https://ia802805.us.archive.org/7/items/dli.osmania.4524/200648_OU_Nannanalli.pdf
https://archive.org/details/dli.osmania.4524
ನನ್ನ ನಲ್ಲ
“ ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ ನನ್ನ ನಲ್ಲ | ಸುಳಿಯಲಿಲ್ಲ, ಸುಳಿದು ಶೃಂಗಾರವ ಮಾಡಲಿಲ್ಲ | ತನ್ನೊಳಗೇ ಎನ್ನ ಬಚ್ಚಿಟ್ಟನಲ್ಲಾ ||”
-ಬಸವಂಣ.
೧ನೇ ಎಸಳು
|| ಕುಸುಮ ದ್ವಿಪದಿ || ಏನಮ್ಮ ಪ್ರತಿಭೆ ನೀನೀಸುದಿನವೆಲ್ಲಿದ್ದಿ ?
ಮತ್ತೆ ಹೇಗಿಲಿಗೇ ಮರುಳಿ ಬಂದೇ | ದಾನಮ್ಮ ನೀನೊಲಿಯೆ ಕೊರಡು ಕೊನರುವದೆಂದೆ ಬರಡು ಹಯನಾಗಲೂ ಬಲ್ಲದೆಂದೆ
ಹಾಡಬೇಕೆಂದೇಸೊ ದಿನ ಬಯಸಿ ಬೇಡಿದರೆ
ಒಂದು ನುಡಿಯೂ ಕೂಡ ಮೂಡಲಿಲ್ಲ | ಹಾಡಿ ಮುಗಿಸೇನೆಂದರಿಂದು ನುಡಿ ನಿಲ್ಲದಿದೆ ನಿನ್ನೊ ನಪಿನೊಯ್ಯಾರ ತಿಳಿಯದಲ್ಲಾ
|| ೨ ||
2-------------------------------------
ಹಿಂದೆ ಬಹುದಿನ ಹಿಂದೆ ನಾನಾಗಿ ಒಂದಿದ್ದೆ
ನಿನ್ನ ಬಾಗಿಲ ತನಕ ಹಂಬಲಾಗಿ | ಅಂದು ನಿನ್ನು ಬ್ಬಿನಲಿ ನೀನಿದ್ದಿ ಲೆಕ್ಕಿಸದೆ
ಇಂದು ನೀನೇ ಬಂದಿ ಯಾತಕಾಗಿ
|| ೩ ||
ಈ ಸುದಿನಗಳ ಬೆಂಕಿ ಈಗಾರಿತಂದಿಲ್ಲಿ
ಮತ್ತೆ ನೀನಡಿಯಿಟ್ಟಿ ಹೌದೆ ಬಾಣೀ | ಲೇಸಿನೊಡತಿಯು ನೀನು ಹಿಗ್ಗಿನಾ ಹಾಲುಂಡು ಹೂವಿನಾ ಹಾಸಿಗೆಯ ತುಳಿನ ರಾಣಿ
ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು
ಬಯಕೆ ಬರುವದರ ಕಣ್ಣನ್ನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ
|| ೫ ||
ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು
ನನ್ನ ನಲ್ಲನ ಕತೆಗೆ ಮರುಳುಗೊಂಡೆ | ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು ಈಸೊಂದು ದಿನ ಕೊರಗಿ ಗೊತ್ತುಗಂಡೆ
|| ೬ ||
ಹದಿನಾಲ್ಕು ವರುಷದಾ ರಾಮರಾ ವನವಾಸ
ಗರ್ಭಿಣಿಯ ನವಮಾಸ ಮೃತ್ಯುಹಾಸ | ಕುದಿಕುದಿದು ಬೇಯುವಾ ಬರಗಾಲದುಪವಾಸ ಮರುಗುವಾ ವಿರಹಿಣಿಯ ಊರ್ಧ ಶ್ವಾಸ || ೭ ||
3------------------------------------
ಜೊತೆಯಿಲ್ಲದೇ ಬೆಳೆಯ ಜೊತೆಯಿಲ್ಲದೇ ಉಳಿಯೆ
ಜೊತೆಯಿಲ್ಲದಾ ಬಾಳು ಗೋಳುಗೋಳು | ಜೊತೆಯಿಲ್ಲದಾಹೊತ್ತು ನೀಗಲಾರದ ಕುತ್ತು ಜೊತೆಯಿಲ್ಲದಿರಲೆಲ್ಲ ಹಾಳುಹಾಳು |
|| ೮ ||
ಜೊತೆಯಿಂದಲೇ ಜಗದ ಕುಡಿಯು ಕೊನರುತಲಿಹುದು
ಜೊತೆಯಿಂದಲೇ ಮಮತೆ ಮೊಳೆಯುತಿಹುದು | ಜೊತೆಯಾಶೆ ಜೀವರಿಗೆ ಸೃಷ್ಟಿ ಸಮ್ಮತ ವಿಧಿಯು ಜೊತೆಯಿಂದಲೇ ಭಾವ ಬೆಳೆಯುತಿಹುದು
ಕನ್ನಕ್ಕಿಯಿರುವನಕ ಹೆಸರು ಹೇಳುವ ಹಿಗ್ಗು
ಕಂಡು ಕಾಣದ ಕತೆಯ ಕೇಳಿ ಹಿಗ್ಗು | ಹೊನ್ನ ಶೂಲದ ಹರೆಯ ಹೊಮ್ಮಿ ಹೊರಚೆಲ್ಲಿದರೆ
ನಲ್ಲನಗಲಿಕೆಯಾಗ ಮನಕೆ ಕುಗ್ಗು
|| ೧೦ ||
ಹರೆಯ ಬಾರದ ಮುನ್ನ ಹಾಗು ಹೀಗೂ ಇದ್ದೆ
ಕರುಳು ಹಸಿಯದ ಮುನ್ನ ಕೆರಳದಿದ್ದೆ | ಕರುಣವಿಲ್ಲದ ಬೆಂಕಿ ಕರುಳು ಕೆದರಿತು ಮುಂದೆ
ಮಂಜುಳಿದು ಮಳೆನೀರಿಗಾಶೆಗೈದೆ
|| ೧೧ ||
ಬಂಣದಾ ಹಂಣುಗಳ ತಿಂದು ತೇಗಲುಬಹುದೆ
ಚಿತ್ರದಾಮಲ್ಲಿಗೆಯ ಮೂಸಬಹುದೇ ? | ಮಂಣುಗೊಂಬೆಯ ಮೆಚ್ಚಿ ಮಾತನಾಡಿಸಬಹುದೆ ಹೊಗೆಯಹೊಳೆ ಯಾರಾರೆ ಈಸಬಹುದೇ ? || ೧೨ ||
4--------------------------
ದೇವರಾಯನ ಹೆಸರನೇಕೆ ಕೇಳಿದೆನಮ್ಮ
ನಾನೇಕೆ ನಂಜು ನುಂಗಿದೆನೆ ತಾಯಿಾ | ಯಾವ ಕಡೆಗೂ ಮಗ್ಗಲೂರಗುಡದಮ್ಮಯ್ಯ ಈ ನೋವ ನಾ ತಾಳಲೆಂತತಾಯಾ
|| ೧೩ ||
ಮನೆಹತ್ತಿ ಉರಿದಲ್ಲಿ ದೂರ ಸರಿಯಲುಬಹುದು
ಮನಹತ್ತಿ ಉರಿದರೆಲ್ಲೋಡಬಹುದೋ || ತನುತಾಪವಿದ್ದಲ್ಲಿ ತಂಪು ತೊಡೆಯಲುಬಹುದು ಮನದ ಕಿಚ್ಚಿನ್ನೆಂತು ನೊಂದಬಹುದೋ
|| ೧೪ ||
ನನ್ನ ನಲ್ಲನ ನೆನವು ಮನವ ಮುಚ್ಚಿಕ್ಕಿರಲು
ಹಗಲು ಇರುಳಾಗುವದು ತಾನೆ ಅರಿದೇ | ನನ್ನ ರಾಯನ ಚಿಂತೆ ಎವೆಯಿಕ್ಕ ಗುಡದಿರಲು
ನನಗಾಗ ಇರುಳು ಹಗಲಾಗದಿರದೇ
|| ೧೫ ||
ಬೇಯುವೆನು ಬಾರೆಂದೆ ನೋಯುವೆನು ಬಾರೆಂದೆ
ಸಾಯುವೆನು ಸಲುಹಬಾರೆಂದು ಕರೆದೆ | ತಾಯಿ ನೀ ಬಾರೆಂದೆ ತಂದೆ ನೀ ಬಾರೆಂದೆ
ಪರದೇಶಿಯನು ಪಾಲಿಸೆಂದು ಮೊರೆದೆ
|| ೧೬ ||
ಹಲುಬುವೆನು ಬಾರೆಂದೆ ಹಂಬಲಿಸುತಿಹೆನೆಂದೆ
ಹೊಲಬುಗೆಟ್ಟೆನು ಹೊರಳಿ ದಿಟ್ಟಿಸೆಂದೆ | ನೆಲೆಗೆಟ್ಟೆ ಬಾರೆಂದೆ ಬಲಗೆಟ್ಟೆ ಬಾರೆಂದೆ
ಛಲಗೆಟ್ಟೆ ಕುಲಗೆಟ್ಟಿ ರಕ್ಷಿಸೆಂದೆ
|| ೧೭ ||
5------------------------------------
ಮರುಗುವೆನು ಬಾರೆಂದೆ ಸೊರಗುವೆನು ಬಾರೆಂದೆ
ಕೊರಗುವೆನು ಕಾಯಬಾರೆಂದು ಕರೆದೆ | ನೆರಳುವೆನು ಬಾರೆಂದೆ ಹೊರಳುವೆನು ಬಾರೆಂದೆ ಕೊರಳಾಣೆಯಿಟ್ಟಿಟ್ಟು ಚೆಲ್ಲವರಿದೆ
|| ೧೮ ||
ಕಲ್ಲೆದೆಯ ಕಣಿಯೆಂದೆ ಕೊರಳು ಕೊಯವನೆಂದೆ
ಕರುಳು ಕರಗದ ಕುಟಿಲ ಕಟುಕನೆಂದೆ | ಸೊಲ್ಲಡಗಿತೇನೆಂದೆ ಛೀ ಸತ್ಯೆಯೇನೆಂದೆ
ಬಲ್ಲಂತೆ ಬಾಯ್ಸಟ್ಟೆ ಬೈದೆ ಅಂದೆ |
|| ೧೯ ||
ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು
ಬಯಕೆ ಬರುವದರ ಕಣ್ಣನ್ನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ
| ೨೦ ||
೨ನೇ ಎಸಳು
ನೆಲಬಗಿದು ಹುಡುಕುವೆನೆ ಮುಗಿಲೇರಿ ನೋಡುವೆನೆ
ನನ್ನ ಕರುಳಿನ ಕಿಚ್ಚು ಹೇಳಲಾರೆ | ಚೆಲುವ ಚೆನ್ನಿಗರಾಯನೆಲ್ಲಿ ಸಿಗಬಹುದಮ್ಮ
ಅವನ ಕಾಣದೆ ಇನ್ನು ತಾಳಲಾರೆ
|| ೨೧ ||
ಯಾವ ದೇಶಾಂತರದೊಳೆಲ್ಲಿ ನಲ್ಲನ ವಾಸ
ಕಂಡವರನ್ನೆಲ್ಲಾರೆ ಕಾಣಬಹುದೇ | ಯಾವ ಪುಣ್ಯಾತ್ಮರಾ ಕಾಲು ಹಿಡಿಯಲೆ ತಾಯಿ ಹೇಗಾರೆ ದೊರೆಯೆನಗೆ ದೊರೆಯಬಹುದೇ
|| ೨೨ ||
6---------------------------------
ಯಕ್ಷ ರಾಕ್ಷಸರಿರಲಿ ಭೂತಬೆಂತರವಿರಲಿ
ದೇವಗಂಧರ್ವರಾರಾರೆ ಇರಲಿ | ಲಕ್ಷ್ಮಿಸಲಿ ಲಕ್ಷಿಸಲಿ ನನ್ನ ಮೊರೆ ಲಕ್ಷ್ಮಿಸಲಿ
ರಕ್ಷಕನ ಸುದ್ದಿ ಯಾರಾರೆ ತರಲಿ
|| ೨೩ ||
ಕಣಿಯ ಕೇಳಲೆ ಮತ್ತೆ ಹೊತ್ತಿಗೆಯ ಕೇಳಲೇ
ದಿಗ್ಗೇಶ ದೇಶಿಕರ ಕೇಳಲೇನೇ ? | ಗಣಿತಿಗಳ ಕೇಳಿದರೆ ಗುಣಿಸಿ ಹೇಳ್ಯಾರೇನೆ
ಯಾರ ಮೊರೆಹೊಗಲಿನ್ನು ಮಾಡಲೇನೆ ?
|| ೨೪ ||
ಬರುವನೆಂಬರು ಕೆಲರು ಬಾರನೆಂಬರು ಕೆಲರು
ಸತ್ತು ಬಹುದಿನವಾಯಿತೆಂಬ ಕೆಲರು ಬೆರಗುಬಡುವರು ಕೆಲರು ಬೆರಳು ಮುರಿವರು ಕೆಲವರು
ಬಲ್ಲಂತೆ ಬಾಯಿಬಡಿವವರು ಕೆಲರು || ೨೫ ||
ಮೇಲೆ ಕೈ ಮಾಡುವರು ಒಳಗೆ ಕೈ ತೋರುವರು
ಒಳಹೊರಗು ಬೆರಳುಸುತ್ತು ವರು ಕೆಲರು | ಕಾಲು ಕೆರೆಯುವ ಕೆಲರು ನೆಲವ ಬರೆಯುವ ಕೆಲರು - ಎದೆಗೆ ಕೈಯಿಟ್ಟಿಟ್ಟು ಕುಣಿವ ಕೆಲರು || ೨೬ ||
ಗಲ್ಲ ಹಿಡಿಯುವ ಕೆಲರು ಗಲ್ಲಹಿಂಡುವ ಕೆಲರು
ಬೆಸನಿಸುವ ಕೆಲರು ಬೆದರಿಸುವ ಕೆಲರು | ಕಲ್ಲುಗೊಳ್ಳುವ ಕೆಲರು ಹಲ್ಲುಕಿಸಿಯುವ ಕೆಲರು ಬಲ್ಲವರು ಬಲ್ಲಂತೆ ಬಣಗುತಿಹರು
|| ೨೭ ||
7--------------------------------------
ತಾಳ್ಮೆಗಲಿಸುವ ಕೆಲರು ತಪ್ಪು ಹೊರಿಸುವ ಕೆಲರು
ತಿರುತಿರುಗಿ ತಿವಿತಿವಿದು ಬಯ್ದ ಕೆಲರು | ತಾಳು ತಪ್ಪಿರೀತಿ ಬೇತಾಳದಂತೆನ್ನ
ಗಾಳಿಸುವ ಗೋಳಿಸುವ ಖಲರು ಕೆಲರು
|| ೨೮ ||
ಆಶೆಹಚ್ಚುವ ಕೆಲರು ಆಶೆಹರಿಯುವ ಕೆಲರು
ಆಶೆತೋರಿಸಿ ಅಡ್ಡ ಸೆಳೆವ ಕೆಲರು | ಆಸರಾಗುವ ಕೆಲರು ಆಶೆಬುರುಕರು ಕೆಲರು
ಮುಖ ತಿರುವಿ ಮೂಗು ಮುರಿವವರು ಕೆಲರು || ೨೯ ||
ಧೈರ್ಯ ಹೇಳುವ ಕೆಲರು ದಿಕ್ಕುಗೆಡಿಸುವ ಕೆಲರು
ದಂಗುಬಡಿಸುವ ದಂಭದವರು ಕೆಲರು | ಶೌರ್ಯಕಲಿಸುವ ಕೆಲರು ಶಾನಗೊಳಿಸುವ ಕೆಲರು
ಸಾಕುಬಿಡು ಸುಮ್ಮನಿರುವೆಂಬ ಕೆಲರು
|| ೩೦ ||
ಸತ್ತವರ ಮನೆಯಲ್ಲಿ ಸಂತೆ ನೆರೆಯುವ ತೆರದೆ - ಬಲ್ಲವರು ಬಲ್ಲಂತೆ ರಂಬಿಸಿದರು || ಸತ್ತವನ ಬದುಕಿಸುವ ಸಾಮರ್ಥದವರಾರು
ಮಾತುಕತೆಹೇಳಿ ಮನೆಗೇಳುವವರು
|| ೩೧ ||
ಯಾರ ಕೇಳಿದರಿಲ್ಲ ಯಾರು ಹೇಳಿದರಿಲ್ಲ
ಯಾರ ಬಳಿಯಲಿ ಅತ್ತು ಕರೆದರಿಲ್ಲ | ಯಾರ ಕಡೆಗೇನುಂಟು ಮಿರಿಮಿಕ್ಕಿದ ಮಾತು
ಯಾರಾರ ಬಳಿಗು ನೆಲೆಕಾಣಲಿಲ್ಲ
|| ೩೨ ||
8-----------------------------------------
ಶಕುನಕ್ಕೆ ಸಿಕ್ಕಿಲ್ಲ ಹೊತ್ತಿಗೆಗೆ ಹೊಳೆದಿಲ್ಲ
ದಿಶಯಾತ್ರಿಗಳು ಕಾಣಲಿಲ್ಲ | ಅಕಟಕಟ ಗತಿಯೇನು ಮುಂದಿನ್ನು ದಿಕ್ಕೇನು ಎಲ್ಲಿ ಮೊರೆಯಿಡಲಿನ್ನು ತಿಳಿಯದಲ್ಲಾ
|| ೩೩ ||
ಹರಣ ಹಾರುವ ರೋಗಿ ಕಂಡಕಸ ತಿನ್ನುವಂತೆ
ಕಂಡಕಂಡವರ ಕಾಲೆರಗುವಂತೆ | ಮರಣಸಂಕಟಬಟ್ಟು ತಿರುತಿರುಗಿ ಬೇಸತ್ತೆ ಸಿಕ್ಕವರು ಸಿಕ್ಕದ್ದು ಹೇಳಿದಂತೆ
ತಿರುಗಿ ಸೊರಗಿದರಿಲ್ಲ ಮರುಗಿ ಮಿಡುಕಿದರಿಲ್ಲ
ಹುಡುಹುಡುಕಿ ಹೈರಣಿಸಿ ದಣಿದರಿಲ್ಲ | ಬೆರಗಾದೆ ಬೆಪ್ಪಾದೆ ಹೊಲ್ದಾದೆ ಹುಚ್ಚಾದೆ
ನಲ್ಲನಿಲ್ಲದೆ ಜೀವ ನಿಲ್ಲದಲ್ಲಾ
|| ೩೫ ||
ಮಾವು ಬೇವಾಯೆನಗೆ ಸವಿಯು ಕಹಿಯಾಯ್ಕೆನಗೆ
ಕೂಳು ನೀರೆನಗೆ ನಂಜಾಯ್ ತಾಯಾ | ಜೀವಸಾಕಾಯ್ತಿನಗೆ ಸಾವು ಬೇಕಾಯ್ತನಗೆ ಜಗವು ಕಿಚ್ಚಿನ ಕೊಂಡವಾಯ್ತ ತಾಯಿ || ೩೬ ||
ಹಿಂದೆ ಹೊರಳುವದರಿದು ಮುಂದೆ ತೆರಳುವದರಿದು
ನಿಂತಲ್ಲಿಯೂ ನೆಚ್ಚಿ ನಿಲ್ಲಲರಿದು | ಹಿಂದಿಲ್ಲ ಮುಂದಿಲ್ಲ ಅತ್ತಿಲ್ಲ ಇತ್ತಿಲ್ಲ ಎತ್ತ ನೋಡಿದರತ್ತ ಬರಿದೊ ಬರಿದು
|| ೩೭ ||
9--------------------------
ಮುಂದಿಲ್ಲಿ ಕಟ್ಟಡವಿ ಹಿಂದಿಲ್ಲಿ ಹೆಬ್ಬುಲಿಯು
ನಿಂತಲ್ಲಿ ನಿಗ್ಗರದ ರಾಶಿರಾಶಿ | ಬಂಧನಕೆ ಸಂದಿಲ್ಲ ಬಿಡುವಿಗಿಂಬೊಂದಿಲ್ಲ ನಿಲುವಿಗಾಸರವಿಲ್ಲ ಘಾಸಿ ಘಾಸಿ
|| ೩೮ ||
ನನ್ನ ನಲ್ಲನ ನೆನವು ಮನವ ಮುಚ್ಚಿಕ್ಕಿರಲು
ಹಗಲು ಇರುಳಾಗುವದು ತಾನೆ ಅರಿದೇ | ನನ್ನ ರಾಯನ ಚಿಂತೆ ಎವೆಯಿಕ್ಕಗುಡದಿರಲು
ನನಗಾಗ ಇರುಳು ಹಗಲಾಗದಿರದೇ
|| ೩೯ ||
ಬೇಯುವೆನು ಬಾರೆಂದೆ ನೋಯುವೆನು ಬಾರೆಂದೆ
ಸಾಯುವೆನು ಸಲುಹಬಾರೆಂದು ಕರೆದೆ | ತಾಯಿ ನೀ ಬಾರೆಂದೆ ತಂದೆ ನೀ ಬಾರೆಂದೆ
ಪರದೇಶಿಯನು ಪಾಲಿಸೆಂದು ಮೊರೆದೆ
|| ೪೦ ||
೩ ನೇ ಎಸಳು
ನಿಲ್ಲು ನಿಲ್ಲಲೆ ನವಿಲೆ ನಿನ್ನ ಕಂಣುಗಳೇಸು
ಕಂಣ ಬಂಣಗಳೇಸು ಎಣಿಸಲಾರೆ | ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ
ತಾಳಲಾರದು ಜೀವ ಹೇಳಬಾರೇ
ಪಿಳುಕಿಸದ ಸಿರಿಗಂಣು ಸುತ್ತು ಚಿನ್ನದ ರೇಖೆ - ಬೆಳ್ಳಿ ಮಿರುಗಿನ ಮೈಯ ಕಾಂತಿ ನಿನಗೆ || ತಿಳಿಗಂಗೆ ನಿಮ್ಮವ್ವ ಮೀನಮೂರುತಿ ತಿಳಿಸಿ
ನನ್ನೊಡೆಯನಡಗಿರುವನಾವ ಕಡೆಗೆ
|| ೪೨ ||
10---------------------------------
ಆರದಾರತಿ ಹಿಡಿದು ಹಾರುತಿರುವೆವಳಾರೆ
ಹೊನ್ನಿ ಏ ಹೊನ್ನಿ ನೀನಾರೆ ಬಾರೇ | ಯಾರಿಗಾರತಿ ಒಮ್ಮೆ ಹೇಳೆ ನಾನೂ ಬರುವೆ ನನ್ನ ರಸನಿದ್ದಾನು ಅಲ್ಲಿ ಯಾರೇ
|| ೪೩ ||
ಸಂಣದನಿಯವಳಾರೆ ಸುಂಣುದನಿಯವಳಾರೆ
ಹೆಂಣುದನಿಗೈವ ಕೋಗಿಲೆಯೆ ಬಾರೇ || ಕಂಣು ತಪ್ಪಿಸಿದವನ ಕುರುಹು ಹೇಳೇ ತಾಯಿ ಬನದಮ್ಮ ನೀನಾರೆ ಕರುಣ ತೋರೇ
ಮಾಣಿಕದ ಮೂಗಿನವ ಮೈ ಪಚ್ಚರತ್ನ ದನ
ಹಂಣು ಕುಕ್ಕುತ ಹಾರುವಂಣ ಬಾರೋ | ಜಾಣ ರಂಗಯ್ಯ ತಾ ಕಾಣದಡಗಿದನೆಲ್ಲಿ ಗಿಣಿರಾಮ ನೀನಾರೆ ಸುದ್ದಿ ಬೀರೋ
|| ೪೫ ||
ಬೆಳದಿಂಗಳಿರುಳಲ್ಲಿ ನಟ್ಟ ನಡುರಾತ್ರಿಯಲಿ
ಸಪ್ಪಳಿಲ್ಲದ ಗಪ್ಪಗಾರಿನಲ್ಲಿ | ಕೊಳದ ಬಾಂದಳದಲ್ಲಿ ಟಿಂವ್‌ಗುಡುವಟೀಂವಕ್ಕಿ ನೀನಾರೆ ಬಲ್ಲೆಯಾ ನಲ್ಲನೆಲ್ಲಿ
|| ೪೬ ||
ಬಿರುಗಂಣ ಮಲ್ಲಿಗೆಯೆ ಸರಿಯೆ ನಿನಗೀ ಮೌನ
ಕಂಣಿಲ್ಲದವರು ಕಂಡಿಲ್ಲದಿರಲಿ | ಸಿರಿವಂತರಾಮಗಳು ಸೊರಗಿ ಸಾಯುತಲಿರುವೆ
ಪುರುಷನೆಡೆ ಹೇಳಮ್ಮ ಪುಣ್ಯ ಬರಲಿ
|| ೪೭ ||
೧೦
11---------------------------------
ಬಹುರಸದ ಮೊಲೆಯುಣಿಸಿ ಜೀವ ತಣಿಸುವ ತಾಯಿ
ಸರ್ವರಾಧಾರೆ ಭೂದೇವಿ ತಾಯಿಾ | ಬಹಳ ಬೇಡುವಳಲ್ಲ ನನ್ನ ರಾಯನ ಸೊಲ್ಲ ನೀನಾರೆ ಹೇಳಿಕೊಡಬಾರೆ ತಾಯಿ
|| ೪೮ ||
ಇಲ್ಲಿಯೂ ಮುಗಿಯದವ ಅಲ್ಲಿಯೂ ಮುಗಿಯದವ
ಎಲ್ಲಿಯೂ ಮುಗಿಯದಾಕಾಶ ತಂದೇ || ಎಲ್ಲಿ ನನ್ನ ರಸನಿಹನಲ್ಲಿ ನನ್ನಾಶ್ರಯವು ಕೈಮುಗಿವೆ ಹೇಳೆನ್ನ ನಂತ ತಂದೇ
|| ೪೯ ||
ಎಂದಿಗೂ ಇದ್ದವನು ಎಂದಿಗೂ ಇರುವವನು
ಜೈಷ್ಟನೇ ಶಾಶ್ವತನೆ ಕಾಲನಟನೇ | ಹಿಂದುಮುಂದರಿಯದಲೆ ಕುಣಿಯುವೆನು ನಿನ್ನೊಡನೆ
ನನ್ನ ರಾಯನ ನೆಲೆಯ ತೋರು ಗಡನೇ || ೫೦ ||
ಹರಳು ಮುತ್ತಿನ ರಾಶಿ ಸೆರೆಸೂರೆ ಮುಗಿಲಲ್ಲಿ
ಅಂತರದೊಳೆ ತೇಲಿಸುವ ಶಕ್ತಿ | ಹೊರಳಿ ನೋಡೆನ್ನ ಸ್ಥಿತಿ ಸೂರ್ಯಚಂದ್ರರ ಕಂಣು ತೆರೆದು ನೋಡೆನ್ನ ಗತಿ ಹೇಳೆ ಯುಕ್ತಿ || ೫೦ ||
ತೀರ ಸನಿಯೆಂದರೂ ತೀರ ದೂರದೊಳಿರುವಿ
ಸಾವಿರದ ಗಾವುದಂಗಳಾಚೆ | ತೋರಿ ನಗೆಬೀರಿ ನೀನೇನು ಹೇಳುವ ಚಿಕ್ಕೆ
ಏನೆಂದು ಭಾವಿಸಲಿದೇನು ಸೂಚೇ ?
|| ೫೨ |
೧೧
12------------------------------
ತೋರಲಾರದ ಗಾಳಿ ತಟ್ಟಿ ತಿಳಿಸುವಿಯೇನು
ಯಾವ ನಾಡಿನ ಸೀಮೆ ತುಳಿದು ಬಂದೆ ? | ಮೀರಿತೆನ್ನ ಯ ತಾಪ ಆರಿಸೆನ್ನ ಯ ತಂದೆ
ನನ್ನ ರಾಯನ ಸುದ್ದಿ ಸಾರು ಇಂದೇ
|| ೫೩ ||
ಹಗಲು ನೆರಳಿನ ನಾರಿ ಮುಗಿಲು ಮುಚ್ಚಿದ ನಾರಿ
ಇರುಳಲ್ಲಿ ಕಗ್ಗ ಕತ್ತಲೆಯ ನಾರಿ | ಮಿಗಿಲು ಮಾಟದ ನಾರಿ ತೋರೆ ನಲ್ಲನ ದಾರಿ
ಕಾಳಿ ಕಿಂಕಾಳಿ ನೀ ಮರುಕುದೂರಿ
|| ೫೪ ||
ನಿದ್ರಿಸುವ ಕತ್ತಲೆಯ ಕನಸಿಡುವ ತಿಳಿಬೆಳಕೆ
ಜಾಗೃತದ ಕಿಚ್ಚೆ ನೀನಾರೆ ಹೇಳು | ನಿದ್ರೆ ಬಾರದೆ ನಿಂತು ಸೋತು ಸಂಣಾಗಿಹೆನು
ರಾಜರಾಜನ ಠಾವ ತೋರಿಸೇಳು
|| ೫೫ ||
ಕಂಣು ಮುಚ್ಚಲು ಮುಂಣು ಕಂಣು ಬಿಚ್ಚಲು ಬಂಣ
ಕಂಣಿನಾಚೆಯ ನಿನ್ನ ರೂಪನರಿಯೆ | ಹಂಣಾದೆ ಸುಂಣಾದೆ ಸಂಣಾದೆ ಕಳವಳಿಸಿ ಮರೆತು ಮಲಗಿದ ದೊರೆಯ ತೋರೆ ಸಿರಿಯೇ || ೫೬ ||
ಕಂಣ ಕಿಂಡಿಯ ಒಳಗೆ ಹಣಿಕೆ ಹಾಕುವ ಚಾಣಿ - ಒಳಗೆ ಜೀವದ ಬೆನ್ನು ಬಡಿವ ಜಾಣೀ | ಕಂಣುಗಾಣದೆ ನಾನು ಕೊರಗಿ ಸಂಕಟಬಡುವೆ
ಚೆಲುವ ಚೆನ್ನಿಗನೆಡೆಯ ತೋರೆ ರಾಣೀ.
|| ೫೭ ||
೧೨
13-----------------------------
ತರುವೆ ನೀ ಹೇಳೆನಗೆ ಮರವೆ ನೀ ಹೇಳೆನಗೆ
ಕಲ್ಲೆ ಕೊರಡೇ ನೆಲೆಯ ಹೇಳಿರೆನಗೆ || ಮೊರೆವೆ 'ಕಾಮಾರ್ತಾ ಹಿ ಪ್ರಕೃತಿ ಕೃಪಣಾಶ್ವೇತ
ನಾಚೇತನೇಷು” ವೆಂಬಂತೆ ನಿಮಗೆ || ೫೮ ||
ನನ್ನ ಕಂಣೀರಿನಲಿ ಕಲ್ಲು ಕರಗುತಲಿಹುದು
ನನ್ನೊಡನೆ ದಿಕ್ಕು ದನಿಗುಡುತಲಿಹುದು | ನನ್ನ ನಿಟ್ಟುಸುರಿನ ಲಿ ಬನವ್ರ ಬಾಡುತಲಿಹುದು
ಕರುಳೆಂಬ ಕರುಳೇಕೆ ಕರಗದಿಹುದು
|| ೫೯ ||
ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು
ಬಯಕೆ ಬರುವದರ ಕಣ್ಮನ್ನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ
|| ೬೦ ||
೪ನೇ ಎಸಳು
ಶಿ
(G.
ನಿಶ್ಯಬ್ಬ ನಿಶ್ಯಬ್ದ ಶಬ್ದ ದಾಚೆಯ ಶಬ್ದ
ನಿಶ್ಯಬ್ದವಿದ್ದ ರೂ ಮೌನವಲ್ಲ. ನಿಸ್ಸಿಮ ನಿಸ್ಸಿಮ ಸೀಮದಲೆ ನಿಸ್ಸಿನ
ನಿಸ್ಸಿಮವೆಂದರೂ ಶೂನ್ಯವಲ್ಲ
|| ೬೧ ||
ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು
ಬಂತೆಂದರೂ ಇದ್ದು ಬಿದ್ದೆ ಯಿತ್ತು | ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ ಇದ್ದದ್ದು ತುಂಬಿ ತುಳುತುಳುಕುತಿತ್ತು
|| ೬೨ ||
೧೩
14----------------------------------------
ತುಂಬಿ ಬಂದಿತು ಕಾಂತಿ ತುಂಬಿ ಬಂದಿತು ಶಾಂತಿ
ತುಂಬಿ ದ್ಯಾವಾ ಪೃಥಿವಿ ಜೀವ ತುಂಬಿ | ತುಂಬಿ ತುಳುಕಿತು ಪೊಳ್ಳು ತುಂಬಿ ತುಳುಕಿತು ಜೊಳ್ಳು ಜಡದೊಡಲ ಜಗ ಜೀವ ಜ್ಯೋತಿ ತುಂಬಿ || ೩ ||
ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ
ನಿಶ್ಯಬ್ದವಿದ್ದರೂ ಮೌನವಲ್ಲ ! ನಿಸ್ಸಿಮ ನಿಸ್ಸಿಮ ಸೀಮದಲೆ ನಿಮ
ನಿಸ್ಸಿಮವೆಂದರೂ ಶೂನ್ಯವಲ್ಲ
|| ೬೪ ||
ದಣಿದು ಮಲಗಿದ ಗಾಳಿ ಮಿಸುಕಲಾರದ ನಸುಕು
ದಣಿವಾರಿ ಜೀವ ತಣಿದೇಳ ನಸುಕು | ಕುಣಿದಪ್ಪಿ ಮರಬಳ್ಳಿ ಬಿಂಕು ಬೀರುವ ನಸುಕು
ಒಳ ಹೊರಗೆ ಶಾಸ್ತ್ರಿ ಸುರಿಸುರಿವ ನಸುಕು
|| ೬೫ ||
ನಿದ್ದೆ ಹರಿಯುವ ಹೊತ್ತು ನಸುಕು ಹರಿಯುವ ಹೊತ್ತು
ರಸವಂತಿ ಹೊಳೆಯಾಗಿ ಹರಿವ ಹೊತ್ತು | ಮುದ್ದು ಬೀರುವ ಹೊತ್ತು ಬೇಸರಾರುವ ಹೊತ್ತು ಬಾಸಿಗದ ಸಿಂಗಾರಿ ಬರುವ ಹೊತ್ತು || ೬೬ ||
ನಸುಬಂಣದಾ ನೆಲವು ಕಿಸುಬಂಣದಾ ದಿಕ್ಕು
ನೊರೆಬಂಣ ಮುಗಿಲಸಿರಿಗೇನು ಅಲ್ಲಿ ! | ಹಸುಕು ಕಸುಕಿನ ಹಸುರು ಹಂಣಿನಾ ಹೊಸಹಳದಿ
ನಸುಕಿನಾ ನೀಲಿ ಮುಂಜಾವಿನಲ್ಲಿ
|| ೬೭ ||
೧೪
15----------------------------
ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ
ನಿಶ್ಯಬ್ದವಿದ್ದ ರೂ ಮೌನವಲ್ಲ | ನಿಸ್ಸಿಮ ನಿಸ್ಸಿಮ ಸೀಮದಲೆ ನಿಸ್ಸಿನ
ನಿಸ್ಸಿಮವೆಂದರೂ ಶೂನ್ಯವಲ್ಲ
|| ೬೮ ||
ಬಂಣದಾ ಹಂಣುಗಳ ತಿಂದು ತೇಗಲುಬಹುದು
ಚಿತ್ರದಾ ಮಲ್ಲಿಗೆಯ ಮೂಸಬಹುದು | ಮಂಣುಗೊಂಬೆಯ ಮೆಚ್ಚಿ ಮಾತನಾಡಿಸಬಹುದು ಹೊಗೆಯ ಹೊಳೆ ಈವಾಗ ಈಸಬಹುದು
|| ೬೯ ||
ಮನದ ಮಂದಾರವನ್ನು ಮೂಸಲಾರೆವು ನಾವು
ಕನಸಿನಾ ಕಲ್ಲಾರ ಮಸದಿಹೆವೇ | ಮನದ ಮಂಜಿನ ಮಡುವ ಕನಸು ಕಲ್ಲಾಗಿಸದೆ
ಮನಸು ಕನಸಾದಲ್ಲಿ ಮಸುಕಿನಿರವೇ ?
|| ೭೦ ||
ಹಗಲುಗನಸಿನ ಸವಿಯು ಇರುಳುಗನಸಿಗೆ ಬಹುದೆ
ಇರುಳಿನದು ಇಲ್ಲದಾ ಸಂತೆ ಕಾಣೋ | ನಗುನಗುತಲೂ ಕನಸು ನೋಡನೋಡುತೆ ಕನಸು
ಬಿಸಿಲಲ್ಲೆ ಬೆಳತಿಗೆಯ ಗುಂತಿ ಕಾಣೋ
|| ೭೦ ||
ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ
ನಿಶ್ಯಬ್ದವಿದ್ದ ರೂ ಮೌನವಲ್ಲ || ನಿಸ್ಸಿಮ ನಿಸ್ಸಿಮ ಸೀಮದಲೆ ನಿಮ
ನಿಸ್ಸಿಮವೆಂದರೂ ಶೂನ್ಯವಲ್ಲ
|| ೭೨ ||
೧೫
16-----------------------------------
ಸುತ್ತು ಮುತ್ತೂ ಸ್ಪರ್ಶ ಒಳಗು ಹೊರಗೂ ಸ್ಪರ್ಶ
ಕೆಳಗು ಮೇಲೂ ಸ್ಪರ್ಶ ಮಧುರಸ್ಪರ್ಶ | ಅತ್ತ ಹೊರಳಲು ಸ್ಪರ್ಶ ಇತ್ತ ಹೊರಳಲು ಸ್ಪರ್ಶ ಎತ್ತಲೂ ಸ್ಪರ್ಶ ದಿವ್ಯ ಸ್ಪರ್ಶ || ೭೩ ||
ಹೇಳಿ ತಿಳಿಯದ ಸ್ಪರ್ಶ ಕೇಳಿ ತಿಳಿಯದ ಸ್ಪರ್ಶ
ಉಂಡು ಉಸುರುವ ಸ್ಪರ್ಶ ಕಂಡ ಸ್ಪರ್ಶ | ಗೋಳಿಡುವ ಜೀವಕ್ಕೆ ಸಂಜೀವನದ ಸ್ಪರ್ಶ ರಂಜನೆಯ ಕತೆಯಲ್ಲ ರೋಮಹರ್ಷ
|| ೭೪ ||
ಸಾಲದಾಯಿತು ಚಿತ್ರ ತುಂಬಿ ರಸ ತುಳುಕಿತ್ತು
ಸಾಕು ಸಾಕಾಯಿತ್ತು ಸ್ಪರ್ಶಪಾನ | ತೇಲಿ ನಡೆಯಿತು ಜೀವ ಮೇಲ ಮೇಲಕೆ ಮತ್ತೆ ಕೇಳಕೇಳುತೆ ದಿವ್ಯಸ್ಪರ್ಶತಾನ
|| ೭೫ ||
ನಿಶ್ಯಬ್ದ ನಿಶ್ಯಬ್ದ ಶಬ್ದ ದಾಚೆಯ ಶಬ್ದ
ನಿಶ್ಯಬ್ದವಿದ್ದರೂ ಮೌನವಲ್ಲ | ನಿಸ್ಸಿಮ ನಿಸ್ಸಿಮ ಸೀಮದಲೆ ನಿಮ
ನಿಭೀಮವೆಂದರೂ ಶೂನ್ಯವಲ್ಲ
|| ೭೬ ||
ಜೀವ ದೇಹದೊಳೆಲ್ಲಿ ಮೈ ಬಗಿದು ನೋಡಿದರೆ ?
ಅಲ್ಲೇನು ಅಸ್ಥಿ ಮಾಂಸಗಳ ಗೂಡು | ದೇವ ಜಗದೊಳಗೆ ಮುಗಿಲೇರಿ ನೋಡಿದರೆ ? ಅಲ್ಲೇನು ಗ್ರಹತಾರಕೆಗಳ ಬೀಡು
|| ೭೭ ||
17--------------------------------
|| ೭೮ ||
ಜಗದ ಜೀವವೆ ದೇವ ಜಗವೆ ದೇವನ ದೇಹ
ಜೀವವಿರದಲ್ಲಿ ಜೀವನದ ಸೆಲೆಯೇ ? | ಜಗದಾತ್ಮ ಜಗದೀಶ ಆತ್ಮಗಳ ಮೂಲಾತ್ಮ
ಪರಮಾತ್ಮ ನಿನಗೊಂದು ಬೇರೆ ನೆಲೆಯೇ ? ನಿಶ್ಯಬ್ದ ನಿಶ್ಯಬ್ದ ಶಬ್ದ ದಾಜೆಯ ಶಬ್ದ
ನಿಶ್ಯಬ್ದವಿದ್ದ ರೂ ಮೌನವಲ್ಲ || ನಿಸ್ಸಿಮ ನಿಸ್ಸಿಮ ಸೀನದಲೆ ನಿಸ್ಸಿನ
ನಿಸ್ಸಿಮವೆಂದರೂ ಶೂನ್ಯವಲ್ಲ ಬರುವದೇನುಂಟೊಮ್ಮೆ ಬರುವಕಾಲಕೆ ಬಹುದು
ಬಯಕೆ ಬರುವದರ ಕಣ್ಣನ್ನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ
|| ೭೯ ||
|| ೮೦ ||
೫ನೇ ಎಸಳು
ತಂದೆ ನೀ ಕರೆದರಂದಿಗರುಣೋದಯವು
ಮುಂದೆ ಸೂರ್ಯೋದಯದ ಚಿಂತೆಯಿಲ್ಲ | ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು ಇಂದೊಳಗು ಹೊರಗು ಬೆಳಗಾಯಿತಲ್ಲ
||
೧ ||
ಈಸುದಿನ ಕಂಡಿದ್ದೆ ಬಾಗಿಲಿಲ್ಲದ ಕೋಟೆ
ಇಂದು ಬಾಗಿಲುಕೋಟೆಯಾಯಿತಲ್ಲ | ಈಸೀಸಿ ದಣಿದಣಿದು ಕೊನೆಗೆ ದಂಡೆಯ ಕಂಡೆ ಇಂತು ದೇವನ ರಾಜ್ಯ ಲಭಿಸಿತಲ್ಲ
|| ೮೨ ||
೧೭
18-------------------------------------
ಒಲವು ತಾನೊಂದು ಕಡೆ ಓಟವಿನ್ನೊಂದು ಕಡೆ
ನೋಟವೆಲ್ಲಾ ಬಿಟ್ಟು ಬೇರೆ ಕಡೆಗೇ | ಗೆಲವು ತಾನೆಲ್ಲಿಯದೊ ನೆಲೆಯೆ ಹತ್ತದ ಬಳಿಕ ಪ್ರಾಣಸಂಕಟವೊಂದೆ ಕಟ್ಟ ಕಡೆಗೆ
|| ೮೮ ||
ಒಂದು ಕಾಲೊಂದು ಕಡೆಗಿನ್ನೊಂದು ಬೇರೆ ಕಡೆ ಗಿಂಥ ಪರಿಯಲಿ ಹೆಜ್ಜೆ ಹಾಕಬಹುದೇ ? | ಒಂದಾಗಿ ಭಾವಬುದ್ದಿಗಳು ಮುಂದರಿವತನಕ ಜೀವನಕೆ ಜೀವ ಜೀವಾಳವಿಹುದೇ
|| ೮೯ ||
ಅನಿಸಿದನಿಸಿಕೆಯನ್ನೆ ದಿಟವೆಂದು ನಂಬುವರೆ
ಅನಿಸಿಕೆಯ ತಳಹದಿಯೆ ಗಟ್ಟಿಯಲ್ಲ | ಮನದ ಮನನದ ಸೂಕ್ಷ್ಮ ಸಂಸ್ಕಾರವನಿಸಿಕೆಯು
ಮನನಕ್ಕೆ ಸತ್ಯದಾ ಭೆಟ್ಟಿ ಯಿಲ್ಲ
ಸತ್ಯವೋ ಮಿಥ್ಯವೋ ಯಾವದೂ ಅರಿಯದಲೆ
ಕೇಳಿಕೆಯ ನೆರೆನಂಬಿ ನೆನೆಯುತಿರಲು | ಸತ್ಯವೆಂದನಿಸುವದು ಸತ್ಯವಲ್ಲದ ಮಾತು ಶ್ರದ್ದೆ ಯಾ ಸತ್ಯಕ್ಕೆ ಇಷ್ಟೆ ಹುರುಳು
||
೧ ||
ತರ್ಕಿಸಿದ ಕಲ್ಪನೆಯ ದಿಟವೆಂದು ನಂಬುವರೆ - ತರ್ಕಕ್ಕೆ ನಿಷ್ಠೆಯಾ ನೆಲೆಯೆ ಇಲ್ಲ | ತರ್ಕಕ್ಕೆ ಹೊಸ ತರ್ಕ ಹೊಡೆದೋಡಿಸುವದಯ್ಯ
ತರ್ಕದಾ ಸತ್ಯಕ್ಕೆ ಮೋರೆಯಿಲ್ಲ
೧೯.
19-------------------------------
ಭಾವಬುದ್ಧಿಗಳೆರಡೆ ತಿಳುವಳಿಕಾಧಾರ
ಭಾವಕ್ಕೆ ಬುದ್ದಿಯೇ ಬಾಹ್ಯನೇತ್ರ | ಭಾವಕೊಲಿಯದ ಬುದ್ದಿ ಬುದ್ದಿ ಗೊಲಿಯದ ಭಾವ ಇಲ್ಲೆ ಕಾಣಯ್ಯ ಸಂದೇಹಸೂತ್ರ
|| ೯೩ ||
ಯುಕ್ತಿಗದು ಯುಕ್ತವೆಂದೆನಿಸಿದ್ದೆ ಅನಿಸಿಕೆಯು
ಅನಿಸಿಕೆಗೆ ಯುಕ್ತವಾದದ್ದೆ ಯುಕ್ತಿ ಶಕ್ತಿಯಿಲ್ಲೆರಡರೊಳಗೊಂದು ಒಮ್ಮೊಂದಕ್ಕೆ
ನೆರೆತು ಬೆರೆತಲ್ಲೆ ಜೀವನದ ಶಕ್ತಿ
|| ೯೪ ||
ಬೀಜದಿಂದಲೆ ಬಳ್ಳಿ ಬಳ್ಳಿಯಿಂದಲೆ ಬೀಜ
ಭಾವಬುದ್ದಿಗಳ ಪರಿಯಿಂಥದಯ್ಯಾ | ಸೋಜಿಗದ ಮಾತೇನು ? “ ತಿಳಿಯುವುದು ತೀರುತಲೆ
ತಿಳಿವು ಮೈದಾಳುವದು '' ಸತ್ಯವಯ್ಯಾ | ೯೫ ||
ಬಗೆಬಗೆಯ ಘಟನೆಗಳನೊಂದೊಂದೆ ನಿಶ್ಚಯಿಸಿ
ಒಂದೊಂದಕೊಂದೊಂದು ಅರ್ಥಯಿಸುತಾ | ಜಗದ ನಿಚ್ಚಣಿಕೆಯನು ತತ್ತರಿಸುತ್ತೇರುವೆವು ಒಂದರಿಂದೆಯಡಿಯೊಂದಕಿ ಡುತಾ
|| ೯೬ ||
ಅನಿಸಿಕೆಯ ಮರ್ಯಾದೆ ಗುಣಿಸುತ್ತ ಸಾಗುವುದೆ
ಅನುಭವದ ಅಧ್ಯಾತ್ಮಯೋಗವಯ್ಯಾ | ಎಣಿಸಿಕೆಯ ಹರಿಗಡಿದು ಅನಿಸಿಕೆಯ ಝರಿಯೊಡೆದು
ಶಾಂತಿಯೊಡಮೂಡಿದ್ದ ಸಿದ್ದಿ ಯಯ್ಯಾ || ೯೭ ||
20--------------------------------
ಬುದ್ದಿ ಭಾವದ ಸೀಮೆ ಇಲ್ಲಿ ಗಾಯಿತ್ತಯ್ಯ
ಮುಂದೆ ದೇವನ ದಿವ್ಯ ರಾಜ್ಯವಯಾ | ಇದ್ದಷ್ಟು ಹಮ್ಮೆಲ್ಲ ಹಂಣು ಹಂಣಾಗುತಲೆ ಕೈಮುಗಿದು ಶರಣು ಶರಣೆಂಬುದಯ್ಯಾ
|| ೯
||
ಬುದ್ದಿ ಯೇ ಬಾಧಕವು ಬುದ್ದಿಯೇ ಸಾಧಕವು ”
ಬುದ್ದಿಯೇ ಮಾನವನ ಭಿತ್ತಿಯಯ್ಯಾ | ಬುದಿ ಯಿಂದಲೆ ಭಾವ ಬೀಳುತೇಳುತೆ ಸಾಗಿ. - ನಿಷ್ಠೆ ನಿಬ್ಬೆರಗಾಗಿ ನಿಲುವದಯ್ಯಾ
|| ೯೯ ||
* ಆದಿಯಾಧಾರ ಘನ ಘನ ವೇಧಿಸುವದೆ ಮನ
ಮನವು ಮಹದಲ್ಲಿ ನಿಂತದ್ದೆ ಭಕ್ತಿ!” ಓದುವಾದಗಳೆಲ್ಲ ಶಕ್ತಿಯುಕ್ತಿಗಳೆಲ್ಲ
ಮುಗಿದು ನಿಜ ನಿಂತದೆ ಭಾವಮುಕ್ತಿ
|| ೧೦೦ ||
ಬರುವದೇನುಂಟೊಮ್ಮೆ ಬರುವಕಾಲಕ ಬಹುದು
ಬಯಕೆ ಬರುವದರ ಕಣನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ | ದೇವದೇವನ ಗೂಢ ವಿಧಿಯು ಕಾಣೋ || ೧೦೧ ||
ಕೊನೆಯ ನುಡಿ “ ಮೊಲೆಯ ಮೇಲಿರ್ದ ಯೋಗಿಗಳುಂಟು ಲೋಕದಲಿ
ಶಿಲೆಯ ಮೇಲಿರುತಿರುವ ಮೊಹಿಯುಂಟು ! ' * ಬಳಸಿದಾ ಬ್ರಹ್ಮ ಚಾರಿತ್ರ್ಯ ಉಂಡುಪವಾಸ' ನಮಗಿದೇ ಇಂದು ಬೇಕಾದ ಗಂಟು || || ೧೦೨ 11
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ
21---------------------------------------
ಶಾರದೆಗೆ
ಮೂಡಲದ ಮಾನವರ ಜೀವನದ ಝರಿಯಾಗಿ
ನಾಡೆ ಪಡುವಲರಾದಿ ನಾದವೇದವನೋದಿ | ಮೂಡ- ಪಡುವಲ ನಡುವೆ ಮಂಡಿಸಿದ ಮಾದೇವಿ
ಶ್ರೀ ಸರಸ್ವತಿಯೆ ಶರಣು
ನಗೆಯ ನೊರೆಯಲಿ ಹಗಲ ಹೆಣೆದು ಹೊತ್ತಿಹ ಹೊಳಹೆ
ಮುಗಿಲಲ್ಲಿ ಮುತ್ತುಗಳ ಮೂಡಿಸುವ ಮಂತ್ರವೇ | ಜಗಕೆ ಕಣ್ಣಳಕೊಟ್ಟ ಕಲನಾದ ಕೌಮುದಿಯೆ ಶಾರದೆಯೆ ಶರಣು ಶರಣು
|| ೨ ||
ಭಾವಬೀಣೆಯ ಮೇಲೆ ಬೆರಲೆಳೆಯುತಳೆಯುತಲೆ
ಧಾವಿಸುವದುವು ತಾನಲೆಗೊಂಡು ಬಾಂದಳಕೆ || ಭಾವಿಸುತ್ತಲೆ ಬಯಲ ಬಂಣಿಸುವ ಬಲುಹುಳ್ಳ ಭಾರತಿಯೆ ಶರಣು ಶರಣು
|| ೩ ||
ಬೆಳದಿಂಗಳನು ಬೆಳಗಿ ಬಿಳುಪುಗೊಳಿಸುವ ಬೆಳಕೆ
ಎಳೆಬಿಸಿಲಿಗೊಪ್ಪಿಡುವ ಹೊಳೆವ ತಿಳಿಗಣ್ಣಿರೆಯೆ | ತುಳುಕುವೆಣ್ಣೆಸೆಗಳಲಿ ನೆಲಮುಗಿಲ ತೇಲಿಸುವ
ರಸವತಿಯೆ ಶರಣು ಶರಣು
--
22-------------------------------------
ನಾಲ್ಮಗನ ನಲ್ಲೆ ಯೆಂಬೀ ಮೇಲೆ ಸಲ್ವುದೇ
ಚೆಲ್ಲುಗಾರ್ತಿಯೆ ನಿನ್ನ ಚೆಲುವ ಚಿಮುಕಿಸಿ ಚೆಲ್ಲಿ | ಒಿಯಲಿ ಪುರುಳಪುಟ್ಟಿಸಿ ಪುಟಿವ ನಾಲೊಗದ - ನುಡಿವೆಂಣೆ ಶರಣು ಶರಣು
|| ೫ ||
ನಿನ್ನ ನಾಲಗೆಯಲ್ಲಿ ನೆಲೆಗೊಂಡ ನಿ ಯ್ಯ - (ನೀನಿಟ್ಟ ನನೆಗೊನೆಯ ತೆರೆಬಾಯ್ದೆರೆಯ ಮುತ್ತಿ) !! ತಾನುಂಡು ಸವಿಸೂಸಿ ಮೊರೆವ ಕವಿ-ಮಧುಕರನ ತಾಯೆ ಚಿತ್ಕಾಯೆ ಶರಣು
| ೬ ||
23------------------------------------
ಶಿವಶರಣರ ಸವಿನುಡಿಗಳು
ಮರದೊಳಗೆ ಬೆಂಕಿಯನು | ಉರಿಯದಂತಿರಿಸಿದಮ್ ||
ಬಿತ್ತಿನೊಳು ಗಿಡವನ್ನು | ಗೊತ್ತಾಗದಂತಿಟ್ಟಿ || ಸೊಂಪಿನಾ ತುಪ್ಪವನು | ಕಂಪಿಲ್ಲದಂದದಿಂ || ನೊರೆವಾಲೊಳಿರಿಸಿರುವ ದೊರೆಯೆ ! ದೊರೆ ನೀನಾರು ? || ೧ ||
ಜಿಗಿವ ಮಿಂಚಿನ ಬಳ್ಳಿ | ಮುಗಿಲ ಮರೆಗಿರುವಂತೆ ||
ಹೊಳೆವ ಕಂಗಳ ಮರೆಗೆ | ಬೆಳಕು ತಾಸಿರುವಂತೆ || ಇಲಿದೇರನಯ್ಯನಾ | ನಿಲವು ತಾ ನಿರ್ಪುದೈ
|| ೨ ||
ಹೊಲೆಯರಾ ಬಾವಿಯೊಳು | ಎಲುವೊಂದು ನಟ್ಟಿರಲು |
ಹೊಲೆಯೆನುವದೀ ಜಗವು | ಹಲವೆಲುವಿನಿಂದಾದ || ಮೆಲುವಂಥ ಬಾಯಿಂದ | ಬಲು ಸಟೆಯ ನುಡಿಯಲದು | ಹೊಲೆಯರಾ ಬಾವಿಯಿಂ | ಬಲು ಕೀಳು ತಾನಲ್ಲೆ ? || ೩ ||
ಉರಿಯೊಳಿಹ ಕಪುರಕೆ | ಕರಿಯುಂಟೆ ? ಮೃಗಜಲಕೆ ||
ಕೆಸರುಂಟೆ ? ಗಾಳಿಯೊಳು | ಪಸರಿಸಿದ ಪರಿಮಕೆ || ನೈರ್ಮಲ್ಯವುಂಟೇನೊ ? | ನಿಮ್ಮಡಿಯೊಳಿಂಬಾದ |
ಕಲಿಗೆ ಭವವುಂಟೆ ? ಕೂ | ಡಲ ಸಂಗಮೇಶ್ವರಾ || ೪ ||
24---------------------------
ಧ್ರುವ
“ ಬಾರವ್ವ ಜಾಣೆ | ರಂಗ ಪೋಗಿ | ತಿಂಗಳಾಯಿತೇ ” ಎಂಬಂತೆ. ಸುನೀತಿ ದೇವಿ | ನಿದ್ದೆ ತಿಳಿದು ಎದ್ದು ಕುಳಿತಳು | ಸುನೀತಿ ದೇವಿ | ನಿದ್ದೆ ತಿಳಿದು ಎದ್ದು ಕುಳಿತಳು | ಪಲ್ಲವಿ ||
ಎದ್ದು ಕುಳಿತು ಹೊದ್ದ ಸೆರಗ |
ಸರಿಸಿ ಮುದ್ದು ಮಗನ ಕಡೆಗೆ | ಕೈಯ ಚಾಚಿ ಕಾಣದಾದಳು ||
ಮಗನ ಕಡೆಗೆ ಕೈಯ ಚಾಚಿ ಕಾಣದಾದಳು
ತರಳ ನಿದ್ದೆ ಗಂಣಿನಲ್ಲಿ |
ಉರುಳಿ ಮುಂದೆ ಹೋದನೆಂದು | ತಿಳಿದು ಸರಿದು ಸರಿದು ನೋಳ್ಳಳು ||
ನೆಲಕೆ ಕೈಯ ಸವರಿ ಮಗನ ಕಾಣದಾದಳು
ಏಳ ಬೀಳುತೆದ್ದು ದೀಪ |
ಹಚ್ಚಿ ನಾಲ್ಕೂ ಮೂಲೆ ನೋಡಿ | ಮಗನ ಮೋರೆ ನೋಡದಾದಳು || ಹುಡುಕಿ ಹುಡುಕಿ ಮಗನ ಮೊಗವ ಕಾಣದಾದಳು
|| ೩ ||
೨೫
25-----------------------------------
ಕಂಣು ತುಂಬ ನೀರ ತಂದು |
ಕೊರಲ ಸೆರೆಯು ಉಬ್ಬಿ ಬರಲು | ಹೊರಟು ಮೂಕಳಂತೆ ನಡೆದಳು ||
ಸುನೀತಿ ಎದ್ದು ಮನೆಯ ಬಿಟ್ಟು ಹೊರಗೆ ನಡೆದಳು
ತೋಟ-ಪಟ್ಟಿ ಹಳ್ಳ-ಕೊಳ್ಳ |
ಬಾವಿ-ಕೆರೆಗಳಲ್ಲಿ ನೋಡಿ | ಕೇರಿಕೇರಿ ತಿರುಗಿ ನೋಳ್ಳಳು ||
ಹಿಂದಕೊಮ್ಮೆ ಮುಂದಕೊಮ್ಮೆ ಹೊರಳಿ ನೋಳ್ಳು
|| ೫ ||
“ ಅಲ್ಲಿ ಇರುವನೇನೋ ತರಳ ? |
ಇಲ್ಲಿ ಇರುವನೇನೋ ಕಂದ ?” | ಎಂದು ಮುಂದುಮುಂದೆ ಹೊರಟಳು ||
* ಬಿಸಿಲುಗುದುರೆ ಹಿಂದೆ ಚಿಗರಿಯಂತೆ '' ನಡೆದಳು
|| ೬ ||
ಮುಂದೆ ಹೋಗಿ ಮತ್ತೆ ಮನಸಿ- |
ನಲ್ಲಿ “ ಮಗನು ಮನೆಗೆ ಹೋಗಿ | ಮಲಗಿಕೊಂಡನೇನೋ ! ” ಎಂದಳು || ಜೋಕಾಲಿಯಂತೆ ತೂಗಲಾಡಿ ಬಾಲೆ ದಣಿದಳು
|| ೭ ||
26----------------------------------
“ ಸಂಣ ಕೂಸು ! ಐದು ವರ್ಷ |
ತುಂಬಲಿಲ್ಲ ಇನ್ನು ತನಕ ! | ಎನ್ನ ಕೂಸು ಎಲ್ಲಿ ಹೋಯಿತು ? ||
-ಸಂಣ ಗಿಣಿಯು ಕತ್ತಲಲ್ಲಿ ಎಲ್ಲಿ ಹಾರಿತು ?
|| ೮ ||
ದೇವರೆನಗೆ ರೆಕ್ಕೆಗಳನ್ನು ||
ಡೇಗೆಯಂಥ ಕಂಣುಗಳನು | ಯೋಗಿಯಂಥ ಮನವ ಕೊಡುವನೇ ? ಕೊಟ್ಟರೀಗ ಮುಗಿಲನೇರಿ ನೋಡಿ ಬರುವೆನೇ !! ”
| ೯ |
ಎಂದು ಹಲುಬಿ ಹಂಬಲಿಸುವ ||
ತಾಯಿ ಜೋಲುಮೋರೆ ಹಾಕಿ | ಹುಚ್ಚಳಂತೆ ಕುಳಿತು ಬಿಟ್ಟಳು |
ಮಂದಿ ಮಕ್ಕಇಳುವ ಕೇಳಿ ಕಂಣ ತೆರೆದಳು
|| ೧೦ ||
ಗಿಡವೆ ಧ್ರುವನು, ದನವೆ ಧ್ರುವನು |
ಕಲ್ಲೆ ಧ್ರುವನು, ಸೊಲ್ಲೆ ಧ್ರುವನು | ಎಲ್ಲ ಕಡೆಗೆ ಧ್ರುವನ ಭ್ರಾಂತಿಯೇ ||
ಸುನೀತಿಯಲ್ಲಿಮೂಡಿತಿಂದು ಧ್ರುವನ ಮೂರ್ತಿಯೇ
|| ೧೧ ||
27----------------------------
ಮೌನ-ಕೋಕಿಲೆಗೆ
ನಾದಲೋಲುಪನರಸಿ !ನಾಡ ರಾಣೀ ! ನಾದ ಮಾಧುರ್ಯವನು ನೀ ನೀಡೆ ಚಾಣೀ !
ಕಾದು ಕೈಮುಗಿದು ನಿರ್ಜರರು ನಿಂತಿಹರು
ನಾದವೇದವನೋದಿ ತಣಿಸತ್ವ ! ಉಸುರು !! ನಿನ್ನ ಹಾಡಿನ ಕೊಡೆಯ ನೆರಳಲ್ಲಿ ಬೆಳೆದು - ನನ್ನಿ ಗರೆದೀ ವಸುಂಧರೆಯಿಂದು ಮುಳಿದು ಹುಡಿಯೆದ್ದು ಹಾರುವಳು ಪುಡಿಯಾಗಿ ಕಾಯ್ದು
ಹಿಡಿದದ್ದಿ ನಾದರಸದಲಿ ನಾದುನಾದು ನೆಲವನೊಲಿಸುವ ನಾದವೇದಮಂತ್ರವನ್ನು ನಲಿದೂದಿ ನಲ್ಲೆ ! ನೀ ನೆಲಿಸು ನಲ್ಕೆಯನು !
*
ನಾದವೇರುತೋರು ತುಚ್ಛಗತಿಗೋಗಿ
ನಾದರಾಜ್ಯದ ಮೇರೆಯನು ಮೀರಿ ಸಾಗಿ || ಮಾನವನ ಶ್ರವಣಶಕ್ತಿಯ ಮಾರಿ ಹಾರಿ
ಮೌನ-ಸಾಮ್ರಾಜ್ಯ-ಸಿಂಹಾಸನವನೇರಿ || ತಾನೇ ತಾನಾಗಿ ತಾಂಡವ ಮೂರ್ತಿಯಾಗಿ
ಗಾನ ಗಾಂಭೀರ್ಯದಲಿ “ ತಲ್ಲೀನ'ವಾಗಿ || ಆವ ಸಂದೇಶವನ್ನು ಸೂರೆ ಮಾಡಿದರೂ
ಈ ವಸುಂಧರೆಯೊಳೇ ಹರಿಯ ಹತ್ತಿದರೂ ||
೨೮
28-----------------------------------------
ಮಾನವನಿಗದು ಮೌನವಾಗಿ ತೋರುವದು !!
ಮೌನಿ-ಮುನಿಯಾದವಗೆ ಮಾತ್ರ ತೋಚುವದು ||
ಸಾಕಾರ ಸಾನ್ನಿಧ್ಯದಲಿ ಸಾಲೆಗಲಿತು - ಆಕಾರದಣ ನಿರಾಕಾರವನ್ನು ಕುರಿತು || ಬೇಕಾದ ಹಾಗಲ್ಲಿ ಬಯಲಾಟವಾಡಿ
* ನಾಕ ' ಲೋಕ' ಗಳೆಂಬ ಭೇದವೀಡಾಡಿ || ಮರವಿನಲಿ ಮರೆಯಾದುದನು ಕಾಣಬಹುದು
ಅರವಿನಿಂದಗಲಾಗಿ ತೆರೆತೆರೆಯಬಹುದು || ಮೌನ ಸಪ್ತಕದಿಂದ ನಾದವನ್ನಿಳಿಸಿ
ನೀನಿಂದು ತಾರಮಂದ್ರಾದಿಗಳ ಬಳಸಿ | * ಪಂಚಮದ ' ಪರಿಯ ನಮ್ಮ ಹಿಂದು !! ಆ ಬಳಿಕೆ
ಇಂಚರವನೇರಿಸುತೆ ನಡೆ ನಿನ್ನ ಸ್ಥಳಕೆ ||
ಮೌನ ಮೋಹನ ಮಂತ್ರ ಮೂಲೆಯರ್ಥವನು
ಏನು ಅರಿಯದ ನಾನು ಹೇಗೆ ಭಾವಿಸೆನು ? || ಕೊರಳನೆತ್ತರಿಸೇನು ಹೇಳಬೇಕೆನುವೆ !
ಗರಿಗಳನ್ನು ಸರಿಸರಿಸಿ ಏನು ಸೂಚಿಸುವೆ ? ? || “ ಶಬ್ದದಾಚೆಗೆ ಭಾವರಾಜ್ಯವಿಹುದೆ `ಂದೋ ? ? ||
* ಶಾಬ್ಲಿಕರು ಭರದಿ ಭಾವಿಕರಾಗಲೆಂದೋ ? ? || ಮುನಿಸೆಂದು ಮುನಿವ ಮನುವಿನ ಮಗನು ತಾನು ಮುನಿಯೊಬ್ಬನರಿವನೀ ಮೌನ-ಭಾಷೆಯನು !!
29--------------------------------------
ಕೂಗು-ಕೋಗಿಲೆ ! ಕೂಗು ಕೂಗಿ ಗಪ್ಪಾಗು ಕೂಗಿ ಹೇಳಿನ್ನೊ ಮೈ ; “ಆಗು ಮುನಿಯಾಗು " ||
ನಿನ್ನ ಪಂಚಮದಿಂಚರದ ಸರಿಯು ಹರಿದು
ನನ್ನ ಕಿವಿಯೊಳಹೊಕ್ಕು ಬಗೆಯನ್ನೆ ಬಗಿದು || ತಿಳಿಗೊಳದೊಳಿಳಿದಾತ್ಮಭಾವದಲಿ ಬಳೆಯೆ
ಇಳೆಯೆಲ್ಲ ನಾದ-ಸಂಶೋಭೆಯನೆ ತಳೆಯೆ || ನಿನ್ನ ಸಂದೇಶವನು ಒಗವು ತಿಳಿದೀತು !!
ನಿನ್ನ ಮೌನವೆ ವಿಶ್ವವನ್ನು ವ್ಯಾಪಿಸೀತು !!!
ನಿರ್ಜರಾಂಗನೆ ! ನಿನ್ನ ನಾದವನ್ನು ಸುರಿಸಿ
ನಿರ್ಜಿವಕೋಟಿಯಲಿ ಜೀವವನು ಹರಿಸಿ || ಕೂಗು ಕೂಗಿ ಕೂಗು! ಕೋಗಿಲೆಯೆ ! ಕೂಗು !!
ಕೂಗಿ ಜಗದೊಡನಾಡಿಯಾಗಿ ಸೀ ಸಾಗು !! || ಆಗ ಜಗದಲಿ ಮೌನಭಾಷೆ ಮೂಡೀತು !! ಆಗ ಮನುವಂಶ ಮುನಿವಂಶವಾದೀತು !!!
ನಾದಲೋಲುಪನರಸಿ !-ನಾಡ ರಾಣೀ !ನಾದಮಾಧುರ್ಯವನು ನೀ ನೀಡೆ-ಚಾಣೀ !! ||
30---------------------------------
ಸಲಿಗೆಯ ಸಲ್ಲಾಪ
ಎಲ್ಲೆಲ್ಲಿರುವೆಯೊ ಅಲ್ಲಲ್ಲೆಲ್ಲಾ ನಿನ್ನ ನು ಕಂಡೇನು!
ಇಲ್ಲಿಯೆ ಬಿಟ್ಟಿನ್ನೆಲ್ಲಿಯೊ ಹೋದರೆ ಅಲ್ಲೇನುಂಡೇನು ||೧|| ವನದಲ್ಲಿದ್ದವ ಮನೆಯಲ್ಲಿಲ್ಲವೆ ? ವನಚರನೇ ನೀನು ||
ಮನೆಯಲ್ಲಿದ್ದರೆ ಮತ್ತೆತಕೆ ತಡ ಬೈಲಿಗೆ ಬಾ ನೀನು ||೨|| ಸಾಧನೆಯಿಂದಲೆ ಸಾಧಿಸಿಕೊಳ್ಳಲು ಬೇತಾಳವೆ ನೀನು ||
ಹಾದರದವನಿಗೆ ಹುಟ್ಟಿದನೇನೋ ? ನಿನ್ನ ವನೇ ನಾನು ||೩|| ನೀ ಹುಟ್ಟಿಸಿದರೆ ಹುಟ್ಟಿದೆನಲ್ಲದೆ ನನಗಿಲ್ಲಿತೆನು ||
ನೀ ಹುಟ್ಟಿಸಿದವ ಹೊರಳಿ ನೋಡದಿರೆ ಗತಿಯೆನಗಿನ್ನೇನು ||೪||
ಇದ್ದದ್ದಾದರೆ ಇದ್ದದ್ದಾಗಲಿ ಸುಮ್ಮನೆ ಇನ್ನೆನು |
ಇದ್ದರೆ ಎತ್ತಿಕೊ ಇರದಿದ್ದರೆ ಬಿಡು ಯಾತರ ಹಂಗೇನು ||೫|| ಇದ್ದರೆ ಬಂದೀ ಇರದಿರೆ ಬಿಟ್ಟ ಇದರೊಳಗುಂಟೇನು |
ಇದ್ದಲ್ಲೆಲ್ಲಾ ಕಾಣಿಸಿಕೊಂಡರೆ ಹೋಗುವ ಗಂಟೇನು ||೬|| ಇರುವಿಯೋ ಇಲ್ಲೋ ನನಗೇನೆನಿಸದು ಇದ್ದರೆ ಹೊಣೆಯೇನು |
ಇರುವಿಯೆಂದು ಸುಮ್ಮನೆಯೆನ್ನಲು ನಿಮ್ಮಪ್ಪನ ರಿಣವೇನು ||೭|| ನೋಡಿನೋಡಿ ಬೇಸರಿಸಿ ಜಗದ ಮನದಾಸೆಯೆ ಅಡಗುವದು |
ಖೋಡಿಗುಣವ ನಿನಗಾರು ಕಲಿಸಿದರೆ ?-ಕಾಣದೆ ಅಡುಗುವದು|| ಧಾರ್ಮಿಕರೆಂಬುವ ಧರ್ಮಗೇಡಿಗಳು ಜಗದಲಿ ತುಂಬಿದರು |
ಧರ್ಮದ ತಂದೆಯ ಇಂಥವನಾದರೆ ಯಾತಕೆ ನಂಬುವರು ||೯||
31----------------------------------
“ ನಂಬದೆ ನೆಚ್ಚದೆ ಕರೆದರೆ ಬರುವನೆ '' ಎಂಬರು ನಿಮ್ಮವರು |
“ ನಂಬುವುದೆಂತೋ ಆಡದೆ ನೋಡದೆ '' ಎಂಬರು ನಮ್ಮವರು || ಮಾ-ಮಾ-ಕರ್ಮವ ಮಾಡಿದ ಮನುಜಗೆ ಕಾಣೆನೆನುವಿಯೇನು ?
ನೀ ಮಾಡಿಸಿದರೆ ಮಾಡಿದೆನಲ್ಲದೆ ನನಗಿಲ್ಲಿನು ? ? ||೧೧|| ಕಂಬವನೊದ್ದರೆ ಕಿಡಿಕಿಡಿ ಬೆಂಕಿಯ ಕಾರುತೆ ಬಂದವನು |
ನಂಬುಗೆಗೆಟ್ಟಿಂದೇಳಿಸುತಿದ್ದರು ಮಿಸುಕದನೆಂಥವನು ? ||೧೨|| ಹಿಂದಿನ ಕತೆಗಳು ಹೊಗಳುವವಲ್ಲೊ ನಿನ್ನ ಯ ಕೀರ್ತಿಯನು |
ಇಂದಿನ ಜಗದಲಿ ಮಾಡಿ ತೋರಿಸೋ ಆ ಶತಕೀರ್ತಿಯನು || ಬಿಟ್ಟು ಬಿಟ್ಟೆ ನೀ ಹೇಸಿಜನ್ಮದಾ ಬರಿಯಾಸೆಯ ನಾನು |
ಸುಟ್ಟು ಹೋಗಲೀ ಸಂಶಯದಾಗರ ಬದುಕಿನೊಳಿದ್ದೇನು ? || ಸಾವಿಗೆ ಹೆದರುವ ಹಳೆಹೇಡಿಯೆ ? ನಾ ಬೇಯುವೆ ನಿನಗಾಗಿ |
ಗಾವಿಲರೆಲ್ಲರು ದೇವಿಲಿಯಾಗರೆ ಭಕ್ತನ ' ಬಲಿ ' ಗಾಗಿ ||೧೫|| ಗುಣವಂತರ ಗೋಳಾಟವೆ ಗಾವಿಲರಿಗೆ ಸಾಕಾಗಿಹುದು |
ಒಣಮಾತೇನಿದು-ನಾ ಸತ್ತರೆ ಬಲು ನಗೆಗೇಡಾಗುವದು ||೧೬|| ನಿನ್ನ ಯ ಬೆಲೆಯನು ನೀನುಳಿಸಯ್ಯಾ ನಾಹೇಳುವದೇನು ? |
ಚನ್ನಿಗರಾಯಾ ! ಕಿವಿಮುಚ್ಚದಿರೋ !! ಬೇಡುವೆನಿದ್ದೇನು ?? !||
32----------------------------------
ನೋಂಪಿ
ಹತ್ತೂ ನಿಟ್ಟಿಗೆ ಹೊತ್ತಿಸಿ ಉರಿಯನು ನಿತ್ತೆನು ನಾ ಕಿಡಿಯಾಗಿ ||
ಹತ್ತೂ ನಿಟ್ಟಿಗೆ | ಹೊತ್ತಿಸಿ ಉರಿಯನು ಕುತ್ತೆನು ನಾ ಮಾಸತಿಯಾಗಿ
|| ೧ ||
ಪಡೆದರು ಸರಿಯೇ
ಮಡಿದರು ಸರಿಯೇ ಬಡಿಸುವೆ ಹರಣವನೆಡೆಯಾಗಿ ||
ಪಡೆದರು ಸರಿಯೇ | ಮಡಿದರು ಸರಿಯೇ | ಮುಡಿಸುವೆ ಮೈಮಲ್ಲಿಗೆಯಾಗಿ
ಮನಸಿನ ಮಾತಿದು | ಮನದಂತಾದರೆ | ಮನುವಿನ ಮಗ ನಾನಾಗುವೆನು ||
ಮನಸಿನ ಮಾತಿದು | ಮನದಂತಾದರೆ | ಪ್ರನವ ಸುಮಂಗಳೆಯಾಗುವೆನು
೩೩
33------------------------------------------
ನೆನಸಿನ ಕೋರಿಕೆ | ಕನಸೇ ಆದರೆ | ತನು ನಿಸಿದಿಗೆಗಲ್ಲಾಗುವದು ||
ನೆನಸಿನ ಕೋರಿಕೆ | ಕನಸೇ ಅದರೆ | ಮನ ಮಾಸ್ತಿಯ ಕಲ್ಲಾಗುವದು
ಕಲ್ಲಾದರು ಸರಿ || ಹುಲ್ಲಾದರು ಸರಿ | ಬಲ್ಲಂದದ ಬಳಲಿಕೆ ಸಾಕು ||
ಕಲ್ಲಾದರು ಸರಿ | ಹುಲ್ಲಾದರು ಸರಿ | ಎಲ್ಲಂದದ ಏಳಿಕೆ ಸಾಕು
|| ೫ ||
34-----------------------------------
ಶ್ರುತಾಶ್ರುತ ವೀಣಾರವ
(೧) ಮಿಂಚಿನಂದದಿ ಹೊಳೆದು ಹರಿಯುವವಳಾರೆ ? ಚಂಚಲೆಯೆ ! ಚಲಮಲನೆ ಚರಿಸುವವಳಾರೆ ?? ಮೈಯಿಲ್ಲದವಳೆ ! ನೀ ಮೆಗ್ಗೋರಿದಂದು ಮೆಯ್ಕರೆಯಿತೀ ಜಗವು ನಿನ್ನಲ್ಲಿ ಸಂದು !!! ನಿಂತಲ್ಲಿ ನಿಲ್ಲುವುದ ನೀನರಿಯದವಳು ! ನಿಂತಲ್ಲಿಯೇ ನೆಲವ ನಿಲಿಸ ಬಲ್ಲವಳು !!! ಸಪ್ತ ಭಂಗಿಗಳಿಂದ ಸುಳಿದಾಡುವವಳು ಸುಪಿಯಲಿ ಸರ್ವವನು ಸೆರೆ ಹಿಡಿಯುವವಳು !! ಮೂಗೆಯೆಂಬೆನೆ ಮೆಚ್ಚು ಮಾತಾಡುವವಳು ! ಮೂಗುವಡಿಸುವಿ ನುಡಿಯ !! ನೀನದೆಂಥವಳು !! ?? ಯಾವ ದೇಶದ ಹೆಂಣೆ ! ? ಯಾವ ಭಾಷೆಯಿದು ! ? ಅಕ್ಷರಕ್ಕಿದು ತಾನೆ ಸಾಕ್ಷಿಯಾಗಿಹುದು !!! ನಿನ್ನ ನೆಲ್ಲಿಯೊ-ಎಂದೋ-ನೋಡಿದಂತಿಹುದು ನಿನ್ನ ನುಡಿಯಲ್ಲೊಮ್ಮೆ ಆಡಿದಂತಿಹುದು !!! ಕೇಳುತಿರುವಂತೆಯೇ ತಿಳಿಯುವಂತಿಹುದು ಹೇಳಲೆಳಸುತ್ತಲೇ ತಿಳಿಯದಂತಿಹುದು !! ಸಪ್ತ ಋಷಿಗಳ ಮಂತ್ರ ಸೂಸಿ ಹರಿಯುವದು ಸಪ್ತಭೂಮಿಕೆಗಳನ್ನು ಸುತ್ತಿ ಸುಳಿಯುವದು !!!
೩೫
35-----------------------------------
* ಆಪ್ತಳಂದದಿ' ನಿನ್ನ ಮರೆಗಿರುವಳಾರು ?? !! ಗುಪ್ತಗಾಮಿನಿಯಾಗಿ ಚರಿಸುವವಳಾರು ? ನಿನ್ನ ಮೋರೆಯ ಮೇಲೆ ಅವಳ ಕುರುಪಿಹುದು !! ನಿನ್ನ ನೋಡಿದ ಮನಕೆ ಅವಳ ನೆನಪಿಹುದು !!! ಅವಳ ಬಂಣಿಸಬಲ್ಲ ಬಾಯಿ ನನಗಿಲ್ಲ !! ಅವಳ ಬಿಟ್ಟಿರಬಲ್ಲ ಶಕ್ತಿ ನನಗಿಲ್ಲ !!! ನೀನವಳ ಬಹಿರಂಗ !! ಅವಳಂತರಂಗ !!! ತಾನಿರುವನವಳಂತರಂಗದಲಿರಂಗ
(೨) * ಕಾಣದ ಕಂಚಿಯ ಗೌರಿಯನು ಕಾಣುವ ಕಂಣೆಮಗುಂಟೇನು ?? ? “ ಕಾಣದ ಕಂಚಿಯ ಗೌರಿಯನು ಕಾಣುವ ಕಂಣೆಮಲ್ಲೇನು !!! ? "
ಕಾಣುವ ಕಂಣಿಗೆ ಕಾಣಿಸಳು ಕಾಣದ ಕಂಣಿಗೆ ಕಾಣುವಳು !! ಕಾಣಿಸದಾಗಲು ಕಾಣುವದು ಕಾಣದುದಾಗಳೆ ಕಾಣುವದು !!!
ಕಾಣುವದೆಲ್ಲಾ ಸವಿಗನಸು ! ಕಾಣದುದದು ಕನಸಿನ ಕಸನು !! ಮೀನಿನ ಹೆಜ್ಜೆಯ ಗೆರೆಯಂತೆ ಕಾಣುವ ಕನಸಿನ ಸವಿ !! ಅಂತೆ !!!
* *
36------------------------------------
ಕಂಡೂ ಕಾಣದ ಹಾಗಿಹೆನು ! ಉಂಡೂ ಊಡದ ಹಾಗಿಹನು ! ಕಂಡೂ ಬಂಣಿಸಲಳವಿಲ್ಲ !! ಉಂಡೂ ಉಣಿಸಿನ ನೆನಹಿಲ್ಲ !!!
ತುದಿನಾಲಿಗೆಯಲಿ ತುಳುಕುವದು ! ಎದೆಯಲ್ಲದುವೇ ತುಂಬಿಹುದು !! ಎದೆಯಿಂದೆದ್ದು ಕೋರುವದು !! ತುದಿ ನಾಲಿಗೆಯಲಿ ತಟ್ಟುವದು !!!
ಬಾಯಿಗೆ ಬಂದಲೆದಾಡುವದು ! ಹಾಯದು ಮುಚ್ಚಿದ ತುಟಿದೆರದು !! ಲೇಖನಿಯಲಿ ಹರಿದಾಡುವದು ಸೋ೦ಕಲೆ ಒಲ್ಲದು ಸಟವನಿದು !!!
ಚೆಲುವಿಗೆ ಚೆಲುವಿಕೆ ಕೊಟ್ಟವಳು ! ಚೆಲುವಿನ ಬಲವನ್ನು ಹೆತ್ತವಳು ! ಸವಿಗೂ ಸವಿಯನು ಸುರಿದವಳು ! ಕವಿಗೂ ತಾ ಕವಿಯಾಗಿಹಳು !!!
ಅಕ್ಷಿ ಯ ಮಿಟುಕಿಸಿ ವಿಶ್ವದೊಳು ಅಕ್ಷರ ಕುಲವನು ಹಡೆದವಳು !! ಅಕ್ಷರವಿಲ್ಲದ ಭಾಷೆಯೊಳು ಸಚ ಳ ಕವಿತೆಯ ಹಾಡುವಳು !!!
೩೭
37-------------------------
'ಆ' ಹಾಡಿನ ಸವಿ-ಸುಳಿಗಳನು 'ಈ' ಹಾಡಿನೊಳೆಂತಿಳಿಸುವೆನು ?? !! ತುದಿಮೊದಲಿಲ್ಲದ ಗೀತವದು ! ಹುದುಗಿಸ ಹೋಗಲು ಹಿರಿದಹುದು !'
38-----------------------------------
ರೋಹಿಣಿ
ಬಾರೇ ಗೆಳತಿ ಒಳಗೇ ಕುಳಿತಿ ಅಮ್ಮಾ ಏರಿ | ಮೇಲೇ ನಿಂತಿ ಕದಾ ಗಿದಾ ನೂಕಿಕೊಂಡು ಚಿಲಕಾ ಗಿಲಕಾ ಹಾಕಿಕೊಂಡು ಅಲ್ಲೇ ಕುಳಿತಿ ಬಾರೇ ಗೆಳತಿ
ಬಾರೇ ಜಾಣಿ ಮಿಂಚಿನ ರಾಣಿ ಅಪ್ಪರ ನಾರಿ
ಮೈ ಜರತಾರಿ ಥಾಟ ಮಾಟ ಮಾಡಿಕೋತ ಆಟ ಪಾಟ ಆಡಿಕೋತ ಅಲ್ಲೇ ಕುಳಿತಿ ಬಾರೇ ಗೆಳತಿ
ಮುಗಿಲಾಗ್ ಹೊಳೆದಿ ಮೇಲೇ ಇಳಿದಿ ಒಳಗೇ ಉಳಿದಿ
ಅಲ್ಲೇ ಸುಳಿದಿ ಏನೋ ಎಂತೋ ನೋಡಿಕೋತ ತರನಾ ತರಲಾ ಹಾಡಿಕೋತ
ಅಲ್ಲೇ ಕುಳಿತಿ ಬಾರೇ ಗೆಳತಿ
|| ೩ ||
39-------------------------------
ಎಂದೀಗೊಮ್ಮೆ ಹಾಕುತ ಹಣಿಕಿ ಮಾರೀ ತೋರಿ ತುಸು ತುಸು ಇಣಿಕಿ ಮಾಟಾ ಮೋಡೀ ಮಾಡಿಕೋತ ಕಳ್ಳಿ ಆಟ ಆಡಿಕೋತ "ಅಲ್ಲೇ ಕುಳಿತಿ ಬಾರೇ ಗೆಳತಿ
ನೀ ಕೂತಲ್ಲಿ ಜ್ಯೋತಿಯ ಢಾಳ ನಾ ಕೂತಲ್ಲಿ ಕತ್ತಲೆ ಕಾಳ ಕಂಡೂ ಕಂಡೂ ಕೂತೇ ಕೂತಿ ತಿಳಿದೂ ತಿಳಿದೂ ಹಾಗೇ ಇರತಿ
ಅಲ್ಲೇ ಕುಳಿತಿ ಬಾರೇ ಗೆಳತಿ
|| ೫ ||
ಏಸೊ ಕಾಲಕೆ ಅಟ್ಟಕೆ ಬಂದಿ - ಅಲ್ಲಿ ದಿಲ್ಲಿ
ಗೆಂದರೆ ಒಂದೇ ಬರತೀ ಬರತೀ ಬಂದೇ ಬರತೀ ಎಷ್ಟೊತ್ತಾರೆ ಅಲ್ಲೇ ಇರತಿ
ಅಲ್ಲೇ ಕುಳಿತಿ ಬಾರೇ ಗೆಳತಿ
|| ೬ ||
V0
40---------------------------------------
ಕೆಸರೊಳಗಿನ ಕಮಲ
?
ಏಳು ಕಮಲವೆ, ನಿನ್ನ
ಯಾವ ಕರ್ಮದಿ ಬಂದು ಇಂಥ ಕೆಸರಲ್ಲಿ ಬಿದ್ದೆ ಹೇಳು ಕಮಲವೆ, ನಿನ್ನ
ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ
?
|| ೧ ||
ಅಚ್ಚ ಮಾನಸದಲ್ಲಿ ಇಚ್ಛೆಯಿಂದಿರಬಹುದು
ಏಸೊ ಯುಗಯುಗದ ವರೆಗೆ ರೊಟ್ಟುಗೊಳದಲ್ಲಿ ನೀ
ಬಿದ್ದು ಬದುಕಿದಿಯಲ್ಲ ! ಚಿನ್ನ ಬಂದಂತೆ ಒರೆಗೆ
ಅಂಗಗುಣದಿಂದ ನೀ ದಿನದಿನಕೆ ಬೆಳೆಬೆಳೆದು
ಕೆಸರ ಕೊಸರೇಳಬಹುದು ಬಿಂಗಬಿಡಿಸುವ ಗಾಳಿ ಭೋರೆಂದು ಬೀಸುತಿರೆ ಕಲಕು ನೀರೇರಿ ಬಹುದು
|| ೩ ||
೪೧
41---------------------------------------
ಅರಮನೆಯ ಪರದೆಯಲಿ ಗಂಧದೆಂಣೆಯ ದೀಪ ಉರಿಯುಬಹುದೇನು ಚೋದ್ಯ ಮುರುಕು ಕೊಂಪೆಯ ಪಣತಿಗೇನು ಗತಿ ? ರಾಜಸಿರಿಗೇನುಂಟು ಈ ಕುಚೋದ್ಯ ?
|| ೪ ||
ಹೇಳು ಕಮಲವೆ, ಮೇಲೆ ಮುಖಮಾಡಿ ದೈನಾಸದಿಂದೇನು ನೋಡುತಿರುವೇ ? ಗೋಳಿಟ್ಟು ಗೋಣೆತ್ತಿ ಕೈಮುಗಿದು ಕೈಲಾಸದಿಂದೇನು ಬೇಡಿ ತರುವೇ ?
ಏನಿಲ್ಲ, ಎಂತಿಲ್ಲ
ಅಲ್ಲೆನ್ನ ದೊರೆ ನಲ್ಲ
ನಲ್ಲೆಯರ ಬಳಗದೊಳಗೆ ತಾನಲ್ಲಿ ಇಹನಲ್ಲ !
ನಾನಿಲ್ಲಿ ಕೆಳಗೆಳಸಿ ಕರೆಯುತಿಹನೊಳಗೆ ಒಳಗೆ
|| ೬ ||
ಹದಿನಾರು ಸಾವಿರದ
ಅಬ್ಬ ಕೋಟಿಗುಮಿಕ್ಕಿ ರಾಣಿಯರು ರಾಜಮಣಿಗೆ
42---------------------------------------------
ಮದನಾರಿಯರ ಬಳಗ
ಮುತ್ತಿ ಮುಗಿಬಿದ್ದಿರಲು ಬಹನೆ ಬಿಟ್ಟೆನ್ನ ಬಳಿಗೆ ?
|| ೭ ||
ಒಬ್ಬಳನು ಮುದ್ದಿಡುತ
ಒಬ್ಬಳನು ತೆಕ್ಕಿಸುತ
ಮತ್ತೊಬ್ಬಳನು ಬಳಿಸುತಾ ಒಬ್ಬೊಬ್ಬಳನೆ ರಮಿಸಿ
ಉಬ್ಬುಬ್ಬಿಸುತ ಮತ್ತೆ ನೋಟ ನನ್ನೆಡೆ ಸುಳಿಸುತಾ ಸನ್ನೆ ಯಿಂದೆನ್ನೆದೆಗೆ ರನ್ನ ಮುದ್ರೆಯನೊತ್ತಿ
ಸನ್ನೆ ಹಿಡಿಸಿರುವನಲ್ಲಾ ಇನ್ನೆಂದಿಗೇ ಇರಲಿ !
ಸನ್ನಿ ಧಿಯ ಭರವಸದ ಕೀಲು ಜಡಿಸಿರುವನಲ್ಲಾ
ಎಲ್ಲ ನಲ್ಲೆಯರಾಟ
ವೆಲ್ಲ ಮುಗಿಯಲಿ, ಬಳಿಕ ಬಾರದಿರದೆನ್ನ ಸರತಿ ಅಲ್ಲಿಯವರೆಗಿಲ್ಲಿ ನಾ
ಅಳಿವಿಂಡಿನೊಡನಾಡಿ ಹೊತ್ತು ನೂಕುವೆನು ಗರತಿ
|| ೧೦ ||
43---------------------------------
ಏಳು ಕಮಲವೆ, ನಿನ್ನ
ಯಾವ ಕರ್ಮದಿ ಬಂದು
ಇ೦ಥ ಕೆಸರಲ್ಲಿ ಬಿದ್ದೇ ? ಹೇಳು ಕಮಲವೆ, ನಿನ್ನ
ಯಾವ ಪುಣ್ಯದಿ ಮತ್ತೆ ಮೊಗವೆತ್ತಿ ಮೇಲಕ್ಕೆದ್ದೇ ??
- || ೧೧ ||
“ ತಚ್ಛಂತಾ ವಿಪುಲಾಹ್ಯಾದ ಕ್ಷೀಣಪುಣ್ಯ ಚಯಾ ತಥಾ | ತದಪ್ರಾಪ್ತಿ ಮಹದುಃಖ ವಿನಾಶೇ ಷ ಸಾಕಾ ' ||
44----------------------------------
ಮುಸುಕು
ನೀನು ನಿನ್ನ ತೋಟದಲ್ಲಿ ನಾನು ನನ್ನ ಕೊಂಪೆಯಲ್ಲಿ ಅತ್ತೆ ಕುಡುವ ಕಾಟ ಬೇರೆ ಮತ್ತೆ ಅಡ್ಡಗುಡ್ಡ ಬೇರೆ ಜೀವವೆಲ್ಲ ತೋಟದಲ್ಲಿ ಖೋಡಿ ಕೆಲಸ ಕೊಂಪೆಯಲ್ಲಿ ತೋಟ ಮನೆಗೆ ದೂರ ಬೇರೆ ಕಾವಲತ್ತೆ ಕಾಳ ಬೇರೆ | ಕೊಂದೆ ನನಗೆ ಜನ್ಮಗಂಟು ತೋಟ ನಿನಗೆ ಗಚ್ಚಿಗಂಟು ಅತ್ತೆ ಕದನ ಮರೆವಳಲ್ಲ ಜೀವ ಸುಮ್ಮನಿರುವುದಿಲ್ಲ. ತೂಗದಂಥ ದಗದ ನನಗೆ ನೀಗದಷ್ಟು ಕೆಲಸ ನಿನಗೆ ಧೀರವಿರದ ಬಾಲೆ ನಾನು ಘೋರ ಗಂಭೀರ ನೀನು ನಿನಗೆ ನಿನ್ನ ದುಡಿವ ಲಕ್ಕು ನನಗೆ ಸತತ ನಿನ್ನ ಬಿಕ್ಕು ನೀನು ನಿನ್ನ ತೋಟದಲ್ಲಿ ನಾನು ನನ್ನ ಕೊಂಪೆಯಲ್ಲಿ.
45------------------------------------
ಸುಗ್ಗಿಯಲ್ಲಿ ನಿನಗೆ ತೊಡಕು ಅಗ್ನಿ ಯಲ್ಲಿ ನನಗೆ ಮಿಡುಕು ನಿನ್ನ ದಗದ ನಿನಗೆ ಹಿರಿದು ನನ್ನ ಕರುಳು ಬರಿದೆ ಬರಿದು ಉಂಡು ಹಸಿದ ಘಾಸಿ ತೀರ ಕೂಡಿ ಅಗಲದಿರವು ಘೋರ ನಿನ್ನ ನೆರೆಯಲಿರುವ ಆ ನಿನ್ನ ನೆಂದು ಅಗಲದಾಸೆ ನಿನ್ನ ನೋಡಿ ನಲಿಯುದಾಶೆ ನಿನ್ನ ಕೂಡಿ ಕೆಲೆಯುವಾಶೆ. ಉದಯ ನಿನ್ನ ಸನ್ನಿಧಾನ ಅಗಲಿದೊಡನೆ ಅಮಾನ ಚೊಕ್ಕ ಬೆಳಕು ನಿನ್ನ ಕೂಟ ಚಿಕ್ಕ ಝುಳಕು ನೆನವಿನಾಟ ಸನಿಹವೆಂಬುದಚ್ಚ ಬೆಳಕು ನೆನಹು ಮೊದಲೆ ಜಿಣುಕು ಮಿಣುಕು ಬೀಸಿ ಬಡಿವ ಗಾಳಿ ಬೇರೆ ಧೂಸು ದುಮ್ಮ ಧೂಳು ಬೇರೆ ನೀನು ನಿನ್ನ ತೋಟದಲ್ಲಿ ನಾನು ನನ್ನ ಕೊಂಪೆಯಲ್ಲಿ.
46-----------------------------
ದೇವತಾ ಪೃಥಿವೀ
ಮೊಲೆಹಾಲು ಸಾಕಮ್ಮಾ ಸವಿಲಾಲಿ ಬೇಕಮ್ಮಾ | ಮುದ್ದಾಡಿ ರಮಿಸಿ ಮೈದಡವ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಹೊಟ್ಟಿಗಿ ಹಸುವಿಲ್ಲ ಕರುಳಿಗಿ ಸೊಗಸಿಲ್ಲ | ಮೊಲೆ ಸಾಕು ಮುದ್ದು ಕೊಡು ತಾಯಿ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಹಸುನೀಗಿ ಮೊಲೆಯುಂಡೆ ಕಸವೀಸಿಗೇನು | ಹಾಲೊಲ್ಲೆ ಸಾಕು ಬಿಗಿದಪ್ಪ | ಏಳಮಾ | ಮಲಗಿರುವ ತಾಯಿ ಸೃಥಿವೀ ||
ಮೊಲೆಹಾಲು ರುಚಿಗೊಂಡು ಮನಾಲು ಬಯಸೀನ | ಗುಟುಗುಟುಕಿಗೊಮ್ಮೆ ಮಿಕಿಮಿಕಿ | ಏಳಮ್ಮಾ | ಮಲಗಿರುವ ತಾಯಿ ಹೃಥಿವೀ ||
ಹೂವಿನ ಮಕರಂದ ಹಂಣಿನ ಮಾಧುರಿಯ || ಹಾಂಗ ಇನ್ನ ಮನಹ್ಯಾಂಗ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಚಂದರನ ಚಲುವೇಕಿ ಇಂದರನ ಹೋಲಿಕೀ | ಮೈ ಹೀಂಗ ನಿನ್ನ ಮನ ಹ್ಯಾಂಗ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
47-------------------------------------
ಹಿಂದಿತು ಕಾರಿರುಳೂ ಇಂದೀಗಿ ಹೂಬಿಸಿಲು | ಅಂದಿಗಿಂದೀಗಿ ಒಂದೇನ ? ! ಏಳಮ್ಮಾ || ಮಲಗಿರುವ ತಾಯಿ ಸೃಥಿವೀ ||
ಕಣ್ಣು ಅರಳದ ಕೂಸು ಮ್ಯಾಲೆ ಕತ್ತಲೆ ಗವಿಯ | ಆಗಲ್ಲ ಕಂಡೆ ನಾನೀಗ | ಏಳಮಾ | ಮಲಗಿರುವ ತಾಯಿ ಸೃಥಿವೀ ||
ಮೊಲೆಹಾಲ ಧಾರೀರಿ ಎಲ್ಲಿದೆ ಸೆಲೆಯಂದೆ | ಆಗೆಲ್ಲಿ ತಾಯೆ ಈ ನೆಲಿಯೆ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಏನಂತೆ ಅಂದಿದ್ದ ತಾಯಂತ ಈಗಂದ | ಕಂಣೀಲಿ ಕಂಡು ಮನಗಂಡು | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಉಂಡದ್ದು ಹೌದಾ ಕಂಡದ್ದು ನಿಜವಮ್ಮಾ | ಉಂಡೇನು ? ಈಗ ಕಂಡೇನು ? | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ !!
ಕತ್ತಲೆಯ ಆ ಸೋಂಕು ಹೂಬಿಸಿಲ ಈ ಮಂಕು | ಕಪ್ಪೇನು ಮತ್ತ ಬಿಳಪೇನು | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಕಾಣದ ಆ ಕುರುಡೂ ಕಾಣವ ಈ ಕುರುಡು || ಕಂಡೇನು ಕಾಣದಿದ್ದೇನು | ಏಳನ | ಮಲಗಿರುವ ತಾಯಿ ಸೃಥಿವೀ ||
೪೮
48----------------------------------
ಅರುವ ಮರವಲ್ಲ ಅರಿತದ್ದು ಸ್ಥಿರವಿಲ್ಲ | ಅರಿತೇನು ಆಶೆ ತೀರದೆ | ಎಳವ 1. ಮಲಗಿರುವ ತಾಯಿ ಸೃಥಿವೀ ||
ಇಲ್ಲಂಬು ಮರುಗಲ್ಲ | ಅಲ್ಲ೦ಬು ಅಳುಕಲ್ಲ | ಇನ್ನಿಲ್ಲದಂಥ ಪರಿ ಹೊಲ್ಲ | ಏಳಮಾ ! ಮಲಗಿರುವ ತಾಯಿ ಸೃಥಿವೀ ||
ಕಿಂಭೂತ ಕೊರಡೊಂದು ತುಂಬೀತು ಕೋನರಾಗಿ | ಹೂವಾಗಿ ಹಂಣು ಬಿಡಲಿಲ್ಲ | ಏಳಮಾ | ಮಲಗಿರುವ ತಾಯಿ ಹೃಥಿವೀ ||
ಎಲ್ಲಿಯ ಈ ನಿದ್ದಿ ಕಾಳನ ಕರಿನಿದ್ದಿ | ಇದ್ದೇನು ಇಲ್ಲದಿದ್ದೇನು | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ತಟ್ಟಿದರು ಮಿಸುಕಿಲ್ಲ ಹಲುಬಿದರು ಉಲುವಿಲ್ಲ | ತುಟಿಯಲ್ಲಿ ತಟಕ ಅಲುಗಿಲ್ಲ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಮರೆತು ಮಲಗುವಳಲ್ಲ ಅರಿತು ಆತುರಳಲ್ಲ | ನಿನಗಾಟ ನನಗೆ ಎದಿಗಿಚ್ಚ | ಏಳಮ್ಯಾ | ಮಲಗಿರುವ ತಾಯಿ ಸೃಥಿವೀ ||
ಅಂದು ಆಗಿಸಬಲ್ಲಿ ನೆನೆದು ನಾಟಿಸಬಲ್ಲಿ | ಮಾರೀಯ ಮುಸುಕುತೆರೆದೇಳ | ಏಳಮಾ | ಮಲಗಿರುವ ತಾಯಿ ಸೃಥಿವೀ |
49----------------------------------------
ಹಾಲುನಿದೀ ತೊರೆಯೇ ಜೇನುನಿದೀ ತೊರೆಯ | ಸಕ್ಕರಿಯ ನಿದ್ದಿ ತೊರೆದೇಳು | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಕನಸಿನ ಕನ್ನಕ್ಕಿ ಮನಸಿನ ಮಾಯಮ್ಮಾ | ಎಚ್ಚತ್ತು ತಾಯಿ ಎಂವೆಬಿಚ್ಚ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಏಳಮ್ಮ ಏಳಮ್ಮಾ ಏಳೆನ್ನ ತಾಯಮ್ಮಾ | ಏಳದೆ ಜೀವ ಕೇಳದ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಈ ಗಾಳಿ ನಿನ್ನು ಸಿರ ಈ ಬೆಂಕಿ ಮೈಗಾವ | ಮುದಡಿದ ಮೊಗ್ಗಿ ಅರಳೀಸ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
ಮೊಲೆಹಾಲು ಸಾಕಮ್ಮ ಸವಿಲಾಲಿ ಬೇಕಮ್ಮಾ | ಮುದ್ದಾಡಿ ರಮಿಸಿ ಮೈದಡವ | ಏಳಮ್ಮಾ | ಮಲಗಿರುವ ತಾಯಿ ಸೃಥಿವೀ ||
50------------------------------------
ಸುಖ-ದುಃಖ
ಸುಖವು ಬೀದಿಯ ನೆರಳ | ದುಖವು ದೂಡುವ ಬಿಸಿಲ | ಸುಖದುಖ್ಯ ನಮಗೆ ಸರಿಸವನ | ತಂಗೆಮ್ಮಾ || ಒಂದು ಬಿಟ್ಟೋಂದು ದೊರಿಯಾವ
ಸುಖಕ ಮರುಳಾದೀವ | ದುಃಖಕ ಬ್ಯಾಸವ | ಸುಖಬೇಡಿ ಮನವ ಮಲಮಲ | ತಂಗೆಮ್ಮಾ || ದುಃಖನೋಡಿ ಜೀವ ಗಲಬಲ
|| ೨ ||
ಸುಖವಂತ ಹಿಡಿದೀವ | ದುಃಖವಾಗಿ ಪಡಿದೀವ | ಹೂವಲ್ಲ ಜಾಣಿ ಹುಳನೋಡ | ತಂಗೆಮ್ಮಾ || ಬೆಳದಿಂಗಳಲ್ಲ ಉರಿಬಿಸಿಲ
|| ೩ ||
ಮುತ್ತಂತ ಮುಟ್ಟವ | ಕಿಡಿಯಾಗಿ ಕಚ್ಯಾವ | ಹಣ್ಯಲ್ಲ ಜಾಣಿ ಹಿಡಿಗೆಂಡ | ತಂಗೆಮ್ಮಾ || ಬಳ್ಯಲ್ಲ ಬಿಗಿದ ಬಲಿನೋಡ
ನೆಲವಂತ ನಿಂತೀವ | ನೀರಾಗಿ ನುಂಗೀತ | ಬೆಣಲ ಜಾಣಿ ಬಿಳಿಸುಣ್ಣ | ತಂಗೆಮ್ಮಾ ||| ಪರಿಮಳವಲ್ಲ ವಿಷಗಾಳಿ
|| ೫ ||
ಜಪ್ಪಿಸಿ ನಡಿದೀವ | ತಪ್ಪಿಸಿ ಒಯ್ದಿತ | ನಿಂತ ನಿಂತಲ್ಲೆ ನುಂಗೀತ | ತಂಗೆಮ್ಮಾ || ಒಲ್ಲಂದ ದಿಕ್ಕಿಗೆಳಸೀತ
೫೧
51-----------------------------
ತಪ್ಪಿಸಿ ನಡಿದೀವ | ಜಪ್ಪಿಸಿ ಹಿಡಗೀತ | ಚಾರಣಿಗೆ ಕಾಲ ಜಾರೀತ | ತಂಗೆಮ್ಮಾ || ಹಾರಟೆಗೆ ರೆಕ್ಕಿ ಮುರೆದೀತ
|| ೭ ||
ಹೊಳಿ ಬೀಳ ಹೋದೀವ | ಹೊಳಿ ಸರಿದು ಇಳಿದೀತ | ಹೊಳಿ ನಮಗ ಹಾಸ ನೆಲವಾಯ | ತಂಗೆಮ್ಮಾ || ಬ್ಯಾಗೀಯ ಬೆಂಕಿ ಬೂದ್ಯಾಯ
ಅವ ಮಕಂ
ದರಿ ಹಾರ ಹೋದೀವ | ಮರಬಳ್ಳಿ ತೊಡಕೀತ | ಕಮರಿಯ ಕೊಳ್ಳ ಉಡಿಯಾಯ | ತಂಗೆಮ್ಮಾ | ಬೇತಾಳ ಬಾಯಿ ಮುಚ್ಚಿತ
" || ೯ ||
ಹುತ್ತಾನೆ ತಟ್ಟವ | ಹಾವಾನೆ ಮೆಟ್ಟವ | ಹೆಡಿ ಜಜ್ಜಿ ಮಡಿದ ಮಿಡಿನಾಗ | ತಂಗೆಮ್ಮಾ || ನುಂಗಿದ ವಿಷವು ಕಕ್ಕಿತ
|| ೧೦ ||
ಗವಿಕಂಡು ಹೊಕ್ಕಿವ | ಹೆಬ್ಬುಲಿಯ ಕೆಣಕೀವ | ಹುಲಿ ನಮಗ ಹೋರಿಗರವಾಯ್ತ | ತಂಗೆಮ್ಮಾ || ಮರಣಾವು ಮಟ್ಟ ಮರೆಯಾಯ್ತ
| ಕುಚ್
ಹೌಹಾರಿ ಹೋದೀವ | ಹುಚ್ಚಾಗಿ ನಿಂತೀವ | ಮುಂದಿನ ಹಾದಿ ಮಂಜಾನ | ತಂಗೆಮ್ಮಾ || ಹಿಂದೆ ಹೈರಾಣದಾಲ್ಯಾಣ
೧೨ ||
52------------------------------------
ಏನಂತ ಮಾಡೋಣ | ಏನಂತ ಬಿಡುವೂಣ | ಹಿಂದಿಲ್ಲ ನಮಗ ಮುಂದಿಲ್ಲ | ತಂಗೆಮ್ಮಾ || ಸವಿಯಿಲ್ಲ ಮುಂದ ಸುಕವಿಲ್ಲ
|| ೧೩ ||
ಮಾಡೀದ ಹಂಚೀಕಿ | ನೋಡಟಿಗೆ ಮುರದಾವ | ನುಗಿಸಿದರು ಹರಣ ಹೋಗಾವ | ತಂಗೆಮ್ಮಾ || ತಟ್ಟಿದರು ಬೆಂಕಿ ಮುಟ್ಟಾದ
|| ೧೪ ||
ಏರೇರಿ ಹೋದೀವ | ಹಾರೈಾರಿ ಹೋದೀತ | ಬೆನ್ನತ್ತಿ ಬ್ಯಾಸರಾದೀವ | ತಂಗೆಮ್ಮಾ || ಹಿಡಹಿಡದು ಸೋತು ಬಿಟ್ಟಿವ
|| ೧೫ ||
ನಿಂತಲ್ಲೆ ನಿಂತೀವ | ಕುಂತಲ್ಲೆ ಕುಂತೀವ | ದಣವೀಕಿಗಳದು ಎದ್ಭವ | ತಂಗೆಮ್ಮಾ || ದುರುಗುಟ್ಟಿ ದಿಕ್ಕ ನೋಡೀವ
| ೧೬ ||
ಆಲ್ಯಾಣದಡಿವ್ಯಾಗ | ಯಾರಾರ ಸುಳವಿಲ್ಲ | ಎಲ್ಲಿದು ಬಂತ ಹಿರಿಹರಕಿ | ತಂಗೆಮ್ಮಾ || ಒಳಹೊರಗ ನಮಗ ಹಿರಿಹಗ್ಗ
| || ೧೭ ||
ಮೂರೆಜ್ಜಿ ದಾಟಿದರ | ಮುಂದಲ್ಲೆ ಗುಡಿಸಲವ | ಅಲ್ಲಿ ಮುನಿಗೋಳ ಅರಸೊತಿಗೆ | ತಂಗೆಮ್ಮ || ಅವರಂಥ ಸುಖವ ಅರಸರಿಯ
|| ೧೮ ||
೫೩
53----------------------------------------
ನಮ್ಮಂಗೆ ಅವರು | ನಮ್ಮಂಗೆ ಕರೆದವರು | ನಮ್ಮಂಗೆ ಬಾಡಿ ಬೆಂದವರು | ತಂಗೆಮಾ || ಕಡಿಗೊಮ್ಮೆ ಗಟ್ಟಿಗೊಂಡವರು
|| ೧೯ || ಊರಿದ್ದೆ ಊರಾಯ್ತು | ನಿಂತಿದ್ದೆ ನೆಲೆಯಾಯ್ತು || ಅಂದದ್ದೆ ವೇದ ರುಚಿಯಾಯು | ತಂಗೆಮ್ಮಾ || ಬಂದದ್ದೆ ಹರಕೆ ಹಿರಿದಾಯ್ತು
|| ೨೦ ||
ಹರಿದದ್ದೆ ಹಳ್ಳಮ್ಮಾ | ನಿಂತದ್ದೆ ತೀರ್ಥಮ್ಯಾ | ಆ ನೀರ ಮತ್ತ ಈ ನೀರ | ಬ್ಯಾರಿಲ್ಲ || ತಿಳಿಬೇಕ ತಂಗಿ ಹೊಳಿಬೇಕ
|| ೨೧ ||
ಬೇಡತ ನಡದಾಂಗ | ಕಾಡೂತ ಹೋದೀತ | ಬೇಡದು ಮರತ ಘಳಿಗ್ಯಾಗ | ತಂಗೆಮ್ಮಾ || ಆಡೂತ ಓದಿ ಬಂದೀತ
ಸುಖವ ಬೀದಿಯ ನೆರಳ | ದುಃಖವು ದೂಡುವ ಬಿಸಿಲ | ಸುಖದುಃಖ ನಮಗ ಸರಿಸವನ | ತಂಗೆಮ್ಮಾ || ಒಂದ ಬಿಲ್ಲೊಂದು ದೊರಿಯಾವ
|| ೨೩ ||
೫೪.
54---------------------------
ಸಿಡಿಲು
ಹಣ್ಣು ಬಿತ್ತು ಹಣ್ಣು ಬಿತ್ತು,
ಇಂದ್ರವನದ ಹಣ್ಣು ಬಿತ್ತು ಅಲ್ಲಿ ಬಿತ್ತು ಇಲ್ಲಿ ಬಿತ್ತು,
ಎಲ್ಲಿ ಬಿತ್ತು ? ಇಲ್ಲೆ ಬಿತ್ತು. ಆಚೆ ಗಿಡದ ಕೆಳಗೆ ಕೆಲರು
ಈಚೆ ಗಿಡದ ಬುಡಕೆ ಕೆಲರು ಅಲ್ಲಿ ಕೆಲರು ಇಲ್ಲಿ ಕೆಲರು
ಅಲ್ಲಿಯಲ್ಲಿ ಎಲ್ಲೊ ಕೆಲರು, ಗಾಳಿ ಉಕ್ಕಿ ಒದರಿತಾಗ,
ಗಿಡದ ಸಾಲು ಅದುರಿತಾಗ, ಅತ್ತಯಿತ್ರ ಅಂದಕಾರ
ನೋಡಿದ, ದುಂದಕಾರ ಲೋಕವೆಲ್ಲ ಮೊಬ್ಬುವರಿದು
ಸರುವಜನದ ಮಬ್ಬು ಹರಿದು ದೊಡ್ಡದೊಂದು ಸಪ್ಪಳಾಗಿ
ಜಗದ ಮೋರೆ ಸಪ್ಪಗಾಗಿ ಗಗನ ಸೃದ್ಧಿ ಏಕವಾಗಿ
ಲೋಕ ಕಕ್ಕ ವಿಕ್ಕಿಯಾಗಿ ಹಣ್ಣು ಬಿತ್ತು ಹಣ್ಣು ಬಿತ್ತು,
ಇಂದ್ರವನದ ಹಣ್ಣು ಬಿತ್ತು
೫೫
55------------------------------------
ಬಿತ್ತು ಬಿತ್ತು ಇಲ್ಲಿ ಬಿತ್ತು
ಲೋಕಕೆಲ್ಲ ದಿಗಿಲು ಬಿತ್ತು * ಇಲ್ಲೆ ಬಿತ್ತು” “ ಇಲ್ಲೆ ಬಿತ್ತು !”
ಎಲ್ಲರಂದ-“ ರಿಲ್ಲೆ ಬಿತ್ತು !!?? ಬೇಡದವರ ಮೇಲೆ ಬಿತ್ತು
ಬೇಡಿದವರಿಗೆ ಇಲ್ಲ ತುತ್ತು ಹಸಿಯದವರು ಹಲವು ಮಂದಿ
ಹಸಿದ ಜನರು ಕೆಲವು ಮಂದಿ ಹಸಿಯದವರಿಗೆ ಅಮೃತ ವಿಷವು
ಹಸಿಯೆ ವಿಷವೆ ಅಮೃತ ರಸವು ಬಯಸಿದವಗೆ ಬೇವೆ ಬೆಲ್ಲ
ಬಯಸದವಗೆ ಮೊದಲೆ ಹೊಲ್ಲ ಬೇಡದವರ ಮಗ್ಗಿ ಲಲ್ಲೆ
ಬೇಡಿ ಬಯಸುವವರು ಅಲ್ಲೆ ಬೇಡಿದಲ್ಲಿ ಬೀಳಲಿಲ್ಲ
ಬೇಡದಲ್ಲಿ ಬಿದ್ದಿತಲ್ಲ ! ಎಲ್ಲೊ ಬಿದ್ದು ಹೋಗಲಿಲ್ಲ
ಇಲ್ಲೆ ಬಿದ್ದು ತನಗೆ ಇಲ್ಲ !!! ಹಣ್ಣು ಬಿತ್ತು ಹಣ್ಣು ಬಿತ್ತು
ಇಂದ್ರವನದ ಹಣ್ಣು ಬಿತ್ತು !
56-----------------------------
ಮಧುರಗೀತ
* ಸಕಲ ನಿಃಕಲನಯ್ಯಾ, ನಿಃಕಲ ಸಕಲನಯ್ಯಾ.
ಸಕಲನಾಗಿ ಸಂಸಾರಿಯಲ್ಲಿ , ನಿಃಕಲನಾಗಿ ವೈ ರಾಗಿಯಲ್ಲ. ಸಂಸಾರಿಯಲ್ಲದ ಸಂಗ, ವೈರಾಗಿಯಲ್ಲದ ನಿಸ್ಸಂಗ, ಉಭಯ ಸಂಗದಿಂದ ಮಹತ್ವ ನೈದಿರ್ಪನಾಗಿ* ಸ್ಮಾವರಂ ಜಗಮಂಚೈವ ದ್ವಿವಿಧಂ ಲಿಂಗಮುಚ್ಯತೇ, ಎಂದುದಾಗಿ ಕೂಡಲ ಚೆನ್ನ ಸಂಗಾ ನೀನಿದ್ದು ದಂತ ಇರ್ಸನಲ್ಲದೆ ನಿಮ್ಮ ಶರಣ ಕ್ಷೀಣನಲ್ಲ.”
ಚೆನ್ನಬಸವಣ್ಣ, ಮೊದಲನೆಯ ಮುದ್ದು
|| ಕುಸುಮ ದ್ವಿಪದಿ || ಬಲುದಿನದ ಬಯಕೆಯೊಂದಿತ್ತೆನ್ನ ತಮ್ಮಯ್ಯ
ನಿನ್ನ ಮೇಲೊಂದು ಹಾಡೇನೆಂಬುವಾ || ಹಲವು ದಿನದಿಂದಲೂ ಪ್ರತಿಭೆ ಮಲಗಿದ್ದವಳು
ಇಂದಿದೇ ಎದ್ದಿಹಳು ಬಾ ನೋಡುವಾ || ೧ || ನಿನ್ನ ನೆವದಿಂದೆನ್ನ ಗೆಳೆತನದ ಕುಲಕೋಟಿ
ಗೆಲ್ಲ ನನ್ನೊಲವಿನಾ ಸಿರಿಯ ಪೇಳ್ವೆ || ಇನ್ನೇನು ಈ ಸಂಧಿ ನನ್ನ ಕಕ್ಕುಲತೆಯಾ ಬರವ ಹಿಂಗಿಸಿತೆಂದ ತಿಳಿದುಕೊಳ್ಳಿ
|| ೨ ||
೫೭.
57-----------------------------
ಸಂಗಸಂಸ್ಕೃತಿಮೂಲ ಬುದ್ದಿ ಬಳಕೆಯ ಸುಫಲ
ಇದುತಾನೆ ಭೌತಿಕದ ಬೀಜಮಾತು || ಅಂಗ ಬಾರದಮುನ್ನ ಆತ್ಮವಿಲ್ಲದೆಯಿಲ್ಲ ಹಿಂದಿನದೆ ಇಂದು ಇದು ಶಾಸ್ತ್ರಹೇತು
ದೇವಲೀಲೆಯೊ ಕಾಣೆ ಕರ್ಮಬಾಲವೊ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು | ಯಾವದೇನೇ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು
ಪ್ರೇಮಕ್ಕೆ ಪ್ರತಿಯಿಲ್ಲ ಮೋಹಕ್ಕೆ ಪ್ರತಿ ವೈರ
ಆದರಕನಾದರವು ಉಂಟೆವುಂಟು | ಪ್ರೇಮತಾನಾತ್ಮದ್ದು ಮೋಹನದು ಜೀವದ್ದು
ಆದರವು ಬುದ್ದಿ ವೈಭವದ ಗಂಟು
|| ೫ ||
ಪ್ರೀತಿಯದು ಅರಿತುಮಾಡಿದ ಮೋಹ ಮೋಹವದು
ಅರುವಿಲ್ಲದೋಂದೊಲವು ಬೇರೆಯೇನು || ರೀತಿಯಲಿ ಸರಿಯುಂಟು ಪ್ರೀತಿ ಮೋಹಗಳಲ್ಲಿ
ಬೆಳಕು ಕತ್ತಲೆಯನ್ನು ಮತ್ತೆಯೇನು
ಮಮತೆ ಪ್ರೀತಿಯ ಸಿರಿ ಮಮತ್ವ ಮೋಹದ ಭಾಗ್ಯ
ಜಾತಿಯೊಂದಾದರೂ ರೀತಿ ಬೇರೆ | ಸುಮತಿ ನುಡಿವನೆ ಹಣ್ಣು ಕಾಯಿಯೊಂದೇ ಎಂದು ಒಂದೆಂದರೂ ಅದರ ಸವಿಯ ಬೇರೆ
|| ೭ ||
58--------------------------------
ಪ್ರೀತಿ ಹಿಗ್ಗಿನ ತಿರುಕಿ ಮೋಹ ಸೌಖ್ಯದ ಹರಕಿ
ಸುಖಕೆ ವ್ಯತ್ಯಯ ಬಂದರದುವೆ ವೈರ | ಪ್ರೀತಿಯೊಮ್ಮೊಮ್ಮೆ ನಸುಮೂರ್ಛಹೊಂದೀತಿಷ್ಟೆ ಜೀವಕ್ಕೆ ಹೆಚ್ಚಾಗೆ ಭವದ ಭಾರ * | ೮ ||
ಎಷ್ಟಾದರೂ ಪ್ರೀತಿ ಸ್ವಾರ್ಥಸಂಬಂಧಿಕವು
ಕರುಣವೇ ಶುದ್ದ ನಿಸ್ವಾರ್ಥವೆಂಬಾ | ಶಿಷ್ಟ ದೃಷ್ಟರ ಮಾತು ಸಟೆಯಲ್ಲದಿದ್ದರೂ
ಪ್ರೀತಿಗೂ ಬೆಲೆಯಿಲ್ಲದಿಲ್ಲ ತುಂಬಾ ಸರ್ವಭೂತಗಳಲ್ಲಿ ಸಮಬುದ್ದಿಯನಿಟ್ಟು
ತನ್ನಂತೆ ಅನ್ಯಕ್ಕೆ ಮರುಕುಗೊಳುವಾ | ಸರ್ವಶ್ರೇಷ್ಠರನಾರು ಅಲ್ಲೆನ್ನ ಬಹುದಯ್ಯ ಸರ್ವರಿಗೆ ಸಾಧ್ಯವೇ ಅಂಥ ಭಾವ
|| ೧೦ ||
ಆತ್ಮದಾ ಅಮರತ್ವ ದೇವನಾ ಅಸ್ತಿತ್ವ
ಸ್ವಪ್ರತೀಯ ವಿಷಯವಿಲ್ಲದೀಗ | ಆತ್ಮಾನುಭಾವಿಗಳ ಅಚ್ಚ ತತ್ಯದ ಮಾತು ಆಚರಣೆಗರಿದಿಂದು ಅಂಥ ಯೋಗ
|| ೧೧ ||
ಕಾಯಗಳ ಮೇಲೆ ಕಾಲಿಟ್ಟಾಗ ಜೀವ ನಾ
ಜೀವದಾಹಂಗು ನನಗಾತ್ಮಗೇನು || ಮಾಯವನ್ನರಿತರೂ ಕಾಯಗುಣಬಿಡಲಿಲ್ಲ ಇಂದಿಂಥ ನಮಗಿನ್ನು ದಾರಿಯೇನು
|| ೧೨ ||
59-----------------------------------
ಬಂದುದಕೆ ಬಾರೆಂಬ ಹೋದುದಕೆ ಹೋಗೆಂಬ
ಇದ್ದದ್ದಕಿರಲಿ ಬಿಡಲೆಂದು ಬಗೆವಾ || ಹಿಂದಿನಾಧೀರರಿಗೆ ಸಾಜವಿತಾ ಮಾತು
ಇಂದಿಗೀ ಸ್ವಾರ್ಥವೇ ಜಗದ ಜೀವ
|| ೧೩ ||
ಸ್ವಾರ್ಥ ಸಾಮ್ರಾಜ್ಯದೀ ಭವನರಕಲೀಲೆಯಲಿ
ನಿಸ್ವಾರ್ಥ ಕಾರುಣ್ಯ ಕಾಣದಾಗೆ || ಪಾರ್ಥಿವರ ಪಾಲಿಗೀ ಪ್ರೇಮಸುಸ್ವಾರ್ಥವೂ ಸಾಧ್ಯವೋ ಅಲ್ಲವೋ ಎಂದೆನಾಗ್ಗೆ
|| ೧೪ ||
ನಿಸ್ವಾರ್ಥವಾತ್ಮ ಗುಣ ಸ್ವಾರ್ಥವಿದು ಜೀವಗುಣ
ಆತ್ಮಸ್ಥ ಜೀವಗುಣ ಸುಸ್ಮಾರ್ಥವು || ನಿಸ್ವಾರ್ಥ ಸಾರ್ಥಗಳ ಮೇಳವಿದೆ ಪ್ರೀತಿಯಲಿ
ಇದರಲ್ಲಿಯೇ ಇಂದು ನಮಗರ್ಥವು
|| ೧೫ ||
ವೈರಾಗ್ಯದವರ ನಿಸ್ಸಂಗವೂ ಅರಿದೆಮಗೆ
ವ್ಯವಹಾರಿಕರ ಸಂಗಕೂಡ ಹಾಗೇ || ವೈರಾಗ್ಯ ವ್ಯವಹಾರಗಳ ಮಧ್ಯ ಯಾನದಲಿ
ಮಧುರಸಂಗವೆ ಇಂದು ಗತಿಯು ನಮಗೆ
|| ೧೬ ||
ಧೀರವೀರರ ಪಥಕೆ ಗಂಡುಗಲಿತನಬೇಕು
ದಿವ್ಯತತ್ತ್ವಜ್ಯೋತಿ ಸ್ಪುರಿಸಬೇಕು || ಯಾರಿಗೇನಾತ್ಮವಿಶ್ವಾಸವೇ ಒಳಗುರುವು ಒಳಗಿನಂತೇ ಹೊರಗೆ ನಮ್ಮ ಜೀಕು
|| ೧೭ ||
60-----------------------
ಗಂಡುಗುಣ ನನ್ನಲ್ಲಿ ಆದಿಯಲ್ಲೇ ಇಲ್ಲ
ಬಾಲೆಯರ ಜೊತೆಯನಗೆ ಬಾಲ್ಯದಲ್ಲೇ || ಕೆಂಡದಂಥಾದ್ದೆನ್ನ ಸುತ್ತಲಿನ ಸ್ಥಿತಿ ಬೇರೆ
ಜತೆಯಂತೆಮತಿ ನಿನಗೆ ಗೊತ್ತು ಹಲ್ಲೆ
| ೧೮ ||
ಹೊರಗೆ ಇಂಥಾ ಬೆಂಕಿ ಒಳಗೆ ಎಂಥಾ ಉರಿಯೊ
ನನ್ನ ತಳಮಳಿಕೆ ಬಲ್ಲವನೆ ಬಲ್ಲಾ | ಕರಗಿ ನಾ ಕುದಿಯುತಿರೆ ಮರುಗಿ ನೀನೊಳಧುಮುಕಿ ಏಕರಸವಾಗಿ ಸರಿಬೆರೆತೆಯಲ್ಲ
|| ೧೯ ||
ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು|| ಯಾವದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು || ೨೦ || ಎರಡನೆಯ ಮುದ್ದು
ಯಾರು ಹುಟ್ಟಿಸಿದವರು ಯಾಕೆ ಹುಟ್ಟಿದೆವಯ್ಯ
ಮುಂದೆ ನಾವಿನ್ನೆಲ್ಲಿಗೋಗುವವರೋ || ಯಾರು ಮಾರಾಯರೇ ಹಡೆದು ಹೊರೆಯನು ಹೊರಿಸಿ ಹೊರದೂಡಿ ಹೊರಳಿಸಹ ನೋಡದವರೋ || ೧ ||
ಹುಟ್ಟಿಸುವ ಮೊದಲು ಮೊಲೆಹಾಲು ಮೂಡಿಸಿದವಗೆ
ಮೊರೆಯಿಟ್ಟರೂ ಇಂಥ ಮೌನವೇಕೋ || ಕೊಟ್ಟು ಮಳೆಬೆಳೆ ಭೂಮಿಶೀಮೆ ರವಿಶಶಿಗಳನು
ಕರುಣದಾಭಾಸವನ್ನಿಟ್ಟನೇಕೋ
|| ೨ ||
61--------------------------------
ಘೋರಾಂಧಕಾರದಲ್ಲಿ ಬೆಳಕು ಮುಚ್ಚಿಡಬಲ್ಲ
ಬಟ್ಟ ಬಯಲನೆ ಗಟ್ಟಿಗೊಳಿಸಬಲ್ಲ || ಮಾರಿದಾಮಹಿಮ ತಾನೆಲ್ಲ ಬಲ್ಲವನಯ್ಯ
ನಮ್ಮ ಮನಸನ್ನೆ ಕೆ ತಿಳಿಯಲೊಲ್ಲ
ತಮ್ಮ ಕರ್ಮವೆ ತನ್ನ ಸರ್ವಫಲಗಳ ಮೂಲ
ಅರುವಿಲ್ಲದತ್ತರವನೇಕೆಕಾದಾ ? | ನನ್ನ ಬೆರಳೇ ನಮ್ಮ ಕಣ್ಣಿಗಿಕ್ಕುವದೊಂದು ಸೋಜಿಗದ ಹಂಚಿಕೆಯು ಕರ್ಮವಾದ
ಹುಟ್ಟಿ ಸೆಂದಾತನಿಗೆ ಬಿನ್ನವಿಸಿದವರಾರೊ
ಕೆಟ್ಟ ಕೃತಿ ತಡೆಯಬೇಡೆಂದರಾರೋ !! ಇಷ್ಟೆಲ್ಲ ತಾಮಾಡಿ ತಪ್ಪ ಹೊರಿಸಿದ ಬಳಿಕ
ಸೆರೆ ಸಿಕ್ಕ ಜೀವರಿಗೆ ದಿಕ್ಕು ಯಾರೋ
|| ೫ ||
ಏನಾದರೇನಾತ್ಮ ನಾಶವಾಗುವುದಲ್ಲ
ಸುಳ್ಳು ಕೂಗಿನ ಬೆಲೆಯೆ ಅವನಿಗಿಲ್ಲ !! ಏನೆ ಆದದ್ದೆಲ್ಲ ನಮ್ಮ ಹಿತಕೆಂದೆಂಬ
ಜುಲುಮೆಯಾ ನಿಶ್ಚಿಂತೆಗರ್ಥವಿಲ್ಲ ಸುಖದುಃಖವೆಂಬುವುದು ಮನದ ಭ್ರಮೆಯೆಂದೆಂಬ
ಆನಂದವಾದಿಗಳ ನೆಲೆಯನರಿಯೆ || ವಿಕಟರೋಗದ ಬಾಧೆ ಹಾವು ಚೇಳಿನ ವೇಧೆ ಇದುಕೂಡ ಕಲ್ಪನೆಯ ಬಗೆಯ ಭ್ರಮೆಯೇ
|| ೭ ||
62--------------------------------------
ಬೆಂಕಿ ಬೇಯಿಸದ ಗಾಳಿ ಹಾರಿಸದಯ್ಯ
ನೀರುತೊಯ್ದು ಕತ್ತಿ ಕಡಿಯದಯ್ತಾ || ಶಂಕೆಬಿಟ್ಟಾತ್ಮವನ್ನೆ ಷ್ಟು ಭಾವಿಸಿದರೂ ದೇಹಬೋಧವು ಇದ್ದೆ ಯಿರುವುದಯ್ಯಾ
|| ೮ ||
ನಿದ್ದೆ ಯಾಚೆಗೆ ತೂರ್ಯವೆಂಬುದೊಂದುಂಟಂತೆ
ಯೋಗದಿಂದಾಸಾನ ಸಾಧ್ಯವಂತೆ | ಸಿದ್ಧನಿಲ್ಲವೆ ದೇವನಿಲ್ಲೆ ಕರುಣಿಸಲಿಕ್ಕೆ ಅಲ್ಲಿ ಅಡಗುವದೊಂದು ಬೇರೆ ಬಂತೇ.
ತಂದೆ ಕಣ್ಮರೆಯೆಂದು ಭಕ್ತ ಬಳಲುತ್ತಿರಲು
ತತ್ತ್ವಮಸಿಯೆಂದುಸುರಲೇನು ಫಲವೋ | ಇಂದು ಮಾನವನಿಂಥ ಸೃಷ್ಟಿಯನ್ನು ಸೃಷ್ಟಿಸಲಿ ಆಗದಿರಲಿಂತೆಂಬುದೇನು ಛಲವೋ
|| ೧೦ ||
ಯಾಕೆ ದೇವನ ಚಿಂತೆ ಯಾಕೆ ಜೀವಕೆ ಭ್ರಾಂತಿ
ಇದ್ದಷ್ಟು ದಿನ ಸುಮ್ಮೆ ಸಾಗಿರೆಂಬಾ | ಲೌಕಿಕೋಕ್ತಿಗೆ ಇಂಥ ಬೆಂಕಿಯಂಥಾ ಪ್ರಶ್ನೆ ಹೇಗೆ ಬಗೆ ಹರಿದೀತು ಹೇಳು ತುಂಬಾ
|| ೧೧ ||
ಶಬ್ದ ವಿಗ್ರಹಗಳೇ ಭಕ್ತಿಭಾವಕೆ ಮೂಲ
ಮೇಲಾ ಪುರಾಣಗಳ ಗಲಭೆ ಬಹಳ | ಶಬ್ದಶ್ರವಣವೆ ವಸ್ತು ಜಿಜ್ಞಾಸೆಗಾಧಾರ ತನ್ನ ತಾ ತತ್ರ್ಯ ಹೊಳೆದದ್ದು ವಿರಳ
|| ೧೨ ||
63-----------------------------------
ಸೃಷ್ಟಿ ರಚನೆಯೊಳತ್ಯಗಾಧ ಜಾಣ್ಮಯ ಕಂಡು
ಮೇಲೆ ಮಳೆಬೆಳೆಗಳಲಿ ಕರುಣೆಗಂಡು | ಇಷ್ಟರಲಿ ಆಸ್ತಿಕ ಗಟ್ಟಿಗೊಳ್ಳುವುದಯ್ಯ ಮುಂದೆ ಹಂಬಲಿಸಿ ಹಲುಬುವುದೆ ಬಂಡು
|| ೧೩ ||
ಅತ್ತು ಕರೆದೂ ಕೂಡ ಬೈದು ಅಂದೂ ಕೂಡ
ದೇವರಾಯನ ಸುಳಿವು ಕಾಣದಾಗೆ | ಮನು ಬದುಕಯ್ಯ ಸತ್ಯಕಿಂತಾಚೆಸರಿ
ಇಂಥವರು ಇದ್ದರೂ ಇರದ ಹಾಗೆ
ಈ ಕಾಲಕೂಟವದು ಕಾಲಕೂಟದ ವಿಷವೆ
ನೋಟ ಒಳಹೊರಗೆಲ್ಲ ಶೂನ್ಯ ಶೂನ್ಯ | ಸಾಕೆ ಸಾಕಾಗುವದು ಸಂಗ ಸಂಘಗಳಾಟ ಇಹವು ಪರವೂ ಆಗ ತುಂಬ ಶೂನ್ಯ
|| ೧೫ ||
ಹೀಗೆ ನಾ ಬಾಡಿರಲು ನಿನ್ನ ಗಾಳಿಯು ಬಂತು
ಸುಳಿಗಾಳಿಗಾಗ ನಾ ಚೇತರಿಸಿದೆ | ಕೂಗಿ ಮಳೆಬೇಡಿದರೆ ಗಾಳಿಯಾದರು ಬಂತು
ಇಷ್ಟಾರೆ ನಾ ಧನ್ಯ ಧನ್ಯನೆಂದೆ
|| ೧೬ ||
ದೇವನಸ್ತಿತ್ವದಾ ಸ್ವಪ್ರತೀತಿಗೆ ಬೆಂದೆ
ಅದು ಸಿಕ್ಕಲಿಲ್ಲ ಸಿಗದಿರಲು ಬಿಡಲಿ | ಭಾವ ಭಕಿಯ ಕಂಡೆ ದಿವ್ಯ ಪ್ರೀತಿಯನುಂಡೆ ಇದು ಕೂಡ ಇಲ್ಲದಾ ಜನ್ಮ ಸುಡಲಿ
|| ೧೭ ||
64 --------------------------------
|| ೧೮ ||
|| ೧೯ ||
ನೋವಿನಿಂದತ್ತರೂ ತಾಯಿಮೊಲೆಯುಣಿಸಿದರೆ
ಕೂಸು ತಾನಾಗಳೇ ಮರೆವುದೆಲ್ಲಾ | ಯಾವ ಉರಿಯಿದ್ದರೂ ದಿವ್ಯ ಪ್ರೇಮದ ನೀರು
ಶಾನಿಗೊಳಿಸುವುದನ್ನು ಕಂಡೆವಲ್ಲಾ ಕರ್ತವ್ಯ ತಿಳಿಯದೇ ಕತ್ತಲೆಯ ಕಾಡಿನಲಿ
ಕಣ್ಣು ಕಾಣದೆ ಹೆಜ್ಜೆ ಹಾಕುವಾಗ | ವ್ಯರ್ಥವಾದರು ಸರಿಯೆ ಸಾರ್ಥವಾದರು ಸರಿಯೇ
ಕೈಗೆ ಕೈಯಾಧಾರವೇ ಸುಯೋಗ ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ದಿ ಯಾಚೆಗಿನ ಮಾತು | ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು ಮೂರನೆಯ ಮುದ್ದು
ಗೆಳೆಯರೆಂಬವರೆಲ್ಲ ದಿನದೂಟದೊಳೆ ತುತ್ತ
ನುಳಿಸಿದರೆ ತನಗೆ ಸಾಕೆಂದು ಮೊರೆದಾ | ಗೆಳೆಯಗೀಯದ ದಿನವೆ ನನ್ನ ನಾ ತಿಳಕೊಂಡೆ ಅಂದೆ ಕೇಳಿಸಿತೆನಗೆ ಪ್ರೇಮನಾದ
|| ೨೦ ||
ತತ್ತೂರ್ವದಲ್ಲಿ ನನಗೆ ಓದಿಗೊತ್ತಾ ಪ್ರೇಮ
ಕಲ್ಪನೆಯ ಚಿತ್ರವೂ ಮೂಡೆಯಿತ್ತು | ತಾತ್ಪರ್ಯವಿನ್ನೇನು ? ಕಲ್ಪನೆಯು ಬಯಲಾಗಿ ಸತ್ಯಸ್ವರ ಆ ಹೊತ್ತೆ ಕೇಳಿಸಿತ್ತು
|| ೨ ||
65-------------------------------
ಬುದ್ದಿಯುಳ್ಳವ ಮತ್ತೆ ಭಕ್ತಿಯುಳ್ಳವ ಮತ್ತೆ - ವೇದಶಾಸ್ತ್ರವನೋದಿದವನು ಮತ್ತೆ | ಸದ್ವಿಚಾರಿಯು ಮತ್ತೆ ಬುದ್ದಿವಂತರ ಸಂಗ
ಇಟ್ಟಿದ್ದು ಈ ಪರಿಯೆ ಎಂದು ಅತ್ತೆ
ಗೆಳೆತನದ ಬೆಲೆಯರಿತ ಗೆಳೆಯರೋಲಗದವನು
ಗೆಳೆತನದ ಗೀತಿಗಳ ಹಾಡಿದವನು | ಗೆಳೆಯನೊಬ್ಬನ ಹೊತ್ತಿಗಾಗಲಾರದೆ ನನ್ನ
ಒಡಲಿಗೆ ಬಡಕೊಂಡೆನೆಂಥ ನರನು
ತಿಳಿದವರ ಪರಿ ಹೀಗೆ ಉಳಿದವರ ಪಾಡೇನು
ಅರಿತದ್ದು ಆಚರಣೆಗಿಳಿಸುವಲ್ಲಿ | ಕೊಳಕು ಬಣ್ಣದ ಮಾತು ಕೆಲಸಕ್ಕೆ ಬಂದೀತೆ
ತತ್ರ್ಯ ಬರಿ ಬಾಯಿಮಾತೆಂದೆನಲ್ಲಿ
|| ೫ ||
ಹೊತ್ತುಗಳೆಯಲು ಮತ್ತೆ ಹೆಮ್ಮೆಗಳಿಸಲು ಮತ್ತೆ
ಬುದ್ದಿಗೊಂದುದ್ಯೋಗವಿಲ್ಲದಿರಲು | ತತ್ತ್ದುಪಯೋಗವಿನ್ನೇತಕೂ ಅಲ್ಲೊಂದು ಮನವು ಮುದುಡಿತು ಜೀವದಲ್ಲಿ ದಿಗಿಲು
|| ೬ ||
ಹಳೆಯ ಕತೆಗಳ ಮಾತು ಕನ್ನಡಿಯ ಹುಸಿಗಂಟೆ
ಮುಗಿಲಮಂಟಪವೊ ಕಲ್ಲಲ್ಲಿ ನಾರೋ | ಬಳಿಸಿ ಕಂಡವರಾರು ಬೆಳಿಸಿ ಬರೆದಿಟ್ಟಿ ಹರೊ
ಓದಿದವರುಂಟುಂಡು ಬಲ್ಲರಾರೋ
|| ೭ ||
66-----------------------------------
ಮತಿಗೆ ಮಿತಿಯೇನಯ್ಯ ಬಾಯಿಗೇತರ ಬಂಧ
ಬಲ್ಲಂತೆ ಬರೆವ ಕೈಗೇನು ಕಷ್ಟ | ಕ್ಷಿತಿಯನುರುಳಿಸಬಹುದು ಬೆಳಕು ಕರಗಿಸಬಹುದು
ಮುಗಿಲು ಮುಟ್ಟುವದೇನು ಮನಕೆ ಕಷ್ಟ
|| ೮ ||
ಹಸುವ ನುಡಿಸಲುಬಹುದು ಹೆಣವ ಕುಣಿಸಲುಬಹುದು
ಕಲ್ಲುಕಡಲೆಯ ಮೆಲ್ಲಲೇನು ಕಷ್ಟ | ಉಸುರಳಿದರೂ ಕೂಡ ಮಿಸುಕಳಿಯಲಿಲ್ಲೆಂದು
ಹೇಳುವುದು ಬಿಗಿಯೆ ತಿಳಿಯುವುದೆ ಕಷ್ಟ || ೯ ||
ಮನೆಯನಿತ್ತವರುಂಟು ಧನವನಿತ್ತವರುಂಟು
ಸತಿಸುತರ ಕೊಟ್ಟ ಕಥೆ ಸಾವಿರುಂಟು | ತನುವನಿತ್ತವರುಂಟು ನಿಸ್ವಾರ್ಥಭಾವದಲಿ ಇಂಥ ಕಥೆ ನಮ್ಮಲ್ಲಿ ಗಂಟುಗಂಟು
|| ೧೦ ||
ಶೂಲದಂತೆನ್ನೆದೆಗೆ ಬಾಧಿಸಿತು ಸಂದೇಹ
ಆತ್ಮ ತಾತ್ಸಾರತೆಯ ಮೊದಲೆ ಗಾಯ | ಮೇಲೆ ರಾಧೆಯ ಕಥೆಯು ಮನದಲ್ಲಿ ನೆಟ್ಟಿತ್ತು
ಆತ್ಮಾತ್ಮದೈಕ್ಯದಾದರ್ಶವಯ್ಯಾ
|| ೧೧ ||
ಅಂದಿನಿಂದದೆ ಧ್ಯಾನ ಅಂದಿನಿಂದದೆ ಚಿಂತೆ
ಅಂದಿನಿಂದದೆ ಮನದ ಮುಖ್ಯ ವಿಷಯ | ಅಂದಿನಿಂದ ಇಂದ್ರ ಅಂದಿನಿಂದದೆ ಚಂದ್ರ ಅಂದಿನಿಂದ ನನ್ನ ಜನ್ಮ ಧೈಯ
|| ೧೨ ||
67-------------------------------
|| ೧೩ ||
ಇಷ್ಟು ದಿನಗಳ ಪ್ರೀತಿ ಅಷ್ಟು ತಳಕಿರಲಿಲ್ಲ
ಅಲ್ಲಿ ಭಕ್ತಿಯ ಬೆಂಕಿ ಹೊತ್ತುತಿತ್ತು | ಇಷ್ಟಕಾಗಿಯೆ ಪ್ರೀತಿ ಸ್ಪಷ್ಟ ರೂಪಕೆ ಬರದೆ
ಅಷ್ಟಷ್ಟಕೆಲ್ಲೆಲ್ಲೂ ಸುತ್ತುತಿತ್ತು ಪ್ರೀತಿರೂಪಕೆ ಬರದೆ ಭಕ್ತಿ ಫಲಿಸುವುದುಂಟೆ
ಪ್ರೇಮವಿಲ್ಲದ ಭಕ್ತಿ ಬಂಜೆಯೆಂದು | ಹೇತು ಮನದಲಿ ಮೂಡಿ ಪ್ರೀತಿಗಾಶೆಯಮಾಡಿ ಹೃದಯವೊಳಗೊಳಗೆ ಮಿಡುಕಾಡಿ ತಂದು
|| ೧೪ ||
ಆನೆಗಂಕುಶದಂತೆ ಪ್ರೀತಿ ಸ್ವಾರ್ಥಕ್ಕೆಂದೆ
ಹಾದಿಗ್ಗತ್ತುವ ಮೂಲಮಂತ್ರವೆಂದೆ | ಜ್ಞಾನವನು ಒಪ್ಪಿಸುತಶುದ್ದಿಸಲು ಸ್ವಾರ್ಥವನು ಪ್ರೀತಿಯಂಥಾ ವಸ್ತುವಿಲ್ಲವೆಂದೆ
|| ೧೫ ||
ದಾನಮೂಲಕವಾಗಿ ಕ್ಷೀಣಸ್ವಾರ್ಥಿಗಳಾಗಿ
ಆತ್ಮಭಾವಕೆ ಬಂದರಂದಿನವರು | ಏನು ಹೇಳುವೆನಯ್ಯ ಪ್ರೇಮಮೂಲಕವಾಗಿ
ಸಾಗಿದರೆ ಸಾಗಬಹುದಿಂದಿನವರು
|| ೧೬ ||
ಒಂದು ಜೀವನಕೂಡ ತನ್ನಂತೆ ನೋಡುವುದು
ಬಂದಿಲ್ಲದಿರುವವರು ಇಂಥ ನಾವು | ಎಂದಿಗಾದರು ಸರ್ವಜೀವಿಗಳ ನೋಡೇವೆ ಇದೆವೊಂದೆ ನನಗಾಗ ಮನದನೋವು
|| ೧೭ ||
68--------------------------------------
ನಡೆದ ಮಾತಿನ್ನೊಂದು ಒಡೆದು ಹೇಳುವೆ ತಮ್ಮ
ಇಷ್ಟರೊಳು ಸಾಧನೆಯು ಕುಂಟುಬಿತ್ತು | ಜಡದೊಳಂತರ್ಯಾಮಿ ಒಡಮೂಡದಂತಾಗೆ ಜೀವಕೋಟಿಯ ಕಡೆಗೆ ಲಕ್ಷ ಬಂತು
|| ೧೮ ||
)
|| ೧೯ ||
|| ೨೦ ||
ಇದ್ದದ್ದು ಬೆಳೆದೀತು ಇಲ್ಲದ್ದು ದುಸ್ಸಾಧ್ಯ
ಹೆಚ್ಚು ಪ್ರಿಯರಾರೆಂದು ಎಣಿಸಿಕೊಂಡೆ | ಇದೆಲ್ಲ ಗೆಳೆಯರಲ್ಲಿ ಮುದ್ದಿನವ ನೀನೊಬ್ಬ
ಯಜ್ಞಕ್ಕೆ ನಿನ್ನನ್ನೆ ಆಯ್ದು ಕೊಂಡೆ ದೇವಲೀಲೆಯೊ ಕಾಣೆ ಕರ್ಮ ಜಾಲವೊ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು | ಯಾವದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು ನಾಲ್ಕನೆಯ ಮುದ್ದು
ಇಷ್ಟ ರೊಳಗೇ ನಿನ್ನ ಪಾತ್ರ ಸಿಂಗರಿಸಿತ್ತು
ಸತ್ಯದಾನಾತು ಹತ್ತಿತ್ತು ನಿನಗೆ || ಸೃಷ್ಟಿ ಜೀವಿಗಳಲ್ಲಿ ಸತ್ಯಲೋಪವ ಕಂಡು
ಮನದಲ್ಲಿ ಮಿಡುಕು ಹುಟ್ಟಿತ್ತು ಒಳಗೆ ಒಂದಿರುಳು ಬಂತಲ್ಲ ಅಂದು ನಾವಡವಿಯಲಿ
ಮಂದಿಮಕ್ಕಳ ರಾಜ್ಯದಿಂದ ಹೊರಗೆ || ಅಂದೆ ಮೇಲಾಗಿ ಜಿನಮುನಿಯನ್ನು ಕಂಡಿದ್ದೆ -
ವಚ್ಚಬತ್ತಲೆಯಾತ್ಮ ವೊಳಗೆ ಹೊರಗೆ
|| ೧ ||
|| ೨ ||
69--------------------------------
ಅಕ್ಷಯ್ಯದಾಕಾಲ ಎಚ್ಚರಿಸುವಾ ಗಾಳಿ
ಆದ್ಯಂತವಿಲ್ಲದಾಕಾಶವಿತ್ತು || ಸಾಕ್ಷಿಯಂತಾ ರಾತ್ರಿ ಸುತ್ತು ಸಂದಣಿಸಿತ್ತು
ನಗುನಗುವಚಿಕ್ಕೆಗಳ ಬಳಗವಿತ್ತು || ೩ || * ಹೊಚ್ಚ ಹೊಸದಿನದಲ್ಲಿ ಮೊಟ್ಟ ಮೊದಲಿನ ಮುದ್ದಿ
ಗಾರು ಮುಂದರಿಯಬೇಕಿಬ್ಬರೊಳಗೆ || ಅಚ್ಚದಂಪತಿಗಳಲಿ ?'' ಅಂತುಯಿಂತೂವೊಮ್ಮೆ
ಅಂತರಂಗದ ಆಶೆ ಬಂತು ಹೊರಗೆ
ಆಗ ಏನಾನಂದ ಆಗ ಎಂಥಾ ಸಮತೆ - ಆಗಿನದ್ದು ತ ಲೀಲೆ ಹೇಳಲಳವೇ || ಆಗಲಾರದ್ದಾಯ್ತು ಆಡಲರಿಯದ್ದಾಯ್ತು ಮೈಯ್ಯ ತೆರೆಹಾರಿ ಬರಿ ಆತ್ಮದ್ರೋಳವೇ
|| ೫ ||
ಅಂದಿನುತ್ನಟ ದೈನ್ಯ ತಿರುಗಿ ಸ್ಥಿರವಾಯಿತ್ತು
ಒಂದುವರುಷದ ತಪದ ಸಿದ್ದಿಯಿಂದ || ಮುಂದಿನದ್ಭುತ ಕಥೆಯು ಜೀವಾತ್ಮಗಳ ಯುದ್ದ ನಡುವಿನಾ ಬಿರುಗಾಳೆ ನೋಡೋ ಕಂದಾ
|| ೬ ||
ತಾನೆ ತಾನಿದ್ದಾಗ ಕುಣಿಯದಾತ್ಮದ ದೀಪ
ಜೀವದಾಗಾಳಿ ತುಸು ತಾಕೆ ಸಾಕು || ಏನು ಹೇಳುವೆನಯ್ಯ ಆತ್ಮ ಹೊಯ್ದಾಡುತಿರಲೊಮ್ಮೆ ಬೆಳಕೊಮ್ಮೆ ಕತ್ತಲೆಯ ಜೀಕು
| ೭ ||
70------------------------------------------
ಜೀವದ ಪತಂಗ ತಾನಾತ್ಮ ದೀಪದ ಮೇಲೆ
ಅಬ್ಬರಿಸಿ ಆವರಿಸಿದಾಗ ಮಬ್ಬು ||| ಕಾವಿನಲಿ ಬೆಂದೋಡಿ ಆತ್ಮ ಜಯವಾದಾಗ
ನೆಲಮುಗಿಲ ತೇಲಿಸುವ ಬೆಳಕಿನುಚ್ಚು
|| ೮ ||
ಆಗ ಎಂಥ ನಿರಾಶೆ ಆಗ ಎಂಥಾ ದುಃಖ
ಆಗ ಎಂಥಾ ಕಷ್ಟ ಚೂರು ಚಾರೇ | ಆಗಿನಂಥಾ ವ್ಯರ್ಥದನಿಸಿಕೆಯ ನೆನಿಸಿದರೆ ಈಗಲೂ ಹೃದಯಕ್ಕೆ ಘೋರು ಘೋರೇ
|| ೯ ||
ಹೀಗಿರುವ ಹೊತ್ತಿನೊಳ ಹೊಟ್ಟೆಯನ್ನು ಬಿಚ್ಚಿ ಮಾ
ತಾಡಿದರೆ ಬಂದಂಥ ಮೋಡ ಬಯಲೇ | ಆಗ ಏನಾನಂದ ಆಗ ಎಂಥಾ ಸನತೆ ಹೇಳಲೇನಾಗಿನದ್ಭುತದಲೀಲೆ
|| ೧೦ ||
ಮುದುಡಿರುವ ಮೊಗ್ಗೆ ತಾನರಳಿದರೆ ಕೋಮಲವು
ಆಗ ನಸುಬಿಸಿಕೂಡ ಬಾಡಿಸುವದು | ಹದಗೆಟ್ಟು ಕುಗ್ಗಿ ಒಗ್ಗಿದ ಹೊತ್ತಿನಲಿ ಕೂಡ ನಸುಗಾಳಿ ಬಂದು ನಗಿಸಾಡಿಸುವದು
|| ೧ ||
ಬಂದ ರಾತ್ರಿಯು ಕಳೆದು ಅಂದು ಹಗಲಾದೊಡನೆ
ಹಿಗ್ಗು ತಿದ್ದೆವು ಪೀಡೆ ಹೋಯಿತೆಂದು | ಮುಂದೆ ತುಸು ಹೊತ್ತಿನೊಳೆ ಕಾಳರಾತ್ರಿಯ ಕಾಟ ಎಲ್ಲಿಂದಲೋ ಮುಸುಕುತಿತ್ತು ಬಂದು
೭೧
71--------------------------------
ಮತ್ತೆ ಮುಂಚಿನಗೋಳ ಬೀಸಿದ್ದೆ ಬೀಸುವದು
ಬುದ್ದಿಗೇ ಬಿಚ್ಚದಂತಾಗುತಿತ್ತು || ಅತ್ತು ತೆಕ್ಕೆಗೆ ತೆಕ್ಕೆ ಬಿದ್ದು ಒಳನೋಡುತಿರೆ ಕತ್ತಲೆಯು ಹರಿದು ಬೆಳಕಾಗುತಿತ್ತು
|| ೧೩ ||
ಒಂದು ದಿನವೇ ಹೀಗೆ ಎರಡು ದಿನವೇ ಹೀಗೆ
ವರುಷದಿನ ಮುಳುಮುಳುಗಿ ಎದ್ದ ಮೇಲೆ || ಅಂಧಕದ ಕಡಲಲ್ಲೆ ರತ್ನರಾಶಿಯ ಕಂಡು ಎಂದಿಗಳಿಯದ ನಿಧಿಯ ಗಳಿಸಲಿಲ್ಲೇ
|| ೧೪ ||
ಆತ್ಮ ಸೂರ್ಯನ ಮುಂದೆ ಜೀವತೃಥಿಯ ತಿರುಗು
ಸಾಗುತಿರುವನಕ ಹಗಲಿರುಳು ಬಿಡದು || ಆತ್ಮಕ್ಕೆ ಜೀವಭಾವದ ಸೋಂಕು ಬಿಡದನಕ
ಬುದ್ದಿ ಭೇದದ ತಾಯಿಬೇರು ಸುಡದು
| ೧೫ ||
ಮನದ ಮಾತನ್ನೆಲ್ಲ ಬಿಚ್ಚಿ ಬಾಯಿಗೆ ಬಿಡದು
ಜೀವಕ್ಕೆ ಇದುವೊಂದು ಭವದ ಗುಣವು || ಅನಿಸಿದಷ್ಟೂ ಮಾತು ಎಣಿಸಿ ಹೇಳಲು ಬರದು
ಬುದ್ದಿಗಿದು ಎಂದಿಗೂ ಕುಂಟುತನವು
|| ೧೬ ||
ಹೇಳಿದ್ದು ಹೇಳಿದಂತರಿತುಕೊಳ್ಳದ್ದೊಂದು
ಭ್ರಾಂತಚಿತ್ರಕ್ಕೆ ಬೆನ್ಬಿಡದಗುಣವು | ಕೇಳಲೇನಯ್ಯ ಸಂದೇಹ ಸೂತಕವಿಲ್ಲೆ ಇದೆ ಬುದ್ಧಿ ಭೇದಕ್ಕೆ ಮೂಲಧನವು
|| ೧೭ ||
-
೭೨
72-----------------------------------------
|| ೧೮ ||
ಸತ್ಯವಿದ್ದೆಡೆ ಪ್ರೀತಿ ಪ್ರೀತಿಯಿದ್ದೆಡೆ ಸತ್ಯ
ಸತಿಪತಿಗಳಂತೆಯಿವು ತಳಕುಮಳಕೋ | ಸಲ್ಲದುಳಿಯವೈ ಒಂದನೊಂದಗಲಿದರೆ
ಅತ್ಮಲೋಕಕ್ಕೆ ಇವು ಬೆಂಕಿ ಬೆಳಕೋ ಹೊರಗೆ ತನುಮನ ಕೂಡಿ ಹಲವು ದಿನವಾಗಿತ್ತು
ಆತ್ಮಾತ್ಮಗಳ ಮುಖವು ಕೂಡಿತಿಗೆ | ಒರತೆಯಾ ನೀರಿಗೂ ಕರುಳೆಯಾ ಬೇರಿಗೂ ಮೇಳುಕಡಿತು ನನಗೆ ನಿನಗೆ ಹೀಗೆ
||೧೯ ||
|| ೨೦ ||
ದೇವಲೀಲೆಯೊ ಕಾಣೆ ಕರ್ಮಚಾವೊ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು | ಯಾವದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು ಐದನೆಯ ಮುದ್ದು
ನಿನ್ನ ತುಟಿಯೇನು ಸವಿ ನಿನ್ನ ಸೋಂಕೇನು ಸುಖ
ಹಾ ಅಹಾ ನಿನ್ನ ತಲೆಯೇನು ಕಂಪೋ | ನಿನ್ನ ಮುಖ ಬಲುಚೆಲುವು ಬಂಣಿಸಲು ಬಾರದ್ದು ಕಿವಿಗೆ ಹಾ ನಿನ್ನ ದನಿಯನ್ನು ಇಂಪೋ
ತುಟಿಗೆ ತುಟಿ ಹಚ್ಚಿ ನಾವಾತ್ಮರುಚಿ ನೋಡಿದೆವು
ಎದೆಗೆಯದೆ ಹಚ್ಚಿ ತೆರೆ ಹಾರಿಸಿದೆವು || ಗುಟುಗುಟುಕು ಹೀರಿದೆವು ತಲೆಯ ಕಮಲದಗಂಧ ನೋಡನೋಡುತೆ ಕಾಲ ಖಂಡಿಸಿದೆವು
೭೩
73----------------------------------------
ಒಬ್ಬರೊಬ್ಬರ ದನಿಯು ಕಿವಿಗೆ ಬಿದ್ದಾಗಲೇ
ಸೂರ್ಯಚಂದ್ರರ ಹಾಡು ಕೇಳಿಸಿತ್ತು ! ಅಬ್ಬಬ್ಬ ಏಸೊದಿನ ಸಾಗಿಸಾಗಿಯು ಕೂಡ ಆಸರಿಕೆ ಬೇಸರಿಗೆ ತೋರದಿತ್ತು
|| ೩ ||
ಮನದೊಳಗೆ ನಿನ್ನ ನೆನಪಾದರಾಕ್ಷಣದೊಳಗೆ
ಮುಗಿಲೊಳಗೆ ಎಳೆಚಂದ್ರ ಮೂಡಿದಂತೆ | ಬನದೊಳಗೆ ಕೇರಳದ ಕೋಗಿಲೆಯ ದನಿಯಂತೆ ಗರಿಬಿಚ್ಚಿ ಗಂಡು ನವಿಲಾಡಿದಂತೆ
ನಿನ್ನ ನುಡಿಯ ಮಧುರ ನಿನ್ನ ನಡೆಯ ಮಧುರ
ನಿನ್ನ ಸೆಡವೂ ಮಧುರ ಸರ್ವಮಧುರ | ನಿನ್ನ ಮುನಿಸೂ ಮಧುರ ನಿನ್ನ ಕನಸೂ ಮಧುರ
ನಿನ್ನ ದೆಲ್ಲಾ ನನಗೆ ಮಧುರ ಮಧುರ |
| ೫ ||
ಅರಗಳಿಗೆ ಅಗಲಿಲ್ಲ ಅಗಲಿದ್ದು ಗೊತ್ತಿಲ್ಲ
ಅಗಲಿದರೆ ಕಣ್ಣು ಕಿವಿ ಮನಸು ಅತ್ತೆ | ಹೊರಗೊಳಗೆ ಸೊಗಸಿಲ್ಲ ಹೊರಗಿನೆಚ್ಚರವಿಲ್ಲ
ಒಂದು ಕೇಳಿದರೊಂದು ಮಾತು ಮತ್ತೆ
|| ೬ ||
ಮನೆಯ ಮುಟ್ಟಿರಬಹುದು ಮಾತು ಮುಗಿದಿರಬಹುದು
ಮರುಳಿ ಹೊರಟಿರಬಹುದು ಎಂದೆಣಿಸುತಾ | ಸನಿಯೆ ಬಂದಿರಬಹುದು ಎಂದನಿಸಿ ನೋಡಿ ಹಾ ಕಾಣದಿರೆ ಹೊಸಲೆಕ್ಕವನು ಗುಣಿಸುತಾ || ೭ ||
೭೪
74-----------------------------------
ಗಾಳಿದೂಳಿಯ ಸುಳಿಗೆ ಕಾಲಸಪ್ಪಳೋ ಎಂದೆ
ಹಕ್ಕಿ ಪಕ್ಕಿಗಳುಲಿಗೆ ರಾಗವೆಂದೆ | ಕಾಳು ಕಡಿಯಾರಿಸುವ ಗುಬ್ಬಿ ತಾ ಹಾರಿದರೆ
ನೀ ಬಂದೆಯೆಂದು ನಾನೆದ್ದು ನಿಂದೆ
|| ೮ ||
ತರಗೆಲೆಯು ಸರಕೆನೆಲು ಹೊರಗೆ ನಾನಾಲಿಸುವೆ
ಬರವಿಲ್ಲದಿರೆ ಮನದಿ ಸೊಪ್ಪುಗರವೆ'' | ನರೆಬಂದ ಮುಪ್ಪಿನ ಷಡಕ್ಷರಿಯನೂ ಬಿಡದ
ಮಧುರ ಸಂಧಾನಕ್ಕೆ ಬೆರಗುಬಡುವೆ
ಸನಿ ಬಂದು ಮುಖವನರಳಿಸಿ ತುಟಿಯ ಬಿಚ್ಚಿದರೆ
ಒಳಗೆ ಹೊರಗೆಲ್ಲವೂ ಒಪ್ಪು ಒಪ್ಪೇ |
ಮನವ ಮುದುಡಿರುವಾಗ ಮೈದಡವಿದರೆ ಸಾಕು ಕದಡಿದ್ದ ಕೊಳವೆಲ್ಲ ತಿಳಿಯ ತುಪ್ಪ
“ವದಸಿ ಯದಿ ಕಿಂಚಿದಪಿ ದಂತರುಚಿಕೌಮುದೀ ಹರತು ದರ ಕಿಮಿರಘೋರಂ' ಸುಘೋರಂ |
ಸುದತಿ ಪದ್ಮಾವತಿಯ ಚರಣ ಚಾರಣ ಚಕ್ರವರ್ತಿ ಜಯದೇವನನುಭವದ ಸಾರಂ
|| ೧೧ ||
ಇಲ್ಲಿ ಮಾತಿನ್ನೊ೦ದು ಹೇಳದಿರಬೇಕೆಂದರೆ ರೆಲ್ಲೆಲ್ಲಿಯೂ ಜೀವ ಕೇಳದಲ್ಲಾ |
ನಲ್ಲೆ ವಾಸಂತಿ ತಾ ಜೀವದಾ ಜೊತೆಗಾರ್ತಿ ಮೂವರೂ ಅಗಲದಾ ಪಥಿಕರಲ್ಲ
|| ೧೨ ||
೭೫
75----------------------------
ಬೆಳದಿಂಗಳಿರುಳಲ್ಲಿ ನಟ್ಟನಡು ರಾತ್ರಿಯಲಿ
ಸಪ್ಪಳಿಲ್ಲದಶಾನ್ಯ ಸೃಷ್ಟಿಯಲ್ಲಿ || ಬಿಳಿಯ ಟೀವಕ್ಕಿ ಮಾತಾಡುತ್ತ ಹೊರಟಂತೆ
ನಾವಾತ್ಮ ಯಾತ್ರಿಕರನಂತದಲ್ಲಿ
|| ೧೩
ಪ್ರೇwwwಸು ಬಲೆಹಾಕಿ ಹಿಡಿದುಕೊಂಡೆವು ನಾವು
ಕಾಮುಕರಿಗಿಂತಲೂ ಕಾಮಿಯಾಗಿ || ಭೂಮಿಯವರೊಳಗಿದೇ ಕರ್ಮಸಿದ್ದಿಯ ಮರ್ಮ
ಹೆಚ್ಚೇನು ಹೇಳುವೆನೊ ತಿರುಗಿ ಮುರುಗಿ || ೧೪
ಪರಿಪರಿಯ ಕಷ್ಟದಲಿ ಹೊರಳುವವರೂ ಕೂಡ
ಇರುವುದಕ್ಕೆ ಆಶೆ ಮಾಡುತಿರಲು || ಇರುವಿನಾನಂದದಲಿ ಸರಿಜೋಡಿ ಕೂಡಿದರೆ ಇರುವಿನಷ್ಟಾದರೂ ಹಿಗ್ಗು ಮಿಗಿಲು
|| ೧೫
ಅನ್ನಬಹುದೇನಯ್ಯ ಹಾಡು ಮುಗಿಯಿತೆಂದು
ಜನ್ಮದಾಕಾಶದಲ್ಲದರ ಬೇರು || “ ಕನ್ನಡಿಯೊಳೆಷ್ಟು ಕಂಡೀತೊ ಕನಕಾಚಲವು ಕೊಡಕೆ ಹಿಡಿಸೀತೆಷ್ಟೋ ಕಡಲ ನೀರು "
|| ೧೬
ಹುಚ್ಚುತನವೋ ಕಾಣೆ ಜಾಣತನವೋ ಕಾಣೆ
ಹುಚ್ಚುತನ ಯಾರಿಗೂ ಬಿಟ್ಟೆ ಯಿಲ್ಲ | ಅಚ್ಚ ಅನುಭವರಾಶಿ ಬಿಚ್ಚಿ ಬೈಲಿಗೆಯಿಟ್ಟಿ
ಮುಚ್ಚುಮರೆಯಿದರೊಳೇನೇನುಯೆಲ್ಲಾ
|| ೧೭
76-------------------------------------
ಬೆಳದಿಂಗಳಿರುಳಲ್ಲಿ ನಟ್ಟನಡು ರಾತ್ರಿಯಲಿ
ಸಪ್ಪಳಿಲ್ಲದಶಾನ್ಯ ಸೃಷ್ಟಿಯಲ್ಲಿ || ಬಿಳಿಯ ಟೀವಕ್ಕಿ ಮಾತಾಡುತ್ತ ಹೊರಟಂತೆ
ನಾವಾತ್ಮ ಯಾತ್ರಿಕರನಂತದಲ್ಲಿ
|| ೧೩
ಪ್ರೇwwwಸು ಬಲೆಹಾಕಿ ಹಿಡಿದುಕೊಂಡೆವು ನಾವು
ಕಾಮುಕರಿಗಿಂತಲೂ ಕಾಮಿಯಾಗಿ || ಭೂಮಿಯವರೊಳಗಿದೇ ಕರ್ಮಸಿದ್ದಿಯ ಮರ್ಮ
ಹೆಚ್ಚೇನು ಹೇಳುವೆನೊ ತಿರುಗಿ ಮುರುಗಿ || ೧೪
ಪರಿಪರಿಯ ಕಷ್ಟದಲಿ ಹೊರಳುವವರೂ ಕೂಡ
ಇರುವುದಕ್ಕೆ ಆಶೆ ಮಾಡುತಿರಲು || ಇರುವಿನಾನಂದದಲಿ ಸರಿಜೋಡಿ ಕೂಡಿದರೆ ಇರುವಿನಷ್ಟಾದರೂ ಹಿಗ್ಗು ಮಿಗಿಲು
|| ೧೫
ಅನ್ನಬಹುದೇನಯ್ಯ ಹಾಡು ಮುಗಿಯಿತೆಂದು
ಜನ್ಮದಾಕಾಶದಲ್ಲದರ ಬೇರು || “ ಕನ್ನಡಿಯೊಳೆಷ್ಟು ಕಂಡೀತೊ ಕನಕಾಚಲವು ಕೊಡಕೆ ಹಿಡಿಸೀತೆಷ್ಟೋ ಕಡಲ ನೀರು "
|| ೧೬
ಹುಚ್ಚುತನವೋ ಕಾಣೆ ಜಾಣತನವೋ ಕಾಣೆ
ಹುಚ್ಚುತನ ಯಾರಿಗೂ ಬಿಟ್ಟೆ ಯಿಲ್ಲ | ಅಚ್ಚ ಅನುಭವರಾಶಿ ಬಿಚ್ಚಿ ಬೈಲಿಗೆಯಿಟ್ಟಿ
ಮುಚ್ಚುಮರೆಯಿದರೊಳೇನೇನುಯೆಲ್ಲಾ
|| ೧೭
77
-------------------------
೧೮ ||
ಈ ಹುಚ್ಚಿಗಳುಕೇಕೆ ಇದ್ದಂತೆ ಹಾಡಿದೆನು - ನನ್ನಂತರಂಗದಾ ಪ್ರಕೃತಿಯಂತೆ || ಹೋಹೊ ಸದೃಶಂ ಚೇಷ್ಟತೇ ಜ್ಞಾನವಾನಪಿತು
ಸ್ವಖ್ಯಾತಿ ಪ್ರಕೃತೆ” ಯೆಂಬ ಗೀತೆಯಂತೆ ಕರ್ಮಮರ್ಮದ ನೆಲೆಯು ಅರಿತವರಿಗೂ ಅರಿದು
ನಾನು ನೀನಾವ ತಕ್ಕಡಿಯ ಕಾಣಿ || * ಕರ್ಮಣ್ಯಕರ್ಮಯಃ ಪಠ್ಯದ ಕರ್ಮಣಿಚ
ಕರ್ಮಯಃ ಪಶ್ಯತ್ ಸಬುದ್ಧಿಮಾ ” ಜನರಾಡಿಕೊಳ್ಳಬಹುದು ನನಗು ನಿನಗೂ ಕೂಡ
ಅವರೇನು ಬಲ್ಲರೊ ಒಳನಿಧಾನ || ನನಗೆ ನೀನತಿಮಧುರ ನಿನಗೆ ನಾ ಬಲು ಚೆನ್ನ - ಹೀಗೆಂತಲೇ ನಾವು " ಮಧುರಚೆನ್ನ ''
| ೨೦ ||
ದೇವಲೀಲೆಯೊ ಕಾಣೆ ಕರ್ಮಜಾಲವೊ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು || ಯಾವದೇನೇ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು
|| ೨೧ ||
======================================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ