ಶನಿವಾರ, ಅಕ್ಟೋಬರ್ 15, 2022

ಪ್ರೇಮಮಂದಿರ



https://archive.org/details/dli.osmania.3737 


------------------------------------------

 



OU _19886 





 

ಪ್ರೇಮಮಂದಿರ --ಭೀಮಾಜಿ ಜೀವಾಜಿ ಹುಲಿಕವಿ




(ಐತಿಹಾಸಿಕ ಕಾದಂಬರಿಯು. ). 



ಲೇಖಕ 

ಭೀಮಾಜಿ ಜೀವಾಜಿ ಹುಲಿಕವಿ, 

ಗವ್ವರ್ನ ಮೆಂಟ್‌ ಟ್ರೇನಿಂಗ್‌  ಕಾಲೇಜ, ಮೈಸೂರು. 



| ಸರ್ವಾಧಿಕಾರವು ಲೇಖಕನ ವಶದಲ್ಲಿದೆ ] 



ಬೆಳಗಾವಿಯೊಳಗೆ ದೇವೇಂದ್ರ ಫಡೆಪ್ಪಾ ಚೌಗುಲೆಯ 

" ಶ್ರೀಮಹಾವೀರ " ಮುದ್ರಣಾಲಯದಲ್ಲಿ ಮುದ್ರಿಸಿದರು 

ಮತ್ತು 

ಧಾರವಾಡದೊಳಗೆ ತ್ರೀ. ಕೆ. ಬಿ. ಅಂಕಲಗಿ ಮ್ಯಾನೇಜರ 

ವಾಗ್ಭೂಷಣ ಧಾರವಾಡ ಇವರು ಪ್ರಸಿದ್ಧ ಮಾಡಿದರು. 




ಸನ್‌ ೧೯ 


ಬೆಲೆ ೮ ಆಣೆ


=======================






ಸಮರ್ಪಣಂ 





ಲಲಿತಾಕರುಣಸಿಂಹರಂತೆ 

ಪರಿಶುದ್ಧ ಪ್ರೇಮವುಳ್ಳವರೂ, ಕುಲಾಚಾರಸಂಪನ್ನರೂ 

ಉಚ್ಚ ಮನೋಭಾವದವರೂ, ಏಕಹೃದಯರೂ ಅದ 



ಕರ್ಣಾಟಕಸ್ಥ ಪ್ರಿಯದಂಪತಿಗಳಿಗೆ 



ಈ" ಪ್ರೇಮಮಂದಿರ" ವನ್ನು 

ಸಂತೋಷದಿಂದ ಸಮರ್ಪಿಸಿದ್ದೇನೆ.  



 ಭೀ. ಜೀ. ಹುಲಿಕವಿ. 



(===================================



ಸದ್ಯಕ್ಕೆ ಪ್ರಸಿದ್ಧವಾದ, ಪ್ರಸ್ತುತಲೇಖಕರಿಂದಲೇ 

ಬರೆಯಲ್ಪಟ್ಟ ಕೆಲವು ಪುಸ್ತಕಗಳು. 



೧) ಸುನಂದಿನಿ ಅಥವಾ ಪವಿತ್ರ ಪತಿಭಕ್ತಿ ೦-೬-೦ 

(೨) ದುಷ್ಕರ್ಮಪರಿಪಾಕ ಅಥವಾ ಉನ್ನಾದಿನಿಯಾದ ಮೋಹಿನಿ ೦-೧-೦ 

(೩) ನನ್ನ ಕನಸು ೦-೧-೬. 

(೪) ಶ್ರೀವಿಷ್ಣು ಸಹಸ್ರನಾಮಮೀಮಾಂಸೆ ೦-೪-೦ 

(೫) ಯಶೋಮತಿ ೦-೨...೬ 

(೬) ಅತ್ತೆಯ ಮನೆಯ ಕಾಟ ಅಥವಾ ಸುಶೀಲಾವಸಂತರ ದುರ್ದೈವ ೦.೪.೦ 

(೬) ಶ್ರೇಯಃಸಾಧನ ೦.೧೨-೦ 

(ಅ) ಪತಿತಪರಾವರ್ತನ ೧-೦-೦ 

(೯) ಹತಭಾಗಿನಿಯಾದ ವಿಮಲೆ 0-೨-೦ 



ಭೀಮಾಜಿ ಜೀವಾಜಿ ಹುಲಿಕವಿ 

ಹನುಮಾನ್‌ ಮತ್ತು ಕಂಪನಿ ಹುಬ್ಬಳ್ಳಿ. 

===========================


ಉಪೋದ್ಭಾತ. 


ಕಾದಂಬರಿಗಳ ಮುಖ್ಯ ಉದ್ಜೇಶವು ವಾಚಕರನ್ನು ಆನಂದಗೊಳಿಸುವುದೋ 

ಅಥವಾ ಅವರಿಗೆ ಬಳ್ನಡೆಯನ್ನು ಕಲಿಸುವುದೋ? ಈ ಪ್ರಶ್ನೆಯನ್ನು ಕುರಿತು ಅನೇಕ 

ಆಂಗ್ಲವಿದಗ್ಧರೂ, ಜರ್ಮನ್‌ ವಿದ್ವಾಂಸರೂ ಅನೇಕ ವಿಧವಾಗಿ ಚರ್ಚಿಸಿದ್ದಾರೆ. ಆ ಎಲ್ಲ 

ಚರ್ಚೆಗಳ ಬಹುಮತದ ಸಾರಾಂಶವನ್ನು ಸಂಗ್ರಹಿಸಿ ಹೇಳಬೇಕಾದರೆ ಹೀಗೆ ಹೇಳ 

ಬಹುದು. " ಕಾದಂಬರೀಕಾರನಿಗೆ ನೈತಿಕೋದ್ದೇಶವು ಮುಖ್ಯವಾದ ಲಕ್ಷ್ಯವಲ್ಲ; 

ವಾಚಕರ ಚಿತ್ರವನ್ನು ಸಂಪೂರ್ಣವಾಗಿ ಆಕರ್ಷಿಸುವಂತಹ ಸೌಂದರ್ಯಯುಕ್ತವಾದ 

ರೀತಿಯಲ್ಲಿ ತಾನು ಹೇಳತಕ್ಕುದನ್ನು ಹೇಳಿ, ವ್ಯಂಗ್ಯಮರ್ಯಾದೆಯಲ್ಲಿ ಗೋಚರವಾಗುವ 

ನೈತಿಕಭಾವಗಳಿಂದಲೇ ಅತನು ತೃಪ್ತನಾಗುತ್ತಾನೆ. " ಕಾದಂಬರಿಯು ವಾಚಕರಲ್ಲಿ ಆಸ 

ಕ್ತಿಯನ್ನು ಹುಟ್ಟಿಸಬೇಕು; ಅವರನ್ನು ಅನಂದಗೊಳಿಸಬೇಕು; ಅವರ ನೀಚವಾದ 

ಮನೋವಿಕಾರಗಳನ್ನೂ, ಅಸಮಾಧಾನಕರವಾದ ತೊಂದರೆಗಳಿಂದುಂಟಾದ ಬೇಸರ 

ವನ್ನೂ ಹೋಗಲಾಡಿಸಿ ಲೀಲೆಯಿಂದಲೇ ಅವರನ್ನು ಉಚ್ಚವಿಚಾರಗಳಲ್ಲಿ ತಲ್ಲೀನರನ್ನಾಗಿ 

ಮಾಡಬೇಕು; ಅವರ ದಣಿವನ್ನೂ ಪೀಡೆಯನ್ನೂ ಮರೆಯಿಸಬೇಕು; ಮುಖ್ಯಪಾತ್ರದ 

ಪ್ರತಿಯೊಂದು ಚಲನವಲನೆಯ ವಿಷಯದಲ್ಲಿಯೂ ಸಹಾನುಭೂತಿಯುಕ್ತರಾಗಿರುವಂತೆ 

ಅವರ ಮನೋವಿಕಾರಗಳನ್ನು ಸ್ಫೂರ್ತಿಗೊಳಿಸಬೇಕು; ಅವರ ಆತ್ಮವು ಅಸಾಧಾರಣ 

ವಾದ ಮತ್ತು ಗಭೀರವಾದ ವಾತಾವರಣದಲ್ಲಿ ವಿಹರಿಸುವಂತೆ ಮಾಡಬೇಕು. ಈ ರೀತಿ 

ಯಲ್ಲಿ ಬರೆದ ಕಾದಂಬರಿಯು ನಿಶ್ಚಯವಾಗಿಯೂ ಅತ್ಯುತ್ತಮವಾದ ನೈತಿಕಪರಿಣಾಮ 

ವನ್ನು ಮಾಡುವುದು. ನೀತಿಪರಿಣಾಮವನ್ನುಂಟುಮಾಡುವುದು ಅವಶ್ಯಕವೆಂಬುದೇ 

ನೋ ನಿಜ; ಆದರೆ ಅದು ಕವಿಯ ((कवयतीति कविः) ಮುಖ್ಯ ಕರ್ತವ್ಯವಲ್ಲ. ಕವಿಗೂ 

ಉಪನ್ಯಾಸಕನಿಗೂ, ಕಾವ್ಯಕ್ಕೂ ಉಪನ್ಯಾಸಕ್ಕೂ ಇರುವ ಭೇದವಿದೇ. ಸಾರಾಂಶ 

ವೇನಂದರೆ ಕಾದಂಬರಿಗಳಲ್ಲಿ ವಾಚಕರ ಚಿತ್ತಾಕರ್ಷಣವು ಲೇಖಕನ ಆದ್ಯಕರ್ತ 

ವ್ಯವು; ನೀತಿಬೋಧೆಯು ವ್ಯಂಗ್ಯಮರ್ಯಾದೆಯಿಂದ ತೋರಬೇಕಲ್ಲದೆ ವಾಚ್ಯವಾಗಿ 

ರಕೂಡದು. 


ಈ ಉದ್ದೇಶದಿಂದಲೇ ನಾನು ಒಂದೆರಡು ಕಾದಂಬರಿಗಳನ್ನು ಬರೆದಿದ್ದೇನೆ. 

ಉತ್ತಮೋತ್ತಮನಾದ ಸ್ವತಂತ್ರ ಗ್ರಂಥಗಳನ್ನು ಬರೆಯುವ ಯೋಗ್ಯತೆಯು ನನ್ನಲ್ಲಿ 

ಇಲ್ಲದೆ ಇದ್ದುದರಿಂದಲೂ ಇದ್ದ ಯೋಗ್ಯತೆಗೆ ಅನುಗುಣವಾದ ಗ್ರಂಥಗಳನ್ನು ರಚಿಸು 

ವುದಕ್ಕೆ ಸಾಕಷ್ಟು ವೇಳೆಯು ದೊರೆಯದೆ ಇದ್ದುದರಿಂದಲೂ ನನಗೆ ತಿಳಿದ ಅನ್ಯ 

ಭಾಷೆಗಳೊಳಗಿನ ಪುಸ್ತಕಗಳನ್ನು ಕೂಡಿದ ವೇಳೆಯಲ್ಲಿ ಭಾಷಾಂತರಿಸಿ ಕೈಲಾದಮಟ್ಟಗೆ 

ಕನ್ನಡಿಗರ ಸೇವೆಯನ್ನು ಮಾಡುತ್ತಲಿದ್ದೇನೆ. ಈ ಪ್ರಕಾರದ ನನ್ನ ಅಲ್ಪ ಸೇವೆಯನ್ನೇ 

ಬಹುವಾಗೆಣಿಸಿ " ಸುನಂದಿನೀ ಅಥವಾ ಪವಿತ್ರ ಪತಿಭಕ್ತಿ, ? " ಶ್ರೇಯಃ ಸಾಧನ "

ಎಂಬ ಪುಸ್ತಕಗಳಿಗೆ ಕರ್ನಾಟಕ ವಿದ್ಯಾವರ್ಧಕಸಂಘದವರು ಬಹುಮಾನವನ್ನಿತ್ತು 



 -------------------------------------೨----------------------------------- 



ಪ್ರೋತ್ಸಾಹಿಸಿದುದಕ್ಕಾಗಿ ಆವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಅದರಂತೆ ಪ್ರಸ್ತುತ 

ಪುಸ್ತಕವನ್ನು ವಾಗ್ಭೂಷಣದ್ದಾರದಿಂದ ಪ್ರಕಟಸಿದುದಕ್ಕಾಗಿ ' ಸಂಘ 'ದವರಿಗೆ ಆಭಾರಿ 

ಯಾಗಿರುವೆನಲ್ಲದೆ, ಬಹುಮಾನವನ್ನು ಕೊಟ್ಟು ಈ ಕೆಲಸದಲ್ಲಿ ನನಗೆ ಹೆಚ್ಚಾದ ಹುರು 

ನ್ವ ಹುಟ್ಟಿ ಸುವರೆಂದು ನಂಬಿದ್ದೇನೆ. ಇನ್ನು ಮುಂದೆ ಭಾಸ ಮಹಾಕವಿಯ ಸಂಸ್ಕೃತ 

ನಾಟಕದ ಭಾಷಾಂತರದ *" ಕರ್ಣಾಟಕಸ್ಪಪ್ನವಾಸವದತ್ತಂ” ಎಂಬ ನಾಟಕ 

ರಸವನ್ನು ವಾಗೂಷಣದ ವಾಚಕರ ಹೃದಯಪಾತ್ರದಲ್ಲಿ ಬಡಿಸಲು ಬರುವೆನೆಂಬುದನ್ನು 

ತಿಳಿಸಲು ಸಂತೋಷಬಡುತ್ತೇನೆ.. ಮತ್ತು ಈ ಸುಯೋಗವನ್ನು ಒದಗಿಸಿಕೊಡಲು 

ಒಪ್ಪಿರುವ ವಾಗ್ಭೂಷಣದ ವ್ಯವಸ್ಥಾಪಕರಿಗೆ ನನ್ನ ವಂದನೆಗಳನ್ನ ಅರ್ಪಿಸುತ್ತೇನೆ. 


ಮಹಾರಾಷ್ಟ್ರಭಾಷೆಯಿಂದ ನಾನು ಕನ್ನಡಕ್ಕೆ ಪರಿವರ್ತಿಸಿದ ಕಾದಂಬರಿಗಳಲ್ಲಿ 

ಇದು ಮೂರನೆಯದಾಗಿದೆ. ಈ ಪುಸ್ತಕದ ಗುಣದೋಷವಿಮರ್ಶೆಯನ್ನ ಮಾಡುವುದು, 

ನಿಷ್ಪಕ್ಷಪಾತಿಗಳೂ ವಿದ್ವಾಂಸರೂ ಅದ ವಾಚಕರ ಕೆಲಸವಾದುದರಿಂದ ಆ ವಿಷಯ 

ವಾಗಿ ನಾನೇನೂ ಬರೆಯುವ ಅವಶ್ಯಕತೆಯಿಲ್ಲವೆಂದು ತಿಳಿಯುತ್ತೇನೆ. ಇದರ ಮೂಲವು 

“ ಮಾಸಿಕಮನೋರಂಜನ "ದಲ್ಲಿ ಪ್ರಸಿದ್ಧವಾಗಿತ್ತು. ಆ ಪತ್ರಿಕೆಯ ಸಂಪಾದಕರಾದ 

ತ್ರೀ. ಕಾಶೀನಾಥ ರಘುನಾಥ ಮಿತ್ರರವರು ಕೀರ್ತಿಶೇಷರಾದ ವೃತ್ತಾಂತವನ್ನು ಈ 

ಉಪೋದ್ವ್ಯಾತದಲ್ಲಿ ಉಲ್ಲೇಖಿಸುವ ಪ್ರಸಂಗವು ಒದಗಿದುದಕ್ಕಾಗಿ ಅತ್ಯಂತವಾಗಿ ವಿಷಾ 

ದಿಸುತ್ತೀನೆ! ಇದು ವಂಗಭಾಸೆಯಿಂದ ಮಹಾರಾಷ ಭಾಷೆಗೆ ಪರಿವರ್ತಿತವಾಗಿರ 

ಬೇಕೆಂದು ಹೇಳಬಹುದಾಗಿದೆ. ನಾನು ಮರಾಠೀಭಾಷೆಯ ಮೂಲವನ್ನೇ ಅನುಸರಿಸಿ 

ರುವೆನಾದುದರಿಂದ ವಂಗಭಾಷಾವಿಶಾರದರಾದ ವಾಚಕರು, ಇದರಲ್ಲಿ ಏನಾದರೂ 

ನ್ಯೂನಾತಿರೇಕಗಳು ಕಂಡರೆ ಅವುಗಳಿಗೆ ನನ್ನನ್ನು ಹೊಣೆ ಮಾಡಲಿಕ್ಕಿಲ್ಲವೆಂದು  

ನಂಬಿದ್ದೇನೆ. 


ಕರ್ಣಾಟಕಭಕ್ತ 

ಭೀಮಾಜಿ ಜೀವಾಜಿ ಹುಲಿಕವಿ. 



ಪರಿಚ್ಛೇದ ಸೂಚಿ. 



ಮೊದಲನೆಯ ಪರಿಚ್ಛೇದ ವಿಮೋಚನ! ೧ 

ಎರಡನೆಯ ಪರಿಚ್ಛೇದ-ಪ್ರೇಮಸಂಚಾರ!

ಮೂರನೆಯ ಪರಿಚ್ಛೇದ- -ಚಿತ್ತದಮನ! ೧೩ 

ನಾಲ್ಕನೆಯ ಪರಿಚ್ಛೇದ--ಗುಪ್ತಸಂದರ್ಶನ ! ೧೯ 

ಐದನೆಯ ಪರಿಚ್ಛೇದ ಭೈರವಿ. ೩೦ 

ಆರನೆಯ ಪರಿಚ್ಛೇದ--ಪರಿಚಯ. ೫೩ 

ಏಳನೆಯ ಪರಿಚ್ಛೇದ--ವಿಲಕ್ಷಣ ಕುಲಾಚಾರ. ೪೮ 

ಎಂಟನೆಯ ಪರಿಚ್ಛೇದ-ಪ್ರೇಮಮಂದಿರ. ೫೪ 



============================================= 






ಮೊದಲನೆಯ ಪರಿಚ್ಛೇದ. | 



 

ವಿಮೋಚನ! 



" ಹಾ! ರಕ್ಷಿಸಿ! ರಕ್ಷಿಸಿ! ಯಾರಾದರೂ ಓಡಿ ಬಂದು ನನ್ನ ಪ್ರಾಣವನ್ನು ಉಳಿಸಿರಿ!” 



ಯಾವಳೋ ಒಬ್ಬ ತರುಣಿಯು ಅತ್ಯಂತ ಕರುಣಸ್ವರದಿಂದ ಈ ಪ್ರಕಾರವಾಗಿ 

ಒದರುತ್ತಿದ್ದಳು. ಅವಳ ಆಕ್ರೋಶದಿಂದ ಕನಕಗಡದ ಸುತ್ತುಮುತ್ತಲಿನ ಗುಡ್ಡ ಗಾಡ 

ಪ್ರದೇಶವೆಲ್ಲ ಪತಿಧ್ವನಿತವಾಯಿತು! ಪರ್ವತದ ಪ್ರತಿಯೊಂದು ದರಿಯಲ್ಲಿಯೂ ಕಂದರ 

ದಲ್ಲಿಯೂ ಆ ಕರುಣ ಸ್ವರವು ತುಂಬಿ ಹೋಯಿತು. 



ತರುಣಿಯು ಈ ಪ್ರಕಾರ ಅರ್ತಸ್ವರದಿಂದ ಕೂಗಿಕೊಳ್ಳುತ್ತಿದ್ದ ಸ್ಥಳದಿಂದ ಸ್ವಲ್ಪ ಅಂತ 

ರದ ಮೇಲೆ ಗಡ್ಡದೊಳಗೆ ಒಂದು ದಾರಿಯು ಹೋಗಿತ್ತು; ಜಾರಿಯ ಪಕ್ಕದಲ್ಲಿ ಒಂದು 

ಝರಿಯು ಮಂದವಾಗಿ ಹರಿಯುತ್ತಿತ್ತು. ಪ್ರವಾಸದ ಶ್ರಮದಿಂದ ದಣಿದು ತೃಷಾರ್ತನಾದ 

ಒಬ್ಬ ತರುಣಶಿಪಾಯಿಯು ಅ ಝರಿಯ ದಂಡೆಯ ಮೇಲೆ ಕುಳಿತು ತನ್ನ ನೀರಡಿಕೆಯನ್ನು  

ಶಾಂತಮಾಡಿಕೊಳ್ಳುತ್ತಿದ್ದನು. ಆತನು ಇಂದು ಬಹುದೂರದ ಪ್ರವಾಸವನ್ನು ಮಾಡಿದ್ದ 

ನೆಂಬಂತೆ ತೋರುತ್ತಿತ್ತು. ಆತನು ತೀರ ನಿಸ್ತೇಜನಾಗಿದ್ದನು. ಅತನ ಮುಖಮಂಡಲವು 

ಬೆಮರಿನಿಂದ ತೊಯ್ದುಹೋಗಿದ್ದರೂ ಒಣಗಿ ಹೋದ ಕಮಲದ ಹಾಗೆ ಕಾಣುತ್ತಿತ್ತು. 

ನೀರಡಿಕೆಯಿಂದ ವ್ಯಾಕುಲಿತನಾಗಿ ನೀರಿಗೋಸ್ಕರ ಇತ್ತಲತ್ತ ಬಹುಕಾಲದವರೆಗೆ ಸುತ್ತಿದ 

ಬಳಿಕ ಕಟ್ಟಕಡೆಗೆ ಅವನು ಆ ಝರಿಯನ್ನು ಕಂಡನು. ಕೂಡಲೇ ಅದರ ದಂಡೆಗೆ ಬಂದು 

ಬೊಗಸೆಯನ್ನು ತುಂಬಿ ಒಂದೆರಡು ಗುಟುಕು ನೀರನ್ನು ಕುಡಿಯುವಷ್ಟರಲ್ಲಿಯೇ ಮೇಲೆ 

ಹೇಳಿದ ತರುಣಸ್ತ್ರೀಯ ಆರ್ಶವಾದ ಕಂಠಸ್ವರವು ಪರ್ವತಪ್ರದೇಶವನ್ನೆಲ್ಲ ನಿನಾದಿತವಾಗಿ 

ಮಾಡಿ ಆತನ ಕರ್ಣರಂಧ್ರವನ್ನು ಪ್ರವೇಶಿಸಿತು. ಆಗಲಾ ತರುಣನು ನೀರು ಕುಡಿಯುವು 

ದನ್ನು ಅಷ್ಟಕ್ಕೇ ಬಿಟ್ಟನು. ಬೊಗಸೆಯೊಳಗಿನೆ ನೀರನ್ನು ಹಾಗೆಯೇ ಕೆಳಗೆ ಎಸೆದು 

ನಮ್ಮ ಶಿಪಾಯಿಯು ಎದ್ದು ನಿಂತುಕೊಂಡನು. 



ವಾಗ್ಮೂಷಣ. 




ಆ ತರುಣನು ತನ್ನ ಕುದುರೆಯನ್ನು ಸಮೀಪದಲ್ಲಿಯೇ ಒಂದು ಒಣ ಮರದ ಬೇರಿಗೆ 

ಕಟ್ಟಿದ್ದನು- ಅಲ್ಪಾವಧಿಯಲ್ಲಿಯೇ ಆತನು ಅದರ ಹತ್ತರ ಹೋಗಿ, ಲಗು-ಬಗೆಯಿಂದ 

ಅದರ ಬೆನ್ನು ಚಪ್ಪರಿಸಿ ಟಣ್ಣನೆ ಹಾರಿ ಅದರ ಮೇಲೆ ಕುಳಿತು ಮಾತನಾಡಿದನು. " ಮಗೂ, 

ಅಜಯಾ! ಇಡ ಇಂದು ನಮಗೆ ವಿರಾಮವು ದೊರೆಯಲೇ ಇಲ್ಲ. 


ಅಜಯನನ್ನು ವೇಗವಾಗಿ ನಡೆಯಿಸುತ್ತ ಆ ಶಿಪಾಯಿಯು ಆ ಆಕ್ರಂದನದ ಧೋರ 

ಣೆಯಿಂದಲೇ ಮಾರ್ಗವನ್ನು ಕ್ರಮಿಸಹತ್ತಿದನು. ಆ ಗುಡ್ಡಗಾಡ ಪ್ರದೇಶದಲ್ಲಿ ಹೆಚ್ಚಾಗಿ 

ತಗ್ಗುಮಿಟ್ಟಿಗಳಿದ್ದದರಿಂದ ಇಷ್ಟಸ್ಥಳವನ್ನು ಮುಟ್ಟಲು ಆತನಿಗೆ ಸ್ವಲ್ಪ ಅವಕಾಶವು ಬೇಕಾ 

ಯಿತು, ಆ ಸ್ಥಳಕ್ಕೆ ಬಂದೊಡನೆಯೇ ವಿಲಕ್ಷಣವಾದ ನೋಟವನ್ನು ಕಂಡ 

ನು. ಅತ್ಯಂತ ರೂಪವತಿಯಾದ ಒಬ್ಬ ತರುಣ ಸ್ತ್ರೀಯನ್ನು ಒಂದು ಗಿಡಕ್ಕೆ ಬಿಗಿದು, ಪಿಶಾ 

ಚಾಕಾರನಾದ ಒಬ್ಬ ಪುರುಷನು ಕೆಂಗಣ್ಣಿ ನಿಂದ ನೋಡುತ್ತ ಅವಳ ಎಡುರಿನಲ್ಲಿ ನಿಂತು 

ಕೊಂಡಿದುದು ಅವನ ಕಣ್ಣಿಗೆ ಬಿತ್ತು. ಆ ಪುರುಷನು ನರಕಲೋಕದ ಭಯಂಕರನಾದ 

ದ್ವಾರಪಾಲಕನೋ ಎಂಬ ಸಂಶಯವು ನಮ್ಮ ಶಿಪಾಯಿಯ ಮನಸ್ಸಿನಲ್ಲಿ ಹುಟ್ಟಿತು. ಸಮೀ 

ಪದಲ್ಲಿಯೇ ಒಂದು ಮೇಣೆಯು ತುಂಡುತುಂಡಾಗಿ ಮುರಿದು ಬಿದ್ದಿತ್ತು. 


ನಮ್ಮ ತರುಣವೀರನು ಅಲ್ಲಿ ಬಂದೊಡೆನೆಯೇ ಕೈಯೊಳಗಿನ ಕತ್ತಿಯನ್ನು ಒರೆ 

ಯೊಳಗಿಂದ ಹಿರಿದನು. ಮತ್ತು ಖಡ್ಗದ ಹಿಡಿಕೆಯಿಂದ. ಆತನ ಭುಜದ ಮೇಲೊಂದು 

ಬಲವಾದ ಏಟನ್ನು ಕೊಟ್ಟು ಕ್ರೋಧಕಂಪಿತ ಸ್ವರದಿಂದ ಗರ್‍ಜಿಸಿದನು. “ನೀನು 

ಯಾರು? ”  


ಭಯದಿಂದ ಬೆದರಿ ನಡುಗುತ್ತ ನಡುಗುತ್ತ ಆ ಪುರುಷನು ಉತ್ತರವಿತ್ತನು. “ಮಹಾ 

ಸ್ವಾಮೀ, ದಯನಿಟ್ಟು ನನ್ನ ನ್ನು ಕ್ಷಮಿಸಿರಿ. ನಾನು ಅಪ್ಪಣೆಯಂತೆ ನಡೆಯುವ ಸೇವಕನು. 

ನಾನು ಸ್ವಲ್ಪಾದರೂ ಅಪರಾಧವನ್ನು ಮಾಡಿಲ್ಲ. ? 


“ನಿನ್ನ ಒಡೆಯನು ಎಲ್ಲಿ ಇದ್ದಾನೆ? ” 


" ಅವರು ಮೇಣಾವಾಹಕರನ್ನು ಬೆನ್ನಟ್ಟಿ ಹೋಗಿದ್ದಾರೆ. ” 


"ಈ ಮುರಕ ಮೇಣೆಯು ಯಾರದು? ಅದನ್ನು ಹೊರುವವರು ಎಲ್ಲಿಹೋದರು?? 


“ಜೀವದ ಆಶೆಯಿಂದ ಅವರು ಓಡಿಹೋದರು. ಈ ಮೇಣೆಯು ಈ ಅಮ್ಮನವರದು, 

ದೇವದರ್ಶನವನ್ನು ಮಾಡಿಕೊಂಡು ಇವರು ಈ ದಾರಿಯಿಂದ ಹೋಗುತ್ತಿರಲು ನಮ್ಮ  

ಯಜಮಾನರು ಮೇಣಾವಾಹಕರನ್ನು ಹೊಡೆದು ಓಡಿಸಿದರು. "


"ನೀನು ಯಾರು? ರಜಪೂತನೋ? " 


"ಹೌದು--ನಾನು ಚಂದ್ರಾವತನು. " 


' "ದುಷ್ಕೃನಾದ ಆ ನಿನ್ನ ಯಜಮಾನನು ಯಾರು! '' 


"ಅವರೂ ಚಂದ್ರಾವತರೇ. " 



---------------------------ಪ್ರೇಮಮಂದಿರ.------------------------ ೩ 


“ನೀವು ಚಂದ್ರಾವತ ರಜಪೂತಚಾತಿಗೆ ನಿಜವಾಗಿಯೂ ಕಲಂಕಪ್ರಾಯರು. ಈ 

ಹೆಣ್ಣು ಮಗಳು ಯಾರೆಂಬದನ್ನು ನೀನು ಬಲ್ಲೆಯಾ? ” 


"ನಾನರಿಯೆನು, "


ಕತ್ತಿಯ ಅಲಗನ್ನು ಅತನ ಹೆಗಲಮೇಲಿಟ್ಟು ನಮ್ಮ ತರುಣ ಶಿಪಾಯಿಯು ಕರ್ಕ 

ಶಸ್ವರದಿಂದ ಮಾತಾಡಿದನು. “ನಿಜವಾಗಿ ಹೇಳು. ಮೂರ್‍ಖಾ ! ಇಲ್ಲದಿದ್ದರೆ ನಿನ್ನ ಸಂತೆ 

ಯು ಮುಗಿಯಿತೆಂದು ತಿಳಿ. " 


ನಡುಗುತ್ತ ನಡುಗುತ್ತ ಆ ಪುರುಷನು ಹೇಳಿದನು. "ಏಕಲಿಂಗದೇವರ ಶಪಥದಿಂದ 

ಹೇಳುತ್ತೇನೆ. ನಿಜವಾಗಿ ನನಗೆ ಯಾವ ಸಂಗತಿಯೂ ಗೊತ್ತಿಲ್ಲ. " 



“ಈ ಹೆಣ್ಣುಮಗಳನ್ನು ಇಲ್ಲಿ ಕಟ್ಟಿದವರಾರು? ” 



""ಯಜಮಾನರವರೇ-- ? 



ಆತನ ಹೆಗಲಮೇಲಿನ ಖಡ್ಗವನ್ನು ತೆಗೆದುಕೊಂಡು ನಮ್ಮ ತರುಣನು ಉಚ್ಚಸ್ವರ 

ದಿಂದ ಆ ಪುರುಷನನ್ನು ಬೆದರಿಸುತ್ತ ಮಾತನಾಡಿದನು. ""ಇಲ್ಲಿಂದ ಓಡಿಹೋಗುವದಕ್ಕೆ 

ಕೊಂಚಮಟ್ಟಿಗಾದರೂ ಪ್ರ ಪ್ರಯತ್ನ ಪಡುವೆಯಾದರೆ ಸತ್ತೆಯೆಂದೇ ತಿಳಿದುಕೋ! ನನ್ನ 

ಕೆಲಸವೆಲ್ಲ ಮುಗಿಯುವ ವರೆಗೆ ಬಾಯಿಮುಚ್ಚಿ ಕೊಂಡು ಇಲ್ಲಿ ನಿಲ್ಲು. ? 



ಹೀಗೆ ಆತನನ್ನು ಆಜ್ಞಾಪಿಸಿ, ಮೃತಪ್ರಾಯಳಾದ ಆ ರಮಣಿಯ ಕಟ್ಟಿನ ಹಗ್ಗಗ 

ಳನ್ನು ತ್ವರೆಯಿಂದ ಹರಿದು ಆಕೆಯನ್ನು ಬಂಧನದಿಂದ ಬಿಡಿಸಿದನು. ಚೋರರಿಂದ ತನಗೆ 

ಪ್ರಾಪ್ತ ವಾದ ಅವಸ್ಥೆಯಮೂಲಕ ಆ ಕೋಮಲಾಂಗಿಯು "ಗದಗದ, ನಡುಗುತ್ತಿದ್ದಳು. 

ಶೂನ್ಯದೃಷ್ಟಿಯಿಂದ ಅವಳು ಆ ತರುಣವೀರನನ್ನು ನೋಡಹತ್ತಿದಳು. 



ಪರಿಪರಿಯಿಂದ ಅವಳಿಗೆ ಅಭಯವನ್ನಿತ್ತು ನಮ್ಮ ತರುಣವೀರನು ಕೋಮಲ ಸ್ವರ 

"ದಿಂದ ಮಾತಾಡಿದನು. " ಇನ್ನು ಮೇಲೆ ತಾವು ಹೆದರಬೇಕಾದುದಿಲ್ಲ. ತಾವು ಈಗ  

ಸಂಕಟದೊಳಗಿಂದ ಪಾರಾಗಿರುವಿರಿ. ತಾವು ಯಾರೆಂಬುದನ್ನು ನನಗೆ ನಿರ್ಭಯದಿಂದ 

ಹೇಳುವದಾಗಬೇಕು. ನನ್ನ ಹೆಸರು ಕರುಣಸಿಂಹ. ನಾನು ಅಕಬರಬಾದಶಹನ ಸೇನಾ 

ಪತಿಗಳಲ್ಲೊಬ್ಬನು. ಮೊಗಲರು ರಾಜಸ್ಥಾನದಲ್ಲಿ ಹೊಸದಾಗಿ ಗೆದ್ದು ಕೊಂಡಿರುವ ಪ್ರದೇ 

ಕೈ ನಾನೊಬ್ಬ ಪ್ರಮುಖನಾದ ಅಧಿಕಾರಿಯಾಗಿದ್ದೇನೆ. ನಿಃಸಂದೇಹವಾಗಿ ತಾವು ನನ್ನ 

ಮೇಲೆ ವಿಶ್ವಾಸವನ್ನಿಡಿರಿ. " 


ಕರುಣಸಿಂಹನ ಪರಿಚಯದಿಂದ ಆ ಹೆಂಗಸು ಚಕಿತಳಾದಳು. ' ಕರುಣಸಿಂಹ! 

ಕರುಣಸಿಂಹ! ಆ ಪ್ರಸಿದ್ಧರಾದ ಕರುಣಸಿಂಹರು ಇವರೇ ಏನು!!' ಆ ರಮಣಿಯ 

ಹೃದಯದಲ್ಲಿದ್ದ ಭಯದ ಸ್ಥಳದಲ್ಲಿ ಈಗ ಆನಂದವು ತಾಂಡವವನ್ನು ಮಾಡತೊಡಗಿತು. 

ಇನ್ನಾ ವನಾದರೂ ಬಬ್ಬ ಪುರುಷನಿಗೆ ಈ ಪ್ರಸಂಗದಲ್ಲಿ ತನ್ನ ಪರಿಚಯವನ್ನು ಸಹಜವಾಗಿ 

ಹೇಳಿಬಿಡಬಹುದಾಗಿತ್ತು; ಅದರೆ ಈ ವೀರನಿಗೆ ತನ್ನ ಪರಿಚಯನನ್ನುಂಟುಮಾಡಿಕೊಡು 



೪-------------------------------- ವಾಗ್ಭೂಷಣ.-----------------------------------

 



ವುದು ಯೋಗ್ಯವಲ್ಲವೆಂದು ಆಲೋಚಿಸಿ ಆ ತರುಣಿಯು ಮಾತನಾಡಿದಳು. " ವೀರ 

ಶ್ರೇಷ್ಠರೇ! ತಾವು ಈ ದಿನ ನನ್ನ ಮೇಲೆ ಮಾಡಿದ ಉಪಕಾರವನ್ನು ಜನ್ಮಜನ್ಮಾಂತರ 

ದಲ್ಲಿಯೂ ತೀರಿಸುವುದು ಅಸಾಧ್ಯವಾಗಿದೆ. ವೀರೋಚಿತವಾದ ಧರ್ಮದಿಂದ ವರ್ತಿಸಿ 

ತಾವು ಭಯಂಕರವಾದ ಪ್ರಾಣಸಂಕಟದೊಳಗಿಂದ ನನ್ನನ್ನು ಸಂರಕ್ಷಿಸಿದಿರಿ. ಅದರೆ 

ನಾನು ಯಾರೆಂಬುದನ್ನು ತಮಗೆ ತಿಳಿಸುವಂತಿಲ್ಲ; ಆದುದರಿಂದ ನನ್ನನ್ನು ಕ್ಷಮಿಸುವುದಾಗ 

ಬೇಕು. ದಯವಿಟ್ಟು ತಾವು ನನ್ನನ್ನು ಈ ಗುಡ್ಡ ಗಾಡ ಪ್ರದೇಶದಿಂದ ಆಚೆಗೆ ಕರೆದು 

ಕೊಂಡು ಹೋಗುವುದಾಗಬೇಕು. ಆ ಮೇಲೆ ನಾನೇ ಹೋಗುವೆನು. ಸಮೀಪದಲ್ಲಿಯೇ 

ಗ್ರಾಮವಿದೆ; ಅಲ್ಲಿ ಮೇಣೆಯಾಗಲಿ, ಡೋಲಿಯಾಗಲಿ ಸಿಕ್ಕಬಹುದು. "


" ತಮ್ಮ ಅಪೇಕ್ಷೆಯಂತೆಯೇ ಆಗಬಹುದು! ಅದರೆ ತಾವು ಒಬ್ಬರೇ ಇರುವಿರಿ. 

ಅದುದರಿಂದ ಒಂದು ವೇಳೆ ತಮಗೆ ಪುನಃ ಸಂಕಟವು ಪ್ರಾಪ್ತವಾಗಬಹುದು. " 


ಮುಗುಳ್ನಗೆಯಿಂದ ಆ ರಮಣಿಯ ಮಾತನಾಡಿದಳು, " ಬಾದಶಹನ ನೂತನ 

ಸೇನಾಪತಿಗಳ ಖಡ್ಗ ಧಾರಿಯಾದ ಹಸ್ತವು ದುರ್ಬಲನಾಗಿಲ್ಲವೆಂಬುದು ನನಗೆ ಚೆನ್ನಾಗಿ 

ಗೊತ್ತು! ಆದರೆ-!” 



ನಮ್ಮ ತರುಣಶಿಪಾಯಿಯು ಅ ರಮಣಿಯ ಅತುಲವಾದ ಸೌಂದರ್ಯದಿಂದ 

ಮೊದಲೇ ದೇಹಭಾನವನ್ನು ಮರೆತಿದ್ದನು. ಈಗ ಅವಳ ಮಂಜುಲವಾದ ಕಂಠಸ್ವರವನ್ನು 

ಕೇಳಿ ಮಂತ್ರಮೂಢಮನುಷ್ಯನಂತೆ ಸ್ತಬ್ಧ ನಾದನು! ಆ ಮೇಲೆ ಏನನ್ನೋ  ಜ್ಞಾಪಿಸಿ 

ಕೊಂಡು ಹಿಂದಕ್ಕೆ ಹೊರಳಿ ನೋಡಿದನು. ಅಲ್ಲೇನಿದೆ? ಯೋಗ್ಯವಾದ ಸಂಧಿಯನ್ನು 

ಸಾಧಿಸಿ ಆ ಹಸ್ತಗತನಾದ ಚಂದ್ರಾವತನು ಅಗಲೇ ಓಡಿಹೋಗಿದ್ದನು. ಆ ಪರ್ವತ 

ಪ್ರದೇಶವು ನಮ್ಮ ಶಿಪಾಯಿಗೆ ಅಪರಿಚಿತವಾಗಿತ್ತು. ಈಗಲವನು ಮಾಡಬೇಕಾದುದೇನು? 

ದುರ್ಗಮವಾದ ಆ ಪರ್ವತವನ್ನು ಅತನು ದಾಟಿ ಹೋಗುವುದೆಂತು? 


ವೀಣಾರವವನ್ನು ಕೂಡ ನಾಚಿಸುವಂತಹ ಮಧುರವಾದ ಸ್ವರದಿಂದ ಆ ಸುಂದರಿ 

ಯು ಮತ್ತೆ ಮಾತನಾಡಿದಳು. “ ತಾವು ಅದಾವ ವಿಚಾರವನ್ನು ಮಾಡುತ್ತಿರುವಿರಿ? ನಡೆ 

ಯಿರಿ. ನಾವು ಜಾಗ್ರತೆಯಾಗಿ ಈ ಪ್ರದೇಶವನ್ನು ದಾಟಿಹೋಗುವ. ಆ ಅಧಮರಾದ 

ಚಾಂಡಾಲರು ಇಲ್ಲಿ ಬಹಳವಾಗಿ ಇದ್ದಾರೆ. ಅವರು ಮತ್ತೆ ಇಲ್ಲಿಗೆ ಬಂದು ನಮ್ಮಿಬ್ಬ 

ರನ್ನೂ ಸಂಕಟಕ್ಕೆ ಗುರಿಮಾಡಬಹುದು. "



ಅಹಹಾ! ಅದೆಷ್ಟ್ರು ಮಧುರಸ್ವರವದು! ಸಜ್ಜಾಗಿ ಮೇಳಯಿಸಿದ ಸತಾರದ ತಂತಿ 

ಯ ಮೇಲೆ ಬೆರಳನ್ನು ಆಡಿಸಿ ರಸಿಕರಾರಾದರೂ ಮೋಹಕವಾದ ಝಂಕಾರವನ್ನು 

ಉತ್ಪನ್ನಮಾಡಿದರೋ! ಅಹಹಾ! ಆ ರಮಣಿಯ ರೂಪವಾದರೂ ಎಷ್ಟು ರಮಣೀಯ! 

ಎಷ್ಟು ಹೃದಯಂಗಮ! ಹೊತ್ತಾರೆಯಲ್ಲಿ ಅರಳಿದ ಸುಂದರವಾದ ಕಮಲದಂತೆ ನಿಷ್ಕ 

ಲಂಕವಾದ ಆ ಸುಂದರಿಯ ಮುಖಮಂಡಲವು ಭಗನತಿಯಾದ ಪ್ರೀತಿದೇವತೆಯ 



------------------------------------ಪ್ರೇಮಮಂದಿರ. -------------------------------- ೫ 



ಮನೋಹರ ವಿಲಾಸದ ಕ್ರೀಡಾಂಗಣವಾಗಿತ್ತು! ವಿಶಾಲವೂ ತೇಜಃಪುಂಜವೂ ಆದ 

ಲೋಚನಯುಗಲದ ನೋಟವು ಎಷ್ಟು ಚಂಚಲ! ಎಷ್ಟು ಮೋಹಕ!! ವೇಣೀರೂಪ 

ದಿಂದ ಬಂಧಿತವಾದ, ಭ್ರಮರಗಳಂತೆ ಶೊಭಾಯಮಾನವಾದ ಕೃಷ್ಣ ಕೇಶರಾಜಿಯು 

ಎಷ್ಟು ಮನೋಹರ! ವ ಬಾಹುಯುಗ್ನವು ಎಷ್ಟು ಚಿತ್ತಾಕರ್ಷಕ! ಎಷ್ಟು ರಮ್ಯ!! 

ಹೆಚ್ಚು ಎತ್ತರವಾಗಿಯೂ ಹೆಚ್ಚು ಗಿಡ್ಡವಾಗಿಯೂ ಅಲ್ಲದ ಮಧ್ಯಮಾಕಾರದ ಅವಳ 

ದೇಹಯುಷ್ಟಿಯು ಎಷ್ಟು ಸೂಕ್ಷ್ಮ ! ವಿಧಾತೃವಿನ ಈ ಸುಂದರವಾದ ಸೃಷ್ಟಿಯನ್ನು 

ನೋಡುತ್ತಿರುವಾಗ ಕಣ್ಣ ರೆಪ್ಪೆಗಳು ಅಲೆಯುವುದೇ ಇಲ್ಲ! ಒಮ್ಮೆ ನೋಡಿದರೆ ಸಾಕು- 

ದರ್ಶನಾಪೇಕ್ರಷೆಯು ಹೆಚ್ಚುತ್ತಲೇ ಹೋಗುವುದು; ಜನ್ಮಜನ್ಮಾಂತರಗಳಲ್ಲಿಯೂ ದರ್ಶ 

ನೇಚ್ಚೆಯು ತೃಪ್ತವಾಗುವುದಿಲ್ಲ. 



ಪ್ರಿಯವಾಚಕರೇ, ವಸಂತಯತುವಿನ ಮೃದುಶೀತಲವಾಯುವಿನಿಂದ ಪ್ರೇಮಭರ 

ದಿಂದ ಚುಂಬಿತವಾದ ಉಳ್ಳಲರ್ದ ಗುಲಾಬಿಯ ಸೌಂದರ್ಯವನ್ನು ನೀವು ಎಂದಾದರೂ 

ನೋಡಿರುವಿರೋ? ಹೇಮಂತಋತುವಿನ ತಂಪಾದ ಇಬ್ ನಿಯೋಗ ಸ್ನಾತವಾದ ಮುಗ್ಧ 

ವಾದ ಜಾದಿಯ ಕಲಿಕೆಯ ಮನೋರಮವಾದ ಲಾವಣ್ಯವನ್ನು ನೀವು ಎಂದಾದರೂ 

ಅವಲೋಕಿಸಿರುವಿರೋ? ವರ್ಷಾಕಾಲದ ತುಂತುರವೃಷ್ಟಿಯಿಂದ ಧೌತವಾದ ಪೂರ್ಣ 

ವಿಕಸಿತವಾದ ಚಂಪಕದ ಗೌರಕಾಂತಿಯ ರಮ್ಯಚ್ಚಾಯೆಯನ್ನು ನೀವು ಎಂದಾದರೂ 

ನಿರೀಕ್ಷಿಸಿರುವಿರೋ? ನೀಲಮೇಘಗಳಿಂದ ಆಚ್ಚನ್ನವಾದ ವಿಸ್ತೀರ್ಣವಾದ ಗಗನದಲ್ಲಿ 

ಥಳಥಳಿಸುವ ಸೌದಾಮಿನಿಯ ಪ್ರಖರರೂಪಜ್ಯೋತಿಯನ್ನು ನೀವು ಎಂದಾದರೂ ಕಂಡಿ 

ರುವಿರೋ? ಬ್ರಹ್ಮದೇವನ ಈ ಮನೋಹರವಾದ ಸೃಷ್ಟಿಯನ್ನು ನೋಡಿ ನಿಮ್ಮ 

ಮನಸ್ಸು ಕ್ವಚಿತ್ಪ್ರಸಂಗದಲ್ಲಿ ಮೋಹಿತವಾಗಲಿಕ್ಕಿಲ್ಲ; ಆದರೆ ಆ ರಜಪೂತ ಬಾಲಿಕೆಯನ್ನು 

ನೋಡಿ ಸೃಷ್ಟಿ ಕರ್ತನ ಸೃಷ್ಟಿ ಚಾತುರ್ಯದ ವಿಷಯಕ್ಕೆ ಅಚ್ಚರಿಪಡುತ್ತ ಮೂಢರಾಗುವಿರಿ; 

ಆ ಲಾವಣ್ಯಮಾಧುರಿಯಿಂದ ನಿಶ್ಚಯವಾಗಿಯೂ ವಿಸ್ಮೃತಿಯನ್ನು ಹೊಂದುವಿರಿ! 



ನಮ್ಮ ತರುಣ ಶಿಪಾಯಿಯು ಆ ಮನೋಮೋಹಿನಿಯ ಸ್ಥಿರವೂ ಉಜ್ಜಲವೂ ಆದ 

ನೇತ್ರಕಟಾಕ್ಷದ ಬಲೆಯಲ್ಲಿ ಸಿಕ್ಕಿದನೋ ಅಲ್ಲವೋ ಎಂಬುದನ್ನು ಖಂಡಿತವಾಗಿ ಹೇಳ 

ಲಾರೆವು. ಆದರೂ ಇಂದಿನವರೆಗೆ ಯಾವ ಕರುಣಸಿಂಹನ ಹೃದಯದ ಮೇಲೆ ರಮಣೀ 

ಪ್ರೇಮದ ಅಮೋಘಶಕ್ತಿಯಿಂದ ಲವಮಾತ್ರವಾದರೂ ಪರಿಣಾಮವಾಗಿದ್ದಿಲ್ಲವೋ 

ಅಂತಹ ಆತನ ಅಭೇದ್ಯ ಹೃದಯವು ಇಂದು ಕಂಪಿಸತೊಡಗಿತೆಂಬುದನ್ನು ಮಾತ್ರ 

ನಿಶ್ಚಯವಾಗಿ ಹೇಳಬಲ್ಲೆವು. ಪ್ರವಾಸದ ದಣುವಿನಿಂದ ಕರುಣಸಿಂಹನು ದಣಿದಿದ್ದ 

ನೆಂಬುದು ವಾಚಕರಿಗೆ ಗೊತ್ತೇ ಇದೆ. ಅದರಲ್ಲಿಯೂ ಅತನ ದುರ್ದೈವದಿಂದ ಅತ್ಯಂತ 

ವಾಗಿದ್ದ ತನ್ನ ನೀರಡಿಕೆಯನ್ನು ಕಳೆದುಕೊಳ್ಳುವುದಕ್ಕೆ ಕೂಡ ಅವಕಾಶವಾಗಲಿಲ್ಲ! 

ಈ ಪ್ರಕಾರ ಆತನು ಅತ್ಯಂತ ಕ್ಲಾಂತನಾಗಿದ್ದರೂ ಈ ಸಮಯದಲ್ಲಿ ಅತನ ಮುಖದ 



೬-------------------------------ವಾಗ್ಭೂಷಣ-----------------------------------



ಮೇಲೆ ಒಂದು ಪ್ರಕಾರದ ಅನಂದರಸವು ಹರಿದಾಡುತ್ತಿತ್ತು. ಕೆಲಹೊತ್ತಿಗೆ ಮುಂಚೆ 

ಕರುಣಸಿಂಹನು ಆ ಸುಂದರಿಯೊಡನೆ ನಿಃಸಂಶೋಚವಾಗಿ ಮಾತನಾಡುತ್ತಿದ್ದನು; ಆದರೆ 

ಈಗ ಅವಳೊಡನೆ ಮಾತನಾಡಲು ಒಂದುತರದ ಸಂಕೋಚಭಾವವು ಅವನ ಮನಸ್ಸಿ 

ನಲ್ಲಿ ಆಕಸ್ಮಿಕವಾಗಿ ಉದ್ಭವಿಸಿತು. ಅಲ್ಪಕಾಲದಲ್ಲಿಯೇ ಈ ರಮಣಿಯನ್ನಗಲಿ ಹೋಗ 

ಬೇಕಾಗುವುದೆಂಬ ವಿಚಾರದಿಂದ ಆತನ ಮನಸ್ಸಿಗೆ ವ್ಯಥೆಯಾಗಹತ್ತಿತು. ಯಾವನು 

ಏಕಾಕಿಯಾಗಿದ್ದರೂ ಕರ್ತವ್ಯಪಾಲನಕ್ಕೋಸ್ಕರವಾಗಿ ಸಂಕಟವನ್ನು ಸಹ ಲೆಕ್ಕಿಸದೆ 

ಓಡಿ ಬಂದಿದ್ದನೋ ಅದೇ ಕರುಣಸಿಂಹನಿಗೆ ಈಗ ಕರ್ತವ್ಯದ ಸ್ಮರಣೆಯೇ ಇಲ್ಲ 

ದಾಯಿತು. 


ನಿಶಾದೇವಿಯು ತನ್ನ ಕೃಷ್ಣಕರಾಲವಾದ ಛಾಯೆಯಿಂದ ಮೆಲ್ಲ ಮೆಲ್ಲನೆ ಜಗ 

ತ್ತನ್ನು ಗಭೀರವಾಗಿ ವ್ಯಾಪಿಸುತ್ತಿರುವುದು ಈಗ ನಮ್ಮ ತರುಣವೀರನಿಗೆ ಗೊತ್ತಾಯಿತು. 

ಆ ಪರ್ವತಪ್ರದೇಶದ ನೈಸರ್ಗಿಕವಾದ ಶ್ಯಾಮಲತೆಯು ಇಲ್ಲದಂತಾಗಿ ಕಪ್ಪು ಬಣ್ಣದ 

ತೆರೆಯು ಅದರ ಮೇಲೆ ಬೀಳತೊಡಗಿತು. ಕರುಣಸಿಂಹನು ಈಗ ಚಿಂತಾಮಗ್ನನಾದನು. 


ಆಗಲವನು ಪ್ರೇಮದ ಸ್ವರದಿಂದ ಆ ಸ್ತ್ರೀಯನ್ನು ಕುರಿತು ಮಾತನಾಡಿದನು. 

" ಸುಂದರೀ, ಕಷ್ಟಕರವಾದ ಈ ಗುಡ್ಡದ ದಾರಿಯಲ್ಲಿ ಮಾರ್ಗವನ್ನು ಕ್ರಮಿಸುವುದು 

ನಿನ್ನಿಂದ ಹೇಗೆ ಸಾಧ್ಯವೋ ನಾನರಿಯೆನು! ಅದುದರಿಂದ ನನ್ನ ಕೈಯನ್ನು ಹಿಡಿ. 

ಸಮೀಪದಲ್ಲಿಯೇ ನನ್ನ ಕುದುರೆಯನ್ನು ಕಟ್ಟಿದ್ದೇನೆ; ಅಲ್ಲಿಯವರೆಗೆ ಹೋಗುವ. ” 



ಇನ್ನಾವುದಾದರೂ ಸಂದರ್ಭವಿದ್ದರೆ ಆ ತರುಣಿಯು ಪರಪುರುಷನ ಹಸ್ತವನ್ನು 

ಹಿಡಿಯಲು ಒಡಂಬಡುತ್ತಿದ್ದಿಲ್ಲ. ಆದರೆ ಈಗ ಗತ್ಯಂತರವೇ ಇದ್ದಿಲ್ಲ. ಗುಡ್ಡಗಾಡಿನ 

ದಾರಿಯು ಅತ್ಯಂತ ಕಷ್ಟಕರವಾಗಿತ್ತು; ಸಾಲದುದಕ್ಕೆ ಸಂಧ್ಯಾಕಾಲವಾಗಿ ಅಂಧಕಾ 

ರವು ಎಲ್ಲೆಡೆಯಲ್ಲಿಯೂ ಪಸರಿಸುತ್ತಿತ್ತು. ಅದರಲ್ಲಿಯೂ ಶತ್ರುಗಳು ಬಂದು ಯಾವಕಾ 

ಲಕ್ಕೆ ತೊಂದರೆ ಕೊಡುವರೋ ಎಂಬ ಅಂಜಿಕೆ, ಆದುದರಿಂದ ಅವಳು ಕರುಣಸಿಂಹನ 

ಕೈಯನ್ನು ಹಿಡಿದಳು. ಇಬ್ಬರೂ ಒಳ್ಳೇ ಜಾಗರೂಕತೆಯಿಂದ ನಡೆಯಹತ್ತಿದರು. 


ದಾರಿಯು ಮೊದಲೇ ಸಂಕುಚಿತವಾಗಿತ್ತು; ಅದರಲ್ಲಿಯೂ ಕಲ್ಲು-ಬಂಡೆಗಳೂ 

ತಗ್ಗು-ನಿಟ್ಟಿಗಳೂ ಎಲ್ಲೆಡೆಯಲ್ಲಿಯೂ ತುಂಬಿದ್ದುವು. ಎರಡೂ ಪಕ್ಕಗಳಲ್ಲಿ ಎತ್ತರವಾದ 

ಗುಡ್ಡದ ತುದಿಗಳು ನಿಂತಿದ್ದುವು. ನಾಲ್ಕೂ ಕಡೆಗಳಲ್ಲಿಯೂ ಶ್ಯಾಮಲಪತ್ರಗಳಿಂದ ಅಜ್ಜಾ 

ದಿತವಾದ ಚಿಕ್ಕ-ದೊಡ್ಡ ಸಾಸಿರಾರು ವೃಕ್ಷಗಳಿದ್ದುವು. ಎಲ್ಲೆಡೆಯಲ್ಲಿಯೂ ನಿಸ್ತಬ್ಧತೆ. 

ಅಸ್ತಗಾಮಿಯಾದ ಸೂರ್ಯನ ಆರಕ್ತ ಕಿರಣಗಳು ಮಲಿನವಾಗಿದ್ದುವು. 


ಮೇಲೆ ಹೇಳಿದಂತೆ ಅವರಿಬ್ಬರೂ ಮೆಲ್ಲ ಮೆಲ್ಲನೆ ಹೋಗುತ್ತಿರಲು, ಗುಡ್ಡದೊಳ 

ಗಿನ ಒಂದು ಗುಹೆಯಿಂದ ಎಂಟು ಹತ್ತು ಜನರು ಹೊರಬಿದ್ದು ಅವರ ದಾರಿಗೆ ಅಡ್ಡ 

ಬಂದರು. ಎಂಟು ಹತ್ತು ತೀಕ್ಷ್ಣವಾದ ನಗ್ಗಖಡ್ಗಗಳು ಸಾಯಂಕಾಲದ ಕ್ಲೀಣವಾದ 



------------------------ಪ್ರೇಮಮಂದಿರ. ----------------------------- ೭



ಕತ್ತಲೆಯಲ್ಲಿ ಹೊಳೆಯಹತ್ತಿದುವು! ಕರುಣಸಿಂಹನು ಒಬ್ಬನೇ; ಅದರಲ್ಲಿಯೂ ಅನಾಥ 

ಳಾದ ಅಬಲೆಯೊಬ್ಬಳು ಆತನ ಆಶ್ರಯದಲ್ಲಿದ್ದಳು. ಬಂದಂತಹ ಆ ಜನರು ಇವರಿಬ್ಬರ 

ಮೇಲೆಯೂ ಸಾಗಿಬಂದರು. ಆ ಸ್ತ್ರೀಯನ್ನು ತನ್ನ ಬೆನ್ನ ಹಿಂದೆ, ತೆಗೆದುಕೊಂಡು, ವಿಪ 

ದ್ಭಂಜಕನಾದ ಪರಮೇಶ್ವರನನ್ನು ಸ್ಮರಿಸಿ ಕರುಣಸಿಂಹನು ಕತ್ತಿಯನ್ನು ಒರೆಯಿಂದ ಹಿರಿ 

ದನು. ಮತ್ತು ಎದುರಾಳಿಗಳನ್ನು ಪ್ರತಿಭಟಿಸಿ ನಿಂತನು. 



ತನ್ನ ಮೇಲೆ ಸಾಗಿಬಂದಿರುವ ಸಮೂಹದಲ್ಲಿ ಮೊದಲು ಮೋಸಗಾರಿಕೆಯಿಂದ 

ಓಡಿಹೋದ ಚಂದ್ರಾ ವತನೂ ಸೇರಿರುವುದು ಕರುಣಸಿಂಹನ ಕಣ್ಣಿಗೆ ಬಿತ್ತು. ಆದುದ 

ರಿಂದ ಆ ನೀಚನೇ  ಈ ಸಂಕಟವನ್ನು ತನಗೆ ಉಂಟುಮಾಡಿರಲಿಕ್ಕೆ ಬೇಕೆಂದು ಅವನು 

ಊಹಿಸಿದನು. ಕರುಣಸಿಂಹನು ಕತ್ತಿಯ ಒಂದೇ ಒಂದು ಹೊಡತದಿಂದ ಮೊಟ್ಟಮೊ 

ದಲು ಆತನ ತಲೆಯನ್ನು ಮುಂಡದಿಂದ ಬೇರೆ ಮಾಡಿದನು. ಉಳಿದವರೆಲ್ಲರೂ ಒಳ್ಳೇ  

ಆವೇಶದಿಂದ ಆತನ ಮೇಲೆ ಕೈಮಾಡಿದರು. ಕರುಣಸಿಂಹನು ಅತ್ಯಂತ ಚಾತುರ್ಯ 

ದಿಂದ ಅವರೆಲ್ಲರ ಮೇಲೂ ತನ್ನ ಖಡ್ಗವನ್ನು ನಡೆಯಿಸುತ್ತಿದ್ದನು! ಆದರೆ ಏಳೆಂಟು ಜನರ 

ಮುಂದೆ ಒಬ್ಬ ನ ಆಟವು ಎಷ್ಟು ಹೊತ್ತಿನವರೆಗೆ ನಡೆಯಬೇಕು? ಹಾಯ! ಕರುಣ 

ಸಿಂಹನು ಅಸಹಾಯನಾಗಿ ಬಿದ್ದುಕೊಂಡನು.


 

ನಮ್ಮ ಶಿಪಾಯಿಯು ಈ, ಪ್ರಕಾರ ಸಂಕಟಕ್ಕೆ ಒಳಗಾಗಿರಲು, ಮೇಲ್ಗಡೆಯ 

ಪರ್ವತಪ್ರದೇಶದಲ್ಲಿ ಬೇರೊಂದು ಸಂಗತಿಯು ನಡೆದಿತ್ತು. ಐವತ್ತು ಜನ ಸೈನಿಕರ ಒಂದು 

ಪಧಕದೊಡನೆ ಒಬ್ಬ ವೀರಪುರುಷನು ಪರ್ವತದ ತಟದಿಂದ ಕೆಳಗೆ ಇಳಿಯುತ್ತಿದ್ದನು 

ನೆಳಗಡೆಯಲ್ಲಿ ಜರುಗುತ್ತಿದ್ದ ಪ್ರಕಾರವನ್ನು ಆತನು ಮೇಲಿಂದಲೇ ನೋಡಿದನು. ಕತ್ತ 

ಲೆಯು ಈಗ ಹೆಚ್ಚಾ ಗಿದ್ದುದರಿಂದ ಗುಡ್ಡದಿಂದ ಕೆಳಗೆ ಇಳಿಯುವುದಕ್ಕೆ ಸ್ವಲ್ಪ ತೊಂದ 

ರೆಯಾಗುತ್ತಿತ್ತು. ಅತನು ಗಂಭೀರಸ್ವರದಿಂದ ತನ್ನ ಅನುಯಾಯಿಗಳಿಗೆ ಅಪ್ಪಣೆ ಮಾಡಿ 

ದನು. " ನಿಮ್ಮೊಳಗಿಂದ ಸುಮಾರು ಹದಿಸೈದು ಇಪ್ಪತ್ತು ಜನರು ಈಗಲೇ ಕೆಳಗೆ ಇಳಿದು 

ಹೋಗಿ ಅತನನ್ನು ಸಂರಕ್ಷಿಸಿರಿ."



ಅಲ್ಫಾವಕಾಶದಲ್ಲಿಯೇ ಅ ಪ್ರದೇಶವೆಲ್ಲ " ಅಲ್ಲಾ ಹೋ ಅಕಬರ! ಎಂಬ 

ಪ್ರಚಂಡವಾದ ಕೂಗಾಟದಿಂದ ಪ್ರತಿಧ್ವನಿತವಾಯಿತು. ಇದೇ ಸಂಧಿಯಲ್ಲಿ ಕರುಣ 

ಸಿಂಹನು ಮನಸ್ಸಿನಲ್ಲಿಯೇ ಪರಮೇಶ್ವರನಿಗೆ ಧನ್ಯವಾದಗಳನ್ನು ಕೊಡುತ್ತ ಮತ್ತೆ 

ಇಬ್ಬರು ಪ್ರತಿಸ್ಪರ್ಧಿಗಳನ್ನು ತುಂಡರಿಸಿದನು. 


ತಮಗಿಂತಲೂ ದೊಡ್ಡದಾದ ಮೊಗಲ ಸೈನ್ಯವನ್ನು ನೋಡಿ ಕರುಣಸಿಂಹನೊಡನೆ 

ಕಾದಾಡುತ್ತಿದ್ದವರು ಓಡಿ ಹೋಗುವುದಕ್ಕೆ ಪ್ರಯತ್ನ ಮಾಡಹತ್ತಿದರು. ಆದರೆ ಹಾಗೆ 

ಓಡಿಹೋಗಲು ಈಗ ಅವರು ಮೊದಲಿನಷ್ಟು ಸ್ವತಂತ್ರರಿದ್ದಿಲ್ಲ; ಅವರೊಳಗಿನ ಕೆಲವರು 

ಗಾಯಪಟ್ಟವರಾಗಿ ಬಿದ್ದು ಕೊಂಡಿದ್ದರು. ಅವರ ರಕ್ತದಿಂದ: ಆ ಗುಹೆಯು ಕೆಂಪಗಾಗಿತ್ತು. 



೮------------------------ವಾಗ್ಭೂಷಣ.--------------------------------------- 



ಸುಂದರವಾದ ಮೈಕಟ್ಟಿನ ಒಬ್ಬ ಸೌಮ್ಯಾಕೃತಿಯ ಪುರುಷನು ಕರುಣಸಿಂಹನ 

ಮುಂದೆ ಬಂದು ನಿಂತನು. ಮತ್ತು "ತನ್ನ ಅನುಯಾಯಿಗಳನ್ನು ಕುರಿತು ಹೀಗೆ ಹೇಳಿ 

ದನು. " ವೀರರೇ, ಶಾಂತರಾಗಿರಿ. ಇನ್ನು ರಕ್ತಪಾತವನ್ನುಂಟು ಮಾಡುವ ಕಾರಣ 

ವಿಲ್ಲ. ಗುಡ್ಡ ದೊಳಗಿನ ಇಲಿಗಳಂತಿರುವ ಇವರನ್ನು ಸೆರೆ ಹಿಡಿಯಿರಿ. " 



ಇದಕ್ಕಿಂತ ಸ್ಪ ಸ್ವಲ್ಪ ಹೊತ್ತು ಮುಂಚಿತವಾಗಿಯೇ ನಮ್ಮ ರಜಪೂತ ವೀರನ ಹೆಗಲ 

ಮೇಲೊಂದು ಬಲವಾದ‌ ಪೆಟ್ಟು ತಗಲಿತ್ತು. ಅದರೊಳಗಿಂದ ನೆತ್ತರವು ಪುಟಿಯ ಹತ್ತಿ 

ದುದರಿಂದ ಅತನು ಕ್ಲಾಂತನಾಗಿದ್ದನು. ಹಿಂದಿನಿಂದ ಬಂದ ಆ ವೀರಪುರುಷನು ತನ್ನ 

ಬಹುಮೂಲ್ಯವಾದ ಉತ್ತರೀಯ ವಸ್ತ್ರ ದಿಂದ ಕರುಣಸಿಂಹನ ಗಾಯವನ್ನು ತಾನೇ 

ಕಟ್ಟಿದನು. ಆ ಮೇಲೆ ಪ್ರೇಮಲ ಸ್ವರದಿಂದ ಮಾತನಾಡಿದನು. " ಕರುಣಾ, ಏಟು ಬಲ 

ವಾಗಿ ತಾಗಿದಂತೆ ತೋರುತ್ತದೆ. ನಿನ್ನನ್ನು ಈ ಕಡೆಗೆ ಒಬ್ಬನನ್ನೇ ಕಳಿಸಿದುದು ನನ್ನ 

ಮನಸ್ಸಿಗೆಕೋ ನೆಟ್ಟಗೆನಿಸಲಿಲ್ಲ. ಅದುದರಿಂದ ನಾನೂ ನನ್ನ ಬೆನ್ನ ಹಿಂದಿಂದೆಯೇ 

ಬಂದೆನು. ನಿನ್ನ ಕುದುರೆಯನ್ನು ನೋಡಿದ ಮೇಲೆ ನಮಗೆ ದಾರಿಯು ಗೊತ್ತಾಯಿತು. 

ಕರುಣಾ, ಸಮಯಕ್ಕೆ ಸರಿಯಾಗಿ ನಾನು ಈ ಹೊತ್ತು ಬರದೆ ಹೋದ ಪಕ್ಷದಲ್ಲಿ ನಿನ್ನನ್ನು  

ಕಳೆದುಕೊಂಡು ಕೂಡ್ರಬೇಕಾಗುತ್ತಿತ್ತು.) 


ಕರುಣಸಿಂಹನು ಕೃತಜ್ಞತೆಯ ಸ್ವರದಿಂದ ಮಾತನಾಡಿದನು. " ಜಹಾಪನಾಹ, 

ಈಶ್ವರನು ತಮಗೆ ಮಂಗಲವನ್ನುಂಟು ಮಾಡಲಿ. ತಾವ್ರ ಹೀಗೆ ಪ್ರೇಮಪೂರ್ವಕವಾಗಿ 

ದಯ‌ ತೋರಿಸಿದುದನ್ನು ನಾನು ಚನ್ಮಜನ್ಮಾಂತರಗಳಲ್ಲಿಯೂ ಮರೆಯಲಾರೆನು." 



ಆ ಎರಡನೆಯ ವೀರನು ವೃಕ್ಷದ ಹಿಂದುಗಡೆಯಲ್ಲಿ ನಿಂತುಕೊಂಡಿರುವ ಆ ತರು 

ಣಿಯನ್ನು ಇನ್ನೂ ವರೆಗೆ ನೋಡಿದ್ದಿಲ್ಲ. ಈಗ ಅಕಸ್ಕಾತ್ತಾ ಗಿ ಅವಳನ್ನು ಕಂಡನು. 

ಕೂಡಲೇ ಆಶ್ಚರ್ಯದಿಂದ ಕರುಣಸಿಂಹನನ್ನು ಕುರಿತು ಪ್ರಶ್ನೆ ಮಾಡಿದನು " ಕರುಣಾ, 

ಈ ತರುಣಿಯು ಯಾರು? 


ಕರುಣಸಿಂಹನು ಇಷ್ಟು ಹೊತ್ತಿನವರೆಗೆ ನಡೆದಿದ್ದ ಸಮಾಚಾರವನ್ನೆಲ್ಲ ಸವಿಸ್ತಾರ 

ವಾಗಿ ಅತನಿಗೆ ಹೇಳಿದನು. ಅಗಲಾ ವೀರನು ತನ್ನ ಸೇನೆಯೊಳಗಿನ ಒಬ್ಬ ಹಿಂದೂ 

ಸೈನಿಕನನ್ನು ಕರೆದು ಹೀಗೆ ಹೇಳಿದನು. " ನೀನು ಕರುಣನನ್ನೂ ಈ ಹೆಣ್ಣುಮಗಳನ್ನೂ 

ಕರೆದುಕೊಂಡು ಆ ಹಿಂದಯೋಗಿಯ ಗುಡಿಸಲಕ್ಕೆ ಹೋಗು. ನಾನು ನಿಮ್ಮ ಹಿಂದಿ 

ನಿಂದಲೇ ಬರುತ್ತೇನೆ. ” 


ಅತನ ಅಪ್ಪಣೆಯಂತೆ ಸರ್ವ ವ್ಯವಸ್ಥೆ ಯೂ ಮಾಡಲ್ಪಟ್ಟಿತು. ವಾಚಕರೇ ಆ ಎರ 

ಜನೆಯ ವೀರನು ಮತ್ತಾರೂ ಅಲ್ಲ--ಅಕಬರ ಬಾದಶಹನು! ಕರುಣಸಿಂಹನು ಆತನ 

ನೂತನ ಸೇನಾಪತಿಯು! 



----------------------ಪ್ರೇಮಮಂದಿರ. ------------------------------------------೯ 



ಎರಡನೆಯ ಪರಿಚ್ಛೇದ. 


ಪ್ರೇಮಸಂಚಾರ! 

ಕರುಣಸಿಂಹನು ಪರ್ಣಶಯ್ಯೆಯ ಮೇಲೆ ಮಲಗಿಕೊಂಡಿದ್ದನು. ಅವನ ಹತ್ತರದ 

ಲ್ಲಿಯೇ ಆ ಸುಂದರಿಯು ಕುಳಿತುಕೊಂಡಿದ್ದಳು. ಚೇತನಾಹೀನನಾಗಿ ಬಿದ್ದು ಕೊಂಡಿರುವ 

ಕರುಣಸಿಂಹನ ಮಲಿನಮುಖವನ್ನು ಅವಳು ಅನಿಮಿಷ ನೇತ್ರದಿಂದ ನೋಡುತ್ತಿದ್ದಳು. 

ಆಗಿಂದಾಗ್ಗೆ ಕಪ್ಪುಬಣ್ಣದ ಒಂದು ತರದ ಮಲಾಮನ್ನು ಅವಳು ಕರುಣಸಿಂಹನ ಗಾಯ 

ಕ್ಕೆ ಹಚ್ಚುತ್ತಿದ್ದಳು.



ಆ ಗುಡಿಸಲವಿದ್ದ ಪ್ರದೇಶವು ಆತ್ಯಂತ ನಿರ್ಜನವಾಗಿತ್ತು. ಕರುಣಸಿಂಹನ ಹಾಸು 

ಗೆಯ ಬಳಿಯಲ್ಲಿ ಕುಳಿತ ಆ ತರುಣಿಯ ಮಂದಶ್ವಾಸೋಚ್ಛ್ವಾಸದ ಹೊರೆತು ಅಲ್ಲಿ ಇನ್ನಾವ 

ಶಬ್ದವೂ ಕೇಳಬರುತ್ತಿದ್ದಿಲ್ಲ. ಆ ತರುಣಿಯು ಏಕಾಗ್ರಚಿತ್ತದಿಂದ ಕರುಣಸಿಂಹನ ಪರಿಚ 

ರ್ಯೆಯಲ್ಲಿ ನಿರತಳಾಗಿದ್ದಳು. 


ಇಷ್ಟರಲ್ಲಿ ಜಟಾಜೂಟದಿಂದ ಭೂಷಿತಮಸ್ತಕನಾದ ಒಬ್ಬ ಯೋಗಿಯು ಅಲ್ಲಿ 

ಬಂದನು. ಮತ್ತು ಪ್ರೇಮಾದ್ರಸ್ವರದಿಂದ ಆ ತರುಣಿಯನ್ನು ಕೇಳಿದನು, " ವತ್ಸೇ' 

ಕರುಣನು ಈಗ ಹೇಗೆ ಇದ್ದಾನೆ?” 


ಯೋಗಿಯು ಬಂದೊಡನೆಯೇ ಆ ಸ್ತ್ರೀಯು ಹಾಸುಗೆಯಿಂದ ಸ್ವಲ್ಪ ದೂರ ಸರಿದು 

ಮಾತನಾಡಿದಳು. " ಅಪ್ಪಾ, ಅವರ ಪ್ರಕೃತಿಯು ಈಗ ಮೊದಲಿಗಿಂತ ಎಷ್ಟೋ ಚನ್ನಾ 

ಗಿದೆ. ಸ್ವಲ್ಪ ಹೊತ್ತಿಗೆ ಮೊದಲು ಅವರು ಎಚ್ಚರವಾಗಿದ್ದರು. ಆದರೆ ಈಗ ಪುನಃ ಇವ 

ರಿಗೆ ನಿದ್ದೆಹತ್ತಿದೆ. " 


ಈ ನುಡಿಯನ್ನು ಕೇಳಿ ಯೋಗಿಯ ಮುಖದ ಮೇಲೆ ಆನಂದದ ಚಿಹ್ನವು ತೋರ 

ಹತ್ತಿತು. ಆಗಲವನು ಉಲ್ಲಾಸದಿಂದ ಮಾತನಾಡಿದನು.  ಜಗದಂಬಾಮಾತೆಯ ಕೃಪೆ 

ಯಿಂದ ಕರುಣಸಿಂಹನು ಈ ಪ್ರಾಣಸಂಕಟದಿಂದ ಪಾರಾದನು! ಔಷಧವು ಗುಣಕಾರಿ 

ಯಾಗಿ ಪರಿಣಮಿಸಿತಲ್ಲವೇ ?" 



ಇಷ್ಟು ಮಾತನಾಡಿ ಸನ್ಯಾಸಿಯು ಹೊರಟುಹೋದನು. ಆ ಸುಂದರಿಯು ತನ್ನ 

ಪ್ರಾಣವನ್ನುಳಿಸಿದ ಆ ರಜಪೂತನೀರನನ್ನು ಕರುಣದೃಷ್ಟಿಯಿಂದ ನೋಡಹತ್ತಿದಳು. ಎಷ್ಟು 

ಹೊತ್ತಿನ ವರೆಗೆ ಆತನ ಮೊಗವನ್ನು ನೋಡಿದರೂ ಅವಳ ದರ್ಶನಾಪೇಕ್ಷೆಯು ತೃಪ್ತನಾ 

ಗಲೊಲ್ಲದು ! ಒಮ್ಮೆ ಕರುಣಸಿಂಹನನ್ನು ನೋಡಿ ಕಣ್ಣೆವೆಗಳನ್ನು ಬಡಿಯುವಷ್ಟರಲ್ಲಿಯೇ 

ಮತ್ತೆ ನೋಡಬೇಕೆಂಬ ಬಯಕೆಯು ಅವಳಲ್ಲಿ ಹುಟ್ಟುವುದು. ದೇವದಾನವರ ಯುದ್ಧ 



೧೦--------------------- ವಾಗ್ಭೂಷಣ-------------------------------------- 



ದಲ್ಲಿ ಕ್ಲಾಂತನಾಗಿ ದೇವೇಂದ್ರಕುಮಾರನಾದ ಜಯಂತನೇ ವಿಶ್ರಾಂತಿಗೋಸ್ಕರವಾಗಿ ಈ 

ಪರ್ಣಕುಟೀರದಲ್ಲಿ ಬಂದು ಮಲಗಿರುವನೆಂದು ಆ ರಮಣಿಯು ಭಾವಿಸಿದಳು ! 



ಪ್ರಿಯವಾಚಕರೇ, ಇಷ್ಟು ಹೊತ್ತಿನ ವರೆಗೆ ನಿಮಗೆ ಹೇಳದೆ ಇದ್ದ ಆ ಸುಂದರಿಯ 

ಹೆಸರು 'ಲಲಿತೆ' ಎಂಬುದಾಗಿತ್ತೆಂದು ಈಗ ಹೇಳಿಬಿಡುವೆವು. 



ರಾಜಕುಮಾರಿಯ ತನ್ನಲ್ಲಿಯೇ ಅಲೋಚಸಹತ್ತಿದಳು. " ಎಲೆ ಭಗವಂತಾ, 

ಯಾಕೆ ನನ್ನ ಪರೀಕ್ಷೆಯನ್ನು ಮಾಡುತ್ತಲಿರುವೆ? ಈ ರೂಪ ಪವಹ್ನಿಯಲ್ಲಿ ನಾನೇತಕ್ಕೆ ಹಾರಿ 

ಕೊಂಡೆನೋ? ಆಪೂರ್ವಸಂಘಟನೆಯಿಂದ ಈ ಕುಮಾರನು ನನ್ನ ದೃಷ್ಟಿಗೇಕೆ ಬೀಳ 

ಬೇಕು? ಯಾವನು ನನಗೆ ಎಂದೂ ಲಭಿಸವಂತಿಲ್ಲವೋ, ಯಾವನನ್ನು ಆಸಿಸುವದಕ್ಕೇ 

ನನಗೆ ಆಸ್ಪದವಿಲ್ಲವೋ ಅಂತಹನ ವಿಷಯವಾಗಿ ಈ ನನ್ನ ಹೃದಯವು ಹೀಗೇಕೆ ಉನ್ಮ  

ತ್ತವಾಗಿರುವದು? ಚಹ್ವಾಣರೂ ಚಂದ್ರಾವತರೂ ಅನ್ಯೋನ್ಯವಾಗಿ ಬದ್ಧ ವೈರಿಗಳು. ಅದರ  

ಲ್ಲಿಯೂ ನನ್ನ ತಂದೆಯು ಈ ವೀರಶ್ರೇಷ್ಠನಾದ ಕರುಣಸಿಂಹನಿಗೆ ಮುಖ್ಯಶತ್ರುವು! ನನ್ನ 

ತಂದೆಯೇ ಈ ಕುಮಾರನ ಸರ್ವಸ್ವವನ್ನೂ ಅಪಹರಿಸಿದ್ದಾನೆ. ನನ್ನ ತಂದೆಯ ಈ ಅತ್ಯಾ 

ಚಾರದ ಮೂಲಕವಾಗಿಯೇ ಕರುಣಸಿಂಹನ ಸರ್ವಸ್ವವು ನಾಶವಾಗಿ ಅತನು ಬಾದಶಹನ 

ಸೇನಾಪತಿಯಾಗಬೇಕಾಯಿತು. ಕರುಣಸಿಂಹನು ನಿಜವಾಗಿಯೂ ನನ್ನವನಾಗಬಹುದು! 

ಆದರೆ ನನ್ನ ಅಪ್ಪನು ಇದಕ್ಕೆ ಸಮ್ಮತಿಸುವುದೆಂತು ?" 


ರಾಜನಂದಿನಿಯಾದ ಲಲಿತೆಯ ಚಿಂತನಪ್ರವಾಹಕ್ಕೆ ಒಮ್ಮೆಲೆ ತಡೆಯುಂಟಾ 

ಯತು. ಪತ್ರಶಯ್ಯೆಯಮೇಲೆ ಮಲಗಿಕೊಂಡಿದ್ದ ಕುಮಾರನು ಈ ಕಾಲಕ್ಕೆ ಮೆಲ್ಲ ಮೆಲ್ಲನೆ 

ಕಣ್ಣೆರೆದನು, ಮತ್ತು ಅಸ್ಪಷ್ಟವಾದ ವಾಣಿಯಿಂದ ಮಾತಾಡಿದನು. " ನಾನು ಎಲ್ಲಿ 

ಇದ್ದೇನೆ. ಈ ಮೋಹಪೂರ್ಣಪ್ರದೇಶದಲ್ಲಿ ನನ್ನನ್ನು ತಂದವರಾರು ? ನನ್ನ ಹಾಸುಗೆಯ 

ಬಳಿಯಲ್ಲಿ ಕುಳಿತಿರುವ ದೇವಬಾಲೆ ನೀನಾರು?” 



ಲಲಿತೆಯು ದೊಡ್ಡ ಸಂಕಟದಲ್ಲಿ ಬಿದ್ದಳು. ನಾಚುಗೆಯಿಂದ ಆಕೆಯ ಕುತ್ತಿಗೆಯು 

ಬಗಿದುಹೋಯಿತು. ಲಲಿತೆಯು ಕರುಣಸಿಂಹನಿಗೆ ನಾಚುವುದು ಸ್ವಾಭಾವಿಕವಾಗಿಯೇ 

ಇತ್ತು. ಆದರೆ 'ಯಾವನು ನಿನ್ನೆ ಪ್ರಾಣವನ್ನು ಬದುಕಿಸಿದನೋ, ಅತುಗೆ ನಾಚಬೇಕಾದ 

ಕಾರಣವೇನೂ ಇಲ್ಲ. '  ಎಂದು ಆ ಯೋಗಿಯು ಅವಳಿಗೆ ಎಷ್ಟೊಸಾರೆ ಹೇಳಿದ್ದನು. 

ಲಲಿತೆಯು ಕಂಪಿತೆವಾದ ಮೃದುಸ್ವರದಿಂದ ಮಾತಾಡಿದಳು. "ತಾವು ಯಾವ ವಿಷ 

ಯಕ್ಕೂ ಚಿಂತೆಯನ್ನು ಮಾಡಬೇಡಿರಿ. ತಾವು ಒಳ್ಳೇ ಸುರಕ್ಷಿತವಾದ ಸ್ಥಳದಲ್ಲಿಯೇ 

ಇದ್ದೀರಿ."  


" ನೀನು ಯಾರು? ಮತ್ತು ಇಷ್ಟೊಂದು ಪ್ರೇಮದಿಂದ ನನ್ನ ಶುಶ್ರೊಷೆಯನ್ನೇಕೆ 

ಮಾಡುತ್ತಿರುವೆ?” 



----------------------------------ಪ್ರೇಮಮಂದಿರ.-------------------- ೧೧ 



" ತಮಗೆ ಆತ್ರಯವನ್ನಿತ್ತ ಯೋಗಿವರರಿಗೆ ನಾನೊಬ್ಬಳು ಶಿಷ್ಯಳು. ಆಜ್ಞೆಯನ್ನು 

ಶಿರಸಾವಹಿಸುವದು ನನ್ನ ಕರ್ತವ್ಯವು. ತಮ್ಮ ಸೇವೆಯನ್ನು ಮಾಡುವದಕ್ಕೋಸ್ಕರ 

ನಾನು ನಿಯಮಿಸಲ್ಪಟ್ಟಿದ್ದೇನೆ. "


"ಈ ಕೆಲಸಕ್ಕೆ ನಿನ್ನನ್ನು ಯಾರು ನಿಯಮಿಸಿದರು. ? " 


"ಆ ಯೋಗಿವರ್ಯರೇ. ? 


"ಆ ಯೋಗಿವರ್ಯರು ಯಾರು?" 


" ಅವರೊಬ್ಬ ಮಾಹಾತಪಸ್ಥಿಗಳು. "


" ಹೀಗೊ-.. ಆದರೆ ನಾನು ಈ ಸ್ಥಳಕ್ಕೆ ಹೇಗೆ ಬಂದೆನು?" 


ಲಲಿತೆಯು ಕರುಣಸಿಂಹನಿಗೆ ಹಿಂದಿನ ವೃತ್ತಾಂತವನ್ನೆಲ್ಲ ಹೇಳಿದಳು. ಅವಳು 

ಹೇಳುತ್ತ ಹೋದಂತೆ ಕರುಣಸಿಂಹನಿಗೂ ಹಿಂದಿನ ಸಂಗತಿಗಳು ನೆನಪಾಗಹತ್ತಿದವು. 

ಆಗಲವನು ಉತ್ಕಂಠತೆಯಿಂದ ಪ್ರಶ್ನೆ ಮಾಡಿದನು. " ಶಹಾನಶಹರು ಎಲ್ಲಿ ಇದ್ದಾರೆ? ” 



" ತಮ್ಮ ಶುಶ್ರೂಷೆಯ ವ್ಯವಸ್ಥೆಯನ್ನು ಮಾಡಿ ಜಹಾಪನಾಹರು ದಿಲ್ಲಿಗೆ ಹೊರಟು 

ಹೋದರು. ತಮಗೋಸ್ಕರ ಗಾಡಿಯು ಸಿದ್ದವಾಗಿದೆ. ತಮಗೆ ವಾಸಿಯಾಯಿತೆಂದರೆ 

ಎಲ್ಲಿಗೆ ಹೋಗತಕ್ಕದ್ದೋ ಅಲ್ಲಿಗೆ ಹೊರಡಬಹುದು. 


" ಈ ಪ್ರಾಣಸಂಕಟದಲ್ಲಿನೀನು ನನ್ನನ್ನು ಜೋಪಾನಮಾಡಿದಿ. ಈ ನಿನ್ನ ಉಪಕಾ 

ರವನ್ನು ನಾನು ಹೇಗೆ ತೀರಿಸಲಿ? ನಿನ್ನ ವಿಷಯವಾಗಿ ನನ್ನಲ್ಲಿರುವ ಕೃತಜ್ಞತೆಯನ್ನು 

ನಾನು ಹೇಗೆ ತೋರಿಸಲಿ? ನೀನು ಸ್ವರ್ಗದೊಳಗಿನ ದೇವಕನ್ಯೆಯೋ? ಯಾಕಂದರೆ 

ನೀನು ಶುಶ್ರೂಷೆ ಮಾಡಿದುದರಿಂದ ನನ್ನ ಯಾತನೆಗಳೆಲ್ಲವೂ ಇಲ್ಲದಂತಾದುವು. ” 


ಈ ಮಾತನ್ನು ಕೇಳಿ ಲಲಿತೆಯು ಲಜ್ಜಿತಳಾದಳು. ಅಸ್ಫುಟಸ್ವರದಿಂದಲೂ ಗಾಂಭೀ 

ರ್ಯದಿಂದಲೂ ಅವಳು ಮಾತನಾಡಿದಳು. " ಮೊದಲು ತಾವೇ ನನ್ನ ಪ್ರಾಣವನ್ನು 

ಉಳಿಸಿದಿರಿ. ನನ್ನ ಈ ಕ್ಷುದ್ರವಾದ ಪ್ರಾಣದ ಮೇಲೆ ಇನ್ನು ತಾನೇ ಪೂರ್ಣ ಅಧಿಕಾ 

ರಿಗಳು. " 


ಲಲಿತೆಯ ಬಾಯಿಂದ ಹೆಚ್ಚಾಗಿ ಮಾತುಗಳು ಹೊರಡಲಿಲ್ಲ. ಅಕೆಯು ತನ್ನ 

ಯೇ ನಕ್ಕು ಮಾತನಾಡಿಕೊಂಡಳು. " ನಮ್ಮವ್ವಾ! ಎಂತಹ ಧೈಯರ್ವಿದು? ನಾನು 

ಸ್ಪಷ್ಟವಾಗಿ ನುಡಿದು ಬಿಟ್ಟೆನಲ್ಲ!... "


ಕರುಣಸಿಂಹನು ಕಿಂಚಿತ್ಸಂಕೋಚದಿಂದ ಪ್ರಶ್ನ ಮಾಡಿದನು. " ಸುಂದರೀ! ನಿನ್ನ 

ಪರಿಚಯವನ್ನು ನನಗೆ ಹೇಳಲು ನಿಜವಾಗಿ ಏನಾದರೂ ಪ್ರತಿಬಂಧಕವಿದೆಯೇ? ” 


ಈ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಲಲಿತೆಯ ಹೃದಯವು ವಿದೀರ್ಣವಾಗ 

ಹತ್ತಿತು. ಯಾವ ಕರುಣಸಿಂಹನು ಅವಳ ತಂದೆಯ ನಿಷ್ಠುರವಾದ ಮತ್ತು ನಿಂದ್ಯವಾದ 

ಆಚರಣೆಗಳಿಂದ ಭಿಕ್ಷುಕನಂತೆ ಸಿಕ್ಕಸಿಕ್ಕಲ್ಲಿ ಹುಡು ಹುಡು ತಿರುಗುತ್ತಿದ್ದನೋ ಅವನಿಗೆ 



೧೨-------------------------- ವಾಗ್ಭೂಷಣ.-------------------------------------------- 



ಒಂದಾನೊಂದು ಕಾಲದಲ್ಲಿ ಸ್ವತಂತ್ರವಾದ ರಾಜ್ಯವಿತ್ತು; ಅವನಿಗೆ ವಿಪುಲವಾದ ಐಶ್ವ 

ರ್ಯವಿತ್ತು; ಆತನನ್ನು ಎಲ್ಲರೂ ಮರ್ಯಾದೆಯಿಂದ ಕಾಣುತ್ತಿದ್ದರು; ಆತನ ಕೀರ್ತಿಯು 

ಎಲ್ಲೆಡೆಯಲ್ಲಿಯೂ ಹರಡಿತ್ತು. ಕರುಣಸಿಂಹನು ದುರ್ಗಾಧಿಪತಿಯಾದ ವಿಮಲಸಿಂಹನ 

ಮಗನು. ಐಶ್ವರ್ಯಶಾಲಿಯಾದ ಕುಣಸಿಂಹನು ಕೇವಲ ಹೊಟ್ಟೆ ಹೊರಕೊಳ್ಳುವದಕ್ಕಾಗಿ 

ಈಗ ಬಾದಶಹನ ಕೈಕೆಳಗಿನ ಸೇನಾಪತಿಯಾಗಿ ನಿಲ್ಲಬೇಕಾಯಿತು. ಆ ಸನ್ಯಾಸಿಗೆ ಕರು 

ಣಸಿಂಹನ ಪೂರ್ವಪೀಠಿಕೆಯೂ ಚರಿತ್ರೆಯೂ ಪೂರ್ಣವಾಗಿ ಗೊತ್ತಿತ್ತು. ಅತನೇ ಲಲಿ 

ತೆಗೆ ಎಲ್ಲ ವೃತ್ತಾಂತವನ್ನೂ ಹೇಳಿದ್ದನು. ಆ ವರ್ತಮಾನವನ್ನು ಹೇಳಿದ ಬಳಿಕ ಕರುಣ 

ಸಿಂಹನ ವಿಷಯಕವಾದ ಲೀಲೆಯ ಕೃತಜ್ಞತೆಯು ನೂರು ಮಡಿ ಹೆಚ್ಚಾಯಿತು! ಅವಳ 

ಸಹಾನುಭೂತಿಯು ಮೆಲ್ಲ ಮೆಲ್ಲನೆ ಪ್ರೇಮದಲ್ಲಿ ರೂಪಾಂತರವನ್ನು ಹೊಂದಹತ್ತಿತು. 

ತಂದೆ ತಾಯಿಗಳು, ಪಿತೃಸ್ನೇಹ, ಸಂಸಾರ ಇವು ಒಂದು ಕಡೆಯಿಂದಲೂ, ಪರ್ಣಶ 

ಯ್ಯೆಯ ಮೇಲೆ ಮಲಗಿಕೊಂಡಿದ್ದು ರಜಪೂತ ವೀರಕುಮಾರನು ಇನ್ನೊಂದು ಕಡೆ 

ಯಿಂದಲೂ ಆಕೆಯನ್ನು ಎಳೆಯಹತ್ತಿದುವು. ಒಂದು ವೇಳೆ ಈ ರಜಪೂತಕುಮಾರನು 

ತನ್ನನ್ನು ಪರಿಗ್ರಹಿಸಿದರೆ, ತುಚ್ಚವಾದ ತನ್ನ ಶರೀರವನ್ನೂ ಕ್ಷುದ್ರವಾದ ಪ್ರಾಣವನ್ನೂ 

ಕರುಣಸಿಂಹನ ಹಿತಾರ್ಥವಾಗಿ ಉಪಯೋಗಿಸುವ ಸಂದರ್ಭವು ಪ್ರಾಪ್ತವಾದರೆ, ಮತ್ತು 

ಹತಭಾಗಿನಿಯಾದ ತನ್ನನ್ನು ಸ್ವೀಕರಿಸಲು ಈ ವೀರನು ಸಮ್ಮತಿಸಿದರೆ ತನ್ನ ಹೃದಯ 

ವನ್ನು ಅತ್ಯಾನಂದದಿಂದ ಕರುಣಸಿಂಹನಿಗೆ ದಾನಮಾಡಿ ತನ್ನೂಲಕ ತನ್ನ ತಂದೆಗೆ 

ಪಾಪದ ಪ್ರಾಯಶ್ಚಿತ್ತವನ್ನು ಉಂಟುಮಾಡಬೇಕೆಂದು ಲಲಿತೆಯು ಮನಃಪೂರ್ವಕವಾಗಿ 

ಇಚ್ಛಿಸಹತ್ತಿದಳು. 


ಈ ಪ್ರಕಾರ ಚಿಂತಾಮಗ್ನಳಾದ ಲಲಿತೆಯನ್ನು ನೋಡಿ, ತನ್ನ ಪರಿಚಯವನ್ನು 

ಹೇಳುವುದಕ್ಕೆ ಅವಳಿಗೆ ಯಾವುದೋ ಒಂದು ಪ್ರತಿಬಂಧಕ ಕಾರಣವಿರಬಹುದೆಂದು 

ನಮ್ಮ ರಜಪೂತ ವೀರನು ತಿಳಿದುಕೊಂಡನು. ಅದುದರಿಂದ ಅವನು ಆ ವಿಷಯವಾಗಿ 

ಅವಳನ್ನು ಹೆಚ್ಚಾಗಿ ಏನೂ ಕೇಳಲಿಲ್ಲ. ಮತ್ತೆ ಆತನಿಗೆ ಸ್ವಲ್ಪ ಬಳಲಿಕೆಯುಂಟಾಯಿತು. : 

ತನ್ನ ಕಣ್ಣು ಗಳನ್ನು ಅರ್ಧ ಮುಚ್ಚಿ ಆತನು ಕರುಣಸ್ವರದಿಂದ ಮಾತನಾಡಿದನು. "ನೀರು 

ಬೇಕು! ನೀರು ಬೇಕು! ನೀರಡಿಕೆಯು ಬಹಳವಾಗಿದೆ! ಗಂಟಲೊಣಗಿದೆ! " 



ಸುಗಂಧಿತವಾದ ಔಷಧದ ಮಿಶ್ರಣದಿಂದ ಮಧುರವಾದ ಪಾನೀಯವನ್ನು 

ಆ ಭುವನಸುಂದರಿಯಾದ ಲಲಿತೆಯು ಕರುಣಸಿಂಹನಿಗೆ ಕುಡಿಸಹತ್ತಿದಳು. ಅದನ್ನು 

ನೋಡಿ, ದೇವಲೋಕದೊಳಗಿನ ಯಾವಳೋ ಒಬ್ಬ ಅಪ್ಸರೆಯು ತನ್ನ ಬಾಯಲ್ಲಿ ಅಮೃ 

ತವನ್ನು ಹಾಕಿ ತನಗೆ ನವಜೀವನವನ್ನುಂಟು ಮಾಡುತ್ತಿರುವಳೋ ಎಂದು ಕರುಣಸಿಂಹ 

ನಿಗೆ ಎನಿಸಹತ್ತಿತು. ಆ ಅಮೃತಸೇವನೆಯಿಂದ ಕರುಣಸಿಂಹನಿಗೆ ಅಲ್ಫಾವಧಿಯಲ್ಲಿಯೇ 

ನಿದೆ ಹತ್ತಿತ್ತು. 



--------------------------ಪ್ರೇಮಮಂದಿರ.----------------------------- ೧೩ 



ಮೂರನೆಯ ಪರಿಚ್ಛೇದ. 


ಚಿತ್ತದಮನ! 


" ವತ್ಸೇ, ಭವಾನೀಮಾತೆಯ ಆದೇಶನನ್ನೇ ನಾನು ನಿನಗೆ ಹೇಳುತ್ತಲಿದ್ದೇನೆ. ಭವಾ 

ನಿಯ ಕೃಪೆಯಿಂದ ನನಗೆ ತಿಳಿದುಬಂದುದನ್ನೇ ನಿನಗೆ ಸ್ಪಷ್ಟಪಡಿಸಿ ಹೇಳಹತ್ತಿದ್ದೇನೆ. 

ನಿಮ್ಮಿಬ್ಬರ ಮೇಲನವು ಎಂದೂ ಸುಖಪ್ರದವಾಗಲಾರದು. ನಿನ್ನಿನ ರಾತ್ರಿಯೆಲ್ಲ ಜಾಗ 

ರಣೆಮಾಡಿ, ನಿನಗೋಸ್ಕರವಾಗಿಯೇ ಗಣಿತವನ್ನು ಮಾಡುತ್ತ ಕುಳಿತುಕೊಂಡಿ 

ದ್ದೆನು. " 


" ತಮ್ಮ ಗಣಿತದಿಂದ ಏನು ಹೊರಟತು? 


" ನಿಮ್ಮ ವಿವಾಹದಲ್ಲಿ ಅಡಿಗಡಿಗೆ ವಿಘ್ನಗಳೇ ಬರುವವೆಂದು ಹೊರಟಿತು. " 


ಆ ನಿರ್ಜನಪ್ರದೇಶದಲ್ಲಿ ಆ ಪರ್ಣಶಾಲೆಯಿಂದ ಸ್ವಲ್ಪ ಅಂತರದ ಮೇಲೆ ಒಂದು 

ತಮಾಲವೃಕ್ಷದ ಬುಡದಲ್ಲಿ ನಿಂತುಕೊಂಡು ನಮ್ಮ ಪರಿಚಿತನಾದ ಯೋಗಿಯು ಮೇಲೆ 

ಹೇಳಿದಂತೆ ಲಲಿತೆಯೊಡನೆ ಸಂಭಾಷಣ ಮಾಡುತ್ತಿದ್ದನು; ಮತ್ತು ರಾಜನಂದಿನಿಯಾದ 

ಲಲಿತೆಯು ಮಸ್ತಕವನ್ನು ಬಗ್ಗಿಸಿಕೊಂಡು ವಿಷಣ್ಣ ಮಲಿನಮುಖಳಾಗಿ ಶುಷ್ಕ 

ತಮಾಲಪತ್ರವೊಂದನ್ನು ಕೈಯಿಂದ ಹರಿದು ಚೂರುಚೂರು ಮಾಡುತ್ತ ಅತನ ಅದೇಶ 

ವನ್ನು ಕೇಳುತ್ತಿದ್ದಳು. 


ಹಿಂದಿನ ಪರಿಚ್ಛೇದದಲ್ಲಿ ಹೇಳಿದ ಸಂಗತಿಯು ಸಂಘಟಿಸಿದ ಬಳಿಕ ಅರೇಳುದಿವ 

ಸಗಳು ಕಳೆದು ಹೋಗಿದ್ದವು. ಕರುಣಸಿಂಹನಿಗೆ ಸಾಧಾರಣರೀತಿಯಿಂದ ವಾಸಿಯಾಗಿ 

ಆತನು ದಿಲ್ಲಿಗೆ ಹೊರಟುಹೋಗಿದ್ದನು. ಲಲಿತೆಯ ತಂದೆಯಾದ ದುರ್ಗಾಧಿಪತಿ ಭೀಮ 

ಸಿಂಹನಿಗೆ ಪತ್ರಬರೆದು ಆ ಯೋಗಿಯು ಸರ್ವವೃತ್ತಾಂತವನ್ನೂ ತಿಳಿಸಿದ್ದನು. ಮತ್ತು 

ಆತನ ಅನುಮತಿಯಿಂದಲೇ ಲಲಿತೆಯನ್ನು ಇನ್ನೂ ಎರಡುಮೂರು ದಿವಸಗಳವರೆಗೆ 

ತನ್ನಲ್ಲಿ ಇರಿಸಿಕೊಂಡಿದ್ದನು.ಆ ಯೋಗಿಯ ಹೆಸರು ಚಂದ್ರಚೂಡನೆಂಬುದು, ತೀಕ್ಷ್ಣ 

ಬುದ್ಧಿಯವನೂ ಅತ್ಯಂತಧೋರಣಿಯೂ ಆದ ಆ ಬೈರಾಗಿಯು ಮುಂದೆ ಒದಗಬಹುದಾ 

ದುದನ್ನು ತಿಳಿದಿದ್ದನು. ಲಲಿತಾಕರುಣಸಿಂಹರ ಹೃದಯದಲ್ಲಿ ಪರಸ್ಪರವಾಗಿ ಪ್ರಬಲವಾದ 

ಅನುರಾಗವು ಉತ್ಪನ್ನವಾಗಿದೆಯೆಂಬುದನ್ನು ಅತನು ಕಂಡು ಹಿಡಿದದ್ದನು. ಆದುದ 

ರಿಂದಲೇ ಕರುಣಸಿಂಹನು ಅಲ್ಪ ಮಟ್ಟಿಗೆ ಸ್ವಾಸ್ಥ್ಯವನ್ನು ಹೊಂದಿದ ಕೊಡಲೇ ಅವನನ್ನು 

ದಿಲ್ಲಿಗೆ ಕಳಿಸಿ ಬಿಟ್ಟಿದ್ದನು! 


ಚಂದ್ರಚೂಡನ ಮುಖದ ಕಡೆಗೆ ನೋಡುತ್ತ ಲಲಿತೆಯು ಕರುಣಸ್ವರದಿಂದ 

ಪ್ರಶ್ನ ಮಾಡಿದಳು. " ಸ್ವಾಮೀ, ಹಾಗಾದರೆ ಇದಕ್ಕೆ ಯಾವ ಉಪಾಯವೂ ಇಲ್ಲವೇ 

ಇಲ್ಲವೇನು? " 



೧೪------------------------------ವಾಗ್ಭೂಷಣ---------------------------------------- 



ಚಂದ್ರಚೂಡನು ಖಿನ್ನ ಸ್ವರದಿಂದ ಮಾತನಾಡಿದನು. ಇಲ್ಲ. ಮಗಳೇ! ಅಲ್ಲ. 

ಇದಕ್ಕೆ ಒಂದೂ ಉಪಾಯವಿಲ್ಲ. ಕುಮಾರನೊಡನೆ ನಿನ್ನ ವಿವಾಹವಾದರೆ ವೆಧವ್ಯಯೋ 

ಗೆವೇ ನಿನ್ನ ಹಣೆಯಲ್ಲಿದೆ. ಇಂದಿನಿಂದ ಒಂದು ವರುಷದವರೆಗೆ ನೀವು ಉಭಯತರೂ 

ಪರಸ್ಪರದರ್ಶನವನ್ನು ಕೂಡ ತೆಗೆದುಕೊಳ್ಳಲಾಗದು. ಇದು ನನ್ನ ಅಪ್ಪಣೆಯು. ನೀವು 

ಒಬ್ಬರನ್ನೊಬ್ಬರು ನೋಡುತ್ತಿರುವುದರಿಂದ ಭಯಂಕರವಾದ ಅನರ್ಥವು ಪ್ರಾಪ್ತವಾ 

ಗುವ ಸಂಭವವಿದೆ. ದೈವಘಟನೆಯು ಎಂದೂ ಸುಳ್ಳಾಗಲಾರದು. ಅದಕ್ಕೋಸ್ಕರ ವೃರ್ಥ 

ವಾಗಿ ದುಃಖಪಟ್ಟು ಪ್ರಯೋಜನವೇನು? 



ಲಲಿತೆಯ ಕಣ್ಣೊಳಗಿಂದ ಅಶ್ರುಬಿಂದುಗಳು ಉದುರಿದವು. ಅವಳು ಬಿಕ್ಕುತ್ತ 

ಬಿಕ್ಕುತ್ತ ಮಾತನಾಡಿದಳು. “ ಹಾಗಾದರೆ ಸ್ವಾಮೀ ನಾನು ಇನ್ನು ಮೇಲೆ ದುರ್ಗಕ್ಕೆ 

ಹೋಗುವುದಿಲ್ಲ. ಸನ್ಯಾಸಿನಿಯಾಗಿ ನಿಮ್ಮ ಸೇವೆಯಲ್ಲಿಯೇ ಆಯುಷ್ಯವನ್ನು ಕಳೆ 

ಯುವೆನು.? 



ಚಂದ್ರಚೂಡನು ಸ್ನೇಹಭರದಿಂದ ಮಾತನಾಡಿದನು. " ಮಗಳೇ, ಹೀಗೆ ಮಾತ 

ನಾಡಬೇಡ. ನಾನು ಸಂಸಾರತ್ಯಾಗಿಯಾದ ಬೈರಾಗಿಯು. ಜಗತ್ತಿನೊಡನೆ ನನ್ನ 

ಸಂಬಂಧವು ಬಹಳ ಕಡಿಮೆ. ನಾನು ಎಲ್ಲಿ ಇರುತ್ತೇನೆ, ಏನು ಮಾಡುತ್ತಿರುತ್ತೇನೆ, ಎಲ್ಲಿ 

ತಿರುಗುತ್ತಿರುತ್ತೇನೆ, ಎಂಬುದಾವುದೂ ನಿಶ್ಚಿತವಿಲ್ಲ. ನನ್ನ ಆಯುಷ್ಯಕ್ರಮಕ್ಕೆ ತಾಳವೂ 

ಇಲ್ಲ, ತಂತ್ರವೂ ಇಲ್ಲ! ಲಲಿತೇ, ಮಗೂ, ಸುಮ್ಮನೇ ನನ್ನನ್ನೇಕೆ ಮಾಯಾ-ಬಂಧನಕ್ಕೆ 

ಗುರಿಮಾಡುವೆ?" 



ಚಂದ್ರಚೂಡನ ಈ ಪ್ರಶ್ನೆಗೆ ಏನೆಂದು ಉತ್ತರ ಕೊಡಬೇಕೆಂಬುದು ಲಲಿತೆಗೆ 

ತಿಳಿಯದಾಯಿತು. ಆಕೆಗೆ ಒಳ್ಳೇ ಕಠಿಣಪ್ರಸಂಗವು ಪ್ರಾಪ್ತವಾಯಿತು. " ಒಂದು 

ವರುಷ! ಅಬಬಾ! ಎಷ್ಟೊಂದು ದೀರ್‍ಘಕಾಲವಿದು! ಇಷ್ಟು ದೀರ್‍ಘಕಾಲವನ್ನು 

ಹೇಗೆ ಕಳೆಯುವೆನೋ ಯಾರಿಗೆ ಗೊತ್ತು! ಇನ್ನು ದುರ್ಗಕ್ಕೆ ಪುನಃ ಹೋಗಿ ತಾಯಿಗೂ 

ತಂದೆಗೂ ಸುಮ್ಮಸುಮ್ಮನೆ ದುಃಖವನ್ನೇಕೆ ಉಂಟು ಮಾಡಬೇಕು? ವಿಮಲಪ್ರೇಮದ 

ಸ್ಮೃತಿಯನ್ನು--ಪ್ರಜ್ವಲಿಸುವ ಪ್ರಖರವಾದ ವಹ್ನಿಯನ್ನು--ಹೃದಯದಲ್ಲಿಟ್ಟು ಕೊಂಡು 

ಈ ದೀರ್ಫ ಕಾಲವನ್ನು ಹೇಗಾದರೂ ಕಳೆಯುವೆನು; ಕಟ್ಟಕಡೆಗೆ ನನ್ನ ಹೃದಯೇಶ್ವರ 

ನನ್ನು ದೊರಕಿಸುವೆನು; ಶೇಷಾಯುಷ್ಯದಲ್ಲಿ ಸೌಖ್ಯವನ್ನು ಅನುಭವಿಸುವೆನು. ದುರ್‍ದೈ  

ವದಿಂದ ಈ ಪ್ರಕಾರ ಸಂಘಟಸದಿದ್ದರೆ ಸ್ವರ್ಗದೊಳಗಿನ ನಮ್ಮಿಬ್ಬರ ಸಮಾಗಮಕ್ಕೆ 

ಯಾರೂ ವಿಘ್ನವನ್ನುಂಟುಮಾಡಲಾರರು !" ಈ ಪ್ರಕಾರದ ವಿಚಾರತರಂಗಗಳು ಈ ಸಮ 

ಯಕ್ಕೆ ಲಲಿತೆಯ ಮನಃಸಮುದ್ರದಲ್ಲಿ ಉತ್ಪನ್ನವಾಗುತ್ತಿದ್ದುವು. 



" ಹೋಗು ಮಗಳೇ! ಹೋಗು, ಸುಮ್ಮನೇ ಹುಚ್ಚಿಯ ಹಾಗೆ ಮಾಡಬೇಡ: 



---------------------------ಪ್ರೇಮಮಂದಿರ. --------------------------------೧೫ 



ತಂದೆ ತಾಯಿಗಳಿಗೂ ನನಗೂ ಕ್ಲೇಶವನ್ನುಂಟು ಮಾಡಬೇಡ. ” ಚಂದ್ರಚೂಡನು 

ವಾತ್ಸಲ್ಯಭರದಿಂದ ಮಾತನಾಡಿದನು. 


ಲಲಿತೆಯ ಕಣ್ಣುಗಳಲ್ಲಿ ಬಾಷ್ಪಗಳು ತುಂಬಿದುವು. ಆಳುದನಿಯಿಂದ ಅವಳು 

ಮಾತನಾಡಿದಳು, " ತಮ್ಮ ಇಚ್ಛೆಯೇ ಹಾಗಿದ್ದ ಮೇಲೆ ನಾನು ಮನೆಗೆ ಹೋಗಲಿಕ್ಕೆ 

ಬೇಕು.” 


" ಹೋಗು. ಮಗಳೇ ಹೋಗು.” 


ಸೇವಕರು ಲಲಿತೆಯ ಮೇಣೆಯನ್ನು ಇಟ್ಟುಕೊಂಡು ಸಮೀಪದಲ್ಲಿಯೇ ಕುಳಿತು 

ಕೊಂಡಿದ್ದರು. ಲಲಿತೆಯು ಚಟಕ್ಕನೆ ಎದ್ದು, ಚಂದ್ರಚೂಡನ ಚರಣಕಮಲಗಳಿಗೆ ಭಕ್ತಿ 

ಪೂರ್ವಕವಾಗಿ ವಂದಿಸಿ ಮೇಣೆಯಲ್ಲಿ ಕುಳಿತುಕೊಂಡಳು. ಸೇವಕರು ಮೇಣೆಯನ್ನು 

ಎತ್ತಿದರು. 


" ಮಗಳೇ, ಹೋಗಿ ಬಾ. ಭವಾನೀ ಮಾತೆಯ ಕೃಪೆಯಿಂದ ನಿನ್ನ ಮನೋರ 

ಥವು ಪೂರ್ಣವಾಗಲಿ. ” ಹೀಗೆಂದು ಚಂದ್ರಚೂಡನು ಆಶೀರ್ವದಿಸಿದ ಕೊಡಲೇ ಮೇಣಾ 

ವಾಹಕರು ನಡೆಯಹತ್ತಿದರು. ಆ ಮೇಣೆಯು ಕಣ್ಮರೆಯಾಗುವವರೆಗೂ ಚಂದ್ರಚೂ 

ಡನು ಆಶ್ರಮದ ಹೊರಬದಿಯಲ್ಲಿ ನಿಂತುಕೊಂಡು ನೋಡುತ್ತಿದ್ದನು. ಆತನನ್ನು ನೋಡಿ 

ದರೆ, ಶಕುಂತಲೆಗೆ ನಿರೋಪವನ್ನಿತ್ತು ಆಕೆಯ ಗಮನಪಥವನ್ನೇ ನೋಡುತ್ತ ನಿಂತು 

ಕೊಂಡಿದ್ದ ಕಣ್ವಮಹರ್‍ಷಿಯೋ ಎಂಬಂತೆ ತೋರುತ್ತಿದ್ದನು. ಅಲ್ಫಾವಧಿಯಲ್ಲಿಯೇ 

ಲಲಿತೆಯ ಮೇಣೆಯು ಕಾಣದಂತಾಯಿತು. ವನ್ಯವೃಕ್ಷಲತೆಗಳು ಅತನ ದೃಷ್ಟಿಪಥಕ್ಕೆ 

ಅಡ್ಡವಾದ ಬಳಿಕ ಚಂದ್ರಚೂಡನು ಕಣ್ಣೊರಸಿಕೊಂಡು ಆಶ್ರಮದ ಕಡೆಗೆ ತಿರುಗಿದನು. 


ಅಶ್ರಮದ್ಧಾರದಲ್ಲಿ ಬಂದೊಡನೆಯೇ ಚಂದ್ರಚೂಡನು ಕೋಮಲಸ್ವರದಿಂದ ಕೂಗಿ 

ದನು. " ಕೃಷ್ಣೇ! " 


ಅತನ ಕೂಗನ್ನು ಕೇಳಿದೊಡನೆಯೇ ಕಾವಿಯ ಬಟ್ಟೆಯನ್ನು ಪರಿಧಾನ ಮಾಡಿ 

ಕೊಂಡಿದ್ದ ಒಬ್ಬ ಸುಂದರ ಯುವತಿಯು ಆಶ್ರಮದ ಬಾಗಿಲಿಗೆ ಬಂದು ನಿಂತುಕೊಂಡಳು. 

ಅವಳ ನೈಸರ್ಗ ಕವಾದ ಸೌಂದರ್ಯವು ಅ ಕಾವಿಯ ವಸ್ತ್ರದಿಂದ ಅಧಿಕೋಜ್ವಲವಾಗಿ 

ತೋರುತ್ತಿತ್ತು. ಆ ರೂಪವತಿಯ ಲಾವಣ್ಯದಲ್ಲಿ ಕೋಮಲತೆಯಿದ್ದಿಲ್ಲ; ಆದರೆ ಒಂದು 

ಪ್ರಕಾರದ ತೀವ್ರತೆಯು ದೃಗ್ಗೋಚರವಾಗುತ್ತಿತ್ತು. ಪ್ರಿಯವಾಚಕರೇ, ಶ್ರಾವಣಮಾಸ 

ದಲ್ಲಿ ದೊಡ್ಡದೊಂದು ಮಳೆಯ ಸೆಳಕು ' ಧಬ ಧಬ ' ಸುರಿಯುತ್ತಿರಲು ಇರ್ತಡಿಗಳ 

ಲ್ಲಿಯೂ ತುಂಬಿ ಹೊರಸೂಸಿ ಹರಿಯುತ್ತಿರುವ ಗಂಗಾನದಿಯಂತಹ ದೊಡ್ಡ ಪ್ರವಾಹದ 

ಭಯಂಕರ ಸ್ವರೂಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ ಆ ಉದ್ದಾಮವಾದ ಚಂಚಲಭಾ 

ವಗಳೆಲ್ಲವೂ ಕೃಷ್ಣಾ ಕುಮಾರಿಯ ಮೊಗವನ್ನು ನೋಡಿದೊಡನೆಯೇ ಕಣ್ಣ ಮುಂದೆ  

ಕಟ್ಟಿದಂತಾಗುತ್ತಿದ್ದುವು. 



೧೬-------------------------ವಾಗ್ಭೂಷಣ.-------------------------------------- 


ಚಂದ್ರಚೂಡನು ಅವಳನ್ನು ನೋಡಿ ಮಮತೆಯಿಂದ ಪ್ರಶ್ನಮಾಡಿದನು. " ಚಿತ್ತದ 

ಮನವು ಕೊನೆಗೆ ನಿನಗೆ ಸಾಧ್ಯವಾಯಿತೋ ಇಲ್ಲವೋ? ” 



ಕೃಷ್ಣಾಕುಮಾರಿಯು ಸ್ವಲ್ಪ ಹೊತ್ತಿನವರೆಗೆ ಸುಮ್ಮನಿದ್ದು ಆ ಮೇಲೆ ಮುಖವನ್ನು 

ತಗ್ಗಿಸಿಕೊಂಡು ಮಾತನಾಡಿದಳು. " ಸ್ವಾಮೀ, ನಿಮ್ಮ ಮುಂದೆ ನಾನು ಸತ್ಯವನ್ನು ಹೇಗೆ 

ಬಚ್ಚಿಡಲಿ, ಲಜ್ಜಾ ದೇವಿಯ ಅಣೆಯಿಂದ ಹೇಳುತ್ತೇನೆ; ಮನಸನ್ನು ಬಿಗಿಹಿಡಿಯುವದು 

ನನ್ನಿಂದ ಆಗುವುದಿಲ್ಲ. ಸ್ವಾಮೀ ನನಗೆ ಆಪ್ಪಣೆಯನ್ನು ಕೊಡಿರಿ. ನಾನು ಆಶ್ರಮದಿಂದ 

ಹೊರಟು ಹೋಗುತ್ತೇನೆ. ಈ ಪವಿತ್ರಸ್ಥಾನವು ಹತಭಾಗಿನಿಯಾದ ಈ ಪಾಪಿಷ್ಠೆಯಿಂದ 

ಇನ್ನು ಮುಂದೆ ಕಲಂಕಿತವಾಗುವುದು ಬೇಡ.” 



ಕೃಷ್ಣೆಯು ತನಗೆ ಈ ಪ್ರಕಾರದ ಉತ್ತರವನ್ನು ಕೊಡಬಹುದೆಂದು ಚಂದ್ರಚೂ 

ಡನು ತಿಳಿದಿರಲಲ್ಲ. ಆವಳ ಮಾತಿನಿಂದ ಅತನ ಮನಸ್ಸು ಕಲ್ಲೋಲವಾಯಿತು. ಆಗಲ 

ವನು ಕ್ರುದ್ಧ-ಸ್ವರದಿಂದ ಮಾತನಾಡಿದನು. “ ಪಾಪಾತ್ಮಳೇ, ನಿನ್ನ ಆದೃಷ್ಟದ ಭವಿಷ್ಯವು 

ತಿಳಿದ ಬಳಿಕಾದರೂ ನೀನು ಚಿತ್ರದಮನ ಮಾಡಬಹುದೆಂದು ನಾನು ತಿಳಿದಿದ್ದೆನು. 

ಕೃಷ್ಣೇ! ನಿನ್ನ ಈ ಅಹಂಕಾರವು ಶೀಘ್ರವಾಗಿಯೇ ಚೂರುಚೂರಾಗಿ ಹೋಗುವುದು. 

ಯಾವ ಆನಿಷ್ಟವನ್ನ ಪ್ರತೀಕಾರಮಾಡುವದಕ್ಕಾಗಿ ನಾನು ಇಷ್ಟೊಂದು ಪ್ರಯತ್ನಪಡು 

ತ್ತಲಿರುವೆನೋ, ಆ ಅನಿಷ್ಟವು ನಿಶ್ಚಯವಾಗಿ ಪ್ರಾಪ್ತವಾಗುವದು! ” 


ಕೃಷ್ಣಾಕಮಾರಿಯು ಮೋರೆಯನ್ನು ತಗ್ಗಿಸಿ ನಿಂತುಕೊಂಡಳು. ಸಮೀಪದಲ್ಲಿಯೇ 

ಬಿದ್ದಿದ್ದ ಒಂದು ಕರಿಯಕಲ್ಲಿನ ಮೇಲೆ ಕುಳಿತುಕೊಂಡು ಚಂದ್ರಚೂಡನು ಮತ್ತೆ ಅವ 

ಳನ್ನು ಕುರಿತು ಮಾತನಾಡಿದನು. " ಕೃಷ್ಣೇ! ಕರುಣಸಿಂಹನು ಯಾರೆಂಬುವದನ್ನು 

ಇಂದು ನಿನಗೆ ಹೇಳುತ್ತೇನೆ. ದುರ್ಗಾಧಿಪತಿಯಾದ ವಿಮಲಸಿಂಹನು ನನ್ನ ಶಿಷ್ಯನು. 

ಆತನ ದುರ್ಗವು ಈಗ ಚಂದ್ರಾವತನಾದ ಭೀಮಸಿಂಹನ ವಶದಲ್ಲಿದೆ. ಭೀಮಸಿಂಹನು 

ದಾಂಭಿಕನು, ಕಪಟಿಯು ಭಯಂಕರಮನುಷ್ಯನು! ಯುಕ್ತಿಯಿಂದಲೂ ಕೌಶಲ್ಯ 

ದಿಂದಲೂ ವಿಮಲಸಿಂಹನ ವಿರುದ್ಧವಾಗಿ ದಿಲ್ಲೀಪತಿಗೆ ದೂರ ಹೇಳಿ, ವಿಮಲಸಿಂಹನಿಂದ 

ದುರ್ಗವನ್ನು ಕಿತ್ತುಕೊಂಡನು. ಅಭಿಮಾನಿಯಾದ ವಿಮಲಸಿಂಹನು ಸರ್ವಸ್ವವನ್ನು ಪರಿ 

ತ್ಯಜಿಸಿ ರಾತ್ರಿಯಲ್ಲಿಯೇ ದುರ್ಗವನ್ನು ಬಿಟ್ಟು ಹೊರಟುಹೋದನು. ಆಗ ನಾನು 

ತೀರ್ಥಯಾತ್ರಿಗೆ ಹೋಗಿದ್ದೆನು. 



" ವಿಮಲಸಿಂಹನು ಮುಕ್ತಾವಲೀನದಿಯನ್ನು ದಾಟುತ್ತಿದ್ದಾಗ ಆತನ ನೌಕೆಯು 

ಒಂದು ಬಂಡೆಯ ಮೇಲೆ ಆಪ್ಪಳಸಿ ಒಡೆದು ಮುಳುಗಿಹೋಯಿತು. ಅದರಲ್ಲಿ ಒಬ್ಬ  

ಹುಡುಗನೂ, ಒಬ್ಬ ಹುಡಿಗೆಯೂ. ಇದ್ದರು. ಆ ಹುಡುಗನೇ ವನಿಮಲಸಿಂಹನ ಒಬ್ಬನೆ 

ಒಬ್ಬ ಮಗನಾದ ಕರುಣಸಿಂಹನು! ಮತ್ತು ಆ ಹುಡುಗೆಯೇ ನೀನು.!! 



------------------------------------ಪ್ರೇಮಮಂದಿರ.-----------------------------೧೭


 

ವಿಮಲಸಿಂಹನು ತನ್ನ ಪ್ರಾಂತವನ್ನೂ ದುರ್ಗವನ್ನೂ ಕಳೆದುಕೊಂಡಾಗ ವಿಧುರಾ 

ವಸ್ಥೆಯಲ್ಲಿದ್ದನು. ಆತನ ಮೊದಲನೆಯ ಹೆಂಡತಿಯು ಸತ್ತ ತರುವಾಯ ಮತ್ತೊಬ್ಬ ರೂಪ 

ಪತಿಯನ್ನು ಮದುವೆಮಾಡಿಕೊಂಡಿದ್ದನು. ಆ ತರುಣಿಯ ಚಾರಿತ್ರ್ಯದ ಸಂಬಂಧವಾಗಿ 

ಆತನ ನಗರದಲ್ಲಿ ಎಷ್ಟೋ ದುವೃತ್ತಾಂತಗಳು ಹರಡಿದ್ದುವು. ಈಗಿನ ದುರ್ಗಪತಿಯಾದ 

ಭೀಮಸಿಂಹನು ಸೇನಾಪತಿಯಾಗಿದ್ದನು. ನೂತನ ರಾಜ್ಞಿ ಮತ್ತು ಭೀಮಸಿಂಹ ಇವರ 

ವಿಷಯವಾಗಿ ಕಲಂಕದ ವರ್ತಮಾನವು ಪಟ್ಟಣದಲ್ಲಿ ಪಸರಸಿತು. ಈ ಅಪಮಾನವನ್ನು 

ಸಹಿಸಲಾರದೆ ವಿಮಲಸಿಂಹನು ಪತ್ನಿಗೆ ವಿಷಪ್ರಾಶನ ಮಾಡಿಸಿ ಅವಳನ್ನು ಕೊಂದು  

ಬಿಟ್ಟನು. 


" ಅನಂತರ ಸ್ವಲ್ಪ ದಿವಸಗಳಲ್ಲಿಯೇ ವಿಮಲಸಿಂಹನ ದುರ್‍ದೈವಕ್ಕೆ ಮೊದಲಾ 

ಯಿತು! ಭೀಮಸಿಂಹನ ಕಪಟವನ್ನು ಅರಿಯದೆ ಅವನು ಹೇಳಿದುದೆಲ್ಲ ನಿಜವೆಂದು ತಿಳಿದು 

ದಿಲ್ಲೀಪತಿಯು ದುರ್ಗವನ್ನು ಬಿಟ್ಟುಬಿಡುವಂತೆ ವಿಮಲಸಿಂಹನಿಗೆ ಆಜ್ಞಾಪಿಸಿದನು. ಅದೇ 

ದಿನಸ ರಾತ್ರಿ ದುರ್ಗಾಧಿಪತಿಯು ಓಡಿಹೋದನು. ನಿನ್ನ ತಾಯಿಯ ದುರಾಚಾರವು 

ಚೆನ್ನಾಗಿ ಗೊತ್ತಿದ್ದರೂ ಪ್ರೀತಿ ವಿಶೇಷದ ಮೂಲಕ ಅವನು ನಿನ್ನನ್ನು ತ್ಯಜಿಸಲಿಲ್ಲ. ನೀವು 

ಕುಳಿತುಕೊಂಡಿದ್ದ ಹಡಗವು ಒಡೆದು ಹೋದ ಬಳಿಕ ಮುಕ್ತಾವಲಿಯ ದಂಡೆಯ ಮೇಲೆ 

ವಾಸವಾಗಿದ್ದ ಒಬ್ಬ ಬೈರಾಗಿಯು ನಿಮ್ಮನ್ನು ಬದುಕಿಸಿದನು. ಕೃಷ್ಣೇ! ಅ ಬೈರಾ 

ಗಿಯೇ ನಾನು.  


 "ನಾನು ಸಂಸಾರತ್ಯಾಗಿಯಾದ ಬೈರಾಗಿಯು. ನಿನ್ನನ್ನು ಕಟ್ಟಿಕೊಂಡು ನಾನು 

ಮಾಡತಕ್ಕದ್ದೇನು? ಅದರೂ ವಿಮಲಸಿಂಹನ ಮೇಲಿದ್ದ ನನ್ನ ಪ್ರೇಮವು ನನ್ನನ್ನು ಬಿಟ್ಟು 

ಹೋಗಲಿಲ್ಲ. ನಾನು ಯಾವಾಗಲೂ ಆಗ್ರಾಪಟ್ಟಣಕ್ಕೆ ಹೋಗುತ್ತಿದ್ದೆನು. ಅಲ್ಲಿ ಒಬ್ಬ 

ಸಾವುಕಾರನು ನನ್ನ ಪ್ರಮುಖ ಶಿಷ್ಯನಾಗಿದ್ದನು. ನಿಬ್ಬಿಬ್ಬರ ಪಾಲನಪೋಷಣದ ಭಾರ  

ವನ್ನು ನಾನು ಆತನಿಗೆ ಒಪ್ಪಿಸಿದೆನು. 


" ಮಾಘಮಾಸದಲ್ಲಿ ಪೌರ್ಣಿಮೆಯ ದಿವಸ ನಾನೊಮ್ಮೆ ಆಗ್ರಾಕ್ಕೆ ಹೋಗಿ 

ದ್ದೆನು. ಆಗ ಕರುಣಸಿಂಹನು ಬಾದಶಹನ ಬಳಿಯಲ್ಲಿ ಕೆಲಸ ಮಾಡುತ್ತಿದ್ದುದು ನನಗೆ 

ತಿಳಿಯಬಂತು. ಅದನ್ನು ಸೇಳಿ ನನಗೆ ಬಹಳೇ ಸಂತೋಷವಾಯಿತು. ನಾನು ನಿಶ್ಚಿಂತ 

ನಾದೆನು. ಅದರೆ. ನಿಮ್ಮಿಬ್ಬರ ಬಾಲ್ಯಸ್ನೇಹವು ಪ್ರೇಮದಲ್ಲಿ ರೂಪಾಂತರ ಹೊಂದುತ್ತ 

ನಡೆದಿರುವುದೆಂಬುದು ಆ ಸಾವಕಾರನ ಹೆಂಡತಿಯಿಂದ ನನಗೆ ಗೊತ್ತಾಯಿತು. ಇದನ್ನು 

ಹೇಳಿ ನನ್ನಗೆ ಅತ್ಯಂತ ವ್ಯಸನವಾಯಿತು. " 


" ಕೃಷ್ಣೇ! ಮನಸ್ಸಿನಲ್ಲಿ ಕಳವಳಪಡಬೇಡ. ನಿನ್ನ ತಾಯಿಯ ಮೇಲಿನ ಕಲಂಕವು 

ಮರೆತುಹೋಗುವುದು ಅಶಕ್ಯವಾಗಿತ್ತು. ಕರುಣಸಿಂಹನೊಡನೆ ನಿನ್ನ ವಿವಾಹವಾಗು 

ವುದೂ ಅಶಕ್ಯವಾಗಿತ್ತು. ಈ ಸಂಗತಿಯು ನನಗೊಬ್ಬನಿಗೇ ಗೊತ್ತಿತ್ತು. ಅದುದರಿಂದ 


 


೧೮----------------------------------ವಾಗ್ಭೂಷಣ-------------------------------------

 



ಮುಂದೆ ಸಂಭವಿಸಬಹುದಾದ ಅನರ್‍ಥವನ್ನು ತಡೆಯುವದಕ್ಕೋಸ್ಕರ ನಿಮ್ಮಿಬ್ಬರನ್ನು 

ಅಗಲಿಸಿ ನಿನ್ನನ್ನು ನನ್ನ ಅಶ್ರಮದಲ್ಲಿ ತಂದಿಟ್ಟುಕೊಂಡೆನು. 



" ದೈವಘಟನೆಯಿಂದ ಕುಮಾರನು ಗಾಯಪಟ್ಟವನಾಗಿ ನನ್ನ ಆಶ್ರಮಕ್ಕೆ ಬರಲು  

ಆತನ ಹತ್ತರ ಹೋಗಬೇಡವೆಂದು ನಾನು ನಿನ್ನನ್ನು ಅಜ್ಞಾಪಿಸಿದ್ಧೆನು. ಆದರೂ ಅದನ್ನು 

ವರಿ ನೀನು ಅತನ ದರ್ಶನವನ್ನು ತೆಗೆದುಕೊಂಡೆ. ಕೃಷ್ಣೇ! ನನ್ನ ಅಪ್ಪಣೆಯನ್ನು 

ಮೀರುವ ಪಾತಕಕ್ಕೆ ನೀನು ಹೇಸಲಿಲ್ಲ. ಆ ಪಾಪಕ್ಕೆ ಚಿತ್ತದಮನವೇ ಪ್ರಾಯಶ್ಚಿತ್ತವು! 

ಮೂರು ದಿವಸಗಳವರೆಗೆ ನಿನ್ನನ್ನು ಉಪವಾಸದಿಂದ ಇರಿಸಿದನು. ಮನಸ್ಸನ್ನು ಸ್ಥಿರಗೊಳಿ 

ಸೆಂದು ಉಪದೇಶ ಮಾಡಿದೆನು. ಆದರೆ ನಿನಗದು ಸಾಧ್ಯವಾಗಲಿಲ್ಲ. ಕೃಷ್ಣೆ ! ನಿನ್ನ ಅದೃ 

ಷ್ಟದಲ್ಲಿ ಏನಿದೆಯೆಂಬುದು ಈಗ ನಿನಗೆ ಗೊತ್ತಾಗಿದೆಯಷ್ಟೇ? ಇನ್ನು ಮೇಲಾದರೂ 

ಜಾಗರೂಕಳಾಗು. ಕರುಣಸಿಂಹನೊಡನೆ ನಿನ್ನ ವಿವಾಹವಾಗುವದು ಹೇಗೆ ಅಶಕ್ಯವಾಗಿ 

ದೆಯೆಂಬದು ಈಗ ನಿನಗೆ ಗೊತ್ತೇ ಆಯಿತು. ಕರುಣನಿಗೆ ತಾಯಿಯಿಲ್ಲ; ತಂದೆಯಿಲ್ಲ; 

ನಾನೇ ಪ್ರತಿಪಾಲಕನು. ನಾನು ಆತನ ಹಿತದಕಡೆಗೆ ಲಕ್ಷ್ಯಗೊಡದಿದ್ದರೆ ಇನ್ನಾರು ಕೊಡ 

ಬೇಕು. ನಿನಗೆ ಇನ್ನೂ ನಾಲ್ಕು ಪ್ರಹರಗಳ ಅವಕಾಶವನ್ನು ಕೊಡುತ್ತೇನೆ. ನಾಳೆ 

ಮುಂಜಾನೆ ನನಗೆ ಮತ್ತೆ ಭೆಟ್ಟಿಯಾಗು. " 


ಇಷ್ಟು ಮಾತನಾಡಿ ಚಂದ್ರಚೂಡನು ಹೊರಟುಹೋದನು. ಕೃಷ್ಣಾಕುಮಾರಿಯು 

ಒಂದು ನಿಶ್ವಾಸವನ್ನು ಬಿಟ್ಟು ತನ್ನಲ್ಲಿಯೇ ವಿಚಾರಮಾಡಹತ್ತಿದಳು. ಎರಡೂ ಕೈಗಳನ್ನು 

ಜೋಡಿಸಿ ಆಕಾಶದ ಕಡೆಗೆ ನೊಡುತ್ತ ಅವಳು ಮಾತನಾಡಿದಳು. " ಪ್ರಭೋ, ದಯಾ 

ಮಯಾ! ಈ ಪ್ರಬಲವಾದ ಪ್ರೇಮಕಾಂಕ್ಷೆಯನ್ನು ಹೇಗೆ ಪ್ರತಿಬಂಧಿಸಲಿ ಕರುಣಸಿಂಹ 

ವಿಷಯಕವಾದ ಪ್ರೇಮವನ್ನು ಹೃದಯದಲ್ಲಿ ತಳೆದೇ ಸತ್ತು ಹೋದರೆ ಒಳಿತಲ್ಲವೇ? 

ಈ ವಿಶಾಲವಾದ ಜಗತ್ತಿನಲ್ಲಿ ನನ್ನವರು ಯಾರಿದ್ದಾರೆ? ಕೇವಲ ಪ್ರೇಮಚಿಂತನವೊಂದು 

ಮಾತ್ರ ನನ್ನ ಸಹಚಾರಿಯಾಗಿದೆ. ಚಂದ್ರಚೂಡರೇ! ಮಹಾಸ್ವ್ರಾಮಿಗಳೇ! ನೀವಂತೂ 

ಬೈರಾಗಿಗಳು. ನಿಮಗೆ ಹೃದಯನಲ್ಲಿರುವುದು?  ಪ್ರೇಮದ ಮರ್ಮವು ನಿಮಗೆ ಹೇಗೆ 

ಗೊತ್ತಾಗುವುದು? " 


ಕೃಷ್ಣಾ ಕುಮಾರಿಯ ಎರಡೂ ಕಣ್ಣುಗಳೊಳಗಿಂದ ಅಶ್ರುಪ್ರವಾಹವು ಹರಿಯತೊ 

ಡಗಿತು. ಒಂದೆರಡು ಅಶ್ರುಬಿಂದುಗಳು ಆ ಕರಿಯ ಕಲ್ಲಮೇಲೆಯೂ ಉದುರಿದುವು. ಆದರೆ 

ಆ ಪಾಷಾಣವು ನೇತ್ರಜಲದಿಂದ ಕರಗುವದುಂಟೇ ? ಕೃಷ್ಣೆಯು ಎದ್ದುನಿಂತಳು. ಮೆಲ್ಲಡಿ 

ಗಳನ್ನಿಕ್ಕುತ್ತ ಆಶ್ರಮದ ಅಂತರ್ಭಾಗವನ್ನು ಸೇರಿದಳು. ಹೋಗುವಾಗ ಮನಸ್ಸಿನಲ್ಲಿಯೇ 

ಅಂತು ಪ್ರತಿಜ್ಞೆ ಮಾಡಿದಳು. " ಕರುಣಸಿಂಹನನ್ನು ತ್ಯಾಗಮಾಡುನ ಸಂದರ್ಭವು ಒಂದು 

ವೇಳೆ ಪ್ರಾಪ್ರವಾದರೆ ಇನ್ನೊಮ್ಮೆ ಅರೂಪಜ್ಯೋತಿಯ ದರ್ಶನವನ್ನು ತೆಗೆದುಕೊಂಡು 

ಪತಂಗಿಯಂತೆ ಅದರ ಮೆಲೆ ಹಾರಿ ಸಟ್ಟು ಕೊಂಡು ಸಾಯುವೆನು. ? 



-----------------------------ಪ್ರೇಮಮಂದಿರ. ---------------------------೧೯ 



ಈ ಸಂಗತಿಯು ನಡೆದ ಮಾರನೇ ದಿವಸವೇ ಕೃಷ್ಣಾ ಕುಮಾರಿಯು ಎಲ್ಲಿರುವ 

ಳೆಂಬದು ಚಂದ್ರ ಚೂಡನಿಗೆ ಗೊತ್ತಾಗಲೇ ಇಲ್ಲ. !! 

........


ನಾಲ್ಕನೆಯ ಪರಿಚ್ಛೇದ. 

~~ 

ಗುಪ್ತಸಂದರ್ಶನ! 



ಸಂಧ್ಯಾ ಕಾಲವಾಯಿತು. ಆಕಾಶದಲ್ಲಿ ಒಂದು ಪ್ರಕಾರದ ಉದಾಸವೂ ಕ್ಷೀಣವೂ 

ಅದ ಕೆಂಬಣ್ಣದ ಕಳೆಯು ಪಸರಿಸಿತ್ತು. ಬಿಳಿದು, ಕರಿದು, ಕೆಂಪದು, ಹಳದಿ, ಮಿಶ್ರ 

ಮೊದಲಾದ ವಿಚಿತ್ರವರ್ಣದ ಮೇಘಗಳು ಒಂದರ ಮೇಲೊಂದು ಎಸೆಯುತ್ತಿದ್ದವು. 

ಆ ಮೇಘಗಳಲ್ಲಿ ಎಷ್ಟೊಂದು ಬಣ್ಣಗಳಿದ್ದುವು! ಎಷ್ಟೊಂದು ವೈಚಿತ್ರವಿತ್ತು! 

ಈ ಪ್ರಕಾರ ಮೇಘಾವಡಂಬರದಿಂದ ವ್ಯಾಪ್ತವಾದ ಆಕಾಶವು ಎಷ್ಟೇ ವಿಶಾಲವಾಗಿ 

ದ್ದರೂ ಮುಕ್ತಾವಲೀ ನದಿಯ ಚಿಕ್ಕ ಪಾತ್ರದಲ್ಲಿಯೇ ಪ್ರತಿಬಿಂಬಿತವಾಗಿತ್ತು. ಅಹಹಾ | 

ಆಕಾಶಕ್ಕಾದರೂ ದುಃಖವಿದೆಯಲ್ಲವೇ? 


ಸಂಧ್ಯಾಕಾಲದ ಆ ಸೃಷ್ಟಿ ಸ್ವರೂಪವನ್ನು ನೋಡಿ ಪ್ರೇಮಿಕಜನರ ಮನಸ್ಸಿನಲ್ಲಿ 

ಅನೇಕ ಪ್ರಕಾರದ ಕಲ್ಪನೆಗಳು ಉದ್ಭವಿಸುವುದು ಸಾಹಜಿಕವಾಗಿತ್ತು. ಮುಕ್ತಾವಲೀ 

ನದಿಯ ತೀರದಲ್ಲಿ ಒಂದು ಮಧ್ಯಮಾಕೃತಿಯ ದುರ್ಗವು ಆಕಾಶದಲ್ಲಿ ತಲೆಯನ್ನೆತ್ತಿ  

ಆಢ್ಯತೆಯಿಂದ ಸೆಟೆದು ನಿಂತುಕೊಂಡಿತ್ತು. ಎಲ್ಲಕ್ಕೂ ಎತ್ತರವಾದ ಆ ದುರ್ಗದ ಶಿಖರ 

ದಲ್ಲಿ ಹದಿನಾರು ವರುಷದ ಒಬ್ಬ ತರುಣಿಯು ಕುಳಿತುಕೊಂಡಿದ್ದಳು. ಕ್ಷಣಕ್ಷಣಕ್ಕೆ ಬದ 

ಲಿಸುತ್ತಿರುವ ಪ್ರಕೃತಿಯ ಮಧುರವೂ ವಿಚಿತ್ರವೂ ಆದ ನೋಟವನ್ನು ನೋಡುವುದರಲ್ಲಿ 

ಅವಳ ಮನಸ್ಸು ಲೀನವಾಗಿತ್ತು. ಆಕೆಯ ಹೃದಯದಲ್ಲಿ ಯಾವ ಪ್ರಕಾರದ ವಿಚಾರತ 

ರಂಗಗಳು ಉದ್ಭವಿಸುತ್ತಿದ್ದು ವೆಂಬುದನ್ನು ಯಾರು ಹೇಳಬಲ್ಲರು? 


ಸಂಧ್ಯಾಕಾಲದ ಗಗನಶೋಭೆಯನ್ನು ನೋಡುವದಕ್ಕಾಗಿ ಅರಮನೆಯ ಶಿಖರವ 

ನ್ನೇರಿ ಸಂಗಮರವರೀ ಕಲ್ಲಿನ ಅಸನದ ಮೇಲೆ ಕುಳಿತು ಹೃದಯದ ಉರಿಯನ್ನು ಶಾಂತ 

ಮಾಡಿಕೊಳ್ಳಲಪೇಕ್ಷಿಸುತ್ತಿದ್ದ ಆ ತರುಣೆಯು ಇನ್ನಾರೂ ಆಗಿರದೆ ದುರ್ಗಾಧಿಪತಿಯಾದ 

ಭೀಮಸಿಂಹನ ಮಗಳೂ ನಮ್ಮ ಪೂರ್ವಪರಿಚಿತಳೂ ಅದ ಲಲಿತೆಯೇ ಆಗಿದ್ದಳು. 


ನಮ್ಮ ಕಥಾನಾಯಿಕೆಯಾದ ಲಲಿತೆಯು ದೇವದರ್ಶನಕ್ಕೆ ಹೋದಾಗ ದಾರಿ 

ಯಲ್ಲಿ ಬೋರರ ಕೈಯಲ್ಲಿ ಸಿಕ್ಕಳೆಂಬುದೂ ಕುಮಾರ ಕರುಣಸಿಂಹನು ಅವಳನ್ನು ಹೇಗೆ 

ರಕ್ಷಿಸಿದನೆಂಬದೂ ಗಾಯ ಹೊಂದಿದ ಕರುಣಸಿಂಹನಿಗೆ ಚಂದ್ರಚೂಡನ ಪ್ರಯತ್ನಗ 

ಳಿಂದ ಹೇಗೆ ವಾಸಿಯಾಯಿತೆಂಬುದೂ ನಮ್ಮ ವಾಚಕರಿಗೆ ಗೊತ್ತೇ ಇದೆ. 



೨೦------------------------------ ವಾಗ್ಭೂಷಣ.--------------------------------- 


ಅರಮನೆಯ ಶಿಖರದ ಮೇಲಿನ ಆ ಏಕಾಂತವಾದ ಸ್ಪಳದಲ್ಲಿ ಕುಳಿತು ಲಲಿತೆಯು 

ಕರುಣಿಸಿಂಹನ ವಿಷಯವಾಗಿಯೇ ಆಲೋಚನೆ ಮಾಡುತ್ತಿದ್ದಳು. ಮುತ್ತಾವಲಿಯ 

ತರಂಗಗಳ ಮೇಲೆ ಹಾಯ್ದು ಬರುವ ಶೀತಲವಾಯುವಿನಿಂದ ಅವಳ ತಪ್ತ ಹ್ಯದಯವು 

ಶಾಂತಿಯನ್ನು ಹೊಂದಲಿಲ್ಲ. ತನ್ನ ತಂದೆಯ ಶತ್ರುವಿನ ಮಗನಿಗೆ ತನ್ನನ್ನು ವಿವಾಹ 

ಮಾಡಿಕೊಡನೆಂದು ಅವಳಿಗೆ ಪೂರ್ಣವಾಗಿ ತಿಳಿದಿತ್ತು. ಕುಮಾರನಾದರೂ ಸಾಹಸ 

ದಿಂದ ದುರ್ಗವನ್ನು ಪ್ರವೇಶಿಸುವದು ಶಕ್ಯವಾಗಿದ್ದಿಲ್ಲ. ಆದರೂ ಚಂದ್ರಚೂಡನ ಅಶ್ರ 

ಮದಿಂದ ಲಲಿತೆಯು ದುರ್ಗಕ್ಕೆ ಬಂದ ಬಳಿಕ ಕುಮಾರಸಿಂಹನು ಒಂದು ಬಾರಿ ಅವ 

ಳನ್ನು ಕಂಡು ಹೋಗಿದ್ದನು. 



ಇರಲಿ, ಪ್ರಿಯಕರನ ಚಿಂತನದಿಂದಾದರೂ ಲಲಿತೆಯ ಮನಸ್ಸು ಶಾಂತವಾಯಿತೆಂದು 

ಹೇಳೋಣವೇ? ಅದೂ ಇಲ್ಲ! ಮುಕ್ತಾವಲೀ ನದಿಯ ಮೇಲೆ ಬೀಸುತ್ತಿರುವ ಮೃದು 

ಶೀತಲವಾಯುವು ಇಷ್ಟೊಂದು ಎತ್ತರವಾದ ಸ್ಥಳದಲ್ಲಿ ಕುಳಿತುಕೊಂಡಿದ್ದ ಲಲಿತೆಯ 

ತಪ್ತಹೃದಯಕ್ಕೆ ಶಾಂತಿದೇವಿಯನ್ನು ಕಳಿಸಲು ಸಮರ್ಥನಾಗಲಿಲ್ಲವೋ ಏನೋ! 

ಲಲಿತೆಯು, ಆ ಸ್ಥಳದಿಂದ ಇಳಿದು ಸ್ವಲ್ಪ ಕೆಳಗೆ ಬಂದಳು. ವಿಕಸಿತ ಸರಸಿಜದಂತಿ 

ರುವ ಅವಳ ವದನದಲ್ಲಿ ಇಷ್ಟು ಅಲ್ಪಶ್ರ ಮದಿಂದಲೇ ಉಂಟಾದ ಘರ್ಮಬಿಂದುಗಳು ಶಿಶಿರ 

ಶೀಕರದಂತೆ ಶೋಭಿಸಹತ್ತಿದವು. ಸೀರೆಯ ಸೆರಗನ್ನು ಮೊಗದಮೇಲೆ ಅಡಿಸಿಕೊಂಡು 

ಆಕಾಶದ ಕಡೆಗೆ ನೋಡುತ್ತ ಖಿನ್ನಳಾಗಿ ಲಲಿತೆಯು ತನ್ನಲ್ಲಿ ಯೇ ಮಾತಾಡಿದಳು. 

" ಹೌದು. ಇದೇ ಸ್ಥಳದಲ್ಲಿಯೇ ಇದೇ ಕಾಲದಲ್ಲಿಯೇ ಅವರ ದರ್ಶನವು ನನಗಾಗಿತ್ತು. 

ದುರ್ಗದ ಈ ಶಿಲಾತಟಕ್ಕೆ ರಜ್ಜುವಿನ ಏಣಿಯನ್ನು ಮಾಡಿಕೊಂಡು ಬಂದು ತಮ್ಮ 

ಸುಖಕರ ಸಹವಾಸದ ಲಾಭವನ್ನು ಅವರು ನನಗೆ ಕೊಟ್ಟಿದ್ದರು. ಅಹಹಾ! ಆ ಸುಖವು 

ಎಷ್ಟು ಅಲ್ಪಾವಧಿಯಲ್ಲಿಯೇ ನಾಶವಾಗಿ ಹೋಯಿತಲ್ಲ! ಚಂದ್ರಾವತ ಕುಲಕ್ಕೂ ಚವ್ಹಾ 

ಣವಂಶಕ್ಕೂ ಮೊದಲಿನಿಂದಲೂ ಹಗೆತನನಿದೆ. ಪ್ರಾಣ ಹೋದರೂ ನಮ್ಮಪ್ಪನು ಶತ್ರು 

ವಂಶದೊಳಗಿನ ಆ ವೀರನೊಡನೆ ನನ್ನ ಮದುವೆಯನ್ನು ಮಾಡಲು ಒಡಂಬಡುವುದಿಲ್ಲ. 

ಅಂದಮೇಲೆ ಇನ್ನು ಮುಂದೆ ನಾನು ಜೀವಿಸಿಯಾದರೂ ಪ್ರಯೋಜನವೇನು? ಮುಕ್ತಾ 

ವಲಿಯ ಭಯಂಕರವಾದ ಈ ಕರ್ಮಡುವಿನಲ್ಲಿ ಹಾರಿಕೊಂಡು ಸತ್ತುಹೋಗುವುದೇ 

ಶ್ರೇಯಸ್ಕರವಲ್ಲವೇ? ಅದರೆ ಅದಕ್ಕಿಂತಲೂ ಪೂರ್ವದಲ್ಲಿ ಆ ಸುಂದರಮುಖ ಚಂದ್ರನ 

ದರ್ಶನವು ಈ ಹತಭಾಗಿನಿಗೆ ಆಗಬಹುದೇ? ದೇವಾ, ಒಮ್ಮೆ `ಅವರ ದರ್ಶನವು 

ನನಗಾದರೆ- "


ಇಷ್ಟರಲ್ಲಿ ತಟದ ಕೆಳಬದಿಯಿಂದ 'ಲಲಿತೆ' ಎಂದು ಯಾರೋ ಪ್ರೇಮಾರ್ದ್ರ 

ಸ್ವರದಿಂದ ಕರೆಯುತ್ತಿರುವುದು ಕೇಳಬಂತು. 



ಅದನ್ನು ಕೇಳಿ ಲಲಿತೆಯು ಬೆರಗಾದಳು, 



--------------------------------ಪ್ರೇಮಮಂದಿರ.--------------------------೨೧

 

 

" ಲಲಿತೇ, ನಾನು ಬಂದಿದ್ದೇನೆ. "


ಕ್ಷಣಾರ್ಧದಲ್ಲಿಯೇ ಲಲಿತೆಯು ಸ್ವರವನ್ನು ಗುರ್ತಿಸಿದಳು. ಕರುಣಸಿಂಹನು ತನ್ನನ್ನು 

ಕಾಣುವುದಕ್ಕೋಸ್ಕರ ಸಾಹಸದಿಂದ ಬಂದಿದ್ದಾನೆಂಬುದು ಆಕೆಗೆ ತಿಳಿಯಿತು. ರಾಜಕು 

ಮಾರನು ಎದುರಿನಲ್ಲಿರುವುದನ್ನು ನೋಡಿ ನಾಚಿಕೆಯಿಂದ ಕೆಳಗೆ ನೋಡಹತ್ತಿದಳು. 



ಕರುಣಸಿಂಹನು ರಾಜಕನ್ಯೆಯ ಮುಂದೆ ಬಂದು ನಿಂತನು. ಕಿಂಚಿತ್ಕಾಲದವರೆಗೆ 

ಇಬ್ಬರೂ ಸ್ತಬ್ಧರಾಗಿದ್ದರು. ಸ್ವಲ್ಪ ಹೊತ್ತಿನ ಮೇಲೆ ಬಂದು ನಿಶ್ಚಾಸವನ್ನು ಬಿಟ್ಟು 

ಆತನು ಖಿನ್ನಸ್ವರದಿಂದ ಮಾತನಾಡಿದನು. " ಲಲಿತೇ, ಹೀಗೆಯೇ ಇನ್ನೂ ಎಷ್ಟು ದಿವ 

ಸಗಳವರೆಗೆ ಕಳ್ಳನಂತೆ ನಿನ್ನ ದರ್ಶನಕ್ಕಾಗಿ ನಾನು ಈ ದುರ್ಗಕ್ಕೆ ಬರಬೇಕು? ನನ್ನ 

ಮನಸ್ಸಿನಲ್ಲಿದ್ದುದನ್ನು ನಿಮ್ಮ ತಂದೆಗೆ ಸ್ಪಷ್ಟವಾಗಿ ತಿಳಿಸಿಬಿಟ್ಟು ನಿನ್ನನ್ನು ನನಗೆ ಮದು 

ವೆಮಾಡಿ ಕೊಡುವಂತೆ ಕೇಳಬೇಕೆಂದು ಬಹು ದಿವಸಗಳಿಂದಲೂ ಯೋಚಿಸಿದ್ದೇನೆ. 

ಆದರೆ ಭೀಮಸಿಂಹನ ಉದ್ಧತವಾದ ಕ್ರೂರಸ್ವಭಾವವು ನೆನಪಿಗೆ ಬಂದೊಡನೆಯೇ ಆ 

ವಿಚಾರವನ್ನು ಬಿಟ್ಟು ಬಿಡಬೇಕಾಗುವುದು. ಭೀಮಸಿಂಹನು ನನ್ನ ಪ್ರಾಣಪ್ರಿಯ ಲಲಿ 

ತೆಯ ಜನ್ಮದಾತೃವೆಂದು ತಿಳಿದು ಅವನೊಡನೆ ಇದ್ದ ಶತ್ರುತ್ವವನ್ನು ಮರೆತು ಬಿಟ್ಟಿದ್ದೇನೆ. 

ಅವನು ನನ್ನ ಅಪ್ತನೆಂದಾಗಲಿ ಮಿತ್ರನೆಂದಾಗಲಿ ತಿಳಿಯುತ್ತೇನೆ. ಚಂದ್ರಚೂಡರವರು 

ಬೇಡವೆಂದು ಹೇಳಿದ್ದರೂ ಅನೇಕ ಭಯಂಕರವಾದ ವಿಘ್ನಗಳನ್ನು ಸಹ ಲೆಕ್ಕಿಸದೆ ಈ 

ಶತ್ರುದುರ್ಗದಲ್ಲಿ ಬಂದು ನಿನ್ನ ದರ್ಶನವನ್ನು ತೆಗೆದುಕೊಳ್ಳುತ್ತಿರುವೆನು. ಲಲಿತೆ ಪ್ರಿಯೇ 

ಈ ಸ್ಥಾನವನ್ನು ಬಿಟ್ಟು ನನ್ನ ಸಗಂಡ ಬಾ. ಅವಶ್ಯವಾಗಿಯೂ ನನ್ನೊಡನೆ ಬಾ. ನಿನ 

ಗೋಸ್ಕರವಾಗಿ ಮೊಗಲರ ದಂಡಾಳುತನವನ್ನು ಕೂಡ ಬಟ್ಟು ಬಿಡಲು ನಾನು ಸಿದ್ದ 

ನಿದ್ದೇನೆ. ಒಂದು ಮುರಕ ಗುಡಿಸಲಿನಲ್ಲಿದ್ದರೂ ಕೂಡ ನಿನ್ನ ಸ್ವರ್ಗೀಯ ಸಹವಾಸದ 

ಮೂಲಕ ನನಗೆ ಅಪೂರ್ವವಾದ ಸೌಖ್ಯವೇ ಆಗುವುದು. ನಿನ್ನ ಪ್ರೇಮಲ ಸಂಗತಿ, 

ಯಿಂದ ವಿಜನವನವೂ ನನಗೆ ನಂದನವನಸಮಾನವಾಗುವುದು. ” 



ಲಲಿತೆಯು ಮೊದಲು ಏನೂ ಮಾತಾಡಲಿಲ್ಲ. ಸುಮ್ಮನೆ ಇದ್ದಳು. ಕೆಲವು 

ವೇಳೆಯ ಅನಂತರ ಅಸ್ಫುಟಸ್ವರದಿಂದ ಕರುಣಸಿಂಹನನ್ನು ಕುರಿತು ಹೇಳಿದಳು: 

" ಪ್ರಿಯರೇ ಈ ಜನ್ಮದಲ್ಲಂತೂ ನಮಗೆ ಸೌಖ್ಯವು ದೊರೆಯುವದು ಅಶಕ್ಯವಾಗಿಯೇ 

ತೋರುತ್ತದೆ. ನಮ್ಮಿಬ್ಬ ರ ವಿವಾಹಕ್ಕೆ ಒದಗಬಹುದಾದ ವಿಘ್ನಗಳನ್ನು ನೆನಿಸಿಕೊಂಡು 

ನಾನಂತೂ ಪೂರ್ಣವಾಗಿ ನಿರಾಶಳಾಗಿದ್ದೇನೆ. ಇದೆಲ್ಲದರ ಪರಿಣಾಮವೇನಾಗಬಹುದೆಂಬು 

ದರ ಕಲ್ಪನೆಯನ್ನು ಮಾಡುವದು ಕೂಡ ನನಗೆ ಅಶಕ್ಕವಾಗಿದೆ. ತಾವು ನನ್ನನ್ನು 

ಎಲ್ಲಿ ಕರೆದುಕೊಂಡು ಹೋಗುವಿರೋ ಆ ಸ್ಥಾನವು ಎಷ್ಟೇ ದರಿದ್ರವಾಗಿದ್ದರೂ ಅಲ್ಲಿ 

ನನಗೆ ಪರಮಸೌಖ್ಯವೇ ಆಗುವುದು. ಅದರೆ ದುರ್ದ್ಯೈವಿಯಾದ ನನ್ನ ಹಣೆಯಲ್ಲಿ ಆ 

ಸುಖವಿಲ್ಲ. ನಮ್ಮ ದಾರಿಯಲ್ಲೊಂದು ಹೊಸದಾದ ವಿಘ್ನವು ಉಪಸಿ ತವಾಗಿದೆ. ನನ್ನ 



೨೨ ------------------------ವಾಗ್ಭೂಷಣ.------------------------------------- 



ವಿವಾಹದ ಮುಹೂರ್ತವನ್ನು ನಿಶ್ಚಯಿಸುವುದಕ್ಕೋಸ್ಕರ ನನ್ನ ತಂದೆಯು ಸರತಾನ 

ಸಿಂಹನ ಕಡೆಗೆ ಹೋಗಿದ್ದಾನೆ. ಯುವರಾಜನಾದ ದುರ್ಜಯಸಿಂಹನನ್ನು ಕರೆದುಕೊಂಡೇ 

ಇತ್ತಕಡೆಗೆ ನಮ್ಮಪ್ಪನು ಬರುತ್ತಾನೆಂದು ನಾನು ಕೇಳಿದ್ದೇನೆ. ಕುಮಾರ! ತಾವು ಈ 

ಸಂಕಟದೊಳಗಿಂದ ನನ್ನನ್ನು ಬದುಕಿಸದಿದ್ದರೆ ನಾನು ಬದುಕುವುದಕ್ಕೆ ಮಾರ್ಗವೇ ಇಲ್ಲ. 

ಆದರೆ ಗೋಪ್ಯವಾಗಿ ಓಡಿಹೊಗುವುದೆಂದರೆ ನನಗೂ ನನ್ನ ವಂಶಕ್ಕೂ ಭಯಂಕರ 

ವಾದ ಕಲಂಕವನ್ನು ತೊಡೆದುಕೊಂಡಂತಾಗುವುದಿಲ್ಲವೇ? ನಾನು ಸರ್ವವನ್ನೂ ಸಹಿಸ 

ಬಲ್ಲೆನು. ಆದರೆ ಕುಲಕ್ಕೆ ಹತ್ತುವ ಕಲಂಕವನ್ನು ಸಹನಮಾಡಲಾರೆನು! ಓಡಿ ಹೋಗು 

ವುದರ ಹೊರತು ನಾನು ಪಾರಾಗುವುದಕ್ಕೆ ಬೇರೆ ಉಪಾಯಗಳೇ ಇಲ್ಲವೇ? " 



ಹೃದಯವನ್ನು ಸ್ಥಿರಗೊಳಿಸಿ ಕರುಣಸಿಂಹನು ಬಹಳ ಹೊತ್ತಿನವರೆಗೆ ಯೊಚನೆ 

ಮಾಡುತ್ತ ಸುಮ್ಮನೆ ನಿಂತುಕೊಂಡನು. ಬಳಿಕ ಪ್ರಿಯೆಯ ಕರಣಾಪೂರ್ಣ ಮುಖ 

ಮಂಡಲವನ್ನು ನಿರೀಕ್ಷಿಸುತ್ತ ಇಂತು ನುಡಿದನು. " ಲಲಿತೇ, ಎಷ್ಟು ವಿಚಾರಮಾಡಿದರೂ 

ಈ ಸಂಗತಿಗೆ ಅನ್ಯ ಉಪಾಯವೇ ತೋಚಲೊಲ್ಲದು. ಇಂದಿಗೆ ಎಂಟನೆಯ ದಿವಸ 

ಬಂದು ನಾನು ನಿನಗೆ ಭೆಟ್ಟಿಯಾಗುತ್ತೀನೆ. " 


" ಯಾವ ಸ್ಥಾನದಲ್ಲಿ?” 


" ಇದೇ ದುರ್ಗದಲ್ಲಿಯೇ. ? 


" ಪ್ರಿಯರೇ, ತಾವು ಹೀಗೆ ವಿಪರೀತವಾದ ಧೈರ್ಯವನ್ನು ಮಾಡಬೇಡರಿ. ತಾವು 

ಮೊದಲನೆಯ ಸಾರೆ ಇಲ್ಲಿಗೆ ಬಂದಾಗಿನಿಂದ ದುರ್ಗದೊಳಗಿನ ಜನರಿಗೆ ಅವುದೋ 

ಒಂದು ಪ್ರಕಾರದ ಸಂಶಯವು ಬಂದಿದೆ. ಆ ದಿವಸಮೊದಲ್ಗೊಂಡು ಕೆಲವು ದಿವಸಗಳ 

ವರೆಗೆ ಪಹರೆಯವರು ನದಿಯ ಕಡೆಗೆ ಪ್ರದೇಶವನ್ನು ಒಒಳ್ಳೇ ಜಾಗರೂಕತೆಯಿಂದ 

ನೋಡಿಕೊಳ್ಳು ತ್ತಿದ್ದರು. ನನ್ನ ತಂದೆಯು ಇಲ್ಲಿಂದ ಹೊರಟು ಹೋದಾಗಿನಿಂದ ಮಾತ್ರ 

ಆ ವ್ಯವಸ್ಥೆಯು ಇಲ್ಲದಂತಾಗಿದೆ. ಆದುದರಿಂದಲೇ ತಾವು ಈ ಹೊತ್ತಿನ ದಿವಸ ಇಷ್ಟು 

ಸುಲಭವಾಗಿ ಇಲ್ಲಿ ಬರುವದು ಸಾಧ ವಾಯಿತು. ದೈವಾನುಕೂಲವೆಂದೇ ಹೇಳಬೇಕು; 

ಇಲ್ಲದಿದ್ದರೆ” 


" ಹಾಗಾದರೆ ಇನ್ನು ಮುಂಡೆ ನಾನು ದುರ್ಗದಲ್ಲಿ ಪ್ರವೇಶ ಮಾಡುವದೆಂತು? ” 

ಕರುಣಸಿಂಹನು ಚಿಂತಾತುರನಾಗಿ ಪ್ರಶ್ನೆ ಮಾಡಿದನು. 


ಸ್ವಲ್ಪ ಹೊತ್ತು ವಿಚಾರಿಸಿ ರಾಜಕನ್ಯೆಯು ಇಂತು ನುಡಿದಳು. " ಒಂದೆರಡು ದಿವ 

ಸಗಳೊಳಗಾಗಿಯೇ ನಾನು ತಮಗೊಂದು ಯುಕ್ತಿಯನ್ನು ತಿಳಿಸುತ್ತೇನೆ. ” 


ಒಂದು ದೀರ್‍ಘನಿಶ್ಚಾಸವನ್ನು ಬಿಟ್ಟು, ಲಲಿತೆಯ ಸುಂದರವಾದ ಮುಖಕಮಲವ 

ನ್ನೊಮ್ಮೆ ಚುಂಬಿಸಿ, ಹಗ್ಗದ ಏಣಿಯಿಂದ ಕೆಳಗಿಳಿದು ಮೆಲ್ಲಡಿಯನ್ನಿಕ್ಕುತ್ತ ಕರುಣ 

ಸಿಂಹನು ಹೊರಟು ಹೋದನು. 



----------------------------------ಪ್ರೇಮಮಂದಿರ. -----------------------------೨೩ 



ಮುಕ್ತಾವಲಿಯ ದಂಡೆಯ ಮೇಲೆ ಕರುಣಸಿಂಹನ ವಿಶ್ವಾಸುವಾದ ಸೇವಕನು, 

ಅತನ ಮಾರ್ಗವನ್ನೇ ಪ್ರತೀಕ್ಷಿಸುತ್ತ ಕುಳಿತುಕೊಂಡಿದ್ದನು. ಕರುಣಸಿಂಹನು ಅವನನ್ನು 

ಕುರಿತು ಮಾತನಾಡಿದನು. " ಸುಂದರಾ, ಏಕೆ? ನೌಕೆಯನ್ನು ತೆಗೆದುಕೊಂಡು ಬಾ. ” 



ನೌಕೆಯು ಬಂದೊಡನೆಯೇ ಅದರಲ್ಲಿ ಕುಳಿತು ಕರುಣಸಿಂಹನು ಹೊರಟು 

ಹೋದನು. 



ಕರುಣಸಿಂಹನು ಹೊರಟು ಹೋದಬಳಿಕ ಲಲಿತೆಯು ವಿಷಣ್ಣ ಹೃದಯದಿಂದ 

ಇತ್ತಲತ್ತ ಸುತ್ತಲಾರಂಭಿಸಿದಳು. ಕರುಣಸಿಂಹನು. ಹೋದ ದಾರಿಯನ್ನು ನಿರೀಕ್ಷಿಸಬೇ 

ಕೆಂದು ಅತ್ತಕಡೆಗೆ ಮೊಗದಿರುವಿ ನಿಂತುಕೊಂಡಳು. ಇಷ್ಟರಲ್ಲಿ ಕತ್ತಲೆಯಲ್ಲಿ ಮಾರ್ಗ 

ವನ್ನು ಹುಡುಕುತ್ತ ಯಾರೋ ತನ್ನ ಕಡೆಗೇ ಬರುತ್ತಿರುವದು ಅವಳ ದೃಷ್ಟಿಗೆ ಬಿತ್ತು ! 



ಆ ಮೂರ್ತಿಯನ್ನು ನೋಡಿ ರಾಜಕನ್ಯೆಯು ಬೆರಗಾದಳು; ಅದರೆ ಬೆದರಲಿಲ್ಲ. 

ಅಂಧಕಾರಪರಿವೃತವಾದ ಆ ಅಜ್ಞಾತಮೂರ್ತಿಯು ಇನ್ನೂಸ್ಟಲ್ಪ ಅಂತರದಲ್ಲಿರುವಾಗಲೇ 

ಲಲಿತೆಯು ಆಶ್ಚರ್ಯಪ್ರದರ್ಶಕಸ್ವರದಿಂದ ನುಡಿದಳು. " ಯಾರವರು.? ನೀನು ಯಾರು, 

ಹೇಳು ? 



ಎದುರಿನಲ್ಲಿ ಬರುತ್ತಿರುವ  ಆ ಮೂರ್ತಿಯು ಲಲಿತೆಯ ಪ್ರಶ್ನೆಗೆ ಉತ್ತರವನ್ನೇ 

ಕೊಡಲಿಲ್ಲ. ಮೆಲ್ಲಮೆಲ್ಲನೆ ನಡೆಯುತ್ತ ಸಮಸಮೀಪಕ್ಕೆ ಬರುತ್ತಿತ್ತು. ಆ ಅಂಧಕಾರದಲ್ಲಿ 

ಚಮತ್ಕಾರಿಕವಾದ ಒಂದು ಹಾಸ್ಯಧ್ವನಿಯು ಅಕಸ್ಮಾತ್ತಾಗಿ ಲಲಿತೆಗೆ ಕೇಳಿಸಿತು. ಈಗೆ 

ಮಾತ್ರ ಅವಳು ಹೆದರಿದಳು. ಅಂಧಕಾರವೇಷ್ಟಿತವಾದ ಆ ಮೂರ್ತಿಯನ್ನ ವಲೋಕಿಸಿ 

ಲಲಿತೆಯ ಹೃದಯವು ಕಂಪಿತವಾಯಿತು. 



ನೋಡನೋಡುವಷ್ಟರಲ್ಲಿ ಆ ಮೂರ್ತಿಯು ಲಲಿತೆಯ ಸಮೀಪದಲ್ಲಿ ಬಂದು 

ನಿಂತಿತು. ಇಷ್ಟೇ ಅಲ್ಲ; ಇನ್ನೂ ಸಮೀಪಕ್ಕೆ ಬಂದು ಲಲಿತೆಯ ಕೈಯನ್ನು ಹಿಡಿದು ಮೃದು 

ಸ್ವರದಿಂದ ಮಾತನಾಡಿತು. " ರಾಜಕನ್ಯೆಯೇ, ಸ್ವಲ್ಪವೂ ಹೆದರಬೇಡ; ನಾನೂ ನಿನ್ನಂತೆ 

ಯೇ ಒಬ್ಬ ಹೆಂಗಸು. " 



ಆ ಮೂರ್ತಿಯು ತನ್ನ ಕೈಯನ್ನು ಹಿಡಿದಿದ್ದರೂ ಲಲಿತೆಯು ಚೀರಲಿಲ್ಲ. ಆಕೆಯು 

ಅಧೀರತೆಯಿಂದ ಆ ಸ್ತ್ರೀಯನ್ನು ವಿಚಾರಿಸಿದಳು. " ನೀನು ಯಾರು? ನೀನು ಇಲ್ಲಿಗೆ ಹೇಗೆ 

ಬಂದೆಯೆಂಬದು ನನಗೆ ಬಹಳೇ ಅಶ್ಚರ್ಯವನ್ನುಂಟು ಮಾಡುತ್ತಿದೆ! ನೀನು ಸ್ತ್ರೀಯೆಂದು 

ಹೇಳುತ್ತೀ; ಆದರೆ ನಿನ್ನ ಸಾಹಸವಾದರೋ ಅತ್ಯಂತ ವಿಲಕ್ಷಣವಾಗಿದೆ ! ಏನಮ್ಮಾ, 

ನಾನು ಏಕಾಂತದಲ್ಲಿದ್ದಾಗ ಈಪ್ರಕಾರ ನನ್ನ ಹತ್ತಿರ ಬರಲು ನಿನ್ನ ಉದ್ದೇಶವಾದರೂ 

ಏನು?” 



೨೪ ---------------------------ವಾಗ್ಭೂಷಣ.------------------------------ 



ಆ ಅಜ್ಞಾತಸ್ತ್ರೀಮೂರ್ತಿಯು ಮತ್ತೊಮ್ಮೆ ಖೊಳಖೊಳನೆ ನಕ್ಕಿತು. ಅವಳ ಅರ್ಥ 

ಸೂಚಕವಾದ ಹಾಸ್ಯದಿಂದ ಲಲಿತೆಯ ಮನಸ್ಸಿನ ಮೇಲೆ ವಿಲಕ್ಷಣಪರಿಣಾಮವಾಯಿತು! 

ಆಕೆಗೆ ಯಾವದೂ ತಿಳಿಯದಾಯಿತು !!  



ಲಲಿತೆಯ ಮನಃಸ್ಥಿತಿಯನ್ನು ನೋಡಿ ಆ ಸ್ತ್ರೀಗೆ ಸೋಚಿಗವಾಯಿತು. ಆಕೆಯು 

ಪುನಃ ವಿಕಟಹಾಸ್ಯಮಾಡಿ ಮಾತಾಡಿದಳು. " ರಾಜಕನ್ಯೆಯೇ, ಸ್ವಲ್ಪವೂ ಹೆದರಬೇ 

ಡಮ್ಮಾ ! ಏನೇ, ನಾನೇನು ಹುಲಿಯೋ ಕರಡಿಯೋ | ಇಷ್ಟೇಕೆ ಹೆದರಿಕೊಂಡಿರುವೆ ?  

ಮೇಲಾಗಿ ನಾನೇನು ನಿನ್ನ ಶತ್ರುವೂ ಅಲ್ಲ; ಆದುದರಿಂದ ನಿನಗೆ ಅಪಾಯವನ್ನುಂಟುಮಾ 

ಡುವುದಕ್ಕೂ ಕಾರಣವಿಲ್ಲ. " 



ಇದನ್ನು ಕೇಳಿ ಲಲಿತೆಯ ಮನಸ್ಸಿನ ಸ್ಥಿತಿಯು ಇನ್ನೂ ವಿಲಕ್ಷಣವಾಯಿತು ! 

ತಾನು ನನ್ನ ಶತ್ರುವಲ್ಲವಂತೆ; ಆದರೂ ಇನ್ನೂವರೆಗೆ ತನ್ನ ಪರಿಚಯವನ್ನೇ ಹೇಳಲಿಲ್ಲ; 

ಅಂದಮೇಲೆ ಅವಳು ಯಾರಿರಬಹುದೆಂಬದು ಅವಳಿಗೆ ತಿಳಿಯದಾಯಿತು ! 


ಆ ಅಜ್ಞಾತಸ್ತ್ರೀಯು "ಮತ್ತೆ ಮಾತನಾಡಿದಳು. " ರಾಜಕನ್ಯೆಯೇ, ನಾನು ನಿನ 

ಗೊಂದು ಪ್ರಶ್ನ ಮಾಡುತ್ತೇನೆ. ನನ್ನ ನ್ನು ಕ್ಷಮಿಸು. ನೀನು ನೊಡುವುದಕ್ಕೇನೋ ಚದುರೆ 

ಯಂತೆ ತೋರುತ್ತೀ. ಆದರೆ ನಿಜವಾಗಿಯೂ ಹೇಳು--ನಿನಗೆ ಪ್ರೇಮದ ಮರ್ಮವು 

ಗೊತ್ತಾಗಿದೆಯೇ? " 



ಈನ ಪ್ರಶ್ನೆಯನ್ನು ಶ್ರವಣಮಾಡಿ ಲಲಿತೆಗೆ ಅತ್ಯಂತ ಆಶ್ಚರ್‍ಯವಾಯಿತು. ಗುರುತಿಲ್ಲ, 

ಪರಿಚಯವಿಲ್ಲ ಒಬ್ಬರನ್ನೊಬ್ಬರು ಇದಕ್ಕೂ ಮೊದಲು ಒಮ್ಮೆ ಸಹ ನೋಡಿಲ್ಲ, ಹೀಗಿ 

ದ್ದರೂ ಈ ಸ್ತ್ರೀಯು ಅಕಸ್ಮಿಕವಾಗಿ ಪ್ರೇಮವಿಷಯಕ ಪ್ರಶ್ನೆಯನ್ನೇ ಮಾಡುತ್ತಾಳಲ್ಲ! 

ಇದರ ಅರ್ಥವೇನು? ಈಪ್ರ ಕಾರ ಮನಸಿನಲ್ಲಿಯೇ ದಿಗಿಲುಬಡುತ್ತ ಆಶ್ಚರ್ಯಪ್ರದರ್ಶಕ 

ಸ್ವರದಿಂದ ಲಲಿತೆಯು ತನು, “ ನೀನು ಯಾವಳಾದರೂ ಇರು. “ನಿನ್ನ ಈ 

ದಿಟ್ಟತನವನ್ನು ಕಂಡು ನನಗೆ ಬಹಳೇ ಅಶ್ಚರ್ಯವಾಗುತ್ತದೆ. ನಾನು ಯಾರೆಂಬುದು  

ಒಂದುವೇಳೆ ನಿನಗೆ ತಿಳಿದಿದ್ದರೂ ನೀನು ಯಾರೆಂಬದು ನನಗೆ ಗೊತ್ತಿಲ್ಲ. ನಿನಗೂ ನನಗೂ 

ಗುರುತಿಲ್ಲ, ಪರಿಚಯನಿಲ್ಲ. ಹೀಗಿದ್ದು ಆಕಸ್ಮಿಕವಾಗಿ ನೀನು ಅಂತಹ ಪ್ರಶ್ನೆಯನ್ನು 

ಕೇಳುತ್ತೀಯಲ್ಲ! ಇದರ ಅರ್ಥವೇನು ?"  


ಆಸ್ತ್ರೀಯು ಮುಗುಳ್ನಗೆಯನ್ನು ನಕ್ಕಳು. ಮತ್ತು ತನ್ನ ತುಟಿಯಮೇಲೆ ಕೈಬೆರಳನ್ನಿ 

ಟ್ಟುಕೊಂಡು ಮಾತಾಡಿದಳು. ನಿನನಗೂ "ನನಗೂ ಪರಿಚಯವಿಲ್ಲದಿದ್ದರೇನಾಯಿತು? 

ಪ್ರೇಮದ ಮರ್ಮವನ್ನು ಕೂಡ ನಿನಗೆ ವಿಚಾರಿಸ ಕೂಡದೇ?! ` ರಾಜಕನ್ಯಯೇ,. ನೀನು 

ಒಳ್ಳೇ ಚದುರೆಯೆಂದು ನಾನು ತಿಳಿದುಕೊಂಡಿದ್ದೆನು." 


" ನನು ಚದುರೆಯಾಗಿರಲಿಕ್ಕಿಲ್ಲ; ಆದರೆ ನೀನು ಆಕಸ್ಕಿ ಕವಾಗಿ ಬಂದು ಈ 

ವಿಲಕ್ಷಣವಾದ ಪ್ರಶ್ನೆಯನ್ನೇಕೆ ಕೇಳಬೇಕು? ” 



--------------------------------ಪ್ರೇಮಮಂದಿರ. -----------------------------೨೫ 


" ಪ್ರಶ್ನೆಗೆ ಉತ್ತರವನ್ನು ಕೊಟ್ಟರೆ ನಿನ್ನ ಗಂಟಾದರೂ ಏನುಹೋಗುತ್ತದೆ.?"

ಲಲಿತೆಯು ಏನೂ ಮಾತಾಡಲಿಲ್ಲ. ತೀಕ್ಷ್ಣದೃಷ್ಟಿಯಿಂದೊಮ್ಮೆ ಆ ಸ್ತ್ರೀಯನ್ನು ನೋಡಿ 

ದಳು. ಆ ದೃಷ್ಟಿಯಲ್ಲಿ ಕ್ರೋಧಕ್ಕಿಂತಲೂ ತಯತುಚ್ಛತೆಯ ಛಾಯೆಯು ಹೆಚ್ಚಾಗಿತ್ತು. 



ಅ ಸ್ತ್ರೀಯು ತನ್ನ ಪ್ರಶ್ನದ ಉತ್ತರಕ್ಕೋಸ್ಕರ ಸ್ವಲ್ಪ ಹೊತ್ತು ಸುಮ್ಮನಿದ್ದಳು. 

ಲಲಿತೆಯು ಯಾವ ಉತ್ತ ರವನ್ನೂ ಕೊಡುವದಿಲ್ಲವೆಂದು ಇಂದು ಅವಳು ತನ್ನ ಲ್ಲಿಯೇ 

ನಕ್ಕು ಇಂತು ನುಡಿದಳು. "" ರಾಜಕನ್ಯೆಯೇ ! ನನ್ನ ಪ್ರಶ್ನೆಗೆ ನೀನು ಉತ್ತರವನ್ನು 

ಕೊಡಲಿಲ್ಲ. ಹೀಗೆ ಮರೆಮಾಜುವುದರಿಂದ ನಿನಗೆ ನಿಜವಾಗಿಯೂ ಲಾಭವಿಲ್ಲ;  

ಕಂಡೆಯಾ? 



ಈಗಾ ಮಾತ್ರ ಲಲಿತೆಯು ಆ ಸ್ತ್ರೀಯಮೇಲೆ ಕೋಪಿಸಿಕೊಂಡಳು. ಆ ವಿಲಕ್ಷಣ 

ಸ್ತ್ರೀಯನ್ನು ಕೆಂಗಣ್ಣಿನಿಂದ ನೋಡುತ್ತ ಕರ್ಕಶಸ್ವರದಿಂದ ಒದರಿ ಮಾತನಾಡಿದಳು. 

" ನಿನ್ನಂತಹ ಉದ್ದತೆಯಾದ ಹೆಂಗಸಿನೊಡನೆ ಮಾತನಾಡತಕ್ಕುದೇನು? ನಿನ್ನೊಡನೆ 

ಒಂದಕ್ಷರವನ್ನು ಕೂಡ ಮಾತನಾಡಲು ನನ್ನ ಮನಸ್ಸಿಲ್ಲ. ಇಕೋ ನೋಡು. ನಾನು 

ಹೊರಟೆನು. " 



ಹೀಗೆಂದು ಲಲಿತೆಯು ನಿಣವಾಗಿಯೂ ಅಲ್ಲಿಂದ ಹೊರಟುಹೋಗಲು ಆರಂಭಿಸಿ 

ದಳು. ಆ ವಿಲಕ್ಷಣಸ್ತ್ರೀಯು ಲಲಿತೆಯೊಡನೆ ಮಾತಾಡಬೇಕೆಂದೂ ಅವಳಿಗೆ ಏನನ್ನೋ 

ಹೇಳಬೇಕೆಂದೂ ಅಲ್ಲಿಗೆ ಬಂದಿದ್ದಳು. ಆದುದರಿಂದ ಲಲಿತೆಯ ಹೊರಟುಹೋದರೆ 

ತನ್ನ ಹೇತುವು ಸಫಲವಾಗುವುದಿಲ್ಲವೆಂದೂ, ಹಗ್ಗವು ಹರಿಯುವೆರೆಗೂ ಜಗ್ಗವುದು 

ಒಳಿತಲ್ಲವೆಂದೂ ಭಾವಿಸಿ, ಲಲಿತೆಯು ದಾರಿಗೆ ಅಡ್ಡವಾಗಿ ಬಂದು ಮಾತನಾಡಿದಳು 

"ಹಾ! ಹಾ! ರಾಜಕನ್ಯೆಯೇ ! ಹೋಗಬೇಡ! ಹೋಗಬೇಡ! ನಾನು--

ನಾನು--"


ಲಲಿತೆಯು ಅಚ್ಚರಿಗೊಂಡು ನಿಂತಲ್ಲಿಯೇ ನಿಂತಳು. ಆ ಉದ್ಧತಸ್ತ್ರೀಯ 

ಮಾತಿಗೆ ಅಸಹ್ಯಪಟ್ಟು, ಅಲ್ಲಿ ನಿಲ್ಲುವುದು ಉಚಿತವಲ್ಲವೆಂದು ಅವಳು ತಿಳಿದಿದ್ದಳು, ಆದರೆ 

ಈಗ ಅವಳಾಡಿದ ನುಡಿಯನ್ನು ಹೇಳಿ ಮುಂದಕ್ಕೆ ಹೋಗಲಾರದೆ ನಿಂತುಕೊಂಡಳು. 

ಏನೋ ತಿರಸ್ಸರವ್ಯಂಜಕಸ್ವರದಿಂದ ಮಾತನಾಡಿದಳು.  " ನಮ್ಮವ್ವಾ ! ಇನ್ನು ಮುಂದೆ 

ಉಪಾಯವೇ ಇಲ್ಲ. ಮೊದಲಿನಿಂದಲೂ ಒಂದೇಸಮನೆ ನನ್ನನ್ನು ಈಪ್ರಕಾರ ಕಾಡುತ್ತ 

ಲಿರುವ ನೀನಾರು? ಇಲ್ಲಿ ಬಂದಾಗಿನಿಂದಲೂ ಒಂದೇಸಮನೆ ಬಡಬಡಿಸುತ್ತಲಿರುವೆ. 

ಆದರೆ ನೀನು ಯಾರು? ಎಲ್ಲಿಯವಳು? ಎಂಬ ವಿಷಯವನ್ನೇ ಎತ್ತಲಿಲ್ಲ. ನಿಜವಾಗಿಯೂ 

ಹೇಳುತ್ತೇನೆ-- ಬೇಕಾದರೆ ನಿನ್ನ ಕಾಲಿಗೆರಗುತ್ತೀನೆ--ನಿನ್ನ ಅಪೇಕ್ಷೆಯೇನಿರುವುದೆಂಬು 

ದನ್ನು ನನನಗೆತಿಳಿಸು. ಕನಿಷ್ಠಪಕ್ಷಕ್ಕೆ ನೀನು ಯಾರೆಂಬದನ್ನಾದರೂ ಹೇಳು!” 



೨೬-----------------------------ವಾಗ್ಭೂಷಣ----------------------------------


ಆ ಸ್ತ್ರೀಯು ಪುನಃ ನಕ್ಕಳು. ಅವಳ ಆ ಮೊದಲಿನ ಸ್ವಭಾವವು ಇನ್ನೂವರೆಗೆ 

ದೂರವಾಗಿಲ್ಲವೆಂಬಂತೆ ತೋರಿತು. ನಗುನಗುತ್ತ ಅವಳು ಮಾತನಾಡಿದಳು, " ನನ್ನ 

ಪರಿಚಯವನ್ನು ನಿನಗೆ ಹೇಳದೆ ಇದ್ದರೆ ಏನುಮಾಡುವೆ? ” 


ಲಲಿತೆಗೆ ಈಗ ಬಹಳೇ ಬೇಸರವುಂಟಾಯಿತು. ಹುಬ್ಬುಗಂಬಕ್ಕಿ ಅವಳು ಉಚ್ಚ 

ಧ್ವನಿಯಿಂದ ಮಾತನಾಡಿದಳು. " ನಿನ್ನ ಪರಿಚಯವನ್ನು ಹೇಳದಿದ್ದರೆ ನಾನು ಬೇರೆ ಏನೂ 

ಮಾಡುವಂತಿಲ್ಲ."


" ಹಾಗಾದರೆ ಏನು ಮಾಡುವೆ?” 


" ಈಗಿಂದೀಗಲೇ ಒದರಿ ಪಹರೆಯವನನ್ನು ಇಲ್ಲಿಗೆ ಕರೆಯುವೆನು. ?? 



ಲಲಿತೆಯ ಈ ಸಿಟ್ಟಿನಿಂದ ಆ ಸ್ತ್ರೀಯ ಮನಸ್ಸಿನ ಮೇಲೆ ಯಾವ ಪರಿಣಾಮವೂ 

ಉಂಟಾಗಲಿಲ್ಲ. ಆಕೆಯು ನಕ್ಕು ರಾಜಕನ್ಯೆಯನ್ನು ಕುರಿತು ಮಾತನಾಡಿದಳು: 

" ಪಹರೆಯವನು ನನಗೆ ಏನು ಮಾಡಬಲ್ಲನು? ನಾನಂತೂ ಹೇಳಿಕೇಳಿ ಹೆಂಗಸು. 

ನಿನ್ನ ಆ ಪಹರೆಯವನು ನನ್ನ ಶರೀರವನ್ನು ಮುಟ್ಟಲು ಕೂಡ ಸಮರ್ಥನಾ 

ಗಲಾರನು. '' 


ಆ ವಿಲಕ್ಷಣ ಸ್ತ್ರೀಯ ಮುಂದೆ ಯಾವ ರೀತಿಯಿಂದಲೂ ತನ್ನ ಆಟವು ಸಾಗುವು 

ದಿಲ್ಲವೆಂದು ತಿಳಿದ ಲಲಿತೆಯು ತನ್ನಲ್ಲುಂಟಾದ ಸಂತಾಪವನ್ನೆಲ್ಲ ನಿಗ್ರಹಿಸಿದಳು. 

ಮತ್ತು ಶಾಂತಸ್ವರದಿಂದ ಮಾತನಾಡಿದಳು. " ಒಳ್ಳೇದು. ಹಾಗಾದರೆ ನಾನು ಪಹರೆ 

ಯವನನ್ನು ಕರೆಯುವುದಿಲ್ಲ. ನೀನು ಈ ಕಾಲದಲ್ಲಿ ಇಲ್ಲಿ ಏಕೆ ಬಂದಿರುವೆಯೆಂಬುದನ್ನು 

ಮಾತ್ರ ನನಗೆ ಹೇಳು.” 


ತನ್ನ ಮನಸ್ಸಿನೊಳಗಿನ ಉದ್ದೇಶವನ್ನು ಲಲಿತೆಗೆ ಹೇಳಬೇಕೋ ಹೇಳಬಾ 

ರದೋ ಎಂದು ಆ ಸ್ತ್ರೀಯು ಆಲೋಚನೆ ಮಾಡಹತ್ತಿದಳು. ಆದರೆ ಈ ವಿಚಾರವು 

ಕ್ಷಣಮಾತ್ರ ನಡೆದಿತ್ತು! ದೃಢಸ್ವರದಿಂದ ಅವಳು ಕೂಡಲೇ ಉತ್ತರವಿತ್ತಳು. " ನಿನ್ನ 

ಬಳಿಯಲ್ಲಿ ನಾನೊಂದು ವಸ್ತುವನ್ನು ಬೇಡಬೇಕಾಗಿದೆ. ” 


" ಏನ ಬೇಡುವೆ? ನಿನಗೆ ಏನು ಬೇಕಾಗಿದೆ? " ಲಲಿತೆಯು ಆಶ್ಚರ್ಯದಿಂದ 

ಕೇಳಿದಳು.  


" ನನಗೆ ಏನು ಬೇಕೆಂದು ಕೇಳುತ್ತೀಯಾ? ನಿಜವಾಗಿಯೂ ನನಗೆ ಏನು 

ಬೇಕು? ಆ ಸ್ತ್ರೀಯು ಭ್ರಮೆಗೊಂಡು ತನ್ನಲ್ಲಿಯೇ ವಿಚಾರಿಸಹತ್ತಿದಳು. 


ಅ ಸ್ತ್ರೀಯು ಹುಚ್ಚಿಯಾಗಿರಬೇಕೆಂದು ಈಗ ಲಲಿತೆಯು ತಿಳಿದುಕೊಂಡಳು. 

ಅದುದರಿಂದ ಇಷ್ಟು ಹೊತ್ತಿನವರೆಗೆ ಆ ಸ್ತ್ರೀಯ ವಿಷಯದಲ್ಲಿ ಉತ್ಪನ್ನವಾದ ತಿರಸ್ಕಾರ 

ಭಾವವೆಲ್ಲ ಇಲ್ಲದಂತಾಗಿ ಈಗ ದಯೆಯು ಹುಟ್ಟಿತು. ಲಲಿತೆಯು ಅವಳ ಸಮೀಪಕ್ಕೆ 



---------------------------ಪ್ರೇಮಮಂದಿರ. -------------------------------೨೭ 

ಹೋಗಿ ಅವಳ ಹೆಗಲ ಮೇಲೆ ಕೈಯಿಟ್ಟು ಸ್ನೇಹದಿಂದ ಮಾತನಾಡಿದಳು. " ನಿನಗೆ 

ಏನು ಬೇಕಮ್ಮಾ? ಹೇಳು. ನನಗೆ ಹೇಳು. ? 



" ರಾಜಕನ್ಯೆಯೇ, ನನಗೆ ಏನು ಬೇಕೆಂಬುದನ್ನು ಹೇಳಿ ಬಿಡಲಾ? ಯಾವುದು 

ನನಗೆ ಎಂದೂ ದೊರೆಯುವಂತಿಲ್ಲವೋ, ಯಾವುದನ್ನು ದೊರಕಿಸುವ ಆಕೆಯನ್ನು 

ನಾನು ಪೂರ್ಣವಾಗಿ ಬಿಟ್ಟು ಬಿಡಬೇಕಾಗಿದೆಯೋ, ಯಾವುದು ನನ್ನ ಕೈಯಲ್ಲಿ 

ಸಿಕ್ಕಿದ್ದರೂ ಕ್ಷಣಾರ್ಧದಲ್ಲಿ ದೂರ ಹೊರಟು ಹೋಯಿತೋ, ಮತ್ತು ಯಾವುದು 

ನನಗೆ ಎಂದೂ ಸಿಕ್ಕಲಾರದೋ ಅದು ನನಗೆ ಬೇಕಾಗಿದೆ. ರಾಜಕನ್ಯೆಯೇ ಅದು 

ನನಗೆ ಬೇಕಾಗಿದೆ. ಅದನ್ನು ನನಗೆ ಕೊಡುವೆಯಾ? ” ಮಾತಾಡುತ್ತಾಡುತ್ತ ಅವಳ 

ಸ್ವರವು ಕ್ರುದ್ಧವಾಯಿತು; ಬಾಯಿಂದ ಶಬ್ದಗಳು ಹೊರಡದಾದವು! ಆಕೆಯು ತನ 

ಸೆರಗಿನಿಂದ ಕಣ್ಣುಗಳನ್ನೊರಸಿಕೊಂಡುದೂ ಲಲಿತೆಗೆ ಗೋಚರವಾಯಿತು? 



ಕೋಮಲಹೃದಯದ ಆ ಲಲಿತೆಯಲ್ಲಿ ಸಹಾನುಭೂತಿಯು ಉತ್ಪನ್ನವಾಯಿತು, 

ಸ್ನೇಹಾರ್ದ್ರಸ್ಯರದಿಂದ ಅವಳು ಮಾತಾಡಿದಳು. " ಈಗ ನೀನು ಹೇಳಿದುದನ್ನು ನನಗೆ 

ಸ್ವಲ್ಪ ಚೆನ್ನಾಗಿ ತಿಳಿಯುವಂತೆ ಹೇಳಮ್ಮ ! ನಿಜವಾಗಿಯೂ ನನಗೆ ನೀನು ಹೇಳಿದು 

ದರ ಅರ್ಥವೇ ತಿಳಿಯಲಿಲ್ಲ. ” 


ಆ ಸ್ತ್ರೀಯು ಈಗ ಸ್ಪಲ್ಪ ಶಾಂತಳಾಗಿದ್ದಳು. ಅದರೂ ಖಿನ್ನ ಸ್ವರದಿಂದಲೇ ನುಡಿ 

ದಳು. " ಲಲಿತೇ ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಅದಕ್ಕೆ ನೀನು 

ಕೋಪಿಸಿಕೊಳ್ಳು ವುದಿಲ್ಲನೆಂದು ನನಗೆ ವಚನಕೊಡು. " 


ಒಂದು ಕ್ಷಣಹೊತ್ತು ವಿಚಾರಮಾಡಿ ಲಲಿತೆಯು ಹೇಳಿದಳು. " ಒಳ್ಳೇದು, 

ನಾನು ನಿನ್ನ ಮೇಲೆ ಸಿಟ್ಟಾಗುವುದಿಲ್ಲ. ಆಯಿತೋ ಇಲ್ಲವೋ? ” 



ಆ ಸ್ತ್ರೀಯು ಒಂದು ದೀರ್ಫನಿಶ್ವಾಸವನ್ನು ಬಿಟ್ಟು ಕೇಳಿದಳು. " ಲಲಿತೇ 

ನಿಜವಾಗಿ ಹೇಳು. ಚವ್ಹಾಣರಾಜಕುಮಾರನಾದ ಕರುಣಸಿಂಹನ ಮೇಲೆ ನಿನ್ನ ಪ್ರೇಮ 

ವೇಕೆ ಕೂತಿದೆ? " 



ಆಕೆಯ ಈ ಅನಪೇಕ್ಷಿತವಾದ ಪ್ರಶ್ನೆಯನ್ನು ಕೇಳಿ ಲಲಿತೆಯು ಆಶ್ಚರ್ಯದಿಂದ 

ಚಕಿತಳಾದಳು. ಕುಮಾರ ಕರುಣಸಿಂಹನಿಗೂ ತನಗೂ ಪರಸ್ಪರವಾಗಿದ್ದ ಪ್ರೇಮಭಾ 

ವವು ಬೇರೆಯವರಾರಿಗಾದರೂ ಗೊತ್ತಿರಬಹುದೆಂದು ಲಲಿತೆಯು ಇನ್ನೂವರೆಗೆ ತಿಲ 

ಮಾತ್ರವೂ ತಿಳಿದಿದ್ದಿಲ್ಲ. ವಿಸ್ಮಯದ ಸ್ವರದಿಂದ ಅವಳು ಆ ಸ್ತ್ರೀಯನ್ನು ಕುರಿತು ಮಾತ 

ನಾಡಿದಳು. "ನಿನ್ನ ಈ ಚಮತ್ಕಾರಿಕ ಪ್ರಶ್ನೆಯನ್ನು ಕೇಳಿ ನಾನು ಆಶ್ಚರ್ಯದಿಂದ 

ಹತಬುದ್ಧಿಯಾಗಿದ್ದೇನೆ! ಏನಮ್ಮಾ ! ಅವರ ಮೇಲೆ ನನ್ನ ಪ್ರೇಮವಿದೆಯೆಂದು ನಿನಗೆ 

ಹೇಳಿದವರಾದರೂ ಯಾರು? " 



೨೮-------------------------- ವಾಗ್ಭೂಷಣ.---------------------------------- 



ರಾಜಕುಮಾರಿಯ ಈ ಮಾತಿನಿಂದ ಆ ಸ್ತ್ರೀಗೆ ಸ್ವಲ್ಪ ತ್ರಾಸವಾದಂತೆ ತೋರಿತು. 

ಆಕೆಯ ಹೃದಯದಲ್ಲಿ ಅವ್ರದೋ ಒಂದು ಗೂಢವಿಚಾರವು ಉತ್ಸನ್ನವಾಗಿರಬಹು 

ದೆಂದು, ಅವಳ ಮುಖವನ್ನು ನೋಡುವ ಯಾವನಾದರೂ ತರ್ಕಿಸುವಂತಿತ್ತು. ಪ್ರಬ 

ಲವಾದ ಅವೇಗಭರದಿಂದ ಅವಳು ಒಮ್ಮೆಲೆ ಹರಿಹಾಯ್ದು ಸ್ವಲ್ಪ ಕ್ರುದ್ಧಸ್ವರದಿಂದ 

ಮಾತನಾಡಿದಳು. " ಲಲಿತೇ, ಲಲಿತೆ ಈ ಮಾತನ್ನು ನನ್ನ ಮುಂದೆ ಬಚ್ಚಿಡುವ ಪ್ರಯ 

ತ್ನವನ್ನು ಸ್ವಲ್ಪಾದರೂ ಮಾಡಬೇಡ. ಆ ನಿನ್ನ ಪ್ರಯತ್ನವು ಎಂದೂ ಸಫಲವಾಗುವುದಿಲ್ಲ. 

ತಿಳಿಯಿತೇ? ನಿಮ್ಮಿಬ್ಬ ರ ಪ್ರೇಮಕಥೆಗಳನ್ನು ನಾನು ಪೂರ್ಣವಾಗಿ ತಿಳಿದಿದ್ದೇನೆ! 

ಇಂತಹನನ್ನಿಂದ ನೀನಾ ಸಂಗತಿಗಳನ್ನು ಬಚ್ಚಿಡುವೆಯಾ? ನಾನು ಒಂದೇ ಒಂದು 

ಮಾತನ್ನು ನಿನಗೆ ಹೇಳುತ್ತೇನೆ ಕೇಳು; ಅಂದರೆ ನನ್ನ ಮಾತಿನ ಸತ್ಯತೆಯು ನಿನಗೆ 

ಕಂಡು ಬರುವುದು. ? 



" ಹೇಳು. ಅದಾವ ಮಾತನ್ನು ಹೇಳುತ್ತೀ? ಸ್ಪಲ್ಪ ಕೌತುಕದಿಂದಲೂ ಸ್ವಲ್ಪ 

ದಿಟ್ಟತನದಿಂದಲೂ ಲಲಿತೆಯು ಮಾತನಾಡಿದಳು. 



ಆ ಸ್ತ್ರೀಯು ಮಂದಹಾಸದಿಂದ ಮಾತನಾಡಿದಳು. " ಕುಮಾರಕರುಣಸಿಂಹನು 

ಈಗಲೇ ಇಲ್ಲಿಂದ ಹೊರಟುಹೋದನು. ಲಲಿತ ನೀವಿಬ್ಬರೂ ಅಡಿದ ಮಾತುಗಳೆ 

ಲ್ಲವನ್ನೂ ನಾನು ಕೇಳಿದೆನು; ತಿಳಿಯಿತೇ?! ” 



ಈ ಮಾತಿನಿಂದ ಲಲಿತೆಯ ಆಶ್ಚರ್ಯವು ದ್ವಿಗುಣಿತವಾಯಿತು. ಆದರೆ ಆ ಆಶ್ಚ 

ರ್ಯವನ್ನು ವ್ಯಕ್ತಗೊಳಿಸದೆ ಅವಳು ಮಾತನಾಡಿದಳು. " ಒಳ್ಳೇದು. ನೀನು ಹೇಳಿ 

ದುದು ನಿಜವಾಗಿದ್ದರೆ, ಮುಂದೆ ಮಾಡತಕ್ಕವಳೇನು? ನಾನು ಈ ವಿಷಯದಲ್ಲಿ ಏನು 

ಮಾಡಬೇಕೆಂದು ನೀನನ್ನುತ್ತೀ?" 



ಆ ಸ್ತ್ರೀಯು ಸ್ವಲ್ಪ ಅಧಿಕಾರದ ಸ್ವರದಿಂದ ಹೇಳಿದಳು. " ರಾಜಕನ್ಯೆಯೇ, ನಾನು 

ಹಿತಕರವಾದ ಮಾತನ್ನೇ ನಿನಗೆ ಹೇಳುತ್ತಿದ್ದೇನೆ ಕೇಳು. ಕುಮಾರನ ಮೇಲೆ ಪ್ರೇಮ 

ಮಾಡುವುದನ್ನು ಬಿಟ್ಟು ಬಿಡು. ಅದರ ಪರಿಣಾಮವು ಒಳ್ಳೆಯದಾಗುವುದಿಲ್ಲ. ' ಕುಮಾ 

ರನನ್ನು ಮರೆತು ಬಿಡುತ್ತೀನೆಂ' ದು ಈಗ ನನ್ನ ಸಮಕ್ಷದಲ್ಲಿ ನೀನು ಒಪ್ಪಿಕೋ. ಮತ್ತೆ 

ಆತನ ದರ್ಶನವನ್ನೇ ತೆಗೆದುಕೊಳ್ಳುವುದಿಲ್ಲವೆಂದು ನನಗೆ ವಚನಕೊಡು. ಇಷ್ಟೇ 

ಅಲ್ಲ; ಆತನ ದರ್ಶನ ಕ್ಕೋಸ್ಕರ ನೀನು ಪ್ರಯತ್ನವನ್ನು ಕೂಡ ಎಂದೂ ಮಾಡ 

ತಕ್ಕುದಲ್ಲ. " 



ಇಷ್ಟು ಮಾತನಾಡಿ ಆ ವಿಲಕ್ಷಣ ಸ್ತ್ರೀಯು ಕೆಲಹೊತ್ತು ಸುಮ್ಮನೆ ನಿಂತಳು, 

ಪಾಪ! ಲಲಿತೆಯು ಕಲ್ಲಬೊಂಬೆಯಂತೆ ನಿಂತಲ್ಲಿಯೇ ನಿಂತುಬಿಟ್ಟಳು. ವಿಸ್ಮಯಾತಿ 

ರೇಕದಿಂದ ಆಕೆಯ ಬಾಯಿಂದ ಶಬ್ದಗಳೇ ಹೊರಡದಾದವು ! 



---------------------------------ಪ್ರೇಮಮಂದಿರ. ------------------------------೨೯



ತನ್ನ ಮಾತಿಗೆ ಲಲಿತೆಯು ಉತ್ತರವನ್ನು ಕೊಡುವುದಿಲ್ಲವೆಂದು ತಿಳಿದು ಆ ಸ್ತ್ರಿಯು 

ಮತ್ತೆ ಮಾತಾಡಹತ್ತಿದಳು. "ಲಲಿತೇ. ನಿನ್ನ ಪ್ರೇಮವು ಯಾವನ ಮೇಲೆ ಕೂತಿ 

ರುವುದೋ ಆ ಕರುಣಸಿಂಹನು ನನ್ನವನಾಗಿದ್ದಾನೆ. ಆತನ ಪ್ರೇಮದ ಮೇಲೆ ನನ್ನ 

ಪೂರ್ಣ ಅಧಿಕಾರವಿದೆ. ಚಿಕ್ಕಂದಿನಿಂದಲೂ ನಾವಿಬ್ಬರೂ ಕೂಡಿಯೇ ಆಡಿದವರು;  

ಕೂಡಿಯೇ ಬೆಳೆದವರು; ಆಗಿನಿಂದಲೇ ಅತನು ನನ್ನ ಹೃದಯೇಶ್ವರನಾಗಿದ್ದಾನೆ. 

ಅಂದಿನಿಂದಲೇ ನನ್ನ ಪ್ರೇಮವು ಆತನ ಮೇಲೆ ದೃಢವಾಗಿ ಕೂತಿದೆ. ರಾಜಕನ್ಯೆಯೇ, 

ನನ್ನ ಹೃದಯೇಶ್ಚರನನ್ನು ಈಗ ನೀನು ಅಪಹರಿಸುತ್ತಿರುವೆ! ಕುಮಾರನ ವಿಷಯಕ 

ವಾದ ಪ್ರೇಮತರುವಿನ ಬೇರುಗಳು ನನ್ನ ಹೃದಯ ಭೂಮಿಯಲ್ಲಿ ತಳತನಕ ಇಳಿದು 

ಹೋಗಿವೆ. ನಿನ್ನ ಕೃತ್ಯದ ಮೂಲಕ ಆ ಭೂಮಿಯು ಈಗ ವಿದೀರ್ಣವಾಗುತ್ತಲಿದೆ! 

ನಾನು ಕುಮಾರನಿಗೋಸ್ಯ ರ- ಆತನ ಪ್ರೇಮಪ್ರಾಪ್ತಿಗೋಸ್ಕರ--ಭಿಕ್ಷುಕಿಯಾಗಿ 

ಹುಚ್ಚಿಯಂತೆ ದೇಶಾಂತರಗಳಲ್ಲಿ ಸಂಚರಿಸುತ್ತಲಿದ್ದೇನೆ! ಲಲಿತೇ, ನನ್ನ ಪ್ರಾಣನಾಥ 

ನನ್ನು ಸೆಳೆದುಕೊಳ್ಳ ಬೇಡ; ನನ್ನ ಶಾಪವು ನಿನಗೆ ಹತ್ತದೆ ಎಂದೂ ಬಿಡಲಾರದು! ” 



ರಾಜಕುಮಾರಿಯಾದ ಲಲಿತೆಯು ಆ ಸ್ತ್ರೀಯ ಮಾತಿನಿಂದ ಚಕಿತಳಾಗಿದ್ದಳಾ 

ದರೂ ಅವಳ ಭಾಷಣದೊಳಗಿನ ಕೆಲವು ಸಂಗತಿಗಳು ಅಸ್ಪಷ್ಟವಾಗಿ ಅಕೆಗೆ ತಿಳಿಯ 

ಹತ್ತಿದುವು. ಆದರೂ ಆಶ್ಚರ್ಯಾತಿರೇಕದ ಮೂಲಕ ಲಲಿತೆಯ ಬಾಯಿಂದ ಶಬ್ದ 

ಗಳು ಹೊರಡಲಿಲ್ಲ. ಕೆಲಹೊತ್ತಿನ ವರೆಗೆ ನೆಲನ್ನು ನೋಡುತ್ತ ಅವಳು ಸ್ವಬ್ಧಳಾಗಿ 

ದ್ವಳು. ಅಷ್ಟು ಅಲ್ಪಾವಕಾಶದಲ್ಲಿಯೇ ಅವಳ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರ 

ತರಂಗಗಳು ಉದ್ಭೂತವಾಗಿ, ವಿಲಯಹೊಂದುತ್ತಿದ್ದುವು. 



ಸ್ವಲ್ಪ ವೇಳೆಯ ಮೇಲೆ ಎಚ್ಚರಗೊಂಡು ಲಲಿತೆಯು ಮೇಲಕ್ಕೆ ಮೊಗವೆತ್ತಿ 

ನೋಡಿದಳು. ಇನ್ನು ಮೇಲೆ ಈ ವಿಲಕ್ಷಣ ಸ್ತ್ರೀಗೆ ಸಲಿಗೆಯನ್ನು ಕೊಡುವುದು ತಕ್ಕು 

ದಲ್ಲ; ಅವಳಿಗೆ ತಕ್ಕ ಶಾಸನವನ್ನು ಮಾಡಿಬಿಡಬೇಕು; ಎಂಬುದಾಗಿ ಆಲೋಚಿಸಿ 

ಆಕೆಯ ಮುಖವನ್ನು ನೋಡಬೇಕೆಂದು ಲಲಿತೆಯು ದೃಷ್ಟಿಯನ್ನು ತಿರುಗಿಸುವಸ್ವರ 

ಲ್ಲಿಯೇ ಆ ವಿಲಕ್ಷಣಸ್ತ್ರೀಯು ಅಲ್ಲಿ ಕಾಣಲೇ ಇಲ್ಲ!! ಎಲ್ಲಿಯೋ ಹೊರಟು ಹೋಗಿ 

ದ್ಧಳು!!! ಆಕಸ್ಥಿಕವಾದ ರೀತಿಯಿಂದ ಅವಳು ಹೇಗೆ ಅಲ್ಲಿ ಬಂದಿದ್ದ ಳೋ ಅದೇ 

ರೀತಿಯಿಂದಲೇ ಮಾಯವಾದಳು !!!



೩೦ ----------------------------ವಾಗ್ಭೂಷಣ.------------------------------------------- 



ಐದನೆಯ ಪರಿಚ್ಛೇದ. 

----— 



ಭೈರವಿ, 



ಲಲಿತೆಯ ಅಚ್ಚ ರಿಯು ಈಗ ಕಡಿಮೆಯಾಯಿತು. ಪ್ರಿಯಕರನ ದರ್ಶನದಿಂದ 

ಅವಳ ಹೃದಯವೇನೋ ಉಲ್ಲಸಿತವಾಗಿತ್ತು, ಆದರೆ ತದನಂತರದ ಸಂಘಟನೆಯಿಂದ 

ಅಂದರೆ ಆ ಅಜ್ಞಾತಳಾದ ವಿಲಕ್ಷಣ ಸ್ತ್ರೀಯ ಸಂದರ್ಶನದಿಂದ ಲಲಿತೆಯ ಹೃದಯವು 

ವಿಷಣ ವಾಯಿತು. ಆಕೆಗೆ ಯಾವುದೂ ತೋಚದಾಯಿತು! 



ದುರ್ಗದ ಮೇಲೆ ತಾನು ನಿಂತುಕೊಂಡಿದ್ದ ಸ್ಥಳದಿಂದ ಲಲಿತೆಯು ಖಿನ್ನ ಹೃದ 

ಯದಿಂದ ಕೆಳಗಿಳಿದು ತನ್ನ ಮಂದಿರಕ್ಕೆ ಬಂದಳು. ಇದೇ ಈಗ ಬಂದು ಅದೃಶ್ಯಳಾದ 

ಆ ವಿಲಕ್ಷಣ ಸ್ತ್ರೀಸಂಬಂಧವಾದ ವಿಚಾರಗಳ ತಾಕಲಾಟವು ಅವಳ ಮನಸ್ಸಿನಲ್ಲಿ ನಡೆ 

ದಿತ್ತು. ಮಂದಿರದಲ್ಲಿ ಬಂದೊಡನೆಯೇ ಒಬ್ಬ ದಾಸಿಯು ಅವಳಿಗೆ ಭೆಟ್ಟಿಯಾದಳು. 

ಇಲ್ಲಿಂದ ಹಾದು ಹೋಗುವಾಗ ಆ ವಿಲಕ್ಷಣ ಸ್ತ್ರೀಯು ಪ್ರಾಯಶಃ ಈ ದಾಸಿಗೆ ಗೋಚ 

ರವಾಗಿರೆಬಹುದೆಂದು ತಿಳಿದು ಲಲಿತೆಯು ಅವಳನ್ನು ಕುರಿತು ಪ್ರಶ್ನೆ ಮಾಡಿದಳು. 

" ಮೋಹನೇ, ದುರ್ಗದ ಮೇಲಿನಿಂದ ಯಾವಳಾದರೂ ಒಬ್ಬ ಹೆಂಗಸು ಕೆಳಗಿಳಿದು 

ಹೋಗುವುದನ್ನು ನೀನು ನೋಡಿದೆಯಾ? ? 


" ಅಮ್ಮನವರೇ, ಯಾವಾಗ? " 


" ಸುಮಾರು ಅರ್ಧ ಗಂಟಿಗೆ ಮೊದಲು. " 


" ಇಲ್ಲ; ಅಮ್ಮನವರೇ! ನನಗಂತೂ ಯಾರೂ ಕಾಣಿಸಲಿಲ್ಲ, ” 


ಮೊಹನೆಯು ಇಲ್ಲವೆಂದು ಹೇಳಿದುದನ್ನು ಕೇಳಿ ಲಲಿತೆಗೆ ಅತ್ಯಂತ ಆತ್ಮ ರ್ಯ 

ವಾಯಿತು. ಆ ಸ್ತ್ರೀಯ ವಿಷಯಕವಾದ ಜಿಜ್ಞಾಸೆಯು ಅತ್ಯಂತವಾಗಿ ಬೆಳೆಯಿತು. 

ಮಂದಿರದ ಬಳಿಯಲ್ಲಿದ್ದ ಪಹರೆಯವನನ್ನು ಕರೆದು, ಆ ಸ್ತ್ರೀಯ ವಿಷಯವನ್ನು ಕೇಳಿ 

ದಳು, ಪಾಪ! ಅವನೂ ಆ ಸ್ತ್ರೀಯನ್ನು ನೋಡಿಯೇ ಇರಲಿಲ್ಲ! ಅಂದಮೇಲೆ ಅವ 

ನಾದರೂ ಏನು ಹೇಳಬಲ್ಲನು ? 


ಈಗ ಮಾತ್ರ ಲಲಿತೆಗೆ ಅತಿಶಯವಾದ ಚಿಂತೆಯು ಉತ್ಸನ್ನವಾಯಿತು. ರಾಜಕ 

ನ್ಯೆಯು ಸ್ವಾಭಾವಿಕವಾಗಿಯೇ ನಿರ್ಭಯಹೃದಯದವಳಾಗಿದ್ದುದೇನೋ ನಿಜ; 

ಅದರೂ ಈ ಸಂದರ್ಭದಲ್ಲಿ ಅವಳ ಹೃದಯದಲ್ಲಿ ಭೀತಿಯು ಉತ್ಪನ್ನವಾಯಿತು. 

ಆ ಹೆಂಗಸು ಯಾರು? ನನಗೂ ಕುಮಾರನಿಗೂ ಪರಸ್ಪರವಾಗಿದ್ದ ಪ್ರೇಮವು ಅವ 

ಳಿಗೆ ಹೇಗೆ ಗೊತ್ತಾಯಿತು? ಕುಮಾರನ ಮೇಲೆ ಪ್ರೀತಿಯನ್ನಿಡಬೇಡವೆಂದೂ, ಆತನ 

ದರ್ಶನಕ್ಕೊಸ್ಕರವಾಗಿ ಸಹ ಪ್ರಯತ್ನ ಮಾಡಬೇಡನೆಂದೂ ಅಧಿಕಾರಯುಕ್ತವಾದ 



-------------------------------------ಪ್ರೇಮಮಂದಿರ. ---------------------------೩೧ 



ವಾಣಿಯಿಂದ ಅವಳು ನನ್ನನ್ನು ಬೆದರಿಸುವುದಕ್ಕೆ ಕಾರಣವೇನು? ಇದರ ಅರ್ಥವಾ 

ದರೂ ಏನು? ಇಷ್ಟೊಂದು ಇಕ್ಕಟ್ಟಿನೊಳಗಿಂದ ಪಾರಾಗಿ ನನ್ನ ಮಂದಿರದವರೆಗೆ 

ಅವಳು ಹೇಗೆ ಬಂದಳು? ಮತ್ತು ಯಾರಿಗೂ ತಿಳಿಯದಂತೆ ಇಲ್ಲಿಂದ ಹೇಗೆ ಹೊರಟು 

ಹೋದಳು? ಇವೇ ಮೊದಲಾದ ಅನೇಕ ಪ್ರಶ್ನೆಗಳು ಆಕೆಯ ಮನಸ್ಸಿನಲ್ಲಿ ಉದ್ಭವಿಸಿ 

ದವು. ಎಲ್ಲವೂ ಗೂಢ! ಎಲ್ಲವೂ ವಿಲಕ್ಷಣ!! ಎಲ್ಲವೂ ಅಜ್ಞಾತ!!! ಲಲಿತೆಯ ಮಸ್ತ 

ಕವು ಈ ವಿಚಾರದಲ್ಲಿಯೇ ಭ್ರಮಣಮಾಡಹತ್ತಿತು, 



ಆದರೆ ಇದೊಂದೇ ಪ್ರಶ್ನೆಯನ್ನು ವಿಚಾರಿಸಲು ಲಲಿತೆಗೆ ಅವಕಾಶವಾದರೂ 

ಎಲ್ಲಿ ಇತ್ತು? ಆಕೆಯ ಆಯುಷ್ಯದೊಳಗಿನ ಅತ್ಯಂತ ಮಹತ್ವದ ಪ್ರಶ್ನೆಯು ಇದೇ 

ಕಾಲದಲ್ಲಿಯೇ ಉಪಸ್ಥಿತವಾಗಿತ್ತು, ಅಕೆಯ ತಂದೆಯಾದ ಭೀಮಸಿಂಹನು ಅಕೆಯ 

ವಿವಾಹದ ಪ್ರಸ್ತಾಪವನ್ನು ಮಾಡುವುದಕ್ಕೋಸ್ಕರ ಸರತಾನಸಿಂಹನ ಕಡೆಗೆ ಹೋಗಿ 

ದ್ದನು. ಇನ್ನು ಒಂದೆರಡು ದಿವಸಗಳಲ್ಲಿಯೇ ಭೀಮಸಿಂಹನು ದುರ್ಜಯಸಿಂಹನನ್ನು 

ಕರೆದುಕೊಂಡು ಇಲ್ಲಿಗೆ ಬರತಕ್ಕವನಿದ್ದನು. ಅವನು ಒಮ್ಮೆ ಬಂದು ಬಿಟ್ಟನೆಂದರೆ ಲಲಿ 

ತೆಯ ಅಶೆಗಳೆಲ್ಲವೂ ಸುಟ್ಟು ಬೂದಿಯಾಗಿ ಹೋಗುತ್ತಿದ್ದುವು. ಈ ಒಂದೆರಡು ದಿವಸ 

ಗಳ ಅವಧಿಯಲ್ಲಿ ಕುಮಾರನ ದರ್ಶನವಾಗದಿದ್ದರೆ ಮುಂದೆ ಮಾಡತಕ್ಕುದೇನು? 

ತಂದೆಯ ಅಪ್ಪಣೆಯಂತೆ ದುರ್ಜಯಸಿಂಹನೊಡನೆ ವಿವಾಹಮಾಡಿಕೊಳ್ಳುವ ಸಂದ 

ರ್ಭ ಪ್ರಾಪ್ತವಾಗುವದಲ್ಲವೇ? ಹಾಗೆ ಒಂದು ವೇಳೆ ಆದರೆ ನನ್ನ ಪ್ರೇಮದ ವಿಡಂಬನೆ 

ಯಾಗದಂತೆ ಅವ ಉಪಾಯವನ್ನು ಮಾಡತಕ್ಕದ್ದು ? ವಜ್ರದ ಉಂಗರವನ್ನು ತೇದು 

ಕುಡಿಯುವುದೇ ಉಪಾಯ !! ಅದರ ಹೊರತು ಗತ್ಯಂತರವೇ ಇಲ್ಲ!!! 



ಈ ಪ್ರಕಾರದ ಅನೇಕ ವಿಚಾರಗಳು ಲಲಿತೆಯ ಮನಸ್ಸಿನಲ್ಲಿ ಬಂದವು. ಆಕೆಗೆ 

ಸ್ಮೃತಿಯು ತಪ್ಪಿಹೋಯಿತು. ತನ್ನ ಮನಸ್ಸಿನ ಸ್ಲಿತಿಯು ಪರಿಜನರಿಗೆ ಗೊತ್ತಾಗಬಾರ 

ದೆಂದು ಅವಳು ಹೇಗೆ ಹೇಗೋ ಒಂದಿರಡು ತುತ್ತು ಬಾಯಲ್ಲಿ ಹಾಕಿಕೊಂಡು ಶಯನ 

ಮಂದಿರಕ್ಕೆ ಬಂದು ಮಂಚದ ಮೇಲೆ ಬಿದ್ದುಕೊಂಡಳು. ಹೀಗೆ ಅವಳು ತನ್ನ ಪರಿಜನ 

ರನ್ನೇನೋ ಮೋಸಗೊಳಿಸಿದಳು. ಆದರೆ ಸರ್ವಾ೦ತವ್ಯಾಪಿಯಾದ ನಿದ್ರಾದೇವಿ 

ಯನ್ನು ಠಕ್ಕಿಸುವುದೆಂತು? ಆ ಸ್ಥಿತಿಯಲ್ಲಿ ರಾಜಕನ್ಯೆಗೆ ನಿದ್ದೆ ಬರುವುದು ಅಸಂಭವನೀ 

ಯವೇ ಅಗಿತ್ತು. ಅವಳು ನಿದ್ರಾದೇನಿಯನ್ನು ಪ್ರಾರ್ಥನೆ ಮಾಡಿದ ಹಾಗೆಲ್ಲ ದೇವಿಯು 

ಹೆಚ್ಚು ಹೆಚ್ಚು ದೂರದಲ್ಲಿಯೇ ಉಳಿಯುತ್ತಿದ್ದಳು! 



ಲಲಿತೆಯು ಈ ಮಗ್ಗಲಿಸಿಂದ ಆ ಮಗ್ಗೆಲಿಗೊ ಆ ಮಗ್ಗಲಿನಿಂದ ಈ ಮಗ್ಗಲಿಗೂ 

ಒಂದೇ ಸವನೆ ಹೊರಳಾಡುತ್ತಿದ್ದಳು. ವಿಚಾರಗಳ ಆವೇಗವು ಅಸಹ್ಯವಾಗಲು 

ಅವಳು ಎದ್ದು ಕೂಡ್ರುತ್ತಿದ್ದಳು. ಆ ಸ್ಥಿತಿಯಲ್ಲಿ ಕೆಲವು ಕಾಲವನ್ನು ಕಳೆದ ಬಳಿಕ 



೩೨ ----------------------ವಾಗ್ಭೂಷಣ.---------------------------------- 



ಅವಳು ಕೆಳಗಿಳಿದು ಸ್ವಲ್ಪ ಹೊತ್ತಿನವರೆಗೆ ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡುತ್ತಿದ್ದಳು. 

ಹೀಗೆ ತಿರುಗಾಡುತ್ತಿರುವಾಗ ಕಿಟಿಕಿಯ ಸಮೀಪಕ್ಕೆ ಹೋದಳೆಂದರೆ, ನೀಲವರ್ಣದ 

ಆಕಾಶವನ್ನೂ ತನ್ನ ದಾರುಣವಾದ ಮನಃಸ್ಥಿತಿಯನ್ನೂ ತಿಳಿದು ಹಾಸ್ಯಮಾಡುತ್ತಿದ್ದ 

ತಾರಕೆಗಳನ್ನು ನೋಡುತ್ತ ಎಷ್ಟೋ ಹೊತ್ತಿನವರೆಗೆ ನಿಂತುಕೊಳ್ಳುತ್ತಿದ್ದಳು. ಈ ಪ್ರಕಾ 

ರದ ಆಚರಣೆಗಳಿಂದ ಮಸ್ತಕದಲ್ಲಿ ನಡೆದಿರುವ ವಿಚಾರಗಳ ಕಲ್ಲೋಲವು ಹೇಗೆ ಶಾಂತ 

ವಾಗಬೇಕು? ಆದುದರಿಂದ ಮತ್ತೆ ಕಿಟಕಿಯನ್ನಿಕ್ಕಿ ಮಂಚದ ಮೇಲೆ ಬಿದ್ದುಕೊಳ್ಳುತ್ತಿ 

ದ್ವಳು. ಮತ್ತು ಸಂಕಟದೊಳಗಿಂದ ತನ್ನನ್ನು ಪಾರಗಾಣಿಸುವುದಕ್ಕಾಗಿ ಅತಿ ನಮ್ರತೆ 

ಯಿಂದ ನಿದ್ರಾದೇವಿಯನ್ನು ಪ್ರಾರ್ಥಿಸುತ್ತಿದ್ದಳು. ಆದರೆ ಈ ಹತಭಾಗಿನಿಯ ವಿಷಯ 

ವಾಗಿ ಆ ಪಾಪಾಣಹೃದಯೆಗೆ ಕಿಂಚಿತ್ತಾದರೂ ದಯೆಯುಂಟಾಗಲಿಲ್ಲ! ಲಲಿತೆಯ 

ಪ್ರಾರ್ಥನೆಯನ್ನು ಕೇಳಿ ಹತ್ತರ ಬರುವದಕ್ಕೆ ಬದಲಾಗಿ ಅವಳು ಇನ್ನೂ ದೂರದಲ್ಲಿ 

ಹೋಗಿ ನಿಂತಳು!!! 



ಎಷ್ಟೋ ಹೊತ್ತಿನವರೆಗೆ ಲಲಿತೆಯು ಇದೇ ಕ್ರಮವನ್ನೇ ನಡೆಯಿಸಿದ್ದಳು. 

ಇಷ್ಟರಲ್ಲಿ ರಾತ್ರಿಯ ಗಂಭೀರವಾದ ನಿಸ್ತಬ್ಧತೆಯು ಭಂಗವಾಯಿತು; ದುರ್ಗದ ಸಿಂಹ 

ದ್ವಾರದಲ್ಲಿದ್ದ ವಾದ್ಯಗೃಹದಲ್ಲಿ ನೌಬತ್ತಿನ ಧ್ವನಿಯಾಗಹತ್ತಿತು; ಕ್ಷಣಾರ್ಧದಲ್ಲಿಯೇ 

ಆ ಧ್ವನಿಯು ನಾಲ್ಕೂ ಕಡೆಯಲ್ಲಿ ಪಸರಿಸಿತು. ಆ ಶಬ್ದವು ಕಿವಿಯಲ್ಲಿ ಬಿದ್ದೊಡನೆಯೇ 

ರಾತ್ರಿಯ ಮೂರನೆಯ ಪ್ರಹರವು ಕಳೆದು ಹೋಯಿತೆಂಬುದು ಲಕ್ಷದಲ್ಲಿ ಬಂದು 

ಲಲಿತೆಯು ಬೆದರಿದಳು. ನಕ್ಷತ್ರಮಣಿಖಚಿತವಾದ ನೀಲನಭೋಮ೦ಡಲವನ್ನು ಒಮ್ಮೆ 

ಅವಲೋಕಸಿ, ಕಿಟಿಕಿಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿ ಮಂಚದ ಮೇಲೆ ಬಿದ್ದು 

ಕೊಂಡಳು ಲಲಿತೆಯ ಮಸ್ತಕದಲ್ಲಿ ಅನೇಕ ವಿಧವಾದ ಚಿಂತನಲಹರಿಗಳು ಮತ್ತೆ 

ಕಲ್ಲೋಲಿತವಾಗಹತ್ತಿದುವು. ಅದರೆ ಈ ಸಾರೆ ಮಾತ್ರ ಅವಳು ಬಹಳ ಹೊತ್ತಿನವ 

ರೆಗೆ ಮೇಲೆ ಹೇಳಿದಂತಹ ಯಾತನೆಗಳನ್ನು ಸಹಿಸುತ್ತ ಬಿದ್ದುಕೊಳ್ಳಬೇಕಾಗಲಿಲ್ಲ. 

ಸ್ವಲ್ಪ ಹೊತ್ತಿನಲ್ಲಿಯೇ ಅವಳ ಕಣ್ಣುಗಳು ಜಡವಾಗಿ ಬೆಳಗಿನ ಸಕ್ಕರೆನಿದ್ದೆಯು ಅವ 

ಳಿಗೆ ಹತ್ತಿತು. ಆದರೆ ಆಗಲಾದರೂ ಅವಳಿಗೆ ಗಡದ್ದು ನಿದ್ದೆ ಹತ್ತಲಿಲ್ಲ; ಅವಳ ಮಸ್ತ 

ಕವು ಶಾಂತವಾಗಿಯೂ ಸ್ಥಿರವಾಗಿಯೂ ಇದ್ದಿಲ್ಲ. ಸಾಯಂಕಾಲದಿಂದ ನಡೆದು 

ಹೋದ ಬೇರೆ ಬೇರೆ ಸಂಗತಿಗಳ ಸಂಬಂಧವುಳ್ಳ ಸ್ಪಪ್ನಗಳನ್ನು ಅವಳು ಕಾಣುತ್ತಿದ್ದಳು! 



ಅರುಣೋದಯದ ಸುಮಾರಕ್ಕೆ ಒಂದು ಭಯಂಕರವಾದ ಸ್ವಪ್ನದ ಆಘಾತ 

ದಿಂದ ಅವಳು ಎಚ್ಚತ್ತಳು, ಕಿಟಕಿಯೊಳಗಿನ ತೆರೆಯಿಂದ ಪ್ರಭಾತಕಾಲದ ಸೌಮ್ಯ 

ವಾದ ಮಂದಪ್ರಕಾಶವು ಒಳಸೇರಿದುದನ್ನು ಕಂಡು ಅವಳು ಎದ್ದಳು, ಪರಿಜನರೊ 

ಡನೆ ಒಂದು ಶಬ್ದವನ್ನು ಕೂಡ ಮಾತನಾಡದೆ ಅವಳು ತನ್ನ ನಿತ್ಯವಿಧಿಯನ್ನು ತೀರಿಸಿ 

ದಳು; ಮತ್ತು ಬೇಗನೇ ಸ್ನಾನ ಮಾಡಿ ತನ್ನ ಮಂದಿರದೊಳಗಿಂದ ಹೊರಬಿದ್ದಳು. 



----------------------------ಪ್ರೇಮಮಂದಿರ. ------------------------------೩೩ 


ದುರ್ಗದ ಉತ್ತರ ದಿಕ್ಕಿಗೆ ಕೆಲವು ಅಂತರದ ಮೇಲೆ ಮುಕ್ತಾವಲೀ ನದಿಯ ತೀರ 

ದಲ್ಲಿ ಶಾಂತವಾದೊಂದು ವೃಕ್ಷರಾಜಿಯ ಮಧ ದಲ್ಲಿ ಕಲ್ಯಾಣೀದೇವಿಯ ಪಾಷಾಣ 

ನಿರ್ಮಿತವಾದ ಚಿಕ್ಕದೊಂದು ಸುಂದರ ಮಂದಿರನಿತ್ತು. ರಜಪೂತಸ್ಥಾನದೊಳಗಿನ 

ಚಂದ್ರಾವತರಿಗೂ, ಚವ್ಹಾಣರಿಗೂ ಕಲ್ಯಾಣೀದೇವಿಯು ಕುಲದ್ಯೈವತವು. ಅವಳ ಉಪಾ 

ಸನೆಯಿಂದ ತಮ್ಮ ಕುಲಕ್ಕೂ ಗೃಹಕ್ಕೂ ಮಂಗಳವುಂಟಾಗುವುದೆಂದೂ, ಅವಳ ಆರಾಧ 

ನೆಯಿಂದಲೇ ತಮ್ಮ ಯೋಗಕ್ಷೇಮವೂ ನಡೆಯುವದೆಂದೂ ಎರಡೂ ಕುಲದವರು ಮನಃ 

ಪೂರ್ವಕವಾಗಿ ತಿಳಿದಿದ್ದರು. ವರುಷದೊಳಗಿನ ಕೆಲವು ನಿಯಮಿತ ದಿವಸಗಳಲ್ಲಿ ಸ್ವತಃ 

ದುರ್ಗಾಧಿಪತಿಯೇ ಕಲ್ಯಾಣೀಮಂದಿರಕ್ಕೆ ಬಂದು ಷೋಡಶೋಪಚಾರಗಳಿಂದ ದೇವ 

ತೆಯನ್ನು ಪೂಜಿಸುತ್ತಿದ್ದನು. 



ಜಳಕ ಮಾಡಿ ಬಿಳಿಯ ರೇಷ್ಮಿಯ ಸೀರೆಯನ್ನುಟ್ಟು ಕೊಂಡು ಪೂಜಾಸಾಹಿತ್ಯಗ 

ಳನ್ನು ತೆಗೆದುಕೊಂಡು ತನ್ನ ಮಂದಿರದಿಂದ ಹೊರಟ ರಾಜನಂದಿನಿಯಾದ ಲಲಿತೆಯು 

ಒಬ್ಬಳೇ ಈ ಕಲ್ಯಾಣೀದೇವಿಯ ಮಂದಿರಕ್ಕೆ ಬಂದಳು. ಅವಳ ಪರಿಜನರು ಸಂಗಡ 

ಬರುತ್ತೇವೆಂಬ ಇಚ್ಛೆಯನ್ನು ತೋರ್ಪಡಿಸಿದರೂ ಲಲಿತೆಯು ಒಬ್ಬಳನ್ನೂ ಕರೆದು 

ಕೊಂಡು ಬಂದಿದ್ದಿಲ್ಲ. 



ಮಂದಿರದಲ್ಲಿ ಬಂದೊಡನೆಯೇ ಲಲಿತೆಯು ದೇವಿಯ ಪಾದತಳದ ಹತ್ತರ ಕುಳಿ 

ತುಕೊಂಡಳು. ತಂದಂತಹ ಸಾಹಿತ್ಯದಿಂದ ಭಕ್ತಿಯುಕ್ತವಾದ ಮನಸ್ಸಿನಿಂದ ದೇವಿಯ 

ಪೂಜಿಯನ್ನು ಮಾಡಿ ಲಲಿತೆಯು ಎಷ್ಟೋ ಕಾಲದವರೆಗೆ ಕಣ್ಣು ಮುಚ್ಚಿಕೊಂಡು 

ದೇವಿಯ ಎದುರಿನಲ್ಲಿ ಕುಳಿತುಕೊಂಡಿದ್ದಳು. ಆ ಕಾಲದಲ್ಲಿ ಲಲಿತೆಯು ಸ್ತಿಮಿತವೂ 

ನಿಷ್ಪಂದವೂ ಆದ ನೇತ್ರಗಳಿಂದ ಎದುರಿನಲ್ಲಿದ್ದ ದೇವತೆಯನ್ನು ಬೇಡಿಕೊಳ್ಳುತ್ತಿರುವಾಗ 

ಸ್ಥಿರವೂ ನಿಶ್ಚಲವೂ ಆದ ಸ್ಪರ್ಣಪ್ರತಿಮೆಯಂತೆ ಗೋಚರವಾಗುತ್ತಿದ್ದಳು! ಈ ಪ್ರಕಾರ 

ಮೂಕಪ್ರಾರ್ಥನೆಯಿಂದ ತನ್ನ ಮನಸ್ಸನೊಳಗಿನ ಅಭಿಪ್ರಾಯವನ್ನು ಕಲ್ಯಾಣೀದೇವಿಗೆ 

ತಿಳಿಸಿದ ಬಳಿಕ ಅವಳು ಕಮಲಸಮಾನವಾದ ತನ್ನ ನೇತ್ರಯುಗವನ್ನು ತೆರೆದಳು; ಮತ್ತು 

ಭಕ್ತಿಪೂರಿತವಾದ ನಿಶ್ಚಲ ದೃಷ್ಟಿಯಿಂದ ದೇವಿಯನ್ನು ನೋಡುತ್ತ ಆಕೆಗೆ ಸಾಷ್ಟಾಂಗ 

ಪ್ರಣಿಪಾತವನ್ನು ಮಾಡಿದಳು. 



ಆ ಮೇಲೆ ಲಳಿತೆಯು ಅಲ್ಲಿಂದ ಎದ್ದಳು. ಒಂದೆರಡು ಸಾರೆ ದೇವಿಯನ್ನು ಮತ್ತೆ 

ನೋಡಿ ಬಳಿಕ ಮಂದಿರದಿಂದ ಹೊರಬಿದ್ದಳು. ಮಂದಿರದಿಂದ ಸ್ವಲ್ಪ ಅಂತರದ ಮೇಲೆ 

ಪಶ್ಚಿಮ ದಿಕ್ಕಿನಲ್ಲಿ ಒಂದು ಚಿಕ್ಕದಾದ ಪರ್ಣಕುಟಿಯಿತ್ತು. ಲಲಿತೆಯು ಅಲ್ಲಿಗೆ ನಡೆ 

ದಳು. ಗುಡಿಸಲದ ಬಾಗಿಲವು ಮುಚ್ಚಲ್ಪಟ್ಟಿತ್ತು. ಲಲಿತೆಯು ಸ್ವಲ್ಪ ಹೊತ್ತಿನವರೆಗೆ 

ಯೋಜನೆ ಮಾಡಿ ತನ್ನ ಕೋಮಲವಾದ ಕರಾಂಗುಲಿಯಿಂದ ಬಾಗಿಲದ ಮೇಲೆ ಮೆಲ್ಲನೆ 



೩೪---------------------------------ವಾಗ್ಭೂಷಣ.----------------------------------- 


 

ಆಘಾತವನ್ನು ಮಾಡಿದಳು. ಪರ್ಣಕುಟಿಯಲ್ಲಿ ಯಾರಾದರೂ ಇದ್ದರೋ ಇಲ್ಲವೋ 

ಯಾರಿಗೆ ಗೊತ್ತು? ಬಾಗಿಲವನ್ನಂತೂ ಯಾರೂ ತೆರೆಯಲಿಲ್ಲ. 



ಸ್ವಲ್ಪ ಹೊತ್ತು ನಿಂತು ಲಲಿತೆಯು ಪುನಃ ಮೊದಲಿನಂತೆಯೇ ಸಪ್ಪಳವನ್ನು 

ಮಾಡಿದಳು. ಅಗ ಒಳಗಿನಿಂದ ಯಾರೋ ಗಂಭೀರಸ್ವರದಿಂದ ಕೇಳಿದರು, " ಯಾರ 

ವರು?” 


ಲಲಿತೆಯು ಆನಂದದಿಂದ ಉತ್ತರವಿತ್ತಳು. " ನಾನು; ಲಲಿತೆ! ಅಮ್ಮನವರೇ 

ನಾನೇ ಬಂದಿದ್ದೇನೆ. ” 


" ಮಗಳೇ ಒಳಗೆ ಬಾ. "



ಅನುಜ್ಞೆಯು ದೊರೆತ ಕೂಡಲೇ ಲಲಿತೆಯು ಮೆಲ್ಲನೆ ಒಳಗೆ ಹೋದಳು. ಗುಡಿ 

ಸಲು ಚಿಕ್ಕದಾಗಿಯೇ ಇತ್ತು; ಅದರೂ ಅದರಲ್ಲಿ ಎರಡು ಭಾಗಗಳಿದ್ದುವು. ಒಳಗಿನ 

ಭಾಗದಲ್ಲಿ ಲಲಿತೆಯು ನೋಡದ ನೋಟವನ್ನು ಇನ್ನಾರಾದರೂ ಅಪರಿಚಿತರು ನೋಡಿ 

ದ್ದರೆ ಭಯದಿಂದ ಮೂರ್‍ಚ್ಛಿತರಾಗಿಯೇ ಹೋಗುತ್ತಿದ್ದರು. ಆದರೆ ಲಲಿತೆಗೆ ಈ ದೃಶ್ಯವು 

ಪರಿಚಿತವಾದುದೇ ಅದ್ದುದರಿಂದಲೋ, ಅಥವಾ ನಾನು ಒಳಹೊಕ್ಕ ಕೂಡಲೆ ಇಂತಹ 

ನೋಟವು ನನ್ನ ಕಣ್ಣಿ ಗೆ ಬಿದ್ದೇ ಬಿಳುವುದೆಂಬ ಕಲ್ಪನೆಯು ಅವಳಲ್ಲಿದ್ದುದರಿಂದಲೋ 

ಆಕೆಯು ಸ್ವಲ್ಪವೂ ಹೆದರಲಿಲ್ಲ. 



ಗುಡಿಸಲಿನ ಒಳ ಅಂಗಣದಲ್ಲಿ ಭಯಂಕರವಾದ ವನ್ಯಪಶುವಿನ ಚರ್ಮದ ಮೇಲೆ 

ಪ್ರೌಢವಯಸ್ಸಿನ ಒಬ್ಬ ಭೈರವಿಯು ಕುಳಿತುಕೊಂಡಿದ್ದಳು. ಆಕೆಯ ಮುಖಮುದ್ರೆಯು 

ಮಾತ್ರ ಉಗ್ರವಾಗಿದ್ದಿ ಲ್ಲ. ಶಾಂತಿ ಮತ್ತು ವಿವೇಕಗಳು ಆಕೆಯ ಅಂಗದಲ್ಲಿ ವಾಸವಾಗಿ 

ದ್ಡುವು. ಭೈರವಿಯ ಎದುರಿನಲ್ಲಿ ಕರಾಲವೇಷದ ಅಷ್ಟಭುಜಾದೇವಿಯ ಮೂರ್ತಿ 

ಯೊಂದಿದ್ದು ಅದು ಸಿಂದೂರದಿಂದ ವ್ಯಾಪ್ತವಾಗಿತ್ತು. ಆ ದೇವಿಯು ಭೈರವಿಯ ಉಪಾ 

ಸ್ಯದೇವತೆಯಾಗಿರಬಹುದೆಂಬಂತೆ ತೋರುತ್ತಿತ್ತು. ಭೈರವಿಯ ಒಂದು ಪಕ್ಕದಲ್ಲಿ ಸಿಂದೂ 

ರವನ್ನು ಬಳೆದ ಒಂದು ತ್ರಿಶೂಲವಿದ್ದು ಇನ್ನೊಂದು ಪಕ್ಕದಲ್ಲಿ ವಿದ್ರಾಪನಾದ ಒಂದೆರಡು 

ತಲೆಬುರುಡೆಗಳು ಬಿದ್ದಿದ್ದುವು. ಸಮೀಪದಲ್ಲಿಯೇ ಒಬ್ಬ ಹೆಂಗಸಿನ ಹೆಣವು ಬಿದ್ದಿತ್ತು. 

ಒಂದೆಡೆಯಲ್ಲಿ ದೊಡ್ಡದಾದ ಭಸ್ಮದ ರಾಶಿಯು ಬಿದ್ದಿತ್ತು. ಬೈರವಿಯ ಕೊರಳಲ್ಲಿ ದೊಡ್ಡ 

ದೊಡ್ಡ ರುದ್ರಾಕ್ಷಗಳ ಮಾಲೆಯಿದ್ದು ಹಣೆಯಲ್ಲಿ ಉದ್ದವಾದ ಸಿಂದೂರದ ನಾಮವನ್ನು 

ಹಚ್ಚಿಕೊಂಡಿದ್ದಳು; ಮತ್ತು ಅದರ ಮೇಲೆ ಬಿಳಿಯ ಚಂದನಗಂಧದ ಎಷ್ಟೋ ಟಿಕಳಿ 

ಗಳು ಕಾಣುತ್ತಿದ್ದುವು. ಆಕೆಯು ತನ್ನ ಮೈತುಂಬ ವಿಭೂತಿಯನ್ನು ಬಳಿದುಕೊಂಡಿದ್ದಳು. 



ಲಲಿತೆಯು ಬಳಗೆ ಬಂದೊಡನೆಯೇ ಭೈರವಿಯು ಮಂದಹಾಸಮಾಡಿದಳು. 

ಅದರೆ ವಿಚಾರನಿಮಗ್ನಳಾದ ಲಲಿತೆಗೆ ಅದು ಲಕ್ಷದಲ್ಲಿ ಬರಲಿಲ್ಲ. ಅವಳು ಭೈರವಿಯ 



------------------ಪ್ರೇಮಮಂದಿರ-------------------------------------೩೫



ಸನ್ನಿಧಿಗೆ ಹೋಗಿ ನಮಸ್ಕಾರ ಮಾಡಿದಳು. ಭೈರವಿಯ ಗಂಭೀರವಾದ ಮುಖವು 

ಈಗ ಇನ್ನೂ ಗಂಭೀರವಾಗಿ ತೋರಹತ್ತಿತು. 


ಭೈರವಿಯು ಸುಮ್ಮನೆ ಇದ್ದಳು. ಸ್ವಲ್ಪಹೊತ್ತಿನ ಮೇಲೆ ಲಲಿತೆಯು ಉತ್ಸುಕತೆ 

ಯಿಂದ ಪ್ರಶ್ನೆಮಾಡಿದಳು. " ತಾಯಿ, ನನ್ನ ಕೆಲಸವಾಯಿತೇ? " 


ಭೈರವಿಯು ಇನ್ನೂವರೆಗೆ ಸುಮ್ಮನೇ ಇದ್ದಳು. ಈ ಕಾಲದಲ್ಲಿ ಅವಳ ಮನಸ್ಸಿ 

ನಲ್ಲಿ ಆವ ವಿಚಾರಗಳು ನಡೆದಿದ್ದುವೆಂಬುದನ್ನು ಹೇಳುವುದು ಕಷ್ಟವಾಗಿದೆ. ಆದರೆ 

ರಾಜಕನ್ಯೆಯ ಪ್ರಶ್ನೆಯನ್ನು ಕೇಳಿದ ಬಳಿಕ ಭೈರವಿಯ ಲಲಾಟಪ್ರದೇಶದಲ್ಲಿ ಚಿಂತೆಯ 

ರೇಖೆಗಳು ಕಾಣಹತ್ತಿದುದು ಮಾತ್ರ ನಿಜ! ಲಲಿತೆಗೆ ಈ ಸಂಗತಿಯು ಗೊತ್ತಾಗದೆ 

ಹೋಗಲಿಲ್ಲ! 


ತನ್ನ ಪ್ರಶ್ನೆಗೆ ಉತ್ತರವು ದೊರೆಯಲಲ್ಲವೆಂಬುದನ್ನು ತಿಳಿದು ಲಲಿತೆಯು ಪುನಃ 

ಸಂಬೋಧಿಸಿದಳು. " ತಾಯೀ! ” 


ಭೈರವಿಯು ಒಮ್ಮೆಲೆ ಎಚ್ಚತ್ತವಳಾಗಿ ಮಾತನಾಡಿದಳು, " ಮಗಳೇ, ಏನು?" 


" ನಾನು ವಿನಂತಿಯನ್ನು ಮಾಡಿಕೊಂಡ ಮೇರೆಗೆ ತಾವು ನನ್ನ ಕೆಲಸವನ್ನು 

ಮಾಡಿದಿರಾ? " 


" ಹೌದು. ಮಾಡಿದ್ದೇನೆ. " 


" ಅದರ ಫಲಿತಾರ್ಥವೇನು? " 


ಭೈರವಿಯು ಸ್ಪಲ್ಪ ಹೊತ್ತಿನವರೆಗೆ ವಿಚಾರಮಾಡುತ್ತ ಸುಮ್ಮನಿದ್ದಳು. ಆಮೇಲೆ 

ಅವಳು ರಾಜಕನ್ಯೆಯನ್ನು ವಿಚಾರಿಸಿದಳು. " ಮಗಳೇ, ನೀನು ಈ ಸಂಕಷ್ಟದಲ್ಲಿ ಏಕೆ 

ಬೀಳುತ್ತೀ? ಭವಿಷ್ಯವನ್ನು ತಿಳಿದುಕೊಂಡು ನೀನು ಏನು ಮಾಡುವೆ? ಲಲಿತೇ, ನಾನು 

ಹೇಳುವುದನ್ನು ಹೇಳು.--ಅದರ ಗೊಡವೆಗೆ ಹೋಗಬೇಡ--ಸುಮ್ಮನೆ ಸುಖದ ಜೀವ 

ವನ್ನು ದುಃಖದಲ್ಲಿ ಕೆಡಹುವುದರಿಂದ ಪ್ರಯೋಜನವೇನು ಮಗಳೇ? ” 


ಭೈರವಿಯ ಈ ಸಲಹೆಯು ಲಲಿತೆಯ ಮನಸ್ಸಿಗೆ ಬರಲಿಲ್ಲವೆಂಬಂತೆ ತೋರಿತು. 

ತನ್ನ ಹಣೆಯಲ್ಲಿ ಏನು ಬರೆದಿದೆಯೆಂಬುದನ್ನು ತಿಳಿದುಕೊಳ್ಳುವ ಉತ್ತಂಠೆಯು ಅವಳಲ್ಲಿ 

ಅತಿಶಯವಾಗಿತ್ತು. ಈಗ ವಿವೇಕದಿಂದ ತನ್ನ ಮನಸ್ಸನ್ನು ದಮನಮಾಡಲು ಆಕೆಯು 

ಅಸಮರ್ಥಳಾಗಿದ್ದಳು. ಲಲಿತೆಯು ದೀನಸ್ವರದಿಂದ ಭೈರವಿಯನ್ನು ಕುರಿತು ಮತ್ತೆ 

ಮಾತಾಡಿದಳು. " ನಾನು ಮೊದಲು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಂಡಾಗಲೇ 

ನಾನು ಎಲ್ಲ ಸಂಗತಿಗಳ ವಿಚಾರವನ್ನು ಮಾಡಿರುತ್ತೇನೆ. ತಾಯೀ, ತಮ್ಮ ಲೆಕ್ಕದಿಂದ 

ಏನು ತಿಳಿದು ಬಂತೋ ಅದನ್ನು ಸ್ಪಷ್ಟವಾಗಿ ಹೇಳುವುದಾಗಬೇಕು, ಸ್ವಲ್ಪಾದರೂ 

ಸಂಕೋಚವನ್ನು ಮನಸ್ಸಿನಲ್ಲಿ ತರಬೇಡಿರಿ. ತಾಯೀ, ಈ ಸಂಶಯೀಸ್ಥಿತಿಯ ಯಾತ 

ನೆಯೇ ನನ್ನನ್ನು ಬಲವಾಗಿ ಬಾಧಿಸುತ್ತದೆ! "



೩೬---------------------------------ವಾಗ್ಭೂಷಣ------------------------------------ 



ಭೈರವಿಯು ಸ್ವಲ್ಪಹೊತ್ತು ಸುಮ್ಮನಿದ್ದು ಆಮೇಲೆ ಗಂಭೀರಸ್ಪರದಿಂದ ಮಾತನಾಡಿ 

ದಳು. " ವತ್ಸೇ, ಹಾಗಾದರೆ ಆ ಸಂಗತಿಯನ್ನು ಹೇಳಿದ ಹೊರತು ಗತ್ಯಂತರವೇ ಇಲ್ಲ 

ದಾಯಿತು. ನಾನು ನಿನ್ನಿನ ರಾತ್ರಿಯನ್ನೆಲ್ಲ ನಿನ್ನ ಸಂಬಂಧದ ಗಣಿತವನ್ನು ಮಾಡುವುದ 

ರಲ್ಲಿಯೇ ಕಳೆದೆನು. " 



ಲಲಿತೆಯು ಉತ್ಸುಕತೆಯಿಂದ ನಡುವೇ ಮಾತನಾಡಿದಳು. " ತಾಯೀ ನನ್ನ 

ಮೇಲೆ ತಮ್ಮ ಉಪಕಾರವು ಬಹಳವಾಯಿತು! " 



ಭೈರವಿಯು ಸ್ನೇಹಭರದಿಂದ ಮಾತನಾಡಿದಳು. " ಲಲಿತೇ, ಇದರಲ್ಲಿ ನನ್ನ ಉಪ 

ಕಾರವೇನು? ನಿನ್ನಂತಹ ಸದ್ಗುಣಿಯಾದ ಸುವರ್ಣಲಕ್ಷಿಯ ಮೇಲೆ ಯಾರ ಪ್ರೇಮವು 

ತಾನೆ ಕೊಡ್ರಲಿಕ್ಕಿಲ್ಲ? "  



ಲಲಿತೆಯು ಸ್ವಲ್ಪ ನಾಚಿದಳು. ಮತ್ತು ಇಂತು ಮಾತಾಡಿದಳು. " ತಾಯಿಯ 

ವರೇ, ಇರಲಿ; ಮೊದಲು ತಮ್ಮ ಗಣಿತದ ಫಲಿತಾಂಶವನ್ನು ನನಗೆ ಹೇಳಿರಿ. ?? 



" ಲಲಿತೇ! ಕರುಣಸಿಂಹಲಲಿತೆಯರ ಪ್ರೇಮಮಿಲನವು ಕೊನೆಯಲ್ಲಿ ಅಗತಕ್ಕ 

ದ್ದಂದೇ ನನಗೆ ಕಂಡುಬಂತು--"  



ರಾಜಕನ್ಯೆಯು ಆನಂದದಿಂದ ಮಾತನಾಡಿದಳು. " ಹೀಗೆಯೋ? ಹಾಗಾದರೆ 

ಇದನ್ನು ಹೇಳುವುದಕ್ಕೆ ತಾವು ಇಷ್ಟೊಂದು ಹಿಂದೆಮುಂದೆ ಯಾಕೆ ನೋಡುತ್ತಿದ್ದಿರಿ?" 



ಭೈರವಿಯು ಗಂಭೀರಸ್ವರದಿಂದ ಮಾತನಾಡಿದಳು. " ಅಷ್ಟೊಂದು ತ್ವರಾಯುತ 

ಳಾಗಬೇಡ. ನಾವು ಹೇಳುವುದನ್ನೆ ಲ್ಲ ಮೊದಲು ಲಕ್ಷಗೊಟ್ಟು ಕೇಳು. ನಿಮ್ಮಿಬ್ಬ ರ 

ಮಿಲನವಾಗುವುದೇನೋ ನಿಜ. ಆದರೆ ಅದರ ಪರಿಣಾಮವು ಸುಖಕರವಾದೀತೆಂಬಂತೆ 

ತೋರುವುದಿಲ್ಲ! " 



ಭೈರವಿಯ ಈ ಭವಿಷ್ಯವಾಣಿಯಿಂದ ಲಲಿತೆಯ ಹೃದಯಕ್ಕೆ ಪೆಟ್ಟು ತಗಲಿತು. 

ಆದರೆ ಅವಳು ಇಂತಹ ಆಘಾತವನ್ನು ಸಹಿಸಲು ಮೊದಲಿನಿಂದಲೂ ತನ್ನ ಮನಸ್ಸನ್ನು 

ಗಟ್ಟಮಾಡಿದ್ದಳು. ಅಕೆಯು ಭೈರವಿಯನ್ನು ಕೇಳಿದಳು. " ಹಾಗಾದರೆ ತಾಯೀ, ಪರಿ 

ಣಾಮವು ಹೇಗಾಗುವುದು? "  



" ಹೇಗಾಗುವುದೆಂಬುದನ್ನು ನಾನೂ ಹೇಳಲಾರೆನು. ಆದರೆ ನಿಮ್ಮಿಬ್ಬ  ಮೇಲನ 

ದಿಂದ ಅವುದೋ ಒಂದು ಅಶುಭವು ಸಂಘಟಸುವುದರಲ್ಲಿ ಸಂದೇಹವಿಲ್ಲ! ” 



ಲಲಿತೆಯು ಒಂದು ದೀರ್ಥನಿಶ್ಚಾಸವನ್ನು ಬಿಟ್ಟಳು. ಕೆಲಹೊತ್ತಿನವರೆಗೆ ಅವರಿ 

ಬ್ಬರೂ ತಮ್ಮ ತಮ್ಮ ವಿಚಾರದಲ್ಲಿ ಮಗ್ನರಾಗಿದ್ದರು. ಅನಂತರ ರಾಜಕನ್ಯೆಯು ಮಾತ 

ನಾಡಿದಳು. “ ತಾಯೀ, ತಮಗೆ ಇನ್ನೂ ಏನಾದರೂ ಹೆಚ್ಚಾ ಗಿ ತಿಳಿದುಬಂದಿತೋ? ” 



------------------------------------ಪ್ರೇಮಮಂದಿರ-------------------------------- ೩೭ 




" ಹೌದು. ಇನ್ನೂ ಒಂದು ಸಂಗತಿಯು ತಿಳಿದಿದೆ. ಮತ್ತು ಅದು ನಿನಗೆ ಅನಂದ 

ಕಾರಕವಾಗಿಯೇ ಇದೆ. 1 



" ಅದಾವುದು? ” ಲಲಿತೆಯು ಉತ್ಕೃಂಠೆಯಿಂದ ಹೇಳಿದಳು. 



" ಕರುಣಸಿಂಹನಿಗೂ ನಿನಗೂ ಮೀಲನವುಂಟಾಯಿತೆಂದರೆ, ನಿಮ್ಮಬ್ಬರಿಗೂ 

ವಿಯೋಗವಾಗುವುದೇ ಇಲ್ಲ. ವೈಧವ್ಯಯೋಗವು ನಿನ್ನ ಹಣೆಯಲ್ಲಿಲ್ಲ! ” 


ಭೈರವಿಯ ಈ ಅಶ್ವಾಸನದಿಂದ ಲಲಿತೆಯು ಆ ಎರಡನೆಯ ಭವಿಷ್ತವನ್ನು ಮರೆತೇ 

ಬಿಟ್ಟಳು. ಆಕೆಯ ಆನಂದವು ಆಕಾಶದಲ್ಲಿ ಹಿಡಿಸದಾಯಿತು! ಭೈರವಿಯ ಚರಣಗಳಿಗೆ 

ವಂದನೆಮಾಡಿ ಲಲಿತೆಯು ತನ್ನ ಮಂದಿರದ ಕಡೆಗೆ ತೆರಳಿದಳು. ಆಕೆಯ ಹೃದಯದಲ್ಲಿ 

ಭಿನ್ನ ಭಿನ್ನ ವೃತ್ತಿಗಳು ಕಲ್ಲೋಲವನ್ನುಂಬುಮಾಡಹತ್ತಿದ್ದುವು. ಚಂದ್ರಚೂಡನು 

ಹೇಳಿದ ಭವಿಷ್ಯವೂ ಭೈರವಿಯ ಭವಿಷ್ಯವೂ ಪರಸ್ಪರ ವಿಸದೃಶವಾಗಿರುವುದನ್ನು 

ತಿಳಿದು ಜ್ಯೋತಿಷ್ಯದ ಮೇಲಿದ್ದ ಅವಳ ವಿಶ್ವಾಸವೇ ಹಾರಿಹೋಯಿತು. ಅದರ ಕಡೆಗೆ 

ಲಕ್ಷವನ್ನೇ ಕೊಡದೆ ತನಗೆ ಯೋಗ್ಯವೆನಿಸಿದ ಮಾರ್ಗದಿಂದ ನಡೆಯುವುದೇ ಜಾಣತನ 

ವೆಂದು ಆಕೆಯು ಮನವರಿಕೆ ಮಾಡಿಕೊಂಡಳು. 



ಆರನೆಯ ಪರಿಚ್ಛೇದ. 

 

ಪರಿಚಯ! 



ರಾತ್ರಿಯ ಎರಡನೆಯ ಪ್ರಹರವು ಮೀರಿಹೋಗಿತ್ತು. ಕೃಷ್ಣಪಕ್ಷದ ರಾತ್ರಿಯಾದುದ 

ರಿಂದ ನಾಲ್ಕೂ ಕಡೆಯಲ್ಲಿಯೂ ಸೂಚಿಭೇದ್ಯವಾಡ ಅಂಧಕಾರವು ಪಸರಿಸಿತ್ತು. ನಿಬಿಡ 

ವಾದ ವನಪ್ರದೇಶದೊಳಗಿನ ಕಾಲ್ದಾರಿಯಲ್ಲಂತೂ ಒಂದೆರಡು ಮೊಳ ದೂರದಲ್ಲಿರುವ 

ಪದಾರ್‍ಥವು ಕೂಡ ಕಾಣಿಸುತ್ತಿದ್ದಿಲ್ಲ! ಗಿಡಗಳ ತುದಿಯಲ್ಲಿರುವ ದಟ್ಟಿತ್ತಾದ ಚಿಗುರೆಲೆ 

ಗಳ ಮೇಲಿನ ಕತ್ತಲೆಗಿಂತಲೂ ಅವುಗಳ ಕೆಳಗಿನ ಕೊಂಬೆಗಳ ಮೇಲಿನ ಕತ್ತಲೆಯು 

ಹೆಚ್ಚಾಗಿಯೂ, ಆ ಕೊಂಬೆಗಳಿಗಿಂತ ಇನ್ನೂ ಕೆಳಗಿರುವ ಶಾಖೆಗಳ ಮೇಲೆ ಅದಕ್ಕೂ 

ಹೆಚ್ಚಾಗಿಯೂ ಇತ್ತು. ಹೀಗೆ ಅಂಧಕಾರವು ಭೂತಲದ ಮೇಲೆ ಅತ್ಯಂತ ಸಾಂದ್ರವಾಗಿ 

ಪಸರಿಸಿತ್ತು. ಗಿಡಗಳ ಬುಡದಲ್ಲಿದ್ದ ದೂರ್ವಾಂಕುರ ಮತ್ತು ಒಣಗಿದ ತರಗಲೆಗಳ 

ನಿಜಸ್ವರೂಪವು ಕತ್ತಲೆಯ ಪ್ರಭಾವದಿಂದ ಲುಪ್ತವಾಗಿ ಸರ್ವವೂ ಅಂಧಕಾರಮಯ 

ವಾಗಿತ್ತು! 


ಸಮಗ್ರವಾದ ವನಭೂಮಿಯು ಶಾಂತವಾಗಿತ್ತು. ಎಲ್ಲೆಡೆಯಲ್ಲಿಯೂ ನಿಸ್ತಬ್ಧ  

ತೆಯು ತುಂಬಿತ್ತು. ವನಪ್ರದೇಶದಲ್ಲಿ ಭುಜಕ್ಕೆ ಭುಜವನ್ನು ಆನಿಸಿ ಮಿತ್ರರಂತೆ ಅನ್ಯೋನ್ಯ 



೩೮---------------------------------- ವಾಗ್ಭೂಷಣ.----------------------------------- 


ಸಹಾಯಾರ್ಥವಾಗಿ ನಿಂತುಕೊಂಡಿರುವ ಅಶ್ವತ್ಥ, ಶಾಲ, ತಮಾಲ ಮೊದಲಾದ ವೃಕ್ಷ 

ಗಳ ಪರ್ಣಸಮೂಹವು ಗಾಳಿಯ ಅಲೆಪದಿಂದ ಒಂದುತರದ ಶಬ್ದವನ್ನು ಮಾಡುತ್ತಿ 

ದ್ದುವು; ಅದರಿಂದ ಆ ವಿರಾಟ್‌ಶಾಂತತೆಯು ಅಲ್ಪಮಟ್ಟಿಗೆ ಭಂಗವನ್ನು ಹೊಂದುತ್ತಿತ್ತು! 

ಆದರೆ ಅದು ಒಂದು ನಿಮಿಷ ಮಾತ್ರ! 



ಶಾಂತತೆ ಮತ್ತು ಕತ್ತಲೆಗಳ ಸಾಮ್ರಾಜ್ಯವು ಮೇಲೆ ಹೇಳಿದಂತೆ ಎಲ್ಲೆಡೆಯಲ್ಲಿ 

ಯೂ ಪಸರಿಸಿತು. ಆದರೆ ಆ ಸಾಮ್ರಾಜ್ಯಗಳೆರಡೂ , ಏಕತಂತ್ರಿಗಳಲ್ಲ. ಆಕಾಶದಲ್ಲಿ 

ಮಿನುಗುತ್ತಿರುವ ತಾರಕೆಗಳ ಅಲ್ಲ ಪ್ರಕಾಶವೂ, ವೃಕ್ಷಶಾಖೆಗಳಲ್ಲಿ ಪುಂಜಗಳನ್ನು ಕಟ್ಟ 

ಕೊಂಡು ವಾಸಮಾಡುತ್ತಲಿದ್ದ ಹೊನ್ನೆಯ ಹುಳದ ಕ್ಷುದ್ರವಾದ ಬೆಳಕೂ ಅಂಧಕಾರದ 

ಸಾಮ್ರಾಜ್ಯಕ್ಕೆ ಪ್ರತಿರೋಧಿಗಳಾಗಿ ಬಂಡಾಯವೆನ್ಸೆಬ್ಬಿಸುತ್ತಿದ್ದುವು! ಅದರಂತೆಯೇ 

ಶಾಂತತೆಯ ಸಾಮ್ರಾಜ್ಯದ ಪ್ರತಿಸ್ಪರ್ಧಿಗಳೂ ಕೆಲವರಿದ್ದರು. ಗಗನಚುಂಬಿತವಾದ 

ವೃಕ್ಷರಾಜಿಯ ಸಾಂದ್ರವಾದ ಪಲ್ಲವಗಳನ್ನು ಆಶ್ರಯಸಿಕೊಂಡಿದ್ದ ಒಂದಾನೊಂದು ನಿಶಾ 

ಚರ ಪಕ್ಷಿಯು ನಡುನಡುವೆ ಕರ್ಕಶವಾದ ಧ್ವನಿಯಿಂದ ಕೂಗುತ್ತ ಆ ವಿರಾಟ್‌ ಶಾಂತತೆ 

ಯನ್ನು ಕಿಂಚಿದ್ಭಂಗಗೊಳಿಸುತ್ತಿತ್ತು! 



ಇಂತಹ ಗಭೀರವಾದ ರಾತ್ರಿಯಲ್ಲಿ ಶಾಂತವೂ ನಿಸ್ತಬ್ಧವೂ ಅದ ಅ ವನದೊಳ 

ಗಿನ ಒಂದು ಕಾಲ್ದಾರಿಯಿಂದ ಒಬ್ಬ ತರುಣನು ಅತಿ ಕಷ್ಟದಿಂದ ತನ್ನ ಕುದುರೆಯನ್ನು 

ನಡೆಯಿಸುತ್ತ ಮಾರ್ಗವನ್ನು ಕ್ರಮಿಸುತ್ತಿದ್ದನು. ಅಂಧಕಾರವು ಅತಿಶಯವಾಗಿದ್ದುದ 

ರಿಂದ ನಡುನಡುವೆ ಆತನಿಗೆ ಬಹಳೇ ವಿಘ್ನವಾಗುತ್ತಿತ್ತು. ಒಂದೆರಡು ಮೊಳಗಳ ದೂರ 

ದಲ್ಲಿ ಕೂಡ ಏನಿದೆಯೆಂಬುದು ಆತನಿಗೆ ಕಾಣುತ್ತಿದ್ದಿಲ್ಲ! ಹಗಲಿನಲ್ಲಿ ಕಟ್ಟಿಗೆಯನ್ನು 

ಕಡಿಯುವುದಕ್ಕೆ ಬರುವ ಜನರ ತುಳಿದಾಟದಿಂದ ಉತ್ಪನ್ನವಾದ ಆ ಹಾದಿಯು ಅತ್ಯಂತ 

ವಕ್ರವಾಗಿತ್ತು; ಪ್ರತಿಕ್ಷಣಕ್ಕೂ ಒಂದಿಲ್ಲೊಂದು ಕಡೆಗೆ ಹೊರಳಬೇಕಾಗುತ್ತಿತ್ತು. ಅದು 

ದರಿಂದ ಆ ಕುದುರೆಯು ಮಾರ್ಗವನ್ನು ಕ್ರಮಿಸುವುದಕ್ಕೆ ಹೆಜ್ಜೆಹೆಜ್ಜೆಗೂ ಸಂದೇಹ 

ಬಡುತ್ತಿತ್ತು. ಆ ವನಮಾರ್ಗದ ಪರಿಚಯವು ಆ ತರುಣನಿಗೆ ಸ್ವಲ್ಪಮಟ್ಟಿಗೆ ಇದ್ದುದ 

ರಿಂದ ಅವನು ಇಷ್ಟಾದರೂ ವಾರ್ಗಕ್ರಮಣ ಮಾಡುತ್ತಿದ್ದನು. ಅದರಲ್ಲಿಯೂ ಆತನು 

ಅತ್ಯಂತ ಶೂರನಾಗಿದ್ದುದರಿಂದ ಇಂತಹ ಭಯಂಕರವಾದ ರಾತ್ರಿಯಲ್ಲಿ ಒಬ್ಬನೇ ಈ 

ಅರಣ್ಯದಲ್ಲಿ ಪ್ರವಾಸಮಾಡುತ್ತಿದ್ದನು. ಇನ್ನಾರಾದರೂ ಆಗಿದ್ದರೆ ಭಯಭೀತರಾಗಿ 

ಪ್ರಾಣವನ್ನೇ ಬಿಡುತ್ತಿದ್ದರು! ಆತನ ಕುದುರೆಯು ಎಡವುತ್ತಲೂ ಮುಗ್ಗರಿಸುತ್ತಲೂ 

ನಡೆಯುತ್ತಿತ್ತು. ಆದರೆ ಅದು ಎಲ್ಲಿಯೂ ನಿಂತುಕೊಳ್ಳುತ್ತಿದ್ದಿಲ್ಲ. ಅದಕೆ ಹೋಗ 

ಹೋಗುತ್ತ ಈಗ ಮಾತ್ರ ಒಂದು ಸ್ಥಳದಲ್ಲಿ ನಿಂತುಕೊಂಡಿತು. ಏನು ಮಾಡಿದರೂ 

ಅದು ಮುಂದಕ್ಕೆ ಹೆಜ್ಜೆಯನ್ನು ಇಡಲಿಲ್ಲ! ಆ ತರುಣನು ಸವಿಮಾತಿನಿಂದಲೂ, ಸಂಜ್ಞಾ 

ಶಬ್ಧಗಲಿಂದೂ ಅದನ್ನು ಸಮುತ್ತೇಜಿಸಿದನು; ಆತನ ಯಾವ ಪ್ರಯತ್ನವೂ ಸಫಲವಾಗ 



-------------------------------ಪ್ರೇಮಮಂದಿರ--------------------------------------೩೮



ಲಿಲ್ಲ. ಆ ಕುದುರೆಯು ಇಂದಿನವರೆಗೆ ಎಷ್ಟೋ ಪ್ರಸಂಗಗಳಲ್ಲಿ ತನ್ನ ಯಜಮಾನನ 

ವಿಜಯಕ್ಕೆ ಕಾರಣೀಭೂತವಾಗಿತ್ತು. ಆದರೆ ಇಂದಿನಂತೆ ಅದು ಹೇಡಿತನವನ್ನೆಂದೂ 

ತೋರ್ಪಡಿಸಿದ್ದಿಲ್ಲ [ 


ಆದುದರಿಂದ ಅಲ್ಲಿ ಏನಾದರೂ ವಿಶೇಷವಿರಲಿಕ್ಕೆ ಬೇಕೆಂದು ತಿಳಿದು ಆ ತರು 

ಣನು ಚಟ್ಚನೆ ಕುದುರೆಯ ಮೇಲಿಂದ ಇಳಿದನು; ಮತ್ತು ಕುದುರೆಯ ಕಡಿವಾಣವನ್ನು 

ಕೈಯಲ್ಲಿ ಹಿಡಿದು ನಾಲ್ಕೂ ಕಡೆಗೆ ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸುತ್ತ ಒಂದೊಂದೇ 

ಹೆಜ್ಜೆಯನ್ನು ನಡೆಯಹತ್ತಿದನು. ಅತನ ಊಹೆಯು ನಿಜವಾಗಿಯೇ ಇತ್ತು. ಕೆಲವು 

ಹೆಜ್ಜೆಗಳನ್ನು ನಡೆದುಹೋದ ಬಳಿಕ ಎದುರಿನ ಒಂದು ಗಿಡದ ಬುಡದಲ್ಲಿ ಅಸ್ಪಷ್ಟೃವಾ 

ದೊಂದು ಮೂರ್ತಿಯ ಛಾಯೆಯು ಆತನಿಗೆ ಗೋಚರವಾಯಿತು! 


ನಮ್ಮ ತರುಣನು ಈ ಪ್ರಸಂಗದಲ್ಲಿ ಸ್ವಲ್ಪಾದರೂ ಭಯಪಡಲಿಲ್ಲ. ಕೈಯೊಳಗಿನೆ 

ದೀರ್ಫುವಾದ ಭಾಲೆಯನ್ನು ಗಟ್ಟಿಯಾಗಿ ಹಿಡಿದು ಧೀರಸ್ವರದಿಂದ ಆತನು ಅಂಧಕಾರ 

ವೇಷ್ಟಿತವಾದ ಆ ಮೂರ್ತಿಯನ್ನು ಕೇಳಿದನು, " ಅಲ್ಲಿ ನಿಂತುಕೊಂಡಿರುವವರು 

ಯಾರು? " 


ಆ ವ್ಯಕ್ತಿಯು ಮಾತಾಡಲಿಲ್ಲ; ಆದರೆ ಖೊಳಖೊಳನೆ ನಗಹತ್ತಿತು! 


ನಮ್ಮ ತರುಣವೀರನು ಚಕಿತನಾದನು! ಮತ್ತೆ ಆತನು ರೇಗಿನಿಂದ ಮಾತನಾಡಿ 

ದನು. " ಯಾರೆಂಬುದನ್ನು ಹೇಳು, ಇಲ್ಲದಿದ್ದರೆ ಪ್ರಾಣಕ್ಕೆ ಎರವಾಗುವೆ. " 


ಆ ಮೂರ್ತಿಯು ಎರಡು ಹೆಜ್ಜೆ ಮುಂದಕ್ಕೆ ಬಂದು ತರುಣವೀರನ ಮುಂದೆ 

ನಿಂತುಕೊಂಡು ಮಾತನಾಡಿತು. " ಕುಮಾರನಿಗೆ ಜಯಜಯಕಾರವಿರಲಿ! ಮಹಾರಾಜ 

ರಿಗೆ ಇನ್ನೂವರೆಗೆ ನನ್ನ ಗುರುತು ಹತ್ತಲೇ ಇಲ್ಲವೆಂಬಂತೆ ತೋರುತ್ತದೆ! ” 



ಕಂಠಸ್ಟರದ ಮೇಲಿಂದ ತರುಣನಿಗೆ ಆ ಮೂರ್ತಿಯ ಪರಿಚಯವುಂಟಾಯಿತು. 

ಆತನ ಎದುರಿನಲ್ಲಿ ನಿಂತುಕೊಂಡಿದ್ದ ವ್ಯಕ್ತಿಯು ಇನ್ನಾರೂ ಆಗಿರದೆ ಆತನ ವಿಶ್ವಾಸ 

ಪಾತ್ರ ಸಹಚರನಾದ ಸಮರಸಿಂಹನಾಗಿದ್ದನು! 



ಕಿಂಚಿದ್ಗಂಭೀರಸ್ವರದಿಂದ ಕುಮಾರನು ಆತನಿಗೆ ಪ್ರಶ್ನಮಾಡಿದನು. " ಸಮರಾ 

ನಿನಗೆ ಇಷ್ಟೇಕೆ ತಡವಾಯಿತು? ನಿಯಮಿತಸ್ಥಾನದಲ್ಲಿ ಎಷ್ಟೋ ಹೊತ್ತಿನವರೆಗೆ ನಾನು 

ನಿನ್ನ ದಾರಿಯನ್ನು ನೋಡಿ ನೋಡಿ ಬೇಸತ್ತೆನು; ಮತ್ತು ಹಾಗೆಯೇ ತಿರುಗಬೇಕೆಂದೂ 

ಯೋಚಿಸಿದ್ದೆನು; ನಿನ್ನ ಪ್ರಯತ್ನಗಳೆಲ್ಲವೂ ನಿಷಲವಾದುವೆಂದೇ ನಾನು ಭಾವಿಸಿದೆನು. " 


ಸಮರಸಿಂಹನು ನಮ್ರತೆಯಿಂದ ಕುಮಾರನಿಗೆ ಪ್ರಣಾಮಮಾಡಿ ಮಾತನಾಡಿದನು. 

" ತಮ್ಮ ಆಶೀರ್ವಾದದಿಂದ ಕೈಕೊಂಡ ಕಾರ್ಯದಲ್ಲಿ ನನಗೆ ಯಶಸ್ಸು ಪ್ರಾಪ್ತನಾ 

ಯಿತು; ಅದರೆ ನನಗೆ ಕಷ್ಟಗಳು ಮಾತ್ರ ಬಹಳ ಪ್ರಾಪ್ತವಾದುವು!"



೪೦----------------------------------ವಾಗ್ಭೂಷಣ---------------------------------- 


ಆತನ ಬೆನ್ನನ್ನು ಚಪ್ಪರಿಸುತ್ತ ಕುಮಾರನು ಮಾತನಾಡಿದನು. " ಶಾಬಾಸ ಶಾಬಾಸ - 

ಸಮರಾ! ನಡೆ ಇನ್ನು. ಸಂಕಟವನ್ನ ಭುಜದ್ವಯದಿಂದ ಆಲಿಂಗಿಸಲು ನಾವು ಸಿದ್ಧರೇ 

ಇದ್ದೇವೆ. ಇನ್ನು ಮೇಲೆ ಸ್ವಲ್ಪಾದರೂ ಹಿಂದೆಸರಿಯುವ ಹಾಗಿಲ್ಲ. " 



" ಇಂದೇ ತಾವು ಆ ಕೆಲಸವನ್ನು ಕೈಕೊಳ್ಳುವಿರಾ?" 



" ಹೌದು ಇಂದೇ; ಈ ರಾತ್ರಿಯಲ್ಲಿಯೇ; ಈ ಕ್ಷಣದಲ್ಲಿಯೇ! '' ಉತ್ತೇಜಿತ 

ಸ್ವರದಿಂದ ಕುಮಾರನು ಮಾತನಾಡಿದನು. 


" ಹಾಗಾದರೆ ದೊರೆಗಳೇ, ನನ್ನದೊಂದು ವಿನಂತಿಯನ್ನು ಕೇಳಿರಿ. ತಮ್ಮ ಕುದು 

ರೆಯನ್ನು ಇಲ್ಲಿಯೇ ಕಟ್ಟಿ ನೀವು ಮುಂದಕ್ಕೆ ಹೋಗಿರಿ. ನಾನೀಗ ದುರ್ಗಕ್ಕೆ ತೀರ 

ಸಮೀಪದಲ್ಲಿಯೇ ಇದ್ದೇವೆ. "


" ಹೌದು--ಸಮರಾ | ನೀನನ್ನುವುದು ನಿಜ. ಆದರೆ ಅಜಯನನ್ನು ಎಲ್ಲಿ ಕಟ್ಟ 

ಬೇಕು?"



ಆ ಸಮೀಪದಲ್ಲಿರುವ ಆ ಗಿಡಕ್ಕೆ ನಾನು ಅದನ್ನು ಕಟ್ಟುತ್ತೇನೆ. ಹಿಂದಿರುಗಿ ಬರು 

ವಾಗ ನಾನು ಅದನ್ನು ತೆಗೆದುಕೊಂಡು ಹೋಗುವೆನು. "



" ಒಳ್ಳೇದು. ನಿನ್ನ ಮನಸ್ಸಿಗೆ ಬಂದಂತೆಯೇ ಮಾಡು. ಆದರೆ ಈ ಭಾಲೆಯನ್ನೂ 

ಖಡ್ಗವನ್ನೂ ಯುದ್ಧ ವೇಷವನ್ನೂ ತೆಗೆದುಕೊಂಡು ಏನು ಮಾಡಬೇಕು? " 



ಆ ಸೂಚಿಭೇದ್ಯ ಅಂಧಕಾರದಲ್ಲಿಯೂ ಕೂಡ ಪದಾರ್ಥವನ್ನಾಗಲಿ ವ್ಯಕ್ತಿಯನ್ನಾ 

ಗಲಿ ಸ್ಪಷ್ಟವಾಗಿ ಕಂಡುಕೊಳ್ಳು ವ ಅದ್ಭುತ ಸಾಮರ್ಥ್ಯವು ಯಾರಿಗಿರುವದೋ ಅಂತ 

ಹರಿಗೆ ಈ ಸಮಯದಲ್ಲಿ ಸಮರಸಿಂಹನ ಮುಖಮುದ್ರೆಯ ಮೇಲೆ ಹಾಸ್ಯರೇಷೆಯು 

ಅಂಕಿತವಾಗಿದ್ದುದು ಸ್ಪಟವಾಗಿ ಕಂಡುಬರುತ್ತಿತ್ತು. ಸಮರಸಿಂಹನು ನಗನಗುತ್ತ ತನ್ನ 

ಲ್ಲಿಯೇ ಮಾತಾಡಿಕೊಂಡನು. " ಇದೇನು ನಮ್ಮ ಒಡೆಯರ ಸ್ವಭಾವವೋ ಏನೋ!

ತಾವು ಪ್ರಣಯಿನಿಯ ಸಂದರ್ಶನಕ್ಕೆ ಹೊರಟರುವುದರಿಂದ ಭಾಲಖಡ್ಗಗಳ ಅವಶ್ಯಕತೆ 

ಯಿಲ್ಲವೆಂದು ಇವರು ತಿಳಿಯುತ್ತಾರೆ!"  



ಅಮೇಲೆ ಸಮರಸಿಂಹನು ಕುಮಾರನನ್ನುದ್ದೇಶಿಸಿ ಮಾತನಾಡಿದನು. " ಭಾಲೆಯು 

ಅಷ್ಟೊಂದು ಅವಶ್ಯಕವಿಲ್ಲವೆಂದು ತಿಳಿಯುತ್ತಿದ್ದರೆ ಅದನ್ನು ಇಲ್ಲಿಯೇ ಇಟ್ಟುಹೋಗಿರಿ. 

ಆದರೆ ಯಾವ ವೇಷದಿಂದ ನೀವು ಅಲ್ಲಿಯವರೆಗೆ ಬಂದಿರುವಿರೋ ಅದೇ ವೇಷದಿದಲೇ 

ಮುಂದೆ ನಡೆಯಿರಿ, ಮತ್ತು ಖಡ್ಗವನ್ನು ಅವಶ್ಯವಾಗಿಯೂ ಸಂಗಡ ತೆಗೆದುಕೊಳ್ಳಿರಿ. 

ಒಡೆಯರೇ, ತಾವೆ ಪ್ರಿಯೆಯ ಸಂದರ್ಶನಕ್ಕೆ ಹೋಗುವುದೇನೋ ನಿಜ; ಆದರೆ ಶತ್ರು 

ಗಳ ದುರ್ಗವನ್ನು ಪ್ರವೇಶಿಸುತ್ತೀರೆಂಜುದನ್ನು ಮಾತ್ರ ಮರೆಯಬೇಡಿರಿ. "



--------------------------------ಪ್ರೇಮಮಂದಿರ.---------------------------------- ೪೧ 


ಹೀಗೆಂದು ಸಮರಸಿಂಹನು ಅಜಯನನ್ನು ಹಿಡಿದುಕೊಂಡು ಹೋಗಿ ಒಂದು 

ಗಿಡಕ್ಕೆ ಕಟ್ಟಿ ಹಾಕಿದನು. ಮತ್ತು ಭಾಲೆಯನ್ನು ಅದೇ ಗಿಡದ ಕೊಂಬೆಯಲ್ಲಿ ಭದ್ರ 

ವಾಗಿಟ್ಟು ಕುಮಾರನಿಗೆ ದಾರಿಯನ್ನು ತೋರಿಸುವುದಕ್ಕಾಗಿ ಅವನ ಮುಂದೆ ಮುಂದೆ  

ಹೊರಟನು. ಕೆಲವು ಹೊತ್ತಿನವರೆಗೆ ಅವರಿಬ್ಬರೂ ಏನೂ ಮಾತನಾಡದೆ ಮೌನವಾ 

ಗಿಯೇ ನಡೆಯುತ್ತಲಿದ್ದರು. ಅಲ್ಪಾವಧಿಯಲ್ಲಿಯೇ ಅವರು ಒಂದು ಸಂಕೇತಸ್ಥಳಕ್ಕೆ 

ಬಂದು ಮುಟ್ಟಿದರು. 



ಆ ನಿಬಿಡವಾದ ವನದ ಸಮೀಪದಲ್ಲಿಯೇ ಒಂದು ಬೆಟ್ಟವಿತ್ತು. ಆ ಬೆಟ್ಟದ 

ಮೇಲಿಂದ ಒಂದು ಚಿಕ್ಕ ಹೊಳೆಯು ಹರಿಯುತ್ತಿತ್ತು. ಇದೇ ನದಿಯು ಮುಂದೆ ಮುಕ್ತಾ 

ವಲಿಗೆ ಕೂಡಿ ಅನಂತರ ದುರ್ಗವನ್ನು ಪರಿವೇಷ್ಟಿಸಿತ್ತು. ಸಮರಸಿಂಹನು ಅತ್ಯಂತ 

ಕಷ್ಟದಿಂದ ಮಾರ್ಗವನ್ನು ಪರಿಶೋಧಿಸಿ ಕುಮಾರನನ್ನು ಆ ಕ್ಷುದ್ರವಾದ ಗಿರಿನದಿಯ 

ಆಚೆಯ ದಡವನ್ನು ಮುಟ್ಟಿಸಿದನು. 



ನದಿಯ ಆಚೆಯ ತೀರಕ್ಕೆ ಬಂದಮೇಲೆ ಮುಂದಕ್ಕೆ ಹೋಗುತ್ತಲೇ ಕರುಣ 

ಸಿಂಹನು ತನ್ನ ಅನುಚರನನ್ನು ಕುರಿತು ಮಾತನಾಡಿದನು. “ ಸಮರಾ ! ಗೊತ್ತಾದ 

ವೇಳೆಯಲ್ಲಿ ನಾವು ದುರ್ಗವನ್ನು ಮಟ್ಟುವುದಿಲ್ಲವೆಂಬಂತೆ ತೋರುತ್ತದೆ. ಹಾಗೆ ಒಂದು 

ವೇಳೆ ಸರಿಯಾದ ಹೊತ್ತಿಗೆ ಮುಟ್ಟದೆ ಹೋದರೆ ಅತ್ಯಂತ ಕೌಶಲ್ಯದಿಂದಲೂ ಪರಿಶ್ರಮ 

ದಿಂದಲೂ ನನಗೋಸ್ಕರ ನೀನು ಮಾಡಿಟ್ಟ ಸಿದ್ಧತೆಯು ವ್ಯರ್ಥವಾಗುತ್ತದೆ! 

ಸಮರಾ! ನಿನ್ನ ಆ ಮಿತ್ರನ ಪಹರೆಯ ಕಾಲವು ಈಗ ಮುಗಿದು ಹೋಗಿರಬ 

ಹುದಲ್ಲವೇ?"


ಸಮರಸಿಂಹನು ಕುಮಾರನಿಗೆ ಉತ್ತರವನ್ನೇ ಕೊಡಲಿಲ್ಲ. ಅವನು ಹಾಗೆಯೇ 

ಮುಂದಕ್ಕೆ ನಡೆಯುತ್ತಿದ್ದನು. ಕುಮಾರನ ಲಕ್ಷ್ಯವಾದರೂ ಬೇರೆ ಕಡೆಗೆ ತೊಡಗಿದ್ದು 

ದರಿಂದ ಆತನು ಮತ್ತೆ ಪ್ರಶ್ನೆ ಮಾಡಲಿಲ್ಲ. ಮೌನವಾಗಿಯೇ ಸಮರಸಿಂಹನ ಹಿಂದಿಂದೆ 

ನಡೆಯಹತ್ತಿದರು. ಕೆಲಕಾಲದ ಅನಂತರ ಅವರಿಬ್ಬರು ಎತ್ತರವಾದ ತಟದಿಂದ ಪರಿವೇ 

ಷ್ಟಿತವಾದ ಆ ದುರ್ಗದ ಒಂದು ಗುಪ್ತದ್ವಾರದ ಹತ್ತರ ಬಂದರು. ಸಮರನು ತನ್ನ 

ಕೈಬೆರಳುಗಳಿಂದ ಮೆಲ್ಲನೆ ಆ ಬಾಗಿಲದ ಮೇಲಿ ಹೊಡೆದನು. ಅದೇ ರೀತಿಯಾಗಿ ಒಳ 

ಗಿನಿಂದ ಅವನಿಗೆ ಉತ್ತರವು ದೊರೆಯಿತು. ಸಮರನು ಪುನಃ ಬಾಗಿಲದ ಮೇಲೆ ಆಘಾತ 

ವನ್ನು ಮಾಡಿದ ಬಳಿಕ ಅದು ತೆರೆಯಲ್ಪಟ್ಟಿತು. 


ಯಾವನೋ ಒಬ್ಬನು ಮೆಲ್ಲನೆ ಮಾತನಾಡಿದನು. “ ಬನ್ನಿ, ಬೇಗನೇ ನಡೆಯಿರಿ. " 


ಸಮರಸಿಂಹನು ಕುಮಾರನನ್ನು ಕುರಿತು ಮಾತನಾಡಿದನು. “ ದೊರೆಗಳೇ, 

ತಾವು ಒಳಗೆ ನಡೆಯಿರಿ. ಆದರೆ ವಿಪರೀತವಾದ ಧೈರ್ಯದ ಸಾಹಸವನ್ನು ಮಾತ್ರ 

ಮಾಡಬೇಡಿರಿ. ಈ ಪಹರ್ಯೆಯವನೇ ನಿಮಗೆ ದುರ್ಗದಲ್ಲಿ ದಾರಿಯನ್ನು ತೋರಿಸುವನು, 

 


೪೨---------------------------ವಾಗ್ಭೂಷಣ.--------------------------------------------


 

ಒಳ್ಳೇ ಜಾಗರೂಕರಾಗಿ ಈ ಪ್ರಸಂಗದಲ್ಲಿ ನಡೆದುಕೊಳ್ಳಬೇಕೆಂದು ತಮಗೆ ನಾನೇನು 

ಹೇಳಬೇಕೆಂಬಂತಿಲ್ಲ! "



ಕರುಣಸಿಂಹನು ಒಂದು ಕ್ಷಣಕಾಲ ವಿಚಾರಮಾಡುತ್ತ ಅಲ್ಲಿಯೇ ನಿಂತುಕೊಂಡನು. 

ಆ ಮೇಲೆ ಸಮರಸಿಂಹನ ಕಿವಿಯಲ್ಲಿ ಆತನು ಹೀಗೆ ಹೇಳಿದನು. " ಸಮರ, ನೀನಿನ್ನು 

ಹೊರಡು. ಹೋಗುವಾಗ ಅಜಯನನ್ನು ಶಿಬಿರಕ್ಕೆ ಹಿಡಿದುಕೊಂಡು ಹೋಗು. ಹೋದ 

ಕೂಡಲೆ ನೂರು ದಂಡಾಳುಗಳನ್ನು ನನ್ನ ಕಡೆಗೆ ಕಳಿಸಿಕೊಡಬೇಕೆಂದು ದಳಪತಿಗೆ 

ತಿಳಿಸು. ನೀವು ಬೆಳಗಾಗುವುದರೊಳಗಾಗಿಯೇ ಇಲ್ಲಿಗೆ ಬಂದು ಮುಟ್ಟುವ ಹಾಗೆ 

ಮಾಡಿರಿ. ಸಮೀಪದ ವನಪ್ರದೇಶದಲ್ಲಿ ಸವಾರರು ಅಡಗಿಕೊಂಡು ನಿಲ್ಲುವಂತೆ ವ್ಯವಸ್ಥೆ 

ಮಾಡೆಂದು ಸೇನಾಪತಿಗೆ ನನ್ನ ನಿರೋಪವನ್ನು ಹೇಳು. ನೀನಿನ್ನು ಹೊರಡು. ನನ್ನ 

ವಿಷಯಕ್ಕೆ ಯಾವತರದ ಚಿಂತೆಯನ್ನೂ ಮಡಬೇಡ. " 


ಸಮರಸಿಂಹನು ಕುಮಾರನಿಗೆ ಪ್ರಣಾಮ ಮಾಡಿ ಮಾತನಾಡಿದನು. “ ತಮ್ಮ 

ಅಪ್ಪಣೆಯಂತೆ ಎಲ್ಲವನ್ನೂ ಮಾಡುತ್ತೇನೆ. ತಾವು ಮಾತ್ರ ಇನ್ನು ವಿಲಂಬ ಮಾಡಬೇಡರಿ. " 


ಸ್ನೇಹಭರದಿಂದ ಓಮ್ಮೆ ಸಮರನನ್ನು ನೋಡಿ ಕುಮಾರನು ದುರ್ಗವನ್ನು ಪ್ರವೇಶಿ 

ಸಿದನು. ತತ್‌ಕ್ಷಣದಲ್ಲಿಯೇ ಈಷತ್ತಾದರೂ ಸದ್ದಾಗದಂತೆ ಆ ಗುಪ್ತದ್ವಾರವು ಮುಚ್ಚ 

ಲ್ಪಟ್ಟಿತು.


ಕರ್ಮಧರ್ಮಸಂಯೋಗವು ಎಷ್ಟೊಂದು ವಿಲಕ್ಷಣವಾಗಿರುತ್ತದೆ ನೋಡಿರಿ! 

ಯಾವ ರಾತ್ರಿಯಲ್ಲಿ ಕುಮಾರ ಕರುಣಸಿಂಹನು ಗುಪ್ತವಾಗಿ ಶತ್ರುಗಳ ದುರ್ಗವನ್ನು 

ಪ್ರವೇಶಿಸಿದನೋ, ಅದೇ ರಾತ್ರಿಯಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನು ಸರತಾನ 

ಸಿಂಹನನ್ನೂ, ದುರ್ಜಯಸಿಂಹನನ್ನೂ ಸಂಗಡ ಕರೆದುಕೊಂಡು ದುರ್ಗದ ಕಡೆಗೆ ನಡೆ 

ದಿದ್ದನು. ದುರ್ಜಯಸಿಂಹನೊಡನೆ ಲಲಿತೆಯ ವಿವಾಹ ಮಾಡುವದು ನಿಶ್ಚಿತವಾಗಿ 

ಆ ಸಂಬಂಧದ ನಿಬಂಧನೆಗಳೆಲ್ಲವೂ ಗೊತ್ತು ಮಾಡಲ್ಪಟ್ಟದ್ದವು. ಭೀಮಸಿಂಹನು ಭಾನೀ 

ಜಾಮಾತೃವನ್ನೂ ಬೀಗನನ್ನೂ ಅಗ್ರಹದಿಂದ ತನ್ನ ಸಂಗಡಲೇ ಕರೆದುಕೊಂಡು 

ಬಂದಿದ್ದನು.  


ದುರ್ಗದ ಸಮೀಪದ ವನಪ್ರದೇಶದಲ್ಲಿ ಬಂದೊಡನೆಯೇ ಅಜಯನ ಹೇಷಿತವು 

ಅವರ ಕಿವಿಗೆ ಬಿತ್ತು. ಕೂಡಲೆ ಆ ಮೂವರ ಲಕ್ಷ್ಯವು ಅತ್ತಕಡೆಗೇ ಹೋಯಿತು, 

ದುರ್ಗದ ಸಮೀಪದಲ್ಲಿ ಇಂತಹ ರಾತ್ರಿಯಲ್ಲಿ ಸುಂದರವಾದ ಉತ್ತಮಾಶ್ವವು ಕಟ್ಟಲ್ಪಟ್ಟಿ 

ರುವುದನ್ನು ನೋಡಿ ಭೀಮಸಿಂಹನ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರಗಳು 

ಹುಟ್ಟಿದುವು. ಇಂತಹ ವೇಳೆಯಲ್ಲಿ ಈ ಕುದುರೆಯನ್ನು ಇಲ್ಲಿ ಕಟ್ಟಲು ಕಾರಣವೇನು ? 

ಯಾರು ಕಟ್ಟರಬಹುದು? ಎಂಬುದಾಗಿ ಎಷ್ಟು ಯೋಚಿಸಿದರೂ ದುರ್ಗಪತಿಗೆ ಯಾವುದೂ 

ಗೊತ್ತಾಗಲಿಲ್ಲ. ಭೀಮಸಿಂಹನಿಗೆ ಅನೇಕ ಶತ್ರುಗಳಿದ್ದು ಅವರು ಭೀಮಸಿಂಹನಿಗೆ ಅಹಿತ 



----------------------------------ಪ್ರೇಮಮಂದಿರ--------------------------- ೪೩ 



ವನ್ನೆಸಗಲು ಯಾವಾಗಲೂ ಸಮಯವನ್ನು ನಿರೀಕ್ಷಿಸುತ್ತಿದ್ದರು. ಅದುದರಿಂದ ತನ್ನ ಅರಿಗ 

ಳಲ್ಲಿ ಯಾರಾದರೂ ಕಪಟ ಜಾಲವನ್ನು ಬೀರಿರುವರೋ ಎಂಬ ಶಂಕೆಯ ಭೀಮಸಿಂಹ 

ನಲ್ಲಿ ಉತ್ಪನ್ನವಾಯಿತು. 


ಭೀಮಸಿಂಹನು ಸರತಾನಸಿಂಹನನ್ನು ಕುರಿತು" ಠಾಕುರರೇ, ಈ ಕುದುರೆಯು 

ಯಾರದಿರಬಹುದೆಂದು ನೀವು ತರ್ಕಿಸುತ್ತೀರಿ? " ಎಂದು ಕೇಳಿದನು: 



ಸರತಾನಸಿಂಹನೂ, ದುರ್ಜಯಸಿಂಹನೂ ಭೀಮಸಿಂಹನಂತೆಯೇ ಬೆರಗಾಗಿ 

ಹೋಗಿದ್ದರು. ಭೀಮಸಿಂಹನ ಪ್ರಶ್ನೆಗೆ ಅವರೇನು ಉತ್ತರವನ್ನು ಕೊಡಬೇಕು 1 

" ಇದೊಳ್ಳೇ ಆಶ್ಚರ್ಯಕರವಾಗಿದೆ! " ಎಂದು ಸರತಾನಸಿಂಹನು ನುಡಿದನು. 


ಭೀಮಸಿಂಹನು ಗಂಭೀರಸ್ವರದಿಂದ ಮಾತನಾಡಿದನು. " ಹೌದು. ನಿಜವಾ 

ಗಿಯೂ ಇದು ಅತ್ಯಂತ ಆಶ್ಚರ್ಯಕರ! ಇಂತಹ ಕಾಲದಲ್ಲಿ ಇದನ್ನು ಇಲ್ಲಿ ಯಾರು 

ಕಟ್ಟಿರಬಹುದು ?" 


ಅಷ್ಟರಲ್ಲಿ ಆ ನಿರ್ಜನ ವನ ಪ್ರದೇಶದಲ್ಲಿ ಕೋಮಲವಾದ ಹಾಸ್ಯಮಿಶ್ರಿತ ಕಂಠ 

ಧ್ವನಿಯೊಂದು ಹೊರಟಿತು. ಸಮೀಪದ ಗಿಡಗುಂಪಿನೊಳಗಿಂದ ಯಾರೋ ಮೆಲ್ಲನೆ 

ಮಾತನಾಡಿದರು. "ನಾನು ನಿಮಗೆ ಎಲ್ಲವನ್ನೂ ಹೇಳುತ್ತೇನೆ. " 



ಈ ಕಂಠಧ್ವನಿಯನ್ನು ಹೇಳಿ ಸರ್ವರೂ ಅಶ್ಚರ್ಯದಿಂದ ಸ್ತಂಭಿತರಾದರು. ಯಾವ 

ಗಿಡಗುಂಪಿನೊಳಗಿಂದ ಆ ಧ್ವನಿಯು ಹೊರಟಿತೋ, ಅತ್ತಕಡೆಗೆ ಎಲ್ಲರೂ ಉತ್ಕಂಠೆ 

ಯಿಂದ ನೋಡಹತ್ತಿದರು. ಗಿಡಗುಂಪಿನಲ್ಲಿ ಯಾವುದೋ ಒಂದು ವ್ಯಕ್ತಿಯು ನಿಂತು 

ಕೊಂಡಿರಬೇಕೆಂದು ಅವರು ತರ್ಕಿಸಿದರು. ಆದರೆ ಆ ವ್ಯಕ್ತಿಯು ಯಾರು? ಅದರ ವೇಷ 

ವೆಂತಹುದು? ಈ ಸಂಗತಿಗಳ ಕಲ್ಪನೆಯೇ ಅವರಲ್ಲುಂಟಾಗಲಿಲ್ಲ ] 


ಭೀಮಸಿಂಹನು ಸರ್‍ರನೆ ತನ್ನ ಕತ್ತಿಯನ್ನು ಒರೆಯಿಂದ ಹಿರಿದನು. ಮತ್ತು ತಾನಿದ್ದ 

ಸ್ಥಳದಿಂದ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿ ಆ ಅಸ್ಪಷ್ಟ ಮೂರ್ತಿಯನ್ನು ಕುರಿತು 

ಕರ್ಕಶಸ್ವರದಿಂದ ಮಾತನಾಡಿದನು. " ಎಲೇ, ನೀನು ಯಾರಿರುತ್ತೀ ಹೇಳು! ? 


ಅಂಧಕಾರವೇಷ್ಟಿತವಾದ ಆ ಮೂರ್ತಿಯು ಭೀಮಸಿಂಹ ಅಬ್ಬರಣೆಯಿಂದ ಅಂಜು 

ವುದಕ್ಕೆ ಬದಲಾಗಿ ನಗನಗುತ್ತ ಮುಂದಕ್ಕೆ ಬಂತು. ಅದರೆ ಭೀಮಸಿಂಹನಿಗೆ ಉತ್ತರಾ 

ರ್ಥವಾಗಿ ಒಂದು ಶಬ್ದವನ್ನು ಕೂಡ ಅದು ನುಡಿಯಲಿಲ್ಲ. 



ಭೀಮಸಿಂಹನು ತ್ವೇಷದಿಂದ ಮತ್ತೆ ಇಂತೆಂದನು. " ಹೇಳು. ಬೇಗ ಹೇಳು; 

ನೀನು ಯಾರು? ಹೇಳದಿದ್ದರೆ ಇಲ್ಲಿಯೇ ನಿನ್ನನ್ನು ತುಂಡರಿಸಿ ಚೆಲ್ಲುತ್ತೇನೆ. ” 



ಆ ಮೂರ್ತಿಯು ಖೊಳಖೊಳನೆ ನಗುತ್ತ ಮಾತನಾಡಿತು. " ದುರ್ಗಾಧಿಪತಿ 



೪೪------------------------------ವಾಗ್ಭೂಷಣ-------------------------------


 

ಯಾದ ಭೀಮಸಿಂಹನು ಒಬ್ಬ ಅಬಲೆಯ ಮೇಲೆ ಖಡ್ಗವನ್ನೆತ್ತಬಹುದೆಂದು ನಾನು 

ತಿಳಿದಿಲ್ಲ---” 


ಖಡ್ಗಧಾರಿಯಾದ ಭೀಮಸಿಂಹನ ಹಸ್ತವು ಆಶ್ಚರ್ಯದಿಂದ ಮುಗ್ಧವಾಯಿತು. 

ಕ್ರೋಧದ ಬದಲು ಆಶ್ಚರ್ಯಾತಿಶಯವು ಭೀಮಸಿಂಹನ ಹೃದಯವನ್ನು ವ್ಯಾಪಿಸಿತು. 

ಅತನು ಮತ್ತೆ ಪ್ರಶ್ನೆ ಮಾಡಿದನು. " ನೀನು ಹೆಂಗಸೇನು? ಇಂತಹ ವೇಳೆಯಲ್ಲಿ, 

ಈ ಘೋರವಾದ ಅಂಧಕಾರದಲ್ಲಿ ಇಂತಹ ನಿರ್ಜನವಾದ ಕಾಡಿನಲ್ಲಿ ನಿರ್ಭಯದಿಂದ 

ಏಕಾಕಿನಿಯಾಗಿ ಸಂಚಾರ ಮಾಡುವ ವಿಲಕ್ಷಣ ಸ್ತ್ರೀಯು ನೀನು ಯಾರು?” 



" ಭೀಮಸಿಂಹಮಹಾರಾಜರೇ, ನಾನು ನಿಜವಾಗಿಯೂ ಹೆಂಗಸು. ನಾನು ತಮ್ಮ 

ಮೇಲೆ ಒಂದು ಮಹದುಪಕಾರವನ್ನು ಮಾಡುವುದಕ್ಕೋಸ್ಕರ ಇಲ್ಲಿಗೆ ಬಂದಿದ್ದೇನೆ, 

ಇದಕ್ಕಿಂತಲೂ ಹೆಚ್ಚಾ ಗಿ ನನ್ನ ಪರಿಚಯವನ್ನು ತಕ್ಕೊಂಡು ನೀವೇನು ಮಾಡುತ್ತೀರಿ?” 



ಭೀಮಸಿಂಹನು ಸ್ವಲ್ಪ ಹೊತ್ತಿನವರೆಗೆ ಸ್ತಬ್ಧನಾಗಿದ್ದನು. ಆ ಮೇಲೆ ಅವಳನ್ನು 

ಕುರಿತು ಮತ್ತೆ ಮಾತನಾಡಿದನು. "ಒಳ್ಳೇದು. ಆಗಲಿ. ನೀನು ಯಾರೆಂಬದನ್ನು 

ನಾನು ಕೇಳುವುದಿಲ್ಲ. ಆದರೆ ಈ ಕುದುರೆಯು ಯಾರದೆಂಬುದನ್ನಾದರೂ ಹೇಳು 

ತ್ತೀಯಾ?! ” 


ಮಹಾರಾಜರೇ, ಈ ಕುದುರೆಯು ಕುಮಾರ ಕರುಣಸಿಂಹರದು. * 


" ಕುಮಾರ ಕರುಣಸಿಂಹ--ಕರುಣಸಿಂಹನಾರು?" 



" ಕರುಣಸಿಂಹರಾರೆಂದರೇನು ಮಹಾರಾಜರೇ? ಅವರೇ! ಅವರ ಪರಿಚಯವು 

ನಿಮಗೆ ಇಲ್ಲವೇ? ಸ್ವರ್ಗಲೋಕವಾಸಿಗಳಾದ ವಿಮಲಸಿಂಹಮಹಾರಾಜರ ಒಬ್ಬರೇ 

ಒಬ್ಬ ಚಿರಂಜೀವರಾದ ಕರುಣಸಿಂಹರು! ದಿಲ್ಲೀಪತಿಯಾದ ಅಕಬರಬಾದಶಹನು 

ನೂತನವಾಗಿ ಗೆದ್ದು ಕೊಂಡಿರುವ ರಜಪೂತಸ್ಥಾನದೊಳಗಿನ ಪ್ರದೇಶಕ್ಕೆ ಮುಖ್ಯ 

ಸೇನಾಪತಿಗಳಾದ ಕರುಣಸಿಂಹರು! ಯಾರ ದುರ್ಗವನ್ನೂ ಜಹಾಗೀರವನ್ನೂ ನುಂಗಿ 

ಕೊಂಡು ನೀವೀಗ ' ಭೀಮಸಿಂಹಮಹಾರಾಜ ' ರಾಗಿರುವಿರೋ, ಆ ಕರುಣಸಿಂಹರು! 

ಭೀಮಸಿಂಹಮಹಾರಾಜರೇ, ಈಗಾದರೂ ನಿಮಗೆ ಕರುಣಸಿಂಹರ ನಿಜವಾದ ಪರಿಚಯ 

ವುಂಟಾಯಿತೇ ” 



ಆ ಸ್ತ್ರೀಯ ತಿರಸ್ಕಾರಪೂರ್ಣವಾದ ಈ ಭಾಷಣವು ಭೀಮಸಿಂಹನಿಗೆ ಕೇಳಿ 

ಸಿತೋ ಇಲ್ಲವೋ ಯಾರಿಗೆ ಗೊತ್ತು! ಅದರೆ ಸಂತಾಪದಿಂದ ಅತನ ಮಸ್ತಕವು ಭ್ರಮ 

ಣಮಾಡಹತ್ತಿತು; ಅತನ ಶರೀರವು " ಥರಥರ ' ನಡುಗಹತ್ತಿತು. ಆತನ ಕ್ರೋಧ 

ಪ್ರದೀಪ್ತ ನೇತ್ರಗಳು ಮದವೇರಿದ ಹುಲಿಯ ಕಣ್ಣುಗಳಂತೆ ಅಂಧಕಾರದಲ್ಲಿ ಪ್ರಕಾಶಿಸ 

ಹತ್ತಿದವು. ತನ್ನ ಗುಪ್ತವೃತ್ತಾಂತವೆಲ್ಲ ಆ ಸ್ತ್ರೀಗೆ ಹೇಗೆ ತಿಳಿಯಿತೆಂಬುದು ಭೀಮಸಿಂಹ 


---------------------------ಪ್ರೇಮಮಂದಿರ------------------------------೪೫



ನಿಗೆ ಗೊತ್ತಾಗಲಿಲ್ಲ! ಅವನು ನಿಂತ ಸ್ಥಳದಿಂದ ಟಣ್ಣನೆ ಹಾರಿ ಆ ಸ್ತ್ರೀಯ ಮುಂದೆ 

ನಿಂತುಕೊಂಡು ಕಂಪಿತಸ್ವರದಿಂದ ಮಾತನಾಡಿದನು. “ ಪಾಪಿಣೀ, ನಿನಗೆ ಜೀವದ 

ಅಶೆಯಿಲ್ಲವೇನು? ಪ್ರಸಂಗಬಂದರೆ ಈ ನಿರ್ಜನವನಪ್ರದೇಶದಲ್ಲಿ ಅಬಲೆಯ ರಕ್ತದಿಂದ 

ತನ್ನ ಕತ್ತಿಯನ್ನು ಕಲಂಕಿತ ಮಾಡಲು ಈ ಭೀಮಸಿಂಹನು ಹಿಂದೆಮುಂದೆ ನೋಡ 

ನೆಂಬುದನ್ನು ಚನ್ನಾಗಿ ನೆನಪಿನಲ್ಲಿಟ್ಟುಕೋ! " 


ತಿರಸ್ಕಾರದಿಂದ ನಕ್ಕು ಆ ಸ್ತ್ರೀಯು ಮಾತನಾಡಿದಳು. " ನಿಜವೇ. ತಾವು 

ಅನ್ನುವುದು ತೀರ ಅಸಂಭವನೀಯವೇನೂ ಅಲ್ಲ! ಯಾವ ದುಷ್ಕಕರ್ಮವನ್ನು ಮಾಡುವು 

ದಕ್ಕೂ ಭೀಮಸಿಂಹನು ಹಿಂದೆಗೆಯುವುದಿಲ್ಲವೆಂಬದನ್ನು ಈ ಹತಭಾಗಿನಿಯು ಚನ್ನಾಗಿ 

ಬಲ್ಲಳು. ಆದರೆ ಈಗ ನನ್ನನ್ನು ಕೊಂದುಹಾಕುವುದಕ್ಕಿಂತ ಒಂದೆರಡು ಗಂಟೆಗಳ 

ವರೆಗೆ ಜೀವದಿಂದ ಇರಗೊಟ್ಟರೆ ಅದರಿಂದ ನಿಮಗೇ ಮಹದುಪಕಾರವುಂಟಾ 

ಗುವುದು. " 



ಭೀಮಸಿಂಹನು ನಿಂತಲ್ಲಿಯೇ ನಿಂತನು. ಸ್ಪಲ್ಪ ಶಾಂತನಾಗಿ ಅವನು ತನ್ನಲ್ಲಿಯೇ 

ಮಾತಾಡಿಕೊಂಡನು. ನಿಜವಾಗಿಯೂ ನಾನು ಈ ಸಮಯದಲ್ಲಿ ಅವಿಚಾರದ ಕೆಲಸ 

ವನ್ನೇ ಮಾಡುತ್ತಿದ್ದೆನು. ” ಆಮೇಲೆ ಮಧುರಸ್ವರದಿಂದ ಆ ಸ್ತ್ರೀಯನ್ನು ಕುರಿತು ಪ್ರಕಾ 

ಶವಾಗಿ ಮಾತನಾಡಿದನು. " ನೀನು ನನ್ನ ವಿಷಯವಾಗಿ ವಿಕಲ್ಪವನ್ನು ತಿಳಿದುಕೊಳ್ಳ 

ಬೇಡ. ರಾಜಧರ್ಮವನ್ನು ಪಾಲಿಸುವುದಕ್ಕೋಸ್ಕರ ನಾನು ಯಾವಾಗಲೂ ಜಾಗರೂಕ 

ನಾಗಿರಬೇಕಾದುದರಿಂದ ನಿನ್ನೊಡನೆ ಇಂತಹ ಕಠೋರ ರೀತಿಯಿಂದ ವರ್ತಿಸಿದೆನು. 

ಇರಲಿ. ಕರುಣಸಿಂಹನು ಇಂತಹ ಸಮಯದಲ್ಲಿ ನನ್ನ ದುರ್ಗದಲ್ಲಿ ಏಕೆ ಪ್ರವೇಶಿಸಿ 

ದ್ಧನೆಂಬುದನ್ನು ಮೊದಲು ಹೇಳು. ಆತನು ಬಬ್ಬನೇ ಹೋಗಿದ್ದಾನೆಯೋ? ಅಥವಾ 

ಅವನ ಸಂಗಡ ಅವನ ಜನರು ಇರುತ್ತಾರೆಯೋ? " 



“ ಅವರು ಒಬ್ಬರೇ ಹೋಗಿದ್ದಾರೆ. ಕರುಣಸಿಂಹರು ಸಿಂಹನ ಮಕ್ಕಳಾದುದರಿಂದ 

ಅವರಿಗೆ ಯಾರ ಭಯವೂ ಇಲ್ಲ!” 


ಭೀಮಸಿಂಹನು ಹಲ್ಲುಗಳಿಂದ ಅಧರೋಷ್ಠವನ್ನು ಕಚ್ಚಿದನು. ಆದರೂ ಶಾಂತ 

ಸ್ವರದಿಂದಲೇ ಪುನಃ ಮಾತನಾಡಿದನು. “ ಹೀಗೋ. ಹಾಗಾದರೆ ಆತನು ದುರ್ಗದಲ್ಲಿ 

ಪ್ರವೇಶಮಾಡಲು ಕಾರಣವೇನು? ” 


ಒಂದು ದೀರ್ಫ ನಿಶ್ವಾಸವನ್ನು ಬಿಟ್ಟು ಅವಳು ಮಾತನಾಡಿದಳು. " ಮಹಾರಾಜ 

ರೇ, ಅದನ್ನು ತಮಗೆ ತಿಳಿಸುವುದಕ್ಕೋಸ್ಕರವೇ ನಾನಿಲ್ಲಿ ಬಂದಿದ್ದೇನೆ. ಆದರೆ ನಾನು 

ಮುಂದೆ ಹೇಳತಕ್ಕುದನ್ನು ಕೇಳುವ ಮೊದಲು ನೀವು ಒಂದು ಪ್ರತಿಜ್ಞೆಯನ್ನು ಮಾಡ 

ತಕ್ಕದ್ದು. ದೇವದೇವತೆಗಳ ವಿಷಯವಾಗಿ ತಮ್ಮಲ್ಲಿ ಪೂಜ್ಯಬುದ್ಧಿಯು ಇರುವದೋ 



೪೬-------------------------------- ವಾಗ್ಭೂಷಣ.-------------------------------------- 



ಇಲ್ಲವೋ? ಇದ್ದರೆ ನಿಮ್ಮ ಕುಲಸ್ವಾಮಿನಿಯಾದ ಕಲ್ಯಾಣೀದೇವಿಯ ಆಣೆಯನ್ನು 

ತೆಗೆದುಕೊಳ್ಳಿ ರಿ. 


ಭೀಮಸಿಂಹನು ಆಶ್ಚರ್ಯದಿಂದ ಮಾತನಾಡಿದನು, " ಯಾತಕ್ಕೋಸ್ಕರವಾಗಿ 

ನಾನು ಅಣೆಯನ್ನು ತೆಗೆದುಕೊಳ್ಳಬೇಕು. " 


' ನಾನು ಕರುಣಸಿಂಹನ ಜೀವಕ್ಕೆ ಯತ್ಕಿಂಚಿತ್ತಾದರೂ ಅಪಾಯವನ್ನು ಮಾಡು 

ವುದಿಲ್ಲ 'ವೆಂದು ಆಣೆಯನ್ನು ತೆಗೆದುಕೊಳ್ಳಿರಿ. 



ಭೀಮಸಿಂಹನು ಒಮ್ಮೆಲೆ ಉಚ್ಚ ಸ್ವರದಿಂದ ಮಾತನಾಡಿದನು. " ಕರುಣಸಿಂಹನು 

ಯಾವ ಉದ್ದೇಶದಿಂದ ದುರ್ಗದಲ್ಲಿ ಹೋಗಿರುವನೆಂಬುದು ತಿಳಿದ ಹೊರತು ನಾನು 

ಯಾವತರದ ಶಪಥವನ್ನು ಮಾಡುವುದಿಲ್ಲ. " 



" ಕರುಣಸಿಂಹರು ಶತ್ರುಭಾವದಿಂದ ನಿಮ್ಮ ದುರ್ಗವನ್ನು ಪ್ರವೇಶಿಸಿಲ್ಲ. ಕರುಣ 

ಸಿಂಹರ ಪ್ರೀತಿಯು ನಿಮ್ಮ ಮಗಳಾದ ಲಲಿತೆಯ ಮೇಲೆ ಬಹಳವಿದೆಯೆಂಬುದರ ಕಲ್ಪ 

ನೆಯು ಕೂಡ ನಿಮಗೆ ಇರಲಿಕ್ಕಿಲ್ಲ. ಲಲಿತೆಯ ದರ್ಶನಕ್ಕೋಸ್ಕರವಾಗಿ ಈಗ ಅವರು 

ದುರ್ಗಕ್ಕೆ ಹೋಗಿದ್ದಾರೆ. ಇತ್ತ ನೀವಾದರೋ ಲಲಿತೆಯ ವಿವಾಹವನ್ನು ನಿಶಯಿಸಿ 

ಬಂದಿರುತ್ತೀರಿ. ಆದುದರಿಂದ ಸದ್ಯಕ್ಕೆ ನಾನು ಹೇಳಿದಂತೆ ಮಾಡಿರಿ. ಕರುಣಸಿಂಹರಿಗೆ 

ಯಾವತರದ ಪ್ರತಿಬಂಧವನ್ನು ಮಾಡದೆ ಅವರನ್ನು ದುರ್ಗದ ಹೊರಗೆ ಬಿಟ್ಟು ಬಿಡಿರಿ. 

ಆಮೇಲೆ ದುರ್ಜಯಸಿಂಹನೊಡನೆ ಲಲಿತೆಯ ವಿವಾಹವನ್ನು ಮಾಡಿಬಿಡಿರಿ. 



ಒಂದು ಕ್ಷಣಕಾಲ ಆಲೋಚಿಸಿ ಭೀಮಸಿಂಹನು ಪ್ರಶ್ನಮಾಡಿದನು "ಕರುಣ 

ಸಿಂಹೆನಿಗೂ ನಿನಗೂ ಸಂಬಂಧವೇನು? " 


" ಕರುಣಸಿಂಹರು ಮತ್ತಾರೂ ಅಲ್ಲ! ನನ್ನ ಹೃದಯೇಶ್ವರರು! ಬಾಲ್ಯದಿಂದ 

ಲೇ ನನ್ನ ಪ್ರೇಮದ ಸಹಚರರು! ನಿಮ್ಮ ಮಗಳು ಅವರನ್ನು ಪ್ರೇಮಪಾಶದಿಂದ ಬಂಧಿ 

ಸದಿದ್ದರೆ ಅವರು ನನ್ನೊಡನೆಯೇ ವಿವಾಹವನ್ನು ಮಾಡಿಕೊಳ್ಳುತ್ತಿದ್ದರು. ? 


ಭೀಮಸಿಂಹನು ಕೆಲವು ಹೊತ್ತಿನವರೆಗೆ ಸುಮ್ಮನಿದ್ದು, ಆಮೇಲೆ ಹೀಗೆ ಮಾತಾಡಿ 

ದನು. " ಒಳ್ಳೇದು. ನೀನು ಹೇಳಿದಂತೆಯೇ ಇಕೋ ನೋಡು, "ನಾನು ಕರುಣ 

ಸಿಂಹನ ಜೀವಕ್ಕೆ ಯತ್ಶಿಂಚಿತ್ತಾದರೂ ಅಪಾಯವನ್ನು ಮಾಡುವುದಿಲ್ಲ' ವೆಂದು ಶಪಥ 

ವನ್ನು ಮಾಡುತ್ತೇನೆ. ಆದರೆ ನೀನು ಯಾರೆಂಬುದನ್ನು ನನಗೆ ನಿಜವಾಗಿ ಹೇಳು. ? 


" ನಾನೇ? ನಾನು ಕೃಷ್ಣಾ ಕುಮಾರಿಯು. " 



ಕಾಲಲ್ಲಿ ಸರ್ಪವನ್ನು ಕಂಡಂತೆ ಭೀಮಸಿಂಹನು ಒಮ್ಮೆಲೆ ಹಿಂದಕ್ಕೆ ಸರಿದನು. 

ಮತ್ತು ಕರ್ಕಶಸ್ಟರದಿಂದ ಒದರಿ ಮಾತಾಡಿದನು. " ಏನು? ಕೃ-ಷ್ಣಾ-ಕೃಷ್ಣ್ಯಾ-ಕು-ಮಾ 



--------------------------ಪ್ರೇಮಮಂದಿರ.-------------------------------- ೪೭ 



ರಿಯೇ? ಪಾಪಿಣೀ-ಚಾಂಡಾಲಿನೀ-ದೂರ ಹೋಗು ಇಲ್ಲಿಂದ!” 


ಕೃಷ್ಣಾ ಕುಮಾರಿಯ ಮುಖದಿಂದ ಹೊರಟ ಒಂದೇ ಒಂದು ಶಬ್ದದಿಂದ ಭೀಮ 

ಸಿಂಹನ ಸ್ಥಿತಿಯು ಚಮತ್ಕಾರಿಕವಾಯಿತು. ಅತನ ಪೂರ್ವಚರಿತವೆಲ್ಲ ಕ್ಷಣಾರ್ಧದಲ್ಲಿ 

ಅತನ ಕಣ್ಣಿ ದುರಿಗೆ ಕಟ್ಟಿದಂತಾಯಿತು. ಆ ವಿಮಲಸಿಂಹನೂ, ತಾನು ಆತನ ನಂಬು 

ಗೆಯ ಸೇನಾಪತಿಯಾಗಿದ್ದುದೂ, ವಿಮಲಸಿಂಹನ ನೂತನಪತ್ನಿಯೂ, ಆ ಕಾಲದ 

ನಿಂದ್ಯವಾದ ತನ್ನ ಆಚರಣೆಯೂ ಅತನ ನೆನಪಿಗೆ ಬಂದುವು. ಈಗ ತನ್ನ ಎದುರಿನಲ್ಲಿ 

ನಿಂತುಕೊಂಡಿರುವ ಕೃಷ್ಣಾ ಕುಮಾರಿಯೂ ತಾನು ಮಾಡಿದ ಕೃಷ್ಣಪಾತಕದ ಮೂರ್ತಿ 

ಮಂತವಾದ ಇತಿಹಾಸವೆಂದೇ ಆತನಿಗೆ ಎನಿಸಹತ್ತಿತ್ತು! ಮುಕ್ತಾವಲಿಯ ಮಡುವಿನಲ್ಲಿ 

ವಿಮಲಸಿಂಹನೊಡನೆ ಕೃಷ್ಟಾ ಕುಮಾರಿಗೂ ಜಲಸಮಾಧಿಯು ಪ್ರಾಪ್ತವಾಗಿ ತನ್ನ ಪಾತ 

ಕಗಳ ಮೂರ್ತಿಮಂತವಾದ ಸ್ಮಾರಕವು ನಷ್ಟವಾಗಿ ಹೇಗಿದೆಯೆಂದು ಭೀಮಸಿಂಹನು 

ಇಂದಿನವರೆಗೂ ತಿಳಿದಿದ್ದನು. ಆದರೆ ಕೃಷ್ಣೆಯ ಒಂದೇ ಒಂದು ಶಬ್ದದಿಂದ ಆ ತಿಳಿವಳಿ 

ಕೆಯು ತಪ್ಪಾದುದೆಂದು ತಿಳಿದು ಬಂತು. ಆತನ ಹೃದಯವು ಬೆಂದುಬೆಂಡಾಗಹತ್ತಿತು. 

ಸ್ವಲ್ಪ ಹೊತ್ತಿನ ವರೆಗೆ ಅತನ ಮೈಮೇಲಿನ ಎಚ್ಚರವೇ ತಪ್ಪಿ ಹೋಯಿತು. ! 


ತನ್ನ ಪೂಪಸ್ಮೃತಿಚಿಹ್ನವನ್ನು ಜಗತ್ತಿನೊಳಗಿಂದ ಇಲ್ಲದಂತೆ ಮಾಡಿಬಿಡಬೇಕೆಂಬ 

ಉದ್ದೇಶದಿಂದ ಭೀಮಸಿಂಹನು ಕ್ರೋಥೋನ್ಮತ್ತನಾಗಿ ಕೃಷ್ಣಾ ಕುಮಾರಿಯನ್ನು ನಿರೀಕ್ಷಿಸ 

ಹತ್ತಿದನು. ಆದರೆ ಅವಳು ಅಲಕ್ಷಿತ ರೀತಿಯಿಂದ ಆಗಲೇ ಮಾಯವಾಗಿ ಹೋಗಿದ್ದಳು! 


ದುರ್ಗಕ್ಕೆ ಹೋದ ಬಳಿಕ ಭೀಮಸಿಂಹನು ಮೊದಲು ಆ ಗುಪ್ತಪ್ರವೇಶದ್ವಾರದ 

ಹತ್ತರ ಬಂದನು. ಆ ದ್ವಾರವು ನಿತ್ಯದಂತೆ ಅರ್ಗಲಬದ್ಧವಾಗಿತ್ತು; ಸರ್ವವ್ಯವಸ್ಥೆಯು 

ಯಥಾಸ್ಥಿತವಾಗಿದ್ದಂತೆ ಆತನಿಗೆ ತೋರಿತು. ಅಲ್ಲಿಯ ಪಹರೆಯವನು ಕುಳಿತಲ್ಲಿಯೇ 

ಸ್ವಸ್ಥವಾಗಿ ತೂಕಡಿಸುತ್ತ ನಿದ್ದೆಮಾಡುತ್ತಿದ್ದನು. ಆತನಿಗೊಂದು ಲತ್ತಾಪ್ರಹಾರವನ್ನು 

ಕೊಟ್ಟು ಭೀಮಸಿಂಹನು ಮಾತನಾಡಿದನು. “ ನಿಮಕಹರಾಮ, ಪಾಜೀ! ಹೇಳು. 

ಈ ದಾರಿಯಿಂದ ನೀನು ಇಂದು ಯಾರನ್ನು ಒಳೆಗೆ ಬಿಟ್ಟೆ?  ತಡೆ, ಬೆಳಗಾಯಿತೆಂದರೆ ಎದು 

ರಿನ ಗಿಡಕ್ಕೆ ನಿನ್ನನ್ನು ಗಲ್ಲಿಗೆ ಹಾಕಿಸುತ್ತೇನೆ! ಅಂದರೆ ಇಂತಹ ಕಪಟವರ್ತನವನ್ನು 

ನನ್ನೊಡನೆ ಮಾಡಬಾರದೆಂದು ಎಲ್ಲರಿಗೂ ಗೊತ್ತಾಗುವುದು. "


ಪಹರೆಯವನು ಭೀತಿಯಿಂದ " ಗದಗದ , ನಡುಗುತ್ತ ಮಾತನಾಡಿದನು. " ದೊರೆ 

ಗಳೇ, ನನ್ನ ಕಡೆಗೆ ಎಳ್ಳಷ್ಟು ಅಪರಾಧವಿಲ್ಲ. ನನಗಿಂತ ಮೊದಲಿನ ಪಾಳಿಯವನು ಮಾತ್ರ 

ತನ್ನ ಒಬ್ಬ ಸ್ನೇಹಿತನನ್ನು ದುರ್ಗದೊಳಗೆ ಕರೆದುಕೊಂಡು ಹೋದನು. " 


" ಒಳ್ಳೇದು ನಾಳಿನ ದಿನ ನಿನ್ನೊಡನೆ ಅವನನ್ನೂ ಗಲ್ಲಿಗೆ ಹಾಕಿಸುತ್ತೇನೆ! " 


ಭೀಮಸಿಂಹನು ಕರುಣಸಿಂಹನನ್ನು ಹುಡುಕುವುದಕ್ಕಾಗಿ ದುರ್ಗದಲ್ಲಿ ನಾಲ್ಕೂ ಕಡೆಗೆ 

ಜನರನ್ನು ಕಳುಹಿಸಿದನು. ಈ ಪ್ರಕಾರ ಎಲ್ಲ ವ್ಯವಸ್ಥೆಯನ್ನು ಮಾಡಿ ತನ್ನ ಮಂದಿರದ 



೪೮ ------------------------------ವಾಗ್ಭೂಷಣ.-------------------------------------- 

 


ಕಡೆಗೆ ಹೊರಟಾಗ ಅತನಿಗೆ ಸೇನಾಪತಿಯು ಭೆಟ್ಟಿಯಾದನು. ಭೀಮಸಿಂಹನನ್ನು ಕಂಡ 

ಕೂಡಲೆ ಸಲಾಮು ಮಾಡಿ ಆತನು ಮಾತನಾಡಿದನು. " ಕರುಣಸಿಂಹನು ರಾಜಕುಮಾ 

ರಿಯ ಮಂದಿರದವರೆಗೂ ಹೋಗಲು ಸಮರ್ಥನಾಗಲಿಲ್ಲ. ದಾರಿಯಲ್ಲಿಯೇ ಆತನನ್ನು 

ಹಿಡಿದು ಗಣೇಶಮಂದಿರದಲ್ಲಿ ಬಂಧಿಸಿಟ್ಟಿದ್ದೇನೆ. " 


ಸೇನಾಪತಿಯ ಬಾಯಿಂದ ಹೊರಟ ಶಬ್ದಗಳನ್ನು ಕೇಳಿ ಭೀಮಸಿಂಹನಿಗೆ ಅತ್ಯಾ 

ನಂದವಾಯಿತು. ಕರುಣಸಿಂಹನು ಬಂಧಿತನಾದುದರಿಂದ ಮುಂದೆ ಒದಗಬಹುದಾದ 

ಅನರ್ಥಗಳ ಮೂಲವೇ ದೂರವಾದ ಹಾಗಾಯಿತೆಂದು ತಿಳಿದು ಭೀಮಸಿಂಹನು ಸ್ವಸ್ಥ 

ನಾದನು. ಮತ್ತು ಸೇನಾಪತಿಯನ್ನು ಕುರಿತು ಮಾತನಾಡಿದನು, “ ಶಾಬಾಸ ಗಂಭೀರ 

ಸಿಂಹ! ಒಳ್ಳೇದು ಮಾಡಿದಿರಿ. ಆದರೆ ಕರುಣಸಿಂಹನು ಸರಕಾರೀ ಅತಿಥಿಯೆಂದು ತಿಳಿ 

ಯಿರಿ. ಆತನ ಆದರಾತಿಥ್ಯದಲ್ಲಿ ಯಾವ ತರದ ನ್ಯೂನತೆಯೂ ಉಂಟಾಗದಂತೆ ವ್ಯವ 

ಸ್ಥೆಯನ್ನಿಡಿರಿ. " 



ಏಳನೆಯ ಪರಿಚ್ಛೇದ. 


ವಿಲಕ್ಷಣ ಕುಲಾಚಾರ, 



ಭೀಮಸಿಂಹನಿಗೆ ಆ ರಾತ್ರಿಯಲ್ಲಿ ನಿದ್ದೆ ಹತ್ತಲಿಲ್ಲ. ಸೂರ್‍ಯೋದಯವಾದೊಡನೆಯೇ 

ಆತನು ತನ್ನ ಭವಿಷ್ಯತ್‌ ಕಾಲದ ಬೀಗನಾದ ಸರತಾನಸಿಂಹರಿಗೆ ಭೆಟ್ಟಿಯಾದನು. ಅರ 

ಮನೆಯೊಳಗಿನ ಒಂದು ಏಕಾಂತ ಸ್ಥಳದಲ್ಲಿ ಅವನನ್ನು. ಕರೆದುಕೊಂಡು ಬಂದನು. 



ಖಿನ್ನ ಮುದ್ರೆಯಿಂದ ಭೀಮಸಿಂಹನು ಸರತಾನಸಿಂಹನನ್ನು ಕುರಿತು ಮಾತನಾಡಿ 

ದನು. " ಠಾಕುರರೇ, ನಾನು ಅತ್ಯಂತ ಸಂಕಟದಲ್ಲಿ ಬಿದ್ದಿರುತ್ತೇನೆ. ಅದರೊಳಗಿಂದ 

ಸುಲಭವಾಗಿ ಹೇಗೆ ಪಾರಾಗಬೇಕೆಂಬ ವಿಷಯವಾಗಿ ತಮ್ಮ ಸಲಹೆಯನ್ನು ತೆಗೆದು 

ಕೊಳ್ಳಬೇಕೆಂದು ಇಂದು ತಮ್ಮನ್ನು ಇಲ್ಲಿಗೆ ಕರಕೊಂಡು ಬಂದಿದ್ದೇನೆ. ನಿನ್ನೆ ಕರುಣ 

ಸಿಂಹನನ್ನು ನನ್ನ ಸೈನಿಕರು ಹಿಡಿದು ಕಚ್ಚಿನಲ್ಲಿಟ್ಟಿ ರುವುದೇನೋ ನಿಜ, ಆದರೆ ಆತನಿಗೆ 

ಬಾಹ್ಯವಾಗಿ ಯಾವ ಶಿಕ್ಷೆಯನ್ನು ವಿಧಿಸುವುದೂ ಅಶಕ್ಯವಾಗಿದೆ. ಪ್ರತ್ಯಕ್ಷ ಅಕಬರ 

ಬಾದಶಹನೇ ಆತನ ಸಂರಕ್ಷಕನಿದ್ದು, ಅವನ ಪ್ರೀತಿಯು ಕರುಣಸಿಂಹನ ಮೇಲೆ ಬಹಳ 

ವಿದೆ. ಕರುಣಸಿಂಹನ ಜೀವಕ್ಕೆ ನಾನು ಅಪಾಯವನ್ನು ಮಾಡಿದೆನೆಂಬ ವಾರ್ತೆಯು 

ಅಕಬರನಿಗೆ ಗೊತ್ತಾದರೆ ಆತನು ನನ್ನನ್ನು ಸಮೂಲವಾಗಿ ನಾಶಮಾಡುವುದರಲ್ಲಿ ಸಂದೇ 

ಹವೇ ಇಲ್ಲ. ಕರುಣನನ್ನು ಹಾಗೆಯೇ ಬಿಟ್ಟುಬಿಡುವುದೂ ನನ್ನ ಮನಸ್ಸಿಗೆ ಬರುವುದಿಲ್ಲ, 

ನನ್ನ ವೈರಿಯು ಇಷ್ಟೊಂದು ಸುಲಭವಾಗಿ ಕೈಯಲ್ಲಿ ಸಿಕ್ಕಿರಲು ಅತನನ್ನು ಹಾಗೆಯೇ 



---------------------------------ಪ್ರೇಮಮಂದಿರ.----------------------------- ೪೯ 



ಬಿಟ್ಟುಬಿಡಲಾ! ಸರ್ಪವನ್ನು ಕೆಣಕಿ ಹಾಗೆಯೇ ಬಿಡುವುದುಂಟೇ? ಠಾಕುರರೇ, ಈ 

ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು? " 


ಸರತಾನಸಿಂಹನು ಕುಲದಿಂದ ರಜಪೂತರಲ್ಲಿ ಶ್ರೇಷ್ಠ ಪ್ರತಿಯವನಾಗಿದ್ದಿಲ್ಲ, ಆದರೆ 

ಪ್ರಚಂಡನಾದ ಸಂಪತ್ತಿನ ಮೂಲಕ ಆತನು ಹೆಸರಿಗೆ ಬಂದಿದ್ದನು. ದುರ್ಜಯಸಿಂಹನು 

ಆತನ ಒಬ್ಬನೇ ಒಬ್ಬ ಮಗನು. ಸರತಾನಸಿಂಹನ ಬಳಿಯಲ್ಲಿ ಅಪರಿಮಿತವಾದ ಐಶ್ವ 

ರ್ಯವಿದ್ದರೂ ಅವನಿಗೊಂದು ಆಶೆಯು ಉತ್ಪನ್ನವಾಗಿತ್ತು. ಭೀಮನಿಂಹನೊಡನೆ 

ಶರೀರಸಂಬಂಧವನ್ನು ಮಾಡಿದರೆ ತನ್ನ ಕುಲದ ಪ್ರತಿಷ್ಠೆಯು ಬೆಳೆಯುವುದೆಂದು ಆತನು 

ತಿಳಿದುಕೊಂಡಿದ್ದನು. ಮತ್ತು ಈ ಸಮಯದಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನಿಗೆ 

ಹಣದ ಅವಶ್ಯಕತೆಯು ಬಹಳವಿತ್ತು. ಭೀಮಸಿಂಹನು ಅನೇಕ ಜನ ಸಾವಕಾರರಲ್ಲಿ 

ಸಾಲವನ್ನು ಮಾಡಿದ್ದನು. ಸರತಾನಸಿಂಹನೊಡನೆ ಶರೀರಸಂಬಂಧವಾದರೆ ತಾನು 

ಸಾಲವೆಂಬ ಸಮುದ್ರವನ್ನು ಈಸಿ ಪಾರಾಗಬಹುದೆಂದು ಅವನು ತಿಳಿದುಕೊಂಡಿದ್ದನು. 

ಹೀಗೆ ಉಭಯತರಿಗೂ ಪರಸ್ಪರ ಶರೀರಸಂಬಂಧದ ಅಪೇಕ್ಷೆಯು ಅಧಿಕವಾಗಿತ್ತು. 

ಅಪೇಕ್ಷೆಯು ಫಲದ್ರೂಪವಾಗುವುದಕ್ಕೆ ಕರುಣಸಿಂಹನು ವಿಘ್ನವಾದನು. ಆದುದರಿಂದ 

ತಮ್ಮ ಮಾರ್ಗವನ್ನು ನಿರಾಪದವಾಗಿ ಮಾಡಿಕೊಳ್ಳವುದಕ್ಕೋಸ್ಕರ ಯಾವದಾದ 

ಕೊಂದು ಸುಷ್ಟದುಷ್ಟ ಉಪಾಯದಿಂದ ಅವರನ್ನು ನಾಶಮಾಡಿಬಿಡಬೇಕೆಂದು ಇಬ್ಬರೂ 

ಯೋಚಿಸುತ್ತಿದ್ದರು. 


ಸ್ವಲ್ಪ ಹೊತ್ತು ಆಲೋಚಿಸಿ ಸರತಾನಸಿಂಹನು ಮಾತಾಡಿದನು. " ಕರುಣಸಿಂಹ 

ನನ್ನು ಹೇಗೆ ನಾಶಿಸಬೇಕೆಂಬುದನ್ನು ನಿಶ್ಚಯಿಸುವ ಮೊದಲು ಒಂದು ಮಾತಿನ ವಿಷಯ 

ವಾಗಿ ನೀವು ಅವಶ್ಯವಾಗಿ ಜಾಗರೂಕರಾಗಿರಬೇಕೆಂದು ನನ್ನ ಅಭಿಪ್ರಾಯವಿದೆ. " 


" ಯಾವ ಮಾತಿನ ವಿಷಯವಾಗಿ? ?? 


" ದಿಲ್ಲೀಪತಿಯು ಮುಂದೆ ನಮಗೆ ಯಾವ ತರದ ಆಕ್ಷೇಪಣೆಯನ್ನು ಮಾಡಲು 

ಆಸ್ಪದವಾಗದಂತೆ ಕರುಣಸಿಂಹನನ್ನು ಈಗ ಇಲ್ಲಿಗೆ ಕರೆಯಿಸಿ ಅವನಿಂದ ತಿಳಿದಷ್ಟು 

ವೃತ್ತಾಂತವನ್ನು ತಿಳಿದುಕೊಳ್ಳಬೇಕು, ಆತನು ಹೇಳುವ ಮಾತಿನಿಂದ ಮುಂದೆ ಹೇಗೆ 

ನಡೆಯಬೇಕೆಂಬುದನ್ನು ಆ ಮೇಲೆ ನಾವು ನಿಶ್ಚಯಿಸುವ. ಆತನನ್ನು ನಾಶಮಾಡುವ 

ಯುಕ್ತಿಯು ಸಹಜವಾಗಿಯೇ ತೋಚಿದರೆ ಒಳಿತೇ ಆಯಿತು” 


ಭೀಮಸಿಂಹನಿಗೂ ಈ ವಿಚಾರವು ಮನಸ್ಸಿಗೆ ಬಂತು. ಆದುದರಿಂದ ಕರುಣಸಿಂಹ 

ನನ್ನು ತನ್ನೆ ಕಡೆಗೆ ಕರೆದುಕೊಂಡು ಬರುವಂತೆ ಅಗಲೇ ಆತನು ಸೇವಕರಿಗೆ ಆಜ್ಞಾಪಿಸಿ 

ದನು. ಕರುಣಸಿಂಹನನ್ನು ಸೆರೆಯಲ್ಲಿ ಸಿಕ್ಕವನೆಂಬಂತೆ ತಿಳದುಕೊಳ್ಳದೆ ರಾಜಕೀಯ 

ಅತಿಥಿಯೆಂದು ತಿಳಿದು ತಕ್ಕ ಆದರೋಪಚಾರವನ್ನು ಮಾಡಬೇಕೆಂದು ಭೀಮಸಿಂಹನು 

ವೊದಲೇ ವ್ಯವಸ್ಥೆ ಮಾಡಿದ್ದನು. 

 


೫೦-----------------------------ವಾಗ್ಭೂಷಣ.----------------------------------- 



ಸ್ವಲ್ಪ ಹೊತ್ತಿನ ಮೇಲೆ ಕರುಣಸಿಂಹನು ಆತನ ಎದುರಿಗೆ ಬಂದುನಿಂತನು. ಆದರೆ 

ಭೀಮಸಿಂಹನಿಗೆ ಆತನು ಪ್ರಣಾಮ ಮಾಡಲಿಲ್ಲ. ಭೀಮಸಿಂಹನು ಪ್ರಯತ್ನ ಪೂರ್ವಕ 

ವಾಗಿ ಮುಖದಲ್ಲಿ ಹಾಸ್ಯವನ್ನು ತಂದುಕೊಂಡು ಮಾತನಾಡಿನು. " ಕುಮಾರ! ನಿನ್ನೆ 

ರಾತ್ರಿ ನಿಮಗೆ ಯಾವತರದ ಕೊರತೆಯೂ ಉಂಟಾಗಲಿಲ್ಲವಷ್ಟೇ? ವ್ಯವಸ್ಥೆಯೆಲ್ಲವೂ 

ಸರಿಯಾಗಿ ಇತ್ತೇ? "


ಕುಮಾರನು ಗಂಭೀರತೆಯಿಂದ ಉತ್ತರವಿತ್ತನು. " ಹೌದು ಎಲ್ಲ ವ್ಯವಸ್ಥೆಯೂ 

ಸರಿಯಾಗಿತ್ತು. ತಮ್ಮ ಅತಿಥ್ಯಿದಿಂದ ನಾನು ಸಂತುಷ್ಟನಾದೆನು. ” 


ಕುಮಾರನು ಅಲ್ಲಿ ಬಂದಾಗಿನಿಂದಲೂ ಎದ್ದು ನಿಂತುಕೊಂಡಿದ್ದನು. ಭೀಮ 

ಸಿಂಹನು ಆತನಿಗೆ ಅಭ್ಯುತ್ಥಾನವನ್ನು ಕೊಡಲಿಲ್ಲ; ಇಷ್ಟೆೇ ಅಲ್ಲ; ಆಸನವನ್ನು ಕೂಡ 

ಕೊಡಲಿಲ್ಲ. ಭೀಮಸಿಂಹನ ಬಲಬದಿಯಲ್ಲಿ ಸರತಾನಸಿಂಹನೂ ಎಡಬದಿಯಲ್ಲಿ ದುರ್ಜ 

ಯಸಿಂಹನೂ ಕುಳಿತುಕೊಂಡಿದ್ದರು. ಆದರೂ ಅಲ್ಲಿ ಇನ್ನೊಂದು ಆಸನವು ತೆರವಾ 

ಗಿಯೇ ಇತ್ತು. ಹೀಗಿದ್ದರೂ ತಾನು ಅಲ್ಲಿ ಕುಳಿತುಕೊಳ್ಳುವಂತೆ ಭೀಮಸಿಂಹನು ವಿನಂತಿ 

ಮಾಡಿಕೊಳ್ಳಲಿಲ್ಲವೆಂಬುದು ಕರುಣಸಿಂಹನಿಗೆ ಹೇಗೆ ಹೇಗೋ ಎನಿಸಹತ್ತಿತ್ತು. ಮಾನ 

ದಲ್ಲಿಯಾಗಲಿ, ವಂಶಮರ್ಯಾದೆಯಲ್ಲಾಗಲಿ ಭೀಮಸಿಂಹನಿಗಿಂತ ತಾನು ಲವಮಾತ್ರ 

ವಾದರೂ ಕಡಿಮೆಯವನಾಗಿರದಿದ್ದರೂ, ಅತನು ತನ್ನೊಡನೆ ಹೀಗೆ ಉದ್ದಾಮತನದಿಂದ 

ವರ್ತಿಸಿದುದು ತನ್ನನ್ನು ಅಪಮಾನಗೊಳಿಸುವುದಕ್ಕಾಗಿಯೇ ಎಂದು ಆತನು ತಿಳಿದು 

ಕೊಂಡನು! ಕರುಣಸಿಂಹನ ಹೃದಯವು ಈ ಅಪಮಾನವಹ್ನಿಯಿಂದ ಸುಡಹತ್ತಿತು. 


ಕರುಣಸಿಂಹನನ್ನು ತೀವ್ರದೃಷ್ಟಿಯಿಂದ ನೋಡಿ ಭೀಮಸಿಂಹನು ಗಂಭೀರಸ್ವರ 

ದಿಂದ ಮಾತನಾಡಿದನು. " ಕುಮಾರ! ನೀವು ಉಚ್ಚಕುಲದಲ್ಲಿ ಜನ್ಮತಾಳಿದ ರಜ 

ಪೂತ ವೀರರು; ದಿಲ್ಲೀಪತಿಯ ವಿಶ್ವಾಸಕೃಪೆಗಳಿಗೆ ಪಾತ್ರರಾದ ಪ್ರಮುಖ ಸೇನಾಪತಿ 

ಗಳು! ಹೀಗಿದ್ದು ಹೇಡಿಯಂತೆಯೂ ಕಳ್ಳನಂತೆಯೂ ನೀವು ನನ್ನ ದುರ್ಗವನ್ನು ಏಕೆ 

ಪ್ರವೇಶಿಸಿದಿರಿ? ಕರುಣಸಿಂಹ, ದಿಲ್ಲೀಪತಿಯು ಇಂತಹ ಅಪಮಾನಾಸ್ಪದವಾದ ಚೋರ 

ತನದ ಕೆಲಸಗಳಿಗಾಗಿ ತನ್ನ ನವೀನ ಸೇನಾಪತಿಗೆ ಶಾಬಾಸಕಿಯನ್ನೇ ಕೊಡುತ್ತಾ 

ನೆಂದು ನೀವು ತಿಳಿದಿರುವಿರೋ? " 


ಅಪಮಾನದ ಮೇಲೆ ಅಪಮಾನ! ಕುಮಾರನ ಸಂತಾಪವು ಈಗ ಹೃದಯದಲ್ಲಿ 

ಹಿಡಿಸದಾಯಿತು! ಆದರೂ ಓಳ್ಳೇ ಕಷ್ಠದಿಂದ ಅದನ್ನು ನುಂಗಿಕೊಂಡು ಕರುಣ 

ಸಿಂಹನು ಮಾತನಾಡಿದನು. “ ನನ್ನ ಸಮಾನನಂತೆ ಮಾನಕೊಟ್ಟು ನಿಮ್ಮ ಪ್ರಶ್ನೆಗಳಿಗೆ 

ಉತ್ತರವೀಯಲು ನನ್ನ ಇಚ್ಚೆಯಿಲ್ಲ; ಮತ್ತು ಇದಕ್ಕೆ ಇನ್ನೂ ಅನೇಕ ಕಾರಣಗಳಿವೆ. 

ಆದರೆ ಒಂದು ಮಾತನ್ನು ಮಾತ್ರ ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಾನು ನಿಮ್ಮ--- 

ಹೌದು ಸದ್ಯಕ್ಕೆ ನಿಮ್ಮದೇ--ದುರ್ಗದಲ್ಲಿ ತುಡುಗನಂತೆ ಬಂದು ಸೇರಿಕೊಳ್ಳಲಿಲ್ಲ. 



------------------------------ಪ್ರೇಮಮಂದಿರ. --------------------------೫೧ 



ನಿಮ್ಮ ಕನ್ಯೆಯ ಅನುಮತಿಯಿಂದಲೂ ಆಕೆಯ ವಿನಂತಿಯಿಂದಲೂ ನಾನು ಇಲ್ಲಿ 

ಬಂದಿದ್ದೇನೆ. ಈಗ ನಾನು ನಿಮಗೇ ವಿನಂತಿ ಮಾಡಿಕೊಳ್ಳುವುದೇನಂದರೆ ನಿಮ್ಮ 

ಮಗಳನ್ನು ವಿವಾಹ ಮಾಡಿಕೊಳ್ಳಲು ನೀವು ಅನುಮತಿಯನ್ನು ಕೊಡಿರಿ. " 


ಭೀಮಸಿಂಹನು ಕುಮಾರನ ಕಡೆಗೆ ನೋಡಿ ತುಚ್ಛತೆಯಿಂದ ನಕ್ಕು ಮಾತನಾಡಿ 

ದನು. " ಚೋರನಂತೆ ದುರ್ಗದಲ್ಲಿ ಪ್ರವೇಶಿಸುವ ರಜಪೂತನಿಗೆ ನನ್ನ ಕನ್ಯೆಯನ್ನು 

ವಿವಾಹ ಮಾಡಿಕೊಡಲು ನಾನು ಎಂದೂ ಒಪ್ಪಲಾರೆನು. ” 


" ಹಾಗಾದರೆ ನಾನೂ ಈಗ ಸ್ಪಷ್ಟವಾಗಿಯೇ ಹೇಳುತ್ತೇನೆ. ದೇವಧರ್ಮದ 

ಸಾಕ್ಷಿಯಿಂದ ಲಲಿತೆಯೊಡನೆ ನನ್ನ ವಿವಾಹವಾಗಿದೆ. ಅವಳು ನನ್ನ ವಿವಾಹಿತ ಧರ್ಮ 

ಪತ್ನಿಯಾಗಿದ್ದಾಳೆ. " 


ಭೀಮಸಿಂಹನ ಮುಖಚರ್ಯೆಯು ತತ್‌ಕ್ಷಣಕ್ಕೆ ಕಪ್ಪಾಯಿತು. ಆತನು ಕುಮಾ 

ರನೊಡನೆ ಏನನ್ನೂ ಮಾತನಾಡದೆ ಸರತಾನಸಿಂಹನನ್ನು ಕರೆದುಕೊಂಡು ಸಮೀಪದ 

ಕೋಣೆಯಲ್ಲಿ ಹೋದನು. ಅವರಿಬ್ಬರೂ ಕೆಲಹೊತ್ತಿನ ವರೆಗೆ ಅಲ್ಲಿ ಆಲೋಚನೆ 

ಮಾಡಿ ಬಳಿಕ ಮತ್ತೆ ಕರುಣಸಿಂಹನು ನಿಂತುಕೊಂಡಿದ್ದ ಕೋಣೆಗೆ ಬಂದರು. 


ತನ್ನ ಆಸನದ ಮೇಲೆ ಕುಳಿತುಕೊಂಡು ಭೀಮಸಿಂಹನು ಗಂಭೀರತೆಯಿಂದ 

ಕುಮಾರನನ್ನು ಕುರಿತು ಮಾತನಾಡಿದನು. " ಕುಮಾರ, ತಾವು ಪ್ರಸಿದ್ಧವಾದ ಕುಲ 

ದಲ್ಲಿ ಹುಟ್ಟಿದ ರಜಪೂತರು. ನಿಜವಾದ ರಜಪೂತರು ಕುಲಾಚಾರಗಳನ್ನು ಪಾಲಿಸುವು 

ದರಲ್ಲಿ ಎಷ್ಟು ತತ್ಪರರಾಗಿರುತ್ತಾರೆಂಬುದನ್ನು ತಮಗೇನೂ ಹೇಳಬೇಕಾದುದಿಲ್ಲ. ತಾವು 

ಅಗ್ನಿಬ್ರಾಹ್ಮಣರ ಸಮಕ್ಷದಲ್ಲಿ ಲಲಿತೆಯೊಡನೆ ವಿವಾಹ ಮಾಡಿಕೊಳ್ಳುವ ಮೊದಲು 

ನಮ್ಮ ಕುಲಾಚಾರಗಳೆಲ್ಲವನ್ನೂ ನೀವು ಪಾಲಿಸಲಿಕ್ಕೆ ಬೇಕು. ” 


" ಆಗಲಿ. ಅವೆಲ್ಲವುಗಳನ್ನೂ ನಾನು ಅವಶ್ಯವಾಗಿ ಪಾಲಿಸುವೆನು. ” 


" ಹಾಗಾದರೆ ಕೇಳಿರಿ. ದುರ್ಗದ ಬಡಗಣ ದಿಕ್ಕಿನಲ್ಲಿ ಎತ್ತರವಾದ ಆ ಬೆಟ್ಟದ 

ತಿಖರದ ಮೇಲೊಂದು ಚಿಕ್ಕ ಮಂದಿರವಿದೆ. ಅದಕ್ಕೆ ' ಪ್ರಮೋದ ಭವನ' ವೆಂದು 

ಹೆಸರು. ಆ ಪ್ರಮೋದಭವನದಲ್ಲಿಯೇ ನಮ್ಮ ಕುಲದ ಹುಡುಗ ಹುಡಿಗೆಯರ ವಿವಾಹ 

ವನ್ನು ಮಾಡುತ್ತೇವೆ. ಇಂದು ವಿವಾಹಕ್ಕೆ ಶುಭಮುಹೂರ್ತವಿದೆ. ಇಂದಿನ ದಿವಸವೆಲ್ಲ 

ನೀವು ಉಪವಾಸದಿಂದಲೇ ಇರಬೇಕು. ಒಂದು ಗುಟುಕು ನೀರನ್ನೂ ಕೂಡ ಬಾಯಲ್ಲಿ 

ಹಾಕಿಕೊಳ್ಳ ಕೂಡದು. ಸೂರ್ಯಾಸ್ತಕ್ಕೆ ಇನ್ನು ಒಂದೆರಡು ಗಳಿಗೆಯ ಅವಕಾಶವಿರು 

ವಾಗ ಲಲಿತೆಯನ್ನು ಎತ್ತಿಕೊಂಡು ಮಧ್ಯದಲ್ಲಿ ಒಂದು ಕ್ಷಣವಾದರೂ ವಿಶ್ರಾಂತಿಯನ್ನು 

ತೆಗೆದುಕೊಳ್ಳದೆ ಪರ್ವತಮಾರ್ಗದಿಂದ ಪ್ರಮೋದಭವನಕ್ಕೆ ಬಂದು ಮುಟ್ಟಬೇಕು. 

ನಮ್ಮ ವಂಶದಲ್ಲಿ ಪರಮಪವಿತ್ರವಾದ ಇದೊಂದು ಅಚಾರವು ಪರಂಪರೆಯಿಂದ ನಡೆದು 

ಬಂದಿದೆ. ಪ್ರತಿಯೊಂದು ವಿವಾಹದಲ್ಲಿಯೂ ವರನು ಈ ಆಚಾರವನ್ನು ಅವಶ್ಯವಾಗಿ 



೫೨ ------------------------------ವಾಗ್ಭೂಷಣ.----------------------------------. 



ಪಾಲಿಸಬೇಕು, ಲಲಿತೆಯನ್ನು ಎತ್ತಿಕೊಂಡು ಪ್ರಮೋದಭವನವನ್ನು ಮಟ್ಟಿದಿರೆಂದರೆ 

ಅವಳು ಅಗ್ನಿ ಬ್ರಾಹ್ಮಣ ಸಾಕ್ಷಿಯಾಗಿ ನಿಮ್ಮ ಧರ್ಮಪತ್ನಿಯಾಗುವಳು. ಸಾಯಂಕಾ 

ಲದ ಶುಭಮುಹೂರ್ತದಲ್ಲಿ ನಾನು ನನ್ನ ಪ್ರಿಯ ಕನ್ಯೆಯನ್ನು ನಿಮಗೆ ಅರ್ಪಿಸುವೆನು. " 



ಭೀಮಸಿಂಹನ ಮಾತಿಗೆ ಕರುಣಸಿಂಹನು ತತ್‌ಕ್ಷಣದಲ್ಲಿಯೇ ಸಮ್ಮತಿಯನ್ನಿ 

ತ್ತನು. ಸರತಾನಸಿಂಹನೊಡನೆ ಕೆಲಹೊತ್ತು ಅಲೋಚನೆ ಮಾಡಿ ಭೀಮಸಿಂಹನು 

ಈ ವಿಲಕ್ಷಣ ಕುಲಾಚಾರವನ್ನು ಪಾಲಿಸುವಂತೆ ತನಗೆ ಹೇಳಿದುದರಿಂದ ಇದರಲ್ಲಿ ಏನಾ 

ದರೂ ಕಪಟವಿರಲಿಕ್ಕೆ ಬೇಕೆಂದು ಕರುಣಸಿಂಹನಿಗೆ ಶಂಕೆಯು ಉತ್ಪನ್ನವಾಯಿತು. 

ಆದರೆ ಅತನು ಅತ್ಯಂತ ಶೂರನಾದ ರಜಪೂತನಾಗಿದ್ದನು. ಎಂತಹ ಬಿಕ್ಕಟ್ಟಿನ ಕೆಲಸವಿ 

ದ್ದರೂ ಅದರಲ್ಲಿ ತನಗೆ ಅಪಯಶಸ್ಸು ಒದಗಬಹುದೆಂಬ ಕಲ್ಪನೆಯೇ ಅವನ ಮನಸ್ಸಿ 

ನಲ್ಲಿ ಬರುತ್ತಿದ್ದಿಲ್ಲ. ಆದುದರಿಂದ ಆ ಕ್ಷಣದಲ್ಲಿಯೇ ಅತನು ನಿರ್ಭಯಹೃದಯದಿಂದ 

ಭೀಮಸಿಂಹನ ಮಾತಿಗೆ ಒಡಂಬಟ್ಟನು. 


ಭೀಮಸಿಂಹನ ಪೂರ್ವಜರಲ್ಲಿ ಈ ತರದ ಒಂದು ನಡತೆಯು ಕೆಲವು ದಿವಸಗಳ 

ವರೆಗೆ ನಿಜವಾಗಿಯೂ ಇತ್ತು. ಆದರೆ ಕಾಲಾಂತರದಲ್ಲಿ ಆ ಅಚಾರವು ಲೋಪವನ್ನು 

ಹೊಂದಿ ಈ ಕಾಲಕ್ಕಂತೂ ಕೇವಲ ನಾಮಶೇಷವಾಗಿತ್ತು. ಕುಮಾರ ಕರುಣಸಿಂಹ 

ನನ್ನು ಈ ಕುಲಾಚಾರವನ್ನು ಪಾಲಿಸುವುದಕ್ಕೆ ಹಚ್ಚುವುದರಲ್ಲಿ ಸರತಾನಸಿಂಹನು ಅತ್ಯಂತ 

ದುಷ್ಟವಾದ ಉದ್ದೇಶವನ್ನಿಟ್ಟು ಕೊಂಡಿದ್ದನು. ಇಡೀ ದಿವಸದಲ್ಲಿ ನೀರಿನ ಹನಿಯನ್ನು 

ಕೂಡ ಬಾಯಲ್ಲಿ ಹಾಕದೆ ನಿರಾಹಾರದಿಂದ ಇದ್ದ ಮೇಲೆ, ಬಲಿಷ್ಮಳಾದೊಬ್ಬ ಪೂರ್ಣ 

ವಯಸ್ಕ ಯುವತಿಯನ್ನು ಹೊತ್ತುಕೊಂಡು ಪರ್ವತದ ಮೇಲೆ ಹೋಗುವುದು ಅತ್ಯಂತ 

ಕಷ್ಟಕರವಾದುದು ! ಅಸಂಭವನೀಯವೆಂದೇ ಹೇಳಿದರೂ ಹೇಳಬಹುದು! ಆದುದ 

ರಿಂದ ಕುಮಾರನಿಗೆ ಲಲಿತೆಯು ಲಭಿಸಲಾರಳೆಂದು ಅತನು ಯೋಚಿಸಿದ್ದನು. ಭೀಮ 

ಸಿಂಹನ ಮನಸ್ಸಿನಲ್ಲಿ ಈ ತರದ ಉದ್ದೇಶವಾವುದೂ ಇದ್ದಿಲ್ಲ. ಆತನ ಮನಸ್ಸಿನಲ್ಲಿ ಕರು 

ಣಸಿಂಹನ ವಿಷಯಕ್ಕೆ ತೀವ್ರದ್ವೇಷವು ಎಂದೂ ಇದ್ದಿಲ್ಲ. ಈ ಪ್ರಸಂಗದಲ್ಲಿಯಂತೂ 

ಆ ದ್ವೇಷವು ಪ್ರಾಯಶಃ ಇಲ್ಲದಂತಾಗುತ್ತಲೇ ಬಂದಿತ್ತು. ಈ ವೀರೋಚಿತ ಪರೀಕ್ಷೆ 

ಯಲ್ಲಿ ಕುಮಾರನು ಉತ್ತೀರ್ಣನಾದರೆ, ಇಂತಹ ಯೋಗ್ಯನಾದ ತರುಣನಿಗೆ ತನ್ನ ಮಗ 

ಳನ್ನು ಅರ್ಪಿಸುವುದಕ್ಕೆ ಆತನಿಗೆ ಒಂದು ವಿಧವಾದ ಆನಂದವೇ ಆಗುತ್ತಿತ್ತು. ಪರೀಕ್ಷೆ 

ಯಲ್ಲಿ ಒಂದು ವೇಳೆ ಅತನಿಗೆ ಯಶಸ್ಸು ಬರದೆ ಹೋಗಿದ್ದರೂ ಆತನಿಗೆ ಅಷ್ಟೊಂದು 

ಕೆಡಕೆನಿಸುತ್ತಿದ್ದಿಲ್ಲ. ಹೀಗೆ ಆತನು ಭಾವೀಪರಿಣಾಮದ ವಿಷಯದಲ್ಲಿ ಉದಾಸೀನ 

ನಾಗಿದ್ದನು. 


ಗಣೇಶಮಂದಿರದೊಳಗಿನ ಸುಸಜ್ಜಿತವಾದ ಒಂದು ಭಾಗದಲ್ಲಿ ಸುಂದರವಾ 

ಗೊಂದು ಮಂಚದ ಮೇಲೆ ಕುಮಾರ ಕರುಣಸಿಂಹನು ಸ್ವಸ್ಯವಾಗಿ ಮಲಗಿಕೊಂಡಿದ್ದನು. 



-------------------------------------ಪ್ರೇಮಮಂದಿರ. ----------------------------೫೩, 



ಆತನ ಪ್ರಫುಲ್ಲವಾದ ಮುಖಮಂಡಲವನ್ನು ನೋಡಿದರೆ, ಸದ್ಯಕ್ಕೆ ಅತನಿಗೆ ಯಾವದಾದ 

ರೊಂದು ಸುಖಸ್ವಷ್ನವು ಬಿದ್ದಿರಬಹುದೆಂದು ಯಾರಿಗಾದರೂ ತಿಳಿಯುವಂತಿತ್ತು. 


ಇಷ್ಟರಲ್ಲಿ ಲಲಿತೆಯು ಮೆಲ್ಲನೆ ಅಲ್ಲಿಗೆ ಬಂದಳು. ಕರುಣಸಿಂಹನು ಇನ್ನೂ ಮಲ 

ಗಿದ್ದನು. ರಾಜಕನ್ಯೆಯು ಮೆಲ್ಲನೆ ಬಂದು ಕರುಣಸಿಂಹನ ಕಾಲ್ದೆಸೆಗೆ ಮಂಚದ ಮೇಲೆ 

ಕುಳಿತುಕೊಂಡಳು. ಆಕೆಯು ಬಹಳ ಹೊತ್ತಿನವರೆಗೆ ಕುಳಿತುಕೊಳ್ಳಬೇಕಾಗಲಿಲ್ಲ. 

ಸ್ವಲ್ಪ ಹೊತ್ತಿನಲ್ಲಿಯೇ ಕುಮಾರನಿಗೆ ಎಚ್ಚರವಾಯಿತು. ಅತನು ಕಣ್ಣೆರೆದು ನೋಡುವ 

ಸ್ಕರಲ್ಲಿ ಸಮೀಪದಲ್ಲಿಯೇ ಲಲಿತೆಯನ್ನು ಕಂಡನು. 



ಕುಮಾರನು ಅತ್ಯಂತ ಪ್ರಸನ್ನ ಹೃದಯದಿಂದ ಲಲಿತೆಯನ್ನು ಕೇಳಿದನು, ಏ 

ಲಲಿತೇ, ಇದೇನು? ಈ ಸಮಯದಲ್ಲಿ ಇತ್ತ ಕಡೆಗೆ ಬಂದು ಬಿಟ್ಟೆ ! ಭೀಮಸಿಂಹರ 

ವರು ನನಗೆ ಭೆಟ್ಟಿಯಾಗುವದಳ್ಕೋಸ್ಕರ ನಿನ್ನನ್ನು ಇತ್ತ ಕಡೆಗೆ ಕಳಿಸಿಕೊಟ್ಟರೇನು? ” 


ಕುಮಾರನ ಊಹೆಯು ನಿಜವಾಗಿತ್ತು. ಈ ಕಾಲದಲ್ಲಿ ಭೀಮಸಿಂಹನೇ ಕರುಣ 

ಸಿಂಹನ ಆತಿಥ್ಯಕ್ಕೋಸ್ಯ ರವಾಗಿ ಲಲಿತೆಯನ್ನು ಕಳುಹಿಸಿದ್ದನು. 


ಕುಮಾರನ ಪ್ರಶ್ನೆಗೆ ವಿನೂ ಉತ್ತರವನ್ನು ಕೊಡದೆ ಲಲಿತೆಯು ಮೊಗವನ್ನು ತಗಿ 

ಪಿಕೊಂಡು ನಿಂತುಕೊಂಡಳು. 


ಕುಮಾರನು ಪ್ರೇಮಭರದಿಂದ ಮತ್ತೆ ' ಲಲಿತೇ, ' ಎಂದು ಕರೆದನು. 



ಲಲಿತೆಯ ಸ್ವಭಾವವು ಇಂದು ಹಾಗೆ ಏಕೆ ಅಗಿತ್ತೋ ಏನೋ! ಯಾರಿಗೆ 

ಗೊತ್ತು! ಅವಳು ಹೆಚ್ಚಾಗಿ ಏನೂ ಮಾತಾಡಲಿಲ್ಲ. ಗದ್ಗದ ಸ್ವರದಿಂದ 'ಕುಮಾರ- ' 

ಎಂಬ ಶಬ್ದ ಮಾತ್ರವು ಅವಳ ಮುಖದಿಂದ ಹೊರಟತು, ಆಕೆಯ ಕಣ್ಣುಗಳೊಳಗಿಂದ 

ಅಶ್ರುಪ್ರವಾಹವು ಸುರಿಯಹತ್ತಿತು. ಕರುಣಸಿಂಹನಿಗೆ ಲಲಿತೆಯು ಹೀಗೇಕೆ ವರ್ತಿಸು 

ತ್ತಾಳೆಂಬುದು ತಿಳಿಯದಾಯಿತು. ಚಟಕ್ಕನೆ ಎದ್ದು ತನ್ನ ಉತ್ತರೀಯ ವಸ್ತ್ರ ದಿಂದ ಆಕೆ 

ಯ ಆಶ್ರುಗಳನ್ನು ಒರಸಿ ಪ್ರೇಮಸೂಚಕ ಸ್ವರದಿಂದ ಮಾತನಾಡಿದನು. " ಛೇ! ಛೇ! 

ಲಲಿತೇ, ಇಂದು ನೀನು ಹೀಗೇಕೆ ಮಾಡುತ್ತಿರುವೆ? ಈ ಕಾಲದಲ್ಲಿ ನಿನ್ನ ಕಣ್ಣೊಳಗೆ 

ಅಮಂಗಲವಾದ ಅಶ್ರುಗಳೇಕೆ? ಈ ಹೊತ್ತಿನಂತಹ ಶುಭದಿವಸದಲ್ಲಿ ಹೀಗೆ ಕಣ್ಣೀರು 

ಗಳನ್ನು ಸುರಿಸುವುದು ನಿನ್ನಂತಹ ರಜಪೂತ ಕನ್ಯೆಗೆ ಉಚಿತವಾದುದೇ? 



ಕುಮಾರನ ಈ ಪ್ರೇಮಪೂರ್ಣ ಶಬ್ದಗಳಿಂದಲೂ ಲಲಿತೆಯ ಅಶ್ರುಪ್ರವಾಹವು 

ಕಟ್ಟಾಗಲಿಲ್ಲ. ಮುಖವನ್ನು ಕೆಳಗೆ ಬಗ್ಗಿಸಿ ಅವಳು ಒಂದೇಸಮನೆ ಕಣ್ಣೀರು ಸುರಿಸುತ್ತಿ 

ದ್ದುದನ್ನು ನೋಡಿ ಕರುಣಸಿಂಹನಿಗೆ ಕಸವಿಸಿಯಾಯಿತು. ಮತ್ತೊ ಮ್ಮ ಆಕೆಯ ಅಶ್ರು 

ಗಳನ್ನು ಒರಸಿ ಕುಮಾರನು ಪ್ರೇಮದಿಂದ ಮಾತನಾಡಿದನು. "ಲಲಿತೇ, ಏನಿದು? 

ಈ ಪ್ರಕಾರ ಅಮಂಗಲವಾದ ಕಣ್ಣೀರುಗಳನ್ನು ಇಂದು ಸುರಿಸುವುದಕ್ಕೆ ಕಾರಣವಾ 

ದರೂ ಏನು? ಹೇಳು, " 



೫೪---------------------------------ವಾಗ್ಭೂಷಣ.------------------------------------- 



ಲಲಿತೆಯು ಬಿಕ್ಕುತ್ತ ಬಿಕ್ಕುತ್ತ ಮಾತನಾಡಿದಳು. " ಕುಮಾರ, ನಿಮಗೆ ಏನು 

ಹೇಳಲಿ! ನಮ್ಮ ಸರ್ವಸ್ವವೂ ಘಾತವಾಯಿತು J" 


" ಲಲಿತೇ, ಏನಾಯಿತು? " 


" ಕುಲಾಚಾರವೆಂದು ಸರತಾನಸಿಂಹನ ಸಲಹೆಯಿಂದ ನಿಮಗೆ ಹೇಳಿದ ಆಚರಣೆ 

ಯಿಂದ ನಮ್ಮ ಮೇಲೆ ಎಂತಹ ಭಯಂಕರವಾದ ಅನರ್ಥವು ಒದಗಬಹುದೆಂಬ ಕಲ್ಪನೆ 

ಯಾದರೂ ನಿಮ್ಮಲ್ಲಿದೆಯೋ? ಪ್ರಮೋದಭವನಕ್ಕೆ ಹೋಗಲು ಎರಡು ದಾರಿಗಳಿವೆ. 

ಅವುಗಳಲ್ಲಿ ಒಂದು ಸರಳವಾಗಿಯೂ ಸುಲಭವಾಗಿಯೂ ಇದೆ. ಎರಡನೆಯದು ಸುತ್ತಿನ 

ದಾರಿ ಕ್ರಮಿಸುವುದಕ್ಕೆ ಅತ್ಯಂತ ಕಷ್ಟಕರವಾದುದು! ಸರಳಮಾರ್ಗದಲ್ಲಿ ಹೋಗ 

ದಂತೆ ಆ ದುಷ್ಟ ಸರತಾನಸಿಂಹನು ವ್ಯವಸ್ಥೆಯನ್ನು ಮಾಡಿಸಿದ್ದಾನೆ. ಆದುದರಿಂದ ಎರ 

ಡನೆಯ ದಾರಿಯಿಂದಲೇ ನೀವೆ ನನ್ನನ್ನು ಹೊತ್ತುಕೊಂಡು ಗುಡ್ಡವನ್ನು ಹತ್ತಬೇಕಾಗು 

ವುದು. ನಿಯಮದಂತೆ ನೀವು ಮಧ್ಯದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತಿಲ್ಲ. 

ನಮ್ಮ ದುರ್ದೈವವು ನಮಗೋಸ್ಕರ ಯಾವ ಸಂಕಟವನ್ನು ಸಿದ್ಧ ಡಿಸಿ ಇಟ್ಟಿರುವುದೋ 

ಹೇಳಲಿಕ್ಕಾಗುವುದಿಲ್ಲ " ಇಷ್ಟು ಮಾತನಾಡಿ ಲಲಿತೆಯು ಅತ್ಯಂತ ದುಃಖದಿಂದ ಬಿಕ್ಕಿ 

ಬಿಕ್ಕಿ ಅಳಹತ್ತಿದಳು. 


" ಲಲಿತೇ, ಇದೇ ಸಂಕಟವೇನು? ಪ್ರೇಮಿಗೆ ಅತನ ಪ್ರಣಯಿನಿಯು ಜಾದಿಯ 

ಹೂವಿನಂತೆ ಹಗುರಾಗಿರುತ್ತಾಳೆ. ಇದಕ್ಕೆ ಇಷ್ಟೇಕೆ ಚಿಂತೆ ಮಾಡುವೆ? " ಕುಮಾರನು 

ಲಲಿತೆಯ ಮುಖಕಮಲವನ್ನು ನೋಡಿ ನಗುತ್ತ ಮಾತನಾಡಿದನು. 



" ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದರಂತಾಗಲಿ! ” 

....


ಎಂಟನೆಯ ಪರಿಚ್ಛೇದ. 

      ಪ್ರೇಮಮಂದಿರ. 



" ಕುಮಾರ --"



" ಏನು ಲಲಿತೇ? " 


" ಅಯ್ಯೋ! ಮುಂದೆ ನಮ್ಮ ಪರಿಣಾಮವು ಹೇಗಾಗುವುದೋ? ನನಗಂತೂ 

ಭಯಂಕರವಾದ ಅನರ್ಥವೇ ಗೋಚರವಾಗುತ್ತಿದೆ! ” ಲಲಿತೆಯು ಗದ್ಗದ ಸ್ವರದಿಂದ 

ನುಡಿದಳು. 


" ಲಲಿತೇ, ಅನರ್ಥವೆಂತಹುದು? ಅರ್ಧಕ್ಕಿಂತಲೂ ಹೆಚಾದ ದಾರಿಯನ್ನು 

ಸದ್ಯಕ್ಕೆ ದಾಟಿದ್ದೇನಷ್ಟೇ? 



--------------------------ಪ್ರೇಮಮಂದಿರ.------------------------------ ೫೫ 



"ಈ ಅರ್ಧದಾರಿಯನ್ನು ಶ್ರಮಿಸಬೇಕಾದರೇ ನಿಮಗೆ ಅತ್ಯಂತ ಶ್ರಮವಾದಂತೆ 

ತೋರುತ್ತದೆ. ಅತ್ಯಂತ ಕಷ್ಟದಿಂದ ನೀವು ಶ್ವಾಸವನ್ನು ಬಿಡುತ್ತಿರುವಿರಿ. ಒಂದೊಂದು 

ಅಡಿಯನ್ನು ಮುಂದಕ್ಕೆ ಇಡಬೇಕಾದರೆ ನಿಮಗೆ ಲೆಕ್ಕವಿಲ್ಲದಷ್ಟು ಯಾತನೆಗಳುಂಟಾಗು 

ತ್ತಿವೆ. ಇನ್ನೂ ಅರ್ಧಹಾದಿಯನ್ನು ನೀವು ಕ್ರಮಿಸಬೇಕಾಗಿದೆ. ಆ ದಾರಿಯಾದರೋ 

ಹಿಂದಿನ ದಾರಿಗಿಂತ ಕಠಿಣವಾದುದೂ, ಏರಿನ ಪ್ರದೇಶವೂ ಆಗಿದೆ. ಕುಮಾರ! 

ಈಗಲೇ ನಿಮ್ಮ ಸಾಮಥ್ಯವೆಲ್ಲ ಇಲ್ಲದಂತಾದ ಹಾಗೆ ತೋರುತ್ತದೆ. ಪ್ರಿಯರೇ, ಮನು 

ಷೃನಿಗೆ ತನ್ನ ಪ್ರಾಣಕ್ಕಿಂತಲೂ ಪ್ರಿಯವಾದ ಇನ್ನಾವ ವಸ್ತುವೂ ಜಗತ್ತಿನಲ್ಲಿಲ್ಲ. 

ನನ್ನನ್ನು ಕೆಳಗಿಳಿಸಿ ನೀವು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ನನ್ನ ಈ 

ವಿನಂತಿಯನ್ನಷ್ಟು ದಯಮಾಡಿ ಕೇಳಿರಿ.” ಲಲಿತೆಯು ಕಣ್ಣೀರುಗಳನ್ನು ಸುರಿಸುತ್ತ 

ದೀನವಾಣಿಯಿಂದ ಮಾತನಾಡಿದಳು. 



ಕರುಣಸಿಂಹನು ಲಲಿತೆಗೆ ಉತ್ತರವನ್ನೇ ಕೊಡಲಿಲ್ಲ. ಒಳ್ಳೇ ಕಷ್ಟದಿಂದ 

ಒಂದೊಂದು ಹೆಜ್ಜೆಯನ್ನು ಮುಂದಕ್ಕೆ ಇಡುತ್ತ ಪರ್ವತದೊಳಗಿನ ದುರ್ಗಮವಾದ 

ಮಾರ್ಗವನ್ನು ಹೇಗೋ ಕ್ರಮಿಸುತ್ತಿದ್ದನು. ಲಲಿತೆಯೊಡನೆ ಪ್ರೇಮಾಲಾಪವನ್ನು 

ಮಾಡಲು ಅವನಿಗೆ ಅವಕಾಶವಿದ್ದಿಲ್ಲ. ಮತ್ತು ಅವನಲ್ಲಿ ಅಷ್ಟೊಂದು ಸಾಮರ್‍ಥ್ಯವೂ 

ಉಳಿದಿದ್ದಿಲ್ಲ. 


ದುರ್ಗಾಧಿಪತಿಯಾದ ಭಿಳಮಸಿಂಹನೂ, ಸರತಾನಸಿಂಹನೂ, ದುರ್ಜಯ 

ಸಿಂಹನೂ ಅವರ ಅನುಜರರೂ ಬೆಟ್ಟದ ತುದಿಯಲ್ಲಿ ನಿಂತುಕೊಂಡು, ಲಲಿತೆಯನ್ನೆತ್ತಿ 

ಕೊಂಡು ಪ್ರಮೋದಭವನದ ಕಡೆಗೆ ಬರುತ್ತಿದ್ದ ಆ ರಜಪೂತವೀರನನ್ನು ಲಕ್ಷ್ಯಪೂ 

ರ್ವಕವಾಗಿ ನೋಡುತ್ತಿದ್ದರೂ ಪ್ರತಿಯೊಬ್ಬರ ಹೃದಯದಲ್ಲಿಯೂ ಅನೇಕ ತರದ ವಿಚಾ 

ರಗಳೂ ವಿಕಾರಗಳೂ ಈ ಕಾಲಕ್ಕೆ ಹುಟ್ಟುತ್ತಿದ್ದುವು. 



ತನ್ನ ಚಿರವಾಂಛಿತವಲ್ಲಭೆಯನ್ನೆತ್ತಿ ಕೊಂಡು ಒಂದೊಂದೇ ಹೆಜ್ಜೆಯನ್ನು ಮುಂದ 

ಕ್ಕೆ ಇಡುತ್ತ ಕರುಣಸಿಂಹನು ಒಳ್ಳೇ ಕಷ್ಟದಿಂದ ಪ್ರಮೋದಭವನದ ಕಡೆಗೆ ಬರುತ್ತ 

ದ್ದನು. ಬೆಟ್ಟದ ತುದಿಯಲ್ಲಿರುವ ಭೀಮಸಿಂಹಾದಿ ಪ್ರೇಕ್ಷಕಮಂಡಳಿಯನ್ನು ನೋಡಿದೊ 

ಡನೆಯೇ ಆತನಲ್ಲಿ ಉತ್ಸಾಹವು ಹುಟ್ಟುತ್ತಿತ್ತು. ಅದರಂತೆ ತನ್ನ ಹೃದಯಕ್ಕೆ ಹೊಂದಿ 

ಕೊಂಡಿರುವ ಲಲಿತೆಯನ್ನು ಪ್ರೇಮಪೂರ್ಣದೃಷ್ಠಿಯಿಂದ ನೋಡಿದೊಡನೆಯೇ ಆತ 

ನಲ್ಲಿ ನೂತನವಾದ ಶಕ್ತಿಯು ಉಗಮಹೊಂದುತ್ತಿತ್ತು. 


ಈ ಪ್ರಕಾರ ಮೆಲ್ಲಮೆಲ್ಲನೆ ಕರುಣಸಿಂಹನು ತನ್ನ ಇಷ್ಟ ಸ್ಫಲದ ಕಡೆಗೆ ನಡೆದಿ 

ದ್ದನು. ಪ್ರತಿಯೊಂದು ಹೆಜ್ಜೆಯನ್ನು ಎತ್ತಿ ಇಡುವಾಗ ಆತನಿಗೆ ಪ್ರಾಣಾಂತವಾದ ಕಷ್ಟ 

ವಾಗುತ್ತಿತ್ತು. ಆದರೂ ಅಷ್ಟೊಂದು ಶ್ರಮವನ್ನು ಕೂಡ ಲೆಕ್ಕಿಸದೆ ಅವನು ಹಾಗೂ 

ಹೀಗೂ ಪ್ರಮೋದಭವನಕ್ಕೆ ತೀರ ಹತ್ತರದಲ್ಲಿ ಬಂದು ನಿಂತನು. ಕರುಣಸಿಂಹನು 



೫೬---------------------------- ವಾಗ್ಭೂಷಣ.------------------------------------- 



ಎಷ್ಟೇ ಬಲಿಷ್ಠನೂ, ಎಷ್ಟೇ ಉತ್ಸಾಹಶಾಲಿಯೂ ಆಗಿದ್ದರೂ ಅವನೂ ಒಬ್ಬ ಮನು 

ಷ್ಯನಷ್ಟೇ? ಅಂದ ಮೇಲೆ ನಿಸರ್ಗದ ಸಾಮರ್ಥ್ಯವನ್ನು ಮೀರಿ ನಡೆಯವುದು ಅವ 

ನಿಂದ ಹೇಗೆ ಆಗಬೇಕು? 


ಪ್ರಮೋದಭವನದಿಂದ ಹತ್ತು ಇಪ್ಪತ್ತು ಮೊಳಗಳ ಅಂತರದಲ್ಲಿರುವಾಗ ಕರುಣ 

ಸಿಂಹನ ಸಾಮರ್ಥ್ಯವೆಲ್ಲ ಗಲಿತವಾಯಿತು. ಆತನ ಬಾಹುಬಂಧನವು ನಿರ್ಜೀವವಾದುದ 

ರಿಂದ ಲಲಿತೆಯು ಭೂಮಿಯ ಮೇಲೆ ನಿಂತುಕೊಂಡಳು. ಕ್ಷಣಾರ್ಧದಲ್ಲಿಯೇ ಕರುಣ 

ಸಿಂಹನು ಮೂರ್‍ಛಿತನಾಗಿ ದೊಪ್ಪನೆ ನೆಲಕ್ಕೆ ಬಿದ್ದನು. 



ರಾಜಕುಮಾರಿಯು ಹೆದರಿದಳು. ಈ ಪ್ರಸಂಗದಲ್ಲಿ ಏನು ಮಾಡಬೇಕೆಂಬುದು 

ಅವಳಿಗೆ ತಿಳಿಯದಾಯಿತು! ಕರುಣಸಿಂಹನ ಬಳಿಯಲ್ಲಿ ಕುಳಿತು ಆತನಿಗೆ ಶೈತ್ಯೋಪ 

ಚಾರವನ್ನು ಮಾಡಹತ್ತಿದ್ದಳು. ಕುಮಾರನು ತೀರ ನಿಶ್ಚಲನಾಗಿ ಬಿದ್ದಿದ್ದನು. ಆತನ 

ಬಾಯೊಳಗಿಂದ ರಕ್ತವು ಸುರಿಯುತ್ತಿತ್ತು. ಆತನ ಚೈತನ್ಯನೆಲ್ಲ ಲುಪ್ತವಾಗಿತ್ತು. ಆತನ 

ಹೃದಯದೊಳಗಿನ ರಕ್ತ ಕೋಶದ ಬಂಧನವು ಹರಿದುಹೋಗಿತ್ತು! 


ಲಲಿತೆಯ ದೈವವು ಪ್ರತಿಕೂಲವಾಯಿತು! ಕ್ಷಣಾರ್ಧದಲ್ಲಿಯೇ ಕೆಲಸವೆಲ್ಲ 

ತೀರಿತು! ತನ್ನ ಪ್ರಿಯಕರನು ಈ ಮೃತ್ಯುಲೋಕವನ್ನು ಬಿಟ್ಟು ಸ್ವರ್ಗಧಾಮಕ್ಕೆ 

ಹೊರಟು ಹೋದನೆಂಬುದು ಆಕೆಗೆ ಆಗಲೇ ಗೊತ್ತಾಯಿತು. ಆ ಕ್ಷಣದಲ್ಲಿಯೇ ಅವಳ 

ಮೇಲಿನ ಎಚ್ಚರದಪ್ಪಿ ಅವಳು ಭ್ರಮಿಷ್ಠೆಯಾದಳು. " ಕುಮಾರ-ಕುಮಾರ! " 

ಎಂದು ಕರುಣಸ್ವರದಿಂದ ಶಂಖವಾದ್ಯ ಮಾಡುತ್ತ ನೆಲದ ಮೇಲಿನ ದೂಳಿಯಲ್ಲಿ 

" ಗುಡುಗುಡು ' ಹೊರಳಾಡಹತ್ತಿದಳು. 



ಈ ಸ್ಥಿತಿಯನ್ನು ನೋಡಿ ಭೀಮಸಿಂಹ, ಸರತಾನಸಿಂಹ, ದುರ್ಜಯಸಿಂಹ ಮೊದ 

ಲಾದವರು ಓಡಿ ಬರಹತ್ತಿದರು. ಈ ಜನರೆಲ್ಲರೂ ತಮ್ಮ ಕಡೆಗೆ ಬರುತ್ತಿರುವುದನ್ನು 

ನೋಡಿ ಲಲಿತೆಯು ಇನ್ನೂ ಭಯಭೀತಳಾದಳು. ಇನ್ನು ಮೇಲೆ ದುರ್ಜಯಸಿಂಹನೊ 

ಡನೆ ವಿಧಿಪೂರ್ವಕವಾಗಿ ತನ್ನ ವಿವಾಹವನ್ನು ಮಾಡುವರೆಂಬ ವಿಚಾರವು ಆಕೆಯ 

ಮನಸ್ಸಿನಲ್ಲೊಂದು ಕ್ಷಣಕಾಲ ಬಂತು. ತಮ್ಮ ಈ ದುಷ ನಾದ ಹೇತುವನ್ನು ಸಾಧಿಸಿ 

ಕೊಳ್ಳುವುದಕ್ಕಾಗಿಯೇ ಸರತಾನಸಿಂಹಾದಿ ನೀಚರು ಈ ವಿಧದ ಕೌಶಲ್ಯುದಿಂದಲೂ 

ತನ್ನ ಹೃದಯವಲ್ಲಭನಿಗೆ ಮರಣವನ್ನುಂಟು ಮಾಡಿದರು. ಇನ್ನು ಮುಂದಿನ ಮಾರ್ಗವು 

ಅವರಿಗೆ ನಿರಾತಂಕವಾಗಿಯೇ ಇದೆ. ಪಾಷಾಣಹೃದಯಿಯಾದ ತನ್ನ ತಂದೆಯು 

ತನ್ನನ್ನು ದುರ್ಜಯಸಿಂಹನಿಗೆ ಸಮರ್ಪಿಸಿದ ಹೊರತು ಬಿಡುವುದಿಲ್ಲ. ಈ ಪ್ರಕಾರದ 

ವಿಚಾರಗಳು ಲಲಿತೆಯ ತಲೆಯಲ್ಲಿ ಸುಳಿದಾಡಹತ್ತಿದುವು. ಮುಂದಾಗತಕ್ಕ ತನ್ನ ಆ 

ವಿಟಂಬನೆಯನ್ನು ಕಳೆದುಕೊಳ್ಳಬೇಕಾದರೆ ಏನು ಮಾಡಬೇಕೆಂಬುದು ಅವಳಿಗೆ ತಿಳಿಯ 

ದಾಯಿತು? 



----------------------------------ಪ್ರೇಮಮಂದಿರ. ----------------------------------೫೩ 



ಇದಕ್ಕೆ ಇನ್ನಾವ ಉಪಾಯವಿದೆ? ಈ ವಿಶಾಲವಾದ ಪೃಥ್ವಿಯಲ್ಲಿ ಯಾರಿಗೆ ತನ್ನವ 

ಕೆಂದು ಹೇಳಿಕೊಳ್ಳಲು ಒಬ್ಬರೂ ಇಲ್ಲವೋ ಅಂತಹರಿಗೆ ಭಗವಂತನ ಹೊರತು 

ಇನ್ನೊಂದು ಆಧಾರವಾವುದು? ಸಜಲನೇತ್ರಗಳಿಂದಲೂ ಭಾವಾಕ್ರಾಂತಹೃದಯ 

ದಿಂದಲೂ ಲಲಿತೆಯು ಆಕಾಶದ ಕಡೆಗೆ; ನೋಡಿದಳು. ಶುಭ್ರವಾದ ನಿರ್ಜಲ ಮೇಘ 

ಖಂಡಗಳು ಎಲ್ಲೆಡೆಯಲ್ಲಿಯೂ ಹರಡಿದ್ದು ಅವುಗಳಾಚೆಯಲ್ಲಿ ಸುನೀಲವಾದ ಆಕಾಶವು 

ತರಂಗಹೀನವೂ ಶಾಂತವೂ ಸ್ಥಿರಪ್ರಕೃತಿಯೂ ಅದ ಸಮುದ್ರದಂತೆ ಕಾಣುತ್ತಿತ್ತು. 

ಆ ಶಾಂತವಾದ ನೀಲಾಕಾಶದ ಒಂದು ತೇಜಃಪುಂಜ ಭಾಗದಲ್ಲಿ ಮಹಾಮೂಲ್ಯವಾದ 

ರತ್ನ ಖಚಿತ ಸಿಂಹಾಸನದಲ್ಲಿ ಕರುಣಸಿಂಹನ ದಿವ್ಯವಾದ ಉಜ್ವಲಮೂರ್ತಿಯು ವಿರಾಜ 

ಮಾನವಾಗಿರುವಂತೆ ಅವಳಿಗೆ ತೋರಿತು! ಆ ಜ್ಯೋತಿರ್ಮಯವಾದ ಸ್ಪರ್ಗರಾಜ್ಯದಲ್ಲಿ 

ಪ್ರವೇಶಿಸಿದ ಕುಮಾರನ ತೇಜೋಮಯ ಮೂರ್ತಿಯು ಅಧಿಕವಾದ ಉಜ್ಜಲತೆಯನ್ನು 

ಧಾರಣಮಾಡಿತ್ತು. ತೇಜಕಿಪುಂಜವಾದ ಆ ಮುಖಮಂಡಲದ ಮೇಲೆ ಲವಮಾತ್ರವೂ 

ಕಲಂಕವಿದ್ದಿಲ್ಲ. ನಿಷಾದ, ಕ್ಲಾಂತಿ ಮೊದಲಾದ ಯಾವ ಕಳೆಯೂ ಆ ಮುಖದಲ್ಲಿದ್ದಿಲ್ಲ. 

ಆ ಮೂರ್ತಿಯ ನೇತ್ರಗಳಲ್ಲಿ ಆಶೆಯೂ, ದೃಷ್ಟಿಯಲ್ಲ ದಿವ್ಯಸ್ನೇಹವೂ, ಓಷ್ಠ ಪ್ರಾಂತದಲ್ಲಿ 

ಸ್ವರ್ಗೀಯ ಹಾಸ್ಯವೂ, ಹೃದಯದಲ್ಲಿ ಚಿರಕಾಲೀನ ಜೀವಂತಪ್ರೇಮವೂ ವಾಸಮಾಡು 

ತ್ತಿದ್ದುವು. ಆ ಅಜ್ಞಾತವಾದ ಸಾಮ್ರಾಜ್ಯದಲ್ಲಿ ಹೋಗಿ ಉಜ್ವಲವೂ, ತೇಜಃಪೂರ್ಣವೂ 

ಆದ ಸ್ವರ್ಗೀಯ ಸಿಂಹಾಸನದಲ್ಲಿ ಕುಳಿತು ಕುಮಾರನು ಹಾಸ್ಕಮುಖದಿಂದ ಅಂಗುಲಿ 

ನಿರ್ದೇಶಮಾಡುತ್ತ ಲಲಿತೆಯನ್ನು ಕುರಿತು ಹೀಗೆ ಹೇಳುತ್ತಿರುವಂತೆ ತೋರಿತು. 

" ಲಲಿತೇ, ಹೃದಯೇಶ್ವರಿ! ಪ್ರಿಯೇ ಇಲ್ಲಿ ಬಾ! ಇಲ್ಲಿ ಬರಲು ಹೆದರುವೆಯೇಕೆ? 

ಇದೋ ನೋಡು. ನಿನಗೋಸ್ಕರವಾಗಿ ಈ ದಿವ್ಯಸಿಂಹಾಸನದಲ್ಲಿ ಅರ್ಧ ಸ್ಥಳವನ್ನು 

ಹಾಗೆಯೇ ಬಿಟ್ಟಿದ್ದೇನೆ. ಈ ಸ್ಥಾನದಲ್ಲಿ ಯಾವತರದ ಚಿಂತೆಯೂ ಇಲ್ಲ; ಯಾತನೆಗಳಿಲ್ಲ; 

ವಿರಹವಿಲ್ಲ; ನಿರಾಶೆ, ನಿಂದೆ, ಅವಮಾನಾದಿಗಳ ಹೆಸರು ಕೂಡ ಇಲ್ಲಿ ಇಲ್ಲ. ಹಾಗಾದರೆ 

ಇಲ್ಲಿ ಏನಿರುವುದೆಂದು ಕೇಳುತ್ತೀಯೋ? ಕೇವಲ ಚಿರಶಾಂತಿಯೂ, ಅನಂತವೂ ಸ್ವರ್ಗೀ 

ಯವೂ ಆದ್ದ ವಿಮಲಪ್ರೇಮವೂ, ಮಧುರಸ್ನೇಹವೂ ಇಲ್ಲಿ ಪೂರ್ಣತ್ವದಿಂದ ವಾಸಿಸ 

ತ್ತವೆ. ಲಲಿತೇ! ಇಂತಹ ರಮಣೀಯವಾದ ಸ್ಥಳಕ್ಕೆ ಬರಲು ನೀನು ಶಂಕಿಸುತ್ತಿ 

ರನಿಯೇಕೆ? ? 



ಮನಃಕಲ್ಪತವಾದ ಈ ದೃಶ್ಯವನ್ನು ನೋಡಿ ಆ ಯಾತನಾಮಯ ಸ್ಥಿತಿಯಲ್ಲಿಯೂ 

ಲಲಿತೆಯ ಮುಖಮಂಡಲದ ಮೇಲೆ ಹರ್ಷಚ್ಛಾಯೆಯು ಪಸರಿಸಿತು. ನಿರಾಶೆಯ ಘೋರ 

ವಾದ ಅಂಧಕಾರದಲ್ಲಿ ಆಶಾಕಿರಣವೊಂದು ಪ್ರಕಾಶಿಸಲು ಆ ಅಂಧಕಾರದಲ್ಲಿ ತೊಳ 

ಲುತ್ತ ಬಿದ್ದಿರುವ ಪ್ರಾಣಿಗೆ ಹೇಗೆ ಉತ್ಕಟವಾದ ಅನಂದವಾಗುವುದೋ ಅದರಂತೆಯೇ 

ರಾಜಕುಮಾರಿಗೆ ಈ ಸಮಯದಲ್ಲಿ ಅಪೂರ್ವವಾದ ಆನಂದವಾಯಿತು. ಹೃದಯವಲ್ಲ  



೫೮----------------------------- ವಾಗ್ಭೂಷಣ.----------------------------------------- 



ಭನ ಪ್ರೇಮಪೂರ್ಣವಾದ ಸಂಬೋಧನದಿಂದ ಆಕೆಯ ಹೃದಯದಲ್ಲಿಯೂ. ಮುಖಚ 

ರ್ಯೆಯಲ್ಲಿಯೂ ತುಂಬಿಕೊಂಡಿದ್ದ ವಿಷಣ್ಣತೆಯು ಕ್ಷಣಾರ್ಧದಲ್ಲಿ ನಷ್ಟವಾಯಿತು. ದುಷ್ಟ 

ರಾದ ಸರತಾನಸಿಂಹಾದಿ ಜನರು ಸಮೀಪಕ್ಕೆ ಬರುತ್ತಿರುವುದನ್ನು ನೋಡಿದೊಡನೆಯೇ 

ಲಲಿತೆಯು ಕುಮಾರನ ನಡುಕಟ್ಟಿನಲ್ಲಿದ್ದ ತೀಕ್ಷ್ಣವಾದ ಕತ್ತಿಯನ್ನು ಹೊರಗೆ ಹಿರಿದಳು. 

ಮತ್ತು ಕರುಣಸಿಂಹನ ಎದೆಯ ಮೇಲೆ ತಲೆಯನ್ನಿಟ್ಟು “ ಪ್ರಾಣಪ್ರಿಯಾ! ಇಗೋ 

ಬಂದೆನು!” ಎನ್ನುತ್ತ ಕತ್ತಿಯನ್ನು ಎದೆಯಲ್ಲಿ ಚುಚ್ಚಿ ಕೊಂಡಳು! ಕ್ಷಣಾರ್ಧದಲ್ಲಿಯೇ 

ಕುಮಾರನ ರಕ್ತಪ್ರವಾಹದಲ್ಲಿ ಲಲಿತೆಯ ಪವಿತ್ರವಾದ ರಕ್ತಪ್ರವಾಹವು ಕೂಡಿ 

ಹೋಯಿತು! ರಾಜನಂದಿನಿಯಾದ ಲಲಿತೆಯು ಎಲ್ಲರ ಸಮಕ್ಷದಲ್ಲಿಯೇ ನಗನಗುತ್ತ 

ಸ್ವರ್ಗದಲ್ಲಿ ತನ್ನ ಹೃದಯವಲ್ಲಭನ ಕಡೆಗೆ ಹೊರಟು ಹೋದಳು! 



ಅಲ್ಬಾವಧಿಯನ್ಲಿಯೇ ಭೀಮಸಿಂಹಾದಿ ಜನರು ಅಲ್ಲಿಗೆ ಬಂದು ಮುಟ್ಟಿದರು. 

ಆ ಹೃದಯಭೇದಕವಾದ ದೃಶ್ಯವನ್ನು ನೋಡಿ ಭೀಮಸಿಂಹನ ಹೃದಯವು ವಿದೀರ್ಣವಾ 

ಯಿತು. ಶೋಕದಿಂದ ಶಂಖವಾದ್ಯ ಮಾಡುತ್ತ ಅತನು ಲಲಿತೆಯ ಮೈಮೇಲೆ ಬಿದ್ದನು. 

ತೀವ್ರವಾದ ಪಶ್ಚಾತ್ತಾಪದಿಂದ ಆತನ ಪಾಪಹೃದಯವು ಚೂರ್ಣವಿಚೂರ್ಣವಾಯಿತು. 

ನೋಡುನೋಡುವರಷ್ಟರಲ್ಲಿ ಆತನ ಪ್ರೀತಿಯಮಗಳಾದ ಲಲಿತೆಯು ಆತನನ್ನು 

ತಿರಸ್ಕರಿಸಿ ಸ್ವರ್ಗಕ್ಕೆ ಹೊರಟು ಹೋದಳು! ಲಲಿತೆಯ ಮೇಲಿದ್ದಷ್ಟು ಭೀಮಸಿಂಹನ 

ಪ್ರೀತಿಯು ಇನ್ನಾರ ಮೇಲೂ ಇದ್ದಿಲ್ಲ. ಅವಳು ಆತನ ಸುಖಸರ್ವಸ್ವವಾಗಿದ್ದಳು. 

ಆ ಸರ್ವಸ್ವವು ಈ ಪ್ರಕಾರ ಬಯಲಾಗಲು ಭೀಮಸಿಂಹನು ಭ್ರಮಿಷ್ಠನಂತಾದನು! 

ಆತನ ತಲೆ ತಿರುಗಿತು. ತನ್ನ ಹತ್ತರದಲ್ಲಿ ನಿಂತುಕೊಂಡಿದ್ದ ಇಬ್ಬರು ಶರೀರರಕ್ಷಕರನ್ನು 

ಉದ್ದೇಶಿಸಿ ಆತನು ಕಠೋರಸ್ವರದಿಂದ ಮಾತನಾಡಿದನು. " ಫತ್ತೇಸಿಂಹ, ಮಾಧವ 

ಸಿಂಗ ಈ ಪಾಪಿಯಾದ ಸರತಾನಸಿಂಹನನ್ನೂ ಆತನ ಮಗನಾದ ಈ ಚಾಂಡಾಲ ದುರ್ಜ 

ಯಸಿಂಹನನ್ನೂ ಈಗಲೇ ಸೆರೆಹಿಡಿದು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನಾಳಿನ 

ದಿವಸ ಅವರನ್ನು ಕಡಿದು ಚೂರು ಚೂರು ಮಾಡಿರಿ! ಈ ದುರಾತ್ಮರ ಕಪಟ ಪಾಶದಲ್ಲಿ 

ಸಿಕ್ಕು ಬಿದ್ದು ನಾನು ನನ್ನ ಜೀವನಸರ್ವಸ್ವವಾದ ಪ್ರಿಯಲಲಿತೆಯನ್ನು ಕಳೆದುಕೊಂಡು 

ಕೂಡ್ರಬೇಕಾಯಿತು. ಲಲಿತೇ, ಮಗೂ ಲಲಿತೇ! ಹಾ!” 



ದುರ್ಗವತಿಯ ಅಪ್ಪಣೆಯಂತೆ ಹತಭಾಗಿಗಳಾದ ಸರತಾನಸಿಂಹನೂ ದುರ್ಜಯ 

ಸಿಂಹನೂ ಸೆರೆ ಹಿಡಿಯಲ್ಲಟ್ಟರು. ದೂಳಿಯಲ್ಲಿ ಬಿದ್ದು, ನಿಶ್ಚಲವೂ ನಿಷ್ಪಂದವೂ ರಕ್ತ 

ಮಲಿನವೂ ಆದ ಆ ಪ್ರಣಯಿಯುಗ್ನದ ದೇಹಗಳನ್ನು ಭೀಮಸಿಂಹನು ಅನಿಮಿಷನೇತ್ರ 

ಗಳಾದ ನೋಡುತ್ತ ಅಶ್ರುವರ್ಷವವನ್ನು ಮಾಡಹತ್ತಿದನು. ಅತನ ದೃಷ್ಟಿಯು ಲಲಿ 

ತೆಯ ಶಾಂತವೂ ತೇಜೋಮಯವೂ ಆದ ಮುಖವನ್ನು ನೋಡುವೆದರೆಲ್ಲಿ ಮಗ್ನವಾಯಿತು. 



----------------------ಪ್ರೇಮಮಂದಿರ------------------------------೫೯ 



ಇಷ್ಟರಲ್ಲಿ ಯಾಕೋ ಬಬ್ಬರು " ಭೀಮಸಿಂಹಾ! ” ಎಂದು ದೊಡ್ಡ ದನಿಯಿಂದ 

ಒದರಿದರು 



ಅದರೆ ದುರ್ಗಪತಿಗೆ ಆ ಕೂಗು ಕೇಳಿಸಲಿಲ್ಲ. ಆದುದರಿಂದ ಪರ್ವತ ಪ್ರದೇಶ 

ವೆಲ್ಲ ಪ್ರತಿಧ್ವನಿತವಾಗುವಂತಹ ಕಠೋರಸ್ವರದಿಂದ ಅದೇ ಶಬ್ಧವು ಮತ್ತೆ ಕೇಳಿಸಿತು. 

" ಭೀಮಸಿಂಹಾ! ” 



ಹತಭಾಗಿಯಾದ ಭೀಮಸಂಹನು ಆತ್ಮವಿಚಾರದೊಳಗಿಂದ ಒಮ್ಮೆಲೆ ಎಚ್ಚತ್ತನು. 

ಕಣ್ದೆರೆದು ನೋಡಿದನು. ಪುಷ್ಟದೇಹಿಯಾದ ಒಬ್ಬ ಸನ್ಯಾಸಿಯೂ ಸೌಮ್ಯಮೂರ್ತಿ 

ಯಾದ ಒಬ್ಬ ತರುಣವೀರನೂ ಆತನ ಎದುರಿನಲ್ಲಿ ನಿಂತುಕೊಂಡಿದ್ದರು. ಕೋಪದೃಷ್ಟಿ

ಯಿಂದ ಭೀಮಸಿಂಹನನ್ನು ನೋಡುತ್ತ ಆ ವೀರಪುರುಷನು ಕ್ರುದ್ಧಸ್ವರದಿಂದ ಮಾತನಾ 

ಡಿದನು.  ಅಧಮಾ! ಚಾಂಡಾಲಾ ! ! ನನ್ನ ಕರುಣಸಿಂಹನು ಎಲ್ಲಿ? ” 



ದುರ್ಗಾಧಿಸತಿಯು ಸ್ತಬ್ಧನಾದನು; ನಿಶ್ಚಲನಾದನು; ಅವನ ಬಾಯಿಂದ ಶಬ್ದ 

ಗಳು ಹೊರಡಲಿಲ್ಲ. ಅವನ ಶಕ್ತಿಯೆಲ್ಲವೂ ಲೋಪವನ್ನು ಹೊಂದಿತು; ಸರ್ವಶರೀರವು. 

ನಡುಗಹತ್ತಿತು; ಹೃದಯವು ಶೂನ್ಯವಾಯಿತು; ಆತನ ದೃಷ್ಟಿಯೊಳಗಿನ, ಚೈತನ್ಯವು 

ನಷ್ಟವಾಯಿತು; ಆತನ ಕಣ್ಣೊಳಗಿನ-ಬಾಷ್ಪಸಂಗ್ರಹವು ಕೂಡ ಬರಿದಾಯಿತು! 



ಆ ವೀರಪುರುಷನು ಯಾರೆಂಬದು ಭೀಮಸಿಂಹನಿಗೆ ಆಗಲೇ ಗೊತ್ತಾಯಿತು. 

ಕೂಡಲೇ ಅತನು ಆ ವೀರನ ಪಾದಗಳಿಗೆ ಸಾಸ್ಟಾಂಗವಾಗಿ ಎರಗಿದನು. 



" ಭೀಮಸಿಂಹ, ನನ್ನ ಕರುಣನು ಎಲ್ಲಿ! ” 



" ಜಹಾಪನಾಹ ಈ ದಾಸನನನ್ನು ಕ್ಷಮಿಸಿರಿ. ಇದೋ ನೋಡಿರಿ. ನಿಮ್ಮ ಪ್ರಿಯ 

ಸೇನಾಪತಿಯಾದ ಕರುಣಸಿಂಹನು! ಮತ್ತು ಇವಳೇ ನ--ನನ್ನ ಲಲಿತೆಯು! ಹಾಯ! 

ಹಾಯ! ತಾವು ಒಂದು ಗಳಿಗೆಗೆ ಮುಂಜೆಯೇ ಬಂದಿದ್ದರೆ!” 



ಸೌಮ್ಯಮೂರ್ತಿಯಾದ ತರುಣವೀರನು ಬೇರೆ ಯಾವನೂ ಆಗಿರದೆ ದಿಲ್ಲೀಪತಿ 

ಯಾದ ಅಕಬರಬಾದಶಹನೇ ಆಗಿದ್ದನು. ಕರುಣಸಿಂಹನು ಸಂಕಟದಲ್ಲಿ ಸಿಕ್ಕಿರುವ 

ಸುದ್ದಿಯನ್ನು ಕೃಷ್ಣಾ ಕುಮಾರಿಯು ಚಂದ್ರಚೂಡನಿಗೆ ತಿಳಿಸಿದಳು. ಕರುಣಸಿಂಹನು 

ಬಿಡುಗಡೆ ಹೊಂದಬೇಕಾದರೆ ಅಕಬರಬಾದಶನ ಹೊರತು ಗತ್ಯಂತರವಿಲ್ಲವೆಂದು ಭಾವಿಸಿ 

ಚಂದ್ರಚೂಡನು ಸಮೀಪದಲ್ಲಿಯೇ ಬೀಡಾರವನ್ನು ಹೊಡೆದಿದ್ದ ಅಕಬರನಿಗೆ 

ಈ ವೃತ್ತಾಂತವನ್ನು ತಿಳಿಸಿದನು. ಆ ಮೇಲೆ ಇಬ್ಬರೂ ಕೂಡಿ ಕರುಣಸಿಹನನ್ನು ಬಿಡಿ 

ಸುವುದಕ್ಕಾಗಿ ದುರ್ಗಕ್ಕೆ ಬಂದರು. ಆದರೆ ಹಾಯ! ಹಾಯ ! ಅವರು ಬರುವುದರೊಳ 

ಗಾಗಿಯೇ ಕಥೆಯಲ್ಲ ಮುಗಿದು ಹೋಗಿತ್ತು 1! 



---------------------------- ವಾಗ್ಭೂಷಣ.------------------------------೬೦ 




ಪಾಪಿಷ್ಠನಾದ ಭೀಮಸಿಂಹನಿಂದ ನಡೆದ ಸಂಗತಿಯೆಲ್ಲವೂ ಅಕಬರನಿಗೆ ವಿದಿತ 

ವಾಯಿತು. ಅದನ್ನು ಕೇಳಿ ಅಕಬರನು ಸಂತಪ್ತನಾದನು. ಬಳಿಯಲ್ಲಿಯೇ ಆತನ ಶರೀ  

ರರಕ್ಷಕರಾದ ಮೊಗಲ ಶಿಪಾಯಿಗಳು ನಿಂತುಕೊಂಡಿದ್ದರು. ಅಕಬರಬಾದಶಹನು 

ಕೂಡಲೇ ಆ ಶಿಪಾಯರಿಗೆ ಅಪ್ಪಣೆ ಮಾಡಿದನು. " ಈ ಚಾಂಡಾಲರೆಲ್ಲರನ್ನೂ ಈಗಿಂದೀ 

ಗಲೇ ಸೆರೆಹಿಡಿಯಿರಿ. ಯಾವ ಪಾಷಾಣಹೃದಯನು ನನ್ನ ಪ್ರಿಯ ಕರುಣನ ಪ್ರಾಣಾಪ 

ಹರಣಕ್ಕೆ ಕಾರಣನೋ, ಹೊಟ್ಟೆಯಲ್ಲಿ ಹುಟ್ಟದ ಮಗಳ ಸತ್ಯನಾಶವನ್ನು ಮಾಡುವುದಕ್ಕೆ 

ಕೂಡ ಯಾವ ದುರಾತ್ಮನು ಹೇಸಲಿಲ್ಲವೋ ಅಂತಹ ನರಾಧಮನಿಗೆ ಯೋಗ್ಯವಾದ 

ಶಿಕ್ಷೆಯಾವುದೆಂಬುದು. ಈಗ ನನಗೆ ತಿಳಿಯುವುದಿಲ್ಲ. ಇವರೆಲ್ಲರನ್ನೂ ನನ್ನ ಶಿಬಿರಕ್ಕೆ 

ಹಿಡಿದುಕೊಂಡು ಹೋಗಿರಿ. ನಾಳಿನ ದಿವಸ ಇವರ ವಿಚಾರಣೆ ಮಾಡುವೆನು. "


ಸೇನಾಪತಿಯಾದ ಅಸಫಖಾನನು ಕೂಡಲೇ ಬಾದಶಹನ ಅಪ್ಪಣೆಯಂತೆ ಆಚರಿ 

ಸಿದನು. ಭೀಮಸಿಂಹ ಮೊದಲಾದವರೆಲ್ಲರೂ ಸೆರೆಹಿಡಿಯಲ್ಪಟ್ಟರು. ಬಳಿಕ ದಿಲ್ಲೀಪ 

ತಿಯು ಅಸಫಖಾನನಿಗೆ ಹೇಳಿದನು. " ಅಸಫಖಾನ, ನಿಮಗೆ ಇನ್ನೊಂದು ಕೆಲಸವ 

ಹೇಳುತ್ತೇನೆ. ಹದಿನೈದು ದಿವಸಗಳೊಳಗಾಗಿ ಈ ದುಷ್ಟ ಭೀಮಸಿಂಹನ ದುರ್ಗವನ್ನೆಲ್ಲ 

ಉಧ್ವಸ್ತ ಮಾಡಿ ನೆಲಸಮ ಮಾಡಿಬಿಡಬೇಕು. ದುರ್ಗದೊಳಗಿನ ಬೆಲೆಯುಳ್ಳ ಒಡವೆ. 

ಗಳನ್ನೆಲ್ಲ. ಮಾರಿ ಬಂದ ಹಣದಿಂದ ಇದೇ ಸ್ಥಳದಲ್ಲೊಂದು ಭವ್ಯವಾದ ಮಂದಿರವನ್ನು 

ಕಟ್ಟುವುಂತೆ ವ್ಯವಸ್ಥೆಯಾಗಬೇಕು. ಆ ಮಂದಿರಕ್ಕೆ "ಪ್ರೇಮಮಂದಿರ" ವೆಂಬ ಹೆಸ 

ನಟ್ಟ ಅದರಲ್ಲಿ ರತ್ನಖಚಿತ‌ ಮಂಟಪ ದಲ್ಲಿ ಸಂಗಮವರೀ ಕಲ್ಲಿಂದ ನಿರ್ಮಿ 

ತವಾದ ಈ ಪ್ರೇಮಿಯುಗ್ಮದ ಪ್ರತಿಮಾದ್ವಯವನ್ನು ಸ್ಲಾಪಿಸಬೇಕು. ಇವರಿಬ್ಬ ರ 

ವಿಮಲಪ್ರೇಮದ ಸ್ಮೃತಿಯು ಚಿರಸ್ಥಾಯಿಯಾಗುವಂತೆ ಮಾಡಲು ಬೇರೆ ಉಪಾಯವು 

ನನಗೆ ತೋಚಲೊಲ್ಲದು. "



ಸಮಯದಲ್ಲಿ ಸೂರ್ಯನು ಅಸ್ತಾಚಲದ ಕಡೆಗೆ ನಡೆದಿದ್ದನು, ಆಕಾಶದ 

ನಾಲ್ಕೂ ಕಡೆಗಳಲ್ಲಿಯೂ ಖಿನ್ನತೆಯೂ ಮಲಿನತೆಯೂ ತುಂಬಿಕೊಂಡ್ಡಿದ್ದುವು. ಅದನ್ನು 

ನೋಡಿದರೆ ಲಲಿತಾಕರುಣರ ವಿರಹದಿಂದ ಪ್ರಕೃತಿಯು ಶೋಕಾಕುಲವಾಗಿದೆಯೋ 

ಎಂಬಂತೆ ತೋರುತ್ತಿತ್ತು ! 


ಚಂದ್ರಚೂಡನು ಲಲಿತಾಕರಣಸಿಂಹರ ದೇಹಗಳನ್ನು ಶೂನ್ಯದೃಷ್ಟಿಯಿಂದ 

ನೋಡುತ್ತ ನಿಂತುಕೊಂಡಿದ್ದನು. ಅಕಬರನು ಒಂದು ದೀರ್‍ಘನಿಶ್ವಾಸವನ್ನು ಬಿಟ್ಟು 

ಚಂದ್ರಚೂಡನನ್ನುದ್ದೇಶಿಸಿ ಮಾತನಾಡಿದನು. " ಸಾಧುವರ್ಯರೇ ನಡೆಯಿರಿ. ಈ ವಿಷಾದ 

ವಾದ ದೃಶ್ಯವನ್ನು ಎಷ್ಟು ಹೊತ್ತಿನವರೆಗೆ ನೋಡುತ್ತ ನಿಂತುಕೊಂಡರೂ, ಸ್ವರ್ಗ 

ಲೋಕದಲ್ಲಿ ಆನಂದದಿಂದ ವಿಹರಿಸುತ್ತರುವ ಈ ಪ್ರೇಮಿದ್ವಂದ್ವವು ಹತಭಾಗಿಗಳಾದ 

ನಮಗೆ ಬಂದು ಭೆಟ್ಟಿಯಾಗುವಂತಿಲ್ಲ! ಹಾಯು! ಹಾಯ ! ಕರುಣಸಿಂಹನು ನನಗೆ ಬೆನ್ನಿ 



--------------ಪ್ರೇಮಮಂದಿರ.----------------------------------------------೬೧ 


ನಿಂದ ಬಿದ್ದ ತಮ್ಮನಿಗಿಂತಲೂ ಹೆಚ್ಚು ಪ್ರೀತಿಯವನಾಗಿದ್ದನು. ಚಂದ್ರಚೂಡರೇ! ಕರು 

ಣನ ಸುಕುಮಾರ ದೇಹಕ್ಕೆ ಕಿಂಚಿರಾಘಾತವಾದರೆ ಅದರಿಂದ ನನ್ನ ಹೃದಯಕ್ಕೆ 

ಅತ್ಯಂತ ವೇದನೆಯಾಗುತ್ತಿತ್ತು; ಹೀಗಿದ್ದು ಚಿತಾಗ್ನಿಯ ಜ್ವಾಲೆಯಿಂದ ಈ ದೇಹವು 

ಉರಿಯುತ್ತಿರುವಾಗ ಈ ಪಾಪಿಷವಾದ ಕಣ್ಣುಗಳಿಂದ ಅದನ್ನು ನಾನು ಹೇಗೆ 

ನೋಡಲಿ!!! 


ಅಲ್ಪಾವಕಾಶದಲ್ಲಿಯೇ ಪ್ರಮೋದಭವನದ ಎದುರಿನ ಪರ್ವತಪ್ರದೇಶವು ಘೋರ 

ಸ್ಮಶಾನದ ರೂಪವನ್ನು ಹೊಂದಿತು. ಲಲಿತಾಕರುಣಸಿಂಹರ ಚಿತೆಗಳು " ಚಟ್‌ಚಟ್‌ ' 

ಎಂದು ಧ್ವನಿಮಾಡುತ್ತ ಹೊತ್ತಲಾರಂಭಿಸಿದುವು. ಆ ಚಿತೆಗಳ ಆಕಾಶಭೇದಕವಾದ 

ಜ್ವಾಲೆಯಿಂದ ದಿಙ್ಮಂಡಲವೆಲ್ಲ ಕೆಂಪಾಗಿ ಹೋಯಿತು. ಕಡಕಡಾಟವನ್ನು ಮಾಡುತ್ತ 

ಚಿತಾಗ್ನಿಯು ಆ ಪ್ರಣಯಿಯುಗಲದ ಪಾರ್ಥಿವದೇಹಗಳನ್ನು ಭಸ್ಮಗೊಳಿಸುತ್ತಿತ್ತು! 


ಇನ್ನೂ ಸ್ವಲ್ಪ ಹೊತ್ತು ಕಳೆದು ಹೋಯಿತು. ಚಿತಾಗ್ನಿಯು ಇನ್ನೂ ನೊಂದಿ 

ಶಾಂತವಾಗಿದ್ದಿಲ್ಲ. ಅದರ ಉದ್ದಾಮತೆಯು ಬಹುಮಟ್ಟಿಗೆ ಕಡಿಮೆಯಾಗಿದ್ದರೂ, ಕೈಗೆ 

ಸಿಕ ಪದಾರ್ಥಗಳನ್ನು ನುಂಗುವುದಕ್ಕಾಗಿ ಅದು ಇನ್ನೂ ತನ್ನ ಜ್ವಾಲಾರಸನೆಗಳನ್ನು 

ಚಾಚುತ್ತಲೇ ಇತ್ತು. ಅದರ ಹೊಗೆಯು ಇನ್ನೂ ಕುಂಡಲಾಕಾರವನ್ನು ಹೊಂದಿ ಆಕಾಶ 

ವೆಲ್ಲವನ್ನೂ ವ್ಯಾಸಿಸುತ್ತಿತ್ತು. 


ಈ ಭಯಂಕರವಾದ ಸಮಯದಲ್ಲಿ ಕಾವಿಯ ಬಟ್ಟೆಯನ್ನುಟ್ಬು ಕೊಂಡು ಸುವರ್ಣ 

ಕಲಶವನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬ ತರುಣ ಭೈರವಿಯು ಅಲ್ಲಿಗೆ ಬಂದಳು. 

ಅರ್ಧದಗ್ಧವಾದ ಚಿತೆಯನ್ನು ಅನಿಮಿಷನೇತ್ರಗಳಿಂದ ನೋಡುತ್ತ ನಿಂತುಕೊಂಡಳು. 

ಉನ್ಮಾದಗ್ರಸ್ತಳಾದ ಭ್ರಮಿಷ್ಠೆಯಂತೆ ಅವಳು ಓಡುತ್ತೋಡುತ್ತ ಚಿತೆಯ ಹತ್ತರಕ್ಕೆ 

ಬಂದು ಕೈಯೊಳಗಿನ ಕಲಶದಲ್ಲಿದ್ದ ಕ್ಷೀರವನ್ನು ಚಿತೆಯ ಮೇಲೆ ಸೇಚನಮಾಡಿ ಆ 

ಪವಿತ್ರಚಿತೆಯ ಅಂತಿಮಾಗ್ನಿ ಸ್ಫುಲಿಂಗವನ್ನು ನೊಂದಿಸಿದಳು. 



ಆ ಭೈರವಿಯ ಮೂರ್ತಿಯು ಅತ್ಯಂತ ಶಾಂತವಾಗಿತ್ತು. ಚಂಚಲತೆಯ ಸ್ಪರ್ಶವೇ 

ಅವಳಿಗಾಗಿದ್ದಿಲ್ಲ. ಹೃದಯದಲ್ಲಿ ಭೀತಿಯು ಎಳ್ಳಷ್ಟಾದರೂ ಇದ್ದಿಲ್ಲ. ಆಕೆಯು ಚಿತೆಗೆ 

ತೀರ ಸಮೀಪದಲ್ಲಿ ನಿಂತುಕೊಂಡು ಆದಕ್ಕೆ ನಮಸ್ಕರಿಸಿ ಮಾತನಾಡಿದಳು. " ಸಾಧ್ವೀ 

ಲಲಿತೇ! ನೀನು ನಿನ್ನ ಕೃತಿಯಿಂದ ನಿಜವಾಗಿಯೂ ಸ್ರ್ರೀಜಾತಿಯನ್ನು ಧನ್ಯವಾಗಿ 

ಮಾಡಿದಿ. ಈಗ ನೀನು ಸ್ವರ್ಗದಲ್ಲಿ ಮಣಿಖಚಿತವಾದ ಸಿಂಹಾಸನದ ಮೇಲೆ ಹೃದಯ 

ವಲ್ಲಭನ ಅರ್ಧಾಂಗಿಯಾಗಿ ಕುಳಿತುಕೊಂಡಿರಬಹುದು. ಲಲಿತೇ! ಪತಿಯೊಡನೆ ಸಹ 

ಗಮನ ಮಾಡಿ ನೀನು ಚಿರಕಾಲಿಕವಾದ ಶಾಂತಿಯನ್ನು ಹೊಂದಿದೆ. ಅಭಾಗಿನಿಯಾದ 

ನಾನಾದರೋ ಜೀವದಿಂದಿದ್ದರೂ ನರಕವಾಸವನ್ನು ಅನುಭವಿಸುತ್ತಲಿದ್ದೇನೆ. ಸತೀ 

ಸುಲಶಿರೋಮಳೆಯಾದ ಲಲಿತೇ! ಅಮರಧಾಮದಲ್ಲಿ ಹೃಡಯೇಶ್ವರನೊಡನೆ ಪ್ರೇಮ 



೬೨----------------------ವಾಗ್ಭೂಷಣ.---------------------------- 



ರಾಜ್ಯವನ್ನು ಚಿರಕಾಲ ಉಪಭೋಗಿಸು. ನಿಮ್ಮಿಬ್ಬರಿಗೂ ಇನ್ನೆಂದಿಗೂ ವಿಯೋಗ 

ವಾಗದಿರಲಿ! ? 


ಭೈರವಿಯ ಕಣ್ಣೊಳಗಿಂದ ಅಶ್ರುಗಳು ಸುರಿಯಹತ್ತಿದುವು. ಆಕೆಯು ಪುನಃ 

ಮಾತನಾಡಿದಳು. " ಕರುಣಸಿಂಹರೇ, ಹೃದಯೇಶ್ವರರೇ ಇಷ್ಟು ದಿವಸಗಳವರಿಗೆ 

ನಾನು ಹೃದಯೇಶ್ವರರೆಂದು ಬಹಿರಂಗವಾಗಿ ಕರೆದಿದ್ದಿಲ್ಲ. ಆದರೆ ಇಂದು ಈ ನಿರ್ಜನ 

ಸ್ಮಶಾನದಲ್ಲಿ ಉಚ್ಛಸ್ವರದಿಂದ " ಹೃದಯೇಶ್ವರಾ! ' ಎಂದು ನಿಮ್ಮನ್ನು ಕರೆಯುತ್ತಲಿ 

ದ್ದೇನೆ: ಈ ಜನ್ಮದೆಲ್ಲಂತೂ ನೀವು ನನಗೆ ಲಭಿಸಲಿಲ್ಲ. ನಾನು ಸತ್ತ ಹೊರತು ನೀವು 

ಸಿಕ್ಕಲಾರಿರೆಬುದೆನ್ನೂ ನಾನು ತಿಳಿದಿದ್ದೇನೆ. ಲಲಿತೆಯು ಸಾಯುವುದಕ್ಕೆ ಸಿದ್ಧಳಾದುದ  

ರಿಂದಲೇ ನಿಮ್ಮ ಲಾಭವು ಅವಳಿಗಾಯಿತು. ಆದುದರಿಂದ ಸತಿ ಮರಣವ 

ನ್ನಂಗೀಕರಿಸಿ ಹೃದಯೇಶ್ವರನ ಲಾಭವನ್ನು ಮಾಡಿಕೊಳ್ಳುವೆನು !" 



ಹೀಗೆಂದು ಭೈರವಿಯಾದ ಆ ಕೃಷ್ಣಾ ಕುಮಾರಿಯು ಆ ಪರ್ವತದ ಅತ್ಯುನ್ನತ 

ವಾದ ಶಿಖರದ ಮೇಲೆ ಹೋಗಿ ನಿಂತುಕೊಂಡಳು. ಅಲ್ಲಿಂದ ಶಾಂತಳೂ ಶ್ಯಾಮಲೆಯೂ 

ಆದ ನಿಸರ್ಗಸುಂದರಿಯನ್ನು ನಿರೀಕ್ಷಿಸಿದಳು. ಬೆರಗಾದಳು! ಎಲ್ಲೆಡೆಯಲ್ಲಿಯೂ ಅಂಧ  

ಕಾರೆವೇ ಅವಳಿಗೆ. ಗೋಚರವಾಯಿತು! ನರಕದೊಳಗಿನ ದಾರುಣದೃಶ್ಯವೇ ಈಗ 

ಅವಳ ಕಣ್ಣ ಮುಂದೆ ಕಟ್ಟದಂತಾಯಿತು. ಭಯಭೀತಳಾಗಿ ಪುನಃ ಮೇಲಕ್ಕೆ ನೋಡಿ 

ದಳು. ಲಲಿತಾ-ಕರುಣಸಿಂಹರು ನಶ್ವರದೇಹಗಳನ್ನು ಪೆರಿತ್ಯಾಗಮಾಡಿ, ದಿವ್ಯದೇಹಗ 

ಳಿಂದ ಮಂಡಿತರಾಗಿ, ಒಬ್ಬರೊಬ್ಬರ ಕೈಯಲಿ ಕೈಯನ್ನು ಹಾಕಿಕೊಂಡು ಮೆಲ್ಲಮೆಲ್ಲನೆ 

ವಿನೋದದಿಂದ ವಿಹಾರಮಾಡುತ್ತಲಿರುವುದು ಅವಳ ದೃಷ್ಟಿಗೆ ಬಿತ್ತು! ಕೃಷ್ಣ ನೀಲ, 

ಶುಭ್ರ, ರಕ್ತ ಮೊದಲಾದ ವಿವಿಧವರ್ಣದ ಮೇಘಗಳು ಆ ಪ್ರೇಮಿಯುಗ್ಮದ ಚರಣ 

ಗಳನ್ನು ನಮ್ರತೆಯಿಂದ ಚುಂಬಿಸುತ್ತಿರುವಂತೆಯೂ, ಉಜ್ವಲವಾದ ತಾರಕೆಗಳು ಅವರ  

ಸುತ್ತಲೂ ಕ್ರೀಡಿಸುತ್ತಿರುವಂತೆಯೂ ಕೃಷ್ಣಾಕುಮಾರಿಗೆ ಗೋಚರವಾಯಿತು. ಲಲಿತೆ 

ಯು ಮೇಘಮಂಡಲದೊಳಗಿಂದ ತನ್ನನ್ನು ಕುಠಿತು ಈ ಪ್ರಕಾರ ಹೇಳುತ್ತಿರುವಂತೆ 

ಅವಳಿಗೆ ಕೇಳಿಸಿತು. " ನೋಡು ಕೃಷ್ಣೇ ಕರುಣಸಿಂಹರು ನನ್ನವರು! ಜನ್ಮ 

ಜನ್ಮಾಂತರಗಳಲ್ಲಿಯೂ ಅನಂತಕಾಲದವರೆಗೂ ಅವರು ನನ್ನವರಾಗಿಯೇ ಇರುವರು ! 

ನೀನು ನಮ್ಮ ಸಂಗಡ ಬರಲಿಲ್ಲ---ಆದುದರಿಂದ ನೀನು ಅಲ್ಲಿಯೇ ಮರಣಪರ್ಯಂತವೂ 

ಶೋಕಾಗ್ನಿಯಿಂದ ಬೇಯುತ್ತ ಇರಬೇಕಾಗುವುದು! ಕೃಷ್ಣೇ! ನಮ್ಮವ್ವಾ, ಹೀಗೆಯೇ 

ಎಷ್ಟು ದಿವಸಗಳವರೆಗೆ ನೀನು ಬೆಂದು ಬೆಂಡಾಗುತ್ತಲಿರುವೆ? ” 


ಪರ್ವತಶಿಖರದ ಕೆಳಭಾಗದಲ್ಲಿ ತರಂಗಭಂಗೆಳಿಂದ ಪ್ರವಹಿಸುತ್ತಲಿರುವ 

ಸುನೀಲ ಮುಕ್ತಾವಲಿಯ ಮೃದುಮಂದವಾದ ಕರುಣಸಂಗೀತವು ಕೃಷ್ಣಾ 

ಕುಮಾರಿಗೆ ಕೇಳಬರುತ್ತಿತ್ತು. ಆ ಅಂಧಕಾರದಲ್ಲಿಯೇ ಅವಳು ಕೆಳಗೆ ನೋಡಿದಳು, 


-------------------------------- ಪ್ರೇಮಮಂದಿರ.----------------------------೬೩ 



ಫೇನರೂಪವಾದ ಧ್ನ ಅಲ್ಲಾಡಿಸುತ್ತ ಅಲ್ಲಾಡಿಸುತ್ತ ಮುಕ್ತಾವಲಿಯು 

ತಿರಸ್ಕಾರಭಾವದಿಂದ " ಕೃಷ್ಣೇ, ಹೀಗೆಯೇ ನೀನು ಎಷ್ಟು ದಿವಸಗಳವರೆಗೆ ಬೆಂದು 

ಬೆಂಡಾಗುತ್ತಲಿರುವೆ? ” ಎಂದು ತನ್ನನ್ನು ಕುರಿತು ನುಡಿಯುತ್ತಿರುವಂತೆ ಅವಳಿಗೆ 

ತೋರಿತು! 


ಸರ್ವರೂ ಈ ಪ್ರಕಾರ ಸಹಾನುಭೂತಿಯನ್ನು ತೋರಿಸುತ್ತಿರಲು ಕೃಷ್ಣಾ ಕುಮಾ 

ರಿಯು ಅದನ್ನು ಉಪೇಕ್ಷಿಸುವುದು ಅಶಕ್ಯವಾಯಿತು. ಈಗ ಆಕೆಯ ಹೃದಯದಲ್ಲಿ.ನಿರಾ 

ಶೆಯ ಪ್ರಲಯಾಗ್ನಿಯು ಭಯಂಕರವಾಗಿ ಉರಿಯುತ್ತಿತ್ತು. ಹಾಯ! ಆ ಅಗ್ನಿ ಜ್ವಾಲೆಯು 

ಅತಿಶಯ., ಭಯಂಕರವಾದುದು! ಆ ತಾಪವನ್ನು ಸಹಿಸುವುದು ಕೃಷ್ಣೆಗೆ ಶಕ್ಯವಾಗ 

ಲಿಲ್ಲ! ಶೂನ್ಯವನಸ್ಯಳಾಗಿ ಆ ಉನ್ನತವಾದ ಶಿಖರದ ಮೇಲಿಂದ ಮುಕ್ತಾವಲಿಯ 

ಮಡುವಿನಲ್ಲಿ ' ಧಡಮ್ಮ'ನೆ ಹಾರಿಕೊಂಡಳು! 


*   *   *   *

 

ಮರುದಿವಸ ಮುಂಜಾನೆ ಮುಕ್ತಾವಲಿಯ ಮಡುವಿನಲ್ಲಿ ಕೃಷ್ಣಾ ಕುಮಾರಿಯ 

ಪ್ರೇತವು ತರಂಗಗಳ ಮೇಲೆ ತೇಲುತ್ತಿರುವದನ್ನು ಓಬ್ಬ ಒಕ್ಕಲಿಗನು ಕಂಡನು. ಪಾಪ! 

ಕೃಷ್ಣೆಯು ಸತ್ತುಹೋದುದೇನೋ ನಿಜ; ಆದರೂ ಅವಳಿಗೆ ಕರುಣಸಿಂಹನು ಲಭಿಸ 

ಲಿಲ್ಲ ! ಸದೋಷ‍‌ ಮೂಲಕ ಸ್ವರ್ಗದ್ವಾರದಲ್ಲಿ ಪ್ರವೇಶಿಸಲು ಅವಳು ಅನರ್ಹ 

ಳಾದಳು 


*   *   *   *


ಕಾಲಮಾಹಾತ್ಮ್ಯದಿಂದ ಈಗ " ಪ್ರೇಮಮಂದಿರ'ವು ನಷ್ಟವಾಗಿ ಹೋಗಿದೆ, 

ಅದರೆ ಲಲಿತಾಕರುಣಸಿಂಹರ ವಿಮಲ ಪ್ರೇಮದ ಸ್ಥಿರ ಸ್ಮಾರಕವಾದ ಆ ಬೆಟ್ಟವು, ರಜ 

ಪೂತಸ್ಥಾನದಲ್ಲಿ ಪ್ರವಾಸಮಾಡುವವರಿಗೆ. ಈಗಲಾದರೂ ಗೋಚರವಾಗುತ್ತದೆ! 


============================================




 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ