Full text of "ಮಾಲತೀ"
See other formats
UNIVERSAL
LIBRARY
OU 200431
NARASIMHARAJA WADIYAR SERIES
ಮಾಲತೀ
ಬಿ. ವೆಂಕಟಾಚಾರ್ಯ
..................................................................
NARASIMHARAJA WADIYAR SERIES
ಮಾಲತೀ
ಕ್ರಯ ೩ ಆಣೆ.
ಶ್ರೀಸ್ಪರ್ಣಕುಮಾರದೇವಿಯವರಿಂದ ಪ್ರಣೀತವಾದ ಮೂಲಗ್ರಂಥದ ಅವ
ಲಂಬನದಿಂದ ಈ ಗ್ರಂಥವು ರಚಿಸ್ಪಟ್ಟಿತು. ಉಪನ್ಯಾಸವು ಚಿಕ್ಕದಾದರೂ
ತಮನೋಹರವಾಗಿರುವುದು. ಮಾನುಷ ಹೃದಯದಲ್ಲಿ ನಡೆಯುವ ಸೂಕ್ಷ್ಮವ್ಯಾ
ಪಾರಗಳು ಅತಿ ಪರಿಷ್ಕಾರವಾಗಿರುವುದು. ಮೂಲಗ್ರಂಥಕರ್ತರಾದ
ಶ್ರೀ ಸ್ವರ್ಣಕುಮಾರಿದೇವಿಯವರು ಬಂಗಾಳಾ ದೇಶದಲ್ಲೊಬ್ಬ ಪ್ರಸಿದ್ಧ ಗೊಂಡಿರುವ ಉಪನ್ಯಾಸಲೇಖಕರಾಗಿದ್ದಾರೆ. ಆ ದೇಶದಲ್ಲಿ ಅವರ ಗ್ರಂಥಗಳು ಹೇರಳವಾಗಿ
ಪ್ರಚುರಗೊಂಡಿವೆ- ಇತಿ.
ಬಿ. ವೆಂಕಟಾಚಾರ್ಯ
OPINION.
ಹಹ
It (Malati) is a sweet short story simply told—
Indian Mirror.
An excellent novelctte in which, within a short
compass, arc vividly portrayed some of the subtlest
workings of the heart — Hindu Patriot.
------------------------------------------------------------
ಶ್ರಿಯೈನಮಃ
ಮಾಲತೀ.
ಮೊದಲನೆಯ ಪರಿಚ್ಚೇದ
ದಿಗಂತವಾಗಿ ಪಸರಿಸಿ ಬೈಲಾಗಿದ್ದ ಸಮಭೂಮಿಯಲ್ಲಿ ಮರಳುಮ
ಯವಾದೊಡಲ ಅಂಚನ್ನು ಚುಂಬನ ಮಾಡುತ್ತ ಸುಖಮಯಿ ನದಿಯು
ಹರಿದು ಹೋಗುತ್ತಿದ್ದಿತು. ನದಿಯ ತೀರದಲ್ಲಿ ರಮ್ಯವಾದೊಂದು ಉಪವನ
ದಲ್ಲೊಂದು ಅಚ್ಚಕಟ್ಟಾದ ವಾಟಿಕೆ- ಅಲ್ಲಲ್ಲಿ ಕುಳಿತುಕೊಳ್ಳುವುದಕ್ಕೆ
ಮಾಡಿದ್ದ ಉಚ್ಚಾಸನಗಳು. ಪ್ರಶಕ್ತವಾದೊಂದು ಪ್ರಸ್ತರಾಸನಕ್ಕೆ ಎರಡು
ಕಡೆಗಳಲ್ಲಿಯೂ ಮಾಲತಿಲತೆಯು ಹಬ್ಬಿದ್ಧ ಎರಡು ಪೂರಿಜಾತಮರಗಳು.
ಆ ಕಲ್ಲಿನಮೇಲೆ ಇಬ್ಬರು ಕುಳಿತು ಕೊಂಡು ಮಾತಾಡುತಿ ದ್ದರು. ಆಕಾಶ
ದಲ್ಲಿ ಚಂದ್ರೋದಯವಾಗಿದ್ದಿತು. ಚೌತಿಯ ಚಂದ್ರನು, ನಿರಾಶೆಯಾದ
ಹೃದಯದಲ್ಲಿ ಅಲ್ಪವಾದ ಆಕೆಯು ನೆಲೆಗೊಂಡಿದ್ದಂತೆ, ಗಗನಪ್ರಾಂಗಣದಲ್ಲಿ
ನೆಲೆಗೊಂಡು ಮಲಿನವಾದ ಬೆಳದಿಂಗಳನ್ನು ಸಣ್ಣಸಣ್ಣ ಧಾರೆಯಾಗಿ ಬೀರಿ
ದರೂ ಬೀರಲಸಮರ್ಥನಾಗಿದ್ದವನಂತೆ ಕಾಣುತ್ತಿ ದನು; ಆ ಬೆಳದಿಂಗಳು
ನದಿಯಮೇಲೆ ಬಿದ್ದು ಪ್ರವಾಹವನ್ನು ಸ್ವಲ್ಪ ಪ್ರಕಾಶಗೊಳಿಸುತ್ತಲೂ,
೨ ---------------------ಮಾಲತೀ ---------------------------------------
ಅರಳಿದ್ದ ಮಾಲತಿ ಪ್ರುಷ್ಪಗಳನ್ನು ಮತ್ತಷ್ಟು ಅರಳಿಸುತ್ತಲೂ ಮಾಲತಿಯ
ಮುಖದಮೆಲೆ ಬಿದ್ದು ಬೆಳಗುತಲೂ ಇದ್ದಿತು. ಮಾಲತಿಯು ಹದಿ
ನಾರು ವರ್ಷದ ಬಾಲೆ, ಮುಗುಳುನಗೆಗೂಡಿದ ಅಲರ್ಮೊಗ್ಗೆ, ಜೊನ್ನೆಯ
ಜೊಂಪಲ ಬೊಂಬೆ- ಮಾಲತಿಯ ಮಾತಾಡುತ್ತಿ ದ್ದ ಹಾಗೆ ಒಂದೊಂದು
ತಡವೆ ಆಕಾಶದಲ್ಲಿದ್ದ ಚಂದ್ರ ನನ್ನು ನೋಡುವಳು, ಒಂದೊಂದು ತಡವೆ
ಬೆಳದಿಂಗಳಲ್ಲಿ ಬೆಳಹತ್ತಿದ್ದ ಹೊಳೆಯುಲ್ಲಿ ತಂಡತಂಡನಾಗಿ ಎದ್ದು ಕುಣಿ
ದಾಡುತ್ತಿದ್ದ ಅಲೆಗಳ ಮಾಲೆಗಳನ್ನು ನೋಡುವಳು; ಹೀಗೆ ಕಣ್ಣುಗೊಳ
ದಾದವುಗಳನ್ನು ನೋಡುತ್ತ ಕಡೆಗೆ ಸಂಜೆಯ ಪೂಗಾಳಿಗೆ ತೂಗಾಡುತ್ತಿದ್ದ
ಮಾಲತಿಲತೆಯಂದ ಒಂದೆರಡು ಹೂವುಗಳನೆತ್ತಿ ಅವುಗಳನ್ನು ನೋಡಿ
ನಗುತ್ತ "ಅಣ್ಣ! ಇನ್ನುಳಿದಿವುವುದು ಹತ್ತು ದಿನವಾದರೂ ಎಷ್ಟೋ ವರ್ಷ
ಗಳಿರುವಂತೆ ತೋರುತ ದೆ " ಎಂದಳು.
ಹರುಪದಿಂದ ಅರಳಿದ್ದ ಯುವಕನ ಮುಖವು ಮತ್ತಷ್ಟು ಅರಳಿ
ಸ್ವಲ್ಪ ಕೆಂಬಣ್ಣವತಾಳ್ದು ತೋರಿದ ನಗೆಮೊಗದಿಂದಲೇ ಮಾಲತಿಯು
ಹೇಳಿದ ಮಾತಿಗೆ ಉತ್ತರವನ್ನು ಕೊಟ್ಟಂತಾಯಿತು. ಮಾಲತಿಯ ತನ್ನ
ಗುಲಾಬಿಯ ಬಣ್ಣವುಳ್ಳ ಮುಖವನ್ನು ತಿರಿಗಿಸಿ ನಗುನಗುತ್ತ,, “ಅಣ್ಣ |
ನಾವಿಬ್ಬರೆ ಈಗಿರುವುದು; ಶೋಭನೆಯೂ ಬಂದರೆ ಮತ್ತೊಬ್ಬಳು
ಬಂದಂತಾಗಾಗುವುದು-.ಹಗಲು ನೀನು ಕೆಲಸಕಾರ್ಯದಮೇಲೆ ಹೋದಾಗ
ನಾನೊಬ್ಬಳೇ ಇದ್ದಂತಾಗುವುದಿಲ್ಲ" ಎಂದಳು.
ಯುವಕನು ಬಾರಿಸ್ಟರು; ಅದರೆ ಲಾಯರ ಕೆಲಸದಲಿ ಸಂಪಾದಿಸ
ಲಾರದೆ ಮನಸೀಫಿ ಕೆಲಸಕ್ಕೊಪ್ಪಿಕೊಂಡು ಪಟ್ಣ ವಾಸವನ್ನು ಬಿಟ್ಟು ಹಳ್ಳಿ
ಊರಲ್ಲಿರುತ್ತಿದ್ದನು. ಹುಡುಗಿಯ ಮಾತಿಗೆ ನಕ್ಕು, "ಮಾಲತಿ ! ಅದು.ಸಲ
ವಾಗಿಯೇ ನಿನಗಿಷ್ಟು ಸಂತೋಷವೆಂದು ತೋರುತ್ತದೆ " ಎಂದನು.
ಮಾಲತಿಯು ಸ್ಪಲ್ಪ ನಾಚಿಕೊಂಡವಳಾಗಿ, 'ಇಲ್ಲ, ಅಣ್ಣ! ಹಾಗಲ್ಲ;
ನಾನು ಶೊಭನೆಯನ್ನು ಎಷ್ಟೊಂದು ಪ್ರೀತಿಸುದ್ದೇನೆಯೋ ಅದನ್ನು ನೀನ
ರಿಯೆ" ಎಂದಳು
ಯುವಕ .. ಆವಳನ್ನು ಆಾಣದಲೇ ಅವಳಮೇಲೆ ಅಷ್ಟೊಂದು
--------------------ಮೊದಲನೆಯ ಪರಿಚ್ಛೇದ------------------- ೩
ಪ್ರೀತಿಯು ಹುಟ್ಟಿದ ಬಗೆ ಹೇಗೆ? ಸ್ಪಪ್ನದಲ್ಲಿಯೇ ನಿನಗೆಲ್ಲರ ಪರಿ
ಚಯದಿಂದ ಪ್ರೀತಿಯು ಹುಟ್ಟುವಂತಿದೆಯಲ್ಲವೆ ?
ಮಾಲತಿ --ನಾನವಳನ್ನು ನೋಡದಿದ್ದರೇನು ? ಅವಳ ವಿಚಾರ
ವೆಲ್ಲಾ ನಿನ್ನಿಂದ ಕೇಳಿದ್ದೇನೆ. ಅದರಿಂದಲೇ ಅವಳ ಮೇಲೆ ಅಷ್ಟೊಂದು
ಅಂತಃಕರಣವು ಹುಟ್ಟಿದೆ-ಅವಳನ್ನು ನೋಡಬೇಕೆಂದು ಎಷ್ಟೋ ಆಶೆ-
ಅಣ್ಣ! ಮದುವೆಗೆ ಮುಂಚೆ ನಾನನಳನ್ನು ನೋಡುವುದಕ್ಕಾಗ
ಲಾರದೆ? ನನ್ನನ್ನು ಒಂದುದಿನದ ಮಟ್ಟಿಗೆ ಕಲಿಕತ್ತೆಗೆ ಸಂಗಡ ಕರೆದು
ಕೊಂಡು ಹೋಗಬಾರದೆ?
ಯುವಕ. -ರೇಯಿಲು ಬಂಡಿಯಲ್ಲಿ ಅಷ್ಟುದೂರ ಪಯಣಮಾಡುವು
ಬಹಳ ಕಷ್ಟ; ಇಲ್ಲವಾದರೆ, ನೀನಷ್ಟೊಂದು ಕೇಳಿಕೊಳ್ಳಬೇಕೆ? ಶೋಭ
ನೆಯೂ ನಿನ್ನನ್ನು ನೋಡಬೇಕೆಂದು ಅನೇಕ ತಡವೆ ಹೇಳಿದಳು.
ಮಾಲತಿ- ಅಣ್ಣ! ಹಾಗಾದರೆ ಅವಳಗೂ ನನ್ನಮೇಲೆ ಅಷ್ಟು ಪ್ರೀ
ತಿಯೆ?
ಯುವಕನ ಉತ್ತರವನ್ನುದುರು ನೋಡದೆ ನಿಟ್ಟುಸುರನ್ನು ಬಿಟ್ಟು,
ಬಾಲೆಯು ಪುನಃ, 'ನೋಡು, ಅಣ್ಣ! ಅಮ್ಮನು ಹೋದಳು, ನೀನು ವಿಲಾ
ಯತಿಗೆ ಹೊರಟುಹೋದೆ-ನಾನೊಬ್ಬಳೇ ಒಬ್ಬಳು--ಆರಿಯದವಳು-- ಆಗ
ಪಟ್ಟ ಕಷ್ಪವನ್ನು ನಾನು ಬಲ್ಲೆನು. ಚಿಕ್ಕಮ್ಮನು ನನ್ನನ್ನುಅದರಿಸುತ್ತಿದ್ಧಳು-
ಆದರೂ ಮನಸ್ಸಿಗೆ ಇಂಪಿಲ್ಲ- ಜತೆಗಾರರು ಇಲ್ಲದಿದ್ದರೆ ಪ್ರಾಣವುಳಿಯುವ
ಬಗೆ ಹೇಗೆ? ಆಗ ಶೋಭನೆಯು ಸಂಗಾತಿಯಾಗಿದ್ದರೆ ಹೇಗಿರುತ್ತಿದ್ದಿತೋ'
ಒಳ್ಳೆಯದು. ಅಣ್ಣ ! ಅವಳನ್ನು ನೀನು ಅವಳನ್ನು ನೋಡಿದುದೆಲ್ಲಿ?"
ಎಂದಳು.
ಯುವಕ-ನಿನಗೆಷ್ಬು ತಡವೆ ಹೇಳಲಿ?
ಮಾಲತಿ - ಮರತೆ! ಸೊಮದತ್ತಮಾವಂದಿರ ಮನೆಯಲ್ಲಿ ಊಟಕ್ಕೆ
ಹೋಗಿದ್ದಾಗ ನೋಡಿದ್ದುದು- ನಾನು ಅಲ್ಲಿ ಗೆ ಬಂದಿರಲಿಲ್ಲ -ಬಂದಿದ್ದರೆ ನೀನ
ವಳನ್ನು ನೋಡಿದಾಗ 'ಹೇಗಿದ್ದೆಯೋ ನಾನದನ್ನು ನೋಡುತ್ತಿದ್ದನು
ಆಹಾ |! ಮದುವೆಯಾವಾಗ ಅದೀತೋ? ಮತ್ತೆಷ್ಟು ದಿವಸಕ್ಕೆ ? ಆಗ
೪-----------------------ಮಾಲತೀ-----------------------------------
ನನ್ನಾನಂದಕ್ಕೆ ಪಾರವೇ ಇರದು. ನೀನು ಹೊರಗೆ ಹೋದಾಗ ನಾವಿಬ್ಬರೂ
ನಮ್ಮಾ ತೋಟದಲ್ಲಿ ತಿರುಗಾಡುತ್ತಿರುವೆವು--ತೋಟದ ಹೂವೆಲ್ಲೂ ಅವ
ಳೆಗೆ ಮುಡಿಸಿ ನೀನು ಮನೆಗೆ ಬರುತ್ತಲೇ ಪರಮಸುಖಿಯಾಗುವಂತೆ ಮಾಡು
ವೆನು-ನಾನಿಬ್ಬರೂ ಬೇಕಾದುದುನ್ನೆಲ್ಲಾಕುರಿತು ಮಾತಾಡುತ್ತಿರುವೆವು.
ಯುವಕ- ನೀನು ಇಂದಿನಿಂದಲೇ ಆನಂದವನೆಲ್ಲಾ ಮನಸ್ಸಿನಲ್ಲಿ ಕಲ್ಪಿ
ಸಿಕೊಂಡು ಸಂತೋಷಪಡುವಂತಿದೆ.
ಮಾತಾಡುತ್ತಿದ್ದ ಹಾಗೆ ಹುಡುಗಿಯು ಸುಮ್ಮನಾದಳು. ಅವಳ ಅರ
ಳದ್ದ ಮುಖವು ದುಃಖದಿಂದ ಬಾಡಿತು. ಯುವಕನ ಮಾತಿಗೆ ಕಿವಿಗೊಡದೆ
ಮಾಲತಿಯು ನಿಟ್ಟುಸುರನ್ನು ಬಿಟ್ಟು “ಅಣ್ಣ! ಆಹಾ! ಅಮ್ಮನೀಗ ಬದುಕಿ
ದ್ದರೆ ಈ ಮದುವೆಯಲ್ಲಿ ಎಷ್ಟೊಂದು ಆನಂದೊಸುತ್ತಿದಳೋ!'' ಎಂದು ಹೇಳಿ
ದಳು.
ಯುವಕನೂ ಆ ಮಾತಿಗೆ ವ್ಯಸನಪಟ್ಟುಕೊಂಡು ಅವದೋ ಭಾವಾಂ
ತರದಲ್ಲಿದ್ದವನು, "ಇದ್ದಿದ್ದಹಾಗೆ, ಅವಳು ಬದುಕಿದ್ದರೆ, ಈ ಮದುವೆಯಾಗು
ತ್ತಿದ್ದಿತೆ?" ಎಂದುಹೇಳಿದನು.
ಹುಡುಗಿಯು ಆಶ್ಚರ್ಯಪಟ್ಟು ಕೌತೂಹಲದಿಂದ, "ಅವಳು ಬದುಕಿ
ದ್ದರೆ ಈ ಮದುವೆಯಾಗುತ್ತಿರಲಿಲ್ಲವೇಕೆ? ಎಂದು ಕೇಳಿದಳು.
ಯುವಕನು ಸುಮ್ಮನಾಗಿ ಗಂಭೀರಭಾವವನ್ನು ತಾಳಿದನು, ಪ್ರಶ್ನೆಗೆ
ಪ್ರತ್ಯುತ್ತರವನ್ನು ಕೊಡಲಿಲ್ಲ.
ಹುಡುಗಿಯು, "ಅಣ್ಣ! ತಾಯಿಯು ಬದುಕಿದ್ದರೆ ಈ ಮದುವೆಯಾ
ಗುತ್ತಿರಲ್ಲವೇಕೆ?" ಎಂದು ಪುನಃ ಕೇಳಿದಳು.
ಯುವಕನು ಹಿಂದು ಮುಂದು ನೋಡುತಿದ್ದು ಬಳಿಕ, ಅವಳು ಬದು
ಕದ್ದರೆ ತಾನು ವಿಲಾಯಿತಿಗೆ ಹೋಗುತ್ತಿರಲಿಲ್ಲವೆಂದೂ ಇಷ್ಟು ದಿನಗಳ ತನಕ
ತನಗೆ ಮದುವೆಯಾಗದಿರುತ್ತಿರಲಿಲ್ಲವೆಂದೂ ಹೇಳಿದನು,
ಮಾಲತಿ ಅದೇಕೆ? ಅಮ್ಮನು ನಿನ್ನನು, ವಿಲಾಯಿತಿಗೆ ಕಳುಹುವಾಗಿ
ಹೇಳಿದ್ದಳಲ್ಲವೆ? ನಿಜವಾಗಿ ನೀನೆನಗೆ ಸಂಗತಿಗಳನ್ನೇಲ್ಲಾ ಹೇಳಿಲ್ಲ-ಅನೇಕ
ಮಾತುಗಳನ್ನು ಮರೆಮಾಚಿರುತ್ತಿ -
---------------------ಮೊದಲನೆಯ ಪರಿಚ್ಛೇದ--------------------------- ೫
ಯುವಕನು ಸ್ವಿರಗಂಭೀರಭಾವವನ್ನು ತಾಳಿ ಮೆಲ್ಲಮೆಲ್ಲನೆ,
“ಮಾಲತಿ! ನೀನೀಗ ದೊಡ್ಡವಳಾದೆ: ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳ
ಬಲ್ಲೆ, ನಿಜವಾಗಿ ಇದುವರೆಗೂ ಒಂದು ಸಂಗತಿಯನ್ನುನಿನಗೆ ಹೇಳದೆ ಮರೆ
ಮಾಚಿದ್ದೆನು, ಈಗದನ್ನು ಬಿಚ್ಚಿ ಹೇಳುವೆನು ಮಾಲತಿ ' ನೀನೆನಗೆ ಸೋ
ದರಿಯಲ್ಲ"ಎಂದನು.
ಮಾಲತಿಯು ರಮೇಶನಿಗೆ ಸೋದರಿಯಲ್ಲ ! ಹಾಗಾದರೆ ಈ ಪ್ರಪಂ
ಚದಲ್ಲಿ ಮಾಲತಿಗೆ ಮತ್ತಾರೂ ಇಲ ' ಪ್ರಪಂಚದಲ್ಲಿ ಯುವಕನೊಬ್ಬನು
ಸಂಬಂಧಪಟ್ಟ ಸಹೋದರನೆಂದು ತಿಳಿದಿದ್ದಳು. ಅವನು ಆಣ್ಣನಲ್ಲನೆಂದು
ಹೇಳದ ಮಾತು ಅವಳೆದೆಯಲ್ಲಿ ಸಿಡಿಲು ಬಿದ್ದಂಗಾಯಿತು. ಯುವ
ಕನು ಪುನಃ ಹೇಳತೊಡಗಿದನು:--" ಮಾಲತಿ ' ನೀನು ಆ ಅಮ್ಮನ ಗೆಳತಿಯ
ಮಗಳು: ನಿನಗೆ ಒಂದು ವರ್ಷವಾಗಿದ್ದಾಗ ಗಂಡನಿಲ್ಲದ ನಿನ್ನ ತಾಯಿಯು
ಸತ್ತುಹೋದಳು; ಅಮ್ಮನು ನಿನ್ನನ್ನು ತನ್ನ ಮಗಳಂತೆ ಸಾಕಿದಳು; ಆಗೆ
ನಗೆ ಏಳು ವರ್ಗ- ಅದೆಲ್ಲಾ ಚೆನ್ನಾಗಿ ನೆನಪಿದೆ; ನಿನ್ನನ್ನು ನನಗೆ ಕೊಟ್ಟು
ಮದುವೆ ಮಾಡಬೇಕೆಂದು ಅಮ್ಮನು ಯೋಚಿಸಿದ್ದಳು: ಆದುಕಾರಣ
ಅಮ್ಮನು ಬದುಕದ್ದರೆ ಈ ಮದುವೆಯಾಗುತ್ತಿರಲಿಲ್ಲವೆಂದು ಹೇಳದೆನು''
ಎಂದು ಹೇಳಿದನು. ಅವಳಿಗಾ ಮಾತುಗಳಲ್ಲಾ ಕಿವಿಗೆ ಬೀಳಲಿಲ್ಲ. ಅವ
ಳಗೆ ನಾಲ್ಕೂ ಕಡೆಯಲ್ಲಿ ಕತ್ತಲೆಯು ಕವಿತುಕೊಂಡಂತಾಗಿ ಅಸದಳ
ವಾದಾವದೋ ಒಂದು ವೇದನೆಯಿಂದ ಅವಳ ಹೃದಯವು ಆದುರಿತು. ಆದಕ್ಕೆ
ಕಾರಣವನ್ನು ಅವಳರಿಯಲಾರದವಳಾಗಿದ್ದಳು.
ಅಂಧಕಾರದಲ್ಲಾವದನ್ನು ಬೆಳಕೆಂದು ತಿಳದಿದ್ದಳೋ ಪ್ರಪಂಚದಲ್ಲಿ
ತನಗೆ ಮತ್ತಾರು ಇಲ್ಲದಿದ್ದರೂ ಅಣ್ಣನೊಬ್ಬನಿದ್ದು ಎಲ್ಲರೂ ಇದ್ದಂತೆ ತಿಳಿ
ದಿದ್ದಳೋ ಆರನ್ನು ತನ್ನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳೋ
ಆಂಥವನು ತನ್ನ ಅಣ್ಣನಲ, ಅವನು ತನಗೇನೂ ಅಗತಕ್ಕವನಲ್ಲ- ಅವ
ನಿಗೂ ತನಗೂ ಆವ ಸಂಬಂಧವೂ ಇಲ್ಲ! ಅವನು ಪ್ರೀತಿನುವುದಕ್ಕೆ ಕಾರ
ಣವೂ ಇಲ್ಲ! ಈ ಪ್ರಪಂಚದಲ್ಲಿ ಮಾಲತಿಯು ಅನಾಥಯಾದ ಬಾಲೆ-
ರಮೇಶನ ಸ್ನೇಹಕ್ಕೆ ಅವಳು ಪಾತ್ರಿಯಲ್ಲ--ಅವನ ಕೃಪೆಗೆ ಪಾತ್ರಿಯಾಗಿ
೬--------------------------ಮಾಲತೀ---------------------------
ಅವನ ಆಶ್ರಿತೆ ಮಾತ್ರವಾಗಿದ್ದಳೇ ಹೋರ್ತು ಅವರವರಿಗೆ ಪರಸ್ಪರ ರಕ್ತ ಸಂ
ಬಂಧವಾವದೂ ಇಲ್ಲ- ಈ ಕಾರಣಗಳಿಂದಲೂ ಅವಳ ಹೃದಯವಲ್ಲಿ
ವ್ಯಥೆಯುಂಟಾಗಿರಬಹುದು. ಆದರೆ ಅ ಕಾರಣಗಳಲ್ಲ್ಹೂ ಆವಳ ಮನಸ್ಸಿಗೆ
ಹೊಳಿಯಲಿಲ್ಲ. ತನಗೇನು ಕಷ್ಟಬಂದಿತೆೋ ರಮೇಶನು ನುಡಿದ ದುಃಖಕರ
ವಾದ ಮಾತುಗಳಾವವೋ, ಅವಾವೂ ಅವಳಿಗೆ ಗೊತ್ತಾಗಲಿಲ್ಲ. ಅಕಾರಣ
ವಾಗಿ ಮರ್ಮವನ್ನು ಭೇದಿಸುವ ತೀವ್ರವಾದಾವದೋ ಒಂದು ಯಾತನೆಯು
ಅವಳ ಹೃದಯವನ್ನು ಪೀಡಿಸುತ್ತಿದ್ದಿತು.
ನೊಡುತ್ತಿದ್ದ ಹಾಗೆ ಚೌತಿಯ ಚಂದ್ರನು ಮೇಘದಲ್ಲಿ ಮುಚ್ಚಿ
ಹೊಂದನು-ಉದ್ಯಾನವನ್ನೂ ನದಿಯನ್ನೂ ಪೃಥ್ವಿಯನ್ನ್ಹೂ ಆವುಗಳೂಂದಿಗೆ
ಚಿರಹಾಸ್ಯಮಯಿಯಾಗಿದ್ದಾ ಮಾಲತಿಯ ಹೃದಯವನ್ನೂ ಅಂಧಕಾರದಿಂದ
ಮುಚ್ಚಿ ಚಂದ್ರನು ಅಸ್ತಮಿತನಾದನು. ಹುಡುಗಿಯು ದುಃಖಾತಿಶಯ
ದಿಂದ ಜ್ಞಾನವಿಲ್ಲದವಳಂತೆ ಮೌನವಾಗಿ ಅಳುವುದಕ್ಕೆ ತೊಡಗಿದಳು.
ರಮೇಶನು ಅವಳ ಮನದ ಭಾವವನ್ನು ತಿಳಿದವನಾಗಿ 'ಮಾಲತಿ!
ಅಳುವುದೇಕೆ? ನೀನೆನಗೆ ಸೋದರಿಯಾಗದಿದ್ದರೂ ತಂಗಿಯಾಗಿರುತ್ತೀ,
ನಾನು ನಿನಗೆ ಸೋದರನಾಗ್ದಿದ್ದರೂ ಅಣ್ಣನಾಗಿದ್ದೇನೆ, ನಿನಗೂ ನನಗೂ
ಸಂಬಂಧವಿಲ್ಲದಿದ್ದರೂ ಚಿಕ್ಕಂದಿನಿಂದ ಬೆಳದುಬಂದ ಸ್ಟೇಹವಾವಾಗಲೂ
ಹೋಗದು, ಆದು ಸಾಯುವತನಕ ಹೃದಯದಲ್ಲಿ ಬದ್ಧಮೂಲವುಳ್ಳದು
ದಾಗಿರುವುದು, ನೀನೆನಗೆ ಸಹೋದರಿಯಾಗಿದ್ದರೂ ನಾನೀಗ ನಿನ್ನನ್ನು
ಪ್ರೀತಿಸುವುದಕ್ಕಿಂತ ಹೆಚ್ಚು ಪ್ರೀತಿಸುತ್ತಿರಲಿಲ್ಲ, ಈಗ ನಿನ್ನ ಮೇಲಿ
ರುವ ನನ್ನ ವಿಶ್ವಾಸವು ಶುದ್ಧವಾದುದು, ಎಂದಿಗೂ ವಿಚ್ಛೇದವಾಗತಕ್ಕು
ದಲ್ಲ, ದೇವತಿಗಳಲ್ಲಿಯೂ ಅಂತಹ ವಿಶ್ವಾಸವು ದುರ್ಬಲವಾದುದು* ಎಂದು
ಹೆೇಳಿದನು.
ಮಾಲತಿಯ ಕಣ್ಣೀರನ್ನೊರಸಿದನು. ದುಃಖಮಯವಾಗಿದ್ದ ಮಾಲ
ತಿಯ ಮೂರ್ತಿಯು ಪುನಃ ಪ್ರಫುಲ್ಲವಾಯಿತು. ಮಾಲತಿಗೆ ಮತ್ತೇನು
ಬೇಕಾಗಿದ್ದಿತು? ಮೊದಲಿನ ಸ್ನೇಹ --ಮೊದಲಿನ ಮಮತೆ-- ಅನಳಿಗೆ ಮತ್ತಾ
ವದರ ದುಃಖ!
.....
-----------------------------ಎರಡನೆಯ ಪರಿಜ್ಞೀದ ----------------೭
ಎರಡನೆಯ ಪರಿಚ್ಛೇದ
ಎರಡನೆಯ ಪರಿಚ್ಛೇದ.
ಎರಡು ಮೂರು ವರ್ಷಗಳು ಕಳೆದುಹೋದುವು. ಕಾರ್ಯರೂಪ
ವಾದ ಹೆಜ್ಜೇಪಾಡನ್ನು ಪ್ರತಿಯೊಬ್ಬ ಮನುಷ್ಯನ ಜೀವನದ ಮಾರ್ಗದಲ್ಲಿ
ಯೂ ಗುರುತುಮಾಡಿ, ಆ ಎರಡು ಮೂರು ವರ್ಷದ ಕಾಲವು ಅತೀತದ
ರಾಜ್ಯದಲ್ಲಿ ಅಂತರ್ಧಾನವಾಗಿ ಹೋಯಿತು.
ಸೊಗಸಾಗಿ ಅಲಂಕರಿಸಲ್ಪಟ್ಟಿದ್ದ ಕೊಠಿಡಿಯಲ್ಲಿ ವಿಧವಿಧವಾದ
ದೀಪಗಳು ಉರಿಯುತ್ತ ಬೆಳಕಾಗಿದೆ. ಶೋಧನೆಯು ಕಲ್ಲಿನ ಮೇಜಿನ
ಬಳಿ ಇದ್ದ ಒಂದು ಸೋಫಾದಮೇಲೆ ಕುಳಿತುಕೊಂಡು ಜಪಾನ ದೇಶದ
ಪಾನದಾನದಿಂದ ಚಿಗರು ವೀಳ್ಯದೆಲೆಯನ್ನು ತೆಗೆದು ಗಂಡನಿಗೋಸ್ಕರ ಮಡಿ
ಸಿಡುತ್ತಾಳೆ. ಪಾರ್ಶ್ವದಲ್ಲಿ ಮತ್ತೊಂದು ಸೋಫದಮೇಲೆ ರಮೇಶನು ಅರ್ಧ
ಶಾಯಿತನಾಗಿ ಒರಗಿಕೊಂಡು ಸಂಸ್ಕೃತದ ರತ್ನಾವಳಿ ನಾಟಕವನ್ನು ಓದು
ತ್ತ ಹೆಂಡತಿಗೆ ಅದರ ಅರ್ಥವನ್ನು ಹೇಳುತ್ತಾನೆ. ರಮೇಶನು ವಿಲಾಯಿತಿ
ಯಿಂದ ಹಿಂದಿರಿಗಿ ಬಂದವನಾದರೂ ಸಂಸ್ಕೃತಾಭ್ಯಾಸವನ್ನು ಬಿಟ್ಟಿರಲಿಲ್ಲ.
ಶೋಧನೆಯು ವೀಳ್ಯವನ್ನು ಸಿದ್ಧಪಡಿಸಿದುದಾಯಿತು. ಕೈಯನ್ನು ತೊಳೆದು
ಕೊಂಡು ಗಲ್ಲದ ಮೇಲೆ ಕೈಯಿಟ್ಟುಕೊಂಡು ಗಂಡನನ್ನು ನೋಡುತ್ತ ರತ್ನಾ
ವಳಿಯನ್ನು ಕೇಳತೊಡಗಿದಳು. ಓದುತ್ತಿದ್ದ ಹಾಗೆ ರಮೇಶನು, 'ಶೋಭನೆ!
ಈ ದಿನ ಮಾಲತಿಯು ಎಲ್ಲಿ? ರತ್ನಾವಳಿಯನ್ನು ಕೇಳುವುದಕ್ಕೆ ಬರಲಿಲ್ಲ'
ವೆಂದು ಹೇಳಿದನು.
ಶೋಧನೆಯು ಮೆಲ್ಲ ಮೆಲ್ಲನೆ ಬಿಸುಸುಯ್ದ ಮೃದುಸ್ಟದಿಂದ, 'ನಾನ
ವಳನ್ನು ಕರೆತಂದು ಬಿಡಲೆ?' ಎಂದಳು
ರಮೇಶ- ಬೇಡ, ಅವಳು ಎಲ್ಲಿಯೋ ಹೂವೆತ್ತುತ್ತಿರಬೇಕು,
ಇಲ್ಲವಾದರೆ, ಹಕ್ಕಿಗೆ ಮಾತನ್ನು ಕಲಿಸುತ್ತಿರಬೇಕು, ಅಥವಾ ನದಿಯಲ್ಲಿ
ದುಂಡುದುಂಡು ಕಲ್ಲುಗಳನ್ನು ಅರಿಸುತ್ತಿರಬೇಕು-ನೀನವಳನ್ನು ಎಲ್ಲೆಂದು
ಹುಡುಕುಬಲ್ಲೆ? ತಾನಾಗಿಯೇ ಬರುವಳು.
ಯುವಕನು ಪುನಃ ಓದತೊಡಗಿದನು :
೮-----------------------ಮಾಲತಿ-------------------------------
“ದುಲ್ಲ ಹಜಣಅಣುರಾಜ ಲಜ್ಞಾ ಗುರುಇಪರವ್ವಸೋಅಪ್ಪಾ |
ವಿಅಸಹಿ ವಿಸಮಂಪೆಮ್ಮಂ ಮರಣಂ ಸರಣಂ ಣವರಿಅಮೆಕ್ಕಂ ||ಇ
ಇಷ್ಟು ಓದಿ ಅದರ ಅರ್ಥವನ್ನು ಹೇಳುತ್ತಿದ್ದಾಗ ಅವನ ದೃಷ್ಟಿಯು ಶೋಭ
ನೆಯಮೇಲೆ ಬಿದ್ದಿತು. ನೋಡಲಾಗಿ ಅವಳ ಕಣ್ಣುಗಳಲ್ಲಿ ಎರಡು ಬಿಂದು
ಕಣ್ಣೀರು ಬಂದಿದ್ದಿತು. 'ಯುವಕನು, ಶೋಭನೆ ! ಇದ್ದ ಹಾಗೆ ಪದ್ಮಸದೃಶ
ನಯನದಲ್ಲಿ ಶಿಶಿರಶೋಭಾ ! ಶೋಕಾರ್ಥವು ಮನದಲ್ಲಿ ನಾಟಿದಂತಿದೆ
ಎಂದನು.
ಶೋಧನೆಯು ಬೆಚ್ಚಿ, ಆವ ಶ್ಲೋಕವೆಂದು ಕೇಳಿದಳು.
ಶೋಧನೆಯು ಶ್ಲೋಕವನ್ನು ಕೇಳುತ್ತಿರಲಿಲ್ಲ. ಅನ್ಯಮನಸ್ಕಳಾಗಿ
ಬೇರೆ ಚಿಂತೆಯಲ್ಲಿ ಮುಳುಗಿದ್ದಳು. ಯುವಕನು ಓದುವುದು ಮುಂದಕ್ಕೆ
ಸಾಗಲಿಲ್ಲ. ಪುಸ್ತಕವನ್ನು ಮುಚ್ಚಿಟ್ಟು ಶೋಭನೆಯನ್ನು ಹತ್ತಿರ ಎಳೆದು
ಕೊಂಡು, 'ಶೋಧನೆ! ನಿನ್ನ ಮೊದಲ ನಗುವೆಲ್ಲಿ ಹೋಯಿತು? ಮದುವೆಗೆ
ಮೊದಲು ನಾನು ನಿಮ್ಮ ಮನೆಗೆ ಬಂದಿದ್ದಾಗ ನಿನ್ನ ಮುಖವು ಹರ್ಷದಿಂದ
ಅರಳಿದ್ದಂತಿರುವುದು. ಈಚೆಗೆ ಆ ಭಾವವು ಕಾಣುವುದಿಲ್ಲವೇಕೆ? ನೀನು
ಸರ್ವದಾ ವ್ಯಸನಾಕ್ರಾಂತೆಯಾಗಿರುವಂತೆ ತೋರುತ್ತದೆ. ಕೇಳಿದರೆ ಹೇಳು
ವುದಿಲ್ಲ. ಶೋಧನೆ! ನನ್ನನ್ನು ವದುವೆಯಾದುದಕ್ಕೆ ಅನುತಾಪವೇನಾದರೂ
ಹುಟ್ಟಿತೆ?' ಎಂದು ಕೇಳಿದನು.
ಶೋಧನೆಯ ಕಣ್ಣುಗಳಿಂದ ಧಾರೆಯಾಗಿ ನೀರು ಹರಿಯಿತು. ಅವಳು
ಗದ್ಗದಸ್ವರದಿಂದ, 'ನನ್ನ ಸರ್ವಸ್ಟನೆ ! ನಿನ್ನನ್ನು ಮದುವೆಯಾಗಿ ನನಗೆ ಅನು
ತಾಪವೆ! ನಿನ್ನೊಂದಿಗೆ ನರಕವಾಸವೂ ಅನುತಾಪಕ್ಕೆ ಕಾರಣವಾಗದು !
ಅದೂ ನನ್ನ ಪಕ್ಷಕ್ಕೆ ಸ್ವರ್ಗವಾಗಿರುವುದು! ನಿನ್ನನ್ನು ಮದುವೆಯಾದುದಕ್ಕೆ
ನನಗೆ ಅನುತಾಪವುಂಟೆ? ಆದರೆ:--
ಯುವಕ-ಆದರೆ, ಏನು? ಹೇಳು, ಶೋಭನೆ! ನಿನ್ನ ಭಾವವನ್ನು ನೋ
ಡಿದರೆ ನನಗೆ ಉಂಟಾಗುವ ಯಾತನೆಯನ್ನು ನೀನು ತಿಳಿಯುವವಳಾದರೆ:--
ಮಾತು ಶೋಧನೆಯ ಮನಕೆ ತಟ್ಟಿತು, ಅವಳು ವ್ಯಥೆಯಿಂದ, 'ನನ್ನಿಂ
ದೇನಾಗಿದೆಯೋ ನಾನದನ್ನು ಅರಿಯೆನು ಆದರೆ ನನ್ನನ್ನು ಮದುವೆಯಾಗಿ
ನೀವು ಸುಖ ಪಡಲಿಲ್ಲ' ವೆಂದಳು.
--------------------------ಎರಡನೆಯ ಪರಿಚ್ಛೇದ-------------------------೯
ಯುವಕ-ಶೋಭನೆ! ಅದು ಎಂತಹ ಮಾತು! ನಾನು ಅಸುಖಿಯಾಗಿ
ದ್ದುದು ನಾನು ನಡೆಯಿಸಿದಾವ ಕಾರ್ಯದಿಂದ ಗೊತ್ತಾಯಿತು? ನಾನು ನುಡಿ
ದಾವ ಮಾತಿನಿಂದ ಗೊತ್ತಾಯಿತು? ಅಥವಾ ನಾನು ತೋರಿದಾವ ಭಾವದಿಂದ
ತಿಳಿದೆ?
ಶೋಧನೆಯು ತನ್ನ ಸೀರೆಯ ಸೆರಗನ್ನು ಎಡದಕೈಯಲ್ಲಿ ಹಿಡಿದು
ಕೊಂಡು ಬಲದ ಕೈಬೆರಳುಗಳಿಂದ ಸೆರಗಿನ ತುದಿಯ ನೂಲನ್ನು ಹುರಿಮಾ
ಡುತ್ತ, ಮುಖತಗ್ಗಿಸಿಕೊಂಡು, ಮಧ್ಯೆ ಮಧ್ಯೆ ಉಗುಳುಗುತ್ತ ಹೀಗೆಂದು
ಹೇಳದಳು. “ನಾಥ! ನನ್ನನ್ನು ಮದುವೆಯಾಗಿ ಸುರಪಡುವದಕ್ಕೆ ನನ್ನಲ್ಲಿ
ಗುಣವೇನಿದೆ? ನಾನೇನು ರೂಪವಂತೆಯೆ ? ಸಾಯುವತನಕ ನಿಂತು ನಳಿ
ಯುವ ರೂಪವೇನಿದೆ? ರೂಪವಿಲ್ಲದಿದ್ದರೂ ಗುಣವಾದರೂ ಇದ್ದರೆ ಅದ
ರಿಂದ ಮೋಹಗೊಳಿಸಬಹುದು. ಅಂತಹ ಗುಣವೂ ಇಲ್ಲ. ಸ್ವಲ್ಪ ವಿದ್ಯೆಯಾ
ದರೂ ಬಂದಿದ್ದರೆ, ನಿಮ್ಮ ಸಂಗಡ ಚತುರೆಯಾಗಿ ಮಾತಾಡಿ ನಿಮ್ಮ ಮನಸ್ಸನ್ನು
ಸಂತೋಷಪಡಿಸಬಹುದಾಗಿದ್ದಿತು ಅಂತಹ ವಿದ್ಯೆಯೂ ನನಗೆ ಇಲ್ಲ; ವಿದ್ಯ
ವಿಲ್ಲದವಳ ಸಂಗಡ ಮಾತಾಡುವುದಕ್ಕಾರಿಗಾದರೂ ಬೇಸರವುಂಟಾಗುತ್ತದೆ.
ನಿಮ್ಮಂತಹ ವಿದ್ಯಾವಂತರಿಗೆ ನಾನು ತಕ್ಕವಳೆ! ನಾನು ಪೆದ್ದು ಹೆಣ್ಣು- ಬರೆದೋ
ದುವುದರಲ್ಲಿ ನಿಮಗಾವ ಸಹಾಯವಂ ಮಾಡಬನು? ಈಡು ಜೋಡಾದ
ಹೆಂಡತಿಯಲ್ಲಿ ಬೇಗನೆ ಓದು ಬರಹಗಳನ್ನು ಕಲಿತು ನಿಮಗೆ ಸಂತೋಷ
ವುಂಟುಮಾಡಬೇಕೆನ್ನುವುದಕ್ಕೆ ಅಂತಹ ಸೂಕ್ಷ್ಮವಾದ ಬುದ್ಧಿಯೂ ಎನ
ಗಿಲ್ಲ -ಅವ ಭಾಗದಲ್ಲಿಯೂ ನಿಮಗನ್ನಿಂದ ಸಹಾಯವಿಲ್ಲ ಅದಾಯವು ಮೊದ
ಲೇ ಇಲ್ಲ ನಿಮಗೆ ಸಂಗೀತವನ್ನು ಕೇಳುವುದಕ್ಕೆ ಎಷ್ಟೋ ಆಶೆ, ನನ್ನ ಗ್ರಹ
ಚಾರಕ್ಕೆ ನನಗಾವ ಸಂಗೀತವೂ ಬರದು ಸರಿಯಾಗಿ ಎರಡು ಹಸೆಗೆ ಕರೆಯು
ಹಾಡೂ ಬರದು ನೀವಾವದನ್ನು ಕಂಡು ನನ್ನಲ್ಲಿ ವಿಶ್ವಾಸವುಳ್ಳವರಾಗಬೇಕು
ರೂಪವಿಲ್ಲ, ಗುಣವಿಲ್ಲ, ವಿದ್ಯೆಯಿಲ್ಲ, ಬುದ್ಧಿಯಲ್ಲ ಅವರದಲ್ಲಿಯೂ
ನಿಮಗೆ ಯೋಗೈಯಾದವಳ-ಯೋಗ್ಯತೆಯು ಹಾಗಿರಲಿ-ಕಡೆಗೆ ನಿಮ್ಮ
ಮನೆಯ ಕಸವನ್ನು ಗುಡಿಸುವವಳು ನಿಲ್ಲುವ ಸ್ಥಳದಲ್ಲಿ ನಿಲ್ಲುವುದಕ್ಕೂ
ನಾನು ತಕ್ಕವಳಲ್ಲ. ನಾನು ತಮಗೆ ತಕ್ಕವಳಲ್ಲವೆಂದು ಪ್ರತಿನಿಮಿಷದ -
೧೦---------------------ಮಾಲತಿ--------------------------------------
ಲ್ಲಿಯೂ ವ್ಯಕ್ತವಾಗುತ್ತಿದೆ. ಮೊದಲು ಮೊದಲು, ರೂಪ, ಗುಣ, ವಿದ್ಯಾ
ಬುದ್ಧಿ, ಅವಾವದಿಲ್ಲದಿದ್ದರೂ ನಾನು ಮಾಡುವ ಸೇವೆಯಿಂದಾದರೂ ತಮ್ಮ
ಪ್ರೀತಿಗೆ ಪಾತ್ರಿಯಾಗಬೇಕೆಂದು ಯೋಚಿಸಿಕೊಂಡಿದ್ದೆನು; ಆದರೆ ಆ ಪ್ರೀ
ತಿಗೂ ನಾನು ಭಾಗಿಯಾಗಿಲ್ಲ-ಅದು ನನ್ನ ಹಣೆಯಲ್ಲಿ ಬರೆದಿಲ್ಲ--
ರಮೇಶನು ಎಲ್ಲವನ್ನೂ ಮೌನವಾಗಿ ಕೇಳಿದನು. ಶೋಭೆನೆಯು
ಹೇಳಿದುದು ಪೂರೈಸಿದ ಬಳಿಕ, ಅವನು ಸ್ವಲ್ಪ ನಕ್ಕು, ' ಶೋಭನೆ!
ನೀನು ವಿದ್ಯೆಯಲ್ಲಿಯೂ ಬುದ್ಧಿಯಲ್ಲಿಯೂ ನನಗೆ ಸಮಕಕ್ಷಿಯಲ್ಲವೆಂದು
ಹೇಳಿದವರಾರು? ನೀನೀಗ ಹೇಳಿದ ವಿಷಯವಾಗಿ ಎಷ್ಟು ಮಂದಿ ಪುರುಷರು
ನಿನ್ನಂತೆ ಭಾಷಣೆಯಂ(Lecture)ಮಾಡಬಲ್ಲರು? ನಿನ್ನ ರೂಪದ ವಿಚಾರದ
ಲ್ಲಾದರೋ ಅದನ್ನು ಕುರಿತು ವಿಚಾರಮಾಡತಕ್ಕವನು ನಾನು-ನೀನಲ್ಲ.
ನಿನಗದು ಅಸಮಾಧಾನಕ್ಕೆ ಕಾರಣವಾಗಿದ್ದರೆ ಅಂತಹ ಅಸಮಾಧಾನಕ್ಕೆ
ಕಾರಣವೇ ಇಲ್ಲ. ಶೋಭನೆ ! ನಾನು ಹುಡುಗಾಟವಾಗಿ ಹಾಸ್ಯಕ್ಕೆ
ಹೇಳುವುದಿಲ್ಲ. ರೂಪದಲ್ಲಿಯೂ ಗುಣದಲ್ಲಿಯೂ ಅವ ದೇವತೆಯೂ
ನಿನಗೆ ಸಮನಲ್ಲ. ಅದನ್ನು ನಾನು ಬಲ್ಲೆನು. ಎಂತಹ ದೇವಿಯು ಸ್ವರ್ಗ
ದಿಂದಿಳಿದು ಬಂದು ನಿಂತರೂ ನಿನಗೆ ಬದಲಾಗಿ ಅವಳನ್ನು ಸಾಟೀಮಾಡಿ
ಕೊಳ್ಳಲಾರೆನು. ನೀನು ನನ್ನ ಹೃದಯೇಶ್ವರಿ ನಿನ್ನನ್ನು ಬಿಟ್ಟರೆ ನನಗೆ
ಪ್ರಪಂಚವೇ ಬೇಕಾಗುವುದಿಲ್ಲ. ಸೀನೆನಗೆ ಸರ್ವಸ್ಥಳು. ನೀನೆನ್ನ
ಸುಖದ ಪ್ರತಿಮೆ ! ' ಎಂದು ಮುಂತಾಗಿ ಹೇಳಿದನು.
ಹರುಪಾತಿಶಯದಿಂದ ಶೋಭನೆಯ ಬಾಯಲ್ಲಿ ಮಾತು ಹೊರಡ
ಲಿಲ್ಲ. ಹಾಗಾದರೆ ಅವಳು ಹೇಳಿದುದೆಲ್ಲಾ ಮನಸ್ಸಿನ ಭಾಂತಿಯಿಂದ
ಕಲ್ಪಿತವಾದುದೆ? ಶೋಭನೆಯು ಗಂಡನ ಪಾದುಗಳಿಗೆರಗಿ, ನಾನು ಪಾಪಿಷ್ಟೆ
ನರಕದಲ್ಲಿಯೂ ನನಗೆ ಸ್ಥಾನವಿರದು; ಅದು ಕಾರಣ ತಮ್ಮಂತಹ ಸ್ನೇಹಪ
ರಿಪೂರ್ಣರಾದ ಸ್ವಾಮಿಯಲ್ಲಿ ಸಂಶಯ ಮನಸ್ಸುಳ್ಳವಳಾದೆನು. ನನಗಾವ
ಪ್ರಾಯಶ್ಚಿತ್ತವಾಗಬೇಕೋ ಅದನ್ನು ಹೇಳಲಾರೆನು. ಆದರೆ ಇಂದೆನ್ನ ಮನ
ಸ್ಸನ್ನು ಬಿಚ್ಚಿ ಎಲ್ಲವನ್ನೂ ಹೇಳಬೇಕೆಂದು ಇರುವೆನಾದುದರಿಂದ ಬಾಯಿ
ಬಿಟ್ಟು ಹೇಳಿಬಿಡುವೆನು ನಾನು ಮೌನವಾಗಿ ಅನುಭವಿಸುವ ನರಕಯಾ
------------------ಎರಡನೆಯ ಪರಿಚ್ಛೇದ------------------------೧೧
ತನೆಗಳನ್ನೆಲ್ಲಾ ಸ್ಪಷ್ಟವಾಗಿ ಹೇಳುವೆನು. ನನ್ನ ಅಪರಾಧವು ಕ್ಷಮಿಸತಕ್ಕು
ದುದಾಗಿದ್ದರೆ ಕ್ಷಮಿಸಬಹುದು, ಇಲ್ಲವಾದರೆ ತಾವೇ ದಂಡಿಸಬಹುದು. ನನ್ನ
ಪ್ರಾಣವು ತಮ್ಮ ಕೈಯಲ್ಲಿದೆ, ನಾಥ ! ನನ್ನ ಹೃದಯದಲ್ಲಿ ಅಗ್ನಿಯ
ಜ್ವಾಲೆಯು ಉರಿಯುತ್ತದೆ. ದೇವರಂತಿರುವ ನಿಮ್ಮಂತಹ ಸ್ವಾಮಿಯನ್ನು
ಪಡದಿದ್ದರೂ ನನ್ನ ಮನಸ್ಸಿನ ದೋಷದಿಂದ ನಾನು ಸುಖಪಡಲಾರದವಳಾಗಿ
ದ್ದೇನೆ. ನೀವು ನನ್ನನ್ನು ಪ್ರೀತಿಸುವುದಿಲ್ಲವೆಂದು ನನ್ನ ಮನಸ್ಸಿಗೆ ತೋರು
ತ್ತದೆ, ನೀವು ಮಾಲತಿಯನ್ನು- 'ಎಂದು ಮುಂತಾಗಿ ಹೇಳುತ್ತಿದ್ದ ಶೋಭ
ನೆಗೆ ಬಾಯಲ್ಲಿ ಮುಂದಕ್ಕೆ ಮಾತು ಹೊರಡಲಿಲ್ಲ. ಲಜ್ಜೆಯಿಂದಲೂ ಕಷ್ಟ
ದಿಂದಲೂ ಅನುತಾಪದಿಂದಲೂ ಮಾತು ನಿಂತುಹೋಯಿತು.
ಯುವಕನು ಅವಳ ನುಡಿಗಳನ್ನು ಕೇಳಿ ಆಶ್ಚರ್ಯಪಟ್ಟನು. ಅವಳ
ಮನಸ್ಸಿನ ಭಾವವು ಅವನಿಗೆ ಪೂರ್ತಿಯಾಗಿ ಗೊತ್ತಾಗಲಿಲ್ಲ. ಅವಳನ್ನು
ಮೆಲ್ಲನೆ ಎಬ್ಬಿಸಿ, ಶೋಧನೆ ! ಏನನ್ನು ಹೇಳಿದೆ ? “ ಮಾಲತಿಯನ್ನು "
ಎಂದು ಹೇಳಿ ಸುಮ್ಮನಾದೆ- "ಮಾಲತಿಯನ್ನು ” ಏನು ? ' ಎಂದು
ಕೇಳಿದನು.
ಶೋಭನೆ- ಮೆಲ್ಲ ಮೆಲ್ಲನೆ - ಪ್ರೀ--ತಿ-ಸು-ತ್ತೀ- ರಿ.
ಯುವಕ- (ಆಶ್ಚರ್ಯದಿಂದ ) ಮಾಲತಿಯನ್ನು ಪ್ರೀತಿಸುತ್ತೇ
ನೆಯೆ ! ಅಯ್ಯೋ ! ಕರ್ಮವೇ ! ಮಾಲತಿಯೆನಗೆ ಒಡಹುಟ್ಟಿದವಳಾಗದಿ
ದ್ದರೂ ಅವಳನ್ನು ನನ್ನ ತಂಗಿಯಂತೆ ಪ್ರೀತಿಸುತ್ತೇನೆ. ಅವಳನ್ನು ಚಿಕ್ಕಂ
ದಿನಿಂದಲೂ ಪ್ರೀತಿಸುತ್ತಿದ್ದೇನೆ.
ಆ ಮಾತಿನಮೇಲೆ ಶೋಧನೆಗೆ ಮಾತಾಡಲು ಧೈರ್ಯವುಹುಟ್ಟಿ
ಒರಟಾದ ಸ್ಪರದಿಂದವಳು, 'ಆ ಪ್ರೀತಿಯನ್ನು ಕುರಿತು ಹೇಳಲಿಲ್ಲ; ನನಗಿಂ
ತಲೂ ಅವಳಲ್ಲಿ ಹೆಚ್ಚು ಪ್ರೀತಿ, ಪ್ರೇಮಪರಸ್ಪರವಾದ ಬಲಮೆ!” ಎಂದಳು.
ಪ್ರೇಮದ ಒಲಮೆಯೆ! ಯುವಕನು ಮಾತಿಲ್ಲದವನಾದನು. ಅಷ್ಟು
ಹೊತ್ತಾದ ಬಳಕ ಹೆಂಡತಿಯ ಮನಸ್ಸನ್ನು ಕಂಡುಹಿಡಿದನು. ಅತಿಕಷ್ಟದಿಂದ
ಸ್ವಲ್ಪ ನಕ್ಕು, 'ಶೋಭನೆ! ಹಾಗಿದ್ದರೆ ಮಾಲತಿಯನ್ನು ಮದುವೆಮಾಡಿಕೊ
ಳ್ಳಲಾರೆನಾಗಿದ್ದೆನೆ? ನಿನ್ನನ್ನು ಮದುವೆ ಮಾಡಿಕೊಂಡೆನೇಕೆ?” ಎಂದು ಹೇಳಿ
ದನು.
೧೨------------------------------ಮಾಲತಿ----------------------------------
ಶೋಧನೆ- ನೀವು ಮದುವೆ ಮಾಡಿಕೊಂಡಾಗ ನಿಮ್ಮ ಮನಸ್ಸು
ನಿಮಗೆ ಗೊತ್ತಾಗಿರಲಿಲ್ಲ.
ಯುವಕ-ಅಗ ತಿಳಿಯದಿದ್ದರೆ ಈಗಲೂ ತಿಳಿದಿಲ್ಲ. ಮೊದಲು ಅವ
ಳನ್ನು ಹೇಗೆ ಪ್ರೀತಿಸುತ್ತಿದ್ದೆನೋ ಈಗಲೂ ಹಾಗೇಯೇ ಪ್ರೀತಿಸುತ್ತೇನೆ;
ಆ ಪ್ರೀತಿಯು ತಂಗಿಯ ಮೇಲಿನ ವಿರುದ್ಧವಾದ ಪ್ರೀತಿ ಪ್ರಯಣದ ಪ್ರೀತಿ
ಯಲ್ಲ.
ಶೋಧನೆ- ಪ್ರಣಯವು ಮನಸ್ಸಿನಲ್ಲಿ ಸ್ವಲ್ಪಸ್ವಲ್ಪವಾಗಿ ಹುಟ್ಟ ವೃದ್ಧಿ
ಗೊಳ್ಳುತ್ತಿದ್ದರೆ ಅದು ನಮಗೆ ಗೋಚರವಾಗುವುದಿಲ್ಲ. ನಿಮ್ಮ ಮನಸ್ಸು
ನಿಮಗೇವೇ ಗೊತ್ತಾಗುವುದಿಲ್ಲ. ನಾನದನ್ನು ತಿಳಿದುಕೊಳ್ಳಬಲ್ಲೆನು.
ಈಪ್ರಕಾರ ಸ್ಥಿರವಾಗಿದ್ದ ಹೆಂಡತಿಯ ಸಂದೇಹವು ಯುವಕನ ಮನ
ಸ್ಸಿಗೆ ಚೆನ್ನಾಗಿ ತಟ್ಟಿತು. ಏನನ್ನು ಮಾಡಿದರೆ ಅ ಸಂದೇಹವು ಅವಳ ಮನಸ್ಸಿ
ನಿಂದ ತೊಲಗುವುದೋ ಅದನ್ನರಿಯದೆ ಯುವಕನು, 'ನಾನು ನಡೆಯಿಸಿರುವಾ
ವ ಕೆಲಸದಿಂದ ನಿನಗೆ ಅಂತಹ ನಂಬಿಕೆಯುಂಟಾಯಿತು? ಎಂದು ಕೇಳಿದನು.
ಶೋಭನೆ- ನಿಮ್ಮ ಮಾತುಗಳಿಂದಲೂ ನಿಮ್ಮ ಹಾವಭಾವದಿಂದಲೂ ನಿಮ್ಮ
ನಡತೆಯಿಂದಲೂ ನಿಮ್ಮ ಎಲ್ಲಾ ಕೆಲಸಕಾರ್ಯಗಳಿಂದಲೂ ನಿಮ್ಮ
ಮನಸ್ಸಿನಲ್ಲಿರುವುದು ಹೋರಪಡುತ್ತದೆ. ಪ್ರಣಯದ ಪ್ರವಾಹಕ್ಕೆ ಮಧ್ಯೆ
ಅಡ್ಡಿಯು ಬಾರದಿದ್ದರೆ ಅಂತಹ ಪ್ರಯವು ಪೂರ್ಣತೆಯನ್ನು ಹೊಂದುವು
ದಿಲ್ಲ. ನಿಮ್ಮ ನಿಮ್ಮಲ್ಲಿ ಬಾಲ್ಯದಿಂದಲೂ ಹುಟ್ಟಿದ ಪ್ರಣಯವು ನಿಮ್ಮ ನಿಮ್ಮ
ಸ್ನೇಹದ ಬಳಕೆಗಳಿಂದ ನಿಮಗೆ ಗೊತ್ತಾಗಲಿಲ್ಲ. ಆದುದರಿಂದ ನನ್ನನ್ನು
ಪ್ರೀತಿಸುವುದಾಗಿ ತಿಳಿದುಕೊಂಡಿರುವಿರಿ. ಈಗೆನಗೆ ತಿಳಿದಂತೆ ನೀವು
ಮಾಲತಿಯನ್ನೇ ಪ್ರೀತಿಸುತ್ತೀರಿ, ಅವಳಲ್ಲಿಯೇ ನಿಮಗೆ ಹೆಚ್ಚು ಪ್ರಣಯವು.
ಯುವಕ-ಸ್ವಲ್ಪ ವಿರಕ್ತಿಭಾವದಿಂದ ಶೋಭನೆ! ಪ್ರಣಯಕ್ಕೆ ಮಧ್ಯೆ
ಅಡ್ಡಿಯು ಬಾರದಿದ್ದರೆ ಅದುಪಕ್ವವಾಗುವುದಿಲ್ಲವೆಂದು ಅನೇಕರು ಹೇಳುವು
ದೇನೋ ನಿಜ-ನೀನೂ ಹಾಗೆಯೇಹೇಳುತ್ತಿ. ಮಾಲತಿಯನ್ನು ನಾನು ಪ್ರೀತಿ
ಸುತ್ತೇನೆಂತಲೇ ಹೇಳು. ಆ ಪ್ರೀತಿಗೆ ಈಗ ಮಧ್ಯೆ ಬಾಧೆ ಬಂದುದೇನು?
ಅದು ಪೂರ್ಣತೆಯನ್ನು ಹೊಂದಿರುವ ಬಗೆ ಹೇಗೆ?
--------------------ಎರಡನೆಯ ಪರಿಚ್ಛೇದ------------------------------೧೩
ಶೋಭನೆ ನನ್ನನ್ನು ಮದುವೆ ಮಾಡಿಕೊಂಡಿರುವುದೇ ಅದಕ್ಕೆ ಬಾಧೆ
ಬಂದಂತಾಯಿತು. ನಾನೇ ನಿಮ್ಮ ಹಾದಿಯಲ್ಲಿ ಮುಳ್ಳಾಗಿ ನಿಂತಿವೆನು!
ಆ ಮಾತನ್ನು ಹೇಳುತ್ತಿದ್ದ ಹಾಗೆ ಶೋಭನಿಗೆ ಅಷ್ಟಭೋಧೆಯಾಗಿ
ಮುಂದೆ ಮಾತು ಸಾಗದೆ ನಿಲ್ಲುತ್ತ ಬಂದಿತು. ಅದುವರೆಗೂ ಹೃದಯದಲ್ಲಿ
ಬಚಿಟ್ಟುಕೊಂಡಿದ್ದ ಯಾತನೆಯು ಉಕ್ಕಿ ಕಣ್ಣುಗಳಲ್ಲಿ ಹರಿಯಿತು. ಕಷ್ಟ
ದಿಂದ ಕಣ್ಣೀರನ್ನು ಅಡಗಿಸಿಕೊಂಡು, ಪುನಃ ಹೀಗೆಂದು ಹೇಳಿದಳು. ನಾಥ !
ನಾನೇ ನಿನ್ನ ಹಾದಿಯಲ್ಲಿ ಮುಳ್ಳು: ಮದುವೆಯಾಗುವುದಕ್ಕೆ ಮೊದಲು
ನಿಮ್ಮ ಜತೆಯಲ್ಲಿ ಮಾಲತಿಯ ಹೊರ್ತು ಮತ್ತಾರೂ ಇರಲಿಲ್ಲ. ಮಾಲತಿಯ ಸಂಗ
ಡಲೇ ಆವಾಗಲೂ ಮಾತುಕಥೆಯಾಡುತ್ತಿದ್ದಿರಿ. ಅವಳು ಸಂಗಾತಿಯಾಗಿ
ರುವಳು. ಅದನ್ನು ಕಂಡು ಆರೂ ಅಳುತ್ತಿರಲಿಲ್ಲ. ಆಗಾರ ಅಡ್ಡಿಯೂ
ಇಲ್ಲದೆ ಮನದಣಿಯ ಮಾತಾಡುತ್ತ ಪರಸ್ಪರ ಸ್ನೇಹಿತರಂತ್ತಿದ್ದಿರಿ. ಅದರಲ್ಲಿ
ಸಂಕೋಚಕ್ಕೆ ಕಾರಣವಿರಲಿಲ್ಲ: ಸ್ನೇಹವು ನಿರ್ವಿಘ್ನವಾಗದ್ದರಿಂದ
ಪಕ್ಷವಾಗುವುದಕ್ಕೆ ಅವಕಾಶವಿರಲಿಲ್ಲ ಅದನ್ನು ಪ್ರೇಮವೆಂದಾಗಲಿ ಪ್ರಣ
ಯವೆಂದಾಗಲಿ ತಿಳಿಯಲಿಲ್ಲ. ಈಗಲಾದರೂ, ಇಷ್ಟವಾದಾಗ ಮಾಲತಿಯೊಂ
ದಿಗೆ ಸಂಕೋಚವನ್ನು ಬಿಟ್ಟು ಧಾರಾಳವಾಗಿ ; ಮಾತನಾಡುವುದಕ್ಕೆ ಅವಕಾಶ
ವಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೂ ನನ್ನ ಜತೆಯಲ್ಲಿರಬೇಕಾಗಿದೆ. ಬಾಲ್ಯದಾ
ರಭ್ಯ ಬೆಳೆದುಬಂದ ನಿಮ್ಮ ಸುಖವನ್ನು ಹೊಗಲಾಡಿಸುವುದಕ್ಕೆ ನಾನೇ
ಕಾರಣವಾಗಿದ್ದೇನೆ. ನಾನೆ ನಿಮ್ಮ ಪ್ರಣಯ ಪ್ರವಾಹಕ್ಕೆ ಅಡ್ಡಿ ಮಾಡಿ
ದಂತಾಗಿ ಆ ಪ್ರಣಯವು ಪ್ರೇಮರೂಪವಾಗಿ ಪರಿಣಮಿಸಿ ಪೂರ್ಣತೆಯನ್ನು
ಹೊಂದಿದೆ. "
ಶೋಧನೆಯ ಯುಕ್ತಿಗಳನ್ನು ಕೇಳಿ, ತಾನು ಕಷ್ಟದಿಂದ ಸ್ವಲ್ಪ
ನಕ್ಕು, ' ಶೋಭನೆ ! ಒಂದು ದಿನವಿಲ್ಲದಿದ್ದರೆ ಒಂದು ದಿನ ಪಂಡಿತರತ್ನರಲ್ಲಿ
ತರ್ಕವಮಾಡಿ, ನೀನವರನ್ನು ಖಂಡಿತವಾಗಿ ಜಯಿಸಬಲ್ಲೆ. ಅದರಲ್ಲೆನಗೆ
ಲೇಶವೂ ಸಂದೇಹವಿಲ್ಲ! ಇಷ್ಟಾಯಿತು-ಇಲ್ಲಿಗೆ ತಕಾವು ಮುಗಿಯಿತೋ
ಅಥವಾ ಉಳಿದಿದೆಯೋ?' ಎಂದು ಕೇಳಿದನು.
೧೪---------------------ಮಾಲತಿ--------------------------------
ಶೋಧನೆಯ ಮುಖದಲ್ಲಿ ಸ್ವಲ್ಪ ಮುಗುಳ್ಳಗೆಯು ಕಂಡಿತು.
ನೋಡುತ್ತಿದ್ದ ಹಾಗೆ ಆ ನಗುವು ಅಳಿಸಿಹೋಗಿ ವಿಷಾದದಿಂದ ಗಂಭೀರಭಾ
ವವು ಹುಟ್ಟಿ ಶೋಭನೆಯು, 'ನಗುಬೇಡಿರಿ, ಅದೆಲ್ಲಾ ಪ್ರಯವಲ್ಲವೆಂದೂ
ನೀವು ನನ್ನವರೇಹೊರ್ತು ಇತರರಲ್ಲಿ ಆಸಕ್ತರಲ್ಲವೆಂದು ನಾನು ನಂಬಿರ
ಬಹುದೆಂದೂ ತೋರಿಕೊಟ್ಟರೆ ನನಗೆ ಮತ್ತೆ ಬೇರೆ ಬೇಕಾಗುವುದೇನು
ಉಳಿಯಿತು? ಹಾಗಿದ್ದರೆ ಈಪ್ರಪಂಚದಲ್ಲಿ ನನ್ನಂತೆ ಸುಖಿಗಳು ಉಂಟೆ?
ನನ್ನ ಹೊಟ್ಟೆಯಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ನೀವು ಹೇಗೆ ನೋಡಿ
ತಿಳಿಯಬಲ್ಲಿರಿ? ನಾನು ಅನೇಕ ಯುಕ್ತಿಗಳನ್ನು ಬಲ್ಲೆನು. ಆ ಯೋಚನೆ
ಯಾವಾಗಲೂ ಜಪತಪ ಧ್ಯಾನಗಳಾಗಿವೆ. ರಾತ್ರಿಹಗಲು ನನಗೆ ಅದೇ ಯೋಚ
ನೆಯಾಗಿದೆ. ಒಂದೊಂದು ವೇಳೆ ಸ್ವಾಮಿಯಲ್ಲಿ ಅನ್ಯಾಯವಾಗಿ ಅನುಮಾನ
ಪಡುತ್ತೇನೆಂಬ ದಾರುಣವಾದ ಯಾತನೆಗೆ ಗುರಿಯಾಗುತ್ತೇನೆ. ಹೀಗೆಲ್ಲಾ
ವಿಧವಿಧವಾದ ಭಾವನೆಗಳಿಂದ ಕಾಲವಂ ಕಳೆಯುವುದಾಗಿದೆ. ಇಷ್ಟು ದುರ್ಭಾ
ವನೆಗಳಿಗೆ ಗುರಿಯಾಗಿದ್ದರೂ ನನಗೆ ಹುಚ್ಚು ಹಿಡಿಯದಿರುವುದು ಹೆಚ್ಚು
ಆಶ್ಚರ್ಯವಾಗಿದೆ' ಎಂದಳು.
ಯುವಕ-ಶೋಭನೆ ! ಇನ್ನು ನಾನು ಹೆಚ್ಚು ಕೇಳಲಾರೆನು.
ಆರನ್ನು ಎಷ್ಟು ನೋಡಿದರೂ ನನ್ನ ಆಶೆಯು ಪೂರೈಸದೋ, ಅರನ್ನು
ಎಷ್ಟು ಪ್ರೀತಿಸಿದರೂ ತೃಪ್ತನಾಗೆನೊ ಆರ ಮೂರ್ತಿಯು ಸರ್ವದಾ ನನ್ನ
ಹೃದಯದಲ್ಲಿ ತುಂಬಿದೆಯೋ ಅಂತಹವಳಿಂದ ಇಂತಹ ಅಪನಂಬಿಗೆಯ
ಮಾತುಗಳನ್ನು ಕೇಳುವುದಕ್ಕಿಂತ ಸಿಡಿಲು ಹೊಡೆದು ಹೋಗುವುದು ನನ್ನ
ಪಕ್ಷಕ್ಕೆ ಮೇಲಾಗಿದೆ.
ಆ ಮಾತುಗಳು ಮಿಂಚಿನ ವೇಗದಿಂದ ಹೋಗಿ ಶೋಧನೆಯ ಮನ
ಸ್ಸಿಗೆ ತಟ್ಟಿದುವು. ಅವಳು ಸ್ವಾಮಿಯ ಪಾದಗಳನ್ನು ಕಟ್ಟಿಕೊಂಡು,
'ನಾಥ! ನನ್ನ ಪಾಪಕ್ಕೆ ಪ್ರಾಯಶ್ಚಿತ್ತವುಂಟೆ? ನಾನಿದ್ದು ನಿಮಗೆ ಸುಖವಿಲ್ಲ,
ಈ ಕೆಟ್ಟ ಮನವುಳ್ಳವಳಾರನ್ನೂ ಸುಖಪಡಿಸಲಾರಳೆಂದು ಚೆನ್ನಾಗಿ ತಿಳಿದು
ಕೊಂಡಿದ್ದೇನೆ. ನನ್ನ ಪ್ರಾಣಗಳಿಗೆ ಕೊನೆಗಾಣಿಸಿದರೆ ಅದರಿಂದ ನನ್ನ
ಪಾಪಕ್ಕೆ ತಕ್ಕ ಪಾಯಶ್ಚಿತ್ತವಾದಂತಾಗುವುದು ' ಎಂದಳು.
-----------------------ಎರಡನೆಯ ಪರಿಚ್ಛೇದ---------------------೧೫
ಯುವಕನಿಗೆ ಹೆಂಡತಿಯಮೇಲೆ ಇದ್ದ ಪ್ರಣಯವು ಸ್ವಲ್ಪವೂ ಕಡಿ
ಮೆಯಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ಅವನ ಮನಸ್ಸು ಕರಗಿ
ಹೋಯಿತು. ಅವನು ಉಕ್ಕಿಬಂದ ಅಶ್ರಜಲವನ್ನೊರಸಿಕೊಂಡು, ಶೋಭನೆ!
ನಾನೇನನ್ನು ಹೇಳಿದರೂ ಪ್ರಕಾರಾಂತರವಾಗಿ ತಿಳಿಯಬೇಡ; ನನಗೆ ಉಂಟಾ
ಗಿದ್ದ ತೀವ್ರಯಾತನೆಯಿಂದ ಮಾತುಗಳು ಹೊರಗಾದುವು; ನೀನು ನಿನ್ನ
ಮನಸ್ಸಿನಲ್ಲಿದ್ದುದನ್ನೆಲ್ಲಾ ಬಿಚ್ಚಿ ಹೇಳಿದುದು ಒಳ್ಳೆಯದಾಯಿತು; ನಿನ್ನ ಮನ
ಸ್ಸಿನಲ್ಲಿ ಮತ್ತೇನಿದ್ದರೂ ಹೇಳಿಬಿಡು; ಮುಚ್ಚು ಮರೆ ಮಾಡಬೇಡವೆಂದು
ಹೇಳಿದನು.
ಶೋಧನೆ -ಎಲ್ಲಾ ಹೇಳಬೇಕೆಂದು ಇರುವಾಗ ಅವದನ್ನೂ ಮರೆ
ಮಾಜುವುದಿಲ್ಲ; ಅದರಿಂದ ನನ್ನ ಅದೃಷ್ಟದಲ್ಲಿದ್ದು ಆಗಿಹೋಗಲಿ; ಏನು
ಬಂದರೂ ಸಹಿಸಿಕೊಳ್ಳುವುದಕ್ಕೆ ಸಿದ್ಧವಾಗಿದ್ದೇನೆ; ಎಲ್ಲವನ್ನೂ ಕೇಳಿ
ಈ ಪಾಪಿಯಾದವಳಿಗೆ ನಿಮ್ಮ ಚರಣದಲ್ಲಿ ಸ್ಥಳವು ಕೊಡಬಹುದಾದರೆ
ಕೊಡಬಹುದು, ಇಲ್ಲವಾದರೆ ಸಾಯುವುದಕ್ಕೆ ಸಿದ್ಧವಾಗಿದ್ದೇನೆ; ಸಾಯು
ವುದಕ್ಕೆನಗೆ ಸ್ವಲ್ಪವೂ ಭಯವಿಲ್ಲ : ರಾತ್ರಿ ಹಗಲು ದೇವರು ನನ್ನನ್ನು
ಇಲ್ಲಿಗೆ ಸಾಕುಮಾಡಲೆಂದು ಕೇಳಿಕೊಳ್ಳುತ್ತಿದ್ದೇನೆ; ಅದನ್ನು ದೇವರೇ
ಬಲ್ಲ !
ಹೀಗೆಂದು ಹೇಳಿ ಶೊಭನೆಯು ಕಣ್ಣೀರಿನ್ನೊರಿಸಿಕೊಂಡಳು.
ಯುವಕನು ವ್ಯಥೆಯಿಂದ ಅವಳ ಹೇಳಿಕೆಯನ್ನು ಕೇಳಲು ಎದುರು
ನೋಡುತ್ತಿದ್ದನು.
ಶೋಭನೆ - (ಸೆರಗನ್ನು ಸರಿಮಾಡಿಕೊಂಡು ಮದುವೆಯಾದ ಹೊಸ
ದರಲ್ಲಿ ನೀವು ಸಾಯಂಕಾಲ ಮನೆಗೆ ಬರುತ್ತಲೇ ನನ್ನನ್ನು ನೋಡಬೇಕೆಂ
ದಿದ್ದ ಕುತೂಹಲವು ಈಚೆಗೆ ತಪ್ಪಿಹೋಯಿತು. ಆ ಕುತೂಹಲವು ಈಗ
ಎಲ್ಲಿ ಹೋಯಿತು ? ಅದಕ್ಕೆ ಬದಲಾಗಿ ಈಚೆಗೆ ಸಂಧ್ಯಾಕಾಲ ಮನೆಗೆ
ಬರುತ್ತಲೇ ಅರನ್ನು ನೋಡದಿದ್ದರೆ ವ್ಯಾಕುಲವುಳ್ಳವರಾಗುವಿರಿ ? ಮತ್ತು
ಆರನ್ನು ನೋಡಿದರೆ ಆ ವ್ಯಾಕುಲವು ಹೋಗಿ ಮುಖವು ಹರುಷದಿಂದ ಅರ
ಳುವುದು ? ಅಂತಹ ಅರಳಿದ ಮುಖವನ್ನು ಚಿತ್ರದಲ್ಲಿ ಬರೆದಿಡಬೇಕೆಂದು
----------------------------ಮಾಲತೀ---------------------------೧೬
ನನಗೆ ಬಹಳ ಆಶೆ; ಆದರೆ ನಾನು ಚಿತ್ರ ಬರೆಯುವವಳಲ್ಲ, ಬರೆಯಲೂ
ಬಾರದು. ಆದರೂ ಅ ಮುಖಭಾವವು ನನ್ನ ಮನಸ್ಸಿನಲ್ಲಿ ಅಂಕಿತವಾಗಿದೆ.
ಮಾಲತಿಯ ಸಂಗಡ ಮಾತಾಡುತ್ತಿರುವಾಗ ನಿಮಗೆ ಉಂಟಾಗುವ ಆನಂ
ದವು ಹೇಳತೀರದು. ನಿಮ್ಮ ಪ್ರತಿವ್ಯವಹಾರದಲ್ಲಿಯೂ ಪ್ರತಿ ಭಾವದ
ಲ್ಲಿಯ ಪ್ರತಿಮಾತಿನಲ್ಲಿ ನಿಮಗೆ ಮಾಲತಿಯಮೇಲೆ ಇರುವ ಪ್ರಣ
ಯವು ವ್ಯಕ್ತವಾಗಿ ನನ್ನನ್ನು ಜೀವದ್ದಶೆಯಲ್ಲಿಯೇ ಸುಡುತಿದೆ. ನಿಮ್ಮ
ನಡೆಗೆಯ ಪ್ರತಿ ಹೆಜ್ಜೆಯಲ್ಲಿ ನಮ್ಮಿಬ್ಬರಲ್ಲಿ ನೀವು ಮಾಡಿಕೊಂ
ಡಿರುವ ಭೇದವು ಸ್ಪಷ್ಟವಾಗುತ್ತದೆ. ನನ್ನೆದುರಿಗೆ ಮನಃಪೂರ್ವಕವಾದ
ಹರುಷದಿಂದುಂಟಾಗುವ ನಗುವು ಬರುವುದಿಲ್ಲ. ನನ್ನೆದುರಿಗೆ ಆ ಆನಂದದಿಂ
ದುಂಟಾಗುವ ಆತ್ಮವಿಸ್ನೃತಿಯ ಇಲ್ಲ. ಮುಖ್ಯ ಮಾಲತಿಯು ಎದು
ರಿಗೆ ಇಲ್ಲದಿದ್ದರೆ ಪ್ರಾಣಬಿಡುವವರಂತಿರುವಿರಿ.
ಯುವಕ: ಮಾಲತಿಯನ್ನು ನೋಡಿದರೆ ನನಗೆ ಸಂತೋಷವಾಗುವು
ದುಂಟು, ನಾನು ಅವಳನ್ನು ಪ್ರೀತಿಸುವುದೂ ಉಂಟು. ಆದಾವದನ್ನೂ
ನಾನೊಪ್ಪದೆ ಇಲ್ಲ. ಈಗಲೂ ಒಪ್ಪಿಕೊಳ್ಳುವೆನು. ಆದರೆ ನಿನ್ನ
ಸ್ವಂತ ಕಲ್ಪನೆಯಿಂದ ಅವಳನ್ನು ನೀನು ಎಕ್ಕರಿಸಿ ಎತ್ತಿಹಾಕುವ ರೀತಿ
ಯಾವದು ನಡೆದಿಲ್ಲ. ನಿನಗೆ ಹೇಗೆ ನಂಬಿಕೆಯುಂಟುಮಾಡಬಹುದೋ
ಅದಾವದೂ ನನಗೆ ಗೊತ್ತಾಗುವುದಿಲ್ಲ. ನೀನು ನಂಬುವುದಾದರೆ-
ಶೋಭನೆಯು ಮಾತನ್ನು ಪೂರೈಸಗೊಡದೆ, “ ನಿಮಗೆ ಮತ್ತೊಂದು
ಮಾತನ್ನು ಹೇಳಲಿಲ್ಲ. ಅದನ್ನು ಮರೆಮಾಡುವುದಕ್ಕೆನಗೆ ಇಷ್ಟವಿಲ್ಲ.
ಮಾಲತಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಅನೇಕರು ಬಂದು ಕೇಳಿ
ದರು. ನೀವು ಸುಕುಮಾರಸಿಗೆ ಹೊರ್ತು ಮತ್ತಾರಿಗೂ ಅವಳನ್ನು
ಕೊಟ್ಟು ಮದುವೆ ಮಾಡುವುದಿಲ್ಲವೆಂದು ಖಂಡಿತ ಹೇಳಿದಿರಿ ಸುಕುಮಾ
ರನು ವಿಲಾಯತಿಯಿಂದ ಹಿಂದಿರುಗಿ ಬರುವುದು ಗೊತ್ತಿಲ್ಲ. ಅದೂ ನನಗೆ
ಸಂದೇಹವನ್ನುಂಟುಮಾಡುವುದಕ್ಕೊಂದು ಕಾರಣವಾಗಿದೆ ” ಎಂದಳು.
ಯುವಕ:- (ಆಶ್ಚರ್ಯದಿಂದ) ಮಾಲತಿಯನ್ನು ಸುಕುಮಾರನಿಗೆ
ಕೊಟ್ಟು ಮದುವೆಯಾಗುವುದು ಖಂಡಿತ; ಅವಳು ಅವನನ್ನು ಪ್ರೀತಿಸುತ್ತಾಳೆ.
----------------------ಎರಡನೆಯ ಪರಿಚ್ಛೇದ------------------------೧೭
ಅವನು ವಿಲಾಯಿತಿಯಿಂದ ಬರುತ್ತಲೇ ಲಗ್ನವಾಗುವುದು. ಹೋದವರ್ಷ
ಅವನಿಗೆ ಪರೀಕ್ಷೆಯಾಗಲಿಲ್ಲ. ಈವರ್ಷ ಪರೀಕ್ಷೆಯಾಗದಿದ್ದರೆ ಬರುವುದು
ಸ್ವಲ್ಪ ಸಾವಕಾಶವಾಗಬಹುದು. ಹಾಗಾದರೂ ಮಾಲತಿಯನ್ನು ಬೇರೆ
ಕೊಟ್ಟು ಲಗ್ನವನ್ನು ಮಾಡೆನು. ಅದಕ್ಕೋಸ್ಕರವಾಗಿ ನಿನ್ನ ಕಣ್ಣಿಗೆನ್ನ
ಪ್ರೇಮವು ಹೆಚ್ಚಾದಂತೆ ಕಂಡಿತೆಂದು ತೋರುತ್ತದೆ. ಈರ್ಷೆಯಿಂದ ಮನು
ಷ್ಯರು ಎಷ್ಟು ಬೇಗನೆ ಕುರುಡರಾಗುತ್ತಾರೆ ?
ಶೋಧನೆಯು ತನ್ನ ತಪ್ಪು ತನಗೆ ಉಂಟಾಗಿದ್ದ ಭ್ರಾಂತಿಮೂಲಕವಾ
ದುದೆಂದು ತಿಳಿದುಕೊಂಡಳು.
ಯುವಕ-ಶೋಭನೆ ! ನೀನು ಹೀಗೆ ಇಲ್ಲದುದನೆಲ್ಲಾ ಭಾವಿಸಿ
ಕೊಂಡು ಅನರ್ಥಕವಾಗಿ ಅಸುಖಿಯಾಗುವೆಯಲ್ಲದೆ ನನ್ನನ್ನೂ ವ್ಯಸನಕ್ಕೆ
ಗುರಿಮಾಡುವೆ. ಇನ್ನು ಮುಂದೆ ಹಾಗೆ ಮಾಡಬೇಡ. ನಾನು ಏನನ್ನು ಮಾಡಿ
ದರೆ ನಿನ್ನ ಅಪನಂಬಿಕೆಯು ದೂರವಾಗುವುದು, ಹೇಳು. ನಾನು ಮಾಡತ
ಕ್ಕುದು ಏನು? ನಿನ್ನನ್ನು ಬಿಟ್ಟು ನಾನು ಮತ್ತಾರನ್ನೂ ಹೆಚ್ಚು ಪ್ರೀತಿಸುವು
ದಿಲ್ಲ. ಎಷ್ಟು ಕಾಲವಾದರೂ ಮಾಲತಿಯನ್ನು ಬಿಟ್ಟಿರುವೆನು. ನಿನ್ನನ್ನು ಬಿಟ್ಟು
ಒಂದುಕ್ಷಣವಾದರೂ ಅಗಲಿರೆನು. ನಿನ್ನನ್ನು ನೋಡದಿದ್ದರೆ ನನಗೆ ಉಂಟಾ
ಗುವ ಕಷ್ಟವನ್ನು ಬಣ್ಣಿಸಲಾರೆನು. ಹೊರಗೆ ಹೋಗಿ ಅವ ಕೆಲಸವನ್ನು
ಮಾಡುತ್ತಿದ್ದರೂ ಮನವು ನಿನ್ನ ಮೇಲಿರುವುದು. ನಿನ್ನ ಮೇಲಿನ ಜ್ಞಾನ
ದಿಂದ ಮಾಡುತ್ತಿದ್ದ ಕೆಲಸವೇ ಮರೆತು ಹೋಗುವುದು. ನಿನ್ನಿಂದಲೇ ಎಲ್ಲಾ
ಕಾರ್ಯಗಳನ್ನೂ ನಿರ್ವಹಿಸಿಕೊಳ್ಳುವುದಕ್ಕೆನಗೆ ಶಕ್ತಿಯಿರುವುದು.
ಶೋಭನೆ! ಹೀಗಿದ್ದುಕೊಂಡಿದ್ದರೂ ನೀನೆನ್ನಲ್ಲಿ ನಂಬಿಕೆಯನಿಡದೆ ಕಷ್ಟವಂ
ಕೊಡಬಹುದೆ? ಇನ್ನು ಮುಂದೆ ನನ್ನಲ್ಲಿ ದಯೆಯಿಲ್ಲದವಳಾಗಬೇಡ.
ಮನಸ್ಸಿನ ವ್ಯಾಕುಲತೆಯಿಂದ ಯುವಕನು ಹೆಂಡತಿಯ ಕಾಲನ್ನು
ಹಿಡಿದುಕೊಳ್ಳುವುದಕ್ಕೆ ಹೋದನು. ಶೋಧನೆಯು ಚಮಕಿತೆಯಾಗಿ ಅವನ
ಕೈಯನ್ನು ಹಿಡಿದು ತನ್ನ ವಕ್ಷದಮೇಲೆ ಇಟ್ಟು ಕೊಂಡಳು. ಆಗವಳ
ಕಣ್ಣಿಗೆ ಪಂಪಂಚವೇ ತಿರುಗುವಂತೆ ಕಂಡಿತು. ಎಲ್ಲವೂ ಸ್ವಪ್ನದಂತೆ
ತೋರಿತು. ತನಗಿಂತ ಸುಖಿಗಳು ಪ್ರಪಂಚದಲ್ಲಿ ಮತ್ತಾರೂ ಇಲ್ಲವೆಂದು
--------------------ಮಾಲತೀ--------------------------೧೮
ತಿಳಿದಳು. ಹಾಳಾದ ಕಲ್ಪನೆಯಿಂದ ತಾನು ನಿರರ್ಥಕವಾಗಿ ಗ೦ಡನನ್ನು
ದೋಷಿಯೆಂದು ತಿಳಿದುಕೊಂಡೆನೆಂದು ತನ್ನನ್ನು ತಾನೇ ಧಿಕ್ಕರಿಸಿಕೊಂಡಳು.
ಅವಳ ಹೃದಯವು ಅನುತಾಪದಿಂದ ತುಂಬಿತು. ಗಂಡನ ಭುಜದ ಮೇಲೆ
ತಲೆಯನ್ನಿಟ್ಟುಕೊಂಡು ಅಳುವುದಕ್ಕೆ ತೊಡಗಿ, ಮನದಲ್ಲಿಯೇ ಕ್ಷಮೆ
ಯನ್ನು ಪ್ರಾರ್ಥಿಸಿದಳು, ಬಾಯಿಂದ ಮಾತು ಹೊರಡದು, ಏನನ್ನು ಹೇಳಿ
ಕೊಳ್ಳುವುದಕ್ಕೂ ತೋಚಲಿಲ್ಲ. ಯುವಕನಿಗೆ ಅವಳ ಮನದ ಭಾವವು
ಗೊತ್ತಾಯಿತು. ಅವಳ ಮನಸ್ಸಿನಲ್ಲಿ ಸಂದೇಹವೆಲ್ಲಾ ತೊಲಗಿತಂದು
ತಿಳಿದುಕೊಂಡನು. ಪುನಃ ಸಂದೇಹಕ್ಕೆ ಅವಕಾಶವಿಲ್ಲವೆಂದು ಸ್ಥಿರವಾ
ಯಿತು. ಅಗವರಿಬ್ಬರೂ ಸುಖದಿಂದ ಅಭಿಭೂತರಾಗಿ ಮೌನವಾಗಿದ್ದರು.
ಇದ್ದ ಹಾಗೆ ಆ ಸಮಯದಲ್ಲಿ ಮಾಲತಿಯು ಮನೆಯೊಳಗೆ ಬಂದಳು,
ಬಂದವಳು ನಗುತ್ತ ಒಂದು ಗುಲಾಬಿಹೂವನ್ನು ಯುವಕನ ಕೈಯಲ್ಲಿರಿಸಿ,
'ನೋಡು ! ನಿನಗೋಸ್ಕರ ಇದೊಂದು ಹೊಸ ಪಾದಾರ್ಥವನ್ನು ತಂದೆನು,
ನಮ್ಮ ಒಣಗಿ ಹೋಗಿದ್ದ ಗಿಡದಲ್ಲಿ ಇಂದೊದು ಹೊಸ ಹೂವು ಬಿಟ್ಟಿದ್ದೆ
ಎಂದು ಹೇಳಿದಳು.
ನುಸಿಯು ಬಳಿದಂತೆ ಲೋಕಾಕುಲವಾಗಿದ್ದಾ ಮನೆಯು ಮಾಲತಿಗೆ
ಸ್ವಭಾವವಾಗಿದ್ದ ಅವಳ ಸರಳ ಹರುಷಭಾವವನ್ನು ನೋಡಿ ಯುವಕನ
ಕಣ್ಣುಗಳಲ್ಲಿ ಕಂಬನಿಯು ಕಾಣಿಸಿಕೊಂಡಿತು. ಮಾಲತಿಯು ಹುಡಗಿಯಾ
ಗಿದ್ದಳು. ಅವಳಿಗೆ ಸಲುವಾಗಿಯೇ ಅವಳ ಅಣ್ಣನಿಗೆ ಅಷ್ಟೊಂದು ವ್ಯಸನ.
ಅವಳ ಮೇಲಿನ ಪ್ರೀತಿಗೆ ಗಲವಾಯ ಅಂದು ರಮೇಶನು ಅಸುಖಿ. ರಮೇ
ಶನ ಶೋಭನೆಯೂ ಅಸುಖಿಯಾಗಿದ್ದಾಳೆ. ಯುವಕನು ಸರಳ ಹೃದಯವು
ಳ್ಳಾಬಾಲೆಯ ಮುಖವನ್ನು ನೋಡಿ, ಹರುಶವಿಷಾದಗಳಿಂದ ಕೂಡಿದ ಭಾವ
ದಿಂದ ಸ್ವಲ್ಪ ನಕ್ಕು ಅವಳು ಕೊಟ್ಟ ಗುಲಾಬಿ ಹೂವನ್ನು ತೆಗೆದುಕೊಂಡು
ಮೂಸಿನೋಡಿದನು.
ಪುನಃ ಬೆಂಕಿಯ ಉರಿಯದ್ದಿತು! ಅವನಾ ನಗುವನ್ನು ಕಂಡು ಶೋ
ಭನೆಯು ತನ್ನ ಸಂಕಲ್ಪವನ್ನು ಸ್ಥಿರಗೊಳಿಸಲಸಮರ್ಥೆಯಾದಳು. ಮನು
---------------------------ಎರಡನೆಯ ಪರಿಚ್ಛೇದ------------------------೧೯
ಷ್ಯನು ಆತ್ಮವಿರೋಧಿ, ಅಸ್ಥಿರಚೇತನು, ಅಗ್ಗೆ ಒಂದು ಕ್ಷಣಕ್ಕೆ ಮೊದಲು
ಶೋಭನೆಯು ತನ್ನ ಮನಸ್ಸಿನಲ್ಲಾವ ಸಂದೇಹಕ್ಕೂ ಅವಕಾಶವ ಕೊಡ
ಕೂಡದೆಂದು ಸಂಕಲ್ಪಿದ್ದಳು : ಆದರೆ ಪನಃ ಅದೇ ಸಂದೇಹವುಂಟಾಗಿ ಆ
ಸಂದೇಹಕ್ಕೆ ಕಾರಣವನ್ನು ತಾನೇ ಅರಿಯದವಳಾಗಿದ್ದಳು. ರಮೇಶನ
ಮಾತುಗಳೆಲ್ಲಾ ಫಲವಿಲ್ಲದೆ ಹೋದುವು. ರಮೇಶನು ಸ್ವಲ್ಪ ನಕ್ಕ ನಗುವಿ
ನಲ್ಲಿ ಅದೆಲ್ಲಾ ಹಬೆಯಾಗಿ ಹೋದುವು. ಆನೆಯು ಅಂಥಾ ಪ್ರೇಮಮ
ಯವಾಗಿಯೂ ಸ್ವಪ್ನಮಯವಾಗಿಯೂ ಸುಖಮಯವಾಗಿಯೂ ಇದ್ದ ನಗು
ವನ್ನು ರಮೇಶನ ಮುಖದಲ್ಲಾವಾಗಲೂ ಕಂಡಿರಲಿಲ್ಲ. ರಮೇಶನು ನಿಜವಾ
ಗಿಯ, ತನ್ನ ಮನಸ್ಸನ್ನು ತಾನೇಅರಿತವನಾಗಿರಲಿಲ್ಲ. ಹಾಗೆಅರಿತವನಾಗಿದ್ದರೆ
ಹೀಗೆ ನಗುತ್ತಿದ್ದನೆ! - ಅಂಥ ನಗುವು ಶೋಭನೆಯ ಅದೃಷ್ಟಕ್ಕೆ ಒದಗಿರಲಿಲ್ಲ,
ಅಂಥಾ ಮಧುಕರ ಮಮತೆಯಿಂದ ಸೇರಿದನಗುವು, ಅಂಥಾ ಪ್ರೇಮಜಡಿತವಾದ
ನಗುವು. ಅಂಥಾ ಆದರದಿಂದೊಡಗೂಡಿದ ನಗುವು, ಅನುರಾಗದಿಂದ ರಂಚಿತ
ವಾದ ಅಂಥಾ ನಗುವು ಶೋಭನೆಯ ಹಣೆಯಲ್ಲಿ ಒಂದಿರಲಿಲ್ಲ. ಹಾಗಾದರೆ
ಅದುವರೆಗೂ ರಮೇಶನು ಕಪಟಮಾತುಗಳಿಂದ ಶೋಭನೆಯನ್ನು ಮೋಸ
ಗೊಳಿಸಿದನೆ ? ಹಾಗಿಲ್ಲ ರಮೇಶನು ತನ್ನ ಮನಸ್ಸನ್ನು ತಾನೇ ಅರಿಯದವ
ನಾಗಿದ್ದನು. ಹಾಗಾದರೆ, 'ರಮೇಶ ! ನೀನು ನಿಜವಾಗಿ ಶೋಧನೆಯವನ
ಲ್ಲವೆ? ! ನಿಜವಾಗಿಯೂ ಮಾಲತಿಗೆ ಸೇರಿದವನೆ? ರಮೇಶನ ಆ ನಗುವು ಶೋ
ಭನೆಯ ಮನಸ್ಸಿನಲ್ಲಿ ನಾಟಿತು. ಅವಳ ಹೃದಯದಲ್ಲಿ ಪುನಃ ಮೊದಲಿನ ದಾವಾ
ನಲದ ಉರಿಯೆದ್ದಿತು.
.............
ಮೂರನೆಯ ಪರಿಚ್ಛೇದ.
ಅದಿನದ ಮೊದಲ್ಗೊಂಡು ಶೋBನೆಯು ಬಾಯಿಬಿಡಲಿಲ್ಲ. ಮೊದ
ಲಿನಂತೆ ಸಂದೇಹವೂ ಒಂದೊಂದು ತಡವೆ ಅನುಮಾನವೂ ಹುಟ್ಟಿ
ಅವಳ ಮನಸ್ಸು ಅಸ್ಥಿರವಾಗುತ ಬಂದಿತ್ತು ಅದನ್ನೆಲ್ಲಾ ತನ್ನೊಳು ತಾನೇ ಸಹಿಸಿ
ಕೊಳ್ಳಬೇಕೆಂದು ಸಂಕಲ್ಪಿಸಿಕೊಂಡಿದ್ದಳು.
೨೦---------------------ಮಾಲತೀ AAAAAAAAAAAAAAAAAAAAAAA
ನಡೆದ ಸಮಾಚಾರಗಳಾವದನ್ನೂ ಮಾಲತಿಯು ಅರಿಯಳು. ಸಣ್ಣ
ದಾದಾ ಪ್ರಪಂಚದಲ್ಲಿ ಅವಳಿಗೆ ಸಲುವಾಗಿ ನಡೆದಿದ್ದ ರಾಜ್ಯ ಪರಿವರ್ತನೆಗಳಾ
ವದನ್ನೂ ಅವಳು ಅರಿಯಳು. ಅದುಕಾರಣ ಅವಳ ನಗುಮೊಗದಲ್ಲಾವಾ
ಗಲೂ ನಗುವು ತುಂಬಿದ್ದಿತು. ಆದರೆ ಆ ಮನೆಯ ಅಂಧಕಾರವು ಒಂದೊಂದು
ತಡವೆ ಆ ಜೊನ್ನೆ ಜೊಂಪಲ ಬೊಂಬೆಯನ್ನೂ ಸ್ಪರ್ಶ ಮಾಡುತ್ತಿರುವುದು.
ಶೋಧನೆಯು ಮೊದಲಿನಂತೆ ತೋಟದಲ್ಲಿ ಮಾಲತಿಯೊಡನೆ ಉಲ್ಲಾಸದಿಂದ
ತಿರುಗಾಡಳು. ಮೊದಲಿನಂತೆ ಕಣ್ಣು ಮುಚ್ಚಾಲೆ ಆಟದಲ್ಲಿ ಗಂಡನಹಿಂದೆ
ಹೋಗಿ ಬಚ್ಚಿಟ್ಟುಕೊಂಡು ಮಾಲತಿಯನ್ನು ಸೋಲಿಸುತ್ತಿರಲಿಲ್ಲ, ಮಾಲ
ತಿಯ ಹೂವುಗಳನ್ನು ಹರಿದು ಕಿತ್ತು ಅವಳನ್ನು ಅಳುವಹಾಗೆ ಮಾಡುತ್ತಿರ
ಲಿಲ್ಲ, ಕದವಿನ ಹಿಂದೆ ಮೂಲೆಯಲ್ಲಿ ಅವಿತುಕೊಂಡು ಮಾಲತಿಯನ್ನು ಹೆದ
ರಿಸುತ್ತಿರಲಿಲ್ಲ, ರಾತ್ರಿ ಗಂಡನ ಸಂಗಡ ಮಾತಾಡಿದುದನ್ನೆಲ್ಲಾ ಮಾಲತಿಗೆ
ಹೇಳಿ ಅವಳನ್ನು ನಗುಸುತ್ತಿರಲಿಲ್ಲ. ಶೋಭನೆಯು ಬಹಳ ವ್ಯಸನಾಕ್ರಾಂತೆ.
ಶೋಭನೆಯು ತಾನುಹುಡುಗಾಟವನ್ನು ಮಾಡುವುದಿಲ್ಲವೆಂದು ಹೇಳುವಳು.
ಮಾಲತಿಯು ಮಾತ್ರ ಚಿರಕಾಲವೂ ಹುಡುಗಿಯಾಗಿರಬೇಕೆ? ಚಿರಕಾ
ಲವೂ ಹೀಗೇವೇ ಆಡಿಕೊಂಡಿರಬೇಕೆ? ಶೋಧನೆಯು ಹೇಳಿದ ಮಾತಿನ
ಅರ್ಥವಾವದೂ ಮಾಲತಿಗೆ ಗೊತ್ತಾಗಲಿಲ್ಲ. ಮಾಲತಿಯು ಮಾತಿಲ್ಲದೆ,
'ನಾನಾವಾಗಲೂ ನಗುಕೊಡದೆ ? ಅಡಬಾರದೆ ? ಹುಡುಗರು ಹೊರ್ತು
ಮತ್ತಾರೂ ನಗುಕೂಡದೆ ? ಆಡಬಾರದೆ? ಮದುವೆಯಾದರೆ ನಾನೂ ಅವಾ
ಗಲೂ ನಗುಬಾರದೆ?' ಎಂದು ಮುಂತಾಗಿ ಯೋಚಿಸಿಕೊಳ್ಳುವಳು. ಮಾಲ
ತಿಯು ಏನನ್ನೂ ಅರಿಯದೆ, ಹುಡುಗಾಟ ಮಾಡುತ್ತ ಶೋಭನೆಯನ್ನು
ನಗುವಹಾಗೆ ಮಾಡಲು ಯತ್ನಿಸುವಳು. ಅವಳಿಗೆ ಇಷ್ಟವಾದ ಹೂವುಗ
ಳನ್ನು ತಂದು ಅವಳ ಮೇಲೆ ಹಾಕುವಳು. ಅದರಿಂದಲೂ ಶೋಭನೆಯ
ವ್ಯಸನವುಳ್ಳ ಮುಖವು ಪ್ರಫುಲ್ಲವಾಗದುದನ್ನು ಕಂಡು, ಆಗ ಮನೆಯ
ಅಂಧಕಾರದ ಛಾಯೆಯು ಅವಳ ಹೃದಯವನ್ನು ಸ್ಪರ್ಶ ಮಾಡುವುದು.
ಶೋಧನೆಯು ನಿಜವಾಗಿಯೂ ದೊಡ್ಡಮನುಷ್ಯೆಯಾಗಿ ಆಡದೆಲೂ ನಗು
ಗೆಲೂ ಇರುವುದನ್ನು ಕಂಡು ಮಾಲತಿಯೂ ವ್ಯಸನಾಕಾಂತೆಯಾಗಿ ಅಳು
ಎರಡನೆಯ ಪರಿಚ್ಛೇದ
ವುದಕ್ಕೆ ಬೇರೆ ಸ್ಥಳಕ್ಕೆ ಹೊರಟುಹೋಗುವಳು. ನದಿಯ ತೀರದಲ್ಲಿ ಒಬ್ಬ
ಳೇ ತಿರುಗಾಡುತ್ತ ಹೊತ್ತಾದಬಳಿಕ ಮನೆಗೆ ಬರುವಳು. ಬಂದು ರಮೇ
ಶನು ಸಂತೋಷವಾಗಿದ್ದರೆ ಆನಂದಪಡುವಳು. ಹಾಗಿಲ್ಲದೆ ರಮೇಶನು
ವಿಷಣ್ಣನಾಗಿದ್ದರೆ ಸ್ತಂಭಿತೆಯಾಗಿ ಯೋಚನಾಕಾಂತೆಯಾಗುವಳು. ದೊ
ಟ್ಟವರಾಗಿ ಸಂಸಾರಿಗಳಾದ ಬಳಿಕ ಗಂಭೀರದಿಂದ ವ್ಯಸನಪಡತಕ್ಕವರು.
ಹೆಂಗಸರೆಂದೂ ಗಂಡಸರುಹಾಗೆ ವ್ಯಸನಪಡತಕ್ಕವರಲ್ಲವೆಂದೂ ಮಾಲತಿಯು
ತಿಳಿದಿದ್ದಳು. ಏಕೆಂದರೆ, ಶೋಭನೆಯು ಹಾಗಿರಬೇಕೆಂದು ಹೇಳಿದ್ದಳು. ಶೋ
ಭನೆಯೂ ಹಾಗಿದ್ದುದನ್ನು ಮಾಲತಿಯುಕಣ್ಣಾರೆ ನೋಡಿದ್ದಳು. ಹೀಗಿರುತ್ತ
ಗಂಡಸಾದ ರಮೇಶನಿಗೆ ವ್ಯಸನವೇಕೆ? ಅವನು ಒಂದೊಂದು ತಡವೆ ವ್ಯಸನ
ದಿಂದ ಊಟಮಾಡದೆ ಮಲಗಿಬಿಡುವನು, ಅದನ್ನು ನೋಡಿ ಮಾಲತಿಯೂ
ಊಟವಿಲ್ಲದೆ ಯೋಚನೆಯಿಂದ ಮಲಗಿಬಿಡುವಳು. ರಮೇಶನು ಚೆನ್ನಾಗಿ
ಉಲ್ಲಾಸದಿಂದಿದ್ದರೆ ಅವನಸಂಗಡ ಮಾತಾಡುವಳು, ವ್ಯಸನವುಳ್ಳವನಾಗಿದ್ದರೆ
ಅವನ ಸಂಗಡ ಮಾತಾಡುವುದಕ್ಕೆ ಸಾಹಸವುಳ್ಳವಳಾಗುತ್ತಿರಲಿಲ್ಲ. ಒಂದು
ದಿನ ರಾತ್ರಿ ಮಲಗಿರುವಾಗ ಮಾಲತಿಯು ಮನಸ್ಸಿನಲ್ಲಿ, ಅನು ವ್ಯಸನ
ವುಳ್ಳವನಾಗಿದ್ದರೆ ಅದಕ್ಕೆ ಕಾರಣವನ್ನು ವಿಚಾರಿಸಬೇಕೆಂದು ಯೋಚಿಸಿ
ಕೊಂಡಳು. ಮಾರನೆಯ ದಿನ ರಮೇಶನು ವಿಷಣ್ಣನಾಗಿದ್ದನು. ಆದರೂ
ಮಾಲತಿಯು ಅದಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ ಧೈರ್ಯವುಳ್ಳವಳಾ
ಗಲಿಲ್ಲ. ಹೀಗೆ ಅನೇಕತಡವೆ ವ್ಯಸನಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ
ಹೋಗಿ ರಮೇಶನನ್ನು ಕೇಳಲಾಗದೆ ಹಿಂದಿರುಗಿ ಬಂದು ಮನೆಯನ್ನು ಬಿಟ್ಟು
ನದಿಯ ತೀರಕ್ಕೆ ಹೋಗಿ ಅಳುತ್ತ ಕುಳಿತಿರುವಳು. ಒಂದು ದಿನ ಮಾಲ
ತಿಯು ನದಿಯ ತೀರದಲ್ಲಿ ಕುಳಿತು ಅಳುತಿರುವ ಸಮಯದಲ್ಲಿ ರಮೇಶನು
ಹೋಗಿ ಆಶ್ಚರ್ಯದಿಂದ ವ್ಯಥೆಪಟ್ಟು ಮೆಲ್ಲ ಮೆಲ್ಲನೆ ಅವಳಿದ್ದೆಡೆ ಹೋಗಿ
ಹಿಂದೆ ನಿಂತು ಅವಳ ಭುಜದಮೇಲೆ ಕೈಯಿಟ್ಟು, 'ಇದೇನು!ಮಾಲತಿ! ಆರೂ
ಇಲ್ಲದ ಸ್ಥಳದಲ್ಲಿ ಒಬ್ಬಳೇ ಕುಳಿತು ಅಳುತ್ತಿ?' ಎಂದು ಕೇಳಿದನು. ಮಾಲ
ತಿಯು ಧ್ವನಿಯಿಂದ ಗುರ್ತಿಸಿ ಹಿಂದಿರಿಗಿ ನೋಡಿದಳು. ಅವಳಿಗೆ ಹೃದಯದ
ವೇಗವು ತಡಿಯಲಿಲ್ಲ. ಕಣ್ಣೀರು ಧಾರೆಯಾಗಿ ಹರಿಯಿತು. ತಾನು ಏಕೆ ಅಳು
೨೨--------------------------ಮಾಲತಿ------------------------------
ತಿದ್ದಳೋ ಅದನ್ನು ಮಾಲತಿಯು ಅರಿತಿರಲಿಲ್ಲ. ಅಂಥವಳು ರಮೇಶನಿಗೆ
ಹೇಗೆ ತಿಳಿಯ ಹೇಳಬಳು? ರಮೇಶನ ಮೆಲ್ಲ ಮೆಲ್ಲನೆ ಕಣ್ಣೀರನ್ನೊ
ರಸಿ, ಪುನಃ, ' ಮಾಲತಿ! ಅಳುವುದೇಕೆ? ಶೋಧನೆಯು ನಿನ್ನನ್ನು ಹೆದರಿಸಿ
ಅಳುಸಿದಳೆ?” ಎಂದು ಕೇಳಿದನು.
ಶೋಭನೆಯು ಮಾಲತಿಯನ್ನು ಹೆದರಿಸಿ ಅಳುಸುತ್ತಿದ್ದುದನ್ನು
ನೋಡಿದ್ದನು. ಮಾಲತಿಯು ಕಣ್ಣೀರ ಪ್ರವಾಹವನ್ನು ಕಷ್ಟದಿಂದ ನಿಲ್ಲಿಸಿ,
' ಇಲ್ಲ ಅವಳು ಇನ್ನು ಮೇಲೆ ಹೆದರಿಸುವುದಿಲ್ಲವಂತೆ ' ಎಂದು ವಿಷಾದ
ದಿಂದ ಭಗ್ನವಾದಸ್ವರದಿಂದ ಹೇಳುತ್ತಲೇ ರಮೇಶನು ಚಮಕಿತನಾಗಿ, 'ಮಾ
ಲತಿ! ಹಾಗಾದರೆ, ನಿನಗೆ ದುಃಖವೇಕೆ ? ' ಎಂದು ಕೇಳಿದನು ಮಾಲತಿಯು,
'ಶೋಧನೆಯು ಹೆದರಿಸುವುದಿಲ್ಲವೆಂದು ಹೇಳಿದುದರಿಂದಲೇ ವ್ಯಸನ'ವೆಂದಳು.
ರಮೇಶನು, ' ಹಾಗಾದರೆ, ನಡೆ, ನಿನ್ನನ್ನು ಮೊದಲಿನಂತೆ ಓಡಾಡಿಸುತ್ತ ಹೆದ
ರಿಸುತ್ತಿರಬೇಕೆಂದು ಶೋಭನೆಗೆ ಹೇಳುತಿರು ' ಎಂದು ಹೇಳಿದನು.
ಮಾಲತಿಯು ಏಳಲಿಲ್ಲ-ನಗಲಿಲ್ಲ. ವಿಷಣ್ಣ ಮನಸ್ಕಳಾಗಿ ಕುಳಿತು
ಕೊಂಡು, ರಮೇಶನ ದುಃಖಕ್ಕೆ ಕಾರಣವನ್ನು ವಿಚಾರಿಸುವ ಬಗೆಯನ್ನು
ಕುರಿತು ಯೋಚಿಸುತ್ತಿದ್ದಳು. ರಮೇಶನು ಪುನಃ, 'ಮಾಲತಿ! ಶೋಭನೆಯು
ಹೆದರಿಸುವುದಿಲ್ಲವೆಂದು ನಿನಗೆ ದುಃಖವೊ ? ' ಎಂದು ಕೇಳಿದನು. ಮಾಲ
ತಿಯು ಸಮಯವು ಸಿಕ್ಕಿತೆಂದು, ಮೆಲ್ಲ ಮೆಲ್ಲನೆ ' ದುಃಖಕ್ಕೆ ಮತ್ತೊಂದು
ಕಾರಣವುಂಟು. ಅಣ್ಣ ! ನಿನಗೇನಾಗಿದೆ ? ಮೊದಲಿನಂತೆ ನೀನು ಮಾತಾ
ಡುವುದಿಲ್ಲ. ನಾನೇನು ತಪ್ಪನ್ನು ಮಾಡಿದೆನು ? ” ಎಂದು ಕೇಳಿದಳು.
ಮಾಲತಿಯು ಕೇಳಿದ ಸಹಜವಾದ ಸರಳ ಪ್ರಶ್ನೆಯಿಂದ ರಮೇಶನ
ಕಣ್ಣುಗಳಲ್ಲಿ ನೀರು ತುಂಬಿ ಗಲ್ಲದ ಮೇಲಿಂದ ಕಂಬನಿಯು ಹರಿದುಬಂದು
ಮಾಲತಿಯ ಕೈಮೇಲೆ ಬಿದ್ದಿತು ! ಮಾಲತಿಯ ಹೃದಯವು ಸಂಭಿತವಾಗಿ
ಮುಖವು ಬಾಡಿತು. ಮಾಲತಿಯು ತಾನೇಏನೋ ತಪ್ಪನ್ನು ಮಾಡಿರಬೇ
ಕೆಂದೂ ಇಲ್ಲವಾಗಿದ್ದರೆ ಅವನ ಕಣ್ಣುಗಳಲ್ಲಿ ನೀರು ತುಂಬಲೇಕೆಂದೂ
ಯೋಚಿಸಿ, ಮಾಲತಿಯು ಸಂಕೋಚವನ್ನು ಬಿಟ್ಟು, ವ್ಯಾಕುಲದಿಂದ,
'ಅಣ್ಣ ! ನಾನೇನು ತಪ್ಪನ್ನು ಮಾಡಿದೆನು ? ಹೇಳು. ನಿನಗೆ ನನ್ನ ಮೇಲೆ
೨೩--------------ಎರಡನೆಯ ಪರಿಚ್ಛೇದ----------------------------- ೨೩
ಕೋಪವೆ ? ಕೋಪಿಸಿಕೊಳ್ಳದೆ ನನ್ನ ತಪ್ಪನ್ನು ಹೇಳು ' ಎಂದು ಕೇಳಿದಳು,
ಯುವಕನು ಅವಳ ವ್ಯಾಕುಲತೆಯನ್ನು ನೋಡಿ ಕಳವಳಗೊಂಡು, " ಇಲ್ಲ
ಮಾಲತಿ ! ನೀನಾವ ತಪ್ಪನ್ನೂ ಮಾಡಿಲ್ಲ' ಎಂದು ಹೇಳಿದನು.
ಮಾಲತಿ-ಹಾಗಾದರೆ ಮೊದಲಿನಂತೆ ನೀನೆನ್ನ ಸಂಗಡ ಮಾತಾಡು
ವುದಿಲ್ಲವೇಕೆ? ಮಾತಾಡುತ್ತಿದ್ದ ಹಾಗೆ ನಿನ್ನ ಕಣ್ಣುಗಳಲ್ಲಿ ನೀರು ಬಂದು
ದಕ್ಕೆ ಕಾರಣವೇನು?
ಮನುಷ್ಯನು ಸುಖದಲ್ಲಿ ಮಾತ್ರ ನಗುವನೆಂದು ಹೇಳುವುದಕ್ಕಾಗದು.
ಅಳಿಸಿಹೋಗುವಾಗಲೂ ದೀಪದ ಉರಿಯು ಹೆಚ್ಚಾಗಿ ಜ್ವಲಿಸುವುದು? ಅಂಧ
ಕಾರದಲ್ಲಿ ಮಿಂಚುಮಿನುಗುವುದು; ಇಂದು ಯುವಕನು ಹುಡಗಿಯ
ಮಾತಿಗೆ ದುಃಖಪಟ್ಟು ಆ ದುಃಖಲ್ಲಿಯೂ ನಕ್ಕು, ' ಮಾಲತಿ! ನಿನ್ನಮೇಲೆ
ಕೋಪಮಾಡುವುದಕ್ಕಾವಾಗಲಾದರೂ ಸಂಭವವುಂಟೆ? ಅಂಥಾ ಸಂಭವವಿಲ್ಲ.
ನನಗೆ ಮೊದಲಿನ ಭಾವವು ಇಲ್ಲದುದಕ್ಕೆ ಕಾರಣವನ್ನೂ ಕಠೋರವಾದೀ
ಕಣ್ಣುಗಳಿಂದ ನೀರು ಬಂದುಕ್ಕೆ ಆರಣವನ್ನೂ ನೀನು ತಿಳಿಯಬಲ್ಲೆಯಾ?
ನಿನ್ನಂಥ ಅರಿಯದ ಚಿಕ್ಕ ಹುಡುಗಿಯು ಅದನ್ನೆಲ್ಲಾ ಹೇಗೆ ತಿಳಿದುಕೊಳ್ಳ
ಬಲ್ಲೆ? ಮಾಲತಿ! ' ಎಂದು ಹೇಳಿದನು.
ರಮೇಶನು ಹೇಳಿದುದು ನಿಜ-ಮಾಲತಿಯು ಇಪ್ಪತ್ತು ವರ್ಷದವಳಾ
ಗಿದ್ದರೂ ಇನ್ನೂ ಬಾಲೆ. ಮನಸ್ಸಿನ ಸರಳತೆಗೆ ಸಲುವಾಗಿ ಇನ್ನೂ ಬಾಲೆ.
ಬಾಲೆಯಾಗಿದ್ದರೂ ಮಾಲತಿಯು ಹೆಂಗಸು. ಹೆಂಗಸರು ದುಃಖಿಗಳೊಂದಿಗೆ
ದುಃಖಿಗಳಾಗುವರು. ವ್ಯಥೆಪಡುವವರ ಸಂಗಡ ವ್ಯಥೆಪಡದಿರರು. ಮತ್ತಾವ
ದನ್ನು ತಿಳಿಯದಿದ್ದರೂ ಪರರ ದುಃಖವನ್ನು ತಿಳಿಯಬೇಕಾದಾಗ ಅವರು
ಹುಡುಗಿಯರಾಗಿರರು. ಮಿಕ್ಕ ಎಲ್ಲಾ ವಿಷಯಗಳಲ್ಲಿಯೂ ಅವರು ಚಿಕ್ಕವ
ರಾಗಿದ್ದರೂ ಅನ್ಯರ ಕಷ್ಟವನ್ನು ತಿಳಿದುಕೊಳ್ಳುವುದರಲ್ಲಿ ನೂರಾರು ವರ್ಷದ
ಮುದುಕರೂ ಅವರಿಗೆ ಸಮನಾಗರು. ಹುಡುಗಿಯಾಗಿದ್ದ ಮಾಲತಿಯು
ಪ್ರೌಢಯಂತೆ, 'ಅಣ್ಣ ನಿನ್ನ ಮಾತನ್ನು ನಾನು ತಿಳಿಯಲಾರೆನೆ? ಹುಡುಗಿಯೆ?
ಈಗ್ಗೆ ಮೂರು ವರ್ಷಕ್ಕೆ ಹಿಂದೆ ನನ್ನನ್ನು ದೊಡ್ಡವಳೆಂದು ಹೇಳಿ ನಿನ್ನ
೨೪---------------------ಮಾಲತೀ----------------------------------
ಮನಸ್ಸಿನಲ್ಲಿದ್ದ ಮಾತನ್ನು ನನಗೆ ಹೇಳಲಿಲ್ಲವೆ ? ಆಗಿನಿಗಿಂತಲೂ ಈಗ
ದೊಡ್ಡವಳಲ್ಲವೆ? ' ಎಂದಳು.
ಭೂಮಂಡಲದಲ್ಲಿ ದುಃಖಿಗಳಾದವರಲ್ಲಿ ನಿಜವಾಗಿ ದುಃಖಿಸುವವರು
ಅತಿ ದುರ್ಲಭ-ಒಂದು ಸುಂದರವಾದ ಗುಲಾಬಿಹೂವನ್ನು ನೋಡಿದರೆ
ಅದನ್ನು ಪ್ರಯತ್ನ ಪೂರ್ವಕವಾಗಿ ಗ್ರಹಣಮಾಡದಿರುವವರಾರು? ಅದನ್ನು
ಪ್ರೀತಿಸಿದಿರುವವರಾರು? ಅದರಿಂದ ತೃಪ್ತರಾಗದಿರುವವರಾರು? ಆದರೆ
ಆ ಗುಲಾಬಿಹೂವು ಒಣಗಿದರೆ ಒತ್ತಡವೆಯಾದರೂ ಮಮತೆಯಿಂದ ಅದನ್ನು
ನೋಡುವವರಾರು? ಎಷ್ಟು ಮಂದಿ ಅದನ್ನು ನೋಡಿ ಅಕೃತ್ರಿಮ ಶೋಕಾ
ಶ್ರುವನ್ನು ಬಿಡುವರು? ಹಾಗೆಶೋಕಾಶ್ರುವನ್ನು ಬಿಡುವವರಿಲ್ಲದುದರಿಂದಲೇ
ಅಕೃತ್ರಿ ಮವಾದ ಅಶ್ರುಜಲಕ್ಕೆ ಅಷ್ಟೊಂದು ಆದರ-ಪ್ರಪಂಚದಲ್ಲಿ ಸ್ವಾರ್ಥ
ವಿಲ್ಲದ ಪ್ರೀತಿ ವಿಶ್ವಾಸಗಳಿಗೆ ಅಷ್ಟೊಂದು ಹೆಚ್ಚು ಬೆಲೆ. ಜನರು ಸ್ವರ್ಗವ
ನ್ನಾದರೂ ತುಚ್ಛವಾಗಿ ಎಣಿಸಿ ಅಂಥಾ ಪ್ರೀತಿಯನ್ನು ಹೊಂದಲು ಇಷ್ಟವು
ಳ್ಳವರಾಗಿರುವರು-ಅದರಿಂದ ಮುಗ್ಧರಾಗುತ್ತಾರೆ-ರಮೇಶನೂ ಮನುಷ್ಯ--
ಮನುಷ್ಯನಿಗೆ ಸಹಜವಾದಾ ದುರ್ಬಲತೆಗೆ ರಮೇಶನು ಹೊರಗಾಗಿರಲಿಲ್ಲ--
ಅವನ ಹೃದಯದ ಕವಾಟವು ತಾನಾಗಿಯೇ ತೆರಕೊಂಡಿತು--ದುಃಖಿಯಲ್ಲಿ
ದುಃಖಿಸುವ ದುಃಖಿಯನ್ನು ಹೊಂದಲು ಅವನಹೃದಯವು ತೆರಿಯಿತು ಅವನು,
' ಮಾಲತಿ! ನನ್ನ ದುಃಖವನ್ನು ಕುರಿತು ಕೇಳುವಿಯಾ ? ನನಗಾವದರಿಂದ
ಸುಖವೋ ಅದರಿಂದಲೇ ನನಗೆ ದುಃಖ! ಶೋಭನೆಯು ತನ್ನ ಸ್ವಂತ ಕಲ್ಪ
ನಾತಿಶಯದಿಂದ ತಾನೂ ಅಸುಖಿಯಾಗಿ ನನ್ನನ್ನೂ ದುಃಖಿಯಾಗಿ ಮಾಡಿದ್ದಾ
ಳೆ' ಎಂದು ಹೇಳಿ, ಬಳಿಕ ಶೋಭನೆಗೆ ಉಂಟಾಗಿದ್ದ ಸಂದೇಹದ ವೃತ್ತಾಂತ
ವನ್ನು ಸಂಕ್ಷೇಪವಾಗಿ ಹೇಳಿದನು.
ಮಾಲತಿಯು ಮೌನವಾಗಿ ಕಣ್ಣಿನವೆ ಇಕ್ಕದೆ ಎಲ್ಲವನ್ನೂ ಕೇಳಿ
ದಳು- ವುನಃ ಅವಳು ಮಾಲತಿಯಾಗಿರಲಿಲ್ಲ ಅವಳ ಬಾಡಿದ ತುಟಿಗಳು
ತಲತಲ ಅದುರಿದುವು--ಯಾತನಾಮಯವಾದ ದೈನ್ಯದೃಷ್ಟಿಯು ಶೂನ್ಯವಾದ
ಅಂತರಿಕ್ಷದಲ್ಲಿ ಸೇರಿತು-ಮಾಲತಿಯು ನಿಂತಹಾಗೆ ಅತ್ತಳು. ಯುವ
ಕನೂ ಅಳುವುದಕ್ಕೆ ತೊಡಗಿದನು. ಸಂಧ್ಯಾಕಾಲದಲ್ಲಿ ಸುಖಮಯಿ
-------------------ಮೂರನೆಯ ಪರಿಚ್ಛೇದ-----------------------೨೫
ನದಿಯ ವಕ್ಷದಲ್ಲಿ ಅವರಿಬ್ಬರ ಕಣ್ಣಿನ ಪ್ರವಾಹವು ಶಬ್ದವಿಲ್ಲದೆ ಸೇರಿ
ಕೊಂಡಿತು. ಆಕಾಶದಲ್ಲಿ ಚಂದ್ರನಿರಲಿಲ್ಲ. ನೂರಾರು ನಕ್ಷತ್ರಗಳು
ಎದ್ದುವು. ಅವು ಆ ದುಃಖವನ್ನು ಸ್ವಲ್ಪವೂ ಅರಿಯವು. ಸ್ವಲ್ಪಸ್ವಲ್ಪ
ಮೃದುವಾಗಿ ನಗುತ್ತಿದ್ದುವು. ನಗದೆ ಮತ್ತೇನನ್ನು ಮಾಡಬಲ್ಲವು ? ಅವು
ಗಳಲ್ಲಿ ಮಮತೆಯುಂಟೆಂದು ಎದುರುನೋಡುವವರಾರು? ಅವು ಅನಂತ
ಕಾಲದವರೆಗೂ ನಗುವುದಕ್ಕೋಸ್ಕರವೇ ಹುಟ್ಟಿವೆ. ಆದುದರಿಂದ ಅವು
ಮಮತೆಯನ್ನು ತೋರದಿದ್ದರೆ ಆರ ಹೃದಯದಲ್ಲಿ ನೋವಾಗುವುದಿಲ್ಲ.
ಆದರೆ ಪ್ರಶಸ್ತವಾದಾ ಸುಖಮಯಿ ನದಿಯ ತೀರದಲ್ಲಿ ಮತ್ತಾರು ನರ
ಪ್ರಾಣಿಯೂ ಇಲ್ಲದಿದ್ದುದು ಕ್ಷೇಮ. ಅಲ್ಲಿ ಅವರಿಬ್ಬರ ಕಣ್ಣೀರನ್ನು
ನೋಡಿ ನಗುವುದಕ್ಕಾಗಲಿ ಅವರು ಸಾಯುವುದನ್ನು ನೋಡಿ ಹಾಸ್ಯಮಾಡು
ವುದಕ್ಕಾಗಲೀ ಅವರ ವ್ಯಾಕುಲವನ್ನು ನೋಡಿ ಸಂತೋಷಿಸುವುದಕ್ಕಾಗಲೀ
ಆರೂ ಇರಲಿಲ್ಲ. ಅವರಿಬ್ಬರೇ ನಿರ್ವಿಘ್ನವಾಗಿ ಅಳುವುದಕ್ಕೆ ತೊಡಗಿದರು.
ಹುಡುಗಿಯು ಅಳುತಳುತ, ' ಅಣ್ಣ ! ಏನನ್ನು ಹೇಳಿದೆ? ಶೋಧನೆಯು
ತನಗಿಂತಲೂ ನನ್ನನ್ನು ನೀನು ಹೆಚ್ಚು ಪ್ರೀತಿಸುತ್ತಿಯೆಂದು ತಿಳಿದುಕೊಂಡಿ
ದ್ದಾಳೆಯೆ? ಹಾಗಾದರೆ, ನಿಮ್ಮಿಬ್ಬರ ದುಃಖಕ್ಕೂ ನಾನೇ ಕಾರಣ ! ನನ
ಗೋಸ್ಕರವಾಗಿಯೇ ನಿನ್ನ ಪ್ರಫುಲ್ಲವಾದ ಮುಖವು ಮಲಿನವಾಗಿದೆ. ಶೋಭ
ನೆಯ ನಗವೂ ಅಳಿಸಿಹೋಯಿತು, ನಿನ್ನ ಅಶಾಂತಿಗೆ ನಾನೇಮೂಲ! ಅಣ್ಣ
ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಖಿಯಾಗುವೆ?' ಎಂದು
ಹೇಳಿದಳು.
ಮಾಲತಿಯು ನಿಸ್ಸ್ವಾರ್ಥವಾಗಿ ನುಡಿದಾ ನುಡಿಗಳಿಂದ ಯುವಕನ
ಹೃದಯವು ಕಂಪಿತವಾಯಿತು. ಅವಳನ್ನು ಹೇಗೆ ಸಮಾಧಾನಗೊಳಿಸ
ಬೇಕೋ ಅದನ್ನರಿಯದೆ ಯುವಕನು, 'ಮಾಲತಿ! ನನ್ನ ಅಸುಖಕ್ಕೆ ನೀನು
ಮೂಲವೆ? ಇಲ್ಲ, ಮಾಲತಿ ! ಆಕಾರಣವಾಗಿ ನನಗೆ--
ಮಾಲತಿಯು ಮುಂದಿನ ಮಾತನ್ನು ಹೇಳಗೊಡಿಸದೆ, ' ಇಲ್ಲ, ಅಣ್ಣ!
ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಖಿಯಾಗುವೆ? ನಾನು
ಸತ್ತರೆ ನಿನ್ನ ದುಃಖಮಯವಾದ ಯಾತನೆಯು ಕೊನೆಗಾಣಲಾರದೆ ಅಣ್ಣ?"
ಎಂದು ಹೇಳಿದಳು,
೨೭----------------------------ಮಾಲತಿ--------------------------------
ಸಕಲ ವಿಧವಾದ ಪ್ರೀತಿಗಳಿಗೂ ಮರ್ಮಾಂತಿಕಭಾವವು ಒಂದೇ
ಪ್ರಕಾರವೆ? ಪ್ರಿಯಜನರ ಸುಖಕ್ಕೋಸ್ಕರ ಸಾಯ್ಬೇಕೆಂಬ ಇಚ್ಛೆಯು
ಪ್ರೀತಿಗೆ ಸ್ವಾಭಾವಿಕ ಉಚ್ಚ್ವಾಸವೆ? ಮಾಲತಿಯ ಮಾತನ್ನು ಕೇಳಿ ರಮೇ
ಶನು ಮೌನವಾಗಿ ಅಳುವುದಕ್ಕೆ ತೊಡಿಗಿದನು ಅವಳ ಮನದ ಭಾವವನ್ನು
ತಿಳಿದುಕೊಂಡವನಾಗಿ ಅವನಾವ ಮಾತಾಡ ವುದಕ್ಕೆ ಶಕ್ತನಾಗಲಿಲ್ಲ. ಮಾ
ಲತಿಯ ಮತ್ತೇನನ್ನೂ ಹೇಳಲಿಲ್ಲ. ತಾನು ಮನಸ್ಸಿನಲ್ಲಿ ಮಾಡಿಕೊಂಡ
ಸಂಕಲ್ಪವನ್ನು ಮನಸ್ಸಿನಲ್ಲಿಯೇ ಇಟ್ಟುಕೊ೦ಡಳು, ಮೌನದಲ್ಲಿ ಬಹಳ
ಹೊತ್ತು ಕಳೆದು ಹೊಯಿತು. ಇಬ್ಬರ ಮನಸ್ಸಿನಲ್ಲಿಯೂ ಎಷ್ಟೋ ಮಾತು
ಗಳು ನಡೆದು ಹೋದುವು. ಅದರೆ ಇಬ್ಬರಲ್ಲಾರಿಗೂ ಅವುಗಳನ್ನು ಹೊರಸ
ಡಿಸುವುದಕ್ಕೆ ಪ್ರವೃತ್ತಿಯುಂಟಾಗಲಿಲ್ಲ. ಇಬ್ಬರೂ ಗಭೀರ ಚಿಂತೆಯಲ್ಲಿ
ಮಗ್ನರಾಗಿ ತಾವುತಾವು ಅಲ್ಲಿ ನಿಂತಿರುವುದನ್ನೂ ಮರೆತರು. ಯುವಕನು
ತಾನೊಬ್ಬನೇ ಅಲ್ಲಿರುವವನೆಂಬ ಭಾವದಿಂದ, ತನ್ನೊಳುತಾನೇ, " ಸರ್ವಾ೦
ತಃಕರಣಳಿಂದಾರನ್ನು ಪ್ರೀತಿಸುತಿದ್ದೇನೆ ಅಂಥವಳು ಅಪನಂಬಿಕೆ ಪಡು
ವುದು ಅದಕ್ಕೆ ತನ್ನ ಪ್ರತಿಕಾರವೆ? ಮರ್ಮಾಂತಿಕವಾದೀ ಅಘಾತವೆ,
ಆ ಪ್ರೀತಿಗೆ ತಕ್ಕ ಪುರಸ್ಕಾರ ” ಎಂದು ಹೇಳಿಕೊಂಡನು. ಈ ಮಾತಿನಿಂದ
ಮಾಲತಿಯು ಎಚ್ಚರಗೊಂಡು 'ಅಣ್ಣ ! ಏನನ್ನು ಹೇಳಿದೆ, ನೀನು ಶೋಧನೆ
ಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೆ ಎಂದು ಅವಳು ನಂಬಿದ್ದಾಳಯೆ?'
ಎಂದಳು.
ಯುವಕನು ಏನೊಂದುತ್ತರವನ್ನೂ ಕೊಡಲಿಲ್ಲ. ಮಾತಿಯು
ಪುನಃ ಶೋಧನೆಯು ಮನಸ್ಸಿನಲ್ಲಿ ನಂಬಿರುವುದು, ಅವಳಿಗಿಂತಲೂ ನನ್ನನ್ನು
ಹೆಚ್ಚಾಗಿ ಪ್ರೀತಿಸುತ್ತಿಯೆಂದಲ್ಲವೇ?' ಎಂದಳು. ಯಂತ್ರದಂತೆ ನಿಂತಿದ್ದ
ಯುವಕನ ಬಾಯಿಂದ " ಆಹುದು " ಎಂಬ ಮಾತು ಹೊರಟಿತು.
ಇದ್ದ ಹಾಗೆ ಆ ಸಮಯಕ್ಕೆ ಸರಿಯಾಗಿ ಶೋಧನೆಯು ಹಿಂದೆ ಬಂದು
ನಿಂತಳು. ಆಗ ಮಾಲತಿಯು ಹೇಳಿದ ಕಥೆಯ ನನ್ನನ್ನು ನೀನು ಹೆಚ್ಚಾಗಿ
ಪ್ರೀತಿಸುತ್ತಿಯೆಂದಲ್ಲವೆ?' ಎಂಬ ಪ್ರಶ್ನೆ ಅದಕ್ಕೆ ಯುವಕನು ಕೊಟ್ಟ
ಕಡೆಯ " ಅಹುದು " ಎಂಬ ಉತ್ತರವೂ ಅವಳ ಕಿವಿಗೆ ಬಿದ್ದುವು. ಅದ
ರಲ್ಲಿ ಮತ್ತೇನೂ ತಪ್ಪಿಲ್ಲ, ಅನುಮಾನವೂ ಇಲ್ಲ, ಆಗವಳ ಕಣ್ಣು
------------------ಮೂರನೆಯ ಪರಿಚ್ಛೇದ-------------------------೨೭
ಗಳಿಗೂ ಕಿವಿಗಳಿಗೂ ಮಧ್ಯೆ ಇದ್ದ ವಿವಾದವು ಹರಿಯಿತು. ಅದೆಲ್ಲಾ ಅವಳು
ಸುಳ್ಳಾಗಿ ಕಲ್ಪಿಸಿಕೊಂಡುದುದಲ್ಲ. ಮಾಲತಿಗೂ ಮೇಳಸಿಗೂ ನಡೆದ
ಪ್ರೀತಿಯ ಸಭಾಸಣೆಯನ್ನು ಸ್ವಂತವಾಗಿ ತನ್ನ ಕಿವಿಗಳಿಂದಲೇ ಕೇಳಿದಳು.
ಶೋಭನೆಯು ಉಲ್ಬಣವಾದ ನೆದರೆಯಿಂದ ಜ್ಞಾನವಿಲ್ಲದವಳಂತಾಗಿ ಅಲ್ಲಿ
ನಿಲ್ಲಗೆ ಸ್ವಲ್ಪದೂರಹೋಗಿ ನದಿ ತೀರದಲ್ಲಿ ಬಂದು ನಿಂತಳು. ತನ್ನಸಂ
ಕಲ್ಪವನ್ನು ನೆರರಿಸುವುದಕ್ಕೆ ಮೊದಲು ಒತ್ತಡವೆ ಭೂದೇವಿಯನ್ನೂ
ಒತ್ತಡವೆ ನದಿಯನ್ನೂ ಒಡವೆ ಮನೆಯನ್ನರಸಿ ದೃಷ್ಟಿಸಿ ನೋಡಿ ಹೃದಯ
ದಲ್ಲಿ ಕೆಲವು ಭಾವಗಳು ಮಿಂಚಿನ ವೇಗದಿಂದ ಹುಟ್ಟಿ 'ನಾನಾರು? ನಾನಾ
ರವಳು? ನಾನು ನನ್ನ ಸ್ವಾಮಿಯವಳಾಗದ ಬಳಿಕ ಮತ್ತಾವಳು? ನನ್ನ
ಸ್ವಾಮಿಯು ನನ್ನನ್ನು ನೋಡಲೆಳಸದಾಗ ಮತ್ತಾರು ನನ್ನನ್ನು ನೋಡಲೆಳ
ಸುವರು? ನಾನು ಪ್ರಪಚಕ್ಕೆ ಬೇಕಾದವಳಲ್ಲ; ಸಮಾಜಕ್ಕೆ ಬೇಕಾದವ
ಳಲ್ಲ; ಬಂಧುಬಳಗದವರಿಗೆ ಬೇಕಾದವಳಲ್ಲ: ಬೇರೇ ಜನರು ಹಾಗಿರಲಿ:
ನಾನೇ ನನಗೆ ಬೇಕಾದವಳಲ್ಲ; ಹೀಗಿರುವಾಗ ಬದುಕಿ ಈ ನರಕಯಾತನೆ
ಯನ್ನು ಅನುಭವಿಸಲೇಕೆ? ಇಂದು ನಾನು ಸತ್ತರೆ ಮೊದಲಿನಂತೆ ರಾತ್ರಿ
ಹಗಲು ಆಗುವುದು ನಿಲ್ಲುವುದಿಲ್ಲ; ಪ್ರಪಂಚವು ನಡೆಯುವುದು ನಿಲ್ಲುವು
ದಿಲ್ಲ: ಋತುಗಳು ಯಥಾ ಪ್ರಕಾರ ಬಂದು ಹೋಗವುವು ಅಮಾವಾಸ್ಯ
ವಾದ ಬಳಿಕ ಚಂದ್ರನು ಹುಟ್ಟುತಲೇ ಇರುವನು: ಒಂಧುಬಳಗದವರು ಒತ್ತ
ಡವೆ ಮಾತ್ರ ಕಣ್ಣೀರನ್ನು ಬಿಟ್ಟಬಳಿಕ ಮೊದಲಿನಂತೆ ಸಂಸಾರದಲ್ಲಿ ಸಂ
ತೋಷವಾಗಿರುವರು: ನನ್ನ ಸ್ವಾಮಿಯಾದರೆ? ಅವನೋ? ಅವನೇನನ್ನು
ಮಾಡುವನು? ಕಣಿರು ಬಿಡುವ ಮಾತು ಹಾಗಿರಲಿ; ತನ್ನ ಮಾರ್ಗವು
ನಿಷ್ಕಂಟಕವಾಯಿತೆಂದು ಭಾವಿಸಿಕೊಂಡು ಸುಖಿಯಾಗಿಯೇ ಇರುವನು!
ಹಾಗಾದರೆ, ಹಾಗಾದರೆ?” ಎಂದು ಹೇಳುತ್ತ ನಾಲಾ ದಿಕ್ಕುಗಳನ್ನು ನೋಡಿ
ದಳು. ತಲೆಯು ತಿರುಗುತ್ತಿದ್ದಿತು. ನಾಲ್ಕೂಕಡೆಯಲ್ಲಿ ಅಂಧಕಾರವು
ಹೊರ್ತು ಮತ್ತಾವದೂ ಕಾಣದು. ಭೂಮಿಯೇ ಕತ್ತಲೆ, ಆಕಾಶವೂ ಕತ್ತಲೆ,
ನದಿಯ ನೀರೂ ಕತ್ತಲೆ. ಎಲ್ಲೆಲ್ಲೆಯೂ ಕತ್ತಲೆಮಯ, ಕತ್ತಲೆಯು ಆವರಿ
ಸಿಕೊಂಡು ಸುತ್ತುತ್ತಿದ್ದಿತು. ಶೋಭನೆಯು ಆ ಕತ್ತಲೆಯಲ್ಲಿ ಸುತ್ತುತ್ತಿದ್ದ
ನದಿಯ ಸುಳಿಯಲ್ಲಿ ಧುಮುಕಿಬಿಟ್ಟಳು.
೨೮----------------------------------ಮಾಲತಿ------------------------
ಶೋಭನೆಯು ಹಿಂದೆ ಬಂದುನಿಂತು ಅಕಾರವಾಗಿ ಅಲ್ಲಿಂದ ಹೊರಟು
ಹೋದುದನ್ನು ಕಂಡು ರಮೇಶನೂ ವಾಲತಿಯೂ ಅವಳ ಹಿಂದೆ ಹೋದರು.
ಶೋಧನೆಯು ನದಿಯಲ್ಲಿ ಧುಮುಕಿದ ನಿಮಿಸವೇ ಧಮೇಶನೂ ನದಿಯಲ್ಲಿ
ಹಾರಿ ಅವಳನ್ನು ನೀರಿನಿಂದೆತ್ತಿ ತೀರಕ್ಕೆ ತಂದನು. ಮಾಲತಿಯು ಕಲ್ಲಿನ
ಪ್ರತಿಮೆಯಂತೆ ಸ್ತಂಭಿತೆಯಾಗಿ ಅಲ್ಲಿಯೇ ನಿಂತಿದ್ದಳು.
.............
ನಾಲ್ಕನೆಯ ಪರಿಚ್ಛೇದ.
ರಮೇಶನು ಶೋಧನೆಯನ್ನು ಎತ್ತಿಕೊಂಡು ಒಂದು ಮನೆಯಲ್ಲಿ
ಮಲಗುವ ಕೊಠಡಿಯಲ್ಲಿ ಸೋಫದಮೇಲೆ ಮಲಗಿಸಿ ತಾನು ಅವಳ
ಪಾರ್ಶ್ವದಲ್ಲಿ ಕುಳಿತುಕೊಂಡನು. ಶೋಭನೆಯು ನಾಲ್ಕೂಕಡೆ ನೋಡಿ
ದಳು. ಈ ಜನ್ಮದಲ್ಲಿ ಪುನಃ ನೋಡುವುದಿಲ್ಲವೆಂದು ಯೋಚಿಸಿದ್ದ ಪದಾ
ರ್ಥಗಳು ಪುನಃ ಅವಳ ಕಣ್ಣಿಗೆ ಬಿದ್ದುವು. ಅದೇ ಮನೆ ಅದೇಕೊಠಡಿ,,
ವಿವಾಹವಾದ ಮೊದಲ್ಗೊಂಡು ಇಬ್ಬರು ಏಕತ್ರ ಇದ್ದು ತಮ್ಮ ಸುಖದುಃ
ಖಗಳಿಗೆ ಕಾರಣವಾದ ಸಂಭವಗಳು ಉಂಟಾಗಿ ಅನೇಕ ಕೆಲಸ ಕಾರ್ಯ
ಗಳು ನಡೆದಿದ್ದ ಅದೇ ಮನೆ. ತಾನು ಮಲಗಿದ್ದ ಅದೇ ಹಾಸಿಗೆ ಹಾಸಿದ್ದಂ
ತೆಯೇ ಇದೆ, ಸೋಫಾದ ಬಳಿ ಇದ್ದ ಸಣ್ಣ ಮೇಜಿನಮೇಲೆ ರತ್ನಾವಳಿ
ನಾಟಕ, ಉತ್ತರರಾಮ ಚರಿತ್ರೆ, ಶಕುಂತಲೆ ಮುಂತಾದ ಪುಸ್ತಕಗಳು
ಹಾಗೇನೇ ಅವೆ, ದೀಪವು ಉರಿಯುತ್ತಿದೆ, ಆದರೆ ಎಣ್ಣೆಯಿಲ್ಲದೆ
ಪ್ರಕಾಶವು ಕಡಿಮೆ; ಸಾಯುವವನ ಪ್ರಾಣದಂತೆ ತುಡುಕೊಳ್ಳುತ್ತಿದೆ,
ನೊಂದಿಹೋಗುವಂತಾಗಿ ನೊಂದಿಹೋಗುವುದಿಲ್ಲ, ಶೋಭನೆಯ ಪ್ರಾಣವೂ
ಹಾಗೇಯೇ ನೊಂದಿಹೋಗಿದ್ದುದು ನೊಂದಿಹೋಗಲಿಲ್ಲ ; ಶೋಭನೆಯು ನಾಚಿ
ಕೆಯಿಂದ ಅದುವರೆಗೂ ಸ್ವಾಮಿಯ ಮುಖವನ್ನು ನೋಡದಿದ್ದವಳು ಆಗ
ನೋಡಿದಳು. ಅವ ಹೃದಯ ರತ್ನವನ್ನು ನೋಡುವ ಅಕೆಯನ್ನು ತೊರದಿ
ದ್ದಳೋ ಅಂಧಾ ಸ್ವಾಮಿಯು ಪುನಃ ದೊರಕುವನೆ ? ವ್ಯಗ್ರಭಾವದಿಂದ
ಅಂಥಾ ಸ್ವಾಮಿಯನ್ನು ನೋಡಿದಳು. ವಿಷಾದದಿಂದ ಗಂಭೀರವಾಗಿದ್ದ
------------------ಮೂರನೆಯ ಪರಿಚ್ಛೇದ------------------------೨೯
ರಮೇಶನ ಮುಖವನ್ನು ನೋಡಿ ಶೋಭನೆಯು ತಲೆತಗ್ಗಿದವಳಾಗಿ ಮೌನ
ವಾಗಿ ಅಳುವುದಕ್ಕೆ ತೊಡಗಿದಳು. ರಮೇಶನೂ ಮೌನವಾಗಿ ಅಳುವು
ದಕ್ಕೆ ತೊಡಗಿದನು.
ಒಂದು ಕ್ಷಣಕಾಲದಲ್ಲಿ ಒಂದು ಅಲ್ಪವಾಗ ಕೆಲಸವು ಒಬ್ಬ ಮನು
ಷ್ಯನ ಜೀವನ ಚರಿತ್ರೆಯನ್ನು ಶುದ್ದವಾಗಿ ಬದಲಾಯಿಸಿಬಿಡುವಂತೆ ಬಹು
ಕಾಲ ವ್ಯಾಪಿಯಾದ ಮಹತ್ತಾದ ದೊಡ್ಡಕಾರ್ಯವೂ ಅದಲು ಬದಲು ಮಾಡ
ಲಾರದು. ಇಂಗ್ಲಾಂಡು ದೇಶಕ್ಕೆ ರಾಜಮಂತ್ರಿಯಾಗಿದ್ದ ಡಿಜರೇಯಿ
ಲಿಯು, ಮನುಷ್ಯನ ಜೀವನಚರಿತ್ರೆಯ ಸಣ್ಣಸಣ್ಣ ಘಟನಾವಳಿಯ ಸಮ
ಷ್ಟಿಮಾತ್ರವೆಂದು ಹೇಳಿದ್ದಾನೆ. ನೂರಾರುವರ್ಷಗಳ ರಾಜ್ಯ ಪರಿವರ್ತನೆ
ಯಿಂದುಂಟಾಗದ ಕಾರ್ಯ ಸಾಧನೆಯು ಒಂದು ಸಮಯದಲ್ಲಿ ಒಂದು
ಸಣ್ಣ ಕೆಲಸದಿಂದ ಒಂದು ನಿಮಿಷದಲ್ಲಿ ಸಂಪೂರ್ಣವಾಗಿ ಸಾಧಿಸಲ್ಪಡುತ್ತದೆ.
ಆಕಳ ಕಳವಿಗೋಸ್ಕರ ಶಿಕ್ಷಿಸಲ್ಪಡದಿದ್ದರೆ ಮಹಾಕವಿಯಾಗಿದ್ದ ಷೇಕಸಪಿ
ಯರನ ಹೆಸರನ್ನು ಆರೂ ಕೇಳುತ್ತಿರಲಿಲ್ಲ.
ಅರಸಾಗಿದ್ದವನು ಬೀದಿಯಲ್ಲಿ ಭಿಕ್ಷುಕನಾದರೂ ಜೀವನಧಾರ
ಣೆಯಂ ಮಾಡುವನು. ಪ್ರಿಯತಮರಾದ ಮಕ್ಕಳ ವಿಯೋಗವಾದರೂ
ಸಹಿಸಿಕೊಂಡಿರಬಹುದು. ಪ್ರಣಯದಲ್ಲಿ ಭಗ್ನಹೃದಯರಾದವರೂ ಜೀವ
ದಿಂದ ಬದುಕಿರುವರು. ಆದರೆ ನಿಮಿಷದಲ್ಲಿ ನುಡಿದ ಅನಾವರದೊಂದು
ನುಡಿಯಿಂದುಂಟಾಗುವ ವಿಪತ್ತನ್ನು ಸಹಿಸಲಸಾಧ್ಯ. ಅಂಥಾ ಕಟುಕ್ತಿ
ಯಿಂದ ಹೃದಯದ ತಂತ್ರಿಯು ಕ್ಷಣಕಾಲದಲ್ಲಿ ಹರಿದು ಪುನಃ ಸರಿಯಾಗಿ
ಪೂರ್ವ ಸ್ಥಿತಿಗೆ ಬರುವುದು ಕಷ್ಟ. ಒಂದೊಂದು ವೇಳೆ ಜೀವನಕ್ಕೆ ದಿಙ್ದ
ರ್ಶಿಯಾದ ಮುಳ್ಳು ಮಾರ್ಗತಪ್ಪಿ ಹೋಗಿ ಪುನಃ ಸರಿಯಾದ ಮಾರ್ಗಕ್ಕೆ ಬರು
ವುದು ಕಷ್ಟವಾಗಬಹುದು. ಗರ್ವಿತವಾದ ಹ ಯ ವುಳ್ಳವವನು ದುರ್ಲ೦
ಫ್ಯವಾದ ದಾರಿದ್ರ್ಯದ ದುರ್ದಿಶೆಗೊಳಗಾಗಿ ಕಷ್ಟಪಡುತ್ತಿದ್ದರೂ ಲಕ್ಷ್ಯಮಾ
ಡದೆ ಇರುವನು. ಒಂದೊಂದು ಪಾಷಾಣಮಯ ಹೃದಯವು ನೂರಾರು
ಜನರ ರಕ್ತಪ್ರವಾಹದೆದುರಿಗಿದ್ದರೂ ವಿಕಾರಹನ್ನು ಹೊಂದಲಾರದು. ಅಂಥಾ
ಪಾಷಾಣಮಯ ಹೃದಯವೂ ಬಂದು ಮಮತಾ ಪೂರ್ಣವಾದ ನುಡಿಯಿಂದ
ಕರಗಿಹೋಗುವುದು, ಅಂಟೋನಿಯನ್ನು ಅತ್ಯಂತಕಷ್ಟದಲ್ಲಿಯೂ ಅಪಾ
೩೦------------------ಮಾಲತಿ---------------------------
ರವಾದ ವಿಪತ್ತನ್ನು ಅತಿಕ್ರಮಿಸಿ ಅಲ್ಪಸಂಖ್ಯೆಯ ಸೈನ್ಯದಿಂದ ಕೆಸಿಯಸನೂನ
ಬ್ರೂಟಸನ್ನೂ ಸೋಲಿಸಿದ್ದನು. ಅಂಥಾ ಭೀಮ ಪರಾಕ್ರಮಶಾಲಿಯಾದ
ಮಹಾ ವೀರಪುರುಷನಾದ ಅಟೋನಿಯನೇ, ಕ್ಲಿಯೆಪೇಟ್ರೆಯ ಕಣ್ಣಿಂದ
ಬಿದ್ದ ಒಂದು ಕಂಬನಿಯನ್ನು ಕಂಡು ತಾನು ಜಯಶಾಲಿಯಾಗುವುದಕ್ಕೆ
ಪೂರ್ವ ಕ್ಷಣದಲ್ಲಿ ಕಾಪುರಷನಂತೆ ಯುದ್ದದಿಂದ ವಿಮುಖನಾಗಿ ಪಲಾಯನ
ವಾಗಿ ಓಡಿಹೋಗಲಿಲ್ಲವೆ ? ಅವ ಹೃದಯವು ಇವಾಗ ಅವದರಿಂದ ಹೇಗೆ
ಏನಾಗುವುದೋ ಅದನ್ನು ನಿರ್ಣಯಿಸುವುದು ಕಷ್ಟ. ನ್ಯೂಟನನೂ ಗೆಲಿಲಿ
ನೂನೂ ಬಹಳ ಯೋಜಸಿ, ಬಾಹ್ಯದ ಸಚ ನ್ಯಾಪಾರದ ನಿಯಮಗ
ಳನ್ನು ಕಂಡು ಹಿಡಿದರು. ಆದರೆ ಮನದ ಜಗತ್ತಿನ ವ್ಯಾಪಾರವನ್ನು ಕಂಡು
ಹಿಡಿದ ನ್ಯೂಟನನೊಬ್ಬನು ಇನ್ನೂ ಹುಟ್ಟಿಲ್ಲ. ಮುಂದೆ ಅಂಥವರಾರು
ಹುಟ್ಟುವರೋ ಇಲ್ಲವೋ ಅದನ್ನು ಬಲ್ಲವರಾರು ?
ಇಂದು ಸಂಜೆಯಲ್ಲಿ ನಡೆದೊಂದು ಸಣ್ಣ ಕೆಲಸದಿಂದ ಶೋಭನೆಯ
ಜೀವನದ ಪ್ರವಾಹವು ಶುದ್ಧವಾಗಿ ಮಾರಿಹೋಯಿತು. ಅವಳು ಎಲ್ಲವನ್ನೂ
ಹೊಸದಾದುದಾಗಿ ಕ೦ಡಳು. ನೀರಲ್ಲಿ ಮುಣುಗಿದ್ದ ಉತ್ತರಕ್ಷಣದಿಂದಲೇ
ಶೋಧನೆಯ ಜೀವನಚರಿತ್ರೆಯು ಹೊಸದಾಗಿ ಆರಂಭವಾಯಿತು. ರಮೇಶ
ನನ್ನು ಮೊದಲಿನಂತೆ ಸ್ನೇಹಮಯನಾದ ಗಂಡನೆಂದು ಕಂಡಳು. ಅವನಲ್ಲಿ
ಪ್ರಣಯವು ಹೊರ್ತು ಮತ್ತೇನೂ ಕಂಡು ಬರಲಿಲ್ಲ. ಒಂದು ಕ್ಷಣಕಾಲದಲ್ಲಿ
ಅವನು ಹೇಗೆ ಬೇರೆ ವಿಧವಾಗಿ ಕಂಡುಬಂದನೋ ಅದನ್ನು ತಾನೇ ಅರಿಯ
ಳು. ಮೆಲ್ಲ ಮೆಲ್ಲನೆ ಅವರು ಮಾತಾಡುವುದಕ್ಕೆ ಪ್ರಾರಂಭಿಸಿದರು. ಮೆಲ್ಲಮೆ
ಲ್ಲನೆ ಹೊಸದಾದ ಪ್ರೇಮದ ನುಡಿಗಳಿಂದ ಕ್ಷಮೆಯನ್ನು ಬೇಡಿದಳು. ನಡದ
ವಿದ್ಯಮಾನಗಳನ್ನು ರಮೇಶನಿಂದ ಅನುಪೂರ್ವಿಕವಾಗಿ ಕೇಳಿ ಅವಳ ಹೃದ
ಯವು ಅನುತಾಪದಿಂದ ತುಂಬಿತು. ಆ ಅನುತಾಪವಾದರೋ, ಪೂರ್ವಕ
ವಾದುದು, ಮಿತ್ರಿತವಾದುದಲ್ಲ; ಆ ಅನುತಾಪದಲ್ಲಿ ಸಂದೇಹವಾಗಲೀ ಅಪನಂ
ಬಿಕೆಯಾಗಲೀ ಕಂಡುಬರಲಿಲ್ಲ. ರಾತ್ರಿ ಹತ್ತು ಘಳಿಗೆಗಳಾದುವು. ಆಗಲೂ ಆ
ಒದ್ದೆಬಟ್ಟೆಯಲ್ಲಿಯೇ ಇದ್ದರು. ಒದ್ದೇಒಟ್ಟೆಯು ಮೈಮೇಲಿದ್ದ ಹಾಗೆ ಒ
ಣಗಿ ಹೋಗಿದ್ದಿತು. ಶೋಭನೆಯು ಜ್ಞಾಪಿಸಿಕೊಂಡು ರಮೇಶನ ಬಟ್ಟೆ
ಯನ್ನು ಮುಟ್ಟಿನೋಡಿ, ' ನನ್ನಿಂದ ತಮಗ ಬಹಳ ಕಷ್ಟವಾಯಿತು! ಅದಕ್ಕಿಂ
-------------------------ಮೂರನೆಯ ಪರಿಚ್ಛೇದ----------------------- ೩೧
ತಲೂ ನನ್ನ ಪ್ರಾಣವು ಹೋಗಿದ್ದರೆ ಚೆನ್ನಾಗಿದ್ದಿತು. ಎಷ್ಟೋ ಪುಣ್ಯವನ್ನುಮಾ
ಡಿ ಹೊಂದಿರುವ ಸ್ವಾಮಿಯನ್ನು ಸುಖಪಡಿಸಲಾರದೆ ಹೋದೆನು. ನನಗೆ ಸಲು
ವಾಗಿ ನಿಮಗೆ ಇಷ್ಟು ಕಷ್ಟ!' ಎಂದು ಹೇಳಿದಳು. ಅವಳ ಕಣಿಂದ ಎರಡು ಬೊಟ್ಟು
ನೀರುಬಿದ್ದಿತು. ರಮೇಶನು ನೋಡಿ, 'ಶೋಭನೆ? ಅದೇನು, ಪುನಃ
ಕಷ್ಟ ಬಂದಿತು! ಪ್ರಪಂಚದಲ್ಲಿ ಈಗ ನನ್ನ ಹಾಗೆ ಮತ್ತಾರೂ ಸುಖಿಯಲ್ಲ.
ನಿನ್ನ ಮೊದಲಿನ ಮನಸ್ಸು ಬದಲಾಯಿಸಿತು. ನಿನ್ನ ಅಪನಂಬಿಕೆಯು ಹೋ
ಯಿತು. ಮತ್ತಾವ ಕಷ್ಟಬಂದರೂ ಲಕ್ಷ್ಯ ಮಾಡೆನು' ಎಂದು ಹೇಳುತ್ತಿರು
ವಾಗ ರಾತ್ರಿಯ ಸಿದ್ಧತೆಯು ಭಂಗವಾಗಿ ದೂರದಲ್ಲಿ ಗಗನವು ಸಂಗೀತ
ಧ್ವನಿಯಿಂದ ತುಂಬಿತು. ರಮೇಶನು ಧ್ವನಿಯಿಂದ ಮಾಲತಿಯೆಂದು ತಿಳಿದನು.
ಅಷ್ಟು ರಾತ್ರಿಯಾದರೂ ಮಾಲತಿಯು ಮನೆಗೆ ಬಂದಿರಲಿಲ್ಲ. ಒಳ ತಿರು
ಗಾಡುತ್ತಿದ್ದಾಳೆ. ಅವನು ಅಶ್ಚರ್ಯಟ್ಟು, ಶೋಭನ! ಮಾಹಿತಿಯು
ಮನೆಗಿನ್ನೂ ಬಂದಿಲ್ಲ. ಒಬ್ಬಳೇ ತಿರುಗಾಡುತ್ತಿದ್ದಳೆ!' ಎಂದು ಹೇಳುತ್ತಿ
ದ್ದಹಾಗೆ ಸ್ವಲ್ಪ ನಕ್ಕು, ಶೋಧನೆ! ಅವಳಿಂದ ನಮಗೆ ಮತ್ತೆಷ್ಟು ತೊಂದ
ರೆಯೆ? ಎಷ್ಟು ಪ್ರೇಮವನ್ನು ತೋರಬೇಕೊ! ನೋಡು' ಎಂದನು. ಶೋ
ಭನೆಯು ನಾಚಿಕೊಂಡ, 'ನಿಜವಾಗಿಯೂ ಮಾಲತಿಯು ಒಹಳ ಒಳ್ಳೆಯ
ಹುಡುಗಿ, ಒಬ್ಬಳೇ ಹೊರಗೆ ಇದ್ದಾಳೆ, ಇಂದಿನದ ಚರ್ಯಗಳನ್ನೆಲ್ಲಾ
ನೋಡಿ, ಸಂಕೋಚದಿಂದ ಮನೆಗೆ ಬಂದಿಲ್ಲವೆಂದು ಕಾಣುತ್ತಿದೆ, ಅವಳಲ್ಲಿ
ನಾನು ಹೆಚ್ಚು ಅಪರಾಧಿಯಾಗಿದ್ದೇನೆ, ನಾನೇ ಹೋಗಿ ಅವಳನ್ನು ಕರೆತರು
ತ್ತೇನೆ, ನಾನು ಹೋಗಿ ಅವಳಲ್ಲಿ ಕ್ಷಮಾಪಾರ್ಥನೆಯನ್ನು ಮಾಡುತ್ತೇನೆ,
ನಾನು ನೂರಾರು ತಪ್ಪನ್ನು ಮಾಡಿದರೂ. ಅವಳು ಕೋಪಿಸಿಕೊಳ್ಳುತ್ತಿ
ಲಿಲ್ಲ. ಈ ದಿನ ಹೋಗಿ ಅವಳ ಕಾಲನ್ನು ಮುಟ್ಟಿ ಬೇಡಿಕೊಂಡರೆ ಮನ್ನಿಸ
ಲಾರಳೆ? ಎಂದಳು.
ರಮೇಶ--ಬೇಡ ಹೊರಗೆ ಬಹಳ ಕತ್ತಲೆ. ಮಾಲತಿಯು ಎಲ್ಲಿ
ದ್ವಾಳೋ ಗೊತ್ತಾಗುವುದಿಲ್ಲ. ನೀನು ಹೋಗಬೇಕಾದ ಅವಶ್ಯಕವಿಲ್ಲ.
ನಾನೇ ಹೋಗಿ ಹುಡುಕಿಕೊಂಡು ಬರುವೆನು.
ಪುನಃ ಸ.ಗೀತದ ಧ್ವನಿಯೆದ್ದಿತು. ತೆರಿದಿದ್ದ ಕಿಟಕಿಯಿಂದ ಶಬ್ದವು
ಚೆನ್ನಾಗಿ ಕೇಳಿತು. ಇಬ್ಬರೂ ಸಂಗೀತವನ್ನು ಅಲೈಸಿ ಕೇಳಿದರು.
೩೨----------------------ಮಾಲತಿ----------------------------
ಪದ್ಯ-ಮನುಜರುಸಿರುಂ ಸುಳಿಯದಿಹ ನಿ | ರ್ಜನವೆನಿಸಿದರೆ ದೂರವೆನಿಸಿದ | ವಪವನೇದ
ಲ್ಕೊರ್ವಳೇ ಸನ್ನದ್ಧೇಯಾಗಿಹೆನ || ಮನದೊಳಿನ್ನೊಂದಾಸೆ ತಾನಿ ಲ್ಲೆನಗು ದಾಸೀನೆಯುಮನಾಥೆಯು |
ಮೆನಿಸಿರುವೆನಿಲಿಂದಿದೋ ಪೊರಮಟ್ಟು ನಿಂದಿಹೆನು ||೧ ||
ಒಲುಮೆಯಂ ಪ್ರತಿದಾನದಾಪ್ರತಿ | ಫಲಗೊಳಿಸಲಿರ್ದಾಸಗಾದುದು ವಿಲಯಮಕಟಾ ಮುಗಿದುದೆ
ನ್ನೊಳಗಿರ್ದ ಸುಖದಾಸೆ | ನೆಲದೊಳಗೆ ಸುಖಪಡುವ ಪ್ರಣ್ಯದ | ನೆಲೆಗಳಾಗಿರ್ಪರ ಸುಖವನಾ | ನಳಿಸೆ
ನೀವು ಸಾಕ್ಷಿಗಳಾಗಿರೆ ತೇ | ಜೋವಿರಾಜಿತ ಸೂರ್ಯಶಶಿತಾ, ರಾವಳಿಂ ಗಿರಿನದಿಗಳಿರ ವೃಕ್ಷಲತೆಗಳಿರಾ |
ನೋವಿಗೊಳಗಾಗೆಲ್ಲಿ ಮಡಿದೊಡ | ಮೋವುವೊ ನೋಡುತ್ತಿರ್ಪೆನೋಲವಿಂ | ನೀವು ಸುಖಪಡಿರೊಪ್ಪೆ
ಬಗೆ ಸಂತೋಷಿಸುವೆ ನಾನು || ೩ || (ಸೊ. ಅ.) 1
ಸಂಗೀತವು ಅವರ ಹೃದಯದ ತಲವನ್ನು ಮುಟ್ಟಿತು. ವಿಷಾದಮ
ಯವಾಗಿ ಗಗನವನ್ನು ಮುಟ್ಟಿ ಸೂದೆಯನ್ನು ಕರೆಯುತ್ತಿದ್ದಾ ಸಂಗೀತ
ವನ್ನು ಕೇಳಿ ರಮೇಶನು ಚಮಕಿತನಾದನು. ಗೊತ್ತಾಗದ ಕಾರಣದಿಂದ
ಅವನ ಹೃದಯವು ಚಂಚಲವಾಯಿತು. ಹೃದಯದಲ್ಲಾವದೋ ಒಂದು
ವೇದನೆಯುಂಟಾಯಿತು, ಎದ್ದು ಬಾಗಿಲ ತಂದನು. ಕೂಡಲೇ ಗಾಳಿಯು
ಹೊಕ್ಕು ಉರಿಯುತ್ತಿದ್ದ ದೀಪವು ನೊಂದಿಹೋಯಿತು. ಮನೆಯು ಅಂಧ
ಕಾರಮಯವಾಯಿತು. ಕತ್ತಲೆಯಲ್ಲಿ ಶೋಧನೆಯು ಭಯಪಡುತ್ತಿರಲಿ
ಲ್ಲವಾದರೂ ಗೊತ್ತಿಲ್ಲದೇನೋ ಒಂದು ಭಯವುಂಟಾಗಿ ಅತ್ತಳು. ರಮೇ
ಶನು ಹಿಂದಿರುಗಿ ನೋಡಿದನು. ಶೋಭನೆಯು ನದಿಯಲ್ಲಿ ಬಿದ್ದಿದ್ದ ಸಂಗ
ತಿಯು ನೆನವಿಗೆ ಬಂದು ನಡುಗಿದನು. ಇದ್ದ ಹಾಗೆ ಸಂಗೀತವು ನಿಂತುಹೋ
ಯಿತು. ಆ ರಾತ್ರಿಯ ನಿಶ್ಯಬ್ದತೆಯು ತನ್ನ ಅಧಿಪತ್ಯವನ್ನು ಪ್ರನಃ ವಿಸ್ತರಿ
ಸಿಕೊಂಡಿತು. ಅದರೊಂದಿಗೆ ಒಂದು ಸ್ಥಿರವಾದ ವಿಷಾದದ ಭಾವವು ರಮೇ
ಶನ ಹೃದಯವನ್ನು ಅವರಿಸಿಕೊಂಡಿತು. ರಮೇಶನು ವ್ಯಾಕುಲದಿಂದ ಅ
ಕತ್ತಲೆಯಲ್ಲಿ ಕತ್ತಲೆ ಕವಿದಿದ್ದಾ ನದಿಯ ತೀರಕ್ಕೆ ಓಡಿಬಂದನು. ಅವನ
ಮನಸ್ಸು ಏಕೆ ಅಂಥ ದಾರುಣವಾದ ವ್ಯಸನದಿಂದ ಭಾರಾಕಾ೦ತವಾ
ಯಿತೋ ಅದನ್ನರಿಯದೆಹೋದನು.
ಎಲ್ಲಿ ನೋಡಿದರೂ ಕತ್ತಲೆ, ದಿಗಂತವಾದ ಕತ್ತಲೆ, ನಿಶ್ಯಬ್ದ !
ಆಕಾಶದಲ್ಲಿ ಸಾವಿರಾರು ನಕ್ಷತ್ರಗಳು, ಆದರೂ ಆಕಾಶವೆಲ್ಲಾ ಕತ್ತಲೆ,
ಮರದ ಎಲೆ ಎಲೆಯಲ್ಲಿಯೂ ಲೆಕ್ಕವಿಲ್ಲವ ಮಿಂಚಿನ ಹುಳಗಳು, ಆದರೂ
------------------------ನಾಲ್ಕನೆಯ ಪರಿಚ್ಛೇದ--------------------------೩೩
ಕೆಳಗೆಲ್ಲಾ ಕತ್ತಲೆ. ಕತ್ತಲೆಯು ಆವರಿಸಿಕೊಂಡಿದ್ದ ನಿಶ್ಯಬ್ದವಾದಾ
ನದಿಯ ತೀರದಲ್ಲಿ ಹೋಗುತ್ತಿರುವಾಗ ರಮೇಶನು ಒಂದಸಾಧಾರಣ
ಭಯದಿಂದ ನಡುಗಿದನು. ಅವನ ಹೃದಯವು ಸ್ವಂಭಿತವಾಗಿ ನರಗಳಲ್ಲಿ
ರಕ್ತಪವಾಹವು ನಿಂತುಹೋದಹಾಗಾಗಿ ನಡೆಯುವ ಶಕ್ತಿಯು ಉಡುಗಿಹೋ
ಯಿತು; ಆದರೆ ಇದ್ದ ಹಾಗೆ, ಅದೇನು? ಏನೋ ಶಬ್ದವಾದಹಾಗಾಯಿತು !
ನದಿಯರಲ್ಲಿ ಭಾರಪದಾರ್ಥವಾವದೋ ಬಿದ್ದ ಶಬ್ದ !
ಪ್ರನಃ ಆ ಸಂಜೆಯಲ್ಲಿ ನಡೆದ ಭಯಾನಕವಾದಾ ಘಟನೆಯು ರಮೇ
ಶನ ಮನಕೆ ಹೊಳೆಯಿತು. ಮೈಯೆಲ್ಲಾ ಮುಳ್ಳಿಂದ ಚುಚ್ಚಿದಹಾಗಾಯಿತು.
ರಮೇಶನಿಗೆ ನಿರ್ಜೀವವಾಗಿದ್ದ ಪ್ರಾಣದಲ್ಲಿ ಪ್ರಾಣವುಬಂದಿತು, ನಾಡಿಯಲ್ಲಿ
ರಕ್ತಚಲನೆಯುಂಟಾಯಿತು. ಕಾಲಲ್ಲಿ ಬಲವು ಬಂದಿತು. ರಮೇಶನು,
' ಮಾಲತಿ! ಮಾಲತಿ! ' ಎಂದುಕೂಗುತ್ತ ಶಬ್ದವು ಕೇಳಿ ಬಂದಿದ್ದ ದಿಕ್ಕಿಗೆ ಓಡಿ
ಹೋದನು. ನದಿಯ ಧಡದಲ್ಲಿ ಎತ್ತರವಾಗಿದ್ದೊಂದು ಗಡ್ಡೆಯಮೇಲೆ ನಿಂತು
ನೋಡಿದನು. ಅಸ್ಥಳದಲ್ಲಿ ಎದ್ದಿದ್ದ ಅಲೆಗಳು ತಂಡತಂಡವಾಗಿ ಅಳಸಿ
ಹೋಗಿ ಆಳವಾಗಿ ಹರಿಯುತ್ತಿದ್ದ ನದಿಯ ಪ್ರವಾಹದೊಂದಿಗೆ ಸೇರಿಹೋ
ಗುತ್ತಿದ್ದಿತು. ರಮೇಶನು ತುದಿಗಾಲಲ್ಲಿ ನಿಂತು ಕುತ್ತಿಗೆಯನ್ನೆತ್ತಿ ದೃಷ್ಟಿಸಿ
ನೋಡಿದನು. ನದಿಯಲ್ಲಿ ತೆರೆಗಳಿರಲಿಲ್ಲ. ಎಲ್ಲಾ ಸಾಮಾನ್ಯವಾಗಿದ್ದ ಹಾಗೆ
ಕಂಡಿತು. ಸುಖಮಯಿಯು ನಿಶ್ಯಬ್ದವಾಗಿ ಹರಿಯುತ್ತಿತ್ತು. ರಮೇಶನು
ನಾಲ್ಕು ಕಡೆ ನೋಡಿದನು. ಮಾಲತಿಯ ಚಿಹ್ನೆಗಳಾವವೂ ಕಂಡುಬರ
ಲಿಲ್ಲ. ರಮೇಶನು ಹುಚ್ಚನಹಾಗೆ, 'ಮಾಲತಿ ಮಾಲತಿ' ಎಂದುಕೂಗಿದನು.
ನದಿಯೂ ಆಕಾಶವೂ ದಿಕ್ಕುಗಳೂ ರಮೇಶನಾ ಆರ್ತನಾದಕ್ಕೆ ಮಾದನಿ
ಯನ್ನು ಕೊಟ್ಟುವು. ಆದರೆ, ಅವ ಮಾಲತಿಯಾಗಲೀ ಉತ್ತರವನ್ನು
ಕೊಡಲಿಲ್ಲ!
-----------------------------------------
ಶುದ್ಧಾಶುದ್ಧ
ಪುಟ ಪಙ್ತಿ ಅಶುದ್ಧ ಶುದ್ಧ
೨೫ ಕೆಳಗಿಂದ ೫ ಆಕಾರಣವಾಗಿ ಅಕಾರಣವಾಗಿ
೩೦ ೧ ಕೆಸಿಯಾಸನೂನ ಕೆಸಿಯಾಸನೂ
==============================================
PRINTED BY
S. NANJUNDA SASTRI
AT THE SREENIVASA PRESS, MYSORE, 1913.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ