪತಿಗಳು
ಐಕಮತ್ಯವನ್ನೂ, ಸನ್ಮಾರ್ಗಪ್ರವರ್ತನವನ್ನೂ ಕಲಿಯಬೇಕೆ೦ದಪೇಕ್ಷಿಸುವ
ರಾದರೆ ಈ ದಂಪತಿಗ ಕಂಡು ಕಲಿಯಬೇಕು. ಚ೦ದ್ರಮತಿಯು
ವಿದಾವತಿಯಾಗಿದ್ದುದರಿಂದ ವಿದ್ಯೆಯ ಪ್ರಯೋಜನವನ್ನು ಚೆನ್ನಾಗಿ ಅರಿತವ
ಳಾಗಿ ತನ್ನ ಸಹಚಾರಿಣಿಯರಾದ ಸ್ತ್ರೀಯರಿಗೆಲ್ಲ ವಿದ್ಯೋಪದೇಶವನ್ನು ಮಾಡಿ
ಹಿತಧರ್ಮಬೋಧನೆಯನ್ನು ಮಾಡುತ್ತಿದ್ದುದಲ್ಲದೆ ಆ ರಾಜ್ಯದಲ್ಲಿ ಬಾಲಿಕಾ
ಪಾಠಶಾಲೆಗಳನ್ನು ಸ್ಥಾಪಿಸಿ ಸ್ತ್ರೀಯರನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾ
ವತಿಯರನ್ನಾಗಿ ಮಾಡಿದಳು. ಅದುಕಾರಣ ಆ ಕಾಲದಲ್ಲಿದ್ದ ಸ್ತ್ರೀಯರೂ
ವಿದ್ಯಾವತಿಯರಾಗಿ, ತಂತಮ್ಮ ಪತಿಗಳು ಮಾಡುವ ಸತ್ಕಾರ್ಯಗಳಿಗೆ ಅಡ್ಡಿ
ಮಾಡದೆ ಮೌಡ್ಯವನ್ನು ತ್ಯಜಿಸಿ, ಸಮಸ್ತ ವಿಷಯಗಳಲ್ಲಿಯೂ ಅವರಿಗೆ ಅನು
ಕೂಲರಾಗುತ್ತೆ, ಒಡವೆ ಮೊದಲಾದುವೆಲ್ಲ ವ್ಯರ್ಥದಂಭಗಳೆಂದೂ ವಿಫಲಕಾರಿ
ಗಳೆಂದೂ ವಿದ್ಯಾ ಮಹಿಮೆಯಿಂದ ತಿಳಿದುಕೊಂಡು, ಅವುಗಳಿಗೋಸುಗೆ
ಗಂಡಂದಿರನ್ನು ಬಾಧಿಸದೆ ಪತಿವ್ರತೆಯರಾಗಿ ಲೋಕವೆಲ್ಲ ಮೆಚ್ಚುವಂತೆ
ನಡೆದುಕೊಳ್ಳುತ್ತಿದ್ದರು ಪುರುಷರೂ ಗೃಹಕೃತ್ಯನಿರ್ವಹಣಭಾರವನ್ನು ಅಷ್ಟಾಗಿ
ವಹಿಸದೆ ಸುಖಿಗಳಾಗಿದ್ದರು. ಚಂದ್ರಮತೀ ಹರಿಶ್ಚಂದ್ರರ ಕಾಲದಲ್ಲಿ ಉ೦
ಟಾಗಿದ ದಾ೦ಪತ್ಯಾನುಕೂಲ್ಯವು ಮತ್ತಾವಕಾಲದಲ್ಲಿಯೂ ಉಂಟಾಗಲಿಲ್ಲ
ರೂಪವತಿಯೂ ಗುಣವತಿಯೂ ಆದ ಚಂದ್ರಮತಿಯ ದೆಸೆಯಿಂದಲ್ಲವೆ
ಲೋಕಕ್ಕೆಲ್ಲ ಮೇಲುಂಟಾದುದು ! ಎಲ್ ನಾರೀಮಣಿಯರಿರಾ ! ಎಲೈ
ಪುರುಷಶ್ರೇಷ್ಠರಿರಾ! ನೀವೂ ಚಂದ್ರಮತಿ ಹರಿಶ್ಚಂದ್ರರಂತೆ ಸೌಶೀಲ್ಯ
ಸದ್ಗುಣ ಗಳಿಂದ ಅಲಂಕೃತರಾದರೆ ನಮ್ಮ ಈ ಗ್ರಂಧರಚನೆಯು ಗೌರವಿಸಲ್ಪಟ್ಟೀ
ತೆಂದೆಣಿಸುವೆವು.
ಸಂಪೂರ್ಣ೦.
--------------------------------------
ಚಂದ್ರಮತಿ ಶೋಧನ ಪತ್ರ,
ಪುಟ. ಪಙ್ತಿ ಅಶುದ್ದ. ಶುದ್ಧ.
ಪ್ರಾರ್ಥನೆಯಲ್ಲಿ ೫ ಆಂದ್ರ ಆಂಧ್ರ
೩ ೮ ಉದ್ಯೊಗ ಉದ್ಯೋಗ
೪ ೭ ಐಕ್ಯಮತ್ಯ ಐಕಮತ್ಯ
" " ಶುಭುಉಂಟಾಗು ಶುಭವುಂಟಾಗು
೧೩ ೩ ಇಂದ್ರಜಾಲಿಕ ಐ೦ದ್ರಜಾಲಿಕ
೧೪ ೨೪ ಭ್ರಮೆ ಭ್ರಮ -
೧೯ ೨೦ ಮತ ಮರ
೨೮ ೬ ಭಾದೆ ಪಾದ
೩೭ ೫ ಗರ್ವವನು ಗರ್ವವನ್ನು
೩೮ ೧೦ ಬೇಕೆಂದು ಬೇಕೆಂದೂ
" ೨೪ ಹಾಗಯೇ ಹಾಗೆಯೇ
೩೯ ೨೨ ಮಾಡಿದ್ದರಲ್ಲದೆ ಮಾಡಿದ್ದರಲ್ಲವೆ
೪೦ ೨ ಬಿಸಲಿಗೂ ಬಿಸಿಲಿಗೂ
೪೧ ೨೨ ನಮ ನಮ್ಮ
೪೫ ೧೪ ಇದ್ದರು ಇಬ್ಬರು
೪೬ ೨ ಪದಾರ್ಥಗಳನು ಪದಾರ್ಥಗಳನ್ನು
" ೧೦ ತಿ೦ಗಳವರಿಗೆ ತಿ೦ಗಳವರೆಗೆ
೬೭ ೭ ಹರಿ೦ಶ್ಚಂದ್ರ ಹರಿಶ್ಚಂದ್ರ
೭೧ ೧೬ ಗಾಡಾಂಧಕಾರ ಗಾಢಾಂಧಕಾರ
೭೬ ೮ ಅರ್ಧರಾತ್ರೆ ಅರ್ಧರಾತ್ರ
೭೭ ೨೫ ಧಾರೆಯೆರದು ಧಾರೆಯೆರೆದು
---------------------------------
ಶ್ರೀ ತಿರುಮಲಮ್ಮನವರಿಂದ ರೂ. ಆ. ಶ್ರೀಯುತ ಎ೦.ವಿ. ಶಾಸ್ತ್ರಿಗಳವರಿಂದ
ಭದ್ರಗಿತಾವಳಿ (ಹಾಡು) 0-4 ರೂ. ಆ.
ವಿಕ್ರಮ- --ಕಾದಂಬರಿ ೧ - ೨ ಸನ್ಯಾಸಿ ೦-೨
ಚಂದ್ರವದನಾ ನಾಟಕ ೧.. 10 ಸುಷಮ ೦-೨
ಸುಮುಖೀವಿಜಯ 1 - 6 ದಾಮಿನಿ ೦-೨
ಪೂರ್ಣಕಲಾ-ಕಾಂಬರಿ [--- ವಿಷವಿವಾಹ ೦-೪
ನಿರ್ಮಲೆ ೦-೪
ಬಂಗಾಳಿ ನಾವಲ್ಸ್, ಸರಳಾ ೦-೨
ಸೌದಾಮಿನಿ ಎಂ.ವಿ. ಶಾಸ್ತ್ರಿ ೦-೮ ಹೇಮಮಿತ್ರ ೦-೪
ಅನಾಥಪ್ರೇತ ೦-೪ ವಿಷವಲ್ಲರಿ ೦-೬
ಕನ್ನಡ ಪಾಠ ಪುಸ್ತಕಗಳು,
ಸಂತಾಪಕ ೦-೬ ಪದ್ಯಸಾರ ೨ ೦-೬
ಚಂದ್ರಮತಿ ೦-೮ ವ್ಯಾಕರಣಸಾರ ೦-೮
ಕಮಲಕುಮಾರಿ ೦- 12 ಬಾಲವ್ಯಾಕರಣ ೦-6 ೧/೨
ಸುವ್ರತ ೦-13 ನೀತಿಚಿಂತಾಮಣಿ ೧ ೦ -೩ ೩/೪
ಇಂದ್ರಕೀಲ ವಿಜಯನಾ 1-4 ಕಥಾವಳಿ ಭಾಗ ೧
ಪದ್ಯಸಾರ ೧ ೦-8 " II ೦ -4
ಹೊಸಕಾದಂಬರಿಗಳು.
ಪ್ರಿಯಂವದಾ ಸುನಂದಿನಿ 0 -6
ಲಜ್ಞಾವತಿ 0--5 ಧರ್ಮ ಸಾಮ್ರಾಜ್ಯ 1- 4
ವಿಲಾಸಿನಿ 0--10 ನಿರ್ಮಲೆ ೧-೨ ೦-೪
ನೀತಿ ಗ್ರಂಥಗಳು.
ಗೃಹಿಣೀಧರ್ಮದೀಪಿಕೆ ೦-8 ವಿವೇಕದೀಪಿಕೆ 1 -೨ ೦-೪
ಸತೀಹಿತಬೋಧಿನಿ 11I-IV೧. -6 ಸ೦ಗೀತಪಾರಿಜಾತಹಾಡು 0- 5
N.Bಉಳಿದವು ಪುನರ್ಮುದ್ರಣವಾಗುತ್ತಿವೆ
ಎಂ. ಎಸ್. ರಾವ್ ಕಂಪೆನಿ, ಬೆ೦ಗಳೂರು ಸಿಟಿ,
========================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ