https://ia802803.us.archive.org/35/items/dli.osmania.3459/198505_OU_Niirede.pdf
ನೀರದೆ
ಬಿ. ವೆಂಕಟಾಚಾರ್ಯ
ವಿಜ್ಞಾಪನೆ
ಶ್ರೀ ಶಚೀಶಚಂದ್ರಬಾಬುಗಳು ರಚಿಸಿರುವ ಮೂಲಗ್ರಂಥದವಲಂಬನೆ
ಯಿಂದೀಗ್ರಂಥವು ರಜೆತನಾಗಿರುವುದು, ಗ್ರಂಥದ ಉತ್ಕಷ್ಪಾಪಕರ್ಪವನ್ನು
ಈುರಿತು ತರ್ಕಿಸಿ ವ್ಯವಸ್ಥೆಯಂ ಮಾಡುವ ಭಾರವನ್ನು ಸಹೃದಯರಾದ
ಪಾಠಕಮಹಾಕಯರಿಗೊಪ್ಪಿಸಿರುವೆವು-ಆರ್ಯನಾರಿಯರುಎಷ್ಟೊಂದು ಕಷ್ಟ
ಕ್ಕೊಳಗಾದರೂ ತಮ್ಮ ಸತೀತ್ವದ ಸಂರಕ್ಷಣೆಯು ತಮಗೆ ಪ್ರಥಮಕರ್ತ
ವ್ಯವೆಂದು ತಿಳದಿರುವರು-ಸತೀತ್ವದ ರಕ್ಷ ಣೆಗೆಸಲವಾಗಿ ಪ್ರಾಣವನ್ನಾದರೂ
ಕೊಡಲು ಬದ್ದವಾಗಿರುವರು. ಸ್ನಭಾವಸಿದ್ದವಾದಾ ಬುದ್ದಿ ವೈಭವವು ಅವ
ರಿಗೆ ಪುರುಷಾಸುಕ್ರಮವಾಗಿ ಬಂದು ಅದವರ ರಕ್ತದಲ್ಲಿ ಗಡುತರವಾಗಿ ಸೇರಿ
ಹೋಗಿ ಹುಟ್ಟುಬುದ್ದಿಯಾಗಿ ಪರಿಣಮಿಸಿಬರುವುದು. ಅದುಕಾರಣ ಅವರಿಗದು
ಶೈಶವದಿಂದಲೂ ಚಿರಭ್ಯಸ್ತವಾಗಿ ಹೃದಯದಲ್ಲಿ ಅಂಟಿ ನಾಟಿರುವುದು-ಅವರಿ
ಗದು ಎರಡನೆಯ ಸ್ವಭಾವವೆಂದು ಹೇಳಬಹುದು. ಹಾಗಿರುವ ಪತಿಪ್ರಾಣ
ಸ್ಪಭಾವವುಳ್ಳ ನಾರಿಯರು ಪ್ರಪಂಚದಲ್ಲಿ ಭಾರತವರ್ಪದಲ್ಲಿ ಹೊರ್ತು
ಮತ್ತಾವ. ದೇಶದಲ್ಲಿಯೂ ಅಷ್ಟೊಂದು ಹೇರಳವಾಗಿ ಕಣ್ಗೊಳಸರೆಂದು
ತೋರುತ ದೆ-ಅದಲ್ಲದೆ ಮಾತಾಪಿತೃಗಳಲ್ಲಿ ಅಸದೃಶವಾದ ಭಕ್ತಿಯು ಆರ್ಯ
ರಲ್ಲಿ ಅದೇಮಾದಿರಿಯಾಗಿ ಪುರುಷಾನುಕ್ರಮವಾಗಿ ಅವಿತಚ್ಛಿನ್ನವಾಗಿ ಬಂದಿ
ರುವುದು. ಈ ಗ್ರಂಥದಲ್ಲಿ ಅವೆರಡರ ಉಜ್ವಲ ಉದಾಹರಣೆಗಳನ್ನು ನೋಡ
ಬಹುದು- ಆದರೆ ಪಾಶ್ಚಾತ್ಯರ ನಾಗರಿಕದ ಸಂಘರ್ಷಣದಿಂದ ವಾಂಛನೀಯ
ವಾದಾ ನೈಜಸ್ವಭಾವಗಳು ಸ್ಥಲ್ಪಸ್ಥುಲ್ಸವಾಗಿ ಬಾಧೆಗೊಂಡು ಶೈಥಿಲ್ಯವಂ
ಹೊಂದುತಿರುವುದು ಚಿಂತನೀಯವಾಗಿದ-ನಮ್ಮ ಸಮಾಜಗಳಲ್ಲಿ ಈಜೀಚಗೆ
ಹೆಚ್ಚಾಗಿ ಹಬ್ಬುತಿರುವ ವಿಲಾಸತೆಯಲ್ಲಾಸಕ್ತಿಯೂ, ಗುರುಶಿರಿಯರಲ್ಲಿ
ಲಾಘವವೂ ಈಗೀಗ ಏರ್ಪಾಟಾಗುತಿರುವುದೊಬ ಧರ್ಮಕಿಕ್ಟ್ರ ದಿಂದಲೂ
ನೈತಿಕಶಿಕ್ಷಣದಿಂದಲೂ ಮುಂದೆ ವೃದ್ಧಿ ಗೊಳ್ಳ ದೆ ತಡೆಯಲ್ಸಟ್ಟು ಅರ್ಯನರ
ನಾರಿಯರು ಪ್ರಾರ್ಥನೀಯವಾದಾ ತಮ್ಮ ಪೂರ್ವದ ಸ್ಪುಭಾವಗಳನ್ನು
ಹೊಂದುವುದರಲ್ಲಿ ಸಂದೇಶವಿರದು, ಇತಿ...
ಮೈಸೂರು
ಬಿ. ವೆಂಕಟಾ ಚಾರ್ಯ
1912 )
---------------------------------------------------------
ಮೊದಲನೆಯ ಪರಿಚ್ಛೇದ.
"ತಾಯಿ! ಭಿಕ್ಷವ ನೀಡಿ ತಾಯಿ! "
" ಅರೆ. ಆದು???
" ನಾನು ಭಿಕ್ಷದವಳು ತಾಯಿ!"
ಮನೆಯ ಯಜಮಾನಿಯು. ಯಾರೆಂದು ಕೇಳಿದಳು. ಭಿಕ್ಷದವಳು
ಬಾಗಿಲಲ್ಲಿ ನಿಂತಿದ್ದವಳು ಅಂಗಳಕ್ಕೆ ಬಂದು ನಿಂತಳು.
ಬಿಕ್ಷದವಳು ಚಿಕ್ಕ ಹುಡುಗಿ. ಹುಡುಗಿಯಾಗಿದ್ದರೂ ಲಜ್ಜೆ
ಯಿಂದ ಕೂಡಿದವಳಾಗಿದ್ದಳು. ಮೆಲ್ಲಮೆಲ್ಲನೆ ಬಂದವಳು ಅಂಗಳದ
ಲೊತ್ತಟ್ಟು ಸಂಕುಚಿತಳಾಗಿ ನಿಂತುಕೊಂಡಳು. ಛಿಂದಿಯಾಗಿದ್ದೊಂದು ಬಟ್ಟೆ
ಯನ್ನುಟ್ಟಿದ್ದಳು. ತಲೆ ಕೂದಲು ಚದರಿ ಗಾಳಿಗೆ ಅತ್ತಿತ್ತಹಾರಾಡುತಿದ್ದಿತು.
ಮೈ ತೈಲಹೀನವಾಗಿ ಧೂಲಿಯಿಂದ ಮೈಲಾಗಿದ್ದಿತು. ಮುಖವು ಬಾಡಿ
ಶೀರ್ಣವಾಗಿದ್ದಿತು. . ಶೀರ್ಣವಾಗಿದ್ದ ಮುಖದಲ್ಲೆರಡು ದೊಡ್ಡದೊಡ್ಡ
------------------------------------------
೨ ನೀರದೆ
ಕಣ್ಣುಗಳು ಭ್ರಮರಚುಂಬಿತ ನೀಲಪದ್ಮದಂತೆ ಕಣ್ಗೊಳಸುತಿದ್ದುವು.
ಹುಡುಗಿಯನ್ನು ನೋಡಿದರೆ, ಚಿಕ್ಕದಾಗಿದ್ದೊಂದು ಚಂಪಕದ ಹೂವು ಆರ
ಳುವುದಕ್ಕೆ ಮೊದಲು, ಅಲರ್ವುಚಂಡಮಾರುತದಿಂದ ಹೊಡೆಯಲ್ಬಟ್ಟು ಛಿನ್ನ
ಭಿನ್ನವಾಗಿ ನೆಲದಮೇಲೆ ಬಿದ್ದು ಹೊರಳಾಡಿದ್ದಂತೆ ಕಾಣುವುದು. ಹುಡು
ಗಿಯು ಸುಂದರಿಯೆಂದು ಯಜಮಾನಿಗೆ ಬೋಧೆವಾಯಿತು. ಅದರ ಭಿಕ್ಷ
ದವಳಗೆ ರೂಪಸೌಂದರ್ಯವುಂಟೆಂದು ಹೇಳಬಹುದೆ? ಯಜಮಾನಿಗೆ
ಕೋಪವುಂಟಾಗಿ. ಅವಳು ರುಕ್ಷಕಂಠದಿನದ, " ಗೃಹಸ್ಥರ ಮನೆಯಲ್ಲಿ
ಊಟವಾದ ಬಳಕ ಮಧ್ಯಾಹ್ನದ ಮೇಲೆ ಭಿಕ್ಷವನ್ನ್ತು ನೀಡುವುದಿಲ್ಲ" ವೆಂದು
ಹೇಳ ಗದರಿಬಕೊಂಡು, ಸ್ಪಾನಾಂತರ ಹೊರಟುಹೋದಳು.
ಹುಡುಗಿಯೂ ಹೊರಟುಹೋಗಲುದ್ಯತೆಯಾದಳು. ಹೋಗಲುದ್ಯ
ತೆಯಾದಾಗ ಕಣ್ಣೀರು ತುಂಬಿದವಳಾದಳು. ಹೆಚ್ಚಾಶೆಯಿಂದವಳು ದೂರ
ವಾಗಿದ್ದಾ ಗ್ರಾಮಕ್ಕೆ ಭಿಕ್ಷಕ್ಕೆಸಲವಾಗಿ ಬಂದಿದ್ದವಳು. ವಿಫಲಮನೋರಥೆ
ಯಾಗಿ ಹೊರಟಳು. ಹಜಾರದಲ್ಲಿ ನಿಂತಿದ್ಧೊಬ್ಬ ದಾಸಿಯು, ಶೋಕ ಭಾರಾ
ಕ್ರಾಂತೆಯಾಗಿದ್ದಾ ಹುಡುಗಿಯ ಮುಖವನ್ನು ನೋಡಿ, " ಆಹಾ! ಹುಡು
ಗಿಯು ಎಷ್ಟೊಂದು ಚಲುವಿಯೆ !'' ವಿಂದಂದುಹೂಂಡು. ಅವಳನ್ನು ಕುರಿತು,
"ಹುಡುಗಿ! ನಿನ್ನ ಮನೆಯಿರುವುದೆಲ್ಲಿ? ' ಎಂದು ವಿಚಾರಿಸಿದಳು,
ಹುಡುಗಿಯು ಮುಖಬಾಡಿದವಳಾಗಿ, "" ಗೊತ್ತಿಲ್ಲ " ವೆಂದಳು.
ದಾಸಿ -ನೀನಿರುವ ಮನೆಯು ನಿನಗೆ ಗೊತ್ತಿಲ್ಲವೆ ?
ಹುಡುಗಿ--ಇಲ್ಲ.
ದಾಸಿ-ನೀನಿರುವುದೆಲ್ಲಿ?
ಹುಡುಗಿ- ಕೃಷ್ಣ ಪುರದಲ್ಲಿ
ದಾಸಿ--ಕೃಷ್ಣಪುರವು ಇಲ್ಲಿಗೆ ಬಹಳದೂರ,
ಹುಡುಗಿ..ಅಹುದು.
ದಾಸಿ- ಆದುದರಿಂದಲೇ ಬರುವುದಕ್ಕಿಷ್ಟ್ರೊಂದು ಹೊತ್ತಾಯಿತು?
ಹುಡುಗಿಯು ಮುಖತಗ್ಗಿ ದನಳಾಗಿ ಸುಮ್ಮನಿದ್ದಳು, ದಾಸಿಯು
" ನಿನಗಾರಿದ್ದಾರೆಯೆ?" ಎಂದು ವಿಚಾರಿಸಿದಳು,
ಕುಡುಗಿ--ನನಗಾರೂ ಇಲ್ಲ.
---------------------------------------
ಮೊದಲನೆಯ ಪರಿಚ್ಛೇದ ೩
ದಾಸಿ..ಆರೂ ಇಲ್ಲವೆ? ಆಹಾ! ಹಾಗಾದರಾರಬಳಿ ಇರುತ್ತಿ ?
ಹುಡುಗಿ --ಮುದುಕಿಯೊಬ್ಬಳು ದಯೆಗೈದು ತನ್ನ ಮನೆಯಲ್ಲೊ
ತ್ತಟ್ಫು ಸ್ವಲ್ಪ ಸ್ಥಳವನ್ನು ಕೊಟ್ಟಿದ್ದಾಳೆ.
ದಾಸಿ--ಎಷ್ಟು ದಿನಗಳಂದ ಮುದುಕಿಯ ಮನೆಯಲ್ಲಿ ರುತ್ತಿ ?
ಹುಡುಗಿ --ಒಂದು ವರ್ಷವಾಗುತ ಬಂದಿತು.
ದಾಖ -ಅದಕ್ಕೆ ಮೊದಲು ಎಲ್ಲಿದ್ದೆ?
ಹುಡುಗಿಯು ಸುಮ್ಮನಿದ್ದಳು-ಉತ್ತ ರವನ್ನು ಕೊಡಲಿಲ್ಲ. ದಾಸಿ
ಯು ಆ ಪ್ರಸ್ತಾಪವನ್ನು ಬಿಟ್ಟು. "`ನೀನಾವ ಜಾತಿಯವಳು ?? "ಎಂದು
ಕೇಳದಳು.
ಹುಡುಗಿ--ಅದೆನಗೆ ಗೊತ್ತಿಲ್ಲ.
ದುಖ. -ಮುದುಕಿಯು ನಿನ್ಸ್ಟ ಜಾತಿಯವಳೆ?
ಹುಡುಗಿ--ನಾನದನ್ನು ಹೇಳಲಾರೆನು. ನನಗದು ತಿಳಯದು.
ದಾಹಿಯು ಸ್ಪಣಕಾಲ ಮೌನವಾಗಿ ಚೆಂತಿಸುತಿದ್ದು, ಚಿಂತಾಂತದಲ್ಲಿ,
ನೀನಿಲ್ಲಿ ಕುಳಿತಿರು, ನಾನು ಹೋಗಿ ಯಜಮಾನಿಗೆ ಹೇಳಿ ಎರಡು ತುತ್ಚು
ಅನ್ನವನ್ನು ತಂದುಕೊಡುವೆನು '' ಎಂದಳು.
ಹೀಗೆಂದು ಹೇಳಿ ದಾಸಿಯು ಯಜವನಿಯನ್ನು ಹುಡುಕಿಕೊಂಡು
ಹೋದಳು. ಯಜಮಾನಿಯು ಶಯನಾಗಾರದಶ್ಲಿ ಮಂಚದಮೇಲೆ ಮಲಗಿ
ಕೊಂಡು ಕೈಯಲ್ಲೊಂದು ಬೀಸಣಿಗೆಯನ್ನು ಹಿಡಿದು ಬೀಸಿಕೊಳ್ಳುತ್ತಿ
ದ್ದಳು. ಬಿಳಪು ಕಪ್ಪು ಮಿಶ್ರಿತವಾಗಿದ್ದವಳ ತಲೆಯ ಕೂದಲರಾಶಿಯು
ಮಂಚದಮೇಲೆ ಬಿದ್ದು ಹಾರಾಡುತಿದ್ದಿತು-ಯಜಮಾನಿಯು ಒಂದು ಮಾಂಸ
ಸ್ತೂಪವಿಶೇಷವಾಗಿದ್ದಳು ; ಆದರವಳ ತಪ್ತಕಾಂಚನಗೌರವರ್ಣದಿಂದಾ
ದೋಷವು ಬಹಳಮಟ್ಟಿಗೆ ಮುಚ್ಚಲ್ಪಟ್ಟಿದ್ದಿತು. ಅವಳು ಮಂಚದಮೇಲೆ
ಉರುಡಾಡುತಿದ್ದುದನ್ನು ನೋಡಿದರೆ, ಮಂಚದಮೇಲೆ ಅವರೇ ಬೇಳೆಯ
ರಾಶಿಯು ಉದ್ದಾಗಿ ಸುರಿದಿದ್ದಂತೆ ತೋರುವುದು.
ದಾಸಿಯು ಮರೆಯಲ್ಲಿ ನಿಂತು ನೋಡಿದಳು.ಯಜಮಾನಿಯು ನಿದ್ರಾ
ಳು-ಆಗವಳಿಗೆ ತೊಂದರೆಯನ್ನು ಕೊಡದೆ ದಾಸಿಯು ಬೇಗನೆ ಅಡಿಗೆಯ
ಮನೆಗೆ ಹೋಗಿ ನೋಡಿದಳು. ಅಡಿಗೆಯವನು ಅನ್ನವನ್ನು ದಾಸದಾಸಿಯ
--------------------------------------
೪ ನೀರದೆ
ರಿಗೆ ಸಲವಾಗಿ ತಂಡತಂಡವಾಗಿ ಕಂಚಿನ ಗಂಗಳಗಳಲ್ಲಿ ಬಡಿಸಿಟ್ಟಿದ್ದನು.
ದಾಸಿಯು ಅವನನ್ನು ಕುರಿತು ನನ್ನ ಗಂಗಳವಾವದು? '' ಎಂದು
ಕೇಳಿದಳು.
ಅಡಿಗೆಯವನು ನಿನ್ನ ಗಂಗಳವನ್ನು ಬೇರೆ ಇಟ್ಟಿದ್ದೇನೆ-ತಂದುಕೊ
ಡುವೆನು.
ಹೀಗೆಂದು ಹೇಳಿ ಪೌಬಕನು ನಾನಾವಿಧ ವ್ಯಂಜನಾದಿಗಳಂದೊಡನೆ
ಅನ್ನವನ್ನು ಬಡಿಸಿದ್ದೊಂದು ದೊಡ್ಡ ತಟ್ಟೆಯನ್ನು ತಂದುಕೊಟ್ಟನು.
ದಾಸಿಯು ಆ ತಟ್ಟೈಯನ್ನು ತೆಗೆದುಕೊಂಡು ಹಜಾರಕ್ತೆ ಬಂದು, ಅದರ
ಲ್ಲಿದ್ದ ಅನ್ನ ಮುಂತಾದುದರಲ್ಲಿ ಅರ್ಧ-ವನ್ನು ಒಂದಲೆಯಲ್ಲಿ ಬಡಿಸಿ ಹುಡು
ಗಿಯಬಳಿ ಇಟ್ಟು ಬಳಕ ತಾನು ಸ್ಟಲ್ಛ ದೂರದಲ್ಲಿ ಕುಳಿತು ಊಟವ
ಮಾಡತೊಡಗಿದಳು.
ಹುಡುಗಿಯು ಊಟವನ್ನು ಮಾಡಲಿಲ್ಲ. ಅನ್ನವನ್ಸು ಇಟ್ಟು
ಕೊಂಡು ಸುಮ್ಮನೆ ಕುಳಿತಿದ್ದಳು. ಮುಖ ತಗ್ನಿದವಐಳಾಗಿ, ಕಣ್ಣುಗಳು
ಅಶ್ರಭಾರಾಕುಲವಾಗಿದ್ದುವು. ದಾಸಿಯು 'ಊಟವ ಮಾಡೆ, ತಾಯಿ!"
ಎಂದಳು,
ಹುಡುಗಿಯು ಕೈಹಾಕರಿಲ್ಲ- ಸುಮ್ಮನಿದ್ದಳು. ಗಂಡಸ್ಥಲದಮೇಲೆ
ಕಣ್ಣೀರು ಹರಿದು ನೆಲದಮೇಲೆ ತೊಟಕಿತು. ದಾಸಿಯು ಅದನ್ನು ನೋಡಿ
ದಳು. ನೋಡಿ, " ಅನ್ನದ ಮುಂದೆ ಕುಳಿತು ಅಳುವುದೆ? ಛಿ! ಕೊಳಕ್ಕೆ
ಹೋಗಿ ಕೈಕಾಲುಗಳನ್ನು ತೊಳದು ಕೊಂಡು ಬಂದು ಊಟವನ್ನು ಮಾಡು-
ನೀನು ಊಟವನ್ನುಮಾಡದೆ ನಾನೂ ಊಟವನ್ನು ಮಾಡುವುದಿಲ್ಲ''ವೆಂದಳು.
ದಾಸಿಯು ಊಟಮಾಡದೆ ಕುಳಿತಿದ್ದುದನ್ನು ನೋಡಿ ಹುಡುಗಿಯ
ಅಳುವು ಮತ್ತಷ್ಟು ಹೆಚ್ಚಾಗಿ, ಅವಳು ಬೇಗನೆದ್ದು ಕೊಳಕ್ಕೆ ಹೋಗಿ
ಕೈಕಾಲುಗಳನ್ನು ತೊಳೆದು ಕೊಂಡು ಬಂದು ಊಟಮಾಡತೊೂಡಗಿದಳು.
.....
-----------------------------------.
ಎರಡನೆಯ ಪರಿಚ್ಛೇದ . ೫
ಎರಡನೆಯ ಪರಿಚ್ಛೇದ
ಹುಡುಗಿಯು ಊಟವನ್ನು ಮಾಡುತ್ತಿ ದ್ಜ್ದ ಮನೆಯ ಪರಿಚಯವು
ಪಾಠಕರಿಗೆ ಅವಶ್ಕಕವಾಗಿರುವುದು. ಮನೆಯಲ್ಲಿ ಮೂರು ಮಹಲುಗಳು-
ಸದರುಮಹಲು, ಒಳಗಿನ ಮಹಲು, ಪಾಕಕಾಲೆ-ಸದರು ಮಹಲಿಸಲ್ಲಿ ಜನರ
ಗದ್ವಲವು ಹೆಚ್ಚು. ಕೆಲವುಮಂದಿ ಕಾವಲುಗಾರರು, ಇಬ್ಬರು ಚಾಕರರು,
ಒಬ್ಬ ಮೇಸ್ಟರು (Teacher) ನಾಲ್ಕುಮಂದಿ ಮಾಲಿಗಳು, ನಾಯಬರು.
ಗುಮಾಸ್ತರು -ಒಳಗಿನ ಮಹಲಿನಲ್ಲಿಯೂ ಅನೇಕಮಂದಿ ಜನರಿದ್ದರು...
ಅದರ ವಿವರಣೆಯು ಪ್ರಕೃತ ಪ್ರಯೋಜನದವಿಲ್ಲ- ಒಳಗಿನ ಮುಹಲಿಗೆ ಹಿಂದೆ
ಒಂದು ಅಂಗಳ-ಅದರಾಚೆ ಪಾಕಶಾಲೆ-ಪಾಕಶಾಲೆಯು ಸಣ ಪುಟ್ಟದುದಲ್ಲ-
ದೊಡ್ಡ ದೊಡ್ಡ ಮೂರು ಮನೆಗಳು -ಮನೆಯೊಳಗೆ ದೊಡ್ಡದೊಂದು
ಹಜಾರ.
ಮನೆಗೆ ಹಿಂದುಗಡೆ ಚಿಕ್ಕದೊಂದು ಕೊಳ. ಕೊಳಕ್ಕೆ ಸುತ್ತ ಫಲ
ಪುಷ್ಪಗಳ ತೋಟ ತೊಟಕ್ಕೆ ಸುತ್ತ ಪಾಗಾರದ ಗೋಡೆ. ಗೋಡೆ
ಯಲ್ಲಿ ತೋಟಕೆ ಹೋಗುವ ಬಾಗಿಲು.
ಮನೆಯ ಯಜಮಾನನು ಬಹು ದಿನಗಳಿಗೆ ಹಿಂದೆ ಹೆಂಡತಿಯನ್ನೂ
ಬಬ್ಬ ಮಗನನ್ನೂ ಬಿಟ್ಟು ಸ್ವರ್ಗಾರೋಹಣವಂ ಮಾಡಿದ್ದನು. ಅವನನೊ
ಬ್ಛನೇ ಸ್ವರ್ಗಕ್ಕೆ ಹೋದವನು-ವಿಷಯಸಂಪತ್ತುಗಳಾವವೂ ಅವನೂಡನೆ
ಹೋಗಲಿಲ್ಲ. ವಿಷಯಸಂಪತ್ತುಗಳನ್ನು ಅನುಭವಿಸಲಿದ್ದವನು ಏಕಮಾತ್ರ
ಪುತ್ರ. ಪುತ್ರನು ವಿಷಯ ಭಾರವನ್ನು ಸ್ವಂತವಾಗಿ ವಹಿಸಿರಲಿಲ್ಲ.ಯಜಮಾ
ನಿಯು-ಮಗನ ಪ್ರೌಢೆಯಾದ ತಾಯಿ-ನಾಯಬ ಮುಂತಾದವರ ಸಹಾಯ
ದಿಂದ ಆಸ್ತಿಯ ವೈವಟ್ಟುಗಳನ್ನು ನಡೆಯಿಸುತ್ತಿದ್ದಳು.
ಮಗಸ ಹೆಸರು ರಮಣೀಮೋಹನ ವಯಸ್ಸು ಹತ್ತೊಂಭತ್ತು
ವರ್ಷ ನೋಡುವುದಕ್ಕೆ ಸುಪುರುಷ. ಅವಸು ಕಲಿಕತ್ತೆ ಯಲ್ಲಿದ್ದು ಕೊಂಡು
ಬಿ. ಎ. ಪರೀಕ್ಷೆಗೆ ಓದುತ್ತಿದ್ದನು. ಅಲ್ಲಿಯೂ ಸ್ನಂತಮನೆ-ಮನೆಯಲ್ಲಿ
ಪಾಚಕರೂ, ಭೃತ್ಯರೂ ಇರುವರು- ಅವನ ಸಂಗಡ ಮಾಸ್ಟರರೊಬ್ಬನಿರುತ್ತಿ
ರುವನು. ಕಲಿಕತ್ತೆಯಲ್ಲಿ ಕಾಲೇಜು ಮುಚ್ಚಲ್ಪಟ್ಟಾಗ ಮಣೀಮೋಹನ
---------------------------------------
೬ ನೀರದೆ
ನನು ಶಿಕ್ಷಕನಸಮೇತನಾಗಿ ಮನೆಗೆ ಬಂದಿರುವನು-ಪ್ರಕೃತ ಬಿಸಿಲಕಾಲ-
ಕಾಲೇಜು ಮುಚ್ಚಿದ್ಲಿತು-ಇಬ್ಬರೂ ಮನೆಗೆ ಬಂದಿದ್ದರು.
ರಮಣೀಮೋಹನನಿಗೆ ತಾಯಿಯಲ್ಲಿ ಪ್ರಾಣ. ಚಿಕ್ಕಂದಿನಲ್ಲಿಯೇ
ತಂದೆಯನ್ನು ಕಳದುಕೊಂಡಿದ್ದವನಿಗೆ ತಂದೆಯ ಗುರುತಾಗಲೀ ಸ್ಮರಣೆ
ಯಾಗಲೀ ಇಲ್ಲ-ತಾಯಿಯೇ ತಂದೆತಾಯಿಯಾಗಿದ್ದಳು- ಅವಳೇ ಅಕ್ಕತಂಗಿ
ಅಣ್ಣ- ತಮ್ಮಂದಿರಾಗಿದ್ದಳು. ತಾಯಿಯನ್ನಲಿ ಕಲಿಕತ್ತಾದಲ್ಲಿರಬೇಕೆಂದರೆ
ಅವನಿಗೆ ಮನಸ್ಸು ನಿಲ್ಲದು. ಅದರೆ ಉಪಾಯವಿಲ್ಲ-ಯತ್ತವಿಲ್ಲದೆ ವಿದ್ಗಾ
ಭ್ಯಾಸಕ್ಕೆ ಸಲವಾಗಿ ಕಲಿಕತ್ತೆಯಲ್ಲಿರಬೇಕಾಗಿದ್ದಿತು-ಅವನಿಗಿನ್ನೂ ಮದು
ವೆಯಿಲ್ಲ-ಹೆಣ್ಣೇನೋ ಗೊತ್ತಾಗಿದ್ದಿತು. ಬಿ.ಎ. ಪರೀಕ್ಷೆಯಾದ ಬಳಿಕ
ಮದುವೆಯಾಗಬೇಕು.
ತಾಯಿ ವಿಶ್ಟೇಶ್ಚರಿಯು ಮಗನನ್ನು ಬಿಟ್ಟು ಮತ್ತಾರನ್ನೂ ಅರಿ
ಯಳು -ಮಗನ ಮಂಗಳವನ್ನು ಬಿಟ್ಟು ಅವಳಗೆ ಬೇರೆ ಆಶೆ ಅಥವಾ
ಯೋಚನೆಯಿರರಿಲ್ಲ -ತನ್ನ ಪ್ರಾಣವನ್ನು ಕಡೆಗೀ ಪ್ರಪಂಚವನ್ನೇ ಒತ್ತ
ಟ್ಟಿಟ್ಟು ಹೋಲಿಸಿದರೂ ತನ್ನ ಪ್ರಾಣಪುತ್ತಲಿಯಾಗಿದ್ದು ರಮಣೀಮೋಹನ
ನಿಗೆ ಸಮನಾಗದು.
ವಿಶ್ಟೇಶ್ವರಿಯು ಬಹಳ ಕ್ರೋಧವುಳ್ಳವಳಾಗಿಯೂ ಮುಷ್ಕ
ರ ಸ್ವಭಾವದವಳಾಗಿಯೂ ಇದ್ದಳು. ಅವಳ ಇಷ್ಟಕ್ಕೆ ವಿರೋಧವಾಗಿ
ಮಾತಾಡಲಾರಿಗೂ ಧೈರ್ಯವು ಸಾಲದು-ಆದರೆ ಒಬ್ಬಳು ಮಾತ್ರ ಹಾಗೆ
ಮಾತಾಡಲು ಧೈರ್ಯವುಳ್ಳವಳಾಗಿದ್ದಳು. ಅವಳವಳಿಗೆ ಎದುರುಸುತ್ತಿದ್ದಳು.
ಮಧ್ಯೆಮಧ್ಯೆ ಮಾತಿಗೆ ಮಾತನ್ನು ಜೋಡಿಸುವವಳಾಗಿದ್ದ ಳು ಅವಳೊಬ್ಬ
ದಾಸಿ -ಅವಳ್ ಹೆಸರು ವಾಮಾ-ಮೂವತ್ತು ವರ್ಷಗಳಿಂದ ವಾಮೆಯು ಮನೆ
ಯಲ್ಲಿದ್ದು ಯಜಮಾನಿಯ ಮೇಲೆ ಅಧಿಕಾರವನ್ನು ನಡಿಸುತ್ತಿದ್ದಳು,
ವಿಶ್ವೇಶ್ವರಿಯು ತೌರಮನೆಯಿಂದ ಅವಳನ್ನು ಸಂಗಡ ಕರೆತಂದಿದ್ದಳು.
ವಿಶ್ಟೇಶ್ಚರಿಗೆ ಹತ್ತು ವರ್ಪದಲಿ ಅತ್ತೆಯ ಮನೆಗೆ ಬಂದು ಹೊಸ ಸಂಸಾರ
ವನ್ನು ಹೂಡಿದಾಗ ವಾಮೆಯೊಬ್ಬಳೇ ಅವಳಗೆ ಬೆಂಬಲವಾಗಿದ್ದಳು-ಅವ
ಳೊಬ್ಬಳು ಮಾತ್ರ ವಿಶ್ವೇಶ್ವರಿಯ ವಿಶ್ವಾಸಕ್ಕೆ ಪಾತ್ರೆಯಾಗಿದ್ದಳು.
-------------------------------------------
ಮೂರನೆಯ ಪರಿಚ್ಛೇದ ೭
ವಾಮೆಯು ಜಾತಿಯಲ್ಲಿ ಕಾಯಸ್ಸೆ-ಮನೆಯ ಭಾಂಡಾರವೇ ಅವಳ
ಸ್ವಾಧೀನದಲ್ಲಿದ್ದಿತು. ಮನೆಯಲ್ಲ ವಳಗೆ ನಿರ್ದಿಷ್ಟ ವಾದ ಕೆಲಸವಾವದೂ
ಇಲ್ಲ. ಎಲ್ಲಾ ವಿಚಾರಗಳಲ್ಲಿಯೂ ಮೇಲ್ವಿಚಾರಣೆಯನ್ನು ಮಾಡುವಳು.
ಮನೆಯ ಕೆಲಸಕಾರ್ಯಗಳಲ್ಲಾವುದರಲ್ಲಿಯೂ ಕೊರತೆಯಿಲ್ಲದೆ ನೋಡಿ
ಕೊಳ್ಳು ವಳು-ದಾಸದಾಸಿಯರೆಲ್ಲರೂ ಅವಳಗೆ ಅಂಜುವರು. ಇಂದೊಂದು
ಸಮಯದಲ್ಲಿ ಯಜಮಾನಿಯೂ ಅವಳಗೆ ಹೆದರದಿದ್ದಳೆಂದು ಹೇಳಲಾಗದು.
ಅದುಕಾರಣ ಅವಳು ಯಜಮಾನಿಯ ಇಷ್ಟಕ್ಕೆ ವಿರೋಧವಾಗಿ ಭಿಕ್ಷದವ
ಳಿಗೆ ಎರಡುತುತ್ತು ಅನ್ನವನ್ನು ಕೊಡಲು ಧೈರ್ಯಗೊಂಡಿದ್ದಳು.
.....
ಮೂರನೆಯ ಪರಿಚ್ಛೇದ.
ಇಬ್ಬರೂ ಊಟವನ್ನು ಮಾಡಿದ ಬಳಿಕ ಮನೆಗೆ ಹಿಂದಿದ್ದ ಕೊಳದ
ಸೋಪಾನಕ್ಕೆ ಹೋದರು, ಅಲ್ಲಿ ರಮಣೀಮೋಹನನಸು ಮೆಟ್ಲಮೇಲೆ
ಕುಳಿತು ಕೊಳದಲ್ಲಿ ಮೀನುಗಳನ್ನು ಹಿಡಿಯುತ್ತಿದ್ದನು. ಕೈಯಲ್ಲಿ
ಹಿತ್ತಾಳೆಯ ಕಟ್ಟು ಹಾಕಿದ್ದ ಮೀನಗಾಣದ ಉದ್ದಕೋಲು-ಸೋಪಾನಕ್ಕೆ
ರಡು ಪಾರ್ಶ್ವಗಳಲ್ಲಿಯೂ ಎರಡು ಹೂವಿನ ಮರಗಳು- ಶೀತಲವಾದಾ ಮರ
ಗಳ ನೆರಳನಲ್ಲಿ ಕುಳತು ರಮಣೀಮೋಹನನು ಅರ್ವಿಂಗುಸಾಹೆಬನ ಪುಸ್ತ
ಕದಲ್ಲಿ ಮೀನು ಹಿಡಿಯುವ ವಿಧಾನವನ್ನು ಕುರಿತು ಬರದಿರುವ ಕ್ರಮದ
ಸತ್ಯಾಸತ್ಯವನ್ನು ಪರೀಕ್ಷಿಸುತಿದ್ದನು.. ಆ ಸಮಯದಲ್ಲಿ ವಾಮೆಯೂ
ಹುಡುಗಿಯೂ ಹೋಗಿ ಸೋಪಾನದ ಮೇಲೆ ನಿಂತರು. ರಮಣಿಮೋಹ
ನರು ಹುಸುಗಿಯನ್ನು ನೊಡುತ "ವಾಮಾತಾಯಿ ! ಹುಡುಗಿಯಾರು ''
ಎಂದು ವಿಚಾರಿಸಿದನು.
ವಾಮಾ.. ನನ್ನ ಮಗಳು.
ರಮಣಿ -ಅಲ್ಲ-ಹೇಳಬಾರದೆ ?
ವಾಮಾ- ಹುಡುಗಿಯು ಭಿಕ್ಷವನ್ನು ಬೇಡಲು ಬಂದವಳು,
--------------------------------------
೮ ನೀರದೆ
ರಮಣಿ -ಭಿಕ್ಷದವಳಿಗೆ ಎಂತಹ ರೂಪಸೌಂದರ್ಯ !
ವಾಮಾ -ರೂಪಸೌಂದರ್ಯಗಳು ಮತ್ತಾರಿಗೂ ಇರಬಾರದೆ-?
ರೂಪಸೌಂದರ್ಯಗಳಗೆ ನಿಮ್ಮ ತಾಯಿಯೊಬ್ಬಳೇ ಅಧಿಕಾರಿಯೆ?
ರಮಣೀ -ನಾನು ಹಾಗೆ ಹೇಳೆನು.
ವಾಮ-ಹಾಗದರೆ, ನೀನು ಹೇಳುವುದೇನು?
ರಮಣಿ -ಹುಡುಗಿಯ ಕೈಯಲ್ಲಿ ಭಿಕ್ಷದ ಜೋಳಗೆಯು ಕಾಣು
ವುದಿಲ್ಲ-ನೀನವಳಿಗೆ ಭಿಕ್ಷವನೀಡಿದುದೂ ಕಾಣುವುದಿಲ್ಲ.
ವಾಮೆ- ನಿಮ್ಮ ತಾಯಿಯು ಭಿಕ್ತೃವನ್ನು ನೀಡಿಸಲಿಲ್ಲ.
ರಮಣೀ- ಏಕೆ?
ವಾಮ- ಮಧ್ಯಾಹ್ನದಮೇಲೆ ಗೃಹಸ್ಥರ ಮನಯಲ್ನಿ ಬಿಕ್ಷ ವನೀಡು
ವುದಿಲ್ಲ.
ರಮಣೀಮೋಹನನು ಮೀನಗಾಣದ ಕೋಲನ್ನಿತ್ತಿಟ್ಟು ಹಾಕಿ
ಎದ್ದು ನಿಂತನು. ವಾಮಯು, " ಎಲ್ಲಿಗೆ ಹೋಗುವೆ? "" ಎಂದು ಕೇಳಿದಳು.
ರಮಣೀ- ಭಿಕ್ಷವನ್ನು ತರುವುದಕ್ಕೆ.
ವಾಮ -ನಿಮ್ಮ ತಾಯಿಯ ಇಷ್ಟಕ್ಕೆ ವಿರೋಧವಾಗಿ ಭಿಕ್ಷವನ್ನು
ಕೊಡುವಿಯಾ ?
ರಮಣಿ- ಇಲ್ಲ ಹಾಗೆ ಮಾಡೆನು.
ವಾಮೆ -ಹಾಗಾದರೆ ಏನನ್ನು ಮಾಡುವೆ ?
ರಮಣಿ -ಹುಡುಗಿಯು ಬೀದಿಯಲ್ಲಿ ಬಂದು ನಿಂತಿರಲಿ ನಾನಲ್ಲಿಗೆ
ಭಿಕ್ಷವನ್ನು ತಂದುಕಕೊಡುವೆನು.
ವಾಮ- ಹಾಗಾದರೆ, ಹೋಗು.
ರಮಣಿ ಮೋಹನನು ಬೇಗನೆ ಹೊರಟುಹೋದನು. ವಾಮೆಯೂ
ಹುಡುಗಿಯೂ ಕೊಳಕ್ಕಿಳಿದು ಕೈಬಾಯಿಗಳನ್ನು ತೊಳಿದುಕೊಂಡು ಸೋ
ಪಾನದ ಮೇಲೆ ಬಂದರು-ವಾಮೆಯು ಹುಡುಗಿಯನ್ನು ಕುರಿತು, " ನಿನ್ನ
ಹೆಸರೇನು ?'' ಎಂದು ವಿಚಾರಿಸಿದಳು-
" ನೀರದೆ."
ನೀನಿರುವ ಮನೆಯ ಮುದುಕಿಯ ಹೆಸರೇನು ?"
------------------------------------------
ಮೂರನೆಯ ಪರಿಚ್ಛೇದ ೯
"ಕಾಳಿ"
" ಅವಳಾವ ಜಾತಿಯವಳು ?''
"ಕಾಯಸ್ಥೆ?'
" ಅವಳಿಗೆಷ್ಟು ವಯಸ್ಸ್ಪು.''
"ಅವಳು ಮುದುಕಿ. ಕೂತರೆ ಏಳಲಾರಳು.''
ಅಷ್ಟರೊಳಗೆ ರಮಣೀಮೋಹನನು ಬಂದನು. ಅವನ ಎಡಗೈ
ಯಲ್ಲೊಂದು ಕಂಚಿನತಟ್ಟೆಯ ತುಂಬ ಅಕ್ಕಿ -ಬಲಗೈಯಲ್ಲೊ೦ದು ರೂಪಾ
ಯಿ-ರಮಣೀಮೋಹನನು ಭಿಕ್ಷದವಳಗೆ ಭಿಕ್ಷವನೀಡಲು ಅವಳೆದುರಿಗೆ
ಬಂದು ನಿಂತನು. ಹುಡುಗಿಯು ಸೆರಗನ್ನು ತೋರಲಿಲ್ಲ._ಭಿಕ್ಷವನ್ನೂ
ತೆಗೆದು ಕೊಳ್ಳಲಿಲ್ಲ- ಅವಳು ಮುಖತಗ್ಗಿದವಳಾಗಿ ಮೌನವಾಗಿ ನಿಂತಿದ್ದಳು-
ಕಮಲವನ್ನು ಧಿಕ್ಕರಿಸುತಿದ್ದವಳ ಮುಖವು ಲಜ್ಜೆಯಿಂದ ಅರಕ್ತಿಮವಾ
ಯಿತು. ಕಾದಂಬಿಸೀ ಸದೃಶವಾದವಳ್ ಸಿಬಿಡಕೇಶದಾಮವು ಮುಖದಮೇಲೂ
ಬೆನ್ನಿನಮೇಲೂ ವಕ್ಷದಮೇಲೂ ಬಿದ್ದು ಚಂಚಲವಾಗುತ್ತದ್ದಿತು-ಹರಕು
ಬಟ್ಟೆಯ ಮಧ್ಯದಿಂದ ಅವಳ್ ಅಂಗಗಳ ಕಾಂತಿಯು ಹೊರಗ ಹೊರಟು
ಕಣ್ಣುಗಳನ್ನು ಚುಚ್ಚುತಿದ್ದಿತು-ಭಾದ್ರಪದ ಮಾಸದ ಕಡೆಯ ಭಾಗದಲ್ಲಿ
ಸಫಾಲಿಕಾವೃಕ್ಷದಲ್ಲಿ ಅಲ್ಲಲ್ಲೊಂದು ಹೂವು ಅರಳೀದ್ದಂತೆ ಕಣ್ಗೊಳೀ
ಸುವುದು.
ರಮಣೀಮೋಹನನು " ಭಿಕ್ಚವನ್ನು ತೆಗೆದುಕೊ '' ಎಂದನು.
ಹುಡುಗಿಯು ಕದಲಲಿಲ್ಲ--ಲಜ್ಜೆಯಿಂದ ಭೂಮಿಗಿಳಿದು ಹೋದಳು-
ಬಿಕಾರಿಣಿಗೆ ಲಜ್ಜೆಯೆ ! ಎಷ್ಕೋ ಸ್ಥಳಗಳಲ್ಲಿ ಅವಮಾನಿತೆಯಾಗಿದ್ದರೂ
ಲಜ್ಜೆಯಿಲ್ಲ-ಎಷ್ಟೊಂದು ಧನಾಢ್ಯರ ಮನೆಯ ಬಾಗಿಲಲ್ಲಿಯೂ ಗೃಹಸ್ಥರ
ಮನೆಯ ಬಾಗಿಲಲ್ಲಿಯೂ ನಿಂತು ಬಿಕ್ಷ ವನ್ನು ಬೇಡಲು ಸಂಕೋಚವಿಲ್ಲ -
ಆಂತಹವಳಂದು ಭಿಕ್ಷವನ್ನು ಬೇಡಿ ಭಿಕ್ಷವನೀಡಿದರೂ ತೆಗೆದುಕೊಳ್ಳಲು
ಕುಂಠಿತೆಯಾದಳೇಕೆ?
ವಾಮೆಯು, ಭಿಕ್ಷವನ್ನು ತೆಗೆದುಕೊ? ಎಂದು ಹೇಳಿ ರಮಣೀ
ಮೋಹನನನ್ನು ಕುರಿತು, “ ಆವದರಲ್ಲಿ ತೆಗೆದುಕೊಳ್ಳ ಲೆಂದು ಯೋಚಿಸು
------------------------------------------
೧೦ ನೀರದೆ
ವಂತಿದೆ-ಬಟ್ಟೆಯಾದರೋ ಶತಛಿದ್ರ-ನೀನಾ ಕಂಜೆನ ತಟ್ಟೆಯನ್ನೂ
ಕೊಟ್ಟುಬಿಡು, ನಾನು ಯಜಮಾನಿಗೆ ಹೇಳುವೆನು ? ಎಂದಳು.
ರಮಣೀ-ವಾಮಾಜಿ! ಒಂದು ಬಟ್ಟೆಯನ್ನು ತಂದುಕೊಡಲೆ?
"ಕೊಡು."
ರಮಣೀಮೋಹನನು ಓಡಿ ಹೋಗಿ ತನ್ನದೊಂದು ಹೊಸಪಂಚೆ
ಯನ್ನು ತೆಗೆದುಕೊಂಡು ಬಂದು ಅದನ್ನು ಕಂಚಿನತಟ್ಟೆಯ ಮೇಲಿಟ್ಟು,
ಕೋಮಲಕಂಠದಿಂದ, " ತೆಗೆದುಕೊ '' ಎಂದನು.
ಹುಡುಗಿಯು ಅದನ್ನೂ ತೆಗೆದುಕೊಳ್ಳಲಿಲ್ಲ ತೆಗೆದುಕೊಳ್ಳುವುದಕ್ಕೆ
ಬದುಲಾಗಿ ಬಹಳವಾಗಿ ಅತ್ತಳು-ಅಳುವನ್ನು ಮುಚ್ಚಿ ಕೊಳ್ಳು ವುದಕ್ಕೆ ಸಲ
ವಾಗಿ ಮುಖವನ್ನು ತಿರಿಗಿಸಿಕೊಂಡು ನಿಂತವಳು, ಮೆಲ್ಲ ಮೆಲ್ಲ ನೆ ಬಾಗಿಲ
ಬಳಿ ಹೋಗಿ ನಿಂತಳು, ಬಾಗಿಲಬಿಟ್ಟು ಹೋದರೆ, ಹೊರಗೆ ಬೀದಿ-ಹುಡು
ಗಿಯು ಬಾಗಿಲನ್ನು ತೆರೆದುಕೊಂಡು ಬೀದಿಯಲ್ಲಿ ಹೋಗಿ ನಿಂತಳು. ಅದರೆ
ವಾಮೆಯು ಅವಳನ್ನು ಬಿಡಲಿಲ್ಲ .. ಅವಳು ಓಡಿಹೋಗಿ ಹುಡುಗಿಯನ್ನು
ಹಿಡಿದುಕೊಂಡಳು-ಬಹಳ ಬಲವಂತ ಮಾಡಿದ ಬಳಕ ಹುಡುಗಿಯು ಅಕ್ಕಿ
ಯನ್ನು ತೆಗೆದುಕೊಂಡಳು-ಬಟ್ಟೆಯನ್ನಾಗಲೀ ಕಂಚನ್ನಾಗಲೀ ರೂಪಾಯಿ
ಯನ್ನಾಗಲೀ ತೆಗೆದುಕೊಳ್ಳ ದೆ ಹೋದಳು.
.............
ನಾಲ್ಕನೆಯ ಪರಿಚ್ಛೇದ.
ಕೃಷ್ಣಪುರವು ಬಹಳ'ದೂರ..ಎರಡು ಹರಿದಾರಿಯಿರಬಹುದು. ಹುಡು
ಗಿಯು ಹೋಗುವುದಕ್ಕೆ ಸಂಜೆಯಾಗುತೆ ಬಂದಿತು-ಹುಡುಗಿಯು ಕಾಳಯ
ಮನೆಯ ಬಾಗಿಲಿಗೆ ಹೋಗಿ ನೋಡಿದಳು-ಬಾಗಿಲು ಮುಚ್ಚಿ ಒಳಗಡೆ ಅಗ
ಣಿಯು ಹಾಕಿದ್ದಿತು. ಹುಡುಗಿಯು ಕೂಗಿದಳು-ಒಳಗಿನಿಂದ ಮುದುಕಿಯು
ಕೋಪಗೊಂಡು, " ನಿನ್ನನ್ನಿಂದು ಮನೆಯೊಳಗೆ ಕಾಲಿಡಿಸಗೊಡಿಸುವುದಿಲ್ಲ-
ಬೆಳಗ್ಗೆ ಮುಂಜಾನೆ ಹೊರಗೆ ಹೋದವಳು ಈಗ ಬಂದಿದ್ದಾಳೆ! ಮನೆಯ
-----------------------------------------
ನಾಲ್ಕನೆಯ ಪರಿಚ್ಛೇದ ೧೧
ಕೆಲಸಕಾರ್ಯಗಳನ್ನು ಮಾಡುವವರಾರು ? ಹೋಗು-ದೂರ ಹೋಗು-
ನಿನಗೆನ್ನ ಮನೆಯಲ್ಲಿನ್ನು ಸ್ಥಳವು ಸಿಗದು ? ಎಂದು ಹೇಳದಳು.
ಹುಡುಗಿಯು ಹೊರಗಿನಿಂದ, "ಇನ್ನು ಮುಂದೆ ಹೊತ್ತುಮಾಡುವು
ದಿಲ್ಲ. ಅಜ್ಜಿ ನಿತ್ಯಿನಿತ್ಯವೂ ಒಂದೊಂದು ಮನೆಯಲ್ಲಿ ಭಿಕ್ಷವ ಬೇಡಿದ್ದೆನು ;
ಆದದರಿಂದ ಊರನ್ನು ಬಿಟ್ಟು ಜೇರೆ ಊರಿಗೆ ಹೋಗಿದ್ದೆನು. ನಾಳೆಯಿಂದ
ಹೋಗುವುದಿಲ್ಲ-ಇಂದು ಮನೆಯಲ್ಲಿರಲು ಅಪ್ಪಣೆಯನ್ನು ಕೊಡು''
ಎಂದಳು,
ಮುದುಕಿ...ನೀನೇನನ್ನು ಮಾಡಿದರೂ ನಿನ್ಫನು ಮನೆಯೊಳಗೆ ಬರ
ಗೊಡಸೆನು.
ಹುಡುಗಿ -ನೀನು ಆಶ್ರಯವನ್ನು ಕೊಡದಿದ್ದರೆ ಮತ್ತೆಲ್ಲಿಗೆ ಹೋ
ಗಲಿ?
ಮುದುಕಿ ನಿನಗಿಷ್ಟಬಂದೆತೆ ಹೋಗು-ನಿನಗೆ ಕ್ಷೇಮಚಿಂತರನೇಕ
ರಿರುವರು, ಅವರ ಬಳಿ ಹೋಗು.
ಹುಡುಗಿ- ನಿನ್ನನ್ನು ಬೆಟ್ಟರೆನಗೆ ಮತ್ತಾರೂ ಇಲ್ಲ.
ಮುದುತಿ--ಜಕ್ಕಜವ್ಪಸಿ ಚೇಡಿಗಿಯಿಂದ ಪ್ರಯೋಜನವಿಲ್ಲ -ಆರೂ
ಇಲ್ಲದಿದ್ದರೆ ಮರದ ಕೆಳಗೆ ಮಲಗಿರು.
ಹುಡುಗಿಯು ಬಾಗಿಲಲ್ಲಿ ಕುಳತಿದ್ದಳು. -ಮುದುಕಿಯು ಬಾಗಿಲು ತೆಗೆ
ಯಲಿಲ್ಲ -ಹೊತ್ತು ಮುಳುಗಿತು-ನಾಲ್ತೂಕಡೆ ಕತ್ತಲು ಕವಿತು ಮರಗಳ
ನೆಲ್ಲಾ ಮುಚ್ಚಿಕೊಂಡಿತು-ಹುಡುಗಿಯನ್ನೂ ಮುಚ್ಚಿ ಕೊಂಡಿತು. ಆಕಾ
ಕದಲ್ಲಿ ನಕ್ಷತ್ರಗಳು ಒಂದೊಂದಾಗಿ ತಲೆದೋರಿದುವು-ಹುಡುಗಿಯು ಮುಖ
ವೆತ್ತಿ ಅವುಗಳನ್ನು ನೋಡತೊಡಗಿದಳು- ಆಂಧಕಾರಮಯವಾದ ಭೂಮಿ
ಯಮೇಲೆ ನೋಡುವುದಕಕ್ಕಾವದೂ ಇರಲಿಲ್ಲವಾಗಿ ಆಕಾಶದ ಉಜ್ವಲ
ನಕ್ಷತ್ರಗಳನ್ನು ನೋಡುತ್ತಿದ್ದಳು. ನಕ್ಷತ್ರಗಳು ಅನೇಕ ಅವುನ್ನೆಲ್ಲಾ
ಒಂದೊಂದಾಗಿ ನೋಡುತ್ತಿದ್ವಳು-ಹುಡುಗಿಯು ಎವೆ ಇಕ್ಕದೆ ಒಂದೇ ನಕ್ಷ
ತ್ರವನ್ನು ನೋಡುವ ರೀತಿಯನ್ನಿನ್ನೂ ಕಲಿತಿರಲಿಲ್ಲಿ. ಜೀವನದ ಕಡೆಯ
ಭಾಗದಲ್ಲಿ ನಾವದನ್ನು ಕಲಿಯುವವು-ಪ್ರಪಂಚವು ನಮಗದನ್ನು ಕಲಿಸು
ವುದು-ದುಃಹದಲ್ಲಿ ಮುಳುಗಿದ್ದರೂ ನೀರದೆಯು ಹುಡುಗಿ,
--------------------------------------
೧೨ ನೀರದೆ
ರಾತ್ರಿ; ಒಂಭತ್ತು ಘುಳಗೆಯಾಯಿತು- ಎರಡು ನರಿಗಳು ಮುಖವೆತ್ತಿ
ಅವಳನ್ನು ನೊಡಿತಿದ್ದುದನ್ನು ಕಂಡು ಹುಡುಗಿಯು ಭಯಗೊಂಡಳು.
ಆಗವಳು ಕಾತರಕಂಠೆಯಾಗಿ, " ಅಜ್ಜಿ ! ಬಾಗಿಲು ತೆಗೆ ನಾನಿನ್ನು ಇಂತಹ
ಕೆಲಸವನ್ನು ಮಾಡೆನು ?' ಎಂದು ಕೂಗಿದಳು.
ಹುಡ.ಗಿಯ ಕೂಗು ಗ್ರಾಮದ ಗಸ್ತಿನವನ ಕಿವಿಗೆ ಬಿದ್ದಿತು. ಗಸ್ತಿನ
ವನು ಬಂದು ಅವಳ ಕೈಯನ್ನ ಹಿಡಿದೆಳೆದು ಭೈರವಕಂಠದಲ್ಲಿ "ನೀನಾರು."
ಬಂದನು.
ಹುಡುಗಿಯು ಭೀತಿಗೊಂಡು ಅಳುವುದಕ್ಕೆ ತೊಡಗಿದಳು. ಅವಳು
ಕಳವು ಮಾಡತಕ್ಕವಲ್ಲವೆಂದು ತಿಳದರೂ ಗಸ್ತಿನವನು, ಹುಡುಗಿಯನ್ನು
ಕೆಟ್ಟಿನಡತೆಯವಳಂದು ಹಿಡಿದುಕೊಂಡೊಯ್ದರೆ ತನಗೆ ಅತುಲ ಕೀರ್ತಿಯುಂ
ಟಾಗುವುದೊಬಾಶೆಯುಳ್ಳವನಾಗಿದ್ದನು-ಮುಖವ ನೋಡಿದ ಬಳಕ ಹುಡುಗಿ
ಯೆಂದು ಕಂಡು, ನಿರಾಶನಾಗಿ, " ನೀನಾರು ? '' ವಂದು ಕೇಳದನು,
ಹುಡುಗಿಯು ಭಮುದಿಂದ ನಡುಗುತ್ತ ಅಳುತ್ತ, " ನಾನು, ನೀರಿ! "
ಎಂದಳು,
ಹುಡುಗಿಯ ಹೆಸರು ನೀರದೆ-ಹನರವಳನ್ನು ನೀರಿ'' ಎಂದು ಕರೆ
ಯುವರು-ಅವಳ ಹೆಸರನ್ನು ಕೇಳಿದ ಬಳಿಕ ಗಸ್ತಿನವನಿಗೆ ಗುರುತಾಗಿ,
" ಇಲ್ಲಿ ಕುಳತಿರುವುದೇಕೆ? " ಎಂದು ವಿಚಾರಿಸಿದನು.
" ಅಜ್ಜಿಯು ಮನೆಯೊಳಗೆ ಹೋಗಗೊಡಸಳು.''
"ಏಕೆ? "
ತಿರುಪೆ ಎತ್ತಲು ತಿರಿಯುವುದಕ್ಕೆ ಹೋಗಿದ್ದವಳು ಹಿಂದಿರಿಗಿ
ಬರಲು ಹೊತ್ತಾಯಿತೆಂದು.''
ಅದನ್ನು ಪ್ರ ಗಸ್ದನವನು ಗರ್ದಭನಿಂದಿತಕಂಠದಿಂದ ಮುದುಕಿ
ಯನ್ನು ಕೂಗಿ ಕರೆದನು. ಅವನಾ ಚೀತ್ಕ್ಯಾರದ ಧ್ವನಿಯು ಪ್ರತಿಧ್ವನಿ
ಗೊಂಡು ನೆರೆಹೊರೆಯವರೆಲ್ಲರೂ ಎಿಚ್ಚ ರಗೊಂಡರು -ಮುದುಕಿಯು ಮನೆ
ಯೊಳಗಿನಿಂದ, " ಅದಾರು?" ಎಂದಳು.
ಗಸ್ತಿನವನು - (ಫುಟ್ಟಿಯಾಗಿ) -ಬಾಗಿಲ ತೆಗಿ-ನಿನ್ನ ಮೊಮ್ಮಗಳನ್ನು
ಒಳಗೆ ಕರೆದುಕೊ.
-------------------------------------
ನಾಲನೆಯ ಪರಿಚ್ಛೇದ ೧೩
ಮುದುಕಿ --ನಾನವಳಿಗೆ ಮನೆಯಲಲ್ಲಿರಗೊಡೆನು.
ಗಸ್ತಿನವ -ಮನೆಯಲಲ್ಲಿಟ್ಟುಕೊಳ್ಳ ಬೇಕು ತೀರದ ಚಿಕ್ಕ ಹುಡುಗಿ
ಯು ಹೋರಗೆ ಬಿದ್ದಿದ್ದು ನೀನು ಮುದಿಗೊಡ್ಡು ಮನೆಯೂಳಗೆ ಮಲಗಿ
ರುವಿಯೊ?
ಮುದುಕಿಯು ಕೋಲೂರಿಕೊಂಡು ಗೊಣಗುಟ್ಟುತ್ತ ಬಂದು ಬಾಗಿಲ
ತೆರೆದಳು... ಹುಡುಗಿಯು ಸಂಕುಚಿತಭಾವದಿದ ಮನೆಯೊಳಗೆ ಬಂದಳು-
ಗಸ್ತಿನವನು ಹೊರಟು ಹೋದನು.
ಮುದುತಿಯು ಮನೆಯೊಳಗೆಬಂದು, ಸ್ಟುಲ್ಬ ಹೊತ್ತು ಕಿವಿಗೊಟ್ಟು
ಅಲೈಸಿ ಹೊರಗೆ ಯಾರೂ ಇಲ್ಲವೆಂದು ತಿಳಿದು ಬಳಿಕ ದೀಪವನ್ತು ಹಚ್ಚಿಸಿ,
ಪ್ರೆನಃ ಸ್ವಲ್ಪ ಹೊತ್ತು ಉತ್ಕರ್ಣಿಯಾಗಿ ಆಲೈಸಿ ಬೀದಿಯಲ್ಲಾರೂ ಇಲ್ಲ
ವೆಂದು ಸ್ಥಿರಮಾಡಿಕೊಂಡು. ಬಂದು ಸರ್ಪದಂತೆ ಬುಸುಗುಟ್ಟುತ್ತ, ಹುಡು
ಗಿಯನ್ನು ಕುರಿತು, " ನಿನಗಿಂದು ಹುಟ್ಟಿದ ಹಬ್ಬ ಮಾಡುತ್ತೇನೆ ಎಂದಳು,
ಹುಡುಗಿಯು ಬಾಗಿಲ ಪಾರ್ಶದಲ್ಲಿ ಸಾಶ್ರುನಯನೆಯಾಗಿ ನಿಂತಿದ್ದ
ವಳು, ಕಾತರಕಂಠದಿಂದ, '" ಅಜ್ಜಿ! ಇನ್ನು ಮುಂದೆ ಹೀಗೆ ಮಾಡುವು
ದಿಲ್ಲ! " ಎಂದು ಮೊರೆಯಿಟ್ಟೆಳು.
ಮುದುಕಿಯ ಕೋಪವು ಮತ್ತಷ್ಟು ಹೆಚ್ಚಿ, ನಿನ್ನ ಸಲುವಾಗಿ ಇಂದೆ
ನಗೆ ಉಪವಾಸ! ಅದನ್ನು ಬಲ್ಲೆಯಾ? ನಿನಗಿಂದು ನಿಸ್ತಾರವಿಲ್ಲ-ತೋರು
ವೆನು, ನೋಡು '' ಎಂದಳು.
ಹುಡುಗಿ -ಈಗಲೇ ಅಡಿಗೆಯನ್ನು ವಾಡಿ ನಿನಗೆ ಬಡಿಸುತ್ತೇನೆ.
ಮುದುಕಿಯು ಅದನ್ನು ಕಿವಿಗೆ ಹಾಕಿಕೊಳ್ಳದೆ, ಕೈಲಿದ್ದ ಕೊಲಿಂದ
ಕೋಮಲವಾದವಳ ಭುಜದ ಮೇಲ ಬಲವಾಗಿ ಹೊಡಿದಳು. ಹಾಗೆ ಪೆಟ್ಟನ್ನು
ತಿನ್ನುವುದು, ಸಕಾರಣವಾಗಲಿ ಅಕಾರಣವಾಗಲಿ, ನಿತ್ಯವು ಹುಡುಗಿಯ ಹಣೆ
ಯಲ್ಲಿ ಬರೆದಿದ್ದಿತು. ಅದರ ಇಂದಿನ ಪೆಟ್ಟು ಬಹಳ ಬಲವಾದುದು-ಪೆಟ್ಟಿನ
ಮೇಲೆ ಪೆಟ್ಟು ಬಿದ್ದು ಹುಡುಗಿಯು ತಡೆಯಲಾರದೆ ನಡುಗುತ್ತ ಕುಳಿತು
ಬಿಟ್ಟಳು ಅದರೂ ಮುದುಕಿಯು ಬಿಡಲಿಲ್ಲ-ಹುಡುಗಿಯ ಸೆರಗಿನಲ್ಲಿ - ಕಟ್ಟಿ
ಕೊಂಡಿದ್ದ, ಅಕ್ಕಿಯು ನೆಲದ ಮೇಲೆ ಚಲ್ಲಿ ಎರಚಾಡಿ ಹೋಯಿತು. ಅದನ್ನು
-----------------------------------------
೧೪ ನೀರದೆ
ಕಂಡು ಮುದುಕಿಯು ಮತ್ತೂ ರೇಗಿ ಮುಖ ಮೋರೆಯನ್ನು ನೊಡದೆ
ಹುಡುಗಿಯನ್ನು ಹೊಡಿದಳು-ಹುಡುಗಿಯು ಮಾತಾಡದೆ ಎಲ್ಲ ವನ್ನು ಸಹಿಸಿ
ಕೊಂಡವಳು, ಪೆಟ್ಟನ್ನು ತಡಿಯಲಾರದೆ ಕಟ್ಟಕಡೆಗೆ ಅವಸನ್ನೆಯಾಗಿ
ಜ್ಞಾನವು ತಪ್ಪಿ ನೆಲದ ಮೇಲೆ ಬಿದ್ದು ಬಿಟ್ಟಳು.
........
ಐದನೆಯ ಪರಿಚ್ಛೇದ.
ಮರುದಿನ ಬೆಳಗ್ಗೆ ಗದ್ದಲವೋಗದ್ದಲ -ಮುದುತಿಯ ಮನೆಯ
ಹೊರಗಡೆ, ಒಳಗಡೆ, ಎಲ್ಲೆಲ್ಲಿಯೂ ಕೆಂಪು ನೀಲಿ ರುಾಮಾಲುಗಳನ್ನುಳ್ಳ ಪೊಲಿ
ನವರು ತುಂಬಿದ್ದರು. ಗ್ರಾಮದ ಯುವಕರು ಕುತೂಹಲರಾಗಿ ಕನಸ್ಟೆ
ಬಿಲರ ಹಿಂದೆ ಸ್ಟಲ್ಪ ದೂರದಲ್ಲಿ ಗುಂಪುಗುಂಪಾಗಿ ಬಂದು ನಿಂತಿದ್ದರು.
ಕುಲವಧುಗಳು ತಲೆಯ ಮೇಲ ಕೊಡಗಳನ್ನು ಹೊತ್ತು ಕೊಂಡು ವೃಕ್ಷಾಂ
ತರಾದೊಳು ನಿಂತು ಪೋಸಿನವರನ್ನುನೋಡುತ್ತಿದ್ವರು- ಊರಿನವರಲ್ಲರೂ
ಬಂದು ಸೇರಿದ್ದರು. ಅಂದು ಊರೊಳಗೆ ಆರ ಮನಿಯಲ್ಲಿಯೂ ಒಲೆ
ಹಚ್ಚಿರಲಿಲ್ಲ.
ಘಟನೆಯು ಬಹಳ ಹೆಚ್ಚಿನದು-ಭಿಕಾರಿಣಿಯಾಗಿದ್ದ ಮುದುಕಿಯನ್ನು
ರಾತ್ರಿ. ಆರೋ ಖೂನು ಮಾಡಿದ್ದಾರೆ-ಅವಳ ಮೈಮೇಲೆ ಘಾಯದ ಗುರು
ತಾಗಲಿ ಪೆಟ್ಟನ ಗುರುತಾಗಲಿ ಅವದೂ ಕಂಡು ಬರಲ್ಲ -ಅದರೂ ಅವಳು
ಖೂನಾದಳಂದು ಸುದ್ದಿಯು ಎಲ್ಲೆ ಲ್ಲಿಯೂ ಹರಡಿದ್ದಿ ತು-ಮುದುಕಿಯ
ಬಾಯಿನ ಬಳಿ ಮತ್ತು ಅವಳ್ ಬಳಿಯಲ್ಲಿದ್ದೊಂದು ಮಣೆಯ ಮೇಲೆ
ಸ್ವಲ್ಪ ರಕ್ತದ ಕಲೆಗಳಿದ್ದುವು ಮುದುಕಿಗೆ ಸ್ಟಜನರಾರೂ ಇಲ್ಲ-ಜೀರ್ಣಕು
ಟೀರದಲ್ಲೊಬ್ಬ ಳೇ ವಾಸವಾಗಿದ್ದಳು-ಈಗ್ಗೆ ಒಂದು ವರ್ಷದಿಂದ ಹುಡುಗಿ
ಯೊಬ್ಬಳು ಅವಳೊಂದಿಗೆ ವಾಸಮಾಡುತಿದ್ದಳು-ಈಗಾ ಹುಡುಗಿಯು
ಪೊಲಿಸ ದರೋಗನೆದುರೆಗೆ ಸಂಕುಚಿತಭಾವದಿಂದ ನಿಂತಿದ್ದಾಳೆ !
---------------------------------------
ಐದನೆಯ ಪರಿಚ್ಛೇದ ೧೫
ದರೋಗನು ಹುಡುಗಿಯನ್ನು ಕುರಿತು, "ನೀನಾರು? ? ಎಂದು
ಕೇಳಿದನು.
ಹುಡುಗಿ --ನಾನು ನೀರದೆ.
ದರೋಗ--ನೀನಿಲ್ಲಿ ಎಷ್ಟು ದಿನಗಳಂದ ಇರುತ್ತಿ ?
ಹುಡುಗಿ--ಒಂದು ವರ್ಷದಿಂದ.
ದರೋಗ--ಅದಕೆ ಮೊದಲು ಎಲ್ಲಿದ್ದೆ?
ಹುಡುಗಿಯು ಉತ್ತರವನ್ನು ಕೊಡಲಿಲ್ಲ. ಸುಮ್ಮ ನಿದ್ದಳು-ದರೋ
ಗನು ಪೀಡಿಸಿ ಒತ್ತಾಯಮಾಡಿ ಕೇಳದನು-ಆದರೂ ಹುಡುಗಿಯು ಸುಮ್ಮ
ನಿದ್ದಳು-ದರೋಗನು ಕೈಲಿದ್ದ ಬೆತ್ತದಿಂದ ಹುಡುಗಿಯನ್ನು ಹೊಡಿದನು.
ಆದರೂ ಹುಹುಗಿಯು ಉತ್ತರವನ್ನು ಕೊಡರಿಲ್ಲ-ಉಪಾಯಾಂತರ ತೋ
ರದ ದರೋಗನಾ ಪ್ರಶ್ನೆಯನ್ನು ಬಿಟ್ಟು, " ಸನ್ನ ಮನೆಯಿರುವುದೆಲ್ಲಿ? "
ಎಂದು ಕೇಳಿದನು.
ಹುಡುಗಿ- -ನನಗೆ ಮನೆಯಿಲ್ಲ.
ದರೋಗ-ನಿನ್ನ ತಂದೆಯ ಹೆಸರೆನು ?
ಹುಡುಗಿ --ನಾನರಿಯೆ,
ದರೋಗ--ನೀನೆಲ್ಲವನ್ನೂ ಮರೆಮಾಚುತ್ತಿ-ನೀನೊಬ್ಬ" ಪಕ್ಕಾ
ಬದಮಾಯಿಷಿ!"
ಹುಡುಗಿ. -ನನಗೆ ಶಿಳದಿರುವ ಮಟ್ಟಿಗೆ ನಿಜವನ್ನು ಹೇಳುವೆನು-
ನಮ್ಮ ಮನೆಯಿರುವುದೆಲ್ಲಿಯೋ ಅದೆನಗೆ ತಿಳಯದು-ನನಗೆ ತಂದೆ ತಾಯಿ
ಗಳು ಇದ್ದಾರೋ ಇಲ್ಲವೋ ಅದೂ ನನಗೆ ಗೊತ್ತಿಲ್ಲ.
ದರೋಗ.--ಮಾತು ಹೋಗಲಿ ಈ ವಿದೃಮಾನದಲ್ಲಿ ನೀನೇನನ್ನು
ಬಲ್ಲೆ?
ಹುಡುಗಿ-ಮುದುಕಿಯ ಹೊಡೆತದಿಂದ ಜ್ಞಾನವು ತಪ್ಬಿ ಮೂರ್ಛೆ
ಗೊಂಡಿದ್ದೆನು-ಬೆಳಗ್ಗೆ ಮೂರ್ಛೆ ತಿಳದು ಎದ್ದು ನೋಡಿದಾಗ ಮುದುಕಿಯು
ಸತ್ತಿದ್ದಳು.
ದರೋಗ--ನೀನು ಹೇಳುವುದು ಸುಳ್ಳು-ನೀನೇ ಮುದುಕಿಯನ್ನು
ಹೊಡಿಯುತ್ತಿದ್ದೆ.
-----------------------------------
೧೬ ನೀರದೆ
ರಾತ್ರಿಯ ಗಸ್ತಿನವನು ಅಪ್ಪಣೆಯ ಪ್ರಸಾರ ಬಂದು ನಿಂತು, ರಾತ್ರಿ
ತಾನು ಹುಡುಗಿಯನ್ನು ಕಂಡ ಸ್ಥಿತಿಯನ್ನು ಹುರಿತು ವಾಜ್ಮೂಲವನ್ನು
ಕೊಟ್ಟನು-ಹುಡುಗಿಯು ಮುದುಕಿಯನ್ನು ಹೊಡಿಯಲು ಬೆರೆ ಜನರನ್ನು
ಕರೆತರುವುದಕ್ಕೆ ಸಲವಾಗಿ ಹೊರಗೆ ಹೋಗಿದ್ದಳೆಂದು ದರೋಗನು ಖಂ
ಡಿತ ಮಾಡಿಕೊಂಡು, ಬಳಕ ನಾಲ್ನಾರು ಮಂದಿ ನೆರೆಯವರನ್ನು ಕರೆಯಿ
ಸಿದನು. ಅವರು ಬಂದು, ಸಮರಾತ್ರಿಯಲ್ಗಿ ಹೊಡಿಯುತ್ತಿ ಶಬ್ದವನ್ನು
ಕೇಳಿದೆವೆಂದು ಹೇಳದರು-ದರೋಗನು ಅವರನ್ನು ಕುರಿತು, "ಮಧ್ಯೆಮಧೈ
ಹುಡುಗಿಯು ಮುದುಕಿಯನ್ನು ಹೊಡಿಯತ್ತಿದ್ಜಳಲ್ಲವೆ? ವಿಂದ ಪ್ರಶ್ನೆ
ಯನ್ನು ಮಾಡಿದನು.
ಸಾಕ್ಷಿಗಳು ಹಾಗೆಂದು ಹೇಳಲು ಹಿಂದು ಮುಂದು. ನೋಡುತ್ತಿ
ದ್ವರು -ಏಕೆಂದರೆ, ಹುಡುಗಿಯು ಮುದುಕಿಯನ್ನು ಹೊಡೆದುದನ್ನು ಅವರಾ
ವಾಗಲೂ ನೋಡಿರಲಿಲ್ಲ-ಮುದುಕಿಯೇ ಹುಡುಗಿಯನ್ನು ಹೊಡೆಯುತ್ತಿದ್ದು
ದನ್ನು ಕಂಡಿದ್ದರು-ಆದರೆ ದರೋಗನ ಹೊಡತದಿಂದ ಆವರು ಬೇರ ವಿಧ
ವಾಗಿ ಹೇಳಿದರು-ದರೋಗನು ಖೂನಿಯು ಪತ್ತೆಯಾಯಿತೆಂದು ತಿಳಿದು
ಪ್ರಸನ್ನ ವದನನಾಗಿ ಜರಬಿನಿಂದ ಕುಳಿತು ವೇತ್ರಹಸ್ತ ನಾಗಿ ಆಸ್ಫಾಲಮಾ
ಡುತ್ತ ಹುಡುಗಿಯನ್ನು ಕುರಿತು, " ಮಾಲನ್ನು ಎಲ್ಲಿಟ್ಟರುವೆ? ಹೇಳು"
ಎಂದು ರುದ್ರಶಂತದಿಂದ ಪ್ರಶ್ನಯಂ ಮಾಡಿದನು.
ಹುಡುಗಿ -ಮಾಲೆಂದರೇನು?
ದರೋಗ- ನಿನ್ನ ನೆವ ತೋರಬೇಡ-ಹಣವನ್ನು ಎಲ್ಲಿಟ್ಟಿರುವೆ?
ತೋರು.
ಹುಡುಗಿ- ಹಣಕಾಸಾವದೂ ನನ್ನಲ್ಲಿಲ್ಲ.
ದರೋಗ.-- ಮತ್ತೂ ಪೋಕರಿತನವೆ ! ನೋಡಿಕೊ.
ಹೀಗೆಂದು ಹೇಳ ಹುಡಗಿಯ ಬೆನ್ನಿಸಮೇಲೂ ತೋಳಗಗಳಮೇಲೂ
ಬೆತ್ತ ದಿಂದ ಪುನಃ ಪುನಃ ಹೊಡಿದನು, ಹುಡುಗಿಯ ಕೋಮಲಾಂಗಗಳಿಂದ
ರಕ್ತ ಧಾರೆಯು ಹೊರಟಿತು. ಹುಡುಗಿಯು ಮಾತಾಡದೆ ನಿಂತಿದ್ದವಳು
ನಿಲ್ಲಲಾರದೆ ಕುಳತುಬಿಟ್ಟಳು ; ಕ್ರಮವಾಗಿ ಮೂರ್ಛೆಗೊಂಡು ನೆಲದ
ಮೇಲೆ ಬಿದ್ದಳು. ಆದರೂ ದರೋಗನ ಕೈಗೆ ವಿರಾಮವಿಲ್ಲ-ಕಡೆಗೆ
----------------------------------------
ನೀರದೆ ೧೭
ದರೋಗನ ಕ್ಷೇಮಚಿಂತಕನಾಗಿದ್ದ ಜಮಾದಾರನೊಬ್ಬ ನು ಓಡಿಬಂದು
ಅವನ ಕಿವಿಯಲ್ಲೇನೋ ಹೇಳಿದನು. ಬಳಕ ದರೋಗನು ನಿರಸ್ತ ನಾದನು.
ಹುಡುಗಿಗೆ ಮೂರ್ಛೆಯು ತಿಳಯಲಿಲ್ಲ. ದರೋಗನು ಮೊದಲು,
ಅವಳು ವೇಷಹಾಕಿಕೊಂಡಿದ್ದಳೆಂದು ತಿಳಿದನು. ಜಮಾದಾರನು, ಅದು
ವೇಷವಲ್ಲ ಹುಡುಗಿಗೆ ಪ್ರಾಣವುಳಿಯುದೇ ಸಂಶಯವೆಂದು ಹೇಳಿದ
ಬಳಕ ದರೋಗನು ಭಯಗೊಂಡು ಡಾಕ್ಟರನ್ನು ಕರೆತರಲು ಕನಸ್ಪೇಬಿಲ
ನನ್ನು ಕಳುಹಿಸಿದನು. ಡಾಕ್ಟರನು ಬಂದು ಅನೇಕ್ ಪ್ರಯತ್ನಗಳಿಂದ ಹುಡು
ಗಿಯನ್ನು ಬದುಕಿಸಿದನು.
ಹುಡುಗಿಯೇನೋ ಬದುಕಿಕೊಂಡಳು. ಅದರೆ ದರೋಗಸು ಅವಳ
ನ್ನಲ್ಲಿಗೆ ಬಿಡರಿಲ್ಲ. ಅವಳನ್ನು ದೋಲಿಯಲ್ಲಿ ಹಾಕಿಸಿ ಠಾಣೆಗೆ ಕಳುಹಿ
ದನು... ಠಾಣೆಗೆ ಕಳುಹುವುದಕ್ಕೆ ಮೊದಲು ಡಾಕ್ಟ್ರರನು ಹುಡುಗಿಯನ್ನು
ತನ್ನ ಮನೆಗೆ ಕೊಂಡೊಯ್ದು ಅವಳಗೆ ಹಾಲು ಮುಂತಾದ ಅಹಾರವನ್ನು
ಕೊಟ್ಟುಪಚರಿಸಿ ಕಳುಹಿಸಿದನು.
ಮಧ್ಯಾಹ್ನಕ್ಕೆ ಮೊದಲು, ಖೂನಿಯ ಸುದ್ದಿಯು ನಾಲ್ಕೂಕಡೆಗ
ಳಲ್ಲಿ ಹರಡಿಕೊಂಡಿತು. ಹತ್ಯಾಕಾರಿಯು ಕಿಡಿಯಲ ಹಿ ದಧ್ವಂತೆಯೂ ಸಮಾ
ಚಾರವು ಹೊರಟು, ಅ ವಿಚಾರದಲ್ಲಿ ಜನರು ನಾನಾವಿಧವಾಗಿ ಆಡಿಕೊಂ
ಡರು, ಆದರೆ ಹುಡುಗಿಗೆ ಸಹಾಯವನ್ನು ಮಾಡಲಾರೂ ಮುಂದಾಗಿ ಬರ
ಲಿಲ್ಲ--ಹುಡುಗಿಯು ಸೆರೆಯಲ್ಲಿಡಲ್ಪಟ್ಟಳು
....
ಆರನೆಯ ಪರಿಚ್ಛೇದ.
ರಮಣೀಮೋಹನನು ವಾಸವಾಗಿದ್ದುದು ಗೋಪಾಲಪುರದಲ್ಲಿ...
ಅಲ್ಲಿಗೂ ಸುದಿಯು ಮುಟ್ಟಿತು. ಮೊದಲು ವಾಮೆಯು ಸುದ್ದಿಯನ್ನು
ಕೇಳಿದವಳು-- ಅವಳು ಸುದ್ದಿಯನ್ನು ಕೇಳಿ ಯಜಮಾನಿಗದನ್ನು ತಿಳಸದೆ
----------------------------------------
೧೮ ಆರನೆಯ ಪರಚ್ಛೇದ
ರಮಣೀಮೋಹನನಿಗೆ ಏಕಾಂತವಾಗಿ ವೃತ್ತಾಂತವನ್ನೆಲ್ಲ್ಲಾ ವಿವರಿಸಿ ಹೇಳಿ
ದಳು. ರಮಣೀಮೋಹನನು ಹೇಳಿ ಸ್ತ೦ಭಿತನಾದನು. ವಾಮೆಯು, "ಈಗ
ಸುಮ್ಮನಿರಲು ಸಮಯವಲ್ಲ ವೆಂದಳು.
ರಮಣೀಮೋಹನ.-.. -ಈಗೇನನ್ನು ಮಾಡಶಿ? ವಾಮಾತಾಯಿ !
ವಾಮೆ ಹುಡುಗಿಯನ್ನು ಬದುಕಿಸು. ಅಯ್ಯೋ ! ಅವಳಿಗಾರೂ ಇಲ್ಲ
ರಮಣೀ.--ಅರೂ ಇಲ್ಲದವರಿಗೆ ದೇವರಿದ್ದಾನೆ. ಮನುಷ್ಯಯತ್ನ
ದಲ್ಲಿ ಸಾಗುವಷ್ಟು ಹುಡುಗಿಗೆಸಲವಾಗಿ ಪ್ರಯತ್ನ ಪಡುವೆನು.
ಹೀಗೆಂದು ಹೇಳಿ ರಮಣೀಮೋಹನನು ಕುದುರೆಯನ್ನು ಹತ್ತಿ
ಕೊಂಡು ಠಾಣಾಭಿಮುಖವಾಗಿ ಓಡಿಸಿಕೊಂಡು ಹೋದನು. ಆಗ ಮೂರು
ಘಂಟೆ-.ಬಿಸಿಲ ತಾಪವು ಅತಿಯಾಗಿದ್ದಿತು. ಅವನದನ್ನು ಗ್ರಾಹ್ಯಮಾಡ
ಲಿಲ್ಲ. ಠಾಣೆಯು ಹತ್ತರದಲ್ಲಿದ್ದಿತು.-ಒಂದು ಹರಿದಾರಿಯ ದೂರ. ಅತಿ
ಸಲ್ಪ ಸಮಯದಲ್ಲಿ ಹೋಗಿ ಠಾಣೆಯಲ್ಲಿ ದರೋಗನನ್ನು ನೋಡಿದನು.
ದರೋಗನು ರಮಣೀಮೋಹನನನ್ನು ಬಲ್ಲನು. ಗೋಪಾಲಪುರದ
ಜಮೀನುದಾರನನ್ನು ಅರಿಯದವರಾರು? ದರೋಗನು ರಮಣೀಮೋಹನ
ನನ್ನು ಕಂಡು ಸಂಭ್ರಮದಿಂದೆದ್ದು ಕುಳತುಕೊಳ್ಳ ಲು ಅವನಿಗೊಂದು ಆಸ
ನವನ್ನು ತಂದು ಕೊಟ್ಟನು, ಅವನು ಕುಳತ ಬಳಕ ತಾನೂ ಅವನ ಬಳ
ಕುಳಿತುಕೊಂಡನು. ರಮಣೀಮೋದಾನನು, " ನಿಮ್ಮ ಬಳಿ ಒಂದು ಕೆಲಸದ
ನಿಮಿತ್ತವಾಗಿ ಬಂದೆನು '' ಎಂದನು,
ದರೋಗ--ಅಪ್ಪಣೆಯಾಗಲಿ.
ರಮ -ಖೂನಿಯನ್ನು ಮಾಡಿದವಳೆಂದು ಒಬ್ಬ ಹುಡುಗಿಯನ್ನು
ಹಿಡಿದಿರುವುದಾಗಿ ಕೇಳಿದೆನು.
ದರೋಗ--ತಮಗೆ ಸರಿಯಾದ ಸುದ್ದಿಯು ಮುಟ್ಟಿದೆ-
ರಮ- ಹುಡುಗಿಯು ಸಂಪೂರ್ಣ ನಿರ್ದೊಷಿ-
ದರೋಗ -ತಮಗದು ಗೊತ್ತಾದಬಗೆ ಹೇಗೆ ?
ರಮ-ಹುಡುಗಿಯು ಮಧ್ಯಾಹ್ನದಲ್ಲಿ ನಮ್ಮ ಮನೆಗೆ ಭಿಕ್ಷಕ್ಕೆ ಸಲ
ವಾಗಿ ಬಂದಿದ್ದಳು. ಕೃಷ್ಣಪುರಕ್ಕೆ ಹಿಂದಿರಿಗಿ ಹೋಗಲು ಸಾಯಂಕಾಲವಾ
ಗಿರಬಹುದು. ಅದಕೆ,ಸಲವಾಗಿ ಮುದುಕಿಯು ಅವಳನ್ನು ಮನೆಯೊಳಗೆ
------------------------------------------
ನೀರದೆ ೧೯
ಹೋಗಗೊಡಿಸರಿಲ್ಲ-ಹುಡುಗಿಯು ಬಾಗಿಲಲ್ಲಿ ಕಾದು ಕುಳಿತಿದ್ದಳು-ರಾತ್ರಿ
ಯಾಗಿ ಗಸ್ತಿನವನು ಬಂದಾಗ ಅವಳದೇ ಸ್ಥಿತಿಯಲ್ಲಿ ಕುಳಿತಿದ್ದವಳನ್ನು
ನೋಡಿದ್ದಾನೆ.ಬಳಕ ನಡಿದುದನ್ನೆಲ್ಲ್ಲಾ ಆರೂ ಕಾಣರು,
ದರೋಗ--ಆರೂ ಕಾಣದಿದ್ದರೂ ನಾವದನ್ನು ಅನುಮಾನದಮೇಲೆ
ಊಹಿಸಿ ತಿಳಯಬೇಕು.
ರಮ- ಏನೆಂದು ಅನುಮಾನಿಸಿ ತಿಳದಿರಿ?
ದರೋಗ--ಹುಡುಗಿಯು ಕೋಲಿನಿಂದ ಹೊಡೆದು ಮುದುಕಿಯನ್ನು
ಖೂನುಮಾಡಿದಳೆಂದು.
ರಮ--ಮುದುಕಿಯ ಮೈಯಲ್ಲಿ ಹೊಡೆದ ಗುರುತಗಳಿದ್ದುವೆ ?
ಮುದುಕಿಯ ಮೈಮೇಲೆ ಹೊಡೆತದ ಗುರುತಿರಲಿಲ್ಲವೆಂದು ದರೋ
ಗನಿಗಾಗ ಸ್ಚರಣೆಗೆ ಬಂದು, ಉತ್ತ ರವನ್ನು ಇಡಲು ತೋಚದೆ ಸುಮ್ಮನಿ
ದ್ವನು. ರಮಣೀಮೋಹನನು, '' ಹುಡುಗಿಯು ಎಲ್ಲಿದ್ದಾಳೆ ? ನಾನವಳ
ನ್ನೊಂಮೆ ನೋಡಬಹುದೆ? " ಎಂದು ಕೇಳದನು,
ಹುಡುಗಿಯು ರಮಣೀಮೋಹನನ ಬಳ ಅಪರಾಧವನ್ನೊಬ್ಪಿಕೊ
ಳ್ಳು ವಳೆಂದು ಭಾವಿಸಿ ದರೋಗನು ಆಕ್ಷೇಪವಿಲ್ಲದೆ, ನೋಡಬಹುದೆಂದು
ಹೇಳಿ, " ಬರೋಣಾಗಲಿ, ಹುಡುಗಿಯ ಒಳ ಕರೆದುಕೊಂಡುಹೋಗುವೆನು'
ಎಂದು ಹೇಳಿದನು.
ಇಬ್ಬರೂ ಎದ್ದು ಸೆರೆಮನೆಯೊಳಗೆ ಹೋದರು, ಹುಡುಗಿಯುಛಿನ್ನ
ಕುಸುಮಿತ ಲತಿಕೆಯಂತೆ ದೂಳನಲ್ಲಿ ಬಿದ್ದಿದ್ದಳು-ರಮಣಿಮೋಹನ
ನನ್ನು ಕಂಡು ಲಜ್ಜೆಯಿಂದ ಸಂಕುಚಿತೆಯಾಗಿ ಮೆಲ್ಲಮೆಲ್ಲನೆ ಎದ್ದು
ಕುಳಿತಳು.
ದರೋಗನು ರಮಣೀಮೋಹನನನ್ನು ಈುರಿತು, "ತಾವು ಹುಡುಗಿ
ಯನ್ನು ಕೇಳೋಣಾಗಲಿ, ಅವಳು ಮುದುಕಿಯನ್ನು ಕೇಗೆ ಖೂನುಮಾಡಿ
ದಳೋ ಅದನ್ನು ಹೇಳಲಿ-ಹುಡುಗಿಯು ತಮ್ಮನ್ನು ಸಮ್ಮಾನಿಸುತ್ತಾಳೆ
ತಾವು ಕೇಳದರೆ ಅವಳು ಹೇಳದಿರಳು ?' ಎಂದು ಹೇಳದನು,
ರಮಣೀಮೋಹನನು ಸ್ನುಲ್ಪ ಉತ್ತೇ ಜಿತ ಕಂಠದಿಂದ, "ಹುಡುಗಿ
ಯನ್ನು ಕೇಳುವುದೇನು? ಅವಳು ಖೂನು ಮಾಡಿದಳೆ ಇಲ್ಲವೆ ಎಂದು
----------------------------------------
೨೦ ಅರನೆಯ ಪರಿಚ್ಛೇದ
ಕೇಳುವುದರಿಂದ ಪ್ರಯೋಜನವಿಲ್ಲ-ಬೇಕಾದರೆ ನಾನದಕ್ಕೆ ಉತ್ತ ರವನ್ನು
ಹೊಡಬಲ್ಲೆನು " ಎಂದನು.
ದರೋಗ.- ತಾನು ಬಲ್ಲಿರಾ? ತಮಗೆ ತಿಳದಿರುವುದೇನು? ಹೇಳೋ
ಣಾಗಲಿ.
ರಮ- ಮುದುಕಿಯನ್ನು ಖೂಸು ಮಾಡಿದವರಾರೋ ನಾನವರನ್ನು
ಅರಿಯೆನು. ಈ ಖೂನಿಯ ವಿಚಾರದಲ್ಲಿ ಹುಡುಗಿಯು ಸಂಪೂರ್ಣ
ನಿರ್ದೋಷಿ ಎಂದು ನಾಸು ಮುಕ್ತ ಕಂಠನಾಗಿ ಹೇಳಬಲ್ಲೆನು. ನಾನಾದರೂ
ಖೂನುಮಾಡಬಲ್ಲೆನೇ ಹೊರ್ತು ಹುಡುಗಿಯು ಎಂದೂ ಖೂನುಮಾಡಳು.
ಅದನ್ನು ಕೇಳೆ ಹುಡುಗಿಯ ಕಣ್ಣುಗಳಲ್ಲಿ ಛಲಛಲ ನೀರು
ತುಂಬಿತು. ಅವಳು ಮುದುಕಿಯ ಹೊಡೆತಕ್ಕೂ ದರೋಗನ ಹೊಡೆ
ತಕ್ಕೂ ಬಿಂದುಮಾತ್ರ ಕಣ್ಣೀರನ್ನು ಬಿಡದವಳು, ಈಗ ಅತ್ತು ಅಕುಲೆ
ಯಾದಳು.
ದರೋಗನು ಸ್ಮಲ್ಪ ನಕ್ಫ್ರು, ನಂಬುಗೆಯಮೇಲೆ ಕೆಲಸವನ್ನು
ಮಾಡಿದರೆ ಸಾಗದು, ಪ್ರಮಾಣಗಳು ಬೇಕು '' ಎಂದನು.
ರಮ--ಹುಡುಗಿಯು ನಿರ್ದೋಷಿಯೆಂದು ನಾನು ಪ್ರಮಾಣವನ್ನು
ಮಾಡಬಲ್ಲೆನು. ನನ್ನ ಸರ್ವಸ್ಥವು ಹೋದರೂ ನಿಮ್ಮ ಒಳಸಂಚು
ಗಳನ್ನು ಹೊರಗೆ ಹಾಕದಿರೆನು.
ದರೋಗನು ಪ್ರಮಾದಕ್ಕಿಟ್ಟತೆಂದು ಗುಣಿಸಿಕೊಂಡನು. ರಮಣೀ
ಮೋಹನನನ್ನು ಕಂಡರೆ ಎಲ್ಲಾ ಗ್ರಾಮಸ್ಥರೂ ಮರ್ಯಾದೆಯಿಂದ ಕಾಣು
ವರೆಂದೂ ಎಲ್ಲರೂ ಅವನ ಅನುಗತರೆಂದೂ ಅವನಿಗೆ ಬಾಧ್ಯಪಟ್ಟವರೆಂದೂ
ಮೊಕದ್ದಮೆಯನ್ನು ನಡಿಸಲು ಹೊದರೆ ಹುಡುಗಿಯ ಪರವಾಗಿ ಬಾರಿ
ಷ್ಪರು ಮುಂತಾದ ವಕೀಲರು ಸಾಲಿಟ್ಟು ನಿಲ್ಲು ವರೆಂದೂ ತಿಳದವನಾಗಿ,
ದರೋಗನು ಏನನ್ನು ಮಾಡುವುದಕ್ಕೂ ತೋಚದೆ, " ನಾನು ಒಳ ಸಂಚಾವ
ದನ್ನ್ರೂ ಮಾಡಿಲ್ಲ--ನಿಜವಾದ ಹತ್ಯಾಕಾರಿಯನ್ನು ಹಿಡಿದಿದ್ದೇನೆ '' ಐಂದು
ಹೇಳದನು.
ರಮಣೀ.--ನಿಜವಾದ ಹತ್ಯಾ ಕಾರಿಯು ಸಿಗದೆ ಒಬ್ಬ ಚಿಕ್ಕ ಹುಡುಗಿ
ಯನ್ನು ಹಿಡಿದು ಅಪರಾಧಿಯನ್ನಾಗಿ ಮಾಡಿರುತ್ತಿ “ನಿಮ್ಮ ಕೆಲಸ ಕಾರ್ಯ
----------------------------------------
ನೀರದೆ ೨೧
ಗಳನ್ನು ಬಲ್ಲೆ ನು-ನಿಮ್ಮ ಕಾನೂನನ್ನೂ ಬಲ್ಲೆನು ಆದರೆ ಇದೇನು !
ಹುಡುಗಿಯ ಬಟ್ಟೆಯೆಲ್ಲಾ ರಕ_ಮಯವಾಗಿದೆ!
ದರೋಗ.--ಅಹುದು-ಒಪ್ಪಿಕೊಳ್ಳಲಿಲ್ಲವೆಂದು ಒಂದೆರಡು ಪೆಟ್ಟು
ಗಳು ಬಿದ್ದಿವೆ.
ರಮಣೀಮೋಹನನು. ಠಾಣೆಯ ಮನೆಯೆಲ್ಲಾ ಅದುರುವಂತೆ
ಚೇತ್ಕಾರವನ್ನು ಮಾಡಿ, "ನೀವು ಹುಡುಗಿಯನ್ನು ಹೊಡೆದಿರಾ? ?' ಎಂದು
ಘಟ್ಟಿಯಾಗಿ ಕೇಳಿದನು.
ದರೋಗನು ರುಕ್ಷ ಸ್ಟರದಿಂದ, "ಹೊಡೆದುದು ಒಳ್ಳೆ ಯಕೆಲಸವ್ನೇ
ಆಯಿತು. ಅದಕ್ಕೆಸಲವಾಗಿ ನಾನಾರಿಗೂ ಉತ್ತ ರವನ್ನು ಕೊಡಲು ಬಾಧ್ಯ
ನಲ್ಲ ಎಂದನು,.
ರಮ--ಬಾಧ್ಯನು ಅಹುದೋ ಅಲ್ಲವೋ, ಅದು ಕೂಡ್ಲೆ ತಿಳಿ
ಯುವೆ-ನಾನು ಸಾಹೆಬನ ಬಳ ಹೋಗುತ್ತೇನೆ.
ರಮಣೀಮೋಹ್ಕನನು ಸಾಹೆಬನ ಬಳ ಹೋಗಬೇಕಾದ ಅವಕ್ಕ
ಕವು ಬೀಳಲಿಲ್ಲ. ರಮಣೀಮನೋಹನನು ಠಾಣೆಯಿಂದ ಹೊರಡುವುದಕ್ಕೆ
ಮೊದಲೇ ಪೊಲಿಸಸಾಹೇಬನೂ ಇನಸ್ಸೆಸ್ಟ ರನೂ ಬರುತಿದ್ದುದನ್ನು ಕಂ
ಡನು, ಅವರಿಬ್ಬ ರೂ ಖೂನಾದ ಸಮಾಚಾರವನ್ನು ಕೇಳಿ ಎತ್ತಿನಗಾಡಿ
ಯಲ್ಲಿ ಬಂದಿದ್ದರು. ಇನಸ್ಸೆಕ್ಟ್ರರನು ವಯಸ್ಸಾದವನು, ತಿಳದವನು,
ಹಾಗೂ ಧರ್ಮನಿಷ್ಠನೂ ಅಹುದು. ಧರ್ಮನಿಷ್ಠನೆಂತಲೆ ಅವನು ಹೆಚ್ಚಿ ಸ
ಪದವಿಗೆ ಬರಲಿಲ್ಲ. ಅವನು ರಮಣೀ ಮೋಹನನ ತಂದೆಯನ್ನು ಬಲ್ಲನು.
ಅವನಲ್ಲಿ ಗೌರವ ಮರ್ಯಾದೆಯುಳ್ಳವನಾಗಿದ್ದನು. ಆಗ ರಮುಣೀಮೋಹ
ನನು ಮಗುವಾಗಿದ್ದನು.
ಇನಸ್ಸೆಕ್ಟ್ರರನು ಬಂಡಿಯಿಂದಿಳದು ರಮಣೀಮೋಹನನ್ನು ಕಂಡು
ಆದರದಿಂದವನ ಸಂಗಡ ಮಾತಾಡತೊಡಗಿದನು-ಸಾಹೇಬನಿಗೆ ಅತ್ತ ಕಡೆ
ದೃಷ್ಛಿಯಿರಲಿಲ್ಲ. ಅವನು ರಮಣೀ ಮೋಹನನ ಕುದುರೆಯನ್ನು ಕುತೂ
ಹಲದಿಂದ ನೋಡುತ್ತಿದ್ದನು. ನೋಡಿದ ಬಳಕ ರಮಣೀಮೋಹನನನ್ನು
ಕುರಿತು, " ಬಾಬು ! ಕುದುರೆಯು ನಿಮ್ಮದೆ? " ಎಂದು ವಿಚಾರಿಬದನು,
-----------------------------------------
೨೨ ಅರನೆಯ ಪರಿಚ್ಛೆೀದ
" ಅಹುದು ?
" O, She is an excellent animal" (ಅದೊಂದು ಉತ್ತಮವಾದ
ಕುದುರೆ.)
" ಕುದುರೆಯು ಬ್ಯಾರೊಸಾಹೆಬನಿಂದ ಕೊಂಡುಕೊಂಡೆನು, '
" ನಾನದನ್ನು ಕೊಂಡುಕೊಳ್ಳ ಬೇಕೆಂದಿದ್ದೆನು--ಆದರೆ ಬೆಲೆಯು
ಹೆಚ್ಚು -ತಾವದನ್ನು ಎಷ್ಪಕ್ಕೆ ಕೊಂಡುಕೊಳ್ಳೋಣಾಯಿತು ?
" ಎಂಟುನೂರು. ''
" ಬ್ಯಾರೊಸಾಹೆಬನು ನನಗೆ ಏಳುನೂರು ರೂಪಾಯಿಗೆ ಕೊಡುವು
ದಾಗಿದ್ದನು..'
" ನನಗೀಗ ಕುದುರೆಯಿಂದ ಪ್ರಯೋಜನವಿಲ್ಲ-ನಾನು ಕಲಿಕತ್ತೆಗೆ
ಹೋಗಬೇಕು. ಹೋದಷ್ಟು ಬೆಲೆಗೆ ಕೊಟ್ಟುಬಿಡುವೆನು.'
" ಎಷ್ಟಕ್ಕೆ ಕೊಡಬೇಕೆಂದಿರುವಿರಿ? ?'
" ಕಡೆಗೆ ಇನ್ನೂ ರುರೂಪಾಯಿಗಾದರೂ ಕೊಟ್ಟು ಬಿಡುವೆನು. "
" ಇನ್ನೂ ರುರೂಪಾಯಿಯೆ ? ನನಗೆ ಕೊಡುವಿರಾ? ''
" ಸೆಂತೋಷವಾಗಿ. ''
ಬಳಕ ಸಾಹೆಬನು ಮುಂದುವರಿದು ಬಂದು ರಮಣೀಮೋಹನನ
ಕೈಯನ್ನ ಕುಲುಕಿ, ಅವನ ಪರಿಚಯವನ್ನು ತಿಳದುಕೊಂಡನು. ಬಳಕ
ಇಬ್ಬರೂ ಹೋಗಿ ಇನಸ್ಪೆಕ್ಷನ್ (Inspection) ಕೊಠಿಡಿಯಲ್ಲಿ ಕುಳತು
ಕೊಂಡರು.
ಈ ಮಧ್ಯೆ ಇನಸ್ಪೆಕ್ಟ್ರರನು ಠಾಣೆಯ ಮನೆಯಲ್ಲಿ ಕುಳತು ಮೊಕ
ದ್ವಮೆಯ ವಿದ್ಯಮಾನಗಳನ್ನು ಕುರಿತು ದರೋಗನಿಂದ ತಿಳದುಕೊಳ್ಳುತ್ತಿ
ದ್ದನು, ದರೋಗನು ಹುಡುಗಿಗೆ ವಿರೋಧವಾಗಿ ಒದಗಿನಿಕೊಂಡಿದ್ದ
ಸಾಕ್ಷ್ಯವನ್ನು ಕುರಿತು ಹೇಳುತ್ತಿದ್ದನು. ಇನಸ್ಸೆಕ್ಟ್‌ರನು ಕಾಗದಪತ್ರ
ಗಳನ್ನೋದಿ ಸಾಕ್ಷ್ಯದ ಸ್ವಿತಿಯನ್ನು ತಿಳದವನಾಗಿ ಮುಖವನ್ನು ಸುರುಗಿಸಿ
ಕೊಂಡನು. ದರೋಗನು ಭೀತಿಗೊಂಡು ಜಮಾದಾರನ ಮುಖವನ್ನು
ನೋಡಿದನು. ಜಮಾದಾರನು ಮೂಗನ್ನು ಕುಂಚಿತಮಾಡಿಕೊಂಡು ಮೇಲ
ಧಿಕಾರಿಗೆಸಲವಾಗಿ ಹುಕ್ಕೆಯನ್ನು ತರಲೆದ್ದು ಹೊರಟುಹೋದನು.
-------------------------------------
ನೀರದೆ ೨೫
ಇನಸ್ಪೆಕ್ಟರು-ಅಸಾಮಿಯೆಲ್ಲಿ ?
ದರೋಗ.--ಸೆರೆಮನೆಯಲ್ಲಿ.
ಇನಸ್ಪೆಕ್ಟರು--ಕರೆದುಕೊಂಡು ಬಾ-ನೋಡೋಣ.
ಹುಡುಗಿಯು ಕರೆತರಲ್ಸಟ್ಟಳು. ಸಂಗತಿಗಳನ್ನು ಅವಳಂದ ತಿಳಿದು
ಇನಸ್ಸೆಕ್ಟ್ರರನು " ಶವವನ್ನು ಕಳುಹಿಸಿದುದಾಯಿತೆ? ? ಎಂದು ಹೇಳದನು.
ದರೋಗ. ಇನ್ನೂ ಸಳುಹಿಬಲ್ಲ-ಬಂಡಿಯಲ್ಲಿ ಹಾಕಿಸಿದ-ರಿವೋ
ರ್ಟನ್ನು ಬರೆಯುತಿದ್ದೆನು-ಅಷ್ಪರೊಳಗೆ ಅಸಭ್ಯಬರ್ಬರನೊಬ್ಬನು ಬಂದು
ನನ್ನ ಸಮಯವನ್ನು ನಷ್ಟಮಾಡಿದನು.
ಇನಸ್ಪೆಕ್ಟರ `ನಡಿ-ಶವವನ್ನು ನೋಡೋಣ.
ಅಲ್ಲಿಂದಿಬ್ಬರೂ ಎದ್ದು ಗಾಡಿಯ ಬಳಿ ಹೊಗಿ, ಶವವನ್ನು ಚೆನ್ನಾಗಿ
ಪರೀಕ್ಷಿಸಿ ನೋಡಿ, ಇನಸ್ಪೆಕ್ಟರನು. " ನೀನಿಲ್ಲಿರು, ಸಾಹೆಬನನ್ನು ಕರತ
ರುವೆನು " ಎಂದು ಹೇಳಿ ಇನಸ್ಸೆಕ್ಟರನು ಹೋದನು.
ಇನಸ್ಪೆಕ್ಟರನು ಸ್ಪಲ್ಛದರಲ್ಲಿಯೇ ಸಾಹೇಬನಸಂಗಡ ಹಿಂದಿರಿಗಿ
ಬಂದು ಸಾಹೆಬನಿಗೆ ಶವದ ಮೈಯಲ್ಲಾವ ಅಸ್ತ್ರಾಘಾತವಾಗಲಿ ಇತರ
ಅಘಾತದ ಗುರುತಾಗಲಿ ಇಲ್ಲದಿರುವುದನ್ನು ತೋರಿ, '' ನನ್ನ ಬುದ್ದಿಗೆ
ಹೆಂಗಸು ಯಕೃತ್ತು (Liver) ಒಡಿದುಹೋದುದರಿಂದಲೋ ಅಥವಾ
ರಕ್ತ ನಾಡಿಯು ಒಡದಿರುವುದರಿಂದಲೋ ಸತ್ನಿದ್ದಾಳೆಂದು ತೋರುತ್ತದೆ"
ಎ೦ದನು.
ಸಾಹೆಬನು, ''ನಾನೂ ಅದೇ ಅಭಿಪ್ರಾಯವುಳ್ಳವನಾಗಿದ್ದೇನೆ ''
ಎಂದನು,
ಇಸಸ್ಸೆಕ್ಟರನು ಸಾಹೆಬನನ್ನು ಠಾಣೆಗೆ ಕರತಂದು ಅಲ್ಲಿದ್ದ ಹುಡು
ಗಿಯನ್ನು ಅವನಿಗೆ ತೋರಿ, " ದುರ್ಬಲವಾದಾ ಹುಡುಗಿಯಿಂದ ಖೂನಾಯಿ
ತೆಂದು ಹೇಳುವುದು ಅಸಂಭವ" ವೆಂದು ಹೇಳದನು.
ಸಾಹೆಬ...ಎಂದಿಗೂ ಹೇಳಲಾಗದು. ಹುಡುಗಿಯು ಖೂನು ಮಾಡಿದ
ಳೆಂದು ಹೇಳದವರಾರು?
ಇನ--ದರೋಗನು ಹೇಳುತ್ತಾನೆ.
-----------------------------------------
೨೪ ಆರನೆಯ ಪರಿಜ್ಜೇದ
ಸಾಹೆಬ -(Idiot he is) ಅವನೊಬ್ಬ ಹುಟ್ಟುಮೂರ್ಖ-(ದರೋ
ಗನನ್ನು ಕುರಿತು) ಅವಳು ಖೂಸುಮಾಡಿದುದನ್ನು ನೀನು ನೋಡಿದಿಯಾ?
ದರೋಗನು ಕೈಮುಗಿದುಕೊಂಡು, "ಹುಜೂರ" ! ಸಾಕ್ಷಿಗಳು
ನೋಡಿದ್ದಾರೆ " ಎಂದನು,
ಸಾಹೆಬ- ನಿನ್ನ ಸಾಕ್ಷಿಗಳನ್ನು ಬರಹೇಳು.
ಸಾಕ್ಷಿಗಳು ಠಾಣೆಯಲ್ಲಿದ್ದರು. ದರೋಗನು ಹೋಗಿ ಏನನ್ನೋ
ಬೋಧಿಸಲು ಹೋದವನು, ರಮಣೀಮೋಹನನು ಅಲ್ಲಿ ನೋಡಿಕೊಂಡಿ
ದ್ದುದರಿಂದ ಕೃತಕಾರ್ಯನಾಗರಿಲ್ಲ. ಸಾಕ್ಷಿಗಳು ಸಾಹೆಬನ ರುದ್ರಮೂ
ರ್ತಿಯನ್ನು ನೋಡಿ ತಾವು ತಿಳದಿದ್ದುದನ್ನು ಮರೆತುಬಿಟ್ಟರು. ಸಾಹೆಬನ
ಪ್ರಶ್ನೆಗೆ ಪ್ರತಿಸಾಕ್ಷ್ರಿಯೂ ಖೂನಾದುದನ್ನು ತಾವು ಕಂಡವರಲ್ಲವೆಂದು
ಹೇಳಿದರಲದೆ ಹುಡುಗಿಯು ಖೂನುಮಾಡಿದವಳಂದು ತಾವೆಂದೂ ನಂಬಲಾ
ರೆವೆಂತಲೂ ಹೇಳಿರನು.
ಸಾಹೆಜನು ಆರಕ್ತ ಲೋಚನನಾಗಿ ದರೋಗನನ್ನು ನೋಡಿ, You are a liar too
(ನೀನೊಬ್ಬ ಸುಳ್ಳು ಗಾರನೂ ಅಹುದು) ಎಂದನು.
ಬಳಕ ಸಾಹೆಬನು ಶವವನ್ನು ಅಸ್ಪತ್ರೆಗೆ ಕಳುಹುಲು ಹೇಳಿ ಹುಡು
ಗಿಯನ್ನು ಸೆರೆಯಿಂದ ಬಿಟ್ಟುಬಿಡುವಂತೆ ಅಪ್ಪಣೆ ಮಾಡಿದನು. ಅಗ ರಮ
ಣೀಮೋಹನಸು ಮುಂದುವರಿದುಕೊಂಡು ಬಂದು ತನ್ನದೊಂದು ಅರಿಕೆಯಿದೆ
ಎಂದನು.
ಸಾಹೆಬ. What can I do for you Babu? (ಬಾಬುಗಳೆ !
ನನ್ನಿಂದೇನಾಗಬೇಕು )).
ರಮಣಿ- ತಪ್ಪನ್ನೊಪ್ಪಿಕೊಳ್ಳ ಲು ದರೋಗನು ಹುಡುಗಿಯನ್ನು
ಅನ್ಯಾಯವಾಗಿ ಹೊಡಿದು ಹಿಂಸಿಸಿದ್ದಾನೆ,. ಹುಡುಗಿಯ ಮೈಮೇಲಿರುವ
ಘಾಯಗಳನ್ನು ನೋಡಿದರೆ ವೇದ್ಯವಾಗಬಹುದು.
ಸಾಹೇಬನೂ ಇನಸ್ಪೆಕ್ಟರನೂ ಹುಡುಗಿಯನ್ನು ಪರೀಕ್ಷಿಸಿ ನೋಡಿ
ದರು. ಮೈಯೆಲ್ಲಾ ಘಾಯ-ಕೆಲವು ಘಾಯಗಳಂದ ಆಗಲೂ ರಕ್ತ ವು
ಸುರಿಯುತಿದ್ದಿತು.
ಸಾಹೆಬನು ಮರುಗಿ, ಕರುಣಕಂಠದಿಂದ, " ನಿನ್ನನ್ನು ಹೊಡೆದವ
ರಾರು ?" ಎಂದು ವಿಚಾರಿಸಿದನು.
----------------------------------------
ಆರನೆಯ ಪರಿಚ್ಛೇದ ೨೮
ಹುಡುಗಿಯು ಅಧೋವದನೆಯಾಗಿ ಉತ್ತರವನ್ನು ಕೊಡತಿಲ್ಲ.
ಪುನಃಪುನಃ ಒತ್ತಾಯಮಾಡಿದುದರಮೇಲೆ, "ಮುದುಕಿಯು ಹೊಡಿದಿದ್ದಳು''
ಎಂದಳು.
" ದರೋಗನು ಹೊಡೆಯರಿಲ್ಲವೆ ? ''
ಅವಳ ಉತ್ತ ರದಮೇಲೆ ದರೋಗನ ಜೀವನಮರಣಗಳು ನಿರ್ಭ್ಯ
ರವಾಗಿದ್ದುವು. ದರೋಗನು ಮನಸ್ಬನಲ್ಲಿ, " ಅಯ್ಯೊ! ಹೊಡಿದೆನೇಕೆ?.-.
ತಾಯಿ, ದುರ್ಗೆ! ಈತಡವೆ ರಕ್ಷಿಸು-ಮುಂದೆಂದೂ ಅರ ಮೇಲೂ ಕೈಯೆ
ತ್ತುವುದಿಲ್ಲ " ವೆಂದಂದುಕೊಂಡನು.
ಆದರೆ ದುರ್ಗೆಯು ರಕ್ಷಸಲಿಲ್ಲ-ಹುಡುಗಿಯು ಅಸ್ಫುಟಸ್ಕರದಿಂದ,
"ಅಹುದು, ಹೊಡಿದನು -ಅದರೆ ನಾನದಕ್ಕೆ ಸಲವಾಗಿ ದುಃಖಿತೆಯಾಗಿಲ್ಲ "
ವೆಂದಳು.
ಸಾಹೆಬ. ನೀನು ದುಃಖಿತೆಯಾಗದಿದ್ದರೂ ಕಾನೂನು ದುಃಖಿತ
ವಾಗಿದೆ.
ಹೀಗೆಂದು ಹೇಳ ಬಳಕ ಸಾಹೆಬನು ಸಾಕ್ಷಿ ಗಳನ್ನು ಕುರಿತು,
(ದರೋಗನು ಹೊಡಿದುದನ್ನು ನೀವು ನೋಡಿದಿರಾ? ಎಂದು ವಿಚಾರಮಾ
ಡಿದನು.
ಸಾಕ್ಷಿ ಗಳು ಹಿಂದುಮುಂದು ನೋಡುತಿದ್ದರು-ಸಾಹೆಬನು, "ನಿಮಗೆ
ಭಯವಿಲ್ಲ_ದರೋಗನನ್ನು ದಸ್ತಗಿರಿಮಾಡಿದೆ " ಎಂದನು.
ಬಳಿಕ ಸಾಕ್ಷಿ ಗಳೆಲ್ಲರೂ ಏಕವಾಕ್ಯವಾಗಿ, ಹುಡುಗಿಯನ್ನು ದರೋ
ಗನು ಹೊಡೆದುದನ್ನು ಕಂಡೆವೆಂದು ಹೇಳಿದರು.
ರಮಣೀಮೋಹನನು ಹಿಂದಿದ್ದವನು. ಮುಂದುವರಿದು ಬಂದು,
ಸಾಹೆಬ! ದರೋಗರನಿಗೆ ಬೇರೆ ಸ್ಥಳಕ್ಕೆ ಬದಲಾಯಿಸಿದರೆ ಸಾಕು. ಅವ
ನಿಗೆ ಬೇರೆವಿಧವಾಗಿ ದಂಡಿಸಿದರೆ, ಫಿರ್ಯಾದಿಯು ನಿಮಗೆ ಸಿಕ್ಕಳು " ಎಂದು ಹೇಳದನು.
ಹೀಗೆಂದು ಹೇಳಿ ಹುಡುಗಿಯ ಕೈಯನ್ನು ಹಿಡಿದುಕೊಂಡು ಠಾಣೆ
ಯಿಂದ ಹೊರಟುಹೋದನು.
....
----------------------------------------
೨೬ ನೀರದೆ
ಏಳನೆಯ ಪರಿಚ್ಛೇದ.
"ವಾಮಾ, ತಾಯಿ " ?'
"ಏನೋ ಮಗು!"
" ಹುಡುಗಿಯನ್ನು ಕರೆತಂದಿದ್ದೇನೆ. "
" ಬಳ್ಳೆ ಯ ಕೆಲಸವನ್ನು ಮಾಡಿದೆ-ನೀನು ಜೆರಜೇವಿಯಾಗಿರು ! "
ಹುಡುಗಿಯು ಸಂಕುಚಿತಭಾವದಿಂದ ಒತ್ತ ಟ್ಫು ನಿಂತಿದ್ದಳು. ವಾಮೆ
ಯು ಅವಳನ್ನು ನೋಡಿ. "ಆಹಾ ! ಇಂತಹ ಹೆಣ್ಣು ಖೂನನ್ನು ಮಾಡು
ವಳೆ? ದರೋನಿಗೆ ದಯೆ, ಧರ್ಮ ಆವುದೂ ಇಲ್ಲವೆ? ಎಂದಳು.
ಹುಡುಗಿಯನ್ನು ವಾಮಾ ತಾಯಿಯ ವರದಲ್ಲಿ ಬಿಟ್ಟು ರಣುಣೀಮೋ
ಹನನು ತಾಯಿಯ ಬಳ ಹೋದನಸು-ವಾಮೆಯು ಹುಡುಗಿಯನ್ನು ಕೊಳಕ್ಕೆ
ಕರೆದುಕೊಂಡು ಹೋಗಿ ಸ್ಪಾನವನ್ನು ಮಾಡಿಸಿ, ಉಟ್ಟುಕೊಳ್ಳಲು ತನು
ದೊಂದು ಸೀರೆಯನ್ನು ಕೊಟ್ಟಳು.
ಇತ್ತ ರಮಣೀಮೋಹನನು ತಾಯಿಯಬಳ ಹೋಗಿ, ಇಂದು ನಿನ್ನ
ಅನುಮತಿಯನ್ನು ಪಡೆಯದೆ ಒಂದು ಕೆಲಸವನ್ನು ಮಾಡಿದೆನು '' ಎಂದನು,
ತಾಯಿ...ಏನನ್ನು ಮಾಡಿದೆಯೋ, ಮಗು?
ರಮಣಿ. ಪೋಲಿಸದರೋಗನು ಬಬ್ಬ ಚಿಕ್ಕ ಹುಡುಗಿಯಮೇಲೆ
ಬಹಳ ಅತ್ಯಾಚಾರಗಳನ್ನು ನಡೆಯಿಸಿದ್ದನು. ಅವಳನ್ನು ಪೊಲಿಸ ಗ್ರಾಸ
ದಿಂದ ತಪ್ಬಿಸಿ ಕರಕೊಂಡು ಬಂದೆನು.
ತಾಯಿ--ಪೊಲಿಸರ ಗೋಜಿಗೆ ಹೋಗದಿರುವುದು ಒಳ್ಳೆಯದು.
ರಮಣಿ. - ಪೋಲಿಸರು ಅತ್ಯಾಚಾರಗಳನ್ನು ಮಾಡುತ್ತಿರುವಾಗ ನಾನು
ಕುಳತು ನೋಡುತ್ತಿರುವುದೆ?
ತಾಯಿ--ದೇಶದಲ್ಲಿ ಎಷ್ಟೋ ಅತ್ಯಾಚಾರಗಳು ನಡಿಯುತ್ತಿವೆ-ಅದ
ನೆಲ್ಲಾ ಕುರಿತು ಪೊಲಿಸರೊಂದಿಗೆ ಕಾದಾಡಿ ತೀರುವುದೆ?
ರಮಣಿ--ನಾವು ಹೋರಾಡದಿದ್ದರೆ, ಬಡವರನ್ನು ಕಾಪಾಡದಿದ್ದರೆ,
ಮತ್ತಾರು ಅವರಗೆ ಸಹಾಯವನ್ನು ಮಾಡುವರು
--------------------------------------
ಏಳನೆಯ ಪರಿಚ್ಛೇದ ` ೨೭
ತಾಯಿ--ಪ್ರಪಂಚದಲ್ಲಾರನ್ನು ನೋಡಿಕೊಳ್ಳ ಲಾದೀತು? ತಾನು
ಬದುಕಿಕೊಂಡರೆ ಸಾಕು. -
ರಮಣೀಮೋಹನನಿಗೆ ಮನಬ ನಲ್ಲಿ ಸ್ಟುಲ್ಪ ವ್ಯಥೆಯಾದಂತೆ ತೋರು
ತ್ತ ದೆ. ಅದುಕಾರಣ ಅವನಾವ ಉತ್ತರವನ್ನೂ ಕೊಡಲಿಲ್ಲ. ಸ್ಪಲ್ಪ
ಹೊತ್ತಾದ ಬಳಿಕ, " ಅಮ್ಮಾ ! ಹುಡುಗಿಗಾರೂ ದಿಕ್ಕಿಲ್ಲ " ಎಂದನು,
ತಾಯಿ-._ ಬಡವರಾದ ದುಃಖಿಗಳಗೆ ದಿಕ್ಕಾರು ಇರುವರು?
ರಮಕಿ--ಅಮ್ಮಾ ! ಹುಡುಗಿಯನ್ನು ಮನೆಗೆ ಕರತಂದಿದ್ದೇನೆ.
ತಾಯಿ... ಇಲ್ಲಿಗೆ? ನಮ್ಮ ಮನೆಗೆ?
ರಮಣೀ- ಅಹುದು.
ತಾಯಿ--ದೂರಕಳುಹು- ಪೋಲಿಸ ಆಸಾಮಿಗಳಿಗೆಲ್ಲಾ ಮನೆಯಲ್ಲಿ
ಸ್ಥಳವು ಸಿಗದು.
ರಮಣೀ -ಈಗವಳು ಪೊರಿಸ ಆಸಾಮಿಯಲ್ಲ
ತಾಯಿ--ಅಸಾಮಿಯಾಗದಿದ್ದರೂ ಅ ಅಲ್ಬಜನರಿಗೆ ಮನೆಯಲ್ಲಿ
ಸ್ಥಳವಿಲ್ಲ.
ರಮಣೀ-ಹುಡುಗಿಗೆ ನಿಲ್ಲು ವುದಕ್ಕೆ ನೆರಳಿಲ್ಲ-ಎಲ್ಲಿರುವಳು ?
ತಾಯಿ-_ಅದೇಕೆ? ಮರದ ಬುಡದಲ್ಲಿರಲಿ.
ರಮಣೀಮೋಹನನು ಆಕಾಶವನ್ನು ನೋಡಿದನು... ಸಾಯಂಕಾಲ
ವಾಗುತ ಬಂದಿತು. ಆಕಾಕವು ನೀಲಿಯಬಣ್ಣ ವು ಹೋಗಿ ಕೃಷ್ಣವಸನ
ದಿಂದಾವೃತವಾಗುತ ಬರುತಿದ್ದಿತು. ರಮಣೀಮೋಹನನು ಮಾತಾಡದೆ
ತಾಯಿಯ ಬಳ ಕುಳಿತಿದ್ದನು.
ಗೃಹಿಣಿಯು ಹರಿನಾಮದ ಮಾಲೆಯನ್ನು ಟಕಟಿಕೆಂದು ತಿರುಗಿಸುತ್ತ
“ಮೋಹನ! ಇಂದೇಕೆ ಅಪ್ಟೊಂದು ಅನ್ಯಮನಸ್ಕನಾಗಿರುವೆ ) " ಎಂದಳು.
ತಾಯಿಯು ರಮಣೀಮೋಹನನ್ನು ಬರಿ " ಮೋಹನ '' ಎಂದು
ಕರೆಯುವಳು. ಮೋಹನನು, "ನಾಳೆ ಕಲಿಕತ್ತೆಗೆ ಹೋಗೋಣವೆಂದು
ಯೋಚಿಸುತ್ತದ್ದೆನು " ಎಂದನು.
ತಾಯಿ -_ಅದೇಕೆ? ಕಾಲೇಜು ತೆರೆಯುವುದಕ್ಕಿನ್ಸೂ ಹೆಚ್ಚು ವಿಳಂ
ಬವಿದೆ?
-----------------------------------------
೨೮ ನೀರದೆ
ಹುಡುಗನು ಅಭಿಮಾನಗೊಂಡಿದ್ದನೆಂದು ತಾಯಿಯು ತಿಳಿದವಳು,
ಒಬ್ಬ ದಾಸಿಯನ್ನು ಕರೆದು, " ಎಲ್ಲಿಂದಲೋ, ಒಬ್ಬ ಹುಡುಗಿಯು ಬಂದಿ
ದ್ದಾಳೆ; ಅವಳಗೆ ಎರಡುತುತ್ತು ಅನ್ನವನ್ನು ಕೊಡುವಂತೆ ಹೇಳು, ಈಗ
ರಾತ್ರಿ ಮತ್ತೆಲ್ಲಿಗೆ ಹೋಗುವಳು? ಇಲ್ಲಿಯೇ ಇರಲಿ--ನಾಳೆ ಬೆಳಗ್ಗೆ ಅವ
ಳನ್ನು ಮನೆಯಿಂದ ಹೊರಗೆ ಕಳುಹಿಸಿ ಬಿಡಲಿ '' ಎಂದು ಹೇಳಿದಳು.
ದಾಸಿ--ವಾಮೆಯು ಅವಳಗೆ ಊಟವನ್ನು ಮಾಡಿಸಿದಳು,
....
ಎಂಟನೆಯ ಪರಿಚ್ಛೇದ.
ಮರುದಿನ ಬೆಳಗ್ಗೆ ಯಜಮಾಸಿಯೆದ್ದು ನೋಡಿದಳು. ಹುಡುಗಿ
ಯೊಬ್ಬಳು ಹಜಾರದಿಂದ ಅಂಗಳಕ್ಕೆ ಹೋಗುವ ದಾರಿಯನ್ನು ಗುಡಿಸುತ್ತಿ
ದ್ದಳು, ಅಚ್ಚ ರಿಗೊಂಡು, " ನೀನಾರೆ? '' ಎಂದು ವಿಚಾರಿಸಿದಳು,
ವಾಮೆಯು ಹತ್ತ ರ ಇದ್ದವಳು ಓಡಿಬಂದು, "ಮತ್ತಾರು? ಅವ
ಳೊಬ್ಬ ಮನುಷ್ಯಳು " ಎಂದಳು.
ಯಜಮಾನಿ-ಮನುಷ್ಯಳೇನೋ ಅಹುದು-ಮನುಪ್ಯರಿಗೆ ಹೆಸರಿಲ್ಲವೆ?
ವಾಮೆ- ಹೆಸರಿಂದ ಪರಿಚಯವಾದಂತಾಗುವುದೆ? ಹುಡುಗಿಯ ಹೆ
ಸರು, ನೀರದೆ--
ಯಜಮಾಸಿ--ಮೊನ್ನೈದಿನ ಭಿಕ್ಪಕ್ಕೆ ಬಂದ ಹುಡುಗಿಯಲ್ಲವೆ?
ವಾಮೆ- -ಅಹುದು.
ಯಜಮಾನಿ--ಇಂದು ಪುನಃ ಭಿಕ್ಷಕ್ಕೆ ಬಂದಳೆ?
ವಾಮೆ--ಅಂದು ಬಹಳ ಭಿಕ್ಚ ವನ್ನು ಕೊಟ್ಟೆ-ಅದೇ ಆಶೆಗೆ ಬಂದಳು.
ಯಜಮಾನಿ -ನಿನ್ನ ಮಾತಿಗೆ ಮಾತನ್ನು ಹವಣಿಸುವುದು ಕಷ್ಪ.
ಸಮಾಚಾರವೇನು? ವಿವರವಾಗಿ ಹೇಳು.
ವಾಮೆ--ಮೋಹನನು ನಿನ್ನೆ ಠಾಣೆಯಿಂದ ಕರತಂದಿರುವ ಹುಡುಗಿ,
ತಾಯಿ !
------------------------------------
ಎಂಟನೆಯ ಪರಿಚ್ಛೇದ ೨೯
ಯಜಮಾನಿಯ ಮುಖವು ಗಂಭೀರವಾಯಿತು. ಅವಳು ಸ್ಪಲ್ಪ
ರುದ್ಧ ಕಂಠೆಯಾಗಿ, " ಅವಳನ್ನೂ ಇಲ್ಲಿ ರುವಳೆ? ಇಂದೂ ಇರುವಳೇನು ?'
ಎಂದಳು.
ವಾಮೆ--ಇಲ್ಲ -ನಿಮ್ಮ ಮನೆಯಲ್ಲೊಂದು ದಿನವಾದರೂ ಇರಳು--
ಇಂದು ನನ್ನೊಡನೆ ಹೊರಟುಹೋಗುವಳು.
ಯಜಮಾನಿ...ನಿನ್ನ ಸಂಗಡಲೆ ?
ವಾಮೆ--ಅಹುದು-ನನ್ನ ಸಂಗಡ,
ಯಜಮಾನಿ. ನೀನೆನ್ಸಿಗೆ ಹೋಗುವೆ?
ವಾಮೆ--ನನ್ನ ಮನೆಗೆ.
ಯಜಮಾಸನಿ--ನಿನ್ನ ಮನೆಯಲ್ಲಿರುವವರಾರು ? ಇಷ್ಟು ಕಾಲದ
ಮೇಲೆ ನಿನ್ನ ನಾಡಿಯು ಬಿಗಡಾಯಿಸಿದಂತಿದೆ.
ವಾಮೆ--ಅರಿಲ್ಲದಿದ್ದರೂ ಮನೆಬಾಗಿಲು ಇದೆ.
ಯಜಮಾಾನಿ...ನಿನಗೆ ಮನೆ ಬಾಗಿಲು ಇಲ್ಲವೆಂದು ತೋರುತ್ತದೆ.
ವಾಮೆ--ಇಲ್ಲದಿದ್ದರೆ ಹೊಸದಾಗಿ ಕಟ್ಟಿಸುವೆನು.
ಯಜಮಾನಿ--ಹಾಗಾದರೆ ಹೋಗಲೇ ಬೇಕೆ?
ವಾಮೆ--ಅಹುದು-ಹೋಗಬೇಕು.
ಯಜಮಾನಿ- ಹೋಗಲೇಕೆ? ಹೇಳಬಾರದೆ?
ವಾಮೆ--ಹೋಗದಿದ್ದರೆ, ಹುಡುಗಿಯಿರುವುದಕ್ಕೆ ಸ್ಥಳವನ್ನಲ್ಲಿ
ಕೊಡಲಿ?
ಯಜಮಾನಿ- ಹುಡುಗಿಯು ನಿನಗೇನಾಗಬೇಕು? ಅವಳಗೆಸಲ
ವಾಗಿ ಅಷ್ಟ್ರೊಂದು ಕಡ್ಡಾಟವೇಕೆ ?
ವಾಮೆ--ಹುಡುಗಿಗೆ ಮತ್ತಾರೂ ದಿಕ್ಕಿಲ್ಲ-ಇಂದಿನಿಂದ ನಾನವಳ
ಪೋಷಣೆಯ ಭಾರವನ್ನು ವಹಿಸಿದ್ದೇನೆ. ನನ್ನ ಮರಣಕಾಲದಲ್ಲಿ ನನಗಿ
ರುವುದನ್ನೆಲ್ಲಾ ಅವಳಗೆ ಕೊಟ್ಟು ಸಾಯುವೆನು.
ಯಜಮಾನಿಯು ಸಂಗತಿಯನೆಲ್ಲಾ ತಿಳದವಳಾದಳು. ತಿಳದು ಸ್ಫಲ್ಪ
ಚಿಂತಿತೆಯಾದಳು. ವಾಮೆಯನ್ನು ಬಿಡುವುದಕ್ಕೆ ಅವಳಗಿಷ್ಪವಿಲ್ಲ . ಮೂ
ವತ್ತು ವರ್ಷಗಳಂದ ಸಹಚರಿಯಾಗಿದ್ದವಳನ್ನು ಬಿಡುವುದು ಸುಲಭವಲ್ಲ.
------------------------------------------
೩೦ ನೀರದೆ
ವಾಮೆಯಂತೆ ನಂಬುಗೆಯಾದವಳು ಮತ್ತಾರೂ ಇಲ್ಲ --ಅವಳಂತೆ ಮನೆಯ
ಕೆಲಸಕಾರ್ಯಗಳನ್ನು ಮಮತೆಯಿಂದ ನೋಡಿಕೊಳ್ಳುವವರು ಮತ್ತಾರೂ
ಇಲ್ಲ --ಅದರೆ ಪೋಲಿಸ ಆಸಾಮಿಯಾಗಿದ್ದ ಭಿಕ್ಷದ ಹುಡುಗಿಗೆ ಮನೆಯಲ್ಲಿ
ರಲು ಸ್ಥಳವನ್ನು ಕೊಡುವುದುಚಿತವಲ್ಲ, ಅವಳಗೆ ಸ್ಥಳವನ್ನು ಕೊಡದಿ
ದ್ದರೆ ವಾಮೆಯು ಹೊರಟುಹೋಗುವಳು. ಯಜಮಾನಿಗೆ ಬಹಳ ಅನು
ಸಂಕಟಕ್ಕಿಟ್ಟೃತು. ಅವಳು ಬಹಳ ಯೋಚಿಸಿ ಬಳಿಕ, '' ಒಳ್ಳೆಯದು,
ಹುಡುಗಿಯು ಇಲ್ಲಿರಲಿ ; ಅವರೆ ಅವಳು ಮನೆಯೊಳಗೆ ಬಾರದಿರಬೇಕು '
ಎಂದು ಹೇಳಿದಳು.
....
ಒಂಬತ್ತನೆಯ ಪರಿಚ್ಚೇದ.
ರಮಣೀಮೋಹನನು ಕಲಿಕತ್ತೆಗೆ ಹೋಗಲಿಲ್ಲ--ವಾಮೆಯೂಮನೆ
ಯನ್ನು ಬಿಟ್ಟು ಹೋಗಲಿಲ್ಲ. ಅವರಿಬ್ಬರ ಇಪ್ಟಾರ್ಥವೂ ಕೈಗೂಡಿತು.
ಅನಾಥೆಯಾದಾ ಹುಡುಗಿಯು ಆಶ್ರಯವನ್ನು ಹೊಂದಲಿ, ಅಥವಾ ಹೊಂದದೆ
ಹೋಗಲಿ, ಅವರಿಗೇಕೆ ಅಷ್ಟೊಂದು ಮನೋವ್ಯಥೆ? ಹುಡುಗಿಯಲ್ಲಿ
ಅವರಿಗೇಕೆ ಅಷ್ಟೊಂದು ಮೋಹ ಅಥವಾ ಮಮತೆ? ಆ ಮೋಹ
ಮಮತೆಗಳೇಕೊ, ನಾವದನ್ನು ಹೇಳಲಾರೆವು. ನಾವು ಒತ್ತಡವೆ ಒಂದು
ಕಪೋತದ ಹಕ್ಕಿಯನ್ನು ನೋಡಿದ್ದೆವು. “ಅದು ಒಂಟಿಯಾಗಿದ್ದಿತು. ಅದ
ರೊಂದಿಗೆ ಬೇರೆ ಕಪೋತವಾಗರಿ, ಕಪೋತಿಯಾಗಲಿ ಇರಲಿಲ್ಲ. ಅದು
ಎಲ್ಲಿಂದಲೋ ಹಾರಿ ಬಂದು ನಮ್ಮ ಮನೆಯ ಮಾಳಿಗೆಯ ಮೇಲೆ ಕುಳತು
ಕೊಂಡಿತು. ಅದಕ್ಕೆಸಲವಾಗಿ ನಮ್ಮ ಮನಸ್ಸು ಮರುಗಿತು. ನಾವು
ಅಂತರಿಕ್ಷವನ್ನೆಲ್ಲಾ ನೋಡಿದೆವು. ಹತ್ತರದಲ್ಲಾಗಲಿ ದೂರದಲ್ಲಾಗಶಿ
ಒಂದಾದರೂ ಪಾರಿವಾಳದಹಕ್ಕಿಯು ಕಣ್ಣಿಗೆ ಬೀಳಲಿಲ್ಲ. ನಾವಾಗ ಸ್ಪಂದ
ನಹೃದಯದಿಂದ ಮನೆಯೊಳಗೆ ಹೋಗಿ ಹಕ್ಕಿಗೋಸ್ಟರ ಸ್ಟಲ್ಪ ಧಾನ್ಯ
ವನ್ನು ತಂದುಹಾಕಿದೆವು. ಹಕ್ಕಿಯು ಅದನ್ನು ತಿನ್ನಲಿಲ್ಲ--ಎದ್ದು ಹಾರಿ
ಹೋಯಿತು. ನಾವದನ್ನು ಬಹಳವಾಗಿ ಕರೆದೆವು. ಅದು ಬರಲಿಲ್ಲ. ನಾವು
-----------------------------------------
ಒಂಭತ್ತನೆಯ ಪರಿಚ್ಛೇದ ೩೧
ಹಗಲೆಲ್ಲಾ ಹೋಗಿ ನಮ್ಮ ಮಾಳಗೆಯಮೇಲೆ ಕವೋತವು ಬರುವುದೆಂಬಾ
ಶೆಯಿಂದ ಆಕಾಶವನ್ನು ನೋಡುತ ಕುಳತಿದ್ದೆವು ಹಕ್ಕಿಯು ಬರಲಿಲ್ಲ.
ಸಂಧ್ಯೆಯು ಬಂದು ಆಕಾಶವನ್ನು ಕವಿತುಕೊಂಡಿತು. ಆಗ ನಾವು ನಿರಸ್ಕರಾ
ದೆವು-ಮರುದಿನದಿಂದ ಪ್ರತಿದಿನವೂ ಮಾಳಿಗೆಯ ಮೇಲೆ ಹೋಗಿ ಕಭೋತ
ವನ್ನು ವಿಮರುನೋಡುತ್ತಿದ್ದೆವು ಅದರಮ ಬರುತಿರಳಿಲ್ಲ ; ಸಾಯಂಕಾಲ
ವಾಗುತಲೆ ವೃಥೆಗೊಂಡು ಮಾಳಗೆಯಿಂದಿಳದು. ಬಂದುಬಿಡುವೆವು. ಆ
ಕಪೋತಕ್ಕೆಸಲವಾಗಿ ನಮಗೇಕೆ ಅಷ್ಟೊಂದು ಮಮತೆ?
ಅಶ್ರಯವಿಲ್ಲದೆ ಅನಾಥೆಯಾದ ಹುಡುಗಿಯಮೇಲೆ ರಮಣೇಮೋ
ಹನನಿಗೆ ಅದೇಪ್ರಸಾರವಾದ ಮಮತೆಯಂದು ತೋರುತ್ತದೆ. ಹುಡು
ಗಿಯು ಸುಖವಾಗಿ ಸ್ವಸ್ಥವಾಗಿರಲು ಅವನು ಬಹಳ ಪ್ರಯತ್ನಪಡುವನು. '
ಹುಡುಗಿಯು ಏನನ್ನು ಮಾಡುವಳೋ ಅದನ್ನು ನೋಡಲು ಅನೇಕತಡವೆ
ಎದ್ದು ಹೋಗುವನು. ಅವಳಗೆ ಊಟವಾಯಿತೆ, ಇಲ್ಲ ವೆ. ಎಂಬ ಸಂಗತಿ
ಯನ್ನು ವಾಮೆಯಿಂದ ಕೇಳಿ ತಿಳದುಕೊಳ್ಳುವನು. ಅವನ ಯತ್ನಾದರ
ಗಳನ್ನು ಕಂಡು ಹುಡುಗಿಯು ಲಜ್ಜೆಯಿಂದ ಭೂಮಿಗಿಳದುಹೋಗುವಳು-
ಆದರೂ ರನುಣೀಮೋಹನನು ನಿರಸ್ತನಾಗಲಿಲ್ಲ.
ಕ್ರಮವಾಗಿ ಬಿಸಿಲಕಾಲವು ಪೂರೈಸುತ ಬಂದಿತು-ರಮಣೀಮೋಹ
ನನು ಕಲಿಕತ್ತೆಗೆ ಹೋಗಲು ಹವಕಿಸಿಕೊಳ್ಳುತಿದ್ಜನು. ಅಷ್ಭರೊಳಗೆ
ಪೊಲಿಸಸಾಹೆಬನಿಂದ ಅವನ ಹೆಸರಿಗೊಂದು ಕಾಗದವು ಬಂದಿತು. ಕಾಗದ
ದಲ್ಲಿ, "ಡಾಕ್ಟರನು ಶವದೇಹವನ್ನು ಪರೀಕ್ಷೆ ಮಾಡಿದುದರಲ್ಲಿ ಮುದು
ಯು ಖೂನಾಗರಿಲ್ಲವೆಂತಲೂ, ರಕ್ತ ಕೋಶವು ಒಡಿದು ಸತ್ತಳೆಂತಲೂ
ಒಮ್ಮಿಂದೊಮ್ಮೆ ಅತ್ಯಧಿಕ ಕೋಪವುಂಟಾದರೂ ಅತ್ಯಧಿಕ ದುಃಖವುಂಟಾ
ದರೂ ಹಾಗೆ ಮರಣರವು ಸಂಭವಿಸುವುದೆಂತಲೂ ಬರೆದಿದ್ದಿತಲ್ಲದೆ, ದರೋಗ
ನಿಗೆ ಬೇರೆ ಶಿಕ್ಷೆಯನ್ನು ಮಾಡದೆ ಜಮಾದಾರಿ ಕೆಲಸಕ್ಕೆ ಕಂಷರಾಮಾಡಿ
ರುವುದಾಗಿಯೂ ಬರೆದಿದ್ದಿತು.
ಆ ವಿಚಾರವು ಹೇಗಾದರೂ ಆಗಲಿ-ಅದಕ್ಕೆಸಲವಾಗಿ,ರಮಣೀಮೋ
ಹನನು ಚಿಂತಿತನಾಗಲಿಲ್ಲ. ಅವನ ಚಿಂತೆಯೆಲ್ಲಾ ನೀರದೆಗೆಸಲವಾಗಿ-ಇಂದ
ವನು ನೀರದೆಯನ್ನು ಬಿಟ್ಟು ಕಲಿಕತ್ತೆಗೆ ಹೊರಡುಬೇಕು. ಬೇಳ್ಗೊಳ್ಳು ವ
----------------------------------------
೩೨ ನೀರದೆ
ಸಮಯವು ಬಂದಿತು. ತಾಯಿಂದಲೂ ವಾಮೆಯಿಂದಲೂ ಬೀಳ್ಗೊಂಡನು.
ಹಜಾರಕ್ಕೆ ಹೋಗಿ ವ್ಯಾಕುಲನಯನನಾಗಿ ನಾಲ್ಕೂಕಡೆ ನೋಡಿದನು.
ಎಲ್ಲಿ ನೋಡಿದರೂ ನೀರದೆಯು ಕಣ್ಣಿಗೆ ಬೀಳಲಿಲ್ಲ. ಅಡಿಗೆಮನೆಗೊಮ್ಮೆ ಹೋಗಿ ನೋಡೋಣವೆಂದು ಇಷ್ಟವಾಯಿತು. ಆದರೆ ಸ್ಟಲ್ಪ ಲಜ್ಜೆಯುಂ
ಟಾಯಿತು. ನೀರದೆಯಿಂದ ಬೀಳ್ಗೊಳ್ಳಲಿಲ್ಲ, ರಮಣೀಮೋಹನನು ಕಲಿ
ಕತ್ತೆ ಗೆ ಹೊರಟುಹೋದನು.
-----
ಹತ್ತನೆಯ ಪರಿಚ್ಛೇದ.
ಕಲಿಕತ್ತೆಗೆ ಹೋದರೂ ರಮಣಿಮೋಹನನಿಗೆ ಶಾಂತಿಯಿಲ್ಲ ನೀರ
ದೆಯ ವಿಷಯವೇ ಎಲ್ಲಾಸಮಯದಲ್ಲಿಯೂ ಮನಸ್ಸಿಗೆ ಹೊಳಿಯುವುದು.
ನೀರದೆಯು ತಾಯಿತಂದೆ ಇಲ್ಲದ ದಾರಿದ್ಯಪಾಲಿತೆಯಾದ ಅನಾಥೆ. ತನ್ನವ
ರೆಂದೀ ಪ್ರಪಂಚದಲ್ಲವಳಗಾರೂ ಇಲ್ಲ. ಸಂಸಾರಸಮುದ್ರದ ತರಂಗದ ಶಿಖ
ರದಲ್ಲಿ ತೇಲುತ್ತಿದ್ದಳು. ರಮಣೀಮೋಹನನು ಅವಳನ್ನು ತಂದು ದಡಕ್ಕೆ
ಹಾಕಿದನು-ಬೆಂಬಲವಿಲ್ಲದ ಅನಾಥೆ ನೀರದೆಗೆ ರಮಣೀಮೋಹನನು ಏಕ
ಮಾತ್ರ ಸಂಬಲವಾಗಿದ್ದನು. ರಮಣೀಮೋಹನನನ್ನು ಬಿಟ್ಟರೆ ಅವಳಗೆ
ಮತ್ತಾರೂ ಇಲ್ಲ... ರಮಣೀಮೋಹನನಿಗೆ ಅವಳ ಜ್ಞಾಪಕವು ಬಂದರೆ
ಸ್ಫಲ್ಫಗರ್ವಿತನಾಗಿ ಹರ್ಷಾನುಭವವನ್ನು ಮಾಡುವನು.
ದಿನದಮೇಲೆ ದಿನವು ಉರಳಿತು. ರಮಣೀಮೋಹನನು ಬಿ. ಎ.
ಪರೀಕ್ಷೆಗೆ ಹೋಗಿ ಒಂದು ವರ್ಷದ ಬಳಕ ಮನೆಗೆ ಬಂದನು. ಮನೆಗೆ
ಬಂದು ತಾಯಿಯನ್ನು ನೋಡಿದನು--ವಾಮೆಯನ್ನು ನೋಡಿವನು. ಅದರೆ
ನೀರದೆಯನ್ನು ಕಾಣಲಿಲ್ಲ. ವ್ಯಾಕುಲನಯನನಾಗಿ ನಾಲ್ಕೂಕಡೆ ಹುಡುಕ
ದನು. ಅವಳಲ್ಲಿಯೂ ಕಾಣಲಿಲ್ಲ. ಕಡೆಗೆ ಹತಾಶನಾಗಿ ಉಡುಪನ್ನು ಬದು
ಲಾಯಿಸಲು ಮಲಗುವ ಸೊಠಿಡಿಗೆ ಹೋದನು- ಆಗ ಮಧ್ಯಾಹ್ನವು ತಿರಿ
ಗಿದ್ದಿತು.
----------------------------------------
ಹತ್ತನೆಯ ಪರಿಚ್ಛೇದ ೩೩
ಮಲಗುವ ಕೊಠಿಡಿಗೆ ಬಂದು ನೋಡಲಾಗಿ ಅಲ್ಲಿ ನವಯೌವವನೋ
ತ್ಫುಲ್ಲ ಅನುಪಮೇಯಾದ ಸೌಂದರ್ಯಮಯಿ ಕಿಶೋರಿಯೊಬ್ಬ ಳು ಅವನ
ಹಾಸಿಗೆಯನ್ನು ಸರಿಯಾಗಿ ಹಾಸುತ್ತಿ ದ್ವಳು, ಹುಡುಗಿಯ ರೂಪವನ್ನು
ನೋಡಿ ರಮಣೀನೋಹನಸು ಅಚ್ಚರಿಗೊಂಡು ಸ್ತಂಭಿತನಾದನು-ನೀರದೆಗೆ
ಅಷ್ಟೊಂದು ರೂಪವಿದ್ದಿತೆಂದು ಅವನು ಮನಸ್ಸಿನಲ್ಲಿ ಉಹಿಸಿರರಿಲ್ಲ -ಅವ
ನದುವರೆಗೂ ನೀರದೆಯ ರೂಪವನ್ನು ನೋಡಿರರಿಲ್ಲ ಅವಳ ದಾರಿದ್ರ್ಯ
ದುಃಖಕಷ್ಟಗಳನ್ನು ಮಾತ್ರ: ನೋಡಿದ್ದನು-ಇಂದು. ಒಮ್ಮಿಂದೊಮ್ಮೆ ಆ
ರೂಪರಾಶಿಯನ್ನು ಕಂಡು ಸ್ವಪ್ನದೃಷ್ಟೆಯಾದ ದೇವಿಯ ಪ್ರತಿಮೆಯು
ಕಣ್ಣೆದುರಿಗೆ ನಿಂತಿದ್ದಂತೆ ತಿಳಿದನು.
ಮರುದಿನ ರಮಣೀಮೋಹನನು ಹುಡುಗಿಯನ್ನು ಹುಡುಕಲು
ಹೋಗುತ್ತಿರರಿಲ್ಲ-ಅವಳೊಂದಿಗೆ ಮಾತಾಡುತಲೂ ಇರಲಿಲ್ಲ. ಹುಡು
ಗಿಯು ದಾಸಿಯ ವೃತ್ತಿಯನ್ಸು ಮಾಡುತ್ತ ಮನೆ, ಮಹಡಿ, ಎಲ್ಲೆಲ್ಲಿಯೂ
ತಿರುಗುತ್ತಿದ್ದುದನ್ನು ನೋಡುವನು. ನಿಶೀಧದಲ್ಲಿ ಶುಕ್ಲಾಷ್ಟಮಿಯ
ಚಂದ್ರನು ನೀಲಾಕಾಶದ ಒಡಲಲ್ಲಿನೀರವವಾಗಿ ತಿರುಗುವಂತೆ ಚಂದ್ರಾಧಿಕ
ಸಂದರ್ಯಮಯಿಯುದಾ ಹುಡುಗಿಯು ಪ್ರಫುಲ್ಲವದನೆಯಾಗಿ ಅಕ್ಲಾಂತ
ದೇಹದಿಂದ ಹಗುಲು ರಾತ್ರಿ ಮನೆಯಲ್ಲಿ ತಿರುಗ.ಹತ್ತಿರುವಳು. ಜೋತ್ಸ್ನಾ
ಮಯವಾದ ರಾತ್ರಿಯಲ್ಲಿ ಗೃಹಾಬದ್ಧನಾದ ರೋಗಿಯು ಹಾಸಿಗೆಯಮೇಲೆ
ಮಲಗಿಕೊಂಡು ಮನಸ್ಸಿನಲ್ಲಿ ಚೆನ್ನಪೂಸಿದ ಕುಸುಮಿತ ಉದ್ಯಾನವನ್ನು ಕಲ್ಪಿಸಿಕೊಳ್ಳುವಂತೆ, ರಮಣೀಮೋಹನನು ನಿಸ್ತಬ್ದನದಿಯ ಸೈಕತದಲ್ಲಿ ಕುಳಿತು ನೀರದೆಯ ಸೌಂದರ್ಯದಿಂದ ಉದ್ಭಾಸಿತವಾಗಬಹುದಾದ ಗೃಹವ ನ್ನು ಕಲ್ಪಿಸಿಕೊಳ್ಳುತ್ತಿರುವನು. ಹುಡುಗಿ ದೂರದಲ್ಲಿದ್ದರೂ ಹತ್ತ ರದಲ್ಲಿದ್ದರೂ ರಮಣೀಮೋಹನನ ಹೃದಯವು ಕಲ್ಪನಾಮಯಲೋಕದಲ್ಲಿ
ಸಂಚರಿಸುತ್ತ ಉದ್ಭಾಸಿತವಾಗುತ್ತಿರುವುದು.
....
------------------------------------ ಹನ್ನೊಂದನೆಯ ಪರಿಚ್ಚೇದ.
ಎರಡುತಿಂಗಳಾದಬಳಕ ಬಿ. ಎ. ಪರಿಕ್ಷೆ ಯ ಫಲವು ಹೊರಪಟ್ಟಿತು.
ರಮಣೀಮೋಹನನು ಪರೀಕ್ಷೋತ್ತೀರ್ಣನಾಗಿದ್ದನು. ಮನೆಯ ಯಜ
ಮಾನಿಯು ಮಗನ ಮದುವೆಗೆ ಸಲವಾಗಿ ಹವಣಿಸಿ ಸಿದ್ಧಪಡಿಸುತ್ತಿದಳು.
ಅನೇಕ ದಿನಗಳಿಗೆ ಮೊದಲೇ ಹೆಣ್ಣು ಗೊತ್ತಾಗಿದ್ದಿತು. ಅದುಕಾ
ರಣ ಮದುವೆಗೆ ಸಲವಾಗಿ ಬೇಕಾದುದನ್ನೆಲ್ಲಾ ಸಿದೃಪಡಿಸಿಕೊಳ್ಳಲು ವಿಳಂ
ಬವಾಗದು... ಅಷಾಢಮಾಸದಲ್ಲಿ ಮದುವೆಯು ಗೊತ್ತಾಯಿತು.
ಒಂದಾನೊಂದು ದಿನ ಸಾಯಂತಕಾಲವಾದ ಬಳಕ ತಾಯಿಯು ಇದ್ದ
ಕೊಠಿಡಿಗೆ ಹೋಗಿ ರಮಣೀಮೋಹನನು ಅಮ್ಮಾ! ಎಂ. ಏ. ಪರೀ
ಕ್ಷೆ ಓದಬೇಕೆಂದು ಸಂಕಲ್ಪಮಾಡಿಕೊಂಡಿದ್ದೇನೆ " ಎಂದನು,
ತಾಯಿ. -ಪುನಃ ಓದಲವಶ್ಯವೇನು? ಈಗ ಓದಿರುವುದೇ ಎಥೇಷ್ಪ
ವಾಯಿಶು.
ಮೋಹನ-ಅಮ್ಮಾ, ಓದುವುದಕ್ಕೆ ತುದಿ ಮೊದಲು ಉಂಟೆ?
ತಾಯಿ-_ಬಡವರಾದವರು ಚಿರಕಾಲ ಓದಲಿ, ದೊಡ್ಡವರ ಮಕ್ಕಳು
ಒಂದೆರಡು ಬುಕ್ಕುಗಳನ್ನೋದಿದರೆ ಸಾಕು,
ಮೋಹನ ಅದು ಅವರವರ ಇಷ್ಟ; ನನಗೆ ಮತ್ತೊಂದು ವರ್ಷ
ಓದುಬೇಕೆಂಬ ಆಸೆ.
ತಾಯಿ--ಒಳ್ಳೆಯದು--ಇಷ್ಪವಿದ್ದರೆ ಓದು.
ಮೋಹನ--ಅಮ್ಮಾ!
ತಾಯಿ--ಏನು? ಮಗು.
ಮೋಹನ- ಮದುವೆಯು ಈಗ್ಗೆ ನಿಂತಿರಲಿ.
ತಾಯಿ--ಅದೇಕೆ ?
ಮೋಹನ-ಓದಿ ಪೂರೈಸುವತನಕ ಮದುವೆಯನ್ನು ಮಾಡಿಕೊಳ್ಳನು,
ತಾಯಿ--ಅದಾಗುವುದಿಲ್ಲ.
ಮೋಹನ--ಏಕೆ? ಅಮ್ಮಾ!
ತಾಯಿ--ಮದುವೆಗೆ ಲಗ್ನವು ಗೊತ್ತಾಗಿದೆ.
---------------------------------------
ಹನ್ನೊಂದನೆಯ ಪರಿಚ್ಛೇದ ೩೫
ಮೋಹನ -ಒಂದುವರ್ಷ ಮುಂದಾದರೆ ನಷ್ಟವೇನು?
ತಾಯಿ - ನಮಗೇನೂ ನಷ್ಟವಿಲ್ಲ -ಹೆಣ್ಣಿ ನವರಿಗೆ ಕಷ್ಟ.
ಮೋಹನ -ಕಷ್ಟವೇನು ?
ತಾಯಿ - ಕನ್ಯೆಯು ಆರಕ್ಷಿಣೀಯೆ.ಹೇಗಾದರೂ ಈವರ್ಷವೇ ಮದು
ವೆಯಾಗಬೇಕು. ಆಷಾಢದೊಳಗೆ ಆಗಬೇಕು. ಮೋಹನನು ಎದ್ದು
ನಿಂತು, "ಹಾಗಾದರೆ, ಹೆಣ್ಣಿನ ತಂದೆಯು ಮತ್ತೆಲ್ಲಾದರೂ ವರವನ್ನು
ನೋಡಿಕೊಳ್ಳಲಿ'ಎಂದನು. ಯಜಮಾನಿಯ ಮುಖವು ಭಾರವಾಯಿತು. ಅವ
ಳೇನನ್ನೂ ಹೇಳಲಿಲ್ಲ. ರಮಣೀಮೋಹನನು ಹೊರಡಲುದ್ಯುಕ್ತನಾದನು,
ಹೊರಡುವ ಸಮಯದಲ್ಲಿ, "ನೀನು ಅಪ್ಪಣೆಮಾಡಿದರೆ, ಮದುವೆಯಾಗಲೇ
ಬೇಕಾಗುವುದು " ಎಂದನು.
ರಮಣೀಮೋಹನನಿಗೆ ತಿಳಿಯಹೇಳಿ ಮದುವೆಗೊಪ್ಬಿಸುವ ಭಾರವು
ವಾಮೆಯ ಮೇಲೆ ಬಿದ್ದಿತು. ವಾಮೆಯು ಬಹಳ ಹೇಳಿದಳು, ಅದರೆ
ರಮಣೀಮೋಹನನು ಒಪ್ಪಲಿಲ್ಲ. ಎಲ್ಲಾ ವಿಧವಾದ ಚರ್ಚಿಯಾದ ಬಳಿಕ
ಮೋಹನನು. "" ಹೆಚ್ಚು ವಯಸ್ಸಾದಬಳಿಕ ಮದುವೆಯಾದರೆ ಚೆನ್ನಾಗಿದೆ-
ಈಗ ಮದುವೆಯನ್ನು ಮಾಡಿಕೊಂಡರೆ ಓದುವುದಕ್ಕೆ ವಿಘ್ನವುಂಟಾಗು
ವುದು" ಎಂದನು.
ವಾಮೆಗೂ ಅದೇ ಒಪ್ಪಿತವಾಯಿತು, ಅವಳಿಗೊಂದು ದೋಷ-
ಮೋಹನನು ಸರಿಯೆಂದು ಹೇಳಿದುದಕ್ಕೆ ಒಪ್ಪುವಳು, ಮೋಹನನು
ಹೇಳಿಮದನ್ನೆಲ್ಲಾ ಕೇಳಿ, " ನೀನು ಹೇಳುವುದು ಸರಿ, ಚಿಕ್ಕ ಹುಡುಗನ
ಲ್ಲದೆ ನಿನಗೇನು ವಯಸ್ಸಾಗಿದೆ? ಈಗಿಲ್ಲದಿದ್ದರೆ ಇನ್ನೆರಡು ವರ್ಷಕ್ಕೆ
ಮದುವೆಯಾಗಲಿ-ಮದುವೆಯೇನೂ ಓಡಿಹೋಗುವುದಿಲ್ಲ - ಯಜಮಾನಿಗೆ
ಅವದರಲ್ಲಿಯೂ ಆತುರ-ಅವಸರ ಅವಸರ '' ಎಂದು ಹೇಳಿದಳು.
ಅತಏವ ಯಜಮಾನಿಯ ಮಾತು ಎದ್ದುಹೋಯಿತು-ಮದುವೆಯು
ನಿಂತಿತು.
....
---------------------------------------
೩೬ ನೀರದೆ
ಹನ್ನೆರಡನೆಯ ಪರಿಚ್ಛೇದ.
ಕೆಲವುದಿನಳಾದಬಳಿಕ ರಮಣೀಮೋಹನನು ಕಲಿಕತ್ತಾಗೆ ಹೊರಟು
ಹೋದನು. ಕಲಿಕತ್ತೆಯಲ್ಲಿ ಈತಡವೆ ಇದಿದ್ದಹಾಗೆ ರಮಣೀಮೊಹನನಿಗೆ
ಬಹಳ ಅಲಸ್ಯವೆಂದು ವರ್ತಮನವು ಬಂದಿತು. ತಾಯಿಯ ಪ್ರಾಣವು
ತುಡುಯಿತು. ಅವಳಾ ನಿಮಿಷದಲ್ಲಿ ಸಾಮಾನುಗಳನ್ನು ಕಟ್ಟು
ವುದಕ್ಕೆ ತೊಡಗಿದಳು-ವಾಮೆಯೂ ಸಿದ್ಧವಾದಾಳು- ಯಜಮಾನಿಯು,
" ವಾಮೆ! ನೀನು ಹೊರಟರೆ ಇಲ್ಲಿ ಮನೆಯ ಸಂಸಾರವನ್ನು ನೋಡಿಕೊ
ಳ್ಳುವರಾರು ?" ಎಂದಳು,
ವಾಮೆ-- ಸಂಸಾರವು ಎಲ್ಲಾದರೂ ಹೋಗಲಿ. ಆರಿದ್ದರೆ ಸಂಸಾರವೋ
ಆವನೇ ಅಲಸ್ಯದಲ್ಲಿ.ಬಿದ್ದಿರುವಾಗ ನಾನಿಲ್ಲಿದ್ದು ಮಾಡುವುದೇನು? ನಾನಿ
ರುವುದಿಲ್ಲ.
ಯಜಮಾನಿಗೆ ಮಾತಿಲ್ಲವಾಯಿತು. ರಾಮಿಯು, " ನಾನೂ ಬರು
ವೆನು ? ಎಂದಳು... ಅವಳಿಗೆ ಕಾಳಿಘಾಟಿನಲ್ಲಿ ಕಲಿಕತ್ತೆಯನ್ನು ನೋಡ
ಬೇಕೆಂಬಾಸೆ ಅಲ್ಲಿ ದೊಡ್ಡ ಸಂತೆಯಾಗುವುದೆಂದೂ ಸಂತೆಯಲ್ಲಿ ಆಪಾರ
ಹಣ್ಣುಗಳೂ. ವಿಧವಿಧವಾದ ಲಾಜಗಳೂ ಕೂದಲಿಗೆ ಹಚ್ಚುವ ಕಪ್ಪು.ರಂಗೂ
ಮಾರುವುವೆಂದೂ ಕೇಳಿದ್ದಳಾದ ಕಾರಣ ಈ ವಯಸ್ಸಿನಲ್ಲೊಮ್ಮೆ ( ನಲ್ವ
ತ್ತಾರುವರ್ಷ) ಆ ದೊಡ್ಮ ಸಂತೆಯಲ್ಲಿ ವ್ಯಾಪಾರವನ್ನು ಮಾಡಬೇಕೆಂಬಾ
ಸೆಯಿಂದ ಯೊರಡಲು ಉತ್ಸುಕೆಯಾಗಿ ಕಣ್ಣೀರನ್ನು ಬಿಟ್ಟಳು. ಯಜಣಮಾ
ನಿಯು ಬೇಡವೆಂದರು -ರಾಜಿಯು ಆಳುವುದಕ್ಕೆ ತೊಡಗಿ ಬಾಬುವನ್ನು
ನೋಡಬೇಕೆಂದು ಮುಷ್ಕರ ಹಿಡಿದಳು-ಬಾಬುವಿನ ಮೇಲೆ ಅವಳ ಮಮತೆ
ಯನ್ನು ಕಂಡು ಯಜಮಾನಿಯು ರಾಜಿಯೂ ಹೊರಡುವುದಕ್ಕೊಪ್ಪಿದಳು.
ವಾಮೆಯು ನೀರದೆಯ ಸ್ಮರಣೆಯು ಬಂದು ಓಡಿಹೋಗಿ ಯಜ
ಮಾನಿಗೆ " ನೀರದೆಯೂ ನನ್ನೊಂದಿಗೆ ಬರುವಳು ' ಎಂದು ಹೇಳದಳು.
ಯಜಮಾನಿ -ಅವಳೇಕೆ ?
ವಾಮಾ.-ನೀರದೆಯು ಮೋಹನನು ಕೆಲಸವನ್ನು ಮಾಡುವಂತೆ
ಮತ್ತಾರೂ ಮಾಡರು. ಅವಳು ಚಿಕ್ಕಮನೆಯನ್ನು ಗುಡಿಸಿ
-------------------------------------
ಹದಿಮೂರನೆಯ ಪರಿಚ್ಛೇದ ೩೭
ಅಚ್ಛು ಕಟ್ಟು ಮಾಡಿ, ಹಾಸಿಗೆಯನ್ನು ಹಾಸಿ, ಅವನ ಪದಾರ್ಥಗಳನ್ನೆಲ್ಲಾ
ಒಪ್ಪಮಾಡುವುದನ್ನು ನೋಡಿದರೆ ಮೋಹನನು ಎಷ್ಟೋ ಸಂತೋಷಿಸು
ವನು... ಮೋಹನನ ಕೆಲಸವನ್ನು ಮತ್ತಾರೂ ಸರಿಯಾಗಿ ಮಾಡರು.
ಯಜಮಾನಿಯು ಈಚೀಚೆಗೆ ನೀರದೆಯ ಕಾರ್ಯತತ್ಪರತೆಯನ್ನೂ
ಅವಳ ಸ್ವಭಾವವನ್ನೂ ಅವಳ ಚರಿತ್ರೆಯನ್ನೂ ಕಂಡು ಅವಳಮೇಲೆ
ಪ್ರಸನ್ನಯಾಗಿದ್ದಳು... ಅವಳು ಮನೆಯಲ್ಲಿ ಎಲ್ಲಿ ಬೇಕಾದರೂ ಹೋಗಿ
ಬರಬಹುದು- ಆದರೆ ಅಹಾರ್ಯಪಾನೀಯ ಪದಾರ್ಥಗಳನ್ನು ಮುಟ್ಟುಗೊಡಿ
ಸುತ್ತಿರಲಿಲ್ಲ ; ಏಕೆಂದರೆ, ಅವಳ ಜಾತಿಯು ಗೊತಿರಲಿಲ್ಲ-ವಾಮೆಯ
ಪ್ರಸ್ತಾಪಕ್ಕೆ್ ಯಜಮಾನಿಯು ಆಕ್ಷೇಪಿಸಲಿಲ್ಲ.
ಆದುದರಿಂದ ನೀರಿದೆಯೂ ಸಂಗಡ ಹೊರಟಳು, ನಾಯಬ ನೌಕ
ರರು ಮುಂತಾದವರು ಸೇರಿ ದೂಡ್ಮದೊಂದು ದಳ'ವಾಯಿತು, ದೊಡ್ಡ
ದಾದಾ ದಳವನ್ನು ಕಟ್ಟಿಕೊಂಡು ಯಜಮಾನಿಯು ಮರುದಿನ ಮಧ್ಯಾಹ್ನ
ಮಗನ ಮನೆಗೆ ಬಂದು ಮುಟ್ಟ್ರಿದಳು.
ಯಜಮಾನಿಯು ದೊಡ್ಡ ದಳದೊಂದಿಗೆ ಬಂದುದು ಸರಿಯಲ್ಲವೆಂದು
ತಿಳಿದಳು,.. ಮನೆಯಲ್ಲಿ ಸ್ಥಳವು ಸಾಲದು. ಅದಲ್ಲದೆ ಡಾಕ್ಟರನು ಆಸಂ
ತುಷ್ಪನಾಗಿ ಮನೆಯಲ್ಲ ಅಷ್ಟೊಂದು ಗುಂಪು ಸೇರತಕೂಡದೆಂದು ಹೇಳಿದನು-
ಬಳಿಕ ನೆರಮನಯನ್ನು ಬಾಡಿಗಗೆ ತೆಗೆದುಕೊಂಡು. ಸಂತೆಯ ವ್ಯಾಪಾರ
ಮುಂತಾದ ಕೆಲಸಕ್ಕೆ ಬಂದವರೆಲ್ಲರೂ ಆ ಮನೆಗೆ ಹೋದರು.
ರೋಗವು ಅಷ್ಟು ಕಠಿಣವಾದುದಲ್ಲವಾದರೂ ದೊಡ್ಡ ಮನುಷ್ಯ
ನಿಗೆ ಬಂದ ಜ್ವರವಾದುದರಿಂದ ದೊಡ್ಡ ರೋಗವಾಗಿ ಪರಿಣಿಮಿಸಿತು,
ಡಾಕ್ಟರೂ ವೈದ್ಯರೂ ಪದೇಪದೆ ಬಂದು ಹೋಗುವರು-ಪಥ್ಯಾದಿಗಳಲ್ಲಾ
ಡಾಕ್ಟರನ ಮನೆಯಲ್ಲಿಯೇ ಸಿದ್ಧವಾಗುವುವು ಹಣವು ಅಜಸ್ರವಾಗಿ ವೆಚ್ಚ
ವಾಗುತಿದ್ದಿತು-ಅದುಸಾರಣ ರೋಗವು ಕಠಿಣವಾದುದೆಂದು ಹೇಳದಿದ್ದರೆ
ಸಾಗದು-ರೋಗವು ಕಠಿಣವಾದುದೆಂದು ಯಜಮಾನಿಯೂ ತಿಳಿದಳು.
ಯಜಮಾನಿಯು ಅಹಾರ ನಿದ್ರೆಗಳನ್ನು ಬಿಟ್ಟು ಮಗನ ಹಾಸಿಗೆಯ
ಬಳಿ ಕುಳಿತಳು-ಆದರೆ ಅವಳು ಮಗನ ಕೆಲಸವಾವುದನ್ನೂ ಮಾಡಳು.
ಡಾಕ್ಟರನು ಹೇಳಿ ಹೋದಂತೆ ಅವ ಕೆಲಸವನ್ನೂ ಮಾಡಲಾರಳು ಡಾಕ್ಟ
-----------------------------------------
೩೮ ನೀರದೆ
ರನು ಹೇಳದುದನ್ನು ತಿಳದುಕೊಳ್ಳುವುದಕ್ಕೂ ಅವಳಿಗೆ ಸಾಮರ್ಥ್ಯವಿರ
ಲಿಲ್ಲಿ-ವಾಮೆಯು ಹತ್ತರ ಸೇರಳು-ಔಷಧಾದಿಗಳನ್ನು ಸೇವನೆ ವಾಡಿಸುವ
ಭಾರವು ನೀರದೆಯಮೇಲೆ ಬಿದ್ದಿತು.
ಅಗ ನೀರದೆಗೆ ಓದುಬರಹವೂ ಬರುತಿದ್ದಿತೆಂದು ಎಲ್ಲರಿಗೂ ಗೊ
ತ್ತಾಯಿತು. ಡಾಕ್ಟರನು ಹೇಳಿ ಬರೆದಿಟ್ಟಂತೆ ಅಕ್ಷರಶಃ ಎಲ್ಲಾ ಕೆಲಸ
ಗಳನ್ನೂ ಮಾಡಿರುವಳು- ಅಷ್ಟೇ ಅಲ್ಲ-ಮಾಡಿದುದನೆಲ್ಲೂ ಬರೆದಿಟ್ಟಿರುವಳು.
ಥರ್ಮಾಮಿಟರನ್ನುವ್ಯವಹರಿಸುವುದನ್ನೂ ಬಲ್ಲವಳಾಗಿದ್ದಳು. ಆವೆಹೊತ್ತಿ
ನಲ್ಲಿ ಎಷ್ಟೆಷ್ಚು ಜ್ವರವಿದ್ದಿತೆಂಬುದನ್ನು ನೋಡಿ ಬರೆದಿಡುವಳು- ಕಾಲ
ಕಾಲಕ್ಕೆ ಸರಿಯಾಗಿ ಅಯಾ ಔಷಧವನ್ನು ಸೇವನೆ ಮಾಡಿಸಿ ಅದನ್ನೂ ಬರೆ
ದಿಡುವಳು. ಡಾಕ್ಟರನು ಬಂದರೆ ಆವ ಮಾತನ್ನೂ ಆಡದೆ ಬರೆದಿಟ್ಟಿದ್ದು
ದನ್ನು ಅವನ ಮುಂದಿಟ್ಟು ದೂರ ಹೋಗಿ ನಿಂತಿರುವಳು.
ಹುಡುಗಿಯ ಬುದ್ದಿಯನ್ನೂ ಆವಳು ಉಪಚರಿಸುವ ರೀತಿಯನ್ನೂ
ನೋಡಿ ಯಜಮಾನಿಯೂ ಮುಗ್ದೆಯಾದಳು. ವಾಮೆಯು ಆದನ್ನು ತಿಳಿದು
ಗರ್ವದಿಂದುಬ್ಬಿ ಸಲ್ಪ ನಗುವಳು. ಆದರೆ ಹುಡುಗಿಗೆ ಬಹಳ ತೂಂದರೆ
ಗಿಟ್ಟಿತು. ಅದಕ್ಕೆ ಮೊದಲು ವಾಮೆಯು ಚಿಕ್ಕಮನೆಯಲ್ಲಿರುತ್ತಿ ದ್ದಾಗ
ಔಷಧದ ಪಾತ್ರದಲ್ಲಿ ಔಷಧವನ್ನು ಹಾಕಿ ವಾಮೆಯ ಕೈಗದನ್ನು ಕೊಟ್ಟು
ನಿಶ್ಚಿಂತೆಯಾಗಿರುವಳು-ವಾಮೆಯು ಹೇಗೋ ಹಾಗೆ ಪ್ರಯತ್ನ ಪುರಸ್ಸರ
ವಾಗಿ ಔಷಧವನ್ನು ಸೇವನೆ ಮಾಡಿಸುವಳು. ಜ್ವರದ ಉತ್ತಾಪವನ್ನು
ನೋಡಬೇಕಾದರೆ ಗಾಜೆನ ಯಂತ್ರವನ್ನುತಗೆದು ಯಜಮಾನಿಯ ಕೈಯಲ್ಲಿ
ಕೊಟ್ಟು ಗಡಿಯಾರವನ್ನು ನೋಡುತ್ತ ಹೊತ್ತನ್ನು ತಿಳಿಸುವಳು-ಈಗಲಾ
ದರೋ, ಅವಳು ಕಾರ್ಯತತ್ಸರತೆಯನ್ನು ತೋರಿದಹಾಗೆಲ್ಲಾ ಆವಳಮೇಲೆ
ಯಜಮಾನಿಯ ಪ್ರಸನ್ನತೆಯು ಹೆಚ್ಚಾ ಗಿ ಎಲ್ಲಾ ಕಾರ್ಯಗಳ ಭಾರವೂ
ಅವಳಮೇಲೆ ಬೀಳುತ್ತ ಬಂದಿತು. ವಾಮಯು ಔಪಧವನ್ನು ಸೇವನ ಮಾಡಿ
ಸುವ ಕಾರ್ಯವನ್ನು ಬಿಟ್ಟಳು -ಯಜಮಾನಿಯು ಗಾಜಿನ ಯಂತ್ರವನ್ನು
ಹಿಡಿದು ಅನನ್ಯಕರ್ಮಳಾಗಿ ಐದು ಮಿನಿಟುತನಕ ಕುಳಿತಿರಲು ಇಷ್ಟವುಳ್ಳ
ವಳಾಗಲಿಲ್ಲ ,., ಅದುದರಿಂದ ಅವೆಲ್ಲಾ ಕೆಲಸಗಳ ಭಾರವೂ ಹುಡುಗಿಯ
ಮೇಲೆ ಬಿದ್ದಿತು.
------------------------------------
ಹದಿಮೂರನೆಯ ಪರಿಚ್ಛೇದ ೩೯
ಕಾರ್ಯಭಾರವನ್ನೆಲ್ಲಾ ವಹಿಸಿ ಹುಡುಗಿಗೆ ಬಹಳ ತೊಂದರೆಗಿ
ಟ್ಟಿತು-ಔಷಧದ ಪಾತ್ರವನ್ನು ಕೈಲಿ ಹಿಡಿದು ರಮಣೀಮೋಹನನ ಪಾರ್ಶ್ವ
ದಲ್ಲಿ ನಿಂತು ಔಷಧವನ್ನು ಸೇವನೆ ಮಾಡಿಸುವುದಕ್ಕೆ ನೀರದೆಗೆ ಬಹಳ
ಲಜ್ಜೆಯಾಗುವುದು. ಥರ್ಮಾಮಿಟರನ್ನು ರಮಣೀಮೋಹನನ ಕೊಂಕು
ಳಲ್ಲಿ ಟ್ಟು ಐದು ಮಿನಿಟಿನತನಕ ಅವನ ಬಾಹುವನ್ನು ಅದಮಿ ಹಿಡಿದಿರಲು
ನೀರದೆಗೆ ಬಹಳ ಸಂಕೋಚವಾಗುವುದು-ಆ ಕಾರ್ಯಗಳು ಸಂಕೋ
ಚಕ್ಕೂ ಲಜ್ಜೆಗೂ ಕಾರಣವೇನೋ ಅಹುದು. ನೀರದೆಯು ಚಿಕ್ಕ ಹುಡು
ಗಿಯಲ್ಲ-ಆಗವಳು ಹದಿಮೂರು ವರ್ಷದ ಉನ್ಮೇಷೋನ್ಮುಖಿ ಕಿಶೋರಿ
ಯಾಗಿದ್ದಳು-ಲಾವಣ್ಯದ ಭಾರದಿಂದಲೂ, ಲಜ್ಜೆಯ ಭಾರದಿಂದಲೂ ಅವಳ
ಚಿಕ್ಕ ದೇಹಲತೆಯು ಬಗ್ಗಿಹೋಗುತ್ತಿರುವುದು-ಕೋಮಲತೆಯೂ ಮಾಧು
ರ್ಯವೂ ಅವಳ ಅಂಗಾಂಗಳಿಂದ ಹೊರಟೊಗಿಯುತ್ತಿರುವುವು.
---
ಹದಿಮೂರನೆಯ ಪರಿಚ್ಚೇದ.
ಕ್ರಮವಾಗಿ ರೋಗವು ವೃದ್ಧಿ ಗೊಂಡಿತು. ಮೊದಲು ಜ್ಲರವು ನಿಂತು
ನಿಂತು ಬರುತಿದ್ದಿತು- ಈಗ ಜ್ವರವು ಸಂತತವಾಗಿ ಬರುತಿದೆ. ಮೊದಲು
ಎದೆಯಲ್ಲಿ ಸಾಮಾನ್ಯವಾದ ಕ್ಲೇಷ ವು ಕಟ್ಟುತಿದ್ದಿತು- ಈಗದು ನ್ಯುಮೋ
ನಿಯಾಕ್ಕೆ (pneumonia)ಶ್ವಾಶಕೋಶವೆಲ್ಲಾ ಶ್ಲೇಷ್ಮಾವೃತವಾಗಿರುವುದು
ಪರಿಣಮಿಸಿತು-ಯಜಮಾನಿಯು ಬಹಳ ಚಿಂತಿತೆಯಾಗಿ ದೊಡ್ಡ ದೊಡ್ಮ
ಡಾಕ್ಟರಗಳನ್ನು ಕರೆಯಿಸಿದಳು.
ಯಜಮಾನಿಯು ದುಡ್ಡನ್ನು ವೆಚ್ಚ ಮಾಡುವುದು ಹೊರ್ತು ಮತ್ತಾ
ವದನ್ನೂ ಅರಿಯಳು. ಏನನ್ನು ಮಾಡಬೇಕೋ ಅದವಳಗೆ ಗೊತ್ತಿಲ್ಲ-
ಅದರೆ ಎಲ್ಲಾ ಕೆಲಸಗಳನ್ನೂ ತಾನೇ ಸ್ವಂತವಾಗಿ ಮಾಡಬೇಕೆಂಬ ಆಶೆ
ಯೇನೋ ಅತಿಯಾಗಿರುವುದು. ರೋಗಿಗೆ ಹಾಲನ್ನು ಕುಡಿಸಬೇಕಾದರೆ,
ಹಾಲನೆಲ್ಲಾ ಬಾಯಿಗೆ ಹೊಯಿದು ಅರ್ಧವನ್ನೆಲ್ಲಾ ಹಾಸಿಗೆಯ ಮೇಲೆ
---------------------------------------
೪೦ ನೀರದೆ
ಚಲ್ಲಿಬಿಡುವಳು-ಎದೆಗೆ ಮುಲಾಮನ್ನು ಹಚ್ಚಿ ಮರ್ದಿಸಬೇಕಾದರೆ ಹಾಸಿಗೆ
ಯನ್ನೆಲ್ಲ್ಲಾ ಮುಲಾಮು ಮಾಡುವಳು. ಕೆಲಸಗಳಲ್ಲಾವದನ್ನೂ ಸರಿಯಾಗಿ
ಮಾಡದವಳಾಗಿ ಕಡೆಗೆ ಎಲ್ಲಾ ಕೆಲಸಗಳನ್ನೂ ನಿ:ರದೆಗೊಪ್ಪಿಸಿದಳು.
ನೀರದೆಯು ಸಮಯಕ್ಕೆ ಹಾಲು ಮುಂತಾದ ಅಹಾರಗಳನ್ನು ಕೊ
ಡುವಳು. ಆಹಾರವನ್ನು ಸೇವಿಸುತ್ತಿರುವಾಗ ಮೋಹನನು ನೀರದೆಯ
ಕಣ್ಣುಗಳನ್ನು ನೀರವವಾಗಿ ನೋಡುತ್ತಿ ರುವನು-ನೀರದೆಯು ಹಾಸಿಗೆಯ
ಮೇಲೆ ಕುಳತು ಎದೆಗೆ ಮುಲಾಮನ್ನು ತಿಕ್ಕುತ್ತಿರುವಾಗ ಮೋಹನನು
ಉತ್ಫುಲ್ಲನಯನನಾಗಿ ನೀರದೆಯ ಮುಖವನ್ನು ನೋಡುತ್ತಿ ರುವನು. ನೀರ
ದೆಯು ರೋಗಿಯ ಬಾಹುಮೂಲದಲ್ಲಿ ತಾಪಯಂತ್ರವನ್ಸಿಟ್ಟು ಪಾರ್ಶದಲ್ಲಿ
ಕುಳತಿರುವಾಗ, ರಮಣಿಮೋಹನನು ನಿಮೀಲಿತನಯನನಾಗಿ ಅವಳ
ಹಸ್ತ ಸ್ಪರ್ಶವನ್ನು ಅನುಭವ ಮಾಡುವನು.ಹೀಗೆ ದಿನದಮೇಲೆ ದಿನಗಳೂ
ಕಳೆಯುತ್ತ ಬಂದುವು. ಹೆಚ್ಚು ದಿನಗಳು ಕಳೆದಹಾಗೆಲ್ಲ ಮೋಹನನಿಗೆ
ನೀರದೆಯ ಅವಶ್ಯಕತೆಯು ಹೆಚ್ಚಾಗುತ್ತ ಬಂದಿತು. ನೀರದೆಯು ಆವನ
ಶಯ್ಯೆಯನ್ನು ರಚನೆಯಂಗೆಯ್ಯುವಂತೆ, ನೀರದೆಯು ಅವನಿಗೆ ಔಷಧವನ್ನು
ಸೇವನೆ ಮಾಡಿಸುವಂತೆ, ಅವನಿಗೆ ಮುಲಾಮನ್ನು ಹಚ್ಚುವಂತೆ , ನೀರ
ದೆಯು ರೋಗಿಗೆ ಶುಶ್ರೂಷೆಮಾಡುವಂತೆ, ಬೇಕಾದದನ್ನೆಲ್ಲಾ ಇಚ್ಛಾಮಾ
ತ್ರದಿಂದ ಅವನಿಗೆ ಒದುಹಿಸಿಕೊಡುವಂತೆ ಮತ್ತಾರೂ ಮಾಡುತ್ತಿರಲಿಲ್ಲ.
ನೀರದೆಯು ಒಂದು ಮುಹೂರ್ತವಿಲ್ಲದಿದ್ದರೂ ಅಲ್ಲಾವದೂ ನಡಿಯದು-
ಅವಳೊಂದು ಮುಹೂರ್ತ ಹೊರಗೆ ಹೋದರೂ ರಮಣೀಮೊಹನನು
ವ್ಯಾಕುಲನಯಮನಬಂದವಳನ್ನು ನಾಲ್ಕೂಕಡೆ ನೋಡುವನು.
ಹಗಲೂ ನೀರೆದೆ-ರಾತ್ರಿಯೂ ನೀರದೆ-ನೀರದೆಯು ಮೊದಲು, ರಾತ್ರಿ
ಯಾಗುತಲೆ ಪಾರ್ಶ್ವದ ಕೊಠಿಡಿಗೆ ಹೋಗಿ ಅಲ್ಲಿ ಮಲಗುವಳು. ಈಗ
ಯಜಮಾನಿಯು ಅವಳನ್ನು ಒಂದು ಮುಹೂರ್ತಮಾತ್ರವೂ ಬಿಟ್ಟಿರಳು
ಹಗಲು ರಾತ್ರಿ: ಅವಳು ರೋಗಿಯ ಪಾರ್ಶ್ಯದಲ್ಲಿದ್ದಿರಜೇಕು. ರೋಗಿಯ
ಅಲಸ್ಯವು ಹೆಜ್ಜೆ ದ ಹಾಗೆಲ್ಲಾ ನೀರದೆಗೆ ಲಜ್ಜೆಯೂ ಸಂಕೋಚವೂ ಕಡಿ
ಮೆಯಾಗುತ ಬಂದುವು-ಬಳಿಕ ನೀರಣೆಯು ರೊಳಗಿಯ ಪಾರ್ಶ್ಟದಲ್ಲಿದ್ದು
ರಾತ್ರಿಯ ನ್ನು ಕಳೆಯುತ್ತಿ ದ್ವಳು.
------------------------------------------------------------
ಹದಿಮೂರನೆಯ ಪರಿಚ್ಛೇದ ೪೧
ಯಜಮಾನಿಯೂ ವಾಮೆಯೂ ನೆಲದಮೇಲೆ ಹಾಸಿಗೆಯನ್ನು ಹಾಸಿ
ಕೊಂಡು ಮಲಗುವರು. ಅವರು ನಿದ್ರೆಕೆಟ್ಟು ಇರರು. ಎಪ್ಟೊಂದು ರಾತ್ರಿ
ನಿದ್ರೆಯಿಲ್ಲದೆ ಇರಲಾದೀತು? ನೀರದೆಯಾದರೋ ರಾತ್ರಿ ಹಗಲು ನಿರಂತ
ರವಾಗಿ ನಿದ್ರೆಯಿಲ್ಲದೆ ಜಾಗರಿತವಾಗಿರುವಳು-ಒಂದುದಿನ ಸಮರಾತ್ರಿಯಲ್ಲಿ
ಯಜಮಾನಿಯೂ ವಾಮೆಯೂ ಮಲಗಿದ್ದಾಗ ರಮಣೀವಮೋಹನನು ಕ್ಷೀಣಿ
ಸಿದ ಕಂಠದಿಂದ "ನೀರದೆ! " ಎಂದು ಕರೆದನು. ನೀರದೆಯು ಪಾರ್ಶ್ವದಲ್ಲಿ
ಕುಳಿತಿದ್ದವಳು ಅವ ಉತ್ತರವನ್ನೂ ಹೇಳದೆ ಗಂಟ್ಲಶಬ್ದವನ್ನು ಮಾಡಿದಳು.
"ನೀರದೆ! ತಾಯಿಯು ಎಲ್ಲಿ "
" ಮಲಗಿದ್ದಾರೆ. "
" ವಾಮಾತಾಮಿಯೆಲ್ಲಿ "
" ಮಲಗಿದ್ದಾರೆ. "
"ನೀರದೆ ! ನೀನೇಕೆ ಮುಲಗಲಿಲ್ಲ?''
ನೀರದೆಯು ಉತ್ತರವನ್ನು ಕೊಡಲಿಲ್ಲ ಸ್ವಲ್ಪ ಹೊತ್ತಾದ ಬಳಕ
ಮೋಹನಸು, "ನೀರದೆ ' ನಾನು ಸತ್ಯುಹೋದರೆ-- "
ನೀರದೆಯು ಚಂಚಲೆಯಾದಳು. ಮೋಹನನು, "ನೀರದೆ! ನಾನು
ಸತ್ತುಹೋದರೆ ನನಗೆ ಸಲುವಾಗಿ ನೀನು ಅಳುವೆಯಲ್ಲವೆ " ಎಂದನು,
ನೀರವೆಯ ಹೃದಯದಲ್ಲೊಂದು ಪ್ರಚಂಡಚಂಡಮಾರುತವು ಎದ್ದಂ
ತಾಗಿ ನಡುಗಿದಳು. ಮೋಹನನು, " ಆಳುದಿರುವೀಯೋ? ನನ್ನನ್ನು ಬಿಟ್ಟರೆ
ಬೇರೆ ನಿನಗಾರೂ ಅಲ್ಲ'' ವೆಂದನು.
ನೀರದೆಯು ಹೊರಟು ಹೋಗಲೆದ್ದಳು- ಮೋಹನನು, "ಹೋಗ
ಬೇಡ, ನೀರದೆ !-ನಾನು ಬದುಕಿರುವತನಕ ನಿನ್ನನ್ನು ನೋಡುತ್ತಿರುವೆನು-
ನಿನ್ನನ್ನು ನೋಡುತ್ತಿದ್ದರೆ, ನನಗೆಷ್ಟೊಂದು ತೃಪ್ತಿಯೂ ಸುಖವೂ ಏಕಾ
ಗುವುದೊ" ಅದನ್ನು ಹೇಳಲಾರೆನು. ನಿನ್ನನ್ನು ನೋಡುತಿದ್ದರೆ ರೋಗದ
ಯಾತನೆಯೂ ಮರೆತುಹೋಗುವುದು. ನೀನೆನಗೆ ಉಪಚರಿಸಿದರೂ ಉಪರಿ
ಸದಿದ್ದರೂ ಅದನ್ನು ನಾನು ಲಕ್ಷ್ಯಮಾಡುವುದಿಲ್ಲ. ನಿನ್ನನ್ನು ನೋಡುತ್ತಿ
ರುವೆನು ?" ಎಂದು ಹೇಳಿ ಬಳಕ ಸ್ಟಲ್ಪಹೊತ್ತು ವಿಶ್ರಮಿಸಿಕೊಂಡು,
" ನಿನ್ನನ್ನು ನೋಡುವ ಅಶೆಯು ಕಡಿಮೆಯಾಗುವುದಿಲ್ಲ, ನಿನ್ಸನ್ನು ನೋಡು
-----------------------------------------------------------------
೪೨ ನೀರದೆ
ತ್ತಿರಬೇಕೆಂತಲೇ ನನಗೆ ರೋಗವುಂಟಾಗಿರಬೇಕೆಂದು ತೋರುತ್ತದೆ.
ರೊಗಿಯಾಗದಿದ್ದರೆ ನಾನು ನಿನ್ನನ್ನುಹೀಗೆ ನೋಡುತ್ತಿರಲಿಲ್ಲ-ನೀರದೆ!
ರೋಗವು ಕೆಟ್ಟುದೆಂದು ಹೇಳುವರಾರು''? ಎಂದನು,
ನೀರದೆಯು ಹೆಚ್ಚು ಹೊತ್ತು ಕುಳತಿರಲಾರದೆ ಹೋದಳು--ಎದ್ದು
ಪಾರ್ಶ್ವದ ಕೊಠಡಿಗೆ ಹೊರಟು ಹೋದಳು.
ಮತ್ತೊಂದು ದಿನ ರಮಣೀಮೋಹನನು ಹಾನಗೆಯಲ್ಲಿ ಮುಲಗಿ
ಪಾರ್ಶ್ವದಲ್ಲಿ ಕುಳಿತಿದ್ದ ನೀರದೆಯನ್ನು ಕುರಿತು, “ನೀರದೆ! ನನಗೆ ಸೋದರ
ಸೋದುಯರಿಲ್ಲ ; ಸೋದರಿಯನ್ನು ಆದರಿಸಿ ಪ್ರೀತಿಸುವುದನ್ನು ನಾನರಿ
ಯೆನು-ನೀನು ಆಹಾರ ನಿದ್ರೆಗಳನ್ನು ಬಿಟ್ಟು ನಿರಂತರವೂ ಸನ್ನಬಳಿ ಕುಳಿ
ತುಕೊಂಡಿರುವುದು ನಿನಗೆಷ್ಟುಕಷ್ಟವಾಗುವುದೋ ಅದನ್ನು ನಾನು ತಿಳಿಯ
ಲಾರೆನು. ನಾನೇನನ್ನು ಮಾಡಲಿ" ನಿನ್ನನ್ನು ಒಂದು ನಿಮಿಷವೂ ನೋಡ
ದಿರಲಾರೆನು " ಎಂದನು.
ನೀರದೆಯು ಅವದೋ ಒಂದು ಕೆಲಸದ ನೆವದಿಂದ ಅಲ್ಲಿಂದೆದ್ದು
ಹೊರಟುಹೋದಳು.
ಒಂದುದಿನ ರಾತ್ರಿ ರಮಣೀಮೋಹನನು ಎಚ್ಚ್ರಗೊಂಡು ಕಣ್ಣನ್ನು
ಬಿಟ್ಟು ನೋಡಿದನು. ಪಾರ್ಶ್ವದಲ್ಲಿ ನೀರದೆಯಿರರಿಲ್ಲ ಚಿಕ್ಕಮನೆಯಲ್ಲಿ
ಎಲ್ಲಿ ನೋಡಿದರೂ ಅವಳಿರಲಿಲ್ಲ. ನೆಲದಮೇಲೆ ಯಜಮಾನಿಯೂ ವಾಮೆ
ಯೂ ಮಲಗಿದ್ದರು. ಮೋಹನನು, ವಾಮಾಬಾಯಿ ! "ಎಂದು ಕೂ
ಗಿದನು.
ಮೂರು ನಾಲ್ಕು ತೆಡವೆ ಕೂಗಿದೆ ಬಳಕ, ವಾಮೆಯು ಎಚ್ಚರ
ಗೊಂಡು, "ಏನು. ಮಗು ! " ಎಂದಳು.
"ನೀರದೆಯು ಎಲ್ಲಿ"
" ನೀರದೆಗೆ ಅಲಸ್ಯವಾಗಿದೆ. "
ರಮಣೀ ಮೋಹನನು ಮೆಲ್ಲಗೆ ಎದ್ದು ಹಾಸಿಗೆಯಮೇಲೆ ಕುಳಿತು
ಕೊಂಡನು. ವಾಮೆಯು ಆದನ್ನು ಕಾಣದೆ, "ಆಹಾ! ಹುಡುಗಿಯು
ಎರಡುತಿಂಗಳಿಂದ ರಾತ್ರಿ, ಹಗಲು ಶ್ರಮಪಟ್ಟಿರುವಳು, ಹೊಟ್ಟೆಗೆ ಅನ್ನ
------------------------------------------
ಹದಿನಾಲ್ಕನೆಯ ಪರಿಚ್ಛೇದ ೪೩
ವಿಲ್ಲ. ಕಣ್ಣಿಗೆ ನಿದ್ರೆಯಿಲ್ಲ; ಮನುಷ್ಯ_ಶರೀರ, ಎಷ್ಟೊಂದು ಸಹಿಸಲಾ
ವದು?" ಎಂದು ಹೇಳಿದಳು.
ಅಂದು ರಾತ್ರಿ ರಮಣೀಮೋಹನನಿಗೆ ಪುನಃ ನಿದ್ರೆಯು ಬರಲಿಲ್ಲ-
ಅನಿದ್ರೆಯಲ್ಲಿ ರಾತ್ರಿಯನ್ನು ಕಳೆದನು,
.....
ಹದಿನಾಲ್ಕನೆಯ ಪರಿಚ್ಛೇದ
ರಮಣೀಮೋಹನನಿಗೆ ಒಂದೆರಡು ವಾರದಲ್ಲಿಯೇ ಆರೋಗ್ಯ
ವಾಯಿತು. ಅದರೆ ಮೈಯಲ್ಲಿ ರಕ್ತವಿಲ್ಲ. ಡಾಕ್ಟರಿನ ಹೇಳಿಕೆಯಂತೆ
ವಾಯು ಪರಿವರ್ತನೆಗೆ ಸಲುವಾಗಿ ಪಶ್ಚಿಮಕ್ಕೆ ಹೋಗಿ ಹೋಗಿ ಬರಬೇಕೆಂದು ಸ್ಥಿರ
ವಾಯಿತು. ಯಜುವಾನಿಯು ದಳದೊಂದಿಗೆ ವೈದ್ಯನಾಥಕ್ಕೆ ಹೊರಟರು.
ಸಂಗಡ ವಾಮೆಯೂ ಣೀಋಧೇಐಊ ಃಓಋಠೃಊ. ನೀರದೆಯನ್ನು
ಮನೆಗೆ ಹಿಂದಕ್ಕೆ ಕಳುಹಲು ಆರೂ ಪ್ರಸ್ತಾಪಿಸವಿಲ್ಲವಾಗಿ ಅವಳೂ ಬಂಡಿ
ಯಲ್ಲಿ ಹತ್ತಿ ಎಲ್ಲರೊೂಡನೆ ದೇವಘಡಕ್ಕೆ ಹೊದಳು.
ಪಟ್ಟಣದ ಹೊರಗೆ ನಂದನಗಿರಿಗೆ ಹತ್ತಿರ ಬಿಡಾರವನ್ನು ಮಾಡಿದರು.
ರಮಣೀಮೋಹನನು ನಿತ್ಯವೂ ಬೆಳಗ್ಗೆ ಎದ್ದು ಗಿರಿಮೇಲೆ ಹೋಗು
ವನು ಪೃಥ್ವಿಯ ಒಡಲಿನಿಂದ ಸೂರ್ಯನುದಯನಾಗಿ ಮೆಲ್ಲಮೆಲ್ಲಗೆ ಆಕಾ
ಶಮಾರ್ಗಕ್ಕೇರುರುವುದನ್ನು ಏಕಾಗ್ರಚಿತ್ತದಿಂದ ನೋಡುತ್ತಿರುವನು-ಏಳು
ಘಂಟೆಯೊಳಗೆ ಮನೆಗೆ ಹಿಂದಿರುಗಿ ಬರುವನು,
ಒಂದು ದಿನ ರಮಣೀಮೋಹನನು ತಪೋವನದ ಬೆಟ್ಟದಲ್ಲಿ ವನಭೋ
ಜನವಂ ಮಾಡಬೇಕೆಂದು ಆಶೆಪಟ್ಟನು. ಅವನ ಆಶೆಯು ಪೂರ್ತಿಗೊಳ್ಳದೆ
ನಿಲ್ಲಲಿಲ್ಲ. ಮೂರು ನಾಲ್ಕು ಕುದುರೆ ಬಂಡಿಗಳು ಸಿದ್ಧವಾದವು. ರಮಣೀ
ಮೋಹನನು ತಪೋವನದಸದ ಬೆಟ್ಟಕ್ಕೆ ಹೋದನು. ದೊಡ್ಡ ದೊಡ್ಡ ಕಲ್ಲು
ಬೋಡೆಗಳು ಸ್ತರಸ್ತರವಾಗಿ ಏರಿಸಲ್ಪಟ್ಟಿದ್ದವು. ಬಂಡೆಗಳ ಪಾರ್ಶ್ವಗಳಲ್ಲಿ
ದೊಡ್ಡದೊಡ್ಡ ಮರಗಳು-ಮರಗಳ ಪಾರ್ಶ್ವದಲ್ಲಿ ಪುನಃ ಬಂಡೆಗಳು ಬೆಟ್ಟದ
-------------------------------------
೪೪ ನೀರದೆ
ತಲೆಯಮೇಲೆ ಮನೋಹರವಾದೊಂದು ಗುಹೆ. ಆ ಗುಹೆಯಲ್ಲಿ ಯೋಗಿ
ವರ ಬಾಲಾನಂದ ಸ್ವಾಮಿಯು ವಾಸಮಾಡುತಿರುವಸು-ಗುಹೆಯ ಸ್ನಭಾವ
ಸಿದ್ದವಾದಾ ಸೌಂದರ್ಯವು ಈಗಿಲ್ಲ-ವಿಲಾಸಿತೆಯಲ್ಲಿ ಎಲ್ಲವೂ ನಷ್ಟ
ವಾಗಿಹೋಗಿರುವುವು.
ಆ ವೃತ್ತಾಂತವೆಲ್ಲಾ ಈಗ ಬೇಡ. ಅರುಣೋದಯಕ್ಕೆ ಸ್ವಲ್ಪ
ಮೊದಲು ಎಲ್ಲರೂ ತಪೋವನಕ್ಕೆ ಮುಟ್ಟಿದರು. ರಮಣೀಮೋಹನನು
ಅದಕ್ಕೆ ಮೊದಲು ವರ್ಧಮಾನಕ್ಕೆ ಪಶ್ಚಿಮದಕಡೆ ಅವಾಗಲೂ ಹೋಗಿರಲಿ
ಲ್ಹವಾದಕಾರಣ ಬೆಟ್ಟಗುಡ್ಡಗಳನ್ನು ಹಿಂದೆಂದೂ ನೋಡಿರಲಿಲ್ಲ--ನಂದನದ
ಬೆಟ್ಟವನ್ನು ನೋಡಿ ಹಿಮುಲಯದ ಕಲ್ಪನೆಯನ್ನು ಮಾಡಿಕೊಳ್ಳುವನು.
ಧಾರಾಜಲದ ಪ್ರಪಾತವನ್ನು ಕಂಡು ನಯಾಗ್ರ್ರದ ಪ್ರಚಂಡಜಲಪ್ರಪಾತ
ವನ್ನು ಕಲ್ಪಿಸಿಕೊಳ್ಳುವನು. ತಪೋವನವನ್ನೀಗ ನೋಡಿ ಹಿಮಾಲಯ
ಕ್ಕಿಂತದು ಸುಂದರವಾದುದೆಂದು ತಿಳದುಕೊಂಡನು.
ದಾಸದಾಸಿಯರಲ್ಲಿ ಬಹಳ ಗದ್ವಲಕ್ಕಿಟ್ಟಿತು. ಅವರು ವೈಷ್ಣವ
ಬಾಬಾಜಿಯ ಪ್ರಾಂಗಣದಲ್ಲಿದ್ದು ಗೋವರ್ಧನವೆಂದು ಹೆಸರುಗೊಂಡಿದ್ದು
ದಕ್ಕಿಂತ ದೊಡ್ಡದಾದಾವದನ್ನೂ ನೋಡಿರರಿಲ್ಲ-ಈಗೊಂದು ಪ್ರಕಾಂಡ
ಸಜೀವದ ಬೆಟ್ಟದ ಕಿಬ್ಛಿಯಲ್ಲಿ ನಿಂತು, ಕೈಲಾಸಧಾಮದಲ್ಲಿರುವುದಾಗಿ ತಿಳ
ದುಕೊಂಡರೆಂದು ತೋರುತ್ತದೆ. ಬೆಟ್ಟದ ಮಧ್ಯೆ ದೇವಮುಂದಿರ-ಶಿಖರ
ದಲ್ಲಿ ಗುಹೆ ಮತ್ತೆ ಬೇಕಾದುದೇನು? ಬೆಟ್ಟದ ಪಾದಮೂಲದಲ್ಲಿ ನಿಂತು
ಭಕ್ತಿಪು ತಹೃದಯದಿಂದ ಎಲ್ಲರೂ ಪ್ರಣಾಮವನ್ನು ಮಾಡಿದರು.
ವಾಮೆಯು ಇದ್ದೆಡೆ ನೀರದೆ -ಕಲಿಕತ್ತೆಯಲ್ಲಿದ್ಚಾಗ ಯಜಮಾನಿಯ
ಬಳಿ ಇರಳು- -ಅವಳನ್ನು ಕಂಡರ ಭಯ--ಈಗ ಭಯಪಡುವ ಅವಶ್ಯಕವಿ
ರಲಿಲ್ಲ -ಹುಡುಗಿಯಮೇಲೆ ಯಜಮಾನಿಗೆ ಈಗಾ ಕೋಪವಿಲ್ಲ--ಈಗವ
ಳನ್ನು ಕಂಡರೆ ವಿಶ್ವಾಸ-ನೀರದೆಯು ಒಂದು ಕ್ಷಣ ಕಣ್ಣು ಮರೆಯಾದರೂ
ಆವದೂ ಜರಗದು-ನೀರದೆಯು ಮನೆಬಾಗಿಲನ್ನು ಗುಡಿಸಿ ರಂಗವಲ್ಲಿಯಿಂದ
ಅಲಂಕರಿಸುವಳು-ನೀರದೆಯು ಲೆಕ್ಕವನ್ನು ಬರೆದಿಡುವಳು-- ಕಾಗದಪತ್ರ್ರಗ
ಳನ್ನು ಬರೆಯುವಳು ಆವಪವಾರ್ಥವು ಎಲ್ಲಿರಿಸಬೇಕೋ ಅದನ್ನು ಆಲ್ಲ
ಲ್ಲಿಸುವಳು ನೀರದೆಯಿಲ್ಲದಿದ್ದರ ಸಂಸಾರವೇ ಸಡಿಯದು-ನೀರದೆಯು ಬರು
-------------------------------------------
ಹದಿನಾಲ್ಕನೆಯ ಪರಿಚ್ಚೇದ ೪೫
ವುದಕ್ಕೆ ಮೊದಲು ಸಂಸಾರವು ಸಡಿಯುತಿದ್ದುದನ್ನೂ ಯಜಮಾನಿಯು
ಭಾವಿಸಿಕೊಳ್ಳುತಿದ್ದಳು.
ಅಹಾರಾದಿಗಳಾದ ಬಳಕ ರಮಣೀಮೋದನನು ಬಂದು, "ಅಮ್ಮಾ !
ಗುಹೆಯನ್ನು ನೋಡುವುದಸ್ಕೆ ಹೊರಡು '' ಎಂದನು.
ತಾಯಿ--ಗುಹೆಯಿರುವುದಲ್ಲಿ?
ರಮಣೀ -ಬೆಟ್ಟಿದ ತಲೆಯಮೇಲೆ.
ತಾಯಿ. ನಾನು ಅಷ್ಟೊಂದು ದೂರ ಹತ್ತಲಾರೆನು.
ರಮ... ಹತ್ತ ಲಾರದೆ ಏನು)> ಒಳ್ಳೆಯದಾದ ಮೆಟ್ಲುಗಳವೆ-.
ಸುಲಭವಾಗಿ ಹತ್ತುಬಹುದು.
ತಾಯಿ -ಇಲ್ಲ ಮಗು. ಅರ್ಧಹಾದಿಯಲ್ಲಿ ನಿಂತುಬಿಡುವೆನು.
ರಮಣೀ.-ಹಾಗೆ ನಿಂತರೆ ನಾನು ಭುಜದಮೇಲೆ ಎತ್ತಿಕೊಂಡು
ಹೋಗುವನು.
ತಾಯಿ -ನನ್ನನು ಎತ್ತುಬಲ್ಲಿಯಾ?
ರಮಣೀ--ಎತ್ತದೆ ಏನು? ನೋಡುವೆ,
ತಾಯಿ --ಬೇಡ, ಈಗ ನೋಡುವುದಕ್ಕಿಷ್ಟವಿಲ್ಲ-ಮತ್ತೊಂದುತಡ
ನೋಡುವೆನು,
ರಮ -ಅದಾಗದು-ಈಗ ಹೊರಡುವಿಯೊ- ಇಲ್ಲವೊ? ಹೇಳು,
ತಾಯಿ--ಹಾಗಾದರೆ, ಹೊರಡು.
ಯಜಮಾನಿಯು ಹೊರಟೊಡನೆ ವಾಮೆಯೂ ನೀರದೆಯೂ ಹೊರ
ಟರು.. ಬಾಲಾನಂದಸ್ಸಾಮಿಯು ಕೊಟ್ಟಿದ್ದ ವಿಭೂತಿಯನ್ನು ಧಾರಣೆ
ಮಾಡಿಕೊಂಡು ನಾಲ್ಕುಮಂದಿ ಹೊೂರಟರು. ಸ್ವಲ್ಪದೂರ ಹತ್ತಿ ಮಧ್ಯ
ದಲ್ಲಿ ಯಜಮಾನಿಯು ಹತ್ತಲಾರದೆ ಕುಳಿತಳು. ರಮಣೀಮೋಹನನು
ಹತಾಶನಾಗಿ, " ಹಾಗಾದರೆ ಹಿಂದಕ್ಕೆ ಹೊಗೋಣ '' ವೆಂದನು.
ತಾಯಿ--ನೀನು ಹೋಗಿ ಗುಹೆಯನ್ನು ನೋಡಿಕೊಂಡು ಬಾ...
ನಾನಿಲ್ಲಿ ತಪನಾಥನಮಂದಿರದಲ್ಲಿ ಈಂಳತಿರುವನು.
ಹಾಗೇವೇ ಗೊತ್ತಾಯಿತು. ವಾಮೆಯು ತಾನು ಯಜನಾನಿಯ
---------------------------------------
೪೬ ನೀರದೆ
ಬಳಿ ಇರುವುದಾಗಿಯೂ, ಮೋಹನನು ನೀರದೆಯನ್ನು ಈರೆದುಕೊಂಡು
ಹೋಗಲೆಂತಲೂ ಹೇಳಿದಳು.
ನೀರದೆಯು ರಮಣೀಮೋಹನನ ಸಂಗಡ ಹೋಗಲು ಸ್ವುಲ್ಪ ಲಜ್ಜಿ
ತೆಯಾದಳು -ಯಜಮುಾನಿಯು, "ಅದೇಕೆ ಹೋಗಕೂಡದು? ನೀನಾವಾಗಲೂ
ನೋಡಿದವಳಲ್ಲ- ಸಂಗಡ ಹೋಗು'' ಎಂದಳು,
ನೀರದುರು ರಮಣೀಮೊಹನನ ಹಿಂದೆ ಹೊರಟಳು, ಮಾರ್ಗದಲ್ಲ
ವರಾರೂ ಮಾತಾಡಲಿಲ್ಲ. ತಲೆಯನ್ನು ಬೊಗ್ಗಿಸಿಕೊಂಡು ಇಬ್ಭರೂ ಹತ್ತಿ
ಹೋಲಾರಂಭಿಸಿದರು.
ಇಬ್ಬರೂ ಗುಹೆಯಬಳಿ ಹೋದರು. ಗುಹೆಯಬಾಗಿಲು ಹಾಕಿದ್ದಿತು.
ರಮಣೀಮೋಹನನು ಅದರಬಳಿ ಇದ್ದ ಬಂಡೆಯಮೇಲೆ ಕುಳಿತುಕೊಂಡನು.
ನೀರದೆಯು ಹತ್ತಿರ ನಿಂತುಕೊಂಡಳು.
ರಮ--ನೀರದೆ ಕುಳಿತುಕೊ.
ನೀರದೆಯು ಕುಳಿತಳು -ಸ್ವಲ್ಪದೂರ ಕುಳಿತಳು.
ಸ್ವಲ್ಪಹೊತ್ತಿನಮೇಲೆ, ಮೋಹಿನನು "ನೀರದೆ!" ಎಂದನು.
ನೀರದೆಯು ಸ್ವಲ್ಬ ಸರಿಯಾಗಿ ಕುಳತಳು.
ರಮ --ನೀರದೆ! ಕಣ್ಣುಬಿಟ್ಟು ನೋಡು ಪೃಥ್ಟಿಯು ಎಷ್ಫೊಂದು ಸುಂದರ
ವಾಗಿದೆ! ದೃಷ್ಟಿಯು ಹೋಗುವವರೆಗೂ ಸೌಂದರ್ಯವು ಹೆಚ್ಛುತಿದೆ; ಬೆಟ್ಟವು
ಆಕಾಶದಮೇಲೆ ಮಲಗಿದಂತಿದೆ -ದೂರದಲ್ಲಿ ಪೃಥ್ಧ್ಧಿಯು ಆಕಾಶದೊಂದಿಗೆ
ಸೇರಿದಂತಿದೆ. ಅಹಾ. ಎಷ್ಟೊಂದು ಸುಂದರವಾಗಿದೆ ! ನೀರದೆ ಇವೇ ಭಾವ
ದಲ್ಲಿ ನಾವಿಲ್ಲಿಯೇ ಇರಲಾಪವಾದರೆ !
ನೀರದೆ - ಕೆಳಗೆ ಹೋಗೋಣ -ಬಂದು ಬಹಳ ಹೊತ್ತಾಯಿತು.
ರಮ -ಬೇಡ, ನೀರದೆ! ಈಗಲೇ ಹೋಗಬೇಡ. ಇಲ್ಲಿಯೇ ನಿನ್ನ
ಪಾರ್ಶ್ವದಲ್ಲಿ ಕುಳತು ಪೃಥ್ವಿಯನ್ನು ನೊಡುಶಿರುವೆನು. ಕಣ್ಣು ಬಿಟು
ನೋಡು, ನೀರದೆ! ನಮ್ಮ ನಾಲ್ಕೂ ಕಡೆಗಳಲ್ಲಿ ಆಲಿಂಗಿಸಲೆಳಿಸುವ
ನೀಲಾಕಾಶ-ಆ ಆಕಾಶಪೃಥ್ವಿಗಳ ಮಧ್ಯೆ ನೀನೂ ನಾನೂ-ನಾವಿಬ್ಬರೆ-
-----------------------------------------
ಹದಿನಾಲ್ಕನೆಯ ಪರಿಚ್ಛೇದ ೪೭
ನೀರದೆಯು ನಡುಗಲಾರಂಭಿಸಿದಳು-ಅದಕ್ಕೆ ಕಾರಣವನ್ನು ನಾವು
ಅರಿಯೆವು-ಅವಳೇನೋ ನಡುಗುತಿದ್ದಳು. ನೀರದೆಯು ಪೃಥ್ವೀ ಆಕಾಶ
ಅವದನ್ನೂ ನೋಡುತ್ತಿರಿಲಿಲ್ಲ-ರಮಣೀಮೋಹನನ್ನೂ ನೋಡುತ್ತಿರಲಿಲ್ಲ-
ನೀರವವಾಗಿ ಅಧೋಮುಖಿಯಾಗಿ ಕುಳಿತು ಸುಮ್ಮನೆ ನಡುಗುವಳು.
ರಮು---ನಿೀ್‌ರದೆ! ಚೆನ್ನಾಗಿ ನೋಡು ; ಆಕಾಕ ಪೃಥ್ವಿಗಳ ಮಧ್ಯೆ
ನಾನಿಬ್ಬರೇ ಬ್ಬರು-ಮೇಲೆ ಸಾಲಾಶಾಕ-ಶೆಳಗೆ ಕಾಮಾಂಗಿ ಪೃಶ್ಚಿ-ಮಧ್ಯೆ,
ನಾನೂ, ನೀನೂ-ನೀರದೆ! ನೀಸು ನನ್ನೊಂದಿಗೆ ಚಿರದಿನವಿರುವಿಯೊ? :
ನೀರದೇಯು ಸಡುಗುತ್ತ ಎದ್ದು ನಿಂತಳು... ಅವಳು ಹೊರಡಲು
ದ್ಯುಕ್ತೆಯಾದಳೆಂದು ಶಿಳಿದು ರಮಣೀಮೋಹನನು, " ಹೋಗಬೇಡ, ನೀರದೆ!
ನನ್ನನ್ನು ಬಿಟ್ಟು ಹೋಗಬೇಡ. ಮತ್ತಾವಾಗಲೂ ನನ್ನ ಮನೋಭಾವ
ವನ್ನು ಹೀಗೆ ನಿನಗೆ ತಿಳಯಹೇಳಲಾರೆಸು -ನೀರದೆ! ಚಿರದಿನ ನಿನ್ನನ್ನು
ಪಾರ್ಶುದಲ್ಲಿಟ್ಟು ಕೊಂಡಿದ್ದರೆ ನಾನೆಷ್ಟೋ ಸುಖಿಯಾಗಿರುವೆನು.
ಲಜ್ಜೆಯಿಂದಲೂ ಆನಂದದಿಂದಲೂ ನೀರದೆಯ ದೇಹವು ಅವಸನ್ನ
ವಾಗುತ ಬಂದಿತು-ಎತ್ತರವಾಗಿದ್ದೊಂದು ಬಂಡೆಯಸ್ತವಲಂಬಿಸಿಕೊಂಡು
ನಿಂತಳು. ತಂಗಾಳಿಯು ನೀರಬೆಯ ಅಳಕಗುಚ್ಚವನ್ನೂ ಸೆರಗನ್ನೂ ಅಲು
ಗಾಡಿಸುತ್ತಿದ್ದಿತು. ಅವಳ ಕೇತಗುಚ್ಚವೂ ಅವಳ ದೇಹವೂ ಕಂಪಿಸು
ತಿದ್ದುವನ್ನ ಮೋಹಸನು ನೋಡಿದವನು "ನೀರವೆ ! ಎಂದಿನದವರೆಗೂ
ಪೃಥ್ಞ್ರಿಯು ಧ್ವಂಸವಾಗದಿರುವುದೊ ಆಕಾಶವು ಬಿರಿದು ಬಿಳದಿರುವದೋ
ಅಂದಿನೆದವರೆಗೂ ನಿನಗೂ ನನಗೂ ಜರಸಂಬಂಧವಿರುವುದು. ನಾನು ಆಕಾಶ,
ಕೋಟಿಕಣ್ಣುಗಳಿಂದ ನಿನ್ನನ್ನು. ನೋಡುತಿರುವೆನು. ನೀರದೆ! ನೀನೆನಗೆ ಸರ್ವ
ಮಯು-ಅರ್ವೇಶ್ವರಿ" ಎಂದು ರುೇಳದನು.
ನೀರದೆಯು ಹೆಚ್ಚು ನಿಲ್ಲ ಲಾರವೆ ಹೋದಳು--ಕುಳಿತುಬಿಟ್ಟಳು.
ಭೂಕಂಪದಿಂದ ಭೂಮಿಯು ನಡುಗುವಂತೆ ನೀರದೆಯು ನಡುಗಲಾರಂಭಿಸಿ
ದಳು. ರಮಣೀಮೋಹನನು, "ನೀರದೆ! ನೀನೆನ್ನನ್ನು ನ್ರೀತಿಸುತ್ತಿ-
ಪ್ರೀತಿಸುತ್ತಿಯೆಂತಲೇ ಈ ಮಾತುಗಳನ್ನು ನಿನಗೆ ಹೇಳಿದೆನು. ಇಲ್ಲದಿ
-------------------------------------------
೪೮ ನೀರದೆ
ದ್ದರೆ ಈ ಪ್ರಣಯದ ಮಾತುಗಳು ನನ್ನ ಬಾಯಿಂದೆಂದೂ ಹೊರಡವು-
ನಿನ್ನನ್ನು ಬಿಟ್ಟು ನಾನು ಮತ್ತಾರನ್ನೂ ಮದುವೆಯಾಗೆನು--ಖಂಡಿತ ತಿಳಿ
ದಿರು '' ಎಂದನು,
ನೀರದೆಯು ಮಾತಾಡಲೆತ್ನಿಸಿದಳು. ಆದರೆ ಮಾತು ಹೊರಡಲಿಲ್ಲ.
ರಮಣೀಮೋಹನನು, " ಏನನ್ನು ಹೇಳುತಿದ್ದೆ? ಹೇಳು '' ಎಂದನು.
ನಾಲ್ಯಾರುತಡವೆ ಗಂಟಲನ್ನು ಸರಿಮಾಡಿಕೊಂಡು, ಬಹಳ" ಪ್ರಯ
ತ್ನಪಟ್ಟು, ಬಳಕ ನೀರದೆಯು " ನಾನಾರೆಂದು ತಾವು ಅರಿಯರಿ ? ಎಂದಳು.
ರಮ--ನಿನ್ನ ಪರಿಚಯವೆನಗೆ ಬೇಕಿಲ್ಲ--ನಾನು ತಿಳಿದಿರುವುದು,
ನೀನು ನೀರದೆಯೆಂದು--ನನಗೆ ಬೇರೆ ಪರಿಚಯದಿಂದ ಪ್ರಯೋಜನವಿಲ್ಲ
ನೀರದೆ--ನಾನು--
ರಮ-. ನೀನಾರು?
ನೀರದೆ--ನಾನೊಬ್ಬ ವೇಶ್ಯೆಯಿಂದ ಪಾಲಿತೆಯಾದವಳು.
ರಮ--ಹಾಗಿದ್ದರೆ, ನಾನೀಗಿನಿಂದೊಬ್ಬ ವೇಶ್ಯಯನ್ನು ಪ್ರೀತಿಸು
ವೆನು ನಿನ್ನನ್ನು ಪಾಲನೆ ಮಾಡಿದವಳನ್ನು ನಾನು ಭಕ್ತಿಯಿಂದ ನೋಡುವೆನು.
ನಿರದೆ.-ನನಗೆ ಜಾತಿಯು ಗೊತ್ತಿಲ್ಲ.
ರವಂ- ಧರ್ಮವೇ ಜಾತಿ-ಅಚಾರವ್ಯವಹಾರ, ಧರ್ಮ, ನೀತಿ ಇವಿ
ದ್ದರೆ, ಜಾತಿ-ಬ್ರಾಹ್ಮಣರಲ್ಲಾಗಲಿ, ದೇವಕುಲದಲ್ಲಾಗಲಿ ನಿನ್ನಂತಿರುವ
ವರು ಎಷ್ಟುಮಂದಿ? ನೀರದೆ!
ಹೀಗೆಂದು ಹೇಳುತ್ತಿರುವ ಸಮಮಯದಲ್ಲಿ ಭೃತ್ಯನೊಬ್ಬನು ಬಂದು,
" ಯಜಮಾನಿಯರು ಕೆಳಗಿಳದುಹೋದರು, ತಾವೂ ಬರಬೇಕು. ಅವರು
ಕಳವಳಗೊಂಡಿದ್ದಾರೆ " ಎಂದು ಹೇಳಿದನು.
....
ಹದಿನೈದನೆಂರು ಪರಿಚ್ಛೇದ.
ರಮಣೀಮೋಹನನು ನೀರದೆಯೊಂದಿಗೆ ಬೆಟ್ಟದಿಂದಿಳದನು. ಅವರಿ
ಳದು ಬರುವಾಗ ಇಬ್ಬರಲ್ಲೊಬ್ಬರೂ ಮಾತಾಡಲಿಲ್ಲ. ಗಂಭೀರವಾದ
------------------------------------------
ಹದಿನೈ ದನೆಯ ಪರಿಚ್ಛೇದ ೪೯
ಮೇಘದ ಹಿಂದೆ ಮಿಂಚಿನಂತೆ ನೀರದೆಯು ರಮಣೀಮೋಹನನ ಹಿಂದೆ
ಹಿಂದೆ ಬರುತಿದ್ದಳು, ಕಡೆಯಸೋಪಾನಸ್ಕೆ ಬಂದು ರಮಣಿನಮೋಹನನು
ಅಲ್ಲಿ ನಿಂತು ಹಿಂದಿರಿಗಿ ನೋಡಿದನು. ಜಟಾಜೂಟಧಾರಿಯಾದೊಬ್ಬ ಸನ್ಯಾ
ಸಿಯು ಅವನನನ್ನು ಹಿಂದಟ್ಟಿಬರುತಿದ್ದನು. ಸನ್ಯಾಸಿಯ ದೃಷ್ಟಿಯು ನೀರ
ದೆಯಮೇಲಿರುವುದು. ಅವಳನ್ನು ಬಿಟ್ಟು ಮತ್ತಾ ವದನ್ನೂ ನೋಡನು.
ಸನ್ಯಾಸಿಗೆ ಹಚ್ಚು ವಯಸ್ಸಾಗಿರಲಿಲ್ಲ.. ಐವತ್ತರೊೂಳಗಿರಬಹುದು.
ಆದರೆ ಜಟಾಭಾರವು ಕಡಿಮೆಯಾಗಿರಶಿಲ್ಲ. ಕಾಸಿದ ಬಂಗಾರದ ಬಣ್ಣದ
ಮೇಲೆ ಜಟಾಭಾರವು ಬಹು ಅಂದವಾಗಿ ಕಣ್ಗೊಳಿಸುವುದು. ಸನ್ಯಾಸಿಯ
ಉಡುಪು ಒಂದು ಕೌಪೀನಮಾತ್ರವಾಗಿದ್ದಿತು-ಕೈಯಲ್ಲೊಂದು ಕಬ್ಬಿಣದ
ಚಿಮುಟಿಗೆ.
ರಮಣೀಮೋಹನನು ಸನ್ಯಾಸಿಯನ್ನು ಕುರಿತು "" ತಮಗೇನು
ಬೇಕು ' ಎಂದು ವಿಚಾರಿಸಿದನು. |
ಸನ್ಯಾಸಿಯು ಉತ್ತ ರವನ್ನು ಕೊಡದೆ ನೀರದೆಯನ್ನು ನೋಡುತಿ
ದ್ದನು- ಸನ್ಯಾಸಿಯು ಹುಡುಗಿಯನ್ನು ಕೂಂಡೊಯ್ವನೆಂದು ಮೋಹನನಿಗೆ
ಭಯವುಂಟಾಯಿತು. ಅವನು ಬೇಗಬೇಗನೆ ನೀರದೆಯನ್ನು ಕರೆದು
ಕೊಂಡು ಯಜಮಾನಿ ಮುಂತಾದವರು ಅವನಿಗೆ ಸಲವಾಗಿ ಕಾದಿದ್ದ ಸ್ಥಳಕ್ಕೆ
ಬಂದನು. ಯಜಮಾನಿಯು ಕಳವಳಗೊಂಡು, " ಏನಾಯಿತು, ಮಗು ? ?
ಎಂದು ಕೇಳದಳು.
" ಅಮ್ಮಾ! ನೋಡೆ, ಒಬ್ಬ ಸನ್ಯಾಸಿಯು ಬೆನ್ನಟ್ಟ ನಮ್ಮ ಹಿಂದೆ
ಹಿಂದೆ ಓಡಿ:ರುತ್ತಾನೆ. "
ಇಬ್ಬರು ಆಳುಗಳು ಹೋಗಿ ಸನ್ಯಾಸಿಯನ್ನು ಅಡ್ಡಗಟ್ಟಿ ನಿಲ್ಲಿಸಿ
ದರು. ಯಜಮಾಸನಿಯು ಬಳಗದ ಸಮೇತವಾಗಿ ಬಂಡಿಯನ್ನು ಹತ್ತಿದಳು.
ಬಂಡಿಗಳು ಹೊರಟುವು. ಅಗ ಸೂರ್ಯಾಸ್ತವಾಗಿದ್ದಿ ತು.
ಬಂಡಿಯು ಅರ್ಧಹಾದಿ ಬಂದುಬಳಿಕ ಮೋಹನನು ಹಿಂದಿರುಗಿನೋಡಿ
ವಿಸ್ಮಿತನಾದನು-ಸನ್ಯಾಸಿಯು ಹಿಂದೆ ಹಿಂದೆ ಓಡಿ ಬರುತಿದ್ದನು; ಅಮ್ಮಾ!
ಸನ್ಯಾಸಿಯು ಬರುತ್ತಾನೆ? ಎಂದನು,
”ಎಲ್ಲೋ ಮಗು! ''
-------------------------------------------
೫೦ ನೀರದೆ
" ಬಂಡಿಯ ಹಿಂದೆ "
ಇದೇನೆ! ಇಂತಹ ಸನ್ಯಾಬಯನ್ನು ಎಲ್ಲಿಯೂ ಕಾಣೆ. ?
ಕತ್ತಲೆಯಾಗುತ ಬಂದಿತು -ಸನ್ಗಾಸಿಯು ಕಣ್ಣಿಗೆ ಬೀಳಲಿಲ್ಲ.
ಮರುದಿನ ಪ್ರಭಾತದಲ್ಲಿ ಮೋಹನನು ಎದ್ದು ಬಾಗಿಲಿಗೆ ಬಂದನು.
ಬಾಗಿಲಲ್ಲಿ ಸನ್ಯಾಸಿಯು ನಿಂತಿದ್ದನು. ಅವನನ್ನು ಕಂಡು ಮೋಹನನು
ಚಿಂತಿತನಾಗಿ ಹೆದರದೆ, ಮುಂದುವರಿದು. ಸನ್ಯಾಸಿಯನ್ನು ಹುರಿತು, "ನಿನ
ಗೇನು ಬೇಕು? '' ವಂದು ವಿಚಾರಿಸಿದನು. ಅದಕ್ಕೆ ಉತ್ತರವನ್ನು ಕೊಡದೆ
ಸನ್ಯಾಸಿಯು, " ನಿನ್ನೆ ನಿಮ್ಮ ಸಂಗಡ ಇದ್ದ ಹುಡುಗಿಯು ಎಲ್ಲಿ ?" ಎಂದು
ಕೇಳಿದನು.
ರಮ -ಹುಡುಗಿಯು ಎಲ್ಲಾದರೂ ಇರಲಿ-ಅವಳಿಂದ ನಿನಗೇನು
ಪ್ರಯೋಜನ -
ಸನ್ಶಾಸಿ...ಪ್ರಯೋಜನವಿಲ್ಲದೆ ನಿಮ್ಮನ್ನೇಕೆ ಬೇಸರಗೊಳಸುತಿ
ದ್ದೆನು? ಅವಳನ್ನು ಕರೆತಂದರೆ ಚನ್ನಾಗಿ ನೋಡುವೆನು.
ರಮ -ನೀನು ಭಂಡನೆಂದೂ ಅಧಾರ್ಮಿಕನೆಂದೂ ಕಾಣುತ್ತದೆ,
ಸನ್ಯಾಸಿ -ಸ್ವಲ್ಪಮಟ್ಛಿಗೆ ಹಾಗೇವೇಸರಿ-ಹುಡುಗಿಯು ಎಲ್ಲಿ ?
ರಮು-- ನೀನವಳನ್ನು ನೋಡಲಾರೆ.
ಸನ್ಮಾಸಿ--ಒಳ್ಳೆಯ ಕೆಲಸವಾಯಿತು -ನನ್ನದೊಂದು ಮಾತಿಗೆ ಉತ್ತರ
ವನ್ನು ಹೇಳರಿ,
ರಮ. -ಏನುಬೇಕೋ, ಬೇಗನೆ ಕೇಳು.
ಸನ್ಯಾಸಿ -ಹುಡುಗಿಯು ನಿಮಗೇನಾಗಬೇಕು ?
ರಮ --ಹುಡುಗಿಯೆ ? ಹುಡುಗಿಯು ನನಗೆ ಸೋದರಿ,
ಸನ್ಯಾಸಿ--ನಿಜವನ್ನು ಹೇಳು. ವಂಚಿಸಬೇಡ.
ರಮ: ಸುಳ್ಳನ್ನು ಹೇಳುವುದಿಲ್ಲ-ಹುಡುಗಿಯು ಸೋದರಿಯಂತೆ
ನಮ್ಮ ಮನೆಯಲ್ಲಿ ಪಾರಿತೆಯಾಗುತ್ತಿದ್ದಾಳೆ.
ಸನ್ಯಾಸಿ--ಹಾಗಾದರೆ, ಹುಡುಗಿಯು ನಿನಗೆ ಸಾಕುತಂಗಿ?
ರಮ -.ಅಹುದು.
ಸನ್ಯಾಸಿ. ಅವಳು ನಿನಗೆಲ್ಲಿ ಸಿಕ್ಕಳು ?
-------------------------------------
ಹದಿನಾರನೆಯ ಪರಿಚ್ಛೇದ ೫೧
ರಮ-.ನಿನಗೇಕೆ ಅಷ್ಪನ್ನೆಲ್ಲಾ ಹೇಳಬೇಕು?
ಸನ್ಯಾಸಿ- ಈಶ್ವರಸಾಕ್ಸಿಯಾಗಿ-ನಿಮ್ಮ ಗುರುವಿನಸಾಕ್ಸಿ ಯಾಗಿ
ಹೇಳು, ಹುಡುಗಿಯು ಎಲ್ಲಿ ಸಿಕ್ಕಳು?
ರಮಣೀಮೋಹನಸನು ಉತ್ತರವನ್ನು ಹೇಳು ವುದಕ್ಕೆ ಮೊದಲು,
ದೂರದಲ್ಲಿದ್ದ ವಾಮೆಯು ಸನ್ಯಾಸಿಯನ್ನು ಈಂಡು, " ಅದೇನೆ ! ಪುನಃ
ಸನ್ಯಾಸಿಯು ಬಂದನಲ್ಲೆ! ಹಾಳಾದ ಆಳುಗಳು ಏನಾದರೆ? ಅನ್ನಗೇಡರು.
ತಿಂದು ಕುಳತು ಆಡುವರು-ಎದ್ದುಹೋಗಿ ನೋಡಿರೊ-ಕಡೆಗಾಲದಲ್ಲಿ
ಹುಡುಗಿಯನ್ನು ಸನ್ಯಾಸಿಯ ಚಿಮುಟಿಗೆಗೆ ಬಲಿಕೊಡಬೇಕಾಯಿತಲ್ಲ |
ಎಂದು ಕೂಗಿದಳು.
ವಾಮೆಯ ಕೂಗನ್ನು ಕೇಳಿ ಅಳುಗಳೆದ್ದು ಹೋಗಿ ಸನ್ಯಾಸಿಯನ್ನು
ಹೊಡಿದೋಡಿಸಿದರು, ಸನ್ಯಾಸಿಯು ಹೋಗುವಾಗ, ಹೇಗಾದರೂ ಮಾಡಿ
ಹುಡುಗಿಯನ್ನು ಕೊಂಡೊಯ್ದೇ ಬಿಡೆನು, ಅಡ್ಡಿಮಾಡುವವರಾರು? ನೋ
ಡುವೆನು " ಎಂದು ಹೇಳುತ್ತ ಹೊರಟು ಹೋದನು.
..........
ಹದಿನಾರನೆಯ ಪರಿಚ್ಛೇದ.
.....
ಸನ್ಯಾಸಿಯ ಕಡೆಯ ಮಾತನ್ನು ಕೇಳಿ ಮೋಹನನಿಗೆ ಬಹಳ ವ್ಯಸ
ನವಾಯಿತು.. ಅವನು ಮನಸ್ಸಿನಲ್ಲಿ, "ಸನ್ಯಾಸಿಯು ನೀರದೆಯನ್ನು
ಕೆೊಂಡೊಯ್ವನು ಅದಕ್ಕೆ ಅಡ್ಡಿಮಾಡುವವರಾರು ? ನನಗೇನು ಅಧಿಕಾರ?
ನಾನವಳಿಗೇನಾಗಬೇಕು ? ನೀರದೆಯೆನಗೇನೂ ಸಂಬಂಧವಿಲ್ಲವೆ? ಹಾ!
ದೇವರೆ! ನೀರದೆಗೂ ನನಗೂ ಸಂಬಂಧವೇನೂ ಇಲ್ಲ" ವೆಂದು ಹೆಳಿ
ಕೊಂಡು ಪರಿತಪಿಸಿದನು.
ಅಂದು ಸಾಯಂಕಾಲಕ್ಕೆ ಸ್ವಲ್ಪಮೊದಲು ಯಜಮಾನಿಯು ಪಾಂ
ಡೆಯ ಸಂಗಡ ಮಂದಿರಾಭಿಮುಖವಾಗಿ ಹೊರಟು ಹೋದ ಬಳಿಕ ಮೋಹ
ನನು ವಾಮೆಯನ್ನು ಕರೆದನು. ಆಗ ಸೂರ್ಯಾಸ್ತವಾಗಿದ್ದಿತು. ಆದರೆ
----------------------------------------
೫೨ ನೀರದೆ
ಕತ್ತ ಲಾಗಿರಲಿಲ್ಲ-ತಾಮಸಿಯಾದ ರಾತ್ರಿಂರು ಜೊಂಪಲು ಜೊಂಪಲಾಗಿದ್ದ
ಮರಗಳ ಹಿಂದೆ ನಿಂತು, ಸೂರ್ಯದೇವನು ಮುಣುಗಿದನೆ ಇಲ್ಲವೆ ಎಂದು
ತಿಳಿಯಲು ಇಣಿಕಿಣಿತಿ ನೋಡುತಿದ್ದಳು.
ಮೋಹನನೂ ವಾಮೆಯೂ ಮಹಡಿಯ ಮೇಲೆ ಪಶ್ಚಿಮಮುಖವಾಗಿ
ಕುಳಿತರು, ರಮಣೀವಮೋದಹನನು " ವಾಮಾತಾಯಿ ! " ಎಂದು ಸಂಬೋ
ಧಿಸಿದನು,
ವಾಮೆ.._ಏನೋ, ಮಗು |
ರಮ--ನಿನಗೊಂದು ಮಾತನ್ನು ಹೇಳಬೇಸಾಗಿದೆ.
ವಾಮೆ- ಏನು? ಹೇಳು.
ಮೋಹನನು ಏನನ್ನೂ ಹೇಳಲಾರದೆ ಹೋದನು --ಮೌನವಾಗಿ
ದ್ದನು-ವಾಮೆಯು ಸ್ಪಲ್ಪ ಉದ್ವಿಗ್ನೆಯಾಗಿ " ನೀನೇಕೆ ಹೀಗೆ ಮಾಡುತ್ತಿ 2
ಏನನ್ನು ಹೇಳಬೇಕೋ ಅದನ್ನು ಹೇಳು ?' ಎಂದಳು.
ರಮ--ನಾನಾರಿಗೆ ಮದುವೆಯಾಗಬೇಕೋ ಅವಳು ತಂದೆಯ ಸಂ
ಗಡ ದೇವಘುಡಸ್ರೆ ಬಂದಿದ್ದಾಳಲ್ಲವೆ ?
ವಾಮ--ಅಹುದು-ಬಂದಿದ್ದಾಳೆ.
ರನಮು--ವಾಮಾತಾಯಿ ! ನಾನು ಮದುವೆಯಾಗೆನು.
ವಾಮೆ- ಅದೇಕೊ?
ರಮ--ವಾವಾತಾಯಿ! ನಾನು ಹುಡುಗನಲ್ಲ-ನಾನಾರನ್ನೂ ಮದು
ವೆಯಾಗೆನು.
ವಾಮೆ--ಅದು ಹೇಗಾಗುವುದು, ಹುಚ್ಚ!
ರಮ - ಅದರೆ...
ವಾಮೆ--ಅದರೇನು? ಹೇಳು.
ರಮ-.ನೀರದೆಯಾದರೆ ಮದುವೆಯಾಗುವೆನು.
ವಾಮೆ-ಅಮ್ಮಾ! ನಾನೆಲ್ಲಿಗೆ ಹೋಗಲೆ! ನೀನು ನೀರದೆಯನ್ನೊ
ಲಿಸಿಕೊಂಡಿರುವಿಯಾ !
ರಮ -ನೀರದೆಗೊಲಿದಿದ್ದೇನೋ ಇಲ್ಲವೋ ಗೊತ್ತಿ ಲ್ಲ ಆದರೆ ನೀರ
ದೆಯನ್ನೊಂದು ನಿಮಿಷವಾದರೂ ನೋಡದಿರೆನು.
-----------------------------------------
ಹದಿನಾರನೆಯ ಸರಿಜ್ಥೇದ ೫೩
ವಾಮೆ--ನಿನಗಿಷ್ಟು ವಿದ್ಯವೆ!
ರಮ-ವಾವಾತಾಯಿ ! ನಕ್ಕು ಮಾತನ್ನು ಹಾರಿಸಬೇಡ.
ವಾಮೆ--ಇದೇನು, ನಗುವ ಸಮಾಚಾರವೇನೊ, ಹುಚ್ಚ! ನೀನು ನೀರದೆ
ಯನ್ನು ಮದುವೆಯಾಗಬಹುದೆ ?
ರಮ- ಏಕಾಗಕೂಡದು. ವಾಮಾತಾಯಿ?
ವಾಮೆ--ನೀರದೆಗೆ ಜಾತಿ. ಕುಲ, ಆವದೂ ಗೊತ್ತಿಲ್ಲ.
ರಮ- ಗೊತ್ತಿಲ್ಲದಿದ್ದರೆ ಬಾಧಕವೆನು?
ವಾಮೆ.. ನೀರದೆಯು ಒಬ್ಬ ದೊಂಬರವನ ಮಗಳಾಗಿದ್ದರೆ?
ರಮ--ದೊಂಬರ ಮಗಳೆ ' ಬ್ರಾಹ್ಮೆಣರಲ್ಲಾಗಠಿ ದೇವತೆಯರಲ್ಲಾ
ಗಲಿ ಅಂತಸ ಒಬ್ಬ ಹುಡುಗಿಯನ್ನು ತೋರು, ನೋಡುವೆನು. ಅವಳು
ದೊಂಬರವಳಲ್ಲವೆಂದು ನೀನು ಚೆನ್ನಾಗಿ ಬಲ್ಲೆ.
ವಾಮೆ-ನನಗೆ ಹೇಗೋ ಗೊತ್ತು?
ರಮ--ದೊಂಬರವಳಾಗಿದ್ದರೆ, ಅವಳನ್ನು ಎದೆಗೆ ಕಟ್ಟಿಕೊಂಡು
ಪ್ರೀತಿಸುತ್ತಿದ್ದಿಯಾ?
ವಾಮೆ -ಅಯ್ಯೋ, ಪಾಪ ಅನಾಥೆಯಾದ ಹುಡುಗಿ !
ವಾಮೆಯ ಕಂಠವು ಅದುರಿತು. ಅವಳು ಅಲ್ಲಿ ಶುಳತಿರಲಾರದೆ
ಹೋದಳು-ಹೊರಡುವುದಕ್ಕೆದ್ದಳು. ಅಪ್ಪರೊಳಗೆ ಮೋಹನನು, "'ವಾಮಾ
ತಾಯಿ ! " ಎಂದು ಕರೆದನು.
ವಾಮೆ -ಪುನಃ ಮತ್ತೇನು ?
ರಮ -_ತಾಯಿಗೆ ಹೇಳುವಿಯಾ?
ವಾಮ -ಏನೆಂದು ಹೇಳಲೋ ! ನಿನೊಬ್ಬ ಹುಚ್ಚನಾದೆ- ಇಂತಹ
ಮಾತನ್ನಾರಿಗಾದರೂ ಹೇಳುವುದುಂಟೆ?
ರಮ -ಹೇಳ'ದಿದ್ದರೆ ಸಾಗುವುದಿಲ್ಲ-ವೈದ್ಯನಾಥನ ಆಣೆ-ನಾನು
ನೀರದೆಯನ್ನು ಬಿಟ್ಟು ಮತ್ತಾ ರನ್ನೂ ಮದುವೆಯಾಗೆನು.
ವಾಮೆ -ನಿನಗೆ ನಿಜವಾಗಿ ಹುಚ್ಚು ಹಿಡಿದಿದೆ-ನಿರದೆಯನ್ನು ನುದುವೆ
ಯಾದರೆ ನಿನಗೆ ಜಾತಿಯುಳಿಯುವುದೆ?
----------------------------------------
೫೪ ನೀರದೆ
ರಮ--ನೀರದೆಗಿಂತ ಜಾತಿಯು ದೊಡ್ಮದಲ್ಲ-ಜಾತಿ, ಮತ, ಸಮಾಜ,
ಎಲ್ಲವೂ ರಸಾತಲಕ್ಕೆ ಹೋಗಲಿ-ನಾನು. ನೀರದೆಯನ್ನೇ ಮದುವೆಯಾ
ಗುವೆನು.
ವಾಮೆಯು ಇಹೊ.ಪಗೊಂಡವಳು, ಸ್ನಲ್ಪ ಉತ್ತೇಜಿತ ಕಂಠದಿಂದ
"ನಿನಗೇನೋ ಜಾತಿಯು ದೊಡ್ಡದಲ್ಲದಿರಬಹುದು-ನಮಗೆ ಜಾತಿಯೇ
ದೊಡ್ಡದು? ಎಂದಳು.
ರಮ -ನನ್ನ ಸುಖಶಾಂತಿಗಳಿಗಿಂತ ಜಾತಿಯು ದೊಡ್ಡದೆ ?
ವಾಮೆ--ನಿಮ್ಮ ತಾಯಿಯ ಸುಖಶಾಂತಿಗಳಿಗಿಂತ ನಿನಗೆ ನೀರದೆಯು
ಹೆಚ್ಚಾದಳೋ ?
ವಾಮೆಯು ಉತ್ತರವನ್ನು ಕೇಳುವುದಕ್ಕೆಮೊದಲು ಗರಗುರ ಎಂದು
ಎದ್ದು ಹೊರಟು ಹೋದಳು.
-----------
ಹದಿನೇಳನೆಯ ಪಠಿಚ್ಛೇದ.
ಸುದ್ದಿಯು ಗುಟ್ಟಾಗಿರಲಿಲ್ಲ - ಹೊರಪಟ್ಟು ಎಲ್ಲರಿಗೂ ತಿಳಿಯಿತು.
ಕ್ರಮವಾಗಿ ಯಜಮಾನಿಯ ಕಿವಿಗೆ ಬಿದ್ದಿತು. ಅವಳು ಕ್ರೋಧದಿಂದ
ಗರ್ಜಿಸುತ ವಾಮೆ.ಯನ್ನು ಚೆನ್ನಾಗಿ ತಿರಸ್ಕರಿದಳು.. ವಾಮೆಯ ತಪ್ಪೇ
ನೆಂದರೆ ಅವಳೇಕೆ ನೀರದೆಗೆ ಮನೆಯಲ್ಲಿರಲು ಸ್ಥಳವನ್ನು ಕೊಡಿಸಿದಳು ?
ವಾಮೆಯು ಚೆನ್ನಾಗಿ ಮಾತಿಗೆ ಮಾತನ್ನು ಜೋಡಿಸಿದಳು. ಅತ್ತ ಸರಿ
ಬೀಳದೆ ಯಜಮಾನಿಯು ನೀರದೆಯಮೇಲೆ ಬಿದ್ದಳು. ದಾಸಿಯ ವೃತ್ತಿಗೆ
ಯೋಗ್ಯೆಯಲ್ಲದವಳು ಸೊಸೆಯಾಗಬೇಕೆ ? ಯಜಮಾನಿಯ ಪ್ರಾಣವಿರು
ವವರೆಗೂ ಅದು ಸಾಗದು.
ಎರಡು ದಿನಗಳು ನೀರದೆಗೆ ಹೊಡೆತ, ಬೈಗಳೂ ಸಮ ಭಾವದಲ್ಲಿ
ಜರಿಗಿದುವು, ನಮಗೆ ತಿಳದು ಬಂದುದರಲ್ಲಿ ಆ ಎರಡುದಿನ ಕಾಗೆಯು ಮನೆ
ಯಮೇಲೆ ಹಾರಾಡುವುದಕ್ಕವಕಾಶವಿರಲಿಲ್ಲವೆಂದು ಶಿಳಯಬಂದಿತು, ಮನೆ
-----------------------------------------
ಹದಿನೇಳನೆಯ ಪರಿಚ್ಛೇದ ೫೫
ಯಲ್ಲಿ ನಿತ್ಯವೂ ಎರಡು ಬೆಕ್ಕುಗಳು ಕಾದಾಡುಶ್ತಿದ್ದುವು. ಆ ಎರಡುದಿಸ
ವೂಅವು ತಮ್ಮತಮ್ಮ ವ್ಯಾಜ್ಯವನ್ನು ತಂತಮ್ಮಲ್ಲಿ ಸರಿಮಾಡಿಕೊಂಡು ಭೀತ
ಚಿತ್ತವುಳ್ಕವವಾಗಿ ಒಂದು ಮೂಲೆಯಲಿ ಕುಳತು ಒಳೊಳ"ಗೆ ನಗುತಿದ್ದುವು.
ಸನ್ಯಾಸಿಯು ಬಂದು ಪುನಃ ಹೆಚ್ಚು ರಗಳಗೆ ಕಾರಣವಾಗುವುದಂದು ತಿಳದು
ಪಹರೆಯವರು ಅವನಾದರೂ ಜಟಾಧಾರವುಳ್ಳವನನ್ನು ಬಿೀದಿಯಲ್ಲಿ ಕಂಡರೆ
ಆ ಬಿದಿಗೆ ಬರಗೊಡಿಸರು. ರಮಣೀಮೋಹನನು ಆ ಎರೆಡು ದಿಸಗಳೂ ಆ
ವಾಗಲಾದರೂ ಒಮ್ಮೆ ಒಳಮಹಲಿಗೆ ಹೋಗುವನು.
ಮತ್ತೆ ನೀರದೆಯೋ? ನೀರದೆಯು ಆರಿಗೂ ಮುಖವನ್ನು ತೋ
ರಳು- ಒಳಮಹಲಿನಲ್ಲೊಂದು ಅಪರಿಷ್ಕಾರವಾದ ಕತ್ತಲೆ ಕೋಣೆಯಲ್ಲಿ
ಕುಳತು ರಾತ್ರಿಹಗಲು ಅಳುತ್ತಿರುವಳು ಅವಳು ಊಟವನ್ನು ಮಾಡಳು-
ನಿದ್ದೆಹೋಗಳು, ರಾತ್ರಿ, ಹಗಲು ಅವಳಿಗೊಂದೇ ಯೋಚನೆ. ಅವಳು
ಮನಸ್ಸಿನಲ್ಲಿ "ಅವನೇಕೆ ಅಂತಹಮಾತನ್ನು ವಾವೆಗೆ ಹೇಳಿದನು-
ನಾನೇನೋ ಚೆನ್ನಾಗಿದ್ದೆನು. ಅವನಿರುವ ಮನೆಯಲ್ಲಿ ನಾನೂ ಇರುತ್ತಿ
ದ್ದೆನು- ಅವನು ತಿರುಗಾಡುವ. ಸ್ಥಳವನ್ನು ನೋಡುತ್ತಿದ್ದೆನು. ಅವನೂ
ನನ್ನನ್ನು ನೋಡುವನು. ಅದನ್ನು ನಾನು ತಿಳದು ಕೊಳ್ಳುತ್ವಿದ್ದೆನು, ಆದ
ಮತ್ತಾವ ಸುಖವು ಬೇಕು? ನನಗಿಂತ ಮತ್ತಾರು ಹೆಚ್ಚು ಸುಖಿಯಾ
ಗಿದ್ದರು?". ಎಂದು ಭಾವಿಸಿಕೊಳ್ಳುವಳು.
ಪುನಃ "ನಿಜ ಅಂತಹ ದೇವರಂತಹವನ ಮನೆಯಲ್ಲಿ ದಾಸಿಯಾಗಿ
ರುವುದಕ್ಕೂ ನಾನು ಯೋಗ್ಯೆಯಲ್ಲ ನಾನೊಂದು ಅಗಣ್ಯಕೀಟ-ಅತನೋ-
ಏಷ್ಟೊಂದು ದೊಡ್ಡವ ! ಒಂದಾನೊಂದುದಿನ ಆತನ ಕೈಯಿಂದ ಒತ್ತಡವೆ
ಭಿಕ್ಷವನ್ನು ಪಡದಿದ್ದೆನು-ಅದರಿಂದಲ್ಲವೆ, ನನಗಿಷ್ಫೊಂದು ಅಹಂಕಾರ?
ಛಿ, ಛಿ! ಏನು ನಾಚಿಕಗೇಡು -ಅವನೇಕೆ ಅಂತಹ ಮಾತನ್ನು ವಾಮೆಗೆ ಹೇಳ
ದನು? ಮಸುಷ್ಕರಿಗೆ ಮುಖವನ್ನು ತೋರಲು ಲಜ್ಜೆಯಾಗಿದೆ '' ಎಂದ
ಭಾವಿಸುವಳು.
ನೀರದೆಯು ಎರಡು ದಿನಗಳಿಂದ ಊಟವನ್ನು ಮಾಡಲಿಲ್ಲವೆಂದು
ವಾಮೆಯು ಕೇಳಿದಳು. ಅವಳಗೆ ಬಹಳ್ ವೃಥೆಯಾಯಿತು. ಆದರೆ ನೀರ
ದಯ ಮುಖವನ್ನು ನೋಡಲವಳಿಗೆ ಪೃವೃತ್ತಿಯುಂಟಾಗಲಿಲ್ಲ. ನೀರದೆಯು
-----------------------------------------
೫೬ ನೀರದೆ
ಸರ್ವನಾಶಿನಿ-ರೂಪವನ್ನಿಟ್ಟು ಕೊಂಡು ಮೋಹನ್ನು ಮೋಹಗೊಳಿಸಿದಳು. .
ವಾಮೆಯು ಸ್ಫಲ್ಪ ರೇಗಿದರೆ ಹುಡುಗಿಗೆ ಮನೆಯಲ್ಲಿ ಅನ್ಪವು ಸಿಗುವು
ದೆಂದು ದಾಸದಾಹಿಯರೆಲ್ಲರೂ ತಿಳಿದಿದ್ದರು. ಅದರದು ನೀರದೆಗೆ ತಿಳಿ
ಯದು-ಅವಳಾ ಕತ್ತಲೆ ಕೋಣೆಯಲ್ಲಿ ಆಹಾರವಿಲ್ಲದೆ ನೆಲದ ಮೇಲೆ
ಬಿದ್ದಿದ್ದಳು.
ಮೂರನೆಯ ದಿನ ಯಜಮಾನಿಯು ಒಬ್ಬ ದಾಸಿಯ ಮೂಲಕ,
ನೀರದೆಯು ಮನೆಯನ್ನು ಬಿಟ್ಟು ಹೊರಟು ಹೋಗಬೇಕೆಂದು ಅವಳಗೆ
ತಿಳಿಸುವಂತೆ ಹೇಳಿ ಕಳುಹಿದಳು,
ದಾಸಿಯ ಹೆಸರು ರಾಧಿಕೆ -ಎಲ್ಲರೂ ಅವಳನ್ನು" ರಾಧಿ'' ಎಂದು
ಕರೆಯುವರು-ನೀರದೆಯನ್ನು ಈಂಡರೆ ಅವಳಿಗೆ ಅಗದು-ಅವಳು ನೀರದೆ
ಯನ್ನು ಮನೆಯಿಂದ ಹೊರಡಿಸಲು ಆನಂದದಿಂದ ಮಂದಾಳಾದಳು.
ರಾಧಿಯು ಹೋಗಿ ನೋಡಿದಾಗ ನೀರದೆಯು ಅಪಾದಮಸ್ತಕವೂ
ಸೆರಿಗಿನಿಂದ ಮುಚ್ಚಿ ದವಳಾಗಿ ನೆಲದ ಮೇಲೆ ಮಲಗಿದ್ದೆಳು-ಅಗ ಕಾರ್ತಿಕ
ಮಾಸ-ಛಳಿಗೆ ಪ್ರಾರಂಭವಾಗಿದ್ದಿತು; ನೀರದೆಗೆ ಹೊದ್ದುಕೊಳ್ಳಲು ಸರಿ
ಯಾದ ಬಟ್ಟೆಯಿಲ್ಲ.
ಹಸಿವಿನಿಂದಲೂ ಬಾಯಾರಿಕೆಯಿಂದಲೂ ನೀರದೆಗೆ ಪ್ರಾಣಹೋಗು
ತ್ತಿದ್ದಿತು. ಒಬ್ಬರಾದರೂ ಒಂದು ಥಾಲಿ ನೀರನ್ನು ತಂದುಕೊಡರು-ಅವಳು
ಬಿದ್ದಿದ್ದ ಕೋಣೆಯನ್ನು ಇಣಿಕಿನೋಡರು. ಅಭಾಗಿನಿಯಾದಾ ನೀರದೆಯು
ಒತ್ತ ಡವೆ ಎದ್ದು ಕುಳತುಕೊಳ್ಳುವಳು-ಕೂಡಲೆ ಮಲಗುವಳು-ನೀರಿಗೆ
ಸಲವಾಗಿ ಒದ್ದಾ ಡುವಳು.
ರಾಧಿಯು ಹೋಗಿ, " ಅದಾರೆ, ಮಲಗಿ ? ಏಳು -ಇನ್ನೇಕೆ ಈ
ಮನೆಯಲ್ಲಿರುವೆ? ಬಹಳವಾಯಿತು. ಮಾನದಿಂದೆದ್ದು ಹೊರಟು ಹೋಗು:
ಎಂದಳು,
ನೀರದಯು ಮಲಗಿದ್ದಳು. ಏಳಲಿಲ್ಲ-ರಾಧಿಯು ಮತ್ತಷು, ಘಟ್ಟಿ
ಯಾಗಿ "ಚೋಟುದ್ದ ಹುಡುಗಿಗೆ ಎಷ್ಟೊಂದು ನಿದ್ದೆ! ಯಜಮಾನಿಯ
ನಿನ್ನನ್ನು ಪಹರೆದವನಿಂದ ಹೊರಗೆ ಹೊರಡಿಸಲು ಹೇಳಿದ್ದಾಳೆ-ಮರ್ಯಾದೆ
ಯಿಂದೆದ್ದು ಹೋಗು '' ಎಂದಳು.
--------------------------------------------
ಹದಿನೇಳನೆಯ ಪರಿಚ್ಛೇದ ೫೭
ರಾಧಿ--ನಿಜವಲ್ಲದೆ ಪುಣ್ಯಕ್ಷೇತ್ರದಲ್ಲಿ ನಿಂತು ಸುಳ್ಳ ನ್ನ್ನು ಹೇಳು
ವೆನೆ? ನಿನ್ನನ್ನು ಸುಟ್ಟರು !
ನೀರ--ನಾನು-ಮತ್ತೆಲ್ಲಿಗೆ ಹೋಗಲಿ?
ರಾಧಿ-ನಿನಗೆ ಸ್ಥಳಕ್ಕೆ ಕಡಿಮೆಯೇ ? ದಾರಿಯಲ್ಲಿ ಹೋಗುತ್ತಿದ್ದರೆ
ಎಷ್ಟೋ ಸ್ವಳಗಳು ಸಿಗುವುವು.
ನೀರದೆಗದು ಚೆನ್ನಾಗಿ ಅರ್ಥವಾಗಲಿಲ್ಲ -ಅವಳಿಗದನ್ನು ತಿಳಿಯಹೇ
ಳಲು ರಾಧಿಯು ಅವಳ ಮುಖಕ್ಕೆ ಕೈತೋರುತ್ತ, "`ನಿನಗೆ ರೂಪವಿದೆ,
ಯೌವನವಿದೆ, ಹೋದೆಡೆ ಅವುಗಳನ್ನು ಮಾರಿಕೊಂಡು ಇದ್ದು, ತಿಂದು
ಕೊಂಡುಹೋಗು-ಸ್ವಳಕ್ಕೇನು ಕಡಿಮೆ-ಶ3ಗ ಐಳು " ಎಂದಳು.
ನೀರದೆಯೇಳಲಿಲ್ಲ-ರಾಧಿಯು, ಪಹರೇದವನನ್ನು ಕರೆಯಬೇಕೆ ?'
ಎಂದಳು. ನೀರದೆಯು ಅಳುತ್ತ ನೆಲದಮೇಲೆ ಮಲಗಿದ್ದಳು. ರಾಧಿಯು
ಕೋಪದಿಂದ ರೇಗಿ ಪಹರೇದನನನ್ನು ಕರೆಯಲು ಹೋದಳು.
ಪಹರೇದವನು ಚಿಕ್ಕದೊಂದು ಕೋಣೆಯಲ್ಲಿ ಕುಳಿತು ಸುಣ್ಣವನ್ನು
ಹಚ್ಚಿ ಹೊಗೆಲೆಯನ್ನು ತೀಡುತಿದ್ದನು. ರಾಧಿಯು ಹೋಗಿ, "ಚೋಬೆ
ಮಹಾಶಯ ! ಒತ್ತಡವೆ ವ.ನೆಯೊಳಗೆ ಬಾ-ಯಜಮಾನಿಯ ಅಪ್ಪಣೆಯಾ
ಗಿದೆ ಎಂದಳು.
ಕೈಯಲ್ಲಿ ಮಾಡುತಿದ್ದ ಕೆಲಸವನ್ನು ಬಿಡದೆ, "ಏನದು? '' ಎಂದು
ವಿಚಾರವನ್ನು ಮಾಡಿದನು.
ರಾಧಿ--ಒಬ್ಬ ಹುಡುಗಿಯನ್ನು ಮನೆಯಿಂದ ಹೊರಡಿಸಬೇಕು.
ಚೋಬೆ-ಸನ್ಮಾಸಿಯು ಪುನಃ ಬಂದನೆ?
ರಾಧಿ--ಇಲ್ಲವೊ-ಒಬ್ಬ ಹುಡುಗಿಯಿದ್ದಾಳೆ-ಅವಳನ್ನು ಹೊರಗೆ
ಹೊರಡಿಸಬೇಕು.
ಚೋಬೆ--ಅರನ್ನು ಹೊರಡಿಸಬೇಕು?
ರಾಧಿ-_-ನೀರಿಯನ್ನು
ಚೋಬೆ ಮಹಾಶಯನು ಹೋಗೆಲೆಯನ್ನು ಬಾಯಲ್ಲಿಟ್ಟು ಕೊಂಡು,
ದೊಡ್ಡದೊಂದು ಕೋಲನ್ನು ತೆಗೆದುಕೊಂಡು, "ಕತ್ತಿಯನ್ನೂ ತರ
ಬೇಕೆ? ?' ಎಂದನು.
---------------------------------------
೫೮ ನೀರದೆ
ರಾಧಿ--ಅಯ್ಯೊ, ಕೆಟ್ಟ ಮೋರೆಯವನೆ ! ನೀರಿಯಂತಹ ಚೋಟುದ್ದ
ಹುಡುಗಿಯನ್ನು ಹೊರಡಿಸುವುದಕ್ಕೆ ಕತ್ತಿಯು ಬೇಕೇನೊ?
ಆ ಮಾತು ರಮಣೀಮೋಹನನ ಕಿವಿಗೆ ಬಿದ್ದಿತು-ಅವನು ಬೈಠಕು
ಖಾನೆಯಲ್ಲಿ ಕುಳಿತಿದ್ದನು-ಅವನೆದ್ದು ಹೊರಗೆಬಂದು, "ಪಹರೆದವನಾರೊ?''
ಎಂದು ಕೂಗಿದನು.
"ಹುಜೂರ್ ! ?!"
" ರಾಧಿಯನ್ನು ಹಿಡಿದುಕೊ?
ಓಡಿ ಹೋಗಲು ರಾಧಿಗೆ ಅವಕಾಕವಾಗಲಿಲ್ಲ -ಚೋಬೆಮಹಾಶಯನು
ಭೀಮದರ್ಪದಿಂದ ಅವಳನ್ನು ಹಿಡಿದನು.
"ರಾಧಿ! " ರಾಧಿಯು ಆಗ ನಡುಗುತಿದ್ದಳು-ಪ್ರಭುವೂ ನಡುಗು
ತ್ತಿದ್ದನು-ಒಬ್ಬಳು ಭಯದಿಂದ. ಮತ್ತೊಬ್ಛನು ಕೋಪದಿಂದ- -
"ರಾಧಿ! ''
" ಅಪ್ಪಣೆ--ನಾನೇನನ್ನ್ಮೂ ಅರಿಯೆನು ''
" ನಿನಗಷ್ಟೊಂದು ಧೈರ್ಯವೆ? ನೀರದೆಯನ್ನು ಮನೆಯಿಂದ ಹೊರ
ಡಿಸುನಿಯಾ? ''
"ಬಾಬುಗಳೆ! ತಮ್ಮ ಪಾದದಾಣೆ , ನಾನೇನನ್ನೂ ಅರಿಯೆನು ''
"ಚೋಬೆ! ಕುತ್ತಿಗೆಯನ್ನು ಹಿಡಿದು ಒದ್ದು ಅವಳನ್ನು ಮನೆ
ಯಿಂದ ದೂರ ಹೊರಡಿಸು. "
" ಬೇಡ, ಬಾಬುಗಳೆ ! "
ಬಾಬುವು ಅಲ್ಲಿ ನಿಲ್ಲಲಿಲ್ಲ- ಅವನು ಅಂಬು ತಗಲಿದ ಹುಲಿಯಂತೆ
ಗರ್ಜಿಸುತ ಒಳಗಣ ಮಹಲಿಗೆ ಹೋಗಿ, ವೈಶಾಖದ ಮೇಘುದಂತೆ ಗಂಭೀರ
ಕಂಠದಿಂದ " ವಾಮಾತಾಯಿ ! ? ಎಂದು ಕರೆದನು.
ದಾಸದಾಸಿಯರು ಸಿಕ್ಕೆಡೆ ಬಿದ್ದು ಓಡಿ ಹೋದರು-ಅವರು ಬಾಬು
ವಿನ ಕೋಪವನ್ನು ಹಿಂದೆಂದೂ ಕಂಡಿರಲಿಲ್ಲ. ರಾಧಿಯು ಗಡಿಪಾರಾದುದನ್ನು
ಕಂಡು," ಮನೆಯಲ್ಲಿ ಪ್ರಳಯಕ್ಕಿಟ್ಟತು ! " ಎಂದಂದುಕೊಂಡರು.
ರಮಣೀಮೊಹನನು ಪುನಃ, " ವಾಮಾತಾಯಿ !" ಎಂದು ಕೂಗಿ
ದನು.
----------------------------------------
ಹದಿನೇಳಯ ಪರಿಚ್ಛೇದ ೫೯
ವಾಮೆಯು ಆಗ ಬಂದು ಬಿಸಿಲಲ್ಲಿ ತೆಲೆಯ ಕೂದಲನ್ನಾರಿಸಿಕೊಳ್ಳು
ತ್ತಿದ್ದವಳು, ರಮಣೀಮೋಹನನು ಕೂಗಿದುದನ್ನು ಕೇಳಿ ಬೇಗನೆ ಬಂದು
ಅವನೆದುರಿಗೆ ನಿಂತಳು.
ಮೋದನನ ಕಣ್ಣುಗಳೆರಡೂ ಅಶ್ರುಸಿಕ್ತವಾಗಿ ನೀರಿನ ಮೇಲಿನ
ಪದ್ಮದಂತೆ ಹಾಣುತಿದ್ದುವು.-ಶರೀರವು ಗಾಳಿಯಿಂದ ಹೊಡಿಯಲ್ಪಟ್ಟಿ ಪತಾಕ
ದಂತೆ ಕಂಪಿತವಾಗುತಿದ್ದಿತು. ನಾಸಿಕೆಯು ಅರಳಿದಂತಿದ್ದಿತು-ಓಷ್ಠವು
ಕಂಪಿತವಾಗುತಿದ್ದಿತು-ವಾಮೆಯೂ ಭೀತಿಗೊಂಡು ಉದ್ವಿಗ್ನೆಯಾಗಿ, "ಕರ
ದುದೇಕೆ್? ' ಎಂದಳು.
ಎರಡು ದಿನಗಳಲ್ಲಿ ಅವರವರಿಗೆ ಇದೇ ಪ್ರಥಮ ಸಂಭಾಷಣೆ-ಅದೇ
ಪ್ರಥಮ ಸಂದರ್ಶನ-ಏದಡು ದಿನಗಳು ಅವರವರು ನೊಡಲಿಲ್ಲ-ಮೋಹ
ನನು, "ನೀವೆಲ್ಲರೂ ಸೇರಿ ನೀರದೆಯನ್ನು ಮನೆಯಿಂದ ಹೊದಡಿಸಲು ಪ್ರಯ
ತ್ನಪಡುವಂತಿದೆಯಲ್ಲವೆ?" ಎಂದನು.
ವಾಮೆ--ಅದಾವದನ್ನೂ ನಾನರಿಯೆನು,
ಮೋಹನ... ಅವಳ ಅಪರಾಧವೇನು ?
ವಾಮೆ- ನಿಮ್ಮ ತಾಯಿಯನ್ನು ಕೇಳು.
ಮೋಹನ--ಅಪರಾಧವನ್ನು ಮಾಡಿದ್ದರೆ ನಾನದನ್ನು ಮಾಡಿದವನು-
ನನ್ನ ಅಪರಾಧಕ್ಕೆ ಸಲವಾಗಿ ನಿರಪರಾಧಿಯಾದಾ ಅನಾಥೆಯನ್ನು ಮನೆಯಿಂ
ದಟ್ಟುವಿರಾ ?
ವಾಮೆ-.-ಹಾಗಾದರೆ, ಅವಳನ್ನು ಸೊಸೆಮಾಡಿಕೊಂಡು ಮನೆಯಲ್ಲಿ
ಟ್ಟುಕೊಳ್ಳಬೇಕೆ?
ಮೋಹನ--ಸೊಸೆಯಾಗಬೇಡ-ಮನೆಯಲ್ಲಿ ಆಶ್ರಯವನ್ನು ಕೊಡ
ಬಹುದಲ್ಲವೆ?
ವಾಮೆ-- ಈ ಅವಸ್ಥೆಯಲ್ಲಿ ?.-ಇಷ್ಟೊಂದು ಹಗರಣವಾದ ಬಳಿಕ
ಅದಾಗುವುದಿಲ್ಲ.
ಮೋಹನ--ಹಾಗಾದರೆ ಅವಳೆಲ್ಲಿರುವಳು ?
ವಾಮೆ-.ಎಲ್ಲಿದ್ದಳೋ ಅಲ್ಲಿ.
ಮೋಹನ--ಅದೆಲ್ಲಿ?
----------------------------------------
೬೦ ನೀರದೆ
ವಾಮೆ-_ಬೀದಿಯಲ್ಲಿ.
ಮೋಹನ--ಬೀದಿಯಲ್ಲಿಯೆ ? ನೀರದೆಯು ಬೀದಿಯಲ್ಲಿರಲೆ ?
ನಾನಾರನ್ನು ಮನೆಗೆ ಸೊಸೆಯೆಂದು ಗ್ರಹಣಮಾಡಿರುವೆನೋ ಆಂತಹಳು
ಬೀದಿಯಲ್ಲಿರಲೆ ?
ವಾಮೆ--ಅಯ್ಯೊ, ರಾಮ. ಇಪ್ಟರೊಳ'ಗೆ ಇಷ್ಟೆ?
ಮೋಹನ -ಕೇಳು, ವಾಮೆ! ನನಗೆ ಕೋಪವನ್ನೆಬ್ಬಿಸಬೇಡ-ನೀರ
ದೆಯೆನಗೆ ಸಹ ಧರ್ಮಿಣಿ, ನೀರದೆಯೆನ್ನ ಸುಖದುಃಖಗಳಲ್ಲಿ ಭಾಗಿನಿ-
ನಾನು ಜೇವದಿಂದಿರುವಾಗ ನೀರೆಬೆಯು ಎಂದೂ ಭಿಕಾರಿಣಿಯಾಗಿ ಬೀದಿ
ಯಲ್ಲಿರಳು-ಬೀದಿಯಲ್ಲಿರಬೇಕಾದರೆ, ನಾನೂ
ಮಾತು ಪೂರೈಸಲಿಲ್ಲ `ಅಷ್ಟರೊಳಗೆ ಯಜಮಾನಿಯು ಬಂದು
ಬಿಟ್ಟಳು. ರಮುಣೀಮೋಹನನು ತಾಯಿಯನ್ನು ನೋಡದೆ ಆಲ್ಲಿಂದ ಹೊ
ರಟು ಹೋದನು,
ಅವನು ಹೇಳಿದಾ ಕಡೆಯ ವೂಾತುಗಗು ಉಚ್ಚಕಂಠದಲ್ಲಿ ಹೇಳಿದನು,
ಅವು ನೀರದೆಯ ಕಿವಿಗೂ ಮುಟ್ಟಿದವು; ಅವಳು ಹಸಿವೂ ಬಾಯಾರಿಕೆಗಳ
ನ್ನೆಲ್ಡಾ ಮರೆತುಬಿಟ್ಟಳು.
ವಾಮೆಯು ಮನಸ್ಸಿನಲ್ಲಿ, " ಇಷ್ಟು ದಿನ "ವಾಮಾತಾಯಿ ' ಯಾ
ಗಿದ್ದು ಈಗ " ವಾಮೆ'' ಯಾದೆನು'' ಎಂದು ಭಾವಿಸಿಕೊಂಡಳು. "ಆ ನತ
ದೃಷ್ಟೆಗೆ ಮನೆಯನ್ನ ಸ್ಥಳವೇಕೆ ಕೊಟ್ಟೆನೋ' ಎಂದಂದುಕೊಂಡಳು,
...........
ಹದಿನೆಂಟನೆಯ ಪರಿಚ್ಚೇದ.
ಆ ದಿಸವೆಲ್ಲಾ ಮನೆಯಲ್ಲೂರಿಗೂ ಅನ್ನಾಹಾರವಿಲ್ಲ- ಹುಡುಗನು
ಊಟಮಾಡಲಿಲ್ಲವಾಗಿ ತಾಯಿಯು ಊಟಮಾಡಳು. ಯಜಮಖನಿಗೆ ಊಟ
ವಿಲ್ಲದೆ ದಾಸಿದಾಸಿಯರಾರೂ ಬುಯಿಗೆ ತುತ್ತೆತ್ತಲಿಲ್ಲ.
-------------------------------------
ಹದಿನೆಂಟನೆಯ ಪರಿಚ್ಛೇದ ೬೧
ವ್ಯಾಪಾರವು ಗುರುತರವಾಗುತ ಬಂದಿತು. ವಾಮೆಗದು ಗೊತ್ತಾ
ಯಿತು-ಆದರೆ ಅವಳೇನನ್ನು ಮಾಡಲಾಪಳು ? ಮೋಹನನು ನೀರದೆಯನ್ನು
ಮದುವೆಯಾಗಕೂಡದು. ಮದುವೆಯಾಗುವ ಮಾತು ಹಾಗಿರಲಿ_ಪ್ರಕ್ಸತ
ಸ್ಥಿತಿಯನ್ನು ಯೋಚಿಸಿ ನೋಡಿದರೆ, ಹುಡುಗಿಯನ್ನು ಮನೆಯಲ್ಲಿಟ್ಟುಕೊ
ಳ್ಳುವುದೂ ಕರ್ತವ್ಯವಾಗಿ ಕಂಡುಬರಲಿಲ್ಲ-ನೀರದೆಯನ್ನು ಕಣ್ಣುಮರೆ
ಮಾಡುವುದು ಹೊರ್ತು ಉಪಾಯುಂತರವು ತೋರಲಿಲ್ಲ-ಹಾಗೆ ಮಾಡು
ವುದು ರಗಳೆಗೆ ಕಾರಣವಾಗುವ್ತದು, ವಾಮೆಯು ಎಷ್ಟೊಂದು ಯೋಚಿಸಿ
.ದರೂ ಕೂಲವು ಸಿಗದು.
ಯಜವಮಾನಿಗಿರುವ ಬಲವೆಲ್ಲಾ -ತರ್ಜನೆ ಗರ್ಜನೆ-ಆದೂ ಕಡಿಮೆ
ಯಾಗರಿಲ್ಲ. ಭೂಮಿಯು ಕಡಗೆ ಕೊನೆಗಾಣುವಂತೆ ಅವಳ ತರ್ಜ್ಹನಗ
ರ್ಜನೆಗಳೂ ಕೊನೆಗಂಡುವು-ಮನೋವ್ಯಥೆಯಿಂದಲೂ ಅನಾಹಾರದಿಂದಲೂ
ಯಜಮಾನಿಯು ಪರಿತ್ರಾಂತೆಯಾದಳು.
ವಾಮೆಯು ಬಂದು ಸವಮ ಧಾನಗೊಳಸಲಾರಂಭಿಸಿದಳು... ಯಜ
ಮಾನಿಯು, " ನನ್ನ ಸಮಾಧಾನದಿಂದಾಗುವುದೇನು, ವಾಮೆ? ಸಂಸಾರಕ್ಕೆ
ಏಕಮಾತ್ರ; ಅವಲಂಬನವಾದವನು ಅವಿಧೇಯನಾದರೆ ನನಗೆ ಸಮಾಧಾನ
ವನ್ನು ಹೇಳುವುದರಿಂದ ಪ್ರಯೋಜನವೇನು? ? ಎಂದು ಹೇಳ ಮುಖಕ್ಕೆ
ಸೆರಗನ್ನು ಮುಚ್ಚಿಕೊಂಡು ಅತ್ತಳು. ವಾಮೆಯು "ಹಾಗೆ ಹೇಳಕೂ
ಡದು-ಹುಡುಗನೆಂದೂ ನಿನಗೆ ಅವಿಧೇಯನಲ್ಲ-ಪುಣ್ಯವನ್ನು ಮಾಡಿದ್ದರೆ
ಅಂತಹ ಮಗನು ಹುಟ್ಟುವನು 2 ಎಂದಳು,
ಯಜಮಾನಿ...ಅವಿಧೇಯನಲ್ಲವೆ ?
ವಾಮೆ-.ನೀಸು ಹೇಳದುದಾವದನ್ತು ಆವನು ಮಾರಿ ನಡಿದಿದ್ದಾನೆ ?
ಯಜಮಾನಿ -ಮಾತಿನಲ್ಲಿ ಆವಿಧೇಯನಾಗದಿದ್ದರೂ ಕಾರ್ಯದಲ್ಲಿ
ಅವಿಧೇಯನಾಗಿದ್ದಾನೆ.
ವಾಮೆ..ಕಾರ್ಯದಲ್ಲಿಯೆ ? ಅವದರಲ್ಲಿ, ಹೇಳು?
ಯಜಮಾನಿ. .ಹಾಳಾದಾ ನೀರಿಯನ್ನು ಮದುವೆಯಾಗಲೆಳಸಲೇಕೆ?
ವಾಮೆ ಅವನು ಮದುವೆಯಾಗಿಲ್ಲ -ನೀನೊಪ್ಪಲಿಲ್ಲ. ಅವನೂ ಮದು
ವೆಯಾಗಲಿಲ್ಲ.
----------------------------------------
೬೨ ನೀರದೆ
ಯಜಮಾಾನಿ--ನಾನು "ರಾಮ, ಕೃಷ್ಣ " ಎಂದು ಸುಖವಾಗಿದ್ದೆನು-
ನನ್ನಾ ಸುದವನ್ನು ನಪ್ಟ್ರಪಡಿಸಿದನು.
ವಾಮೆ--ನೋಹಸನು ಏನನ್ನೂ ಮಾಡಲಿಲ್ಲ ; ಹಾಳಾದಾ ಹುಡು
ಗಿಯು ಮಾಡಿದವಳು.
ಬಳಕ ಅವರಿಬ್ಬರೂ ನೀರದೆಯ ಮೇಲೆ ಬಿದ್ದರು. ಬೈಗಳು ಬಾಕಿ
ಉಳಿಯಲಿಲ್ಲ- ಆ ಅಭಿಧಾನವು (Dictionary -ನಿಘಂಟು) ಪೂರೈಸಿದ ಬಳಕ
ನೀರದೆಯನ್ನು ಸ್ಥಾನಾಂತರ ಮಾಡುವ ಬಗೆಯನ್ನು ಕುರಿತು ಆಲೋಚಿಸಿ
ದರು-ಆಲೋಚನೆಯಾವದೂ ಸರಿಯಾಗಲಿಲ್ಲ-ಯಜಮಾನಿಯು ವಾಮೆಯ
ನ್ನು ಬಿಟ್ಟು ಸುಖಿ ವಿಂಖಿ ಮತ್ತೊಬ್ಬ ಮುದಿದಾಸಿಯನ್ನು ಹಿಡಿದಳು
ದಾಸಿಯು, " ಯೋಚನೆಯೇಕ ? ನಾನು ನೀರಿಯನ್ನು ನಿಮಿಷದಲ್ಲಿ ಕಣ್ಣು
ಮರೆ ಮಾಡುವೆನು '' ಎಂದಳು.
ಯಜಮಾನಿಯು ಪುಲಕಿತೆಯಾಗಿ ಅವಳನ್ನು ಸಂಗಡ ಕರಕೊಂಡು
ಮಹಡಿಯ ಮೇಲೆ ಹೋದಳು, ಆಲ್ಲರೂ ಇಲ್ಲದೆಡೆ ಕಳಿತು ಬಹಳ
ಹೊತ್ತು ಆಲೋಚಿಸಿದರು. ಆಲೋಚನೆಯಾದ ಬಳಕ ಕೆಳಗಿಳಿದುಬಂದು
ಯಜಮಾನಿಯು, "ಇಂದು ರಾತ್ರಿಯೇ ರಯಿಲನ್ನು ಹತ್ತಿ ದೇಶಕ್ಕೆ ಹಿಂದಿ
ರುಗುಬೇಕು?' ಎಂದು ಎಲ್ಲರಿಗೂ ತಿಳಸಿದಳು.
ಸಾವಾನುಗಳನ್ನು ಕಟ್ಟುವ ಗದ್ದಲವು ಹತ್ತಿತು-ಹಾಸಿಗೆ, ಟ್ರಂಕು
ಗಳು, ಪೆಟ್ಟಿಗೆಗಳು, ಪಾತ್ರಪದಾರ್ಥಗಳು, ಬಟ್ಟೆ ಯ ಗಂಟುಗಳು, ಇವು
ಗಳನ್ನು ಕಟ್ಟುವ. ಗದ್ದಲಕ್ಕೆ ಪ್ರಾರಂಭವಾಯಿತು.ಆ ಕೆಲಸದ ಮಧ್ಯೆ
ಯಜಮಾನಿಯೂ ವಾಮೆಯೂ ಮನಸ್ಸಿನಲ್ಲಿ " ಮೋಹನನು ಹೊರಡು
ವನೆ? ? ಎಂದು ಅನೇತಡವೆ ಹೇಳಿಕೊಂಡರು,
ಮೋಹನನು ಅವಿಧೇಯನಲ್ಲ- ಹೊರಡುವುದಕ್ಕೆ ಬದ್ದವಾದನು-
ಅದರೆ ನೀರದೆಯೊ? ಅವಳ ಯೋಜನೆಯು ಎಲ್ಲರಿಗೂ ಹುಟ್ಟಿ ಅವರು,
ವಾಮೆಯನ್ನೂ ಯಜಮಾನಿಯನ್ನೂ "ನೀರದೆಯು ಎಲ್ಲಿರುವಳು ?"
ಎಂದು ವಿಚಾರವನ್ನು ಮಾಡುವರು.
ಯಜಮಾನಿಯು, ತನ್ನ ಅಭಿಪ್ರಾಯವನ್ನು ಹೊರಗೆ ಬಿಡದೆ,
"ನೋಡೋಣ ಏನಾಗುವುದೊ? '' ಎನ್ನುವಳು.
--------------------------------------
ಹದಿನೆಂಟನೆಯ ಪರಿಚ್ಛೇದ ೬೩
ಯಜಂಆನಿಗೆ ಮತ್ತೇನೋ ಅಭಿವಾಯವಿರಬೇಕೆಂದು ವಾಮೆಯು
ತಿಳದುಕೊಂಡಳು. ಅವಳ ಅಭಿಪ್ರಾಯವು ವಾಮೆಗೆ ಗೊತ್ತಾಗಲಿಲ್ಲ.
ಸಾಯಂಕಾಲವಾಗುತ ಬಂದಿತು. . ಆಗ ದಾಸಿ ಸುಖಿಯು ನೀರದೆಯ ಬಳಿ
ಹೋಗಿ ಅವಳನ್ನೆಬ್ಬಿಸಿ ಮುಖವನ್ನು ತೊಳದುಕೆೊಳ್ಳಲು ನೀರನ್ನು ಕೊಟ್ಟು
ಊಟವನ್ನು ಮಾಡಿಸಿದಳು, ಅವಳಗೆ ಸಲವಾಗಿ ಅನೆಕ "ಆಹಾ ' ಊಹೂ!"
ಗಳನ್ನು ಹೇಳಿ ಬಹಳ ಮರುಗಿದವಳಂತೆ ನಟಿಸಿದಳು, ನೀರದೆಯು ಕೇಳಿ
ಕರಗಿಹೋದಳು ಅವಳು ಪ್ರಕೃತಸ್ಥೆಯಾದ ಬಳಕ, "ಇಂದು ನಾವೆಲ್ಲರೂ
ದೇಶಕ್ಕೆ ಹೆೊರಡಬೇಕು ' ಎಂದಳು.
ನೀರದೆ -ನಾನೊ?
ಸುಖಿ..ನೀನೂ ಹೊರಡದೆ ಉಂಟೆ? ನೀನೂ ಹೊರಡುವೆ.
ನೀರದೆಯ ಮುಖವು ಪ್ರಫುಲ್ಲವಾಯಿತು.. ಅವಳ ಮನಸ್ಸಿನಲ್ಲಿ,
" ನೀರದೆಯು ಸನ್ಫ ಸಹಧರ್ಮಿಣಿ ನೀರದೆಯು ನನ್ಸ ಸುಖಡುಃಖಗಳಲ್ಲಿ
ಭಾಗಿನಿ " ಎಂಬೀ ಮಾತುಗಳು ಚೆನ್ನಾಗಿ ನಾಟಿ ನೆಲೆಗೆೊಂಡಿದ್ದುವು. ಆ
ಎರಡು ಮಾತುಗಳು ನಿರಂತರವಾಗಿ ಅವಳ ಹೃದಯದಲ್ಲಿ ಜಾಗರಿತವಾಗಿ
ದ್ದುವು. ನೀರದೆಗಿಂತ ಮತ್ತಾರು ಹೆಚ್ಚು ಸುಖಿಯರು)?
ಸುಖಿ-ಏನೆ. ನೀನು ದೇವರನ್ನು ನೋಡಿದಿಯಾ?
ನೀರದೆ ಆವ ದೇವರು ?
ಸುಖಿ .-ಅವ ದೇವರೆ? ಬಾಬಾಜಿ ವೈದ್ಯನಾಥ ದೇ.ವರು.
ನೀರದೆ- ಇಲ್ಲ-ನೋಡಿಲ್ಲ.
ಸುಖಿ. -ಹೊರಡು- ಪ್ರಯಾಣಕ್ಕೆ ಮೊದಲು ನಾವಿಬ್ಬರೇ ಹೋಗಿ
ದೇವರ ದರ್ಶನವನ್ನು ಮಾಡಿಕೊಂಡು ಬರೋಣ.
ನೀರದೆ--ಹೊತ್ತಾ ಗುಪವುದೇನೊ?
ಸುಖಿ ಬಹಳ ಹೊತ್ತಿದೆ ರಾತ್ರಿ ಹನ್ನೆರಡು ಘುಂಟೆಗೆ. ಗಾಡಿಯು
ಹೊರಡುವುದು.
ನೀರದೆ-ರಾತ್ರಿ, ದೇವರ ದರ್ಶನವನ್ನು ಮಾಡುವುದೆ?
-------------------------------------
೬೪ ನೀರದೆ
ಸುಖಿ- ರಾತ್ರಿಯೇ ದೇವರಿಗೆ ಬಹ ಅಲಂಕಾರಗಳನ್ನು ವಾಡು
ತ್ತಾರೆ-ಆ ಸಮಯದಲ್ಲಿ ದರ್ಶನವನ್ನು ಮಾಡಿ, ಅವ ಇಷ್ಟಾರ್ಥವನ್ನು
ಬೇಡಿಕೊಂಡರೂ ಅದು ಕೈಗೂಡುವುದು.
ನೀರದೆಯು ತನ್ನ ಿಷ್ಟಾರ್ಥವೂ ಕೈಗೂಡುವುದೆ? ಎಂದು ಭಾವಿ
ಸಿಕೊಂಡು ಎದ್ದಳು. ಇಬ್ಬರೂ ಸದ್ದಿಲ್ಲದೆ ಮನೆಯಿಂದ ಹೊರಟರು,
................
ಹತ್ತೊಂ೦ಭತ್ತನೆಯ ಪರಿಚ್ಛೇದ.
ದೇವರ ದರ್ಶನವನ್ನು ಮಾಡಿ ನೀರದೆಯ ಹೃದಯವು ಭಕ್ತಿಯಿಂದ
ಪೂರಿತವಾಯಿತು.. ಅವಳು ದೇವರ ಮುಂದ ನಿಂತು, "ದೇವರೆ! ಅವನು
ಸುಖಿಯಾಗಿರಲಿ' ? ಎಂದು ಕಾಯಮನೋವಾಕ್ಕುಗಳಿಂದ ಪ್ರಾರ್ಥಿಸಿದಳು.
ಆ “ ಅವನು'' ಅರು? ರಮಣೀಮೋಹನನ್ನು ಬೆಟ್ಟರೆ ನೀರದೆ ಬೇರೆ
ಎರಡನೆಯ " ಅವನು'' ಪ್ರಸಂಚದಲ್ಲಿಲ್ಲ.
ನೀರದೆಯು ದೇವರಿಗೆ ಪ್ರಣಾಮವನ್ನು ಮಾಡಿ ಎದ್ದು ನೋಡಿದಳು
ಪಾರ್ಶ್ವದಲ್ಲಿದ್ದ ಸುಖಿಯಿರರಿಲ್ಲ... ಮಂದಿರದಲ್ಲಿ ನಾಲ್ಕೂಕಡೆ ನೋಡಿ
ದಳು-ಅವಳೆಲ್ಲಿಯೂ ಕಾಣಲಿಲ್ಲ _ನೀರದೆಯು ಬೇಗನೆ ಬಾಗಲಿಗೆ ಬಂದಳು.
ನಾನಾ ದೇಶಗಳ ಜನರು ಬಂದು ಹೋಗುವರು-ಸುಖಿಯು ಮಾತ್ರ ಕಾಣ
ಲಿಲ್ಲ-ಪ್ರಾಕಾರದ ಸುತ್ತ ಹುಡುಕಿದಳು- ಎಲ್ಲಿಯೂ ಕಾಣಲಿಲ್ಲ. ಬಳಿಕ
ನೀರದೆಯು ಕ್ಷಾಂತೆಯಾಗಿ ಮುಂದಿರದ ಬಾಗಲಿಗೆ ಹತ್ತರ ಹೋಗಿ ಒತ್ತಟ್ಟು
ಕುಳತುಕೊಂಡವಳು, ಸುಖಿಯು ಮಂದಿರದೊಳಗೆ ತನ್ನನ್ನು ಹುಡುಕು
ತ್ತಿವಳೆಂದು ತಿಳಿದು ಕೊಂಡಳು. ಲಿ ನಾ ೦ ದೆ ೪ `` ಗ್ರ
ತಿ ರುವಳೆಂದು ಶಿಳದುಕೊಂಡಳು. ಬಳಕ ಮಂದಿರದೊಳಗೆ ಹೋಗಲು
ಪ್ರ)ಯತ್ನಿಸಿದಳು ; ಬಂದು ಹೋಗುತ್ತಿದ್ದ ಜನರ ಗುಂಪು ಆತಿಯಾಗಿದ್ದು
ದರಿಂದ ಮುಂದುವರಿದು ಹೋಗಲಾಗಲಿಲ್ಲ. ಬಳಕ ಮನೆಗೆ ಹಿಂದಿರಿಗಿ ಹೋ
ಗೋಣನೆ? ಎಂದು ಯೋಚಿಸಿದಳು-ಆದರೆ ಕತ್ತಲೆಯಲ್ಲಿ ಮನೆಗೆ ಹೋಗುವ
ಹಾದಿಯು ಗೊತ್ತಾಗದು ಅದಲ್ಲದೆ ಒಬ್ಬಳೇ ಹೋಗುವುದು ಹೇಗ? ನೀರ
-------------------------------------------
ಹತ್ತೊಂಬತ್ತನೆಯ ಪರಿಚ್ಛೇದ ೬೫
ದೆಯು ಕಿಂಕರ್ತವ್ಯವಿಮೂಢೆಯಾಗಿ ನಾಲ್ಕೂಕಡೆ ನೋಡಿದಳು. ಯುವಾಪು
ರುಸನೊಬ್ಬನು ನಿಂತಿದ್ದನ್ನು ನೋಡಿದಳು ಅವನದನ್ನು ಕಂಡನು.
ಆ ಯುವಕನು ವೀರಭೂಮಿಯ ಪ್ರಾಂತ್ಯದೊಬ್ಬ ಜಮಾನುದಾರನ
ಮಗನಾಗಿದ್ದನು-ಹೆಸರು ರತ್ನೆಶ್ವರ_ ಅವನು ವಾಯುಪರಿವರ್ತನೆಗೆ ಸಲವಾಗಿ
ಮಧುಪುರಕ್ಕೆ ಬಂದಿದ್ದನು-ವಿದ್ಯವಿಲ್ಲದ ಧನವಂತರಾದ ಯುವಕರ ರೀತಿ
ನೀತಿ ಚರ್ಯಗಳು ಹೇಗೆ ಸಾವಾನ್ಯನಾಗಿರುವುವೋ, ರತ್ನೆಶ್ವರನ ರೀತಿ
ನೀತಿ ಚರ್ಯೆಗಳೂ ಹಾಗಿದ್ದುವು- ಅವನೊಬ್ಬ ಸ್ನೇಹಿತನನ್ನು ನೋಡಲು
ಅಂದು ದೇವಗಡಕ್ಕೆ ಬಂದಿದ್ದಸು-ದೇವರ ದರ್ಶನಕ್ಕೆ ಅಲ್ಲದಿದ್ದರೂ ಮಂದಿ
ರವನ್ನು ನೋಡುವುದನ್ಕೆ ಸಲವಾಗಿ ಬಂದಿದ್ದ ವನು ನೀರದೆಯನ್ನು ನೋಡಿ
ದನು-ನೋಡಿ ಅವಳ ಭಾವಗತಿಕಗಳನ್ನು ಈಂಡು ಸಂಗಡ ಬಾದಿದ್ದವಳನ್ನು
ಕಳೆದುಕೊಂಡಿವ್ದಳೆಂದು ತಿಳವವನಾಗಿ, "" ಹೆಂಗಸೊಬ್ಬಳು ನಿನ್ನನ್ನು ಹುಡು
ಕುತಿದ್ದಳು " ಎಂದು ಹೇಳಿದನು.
ನೀರದೆಯು ಲಜ್ಜೆಯನ್ನುಬಿಟ್ಟು ಉತ್ಸುಕದಿಂದ "ಎಲ್ಲಿ" ಎಂದಳು.
ಯುವಕ--ದೊಡ್ಡ ಮಾರ್ಗವಾಗಿ ಹೋಗುತ್ತಿದ್ದಳು. ನಾವು ಬಂಡಿ
ಯಲ್ಲಿ ಹೋದರೆ ಅವಳು ಸಿಕ್ಕುವಳು.
ನೀರದೆಯು ಸ್ಟಲ್ಪವೂ ಯೋಚಸದೆ -ಅವನನ್ನು ಬೆನ್ನಟ್ಟಿ ಹೋ
ದಳು. ಅವರಿಬ್ಬರೂ ಮಂದಿರವನ್ನು ಬಿಟ್ಟು ಬೀದಿಗೆ ಬಂದರು-ಅಲ್ಲೊಂದು
ಬಂಡಿಯು ಯುವಕನಿಗೆ ಸಲವಾಗಿ ಕಾದು ನಿಂತಿದ್ದಿತು. ಯುವಕನು ನೀರದೆ
ಯನ್ನು ಬಂಡಿಯಲ್ಲಿ ಹತ್ತಿಸಿ, ತಾನು ಕೋಚಮಾನನು ಕುಳಿತುಕೊಳ್ಳುವ
ಸ್ಥಳದಲ್ಲಿ ಕುಳಿತುಕೊಂಡನು-ಬಂಡಿಯು ನಕ್ಷತ್ರವೇಗದಿಂದ ಹೊರತು,
" ಒಂದು ಫಂಟೆಯ ಹೊತ್ತಿನಲ್ಲಿ ಬಂಡಿಯು ವೈದ್ಯನಾಥದ ಜಂಕಷನ್
ಬಳಿ (Junction -ಮೂರು ನಾಲ್ಕು ಕಡೆಗಳಿಂದ ಬಂಡಿಗಳು ಬಂದು
ಸೇರುವ ಸ್ಥಳ) ಬಂದಿತು. ಯುವಕನು ಕೋಚುಬಾಕ್ಸಿಂದಿಳದು ಬಂದು
ಬಂಡಿಯ ಬಾಗಿಲನ್ನು ತೆರದನು-ಆಗ ನಿಲ್ದಾಣಕ್ಕೆ (Station) ಬಂಡಿಗಳು
ಬಂದಿದ್ದುವು. ನೀರದೆಯು "" ನಾವೆಲ್ಲಿಗೆ ಬಂದೆವು? " ಎಂದು ವಿಚಾರಿ
ಸಿದಳು.
------------------------------------------
೬೬ ನೀರದೆ
ಯುವಕನು ಅದಕ್ಕ ಉತ್ತರವನ್ನು ಕೊಡದೆ, "ಬೇಗನೆ ಇಳಿ -
ಹೊರಡುವ ಬಂಡಿಗಳು ಬಂದು ನಿಂತಿವೆ " ಎಂದನು.
ನೀರವೆಯೇನೋ ಬಂಡಿಯಿಂದಿಳದಳು. ರತ್ನೇಶ್ವರನ ಸಂಗಡಹೋಗಲು
ಬಂಡಿಯನ್ನು ಹತ್ತಲೊಪ್ಪಲಿಲ್ಲ--ರತ್ನೇಶ್ವರನು ಅವಳ ಕೈಯನ್ನು ಹಿಡಿ
ಯಲು ಹೋದನು. ಅದಾಗಲಿಲ್ಬ. ನೀರದೆ ಕ್ರೋಧಗೊಂಡ ರಾಜ
ಹಂಸಿಯಂತೆ ಕುತ್ತಿಗೆಯನ್ನು ಬೊಗ್ಗಿಸಿ ಸರಿದು ದೂರ ನಿಂತು, "ನೀನು
ಸುಳ್ಳನ್ನು ಹೇಳಿ ನನ್ನನು ಇಲ್ಲಿಗೆ ಕರತಂದಿರುತ್ತಿ" ಎಂದಳು.
ಅವರವರಿಗೆ ವಾಚಾಟವಾಗಿ ಗದ್ವಲಕ್ಕಿಟ್ಟಿತು--ನಿಲ್ದಾಣದ ಕರ್ಮ
ಚಾರಿಗಳು ಬಂದು ನಿಂತರು-ರತ್ನೇಶ್ವರನು ಅಲ್ಲಿರುವುದು ಸರಿಯಲ್ಲವೆಂದು
ಗುಂಪಿನಲ್ಲಿ ಅದೃಶ್ಯನಾದನು.. ಕರ್ಮಚಾರಿಗಗಳು ನೀರದೆಯನ್ನು ಸುತ್ತಿ
ಕೊಂಡರು-ಅವರು ಕೆಟ್ಟ ಯೊಸಚನೆಯಿಂದ ಅನಳನ್ನೊಂದು ತಟ್ಟೆಡದಲ್ಲಿ
ಟ್ಟಿರಬೇಕೆಂದು ಗೊತ್ತು ಮಾಡಿಕೆೊಂಡು ಅವಳನ್ಟೊಯ್ಬು ಒಂದು ಕತ್ತಲೆ
ಮನೆಯಲ್ಲಿಟ್ಟು ಬೀಗವನ್ನು ಹಾಕಿದರು. ಅ ಮನೆಯು ನಿಲ್ದಾಣದೊಬ್ಬ ಮ
ಕರ್ಮಚಾರಿಗೆ ಸೇರಿದುದು, ಅವನ ಪರಿವಾರದವರಾರೂ ಇರಲಿಲ್ಲೃ-ಅಲ್ಲೊ
ಬ್ಬನೇ ವಾಸವಾಗಿದ್ದನು ನೀರದೆಯು ವ್ಯಾಘ್ರದ ಕಬಳದಿಂದ ರಕ್ಷಿತೆ
ಯಾಗಿ ಸರ್ಪದ ವಿವರದಲ್ಲಿ ಪ್ರವೇಶಿಸಿದಂತಾಯಿತು.
....
ಇಪ್ಪತ್ತನೆಯ ಪರಿಚ್ಛೇದ.
ಸಾಯಂಕಾಲ ಕತ್ತಲೆಯಾಗುತ್ತ ಬಂದ ಬಳಕ ಯಜಮಾನಿಯು
ಸಪರಿವಾರವಾಗಿ ನಿಲ್ದಾಣಾಔಭಿಮುಖವಾಗಿ ಪ್ರಯಾಣ ಮಾಡಿದಳು- ಕೆಲವು
ಸಾಮಾನುಗಳೂಡನೆ ಅನಳ ಜನರು ಮೊದಲು ಅಲಿಗೆ ಬಂದಿದ್ದರು-ಎಲರೂ
ಬಂಡಿಯನ್ಸು ಹತ್ತಿದರು -ಕತ್ತಲಲ್ಲಾರು ಅವ ಬಂಡಿಯಲ್ಲಿ ಕುಳತರೋ
ರಮಣೀಮೊಹನನಿಗದು. ಗೊತ್ತಾಗಲಿಲ್ಲ-ಅನನೊಬ್ಬನೇ ಒಂದು ಗಾಡ
ಯಲ್ಲಿ ಕುಳಿತನು,
-----------------------------------------
ಇಪ್ಪತ್ತನೆರು ಪರಿಚ್ಛೇದ ೬೭
ದೇವಗಡೆದ ನಿಲ್ದಾಣಕ್ಕೆ ಬಂದ ಬಳಿಕ ನೀರದೆಯು ಬರಲಿಲ್ಲವೆಂದು
ಮೋಹನನಿಗೆ ತಿಳಯಬಂದಿತು-ನೀರದೆಯು ಎಲ್ಲಿಗೆ ಹೋದಳು? ರಮ
ಲೀಮೋದಹನನು ಅದೇ ಬಂಡಿಯಲ್ಲಿ ಕುಳಿತು ಪುನಃ ಹಿಂದಕ್ಕೆ ಮನೆಗೆ
ಹೋಗಿ ಮನೆಯನ್ನೆಲ್ಲಾ ಚೆನ್ನಾಗಿ ಹುಡುಕಿದನು. ನೀರದೆಯು ಸಿಗಲಿಲ್ಲ-
ಪುನಃ ನಿಲ್ದಾಣಕ್ಕೆ ಬಂದನು-ಅಲ್ಲಿಯೂ ನೀರದೆಯಿರಲಿಲ್ಲ _ಅವನು ಉದ್ವಿ
ಗ್ನಚಿತ್ತನಾಗಿ ಒಬ್ಬ ಸೇವಕನನ್ನು ಕುರಿತು, “ ನೀರದೆಯು ಎಲ್ಲಿ? ?
ಎಂದು ವಿಚಾರಿಸಿದನು.
ಸೇವಕ-ಅವಳನ್ನು ಸುಖಿಯ ಸಂಗಡ ನೋಡಿದ್ದೆನು.
ಮೊಹನ -ಸುಖಿನು ಸಂಗಡ? ಅವಾಗ?
ಸೇವಕ-..ಸಾಯಂಕಾಲದಲ್ಲಿ.
ಮೋಹನ... ಎಲ್ಲಿ ನೊಡಿದ್ದೆ ?
ಸೇವಕ.ನಾನು ಬಂಡಿಯನ್ನು ಸರಿಮಾಡಿಸಿಕೊಂಡು, ಆಂಗಡಿಯ
ಬೀದಿಯಲ್ಲಿ ಬರುತ್ತಿದ್ದಾಗ ಅವರು ಅಂಗಡಿಯ ಬೀದಿಗಾಗಿ ಹೋಗು
ತ್ತಿದ್ದರು.
ಮೊಹನ-ಸುಖಿಯನ್ನು ಬರಹೇಳು.
ಸುಖಿಯು ಬಂದಳು. ನೀರದೆಯನ್ನು ಮಂದಿರದಲ್ಲಿ ಬಿಟ್ಟು ಅವಳು
ನೆಟ್ಟಗೆ ನಿಲ್ದಾಣಕ್ಕೆ ಬಂದಿದ್ದಳು. ಈಗ ಕರೆಬಂದು ನಡುಗುತ್ತ ರಮಣೀ
ಮೋಹನನೆದುರಿಗೆ ಬಂದು ನಿಂತಳು. ಅವಳು ತನ್ನ ಮೋ ಸವು ಹೊರಪ
ಡದೆಂದು ತಿಳದಿದ್ದವಳು ಈಗ ಕ್ರುದ್ಧಸಿಂಹನೆದುರಿಗೆ ಬಂದು ನಿಂತು, '" ಎರಡು
ರೂಪಾಯಿನ ಆಶೆಗೇಕೆ ಅಂತಹ ಕೆಲಸವನ್ನು ಮಾಡಿದೆನು? ಎಂದಂದು
ಕೊಂಡಳು.
ಮೋಹನ.-ನೀರದೆ ಯೆಲ್ಲಿ ?
ಸುಖಿ-_ನಾನು-ನಾನು_
ಮೋಹನ. ನೀನೇ ಅವಳನ್ನು ಕರೆದುಕೊಂತು ಹೋದವಳೆಂದು
ಬಲ್ಲೆನು-ಅವಳನ್ನಲ್ಲಿ ಬಿಟ್ಟು ಬಂದೆ?
ಸುಖಿಯು, ಉಪಾಯಾಂತರವು ತೋರದೆ, "ಮಂದಿರದಲ್ಲಿ"
ಎಂದಳು.
-----------------------------------
೬೮ ನೀರದೆ
ಮೋಹನನು ಆಲ್ಲಿ ನಿಲ್ಲದೆ ಬೇಗನೆ ಹೋಗಿ ಬಂಡಿಯನ್ನು ಹತ್ತಿ
ದನು-ಆಗ ವಾಮೆಯು ಹಿಡಿ ಬಂದು, "ಮೋಹನ! ಯಜಮಾನಿಯು
ನಿನ್ನನ್ನು ಕರೆಯುತ್ತಾಳೆ ಎಂದಳು.
ಮೋಹನನು ಮೇಲ್ಲಮೆಲ್ಲನೆ ಬಂಡಿಯಿಂದಿಳಿದು ವಾಮೆಯನ್ನನು
ಸರಿಸಿ ಹೋದನು.
ಯಜಮಾನಿ... ಎಲ್ಲಿಗೆ ಹೋಗುತ್ತಿ ?
ಮೋಹನನು ನಿಸ್ಸಕೋಚವಾಗಿ, " ನೀರದೆಯನ್ನು ಹುಡುಕಿ
ಕೊಂಡು ಬರುವುದಕ್ಕೆ " ಎಂದನು.
ಯಜಮಾನಿ--ನಾನೊಬ್ಬಳೇ ಇರಲೆ?
ಮೋಹನ--ನಾನೀಗಲೇ ಹಿಂದಿರಿಗಿ ಬರುವೆನು.
ಯಜಮಾನಿ--ಅದಾಗುವುದಿಲ್ಲ-ಗಾಡಿಯು ಹೊರಡು ವುದಕ್ಕೆ ಸಾವ
ಕಾಶವಿಲ್ಲ.
ಮೋಹನ--ಆಗದಿದ್ದರೆ ಮತ್ತೊಂದು ಗಾಡಿಯಲ್ಲಿ ಹೋಗುವೆನು.
ಯಜಮಾನಿ. ಆಗದು, ಇಬೇ ಗಾಡಿಯಲ್ಲಿ ಹೋಗಬೇಕು.
ವಾಮೆಯು ಯಜನರಾನಿಯಕಿವಿಯಲ್ಲಿ " ಅಷ್ಟೊಂದು ಖಂಡಿತ
ವಾಗಿ ಒತ್ತಾಯಮಾಡಲಾಗದು.ಚಿಕ್ಕ ಹುಡುಗನಲ್ಲ- ಎದುರು ಬಿದ್ದರೆ-?
ಎಂದಳು .
ಆದರೆ ಅವನು ಎದುರುಬೀಳಲಿಲ್ಲ -ಮೋಹನನು ತಾಯಿಯ ಅಪ್ಪಣೆ
ಯನ್ನು ಮೀರಲಿಲ್ಲ-ಮೌನವಾಗಿ ನಿಂತಿದ್ದನು. ಸ್ಟಲ್ಪ ಹೊತ್ತಾದ ಬಳಕ,
" ಅಮ್ಮ್ರಾ.?' ಎಂದು ಕರೆದನು,
ಯಜಮಾನಿ--ಏನು?
ಮೋಹನ--ನೀರದೆಯು ಹುಡುಗಿ- ಈ ವಿದೇಶಕದಲ್ಲಿ
ಯಜಮನಾನಿ--ಭಿಕ್ಷಿಕರಿಗೆ ವಿದೇಶವಾವದು? ಸ್ವದೇಶವಾವದು?
ಮೋಹನ--ಅವಳೆಲ್ಲಿಗೆ ಹೋಗಲಾಪಳು?
ಯಜಮಾಸಿ--ಎಲ್ಲಿದ್ದಳೋ ಅಲ್ಲಿಗೆ ಹೋಗುವಳು.
ಮೋಹನ. -ಪ್ರಪಂಚದಲ್ಲಿ ಅವಳಗೆ ಬೇರೆ ಸ್ಥಳವಿಲ್ಲ-
ಯಜಮಾಸಿ--ತೀರ್ಥಕ್ಷೇತ್ರಗಳಲ್ಲಿ ಭಿಕ್ಷಕ್ಕೆ ಕಡಿಮೆಯಿಲ್ಲ-
-------------------------------------------
ಇಪ್ಪತ್ತೊಂದನೆಯ ಪರಿಚ್ಛೇದ ೬೯
ಮೋಹನನು ನಿರುತ್ತರನಾಗಿ ನಿಂತನು-ಆದರೆ ಹೃದಯದ ಅಂತಸ್ಥಳ
ವನ್ನು ಭೇದಿಸಿಕೊಂಡೊಂದು ದೀರ್ಘನಿಶ್ವಾಸವು ಹೊರಟಿತು.
ಆ ಸಮಯದಲ್ಲಿ ಪೂರ್ವಪರಿಚಿತನಾಗಿದ್ದ ಸನ್ಯಾಸಿಯು ಅಲ್ಲಿಗೆ
ಬಂದನು-ಅವಸು ತೀಕ್ಷ್ಣದೃಷ್ಟಿಯಿಂದ ಎಲ್ಲಾ ಕಡೆಯೂ ನೋಡಿದನು;
ನೀರಬೆಯು ಎಲ್ಲಿಯೂ ಕಾಣಲಿಲ್ಲ- ಒಂದೊಂದು ಗಾಡಿಗೂ ಹೋಗಿ ಪರೀ
ಕ್ಷಿಸಿ ನೋಡಿದನು, ನೀರದೆಯು ಕಾಣಲಿಲ್ಲ.
ಅಲ್ಲೆಲ್ಲರೂ ಸನ್ಯಾಸಿಯ ಶೆಲಸವನ್ನು ನೋಡಿದರು ಸನ್ಯಾಸಿ
ಯಾರನ್ನು ಹುಡುಕುತಿದ್ದನೆಂದು ಯಜಮಾನಿಗೆ ಗೊತ್ತಾ ಯಿತು, ಅವಳು
ಸುಖಿಯ ತಿದಿಯಲ್ಲಿ " ಸನ್ಯಾಸಿಯು ನೀರಿಯನ್ನು ಹುಡುಕುತಿದ್ದಾನೆ-
ಹುಡುಗಿಯು ಸಿಕ್ಕರೆ ಮಹಾಕಾಳಿಗವಳನ್ನು ಬಲಿ ಕೊಡುವನು ; ನೀನು
ಹೋಗಿ, ನೀರಿಯು ಮಂದಿರದಲ್ಲಿದ್ದಾಳೆಂದು ಹೇಳು" ಎಂದು ಏಕಾಂತ
ವಾಗಿ ಹೇಳಿದಳು.
ಸುಖಿ -ಎಲ್ಲವನ್ನೂ ವಿವರವಾಗಿ ಹೇಳಲೆ ?
ಯಜಮಾನಿ- -ಅಹುದು ಕಣೆ. ಅಹುದು
ಸುಖಿಯು ಹೋಗಿ ಸನ್ಯಾಸಿಗೆ ಸಂಗತಿಯನ್ನು ತಿಳಸಿದಳು. ಸನ್ಯಾ
ಸಿಯು ಕಾಲವಿಳಂಬ ಮಾಡದೆ ಮಂದಿರಕ್ಕೆ ಓಡಿದನು, ನಿಲ್ದಾಣೆಯಿಂದ
ಮಂದಿರಕ್ತೆ ಹೊರ್ಕಾಕಂದರ ಆಂಗಡಿ ಬೀದಿಯಲ್ಲಿ ಹೋಗಬೇಕು.
ಸನ್ಯಾಸಿಯು ಆಗಿ ಬೇದಿಯಲ್ಲಿ ಹೋಗುತಿದ್ದಾಗ ಒಂದು ಗಾಡಿಯು
ಅತಿ ವೇಗವಾಗಿ ಅವನ ಪಾರ್ಶ್ವದಲ್ದಿ ಹೋಯಿತು-ಗಾಡಿಯಲ್ಲೊಬ್ಬ ಹೆಂಗ
ಸುಮಾತ್ರ; ಕುಳತಿದ್ದುವನ್ನು ನೋಡಿದನು. ಆಂಗಡಿಗಳ ಬೆಳಕಿನಿಂದ
ಗಾಡಿಯೊಳಗೆ ಚೆನ್ನಾಗಿ ಕಾಣುವುದು ಆ ಬೆಳಕಿನಿಂದ ಸನ್ಯಾಸಿಯು ಗಾಡಿ
ಯಲ್ಲಿದ್ದವಳನ್ನು ನೀರದೆಯೆಂದು ಗುರ್ತಿಸಿದವನು. ತನ್ನ ಶಕ್ತಿಕಿಯಿದ್ದಷ್ಟೂ
ಗಾಡಿಯ ಹಿಂದೆ ಓಡಲಾರಂಭಿಸಿದನು.ಬಹಳದೂರ ಬೆನ್ನಟ್ಟಿ ಹೋದನು.
ಕಡೆಗೆ ಕ್ಷಾಂತನಾದನು ಗಾಡಿಯು ಮುಂಂದಸ್ತೆ ಹೊರಟುಹೋಯಿತು.
ಸನ್ಯಾಸಿಯು ಬಿಡಲಿಲ್ಲ-ಗಾಡಿಯು ಹೋದ ಹಾದಿಗೊಂಡುಹೋದನು.
ಅದೇ ಹಾದಿಗೊಂಡುಹೋಗಿ ಸನ್ಯಾಸಿಯು ಕಡೆಗೆ ವೈದ್ಯನಾಥದಜಂಕ
ಷನಿಗೆ ಮುಟ್ಟಿದನು. ಅಲ್ಲಿ ವಿಚಾರಿಸಿದುದರಲ್ಲಿ ಆರೋ ಒಬ್ಬನು ಒಬ್ಬ
-------------------------------------
೭೦ ನೀರದೆ
ಹುಡುಗಿಯನ್ನು ಮರುಳ್ಗೊಳ್ಳಿಸಿ ಕರತಂದಿದ್ದನೆಂದು. ತಿಳಿಯಬಂದಿತು.
ಸನ್ಯಾಸಿಯು ಆ ಹುಡುಗಿಯು ನೀರದೆಯಾಗಿರಬೇಕೆಂದು ಸ್ಥಿರಮಾಡಿ
ಕೊಂಡನು.
ಸನ್ಯಾಸಿಯು ಸಹಸ್ರಪ್ರಯತ್ನಗಳನ್ನು ನಡಿಸಿದರೂ ನೀರದೆಯಿದ್ದ
ಸ್ಥಳವು ಗೊತ್ತಾಗಲಿಲ್ಲ-ತಂತ್ರಿಗಳಾದ ನಿಲ್ದಾಣದ ಕರ್ಮಚಾರಿಗಳು ಆವ
ಳನ್ನು ಬಚ್ಚಿಟ್ಟಿದ್ದ ಸ್ಥಳವು ಆರಗೂ ಗೊತ್ತಾಗತಕ್ಕ ಸ್ಹಳವಾಗಿರರಿಲ್ಲ-
ಸನ್ಯಾಸಿಯು ಎಷ್ಪೊಂದು ಹುಡುಕಿದರೂ ನೀರದೆಯು ಸಿಗಲಿಲ್ಲ.
ಆಗ ರಾತ್ರಿ ಎರಡು ಪ್ರಹರಗಳಾಗಿದ್ದುವು-ಸನ್ಯಾಸಿಯು ಸ್ಟೇಷನ್ನಿನ
ಬಳಿ ಒಂದು ಮರದ ಕೆಳಗೆ ಆಶ್ರಯವನ್ನು ಗ್ರಹಣಮಾಡಿದನು. ಸನ್ಯಾ
ಸಿಗೆ ಅಗ್ಲಿಷ್ಟಿಕೆಯಿಲ್ಲ-ಶಿಷ್ಯನೂ ಇಲ್ಲ ಒಬ್ಬನೇ ಕತ್ತಲಲ್ಲಿ ಕುಳಿತಿದ್ದನು.
ರಾತ್ರಿಯು ಗಭೀರ- ಎಲ್ಲವೂ ನಿಸ್ತಬ್ಧ. ಆಕಾಶವು ಭೂಮಿಯೊಂ
ದಿಗೆ ಮೆಲ್ಲಮೆಲ್ಲನೆ ಮಾತಾಡುವುದು-ನಕ್ಷತ್ರಗಳು ಪ್ರಥ್ವಿಯ ದುಷ್ಕೃತ್ಯ
ಗಳನ್ನು ಗಣನೆಮಾಡುತ್ತಿದ್ದುವು-ಮರಗಳು ತಲೆಯನ್ನಾಡಿಸುತ್ತ ಮನು
ಷ್ಯನಿಗೆ ಪಾಪದಿಂದ ವಿರತನಾಗೆಂದು ಉಪದೇಸವನ್ನು ಮಾ.ಡುತ್ತಿದ್ದುವು ಆ
ಸಮಯದಲ್ಲಿ ಆ ನೈಶನಿಸ್ತಬ್ಧತೆಯನ್ನು ಭಂಗಮಾಡಿ ರಮಣಿಯ ಕಂಠ
ದಿಂದ ಹೊರಟ ಒಂದು ಆರ್ತನಾದವು ಕೇಳಿತು-ಸನ್ಯಾಸಿಯು ಚಕಿತನಾಗಿ
ಎದ್ದು ನಿಂತನು-ನಿಂತವನು ಆರ್ತನಾದವು ಬರುತ್ತಿದ್ದ ಕಡೆ ಓಡಿಹೋದನು.
ಪುನಃ ಆರ್ತನಾದ ! ಆರ್ತನಾದವು ಒಂದು. ಮನೆಯೊಳಗಿನಿಂದ
ಹೊರಡುವಂತೆ ತಿಳಯಬಂದಿತು. ಸನ್ಯಾಸಿಯು ಮುಂದುವರಿದುಹೋಗಿ
ನೋಡಿದನು. ಮನೆಯ ಾಗಿಲನ್ನು ಹಾಕಿದ್ದಿತು. ಒಳಗ ಪ್ರವೇಶಕ್ಕೆ ಬೇರೆ
ಮಾರ್ಗವಿಲ್ಲ -ನಾಲ್ಮೂ ಕಡೆ ಎತ್ತರವಾದ ಗೋಡೆ-ಎತ್ತರವಾದಾ ಗೋಡೆ
ಯೂ ಸನ್ಯಾಸಿಯ ಗತಿ ರೋಧಮಾಡಲಾರದೆ ಹೋಯಿತು ; ಅವನತಿ ಸುಲ
ಭವಾಗಿ ಗೋಡೆಯನ್ನು ಹತ್ತಿ ಒಳಗೆ ಆಂಗಳಕ್ಕೆ ಇಳಿದನು-ಆಂಗಳದಲ್ಲಿ
ಬಹಳ ಕಸವು ತುಂಬಿದ್ದಿತು; ಅಲ್ಲಿ ಎರಡು ಮನೆಗಳು-ಒಂದರಲ್ಲಿ ಬೆಳಕಿ
ದ್ದಿತು-ಅಲ್ಲಾರೂ ಇರಲಿಲ್ಲ-ಮತ್ತೊಂದು ಮನೆಯ ಬಾಗಿಲು ಮುಚ್ಚಿ
ಒಳಗನಿಂದ ಅಗಣಿಯು ಹಾಕಿದ್ದಿತು-ಸನ್ಯಾನಿಯು ಕದನನ್ನು ಕಾಲಿನಿಂದೊ
ದ್ದನು. ಕದವು ಮುರಿದುಹೊಯಿತು. ಸನ್ಯಾಸಿಯು ಒಳಗೆ ಹೋದನು,
-------------------------------------------
ಇಪ್ಪತ್ತೊಂದನೆಯ ಪರಿಚ್ಛೇದ ೭೧
ಒಳಗೆ ಹೋಗಿ ನೋಡಿದನು ಮೂರು ಮಂದಿ ನರಕತಾಯಪಶುಗಳು
ಒಬ್ಬ ಹುಡುಗಿಯ ಮೇಲೆ ಅತ್ಯಾಚಾರವನ್ನು ನಡೆಯಿಸಲು ಪ್ರಯತ್ನಪಡು
ತಿದ್ಲರು, ಅದರೆ ಅವರಲ್ಲಾರೂ ಹುಡುಗಿಯ ಅಂಗಸ್ಪರ್ಶಮಾಡಲು ಸಮ
ರ್ಧರಾಗಿರಲಿಲ್ಲ-ಹುಡುಗಿಯು ಮನೆಯೊಂದು ಮೂಲೆಯಲ್ಲಿ ನಿಂತು ಒಂದು
ಹಿತ್ತಾಳೆಯ ಕೊಡವನ್ನವಲಂಬಿಕೆೊಂಡು ದೊಡ್ಡದೊಂದು ಕಬ್ಬಿಣದ
ಸೌಟಿನಿಂದಾ ದುರಾತ್ಮರನ್ನು ದೂಮಾಡುತಿದ್ದಳು.
ಸನ್ಯಾಸಿಯು ಹುಡುಗಿಯನ್ನು ಗುರುಶಿಸಿದನು. ಆರನ್ನು ನೋಡ
ಬೇಕೆಂದು ಹುಡುಕುತ್ತಿದ್ದನೋ ಆ ಯಡುಗಿಯು.ಆದೇ ನೀರದೆಯಾಗಿ
ದ್ದಳು-ಅವ ನೀರದೆಯು ಮುದುಕಿಯಿಂದಲೂ ಪೊಲಿಸ ದರೊಗನಿಂದಲೂ
ನಿರ್ಜೀವಿಯಂತೆ ಪೆಟ್ಟುಗಲನ್ನು ತಿಂದು ಮೌನದಿಂದ ಸಹಿಸುತ್ತಿದ್ದಳೋ
ಅಂಥಾ ನೀರಿದೆಯು ತನ್ನ ಧರ್ಮವನ್ನು ಕಾಪಾಡಿಕೊಳ್ಳಲು ಸೌಟನ್ನು
ತಿರಿಗಿಸುತ್ತ ಮೂರು ಮಂದಿ ನರಪಶುಗಳನ್ನು ದೂರಮಾಡುತಿದ್ದಳು ಬಹಳ
ಹೆಣಗಾಡಿ ಸೋತು ಅವಸನ್ನವಾಗುತ್ತ ಬಂದಳು ಮೂರ್ಛೆಬೀಳುವು
ದಕ್ಕೆ ವಿಳಂಬವಿರಲಲ್ಲ.
ನೀರದೆಯನ್ನುದ್ಧಾರಮಾಡಲು ಸನ್ಯಾಸಯು ಹೆಚ್ಚು ಪ್ಯಯತ್ನ
ಮಾಡಬೇಕಾಗಿರಲಿಲ್ಲ-ಆಕ್ರಮಣಮಾಡುತ್ತಿದ್ದವರು ಭಯದಿಂದ ಅವಸನ್ನ
ರಾಗಿದ್ದರು-ಬಾಗಿಲನ್ನೊಡೆದು ಬಾಗಿಲಲ್ಲಿ ದೀರ್ಘಾಕಾರವುಳ್ಳ ಜಟಾಜೂಟ
ಧಾರಿಯ ಸನ್ಯಾಸಿಯ ಮೂರ್ತಿಯನ್ನು ಕಂಡು ಅವರು ನಿರದೆಯನ್ನು
ಬಿಟ್ಟು ದೂರ ಸರಿದುನಿಂತರು-ಸನ್ಯಾಸಿಯು ಆಚೈತಪ್ರಾಯವಾಗಿದ್ದಾ
ಹುಡುಗಿಯನ್ನು ಎತ್ತಿಕೊಂಡು ಮನೆಯಿಂದ ಹೊರಟುಹೋದನು.
.....
ಇಪ್ಪತ್ತೊಂದನೆಯ ಪರಿಚ್ಛೇದ.
ರಮಣೀಮೋಹನನು ತಾಯಿಯ ಅಪ್ಪಣೆಯನ್ನು ಮಿರಲಿಲ್ಲ-
ಮನೆಗೆ ಹಿಂದಿರುಗಿ ಬಂದನು, ಮನೆಯ ಶೂನ್ಯ-ಕತ್ತಲೆಯು ಆವ ಬೆಳಕನ್ನು
ನೀರದೆಯು ಬೀರತ್ತದ್ದಳ್ಳೋ ಆ ಬೆಳಕು ಅಳಸಿಹೋಗಿದ್ದಿತು.
--------------------------------------------
೭೨ ನೀರದೆ
ತಾಮಿ ಮಗನಿಗೆ ಮೊದಲಿದ್ದ ಸದ್ಭಾವವಿಲ್ಲ-ರಮಣೀಮೋಹನನು
ಮೊದಲಿನಂತೆ ತಾಯಿಯ ತೆೊಡೆಯ ಮೇಲೆ ಮಲಗುತ್ತಿರರಿಲ್ಲ-ತಾಯಿಯೂ
ಮೊದಲಿನಂತೆ ಸ್ನೇಹ ಪೂರ್ಣೆಯಾಗಿ "ಮೋಹನ " ಎಂದು ಕರೆಯುತ್ತಿರ
ಲಿಲ್ಲ ವಾಮೆಯೂ ಮೊದಲಿನಂತೆ ಸುಖದುಃಖಗಳಿಗೆ ಆಶ್ರಯಸ್ಥಾನವಾಗಿ
"ವಾಮಾತಾಯಿ '' ಯಾಗಿರಲಲ್ಹ- ಅವಳು ಮಿಕ್ಕವರಂತೆ ದಾಸಿಯಾಗಿ
ಮಾತ್ರ ಇದ್ದಳು.
ದಿನಗಳು ಕಳೆದ ಹಾಗಲ್ಲಾ ರಮಣೀಮೋಹನನಿಗೆ ಮನೋವ್ಯ
ಧೆಯು ಹೆಚ್ಚಾಗುತ್ತ ಬಂದಿತು, ಅವನು ಮನಸ್ಸಿನಲ್ಲಿ "ನೀರದೆಯು
ಅನ್ನವಿಲ್ಲದೆ ಅಲ್ಲಲ್ಲಿ ತಿರುಗುತ್ತಿರುವಳು!" ಎಂದು ಭಾವಿಸಿಕೊಳ್ಳು
ವನು-ಒಂದೊಂದು ಸಮಯದಲ್ಲಿ. "ನೀರದೆಯು ತನ್ನ್ನೆದುರು ನೋಡು
ತ್ತಿರುವಳು : ತಾನು ಹೋ:ಗದಿದ್ದರೆ ಜೇವದಿಂದಿರಳು ; ನೀರದೆಯನ್ನು
ಹೊಂದದಿದ್ದರೆ ತಾನೂ ಉಳಿಯುವುದಿಲ್ಲ'' ವೆಂದು ಭಾವಿಸಿಕೊಳ್ಳುವನು-
ಉತ್ತರ ಕ್ಷಣದಲ್ಲಿ, " ಅದರೆ ಎಲ್ಲಿಗೆ ಹೋದರೆ ನೀರದೆಯನ್ನು ಕಾಣು
ವೆನು? "ನೀರದೆಯು ಆಗಲೂ ದೇವಗಡದಲ್ಲಿರುವಳೆ?" ಎಂದು ಯೋಚಿಸಿ ,
ಬಳಕ, “ನೀರದೆಯು ಭೂಮಿ ಮೇಲೆ ಎಲ್ಲಿದ್ದರೂ ಹುಡುಕಿ ಕರತರು
ವೆನು; ಹುಡುಕುವುದಕ್ಕೆ ಮನೆಯನ್ನು ಬಿಟ್ಟು ಹೋಗಬೇಕು ; ಮನೆ
ಯನ್ನು ಬಿಟ್ಟು ಹೋಗಲು ಏನನ್ನು ಮಾಡಲಿ; ಹೋಗಲು ತಾಯಿಯು
ಅಪ್ಪಣೆಯನ್ನು ಕೊಡಳು- ಅವಳ ಅನುಮತಿಯಲ್ಲದೆ ಹೋಗಕೂಡದು-
ತಾಯಿಗೆ ಹೇಳಿ ಕಲಿಕತ್ತೆಗೆ ಹೋಗಬಹುದು. ಅಲ್ಲಿಂದಾರಿಗೂ ಹೇಳದೆ
ದೇವಗಡಸ್ಕೆ ಹೋಬದುದು. ಛಿ! ಛಿ! ತಾಯಿಗೆ ವಂಚಿಸುವುದೆ?
ಹಾಗೆಂದೂ ಮಾಡೆನು-ಹಾಗಾದರೆ, ಮತ್ತೇನನ್ನುಮಾಡಲಿ? ಒತ್ತಟ್ಟು ತಾಯಿ,
ಬೇರೊತ್ತಟ್ಟು ನೀರದೆ-ಅವರಿಬ್ಬರಲ್ಲಾರು ದೊಡ್ಡವರು? ತಾಯಿಯು
ಹೆಚ್ಚೆ ? ಅಥವಾ ನೀರದೆಯು ಹೆಚ್ಚೆ? ತಾಯಿಯೇ ಹೆಚ್ಚು. ಸಹಸ್ರತಡ
ವೆಗೂ ತಾಯಿಯೇ ಹೆಚ್ಚು. ಲಕ್ಷ ನೀರದೆಯರು ಹೋಗಲಿ ಕೋಟಿ
ರಮಣೀಮೋಹನರ ಹೃದಯಗಳು ಚೂರ್ಣಿತವಾಗಲಿ; ತಂದೆ ತಾಯಿಯರ
ಈಕಣ್ಣಿನಿಂದೊಂದು ತೊಟ್ಟು ನೀರನ್ನು ಬೀಳಸಲಾಗದು ' ಎಂದುಭಾವಿಸಿ
ಕೊಳ್ಳುವನು.
-----------------------------------------
ಇಪ್ಪತ್ತೊಂದನೆಯ ಪರಿಚ್ಛೇದ ೭೩
ರಮಣೀಮೋಹನನು ತಾಯಿಯನ್ನು ಅಳುಸಕೂಡದೆಂದೂ ಅವಳಿಗೆ
ವ್ಯಥೆಯನ್ನುಂಟುಮಾಡಕೂಡದೆಂದೂ ಸ್ಥಿರಮಾಡಿಕೊಂಡನು-ಅವನ ಪ್ರಾಣ
ವು ರುದ್ಧವಾಗಿದ್ದ ಯಾತನೆಯಿಂದ ವ್ಯಥಿತವಾಗಲಾರಂಭಿಸಿತು-ಆದರೂ ಒತ್ತ
ಡವೆಯಾದರೂ ನೀರದೆಯ ವಿಚಾರವನ್ನು ಕುರಿತು ಬಾಯಿಂದುಚ್ಚ ರಿಸನು.
ನೀರದೆಯ ವಿಚಾರವನ್ನು ಕುರಿತು ಬಾಯಿಂದಾರೂ ಹೇಳರು,
ಅದರೆ ವಿಲ್ಲರ ಮನಸ್ಸಿನಲ್ಲಿಯೂ ಆದು ಜಾಗರಿತವಾಗಿದ್ದಿತು. ನೀರದೆಯ
ಮಾತನ್ನು ಕುರಿತು ವಾಮೆಯು ಯಜಮಾನಿಗೆ ಹೇಳಲಿಲ್ಲ-ಯಜಮಾನಿಯೂ
ಅದನ್ನು ಕುರಿತು ವಾಮೆಗೆ ಹೇಳಿಲ್ಲ-ನೀರದೆಯ ವಿಷಯವು ಕ್ರಮವಾಗಿ
ಆ ಮನೆಯ ಸಂಸಾರದಿಂದ ಅಳಸಿ ಹೋಯಿತು.
ಸ್ವಲ್ಪ ಕಾಲವಾದ ಬಳಕ ರಮಣೀಮೋಹನನು ಒಂದಾನೊಂದು
ದಿನ ತಾಯಿಯನ್ನು ಕುರಿತು, " ಅಮ್ಮ! ಒತ್ತಡವೆ ಪಶ್ಚಿಮ ದೇಶಕ್ಕೆ
ಹೋಗಿ ಬರಬೇಕೆಂದು ಆಶೆಯಾಗುತ್ತದೆ'' ಎಂದು ಹೇಳಿದನು.
ಯಜಮಾನಿಯು ಚಮಕಿತಯಾಗಿ, " ಎಲ್ಲಿಗೆ? ದೇವಗಡಕ್ಕ್ಲ್ಲವೆ?"
ಎಂದಳು.
ರಮ--ಇಲ್ಲ ದೇವಗಡಕ್ಕೆ ಫ್ರನಃ ಹೋಗೆನು.
ತಾಯಿ--ಅದೇಕೆ?
ರಮ---ನಿನಗದು ಇಷ್ಟವಿಲ್ಲ.
ತಾಯಿಯ ಹೃದಯವು ಈರಗಿತು. ಅವಳು, " ನಿನ್ನಗಲಿ ಹೇಗಿ
ರಲಿ?'' ಎಂದಳು.
ರಮ--ನನ್ನನ್ನಗರಿರಲು ನಿನಗೆ ಕಷ್ಟವಾದರೆ, ನಾನು ಹೋಗು
ವುದಿಲ್ಲ.
ತಾಯಿಯು ಕಣ್ಣೀರನ್ನ್ತು ಸುರಿಸಿದಳು -ಮೋಹನನ ಬಾಯಲ್ಲಿ
ಅಂತಹ ಇನವಾತನ್ನು ಕೇಳಿ ಬಹಳ ದಿನಗಳಾಗಿದ್ದುವು! ಯಜಮಾನಿಯು,
" ಎಷ್ಟು ದಿನಗಳಲ್ಲಿ ಹಿಂದಿರುಗಿ ಬರುವೆ? ?' ಎಂದು ವಿಚಾರಿಸಿದಳು.
ಸಾಧ್ಯವಾದಷ್ಟು ಬೇಗನೆ ಬರುವೆನು.ನಿನ್ನನ್ನಗಲಿ ಎಷ್ಟು, ದಿನಗಳಿ
ರಲಾಪೆನು??
-----------------------------------------
೭೪ ನೀರದೆ
ತಾಯಿಯ ವಾತ್ಸಲ್ಯವು ಉಕ್ಕಿಹರಿಯಿತು-ಸ್ನಲ್ಬ ಹೊತ್ತಾ ದ ಬಳಕ,
ಮೋಹನನ, " ಅಮ್ಮಾ! " ಎಂದನು,
"`ಏನೋ, ಮಗು! "
" ಅಮ್ಮಾ `` ಎಂದು ಕರೆದುದನ್ನು ಕೇಳಿ ಬಹಳ ದಿನಗಳಾಗಿದ್ದುವು.
ತಾಯಿಮಗನಿಬ್ಯರ ಹೃದಯವೂ ಸ್ನೇಹದಿಂದಲೂ ಅನಂದದಿಂದಲೂತುಂಬಿತು.
ತಾಯಿ--ಏನನ್ನ್ತು ಹೇಳುತ್ತದ್ದೆಯೋ ಅದನ್ನು ಕೇಳು, ಮಗು!
ರಮೀ--ಅಮ್ಮ ! ಹೇಳಲೆ?
ತಾಯಿ-ಸಂತೋಷದಿಂದ ಹೇಳು.
ರಮಣೀ--ಒತ್ತಡವೆ ಅವಳನ್ನು ಹುಡುಕಿ ನೋಡಲೆ?
ತಾಯಿ- ಆರನ್ನು ನೀರಿಯನ್ನೆ!
ರಮಣೀ. -ಅಹುದು,
ತಾಯಿ-.ಅವಳನ್ನಿನ್ನೂ ಮರೆತಿಲ್ಲವೆ?
ರಮಣೀ--ಹೇಗೆ ಮರೆಯಲಿ, ಅಮ್ಮಾ? ಅವಳಗೆ ಆಶ್ರಯವನ್ನು
ಕೊಟ್ಟಿದ್ದು ಅದನ್ನು ತಪ್ಪಿಸಿದೆನು-ಆಶೆಯನ್ನು ಕೊಟ್ಟು ಆಕಾಭಂಗವನ್ನು
ಮಾಡಿದೆನು.
ತಾಯಿ--(ಸ್ಪಲ್ಪ ಯೋಚಿಸಿ) --ಅವಳನ್ನು ಪುನಃ ಮನೆಗೆ ಕರತರ
ಬೇಕೆಂಬಾಕೆಯೊ ?
ರಮಣೀ.-ನಿನ್ನ ಅಪ್ಪಣೆಯಿಲ್ಲದೆ ಕರತರುವುದಿಲ್ಲ-ಅವಳಗೆಲ್ಲಾ
ದರೂ ಅನ್ನಕ್ಕೆ ಮಾರ್ಗವನ್ನು ಮಾಡಿ ಬಂದು ಬಿಡುವೆನು.
ತಾಯಿ--ಹಾಳಾದಾ ಹುಡುಗಿಯ ಬಳಿ ನೀನು ಹೋಗುವುದೆನಗಿಷ್ಪ
ವಿಲ್ಲ.
ರಮಣಿ-.ನೀನು ಬೇಡವೆಂದರೆ ಹೋಗುವುದಿಲ್ಲ -ಅದರೆ, ನಿನ್ನ
ಪಾದಗಳನ್ನು ಮುಟ್ಟಿ ಶಪಥಮಾಡುವೆನು-ನಿನ್ನ ಅಪ್ಪಣೆಯಿಲ್ಲದೆ ಅವಳನ್ನು
ಮುಟ್ಟುವುದಿಲ್ಲ -ಮನಗೆ ಕರತರುವುದೂ ಇಲ್ಲ.
ತಾಯಿಯು ಪುಲಕಿತೆಯಾಗಿ, ಮನಸ್ಸಿನಲ್ಲಿ, " ಸನ್ಯಾಸಿಯು ಇಷ್ಟು
ದಿನಕ್ಕೆ ನೀರಿಯನ್ನು ಮಹಾಕಾಳಿಗೆ ಬಲಿಯನ್ನಾದರೂ ಕೊಟ್ಚಿರುವನು,
ಅಥವಾ ಅವಳು ಧರ್ಮಭ್ರಷ್ಠೆಯಾಗಿದ್ದರೂ ಇರಬಹುದು-ಹಾಗಿರುವ
-------------------------------------
ಇಪ್ಪತ್ತೈರಡನೆಯ ಪರಿಚ್ಛೇದ ೭೫
ಸಂಧವದಲ್ಲಿ ಸಮ್ಮತಿಸುವುದಕ್ಕೆ ಆಕ್ಷೇಪಣೆಯೇನು ? ' ಎಂದು ಯೋಚಿ
ಸಿಕೊಂಡು ಬಳಕ, " ಹುಡಗಿಯು ಕುಲತ್ಯಾಗಿನಿಯಾಗಿದ್ದರೆ ಅವಳನ್ನೆಲ್ಲಾ
ದರೂ ಇಟ್ಟು ಹೊರಟು ಬಾ" ಎಂದಳು.
ತಾಯಿಯ ಪಾದಗಳಿಗೆರಗಿ ಮೋಹನನು ನೀರದೆಯನ್ನು ಹುಡುಕಲು
ಹೊರಟನು,
.......
ಇಪ್ಪತ್ತೆರಡನೆಯ ಪರಿಚ್ಚೇದ.
ದೇವಗಡದಲ್ಲಿ ನೀರದೆಯ ಸಮಾಚಾರವಾವದೂ ಗೊತ್ತಾಗಲಿಲ್ಲ-
ವೈದ್ಯನಾಥದ ಜಂಕ್ಷನಿನಲ್ಲಿ ಸ್ಪಲ್ಪ ಮಟ್ಟಿಗೆ ತಿಳಯ ಬಂದಿತು... ಅದರದು
ಅತಿಸಾಮಾನ್ಯವಾದ ಸಮಾಚಾರ-ಸಮಾಚಾರವು ಸಾಮಾನ್ಯವಾದುವಾದರೂ
ರಮಣೀಮೋಹನಸು ಅದೇ ಸುಳುವನ್ನು ಅವಲಂಬಿಸಿ ದೇಶಗಳಲ್ಲಿ ನೀರ
ದೆಯನ್ನು ಹುಡುಕುತ್ತ ಹೋಗುತ್ತಿದನು,
ಸನ್ಯಾಸಿಯು ನೀರದೆಯನ್ನು ಎತ್ತಿಕೊಂಡು ಹೋಗಿದ್ದಾನೆಂದು
ಮೋಹನನು ನಂಬಿದನು-ಅದುಕಾಣರಣ ಅವನು ಸನ್ಯಾಸಿಗಳ ದಳವನ್ನು
ಕಂಡರೆ ನೀರದೆಯನ್ನು ಹುಡುಕುವನು-ರೈಯಲು ಗಾಡಿಯನ್ನು ಬಿಟ್ಟು
ಕುದುರೆಯ ಗಾಡಿ, ಕುದುರೆಯ ಗಾಡಿಯನ್ನು ಬಿಟ್ಟು ಕಾಲುನಡೆಗೆ, ಹೀಗೆ
ದೇಶದೇಶ ತಿರಗಿದನು-ಒಂದು ತಿಂಗಳಾಯಿತು-ನೀರದೆಯ ಸಮಾಚಾರವು
ಗೊತ್ತಾಗಲಿಲ್ಲ.
ರಮಣೀಮೋಹನನ ಸಂಗಡ ಒಬ್ಬ ಆಳು ಇದ್ದನು-ಯಜಮಾನ
ನಂತೆ ಆನಾಹಾರಿಯಾಗಿ ಊರೂರು ತಿರುಗುವುದಕ್ತೆ ಅವನಿಗಿಷ್ಟವಿಲ್ಲ-ಹೊ
ತ್ತಿಗೆ ಸರಿಯಾಗಿ ಅನ್ನವಿಲ -ಅನ್ನವು ಸಿಕ್ಕರೆ ಅದತಿ ಕದರ್ಯವಾದುದು- ಆಳು
ಸಮಯವನ್ನು ನೋಡಿಕೊಂಡಿದ್ದವನು ಯಜಮಾನನ ಸರ್ವಸ್ವವನ್ನೂ
ತೆಗೆದುಕೊಂಡು ಪಲಾಯನವಾಗಿ ಹೋದನು.
-------------------------------------------
೬೬ ನೀರದೆ
ರಮಣೀಮೋಹನನು ಒಬ್ಬಂಟಿಗನಾದನು-ಕೈಯಲ್ಲೊಂದು ಕಾಸು
ಇಲ್ಲ-ಊರಿಗೆ ಹಿಂದಿರಿಗಿ ಹೋಗೋಣವೆ ಎಂದು ಯೋಚಿಸಿದನು-ಪುನಃ,
ನೀರದೆಯ ಸಮಾಚಾರವು ಗೊತ್ತಾಗದೆ ಹೋಗಕೂಡದೆಂದಂದುಕೊಂಡನು-
"ನೀರದೆಯು ಅಲ್ಲಲ್ಲಿ ಭಿಕ್ಷವನ್ನು ಬೇಡುತ್ತ ತಿರುಗುತ್ತಿ ರುವಳು-ಹಾ
ಗೇವೇ ನಾನೂ ದೇಶಗಳಲ್ಲಿ ಭಿಕ್ಷಕನಾಗಿ ತಿರುಗುತ್ತಿರುವೆನು.ನೀರದೆಯು
ಸಹಿಸಬಲ್ಲಾದುದನ್ನು ನಾನೂ ಸಹಿಸುವೆಸು-ನೀರದೆಯು ಭಿಕ್ಷುಕಳಾಗಿದ್ದು
ನಾನು ರಾಜಭೋಗದಲ್ಲಿರಲೆ? ಅದೆಂದೂ ಅಗದು-ನೀರದೆಯನ್ನು ಕಂಡ
ಹೊರ್ತು ಮನೆಗೆ ಹಿಂದಿರುಗುವುದಿಲ್ಲ'' ವೆಂದು ಸ್ಥಿರಮಾಡಿಕೊಂಡನು.
ರಮಣೀಮೋಹನನು ದ್ವಿಗುಣ ಉತ್ಸಾಹದಿಂದ ನೀರದೆಯನ್ನು
ಹುಡುಕಲು ಪ್ರವೃತ್ತನಾದನು, ದಿನದಮೇಲೆ ದಿನವು ಕಳೆಯಿತು. ಛಳಿ
ಗಾಲವು ಹೋಗಿ ಬಿಸಿಲಕಾಲವು ಬಂದಿತು. ರಮಣೀಮೋಹನನು ಭಿಕ್ಷ
ವನ್ನು ಮಾಡಿಕೊಂಡು ಒಂದೇ ಬಟ್ಟೆಯುಳ್ಳವನಾಗಿ ದಿನವನ್ನು ಹಾಕು
ತ್ತಿದ್ದನು.
ಒಂದಾನೊಂದುದಿನ ರಮಣೀಮೋಹನನು ಒಬ್ಬ ಧನಾಢ್ಯನ ಬಾಗಿ
ಲಲ್ಲಿ ನಿಂತು ಒಂದು ಬಟ್ಟೆಯನ್ನು ಬೇಡಿದನು. ಧನಾಢ್ಯನಾದಾ ಮನುಪ್ಯನು
ಬಟ್ಟೆಯನ್ನು ಕೊಡದೆ ಅವಮಾನಪಡಿಸಿ ಓಡಿಸದನು,. ರಮಣೀಮೋಹೆ
ನನು ವ್ಯಸಸಗೊಂದು, "ನೀರದೆಗೂ ಹೀಗೆ ಎಷ್ಟೋತಡವೆ ಅವಮಾನ
ವಾಗಿರಬೇಕು '' ಎಂದಂದು ಕೊಳ್ಳುವನು.
ರಮಣೀಮೋಹನನು ದೇಶವನ್ನು ಬಿಟ್ಟು ಬಹಳ ದೂರ ಬಂದುಬಿ
ಟ್ಟನು, ದೇವಗಡದಿಂದ ವಾಕುಂದಕ್ಕೆ ಬಹಳ ದೂರ- ಮೋಹನನು ದಾಮೋ
ದರ ನದಿಯತೀರವನ್ನು ಹಿಡಿದು ಹೋಗುತ ದೊಡ್ಡದೊಂದು ಗ್ರಾಮಕ್ಕೆ
ಬಂದನು. ಗ್ರಾಮದ ಹೆಸರು ಇಂದ್ರಪುರ. ಅಲ್ಲಿ ಅನೇಕ ದೇವಾಲಯ
ಗಳೂ ಅನ್ನಸತ್ರಗಳೂ ಇದ್ದುವು. ಗ್ರಾಮದ ಹೊರಗೆ ಜಮೀನುದಾರನ
ಉಪ್ಪರಿಗೆಯ ಮನೆ. ಆ ಮನೆಗೆದುರಾಗಿ ಅತಿಥಿಶಾಲೆ, ರಮಣಿಮೋಹನನು
ಅತಿಥಿಶಾಲೆಯಲ್ಲಿರಲು ಅಪ್ಪಣೆಯನ್ನು ಬೇಡಿದನು.
ಅಪ್ಪಣೆಯಾಗರಿಲ್ಲ. ಅದರಲ್ಲಿ ಸಾವಿರಾರುಮಂದಿ ಭಿಕ್ಷುಕ ಮುಂತಾ
--------------------------------------
ಇಸ್ಪತ್ರೈರಡನೆಯ ನರಿಜ್ಛೇದ
ದವರು ಇದ್ದುದರಿಂದ ಸ್ಥಳವಿರರಿಲ್ಲ. ಯತ್ನವಿಲ್ಲ ದೆ ರಮಣಿಮೋಹನನು
ಅಲ್ಲಿದ್ದೊಂದು ಮರದ ನರಳಿನಲ್ಲಿ ಆಶ್ರಯಗ್ರಹಣ ಮಾಡಿದನು.
ರಮಣೀಮೋಹನನು ಶ್ರಾಂತನಾಗಿ ಕ್ಷುಧಾರ್ತನಾಗಿದ್ದನು, ಮರದ
ತಂಪಾದ ನೆರಳನಲ್ಲಿ ಭೂಶಯ್ಯೆಯಲ್ಲಿ ಮಲಗಿದನು. ಬೇಗನೆ ನಿದ್ರೆಯು
ಹತ್ತಿತು. ಪುನಃ ಎಚ್ಚರವಾದಾಗ ಮಧ್ಯಾಹ್ನವು ತಿರಿಗಿದ್ದಿತು. ಎದ್ದು ನೋಡಿ
ದನು. ಅತಿಥಿಶಾಲೆಯ ಬಾಗಿಲು ಮುಚ್ಚಿದ್ಹಿತು. ಯತ್ನ ತಪ್ಪಿದವನಾಗಿ
ದೊಡ್ಡದಾದಾ ಅರಮನೆಯ ಬಾಗಿಲಬಳಿ ಹೋಗಿ ಭಿಕ್ಷ ವನ್ನು ಬೇಡಿದನು.
ಜಮೀನುದಾರನ ಹೆಸರು ಅನ್ನದಾಪ್ರಸಾದಸಿಂಹ, ಅವನು ಧನವಂ
ತನಾಗಿದ್ದರೂ ಅತಿಥಿಗಳಗೆಂದೂ ವಿಮುಖನಲ್ಲ-ಜಮೀನುದಾರನ ಮಗನಾಗಿ
ದ್ದರೂ ಮೂರ್ಖನಾಗಿ ಸ್ವಾರ್ಥಪರನಾಗಿರರಿಲ್ಲ-ಧಾರ್ಮಿಕನಾಗಿಯೂ
ನ್ಯಾಯಶೀಲನಾಗಿಯೂ ಇದ್ದನು; ಪರರ ದುಃಖಕ್ಕೆ್ ಸಲವಾಗಿ ಸರ್ವಸ್ವ
ವನ್ನಾದರೂಕೊಟ್ಟು ಅವರ ದುಃಖವಿಮೋಚನೆ ಮಾಡುವನು.
ಅನ್ನದಾಬಾಬುವಿನ ವಯಸ್ಸು ನಲ್ವತ್ತು ವರ್ಷಕ್ಕೆ ಮೀರಿರಲಿಲ್ಲ.
ಅನನಿಗೆ ಹೆಂಡತಿಯು ಹೊ:ಗಿದ್ದಳು. ಒಬ್ಬಳೇ ಒಬ್ಬ ಮಗಳು. ಅವ
ಳಿಂದ ಎಲ್ಲ್ಲಾ ಸಂಸಾರ. ಮಗಳ ಅವಲಂಬನವಿಲ್ಲದಿದ್ದರೆ ಅವನು ಸಂಸಾರ
ದಲ್ಲಿರುತಿರಲಿಲ್ಲ.. ಆರೂ ಇಲ್ಲದಿದ್ದರೆ ಸ್ವಂತ ಆವಲಂಬನ ಮನುಷಯಮಾ
ತ್ರನು ಬಾಯಯಲ್ಲೇನನ್ನು ಹೇಳುತ್ತಿದ್ದರೂ ಆತ್ಮತೃಪ್ತಿಗೆಸಲವಾಗಿ ಸಂಸಾರ
ವನ್ನು ಪದದಳಿತ ಮಾಡುವುದಕ್ಕೆ ಪರಾಙ್ಮುಖನಾಗನು.
ಅನ್ಪದಾಬಾಖುನಿನ ಮನೆಯೊಳಗೆ ಹೋಗಲು ಅತಿಥಿಗಳಿಗೆ ಅಡ್ಡಿ
ಯಿಲ್ಲ. ರಮಣೀಮೊಃಹನನು ಬಾಗಿಲೊಳಗೆ ಹೋಗಿ ಹಜಾರದಲ್ಲಿ ನಿಂತು
ಕೊಂಡನು. ಆರೂ ಅಡ್ಡಿಮಾಡಲಿಲ್ಲ `ಭೃತ್ಯನೊಬ್ಬನು ವಿನೀತಭಾವದಿಂದ
ಭಿಕ್ಷವನ್ನು ತರುವುದಾಗಿ ಹೇಳಿ ಒಳಗೆ ಹೋದನು. ರಮಣೀಮೋಹನನು
ನಿಂತಿದ್ದನು.
ಅಲ್ಲವನು ನಿಂತಿದ್ದಂತೆ ಅತ್ತಿತ್ತ ನೋಡುತ್ತ ಎರಡನೆಯ ಅಂತಸ್ತಿನ
ಒಂದು ಗವಾಕ್ಷದಮೇಲೆ ದೃಷ್ಟಿಯು ಬಿದ್ದಿತು. ಅಲ್ಲೊಬ್ಬ ಸುವರ್ಣಾಲಂ
ಕಾರಭೂಷಿತೆಯಾದ ದೇವಿಯ ಪ್ರತಿಮೆಯಂತೆ ಭುವನವಂ ಮೋಹಗೊ
ಳಿಸುವ ಕಿಶೋರಿಯೊಬ್ಬಳು ನಿಂತಿದ್ದಳು. ಅವಳುಟ್ಟಿದ್ದ ಸೂಕ್ಷ್ಮವಾದ
----------------------------------------
೭೮ ನೀರದೆ
ವಸ್ತ್ರಾಭ್ಯಂತರದಿಂದ ಅವಳ ದೇಹದ ಕಾಂತಿಯು ಹೊರಗೊಗಿಯುತ್ತಿ
ದ್ದಿತು--ಹೆರಳು ಹಾಕದ ಕೃಷ್ಣಕೇಶರಾಶಿಯು ಗುಂಗುರುಗುಂಗುರಾಗಿ ವಕ್ಷ
ವನ್ನು ಮುಚ್ಚಿದ್ದಿತು. ಚಿತ್ರಿತವಾದ ಪ್ರತಿಮೆಯಂತಿದ್ದಾಮೂರ್ತಿಯನ್ನು
ನೋಡಿ ರಮಣೀಮೋಹನನು ವಿಹ್ವಲನಾದನು -ಸ್ಥಿರನಯನಗಳಿಂದ ನೋಡಿ
ಹುಡುಗಿಯನ್ನು ಗುರುತಿಸಿದವನು, " ನೀರದೆ ! ನೀರದೆ!! " ಎಂದು
ಕೂಗಿದನು.
ನೀರದೆಯು ಆ ಕೂಗನ್ನು ಕೇಳಿದಳು. ಸ್ತ್ರೋತ್ರದಿಂದ ತುಷ್ಟ
ವಾದ ದೇವತೆಯ ಸ್ನೇಹಾನುಗ್ರಹವೂರ್ವಕ ಸಂಭಾಷಣೆಯಂತೆ ಆ ಉನ್ಮ
ತ್ತ ಚೀತ್ಕಾರವು ನೀರದೆಯ ಕಿವಿಯಲ್ಲಿ ಸೊದೆಯಂ ಸುರಿಯಿತು. ಆರನ್ನು
ಧ್ಯಾನಿಸುತ್ತಿದ್ದಳೋ ಅವನು ತನ್ನೆದುರಿಗೆ ನಿಂತಿರುವುದನ್ನು ನೋಡಿದಳು.
ನೋಡಿದವಳು ನಿಂತಿರರಾರದೆಹೋದಳು-ನಡುಗುತ್ತ ನೆಲದಮೇಲೆ ಕುಳತು
ಬಿಟ್ಟಳು.
.....
ಇಪ್ಪತ್ತುಮೂರನೆಯ ಪರಿಚ್ಛೇದ.
ಇಬ ರೂ ಮೈಮರೆತಂತವರಾಗಿ ಪರಸ್ಪರ ನೋಡುತ್ತಿದ್ದರು.
ರಮಣೀಮೋಹನನು ಭಿಕ್ಷುಕವೇಷದಲ್ಲಿರುವುದನ್ನು ನೀರದೆಯು
ನೋಡಿದಳು. ಒಂದಾನೊಂದು ದಿನ ಆವ ವೇಷದಲ್ಲಿ ನೀರದೆಯು ರಮ
ಣೀಮೋಹನನ ಮನೆಗೆ ಭಿಕ್ಷವಂ ಬೇಡಲು ಹೋಗಿದ್ದಳೋ ರಮಣೀ
ಮೋಹನನ ವೇಷವೂ ಇಂದು ಹಾಗಿದ್ದಿತು. ತಲೆಯ ಕೂದಲು ಕೆದರಿದ್ದಿತು.
ಅಂಗವು ತೈಲಹೀನ_ಬಟ್ಟೆಯು ಶತಛಿದ್ರ-ಆದರಾ ವೇಷವು ಹೇಗೆಬಂದಿತು ?
ನೀರದೆಯು, "ನನಗೆ ಸಲವಾಗಿರಬೇಕು ?' ಎಂದು ಭಾವಿಸಿದಳು.
ನೀರದೆಯು ಒಂದು ಹಿಡಿ ಅಕ್ಕಿಯ ಭಿಕ್ಷಕ್ಕೆ ಹೋಗಿದ್ದವಳು ಅಪರಿ
ಮಿತ ದಯೆಯನ್ನೂ ಆಯಾಚಿತವಾದ ಅನಂತ ಪ್ರಣಯವನ್ನೂ ಹೊಂದಿ
------------------------------------------
ಇಪ್ಪತ್ತುಮೂರನೆಯ ಪರಿಚ್ಛೇದ ೭೯
ದಳು... ಇಂದು ಏನನ್ನು ತೊಟ್ಟು ಅತಿಥಿಸತ್ಕಾರವನ್ನು ಮಾಡಬಲ್ಲಳು !
ನೀರದೆಗೆ ಉಳದಿರುವುದೇನು? ಅವಳೇನನ್ನು ಕೊಡಬಲ್ಲ ಳು? ಅವಳಗಿ
ದ್ದುದನ್ನು ಅವಳು ಬಹುದಿನಕ್ಕೆ ಮೊದಲು ಕೊಟ್ಟು ಬಿಟ್ಟಿದ್ದಳು. ನೀರ
ದೆಯು ಅಶ್ರುಪ್ಲಾವಿತ ನಯನಗಳಂದ ರಮಣೀಮೋಹನನನ್ನು ನೋಡುತ್ತ
ಮನಸ್ಸಿನಲ್ಲಿ, " ನಾಥ! ನಿನಗೆ ಎಲ್ಲವನ್ನೂ ಕೊಟ್ಟುಬಿಟ್ಟದ್ದೇನೆ " ಎಂದಂ
ದುಕೊಂಡಳು.
ರಮಣೀಮೋಹನನು ಮನಸ್ಸಿನಲ್ಲಿ " ನೀರದೆಯ ದುಃಖವಿಮೋಚ
ನೆಯನ್ನು ಮಾಡಲು ಒಂದು ನಾನಿಂದು ನೀರದಯ ಬಾಗಿಲಲ್ಲಿ ಭಿಕ್ಬಾರ್ಥಿ
ಯಾಗಿದ್ದೇನೆ. ಅದರೆ ನೀರದೆಯು ಉಪ್ಪರಿಗೆಯಮೇಲೆ ಹೇಗೆ ಬಂದಳು?
ಅರಾದರೂ ದಯಾಪರವಶರಾಗಿ ಅನಾಥೆಯಾಗಿದ್ದಾನೀರದೆಗೆ ಅಶ್ರಯವಂ
ಕೊಟ್ಟಿರುವರೆ? ನೀರದೆಗೆ ಅಷ್ಟೊಂದು ಸುವರ್ಣಲಂಕಾರಗಳು ಹೇಗೆ
ಬಂದುವು!-ಹೀಗವಳನ್ನು ನೋಡುವೆನೆಂದು ನಾನೆಂದೂ ಭಾವಿಸಿರರಿಲ್ಲ.
ಅವಳನ್ನೀಸ್ಥಿತಿಯಲ್ಲಿ ನೋಡಲು ಕಾರಣವೇನಿರಬಹುದು ?'' ಎಂದು ಭಾವಿ
ಸಿಕೊಳ್ಳುತ್ತಿದ್ವನು.
ಆ ಸಮಯದಲ್ಲಿ ಮನೆಯ ಯಜಮಾನ ಅನ್ನದಾಬಾಬುವು ಬಂದು
ರಮಣೀಮೋಹನನ್ನು ಕುರಿತು, " ನಿನ್ನ ಹೆಸರು ರಮಣೀಮೋಹನನ
ಲ್ಲವೆ?" ಎಂದು ವಿಚಾರಿಸಿದನು.
ರಮಣೀಮೋಹದನನು ವಿಸ್ಮಿತನಾಗಿ, "ಅಹುದು? ಎಂದುತ್ತರವನ್ನು
ಕೊಟ್ಟನು.
ಅನ್ನದಾ ನನ್ನ ಸಂಗಡ ಬಾ.
ಇಬ್ಬರೂ ಹೋಗಿ ಬಂದು ಸಜ್ಜಿತವಾಗಿದ್ದ ಕೊಠಿಡಿಯಲ್ಲಿ ಕುಳಿ
ತರು. ಆಲ್ಲಿ ಮತ್ನಾರೂ ಇರಲಿಲ್ಲ.
ಅನ್ಪವಾ--ನಿನ್ನನ್ನು ದ್ಗೇವಗಡದಲ್ಲಿ ನೋಡಿದ್ದೆನು : ಆದರೆ ಆಗ
ನಿನ್ನ ಹೆಸರು ಗೊತ್ತಿರಠಿಲ್ಲ. ಈಚೆಗೆ ನೀರದೆಯಿಂದ ತಿಳದೆನು.
ರಮಣೀ--ತಾವು-ತಾವಾರು?
ಅನ್ನದಾ--ನೀನು ನನ್ನನ್ನು ಅರಿಯೆ...ನೀನಾಗ ಹುಡುಗನಾಗಿದ್ದೆ.-
ನಿನ್ನ ತಂದೆಯು ನನ್ನನ್ನು ಬಲ್ಲನು, ನನ್ನ ಹೆಸರು ಅನ್ನದಾಪ್ರಸಾದಸಿಂಹ.
--------------------------------------
೮೦ ನೀರದೆ
ರಮಣೀ-ತಮ್ಮ ಹೆಸರನ್ನು ನಮ್ಮ ತಾಯಿಯ ಬಾಯಿಂದ ಕೇಳಿ
ದೈನು--ತಾವು ನಮಗೆ ಒಂದಾನೊಂದುಸಾಲದಲ್ಲಿ ಬಹಳ ಉಪಕಾರವನ್ನು
ಮಾಡೋಗಾಗಿದೆ.
ಅನ್ನದಾ- -ಆದಸಕ್ಕೆಸಲವಾಗಿಯಲ್ಲವೆ. ತಾಯಿಯೂ ಮಗನೂ ಸೇರಿ
ನನ್ನನ್ನು ಮನೆಯಿಂದ ಹೊರಡಿಸಿದುದು?
ರಮಣಿ -ತಮ್ಮನ್ನೇ ಹೊರಡಿಸಿದೆವು?
ಅನ್ನದಾ- -ಹೊರಡಿಸದೆ ಮತ್ಸೇನು? ಆದರದು ನಿಮ್ಮ ಅಪರಾಧ
ವಲ್ಲ-ಆಗೆನ್ನ ತಲೆಯಲ್ಲಿ ಜಟೆಯಿದ್ದಿತು.
ರಮಣಿ -ಹಾಗಾದರೆ, ತಾವಾ--ಆ ಸನ್ಯಾಸಿಯೆ ?
ಅನ್ನದಾಬಾಬುವು ಮುಖವನ್ನೋರೆ ಮಾಡಿಕೊಂಡು ಮುಗುಳ ನಗೆ
ಯನ್ನು ನಕ್ಕನು.ರಮಣೀಮೋಹನನು ಮನಸ್ಸಿನಲ್ಲಿ, " ಈ ಅನ್ನದಾಬಾ
ಬುವು ಅ ಸನ್ಯಾಸಿಯೇ ಅಹುದು. ಅದೇ ಮುಖ ಅದೇ ಮೂಗು, ಅದೇ
ಕಣ್ಣುಗಳು ಆದರೆ ಅವನು ಸಂಸಾರವನ್ನು ಬಿಟ್ಟು ಸನ್ಯಾಸಿಯಾದನೇಕೆ?
ಪುನಃ, ಸನ್ಯಾಸಾಶ್ರಮವನ್ನು ಬಿಟ್ಟು ]ಗೃಹೀಯಾದನೇಕೆ ? ಅವೆಲ್ಲವೂ
ನೀರದೆಗೆ ಸಲವಾಗಿರಬಹುದೆ? ನೀರದೆಯಿದ್ದೆಡೆ ಅವನಿದ್ದನು ದೇವಗಡ
ದಲ್ಲಿ ನೀರದೆಯನ್ನು ಬೆಂಬಳಿಸುತಿದ್ದುದನ್ನು ನೋಡುತಿದ್ದೆನು- ಪುನಃ
ಇಲ್ಲಿಗೆ ಬಂದರೆ ನೀರದೆಯು ಅವನ ಮನೆಯಲ್ಲಿದ್ದಾಳೆ-ಇದರ ಅರ್ಥವೇ
ನಿರಬಹುದು ? ಅನ್ನದಾಬಾಬುವಿನ ಉದ್ದೇಶವೇನಿರಬಹುದು ' ಎಂದು
ಮುಂತಾಗಿ ಭಾವಿಸಿಕೊಳ್ಳುತಿದ್ದನು.
ಬಳಕ ರಮಣೀಮೋಹನನು, " ನೀರದೆಯು ಇಲ್ಲಿಗೆ ಹೇಗೆ ಬಂ
ದಳು? '' ಎಂದು ವಿಚಾರಿಸಿದನು,
ಅನ್ನದಾ -ನಾನವಳನ್ನು ಕರತಂದೆನು.
ರಮಣೀ- ವೈದ್ಯನಾಥದಿಂದಲೆ?
ಅನ್ಡದಾ--ಅಹುದು.
ರಮಣೀ--ಏಕೆ ಕರತರೋಣಾಯಿತು ?
ಅನ್ನದಾ--ನೀರದೆಯು ನನಗೆ ಮಗಳು.
--------------------------------------------
ಇಪ್ಪತ್ತುನಾಲ್ಕನೆಯ ಪರಿಚ್ಛೇದ ೮೧
ರಮಣೀಮೋಹನನು ಮೂಕಾಗಿ ಸ್ತ೦ಭಿತನಾದನು. ನೀರದೆಯು
ಆ ಧನವಂತನಾದ ಭೂಸ್ವಾಮಿಯ ಮಗಳೆ? ಸುಳ್ಳುಮಾತು--ಹಾಗಿರದು.
ನಿಜವಾಗಿದ್ದರೆ ನಿಜವಾಗಿದ್ದರೆ, ಎಷ್ಟೊಂದು ಸುಖವಾಗುವುದು! ಸ್ವಲ್ಪ
ಹೊತ್ತು ಸುಮ್ಮನಿದ್ದು ಬಳಕ ರಮಣೀಮೋಹನನು, " ತಮ್ಮ ಸಾಕಮಗ
ಳೆಂದು ತೋರುತ್ತದೆ? " ಎಂದನು.
ಅನ್ನದಾ--ಇಲ್ಲ.--ನನ್ನ ಔಿರಸಮಗಳು.
ರಮಣೀ-ತಮ್ಮ ಸ್ವಂತಮಗಳನ್ನು ಭಿಕ್ಷಾಟನೆಗೆ ಬಿಟ್ಟಿರೋ
ಣಾಯಿತೆ ?
ಅನ್ಪದಾ-- ಎಲ್ಲವೂ ಅದ್ಭಷ್ಟದೋಪ. ಹೆಂಗಸು ಸ್ವರ್ಗಾರೋಹಣವಂ
ಮಾಡಿದಳು. ನಾನು ಸನ್ಯಾಸಾಶ್ರಮವನ್ನು ಕೈಗೊಂಡೆನು. ಮಗಳು ಬಿಕ್ಷು
ಕಳಾದಳು.
ರಮಣೀ--ನಾನದಾವ ಸಂಗತಿಯನ್ನೂ ಅರಿಯೆನು.
ಅನ್ನದಾ--ಹಾಗಾದರೆ ಕೇಳು--ಸಂಕ್ಷೇಪವಾಗಿ ಹೇಳುವೆನು- ಎಂಟು
ವರ್ಷಕ್ಕೆ ಮೊದಲು ಒಂದೌತಣವು ಬಂದು ನಮ್ಮ ಮಾವನ ಮನೆಗೆ ಹೋಗಿ
ದ್ದೆನು. ಸಂಗಡ ನೀರದೆಯೂ ಅವಳ ತಾಯಿಯೂ ಇದ್ದರು. ನಾವು
ದಾಮೋದರನದಿಯಲ್ಲಿ ದೋಣಿಯಲ್ಲಿ ಹೋಗಬೇಕು-ಹಿಂದಿರುಗಿ ಬರು
ವಾಗ ದೋಣಿಯು ಮುಳುಗಿಹೋಯಿತು. ನಾನು ಬದುಕಿಕೊಂಡೆನು. ನನ್ನ
ಹೆಂಡತಿ ಮತ್ತು ಮಗಳ ಸಮಾಚಾರವು ಗೊತ್ತಾಗಲಿಲ್ಲ, ಕೆಲವು ದಿನಗಳಲ್ಲಿ
ನನ್ನ ಹೆಂಡತಿಯ ಶವವು ಸಿಕ್ಕಿತು. ನೀರದೆಯ ಸಮಾಚಾರವು ಗೊತ್ತಾ
ಗಲಿಲ್ಲ. ಅದು ಮೊದಲ್ಗೊಂಡು ನಾನು ಗೃಹತ್ಯಾಗಿ ಸನ್ಯಾಸಿಯಾದೆನು.
ಅನ್ನದಾಬಾಬುವು ವ್ಯಸನಭಾರಾಕ್ರಾಂತವಾಗಿ ಅಧೋಮುಖಿಯಾಗಿ
ಮೌನವಾಗಿದ್ದವನು, ಸ್ಪಲ್ಪಹೊತ್ತಾದಬಳಕ ಪುನಃ ಹೇಳತೊಡಗಿದನು :--
ಅರೇಳುವರ್ಪಗಳಾದ ಬಳಕ ತಪೋವನದ ಬೆಟ್ಟದಲ್ಲಿ ನೀರದೆಯನ್ನು ನಿನ್ನ
ಸಂಗಡ ನೋಡಿದೆನು-ಮೊದಲು ಚೆನ್ನಾಗಿ ಗುರುತಾಗಲಿಲ್ಲ --ಸಂದೇಹವಾಗಿ
ದ್ದಿತು. ನನ್ನ ಸಂದೇಹದ ನಿವಾರಣೆಗೆ ನೀನೆನಗೆ ಅವಕಾಶವನ್ನು ಕೊಡ
ಲಿಲ್ಲ--ನೀರದೆಯ ಕಣ್ಣಿನಲ್ಲಿ ಎರಡು ಮುಚ್ಚೆ ಗಳದ್ಟುವು. ಅಂತಹ ಮಚ್ಚೆ
ಳಾರಿಗೂ ಇರದು, ಭಗವಂತನ ಅನುಗ್ರಹದಿಂದ ನೀರದೆಯನ್ನು ಪುನಃ
----------------------------------------
೮೨ ನೀರದೆ
ಹೊಂದಿದೆನು. ಅವಳ ಕಣ್ಣಿನಲ್ಲಾ ಮಚ್ಚೆ ಗಳದ್ದುವು. ನೀರದೆಯನ್ನು
ಹೊಂದಿ ನಾನು ಪುನಃ ಸಂಸಾರಿಯಾದೆನು. ನೀರದೆಯು ಅವಳ ಜೇವನದಲ್ಲಿ
ಆರುವರ್ಪಕಾಲ ಪಟ್ಟ ಕಷ್ಟವನ್ನು ಎಂದಿಗೂ ಮರೆಯೆನು. "
ರಮಣೀ--ಆ ಅರುವರ್ಷಕಾಲ ನೀರದೆಯೆಲ್ಲಿದ್ದಳು?
ಅನ್ನದಾ- ಒಬ್ಬ ವೇಶ್ಯೆಯ ಮನೆಯಲ್ಲಿ.
ರಮಣೀ--ನಾನೂ ಹಾಗೇವೇ ಕೇಳಿದೆನು.
ಅನ್ನದಾ--ನಿನಗೆ ಹೇಳದನರಾರು? ನೀರದೆಯೆ?
ರಮಣೀ--ಅಹುದು.
ಅನ್ನದಾ--ಅದರೂ ನೀನು ನೀರದೆಯನ್ನು ತಿರಸ್ಕರಿಸಿ ನಿರಾಕರಿಸದೆ
ಪ್ರೀತಿಸಿದೆ.
ರಮಣೀ -ನೀರದೆಯನ್ನು ಶಿರಸ್ಕರಿಸುವುದೆ ? ನೀರದೆಯನ್ನು ತಿರ
ಸ್ವರಿಸಿದ ದಿನ ನಾನು ಮನುಷ್ಯನಾಗೆನು.
ಅನ್ನದಾಬಾಬುವಿನ ಮೈಕಂಟಕಿತವಾಯಿತು. ಕಣ್ಣು ಸೋಗೆಯಲ್ಲಿ
ಏರಡು ತೊಟ್ಟು ನೀರುಕಣ್ಗೊಳಸಿತು. ಅವನು. “ ನನ್ನ ನೀರದೆಯನ್ನು
ಪ್ರೀತಿಸುವವನನ್ನು ನನಗಿಂತಲೂ ಹೆಚ್ಚೆಂದು ತಿಳಯುವೆನು-ನಿನ್ನ ಉಪಾ
ರಕ್ಕೆ ತಕ್ಕ ಪ್ರತ್ಯುವಕಾರವನ್ನು ನಾನೆಂದೂ ಮಾಡಲಾರೆನು '' ಎಂದನು.
ರಮಣೀ--ನನ್ನ ಅಭಿಪ್ರಾಯದಲ್ಲಿ ನಾನಿಬ್ಬರೂ ಋಣಿಗಳು.
ಅನ್ನದಾ--ಅರಿಗಾರು ಋಣಿ?
ರಮಣೀ.-ನೀರದೆಯ ಪ್ರಾಣರಕ್ಷಣೆಯನ್ನು ಮಾಡಿದವರಿಗೆ.
ಅನ್ನದಾ--ವೇಶೈ ಯಮುನೆಯ ನೀರದೆಯನ್ನು ಆಸನ್ಸ ಮೃತ್ಯುವಿ
ನಿಂದ ರಕ್ಷಿಸಿದವಳು-ಯಮುನೆಯು ಬ್ರಾಹ್ಮಣರ ಮಗಳು-ಗಂಡನಿಲ್ಲದವಳು.
ಕುಲತ್ಯಾಗಿಯಾದಾಗ ದಾನೋದರ ನದಿಯ ಮರಳಿನಲ್ಲಿ ನೀರದೆಯನ್ನು
ಹೊಂದಿದಳು-ತಾನು ಧರ್ಮ-ಭ್ರಷ್ಠೆಯಾಗಿದ್ದರೂ ಯಮುನೆಯು ನೀರದೆಗೆ
ಧರ್ಮವನ್ನೂ ವಿದ್ಯೆಯನ್ನೂ ನೀತಿಯನ್ನೂ ಕ೨ಸದಳು-ನೀರದೆಯು ವಯ
ಸ್ಸಾಗಿ ಜ್ಞಾನವು ಬಂದಾ! ಅ ವೇಕ್ಕೆಯ ಅಶ್ರಯವನ್ನು ತ್ಯಚಜೆನಿ ಭಿಕ್ಷುಕ
ಳಾದಳು_ಅಸತ್ಸಂಗಕ್ಕಿಂತ ಭಿಕ್ಸೆ ಯು ಮೇಲೆಂದು ತಿಳದು ಹಾಗೆ ಮಾತಿ
ದಳು-ಬಳಕ ನಡೆದ ವಿದ್ಯಮಾನಗಳನ್ನು ನೀನೇ ಬಲ್ಲೆ.
--------------------------------------
ಇಪ್ಪತ್ತುನಾಲ್ಯನೆಯ ಪರಿಚ್ಛೇದ ೮೩
ರಮಣೀ--ನಾನು ಬಲ್ಲೆನು-ಅದರೆ ತಾವು ಅರಿಯರಿ.
ಅನ್ನದಾ--ನಾನರಿಯದಿರುವುದಾವದು? ಹೇಳು.
ರಮಣೀ--ನಾಚಿಕೆಯಿಲ್ಲದೆ ನಾನದನ್ನು ಹೇಳಬೇಕಾ.
ಅನ್ನದಾ--ನಿಸ್ಸಂಕೋಚವಾಗಿ ಹೇಳು.
ರಮಣೀ.-ನೀರದೆಯನ್ನು ನಾನು ಮನಸಾ ನನ್ನ ಪತ್ನಿಯೆಂದು
ಗ್ರಹಣ ಮಾಡಿದ್ದೇನೆ. ಆವಳ ಹೊರತು ನಾನು ಮತ್ತಾ ರನ್ನೂ ಮದುವೆ
ಯಾಗೆನು.
ಅನ್ನದಾ--ನಾನೂ ಕನ್ಯಾದಾನ ಮಾಡಲು ಸಿದ್ಧವಾಗಿದ್ದೇನೆ-ಆದರೆ-
ರಮಣೀ.--ಅದರೆ ಏನು?
ಅನ್ನದಾ -ಆದರೆ ಇಂದೇ ಮದುವೆಯಾಗಬೇಕು.
ರಮಣಿೀ--ಇಂದೇ? ಅದೇಕೆ?
ಅಸ್ಪದಾ--ನೀರದೆಗಿಂದು ಮದುವೆಯಂ ಮಾಡಬೇಕೆಂದು ಪ್ರತಿಜ್ಞೆ
ಮಾಡಿದ್ದೇನೆ-ನೀನೊಪ್ಪದಿದ್ದರೆ ಬೆೇರೆ ವರನಿಗೆ ಕೊಟ್ಟು ಮದುವೆ ಮಾಡು
ವೆನು,
ರಮಣಿ ಹಾಗಾದರೆ, ನನ್ನ ಅದೃಪ್ಫದಲ್ಲಿ ನೀರದೆಯನ್ನು ಹೊಂದು
ವಂತಿಲ್ಲ.
ಅನ್ನದಾ--ಏಕೆ ?
ರಮಣೀ--ತಾಯಿಯ ಅನುಮತಿಯಿಲ್ಲ ದೆ ಮದುವೆಯಾಗೆನು-ಮದು
ವೆಯ ಮಾತು ಹಾಗಿರರಿ-ಅವಳನ್ನು ಸ್ಪರ್ಶವನ್ನೂ ಮಾಡೆನು.
ಅನ್ನದಾ -ನನ್ನ ಮಗಳನ್ನು ಮದುವೆಯಾಗಲು ತಾಯಿಯ ಅನುಮ
ತಿಯು ಬೇಕೆ? ನೀನಿನ್ನೂ ಹುಡುಗನಲ್ಲ.
ರಮಣೀ--ತಾಯಿಯು ಬದುಕಿರುವತನಕ ನಾನು ಹುಡುಗನೇ
ಅಹುದು ; ಆಕೆಯ ಅನುಮತಿಯಿಲ್ಲದೆ ಮದುವೆಯಾಗೆನು.
ಅನ್ನದಾ--ಹಾಗಾದರೆ ನೀರದೆಯನ್ನು ಬೇರೆ ವರನಿಗೆ ಕೊಟ್ಟುಬಿಡಲೆ?
ರಮಣೀ -ಇಷ್ಟವಿದ್ದಂತೆ ಮಾಡಬಹುದು-ನೀರದೆಯನ್ನು ಹೂಂದದಿ
ದ್ದರೆ, ನನ್ನ ಜೇವನವು ಮುರುಭೂಮಿಯಾಗಿರುವುದು-ಸಂಸಾರವನ್ನು
ಬಿಟ್ಟು ಸನ್ಯಾಸಾಶ್ರಮವನ್ನು ಗ್ರಹಣ ಮಾಡಟೇಕಾಗುವುದು-ಹಾಗೆ ಮಾಡಿ
------------------------------------------
೮೪ ನೀರದೆ
ದರೂ ತಾಯಿಗೆ ವ್ಯಥೆಯನ್ನುಂಟುಮಾಡಿದಂತಾಗದು-ಸಹಸ್ರ ರಮಣೀಮೋ
ಹನರ ಸುಖದುಃಖಗಳಗಿಂತ ತಾಯಿಯ ಕಣ್ಣೀರು ದೊಡ್ಡದು.
ಅನ್ಬದಾಬಾಬುವು ಕೇಳಿ ಚಮತ್ಕೃತನಾದನು-ರಮಣೀಮೋಹ
ನನ ಕೈಗಳನ್ನು ಹಿಡಿದುಕೊಂಡು ಉತ್ಸುಕಪಪೂರ್ಣನಾಗಿ, " ಅಣ್ಣಾ!
ನೀನು ದೀರ್ಫಾಯುಸ್ಸುಳ್ಳ ವನಾಗೆಂದು ಹರಿಸುವೆನು-ನೀರದೆಯು ನಿನ್ನ
ವಳು. ನಿನ್ನಹೊರ್ತು ನೀರದೆಯನ್ನು ಮತ್ತಾರೂ ಹೊಂದರು. ನಾನು
ನಿನ್ನನ್ನು ಪರೀಕ್ಷಿಸಿದೆನು-ಆವನು ಮಾತೃದ್ರೋಹಿಯೋ ಅವನು ಮನು
ಷ್ಯತ್ವ ವರ್ಜಿತ ನರಪಿಶಾಚನು. ಮಾತೃಭಕ್ತನಿಗೆ ಭಾಗ್ಯಲಕ್ಷ್ಮಿಯು ಅವನ
ವಳಾಗುವಳು-ಈಶ್ವರನು ಅಂತಹವನಿಗೆ ಪ್ರಸನ್ನನಾಗುವನು -ಮಾತೃವತ್ಸಲ!
ಹೋಗು, ತಾಯಿಯ ಅನುಮತಿಯನ್ನು ಪಡೆದುಕೊಂಡು ಬಾ'' ಎಂದು
ಹೇಳಿದನು,
.....
ಇಪ್ಪತ್ತುನಾಲ್ಯನೆಯ ಪರಿಚ್ಛೇದ.
ಬಳಕ ಮೂರುತಿಂಗಳುಗಳು ಕಳೆದವು-ಇಂದು ಗೊಪಾಲಪುರದಲ್ಲಿ
ಬಹಳ ಗದ್ದಲ-ಗ್ರಾಮದ ಜಮಾನುದಾರ ರಮಣೀಮೋಹನನು ಮದುವೆ
ಯಾಗಿ ಹೊಸ ಸೊಸೆಯನ್ನು ಮನೆಗೆ ಕರತರುತ್ತಾನೆ..ಹತ್ತ ರದ ಗ್ರಾಮದ
ವರೆಲ್ಲರೂ ಮನೆಗೆ ಬೀಗಗಳನ್ನು ಹಾಕಿಕೊಂಡು ಸೊಸೆಯನ್ನು ನೋಡಲು
ಹೊರಟರು. ಜಮೀನುದಾರನ ಮನೆಯಲ್ಲಿ ಜನವು ತುಂಬಿ ನಿಲ್ಲುವುದಕ್ಕೆ
ಸ್ಥಳವಿಲ್ಲ.. ವಿಸ್ಕ್ರೀರ್ಣವಾದಾ ಪ್ರಾಂಗಣದಲ್ಲಿ ನಿಂತು ಯಜಮಾನಿಯು
ಸೊಸೆಯನ್ನು ಬರಮಾಡಿಕೊಳ್ಳುತ್ತಾಳೆ. ಸೊಸೆಯು ಸರ್ವಾಂಗಭೂಷಿತೆ
ಯಾಗಿ ಮಿಂಚೆನ ಲತೆಯಂತೆ ನಿಂತಿದ್ದಾಳೆ. ವಜ್ರಖಚಿತವಾದ ಸುವರ್ಣಾಲಂ
ಕಾರಗಳಿಂದಲಂಕೃತೆಯಾಗಿದ್ದಾಳೆ-ಸ್ಫರ್ಣವನ್ನು ಕಂದಿಸುವ ಸೊಸೆಯ ಮೈ
ಸ್ವರ್ಣಖಜೆತ ಮಹಾಮೂಲ್ಯವುಳ್ಳ ಸೀರೆಯಿಂದಾವೃತವಾಗಿದೆ.
ಎಲ್ಲರೂ ಸೊಸೆಯನ್ನು ನೋಡಲೆಳಸುತ್ತಿದ್ದರು.. ಯಜಮಾನಿ
ಯು ಸೊಸೆಯ ಮುಖದಮೇಲಿನ ಬಟ್ಟೆಯನ್ನು ತೆಗೆದು ಮುಖವನ್ನು
---------------------------------------
ಇಪ್ಪತ್ತುನಾಲ್ಯನೆಯ ಪರಿಚ್ಛೇದ ೮೫
ನೋಡಿದಳು. -ಅಂತಹ ಸೌಂದರ್ಯವನಾರೂ ಆವಾಗಲೂ ನೋಡಿರಲಿಲ್ಲ-
ಸಾಲಂಕಾರದ ದೇವಿಯ ಪ್ರತಿಮೆಯಂತಿದ್ದಳು. ಸೊಸೆಯು ಕಣ್ಣುಗಳನ್ನು
ಮುಚ್ಚಿ ಕೊಂಡಿದ್ದಳು-ಆದರೆ ಅಧರದಲ್ಲಿ ಮೆಲ್ನಗು-ಅದು ಗರ್ವದ ನಗು
ವಾಗಿರಠಿಲ್ಲ-ಆನಂದದ ನಗುವಾಗಿದ್ದಿತು-ಆ ನಗುವನ್ನಡಗಿಸಲಾರದವಳಾ
ಗಿದ್ದಳು.
ಆದರೆ ಯಜಮಾನಿಯ ಅಧರದಕಲ್ಲಿ ಗರ್ವದ ನಗುವು ತೋರುವುದು.
ಆನಂದದಿಂದಲೂ ಗರ್ವದಿಂದಲೂ ಹೃದಯವು ತುಂಬಿದರೆ ಮನುಷ್ಯನಾವ
ನಗುವನ್ನು ನಗುವನೋ ಯಜಮಾನಿಯ ಅಧರದಲ್ಲಿ ಅಂತಹ ನಗುವು-ಕಡದ
ವಿಗ್ರಹದಂತಿದ್ದ ಸೊಸೆಯನ್ನು ಬರಮಾಡಿಕೊಂಡು ಅಂತಹ ಸೊಸೆಯು
ಮತ್ತಾರ ಮನೆಯಲ್ಲಿಯೂ ಇಲ್ಲವೆಂತಲೂ ತನ್ನಂತೆ ಮತ್ತಾರೂ ಸುಖಿ
ಗಳಲ್ಲವೆಂತಲೂ ಭಾವಿಸಿಕೊಂಡಳು.
ವಾಮೆಯು ದೂರ ನಿಂತು "ನೀರದೆಯು ಅಷ್ಟೊಂದು ಸುಂದರಿ
ಯೆಂದು ಅವಾಗಲೂ ತಿಳದಿರರಿಲ್ಲವೆಂತಲೂ ಆ ಭಿಕಾರಿಣಿಯೆಲ್ಲಿ? ಈ
ದೇವಿಯ ಪ್ರತಿಮೆಯೆಲ್ಲಿ?'' ಅರ್ಥಾರ್ಥಸಂಬಂಧವಿಲ್ಲವೆಂತಲೂ ಸೊಸೆಯು
ನಿಜವಾಗಿಯೂ ನೀರದೆಯಾಗಿರುವಳೆ? ಎಂತಖೂ ಭಾವಿಸುವಳು.
ಸೊಸೆಯು ವಯಸ್ಸಾದವಳಂದು ಹೆಂಗಸರ ಮಹಲಿನಲ್ಲಿ ಚರ್ಚೆಯಾ
ಯಿತು-ಆದರೆ ಅವಳಾ ರೂಪವೂ ಅವಳಾ ಅಮಾಲ್ಯ ಅಲಂಕಾರಗಳೂ ಆ
ಚರ್ಚೆಯನ್ನಡಗಿಸಿದುವು. ನಾವು ಮನುಷ್ಯರನ್ನು ದೂಷಿಸಿ ಹಿಂಸಿಸುತ್ತೇವೆ-
ದೇವಿಯನ್ನು ಹಿಂಸಿಸಲಾರೆವು-ನೀರದೆಯು ಆ ದೇವಿಯಾಗಿದ್ದಳು-ಬಂದವ
ರೆಲ್ಲರೂ ಸೊಸೆಯ ಸೊಬಗನ್ನೂ ಕೀರ್ತಿಯನ್ನೂ ಕೊಂಡಾಡುತ್ತ ಪ್ರೀತ
ಮನಸ್ಕರಾಗಿ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು.
ಪುಷ್ಪಕಯ್ಯೆಯ ರಾತ್ರಿ ರಮಣೀಮೋಹನನು ಕೊಠಿಡಿಗೆ ಹೋಗಿ
ನೋಡಿದನು, ಪುಷ್ಪಮಯಿ ನೀರದೆಯು ಪುಷ್ಪಾಲಂಕಾರಗಳಂದ ಭೂಪಿತೆ
ಯಾಗಿ ನೆಲದಮೇಲೆ ಕುಳತಿದ್ದಳು-ಮೋಹನನು ವಿಸ್ಕ್ರಿತನಾಗಿ, "ನೀರದೆ?
ನೆಲದಮೇಲೆ ಕುಳತಿರುವುದೇಕೆ? " ಎಂದು ವಿಚಾರಿಸಿದನು. ನೀರದೆಯು
ಸುಮ್ಮನಿದ್ದಳು-ಕಡೆಗೆ ಒತ್ತಾ ಯ ಮಾಡಿದುದರಮೇಲೆ ನೀರದೆಯು " ನಾನು
ಹಾಹಿಗೆಯಮೇಲೆ ಹೇಗೆ ಕುಳಿತುಕೊಳ್ಳಲಿ?_ಆ ಹಾಸಿಗೆಯು ನನಗೆ ದೇವ
--------------------------------------
೮೬ ನೀರದೆ
ಮಂದಿರವಾಗಿರುವುದು- ಈಗ್ಗೆ ಬಹುದಿನಗಳಗೆ ಹಿಂದೆ ನಾನಾ ಹಾಸಿಗೆಯನ್ನು
ಸರಿಮಾಡಿ ಹಾಸುತ್ತದ್ದೆನು-ಅದು ನೆನಪಿದೆಯೆ ?" ಎಂದಳು.
ರಮಣೀ--ಆ ಸಮಯಕ್ಕೆ ಸರಿಯಾಗಿ ನಾನು ಕೊಡಿಡಿಗೆ ಬಂದೆನು,
ಅದು ನೆನಪಿದೆ. ನಾನಂದು ನಿನ್ನನ್ನು ಪ್ರೀತಿಸುತ್ತೇನೆಂದು ತಿಳದುಕೊಂಡೆನು.
ನೀರದೆ-ಹಾಸಿಗೆಯನ್ನೇ ದೇವಮಂದಿರವೆಂದು ಕಲ್ಪಿಸಿಕೊಂಡು
ನಿತ್ಯವೂ ಅದನ್ನು ಸರಿಮಾಡಿ ರಚನೆಯಂಗೈಯುತಿದ್ದೆನು. ಅದರಿಂದೆನಗೆ
ಉಂಟಾಗುತಿದ್ದ ಸುಖವೂ ತೃಪ್ತಿಯೂ ಸ್ಪಲ್ಪವಾದುದಾಗಿರರಿಲ್ಲ . ಶಯ್ಕೆಯ
ರಚನೆಯಂ ಬಿಟ್ಟು ಬೇರೆ ಆಕೆಯೆನಗಿರಲಿಲ್ಲ. ಆ ವ್ರತವನ್ನು ನಡಿಸಿ
ಕೊಂಡು ಸುಖದಿಂದ ಕಾಲವನ್ನು ಕಳೆಯುತ್ತಿದ್ದೆನು. ಆದರೆ...
ರಮಣಿ -ಆದರೆ ಮತ್ತೇನು ?
ನೀರದೆ -ಅದರೆ ಹೃದಯದಲ್ಲಿ ನೂತನ ಆಸೆಯು ತಲೆದೋರಿತು.
ದೈವವಾಣಿಯಂತೆ ದೇವರ ಬಾಯಿಂದ ಎಂದು "ನೀರದೆಯು ನನ್ನ ಸಹಧ
ರ್ಮಿಣಿ, ನೀರದೆಯು ನನ್ನ ಸುಖದುಃಭಗಳಲ್ಲಿ ಭಾಗಿನಿ " ಎಂದು ಕೇಳಿ
ದೆನೋ ಅಂದಿನಿಂದ... -
ರಮಣಿ.-ನಿಲ್ಲಿಸಬೇಡ, ಹೆಳು--ನಿನ್ನಾವೀಣಾಝುಂಕಾರವನ್ನು ವಿನಿಕೆ
ಮಾಡು.
ನೀರದೆ-ಮತ್ತೇನನ್ನು ಹೇಳಲಿ? ನನ್ನ ದೇವರು ನನ್ನನ್ನು ಪ್ರೀತಿ
ಸುತ್ತಾನೆ-ತಾಯಿಯು ನನ್ನನ್ನು ಆದರಿಸುತ್ತಾ ಳೆ.-ನನ್ನಂತೆ ಸುಖಿಯು
ಮತ್ತಾರು?
ರಮಣೀ.- ನಿನಗಿಂತ ನಾನು ಹೆಚ್ಚು ಸುಖಿಯೆಂದು ತೋರುತ್ತ ದೆ.
ಒಂದಾನೊಂದುದಿನ ನೀನು ಹೆಚ್ಚೆ ತಾಯಿಯು ಹೆಚ್ಚೆ ? ಎಂದು ಸಂದೇಹ
ಪಡುತ್ತಿದ್ದೆನು. ಇಷ್ಟೊಂದು _ದಿನಗಳಾದ ಬಳಕ, ನಿನಗಿಂತ ತಾಯಿಯು
ಬಹಳ ಹೆಚ್ಚೆಂದು ತಿಳದೆನು--ಆ ನಂಬುಗೆಯೇ ನನ್ನ ಸುಖವಾಗಿರು
ವುದು. ಅದುದರಿಂದ ನನಗಿಂಶ ಹೆಚ್ಚು ಸುಖಿಗಳು ಮತ್ತಾರೂ ಇಲ್ಲವೆಂದು
ಹೇಳುತಿದ್ದೆನು.
=========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ