ಬುಧವಾರ, ಏಪ್ರಿಲ್ 8, 2020

ಐತಿಹಾಸಿಕ ಕಥೆಗಳು-ಪಂಜೆ

https://archive.org/details/dli.osmania.3099
ದು ರ್ಗಾವತಿ ,
ಭರತಖಂಡದ ಪುರಾಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿಯ ಯುದ್ಧವನ್ನು ಪೂರಯಿಸಿದಳು. ಆಗರ್ಭ ಶ್ರೀಮಂತೆಯಾದ ಜನಕನಂದನೆಯು ಪತಿವಿಯೋಗಕ್ಕಿಂತಲೂ ಅರಣ್ಯವಾಸವೇ ಮಧುರವೆಂದು ಭಾವಿಸಿ, 14 ವರ್ಷಗಳ ವರೆಗೆ ಗಟ್ಟ ಬೆಟ್ಟಗಳಲ್ಲಿ ಅಲೆದಳು. ಭಾರತ ಇತಿಹಾಸ ಕಾಲದಲ್ಲಿಯೂ ಸಂಯೋಗೀತಾ, ಪದ್ಮಿನಿ, ಕರ್ಮದೇವಿ ಮೊದಲಾದ ಅಸಂಖ್ಯಾತ ರಜಪುತ್ರ ವೀರ ರಮಣಿಯರು ಧರ್ಮಾಂಧರಾದ ಮುಸಲ್ಮಾನರನ್ನು ಯುದ್ಧದಲ್ಲಿ ಪ್ರತಿಭಟಿಸಿ, ತಮ್ಮ ಪತಿಗಳ ಆಪತ್ತು ವಿಪತ್ತುಗಳನ್ನು ಪರಿಹರಿಸುವುದಕ್ಕೆ ರಣರಂಗದಲ್ಲಿ ರಕ್ತವನ್ನು ಬಸಿದರು. ಆದರೂ ಪಾಶ್ಚಾತ್ಯ ನಾಗರಿಕತೆಯನ್ನು ಹೊ೦ದಿ, ಸರ್ವ ವಿಷಯಗಳಲ್ಲೂ ಪಾಶ್ಚಾತರೇ ನಮಗೆ ಬುದ್ದಿ ಕಲಿಸುವರೆಂದು ನಂಬುವವರು ಈ ಪುರಾಣಗಳು ಕಲ್ಪಿತ ಕಥೆಗಳೆಂದೂ, ಈ ಪ್ರರಾಣಸಿದ್ದ ಸ್ತ್ರೀಯರು ಕವಿಸೃಷ್ಟಿಗಳೆಂದೂ ಅಲ್ಲಗಳೆವರು. ಅಷ್ಟೇಕೆ? ಸ್ಪಷ್ಟಾಕ್ಷರ ಗಳಿ೦ದ ಅ೦ಕಿತವಾದ ಜೀಜಾಬಾಯಿ, ಅಹಲ್ಯಾಬಾಯಿ ಮೊದಲಾದ ಭಾರತ ಯುವತಿಯರ ಪ್ರಭಾವವು ಚರಿತ್ರಕಾರನ ಅತಿಶಯೋಕ್ತಿ ಎಂದು ಇವರು ಅನುಮಾನಿಸುವರು. ಜನರ ಕಟ್ಟು ಕಥೆಗಳನ್ನಾಗಲಿ, ಕವಿಯ ಬಣ್ಣ ಮಾತು ಗಳನ್ನಾಗಲಿ ನಂಬಬೇಕೆಂದು ನಾವು ಪ್ರತಿಪಾದಿಸುವುದಿಲ್ಲ. ಪುರಾಣೋಕ್ತ ವಾದ ವಿಷಯಗಳು ಸಟೆಯಾದರೂ ಸತ್ಯವಾದರೂ ದೋಷವಿಲ್ಲ. ಆದರೆ ಪುರಾಣಕಥನಗಳು ಸುಳ್ಳೆಂದು ಮೊದಲಿಂದ ಹಿಡಿದು ಹೋಗಿ, ಇದರಿಂದ ಭಾರತ ಇತಿಹಾಸದ ಸ್ಥಿತಿಗತಿಯನ್ನು ಪ್ರಮಾಣಿಸುವುದು ಯೋಗ್ಯವಲ್ಲ. ಪಾತಿವ್ರತ್ಯ, ಧರ್ಮಪರಾಯಣತೆ, ರಣೋತ್ಸಾಹ ಮೊದಲಾದ ಗುಣಗಳು

2

ಪುರಾಣ ಕಾಲದಲ್ಲಿ ಇಲ್ಲದೆ ಇರುತ್ತಿದ್ದರೆ, ಅವುಗಳು ಇತಿಹಾಸಕಾಲದಲ್ಲಿ ಉಜ್ವಲವಾಗಿ ಪ್ರತಿಬಿಂಬಿಸುವುದಿಲ್ಲ, ಭಾರತಭೂಮಿಯು ಮುಸಲ್ಮಾನರ ಕಠೋರ ಶಾಸನದಿಂದ ತಲ್ಲಣಿಸುತ್ತಿದ್ದಾಗ, ಈ ಗುಣಗಳು ಇನ್ನೂ ಪ್ರಭಾ ನಯವಾಗಿ ಬೆಳಗಿದುವು.

ಪ್ರತಾಪಶಾಲಿಯಾದ ಅಕ್ಬರು ದೆಹಲಿಯ ಸಿಂಹಾಸನರೂಢನಾಗಿದ್ದನು. ಮೊಗಲ್ ಸಾಮ್ರಾಜ್ಯದ ಅರ್ಧ ಚಂದ್ರಾಂಕಿತವಾದ ಧ್ವಜವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ, ಸಿಂಧೂ ನದಿಯಿಂದ ಬಂಗಾಳೆ ಯ ವರೆಗೂ ನೆರಳು ಹಾಕುತಿತ್ತು. ಪೂರ್ವದ ಅಪಘಾನ್ ರಾಜರು ಬದ್ಧಹಸ್ತರಾಗಿ ದಿಲೀಶ್ವರನಿಗೆ ಕೈ ಮುಗಿದರು. ರಾಜ ಪುತ್ರರಲ್ಲಿ ಅನೇಕರು ಅವನ ದೋರ್ದಂಡ ಪ್ರತಾಪವನ್ನು ಸಹಿಸಲಾರದೆ, ಅವನ ಗದ್ದುಗೆಯ ನೆರಳಲ್ಲಿ ಮರೆಹೊಕ್ಕರು. ಅವರ ಅನೇಕ ದುರ್ಗಗಳು ಮೊಗಲರ ವಿಹಾರಸ್ಥಾನಗಳಾದುವು. ಪರಂತು ಗಢಾಮಂಡಲದ ರಾಣಿಯು ತನ್ನ ಕೊರಳನ್ನು ಅಕ್ಬರನ ಪಾಶಕ್ಕೆ ಒಡ್ಡಲಿಲ್ಲ. ಚತುರೋಪಾಯ ಸಂಪನ್ನ ನಾದ ಅಕ್ಬರು ಗಡಾಮಂಡಲದ ರಾಣಿಯಾದ ದುರ್ಗಾವತಿಯು ತನ್ನ ಅನುಚರಿಯಾಗುವಂತೆ, ಹಲವು ಉಪಾಯಗಳನ್ನು ಮಾಡಿದನು. ತೇಜಸ್ವಿನಿಯಾದ ದುರ್ಗಾವತಿಯ ವೀರಸಹಾಸದಿಂದ, ಅವೆಲ್ಲವೂ ಬಯಲಾಗಿ ಹೋದುವು.

ದುರ್ಗಾವತಿಯು ಮಧ್ಯ ಹಿಂದುಸ್ಥಾನದ ಮಹೊಬಾ ಸಂಸ್ಥಾನದ ರಾಜನಾದ ಚಂದೇಲನ ಮಗಳು. ದುರ್ಗದ ಅಧಿದೇವತೆಯ ಸಾಮಾಂಕಿತ ದಿಂದ ಅವಳಿಗೆ ದುರ್ಗಾವತಿ ಎಂದು ಹೆಸರನ್ನಿಟ್ಟರು. ಕನ್ನಿಕೆಯ ಬುದ್ದಿ ಸಂಪನ್ನತೆಯನ್ನೂ ಸೌಂದರ್ಯವನ್ನೂ ನೋಡಿ ಆನಂದಪಡುತ್ತಲಿದ್ದ ಚಂದೇಲನು, ತನ್ನ ವಂಶಕ್ಕೆ ಅನುರೂಪನಾದ ಕುಲೀನ ರಾಜ ಪುತ್ರ ರಾಜ ನಿಗೆ ಅವಳನ್ನು ಕೊಡಬೇಕೆಂದು ಮನಸ್ಸು ಮಾಡಿದ್ದನು. ದುರ್ಗಾವತಿಯು ಗಢಾಮಂಡಲದ ಗೌಡರಾಜನಾದ ದಳಪತಿ ಶಹನ ಸಾಹಸಕ್ಕೂ ಪರಾಕ್ರಮಕ್ಕೂ ಮುಗ್ಗಳಾಗಿ, ತನ್ನ ತಂದೆಗೆ ತಿಳಿಯದಂತೆ ಆ ವೀರನನ್ನು
ಹೃದಯದಲ್ಲಿ ವಂಸಿದ್ದಳು. ದಳಪತಿಶಹನು ಮಹಾ ಯೋಧನು;

3

ರಾಜ ಕಾರ್ಯಧುರಂಧರನು; ರಾಜಪುತ್ರ ರಮಣಿಯರ ಮಾನ ರಕ್ಷಕನು. ದುರ್ಗಾವತಿಯು ಅಂತರಂಗದಲ್ಲಿ ತನ್ನ ಪ್ರಣಯಚಿಹ್ನ ವಾದ ಹೊನ್ನಿನ ತೆಂಗಾಯಿಯನ್ನು ದಳಪತಿ ಶಹನಿಗೆ ಕಳುಸಿದಳು. ದಳಪತಿ ಶಹನು ಕನ್ನಿಕೆಯ ಪ್ರೇಮಪುರಸ್ಕಾರವನ್ನು ಅತ್ಯಂತ ಶ್ರದ್ದೆಯಿಂದ ಸ್ವೀಕರಿಸಿದನು. ಕ್ರಮೇಣ ದುರ್ಗಾವತಿಯ ಆಶೆಯು ಹೊರಬಿದ್ದಿತು. ದುರ್ಗಾವತಿಯ ತಂದೆಯು ಈ ಸಂಬಂಧವನ್ನು ಒಪ್ಪಲಿಲ್ಲ. ದಳಪತಿ ಶಹನು ಸಾಮಾನ್ಯ ರಾಜ ಪುತ್ರನೆಂದೂ, ಅವನ ರಾಜ್ಯವು ಬಲು ಚಿಕ್ಕದೆಂದೂ, ಅವನು ಅಳಿಯನಾದರೆ ತನ್ನ ಕುಲಗೌರವವು ಕಳಂಕಿತವಾಗುವುದೆಂದೂ ಭಾವಿಸಿ, ಒಂದು ಉಪಾಯವನ್ನು ಮಾಡಿದನು. ದಳಪತಿಶಹನು ಅರ್ಧ ಲಕ್ಷ ಸೈನ್ಯದೊಡನೆ ಸ್ವಯಂವರಕ್ಕೆ ಬರಬೇಕೆಂದು ಚಂದೇನು ಹೇಳಿ ಕಳುಹಿಸಿ ದನು. ಅಷ್ಟು ಸೈನ್ಯವನ್ನು ತನ್ನ ಚಿಕ್ಕ ಮ೦ಡಲದಲ್ಲಿ ಸಾಮಾನ್ಯ ರಾಜನಾದ ದಳಪತಿಶಹನು ಜತೆಗೊಳಿಸಲಾರನೆಂದು ಚಂದೇಲನು ಬಗೆದನು. ವೀರಭೂಮಿಯು ತುರುಕರ ಪಾಲಾದರೂ, ವೀರತ್ವವು ಈ ಬಾರತಭೂಮಿ ಯಿಂದ ಇನ್ನೂ ನಿರ್ನಾಮವಾಗಿರಲಿಲ್ಲ ಎಂದು ಚಂದೇಲನು ತಿಳಿದಿರಲಿಲ್ಲ. ಪ್ರಸಿದ್ದ ವೀರನಿದ್ದರೆ ರಾಜಪುತ್ರರು ಉತ್ಸಾಹಿತರಾಗಿ ಅವನ ಪತಾಕೆಯ ಕೆಳಗೆ ಇನ್ನೂ ಒಟ್ಟು ಕೂಡುತ್ತಿದ್ದರೆಂದು ಚಂದೇಲನ ಮನಸ್ಸಿಗೆ ಹತ್ತಲಿಲ್ಲ. ಲಕ್ಷಾರ್ದ ಸೈನ್ಯವನ್ನು ಮೋಹರಿಸಲಾರದೆ ದಳಪತಿಶಹನು ತಾನೆ ಹಿಂದೆಗೆವ ನೆಂದು ಚಂದೇಲನು ನಂಬಿದನು.

ಸ್ವಯಂವರದ ದಿನವು  ಪ್ರಾಪ್ತವಾಯಿತು. ದುರ್ಗಾವತಿಯ ಸೌಂದರ್ಯ ಕೀರ್ತಿಯನ್ನು ಕೇಳಿ ಮೋಹಿತರಾದ ರಾಜಪುತ್ರರೆಲ್ಲರೂ ಮಂಟಪದಲ್ಲಿ ಬಂದು ನೆರೆದರು. ಆ ರಾಜಪುತ್ರರ ಮಂಡಲದಲ್ಲಿ ಗಢಾ ಮಂಡಲದ ನಾಯಕನು ಮಾತ್ರ ಇರಲಿಲ್ಲ. ಕನ್ನಿಕೆಯಾದ ದುರ್ಗಾ ವತಿಯು ಕೈಯಲ್ಲಿ ಪುಷ್ಪ ಮಾಲಿಕೆಯನ್ನು ಹಿಡಿದುಕೊಂಡು, ಸ್ವಯಂವರ ಮಂಟಪದಲ್ಲಿ ಮೆಲ್ಲನೆ ಕಾಲಿಟ್ಟಳು; ಮುಹೂರ್ತ ಮಾತ್ರ ನಿಂತು ಕೊಂಡು, ತನ್ನ ಕಣ್ಣಿನ ಮಿಂಚನ್ನು ಸಭಾಮಂಡಲದಲ್ಲಿ ಬೀರಿದಳು. ಕೂಡಲೇ ಅವನತಮಸ್ತ ಕಳಾಗಿ ಪ್ರತಿಮೆಯಂತೆ ನಿಂತುಬಿಟ್ಟಳು. ದಳಪತಿ ಶಹನ ಉಜ್ವಲಮುಖವು ಅಲ್ಲಿ ತೋರಲಿಲ್ಲ. ಆಶಿಸುವಂತಹನನ್ನು

-೪-
ಆಯ್ದು ಕೊಳ್ಳು ಎಂದು ಮುದಿಹೃದಯನಾದ ತಂದೆಯು ಅಪ್ಪಣೆ ಕೊಟ್ಟನು. ದುರ್ಗಾವತಿಯು ನಿರುತ್ತರಳಾದಳು. ತಿಳಿಯದಂತೆ ಜಗುಳಿ ಬಿದ್ದ ಅಶ್ರುಜಲವು ಹೂಮಾಲೆಯಲ್ಲಿ ಹಿಮಬಿಂದುವಿನಂತೆ ನಿಮಿಷ ಮಾತ್ರವಿದ್ದು ತೊಲಗಿ, ಕರ್ಕಶವಾದ ಭೂಮಿಗೆ ಬಿದ್ದು ಆರಿಹೋಯಿತು. ಸ್ವಯಂವರದ ಮಂಗಲಮುಹೂರ್ತವು ತಪ್ಪಿ ಹೋಗುವುದೆಂದು ಚಂದೇ ಲನು ದುರ್ಗಾವತಿಯನ್ನು ತವಕಿಸಿದನು. ಅವಳ ಮುಕುಳಿತವಾದ ಮನಸ್ಸಿನಲ್ಲಿ ಆ ಮಾತು ಇಳಿಯಲಿಲ್ಲ. ಅವಳು ಅಧೋವದನಳಾಗಿ ಕಣ್ಣೆತ್ತದೆ ಮುಂದೆ ಮುಂದೆ ಹೆಜ್ಜೆಯನ್ನಿಟ್ಟಳು. ಅವಳ ಹೃದಯಕಮಲ ವನ್ನು ವಿಕಸಿಸುವ ಬಾಲಸೂರ್ಯನು ಇನ್ನೂ ಪೂರ್ವ ಶಿಖರವನ್ನು ಹತ್ತಿರ ಲಿಲ್ಲ. ದಳಪತಿ ಶಹನು ಸೈನ್ಯವನ್ನು ಸೇರಿಸಿ, ದುರ್ಗದ ಹಿ೦ದುಗಡೆಯಲ್ಲಿ ನಿಲ್ಲಿಸಿ, ವಿವಾಹಮಂಟಪವನ್ನು ಅಲಂಕರಿಸುವುದಕ್ಕೆ ಕಾಲವಿಳಂಬ ವಾಯಿತು. ಕನ್ನೆ ಯ ಈ ಅವಸ್ಥೆಯನ್ನು ನೋಡಿ ಆಮಂತ್ರಿತ ರಾಜಪುತ್ರ ರೆಲ್ಲ ರೂ ಆಶ್ಚರ್ಯಗೊಂಡರು. ಕೈ ಕಟ್ಟಿದಂತಾದ ಕನ್ಯೆಯು ಏನು ಮಾಡ ಬೇಕೆಂಬುದು ಮುಂಗಾಣದೆ, ನೆಟ್ಟನೆ ಮಂಟಪದ ಬಹಿರ್ದ್ವಾರಕ್ಕೆ ಸರಿಯಾಗಿ ನಡೆದಳು. ಎರಡು ಕಡೆಗಳಲ್ಲಿ ಕುಳಿತುಕೊಂಡ ಅತಿಥಿಗಳೆಲ್ಲ ಕೊರಳು ಗಳನ್ನು ನೀಡುತ್ತ ಹೊರ ಬಾಗಿಲಿನ ಕಡೆಗೆ ತಮ್ಮ ದೃಷ್ಟಿಯನ್ನು ಚಾಚಿದರು. ರಾಜಾಂಗಣದಲ್ಲಿ ಆನೆಯನ್ನು ಹತ್ತಿ ಒಬ್ಬ ಯೋಧನು ಬರುತ್ತಿದ್ದನು. ಅವರು ನೋಡುವಷ್ಟರಲ್ಲಿ ಯೋಧನು ಅನೆಯಿಂದ ಇಳಿದು ಮಂಟಪವನ್ನು ಪ್ರವೇಶಿಸಲಿಕ್ಕಿದ್ದನು. ದೂರದಿಂದ ಹಾರಿಬರುವ ಗಂಡು ಕಪೋತವನ್ನು ವಿರಹಿಣಿಯಾದ ಹೆಣ್ಣು ಕಪೋತವು ದೃಷ್ಟಿಸಿ, ಗರಿ ಗಳನ್ನು ಬಿಚ್ಚಿ, ಹಾರಿ ಹೋಗಿ ಅದರ ಬಳಿ ಸಂದು ಅದರ ರೆಕ್ಕೆಗಳಲ್ಲಿ ಒಗ್ಗೂಡುವಂತೆ, ತನ್ನ ಪ್ರಾಣವಲ್ಲಭನಾದ ದಳಪತಿ ಶಹನು ಸ್ವಯಂವರ ಮಂಟಪದಲ್ಲಿ ಪದಾರ್ಪಣ ಮಾಡುತ್ತಲೇ ಪುಳುಕಿತಳಾದ ದುರ್ಗಾವತಿಯು ಓಡಿಹೋಗಿ ಕುಸುಮಮಾಲೆಯನ್ನು ಅವನ ಕಂಠದಲ್ಲಿ ಇಟ್ಟು, ಅವನ ವಾಮಭಾಗವನ್ನು ಅವಲಂಬಿಸಿ ನಿಂತುಬಿಟ್ಟಳು. ಭಗ್ನ ಮನೋರಥ ನಾದ ಚಂದೇಲನು ತನ್ನ ಮಗಳ ನಡತೆಯನ್ನು ನೋಡಿ ಅವಾಕ್ಕಾದನು. ಮ ನ ಪೂರ್ವ ಕ ವಾಗಿ ಮಗಳನ್ನು ಅಳಿ ಯ ನಿಗೆ ಕೊಡುವುದಕ್ಕೆ

5
ಅವರು ಸಮ್ಮತಿಸಲಿಲ್ಲ. ದುರ್ಗಾವತಿಯನ್ನು ಅಳಿಯನ ಕೈಗೆ ಖಡ್ಗ ಧಾರಾಪೂರ್ವಕವಾಗಿ ಕೊಡಬೇಕೆಂದು ನಿಶ್ಚಯಿಸಿದನು. ಕೂಡಲೇ ಇತ್ತಂಡಗಳ ಸೇನೆಗಳು ಸನ್ನದ್ಧವಾಗಿ ಬಂದುವು; ಸ್ವಯಂವರಮಂಟಪವು ಸಮರಭೂಮಿಯಾಯಿತು; ಅಳಿಯನಿಗೂ ಮಾವನಿಗೂ ಕಾಳಗವಾಯಿತು. ಚಂದೇಲನು ಸೋತುಹೋದನು. ವಿಜಯಿಯಾದ ದಳಪತಿಶಹನು ರಮಣೀ ರತ್ನವನ್ನು ಹಾರಿಸಿಕೊಂಡು ಹೋದನು.

ಆದರೆ ದುರ್ಗಾವತಿಯ ಸಹವಾಸ ಸುಖವನ್ನು ಚಿರಕಾಲ ಅನು ಭವಿಸುವುದನ್ನು ದಳಪತಿಶಹನ ಹಣೆಯಲ್ಲಿ ವಿಧಾತನು ಬರೆಯಲಿಲ್ಲ. ದುರ್ಗಾವತಿಯಲ್ಲಿ ಪುತ್ರೋತ್ಸವವಾದ ಸ್ವಲ್ಪ ಕಾಲದಲ್ಲಿಯೇ ದಳಪತಿ ಶಹನು ಕಾಲವಶನಾದನು. ಗಢಾಮಂಡಲದ ಮೇಲೆ ಸ್ವಲ್ಪ ಕಾಲದ ವರೆಗೆ ಅಂಧಕಾರವು ಅಚ್ಛಾದಿತವಾಯಿತು. ಗಢಾಮಂಡಲಕ್ಕೆ ಉಂಟಾದ ಈ ದುರ್ಗತಿಯನ್ನು ನೋಡಿ ಅಕ್ಬರು ಸಮಯವನ್ನು ಎದುರ್ನೋಡು ತಿದ್ದನು. ಕೂಡಲೇ ದುರ್ಗಾವತಿಯು ತನಗೆ ಒದಗಿದ ಕಷ್ಟ ಸಂಕಷ್ಟವನ್ನು ಮರೆತು ಬಿಟ್ಟಳು; ಪತಿವಿಯೋಗದಿಂದ ಉಂಟಾದ ಕಣ್ಣೀರುಗಳನ್ನು ಕಣ್ಣು ಗಳಿಂದ ಒರಸಿಬಿಟ್ಟಳು; ದುಃಖಸೂಚಕವಾದ ವಸನಗಳನ್ನು ತೆಗೆದಿಟ್ಟಳು. ಪ್ರಜಾಪರಿಪಾಲನದಲ್ಲಿಯೂ, ಸಂಸ್ಥಾನಾಭಿವೃದ್ಧಿಯಲ್ಲಿಯ, ಬಾಲಕನ ಅಭ್ಯುದಯದಲ್ಲಿಯೂ ತನ್ನ ಮನಸ್ಸನ್ನು ಊರಿದಳು. ಬಾಲಕನಾದ ವೀರನರೇಂದ್ರನು ಪ್ರಾಯಕ್ಕೆ ಬರುವ ವರೆಗೆ ಅಸಾಧಾರಣ ಸ್ತ್ರೀಯಾದ ದುರ್ಗಾವತಿ ಯು ರಾಜಕಾರ್ಯಸೂತ್ರಗಳನ್ನು ತನ್ನ ಕೈಯಲ್ಲೇ ಹಿಡಿದು ಕೊಂಡಳು. ಅವಳ ಆಳಿಕೆಯಲ್ಲಿ ಮಾರ್ಗಗಳು ಸಂಸ್ಥಾನವನ್ನು ಸೀಳಿ ಹೋದುವು. ಅಲ್ಲಲ್ಲಿ ಪ್ರಯಾಣಸ್ಥರಿಗೆ ಅನುಕೂಲವಾದ ವಾಪಿಗಳೂ
ಪ್ರಪಾಶಾಲೆಗಳೂ ತಲೆದೋರಿದುವು. ಕೆರೆ ಕಾಲುವೆಗಳು ವ್ಯವಸಾಯಕ್ಕೆ ಸಹಾಯಕವಾಗಿ ಹರಿದು ಹೋದುವು. ರಾಜ್ಯದ ಕಂದಾಯವು ಇಮ್ಮಡಿ ಯಾಯಿತು. ಗಢಾಮಂಡಲವು ಉನ್ನತಿಗೆ ಏರಿತು. ಪ್ರಜೆಗಳಿಗೆ ತಾಯಿ ಯಂತಿದ್ದ ದುರ್ಗಾವತಿಯ ಆಳಿಕೆಯಲ್ಲಿ ಸುಖವಂತರಾದ ಜನರೆಲ್ಲರು ತಮ್ಮ ಅಧಿಪತಿಯ ಅಕಾಲಿಕ ಮರಣದುಃಖವನ್ನು ಕ್ರಮೇಣ ಮರೆತು ಬಿಟ್ಟರು,
- -
6
-
- ಅವಿಚ್ಛಿನ್ನವಾದ ಸುಖವು ಐಹಿಕ ಮನುಷ್ಯನ ಪಾಲಿಗೆ ಬರುವುದಿಲ್ಲ. ದುರ್ಗಾವತಿಯ ರಾಜ್ಯ ರಕ್ಷ ಣ ಸುಖವನ್ನು ಅನುಭವಿಸುವ ಅದೃಷ್ಟವು ಪ್ರಜೆಗಳಿಗೆ ಇದ್ದಿಲ್ಲ. ಅವಳ ದೇಶೋನ್ನತಿಯ ಸಮಾಚಾರವನ್ನು ಕೇಳಿ ಅಸೂಯೆಗೊಂಡವರಲ್ಲಿ ಅನೇಕರು ಇದ್ದರು. ಇಂತಹವರಲ್ಲಿ ಅಸೋಫ್ ಖಾನನು ಒಬ್ಬನು. ಅಸೋಫ್ ಖಾನನು ಗಢಾಮಂಡಲದ ಬಳಿಯಲ್ಲಿರುವ ಮಾಳವ ದೇಶದ ಸುಭೇದಾರನಾಗಿದ್ದನು. ಸ್ತ್ರೀ ಪಾಲಿತ ವಾದ ಸಂಸ್ಥಾನವನ್ನು ಆಕ್ರಮಿಸುವುದಕ್ಕಾಗಿ ಇದೇ ಅವಕಾಶವೆಂದು ಅವನು ರಾಜಾಧಿರಾಜನಾದ ಅಕೃರಿಗೆ ಬರೆದು ಕಳುಹಿಸಿದನು. ಅಕ್ಬರು ಪರರಾಜ್ಯ ಆಕಾಂಕ್ಷಿತನಾಗಿದ್ದರೂ ಶತ್ರುಗಳಲ್ಲಿ ಕೂಡ ಸದ್ದು ಣವನ್ನು ಪರಿಗ್ರಹಿಸಿ ಸನ್ಮಾನಿಸುತ್ತಿದ್ದನು. ಅಬಲೆಯಾದ ದುರ್ಗಾವತಿಯನ್ನೂ ಬಾಲಕನಾದ ವೀರನರೇಂದ್ರನನ್ನೂ ನೋಯಿಸುವುದು ಅಕ್ಷರಿನ ಆರ್ಯ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಗಢಾಮಂಡಲವು ರಕ್ತಪಾತವಿಲ್ಲದೆ ತನಗೆ ಶರಣು ಬರಬೇಕೆಂದು ತನ್ನ ಅಂತರ್ಯದಲ್ಲಿ ಆಶಿಸಿದ್ದನು. ಅಸೋಫಖಾನನು ಪುನಃ ಪುನಃ ಈ ವಿಷಯವನ್ನು ಅಕ್ಷರಿನ ಕಿವಿಗೆ ಒತ್ತಿ ಒತ್ತಿ, ಕೊನೆಗೆ ಗಢಾಮಂಡಲದ ಮೇಲೆ ದಳವನ್ನು ನಡೆಯಿಸಬಹುದೆಂದು ಅವನ ಅಪ್ಪಣೆಯನ್ನು ಹೊಂದಿದನು.
ಅಸೋಫ್ ಖಾನನು ಅಸಂಖ್ಯಾತ ಸೇನೆಯೊಡನೆ ಪುರದ್ವಾರದಲ್ಲಿ ಬಂದಿಳಿದನು. ನಗರದಲ್ಲಿ ಕೋಲಾಹಲವು ಎದ್ದಿತು. ಅರಮನೆಯಲ್ಲಿ ಎಲ್ಲರೂ ದಿಗಿಲು ಬಿದ್ದರು. ಕೂಡಲೇ ದುರ್ಗಾವತಿಯು ಅರಮನೆ ಯನ್ನು ಬಿಟ್ಟು ಕೆಳಕ್ಕೆ ಬಂದಳು. ಸಂಸ್ಥಾನದ ಮುಖ್ಯಾಧಿಕಾರಿಗಳನ್ನು ಕರೆಯಿಸಿ ದುರ್ಗಾವತಿಯು ಹೀಗೆಂದಳು:- ನೀವು ಬುದ್ಧಿಸಂಪನ್ನರು; ರಣನೈಪುಣ್ಯಶೀಲರು, ನಾನು ಎಷ್ಟಾದರೂ ಹೆ೦ಗಸು; ಅರಮನೆಯನ್ನು ಬಿಟ್ಟವಳಲ್ಲ. ನಮ್ಮೆಲ್ಲರಿಗೆ ಬಂದೊದಗಿದ ಆಪತ್ತು ದುಸ್ಸಹವಾಗಿದೆ. ನಿರಪರಾಧಿಗಳಾದ ನಮ್ಮನು ಕೊಂದು, ನಮ್ಮ ಸದ್ಧರ್ಮವನ್ನು ಹಾಳು ಮಾಡಿ, ನಮ್ಮ ರಾಜ್ಯವನ್ನು ಆಕ್ರಮಿಸಬೇಕೆಂಬ ಈ ಮೇಚ್ಛರ ನಡ ತೆ ಯು ನಿಮಗೆ ಯುಕ್ತ ತೋರುವುದೆ? ಇದಕ್ಕಿಂತಲೂ ದುಃಖಕರವಾದ ಸಂಗತಿಯುಂಟೆ? ಮನಸ್ವಿಯಾಗಿ ರಾಜಪುತ್ರರನ್ನು ಈ ಧರ್ಮಾ೦ಧರಾದ
--
7
---
ಮುಸಲ್ಮಾನರು ಪಿ ಡಿ ಸು ವು ದೆ೦ ದ ರೆ ನಮಲ್ಲಿ ಸಹನಾಶಕ್ತಿಯಿಲ್ಲದೆ ಪೌರುಷವೇ ಇಲ್ಲದಂತಾಯಿತಲ್ಲಾ! ನನ್ನ ಪ್ರಜೆಗಳಿರ! ನನ್ನ ಬಂಧುಗಳಿರ! ನಾವು ಹೆಣ್ಣು ಕುರಿಗಳಂತೆ ಸುಮ್ಮನಿದ್ದರೆ ಪಲಾಯನಮಾಡುವ ಕತ್ತೆ ಕಿರು ಬನು ಮೇಲೆ ಬೀಳಲು ಮುಂದೆ ಹೆಜ್ಜೆಯನ್ನಿಡುವುದು. ನಿಮ್ಮ ಈ ದೇಶವು ಶತ್ರುಗಳ ಪಾಲಾಗುವುದು. ನಿಮ್ಮ ಮಕ್ಕಳುವರಿಗಳು ಅವರ ದಾಸರಾಗುವರು; ನಿಮ್ಮ ಹೆಂಡತಿಯರು ತಂಗಿಯರು, ಅವರ ಮನೆಯ ತೊತ್ತುಗಳಾಗುವರು. ಇದಕ್ಕಿಂತಲೂ ಹೀನವಾದ ಆ ಧೋಗತಿಯುಂಟ? ಯಾರು ನಮ್ಮ ಸನಾತನ ಧರ್ಮದ ವಿಗ್ರಹಗಳನ್ನು ಹದಹತಿಯಿ೦ಗ ಚೂರ್ಣ ಮಾಡುವರೋ, ಯಾರು ನನ್ನ ಬೆನ್ನ ಮೇಲೆ ಕುಳಿತುಕೊಂಡು ನಿರಂಕುಶರಾಗಿ ಇಲ್ಲಿ ಆಳುವರೋ, ಯಾರು ನಮ್ಮ ಕಳತ್ರ ಪುತ್ರಿಯರ ಪಾತಿವ್ರತ್ಯವನ್ನು ಸೂರೆ ಗೊಳ್ಳುವರೋ ಆ ಮುಸಲ್ಮಾನರು, ಆ ಮಲಿನ ಮೇಚ್ಛರು, ಆ ಮತಾಂಧ ತುರಷ್ಕರು ನಮ್ಮ ಪುರದ್ವಾರದ ಬಳಿಯಲ್ಲಿ ಇಳಿದಿರುವರಂತೆ. ಭಾರತ ಭೂಮಿಯಲ್ಲಿ ಇನ್ನೂ ವೀರತ್ವವು ಇದ್ದರೆ ಅದು ಈಗ ಚಿಗುರಲಿ! ಬಾಪ್ಪಾ ರಾಯನ ಪವಿತ್ರ ರಕ್ತವು ನಿಮ್ಮ ಧಮನಿಯಲ್ಲಿ ಹರಿಯುವುದು ನಿಜವಾದರೆ ಅದರ ದೃಷ್ಟಾಂತವು ಈಗ ತೋರಲಿ! ನೀವು ವೀರಶಿರೋಮಣಿಗಳಾದ ರಾಜ ಪುತ್ರರ ಸಂತತಿಯವರಾಗಿದ್ದರೆ ಕತ್ತೆ ಕಿರುಬಗಳು ತಡೆಗಟ್ಟಿದ್ದ ಈ ಅನಾಥ ಗೋವನ್ನು ರಕ್ಷಿಸಿರಿ! ಗೋಹತ್ಯಕ್ಕೆ ಅವರು ಹೇಸುವವರಲ್ಲ. ಆದರೆ ಅವರು ನನ್ನ ಯರ್ಥಾಧ ಸ್ಥಿತಿಯನ್ನು ಕಂಡು ಹಿಡಿಯಲಿಲ್ಲ. ಈ ಗೋವೇ ಅವರಿಗೆ ವ್ಯಾ ಘಿಯಾಗಿ ಪರಿಣಮಿಸುವುದೆಂದು ತಿಳಿದುಕೊಳ್ಳಿರಿ! ದುರ್ಗಾ ನಮ್ಮೆಲ್ಲರಿಗೆ ಸಹಾಯಕಳಾಗು! ದುರ್ಗಾ! ನಮ್ಮ ಶತ್ರುಗಳನ್ನು ಹಾರಿಸಿಬಿಡುವದಕ್ಕೆ ನಮ್ಮ ಹೃದಯದಲ್ಲಿ ಉತ್ಕಟಶಕ್ತಿಯನ್ನು ತುಂಬಿಸು!” ದುರ್ಗಾವತಿಯು ಈ ಉತ್ತೇಜಿತ ವಾಕ್ಕುಗಳನ್ನು ಕೇಳಿ ನಗರದ ರಾಜಪುತ್ರರೆಲ್ಲರು ರಕ್ತವರ್ಣ ವಸನವನ್ನು ಉಟ್ಟುಕೊಂಡು ಯುದ್ಧಕ್ಕೆ ಸಿದ್ದರಾಗಿ ಬಂದರು. ಎಂಟು ಸಾವಿರ ಸಸಾರರೂ ಎಂಟು ಸಾವಿರ ಸೈನಿಕರೂ ಸ್ವದೇಶವನ್ನು ರಕ್ಷಿಸುವುದಕ್ಕೆ ಮುಂದಾದರು. ಈ ಸೈನ್ಯಕ್ಕೆ ದುರ್ಗಾವತಿ ತಾನೇ ಅಗ್ರೇಸರಳಾದಳು. ಲೋಹಕವಚವನ್ನು ತೊಟ್ಟುಕೊಂಡು ಶಸ್ತ್ರಧಾರಿಣಿಯಾಗಿ, ದುರ್ಗಾವತಿಯು ಕುದುರೆಯನ್ನು ಹತ್ತಿ ಸೈನ್ಯವನ್ನು ನಡೆಯಿಸಿದಳು. ಯುದ್ಧವು ಪ್ರಾರಂಭ
-
8
-
ವಾಯಿತು. ದುರ್ಗಾವತಿಯು ಪ್ರಾಣದ ಮೇಲೆ ಆಶೆಯನ್ನಿಡದೆ, ಶತ್ರುಸೈನ್ಯ ವನ್ನು ಭೇದಿಸಿಕೊಂಡು ಹೋದಳು. ಅವಳ ಭಲ್ಲೆಯ ಪೆಟ್ಟಗೆ ಶತ್ರುಗಳು ಚೂರ್ಣವಾಗಿ ಹೋದರು. ಹಿಂದಿರುಗುವಾಗ ದುರ್ಗಾವತಿಯು ಶತ್ರುವಿನ ವ್ಯೂಹದಲ್ಲಿ ಸಿಕ್ಕಿ ಬಿದ್ದಳು. ಅವಳ ಭುಜದಿಂದ ರಕ್ತಪ್ರವಾಹವು ಹರಿಯು ತಿತ್ತು. ಅವಳನ್ನು ರಕ್ಷಿಸುವುದಕ್ಕೆ ರಾಜಪುತ್ರರು ತಂಡತಂಡವಾಗಿ ಹೋಗಿ ರಣರಂಗದಲ್ಲಿ ಮಲಗಿದರು. ಕೊನೆಗೆ ರಣಮತ್ತೆಯಾದ ಸಾಕ್ಷಾತ್ “ದುರ್ಗಾವತಿ”ಯನ್ನು ರಾಜಪುತ್ರರ ಪಾಳೆಯಕ್ಕೆ ಸುರಕ್ಷಿತವಾಗಿ ತಂದರು. ದೂರದಿಂದ ಇದನ್ನೆಲ್ಲಾ ನೋಡುತ್ತಿದ್ದ ಅಸೋಫ್ ಖಾನನು ಆಶ್ಚರ್ಯದಿಂದ ಭ್ರಾಂತಿಗೊಂಡನು. ಈ ಭ್ರಾಂತಿಯೇ ಪಲಾಯನವಾಗಿ ಪರಿಣಮಿಸಿತು. ಹತಾಶನಾದ ಅಸೋಫ್ ಖಾನನು ಅಳಿದುಳಿದ ಸೇನೆಯನ್ನು ಕೂಡಿಸಿ ಅಪ ಮಾನವನ್ನೂ ಜೀವವನ್ನೂ ಕಟ್ಟಿಕೊಂಡು, ಮಾಳವ ದೇಶಕ್ಕೆ ಜಾರಿಬಿಟ್ಟನು.
ನೀಚನಾದ ಅಸೋಫ್‌ಖಾನನು ಈ ಅಪಜಯದಿಂದಲೂ ಅಪಮಾನ ದಿ೦ದಲೂ ಇನ್ನೂ ಕೆರಳಿದ೦ತಾದನು. ಗಢಾಮಂಡಲವನ್ನು ಭೂಸಮವಾಡ ಬೇಕೆಂದು ಅವನು 18 ತಿಂಗಳುಗಳ ಮೇಲೆ ಮಹಾ ಸೈನ್ಯವನ್ನು ಜೋಡಿಸಿ ಕೊಂಡು ಬಂದನು. ಆದರೂ ಗಢಾಮಂಡಲಕ್ಕೆ ರಕ್ಷಕರು ಇಲ್ಲದೆ ಇರಲಿಲ್ಲ. ಈ ಸಲವೂ ಅಸೋಫ್‌ಖಾನನು ಅಪಜಯವನ್ನು ತಾಳಲಾರದೆ ಓಡಿ ಹೋದನು. ಯುದ್ಧದ ಮುಖಾಂತರವಾಗಿ ತನ್ನ ಮನೋರಥವು ಸಿದ್ಧಿಸದೆ ಇದ್ದುದರಿಂದ, ಅಧಮಾಧವನಾದ ಅಸೋಫ್ ಖಾನನು ಕಸಟೋಪಾಯ ಗಳನ್ನು ಮಾಡುವುದಕ್ಕೆ ಕೈ ಚಾಚಿದನು. ದುರ್ಗಾವತಿಯ ರಾಜ್ಯಾಧಿಕಾರದಲ್ಲಿ ಪ್ರಮುಖರಾದ ಸರದಾರಲ್ಲಿ ಭೇದವುಂಟಾಗುವಂತೆಯೂ ಅವಳ ಆಪ್ತರು ಅವಳಿಂದ ಸಡಿಲಿಹೋಗುವಂತೆಯೂ ಗೂಢಚಾರದಿಂದ ಒಳಸಂಚು ನಡೆ ಯಿಸಿದನು. ಈ ಕುಹಕದಿಂದ ರಾಜ್ಯದಲ್ಲಿ ಅನೇಕ ಅನಿಷ್ಟಗಳು ಮೊಳೆತುವು. ದುರ್ಗಾವತಿಯು ಈಗ ಯಥಾರ್ಥವಾಗಿ ಅಬಲೆಯಾದಳು. ಆದರೂ ತನ್ನ ದೇಹದಲ್ಲಿ ಪ್ರಾಣವಾಯುವು ಸಂಚರಿಸುವ ವೆರೆಗೆ ಮೊಗಲರು ತನ್ನ ರಾಜ್ಯ ದಲ್ಲಿ ಕಾಲಿಡದ ಹಾಗೆ ಮಾಡುವೆನೆಂದು ವೀರರಾಜ್ಜಿಯು ಶಪಥ ಕಟ್ಟಿದಳು. ಅಷ್ಟರಲ್ಲಿ ಅಸೋಫ್ ಖಾನನು ಮೂರನೆಯ ಸಲ ದಂಡಿನೊಡನೆ ಬಂದನು. ದುರ್ಗಾವತಿ ಇದ್ದಷ್ಟು ಸೇನೆಯನ್ನು ಒತ್ತರಿಸಿ ಕೊಂಡು ಮುಂದರಿಸಿದಳು,
-
9 |

ಈ ಕಾಲದಲ್ಲಿ ಅವಳ ಹದಿನಾಲ್ಕು ವರ್ಷ ವಯಸ್ಸಿನ ಬಾಲಕನು ಆಯುಧ ಪಾಣಿಯಾಗಿ ರಣಸನ್ನದ್ದನಾದನು. ಯುದ್ಧವು ಘೋರವಾಗಿ ನಡೆಯಿತು. ವೀರೇಂದ್ರನು ಉನ್ಮತ್ತನಂತೆ ಶತ್ರುಗಳ ಮೇಲೆ ಬಿದ್ದು ಕಾಳಗವಾಡಿದನು. ಕೊನೆಗೆ ಗಾಯಗೊಂಡು ಖಡ್ಡ ಹಸ್ತನಾಗಿ ರಣರಂಗದಲ್ಲಿ ಮಲಗಿದನು; ಮಲಗಿ ದವನ, ಮಳಲಿಲ್ಲ. ಮರಿಯನ್ನು ಕಳೆದ ವ್ಯಾಪ್ತಿಯಂತೆ ದುರ್ಗಾವತಿ ಆವೇಶಗೊಂಡು ಶತ್ರುಗಳ ಮೇಲೆ ಬೀಳಲು ಹೊರಟಳು. “ಮರಣಕರವಾದ ಏಟನ್ನು ಹೊಂದಿದ ಬಾಲಕನನ್ನು ಕರೆದುಕೊಂಡು ಸ್ವಾಮಿನಿ ಶಿಬಿರಕ್ಕೆ ತೆರಳ ಬಾರದೆ? ನಮ್ಮಂತಹ ವೀರರಿರಲು ಯುದ್ದದ ಗೊಡವೆ ತಮಗೇಕೆ?” ಎಂದು ರಣರಂಗದಲ್ಲಿ ಸ್ವಾಮಿಭಕ್ತನಾದ ರಾಜಪುತ್ರನೊಬ್ಬನು ಕೇಳಿದನು. ಅದಕ್ಕೆ ದುರ್ಗಾವತಿಯು ಗಂಭೀರ ಸ್ವರದಿಂದ “ನಾನು ಹಿಂತಿರುಗುವೆನೆಂಬ ಸುದ್ದಿ ತಿಳಿದರೆ, ಸೈನ್ಯವೆಲ್ಲವೂ ಹಿಮ್ಮೆಟ್ಟುವುದು, ವೀರಕುಮಾರನು ರಣರಂಗದಲ್ಲಿ ಮಡಿದು ಕ್ಷತ್ರಿಯ ಸ್ವರ್ಗವನ್ನು ಏರಿದನೆಂದರೆ ನನಗೆ ಸಂತೋಷವಲ್ಲವೇ? ಯುದ್ಧ ತೀರಿದೊಡನೆಯೇ ನನ್ನ ಪ್ರಿಯ ಪುತ್ರನನ್ನು ಪರಲೋಕದಲ್ಲಿ ನಾನು ಸೇರಬೇಕೆಂದಿರುವೆನು” ಎಂದು ಹೇಳಿದಳು. ದುರ್ಗಾವತಿ! ನೀನು ಧನ್ಯ ! ನೀನು ಯುದ್ಧದಲ್ಲಿ ಸೋತರೂ ಇನ್ನು ಗೆದ್ದೆ! ಶತ್ರುಗಳ ಪರಂಪರೆಯ ಸಾಲು ಗಳಿ೦ದ ದುರ್ಗಾವತಿಯ ಸೇನೆ ಪುಡಿಪುಡಿಯಾಯಿತು. ಒಂದು ಬಾಣವು ಅವಳ ಕಣ್ಣನ್ನು ಚುಚ್ಚಿತ; ಮತ್ತೊಂದು ಬಾಣವು ಅವಳ ಎದೆಯನ್ನು ನಾಟಿತು. ಬಾಣಗಳನ್ನು ಕಿತ್ತು ತೆಗೆದರೂ ಅವಳು ರಕ್ತಸ್ರಾವದಿಂದ ಮೂರ್ಛ ಹೋಗಿ, ವಾಹನದ ಮೇಲೆ ಒರಗಿದಳು. ಅವಳು ಕುಳಿತಿದ್ದ ಆನೆಯನ್ನು ಯೋಧನೊಬ್ಬನು ಶಿಬಿರಕ್ಕೆ ಹಿಂತಿರುಗಿಸಲಿಕ್ಕೆ ಪ್ರಯತ್ನಿಸಿದನು. ಕೂಡಲೇ ಧೀರ ಯುವತಿಯು ಮೂರ್ಛ ತಿಳಿದು ಎದ್ದು, ಮುಗುಳಗು ನಗಾಡಿದಳು, “ನನ್ನನ್ನು ಬದುಕಿಸಲು ಎಣಿಸುವೆಯಾ? ನನ್ನನ್ನು ಶಿಬಿರಕ್ಕೆ ಒಯ್ದರೆ ನನಗೆ ಮುಂದಿನ ಮರಣವನ್ನು ತಪ್ಪಿಸಬಹುದೇ? ಅದರ ಬದ ಲಾಗಿ ಕೈಯಲ್ಲಿದ್ದ ಶಸ್ತ್ರದಿಂದ ನನ್ನ ಪ್ರಾಣವನ್ನು ದೇಹದಿಂದ ಉಗಿದು ಬಿಡು ಎಂದು ಅಸ್ಪುಟಸ್ವರದಿಂದ ಹೇಳಿದಳು. ಇಂತಹ ಜನನಿಯನ್ನು ಕೊಲ್ಲಲು ಯಾರು ತಾನೆ ಕೈಮಾಡುವರು? ಸುತ್ತಲಿರುವವರೆಲ್ಲರೂ ಮರುಗಿ ದರು. ಕೂಡಲೇ ದುರ್ಗಾವತಿಯು ನಗಾಡುತ್ತ ತನ್ನ ಖಡ್ಗಕ್ಕೆ ತನ್ನ ಉದರ ವನ್ನು ಒರೆಯಾಗಿ ಮಾಡಿಬಿಟ್ಟಳು.
- 10 - ಯುದ್ಧವು ಸಮಾಪ್ತವಾಯಿತು. ಯುದ್ಧದ ನಾಯಕಿಯೇ ರಣ ತಲದಲ್ಲಿ ಒರಗಿದ ಬಳಿಕ ಯುದ್ಧವನ್ನು ನಡೆಯಿಸುವವರು ಯಾರು? ರಾಜ್ಯವು ಅಸೋಫ್‌ಖಾನನ ವಶವಾಯಿತು. ಆದರೆ ಕ್ಷಾತ್ರಧರ್ಮಪರಾ ಯಣೆಯಾದ ಆ ವೀರಶಿರೋಮಣಿಯ ಪವಿತ್ರ ದೇಹವು ಶತ್ರುಗಳ ಅಪವಿತ್ರ ಹಸ್ತದಿಂದ ಮಲಿನವಾಗಲಿಲ್ಲ. ಅನುಚರರಲ್ಲಿ ಕೆಲವರು ಕೂಡಲೇ ಅಗ್ನಿ ಕುಂಡವನ್ನು ಬೆಳಗಿಸಿ, ಶಾಸ್ಪೋಕ್ತ ನಿಧಿಯಿಂದ ದುರ್ಗಾವತಿಯ ಸಂಸ್ಕಾರ ಗಳನ್ನು ನಡೆಯಿಸಿದರು.
ದುರ್ಗಾವತಿಯು ಈ ನಶ್ವರ ಶರೀರವನ್ನು ಬಿಟ್ಟು ಅವಿನಶ್ವರ ಕೀರ್ತಿ ಯನ್ನು ಪಡೆದಳು. ಈ ವೀರ ಯುವತಿಯನ್ನು ಕುರಿತು ಕರ್ನಲ್ ಸೀಮೆನ್ ನಾಹೇಬರು ಹೀಗೆ ಬರೆದಿರುವರು:- “ರಣ ಶೂರ ರಾಣಿಯಾದ ದುರ್ಗಾವತಿಯ ಸ್ಮಾರಕವು ಅದೇ ಪರ್ವತಪ್ರದೇಶಮಧ್ಯದಲ್ಲಿ ಕಟ್ಟಲ್ಪ ಟಿದೆ. ಅಲ್ಲಿ ಎರಡು ಪಾಷಾಣಸ್ತಂಭಗಳು ನೆಟ್ಟಗೆ ನಿಲ್ಲಿಸಿದ್ದು, ಅವುಗಳು ಆ, ಯುದ್ಧಭೂಮಿಯ ಪ್ರೇಕ್ಷಕರ ಮನಸ್ಸಿನಲ್ಲಿ ಮೂರ್ತಿವಂತವಾದ ದೃಶ್ಯವನ್ನು ಉತ್ಪನ್ನ ಮಾಡುವುವು. ಈ ಗಿರಿಶಿಖರದಲ್ಲಿ ರಾತ್ರಿ ಸಮಯದಲ್ಲಿ ಅತಿ ಭಯಂಕರವಾದ ರಣಘೋಷವು ಆಗುತ್ತದೆಂದು ಹೇಳುವರು. ಈ ನಿರ್ಜನವಾದ ಮತ್ತು ರಮಣೀಯವಾದ ಪ್ರದೇಶ ಮಧ್ಯದಲ್ಲಿ ಹೋಗುವ ಪ್ರವಾಸಿಜನರು ಅತ್ಯಾನಂದದಿಂದ ಈ ಸ್ಥಳದಲ್ಲಿ ನಡೆಯುವರು. ಈ ರಾಣಿಯ ಸಮಾಧಿಯ ದರ್ಶನವನ್ನು ಪ್ರೇಮಪೂರ್ವಕವಾಗಿ ಸ್ವೀಕರಿಸುವರು; ಅವಳ ಪರಾಕ್ರಮ ಗುಣಗಳಿಂದ ಬೆರಗಾಗಿ ಸ್ವಾನಂದಚಿತ್ರದಿಂದ ಅವಳನ್ನು ಪೂಜಿಸುವರು. ಈ ಪ್ರದೇಶಮಧ್ಯದಲ್ಲಿ ಹೊಳೆಹೊಳೆವ ಕಂಚಿನ ತುಂಡು ಗಳು ಹೇರಳವಾಗಿ ಸಿಕ್ಕುತ್ತವೆ. ಅವನ್ನು ತೆಗೆದುಕೊಂಡು ಆ ಜನರು ಅಲ್ಲಿ ಸಮರ್ಪಿಸುವರು. ತಮ್ಮ ಪ್ರಜಾಭಕ್ತಿಗನುಸಾರವಾಗಿ ನಾನು ಅದನ್ನು ನೋಡುತ್ತಲೇ ಮಹಾರಾಣಿ ದುರ್ಗಾವತಿಯ ದಿವ್ಯಗುಣದ ಅಭಿನಂದನಾರ್ಥವಾಗಿ ಒಂದು ತುಂಡನ್ನು ಅರ್ಪಣಮಾಡಿದೆನು.” ಅಲೌಕಿಕ ಸೌಂದರ್ಯವನ್ನು ಯಾರು ತಾನೇ ಪೂಜಿಸದೇ ಇರುವರು?
22-31===================================
-
11
-
ವಿ ರ ಮ ತಿ . ಮಧ್ಯಾಹ್ನ ಸೂರ್ಯನು ಆಕಾಶವಕ್ಷವನ್ನು ಏರಿದ್ದನು. ಅವನ ಉಷ್ಣ ವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತ ಮಾಡುತ್ತಲಿ ದ್ದು ವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿ೦ದ ಮೆಲ್ಯಾಡುತ್ತಿದ್ದು ವ; ಆಗಾಗ ಬಾಲಗಳನ್ನು ಬೀಸುತ್ತ ಬೆನ್ನ ಮೇಲಿನ ನೊಳಗಳನ್ನು ಝಾಡಿಸುತ್ತಿದ್ದು ವು. ಹಕ್ಕಿಗಳು ಮರದ ಎಲೆಗಳಲ್ಲಿ ಹುದುಗಿಕೊಂಡು, ಸುಖವಾಗಿ ನಿದ್ದೆ ಹೋಗುತ್ತಿದ್ದು ವು. ಕಾಗೆಯು ಅತ್ತಿತ್ತ ಅರಚುತ್ತ ಮರದಿಂದ ಮರಕ್ಕೆ ಹಾರುತ್ತಲಿತ್ತು. ಗಿಡುಗನು ಗಗನಮಧ್ಯದಲ್ಲಿ ಮಂಡಳಿಸಿ, ನೆಲದ ಮೇಲೆ ಸುಳಿಯುವ ಕೊಳೆಯನ್ನು ತೀಕ್ಷದೃಷ್ಟಿಯಿಂದ ನೋಡಿ, ಫಕ್ಕನೆ ಕೆಳಕ್ಕೆ ಹಾರಿಬಂದು, ಹತಾಶನಾಗಿ ಸವಿಾಪದಲ್ಲಿದ್ದ ಉನ್ನತ ವಾದ ಮಂದಿರದ ಸೂರುಗಳಲ್ಲಿ ಕುಳಿತುಕೊಳ್ಳುತಿತ್ತು. ದೇವಗಿರಿಯ ಅರ ಮನೆಯ ಬಳಿಯಲ್ಲಿ ಕಾವಲುಗಾರರು ಬಹಳ ಎಚ್ಚರಿಕೆಯಿಂದ ಸಹರೇ ಮಾಡುತ್ತಿದ್ದರು. ಅರಮನೆಯಲ್ಲಿ ಜನರು ಕಾರ್ಯಗೌರವದಿಂದ ಹೋಗುತ್ತ ಬರುತ್ತ, ಅಲ್ಲಲ್ಲಿ ಗುಂಪು ಕೂಡಿ ನಿಂತು, ತಮ್ಮೊಳಗೆನೇ ಏನನ್ನೊ ವಿಚಾರ ಮಾಡುತ್ತಿದ್ದರು. ರಾಜಮಂದಿರದ ಕಿರುಬಾಗಿಲನಿಂದ ಒಂದು ಪಲ್ಲಕಿಯು ಹೊರಕ್ಕೆ ಬಂದಿತು. ಪ್ರಜೆಗಳೆಲ್ಲರು ವಿಶೇಷವಾದ ಕಾರ್ಯದಲ್ಲಿ ಮಗ್ನರಾದು ದರಿಂದ, ಪಲ್ಲಕ್ಕಿಯನ್ನು ಯಾರೂ ಲಕ್ಷ್ಮಿ ಸಲಿಲ್ಲ. ಅಂದಣವು ತಪ್ತವಾದ ರಾಜಮಾರ್ಗವನ್ನು ಬಿಟ್ಟು, ನಿರ್ಜನವಾದ ಶೀತಲವಾದ ರಹಸ್ಯ ಮಾರ್ಗವನ್ನು ಹಿಡಿದುಕೊಂಡು ಹೋಯಿತು. ಪಲ್ಲಕ್ಕಿಯು ಕೋಟೆಯನ್ನು ಸವಿಾಪಿಸು ತಲೇ ಪಹರೆಯವನು ಅದನ್ನು ನೋಡಿ, ಖಡ್ಗವನ್ನು ಎತ್ತಿ ಹಿಡಿದು, ಅದನ್ನು ಅಡ್ಡಿಮಾಡದೆ ಹೊರಕ್ಕೆ ಬಿಟ್ಟನು. ಅಂದಣವು ದೇವಗಿರಿಯ ಕೋಟೆಯನ್ನು ಅತಿಕ್ರಮಿಸಿ, ಅದರ ಬಹಿರ್ಭಾಗದಲ್ಲಿದ್ದ ಅರಣ್ಯವನ್ನು ಸೇರಿತು. ಕೊನೆಗೆ ವಿಜನವಾದ ಭೀಕರವಾದ ಅರಣ್ಯ ಮಧ್ಯದಲ್ಲಿದ್ದ ಕಾಳಿಕಾ ದೇವಸ್ಥಾನದ ಬಳಿ ಯಲ್ಲಿ ಆಳುಗಳು ಪಲ್ಲಕ್ಕಿಯನ್ನು ಇಟ್ಟು ಹೋದರು. ಕೂಡಲೇ ರಮಣಿಯ ರಿಬ್ಬರು ಅಂದಣದಿಂದ ಕೆಳಕ್ಕೆ ಇಳಿದು, ಕಾಲ್ನಡೆಯಾಗಿ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಸಿದ್ದರಾಗಿ, ತಮ್ಮ ವಸ್ತ್ರಾಲಂಕಾರಗಳನ್ನು ಸರಿಗೊಳಿಸು ವುದಕ್ಕೆ ಒಂದು ಮುಹೂರ್ತ ಅಲ್ಲಿಯೇ ತಡೆದರು.
2
- 12 - ಇಬ್ಬರೂ ಸಮವಯಸ್ಯೆಯರು. ಇಬ್ಬರೂ ಅಸಮಾನ ಸೌಂದರ್ಯ ಶಾಲಿನಿಯರಾಗಿದ್ದರೂ, ಒಬ್ಬಳ ರೂಪಲಾವಣ್ಯಗಳು ಮತ್ತೊಬ್ಬಳ ಅಂದ ಚೆಂದವನ್ನು ಅತಿಕ್ರಮಿಸಿದ್ದು ವು. ಭಾರತೇಯ ಕವಿಗಳು ಸ್ತ್ರೀಯನ್ನು 4 ಚಂದ್ರಮುಖಿ' (ಕಮಲವದನೆ' ಎಂದು ವರ್ಣಿಸಿರುವರು. ಈ ಯುವತಿಯು ಈ ಅಭಿದಾನಕ್ಕೆ ಪಾತ್ರಳಾಗಿರಲಿಲ್ಲ. ಏಕೆಂದರೆ ಇವಳ ಮುಖಮಂಡಲವು ನೈಸರ್ಗಿಕ ಚಂದ್ರನಂತಾಗಲೀ ಕಮಲದಂತಾಗಲೀ ಶೋಭಿಸಿರಲಿಲ್ಲ. ವರ್ತುಲವಾದ ಪೂರ್ಣಚಂದ್ರನು ಸ್ವಲ್ಪ ದೀರ್ಘಕಾರವನ್ನು ಧರಿಸಿದರೆ ಎಷ್ಟು ಮಧುರನಾಗಿ ಶೋಧಿಸಬಹುದೋ, ಅಥವಾ ದೀರ್ಘವಾದ ಕಮಲಪತ್ರವು ಸ್ವಲ್ಪ ವೃತ್ತಾಕೃತಿಯನ್ನು ವಹಿಸಿದರೆ ಎಷ್ಟು ರಮ್ಯವಾಗಿ ಉಜ್ವಲಿಸುವುದೋ ಅಷ್ಟೇ ಸೌಂದರ್ಯಮಯವಾಗಿ ಆ ರಮಣಿಯ ಮುಖಮಂಡಲವು ರಂಜಿಸು ತಿತ್ತು. ನಯನೇಂದ್ರಿಯಗಳು ಹರಿಣಲೋಚನದಂತೆ ಕಂಪಿಸುತ್ತಲಿದ್ದು ವು. ಈ ಕಂಪನವು ಅವುಗಳಲ್ಲಿ ಪ್ರವಹಿಸುತ್ತಲಿದ್ದ ಪ್ರೇಮರಸದಿಂದ ಸರಿಯಾಗಿ ವ್ಯಕ್ತವಾಗುತ್ತಿರಲಿಲ್ಲ. ಅದೂ ಅಲ್ಲದೆ ಮುಖದ ಮೇಲೆ ಕ್ಷಾತ್ರತೇಜಸ್ಸು ಸಂಪೂರ್ಣವಾಗಿ ಪ್ರತಿಫಲಿಸುತ್ತಿದ್ದುದರಿಂದ, ' ಭಯದಿಂದ ಉಂಟಾದ ಕಂಪನವು ಎಲ್ಲಿಯೋ ಅದೃಶ್ಯವಾಗಿತ್ತು. ಸೂರ್ಯನ ಉಷ್ಣದಿಂದಲೋ ಅಥವಾ ಮಾರ್ಗದ ಆಯಾಸದಿಂದಲೂ ಪ್ರಾಪ್ತವಾದ ಸೈದಬಿಂದುಗಳನ್ನು ಧರಿಸಿದ ಆ ಮುಖವು ಹಿಮಜಲದಿಂದ ಮಾನವಾದ ಹೇಮಂತಋತುವಿನ ಕಮಲದಂತೆ ಕನಿಕರವನ್ನು ಉಂಟುಮಾಡುತ್ತಲಿತ್ತು. ಮಸ್ತಕದ ಹಿಂದು ಗಡೆಯಲ್ಲಿದ್ದ ವೇಣಿಯು ಶಿರವನ್ನು ಏರಿದ ಚೀನಾಂಬರದಿಂದ ಆಚ್ಛಾದಿತ ವಾಗಿದ್ದುದರಿಂದ, ಅವಳ ಸೃಷ್ಟದಲ್ಲಿಯೇ ಸ್ವತಂತ್ರವಾಗಿ ಕ್ರೀಡಿಸುತ್ತಲಿತ್ತು. ಹಸುರು ರೇಶ್ಮಿಯ ಸೆರಗನ್ನು ದಕ್ಷಿಣ ಬಾಹುವಿನ ಕೆಳಗಡೆಯಿಂದ ಸೆಳೆದು ಕೊಂಡು, ಉಡಿಯಲ್ಲಿ ಬಿಗಿದುದರಿಂದ ವರಂಗವು ಇನ್ನೂ ಉನ್ನತ ವಾಗಿಯೂ ಉಜ್ವಲವಾಗಿಯೂ ತೋರುತ್ತಲಿತ್ತು. ಮನ್ಮಥವೈಜಯಂತಿ ಯಂತೆ ವಾಯುವಿನಲ್ಲಿ ಮೆಲ್ಲಮೆಲ್ಲನೆ ತೇಲುತ್ತಿರುವ ಹಸುರಾದ ದುಕೂಲವು ಅವಳ ಅಂಗಕಾಂತಿಯನ್ನು ಸಂಪೂರ್ಣವಾಗಿ ಮುಚ್ಚಿದರೂ, ಅಂಗ ಛಾಯೆಯು ವಸ್ತ್ರದ ಹಿ೦ದುಗಡೆಯಿಂದ ನೋಟಕರ ಮನಸ್ಸನ್ನು ಆಕರ್ಷಿಸು ವಂತಿತ್ತು. ದೇಹವರ್ಣವು ಹರಿದ್ರ; ಸ್ವಲ್ಪ ಹಳದಿ; ಸುವರ್ಣಕಮಲದಂತೆ
-
13
--
ಹರಿದ್ರವಾಗಿರಲಿಲ್ಲ; ಹೊಂಗೇದಗೆಯಂತೆ ಹಳದಿಯಾಗಿರಲಿಲ್ಲ. ಹಿಮದಿಂದ ಆದ್ರ್ರವಾದ ಸುವರ್ಣಕಮಲವು ಹರಿತಪತ್ರದ ಛಾಯೆಯಿಂದ ಯಾವ ಕಾಂತಿ ಯನ್ನು ಧರಿಸುವುದೋ, ಚಂದ್ರಕಾಂತಿಯಿಂದ ನನೆದ ಹೊಂಗೇದಗೆಯು ಹಸುರೆಲೆಯ ಮರೆಯಲ್ಲಿ ಯಾವ ಬಣ್ಣದಿಂದ ಶೋಭಿಸುವುದೋ, ಆ ಕಾಂತಿಯೂ ಆ ವರ್ಣವೂ ಈ ಯುವತಿಯ ಪ್ರಫುಲ್ಲಿತ ದೇಹದಲ್ಲಿ ಸಮ್ಮಿಳಿತವಾಗಿದ್ದು ವು.
ರಮಣಿಯರಿಬ್ಬರು ದೇವಸ್ಥಾನವನ್ನು ಪ್ರವೇಶಿಸಿದರು, ಕಾಳಿಕಾ ಮೂರ್ತಿಯ ಸಮ್ಮುಖದಲ್ಲಿ ಬದ್ದ ಹಸ್ತದಿಂದ ಇಬ್ಬರೂ ಕಣ್ಮುಚ್ಚಿ ನಿಮಿಷ ಮಾತ್ರ ನಿಂತರು. ಬಳಿಕ ಕರಾಳವಾದ ಚಂಡಿಕಾ ವಿಗ್ರಹವನ್ನು ಬಲವಂದು ದೇವಿಯ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿದರು. ಪುನಃ ಎದ್ದು ನಿಂತು “ತಾಯೇ! ಚಂಡಿಕೇ! ನಮಗೆ ಬಂದಿದ್ದ ಆಪತ್ತನ್ನು ಪರಿಹರಿಸು! ಯುದ್ಧದಲ್ಲಿ ನಮ್ಮ ಪತಿಗಳಿಗೆ ಸಹಾಯಕಳಾಗು! ಅವರ ಹಸ್ತದಿಂದಲೇ ನಮ್ಮ ವೈರಿ ಗಳನ್ನು ಸಂಹರಿಸು!” ಎಂದು ಪ್ರಾರ್ಥಿಸಿದರು. ಪುನಃ ದೇವಗಿರಿ ದುರ್ಗದ ಅಧಿಷ್ಠಾತ್ರಿಯಾದ ದುರ್ಗಾಂಬಿಕೆಯನ್ನು ಪ್ರದಕ್ಷಿಣೆ ಮಾಡಿ, ಇಬ್ಬರೂ ಪಲ್ಲಕ್ಕಿ ಯನ್ನು ಹತ್ತು ವಷ್ಟರಲ್ಲಿ ಕುದುರೆಯ ಖುರಪುಟ ಧ್ವನಿಯು ಕೇಳಿಸಿದುದರಿಂದ, ಇಬ್ಬರೂ ಸ್ವಲ್ಪ ಸಂಭ್ರಾಂತರಾದಂತೆ ಅಲ್ಲಿಯೇ ತಡೆದರು. ಕೂಡಲೇ ಒಬ್ಬ ಅಶ್ವಾರೋಹಿಯು ಕುದುರೆಯಿಂದ ದುಮಿಕಿ, ಯುವತಿಯರ ಸವಿಾಪಕ್ಕೆ ಬರುತ್ತಿದ್ದನು. ಯುವತಿಯರು ಇವನನ್ನು ದೃಷ್ಟಿಸುತ್ತಲೇ ಆನಂದದಿಂದಲೂ ಆಶ್ಚರ್ಯದಿಂದಲೂ ಚಕಿತರಾಗಿ ಹೋದರು
ಯುವಕ:-“ವೀರಮತಿ! ನೀನು ಗೌರಿಯೊಡನೆ ಇಲ್ಲಿ ಏಕೆ ಬ೦ದಿ?”
ವೀರಮತಿಯು ಯುವಕನ ಕೈಯನ್ನು ತನ್ನ ಕೈಯಲ್ಲಿ ತೆಗೆದು ಕೊಂಡು, “ನಾವು ಇಲ್ಲಿ ಬಂದೆನೆಂದು ನಿನಗೆ ಹೇಗೆ ತಾನೇ ತಿಳಿಯಿತು?” ಎಂದು ಪ್ರಶ್ನಿಸಿದಳು.
ಯುವಕ:- “ಕಾಜಮಂದಿರದಲ್ಲಿ ನೀವು ಇಲ್ಲದೆ ಇದ್ದುದನ್ನು ನೋಡಿ, ನಾನು ಕಾತರದಿಂದ ನಿಮ್ಮನ್ನು ಹುಡುಕಿ ಬಂದನು. ಕೋಟೆಯ ಪಹರೇ ಯವರು ನೀವು ಕಾಳಿಕಾ ಪೂಜೆಗೆ ಹೋಗಿರುವಿರಿ ಎಂದು ಹೇಳಿದನು. ನೀವು ಇಲ್ಲಿ ಏಕೆ ಬಂದಿರಿ?”
-
14
-
ನೀರಮತಿ:- “ಏಕೆ೦ದು ಇನ್ನೂ ತಿಳಿಯಲಿಲ್ಲವೇ? , ಮುಂದಿನ ಆಪತ್ತನ್ನು ಪರಿಹರಿಸುವಂತೆ ದೇವಿಯನ್ನು ಬೇಡುವುದಕ್ಕೆ
ಯುವಕ:- “ ಅದಕ್ಕೋಸ್ಕರ ನೀವು ಇಷ್ಟು ದೂರ ಬರಬೇಕಿತ್ತೇ? ಶತ್ರುವಿನ ಪಾಳಯದವರು ನಿಮ್ಮನ್ನು ಇಲ್ಲಿ ಎಲ್ಲಾದರೂ ನೋಡಿದರೆ ನಿಮ್ಮ ಗತಿ ಏನಾಗುವುದು?”
ಈ ಮಾತನ್ನು ಕೇಳುತ್ತಲೇ ವೀರಮತಿಯ ಮುಖದಲ್ಲಿ ಒಂದು ಪ್ರಕಾರವಾದ ತೇಜಸ್ಸು ಹೊಳೆಯಿತು. ಕೂಡಲೇ ತನ್ನ ಕಟಭಾಗದಲ್ಲಿ ಅಡ ಗಿಸಿಟ್ಟ ಭರ್ಚಿಯನ್ನು ಇಚೆಗೆ ಸೆಳೆದುಕೊಂಡು, ನೋಡಿದೆಯೇ ಇದನ್ನು ? ಇದರ ಸಹಾಯದಿಂದಲೇ ನಾನು ದಾರಿಯನ್ನು ಬಿಡಿಸಿಕೊಂಡು, ಅರಮನೆಗೆ ಹಿಂದೆರಳುತ್ತಿದ್ದೆನು” ಎಂದು ವೀರಮತಿಯು ಉತ್ತರ ಕೊಟ್ಟಳು.
ಯುವಕ:- “ನೀನು ಕ್ಷತ್ರಿಯ ಕುಮಾರಿ ಎಂದು ಬಲ್ಲೆ. ನೀವೆಲ್ಲರು ನಮ್ಮ ಭುಜಗಳ ನೆರಳಿನಲ್ಲಿರುವಾಗ ಇಷ್ಟು ಆಯಾಸವೇಕೆ?”
- ವೀರಮತಿ:- “ಯುದ್ಧ ಕಾಲದಲ್ಲಿ ಶೌರ್ಯವನ್ನು ತೋರಿಸುವುದು ಪುರುಷಕರ್ತವ್ಯ, ದೇವಪ್ರಾರ್ಥನೆಯನ್ನು ಮಾಡುವುದು ಸ್ವೀಕೃತ್ಯ, ಇಬ್ಬರ ಕಾರ್ಯಗಳೂ ಒಂದೇ ಫಲವನ್ನು ಕೊಡುವುವು.”
ಯುವಕನು ಮತ್ತೆ ಮಾತನಾಡಲಿಲ್ಲ. ಗೌರಿಯು ಈ ಸಂಭಾಷಣೆಯ ಕಾಲದಲ್ಲಿ ಸುಮ್ಮನಿದ್ದು ಕೊನೆಗೆ “ಸಖಿಯೆ! ವೀರಮತಿ! ನಾವು ಇನ್ನೂ ಇಲ್ಲಿ ತಳುವಿದರೆ, ತಂದೆಯು ನಮ್ಮ ಮೇಲೆ ಕೋಪಿಸದೆ ಇರಲಾರನು” ಎಂದಳು.
- ಇಬ್ಬರೂ ಪಲ್ಲಕ್ಕಿಯನ್ನು ಹತ್ತಿ, ಯುವಕನನ್ನು ಕರೆದರು. ಯುವ ಕನು “ನಾನು ಇದೇ ಸಂದರ್ಭದಲ್ಲಿ ಶತ್ರುವಿನ ಸೇನೆಯ ವಿಸ್ತಾರವನ್ನೂ ರಚನೆಯನ್ನೂ ಹೊಂಚಿ ನೋಡಿ ಬರುವೆನು. ನೀವು ಬೇಗನೆ ಮುಂದು ಹೋಗಿರಿ” ಎಂದು ಹೇಳಿ ಕೋಟೆಯ ವರೆಗೆ ಅವರಿಬ್ಬರ ಮೈಗಾವಲಾಗಿ
ಬಂದು, ಅಲ್ಲಿಯೇ ಹಿಂದುಳಿದನು.
ಕಥಾಸೂತ್ರವನ್ನು ಪಾಠಕಮಹಾಶಯರು ಸರಿಯಾಗಿ ಹಿಡಿಯುವಂತೆ ಇಲ್ಲಿ ಕೆಲವು ಪ್ರಸ್ತಾಪಗಳನ್ನು ಹೇಳಬೇಕಾಗುವುದು. ಕ್ರಿ. ಶಕೆಯ ೧೩ನೆಯ ಶತಮಾನದ ಆದಿಯ ವರೆಗೆ ದಕ್ಷಿಣ ಹಿಂದುಸ್ಥಾನದ ಮೇಲೆ ಮುಸಲ್ಮಾನರ ದೃಷ್ಟಿಯು ಬಿದ್ದಿರಲಿಲ್ಲ. ಪಠಾನ ಸುಲ್ತಾನರು ಉತ್ತರ ಹಿಂದುಸ್ಥಾನದಲ್ಲೇ ಸರ್ವಶಕ್ತರಾಗಿದ್ದರಲ್ಲದೆ, ದಕ್ಷಜದಲ್ಲಿನ ಚಿಕ್ಕ ದೊಡ್ಡ
-
15
-
ರಾಜ್ಯಗಳು ಸ್ವಾತಂತ್ರ ಸುಖವನ್ನು ಅನುಭವಿಸುತ್ತಲಿದ್ದು ವು. ಇಂತಹ ಸ್ವತಂತ್ರ ರಾಜ್ಯಗಳಲ್ಲಿ ಭಾವಿ ಮಹಾರಾಷ್ಟ್ರ ಸಾಮ್ರಾಜ್ಯದ ಅಂಕುರ ಸ್ವರೂಪ ವಾದ ಚಿಕ್ಕದೊಂದು ರಾಜ್ಯವಿತ್ತು. ದೇವಗಿರಿ ಎಂಬುದು ಇದರ ರಾಜ ಧಾನಿಯಾಗಿತ್ತು; ರಾಮದೇವ ಎಂಬವನು ರಾಜನಾಗಿದ್ದನು. ಈ ಮರಾಟೆ ರಾಜ್ಯವನ್ನು ಕುರಿತು ಜೀಯದ್ದಿನ ಬಾರ್ನಿ ಎಂಬ ತುರುಹ್ಯ ಇತಿಹಾಸ ಕಾರನು ಹೀಗೆಂದು ಬರೆದಿರುವನು- “ ಈ ಮೊದಲು ಇಲ್ಲಿನ ಜನರು ಮುಸಲ್ಮಾನರನ್ನು ಕುರಿತು ಕೇಳಿರಲಿಲ್ಲ. ಮುಸಲ್ಮಾನ್ ಸೈನ್ಯವು ಇದ ಕ್ಕಿಂತ ಮೊದಲು ಮಹಾರಾಷ್ಟ್ರ ರಾಜ್ಯದಲ್ಲಿ ಪದಾರ್ಪಣ ಮಾಡಿರಲಿಲ್ಲ. ದೇವಗಿರಿ ನಗರವು ಚಿನ್ನ ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳಿಗೆ ತವರು ಮನೆಯಾಗಿತ್ತು. ಈ ವರ್ಣನೆಯು ಆ ರಾಜ್ಯಕ್ಕೆ ಮಾತ್ರವೇ ಸಲ್ಲುತ್ತಿರ ಲಿಲ್ಲ. ವಿದೇಶಿಯರು ಭಾರತಭೂಮಿಯಲ್ಲಿ ಕಾಲಿಡುವ ಮೊದಲು ಹಿಂದು ಸ್ಥಾನದ ಸ್ಥಿತಿಯನ್ನು ಪ್ರತಿ ಒಬ್ಬ ಇತಿಹಾಸಕಾರನು ಇಂತಹ ಮಾತು ಗಳಲ್ಲಿಯೇ ವರ್ಣಿಸಿರುವನು. ಈ ಧನವೇ ವಿದೇಶಿಯರ ಮತ್ಸರದೃಷ್ಟಿಗೆ ಬಿದ್ದುದರಿಂದ, ದಿಲ್ಲಿಯ ಅಂದಿನ ಚಕ್ರವರ್ತಿಯಾದ ಜಲಾಲ್‌ವುದ್ದೀನ್ ಖಿಲ್ಟಿ ಯ ಅಳಿಯನಾದ ಅಲ್ಲಾವುದ್ದೀನ್ ಖಿಲ್ಟಿ ಯು ಮಹಾ ಸೈನ್ಯದೊಡನೆ ಕ್ರಿ. ಶಕೆಯ ೧೨೯೪ರಲ್ಲಿ ದಟ್ಟಣಕ್ಕೆ ದಂಡೆತ್ತಿ ಹೋದನು. ಅಲ್ಲಾವುದ್ದೀನನು ಮಹಾಸೈನ್ಯದೊಡನೆ ದೇವಗಿರಿಯನ್ನು ಎರಡು ಸಲ ಮುತ್ತಿಗೆ ಹಾಕಿ ಹತಾಶ ನಾಗಿ, ಮೂರನೆಯ ಸಲ ಅದರ ಕೋಟೆಯ ಬಾಗಿಲಲ್ಲಿ ಕುಳಿತುಕೊಂಡಿದ್ದು, ಪ್ರಕೃತದಲ್ಲಿ ಜಾರುವಂತಿದ್ದನು.
ರಾಮದೇವ ರಾಜನಿಗೆ ಬಲಗೈಯಂತಿದ್ದು ಯುದ್ಧದಲ್ಲಿಯೂ ರಾಜ್ಯ ವಿಸ್ತರಣದಲ್ಲಿಯೂ ಅವನಿಗೆ ಸಹಾಯ ಮಾಡಿದ್ದ ಸರದಾರನೊಬ್ಬನು ಈ ಮುತ್ತಿಗೆಯ ಕಾಲದಲ್ಲಿ ಮಡಿದು ಹೋದನು. ಈ ಸರದಾರನು ತನ್ನ ಪುತ್ರೀರತ್ನ ವಾದ ವೀರಮತಿಯ ವಿವಾಹಕ್ಕೆ ಎಲ್ಲವನ್ನು ಸಿದ್ಧಪಡಿಸಿದ್ದನು. ವೀರಮತಿಯು ಕಾಳಿಕಾದೇವಸ್ಥಾನದ ಬಳಿಯಲ್ಲಿ ಯಾರೊಡನೆ ಮಾತನಾಡಿ ದಳೊ ಆ ಯುವಕನು ತನ್ನ ಪ್ರಾಣೇಶ್ವರನೆಂದು ಆರಿಸಲ್ಪಟ್ಟಿದ್ದನು. ಕೃಷ್ಣರಾಜನು ತನ್ನ ಅಳಿಯನಾಗುವುದು ವೀರಮತಿಯ ತಂದೆಗೆ ಏನು ಕಾರಣದಿಂದಲೋ ಮೊದಲು ಯೋಗ್ಯವಾಗಿ ತೋರಲಿಲ್ಲ. ಕೊನೆಗೆ ಮಗಳ
6
- 16 - ನಿರ್ಬಂಧದಿಂದ ಅವನು ಸಮ್ಮತಿ ಕೊಟ್ಟನು. ಆದರೆ ಪ್ರಕೃತದ ಅವನ ಅಕಾಲಿಕ ಮರಣದಿಂದ ವೀರಮತಿಯ ಲಗ್ನಕ್ಕೆ ವಿಘ್ನ ಬಂದಿತು. ಈಗ ವೀರಮತಿಯು ತಂದೆಯ ಮರಣಕ್ಕೆ ಪ್ರತಿಕಾರವನ್ನು ಮಾಡಿದ ಹೊರತು, ಲಗ್ನ ಮಂಟಪವನ್ನು ಸೇರುವುದಿಲ್ಲ ಎಂದು ನಿಶ್ಚಯ ಮಾಡಿದಳು. ಅದ ಕೋಸ್ಕರವೇ ಅವಳು ಅರಸನ ಮಗಳಾದ ಗೌರಿಯೊಡನೆ ಕಾಳಿಕಾಪೂಜೆಗೆ
ಹೋಗಿದ್ದಳೆಂದು ಪಾಠಕ ಮಹಾಶಯರು ಈಗ ತಾನೇ ತಿಳಿಯಬಹುದು.
“ಭಾರತಭೂಮಿಯ ಸೌಭಾಗ್ಯ ಭಂಡಾರವನ್ನು ಸೂರೆಗೊಂಡು, ತಮ್ಮ ವಂಶಸ್ಥರ ನಾಮವನ್ನೂ ತಮ್ಮ ಹೆಸರನ್ನೂ ಇತಿಹಾಸಪುಟದಲ್ಲಿ ಕಂಳಂಕಿತ ವಾಗಿ ಮಾಡಿದ ಮುಸಲ್ಮಾನರಲ್ಲಿ ಘಜಿ ಮಹಮ್ಮದ್, ಅಲ್ಲಾವುದ್ದೀನ್ ಖಿಲ್ಲಿ, ತೇಮರಲೇನ್ ಈ ಮೂವರಿಗಿಂತಲೂ ಅಧಮರು ಯಾರೂ ಇಲ್ಲ” ಎಂದು ಒಬ್ಬ ಬಂಗಾಳೆಯ ಚರಿತ್ರಕಾರನ ಹೇಳುವನು. ಈ ಮೂವರು ತಾವು ಕಾಲಿಟ್ಟ ಭೂಮಿಯಲ್ಲಿ ಆರ್ಯಧರ್ಮಾವಲಂಬಿಗಳಾದ ಆಬಾಲ ವೃದ್ದರನ್ನು ಕೊಂದು, ಪವಿತ್ರವಾದ ದೇವಸ್ಥಾನಗಳ ಮುಂದುಗಡೆಯಲ್ಲಿ ಪಶುರಕ್ತವನ್ನು ಬಸಿದು, ಆರಾಧಿತವಾದ ವಿಗ್ರಹಗಳನ್ನು ಮಸೀದಿಯ ಸೋಪಾನಗಳಿಗಾಗಿ ಹಾಸಿ, ನಂದನವನದಂತೆ ಇದ್ದ ಪ್ರದೇಶಗಳನ್ನು ಸ್ಮಶಾನ ದಂತೆ ಮಾಡಿ, ಹೊಟ್ಟೆಯೊಳಗಿದ್ದ ಹಾಲನ್ನು “ಒಂದೇ ಬಾರಿ ಸುರಿಗೊಂಬ” ತವಕದಿಂದ ಭಾರತಧೇನುವಿನ ಉದರವನ್ನು ಸೀಳಿಬಿಟ್ಟರು. ಇವರು ನಡೆದ ಮಾರ್ಗಗಳೆಲ್ಲಾ ಸಿಡಿಲು ಬಡಿದ ಬೆಟ್ಟ ದಾರಿಗಳ೦ತೆ ಆದುವು; ನುಗ್ಗಿದ ನಗರಗಳೆಲ್ಲಾ ಅಡವಿಯ ಗುಹೆಗಳಂತೆ ಆದುವು. ಇವರ “ದೀನ್! ದೀನ್!” ಎಂಬ ರಣಕೋಲಾಹಲವನ್ನು ಕೇಳುತ್ತಲೇ ಹಳ್ಳಿ ಹಳ್ಳಿಗರು ತಾವು ತಿಂದುಳಿಗೆ ಕೊಂಚ ಹಣವನ್ನು ಉಡಿಯಲ್ಲಿ ಕಟ್ಟಿಕೊಂಡು, ಹುಲಿ ಹಾವುಗಳಿದ್ದ ಅಡವಿ ಗಾದರೂ ಒಕ್ಕಲು ಹೋಗುತ್ತಿದ್ದರು, ರಾಜಯುವತಿಯರು ತಮ್ಮ ವೀರಪತಿ ಗಳನ್ನು ಇವರೊಡನೆ ಯುದ್ಧಕ್ಕೆ ಸಶಸ್ತ್ರರಾಗಿ ಕಳುಹಿಸಿ, ತಮ್ಮ ಪಾತಿವ್ರತ್ಯ ವನ್ನು ರಕ್ಷಿಸುವುದಕ್ಕೆ ನಗುನಗುತ್ತ ಚಿತಿಯನ್ನು ಏರುತ್ತಿದ್ದರು. ಇವರು ಮಾಡಿದ ಹಾಳು ಹಾವಳಿ ಎಷ್ಟೆಂದು “ತುರುಕರು ತುಳಿದಲ್ಲಿ ತರಕಾರಿ ಬೆಳೆ ಯದು” ಎಂಬ ಗಾದೆಯೇ ತೋರಿಸುವುದು. ಅದರೂ ಧರ್ಮಾ೦ಥರಾದ ಈ ಮೂವರಲ್ಲಿ ಇಷ್ಟೊಂದು ಪ್ರಭೇದವಿತ್ತು; ಅವರ ಕಾರ್ಯಗಳಲ್ಲಿ ಸಾಮ್ಯ
- 17 - ವಿದ್ದರೂ ಅವರ ಉದ್ದೇಶಗಳಲ್ಲಿ ಇಷ್ಟೊಂದು ತಾರತಮ್ಯವಿತ್ತು. ತೇಮರಲೇನನು ಅತ್ಯಂತ ಧನಾಪೇಕ್ಷೆಯುಳ್ಳವನು. ಆ ಆಸೆಯು ತೀರುವ ತನಕ ಅವನು ಹಸಿದ ಸಿಂಹ; ಹಸಿವು ಅಣಗುವುದಕ್ಕೆ ಕೈಗೆ ಸಿಕ್ಕಿದ ಕೊಳ್ಳೆಯನ್ನು ಹೊಡೆದುಬಿಡುತ್ತಲೇ ತೃಪ್ತಿಗೊಂಡು, ದೂರದ ಗವಿಗೆ ಹಿಂತಿರುಗಿದನು. ಘಜ್ಜಿ ಮಹಮ್ಮದನು ಧನಾಪೇಕ್ಷೆ ಯೊಡನೆ ಧರ್ಮಾಂಧತೆಯನ್ನು ಬೆರ ಸಿದ್ದನು. ಹಿಂದೂ ಜನರ ಬೊಕ್ಕಸವನ್ನು ಬಿಚ್ಚಿ, ಅವರ ದ್ರವ್ಯಾಪಹಾರ ವನ್ನು ಮಾಡುವುದು ಮಾತ್ರವಲ್ಲ, ಅವರ ಆರ್ಯಧರ್ಮವನ್ನು ನಿರ್ಮೂಲಿಸಿ, ತನ್ನ ಮತವನ್ನು ಖಡ್ಡ ಮುಖದಿಂದ ಸ್ಥಾಪಿಸಬೇಕೆಂದು ಬದ್ಧ ಕಂಕಣನಾದನು. ಇದಕ್ಕೋಸ್ಕರವೇ ಈತನು ಹನ್ನೊಂದು ಸಲ ಹಿಂದುಸ್ಥಾನಕ್ಕೆ ದಂಡೆತ್ತಿ ಬಂದುದು ಸಾಲದೆ, ಕೊನೆಗೆ ಕ್ರಿ. ಶ. ೧೦೨೪ರಲ್ಲಿ ಗುಜರಾತಿನಲ್ಲಿದ್ದ ಸೋಮನಾಥ ದೇವಸ್ಥಾನವನ್ನು ಒಳನುಗ್ಗಿ, ವಿಗ್ರಹಗಳನ್ನು ಪುಡಿಪುಡಿಗೈದನು. ಆದರೂ 'ಪರದ್ರವ್ಯಾಪಹಾರಿ” “ಅನ್ಯಮತಭಂಜಕ' ಎಂಬ (ಮಹಾ+ ಅಯೋಗ್ಯ?) ಬಿರುದುಗಳನ್ನು ತಾಳಿದಬಳಿಕ ತನ್ನ ದೇಶಕ್ಕೆ ನೇ ಹಿಂತೆರಳಿ ದನು. ಅಲ್ಲಾವುದ್ದೀನನಾದರೆ, ತನ್ನ ಹಾಳು ಜೀವಕಾಲದಲ್ಲಿ ಮೂರು ಉದ್ದೇಶಗಳನ್ನು ಕೊನೆಗಾಣಿಸುವುದಕ್ಕೆ ಯತ್ನಿಸಿದನು. ತೇಮರಲೇನನ ಧನಾಪೇಕ್ಷೆ ಯೂ, ಮಹಮ್ಮದನ ಮತಾಭಿಮಾನವೂ, ಮಾತ್ರವಲ್ಲ, ಹಿಮಾ ಲಯದಿಂದ ಕನ್ಯಾಕುಮಾರಿಯ ವರೆಗೆ ರಾಜದಂಡವನ್ನು ಬೀಸಬೇಕೆಂಬ ರಾಜ್ಯಾಕಾಂಕ್ಷೆ ಯೂ ಈತನ ಹೃದಯದಲ್ಲಿ ಬೇರೂರಿದ್ದು ವು. ಈ ಅಭಿ ಲಾಷೆಯು ಹುಟ್ಟು, ಬಂಜೆಗೆ ಮಕ್ಕಳಾಗಬೇಕೆಂಬ ಆಸೆಯಾಗಿರಲಿಲ್ಲ. ಅಲ್ಲಾ ವುದ್ದೀನನು ಮಹಾವೀರನಾಗಿದ್ದನು ಎಂಬುದೇನೋ ನಿಜ; ಆದರೆ ಬಾಲ್ಯ ದಿಂದಲೂ ನ್ಯಾಯನೀತಿಗಳ ಚಿಂತೆಯನ್ನು ಇವನು ಕಟ್ಟಿಕೊಳ್ಳದೆ ಇದ್ದುದೆ ರಿಂದ, ಕೆಲವು ಕಾಲ ಮಾತ್ರವೇ ಬಳೆಯುತ್ತ ಹೋದನು. ಹೊಕ್ಕುಳಿನ ಪ್ರಯೋಜನವನ್ನು ಅರಿಯದ ಈ ಕೃತಘ್ನನು ಯಾವ ಸೋಪಾನಗಳನ್ನು
ಹತ್ತಿ ಶಿಖರಕ್ಕೆ ಏರಿದನೋ, ಅವುಗಳನ್ನೇ ಧಿಕ್ಕಾರದೃಷ್ಟಿಯಿಂದ ಮೇಲೆ ನಿಂತು ನೋಡುತ್ತಿದ್ದನು. ಯಾವ ಮರದ ಕೊಂಬೆಯ ಮೇಲೆ ತನ್ನ ಕೈ ಕೊಡಲಿಯನ್ನು ತಿಕ್ಕಿ ಹರಿತವಾಗಿ ಮಾಡಿದನೋ, ಆ ವೃದ್ದ ವೃಕ್ಷವನ್ನೇ ಕಡಿದುಹಾಲಿಕ್ಕೆ ಇವನು ಹೇಸಲಿಲ್ಲ. ತನ್ನನ್ನು ಉನ್ನತ ಪದವಿಯಲ್ಲಿಟ್ಟ ತನ್ನ
- 18 - ಮಾವನಾದ ಜಾಲಾಲುದ್ದೀನ್ ಖಿಲ್ಟಿ ಯನ್ನು ರಾಜಾಭಿಲಾಷೆಯಿಂದ ಸಂಹರಿಸು ವುದಕ್ಕೆ ಯಾವನು ಹಿಂಜರಿಯಲಿಲ್ಲವೋ, ಸಿಂಹಾಸನವನ್ನು ಹತ್ತುವುದಕ್ಕೆ ಹೋಗಬೇಕಾದ ಮಾರ್ಗದಲ್ಲಿದ್ದ ತನ್ನ ಬಂಧುಬಾಂಧವರನ್ನೂ ಗುರುಹಿರಿಯ ರನ್ನೂ ನೆಲ್ಲು ಹುಲ್ಲಿನಂತೆ ಕೊಟ್ಟು ಬಿಟ್ಟು ಯಾವನು ಮುಂದೆ ಗದ್ದು ಗೆಯನ್ನು ಏರಿದನೋ, ಆ ವಿಶ್ವಾಸಘಾತುಕನೇ, ಆ ಪರಮಪಾಪಿಯೇ ಆ ತುಲ ಸೈನಿಕ ರೊಡನೆ ದೇವಗಿರಿಯ ಮುತ್ತಿಗೆಯನ್ನು ತೆಗೆದು ಓಡುವಂತಿದ್ದನು.
ಈ ಸಂಕಷ್ಟಕರವಾದ ಸಮಯವನ್ನು ಹೇಗೆ ಇದಿರಿಸಬೇಕೆಂಬ ವಿಷಯ ದಲ್ಲಿ ರಾಮದೇವರಾಜನು ತನ್ನ ಸ್ನೇಹಿತ ಸರದಾರರ ಆಲೋಚನೆಯನ್ನು ವಿಚಾರಿಸಿದನು. ರಾಮದೇವನ ಅಳಿಯನಾದ ಹರಪಾಲದೇವನು ಕೋಟೆ ಯನ್ನು ದಾಟಿ ಯುದ್ಧ ಕೊಡುವುದು ನ್ಯಾಯವಲ್ಲವೆಂದು ಹೇಳಿದನು. ಈ ಮಾತು ರಾಜನಿಗೆ ಸಮ್ಮತಿಯಾಯಿತು. “ ಅಲ್ಲಾವುದ್ದೀನನು ಎರಡು ಸಲ ಸೋತು ಹೋದನು. ಮೂರನೆಯ ಸಲ ಹಾಕಿದ ಮುತ್ತಿಗೆಯನ್ನು ತಾನೇ
ತೆಗೆದು ಈಗ ಪಲಾಯನ ಮಾಡುತ್ತಲಿರುವನು. ತಾನಾಗಿ ಹೀಯಾಳಿಸಿ ಶತ್ರುವನ್ನು ಕೆರಳಿಸಿ, ಹೋಗುವ ಮಾರಿಯನ್ನು ಕರೆದು, ನಮ್ಮ ಸೈನ್ಯವನ್ನು ಆಪತ್ತಿಗೆ ಗುರಿಮಾಡುವುದು ಶ್ರೇಯಸ್ಕರವಲ್ಲ, ಇದಲ್ಲದೆ ಅಲ್ಲಾವುದ್ದೀನನು ಯಾವ ಕಾರಣದಿಂದ ಪಲಾಯನ ಮಾಡುತ್ತಿರುವನೆಂದು ತಿಳಿಯಬೇಕು, ಅಭೇದ್ಯವಾದ ಕೋಟೆಯೊಳಗೆ ಸುರಕ್ಷಿತವಾಗಿದ್ದ ನಮ್ಮನ್ನು - ಹಾವಾಡಿಗನು ಕೊಳಲೂದಿ ಬಿಲದಿಂದ ಹಾವನ್ನು ಹೊರಡಿಸುವಂತೆ ಅವನು ಸೆಳೆಯ ಬೇಕೆಂಬ ಉಪಾಯಮಾಡಿದ್ದರೆ, ನಮ್ಮ ಸೈನ್ಯವೆಲ್ಲಾ ನಿರರ್ಥಕವಾಗಿ ಶತ್ರು ಹಸ್ತದಿಂದ ಸಂಹಾರವಾಗಬಹುದು” ಎಂದು ರಾಮದೇವನು ಅಳಿಯನ ಅಭಿಪ್ರಾಯವನ್ನು ಬಲಗೊಳಿಸಿದನು. ಈ ಮಾತು ಕೃಷ್ಣರಾಜನಿಗೆ ಯಾವ ಕಾರಣದಿಂದಲೂ ಸಮ್ಮತವಾಗಲಿಲ್ಲ, ಅವನು ಯುದ್ಧ ಮಾಡಲೇಬೇಕೆಂದು ನಿಂತುಬಿಟ್ಟನು. “ಅಲ್ಲಾವುದ್ದೀನನು ಈಗ ಹಿಮ್ಮೆಟ್ಟಿದರೂ ಮತ್ತೆ ಮತ್ತೆ ಬಾರದೆ ಇರಲಾರನು. ಯಾರೂ ಬಾರದೆ ಹೋದರೂ, ನಮ್ಮ ಸೈನ್ಯವನ್ನು ನಾನೊಬ್ಬನೇ ಕೋಟೆಯ ಹೊರಕ್ಕೆ ಕೊಂಡುಹೋಗಿ, ಶತ್ರುವು ಯಾವ ಉಪಾಯದಿಂದಲಾದರೂ ನನಗೆ ತಲೆಬಾಗಿಸುವಂತೆ ಮಾಡಿ, ದೇವಗಿರಿರಾಜ್ಯವು ನನ್ನನ್ನು ಚಿರಕಾಲ ಸ್ಮರಿಸುವಂತೆ ಮಾಡುವೆನು” ಎಂದು ಕೃಷ್ಣರಾಜನು
-
19
-
ಹೇಳಿದನು. ಈ ಅಭಿಪ್ರಾಯಗಳಲ್ಲಿ ಯಾವುದನ್ನು ಸ್ವೀಕರಿಸಬೇಕೆಂದು ತಿಳಿಯದೆ, ರಾಜನು ವೀರಮತಿಯ ಮುಖವನ್ನು ದೃಷ್ಟಿಸಿದನು. ಪ್ರಾಚೀನ ಕಾಲದಲ್ಲಿ ಭಾರತಸ್ತ್ರೀಯರ ಸ್ವಾತಂತ್ರ್ಯಕ್ಕೆ ಯಾವುದೊಂದು ನಿರ್ಬಂಧ ವಿಲ್ಲದೆ ಇದ್ದುದರಿಂದ, ವೀರರಮಣಿಯರು ಇಂತಹ ಸಂದರ್ಭಗಳಲ್ಲಿ ತಮ್ಮ ಆಲೋಚನೆಯಿಂದಲೂ, ಆಯುಧದಿಂದಲೂ ರಾಜ್ಯಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು. ರಾಮದೇವನ ಸಾಕೂತದೃಷ್ಟಿಯಿಂದ ತನ್ನನ್ನು ನೋಡು ತಲೇ ವೀರಮತಿಯು ಉತ್ಸಾಹಿತಳಾಗಿ ಹೀಗೆಂದಳು:- “ನನ್ನ ಪ್ರಾಣ ವಲ್ಲಭನ ಅಭಿಪ್ರಾಯವು ವಿದಿತವಾಗಿದೆ. ಅಲ್ಲಾವುದ್ದೀನನನ್ನು ಈಗ ಜಾರಬಿಟ್ಟರೆ, ರಕ್ತದ ರುಚಿ ಹತ್ತಿದ ಹುಲಿಯು ಮತ್ತೆ ಮತ್ತೆ ಗ್ರಾಮಗಳಿಗೆ ಬಂದು, ಹಳ್ಳಿಗರನ್ನು ಹೆದರಿಸುವಂತೆ; ಅವನು ಮರಳಿಮರಳಿ ಇಲ್ಲಿಗೆ ಬರುವ ನಲ್ಲವೆ? ಇದಲ್ಲದೆ ನನ್ನ ಜನ್ಮದಾತಾರನಾದ ತಂದೆಯು ಶತ್ರುವಿಂದ ರಣರಂಗ ದಲ್ಲಿ ಬಿದ್ದು ಹೋದನೆಂಬ ದುಃಖಾಗ್ನಿಯು ನನ್ನ ಹೃದಯವನ್ನು ಪದೇಪದೇ ದಹಿಸುತ್ತಿರುವುದು. ಶತ್ರುವಿನ ರಕ್ತಸೇಚನದಿಂದ ಈ ಅಗ್ನಿಯು ಶಾಂತವಾಗ ಬೇಕಾದುದರಿಂದ, ನನ್ನ ಪ್ರಾಣೇಶ್ವರನು ಸೈನ್ಯದ ವಿಶೇಷ ಭಾಗವನ್ನು ಈ ರಾತ್ರಿ ಕೋಟೆಯ ಹೊರಕ್ಕೆ ಕೊಂಡುಹೋಗುವಂತೆ ಅಪ್ಪಣೆಯಾಗಬೇಕೆಂದು ಪ್ರಾರ್ಥಿಸುವೆನು. ಇವನ ಸಹಾಯಕಳಾಗಿ ಹೋಗಲಿಕ್ಕೆ ನನಗೂ ಅಷ್ಟೆ ಯಾಗಬೇಕೆಂದು ವಿಜ್ಞಾಪಿಸುವೆನು.” ರಾಮದೇವನ ಮೊದಲಿನ ಎರಡು ಯುದ್ಧಗಳಲ್ಲಿಯ ಕೃಷ್ಣರಾಜನ ಸಾಹಸವನ್ನೂ ಚಾತುರ್ಯವನ್ನೂ ಕಣ್ಣಾರೆ ಕಂಡಿದ್ದುದರಿಂದ, ಕೃಷ್ಣರಾಜನು ಸೇನೆಯ ಹೆಚ್ಚಿನ ಭಾಗವನ್ನು ಆ ರಾತ್ರಿ ಹೊರಗೆ ಕೊಂಡುಹೋಗಿ ಯುದ್ಧ ಮಾಡುವುದಕ್ಕೆ ರಾಮದೇವನು ಸಮ್ಮತಿಸಿ, ತಾನು ಅವನೊಡನೆ ಹೊರಡಲಿಕ್ಕೆ ಸಿದ್ಧನಾದನು. ಆದರೆ ವೀರಮತಿಯು ಸೈನ್ಯದೊಡನೆ ಹೊರಕ್ಕೆ ಹೋಗುವುದು ಯೋಗ್ಯವಲ್ಲವೆಂದು ಬಹುಪಕ್ಷ ದವರ ಮತವಾಯಿತು.
ದೇವಗಿರಿ ದುರ್ಗವು ಪುರಾತನ ಕಾಲದಲ್ಲಿ ಮಹಾಪ್ರಖ್ಯಾತಿಗೊಂಡಿತು. ಕಡಲು ಮಟ್ಟಕ್ಕಿಂತ ೬೪೦ ಅಡಿ ಎತ್ತರಕ್ಕೆ ಏರಿದ ಏಕಾಕಿಯಾದ ಪರ್ವತದ ಮೇಲೆ ಅದು ಇದ್ದಿತ್ತು. ಈ ಪರ್ವತವು ಸೂಚ್ಯಾಕಾರವಾಗಿದ್ದು (coneshaped) ಸುತ್ತಲೂ ಪ್ರಪಾತಮಯವಾದ ಬಂಡೆಗಳಿಂದ ಭದ್ರವಾಗಿತ್ತು
*
20
-
ಲಂಬಾಯಮಾನವಾದ ಪ್ರಾಕಾರಗಳು, ಉನ್ನತವಾದ ತೆನೆಗಳು, ವಿಸ್ತಾರವಾದ ಪರಿಗೆಯು ಕೋಟೆಯನ್ನು ಬಲಪಡಿಸಿದ್ದು ವು. ದೂರದೃಷ್ಟಿಗೆ ಈ ದುರ್ಗವು ಒಂದೇಯಾಗಿ ತೋರಿದ್ದರೂ, ಇದರಲ್ಲಿ ಒಂದರ ಒಳಗೊಂದಾಗಿ ಮೂರು ಕೋಟೆಗಳಿದ್ದು ವು. ದುರ್ಗದ ಅಡಿಯಲ್ಲಿ ದೇವಗಿರಿ ನಗರವು ಹುದುಗಿಕೊಂಡು ಭದ್ರವಾಗಿತ್ತು. ಇಂತಹ ಕೋಟೆಯನ್ನು ಶತ್ರುವು ಮಹಾ ಸೈನ್ಯದೊಡನೆ ೧೦ ವರ್ಷಗಳ ವರೆಗೆ ಮುತ್ತಿದರೂ ರಾಮರಾಜನು ಸುಖವಾಗಿಯೂ ನಿರಾಂತಕವಾಗಿಯೂ ನಿದ್ದೆ ಹೋಗಬಹುದಿತ್ತು. ಮುಸಲ್ಮಾನರ ಸೇನಾ ಸಮುದ್ರವು ಉತ್ತರ ಹಿಂದುಸ್ತಾನದ ಮೇರೆಯನ್ನು ಅತಿಕ್ರಮಿಸಿ, ಚಿರಕಾಲ ದೇವಗಿರಿಯ ಪ್ರಾಕಾರಗಳ ಮೇಲೆ ಬಂದು ಬಡಿದರೂ, ಅದರ ಸ್ವಾತಂತ್ರವು ಮುಳುಗಿ ನಾಶವಾಗುತ್ತಿದ್ದಿಲ್ಲ. ವಿಧಾತೃನು ಮಾತ್ರ ಹಾಗೆ ಎಣಿಸಿರಲಿಲ್ಲ.
* ಮಧ್ಯರಾತ್ರಿ ಅಷ್ಟಮಿಯ ಚ೦ದ್ರನು ದುಃಖದಿಂದ ಅಸ್ತಮಿಸುತ ಲಿದ್ದನು, ಅಂಧಕಾರವು ಮಲ್ಲಮೆಲ್ಲನೆ ದೇವಗಿರಿಯ ಹೊರವಳಯವನ್ನೆಲ್ಲಾ ಆಕ್ರಮಿಸಿಕೊಳ್ಳತೊಡಗಿತು. ದೇವಗಿರಿಯ ಪಾಳಯದಲ್ಲಿ ಕಾವಲುಗಾರರು ದೀವಟಿಗೆಗಳನ್ನು ಹಿಡಿದುಕೊಂಡು ಅತ್ತಿತ್ತ ತಿರುಗುತ್ತಿದ್ದರು. ವೀರರು ಶಸ್ತ್ರ ಕವಚಗಳನ್ನು ತೊಟ್ಟು ಕೊಳ್ಳುವ ಝಣತ್ಯಾರ, ಯುದ್ದಾಶ್ವಗಳ ಹೇಷಧ್ವನಿ, ಭಟರ ಕಲಕಲ~- ಇವೆಲ್ಲಾ ನಿಶ್ಯಬ್ದ ವಾದ ರಾತ್ರಿಯ ಕರ್ಣವನ್ನು ಭೇದಿಸಿ ಹೋಗುವಂತಿದ್ದು ವು. ರಾಮದೇವನು ತಾನೇ ಪಾಳಯದಲ್ಲಿ ಸಂಚರಿಸುತ್ತ, ಪಾತಃ ಕಾಲದ ಯುದ್ಧಕ್ಕೆ ಸೈನಿಕರಲ್ಲಿ ಭೀತರಾದವರನ್ನು ಉತ್ಸಾಹಗೊಳಿಸುತ ಶತ್ರು ಚಲನೆಯನ್ನು ತಿಳಿಯುವುದಕ್ಕೆ ನೆಲಕ್ಕೆ ಒರಗಿ, ಕಿವಿ ಕೊಡುತ್ತಿದ್ದನು. ಅಲ್ಲಾವುದ್ದೀನನ ಪಾಳಯವು ದುರ್ಗದಿಂದ ೧೦ ಮೈಲು ದೂರವಿದ್ದುದರಿಂದ ಶತ್ರು ಚಲನೆಗಳೇನೂ ತೋರುತ್ತಿರಲಿಲ್ಲ. ಕೃಷ್ಣರಾಜನು ತಾನೇ ಮುಂದು ಹೋಗಿ ಪರೀಕ್ಷೆ ಸುವೆನೆಂದು ಹೇಳಿ ಕೋಟೆಯ ಗೋಡೆಯನ್ನು ಹತ್ತಲು ಹೋದನು.
ಅಲ್ಲಾವುದ್ದೀನನ ಸೈನಿಕರೆಲ್ಲರು ಗಾಂಜಾವಿನ ಬಲದಿಂದ ಸುಖವಾಗಿ ನಿದ್ದೆ ಹೋಗುತ್ತಿದ್ದರು. ಅಲ್ಲಲ್ಲಿ ಒಬ್ಬಿಬ್ಬರು ಕಾವಲುಗಾರರು ಪಹರೇ ಮಾಡುತ್ತಿದ್ದರು. ಇಷ್ಟರಲ್ಲಿ ಅಲ್ಲಾವುದ್ದೀನನ ಪಾಳಯದಲ್ಲಿ ಒಂದು ದೀಪ ವನ್ನು ಯಾರೋ ಹಚ್ಚಿದರು. ಡೇರೆಯ ಒಳಗೆ ಒಬ್ಬ ಯುವಕನು ಏನನ್ನೂ
32-41==============================
-
21
-
ಆಲೋಚಿಸುತ್ತ ಕುಳಿತುಕೊಂಡಿದ್ದನು. ಬಳಿಕ ಹೊರಗೆ ಬಂದು ಯಾರನ್ನೂ ಹುಡುಕಿದಂತೆ ಅತ್ತಿತ್ತ ನೋಡಿಕೊಂಡು ನಿಂತನು. ಶೀತಲವಾದ ಗಾಳಿ ಬೀಸುತ್ತಿತ್ತು. ಆಕಾಶದಲ್ಲಿ “ಸಹಸ್ರ ರತ್ನಗಳು” ಮಿನುಗುತ್ತಿದ್ದು ವು. ಯುವಕನು ಪುನಃ ಡೇರೆಯೊಳಗೆ ಹೋಗಿ ಕುಳಿತುಕೊಂಡನು. ಯುವಕನ ಹೆಸರು ಮಾಲಿಕ ನಾಯಬ್ ಕಾಫರ್, ಹಿಂದುಸ್ಥಾನದ ಇತಿಹಾಸದಲ್ಲಿ ಈ ಹೆಸರೇ ಮಾಲಿಕ್ ಕಾಫರ್ ಎಂದು ಸಂಕ್ಷೇಪವಾಗಿರುವುದು. ಈ ಮಾಲಿಕ್ ಕಾಫರನು ಮೊತ್ತಮೊದಲು ಅಲ್ಲಾವುದ್ದೀನನ ಗುಲಾಮನಾಗಿದ್ದು , ಅವನ ದಯೆಯಿ೦ದಲೇ ಸೈನ್ಯದಲ್ಲಿ ಉಚ್ಚ ಪದವಿಯನ್ನು ಪಡೆದಿದ್ದನು. ಮುಸಲ್ಮಾನರ ದುರ್ಗುಣಗಳೆಲ್ಲಾ ಇವನಲ್ಲಿ ಹಾಸು ಹೊಕ್ಕಾಗಿದ್ದು ವು. ಅಲ್ಲಾ ವುದ್ದೀನನು ಈ ಪಾಪಿಯಲ್ಲಿ ಹೆಚ್ಚಾದ ವಿಶ್ವಾಸವಿಟ್ಟದ್ದನು; ಅವನನ್ನೇ ತನ್ನ ಸೇನಾಧಿಪತಿಯನ್ನಾಗಿ ಮಾಡಿದ್ದನು; ಅವನ ವಚನವನ್ನು ಕುರಾನಿನಂತೆ ಪಾಲಿಸುತ್ತಿದ್ದನು. ಅಲ್ಲಾವುದ್ದೀನನ್ನು ರಾಜ್ಯಾಭಿಲಾಷೆಯಿಂದ ಲೋಕಾಂತ ರಕ್ಕೆ ಕಳುಹಿಸಿದ ವಿಶ್ವಾಸಘಾತಕನು ಈತನೇ. ಮಾಲಿಕ್ ಕಾಫರನು ಹೊರಕ್ಕೆ ಬಂದು ಅಲ್ಲಲ್ಲಿ ವಿಹರಿಸುತ್ತಿದ್ದನು. ರಾತ್ರಿಯು ಮೆಲ್ಲಮೆಲ್ಲನೆ ಸರಿ ಯುತ್ತ ಬಂದಿತು. ಮುಸಲ್ಮಾನರ ಸೈನ್ಯದಲ್ಲಿ ಒಬ್ಬಿಬ್ಬರು ಎಚ್ಚರವಾಗು ತಿದ್ದರು. ಮಾಲಿಕ್ ಕಾಫರನು ಡೇರೆಯ ಸಮೀಪದಲ್ಲಿದ್ದ ಮರದ ತೋಪಿನ ಬಳಿಯಲ್ಲಿ ಬಂದು ನಿಂತನು. ಅಷ್ಟರಲ್ಲಿ ಅವನ ಇದಿರಿಗೆ ಯಾರೋ ಒಬ್ಬನು ಕಾಲ್ನಡೆಯಾಗಿ ಬರುತ್ತಿದ್ದನು. ಮಾಲಿಕ್ ಕಾಫರನು ಆಗಂತುಕ ನನ್ನು* ನೋಡಿ ಸಲಾಂ ಮಾಡಿದನು.
ಮಾಲಿಕ್ ಕಾಫರನು ಆಗುಂತುಕನ ಬಳಿಗೆ ಬಂದು, “ನಿನ್ನೊಡನೆ ಮತ್ತಾರೂ ಬಂದಿದ್ದರೇ?” ಎಂದನು.
ಆಗಂತುಕನು ಸುತ್ತಲೂ ನೋಡುತ್ತ, “ಇಲ್ಲ. ನಾನು ಬಂದುದು ಯಾರೂ ತಿಳಿಯಲು ಕಾರಣವಿಲ್ಲ” ಎಂದನು.
ಮಾಲಿಕ್ ಕಾಫರ್:-“ನಿನ್ನ ಹಿಂದೆಯೇ ಏನೋ ದೂರದಲ್ಲಿ ನಿನ್ನ ನೆರಳಂತೆ ತೋರಿತು. ಇಷ್ಟು ವಿಳಂಬವೇಕಾಯಿತು?”
ಆಗಂತುಕ:-“ಮಧ್ಯಾಹ್ನದಲ್ಲಿ ನಿನ್ನನ್ನು ನೋಡಿದ ಬಳಿಕ ಅರ ಮನೆಯ ಕಾರ್ಯಗೌರವದಿಂದ ತಳುವಿದೆನು.”
*ಬಂದವನು.
-
22
-
ಮಾಲಿಕ್ ಕಾಫರ್:-“ನೀನು ಹಗಲು ನನಗೆ ಮಾತು ಕೊಟ್ಟಂತೆ. ದೇವಗಿರಿಯ ಸೈನ್ಯವನ್ನು ಹೊರಕ್ಕೆ ಇಳಿಸಿರುವೆಯ?”
ಎಲೆಯ ಮರಮರ ಶಬ್ದ ದಂತೆ ಹತ್ತಿರದಲ್ಲಿ ಕೇಳಿಸಿತು.
ಆಗಂತುಕ:- “ಕೊಟ್ಟ ಮಾತನ್ನು ಮರೆಯಲಾರೆನು, ಅರಮನೆ ಯನ್ನು ಕಾಯುವಷ್ಟು ಕೈ ತುಂಬಾ ಸೈನಿಕರನ್ನು ಹಿಂದೆ ಬಿಟ್ಟು, ಮಿಕ್ಕ ಸೈನ್ಯ ವನ್ನು ಹೊರಕ್ಕೆ ಹೊರಡಿಸಿರುವೆನು.”
ಮಾಲಿಕ್ ಕಾಫರ್:- “ಹಾಗಾದರೆ ನಮ್ಮ ಸೈನ್ಯವು ಒಳನುಗ್ಗು ವು ದಕ್ಕೆ ಇದೇ ಅವಕಾಶವಲ್ಲವೇ? ರಹಸ್ಯಮಾರ್ಗವು ಯಾವುದು?”
ಆಗಂತುಕ:-ಇದೇ ಸಮಯ ನಾನು ಈ ಮಧ್ಯಾಹ್ನದಲ್ಲಿ ನಿನ್ನೊ ಡನೆ ಯಾವ ಸ್ಥಳದಲ್ಲಿ ಸಂಭಾಷಣೆ ಮಾಡಿದೆನೋ ಆ ಸ್ಥಳದಿಂದ ಎಡಕ್ಕೆ ತಿರುಗಿದರೆ
ಮಾಲಿಕ್ ಕಾಫರ್:-“ಎಡಕ್ಕೆ ತಿರುಗಿದರೆ ಹಾಳುಗುಡಿಯೊಂದು ತೋರುವುದು.”
ಆಗುಂತುಕ:- “ಸರಿ, ಆ ಕಾಳಿಕಾ ದೇವಸ್ಥಾನಕ್ಕೆ ಇದಿರಾದ ಹಾದಿ ಯನ್ನು ಹಿಡಿದು ಹೋದರೆ, ಅರಮನೆಯ ಹಿಂದುಗಡೆಯಲ್ಲಿ ಇಳಿಯಬಹುದು.”
ಮಾಲಿಕ್ ಕಾಫರ್:- “ಅಲ್ಲಿ ಸೈನ್ಯವೆಷ್ಟಿರುವುದು?” - ಅಷ್ಟರಲ್ಲಿ ಇಬ್ಬರೂ ಸುತ್ತು ಮುತ್ತಲು ನೋಡಿದರು. ಯಾರೊಬ್ಬರ ಸುಳಿವು ತೋರುತ್ತಿರಲಿಲ್ಲ. ಗಾಳಿಯ ಶಬ್ದ ವೆಂದು ಸುಮ್ಮನಾದರು. ಪುನಃ ಕಣ್ಣೆತ್ತಿ ನೋಡಿದರು. ವಾಯುವಿನ ಹಿಲದಿಂದ ಉಂಟಾದ ಎಲೆಗಳ ಮರಮರ ಶಬ್ದ ದಲ್ಲಿ ಅವರಿಗೆ ಏನೊಂದೂ ಕೇಳಿಸಲಿಲ್ಲ.
ಆಗಂತುಕ:- “ ಅಲ್ಲಿ ಬೇಕೆಂತಲೇ ಮೂವರು ಸಿಪಾಯರನ್ನು ಇಟ್ಟಿರುವೆನು.”
ಮಾಲಿಕ್ ಕಾಫರ್:- “ ಅಲ್ಲಾವುದ್ದೀನರು ನೀನು ಮಾಡಿದ ಉಪ ಕಾರವನ್ನು ಮರೆಯಲಾರರು. ಯಾವ ಉಪಾಯದಿಂದಲಾದರೂ ಕೋಟೆ ಯನ್ನು ಜಯಿಸಿದ ಹೊರತು, ತಾನು ಅನ್ನಾ ಹಾರವನ್ನು ತೆಗೆದುಕೊಳ್ಳುವು ದಿಲ್ಲ ಎಂದು ನಿನ್ನೆಯಿಂದ ಹಟಹಿಡಿದಿರುವರು. ರಾಮದೇವನ ಸ್ಥಾನವನ್ನು ನೀನೇ ಅಲಂಕರಿಸುವೆ ಎಂದು ತಿಳಿ.”
-
23
-
ಆಗಂತುಕ:- “ರಾಜನಾದ ಬಳಿಕ “ನಾನು ವಿವಾಹವಾಗಬೇಕೆಂದು ಯೋಚಿಸಿರುವೆನು. ಅಲ್ಲಾವುದ್ದೀನನ ಸಮಕ್ಷಮದಲ್ಲಿಯೇ ನಾನು ವೀರಮತಿ
ಯನ್ನು ವಿವಾಹವಾಗಬೇಕೆಂದು ನನ್ನ ಆಸೆ.”
- ಆಗ ಗಾಳಿಯು ಪುನಃ “ಚಿ! ಚಿ!” ಎಂಬ ಸ್ವರದಿಂದ ಬೀಸಿತು. ಒಂದೊಂದು ಹಕ್ಕಿಯು ಮರದಲ್ಲಿ ಗೂಡಿನಿಂದ “ಧಿ! ಧಿಕ್!” ಎಂದು ಆರತು, ಮಾಲಿಕ್ ಕಾಫರನು ಆಗಂತುಕನ ಹಸ್ತವನ್ನು ಹಿಡಿದುಕೊಂಡು, “ಕೃಷ್ಣರಾಜ! ಇನ್ನು ಮುಂದೆ ನೀನೇ ದೇವಗಿರಿಯ ರಾಜನೆಂದು ತಿಳಿ, ನೀನು ಇಲ್ಲಿ ಡೇರೆಯಲ್ಲಿ ತಳುವಿದೆರೆ, ನಾನು ಅಲ್ಲಾವುದ್ದೀನರಿಗೆ ನಿನ್ನನು ಮನ್ನಣೆಗೊಳಿಸಬೇಕೆಂದು ಹೇಳುವೆನು. ವಿಳಂಬವಾದರೆ ಕಾರ್ಯವು ಕೆಟ್ಟು ಹೋಗುವುದು. ಕುದುರೆಯನ್ನು ಹತ್ತಿ ನಾನು ಕೋಟೆಯನ್ನು ಬೆಳಗಾಗುವಷ್ಟರಲ್ಲಿ ಒಳನುಗ್ಗಬೇಕು. ಇಕೋ ಕೋಳಿ ಕೂಗಿತು!” ಎಂದು ಹೇಳಿ ಕುದುರೆಯ ಮೇಲೆ ಹತ್ತಿ ಅದೃಶ್ಯನಾದನು.
ಆಗಂತುಕನು ಮನಸ್ಸಿನಲ್ಲಿ ಏನನ್ನೋ ಯೋಚಿಸುತ್ತ ಮಾಲಿಕನು ಇದ್ದ ಡೇರೆಯ ಕಡೆಗೆ ಮೆಲ್ಲಮೆಲ್ಲನೆ ಕಾಲಿಡುತ್ತಲಿದ್ದನು. ಅಷ್ಟರಲ್ಲಿ ( ಹಾ! ದುಷ್ಟಾ” ಎಂಬೊಂದು ಧ್ವನಿಯು ಅವನ ಕಿವಿಯನ್ನೂ ಎದೆಯನ್ನೂ ಸೀಳಿಕೊಂಡು ಹೋಯಿತು, ಆಗಂತುಕನು ಪುನಃ ತಿರುಗಿದನು. ಕಣ್ಣು ಮುಚ್ಚುವಷ್ಟರಲ್ಲಿ ಮುಸುಕಿಟ್ಟು, ಒಂದು ವ್ಯಕ್ತಿಯು ಅವನ ಸಮ್ಮುಖಕ್ಕೆ ಹಾರಿಬಂದಿತು. ಆಗಂತುಕನು ತನ್ನ ಕಟಿಯಲ್ಲಿದ್ದ ಕಠಾರಿಯನ್ನು ಈಚೆಗೆ ಸೆಳೆಯುವಷ್ಟರಲ್ಲಿ ವ್ಯಕ್ತಿಯ ಕೈಯಲ್ಲಿದ್ದ ಭರ್ಚಿಯು ಅವನ ಹೊಟ್ಟೆಯನ್ನು ಹಾಯ್ದು ಕೊಂಡು ಅವನ ಸೊಂಟದ ಕಠಾರಿಯನ್ನು ರಣತ್ಕರಿಸಿತು. ಆಗಂ ತುಕನು ಘಾತವನ್ನು ತಡೆಯಲಾರದೆ, ನೆಲಕ್ಕೆ ಒರಗಿದನು.
ಕೃಷ್ಣರಾಜನು ಕರ್ಕಶವಾದ ಭೂಮಿಯ ಮೇಲೆ ಬಿದ್ದು ಬಿಟ್ಟನು. ಅವನ ದೇಹದ ರಕ್ತದಿಂದ ನೆಲವೇ ಹರಿದುಹೋಗುವಂತಿತ್ತು. ಕೃಷ್ಣರಾಜನ ಪ್ರಾಣವು ಮೆಲ್ಲಮೆಲ್ಲನೆ ದೇಹವನ್ನು ಬಿಟ್ಟು ಹೋಗುತ್ತಿತ್ತು. ಅವನು ಅಸ್ಪುಟ ಸ್ವರದಿಂದ, “ ಪ್ರಿಯೇ! ನನ್ನ ಹತ್ಯವನ್ನು ಮಾಡುವುದಕ್ಕೆಂದು ಇಲ್ಲಿಗೆ ಬಂದೆಯೇ?” ಎಂದು ಕೇಳಿದನು.
ವೀರಮತಿಯು ಉದ್ರೇಕಿತಳಾಗಿ ( ಯಾವನು ಜನ್ಮಭೂಮಿಯ ಹತ್ಯ ವನ್ನು ಮಾಡುವನೋ ಅವನು ನಿನ್ನ ಗತಿಗೆ ಹೋಗಲಿ” ಎಂದಳು
-
24
-
ಕೃಷ್ಣರಾಜ:-“ಸಖಿ! ವೀರಮತಿ! ನನ್ನನ್ನು ನೀನು ಪ್ರೀತಿಸಲಿಲ್ಲವೇ?”
ವೀರಮತಿಯ ಉತ್ಸಾಹಿತವಾದ ಹೃದಯವು ಈ ಪ್ರಣಯಪ್ರಸ್ತಾಪ ದಿಂದ ಫಕ್ಕನೆ ಪರಿವರ್ತಿತವಾಯಿತು. ಕೃಷ್ಣರಾಜನ ಮಾಲಿಕ್ಯಾಫರರ ಗುಪ್ತ ಸಂಭಾಷಣದಿಂದ ಉದ್ರೇಕಿತವಾದ ಅವಳ ಸ್ವದೇಶಾನುರಾಗವು ಸರ್ವ ದೇಹ ವನ್ನು ಆವರಿಸಿಕೊಂಡು ಅವಳ ಹಸ್ತದಿಂದ ಈ ಘೋರಕೃತ್ಯವನ್ನು ಹೇಗೆ ನಡೆಯಿಸಿತೋ, ಹಾಗೆಯೇ ಆ ಮನೋಭಾವವು ಶಾಂತವಾಗುತ್ತಲೇ ಪ್ರಾಣ ವಲ್ಲಭನ ಅಂತಿಮ ದರ್ಶನದಿಂದ ಅವಳ ಮನಸ್ಸನ್ನು ಆಕ್ರಮಿಸಿ, ತಾನೇ ತಾನಾಗಿ ನಿಂತ ಪ್ರಣಯವು ಅವಳನ್ನು ದುಃಖಕ್ಕೆ ಗುರಿಮಾಡಿತು. ಕೃಷ್ಣ ರಾಜನು ಉಜ್ವಲ ಮುಖದಿಂದ “ಪ್ರಾಣೇಶ್ವರೀ! ರಾಜ್ಯ-- ಬೇಡ-ನಿನ್ನ--- ಚುಂ-ಬ-ನ-ನಾನು-ಸಾ-ಯು” ಎಂದನು. ಅವನ ಕಡೆಯ ಮಾತುಗಳು ನಾಲಗೆಯಲ್ಲೇ ಉಳಿದುಹೋದುವು.
ವೀರಮತಿಯು ಆ ಮೃತದೇಹವನ್ನು ಚುಂಬಿಸಿದಳು; ಮತ್ತೊಮ್ಮೆ ಚುಂಬಿಸಿದಳು; ಪುನಃ ಚುಂಬಿಸಿದಳು. ಅಯ್ಯೋ! ವಿಧಾತೃನು ಈ ಸುಂದರ ವಾದ ದೇಹದಲ್ಲಿ ಕಪಟವನ್ನು ಏಕೆ ಅಡಗಿಸಿಟ್ಟನು? ಮಧುರ ಪುಪ್ಪದಲ್ಲಿ ಕ್ರಿಮಿ ಇರುವುದೆಂದು ಹೇಳುವರಲ್ಲವೆ? ಆದಕಾರಣದಿಂದಲೇ ಅದು ಸುಂದರ ಪುಷ್ಪವೆನಿಸುವುದೇ? ಪ್ರಿಯನೇ! ನಿನ್ನ ದೇಹವು ಚಂದ್ರನಂತೆ ಶೀತಲವಾಯಿ ತಲ್ಲಾ ! ಚಂದ್ರನ ಕಳಂಕು ಗೋಚರವಾಗಿದೆ. ನಿನ್ನ ಕಳಂಕವನ್ನು ನೀನು ಮರೆಗೊಳಿಸಿ, ನನಗೆ ಈ ದುರ್ಗತಿಯನ್ನು ತಂದುಬಿಟ್ಟೆಯಲ್ಲ! ನಿನ್ನ ಸ್ಥಿತಿ ಯನ್ನು ನೋಡಲಾರದೆ “ಆಕಾಶದೀಪಗಳು” ಕಣ್ಮುಚ್ಚಿದುವು. ನನ್ನ ಕೈ ದೀಪವೇ! ನಿನ್ನ ಜೀವಜ್ಯೋತಿಯನ್ನು ನಾನು ನಂದಿಸಿದೆನಲ್ಲಾ! ಮರಳಿ ಇದನ್ನು ಹಚ್ಚುವುದಕ್ಕೆ ನಾನು ಬಲ್ಲೆನೆ? ಮುಸಲ್ಮಾನರಿಗೆ ಸಿಕ್ಕಿದರೇನು? ಸರಿ! ಇನ್ನು ವಿಳಂಬ ಮಾಡಲಾರೆನು. ನಿನ್ನನ್ನು ನಾನು ಬಿಟ್ಟಿರಲಾರೆನು, ಸರಿ! ಸರಿ! ಮುಸಲ್ಮಾನರು ಕೋಟೆ ನುಗ್ಗಿದರು!” ಹೀಗೆಂದು ಪ್ರಲಾಪಿಸುತ್ತಾ ವೀರಮತಿಯು ಪುನಃ “ನನ್ನ ಪ್ರಾಣವಲ್ಲಭನೇ! ಈ ಕಠಾರಿಯು ನಿನ್ನನ್ನು ಎಷ್ಟು ತಿವಿಯಿತೋ ನಾನು ಇದನ್ನು ನೋಡುವೆನು” ಎಂದು ಹೇಳಿ ಕಠಾರಿ ಯನ್ನು ಮೃತದೇಹದಿಂದ ಈಚೆಗೆ ಸೆಳೆದಳು. “ಶರಪುಷ್ಪವೇ! ನಿನ್ನನ್ನು ಇನ್ನೊಮ್ಮೆ ಆಘ್ರಾಣಿಸುವೆನು” ಎಂದು ಹೇಳಿ ಪುನಃ ಪುನಃ ಚುಂಬಿಸಿ “ಕೃಷ್ಣ !
-
25
--
ಕೃಷ್ಣ! ಕೃಷ್ಣ!” ಎಂದು ಉಚ್ಚರಿಸುತ್ತ, ಕಠಾರಿಯ ಹತಿಯಿಂದ ಆ ಹತಳಾಗಿ ಕೃಷ್ಣರಾಜನ ದೇಹದ ಮೇಲೆ ಬಿದ್ದು ಪ್ರಾಣವನ್ನು ತೊರೆದಳು.
ಇಲ್ಲಿ ಇನ್ನೂ ಹೇಳುವುದೇನೂ ಉಳಿಯಲಿಲ್ಲ. ಅಲ್ಲಾವುದ್ದೀನನು ಮಾಲಿಕ್ ಕಾಫರನ ಮುಖಾಂತರವಾಗಿ ಮಾಡಿದ ಭೇದೋಪಾಯವು ಫಲಿಸಿತು. ದೇವಗಿರಿಯ ದುರ್ಗವು ಅಲ್ಲಾವುದ್ದೀನನ ವಶವಾಯಿತು. ಮಿಕ್ಕ ಅ೦ಶವೆಲ್ಲಾ ಹಿಂದೂಸ್ಥಾನದ ಇತಿಹಾಸದಲ್ಲಿ ವಿಸ್ತರಿತವಾಗಿದೆ.
ಶೈಲಿ ನಿ. ಚಂದ್ರನು ಗಗನಾಂಗಣದಲ್ಲಿ ಮೆಲ್ಲಮೆಲ್ಲನೆ ಸಂಚರಿಸುತ್ತಿದ್ದನು; ಒಮ್ಮೆ ಸಾಂದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿ ಲೌರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸಂಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ ಕೋಟೆಯ ಹಾಳುಕೊಂಪೆಯ ಮೇಲೆ ಬಿದ್ದು ನಗುತ್ತಲಿತ್ತು; ನವೀನ ದುರ್ಗದ ಪ್ರಾಕಾರಗಳು ಶ್ವೇತಶಿಲೆ ಯಿಂದ ನಿರ್ಮಿತವಾದಂತೆ ಕಂಗೊಳಿಸುತ್ತಲಿದ್ದು ವು. ನಗರೋಪ ಕಂಠ ದಲ್ಲಿದ್ದ ರಾಜಪುತ್ರರ ಮಂದಿರಗಳೂ ಮನಸಬಾರರ ಮಹಲುಗಳೂ ಇನ್ನು ಶುಭ್ರವಾಗಿ ರಂಜಿಸುತ್ತಲಿದ್ದು ವು. ಸಮೀಪದಲ್ಲಿ ಯಮುನಾನದಿಯು ಮಂಜುಘೋಷಿಣಿಯಾಗಿ ಪ್ರವಹಿಸುತಲಿತ್ತು. ತರಂಗಹಿಲ್ಲೊಲದಿಂದ ನದಿಯಲ್ಲಿ ಚಂದ್ರನು ಸಹಸ್ರಬಿ೦ಬನಾಗಿ ಬೆಳಗುತ್ತಿದ್ದನು. ಒಂದೆರಡು ದೋಣಿಗಳು ನದಿಯ ಮೇಲೆ ಕ್ರೀಡಿಸುತ್ತಲಿದ್ದು ವು. ನದಿಯ ದಡದಲ್ಲಿ ಮನುಷ್ಯ ಸಂಚಾರವಿರಲಿಲ್ಲ. ತರುಣನೊಬ್ಬನು ನದಿಯ ತೀರವನ್ನು ಬಿಟ್ಟು ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲಮೆಲ್ಲನೆ ಕಾಲಿಡುತ್ತ, ಒಮ್ಮೆ ಬೇಗಬೇಗನೆ ನಡೆಯುತ್ತಿದ್ದನು. ಮಂದವಾದ ಯಮುನಾಜಲದಲ್ಲಿ ಪ್ರತಿಬಿಂಬಿತವಾದ ಚಂದ್ರನ ಸೌಂದರ್ಯವನ್ನು ವಿನಂದಿ ಸುವುದಕ್ಕೆ ನಿಲ್ಲದೆ, ಯುವಕನು ರಾಜಮಾರ್ಗವಾಗಿ ಹೋಗುತ್ತಿದ್ದನು. ಅಲ್ಲಲ್ಲಿ ಮನೆಗಳ ಮಹಡಿಗಳನ್ನು ನೋಡುತ್ತ ಮುಂದರಿಸುತ್ತಿದ್ದನು. ತರುಣನು ಯಾರೆಂದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆಕಾರದಲ್ಲಿ
- 20 - ಕುಳ್ಳನು, ಆಜಾನುಬಾಹುವು; ದೇಹದಲ್ಲಿ ಬಲಾಡ್ಯನು; ದೃಢಕಾಯನು; ಅವನ ನಡಿಗೆಯು ರಾಜಗಮನದಂತಿರಲಿಲ್ಲ. ಹೆಜ್ಜೆಯನ್ನು ದೂರವಿಡುತ್ತ
ಯುವಕನು ರಾಜಮಾರ್ಗದ ಕೊನೆಯ ತನಕ ಏಕಾಕಿಯಾಗಿ ಹೋದನು. ಹಠಾತ್ತಾಗಿ ಒಂದು ನಿಮಿಷ ಮಾರ್ಗದ ಮೇಲೆ ತಳುವಿದನು. ಚಂದ್ರನು ಅಸ್ತಮಿಸುವಂತಿದ್ದನು. ಎಲ್ಲಿಂದಲೋ ಮಧುರವಾದ ಸ್ವರವು ವಾಯು ತರಂಗಗಳಲ್ಲಿ ತೇಲಿ ಬರುತ್ತಲಿತ್ತು. ಸ್ವರವು ಎಲ್ಲಿಂದ ಬರುವುದೆಂದು ನೋಡುವುದಕ್ಕೆ ತರುಣನು ಕುತೂಹಲಚಿತ್ತನಾಗಿ ಹಿಂದುಮುಂದು ನೋಡಿ ದನು. ಒಡನೆ ಒಂದು ಮಂದಿರದ ಉಪ್ಪರಿಗೆಯಿಂದ ಸ್ವರವು ಬೀಸುತ್ತಿರುವು ದೆಂದು ಬೋಧೆಯಾಗಿ, ಯುವಾನನು ಮಂದಿರದ ಕೆಳಗೆ ಬಂದು ನಿಂತನು. ಹೃದಯಂಗಮವಾದ ಗೀತ ಸ್ವರವು ಫಕ್ಕನೆ ಸ್ತಬ್ದವಾಯಿತು. ಅಧ್ರ ಗನು ಮಾರ್ಗದ ಮೇಲೆ ನಿಲ್ಲುವುದು ಸರಿಯಲ್ಲವೆಂದು ಬಗೆದು ಮಹಲಿನ ಬಲಗಡೆ ಯಲ್ಲಿ ಬೆಳೆದಿದ್ದ ಮರದ ಹಿ೦ದುಗಡೆಯಲ್ಲಿ ಸರಿದು ನಿಂತನು. ಮರದ ಟೊಂಗೆಯೊಂದು ಉಪ್ಪರಿಗೆಯ ಗೋಡೆಯ ವರೆಗೆ ವಿಸ್ತರಿಸಿತ್ತು. ಹಾಡು ಉಪ್ಪರಿಗೆಯಿಂದ ಪುನಃ ಕೇಳಿಸಿತು.
ಇಚ್ಛಿತ ವರನನು | ತುಚ್ಛಕರಿಸುತ
ಮೈಚ್ಛನ ವರಿಸೆಂದು | ಉಚ್ಚರಿಪನೆ ತಂದೆ. ಯುವಾ ಪುರುಷನು ಕ್ಷು ಧಿತನಯನನಾಗಿ ಕಾಲಬೆರಳ ಮೇಲೆ ನಿಂತು ತನ್ನ ಕೊರಳನ್ನು ನಿಲ್ಲಿ ನೋಡಿದನು. ಯಾರ ಮುಖವೂ ಅವನ ದೃಷ್ಟಿ ಪಥದಲ್ಲಿ ತೋರಲಿಲ್ಲವೆಂದು ಚಿಂತಿಸಿ, ಯುವಕನು ಪಕ್ಕದಲ್ಲಿದ್ದ ಮರವನ್ನು ಹತ್ತಿದನು. ಗೀತದ ಮುಂದಿನ ಮಾತುಗಳು ಸರಿಯಾಗಿ ಕೇಳಿಸುತ್ತಲಿದ್ದು ವು.
ಎಲ್ಲವ ತೊರೆವೆನು | ನಲ್ಲನ ಸೇರ್ವೆನು
ಕಲ್ಲಿನ ಕಾಡೊಳು | ನಿಲ್ಲದೆ ಪೋಗುವೆ. !! ಯುವಕನು ಟೊಂಗೆಯನ್ನು ಹತ್ತಿ, ತೆರೆದಿದ್ದ ಕಿಟಕಿಯ ಇದಿರಾಗಿ ತನ್ನ ಮುಖವನ್ನು ಇಟ್ಟು ಇಣಿಕಿ ನೋಡಿದನು. ಉಪ್ಪರಿಗೆಯ ಕೊಟ್ಟಡಿ ಯಲ್ಲಿ ದೀಪವೊಂದು ಉರಿಯುತ್ತಲಿತ್ತು. ಅದರ ಬಳಿಯಲ್ಲಿ ಮತ್ತೊಂದು ದೀಪವು ಪ್ರಜ್ವಲಿಸುತ್ತಲಿತ್ತು. ಅನಂಗರಂಗಮಯವಾದ ಅ೦ಗನಾರತ್ನ ಪ್ರದೀಪ.
- 27 - ಯುವಕನು ಸದ್ದಾಗದಂತೆ ಮರದ ರೆಂಬೆಯಲ್ಲಿ ಅವಿತುಕೊಂಡು ಕಣ್ಣಿಟ್ಟು ನೋಡಿದನು. ರಮಣಿಯ ಹಾಡು ತೀರಿತು. ಕಾಮಿನಿಯು ಚಿಂತಾಕುಲಿತಳಾದಂತೆ ಪರ್ಯ೦ಕದ ಮೇಲೆ ಒರಗಿದ್ದಳು. ಅವಳ ಅವ ಕುಂಠರಹಿತವಾದ ಮುಖವು ಬಿಳೋರಿ ಹೋಗಿತ್ತು, ನನೆದ ಕನ್ನಡಿಯಂತೆ ತೋರುವ ಕಪೋಲವೊಂದು ಕೈದಳವನ್ನು ಆಧರಿಸಿತ್ತು. ಸ್ವಪ್ನ ಸಾಮ್ರಾಜ್ಯದ ಸುಖವನ್ನು ಅನುಭವಿಸುವಂತೆ ಅಧರಗಳಲ್ಲಿ ಮಂದಸ್ಮಿತವು ಅಡಗಿತ್ತು. ಹೊಳೆಹೊಳೆವ ಸೀರೆಯ ಅಂಚಲವು ವಕ್ರೋಭಾಗದಿಂದ ಮೆಲ್ಲಮೆಲ್ಲನೆ ಓಸರಿಸುತ್ತಲಿತ್ತು. ಅವಳ ಅರ್ಧೋಲಿತವಾದ ನಯನಗಳ ಕಾಂತಿ ಯನ್ನು ಕಳುವುದಕ್ಕೆ ದೀಪದ ಕುಡಿಯು ಸಡಗರಿಸುತ್ತಲಿತ್ತು. ದೀಪದ ಅಡಿಯಲ್ಲಿ ಪುಸ್ತಕವೊಂದು ಅರೆತೆರೆದಿತ್ತು. ರಮಣಿಯ ರೂಪಲಾವಣ್ಯಗ ಳೇನೂ ಅಷ್ಟು ಅಸಾಧಾರಣವಾಗಿರಲಿಲ್ಲ. ಆದರೆ ಅವಳ ಮುಖದಲ್ಲಿಯೂ
ಮೈ ಯಲ್ಲಿಯೂ ಒಂದು ಪ್ರಾಕಾರವಾದ ಚಿತ್ತಾಕರ್ಷಕವಾದ ಸೌಂದರ್ಯವು ಕವಿದಿತ್ತು. ಇವಳಿಗಿಂತಲೂ ರೂಪವತಿಯವರಾದ ಸ್ತ್ರೀಯರು ಎಷ್ಟೋ ನೋಡಸಿಕ್ಕುವರು. ಈ ಮುಖದಲ್ಲಿದ್ದ ಮಾಧುರ್ಯವೂ ಮೋಹನಶಕ್ತಿಯೂ ನೋಡಸಿಕ್ಕದು. ಪ್ರಥಮದೃಷ್ಟಿಗೆ ಅವಳ ಮುಖವು ಮನಸ್ಸಿನಲ್ಲಿ ಕನಿಕರ ನನ್ನ ದುಃಖವನ್ನೂ ಉಂಟುಮಾಡುವುದು. ಮುಖವನ್ನು ದರ್ಶಿಸಿದಷ್ಟಕ್ಕೆ ಅಂತರ್ಯದಲ್ಲಿದ್ದ ಕೋಮಲಭಾವವು ಪರಿಸ್ಪುಟವಾಗಿ ನೋಟಕನ ಕಣ್ಮನ ವನ್ನು ಸೆಳೆದುಬಿಡುವುದು ಎಷ್ಟು ನೋಡಿದರೂ ಮನಸ್ಸು ತೃಪ್ತಿಗೊಳ್ಳದು, ಶಾಂತವಾಗದು. ಅವಳ ಪ್ರಥಮದರ್ಶನದಿಂದ ನೋಟಕನ ಮನಸ್ಸಿನಲ್ಲಿ ಉಂಟಾಗುವ ಸಂತೋಷವು ಪರಕ್ಷಣದಲ್ಲಿಯೇ ಅಲ್ಲಲ್ಲಿ ತೋರಿತೋರದ ವ್ಯಸನಬಿಂದುಗಳಿಂದ ಹೆಪ್ಪುಗಟ್ಟಿ ಹೋಗುತ್ತಲಿತ್ತು. ವೈಶಾಖ ಸೂರ್ಯನ ಆತಸದಿಂದ ಕಂದಿದ ಕುಂದಿದ ಕೋಮಲವಾದ ಬಳ್ಳಿಯೂ ದವಾನಲದ ಉಷ್ಣ ಸ್ಪರ್ಶದಿಂದ ಬಾಡಿ ಬಸವಳಿದ ಕರ್ಣಿಕಾರ ಪುಷ್ಪವೂ ಯಾವ ಪ್ರಕಾರ ದಲ್ಲಿ ವಿಷಾದ ವಿನೋದಗಳನ್ನು ಮನಸ್ಸಿನಲ್ಲಿ ಒಂದೇ ಸಲ ಉಂಟುಮಾಡು ವುವೋ ಆ ಭಾವವನ್ನೇ ಈ ಸುಂದರಿಯ ದರ್ಶನವು ಪ್ರೇಕ್ಷಕರ ಹೃದಯ ದಲ್ಲಿ ಉಂಟುಮಾಡುತ್ತಲಿತ್ತು.
ಯುವಕನು ದೀಪದ ಜ್ಯೋತಿಯಿಂದ ಇನ್ನೂ ಉಜ್ವಲವಾಗಿ ತೋರುವ
-
28
-
ಮುಖವನ್ನು ಸ್ವಲ್ಪ ಹೊತ್ತು ದೃಷ್ಟಿಸುತ್ತ ತನ್ನ ತುಟಿಯೊಳಗೆನೇ ಏನನ್ನೂ ಅನ್ನುತ್ತಿದ್ದನು. ಫಕ್ಕ “ಶೈಲಿನಿ” ಎಂಬ ಮಾತು ಅವನ ಬಾಯಿಂದ ಎಚ್ಚರ ವಿಲ್ಲದೆ ಕೆಳಕ್ಕೆ ಬಿದ್ದಿತು. ನಿಶ್ಯಬ್ದ ವಾದ ಕೊಟ್ಟಡಿಯೊಳಗೆ ಶೈಲಿನಿ ಎಂಬ ಪದವು ಪ್ರತಿಧ್ವನಿತವಾಯಿತು. ವೃಕ್ಷಾರೋಹಿಯು ಏನೆಂದನೆಂದು ಅರಿಯದೆ ಅಳುಕಿದನು. ಪುನಃ ಯುವಾಪುರಷನು “ಶೈಲಿನಿ!” ಎಂದು ಕೂಗಿ ಕರೆದನು. ಒಡನೆ ರಮಣಿಯು ಎಚ್ಚರವಾದಂತೆ ಕಣೇ ರಸಿ, ತನ್ನನ್ನು ಯಾರೋ ಕೂಗಿ ಕರೆಯುವರೆಂದು ಎಂದು ಎಣಿಸಿ ಸುತ್ತಲೂ ನೋಡಿದಳು. ಕಿಟಕಿಯ ಕಡೆ ಯಿಂದ ಶೈಲಿನಿ ಎಂಬ ಸ್ವರವು ಮತ್ತೊಮ್ಮೆ ಕೇಳಿಸಿತು. ಯುವತಿಯು ಸಂತೋಷಚಿತ್ತಳಾಗಿ ತನ್ನ ಸೀರೆಯ ಸೆರಗನ್ನು ಸರಿಗೊಳಿಸುತ್ತ, ಗವಾಕ್ಷದ ಕಡೆಗೆ ಹೆಜ್ಜೆಯನ್ನಿಟ್ಟಳು, ನಿದ್ರಾಭಂಗದಿಂದಲೋ ಭಯದಿಂದಲೋ ಆಯಾಸದಿಂದಲೊ ತರುಣಿಯ ಕಾಲು ತಡವರಿಸುತ್ತಲಿತ್ತು. ಅವಳು ತನ್ನ ಇದಿರಾಗಿ ಬರುವುದನ್ನು ನೋಡಿ ವೃಕ್ಷಾರೋಹಿಯು “ಜೈಲಿನಿ”! ದಾರಿಗ ನೊಬ್ಬನು ಇರುಳೆಲ್ಲಾ
ಶೈಲಿನಿಯು ಕೈ ಸನ್ನೆ ಮಾಡುವುದನ್ನು ನೋಡಿ ಯುವಕನ ಮಾತು ಮುಂದುವರಿಸಲಿಲ್ಲ. ಅವಳು ಗವಾಕ್ಷದ ಬಳಿಗೆ ಬಂದು ಮುಖವನ್ನು ಹೊರ ಚಾಚಿ “ನೀನು ಇಷ್ಟು ಸಾಹಸವನ್ನು ಏಕೆ ಮಾಡಿದೆ?” ಎಂದು ಕೇಳಿದಳು.
ಯುವಕ:- “ನಿನಗೋಸ್ಕರ.”
ಶೈಲಿನಿ:- “ನನಗೋಸ್ಕರ ನೀನು ಅಪಾಯಕ್ಕೆ ಗುರಿಯಾಗಬೇಕೆಂದು ನಾನು ಬಯಸುವುದಿಲ್ಲ.”
ಯುವಕ:- “ಅಪಾಯಕ್ಕೆ ಈ ಮರಾಟನು ಹೆದರುವನೇ? ನನಗೆ ಅಪಾಯ ಬರುವುದು ಯಾರಿಂದ? ನಿನ್ನ ತಂದೆಯಿಂದಲೇ?”
ಶೈಲಿನಿಯು ಮನಗುಂದಿದವಳಾಗಿ, “ಅಪಾಯವು ಯಾರಿಂದಲಾದರೂ ಬರಬಹುದು. ನಿಶೆಯಲ್ಲಿ ಈ ಎತ್ತರವಾದ ಮರವನ್ನು ನೀನು ಹೇಗೆ ಹತ್ತಿದೆ?”
ಯುವಕ:-(ಕಾಮದೇವನೇ ನನ್ನ ಬೆಂಬಲಕ್ಕೆ ಇದ್ದನು. ಅಂದು ನೀನು ಪ್ರತಾಪಗಡದಲ್ಲಿ ಅರಮನೆಯ ಗೋಡೆಯನ್ನು ಹೇಗೆ ಏರಿ ಬಂದೆ?”
ಶೈಲಿನಿಯು ಒಮ್ಮೆ ಮಾತನಾಡಲಿಲ್ಲ. ಬಳಿಕ “ಅದು ಹೋಗಲಿ, ಈಗ ನೀನು ಬಂದುದು ಅನುಚಿತವಾಯಿತು” ಎಂದಳು.
-
29
-
ಯುವಕ:-“ಹೇಗೆ ಅನುಚಿತವಾಯಿತು?”
ಶೈಲಿನಿ:- “ನನ್ನ ತಂದೆಯು ನನ್ನೊಡನೆ ಮಾತನಾಡುವುದಕ್ಕೆ ಈಗಲೇ ಇಲ್ಲಿಗೆ ಬರುತ್ತಿರುವನು. ನಿನ್ನನ್ನು ನೋಡಿಬಿಟ್ಟರೆ, ನಮ್ಮ ಅವಸ್ಥೆ ಏನಾಗುವುದೋ ಎಂದು ಭಯವಾಗುತ್ತಿದೆ.”
ಯುವಕ:-“ರಜಪೂತ ಸ್ತ್ರೀಯು ಮರಣಕ್ಕೆ ಭೀತಳಾಗುವಳೇ? ಸಖೀ! ಶೈಲಿನಿ! ನಾನು ಮರಣಕ್ಕೆ ಸಿದ್ಧನಾಗಿರುವೆನು, ಆದರೆ ಸಾಯುವ ಮೊದಲು ನಿನ್ನೊಡನೆ ಎರಡು ಮಾತುಗಳನ್ನು ಕೇಳಬೇಕೆಂದಿರುವೆನು.”
ಯುವಕನು ಕಾಂಕ್ಷಿ ತಸ್ವರವನ್ನು ಕೇಳಿ ಶೈಲಿಸಿಯು ಏನೋ ಯೋಚಿ ಸುತ್ತ ನಿಂತುಬಿಟ್ಟಳು. ತಂದೆಯು ತನ್ನನ್ನು ನೋಡಲು ಬರುವ ಸಮಯವು ಸಮಿಾಪಿಸಿತೆಂದು ತಿಳಿದು ಕಾತರಳಾದಳು. ಯುವಕನೊಡನೆ ಪ್ರಣಯ ಸಲ್ಲಾಪಕ್ಕೆ ಸಮಯವು ಅನುಚಿತವಾಯಿತೆಂದು ಕಾತರಳಾದಳು. ತಂದೆಯು ಇದುವರೆಗೆ ತನ್ನನ್ನು ನೋಡಲು ಬಾರದೆ ಇದ್ದುದರಿಂದ, ಇನ್ನೂ ಮೇಲೆ ಬರ ಲಾರನೆಂದು ಒಮ್ಮೆ ನಿಶ್ಚಿಸಿ ಶೈಲಿನಿಯು ಯುವಕನನ್ನು ಒಳಕ್ಕೆ ಬರುವಂತೆ ಕೈ ಸನ್ನೆ ಮಾಡಿದಳು. ಒಡನೆ ಶಿರೀಶಪುಷ್ಪ ಸದೃಶವಾದ ತನ್ನ ಹಸ್ತವನ್ನು ಹೋರನೀಡಿದಳು. ಯುವಕನು ಪಾಣಿಗ್ರಹಣ ಮಾಡಿ ಕೃತಕೃತ್ಯನಾದನು.
ಯುವಕನು ಶೈಲಿನಿಯ ಕೈಯನ್ನು ಬಿಗಿಹಿಡಿದು ಪ್ರಿಯೆ ! ನನ್ನನ್ನು ಪ್ರೀತಿಸುವೆಯಾ?” ಎಂದು ಕೇಳಿದನು.
ಶೈಲಿನಿಯು ಎಲ್ಲಿಯೋ ಕಿವಿಗೊಟ್ಟ೦ತೆ ನೋಡುತ್ತ ಅಪ್ರತಿಭಳಾಗಿ ನಿಂತುಬಿಟ್ಟಳು.
ಯುವಕ:-“ಶೈಲಿನಿ! ನಿನ್ನ ಇಚ್ಛಿತ ವರನು ಯಾರು? ನಿನ್ನ ತ೦ದೆಯು ಯಾರನ್ನು ತುಚ್ಛಕರಿಸುವನು? ನನ್ನ ಸ್ನೇ?”
ಶೈಲಿನಿಯು ಏನು ಹೇಳಬೇಕೆಂದು ತಿಳಿಯಲಾರದೆ ಹೋದಳು. ಕೂಡಲೇ “ಶೈಲಿ! ಶೈಲಿ!” ಎಂದು ಕೆಳಗಿನಿಂದ ಯಾರೋ ಕೂಗಿ ಕರೆಯು ವುದು ಕೇಳಿಸಿತು. " ಶೈಲಿನಿಯು ಯುವಕನು ಕರನಾಶದಿಂದ ಸಡಿಲಿಸು ವುದಕ್ಕೆ ತವಕಗೊಂಡು, ಕೈಯನ್ನು ಹಿಂದೆ ಸೆಳೆದುಬಿಟ್ಟಳು. “ನನ್ನ ತಂದೆಯು ಈಗಲೇ ಮೇಲೆ ಬರುವನು. ಇನ್ನು ನಿಲ್ಲಬೇಡ” ಎಂದಳು. ಯುವಕನು “ತಂದೆ ಹೀಗಿಸುವುದು ನನ್ನನ್ನೇ?” ಎಂದು ಪುನಃ ಕೇಳಿದನು.
– 30 - ಮಹಡಿಯ ಮೆಟ್ಟಿಲು ಹತ್ತಿ ಯಾರೋ ಬರುವ ಸದ್ದು ಕೇಳಿಸಿತು. ಶೈಲಿನಿಯು ಯುವಕನೊಡ ಮೆಲ್ಲನೆ ಏನನ್ನೂ ಹೇಳಿಬಿಟ್ಟಳು. “ನವಮಿ.... ರಾತ್ರಿ.....ಶಿಬಿರದ.....ಬಳಿಯಲ್ಲಿ” ಎಂಬ ಮೊದಲಿನ ಶಬ್ದ ಗಳು ಮಾತ್ರ ಯುವಕನ ಕಿವಿಯಲ್ಲಿ ಇಳಿದುವು. ಯುವಕನು ಮನಸ್ಸಿನಲ್ಲಿ ಸಂಪೂರ್ಣ ವಾದ ಅರ್ಥವನ್ನು ಮಾಡಿ, ವೃಕ್ಷದಿಂದ ಕೆಳಕ್ಕೆ ಇಳಿಯಲು ಸಿದ್ಧನಾದನು. ಪುನಃ ಶೈಲಿನಿಯ ಪ್ರಫುಲ್ಲಿತವಾದ ಮುಖಸಂದರ್ಶನವನ್ನು ಮಾಡಲೆಳಸಿ, “ನನ್ನನ್ನೇ” ಎಂದು ಒತ್ತಿ ಹೇಳಿದನು.
ಶೈಲಿನಿಯು ಮನಸ್ಸಿನಲ್ಲಿಯೇ “ವರಿಸುವೆನು” ಎಂದು ಅಂದು ಕೊಂಡಳು. ತತ್ ಕ್ಷಣದಲ್ಲಿ ಉಪ್ಪರಿಗೆಯ ಬಾಗಿಲನ್ನು ತೆರೆದು ಯಾರೋ ಒಬ್ಬನು ಒಳಕ್ಕೆ ಬಂದನು. ಬಂದವನು ಶೈಲಿನಿಯ ತಂದೆ; ರಾಠೋರ್ ಸಂಸ್ಥಾನದ ರಾಜನಾದ ರಾಜಸಿಂಹನು,
ಈ ಕಥಾ ಕಾಲದಲ್ಲಿ ಅವರಂಗಜೇಬನು ಡಿಲ್ಲಿಯ ಸವಾಟನಾಗಿದ್ದನು. * ಅವರಂಗಜೇಬನ ಕಠೋರ ಶಾಸನದಿಂದ ಭಾರತವರ್ಷದಲ್ಲಿ ಸರ್ವತ್ರ ಭೀತಿಯ ಆತಂಕವೂ ಪಸರಿಸಿದ್ದು ವು.” ಅವನ ಕ್ರೂರವಾದ ಅಧಿಕಾರ ಜಂಝನಿಲನಿಂದ ಪ್ರಚಲಿತವಾದ ಭಾರತಸಾಗರದ ಜಲದಲ್ಲಿ ರಾಜ ಪುತ್ರರ ಸ್ವಾತಂತ್ರವು ಮುಳುಗಿ ಹೋಗುತ್ತಲಿತ್ತು. ಸ್ವಾಧೀನತೆಯ ಪ್ರಧಾನಭಕ್ತ ನಾದ, ಅಂಬರಸಂಸ್ಥಾನದ ಅಧಿಪತಿಯಾದ ಜಯಸಿಂಹನು ಢಿಲ್ಲಿಯ ಸಿಂಹಾ ಸನದ ಬಳಿಯಲ್ಲಿ ಬದ್ದ ಹಸ್ತನಾಗಿ ನಿಲ್ಲಲು ಒಡಂಬಟ್ಟನು! ಮಾರವಾಡದ ಯಶವಂತಸಿಂಹನಿಗೂ ರಾಠೋರದ ರಾಜಸಿಂಹನಿಗೂ ಭೇದವನ್ನು ತಂದಿಕ್ಕಿ, ಇಬ್ಬರನ್ನೂ ಅವರಂಗಜೇಬನು ತನ್ನ ಸಿಂಹಾಸನಕ್ಕೆ ಅಲಂಕಾರಕಲಶಗಳ ನ್ನಾಗಿ ಮಾಡಿದನು. ಉತ್ತರ ಹಿಂದುಸ್ಥಾನದಲ್ಲಿ ಸಿಕ್ ಜನರು ತಮ್ಮನ್ನು ಬಂಧಿಸಿದ ಶೃಂಖಲಗಳನ್ನು ಕಳಚುವುದಕ್ಕೆ ಹುರಿದುಂಬಿ ಒಟ್ಟುಗೂಡುತ್ತ ಲಿದ್ದರು. ದ೩ಣದಲ್ಲಿ ಸ್ವತಂತ್ರವಾಗಿದ್ದ ಗೊಲ್ಗೊಂಡ ಮತ್ತು ಬಿಜಾಪುರ ಸಂಸ್ಥಾನಗಳು ಕ್ಷೀಣವಾಗಿ ಅಸ್ತಮಿಸುವಂತಿದ್ದುವು. ಲೋಕೈಕವೀರನಾದ ಶಿವಾಜಿಯು, ಮಹಾರಾಷ್ಟ್ರ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಹಿಂದುಗಳನ್ನು ಏಕತ್ರವಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಅವನ ಪ್ರಯತ್ನಗಳಿಂದ ಮೊಗಲ ಸಾಮ್ರಾಜ್ಯದ ಕೀಲು ಸಡಿಲಾಗುತ್ತಾ ಬಂದಿತು. ಭೂಕಂಪನದಿಂದ
42-51=============================

52-61=======================
L
- 41 - ಗೌರವದ ಅಪೇಕ್ಷೆ ಇದ್ದಲ್ಲಿ ನಾವು ಈ ಯಶವಂತಸಿಂಹ, ರಾಮಸಿಂಹ, ಮೊದಲಾದವರೊಡನೆ ಕುಳಿತುಕೊಳ್ಳುವೆವು ಅಲ್ಲದೆ, ಪ್ರಕೃತದಲ್ಲಿ ಅಂತಹ ಬಹುಮಾನವನ್ನು ಆಶಿಸುವುದಿಲ್ಲ” ಎಂದನು.
ಬಾದಶಹನ ಪಕ್ಕದಲ್ಲಿದ್ದ ರಜಪೂತರೆಲ್ಲರೂ ಅಧೋವದನರಾದರು. ರಾಜಸಿಂಹನು ಮಾತನಾಡಲಾರೆವೆ ಮೊರೆ ತಗ್ಗಿಸಿ ನಿಂತನು. ಬಾದಶಹನು ಶಿವಾಜಿ ಆಡಿದ ಭಾಷೆಯ ಜ್ಞಾನಶೂನ್ಯನಾದರೂ, ಸಂದರ್ಭಾನುಸಾರ ದಿ೦ದ ಅದರ ಅರ್ಥವನ್ನು ತಿಳಿದು ರಾಜಸಿಂಹನೊಡನ “ಇದೇನು ಸಂಗತಿ” ಎಂದು ಕೇಳಿದನು.
ರಾಜಸಿಂಹನು ನತಶಿರಸ್ಕನಾಗಿ “ವನಸಿ೦ಹವು ಬೋನಿನಲ್ಲಿ ಸಿಕ್ಕಿ ಕೊಂಡಿದೆ” ಎಂದನು.
ಅವರಂಗಜೇಬನು ನಗುತ್ತ, “ಅದಕ್ಕೋಸ್ಕರ ಬೊಬ್ಬಿಡುತ್ತಿದೆಯೇ? ವನ್ಯ ಸ್ಥಿತಿಯಲ್ಲಿದ್ದಾಗ ಮೃಗಗಳನ್ನು ನೋಡುವುದು ಸರಿಯಲ್ಲ” ಎಂದನು.
ರಾಜಸಿಂಹನು “ಮೃಗವನ್ನು ಈಗ ನಾನು ಏನು ಮಾಡಲಿ?” ಎಂದು ಮೆಲ್ಲನೆ ಕೇಳಿದನು.
ಅವರಂಗಜೇಬ:- “ ಅದನ್ನು ಕೊಂಡುಹೋಗಿ 'ಶಾಂತವಾದ ಬಳಿಕ ಮರಳಿ ತರಬಹುದಷ್ಟೆ.”
ಈ ಸಂದರ್ಭದಲ್ಲಿ ಶಿವಾಜಿಯು ಅಲ್ಲಿ ನಿಲ್ಲಲಾರದೆ “ಆಮ್ಖಾಸ್ ಖಾನೆಯಿಂದ” ಹಿಂದೆರಳಿದ್ದನು. ಬಾದಶಹನಿಗೆ ನಮಸ್ಕಾರಮಾಡದೆ, ರಾಜಪುತ್ರರನ್ನು ಕಣ್ಣೆತ್ತಿ ನೋಡದೆ, ಅವನು ಹೋಗಿಬಿಟ್ಟನು. ಶಿವಾಜಿಯು ಅಕಸ್ಮಾತ್ತಾಗಿ ಅಲಕ್ಷ ವಾಗಿ ಅಸ್ಥಾನವನ್ನು ಬಿಟ್ಟು ಹೋದುದನ್ನು ನೋಡು ಇಲೇ, ಅವರಂಗಜೇಬನ ಕೋಪಕ್ಕೆ ಪಾರವಿರಲಿಲ್ಲ. ಆದರೂ ಸ್ಥಿರಚಿತ್ರ ನಾಗಿದ್ದು, ಮೌನವಾಗಿದ್ದು ತನ್ನ ಮುಖಮುದ್ರೆಯನ್ನು ಬೇರೆ ಮಾಡಲಿಲ್ಲ. ಶಿವಾಜಿಯು ಹೋದ ಬಳಿಕ ಅವನ ಪರಿಜನರು ಅವನ ಹಿಂದೆಯೇ ನಡೆದು ಬಿಟ್ಟರು. ಅವರಂಗಜೇಬನು ರಾಜಸಿಂಹನ್ನು ಕರೆದು, “ಹೋದವರು ಎಲ್ಲಿ ತಾನೇ ಇಳಿಯುವರು?” ಎಂದು ಕೇಳಿದನು.
ರಾಜಸಿಂಹ:- “ಖಾವಂದರ ಅಪ್ಪಣೆಯಂತೆ ಅವರಿಗೋಸ್ಕರ
- 42 - ಕೋಟೆಯ ಒಳಗೆ ಮೊದಲೇ ಸಜ್ಜುಗೊಳಿಸಿದ್ದ “ದಿಲ್ಖುಷ್” ಮಂದಿರ
ದಲ್ಲಿ ಇಳಿಸುವೆನು.”
ಅವರಂಗಜೇಬನು “ಹಾಗಾದರೆ ನಡೆ! ನಡೆ! ವಿಳಂಬಿಸಬೇಡ! ಶಿವಾಜಿಯನ್ನು ಅಲ್ಲಿ ಇಳಿಸಿದ ಬಳಿಕ ನಮ್ಮನ್ನು ನೋಡಲು ನೀನು ಅರ ಮನೆಗೆ ಬರಬೇಕಾಗುವುದು. ರಾಜಕಾರ್ಯಗೌರವವು ಹೆಚ್ಚಿದೆ” ಎಂದು ಹೇಳಿ ಸುಮ್ಮನಾದನು.
- ಶಿವಾಜಿಯು ಪೂರ್ವದ ಇಂದ್ರಪ್ರಸ್ತದ ಸೌಭಾಗ್ಯವನ್ನೆಲ್ಲಾ ನೋಡುತ್ತ ಆರ್ಯಪುತ್ರರ ಆಸ್ಥಾನದಲ್ಲಿ ಮೊಗಲರು ಸ್ವಚ್ಛೆಯಿಂದ ರಾಜದಂಡವನ್ನು ಪರಿಪಾಲಿಸುವುದನ್ನು ಯೋಚಿಸುತ್ತ, ರಾಜಪುತ್ರರಿಗೂ ಹಿಂದುಗಳಿಗೂ ತಗಲಿದ ಹೀನಾವಸ್ಥೆಯನ್ನು ಕುರಿತು ದುಃಖಿಸುತ್ತ ಮೆಲ್ಲಮೆಲ್ಲನೆ ಹೋಗು ತಿದ್ದನು. ರಾಜಸಿಂಹನು ತನ್ನ ಸವಿಾಪಸ್ಥನಾದುದನ್ನು ನೋಡಿ ಶಿವಾಜಿಯು “ಬಾದಶಹನು ಎಂತಹನು? ನಮ್ಮನ್ನೂ ಯಶವಂತಸಿಂಹನನ್ನೂ ಒಂದು ಮಾಡಿದನಲ್ಲ!” ಎಂದು ಕೇಳಿದನು.
ರಾಮಸಿಂಹನು “ಅರಮನೆಯಲ್ಲಿದ್ದಾಗ ಅಲ್ಲಿನ ಪದ್ದತಿಗನುಸಾರವಾಗಿ ನಡೆಯದೆ ಆಗಲಾರದು. ಅದು ಹೋಗಲಿ! ಈಗ ತಾವು ಸುರಕ್ಷಿತವಾಗಿ ತಮ್ಮ ಊರನ್ನು ಸೇರಿದರೆ ಸಾಕು! ನನ್ನ ಭಾರವನ್ನು ಇಳಿಸಿಕೊಂಡಂತಾಗು ವುದು” ಎಂದು ದೈನ್ಯದಿಂದ ಬೇಡಿಕೊಂಡನು.
ಶಿವಾಜಿಯು ಈ ಮಾತುಗಳ ಸೂಕ್ಷಾರ್ಧವನ್ನು ಗ್ರಹಿಸಿಕೊಂಡು, ತನಗೋಸ್ಕರ ಅಣಿಮಾಡಿದ್ದ ಮಂದಿರವನ್ನು ಸೇರಿದನು. ಈ ರೀತಿಯಾಗಿ ಕ್ರಿ. ಶಕೆಯ ೧೬೬೬ರಲ್ಲಿ ಶಿವಾಜಿಯು ಬಾದಶಹನಿಗೆ ಮೊತ್ತಮೊದಲು ಕೊಟ್ಟ ಸಂದರ್ಶನವು ಕಟ್ಟ ಕಡೆಯದಾಯಿತು.
ಯಾವ ದಿವಸದಲ್ಲಿ ಶಿವಾಜಿಯು ಅವರಂಗಜೇಬನ ಸಂದರ್ಶನಾರ್ಥ ವಾಗಿ ಹೋಗಿದ್ದ ನೋ ಆ ದಿವಸವೇ ಶೈಲಿನಿಯು ಕೋಟೆಯೊಳಗೆ ರಾಜ ಸಿಂಹನಿಗೋಸ್ಕರ ಸಜ್ಜುಗೊಳಿಸಿದ್ದ ಮಂದಿರದ ಉಪ್ಪರಿಗೆಯನ್ನು ಏರಿದ್ದಳು. ಶಿವಾಜಿಯು ಶಿಬಿರವನ್ನು ಮುಟ್ಟಿದನು. ಬಾದಶಹನ ಆಜ್ಞಾನುಸಾರವಾಗಿ ರಾಜಸಿಂಹನು ಅರಮನೆಗೆ ಹಿಂದೆರಳಿದನು. ಆದರೂ ಶೈಲಿನಿಯು ಮಹಡಿ ಯಿಂದ ಕೆಳಕ್ಕೆ ಇಳಿಯಲಿಲ್ಲ. ರಾತ್ರಿದೇವಿಯು ತನ್ನ ಭಯಾನಕ ರೂಪ
-
43
-
ವನ್ನು ಧರಿಸಿ ಬರುವಾಗ ಒಂದೆರಡು ನಕ್ಷತ್ರಗಳು ಆಕಾಶದಲ್ಲಿ ಕಣ್ಣು ಮಿಟುಕಿಸುತ್ತಿದ್ದು ವು. ಆದರೂ ಶೈಲಿನಿಯು ಅಲ್ಲಿಯೇ ನಿಂತಿದ್ದಳು. ತಂದೆಯು ಬಾದಶಹನನ್ನು ಬೀಳ್ಕೊಂಡು ಮರಳಿ ಬಂದನು. ರಾಜಸಿಂಹನು ಮಗಳನ್ನು ನೋಡುವುದಕ್ಕೆ ಮಹಡಿಯನ್ನು ಹತ್ತಿದನು. ಶೈಲಿನಿಯು ಸುಮ್ಮನೆ ನಿಂತಿರುವುದನ್ನು ಕಂಡು, “ಮಗು! ಇನ್ನೂ ನಿದ್ದೆ ಹೋಗಲಿಲ್ಲ ವೇಕೆ?” ಎಂದು ರಾಜಸಿಂಹನು ಕೇಳಿದನು.
ಶೈಲಿನಿ:- “ಅಪ್ಪಾ ನೀನು ಬರಲಿಲ್ಲವೆಂದು ಕಾದಿದ್ದೆನು.”
ರಾಜಸಿಂಹ:--“ಮುಜಮನು ನನ್ನ ಸಂಗಡ ಬರುವನೆಂದು ನೀನು ತಿಳಿದೆಯಾ??”
ಶೈಲಿನಿ:-“ಮು- ಆಜಮನು ಈ ಮನೆಗೆ ಏಕೆ ತಾನೇ ಬರುವನು? ಇದು 'ಶರಾಬ್ಖಾನೆ' ಅಲ್ಲವಲ್ಲಾ!?
ರಾಜಸಿಂಹನು ಹುಬ್ಬು ಗಂಟಿಕ್ಕಿ, “ಅಲ್ಲ! ಇದು ಶೈಲಿನಿ ಮಂದಿರ. ಇಲ್ಲಿಯೇ ಹೆಂಡತಿಯನ್ನು ನೋಡುವ ಹಾಗೆ ಅವನು ಬರಬೇಕೆಂದಿದ್ದನು.”
ಶೈಲಿನಿ ಪ್ರತಿಯಾಗಿ, “ಅಪ್ಪಾ! ಹೆಂಡ ತಿಂದುನೋಡುವುದಕ್ಕೆ ಇದು “ಶರಾಬ್ ಖಾನೆ' ಅಲ್ಲವೆಂದೇ ನಾನು ಹೇಳಿದೆನು.”
ರಾಜಸಿಂಹ:- “ ಅಮಾ! ಉದ್ದು ರುಂಟು ಮಾತಾಡಬೇಡ! ಸುಮ್ಮನೆ ಹಟಹಿಡಿದು ಹುಚ್ಚಳಾಗಬೇಡ, ಕಂಡೆಯಾ?”
ಶೈಲಿನಿ:- “ ಅಪಾ! ಹಟ ಹಿಡಿಯುವವರೆಲ್ಲರೂ ಹುಚ್ಚರಾದರೆ, ಲೋಕದಲ್ಲಿ ಬುದ್ದಿವಂತರು ಯಾರು ತಾನೇ ಇರುವರು?”
ರಾಜಸಿಂಹ:-"ಮಗು! ನಾನು ನಿನ್ನ ಅರ್ಥವನ್ನೆಲ್ಲಾ ತಿಳಿದಿರು ವೆನು: ಆದರೆ ಒಂದು ಮಾತನ್ನು ಮರೆಯಬೇಡ-ಮರಾಟರು ಶೂದ್ರರು”.
ಶೈಲಿನಿ:-“ನಾನು ಅದಕ್ಕಿಂತಲೂ ಹೆಚ್ಚಾಗಿ ಬಲ್ಲೆನು. ಮುಸ ಲ್ಮಾನರು ಮೆಚ್ಚರು”.
* ರಾಜಸಿಂಹನು ಉಚ್ಚಸ್ವರದಿಂದ “ಮಗು!, ಶೈಲಿನಿ! ನಾನು ನಿನ್ನನ್ನು ಯಾವಾಗ ಪ್ರತಾಪಗಡಕ್ಕೆ ಕೊಂಡು ಹೋದೆನೋ ಅಂದಿನಿಂದ ನೀನು ಹೀಗೆ ವರ್ತಿಸಲು ತೊಡಗಿದೆ. ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ನಿನ್ನ ಹಣೆಯಲ್ಲಿ ಬರೆದಂತಾಗುವುದು. ಈ ನಿನ್ನ ನಡತೆಯು ನಿನಗೆ ಹಿತ ಕರವಲ್ಲ. ನೀನು ಅನ್ಯರ ಹಸ್ತಗತಳಾಗಿ, ನಿನ್ನೊಡನೆ ನನ್ನನ್ನೂ ನಮ್ಮ
-
44
ಕುಲವನ್ನೂ ಅಳಿಸಿ ಬಿಡುವುದಕ್ಕಿಂತಲೂ, ನಾನು ಹೇಳಿದಂತೆ ನಡೆದುಕೊಳ್ಳು ವುದು ಒಳ್ಳೆಯದಲ್ಲವೇ? ಅವರಂಗಜೇಬನ ಬಂದಿಯಾದ ಶೂದ್ರ ಮರಾಟನ ಕಪಟಪ್ರೇಮಪಾಶದಲ್ಲಿ ನೀನು ಬಿದ್ದು ಸಾಯುವುದಕ್ಕಿಂತಲೂ ಸಾಕ್ಷಾತ್ {ಾರತ ಬಾದಶಾಹಿಯ ಪುತ್ರನಾದ, ವಿಕ್ರಮಸಂಪನ್ನನಾದ ಮುಆಜಮನ ಯಥಾರ್ಥ ಪ್ರಣಯಭಾಜನೆಯಾಗಿ, ಭಾಗ್ಯಶಾಲಿನಿ ಎನಿಸಿಕೊಳ್ಳುವುದು ಲೇ ಸಲ್ಲವೇ! ತುಚ್ಛನಾದ ಆ ಮಾವಳಿಗನೆಲ್ಲಿ? ರಜಪೂತ ಕನೈಯಾದ ಶೈಲಿನಿ ಎಲ್ಲಿ? ಕೆಲವು ದಿನಗಳಿಂದ ಈಚೆಗೆ ನಿನ್ನ ನಡತೆ ನನಗೆ ಅಸಹ್ಯವಾಗುತ್ತ ಬಂ ದಿದೆ. ಅನ್ನಾ ಹಾರಾದಿಗಳಲ್ಲಿ ಅಲಕ್ಷ್ಯ, ಮನೆಯವರ ಮೇಲೆ ಔದಾಸೀನ್ಯ, ನನ್ನೊಡನೆ ಅವಿಧೇಯತೆ, ಮು೦ಜಮನ ವಿಷಯದಲ್ಲಿ ತಾತ್ಸಾರ, ನಿನ್ನ ಆತ್ಮಸಂಭಾಷಣೆ, ನಿನ್ನ ಅಂತರಂಗ ಪಲಾಯನ- ಇವೆಲ್ಲವು ವಿಪರೀತವನ್ನು ಸೂಚಿಸುತ್ತಿವೆ. ಬಾದಶಹರ ರಾಜಕಾರ್ಯಗೌರವ, ಶಿವಾಜಿಯ ಆಗಮನ ಮುಜವನ ನಿರ್ಬಂಧ, ನಿನ್ನ ಹುಚ್ಚು ಹಟ- ಇವೆಲ್ಲವುಗಳಿಂದ ನನ್ನ
ಬುದ್ದಿ ಯು ಮು೦ಗಾಣದು” ಎಂದು ಹೇಳಿದನು.
ಶೈಲಿನಿಯು ಈ ವಾಕ್ಯ ಪರಂಪರೆಯಿಂದ ಕದಲದೆ, “ಅಪ್ಪಾ! ಶಿವಾ ಜಿಯು ಅವರಂಗಜೇಬನ ಬಂದಿ ಒಂದು ನೀನು ಹೇಳಿದೆ. ಅವಮಾನ ಮಾಡಿದ್ದು ಸಾಲದೆ ಅವನನ್ನು ಮೋಸದಿಂದ ಬಂದಿಯಾಗಿ ಮಾಡಿದೆನೇ? ಎಂದು ಕೇಳಿದಳು.
ರಾಜಸಿಂಹನು ಮೈದೆಗೆದು, “ಶಿವಾಜಿ ಬಂದಿಯಾಗಿರುವೆನಂದು ನಾನು ಹೇಳಿದೆನೇ? ನನ್ನ ಮನಸ್ಸು ಸರಿಯಾಗಿಲ್ಲ. ನಿದ್ದೆ ಗಣ್ಣುಗಳಿಂದ ಏನು ಹೇಳಿರುವೆನೆಂದು ಅರಿಯೆನು” ಎಂದು ಹೇಳಿ ಉಪ್ಪರಿಗೆಯಿಂದ ಇಳಿದು ಹೋ ದನು.
ಶೈಲಿನಿಯು ತಂದೆಯ ಮಾತುಗಳನ್ನು ಮನಸ್ಸಿನಲ್ಲಿ ಮಥಿಸುತ್ತ, ಕುಳಿ ತಲ್ಲಿಯೇ ಗೋಡೆಗೆ ಒರಗಿ ನಿದ್ದೆ ಹೋದಳು.
ರಾಜಸಿಂಹನು ಎಚ್ಚರ ತಪ್ಪಿ ಹೇಳಿದಂತೆ, ಶಿವಾಜಿಯು ದಿಲ್ಲಿಯಲ್ಲಿ ಸೆರೆಯಾಗಿದ್ದನು. ಶಿವಾಜಿಯು ತಪ್ಪಿಸಿಕೊಳ್ಳದಂತೆಯೂ, ರಾಜಪುತ್ರರೊ ಡನೆ ಒಳಸಂಚು ನಡೆಯಿಸದಂತೆಯೂ, ಅವರಂಗಜೇಬನು ಅವನ ಮೇಲೆ ಹೊಂಚು ಹಾಕಿದ್ದನು. ಆದರೆ ಈ ಪಹರೆಯಲ್ಲಿ ಶಿವಾಜಿಯ ಬಂಧನವು
*
45
-
ಸೂಚಿತವಾಗಿರಲಿಲ್ಲ. ಆದರೂ ಶಿವಾಜಿಯು ಕೋಟೆಯನ್ನು ದಾಟುವುದಾ ದರೆ, ಆವರಣಗಜೇಬನ ಸೈನಿಕರ ಕತ್ರಿಗಳು ಒರೆಯಿಂದ ಹಾರಲು ಸಿದ್ಧ ವಾಗಿದ್ದು ವು. ಮರು ದಿನಗಳಿಂದ ಮೊಗಲ್ ಸೈನಿಕರು ಆಯುಧಪಾಣಿ ಗಳಾಗಿ ಹಗಲಿರುಳು ತನ್ನ ಶಿಬಿರವನ್ನು ಬಿಡದೆ ಕಾಯುವುದನ್ನು ಶಿವಾಜಿಯು ತಿಳಿದುಕೊಂಡನು. ಆ ಮೈಗಾವಲಿನ ಅರ್ಧವನ್ನು ಶಿವಾಜಿಯು ತಿಳಿಯ ಹೋಗಲಿಲ್ಲ. ಈ ಸಂಕಷ್ಟಕರವಾದ ಸಮಸ್ಯೆಯಿಂದ ರಕ್ತಪಾತವಿಲ್ಲದೆ ಹೇಗೆ ಪಾರಾಗಬೇಕೆಂದು ಅವನು ಒಂದೆರಡು ದಿನ ತಾನೆ ವಿಚಾರಮಾಡಿ ದನು. ರಹಸ್ಯದಲ್ಲಿ ಪಲಾಯನ ಮಾಡುವುದಕ್ಕೆ ಅವನ ಬಳಿಯ ದಳವು ಅಧಿಕವಾಗಿತ್ತು; ಅವರನ್ನೆಲ್ಲಾ ಕಟ್ಟಿಕೊಂಡರೆ, ಪಲಾಯನದಲ್ಲಿ ಗುಟ್ಟು ನಿಲ್ಲಲಾರದು. ಬಹಿರಂಗ ಯುದ್ಧವನ್ನು ಮಾಡುವುದಕ್ಕೆ ದಳವು ಅಲ್ಪ ವಾ ಗಿತ್ತು; ಅಲ್ಪಸೇನೆಯನ್ನು ನಂಬಿ ಯುದ್ಧ ಮಾಡುವುದು ಹುಚ್ಚುತನವೆಂದು ಶಿವಾಜಿ ಎಣಿಸಿದನು.
ನಾಲ್ಕು ದಿನಗಳು ಕಳೆದುಹೋದುವು. ರಾಜಸಿಂಹನು ದಿನಕ್ಕೆ ಅನೇಕಾನರ್ತಿ ಮರಾಟರ ಪಾಳೆಯಕ್ಕೆ ಬಂದು ಹೋಗಿ, ಶಿವಾಜಿಗೆ ಬೇಕು ಬೇಕಾದುದನ್ನು ಒದಗಿಸುತ್ತ, ಆತನು ಉಳುಕೊ೦ಡ ಮ೦ದಿರದ ವಿಷಯ ವಾಗಿ ಬಹಳ ಶ್ರಮಗೊಳ್ಳುತ್ತ, ಶಿವಾಜಿಯ ಮಹಾ ಹಿತಚಿಂತಕನೆಂದು ನಟಿಸುತ್ತ ಇರುವುದನ್ನು ಶಿವಾಜಿಯು ತಿಳಿದುಕೊಂಡನು. ಅದಕ್ಕೆ ತಕ್ಕು ದಾದ ಪ್ರತಿಕಾರವನ್ನು ಮಾಡಲು ಉದ್ಯೋಗಿಸಿದನು ಅವನ ಸರ್ವ ವ್ಯಾಪಕ ಬುದ್ದಿಯ ಮುಂದೆ ಅವರಂಗಜೇಬನ ಪ್ರಯತ್ನಗಳೂ ರಾಜಸಿಂಹನ ಕಾರ್ಯಗಳೂ ಕುಂಠಿತವಾದುವು. ಈ ಸಂದರ್ಭದಲ್ಲಿ ಶಿವಾಜಿಯ ಕುಲದೇವತೆಯಾದ ಭವಾನಿಯು ಅವನ ಮೈಮೇಲೆ ಬಂದು, “ಶಿವಾ! ಹೆದರ ಬೇಡ! ಯಾವಾತನು ಜನನೀಜನ್ಮಭೂಮಿಯನ್ನು ಪ್ರೀತಿಸಿ, ಅದನ್ನು ಉದ್ಧಾರಮಾಡಲು ಪ್ರಯತ್ನಿ ಸುವನೋ, ಅವನು ನನ್ನ ಭಕ್ತನು, ಭಕ್ತರಲ್ಲಿ ಭಕ್ತನು. ಅವನಿಗೆ ಯಾವುದೊಂದು ಆಪತ್ತು ತಗಲಲಾರದು. ಅಂತಹ ನನ್ನು ಹಾಳುಮಾಡಲು ಬಗೆದವರು ಆ ದೇಶವತ್ಸಲನ ವೈಭವ ಪ್ರಾಭವವನ್ನು ನೋಡುವುದಕ್ಕೆ ಉಳಿಯದೆ, ನರಕಕ್ಕೆ ಇಳಿದು ಹೋಗುವರು. ನೀನು ಭಯ ಪಡಬೇಡ! ನಿನ್ನ ಕೋರಿಕೆಗಳೆಲ್ಲವು ಸಿದ್ಧಿಸುವುವು” ಎಂದು ಹೇಳಿದಳು.
-
46 ° -
ಇದಾದ ಎರಡು ದಿನಗಳ ಬಳಿಕ ಶಿವಾಜಿಯು ರಾಜಸಿಂಹನನ್ನು ಕರೆಯಿಸಿ “ನಮ್ಮ ಸೈನಿಕರೆಲ್ಲರು ಮಾರ್ಗಾಯಾಸದಿಂದ ಮೊದಲೇ ಬಳಲಿ ದ್ದರು. ಇಲ್ಲಿನ ಹವೆಯು ನಮಗೆ ಹಿತಕರವಾಗುವುದಿಲ್ಲ. ಹಾಗೂ ನೀರೂ ಗಾಳಿಯೂ ನಮ್ಮೆಲ್ಲರ ಆರೋಗ್ಯವನ್ನು ಕೆಡಿಸಿರುವುವು. ಏನಾದರೂ ಪ್ರಮಾದ ಸಂಭವಿಸಿದರೆ, ನಾವು ಡಿಲ್ಲಿಗೆ ಬಂದುದೇ ಅಯೋಗ್ಯವಾಯಿತು ಎಂದು ತಿಳಿಯಬೇಕಾಗುವುದು. ನಮ್ಮ ಸೈನಿಕರೆಲ್ಲರು ನಮ್ಮ ದೇಹವನ್ನು ನೆರಳಿನಂತೆ ಹಿಂಬಾಲಿಸುವರು. ಆದರೂ ಅವರನ್ನೆಲ್ಲ ಊರಿಗೆ ಕಳುಹಿಸದೆ ನಿರ್ವಾಹವಿಲ್ಲ. ನಾವು ಅವರನ್ನೆಲ್ಲ ಹಿಂದಕ್ಕೆ ಕಳುಹಿಸಬೇಕೆಂದು ನಿಶ್ಚಿಸಿ ರುವೆವು. ಅವರಿಗೆ ಬಾದಶಹರ ಹೆಸರಿನಲ್ಲಿ - ರಹದಾರಿಗಳನ್ನು ಕೊಡಿಸ ಬೇಕಾಗಿ ಅಪೇಕ್ಷಿಸುತ್ತೇವೆ' ಎಂದು ಹೇಳಿದನು. ರಾಜಸಿಂಹನು ಬಾದಶಹ ನಿಗೆ ಶಿವಾಜಿಯ ಪ್ರಾರ್ಥನೆಯನ್ನು ಅರಿಕೆಮಾಡಿದನು. ಅವರಂಗಜೇಬನು ಆ ಪ್ರಾಸ್ತಾಪಕ್ಕೆ ಒಪ್ಪಿದನು. ಶಿವಾಜಿಯ ಆಪ್ತ ಅನುಚರರಲ್ಲದೆ ಮಿಕ್ಕವರೆ ಲ್ಲರು ಯಜಮಾನನ ನಿರ್ಬಂಧದಿಂದ ಊರಿಗೆ ಮರಳಿದರು.
ಸೈನಿಕರೆಲ್ಲರು ಹಿ೦ದೆರಳಿದ ಬಳಿಕ ಶಿವಾಜಿಯು ಮೈ ಯಲ್ಲಿ ಸ್ವಸ್ಥವಿಲ್ಲ ವೆಂದು ಹಾಸಿಗೆ ಹಿಡಿದು ಮಲಗಿದನು. ಶಿವಾಜಿಯ ಅಸುಸ್ಥತೆಯ ಸುದ್ದಿಯು ಡಿಲ್ಲಿಯಲ್ಲೆಲ್ಲಾ ಹಬ್ಬಿತು ಜನರು ಶಿವಾಜಿಯನ್ನು ನೋಡುವುದಕ್ಕೆ ಗುಂಪು ಗುಂಪಾಗಿ ಶಿಬಿರಕ್ಕೆ ಬಂದರು. ಯಾರನ್ನೂ ಮನೆಯೊಳಕ್ಕೆ ಬಿಡದಂತೆ ಶಿವಾಜಿಯು ಆಜ್ಞೆ ಮಾಡಿದ್ದನು. ರಾಜಸಿಂಹನಿಗೂ ಮುಜಮನಿಗೂ ಹೊರತು ಮಿಕ್ಕವರಿಗೆ ಶಿವಾಜಿಯನ್ನು ನೋಡುವುದಕ್ಕೆ ಅಪ್ಪಣೆಯಿರಲಿಲ್ಲ. ಇವರಿಬ್ಬರು ಸಹ ಶಿವಾಜಿಯು ನಿಜವಾಗಿ ಅಸ್ವಸ್ಥನಾಗಿರುವನೋ ಇಲ್ಲವೊ ಎಂದು ಸರಿಯಾಗಿ ತಿಳಿಯದೆಹೋದರು. ಶಿವಾಜಿಯ ಅಸ್ವಸ್ಥದಿಂದ ಎಲ್ಲರೂ ದುಃಖಿತರಾದರು. ಶಿವಾಜಿಯ ಕ್ಷೇಮವನ್ನು ಎಲ್ಲರೂ ವಿಚಾರಿಸುತ್ತಿದ್ದರು. ಶೈಲಿನಿಯು ತನ್ನ ತಂದೆಯು ಮನೆಗೆ ಬಂದ ಕೂಡಲೇ ಅದೇ ಪ್ರಶ್ನೆಯನ್ನು ಮಾಡುವಳು. ಶಿವಾಜಿಯು ಹೇಗಿರುವನೆಂದು ನೋಡುವುದಕ್ಕೆ ಅವಳ ಪ್ರಾಣವು ತುಡಿದುಕೊಳ್ಳುತ್ತಲಿತ್ತು. ಗುಪ್ತ ವೇಷದಿಂದ ಅವನಿದ್ದಲ್ಲಿಗೆ ಹೋಗುವೆನೆಂದು ಒಂದು ಸಲ ಯೋಚಿಸಿದಳು.' ಒಡನೆ ತನ್ನನ್ನು ಯಾರಾ ದರೂ ಗುರುತಿಸಿದರೆ, ತನ್ನ ಅವಸ್ಥೆಯೂ ಅನ್ಯರ ಅವಸ್ಥೆಯೂ ಏನಾಗುವು
- 47 - ದೆಂದು ಚಿಂತಿಸಿದಳು. ಅಸ್ವಸ್ಥವು ಸ್ವಲ್ಪ ಗುಣವಾದಂತೆ ಸುದ್ದಿ ಎದ್ದಿತು. ತಾನು ಕ್ಷೇಮವನ್ನು ಹೊಂದಿದುದಕ್ಕೆ, ಶಿವಾಜಿಯು ಪ್ರತಿ ಬೃಹಸ್ಪತಿವಾರ ಗುರುಪೂಜೆಯನ್ನು ಮಾಡಲಾರಂಭಿಸಿದನು. ಪ್ರತಿ ಗುರುವಾರ ಹಗಲು ಮಹೋತ್ಸವದಿಂದ ಪೂಜೆಯನ್ನೂ ರಾತ್ರಿ ಭಗವನ್ನಾಮ ಸಂಕೀರ್ತನವನ್ನೂ ಮಾಡಿ, ದೇವರಿಗೆ ನಿವೇದನ ಮಾಡಿದ ಭಕ್ಷ್ಯಾದಿಗಳನ್ನು ದೊಡ್ಡ ದೊಡ್ಡ ಬಿದಿರ ಬುಟ್ಟಿಗಳಲ್ಲಿ ತುಂಬಿ, ಬ್ರಾಹ್ಮಣರಿಗೂ, ಮುಖ್ಯ ಮುಖ್ಯರಾದ ಅಧಿಕಾ ರಿಗಳಿಗೂ ಬೈರಾಗಿಗಳಿಗೂ, ಫಕೀರರಿಗೂ, ಹಂಚುವಂತೆ ಆಜ್ಞೆ ಮಾಡಿದನು. ಮೊದಲು ಮೊದಲು ಕಾವಲುಗಾರರು ಬುಟ್ಟಿಗಳನ್ನು ಶೋಧಿಸದೆ ಬಿಡುತ್ತಿರ ಲಿಲ್ಲ. ಪ್ರತಿ ಗುರುವಾರವೂ ಈ ರೀತಿಯಾಗಿ ಭಕ್ಷದ ಬುಟ್ಟಿಗಳು ಹೋಗ ಲಾರಂಭಿಸಿದಂತೆ, ಮೊಗಲ್ ಕಾವಲುಗಾರರು ತಮ್ಮ ತಮ್ಮ ಕಾರ್ಯದಲ್ಲಿ ಉದಾಸೀನರಾಗಿ, ಪರೀಕ್ಷೆ ಮಾಡದೆಯೇ ಬುಟ್ಟಿಗಳನ್ನು ಬಿಡುತ್ತ ಬಂದರು. ಶಿವಾಜಿಯು ಗುಣಹೊಂದುತ್ತ ಬರುವಷ್ಟಕ್ಕೆ ಈ ಪೂಜೆಯು ಮಹಾ ವೈಭವದಿಂದ ನಡೆಯ ತೊಡಗಿತು. ಈ ವೈಭವವು ಹೆಚ್ಚಿದಷ್ಟಕ್ಕೆ ಕಾವಲುಗಾ ರರ ಕಾರ್ಯಗಳು ಸಡಿಲವಾಗುತ್ತ ಬಂದವು. ಶಿವಾಜಿಯು ಯಾವ ಉಪಾಯ ಗಳಿಂದ ತನ್ನ ಉದ್ದೇಶವನ್ನು ಕೊನೆಗಾಣಿಸಬೇಕೆಂದಿದ್ದನೋ ಅವೇ ಉಪಾ ಯಗಳು ಫಲಿಸುವುದಕ್ಕೆ ಅನುಕೂಲವಾಗಿ ಸಮಯವು ಬಂದೊದಗಿತು.
ಅವರಂಗಜೇಬನು ಶಿವಾಜಿಯ ಪೂಜಾಕೃತ್ಯಗಳನ್ನು ನೋಡಿ ಮಾಯಾವಿಯಾದ ಶಿವಾಜಿಯು ಅವುಗಳನ್ನು ಏಕೆ ನಡೆಯಿಸುವನೆಂದು ರಾಜಸಿಂಹನೊಡನೆ ವಿಚಾರಿಸಿದನು. ರಾಜಸಿಂಹನು ಅವುಗಳಿಂದ ಮೋಸ ವೇನೂ ನಡೆಯಲಾರದೆಂದು ಬಾದಶಹನಿಗೆ ಭರವಸೆಯಿತ್ತನು. ಸಂದೇಹ ಗ್ರಸ್ತನಾದ ಬಾದಶಹನಿಗೆ ಈ ಉತ್ತರವು ಸಮರ್ಪಕವಾಗಲಿಲ್ಲ. ಶಿವಾಜಿಯ ಮೇಲಿನ ಕಾವಲನ್ನು ಬಿಗಿಮಾಡುವಂತೆ, ಅವನು ತನ್ನ ಸೈನಿಕರಿಗೆ ಆಜ್ಞೆ ಮಾಡಿದನು. ಹಾಗೂ ತಾವು ಯೋಚಿಸಿದ ಕಾರ್ಯವನ್ನು ಬೇಗನೆ ನೆರ ವೇರಿಸಬೇಕೆಂದು ರಾಜಸಿಂಹನಿಗೆ ಸೂಚಿಸಿದನು. ಎಂದಿನಂತೆ ಬೃಹಸ್ಪತಿ ವಾರವು ಬಂದಿತು. ಪೂಜೆಯು ಸ್ವಲ್ಪ ವಿಳಂಬವಾಗಿ ನಡೆಯಿತು. ರಾತ್ರಿ ೪ ಗಳಿಗೆಯಾಯಿತು. ಭಿಕ್ಷುಕರೂ, ಬಡವರೂ, "ಪೀರರೂ, ಫಕೀರರೂ ಶಿವಾಜಿಯ ಶಿಬಿರವನ್ನು ಮುತ್ತಿಕೊಂಡಿದ್ದರು. ಎಂದಿನಂತೆ ಭಕ್ಷ್ಯಭೋಜ್ಯ
-
48
-
ಗಳನ್ನು ಎಲ್ಲರಿಗೂ ಹಂಚಿದರು. ಬ್ರಾಹ್ಮಣರು ದಕ್ಷಿಣೆಗಳಿಂದ ಸಂತೃಪ್ತ ರಾಗಿ ಶಿವಾಜಿಯನ್ನು ಹರಸಿ ಹೋದರು. ನೂರಾರು ಬುಟ್ಟಿಗಳನ್ನು ಧರಿಸಿ, ಅನಾಥರೂ ಆಶನಾರ್ಥಿಗಳೂ ಕೋಟೆಯ ಮಾರ್ಗವಾಗಿ ನಡೆದರು. ಇವರ ನಡುವಿನಲ್ಲಿ “ಭೀಮಕಾಯರಾದ ಇಬ್ಬರು ಮಾವಾಳಿಗಳು ಎರಡು ಬುಟ್ಟ ಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಮನೆಯಿಂದ ಹೊರಟು, ಡಿಲ್ಲಿ ಯಿಂದಾಚೆಗೆ” ನುಸುಳಿ ಬಿಟ್ಟರು. ಮುಸಲ್ಮಾನ್ ಕಾವಲುಗಾರರು ತಮಗೆ ಸಿಕ್ಕಿದ ಖಾದ್ಯ ಪದಾರ್ಥಗಳ ವಿಚಾರದಲ್ಲಿ ಮಗ್ನರಾಗಿದ್ದುದರಿಂದ, ಬರುವವರ ಹೋಗುವವರ ಬುಟ್ಟಿಗಳನ್ನು ಪರೀಕ್ಷಿಸಿ ನೋಡದೆ, ತಲೆಯ ಮೇಲೆ ಬುಟ್ಟಿ ಹೊತ್ತವರನ್ನು ಹೊರಕ್ಕೆ ಹೋಗಬಿಟ್ಟರು. ಕತ್ತಲು ಬಲವಾಗುತ್ತ ಬಂದಿತು. ಕೋಟೆಯ ಹೊರಕ್ಕೆ ಹೋಗುವವರೆಲ್ಲರೂ ಅವಸರಗೊಂಡರು. ಪಹರೇಯವರು ರಾತ್ರಿಯಾಯಿತೆಂದು ಕೋಟೆಯ ಹೆಬ್ಬಾಗಿಲನ್ನು ಮುಚ್ಚಿ ಬಿಟ್ಟರು. ಇದು ವರೆಗೆ ಅ೦ಬೋಧಿಯಂತೆ ಕಲಕಲಮಯವಾವ ಶಿಬಿರವು ನಿರ್ಜನವಾದ ಕಾಂತಾರದಂತೆ ನಿಶ್ಯಬ್ದವಾಯಿತು.
ಕೃಷ್ಣ ಪಕ್ಷದ ಕಾಳಿಮೆಯ ರಾತ್ರಿ, ಆಕಾಶದಿಂದ ಸುರಿದ ತಿಮಿರ ಧಾರೆಯಲ್ಲಿ ಡಿಲ್ಲಿ ನಗರವು ನೆನೆದು ಹೋಗಿ ಮಸುಕಾಗಿ ತೋರುತ್ತ ಲಿತ್ತು. ಬಾದಶಹನ ಅರಮನೆಯಿಂದ ಒಬ್ಬ ಯುವಕನು ಹೊರಕ್ಕೆ ಬಂದನು. ಪಹರೆಯವನು ಕೈಯಲ್ಲಿದ್ದ ಆಯುಧವನ್ನು ಎತ್ತಿ ತೋರಿಸಿ, ರಾಜದ್ವಾರವನ್ನು ತೆರೆದುಬಿಟ್ಟನು. ಯುವಕನು ರಾಜಮಾರ್ಗಕ್ಕೆ ಇಳಿ ದನು. ಅವನ ಹಿಂದುಗಡೆಯಲ್ಲಿಯೇ ರಾಜದ್ವಾರವು ಕಣಕಣ ಶಬ್ದ ದಿಂದ ಮುಚ್ಚಲ್ಪಟ್ಟಿತು. ಯುವಕನು ಬಾದಶಹನ ಜೇಷ್ಠ ಪುತ್ರನಾದ ಮುಆಜಮ್ ಆಗಿದ್ದನು. ಶಿವಾಜಿಯು ಪೂಜೆಯ ನೆವದಿಂದ ಹಂಚುತ್ತ ಲಿದ್ದ ಬುಟ್ಟಿಗಳನ್ನು ಪುನಃ ಪರೀಕ್ಷಿಸಬೇಕೆಂದು ಮುಆಜಮನು ಸಾಯಂ ಕಾಲದಲ್ಲಿಯೇ ಆಜ್ಞಪ್ತನಾಗಿದ್ದನು. ತಂದೆಯ ಈ ಆಜ್ಞೆಯನ್ನು ಶಿರಸಾ ವಹಿಸುವುದು ಯುವಕನಿಗೆ ಅಸಾಧ್ಯವಾಗಿತ್ತು. ಅದಕ್ಕೆ ಕಾರಣ ವೊಂದಿತ್ತು. ಸುರಾದೇವಿಯು ಈತನ ಶಿರಸ್ಸಿನಲ್ಲಿ ಆವಿರ್ಭವಿಸಿದ್ದು ದ ರಿಂದ, ಪಿತೃವಿನ ಆಜ್ಞೆಗೆ ಅಲ್ಲಿ ಸ್ಥಳವಿರಲಿಲ್ಲ. ಬಾದಶಹನ ಆಜ್ಞೆಯನ್ನು ಮನಃಪೂರ್ವಕವಾಗಿ ಈ ಸತ್ತು ತನು ಪಾಲಿಸಿದ್ದರೆ, ಭಾರತವರ್ಷದ ಇತಿ
-
49
-
ಹಾಸವು ಬೇರೊಂದು ರೂಪವನ್ನು ಹೊಂದುತ್ತಿತ್ತು. ಮು೦ಜಮನು ನೆಟ್ಟನೆ ಶಿವಾಜಿಯ ಶಿಬಿರದ ಕಡೆಗೆ ನಡೆಯುವ ಬದಲಾಗಿ ತೆರೆಮಸಗಿದ ಕಡಲಿನಲ್ಲಿ ಚುಕ್ಕಾಣಿ ಇಲ್ಲದ ನಾವೆಯಂತೆ-ಕಂಡ ಕಡೆಗೆ ಅಲೆದನು. ಕೊನೆಗೆ ಈ ನಾವೆಯು ರಾಜಸಿಂಹನ ಮಂದಿರದ ಬಳಿಯಲ್ಲಿ ಬಂದು ನಿಂತಿತು. ರಾಜಸಿಂಹನನ್ನು ಈಗ ತಾನೇ ಅರಮನೆಯಲ್ಲಿ ಸ್ವತಃ ನೋಡಿ ದ್ದರೂ, ಮು೦ಜಮನು ಅವನನ್ನು ಕುರಿತು ಮನೆಯೊಳಕ್ಕೆ ವಿಚಾರಿಸಿದನು. ರಾಜಸಿಂಹನು ಮನೆಯಲ್ಲಿ ಇಲ್ಲದಿದ್ದರೂ ಒಳಹೋಗುವುದಕ್ಕೂ, ಶೈಲಿನಿ ಯೊಡನೆ ಮಾತುಕಥೆಯಾಡುವುದಕ್ಕೂ, ಮುಆಜಮನು ಸಂಪೂರ್ಣ ಅಧಿಕಾರ ವನ್ನು ಪಡೆದಿದ್ದನು. ಮು೦ಜಮನು ಅನೇಕ ಸಲ ಶೈಲಿನಿಯ ಚಿಕ್ಕ ಮನೆಗೆ ಬಂದು ಹೋಗುತ್ತಿದ್ದನು. ಶೈಲಿನಿಯ ಪ್ರಣಯವನ್ನು ಸಾಧಿಸುವುದಕ್ಕೆ ನಾನಾ ಉಪಾಯಗಳನ್ನು ಮಾಡಿದ್ದನು. ಒಂದು ಸಲ ನೂರಾರು ಸುರಾಪೂರಿತ ಸೀಸೆಗಳನ್ನು ತರಿಸಿಕೊಂಡು ಬಂದನು. ಶೈಲಿನಿಯು ಪ್ರಸನ್ನಳಾಗದೆ ಸುರೆಯನ್ನು ತಂದವನೊಡನೆ, “ಇವುಗಳು ನಮ್ಮಲ್ಲಿ ಬಿಕರಿಯಾಗವು. ಅವಕ್ಕೆ ಬಾದಶಹನ ಅಂತಃಪುರದಲ್ಲಿ ಬೆಲೆ ಬರುವುದು' ಎಂದು ಮುಂಜವನು ಕೇಳುವಂತೆ ಹೇಳಿ ನಡೆದುಬಿಟ್ಟಳು. ಮುಆಜಮನು ಸಿಟ್ಟು ಕೊಂಡು ತನ್ನ
ಪರಾಕ್ರಮವನ್ನು ತೋರಿಸುವುದಕ್ಕೆ ಮತ್ಯಾವುದನ್ನೂ ಕಾಣದೆ. ಸೀಸೆಗಳ ಕೊರಲುಗಳನ್ನು ಮುರಿದು, ಕೆನ್ನೀರನ್ನು ಪಾನಮಾಡಿಬಿಟ್ಟನು. ಇನ್ನೊಮ್ಮೆ ಮುಆಜಮನು ಸ್ವತಃ ಹೋಗದೆ ' ತನ್ನ ದೊಂದು ತಸಬೀರನ್ನೂ ಪ್ರಣಯ ಪತ್ರಿಕೆಯನ್ನೂ ಕಳುಹಿಸಿದನು. ಶೈಲಿನಿಯು ಪ್ರತಿಯಾಗಿ “ನಿನ್ನ ಪ್ರಣಯ ಪಾತ್ರಳ ತಸಬೀರು ಇಲ್ಲದೆ ಇದ್ದು ದರಿಂದ, ಅದರ ಮಾತೃಕೆಯನ್ನು (original copy) ಕಳುಹಿಸಿರುವೆನು” ಎಂದು ಪತ್ರ ಬರೆದು ಸಿಪಾಯಿಯ ಒಡನೆ ಒಂದು ದೊಡ್ಡ ವಾನರಿಯನ್ನು ಕಳುಹಿಸಿದಳು. ಮತ್ತೊಮ್ಮೆ ಮುಆಜಮನು ಶಿವಾಜಿಯ ವೇಷವನ್ನು ಅಳವಡಿಸಿಕೊಂಡು, ಶೈಲಿನಿಯ ಮಂದಿರಕ್ಕೆ ಹೋದನು. ಶೈಲಿನಿಯು ಬಂದವನನ್ನು ಕುಳ್ಳಿರಿಸಿ, “ಸಿಂಹಚರ್ಮದಲ್ಲಿ ಕತ್ತೆ” ಎಂಬ ಪಾರಸೀ ಕಥೆಯನ್ನು ಅವನಿಗೆ ಓದಲು ಕೊಟ್ಟು, ತನ್ನ ದಾಸಿಯನ್ನು ಕರೆದು, ಬಂದವನನ್ನು ಸತ್ಕರಿಸೆಂದು ಹೇಳಿ ಹೋಗಿ ಬಿಟ್ಟಳು. ಶೈಲಿನಿಯ ತಿರಸ್ಕಾರವನ್ನು ಮು೦ಜಮನು ರಾಜಸಿಂಹನಿಗೆ
- 50 - ತಿಳಿಸಿದ್ದನು. ಹಾಗೂ ಶಿವಾಜಿಯನ್ನು ಪ್ರೀತಿಸಿ, ಗುಪ್ತವೇಷದಿಂದ ಮರಾಟರ ಶಿಬಿರಕ್ಕೆ ಹೋಗುತ್ತಿದ್ದಳೆಂದು ಹೇಳಿದ್ದನು. ರಾಜಸಿಂಹನು ಕೋಪಾವಿಷ್ಟ ನಾಗಿ ಮಗಳನ್ನು ಅವಳ ಚಿಕ್ಕ ಮನೆಯಲ್ಲಿ ಮುಚ್ಚಿಟ್ಟನು. ಮಹಡಿಯ ಬಳಿ ಯಲ್ಲಿ ಬೆಳೆದಿದ್ದ ಮರವನ್ನು ಕಡಿದು ಹಾಕಿಸಿದನು. ಶೈಲಿನಿಯ ಸೆರೆಮನೆ ಯನ್ನು ಒಳಹೋಗಲು ಮುಆಜಮನಿಗಲ್ಲದೆ ಮತ್ತಾರಿಗಾದರೂ ಅಪ್ಪಣೆ ಯಿರಲಿಲ್ಲ. ಶೈಲಿನಿಯು ಇದುವರೆಗೆ ತನಗೆ ತೋರಿಸಿದ ಆಲಕ್ಷ್ಮಭಾವಕ್ಕೂ ಹಾಸ್ಯಕರವಾದ ಆಚರಣೆಗೂ ತಕ್ಕದಾದ ಶಾಸ್ತ್ರಿಯನ್ನು ಮಾಡಬೇಕೆಂದು, ಮು೦ಜಮನು ಈ ರಾತ್ರಿ ಶೈಲಿನಿ ಇದ್ದಲ್ಲಿಗೆ ಬಂದಿದ್ದನು.
ಮುಆಜಮನು ಉಪ್ಪರಿಗೆಯನ್ನು ಹತ್ತಿ, ಶೈಲಿನಿಯ ಮಂದಿರದ ಬಾಗಿಲನ್ನು ತೆರೆದು, ಒಳಕ್ಕೆ ಕಾಲಿಟ್ಟನು. ಅಚ್ಚರಿಗೊಂಡ ಕಣ್ಣುಗಳಿಂದ ಬಾಯಿಬಿಟ್ಟು ಅಪ್ರತಿಭನಾಗಿ ಅಲ್ಲಿಯೇ ನಿಂತು ನೋಡಿದನು. ಶೈಲಿನಿಯು ಓಡಿ ಹೋಗಿದ್ದಳು. ದು ಜ ೯ ನ ರ ಅಶುದ್ಧಾಚರಣೆಯಿಂದ ಹಾಳಾದ ಊರಿ೦ದ ಪುರದೇವತೆಯು ತೊಲಗುವಂತೆ ಶೈಲಿನಿಯು ತನ್ನ ಮನೆಯಿಂದ ಓಡಿಹೋಗಿದ್ದಳು. ಕಣ್ಣೆರೆದು ಎಲ್ಲಾ ಕಡೆಗಳಲ್ಲಿ ನೋಡಿದನು. ದೀಪ ವನ್ನು ಕೈಯಲ್ಲಿ ಕೊಂಡು ಕೊಟ್ಟಡಿಯನ್ನೆಲ್ಲಾ ಹುಡುಕಿದನು. ಶೈಲಿನಿಯು ಅಲ್ಲಿಂದ ಮಾಯವಾಗಿದ್ದಳು. ಉನ್ನತವಾದ ಉಪ್ಪರಿಗೆಯಲ್ಲಿ ಬಂಧಿತ ಳಾದಳು ಅಲ್ಲಿಂದ ಹೇಗೆ ಜಾರಿಹೊದಳೆಂದು ನೋಡುವುದಕ್ಕೆ ಮು೦ಜ ಮನು ಪ್ರಯಾಸಪಟ್ಟನು. ಶೈಲಿನಿಯು ಎರಡು ಪಟ್ಟೆಯ ಸೀರೆಗಳನ್ನು ಜೋಡಾಗಿ ಬಿಗಿದು, ಒಂದು ಕೊನೆಯನ್ನು ಕೊಟ್ಟಿಡಿಯ ತೊಲೆಗೆ ಸುತ್ತಿ, ಮತ್ತೊಂದನ್ನು ಕಿಟಕಿಯಿಂದ ಕೆಳಗೆ ಇಳಿಬಿಟ್ಟು, ಅದರ ಸಹಾಯದಿಂದ ಕೆಳಕ್ಕೆ ಇಳಿದು, ಎಲ್ಲಿಯೋ ಪಲಾಯನ ಮಾಡಿದಳು ಎಂದು ಮುಂಜಮನು ನಿಶ್ಚಯ ಮಾಡಿದನು. ಇನ್ನೂ ಕಾಲ ಕಳೆದರೆ ಕಾರ್ಯವು ಕೆಟ್ಟು ಹೋಗುವುದೆಂದು ತಿಳಿದು, ಅವಳನ್ನು ಹುಡುಕುವುದಕ್ಕೆ ಯೋಚಿಸಿದನು. ಶೈಲಿನಿಯು ಮರಾಟರ ಶಿಬಿರಕ್ಕೆ ಓಡಿ ಹೋಗಿರಬಹುದೆಂದು ಅವನು ನಿಶ್ಚಿಸಲಿಕ್ಕೆ ಕಾರಣವಿದ್ದಿತು. ಆದುದರಿಂದ ಅವಳನ್ನು ಹಿಡಿದು ತಂದು, ಅವಳ ತಂದೆಯ ವಶದಲ್ಲಿ ಕೊಟ್ಟು ಅವಳು ಮಾಡಿದ ದುಷ್ಕಾರ್ಯವನ್ನು ಅವಳ ಮುಖಕ್ಕೆ ಇಟ್ಟು, ತನ್ನ ಪರಾಕ್ರಮವನ್ನು ತೋರಿಸಬೇಕೆಂದು
62-71=========================
- 51 - ನಿರ್ಧರಿಸಿ ಕೆಳಕ್ಕೆ ಇಳಿದನು. “ಅಂದು ನಾನು ಕಾಲಿಗೆ ಎರಗಿದಾಗ ನನ್ನನ್ನು ಎಡವಿ ಒಡೆದುಬಿಟ್ಟಳು, ತಾಯಿತಂದೆಗಳಿಗೆ ನಮಸ್ಕರಿಸದ ನನ್ನ ಪವಿತ್ರ ಮಸ್ತಕವನ್ನು ಈ ಮೂಳಿಯು ಚೆಂಡಾಡಿದಂತೆ ಒದೆದುಬಿಟ್ಟಳು. ಈ “ ಹರಾಮ್ ಖೋರಿಯನ್ನು' ಮೂಗುದಾರ ಹಿಡಿದು, ಹಟ್ಟಿಗೆ ಒಯ್ಯದೆ ಬಿಡೆನು.” ಎಂದು ಮನಸ್ಸಿನಲ್ಲಿಯೇ ಅನ್ನುತ್ತ, ಮುಆಜಮನು ಮಾರ್ಗಕ್ಕೆ ಬಂದನು.
ರಾತ್ರಿ ೧೦ ಗಳಿಗೆ ಕಳೆಯಿತು. ಸೃದ್ಧಿಗೆ ಗಾಢಾಂಧಕಾರದ ಅವರಣವು ಸುತ್ತಿತು. ಶ್ರಾಂತವಾದ ಡಿಲ್ಲಿ ನಗರವು ಪ್ರಕೃತಿಯ ಸುಷುಪ್ತಿ ಯಲ್ಲಿ ಸ್ವಪ್ನ ಮಯವಾಗಿತ್ತು. ಮಾರ್ಗಗಳಲ್ಲೆಲ್ಲಾ ನಿರ್ಜನ, ನಿಶ್ಯಬ್ದ, ಭೂ ಗಗನಗಳ ಅ೦ತರವು ಉಜ್ವಲವಾದ ನಕ್ಷತ್ರಗಳಿಂದ ಅಲ್ಲದೆ ತಿಳಿಯಲು ಅಸಾಧ್ಯ, ನೀಲ ವಾದ ಆಕಾಶದಲ್ಲಿ ಪ್ರಭಾಪುಂಜದಂತಿರುವ ಸಾವಿರಾರು ನಕ್ಷತ್ರಗಳು ಕರಿಕಂಬಳಿಯಲ್ಲಿ ದಟ್ಟವಾಗಿ ಚಿಮಿಕಿಸಿದ ವಜ್ರದ ಗೊಂಚಲುಗಳಂತಿರುವ ನಕ್ಷತ್ರಗಳು, ಈ ನಿಶಿಯಲ್ಲಿ ಶೈಲಿನಿಯು ಒಬ್ಬಳೇ ಹೋಗುತ್ತಿದ್ದಳು. ಎಲ್ಲಿಗೆ ಹೊಗುತ್ತಿದ್ದಳೆಂಬುದು ವಾಚಕರಿಗೆ ತಿಳಿದಿದೆ ರಾಜಮಾರ್ಗದಿಂದ ಕವಲಾಗಿ ಹೋದ, ಅಳಿಸಿದ ಕಾಲುಹಾದಿಯನ್ನು ಹಿಡಿದು ಹೋಗುತ್ತಿದ್ದಳು. ಶೈಲಿನಿಯ ಗುರುತು ಯಾರಿಗೂ ಹಸ್ತದು. ಹಾದಿಯಲ್ಲಿ ಜನಸಂಚಾರವಿಲ್ಲ; ಅದರಮೇಲೂ ಅಂಧಕಾರ; ಅದೂಅಲ್ಲದೆ ಗಂಡು ಉಡುಪನ್ನು ಉಟ್ಟು ಕೊಂಡಿ ದ್ದಳು, ಆ ಕಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಹೋಗುವ “ಹಕೀಮರು” ಯಾವ ಉಡುಪನ್ನು ಧರಿಸಿಕೊಳ್ಳುತ್ತಿದ್ದ ರೋ, ಆ ವೇಷವನ್ನು ಶೈಲಿನಿಯು ಇಂದು ಅಳವಡಿಸಿದ್ದಳು. ಇದೇ ವೇಷದಲ್ಲಿ ಅವಳು ಒಂದೆರಡು ಸಲ ಮರಾಟರ ಶಿಬಿರಕ್ಕೆ ಹೋಗಿದ್ದಳು. ಅವಳ ಇಚ್ಛಿತ ವರ'ನು ಸಂಕೇತ ಮಾಡಿದ ರಾತ್ರಿಯಲ್ಲೇ ಶೈಲಿನಿಯು ಅವನ ಆಶಾನುಬದ್ಧಳಾಗಿ ಒಂದು ಗುರುವಾರ ಹೋದಳು. ಆದರೆ ಆ ದಿನ ಶಿವಾಜಿಯು ತನ್ನ ಪರಿಜನರೊಡನೆ ಯಾವುದೋ ಒಂದು ರಾಜ್ಯಾಲೋಚನೆಯನ್ನು ಕುರಿತು ವಿಚಾರಮಗ್ನನಾಗಿ ದ್ದುದರಿಂದ, ಶೈಲಿನಿಯು ಕೃತ ಕಾರ್ಯಳಾಗಲಿಲ್ಲ. ಶಿವಾಜಿಯ ಅಸ್ವಸ್ಥವು ಶೈಲಿನಿಯ ಪುನರಾಗಮನಕ್ಕೆ ಕಾರಣವಾಯಿತು. ಶಿವಾಜಿಗೆ ಮಲಿಕೆಯನ್ನು ತಂದುಕೊಡುವ ನಿಮಿತ್ತವಾಗಿ ಶೈಲಿನಿಯು `ಹಕೀಮ' ವೇಷದಲ್ಲಿ ಬಂದು
- 52 - ಹೋಗುತ್ತಿದ್ದಳು. ಇದೆಲ್ಲವನ್ನು ಶಿವಾಜಿಯು ಅರಿತಿದ್ದ ನೋ + ಇಲ್ಲವೋ
ನಮಗೆ ಗೊತ್ತಿಲ್ಲ. “ಹಕೀಮನನ್ನು” ಮರಾಟರ ಶಿಬಿರದಲ್ಲಿ ಪ್ರವೇಶ ಮಾಡು ವುದಕ್ಕೆ, ಯಾರೂ ಅಡ್ಡಿ ಮಾಡುತ್ತಿರಲಿಲ್ಲ. ಅವಳು ಒಳಹೋಗಿ ಯಾರೋ ಒಬ್ಬನ ಕೂಡೆ ಮಾತನಾಡಿ ಮರಳಿ ಹೋಗುತ್ತಿದ್ದಳು. ಈ ಕಥಾಪ್ರಾರಂಭ ದಲ್ಲಿ, ಯಾರು ರಹಸ್ಯವಾಗಿ ಶೈಲಿನಿಯ ಮಂದಿರದ ಮರಹತ್ತಿ, ಅವಳ ಪಾಣಿ ಗ್ರಹಣ ಮಾಡಿದನೋ, ಆ ಮಹಾಶಯನೊಡನೆ ಮಾತನಾಡಿ ಶೈಲಿನಿಯು ಮನೆಗೆ ಹಿಂದೆರಳುತ್ತಿದ್ದಳು. ಈ ರಾಯನು ಎರಡು ದಿವಸಗಳ ಹಿಂದೆ, ಇವರಿಬ್ಬರು ಮರಾಟರ ಶಿಬಿರದ ಬಳಿಯಲ್ಲಿರುವ ಏಕಾಂತವಾಗಿ ಪ್ರಣಯ ಸಲ್ಲಾಪ ಮಾಡುತ್ತಿದ್ದಾಗ, ಮು೦ಜಮನು ಶೈಲಿನಿಯ ಗುರುತು ಹಿಡಿದನು; ಮುಜಮನು ಅವರ ಸಂಭಾಷಣೆಗೆ ಏಷ್ಟವಾಗಿ ಬಂದುದು ಮಾತ್ರವಲ್ಲ; ಅದಕ್ಕಿಂತಲೂ ಸ್ವಲ್ಪ ದೂರಕ್ಕೆ ಹೋದನು. ಆವನು ಕೋಪಗೊಂಡು ತನ್ನ ಕೈ ಬಿಟ್ಟದ್ದು ಒಂದು; ಅನ್ಯರಿಗೆ ಕೈ ಕೊಟ್ಟದ್ದು ಒಂದು- ಇವೆರಡರಿಂದ ಮುಜಮನು ರೋಷಾವೇಶಗೊಂಡನು. ಅವನು ಶೈಲಿನಿಯ ವಿಷಯವಾಗಿ ರಾಜಸಿಂಹನ ಕಿವಿಯಲ್ಲಿ ದೂರು ಸುರಿದನು. ಶಿವಾಜಿಯು ನಿನ್ನ ಮಗಳನ್ನು ಎತ್ತಿಕೊಳ್ಳುವನು” ಎಂದು ಗದ್ದಲ ಹಚ್ಚಿದನು. ಮೊದಲೇ ಶಿವಾಜಿಯ ಮೇಲೆ ರಾಜಸಿಂಹನಿಗೆ ಇದ್ದ ಅಲಕ್ಷ್ಮಭಾವವು ಮು೦ಜಮನ ಮಾತಿನಿಂದ ದ್ವೇಷವಾಗಿ ಪರಿಣಮಿಸಿತು. ಮಗಳು ಜಾರಿಹೋಗದಂತೆ ರಾಜಸಿಂಹನು ಅವಳನ್ನು ಕೊಟ್ಟಡಿಯಲ್ಲಿ ಮುಚ್ಚಿಟ್ಟನು. ದಿನಕ್ಕೆ ಎರಡು ಬಾರಿ ರಾಜ ಸಿಂಹನು ಅವಳನ್ನು ನೋಡುವನು; ಆದರೆ ಪೂರ್ವದಂತೆ ಮಾತನಾಡುತ್ತಿರ ಲಿಲ್ಲ. ರಾಜಸಿಂಹನ ದರ್ಶನವಾಗುತ್ತಲೇ ಬಂಧಿತಳಾದ ಶೈಲಿನಿಯು “ಶಿವಾಜಿ ಮಹಾರಾಜರು ಹೇಗಿರುವರು?” ಎಂದು ಕೇಳುವಳು. ತಂದೆಯು ಮಾತಿಲ್ಲದವನಾಗಿ, ಶಿವಾಜಿಯ ಪೂರ್ವಜರ ನಾಮಸ್ಮರಣೆ ಮಾಡುತ್ತ, ಮಹಡಿಯಿಂದ ಕೆಳಕ್ಕೆ ಇಳಿದು ಹೋಗುವನು. ಈ ದಿನ ರಾಜಸಿಂಹನು ಕಾರ್ಯಗೌರವದಿಂದ ಅರಮನೆಯಲ್ಲಿ ಹಗಲೆಲ್ಲಾ ತಳುವಿದ್ದನು. ಯಾವ ಕಾರ್ಯವಿಶೇಷದಿಂದ ಅವನು ವಿಳಂಬಿಸಿದ್ದನೋ ಅದನ್ನು ಶೈಲಿನಿಯ ತಿಳಿದಿ ದ್ದಳು. ರಾಜಸಿಂಹನು ಹಿಂದಿನ ರಾತ್ರಿ ಮುಜಮನೊಡನೆ ಬಾದಶಹನ ಯಾವ ಆಜ್ಞೆಯನ್ನು ತಾವು ಮನ್ನಿಸಬೇಕೆಂಬ ವಿಷಯದಲ್ಲಿ ಮಾತುಕಥೆ
- _53 + ಯನ್ನು ನಡೆಯಿಸುತ್ತಲಿದ್ದನೋ, ಆ ಮಾತುಗಳನ್ನೆಲ್ಲಾ ಶೈಲಿನಿಯು ಮಹಡಿಯ ಕೊಟಡಿಯಲ್ಲಿ ಇದ್ದು ಕೇಳಿದ್ದಳು. ಅದಕ್ಕೋಸ್ಕರವೇ ಅವಳ ಹೃದ ಯವು ಮರಾಟರ ಶಿಬಿರಕ್ಕೆ ಹಾರಿಹೋಗುವುದಕ್ಕೆ ಸಂಕಷ್ಟಗೊಳ್ಳುತ್ತಲಿತ್ತು.
ಶೈಲಿನಿಯು ಕಾಲುನಡೆಯಾಗಿ ಹೋಗುತ್ತಿದ್ದಳು. ಹಾದಿಯಲ್ಲಿ ತಾನೇ ಆತ್ಮಗತವಿಚಾರ ಮಾಡಿ ಕೊಳ್ಳುತಿದ್ದಳು. ಅವಳ ಇದಿರಿಗೆ ಆಕಾಶದಲ್ಲಿ ಚಂದ್ರನು ಉದಯವಾಗುತ್ತಲಿದ್ದನು. ರೋಹಿಣಿ ನಕ್ಷತ್ರವು ಚಂದ್ರನ ಸಮಾಪಕ್ಕೆ ಬರುವಂತೆ ಅವಸರಗೊಳ್ಳು ತಲಿತ್ತು, ಶೈಲಿನಿಯು ನಿಶಾನಾಥ ನನ್ನು ನೋಡಿ ಏನೇನೋ ಹೇಳತೊಡಗಿದ್ದಳು. “ಚಂದ್ರನೇ! ನೀನು ವಿರಹಿಗಳ ವೈರಿ ಎಂಬುದು ನಿಜವೇ? ನೀನು ಕಾಮುಕರ ತಾಪಕಾರಕನೆಂ ಬುದು ಸತ್ಯವೇ? ಹಾಗಿದ್ದರೆ ಈ ಕತ್ತಲಾದ, ಕಂಗಾಣದ ಹಾದಿಯಲ್ಲಿ ನನ್ನ ಮಾರ್ಗಪ್ರದರ್ಶಕನಾಗಿ ಏಕೆ ಉದಯಿಸುತ್ತಲಿರುವೆ? ನಿನ್ನ ರೋಹಿಣಿಯು ನಿನ್ನ ಸವಿಾಪಕ್ಕೆ ಬರುತ್ತಿರುವಳು. ನೀನು ದೂರದೂರಕ್ಕೆ ಹೋಗುತ್ತಿರುವು ದೇಕೆ? ನನ್ನ ಜೀವಿತೇಶನು ನಿನ್ನಂತೆ ಗಗನದಲ್ಲಿ ಚಲಿಸುತ್ತಿದ್ದರೆ, ನಾನು ರೋಹಿಣಿಯಂತೆ ಅವನನ್ನು ಅನುವರ್ತಿಸುತ್ತಿದ್ದೆನು. ನನ್ನ ಪ್ರಿಯನು ನಿನ್ನ
ತೆಯೇ ಇರುವನು; ನಿನ್ನಂತೆಯೇ ಸೌಂದರ್ಯಮಯನು; ಸುಧಾಮಯನು; ಶಾಂತನು. ಛ! ಛೇ! ಈ ಸಾಮ್ಯವು ಸರಿಹೋಗದು. ಅವನ ಪ್ರೀತಿಯು ನಿನ್ನಂತೆ ದಿನೇ ದಿನೇ ಕುಂದಬಹುದೇ? ನೀನು ರೋಹಿಣಿಯಿಂದ ದೂರಕ್ಕೆ ಮನಸ್ವಿಯಾಗಿ ಸಾರುವಂತೆ, ಅವನ ಪ್ರೀತಿಯು ಗಳಿತವಾಗಬಹುದೇ? ಹಾಗೆ ಪ್ರೇಮವು ಕುಂದದಿದ್ದರೆ ಮೊನ್ನೆ ನನ್ನೊಡನೆ ಏತಕ್ಕೆ ಅಷ್ಟು ಉದಾ ಸೀನನಾದನು? ನಾವು ಏಕಾಂತದಲ್ಲಿದ್ದರೂ ನನ್ನನ್ನು ಸರಿಯಾಗಿ ಆದರಿಸ ಲಿಲ್ಲವೇಕೆ? ನನ್ನ ಪ್ರೇಮಸಲ್ಲಾಪವನ್ನು ಕಳ್ಳುನುಡಿಗಳಿಂದ ಜಗುಳಿಸಿದ ನೇಕೆ? “ನನ್ನ ಪ್ರೇಮಪಾಶದಲ್ಲಿ ಸಿಕ್ಕಿ ಮೋಸಹೋದೆ” ಎಂದು ಮೈಮರೆ ದಂತೆ ಹೇಳಿದನೇತಕ್ಕೆ? ನನ್ನನ್ನು ಮಧುರವಾದ ಮಾತುಗಳಿಂದ ಕಳುಹಿಸಿ ಕೊಡಲಿಲ್ಲವೇಕೆ? ಛೇ! ಮನವೇ ಕೊಂಚ ತಡೆ! ತಡೆ! ಸುಮ್ಮನೆ ಬಹಳ ದೂರಕ್ಕೆ ಯೋಚಿಸುತ್ತಿರುವೆ. ನೀನೂ ಅವನ ಪಕ್ಷ ವಾಗಿ ಹೇಳಲಾರೆಯಾ? ಶಿವಾಜಿಯು ಕಾರ್ಯಾ೦ತರದಲ್ಲಿರಬಹುದು. ದುಷ್ಟ ಅವರಂಗಜೇಬನ
-
64
ಬಂದಿಯಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಅವನ ಮನಸ್ಸು ಮಗ್ನ ವಾಗಿದ್ದಿರಬಹುದು. ಹಾಗೆ ಮಗ್ನವಾಗಿತ್ತು ಎಂದು ತಿಳಿಯಲೆ? ಆದರೂ ಈ ಹತಭಾಗಿನಿಗೆ ಆ ಹೃದಯದಲ್ಲಿ ಒಂದು ಎಡೆಯಿಲ್ಲವೇ? ರಾಜ್ಯ ಕಾರ್ಯವು ವಿಶೇಷವಾದ ಮಾತ್ರಕ್ಕೆ ಅರಸರು ತಮ್ಮ ಪ್ರಾಣವಲ್ಲಭೆ ಯರನ್ನು ತ್ಯಜಿಸಿಬಿಡುವರೇ? ಬಿಡುವಂತಹರು ಬಿಡುವರು. ಶ್ರೀರಾಮನು ತನ್ನ ಪತ್ನಿ ಯನ್ನು ತೊರೆದನು. ದೂರೋ ಬಾಯನ್ನು ಮುಚ್ಚುವುದಕ್ಕೆ ರಾಮನು ಜಾನಕಿಯನ್ನು ಕೈಬಿಟ್ಟನು. ನನ್ನಲ್ಲಿ ದೋಷವೇನು? ಹಗ ಲೆಲ್ಲಾ ಸತಿದೇವತೆಯ ಧ್ಯಾನಮಾಡುತ್ತ, ಎ೦ದಿಗೆ ಸುಖಿಯಾಗುವೆನು ಎಂದು ಚಿಂತಿಸುತ್ತ ಇರುವುದು ದೋಷವೇ? ಇರುಳೆಲ್ಲಾ ನಿದ್ದೆ ಯಿಲ್ಲದೆ ನೆಲದ ಮೇಲೆ ಹೊರಳುತ್ತ, ಕನಸುಕಂಡ ಮಾತ್ರಕ್ಕೆ ಸುಖಿಯೆಂದು ತಿಳಿದು, ಎಚ್ಚರವಾಗಿ ನೋಡುವುದು ದೋಷವೇ? ತಂದೆಯ ಮಾತನ್ನು ಮಾರಿ, ಅನೇಕ ನೃಸಕುಮಾರರನ್ನು ತ್ಯಜಿಸಿ, ನೀನೆ ಗತಿಯೆಂದು ನಂಬಿ ದುದು ದೋಷವೇ? ನಾನು ಮೂರ್ಖಳು. ಸುಮ್ಮನೆ ಹುಚ್ಚಳಂತೆ ಮಾತಾಡುವೆನು. ನನ್ನ ಮನಸ್ಸಿನ ಭ್ರಮೆ; ನನ್ನ ಹುಚ್ಚು ಭ್ರಾಂತಿ. ಪತಿಯ ಪ್ರೇಮದಲ್ಲಿ ಸಂಶಯಪಡುವವಳು ಮೂರ್ಖಳಲ್ಲದೆ ಮತ್ತೇನು? ನನ್ನ ವಲ್ಲಭನ ಪ್ರೀತಿಯ ಅಚಲವಾದುದು; ಪರ್ವತದಂತೆ ಅಚಲ ವಾದುದು. ನಕ್ಷ ತ್ರವು ಸ್ಥಿರವಾದುದು; ಅದು ಅಸ್ಥಿರವೆಂಬುದು ಚಲಿಸು ತಿರುವವನ ಸುಳ್ಳು ಭಾವನೆಯಾಗಿದೆ. ಪತಿಯ ಪ್ರಣಯಮುಕುರದಲ್ಲಿ ನಮ್ಮ ಮನೋಭಾವವೇ ಪ್ರತಿಬಿಂಬಿಸುವುದಲ್ಲದೆ, ಅದು ತಾನೇ ವರ್ಣ ರಹಿತವಾದುದು. ನಾನು ಇದನ್ನೆಲ್ಲಾ ಚಿಂತಿಸುವಷ್ಟಕ್ಕೆ ನನ್ನ ನಡೆಯು ಹಿ೦ಚುವುದು, ನನ್ನ ವಿಳಂಬವು ಘೋರ ಪ್ರಮಾದಕ್ಕೆ ಕಾರಣವಾಗುವುದು. ಇಕೋ! ಶಿಬಿರವು ನನ್ನ ಮುಂದೆ ತೋರುತ್ತಿರುವುದು. ಇಲ್ಲಿಯೇ! ನಿನಗೆ ನಮಸ್ಕಾರವು! ನಿನ್ನ ಧರ್ಮಾಂಧತೆಗೆ, ನಿನ್ನ ಕುಹಕೋಪಾಯಗಳಿಗೆ, ನಿನ್ನ ರಾಜತಂತ್ರಗಳಿಗೆ, ನಿನ್ನ ದುಷ್ಕಾರ್ಯಕೌಶಲಕ್ಕೆ ತ್ರಾಹಿ ಎನ್ನುವನು! ನಮ್ಮ ಸ್ವಾತಂತ್ರಾಪಹಾರಿಯಾದ ನಗರವೇ! ನಾನು ಇನ್ನೂ ನಿನ್ನ ಮುಖವನ್ನು ನೋಡಲಾರೆನು. ರಾಜಪುತ್ರರ ಸುವರ್ಣಕಾರಾಗೃಹವೇ? ಯಾವಾತನನ್ನು ನಿನ್ನ ಮೋಸದ ಕೈಗಳಿಂದ ಬಂಧಿಸಬೇಕೆಂದು ನೀನು
- 55 - ಉಪಾಯವನ್ನು ಮಾಡುತ್ತಿರುವೆಯೋ, ಆತನ ಸಹಾಯದಿಂದಲೇ ನಾನು | ನಿನ್ನ ಅಪವಿತ್ರ ಸ್ಥಳದಿಂದ ಮುಕ್ತಳಾಗುವೆನು! ನಿನ್ನ ಅಧೀಶ್ವರಿಯಾಗಿ ನಿನ್ನ ಸಾಮ್ರಾಜ್ಯ ರಥವನ್ನು ನಾನು ನಡಿಸುವುದಕ್ಕೆ ಧಿಕ್ಕಾರವಿರಲಿ! ನಾನು ಶಿವಾಜಿಯ ದಾಸಿಯಾಗಿ ಆವನ ರಾಜ್ಯವೆಂಬ ಮಂದಿರದ ಬಳಿಯಣ ಕಸ ವನ್ನು ಗುಡಿಸಿ ಈ ಜೀವಕಾಲವನ್ನು ಕಳೆಯುವೆನು.”
ಅರಮನೆಯ “ ಘುಸಾಲ್‌ಖಾನೆಯಲ್ಲಿ' ಅವರಂಗಜೇಬನು ಈ ರಾತ್ರಿ ಏಕಾಂತದಲ್ಲಿ ರಾಜ್ಯ ಕಾರ್ಯವನ್ನು ಕುರಿತು ಆಲೋಚಿಸುತ್ತಲಿದ್ದನು. ಮಂತ್ರಿಗಳು ಯಾರೂ ಅವನ ಬಳಿಯಲ್ಲಿ ಇರಲಿಲ್ಲ. ಬಾದಶಹನ ಬಲಗದೆ ಯಲ್ಲಿ ರಾಜಸಿಂಹನು ನಿಂತಿದ್ದನು. ಸ್ವಲ್ಪ ದೂರದಲ್ಲಿ ಇಬ್ಬರು ಸಿಪಾಯರು ಕಾವಲಾಗಿದ್ದರು. ಬಾದಶಹನು ಹಣೆಯನ್ನು ನಿರಿಗೊಳಿಸಿ “ನಮ್ಮ ಮನಸ್ಸು ಸ್ವಸ್ಥವಾಗಿಲ್ಲ. ಮರಾಟನ ಶಿಬಿರದಿಂದ ಏನೊಂದೂ ವರ್ತಮಾನ ಬರಲಿಲ್ಲ. ಹೋದ ಮುಆಜಮನು ಇನ್ನೂ ಬರಲಿಲ್ಲ. ನಮಗೆ ಯೋಚನೆ ಹತ್ತಿದೆ”
ಎಂದು ಹೇಳಿದನು.
ರಾಜಸಿಂಹ:--- “ ಅಂತಹ ಯೋಚನೆಗೆ ಆಸ್ಪದವಿಲ್ಲ. ಈ ದೂತನು ಈಗ ತಾನೇ ಪಾಳೆಯದಿಂದ ಬಂದಿರುವನು. ಅವನು ಶಿವಾಜಿಯನ್ನು ಕಣ್ಣಾರೆ ನೋಡಿ ಬಂದಿರುವನು.”
- ಬಾದಶಹನು ಕೈಯಿಂದ ತಲೆಯನ್ನು ಸವರುತ್ತ, “ನೀವೆಲ್ಲರು ಹೇಗೆ ಹೇಳಿದರೂ, ನಮ್ಮ ಮನಸ್ಸಿಗೆ ಸಮಾಧಾನವಿಲ್ಲ. ಬೋನಿನಲ್ಲಿ ಬಿದ್ದ ಬೆಟ್ಟದ ಇಲಿಯು ತಪ್ಪಿಸಿಕೊಂಡಿರಬಹುದು ಎಂದು ನಮಗೆ ಶಂಕೆ ಉಂಟು. ನಮ್ಮ ಶಂಕೆ ಸುಳ್ಳಾಗಲಾರದು” ಎಂದನು.
ರಾಜಸಿಂಹನು ಸ್ವಲ್ಪ ಹತ್ತಿರಕ್ಕೆ ಬಂದು, “ಹುಜುರ್! ಅಂತಹ ಸಮಯ ಒದಗಿದರೆ ಈ ಸೇವಕನು ಯಾವ ಕಾರ್ಯಕ್ಕೂ ಸಿದ್ಧನಾಗಿರುವನು. ಬೋನು ಬಿಗಿಯಾದುದರಿಂದ, ಇಲಿಯು ತಪ್ಪಿಸಿಕೊಳ್ಳಲಾರದು” ಎಂದು
ಸಮಾಧಾನಗೊಳಿಸಿದನು. - ಬಾದಶಹನು ಸ್ವಲ್ಪ ಆಲೋಚಿಸುತ್ತ, ಮುತಜಮನು ಬರುವ ತನಕ ನೀನು ಇಲ್ಲಿಯೇ ಇರುವೆಯಾ? ಅವನು ವಿಲಾಸಪ್ರಿಯನು; ವಿಲಾಸದಲ್ಲಿ
* 56 - ಮಗ್ನನಾಗಿ ಇರುಳೆಲ್ಲಾ ಕಳೆದರೆ, ಕಾರ್ಯವು ಕೆಟ್ಟು ಹೋಗುವುದು” ಎಂದನು,
ರಾಜಸಿಂಹ:- ಅಪ್ಪಣೆಯಾದರೆ ನಾನೇ ಹೋಗುವೆನು.”
ಬಾದಶಹನು ಸ್ವಲ್ಪ ಶಾಂತನಾದನು. ರಾಜಸಿಂಹನ ಕಡೆಯ ಮಾತುಗಳಿಂದ ಅವನ ಶಿರಸ್ಸಿನ ಭಾರವು ಕೊಂಚ ಇಳಿದಂತಾಯಿತು. ಒಡನೆ ಅವರಂಗಜೇಬನು ರಾಜಸಿಂಹನನ್ನು ತನ್ನ ಬಳಿಗೆ ಕರೆದು, ಅವನ ಕಿವಿಯಲ್ಲಿ ಏನನ್ನೊ ಉಸುರಿದನು. ರಾಜಸಿಂಹನು ಇನ್ನೂ ಅಲ್ಲಿ ತಡೆಯಲಿಲ್ಲ. ಅವನು ಬಾದಶಹನಿಗೆ ಪ್ರಣಾಮವನ್ನು ಮಾಡಿ, ಅರಮನೆ ಯಿಂದ ಹೊರಟುಹೋದನು.
ಮಧುರವಾದ ಚಂದ್ರೋದಯ, ಬೆಳದಿಂಗಳಲ್ಲಿ ನನೆದ ಮರಾಟರ ಶಿಬಿರ, ಶಿಬಿರವು ಸುತ್ತಲೆಲ್ಲಾ ರಜತಮಯವಾದಂತಿತ್ತು. ಚಂದ್ರನು ಮೆಲ್ಲಮೆಲ್ಲನೆ ಇಳಿವಷ್ಟಕ್ಕೆ ಚಂದ್ರಿಕೆಯು ಮಂದಿರದ ತೆರೆದ ಕಿಟಕಿ ಗಳಿಂದ ಹಾಯ್ದು, ಒಳಗಡೆಯ ಕತ್ತಲನ್ನು ತೊಲಗಿಸುತ್ತಲಿತ್ತು. ಮಂದಿರದ (ಹೋಲ್' ಒಂದು ಚಂದ್ರಿಕೆಯಿಂದ ಉಜ್ವಲವಾಗಿತ್ತು. (ಹೋಲ್' ಪರಿಷ್ಕಾರವಾಗಿತ್ತು. ಅದರ ಎರಡೂ ದ್ವಾರಗಳಿಗೂ ರೇಷ್ಮೆಯ ಪರದೆ; ಪರದೆಯಲ್ಲಿ ಚಿತ್ರಿತವಾದ ಹೂಗಳು, ಕಿಟಕಿಗೆ ಇದ್ದ ಪರದೆಯು ತೆರೆದಿತ್ತು. ಚಂದ್ರನ ಕಿರಣವು ಈ ಕಿಟಕಿಯಿಂದ ನುಸುಳಿ ಬಂದು, ಗೋಡೆಯ ಪಟ್ಟೆ ತೂಗುಗಳ (Silk hangings) ಮೇಲೆ ಕುಣಿಯುತ್ತಲಿತ್ತು. ಗೋಡೆಗೆ ಸಮೀಪವಾಗಿ ಪರ್ಯ೦ಕ; ಬೆಳ್ಳಿಯ ಕಾಲುಗಳುಳ್ಳ ಪರ್ಯ೦೪. ಮಂಚದ ನಾಲ್ಕು ಕಂಬಗಳಿಗೂ ಬೆಳ್ಳಿ; ಇವುಗಳ ಮೇಲೆ ಚಿನ್ನದ ಹುಲಿಯ ಮುಖಗಳು. ಮಂಚದ ಕೆಳಗೆ ಮೆತ್ತಗಾದ, ದಪ್ಪಗಾದ ರತ್ನ ಗಂಬಳಿಯು ಹಾಸಿತ್ತು. ಗೋಡೆಗಳಲ್ಲಿ ಚಿತ್ರಗಳು ಇದ್ದಂತೆಯೇ ರತ್ನ ಗಂಬಳಿಯ ಮೇಲೂ ಚಿತ್ರಗಳು. ಮಂಚದ ಮೇಲೆ ಹಂಸತೂಲಿಕಾತಲ್ಲ. ಕಿನ್ಕಾಬಿನಿಂದ ರಚಿತವಾದ ಮೃದುವಾದ ಹಾಸಿಗೆ, ಹಾಸಿಗೆಯ ಮೇಲೆ, ಡಾಕ್ಕಾ ಮಲ್ಲಿ ನ ಹೊದಿಕೆ ಹಾಸಿಗೆಯ ಇಕ್ಕಡೆಗಳಲ್ಲಿಯೂ 'ತುಪ್ಪುಳಿನ ತಲೆದಿಂಬುಗಳು. ಹಾಸಿಗೆಯ ಮೇಲೆ ಯಾರೂ ಮಲಗಿ
-
57
-
ದಂತೆ ತೋರಲಿಲ್ಲ. ಹೊದಿಕೆಯು ಸುರ್ಕುಗೊಂಡಿರಲಿಲ್ಲ. ಅಂತಸ್ತಿನಿಂದ ಬೆಳ್ಳಿ ಯ ತೂಗುದೀಪವೊಂದು ಮಿಣಮಿಣನೆ ಉರಿಯುತ್ತಲಿತ್ತು. ದೀಪಕ್ಕೆ ಚಿನ್ನದ ಸರಪಣಿ; ಗಂಧದ ಎಣ್ಣೆ, ದೀಪದ ಕೆಳಗೆ ಆಜಾನುಬಾಹುವಾದ ಯುವಕನೊಬ್ಬನು ಏನನ್ನೋ ಯೋಚಿಸುತ್ತ ಕುಳಿತಿದ್ದನು. ಯುವಕರು ಒಂದು ತಡವೆ ಕಣೋರಸುತ್ತ, ಮತ್ತೊಂದು ತಡವೆ ಚಂದ್ರನನ್ನು ನೋಡು ಇಲಿದ್ದ ನು, ನಡುನಡುವೆ “ನಾನೇಕೆ ಹೀಗೆ ಮಾಡಿದೆನು?” ಎನ್ನು ವನು. ದೀಪವು ನಂದಿಹೋಗುವಂತಿತ್ತು, ಯುವಕರು ಅದನ್ನು ಸರಿಮಾಡುವು ದಕ್ಕೆ ಎದ್ದನು. ಅಷ್ಟರಲ್ಲಿ ಹೊರಕ್ಕೆ ಯಾರೋ ಬಂದಂತೆ ಸದಾ ಯಿತು. ಬಂದವನಿಗೆ ಯುವಕನಿದ್ದ ಕೊಟ್ಟಡಿಯನ್ನು ಪ್ರವೇಶಿಸುವುದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಬಂದವಳು “ಹಕೀಮನ” ವೇಷದಲ್ಲಿದ್ದ ಶೈಲಿನಿ.
ಯುವಕ:- “ಶೈಲಿನಿ! ನೀನು ಈ ಗಂಭೀರವಾದ ರಾತ್ರಿ ಇಲ್ಲಿ ಬಂದೆ ಏತಕ್ಕೆ?”
ಶೈಲಿನಿಯು ಈ ಮಾತಿನಿಂದ ನೀರಾವಳಾದಳು. ಸಲ್ಲಾಪದ ಪ್ರಾರಂಭ ದಲ್ಲಿ ಕೇಳಿದ ವಿಪರೀತವಾದ ಪ್ರಶ್ನೆಗೆ ಶೈಲಿನಿಯ ತುಟಿಗಳು ಉತ್ತರವಿಲ್ಲದೆ ಅಲುಗಿದುವು.
ಯುವಕನು “ಏಕೆ ಬಂದೆ? ಏಕೆ ಪ್ರಯಾಸಪಟ್ಟಿ?” ಎಂದು ಮತ್ತೂ ಕೇಳಿದನು.
ಶೈಲಿನಿಯು ಸ್ವಲ್ಪ ಧೈರ್ಯಗೊಂಡ. “ನಿನ್ನ ಕ್ಷೇಮವನ್ನು ವಿಚಾರಿಸು ವುದಕ್ಕೆ; ಅವರಂಗಜೇಬನ ಕೃತ್ರಿಮವನ್ನು ತಿಳಿಸುವುದಕ್ಕೆ” ಎಂದಳು.
ಯುವಕನು ನಿಟ್ಟುಸಿರಿಡುತ್ತ “ಎಲ್ಲವೂ ಕೃತ್ರಿಮ” ಎಂದು ಹೇಳಿ ಪುನಃ ಉಸಿರು ಬಿಟ್ಟನು.
ಶೈಲಿನಿಯ ಹೃದಯವು ದಡದಡಿಸತೊಡಗಿತು. ಆದರೂ ಅವಳು ಮನಸ್ಸನ್ನು ಸ್ಥಿರಗೊಳಿಸಿ, ತನ್ನ ಪ್ರಿಯನ ಮಾತನ್ನು ಲಕ್ಷಿಸದಂತೆ ಮಾಡಿ, “ನನ್ನ ತಂದೆಯು ವಿಚಾರವಿಲ್ಲದೆ ಮಾಡಿದ ಕೃತ್ಯಕ್ಕೆ ನೀನು ಇಷ್ಟು?”
-
58
-
ಯುವಕನು ಕಣ್ಣೀರನ್ನು ಕಾಣಿಸದೆ ಒರಸುತ್ತ “ಎಲ್ಲರೂ ವಿಚಾರವಿಲ್ಲದೆ ಕೆಲಸಮಾಡುವರು. ನಾನೂ ಹಾಗೆಯೇ, ನೀನೂ ಹಾಗೆಯೇ, ಎಲ್ಲರೂ ಹಾಗೆಯೇ” ಎಂದು ಸಬನಾದನು.
ಯುವಕನ ಮಾತುಗಳು ಶಲ್ಯದಂತೆ ಶೈಲಿನಿಯ ಮನಸ್ಸನ್ನು ಚುಚ್ಚಿ ದುವು. ಶೈಲಿನಿಯು ಹತ್ತಿರ ಬಂದು, “ನಾನು ವಿಚಾರವಿಲ್ಲದೆ ಮಾಡಿದ ಕಣರ್ಯವು ಯಾವುದು?” ಎಂದು ಕೇಳಿದಳು.
ಯುವಕನು ತಲೆಯನ್ನು ಕೈಯಿಂದ ಆದರಿಸುತ್ತ “ನ-ನನ್ನನ್ನು ಪ್ರೀ- ಪ್ರೀತಿಸಿದುದು” ಎಂದು ಹೇಳಿ, ಮುಖವನ್ನು ತಗ್ಗಿಸಿದನು.
ಶೈಲಿನಿಯ ಹೃದಯವು ವಿದೀರ್ಣವಾಗುವಂತಿತ್ತು. ಅವಳು ಕಿಟಕಿಯ ಕಡೆಗೆ ಕಣ್ಣೆತ್ತಿ ನೋಡಿದಳು. ಚಂದ್ರನು ಇದಿರಿಗೆ ತೋರುತ್ತಿರಲಿಲ್ಲ. ಶೈಲಿನಿಯು ಕಾತರಸ್ವರದಿಂದ, “ನನ್ನ ಕೃತ್ಯಗಳಲ್ಲಿ ವಿಚಾರವಿಲ್ಲ. ಅದನ್ನು ನಾನು ತಿಳಿದಿರುವೆ. ನನ್ನ ಪ್ರೀತಿಯಲ್ಲಿ ಅವಿಚಾರವು ಯಾವುದು? ತುಂಬಿಯು ಕಮಲದ ಬಳಿಗೈದುವುದರಲ್ಲಿ ಯಾವ ವಿಚಾರ ಮಾಡುವುದು?”
ಯುವಕ:-- “ಕಮಲಪುಷ್ಪವೊ, ಕಿಂಶುಕ ಪುಷ್ಪವೊ ಎಂದು ನೋಡದೆ ಇರುವುದೇ?”
ಶೈಲಿನಿಯು ಬಾಯಲ್ಲಿ ಮಾತಿಲ್ಲದೆ ಯುವಕನನ್ನೇ ನೋಡುತ್ತ ನಿಂತಳು. ಯುವಕನು ರುದ್ದ ಕ೦ಠನಾದನು. ಹೊರಕ್ಕೆ ಯಾರೋ ಬಂದಂತೆ ಸದ್ದು ಕೇಳಿಸಿತು.
ಒಡನೆ ಶೈಲಿನಿಯ ಕೈಯನ್ನು ಯುವಕನು ತನ್ನ ಕೈಯಿಂದ ಬಿಗಿ ಹಿಡಿದು “ಶೈಲಿನಿ! ನನ್ನನ್ನು ಮನ್ನಿ ಸು! ಶೈಲಿನಿ! ನನ್ನನ್ನು ಕ್ಷಮಿಸು !” ಎಂದು ಹೇಳಿ ಅಳತೊಡಗಿದನು.
ಅಷ್ಟರಲ್ಲಿ ಹೊರಗಿನ ಗದ್ದಲವು ಹೆಚ್ಚಾಯಿತು. ಶೈಲಿನಿಯು ಅವಾಕ್ಕಾದಳು. ಆದರೂ ಚಿತ್ರಸೈರ್ಯದಿಂದ, “ರಾಜಾಧಿರಾಜ! ಈ ದಾಸಿಯು ಯಾವುದನ್ನು ಮನ್ನಿಸಬೇಕು? ನಾನು ಕ್ಷಮಿಸುವುದಕ್ಕೆ ಅಪರಾಧವೇನಿದೆ?” ಎಂದು ವಿಸ್ಮಿತನಯನಗಳಿ೦ದ ಕೇಳಿದಳು.
5
- 59 - “ಒಳಗೆ ಹೋಗುವುದಕ್ಕೆ ಯಾರ ಅಪ್ಪಣೆಯೂ ಇಲ್ಲ' ಎಂದು ಹೊರ ಗಿ೦ದ ಮಾತುಗಳು ಕೇಳಿಸಿದುವು.
ಯುವಕನು ಒಮ್ಮೆ ಮಾತನಾಡಲಿಲ್ಲ. ಬಳಿಕ ಶೈಲಿನಿಯ ಮುಖ ವನ್ನು ತುಂಬಾ ನೋಡುತ್ತ, “ಶೈಲಿನಿ! ನೀನು ನನ್ನಿಂದ ವಂಚಿತಳಾದೆ ವಂಚಿತಳಾದೆ. ನೀನು ಹೇಗೆ ವಂಚಿತಳಾದೆ ಎಂದು ನಾನೇ ಬಾಯಿಟ್ಟು ಹೇಳುವ ಬದಲಾಗಿ ಈ ಪತ್ರವೇ ತಿಳಿಸುವುದು; ಇದನ್ನು ಓದಿ ನೋಡಿ, ನನ್ನ ಅಪರಾಧವನ್ನು ಕ್ಷಮಿಸು!” ಎಂದು ಹೇಳಿ, ಅಲ್ಲಿಯೆ ಕೈಗಳಿಂದ ಕಣ್ಣು ಮುಚ್ಚಿ ನಿಂತುಬಿಟ್ಟನು.
ಹೊರಕ್ಕೆ ಮುಆಜಮನು ಸಹರೇಯವನನ್ನು ಗದರಿಸಿ, ಒಳಗೆ ಬಂದನು. ಅವನು ಕೊಟ್ಟಡಿಗೆ ಇದಿರಾಗಿ ಬರುವುದನ್ನು ರೈಲಿನಿಯು ಕಂಡು “ರಾಜಾಧಿರಾಜ! ನನ್ನ ನ ರ ಸು! ರಕ್ಷಿಸು !!” ಎಂದು ಕೂಗಿದಳು.
ಮು೦ಜಮನು ಶೈಲಿನಿಯನ್ನು ಸ್ವರದಿಂದ ಗುರುತಿಸಿದನು. ಅವನು ಒಳಕೊಟ್ಟಡಿಯ ಸವಿಾಪಸ್ಥನಾಗಿ “ಶಿವಾಜಿರಾಜ! ಇದೇನು ಅಕೃತ್ಯವನ್ನು ಮಾಡುವೆ?” ಎಂದು ಕೇಳಿದನು.
ಶೈಲಿನಿಯ ಪ್ರಾಣವಲ್ಲಭನು ಮುಂದೆ ಬಂದು, ಶೈಲಿನಿಯನ್ನು ತನ್ನ ಬೆನ್ನ ಹಿಂದೆ ಇರಿಸಿ, “ನನ್ನ ಏಕಾಂತದ ಕೊಟ್ಟಡಿಗೆ ನೀನು ಯಾರ ಅನುಮತಿಯಿಂದ ಪ್ರವೇಶಮಾಡಿದೆ?” ಎಂದು ಕೇಳಿದನು. “ಎಲ್ಲವೂ ನಮ್ಮದಾದಲ್ಲಿ ನಾವು ಯಾರೊಡನೆ ಕೇಳಬೇಕು?" ವಿಂದು ಮುಂಜಮನು ಉತ್ತರ ಕೊಟ್ಟನು. ಪುನಃ ನಮ್ಮ ನಗರದಲ್ಲಿ ಹೆಣ್ಣು ಕಳವು ಆಗದಂತೆ ನಾವು ಜಾಗರೂಕರಾಗಿರಬೇಕು.” ಎಂದು ಮುಂದರಿಸಿದನು.
ಅವನ ಪ್ರತಿದ್ವಂದ್ವಿಯು ಉದ್ರೇಕಗೊಂಡನು. ಇಬ್ಬರಿಗೂ ಮಾತಿಗೆ ಮಾತು ಬಂದಿತು. ಮುಸಲ್ಮಾನನು ಕತ್ತಿಯನ್ನು ತೋರಿಸಿದನು. ಒಡನೆ ಹಿಂದುವು ಖಡ್ಗವನ್ನು ಕೈಯಲ್ಲಿ ಹಿಡಿದು, ಕೊಟ್ಟ ಡಿಯ ಹೊರಕ್ಕೆ | ಹೋದನು. ಮುಆಜಮನು ಮುಂದೆ ಓಡತೊಡಗಿದನು. ಮಂದಿರದ ಒಳಕ್ಕೆ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಓಡಿಯೋಡಿ,
-
60
-
ಮುಜಮನು ಹೊರಕ್ಕೆ ಬಂದು, ಪಹರೆಯವನಿಗೆ “ಬಾಗಿಲನ್ನು ಬಿಗಿ
ಮಾಡು' ಎಂದು ಆಜ್ಞೆ ಕೊಟ್ಟನು.
ಮರಾಟನು ಹೊರಕ್ಕೆ ಬಾರದಂತೆ, ಪಹರೆಯವನು ಬಾಗಿಲನ್ನು ಬಿಗಿದುಬಿಟ್ಟನು. ಮರಾಟನು ಉಚ್ಚಸ್ವರದಿಂದ, “ಶೈಲಿನಿ! ಶೈಲಿಸಿ! ಪ್ರಮಾದ ಸಂಭವಿಸುವಂತಿದೆ. ಬೇಗನೆ ಓಡಿಬಿಡು! ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳು!” ಎಂದು ಹೇಳುತ್ತ ಮತ್ತೊಂದು ಕೊಟಡಿಗೆ ಹೋಗಿ, ತೆರೆದಿದ್ದ ಕಿಟಕಿಯನ್ನು ಹತ್ತುತ್ತಿದ್ದನು. ಅದನ್ನು ನೋಡಿ ಮಂದಿರದ ಜಗುಲಿಯ ಮೇಲಿದ್ದ ಮಆಜಮನು ಓಡತೊಡಗಿದನು. ಶಿಬಿರದ ಸುತ್ತಲಿದ್ದ ಸೈನಿಕರೆಲ್ಲರು ಗದ್ದಲದಿಂದ ಸಂಭ್ರಾಂತರಾದರು. ಅಷ್ಟರಲ್ಲಿ ರಾಜಸಿಂಹನು ಮಂದಿರದ ಬಳಿಯಲ್ಲಿ ಇಬ್ಬರು ಸಿಪಾಯರೊಡನೆ ಬಂದು ಇಳಿದನು. ಮರಾಟನು ಕಿಟಕಿಯನ್ನು ಹತ್ತಿ, ಕೈಯಲ್ಲಿದ್ದ ಖಡ್ಗವನ್ನು ಜಳಪಿಸುತ್ತ ಕೆಳಗೆ ದುಮುಕುವುದಕ್ಕೆ ಸಿದ್ಧನಾಗಿದ್ದನು. ಮು೦ಜಮನು ರಾಜಸಿಂಹನನ್ನು ನೋಡಿ, “ಅಯ್ಯಾ! ಶಿವಾಜಿಯು ನನ್ನನ್ನು ಅಟ್ಟ ಕೊಂಡು ಬರುವನು. ಇಕೋ! ನನ್ನನ್ನು ರಕ್ಷಿಸು ” ಎಂದು ಚೀರುತ್ತ ಹತ್ತಿರಕ್ಕೆ ಬಂದನು. ರಾಜಸಿಂಹನು ಮರಾಟನನ್ನು ನೋಡಿದನೋ ಇಲ್ಲವೋ, ಉಪ್ಪರಿಗೆಯ ಮೇಲೆ ಕಾವಲಿದ್ದ ಸೈನಿಕರಿಗೆ ಕೈ ಸನ್ನೆ ಮಾಡಿ, “ಕಳಚಿ ಬಿಡು!” ಎಂದು ಒದರಿದನು. ನೂರಾರು ಬಂಡಿಗಳ ಗಡಗಡ ಶಬ್ದದ ಚೀತ್ಕಾರವೊಂದು ಮಹಡಿಯಿಂದ ಕೇಳಿಸಿತು. ಮರಾಟನು ಕಿಟಕಿಯಿಂದ ಕೆಳಕ್ಕೆ ಹಾರಿದನು. ಕಣ್ಣು ಮುಚ್ಚುವಷ್ಟರಲ್ಲಿ ಮಂದಿರದ ಉಪ್ಪರಿಗೆಯು ನಾಡಿನೊಡನೆ ಜರಿದು ಜಾರಿ ಬರುವಂತಿತ್ತು. ಸಾವಿರಾರು ಬೀಳಲು ಗಳಿಂದ ಆದರಿಸಿದ್ದ ಉನ್ನತವಾದ ಮಹತ್ತಾದ ಆಲದ ಮರವು ಸಿಡಿಲ ಘಾತದಿಂದ ಬುಡದೊಡನೆ ನೆಲಕ್ಕೆ ಒರಗುವಂತೆ, ಸೈನಿಕರು ಶೀಘ್ರವಾಗಿ ಗೊಣಸುಗಳನ್ನು ಕಳಚಿಬಿಡುತ್ತಲೇ, ಆ ಕೃತ್ರಿಮಭವನವು ಓರ್ಗುಡಿಸಿ ಬೀಳತೊಡಗಿತು.
ಮುಆಜಮನು ಕಳವಳದಿಂದ “ಅಯ್ಯೋ! ಅಯ್ಯೋ! ಶೈಲಿನಿಯು ಒಳಕ್ಕೆ ಇರುವಳು--ನಿನ್ನ ಮಗಳನ್ನು ರಕ್ಷಿಸು!” ಎಂದು ಚೀರಿದನು.
72-81=========================
- 61 - ಅದೇ ಸಮಯದಲ್ಲಿ ಶಿಬಿರದ ಅಂತಸ್ತು ಮರಾಟನ ತಲೆಯನ್ನು ಹಳಚಿತು. ಮರಾಟನು ಭಾರದಿಂದ ಮುಂದರಿಸಲಾರದೆ 'ಕೈಲಿನಿ-ಶೈ” ಎನ್ನುತ್ತ ಅಡ್ಡಗೆಡಲಿಕ್ಕಾದನು.
( ಶೈಲಿನಿ' ಎಂಬ ಮಾತು ಕಿವಿಗೆ ಬಿದ್ದಿತೊ ಇಲ್ಲವೊ ರಾಜಸಿಂಹನು ಉನ್ಮತ್ತನಾದನು. ಕೆಲಸವು ಕೈಮೀರಿ ಹೋಯಿತು. ಯಾರನ್ನೂ ಬದ: ಕಿಸುವುದಕ್ಕೂ ಉಪಾಯವಿರಲಿಲ್ಲ. " ಅಮ್ಮಾ! ಶೈಲಿನಿ! ನೀನು ಎಲ್ಲಿ ಇರುವೆ?” ಎಂದು ಹೇಳಿ ರಾಜಸಿಂಹನು ಜೀವದಾಸೆಯಿಲ್ಲದೆ ಒಳಕ್ಕೆ ಹಾರಿದನು. ಸಿಪಾಯನೊಬ್ಬನು ಅವನನ್ನು ತಡಿಸುವುದಕ್ಕೆ ಹೋದನು. ಅವನು ಕೃತಕೃತ್ಯನಾಗಲಿಲ್ಲ. ಎತ್ತರವಾದ ಮಾಡು ಮಹಾಶಬ್ದದೊಡನೆ ನೆಲವನ್ನು ಚುಂಬಿಸಿಬಿಟ್ಟಿತು. ಆ ಭಯಂಕರ ಧ್ವನಿಯು ಆ ಗಂಭೀರವಾದ ರಾತ್ರಿಯಲ್ಲಿ ಅರಣ್ಯ ಮಧ್ಯದಲ್ಲಿ ಉಂಟಾದ ಗುಡುಗಿನಂತೆ ಕೇಳಿಸಿತು.
ಮುಆಜಮನು ಆರಮನೆಗೆ ಓಡಿದನು. ಬಾದಶಹನು (ಘನಾಲ್ ಖಾನೆ'ಯಲ್ಲಿ ನಿದ್ದೆ ಹೋಗದೆ, ರಾಜಸಿಂಹನಿಂದ ಸಮಾಚಾರವನ್ನು ನಿರೀಕ್ಷಿ ಸಿದ್ದನು. ಮುಂಜಮನು ಬಾದಶಹನ ಬಳಿಗೆ ಬಂದು ಘೋರ ಪ್ರವಾದ ವಾಯಿತು' ಎಂದನು.
ಅವರಂಗಜೇಬನು ( ಶಿವಾಜಿಯು ತಪ್ಪಿಸಿಕೊಂಡು ಹೋದನೆ?' ಎಂದು ಕಾಂಕ್ಷಿ ತಸ್ವರದಿಂದ ಕೇಳಿದನು.
ಮು೦ಜಮ್:-( ರಾಜಸಿಂಹನು ಶಿಬಿರವನ್ನು ಬಿಚ್ಚುವಂತೆ ಆಜ್ಞೆ ಮಾಡಿದನು'.
ಬಾದಶಹ:-'ಶಿವಾಜಿಯು ಒಳಗೆ ಇರಲಿಲ್ಲವೇ?'
ಮುಆಜಮ್: – 'ಶಿವಾಜಿಯೂ ಇದ್ದನು. ಅವನೊಡನೆ ಶೈಲಿನಿಯೂ ಇದ್ದಳು' ಎಂದನು.
ಬಾದಶಹ:-'ರಾಜಸಿಂಹನು ಮಗಳನ್ನು ರಕ್ಷಿಸಲಿಲ್ಲವೇ?
ಮುಅಜಮ್:--- ಮಗಳನ್ನು ರಕ್ಷಿಸುವುದು ಅಸಾಧ್ಯವಾಗಿದ್ದಿತು. ಮಗಳು ಒಳಗೆ ಇರುವಳೆಂದು ಕೇಳುತ್ತಲೇ ರಾಜಸಿಂಹನು ತಾನೂ ಬಲಿಬಿದ್ದನು'.
– 62 ಅವರಂಗಜೇಬನು ಇದನ್ನು ಕೇಳುತ್ತಲೇ ಶಿಬಿರದ ಕಡೆಗೆ ಹೊರಟನು. ಸೈನಿಕರಿಗೆ ಆಜ್ಞೆ ಮಾಡಿ ಹಾಳು ಕೊಂಪೆಯನ್ನೆಲ್ಲಾ ಬೆಳಗಾಗುವಷ್ಟರಲ್ಲಿ ತೋಡಿಸಿ ತೆಗೆದನು. ನಾಲ್ಕು ಮಂದಿ ರಜಪೂತ ಸೈನಿಕರು ಮರಾಟನ ಶವವನ್ನು ಅವರಂಗಜೇಬನ ಕಾಲಡಿಯಲ್ಲಿ ತಂದಿಟ್ಟರು. ಅವರಂಗಜೇಬನು ಮುಖದಲ್ಲಿ ಸಂತೋಷವನ್ನಾಗಲಿ ದುಃಖವನ್ನಾಗಲಿ ಸ್ಪುಟಮಾಡಲಿಲ್ಲ. ಶಿವಾಜಿಯು ಸತ್ತು ತನ್ನ ಪಾದಾಕ್ರಾಂತನಾದನೆಂದು ಮನಸ್ಸಿನಲ್ಲಿ ತಿಳಿ ದರೂ, ಬಾದಶಹನು ಶಾಂತನಾಗಿದ್ದನು. ಬಳಿಕ ರಾಜಸಿಂಹ ಶೈಲಿನಿಯರ ಶವಗಳು ತೆಗೆಯಲ್ಪಟ್ಟುವು. ಚಂದ್ರಕಾಂತಪುತ್ಥಳಿಯು ಚಂದ್ರಕಿರಣದಲ್ಲಿ ನೆನೆದು ಹೋದಂತೆ, ಶೈಲಿನಿಯ ದೇಹವು ತಣ್ಣಗಾಗಿದ್ದಿತು. ಬಾದಶಹನು ಶೈಲಿನಿಯ ದೇಹವನ್ನು ನೋಡುತ್ತ ನಿಂತನು. ಅವಳ ಹಸ್ತದಲ್ಲಿ ಬಿಗಿ ಹಿಡಿದ ಪತ್ರವೊಂದಿತ್ತು. ಬಾದಶಹನು ಕಾಗದವನ್ನು ಓದಿಸಿದನು. ಕಾಗದವು ಈ ಪರಿಯಾಗಿ ಬರೆದಿತ್ತು: ಶೈಲಿನಿ,
ನಿನ್ನನ್ನು ಹೇಗೆ ಸಂಬೋಧಿಸಬೇಕೆಂದು ಇದುವರೆಗೆ ನಿಶ್ಚಯಮಾಡಲಾರದವ ನಾಗಿದ್ದೇನೆ. ಒಂದೆರಡು ಬಾರಿ ನಿನ್ನನ್ನು ಪ್ರಿಯೆ, ಪ್ರಿಯ' ಎಂದು ಕರೆದಿದ್ದೇನೆ. ಹಾಗೆ ಏಕೆ ಕರೆದೆನೆಂದು ಈಗ ದುಃಖಪಡುತ್ತೇನೆ. ನಾನು ಹತಭಾಗ್ಯನು; ಪಾಪಿಯು ನನ್ನ ಪಾಪದಿಂದ ನಿನ್ನ ದೇಹವನ್ನು ಪಾಪಮಯವಾಗಿ ಮಾಡಲು ನಾನು ಆಶಿಸು ವುದಿಲ್ಲ. ಯಾವ ಕಾಲದಲ್ಲಿ ನೀನು ನಿನ್ನ ತಂದೆಯೊಡನೆ ಪ್ರತಾಪಗಡಕ್ಕೆ ಬಂದೆಯೋ ಆ ಕಾಲದಲ್ಲಿ ಈ ಪಾಪದ ಬೀಜವು ನನ್ನ ಹೃದಯದಲ್ಲಿ ಉಂಟಾಯಿತು. ನೀನು ಒಂದು ಸಾಯಂಕಾಲ ಪ್ರತಾಪಗಡದ ಉಪವನದಲ್ಲಿ ಏಕಾಕಿಯಾಗಿ ಏನನ್ನೋ ಚಿಂತಿಸುತ್ತ ಕುಳಿತಿದ್ದೆ. ಬಳಿಕ ಚಿಂತನೆಯನ್ನು ಬಿಟ್ಟು ನಿನ್ನ ಪ್ರಾಣೇಶನ ಸ್ಮರಣೆ ಯನ್ನು ಮಾಡತೊಡಗಿದೆ. ನಿನ್ನ ದೀರ್ಘವಾದ ಕೇಶರಾಮವು ಬೆನ್ನ ಮೇಲೆ ಗುಂಗುರು ಗುಂಗುರಾಗಿ ಹರಡಿತ್ತು. ಮುಖವು ಕೈ ದಳದ ಮೇಲೆ ಆಶ್ರಯಿಸಿತ್ತು. ಪ್ರಣಯಜನ್ಯವಾದ ಕಣ್ಣೀರುಗಳು ದರದರನೆ ಸುರಿಯುತ್ತಿದ್ದುವು. ಆಗ ನಾನು ಬಳಿ ಯಲ್ಲಿದ್ದ ನಿಕುಂಜದ ಮರೆಯಲ್ಲಿದ್ದೆನು. ಎರೆಹಿಣಿಯಾದ ವನದೇವತೆಯಂತೆ ಒಪ್ಪು ಕೈಲಿದ್ದ ನಿನ್ನ ಮೂರ್ತಿಯನ್ನು ನೋಡಿ ನಾನು ಮುಗ್ಧನಾದೆನು. ನಾನು ಯೋಚಿ ಸಿದ ಕೃತ್ಯವು ಅಕಾರ್ಯವೆಂದು ನಾನು ಆಗ ತಿಳಿದಿದ್ದರೂ, ನಿನ್ನ ಲಾವಣ್ಯಮಯವಾದ ಶರೀರದ ಕಡೆಯಿಂದ ನನ್ನ ಮನಸ್ಸು ಹಿಂದೆಳಿಯಲಾರದೆ ಹೋದನು. ನಾನು ಮರೆಯಿಂದ ಹೊರಕ್ಕೆ ಬಂದೆನು. ನೀನು ನನ್ನನ್ನು ನೋಡಿ ಲಜ್ಜೆ ತಳಾದೆ. ನಾನು
=
68
ಮಾತನಾಡುವಷ್ಟರಲ್ಲಿ ಕೋಟಿಯ ಘಂಟಾನಾದವಾದುದರಿಂದ, ನಾನು ನಿನ್ನನ್ನು ಬಿಟ್ಟು ಹೋಗಬೇಕಾಯಿತು. ನೀನು ನನ್ನ ಹೃದಯವನ್ನು ಓದಿಬಿಟ್ಟೆ,
ಶೈಲಿನಿ! ನಿನ್ನೊಡನೆ ಮುಚ್ಚು ಮರೆ ಏಕೆ? ನಿನ್ನ ಪ್ರಣಯ ಸರ್ವಸ್ವವನ್ನು ನನಗೆ ಅರ್ಪಿಸಲಿಕ್ಕೆ ಇದ್ದ ನಿನ್ನೊಡನೆ ಮರೆ ಮೋಸವೇಕೆ? ನನ್ನನ್ನು ಶಿವಾಜಿ ಎಂದು ಭಾವಿಸಿ, ನೀನು ಮೋಸಹೋದೆ. ನಿನ್ನ ಹೃದಯವು ಶಿವಾಜಿ ಮಹಾರಾಜರು ಬರುವಲ್ಲಿ ಅಲ್ಲದೆ ಮತ್ತೆಲ್ಲಿ ಹೋಗುವುದು? ಕಮಲಿನಿಯು ರಾಜಹಂಸನಿಗೆ ಆಶ್ರಯ ಕೊಡುವುದಲ್ಲದೆ ಆಫ್ರೆಯನ್ನು ಬಯಸುವುದೇ? ನಾನು ಶಿವಾಜಿರಾಜರ ಸ್ವಾಮಿಭಕ್ತನಾಗಿದ್ದರೂ ಸ್ವಾಮಿದ್ರೋಹಿಯಾದನು. ಮಹಾರಾಜರ ಆಪತ್ತುಗಳಲ್ಲಿ ನಾನು ಅವರಿಗೆ ನೆರವಾಗುವಂತೆ ನನಗೆ ಅವರು ಬಳಿಯಲ್ಲಿ ಆಶ್ರಯ ಕೊಟ್ಟಿದ್ದರು. ನನ್ನ ರೂಪ, ದೇಹ, ಆಕಾಶ, ವರ್ಣ ಎಲ್ಲವು ಶಿವಾಜಿರಾಜರಂತೆಯ, ಅವಳಿಜವಳಿ ಕೂಸುಗಳಲ್ಲಾದರೂ ಸ್ವಲ್ಪ ಭೇದ ತೋರಬಹುದು, ನಮ್ಮಲ್ಲಿರಲಿಲ್ಲ. ಏನೊಂದು ಪ್ರಮಾದ ಸಂಭವಿಸುವ ಹಾಗಿದ್ದರೆ, ರಾಜರು ನನ್ನನ್ನು ತಮ್ಮ ಸ್ಥಾನದಲ್ಲಿ ಇಟ್ಟು ಪ್ರಾಣವನ್ನು ಉಳಿಸಿಕೊಳ್ಳುತಿದ್ದರು. ರಾಜರು ಒಂದು ಕಾಲ ದಿಲೇರಿಖಾನನ ಹಸ್ತಗತವಾಗುವಂತಿದ್ದರು. ಆಗ ರಾಜರ ಬದಲಿಗೆ ನಾನೇ ಬಹಿರಂಗದಲ್ಲಿ ಕಾರ್ಯ ವನ್ನು ವಿಚಾರಿಸುತ್ತಿದ್ದೆನು. ಯುದ್ದದಲ್ಲಿ ರಾಜರಿಗೆ ಏಟು ತಗಲುವ ಹಾಗಿದ್ದರೆ, ಸೈನ್ಯವು ಹಿಂಜಾರದಂತೆ ನಾನೇ ನಾಯಕನಾಗಬೇಕಾಗುತ್ತಿತ್ತು. ಅಷ್ಟೇಕೆ! ಪ್ರಕೃತ ದಲ್ಲಿ ಬಾದಶಹರ ಬದಿಯಲ್ಲಿದ್ದ ಶ್ರೀ ಶಿವಾಜಿ ಮಹಾರಾಜರು ತಾವು ತಪ್ಪಿಸಿ ಕೊಂಡುದು ಬಾದಶಹರಿಗೆ ತಿಳಿಯಲು ಸ್ವಲ್ಪ ವಿಳಂಬವಾಗುವಂತೆ, ನನ್ನನ್ನು ಅವರ ಹಾಸಿಗೆಯ ಮೇಲೆ ಮಲಗಬೇಕೆಂದು ಆಜ್ಞೆ ಮಾಡಿದ್ದರು.
ಶೈಲಿನಿ! ಬ್ರಹ್ಮಹತ್ಯಕ್ಕಾಗಲಿ ಪತ್ನಿಹತ್ಯಕ್ಕಾಗಲಿ ಪ್ರಾಯಶ್ಚಿತ್ತವು ಉಂಟು. ಸ್ವಾಮಿದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ. ನಾನು ಶಿವಾಜಿರಾಜರ ಸೇವೆಯಲ್ಲಿ ಸೇರು ವಾಗ ವಿವಾಹಮಾಡಿಕೊಳ್ಳುವುದಿಲ್ಲ ಎಂದು ರಾಜಚರಣಗಳನ್ನು ಹಿಡಿದು ಪ್ರಮಾಣ ಮಾಡಿದ್ದೆನು. ಅದಕ್ಕೋಸ್ಕರವೇ ನನ್ನ ಬಡ ತಾಯಿಯನ್ನೂ ತಮ್ಮಂದಿರನ್ನೂ ರಾಜ್ಯದ ವೆಚ್ಚದಿಂದ ಮಹಾರಾಜರು ಪೋಷಿಸುತ್ತಿರುವರು. ನಾನು ಈ ಸ್ಥಿತಿಯಲ್ಲಿ ವಿವಾಹಮಾಡಿಕೊಳ್ಳುವುದು ಅನುಚಿತವಾಗಿತ್ತು. ನನ್ನ ವಿವಾಹದಿಂದ ರಾಜಕಾರ್ಯ ಗಳಿಗೆ ತೊಡಕು ಉಂಟಾಗುವುದೆಂದು ನನಗೆ ಗೊತ್ತಿತ್ತು. ಅದರೆ ಅಂದು ನಿನ್ನ ರೂಪವನ್ನು ನೋಡಿ ನಾನು ಮರುಳಾದೆನು. ನನ್ನನ್ನು ಶಿವಾಜಿಯೆಂದು ಭ್ರಮಿಸಿ ನೀನೂ ಮರುಳಾದೆ. ನಾನು ಸ್ವಾಮಿದ್ರೋಹವನ್ನು ಮಾಡಿದುದು ಅಲ್ಲದೆ ನನ್ನ ಕಪಟವೇಶದಿಂದ ನಿನ್ನ ಹೃದಯವನ್ನೂ ಸೂರೆಗೊಳ್ಳಲಿಕ್ಕೆ ಇದ್ದೆನು. ನನ್ನ ಕಪಟಾಚರಣೆಯು ಶಿವಾಜಿ ಮಹಾರಾಜರಿಗೆ ಪ್ರಕೃತದಲ್ಲಿ ತಿಳಿದಿತ್ತೋ ಇಲ್ಲವೊ
ನಾನು ಖಂಡಿತವಾಗಿ ಹೇಳಲಾರೆನು, ಆದರೆ ದಿನೇ ದಿನೇ ನನ್ನ ದ್ರೋಹವು ನನ್ನನ್ನೇ ಚುಚ್ಚತೊಡಗಿತು. ಅಂದಿನಿಂದ ನಿನ್ನನ್ನು ಏಕೆ ಪ್ರೀತಿಸಿದನೋ ಎಂದು ವಿಷಾದ ಗಂಡನು. ನೀನು ಆ ರಾತ್ರಿ ಗುಪ್ತವೇಷದಿಂದ ಶಿಬಿರಕ್ಕೆ ಬಂದಾಗ ನಿನ್ನ ಮೇಲೆ ಉದಾಸೀಘಗೊಳ್ಳಲಿಕ್ಕೆ ಇದೇ ಕಾರಣ,
ಶೈಲಿನಿ! ನಾನು ಇನ್ನೂ ಹೇಳುವುದಕ್ಕಿಂತ ಸನ್ನ ಶ್ವಾಸವು ನಿಂತು ಹೋದರೆ ಚೆನ್ನಾಗಿತ್ತಲ್ಲವೆ? ನಾನು ಇನ್ನೂ ಬರೆಯುವುದಕ್ಕಿಂತ ನನಗೆ ಕೈಗೆಟ್ಟರೆ ಒಳ್ಳೆಯ ದಾಗಿತ್ತಲ್ಲವೇ? ನಾನು ನಿನ್ನ ಪಾಣಿಗ್ರಹಣ ಮಾಡಿದ್ದು ಹೊರತು ನಿನ್ನ ಶುದ್ಧದೇಹವನ್ನು ನನ್ನ ಅಶುದ್ಧತೆಯಿಂದ ಹಾಳು ಮಾಡಲಿಲ್ಲ. ನಾನು ಸ್ವಾಮಿದ್ರೋಹಿ ಎನ್ನಿಸಿಕೊಳ್ಳುವು ದಕ್ಕಿಂತಲೂ ಕಪಟಪ್ರೇಮಿಯೆಂದಾದರೂ ಜನಗಳಿಂದ ಹೇಳಿಸಿಕೊಳ್ಳುವೆನು. ನೀನು ನನ್ನನ್ನು ಕ್ಷಮಿಸು! ನನ್ನನ್ನು ಶುದ್ಧವಾಗಿ ಮಾಡಿಬಿಡು! ನೀನು ಯಾರನ್ನು ನೋಡಿ - ಶಿವಾಜೆಯೆಂದು ಭ್ರಾಂತಿಗೊಂಡೆಯೋ ಆ ಹಿರೋಜಿ ಘರ್ಜಂದ ಎಂಬ ಈ ಪಾಪಿ ಮರಾಟನನ್ನು ಇನ್ನು ಸಂಪೂರ್ಣವಾಗಿ ಮರೆತುಬಿಡು. ನೀನು ಮರೆತು ಬಿಡುವುದೆ ನನಗೆ ಕ್ಷಮಾಪಣೆಯೆಂದು ಭಾವಿಸುವೆನು.
ಹಿರೋಜಿ ಫರ್ಜ೦ದ.
ಅವರಂಗಜೇಬ್ ಬಾದಶಹನು ಈ ಕಾಗದವನ್ನು ಕೇಳುತ್ತಲೇ ಕೋಪಗೊಂಡನು; ದುಃಖಗೊಂಡನು. ಶಿವಾಜಿ ತಪ್ಪಿಸಿಕೊಂಡನು ಎಂದು ಕೊಪ; ರಾಜಸಿಂಹನು ಮಗಳೊಡನೆ ಸತ್ತನೆಂದು ದುಃಖ. ಶಿವಾಜಿಯ ಬೆನ್ನ ಹಿಂದೆ ಜನಗಳನ್ನು ಕಳುಹಿಸಿದನು. ಶಿವಾಜಿಯ ಹೆಜ್ಜೆ ಹಿಡಿಯಲಿಕ್ಕೆ ಆಗದೆ ಹೋಯಿತು. ಬಾದಶಹನು ಮೂರು ಶವಗಳಿಗೂ ಹಿಂದೂ ದಹನ ಸಂಸ್ಕಾರಗಳನ್ನು ಮಾಡಿಸಿದನು. ಆದರೆ, ೧೫ ದಿನಗಳ ವರೆಗೆ ಅವನು “ಆನ್ ಖಾಸ್ ಖಾನೆ” ಯಲ್ಲಿ ಕಾಲಿಡಲಿಲ್ಲವಂತೆ.
======================================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ