https://ia802807.us.archive.org/0/items/dli.osmania.3575/198463_OU_Pragati.pdf
ಪ್ರಗತಿ ಅಥವಾ
ದಾಸ್ಯ ವಿಮೋಚನ,
ಭಿಕಾಜಿ ಪರಶುರಾಮಪಂತ ಕಾಳೆ
ಉಪೋದ್ಘಾತ
ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು
ಹೊಂದುತ್ತಲಿದೆ. ಭೂಮಿಯಂಥ ಅತಿದೊಡ್ಡ ಗೋಲವೂ, ನೊರೆ
ಜಿನಂಥ ತೀರ ಕ್ಷುದ್ರಪ್ರಾಣಿಯೂ ಕ್ರಮೇಣ ಪ್ರಗತಿಹೊಂದಿವೆ,
ಎಷ್ಟೋ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾಡು ಪ್ರಕಾಶ
ಗೊಂಡಿದ್ದ ಭೂಗೋಲವು, ಪ್ರಗತಿಯಿಂದ ತಣ್ಣಗಾಗಿ ಘನರೂಪ
ತಾಳಿ, ವಿಧವಿಧದ ಘನ ಪ್ರವಾಹ, ವಾಯುರೂಪಗಳಿಂದ ಯುಕ್ತ
ವಾಗಿ ಮನುಷ್ಯ ಮೊದಲಾದ ಪ್ರಾಣಿಗಳ ವಸತಿಗೆ ತಕ್ಕದ್ದಾಗಿದೆ.
ಅದರಂತೆಯೇ ಪ್ರಾಣಿಶಾಸ್ತ್ರದಲ್ಲಿ ವಿವರಿಸಿದಂತೆ ಮೀನವು ಪ್ರಗತಿ
ಯನ್ನುನ ಹೊಂದಿ, ಮಂಗನ, ಮನುಷ್ಯನ ರೂಪವನ್ನು
ಹೊಂದಿರುವದು. ಆದರೆ ಭೂಮಿ ಮೀನ, ಕಪ್ಪೆ, ಮಂಗ ಇವುಗಳ
ಪ್ರಗತಿಯು ಕೃತ್ರಿಮವಾಗಿರುವದಿಲ್ಲ ; ಅದು ಸ್ಫಷ್ಟಿನಿಯಮಕ್ಕನು
ಸರಿಸಿ ತನ್ನಿಂದತಾನೇ ಆಗಿರುವದರಿಂದ ನೈಸರ್ಗಿಕಪ್ರಗತಿಯಾಗಿದೆ.
ಸೃಷ್ಟಿನಿಯಮಗಳನ್ನು ಆನುಸರಿಸಿನದೆಯುವ ಅಜೇತನ ಹಾಗು ಸಚೇ
ತನಗಳ ಪ್ರಗತಿಯು ನೈಸರ್ಗಿ ಕವಾಗಿಯೇ ಆಗತಕ್ಕುದ್ದು. ಅವುಗಳ
ಪ್ರಗತಿಗೆ ಕೃತ್ರಿಮಉಪಾಯಗಳ ಯೋಜನೆಯು ಅವಶ್ಯಕತೆಯಿಲ್ಲ,
ದರೆ ಯಾವ ಪ್ರಾಣಿಗಳು ಸೃಷ್ಟಿನಿಯಮಕ್ಕೆ ವಿರೋಧವಾಗಿ ನಡೆ
ಯುವವೋ, ನಡೆಯಲುಯತ್ನಿಸುವವೋ, ಅವುಗಳ ಪ್ರಗತಿಯನ್ನು
ಕೃತ್ರಿಮಉಪಾಯಗಳಿಂದ ಮಾಡುವದು ಉಕ್ತವಾಗಿದೆ. ಈ ಪ್ರಗ
ತಿಯು ನೈಸರ್ಗಿಕದೆ ಮಾನದಿಂದ ಹೋಲಿಸಿ ನೋಡಿದರೆ ನಿಜವಾದ
ಪ್ರಗತಿಯಾಗಿರದಿದ್ದರೊ, ಮನು ಹ್ಯನೆ ವಿಚಾರಸರಣಿಗನುಸರಿಸಿ
ಯೋಗ್ಯವಾಗಿರುವದು.
ಪ್ರಗತಿಹೊಂದೋಣವೆಂದರೆ ಇದ್ದ ಸ್ಥಿತಿಯಿಂದ ಆಂತರಿಸುತ್ತ
ಕೀಳುಸ್ಥಿತಿಯನ್ನು ಬಿಟ್ಟು ಉತ್ತಮಪದವನ್ನು ಏರೋಣವು. ಪ್ರಗ
ತಿಹೊಂದದ ಸ್ಥಿತಿಗೆ ಕೀಳು ಅಥವಾ ದಾಸ್ಯ ಸ್ಥಿತಿಯೆಂತಲೂ, ಉತ್ತ
ಮಪದವೇರಿದ ಸ್ಥಿತಿಗೆ ಪ್ರಗತಿ ಅಥವಾ ದಾಸ್ಯವಿಮೋಚನಸ್ಥಿತಿಯೆಂ
ತಲೂ ನಿರ್ಬಾಧವಾಗಿ ಹೇಳಬಹುದು. ಮೇಲೆ ಹೇಳಿದಂತೆ ಮೀನವು
ಪ್ರಗತಿಹೊಂದದೆಯಿದ್ದಾಗೆ ಕೀಳು-ದಾಸ್ಯಸ್ಥ್ರಿತಿಯಲ್ಲಿ ಇದ್ದು, ಆದು
ಪ್ರಗತಿಪಥವನ್ನು ಕ್ರಮಕ್ರಮಿಸಿದಂತೆ ಪ್ರಗತಿ-ದಾಸ್ಯವಿಮೋಚನ ಸ್ಥಿತಿ
ಯೆನ್ನು ಹೊಂದಿರುವದು. ದಡ್ಡನು ಪಂಡಿತನಾಗುವದೂ, ಮೂರ್ರ್ಪನು
ವಿವೇಕಿಯಾಗುವದೂ, ಹೇಡಿಯು ಪ್ರಸಿದ್ಧ ರಣಪಂಡಿತನಾಗುವದ್ಕೂ
ಆಶಕ್ರನು ಸಶಕ್ತನಾಗುವದೂ, ಅಳುಬುರಕನು ಧೈರ್ಯಶಾಲಿಯಾ
ಗುವುದೂ, ಕಳ್ಳನು ನೀತಿಶಾಸ್ತ್ರಭೋಧಕನಾಗುವದೂ, ದರಿದ್ರನು
ಘನಶ್ರೀಮಂತನಾಗುವದ್ಕೂ ಕೂಲಿಯವನು ಯಜಮಾನನಾಗುವದೂ
ನೌಕರನು ಪ್ರಖ್ಯಾತ ಉದ್ಯೋಗಸ್ತನಾಗುವದೂ, ಜಾರಿಣಿಯು ಪತಿ
ವ್ರತಾಶಿರೋಮಣಿಯಾಗುವದೂ ಪ್ರಗತಿ ಅಥವಾ ದಾಸ್ಯವಿಮೋಚನ
ದಿಂದಲೇ. ಪ್ರಗತಿಪಥವನ್ನು ಕ್ರಮಿಸಹತ್ತಿದರೆ ಮನುಷ್ಯನಲ್ಲಿ ನಿಜ
ವಾದ ಮನುಷ್ಯತ್ವವು ಕ್ರಮೇಣಬರತೊಡಗುವದು. ಪೂರ್ವಜನ್ಮ
ಸಂಸ್ಕಾರದಿಂದ ನಮ್ಮಲ್ಲಿಯ ಎಷ್ಟೋ ಜನರು ಹುಟ್ಟಾ ಪ್ರಗತಿಗಾಮಿ
ಗಳಾದ್ದರಿಂದ ಅವರು ಬಾಲ್ಯದಲ್ಲಿಯೇ. ಮನುಷ್ಯತ್ವವನ್ನು ಹೊಂದಿ,
ತಮ್ಮ ಆ ಮಾರ್ಗದ ಶುದ್ಧಾಚರಣೆಯಿಂದ ಲೋಕವಂದ್ಯರಾಗುವರು.
ಶ್ರೀಶಂಕರಾಚಾರ್ಯ, ಶ್ರೀಮಧ್ವಾಚಾರ್ಯ, ಶ್ರೀರಾಮಾನುಜಾ
ಚಾರ್ಯ, ಏಸೂಕ್ರಿಸ್ತ, ಮಹಮ್ಮದ ಪೈಗಂಬರ, ಬುದ್ಧದೇವ,
ಶ್ರೀಸಮರ್ಧರಾಮದಾಸ್ತ ಶ್ರೀಶಿವಾಜಿಮಹಾರಾಜ, ಶ್ರೀಟೇಂಬೇ
ಮಹಾರಾಜ, ಶ್ರೀ ಶೇಷಾಚಲ ಸಾಧುಗಳು, ಮಹಾತ್ಮಾಗಾಂಧೀ,.
ಶ್ರೀಯುತ ಟಿಳಕ ಮೊದಲಾದವರು ಹುಟ್ಟಾ ಪುಗತಿಗಾಮಿಗಳಾಗಿ
ದ್ದಾರೆ. ಇವರ ಶೀಲವೇ ಪ್ರಗತಿಮಾರ್ಗದ ದ್ಯೋತಕವಾಗಿದೆ.
ಆದರೆ ಮಹಾನುಭಾವರ ಈ ಪ್ರಗತಿಮಾರ್ಗವು ದುರಭಿಮಾನಿ
ಗಳೂ ಲೇಶವೂ, ಮನುಷ ತತ್ತವಿಲ್ಲದ ದ್ವಿಪಾದಪಶುಗಳೂ ಆದ
ನಮಗೆ ಹ್ಯಾಗೆ ಗೋಚರವಾಗಬೇಕು? "ದೊಡ್ಡಸ್ತಿಕೆಬೇಕು, ಕಷ್ಟ
ಪಡಲಿಕ್ಕೆ ಬೇಡ" ಎಂಬಂತೆ ನಾವು ಲೋಕದಲ್ಲಿಯ ಸರ್ವಾಗ್ರಗಣ್ಯ
ತ್ವವನ್ನು ಬಯಸಿ, ಇಡಿ ಆಯುಷ್ಯವನ್ನು ದುಂದುಗಾರಿಕೆಯಲ್ಲಿಯೂ,
ಹೀನತರೆದ ಆಚಾರಗಳಲ್ಲಿಯೂ ಕಳೆಯುವೆವು, ಇದರಿಂದ ನಮ್ಮ
ಬಯಕೆಯು ಕೊನೆಗಾಣುವದೊತ್ತಟ್ಟಿಗೇ ಉಳಿದು ಹೊಟ್ಟೆಬಟ್ಟೆ
ಗಾಗಿಯೂ, ರೋಗಾದಿಗಳ ನಿವಾರಣಕ್ಕಾಗಿಯೂ, ಧನಾರ್ಜನಕ್ಕಾ
ಗಿಯೂ ನಾವು ಯಾವಾಗಲೂ ಪರರ ದಾಸ್ಯತ್ಯವನ್ನು ವಹಿಸಬೇಕಾ
ಗುವುದು, ಆದರೆ ಆ ದಾಸ್ಯತ್ವವವನ್ನಾದರೂ ನಾವು ಸಮಾಧಾನದಿಂದ
ವಹಿಸಿ ನಡೆದರೆ, ಆ ಸ್ಥಿತಿಯಲ್ಲಯೂ ನಮಗೆ ಕೆಲಮಟ್ಟಿಗೆ ಸುಖವೆ
ನಿಸಬಹುದು. ಸ್ವಭಾವತಃ ದುಷ್ಟರೂ, ಕೀಳರೂ, ಹೇಡಿಗಳೂ,
ಪರರ ಔನ್ನತ್ಯವನ್ನು ಕಂಡು ಅಸೂಯಪಡುವವರೂ ಆದ ನಮ್ಮಿಂದ
ಆ ದಾಸವೃತ್ತಿಯನ್ನು ಸಹಿಸಲಾಗುವದಿಲ್ಲ. ಅದಕ್ಕಾಗಿ ನಾವು
ಹಲವು ಹೇಯಪ್ರಕಾರದಿಂದ ಮಂದಿಯ ಗೋಣು ಮುರಿಯಲು ಪ್ರಯ
ತ್ನಿಸಿ ಕಡೆಗೆ ಅದರಿಂದಲೂ ದಾಸ್ಯವಿಮೋಚಿತವಾಗದಿರಲು ಮುಂದು
ಗಾಣದಾಗುವೆವು. ಆದ್ದರಿಂದ ಮನುಷ್ಯನು ಕುಹಕತನದಿಂದ ಪ್ರಗ
ತಿಯನ್ನು ಹೊಂದಲು ಸರ್ವಥಾ ಹವಣಿಸಬಾರದು, ಪ್ರಸಂಗವಶಾತ್
ಈ ದುಷ್ಟಮಾರ್ಗದಿಂದ ಪ್ರಗತಿಯಾದಂತೆ ತೋರಿದರೂ ಅದು ನಿಜ
ವಾದ ಪ್ರಗತಿಯಾಗಿರದೆ, ತನ್ನನ್ನು ಮತ್ತಿಷ್ಟು ಅಧೋಗತಿಯನ್ನು
ಹೊಂದಿಸುವ ಚಿಹ್ನವಾಗಿದೆಯೆಂದು ಅರಿತುಕೊಳ್ಳಬೇಕು.
ಪ್ರಗತಿಯನ್ನು ಪಡೆದು ದಾಸ್ಯವಿಮೋಜಚತನಾಗುವ ಇಚ್ಛೆಯು
ಲ್ಲಮನುಷ್ಯನು ಪ್ರಗತಿಥಗಳಾದ ಕೆಳಗಿನ ಉಪಾಯಗಳನ್ನು ಕಂಡು
ಪ್ರಯತ್ನ ಪೂರ್ವಕ ಅದರಂತೆ ನದೆಯಲು ಬದ್ನನಾಗಬೇಕು, ಇದ
ರಿಂದ ಪ್ರಗತಿಯು ನಿಶ್ಚಯವಾಗಿ ಆಗುವದು,
೪------------------------------------
೧ನೆಯ ಖಂಡ. -ಸ್ವಾತಂತ್ರ್ಯಪ್ರೀತಿ.
ಪ್ರಗತಿಯನ್ನು ಹೊಂದಲಿಚ್ಛಿಸುವವನಲ್ಲಿ "ಸ್ಪಾತಂತ್ರ್ಯಪ್ರೀತಿ”
ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷ್ಯವನ್ನು ನಿರಾಶೆಯಿಂದ
ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ ದುಃಖಗಳಿಂದ
ವಿಮುಖಮಾಡಲಿಕ್ಕೂ ಸ್ವಾತಂತ್ರ್ಯಪ್ರೀತಿಯು ಮನುಷ್ಯನಿಗೆ ಸಹಾ
ಯಕವಾಗುವದು. ಆರಂಭದಿಂದಲೇ ಸ್ವಾತಂತ್ರ್ಯಪ್ರೀತಿಯುಳ್ಳವನಿಗೆ
ಯಾವದುಃಖಸಂಕಟಗಳಲ್ಲಿ ಸಿಲುಕುವ ಪ್ರಸಂಗವೇ ಬರುವದಿಲ್ಲ.
ಸ್ವಾತಂತ್ರ್ಯವಿಲ್ಲದ ಮನುಷ್ಯನು ಒಂದಿಲ್ಲೊಂದು ರೀತಿಯಿಂದ
ಪರರಿಗೆ ದಾಸನಾಗಿರಬೇಕಾಗುವದು ಸಹಜವು,. ಅಂಧ ಮನುಷ್ಯನು
ಸನ್ಮಾನನೀಯ ಅಮಲದಾರನಿದ್ದರೂ ಅಷ್ಟೇ; ಯಳಃಶ್ಚಿತ ಕೂಲಿಕಾ
ರನಿದ್ದರೂ ಅಷ್ಟೇ. ಯಾವನಲ್ಲಿ ವಿಚಾರಸ್ವತಂತ್ರವಿಲ್ಲವೋ, ಆಚಾರ
ಸ್ವತಂತ್ರವಿಲ್ಲವೋ ಅವನ: ಮನುಷ್ಯನಾಗಿ ಹುಟ್ಟಿದ್ದು ನಿರರ್ಥಕವೆಂದು
ಹೇಳಬಹುದು. ಯಾಕಂದರೆ, ಲೋಕದಲ್ಲಿಯ ಪ್ರತಿಯೊಂದು ಆಚೇ
ತನ ಹಾಗು ಸಚೇತನ ವಸ್ತುಗಳು ಸ್ವಭಾವತಃ ಸ್ವತಂತ್ರವಾಗಿಯೇ
ಇರುವವು. ಅವುಗಳ ಉತ್ಪತ್ತಿಯು ಸ್ವತಂತ್ರ ಸ್ವರೂಪಾದಿಭೇದ
ಗಳು ಸ್ವತಂತ್ರ ಕಾರ್ಯಕಾರಣಭಾವಗಳು ಸ್ಟತಂತ್ರ, ಹೀಗಿರಲು
ಮನುಷ್ಯನಂಧ ಕೇವಲ ಬುದ್ಧಿ ಮಾನಪ್ರಾಣಿಯು ಅಸ್ವತಂತ್ರನಾಗಿ ಪರ
ರ ದಾಸ್ಯತ್ವವನ್ನು ವಹಿಸಲಿಕ್ಕೆ ಕಾರಣವೇನಿರಬಹುದೆಂದು ವಿಚಾರ
ಣೀಯಮಾತಾಗಿದೆ. ಆದರೆ ಮನುಷನು ಪರಾಧೀನ-ಅಸ್ವತಂತ್ರ
ನಾಗಲಿಕ್ಕೆ ಅವನಲ್ಲಿಯ ಸ್ವಾತಂತ್ರ್ಯಪ್ರೀತಿಯು ನಷ್ಟವಾದದ್ದೇ
ಕಾರಣವಾಗಿದೆ ಎಂದು ಹೇಳಬಹುದು.
"ಪ್ರಾರಂಭದಿಂದಲೇ ತಾನೊಬ್ಬ ದೊಡ್ಡ ಸಂಸ್ಥೆಯ ಯಜ
ಮಾನನು ಇಲ್ಲವೆ ಅರಸು, ಅಥವಾ ಧರ್ಮಾಧಿಕಾರಿಯು ಆಗಬೇಕು
ಎಂಬ ಕಾಲ್ಪನಿಕ ವಿಚಾರಗಳಿಂದಲೇ ಯಾಕಾಗಲೊಲ್ಲದು; ಯಾವನು
ತನ್ನ ಜೀವನಾರ್ಧಕಲಹವನ್ನು ಸಾಗಿಸಲು ಪ್ರಯತ್ನಿಸದೆ, ಕೇವಲ
ದಿಙ್ಮೂಡವಾಗಿ ಹ್ಯಾಗಾದರೂ ಜೀವನಾರ್ಥವನು , ದೊರಕಿಸಲು
೫--------------------------------
ಯತ್ನಿಸುವನೋ ಅವನಿಗೆ ಒಂದು ಪೈಯನ್ನು ಕೂಡ ಸಹಾಯಮಾ
ಡುವ ಇಚ್ಛೆಯು ನನಗಾಗುವದಿಲ್ಲ” ಎಣದು ಅಂದ್ರೂಕಾರ್ನೆಜಿ ಎಂಬ
ಪ್ರಖ್ಯಾತ ಅಮೇರಿಕನ್ ಕೋಟ್ಯಾಧೀಶನು ಎಂದು ಪ್ರಸಂಗದಲ್ಲಿ
ಹೇಳಿರುವನು. ಈ ಉದಾರಥೀಯೇ ಸುಮಾರು 2೨೦ಕೋಟಿ ರೂಪಾ
ಯಿಗಳನ್ನು ಬರೇ ಪುಸ್ತಕ ಪ್ರಸಿದ್ಧಿಸುವವರ ಸಲುವಾಗಿ ಖರ್ಚುಮಾ
ಡಿರುವನು! ಇವನು ತನ್ನ ನೌಕರರನ್ನು ಮೇಲಿಂದಮೇಲೆ ಬೋಧಿ
ಸುವದೇನೆಂದರೆ "ನೀವು ಹೆಚ್ಚುಪಗಾರದ ಇಲ್ಲವೆ ದೊಡ್ಡ ಹುದ್ದೆಯ
ಕೆಲಸಗಾರರಾಗುವ ಇಚ್ಛೆಯಿಂದ ನನ್ನಲ್ಲಿ ದುಡಿಯಬೇಡಿರಿ. ಕಲ್ಪ
ನಾಸೃಷ್ಟಿಯಲ್ಲಿಯೇ ಯಾಕಾಗಲೊಲ್ಲದು ನೀವು ನನ್ನಂದ ಇಲ್ಲವೆ
ನನ್ನಗಿಂತಲೂ ವಿಖ್ಯಾತಉದ್ಯೋಗಸ್ತರಾಗಬೇಕೆಂಬ ವಿಚಾರದಿಂದ ಪ್ರೇ
ರಿತರಾಗಿ ಉದ್ಯೋಗತತ್ಪರರಾಗಿರಿ, ಈ ಸ್ವತಂತ್ರವಿಚಾರದಿಂದ ನಿಮ್ಮ
ಉಚ್ಛ್ರೇಯವು ಬಹುಬೇಗ ಆಗುವದರಲ್ಲಿ ಸಂಶಯವಿಲ್ಲ.”
ಈ ಮೇಲಿನ ನಮ್ಮ ಸನ್ಮಾನನೀಯ ಅಮೇರಿಕನ್ ಕೋಟ್ಯಾ
ಧೀಶರ ಅರ್ಧ ಪೂರ್ಣವಾದ ಸ್ವಾತಂತ್ರ ಪ್ರೀತಿಯ ವಿಷಯದ ಉದ್ಗಾ
ರದಿಂದ ಒಂದು ಮಾತು ಸಿದ್ಧವಾಗುತ್ತದೆ. ಅದು ಯಾವದೆಂದರೆ,
ಮನುಷ್ಯನು ಹುಟ್ಟಿದಂದಿನಿಂದ ಸಾಯುವವರೆಗೆ ಯಾವಾಗಲೂ
ಉದ್ಯೋಗಿಯಾಗಿರಬೇಕಲ್ಲದೆ ಅಲಸ್ಯನೂ,, ನಿರುದ್ಯೋಗಿಯೂ,
ಹೇಡಿಯೂ, ಇದ್ದ ಸ್ಥಿತಿಯಲ್ಲಿ ಕೊಳೆಯುವವನೂ ಆಗಬಾರದು.
ನಾನು ಇಂಥಾದೊಂದು ಕೆಲಸಮಾಡಿದರೆ ಕೃತಕೃತ್ಯನಾದೆನೆಂದು
ಯಾರೂ ಎಂದೂ ಭಾವಿಸಬಾರದು. ಮನುಷ್ಯನ ಅಂತಿಮಧೇಯ
ವಾದ ಮೋಕ್ಷಪ್ರಾಪ್ತಿಯಾಗುವವರಿಗೆ ಮನುಷ್ಯನು ತನ್ನ ಯೋಗ್ಯ
ತೆಯಂತೆ ಸದಸದ್ವಿವೇಕದಂತೆ ಪ್ರತಿಕ್ಷಣಕ್ಕೂ ಪ್ರಗತಿಯನ್ನು ಪಡೆಯು
ತ್ತಿರಬೇಕು: ಶಾರೀರಿಕದಾರ್ಢ್ಯಕ್ಕಿಂತಲೂ ಮನೋದಾರ್ಥ್ಯವು
ಮಹತ್ವದಿರುವದರಿಂದ ಪರಮಶ್ರೇಯಸ್ಕರವಾದ ಮನೋದಾ
ರ್ಥ್ಯವೇ ಸ್ವಾತಂತ್ರ್ಯದ ವೃಕ್ಷವೆಂದು ತಿಳಿಯಲ್ಪಡುವದು:
ಇಂದ ಸ್ವತಂತ್ರವಿಚಾರ ಪ್ರೇರಿತವಾದ ರಾಷ್ಟ್ರವು ಧನ್ಯವು!
೬------------------------------------
ಅಲ್ಲಿಯ ಜನರೇ ಮಾನಾರ್ಹರು!! ಆದರೆ ಭಾರತೀಯರಾದ ನಾವು,
ಸದ್ಯಕ್ಕೆ ಸ್ವಾತಂತ್ರ್ಯಹೀನರದ್ದರಿಂದ, ಈ ವಿಚಾರಗಳನ್ನು ತಿಳಿಯಲು
ಮಂದಿಯ ಮೊರೆಯನ್ನು ನೋಡುವ ಪ್ರಸಂಗಬಂದದೆ. ನಮ್ಮ
ಪೂರ್ವಜರು ಸ್ವಾತಂತ್ರ್ಯದ ಪರಮಭೋಕ್ತರರೂ, ಸ್ವಾತಂತ್ರ್ಯದ
ಮೂರ್ತಿಗಳೂ ಆಗಿದ್ದರು. ಅವರು ಸ್ವತಂತ್ರ ಮನಸ್ಕರಾದ್ದರಿಂ
ದಲೇ ಅವರ ಆಗಿನ ಕೃತಿಗಳಿಂದ ಇಡಿಜಗತ್ತು ಈಗಲೂ ನಡುಗುತ್ತಿ
ರುವದು. ಅವರ ಅಪಾರಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳು
ಅನುಕರಣೀಯಗಳಾಗಿರುವವು. ಉತ್ತಮರೀತಿ, ಮಧ್ಯಮಬೇಪಾರ,
ಕನಿಷ್ಟಚಾಕರಿ” ಎಂಬ ನಾಣ್ಣುಡಿಯ ಗರ್ಭಿರಾರ್ಥವು ಸ್ವಾತಂತ್ರ್ಯ
ಶಬ್ದದ ವಿವರಣೆಯನ್ನು ಚೆನ್ನಾಗಿ ಮಾಡುತ್ತದೆ. ಈ ನಾಣ್ಣುಡಿ
ಯಲ್ಲಿ ಕೇವಲ ಸ್ವತಂತ್ರನಾಗಿ ಹೊಲವಾದುವದೂ, ಸ್ವತಂತ್ರ-ಪಾರ
ತಂತ್ರಗಳ ಮಿಶ್ರಣದಿಂದ ವ್ಯಾಪಾರಮಾಡುವದೂ, ಕೇವಲ ಸ್ವಾತಂ
ತ್ರ್ಯಹೀನನಾಗಿ ನೌಕರಿಮಾಡುವದೂ ಎಂದು ಹೇಳಿದೆ. ಸಾವಿರಾರು
ರೂಪಾಯಿತಲಬಿನ ದೊಡ್ಡ ಹುದ್ದೆಯ ನೌಕರನಿದ್ದರೂ, ಅವನು
ಸ್ವಾತಂತ್ರ್ಯಹೀನನೇಸರಿ, ಅವನಿಗೆ ಒಬ್ಬ ಬಡ ರಯತನ ಸ್ವಾತಂ
ತ್ರ್ಯಸುಖವು ಎಂದಿಗೂ ಪ್ರಾಪ್ತವಾಗಲಾರದು. ಬಹು ದಿವಸಗಳವ ರೆಗೆ
ಪರರ ಚಾಕರಿಯಲ್ಲಿದ್ದದರಿಂದ ಸ್ವಾತಂತ್ರ್ಯಮೊದಲಾದ ಶ್ರೇಷ್ಠ
ಗುಣಗಳು ಮನುಷ್ಯನಲ್ಲಿ ಲೋಪವಾಗುವವು. ಶೋಧಕ ಹಾಗು
ಕುಶಾಗ್ರ ಬುದ್ಧಿಯ ಸ್ವತಂತ್ರಮನುಷ್ಯನಿಗಿಂತ ಪರಾಧೀನ ನೌಕರ
ಮನುಷ್ಯನಲ್ಲಿ ವಿಕಸಿತವಾಗುವದು ಕಡಿಮೆ. ತನ್ನ ಸ್ವಂತದ ಕೆಲ
ಸದಸಲುವಾಗಿ ಉಪಯೋಗಿಸುವಷ್ಟು ಬುದ್ಧಿ, ಶ್ರಮ, ಯುಕ್ತಿಗ
ಳನ್ನು ಮುಂದಿಯ ಕೆಲಸಕ್ಕೆ ಯಾರೂ ಉಪಯೋಗಿಸುವದಿಲ್ಲವೆಂ
ಬದು ಸಿದ್ಧಾಂತವು. ಎಂದ ಪ್ರಾಮಾಣಿಕನೌಕರನಿಂದಾದರೂ ಈ
ಸರ್ವ ಸಾಧಾರಣನಿಯಮವನ್ನು ಉಲ್ಲಂಘಿಸಲಿಕ್ಕಾಗುವದಿಲ್ಲ. ಹೆರ
ವರ ನೌಕರಿಯಲ್ಲಿರುವಾಗ ಯಜಮಾನನಿಗೆ ಪ್ರಾಪ್ತವಾಗುವಂಥ
ಕಷ್ಟನಷ್ಯಗಳು ನೌಕರನಿಗೆ ಬರುವ ಸಂಭವವು ಕಡಿಮೆಯಾದ್ದರಿಂದ
೭---------------------------------------
ಪ್ರತಿಯೊಂದು ಕಠಿಣಪ್ರಸಂಗಕ್ಕೆ ಎದೆಗೊಟ್ಟಿಗೊಡುವೆನೆಂಬ ಆತ್ಮ
ವಿಶ್ವಾಸವು ಆ ನೌಕರನಲ್ಲಿ ಪ್ರಾಪ್ತವಾಗಲಾರದು. ಸ್ವಂತದಸಲು
ವಾಗಿ ನಾವು ಬೇಕಾದ್ದನ್ನು ಮಾಡಲಿಕ್ಕೂ, ಬೇಕಾದಲ್ಲಿಗೆ ಹೋಗ
ಲಿಕ್ಕೂ, ಬೇಕಾದಷ್ಟು ಕಷ್ಟಪಡಲಿಕ್ಕೂ, ಸಿಕ್ಕ ಅಲ್ಪ ಪ್ರತಿಫಲ
ಕೂಡ ಸಂತೋಷಪಡಲಿಕ್ಕೂ ಸಿದ್ಧರಾಗಿರುತ್ತೇವೆ. ಆದರೆ
ನಾವು ನೌಕರರಿರುವಾಗ ಸ್ಥಿತಿಯು ಇದಕ್ಕೆ ಕೇವಲ ವಿಪರೀತ
ವಾಗುವದು. ನಾವು ಹೆರವರ ನೌಕರರಿದ್ದರೂ, ಅವರ ಪ್ರತಿಯೊಂದು
ಕೃತಿಯು ನಮಗೆ ಒತ್ತಾಯದ್ದಾಗಿ ತೋರುವದು, ಕಿಂಚಿತ್‌ಕ
ಷ್ಟವೂಸಹಿಸದಾಗುವದು, ಎಷ್ಟು ಪ್ರತಿಫಲದೊರೆತರೂ ಅಲ್ಪವಾಗಿ
ತೋರಿ ದುಃಖವಾಗುವದು.
ನೌಕರಿಮಾಡದೆ ಸ್ವತಂತ್ರರೀತಿಯಿಂದ ಚರಿತ್ರಾರ್ಥಸಾಗಿಸಿಕೊ
ಳ್ಳುವ ಜನರೇ ದೇಶದ ಪ್ರಗತಿಗೆ ಕಾರಣರೂ ಆಧಾರಸ್ತಂಭರೂ ಆಗಿ
ರುವರು. ಅವರು ರಾಷ್ಟ್ರವೆಂಬ ದೇಹದ ಬಲವಾದ ಸ್ನಾಯುಗ
ಳೆಂದು ಅನ್ನಲು ಬಾಧೆಯಿಲ್ಲ. ಸ್ವಾತಂತ್ರ್ಯದಲ್ಲಿ ವಿಶೇಷ ಕಷ್ಟಗ
ಳನ್ನು ಸಹಿಸಿ, ಪ್ರಸಿದ್ಧಿಗೆ ಬರುವ ಹಾಗು ಕೀರ್ತಿಯುತರಾಗುವ ಕಠಿ
ಣಪಾಠಗಳು ಅವರಿಗೆ ಕಲಿಸಲ್ಪಟ್ಟಿರುತ್ತವೆ. ಮತ್ತು ಈ ಶಿಕ್ಷಣವೇ
ಅವರ ಪ್ರಗತಿಗೆ ಕಾರಣವಾಗಿರುತ್ತದೆ. ಅವರ ಪ್ರಗತಿಯ ಎಲ್ಲ
ಶ್ರೇಯಸ್ಸು ಆವರಲಿಯ ಸ್ವಾತಂತ್ರ್ಯಪ್ರೀತಿಯದೇ ಆಗಿರುತ್ತದೆ.
ಇಂಥವರು ನೌಕರರಾಗಿದ್ದರೆ, ಈ ಮಹತ್ವವು ಅವರಿಗೆ ಎಂದೂ ಪ್ರಾಪ್ತ
ವಾಗುತ್ತಿದ್ದಿಲ್ಲ.
ಸಾಮಾನ್ಯವಾಗಿ ವಿಚಾರಮಾಡಿದರೆ, ಯಾವನು ಹರವರ ಸೇವೆ
ಯಲ್ಲಿ ಬಹು ದಿವಸಗಳನ್ನು ಕಳೆದಿರುವನೋ, ಯಾವನು ಪ್ರತಿ ಕೆಲ
ಸಕ್ಕೆ ಮಂದಿಯ ಉಪದೇಶವನ್ನು ಗ್ರಹಿಸಬೇಕಾಗುವದೋ, ಸ್ವಮತ
ಪ್ರತಿಪಾದನದ ಸಂಧಿಯು ಯಾವನಿಗೆ ಇಡಿ ಜನ್ಮದಲ್ಲಿ ದೊರಕುವದಿ
ಲ್ಲವೋ, ಇಂಥವನು ಜವಾಬುದಾರಿಯ ಕೆಲಸಮಾಡಲಕ್ಕೆ ಸಹಸಾ
ಮುಂದುವರಿಯುವದಿಲ್ಲವೆಂಬದು ವ್ಯಕ್ತವಾಗುವದು. ಮಂದಿಯ
೮------------------------------------
ಹುಕುಮಿನಿಂದ ನಡೆದುನಡೆದು ಇಂಥವರ ಸ್ವತಂತ್ರವಿಚಾರಗಳೂ, ಸ್ವಮ
ತಗಳೂ ಲುಪ್ತವಾಗಿರುತ್ತದೆ. ಈ ಜನರು “ಒಡೆಯನ ಹೇಳಿಕೆ,
ಬಡಿಗನ ಮಾಟವೆಂಬಂತೆ ಬರೇ ಹೇಳಿದಷ್ಟು ಕೇಳುವವರಾಗಿರು
ತ್ತಾರೆ. ಈ ನಿರುಪಯೋಗನರನ್ನು ಪ್ರಸಂಗವರುತ್ ನೌಕರಿಯಿಂದ
ಬಿಡಿಸಿಬಿಟ್ಟರೆ, ಮೀನಗಳನ್ನು ನೀರೊಳಗಿಂದ ಹೊರಗೆ ಬಿಸುಟಿದಂ
ತಾಗಿ ಮುಂದುಗಾಣದಾಗುವರು. ಬಹಳ ದಿವಸಗಳವರೆಗೆ ಸರಕಾರಿ
ನೌಕರಿಯನ್ನು ಮಾಡಿ, ಪೆನ್‌ಶನ್ ತೆಗೆದುಕೊಂಡಕೂಡಲೆ ತಮ್ಮ
ಗತಿಯು ಮುಂದೆ ಹ್ಯಾಗುಗುವದೋ ಎಂಬ ದುರ್ಬಲಮಾನಸಿಕ ವ್ಯಥೆ
ಯಿಂದ ಪೀಡಿತರಾಗಿ ಕಠಿಣವಾದ ಬೇನೆಗೆ ಇಲ್ಲವೆ ಆಕಸ್ಮಿಕಮರ
ಣಕ್ಕೆ ಗುರಿಯಾಗುವ ಜನರನ್ನು ನೋಡಿದರೆ ನಮ್ಮ ಮೇಲಿನ ಬರಹದ
ಸತ್ಯತೆಯು ಕಂಡುಬರುವದು.
ನಿಜವಾದ ದೊಡ್ಡಸ್ತಿಕೆಯು ನೆಲೆಗೊಳ್ಳಬೇಕಾದರೆ, ಮನು
ಷ್ಯನಲ್ಲಿ ಆಚಾರಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯಗಳಿರಬೇಕಾಗು
ವವು, ಪೂರ್ಣ ಸ್ವಾತಂತ್ರ್ಯವು ಸಿಕ್ಕ ಹೊರತು ಮನುಷ್ಯನ ಮನ
ಸ್ಸು ಹೊಸ ಹಾಗು ಆಕಲ್ಪಿತವಾದ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸ
ಲಾರದು. ಸ್ವಾವಲಂಬನವೇ ಮನುಷ್ಯನಲ್ಲಿ ಮನುಷ್ಯತ್ವವನ್ನು೦
ಟುಮಾಡುವ ಪ್ರಾಮುಖ್ಯಸಾಧನವಾಗಿದೆ. ಅಂತೇ ಹಿಂದೆ ಹೇಳಿ
ದಂತೆ ದೊಡ್ಡ ಹುದ್ದೆಯ ಅಮಲದಾರನಿಗಿಂತ ಕೂಳಿಲ್ಲದ ಬಡ
ರಯತನು ಹೆಚ್ಚು ಯೋಗ್ಯತೆಯವನೆಂದು ಎಣಿಸಲ್ಪಡುವನು. ಆದ್ದ
ರಿಂದ ಸ್ವಾವಲಂಬನವೇ ಮನುಷ್ಯನ ಧೈಯವಾಗಿರಬೇಕು.
ತನ್ನ ಸ್ವಂತದ ಉದ್ಯೋಗದಲ್ಲಿ ತತ್ಪರನಾದಾಗ ಮನುಷ್ಯನಿಗೆ
ಆಯಾ ಉದ್ಯೋಗದ ಉತ್ಕರ್ಷ ಮಂದತ್ವಗಳ, ಅನುಕೂಲ ಪ್ರತಿಕೂಲ
ತೆಗಳ ವಿಚಾರವನ್ನು ಮಾಡಬೇಕಾಗುತ್ತದೆ. ಈ ವಿಚಾರದಿಂದ ಅವ
ನಲ್ಲಿ ಒಂದು ಪ್ರಕಾರದ ಗ್ರಹಣಶಕ್ತಿಯು, ಸಹನಶೀಲತೆಯು ದೂರ
ದೃಷ್ಟಿಯು ಹಾಗು ಮುಂದುವರಿದುಹೋಗುವಸ್ವಭಾವವು ಬೆಳೆಯಹ
ತ್ತುತ್ತವೆ. ಎರಡನೆಯವರ ಸಲುವಾಗಿ ಮಾಡಿದ ಎಂಧ ವಿಶಿಷ್ಟ
೯--------------------------------------------------------------
ಪ್ರಯತ್ನದಿಂದಲೂ ಈ ಗುಣಗಳು ಮನುಷ್ಯನಲ್ಲಿ ಪ್ರಾದುರ್ಭವಿಸುವ
ಸಂಭವವಿರುವದಿಲ್ಲ. ಸ್ವಂತದ ಉದ್ಯೋಗದಲ್ಲಿ ಸ್ವಂತದ ಲಾಭ
ಹಾನಿಗಳ ಪರವಿಯೇ ಯಾವಾಗಲೂ ನಮ್ಮನ್ನು ಜಾಗೃತಗೊಳಿಸು
ವದು; ಹಾಗು ಸತತ ಪರಿಶ್ರಮ ಮಾಡಲಿಕ್ಕೆ ಕಾರಣೀಭೂತವಾಗು
ವದು. ಸ್ವಂತದ ಉದ್ಯೋಗಗಳಲ್ಲಿ ನಮ್ಮ ಶೋಧಕ ಬುದ್ಧಿಯ
ಪೂರ್ಣ ಉಪಯೋಗಮಾಡಿಕೊಳ್ಳಲಿಕ್ಕೆ ಬರುತ್ತಿರುವದರಿಂದ, ನಮ್ಮ
ಮಾನಸಿಕ ಶಕ್ತಿಯ ಹಾಗು ಬುದ್ಧಿಯ ವಿಕಾಸಕ್ಕೆ ಬಾಧೆಬಾರದೆ, ಅವು
ಕ್ರಮೇಣ ಬೆಳೆದು ನಮ್ಮ ಪ್ರಗತಿಗೆ ಕಾರಣಗಳಾಗುವವು. ಯಾಕಂ
ದರೆ, ಯಾವ ಪರಿಸ್ಥಿತಿಯಲ್ಲಿ ನಮಗೆ ಹೆಚ್ಚು ವಿಚಾರಮಾಡುವ,
ಮನನ ಇಲ್ಲವೆ ಚಿಂತನಮಾಡುವ, ಅಭ್ಯಾಸಮಾಡುವ, ಕಾರ್ಯಕ್ರ
ಮಗೊಳಿಸುವ ಹಾಗು ಅದರಂತೆ ನಡೆಯುವ ಯೋಗ್ಯ ಸಂಧಿಯು
ಸಿಗುವದೋ, ಆ ಪರಿಸ್ಥಿತಿಯ ಯೋಗದಿಂದ ನಮ್ಮ ಉನ್ನತಿಯಾಗು
ತ್ತದೆ. ಆ ಪರಿಸ್ಥಿತಿಯಂದರೇ ಸ್ವಾತಂತ್ರ್ಯ.
ಈಗಿನಂಧ ಭಯಂಕರ ಮಹರ್ಗತೆಯ ಕಾಲದಲ್ಲಿ ಸ್ವಲ್ಪ ಬಂಡ
ವಲದಿಂದ ಯಾವದಾದರೊಂದು ಸ್ವತಂತ್ರ ಉದ್ಯೋಗವನ್ನು ತೆಗೆ
ಯುವ ಮನುಷ್ಯನು, ನಿಕರದ ಪ್ರಸಂಗದಲ್ಲಿ ಹತ್ತಿರದ ಮದ್ದುಗುಂಡು
ತೀರುತ್ತ ಬಂದಿದ್ದ ಸೇನಾವತಿಯು ವರ್ತಿಸುವಂತೆ ಬಹಳ ಎಚ್ಚರಿಕೆ
ಯಿಂದ ನಡೆಯಬೇಕಾಗುವುದು. ಅವನು ಕಾರ್ಯ ಸಾಧನಕ್ಕಾಗಿ
ತನ್ನ ಕಾಯಿಕ- ವಾಚಿಕ-ಮಾನಸಿಕ ಮೊದಲಾದ ಎಲ್ಲ ಶಕ್ತಿಗಳನ್ನೂ,
ಸದಸದ್ವಿವೇಕ ಬುದ್ಧಿಯನ್ನೂ, ಧೈರ್ಯ ಹಾಗು ಸಹನಶೀಲತೆ-ಶ್ರಮ
ಸಹಿಷ್ಣುತೆಗಳನ್ನೂ ಸಹಾಯಕ್ಕೆ ತೆಗೆದುಕೊಳ್ಳಬೇಕು. ತನ್ನ
ಒಂದೂ ಮನೋಭಿಲಾಷೆಯ ಗುರಿಯು ವ್ಯರ್ಧವಾಗದಂತೆ, ಒಂದು
ಪೈಕೂಡ ಆಕ್ರಮವಾಗಿ ವೆಚ್ಚವಾಗದಂತೆ, ಪ್ರತಿಯೊಂದು ಪ್ರಯ
ತ್ನವೂ ನಿಷ್ಪಲವಾಗದಂತೆ ಜಾಗರೂಕನಾಗಿರಬೇಕು. ಅಂದರೆ ಅವನ
ಪ್ರಗತಿಯಾಗಹತ್ತುತ್ತದೆ: ಮಹತ್ವಾಕಾಂಕ್ಷೆಯು ತನ್ನಿಂದ ಎಂಥ
ಪರಿಶ್ರಮವನ್ನು ಮಾಡಿಸಿಕೊಳ್ಳುತ್ತದೆಂಬದು ನಿದರ್ಶನಕ್ಕೆ ಬರಹ
೧೦-------------------------------------------------------------
ತುತ್ತದೆ. ಅತ್ಯಂತ ಕಠಿಣ ಹಾಗು ತೊಡಕಿನ ಪ್ರಸಂಗಗಳಿಗೆ
ಮೇಲಿಂದ ಮೇಲೆ ಎದೆಗೊಡಬೇಕಾಗುವದರಿಂದಲೂ, ಮನುಷ್ಯನ
ಬಹಿಃಪ್ರಾಣವಾದ ಹಣದ ಸಲುವಾಗಿ ಆಗಾಗ್ಗೆ ಕಷ್ಟ-ನಷ್ಟಗಳನ್ನು
ಹೊಂದಬೇಕಾಗುವದರಿಂದಲೂ, ತೇಜಿ-ಮಂದತ್ವಗಳ ಆಘಾತಗಳಿಂದ
ಮನಸ್ಸಿನಲ್ಲಿ ಉಂಟಾಗುವ ಧೈರ್ಯ-ದೌರ್ಬಲ್ಯಗಳಿಂದಲೂ ಆ ಮನು
ಷ್ಯನ ಸ್ಥಿತಿಯು ಚದರಂಗದ ಆಟದಲ್ಲಿ ಸೋತ ಮನುಷ್ಯನಂತೆ
ಆಗುವದು. ಈ ಹೊಸ ಉದ್ಯೋಗಸ್ತನು ಸ್ವಪ್ನದಲ್ಲಿ ಕೂಡ ಅಜಾಗ
ರೂಕನಾಗಿರಬಾರದು; ಕುಲ್ಲಕ ತಪ್ಪು ಕೂಡ ಪ್ರಸಂಗವಶಾತ್
ಆವನ ನಾಶಕ್ಕೆ ಕಾರಣವಾಗುವದು. ಅವನು ಒಂದು ಕ್ಷಣವನ್ನು
ಕೂಡ ಆಲಸ್ಯದಲ್ಲಿ ಯಾಗಲಿ, ನಿಷ್ಕಾಳಜಿಯಲ್ಲಾಗಲಿ ಕಳೆಯಕೂಡದು.
ಯಾಕಂದರೆ, ಅವನ ಉದ್ಯೋಗದ ಉಚ್ಛ್ರೇಚ್ಛಯ-ಅಪಚ್ಛ್ರೇಯಗಳು
ಆಗಿನ ಅವನ ವರ್ತನ ಚಾತುರ್ಯವನ್ನು ಹೆಚ್ಚಾಗಿ ಅವಲಂಬಿಸಿರು
ತ್ತವೆ: ಈ ಕಾಲದಲ್ಲಿ ಅವನು, ಮಹಾಯುದ್ದದ ಪ್ರಸಂಗದಲ್ಲಿ
ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹಗಲು-ರಾತ್ರಿ ಒಂದೇಸವನೆ ತಮ್ಮ
ಶಿಬಿರವನ್ನು ಕಾಯುವ ಕಾವಲುಗಾರರಂತೆ ಬಹಳ ಎಚ್ಚರದಿಂದಿರ
ಬೇಕಾಗುವದು.
ಎರಡನೆಯವರ ಸಲುವಾಗಿ ನೌಕರನಾಗಿ ದುಡಿಯಬೇಕಾಗಿ
ದ್ದಾಗ ಮನುಷ್ಯನ ಮಹತ್ವಾಕಾಂಕ್ಷೆಯು ಬಹಳವಾದರೆ, ಅತಿದೊಡ್ಡ
ಪಗಾರದೊರಕಿಸುವ ಬಹಳ ದೊಡ್ಡ ಹುದ್ದೆಯನ್ನು ಪಡೆಯುವವರೆಗೆ
ಮಾತ್ರ ಇರುವದು. ಆದರೆ ತನ್ನ ಸ್ವಂತದ ಉದ್ಯೋಗದಲ್ಲಿ ತೊಡ
ಗಿದ ಮನುಷ್ಯನಿಗೆ ಬೇರೆತರದ ಮಹತ್ವಾಕಾಂಕ್ಷೆಯ ಸ್ಪುರಣವಾಗು
ತ್ತಿರುತ್ತದೆ. ಸ್ವಾತಂತ್ರ್ಯದ ಮಧುರ ಫಲಗಳ ಸೇವನದ ಅನುಭವವೇ
ಲಭಿಸುತ್ತಿದ್ದದರಿಂದ ಅವನು ಆ ಸ್ವಾತಂತ್ರ್ಯರಕ್ಷಣಕ್ಕಾಗಿಯೂ
ಅದನ್ನು ವೃದ್ಧಿಗೊಳಿಸುವದಕ್ಕಾಗಿಯೂ ಬೇಕಾದಷ್ಟು ಶ್ರಮವಹಿ
ಸಲು ಸ್ವಸಂತೋಷದಿಂದ ಸಿದ್ಧನಾಗಿರುತ್ತಾನೆ. ಅಂಗೀಕೃತಉದ್ಯೋ
ಗವನ್ನು ಮನಃಪೂರ್ವಕವಾಗಿ ಮಾಡುವಾಗ ಯಾವ ಹೊಸ ಹೊಸ
೧೧------------------------------------------------------------------
ಸಂಗತಿಗಳ ಅನುಭವವು-ಶಿಕ್ಷಣವು ಮನುಷ್ಯನಿಗೆ ಎಷ್ಟು ತೀವ್ರ ಪ್ರಾಪ್ತ
ವಾಗುವವೋ ಆ ಪ್ರಕಾರದ ಅನುಭವವೂ ಶಿಕ್ಷಣವೂ ಪರರ ದಾಸ್ಯತ್ವ
ದಲ್ಲಿದ್ದಾಗ ಜನ್ಮಜನ್ಮಾಂತರದಲ್ಲಿಯೂ ದೊರಕದು.
ಜವಾಬದಾರಿಯ ಭಾವನೆಯೇ ಶಿಕ್ಷಣಹೊಂದುವ ಸುಲಭಮಾ
ರ್ಗವಾಗಿದೆ. ಬಹಳಕಠಿಣ ಹಾಗು ಜವಾಬುದಾರಿಯ ಪ್ರಸಂಗಗಳು
ಬಂದಹೊರತು ತಾವು ಮುಂದೆ ಏನು ಮಾಡಬಹುದೆಂಬದನ್ನು ಊಹಿ
ಸಲಿಕ್ಕಾಗುವದಿಲ್ಲ; ನಮ್ಮ ಸಾಮರ್ಥ್ಯದ ಕಲ್ಪನೆಯು ನಮಗಿರುವ
ದಿಲ್ಲ. ಆದರೆ ಯಾವಾಗ ನಮಗೆ ಎರಡನೆ ಕಡೆಯಿಂದ ಸಹಾಯವು
ದೊರೆಯುವ ಸಂಭವವಿರುವದಿಲ್ಲವೋ, ಸ್ವಂತದ ಕಾಲಮೇಲೆ ನಿಂತ
ಹೊರತು ಅನ್ಯಮಾರ್ಗವಿರುವದಿಲ್ಲವೋ ಆವಾಗ್ಗೇ ನಾವು ನಿಕರ
ದಿಂದ ಪ್ರಯತ್ನ ಮಾಡಹತ್ತುತ್ತೇವೆ. ಈ ನಿಕರದ ಪ್ರಯತ್ನದಲ್ಲಿ
ಈಶ್ವರನು ನಿಶ್ಚಯದಿಂದ ನಮಗೆ ಯಶಸ್ಸು ಕೊಡುವನು,
ಸೇವಾಧರ್ಮಕ್ಕೆ ಕನಿಷ್ಠತ್ವಬರಲಿಕ್ಕೆ ಮುಖ್ಯ ಕಾರಣವೇನಂ
ದರೆ, ಸೇವಾಧರ್ಮದಿಂದ ಸೇವಕನ ಸತ್ವಕ್ಕೆ ಭಂಗಬರುತ್ತಿದ್ದು, ಪ್ರಗ
ತಿಮಾರ್ಗಾವಲಂಬನಕ್ಕೆ ಅವನಿಗೆ ಸಂಧಿಯೇ ಸಿಗದಾಗುವುದು. ಹೀಗೆ
ನೈಸರ್ಗಿಕಗುಣಗಳ ವೃದ್ಧಿಗೇ ಭಂಗಬರುತ್ತಿರಲು, ಪ್ರಯತ್ನಪೂರ್ವ
ಕಸಾಧಿಸಬೇಕಾದ ಪ್ರಗತಿಯ ಗತಿಯೇನು? ಹೀಗಾಗಿ ಸೇವಕನು
ಎಲ್ಲ ಬಗೆಯಿಂದಲೂ ದಾಸ್ಯವಿಮೋಚನ ಮಾಡಿಕೊಳ್ಳಲು (ಪ್ರಗತಿ
ಹೊಂದಲು) ಅಯೋಗ್ಯನಾಗುತ್ತಾನೆ.
ಇನ್ನು ಕೆಲವರು ಹೀಗೆ ತರ್ಕಿಸಬಹುದು, ನಾವು ಎಲ್ಲರೂ
ಸ್ವತಂತ್ರರಾಗುವದೂ ಎಲ್ಲರೂ ಉದ್ಯೋಗಸ್ತರಾಗುವದೂ ಅರಸರಾ
ಗುವದೂ ಶಕ್ಯವಾಗಿಯಾದರೂ ತೋರುವದೋ "ಎಲ್ಲರೂ ಪಲ್ಲ
ಕ್ಕಿಯಲ್ಲಿ ಕೂತರೆ ಪಲ್ಲಕ್ಕಿ ಹೊರುವವರಾರು” ತಾರ್ಕಿಕರ ಈ ತರ್ಕ
ವು ವಿಚಾರಣೀಯವಾಗಿದೆ, ಆದರೆ ಇದೇ ವಿಚಾರವು ಸ್ವತಂತ್ರ ರೀತಿ
ಯಿಂದ ಇರುವ ಉದ್ಯೋಗಸ್ಥರ, ರಯತರ ಇಲ್ಲವೆ ಅರಸರ ಮನಸಿ
ನಲ್ಲಿ ಬಂದು ಅವರು ತಮ್ಮ ತಮ್ಮ ವೃತ್ತಿಗಳನ್ನು ಬಿಟ್ಟುಕೊಟ್ಟು
೧೨--------------------------------------------------------------
ನಮ್ಮಂತೆ ನೌಕರರಾಗಬಯಸಿದರೆ ನಮ್ಮ ತಾರ್ಕಿಕರ ತರ್ಕಕ್ಕೇನೆ
ನ್ನಬೇಕಾಗುವದು? ಆಗ ನಾವು ನೌಕರಿ ಮಾಡುವದಾದರೂ ಯಾರ
ದು? ಹೊರಲಿಕ್ಕೆ ಪಲ್ಲಕ್ಕಿಯಾದರೂ ಯಾರದುಸಿಗುವದು? ಆದ್ದರಿಂದ
ಸ್ವಾತಂತ್ರ್ಯ ಪ್ರೀತಿಯುಳ್ಳ ಮನುಜನು ಹೊಲ್ಲದ ಈ ಹೇಡಿಕುತರ್ಕ
ಗಳಿಗೆ ಮನಸ್ಸನ್ನೆಳಿಸದೆ, ತನ್ನ ಅಂತಃಕರಣಕ್ಕೆ ಸರಿದೋರುವ ಮಾರ್ಗ
ವನ್ನು ಹಿಡಿದು ತೀವ್ರವಾಗಿ ಪ್ರಗತಿಯನ್ನು ಹೊಂದಲುಯತ್ನಿಸಬೇಕು.
ಸ್ವಾತಂತ್ರ್ಯಪ್ರೀತಿಯುಳ್ಳ ಎಲ್ಲ ವ್ಯಕ್ತಿಗಳ ಆಧಿಕಾರವು ಲೋಕದಲ್ಲಿ
ಒಂದೇಸವನೆ ಆಗಿರುವದು, ಆ ವೃತ್ತಿಯಿಂದ ನಮ್ಮನ್ನು ಪರಾಙ್ಮು
ಖಮಾಡಲಿಕ್ಕೆ ಯಾವನಿಗೂ ಅಧಿಕಾರವಿರುವದಿಲ್ಲ. ಸ್ವಾತಂತ್ರ್ಯ
ಪ್ರೀತಿಯನ್ನು ವೃದ್ಧಿಗೊಳಿಸದೆ ಕುಗ್ಗಿಸುವದೆಂದರೆ, ಮನುಷ್ಯತ್ವದ
ಕರ್ತವ್ಯಕ್ಕೆ ಭಂಗ ತಂದಂತಾಗುವದು. ಆದ್ದರಿಂದ ಮನುಷ್ಯತ್ವಕಾ
ಯ್ದುಕೊಳ್ಳುವದಕ್ಕಾಗಿ ಪ್ರತಿಯೊಬ್ಬನೂ ಸ್ವಾತಂತ್ರ್ಯ ಪ್ರಿಯ
ನಾಗಬೇಕು.
ಪರತಂತ್ರ ಮನುಷ್ಯನು ಸ್ವತಂತ್ರನಾಗಬಯಸಿ ಪ್ರಯತ್ನ ಪಡಹ
ತ್ತಿದರೆ ಅವನಿಗೆ ಒಮ್ಮೆಲೆ ಸರ್ವವೂ ಸಾಧ್ಯವಾಗಲಾರದೆಂಬದು ನಿಜವು;
ಯಾಕಂದರೆ ಗತಯುಷ್ಯವು ಪಾರತಂತ್ರರುವಿನಿಂದ ಬಿಗಿಯ
ಲ್ಪಟ್ಟಿತ್ತಾದ್ದರಿಂದ, ಈಗಲೂ ಅವನ ದೇಹದ ಮೇಲೆ, ಮನಸ್ಸಿನ
ಮೇಲೆ ಆ ರಜ್ಜುವಿನ ಬಾಸಾಳಗಳು ಮೂಡಿರುವದರಿಂದ, ಕೆಲಕೆಲವು
ಪ್ರಸಂಗಗಳಲ್ಲಿ ತನ್ನಿಂದ ತಾನೇ ಅವನು ತನ್ನ ಸ್ವಾತಂತ್ರ್ಯಭಂಗಕ್ಕೆ
ಕಾರಣನಾಗಿ, ಪ್ರಗತಿಗೆ ಆಗಿನ ಮಟ್ಟಿಗೆ ಬಾಧೆ ತಂದುಕೊಳ್ಳುವನು.
ಆ ರಜ್ಜುವಿನ ಬಾಸಾಳಗಳು ಸಂಪೂರ್ಣ ಇಲ್ಲದಂತಾಗಲು ಅವನ
ಪ್ರಗತಿಯು ಒಳ್ಳೆ ಒತ್ತರದಿಂದ ಆಗಹತ್ತುವದು. ಆಗ ಅವನು
ತನ್ನ ಮೊದಲಿನ ಹಾಗು ಈಗಿನ ಮಹತ್ವಾಕಾಂಕ್ಷೆಗಳ ತುಲನೆಯನ್ನು
ಮಾಡಿದರೆ, ತನ್ನಲ್ಲಿ ಒಂದು ಪ್ರಕಾರದ ಸಾಮರ್ಥ್ಯವು ಉಂಟಾಗಿರುವ
ದೆಂದು ಅವನಿಗೆ ಕಂಡುಬರುವದು. ಸ್ವಾವಲಂಬನದ ಸುಖದ ಮುಂದೆ
ಪರಾವಲಂಬನದ ಸುಖವು ಅವನಿಗೆ ತುಚ್ಚವಾಗಿ ಕಾಣಹತ್ತುವದು.ಹೀಗೆ
೧೩---------------------------------------------------------------------
ಆಗುವದು ಸಿದ್ಧಮಾತಾಗಿದ್ದರೂ ನಮ್ಮಲ್ಲಿಯ ಬಹುಜನರು ತಿಂಗತಿಂಗ
ಳಿಗೆ ತಪ್ಪದೆ ಸಿಗುವ ಪಗಾರಕ್ಕಾಗಿಯೂ, ಹೆಚ್ಚು ಜವಾಬುದಾರಿ ಸಾಹ
ಸಗಳಿಂದ ಅಲಿಪ್ತರಾಗುವದಕ್ಕಗಿಯೂ, ತಮ್ಮ ದೇಹವನ್ನು ಮಾರಿ
ಕೊಳ್ಳುವರು. ಇವರು ತಮ್ಮ ಭಾಷಣಸ್ವಾತಂತ್ರ್ಯ, ಆಚಾರಸ್ವಾ
ತಂತ್ರ್ಯ, ವಿಚಾರಸ್ವಾತಂತ್ರ್ಯಗಳನ್ನು ಕಳಕೊಂಡು ತಮ್ಮ ಪ್ರಗತಿ
ಯನ್ನು ತಮ್ಮ ಕಾಲಿಲೆ ತುಳಿದು ನಾಶಮಾಡಿಕೊಳ್ಳುತ್ತಾರೆ. ಈಗಿನ
ಕಾಲದಲ್ಲಿ ದೊಡ್ಡ ಪದವೀಧರರು ಮೊದಲು ಮಾಡಿಕೊಂಡು, ಅಕ್ಷರ
ಶತ್ರುವಿನವರೆಗೆ ಪ್ರತಿಯೊಬ್ಬನ ಒಲವೂ ಚಾಕರಿಯ ಕಡೆಗೇ ಇರು
ವದು, ಬಿ, ಏ, ಪಾಸಾದರೂ ನೌಕರಿಯ ಬಯಕೆಯು; ಎಂ, ಏ
ಪಾಸಾದರೂ ನೌಕರಿಯ ಬಯಕೆಯು; ಆಯ್, ಸಿ, ಎಸ್, ಪಾಸಾ
ದರೂ ನೌಕರಿಯ ಬಯಕೆಯು; ಹರಹರ! ಸ್ವಾಮಿತ್ವ ಮೆರೆಯಿಸುವದ
ಕ್ಕಾಗಿ, ಬೇಕಾದ ಸಂಗತಿಯನ್ನು ಸಾಧ್ಯಮಾಡಿಕೊಳ್ಳುವದಕ್ಕಾಗಿ,
ಸ್ವಾತಂತ್ರ್ಯಕ್ಕಾಗಿ, ಕರ್ತವ್ಯನಿಷ್ಠೆಯನ್ನು ತೋರಿಸುವದಕ್ಕಾಗಿ
ಮತ್ತು ಸ್ವಾವಲಂಬನಕ್ಕಾಗಿ ಹುಟ್ಟಿ ಬೆಳೆದ ಮನುಷ್ಯ ಪ್ರಾಣಿಯು
ಸೇವಾಧರ್ಮದಲ್ಲಿ ಸುಖಸಮಾಧಾನದಿಂದಿರುವದು ಯೋಗ್ಯವೆ?
ಹೇಳಿದ ಚಾಕರಿಮಾಡಿಕೊಂಡು, ಹಾಕಿದಷ್ಟು ಬಕ್ಕರಿಯನ್ನು ತಿನ್ನುವ
ನಾಯಿಯಂತೆ ದಾಸ್ಯದಲ್ಲಿ ಸುಖ ಸಮಾಧಾನಗಳಿಂದಿರುವದು ಭೂಷ
ಣವೇ? ಕುಂಠಿತ ಪ್ರಗತಿಗಾಮಿಗಳಾಗಿ ಸದೈವದಾಸ್ಯತ್ವದಲ್ಲಿರಲು ಹವ
ಣಿಸುವದು ಎಂದ ಖೇದಕರವಾದ ಮಾತಿದು !
ಸ್ವಾತಂತ್ರ್ಯಸುಖವನ್ನು ಅನುಭವಿಸಲಕ್ಕೂ, ಸ್ವಕರ್ತವ್ಯದಿಂದ
ಉನ್ನತಿಯನ್ನು ಹೊಂದಲಿಕ್ಕೂ, ಸ್ವಂತದ ಬಗ್ಗೆ ಸ್ವತಂತ್ರ ವಿಚಾರ
ಮಾಡಿ ಧೈಯವನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಈಶ್ವರನು ಮನುಷ್ಯ
ಪ್ರಾಣಿಯನ್ನು ನಿರ್ಮಿಸಿರುವನು ಹೀಗಿದ್ದು ನಾವು ಪೂರ್ವಸುಕೃತ
ದಿಂದ ಪ್ರಾಪ್ತವಾದ ನಮ್ಮ ಮನುಷ್ಯ ದೇಹವನ್ನು ಪರರ ದಾಸ್ಯತ್ವ
ದಲ್ಲಿ ಕಳೆಯುವದು ಯೋಗ್ಯವಾಗಬಹುದೇ? ಇನ್ನು ಯಾವನಿಗೆ
ಸ್ವತಂತ್ರ ವಿಚಾರಗಳು ಹರಿಯುವದಿಲ್ಲವೋ, ಯಾವನು ಪರರ ದಾಸ್ಯ
೧೪------------------------------------------------------------
ದಲ್ಲಿಯೇ ಅಂತಃಕರಣ ಪೂರ್ವಕವಾಗಿ ಸುಖಿಯಾಗಿರುವನೋ,
ದೇವರು ಇಟ್ಟ ಸ್ಥಿತಿಯಲ್ಲಿಯೇ ಯಾವನು ಪರಮ ಸುಖಿಯಾಗಿರು
ವನೋ ಅವನು ತನ್ನ ಇಚ್ಛೆಯಂತೆ ಇರಲಿ, ಆದರೆ ಯಾವನು
ಮೇಲಿನ ಎಲ್ಲ ದುಃಖಗಳನ್ನು ಅಂತಃಕರಣದಲ್ಲಿ ದುಃಖಗಳೆಂದು
ಭಾವಿಸಿ, ತೋರಿಕೆಯಲ್ಲಿ ಸುಖಿಯಾಗಿರುವವನಂತೆ ತೋರುವನೋ
ಅವನು ಮಾತ್ರ ಕೂಡಲೆ ತನ್ನ ಸ್ವಾತಂತ್ರ್ಯಪ್ರೀತಿಯನ್ನು ಜಾಗ್ರತ
ಗೊಳಿಸಿಕೊಂಡು ದಾಸ್ಯವಿಮೋಚನಕ್ಕೆ ಪ್ರಯತ್ನಿಸತಕ್ಕದ್ದು. ಪ್ರಗತಿ
ಮಾರ್ಗವು ಕಷ್ಟಸಾಧ್ಯವಾಗಿದೆ ಎಂಬದು ನಿಜವಾಗಿದ್ದರೂ, "ಹುಚ್ಚು
ಹೋಗದೆ ಲಗ್ನವಾಗದು, ಲಗ್ನವಾಗದೆ ಹುಚ್ಚು ಹೋಗದು” ಇಲ್ಲವೆ
"ಈಸುಬಂದ ಹೊರತು ನೀರಹೆದರಿಕೆ ಹೋಗುವದಿಲ್ಲ, ನೀರ ಹೆದರಿಕೆ
ಹೋದ, ಹೊರತು ಈಸುಬರುವದಿಲ್ಲ” ಎಂಬಂತೆ ಪ್ರಗತಿಮಾರ್ಗ
ದಲ್ಲಿ ಪ್ರವೇಶಿಸಿದ ಹೊರತು ಪ್ರಗತಿಹೊಂದುವ ಬಗೆ ಹ್ಯಾಗೆ? ಆದ್ದ
ರಿಂದ ಮನುಷ್ಯನು ಸ್ವಾತಂತ್ರ್ಯಪ್ರೀತಿಯೆಂಬ ಈಸಗುಂಬಳಕಾಯಿ
ಯನ್ನು ಕಟ್ಟಿಕೊಂಡು ಈ ಸಂಸಾರವೆಂಬ ಸಾಗರದಲ್ಲಿ ಬಿದ್ದುಬಿಟ್ಟರೆ,
ಅವನು ಪ್ರಗತಿಪಧವನ್ನು ಹಿಡಿದು, ಶ್ರೇಷ್ಠವಾದ ಮಾನ-ಕೀರ್ತಿಗಳಿಂದ
ಯುಕ್ತನಾಗಿ ಭವವನ್ನು ನಿರಾಯಾಸವಾಗಿ ದಾಟುವನು.
=================
೨ನೆಯ ಖಂಡ-ದೃಢನಿಶ್ಚಯ,
" ನಿಶ್ಚಯಾಚೆ ಬಲ, ತುಕಾಮೃಣೆ ಹೇಚಿ ಸರ್ವಾಚೆ ಫಲ "
ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು
ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚ
ಯದಿಂದ ಜಗತ್ತಿನಲ್ಲಿ ಬೇಕಾದಂಧ ಪದವಿಗೇರಬಹುದಾಗಿದೆ. ಪೂರ್ವ
ದಲ್ಲಿ ಆರ್ಯಾವರ್ತದಲ್ಲಿ ದೀಪಕನೆಂಬ ಒಬ್ಬ ಮಹಾದೃಢನಿಶ್ಚಯಿ
ಯು ಆಗಿಹೋದನು. ಅವನು ಒಂದು ಪ್ರಸಂಗದಲ್ಲಿ ತೋರಿಸಿದ ದೃಢನಿ
ಶ್ಚಯವು ನಮ್ಮ ವಾಚಕರ ಅವಗಾಹನೆಗೆ ತಂದು ಕೊಡುವದು ಅವ
೧೫-------------------------------------------------------
ಶ್ಯವೆಂದು ನಮಗೆ ತೋರುವದರಿಂದ ಅದರ ಉಲ್ಲೇಖವನ್ನು ಇಲ್ಲಿ
ಮಾಡುವೆವು.
ಈ ದೀಪಕನು ಬಾಲ್ಯದಲ್ಲಿ ವಿದ್ಯೆ ಕಲಿಯುವದಕ್ಕಾಗಿ ಒಬ್ಬ
ಮಹಾಜ್ಞಾನಿಯಾದ ಋಷಿಯ ಬಳಿಯಲ್ಲಿರುತ್ತಿದ್ದನು. ಪೂರ್ವದ ಅಧ್ಯಾ
ಪಕರು, ಋಷಿಗಳು, ಶಿಕ್ಷಣ ಕೊಡುವ ಪದ್ಧತಿಯು ಈಗಿನಂತೆ ಇದ್ದಿಲ್ಲ.
ಅವರ ಕಲಿಸೋಣವು ಗಹನವು. ಆಗಿನ ಗುರುಗಳು ಈಗಿನಂತೆ,
ವಿದ್ಯಾರ್ಥಿಗಳಿಂದ ಪ್ರಾಥಮಿಕ ಪುಸ್ತಕಗಳನ್ನು ಓದಿಸಿ ಬಳಿಕ ಉಚ್ಚ
ತರದ ಶಿಕ್ಷಣ ಕೊಡುವಂತೆ ಪಾಠ ಹೇಳುತ್ತಿದ್ದಿಲ್ಲ. ಅವರು ತಮ್ಮ
ಲ್ಲಿಗೆ ಬಂದ ಎಲ್ಲ ವಿದ್ಯಾರ್ಥಿಗಳನ್ನು ಅವರವರ ಶೀಲ, ಗುಣಗ್ರಾಹ
ಕತೆ, ದೃಢನಿಶ್ಚಯ ಮೊದಲದವನ್ನು ಪರೀಕ್ಷಿಸುವದಕ್ಕಾಗಿ ತಪಗ
ಟ್ಟಲೆ ಸೇವೆ ಮಾಡಲು ಹಚ್ಚುವರು, ಉತ್ತಂಕನೆಂಬ ಮಹಾತ್ಮಶಿ
ಷ್ಯನು ಗುರುಗಳಲ್ಲಿ ದನಕಾಯು ವಿದ್ಯೆ ಸಂಪಾದಿಸಿದನು. ಶ್ರೀ
ಕೃಷ್ಣನು ಕಟ್ಟಿಗೆ ತಂದು ವಿದ್ಯೆಗಲಿತನು. ಹೀಗೆ ಗುರುಗಳು
ವಿದ್ಯಾರ್ಥಿಗಳನ್ನು ಸೇವೆಮಾಡಲಿಕ್ಕೆ ಹಚ್ಚಿ, ಅವರ ಅಂತಶುದ್ದಿ
ಯಾಗುವದಕ್ಕೂ, ಅವರಲ್ಲಿ ನಿಜವಾದ ಸದ್ಗುಣಗಳು ಪ್ರಾದುರ್ಭವಿ
ಸಲಿಕ್ಕೂ ಪ್ರಸಂಗ ದೊರಕುವಂತೆ ಅವರಿಗೆ ವಿಧವಿಧದ ಕಷ್ಟಗಳನ್ನು
ಕೊಡುತ್ತಿದ್ದರು. ಇದೇಪ್ರಕಾರ ದೀಪಕಶಿಷ್ಯನಿಗೆ ಅವನ ಗುರು
ಗಳು ಬಹಳವಾಗಿ ಕಾಡಿಸಿದರು. ಆದರೂ ಆ ದೃಢನಿಶ್ಚಯಿಯು ವಿಮ
ನಸ್ಕನಾಗದೆ ಗುರುಸೇವೆಯನ್ನು ಒಮ್ಮನಸಿನಿಂದ ಮಾಡುತ್ತಿದ್ದನು.
ಒಮ್ಮೆ ಗುರುಗಳು ದೀಪಕನ ದೃಢನಿಶ್ಚಯವನ್ನು ಪರೀಕ್ಷಿಸುವದ
ಕ್ಕಾಗಿ ಅವನನ್ನು ಕುರಿತು "ತಮ್ಮಾ ದೀಪಕಾ, ನಾನು ಜನ್ಮಾಂತರ
ದಲ್ಲಿ ಬಹಳ ನೀಚ ಕರ್ಮಗಳನ್ನು ಮಾಡಿರುವೆನು. ಈ ಜನ್ಮದಲ್ಲಿ
ತಪೋನಿಷ್ಠನಾಗಿ ಬಹಳ ಪುಣ್ಯ ಸಂಪಾದಿಸಿದ್ದರೂ ಆ ಪ್ರಾಚೀನ
ದುಷ್ಕೃತ್ಯವು ನನಗೆ ತೊಂದರೆ ಕೊಡದೆ ಇರದು. ಅದಕ್ಕಾಗಿ ಕೈಕಾಲು
ಗಟ್ಟಿಯಾಗಿದ್ದು ಸ್ವತಂತ್ರನಿರುವಾಗಲೇ ನಾನು ಆದುಷ್ಕೃತಿಯವಿಮೋ
ಚನಕ್ಕಾಗಿ ಉಪಾಯವನ್ನು ಮಾಡಬೇಕೆಂದಿರುವೆನು, ಆ ದುಷ್ಕರ್ಮ
೧೬--------------------------------------------------------
ದಿಂದ ನಾನು ಇಪ್ಪತ್ತೊಂದು ವರ್ಷಗಳ ವರೆಗೆ ಅಂಧನಾಗಿಯೂ,
ಕುಷ್ಟದಿಂದ ಪೀಡಿತನಾಗಿಯೇ ಇರಬೇಕಾಗುವದು. ಈ ಅವಧಿ
ಯಲ್ಲಿ ನೀನು ನನ್ನ ಸೇವೆ ಮಾಡಿಕೊಂಡು ಇರುವದಾದರೆ, ನಿನ್ನ
ಉಚ್ಛ್ರೇಯವು ನಿಜವಾಗಿ ಆಗುವದು ಆದರೆ ನಾನು ಹೇಳುವ
ದನ್ನು ಪೂರ್ಣವಾಗಿ ಲಕ್ಷಗೊಟ್ಟು ಕೇಳು, ನಾನು ವ್ಯಾಧಿಪೀಡಿತ
ನಾದಾಗ ಬಹಳ ಕಷ್ಟ ಪಡಬೇಕಾಗುವದು. ವ್ಯಾಧಿಗ್ರಸ್ತರು ಒಂದು
ಪಾಲು ಕಷ್ಟ ಪಟ್ಟರೆ, ಸೇವಾತತ್ಪರರು ಹತ್ತುಪಾಲು ಕಷ್ಟಪಡಬೇ
ಕಾಗುವದು. ಆದ್ದರಿಂದ ವಿಚಾರಮಾಡಿಕೊಂಡು, ದೃಢಮನಸ್ಸಿ
ನಿಂದ ಸೇವೆಮಾಡಲಕ್ಕೆ ಒಪ್ಪುತ್ತಿದ್ದರೆ ಹೇಳು” ಎಂದರು.
ಬಳಿಕ ಆ ಗುರುಗಳ ಮಾತನ್ನು ಕೇಳಿ ತಾನು ನಿಶ್ಚಯಪೂರ್ವಕವಾಗಿ
ಸೇವಾತತ್ಪರನಾಗುವೆನೆಂದು ದೀಪಕನು ಹೇಳಿದನು. ಬಳಿಕ ಆ
ಗುರುಶಿಷ್ಯರು ಸಂಕೇತದಂತೆ ಕಾಶಿಗೆ ಹೋದರು. ಅಲ್ಲಿ ಗುರುಗಳು
ಗಂಗೆಯಲ್ಲಿ ಸ್ನಾನಮಾಡಿ ವ್ಯಾಧಿಯನ್ನು ಬರಮಾಡಿಕೊಂಡರು
ಅವರ ವ್ಯಾಧಿಯು ನಿಜವಾದ ವ್ಯಾಧಿಯಾಗಿರದೆ ಶಿಷ್ಯನ ಪರೀಕ್ಷೆಗೆ
ಬೇಕಂತಧರಿಸಿದ ವ್ಯಾಧಿಯಾಗಿತ್ತು. ಗುರುಗಳು ಶಿಷ್ಯನಲ್ಲಿ ದೃಢ
ನಿಶ್ಚಯ ನೆಲೆಗೊಳಿಸುವದಕ್ಕಾಗಿ ಹಲವು ಪ್ರಕಾರದ ವೇಷಗಳನ್ನು
ಧರಿಸಿದರು. ಅವರ ಮೈಯಲ್ಲಿ ವ್ರಣಗಳಾದವು; ಕಣ್ಣು ಕಾಣದಾ
ದವು; ಕಿವಿಗಳು ಕೇಳದಾದವು; ದೇಹದಲ್ಲಿ ಹುಳಬಿದ್ದವು. ವ್ಯಾಧಿ
ಹೆಚ್ಚಾದಂತೆ ಗುರುಗಳ ಸಂತಾಪವು ಹೆಚ್ಚಾಗತೊಡಗಿತು ಸಂತಾ
ಪದ ಭರದಲ್ಲಿ ಅವರು ದೀಪಕನಿಗೆ ಬಹಳ ಕಷ್ಟ ಕೊಡಹತ್ತಿದರು.
ಅವನು ತಿರಿದುತಂದ ಭಿಕ್ಷಾನ್ನಕ್ಕೆ ಕಂಡ ಕಂಡ ಹಾಗೆ ಹೆಸರಿಡುವರು;
ಒಮ್ಮೊಮ್ಮೆ ಅದು ಕಹಿಯಾಗಿದೆಯೆಂದೂ, ಮಧುರವಾಗಿಲ್ಲೆಂದೂ
ಹೇಳಿ ಅದನ್ನು ನೆಲದ ಮೇಲೆ ತಿರಸ್ಕಾರದಿಂದ ಬಿಸುಟಿಬಿಡುವರು.
ಮರುದಿನ ಅವನು ಒಮ್ಮೆ ಶೀಯಾದ ಹಾಗು ಮಧುರವಾದ ಅನ್ನ
ವನ್ನು ತಂದು ನೀಡಿದರೆ, ಅವರು ಈ ಅನ್ನವು ಬಹಳ ಹುಳಿಯಾಗಿದೆ
ಯೆಂದು ಹೇಳಿ ಊಟವನ್ನೇ ಬಿಡುವರು. ಒಂದುದಿನ ಬಟ್ಟೆ ಜಳ
೧೭--------------------------------------------------------------
ಜಳಮಾಡಿಲ್ಲವೆಂದೂ, ಮತ್ತೊಂದುದಿನ ಮೇಲಿಂದ ಮೇಲೆ ಬಟ್ಟೆ
ಜಳಜಳ ಮಾಡಬೇಡವೆಂದೂ, ಒಮ್ಮೆ ದಿನಾಲು ಜಳಕಮಾಡಿಸೆಂದೂ,
ಮತ್ತೊಮ್ಮೆ ನನಗೆ ಜಳಕವೇ ಬೇಡವೆಂದೂ ಹಟಹಿಡಿಯುವರು,
ವ್ಯಾಧಿಯು ಹೆಚ್ಚಾದಂತೆ ಸಹಿಸದಾಗಲು ಗುರುಗಳು ಹಗಲಿರಳು
ನಿದ್ದೆ-ನೀರಡಿಕೆಗಳಿಲ್ಲದೆ ಕಷ್ಟ ಪಡಹತ್ತಿದರು. ಅವರ ಮೈಯೊಳಗಿನ
ಕ್ರಿಮಿಗಳನ್ನು ಹೊರಪಡಿಸುವದು ದುಸ್ತರವಾಯಿತು. ಮೈಮುಟ್ಟಿ
ದರೆ, ರಕ್ತವೂ, ಕೀವವೂ, ಚಿಮ್ಮುತ್ತಿದ್ದವು. ಇಂಥ ಸ್ಥಿತಿಯಲ್ಲಿ
ಗುರುಸೇವಕನಾದ ದೀಪಕನು ತನ್ನ ನಾಲಿಗೆಯಿಂದ ಗುರುಗಳ ವ್ರಣ
ಗಳೊಳಗಿನ ಕ್ರಿಮಿಗಳನ್ನು ತೆಗೆಯುತ್ತಿದ್ದನು. ಅವನ ಈ ದೃಢ
ನಿಶ್ಚಯದ ಗುರುಸೇವೆಯನ್ನು ಕಂಡು ತ್ರಿಮೂರ್ತಿಗಳು ಕೂಡ
ಚಕಿತರಾದರು. ಅವರು ವರಕೊಡುತ್ತೇವೆಂದು ಆಗಾಗ್ಗೆ ದೀಪಕನ
ಹತ್ತಿರ ಬರುತ್ತಿದ್ದರು. ದೀಪಕನ ಆದರೆ ಗುರುವಾಕ್ಯದಲ್ಲಿ ದೃಢನಿಶ್ಚಯ
ವುಳ್ಳ ದೀಪಕಶಿಷ್ಯನು ತನ್ನ ಗುರುಗಳ ಅಪ್ಪಣೆ ಹೊರತು ತನಗೆ
ವರಗಳು ಬೇಡವೆಂದು ಹೇಳಿಬಿಟ್ಟನು. ಕಡೆಗೆ ಆ ತ್ರಿಮೂರ್ತಿಗಳು
ಗುರುಗಳ ಬಳಿಗೆ ಬಂದು ದೀಪಕನ ದೃಢನಿಶ್ಚಯವನ್ನು ಅತ್ಯಂತ
ವಾಗಿ ಹೊಗಳಿದರು. ಮಹಾಜ್ಞಾನಿಗಳಾದ ಗುರುಗಳಾದರೂ
ದೀಪಕನ ದೃಢನಿಶ್ಚಯಕ್ಕೆ ಮೆಚ್ಚಿಯೇ ಇದ್ದರು. ಆಗ ಅವರು
"ಮಹಾಜ್ಞಾನಿಯ, ದೃಢನಿಶ್ಚಯದ ದರ್ಶಕನೂ, ಲೋಕೋತ್ತರ
ಕೀರ್ತಿಯುತನೂ ಆಗೆಂದು ದೀಪಕನನ್ನು ಹರಸಿದರು.
ಪ್ರಖ್ಯಾತನ, ಕರ್ತವ್ಯನಿಷ್ಠನೂ ಆಗಬೇಕಾದರೆ ಮನುಷ್ಯ
ನಲ್ಲಿ ದ್ರಢನಿಶ್ಚಯವು ಅವಶ್ಯವಾಗಿ ಇರಬೇಕು. ಈ ವರೆಗೆ ಲೋಕ
ದಲ್ಲಿ ಪ್ರಖ್ಯಾತರಾದ ಜನರಲ್ಲಿ ಈ ಗುಣವು ಇದ್ದೇ ಇತ್ತು ಶ್ರೀ
ಸಮರ್ಧ ರಾಮದಾಸರು, ಶ್ರೀ ಶಿವಾಜಿಮಹಾರಾಜರು, ಜಾರ್ಜವಾಸಿಂ
ಗ್ಟನ್ನನು, ಪುಣ್ಯಶಾಲಿ ಅಶೋಕಚಕ್ರವರ್ತಿಯು, ಲಾರ್ಡ ಕ್ಲೈವನು,
ಸರಬುಕರ ವಾಸಿಂಗ್ಟನ್ನನು, ಕೈ, ಸರ ಗೋಖಲೆಯವರು ಮೊದ
ಲಾದ ಪ್ರತಿಭಾಶಾಲಿಗಳು ಪ್ರಸಿದ್ಧಿಗೆ ಬರಲಿಕ್ಕೆ ಅವರಲ್ಲಿದ್ದ ದೃಢ
೧೮.-------------------------------------------------------------
ನಿಶ್ಚಯ ವೇ ಕಾರಣವು; ದೃಢನಿಶ್ಚಯವಿಲ್ಲದವನು ಯಾವ ಕೆಲಸ
ದಲ್ಲಿಯ ಖ್ಯಾತಿಹೊಂದಲಾರನು. ಅವನ ಬಾಳು ನಾಯಿಗಿಂತಲೂ
ಕಡೆಯಾಗುವದು, ಮನುಷ್ಯನು ಆತ್ಮಸಂಯಮನದಿಂದ ತನ್ನ
ಧ್ಯೇಯದ ಪ್ರಕಾರ ಯಾವದಾದರೊಂದು ವಿಶಿಷ್ಟ ಕಾರ್ಯದಲ್ಲಿ ಮನ
ಸ್ಸನ್ನು ತೊಡಗಿಸಿ, ಆ ಕಾರ್ಯ ಸಾಧನ ಪ್ರೀತ್ಯರ್ಥವಾಗಿ ಮನಸ್ಸನ್ನು
ಸ್ಥಿರಗೊಳಿಸುವದೇ ದೃಢನಿಶ್ಚಯದ ಅಭ್ಯಾಸವಾಗಿದೆ. ಹೀಗೆ ಮನ
ಸ್ಸಿನ ಏಕೀಕರಣವಾದವಾದಂತೆ ಹಿಡಿದ ಕಾರ್ಯಗಳಲ್ಲಿ ಹೆಚ್ಚು
ಶ್ರೇಯಸ್ಸು ಪ್ರಾಪ್ತವಾಗುವದು. "ಮನ ಏವ ಮನುಷ್ಯಾಣಾಂ
ಕಾರಣಂ ಬಂಧಮೋಕ್ಷಯೋಃ” ಎಂಬ ಗೀತಾವಾಕ್ಯದಂತೆ ಮನಸ್ಸೇ
ಮನುಷ್ಯನ ಬಂಧನಕ್ಕೂ ದಾಸ್ಯಕ್ಕೂ, ಮೋಕ್ಷಕ್ಕೂ, ಪ್ರಗತಿಗೂ
ಕಾರಣವಾಗಿದೆ. ಆದ್ದರಿಂದ ಮನಸ್ಸನ್ನು ದೃಢಪಡಿಸುವ ಅಭ್ಯಾಸ
ವನ್ನು ಬಾಲ್ಯದಿಂದಲೇ ಪ್ರಾರಂಭಿಸಬೇಕು. 'ಮೂರು ವರ್ಷದ
ಬುದ್ಧಿ ನೂರು ವರ್ಷಗಳ ವರೆಗೆ” ಎಂಬಂತೆ ಬಾಲ್ಯದಲ್ಲಿ ಅಭ್ಯಾಸ
ವಾದ ವಿಷಯಗಳು ಆಮರಣ ಸ್ಮರಣದಲ್ಲಿರುವವು.
ಮನುಷ್ಯನ ಪ್ರಗತಿಯು ದೃಢನಿಶ್ಚಯದಿಂದ ಬಹುಬೇಗ ಆಗು
ವದು, ಕೈ, ವಾ. ಗೋಪಾಳ ಕೃಷ್ಣ ಗೋಖಲೆಯವರು ತೀಕ್ಷ್ಣ
ಬುದ್ಧಿಯವರಾಗಿರದಿದ್ದರೂ, ಬಾಲ್ಯದಿಂದಲೇ ಅವರು ತಾವೊಬ್ಬ
ಪ್ರಸಿದ್ಧ ಪುರುಷರಾಗಿ ರಾಷ್ಟ್ರ ಕಾರ್ಯ ಮಾಡಬೇಕೆಂಬ ಹಂಬಲವು
ಳ್ಳವರಾಗಿದ್ದರು, ಆ ಬಗ್ಗೆ ಅವರು ಒಮ್ಮನಸಿನಿಂದ ಪ್ರಯತ್ನಿಸಿ
ಪ್ರಸಿದ್ಧಿಗೆ ಬಂದರು. ಲಾರ್ಡ ಕೈವನಲ್ಲಿ ದೃಢಮನಸ್ಸಿಲ್ಲದಿದ್ದರೆ,
ಇಂಗ್ಲಿಷರ ರಾಜ್ಯವು ಹಿಂದುಸ್ತಾನದಲ್ಲಿ ನೆಲೆಗೊಳ್ಳುವದು ಸಂಶಯಾ
ಸ್ಪದವಾಗುತ್ತಿತ್ತು. ದೇಶಹಿತ ಕಾರ್ಯದಲ್ಲಿ ದೃಢಮನಸ್ಸಿಡದಿ
ದ್ದರೆ, ಲೋಕಮಾನ್ಯ ಬಾಳ ಗಂಗಾಧರ ಟಿಳಕರವರಿಂದ ಇಷ್ಟು
ಕಷ್ಟ ಸಹಿಸುವದಾಗುತ್ತಿಲ್ಲ, ಆದ್ದರಿಂದ ಪ್ರಗತಿಗಾಮಿಯಾಗ
ಬಯಸುವ ಪ್ರತಿಯೊಬ್ಬ ಮನುಷ್ಯನು ದೃಢನಿಶ್ಚಯವುಳ್ಳವನಾಗಿ
ರಲೇಬೇಕು, ದೃಢನಿಶ್ಚಯದಿಂದ ಕರ್ತವ್ಯನಿಷ್ಠೆಯೂ, ಸತ್ಯಪಕ್ಷ
೧೯-------------------------------------------------
ಪಾತಿತ್ವವೂ, ಆತ್ಮಹಿತವೂ, ದೇಶಾಭಿಮಾನವೂ, ಪರೋಪಕಾರ
ಬುದ್ಧಿಯೂ, ನಿಸ್ಸೀಮವಾದ ಧೈರ್ಯವೂ, ಸೃಷ್ಟವಾದಿತ್ವವೂ
ಇನ್ನೂ ಅನೇಕ ಸುಗುಣಗಳೂ ಲಭಿಸಿ, ಪ್ರಗತಿಗೆ ಕಾರಣೀಭೂತ
ಗಳಾಗುವವು
==============
೩ನೆಯಖಂಡ-ರಾಢಿಯ ಪರಿತ್ಯಾಗ,
ಲೋ, ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ
ಇಂಥಿಂಧವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿ
ಯನ್ನು ಅನುಕರಿಸಲಿಲ್ಲ; ಶ್ರೀ ಶಿವಾಜಿ ಮಹಾರಾಜರು ಸ್ವರಾಜ್ಯಸ್ಥಾ
ಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ
'ಗನೀನೂಕಾವಾ' ಯುದವು ಅಪೂರ್ವವಾಗಿತ್ತು. ಕೇಸರನು ಮೊದ
ಲಿನ ಯುದ್ಧದ ಎಲ್ಲ ಪದ್ಧತಿರೋಧಿಗಳನ್ನು ತಿರಸ್ಕರಿಸಿ ಹೊಸ ಪದ್ಧತಿ
ಯನ್ನೇ ಗೊತ್ತು ಮಾಡಿಕೊಂಡನಲ್ಲವೆ! ಪ್ರಗತಿಗಾಮೇಚ್ಚುವು ರೂಢಿಗ
ಳನ್ನು ವಿಶೇಷವಾಗಿ ದುಷ್ಟರೋಧಿಗಳನ್ನು ಅನುಕರಣಮಾಡುವ
ಗೊಡವಿಗೆ ಸರ್ವಧಾ ಹೋಗಬಾರದು.
ಹಿಂದೆ ಆಗಿಹೋದ ಎಲ್ಲ ಮುಂದಾಳುಗಳು ರೂಢಿವಿನಾಶಕರೇ
ಆಗಿದ್ದರೆನ್ನಬಹುದು. ಪ್ರತಿಯೊಂದು ಪ್ರಕೃತಿಯು ರೂಪ, ಲಾವಣ್ಯ
ಸ್ವಭಾವ ಮೊದಲಾದವುಗಳಲ್ಲಿ ಭಿನ್ನವಾಗಿರಲು, ಆ ಪ್ರಕೃತಿಯು
ಭಿನ್ನ ಪ್ರಕೃತಿಯವರ ರೂಢಿಯನ್ನು ಅನುಕರಿಸುವದಾದರೂ ಹ್ಯಾಗೆ
ಯೋಗ್ಯವೆನಿಸುವದು ಪ್ರಸಿದ್ಧಿಗೆ ಬಾರದಮುಂದಾಳುವಾಗದಮನುಷ್ಯನು
ಎಂಧ ಸಾಮರ್ಥ್ಯವಂತನಿದ್ದರೂ, ಬಹು ದೊಡ್ಡ ಶ್ರೀಮಂತನಿದ್ದರೂ
ಕೇವಲ ಬುದ್ದಿವಂತನಿದ್ದರೂ ಪ್ರಯೋಜನವಿಲ್ಲ. ಯಾಕಂದರೆ ಅವನು
ರೂಢಿಗಳ ನಾಶಕ್ಕೆ ಬಹಳ ಹೆದರುತ್ತಿದ್ದದರಿಂದ ಅವನ ಸಾಮರ್ಥ್ಯವೂ,
ದುಡ್ಡೂ, ಬುದ್ಧಿಯೂ ಪ್ರಯೋಜನವಾಗುವದಿಲ್ಲ. ಅಪೂರ್ವತೆಯೂ,
ನಿರ್ಭಯತನವೂ ಯಶಸ್ವಿಪುರುಷನ ಮುಖ್ಯಲಕ್ಷಣಗಳಾಗಿವೆ. ಹಳೇ
ದುಷ್ಟರೂಢಿಗಳು ಅವು ಎಷ್ಟೇ ಪ್ರಾಚೀನಗಳಾಗಿರಲಿ, ಅವುಗಳ ಬಗ್ಗೆ
೨೦---------------------------------------------------------
ಪ್ರಗತಿಗಾಮಿಯಲ್ಲಿ ಆದರವಿರಲಾರದು. ಹಳೇದನ್ನ ತೀಡುತ್ತ ಕೂ
ಡ್ರದೆ, ಅವನು ಅದರಲ್ಲಿಯ ಯೋಗ್ಯ ಗುಣವನ್ನನ್ನು ಸ್ವೀಕರಿಸು
ವನು. ಪ್ರಗತಿಗಾಮಿಗಳು ಆತ್ಮವಿಶ್ವಾಸದಿಂದ ಪ್ರೇರಿತರಾಗಿ ಯೋಗ್ಯ
ವಿಚಾರಿಗಳಾಗಿ ಧೈರ್ಯದಿಂದ ಯುಕ್ತರಾಗಿ ಶೋಧಕಬುದ್ಧಿಯವ
ರಾಗಿ ಸಮಾಜರೂಢಿಗಳನ್ನು ಮುರಿಯುವರು; ಹಾಗು ಹಿಂದೆ ಯಾರೂ
ಎಂದೂ ತುಳಿಯದ ಮಾರ್ಗವನ್ನು ತುಳಿದು ಪ್ರಗತಿಹೊಂದುವರು,
ಒಂದು ಸಂಗತಿಯು ಕೇವಲ ಹೊಸದೆಂದು ಅದನ್ನು ಮಾಡಲು
ಹೆದರಬಾರದು. ಹಾಗು ನಮ್ಮ ತಂದೆಯೆ, ಅಜ್ಜ ಮುತ್ತರ,
ಆಪ್ತೇಷ್ಟರ, ಮಿತ್ರರ ಇಲ್ಲವೆ ಸಮಾಜದ ದುಷ್ಟ ರೂಢಿಗಳನ್ನು ತಿಳಿ
ದೂತಿಳಿದು ಅನುಕರಣಮಾಡಬಾರದು, ಇಂಥ ರೂಢಿಗಳ ಅನುಕರ
ಣಮಾಡೋಣವು ಕೇವಲ ಹಾಸ್ಯಾಸ್ಪದವಾಗಿರುವದು. ಪ್ರತಿಯೊಬ್ಬ
ಮನುಷ್ಯನು ಒಂದು ವಿಶಿಷ್ಟ ಕಾರ್ಯಕ್ಕಾಗಿ ಅವತರಿಸಿರುತ್ತಾನೆ.
ಆದರೆ ಅವನು ರೂಢಿವಿನಾಶಕನಾಗದ್ದರಿಂದ ಇಷ್ಟಾರ್ಧವನ್ನು ಸಾಧಿ
ಸಿಕೊಳ್ಳದೆ ಮರಣಹೊಂದುವನು. ಪ್ರಸಿದ್ಧಿಗೆ ಬರುವ ಮನುಷ್ಯನು
ಅನುಕರಣಪ್ರಿಯನಾಗಿರದೆ, ಸ್ವತಂತ್ರವಿಚಾರ ಆಚಾರದವನಾಗಿರು
ತ್ತಾನೆ. ಅವನು ಮಾಡುವ ಪ್ರತಿಯೊಂದು ಕೃತಿಯು, ಉದ್ಯೋಗವು
ಉಪದೇಶವು, ಯುಕ್ತಿಗಳು ಕೇವಲ ಆವರ ಸ್ವಂತದ ವಿಚಾರದ
ವಾಗಿರುತ್ತವೆ.
ಹೆರವರ ಸಹಾಯದ ಹೊರತು ಪ್ರಗತಿ ಹೊಂದಲಿಕ್ಕೆ ಯಾರು
ಹೆದರುವರೋ ರೂಢಿಗಳನ್ನು ಒದೆದು ಮುಂದಕ್ಕೆ ಬರಲು ಯಾರಿಗೆ
ಧೈರ್ಯಸಾಲದೋ ಇಂಥವರು ಪ್ರಖ್ಯಾತರಾಗುವದಂತೂ ಒತ್ತಟ್ಟಿಗಿ
ರಲಿ, ಇವರು ಜಗತ್ತಿನಲ್ಲಿ ಇರುವರೆಂಬದು ಕೂಡ ಮಂದಿಗೆ ಗೊತ್ತಾ
ಗುವ ಸಂಭವವಿಲ್ಲ. ಅನುಕರಣದಂಧ ನಾಶಕಾರಕವಾದ ಪ್ರಗತಿಗೆ
ಬಾಧೆತರುವಂಧ ಬೇರೊಂದು ಸಂಗತಿಯು ಸಿಗಲಾರದು. ಅನುಕರಣ
ದಿಂದ ಸ್ವಂತದ ವಿಶಿಷ್ಟತ್ವವು ಇಲ್ಲದಂತಾಗುವದು; ಉತ್ಪಾದಕ
ಶಕ್ತಿಯು ನಾಶವಾಗುವದು. ಕಲ್ಪಕಶಕ್ತಿಯು ಕುಂಠಿತವಾಗುವದು.
೨೧--------------------------------------------------------------
ಯಶಃಪ್ರಾಪ್ತಿಯು ಅನುಕರಣದಿಂದ ಸರ್ವಧಾ ಪ್ರಾಪ್ತವಾಗುವದಿಲ್ಲ. ಅನುಕರಣೆಯನ್ನು ಹೆಚ್ಚಾಗಿ ದ್ವೇಷಿಸಹತ್ತುವರು.
ಎಷ್ಟೋಜನರು ಲೋ ಬಳಕರಂತೆ ಪೋಕ್ತವಾದ ಭಾಷಣಮಾಡ
ಲೆಳೆಸಿಯೂ, ಮ. ರಾ.ರ. ಹರಿ ನಾರಾಯಣ ಆಪಟೆ ಇವರಂತೆಕಾದಂಬ
ರಿಗಳನ್ನು ಬರೆಯಲೆಳೆಸಿಯೂ, ಪ್ರೋ. ರಾಮಮೂರ್ತಿ ಇಲ್ಲವೆಸ್ಯಾಂಡೋ
ಇವರಂತೆ ಅಂಗಸಾಧನ ಮಾಡಲೆಳಿಸಿಯೂ, ಮಿ. ಅಬುಲ್‌ಕರಿಮಖಾನ
ಇಲ್ಲವೆ ಬಾಲಗಂಧರ್ವ ಇವರಂತೆ ಗಾನಾಲಾಪಮಾಡಲೆಳಿಸಿಯೂ,
ಪ್ರಸಿದ್ಧ ಹರಿದಾಸರ ಇಲ್ಲವೆ ಪೌರಾಣಿಕರ ಅದರಂತೆ ಸಾಧು ಸಜ್ಜನರ
ಇಲ್ಲವೆ ಸನ್ಯಾಸಿಗಳ ಅನುಕರಣಮಾಡಲೆಳಿಸಿಯ ಪ್ರಖ್ಯಾತರಾಗಬೇ
ಕೆನ್ನುವರು. ಆದರೆ ಮಂದಿಯ ಅನುಕರಣವು (ನಕಲು) ಚೆನ್ನಾಗಿ
ಸಾಧಿಸದ್ದರಿಂದ ಆ ಹತಭಾಗಿಗಳು "ಹಿಂದಿನ ಮನೆ ಭಿಕ್ಷವೂ ಹೋ
ಯಿತು, ಮುಂದಿನ ಮನೆಯ ಕೋರಾನ್ನೆವೂ ತಪ್ಪಿತು. ” ಎಂಬಂತೆ
ನಿರಾಶರಾಗುವರು; ಅಲ್ಲದೆ ಅನುಕರಣಮಾಡುವವನು ತನ್ನ ನೈಸರ್ಗಿಕ
ವಿಶಿಷ್ಟ ಗುಣವನ್ನು ಕೂಡ ಶಾಶ್ವತವಾಗಿ ಕಳಕೊಳ್ಳಬೇಕಾಗುತ್ತದೆ.
ಅನುಕರಣವು (ನಕಲು) ನೈಸರ್ಗಿಕ ವೃತ್ತಿಗಿಂತ ಭಿನ್ನವಾಗುವದು.
ಹ್ಯಾಗೆಂದರೆ, ಅನ್ನವನ್ನು ಪುನಃ ಬೇಯಿಸಿದರೆ, ಆದರೆ ರುಚಿಯು ಅಕ್ಕಿ
ಅನ್ನಗಳಿಗಿಂತ ತೀರಭಿನ್ನವಾಗುವದಲ್ಲದೆ, ಪಚನಶಕ್ತಿಗೆ ಕೂಡ ಅದು
ಹೆಚ್ಚು ಜಡವಾಗುವದು. ಇದರಂತ ನೈಸರ್ಗಿಕ ವೃತ್ತಿಯವನ
ಆಚಾರ ವಿಚಾರಗಳು ಜನರಿಗೆ ರುಚಿಸುವಂತೆ, ಅನುಕರಣ
ಮಾಡುವವನ ಆಹಾರ ವಿಚಾರಗಳು ರುಚಿಸುವದಿಲ್ಲ. ಇಷ್ಟೇ ಅಲ್ಲ
ಜನರು ಆ ಅನುಕರಣೆಯನ್ನು ಹೆಚ್ಚಾಗಿ ದ್ವೇಷಿಸಹತ್ತುವರು.
ಸ್ವಾತಂತ್ರಪ್ರೀತಿಯನ್ನು ಜಾಗೃತಗೊಳಿಸದ್ದರಿಂದಲೂ, ಸ್ವಂತ
ದಲ್ಲಿ ದೃಢನಿಶ್ಚಯವಿರದ್ದರಿಂದಲೂ ಅನುಕರಣದಂಥ ಹೇಯವೃತ್ತಿ
ಯನ್ನು ಮನುಷ್ಯನು ಸ್ವೀಕರಿಸಬೇಕಾಗುತ್ತದೆ. ಆನುಕರಣಮಾ
ಡುವವರ ಸಂಖ್ಯೆಯು ಹೆಚ್ಚು ಇದ್ದಂತೆ, ಅನುಕರಣೀಯ ಪುರುಷರ
ಸಂಖ್ಯೆಯು ಹೆಚ್ಚು ಇರುವದಿಲ್ಲ. ಆ ಜನರು ಬಹುಸ್ವಲ್ಪ ಮಂದಿಗ
ಳಿರುವರು. ಖರೇ ಅನುಕರಣೀಯ ಮನುಷ್ಯನು ವಿಶಿಷ್ಟ ಕೃತಿ
೨೨----------------------------------------------------------
ಯನ್ನು ಮಾಡಿ, ಪ್ರಸಿದ್ಧನಾಗಿ ಪ್ರಗತಿಹೊಂದುವನು, ಇವನೇ ದಾ
ಸ್ಯದ ಶೃಂಖಲೆಯನ್ನು ಚೂರುಮಾಡಲಿಕ್ಕೆ ಕಾರಣನಾಗುವನು.
ಪ್ರಗತಿಹೊಂದುವ ಇಚ್ಛೆಯುಳ್ಳವನು ಇಂಥ ಮನುಷ್ಯನ ಪ್ರತಿಯೊಂ
ದು ಕೃತಿಯನ್ನು ಅನುಕರಣ ಮಾಡದೆ, ಅವನಲ್ಲಿ ವಿಶಿಷ್ಟ ಗುಣ
ಗಳಲ್ಲಿ ಯಾವವು ತಮ್ಮ ವಿಶಿಷ್ಟಗುಣಗಳ ಪೋಷಣೆಗೆ ಅವಶ್ಯವಾಗಿ
ರುವವೋ ಅವುಗಳನ್ನು ಮಾತ್ರ, ಹುಲಿಯು ಇಡಿ ಪ್ರಾಣಿಯನ್ನು ತಿನ್ನದೆ
ಬರೇ ರಕ್ತವನ್ನು ಹೀರಿಕೊಳ್ಳುವಂತೆ, ಶೋಷಿಸಿಕೊಳ್ಳತಕ್ಕದ್ದು,
ದೃಢನಿಶ್ಚಯದ ಹಾಗು ಅಲೌಕಿಕ ಮನುಷ್ಯನಿಗೆ ಯೋಗ್ಯ
ಮಾರ್ಗ ತೋರಿಸಲಿಕ್ಕೆ ಸೃಷ್ಟಿಯು ಸದಾತತ್ಪರವಾಗಿರುತ್ತದೆ! ಪರಾ
ವಲಂಬಿಯೂ, ಹೇಡಿಯೂ ಆದವನಿಗೆ ಅದು ಕೊಂಚವೂ ಸಹಾಯ
ಮಾಡಲಾರದು. ಲೋಕದಲ್ಲಿ ಅಪೂರ್ವತೆಯುಳ್ಳವರ ಅವಶ್ಯಕ
ತೆಯು ಹೆಚ್ಚಾಗಿರುವದು. ಕೇವಲ ಹೊಸ ಪದ್ಧತಿಯಿಂದ ಔಷಧ
ಕೊಡುವ ವೈದ್ಯರೂ, ಹೊಸ ಹೊಸ ತರದ ಯಂತ್ರಗಳನ್ನು ತಯಾರಿ
ಸುವ ಯಂತ್ರಕಲಾನಿಪುಣರೂ, ವಿಶಿಷ್ಟ ಪದ್ಧತಿಯಿಂದ ಖಟ್ಲೆನಡಿಸುವ
ವಕೀಲರೂ, ಹಿಂದೆ ಯಾರೂ ಬೋಧಿಸದೆ ಇದ್ದರೀತಿಯಿಂದ ಬೋಧಿ
ಸುವ ಉಪದೇಶಕರೂ, ಹೊಸ ಪದ್ಧತಿಯಿಂದ ಕಲಿಸುವ ಶಿಕ್ಷಕರೂ,
ವಿಶೇಷವಾಗಿ ಬೇಕಾಗಿರುವರು. ಈಗಿನ ಮನ್ವಂತರದಲ್ಲಿ ಎಂಥ
ಜನರ ಮೇಲಾಟವು ನಡದೇ ಇರುವದು, ಆದರೂ ಎಂಥ ಹೊಸ
ವಸ್ತುವಾದರೂ ಅದನ್ನು ಒಮ್ಮೆ ಉಪಯೋಗಿಸಿದ ಮಾತ್ರದಿಂದ
ಆದು 'ಸೆಕಂಡಹ್ಯಾಂಡ' ಎಂದು ಕರೆಯಲ್ಪಟ್ಟು ಬೆಲೆಯಲ್ಲಿ ಅದು
ಹ್ಯಾಗೆ ಕಡಿಮೆತರದ್ದಾಗುವದೋ ಹಾಗೆ ಇಂದಿನ ವಿಶಿಷ್ಟತ್ವವು ನಾಳೆ
ಗೆ ಹಳೆಯದಾಗುವದರಿಂದ, ಪ್ರಗತಿಗಾಮಿಗಳು ತಮ್ಮ ವಿಶಿಷ್ಟತ್ವವನ್ನು
ಸ್ಥಾಪಿಸಲು ಹಿಂದೆಗೆಯಬಾರದು.
ನಾವು ಪ್ರಗತಿಹೊಂದಲಿಕ್ಕೆ ಬೇಕಾಗುವ ಶಕ್ತಿಯು ನಮ್ಮಲ್ಲೇ
ಇರುತ್ತದೆ. ಅದು ನಮ್ಮ ವಿಶಿಷ್ಟ ಈರ್ಷೆಯಲ್ಲಿಯೂ, ದಢನಿಶ್ಚ
ಯದಲ್ಲಿಯೂ, ನಡಾವಳಿಯಲ್ಲಿಯ, ಅಪೂರ್ವತೆಯಲ್ಲಿ ತುಂಬಿ
೨೩----------------------------------------------------------
ತುಳುಕುತ್ತಿರುತ್ತದೆ. ಹೊರಗಿನ ಶಕ್ತಿಯ ಅಪೇಕ್ಷೆಮಾಡದೆ ಎಷ್ಟು
ಬೇಗನೆ ಸ್ವಾವಲಂಬಿಗಳಾಗಿ ನಡೆಯಹತ್ತುವೆವೋ ಅಷ್ಟು ಬೇಗನೆ
ನಾವು ನಿಶ್ಚಯದಿಂದ ಪ್ರಗತಿಯನ್ನು ಹೊಂದಿ ದಾಸ್ಯವಿಮೋಚಿತ
ರಾಗುವೆವು.
ನಮ್ಮಲ್ಲಿಯ ಅಪೂರ್ವತೆಯನ್ನು ತೋರಿಸಲು ನಮಗೆ ಧೈರ್ಯ
ಸಾಲದ್ದರಿಂದ ನಾವು ಪರರಿಗೆ ದಾಸರಾಗಿರಬೇಕಾಗಿದೆ. ಯಾರು
ಅಪೂರ್ವತೆಯನ್ನು ತೋರುವರೋ ಅವರು ಒಂದಿಲ್ಲೊಂದು ರೀತಿ
ಯಿಂದ ಪ್ರಸಿದ್ಧಿಗೆ ಬಂದೇ ಬರುವರು ಯಶಸ್ವಿ ಉದ್ಯೋಗಸ್ತನಿಗೆ ,
ಜಗತ್ತು ಅಪೂರ್ವವಾಗಿ ತೋರುವದು. ಅವನು ಸಾಧ್ಯವಿದ್ದ ಮ
ಟ್ಟಿಗೆ ಅಪೂರ್ವತೆಯನ್ನು ತನ್ನ ಉದ್ಯೋಗದಲ್ಲಿ ಉಪಯೋಗಿಸು
ವನು. ಯಾವ ರೂಢಿಗಳನ್ನೂ ಅನುಕರಣಮಾಡುವ ಗೊಡವಿಗೆ
ಅವನು ಹೋಗುವದಿಲ್ಲ ಜಗತ್ತು ಅಂದರೆ ಹಲವು ದುಷ್ಟರೂಢಿ
ಗಳ ಹಾಗು ಅಂಧಪರಂಪರೆಗಳ ದ್ಯೋತಕವಾಗಿರುವದೆಂದು ಭಾವಿಸಿ
ಅದಕ್ಕೆ ಎದೆಗೊಡಲು ಅವನು ಯಾವಾಗಲೂ ಸಿದ್ಧನಾಗಿರುತ್ತಾನೆ.
ಪ್ರಸ್ತುತದ ಮಹಾಯುದ್ಧದಲ್ಲಿ ನಿನ್ನೆ ಉಪಯೋಗಿಸಿದ ಪ್ರಚಂ
ಟ ತೋಫುಗಳು ಈ ದಿನ ನಿರುಪಯೋಗಿಗಳಾಗಿ ತೋರುವವು; ಅವ
ಕ್ಕಿಂತ ಗತಿಯಲ್ಲಿ ಹೆಚ್ಚಾಗಿಯೂ ಭಾರದಲ್ಲಿ ಕಡಿಮೆಯಾಗಿಯೂ,
ಬೇರೆ ವಿಶಿಷ್ಟತ್ವವುಳ್ಳವುಗಳಾಗಿಯೂ ಆಗಿರುವ ಇಂದಿನ ತೋಫುಗಳು
ಅವನ್ನು ತುಚ್ಛೀಕರಿಸಿಬಿಡುವವು. ಅದರಂತೆ ಈ ವರೆಗೆ ಪ್ರಚಾರದಲ್ಲಿದ್ದ
ಉಗೆಬಂಡಿಗಳನ್ನು ವಿಮಾನಗಳು, ತಂತಿಪಾಲನ್ನು ತಂತಿಯಿಲ್ಲದೆ ಈಥರದ
ದ್ವಾರಾ ಬರುವ ಟಪಾಲುಗಳು ಆಕ್ರಮಿಸಿ ತಮ್ಮ ತಮ್ಮ ವಿಶಿಷ್ಟ ಗು
ಣಗಳಿಂದ ಮೆರೆಯ ಹತ್ತಿರುವ, ಹಿಂದಕ್ಕೆ ಪ್ರಚಾರದಲ್ಲಿದ್ದ ಶಿಲಾ
ಪ್ರೆಸ್ಸುಗಳು ಮೂಲಿಗೆ ಬಿದ್ದು ಮೊಳೆಗಳ ಛಾಪಖಾನೆಗಳು ಈಗಿನ
ಸುಧಾರಣೆಯಲ್ಲಿ ಕಂಗೊಳಿಸುತ್ತಿರುವವು. ಕೆಲವು ವರ್ಷಗಳ ಮುಂಚೆ
ಇದ್ದ ಹತ್ತೀರಾಟಿಗಳು ಜಂಗುಹಿಡಿಯಹತ್ತಿ, ಜಿನ್ನುಗಳೂ,
ಪ್ರೆಸ್ಸುಗಳೂ ಮುಂದುವರೆಯಹತ್ತಿರುವವು ಹೀಗೆ ಲೋಕ
೨೪-----------------------------------------------------------------
ದಲ್ಲಿ ವಿಶಿಷ್ಟ್ಯತ್ವಕ್ಕೆ ಮಹತ್ವವುಂಟಾಗಿರುವದರಿಂದ ಪ್ರತಿಯೊಬ್ಬನೂ
ಯೋಗ್ಯವಾದ ಮಾರ್ಗವನ್ನವಲಂಬಿಸಿ ಪ್ರಗತಿಯನ್ನು ಹೊಂದ
ಹತ್ತಬೇಕು.
ಯಾರು ಹೊಸದನ್ನು ತಿರಸ್ಕರಿಸುವರೋ, ಹಳೇದನ್ನು ಅನುಕ
ರಿಸುವದರಲ್ಲಿಯೂ, ಅದರ ವಿಷಯಕ್ಕೆ ಅಭಿಮಾನವಹಿಸುವದರಲ್ಲಿ
ಯೂ ಭೂಷಣವೆಂದು ತಿಳಕೊಳ್ಳುವರೋ, ಅಪೂರ್ವತೆಯನ್ನು ವ್ಯಕ್ತ
ಗೊಳಿಸುವದು ಯಾರಿಗೆ ಶಕ್ಯವಾಗಿ ತೋರುವದಿಲ್ಲವೋ, ಇಂಥವರ
ಪ್ರಗತಿಯು ಬಹುಶಃ ಆಗುವದಿಲ್ಲ. ಕಠಿಣಸಂಗತಿಗಳನ್ನು ಅಶಕ್ಯವೆಂದು
ತಿಳಿಯುವದೇ ಪ್ರಗತಿರಹಿತನ ಅಪೂರ್ವತೆಯು ಇಲ್ಲದವನ ಮುಖ್ಯ
ಲಕ್ಷಣವಾಗಿದೆ. ಇದಕ್ಕೆ ಮಹಾಭಾರತದೊಳಗಿನ ಒಂದು ಚಿಕ್ಕ ಸಂಗತಿ
ಯ ಉದಾಹರಣೆಯನ್ನು ಕೊಡುವಾ!
ದುರ್ಯೋಧನನು ಸಭೆಯಲ್ಲಿ ಕುಳಿತಾಗ ಆಕಸ್ಮಿಕವಾಗಿ ನಾರ
ದರು ಬಂದರು. ಆಗ ರಾಜನು ನಾರದರನ್ನು ಯಥಾಯೋಗ್ಯ ಉಪ
ಚರಿಸಿ-ಸ್ವಾಮಿ, ನೀವು ತ್ರಿಲೋಕಸಂಚಾರಿಗಳು, ಯಾವದಾದರೂ
ಹೊಸ ಸಂಗತಿಯನ್ನು ಕಂಡಿದ್ದರೆ ತಿಳಿಸುವದಾಗಬೇಕು. ಎಂದು
ಕೇಳಿಕೊಂಡನು. ಅದಕ್ಕೆ ನಾರದರು-ವಿಶ್ವಾಸದಿಂದ ಕೇಳುತ್ತಿದ್ದರೆ
ಹೇಳುವೆನು ಎಂದು ಹೇಳಲು, ದುರ್ಯೋಧನನು ಒಪ್ಪಿಕೊಂಡನು
ಆಗ ನಾರದರು-ವಿಶ್ವಾಸದಿಂದ ಕೇಳಬೇಕು ಮಹಾರಾಜಾ, ವಿಷ್ಣು
ಲೋಕದಿಂದ ಭೂಲೋಕಕ್ಕೆ ಬರುವಾಗ ಮಾರ್ಗದಲ್ಲಿ ವಿಶ್ವಾಸದಿಂದ
ಕೇಳಬೇಕು ಮಹಾರಾಜಾ ಒಂದು ಸೂಜಿಯಹೆಜ್ಜದಲ್ಲಿ ಆಕ್ಷೇಹಿಣಿ
ಗಟ್ಟಲೆ.ಸೈನ್ಯವು ಹಾಯ್ದು ಹೋಯಿತು ಎಂದು ಹೇಳಿದನು. ಅದನ್ನು
ದುರ್ಯೋಧನನು ಅಶಕ್ಯವೆಂದು ಭಾವಿಸಿ ನಕ್ಕನು. ಮರ್ಮವನ್ನು
ತಿಳಿದ ನಾರದರು ಕೂಡಲೆ ಅಲ್ಲಿಂದ ಹೊರಟು ಧರ್ಮರಾಜನಿದಲ್ಲಿಗೆ
ಹೋಗಿ ಅವನಿಗೂ ಈ ಸಂಗತಿಯ ನ್ನು ಮೇಲಿನಂತೆಯೇ ನಿವೇದಿಸಿ
ದರು. ಆದರೆ ಸ್ವತಃ ಅಪೂರ್ವ ಸ್ವಭಾವವುಳ್ಳ ಧರ್ಮರಾಜನಿಗೆ ನಾರ
ದರ ವಾಕ್ಯವು ಸತ್ಯವಾಗಿ ತೋರಿತು. ಧರ್ಮರಾಜನು ತನ್ನ ಅಪೂ
೨೫-----------------------------------------------------------
ರ್ವತೆಯನ್ನು ವ್ಯಕ್ತಗೊಳಿಸಿ ಸುಯೋಧನನಂಧ ಮಹಾಬಲಿಷ್ಠನನ್ನು
ಸಹ ಹೇಳಹೆಸರಿಲ್ಲದಂತೆ ಮಾಡಿದನು.
ಆದ್ದರಿಂದ ಪ್ರಗತಿಗಾಮಿಯುಳ್ಳ ಮನುಷ್ಯನಿಗೆ ಯಾವ ಸಂಗ
ತಿಯೂ ಅಶಕ್ಯವಾಗಿ ತೋರುವದಿಲ್ಲ. ಸಂಕಟಗಳಿಗೂ, ದ್ವೇಷ
ಅಸೂಯೆಗಳಿಗೂ, ಉಪಹಾಸ ಅಪಮಾನಗಳಿಗೂ ಹೆದರದೆ ಹಳೇ
ರೂಢಿ-(ದುಷ್ಟರೋಧಿಗಳನ್ನು) ಕಿತ್ತು ಒಗೆಯುವ, ಹಾಗು ಪ್ರತಿನಿತ್ಯ
ಅಪೂರ್ವತೆಯನ್ನು ತೋರುವ ಮನುಷ್ಯರಿಂದಲೇ ಈ ಇಪ್ಪತ್ತನೆಯ ಶತಮಾನದ
ಎಲ್ಲ ಸುಖಸಂಪತ್ತುಗಳು ಸಿದ್ಧವಾಗಿರುವವು.
ಪ್ರತಿಧ್ವನಿ, ಅನುಕರಣ, ನಕಲು ಈ ತ್ರಯಿಗಳ ಸಂಗತಿಯಿಂದ
ಯಾವನ ಮಹತ್ವಾಕಾಂಕ್ಷೆಯೂ ಈಡೇರಲಾರದು ಸ್ವಾತಂತ್ರ್ಯಪ್ರೀತಿ
ಯುಳ್ಳ, ದಢನಿಶ್ಚಯವುಳ್ಳ ಹಾಗು ರೂಢಿಗಳ ಬಗ್ಗೆ ನಿರ್ಭಯ
ವುಳ್ಳ ಮನುಷ್ಯನಿಂದಲೇ ಯಾವದಾದರೂ ಹೊಸ ಕಾರ್ಯವಾದ
ಆಗಬೇಕು. ಇಂಥ ಸ್ವಭಾವವುಳ್ಳವರು ನಿಶ್ಚಿತಕಾರ್ಯವನ್ನು
ಒಮ್ಮೆಲೆ ಆರಂಭಿಸಬೇಕು, ಮೀನ-ಮೇಷ ಮಾಡುತ್ತ ಕೂಡ್ರಬಾರದು
===================
೪ನೆಯ ಖಂಡ-ಸಾಧನಾಭಾವ.
ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತಃ
ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯುವ
ಹಾಗಿಲ್ಲವೆಂದೂ, ಮನೆಯಲ್ಲಿ ಒಬ್ಬೊಂಟಿಗನಾದ್ದರಿಂದ ಯಾವ
ಉದ್ಯೋಗವನ್ನೂ ಕೈಗೊಳ್ಳಲಾರೆನೆಂತಲೂ, ಏನು ಮಾಡುವಿರಿ.
ನನಗೆ ದುಡ್ಡಿನ ಕೊರತೆಯೊಂದಿಲ್ಲದಿದ್ದರೆ ನಾನು ಇಂಥ ಹಲವು
ಉದ್ಯೋಗಗಳನ್ನು ಸಾಗಿಸುತ್ತಿದ್ದೆನೆಂತಲೂ, ನನ್ನ ಪ್ರಕೃತಿ ಸರಿಯಾ
ಗಿಲ್ಲ, ಆದ್ದರಿಂದ ನಾನು ಕಮತಮಾಡುವಹಾಗಿಲ್ಲವೆಂತಲೂ, ಮನೆ
ಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿರುವದರಿಂದ ಪ್ರಕೃತದ ಯುದ್ಧದಲ್ಲಿ
ಸ್ವಯಂಸೇವಕನಾಗಿ ಯುದ್ಧ ಮಾಡುವದು ನನಗೆ ಸಾಧಿಸದೆಂತಲೂ
ಹಲವರು ಹಲವು ವಿಧವಾಗಿಹೊರಪಡಿಸುವ ಉದ್ಗಾರಗಳನ್ನು ಲಕ್ಷ್ಯ
೨೬----------------------------------------------------------------
ಪೂರ್ವಕವಾಗಿ ಕೇಳಿದರೆ, ಆ ಎಲ್ಲರ ಕಾರ್ಯಸಾಧನೆಗೂ ಒಂದೇ
ಒಂದು ಸಂಗತಿಯ ಅಭಾವವು ವ್ಯಕ್ತವಾಗುವದು, ಆ ಸಂಗತಿ ಯಾವ
ದೆಂದರೆ ಸಾಧನಾಭಾವವು. ಕೆಲವರಿಗೆ ಸಮಯದ ಅಭಾವ, ಕೆಲವ
ರಿಗೆ ಮನುಷ್ಯರ ಅಭಾವ, ಕೆಲವರಿಗೆ ದುಡ್ಡಿನ ಅಭಾವ, ಕೆಲವರಿಗೆ
ಆರೋಗ್ಯದ ಅಭಾವ; ಹೀಗೆ ಎಲ್ಲಿ ನೋಡಿದರೂ ಸಾಧನಾಭಾವವೇ
ಸಾಧನಾಭಾವವು.
"ಯಾವ ಪವಿತ್ರ ಭರತಭೂಮಿಯಲ್ಲಿ ನನ್ನ ಜನ್ಮವಾಗಿರುವದೋ
ಆ ದೇಶದ ಸಲುವಾಗಿಯೂ, ನನ್ನ ಸ್ವಂತದ ಸಲುವಾಗಿಯೂ, ಹಾಗು
ನನ್ನ ದೇಶಬಾಂಧವರ ಸಲುವಾಗಿಯೂ ಕೆಲಮಟ್ಟಿಗಾದರೂ
ಹಿತದ ಕಾರ್ಯವನ್ನು ಮಾಡಬೇಕೆಂದು ನಾನು ಬಯಸುವೆನು
ಹಾಗು ಅದಕ್ಕಾಗಿ ನಾನು ಯಧಾಶಕ್ತಿ ವರ್ತಿಸುತ್ತಿರುವೆನು” ಎಂಬಸಂಕ್ಷಿ
ಪ್ತವೃತ್ತಾಂತದಿಂದ ಕೈ, ನಾಮದಾರ ಗೋಖಲೆಯವರು ಒಂದು
ಪ್ರಸಂಗದಲ್ಲಿ ವಿದ್ಯಾರ್ಥಿಗಳ ಮುಂದೆ ಆತ್ಮನಿವೇದನ ಮಾಡಿಕೊಂಡಿ
ರುವರು. ದಾರಿದ್ರಾವಸ್ಥೆಯಲ್ಲಿ ಹುಟ್ಟಿ, ಕೇವಲ ಬಡತನದಲ್ಲಿ
ಬೆಳೆದು, ಸಂಕಟ ಪರಂಪರೆಗಳಿಂದ ವೇಷ್ಟಿತರಾಗಿ, ಪ್ರಗತಿಮಾರ್ಗ
ದಲ್ಲಿ ಕೇವಲ ನಿರಾಧಾರರಾಗಿದ್ದ ಈ ಗೋಖಲೆಯವರು ಅತ್ಯಂತ
ಪ್ರಗತಿಯನ್ನು ಹೊಂದಿ, ಹಿಂದೂ ಮಾತೆಯ ಸುಪುತ್ರರ ಮಾಲಿಕೆಯಲ್ಲಿ
ಶೋಭಿಸುತ್ತಿರುವರು. ದೃಢನಿಶ್ಚಯದವನಿಗೆ ಪ್ರಗತಿ ಮಾರ್ಗವನ್ನು
ತೋರಿಸಲಿಕ್ಕೆ ಸೃಷ್ಟಿಯು ಹ್ಯಾಗೆ ತತ್ಪರವಾಗಿರುತ್ತದೆಂಬದನ್ನೂ,
ಯಶಃಪ್ರಾಪ್ತಿಯು ಕೇವಲ ಸಾಧನಗಳಲ್ಲಿರದೆ, ಮನುಷ್ಯನು ಪ್ರಯ
ತ್ನಯದಿಂದ ಅದನ್ನು ಹ್ಯಾಗೆ ಸಾಧಿಸಬಹುದೆಂಬದನ್ನೂ, ಗೋಪಾಳರಾವ
ಗೋಖಲೆಯವರ ಉದಾಹರಣೆಯಿಂದ ತಿಳಿದುಕೊಳ್ಳಬಹುದಾಗಿದೆ .
ಆ ಕಾಲಕ್ಕೆ ಪುಣೆಯಲ್ಲಿ ಗೋಪಾಳರಾಯರ ಸಮವಯಸ್ಕರಾದ
ಎಷ್ಟೋ ಜನ ವಿದ್ಯಾರ್ಥಿಗಳು ಸಾಧನಾಭಾವದ ಸಲುವಾಗಿ ಅಳುತ್ತ
ಕೂತಿದ್ದರು. ಆದರೆ ಗೋಪಾಳರಾಯರು ಅವರಂತೆ ಅಳಬುರಕರಾ
ಗದ್ದರಿಂದ ಅವರು ಪ್ರತಿಯೊಂದು ಪ್ರತಿಕೂಲ ಪ್ರಸಂಗಕ್ಕೂ ಧೈರ್ಯ
೨೭----------------------------------------------------------------
ದಿಂದ ಎದೆಗೊಟ್ಟು ಇಷ್ಟ ಕಾರ್ಯಸಾಧಿಸಿದರು; ಅವರ ಧೈಯವು
ನಿಶ್ಚಿತವಾದ್ದರಿಂದ ಎಂಧ ಇಕ್ಕಟ್ಟಿನಪ್ರಸಂಗಗಳ ಪರಿಯು ಅವರ
ಕಣ್ಣಿಗೆ ಬಂದರೂ ಅದರೊಳಗಿಂದ ಧೈಯವು ಅವರಿಗೆ ಸ್ಪಷ್ಟವಾಗಿ
ಕಾಣದೆ ಇರುತ್ತಿದ್ದಿಲ್ಲ. ಕೇವಲ ಸಾಧನಾಭಾವಸ್ಥಿತಿಯಲ್ಲಿ ಸಹ ಅವ
ರಿಗೆ ತಮ್ಮ ಆಲೌಕಿಕ ಕಾರ್ಯದ ಹಲವು ಅನುಪಮ ಸಾಧನಗಳು
ಗೋಚರವಾಗುತ್ತಿದ್ದವು. ಮಾರ್ಗದಲ್ಲಿ ಬರಬಹುದಾದ ಪ್ರತಿಯೊ೦
ದು ಎಡರುಗಳಿಗೆ ಎದೆಗೊಡಲು ತಾನು ಸಮರ್ಧನಿದ್ದೇನೆಂದು ಗೋ
ಪಾಳರಾಯರಿಗೆ ತೋರುತ್ತಿದ್ದದರಿಂದ ಅವರು ಸಂಕಟಗಳಿಗೆ
ಹೆದರುತ್ತಿದ್ದಿಲ ; ಜೀವಿತಸಾಫಲ್ಯ ಮಾಡಿಕೊಳ್ಳುವ ಕಾ
ರ್ಯದಲ್ಲಿ ಯಾವಾಗಲೂ ಮುಂದುವರಿಯುತ್ತಿದ್ದರು. ಗೋಪಾ
ಳರಾಯರಿಗೆ ಹಲವು ಸಾಧನಗಳು ಬೇಕಾಗಿದ್ದವು. ಆದರೆ ಅವುಗಳ
ಸಲುವಾಗಿ ಅವರು ತಮ್ಮ ಪ್ರಗತಿಯನ್ನು ನಿಲ್ಲಿಸಲಿಲ್ಲ: ಆ ಸಾಧನ
ಗಳನ್ನು ಅವರು ತಮ್ಮ ಪ್ರಯತ್ನದಿಂದ ಕೈವಶ ಮಾಡಿಕೊಂಡರು.
ದೃಢನಿಶ್ಚಯವುಳ್ಳವರು ಕಾರಣಗಳನ್ನು ಹೇಳುತ್ತ ಕೂಡುವ
ದಿಲ್ಲ. ಅವರ ಓಟವು ಸದಾ ಕೆಲಸದಕಡೆಗೇ ಇರುತ್ತದೆ. ಈ ಸ್ವಾವಲಂ
ಬಿಗಳು ಮಂದಿಯಸಹಾಯದ ಅಪೇಕ್ಷೆಯನ್ನು ಸಹಸಾಬಯಸುವದಿಲ್ಲ
ಅನುಕೂಲಸಮಯದ ನಿರೀಕ್ಷಣಮಾಡುತ್ತ ಕೊಡದೆ, ಇಷ್ಟ ಕಾರ್ಯ
ಸಾಧಿಸುವದಕ್ಕಾಗಿ ಒಂದೊಂದು ಹೆಜ್ಜೆ ಮುಂದಿಕ್ಕುತ್ತಿರುತ್ತಾರೆ.
ಅವರ ಈ ಸಾಹಸದಿಂದ ಸಾಧನಗಳು ಅವರಿಗೆ ತಾವಾಗಿಯೇ ದೊರಕ
ಹತ್ತುವವು. ಯಾರು ತಮಗೆ ಸಾಧನಾಭಾವವೆಂದು ಹೇಳುವರೋ
ಅವರು ತಮ್ಮ ಬಾಯಿಂದಲೇ ತಾವು ದುರ್ಬಲರಿರುತ್ತೇವೆಂದು ಒಪ್ಪಿ
ಕೊಂಡಹಾಗಾಗುತ್ತದೆ .
'ಸಾಧನಾಭಾವ'ವು ಪರಾಜಯ ಹೊಂದಿದ ಜನರ ನಿಶ್ಚಿತ ಉತ್ತ
ರವಾಗಿದೆ. ಈ ಜನರು ಮೇಲೆ ಹೇಳಿದಂತೆ ತಮಗೆ ಧನಸಹಾಯ
ಇಲ್ಲವೆ ಜನಸಹಾಯ ಇಲ್ಲವೆ ಬುದ್ಧಿ ಸಹಾಯ ಮೊದಲಾದ ಸಾಧನ
ಗಳು ಯೋಗ್ಯವಾಗಿ ದೊರಕದ್ದರಿಂದ ಪ್ರಗತಿಮಾರ್ಗದಲ್ಲಿ ಪರಾಜಯ
೨೮----------------------------------------------------------------------
ಹೊಂದಿರುವೆವೆಂದು ಭಾವಿಸುತ್ತಾರೆ. ಆದರೆ ಬಾಲ್ಯಾವಸ್ಥೆಯಲ್ಲಿ
ತಂದೆಯ ಅಕಾಲಿಕ ಮರಣದಿಂದಲೂ, ಬಡವೆಯಾದ ತಾಯಿಯುಪಲ್ಲೆ
ಕಾಯಿಮಾರಿ ಸಂಪಾದಿಸುವ ಸಂಪಾದಿಸುವ ಪ್ರಾಪ್ತಿಯಲ್ಲಿ ಹೊಟ್ಟೆ ತುಂಬ
ದ್ದರಿಂದಲ, ಕೇವಲ ಉಪಜೀವಿಕೆಗಾಗಿಎರಡುರೂಪಾಯಿಮಗಾರಕ್ಕೆ
ದುಡಿಯುತ್ತಿದ್ದ ಜಾವಜೀದಾದಾಜಿಗೆ ನಿರ್ಣಯಸಾಗರದಂಧ ಜಗತ್ಪ್ರ
ಸಿದ್ಧ ಪ್ರೆಸ್ಸಿನ ಉತ್ಪಾದಕನಾಗಲಿಕ್ಕೆ ಸಾಧನಗಳನ್ನು ಅನುಕೂಲ
ವಾಗಿದ್ದವು? ಈ ವಿಪರೀತ ಪರಿಸ್ಥಿತಿಯಲ್ಲಿಯೇ ದೃಢನಿಶ್ಚಯ
ದಿಂದ ಧೈಯವನ್ನು ಸಾಧಿಸಿದ್ದರಿಂದ ಅವನು ಅಜರಾಮರ ಕೀರ್ತಿಗೆ
ಪಾತ್ರನಾದನಲ್ಲದೆ, ನೂರಾರುಜನರ ಪಾಲನಕರ್ತನೂ, ಕೋಟ್ಯಾಧೀ
ಶನೂ ಆದನು, "ಜಸ್ಟಿಸ್ ಆಫ್‌ದಿಪೀಸ”ವನ್ನು ನಿರೀಕ್ಷಿಸುತ್ತ ಕೂಡ್ರದೆ,
ಸಾಧನಾಭಾವವೆಂದು ಹೇಳದೆ, ಎಂಧ ಕಠಿಣಪರಿಸ್ಥಿತಿಯಲ್ಲಿಯೂ
ಕಾರ್ಯ ಮಾಡಿತೋರಿಸುವ ಇಂಥಸಾವಿರಾರು ಜಾವಾಜಿಗಳು ನಮ್ಮ ಹಿಂ
ದುಸ್ತಾನದಲ್ಲಿ ಬೇಕಾಗಿದ್ದಾರೆ. ಆದರೆ ಆ ಜಾವಜಿಗಳು ಪೇಟೆಯಲ್ಲಿ
ಮಾರಲಿಕ್ಕೆ ದೊರೆಯದೆ, ಕೇವಲ ಪ್ರಯತ್ನದಿಂದ ಆಗಬಹುದಾದ್ದ
ರಿಂದ ಪ್ರಗತಿಗಾಮೇಚ್ಛುಗಳು ಜಾವಜಿಯ ಉದಾಹರಣೆಯನ್ನು
ಮುಂದಿಟ್ಟುಕೊಂಡು ಸತತವಾಗಿ ಪರಿಶ್ರಮಪಟ್ಟು ಪ್ರಗತಿಯನ್ನು
ಹೊಂದಬೇಕು,
ಸಾಧನಗಳ ಸಲುವಾಗಿ ತದೆದು ನಿಲ್ಲುವದು ಬಹಳ ಘಾತಕವಾ
ಗಿದೆ. ಹೀಗೆ ತಡೆದುನಿಲ್ಲುವದರಿಂದ ನಮ್ಮ ಉತ್ಸಾಹದ ಹಾಗು ಕೆಲ
ಸಮಾಡುವ ಪ್ರವೃತ್ತಿಯು ನಾಶವಾಗುವದು. ಯಾವ ಕೆಲಸಮಾ
ಡಲೂ ಇಚ್ಛೆಯಿಲ್ಲದವನಿಗೂ, ಸಾಧನಗಳ ಸಲುವಾಗಿ ತಡೆದು
ನಿಲ್ಲುವವನಿಗ ಸುಸಂಧಿಗಳು ಆದಶ್ಯವಾಗುವವು. ಎಂಧ ಅನು
ಕೂಲಪರಿಸ್ಥಿತಿಯು ಪ್ರಾಪ್ತವಾದರೂ ಎಂಧ ಸುಸಾಧನಗಳು ಹಸ್ತಗ
ತವಾಗಿದ್ದರೂ ಈ ಹೇಡಿಜನರ ದೃಷ್ಟಿಯಿಂದ ಅದು ತಕ್ಕ ಸಮ
ಯವೇ ಆಗಿರುವದಿಲ್ಲ. ಯೋಗ್ಯ ಸಾಧನವಾಗಿಯೂ ಕಂಡುಬರುವ
ದಿಲ್ಲ, ಇಂಥ ಜನರನ್ನು ಬಂಗಾರರತ್ನಗಳ ಖಣಿಗಳಲ್ಲಿ ತಿರುಗಾಡಿಸಿ
೨೯-------------------------------------------------------------------
ದರೆ ಕೂಡ ಇವರಿಗೆ ಮೌಲ್ಯವಾದ ವಸ್ತುಗಳು ದೊರೆಯದಾಗುವವು.
ಆದರೆ ದೃಢನಿಶ್ಚಯದ ಧೈಯವನ್ನು ಗೊತ್ತು ಮಾಡಿಕೊಂಡ ಅಪೂ
ರ್ವತೆಯ ಗುಣವುಳ್ಳ ಹಾಗು ಸ್ವಾತಂತ್ರ್ಯಪ್ರೀತಿಯುಳ್ಳ ಮನುಷ್ಯ
ನನ್ನು ಎಂಥ ರುಕ್ಷ ಹಾಗು ಕಾಡುಪ್ರದೇಶದಲ್ಲಿ ಬಿಟ್ಟರೂ ಅವನಿಗೆ
ತನ್ನ ಸುತ್ತು ಮುತ್ತು ಸಾಧನಗಳ ಸಂಗ್ರಹಾಲಯವೇ ಇದ್ದಂತೆ
ಕಾಣುವದು.
ಲೋ. ಟಿಳಕರು 'ಗೀತಾರಹಸ್ಯ”ದಂಧ ಕರ್ಮಯೋಗಶಾ
ಸ್ತ್ರದ ಸರ್ವಮಾನ್ಯವಾದ ಉದ್ಧಂಧವನ್ನು ಜೇಲಿನಲ್ಲಿದ್ದಾಗ ಬರೆದು
ಮುಗಿಸಿದರು. ಅವರ ಆಗಿನ ಮನಸ್ಥಿತಿ, ಅನುಕೂಲತೆ, ಪರಿಸ್ಥಿತಿ
ಗಳನ್ನು ಅವಲೋಕಿಸಿದರೆ, ದೃಢನಿಶ್ಚಯವೇ ಅವರಿಂದ ಈ ಪ್ರಚಂಡ
ಕೆಲಸವನ್ನು ಮಾಡಿಸಿತೆನ್ನಬೇಕಾಗುವದು. ಲೋ. ಟಿಳಕರಂತೆ
ಪ್ರಗತಿಗಾಮಿಗಳಾದ ಅನೇಕರು ಕಠಿಣ ಪ್ರಸಂಗದಲ್ಲಿ ಅಲೌಕಿಕ
ಕೃತಿಗಳನ್ನು ಮಾಡಿ ಕೀರ್ತಿಶೇಷರಾಗಿರುವರು. ಆದರೆ ತಮ್ಮ ಎಲ್ಲ
ವೇಳೆಯನ್ನು ಕಾರ್ಯಸಾಧನದಲ್ಲಿ ಕಳೆಯುವವರು ವಿರಳ. ಕೆಲವ
ರಿಗೆ ಕಾರ್ಯ ಸಾಧನದಲ್ಲಿ ಇಡಿದಿವಸದಲ್ಲಿ ತಾಸು ಅರ್ಧತಾಸು ಕೂಡವಿರಾ
ಮಹೊಂದಲು ವೇಳೆಸಿಗದಿರುವಾಗ, ಬೇರೆ ಕೆಲವರು ಏನೂ ಕೆಲಸ
ವಿಲ್ಲದೆ ಯಾವ ಮೋಜಿನ ಆಟಗಳಲ್ಲಿ ಕಾಲಕಳೆಯಬೇಕೆಂಬ ಆಲೋ
ಚನೆಯಲ್ಲಿ ಮಗ್ನರಾಗಿರುವರು: ಇದರಂತೆ ಯಾರು ನಿರೋಗಿಗಳಾಗಿ
ರುವರೋ ಅವರು ಹೆಚ್ಚು ಆರೋಗ್ಯವನ್ನು ಹೊಂದುವದಕ್ಕಾಗಿಯೂ,
ದೇಹದ ಬಲವನ್ನು ಬೆಳೆಸುವದಕ್ಕಾಗಿಯೂ ವ್ಯಾಯಾಮಾದಿಗಳ ಅವ
ಲಂಬನ ಮಾಡುತ್ತಿರಲು, ಬೇರೆ ಕೆಲವು ಶ್ರೀಮಂತ ರೋಗಿಗಳು
ರೋಗನಿವಾರಣಕ್ಕಾಗಿ ಆರೋಗ್ಯವಿಷಯದ ಯಾವ ಮಾರ್ಗ
ವನ್ನೂ ಅವಲಂಬಿಸಲಾರದೆ, ಕೇವಲ ಆಲಸ್ಯದಲ್ಲಿಯೂ, ತಿನಸುಗೂ
ಳಿತನದಲ್ಲಿಯೇ ಕಾಲಕಳೆದು ಹೆಚ್ಚು ಹೆಚ್ಚು ರೋಗಗ್ರಸ್ತರಾಗು
ತ್ತಿರುವರು, ಪ್ರಗತಿಹೊಂದುವ ಇಚ್ಛೆಯು ಪ್ರಾಪ್ತವಾದಹೊರ್ತು
ಮನುಷ್ಯನಿಗೆ ಸರಿಯಾಗಿ ಹೊಟ್ಟೆ ಹಸಿಯದಿದ್ದಾಗ, ಮಧುರವಾದ
೩೦----------------------------------------------------------------
ಫಲಗಳೂ ಸ್ವಾದವಾಗಿ ತೋರದಿರುವಂತೆ, ಎಂಧ ಉತ್ಕಷ್ಟ ಸಾಧ
ನಗಳೂ ಸಾಧನಗಳಾಗಿ ತೋರುವದಿಲ್ಲ. ಆದ್ದರಿಂದ ಪ್ರಗತಿಹೊ೦
ದಬೇಕೆನ್ನುವ ಮನುಷ್ಯನು ಮೊದಲು ತನ್ನ ದೃಷ್ಟಿಯನ್ನು ತಿದ್ದಿ
ಕೊಳ್ಳಬೇಕು. ಅಂದರೆ ಅವನಿಗೆ ಪ್ರಗತಿಯ ಇಚ್ಛಾ ಪ್ರಾಪ್ತವಾಗಿ
ಪ್ರತಿಯೊಂದು ಸ್ಥಿತಿಯ ಅನುಕೂಲವಾಗಿಯೇ ಕಾಣುವದು.
ಪ್ರಗತಿಯ ಇಚ್ಚೆಯೊಂದು ಪ್ರಾಪ್ತವಾಯಿತೆಂದರೆ, ಜಾವಜಿ,
ಗೋಖಲೆ ಇವರಂತೆ ಮತ್ತಾರಾದರೂ ಅಪೂರ್ವ ಕಾರ್ಯವನ್ನು ಮಾಡಿ
ತೋರಿಸಹತ್ತುವರು. ಇಷ್ಟೇ ಅಲ್ಲ ಅತ್ಯಂತ ರೋಗಿಯಾದ ಮಹಾ
ವ್ಯಂಗವುಳ್ಳ ಮನುಷ್ಯನು ಕೂಡ ಅಲೌಕಿಕ ಕೆಲಸಮಾಡಿ ತೋರಿ
ಸುವನು. ಈಗಿದ್ದ "ಬೀಜಗಣಿತ” ವನ್ನು ಯಾವನೋ ಜನ್ಮಾಂಧ
ನೊಬ್ಬನು ತನ್ನ ಅಪೂರ್ವವಾದ ಕಲ್ಪಕತೆಯಿಂದ ರಚಿಸಿರುವನೆಂಬ
ದಂತಕಥೆಯು ಕೇಳಿಕೆಯಲ್ಲಿದೆ. ನಮ್ಮ ಆರ್ಯಾವರ್ತದಲ್ಲಿ
ಇಂಥ ಗುಣಗಳುಳ್ಳ ಆದರಣೀಯರಾದ ಹಲವರು ಸ್ತ್ರೀ ಪುರುಷರು
ಆಗಿಹೋದರು . ಸದ್ಯಃಕಾಲದಲ್ಲಿಯೂ ಇರುವರು. ತೀರ
ಸ್ವಲ್ಪ ಅಪವಾದಗಳನ್ನು ಬಿಟ್ಟು ಕೊಟ್ಟರೆ, ಜಗತ್ತಿನೊಳಗಿನ
ಉಳಿದ ಎಲ್ಲ ಆಲೌಕಿಕ ಕಾರ್ಯಗಳು ಕೇವಲ ಪ್ರತಿಕೂಲಸ್ಥಿತಿಯ
ಲ್ಲಿದ್ದ ಬಡಹುಡುಗರಿಂದಲೇ ಆಗಿವೆಯೆಂದು ಹೇಳಲಿಕ್ಕೆ ಅಡ್ಡಿಯಿಲ್ಲ.
ಆತ್ಮೋನ್ನತಿಯ ದೃಢನಿಶ್ಚಯದಿಂದ ಪ್ರೇರಿತನಾದ ಮನುಷ್ಯನ
ಎದುರಿನಲ್ಲಿ ಯಾವ ವಿಘ್ನಗಳೂ ಬಹಳ ಹೊತ್ತಿನವರೆಗೆ ನಿಲ್ಲಲಾರವು.
ಯಾವ ವಿಘ್ನಗಳು ಸಾಮಾನ್ಯರನ್ನು ಕುದ್ರವಸ್ಥೆಯಲ್ಲಿರಸಲು ಕಾರ
ಣಗಳಾಗುವವೋ ಆ ವಿಘ್ನಗಳನ್ನು ದೃಢನಿಶ್ಚಯದ ಮನುಷ್ಯನು
ಸಹಜವಾಗಿ ಛೇದಿಸುವನು. ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿದ
ಮಾನದಿಂದ ಕಾರ್ಯಸಾಧಿಸುವ ಸಂಭವವು ಹೆಚ್ಚು; ಕಡಿಮೆತರದ
ಆಸಕ್ತಿಯಿಂದ ಯಾವ ಕಾರ್ಯವೂ ಸಾಧಿಸಲಾರದು, ಸಾಧಾರಣ
ವಾದ ಬೆಚ್ಚಗಿನ ನೀರಿನಿಂದ ಉಗಿಯು ಉತ್ಪನ್ನವಾಗದ್ದರಿಂದ ಎಂಜಿ
ನವು ನಡೆಯುವದಿಲ್ಲ. ಅದೇ ಸಳಮಳ ಕುದಿಯುವ ನೀರಿನಿಂದ
೩೧------------------------------------------------------------
ಆಗಲೇ ಇಂಜನಿಗೆ ಗತಿಯು ಉಂಟಾಗುವದು. ಈ ನಿಯಮವೇ
ಪ್ರಗತಿಪರ ಮನುಷ್ಯನಿಗೆ ಹತ್ತುವದು. ಯಶಃಪ್ರಾಪ್ತಿಯ ಗುಹ್ಯವು
ಹೆಚ್ಚಾದ ಆಸಕ್ತಿಯಲ್ಲಿರುವದು. ಪ್ರತಿಬಂಧಗಳನ್ನು ಛೇದಿಸುವ
ಶಕ್ತಿಯ ಮಿತಿಮೀರಿದ ಆಸಕ್ತಿಯಿಂದ ಉಂಟಾಗುವದು. ಪ್ರತಿಬಂಧ
ಗಳಿಗೆ, ವಿಘ್ನಗಳಿಗೆ ಹೆದರುವವರು ಅವುಗಳ ವರ್ಚಸ್ಸನ್ನು
ಒಪ್ಪಿಕೊಂಡಂತಾಗುವದು. ಆದರೆ ಕಾರ್ಯಾಸಕ್ತಿಯನ್ನು ಬೆಳಿಸಿ
ದೃಢನಿಶ್ಚಯದಿಂದ ಕೆಲಸ ಮಾಡಹತ್ತಿದರೆ ಧೈಯವನ್ನು ಬಹುಬೇಗ
ಸಾಧಿಸಲಿಕ್ಕೆ ಬರುತ್ತದೆ.
ತಮ್ಮ ಊರ ಭೂಮಿಗಿಂತ ಬೇರೆ ಊರ ಭೂಮಿಗಳು ಹೆಚ್ಚು
ಫಲಕಾರಿಗಳೆಂದು ತಿಳಿಯುವ ಮೂಢಒಕ್ಕಲಿಗನಂತೆ, ಎಷ್ಟೋ
ಜನರು ಕಾರ್ಯಸಾಧನಕ್ಕಾಗಿ ಸ್ಥಳಾಂತರ ಮಾಡುವದು ಅವಶ್ಯವೆಂದು
ತಿಳಿಯುತ್ತಾರೆ ಆದರೆ ಜಾಣರೈತನು ಕಾಡುಭೂಮಿಯನ್ನೇ ಗೊಬ್ಬ
ರಹಾಕಿಫಲರೂಪವಾಗಮಾಡಿಕೊಳ್ಳುವಂತೆ, ಬುದ್ಧಿವಂತಹಾಗು ದೃಢ
ನಿಶ್ಚಯದ ಮನುಷ್ಯನು ಕಾರ್ಯಸಾಧನಕ್ಕಾಗಿ ಸ್ಥಳಾಂತರ ಮಾಡದೆ
ಈದ್ದ ಊರಲ್ಲಿಯೇ ಇದ್ದ ಸ್ಥಿತಿಯಲ್ಲಿಯೇ ಇದ್ದು, ಸ್ವಂತ ಪರಿಶ್ರಮ
ದಿಂದ ಬೇಕಾದ ಅನುಕೂಲತೆಗಳನ್ನು ಉತ್ಪನ್ನ ಮಾಡಿಕೊಂಡು ಕಾರ್ಯ
ಸಾಧಿಸಹತ್ತಿ ಪ್ರಗತಿಹೊಂದುವನು. ಆದ್ದರಿಂದ ಕಾರ್ಯದಲ್ಲಿ ಆಸ
ಕಿಯನ್ನಿಡದೆ ದೈವಪರೀಕ್ಷೆಯನ್ನು ಕಂಡುಹಿಡಿಯುವದಕ್ಕಾಗಿ ಸ್ಥಳಾಂ
ತರಮಾಡಿ ದೊಡ್ಡ ದೊಡ್ಡ ಪಟ್ಟಣಗಳ ಕಡೆಗೆ ಓಡಹತ್ತ ಬಾರದು:
ಅಧವಾ ಒಂದು ಉದ್ಯೋಗವನ್ನು ಬಿಟ್ಟು ಬೇರೆ ಉದ್ಯೋಗವನ್ನು
ಕೈಕೊಳ್ಳಬಾರದು. ಸಂಕಟಗಳು, ವಿಘ್ನಗಳು ಮನುಷ್ಯನಲ್ಲಿ ಆಸ
ಕ್ತಿಯನ್ನು ಹೆಚ್ಚಿಸಲಿಕ್ಕೂ, ನಿಶ್ಚಯವನ್ನು ದೃಢಪಡಿಸಲಿಕ್ಕೂ,
ವ್ಯಕ್ತಗೊಳಿಸಲಿಕ್ಕೂ ಕಾರಣಗಳಾಗುವವು. ಯಾವನು ಸಂಕಟಪರಂ
ಪರೆಗಳಿಗೆ ಎದೆಗೊಟ್ಟು ಕಾರ್ಯ ಸಾಗಿಸುವನೋ ಅವನು ಪುಟಕೊಟ್ಟ
ಚಿಹ್ನಕವು ಶುದ್ಧವೂ, ಹೆಚ್ಚು ಕಾಂತಿಮಯವೂ, ವಿಶೇಷ ಬೆಲೆಯು
೩೨-----------------------------------------------------------
ಳ್ಳದ್ದೂ ಆಗುವಂತೆ ಮನೋದಾರ್ಡ್ಯವಿಶೇಷದಿಂದ ಪ್ರಖ್ಯಾತನಾಗಿ
ಪ್ರಗತಿಯನ್ನು ಹೊಂದುವನು.
ಇಂಥ ಇಂಥ ಕಾರ್ಯವನ್ನು ಮಾಡಿದ ಮನುಷ್ಯನೇ ಪ್ರಗತಿ
ಹೊಂದಬೇಕೆಂತಿಲ್ಲ; ಇಂಥ ಇಂಥ ಜಾತಿಯ ಇಲ್ಲವೆ ಇಂಥ ಇಂಥ
ವರ್ಣದ ಜನರೇ ಪ್ರಗತಿಹೊಂದಬೇಕೆಂತಿಲ್ಲ ; ಪ್ರಗತಿಹೊಂದುವ ವಿಷ
ಯದಲ್ಲಿ ಬ್ರಾಹ್ಮಣನೂ ಅಷ್ಟೇ ಅಧಿಕಾರಿಯು ; ಚಾಂದಾಲನೂ
ಅಷ್ಟೇ ಅಧಿಕಾರಿಯು; ಬಡ ಕೂಲಿಕಾರನೂ ಆ ಅಧಿಕಾರಿಯು;
ಪ್ರಗತಿಹೊಂದಲಿಚ್ಛಿಸುವ ಮನುಷ್ಯನನ್ನು ಕಂಡು ಯಾರೂ ಅಸೂ
ಯೆಪಡುವಕಾರಣವಿಲ್ಲ. ಒಂದುವೇಳೆ ನೆರೆಹೊರೆಯವರು ಪ್ರಗತಿಪರ
ಮನುಷ್ಯನಿಗೆ ಕೇಡುಬಗೆಯಹತ್ತಿದರೂ ಸೃಷ್ಟಿಯು, ಈಶ್ವರನು ಅವನಿಗೆ
ಸಂಪೂರ್ಣ ಸಹಾಯಕಾರಿಗಳಾಗಿರುವದರಿಂದ ಅವನ ಉಚ್ಛ್ರೇ
ಯವು ದಿನೇದಿನೇ ಅಭಿವೃದ್ಧಿಯಾಗಹತ್ತುತ್ತದೆ.
ಆದರೆ ಬರೆಯಲಿಕ್ಕೆ ಅತ್ಯಂತ ಖೇದವೆನಿಸುವ ಸಂಗತಿ ಯವದೆಂ
ದರೆ, ನಮ್ಮಲ್ಲಿಯ ಬಹುಜನ ಮುದುವರು ಪ್ರಗತಿಮಾರ್ಗದಲ್ಲಿ ಬರುವ
ಸಂಕಟಗಳಿಗೆ ಹೆದರಿ ನಮ್ಮ ಮಕ್ಕಳಿಗೆ ಯಾವ ಹೊಸ ಉದ್ಯೋಗ
ವನ್ನೂ ಮಾಡುವ ಅವಶ್ಯವಿಲ್ಲ. ದೇವರ ದಯೆಯಿಂದಲೂ, ಪೂರ್ವ
ಜರ ಪುಣ್ಯದಿಂದಲೂ ಅವರ ಹೊಟ್ಟೆ ಬಟ್ಟೆಗಳಿಗೆ ಕೊರತೆಯಿಲ್ಲ:
ಅವರು ಕೂತು ತಿಂದರೂ ಚೆಟ್ಣಿ-ಬಕ್ಕರಿಗೆ ಕೊರತೆಯಾಗಲಿಕ್ಕಿಲ್ಲ.
ಆದ್ದರಿಂದ ನಮ್ಮ ಮಕ್ಕಳು ಹೆಚ್ಚಿನ ಸಾಹಸಕ್ಕೆ ಹೋಗದೆ ಇದ್ದ
ದನ್ನು ಸಾಗಿಸಿಕೊಂಡು ಹೋದರೆ ಸಾಕು” ಎಂದು ನಿರುತ್ಸಾಹದ
ಹೇಡಿತನದ, ಕರ್ತವ್ಯಪರಾಙ್ಮುಖತೆಯ, ಹೇಯವೃತ್ತಿಯ ಉದ್ಧಾರಗ
ಳನ್ನು ಬಾಲ್ಯದಿಂದಲೇ ತಮ್ಮ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಬಿಂಬಿಸು
ವಂತೆ ಹೊರಗೆಡುವುತ್ತಿರುತ್ತಾರೆ. ಅವರ ಈ ಉದ್ಗಾರಗಳು ಸಾಮಾ
ನ್ಯದೃಷ್ಟಿಯಿಂದ ಯೋಗ್ಯವಾಗಿ ತೋರಬಹುದಾಗಿದ್ದರೂ ಪ್ರಗತಿ
ಗಾಮಿಯ ದೃಷ್ಟಿಯಿಂದ ಅವು ಬಹಳ ನಿಂದ್ಯವಾಗಿ ತೋರುವವು.
ಪ್ರತಿಯೊಬ್ಬನ ಜನ್ಮವೂ, ರೂಪವೂ, ಬುದ್ಧಿಯೂ, ಧೈಯವೂ ಹಿಂದೆ
೩೩---------------------------------------------------------------.
ಹೇಳಿದಂತೆ ಪ್ರತ್ಯೇಕವಾಗಿರುವದರಿಂದ ಅವನು ಪೂರ್ವಜರ ಅನುಕ
ರಣಮಾಡುವದು ಯೋಗ್ಯವಾದೀತೇ? ಹುಡುಗರಿಗೆ ತಿಳಿಯಹತ್ತಿದಾಗಿ
ನಿಂದ ಅವರ ಒಲವು ಜಾಗ್ರತವಾಗಹತ್ತುತ್ತದೆ; ಕಾರ್ಯಕಾರಣ
ಗಳಿಂದ ಚಿಕಿತ್ಸೆ ಮಾಡುವ ಅಧಿಕಾರವು ಪ್ರಾಪ್ತವಾಗುತ್ತದೆ. ಎಷ್ಟೋ
ಹುಡುಗರು ಒಂದೇ ಸಾಲೆಯಲ್ಲಿ, ಒಂದೇ ವರ್ಗದಲ್ಲಿ, ಒಬ್ಬನೇ
ಶಿಕ್ಷಕನಲ್ಲಿ ಕಲಿಯುತ್ತಿದ್ದರೂ, ಅವರೆಲ್ಲರ ಬುದ್ದಿಯೂ, ವಿಚಾರ
ಗಳೂ, ಶಿಕ್ಷಣವೂ ಭಿನ್ನ ಭಿನ್ನವಾಗುವಂತೆ, ಅವರವರ ಧೈಯಗಳೂ
ಭಿನ್ನ ಭಿನ್ನವಾಗುವವು. ಹೀಗಿರಲು ಹೇಡಿ ಹಾಗು ಕರ್ತವ್ಯಪರಾ
ಙ್ಮುಖನಾದ ತಂದೆಯು ತನ್ನ ಓಜಸ್ವಿ ಹಾಗು ಕರ್ತವ್ಯನಿಷ್ಠ ಮಗನಿಗೆ
ಮೇಲಿನಂತೆ ಬೋಧಿಸುವದು ಯೋಗ್ಯವೇ? ಅಪಕ್ವವಿಚಾರಗಳಿರುವ
ವರೆಗೆ ಮಗನಿಗೆ ತಂದೆಯ ಬೋಧವು ಸಮ್ಮತವಾಗಿದ್ದರೂ, ಕರ್ತ
ವ್ಯದಿಶೆಯನ್ನು ಕಂಡುಹಿಡಿದ ಮಗನಿಗೆ ತಂದೆಯ ಬೋಧದಲ್ಲಿ ಅರ್ಧ
ವಿಲ್ಲೆಂಬದು ವ್ಯಕ್ತವಾಗುವದು, ಯಾಕಂದರೆ ಕರ್ತವ್ಯನಿಷನು
ತನ್ನ ಪೂರ್ವಜರ ಧನ-ಧಾನ್ಯಗಳನ್ನು ಉಪಯೋಗಿಸುವದರಲ್ಲಿ ಸುಖಿ
ಯಾಗಿರುವದಿಲ್ಲ. ಅವನು ಅವುಗಳನ್ನು ಪಿತೃಗಳ ಪೂಜ್ಯತೆಯ
ಮಾನದಿಂದ ಪ್ರಸಾದವೆಂದು ತಿಳಿದರೂ, ಮನುಷ್ಯತ್ವದ ದೃಷ್ಟಿ
ಯಿಂದ ಅವನು ಅವನು ತನ್ನ ಮಾರಕ ಆಗ್ರಾಹ್ಯಗಳ೦ದು
ಭಾವಿಸುವನು. ಹಿರಿಯರ ಹೆಸರಿನ ಮೇಲೆ, ಕೀರ್ತಿಯ ಮೇಲೆ
ಪುಣ್ಯದ ಮೇಲೆ, ಆಸ್ತಿಯ ಮೇಲೆ ಉಪಜೀವಿಸುವದು ಅಲೌಕಿಕ
ಮನುಷ್ಯನಿಗೆ ನರಕಪ್ರಾಯವಾಗಿ ತೋರುವದು, ಹಿರಿಯರ ಆಸ್ತಿಯ
ಚೆಟ್ಣಿ-ಬಕ್ಕರೆ, ಇಲ್ಲವೆ ತರತರದ ಪಕ್ವಾನ್ನ ಇವುಗಳ ಸೇವನಕ್ಕಿಂತ
ಸ್ವಂತದ ಬೆವರುಹನಿಯಿಂದಸಂಪಾದಿಸಿದ ಕಾಟಿಯನ್ನು ಕುಡಿದುಜೀವಿ
ಸುವದರಲ್ಲಿ ಹೆಚ್ಚು ಸುಖವದೆಯೆಂದು ಓಜಸ್ವಿ ಮನುಷ್ಯನು ಭಾವಿಸಿ,
ಶಕ್ತಿಮೀರಿ ಹೆಣಗಿ ಆಲೌಕಿಕತೆಯನ್ನು ವ್ಯಕ್ತಗೊಳಿಸುವನು. ಆದ್ದ
ರಿಂದ ಪ್ರಗತಿಹೊಂದಬಯಸುವ ಮನುಷ್ಯನು, ಸಾಧನಾಭಾವಕ್ಕಾಗಿ
ತಡೆಯದೆ, ಅಪೂರ್ವತೆಗೆ ಭಂಗತಂದುಕೊಳ್ಳದೆ, ದೃಢನಿಶ್ಚಯಕ್ಕೆ
೩೪----------------------------------------------------------------
ಚ್ಯುತಿಬಾರದ ಹಾಗೆ, ಸ್ವಾತಂತ್ರ್ಯಪ್ರೀತಿಗೆ ಕುಂದುತಟ್ಟದ ಹಾಗೆ
ಕಾರ್ಯಮಾಡಿ ಪ್ರಗತಿಹೊಂದಬೇಕು.
=================
೫ನೆಯ ಖಂಡ-ಪ್ರತಿಕೂಲತೆ,
"ಮಹಾರಾಜಾ, ಈ ಘಟಕ್ಕೆ ಬಂದ ಪ್ರತಿಕೂಲಪ್ರಸಂಗ
ಗಳು ನಿಮಗೆ ಬಂದಿದ್ದರೆ ಮಹಾರಾಜಾ ನಿಮ್ಮ ಸ್ಥಿತಿಯು ಏನಾಗು
ತಿತ್ತೋ ಹೇಳಲಾಗದು ಮಹಾರಾಜಾ! ಮಹಾರಾಜಾ ಮನೆಯಲ್ಲಿ
ರಾಮಭಟ್ಟ ತಂದೆಯವರ ತ್ರಾಸ, ಅಣ್ಣ-ತಮ್ಮಂದಿರುಸ, ಜಾಜ್ಯ
ಲ್ಯಭಾವದ ಹೆಂಡತಿಯತ್ರಾಸ ಅಲ್ಲದೆ ಆಪ್ತೇಷ್ಟರ ಹಾಗು ನೆರೆ
ಹೊರೆಯವರ ನಿಂದಾ, ಚೇಷ್ಮೆ, ಅಪಮಾನಗಳತ್ರಾಸ ಇಷ್ಟೆಲ್ಲ ತ್ರಾಸ
ಗಳನ್ನು ಸಹಿಸಿ ಸಹಿಸಿ, ಮಹಾರಾಜಾ, ''ಸಾಧು"ಎಂಬ ಎರಡು ಅಕ್ಷರ
ಗಳನ್ನು ಕಾಯ್ದುಕೊಳ್ಳಬೇಕಾದರೆ ಈ ದೇಹವು ಎಷ್ಟು ಕಷ್ಟ ಪಟ್ಟಿ
ರುವದೆಂಬದನ್ನು ನೀವೇನು ತಿಳಿದೀರಿ ಮಹಾರಾಜಾ !” ಎಂಬ ಶ್ರೀ
ಶೇಷಾಚಲ ಸದ್ಗುರು ಮಹಾರಾಜರವರ ಉಪದೇಶವು ಸ್ಮರಣವಾಯಿ
ತೆಂದರೆ ನಮ್ಮ ಹೃದಯವು ಕಂಪಿಸಹತ್ತುತ್ತದೆ.
ಪ್ರತಿಕೂಲಸಂಗತಿಗಳಿಂದ ಶ್ರೀ ಶೇಷಾಚಲ ಗುರುವರರಲ್ಲಿ ಸಾಧು
ತ್ವವು ನೆಲೆಗೊಂಡದ್ದು ಹ್ಯಾಗೆಂಬದನ್ನು ವಿವೇಚಿಸುವಾ, ಭಾವಿಕರ
ದೃಷ್ಟಿಯಿಂದ ಅವರು ಶ್ರೀ ಚಿದಂಬರನ ದ್ವಿತೀಯಾವತಾರಿಕರು ಆಗಿ
ದ್ದರೂ ಪ್ರಯತ್ನವಾದಿಗಳ ದೃಷ್ಟಿಯಿಂದಲೂ, ಅವರ ಅವತಾರದ
ಮಹತಿಯು ತಿಳಿದುಬರುವಂತಿದೆ. ಸದರುಗಳು ಸಾಧಾರಣಸ್ಥಿತಿಯ
ಬ್ರಾಹ್ಮಣಮನೆತನದಲ್ಲಿ ಜನ್ಮತಾಳಿದರು; ಅವರು ಸ್ವಭಾವತಃ ಕುಶಾ
ಗ್ರಬುದ್ಧಿಯವರಾಗಿರದೆ, ಮಂದಬುದ್ಧಿಯವರಾಗಿದ್ದರು. ಬಾಲ್ಯ
ದಲ್ಲಿ ಬಹಳದಿವಸಗಳವರೆಗೆ ಅಭ್ಯಾಸದಕಡೆ ಲಕ್ಕು ಇರದ್ದರಿಂದ
ಕೇವಲ ಆಟನೋಟಗಳಲ್ಲಿ ಹೊತ್ತುಗಳೆಯುತ್ತಿದ್ದರು. ಉಪನಯನ
ಸಂಸ್ಕಾರವಾದಮೇಲೆ ಅವರ ವೈದಿಕ ಶಿಕ್ಷಣಕ್ಕೆ ಪ್ರಾರಂಭವಾಯಿತು
ಆದರೆ ದಡ್ಡತನದ ಮೂಲಕ ಅವರು ಅದರಲ್ಲಿ ಆಗ ಪ್ರಗತಿಯನ್ನು
೩೫---------------------------------------------------------------
&೫=
ಹೊಂದಲಿಲ್ಲ. ಹಿರಿಯರು ಲಗ್ನ ಮಾಡಿದರು. ಆಗಿನಿಂದ ಅವರ
ಸಾಧುತ್ವದ ಪ್ರಗತಿಗೆ ಆರಂಭವಾಯಿತು: ಮನೆತನದ ಕೆಲಸದಲ್ಲಿ
ಬೀಳದೆ, ಇವರು ಸದಾ ದೇವರ ಪೂಜೆ-ಪುನಸ್ಕಾರ, ಮೊದ
ಲಾದವುಗಳಲ್ಲಿ ಹೊತ್ತುಗಳೆಯತೊಡಗಿದರು. ಇದರಿಂದ ಮನೆಯವ
ರಿಗೂ ಇವರಿಗೂ ಸರಿಬೀಳಲಿಲ್ಲ. ಆಪ್ತೇಷ್ಟರು ನಿಂದೆಯನ್ನು
ಮಾಡತೊಡಗಿದರು. ನೆರೆಹೊರೆಯವರೂ, ಮಿತ್ರರೂ ಇವರ ಭಾವಿ
ಕತನವನ್ನು ಕುರಿತು ಚೇಷ್ಟೆಯನ್ನೂ, ಉಪಹಾಸವನ್ನೂ ಮಾಡಹತ್ತಿ
ದರು. ಆದರೂ ಪ್ರಗತಿಯ ಕಡೆಗೆ ಲಕ್ಷ್ಯವಿದ್ದ ಆ ಸಾಧುಶ್ರೇಷ್ಠನು
ಯಾರನ್ನೂ ವಿರೋಧಿಸಹೋಗಲಿಲ್ಲ. ಇಷ್ಟೇ ಅಲ್ಲ. ಅವರ
ಕ್ರಿಯೆಗೆ ಕಾಯಾ-ವಾಚಾಮನಸಾತಡೆಹಾಕಲು ಯತ್ನಿಸದೆ ನೆಟ್ಟಗೆ
ತನ್ನ ಧೈಯದ ಕಡೆಗೆ ಸಾಗಿದ್ದನು. ಸಾಧುಗಳ ಈ ಕೃತಿಯಿಂದ
ವಿವೇಕಿಗಳಾದ ಪ್ರತಿಸ್ಪರ್ಧಿಗಳು ಹಿಂಜರಿದರು. ದುರಭಿಮಾನಿಗಳು
ಮಾತ್ರ ರೊಚ್ಚಿಗೆದ್ದರು. ಅವರು ಹ್ಯಾಗಾದರೂ ಮಾಡಿ ಇವನನ್ನು
ಅಂಣತಮ್ಮಂದಿರಿಂದ ವಿಂಗಡಿಸಿದರೆ, ಇವನ ಈ ಥೋಂಗೀ ಸಾಧು
ತ್ವವು ಇಲ್ಲದಂತಾಗಿ ಹತ್ತು ಜನರಂತೆ ಮನೆಮಾರು ಸಾಗಿಸಿಕೊಳ್ಳುವ
ನೆಂದು ಭಾವಿಸಿ, ಗುರುಗಳನ್ನು ಬೇರೆ ಇರಲು ಹಚ್ಚಿದರು. ಬೇರೆ
ಇರಹತ್ತಿದಾಗಿನಿಂದ ಕುಹಕರ ದೃಷ್ಟಿಯಂತೆ ಗುರುಗಳ ಸಾಧನವು
ಕಡಿಮೆಯಾಗದೆ, ಅದು ಮತ್ತಷ್ಟು ಶೀಘ್ರವಾಗಿಯೂ, ಸ್ವಲ್ಪ ಮಟ್ಟಿಗೆ
ಯಾಕಾಗಲೊಲ್ಲದು. ತ್ರಾಸರಹಿತವಾಗಿಯೂ ಸಾಗಹತ್ತಿತು. ಗುರು
ಪತ್ನಿಯವರು ಅತ್ಯಂತ ಉಜ್ವಲವೃತ್ತಿಯ ಶೀಡಕಸ್ವಭಾವದವರಿ
ದ್ದರು. ಅವರು ತಮ್ಮ ಪತಿದೈವನಿಗೆ ತೊಂದರೆ ಕೊಡುವದಕ್ಕಾಗಿ,
(ಹೀಗೆನ್ನುವದಕ್ಕಿಂತ ಅವನಲ್ಲಿ ಸಾಧುತ್ವವು ತೀವ್ರವಾಗಿ ಸ್ಥಿರಗೊಳ್ಳು
ವದಕ್ಕೆಂದರೆ ಹೆಚ್ಚು ಸಮಂಜಸವಾಗಿ ತೋರುವದು.) ಬಹುಪರಿಯ
ಕಷ್ಟಗಳನ್ನು ಕೊಟ್ಟರು. ಅವರು ತಮ್ಮ ಪತಿಯೆಂದು ಉಜರು
ಇಡದೆ ಸಾಧುಗಳವರಿಂದ ಕುಟ್ಟುವದು, ಬೀಸುವದು. ಮುಸುರಿತಿಕ್ಕು
ವದು ಮೊದಲಾದ ನೀಚ ಕೆಲಸಗಳನ್ನು ಮಾಡಿಸಿದರು. ಮಂದಿಯ
೩೬------------------------------------------------------------------
ಎದುರಿಗೆ ಅವರನ್ನು ಸಿಕ್ಕ ಸಿಕ್ಕ ಹಾಗೆ ಅಂದುಕೊಂಡರು. ಇವೆಲ್ಲ
ಪರೀಕ್ಷೆಗಳಲ್ಲಿ ಸಾಧುಗಳು ಉತ್ತೀರ್ಣರಾಗಲಿಕ್ಕೆ ಅವರಲ್ಲಿ ದೃಢ
ನಿಶ್ಚಯ, ಆಲೌಕಿಕತೆ ಮೊದಲಾದ ಗುಣಗಳ ಸಹಾಯವಾಯಿತು.
ಎಂಥ ಪ್ರತಿಕೂಲಪ್ರಸಂಗದಲ್ಲಿಯೂ ಅವರಿಗೆ ಸಾಧನದಮಾರ್ಗವು
ಸುಗಮವಾಗಿ ತೋರುತ್ತಿತ್ತು ಅಂತ ಅವರು ಅಲೌಕಿಕರೂ, ಕರ್ತೃ
ಮಾಕರ್ತ್ರುಮಶಕ್ತಿಯುಳ್ಳವರೂ ಆಗಿ ಲೋಕದಲ್ಲಿ ವಿಖ್ಯಾತ
ರಾದರು .
ಪ್ರತಿಕೂಲತೆಯಲ್ಲಿ ಪ್ರಗತಿಯನ್ನು ಹೊಂದಬೇಕಾದರೆ, ಸೌಜನ್ಯ,
ಸಹನಶೀಲತೆ, ಶ್ರಮಸಹಿಷ್ಣುತೆ, ದೀರ್ಘ ಪರಿಶ್ರಮ ಈ ಗುಣಗಳು
ಸಾಧಕನಲ್ಲಿರಬೇಕಾಗುತ್ತವೆ. ಒಂದೇ ಕಾರಖಾನೆಯೊಳಗಿನ ಸರಿ
ಜೋಡಿಯಿಂದ ಕೆಲಸಮಾಡುವ ಇಬ್ಬರು ಕೆಲಸಗಾರರಲ್ಲಿ ಒಬ್ಬನ
ಲಕ್ಷವು ತನ್ನ ಪಗಾರವು ಎಷ್ಟು ಬೇಗ ಹೆಚ್ಚೀತೆಂಬದರ ಕಡೆಗೆ
ಇದ್ದರೆ, ಇನ್ನೊಬ್ಬನ ಲಕ್ಷವು ತಾನು ಎಷ್ಟು ಬೇಗ ಕಾರಖಾನೆಯ
ಎಲ್ಲ ಕೆಲಸಗಳಲ್ಲಿ ಪಾರಂಗತನಾದೇನೆನ್ನುವದರ ಕಡೆಗೆ ಇರುತ್ತದೆ.
ಮೊದಲನೆಯವನಿಗೆ ವರ್ಷಾರುತಿಂಗಳುಗಳಲ್ಲಿ ಬಡತಿ ಸಿಗದಾಗಲು,
ಅವನು ಮನಸ್ಸುಗೊಟ್ಟು ಕೆಲಸಮಾಡದಾಗುವನು. ಆದರೆ ಇದಕ್ಕೆ
ವಿರುದ್ಧವಾಗಿ ಎರಡನೆಯವನು ಬಡತಿಯ ಆಶೆಗೆ ಬೀಳದೆ ಕಾರಖಾ
ನೆಯನ್ನು ನಡೆಸುವ ಕಾರಖಾನದಾರನ ಗುಹ್ಯಗಳನ್ನು ತಿಳಿದುಕೊಳ್ಳು
ವದರಲ್ಲಿ ಸತತವಾಗಿ ಶ್ರಮಪಡುವನು, ಆಕಸ್ಮಿಕ ಪ್ರಸಂಗದಿಂದ
ಕಾರಖಾನೆಯು ಬಂದುಮಾಡಲ್ಪಟ್ಟರೆ, ಮೊದಲನೆಯವನು ನಿರಾಧಾ
ರನಾಗಿ, ನೌಕರಿಗಾಗಿ ಕಂಡಕಂಡವರನ್ನು ಯಾಚಿಸಹತ್ತುವನು.
ಎರಡನೆಯವನು ಕೂಡಲೆ ಚಿಕ್ಕದೇ ಯಾಕಾಗಲೊಲ್ಲದು ಸ್ವಂತದ
ಉದ್ಯೋಗವನ್ನು ಪ್ರಾರಂಭಿಸಿ, ಉತ್ಸಾಹದಿಂದಲೂ, ಜಾಗ್ರತೆಯಿಂ
ದಲೂ ನಡೆಯಿಸಹತ್ತುವನು. ಆದ್ದರಿಂದ ಪ್ರಗತಿಯ ನಿಜವಾದ
ತತ್ವಗಳನ್ನು ಪ್ರತಿಕೂಲ ಸಂಧಿಯನ್ನೇ ಅನುಕೂಲ ಮಾಡಿಕೊಳ್ಳುವ
ರಹಸ್ಯವನ್ನು ಬಲ್ಲಂಧ ಮನುಷ್ಯನನ್ನು ಪ್ರಗತಿಮಾರ್ಗದಿಂದ ಪರಾ
೩೭--------------------------------------------------------------------
ವೃತ್ತರನ್ನಾಗಮಾಡಲಿಕ್ಕೆ ಯಾರೂ ಶಕ್ತರಾಗಲಿಕ್ಕಿಲ್ಲ. ಒಮ್ಮೊಮ್ಮೆ
ಒಂದೆರಡು ಪ್ರತಿಕೂಲ ಪ್ರಸಂಗಗಳಲ್ಲಿ ನಮ್ಮ ಸಾಧನವು ಸ್ವಲ್ಪ
ಕುಂಠಿತವಾದಂತೆ ತೋರಿದರೂ ನಿಜವಾಗಿ ಅದು ಕುಂಠಿತವಾಗಿರು
ವದಿಲ್ಲ. ಚಳಿಗಾಲದ ಮೂಡಣಗಳಿಂದ ಎಲೆಗಳುದುರಿ ಆಮ್ರವೃಕ್ಷವು
ಬಾಡಿದಹಾಗೆ ತೋರಿದರೂ, ಮುಂದೆ ಬರುವ ವಸಂತಋತುವಿನಲ್ಲಿ
ಚಿಗಿತು ಅದು ಮನೋಲ್ಲಾಸಕ್ಕೆ ಕಾರಣೀಭೂತವಾಗುವಂತೆ, ಆ ಸಂದಿ
ಹೋದ ಪ್ರತಿಕೂಲ ಪ್ರಸಂಗಗಳೇ ಪ್ರಗತಿಗೆ ಕಾರಣವಾದದ್ದೆಂದು
ಕಂಡುಬರುವದು.
ಉನ್ನತಿಯು(ಪ್ರಗತಿಯು) ನಮ್ಮಲ್ಲಿ ದೃಢನಿಶ್ಚಯವಿದ್ದ ಮಾನ
ದಿಂದ ಬೆಳೆಯುವದು, ಹೊರತು ಅದಕ್ಕಿಂತ ಮಿತಿಮೀರಿ ಆಗಲಾರದು.
"ನಮ್ಮ ದೈವದಲ್ಲಿ ಸಾಯುವವರೆಗೆ ಶಿಪಾಯಿಯಾಗುವದೇ ಇರುವ
ದೆ"ಂದು ನಂಬಿರುವ ಮನುಷ್ಯನು ಬಹುಶಃ ಶಿಪಾಯಿತನಬಿಟ್ಟು ಜಮಾ
ದಾರ ನಾಗಲಾರನು. "ಕಾರಕೂನಿಕಿ ಒಂದು ಸಿಕ್ಕರೆ ಸಾಕು, ನಮಗೆ
ಹೆಚ್ಚಿನ ಹುದ್ದೆ ಯಾತಕ್ಕೆ ಬೇಕೆಂದು ಭಾವಿಸಿರುವವನಿಗೆ ಕಾರಕೂ
ನಿಕಿ ಸಿಗುವದೇ ದುರ್ಲಭವಾಗುವದು. ಯಾಕಂದರೆ ಈ ಜನರು
ಕಲ್ಪನಾಸೃಷ್ಟಿಯಲ್ಲಿ ಸಹ ಹೆಚ್ಚಿನ ಪದವಿಗೇರುವಾಗ ತೋರಬ
ಹುದಾದ ಪ್ರತಿಕೂಲಸಂಗತಿಗಳಿಗೆ ಅಂಜುತ್ತಿದ್ದದ್ದರಿಂದ ಇವರು ನಿಜ
ವಾದ ಪ್ರಗತಿಗೆ ಸ್ವಾಭಾವಿಕವಾಗಿ ಅಯೋಗ್ಯರಾಗುವರು. ಆತ್ಮಶ್ರದ್ಧೆ,
ದೃಢನಿಶ್ಚಯಗಳಿದ್ದ ಹೊರತು ಪ್ರತಿಕೂಲಪ್ರಸಂಗಗಳಿಗೆ ಎದೆಗೊ
ಡುವ ಧೈರ್ಯವುಂಟಾಗುವದಿಲ್ಲ. ಈ ಗುಣಗಳು ಇರದ್ದರಿಂದಲೇ
ಶಿವಾಯಿಯು ಕಡೆತನಕ ಶಿಪಾಯಿಯಾಗಿಯೂ, ಕಾರಕೂನನು
ಸಾಯುವವರೆಗೆ ಕಾರಕೂನನೇಆಗಿಯೂ ಇರಬೇಕಾಗುತ್ತದೆ.
ಆಕಾಶದಲ್ಲಿ ತೂರಿದ ಚಂಡು ಮರಳಿ ನೆಲಕ್ಕೆ ಬೀಳುವದು
ಹ್ಯಾಗೆ ಸಂಭವವೋ, ನೀರಲ್ಲಿ ಚೆಲ್ಲಿದ ಕಲ್ಲು ಮಣುಗುವದು ಹ್ಯಾಗೆ
ಸಂಭವವೋ ಹಾಗೆಯೇ ದೃಢನಿಶ್ಚಯದಿಂದ ಮಾಡಿದ ಪ್ರಯತ್ನದಿಂದ
ಪ್ರಗತಿಯಾಗುವದು ಸಂಭವವಾಗಿರುತ್ತದೆ. ಇದರಲ್ಲಿ ಅಭ್ಯಂತರ
೩೮-----------------------------------------------------------------
ವೇನೂ ಇರುವದಿಲ್ಲ. ಸ್ವಾತಂತ್ರ ಪ್ರೀತಿ, ದೃಢನಿಶ್ಚಯ, ಅಪೂ
ರ್ವತೆ, ಮಹತ್ವಾಕಾಂಕ್ಷೆ, ಸ್ವಾವಲಂಬನ ಮೊದಲಾದ ಗುಣಗಳಲ್ಲಿ
ಯಾದರೂ ಗುರುತ್ವಾಕರ್ಷಣಧರ್ಮದಂತೆ ಈ ಪ್ಸಿತಸಾಧನವನ್ನು
ತಪ್ಪದೆ ದೊರಕಿಸಿಕೊಡುವ ಶಕ್ತಿಯಿರುತ್ತದೆ. ಈ ಮಾರ್ಗದಿಂದ ಪ್ರಗ
ತಿಯು ಬೇಗನೆ ಆಗುವದಿಲ್ಲೊಂದು ಭಾವಿಸಿ ಅತಂತ್ರವಿಚಾರದಮನು
ಷ್ಯನು ಬೇರೆ ದುರ್ಮಾರ್ಗದಿಂದ ತೀವ್ರ ಪ್ರಗತಿಹೊಂದಲು ಯತ್ನಿಸಿ
ದರೆ, ಅವನ ಪ್ರಗತಿಯಾಗುವದೊತ್ತಟ್ಟಿಗೇ ಉಳಿದು ಗೌಳಿಗನು ಕೆಚ್ಚ
ಲಕೊಯ್ದು ಎಮ್ಮೆಯ ಎಲ್ಲ ಹಾಲನ್ನು ಒಂದೇದಿವಸ ಕರೆಯಲಿಚ್ಛಿಸಿ,
ಹತಭಾಗಿಯಾದಂತೆ, ಹತಾಶನಾಗುವನು.
ಸಂಪತ್ತಿಯಾಗಲಿ, ಸೌಖ್ಯವಾಗಲಿ ತಾವಾಗಿ ನಮ್ಮನ್ನು ಹುಡುಕಿ
ಕೊಂಡು ಬರುವದಿಲ್ಲ. ನಾವು ಅದನ್ನು ಎದುರುಗೊಳ್ಳಲು ಹೋದರೆ
ಮಾತ್ರ ಅವು ನಮ್ಮೆಡೆಗೆ ಬರಹತ್ತುವವು. ಯಶೋಮಂದಿರದ ಬಾಗಿ
ಲವು ಸದಾ ತೆರೆಯಲ್ಪಟ್ಟಿರುತ್ತದೆ. ಆದರೆ ಬಾಗಿಲವನ್ನು ಪ್ರವೇಶಿ
ಸುವ ಮಾರ್ಗವನ್ನು ಕಂಡುಹಿಡಿಯುವದು ಮಾತ್ರ ಎಲ್ಲರಿಂದಲೂ
ಆಗುವದಿಲ್ಲ. ಇಷ್ಟೇ ಅಲ್ಲ. ಆ ದ್ವಾರವನ್ನು ಪ್ರವೇಶಿಸುವ ಪ್ರತಿಯೊ
ಬೃನ ಮಾರ್ಗವು ಬೇರೆ ಬೇರೆಯಾಗಿರುವದರಿಂದ ತಂದೆಯ ಮಾರ್ಗವು
ಮಗನಿಗೂ, ತಾಯಿಯಮಾರ್ಗವು ಮಗಳಿಗೂ, ಅರಸನಮಾರ್ಗವು
ಪ್ರಜೆಗಳಿಗೂ ಗುರುವಿನಮಾರ್ಗವು ಶಿಷ್ಯನಿಗೂ ಯಶಃಪ್ರಾಪ್ತಿಗೆ
ಪ್ರಗತಿಗೆ ಸುಗಮವಾಗಲಿಕ್ಕಿಲ್ಲ; ಆದ್ದರಿಂದ ಪ್ರಗತಿಪರನು ಹಿಂದೆ
ಹೇಳಿದಂತೆ ಲೋ, ಟಿಳಕರಂತೆ ವ್ಯಾಖ್ಯಾನಕೊಟ್ಟು, ಶ್ರೀಯುತ ಶಿವ
ರಾಮಪಂತ ಪರಾಂಜಪೆಯವರಂತೆ ಲೇಖಬರೆದು, ಪ್ರೊ, ಕರ್ವೆಯವ
ರಂತೆ ಸಾಹಸಪಟ್ಟು, ವೈ, ವೇಂಕಟ ರಂಗೋ ಕಟ್ಟಿಯವರಂತೆ ಭಾಷೆ
ಯಏಳ್ಗೆಯನ್ನು ಮಾಡಿ ಇಲ್ಲವೆ ಪ್ರಸಿದ್ಧ ಕಳ್ಳನಾದ ಕಟ್ಟಿ ಚೆನ್ನನಂತೆ
ಕಳುವು ಮಾಡಿ ತಲೆಕೊಡಕ ವಾಲ್ಮೀಕನಂತೆ ತಲೆಹೊಡೆದು ಪ್ರಸಿದ್ಧರಾ
ಗಲು ಯತ್ನಿಸುವದು ದಡ್ಡತನವು, ಪ್ರಗತಿಗಾಮಿಯು ದೃಢನಿಶ
೩೯-------------------------------------------------------------------
ಯದ ಬಲದಿಂದ ಪ್ರತಿಕೂಲಪ್ರಸಂಗಗಳ ಮುಂದೆ ಸೆಡ್ಡು ಹೊಡೆ
ಡೆದು ನಿಲ್ಲ ಹತ್ತಿದಂತೆ ಆ ಪ್ರಸಂಗಗಳು ಹೋಗಿ ಇಲ್ಲವೇ ಅವೇ ಅನು
ಕೂಲಗಳಾಗಿ ಪರಿಣಮಿಸಿ ಅವನ ಪ್ರಗತಿಗೆ ಕಾರಣವಾಗುವವು
================
೬ ನೆಯ ಖಂಡ ಸಮಯಸಾಫಲ್ಯ
ಬೇಬಂದಶಾಹಿಯ ನಿಜಾಮರಾಜ್ಯದಲ್ಲಿ ಹಿಂದಕ್ಕೊಮ್ಮೆ ಬಾದ
ಶಹನ ಮೆಹರಬನಿಗೆಯಿಂದ 'ಗೋಮಾಜಿ ಕಾಪಸಿ' ಎಂಬಾತನಿಗೆ
ಮೂರು ಮುಕ್ಕಾಲುಗಳಿಗೆಯವರೆಗೆ ಬಾದಶಾಹಿ ಪದವಿಯು ದೊರಕಿ
ತ್ತಂತೆ! ಆ ಸಮಯಾನುವರ್ತಿಯು ಮೂರು ಮುಕ್ಕಾಲುಗಳಿಗೆಯಲ್ಲಿ
ಲಕ್ಷಂತರ ಜನರಿಗೆ ಇನಾಮುಗಳ ಸನದುಗಳನ್ನು ಮಾಡಿಕೊಟ್ಟ
ನೆಂದೂ, ಅವನು ಹಾಕಿಕೊಟ್ಟ ಇನಾಮುಗಳೇ ಈಗೂ ಕರ್ನಾಟಕ
ದೊಳಗಿನ ಜನರಿಗೆ ವಿಶೇಷವಾಗಿ ಬ್ರಾಹ್ಮಣರಿಗೆ ನಡೆಯುತ್ತವೆಯಂದೂ
ಕೇಳಿಕೆಯಲ್ಲಿದೆ. ಗೋಮಾಜಿ ಕಾಪಸೆಯ ಯಾರೇ ಇರಲಿ, ಎಂದ
ವಿಚಾರದವನೇ ಇರಲಿ, ಅವನ ಸಮಯಸಾನವು ಹೊಗಳತಕ್ಕ
ದ್ದೇಸರಿ!
ಎಷ್ಟೊತಲೆಗಟ್ಟಲೆ ಬಾದಶಾಹಿಯನ್ನು ಅನುಭವಿಸಿದ ನಿಜಾ
ಮನು ಮಾಡದ ಕೆಲಸವನ್ನು ಕೇವಲ ಮೂರು ಮುಕ್ಕಾಲುಗಳಿಗೆ
ಪಟ್ಟವೇರಿದ ಗೋಮಾಜಿಕಾಪಸೆಯು ಹ್ಯಾಗೆ ಸಾಧಿಸಿದನು ನೋಡಿರಿ!
ಮನುಷ್ಯನಲ್ಲಿ ಸ್ವಾತಂತ್ರ್ಯಪ್ರೀತಿ, ದಢನಿಶ್ಚಯ, ಮಹತ್ವಾಕಾಂಕ್ಷೆ,
ಅಲೌಕಿಕತೆ, ಸದಸದ್ವಿವೇಕ ಬುದ್ದಿಗಳು ಜಾಗೃತವಿದ್ದವೆಂದರೆ ಆ
ಮನುಷ್ಯನು ತಕ್ಕ ಸಮಯವನ್ನು ನಿರರ್ಧಕವಾಗಿ ವ್ಯಯಮಾ
ಡುವದಿಲ್ಲ. ಸರ ಎಂ. ವಿಶ್ವೇಶ್ವರಯ್ಯನವರು ಮೈಸೂರ ದಿವಾಣ
ಗಿರಿಯನ್ನು ೫-೬ ವರ್ಷ ಮಾಡಿದರು. ಈ ಅವಧಿಯಲ್ಲಿ ಮೈಸೂರಸಂ
ಸ್ಥಾನದಲ್ಲಿ ಆದ ಸುಧಾರಣೆಗಳು ಅಪೂರ್ವವಾಗಿರುವವು. ಗ್ರಾಮಾಭಿ
ವೃದ್ಧಿ ಖಾತೆ, ರೇಲ್ವೆ ಖಾತೆ ಮೊದಲಾದ ಹೊಸಖಾತೆಗಳು ಉದಯಕ್ಕೆ
ಬಂದು ಪ್ರಜೆಗಳಿಗೆ ಆರೋಗ್ಯ ಹಾಗು ಪ್ರಯಾಣಸೌಕರ್ಯವನ್ನುಂಟು
೪೦----------------------------------------------------------------
ಮಾಡಹತ್ತಿವೆ. ಅರ್ಧ ಸಾಧಕದ ವಿಚಾರಗಳ ಚರ್ವಣವಾಗಹತ್ತಿ
ಜನರ ಆರ್ಧಿಕ ದೃಷ್ಟಿಯು ವಿಸ್ತೃತವಾಗಹತ್ತಿದೆ. ಕನ್ನಂಬಾಡಿಯ
'ಕೃಷ್ಣರಾಜಸಾಗರ'ದಂಧ ವಿಸ್ತೀರ್ಣ ಕೆರೆ ಕಟ್ಟಲು ಪ್ರಾ್ರರಂಭ
ವಾದ್ದರಿಂದ ರೈತರು ವಿಶ್ವೇಶ್ವರಯ್ಯನವರ ವಿಷಯಕ್ಕ ಆದರವುಳ್ಳವ
ರಾಗಿದ್ದಾರೆ. ಪ್ರಜಾಪ್ರತಿನಿಧಿಸಭೆಯಿಂದ ರಾಜ-ಪ್ರಜೆಗಳಲ್ಲಿ ಪ್ರೇಮವು
ವೃದ್ಧಿಂಗತವಾಗಹತ್ತಿದೆ. ಆದರೆ ಇದು ಯಾತರ ಫಲವು? ಸರ ವಿಶ್ವೇಶ್ವರ
ಯ್ಯನವರ ಸಮಯಸಾವಲ್ಯವೆಂದು ನಿಸ್ಸಂಶಯವಾಗಿ
ಮೂರು ಮೂರು ಸಾರೆ ಹೇಳಬಹುದು, ಯಾಕಂದರೆ, ವಿಶ್ವೇಶ್ವರ
ಯ್ಯನವರಿಗಿಂತ ಮೈಸೂರ ರಾಜ್ಯಕ್ಕೆ ಪೂರ್ವದಲ್ಲಿ ದಿವಾಣರಿದ್ದಿಲ್ಲ
ವೆಂತಲ್ಲ: ಇಲ್ಲವೆ ಆಗ ಅನಾನುಕೂಲತೆಗಳು ಇದ್ದವೆಂದು ಹೇಳ
ಲಿಕ್ಕೂ ಬರುವಹಾಗಿಲ್ಲ ಆಗ ಈಗಿನಕ್ಕಿಂತ ಹೆಚ್ಚು ಅನುಕೂಲತೆ
ಗಳು ಇದ್ದವು. ಪ್ರಸ್ತುತದ ಮಹಾಯುದ್ಧದಂಧ ಸಾಧನಾಭಾವದ
ಪ್ರಸಂಗದಲ್ಲಿ ಕೂಡ ಮೈಸೂರರಾಜ್ಯದ ಸುಧಾರಣೆಯು ಒಂದೇಸ
ವನೆ ಆಗುವದನ್ನು ನೋಡಿದರೆ ಸಮಯ ಸಾಫಲ್ಯ ಮಾಡಿಕೊಳ್ಳುವ
ಶಕ್ತಿ ವಿಶೇಷದಿಂದ ವಿಶ್ವೇಶ್ವರಯ್ಯನವರು ಕೀರ್ತಿಶಾಲಿಗಳಾಗುತ್ತಲಿ
ರುವರು; ಅವರ ದೃಢನಿಶ್ಚಯ, ಸ್ವಾತಂತ್ರ ಪ್ರೀತಿ, ಸುಧಾರಣಾ
ಕಾಂಕ್ಷೆ, ದೇಶಹಿತದಕ್ಷತೆ ಮೊದಲಾದ ಗುಣಗಳು ಅವರ್ಣನೀಯವಾ
ಗಿವೆ. ಇವರು"ಕ್ಷಣಶಃ ಕಣಶಃ ಚೈವ ವಿದ್ಯಾವರ್ಧಂಚ ಸಾಧ
ಯೇತ್” ಎಂಬಂತೆ ತಮ್ಮ ಪ್ರತಿಕ್ಷಣವನ್ನು ದೇಶಹಿತದಲ್ಲಿ ವೆಚ್ಚ ಮಾ
ಡುತ್ತಿರುವದರಿಂದ ಇವರ ಪ್ರಸಿದ್ಧಿಯಾಗಹತ್ತಿದ್ದರಲ್ಲಿ ಆಶ್ಚರ್ಯವಿಲ್ಲ.
ಕೈ, ಪ್ರೋ, ದೇಸಾಯಿ ಎಂಬ ಗಣಿತಜ್ಞರು ಒಂದು ಮಿನಿ
ಟನ್ನು ಸಹ ವ್ಯರ್ಧವಾಗಿ ಕಳೆಯುತ್ತಿಲ್ಲವಂತೆ; ಹೊತ್ತುಹೋ
ದರೆ ಮತ್ತೆ ಬಾರದು, ಮುತ್ತು ಹೋದರೆ ಮತ್ತೆ ಬಪ್ಪದು” ಸಾವಿರಾರು
ರೂಪಾಯಿಗಳಿಗಿಂತ ಒಂದು ತಾಸಿನ ಬೆಲೆಯ ಎಷ್ಟೋ ಹೆಚ್ಚಿರುವ
ದೆಂದು ಅವರು ಭಾವಿಸಿದ್ದರು. ಅವರ ನಡಿಗೆಯ ಗತಿಯು ಕೇವಲ
ಯಾಂತ್ರಿಕಪದ್ಧತಿಯದಾಗಿತ್ತು; ಮನೆಯಿಂದ ಶಾಲೆಗೆ ಬರಲಿಕ್ಕೆಂದು
೪೧---------------------------------------------------------------------
ನಿಯಮಿಸಿದ ಮಿನೀಟುಗಳಲ್ಲಿ ಅವರು ತಪ್ಪದೆ ಬರುತ್ತಿದ್ದರು. ಪ್ರಿನ್ಸಿ
ಪಾಲರಿದಾಗ ರಾತ್ರಿ ಹುಡುಗರ ಕೋಣೆಯನ್ನು ತಪಾಸಿಸುವಾಗ
ಪ್ರತಿನಿತ್ಯ ಇಂಥವನ ಕೋಣೆಗೆ ಇಷ್ಟು ಹೊಡೆದು ಇಷ್ಟುಮಿನೀಟಿಗೆ
ತಪ್ಪದೆ ಹೋಗುತ್ತಿದ್ದರು. ಆ ಕಾಲವನ್ನು ಅವರು ಎಂದೂ ತಪ್ಪಿ
ಸಲಿಲ್ಲ. ಆ ವೇಳೆ ತಪ್ಪಿಸಬೇಕೆಂಬ ವಿಚಾರಮಾಡಲಿಕ್ಕೆ ಕೂಡ ಅವ
ರಿಗೆ ಸಮಯದೊರೆಯುತ್ತಿಲ್ಲವಂತೆ!
ಆದರೆ ದೇಸಾಯಿಯವರ ಅನುಕರಣಮಾಡಿ ಸಮಯಸಾಫಲ್ಯ
ಮಾಡಿಕೊಳ್ಳುವದರಲ್ಲಿ ಅವರ ಶಿಷ್ಯರಲ್ಲಿ ಎಷ್ಟುಜನ ವಿದ್ಯಾರ್ಥಿ
ಗಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಒಬ್ಬನೂ ಇಲ್ಲವೆಂದು ಹೇಳ
ಬಹುದು. ಸರ್ವಸಾಧಾರಣವಾದ ನಿಷ್ಕಾಳಜಿತನವೂ, ವೇಳೆಯ
ಅಮೂಲ್ಯತೆಯ ಅಜ್ಞಾನವೂ ಇವೇ ಆಯುಷ್ಯವನ್ನು ಶೋಕಪರ್ಯ
ವಸಾಯಿಯಾಗಿಮಾಡುವ ಕಡುವೈರಿಗಳಾಗಿವೆ. ಬಹುಜನರು ತಮ್ಮ
ಆಯುಷ್ಯದೊಳಗಿನ ಎಷ್ಟೋ ತಾಸುಗಳನ್ನೂ, ದಿವಸಗಳನ್ನೂ
ತಿಂಗಳುಗಳನ್ನೂ ನಿರರ್ಥ್ಧಕವಾದ ಕಾರ್ಯಗಳಲ್ಲಿ ಕಳೆಯುತ್ತಾರೆ.
ಆಲಸ್ಯದಲ್ಲಿಯಾಗಲಿ, ಖುಷಿಮೋಜಿನಾಗಲಿ ವ್ಯಯಮಾಡುವ
ವೇಳೆಯ ಶತಾಂಶದಷ್ಟು ಹಣವನ್ನು ಕೂಡ ಅತ್ಯಂತ ದೀವಾಳಿಖೋ
ರನು ಸಹ ಹಾಳುಮಾಡಿಕೊಳ್ಳುವದಿಲ್ಲ.
ಲೋ, ಟಿಳಕರ ವಿಷಯಕ್ಕೆ ಆದರವಹಿಸುವ, ಅವರ ಯಶ
ಸ್ಸನ್ನು ಕುರಿತು ಚಕಿತರಾಗುವ, ಅವರನ್ನು ಹಿಂದುಮಾತೆಯೆ ಭಾಗ್ಯ
ವಾನ್ ಪುತ್ರರೆಂದು ಭಾವಿಸುವ ಜನರು, ಟಿಳಕರವರು ಹೊಂದಿರುವ
ಪ್ರಗತಿಯು ಅವರ ಸಮಯಸಾಫಲ್ಯದ ಫಲವೇ ಆಗಿದೆಯೆಂದು ತಿಳಿಯ
ಬೇಕಲ್ಲವೇ? ಟಿಳಕರವರು ಪ್ರತಿಯೊಂದು ಸಾರೆಯ ಜೀಲಿನೊಳಗಿನ
ಆಯುಷ್ಯವನ್ನು ಕೂಡ ಸಾಫಲ್ಯಮಾಡಿಕೊಂಡಿರುವರಾದ್ದರಿಂದ, ಅವ
ರಂಧ ಬೇರೆ ಉದಾಹರಣೆಯೇ ಇಲ್ಲದಾಗಿದೆ. ಸಮಯ ಸಾಫಲ್ಯವೇ
ನಿಜವಾದ ಜೀವನ ಸಾಫಲ್ಯವು. ನಿರರ್ಧಕವಾಗಿ ವೇಳೆ
ಕಳೆದು ಯಾರು ಪ್ರಸಿದ್ದಿಗೆ ಬಂದಿರುವರು? ಮರಣವು ಅನಿಶ್ಚಿತ
೪೨------------------------------------------------------------------
ವಾದ್ದರಿಂದ ಪ್ರತಿಕ್ಷಣದಲ್ಲಿ ಪ್ರಗತಿಪರ ಕಾರ್ಯ ಮಾಡಲಿಕ್ಕೆ ಹಿಂದು
ಮುಂದು ನೋಡಬಾರದು.
"ಬೇಕಾದರೆ ದುಡ್ಡು ಹಾಳುಮಾಡಿ, ಮನೆಮಾರು ಹಾಳು
ಮಾಡಿಕೊಳ್ಳಿರಿ; ಆದರೆ ವೇಳೆಯನ್ನು ಮೂತ್ರ ಹಾಳುಮಾಡಿಕೊಳ್ಳ
ಬೇಡಿರಿ” ಎಂದು ಒಬ್ಬ ಆಂಗ್ಲ ಗ್ರಂಥಕಾರನು ಸಮಯದ ಮಹತ್ವ
ವನ್ನು ಒಂದು ಕಡೆಗೆ ಹೇಳಿರುವನು, ಬೆಲೆಬಾಳುವ ಯಾವ ವಸ್ತು
ಗಳೂ ವೇಳೆಯನ್ನು ಸರಿಗಟ್ಟಲಾರವು. ವೇಳೆಯು ಅಮೂಲ್ಯವಾ
ಗಿದೆ. ವೇಳೆಯ ಅಪವ್ಯಯದಿಂದ ಆಗಬಹುದಾದ ಹಾನಿಯು
ಯಾತರಿಂದಲೂ ತುಂಬಿಬರಲಾರದು. "ಬಾಣಬಿಟ್ಟರೆ ಹೋಯಿತು,
ಮುತ್ತು ಒಡೆದರೆ ಹೋಯಿತು” ಎಂಬಂತೆ ಸಂದ ವೇಳೆಯು ತಿರುಗಿ
ಎಂದೂ ಬರಲಾರದು. ನಿರರ್ಧಕವಾಗಿ ದುಡ್ಡನ್ನು ಹಾಳುಮಾಡುವ
ಮನುಷ್ಯನನ್ನು ಜನರು ನಿಂದಿಸುವಂತೆ, ವ್ಯರ್ಧವೇಳೆಯನ್ನು ಕಳೆಯುವ
ಮನುಷ್ಯನನ್ನು ಜನರು ಹಳಿಯುವದಿಲ್ಲ. ಈ ಆಲಸ್ಯಗಾರರು ಪ್ರಗತಿ
ಪದವನ್ನು ಹಿಡಿಯಲು ತಮಗ ಯೋಗ್ಯ ಸಮಯವೇ ಸಿಗುವದಿಲ್ಲೆಂ
ತಲೂ, ಸಾಧನಗಳು ಸರಿಯಾಗಿರುವದಿಲ್ಲೆಂತಲೂ, ಹಿಡಿದ ಕಾರ್ಯ
ದಲ್ಲಿ ಯಶವು ಬರುವದಿಲ್ಲೆಂತಲೂ ಗುಣಗುಟ್ಟುವರು. ಆದರೆ
ಇವರು ತಮ್ಮ ವೇಳೆಯನ್ನು ಸರಿಯಾಗಿ ಉಪಯೋಗಿಸಲಾರದವರಾ
ದರಿಂದ ಇವರ ಪ್ರಗತಿಯು ಎಂದೂ ಆಗಲಿಕ್ಕಿಲ್ಲಂಬದು ಸಿದ್ಧಾಂತವು.
ಎಂಜಿನವು ಎಷ್ಟು ಕಾಳಜಿಯಿಂದ ತಯಾರಿಸಲ್ಪಟ್ಟರೂ,
ಅದಕ್ಕೆ ಉಗಿಯಶಕ್ತಿಯು ದೊರತಹೊರತು ಆದು ಒಂದು ತುಸು
ಕೂಡ ಸರಿದಾಡಲಾರದು. ಅದರಂತ ಸಾಮರ್ಥ್ಯವು ಎಷ್ಟಿದ್ದರೇನು?
ಅದರ ಉಪಯೋಗ ಮಾಡಿಕೊಂಡರ ಮಾತ್ರ ಪ್ರಯೋಜನವಾಗುವ
ಸಂಭವವಿರುವದು? ಕರ್ತವ್ಯಬುದ್ಧಿಯನ್ನು ಜಾಗೃತಗೊಳಿಸಿದ್ದರಿಂದಲೇ
ನಮ್ಮಲ್ಲಿಯ ಎಷ್ಟೋ ಜನರ ಆಯುಷ್ಯವು ವ್ಯರ್ಧವಾಗಿ ಕ್ಷೀಣಿಸ
ಹತ್ತಿದೆ. ಅವರು ಕೈಲಾಗದವರೆಂತಲ್ಲ. ಬಹು ಜನರು ಸಮಯ
ಸಾಫಲ್ಯದ ಮಹತ್ವವನ್ನರಿಯದೆ, ಗಾಢನಿದ್ರೆ ಹತ್ತಿದವರಂತೆ ಸುಖರೂಪ ಎ
೪೩----------------------------------------------------------------------
ದಿಂದಿರುವರು. ನಾವೆಲ್ಲರೂ ಬರೇ ಹೊಟ್ಟೆ ಹೊರಕೊಳ್ಳುವದೊಂದೇ
ಧೈಯವನ್ನು ಮುಂದಿಟ್ಟುಕೊಂಡಿರುವದರಿಂದ, ನಮಗೆ ವೇಳೆಯ
ಮಹತ್ವವು ತಿಳಿಯದಾಗಿದೆ. ಪುಥ್ವಿಯೊಳಗಿನ ದೊಡ್ಡ ದೊಡ್ಡ
ಗುಡ್ಡ, ವಿಶಾಲವಾದ ಸರೋವರ, ವಿಸ್ತೀರ್ಣಗಳಾದ ಸಾಗರ ಮೊದ
ಲಾದವುಗಳನ್ನು ನೋಡಿ, ಇವುಗಳಿಂದ ವಿಶೇಷ ಪ್ರಯೋಜನವೇನೆಂದು
ಕೇಳುವ ಮೂಢನು, ತನ್ನ ಎಷ್ಟು ವೇಳೆಯನ್ನು ನಿರರ್ಥಕವಾಗಿ
ವ್ಯಯ ಮಾಡುತ್ತೇನೆಂಬದನ್ನು ತಿಳಿಯದವನಾಗಿರುತ್ತಾನೆ. ಅವನವನ
ಮಟ್ಟಿಗೆ ಪ್ರಗತಿಹೊಂದುವ ಸಾಮರ್ಥ್ಯವನ್ನು ದೇವರು ಎಲ್ಲರಿಗೂ
ಕೊಟ್ಟಿರುತ್ತಾನೆ. ಆದರೆ ಯಾವದಾದರೊಂದು ತರದ ವ್ಯಂಗ
ದಿಂದಲೂ, ನಿಷ್ಕಾಳಜಿತನದಿಂದಲೂ ಹುರುಪಿನ ಅಭಾವದಿಂದಲೂ
ಅವನ ಸಾಮರ್ಥ್ಯವು ಸಲವಾಗುವದಿಲ್ಲ. ಸಾಧನಗಳು ಸಜ್ಜಾಗಿ
ದ್ದರೂ ಅವನ್ನು ಉಪಯೋಗಿಸಿ ಪ್ರಗತಿಹೊಂದಲು ಅವನು
ಶಕ್ತನಾಗುವದಿಲ್ಲ.
ಮುಂಜಾಗ್ರತಿ ಇದ್ದವನು ಸಮಯಸಾಫಲ್ಯ ಮಾಡಿಕೊಳ್ಳಲು
ಅರ್ಹನಿರುತ್ತಾನೆ: ಯಾಕಂದರೆ ಪೂರ್ವಜನ್ಮ ಸಂಸ್ಕಾರಧರ್ಮದಂತೆ
ಹಿಂದಿನ ಜನ್ಮದ ಪಾಪ-ಪುಣ್ಯಗಳ ಮೂಲಗಳನ್ನು ಈ ಜನ್ಮದಲ್ಲಿ ಅನು
ಭೋಗಿಸುವಂತೆ, ಈ ಜನ್ಮದಲ್ಲಿ ಮಾಡುವ ದುಷ್ಕೃತಿ-ಸುಕೃತಿಗಳ
ಫಲಗಳನ್ನು ಭವಿಷ್ಯತ್ಕಾಲದಲ್ಲಿ ಅನುಭೋಗಿಸಲೇ ಬೇಕಾಗಿರುವುದು
"ಒಂದು ಕೈಯಿಂದ ಮಾಡಿದ ಅಡಿಗೆಯನ್ನು ಮತ್ತೊಂದು ಕೈಯಿಂದ
ಉಣ್ಣುವದು” ನಿಜವಿರುವದರಿಂದ, ತಾನು ಭವಿಷ್ಯ ಕಾಲದಲ್ಲಿ ಸುಖಿ
ಯಾಗಬಯಸುವ ಮನುಜನುವರ್ತಮಾನಕಾಲದಲ್ಲಿ ಪ್ರಯತ್ನಪೂರ್ವ
ಕವಾಗಿ ಸುಖಿಯಾಗಿರಲಿಕ್ಕೆ ಯತ್ನಿಸತಕ್ಕದ್ದು, ಆಸಾರವಾದ ಸಂಸಾ
ರವನ್ನು ಸಾರಭೂತವಾಗಿ ಮಾಡುವ ಸಾಧನವು, ನಮ್ಮ ಕಿರುಕಳ
ವೇಳೆಯ ಸಾಫಲ್ಯವನ್ನು ಮಾಡಿಕೊಳ್ಳುವದರಿಂದಲೇ ಲಭಿಸುವದು.
ಕೆಲಸವಿರಲಿ-ಇಲ್ಲದಿರಲಿ, ಇಚ್ಛೆಯು ಇರಲಿ-ಇಲ್ಲದಿರಲಿ, ಕಿರುಕಳ
ವೇಳೆಯನ್ನು ಯೋಗ್ಯವಾಗಿ ವ್ಯಯ ಮಾಡಹತ್ತಿದರೆ, ಬಡವನು ಘನ
೪೪------------------------------------------------------------------------
ಶ್ರೀಮಂತನೂ ಅಶಿಕ್ಷಿತನು ಸುಶಿಕ್ಷಿತನೂ ನಿಶ್ಚಯವಾಗಿ ಆಗುವನು.
ನೌಕರಿಯನ್ನು ಮಾಡಿ ಉಳಿದ ಕಿರುಕಳ ವೇಳೆಯಲ್ಲಿ ಕೆಲಸಮಾಡ
ಹತ್ತಿ ಪ್ರೊ, ಧೋಂಡೋಪಂತ ಕರ್ವೆಯವರು ಶಿಕ್ಷಣದ ಹಲವು
ಸಂಸ್ಥೆ, ಅನಾಥಬಾಲಿಕಾಶ್ರಮ, ವನಿತಾವಿದ್ಯಾಲಯ, ನಿಷ್ಕಾಮ
ಕರ್ಮಮಠ, ಸ್ತ್ರೀಯರ ಸ್ವತಂತ್ರ ಯುನಿವರ್ಸಿಟಿಗಳನ್ನು ಸ್ಥಾಪಿಸಿ
ದರು. ಕೈ. ನಾ. ರಾನಡೆಯವರು ತಮ್ಮ ಕಿರುಕಳ ವೇಳೆಯನ್ನು
ದೇಶಹಿತದ ಕಾರ್ಯದಲ್ಲಿ ಉಪಯೋಗಿಸಿ, ಪ್ರಸಿದ್ಧ ಪ್ರಸಿದ್ಧ ದೇಶಹಿತಚಿಂ
ತಕರಾದರು.
ಪ್ರಸ್ತುತದಲ್ಲಿ ಈ ಕಿರುಕಳ ವೇಳೆಯಲ್ಲಿ ಶಿಕ್ಷಣ ಕೊಡುವ
ಹಲವು ಸಂಸ್ಥೆಗಳು ರಾಜಾಶ್ರಯ-ಲೋಕಾಶ್ರಯಗಳಿಂದ ನಡೆದಿರು
ವವು. ಇವುಗಳಿಂದ ಜನರಿಗೆ ಬಹಳ ಉಪಯೋಗವಾಗುತ್ತಲಿದೆ.
ಇದ್ದಊರಲ್ಲಿ ಇದ್ದು ಪಟ್ಟಣಗಳಲ್ಲಿ ನಡೆಯುವ ಶಿಕ್ಷಣವನ್ನು
ಕಲಿಸುವ "ಆಕೌಂಟನ್ಸಿಕೋರ್ಸ”ದಂಧ ಉಪಯುಕ್ತ ಪತ್ರವ್ಯವಹಾ
ರದ ಸಂಸ್ಥೆಗಳೂ, ರಾತ್ರಿಯಸಾಲೆ, ಸೂಟಿಯ ದಿವಸದಸಾಲೆ, ಕೂಲಿ
ಕಾರರ ಸಾಲೆಗಳೂ ಇದಕ್ಕೆ ಉದಾಹರಣಗಳಾಗಿವೆ. ಈ ಸಂಸ್ಥೆಗಳ
ದ್ವಾರಾ ತಮ್ಮ ತಮ್ಮ ಕಿರುಕಳ ವೇಳೆಯಲ್ಲಿ ಪ್ರಗತಿಯನ್ನು ಹೊಂದ
ಲಿಕ್ಕೆ ಅತ್ಯಂತ ಸಹಾಯವಾಗಿದೆ.
ಮುಖ್ಯವಾದ ಮಾತು ಏನಂದರೆ, ತಮ್ಮ ಇಡಿ ಆಯುಷ್ಯವು
ತಮ್ಮ ಪ್ರಗತಿಯ ಸಲುವಾಗಿಯೇ ಇರುತ್ತದೆ. ಹಲವು ತರದ ವಸ್ತು
ಗಳು, ಪ್ರಸಂಗಗಳು, ಪ್ರಾಣಿಗಳು ಇವು ನಮ್ಮ ಪ್ರಗತಿಗೆ ಕಾರಣೀಭೂ
ತಗಳಾಗಿರುತ್ತವೆ. ಕಣ್ಣು ಹಾಗು ಕಿವಿಗಳನ್ನು ತೆರೆದಿಟ್ಟು ಆಯು
ಷ್ಯದ ಪ್ರತಿಕ್ಷಣವನ್ನು ಜ್ಞಾನಾರ್ಜನ ಪ್ರಗತಿಯಲ್ಲಿ ಕಳೆಯಬೇಕು.
"ಕೆಲವಂಬಲ್ಲವರಿಂದ ಕಲ್ಲು ಕಲವಂ ಸುಜ್ಞಾನದಿಂನೋಡುತ” ಇತ್ಯಾ
ದಿ ವಿಚಾರಗಳ ಸೋಮೇಶ್ವರಕವಿಯ ಉಕ್ತಿಯಂತೆ ನಾವು ದಿನಾಲು
ಕೇಳುವ ಸಂಭಾಷಣಗಳಿಂದಲೂ, ಕೇಳುವ ಸುದ್ದಿಗಳಿಂದಲೂ, ಓದುವ
ಪುಸ್ತಕಗಳಿಂದಲೂ ಪ್ರಗತಿಮಾರ್ಗಕ್ಕೆ ಅವಶ್ಯವಿರುವ ಸಂಗತಿಗಳನ್ನು
೪೫---------------------------------------------------------------------
ಗ್ರಹಿಸುತ್ತಿರಬೇಕು. ಹೀಗೆ ಮಾಡದೆ ವಾಚ್ಯಾವಾಚ್ಯ ಸಂಭಾಷ
ಣಮಾಡುತ್ತ ನಿಷ್ಟ್ರಯೋಜಕಗಳಾದ ಸುದ್ದಿಗಳ ಚರ್ವಿತಚರ್ವಣ
ಮಾಡುತ್ತ, ಬುದ್ಧಿಗೆ ಮಾಂದ್ಯತ್ವವನ್ನುಂಟುಮಾಡುವ ಪುಸ್ತಕಗ
ಳನ್ನು ಓದುತ್ತ ನಮ್ಮ ಕಾಲವನ್ನು ಆಯುಷ್ಯವನ್ನು ಕಳೆಯತೊಡಗಿ
ದರೆ ನಮಗೆ ಅದರಿಂದ ಸ್ವಲ್ಪವೂ ಪ್ರಯೋಜನವಾಗಲಿಕ್ಕಿಲ್ಲ.
ಗತ ಆಯುಷ್ಯವನ್ನು ಅಶಿಕ್ಷಿತತನದಲ್ಲಿ ಕಳೆದು ಈಗ ಪ್ರೌಢ
ದೆಸೆಯಲ್ಲಿ ಶಿಕ್ಷಣಹೊಂದುವ ಪ್ರಸಂಗ ಬಂದದರಿಂದಲೂ, ದುಷ್ಟವ್ಯ
ವಹಾರಗಳನ್ನು ಬಿಡುವ ಮನಸ್ಸಾಗಿದ್ದರೂ ಅವನ್ನು ಬಿಡುವದಾ
ದೀತೋ ಇಲ್ಲವೋ ಎಂಬ ಸಂಶಯದಿಂದಲೂ ಪೀಡಿತರಾಗಿ ಎಷ್ಟೋ
ಜನರು ತಮ್ಮ ಮುಂದಣ ಆಯುಷ್ಯದ ಸಾಫಲ್ಯವು ಹ್ಯಾಗಾದೀತೆಂದು
ಚಿಂತಿಸುತ್ತಾರೆ, ಇಂಥವರು ಇಷ್ಟಫಲವನ್ನು ಬೇಗನೆ ನಿಸ್ಸಂ
ಶಯವಾಗಿ ಹೊಂದುವರು. ಯಾಕಂದರೆ ಪಶ್ಚಾತ್ತಾಪದಿಂದ ಮನು
ಷ್ಯನಲ್ಲಿ ಒಂದು ತರದ ತೀಕ್ಷ್ಯವಾದ ಕರ್ತವ್ಯಜಾಗ್ರತಿಯು ಉಂಟಾಗಿ
ಅದು ಹಿಡಿದ ಕೆಲಸದಲ್ಲಿ ತಪ್ಪದೆ ಯಶಃಪ್ರಾಪ್ತಿಗೊಳಿಸುವದು. ಆದ
ರಲ್ಲಿ ಪ್ರೌಢವಯಸ್ಸಿನಲ್ಲಿ ಪಶ್ಚಾತ್ತಾಪಪಡುವ ಮನುಷ್ಯನಿಗೆ
ಯೋಗ್ಯ ಮಾರ್ಗವು ಕೂಡಲೆ ಕಾಣಹತ್ತುವದು: ಅಕ್ಷರಶತ್ರುವಾದ
ಪ್ರೌಢಪಶ್ಚಾತಾಪಿಯಿಂದ ಅಕ್ಷರಗಳದ್ವಾರಾ ಶಿಕ್ಷಣಹೊಂದುವದು
ಅಸಾಧ್ಯವಾದರೂ ಅವನು ಶಿಲ್ಪ, ನೇಕಾರಿಕೆ, ಬಡಿಗತನ ಮೊದಲಾದ
ಇತರ ಕಲೆಗಳ ಶಿಕ್ಷಣವನ್ನು ಬಹು ಬೇಗ ಸಂಪಾದಿಸಿ ಪ್ರಗತಿಹೊಂದ
ಬಹುದು. ಮದ್ಯಪಾನದಂಧ ದುಶ್ಚಟದಿಂದ ನಿವೃತ್ತರಾಗಬಯಸಿದ
ಎಷ್ಟೋ ಪ್ರೌಢಪಶ್ಚಾತ್ತಾಪಿಗಳು ಸ್ವಲ್ಪ ದಿವಸಗಳಲ್ಲಿಯೇ ಮದ್ಯ
ಪೀಯದ್ವೇಷಿಕರೂ, ಸಮಂಜಸವರ್ತಿಗಳೂ ಆದ ಉದಾಹರಣೆಗಳನ್ನು
ಬಹುಜನರು ನೋಡಿರಬಹುದು. ಆದರೆ ಪಶ್ಚಾತ್ತಾಪವು ಮಾತ್ರ ನಿಜ
ವಾಗಿ ಆಗಿರಬೇಕು. ಅಂದರೆ ಅವನಿಗೆ ಸಮಯಸಾಫಲ್ಯ ಮಾಡಿಕೊ
ಳ್ಳುವ ಯೋಗವು ದೊರಕುವದು.
ಪ್ರಗತಿಯ ಮುಖ್ಯ ರಹಸ್ಯವು ಸಮಯ ಸಾಫಲ್ಯದಲ್ಲಿಯೇ
೪೬--------------------------------------------------------------
ಅಡಕವಾಗಿರುವದು, ವ್ಯರ್ಧವಾಗಿ ವೇಳೆಯನ್ನು ಕಳೆಯುವದರಿಂದ
ನಮ್ಮ ಪುರುಷಾರ್ಥದನಾಶವೂ, ಸಾಮರ್ಥ್ಯದನಾಶವೂ ಆಗಿ ನಾವು ಪ್ರಗತಿ
ಹೀನರಾಗಬೇಕಾಗುವದು. ವ್ಯರ್ಧ ವೇಳೆ ಕಳೆಯುವದರಿಂದ, ಉಡಾಳ
ಹಾಗು ದುರ್ವ್ಯಸನಿ ಮನುಷ್ಯರ ಸಂಗಮಾಡುವದರಿಂದ ಹೆಚ್ಚು
ಅನರ್ಧವಾಗುವದು, ಅಥವಾ ಪ್ರಗತಿಮಾರ್ಗದ ಪ್ರಧಾನವಾಧನ
ವನ್ನು ಕಳಕೊಂಡಂತಾಗುವದು.. ಯಾರು ಸಮವನ್ನು ಸಾಫಲ್ಯ
ಮಾಡಿಕೊಳ್ಳುವರೋ, ಅವರ ಜೀವಿತವು ಸಫಲವೇ ಸರಿ. ಯಾರು
ಜೀವಿತವನ್ನು ಸಫಲಮಾಡಿಕೊಳ್ಳುವರೋ, ಅವರೇ ಮೋಕ್ಷಕ್ಕೆ
ಅರ್ಹರಾಗುವರು.
==============
೭ನೆಯ ಖಂಡ-ಅನನ್ಯಗತಿಕವೂ, ಸಂಕಲ್ಪಶಕ್ತಿಯೂ
ಮಾಘವದ್ಯನವಮಿಯ ದಿವಸ ಸಿಂಹಗಡವನ್ನು ಹಸ್ತಗತ ಮಾಡಿ
ಕೊಳ್ಳುವೆನೆಂದು ಶಿವಾಜಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೋದ
ತಾನಾಜಿಮಾಲಸುರೆ ಎಂಬ ಸರದಾರನು ಸಿಂಹಗಡದ ಕಿಲ್ಲೇದಾರನಾದ
ಉದಯಭಾನುವಿನಿಂದ ಮರಣಹೊಂದಿದ ಬಳಿಕ ಗಾಬರಿಗೊಂಡು
ಓಡಿಹೋಗಲುದ್ಯುಕ್ತರಾದ ಅವನ ದಂಡಿನ ಮಾವಳೆ ಜನರು ಗಡ
ದಿಂದ ಇಳಿದು ಹೋಗಲಿಕ್ಕೆ ಒಂದೇ ಒಂದಾಗಿದ್ದ ಸಾಧನವಾದ
ಹಗ್ಗವನ್ನು-ಆಶ್ರಯರಜ್ಜುವನ್ನು ತಾನಾಜಿಯ ತಮ್ಮನಾದ ವೀರಶಿ
ರೋಮಣಿಸೂರ್ಯಾಜಿಯು ಈ ಮೊದಲೆ ಕೊಯ್ದು ಚೆಲ್ಲಿರುವನೆಂ
ಬದನ್ನು ಕೇಳಿ, ಇನ್ನು ಓಡಿಹೋಗಿ ಕಂದಕದಲ್ಲಿ ಬಿದ್ದು ಹೇಡಿಗ
ಳಂತೆ ಪ್ರಾಣಕಳಕೊಳ್ಳುವದಕ್ಕಿಂತ ಜೀವವಿರುವವರೆಗೆ ಶಕ್ತಿಮೀರಿ
ಶತ್ರುಗಳೊಡನೆ ಕಾದಿ ಧಾರಾತೀರ್ಧದಲ್ಲಿ ಬಿದ್ದು ವೀರಸ್ವರ್ಗವನ್ನು
ಹೊಂದುವದು ಶ್ರೇಯಸ್ಕರವೆಂದು ತಿಳಿದು ಅವರು ತಾನಾಜಿಯ ಮರ
ಣದಿಂದ ಅತ್ಯಂತವಾದ ದುಃಖ,ಸಂತಾಪಗಳಿಂದ ಪೀಡಿತರಾಗಿ ಪ್ರಸಂ
ಗದಲ್ಲಿ ತಾವು ಓಡಿಹೋಗುವ ಪ್ರಯತ್ನ ಮಾಡಿದ್ದಕ್ಕೆ ಬಹಳವಾಗಿ
ನಾಚಿ ಯುದ್ಧ ಮಾಡಿದ್ದು ಅಪೂರ್ವವಾಯಿತು. ಕಡೆಗೆ ಕಿಲ್ಲೆಯು
೪೭-----------------------------------------------------------------
ಮರಾಟರ ಕೈಸೇರಿ ತಾನಾಜಿಯ ಪ್ರತಿಜ್ಞೆಯು ಈಡೇರಿತು? ಇದು
ಯಾತರ ಫಲವೆಂದು ನಾವು ಭಾವಿಸಬೇಕು? ತಾನಾಜಿಯ ಪ್ರತಿಜ್ಞೆಯ
ಫಲವೋ, ಶಿವಾಜಿಯ ಪುಣ್ಯವೋ, ಸೂರ್ಯಾಜಿಯ ಸಮಯಾನುವ
ರ್ತನದ ಫಲವೋ, ಅಧವಾ ಮಾವಳರ ಶೌರ್ಯದ ಫಲವೋ? ಸಿಂಹ
ಗಡವು ಕೈಸೇರುವದಕ್ಕಾಗಿ ಇವೆಲ್ಲ ಸಾಧನಗಳ ಸಹಾಯವಾಗಿದ್ದರೂ
ಆ ಎಲ್ಲ ಸಾಧನಗಳನ್ನು ಏಕಸಮಯಾವಚ್ಛೇದದಿಂದ ಉಪಯೋ
ಗಕ್ಕೆ ತಂದ ಮುಖ್ಯ ಸಾಧನವು ಆಶ್ರಯರನ್ನು ಛೇದನವಾಗಿದೆ.
ಸೂರ್ಯಾಜಿಯು ಗಡದಿಂದ ಇಳಿದು ಹೋಗುವ ಹಗ್ಗವೊಂದನ್ನು
ಕೊಯ್ಯದಿದ್ದರೆ, ದುರ್ಗವು ಕೈಸೇರುವದೊತ್ತಟ್ಟಿಗೇ ಇರಲಿ, ಶಿವಾ
ಜಿಯ ವಿಷಯಕ್ಕೆ ಈಗ ಉಪಲಬ್ಧವಾಗಿದ್ದ ಇತಿಹಾಸವು ಕೂಡ
ಬೇರೆ ರೀತಿಯಾಗಿಯೇ ನಮಗೆ ದೊರೆಯಬಹುರಾಗಿತ್ತು. ಆಶ್ರಯ
ರಜ್ಜುಛೇದನದಿಂದ ಪ್ರಗತಿಮಾರ್ಗದಲ್ಲಿ ಎಷ್ಟು ಬೇಗ ಕ್ರಾಂತಿಯಾ
ಗುವದಂಬದು ಮೇಲಿನ ಉದಾಹರಣೆಯಿಂದ ಬಹು ಸ್ಪಷ್ಟವಾಗಿ
ತಿಳಿಯಬರುವಂತಿದೆ. .
ಪರಾಜಯಕ್ಕೆ ಆಸ್ಪದವೇ ಉಳಿಯಬಾರದೆಂದು, ತನ್ನ ಸೈನ್ಯ
ವೆಲ್ಲ ಇಂಗ್ಲೆಂಡದ ಧಡಕ್ಕೆ ಇಳಿದ ಕೂಡಲೆ ಜುಲಿಸಸೀಝರನೆಂಬ
ಪ್ರಸಿದ್ಧ ಸೇನಾನಾಯಕನು ತನ್ನ ಎಲ್ಲ ಹಡಗಗಳನ್ನು ಶಿಪಾಯಿಗಳ
ಸಮಕ್ಷ ಒಮ್ಮೆಲೆ ಸುಟ್ಟು ಬಿಟ್ಟನು. ಇದರಂತೆ ಸದ್ಯದ ಮಹಾಯು
ದ್ಧದಲ್ಲಿ ಜರ್ಮನರೂ, ದೋಸ್ತರಾಷ್ಟ್ರದವರೂ ತಮ್ಮ ತಮ್ಮ
ಸೈನ್ಯವು ನಿಕರದಿಂದ ಕಾದುವದಕ್ಕಾಗಿ, ಹೊಳೆ-ಹಳ್ಳಗಳನ್ನು ದಾಟಿ
ದನಂತರ ತಾವು ಕಟ್ಟಿದ ಪೂಲುಗಳನ್ನು ತಾವೇ ನಾಶಮಾಡಿ ಮುಂ
ದಕ್ಕೆ ಸಾಗುತ್ತಿರುವರು. ಹೀಗೆ ಮಾಡುವದು ಸಾಮಾನ್ಯರ ದೃಷ್ಟಿ
ಯಿಂದ ಹಾಸ್ಯಾಸ್ಪದವಾಗಿದ್ದರೂ, ಅದರಲ್ಲಿ ಬಹಳ ಮಹತ್ವವಿರುವ
ದೆಂದು ಪ್ರಗತಿಪರ ಮನುಷ್ಯನು ಭಾವಿಸುವನು. ನಿರ್ಮಾಣದ ಪ್ರಸಂ
ಗದಲ್ಲಿ ಕೂಡ ಸ್ವಲ್ಪಾದರೂ ಆಶ್ರಯವಿರುವವರೆಗೆ ಹಿಂದಕ್ಕೆ ಸರಿ
ಯುವದು ಮನುಷ್ಯನ ಸ್ವಾಭಾವಿಕ ಪ್ರವರ್ತಿಯಾಗಿದೆ. ಆಶ್ರಯ
೪೮----------------------------------------------------------------
ರಜ್ಜುವಿನಛೇದನವಾದ ಹೊರತು ಜೀವದ ಮೇಲೆ ಉದಾರನಾಗಿ
ಕಾದದೆ, ಮೋಹಪರವಶನಾಗಿ ಹಿಂದೆಗೆಯಹತ್ತುತ್ತಾನೆ. ಖರೇ
ಶೌರ್ಯವೂ, ನಿಜವಾದ ಪ್ರಯತ್ನವೂ, ಯೋಗ್ಯ ಸಾಹಸವೂ ಆಶ್ರಯ
ರಜ್ಜುವಿನಛೇದನವಾದ ಹೊರತು ಪ್ರಕಾಶಿತವಾಗುವದಿಲ್ಲ. ಆಶ್ರಯ
ರಜುವಿನ ಮಹತ್ವವು ತಿಳಿಯದ್ದರಿಂದಲೇ ಸದಾಶಿವರಾವ ಪೇಶವೆಯು
ಪಾನಿಪತದ ಕಡೆಯ ಕಾಳಗದಲ್ಲಿ ಸೋತು ಮರಾಟರ ನಾಶಕ್ಕೆ
ಕಾರಣನಾದನು.
ಒಂದು ಮಹತ್ಕಾರ್ಯವನ್ನು ಆರಂಭಿಸಿದ ಬಳಿಕ ಅದರಲ್ಲಿ
ಯಶಃಪ್ರಾಪ್ತಿಯಾಗದೆ, ಮೇಲಿಂದ ಮೇಲೆ ಸಂಕಟಗಳುದ್ಭವಿಸಹ
ತ್ತಿದರೆ ಅವನ್ನು ನೀಗಿಕೊಂಡು ಯೋಗ್ಯರೀತಿಯಿಂದ ಪ್ರಗತಿಹೊಂ
ದುವ ಮಾರ್ಗವು ನಮ್ಮಲ್ಲಿಯ ಬಹುಜನರಿಗೆ ಸಿಗುವದಿಲ್ಲ. ಕಠಿಣ
ಪ್ರಸಂಗದೊಳಗಿಂದ ಸಹಜವಾಗಿ ಪಾರಾಗಲಿಕ್ಕೆ ಎಲ್ಲಿಯವರೆಗೆ ನಮಗೆ
ಸಾಧ್ಯವಿರುತ್ತದೋ ಅಲ್ಲಿಯವರೆಗೆ ನಾವು ಅತಿಸಾಹಸದ ಪ್ರಯತ್ನ
ಮಾಡಲಿಕ್ಕೆ ಸಹಸಾ ಮುಂದುವರಿಯುವದಿಲ್ಲ. ಇದಕ್ಕೆ ಒಂದು
ಸಣ್ಣ ಉದಾಹರಣೆಯನ್ನು ಕೊಡುವಾ ಬೆಕ್ಕನ್ನು ಪ್ರತಿಬಂಧಿಸ
ಬೇಕೆಂದು ನಾವು ಪ್ರಯತ್ನ ಪಡಹತ್ತಿದರೆ, ಓಡಿಹೋಗಲಿಕ್ಕೆ ಬಾಗಿಲು
ಕಿಟಕಿ, ಬೆಳಕಿಂಡಿಗಳು ಎಲ್ಲಿಯವರಗೆ ತೆರವಿರುವವೋ ಅಲ್ಲಿಯವರೆಗೆ
ಆ ಬೆಕ್ಕು ನಮಗೆ ವಿರೋಧಮಾಡದೆ ಸಿಕ್ಕಮಾರ್ಗದಿಂದ ಬೇಗನೆ
ಓಡಿಹೋಗುವದು. ಆದರೆ ಯಾವಾಗ ಓಡಿಹೋಗಲಿಕ್ಕೆ ಮಾರ್ಗವು
ಸಿಗುವದಿಲ್ಲವೋ ಆವಾಗ ಆ ಕ್ಷುಲ್ಲಕ ಬೆಕ್ಕು ಕೂಡ ಹುಲಿಯಂತೆ
ಉಗ್ರಸ್ವರೂಪತಾಳಿ ಗಟ್ಟಿಗಟ್ಟಿಯಾಗಿ ಒದರುತ್ತ ತನ್ನ ನಖಪಂಜರಗ
ಳಿಂದ ಪ್ರತಿಬಂಧಮಾಡುವ ನಮ್ಮನ್ನು ಹೊಡೆಯ ಬಂದು ಪಾರಾಗಿ
ಹೋಗುವದು. ಆಶ್ರಯರಜ್ಜುಛೇದನದಿಂದ ಜೀವದ ಹಂಗು ಇಲ್ಲದೆ
ಕಾರ್ಯಸಾಧಿಸುವದಕ್ಕೂ ಇಷ್ಟಮನೋರಧಕ್ಕಾಗಿ ಹೃದಯ
ಸರ್ವಸ್ವವನ್ನು ಅರ್ಪಿಸುವದಕ್ಕೂ ಸಾಧನವಾಗುವದು.
೪೯----------------------------------------------------------------
ಎಷ್ಟೋ ಜನರ ಪ್ರಗತಿಯ ಅವನತಿಗೆ ಕಾರಣವೇನಂದರೆ,
ಅವರಲ್ಲಿ ಹಿಡಿದ ಕಾರ್ಯದಲ್ಲಿ ತಮಗೆ ಯಶಃಪ್ರಾಪ್ತಿಯು ಆಗಿಯೇ
ತೀರುವದೆಂಬ ದೃಢನಿಶ್ಚಯವಿಲ್ಲದಿರುವದು, ನಾವು ಎಂದ ಪ್ರಕಾ
ರದ ಹಾಗು ಎಷ್ಟು ಪ್ರಗತಿಯನ್ನು ಹೊಂದಬೇಕೆಂದು ಬಯಸುವೆವೋ
ಅಂಧ ಪ್ರಕಾರದ ಹಾಗು ಅತರದ ಪ್ರಯತ್ನಗಳನ್ನು ಮಾಡಲಿಕ್ಕೆ
ಮಾತ್ರ ನಾವು ಹತ್ತುವದಿಲ್ಲ. ಶಿಕ್ಷಣಪ್ರೀತ್ಯರ್ಧವಾಗಿ ಸದಾಚಾರ
ದಿಂದ ನಡೆದು ತಪಗಟ್ಟಲೆ ಕಷ್ಟ ಪಡಲು ಮನಸ್ಸು ಮಾಡದಾಗು
ವೆವು. ಕ್ಷಣಿಕ ಹಾಗು ಕ್ಷುಲ್ಲಕವಾದ ಸುಖವನ್ನು ತ್ಯಜಿಸಲಿಕ್ಕೂ,
ಶ್ರೇಷ್ಠವಾದ ಪ್ರಗತಿಯ ಸಲುವಾಗಿ ಖುಷಿಮೋಜುಗಳನ್ನು ಕಡಿಮೆ
ಮಾಡಲಕ್ಕೂ ಒಪ್ಪದಾಗುವೆವು.
ಕಿರುಕಳ ವೇಳೆಯನ್ನು ಆತ್ಮಸುಧಾರಣೆಗಾಗಿ ಉಪಯೋಗಿಸು
ವದಕ್ಕೂ, ಸಾಮರ್ಥ್ಯವನ್ನು ಆರೋಗ್ಯಾದಿ ಸಾಧನಗಳಿಂದ ಬೆಳೆಸಿ
ಸುಖಪಡಲಿಕ್ಕೂ ನಮಗೆ ಇಚ್ಛೆಯುಂಟಾಗುವದಿಲ್ಲ. ಯಾರು ಸಂಕ
ಲ್ಪ ಶಕ್ತಿಯುಳ್ಳವರಿಲ್ಲವೋ, ದೃಢಮನಸ್ಕರಿಲ್ಲವೋ, ಅಪೂರ್ವತೆಯ
ಗುಣಗಳುಳ್ಳವರಿಲ್ಲವೋ, ಯಾರು ಶ್ರಮಸಹಿಸಲಾರರೂ, ಸ್ವಾವಲಂಬಿ
ಗಳಲ್ಲವೋ, ಸಮಯಾನುವರ್ತಿಗಳಲ್ಲವೋ, ಪ್ರಯತ್ನವಾದಿಗಳಲ್ಲವೋ
ಅವರು ಪ್ರಗತಿಹೊಂದಬಯಸುವದು ನಿರರ್ಧಕವು. 'ಉದ್ಯೋಗಿನಾಂ
ಪುರುಷಸಿಂಹ ಮುಪೈತಿಲಕ್ಷ್ಮೀಃ ದೈವೇನದೇವಮಿತಿಕಾಪುರುಷಾವ
ದಂತಿ || ದೈವಂನಿಹತ್ಯಕುರು ಪೌರುಷಮಾತ್ಮಶಕ್ತ್ಯಾ | ಯತ್ನೇಕೃತೇ
ಯದಿನಸಿದ್ಧ್ಯತಿ ಕೋತ್ರದೋಷಃ ” ಎಂಬ ಕವಿಯ ಉಕ್ತಿಯಂತೆ
ಕೇವಲ ದೈವದ ಮೇಲೆ ಹವಾಲಕೊಟ್ಟು ಕೂಡ್ರುವ ನಿಂದ್ಯಪುರುಷ
ರಾಗದೆ, ಪ್ರಯತ್ನ ಪೂರ್ವಕ ಕೆಲಸಮಾಡಿ ಅಖಂಡ ಲಕ್ಷ್ಮಿಯನ್ನೂ
ಆರೋಗ್ಯವನ್ನೂ ಹೊಂದಿ ಪ್ರಗತಿಹೊಂದಬೇಕು,
ಹೊರೆಸ ಮೇನಾರ್ಡನೆಂಬ ಸುಪ್ರಸಿದ್ದ ಅಮೇರಿಕನ್ ಗ್ರಹ
ಸ್ಥನು ಕಾಲೇಜದಲ್ಲಿ ಕಲಿಯುತ್ತಿದ್ದಾಗ, ತನ್ನ ವಸತಿಯ ಕೋಣೆಯ
ಬಾಗಿಲ ಮೇಲೆ " V” ಎಂಬ ಅಕ್ಷರವನ್ನು ಕೆಂಪುಬಣ್ಣದಿಂದ ಬರೆದು
೫೦-------------------------------------------------------------------------
ಸ್ಪಷ್ಟವಾಗಿ ಕಾಣುವಂತೆ ಮಾಡಿದ್ದನು. ಸಂಗಡಿಗರಾದ ವಿದ್ಯಾ
ರ್ಥಿಗಳಲ್ಲೊಬ್ಬರಿಗೂ ಮೇನಾರ್ಡನು ಬರೆದಿದ್ದ "V” ಯೆ ಅರ್ಧವು
ತಿಳಿಯಲಿಲ್ಲ. ಆದ್ದರಿಂದ ಅವರು ಮೆನಾರ್ಡನನ್ನು ವಿಕ್ಷಿಪ್ತನೆಂದು
ಭಾವಿಸಿ, ಅವನಿಗೆ "V” ಯನ್ನೇ ಸಂಬೋಧನವಾಗಿ ಉಪಯೋಗಿಸ
ಹತ್ತಿದರು. ಕಾಲೇಜ ಪರೀಕ್ಷೆಯಾಗಿ ಯಾವಾಗ ಅವನು "ವ್ಹಲಿಡಿ
ಕ್ಟೊರಿಅನ” (ಫೇಲೋ) ನಾಗಿ ಆರಿಸಲ್ಪಟ್ಟನೋ, ಆವಾಗ ಅವನು
ಸಂಗಡಿಗರಾದ ವಿದ್ಯಾರ್ಥಿಗಳನ್ನು ಕುರಿತು ಮಿತ್ರರೇ, ನಾನು
ಕೋಣೆಯ ಬಾಗಿಲ ಮೇಲೆ ಬರೆದಿಟ್ಟಿದ್ದ ”V" ಯ ಅರ್ಥವು ಈಗ
ನಿಮಗೆ ತಿಳಿದಿರಬಹುದು. ಕಾಲೇಜದಲ್ಲಿ ಸೇರಿದಾಗಿನಿಂದ "ವ್ಹಲಿಡಿ
ಕ್ಟೋರಿಅನ ” ನಾಗಬೇಕೆಂದು ನನ್ನ ಇಚ್ಛೆಯಿತ್ತು” ಎಂದು ಹೇಳಿ
ದನು. ಪ್ರಬಲವಾದ ಇಚ್ಛಾಶಕ್ತಿಯ, ಹಾಗು ಸಂಕಲ್ಪ ಬಲದ
ಸಾಮರ್ಥ್ಯದಿಂದ ಯಾವದು ತಾನೆ ಅಸಾಧ್ಯವು?
ಹೊರೆಸ ಮನಾರ್ಡ ಇವರ ಉದಾಹರಣೆಯಿಂದ ಪ್ರಗತಿಗಾ
ಮಿಗೆ ಬಹಳ ಸಂಗತಿಗಳ ಬೋಧವಾಗಬಹುದಾಗಿದೆ. ತನ್ನ ಸಂಗಡಿ
ಗರಾದ ವಿದ್ಯಾರ್ಥಿಗಳಲ್ಲಿ, ಎಷ್ಟೋ ಜನರು ಬುದ್ಧಿಯಿಂದಲೂ,
ಪಾಠಶಕ್ತಿಯಿಂದಲೂ ತನ್ನನ್ನು ತಲಮೆಟ್ಟಿ ಹಾರುವರಿರುತ್ತಿರಲಿಕ್ಕೆ,
ತನ್ನಂಥ ಸಾಧಾರಣ ವಿದ್ಯಾರ್ಥಿಗೆ “ವ್ಹಲಿಡಿಕ್ಟೋಕೊರಿಅನ”ಪದವಿಯು
ಸಿಗುವುದು ಅಸಾಧ್ಯವೆಂದು ಅವನು ತಿಳಿದಿದ್ದರೆ, “ವಲಿಡಿಕ್ಟೊರಿ
ಅನ” ಕ್ಕಾಗಿ ಪ್ರಯತ್ನಿಸುವ ಪೂರ್ವದಲ್ಲಿಯೇ ಅದರಲ್ಲಿ ಪರಾಜಯವು
ಖಾತ್ರಿಯಿಂದಾಗುವದೆಂದು ಭಾವಿಸಿದಂತಾಗುತ್ತಿತ್ತು. ಈ ತರದ
ಹೇಡಿಭಾವನೆಗಳೇ ಸಾಮರ್ಥ್ಯಯವಿ ಹೀನತೆಯ ಹಾಗು ದೃಢನಿಶ್ಚಯದ
ಅಭಾವದ ದ್ಯೋತಕಗಳಾಗಿರುವವು. ಆದರೆ ಮೆನಾರ್ಡನು ಈ
ಭಾವನೆಯುಳ್ಳವನಾಗಲಿಲ್ಲ ಈ ತರದ ಅವನು ಮೊದಲಿನಿಂದಲೇ ತನಗೆ
ಯಶಃಪ್ರಾಪ್ತಿಯಾಗುವದೆಂದು ಭಾವಿಸಿಕೊಂಡನು. ಹಾಗು ಆ ಭಾವ
ನೆಯನ್ನು ಕಾರ್ಯರೂಪವಾಗಿ ಪರಿಣಮಿಸುವದಕ್ಕೆ ಅವನು ಮನ
ಮುಟ್ಟಿ ದೀರ್ಘ ಪ್ರಯತ್ನ ಮಾಡಹತ್ತಿದನು. ಯಾವಾಗಲೂ ತನ್ನ
೫೧-----------------------------------------------------------------
ಭಾವನೆಯು ಜಾಗ್ರತವಾಗಿದ್ದು ಪ್ರಯತ್ನ ಮಾಡಲಿಕ್ಕೆ ಉತ್ಸಾಹವು ಬೆಳೆ
ಯಬೇಕೆಂದು ಅವನು "ವ್ಹಲಿಡಿಕ್ಟೋರಿಅನ" ದ ಮೊದಲಿನ ಅಕ್ಷರವಾದ
”ವ್ಹಿ" "V" ಯು ಸದಾ ಕಣ್ಣಿಗೆ ಗೋಚರವಾಗುವದಕ್ಕಾಗಿ,
ಬಾಗಿಲ ಮೇಲೆ ಕೆಂಪುಬಣ್ಣದಿಂದ ಒಡೆದುಕಾಣುವಂತೆ ಬರೆದಿಟ್ಟು
ಕೊಂಡಿದ್ದನು
ಇನ್ನು" V” ಯನ್ನು ಬರೆದಿಡುವದರಿಂದ ಮೆನಾರ್ಡನಿಗೆ ಮತ್ತೂ
ಒಂದು ಪ್ರಕಾರದ ಆತರ್ಕ್ಯ ಸಹಾಯವಾಯಿತೆಂದು ನಮ್ಮ ಭಾವನೆ
ಯಾಗಿದೆ. ಅದಾವದೆಂದರೆ, ಮೆನಾರ್ಡನು "V” ಯನ್ನು ಒಡೆದು
ಕಾಣುವಂತೆ ಬರೆದು, ತಾನು ಹೊಂದಬೇಕಾಗಿದ್ದ ಪ್ರಗತಿಯಿಂದ
ಪರಾವೃತ್ತನಾಗಲಿಕ್ಕೆ ಬರದಂತೆ ಬಂಧನ ಮಾಡಿಕೊಂಡನು, ಅಥವಾ
ಮನುಷ್ಯನ ಸ್ವಭಾವಧರ್ಮದಂತೆ ವಿಶೇಷ ಸಂಕಟಗಳು ಬಂದಾಗ
ಹಿಡಿದ ಕಾರ್ಯದಿಂದ ಹಿಂತಿರುಗಲು ಆಸ್ಪದಉಳಿಯಬಾರದೆಂದು "V"
ಯನ್ನು ಬರೆದಿಟ್ಟು ಆಶ್ರಯರಜ್ಜುವನ್ನು ಛೇದನಮಾಡಿಕೊಂಡನು. "V"
ಯನ್ನು ಎಲ್ಲರಿಗೂ ಒಡೆದು ಕಾಣಿಸುವಂತೆ ಬರೆದಿಡದೆ, ಬರೇ ಮನಸ್ಸಿ
ನಲ್ಲಿ ವ್ಹಲಿಡಿಕ್ಟೋರಿಆನ" ನಾಗಬೇಕೆಂದು ಬಯಸಿ ಪ್ರಯತ್ನ ಮಾಡ
ಹತ್ತಿದರೆ ಅವನಿಗೆ ಯಶಃಪ್ರಾಪ್ತಿಯಾಗುವದು.ಸಂಶಯಾಸ್ಪದವಾಗುತ್ತಿ
ತ್ತು. ಒಂದುವೇಳೆ ಅವನು ಯಶವನ್ನು ಹೊಂದದಿದ್ದರೆ, "V”ಯನ್ನು
ಬರೆದಿಟ್ಟಾಗ ಆಗುವ ಮನಸ್ತಾಪಕ್ಕಿಂತ, ಬರೆದಿಡದೆ ಹಾಗೇ ಪ್ರಯತ್ನ
ಮಾಡಿದಾಗಿನ ಮನಸ್ತಾಪವು ಕಡಿಮೆಯತರದ್ದಾಗುತ್ತಿತ್ತು. ಆದ್ದ
ರಿಂದ ಪ್ರಗತಿಹೊಂದಬಯಸುವವನು ಆ ಪಥದಿಂದ ಹಿಂದಿರುಗಲಿಕ್ಕೆ
ಆಸ್ಪದವುಳಿಯದಂತೆ ಆಶ್ರಯರಜ್ಜುವನ್ನು ತನ್ನ ಕೈಯಿಂದ ತಾನೇ
ಛೇದಿಸಿಕೊಳ್ಳಬೇಕು. ಅಂದರೆ ಅಧಃಪತನವಾಗದೆ ತೀವ್ರವಾಗಿ
ಹೆಚ್ಚು ಹೆಚ್ಚು ಶ್ರೇಯಸ್ಸನ್ನು 'ಪಡೆಯುತ್ತ ಹೋಗುವನು.
ಆಶ್ರಯ ರಜ್ಜುಛೇದನಕ್ಕೆ ಸತ್ಯಸಂಕಲ್ಪವೆಂದು ಸಾಧಾರಣ
ವಾಗಿ ಹೇಳಬಹುದು. ನಮ್ಮ ಪೂರ್ವಜರು ಸಂಕಲ್ಪಕ್ಕೆ ಬಹಳ
ವಾಗಿ ಮಹತ್ವ ಕೊಡುತ್ತಿದ್ದರು. ಸಂಣ ಸಂಣ ಸಂಗತಿಗಳನ್ನು
೫೨--------------------------------------------------------------
ಕೂಡ ಸಂಕಲ್ಪ ಮಾಡದೆ ಅವರು ಮಾಡಲುದ್ಯುಕ್ತರಾಗುತ್ತಿಲ್ಲ.
ಆ ಪರಿಪಾರವು ಬ್ರಾಹ್ಮಣರಕ್ರಿಯಾಕರ್ಮಗಳಲ್ಲಿ ಈಗ ಕಂಡುಬರು
ವದು: ಆದರೆ ಸಂಕಲ್ಪಶಕ್ತಿಯ ಮಹತ್ವವನ್ನರಿಯದ ನಾವು, ಹಿರಿ
ಯರ ಅನುಕರಣವನ್ನು ಶಬ್ದಮಾತ್ರದಲ್ಲಿ ಮಾಡಿ ಲೌಕಿಕರಹಾಸ್ಯಕ್ಕೆ
ಕಾರಣರಾಗುತ್ತಿದ್ದೇವೆ. ಯಾವ ಕೆಲಸದ ಸಲುವಾಗಿಯಾದರೂ
ದೇವ-ಬ್ರಾಹ್ಮಣರ, ಗುರುಹಿರಿಯರ, ಅಗ್ನಿ-ಸೂರ್ಯರ ಸಮಕ್ಷಮ
ಸಂಕಲ್ಪ ಮಾಡಿ ಅಂದರೆ ನಾನು ಇಂಥ ಇಂಥ ಕೆಲಸವನ್ನು ಹೀಗೆಯೇ
ಮಾಡುತ್ತೇನೆಂದು ಸಾಕ್ಷಿಯಿಟ್ಟು ಹೇಳಿ, ಕೆಲಸ ಪ್ರಾರಂಭಿಸಿ ಯಥಾ
ಯೋಗ್ಯವಾಗಿ ಮುಗಿಸಬೇಕಾಗುತ್ತದೆ. ಸಂಕಲ್ಪವು ಸತ್ಯವಾಗು
ವಂತೆ ಯತ್ನಿಸದಿದ್ದರೆ ನಮಗೆ ಅಧೋಗತಿಯು ತಪ್ಪದೆ ಆಗುವದು.
ಸಂಕಲ್ಪ ಮಾಡಿ ಕೆಲಸಪ್ರಾರಂಭಿಸುವದರಿಂದ ಆ ಕೆಲಸ ಮುಗಿಸದೆ
ಹಿಂದಿರುಗಲು ಮಾರ್ಗವಿದ್ದ ಆಶ್ರಯವನ್ನು ಛೇದನ ಮಾಡಿ ಕೆಲಸ
ಪ್ರಾರಂಭಿಸಿದಂತಾಗುವದು. ಕೆಲಸಮಾಡದೆ ಹಿಂತಿರುಗಲು ಮಾರ್ಗ
ವೇಇಲ್ಲದಾಗಲು ಎಂಧ ಸಂಕಟಗಳು ಅಡ್ಡ ಬಂದರೂ ಅವಕ್ಕೆ ಅಂಜದೆ
ಕೆಲಸವನ್ನು ಪೂರ್ಣಮಾಡುವದರಲ್ಲಿ ತತ್ಪರನಾಗುವನು. ಈ ಸಂಕ
ಲ್ಪವನ್ನು ಪಾಲಿಸಕ್ಕೆ ಆಚಲವಾದ ಭಾವನೆಯಿರಬೇಕಾಗುವದು;
"ಭಾವನಾಯದಿಭವೇತ್ಫಲದಾತ್ರಿ” ಇಲ್ಲವೆ "ಭಾವಿಕಸ್ಯತಪೋಬಲಂ”
ಎಂಬಂತೆ ಭಾವನೆಯುಳ್ಳವರೇ, ಸಂಕಲ್ಪ ಶಕ್ತಿಯುಳ್ಳವರೇ ಆಶ್ರಯ
ರಜ್ಜುಛೇದನಮಾಡಿಕೊಳ್ಳುವವರೇ ಲೋಕದಲ್ಲಿ ಏನಾದರೂ ಕೆಲಸ
ಮಾಡಿ ಪ್ರಖ್ಯಾತರಾಗುವರು. ಪುಣ್ಯಶಾಲಿ ರಾಮಚಂದ್ರನು ಭಾವ
ನಾಪೂರ್ವಕವಾಗಿ, ಸಂಕಲ್ಪಪೂರ್ವಕವಾಗಿ ತಂದೆಯ ಮಾತನ್ನು
ಕೇಳಿದ್ದರಿಂದಲೇ ಅವನು ಲೋಕವಂದ್ಯನಾದನು. ಸತ್ಯಪ್ರತಿಜ್ಞ
ಹರಿಶ್ಚಂದ್ರರಾಯನು ಸತ್ಯಸಂಕಲ್ಪ ಕಾಯ್ದುಕೊಂಡದ್ದರಿಂದಲೇ
ಕೀರ್ತಿಶೇಷವಾಗಿರುವನು. ಶ್ರೀಯಾಳಭೂಪಾಲನೂ, ಧರ್ಮರಾಜನೂ
ಲೋಕವಿಖ್ಯಾತರಾದದ್ದಾದರೂ ಸಂಕಲ್ಪ ಶಕ್ತಿಯಿಂದಲೇ.
೫೩----------------------------------------------------------
ಸಂಕಲ್ಪಕ್ಕೆ ಈಗಿನ ಮನ್ವಂತರದಲ್ಲಿ ಕಾರ್ಯಕ್ರಮ Pro-
gramme)ಎಂದೆನ್ನುವರು. ಕಾರ್ಯನಿಷ್ಠ ಪ್ರತಿಯೊಬ್ಬನೂ ವಿಶೇ
ಷವಾಗಿ ಆಂಗ್ಲರು ಕಾರ್ಯಕ್ರಮದ ಹೊರತು ಕೆಲಸಕ್ಕೆ ಪ್ರಾರಂ
ಭಿಸುವದಿಲ್ಲ. ಕಾರ್ಯಕ್ರಮವು ತನ್ನ ಮನಸ್ಸಿನಂತೆ ಮೊದಲು
ಗೊತ್ತು ಮಾಡಲ್ಪಡುವದರಿಂದ, ಅದರಂತೆ ನಡೆಯುವದರಿಂದ ಸ್ವಾತಂ
ತ್ರ್ಯಪ್ರೀತಿ, ದೃಢನಿಶ್ಚಯ, ಕಾರ್ಯದಕ್ಷತೆ, ಸಾಧನಗಳನ್ನು ಒದಗಿಸಿ
ಕೊಳ್ಳುವಿಕೆ, ಸಮಯಸಾಫಲ್ಯ ಮಾಡುವಿಕೆ ಇನ್ನೂ ಅನೇಕ ಗುಣ
ಗಳ ಪೋಷಣಮಾಡಿಕೊಂಡಂತಾಗುವದು. ಆದ್ದರಿಂದ ಪ್ರತಿಯೊಬ್ಬ
ಮನುಷ್ಯನೂ ಮೊದಲು ತಾನು ಯಾವ ಹಾಗು ಎಷ್ಟು ಕೆಲಸವನ್ನು
ಮಾಡಿ ಪ್ರಗತಿಯನ್ನು ಹೊಂದಬೇಕೆಂಬದನ್ನು ಗೊತ್ತುಮಾಡಿಕೊಂಡು
ಇಡಿ ಆಯುಷ್ಯದ ಕಾರ್ಯಕ್ರಮವನ್ನು ತಯಾರುಮಾಡಿಕೊಳ್ಳಬೇಕು.
ಹಾಗು ಆ ಕಾರ್ಯಕ್ರಮದಂತೆ ನಡೆಯುವದರಿಂದ ನಿಜವಾಗಿ ಪ್ರಗತಿ
ಯಾಗುವದೆಂದು ದೃಢಭಾವನೆಯನ್ನು ಮಾಡಿಕೊಳ್ಳಬೇಕು. ಅಂದರೆ
ಯಶಃಪ್ರಾಪ್ತಿಯ ಕಾರ್ಯದಲ್ಲಿ ಬರಬಹುದಾದ ವಿಘ್ನಗಳಿಗೆ ಆಸ್ಪದ
ವುಳಿಯದೆ ಪ್ರಗತಿಯು ಭರಾಟಿಯಿಂದ ಆಗಹತ್ತುವದು.
"ದೇಹಂವಾಪಾತಯಾಮಿ ಕಾರ್ಯ೦ವಾಸಾಧಯಾಮಿ” ಎಂಬಂ
ತೆ ಸಾಂಕಲ್ಪಿಕದೃಢನಿಶ್ಚಯ ಮಾಡಿಕೊಂಡು, ಪ್ರಗತಿಗಾಗಿ ಪ್ರಯತ್ನ
ಮಾಡಬೇಕು. ಅಂದರೆ ತಾನಾಜಿಯಂತೆ ಕಾರ್ಯಸಾಧನದಲ್ಲಿ ದೇಹದ
ಪಾತವಾದರೂ ಇಷ್ಟವು ಸಾಧಿಸದೆ ಇರುವದಿಲ್ಲ, ಶಿವಪ್ರಭುಗಳು
ತಾನಾಜಿಯಂಥ ಸಾಂಕಲ್ಪಿಕ ದೃಢಮನಸ್ಸಿನ ಸಾಹಸಿಗನೊಬ್ಬನ
ಹೊರತು ಬೇರೆ ಸರದಾರರಲ್ಲೊಬ್ಬನಿಂದಲೂ ಸಿಂಹಗಡವನ್ನು ತಕ್ಕೊ
ಳ್ಳುವದಾಗುವದಿಲ್ಲವೆಂದು ಚೆನ್ನಾಗಿ ತಿಳಿದಿದ್ದರು. ಅಂತೇ ಅವರು
ಆ ಅತ್ಯಂತ ಕರಿಣ ಕಾರ್ಯವನ್ನು ತಾನಾಜಿಗೆ ಒಪ್ಪಿಸಿದ್ದರು,.
ಏನು ಮಾಡುತ್ತೇವೆ, ಹಾಗು ಮುಂದೆ ಏನನ್ನು ಮಾಡಬೇಕಾ
ಗಿದೆ ಎಂಬದಾವದನ್ನೂ ಅರಿಯದ ನಾವು, ಸದಾ ಸಂಶಯಪಿಶಾಚಿ
ಯಿಂದ ಗ್ರಸ್ತರಾಗಿ ಆಯುರ್ಗಲಿತರಾಗುವೆವು. ಕೆಲಸ ಆರಂಭಿಸುವ
೫೪----------------------------------------------------------
ಮೊದಲೂ, ಕೆಲಸಮಾಡಹತ್ತಿದಾಗಲೂ ನಾವು ಆ ಬಗ್ಗೆ ವಿಚಾರಮಾ
ಡುವದರಲ್ಲಿ ವೇಳೆಯನ್ನು ಮಿತಿಮೀರಿ ಕಳೆಯುವೆವು. ಅನುಕರಣ
ಪ್ರಿಯರಾದ, ಅಪೂರ್ವಗುಣಗಳಿಲ್ಲದ ನಾವು ಮಂದಿಯ ಅನುಕರಣ
ಮಾಡಬೇಕೆಂದು ಆಲೋಚಿಸುವಾಗ ವಿಚಾರದಲ್ಲಿ ಹೀಗೆ ಬಹಳ ವೇಳೆ
ಹಾಳುಮಾಡಿಕೊಳ್ಳುವೆವು. ಇದರಿಂದ ಪರಿಣಾಮದಲ್ಲಿ ನಮ್ಮ ಆತ್ಮ
ವಿಶ್ವಾಸದ, ಸ್ವಾತಂತ್ರ್ಯದ ಹ್ರಾಸವಾಗುವದು. ಪ್ರಸಂಗದಲ್ಲಿ
ಸಹಾಯವಾದೀತೆಂಬ ಮರುಳು ವಿಶ್ವಾಸವು ಕೆಲಸದ್ದಲ್ಲ. ನಾವು
ಪ್ರಗತಿ ಕಾರ್ಯಕ್ಕೆ ಮಹತ್ವ ಕೊಡದೆ, ಕ್ಷುಲ್ಲಕ ಜನರ
ಮಾತನ್ನು ನಡೆಸುವಭರಕ್ಕೂ ಅವರ ಪ್ರೇರಣೆಯಿಂದ
ಹೊಲ್ಲದ ಕೆಲಸಮಾಡಲಿಕ್ಕೂ ಪ್ರವೃತ್ತರಾಗುತ್ತೇವೆ. ಇದರಿಂದ
ಪ್ರಗತಿಯಾಗದೆ ಕಾರ್ಯಸಾಧನವಾಗದೆ ದುಷ್ಟ ಜನರ ಸಂಗತಿಯಿಂದ
ಹೊಲ್ಲದ ಕೆಲಸಮಾಡಿದ್ದರಿಂದ ಲೋಕೋತ್ತರ ಅಪಕೀರ್ತಿಯು
ಮಾತ್ರ ನಮ್ಮ ಉಡಿಯಲ್ಲಿ ಬೀಳುವದು. ಆದ್ದರಿಂದ ಪ್ರಗತಿಗಾಮಿ
ಯು ಪುನಃ ಪುನಃ ವಿಚಾರಮಾಡದೆ, ದುಷ್ಟ ಜನರ ಮಾತು ಕೇಳದೆ,
ಕೇವಲ ತನ್ನ ಸದಸದ್ವಿವೇಕಬುದ್ಧಿಗೆ-ಅಂತಃಕರಣಕ್ಕೆ ಸ್ಫೂರ್ತಿಯಾ
ಗುವ ಮಾರ್ಗದಿಂದ ಪ್ರಗತಿಮಾರ್ಗವನ್ನು ಹಿಡಿಯಬೇಕು. ಹೀಗೆ
ಮಾಡುವದರಿಂದ ಪ್ರಸಂಗದಲ್ಲಿ ಸಹಾಯವಾದೀತೆಂಬ ಸಂಗತಿಗಳ
ಆಶ್ರಯಗಳ ಛೇದನವನ್ನು ಮಾಡಿಕೊಳ್ಳುವದರಿಂದ ಮುಂದೆ ಪ್ರಗತಿಗೆ
ಯಾವ ಬಾಧಕಗಳೂ ಉಳೆಯಲಾರವು:
ಅನಿಶ್ಚಿತಧೈಯದ ಹಾಗು ಅಂಜುಬುರುಕನಾದ ಮನುಷ್ಯನು
ಕಂಡ ಕಂಡವರ ಮಾತಿನಂತೆ ನಡೆಯಹತ್ತುತ್ತಾನೆ ಪ್ರತಿಯೊಬ್ಬರ
ಅನುಕೂಲ ಹಾಗು ಪ್ರತಿಕೂಲ ಅಭಿಪ್ರಾಯಗಳಿಂದ ಅವನ ಮನಸ್ಸು
ಚಂಚಲವಾಗುವದು. ಧೈಯವು ಗೊತ್ತಾಗದ್ದರಿಂದ, ಅಭಿಪ್ರಾಯ
ಕೊಡುವ ಪ್ರತಿಯೊಬ್ಬನ ಮತಕ್ಕೆ ಅವನು ಸಮ್ಮತಿಪಡಬೇಕಾಗು
ತ್ತದೆ. ಒಂದು ಕಾರ್ಯವನ್ನು ಮಾಡಿಯೇ ತೀರಬೇಕೆಂದು ಎಷ್ಟು
ನಿಶ್ಚಯಸಿದರೂ, ಅವನ ನಿಶ್ಚಯವನ್ನು ತಿರುಗಿಸಲಿಕ್ಕೆ ಒಬ್ಬ ಸಾ
೫೫--------------------------------------------------------------.
ಮಾನ್ಯ ಹುಡುಗನೂ ಸಮರ್ಧನಾಗುವನು. ಇಂಥ ಮನುಷ್ಯನು
ಇಂದು ಒಬ್ಬನಂತೆಯೂ ನಾಳೆ ಮತ್ತೊಬ್ಬನಂತೆಯೇ ನಡೆಯಹತ್ತಿ
ಮಂದಿಯ ಕೈಯೊಳಗಿನ ಆಟಿಗೆಯಾಗಿ ಕೂಡ್ರುವನು. ಈ ತರದ
ಹುಚ್ಚು ಜನರು ಹೆಚ್ಚಾಗಿ ದುರಾಶೆ ಪ್ರೇರಿತರಾಗಿರುವದರಿಂದ ಇಂದು
ಮಾಡತಕ್ಕ ಕೆಲಸವನ್ನು ಇನ್ನೊಮ್ಮೆ ವಿಚಾರಮಾಡಿ ನಾಳೆಮಾಡಿದರೆ
ಅಷ್ಟರಲ್ಲಿ ದೇವರು ಯಾವರೂಪದಿಂದ ಸಹಾಯಮಾಡಿ ತಮ್ಮ ಕೆಲ
ಸದಲ್ಲಿ ಹೆಚ್ಚು ಲಾಭವಾಗುವಂತೆ ಮಾಡುವನೋ ಎಂದು ತಿಳಿಯು
ವರು. "Do not put off till tomorrow what you can
do to-day” ಎಂಬ ಆಂಗ್ಲ ನಾಣ್ಣುಡಿಯ ಗರ್ಭಿತಾರ್ಧವನ್ನು
ವಿಚಾರಿಸಿದರೆ ಈ ಹೊತ್ತು ಆಗಬಹುದಾದ ಕೆಲಸವನ್ನು ಯಾವಕಾರ
ಣದ ಸಲುವಾಗಿಯೂ ನಾಳಿಗೆ ಹಾಕಬಾರದು, ಹೇಳುವದೇನಂದರೆ,
ಮನಸ್ಸು ಬಹು ಚಂಚಲವಾಗಿರುವದರಿಂದ ಕಾಲಾತಿಕ್ರಮಣದಿಂದ
ಕೃತನಿಶ್ಚಯವು ಸಡಿಲಾಗುವ ಸಂಭವವಿರುತ್ತದೆ. ಹಾಗು ಇಂದಿನ
ಕಾರ್ಯವು ನಾಳೆ ಆಗದಾಗುತ್ತದೆ, ಆದ್ದರಿಂದ ವ್ಯವಸಾಯಾತ್ನಿ
ಕಾಬುದ್ಧಿರೇತೇಹಕುರುನಂದನ | ಬಹುಶಾಖಾಹ್ಯನಂತಶ್ಚಬುದ್ಧ
ಯೋsವ್ಯವಸಾಯಿನಾಮ್ ” ಎಂಬಂತೆ ಪ್ರಗತಿಹೊಂದುವ ಬಲ
ವಾನ್ ಮನುಷ್ಯನು ಹಿಡಿದಕೆಲಸಕ್ಕಾಗಿ ಸಂಪೂರ್ಣ ಶಕ್ತಿಯನ್ನು
ಪಯೋಗಿಸುವದರಲ್ಲಿ ಸ್ವಲ್ಪವೂ ಹಿಂಜರಿಯುವದಿಲ್ಲ. ಇದರಿಂದ
ಅವನಲ್ಲಿ ಕರ್ತೃತ್ವ ಶಕ್ತಿ ಬೆಳಯುವದಲ್ಲದೆ, ವಿಚಾರಶಕ್ತಿಯೂ ಬೆಳೆ
ಯುವದು, ಆಚಾರ ವಿಚಾರಗಳ ಐಕ್ಯದಿಂದ ಮಾಡುವ ಕೆಲಸಗಳ
ಲ್ಲಿ ಯಶವು ದೊರೆತೇದೊರೆಯುವದು. ಹೀಗೆ ಮಾಡದೆ ಒಬ್ಬನ
ವಿಚಾರ ಇನ್ನೊಬ್ಬನ ಆಚಾರ ಇವುಗಳಿಂದ ಪ್ರಗತಿಯಾಗುವ ಬಗೆ
ಹ್ಯಾಗೆ? ಮೇಲಿಂದ ಮೇಲೆ ವಿಚಾರಮಾಡುವವನ ಕಡೆಯಿಂದ ಯಾವ
ಕೆಲಸವೂ ಅಗುವದಿಲ್ಲ.
===================
೫೬----------------------------------------------------
೮ ನೆಯ ಖಂಡ ಸಾಮರ್ಥ್ಯಸಂಚಯ.
ಯುದ್ಧದಲ್ಲಿ ಉಪಯೋಗಿಸಬೇಕಾದ ತೋಫುಗಳನ್ನು ಮೊದ
ಲು ಪರೀಕ್ಷಿಸಿ ಆ ಮೇಲೆ ಉಪಯೋಗಿಸುವ ರೂಢಿಯುಂಟು. ಪರೀ
ಕ್ಷೆಯ ಕಾಲಕ್ಕೆ ಅವುಗಳಲ್ಲಿ ಸಾಧಾರಣವಾಗಿ ತುಂಬುವ ಮದ್ದು
ಗುಂಡುಗಳಿಗಿಂತ ಹೆಚ್ಚು ಮದ್ದು-ಗುಂಡುಗಳನ್ನು ತುಂಬಿ ಹಾರಿಸಿ
ನೋಡುವರು. ಹೆಚ್ಚು ಮದ್ದು-ಗುಂಡು ಉಪಯೋಗಿಸಿ ಹಾರಿಸಿ
ನೋಡುವ ಕಾರಣವೇನೆಂದರೆ, ಯಾವನಾದರೊ ಅರಿಯದ ಮನು
ಷ್ಯನು ಯುದ್ಧ ಪ್ರಸಂಗದಲ್ಲಿ ಹಾಗೆ ಹಾರಿಸಿದರೆ ಅಪಘಾತವಾಗಬಾ
ರದು, ಪರೀಕ್ಷೆಯಲ್ಲಿ ಪಾಸಾಗದ ಸ್ವಾಭಾವಿಕ ಶಕ್ತಿಗಿಂತ ಹೆಚ್ಚು
ಮದ್ದು-ಗುಂಡಿನ ಆಘಾತವನ್ನು ತಡೆಯದ ತೋಫುಗಳನ್ನು ಯುದ್ಧ
ದಲ್ಲಿ ಉಪಯೋಗಿಸದ ಅವನ್ನು ನಾಶಗೊಳಿಸುವರು ಇಲ್ಲವೆ ಅವು
ಗಳ ಸ್ವಾಭಾವಿಕ ಶಕ್ತಿಯನ್ನಾದರೂ ಕಡಿಮೆಮಾಡುವರು.
ಉಗೆಬಂಡಿಯ ಇಲ್ಲವೆ ಉಗೆಹಡಗಗಳ ಇಲ್ಲವೆ ಎಂಜಿನ್,
ಪ್ರೆಸ್ಸು ಮೊದಲಾದವುಗಳ ಇಂಜಿನಗಳ ಶಕ್ತಿಯನ್ನಾದರೂ ಅವುಗ
ಳನ್ನು ಉಪಯೋಗಿಸುವ ಶಕ್ತಿಗಿಂತ ತುಸು ಹೆಚ್ಚು ಶಕ್ತಿಯನ್ನು
ಬೇಕಂತ ಇಟ್ಟಿರುತ್ತಾರೆ. ಸಾಧಾರಣವಾಗಿ ೨೦ಹಾರ್ಸ- ಕುದು
ರೆಯ ಶಕ್ತಿಯ ಇಂಜಿನವು ನಮಗೆ ಬೇಕಾಗಿದ್ದರೆ, ನಿಪುಣಯಾಂತ್ರಿ
ಕನು ತಿಳಿಸಿಯೇ ಆಗಲಿ, ತಿಳಿಸದೆಯೇ ಆಗಲಿ, ಬೇಕಂತ ೫ ಹಾರ್ಸ
ಪಾವರ ಹೆಚ್ಚು ಶಕ್ತಿಯುಳ್ಳ ಅಂದರೆ ೨೫ ಹಾರ್ಸ ಪಾವರವುಳ್ಳ
ಇಂಜಿನವನ್ನು ನಮಗೆ ಕೊಡುವನು: ಈ ಹೆಚ್ಚು ಶಕ್ತಿಯ ಉಪ
ಯೋಗವನ್ನು ಮಾಡಿಕೊಳ್ಳದಿದ್ದರೂ ಚಿಂತೆಯಿಲ್ಲ. ಆದರೆ ಅದರಲ್ಲಿ
ಆ ಶಕ್ತಿಯು ಇರಬೇಕಾದದ್ದು ಅತ್ಯವಶ್ಯವಾಗಿದೆ. ಇದರಂತೆ ಪ್ರಗತಿ
ಹೊಂದುವ ಮನುಷ್ಯನಲ್ಲಿ ಅವನು ಮಾಡಬೇಕಾದ ಕೆಲಸದ ಜ್ಞಾ
ನವು ಅವನು ಅದರಲ್ಲಿ ಹೊಂದಬೇಕಾದ ಯಶಸ್ಸಿಗಿಂತ ತುಸುಹೆಚ್ಚು
ಇರಬೇಕಾಗುವದು. ಈ ಹೆಚ್ಚು ಶಕ್ತಿಯು ಸಾಮರ್ಧ್ಯ ಸಂಚಯವು
ಪಸಂಗದಲ್ಲಿ ಅವನಿಗೆ ಒಳ್ಳೆ ಸಹಾಯಕಾರಿಯಾಗದೆ ಇರದು.
೫೭-----------------------------------------------------------------
ಕಾಲವು ಒಂದೇಸವನೆಯಾಗಿರುವವರೆಗೆ ಬಹುಜನರು ಪ್ರಗತಿ
ಪರಕೆಲಸಗಳಲ್ಲಿ ತೊಡಗಬಹುದು. ಆದರೆ ಸಾಮರ್ಥ್ಯಸಂಚಯ
ವಿದ್ದ ಹೊರತು ಕಠಿಣಪ್ರಸಂಗಗಳಲ್ಲಿ ಅವರ ದೊಡ್ಡ ಕೆಲಸಗಳು
ಸುರಳೀತವಾಗಿ ಸಾಗಲಾರವು, ಸಾಮರ್ಧ್ಯಸಂಚಯವಿಲ್ಲದವರು ಅಪ
ತ್ತಿನ ಪ್ರಸಂಗಗಳಲ್ಲಿ ಹತಾಶರಾಗಿ ಹಿಡಿದ ಕಾರ್ಯ ಬಿಟ್ಟು ಬಿಡುವರು.
ಆದರೆ ಸಾಮರ್ಥ್ಯವಂತನು ಚಾತುರ್ಯದಿಂದ ನಡೆದು ಕಠಿಣಪ್ರಸಂಗ
ಗಳಲ್ಲಿಯೂ ಪ್ರಗತಿಹೊಂದಲು ಯತ್ನಿಸುವನು.
ದೊಡ್ಡ ದೊಡ್ಡ ಕೆಲಸಮಾಡುವ ಯೋಗ್ಯತೆಯುಳ್ಳ ಎಷ್ಟೋ
ಜನರು ಇಡಿ ಆಯುಷ್ಯವನ್ನು ಸಾಧಾರಣವಾದ ಕೆಲಸಮಾಡುವದರ
ಲ್ಲಿಯೇ ಕಳೆಯುವರು, ಇದಕ್ಕೆ ಕಾರಣವೇನಂದರೆ, ತಮ್ಮಲ್ಲಿ
ಹೆಚ್ಚು ಸಾಮರ್ಥ್ಯವಿದ್ದ ಬಗ್ಗೆ ಅವರಿಗೆ ಆತ್ಮವಿಶ್ವಾಸವಿರುವದಿಲ್ಲ.
ಹಾಗು ನಿತ್ಯೋಪಯೋಗಕ್ಕೆ ಬೇಕಾಗುವ ಶಕ್ತಿಗಿಂತ ಹೆಚ್ಚು ಸಾಮ
ರ್ಥ್ಯವನ್ನು ಸಂಗ್ರಹಿಸಲು ಅವರು ಎಂದೂ ಪ್ರಯತ್ನ ಮಾಡುವದಿಲ್ಲ.
ಹೀಗೆ ಸಾಮರ್ಥ್ಯಸಂಚಯಿಸದವರೂ, ಇದ್ದ ಸಾಮರ್ಥ್ಯವನ್ನೆಲ್ಲ
ಉಪಯೋಗಿಸುವವರೂ ಆದ ಅವರು ಆಕಸ್ಮಿಕವಾದ ಯಾವದೊಂದು
ವಿಪತ್ತಿಗೆ (ಅವು ಎಷ್ಟು ಕ್ಷುಲ್ಲಕಗಳಾಗಿದ್ದರೂ) ಗುರಿಯಾದರೆ ಸಂಪೂ
ರ್ಣನಾಶಹೊಂದುವರು. ಭಯಂಕರ ಬಿರುಗಾಳಿಯಿಂದ ಇಲ್ಲವೆ
ಮಳೆಯಿಂದ ಸಂಣ ಸಂಣ ಗಿಡಗಳೂ, ಮುರುಕಳಿಗಬಂದಿದ್ದ ಮನೆ
ಗಳೂ ಹ್ಯಾಗೆ ಒಮ್ಮೆಲೆ ಬೀಳಹತ್ತುವವೋ ಹಾಗೆ ದುರ್ಬಲರು ಸಂಕ
ಟಗಳು ಬರಬರುವದರೊಳಗಾಗಿ ನಾಶಹೊಂದಹತ್ತುವರು. ಸಾಕ
ಷ್ಟು ಧನಸಂಗ್ರಹವಿಲ್ಲದೆ ನಡಯಿಸಿದ ಉದ್ಯೋಗಗಳೂ, ಯೋಗ್ಯ
ಅಭ್ಯಾಸಮಾಡದ ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಧಿಗಳೂ ತಮ್ಮ
ಪರಾಜಯದಿಂದ ಮೇಲನ ಸಂಗತಿಗೆ ಪುಷ್ಟಿಕೊಡುವರು. ಬ್ಯಾಂಕು
ಗಳು ದಿವಾಳಿತೆಗೆಯಲಿಕ್ಕೆ ಇದೇ ಕಾರಣವಂದು ತಜ್ಞರ ಮತವದೆ.
ಚುನ್ನಿಲಾಲಸರಯ್ಯಾ ಎಂಬ ಸುಪ್ರಸಿದ್ಧ ಬ್ಯಾಂಕರನು ಆತ್ಮಹತ್ಯ
ಮಾಡಿಕೊಳ್ಳಲಿಕ್ಕೆ ಇದೇಕಾರಣವು. ತೋಫುಗಳಲ್ಲಿ ಇಲ್ಲವ
೫೮-------------------------------------------------------------
ಇಂಜಿನುಗಳಲ್ಲಿ ಎಂದೂ ಉಪಯೋಗಿಸದಂಧ ಹೆಚ್ಚು ಶಕ್ತಿಯು
ಹ್ಯಾಗೆ ಅವಶ್ಯವೋ, ಹಾಗೆಯೇ ಬ್ಯಾಂಕುಗಳಲ್ಲಿ ಉಪಯೋಗಕ್ಕಿಂತ
ಹೆಚ್ಚು ಹಣವೂ, ರಾಷ್ಟ್ರಗಳಲ್ಲಿ ಯುದ್ಧಕ್ಕೆ ಬೇಕಾಗುವ ದಂಡಿ
ಗಿಂತ ಹೆಚ್ಚು (Resevedforce) ಕಾದಿಟ್ಟದಂಡೂ, ವ್ಯಾಖ್ಯಾತೃ
ವಿನಲ್ಲಿ ಕೊಡಬೇಕಾದ ವ್ಯಾಖ್ಯಾನಗಳಿಗಿಂತ ಹೆಚ್ಚು ವಿಷಯಜ್ಞಾ
ನವೂ, ಲೇಖಕನಲ್ಲಿ ವಿವೇಚಿಸಬೇಕಾದ ಲೇಖಕ್ಕಿಂತ ಹೆಚ್ಚು ವಿವೇ
ಚನಶಕ್ತಿಯ ಜಟ್ಟಿಯಲ್ಲಿ ದಿನಾಲು ಉಪಯೋಗಿಸುವ ಶಕ್ತಿ
ಗಿಂತ ಹೆಚ್ಚು ಶಕ್ತಿಯೂ, ಜರರದಲ್ಲಿ ದಿನಾಲು ಪಚಿಸಬಹುದಾದ
ಸಾಮರ್ಥ್ಯಕ್ಕಿಂತ ಹೆಚ್ಚು ಸಾಮರ್ಥ್ಯವೂ ಇರಬೇಕಾಗಿರುವದು.
ಪ್ರಸಂಗಕ್ಕೆ ಉಪಯೋಗಬೀಳಬೇಕೆಂದು ಪ್ರಯತ್ನ ಮಾಡುವಾಗ
ಬ್ಯಾಂಕುಗಳು ಬೇಕಂತ ಕೆಲವು ಹಣವನ್ನು ಬೇರೆಯಾಗಿರಿಸಬೇಕಾ
ಗುತ್ತದೆ. ಖರ್ಚಿನ ಬಾಬಿನಲ್ಲಿ ರಾಷ್ಟ್ರವು ಬಹಳ ತೊಂದರೆ ಮಾಡಿ
ಕೊಂಡು ಕೆಲವು ದಂಡನ್ನು ಕಾದಿಡಬೇಕಾಗುತ್ತದೆ. ಬಾಲ್ಯದಿಂದ
ವ್ಯಾಖ್ಯಾತವು ಕಷ್ಟ ಪಟ್ಟು ಅನೇಕ ವಿಷಯಗಳನ್ನು ಕಲಿತಿರಬೇಕಾ
ಗುತ್ತದೆ. ಕೂತ, ನಿಂತಲ್ಲಿ, ಮಲಗಿದಲ್ಲಿ ವಿಚಾರಮಾಡಿ ಮಾಡಿ
ಲೇಖಕನು ವಿವೇಚನಶಕ್ತಿಯನ್ನು ಸಂಗ್ರಹಿಸಬೇಕಾಗುತ್ತದೆ. ದಿನಾಲು
ಹಲವು ಪ್ರಕಾರದ ಅಂಗಸಾಧನ ಮಾಡಿ ಮಾಡಿ ಜಟ್ಟಿಯು ಸಾಮರ್ಥ್ಯ
ವನ್ನು ಸಂಚಯಗೊಳಿಸಿಕೊಂಡಿರಬೇಕಾಗುತ್ತದೆ. ದಿನಾಲು ತುತ್ತು
ತುತ್ತು ಕಡ್ಮಿಮಾಡಿ ಅನ್ನವನ್ನುಂಡು ಪಚನಶಕ್ತಿಯನ್ನು ಬೆಳೆಸಿರ
ಬೇಕಾಗುತ್ತದೆ .
" ಇಟ್ಟು ಒಳಿಸು” ಎಂಬ ನಾಣ್ಣುಡಿಯ ಗರ್ಭಿತಾರ್ಧವಾದರೂ
ಸಾಮರ್ಥ್ಯಸಂಚಯಗೊಳಿಸು ಎಂದಿರುವದು. ಮೇಲಿನ ಸಾಮರ್ಥ್ಯ
ಸಂಚಯದ ನಿಯಮವು ರೋಗಿಗಳಿಗೂ ಹತ್ತುವದು. ಮೊದಲಿನಿಂದ
ನಿಯಮಿತವಾಗಿ ಉಣ್ಣುತ್ತ, ಯೋಗ್ಯವಾಗಿ ವಿಶ್ರಾಂತಿಯನ್ನು
ಹೊಂದುತ್ತ ಬಂದಿದ್ದರೆ ಬೇನೆ ಬರುವ ಸಂಭವವಿದ್ದಿಲ್ಲ. ಒಂದು
ವೇಳೆ ಸಾಧಾರಣಬೇನೆಬಂದರೂ ದೇಹವು ನೈಸರ್ಗಿಕಧರ್ಮದಂತೆ
೫೯------------------------------------------------------------
ಬೇನೆಯಿಂದ ತೀವ್ರವೇ ಮುಕ್ತವಾಗುತ್ತಿತ್ತು. ಆದರೆ ರೋಗಿಯು
ಉಣ್ಣು ತಿನ್ನುವದರಲ್ಲಿ ಮಿತಿಯನ್ನಿಡದೆ ತನ್ನ ಪಾಚಕಶಕ್ತಿಗೆ ಹರಿಯ
ದಷ್ಟು ಅನ್ನವನ್ನು ಪ್ರತಿನಿತ್ಯ ಮೂರು ಮೂರು ಸಾರೆ ಉಣ್ಣುವದ
ರಿಂದ ಪಚನಶಕ್ತಿಯು ಕೆಟ್ಟು ಹೋಗಿ ಕಾಯಮರೋಗಗಳ ಬೀಡಾ
ರಕ್ಕೆ ಅವನ ದೇಹವು ತಕ್ಕದ್ದಾಗುವದು. ಉಣಿಸು-ತಿನಿಸುಗಳಂತೆ
ವಿಶ್ರಾಂತಿಯನ್ನಾದರೂ ರೋಗಿಯು ಮಿತಿಯಿಲ್ಲದೆ ತಕ್ಕೊಳ್ಳುವನು.
ಅದರಿಂದಲೂ ದೇಹದ ಅಸ್ವಸ್ಥತೆಗೆ ಅನುವುದೊರೆಯುವದು. ದೃಢ
ಕಾಯನಾಗ ಬಯಸುವವನು ಜಠರವು ಪಚಿಸಬಹುದಾದ ಅನ್ನಕ್ಕಿಂತ
ತುತ್ತು ಕಡಿಮೆ ಉಣ್ಣುವ ಪರಿಪಾರವಿಡಬೇಕು. ಹಾಗು ಬೇಸರ
ಬಾರದಷ್ಟು ವಿಶ್ರಾಂತಿಯನ್ನು ಅನುಭೋಗಿಸುತ್ತಿರಬೇಕು. ಅಂದರೆ
ಇವುಗಳಿಂದ ಒಂದುತರದ ಸಾಮರ್ಥ್ಯಸಂಚಯವಾಗಿ ಪ್ರಕೃತಿಯು
ನಿರೋಗವಾಗುವದು.
ವೆಲಿಂಗ್ಟನ್ನನ್ನು ಯುದ್ಧ ನೈಪುಣ್ಯದಿಂದಾಗಲಿ, ಸಾಮರ್ಥ್ಯಶ್ರೇಷ್ಠ
ದಿಂದಾಗಲಿ ವಾಟರ್ಲೂ ಕಾಳಗದಲ್ಲಿ ರಣಧುರಂಧರ ನೆಪೋಲಿ
ಯನ್ನ ಬೋನಾಪಾರ್ಟನನ್ನು ಗೆಲ್ಲಲಿಲ್ಲ; ಆದರೆ ಒಳ್ಳೇ ಹೊತ್ತಿಗೆ
ದೊರೆತ ೩೦ ಸಾವಿರ ಕಾದಿಟ್ಟದಂಡಿನ ಸಹಾಯದಿಂದ ಅವನು ನೆಪೋ
ಲಿಯನ್ನನನ್ನು ಗೆದ್ದನೆಂದು ಇತಿಹಾಸದಲ್ಲಿ ಬರೆದದೆ. ಇದರಂತೆ ಸದಾ
ಶಿವರಾಯನಿಗೆ ಮಲ್ಲಾರರಾವ ಹೋಳಕರನ ಕಾದಿಟ್ಟದಂಡು ಹೊತ್ತಿ
ಗೆಸರಿಯಾಗಿ ಅನುವಾಗದ್ದರಿಂದ ಪಾನಿಪತ್ತದಲ್ಲಿ ಮರಾಟರ ಭಯಂ
ಕರ ಪರಾಜಯವಾಯಿತು. ಸಾಮರ್ಥ್ಯಸಂಚಯಮಾಡದಿದ್ದವನ
ಪರಾಜಯಗಳೆಲ್ಲ ಇದೇ ಪ್ರಕಾರದವಾಗುವವು.
ಕೈ. ನಾಮದಾರ ಗೋಖಲೆಯವರು ವಕ್ತೃತ್ವಸಾಮರ್ಥ್ಯವನ್ನು
ಬೆಳೆಸಿಕೊಳ್ಳುವದಕ್ಕಾಗಿ ಎಷ್ಟೋ ಉತ್ತಮ ಗ್ರಂಧಗಳನ್ನು ಬಾಯಿ
ಪಾಠಮಾಡಿದ್ದರು. ಅವರು ಈ ಭಾಷಾಸಂಚಯದಿಂದ ಲಾರ್ಡಕರ
ನ್ನ ಹಾಗು ಲಾರ್ಡಮಿಂಟೋಸಾಹೇಬರಂಧ ಅತ್ಯಂತ ಅಭಿಮಾನಿಗಳ
ಬಾಯಿಗಳನ್ನು ಕಟ್ಟಿ ಬಿಡುತ್ತಿದ್ದರು. ಗೋಖಲೆಯವರ ವಾಕ್‌ಸಾ
ಮರ್ಥ್ಯವು ಹ್ಯಾಗೆ ಹ್ಯಾಗೆ ಬೆಳೆಯಹತ್ತಿತೋ ಹಾಗೆ ಹಾಗೆ ಅವರ
೬೦---------------------------------------------------------------
ವಕ್ತೃತ್ವಕ್ಕೆ ಅಪೂರ್ವತೆಯು ಪ್ರಾಪ್ತವಾಗುತ್ತಿತ್ತು. ಮತ್ತು ಕಡೆ
ಕಡೆಗೆ ಗೋಖಲೆಯವರೆಂದರೆ ಭೂಲೋಕದ ಬ್ರಹಸ್ಪತಿಯೇ ಆಗಿ
ಹೋದರು.
ಕೋರ್ಟುಗಳಲ್ಲಿ ನಡೆಯುವ ಎಷ್ಟೋ ಖಟ್ಲೆಗಳನ್ನು ಹೊಸಬ
ರಾದ ವಕೀಲರು ನಡೆಯಿಸಲಾರರೆಂತಲ್ಲ; ಆದರೆ ಕೋರ್ಟಿನ ಕೆಲಸ
ಗಳಲ್ಲಿ ತೀರ ಅನನುಭವಿಕರಾದ ಇವರ ಕಡೆಗೆ ಪಕ್ಷಗಾರರು ಮುದ್ದಾ
ಮಾಗಿ ಹೋಗುವದಿಲ್ಲ; ಯಾಕಂದರೆ ಖಟ್ಲೆ ಕೆಡಲಿಕ್ಕೆ ಈ ಅಪಕ್ವ
ವಕೀಲನೊಬ್ಬನು ಮತ್ತೆ ಎಲ್ಲಿ ಕಾರಣನಾಗುವನೋ ಎಂದು ಅವರು
ತಿಳಿಯುವರು.
ಯಾವದಾದರೊಂದು ಯಂತ್ರವನ್ನು ಮಾಡುವವನಿಗೆ ೫೦ ರೂ.
ಬತ್ತೀಸು ಕೊಡುವೆನೆಂದೂ, ಯಾವದಾದರೊಂದು ಯಂತ್ರವನ್ನು ಮಾ
ಡಕಲಿಯುವವನಿಗೆ ೩೦೦೦ ರೂ, ಬತ್ತೀಸು ಕೊಡುವೆನೆಂದೂ ಒಬ್ಬ
ಪ್ರಸಿದ್ಧ ಯಂತ್ರಕಲಾವಿಶಾರದನು ಪ್ರಸಿದ್ಧಿಸಿದ್ದನಂತೆ, ಇದರಲ್ಲಿ ಅವನು
ಕೆಲಸಮಾಡುವ ಮನುಷ್ಯನಿಗಿಂತ ಕೆಲಸ ಕಲಿಯುವ ಮನುಷ್ಯನಿಗೆ
ಹೆಚ್ಚು ಇನಾಮು ಕೊಡಲಿಚ್ಛಿಸಿದ್ದನ್ನು ಕೇಳಿ ಸಾಮಾನ್ಯರು ಚಕಿತ
ರಾಗಬಹುದಾಗಿದೆ. ಆದರೆ ಅವನು ಹಾಗೆಬತ್ತೀಸು ಕೊಡುವದು ಯೋ
ಗ್ಯವೇ ಆಗಿರುವದು. ಯಾಕಂದರೆ ಯಂತ್ರಪ್ರವೀಣನಿಗೆ ಹೊಸಯಂತ್ರ
ಮಾಡುವದಕ್ಕೆ ಒಂದೆರಡು ದಿವಸಗಳಾದರೆ ಸಾಕು ಆದರೆ ಅದೇ ಯಂತ್ರ
ಮಾಡಕಲಿಯುವವನು ೪-೬ ವರ್ಷ ಒಂದೇಸವನೆ ಲಕ್ಷಗೊಟ್ಟು ಶಿಕ್ಷಣ
ಹೊಂದಬೇಕಾಗುತ್ತದೆ. ಆ ಮಾನದಿಂದ ಅವನಿಗೆ ಬಕ್ಷೀಸು ಹೆಚ್ಚು
ಸಿಗುವದು ಅವಶ್ಯವಾಗಿದೆ. ಕಲಿಯುವವನು ಸಾಮರ್ಥ್ಯಸಂಚಯ
ಗೊಳಿಸಲಿಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಮಾಡುವವನು
ತನ್ನಲ್ಲಿದ್ದ ಸಾಮರ್ಥ್ಯದ ಲೇಶಾಂಶವನ್ನು ಖರ್ಚು ಮಾಡಿ ಯಂತ್ರ
ತಯಾರಿಸುವನು.
ತಾಸೆರಡು ತಾಸಿನ ಕೆಲಸಕ್ಕಾಗಿ ಪ್ರಸಿದ್ಧ ಡಾಕ್ಟರರೂ, ಬ್ಯಾರಿ
ಸ್ಟರರೂ ಮಿತಿಮೀರಿ ಪ್ರತಿಫಲವನ್ನು ಕೇಳುವದನ್ನು ನೋಡಿದರೆ ಆಶ್ಚ
೬೧----------------------------------------------------------------
ರ್ಯವಾಗುವದು. ಆದರೆ ಅವರು ಆ ಕಲೆಯಲ್ಲಿ ಪ್ರವೀಣತೆಯನ್ನು
ಪಡೆದು ಪ್ರಸಿದ್ಧಿಗೆ ಬರಲಿಕ್ಕೆ ಅವರಿಗೆ ಹತ್ತಿದ ಕಾಲ, ಪರಿಶ್ರಮಗ
ಳನ್ನು ಕುರಿತು ಆಲೋಚಿಸಿದರೆ, ಅವರು ಬೇಡುವ ಪ್ರತಿಫಲವು
ಯೋಗ್ಯವೆಂದು ತಿಳಿಯಬರುವದು. ಕಡಿಮೆ ಪ್ರತಿಫಲತಕ್ಕೊಂಡು
ಕೆಲಸಮಾಡಲಿಕ್ಕೆ ಸಿದ್ಧರಿದ್ದ ಡಾಕ್ಟರ-ಬ್ಯಾರಿಸ್ಟರರಿಗೂ ಇವರಿಗೂ
ಆಯಾ ಕಲೆಗಳ ಜ್ಞಾನದಲ್ಲಿ ಏನೂ ಹೆಚ್ಚು ಕಡಿಮೆಯಿರುವದಿಲ್ಲ :
ಆದರೆ ಪ್ರಸಿದ್ಧಿ ಪಡೆಯಲಿಕ್ಕೆ ಅವರು ತಪಗಟ್ಟಲೆ ತಮ್ಮ ಉದ್ಯೋಗ
ವನ್ನು ಒಳ್ಳೆ ಪರಿಶ್ರಮದಿಂದ ಸಾಗಿಸಿರುವದರಿಂದ, ಅವರಲ್ಲಿ ಆ
ಉದ್ಯೋಗದ ಅನುಭವವು ಹೆಚ್ಚಾಗಿರುತ್ತದೆ. ಅವರ ಅನುಭವವಿಶೇ
ಷಕ್ಕಾಗಿಯೇ-ಸಾಮರ್ಧ್ಯಸಂಚಯಕ್ಕಾಗಿಯೇ ಅವರಿಗೆ ಹೆಚ್ಚು ಪ್ರತಿ
ಫಲವು ದೊರೆಯುವದು.
ನಾಮದಾರ ರೊದ್ದರವರು ಇಲ್ಲವೆ ರಾ. ಬ. ಅರಟಾಳರವರು
ಬಿ. ಏ. ಇಲ್ಲವೆ ಎಂ. ಏ. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವದಿಲ್ಲ.
ಅವರು ಬರೇ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆ ಪಾಸಾಗಿದ್ದರೂ, ದೊಡ್ಡ
ದೊಡ್ಡ ಹುದ್ದೆಯ ಅತ್ಯಂತ ಜವಾಬುದಾರಿಯ ಕೆಲಸಗಳಿಗೆ ಅರ್ಹ
ರಾಗಿದ್ದರು. ಅದೇ ಈಗ ಪಾಸಾದ ಎಂ ಏ. ಇಲ್ಲವೆ ಬಿ. ಏ ಯವ
ರಿಗೆ ನಾಮದಾರ ರೊದರಂಧ ಜವಾಬುದಾರಿಯ ಕೆಲಸಗಳೂ,
ಹುದ್ದೆಯೂ ಒಮ್ಮೆಲೆ ಸಿಗಲಾರವು. ಅವರು ಮೂವತ್ತು ವರ್ಷಗ
ಟ್ಟಲೆ ತಮ್ಮ ಕೆಲಸವನ್ನು ಏಕಪ್ರಕಾರವಾಗಿ ಮಾಡಿ ಪ್ರಗತಿಯನ್ನು
ಹೊಂದಿದ್ದರಿಂದ, ಅವರಿಗೆ ಈಗಿನ ಮಹತ್ವವು ಪ್ರಾಪ್ತವಾಗಿದೆ.
ಕಾವ್ಯಾದಿಗಳ ವ್ಯುತ್ಪತ್ತಿ ಮಾಡಿಕೊಳ್ಳುವಾಗ ಅಮರ
ಕೋಶ, ಸ್ತೋತ್ರರತ್ನಾಕರ, ವ್ಯಾಕರಣಗಳಸೂತ್ರ ಮೊದಲಾದವು
ಗಳನ್ನು ಪಾರಮಾಡುವದಕ್ಕೆ ಎಷ್ಟೋ ದಿವಸಗಳನ್ನು ಕಳೆಯಬೇಕಾ
ಗುತ್ತದೆ. ಅಂಕಗಣಿತ ಬೀಜಗಣಿತಗಳನ್ನು ಕಲಿಯಬೇಕಾದರೆ
ಅಂಕಿ, ಮೊಗ್ಗೆ, ಕಾಲು, ಅರ್ಧ, ಮುಕ್ಕಾಲು ಇತ್ಯಾದಿಗಳನ್ನು
ಕಲಿಯುವದಕ್ಕೂ, ವರ್ಗಮೂಲ, ಘನಮೂಲ, ಮಹತ್ವಮಾಪನ
೬೨----------------------------------------------------------
ಮೊದಲಾದವುಗಳ ನಿಯಮಗಳನ್ನು ಪಾರಮಾಡುವದಕ್ಕೂ ಬಹು ದಿವ
ಸಗಳನ್ನು ಕಳೆಯಬೇಕಾಗುತ್ತದೆ. ಮೊದಲುಮಾಮಲತಿಯನ್ನು ಸಂಪಾ
ದಿಸಬೇಕಾದರೆ ಬಾರನಿಶಿಕಾರಕೂನನ ಕೆಲಸವನ್ನು ಎಷ್ಟೋ ದಿವಸಗ
ಳವರೆಗೆ ಮಾಡಬೇಕಾಗುತ್ತಿತ್ತು. ಹೀಗೆ ಆಯಾಕೆಲಸಕಲಿಯುವದಕ್ಕಾಗಿ
ಕಳೆಯುವ ವೇಳೆಯ, ಪಡುವಶ್ರಮವೂ ವ್ಯರ್ಥವಾಗುವದಿಲ್ಲ.
ಕಾಲಹರಣದಪರಿಶ್ರಮಮಾಡಿದಂತಾಗುವದಿಲ್ಲ. ಇವುಗಳಿಂದ ಕೆಲಸ
ಕಲಿಯುವವನಲ್ಲಿ ಆಯಾ ವಿಷಯದ ಸಾಮರ್ಥ್ಯ ಸಂಚಯವು
ಬೆಳೆಯುವದು.
ಸಾಮರ್ಥ್ಯಸಂಚಯದಿಂದ ಅನಿತ್ಯವಾದ ವ್ಯವಹಾರಗಳ ಜ್ಞಾನ
ವಾಗುವದು. ಹೀಗೆ ಅನಿತ್ಯವ್ಯವಹಾರಗಳ ಜ್ಞಾನ ನವಾದ ಹೊರತು
ಖರೇ ಪ್ರಗತಿಯಾಯಿತೆಂದು ಹೇಳಲಿಕ್ಕೆ ಬರುವದಿಲ್ಲ. ಪ್ರಗತಿಪರನಿಗೆ
ಸಾಮರ್ಥ್ಯಸಂಚಯವೇ ಬಂಡವಾಳವು. ಇದೇ ಅವನ ತಾರಕ
ತರುಣೋಪಾಯವು.
ರೈತನು ಭೂಮಿಯನ್ನು ರೆಂಟಿಹೊಡೆದು ಹರಗಿ ತಯಾರುಮಾ
ಡಿಟ್ಟುಕೊಂಡು ಬಿತ್ತುವದಕ್ಕಾಗಿ ಮಳೆಯ ಹಾದಿಯನ್ನು ನೋಡುತ್ತ
ಕೂಡ್ರುವಂತೆ, ಪ್ರಗತಿಯ ಇಚ್ಛೆಯುಳ್ಳವನು ಸಾಮರ್ಧ್ಯಸಂಚಯ
ಗೊಳಿಸಿಕೊಂಡು ದೃಢನಿಶ್ಚಯದಿಂದ ಕೆಲಸಮಾಡಿ ಯಶಃಪ್ರಾಪ್ತಿಯ
ಹಾದಿಯ ಕಾಯಬೇಕು. ಯಾರಲ್ಲಿ ಯೋಗ್ಯ ಸಾಮರ್ಧ್ಯದ ಸಂಚ
ಯವಾಗಿರುವದಿಲ್ಲವೋ ಅವರಿಗೆ ಯಶಃಪ್ರಾಪ್ತಿಯಾಗಲಾರದು.
===================
೯ನೆಯ ಖಂಡ ನಿರಾಶಾಮಯ ಆಶಾ.
"ಆಶಾಃ ಆಶಾಃ ಪರಮಂ ದುಃಖಂ ನಿರಾಶಾಃ ಪರಮಂ ಸುಖಂ"
ಎಂಬ ವಾಕ್ಯವನ್ನು ಸತ್ಯವಾಗಿ ತೋರ್ಪಡಿಸಲಿಕ್ಕೆ ಪ್ರಗತಿಪರಮನು
ಏನು ಪ್ರಯತ್ನಿಸಬೇಕು. ಈ ಶ್ಲೋಕವು ಅನ್ನಲಿಕ್ಕೆ ಅತ್ಯಂತ
ಸುಲಭವಾಗಿರುವಂತೆ, ಆಚರಣೆಯಲ್ಲಿ ತರಲಿಕ್ಕೆ ಇದು ಅತ್ಯಂತ ಕಠಿ
ಣವಾಗಿರುವದು ಮಹಾರಾಜನಿಗೂ ಆಶೆಬಿಟ್ಟಿಲ್ಲ ; ರಾಜನಿಗೂ
೬೩-------------------------------------------------------------
ಆಶೆಬಿಟ್ಟಿಲ್ಲ; ಲೌಕಿಕನಿಗೂ ಆಶೆಬಿಟ್ಟಿಲ್ಲ; ಪಾರಮಾರ್ಥಿಕನಿಗೂ
ಆಶೆಬಿಟ್ಟಿಲ್ಲ ; ಕೃಪಣನಿಗೂ ಆಶೆಬಿಟ್ಟಿಲ್ಲ. ಅತ್ಯಂತ ಉದಾರನಿಗೂ
ಆಶೆಬಿಟ್ಟಲ್ಲ. ಇಷ್ಟೇ ಅಲ್ಲ ಜಗತ್ತಿನೊಳಗಿನ ಪ್ರತಿಯೊಂದು
ಪ್ರಾಣಿಯು ಈ ಘೋರವಾದ ಆಶಾಸೂತ್ರದಿಂದ ಬಂಧಿ
ಸಲ್ಪಟ್ಟಿರುವದು.
ಈ ವಿವರಣವನ್ನು ಓದಿ ಕೆಲವರು ಅನುಮಾನಪಡಬಹುದಾಗಿದೆ.
ಪರಮಯೋಗಿಗಳೂ ಪೂಜ್ಯಸನ್ಯಾಸಿಗಳೂ ಇನ್ನೂ ಅನೇಕರೂ
ಆಶಾರಹಿತರೆಂದು ಗ್ರಂಥಾಂತರದಲ್ಲಿ ಬರೆದಿರಲು ಇವರು ಹೀಗೆ
ಎಲ್ಲರೂ ಆಶೋತ್ರಿಗಳೇ ಎಂದು ಬರೆಯುವದಕ್ಕೆ ಆಧಾರವೇನು?
ಎಂದು ಹೇಳಬಹುದಾಗಿದೆ ಅವರ ಪ್ರಶ್ನೆಗೆ ಉತ್ತರವಿಷ್ಟೇ; ಆಶಾ
ರಹಿತನಾದವನು ಲೋಕದಲ್ಲಿ ಯಾರೂ ಇಲ್ಲ. ಆದರೆ ನಮ್ಮ ಆಶೆಗೂ
ದೊಡ್ಡವರ ಆಶೆಗೂ ಭೇದ ಮಾತ್ರವಿರುವುದು. ನಾವು ಪ್ರತಿಯೊಂದು
ವಿಷಯಕ್ಕೆ ಹೆಚ್ಚಾದ ಆಶೆಯನ್ನು ತೋರಿಸಿ, ಆಶೆಗಳು ಪೂರ್ಣವಾಗ
ದಿರಲು, ಕಡೆಗೆ ಆಶಾಮಯವಾದ ನಿರಾಶೆಯುಳ್ಳ ನಾವುನರಿಯು ತಿನ್ನ
ಲಿಕ್ಕೆ ದ್ರಾಕ್ಷಿಗಳು ಸಿಗದಾಗಲು ಹುಳಿದಾಕ್ಷಿಗಳು ಎಂದು ಭಾವಿಸಿ ನಿರಾ
ಶೆಪಟ್ಟಂತೆ ಆಗುವೆವು. ಆದರೆ ದೊಡ್ಡವರು, ಜ್ಞಾನಿಗಳು ಯಾತರ
ಲ್ಲಿಯೂ ಆಸಕ್ತಿಯನ್ನಿಡದೆ ಆಸೆಯನ್ನಿಡದೆ ಹಿಡಿದ ಕೆಲಸಗಳನ್ನು
“ಕರ್ಮವಾಧಿಕಾರಸ್ತೇ ಮಾಫಲೇಷು ಕದಾಚನ” ಎಂಬಂತೆ
ಮಾಡಿ, ನಿರಾಶಾಮಯವಾದ ಆಸೆಯಿಂದ ಕಡೆಗೆ ಶ್ರೇಷ್ಠವಾದ ಫಲ
ವನ್ನು ಪಡೆಯುವರು. ಇದೇ ನಮ್ಮ ಹಾಗು ದೊಡ್ಡವರ ಆಶೆಯ
ಭೇದವಾಗಿದ್ದರೂ, ಫಲದಲ್ಲಿ ಎಲ್ಲರೂ ಒಂದೇ ವಸ್ತುವನ್ನು
ಹೊಂದುವೆವಾದ್ದರಿಂದ, ಎಲ್ಲರೂ ಆಶೋತ್ರಿಗಳೇ ಎಂದು ನಮ್ಮ
ಮತವದೆ.
ಪ್ರಗತಿಹೊಂದುವ ಮನುಷ್ಯನಲ್ಲಿ ಆಶೆಯು ಅವಶ್ಯವಾಗಿರಬೇ
ಕಾಗುವದು. ಆದರೆ ದುರಾಶೆಯು ಮಾತ್ರ ಸರ್ವಧಾ ಇರಕೂಡದು.
ಪ್ರಾಪಂಚಿಕರಾದ ನಾವು ಆಶಾಪಾಶದಿಂದಲ್ಲದೆ ಬೇರೆ ಮತ್ತಾವದರಿಂ
೬೪-------------------------------------------------------------
ದಲೂ ಕಾರ್ಯಾಸಕ್ತರಾಗಲಾರೆವು ಯೋಗ್ಯ ಆಶೆಯು ಮನುಷ್ಯ
ನಿಗೆ ತಾರಕವಾಗಿಯೂ, ದುರಾಶೆಯು ಮಾರಕವಾಗಿಯೂ ಪರಿಣಮಿ
ಸುವದು. ಯೋಗ್ಯ ಆಶೆಯಂದರೇ ನಿರಾಶಾಮಯಆಶೆಯು, ಕೆಲಸ
ವನ್ನು ಮನಮುಟ್ಟಿ ಮಾಡುವವನು ತಾನಾಗಿ ಹೆಚ್ಚು ಪಗಾರವನ್ನು
ಕೇಳಬೇಕಾಗಿಲ್ಲ. ಕಾರಖಾನದಾರನೇ ಅವನ ಕಲಸಕ್ಕೆ ಮೆಚ್ಚಿ
ಹೆಚ್ಚು ಹೆಚ್ಚು ಪ್ರತಿಫಲವನ್ನು ಕೊಡುತ್ತಹೋಗುತ್ತಾನೆ. ಅದರೆ
ಆಶೆಬುರುಕನು ತನಗೆ ಪಗಾರವು ಹೆಚ್ಚಿಗೆ ದೊರಯಬೇಕೆಂಬ ಆಶೆ
ಯಿಂದ ಯಜಮಾನನೆದುರಿಗೆ ಒಳ್ಳೇ ದುಡಿಯುವವನಂತೆ ನಟಿಸು
ವನು, ಯಜಮಾನನು ಮೊದಮೊದಲು ಅವನ ಆಶೆಗೊಳಪಟ್ಟರೂ
ಪರಿಣಾಮದಲ್ಲಿ ನಿಜಸ್ವರೂಪವು ಅವನಿಗೆ ಗೊತ್ತಾಗದೆ ಇರದು.
ಒಮ್ಮನಸ್ಸಿನಿಂದ ಯೋಗ್ಯ ಕೆಲಸಮಾಡುವ ಮನುಷ್ಯನಿಗೆ ಪ್ರತಿಫಲವು
ದೊರೆಯುವದು ಸಿದ್ಧಾಂತವು. ಆಶೆಮಾಡಿದ ಫಲಗಳು ಕಡಿಮೆ
ಯೋಗ್ಯತೆಯವೂ ಅಶಮಾಡದಿದ್ದ ಫಲಗಳು ಅಮೂಲ್ಯಯೋಗ್ಯತೆ
ಯವೂ ಆಗಿರುತ್ತವೆ. ಇದಕ್ಕೆ ಉದಾಹರಣೆಯು-ನೌಕರನು ಆಶೆ
ಗಾಗಿ ಕೆಲಸಮಾಡುವದರಿಂದ ಕಡತನಕ ನೌಕರಿಯ ಕಡಿಮೆಯೋಗ್ಯ
ತೆಯವನಾಗುವನು. ಎಷ್ಟು ಪಗಾರಿಗಳಿಸಿದರೂ ಅವನ ವೃತ್ತಿಯು
ಆಶಾವೃತ್ತಿಯದಾಗಿರುವದರಿಂದ ಅವನ ಯೋಗ್ಯತೆಯು ಕಡಿಮೆಯಾ
ಗುವದೇ ಸರಿ. ಆದರೆ ಅದೇ ಒಬ್ಬ ಸಾಧುವು ಇಲ್ಲವೆ ಸನ್ಯಾಸಿಯು
ಮಾಡುವ ಕೆಲಸವು (ಇವರು ಪ್ರತ್ಯಕ್ಷ ಕಲಸಮಾಡುವ ಅವಶ್ಯಕ
ತೆಯೇ ಇಲ್ಲ. ಇವರ ನಿತ್ಯದ ನಡಾವಳಿಗಳ ವೃತ್ತಿಗಳೇ ಇವರ
ಪೂಜ್ಯಕುತಿಯ ದ್ಯೋತಕಗಳಾಗಿವೆ.) ಅತ್ಯಂತ ಶ್ರೇಷ್ಠವಾಗಿದ್ದು
ನಿರಾಶೆಯಿಂದ ಮಾಡಲ್ಪಡುವದರಿಂದ ಅವರಿಗೆ ಬೇಕಾದಷ್ಟು ಧನ-
ಧಾನ್ಯ ಮೊದಲಾದ ಮೂಲ್ಯಪದಾರ್ಧಗಳು ದೊರೆಯುವವಲ್ಲದೆ,
ಅಮೂಲ್ಯವಾದ ಕೀರ್ತಿಯು ಅವರನ್ನು ಸೇವಿಸಲಕ್ಕೆ ತತ್ವರವಾಗು
ವದು. ಆದ್ದರಿಂದ ಪ್ರಾಪಂಚಿಕನೇ ಆಗಲಿ, ಪಾರಮಾರ್ಧಿಕನೇ ಆಗಲಿ
ಸ್ವತಂತ್ರ ಧೈಯದ ಪ್ರಗತಿಮಾರ್ಗವನ್ನು ಗೊತ್ತು ಮಾಡಿಕೊಂಡು,
೬೫------------------------------------------------------------------
ದೃಢನಿಶ್ಚಯಾದಿ ಪ್ರಗತಿವರ್ಧಕಗುಣಗಳಿಂದ ನಿರಾಶಾಮಯವಾದ
ಆಶೆಯಿಂದ ದುಡಿಯಹತ್ತಿದರೆ, ಅವನಿಗೆ ಇಹದಲ್ಲಿಯ ಎಲ್ಲ ಸುಖ
ಗಳೂ ಲಭಿಸುವವಲ್ಲದೆ ಪರದಲ್ಲಿಗತಿಯ ದೊರಕುವದು.
“ಆಶಾಬಿಡಬೇಕು, ಸಂಸಾರವನ್ನು ಆಶಾರಹಿತವಾಗಿ ಮಾಡ
ಬೇಕು” ಎಂದು ಬೋಧಿಸುವ ದೊಡ್ಡವರ ಬೋಧದ ತಾತ್ಪರ್ಯವು
ನಿರಾಶಾಮಯವಾದ ಆಶೆಯನ್ನು ಧರಿಸಿ ಸಂಸಾರಸಾಗಿಸಬೇಕು ಎಂದಿ
ರುವುದು. ಮನುಷ್ಯನು ಆಶಾಬದ್ಧನಾಗಲಿಕ್ಕೆ ವ್ಯಾಮೋಹವೇ
ಕಾರಣವಾಗುತ್ತದೆ. ವ್ಯಾಮೋಹವೆಂದರೆ ನಿಜವಾದ ಮೋಹವಲ್ಲ
ಭಾಸಮಯವಾದ ಮೋಹವು. ಯಾವದಾದರೊಂದು ಪದಾರ್ಧವನ್ನು
ಇಷ್ಟಾನಿಷ್ಟಾ ಸಂಗತಿಗಳ ದ್ವಾರಾ ಪರೀಕ್ಷಿಸದೆ ಕೇವಲ ಆದರ ತೋರಿ
ಕೆಯ ಗುಣಕ್ಕೆ ಮನಜೋಲುವದು ವ್ಯಾಮೋಹದ ಲಕ್ಷಣವು. ಇಂಥ
ವ್ಯಾಮೋಹಗ್ರಸ್ತವಸ್ತುವಿಗಾಗಿ ನಾವು ಆಶೆಪಡಹತ್ತುತ್ತೇವೆ. ಈ
ಆಶೆಯೇ ದುರಾಶೆಯಾಗುವದು.
ಪತಂಗವು ದೀಪದ ದಾಹಕ ಗುಣವನ್ನು ತಿಳಿಯದೆ, ಕೇವಲ
ಅದರ ಪ್ರಕಾಶಕ್ಕೆ ಮೆಚ್ಚಿ ಆಲಿಂಗಿಸಹೋಗಿ ಸುಟ್ಟು ಹೋಗುವದೂ
ಕಾಮುಕನು ಪರಸ್ತ್ರೀಯನ್ನೂ ಜಾರಿಣಿಯನ್ನೂ ಸಂಭೋಗಿಸುವ
ಮೋಹಕ್ಕೆ ಬಲಿಬಿದ್ದು ಅನರ್ಧಕ್ಕೆ ಒಳಗಾಗುವದು, ವ್ಯಾಮೋಹ
ದುರಾಶೆಗಳ ಉದಾಹರಣಗಳಾಗಿವೆ.
ಆಶಾಗ್ರಸ್ತನಾಗಲಿಕೆ ವ್ಯಾಮೋಹದಂತೆ ದುರಭಿಮಾನವೂ
ಕಾರಣವಾಗಿರುವದು. ಯಾವನೊಬ್ಬ ಮನುಷ್ಯನಿಗೂ ನಮಗೂ
ಸ್ನೇಹರೂಪವಾದ ಅಭಿಮಾನ ಬೆಳೆಯಬೇಕಾದರೆ ನಾವು ಅವನೊಡನೆ
ಸಂಪೂರ್ಣಸಲಿಗೆಯಿಂದ ನಡೆದು, ಅವನ ಗುಣದೋಷಗಳು ತಿಳಿದನಂ
ತರ ನಾವಿಬ್ಬರೂ ಸಮಾನಧರ್ಮದವರಾದರೆ ಮಾತ್ರ ನಾವು
ಪರಸ್ಪರಾಭಿಮಾನಿಗಳಾಗುವೆವು. ಹೀಗೆ ಆಗದೆ ಕಾರ್ಯ ಸಾಧನ
ಕ್ಕಾಗಿ ಒಬ್ಬನು ನಮ್ಮನ್ನು ಹೆಚ್ಚಾಗಿ ಹೊಗಳಿದ ಮಾತ್ರದಿಂದ
ಕೇಳಿದಷ್ಟು ದ್ರವ್ಯಸಹಾಯಮಾಡಿದಮಾತ್ರದಿಂದ ನಾವು ಅವನ ನಿಜ
ವಾದ ಗುಣಗಳನ್ನು ಪರೀಕ್ಷಿಸದೆ ಅವನಲ್ಲಿಡುವ ಅಭಿಮಾನವು ನಿಜ
೬೬---------------------------------------------------------------
ವಾದ ಅಭಿಮಾನವೆನಿಸುವದಿಲ್ಲ, ಈ ವೃಥಾಭಿಮಾನಕ್ಕಾಗಿ ದುರಾಶೆ
ಪಡಬೇಕಾಗುತ್ತದೆ. ಆದ್ದರಿಂದ ಪ್ರಗತಿಗಾಮಿಯು ದುರಾಶಾ,
ವ್ಯಾಮೋಹ, ವ್ಯಥಾಭಿಮಾನ, ದುರಭಿಮಾನ ಮೊದಲಾದ ಅವನತಿ
ಕಾರಕ ಗುಣಗಳನ್ನು ಸಂಗ್ರಹಿಸಬಾರದು.
===============
೧೦ ನೆಯ ಖಂಡ-ಉಪಹಾಸಗಳ ಉಪಯುಕ್ತತೆ,
"ಜ್ಯೂರಿಯವರು ಹ್ಯಾಗೇ ಅಭಿಪ್ರಾಯಪಟ್ಟಿದ್ದರೂ ನಾನು
ಸಂಪೂರ್ಣ ನಿರ್ದೋಷಿಯಾಗಿರುವೆನೆಂದು ನನ್ನ ಮನೋದೇವತೆಯು
ಈಗಲೂ ನನಗೆ ಹೇಳುತ್ತದೆ. ಸೃಷ್ಟಿಯ ಅಧಿಪತ್ಯದಲ್ಲಿ ಈ
ಕೋರ್ಟಿಗಿಂತ ಹೆಚ್ಚು ಅಧಿಕಾರವುಳ್ಳ ಪರಮೇಶ್ವರನ ನ್ಯಾಯಾ
ಸನವಿರುತ್ತದೆ. ನಾನು ಸ್ವತಂತ್ರನಾಗಿರುವದಕ್ಕಿಂತ ಕಷ್ಟನಷ್ಟಗ
ಳಲ್ಲಿರುವದರಿಂದ ನನ್ನ ಅಂಗೀಕೃತ ರಾಷ್ಟ್ರ ಕಾರ್ಯವು ಭರಭರಾ
ಟಿಗೆ ಬರಬೇಕೆಂತಲೇ ಈಶ್ವರೀಸಂಕೇತವಿರಬಹುದು !” ಎಂದು ಸನ್
೧೯೦೮ಇಸ್ವಿಯ ರಾಜದ್ರೋಹದ ಖಟ್ಟೆಯಲ್ಲಿ ಜಸ್ಟಿಸದಾವರ ಇವರು
ಆರುವರ್ಷಗಳ ಟಾಪುಶಿಕ್ಷೆಯನ್ನು ವಿಧಿಸಿದಾಗ ಲೋಕಮಾನ್ಯ ಟಿಳಕ
ರವರು ಕೋರ್ಟಿಗೆ ಉದ್ದೇಶಿಸಿ ಮಾತಾಡಿದರು. ಲೋಕಮಾನ್ಯರ
ಈ ಭಾಷಣವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾಗಿದೆ.
ಹಾಗು ಪ್ರಗತಿಪರನು ದಿನಾಲು ಪಾರಾಯಣಮಾಡಲಿಕ್ಕೆ ಅದು
ತಕ್ಕದ್ದಾಗಿದೆ.
ಉಪಹಾಸ, ಅಪಮಾನ, ವಿಟಂಬನೆ, ವಿಪರೀತಪರಿಸ್ಥಿತಿ, ಭಯಂ
ಕರದಾರಿದ್ರ ಮೊದಲಾದ ದುಃಖದಾಯಕಸ್ಥಿತಿಯಿಂದಲೇ ಎಷ್ಟೋ
ಜನರ ಪ್ರಗತಿಯಾಗಿ ಪ್ರಖ್ಯಾತರಾಗಿರುವರು. ಉಪಹಾಸ ಇಲ್ಲವೆ
ಅಪಮಾನವಾದಹೊರತು ಎಷ್ಟೋ ಜನರಿಗೆ ಪ್ರಗತಿಮಾರ್ಗವು ಗೋಚರ
ವಾಗುವದಿಲ್ಲ. ಅರ್ಜುನನಿಗೆ ಅಪಮಾನ-ಉಪಹಾಸಗಳು ಆದ
ಹೊರತು ಕಾರ್ಯಸೂರ್ತಿಯೇ ಆಗುತ್ತಿಲ್ಲವೆಂದು ಭಾರತ
ದಲ್ಲಿ ವರ್ಣಿಸಿದೆ. ಇದರಂತೆ ಅಪಮಾನವು ಕರ್ಣನಿಗೆ ಆದರೆ ಅವ
೬೭-----------------------------------------------------------
ನಿಗೆ ಕಾರ್ಯದಸ್ಫೂರ್ತಿಯಾಗದೆ ಅವನು ಕೇವಲ ಹೇಡಿಯಾಗುತ್ತಿ
ದನು, “ಭಾಪುರೆ ಕರ್ಣ” ಎಂದು ಉಬ್ಬಿಸಿದಾಗಲೇ ಅವನು ದೊಡ್ಡ
ದೊಡ್ಡ ಕಾರ್ಯಗಳನ್ನು ಮಾಡಿರುವನು. ಸ್ವಭಾವವೈಚಿತ್ರದಂತೆ
ಕೆಲವು ಜನರು ಉಪಹಾಸದಿಂದ ಪ್ರಗತಿಯನ್ನು ಹೊಂದುವಂತೆ, ಬೇರೆ
ಕೆಲವರು ಉತ್ತೇಜನದಿಂದ ಉನ್ನತಿಯನ್ನು ಹೊಂದುವರು. ಕೆಲವು
ಮಾನೀ ಸ್ವಭಾವದವರು ಸಾಧಾರಣ ಉಪವಾಸ-ಉತ್ತೇಜನಗಳಿಂದ
ಕಾರ್ಯಪ್ರವರ್ತರಾದರೆ, ಕೆಲವು ಮಡ್ಡ ಜನರು ಕಾರ್ಯ ಪ್ರವೃತ್ತ
ರಾಗಲಿಕ್ಕೆ ದುಸ್ಸಹವಾದ ಅಪಮಾನವೂ, ಮಿಗಿಲಾದ ಇನಾಮೂ ಅವ
ಶ್ಯವಾಗುವವು. ಇಂಥವರು ಕೆಲಸಮಾಡಹತ್ತಿದರೆಂದರೆ, ದೇಹದ
ಪರಿವೆಯಿಲ್ಲದೆ ದುಡಿದು ಕೊನೆಗಾಣಿಸುವರು.
ನಿನ್ನಿಂದ ಏನಾಗುವದು? ನೀನು ಹೀಗೆಯೇ ರ ರ ಈ ಕಲಿಯುತ್ತ
ಕೂಡ್ರುವವನು, ಎಂದು ಗುರುವರ್ಯ ಮಹಾಜನಿ ಇವರು ಅಂದದ್ದ
ರಿಂದ ಕೈ. ಆಗರಕರರವರಿಗೆ ಬಹಳ ಅಪಮಾನವೆನಿಸಿತು. ಆದ್ದರಿಂದ
ಅವರು ಕರ್ತವ್ಯಜಾಗ್ರತರಾಗಿ ಮಹಾಜನಿಯವರಂತೆ ಎಂ ಏ. ಪರೀ
ಕ್ಷೆಯಲ್ಲಿ ಪಾಸಾದರಲ್ಲದೆ, ತಮ್ಮ ಓಜಸ್ವಿಯಾದ ಲೆಕ್ಕಣಿಕೆಯಿಂದ
ಹಲವು ಉತ್ತಮ ಪುಸ್ತಕಗಳನ್ನು ಬರೆದು ಭಾಷಾಮಾತೆಯನ್ನು ಅಲಂ
ಕರಿಸಿದರು. ಇವರು ಮರಾಠಾ” ಎಂಬ ಇಂಗ್ಲಿಷಭಾಷೆಯ ವಾರ
ಪತ್ರವನ್ನು ತೆಗೆದರು. ಅವರ ಆ ಮರಾಠಾಪತ್ರವು ಈಗಲೂ ಪುಣೆ
ಯಲ್ಲಿ ಪ್ರಸಿದ್ಧವಾಗುತ್ತಿದೆ. ಹೆಸರುವಾಸಿಗಳಾದ ಎಲ್ಲ ಪುರುಷರು
ಹೆಚ್ಚು ಕಡಿಮೆಮಾನದಿಂದ ಅಪಮನ-ಕಷ್ಟ-ನಷ್ಟಗಳನ್ನು ಸೋಸಿ
ಯೇ ಮುಂದೆ ಬಂದಿರುವರು.
"ನನ್ನ ಆಯುಷ್ಯದೊಳಗಿನ ಪ್ರತಿಯೊಂದು ವಿಜಯವನ್ನು
ನಾನು ದೀರ್ಘ ಶ್ರಮಪಟ್ಟು ಸಂಪಾದಿಸುವದರಿಂದ ಸುಲಭರೀತಿ
ಯಿಂದ ಸಾಧಿಸಬಹುದಾದ ಕಾರ್ಯವು ಕೂಡ ನನಗೆ ದುರ್ಲಭವಾಗಿ
ತೋರುತ್ತದೆ” ಎಂದು ಒಬ್ಬ ಯಶಸ್ವಿಉದ್ಯೋಗಸ್ತನು ತನ್ನ
ದೊಂದು ಭಾಷಣದಲ್ಲಿ ಹೇಳಿರುವನು. ಅವನು ಮತ್ತೆ ಅನ್ನುವದೇ
೬೮---------------------------------------------------------------
ನಂದರೆ, ಯಾವ ಕೆಲಸವು ಶ್ರಮವಿಲ್ಲದೆ ಕೈಗೂಡುವದೋ ಆ ಕೆಲಸ
ದಲ್ಲಿ ಏನಾದರೂ ಗೌಣವಿರಲೇಬೇಕು. ಮತ್ತು ನಿರಾಯಾಸದಿಂದಾ
ದ ಕೆಲಸವು ಮಹತ್ವದ್ದೇ ಅಲ್ಲ, ಇಂಥ ನಾವಿರಾರು ಕೆಲಸ
ಮಾಡಿದರೂ ಮನುಷ್ಯನ ಪ್ರಗತಿಯಾಗಲಾರದು. ಮೈಮೇಲೆ
೯೯ ಗಾಯಗಳಾಗಿದ್ದರೂಸಂಗ್ರಾಮಸಿಂಹನು ಸಾಯುವವರೆಗೆ ಯುದ್ಧ
ಮಾಡಲಿಕ್ಕೆ ಹೇಗೆ ಬೇಸರಿಯುತ್ತಿಲ್ಲವೋ, ಹಾಗೆ ಸಂಕಟಪರಂ
ಪರೆಗಳಿಗೆ ಎದುರಾಗಿ ಶ್ರೇಯಸ್ಸನ್ನು ಪಡೆದಿರುವ ಮನುಷ್ಯನು ಕಠಿ
ಣಕಾರ್ಯಗಳನ್ನು ಮಾಡಲಿಕ್ಕೆ ಹಿಂದುಮುಂದು ನೋಡುವದಿಲ್ಲ.
ಅಂಥವನಿಗೆ ಸಂಕಟಗಳಿಗೆ ಎದುರಾಗುವದಕ್ಕೂ ವಿಧವಿಧದ ಪ್ರಯ
ತ್ನ ಮಾಡಿ ವಿಜಯಿಯಾಗುವದಕ್ಕೂ ಒಳ್ಳೆ ಹುರುಪು ಬರುವದು. ಈ
ಹುರುಪು ಸಾಮಾನ್ಯ ಕೆಲಸಗಳಲ್ಲಿ ಬರುವದಿಲ್ಲದ್ದರಿಂದ ಅವನು
ಸಾಮಾನ್ಯ ಕೆಲಸಗಳನ್ನು ಮಾಡಲುದ್ಯುಕ್ತನಾಗುವದಿಲ್ಲ.
ಕೃತ್ರಿಮ ಉಪಹಾಸ-ಅಪಮಾನಗಳಂತೆ ಶರೀರವು ವ್ಯಂಗ
ವಾಗಿ ಉಪಹಾಸವಾಗುವದರಿಂದಲೂ ಮನುಷ್ಯನಲ್ಲಿ ಒಂದು ತರದ
ಕರ್ತವ್ಯಜಾಗ್ರತಿಯು ಬೆಳೆಯುವದು. ಎಷ್ಟೋ ಜನರು ಕುರುಡರು
ಗಾಯನ-ವಾದನಪಟುಗಳಾಗಿರುವರು. ಮೂಕರು ಉತ್ತಮ ಶಿಲ್ಪಿ
ಗರೂ, ನೇಕಾರರೂ, ಬಡಿಗರೂ ಆಗಿರುವರು. ನಾಧಮಾಧವನೆಂಬ
ಸುಪ್ರಸಿದ್ಧ ಮಹಾರಾಷ್ಟ್ರ ಕಾದಂಬರಿಕಾರನು ಹೆಳವನಿದ್ದನು.
ಜನ್ಮತಃ ಕಾಲು-ಕೈಗಳಿಲ್ಲದ ಅಗಡಿಯ ರಾಮಭಟ್ಟ ತಾಳಿಕೋಟಿ
(ಒಡೆಯರು) ಎಂಬವರು ಮಹಾಬುದ್ಧಿಶಾಲಿಗಳಿದ್ದರು.
ನಮ್ಮಲ್ಲಿಯ ಬಹು ಸ್ವಲ್ಪ ಜನರು ತಮ್ಮ ನಿಜವಾದ ಯೋಗ್ಯ
ತೆಯನ್ನು ಕಂಡುಕೊಂಡವರೂ, ಪ್ರಗತಿಯ ಯೋಗ್ಯ ಮಾರ್ಗವನ್ನು
ಹಿಡಿದವರೂ ಆಗಿರುತ್ತಾರೆ: ತಮ್ಮ ಸಾಮರ್ಥ್ಯಭಾಂಡಾರದ, ದೇಹ
ಸಾರ್ಥಕ್ಯದ ಮಾರ್ಗವನ್ನು ಗೊತ್ತು ಹಚ್ಚಿಕೊಳ್ಳುವಷ್ಟರಲ್ಲಿಯೇ
ಎಷ್ಟೋ ಜನರು ಇಹಲೋಕದಯಾತ್ರೆಯನ್ನು ಮುಗಿಸಿಕೊಳ್ಳುವರು.
ವಿಶಿಷ್ಟಕಾರ್ಯಕ್ಕಾಗಿ ಒಂದೇಸವನೆ ದುಡಿಯುವದೇ ಪ್ರಗತಿಯ
೬೯---------------------------------------------------------------
ಮುಖ್ಯ ಶಕ್ತಿಯಾಗಿದೆ. ಅವಿಶ್ರಾಂತಶ್ರಮಮೂಡಿದ ಹೊರತು ಕೆಲಸದ
ಮಹತ್ವವು ಬೆಳೆಯುವದಿಲ್ಲ. ಇಂಥ ಹಲವು ಕೆಲಸಗಳನ್ನು ಮಾಡಿದ
ಹೊರ್ತು ಮನುಷ್ಯನ ಮಹತ್ವಬೆಳೆಯುವದಿಲ್ಲ. ಕೆಲಸಮಾಡುವ ಸಂಧಿ
ಗಳನ್ನು ದೊರಕಿಸುವವನು ಪ್ರಗತಿಪರನೂ, ಸಂಧಿಗಳನ್ನು ಪ್ರಯತ್ನ
ಪೂರ್ವಕ ಕಳಕೊಳ್ಳುವವನು ಪ್ರಗತಿಹೀನನೂ ಆಗುವರು. ತಮ್ಮ
ಜಾತಿಯವರ ಸಲುವಾಗಿ ಬಡ ಸಿದ್ದೀಗುಲಾಮನಾದ ಡಾ. ಬುಕರ ಟಿ.
ವಾಸಿಂಗ್ಟನ್ನನು ಅತ್ಯಂತ ಶ್ರಮಪಟ್ಟು ಹಿತಮಾಡುವ ಸಂಧಿಯನ್ನು
ತಂದುಕೊಂಡಿದ್ದರಿಂದಲೇ ಅವನು ಆ ಜಾತಿಯ ಅದೇಕೆ ಮಾನವಜಾ
ತಿಯ ಕಲ್ಯಾಣಕರ್ತನಾದನು. ಅವನು ತಾನುಶ್ರೀಮಂತನಲ್ಲವೆಂದೂ,
ಸುಶಿಕ್ಷಿತನಲ್ಲವೆಂದೂ ಭಾವಿಸಿದ್ದರೆ, ಅವನಿಗೆ ಈ ಸಂಧಿಯು ದೊರಕುತ್ತಿ
ದಿಲ್ಲ. ಉಪಹಾಸದಿಂದ ಪೀಡಿತನಾದ ಅವನು ಕೇವಲ ಗುಲಾಮಗಿರಿಯ
ಲ್ಲಿಯೇ ದೀರ್ಘಪರಿಶ್ರಮಪಟ್ಟು ಸ್ವತಃ ವಿದ್ಯೆಸಂಪಾದಿಸಿ, ಮಂದಿಗೆ
ಕಲಿಸಿ ಅವರಲ್ಲಿ ಮನುಷ್ಯತ್ವವನ್ನುಂಟು ಮಾಡಿದ್ದರಿಂದಲೇ ಅವನ
ಮಹತ್ವ ಬೆಳೆದಿದೆ.
ಸಾಧಾರಣವಾಗಿ ವಿಚಾರಿಸಿ ನೋಡಿದರೆ ಮನುಷ್ಯನು ಆಲಸ್ಯ
ಪ್ರಿಯನೆಂಬದು ಕಂಡುಬರುತ್ತದೆ. ಅವನು ಅವಶ್ಯವೆಂದು ಎಲ್ಲ
ಕೆಲಸಗಳನ್ನು ಮಾಡುತ್ತಿರುತ್ತಾನೆ. ಏಳುವದು, ಕೂಡ್ರುವದು,
ಓಡಾಡುವದು, ಕೆಲಸಮಾಡುವದು ಇವು ಅವನಿಗೆ ಬೇಸರಿಕೆಯನ್ನು೦
ಟುಮಾಡುತ್ತವೆ. ಶ್ರೀಮಂತರಿಗೂ 'ಆಲಸ್ಯದಲ್ಲಿ ಗಳಲ್ಲಿಯೂ ಐಷ ಆರಾಮ
ಗಳಲ್ಲಿಯೂ ಬೆಳೆದವರಿಗೂ ಬಡವರ ಕಲ್ಪನೆಯೇ ಆಗುವುದಿಲ್ಲ.
ಕಷ್ಟಪಟ್ಟು ಪ್ರಗತಿ ಹೊಂದೆಂದು ಯಾರಾದರೂ ಅವರಿಗೆ ಬೋಧಿ
ಸಿದರೆ ಅವರು ಅದರ ಅರ್ಧವನ್ನೇ ತಿಳಿಯದಾಗುವರು. ಇಂಥವರು
ದೀರ್ಘ ಪರಿಶ್ರಮಪಟ್ಟು ಉಪಹಾಸ ಅಪಮಾನಗಳನ್ನು ಸಹಿಸಿ ಪ್ರಗತಿ
ಹೊಂದಲಿಕ್ಕೆ ಎಂದೂ ಯತ್ನಿಸಲಾರರು, ಆಲಸ್ಯತನದಿಂದ ಅಧೋ
ಗತಿಯಾಗಿ ಇವರ ಶ್ರೀಮಂತಿಕೆ ಕಳೆದುಹೋಗಿ ಬಡತನಬಂದಾಗ
ಮಾತ್ರ ಇವರ ಕಣ್ಣುಗಳು ತೆರೆಯಹತ್ತುವವು.
70-------------------------------
ಪರಾಜಯವಾದ ಬಳಿಕ ಅವಲಂಬಿಸುವ ಮಾರ್ಗದಿಂದಲೇ
ಮನುಷ್ಯನ ಖರೇ ಪರೀಕ್ಷೆಯಾಗುವದು. ಪರಾಜಯದಿಂದ ಅವನು
ಪ್ರೋತ್ಸಾಹನಹೊಂದುವನೋ ನಿರಾಶೆಹೊಂದುವನೋ ಎಂಬದನ್ನು
ನೋಡಬೇಕು. ಪರಾಜಯಕ್ಕೆ ಹೆದರದಿದ್ದರೆ ಹೆಚ್ಚು ಪ್ರಗತಿಪಡೆಯು
ವನು, ಪರಾಜಯಕ್ಕೆ ಹೆದರಿದರೆ ಕಾರ್ಯವಿನ್ಮುಖನಾಗಿ ಅಧೋಗತಿ
ಹೊಂದುವನು.
" ಆರಂಭಶೂರಃ” ಎಂಬಂತೆ ಎಲ್ಲಿ ನೋಡಿದರೂ ಒಳ್ಳೇ ಈರ್ಷೆ
ಯಿಂದ ಹೊಸ ಹೊಸ ಕೆಲಸ ಮಾಡುವವರೇ ಕಣ್ಣಿಗೆ ಬೀಳುತ್ತಾರೆ.
ಮತ್ತು ಕ್ಷುಲ್ಲಕ ವಿಘ್ನ ಬಂದಕೂಡಲೆ ಕಾರ್ಯವಿನ್ಮುಖರಾಗಿ ಪರಾ
ಜಯಹೊಂದುತ್ತಾರೆ. ಸಾವಿರಗಟ್ಟಲೆ ಜನರಿಗೆ ತಮ್ಮ ದಾರಿದ್ರದ
ನಿಜವಾದ ಕಾರಣವು ಗೊತ್ತಾಗಿರುವದಿಲ್ಲ, ಹಾಗು ಅದನ್ನು ತಿಳ
ಕೊಂಡು ನಿವಾರಣಮಾಡಿಕೊಳ್ಳಲು ಯತ್ನಿಸುವದೂ ಇಲ್ಲ. ಪರಾ
ಜಯವು ಪ್ರಾಪ್ತವಾದಾಗ ಎದೆಯೊಡೆದುಕೊಳ್ಳದೆ, ಮತ್ತೊಮ್ಮೆ
ಅವಿಶ್ರಾಂತ ಪ್ರಯತ್ನ ಮಾಡಿ ಪ್ರಗತಿಹೊಂದಿದವರ ಎಷ್ಟೋ ಉದಾಹ
ರಣೆಗಳು ಇತಿಹಾಸ ಪ್ರಸಿದ್ಧವಿರುವವು. ತೈಮೂರನೂ, ಘೋರಿ
ಮಹಮ್ಮದನ, ಶಿಕಂದರಬಾದಶಹನ ಪ್ರತಾಪಸಿಂಹನೂ ಹೀಗೆ
ಪ್ರಯತ್ನ ಮಾಡಿ ಯಶೋಭಾಗಿಗಳಾಗಿರುವರು.
ಪುನಃ ಪುನಃ ಪ್ರಯತ್ನ ಮಾಡಿದ್ದರಿಂದಲೇ ಆಂಗ್ಲಯರನೇಕರು
ಹಲವು ದೇಶಗಳನ್ನು ಗೊತ್ತು ಹಚ್ಚಿದರು. ಪೇರಿಸನೆಂಬ ಶೋಧ
ಕನು ಉತ್ತರಧ್ರುವವನ್ನು ಕಂಡು ಹಿಡಿಯುವದಕ್ಕೆ ಆರುಸಾರೆ ಪ್ರಯ
ತ್ನಮಾಡಿ ಪರಾಜಯಹೊಂದಿದನು. ಪ್ರತಿಯೊಂದು ಸಾರೆ ಸಂಗಡಿಗ
ರಾದ ನೂರಾರುಜನ ನಾವಿಕರನ್ನೂ, ಎಷ್ಟೋ ಸಾಧನ ಸಾಮಗ್ರಿಗ
ಳನ್ನೂ ಕಳಕೊಂಡನು. ಆದರೆ ಅವನ ದೃಢನಿಶ್ಚಯವು ಮಾತ್ರ
ಸಡಿಲಾಗಲಿಲ್ಲ. ಅಂತಿಮಸಾಧ್ಯಕ್ಕಾಗಿ ೨೫ ವರ್ಷ ಅವನು
ಕಷ್ಟಪಡಬೇಕಾಯಿತು. ಈ ಅವಧಿಯಲ್ಲಿ ಒಮ್ಮೆ ಸಹ ಅವನು
ನಿರಾಶನಾಗಲಿಲ್ಲ, ಅವನ ಧೀರ್ಘ ಪ್ರಯತ್ನದಿಂದಲೇ ಏಳನೇಸಾರೆ
೭೧-----------------------------------------------------------------
ಅವನಿಗೆ ಉತ್ತರಧ್ರುವದ ಶೋಧವಾಯಿತು. ಜೇಡಹುಳವು ಮನೆಕಟ್ಟು
ವಾಗ ತಂತುಗಳು ಮೇಲಿಂದ ಮೇಲೆ ಹರಿಯುತ್ತಿದ್ದರೂ ಬೇಸರಪಡದೆ
ದೃಢನಿಶ್ಚಯದಿಂದ ತಂತುಗಳನ್ನು ಹೆಣೆದು ಮನೆ ಕಟ್ಟುವದು. ಕ್ಷಣ
ಶಃ ಪ್ರಗತಿಹೊಂದುತ್ತಲಿದ್ದ ಈ ಸೃಷ್ಟಿಯಲ್ಲಿ ನಾವು ನಮ್ಮ ಪ್ರಗ
ತಿಯನ್ನು ಮಾಡಿಕೊಳ್ಳುವದು ಕರ್ತವ್ಯವಾಗಿದೆ. ಹೀಗೆ ಮಾಡದೆ
ಪ್ರಗತಿಹೀನರಾಗುತ್ತ ಹೋಗಿ, ಸೃಷ್ಟಿಯ ರಚನೆಗೆ ಬಾಧೆತರುವದು
ಯೋಗ್ಯವಾದೀತೆ?
=========
೧೧ ನೆಯ ಖಂಡ-ಆಸ್ಥೆ-ಕಾಳಜಿ
"ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್ವಕ ಕೆಲಸ
ಮಾಡುವವನು ನನಗೆ ಅತ್ಯಂತ ಪ್ರಿಯನಾಗುವನು” ಎಂದು ಓರ್ವ
ಬ್ರಿಟಿಶ ಮಂತ್ರಿವರನು ಅಂದಿದ್ದಾನೆ. ಆಚಾರ್ಯರು ಕುದುರೆಯ
ಹಿಂದೆ ಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರದಿಂದ
ಬುದ್ಧಿಗೇಡಿ ಭಗವಂತನು ಕುದುರೆಯ ಲದ್ದಿಯನ್ನು ಕೂಡ ಹಸಿಬೆ
ಯಲ್ಲಿ ತುಂಬಿತಂದಂತೆ, ಕಾರ್ಯಗಳ ಮಹತ್ವವನ್ನು ತಿಳಿಯದೆ ಕೆಲ
ಸಮಾಡುವವರು ಬಹಳ, ಕಾರ್ಯದ ಮಹತ್ವ ತಿಳಿಯುವದಕ್ಕೆ ಮನ
ಸ್ಸಿನಲ್ಲಿ ಆಸ್ಥೆ-ಕಾಳಜಿ ವಹಿಸಬೇಕಾಗುವದು, ಆಸ್ಥೆಯು ಬೆಳೆ ಬೆಳೆ
ದಂತೆ ಪ್ರಯತ್ನಗಳು ಎಂದೂ ನಿರರ್ಧಕವಾಗುವದಿಲ್ಲ.
ಹಿಂದಕ್ಕೆ ಆಗಿ ಹೋದ ಮಂತ್ರಿವರ್ಯ ಯೋಗಂಧರಾಯಣ,
ಅಮಾತ್ಯ ರಾಕ್ಷಸ ಮೊದಲಾವರು ಅತ್ಯಂತ ಆಸ್ಥೆಯಿಂದ ಕೆಲಸಮಾಡು
ತಿದ್ದದರಿಂದಲೇ ಅವರು ಸುಪ್ರಸಿದ್ಧ ಪ್ರಧಾನರಾಗಿದ್ದರು. ಮೈಸೂರು
ಮಾಜಿ ದಿವಾಣರಾದ ಸರಶೇಷಾದ್ರಿ ಅಯ್ಯನವರು ಒಳ್ಳೆ ಆಸ್ಥೆಯಿಂದ
ಕಾರ್ಯಭಾರವನ್ನು ಸಾಗಿಸಿದ್ದರಿಂದಲೇ ಅಂಥಕಠಿಣ ಪ್ರಸಂಗಿದಲ್ಲಿ
ಕೂಡಾ ಮೈಸೂರ ರಾಜ್ಯವು ಪ್ರಗತಿಯನ್ನು ಹೊಂದಿತು. ನಮ್ಮ ವಿಷ
ಯಕ್ಕೆ ನಮ್ಮಲ್ಲಿ ಆಸ್ಥೆಯಿಲ್ಲದಿರಲು ಮಂದಿಯ ಬಗ್ಗೆ ನಾವು ಆಸ್ಥೆಪ
ಡುವ ಬಗೆಯಾದರೂ ಹೇಗೆ?
೭೨------------------------------------------------------
" ತನ್ನಂತೆ ಪರರಬಗೆದೊಡೆ ಕೈಲಾಸಬಿನ್ನಾಣವಕ್ಕು” ಎಂಬ
ಸರ್ವಜ್ಞಕವಿಯ ಉಕ್ತಿಯು ಮನನೀಯವಾಗಿದೆ. ಖರೇ ಆಸ್ಥೆಯಿಂ
ದಾಗಲಿ, ತೋರಿಕೆಯ ಡಂಭಾಚಾರದ ಆಸ್ಥೆಯಿಂದಾಗಲಿ ನಾವು ನಮ್ಮ
ಕೆಲಸಗಳನ್ನು ಹೇಗಾದರೂ ಸಾಗಿಸಿಕೊಳ್ಳುತ್ತಿರುವೆವು. ಆದರ
ಪರರ ಕೆಲಸದಲ್ಲಿ ನಮ್ಮ ಆ ಡಂಭಾಚಾರದ ಆಸ್ಥೆಯನ್ನು ಕೂಡ
ಉಪಯೋಗಿಸ ಹೋಗದೆ, "ಹತ್ತಿನಲ್ಲಿ ಹತ್ತಿತು ಹಾರಿದಲ್ಲಿ ಹಾರಿತು”
ಎನ್ನುವಂತೆ ದುರ್ಲಕ್ಷ್ಯಮಾಡುವೆವು. ಇದರಿಂದ ಕಾರ್ಯಕೆಟ್ಟು
ಹಾನಿಯಾಗುವ ಮಾನಕ್ಕಿಂತ, ನಮ್ಮ ವೃತ್ತಿಯು ಕೆಟ್ಟು ಪ್ರಗತಿಹೀನ
ವಾಗುವಮಾನವು ಹೆಚ್ಚಾಗುವದು. ಆದ್ದರಿಂದ ಪ್ರಗತಿಪರನು ಪ್ರಗ
ತಿಹೊಂದುವದಕ್ಕಾಗಿ ಮಾಡಬೇಕಾದ ಕೆಲಸವನ್ನು ಒಳ್ಳೆ ಆಸ್ಥೆ
ಯಿಂದಮಾಡಿ ಪ್ರಗತಿಹೊಂದಬೇಕು.
======
೧೨ ನೆಯ ಖಂಡ-ದೇಶಪರ್ಯಟಿನ.
ಯೋನಸಂಚರತೀ ದೇಶಾನ್ ಯೋನಸೇವೇತ್ ಪಂಡಿತಾನ್ |
ತಸ್ಯ ಸಂಕುಚಿತಾಬುದ್ದಿರ್ಘೃತಬಿಂದುರಿವಾಂಭಸಿ || ಸುಭಾಷಿತ ||
ಎಷ್ಟೋಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್ಧಕ
ವಾಗಿ ವ್ಯಯವಾಗುವದೆಂದು ಭಾವಿಸುವರು. ಆದರೆ ಹಾಗೆ ತಿಳಿಯು
ವದು ದಡ್ಡತನವು. ಪ್ರವಾಸಮಾಡುವದರಿಂದ ವಿಶಿಷ್ಟ ಪ್ರಕಾರದ
ಜ್ಞಾನಸಂಚಯವಾಗುವದು, ದೇಹಕ್ಕೆ ಆರಾಮವೆನಿಸುವದು. ಪ್ರಸಿದ್ಧ
ಜನರ ಗುರುತುಪರಿಚಯವಾಗುವದು. "ಕೇಲ್ಯಾನದೇಶಾಟನಾ ಪಂಡಿ
ತಮೈತ್ರೀಸಭೇತಸಂಚಾರ” ಎಂಬಂತೆ ಪ್ರವಾಸದಿಂದ ಉಪಲಬ್ಧವಾ
ಗದ ಹಲವು ಸಂಗತಿಗಳ ಜ್ಞಾನವು ಉಪಲಬ್ಧವಾಗುತ್ತದೆ.
ಪ್ರವಾಸಮಾಡುವದರಿಂದ ಮಹಾ ಮಹಾ ರೋಗಿಗಳು ಗುಣ
ಹೊಂದಿರುವದನ್ನು ನೋಡಿದರೆ ಮನುಷ್ಯನಿಗೆ ಅದರಲ್ಲಿಯೂ ಪಟ್ಟಣ
ವಾಸಿ ಮನುಷ್ಯನಿಗೆ ಪ್ರವಾಸವು ಅತ್ಯಂತ ಅವಶ್ಯವಾದದ್ದು. ಯಾಕಂ
ದರೆ ಮುಂಬಯಿಯಂದ ಅತ್ಯಂತ ದಟ್ಟವಾದ ವಸತಿಯುಳ್ಳ ಪಟ್ಟಣ
ಗಳಲ್ಲಿಯ ಸಾಧಾರಣಪ್ರತಿಯ ಜನರು ಹಗಲು-ರಾತ್ರಿ ಶ್ರಮಬಟ್ಟ
೭೩---------------------------------------------------------------
ಕೆಲಸ ಮೂಡಬೇಕಾಗುವದು. ಅಲ್ಲಿ ಹಗಲು ರಾತ್ರಿ ಒಂದೇಸಮನೆ
ನಡೆಯುವ ಗಿರಣಿ, ಉಗೆಬಂಡಿ, ಉಗೆಹಡಗ, ಮೋಟಾರಗಳಿಗಾಗಿ
ಕಲ್ಲಿದ್ದಲಿಯನ್ನು ಉಪಯೋಗಿಸುವರು. ಆ ಹೊಗೆಯು ಪಟ್ಟಣ
ತುಂಬತುಂಬಿ ಹವೆಯೊಳಗೆ ಮಿಶ್ರವಾಗುವದು. ಈ ಹವೆಯನ್ನೇ
ಎಲ್ಲರೂ ಉಸಿರಾಡಿಸುವದರಿಂದ ಪ್ರಕೃತಿಯು ಕೆಟ್ಟು ಹೋಗುವದು.
ಮನಸ್ಸಿಗೆ ಸ್ವಸ್ಥತೆಯುಂಟಾಗದು. ಅದರಿಂದ ಆ ಜನರು ವರ್ಷ
ದೊಳಗಿನ ಕೆಲವು ದಿವಸಗಳನ್ನಾದರೂ ಶುದ್ಧಹವೆಯಿದ್ದ ಕಡೆಗೂ,
ತರತರದ ವನಶೋಭೆಯಿರುವಕಡೆಗೂ ಹೋಗಿ ಪ್ರವಾಸಮಾಡಿಬರ
ಬೇಕು. ಈ ಪ್ರವಾಸಕಾರ್ಯದಿಂದ ಅವರ ಶರೀರ ಮನಸ್ಸು ಇವು
ಗಳ ಜಾಡ್ಯವು ಹೋಗುವದು. ಕೆಲಸಮಾಡಲಿಕ್ಕೆ ಹೊಸ ಹುರುಪು
ಬರುವದು.
ಸುವ್ಯವಸ್ಥಿತವಾದ ಜೀವನೋಪಾಯಕ್ಕೂ, ನಿಜವಾದ ಪ್ರಗ
ತಿಗೂ ಪ್ರವಾಸವು ಬೇಕೇಬೇಕು. ಪ್ರವಾಸದಲ್ಲಿ ವಿಶ್ರಾಂತಿಯೂ
ಸಿಗುವದು. ಖುಷಿಮೋಜೂ ಆಗುವದು. ವರ್ಷಾನುಗಟ್ಟಲೆ ಕೊರ
ಗುತ್ತ ಕೆಲಸಮಾಡುವದಕ್ಕಿಂತ ನಡುವೆ ಕೆಲವು ದಿವಸ ಪ್ರವಾಸಮಾಡಿ
ಹುರುಪುಗೊಂಡು ತೀವ್ರ ಕೆಲಸಮಾಡುವದು ಯೋಗ್ಯವಲ್ಲೆಂದು
ಯಾರು ಹೇಳುವರು? ಕೆಲಸಮಾಡುವಾಗ ಒದಗುವ ಚಿಂತೆಯಿಂದ
ಒಂದುಪ್ರಕಾರದ ಬುದ್ಧಿಮಾಂದ್ಯವು ಉಂಟಾಗುತ್ತದೆ. ನಡುವೆ
ಪ್ರವಾಸದಲ್ಲಿ ವಿಶ್ರಾಂತಿಪಡೆಯುವದರಿಂದ ಮನಸ್ಸುಶ್ರಾಂತಗೊಂಡು
ವಿಕಸಿತವಾಗುವದು:
ಪ್ರವಾಸವು ಪಟ್ಟಣಿಗರಿಗೆ ಸುಖಕರವಾಗುವಂತೆ ಹಳ್ಳಿಯವ
ರಿಗೂ ಆಗುವದು. ಸದಾ ಹಳ್ಳಿಯಲ್ಲಿ ವಾಸಮಾಡುವ ಮನುಷ್ಯನು
ಕೂಪಮಂಡೂಕದಂತೆ ದೇಶಾಂತರಗಳ ಜ್ಞಾನವಿಲ್ಲದವನಾಗುವನು.
ಹಳ್ಳಿಯವರು ವರ್ಷಕ್ಕೊಮ್ಮೆಯಾದರೂ ಪ್ರಸಿದ್ಧ ಸ್ಥಳಗಳಿಗೆ ಹೋಗಿ
ಅಲ್ಲಿ ಒಂದೆರಡುವಾರಗಳನ್ನು ಕಳೆದು ಬರಬೇಕು. ಅಂದರೆ ಅವರು
ವಿವಿಧ ಸಂಗತಿಗಳನ್ನು ಬಲ್ಲವರಾಗುವರು. ಅದರಿಂದ ಅವರ ವಿವೇ
೭೪---------------------------------------------------------------
ಚಕಶಕ್ತಿಗೆ ಬಹಳ ಸಹಾಯವಾಗುವದು.
ಪೌರ್ವಾತ್ಯರಲ್ಲಿ ಪ್ರತಿವರ್ಷ ಕೆಲವು ದಿವಸಗಳನ್ನು ಪ್ರವಾಸ
ದಲ್ಲಿ ಕಳೆಯುವ ರೂಢಿಬಿದ್ದದೆ. ಅನುಕರಣೀಯವಾದ ಆ ರೂಢಿಯು
ವೃಕ್ಷ ಮೊದಲಾದವುಗಳಿಗೆ ಮಳೆ-ಚಳಿ-ಬಿಸಿಲು-ನೆರಳು ಇವುಗಳಿಂದ
ಹೊಸ ಜೀವನವು ಪ್ರಾಪ್ತವಾಗುವಂತೆ, ಮನುಷ್ಯನಿಗೆ ಅತ್ಯಂತ ಉತ್ಸಾ
ಹಪೂರ್ಣವಾದ ಹೊಸ ಚೈತನ್ಯವನ್ನು ಕೊಡುವದು,
ಪ್ರವಾಸಮಾಡುವಾಗ ನಾವು ಚಿಂತೆಯನ್ನು ಸಂಗಡ ಕಟ್ಟಿ
ಕೊಂಡು ಹೋಗಬಾರದು, "ಯಾಕೆ ಯಾತ್ರೆಯ ಮಾಡುತಿರ್ಪರ
ಲ್ಲೇನಿಹುದು” ಎಂಬಂತೆ ಪ್ರವಾಸಿಕನು ದ್ವೇಷ, ಅಸೂಯಾ, ನಿಂದಾ,
ಮೋಹ ಇತ್ಯಾದಿ ಗುಣಗಳುಳ್ಳವನಾಗಿ ಪ್ರವಾಸಮಾಡಿದರೆ, ಪ್ರವಾ
ಸದ ಮಹತ್ವವು ಅವನಿಗೇನೂ ತಿಳಿದುಬರುವದಿಲ್ಲ. ಯಾಕಂದರೆ
ಅವನ ಮನಸ್ಸು ಪ್ರವಾಸದ ಸುಖವನ್ನು ಅನುಭವಿಸಲು ಅವನ ಸಂಗಡ
ಬಂದಿರುವದಿಲ್ಲ. ಅದು ಮನೆಗೆಲಸ, ಹೆಂಡತಿ, ಮಕ್ಕಳು, ತರುವದು,
ಬರುವದು, ಖಟ್ಟೆ-ಖೋಖಲೆ ಇವುಗಳಲ್ಲಿ ಪೇಚಾಡುತ್ತ ಮನೆಯ
ಲ್ಲಿಯೇ ಇರುತ್ತದೆ.
ಆರೋಗ್ಯವು ಎಲ್ಲಕ್ಕೂ ಮಹತ್ವವಾದ ವಿಷಯವಾಗಿರುತ್ತದೆ.
"ಅಪಭಲಾ ತೋ ಜಗಭಲಾ” ಎಂಬ ನಾಣ್ಣುಡಿಯ ಅರ್ಧವನ್ನು
ಆರೊಗ್ಯದಷ್ಟಿಯಿಂದ ಮಾಡಿದರೆ ಮನುಷ್ಯನು ಗಟ್ಟಿ ಮುಟ್ಟಿಯಾ
ಗಿದ್ದರೆ ಏನನ್ನಾದರೂ ಮಾಡಿ ಪ್ರಗತಿಹೊಂದುವನು, ಎಂದಾಗುವದು;
ರೋಗಿಷ್ಠನಾದ ಮನುಷ್ಯನು ಯಾವ ಕಾರ್ಯವನ್ನೂ ಸಾಧಿಸಲರ್ಹ
ನಲ್ಲ ಆರೋಗ್ಯದ ಬಲದಿಂದಲೇ ನಮಗೆ ಎಲ್ಲ ಸುಖಗಳ ಅನುಭವಆಗು
ವದು. ಆದ್ದರಿಂದ ಕೃಪಣತನಮಾಡುವದಿದ್ದರೆ ಬೇರೆ ಬೇಕಾದ
ವಿಷಯಗಳಲ್ಲಿ ಮಾಡಬಹುದು. ಪ್ರವಾಸಕಾರ್ಯದ ವಿಷಯಕ್ಕೆ
ದುಡ್ಡಿನ ಹಾಗು ವೇಳೆಯ ಕೃಪಣತನ ಮಾಡಿ ಆರೋಗ್ಯ ಮಂದಿರದ
ನೆಲಗಟ್ಟನ್ನು ಸಡಲಿಸಲಿಕ್ಕೆ ಯತ್ನಿಸಲಾಗದು.
೭೫---------------------------------------------------------------
೧೩ ನೆಯ ಖಂಡ-ಪ್ರಸನ್ನತೆ,
ಆನಂದಕಾರಕ ಸಾಧನಗಳಲ್ಲಿ ಪ್ರಸನ್ನತೆ ಎಂಬದೊಂದು ಬಹು
ದೊಡ್ಡ ಸಾಧನವಾಗಿದೆ. ಪ್ರಸನ್ನತೆಯಿಂದ ಶಿಕ್ಷಕನು ಲೋಕಪ್ರಿಯ
ನಾಗುವನು. ಅಂಗಡಿಕಾರನು ಹೆಚ್ಚಾಗಿ ಗಿರಾಕಿಗಳನ್ನು ದೊರಕಿ
ಸುವನು; ನೌಕರನು ಹೆಚ್ಚು ಸಂಬಳವನ್ನು ದೊರಕಿಸುವನು; ರಾಜನು
ಪ್ರಜಾನುರಾಗಿಯಾಗುವನು; ನಾನಾಪ್ರಕಾರದ ಮಹತ್ಕಾರ್ಯಗಳು
ಪ್ರಸನ್ನತೆಯನ್ನು ಕಾಯ್ದುಕೊಳ್ಳುವದರಿಂದ ಸಹಜವಾಗಿ ಕೊನೆಗಾ
ಣುವವು. ಖಿನ್ನತೆಯು ಪ್ರಗತಿಯನ್ನು ನಾಶಮಾಡುವ ಶಸ್ತ್ರವಾಗಿದೆ.
ಪ್ರಸನ್ನತೆಯು ಶಕ್ತಿಯ ಉತ್ಪಾದಕವೂ, ಖಿನ್ನತೆಯು ಶಕ್ತಿಯ ನಾಶ
ಕಾರಕವೂ ಆಗಿರುತ್ತದೆ.
ಪ್ರಸನ್ನತೆಯಲ್ಲಿ ಮನೋಹರತ್ವವೂ ಇರುವದು. ಅದರಿಂದ
ಅದು ಪ್ರಗತಿಪರನಿಗೆ ಕಾರ್ಯಸಾಧಕವಾಗಿರುವದು; ಪ್ರಸನ್ನತೆಯಿಂದ
ಸ್ನೇಹವು ಬೆಳೆಯುವದು, ಪ್ರಸನ್ನ ಮುಖಿಯು ದುಷ್ಟ ಹಾಗು ವಿರೋಧಿ
ಮನುಷ್ಯನಿಂದ ಕೂಡ ಪ್ರಸಂಗದಲ್ಲಿ ಸಹಜವಾಗಿ ಸಹಾಯಹೊಂ
ದುವನು, ಮನೆಯಲ್ಲಾಗಲಿ, ಕಾರಖಾನೆಗಳಲ್ಲಾಗಲಿ, ರಾಷ್ಟ್ರದ
ಲ್ಲಾಗಲಿ, ಲೋಕಪ್ರಿಯನಾದವನು ಪ್ರಸನ್ನ ಮುಖಿಯ ಆಗಿರುತ್ತಾ
ನೆಂಬದು ಕಂಡುಬರುತ್ತದೆ. ನಿನ್ನ ಹಾಗು ಉಗ್ರಮುದ್ರೆಯ ಮನು
ಷ್ಯನು ಲೋಕಪ್ರಿಯನಾಗುವದು ದುಸ್ತರವು. ಖಿನ್ನವದನನು ಬೇಗ
ಸಾಯುವನೆಂದೂ, ಪ್ರಸನ್ನಮುನಿಯು ದೀರ್ಘ ಕಾಲಬಾಳುವನೆಂದೂ
ತಜ್ಞರು ಹೇಳುತ್ತಾರೆ, ಆದ್ದರಿಂದ ಪ್ರಗತಿಯನ್ನು ಬಯಸುವವನು
ಸದಾ ಪ್ರಸನ್ನ ಚಿತ್ತವಿರುವಂತೆ ಯತ್ನಿಸಬೇಕು.
ಅಭ್ಯಾಸದಿಂದ ಬೇಕಾದದ್ದನ್ನು ಕೈವಶ ಮಾಡಿಕೊಳ್ಳ ಬ
ಹುದು. ದುರ್ಮುಖಿಯು ಕೂಡ ಅಭ್ಯಾಸದಿಂದ ಪ್ರಸನ್ನತೆಯನ್ನು
ಪಡೆಯಬಹುದು. ಪ್ರಸನ್ನ ಚಿತ್ರದವನಿಗೆ ದುಃಖ-ಶೋಕಗಳು
ಹೆಚ್ಚಾಗಿ ಬಾಧಿಸಲಾರವು. ಪ್ರಸನ್ನತೆಯನ್ನು ಸಂಪೂರ್ಣವಾಗಿ
ಪಡೆಯಲಿಚ್ಛಿಸುವವನು ಮೊದಲು ಸ್ಥಿತವದನನಾಗಿರಲು ಪ್ರಯತ್ನ ಮಾ
೭೬------------------------------------------------------------------
ಡಬೇಕು, ಮುಗುಳುನಗೆಯೆಂದರೆ, ಜಾರಿಣಿಯು ಜಾರನನ್ನು ವಶ
ಮಾಡಿಕೊಳ್ಳುವಾಗ ತೋರಿಸುವ ವಿಕಟಹಾಸ್ಯವಲ್ಲ. ಬಾಲ ಬಡಿಯವ
ಸ್ವಭಾವದವರು ಅಧಿಕಾರಿಗಳ ಇಲ್ಲವೆ ಶ್ರೀಮಂತರ ಬಳಿಯಲ್ಲಿ ಕಾರ್ಯ
ಸಾಧನಕ್ಕಾಗಿಯೂ, ಒಣಪ್ರತಿಷ್ಠೆಯನ್ನು ಹೊಂದುವದಕ್ಕಾಗಿಯೂ
ನಗುವ ದೇಶಾವರಿ ನಗೆಯಲ್ಲ ; ತಾಯಿಯು ಪ್ರೀತಿಯಿಂದ ಮಗನನ್ನು
ಮುದ್ದಾಡುವಾಗ ನಗುವನಗೆಯು; ಸ್ಮಿತವದನದಿಂದ ಕಡುವೈರಿಯು
ಕೂಡಶಾಂತನಾಗುವನು. ಸ್ಮಿತವದನನಾಗುವದು ಸಾಧಿಸಿದ ಬಳಿಕ ಆಂ
ತಃಕರಣವನ್ನು ಪ್ರಸನ್ನವಾಗಿಟ್ಟುಕೊಳ್ಳಲಿಕ್ಕೆ ಪ್ರಯತ್ನಿಸಬೇಕು.
ಸತ್ಯ ಹಾಗು ಸುಲಲಿತ ಭಾಷಣ ಮಾಡುವದರಿಂದ ಪ್ರಸನ್ನತೆಯು
ಅಂತಃಕರಣದಲ್ಲಿ ನೆಲೆಗೊಳ್ಳಹತ್ತುವದು, ಪ್ರಸನ್ನಾಂತಃಕರಣವು
ತ್ರಾಸ, ನಿರಾಶೆ ದುಃಖ ಕಷ್ಟ ಇವುಗಳ ಮೇಲೆ ಅಧಿಕಾರತೋರಿಸಿ
ಅವನ್ನು ಓಡಿಸುವದು. ಪ್ರಸನ್ನ ಚಿತ್ತನು ಎಂಧ ಪ್ರತಿಕೂಲಪ್ರಸಂಗ
ಗಳಲ್ಲಿಯೂ ಅನುಕೂಲತೆಯನ್ನು ದೊರಕಿಸಿಕೊಂಡು ಪ್ರಗತಿ
ಪರನಾಗುವನು.
ನಿಜವಾದ ಸಭ್ಯ ಪುರುಷರು ದುಃಖ, ಶೋಕ, ದಾರಿದ್ರ್ಯ
ಇವುಗಳನ್ನು ಸಹಜವಾಗಿ ಸಹಿಸುವರು. ಪ್ರಸನ್ನತೆಯಿಂದಲೇ ಸಭ್ಯ
ಗುಣವು ಅವರಲ್ಲಿ ಒಡಮೂಡಿರುತ್ತದೆ. ದೈನ್ಯವನ್ನು ಮಂದಿಯ
ಮುಂದೆ ಹೇಳಿಕೊಳ್ಳುವದು ಸಭ್ಯ ಜನರಿಗೆ ಮರಣಪ್ರಾಯವಾಗು
ವದು. ಇದರಿಂದಲೇ ಅವರು ಉಜ್ವಲಚರಿತ್ರರಾಗಿ, ಲೋಕವಂದ್ಯ
ರಾಗುವರು. ದುಃಖ, ಶೋಕ, ಶ್ರಮಗಳನ್ನು ನುಂಗಲು ಪ್ರಯತ್ನ
ಮಾಡುವದರಿಂದ ಮನೋದಾರ್ಢ್ಯವು ಹೆಚ್ಚುವದು, ದೃಢಮನ
ಸ್ಸಿನವನು ಪ್ರಸನ್ನತೆಯನ್ನು ಪಡೆದಿರಬೇಕಾಗುವದು, ಇಲ್ಲದಿದ್ದರೆ
ಅವನ ನಿಶ್ಚಯವು ಸಹಜವಾಗಿ ಸಡಿಲಾಗಬಹುದು.
ಕಪಟದ, ಮಾತ್ಸರ್ಯದ, ಭಿನ್ನತೆಯ ಮುದ್ರೆಗಳುಳ್ಳ ಮನು
ಷ್ಯನು ಯಾವ ಪ್ರಕಾರದ ಪ್ರಗತಿಯನ್ನೂ ಪಡೆಯಲಾರನು. ನಗೆ
ಮೊಗದ ಮಗುವನ್ನು ಯಾರು ಮುದ್ದಿಡಲಿಕ್ಕಿಲ್ಲ? ನಗೆಮೊಗದ
೭೭-----------------------------------------------------------
ಮನುಷ್ಯನನ್ನು ಯಾರು ಮುಂದೆ ಕರೆಯಲಿಕ್ಕಿಲ್ಲ? ನಗೆಮೊಗದ
ಹೆಂಡತಿಯನ್ನು ಯಾವ ಗಂಡನು ಪ್ರೀತಿಸಲಿಕ್ಕಿಲ್ಲ? ಇದು ಯಾತರ
ಪರಿಣಾಮವು? ಅವರ ಪ್ರಸನ್ನ ಮಯಿಯಾದ ಮುದ್ರೆಯಿಂದಲ್ಲವೇ?
ಸರಳವಾದ ನಡಾವಳಿಯವರಾಗುವದೂ, ಮಿತ್ರರ ಆದರಕ್ಕೆ
ಪಾತ್ರರಾಗುವದೂ, ಸಮಾಜದ ಪ್ರೇಮಕ್ಕೆ ಪಾತ್ರರಾಗುವದೂ ಪ್ರಸ
ನ್ನ ಚಿತ್ರದಿಂದಲೇ ಪ್ರಸನ್ನತೆಯನ್ನೊಂದು ಕಳಕೊಳ್ಳುವದರಿಂದ
ಮನೆಯವರ, ಮಿತ್ರರ, ಸಮಾಜದ, ರಾಷ್ಟ್ರದ ಕ್ಷೋಭಕ್ಕೆ ಪಾತ್ರರಾಗ
ಬೇಕಾಗುತ್ತದೆ. ಎಷ್ಟೋ ಜನರು ಸಾಧಾರಣವಾದ ವ್ಯವಹಾರಗ
ಳಲ್ಲಿ ಕೂಡ ಸಭ್ಯತೆಯನ್ನು ಕಾಯ್ದುಕೊಳ್ಳುವದಿಲ್ಲ. ಈ ದಾರಿಯು
ಯಾವ ಊರಿಗೆ ಹೋಗುವದೆಂದು ಪ್ರವಾಸಿಕನು ಕೇಳಲು, ದಾರೀ
ತೋರಿಸಲಿಕ್ಕೆ ನನ್ನನ್ನು ಆಳುಗಿ ನಿಯಮಿಸಿರುವೆಯೇನು? ಎಂದು
ಕೇಳುವ ನಿರ್ದಯರು ನಮ್ಮಲ್ಲಿ ಬಹುಜನರಿರುವರು. ಇಂಥ ದುರ
ಭಿಮಾನಿಗಳಿಂದ ಸ್ನೇಹಿತದ ಕಾರ್ಯವಾಗಲಿ, ದೇಶಹಿತದ ಕಾರ್ಯ
ವಾಗಲಿ ಆಗುವ ಸಂಭವವಿಲ್ಲ. ಇವರ ಈ ದುಶ್ಚಿತ್ತತನದಿಂದ ಅವರ
ಪ್ರಗತಿಯ ಘಾತಮಾತ್ರ ತಪ್ಪದೆ ಆಗುವದು:
ಶ್ರೀ ಶೇಷಾಚಲ ಸದ್ಗುರುಗಳು ಎಲ್ಲರನ್ನೂ ಸ್ಮಿತವದನ ಪೂರ್ವ
ಕವಾಗಿ ನಮಿಸುತ್ತ ಅವರನ್ನು ಕುರಿತು-ಮಹಾರಾಜಾ, ಎಂಬ
ಉಪಪದದೊಡನೆ ಸಂಬೋಧಿಸುತ್ತ ಬೋಧಮಾಡುತ್ತಿದ್ದದರಿಂದಲೇ
ಅವರ ಬೋಧವು ಸುಪರಿಣಾಮಕಾರಿಯಾಗಿ, ಅವರು ಲೋಕವಂದ್ಯ
ರೂ, ಭಕ್ತಾನುರಾಗಿಗಳೂ ಆದರು. ಶ್ರೀ ಟೇಂಬೆ ಮಹಾರಾಜರು
ಸದ್ಗುಣಿಗಳನ್ನು ಮನ್ನಿಸುತ್ತಲೂ, ದುರ್ಗುಣಿಗಳನ್ನು ದಂಡಿಸು
ತಲೂ ಲೋಕಹಿತದಕ್ಷರಾದರು. ಆದರೆ ಅಗಡಿಯ ಸಾಧುಗಳು
ದುಷ್ಟರ ಹಾಗು ಶಿಷ್ಯರ ದೃಷ್ಟಿಯಿಂದ ಸರಿಯಾಗಿಯೇ ವಂದ್ಯರಾ
ದಂತೆ ಟೇಂಬೇಮಹಾರಾಜರು ಆಗಲಿಲ್ಲ. ಇದರಲ್ಲಿ ಶ್ರೀ ಟೇಂಬೇಮ
ಹಾರಾಜರನ್ನು ನಿಂದಿಸಬೇಕೆಂದು ಲೇಖಕನ ಉದ್ದೇಶವಿಲ್ಲ. ಶ್ರೀಗುರು
ಗಳಂತೆ ಅವರೂ ಲೇಖಕನಿಗೆ ಅತ್ಯಂತ ಪೂಜ್ಯರಾಗಿರುವರು. ಆದರೆ
೭೮-------------------------------------------------------
ಪ್ರಸ್ತುತ ವಿಷಯವಾದ ಪ್ರಸನ್ನತೆಯ ವಿವೇಚನವನ್ನು ಮಾಡುವಾಗ
ತೋರಬಹುದಾದ ಭೇದವನ್ನು ಇಲ್ಲಿ ವಿವರಿಸಿರುವೆವು.
ಸಾಮಾನ್ಯರಿಗೆ ನಾವು ಪ್ರಯತ್ನದಿಂದ ಎಂಥ ಶ್ರೀಮಂತರೇ ಆಗಲಿ, ಎಷ್ಟು
ಕೀರ್ತಿಯನ್ನೇಹೊಂದಲಿ ಆದರೆ ಯಾವನಿಗೆ ಪ್ರಸನ್ನತೆಯ ಮಧುರ
ರಸವು ಸೇವಿಸಲಿಕ್ಕೆ ದೊರೆಯಲಿಲ್ಲವೋ ಅವನ ಬಾಳು ವ್ಯರ್ಧವೆನ್ನಬ
ಹುದು. ಅಂಗೀಕೃತಕಾರ್ಯದಲ್ಲಿ ಯಶವು ದೊರೆಯಲಿ-ದೊರೆಯ
ದಿರಲಿ, ದುಡ್ಡುಸಿಗಲಿ-ಸಿಗದಿರಲಿ, ಏನೇ ಆಗಲಿ,ಪ್ರಸನ್ನತೆಯನ್ನು
ಮಾತ್ರ ಕಳಕೊಳ್ಳಬಾರದು. ನಮಗೆದುಡ್ಡು ಸಿಕ್ಕರೂ ಅಷ್ಟೇ-ಸಿಗದಿದ್ದರೂ
ಆಷ್ಟೇ, ಯಶೋಭಾಗಿಗಳಾದರೂ ಅಷ್ಟೇ-ಯಶೋವಿಹೀನರಾದರೂ
ಅಷ್ಟೇ, ಈ ಸಂಗತಿಗಳು ಕೇವಲ ನಮ್ಮ ಸ್ವವಿಷಯಗಳಾಗಿರುವವು.
ಜನರಿಗೆ ಇವುಗಳ ಪರಿವೆಯಿರುವದಿಲ್ಲ. ನಾವು ಪ್ರಸನ್ನ ಚಿತ್ತರಿರುವೆವೋ
ಇಲ್ಲವೋಎಂಬದೊಂದು ವಿಷಯವನ್ನು ಮಾತ್ರ ಜನರು ಪರೀಕ್ಷಿಸುವರು,
ಕೈ. ನಾಮದಾರ ಗೋಪಾಳ ಕೃಷ್ಣ ಗೋಖಲೆಯವರ ಪ್ರಗ
ತಿಯ ರಹಸ್ಯವು ಅವರು ಸದಾ ಧರಿಸುತ್ತಿದ್ದ ಪ್ರಸನ್ನ ಮುದ್ರಯದಾಗಿ
ರುವದೆಂದು ಅವರ ಸಹಪಾರಿಗಳು ಹೇಳುತ್ತಾರೆ. ಇತಿಹಾಸ ಪ್ರಸಿ
ದ್ಧರಾದ ಎಷ್ಟೋ ಜನರು ದೊಡ್ಡವರೆನಿಸಿಕೊಳ್ಳಲಿಕ್ಕೆ ಅವರ
ಪ್ರಸನ್ನ ಚಿತ್ತವೇ ಕಾರಣವೆಂದು ಗೊತ್ತಾಗುವದು. ಶ್ರೀ ಶಿವಾಜಿ
ಮಹಾರಾಜರು ದುರ್ಮುಖಿಗಳಾದದ್ದನ್ನು ಯಾರೂ ನೋಡಿದಿಲ್ಲ.
ಸಂತಶ್ರೇಷ್ಠ ತುಕಾರಾಮ ಮಹಾರಾಜರು ಎಂದೂ ದೀನರಾಗಿದ್ದಿಲ್ಲ.
ಜಗತ್ತು ಕನ್ನಡಿಯಂತಿರುವದು. ಅದರಲ್ಲಿ ಯಾವ ಪ್ರಕಾ
ರದ ಬಿಂಬವನ್ನು ಕಡವುವೆವೋ ಅದರ ಪ್ರತಿಬಿಂಬವೇ ಕಾಣುವದು.
ಯಾವ ಪ್ರಕಾರವಾಗಿ ಕೂಗುವೆವೋ ಅದೇ ಪ್ರಕಾರದ ಪ್ರತಿಧ್ವನಿಯುಂ
ಟಾಗುವದು. ಎಷ್ಟು ಖರ್ಚು ಮಾಡುವೆವೋ ಅಷ್ಟು ಹೊಂದು
ವೆವು. "ಖರ್ಚುಗಾರರ ಮನೆಯ ಮೊಟ್ಟೆಗಾರ” ಎಂದು ದೊಡ್ಡ
ವರು ಹೇಳಿರುವ ರಹಸ್ಯವಾದರೂ ಇದೇ
೭೯-----------------------------------------------------------
೧೪ನೆಯ ಖಂಡ-ದೈವೀಭಾವನೆ.
“ಸತ್ಯಂವದ, ಧರ್ಮಂಚರ; ಆಚಾರ್ಯ ದೇವೋಭವ, ಮಾತೃ
ದೇವೋಭವ, ಪಿತೃದೇವೋಭವ” ಮೊದಲಾದ ಉಪನಿಷದ್ವಾಕ್ಯಗಳು
ಪ್ರಗತಿಪರನಿಗೆ ಕೇವಲ ಮಾರ್ಗದರ್ಶಕಗಳಾಗಿವೆ. ಪ್ರತಿಯೊಬ್ಬ
ಮನುಷ್ಯನು ಪ್ರಗತಿಯನ್ನು ಹೊಂದುವಾಗ ದೈವೀಭಾವನೆಯುಳ್ಳವ
ನಾಗಿರಬೇಕು. ದೈವೀಭಾವವಿಲ್ಲದೆ ಪ್ರಗತಿಹೊಂದುವದೆಂದರೆ,
ನಾಯಿಯ ಬಾಲವನ್ನು ಕೊಳವೆಯಲ್ಲಿ ಹಾಕಿ ಸರಿಮಾಡಹೋದಂ
ತೆಯೇ ಸರಿ. ಗುರುವು ಗುರುತ್ವವನ್ನು ಕಾಯ್ದುಕೊಳ್ಳಲಿಕ್ಕೂ,
ಶಿಷ್ಯನು ಶಿಷ್ಯತ್ವವನ್ನು ಕಾಯ್ದುಕೊಳ್ಳಲಿಕ್ಕೂ, ತಾಯಿಯು
ಮಾತೃತ್ವವನ್ನು ರಕ್ಷಿಸಲಿಕ್ಕೂ, ತಂದೆಯು ಪಿತೃಭಾವದವನಾಗಿರ
ಲಿಕ್ಕೂ, ರಾಜನು ರಾಜನೆನಿಸಲಿಕ್ಕೂ ಪ್ರಜೆಗಳು ಪ್ರಜೆಗಳೆನಿಸಲಿಕ್ಕೂ,
ಕ್ಷತ್ರಿಯನ್ನು ಕ್ಷಾತ್ರಧರ್ಮಿಯಾಗಲಿಕ್ಕೂ, ಬ್ರಾಹ್ಮಣನು ಬ್ರಹ್ಮಜ್ಞಾನಿ
ಯಾಗಲಿಕ್ಕೂ, ವೈಶ್ಯನು ವ್ಯವಹಾರದಕ್ಷನಾಗಲಿಕ್ಕೂ, ಶೂದ್ರನು
ಬೇಸಾಯೆನಾಗಿಸಲಿಕ್ಕೂ ಅರ್ಹರಾಗಿ, ಪ್ರಗತಿಪರರಾಗಬೇಕಾದರೆ
ದೈವೀಭಾವನೆಯು ಅವರಲ್ಲಿ ಅತ್ಯವಶ್ಯವಾಗಿ ನೆಲೆಗೊಂಡಿರಬೇಕು.
ದೈವೀಭಾವನೆಯೆಂದರೆ ದೇವರಲ್ಲಿ ಇಡುವ ನಿಷ್ಠೆಯು, ಅಥವಾ
ಪೂಜ್ಯರಲ್ಲಿ ಇದ್ದ ಭಕ್ತಿಯು ಭಕ್ತನು ದೇವರಲ್ಲಿ ವಹಿಸುವ ಭಾವ
ನೆಯೂ, ಪತ್ನಿಯು ಪತಿಯಲ್ಲಿ ವಹಿಸುವ ಭಾವನೆಯ, ಮಗನು
ತಂದೆಯಲ್ಲಿ ವಹಿಸುವ ಭಾವನೆಯೂ, ಪ್ರಜೆಗಳು ರಾಜನಲ್ಲಿ ವಹಿಸುವ
ಭಾವನೆಯ ದೈವೀಭಾವನೆಯ ದ್ಯೋತಕಗಳಾಗಿರುವವು, ದೈವೀ
ಭಾವನೆಯಿಲ್ಲದ ಭಕ್ತನು ಭಕ್ತನಲ್ಲ ; ಪತ್ನಿಯು ಪತ್ನಿಯಲ್ಲ ; ಮಗನು
ಮಗನಲ್ಲ ; ಪ್ರಜೆಗಳು ಪ್ರಜೆಗಳಲ್ಲ. ಹೀಗೆಯೇ ಪ್ರಗತಿಪರಮನು
ಷ್ಯನು ಸಮಾಜದಲ್ಲಿ ಅವಶ್ಯವಾಗಿ ವಹಿಸಬೇಕಾದ ದೈವೀಭಾವನೆಯ
ಳ್ಳವನಾಗಿರಬೇಕಲ್ಲದೆ, ಸ್ವೀಕೃತಕಾರ್ಯದಲ್ಲಿಯೂ, ಕಾರ್ಯಸಾ
ಧನಗಳಲ್ಲಿಯೂ, ಕಾರ್ಯಸಾಧಕನಾದ ತನ್ನಲ್ಲಿಯೂ ದೈವೀಭಾವ
ನೆಯುಳ್ಳವನಾಗಿರಬೇಕು. ಕಾರ್ಯ, ಸಾಧನ, ಸಾಧ್ಯ ಈ ತ್ರಯಿ
೮೦--------------------------------------------------------------
ಗಳಲ್ಲಿಯ ದೈವೀಭಾವನೆಯು ಸರಿಯಾದ ಪ್ರಮಾಣದಲ್ಲಿದ್ದ ಹೊರತು
ಸಾಧಕನ ಪ್ರಗತಿಯು ಆಗುವದಿಲ್ಲ.
ಬ್ರಹ್ಮಭಾವನೆಯುತನಾಗಬೇಕಾದರೆ "ಆಹಂಬ್ರಹ್ಮಾಸ್ಮಿ” ಎಂದು
ಸಾಧಕನು ತಿಳಿದಿರಬೇಕಾಗುವದು, ಗುರುಸಾಕ್ಷಾತ್ಕಾರ ಮೊದಲಾದ
ವುಗಳಿಗಿಂತ ಆತ್ಮಸಾಕ್ಷಾತ್ಕಾರವೇ ಪ್ರಗತಿಪರನಿಗೆ ಪ್ರಾಮುಖ್ಯವಾದ
ಸಾಧನವೆಂದು ವೇದಾದಿಗಳಲ್ಲಿ ಹೇಳಿದೆ ಆತ್ಮಸಾಕ್ಷಾತ್ಕಾರದಿಂದ ಬ್ರಹ್ಮ
ತ್ವವನ್ನು ವಹಿಸುವವನು, ತಾನೊಬ್ಬ ಕೈಲಾಗದ ಆಶಾವಾದಿಯೆಂದು
ಭಾವಿಸಿ ನಡೆದರೆ, ಬ್ರಹ್ಮತ್ವವನ್ನು ಎಂದೂ ಹೊಂದಲಾರನು. ಆದ್ದ
ರಿಂದ ಪ್ರಗತಿಪರನು ಸುಗುಣಯುತನಾಗಿ ಸ್ವಂತದ ವಿಷಯದಲ್ಲಿ
ದೈವೀ ಭಾವನೆಯುಳ್ಳವನಾಗಿರಬೇಕು, ಆದರೆ ನಾನೇ ದೇವರು;
ನಾನೇ ಕುಲಗುರುವು; ನಾನೇ ಕುಲಪತಿಯೇ ಎಂದು ಬಹಿರಂಗದಲ್ಲಿ
ಹೇಳುತ್ತ ಹೋಗುವದು ದೈವೀಭಾವನೆಯ ಲಕ್ಷಣವಲ್ಲ, ಭಾವ
ನೆಯು ಬರೇ ಭಾವಿಸತಕ್ಕ ವಿಷಯವೇ ಹೊರತು ಒಡನುಡಿಯುವ
ವಿಷಯವಲ್ಲ.
ಪ್ರಗತಿಪರನು ತಾನೆಷ್ಟು ಪೂಜ್ಯನೂ, ಸನ್ಮಾರ್ಗಿಯೂ, ಕರ್ತೃ
ಮಾಕರ್ತೃಮಶಕ್ತಿಯುಳ್ಳವನೂ ಆಗಿದ್ದರೂ, ತನ್ನ ದೊಡ್ಡಿಸ್ತಿಕೆ
ಯನ್ನು ಹೇಳಿಕೊಳ್ಳಬಾರದು. ಹೀಗೆ ಹೇಳುವದರಿಂದ ತನ್ನ ಬಗ್ಗೆ
ಜನರಲ್ಲಿ ಆದರವು ಕಡಿಮೆಯಾಗಿ, ದ್ವೇಷಕ್ಕೆ ಗುರಿಯಾಗಿ ಸನ್ಮಾರ್ಗ
ದಿಂದ ಚ್ಯುತಿಹೊಂದಲಿಕ್ಕೆ ಕಾರಣವಾಗುವದು. ಆದ್ದರಿಂದಲೇ ಅವ
ತಾರಿಕರು ಕೂಡ ತಾವು ಕಿಂಕರರೆಂದು ಹೇಳಿಕೊಳ್ಳುವರು. "ಮಹಾ
ರಾಜಾ, ಈ ದೇಹಕ್ಕೆ ಎದೆ ಸೀಳಿದರೆ ಮೂರು ಅಕ್ಷರವಿಲ್ಲ ಮಹಾ
ರಾಜಾ! ಆದರೆ ಮಹಾರಾಜಾ, ಮಹಾಸ್ವಾಮಿಯು ಈ ಘಟದ ನಾಲಿ
ಗೆಯಮೇಲೆ ಕುಳಿತುಕೊಂಡು, ಮೃದಂಗಬಾರಿಸುವವನು ಛಾಪಹಾಕಿ
ಮೃದಂಗವನ್ನು ನುಡಿಸುವಂತೆ ನುಡಿಸುತ್ತಿರುವನು, ಮಹಾರಾಜಾ”
ಎಂದು ನುಡಿದು ದೇವರಲ್ಲಿ ತಾನು ಎಷ್ಟು ದೈವೀಭಾವನೆಯುಳ್ಳವ
ನಾಗಿದ್ದೇನೆಂಬದನ್ನು ವ್ಯಕ್ತಗೊಳಿಸುತ್ತಿದ್ದ ಶ್ರೀ ಶೇಷಾಚಲ
೮೧------------------------------------------------------------
ಗುರುವರನನ್ನು ನೋಡಿದವರಿಗೆ ನಿಜವಾದ ದೈವೀಭಾವನೆಯ ಕಲ್ಪ
ನೆಯು ಆಗದಿರದು.
ಪ್ರಗತಿಪರನು ಎಂಧ ನೀಚನನ್ನೂ ನಿಂದಿಸಬಾರದು. ವಿರಾಟ್
ಸ್ವರೂಪವಾದ ಜಗತ್ತೆಲ್ಲ ಈಶ್ವರನ ಸ್ವರೂಪವೇ ಆಗಿರುವದರಿಂದ
ಪ್ರತಿಯೊಂದನ್ನು ಈಶ್ವರೀಅಂಶವೆಂದು ತಿಳಿದು ನಡೆಯುವಲ್ಲಿ ಯಾವ
ತರದ ದೋಷವೂ ತಟ್ಟುವ ಸಂಭವವಿಲ್ಲ. "ಶುನಿಚೈವ ಸ್ವಪಾಕೇಚ
ಪಂಡಿತಃ ಸಮದರ್ಶಿನಃ” ಎಂಬಂತೆ ವಿವೇಕಿಯಾದ ಪ್ರಗತಿಪರಪಂಡಿ
ತನು ಜಗತ್ತಿಗೇ ಕಿಂಕರಭಾವವುಳ್ಳವನಾಗಿ ನಡೆಯುವುದು ಅತ್ಯವ
ಶ್ಯವು, "ಕಿಂಕರನಾದಹೊರತು ಶಂಕರನಾಗಲಾರನೆ”ಂಬ ದೊಡ್ಡ
ವರ ವಚನದ ಮರ್ಮವೂ ಇದೇ ಆಗಿದೆ:
ಆದರೆ ದೈವೀಭಾವನೆಯು, ವಿವೇಕಿಗಳು ಸಂಪಾದಿಸತಕ್ಕ
ಗುಣವಾಗಿದೆಯೇ ಹೊರತು, ಅವಿವೇಕಿಗಳಿಗೆ ಸಾಧ್ಯವಲ್ಲ, ಅವಿವೇಕಿ
ಗಳಿಂದ ದೈವೀಭಾವನೆ ಧರಿಸಲ್ಪಡಬೇಕಾದರೆ ಅನರ್ಧಕಾರಕ
ಗಳಾದ ತಪ್ಪುಗಳಾಗುವ ಅಂಜಿಕೆ ಬಹಳ ಉಂಟು. "ಮಾಘವ
ನ್ನೋದಿ ಮಗಕೆಟ್ಟನು, ಕುಮಾರವನ್ನೋದಿ ಅಳಿಯಕೆಟ್ಟನು”ಎಂ
ಬಂತೆ ಅವಿವೇಕಿಗಳಿಗೆ ದೈವೀಭಾವನೆಯ ನಿಜಸ್ವರೂಪವು ಗೊತ್ತಾಗ
ದಿದ್ದರೆ ಅವರು ಅಡ್ಡಮಾರ್ಗವನ್ನು ಹಿಡಿಯಹತ್ತುವರು. ಹೆಂಡತಿ
ಯಲ್ಲಿ ದೈವೀಭಾವನೆಯಿಡುವವನು ಆಕೆಯನ್ನು ಭೋಜ್ಯೇಷು
ಮಾತಾ ಶಯನೇಷು ರಂಭಾ ಕಾರ್ಯೇಷು ಮ೦ತ್ರಿ...” ಹೀಗೆ
ತಿಳಿಯಬೇಕು.
===============
೧೫ ನೆಯ ಖಂಡ-ದಾಸ್ಯವಿಮೋಚನ
ಹಂಗಿನರಮನೆಗಿಂತ ಇಂಗಡದ ಗುಡಿಲೇಸು, ಭಂಗಬಟ್ಟಂಬ
ಬಿಸಿಯನ್ನಕ್ಕಿಂತ ತಂಗುಳವೇ ಲೇಸು” ಎಂಬ ಸಮಾನ ಅರ್ಧಗಳುಳ್ಳ
ಈ ನಾಣ್ಣುಡಿಗಳು ದಾಸ್ಯವೃತ್ತಿಯನ್ನು ಹೇಯವೃತ್ತಿಯೆಂದು
ಬೋಧಿಸುತ್ತಿರುವವು ದಾಸ್ಯವತಿಯಿಂದ ಪ್ರಗತಿಗೆ ಪೋಷಕಗ
೮೨-----------------------------------------------------------
ಳಾದ ಗುಣಗಳನ್ನು ಪಡೆಯುವ ಮಾರ್ಗವು ಕಟ್ಟಾಗುತ್ತದೆ. ಕೇವಲ
ಯಜಮಾನನ ಅನುವರ್ತಿಯಾಗುವದರಿಂದ ಸೇವಕನ ಆತ್ಮವಿಶ್ವಾಸವು
ಲೋಪವಾಗುತ್ತದೆ, ಕಾರ್ಯಾಸಕ್ತಿಯು ಕಡಿಮೆಯಾಗುತ್ತದೆ,
ದುರಾಶೆಯು ಉತ್ಪನ್ನವಾಗುತ್ತದೆ, ಆಲಸ್ಯವು ಬೆಳೆಯುತ್ತದೆ, ಸದಭಿ
ಮಾನವೂ, ದೈವೀಭಾವನೆಗಳೂ ರೂಪಾಂತರಿಸುತ್ತವೆ. ಹೀಗೆ ದಾಸ್ಯ
ವೃತ್ತಿಯು ಒಂದಲ್ಲ, ಎರಡಲ್ಲ ಅನಂತದುರ್ಗುಣಗಳು ಸೇವಕನಲ್ಲಿ
ಅಂಕುರಿಸಲು ಕಾಣೀಭೂತವಾಗುತ್ತದೆ.
ನಾವು ಇಲ್ಲಿಯವರೆಗೆ ವಿವೇಚಿಸುತ್ತ ಬಂದ ವಿವರಣೆಗಳಮೇ
ಲಿಂದ ವಾಚಕರು ಗೊಂದಲದಲ್ಲಿ ಬಿದ್ದು' ಒಬ್ಬರ ಆಳಾದಹೊರ್ತು
ನಮ್ಮ ಹೊಟ್ಟೆ ತುಂಬುವ ಹಾಗಿಲ್ಲದ್ದರಿಂದ ನಾವು ಮುಂದೇನು ಮಾ
ಡಬೇಕು' ಎಂಬ ಕಲ್ಪನೆಯನ್ನು ಮಾಡಬಹುದು; ಆದರೆ ಅವರಿಗೆ
ನಮ್ಮ ಉತ್ತರವಿಷ್ಟೇ; ಒಬ್ಬರ ಆಧೀನನಾಗಿದ್ದ ಮನುಷ್ಯನು
ತಾನು ಎಷ್ಟರಮಟ್ಟಿಗೆ ಒಬ್ಬರನ್ನು ಆಶ್ರಯಿಸಿರುವೆನು, ತನ್ನಲ್ಲಿ
ಪೌರುಷಪ್ರಿಯತೆಯ, ಸ್ವಾತಂತ್ರ್ಯಪ್ರಿಯತೆಯೂ ಎಷ್ಟರಮಟ್ಟಿಗಿ
ರುವವು, ಎಂಬದನ್ನು ತೂಗಿ ನೋಡಿಕೊಳ್ಳಬೇಕು. ಮತ್ತು ತನ್ನ
ವಿಚಾರ ಸ್ವಾತಂತ್ರ್ಯವನ್ನಾದರೂ ಕಾಯ್ದುಕೊಳ್ಳಲಿಕ್ಕೆ ಅರ್ಹನಾಗ
ಬೇಕು. ಮನಸ್ಸಿನಿಂದ ಸ್ವಾತಂತ್ರ್ಯಸುಖವನ್ನು ಅನುಭವಿಸುತ್ತ
ರಟ್ಟೆಯನ್ನು ಮುರಿದು ( ದುಡಿದು ) ಹೊಟ್ಟೆ ತುಂಬಿಕೊಳ್ಳುವದು
ದಾಸ್ಯವಲ್ಲ.
ಒಬ್ಬನು ಮತ್ತೊಬ್ಬನನ್ನು ಆಶ್ರಯಿಸುವದರಲ್ಲಿ ಎರಡು ಪ್ರಕಾ
ರಗಳುಂಟು. ಕೇವಲ ವ್ಯವಹಾರದ ಅಧವಾ ಗರಜಿನ, ಅಥವಾ
ಕಾರ್ಯನಿಮಿತ್ಯದ ಮಟ್ಟಿಗೆ ಒಬ್ಬನು ಮತ್ತೊಬ್ಬನನ್ನು ಆಶ್ರಯಿಸಿ,
ಉಳಿದ ಬಾಬುಗಳಲ್ಲಿ ಸ್ವತಂತ್ರನಾಗಿ ಇರತಕ್ಕವನು ಒಂದನೆಯ
ವರ್ಗದವನು. ಕೇವಲ ಯಜಮಾನನ ಕೈಯೊಳಗಿನ ಕಲ್ಲಿನಂತೆ
ಇದ್ದು, ತನ್ನ ನೈಸರ್ಗಿಕಪುರುಷ ಸ್ವಾತಂತ್ರ್ಯವನ್ನು ಅವನಿಗೊಪ್ಪಿಸಿ
ತನ್ನ ಅತ್ಯಂತ ಶ್ರೇಷ್ಠವಾದ ಆಯುಷ್ಯವನ್ನು ಅವನ (ಅಂದರೆ ಯಜ
ಮಾನನ) ಸೇವೆಯಲ್ಲಿ ಕಾಲಕಳೆಯುವವನು ೨ನೇ ವರ್ಗದವನು.
೮೩------------------------------------------------------------
ಈ ಎರಡನೇ ವರ್ಗದವನೇ ನಿಜವಾದ ದಾಸ್ಯವೃತ್ತಿಯವನು: ಇವ
ನಲ್ಲಿ ಪೌರುಷವಿರುವದಿಲ್ಲ. ಕೇವಲ ಲಾಂಗೂಲಚಾಲನೆಯೇ ಇವನ
ಉಚ್ಚತಮ ಧ್ಯೇಯವಾಗಿರುವದು.
ದೇವ ಈ ಎರಡನೇ ವರ್ಗದ ದಾಸ್ಯವನ್ನು ಮಹಾತ್ಮರಲ್ಲಿ ಇಲ್ಲವೆ
ದೇವರಲ್ಲಿ ವಹಿಸಬೇಕಲ್ಲದೆ, ಮನುಷ್ಯರಲ್ಲಿ ವಹಿಸಲಾಗದು. ದೇವ
ರಲ್ಲಿಯೂ, ಮಹಾತ್ಮರಲ್ಲಿಯೂ ವಹಿಸಿದ ದಾಸ್ಯವು ದಾಸನಿಗೆ ಉಚ್ಚ
ಸ್ಥಿತಿಯ ಪ್ರಾಪ್ತಿಯನ್ನು ಮಾಡಿಕೊಡುತ್ತದೆ. ಮನುಷ್ಯರ ದಾಸ್ಯ
ತ್ವವು ಆಧೋಗತಿಯನ್ನು ದೊರಕಿಸಿಕೊಡುತ್ತದೆ:
ಸ್ತ್ರೀಯರು ಜನ್ಮತಃ ಪರಾಧೀನರಾದ್ದರಿಂದ ಅವರು ಪುರುಷ
ನಲ್ಲಿ ಅಂದರೆ ಗಂಡನ ದೈವೀಭಾವನೆಯಿಂದ ನಡೆದು ಪುರುಷನ
ಆಶ್ರಯದಿಂದ ಪುರುಷಾರ್ಧಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ.
“ನ ಸ್ತ್ರೀ ಸ್ವಾತಂತ್ರ್ಯ ರ್ಮಹತಿ” (ಮನುಸ್ಮೃತಿ)
ಮುಖ್ಯವಾಗಿ ಈಗಿನ ದಾಸ್ಯವರ್ಗದ ಕೆಲವರಲ್ಲಿರುವ ದೊಡ್ಡ
ದೋಷವೆಂದರೆ ಯಜಮಾನನ ಪ್ರಸನ್ನತೆಯನ್ನು ಪಡಕೊಳ್ಳುವದ
ಕ್ಕಾಗಿ ಎಂದ ನೀಚಕೆಲಸವನ್ನಾದರೂ ಮಾಡುವದು. ನೀಚ ಕೆಲಸ
ವೆಂದರೆ (ಶಗಣೀಬಳಿಯುವ ಕೆಲಸವಲ್ಲ.) ಕೇಳಲಿಕ್ಕೆ ಹೇಳಲಿಕ್ಕೆ
ಅಸಹ್ಯವಾದವುಗಳು, ಎಷ್ಟೊ ಜನ ನರಾಧಮರು ತಮ್ಮ ವರಿಷ್ಠರ
ತೃಪ್ತಿಗಾಗಿ ತಮ್ಮ ಸಹಧರ್ಮಿಣಿಯಾದ ಹೆಂಡತಿಯನ್ನು ಸಹ ಅರ್ಪಿಸು
ವರಂತೆ! ಹಾಯ್! ಹಾಯ್! ಇದಕ್ಕೂ ಹೆಚ್ಚಿನ ನೀಚತನವನ್ನು
ದಾಸ್ಯ ವರ್ಗದವರು ಇನ್ನೇನು ಮಾಡಬೇಕು?
ಒಟ್ಟಿನಮೇಲೆ ಕಾಯಾವಾಚಾಮನಸ್ಸಿನಿಂದ ಒಬ್ಬರ ಅಳು
ಆಗುವದು ಅತಿ ನಿಂದ್ಯವಿರುವದರಿಂದ ತೇಜಪುರುಷನು ತನ್ನ
ಕುಟುಂಬಪೋಷಣೆಗಾಗಿ ಮಂದಿಯ ಮೋರೆಯನ್ನು ನೋಡುತ್ತ
ಕುಳಿತುಕೊಳ್ಳಬಾರದು. ಸದಾ ಉದ್ಯೋಗಿಯಾಗಿ ಅರ್ಥಾತ್
ಪ್ರಗತಿಪರನಾಗಿ ದೈನ್ಯವಿಲ್ಲದೆ ಖಂಬೀರತನದಿಂದ ಕಾಲಕ್ಷೇಪಮಾಡು
ವಷ್ಟು ಸಮರ್ಥನಾಗಬೇಕು. "ಅನಾಯಾಸೇನಮರಣಂ ವಿನಾದೈ
ನ್ಯೇನ ಜೀವನಂ” ಎಂಬಿವು ತೇಜಸ್ವಿಗೆ ಲಭಿಸತಕ್ಕವಾಗಿವೆ.
೮೪----------------------------------------------------------
ದಾಸ್ಯವಿಮೋಚನವು ವ್ಯಕ್ತಿಗೂ, ಸಮಾಜಕ್ಕೂ, ರಾಷ್ಟ್ರಕ್ಕೂ
ಅತ್ಯವಶ್ಯವು. ಆದರೆ ಅದನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದನ್ನು
ಮಾತ್ರ ಬಹು ಸ್ವಲ್ಪ ಜನರಹೊರತು ಉಳಿದವರಾರಿಗೂ ಗೊತ್ತಿಲ್ಲ.
ಪ್ರಗತಿಹೊಂದುವವನು, ಅಂದರೆ ದಾಸ್ಯವಿಮೋಚನ ಮಾಡಿಕೊಳ್ಳುವ
ವನು ಮೇಲೆ ಹೇಳಿದ ಎಲ್ಲ ಗುಣಗಳನ್ನು ತನ್ನಲ್ಲಿ ಹೆಚ್ಚು ಹೆಚ್ಚಾಗಿ
ಸಂಗ್ರಹಿಸಬೇಕು. ಆ ಗುಣಗಳು ಪರಿಪೂರ್ಣವಾದವಾದಂತೆ, ಪ್ರಗತಿಯು
ಆಗಿ, ದಾಸ್ಯವಿಮೋಚನೆಯಾಗುವದು; ಸಂಶಯವಿಲ್ಲ,
===============
ಉಪಸಂಹಾರ.
ಪೂರ್ವಸಂಚಯದ ಪ್ರಗತಿ ಪ್ರವರ್ತಕನಿಗೆ ಪ್ರಗತಿಮಾರ್ಗಗಳನ್ನು
ಬೇರೆಯವರು ತೋರಿಸುವ ಕಾರಣವಿಲ್ಲ; ಆದರೆ ಆ ಸಂಚಯವು
ಸರ್ವರಿಗೂ ಇರುತ್ತದೆಯೆಂದು ಭಾವಿಸಿನಡೆಯುವದು ಮಾತ್ರ ಯೋಗ್ಯ
ವಲ್ಲದ್ದರಿಂದ, ಪ್ರಗತಿಮಾರ್ಗಗಳನ್ನು ಕಂಡುಕೊಳ್ಳಿರೆಂದು ಸಾಮಾ
ನ್ಯವಾಗಿ ಹೇಳುವದು ತಪ್ಪಾಗಲಾರದು.
ಪ್ರಗತಿಮಾರ್ಗಗಳು ಮೇಲೆ ಬರೆದವವಿಷ್ಟೇ ಇವೆಯೆಂದು ನಿರ್ಷ್ಕ
ರ್ಷವಾಗಿ ಹೇಳಲಾಗುವದಿಲ್ಲ. ಇವುಗಳಲ್ಲದೆ ಇನ್ನೂ ಅನೇಕ
ಮಾರ್ಗಗಳಿಂದ ಪ್ರಗತಿಹೊಂದಬಹುದಾಗಿದೆ. ಆದರೆ ಅವೆಲ್ಲ ಮಾರ್ಗ
ಗಳು ಈಗ ವಿವರಿಸಿರುವ ಸ್ವಾತಂತ್ರ್ಯಪ್ರೀತಿ, ದೃಢನಿಶ್ಚಯ, ರೂಢಿ
ವಿನಾಶಕ, ಸಾಧನಾಭಾವ, ಪ್ರತಿಕೂಲ ಸಮಯಸಾಫಲ್ಯ, ಆಶ್ರಯ
ರಜ್ಜು ಛೇದನ, ಸಂಕಲ್ಪಶಕ್ತಿ, ಸಾಮರ್ಥ್ಯಸಂಚಯ, ಉಪಹಾಸೋ
ತ್ತೇಜನ, ಆಸ್ಥೆ ಕಾಳಜಿ, ಪ್ರವಾಸ, ಪ್ರಸನ್ನತೆ, ದೈವೀಭಾವನೆ,
ದಾಸ್ಯ ವಿಮೋಚನೆ ಮುಂತಾದ ಪ್ರಗತಿಪಧಗಳಲ್ಲಿಯೇ ಹೆಚ್ಚು ಕಡಿಮೆ
ಮಾನದಿಂದ ಅಡಕವಾಗಿರುತ್ತವೆ. ಹ್ಯಾಗೇಆಗಲಿ, ಯಾವದೇ ಮಾರ್ಗ
ವನ್ನು ಹಿಡಿದೇಆಗಲಿ, ಮನುಷ್ಯನು ಪ್ರಗತಿಹೊಂದಲಿಕ್ಕೆ ಮಾಡತ
ಕ್ಕದ್ದು. ಇಲ್ಲಿ ಮಾರ್ಗಗಳ ಭೇದಗಳಿಗೆ ಮಹತ್ವವಿರದೆ, ಪ್ರಗತಿಗೆ
ಮಹತ್ವವಿರುತ್ತದೆ.
ಸ೦ಪೂಣ೯,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ