ಕೈಲಾಸಂ ಕಲ್ಪನೆ ಬಿ. ಎಸ್ ರಾಮರಾವ್
-----------------------------------------
ಮೊದಲ ಮುದ್ರಣ ೧೯೫೧
ನಗುವ-ನಂದ ವಾರಪತ್ರಿಕೆಯ ದೀವಾವಳಿ ವಿಶೇಷ ಸಂಚಿಕೆ
ಸ೦ಪಾದಕ . .ಬಿ. ರಂಗನಾಥರಾವ್ | . ಪುಟ ೯೩,
ಸಂಚಾಲಕ : ರಾಘವೇಂದ | ...ರಿಂದ ೧೧೯
ಇದೀಗ ಎರಡನೆಯ ಮುದ್ರಣ ಬೇರೆ ಹೊತ್ತಿಗೆಯಾಗಿ ೨೦ ವರುಷ ಕಳೆದ:
೧೯೭೧ ನವೆಂಬರು ೨೫ ನೆಯ ಪಣ್ಮತಿಧಿಯಂದು
ಕಾಪಿರೈಟ್ .. ಕೈಲಾಸಂ
ಬೆಲೆ : . ಎರಡೂವರೆ ರೂಪಾಯಿ
ಮುದ್ರಣ ; ಶ್ರೀ ಶಂಕರ ಪ್ರಿಂಟಿಂಗ್ ವರ್ಕ್ಸ್,
ಜಯನಗರ, ಬೆಂಗಳೂರು-೧೧
---------------------------------------
[ ಕೊನೆಯ ಪುಟದಲ್ಲಿನ ಎರಡು ಲೇಖನಗಳು, “ ಬಿ. ವಿ. ಕೆ. ಶಾಸ್ತ್ರಿ
. (ಮುರಲಿ)", ಮತ್ತು “ ಸಂಪಾದಕ " ರಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ
೧೯೫೪ನೆಯ ಇನವಿಯಲ್ಲಿ ಪ್ರಕಟವಾದವು. ಆ ಪತ್ರಿಕೆಯ ನಂವಾದಕರು
ಮಾನ್ಯಮ ಶ್ರೀ ಟಿ. ಎನ್. ರಾಮಚಂದೃರಾಯರ courtesy ಇಂದ
ಇಲ್ಲಿಲ ಪುನಃ ಮುದ್ರಿಸಿದೆ.
ಈ ಹೊತ್ತಿಗೆಗೆಂದೇ ಬರೆದ ಇನ್ನೆರಡು ಲೇಖನ ಶ್ರೀ. ಹೆಚ್,
ವಿ. ವೆಂಕಟಸುಬ್ಬಯ್ಯ ಮತ್ತು ಶ್ರೀ ಕೆ. ಎನ್. _ ಶ್ರೀನಿವಾಸಮೂರ್ತಿ
ಇವರಿಂದ. ಈ ಇಬ್ಬರು ಅಕೌಂಟ್ಸ್ ಆಫೀಸರು ಕೈಲಾಸಂ ಜತೆಗಿದ್ದು
ಅನುಭವಿಸಿದ ರಸನಿಮಿಷಗಳ ನೆನವು ಮಾಡಿಕೊಟ್ಟಿದ್ದಾರೆ. ಇವರಿಗೆ
ಸಂಪಾದಕನ ಕೃತಜ್ಞತೆ ಇದೆ.
ಇಲ್ಲಿನ ಪಡಿಯಚ್ಚು ಪ್ರಸಿದ್ಧ ನಾಟಕಕಾರ ಶ್ರೀ ದಾಶರಧಿ ದೀಕ್ಷಿತರು
ತಮ್ಮ “ ಗಾಂಪ " ರ ಗುಂಪು ಜೊತೆ ಮತ್ತು ಇತರ ಮಿತ್ರರೊಡನೆ
ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ 'ಷೀಲ್ಡ್:'ಸಂಪಾದಿಸಿದ 'ನಂಕಂಪ್ನಿ'
ನಾಟಕದ ದೃಶ್ಮಗಳು. ]
-----------------------------------------
ಪಾತ್ರಗಳು
ಸೂತ್ರಧಾರ ನಟಿ.
ಪಾತ್ರಧಾರಿಗಳು ಮೂರ್ತಿ, ಸುಬ್ಬು, ರಂಗು.
ಶಂಬರ | ಬೋರ, ಬೋರಿ
ವಿದೂಷಕ | ಬೀರ ಬೀರಿ
ರತಿ | ಮಾರ, ಮಾರಿ
ಶಸ್ತ್ರಧಾರಿ |
ನೇಗಿಲಯೋಗಿ | ಸ್ಯಾನಿಟರಿ ಇನ್ಸ್ಪೆಕ್ಟರು
"ಸಿಂಹ" | ಪೋಲೀಸ್ "
ಮಹಾರಾಣಿ | ಅಯ್ಯರು, ಇಬ್ಬರು
ಇತರ ಪರಿವಾರ | ಮಿತ್ರರು ಇತರರು
- ಪ್ರೇಕ್ಷಕರು -
-------------------------------------------
ಶ ೦ ಬ ರ ನ ಶೃ ಂ ಗಾ ರ --.
ನಾಂದೀ ದೃಶ್ಯ
____
[ರಂಗಭೂಮಿಯ ಏರ್ಪಾಡು | ಅ | ಆ | ಈ ರೀತಿ ಇದೆ. . ಎಡಗಡೆ ರಂಗದ
ಅರ್ಧದಲ್ಲಿ “ಗ್ರೀನ್ ರೂಂ, ಬಲಗದೆ `ಅ`ದಲ್ಲಿ ನಾಟಕ ಪ್ರದರ್ಶನ,. 'ಅ` ಪರದೆ ಎತ್ತಿದ್ದಾಗ
'ಆ' ಪರದೆ ಬಿದ್ದಿರುತ್ತದೆ, 'ಅ` ಪರದೆ ಬಿದ್ದಿದದ್ದಾಗ, “ಆ ಪರದೆ ಎದ್ದಿರುತ್ತದೆ. ಗ್ರೀನ್
ರೂಮಿನಿಂದ 'ಆ` ರಂಗಕ್ಕೆ ಬರಲು ಹೋಗಲು ಅಡ್ಡ ಗೋಡೆಯಂತೆ ಪರದೆ ಇದ್ದು ದ್ವಾರ
ಗಳಿರುತ್ತವೆ . 'ಅ' ರಂಗದಲ್ಲಿ ಒಂದರ ಹಿಂದೊಂದು ಪರದೆಗಳೂ ಅಂಕದ ಪರದೆಯೂ ಇದೆ
ಗ್ರೀನ್ ರೂಮಿಗೆ ಒಂದೇ ಪರದೆ. . ಆದರೆ ಸೊಳ್ಳಪರದೆಯಂತೆ ಇದ್ದು ಒಳಗೆ ನಡೆಯು
ವುದೆಲ್ಲ ಸ್ವಲ್ಪ ಸ್ವಲ್ಪ ಕಾಣುತ್ತದೆ. ರಂಗಭೂಮಿಯ ಮುಂದೆ 'ಪಿಟ್' ಇದ್ದು ವಾದ್ಯ
ಗಾರರು), ದೀಪಕ್ಕೆ ಬಣ್ಣದ ಕಾಗದ ಹಾಕುವವರು, ಸ್ವಿಚ್‌ಹಾಕಿ ಆರಿಸುವವರು ಕೂರು
ವುದಕ್ಕೆ ಜಾಗಮಾಡಿದೆ.]
[ 'ಅ` ಮತ್ತು 'ಆ" ರಂಗವೆರಡನ್ಕೂ ಮುಚ್ಚಿರುವ ದೊಡ್ಡ. ಅಂಕದ ಪರದೆ ಎದ್ದರೆ
ನಾಟಕವಾರಂಭವಾದಂತೆ . ಪ್ರೇಕ್ಷಕರು ನೆರದ ಕೂಡಲೆ ನಾಟಕಾರಂಭ ಸೂಚನೆಯ ಗಂಟೆ
ಐದೈದು ನಿಮಿಷಕ್ಕೊಂದು ಸಲ ಬಾರಿಸಲ್ಬಟ್ಟು 3ನೆಯ ಸಲ ಬಾರಿಸಿದೊಡನೆ 'ಪಿಟ್'
ನಲ್ಲಿದ್ದ ವಾದ್ಯಗಾರರಿಂದ ಸಂಗೀತ ಆರಂಭವಾಗಿ ಮೊಳಗುತ್ತದೆ. " ಎಲ್ಲಿರುವೆ ತಂದೆ
ಬಾರೋ ಮಾರುತಿ “ ಹಾಡನ್ನು ಸಂಗತಿಗಳೊಡನೆ ಬಾರಿಸಲಾಗುವುದು. ಕೊನೆಯ ಸಂಗತಿ
ಮುಗಿವ ಹೂತ್ತಿಗೆ ತಬಲಾ ಮುಕ್ತಾಯದ ಏಟಿಗೆ ಸರಿಯಾಗಿ ಅಂಕದ ಪರದೆ
ಏಳುವುದು.
ಗ್ರೀನ್ ರೂಮಿನಲ್ಲಿ ಎಲ್ಲರೂ “ಮೇಕಪ್' ಮಾಡಿಕೊಳ್ಳುತ್ತ. ಪೋಷಾಕು ಹಾಕಿ
ಕೊಳ್ಳುತ್ತಿದ್ದಾರೆ. ಹೆಂಗಸರ. ಚಲ್ಲಣಗಳನ್ನು . ಹಾಕಿಕೊಂಡು ಕುಪ್ಪಸ
ತೊಟ್ಟು ಎದೆಗೆ ಚೆಂಡುಗಳನ್ನು ಕಟ್ಟಿಕೊಳ್ಳುತ್ತಿರುವರು. ]
ಸೂತ್ರಧಾರನ ಪಾತ್ರಕ್ಕೆ ಸಿದ್ದನಾಗುತ್ತಿರುವವನನ್ನು ಕುರಿತು ಸ್ಟೀ ಪಾತ್ಪರಧಾರಿ ಒಬ್ಬ :
“ ಮೂರ್ತಿ ಲೇ ! ಸೇಫ್ಟೀ ಪಿನ್ನೆಲ್ಲಮ್ಮಾ , ಈ ಬ್ರೈಸ್ಟ್ ಬಾಲ್ಸ್
ನಿಲ್ಲೋದೇ ಇಲ್ಲವಲ್ಲೊ ? "
----------------------------------------------
೨
ಮೂರ್ತಿ_ಲೋ, ರುಗೂ ! ನೀ ಮಾಡೋ ಮಹಾ ಹೆಣ್ಣು ಪಾರ್ಟಿಗೆ
ಬ್ರೆಸ್ಟ್ ಬಾಲ್ಸ್ ಬೇರೇ ಏನೋ ? ಅಲ್ಲಿರೋ ಆ ಹರಕಲು ಬಟ್ಟಿ ಉಂಡೆ
ಮಾಡಿ ತುರುಕ್ಕೊಂಡು ಒಂದು ತುಂಡು ಬಟ್ಟೆ ಭದ್ರವಾಗಿ ಬಿಕ್ಕೊಂಡು
ಮೇಲೆ ಕುಪ್ಪಸ ತೊಟ್ಟುಕೊಳ್ಳೋ,
ರಂಗೂ--ಲೋ, ನಟೆಪಾರ್ಟೋ ! ಪರದೇ ಎತ್ತತ್ತಲೂ ಕಾಣಿಸೋದು
ನಾನೇ, . ಸರಿಯಾಗಿರಬೇಡವೇನೋ ? ಕೊಡೋ _ ಎರಡು ಸೇಫ್ಟೀ
ಪಿನ್ನೂಂದ್ರೆ ?
ಮೂರ್ತಿ ಎತ್ತತ್ತಲೂ ಯಾರೂ ಕಾಣಿಸೊಲ್ಲಾ. ಎಂಟ
ರಾದರೆ ಸೂತ್ರಧಾರ ನಾನೆ. ಹೇಳಿದಷ್ಟು ಮಾಡೋಂದ್ರೆ ? ನೀ ಮಾಡೋ
ನಟೀ ಪಾರ್ಟಿಗೆ ಸೇಫ್ಟೀಪಿನ್ನು ಬೇರೆ
ರಂಗೂ-- ಸರೀ ! ಯಾವಾಗಿನ್ದಾಗೇ ಈ ಹೊತ್ತು. ಒಳ್ಳೇ ಹಿಡಿಂಬನ
ಹಟ ನಿನ್ನ ಹಟ. ಸ್ಸರೀ ! ಇನ್ನು ಇಲ್ಲಿ ಕಿರ್ಲೇನ್ಪ್ರಯೋಜ್ನ ಇಲ್ಲಿ ಕಿರಲಿಬಿಟ್ಟು
ಪೀಪೀ ಪಾಚೊಂಬಿಟ್ರೆ ಆಡಿಯನ್ಸಿಂದ ಪಾಪಾಸ್ ಬೀಳತ್ತಷ್ಟೇ. ಹೇಗೋ
ಏಗಬೇಕು. ಸುಬ್ಲೂಲೇ ! ಆ ರತೀ ಪಾರ್ಟಿನ್ ಟೈಟ್ ಕುಪ್ಪಸ ತೊಡಿಸೋ,
ಈ ಚಿಂದೀ ಬ್ರೆಸ್ಟ್ ಸಿಗೇ. ಇನ್ನೂ ಕಂಡರೆ ಸೆರಗಿನಿಂದ ಪೂರ್ತಿ ಮುಚ್ಚಿಕೊಂಡ್ರೆ
ಆಯ್ತು.
ಸುಬ್ಬು -ರತೀ ಪಾರ್ಟಿಂದು ಕುಪ್ಪಸ ನಿಂಗೆ ಕೊಟ್ಟುಬಿಟ್ಟು ನಾನು
ಬರೀ ಬಾಡಿ ಬಿಕ್ಕೊಂಡು ಬರ್ಲೆ? ಒಳ್ಳೇ ಗಿರಾಕಿ ನೀನು ! ಇಷ್ಟಾಗಿ
ನಟೀ ಪಾರ್ಟಿಗೇನು, ಹ್ಯಾಗಿದ್ದರೂ ಆಯಿತು. ನನ್ನ ನೋಡೋ ! ಮೊದಲು
'ರತಿ' ಆಮೇಲೆ _ 'ಅಪ್ಟುಡೇಟ್ ಅಮ್ಮಯ್ಯಾ`, ಎರಡರಲ್ಲೂ ಸೆರಗು
ಮುಚ್ಚೋಹಾಗಿಲ್ಲ ನಿಂಗೇನು ? ನೀನೇ ಅಂದ್ಧಾಗೆ ಸೆರಗಿನಲ್ಲಿ ಮೈ
ಮುಚ್ಚಿಕೋ.
ರಂಗೂ --ಅಲ್ಕಾಣೋ ! ನಾನು ಉಟ್ಕೋತಾ ಇರೋದು ಸೀರೆ
ಅಲ್ಲಾ, . ಲಂಗದ ಮೇಲೆ ಹೊಲಿದಿರೋ ದಾವಣಿ, ಇದರ ಸೆರಗು ಮೊರವೇ
ಯಾವಾಗಲೂ. ಇದರಲ್ಲೇನು ಮುಚ್ಕೊಳೋದೋ ? ನಿನ್ನೆರಡೂ
-----------------------------------------
3
ಪಾರ್ಟಿಗೂ ಸರಿಹೋಗುತ್ತೆ ಇದು. ನಿನ್ನ ಸೀರೆ ನಂಗೆ ಕೊಡಮ್ಮಾ,
ಲೋ ದಮ್ಮಯ್ಯಾ!
ಸುಬ್ಬು ~ ತಕ್ಕೊಂಡು ಹಾಳಾಗ್ಹೋಗು! ಅಂಕದ ಪರ್ದೆ ಎತ್ತಿಬಿಡತ್ತೆ
ಇನ್ನು. ಬೇಗ ಸುತ್ತುಕೊಂಡು ತೊಲಗು.
(ರಂಗುವಿನ ಕದೆ ತಾನು ಉಡುತ್ತಿದ್ದ ಸೀರೆ ಬಿಚ್ಚಿ ಎಸೆಯುವನು. ತಾನು ಅರೆಬೆತ್ತಲೆ
ಯಾಗುವನು, ರಂಗುವು ಇವನು ಎಸೆದ ಸೀರೆಯನ್ನು ತನ್ನ ದಾವಣಿಯ ಮೇಲೇ ಸುತ್ತಿ
ಕೊಳ್ಳುವನು. ಸೀರೆ ಬಿಚ್ಚುವಾಗ ಠೋಫನ್ ಕೆದರಿದ್ದನ್ನು ನೋಡಿಕೊಳ್ಳಲು ಕನ್ನಡಿಯ
ಹತ್ತಿರ ಸುಬ್ಬು ಹೋಗುವನು. ಅಷ್ಟರಲ್ಲಿ ನಾಟಕ ಪ್ರಾರಂಭವಾಗುವ ಬೆಲ್ ಆಗುವುದು
ಸೂತ್ರಧಾರ ಮೂರ್ತಿ ಬಂದು ರಂಗು ನಟಿಯನ್ನು ತಳ್ಳುತ್ತ)
ಮೂರ್ತಿ-- ನಡಿಯೋಲೇ ಬೆಲ್ ಆಯಿತು. ಸೈಡ್ ವಿಂಗ್ಸಲ್ಲಿ
ನಿಂತಿರು. ಕರೀತ್ಲೂ ಬಾ. ಸಾಕು ನಿನ್ನ ಅಲಂಕಾರ. ನೀನೋ ನಿನ್ನ ಬ್ರೆಸ್ಟ್
ಬಾಲ್ಸೋ , ಅಲ್ಲವೋ ಒಳ್ಳೇ ಗುಡಾಣದ್ಹಾಗೆ ಸುತ್ತಿಕೊಂಡಿದೀಯಲ್ಲೋ
ಸೀರೇ ! ಕುತ್ಇಗೆಯಿಂದ ಕಾಲಿನವರಿಗೆ ಒಳ್ಳೇ ಸಿಮೆಂಟ್ ಮೂಟೆ ನಿಲ್ಲಿಸಿದ
ಹಾಗೇ ! ಅದರ ಮೇಲೆ ತಂಬಿಗೆ ಕವಿಚಿ ಹಾಕಿದ ಹಾಗಿದೆ ನಿನ್ನ ಮೂತಿ-
ಬಾ ! ಹ್ಯಾಗಿದರೂವೇ ಆಗೇ ಹೋಯಿತು.
[ಇಬ್ಬರೂ 'ಆ' ರಂಗಕ್ಕೆ ಬಂದು, ಸೂತ್ರಧಾರ ಮಧ್ಯೆ ಪರದೆಯ ಹಿಂದೆಯೊ
ನಟಿಯು ಸೈಡ್ವಿಂಗ್ಸ್ ಲ್ಲೂ ನಿಲ್ಲುವರು 'ಆ' ಪರದೆ ಏಳುವುದು, ಸೂತ್ರಧಾರ
ಅಂಜಲಿಯಲ್ಲಿ ಪುಷ್ಪಗಳನ್ನು ಹಿಡಿದು 'ಪಿಟ್' ಕಡೆ ನೋಡುವನು, ವಾದ್ಯಗಳಾರಂಭ
ವಾಗುವುದು. . ಶ್ರುತಿ 'ಒಂದು ಕರೀ` ಎಂದು ತೋರಿಸಲು ಯಾವ ಸಂಜ್ಞೆಯೂ ಹೊಳೆ
ಯದೆ, ಹೆಬ್ಬೆಟ್ಟನ್ನು ಕರೀ ಕೋಟಿನ ಮೇಲೆ ಮೇಲಿಂದ ಕೆಳಕ್ಕೆ ಜಾರಿಸುವನು. ಆದರೆ
ಅಂಜಲಿಬದ್ಧನಾಗಿದ್ದರಿಂ ಎರಡೂ ಹೆಬ್ಬೆಟ್ಟನ್ನು ಸವರಿದ್ದರಿಂದ ಹಾರ್ಮೋನಿಯಂ
`ಏರಡೂ ಕರೀ' ಅರಂಭವಾಗುವುದು, ಆಡಿಯನ್ಸಲ್ಲಿ ಗದ್ದಲ ಅಡಗದಿರುವುದರ ಅವಕಾಶ
ಉಪಯೋಗಿಸಿಕೊಂಡು ಸೂತ್ರಧಾರ ಪಿಟ್ ನವರ ಕಡೆ ಓಂದು ಹಜ್ಚೆ ಮುಂದೆ ಬಂದು
“ಎರಡು ಕರೀ ಅಲ್ವೋ, ಕೇಕಡಿ, ಒಂದೂ ಕರಿ ! ಹಾಳಾಗ್ಹೋಯ್ತು !“
ಅನ್ನುವನು,
ಹಾರ್ಮೋನಿಯಂ ಹರಿಯಪ್ಪ---{ಕುಳಿತಲ್ಲಿಂದಲೇ) ಟೇಜುಮ್ಯಾಗೆ
ನಿಂತಾಗ ಸೃತಿ ತೋರಿಸಾಕೆ ಬೆಳ್ಳ್‌ನಲ್ಲಿ ಇಂಗೆ ತೋವನ್ ಸವರಿಕೋ ಅಂತ
-----------------------------------------
೪
ಏಳಿರಲಿಲ್ನಾ. ನಿಂಗ್ ತೋರ್ಪ ಇಲ್ಲ 'ಕರೀ ಒಂದು' ಅಂತ ಏಳಾಕೆ. ಓಗ್ಲಿ,
ಕೋಟು, ಲಾಂಗ್ ಕೋಟು, ಕರೇದು ಆಕ್ಕೊಂಡಿದ್ದಿಯಾ, ಅದರ ಮ್ಯಾಗೆ
ಒಂದು ಬೆಟ್ಟು ಸವರಿ ತೋರಿಸಬಾರದಾಗಿತ್ತಾ, ಬೇಕೂಪಾ !
ಮೂರ್ತಿ--ತೋರಿಸಿದ್ನಲ್ಲೋ ತಿರುಬೋಕಿ !
ಹರಿಯಪ್ಟ-- ಏನ್ ತೋರ್ಸಿದ್ನೀನು ? ಗ್ಯಾನಾ ಗೀನಾ ಐತಾ ಮೈ
ಮ್ಯಾಗೆ ಎರಡು ಎಬ್ಬೆಟ್ಟು ತೋರಸ್‌ನಿಲ್ವಾ ನೀನು ಕೋಟು ಮ್ಯಾಗೆ ಸವರಿ
ಕೊಂಡೂ ? ಅದ್ಕೆ ಎಳ್ಡೂಕರೀ ಇಟ್ಚಿದ್ನಾನೂ ! ಈಗ ಕಿರಿಚಿಕೊಂಡೆಲ್ಲಾ
ಒಂದು ಕರೀ ಅಂತ. ಆಗ್ಡೆ ಬಾಯಿಬಿಡಾಕೆ ಮುಂಚೇನೇ ಕಿರ್ಲಿದ್ದಿದ್ರೆ ! ಅದೆಲ್ಲಾ
ಎಂಗಾಗ್ತದೇ ನಿಂಗೇ : ಟೇಜು ಮೇಲೆ ನೀನು ರಾಜಾ ಪಾರ್ಟಿನೋನೂಂತ
ತೋರಿಸ್ಕೋ ಬೇಡ್ವಾ ! ಊ ! ಸುರುಮಾಡು ಒತ್ತಾಯ್ತು, ಜನ ಕಾದವ್ರೆ !
ಕರೇ ಒಂದು !
ಮೂರ್ತಿ--ಊ | ನಾಟಿ ರಾಗ ಬಾರಿಸು. ನೀನು ಬಾರಿಸೋದ್ರಲ್ಲಿ
ಅದು ನಾಟ್ ಎ ರಾಗ (Not a raga) ಆಗಿ ಹೋಗುತ್ತೆ ಸದ್ಯ.
ಹುಷಾರಾಗಿ ಆ ಮನೆಗಳು ಸುಮ್ಮನೆ ಮುಟ್ಟೋ ಸಾಕು.
ಹರಿಯಪ್ಪ-- ನೀ ಸುರುಮಾಡಪ್ಟಾ ಕಂಡೀವ್ನಿ ಎಲ್ಲಾ. ಮನೆ
ಮುಟ್ಟಿದರೆ ಕಯ್ ಅಂತದಾ ಈ ಪಟ್ಟಿಗೆ ? ರಿಪೇರಿ ಮಾಡಿಸಿ ಇನ್ನೊಂದು
ರೀಡ್ ಆಕ್ಸೋವಾ ಅಂದರೆ ಆವೊತ್ನಿಂದ ಪಂಚಾಯಿತಿ ಅದ್ಕೆ. ಕೊಡತಿ
ಎತ್ಕೊಂಡು ಬಡದರೇ ಇದು ಕೂಗೋದು. ಸುರುಮಾಡಪ್ಪ ಇನ್ನು ! ]
ಸೂತ್ತಧಾರ__ ರಾಗ : ನಾಟಿ
ಸರಸ್ವತತೀ ನಮಸ್ತುಭ್ಶಂ
ವರದೇ ಕಾಮರೂಪಿಣಿ |
ನಾಟಕಾರಂಭಂ ಕರಷ್ಯಾಮಿ
ಸಿದ್ದಿರ್ಭವತುಮೇ ಸದಾ ||
ಸರಸ್ತತಿಯನ್ನು ಆಹ್ವಯಿಸಿದ್ದಾಯಿತು. ಇನ್ನು ಬರೀ ಸರಸ್ವತಿ
ಪ್ರಸನ್ನವಾದರೇನಾದ ಹಾಗಾಯಿತು ? ಲಕ್ಷ್ಮೀ ಕಟಾಕ್ಷವಿಲ್ಲದೆ ಪ್ರಪಂಚ
ನಡೆಯುವುದು ಹೇಗೆ ? ಲಕ್ಷೀದೇವಿಯನ್ನು ಭಜಿಸುವಾ.
--------------------------------------
5
ಲಕ್ಮೀ ಹೇ ನಮುಸ್ತುಭ್ಮಂ
ವರದೇ ಕಾಮುರೂಪಿಣಿ
ನಾಟಕಾರಂಭಂ ಕರಿಷ್ಯಾಮಿ
ಸಿದ್ದಿ ರ್ಭವತುಮೇ ಸದಾ !
(ಅಂಜಲಿಯ ಪುಷ್ಪಗಳನ್ನು ಸಭಾಸದರ ಕಡೆಗೆ ಎರಚಿ ಕೈಮುಗಿದು ತೋರ್ಬೆರಳನ್ನೂ
ಮಧ್ಯಬೆರಳನ್ನೂ ಕೋಟಿನ ಮೇಲೆ ಸವರಿ 'ಕರೀ ಎರಡು' ಶೃತಿಯೆನ್ನುವನು : ಶೃತಿ
ಬದಲಾಯಿಸಿ ಹರಿಯವಪ್ಪ ಆವರ್ತ ಹಿಡಿದಾಗ)
ಗ್ಯಾಲರಿ ಪ್ರೇಕ್ಷಕರಲ್ಲೊಬ್ಬ-- ಜಯಜಯ ಗೋಕುಲ ಬಾಲ ಹಾಡು
ಮೂರ್ತಪ್ಪೋ !
(ಆ ಕೂಗಿಗೆ ಗಮುನಕೊಡದೆ ಸೂತ್ಪಧಾರ)
ರಾಗ - ಕಮಾಚು
ಸುಜನ ಜೀವನಾ ರಾವು ಸುಗುಣಭೂಷಣಾ | ರಾಮಾ | !
ಪ್ರೇಕ್ಷಕ---ಲೇ ಮೂರ್ತಪ್ಟಾ ! ಜಯಜಯ ಗೋಕುಲಬಾಲ ಹಾಡೋ
ಅಂದ್ಬೆ ಏನೋ ಎತ್ತಾನೆ ರಾಗ ! ಹಾಡೋ ಜಯಜಯ ಗೋಕುಲಬಾಲ !
ಮತ್ತೊಬ್ಜ ಪ್ರೇಕ್ಷಕ -ಅಡೇ ಅದೆಲ್ಲಾ ವಾಣಾ ! ಅಂದ ಬಂಗೇರುಹಾ
ಪಾಡರಾಡೇ ಮೂರ್ತಿಯಪ್ಪಾ-'ಬಂಗೇರುಹಾ' ಪಾಡು !
[ಸೂತ್ರಧಾರ (ಕಕ್ಕಾಬಿಕ್ಕಿಯಾಗಿ ಹರಿಯಪ್ಪನ ಕಡೆ ನೋಡಿ)
ಈಗೇನೋ ಮಾಡೋದು ನಾನು ! ಅವನಂ ಜಯಜಯಿ ಗೋಕುಲ
ಬಾಲ ಅಂತಾನೆ. ಇವನು `ಬಂಗೇರುಹಾ` ಅಂತಾನೆ, ಯಾವುದು ಹಾಡಲಿ ! ?
ಹರಿಯಪ್ಪ -ಯಾವುದಾದ್ರೇನೋ ? ಅಂಗೇ ಎತ್ತು ! ಬದಲಾಯಿಸಿ
ಕೊಂತೀನಿ ಸ್ರುತಿ ! ರಾಗ ಒಂದೇ ತಾನೇ ! ಜಯಜಯ ಗೋಕುಲ ಎಳ್ಡು
ಸಾರಿ ಅಂಗಂದುಬಿಟ್ಟು ಆ "ಪಂಕೇರುಹಾಸ-ನಾಸಿಡೈನ" ಭಿರಕಾಯ್ಸು.
ಇಬ್ಬರೂ ತೆಪ್ಪಗಾಗ್ತಾರೆ.
ಸೂತ್ರಧಾರ-_ಹಾಗೇ ಆಗ್ಸೋ. ಕಮಾಚು ವುಂಗಿಸಿ ಆಮೇಲೆ
`ಪಂಕೇರುಹಾಕ್ಕೆ' ಹೋಗೋಣೋ ! ಈಗಲೇ ಶೃತಿ ಬದಲಾಯಿಸಬೇಡ .
(ಚರಣವನ್ನೆ ತ್ತಿ ಮುಗಿಸುವಷ್ಪರಲ್ಲಿ)
----------------------------------------
೬
ಮೊದಲನೇ ಪ್ರೇಕ್ಷಕ --ಓ | ಇವ್ನು ಒಳ್ಳೇ . ಮಾತಿಗ್ಹಾಡೋದಿಲ್ಲ
ಇರ್ಲಿ. . ಲ್ರೋ ! (ಸುತ್ತಲಿದ್ದ ತನ್ನ ಮಿತ್ರರಿಗೆ) ಷುರು ಮಾಡ್ರೋ !
ಜಯಜಯ ಗೋಕುಲಬಾಲ, ಹಾಡೂ ಮೂರ್ತವ್ಟಾ !
ಕೆಲವರು ಒಟ್ಟಿಗೆ) ಜಯಜಯ ಹಾದೂ ಮೂರ್ತಪ್ಪಾ !
ಅದಕ್ಕೆ ಸರಿಯಾಗಿ ಚಪ್ಪಾಳೆ ತಟ್ಟಿ ತಾಳ ಹಾಕುತ್ತಾ ಹೇಳುವರು)
(ಇದನ್ದು ನೋಡಿ ಎರಡನೇ ಪ್ರೇಕ್ಷನಿಗೆ ರೇಗಿ) . ಅಡಾಪಾವಿ ! ನಾ 'ಬಂಗೆ
ರುಹಾ`ನ್ನ ಇವಾ :`ಜಯಜಯ ಗೋಕುಲಬಾಲ` ಸೊಲ್ರಾ. ಡೇ ಮೂತ್ರ
ಪ್ಪಾವೀ ! ಅಂದ 'ಬಂಗೇರುಹಾ` ಪಾಡ್ರೆಯಾ ಇಲ್ಲೆಯಾ ? (ತನ್ನ ಸುತ್ತಲಿದ್ಧ
ಮಿ.ತ್ರರನ್ನು ನೋಡಿ) ಎಡ್ರಾಡೇ ! ಅವ ಯೆನ್ನಾವೆರುವಳಿ? ನಾಂಬೊ
ಕಾಟಲಾ _ ಅವನಕ್ಕೂ ! ಇವಾ ಎಲ್ಲಾ ಕನ್ನಡಂ ಪೇಚರ ಪೈಲೆ ಪಚ್ಚೆ
ಪಶಂಗೋ ! ನಾಮೆಲ್ಲಾ `ತಮಿಳ್ ತಮಿಳ್? ಪೇಶರವಾ-ಪಾಡರವಾ,
ಸೊಲ್ರಾಡೇ!
ಬಂಗೇರುಹಾ ಪಾಡು ಮೂರ್ತಪ್ಪಾ|
ಅಂದ ಬಂಗೇರುಹಾ ಪಾಡು ಮೂರ್ತ್ರಪ್ಪಾ ||
(ಅವರೂ ಚವ್ಹಾಳೆಯೊಡನೆ ತಾಳ ಬಡಿಯುತ್ತಾ ಕೂಗುವರು)
“ಸೂತ್ರಧಾರ -- ಹರೀ . ಲೋ ! ಏನೋ ಇದು ವಿಪರೀತಕ್ಕಿಟ್ಟು
ಕೊಂಡಿದೇ ? ಏನು ಮಾಡೋದು ಈಗ ? ಮುಂದಿರೋರೆಲ್ಲಾ ಎದ್ದು
ಹೋದ್ಯೆ ಇದು ನೋಡಿ ?
ಹರಿಯಪ್ಪ--ಮಾಡೋದೇನಾ : ದುಡ್ಡು ಬಿಸಾಕಲ್ವಾ
ಬಂದಿರೋದು ನಾಟ್ಕಾ ನೋಡಾಕೆ ? ಅವ್ರಿಗೆ ಬೇಕಾದ್ಬನ್ನ ನಾವೂ ಕೊಡ್ಬೇಕು.
ನೀನು ಮುಂದಿರೋರನ್ನ ನೋಡ್ತಾ ಕಂತುಕೊಂಡ್ರೆ ಆಗ್ತೈತಾ ? ಮುಂದಿ
ರೋರೆಲ್ಲಾ ಮುಕ್ಕಾಲು ಮುಫತ್ತು, ಕಾಲು ಕಾಂಪ್ಲಿಮೆಂಟ್ರಿ. ಅದೋ !
ವ್ಹಾದೊರಸದ್ ಕಾಂಪ್ಲೀಮೆಂಟ್ಜೀ ಎತ್ಕೊಂಬಂವ್ ಗೇಟ್ ಕೀಪರ್ನಾ
ಗುಮೌಯ್ಸಿ ಟಿಕೇಟ್ ಕೇಳೋಲನಿಗ್ ಧೋಕಾಕಲಾಯ್ಸಿ ಒಳಗ್ ಬಂದು
ಕುಕೃರ್ಸಿರೋ ಬದ್ಮಾಷುಗಳೇ ! ನಾಕಾಣೆ ಗ್ಯಾಲ್ಫೀಯೋರೂಂದ್ಬೆ ದುಡ್ಡು
---------------------------------------
೭
ಬಿಸಾಕವ್ರೆ ಅವ್ರೂ ! ಯೋಳು ಯೋಳು ಅವರು ಕೇಳಿದ್ನ. ಇಲ್ದಿದ್ರೆ ಇನ್ನು
ಎಸೀತವ್ಪೆ ಕಲ್ಲೋ ಚಪ್ಸೀನೋ !
ಸೂತ್ರಧಾರ-ಸ್ಸರೀ ! ಷುರುಮಾಡು [ ]
(ರಾಗ ; ಖರ-ಭ್ರೈರವೀಪ್ತಿಯ-ತಾಳ : ಆದಿ.)
ಜಯ ಜಯ ಗೋಕುಲ ಬಾಲ
ಜಯ ಸಕಲಾಗಿವು ಲೀಲಾ ||
(ತಮಿಳಿನವರ ಕಡೆ ನೋಡಿ)
ಪಂಕೇರುಹಾಸ_ನಾಸೀನುಡೈನ
ಬ್ರಹ್ಮಕ್ಕೆನ ತೆಲುಸುನೋ ತಲಿಯದೋ
ಸಂಕಲ್ಪ_-ಮೆಟ್ಟೀದೋ_ಮನಸಾ
ಸಾಕೇತ ರಾಮುಣೀ
(ಬದಲಾಯಿಸಿ ಕನ್ನಡದವರ ಕಡೆ ನೋಡಿ)
ಜಯ ಜಯ ಗೋಕುಲ ಬಾಲ. .. .(ಮುಗಿಸುವನು)
[ಎರಡೂ ಪ್ರೇಕ್ಷಕರ ಗುಂಪಿನವರು ಅವರವರಿಗೆ ಬೇಕಾದ್ಗು ಹಾಡಿದಾಗ ಚಪ್ಪಾಳೆ
ತಟ್ಟುವರು- “ಭೇಷ್ ಭೇಷ್-ಬಲೆ ಬಲೆ` ಎನ್ನುವರು]
(ಸೂತ್ಪರಧಾರ ೨ ಹಾಡನ್ನೂ ಮುಗಿಸಿ ಕೊನೆಯಲ್ಲಿ ಕಮಾಜಚಿಗೆ ಬದಲಾಯಿಸಿಕೊಂಡು
'ಸುಜನ ಜೀವನ: ವನ್ಮೂ ಹೇಳಿ ಮುಗಿಸುವನು. ಮುಂದಿರುವವರು ಚಪ್ಪಾಳ ತಟ್ಟುವರು)
ಸೂತ್ರಧಾರ-(ಸ್ವಗತ) ಅಬ್ಬಾ { ಬದುಕಿದೆ (ಪ್ರಕಾಶ) ಸಭಾಸದರಲ್ಲಿ
ಅನಂತ ವಂದನೆಗಳು. ಇಂದು ತಮ್ಮೆಲ್ಲರ ಅವಗಾಹನೆಗಾಗಿ ವಿವಿಧ ವಿನೋ
ದ್ಹಾವಳಿ, ಪ್ರದರ್ಶನವಾಗಲಿದೆ ಎಂದಿನಂತೆ ಪ್ರೋತ್ಸಾಹಿಸಬೇಕು. ಮೊದಲು
'ಶಂಬರನ ಶೃಂಗಾರ`ದ ಮೊದಲು ಭಾಗವಾದ :ಪ್ರವೇಶ'_ಇದರ ಕತೆ
ಹೀಗಿದೆ. ನನ್ನ ಜೀವನದ ಕಷ್ಪಸುಖಗಳಲ್ಲಿ....(ಸ್ವಗತ) ಕಷ್ಪರವೇ ಇದುವರೆಗೂ,
ಒಂದು ದಿನ ಸುಖವಿಲ್ಲ (ಪ್ರಕಾಶ) ನನ್ನೊಡನೆ ಕ್ಕೆ ಹಿಡಿದು ಪತಿಯ ಹೆಜ್ಜೆಯ
ಮೇಲೆ ಹೆಜ್ಜೆಯಿಡುತ್ತ ನೆರಳಿನಂತೆ ಹಿಂಬಾಲಿಸಿ ಬೆನ್ನಲ್ಲಿ ಬಿದ್ದಿರುವ ನನ್ನ ಒಡ
ನಾಡಿ 'ನಟೆ`ಯು ನಿಮಗೆ ಆ ಕತೆಯನ್ನು ಹೇಳುವಳು 'ಆರ್ಯೆ ! ನಿನ್ನ
ಅಲಂಕಾರವು ಪೂರ್ತಿಯಾಗಿದ್ದರೆ, (ನೇಪಧ್ಯದ ಕಡೆ ನೋಡಿ) ,. ಓಹೋ !
-----------------------------------------
೮
ಆರ್ಯೆಯು ತೊಡಕಿಗೆ ಸಿಕ್ಕಿರುವಂತಿದೆ ಬಿಡಿಸಿಕೊಂಡು ಈ ಕ್ಷಣ ಬರುವೆನು,
(ಗ್ರೀನ್ ರೂಮ್ ಕಡೆ ಹಜ್ನೆ ಇಡುವನು)
[ 'ಅ' ರಂಗದ ಫರದೆ ಏಳುವುದು (ರತೀ: ಪಾರ್ಟಿನ ಸುಬ್ಬು, ನಟೀ ಪಾರ್ಟಿನ
ರಂಗುವಿನ ಸೀರೆ ಹಿಡಿದು ಎಳೆಯಿತ್ತ) ಲೋ ನನ್ ಸೀರೇನೂ ಸುತ್ತಿಕೊಂಡು ನಾನು
ಚಡ್ಲೀಲಿ ನಿಂತ್ಬೊಳ್ಳೋ ಹಾಗೆ ಮಾಡಿದೀಯಲ್ಲೋ ? ನೀನು ನಟಿ. ಕತೆ
ಹೇಳ್ತಿಂತಿದಾನೆ ಆ ಮೂರ್ತಿ. ನೀನಾಡೋದು ಎರಡೇ ಮಾತು. “ರತಿಯು
ವಿಲಾವ ಮುಗಿಸಿ ಈ ಮಾರ್ಗವಾಗಿಯೇ ಬರುತ್ತಿಳೂ"ಂತ ಅಂದು ಪುಸ
ಕ್ಕಂತ ಒಳಗೆ ಬರ್ತೀಯಾ ! ನಾನು ಎಂಟರ್ ಆಗೋಕೆ ತಯಾರಾಗಿರ್ಬೇಡವೇ,
ನೀನು ಕಟ್ಟಿಕೊಂಡಿರೋ ಜರತಾರಿ ನಕ್ಕಿ ಲಂಗ ದಾವಣೀ ಎರಡೂ ಇಲ್ಲಿ ಬಿಚ್ಚಿ
ಕೊಟ್ಟು ಆಮೇಲೆ ಹೋಗು ಸೀನಿಗೆ ! ಒಳ್ಳೇ ಗಿರಾಕಿ ! ನಾನು ಮೇಲೆಲ್ಜಾ
ರತೀ ಹಾಗೆ ಮೇಕಪ್ ಮಾಡಿಕೊಂಡು ಚಡ್ಡೀಲಿ ಬರ್ಲಾ ಸ್ಟೇಜಿಗೇ ? ಬಿಡೋ
ಸೀರೇನಾ [ (ಜಗ್ಗುವನು)
ಮೂರ್ತಿ __(ಬೇಗ ಓಡಿಬಂದು) ಲೋ ಸುಬ್ಬು ! ಅವನು ಸೀನಿಗೆ
ಬರ್ಬೇಕಮ್ಮಾ ಬಿಡೋ ಲೇ ! ಓಂದು ನಿಮಿಷ, ಬಂದು ಬಿಡ್ತಾನೋ !
ಸುಬ್ಬು-ಅಲ್ಲಾ ! ಒಳ್ಳೇ ಬೇಕೊಫನೋ ನೀನು | 'ರತೀ . ಬರ್ತಾ
ಇದಾಳೇಂ;ತಂದರೆ ನಾನು ಸ್ಕೆಡ್ವಿಂಗ್ಸಲ್ಲಿ ಸಿದ್ಧವಾಗಿರಬೇಡವೇ ? ಬ್ರೆಸ್ಟ್
ಬಾಲ್ಸಲ್ಲಾ, ಬೈಸ್ಮುಮುಚ್ಚಿಕೊಳ್ಳೋಕೇ ಅಂತ ನಾನುಟ್ಟುಕೋತಿದ್ದ ಸೀರೇನೂ
ಸೆಳಕೊಂಡ,. ನನಗೆ ಅವನ್ಹಾಕ್ಕೊಂಡಿದ ಲಂಗಾದ್ಹಾವಣೀನೂ ಇಲ್ಲ. ಅದರ
ಮೇಲೆ ಸೀರೆ ಸುತ್ಕೊಂಡಿದಾನೆ ˜ನಾನೇನು ಹೀಗೇ ಬರಲೇ ನೀ ಕರೆದಾಗ ?
ನಂಗೇನು ? ನಿನ್ನ ಕಂಪೆನಿ ಹೆಸರೇ ಕೆಟ್ಟ್ಹೋಗುತ್ತೆ!
ಮೂರ್ತಿ__ಲೋ ರಂಗೂ ! ಬಿಡಮ್ಮಾ ಅವನ ಸೀರೇನ. ಇದೇನೋ
ಇದು, ಯಾವತ್ತೂ ಇಲ್ಲದ ಜಗ್ಳ_ಒಳ್ಳೇ ಕಲೆಕ್ಷನ್ನಾಗಿ ಫುಲ್ ಹೌಸಾಗಿರೋ
ವಾಗ ? ಬಿಡೋ ಸೀರೇನಾ ದಮ್ಮಯ್ಯಾ ! (ಸೀರೆ ಸೆಳೆದು ಬಿಚ್ಚಿ ರತೀ ಪಾರ್ಟಿಗೆ
ಎಸೆದು 'ನಟೀ`ನ್ನೋಡಿ) ನಡಿಯೋ ಸ್ಟೇಜಿಗೆ ತಡೀ [ ನಾನು ಹೋಗಿ ಪುನಃ
ಕರೀತೇನೇ-ತಡಿಯೋ ! ಹೀಗೇ ಬಂದು ಬಿಡಬೇಡ..ಆ ಓವರ್ ಕೋಟೋ
ಇಲ್ಲಾ ಆ ಅಪ್ಟುಡೇಟಮೃಯ್ಯನ ಸ್ವೆಟರೋ . ಯಾವುದಾದರೂ
--------------------------------
೯
ತೊಟ್ಕೊಂಡು ಬಾ ! ನಮ್ಮ ಹುಳುಕುಗಳೇನೇ ಇರಲಿ, ಒಳ್ಳೆ ಷೋ
ಕೊಡೋಣ ಬಾಮ್ಮಾ ! (ಸುಬ್ಬೂಗೆ) ಇನ್ನು ನೀ ಸಿದ್ಧವಾಗೋ ! ಅಳಬೇಡ
ಸೀರೆ ಇಲ್ಹಾಂತ ರತೀ ಸ್ಟೇಜಿನ ಮೇಲೆ ಅಳೋದು ಸರಿ-ಸ್ಕೆಡ್ವಿಂಗ್ಸಲ್ಲೂ
ಅಳಬೇಕೇ ರೆಡಿ ಆಗು ಬೇಗ ! (ರಂಗುವಿಗೆ) ಊ, ಬಾರೋ ಕರೆದ ಕೂಡಲೇ.
'ಆ' ರಂಗಕ್ಕೆ ತೆರಳುವನು,]
-'ಆ' ರಂಗದ ಪರದೆ ಏಳುವುದು ---
ಸೂತ್ಪಧಾರ -_-(ಪ್ರಕಾಶ) ಅಹಾ ! ಆರ್ಯೆಯು ತಡವಾದುದಕ್ಕೆ ನಾನೆಣಿ
ಸಿದ್ದಂತೆ ಗುರುತರವಾದ ಕಾರಣವೇ ಇತ್ತು. ಮುಕಕಣ್ಣನ ಮೂರನೆಯ
ಕಣ್ಣನ ಅನಿಲದಿಂದ ದಗ್ಧನಾದ ಮನ್ಮಥನ ಪ್ರಿಯಪತ್ನಿ ರತಿಯ ವಿಲಾಪವನ್ನು
ಆಲಿಸುತ್ತ ಅರ್ಯೆಯು ಮೈಮರತೇ ಇದ್ದಳು. ಎಚ್ಚರಿಸಿ ಬಂದಿರುವೆ-ಅಹಾ !
ಇಗೋ ಬಂದಳಾರ್ಯೆ ! ಅರ್ಯೆ ! ರತಿ ವಿಲಾಪವನ್ನಾಲಿಸುತ್ತ ಆಲಿಸುತ್ತ
ಇಲ್ಲ ಸಭಿಕರು ನಿನ್ನ ಕೋಕೆಲಧ್ವನಿಯನ್ಕೂ ಮುಂಜುಳಗಾನವನ್ಯೂ ಕೇಳಲು
ಹಾತೊರೆಯುತ್ತಿರುವರೆಂಬುದನ್ನು ಮರೆತೆಯಾ ? ಅದಂತಿರಲಿ ! ಇಂದಿನ
ನಾಟಕವಾದ :ಶಂಬರನ ಶೃಂಗಾರ'ದ ಕತೆಯನ್ನು ಸಭಾಸದರಿಗೆ
ಸೂಕ್ಷ್ಮವಾಗಿ, . ಈಗಾಗಲೇ ವೇಳೆಯಾಯಿತು. ಸಂಪ್ರದಾಯವನ್ನಿಂದು
ಕೊಂಚ ಮುರೆಯೋಣ ಋತುವರ್ಣನೆಯ ಗಾನವಿಂದು ವರ್ಜ. ಪೌರಾಣಿಕ
ನಾಟಕಗಳ ಮೇಲೋಗರವೊಂದನ್ನು ಪ್ರದರ್ಶಿಸಿ ಪ್ರೇಕಕರಿಗೆ ರಸದೌತಣ
ನೀಡುವ ! ಆರ್ಯೆ ! ಇಪ್ಪೇಕೆ ತಡಮಾಡಿದೆ ?
ನಟಿ__ಆರ್ಯಪುತ್ರಾ ! ಕಾಮದೇವನು ದಗ್ಧನಾಗಿ ಬೂದಿಯಾಗಲು,
ಅಲ್ಲಿಯೇ ಮೂರ್ಛಿತಳಾಗಿದ್ದ ರತಿದೇವಿಯನ್ನು ಸಂತ್ಮೆಸಿ ಆ ಉರಿಯೂ ಸೋಕಿ
ವಸ್ತ್ರವಿಹೀನಳಾಗಿದ್ದ ಆ ಪತಿವ್ರತಾ ಶಿರೋಮವಣಿಗೆ ನನ್ನ ಸೀರೆಯನ್ನೇ ಉಡಿಸಿ
ಸಂತ್ಕೆಸಿದೆ_ಶಂಬರಾಸುರ ಮಹಾರಾಜನ ಪುರವು ಇದೇ ಮಾರ್ಗದಲ್ಲಿರಂವ
ಅರಣ್ಮವನ್ನುದಾಟಿದರೆ ದೊರಕುವದೆಂದೂ ಅಲ್ಲಿಗೆ ತೆರಳಬೇಕೆಂದೂ ಸೂಚಿಸಿದೆ.
ಅದೋ ಆಕೆ ನಾ ಕೊಟ್ಟ ವಸನ ಧರಿಸಿಕೊಳುತ್ತಿದ್ದಾಳೆ. ಆರ್ಯಪುತ್ರನ
ದೃಷ್ಠಿಯನ್ನೊಮ್ಮೆ ಅತ್ತ ಪಸರಿಸೋಣಾಗಲಿ, ಏನು ರೂಪು ಆಕೆಯದು ?
ಸೂತ್ರಧಾರ- ಆರ್ಯೆ ! ಪತಿವ್ರತಾ ಶಿರೋಮಣಿಯಾದ ಅ ರತಿದೇವಿ
ಯನ್ನು ಮನ್ಮಥನ ಮಹಿಷಿಯನ್ಶು, ಈ ಮಾನವ ಮಾತ್ರನಾದ ಪರಪುರುಷನು
-------------------------------------------
1೦
ಕಣ್ಣೆತ್ತಿ ನೋಡುವುದೆಂದರೇನು ? ಅದರಲ್ಲೂ ಅಕೆ ನಿರ್ವಸನಳಾಗಿದ್ಧು ವಸ್ತ್ರ
ಧರಿಸುತ್ತಿರುವಾಗ ! ಶಾಂತಂ ವಾಪಂ ಶಾಂತಂ ಪಾಪಂ !
ನಟಿ- ಆರ್ಯಪುತ್ರ ! ನಿನ್ನ ಏಕಪತ್ನೀ ವ್ರತತ್ವಕ್ಕೆ ಮೆಚ್ಜಿದೆನು.
ಅದರಿಂದಲೇ ಯಾವಜ್ಜೀವವೂ ನಿನ್ನ ನೆರಳಾನುವರ್ತಿಯಾಗಿ ನಾನಿರುವುದು.
ಅದಂಕಿರಲಿ ! . ಅದೋ ರತಿಯು ಇತ್ತಲೇ ಬರುತ್ತಿರುವಳು. ನಾವು ಹೋಗಿ
ಶಂಬರಾಸುರನ ದೃಶ್ಯದ ಏರ್ಪಾಡನ್ನು ಮಾಡುವಾ.
ಸೂತ್ರಧಾರ-ಹಾಗೆಯೇ ಆಗಲಿ ಆರ್ಯೆ ! ನೀ ಮುಂ ಪೊರಮಡು |
ನಾನೂ ನಿನ್ನ ಹಿಂದೆಯೇ ಪಿಂಪೊರಮಡುವೆನು. (ನಟಿಯು ಬಲಗದೆ ಸೈಡ್ ವಿಂಗ್ಸಿಗೆ
ತೆರಳಲು ರತಿಯು ಬರುತ್ತರುವ ಕಡೆ ನೋಡಿ) ಅಹಾ ! ರತಿದೇವಿಯೆಂದರೆ ರತಿ
ದೇವಿಯೇ ! . ಅದರೂ . ಪತಿವಿಹೀನೆಯಾದ ರತಿದೇವಿಯಾದರೂ ಎಂತಹ
ರಪವು ? ಆರ್ಯೆ ಮರೆಯಾಬಳು ! ಈಗ ಚೆನ್ನಾಗಿ ಈಕ್ಷಿಸಬಹುದು.
ಸದ್ಯ ! (ತೆರಳುವನು)
-ಇಂತಿಲ್ಲಿಗೆ ನಾಂದೀ ದೃಶ್ಯ ಸಂಪೂರ್ಣಂ -
----------------------------------------
ಅಂಕ ೧ - ಪ್ರವೇಶ
[ಸೂತ್ರಧಾರನು ತೆರಳಿದೊೂಡನೆ ರೊಡ್ಡ್ಗ ಅಂಕದ ಪರದೆ ಬಿದ್ದು ಓಂದು ಕ್ಷಣ ನಿಂತು
ಪುನಃ ಏಳುವುವು - - ಅರಣ್ಯದ ಸೀನು. ಒಂದು ದೊಡ್ಲ ವೃಕ್ಷ, ದುಧ್ಯೆ - ಸಿಂಹ ಹುಲಿ,
ಕರಡಿಗಳು, ಬೇರೆಬೇರೆ ಪೊದೆಗಳಿಂದ ಹುಲ್ಲೆ. ಹಸು ಜಿಂಕೆ ಮರಿಗಳನ್ನು ಹೆದರಿಸಿ ಓಡಿಸು
ತ್ತಿರುವಂತೆ ಪರದೆಯ ಮೇಲಿನ ಚಿತ್ತಗಳು - ಸ್ಟೇಜು ಅರ್ಧಕತ್ತಲೆ]
(ರತಿಯು ಗ್ಬೀನ್ ರೂಮಿನಿಂದ ಹಾಡುತ್ತಲೇ ಪ್ರವೇಶಿಸುವಳು - ಹಾರ್ಮೋನಿಯಂಗೆ
ತಲೆಮೇಲೆ, ಹುಬ್ಬಿನ ಮೇಲೆ ಬೆರಳು ಸವರಿಕೊಳ್ಳುತ್ತಾ ಶೃತಿ ತೋರಿಸುವಳು)
ರಾಗ -- : ಯದುಕುಲ ಕಾಂಭೋಜಿ_ತಾಳ ಕ್ರಿಪುಟ _-ಚತುರತ್ರ
ಕಾಣಲೇಂತು ನಾನೂ ಪ್ರಾಣಕಾಂತನನ್ನೂ|
ಘೋರಕಾನನಾದಿ ಕಾಮದೇವನನನ್ನೂ ||
ಕಾಣಲೇಂತು . ಊ . ಊ !
ಆಹಾ ! ಈ ಘೋರ ಕಾನನದಲ್ಲಿ ಏಕಾಂಗಿಯಾಗಿ ಅಬಲೆಯಾದ ನಾನು
ಸತಿಯನ್ನು ಇನ್ನು ಕಾಣುವುದೆಲ್ಲಿ ? ಸಮೀಪದಲ್ಲಿ ಶಂಬರಾಸುರನ ಪುರವಿರು
ದೆಂದೂ ಅಲ್ಲಿ ನನ್ನ ಪತಿಯು ಅವನ ಪುತ್ರನಾಗಿ ಬೆಳೆಯುತ್ತಿರುವನೆಂದೂ
ಉಮಾದೇವಿಯು ಸಂತ್ಕೆಸಿ ಕಳುಹಿಸಿದಳು. ಅಲ್ಲಿಗೆ ನೇರುವುದೆಂತು ? ಕ್ಕೆ
ಕಾಲುಗಳೇ ನೋತುಹೋಗುಶ್ಲಿರುವುದಲ್ಲಾ ! ಲೋಕಮೋಹಕನಾದ ನನ್ನ
ಪತಿ ಮನ್ನಧನ ವಹಿಷಿಯಾದ ನನ್ನ ಪಾಡೇ ಹೀಗಾದ ಮೇಲೆ ಮಾನವ
ಲೋಕದ ಮಹಿಳಾದುಣಿಯರ ಪಾಡೇನು ± ಇರಲಿ ! ' ಅವಶ್ಯಮನುಭೋ
ಕ್ತವ್ಯಂ ಕೃತಂ ಕರ್ಮ ಶುಭಾಶುಭಂ'ಎಂಬುದು ವೇದವಾಕ್ಶವೇ ಅಲ್ಲವೇ ?
ನನ್ನ ಪೂರ್ವ ಜನ್ಮದಲ್ಲಿ ಯಾವ ದಂಪತಿಗಳನ್ನು ಅಗಲಿಸಿ ನೋಯಿಸಿದ್ದೆನೋ
ಈ ಜನ್ಮದಲ್ಲಿ ಹೀಗೆ ಅವಸ್ಥೆ ಪಡಬೇಕಾಗಿದೆ. ಇರಲಿ ! ದೇವಿಯರ ವರ
ವೊಂದೇ ನನಗೆ ಧೈರ್ಯಸ್ಥೈರ್ಯಗಳನ್ನು ಕೊಡುತ್ತಿದೆ. ಓಹೋ ! ಇಲ್ಲಿ
ಯಾರೋ ಬರುವಂಕಿದೆ. ಹಿಂದೆ ಹೆಜ್ಜೆ ಹೆಜ್ಜೆಗೂ ಇವನು ತಿರುಗಿ ನೋಡಿ
ದಾಗೆಲ್ಲ ಹಿಂದಿರುವ ಜನ ತಲೆತಗ್ಗಿಸಿ ಮಾತನಾಡುವಂತಿದೆ. ಇವನಾರು ?
ಇವನೇ ಶಂಬರಾಸುರ ಮಹಾರಾಜನೋ ? ದೇವಿಯೇ ! ಪ್ರಸನ್ನಳಾದೆಯಾ !
ಆಹಾ ! ಇವನೇ ಶಂಬರಾಸುರನಾಗಿದ್ದಲ್ಲಿ ದೇವಿಗೆ ಅನಂತ ನಮಸ್ಕಾರಗಳು.
ಇಲಿಯೇ ಈ ವೃಕ್ಷದ ಮರೆಹೊಗುವೆ ! ಅವರಾಡುವ ಮಾತುಗಳನ್ನು ಕೇಳಿ
ಅನಂತರ ಮುಂದಿನ ಹೆಜ್ಜೆ ಇಡುವೆ. (ಪರದೆಯ ವೃಕ್ಷದ ಬಳಿ ಸರಿದು ನಿಲ್ಸುವಳು)
(ನೇಪಥ್ಯದಲ್ಲಿ)
“ಕೊಂಬು ಕಹಳೆಗಳ ಶಬ್ದ - “ಚಂಡಮಾರ್ತಾಂಡ ಚಂಡ ಪ್ರಚಂಡ ರಾಕ್ಷಸ ಕುಲ
ಪ್ರದೀಪ ತ್ರಿಜಗ . ಲೋಕೇಶ್ವರ ಮಹೇಶ್ವರನ ಪರಮಭಕ್ತ ಶಂಬರಾಸುರ ಮಹಾರಾಜ
ಬೋಪರಾಕ್ “ ಮಹಾರಾಜನ ಅರಣ್ಯವಿದು, ಇಲ್ಲಿ ಕ್ರೂರ ಮೃಗಗಳಿದ್ದರೆ ಇಲ್ಲಿನ
ಪ್ರಕೃತಿ ನಿಯಮಗಳಿಗೆ ವಿರೋಧ. ರಾಜನ ಶಾಸನವನ್ನು ಮುರಿದಂತೆ ಅಂತಹ ಮೃಗಗಳು
ತಾವಾಗಿ ಮುಂದೆ ಬಂದು ಮಹಾರಾಜನ ಸ್ವಹಸ್ತದಿಂದ ಶಿಕ್ಷೆ ಸ್ವೀಕರಿಸಬೇಕು. ಇದೋ
ಮಹಾರಾಜರು ಬರುತ್ತಿರುವರು. . ಶಂಬರಾಸುರ ವುಹಾರಾಜರು ! ಭೋಪರಾಕ್ 1 “
ಎನ್ನುವುದು ಕೇಳುವುದು ]
[ರಂಗಭೂಮಿಯ ದೀಪ ಕ್ಷಣಮುತ್ಪ್ರ ಆರಿ ಹತ್ತುವಲ್ಲಿ ಹಿಂದಿನ ಪರದೆ ಬದಲಾಗಿ
ಬೇರೆ. ಪರದೆ ಇಳಿದಿರುವುದು . ಅದರಲ್ಲಿ ಹುಲ್ಲೆ ಮುಂತಾದವುಗಳು ಭಯವಿಲ್ಲದೆ ನಿಂತಿರು
ವಂತೆಯ್ಯೂ ಹುಲಿ, ಸಿಂಹ ಕರಡಿಗಳು ತಮ್ಮ ಗುಹೆಗಳ ಕಡೆ ಬಾಲ ಮುದುರಿಕೊಂಡು
ಓಡುತ್ತಿರುವಂತೆಯೂ ಕಾಣುವುದು, ರತಿದೇವಿ - ಮೊದಲ ಸ್ಥಳದಿಂದ ಸರಿದು ರಂಗದ
ಕತ್ತಲಾಗಿರುವ ಪಕ್ಕಕ್ಕೆ ತೆರಳಿ ನಿಲ್ಲುವಳು.
ಮಹಾರಾಜನ ಮುಂದೆ ಕತ್ತಿ, ಗುರಾಣಿ, ಕಠಾರಿ ಚಾಕು, ಬ್ಲೇಡುಗಳು, ಸರಪಳಿ,
ರೈಫಲ್ಲು, ಗನ್ನು, ಪಿಸ್ಸೂಲ್ಮು ಚೂರಿ, ಭಲ್ಲೆ ಲಟ್ಟ್ತ ಲಾಠಿ, ಬಿಲ್ಲು, ಬಾಣ, ಬತ್ತಳಿಕೆ
ಎಲ್ಲವನ್ನೂ ಬೆಲ್ಟು ಡವಾಳಿಗಳಲ್ಲಿ ಧರಿಸಿ ಮೈಮೇಲೆ ಹೇರಿಕೊಂಡಿರುವ ಬೃಹದಾಕಾರದ
ಮನುಷ್ಯನೊಬ್ಬ ಬೇಟೆಗಾರನ ಪೋಷಾಕು ಧರಿಸಿ ಬರುವನು, ಪರದೆಯ ಕಡೆ ನೋಡಲು,
ಪರದೆಯ ಮೇಲೆ 'ಸ್ಪಾಟ್‌ಲೈಟ್' ಬಿಟ್ಟಂತೆ ಇವನನ್ನು ನೋಡಿಯೇ ಆ ಕ್ರೂರ ಮೃಗಗಳು
ಓಡುತ್ತಿರುವಂತೆ ಪರದೆ ಆಡುವುದು. ಅವನೊಂದು ಪಕ್ಕಕೈ ಬಂದು ನಿಲ್ಲುವನು.
ಮಹಾರಾಜನ ಪ್ರವೇಶ-ಹಿಂದೆ ಪರಿವಾರದವರೂ ಬಂದು ನಿಲ್ಲುವರು. ರಂಗದ 'ಆ`
ಭಾಗ ಮಾತ್ರ ಬೆಳಕಾಗುವುದು. ಹಿಂದೆ ಕೂಗಿದವನೊಬ್ಬ ಮುಂದೆ ಬಂದು "ಶಂಬರಾಸುರ
ಮಹಾರಾಜನಿಗೆ ವಿಜಯವಾಗಲಿ, ಈ ಗೊಂಡಾರಣ್ಯದ ಈ ಪ್ರಾಂತದಿಂದ ಇಲ್ಲಿ ಕ್ರೂರ
ಮೃಗದ ಹಾವಳಿ ತುಂಬ ಆಗ-ತ್ತಿದೆಯಿಂದು ದೂರು ಬಂದಿದೆ, ಆ ದೂರು ಕೊಟ್ಟವರಾರು?
ಮುಂದೆ ಬನ್ನಿ“ ಎಂದು ಕೂಗಿ ಹಿಂದೆ ಹೋಗಿ ನಿಲ್ಲುವನು]
-------------------------------
೧೩
ನೇಗಿಲಯೋಗಿ_-(ಪ್ರವೇಶಿಸಿ) ಅಡ್ಡಬೀಳುವೆ ಮಹಾರಾಜ ! ತಮ್ಮ
ನಾವುಪಠನ ಮಾತ್ರದಿಂದ ಓಡಿಹೋಗುತ್ತಿದ್ದ ಈ ಪ್ರಾಂತದಲ್ಲಿ ಈಗೊಂದು
ಪಕ್ಷದಿಂದ ಮುದಿಸಿಂಹವೊಂದು ನನ್ನಲ್ಲಿಗೆ ಬಂದು ಗುರುಗಟ್ಟುತ್ತಿದೆ. ಸಾರ್ವ
ಭೌಮರ ಆಗಮನಕ್ಕಿಂತ ಮೊದಲೇ ಕೇಳಿಬಂದ 'ಪರಾಕ್` ಧ್ವನಿಗೇ ಭಯ
ಪಟ್ಟು ಅರಣ್ಯದ ಕ್ರೂರಮೃಗಗಳು ಇತರ ವನ್ಯಮೃಗಗಳನ್ನು ಹೆದರಿಸುವು
ದನ್ನು ಬಿಟ್ಟು ತಮ್ಮ ತಮ್ಮ ಗುಹೆಗೆ ಓಡುತ್ತಿವೆ, ನೋಡಿ ಸಾರ್ವಭೌಮ !
ಆದರೆ ಈ ಮುದಿಸಿಂಹ ಮಾತ್ರ ಓಡದೆ ನನ್ನ ಹಿಂದೆ ಬಿದ್ದಿದೆ- ಈಗ್ಗೆ ಮೂರು
ದಿನವಾಯಿತು. ಅದು ನನ್ನ ಬೆನ್ನು ಬಿದ್ದು ಬೆಳಿಗ್ಗೆ ಏಕೆಂದು ಅದನ್ನು
ಅದರ ಭಾಷೆಯಲ್ಲೇ ಕೇಳಿದೆ. ಅದಕ್ಕೆ ಉತ್ತರ. ಹೀಗೆ ಬಂತು, ಕೇಳಿ,
(ಸಿಂಹ ಪಾತ್ರಧಾರಿ ಧ್ವನಿ ಅನುಕರಿಸಿ ಮಾತನಾಡುವನು)
ಸಿಂಹ- ಶಂಬರಾಸುರ ಮಹಾರಾಜನ ಕಟಾಜ್ಞೆ ಈ ಅರಣ್ಮದಲ್ಲಿ ಬಂದಂದಿ
ನಿಂದ ಇಲ್ಲಿನ ಕ್ರೂರಮೃಗಗಳೆನಿಸಿಕೊಂಡವಕ್ಕೆ ಆಹಾರವಿಲ್ಲವಾಗಿದೆ. ಪ್ರಕೃತಿಯ
ಸೃಷ್ಪಿನಿಯಮುಕ್ಕೇ ಇದು ವಿರೋಧವಲ್ಲವೆ ? ಮಹಾರಾಜರು .
ಒಡೆಯರೆನಿಸಿಕೊಂಡಿರುವವರು. ಅಂದಮಾತ್ರಕ್ಕೇ ಪ್ರಕೃತಿ ನಿಯವಮುಗಳನ್ನೇ
ಬದಲಾಯಿಸಬೇಕೇ : ಕ್ಫೂರಮೃಗಗಳೆಂದು ನಮ್ಮನ್ಕೂ, ಸಾಧುಪ್ರಾಣಿ
ಗಳೆಂದು ಇತರ ವನವಾಸಿಗಳನ್ನೂ ಹೆಸರಿಸಿರುವುದು ಕೇವಲ ಮಾನವಲೋಕ
ದವರು ಮಾತ್ರ, ಇದು ಮಾನವನ ಕೀಳುಮಟ್ಟದ ಬುದ್ಧಿ ಶಕ್ತಿಗೆ ಅನುಗುಣ
ವಾಗಿದೆ. ಆದರೆ ಇದು ರಾಕ್ಷಸರ ಲೋಕ. _ ರಾಕ್ಷಸರು ಅತಿಮಾನವರಷ್ಟೆ.
ಅದರಲ್ಲೂ ಮಹಾರಾಜ ಶಂಬರಾಸುರನ ರಾಜ್ಯದಲ್ಲಿ ದುಷ್ಪಶಿಕ್ಷಣ ಶಿಷ್ಟಪರಿ
ಪಾಲನೆ ಎಂದಿಗಿಂತ ಹೆಚ್ಚಾಗಿ ನಡೆಯತಕೃದ್ದು ಸರಿ. ಅಂದಮಾತೃಕೈ ಸಿಂಹ
ಗಳಾದ ನಾವು ಹುಲಿ ಶಾರ್ದೂಲ ಕರಡಿಗಳುದ ಜೊತೆಯವರು . ನನ್ನ
ಪ್ರಜೆಗಳು,
ಇದುವರಗೆ ಮಹಾರಾಜ ಅದರಂತೆ ವ ಕಿಗ ಪ ತಜ್ಜನ್ಮ ,
------------------------------------
೧೪
ಶಕ್ತಿಯಿದೆಯೆಂದು ನಾವು ಬಲ್ಲೆವು. ನಾನೂ ಬಲ್ಸೆ. ಇತರ ಮ್ಯುಗಗಳಿಗೆ
ತಿಳಿಯದು. ನಾವು ಗುಹೆ ಬಿಟ್ಟು ಹೊರಗೆ ಬಂದೊಡನೆ ಅದೆಲ್ಲ ಅರಮತ್ತ
ಭಯದಿಂದ ಈ ನೇಗಿಳಯೋಗಿಯ ಬಳಿಗೆ ಬರುತ್ತಿದ್ದದ್ದನ್ನು ಮೃಗರಾಜ
ನಾನು ನೋಡಿದೆ. ಅವಕ್ಕಿಂತ ಮುಂಚೆ ನಾನೇ ಇವನಲ್ಲಿಗೆ ಬಂದು ಬೆನ್ನು
ಬಿದ್ದರೆ ತಮೃವರಿಗೂ ದೂರು ಹೋದೀತು. ಬಂದೀರಿ. ಆಗ
ಪ್ರತ್ಯಕ್ಷವಾಗಿ ನಮಗೆ ದೈವದತ್ತವಾದ ಆಹಾರ ಕೊಡಿರೆಂ˜ದು ಕೇಳೋಣ.
ಶಂಬರಾಸುರ ಮಹಾರಾಜರು ಮಹಾನ್ಯಾಯಪರರು. ನಮಗೆ ನ್ಯಾಯವಾಗಿ
ದೊರೆಯಬೇಕಾದ ಅಹಾರ ದೊರಕೇ ದೊರಕುವುದು ಎಂದು ಬಂದಿದ್ದೇನೆ.
ನೇಗಿಲಯೋಗಿ- ಈಗ ಸಿಂಹದ ಮೊರಿಯನ್ನು ಪರಾಂ
ಬರಿಸಬೇಕು.
ಶಂಬರಾಸುರ. ಆಹಾ ! ಪ್ರಕೃತಿಯ ನಿಯಮಗಳಿಗೆ ವಿರುದ್ಧಾಚರಣೆ
ಸರ್ವಧಾ ಕೂಡದು. ಆ ಮೈಗರಾಜನೆಲ್ಲಿ? ಕಾಣುವುದಿಲ್ಲವಲ್ಲ ? ನನ್ನ
ಮುಂದೆ ಬರಮಾಡು.
ನೇಗಿಲಯೋಗಿ- (ಅರುಗಾಗಿ ತಾನು ಸಿಂಹದ ಮುಖದ ಮೇಲೆ ಹೊದಿಸಿದ್ದ
ಕಂಬಳಿ ತೆಗೆದು) ! ಮಹಾರಾಜರು ನಿನ್ನ ಬೇಡಿಕೆಯನ್ನು ಈಡೇರಿ
ಸುವ ಮುನ್ಕ ನಿನ ನ್ನು ಪರಿಕಿಸಲಿಚ್ಛಿಸಿರುವರು. ಹೀಗೆ ಬಾ. ಮಹಾರಾಜರಿಗೆ
ನಮಸ್ಕರಿಸು.
ಸಿಂಹ-(ಮುಂದೆ ಬಂದ್ಧ ದೀಪದ ಬೆಳಕಿಗೆ ಬದರಿ ಬೆಜ್ಗಿ ದಂಕೆ ಮಾಡಿ, ಪ್ರೇಕ್ಷಕ
ರನ್ನು ಮೊದಲು ನೋಡಿ, ಮಹಾರಾಜನ ಪರಿವಾರದವರನ್ನೂ ನೇಗಿಲಯೋಗಿಯನ್ನೂ
ಸುತ್ತ ಒಮ್ಮೆ ನೋದ್ಮಿ . ಕೊನೆಗೆ ಕತ್ತೆತ್ತಿ ಮಹಾರಾಜನನ್ನ್ನ ನೋಡಿ ಮೊಣಕಾಲೂರಿ ನಮುಸ್ಕರಿಸುವುದು.)
ಶಂಬರಾಸುರ (ಮುಂದ ಬಂದು ಮೃಗರಾಜನ ತಲೆ ಮೈದಡವಿ)
ನಿನ್ನ ಪ್ರಣಾವುವನ್ನು ಸ್ವೀಕರಿಸಿದ್ದೇವೆ. ಎದ್ದು ನಿಲ್ಲು ಮೃಗರಾಜ !
(ಸಿಂಹವು ನಿಲ್ಲುವುದು)
(ರೀವಿಯಿಂದ ನಿಂತು) ಮೃಗರಾಜ ! ನಿನ್ನ ವಾದವೇನೋ ನ್ಮಾಯಸಮ್ಮತವೇ;
ಆದರ ನನ್ನೆ ಆಜ್ಞೆಯನ್ನು ನೀವೆಲ್ಲ ತಪ್ಪು ಅರ್ಧಮಾಡಿಕೊಂಡಿದ್ದೀರಿ. ಕಾಡಿ
ನಲ್ಲ ಒಂದು ಮೃಗಕ್ಕೆ ಆಹಾರವಾಗಿ ಮತ್ತೊಂದು ಮೃಗ ಸ್ಟಷ್ತಿಯಾಗಿರು
ವುದು ಅಕ್ಷರಶ: ವಿಜ. ನನಗೆ ಬಹು ದಿನದ ಹಿಂದೆ ಬಂದ ದೂರಿನಂತೆ ಸಿಂಹ,
---------------------------------------
೧೫
ಹುಲ್ಕಿ ಶಾರ್ದೂಲ್ಬ ಕರಡ್ಠಿ ತೋಳಗಳಂತಹೆ ಮೃಗಗಳು ದ್ಯೈವದತ್ತ
ವಾದಂತೆಯೇ ತಾವು ಆಹಾರಕ್ಯಾಗಿ ಉಪಯೋಗಿಸಬೇಕಾದ ಕೆಲವು ಮೃಗ
ಗಳನ್ನು ಮಾತ್ರ ಕೊಂದು ತಿನ್ನುವುದು ಬಿಟ್ಟು ಮನಬಂದಂತೆ ಸ್ವೇಚ್ಛಾಚಾರಿ
ಗಳಾದುವೆಂದೂ ಅದರಿಂದ ಇತರ ಹುಲ್ಲೆ ಮುಂತಾದ ಮೃಗಗಳು ಭಯವಿಹ್ವಲ
ರಾದುವೆಂದ್ಯೂ ತಿಳಿಯಿತು. ಹಾಗೆ ಸ್ವೇಚ್ಛಾಚಾರಿಗಳಾದಾಗಲೇ ಅಂತಹ
ಮೃಗಗಳನ್ನು ಕ್ರೂರಮೃಗಗಳೆನ್ನುವುದು. ಆಗಲೇ ರಾಜರಾದ ನಾವುಗಳು
ಅರಣ್ಯಗಳಿಗೆ ಬಂದು ಆ ದುಷ್ಪರಿನಿಸಿಕೊಂದ ಮೃಗಗಳನೂ. ಬೇಟೆಯಾಡಿ,
ಕೊಲ್ಲುವುದು.
ನಿನ್ನ ಮೃಗರಾಜ್ಯದಲ್ಲಿ ಅಂತಹ ಸ್ವೇಚ್ಛಾಚಾರಗಳು ಆಗದಂತೆ ನೋಡಿ
ಕೊಳ್ಳುವುದು ನಿನ್ನ ಭಾರ, ಆ ರೀತಿ ನೋಡಿಕೊಳ್ಳುವೆಯಾ ಮೃಗರಾಜ ?
ಸಿ೦ಹ_(ಹೂಂಕರಿಸಿ ಸಮ್ಮತಿ ಸೊಚಿಸುವುದು)
ಶಂಬರಾಸುರ - ಒಳ್ಳೆಯದು. ನಿನ್ನ ಮಾತನ್ನು ನಂಬುತ್ತೇನೆ. ಒಂದು
ವೇಳೆ ನಿನ್ನ ಪ್ರಜೆಗಳು ನಿನ್ನಾಜ್ಞೆ ಮೀರಿದರೆ ಇಕ್ಯೋ-ಈ ಸರ್ವ ಶಸ್ತ್ರವಾಹಕ
ನನ್ನು ಇಲ್ಲಿಗೆ ಕಳುಹಿಸಿಬಿಡುತ್ತೇನೆ. ಎಚ್ಚರಿಕೆ ಇರುವುವೇ ?
(ಸಿಂಹ ಇರುವುದೆಂಬಂತೆ ಹೂಂಕರಿಸುವುದು)
ಶಂಬರಾಸುರ- ನಾವು ಸುಪ್ರೀತರಾದೆವು. ಮೃಗರಾಜ ! ನಿಮ್ಮ ವಾಸ
ಸ್ಥಾನಕ್ಕೆ ತೆರಳಿ ಪ್ರಕೃತಿ ನಿಯಮಕ್ಕನುಗುಣವಾಗಿ ನಿಮ್ಮ ನಿಮ್ಮ ಅಹಾರವನ್ನು
ನೀವು ನೀವು ಭುಂಜಿಸಬಹುದು. ಇನ್ನು ಹೊರಡು ನಿನಗೆ ಸಂಶೋಷ
ವಾಯಿತೇ ?
ಸಿಂಹ- (ತಲೆದೂಗಿ ಒಂದು ಸಲ ಮೇಲಕ್ಕೆ ಹಾರಿ ಇಳಿದು ಸರ್ವಶಸ್ಥ್ರವಾಹಕ
ನನ್ನು ನೋಡಿ ಮುಖದಲ್ಲಿ `ಸುಯ್ದು“ ನೇಪಧ್ಯಕೈ ಹೊರಡುವುದು )
ನೇಗಿಲಯೋಗಿ- ಮಹಾರಾಜನಿಗೆ ವಿಜಯವಾಗಲಿ ! ಜನನಿಬಿಡವಾದ
ನಗರದಲ್ಲೂ ನ್ಯಾಯಪೂರಿತವಾಗಿರುವಂತೆ, ಅರಣ್ಮದಲ್ಲೂ ನ್ಯಾಯಪೂರಿತ
ಜೀವನವೇರ್ಪಟ್ಟಿರುವುದಕ್ಕಾಗಿ ನಾವಲ್ಲ ಕೃತಜ್ಞರು. (ಗಟ್ಟಿಯಾಗಿ) ಎಲ್ಲರೂ
ಜಯಕಾರಮಾಡಿ ! ಶಂಬರಾಸುರ ಮುಹಾರಾಜರಿಗೆ ಜಯವಾಗಲಿ ` ಮಹಾ
ಪ್ರಭುವಿಗೆ ಜಯವಾಗಲಿ ! (ನೇಪಥ್ಯದಲ್ಲಿ ಜಯಕಾರ)
---------------------------------------
೧೬
ಶಂಬರಾಸುರ __ನನ್ನ ಪ್ರಜೆಗಳು ಸರ್ವರೂ ಕ್ಷೇಮುವಾಗಿರಬೇಕೆಂದೇ
ನನ್ನ ಇಷ್ಟ. . ಅವರು ಸುಪ್ರೀತರಾಗಿದ್ದರೇನೇ ನನ್ನ ಮನಸ್ಸಿಗೆ ಶಾಂತಿ; ಅರ್ತ
ರಾದವರು ಒಬ್ಬರಿದ್ದರೂ ದೇವ, ರಾಕ್ಷಸ, ಮಾನವ, ಮೃಗಗಳಲ್ಲಿ ಯಾರಾ
ದರೂ ಸರಿಯೆ, ಅವರನ್ನು ಅವರ ಇಷ್ಪಾರ್ಧ ಪೂರೈಸಿದ ಹೊರತು
ನನ್ನೆ ಮನಸ್ಸಿಗೆ ನೆಮ್ಮದಿಯಿಲ್ಲ. ಇನ್ನು ಹೊರಡುವ.
(ಎಂದು ಒಮ್ಮೆ ಸುತ್ತಲೂ ನೋಡುವಲ್ಲಿ ಗುಹೆಗೆಂದು ಹೊರಟಿದ್ದ ಸಿಂಹವು
ಕತ್ತಲಾದ ಒಂದು ಪ್ರದೇಶದ್ಧ ನಿಂತಿರುವುದು ಕಾಣುವುದು.)
ಶಂಬರಾಸುರ- ಮೃಗರಾಜ, ಇನ್ನೂ. ನಿನ್ನ. ಮೊರೆಯನಾದರೂ -
ಇದೆಯೇ ?
ಸಿಂಹ - -(ತನ್ನನ ಪಕೃದಲ್ಲಿ ಅರೆಗತ್ತಲಲ್ಲಿ ನಿಂತಿರುವ ರತಿಯೆಡೆ ಮುಖ ತಿರುಗಿಸಲು)
ಶಂಬರಾಸುರ -ಯಾರಿದು ಇಲ್ಲಿ ನಿಂತಿರುವವರು : ರೂಪಿನಿಂದ ನಾರಿ
ಯಂತೆ ಕಾಣುವುದು.
(ಹಾರ್ಮೋನಿಯಂ ಕಡೆ ತಿರುಗಿ ಬೆರಳುಗಳಿಂದ ತೋಫನ್ ಸವರಿಕೊಂಡು “ಎರಡೂ
ಕರೀ“ ಎಂದು ತೋರಿಸುವನು. ಹಾರ್ಮೋನಿಯಂ ಆರಂಭವಾದೊಡನೆ)
ರಾಗ : ಇಂಗ್ಜೀಷು ನೋಟು. ತಾಳ : ಮಿಶ್ರ ಛಾಪು
ಯಾರ ದಿಲ ನಾರೀ
ವೈಯಾರೀ ಮನೋಹಾರಿ |
ಯಾರ ದಿಲ್ಲಿ ನಾರೀ .. ?
ಕಠಾರೀ, ಮಿಠಾರೀ, ಸುಂದ-- ರೀ ||
ಯಾರದ್ದಿಲ್ಲೀ ನಾರೀ ___?
ಕಣ್ಣು ಕೋರೈಸುವ ರೂಪವೆತ್ತ ನಾರೀ ||
ಈಕೆ ಯಾರಾಗಿರಬಹಂದು ? ಮನ್ಮಥನ ಮಹಿಷಿಯಾದ ರತಿದೇವಿಯೇ
ಈ _ ರೂಪ ತಾಳಿರಬಹುದೇ ? ಅಥವಾ ದೇವಲೋಕದ ರಂಭೆಯೇ,
ತಿಲೋತ್ತಮೆಯೋ, ಮೇನಕೆಯೋ, ಯಾವ ಅಪ್ಸರೆಯೋ.-ಜಿತೇಂದ್ರಿ
ಯನಾದ್ರ ನನ್ನ ಮನಸ್ಸನ್ನು ಅಪಜಿತೇಂದಿಯಗೊಳಿಸಲು ದೇವತೆಗಳ
ಹೊಂಚೋ ಇದು ? ಅಥವಾ ನನ್ನ ರಾಜ್ಮದಲ್ಲಿ ಪ್ರಜೆಗಳೂ ಮೃಗ ಪಕ್ಷಿ
-------------------------------------------
೧೭
ಕೀಟಗಳೂ ಕೂಡ ಸೌಖ್ಯದಿಂದರಲೂ ಕರುಬಿದ ಇಂದ್ರನೇನಾದರೂ ಅಸೂಯೆ
ಯಿಂದ ತನ್ನ ಪಟ್ಟಮಹಿಷಿಯಾದ ಶಚೀದೇವಿಯನ್ನೇ ಈ ರೂಪ ಕೊಟ್ಟು
ನನ್ಕನ್ಶ್ನ ಅಪಾಮಾರ್ಗಕ್ಕೆಳೆಯಲು ಹಂಚಿಕೆ ಹಾಕಿರುವನೋ ? ಹಾಗೇನಾದರೂ
ಇದ್ದಲ್ಲಿ ಅವನ ಪ್ರಯತ್ಕವೆಲ್ಲ ವ್ಮರ್ಧವೇ ಸರಿ. (ಪ್ರೇಕ್ಷಕರ ಕಡೆ ತಿರುಗಿ)
ಆದರೆ ಈಕೆ ಆರ್ತಳೆಂದು ಮೃಗರಾಜನ ಹೇಳಿಕೆಯಿಂದ ತಿಳಿಯುತ,ದೆ
ಯಾಗಿ ಆರ್ತರಾಗಿ ನನ್ನಲ್ಲಿಗೆ ಬಂದವರ ಮೊರೆ ಕೇಳಿ ಅವರ ಇಷ್ಟಾರ್ಥ ಸಲ್ಲಿಸು
ವುದೇ ನನ್ನ ಕರ್ತವ್ಮವಲ್ಲವೇ ? ಈಕೆ ಯಾರೋ ಕಾಣೆನಲ್ಲಾ
ಹಾಡು : ರಾಗ ? ತಾಳ ?
ಯಾರು ಕಾಣೆ ನಾಂ ಈಕೇ |
ಅಂದ ದಾರ ವಿಂದ ವದನೇ ||
(ರಂಗದ ಬೆಳಕು ಹೆಚ್ಚು ಮಾಡಲು ರತಿಯ ಮುಖವನ್ನು ಚೆನ್ನಾಗಿ ನೋಡಿ)
ಭದ್ರೆ ! ನೀನಾರು ? ಎಲ್ಲಿಂದ ಇಳಲ್ಲಿಗೈತಂದೆ ? ಈ ಘೋರಾರಣ್ಯದಲ್ಲಿ
ಏಕಾಂಗಿನಿಯಾಗಿ ಹೇಗೆ ಮುಂದಡಿಯಿಡುವೆ ? ನಿನ್ನ ಕಣ್ಣುಗಳಲ್ಲಿ ನೀರು ಹನಿ
ಯೇಕೆ ? ನಿನ್ನನ್ನು ಪೀಡಿಸುತ್ತಿರುವ ದುಃಖವ್ಯಾವುದು ? ಶೀಘ್ರವಾಗಿ ಒರೆ
ದರೆ ನಿನ್ನ ದುಃಖ ಪರಿಹರಿಸಲು ನಾನು ಸಿದ್ಧನಾಗಿರುವೆನು. ದುಃಖಾರ್ತರಾದ
ವರಿಗೆ ದುಃಖ ಪರಿಹರಿಸುವ ಖ್ಯಾತಿಯುಳ್ಳ ಶಂಬರಾಸುರನ ಹೆಸರು ಕೇಳಿಬಲ್ಲೆ
ಯಲ್ಲವೇ ? ನಾನೆ . ಶಂಬರಾಸುರ. . ನಿನ್ನ ದುಃಖವೇನೆಂಬುದನ್ನು ಧೈರ್ಯ
ವಾಗಿ ಹೇಳು ಮಹಿಳಾಮಣಿ !
ರತಿ (ಮುಂದೆ ಬಂದು) ಮಹಾರಾಜನಿಗೆ ವಿಜಯವಾಗಲಿ, ನಿಮ್ಮ
ಆಶ್ವಾಸನದಿಂದ ನನ್ನ ಕಷ್ಟ ಪರಿಹಾರವಾದಂತೆಯೇ ಎಣಿಸುವೆನು. ಕೃತಾರ್ಧ
ಳಾದೆನು ಮುಹಾರಾಜ !
ಶಂಬರ-_-ಸಂತೋಷ | ಎಲಿ ಭದ್ರೆ ! ನೀನು ತುಂಬ ಆಯಾಸ
ಗೊಂಡಂತಿದೆ, ನಮ್ಮ ಅರಮನೆಗೆ ನಮ್ಮ ರಧದಲ್ಲಿ ತೆರಳುವಳಾಗು. ರಾಣಿ
ವಾಸದವರು ನಿನ್ನನ್ನು ಆದರಿಸುವರು. ಅಲ್ಲಿ ವಿಶ್ರಮಿಸಿ ನಮ್ಮ ಅತಿಥ್ಯ
ಸ್ವೀಕರಿಸಿ ನಾಳೆಯ ದಿನ ಅಸ್ಥಾನದಲ್ಲಿ ನಮ್ಮನ್ನು ಕಂಡು ನಿನ್ನ ಮೊರೆಯನ್ನು
ಬಿನ್ನವಿಸಬಹುದು. ಒಪ್ಪಿಗೆಯೋ ?
----------------------------------------
೧೮
ರತಿ -ಮಹಾರಾಜರು ಅಪ್ಪಣೆ ಕೊಡಿಸಿದಂತೆ... ಆದರೆ...
ಶಂಬರ ನಿನಗೇನಾದರೂ ಶಂಕೆಯೇ ? ನಮ್ಮನ್ನು ಕಂಡರೆ
ಅ೧ಜಿಕೆಯೇ?
ರತಿ--ಅದೇನೂ ಅಲ್ಲ ಮಹಾರಾಜ ! ಕಮ್ಮ ಅಂತಃಪುರದ ರಾಣೀ
ವಾಸದವರಿಂದ ಆದರಾತಿಥ್ಯಗಳನ್ನು ಸ್ನೀಕರಿಸುವುದರಲ್ಲಿ ನಾನು ಧನ್ಯಳೇ ಆದೆ.
ಆದರೆ ನನ್ನ ಮೊರೆಯನ್ನು ನಾಳಿನ ಆಸ್ಥಾನದ ವೇಳೆಯವರೆಗೂ ಸಲ್ಲಿಸದೆ
ಇರಲಾರೆ. . ಅಪ್ಪಣೆಯಾದರೆ....
ಶಂಬರ-- ಈಗಲೇ ಬಿನ್ನವಿಸುವಿಯೆನ್ನುವೆಯಾ ? ಆಗಬಹುದು.
ರತಿ-- ನನ್ನದೊಂದು ಪ್ರಾರ್ಥನೆಯಿದೆ.
ಶಂಬರ-_ನೀನಾರೆಂಬುದೇ ನನಗೆ ಹೇಳಲಿಲ್ಲವಲ್ಲ ? ಆದರೂ ಸರಿ-
ನಿನ್ನ ಪ್ಪಾರ್ಥನೆಯೇನೋ ಅದನ್ನು ಒರೆ !
ರತಿ-- ತಮ್ಮ ವಾಗ್ದಾನವಾದ ನಂತರ ಹೇಳುವೆ.
ಶಂಬರ_-ಹೆಣ್ಣು ಜೀವ ಎಷ್ಟಾದರೂ ಹೆಣ್ಣೇ. ಗಂಡಸರಲ್ಲಿ ಯಾವಾ
ಗಲೂ ಅಪನಂಬಿಕೆಯೇ--ಇರಲಿ. ಎಲೌ ! ಭದ್ರೆ ! ನಿನ್ನ ಪ್ರಾರ್ಥನೆಯನ್ನು
ಮನಸಾ ಮನ್ಕಿಸುವೆ.
ರತಿ--ಕೃತಾರ್ಥಳಾದೆ. ನನ್ನದೊಂದು ವೃತವಿದೆ.
ಶಂಬರ__ವೃತವಿದರೆ ವರ್ತಿಸು. ಏನಭ್ಯಂತರ ?
ರತಿ--ಅದು ಕಠಿಣವಾದ ವ್ರತ. ಆರು ಮಾಸಗಳವರೆಗೆ ನಿಮ್ಮ ರಾಣಿ
ವಾಸದಲ್ಲಿ ಯಾವ ಗಂಡಸೂ ನನ್ನನ್ನು ನೋಡಬಾರದು. ಸ್ವಯಂ ಮಹಾ
ರಾಜರೂ ನೋಡಬಾರದು. ಹಾಗೆ ನೋಡಿದಲ್ಲಿ ಹಾನಿ ತಟ್ಟುತ್ತದೆ.
ಶಂಬರ-ಹಾನಿ ತಟ್ಟುತ್ತದೆಯೇ ? ಯಾರಿಗೆ ? ನಿನಗೇ ?
ರತಿ-ನನಗಲ್ಲ ಮಹಾರಾಜ. ನನ್ನನ್ನು ನೋಡಿದವರಿಗೆ !
ಶಂಬರ-ಹಾಗೋ ? ನಿನ್ನ ವ್ರತ ಆರಂಭ ಯಾವಾಗ ?
ರತಿ- ತಾವು ವಾಗ್ದಾನ ಮಾಡಿದೊಡನೆ ?
----------------------------------
19:
ಶಂಬರ (ಪುನಃ ಯೋಚಿಸಿ)
ನಾಳೆ ನನ್ನ ಬೆಳಗಿನ ಪೂಜಾದಿ ವಿಧಿಗಳನ್ನು ತೀರಿಸಿದೊಡನೆಯೇ
ವಾಗ್ದಾನ ಕೊಡುವೆ. ಅಲ್ಲಿಯವರೆಗೆ ಅವಕಾಶವಿದೆಯೋ ?
ರತಿ-ಇದೆ ಮಹಾರಾಜ !
ಶಂಬರ ಸರಿ ! ನಾಳೆ ವಾಗ್ದಾನ ಕೊಡುವೆ. ಈಗ ವೇಳೆಯಾಯಿತು.
ರಥವನ್ನೇರಿ ನೀನು ಹೊರಡು, ನಾನ ಪರಿವಾರವೂ ಹಿಂದಿನಿಂದ ಆಗಮಿಸು
ತ್ತೇವೆ.
ಪರಾಕಿನವರು--ಭೋ ಪರಾಕ್-ಮಹಾರಾಜರು ನಗರಕ್ಕೆ ಹಿಂದಿರುಗು
ವರು ! ಪರಿವಾರವೆಲ್ಲ ಹಿಂಬಾಲಿಸಲಿ ! ಜಯವಾಗಲಿ ಚಂಡ ಮಾರ್ತಾಂಡ
ತ್ರಿಲೋಕ ದಿಗ್ವಿಜಯಿ ಸಾರ್ವಭೌಮ ಶಂಬರಾಸುರ ಮಹಾರಾಜರಿಗೆ ಜಯ
ವಾಗಲಿ ! ಭೋ ಪರಾಕ್ ! ವಿಜಯಗೀತೆ ಹಾಡಿರಿ.
ಎಲ್ಲರೂ ರಾಗ : ಇಂಗ್ಲೀಷು ನೋಟು, ತಾಳ : ಏಕ.
ಬನ್ನಿರಿ ನಾವ್ ಪೋಗುವಾ |
ನಗರವನೇ ನಾವ್ ಸೇರುವಾ ||
ಬನ್ನಿರಿ ನೀವ್ ಪೋಗುವಾ ||
(ಬೇಗನೆ ಹೆಜ್ಜೆ ಹಾಕುತ್ರ)
ಬನ್ನಿರಿ ಪೌರರೆ ನೀವೀಗ
ನಗರವ ಸೇರುವ ಬಲುಬೇಗ !
ಇಲ್ಲಿ ಕೆಲಸವಿಲ್ಲವೂ ನಾವು ಬಲ್ಲೆವೂ
ಬನ್ನಿರಿ ಪೌರರೇ ನೀವೀಗ.......
(ಸಿಂಹವು ಆರಣ್ಯದ ಕಡೆಯ ನೇಪಥ್ಯಕ್ಕೂ ಶಂಬರಾಸುರ, ರತಿ
ಪರಿವಾರದವರು ಇವರೆಲ್ಲ ನಗರದ ಕಡೆಯ ನೇಪಥ್ಯಕ್ಕೂ ತೆರಳುವರು.)
'ಆ' ರಂಗದ ಪರದೆ ಬೀಳುವುದು
-------------------------------------
೨೦
- ಅ' ಗ್ರೀನ್ ರೂಮಿನ ಫರದೆ ಏಳುವುದು
(ಪಾತ್ರಧಾರಿಗಳು ಅವರವರ ಬಟ್ಟೆ, ಒಡವೆ ತೆಗೆದಿಡುತ್ತ) "ಅಬ್ಬ, ಸದ್ಯ
ಮುಗೀತಲ್ಲಪ್ಪಾ ಸೀನು-ಅದೇನು ಉದ್ದುದ್ದ ಸೀನೂ, ಅದೇನು ಉದ್ದುದ್ದಾ
ಮಾತುಗಳ-ಅದೂ ಎಲ್ಲ ಒಬ್ಬನ ಬಾಯಿಂದ್ದೇನೇ-ನಮಗೆಲ್ಲಾ ಹುಚ್ಚು
ಹಿಡಿಯೋದೊಂದು ಬಾಕಿ” ಎಂದು ಒಬ್ಬೊಬ್ಬರು ಒಂದೊಂದು ವಿಧವಾಗಿ
ಮಾತನಾಡಿಕೊಳ್ಳುತ್ತಿರುವರು.
ಮಂರ್ತ-ಲೇ ! ಮಾತು ನಿಲ್ಲಿಸ್ರೋ ! ಆಗ್ಹೋದ ಸೀನು ಕಟ್ಟಿ
ಕೊಂಡೇನ್ರೋ ಈಗಾ ! ಈಗ ಮುಂದಾಗಬೇಕಲ್ವಾ ಕಾಮಿಕ್ ಸೀನು, ಅದರ
ಆರೇಂಜುಮೆಂಟೆಲ್ಲಾ ನೋಡ್ರೋ ಮೊದಲು, ಎಲ್ರೋ ಆ ತರಕಾರಿ
ಮಾರ್ಕೆಟ್ಟು ಈ ಬಾಬುಗಳೆಲ್ಲಾ ?
ರಂಗ-ಲೇ ಮೂರ್ತಿ! ಅದೆಲ್ಲಾ ಅಲ್ಲಿ ನೋಡು ! ಘರದೇ ಹಿಂದೇನೇ
ಎಲ್ಲಾ ಆರೇಂಜು ಮಾಡಿದೀನಿ. ಈಗ ಸದ್ಯ ಇವರೆಲ್ಲಾ ಮೇಕಪ್
ತೆಗೆದು ಹಾಕಿ ಆ ಸೀನಿಗೆ ಡ್ರೆಸ್ ಮಾಡದರ ಒಳಗಾಗಿ ಅಲ್ಲೋಂದು
ಏನಾದ್ರೂ, ಮಾನೋ ಟರ್ನು ಒಂದು ಕೊಡ್ತೀಯಾ ? ಇಲ್ಲಾ ಅದೂ
ನಾನೇನೋ ? ಆಡಿಯನ್ಸು ರೆಸ್ಟಿವ್ ಆಗಿಬಿಡ್ತಾರೆ.
ಮೂರ್ತಿ ನಾನು ಅಲ್ಲ; ನೀನ ಅಲ್ಲಮ್ಮಾ, ಲೋ ! ಅವನು ಸೀರೇಗೆ
ಜಗಳ ಆಡಿದಾಗಲೇ ಗೊತ್ತಾಗಲಿಲ್ವೇನೋ ? ಅವನೇ ಕಿರ್ಲಿದಇಮೊಂದಲು ರತಿ
ಆಮೇಲೆ ಅಪ್' ಟು ಡೇಟ್ ಅಮ್ಮಯ್ಯಾಂತ. ಈಗ ಸುಬ್ಬು, ಲೇ ! ಬೇಗ
ಡ್ರೆಸ್ ಮಾಡಿಕೊಂಡು ಹೋಗಮ್ಮ, ಆಡಿಯನ್ಸ್‌ನ ಕಾಯಿಸಬೇಡ.
ದಮ್ಮಯ ಹೋಗೋ ಬೇಗ-ಕಿತ್ಹಾಕಿ ಆ ಸೀರೇನಾ, ಈ ದ್ಹಾವಣಿ-ಆ ಜರೀ
ಲಂಗ ತಗಲಿಸ್ಕೊಂಡು ಆ ಎತ್ತರದ್ ಹೀಲಿನ ಷೂಸು ಬಿಕ್ಕೊಂಡು ಕೈಲಿ
ಒಂದು ಆ ಪ್ಯಾರಾಸೋಲ್ ಎತ್ತಿಕೊಂಡು, ಯಾವ ಅಮ್ಮಯ್ಯಾ ಇಷ್ಟು
ಅಪ್ ಟು ಡೇಟ್ ನೋಡೋಣ ? ಸ್ವಲ್ಪಿರು. ಆ ಸೈಡ್ ಪಾರ್ಟಿಂಗ್ ಸರಿ
ಯಾಗಿ ಎತ್ತು-ಈ ಹಳೇಕಾಲದ ಒಡವೆ ಕಿತ್ತು ಬಿಸಾಕು ಒಂದೆರಡು
ಲೋಲಾಕು ತಗುಲಿಸ್ಕೊಳ್ಳೋ ! ಇನ್ನು ನಡಿ !.... ಒಳ್ಳೇ ಆಕ್ಟರುಗಳು !
-----------------------------
೨೧
ಎಲ್ಲದಕ್ಕೂ ನಾನು ಸೊಂಟ ಕಟ್ಟಿ ಜಟ್ಟೈ ಹಾಗೆ ನಿಂತು ಜಗ್ಗಿ ಸಿದರೇನೇ
ಇವರೆಲ್ಜಾ ಜಗ್ಗೋದು !
ಇನ್ನು ಹೋಗಮ್ಮಾ ಬೇಗ ! ಬಡುಕೊಂಡಾರು ಆಡಿಯನ್ಸೂ !
( ಸಾಲಂಕೃತವಾದ ಸುಬ್ಬುವು `ಅ` ರಂಗದಾಟೆ °ಆ` ರಂಗದ ಕಡೆ ಹೋಗಿ ಸೈಡ್
ವಿಂಗ್ಸ್ ನಲ್ಲ ನಿಂತು ಫರದೆ ಮೇಲಕ್ಕೆತ್ತಲು ಸೂಚಿಸುವನು )
ಮೂರ್ತಿ ಈ ಕಾವಿಂಕ್ ಸೀನು ಅಗುತ್ತಲೊ ಇನ್ನೇನು ಇದೇ ಅಂತ
ಆಡಿಯನ್ಸು ಯೋಚನೆ ಮಾಡೋಷ್ಪರಲ್ಲಿ ಹೊಡೆದು ಬಿಡಬೇಕು ಇನ್ನೊಂದು
ಆಕ್ಬು. ಅದಾದ ಮೇಲೆ ಒಂದು ಸಣ್ಣ ಕಾಮಿಕ್ಕು, ಆಮೇಲೆ ಕೊನೆ ಆಕ್ಟು .
ತೀರಿಹೋಯಿತೋ ಈ ದಿನದ ಋಣ ಸದ್ಯ ! ಶಂಬರನ ೨ನೆ ಆಕ್ಸಿಗೆ ಪ್ರಿಪೇರ್
ಮಾಡಿಕೊಳ್ರೋ !
ರಂಗೂ ಮುಂತಾದವರು- ಲೇ ನಿನ್ನ ಕೆಲಸ ನೀನು ನೋಡಮ್ಮಾ |
ನೀನೇ ಕಂಡಿರೋನು, ಮಹಾ ! ನಾಟಕ ಹೇಗೆ ಆಡ್ಸೋದೂ ಅಂತ,. ನಿನ್ನ
ಎರಡನೇ ಆಂಕದ ಶಂಬರನ ಆಲಂಕಾರ ಮುಗಿಸಿ ರೆಡಿಯಾಗಿರು-ನಾವು ಮಾ
ರ್ಕೆಟ್ಟು ಸೀನು ವಂಗಿಸೋ ಹೊತ್ತಿಗೆ-
( “ಅ` ಪರದೆ ಬೀಳುವುದು)
ಎಂಬಲ್ಲಿಗೆ `ಶಂಬರನ ಶೃಗಾರ` ದ ಮೊದಲನೆಯ ಅಂಕ ಪ್ರವೇಶವು ಸಮಾಪ್ತ
ವಾದಂದು.
ಉಪನಾಟಕ- ದೃಶ್ಯ
( 'ಆ' ರಂಗದ ಪರದೆ ಏಳುವುದು )
| ಪ್ರವೇಶ : ಅಪ್ ಟು ಡೇಟ್ ಅಮ್ಮಯ್ಯ, ವಾರೆ ಬೈತಲೆ ತೆಗೆದು ರಿರ್ಬ್ಬಕಟ್ಟಿದ
ಎರಡು ಜಡೆ. ಎದ್ದು ಕಾಣುವ ಹೇರ್ ಪಿನ್ನುಗಳು ಪ್ಲಾಸ್ಟಿಕ್ಕ್‌ನ ಮಲ್ಲಿಗೆ ದಂಡೆ,
ಹೊಳೆಯುವ ಲೋಲಾಕು, ಹಣೆಗೆ ಸಣ್ಣ ಸಾದುಚುಕ್ಕೆ, ಹುಬ್ಬುಗಳ ನಡುವೆ ಕಬ್ಚೆರುವ
ಫೈಮ್ ಇಲ್ಲದ ದಪ್ಪಗಾಜಿನ ಕನ್ನಡಕ, ನಕ್ಕಿ ಜರತಾರಿ ಕೆಲಸದ ಲಂಗ, ಮೇಲೆ ಸೀರೆ
ಯಂತೆ ದ್ಹಾವಣಿ, ಮೊಂಡುಸೆರಗು, ಎಡಭುಜದ ಮೇಲೆ ನೆರಿಗೆ ಜೋಡಿಸಿ `ಬ್ರೂಚ್`
ಸೆಕ್ಕಿಸಿದೆ ತೋಳು ಅರ್ಧಮುಚ್ಚಿ ಗುಪ್ಪು ಕಟ್ಟಿರುವ ಕುಪ್ಪಸ `ಜಾರ್ಜೆಟ್ ತೆಳು ದ್ಹಾವಣಿ
ಸೀರೆ ಸ್ಟಾಕಿಂಗ್ಸ್‌ನ ಮೇಲೆ ಪಾದಗಳು ಮೆಟ್ಟಿರುವ ಎತ್ತರ ಹಿಮ್ಮಡಿಯ ಸ್ಲಿಪ್ಪರು, ಓಂದೇ
ಕೈಗೆ. ತುಂಬ ನಿಗಿನಿಗಿಸುತ್ತಿರುವ ಬಳೆಗಳು, ಕೈಯಿಂದ ಕೈಗೆ ಬದಲಾಯಿಸುತ್ತಿರುವ
-----------------------------------------------
೨೨
ಒಮ್ಮೊಮ್ಮೆ ತೆರೆದು ಮುಚ್ಚುತ್ತಿರುವ ಪ್ಯಾರಾಸೋಲ್ (ಆಧುನಿಕ ಹೆಣ್ಣು ಛತ್ರಿ)-ಭುಜಕ್ಕೆ
ಸಣ್ಣ ಸ್ಟ್ರ್ಯಾಪ್‌ನಿಂದ ನೇತುಹಾಕಿರುವ ವ್ಯಾನಿಟಿ ಬ್ಯಾಗ್ -ಹೀಗೆ ಅಲಂಕೃತಳಾಗಿ ರಂಗದ
ಮಧ್ಯೆ ಬಳುಕುತ್ತ ಬಂದು ಹಾಕ್ಕೋನಿಯಂ ಕಡೆ ದೃಷ್ಟಿ ಹಾಯಿಸಿ ಕೊಡೆಯ ದಂತದ ಹಿಡಿ
ಯ ಮೇಲೆ ಎರಡು ಬೆರಳನ್ನಿಟ್ಟು ಶೃತಿ ತೋರಿಸಿ ಆರಂಭಿಸುವಳು, ರಂಗಭೂಮಿಯ
ಆ ಕಡೆ ಈಕಡೆ ಯಥಾ ಸಾವಕಾಶವಾಗಿ ಓಡಿಯಾಡುತ್ಯ ಪದ್ಯ-ಗದ್ಯ ಹೇಳುವಳು.]
ರಾಗ--ಹಮೀರ್ಕಲ್ಯಾಣಿ ತಾಳ...ಏಕ ..ಮಿಶ್ರನಡೆ
Verse - ಚರಣ
From what my mother has said to me
The girls of to day are certainly
Much altered to what they used to be
When mother was twenty one:
( Says) girls of her days stop'd indoors all day
At eve went to temples to worship and pray
An ಅರ್ಷ್ಣಾ ಕುಂಕ್ಮಾ party once in a way
Contented them every one
Chorus - ಪಲ್ಲವಿ
When mother was twenty one,
The girls didn't have much fun,
They didn't stop out very late till dark
Prancing in Lalbagh or Cubbon Park;
Soon as their schools were done,
Homewards they had to run;
I am sure that women
Had a rotten time then
When mother was twenty one.
Patter I
ಏನ್ಸಾರಿಬಲ್ ನೋಡೀಂದ್ರೆ - "At eve went to temples
to Worship and pray ” ಅಂತೆ ! Men ಹಾಗೆ! ಒಂದ್ಯಂತ್ರ ಗೊತ್ತಿಲ್ಲ -
ಒಂದ್ ತಂತ್ರ ಗೊತ್ತಿಲ್ಲ !-temple ಗ್ಹೋಗಿ-ಒಂದ್ರಾಟನ್ cocoanut
------------------------------------
23
break ಮಾಡಿ ಒಂದ್ಪೀಸಿಟ್ಬಿಡೋಂತೆ ಅಲ್ಲಿ, ಇನ್ನೊಂದ್ಪೀಸ್ ಮನೇಗ್ತಂದು
ಚಟ್ನಿ prepare ಮಾಡಿತಿನ್ನೋದಂತೆ ! ಇದೇ religious ಆಗಿದ್ದದ್ದವು!
ಏನ್ಹಾರಿಬಲ್ ನೋಡೀಂದ್ರೆ ! ಇನ್ನಿವರ್ Famous ಆರ್ಷ್ಣಕುಂಕ್ಮ party
....stuffy roomನಲ್ಲಿ squat ಮಾಡ್ಕೊಂಡು.. squeaky voicesನಲ್ಲಿ
shriek ಮಾಡೋದು...ಹಣೇಗ್ saffron ಹಚ್ಕೊಂಡು ಹೋರ್ಡೋದ್ಮನೇ
ಕಡೆ ! ಇದೇ ಇವರ್ recreationoo! ಏನ್ಹಾರಿಬಲ್ ನೋಡೀಂದ್ರೆ !
Verse - ಚರಣ
What my mother dreads most now-a-days
Is the bicycling girl that at Badminton plays
Be- ribbons her plait and powders her face
Dead to sneers and sniggers of scorn!
Mother swears she never used powder and puff
Found saffron and turmeric good enough stuff,
Drawing water from wells recreation enough
When mother was twenty one.
- Chorus - ಪಲ್ಲವಿ
When mother was twenty one
The girls did fashion shun:
They didn't part their hair at the side
Wear boots and wrist watches and brooches beside ;
Soon as they could walk
With men were forbidden to talk :
Rose up with the lark, slaved at home till’t was dark When mother was twenty one.
Patter II
ಈ ಕಾಲಲ್ಲಿ girls ಏನ್ಮಾಡಿದ ತಪ್ಪೇ time waste ಮಾಡ್ಕೂ
ಡ್ದೂಂತ...ಒಂದ್ bicycle ಮೇಲ್ಹೋದ್ರೆ..ಬೈಸ್ಕೊಳ್ಳೋದೇನೇ ಲಾಭ !...
ಮಧ್ಯದಲ್ಲೇ hair part ಮಾಡ್ಕೊಂಡ್ರೆ thin ಆಗುತ್ತೆ growthoo ಅಂತ
-------------------------------------
24,
side part ಮಾಡ್ಕೊಳ್ಳೋದಷ್ಟೇ ? Middle ನಲ್ಲಿ ಬೈತಲೆ
ತಕೊಂಡು ಮೂವತ್ತ್ರಲ್ bald ಆದವು , ಎಷ್ಟ್ಜನ ಇಲ್ಲ ಈ ಕಾಲ್ದಲ್ಲಿ...
ಇನ್ನಿತ್ಯ ಒಂದೊಂದ್ನಾರು ಕಿತ್ತು ಕಟ್ಕೋಳ್ಳೋಕಿಂತ ನಾಲಕ್ದಿನ ನಿಲ್ಲಲೀಂತ
ಒಂದ್ ribbon ಕಳ್ಕೊಳೋದ್ಘಾಪಾನೇ? ..ಏನ್ ಸಾರಿಬಲ್ ನೋಡೀಂದ್ರೆ!
mother ಕಾಲ್ನಲ್ಲಿದ್ದ Wellsನೆಲ್ಲಾ ಮುಚ್ಚಿಟ್ಟು ಕೊಳಾಯಿ ಇಟ್ಟಿರೋದ್ನ
ಮ್ತಪ್ಪೆ ನೀರ್ಸೇದೋ exerciseಗೆ ಬದ್ಲಾಗಿ badminton ಆಡೋ
ಣಾಂದ್ರೆ, ಅದಕ್ಕೊಂದ್ಬೊಬ್ಡಾನೇ ! ಇನ್ mother ಕಾಲ್ದಲ್ಲಿ muddy
roads ಆಗಿದ್ದು ಬರಿ: ಕಾಲ್ನಿಲ್ಹೋಗೋದು harmless ಆಗಿತ್ತು. ಈ
metalled roads ಕಾಲಲ್ಲಿ bare-footed ಆಗಿ ಬೆಣಚ್ಕಲ್ಮೇಲ್ನಡದು
bleeding soles ಆಗೋದು ಒಂದ್ beautyನೇ ! ...ಏನ್ horribly
unfair ನೋಡೀಂದ್ರೆ !
Verse-ಚರಣ
From what my mother shrieks night and day
The girls today are too giddy and gay
To walk through their lives in a womanly way
As she did at twenty one! (
Says) “Woman should have but one aim in life,
That's to be a kind mother and a dutiful wife,
And keep her home free from misery and strife"
As she did at twenty one!
- Chorus-ಪಲ್ಲವಿ
When mother was twenty one,
Publicity women did shun;
They did'nt give lectures or parties gay
Shrieking and shouting for manly sway.
Soon as they were wed
To the rest of the world they were dead;
And of their own accord
Were the slaves of theit lords
When mother was twenty one.
----------------------------------
25
Patter III ಓ ! ಹೋ ! ಹೊ | Of their own accord were the
slaves of their lords !” ಏನ್ಸುಳ್ನೋಡೀಂದ್ರೆ ! ಇಷ್ಟಕ್ಕೂ
facts ಏನು? ಆರಳ್ವೇರ್ಷದೊಳ್ಗೆ ಮಸೀಮುಖ್ದವ್ನಿಗ್ marriage
ಮಾಡ್ಕೊಡೋದು ಮಗಳ್ನ : ಇನ್ನವನಿಗೆ ಅಡಿಗೆಯವ್ಳಕೆಲ್ಲ
ಅವನ್ಮಕ್ಳಿಗಾಯಾಕೆಲ್ಸ ಮಾಡ್ಕೊಂಡು ಆಕಳ ಹಾಗೆ ಆಯಸ್ಸೆಲ್ಲಾ
ಬಿದ್ದಿರ್ಬೇಕಂತೆ Womenoo ! ಯಾಕೋ ಕಾಣೆ motherನ
"ವಿಲಾಯ್ತೀಲಿ women wom, warಗೆ ಹೋಗಿ vote ಗ್ಳು
ಸಂಪಾದಿಸಿಧಾರೆ ಅಂದರೆ'' ಸರಿ ! ನೀವೆಲ್ಲಾ Carvalry ಸೇರ್ಬಿಡಿ !--
ಆದ್ರೆ ಸದ್ಯ ಮನೇಲಿರೋ Infantry ನೋಡ್ಕೊಳ್ಳೋವ್ರ್ಯಾರೂ ?”ಂ
ತಂದ್ಬಿಡ್ತಾಳೆ . Menನ್ನೋ ಬಲು up-to-date community
ಅಂತ್ಹೆಸರು “ವಿಪ್ರಾಃ ಪಶ್ಚಿಮ ಬುದ್ಧಯಃ” ಅಂತೆ- ಅದೇನ್
western-minded ಡೋ, Brahminsoo . time ಏ ತೋರಿ
ಸ್ಟೇಕು ! ಇಷ್ಟಕ್ಕೂ mother ಏನ್ peace-minded
pigeon ಆಗಿದ್ಲೋ ? ಅದೆಲ್ಲ ಅಜ್ಜಿನ್ಕೇಳಿದ್ರೆ ಗೊತ್ತಾಗತ್ತೆ--
ಬರಲೂಂದ್ರೀಗ್ಲೂ ಬೆದರ್ತಾನೆ ಅಪ್ಪ.
Chorus End...ಪಲ್ಲವಿ ಅಂತ್ಯ
She I'm sure in her day
Kept poor father at bay
When my mother was twenty one.
(ಆಪ್‌ಟುಡೇಟಮ್ಮಯ್ಯನ ನಿಷ್ಮ ಣ)
( ಆ ರಂಗದ ಪರದೆ...ಅಂಕದ ಪರದೆ ಬೀಳುವುದು)
--------------------------------
ಅಂಕ ೨ ಪ್ರಯಾಸ
('ಅ' ರಂಗದ ಪರದೆ ಏಳುವುದು. ಶಂಬರಾಸುರನ ಚಿಕ್ಕ್ ಮಂದಿರ.
ಪೂಜಾದಿಗಳನ್ನು ಮುಗಿಸಿ ರಾಜನು ಸಿಂಹಾಸನಾಸೀನನಾಗಿದ್ದಾನೆ. ವಿದೂಷಕ ಪಕ್ಕದಲ್ಲಿ
ನಿಷಣ್ಣಿಸಿದ್ದಾನೆ. _ ಪ್ರಹರಿ, ಚಾರ, ಚಾಮರ-ಸೇವಿಕೆಯರು ಮರ್ಯಾದೆಯಿಂದ ದೂರದಲ್ಲಿ
ನಿಂತಿದ್ದಾರೆ. ಆಡುವ ಮಾತು, ಹೇಳುವ ಹಾಡು, ಎಲ್ಲವೂ ಅಕ್ಷರಶಃ . ಅಭಿನಯಪೂರ್ವಕ
ವಾಗಿರುತ್ತವೆ)
ಶಂಬರಾಸುರ-ಮಿತ್ಥಾ, ಮಾಂಡವ್ಯ ! ನಿನ್ನೆ ಅರಣ್ಮದಲ್ಲಿ ಏಕಾಂಗಿನಿ
ಯಾಗಿ ದುಃಖಾರ್ತಳಾಗಿ ನಿಂತಿದ್ದ ಲಲನಾಮುಣಿಯನ್ನು ನೋಡಿದಾಗಿನಿಂದ
ನನ್ನ ಮನವೆಲ್ಲವೂ ಅವಳಲ್ಲಿಯೇ ಲೀನವಾಗಿದೆ. ನಾನಾಗಿ ಅವಳನ್ನು ಅಪೇಕ್ಷಿ
ಸುವುದು ರಾಜಯೋಗ್ಮವಲ್ಲ. ಹೆಣ್ಣು ತಾನಾಗಿ ಒಲಿದು ಬಂದರೆ ಅವಳ
ಇಷ್ಪಾರ್ಧ ಪೂರೈಕೆಯೇ ರಾಜನ ಕರ್ತವ್ಮ. ಏನೆನನ್ನುವೆ ?
ವಿದೂಷಕ__ಮಹಾರಾಜ! ನೀನು ಬೇಟೆಗೆಂದು ಅರಣ್ಯಕ್ಕೆ, ಹೋಗು
ವುದೇ ಅಪರೂಪ. ನಿನ್ನ ಹೆಸರು ಕೇಳಿದರೇನೇ ದುಷ್ಟರೆನ್ನಿಸಿಕೊಂಡ ಮೃಗ
ಗಳೂ ಸಾಧುವಾಗುತ್ತವೆ ! ವನ್ಮಮ್ಯುಗಗಳಲ್ಲೇ ಹೀಗಾದ ಮೇಲೆ ವನ್ಯ
ಮಾನವಿಯಾದ ಈಕೆಯ ಪಾಡೇನು ? ಇಲ್ಲಿಗೆ ತಾನಾಗಿ ಬಂದು ತನ್ನ ಅಭೀಷ್ಟ
ವನ್ನು ಸಲ್ಲಿಸೆಂದು ಕೇಳಿಕೊಳ್ಳುವುದೇನೂ ಆಶ್ಚರ್ಯವಲ್ಲ. ಬರಲಿ, ಏನು
ಹೇಳುವಳೋ ನೋಡುವ
ನಿನಗೇನೋ ಮನವು ಅವಳಲ್ಲಿ ನೆಟ್ಟು ಅನ್ನಾಹಾರ ನಿದ್ರೆಗಳು ಬೇಡ
ವಾಗಿದೆ. ಆದರೆ ನಿನ್ನ ಮಿತ್ರನಾದ ನನಗೂ ನಿನ್ನೆಯಿಂದ ಇದೇ ದುರ
ವಸ್ಥೆಯೇ ? ಸದ್ಯ ಈ ಅವಕ್ಕೆ ಯಿಂದ ನಾವಿಬ್ಬರೂ ಎಂದಿಗೆ ಪಾರಾದೇವೋ.
ಎಂದಿಗೆ ವೃಷ್ಟಾನ್ನ ಭೋಜನ ಮಾಡಿ ಸುಖವಾಗಿ ನಿದ್ದಿಸಿಯೇವೋ ಎಂದೆನ್ನಿ
ಸುತ್ಕಿದೆ ನನಗೆ ಈಗ !
--------------------------------------------
²7
ಶಂಬರಾಸುರ ಸರಿ. . ಯಾವಾಗಲೂ ನಿನಗೆ ಭೋಜನ, ಅನಂತರ
ಶಯನ ಇದೇ ನಿತ್ಯ
ಚರ್ಯೆಯಾಗಿರುವಂತಿದೆ. ಇರಲಿ,
ಚಾರ(ಪ್ರವೇಶಿಸಿ) __ .ಮುಹಾರಾಜನಿಗೆ ವಿಜಯವಾಗಲಿ, ರಾಣೀವಾಸ
ದಿಂದ ಓರ್ವ ಮಹಿಳಾಮಣಿಯು ಸಾರ್ವಭೌವುರ ದರ್ಶನಾಕಾಂಕ್ಷಿಯಾಗಿ
ದ್ವಾರದಲ್ಲಿ ಕಾದಿರುವಳು.
ಶಂಬರಾಸುರ - -ವಿದೂಷಕ | ಈಗ ನಿನ್ನ ಬುದ್ದಿ ಕುಶಲತೆಯ ಪ್ರದ
ರ್ಶನಕ್ಕೆ ಒಳ್ಳೆಯ ಅವಕಾಶ (ಚಾರನಿಗೆ) ಆಕೆಯನ್ನು ಮರ್ಯಾದೆ
ಗಳೊಡನೆ ಬರಮಾಡು.
ರತಿ (ಪ್ರವೇಶಿಸಿ) ___ಮಹಾರಾಜನಿಗೆ ವಿಜಯವಾಗಲಿ ! ನಿನ್ನೆ ತಿಳಿಸಿ
ದ್ದಂತೆ ನನ್ನ ಬಿನ್ನಪವನ್ನರ್ಪಿಸಲು ಬಂದಿರುವೆನು.
ಶಂಬರಾಸುರ-- ಬಹಳ ಒಳ್ಳೆಯದು. ಮುಂದುವರೆಯಬಹುದು.
(ವಿದೂಷಕನ ಕಡೆ ನೋಡುವವನು)
ವಿದೂಷಕ--ಆರ್ಯೆ [ ನಮ್ಮ ಮಹಾರಾಜನು ತಾನಾಗಿ ದುಃಖಾರ್ತ
ರಾದವರು ಎಲ್ಲಿದ್ದರೂ ಹುಡುಕಿ ಅವರನ್ನು ಸಂತ್ಕೆಸುವ ಖ್ಯಾತಿಯುಳ್ಳವನು.
ಇನ್ನು ತಾವಾಗಿ ತನ್ನಲ್ಲಿಗೆ ಬಂದವರ ಬಗ್ಗೆ ಹೇಳಬೇಕಾದದ್ದೇನಿದೆ ? ಮಹಾ
ರಾಜನು ನಿನ್ನ ಇಷ್ಟಾರ್ಥ ಪೂರೈಸುವನೆಂದೇ ತಿಳಿ. ಆದರೆ ನಿನ್ನ ಹೆಸರು
ನೀನಾರು, ನಿನ್ನ ಕಷ್ಟವೇನು` ಎಂಬುದಾಗಿ ನೀನಾಗಿ ಹೇಳಿಕೊಳ್ಳುವುದೇ ನಿನಗೆ
ಒಳ್ಳೆಯದಲ್ಲವೇ ? ಹೆಜ್ಕೆ ಹೆಜ್ಜೆಗೂ ಮಹಾರಾಜರಾಗಲಿ. ನಾನಾಗಲಿ ಪ್ರಶ್ನೆ
ಹಾಕುವ ಪರಮೇಯವಿಲ್ಲದಿರುವಂತೆ ಒರೆ. ನಿನ್ನಂತೆ ಅನೇಕರು ಮಹಾರಾಜನ
ದರ್ಶನಕ್ಕಾಗಿ ಕಾದಿರುವರು. (ಹೇಗಿದೆ ಎಂದು ಸೂಚಿಸುವ ದೃಷ್ಟಿಯನ್ನು ಶಂಬರನ
ಕಡೆ ಬೀರುವನು. ಶಂಬರನು ಒಪ್ಪಿಗೆ ಸೂಚಿಸುವನು)
ರತಿ_-ವಂಹಾರಾಜರಲ್ಲಿ ನನ್ನದೊಂದು ವಿಜ್ಞಾಪನೆ ಇದೆ. ಓ ! ಮಹಾ
ರಾಜರ ವೇಳೆಯನ್ನು ನಾನು ಅಪವ್ಮಯಮಾಡಲಾರೆ. ಸೂಕ್ಷ್ಮವಾಗಿ ಹೇಳಿ
ಬಿಡುವೆ. . ನಾನೊಬ್ಬ ಹತಭಾಗ್ಯೆ !
--------------------------------------
೨೮
ವಿದೂಷಕ- ಹಾಗೇನು ? ನಿನ್ನ ಭಾಗ್ಮ ನಿನಗೆ ಹಿಂದಿರುಗುವಂತೆ ಮಹಾ
ರಾಜನು ಮಾಡುವನು. ನೀನಾರೆಂಬುದನ್ನೂ ಹೇಗೆ ಹತಭಾಗ್ಮೆ ಎಂಬು
ದನ್ನೂ ಹೇಳಲೇ ಇಲ್ಲವಲ್ಲಾ ! ವೇಳೆ ಆಗುತ್ತಿದೆ ?
ರತಿ-ನಾನು ಮನ್ಮಥನ ಮಡದಿಯಾಗಿದ್ದ ರತಿ.
ವಿದೂಷಕ--ಅಗಿದ್ದ ಅಂದರೆ ? ಈಗಿಲ್ಲವೇನು ? ನಿನ್ನ ಪತಿಯು ನಿನ್ನ ಕೈ
ಬಿಟ್ಟನೇನು ? ಹೇಳು ! ನಿನ್ನಂಥ ರೂಪವತಿಯನ್ನೂ ಗುಣವತಿಯನ್ಮೂ ಬಿಟ್ಟು
ಹೋದ ಆ ಮನ್ಮಥನೆಲ್ಲಿದ್ದರೂ ಹಿಡಿದು ತರಿಸಿಬಿಡುವನು, ಮಹಾರಾಜನು.
ರತಿ-- ಮನ್ಮಥನು ಮುಕ್ಕಣ್ಣನ ತೃತೀಯ ನೇತೃವಿನ ಕೋಪಾಗ್ನಿಗೆ
ಸಿಕ್ಕಿ ದಗ್ಭನಾದನು. (ಅಳುವ ಸೂಚನೆ ಶೋರುವಳು)
ಶಂಬರಾಸುರ-- ಅಂದರೆ ಭಗವಂತನಾದ ಮಹೇಶ್ವರನ ಕೋಪಕ್ಕೆ ಅಹುತಿ
ಯಾಗಿದ್ದಿರಬೇಕು
ರತಿ -ಇಲ್ಲ. ಮಹಾರಾಜ ! ಜಗನ್ನಿಯಾಮಕನಾದ ಮಹೇಶ್ವರನಿಗೆ
ಮಾಹೇಶ್ವರಿಯಲ್ಲಿ ಮನ ನಿಲ್ಲಿಸುವಂತೆ ಮಾಡುವ ಪ್ರಯತ್ನದಲ್ಲಿ ನನ್ನ ಪತಿಯು
ಲೋಕಹಿತಾರ್ಥವಾಗಿ ಅಸುವನ್ನು ನೀಗಬೇಕಾಯ್ತು.
ವಿದೂಷಕ--ಆಹಾ ! ಎಂತಹ ಪರೋಪಕಾರಿ ಮನ್ಮಥ ? ಊ |
ಅಮೇಲೇನಾಯಿತು ?
ರತಿ--ಮಾಹೇಶ್ವರಿಗೆ ಪತಿಯ ಸಮಾಗಮಂವಾಯ್ತು.
ವಿದೂಷಕ __ಆಹಾ ! ಕಷ್ಟ ಕಷ್ಟ! ಅದರೂ ಉಪಕಾರ ಪಡೆದ ಸತಿಪತಿ
ಗಳು ನಿನಗೆ ಪ್ರತ್ಯುಪಕಾರವೆಸಗಲಿಲ್ಲವೆ ?
ರತಿ-- ನನ್ನ ವಿಲಾಪ ಕೇಳಿ ಉಮಾಮಹೇಶ್ವರರು ನನ್ನೆಡೆಗೆ ಬಂದು,
ನನ್ನನ್ನು ಸಂತ್ಮೆಸಿ ಹೀಗೆಂದರು ;
“ರತಿ | ನೀನೀಗ ನಿಜವಾದ ಸತಿ ! ನಿನ್ನ ಪತಿಯ ಅರ್ಧಾಂಗಿಯಾಗಿದ್ದ
ನೀನೀಗ ಪೂರ್ಣಾಂಗಿಯಾಗಿರುವೆ. ನಿನ್ನ ಪತಿಯು ಈಗ ಅನಂಗನಾಗಿದ್ದರೂ
ಸರ್ವ ಜೀವರಾಶಿಗಳಲ್ಲೂ ಪ್ರೇಮವೆಂಬುದರ ಎಚ್ಚರವನ್ನುಂಟುಮಾಡಿರುವನು,
--------------------------------------------
೨೯
ಈ ಕಾರ್ಯ ನೆರವೇರಿಸಲು ನೀನು ನೆರವಾದೆ. ಲೋಕಕ್ಕೇ ಉಪಕಾರಮಾಡಿ
ರುವ ನೀನೀಗ ಪತಿಯನ್ನು ಕಳೆದುಕೊಂಡ ಪತಿರಹಿತೆಯಲ್ಲ. ನಿತ್ಮಸುಮಂಗಲಿ
ನೀನು. ನಿನ್ನ ದರ್ಶನ ಮೌತೃದಿಂದ ಜೀವರಾಶಿಯಲ್ಲಿ ಪ್ರೇಮವುಕ್ಕುವುದು.
ಸಮೀಪದಲ್ಲಿ ಅರಣ್ಮವಿದೆ. ಅಲ್ಲಿಗೆ ತೆರಳಿ ಕಾದಿರು . ಶಂಬರಾಸುರ ಮಹಾ
ರಾಜ ಹತ್ತಿರದ ನಗರದಲ್ಲಿದ್ದಾನೆ. ಅವನ ನಿನ್ನ ಪತಿವಿರಹದ ದುಃಖ
ಶಮನ ಮಾಡುತ್ತಾನೆ. ಅಲ್ಲಿ ನಿನ್ನ ಪತಿ ಪುನಃ ಬೇರೊಂದು ರೂಪದಲ್ಲಿ
ನಿನ್ನನ್ನು ಸೇರುವನಂ. _ ಇಹ ಜನ್ಮವನ್ನು ನೀನಂ ಅನಂತರ ಸುಖದಲ್ಲಿ
ನೀಗುವೆ. . ತೆರಳು“ ಎಂದು.
ಅಂತೆಯೇ ಇಲ್ಲಿಗೆ ಬುದಿದ್ದೇನೆ. ನನ್ನ ಆಸೆ ಪೂರೈಸುವುದು ಮಹಾ
ರಾಜರ ಕೈಲಿದೆ.
ವಿದೂಷಕ-- (ಹಾಡು, `ಭಲರೆ ಭಲರೆ` ಎಂಬಂತೆ.)
ಭಲರೇ ಭಾಲರೇ ಏ |
ನಿನ್ನ ನುಡಿಗೆ ಒಲಿಯುವ ನೀಗಾ |
ಈ ಶಂಬರ ಕುಲಪತಿ ||
(ಶಂಬರಾಸುರನ ಬಳಿಗೆ ಬಂದು ಧ್ವನಿ ಅಡಗಿಸಿ)
ಮಹಾರಾಜ ! ರೋಗಿ ಬಯಸಿದ್ದೂ ವೈದ್ಯ ಹೇಳಿದ್ದೂ ಒಂದೇ
ಆಯಿತಲ್ಲವೇ ?
ಶಂಬರಾಸುರ--ಭದ್ರೆ! ಸರ್ವರ ಇಷ್ಟಾರ್ಥ ಪೂರೈಕೆಯೇ ನನ್ನ ಕರ್ತವ್ಮ.
ನನ್ನ ಇಷ್ಟಾರ್ಥವೂ ಪೂರೈಸಿಡಂತೆಯೇ ತಿಳಿ, ಕೇಳು : (ಎಂದಿನಂತ ಶೃತಿ ಸೂಬೆಸಿ
ಸಿಂಹಾಸನದಿಂದ ಎದ್ದುನಿಂತು)
ಹಾಡು : ರಾಗ : ಬೇಗಡೆ ; ತಾಳ ತ್ರಿಪುಟಿ
ಅಅ . .ವರೆಯಂತೆ!
ಅಅಅ . ,. .ತಾವರೆಯಂತೆ !
ಅಅ . . ಯಾತಾವರೆಯಂತೆ !
ಅಅ . .. . .ಳೆಯಾ ತಾವರೆಯಂತೆ !
ಅ . .. .ಎಳೆಯಾ ತಾವರೆಯಂತೆ !
-----------------------------------
3೦
ಎಳೆಯಾ ತಾವರೆಯಂತೆ
ಪೊಳೆವ ನಿನ್ನ್ ಆ ಅ ಅ ಅ ಅ ಆ ಸ್ಯದಾ !
ಚೆಲುವೀಗೆ ಮರುಳಾಆದಿ _ !
ನೀರೇಜನೇತ್ರೇ .......!
ಎಳೆಯಾ ತಾವರೆಯಂತೆ !
(ಹಾಡಿನ ಪ್ರತಿ ಅಕ್ಷರವನ್ನೂ ದೇಹದ ಅಂಗಾಂಗ ಅಭಿನಯದಿಂದ ಮುಗಿಸಿ)
ಭದ್ರೆ ! ನನ್ನ ಮನವು ಇಂತಿರುವುದು. ಹೀಗಿರುವಲ್ಲಿ ನಿನ್ನ ಅಭೀಷ್ಟ
ವನ್ನು ಪೂರೈಸುವ ಪ್ರಶ್ನೆಯೇ ಏಳದು ?
ರತಿ.-ನಿಜ ಮೆಹಾರಾಜ ! ಅದರೂ ನನ್ನ ಅಭೀಷ್ಟವನ್ನು ಪುನರುಚ್ಚ
ರಿಸಲೇಬೇಕಾಗಿದೆ.
ಶಂಬರಾಸುರ--ಮಕ್ತೊಮ್ಮೆ ಉಚ್ಚರಿಸಬೇಕೇ ? ನೂರು ಬಾರಿ ಹೇಳು,
ಅದಕ್ಕೇನು? ನಾನಾಗಲೇ ನಿನ್ನ ಇಷ್ಟ ಪೂರೈಸುವೆನೆಂದು ವಾಗ್ದಾನ ಮಾಡಿದ್ದೇ
ನಲ್ಲಾ? ಅದನ್ಕೂ ನೂರು ಬಾರಿ ಉಚ್ಚರಿಸಲೇ ? ಪರಸ್ಪರರ ನಮ್ಮ ಮನ
ವೊಲಿದಿರುವಾಗ ?
ರತಿ--(ಅರ್ಧದಲ್ಲಿ) . ಮಹಾರಾಜರು ಕ್ಷಮಿಸಬೀಕು ! ನನ್ನ ಮನದ
ಭೀಷ್ಪವು ವುಹಾರಾಜರಿಗೆ ತಿಳಿಯಲೇ ಇಲ್ಲ!
ಶಂಬರಾಸುರ (ಆತಂಕದಿಂದ) ಹಾಗೆಂದರೆ ? ನನ್ನ ಮನೋಹರೆಯಾಗಿರ
ಬೇಕೆಂದು ನಿನ್ನಿಷ್ಪವಲ್ಲವೆ ?
ರತಿ-- ಅದಲ್ಲ ಮಹಾರಾಜ ! ನನ್ನ ಮನ ನಟ್ಚಿರುವುಮ ದೈವಾಜ್ಜೆ
ಯಾಗಿರುವ ಮತ್ತೊಂದು ರೂಪದಲ್ಲಿ. ಅದು ತಮ್ಮಲ್ಲಿದೆ.
ಶಂಬರಾಸುರ-- ಆ ರೂಪ ನಾನಲ್ಲವೆ ? (ಬಿಸುಸುಯ್ಯುವನು)
ರತಿ-ಅಲ್ಲ ಮಹಾರಾಜ ! ತಾವು ಬೆಳಸಿರುವ ತಮ್ಮ ಪುತ್ಪ ಪ್ರದ್ಯು
ಮ್ನನೇ ಆ ರೂಪ,
ಶಂಬರಾಸುರ _-ಅವನನ್ನು ನೀನು ನೋಡಿಯೇ ಇಲ್ಲವಲ್ಲಾ ?
----------------------------------
೩೧
ರತಿ--ನೋಡದಿದ್ದರೂ ನನ್ನಪತಿ ಆ ರೂಪದಲ್ಲಿ ಇರುವನೆಂದು ಉಮಾ
ಮಹೇಶ್ವರರ ಆಶ್ವಾಸನೆ |
ಶಂಬರಾಸುರ ಮತ್ತೆ ಸರ್ವ ಜೀವರಾಶಿಗಳಲ್ಲೂ ನಿನ್ನೆ ಪತಿ ಹಂಚಿ
ಅಡಗಿದ್ದಾನೆಂದೆಯಲ್ಲವೆ ?
ರತಿ _ನಿಜ ಮಹಾರಾಜ ! ಆ ಆ ರತಿಸತಿಯರಿಗೆ ಆ ಆ ಪತಿಯರು
ದೇವರಂತೆ. ನನ್ನ ಪತಿ. ಅನಂಗ˜ನಾದುದು ದಂಪತಿಗಳಾಗಿರುವವರಲ್ಲಿ
ನಿಶ್ವಲಪ್ಪೇಮ ಉಕ್ಕಿಸಲಿಕ್ಕಾಗಿ. ಕಂದ ಕಂಡ ಗಂಡುಗಳು ಕಂಡ ಕಂಡ
ಹೆಣ್ಣುಗಳಲ್ಲಿ ಅನುರಕ್ತರಾಗುವುದಕ್ಕಲ್ಲ. ನನ್ನ ಪತಿ ಆ ದೃಷ್ಟಿಯಿಂದ ತಮ್ಮ
ಲ್ಲಿಯೂ ಇದ್ದಾನೆ. ಆದರೆ ಅದು ತಮ್ಮನ್ನು ನಂಬಿ ತನ್ನ ಪ್ರೇಮಮೂರ್ತಿ
ಯೆಂದು ಆರಾಧಿಸುತ್ತಿರುವ ನಿಮ್ಮ ಮಹಿಷಿಯಲ್ಲಿ ತಮ್ಮ ಪ್ರೇಮವು
ನೆಡುವುದಕ್ಕಾಗಿ.
ಶಂಬರಾಸುರ -ಈ ಪ್ರೇಮವಿದ್ದೇ ಇದೆ. ಅದರಿಂದೇನಾಗಂವುದು !
ಮಹಾರಾಜನಿಗೆ ಹಲವು ಸತಿಗಳಿರಬಾರದೇನು ?
ರತಿ ಇರಬಹುದು ಮಹಾರಾಜ ! ಆದರೆ ಪಟ್ಟ ಮಹಿಷಿಯೊಬ್ಬಳೇ
ನಿನಗೆ ಯೋಗ್ಯನಾದ, ಮುಂದೆ ಈ ರಾಜ್ಮವನ್ನು ನಿನ್ನಂತೆಯೇ ಆಳುವ,
ಕುಮಾರನೊಬ್ಬನನ್ನು ಕೊಡಲು ಯೋಗ್ಯಳು, ಆದ್ಧರಿಂದ ನಿನ್ನ ಪ್ರೇಮ
ದೃಷ್ಟಿ ಪೂರ್ಣವಾಗಿ ಆಕೆಯ ಮೇಲೆಯೇ ಇರಬೇಕು.
ಶಂಬರಾಸುರ-- ಹಾಗಾದರೆ ಉಳಿಕೆಯ ಸತಿಗಳಲ್ಲ ?
ರತಿ --ಅವರೆಲ್ಲ ಬಂಗಾರದವರೆನಿಸಿಕೊಳ್ಳುವರು. ಅಂತಹ ಬಂಗಾರದ
ವಳು ನಾನಾಗಲೂ ನನ್ನ ಇಷ್ಪವಲ್ಲ
ಶಂಬರಾಸುರ-- ಹಾಗಾದರೆ ನಿನ್ನಿಷ್ಟವೇನು ?
ರತಿ. .. ಹೇಳಿದೆನಲ್ಲ ಆಗಲೇ 7
ಶಂಬರಾಸುರ-ನೀನೇ ಏಕೆ ನನ್ನ ಪಟ್ಟಿಮಹಿಷಿಯಾಗಬಾರದು ?
ರತಿ--ನಿಮ್ಮ ಕೈಹಿಡಿದು ನಿಮ್ಮ ಸಹಧರ್ಮಿಣಿಯಾಗಿರುವ ಹೆಣ್ಣನ್ನು
ಪತಿಯ ಪ್ರೇಮದಿಂದ ವಂಚಿತಳಾಗಿಸಲು ಈ ಹೆಣ್ಣಿನ ಮನ ಒಪ್ಪದು.
---------------------------------------
32
ಶಂಬರಾಸುರ-_ಹಾಗಾದರೇನು ಮಾಡಬೇಕನ್ನುವೆ ?
ರತಿ-- ನಿಮ್ಮ ಅರಸುತನಕ್ಕೆ ಯೋಗ್ಯವಾದ ಉಚಿತವಾದ ಕರ್ತವ್ಯ
ಮಾಡಿ ಮಹಾರಾಜ. ನಿಮ್ಮ ಸತಿ ನಿಮಗಾಗಿ ಹಂಬಲಿಸುತ್ತಿರುವಳು.
ಸರ್ವರ ಇಷ್ಟಾರ್ಧ ಪೂರೈಸುವವರು ನೀವು ನಿಮ್ಮ ಪಟ್ಟಮಮಹಿಷಿಯ ಇಷ್ಟಾರ್ಧ
ಪೂರ್ತಿಮಾಡಲಾರಿರಾ ?
ಶಂಬರಾಸುರ-ಅದು ಬಹು ಪ್ರಯಾಸದ ಕೆಲಸವೆಂದಿನಿಸುತ್ತದೆ.
ರತಿ-- ಮೊದಲು ಪ್ರಯಾಸದ ಆಯಾಸ ಅನಂತರ ಸುಖ ಪ್ರವಾಸದಾ
ವಾಸ. ಜೀವನವೇ ಹೀಗೆ.
ಶಂಬರಾಸುರ-ಹಾಗಾದರೆ ಇದೇ ನಿನ್ನ ಕೊನೆಯ ಮಾತೇ ?
ರತಿ್-- ನಾನಿನ್ನೂ ಕೊನೆಯ ಮಾತು ಆಡಿಲ್ಲ,
ಶಂಬರಾಸುರ-- ಹಾಗಾದರೆ ನಾನಿನ್ನೂ ನಿನ್ನ ಮನವೊಲಿಸಲು ಅವಕಾಶ
ವಿದೆಯಿನ್ನುವಿಯಾ ?
ರತಿ--ಅವಕಾಶವೇನೋ ಇದೆ. ನೀವು ಪ್ರಯಾಸಪಡಲು ಮಾತೃ.
ಅದರಿಂದ ನನ್ನ ಮನ ನಿಮ್ಮ ಕಡೆ ತಿರುಗುವುದೆಂದು ನಾನು ಭರವಸೆ ಕೊಡಲಾರೆ,
ಶಂಬರಾಸುರ--ೇನಾ ಅವಕಾಶ ? ಅದನ್ಮಾದರೂ ಹೇಳು.
ಅದಕ್ಕೆ ಮೊದಲು ನನ್ನ ಮಾತನ್ನೂ ಸ್ವಲ್ಫ ಕೇಳು (ಶೃತಿ ಕೋರಿಸ ಹಾಡುವನು)
(ನೀಲಕುಂತಳೆ ಎಂಬಂತೆ ಹಾಡು) _ ರಾಗ _ತಾಳ
ಕಾ. ಮಣೀ (ಮೂರುಸಲ)
ಬಾಲಿಕಾವುಣೀ (ಆರುಸಲ)
ನೀಲುಕುಂತಳೆ ಲೋಲ ಲೋಚನೆ ಬಾಲಿಕಾಮಣೀ |
ಲಾಲಿಸನ್ನ ಪೇಳ್ವಮಾತ ಬಾಲಚಂದ್ರ ಫಾಲೇ ಬಾ-ಲೆ
ನೀಲಕುಂತಲೆ_ || (ಹಾವಭಾವ ವಿಲಾಸದೊಡನೆ ಹಾಡಿ ಮುಗಿಸಿದಾಗ)
ರತಿ | ನಿನ್ನ ಗಾನವು ಬಹು ಇಂಪಾಗಿದೆ. ಇದನ್ನು
ಕೇಳಲೆಂದೇ ನಿನ್ನ ಪಟ್ಟ ಮಹಿಷಿ ಕಾದಿರುವಳು. ಅವಳ ಅಸೆ ಪೂರೈಸುವುದು
--------------------------------------
33
ನಿನ್ನ . ಕರ್ತವ್ಯವಲ್ಲವೆ ? ಪರ ಸ್ತ್ರೀ.ಯಾದ ನನ್ಷಲ್ಲಿ ದೀನು . ಪ್ರಯಾಸ
ಪಡುವುದಕ್ಕಿಂತ ಅದು ಶ್ರೇಷ್ಟಮಾರ್ಗವಲ್ಲವೆ ?
ಶಂಬರಾಸುರ _-ಹಾಗೆನ್ನುವೆಯಾ ? ನನಗದು ಹೊಳೆದೇ ಇರಲಿಲ್ಲ !
ಆಗಲಿ ! ನೀನೆಂದಂತೆ ಪ್ರಯಾಸವಡುವೆನು. ಆದರೆ ನೀನು ?
ರತಿ--ವ್ರತವನ್ನು ಆಚರಿಸಬೇಕೆಂದಿರುವೆನು ಮಹಾರಾಜ !
ಶಂಬರಾಸುರ _-ವ್ರತವೆ ?
ರತಿ---ಹೌದು ವ್ರತ
ಶಂಬರಾಸುರ--ವ್ರುತವೆಂದೆಯಾ ? ವರ್ತಿಸು. ಎಷ್ಟು ಕಾಲ ?
ರತಿ-- ಆರು ಮಾಸಗಳ ಕಾಲ !
ಶಂಬರಾಸುರ _ ಕಾರಣ ?
ರತಿ--ಅದು ನಿಮ್ಮ ಸಾಕು ಪುತ್ರ ಪ್ರೃದ್ಮುಮ್ಮನಿಗೆ ನನ್ನ ನಿಜಸ್ವರೂಪ
ಗೋಚರವಾಗಲು ಮತ್ತು ಆತನು ಪೂರ್ವಜನ್ಮದಲ್ಲಿ ನನ್ನ ಪತಿಯಾಗಿದ್ದ
ನೆಂದು ತಿಳಿವು ಬರಲು,
ಶಂಬರಾಸುರ---ಅದರಲ್ಲಿ ನೀನು ವಿಫಲಳಾದರೆ ?
ರತಿ--.ಆಗ ತಮ್ಮ ಆಜ್ಞಾನುವರ್ತಿಯಾಗಿ ನಡೆಯುವೆ.
ಶಂಬರಾಸುರ -ಹಾ ! ಅದೀಗ ಯೋಗ್ಯವಾದ ಮಾತು. ಸರಿ.
ನಿನ್ನಿಷ್ಟದಂತೆ ಏಕಾಂಗಿಯಾಗಿ ವ್ರತವಾಚರಿಸು. ಅರ್ಧ ಸಂವತ್ಸರದವರೆಗೆ
ನಾನಿನ್ನ ಗೊಡವೆಗೇ ಬಾರೆನು. ಅನಂತರ ಪರಮೇಶನಿಚ್ಛೆಯಿದ್ದಂತಾಗಲಿ.
ರತಿ -ಕೃತಾರ್ಥಳಾದೆನು. ಎಲ್ಲರೂ ಸೇರಿ ಕಾಮದೇವನನ್ನು ಭಜಿಸುವ
(ಎಲ್ಲರೂ ಹಾಡುವರು)
ಕಮಲಶರಾ ಸುಮುನೆನಿಪಾ ರವುಣ ನಿರಲ್ಕಾ |
ಕಾಮನೆನಿಪ ಸೋಮ ಮುಖಿಗೆ ಸುಮರಸರಿಂದಾ!
(ಎಂಬಲ್ಲಿಗೆ “ಶಂಬರನ ಶೃಂಗಾರದ ೨ನೆಯ ಅಂಕವಾದ ಪ್ರಯಾಸಾಂಕವು`
ಮುಗಿದು-ದೊಡ್ಡ ತೆರೆ ಬೀಳುವುದು)
------------------------------------------
34
ಉಪನಾಟಕ-೨-ಮಟ್ಟುಗಳಿಗೆ ಮಟ್ಟ
[ದೊಡ್ಡ್ರ ಅಂಕದ ಎದ್ದು ಈನಂತರ 'ಅ' ರಂಗದ ಪರದ ಏಳುವುದು. ]
(ಹಳೇ ವಾರ್ಕೆಟ್ಟು ಸೀನು. ಕಟ್ಟೆಗಳ ಮೇಲೆ ವಿವಿಧ ತರಕಾರಿ, ಸೊಪ್ಪು, ನಿಂಬೆ,
ಟೊಮ್ಮೊಟೊ, ಕರಿಬೇವ್ರು . ಕೊತ್ತುಂಬರರಿ, ಗುಡ್ಗೆಗಳನ್ನಿಟ್ಟುಕೊಂಡು
ಎಲೆ ಅಡಿಕೆಯನ್ನು ಪುಷ್ಕಳವಾಗಿ ಆಗಿದು ಮುಂದಿರುವ ಚರಂಡಿಗೇ ಬಾಯಿಂಜಲನ್ನು ಪೀಚೆ,
ಬಂದ ಹೋದ್ಧ ಗಿರಾಕಿಗಳನ್ನು ಕೂಗಿ ಕರೆಯುತ್ತ ವ್ಯಾಪಾರ ನಡೆಯುವ ಗುಜಗುಂಪಲು.
ಮಧ್ಯದಲ್ಲಿ ಮಹೋದರಿಯೊಬ್ಬಳು ಅಂಗಡಿಯವಳ್ಳ ಪ್ರತಿಷ್ಠಾಪಿತೆಯಾಗಿ ಒಂದು ಕಾಲು
ಚಾಚಿ ಕುಳಿತಿದ್ದಾಳೆ. ಅಡಿಕೆಲೆಯ ಕೆಂಪುರಸ ಬಾಯಿಂದ ಬಟ್ಟೆಯ ಮೇಲೆಲ್ಲ ತೊಟ್ಟಿಕ್ಕುತ್ತಿದೆ.
ಇತರರೂ ಯಧಾಶಕ್ಕಿ. ಫರದ್ಗೆ ಏಳುವ ಹೊತ್ತಿಗೆ ಎಲ್ಲರೂ. ಹಾಡು . ಹಾಡಿಕೊಂಡೇ
ಸಾಮೂಹಿಕವಾಗಿ ಜನರನ್ನು ಕರೆಯುವರು. ಮಟ್ಟುಗಳೆಲ್ಲ 'ವರದಾಚಾರೀ ಕಂಪೆನೀದು'
ಧಾಟಿ ಅದೇ. .ಮಾತುಗಳು, ಅರ್ಧ, ಈ ಸಂದರ್ಭಕ್ಕೆ ತಕ್ಕಂತೆ )
(ಹಾಡು ; ಕೆಮುಲಶರಾ ಎಂಬಂತೆ)
ದಂಟಿನಸೊಪ್ಪೂ ಕೀರೆಯಸೊಪ್ಪೂ, ಹರಿವೆಯ ಸೊಪ್ಪೂ |
ಚಪ್ಪರದವರೇಕಾಯೀ ತುಪೃದ ಹೀರೇಶಾಯಿ ಎಳೇ
ಬೆಂಡೇಕಾಯೀ |
ಹಾಗಲಕಾಯೀ . ಗೋರೀಕಾಯಿ . ಹುರುಳೀಕಾಯಿ ||
ದಂಟಿನಸೊಪ್ಪೂ || ಪ [[
ಸೀಮೇಬದನೇಕಾಯಿ ಕೊಡಗಿನ ಕಾಚೀಕಾಯಿ
ಬೂದಿಗುಂಬಳಕಾಯೀ || ಹಾಗಲಕಾಯೀ ಹೀರೇಕಾಯಿ
ಪಡವಲಕಾಯಿ ಹೇರಳೇಕಾಯಿ (ಎನ್ನುವ ಹೊತ್ತಿಗೆ) ದೊಣ್ಣೆ
ಮೆಣಸಿನಕಾಯೀ---
{ಎಂದು ವುಹೋದರಿ ಪೂರ್ತಿಮಾಡುವಳು-ಪುನಃ ಎಲ್ಲರೂ ಇದೇ ರೀತಿ ಹಾಡುವರು)
(ಇನ್ನೊಂದು ಅಂಗಡಿಯವ)
ಬನ್ನೀ ರಾಜಾ ಕೊಳ್ಳೀ ರಾಜಾ ತಾಜಾ ಮಾಲುಗ್ಯೂ |
ಉಳ್ಳಾಗೆಡ್ಡೇ ನೀರುಳ್ಳಿ ಗೆಡ್ಡೇ ಕೋಸಿನ ಗೆಎಡ್ಡೇ |
ಗುಡ್ಜೇವೆಣಸಿನಕಾಯಿ, ಏಳೇನಿಂಬೇಕಾಯಿ, ಬಲಿತದ್
ಬೋರೇಕಾಯೀ |
(ಎನ್ನುವನು, ಪುನಃ ಮೊದಲ ಪಂಕ್ತಿ ಎಲ್ಲರ ಬಾಯಲ್ಲೂ)
----------------------------------------
35
ಗಿರಾಕಿಗಳಿಬ್ಬರ ಪ್ರವೇಶ : ಇಬ್ಬರಿಗೂ ನೆಗಡಿ . ಕರವಸ್ಥ್ರಗಳಿಂದ
ಮೂಗು ಸೀದುತ್ತಾ ಒರೆಸಿಕೊಳ್ಳುತ್ತಾ)
ಮೊದಲನೆಯವ._ಎದೋ ಎದೋ. ಏದ್ ದೆಗಡೀದೋ ದದಗೇ ?
ಸ್ವಲ್ಫ ದಶ್ಶಕೊಡೋ ಇದ್ದರೆ ?
ಎರಡನೆಯವ-- ಒಳ್ಳೆ ಗಿರಾಕಿಲೋ ಲೀಲು ? ಲಲಿಗೇ ಇಲ್ಲ ಲಿಲಗೆಲ್ಲ
ತರಲೋ ? ಸ್ಕಲ್ಜ ತಡೀ ತರಕಾರೀ ತಕ್ಕೊಲ್‌ಡು ಚಿಲ್ಲರೆ ಬಲ್‌ದರೆ ಅದರಲ್ಲಿ
ಕೊಲ್‌ಡಕೊಳ್ಳೋಡಾ ! ತಡೀ ಸ್ವಲ್ಟಾ
೧ನೆಯವ__ಏದು ಹುಯಿಲೋ ಈ ಹೊತ್ತೂ. ? ಈ ಅದ್‌ಗಡೀ
ಯೋರಲ್ಜಾ ಬೇಡಾ. ದುಬಾರಿಯಾಗುತ್ತೆ ! ತಡೀ ! ಇವಳ್ಯಾರೋ
ಬಕರಿ ಎತ್ತ್‌ಕೊಂಡ್ ಹೋಗ್ತಿದ್ದಾಳೇ. ಬಕರೀ ಬೇಲೇ ವ್ಯಾವಾರಾ ಬಾಡಿದ್ರೇ
ಸುಲಭ. . ಕೂಗು ! ದಿಲ್ಸು.
೨ನೆಯವ- -ಸುಬ್ಲೇ ಕೂಗಿದ್ದೆ ಲಿಲ್ತಾರೇಲೋ ಅವರೆಲ್ಲಾ ? ಈ
ವರದಾಚಾರೀ ಲಾಟಕದ ಬಟ್ಟು ಹಾಡೋರೂ ? ಟ್ರೈಬಾಡೋಡ್ಣ ತಡೀ !
ಲಾವೂ ಹಾಗೇ ಹಾಡಿ ಕೂಗೋಡ್ಡ !
(ಹಾಡು : ` ಪೋಗುವೆ ಎಲ್ಲಿಗೆ, ನಾಗವೇಣೀ ಮಿಗೆ ' ಎಂಬಂತೆ)
ಪೋಗುವೆ ಎಲ್ಲಿಗೆ |
ಲಾಗವೇಲ್ಲೀ ಬಿಗೆ ||
ಪೋಗುವೇ ಎಲ್ಲಿಗೇ .
ಲಾಗವೇಲ್ಲೀ ಬಿಗೇ ||
ಪೋಗುವೇ ಎಲ್ಲಿಗೆ ? ||
ಭಾರವ ಪೋತ್ತಿಹೇ
ಇಳಿಸದೆ ಲಡೆದಿಹೇ |
ಈಪರಿ ಯಾದರೇ |
ದಾರಿಯದೆಲ್ಲಿದೇ |
ಪೋಗುವೇ . ಎಲ್ಲಗೇ ||
ಎಲೌ ! ಲಲಲಾಬಣೀ ! ಭಾರವಾಗಿರುವ ಬಕ್ತರಿಯಲ್ಲು ಇಳಿಸಿ ಬದಲೇ
ಕಾಯಿಯಲ್ಹು ಲಬಗೆ ಕೊಡುವಲ್ಥಾವಳಾಗು.
---------------------------------------
36
ಮಕ್ಕರಿಯಾಕೆ _ ಲೇ ! ಅಪ್ಲೀ ! _ ಯಾರದು ಬದನೇಕಾಯಿ ಗಿದನೆ-
ಕಾಯೀಂದೀಯಾ_ ಮುಳ್ಳುಗಾಯಿ ಇದು.
೨ನೆಯವ-- ಏಲಾದ್ರೂ ಇತ್ಲಿ. . ಈ . . ಬದಲೇಕಾಯೇ
ಲಾವಲ್ಲೋದು. ಇಳಿಸು ಹೋಗ್ಲಿ, ಲಿಲ್ಲ ಬುಳ್ಳು ಗಾಯಿ !
(ಅವಳು 3 ಇಳಿಸಲು)
ಹೇಗೆ ಇದೂ ? ಗುಡ್ಡೇಲೋ ತೂಕದಲ್ಲೋ ?
ಮಕ್ಯರಿಯಾಕೆ~ಇಳಿಸಾಕೆ ಕೇಳಬಾರದಾ ಎಂಗೇಂತ ?
ಏನ್ ಆಳ್ ಗಂಡಸ್ರೋ ?
ಅಯ್ಯರ್, ~ (ಪ್ರವೇಶಿಸಿ ) Brother ! ಮೆದುವಾ ಪೇಶುಣು ಅವರೊಡೆ.
ಹಂಗೆಲ್ಲಾ. ರೂಡ್ ( Rude) ಆಕಿ. ಪೇಶಿತರೆ ಅದು ಸರಿ ಓಗ್ತದಾ ?
ಜೆಂಟೆಲ್ಮೇನ್ ಆಕೆ ಸ್ಪಲ್ಪ ನಯವಾಕಿ ಕೇಳವೇಕು ಸ್ವಾಮೀ. ಇವಾ ಎಲ್ಲಾ
ರಾಗ ಪ್ರಿಯರ್. ಪದಾ ಆ-ವದಾ ಆಟ್ರೀ.
ಮಕ್ಯರಿಯಾಕೆ-ಏನಯ್ಮಾ ! ಪದ ಆಡೊದಂತೆ ಪದಾ ! ಅಂಗಂದ್ರೇನ್.
ಗೊತ್ತೈತಾ ನಿಂಗೇ ? ಪದಾ ಆಡೋದೂ ಅಂದ್ರೆ ಜೀವ ಒಗ್ಯೋದೂ ಅಂತ !
ಅಂಗನ್‌ಬ್ಯಾಡಾ, ಆಡು ಆಡು ಅನ್ನು.
ಆಯ್ಮರ್--ಸ್ಸರೀ ಅವ್ವಾ ! ನಾನೇ ಆಟಲಾ ? ಕೇಳು ಆಂಗಾರೆ
(ಇಂದುವದನಿ ಕುಂದರದನಿ-ಎಂಬಂತೆ ಹಾಡು. )
ಇಂದು ಬದನೆ ಕಾಯಿಯ ಬೆಲೇ
ಒಂದೇ ಮಾತೊಳ್ ಪೇಳ್ |
ಇಂದು ಬದನೆ ಕಾಯಿ..
ಯಾ ಬೆಲೇ ಒಂದೇ....
ಮಾ ತೋಳ್. . ಪೇಳ್ ||
ಕೋಪಮಾಟಿಕೋ ಬೀಡ ಸಿಸ್ಟರ್ ! ಸಿಸ್ಟರ್ ಅನ್ನ ಸಉದರಿ ಅಲ್ಲೆ__
ಸಿಸ್ಟರ್ ಅನ್ನ ನಂಬುಳೊಡೆ ಪೊರಂದವಾ ಇಂದ ಬೂಮೀಲೇ ಪೊರಂದವಾ--
ಅನ್ಕನಾ---ವಂದೇ ಮಾತರಂ ಮಕ್ಕಳೂನ್ ಪೇರು-ಅತಕ್ಕೆ ಇಂಗ್ಸೀಷ್‌ಲೇ
ಸಿಸ್ಟರೂಂಗ್ರಾ ಅ ಚಾ_ ?
----------------------------------------
37
ಮಕ್ಕರಿಯಾಕೆ--ಅಂಗೇ ಅಗ್ಲಿ ನನ್ನೊಡೆಯಾ. ಈ ಮುಳ್ಳುಗಾಯಿ
ಎಂಟಾಣೆ ವೀಸೆ. _ ತಕ್ಕಂಡೀಯಾ ಯೋಳು.
ಅಯ್ಯರ್ -ಆಹಟ್ಟುಂ ಅಪ್ಪಡಿಯೇ ಆಹಟ್ಟುಂ. ಆನಾಲ್ ನಲ್ಲದಿ
ಕುಡುಮ್ಮು. (ಮುಂದೆ ಹಾಡುತ್ತಾ)
ಕಳಿತ. ಕೊಳೆತ. ಹುಳಿತ
ಕಾಯ್ಗಳಾ ಕೊಳಲುಲಾರ್ರೇನೇ |
ಕಾಳೀತ . ಕೋಳೇತ . ಹೂಳೀತ
ಕಾಯ್ಗಳಾ ಕೊಳಲು ಲಾರ್ರೇನೇ ||
ಈಂದು ಬಾದನೆಕಾಯಿಯಾ
ಬೆಲೇ ವಂದೇ ಮಾತೋಳ್ ಪೇಳ್ ||
ಮುಕೃರಿಯಾಕೆ-ಯೋಯ್ ! ಈ . ಕಣಿವೇ ಕೆಳಗ್ನೋರೆಲ್ಲಾ
ಇಂಗೇವೇ ! ಇಂಗೇವೇಯ. ಬರೇ ಮಾತು ! ಕಾಯಿಗೀಯಿ ಕೊಳತಿಲ್ಲಾ
ಕಳಿತಿಲ್ಲಾ ತಕ್ಕೊಣ್ಣೋ ಅಂಗಿದ್ದೇ ತಕ್ಕೋ. _ ಶೆಂದಾಕಿರೋ ಕಾಯಿನ
ಅಂಗೆಲ್ಹಾ ಅನ್ನೋಕೋಗ್ಬ್ಯಾಡಾ ಬೇಕಾ ಬೇಡ್ವಾ? ಲೇ ! ಎತ್ಪೋಲೇ
ಮುಕರೀಯಾ. ವೊತ್ತಾಯ್ದು ! ಅಲ್ಲೇ ಒಂದು ಅಂಗಡೀಗಾರ ಆಕುವಾ.
(ಸುಳಿದಾಡುತ್ತಿದ್ದ ಒಬ್ಬನ ಕೈಲಿ ಮಕೃರಿ ಎತ್ರಿಸಿಕೊಂಡು ಹೊರಡಲನುವಾಗಲು)
೨ನೆಯವ . .ಇರವ್ವಾ ಸ್ವಲ್ಪಾ ! ಅವಸರಾ ಬೇಡಾ ! ಅವರು ಅಯ್ಯರು.
ಅವರಲ್ದಿದ್ಧೆ ಲಾವಿಲ್ನಾ. ಲಾವೇ ತಕ್ಕೊಳ್ಳೋರೂ. ಇಳಿಸೂ.
ಮಕ್ಕರಿಯಾಕೆ_ಬಿದ್ತೀ ಬಿಡ್ರೀ ಯಾಸಟ್ಟಿಗೋ,. ಎತ್ತೋದೂ ಇಳಿ
ಸೋದೂ ಇದೇ ಕೆಲಸ. _ ನಾನೇನಿಲ್ಲಂಗ್ಡಿ ಇಟ್ಚಿವ್ನಾ ಅಕ್ಕೋ ಅವಳಂಗೇ !
(ಮಹೊದರೀ ಕಡೆ ನೋಡುವಳು ) ಇದ್ ಮಾರೀ ಇನ್ನು ಮೊರು ಮ್ಮೆಲೀ
ನಡೀಬೇಕ್ ನಮ್ಮ್ ಅಟ್ಟೀಗೆ.
ಮಹೋದರಿ_-(ಬಾಯಲ್ಲಿದ್ದ ಅಡಿಕೆಲೆ ಉಗುಳನ್ನು ಇವರೆಲ್ಲ ನಿಂತಿದ್ದ ಕಡೆ
ಪೀಚಿ) ಲೇ ! ಎಳೇ ನಿಂಬೇಕಾಯೀ ಯಾರ್ನೇ ಮಾರೀ ಗೀರೀಂದೀಯಾ? ಚಿಗತ್
-------------------------------------------
38
ಕೊಂಡೇ ಚೋಟುದ್ಧಾ ಇದ್ದೋಳೂ. ನೀನೂ ಒಂದು ಅಂಗಡಿ ಆಕ್ಕೊಂಡು
ಕುನ್‌ತಕೋ ಇಲ್ಲೀ ? ಇಲ್ಲ್‌ದಿದ್ರೆ ಓಗು ಅತ್ತಾಗೇ ? ನನ್ನಂಗಡೀ ಗಿರಾಕೀನ
ಎಳ್ಕೊಂಡ್ ಓಗ್ತಿದ್ದೀಯಾ ! ಓಗೇಲೇ ! ಇಲ್ಲ್‌ದಿದ್ರೆ ಈ ಕುಂಬಳಕಾಯಿ
ಎತ್ತಾಕ್ದಂಗೆ ಎತ್ತಿ ಒಗದ್ದಿಟ್ಟೇನು ಉಷಾರೂ ! ಓಗೇ !
ಅಯ್ಯರ್-- ಏ ! ಸಿಸ್ತ ರ್. ಸೋದರಿಯಾ ಮಹೋದರಿಯಾ ಉಂಗ
ವೇರೂ ? ನಂಬ ನಂಬ ಮಾತಿಕಳಕು ನೀನ್ಯಾಕೆ ಮೊಗಿಡ್ತೀಯಾ ಅಂತ ?
ಮಹೋದರಿ-- ಲೇ ಅಯ್ಯುರೀ ! ಮುಚ್ಚೋ ಕಂಡಿವ್ನೀ. ಏನೋ
ಪದಾ ಆಡ್ತಾನೆ ಆಟೊತ್ನಿಂದ. _ ಕ್ಕೆ ಮೈ ಆಡಿಸ್ಕೊಂಡು ! ಕೊಂಗನಂಗೆ,
ಅಯ್ಯರ್ ಮಿತ್ರ__( ಹಾಡು : ಸೈತಿರು ಮೋಹಾಕರೆ ಎಂಬಂತೆ )
ಸಾಕದು ಸುಂಸುಂಕಿರೇ ! ಸಿಸ್ಟರ್ !
ಕೊಂಗಾಕುಲವ ಬಹಿರಂಗಾ
ಪಡಿಸಲಹುದೇ !
ಸಾಕ್ ಸಾಕದು ಸುಂಸುಂಕಿರ್ರೇ ||
ಮಹೋದರಿ--ಓ ಓ ! ಇವ್ನೊಬ್ಬ ಬಂದ್ನೋ ಅಬ್ಬೇಪಾರೀ ! ನಿಂಗಲ್ಲ
ನಾನೀಳಿದ್ದು ಇವನಿಗೆ, ಈ ಅಯ್ಯರೀಗೆ-ಅವನೇನೇಳ್ತಾನೆ . ಕೇಳೋವಾ !
ನೀನ್ಮಾಕಾ ಬಾಯಿ ಬಿಡಾದು ?
ಅಯ್ಯರ್--ನಾನೇ ಪೇಶರೆ-ಕೇಳು (ಹಾಡುವನು)
(“ಸಾಕು ಸಾಕ್ಕು ನಿನ್ನ ಮಾತೂ“ ಎಂಬಂತೆ)
ಸಾಯಿಕು ಸಾಯಿಕೂ ನಿನ್ನ ಮಾಯಿತೂ
ಚುಮ್ಮು ಇರಲೂ ಮನವು ಬರದೂ ?
ಸಾಯಿಕು ಸಾಯಿಕು |
ಮಕೃರಿಯಾಕೆ-_ (ಇವರಿಬ್ಬ˜ರ ಮಾತಿಗಾರು. ವಾದದ್ದು ನೋಡಿ ಮಕೃರಿ ಎತ್ತಿ
ಕೊಂಡು ಹೊರಟಿದ್ದು ನೋಡಿ )
----------------------------------------
39
೨ನೆಯವ-- ಲೇ ಅವ್ವಾ ! ಲಲ್ಲು ಲಿಲ್ಲು ! (ಹಾಡು : ನಿಲ್ಲು ನಿಲ್ಲು. ಎಂಬಂತೆ))
ಲಿಲ್ಲು ಲಲ್ಲೂ ಎಲ ಪೋಲ್ಬೇ
ಸುಲ್ದ ರಾಲ್ಗೀಯೇ ||
ಲಿಲ್ಲು ಲೀಲ್ಲು ಎಲ್ಲೂ ಪೋಗದೇ
ಕೊಳಲು ಲಾಲು ಇಲ್ಲಿಹೇ ||
ಲೀಲ್ಲು ಲೀಲ್ಲು ಏಲ್ಲಿ
ಪೋಲ್ಫೆ! ಸು ಲ್ದಾ ರಾ ಲ್ಗೀ---ಯೇ |
( ಮಕ್ಕರಿಯಾಕೆ ನಿಲ್ಲುವಳು ಮಹೋದರಿಗೆ ತನ್ನ ಗಿರಾಕಿಗಳು ಪುನಃ ಇವಳ ಹತ್ತಿರ
ಹೋದರಲ್ಲಾ ಎಂದು ಕೋಪ)
ಮಹೋದರಿ_-ಲೇ ! ತಿರ್ಗೀ ನಿಂತೊಂಡಾ ಇಲ್ಲೇವಾ ? ನನ್ನ
ಗಿರಾಕಿ ಕಿತ್ಯೋಳ್ಳಾಕೇ ? ಬಂದೆ ತಡೀ [ ಇಕ್ಕತೀನಿ . ಈವತ್ನಿಂಗೆ ಇಂಗೂ.
ತಿರ್ಗಿ ಸುಳಿದಾಡಬಾರ್ದು ಈ ಕಡೇ ಅಂಗೆ !
ಅಯ್ಮರು--ವಿತ,ರೂ-ಎಲ್ಲರೂ
(ಹಾಡು : ಲೋ ಖೂಳನೆ ದುರಾತ್ಮ್ರನೆ ಎಂಬಂತೆ)
ಲೇ ಖೊಳಳೇ ದುರಾತ್ಮಳೇ
ಕರೋರ ನೀಚ ಹೇಡಿಯೇ !
ವಿನೀತಭಾವವನ್ನು ತೋರಿ
ಮೋಸಗ್ಮೆಯ್ಯುತ್ತೀರ್ಪೆಯಾ ||
ಯಾರ್ರೀ ಅಲ್ಲೀ ? ಪೋಲೀಸ್ ! ಪೋಲೀಸ್ ! (ಕೂಗುವರು)
(ಮಾರ್ಕೆಟ್ಟಿನ ಕಾವಲು ಇನ್ಸೈಕ್ಬರು ಲಟ್ಠಾ ಹಿಡಿದು ಪೃವೇಶಿಸುವನು.)
ಏವ್ರಿ ಇದೂ ! ಏನವ್ಮಾ... ಸ್ಕೆರಿಸಿಕೋ ಸ್ಪಲ್ಬ , ಅಂಗಾರಾಗಬೇಡಮ್ಮಾ .
ಇದೇನು ತರಕಾರೀ ಮಾರ್ಕೆಟ್ಬೋ ಮೀನು (mean) ಮಾರ್ಕೆಟ್ಟೋ
ಹೀಗೆ ಕಾದಾಡೋಕೆ ? ಶಾಂತೀ-ಶಾಂತೀ ಶಾಂತೀ !
ಹಾಡು(ಸಾಮರಾಗ)
ಶಾಂತಮು ಲೇಕಾ ಸೌಖ್ಮಮು ಲೇದೂ |
ಸಾರಸ ಸಮವದವನ ||
-------------------------------------
40
ಎಲೌ! ಸುಮವದನೆ! ಶಾಂತಿಯಿಲ್ಲದೇ ಸೌಖ್ಯವಿಲ್ಲಮ್ಮಾ. ಮಿತ್ರರೇ !
ಶಾಂತಿ ಇಲ್ಲದೇ ನಿಮಗೆಲ್ಲ ಸೌಖ್ಮವೆಲ್ಲಿ ಬಂತು ?
ದಾರಸುತಾ ಧನಧಾನ್ಯ ಮೂಲುಂಡಿನಾ |
ಬಾಗುಗಾ ಸಕಲ ಹೃದ್ಬಾವಮೂ ದೆಲಿಶೀನಾ |
ಶಾಂತಮು ಲೇಕಾ.... ||
(ಕಂದಕ್ಕೆ ಬದಲಾಯಿಸಿ)
ಅಮ್ಮಗಳಿರಾ ! ಅಕ್ಕಗಳಿರಾ !
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವಳೆಂದು ಕಾಣಿರಿ
ತಬ್ಬಲಿಯ ನೀ ಕರುವನೂ ||
ಎಂಬ ಗೋವಿನ ಕತೆ ಹಾಡನ್ನು ಕೇಳಿಲ್ಲವೇ ? ಪಾಪ ! ಈ ಮಕ್ಕರಿ
ಹೊತ್ತಮ್ಮ ನಿನ್ನಮುಂದೆ ಒಂದು ಎಳೆಗರು. ಅದರ ಮೇಲೇಕಮ್ಮ್ರ ನಿನ್ನ
ಕೋಪ ? ಶಾಂತಳಾಗು, ಶಾಂತಳಾಗು ಒಬ್ಬರಿಗೊಬ್ಬರು ಅರ್ಥಮಾಡಿ
ಕೊಂಡೂ ತರಕಾರಿ ಕೊಂಡುಕೊಂಡೂ ಸೌಖ್ಯವಾಗಿ ಮನೇಗೆ ಹೋಗಿ.
ಹಾಗೆ ಸೌಖ್ಯವಾಗಿ ಮನೇಗೆ ಹೋಗಬೇಕಾದರೆ _ ಶಾಂತಿ ಇಲ್ಲದಿದ್ದರೆ
ಹೇಗೆ ಸಾಧ್ಮ . ಹೇಳಿ ಎಲ್ಲರೂ ... (ಎಲ್ಲರೂ ಹೇಳುವರು)
ಶಾಂತಮು ಲೇಕ | ಸೌಖ್ಯಮು ಲೇದೂ ||
(ಎಂಬಲ್ಲಿಗೆ ಶೃಂಗಾರದ ೨ನೆಯ ಅಂಕದಾನಂತರದ ಉಪನಾಟಕವಾದ
`ಮಟ್ಟುಗಳಿಗೆ ಮುಟ್ಟ'ದ ಮೊದಲ ಚೂರು ಮುಗಿದು ಅಂಕದ ಪರದೆ. ಬೀಳುವುದು
ಎರಡನೆಯ ಚೂರಿನ ತುಣುಕು ಮಾತ್ರ ಸಂಪಾದಕನ ನುಡಿಯಲ್ಲಿ ಕೊನೆಯ ಪುಟಗಳಳ್ಲಿದೆ.
ಅದನ್ನು ಪೂರ್ಣಮಾಡಿದಾಗ ಈ ಉಪನಾಟಕದ ಮುಕ್ತಾಯ)
----------------------------------
ಅಂಕ ೩ ಪ್ರವಾಸ
ಉಪನಾಟಕ ಮುಗಿದಾಗ ಬಿದ್ಸಿದ್ದ ದೊಡ್ಲ ಅಂಕದ ಪರದೆ ಎದ್ಗು ಶಂಬರಾಸುರನ
ಅರಮನೆಯ ರಾಣೀವಾಸದ ಹಜಾರ ಎದ್ದು ಕಾಣುವುದು. ಎದುರಿಗೆ ರಾಣಿಯ ಪೂಜಾ
ಗೃಹದ ಬಾಗಿಲ. ಎರಡೂಕಡೆ ದೊಡ್ಡ ತ್ರೈಲ ಪ್ರದೀಪಗಳು, ಧೂಪಧೂವುಗಳು,
ಮೂರು ಸಿಂಹಾಸನಗಳು ; ಮುಂದುಗಡೆ ಎರಡು, ಹಿಂದೆ ಒಂದು. ಪೂಜಾಗೃಹದಲ್ಲಿ
ವಾದ್ಯಗಳ ಜೊತೆಗೆ ಎರಡು ಹೆಣ್ಣು ಕಂಠಗಳು ಸೇರಿ ಹಾಡುತ್ತಿರುವುದು ಕೇಳುವುದು.)
(ಹಾಡು.-ಹಳೆಯ ಕಂದಾಚಾರದ ಧಾಟಿಯಲ್ಲಿ)
ನಂಬಿದವರ ವ್ಮಸನಗಳನು
ಇಂಬಿನಿಂ ಪರಿಹರಿಸು ನೀ ಇಇಇಇ |
ದಿತಿ ಕುಲದ ದೀವಿಯೇ ನೀ
ಕ್ಷಿತಿಯೊಳಿಂತವತರಿಸೀ ಇಇಇಇ ||
ಮತಿವಿಹೀನರಿಗಾದೆ ಗತಿ ನೀ ಎ
ನ್ನಂಬೆ ಕರುಣಾಕರೀ ಇಇಇಇ ||
ದಿತಿ ಕುಲದ ದೇವಿಯೇ ನೀ... ||
(ಅನಂತರ ಮಂಗಳವಾದ್ಯಗಳ ಶಬ್ದ)
ವಿದೂಷಕ___-(ಪ್ರವೇಶಿಸಿ) ಆಹಾ ! ಇದೀಗ ಸುಖಜೀವನ ! ಈ ಆರು
ಮಾಸಗಳಿಂದ ರತಿ ದೇವಿ. ನಮ್ಮ ಮಹಾರಾಣಿ ಇವರಿಬ್ಬರೂ ಅವರವರ ಪತಿ
ಗಳನ್ನೊಲಿಸಿಕೊಳ್ಳಲು ಪೂಜೆಗಳಲ್ಲಿ ನಿರತರಾಗಿ ವ್ರತಿಗಳಾಗಿರುವಲ್ಲಿ ಪ್ರತಿದಿನ
ಹಗಲು ರಾತ್ರೆ ನನಗೆ ಪ್ರಸಾದರೂಪದ ಮೃಷ್ಪಾನ್ನಭೋಜನ, ಆರಾಮ
ಜೀವನ | ನನಗೇನೋ ಒಳ್ಳೆಯದೇ, ಆದರೆ ಮಹಾರಾಜನೂ ಪ್ರದ್ಮುಮ್ನನೂ
ಕೊರಗಿ ಸೊರಗುತ್ತಿರುವರು. ವ್ರತವೆಂದು ಮುಗಿದೀತೋ, ಎಂದು ಕೈ ಹಿಡಿವ
ಹೆಣ್ಣಿನ ಸಂದರ್ಶನವಾದೀತೋ ಎಂದು ಹಾತೊರೆಯುತ್ತಿರುವರು. ಈರ್ವರೂ
ಅವರವರ ಪ್ರೇಮ ಪುತ್ಕಳಿಗಳನ್ನು ತಾತ್ಕಾಲಿಕವಾಗಿ ಆನಂದ
----------------------------------
42
ಹೊಂದುತ್ತಿರುವುದು ಅವರ ವಿರಹತಾಪವನ್ಶು ಇನ್ನೂ ಹರಿತವಾಗಿಸುತ್ತಿದೆ
ಆ ದೃಷ್ಟಿಯಿಂದ ನಾನೂ ನನ್ನ್ನ ಸುಖವನ್ನು ಇತರರ ಸುಖಕ್ಕಾಗಿ ಬಲಿಕೊಡ
ಬೇಕಾಗಿದೆಯಲ್ಲ ? ಇರಲಿ. ಆದರೆ ಸಂತೋಷದ ಸುದ್ರಿಯಿಂದರೆ. ಮಹಾ
ರಾಜನ ಮಸ್ಸು ಮಹಾರಾಣಿಯ ಕಡೆ ಹೆಚ್ಚು ವಾಲುಶ್ತಿರುವುದೇ ಆಗಿದೆ.
ಇಗೋ ! ಮಹಾರಾಜರೂ ಪ್ರದ್ಯುಮ್ನ ರಾಜಕುಮಾರರೂ ಇಲ್ಲಿಗೇ ಬಿಜಯ
ಮಾಡುತ್ತಿದ್ದಾರಾಗಿ ವ್ರತ ಮುಗಿವ ಕಾಲ ಸನ್ನಿಹಿತವಾಗಿದೆಯೆನ್ನಬಹುದು.
ವಿಜಯವಾಗಲಿ ಮಹಾರಾಜರಿಗೆ ! ವಿಜಯವಾಗಲಿ ಪ್ರದ್ಮಮ್ನಕುಮಾರನಿಗೆ.
ಇದೇ ತಾನೇ ಮಂಗಳಾರತಿ ಮುಗಿದಂತಿದೆ
ಶಂಬರಾಸುರ--ಕೃತಾರ್ಥರಾದೆವು. ದೇವಿಯು ಹೇಗಿರುವಳು.
ವಿದೂಷಕ-- ನಿಮ್ಮಆಗಮುನವನ್ನೇ ನಿರೀಕ್ಷಿಸುತ್ತ ನಿಮಗಾಗಿ ಹಂಬಲಿ
ಸುತಿ.ರುವಳು ಮಹಾರಾಜ !
ಶಂಬರಾಸುರ-ಧನ್ಯನಾದೆನು. ಕುಮಾರ ಪ್ರದ್ಯುಮ್ನನ ಮನಸ್ಸಿನಲ್ಲೂ
ಅದೇ ರೀತಿ ಇರಬಹುದಲ್ಲವೆ ?
ಪ್ರದ್ಯುಮ್ನ--ತಾವು ಅಪೃಣೆ ಕೊಡಿಸಿದಂತೆಯೇ ಇದೆ ನನ್ನ ತಂದೆಯೆ.
[ಮಂಗಳವಾದ್ಯಗಳ ಸಮೇತ ಮಹಾರಾಣಿ ರತಿದೇವಿಯರು ಪೂಜಾಗೃಹದಿಂದ
ಹೊರಗೆ ಬರುವರು., . ಅವರ ಕಣ್ಣುಗಳು ವಸ್ತ್ರಾಚ್ಛಾದಿತವಾಗಿರುವವು,
ಹಜಾರದ ಮಧ್ಯೆ ಅವರು ನಿಲ್ಲುವರು. ವಿದೂಷಕನು ಮಹಾರಾಜ ಮತ್ತು ಪ್ರದ್ಯು
ಮ್ನನಿಗೂ ಕಣ್ಣುಗಳನ್ನು ವಸ್ತ್ರದಿಂದ ಬಿಗಿದು ಇಬ್ಬರನ್ನೂ ತಾನೇ ಕೊಂಡೊಯ್ದು
ಪೂಜಾಗೃಹಕೈ ಬಿಟ್ಟು ಬರುವನು. ಅಲ್ಲಿ ದೇವ ದೇವನಿಗೆ ನಮಿಸಿದೊಡನೆ ಇಬ್ಬರನ್ನೂ
ವಾಪಸು ಕರೆತಂದು ವೂರು ಸಿಂಹಾಸನಗಳನ್ನೂ ಒಂದು ಕಡೆ ಹಾಕಿಸಿ ಅದರ ಮೇಲೆ ಅವರನ್ನು
ಕುಳ್ಳಿರಿಸಿ ತಾನೂ ಕೂರುವನು. ಅನಂತರ ಚೇಟಿಯರಿಗೆ ಹೇಳಿ ಸತಿಯರಿಬ್ಬರನ್ನೂ ಕರೆ
ತಂದು ಇವರ ಮುಂದೆ ನಿಲ್ಲಿಸಬೇಕೆಂದೂ ಸಂಜ್ಞೆ ಮಾಡುವನು
ಹಿಮ್ಮೇಳನದ ಸಂಗೀತ ಪೂಜಾಗೃಹದಿಂದ ಕೇಳುವುದು. ಮುಕ್ತಾಯದ ಹೊತ್ತು
ಬಂದಾಗ ಇವರ ಸುತ್ತು ಪ್ರದಕ್ಷಿಣೆ ಮಾಡುತ್ತಿದ್ದ ಮಹಾರುಣಿಯು ಶಂಬರಾಸುರನಿಗೂ,
ರತಿಯು ಪ್ರದ್ಯುಮ್ನನಿಗೂ ತಮ್ಮ ಕೈಲಿದ್ದ ಮಾಲೆ ಹಾಕಿ ಅವರ ಕೈಹಿಡಿದುಕೊಂಡು ನಿಲ್ಲು
-------------------------------------------------
43
ವರು. ಕಣ್ಣು ಕಟ್ಟುಗಳನ್ನು ಬಿಚ್ಚಿದೊಡನೆ ಎಲ್ಲರಿಗೂ ಅಶ್ಚರ್ಯವಾಗುವುದು. ಸತಿ
ಯರು ಪತಿಯರಿಗೆ ನಮಿಸುವರು. ]
ಶಂಬರಾಸುರ - ಆಹಾ ! ದೈವಲೀಲೆ ಎಂತಹ ಅದ್ಬುತವಾದುದು ?
ಯಾರು ಯಾರಿಗೆ ತಕ್ಕವರೋ ಅವರು ಅಂಧರಾಗಿದ್ದರೂ ಅವರವರು
ಅವರವರನ್ನು ಮುಚ್ಚಿದ ಕಣ್ಣಲ್ಲಿಯೇ ಪ್ರೇಮದಿಂದ ಸೇರುವಂತೆ ಮಾಡು
ವುದಲ್ಲಾ, ಇದೇ ಸತ್ಯ ಸ್ವರೂಪದ ಸಾಕ್ಷಾತ್ಕಾರ. ಮಹಾರಾಣಿಯೇ ! ಈ:
ಸಮಯದಲ್ಲಿ ನಿನ್ನ ಕೋರಿಕೆಯೇನು ?
ಮಹಾರಾಣಿ-- ಆರ್ಯಪುತ್ರಾ ! ಈ ರಾಜ್ಯ ವೈಭವದ ಸುಖವಿನ್ನು
ಸಾಕು. ಅರಣ್ಮವಾಸ ಪ್ರವಾಸಿಗಳಾಗಿ ತಪಸ್ಸಿನಿಂದ ಜಗತ್ಕಲ್ಯಾಣ ಸಾಧಿಸಲು
ತಾವೂ ಇಷ್ಟಪಡುವುದಾದರೆ ನಾನು ಕೃತಾರ್ಧಳು.
ಶಂಬರಾಸುರ-- ದೇವಿಯು ನುಡಿದಂತಾಗಲಿ. ಈ ರಾಜ್ಮವನ್ನು ಕುಮಾರ
ಪ್ರದ್ಯುಮ್ನನ ಕೈಲಿಟ್ಟು ಪ್ರಜೆಗಳ ಯೋಗಕ್ಷೇಮವನ್ನು ಇತೋಪ್ಯತಿಶಯ
ವಾಗಿ ಕಾಪಾಡೆಂದು ಹೇಳಿ ಪ್ರವಾಸಕ್ಕೆ ತೆರಳೋಣವೇ ?
ಮಹಾರಾಣಿ--ನನ್ನ ಮನಸ್ಸಿನಲ್ಲಿದ್ದುದನ್ನೇ ಅಪ್ಪಣೆ ಕೊಡಿಸಿದಿರಿ
ನಾಥಾ !
ಶಂಬರಾಸುರ-- ಅನಾಥೆಯಾಗಿ ನನ್ನ ಮರೆಹೊಕ್ಕಿದ್ದ. ರತಿದೇವಿ ಈಗ
ಸನಾಥೆಯಾದಳು. ತನ್ನ ಸುಖವನ್ನೇ ಎಲ್ಲರಿಗೂ ಹಂಚಿಕೊಟ್ಟ್ಗಳು. ಧನ್ಮೆ ನೀ
ರತಿದೇವಿ ! ಇನ್ನು ಕುಲಪುರೋಹಿತರನ್ನು ಕರೆಸಿ ರತಿ ಪ್ರದ್ಯುಮ್ನರಿಗೆ
ಶಾಸ್ತ್ರೋಕ್ತ ವಿವಾಹವೆಸಗಿ ರಾಜ್ಯ ಪಟ್ಟಾಭಿಷೇಕವನ್ನೂ ಕಟ್ಟಿ ನಾವೂ
ತಪೋವನ ಪ್ರವಾಸ ಕೈಗೊಳ್ಳಬಹುದಲ್ಲವೇ ಮಹಾರಾಣಿ ?
ಮಹಾರಾಣಿ-.--ನೀವೆಂದಂತೆ ಪ್ರಾಣನಾಥ.
ಶ೦ಬರಾಸುರ__ಒಳ್ಳೆಯದು. ಇವೆಲ್ಲ ಶುಭಕಾರ್ಯಗಳಿಗೂ ಕಾರಣರಾದ
ಉಮಾಮಹೇಶ್ತರರನ್ನು ಲೋಕದಲ್ಲಿ ಸತಿಪತಿಯರೆಂದೆಂದೂ ಒಂದಾಗಿ
ಪ್ರೇಮಜೀವನ ನಡೆಸಲೆಂದು ಲೋಕಹಿತಕ್ಕಾಗಿ ತನ್ನ ದೇಹವನ್ನೇ ಬಲಿ
----------------------------------------
4.4
ಗೊಟ್ಟು ದೇವಲೋಕಕ್ಕೆ ನಡೆದ ಕಾವುದೇವನು ಸರ್ವಜೀವರಾಶಿಗಳಲ್ಲಿಯೂ
ನೆಲೆಸುವಂತೆಸಗಿದ ಆ ಜಗನ್ಮಾತಾಪಿತೃಗಳನ್ನು ಭಜಿಸುವ. ಜಗನ್ಮಾತೆಯ
ಸ್ತ್ರೋತ್ರವಾಗಲಿ.
ಸರ್ವರೂ---(ರಾಗ- ನೋಟು)
ಕರುಣಿಸೆ ಕುಲದೇವಿಯೇ
ಕರುಣಿಸಿ ಪೊರೆಯೇ |
ಧರಣಿ ಸೃರ್ಗ ನರಕದಿರುವ
ಸಕಲ ಜೀವರಾಶಿಗಳನೇ
ಪೊರೆಯೆ ದೇವಿ ನೀಂ ||
(ಅಂತೆಯೇ)
ಶುಭ ವಿಭವಕರನೆನಿಪ ದೇವ ಪರಿಪಾಲಿಸು |
ದೇವ ಜಗತೀಧವಾ ಭಯಹರ ದಯಾಕರ |
ದೇವ ಯುಮಪಾಶಹರ ಕ್ಲೇಶಹರ ಭಾಸ್ಕರಾ !
ದೇವರೆ ಸರ್ವರಿಗೂ ಮಂಗಳವನ್ನುಂಟುಮಾಡುವಂಥಾವನಾಗು.
(ಎಲ್ಲರೂ ಹೊರಟು ರಂಗದಲ್ಲಿ ಮಹಾರಾಜ ವಿದೂಷಕ-ಇಬ್ಬರೇ ನಿಲ್ಲುವರು. )
ಶಂಬರಾಸುರ-- ಎಲ್ಲರಿಗೂ ಅವರವರ ಇಷ್ಪಾರ್ಥವನ್ನೇನೋ ಸಲ್ಲಿಸಿದೆ
ನಾನು.. ಆದರೆ ನನ್ನ ಸಲ್ಲಿಸಿಕೊಳ್ಳಲು ಅಸಮರ್ಧನಾದೆನಲಾ
ಮಾಂಡವ್ಯ ? ಏನೆನ್ನುವೆ ?
ವಿದೂಷಕ _ಮಹಾರಾಜ ! ಸಾರ್ವಭೌಮನೆನಸಿಕೊಂಡವನಿಗೆ ಪರರ
ಹಿತ ಮುಖ್ಯವೇ ಹೊರತು ಸ್ವಹಿತವಲ್ಲ. ಪರರ ಹಿತಾಕಾಂಕ್ಷಿಯಾದ ನೀನು
ನಿನ್ನ . ಸ್ವೇಚ್ಛೆಯನ್ನು ಬಲಿಕೊಟ್ಟುದು ಲೋಕಮಾನ್ಯ ಮಹಾರಾಜ
ಲೋಕಕ್ಕೇ ಆದರ್ಶರೂಪನಾದ ಶಂಬರಾಸುರನಿಂದ ಈ ತ್ಯಾಗ ಸಾಧ್ಯವಲ್ಲದೆ
ಬೇರಾರಿಂದ ಸಾಧ್ಯ ? ಈ _ ಸಂಧಿಯಲ್ಲಿ ನನಗೂ ಸಮಾರಾಧನೆಯೇ ಆಗಿ
ಹೋಯಿತು. ಇನ್ನು ಹೊಸ ಮಹಾರಾಜ ಮಹಾರಾಣಿಯರ ಸೇವೆಗೆ ಆಣಿ
------------------------------------
45
ಮಾಡಿಕೊಳ್ಳುತ್ತೇನೆ ಮಹಾರಾಜ, ತಾವೂ ಮಹಾರಾಣಿಯೂ ಅರಣ್ಯಕ್ಕೆ
ಇನ್ನ ಪ್ರವಾಸ ತೆರಳಬಹುದು. ನನಗಂತೂ ಇಲ್ಲಿ ನಿತ್ಯದ ಮೃಷ್ಟಾನ್ನ
ಕಾದಿದೆ. ತಪೋವನದಲ್ಲಿ ಆಗಾಗ್ಗೆ ನನ್ನನ್ನು ಜ್ಞಾಪಿಸಿಕೊ ಮಹಾರಾಜ.
ಮಹಾರಾಜ !-- ನಿನಗೆ ಮಂಗಳವಾಗಲಿ ಶುಭ ಶಾಂತಿ ರಸ್ತು,
ಅರೋಗ್ಯ-ಮೊಸ್ತು, ತಮಗೆ ನನಗೆ ಇಲ್ಲಿ ನೆರದಿರುವವರಿಗೆಲ್ಲ. ಭದ್ರಂ.
ಶಿವಂ. ಮಂಗಳಂ.
--ದೊಡ ಅಂಕದ ಪರದೆ ಬೀಳುವುದು
ಶಂಬರಾಸುರ ನಾಟಕ_.ಉಪನಾಟಕಗಳು. -
ಸಂಪೂರ್ಣಂ,
[ನಂಜನಗೂಡಿನಲ್ಲಿ ಈ ನಾಟಕ ಆಡಬೇಕೆನ್ನುವ ಮೊದಲ ಅದರ
ಪಾತ್ರ, ರೂಪರೇಷೆಗಳನ್ನು ಕೈಲಾಸಂ . ಸ್ವಯಂ
ಗುರುತು ಹಾಕಿದರು. ಆ ಬಗ್ಗ್ಯೆ ಮೂರು ಪಡಿಯಚ್ಚುಗಳನ್ನು
ಕೊನೆಯಲ್ಲಿ ಮುದ್ಬಿಸಿದೆ. ಅದರಲ್ಲಿ ನಂಕಂಪ್ನಿ ನಾಟಕದ
ಶೀರ್ಷಿಕೆ, ಪಾತ್ರ, ಪದ್ಮ. ಬರೆದಿರುವುದೂ ಇದೆ ಶಂಬರನ
ಶೃಂಗಾರದ ಸಂಭಾಷಣೆಯ ಚೂರೂ ಇದೆ. ಕಂದ ಪದ್ಯ
ಅವರೇ ಯಾವ ರೀತಿ ಹೊಳೆದಂತೆ ರಚಿಸುತ್ತಿದ್ದರೆಂಬಂದನ್ನೂ
ಕಾಣಬಹುದಂ,. ಸಂ.]
======================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ