ಸೋಮವಾರ, ಡಿಸೆಂಬರ್ 21, 2020

ಉನ್ಮಾದಿನೀ-ಬಿ. ವೆಂಕಟಾಚಾರ್ಯ.

 https://archive.org/details/dli.osmania.4118

UNIVERSAL LIBRARY 

200216 

LIBRARY UNIVERSAL 

--------------------------------------

NARASIMHARAJA WADIYAR SERIES 

(ಎರಡನೆಯ ಸಂಸ್ಕರಣ) 

          ಬಿ. ವೆಂಕಟಾಚಾರ್ಯ 

  ಕ್ರಯ -0-6-0   

ಎಂ. ಎಸ್. ರಾವ್ ಕಂಪೆನಿ 

ಪುಸ್ತಕ ವ್ಯಾಕಾರಿಗಳು, ಬೆಂಗಳೂರು ಸಿಟಿ 

------------------------------------ 


ವಿಜ್ಞಾಪನೆ 

ಈ ಗ್ರಂಥವು ಶ್ರೀ ಯೋಗಿಂದ್ರನಾಥ ಬೆಬುಯವರ ಗ್ರಂಥವನ್ನು ಅವಲಂಬಿಸಿ 

ಬರೆದಿರುವುದು, ಇದು ಚಿಕ್ಕದಾದರೂ ಒಂದು ಮನೋಹರವಾದ ಚಿತ್ರವಾಗಿ 

ಸಾಮಾಜಿಕ ನೀತಿಬೋಧಕವಾಗಿರುವುದು, 

ಇತಿ 

ಮೈಸೂರು,  ಬಿ. ವೆಂಕಟಾಚಾರ್ಯ.

1901, 

 

ಬಿನ್ನ ಹ . 

"ಸುವಾಸಿನಿ' ಮಾಸಪತ್ರಿಕೆಯಿಂದ ಉಧೃತವಾಗಿ ಪ್ರಕಟವಾಗಿದ್ದ ಈ 

ಗ್ರಂಥದ ಪ್ರಥಮ ಮುದ್ರಣದ ಪ್ರತಿಗಳೆಲ್ಲ ಮುಗಿದು ಬಹು ದಿನಗಳಾದುವು. 

ಪ್ರಿಯರಾದ ಕರ್ಣಾಟಕ ವಾಚಕರ ಆಜ್ಞಾನುಸಾರವಾಗಿ ಪುನಃ ಮುದ್ರಿಸಿರುತ್ತದೆ. ಇ

ತರ ಗ್ರಂಥಗಳಂತೆಯೇ ಇದಕ್ಕೂ ಪ್ರೋತ್ಸಾಹ ದೊರೆತರೆ ಶ್ರಮವು ಸಾರ್ಥಕವೇಸರಿ, 


ಮೈಸೂರು ಇತಿ

1918  ಬಿ. ವಿ. ನರಸಿಂಹಯ್ಯಂಗಾರ್, 


PRINTED AND PUBLISFIED BY B. V. NARASIMHA IYENGAR 

AT THE ROYAL PRESS, MYSORE.-1918, 

---------------------------------------- 

ಶ್ರೀ

|| ಶ್ರಿಮೈನಮಃ || 

ಉನ್ಮಾದಿನೀ. 

ಮೊದಲನೆಯ ಪರಿಚ್ಛೇದ. 

"ಈ ಪ್ರಕಾರ ಗೋಪ್ಯವಾಗಿ ವಿವಾಹ ಮಾಡಲೇಕೆ ?” ತರ್ಕಾಲಂಕಾರ ಮಹಾ 

ಶಯರು ಎಡಗೈಯಲ್ಲಿದ್ದ ನಸ್ಯದ ಡಬ್ಬಿಯನ್ನು ಬಲಗೈ ತೋರ್ಬೆಟ್ಟಿನಿಂದ 

ಒಂದೆರಡು ತಡವೆ ಹೊಡೆದು, ಅದರ ಮುಚ್ಚಳವನ್ನು ತೆಗೆದು, ಒಂದು ಚಿಟಿಕೆ ನಸ್ಯ 

ವನ್ನು ಹಿಡಿದು, ಶಬ್ದವಾಗುವ ಹಾಗೆ ಬಲವಾಗಿ ಮೂಗಿಗೇರಿಸಿ "ಈ ಪ್ರಕಾರ 

ಗೋಪ್ಯವಾಗಿ ವಿವಾಹ ಮಾಡಲೇಕೆ ? ” ಎಂದು ಕೇಳಿದರು. 


ಪ್ರಶ್ನೆಗೆ ಉತ್ತರವಾಗಿ ರಾಮಗೋಪಾಲನು ವಿನೀತಭಾವದಿಂದ,"ತಾವು 

ನಮ್ಮ ಕುಲಪುರೋಹಿತರಾಗಿರುವುದರಿಂದ, ತಮಗೆ ಯಾವುದನ್ನೂ ಮುಚ್ಚುಮರೆ 

ಮಾಡುವುದಿಲ್ಲ. ತಮ್ಮ ಸೋದರಮಾವಂದಿರು ನಮ್ಮ ಸಾಂಸಾರಿಕವಾದ ವಿಚಾರವ 

ನ್ನೆಲ್ಲಾ ಚೆನ್ನಾಗಿ ಅರಿತಿರುವರು. ದುರ್ಗಾವತಿಯು ನನ್ನ ಮಗಳಲ್ಲವೆಂಬುದನ್ನು ತಾವು 

ಬಲ್ಲಿರೋ ?” ಎಂದನು. 


ತರ್ಕಾಲಂಕಾರ ಮಹಾಶಯರು ಆಶ್ಚರ್ಯಪಟ್ಟು, " ಇದೇನು ಸೋಜಿಗೆ ! 

ಅದನ್ನು ನಾನು ಅರಿಯೆನು, ಅವಳು ನಿನ್ನ ಮಗಳೆಂತಲೇ ತಿಳಿದಿದ್ದೆನು'' ಎಂದು 

ಹೇಳಿದರು. 

------------------------------------------------------------------  

ಉನ್ಮಾದಿನೀ 


ರಾಮಗೋಪಾಲ :-" ದುರ್ಗಾವತಿಯು ನನ್ನ ಕಿರೇ ತಮ್ಮನಾದ ನವೀನ 

ಗೋಪಾಲನ ಮಗಳು, ನವೀನಗೋಪಾಲನು ಒಬ್ಬ ಹೆಸರ್ಗೊಂಡ ಬ್ರಹ್ಮೋ ಎಂಬು 

ದನ್ನು ನೀವು ತಿಳಿದಿರಬಹುದೆಂದು ತೋರುತ್ತಿದೆ." 


ತರ್ಕಾಲಂಕಾರ :-" ನಿನ್ನ ಕಿರೇ ತಮ್ಮನು ಬ್ರಹ್ಮಧರ್ಮಾವಲಂಬಿಯಾಗಿ, 

ಸಪರಿವಾರವಾಗಿ ಮನೆಯನ್ನು ಬಿಟ್ಟು ಹೋದನೆಂದು ನಮ್ಮ ಸ್ವರ್ಗಸ್ಥರಾದ ಮಾವಂದಿರು 

ಹೇಳುತಲಿದ್ದುದನ್ನು ಕೇಳಿರುವೆನು."

 

ರಾಮಗೋಪಾಲ :"ದುರ್ಗಾವತಿಯು ಹುಟ್ಟಿದ ಒಂದೂವರೆ ವರ್ಷದ 

ಲ್ಲಿಯೇ ನವೀನಗೋಪಾಲನಿಗೆ ಒಂದು ಗಂಡು ಮಗು ಹುಟ್ಟಿತು. ತಾಯಿಯೇ ಆ ಮಗು 

ವನ್ನು ಮುಂದಕ್ಕೆ ತಂದಳು, ಅದು ಮೊದಲ್ಗೊಂಡು ಮಕ್ಕಳು ಇಲ್ಲದ ನನ್ನ ಹೆಂಡ 

ತಿಯು ದುರ್ಗಾವತಿಯನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದಳು. ನವೀನಗೊಪಾ 

ಲನು ಪಿತ್ರಾರ್ಜಿತವಾದ ಆಸ್ತಿಯನ್ನೆಲ್ಲಾ ನನಗೆ ಮಾರಿಬಿಟ್ಟು, ಸಪರಿವಾರವಾಗಿ ಮನೆ 

ಯನ್ನು ಬಿಟ್ಟು ಹೋಗುವಾಗ, ದುರ್ಗಾವತಿಗೆ ಐದುವರ್ಷವಿರಬಹುದು. ಅವಳು 

ದೊಡ್ಡಮ್ಮನನ್ನು ಬಿಟ್ಟು ತನ್ನ ತಾಯಿತಂದೆಗಳೊಡನೆ ಹೋಗುವುದಕ್ಕೊಪ್ಪಲಿಲ್ಲ. 

ನನ್ನ ಹೆಂಡತಿಯ ಅವಳನ್ನಗಲಿರುವುದಕ್ಕೆ ಸಮ್ಮತಿಸಲಿಲ್ಲ. ಆಗಿನಿಂದಲೂ ದುರ್ಗಾ 

ವತಿಗೆ ತಾಯಿತಂದೆಗಳ ಸಂಬಂಧವು ತಪ್ಪಿತು. ಅವಳು ನನ್ನನ್ನೇ ತನ್ನ ತಂದೆಯೆಂದೂ 

ನನ್ನ ಗತಿಸಿಹೋದ ಹೆಂಡತಿಯನ್ನೇ ತನ್ನ ಗರ್ಭಧಾರಣಿಯೆಂದೂ ತಿಳಿದುಕೊಂಡಿದ್ದಳು. 


ತರ್ಕಾಲಂಕಾರ :-- ಒಳ್ಳೆಯದಾಯಿತು ಆ ಮಗುವಿಗೆ ಇಷ್ಟು ಏಕಾಂತ 

ವಾಗಿ ಮದುವೆ ಮಾಡಲೇಕೆ ?" 


ರಾಮಗೋಪಾಲ :-ಅದಕ್ಕೆ ಒಂದು ಕಾರಣವುಂಟು, ನನ್ನ ಹೆಂಡತಿಯು 

ಹೊದ ಮೊದಲ್ಗೊಂಡು ನವೀನಗೋಪಾಲನು ತನ್ನ ಮಗಳನ್ನು ಕಳುಹಿಸಿಕೊಡಬೇ 

ಕೆಂದು ಕೇಳುತ್ತಿರುವನು. ನನಗೆ ಸ್ವಲ್ಪ ಆಸ್ತಿಯುಂಟು. ಅದರಮೇಲಿನ ಆಸೆಯಿಂದ 

ಅವನು ಹುಡುಗಿಯನ್ನು ಇಲ್ಲಿಯೇ ಇಟ್ಟು ಕೊಂಡಿರುವುದಕ್ಕೆ ಸಮ್ಮತಿಸಿರುವನು. 

ಆದರೆ ನಮ್ಮ ಹಿಂದೂಮತದ ಪ್ರಕಾರ ಆ ಮಗುವಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದು 

ವೆಮಾಡುವುದಕ್ಕೆ ಅವನಿಗೆ ಒಪ್ಪಿತವಿಲ್ಲ. ಅವನು ಬಂದು ರಚ್ಚೆಗೊಂಡು ಗದ್ದಲಿಸಿ 

ಮದುವೆ ಮಾಡದಹಾಗೆ ಅಡ್ಡಗಿಸುವನು. ಅದುಕಾರಣ ಮದುವೆಯನ್ನು ಗೋಪ್ಯ 

ವಾಗಿ ಮಾಡಬೇಕಾಗಿರುವುದು." 


ತರ್ಕಲಂಕಾರ ಮಹಾಶಯರು ಸ್ವಲ್ಪ ಯೋಚಿಸಿ, ಅನಂತರ ಎರಡು ಮೂರು 

ತಡವೆ ನಸ್ಯ ಗ್ರಹಣವಾಗಿ, ಹುಡುಗಿಗೆ ಎಷ್ಟು ವರ್ಷವೆಂದು ಕೇಳಿದರು, 

-----------------------------------------------------------------

ಮೊದಲ ಪರಿಚ್ಛೇದ ೩ 


ರಾಮಗೋಪಾಲ - ಹುಡುಗಿಗೆ ಹನ್ನೆರಡನೆಯ ವರ್ಷ, ನನ್ನ ತಮ್ಮನು 

ಇಷ್ಟು ಚಿಕ್ಕವಯಸ್ಸಿನಲ್ಲಿ ಹಿಂದೂಮತಾನುಸಾರವಾಗಿ ಹುಡುಗಿಗೆ ಮದುವೆಮಾಡಿ 

ದರೆ, ಬ್ರಹ್ಮಸಮಾಜದಲ್ಲಿ ತನಗೆ ತಲೆ ತಗ್ಗಿ ಹೋಗುವುದೆಂದು ಹೇಳುತ್ತಲಿರುವನು.” 


ತರ್ಕಾಲಂಕಾರ ಮಹಾಶಯರು ವಿಸ್ಮಿತರಾಗಿ, " ಅದು ಹೇಗೆ ? ಕನ್ಯಾಕಾ 

ಲವು ಮೀರಿಹೋಯಿತು ! ಇನ್ನು ವಿಳಂಬಮಾಡುವುದು ಸರಿಯಲ್ಲ, ಏಕಾಂತವಾ 

ಗಿಯೇ ಮದುವೆ ಮಾಡಿಬಿಡು, ಒಳ್ಳೆಯದು, ಪಾತ್ರನೆನ್ನಲ್ಲಿ ಗೊತ್ತು ಮಾಡಿರುವೆ ? 

ಎಂದು ಕೇಳಿದರು. 


ರಾಮಗೋಪಾಲ :-" ಪಾತ್ರನು ನಮ್ಮ ಮನೆಯಲ್ಲಿಯೇ ಇರುವನು, 

ಪಾತ್ರನ ತಂದೆಯು ನನಗೆ ಪರಮ ಸ್ನೇಹಿತನಾಗಿದ್ದನು. ಈಗವನು ಇಲ್ಲ, ಪಾತ್ರನಿಗೆ 

ಯಾರೂ ಇಲ್ಲ. ಈ ಮದುವೆಗೋಸ್ಕರ ನಾನವನನ್ನು ಕರೆತಂದು, ಮನೆಯಲ್ಲಿಟ್ಟು 

ಕೊಂಡಿರುವೆನು.” 


ತರ್ಕಾಲಂಕಾರ ಮಹಾಶಯರು ಆಹ್ಲಾದಿತರಾಗಿ, " ಹಾಗಾದರೆ ಎಲ್ಲವನ್ನೂ 

ಸಿದ್ಧಪಡಿಸಿರುವೆ. ಪಾತ್ರನು ಸುಪಾತ್ರನಷ್ಟೆ ? ” ಎಂದು ಹೇಳಿದರು. 


- ರಾಮಗೋಪಾಲನು ಕೂಡಲೆ, " ಅಹುದು, ಪಾತ್ರನು ಸರ್ವಾಂಶದಲ್ಲಿಯೂ 

ಸುಪಾತ್ರನಾಗಿರುವನು ; ನನಗೂ ಸಂಬಂಧ, ಅವನನ್ನು ಈಗಲೇ ಕರೆಯಿಸುವೆನು 

ಅವನ ಸಂಗಡ ಮಾತನಾಡುವ ಕೆಲವು ಸಂಗತಿಗಳುಂಟು, ಅದನ್ನೆಲ್ಲಾ ತಮ್ಮ ಸಮ 

ಕ್ಷಮ ಮಾತನಾಡುವುದು ಒಳ್ಳೆಯದು ' ಎಂದನು. 


ಹೀಗೆಂದು ಹೇಳಿ, ' ಖಗೇಂದ್ರ ! ' ಎಂದು ಕೂಗಿದನು. ಕೂಡಲೇ ಒಬ್ಬ 

ಹದಿನೆಂಟು ವರುಷ ವಯಸ್ಸಿನ ಯುವಕನು ಬಂದು ನಿಂತನು. ರಾಮಗೋಪಾಲನು  

ಖಗೇಂದ್ರವನ್ನು ಕುರಿತು, ಪುರೋಹಿತರಿಗೆ ನಮಸ್ಕಾರಮಾಡೆಂದು ಹೇಳಿದನು. 


ಖಗೇಂದ್ರಮ ತತ್ ಕ್ಷಣದಲ್ಲಿ ಭೂಮಿಷ್ಟನಾಗಿ ತರ್ಕಾಲಂಕಟರಮಹಾಶಯರಿಗೆ 

ಸಾಷ್ಟಾಂಗಣಾಮವನ್ನು ಮಾಡಿದನು, ರಾಮಗೋಪಾಲನು ಅವನಿಗೆ ಕುಳಿತುಕೊ 

ಳ್ಳುವುದಕ್ಕೆ ಅಪ್ಪಣೆ ಮಾಡಿದನು. ಖಗೇಂದ್ರನು ಕುಳಿತುಕೊಂಡನು . ರಾಮಗೋಪಾ   

ಲನು, " ಖಗೇಂದ್ರ? ನಾನು ನಿನ್ನನ್ನು ನನ್ನ ಮಗನಹಾಗೆ ನೋಡುತ್ತಲಿರುವೆನು.  

ಅದುಕಾರಣ ನಿನಗೆ ದುರ್ಗಾವತಿಯನ್ನು ಕೊಟ್ಟು ಮದುವೆಮಾಡುವೆನು. ನೀನು 

ದುರ್ಗಾವತಿಯನ್ನು ಪ್ರೀತಿಸುವುದನ್ನೂ ನಾನು ಕಂಡಿರುವೆನು. ಆದರೆ ನೀನೊಂದು 

ಪ್ರತಿಜ್ಞೆಯನ್ನು ಮಾಡಬೇಕು ” ಎಂದನು. 

-------------------------------------------------------------------

ಉನ್ಮಾದಿನಿ 

 

ಖಗೇಂದ್ರನಾಥನು ವಿನೀತಭಾವದಿಂದ, " ಏನು ಪ್ರತಿಜ್ಞೆಯೋ ಅಪ್ಪಣೆಯಾ 

ಗಲಿ” ಎಂದನು. 


ರಾಮಗೋಪಾಲನು ಸ್ವಲ್ಪಹೊತ್ತು ಚಿನ್ತಿಸಿ, " ತಾನು ಬದುಕಿರುವವರೆಗು 

ನೀನು ಈ ವಿವಾಹವಿಚಾರವನ್ನು ಏಕಾಂತವಾಗಿರಬೇಕು. ಈ ವಿವಾಹವಾದಮೇಲೆ, 

ನೀನು ನನ್ನ ಮನೆಗೆ ನಾನು ಬದುಕಿರುವವರೆಗೂ ಬಾರದಿರಬೇಕು. ನನ್ನ ಮರಣನಂ 

ತರ ಈ ಮದುವೆಯಾದ ವಿಚಾರವನ್ನು ಬಹಿರಂಗಪಡಿಸಿ, ನಾನು ಇರಿಸಿಹೋಗುವ 

ಆಸ್ತಿಯನ್ನು ನೀವು ಗಂಡಹೆಂಡಿರಿಬ್ಬರೂ ಅನುಭವಿಸಬೇಕು. ಈಗ ಮದುವೆಯಾದ 

ಮೇಲೆ ಅಲಹಾಬಾದಿಗೆ ಹೋಗಿ, ಅಲ್ಲಿ ನನ್ನ ಸಂಬಂಧರಾದವರೊಬ್ಬರ ಮನೆಯಲ್ಲಿರ 

ಬೇಕು, ನಿನಗೆ ಬೇಕಾಗುವ ವೆಚ್ಚಗಳಿಗೆಲ್ಲಾ ನಾನು ಹಣವನ್ನು ಕಳುಹಿಸುತ್ತಲಿರು 

ವೆನು, ಅಲ್ಲಿ ಕಾಲೇಜಿನಲ್ಲಿ ಓದಬೇಕು. ಇದಕ್ಕೆ ನೀನಪ್ಪುವಿಯೋ ಹೇಳು ?" 

ಎಂದನು. 


ಖಗೇಂದ್ರನು ಪುನಃ ವಿನೀತಭಾವದಿಂದ, "ತಾವು ಹೇಗೆ ಅಪ್ಪಣೆ ಮಾಡು 

ವಿರೋ, ಹಾಗೆ ಮಾಡುವುದಕ್ಕೆ ಸಿದ್ಧನಾಗಿರುವೆನು ” ಎಂದು ಹೇಳಿದನು. 

 

ರಾಮಗೋಪಾಲ:-" ಒಳ್ಳೆಯದು, ಈಗ ನೀನು ಹೋಗಬಹುದು." 


ಖಗೇಂದ್ರನಾಥನು ಹೊರಟುಹೋದ ಮೇಲೆ, ತರ್ಕಾಲಂಕಾರ ಮಹಾಶಯರು, 

" ಹಾಗಾದರೆ ನಾಳೆ ವಿವಾಹಕ್ಕೆ ಬಹಳ ಒಳ್ಳೆಯ ದಿನವಾಗಿರುವುದು. ಎರಡು ಪ್ರಹ 

ರದ ಮೇಲೆ ಲಗ್ನ ಎಡಬಹುದು. ಪ್ರಸ್ತ್ರಕ್ಕೆ ಎಲ್ಲಾ ಸಿದ್ಧ ಮಾಡಿಡಬಹುದು” ಎಂದರು. 


ರಾಮಗೋಪಾಲ :-" ಇನ್ನೊಂದು ಮಾತು ಹೇಳುವುದಿರುವುದು, ಪ್ರಸ್ತವು 

ನನ್ನ ಮನೆಯಲ್ಲಿ ನಡೆಯಕೂಡದು. ಎಲ್ಲಾ ಸಿದ್ಧ ಪಡಿಸಿಡುವೆನು, ಬೇಕಾದ ಹಣ 

ಕಾಸೆಲ್ಲಾ ತಮ್ಮ ವಶಕ್ಕೆ ಕೊಡುವೆನು. ಸಂಪ್ರದಾನಕಾರ್ಯವು ತಮ್ಮ ಕಾಳಿಯ 

ದೇವಸ್ಥಾನದಲ್ಲಿ ನಡೆಯಬೇಕು, ಈ ಕಾರ್ಯವನ್ನು ಸಾಧ್ಯವಾದ ಮಟ್ಟಿಗೂ 

ಏಕಾಂತ ವಾಗಿ ನಡೆಯಿಸಿಬಿಡಬೇಕೆಂಬುದು ನನ್ನ ಇಷ್ಟ.” 


ತರ್ಕಾಲಂಕಾರ ಮಹಾಶಯರು ಹಾಗೆಯೇ ಸ್ವಲ್ಪ ಯೋಚಿಸಿ ಬಹಳ ಆಹ್ಲಾದ 

ದಿಂದ, " ಅದು ಬಹಳ ಸರಿಯಾದುದು. ಅದರ ವಿಚಾರದಲ್ಲಿ ನೀನು ಚಿಂತಿಸಬೇಕಾದ 

ಆವಶ್ಯಕವಿಲ್ಲ. ನಾನು ಎಲ್ಲವನ್ನೂ ಸಿದ್ಧ ಪಡಿಸುವೆನು” ಎಂದು ಹೇಳಿದರು. 


ಮಾರನೆಯ ದಿನ ರಾತ್ರಿ ಎರಡನೆಯ ಪ್ರಹರದಲ್ಲಿ ಶಾಮವುರಗ್ರಾಮದಲ್ಲಿ 

ರೇವತೀನದಿಯ ತೀರದಲ್ಲಿದ್ದ ಕಾಳಿಯ ದೇವಸ್ಥಾನದಲ್ಲಿ ಅತ್ಯಂತ ಏಕಾಂತವಾಗಿ ಈ 

----------------------------------------------------------------------

ಮೊದಲನೆಯ ಪರಿಚ್ಛೇದ ೫ 


ವಿವಾಹಕಾರ್ಯವು ನಡೆದುಹೋಯಿತು. ಪಾತ್ರನಾದ ಖಗೇಂದ್ರನಾಥನು ತಾನು 

ಮೆಚ್ಚಿದ್ದ ಪಾತ್ರಿಯಾದ ದುರ್ಗಾವತಿಯೊಡನೆ ಪರಿಣಯಸೂತ್ರದಿಂದ ಆಬದ್ಧನಾದನು. 

ಅದುಕಾರಣ ಆವನ ಆನಂದಕ್ಕೆ ಪಾರವಿರಲಿಲ್ಲ. ಪಾತ್ರಿಯಾದ ದುರ್ಗಾವತಿಯ ಆ 

ಸಣ್ಣ ಹೃದಯದಲ್ಲಿ ಹಿಡಿಯಲಾರದಷ್ಟು ಆನಂದವುಂಟಾಯಿತು. ಪಾತ್ರನು ಅವಳಿಗೆ 

ವಿಶೇಷ ಪರಿಚಿತನಾಗಿ ಬಾಲ್ಯ ಸ್ನೇಹಿತನಾಗಿದ್ದನು. ಇಬ್ಬರಿಗೂ ಪರಸ್ಪರ ಗಾಢಪ್ರಣಯ 

ವಿತ್ತೋ ಇಲ್ಲವೋ, ಅದನ್ನು ಈ ಹಿಂದೂ ವಿವಾಹದಲ್ಲಿ ಅನುಸಂಧಾನಮಾಡುವುದು 

ನಮಗೆ ಅವಶ್ಯವಿಲ್ಲ. ಆದರೆ ವಿವಾಹಕ್ಕೆ ಪೂರ್ವವೇ ಇಬ್ಬರೂ ಪರಸ್ಪರ ಒಂದು 

ಪ್ರಕಾರವಾಗಿ ಪ್ರೀತಿಸುತ್ತಲಿದ್ದರೆಂದು ನಾವು ಖಂಡಿತವಾಗಿ ಹೇಳಬಲ್ಲೆವು. ಕನ್ಯೆಯ 

ಕರ್ತನಾದ ರಾಮಗೋಪಾಲವೂ ಆನಂದದಿಂದ ಅಧೀರನಾದನು. ಬಹಳ ದಿವಸಗಳ 

ಅವನ ಆಶೆಯು ಈ ದಿನ ಕೈಗೂಡಿತ್ತು. ಪುರೋಹಿತ ತರ್ಕಾಲಂಕಾರ ಮಹಾಶಯರು 

ಈ ದಿನ ಆನಂದದಿಂದ ಉಲ್ಲಾಸಿತರಾಗಿದ್ದರು. ಏಕೆಂದರೆ, ಈ ವಿವಾಹದಿಂದ ಅವರಿಗೆ 

ಆಶಾತೀತ ಅರ್ಥಲಾಭ ಉಂಟಾಯಿತು. ಆದರೆ ಈ ಆಖ್ಯಾಯಿಕೆಯ ನಾಯಕನಾಯಕಿ 

ಯರ ಮದುವೆಯ ಸಲುವಾಗಿ, ನಮ್ಮ ಪಾಠಕಮಹಾಶಯರ ಆನಂದವನ್ನು ಹೇಗೆ 

ವೃದ್ಧಿಗೊಳಿಸಬೇಕೊ, ಅದನ್ನು ಕುರಿತು ನಾವು ಏನೂ ಸ್ಥಿರಮಾಡಲಾರದವರಾಗಿರು 

ವೆವು. ಯಾವ ಮದುವೆಯಲ್ಲಿ ಗೋಧಿಕಲ್ಲು ಶಾಸ್ತ್ರ, ಒಂದಕ್ಕಿಶಾಸ್ತ್ರ, ದೇವರನ್ನು ತರು 

ವುದು, ದಿಬ್ಬಣದವರ ಒಡ್ಡಣೆ ಮುಂತಾದವು ಇಲ್ಲವೋ, ಅಂತಹ ಮದುವೆಯು   

ಪಾಠಕರ ಮನೋಮತವಲ್ಲ ಎಂಬುದು ಖಂಡಿತ ಹೇಳಬಲ್ಲೆವು. ಓಲಗ, ಬಾಜಾ 

ಬಜಂತರಿ, ಮೇಳತಾಳ, ಇಂಗ್ಲೀಷು ಬಾಂಡು ಇವುಗಳ ಮಾತು ಹಾಗಿರಲಿ-- 

ಮುಹೂರ್ತಕಾಲದಲ್ಲಿ ಆನಂದಸೂಚಕವಾದ ಒಂದು ಘಂಟಾಶಬ್ದವು ಕೂಡ ಇಲ್ಲದ 

ಮದುವೆಯು ಪಾಠಕಮಹಾಶಯರಿಗೆ ಮದುವೆಯಾಗಿ ಗಣ್ಯ ವಾಗಲಾರದು. ಯಾವ ವಿ

ವಾಹದಲ್ಲಿ ಕಾಶೀಯಾತ್ರೆ ಇಲ್ಲವೋ, ನಾಗವಲಿ ಮೆರವಣಿಗೆ ಇಲ್ಲವೋ, ಅಂತಹ 

ವಿವಾಹವನ್ನು ಕುರಿತು ಅನೇಕರು ಜರೆದಾಡುವರೆಂದು ನಾವು ಖಂಡಿತವಾಗಿ ಹೇಳ 

ಬಲ್ಲೆವು. ಈ ಪ್ರಕಾರ ನಡೆದ ವಿವಾಹ ಮಹೋತ್ಸವವನ್ನು ಕುರಿತು ನಾವು ಮತ್ತೇನು 

ತಾನೇ ವರ್ಣಿಸಲಾಪೆವು ? ಶುಭಮುಹೂರ್ತದಲ್ಲಿಯೋ ಅಥವಾ ಅಶುಭಮುಹೂರ್ತ 

ದಲ್ಲಿಯೋ, ಮಾರನೆಯ ದಿನ ಗಭೀರರಾತ್ರಿಯಾವುದೋ ಒಂದು ಮುಹೂರ್ತದಲ್ಲಿ ಆ ಕ

ರಾಳಮೂರ್ತಿ ಕಾಳಿಕಾದೇವಿಯ ಸಮಕ್ಷಮದಲ್ಲಿ, ಈ ಮದುವೆಯು ಅತ್ಯಂತ 

ಏಕಾಂತವಾಗಿ ನಡೆದುಹೋಯಿತು, 

++++

-------------------------------------------------------------------

ಎರಡನೆಯ ಪರಿಚ್ಛೇದ 

ಮೇಲೆ ಹೇಳಿದ ಮದುವೆಯದ ಎರಡು ವರ್ಷವಾದಮೇಲೆ ವಿಸೂಚಕಾರೋಗ 

ದಿಂದ ರಾಮಗೋಪಾಲನಿಗೆ ಲೋಕಾಂತರಪ್ರಾಪ್ತಿಯುಂಟಾಯಿತು. ದುರ್ಗಾ 

ವತಿಗೆ ದಿಕ್ಕಿಲ್ಲದೆ ಹೋಯಿತು, ಕಲಿಕತ್ತೆಯಲ್ಲಿ ನವೀನಗೋಪಾಲನಿಗೆ ಈ ಸಮಾಚಾ  

ರವು ಮುಟ್ಟಿತು. ಆದರೆ ಅಲಹಾಬಾದಿನಲ್ಲಿ ಖಗೇಂದ್ರನಾಥನಿಗೆ ಈ ಸಮಾಚಾರವನ್ನು 

ಯಾರೂ ಬರೆದು ಕಳುಹಿಸಲಿಲ್ಲ. ಈ ಸಮಾಚಾರವನ್ನು ಕಳುಹಿಸುವ ಭಾರವು ಯಾರ  

ಮೇಲೆ ಇತ್ತೋ, ಆ ತರ್ಕಾಲಂಕಾರ ಮಹಾಶಯರು ಆಗ ಊರಲ್ಲಿರಲಿಲ್ಲ. ಆ 

ಏಕಾಂತ ವಿವಾಹದ ಸಮಾಚಾರವನ್ನು ಮತ್ತಾರೂ ಅರಿಯರು, ಆದಕಾರಣ ಖಗೇಂ 

ದ್ರನಿಗೆ ಸಮಾಚ೦ರವನ್ನು ಕೊಡುವವರು ಯಾರು ? ನವೀನಗೋಪಾಲನಿಗೆ ಸಮಾ 

ಚಾರ ಮುಟ್ಟಿದಕೂಡಲೆ, ಅವನು ಸ್ವಗ್ರಾಮಕ್ಕೆ ಬಂದು, ಅಣ್ಣನು ಬಿಟ್ಟು ಹೋಗಿದ್ದ 

ಆಸ್ತಿಯನ್ನೆಲ್ಲಾ ಭದ್ರಪಡಿಸಲಾರಂಭಿಸಿದನು, ರಾಮಗೋಪಾಲನು ಸಾಯುವುದಕ್ಕೆ 

ಪೂರ್ವ ಒಂದು ಉಯಿಲನ್ನು ಬರೆದಿಟ್ಟಿದ್ದರು. ಅದು ನವೀನಗೋಪಾಲನಿಗೆ ಸಿಕ್ಕಿತು. 

ಅದರಲ್ಲಿ ರಾಮಗೋಪಾಲನು ತನ್ನ ಸ್ಥಾವರ ಜಂಗಮ ಆಸ್ತಿಯನ್ನೆಲ್ಲಾ ದುರ್ಗಾವ 

ತಿಗೆ ದಾನವಾಗಿ ಬರೆದಿದ್ದನು, ನವೀನಗೋಪಾಲನ ಇತರ ಮಕ್ಕಳಿಗೆ ಅದರ ಮೇಲೆ ಅಧಿ 

ಕಾರವಿರಲಿಲ್ಲ. ದುರ್ಗಾವತಿಯ ವಯಸ್ಕಳಾಗುವವರೆಗೂ ಆ ಆಸ್ತಿಯೆಲ್ಲಾ ಅವಳ ಗಂಡನ 

ಸ್ವಾಧೀನದಲ್ಲಿರಬೇಕೆಂದೂ ಉಯಿಲಿನಲ್ಲಿ ಬರೆದಿತ್ತು. ಆದರೆ ಅದರಲ್ಲಿ ಗಂಡನ ಹೆಸರು 

ಬರೆದಿರಲಿಲ್ಲ. ರಾಮಗೋಪಾಲನ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಆಸ್ತಿಯನ್ನು 

ಇಟ್ಟುಹೋಗಿದ್ದವು. ಆದ ಕಾರಣ ನವೀನಗೋಪಾಲನಿಗೆ ಭಾತೃವಿಯೋ ಗದಿಂದ 

ಆನಂದವೋ ಅಥವಾ ದುಃಖವೋ, ಇದರಲ್ಲಿ ಯಾವುದು ಹೆಚ್ಚಾಗಿತ್ತೋ, 

ಅದನ್ನು ಕಂಡು ಹಿಡಿಯುವುದು ನಮಗೆ ಇನೋ ಸಾಧ್ಯವಾಗಿಲ್ಲ, ಆದರೆ ಉಯಿಲಿ 

ನಲ್ಲಿ ತನ್ನ ಹೆಸರು ಇಲ್ಲವಾದುದಕ್ಕೆ ಬಹಳ ದುಃಖಕನಾಗಿದ್ದನೆಂದು ನಾವು ವಿಚಾರಿಸಿ 

ದುದರಲ್ಲಿ ತಿಳಿಯಬಂದಿತು. 

 

ನವೀನಗೋಪಾಲನು ಒಬ್ಬ ಪೂರ್ಣವಾಗಿಯೂ ಬ್ರಹ್ಮೋವಾಗಿದ್ದನು. ಆದು 

ದರಿಂದ ಅವನು ತನ್ನ ಮೃತನಾದ ಅಣ್ಣನ ಶ್ರದ್ಯಾದಿಗಳಿಗೆ ಏರ್ಪಾಡಾವದೂ 

ಮಾಡದೆ, ಮನೆಯಲ್ಲಿದ್ದ ರೊಕ್ಕ ಚರಸ್ವತ್ತು ಮುಂತಾದುದನ್ನೆಲ್ಲಾ ಒಟ್ಟು ಮಾಡಿ 

ಕೊಂಡು, ಸಂಗಡ ಮಗಳಾದ ದುರ್ಗಾವತಿಯನ್ನೂ ಕರೆಸಿಕೊಂಡು, ಕಲಿಕತ್ತೆಗೆ 

ಹೊರಟುಹೋದನು. ದುರ್ಗಾವತಿಯ ಪ್ರಕೃತಿಯು ಅತಿ ಕೋಮಲವಾದುದು 

--------------------------------------------------------------------

ಎರಡನೆಯ ಪರಿಚ್ಛೇದ ೭ 


ಅವಳು ಬಹಳ ಲಜ್ಜಾಶೀಲೆ, ತಂದೆಯ ಇದಿರಿಗೂ ಅವಳು ತಲೆಯೆತ್ತಿ ಮಾತನಾಡಳು. 

ಬ್ರಹ್ಮೋಮತಾವಲಂಬಿಯಾದ ತಂದೆಯ ಸಂಗಡ ಕಲಿಕತ್ತೆಗೆ ಬರುವುದಕ್ಕೆ ಅವಳಿಗೆ 

ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಆಗ ಅವಳು ಆ ಮಾತನ್ನು ಬಾಯಿಬಿಟ್ಟು ಹೇಳಬ 

ಲ್ಲಳಾಗಿದ್ದಳೆ ? ಮತ್ತು ಅವಳ ಪ್ರಾಣವು ಯಾರಿಗೋಸ್ಕರ ಸರ್ವದಾ ತುಡಿದು ಸಂಕಟ 

ಪಡುತ್ತಲಿತ್ತೊ, ಆತನು ಈ ದಃಖವ ಸಮಯದಲ್ಲಿ ಎಲ್ಲಿಗೆ ಹೋದನು ? ಎದೆ ಸೀಳಿ 

ಹೋದರೂ ಆ ಮಾತು ಅವಳ ಬಾಯಿಯಿಂದ ಹೊರಡದು, ದುರ್ಗಾವತಿಯು ಮನ 

ಸ್ಸಿನಲ್ಲಿ, ತನ್ನ ದೊಡ್ಡಪ್ಪನು ಸತ್ತ ಸಮಾಚಾರವನ್ನು ಕೇಳಿದ ಕೂಡಲೆ, ಖಗೇಂದ್ರ 

ನಾಥನು ಬಂದು ಸಮಸ್ತ ಭಾರವನ್ನೂ ವಹಿಸಿಕೊಳ್ಳುವನೆಂದು ತಿಳಿದಿದ್ದಳು. ದುರ್ಗಾ 

ವತಿಯು ಅಲಹಾಬಾದಿಗೆ ಎಷ್ಟು ದಿನಗಳೊಳಗೆ ಸಮಾಚಾರವು ಮುಟ್ಟುವುದೋ 

ಎಂದು ಯೋಚನೆಯಲ್ಲಿದ್ದಳು. ಅಲ್ಲಿಗೆ ಸಮಾಚಾರವನ್ನು ಯಾರೂ ಬರೆದು ಕಳುಹಿಸ 

ಲಿಲ್ಲ ವೆಂಬುದು ಅವಳ ಮನಸ್ಸಿಗೆ ಹತ್ತಲಿಲ್ಲ. ತರ್ಕಾಲಂಕಾರ ಮಹಾಶಯರು 

ಗ್ರಾಮದಲ್ಲಿಲ್ಲವೆಂಬುದೂ ಅವಳಿಗೆ ತಿಳಿಯದು. ಅವಳ ಸ್ವಭಾವಕ್ಕನುಗುಣವಾಗಿ 

ಏನೊಂದೂ ಮಾತನಾಡದೆ, ಅಳುತ್ತಳುತ್ತ. ತಂದೆಯೊಡನೆ ಹೊರಟು ಕಲಿಕತ್ತೆಗೆ 

ಬಂದಳು. ಹೊರಡುವಾಗ ಗ್ರಾಮದಲ್ಲಿದ್ದ ಅವಳ ಸಮವಯಸ್ಕರಾದ ಗೆಳತಿಯರು ಅ

ವಳನ್ನು ನೋಡುವುದಕ್ಕೆ ಬಂದಿದ್ದಳು. ಆಗ ಅವಳು ಬಹಳ ಅತ್ತಳು, ಅಳುವು 

ದಕ್ಕೆ ಅವಳಿಗೆ ಅನೇಕ ಕಾರಣಗಳಿದ್ದವು. ಮೊದಲನೆಯದು, ತಂದೆಗೆ ಸಮಾನನಾದ 

ದೊಡ್ಡಪ್ಪನು ಸತ್ತುಹೋದನು, ಅನಂತರ; ಆಜೀವನವೂ ಯಾವ ಮನೆಯಲ್ಲಿ ಪ್ರತಿ 

ಪಾಲಿತಳಾಗಿದ್ದಳೋ, ಆ ಶೈಶವಾಸ್ಥೆಯಿಂದ ಯಾರು ತನ್ನ ಸಂಗಾತಿಗಳಾಗಿ 

ದ್ದರೋ, ಯಾವ ದಾಸದಾಸಿಯರನ್ನು ತಿಲಾರ್ಧಕಾಲವಾದರೂ ನೋಡದಿದ್ದರೆ 

ಸುಮ್ಮನೆ ಇರಳೋ, ಅಂತಹವರ ಮೇಲಿನ ಮಮತೆ ಯನ್ನೆಲ್ಲಾ ತೊರೆದು ಬೇರೆ ಹೊಸ 

ಸ್ಥಳಕ್ಕೆ ಹೋಗಬೇಕಾಗಿ ಬಂದಿತು, ಎಲ್ಲರೂ ದುರ್ಗಾವತಿಯ ತಾತ್ಕಾಲಿಕ ಅಳುವಿಗೆ 

ಇದೆಲ್ಲಾ ಕಾರಣಗಳೆಂದು ಊಹಿಸಿಕೊಂಡು, ಅವಳ ದುಃಖದಲ್ಲಿ ದುಃಖಿತರಾಗಿ 

ಕಣ್ಣೀರು ಬಿಟ್ಟರು. ಆ ಸಮಯದಲ್ಲಿ ಅವಳ ಆ ಅಳುವಿಗೆ ಮುಖ್ಯವಾದ ಕಾರಣ 

ವನ್ನು ಯಾರೂ ಊಹಿಸಲಾರದೆ ಹೋದರು. 


ದುರ್ಗಾವತಿಯು ಕಲಿಕತ್ತೆಗೆ ಬಂದಳು. ಒಂದುಕಡೆ ನೋಡಿದರೆ, ಹುಡುಗಿಯು 

ಬಹಳ ಕಾಲದ ಮೇಲೆ ತೌರುಮನೆಗೆ ಬಂದು, ತಾಯಿ ತಂದೆಗಳು ಸೋದರಸೋದರಿ 

ಯರು ಇವರೊಂದಿಗೆ ಸೇರಿದಹಾಗಿರುವುದು, ಮತ್ತೊಂದು ಕಡೆ ನೋಡಿದರೆ, ಒಬ್ಬ 

ಹಿಂದೂಜಾತಿಯ ಹುಡುಗಿಯು ಸಂಪೂರ್ಣ ಅಪರಿಚಿತವಾದ ಬ್ರಹ್ಮಜಾತಿಯವರ 

-----------------------------------------------------------------

ಉನ್ಮಾದಿನಿ 


ಮನೆಯಲ್ಲಿ ಅಪರಿಚಿತರಾದವರ ಸಂಗಡ ಸೇರಿದ ಹಾಗಿರುವುದು, ದುರ್ಗಾವತಿಗೆ ಈ 

ಯವಸ್ಥೆಯ ಪರಿವರ್ತನೆಯಿಂದ ಸುಖವು ಹೆಚ್ಚಾಯಿತೊ ಅಥವಾ ದುಃಖವು ಹೆಚ್ಚಾ 

ಗಿರುವುದೊ ? ನಾವು ಈಗ ದುರ್ಗಾವತಿಯನ್ನು ಸುಖಿಯೆಂದು ಹೇಳಬೇಕೋ ಅಥವಾ 

ದುಃಖಿಯೆಂದು ಹೇಳಬೇಕೋ ? ನೀವು ಹೇಳಿರಿ, ದುರ್ಗಾವತಿಗೆ ಬ್ರಹ್ಮೋಮತಕ್ಕೆ 

ಸೇರಿದ ಅವಳ ತಾಯಿತಂದೆಗಳು ಸೋದರಸೋದರಿಯರು, ಇವರ ಮೇಲೆ ಸ್ವಲ್ಪವೂ 

ಪ್ರೀತಿವಿಶ್ವಾಸಗಳು ಇರಲಿಲ್ಲ. ಯಾವನ್ನು ಇಷ್ಟು ಕಾಲ ನೋಡಿರಲಿಲ್ಲವೋ, ಅಂತಹ 

ವರ ಮೇಲೆ ಪ್ರೀತಿ ಹುಟ್ಟುವ ಬಗೆ ಹೇಗೆ ? ದುರ್ಗಾವತಿಯು ಇಲ್ಲಿಗೆ ಬಂದು 

ಮತ್ತೊಂದು ಅನನುಕೂಲವಾಯಿತು. ನನಗೋಪಾಲನ ಹೆಂಡತಿ ಹೈಮವತಿಯು 

ಅವಳಿಗೆ ಯಥಾರ್ಥ ಗರ್ಭಧರಣಿಯಾಗಿದ್ದರೂ, ಅವಳನ್ನು ತನ್ನ ತಾಯಿಯೆಂದೊಪ್ಪಿ 

ಕೊಳ್ಳುವುದಕ್ಕೆ ಮನಸ್ಸು ಹಿಮ್ಮೆಟ್ಟುವುದು, ಹಳ್ಳಿಯಲ್ಲಿ ಹಿಂದೂಗೃಹದಲ್ಲಿ ಪಾಲಿತ 

ಳಾದ ದುರ್ಗಾವತಿಯ ಆ ವಿಚಿತ್ರ ವೇಷಭೂಷಣಗಳುಳ್ಳ ಬೂಟುಧಾರಿಣಿಯಾದ 

ಲಜ್ಜೆಯಿಲ್ಲದ ಹೆಂಗಸನ್ನು ಹೇಗೆ ತಾನೇ ತನ್ನ ಗರ್ಭಧಾರಿಣಿಯೆಂದೊಪ್ಪಿಕೊಳ್ಳುವಳು ? 

ಅವಳಿಗೆ ತಾಯಿಯ ಸ್ಮರಣೆ ಮನಸ್ಸಿಗೆ ಬಂದರೆ, ಆ ರಾಮಗೋಪಾಲನ ಗತಿಸಿಹೋದ 

ಹೆಂಡತಿಯಾದ ಹರಸುಂದರಿಯ ಜ್ಞಾಪಕವೇ ಬರುವುದು. ಆಗ ದುರ್ಗಾವತಿಗೆ ಕಣ್ಣೀರು 

ನಿಲ್ಲದು, ಅವಳು ಬಿಕ್ಕಿ ಬಿಕ್ಕಿ ಅಳುವಳು. 

 

ದುರ್ಗಾವತಿಯು ಮನೆಗೆ ಬಂದುದನ್ನು ಕಂಡು, ತಾಯಿ ಹೈಮವತಿಯು ಅವ 

ಳನ್ನು ಆದರಿಸಿ ಅಭ್ಯ ರ್ತನ ಮಾಡಿ ಬರಮಾಡಿಕೊಂಡಳು. ಆದರೆ ಆ ವಿಜಾತೀಯವಾದ 

ಆದರವೂ ಆಭ್ಯರ್ತನವೂ ದುರ್ಗಾವತಿಗೆ ಸರಿಯಾದುದಾಗಿ ಕಾಣಿಸಲಿಲ್ಲ. ದುರ್ಗಾ 

ವತಿಯು ತಾಯಿಯನ್ನು ಮೊದಲು ನೋಡಿದ ಕೂಡಲೆ ಭೂಮಿಷ್ಠಳಾಗಿ ಪ್ರಣಾಮ 

ವನ್ನು ಮಾಡುವುದಕ್ಕೆ ಹೋದಳು, ಆದರೆ ಹೈಮವತಿಯು ಅವಳು ಹಾಗೆ ಪ್ರಣಾಮ 

ಮಾಡುವುದನ್ನು ನಿಷೇಧಿಸಿ, ಕೇವಲ ಮುಖವನ್ನು ಚುಂಬನಮಾಡಿದಳು. ಮತ್ತು ಅವಳ 

ಆಹಾರ, ಉಡುಪು, ಇವುಗಳ ವಿಚಾರದಲ್ಲಿಯ ಹೈಮವತಿಯು ಪ್ರಯತ್ನ ಪೂರ್ವಕ 

ವಾಗಿ ಮಮತೆಯಿಂದ ನೋಡಿಕೊಳ್ಳಲಾರಂಭಿಸಿದಳು. ಅದು ದುರ್ಗಾವತಿಗೆ ಬಹಳ 

ಕಷ್ಟವನ್ನುಂಟುಮಾಡಿತು, ಬೆಳಗಾಗುತ್ತಲೇ ಆರೇಳು ಗಂಟೆಯೊಳಗಾಗಿ ಎಲ್ಲರ 

ಸಂಗಡ ಅವಳು ಕಾಫಿ, ಟಿ, ಮುಂತಾದುದನ್ನು ಕುಡಿಯಬೇಕೆಂದು ಬಲವಂತಕ್ಕೆ 

ಪ್ರಾರಂಭವಾಯಿತು. ಹತ್ತು ಘಂಟೆಗೆ ಊಟ, ಪುನಃ ಎರಡು ಘಂಟೆಗೆ ಫಲಾಹಾರ, 

ಸಾಯಂಕಾಲದಲ್ಲಿ ಪುನಃ ಟಿ, ತಿರುಗಿ ರಾತ್ರಿ ಹತ್ತು ಘಂಟೆಗೆ ಊಟ, ಆ ಊಟ 

ವಾದರೂ ಹೆಂಗಸರೂ ಗಂಡಸರೂ ಎಲ್ಲರೂ ಏಕತ್ರ ಕುಳಿತುಕೊಂಡು ಮಾಡಬೇಕಾದ 

------------------------------------------------------------------------

ಎರಡನೆಯ ಪರಿಚ್ಛೇದ ೯ 


ಊಟ ಎಲ್ಲ ಗಂಡಸರ ಸಂಗಡ ವರ ಜತೆಯಲ್ಲಿ ಕುಳಿತು ಕೊಂಡು ಊಟ ಮಾಡ 

ಬೇಕಾದರೆ, ದುರ್ಗಾವತಿ: ಊಟವೇ ಸಾಗದು, ಗಂಟಲು ಹಿಚಿಕಿದ ಹಾಗಾಗು 

ವುದು. ಆ ಊಟದ ಸಾಮಗ್ರಿಗಳೆಲ್ಲವೂ ಅವಳಿಗೆ ವಿಷವಾಗಿರುವುವು, ಅವಳ ಉಡು 

ಪಿನ ವಿಚಾರದಲ್ಲಿಯೂ ಸ್ನೇಹಮಯಿಯಾದ ತಾಯಿಯು ಹೆಚ್ಚು ಆದರದಿಂದ ಮಗ 

ಳಿಗೆ ಸಂತೋಷವಟುಮಾಡಲು ಪ್ರಯಾಸವಡುವಳು:- ಬೂಟು, ಮೇಜೋಡು, 

ಚಳಣಿ, ಬಾಡಿಸು (ಬಿಗಿಯಾದ ಕುಪ್ಪಸ), ಕಾರ್ಸೆಟು (ಬಹಳ ಬಿಗಿಯಾದ ತೋಳಿ 

ಲ್ಲದ, ಎದೆಯಿಂದ ಸೊಂಟದವರೆಗೆ ರ್ಬಳ ಕಷ್ಟದ ತೊಟ್ಟು ಕೊಳ್ಳಬೇಕಾದ 

ಒಂದು ವಿಧವಾದ ಜಾಕೆಟು; ಇದನ್ನು ಧರಿಸಿಕೊಂಡರೆ, ನೋಡುವವರಿಗೆ ಎದೆಯು 

ಬ್ಬಿದ ಹಾಗೂ, ಸೊಂಟವು ಕೊರೆದು ಸಣ್ಣಗೆ ಸೆಳನಡುವಾಗಿರುವ ಹಾಗೂ, 

ಕಾಣಿಸುವದು), ಹೊಸ ಮಾದರಿಯ ಸೀರೆ ಇವುಗಳನ್ನೆಲ್ಲಾ ದುರ್ಗಾವತಿಗೆ 

ಕೊಟ್ಟಳು. ಅದನ್ನೆಲ್ಲ ಹೇಗೆ ತೊಟ್ಟುಕೊಳ್ಳಬೇಕೊ, ಅದನ್ನೂ ಹೇಳಿಕೊಟ್ಟಳು. 

ಆದರೆ ದುರ್ಗಾವತಿಂದು ತಾಯಿಯ ಆ ಲವಲವಿಕೆಯ ಮತ್ತು ಸ್ನೇಹದ ಮೌಲ್ಯವನ್ನು 

ಅರಿಯದೆ ಹೋದಳು. ಅದೆಲ್ಲಾ ಒಂದು ವಿಧವಾದ ಅತ್ಯಾಚಾರವೆಂದೂ, ತನ್ನನ್ನು 

ಅಪಮಾನ ಪಡಿಸುವಳೆಂದೂ ತಿಳಿದುಕೊಳ್ಳುವಳು. 

 

ಇತ್ತಲಾಗಿ ನವೀನಗೋಪಾಲನ ಮಗಳು ಇಷ್ಟು ಐಶ್ವರ್ಯಕ್ಕೆ ಅಧಿಕಾರಿಣಿ 

ಯಾಗಿರುವಳೆಂದು ತಿಳಿದು, ಬ್ರಹ್ಮೋಸಮಾಜದಲ್ಲಿ ಪ್ರಚಾರಗೊಂಡ ಕೂಡಲೆ, ಅವಿ 

ವಾಹಿತರಾದ ಬ್ರಹ್ಮೋಯುವಕರ ಮಂಡಳಿಯಲ್ಲಿ ವಿಶೇಷ ಗದ್ದಲ ಹಟ್ಟಿತು. ಆಗ 

ವಿವಾಹವಾರ್ಥಿಗಳಾದ ಬ್ರಹ್ಮೋಯುವಕರು ತಂಡತಂಡವಾಗಿ ಪ್ರತಿದಿನವೂ ನವೀನ 

ಗೋಪಾಲನ ಮನೆಯಲ್ಲಿ ಬಂದು ಸೇರುವರು, ಗೃಹಿಯಾದ ಹೈಮವತಿಯ 

ಆನಂದಕ್ಕೆ ಪಾರವೇ ಇರದು. ಆ ಆನಂದಕ್ಕೆ ಅವಳು ನಿತ್ಯವೂ ಮಾಡಬೇಕಾದ 

ದೇವರ ಪ್ರಾರ್ಥನೆಯನ್ನು ಕೂಡ ಮರೆತುಬಿಡುವಳು, ವಿವಾಹಪ್ರಾರ್ಥಿಯಾಗಿ ಮೊದಲು 

ಬಂದವನು ಜೋತಿಪ್ರಕಾಶ, ಜ್ಯೋತಿ ಪ್ರಕಾಶನಿಗೂ ಹೈಮವತಿಗೂ ನಡೆದ ಸಂಭಾಷ 

ಣೆಯನ್ನು ನಮ್ಮ ಪಾಥಕಮಹಾಶಯರು ಸ್ವಲ್ಪ ಗಮನವಿಟ್ಟು ಕೇಳಬೇಕು. ಜ್ಯೋತಿ 

ಪ್ರಕಾಶನು ಬಂದಕೂಡಲೆ ಕುಲ್ಕು ವೈಯಾರಿಯಾದ ಹೈಮವತಿಯು ಅವನ ಕೈಯನ್ನು 

ಹಿಡಿದು ಕುಲುಕಿ, ಅವನನ್ನು ಒಂದು ಕುರ್ಚಿಯ ಮೇಲೆ ಕುಳ್ಳಿರಿಸಿದಳು. ಜ್ಯೋತಿ 

ಪ್ರಕಾಶನು ಸಂಭಾಷಣೆಯ ಆರಂಭದಲ್ಲಿಯೇ, ತಮ್ಮ ಮಗಳು ಬಂದ ಶುಭವಾರ್ತೆ 

ಯನ್ನು ಕೇಳಿ, ಆಕೆಯ ಪರಿಚಯ ಮಾಡಿಕೊಳವದಕ್ಕೋಸ್ಕರ ನಾನು ಓಡಿ 

ಬಂದೆನು ?” ಎಂದು ಹೇಳಿದನು. 

--------------------------------------------------------------------- 

 10 ಉನ್ಮಾದಿನಿ 

 

ಆ ಸಮಯದಲ್ಲಿ ದುರ್ಗಾವತಿಯು ಅಲ್ಲಿಯೇ ಇದ್ದಳು, ಜ್ಯೋತಿಪ್ರಕಾಶನು  

ಅವಳ ಕಡೆ ಸ್ವಲ್ಪ ತಿರುಗಿನೋಡಿ ನಗುನಗುತ್ತ " ಈಕೆಯೇ ತಮ್ಮ ಕುಮಾರಿಯೆಂದು 

ತೋರುತ್ತದೆ, ತಾವು ನನಗೆ ಆಕೆಯ ಪರಿಚಯವನ್ನು ಮಾಡಬೇಕು " ಎಂದು 

ಹೇಳಿದನು. 

 

ಹೈಮವತಿಯು ಆ ಕೂಡಲೇ ಅವಳ ಕೈಯನ್ನು ಹಿಡಿದು ಜ್ಯೋತಿ ಪ್ರಕಾಶನ 

ಇದಿರಿಗೆ ಬಂದು ನಿಲ್ಲುವದಕ್ಕೋಸ್ಕರ ಎಳೆದಾಡಿದಳು. ದುರ್ಗಾವತಿಗೆ ಇದಿರಿಗೆಬಂದು 

ನಿಲ್ಲುವುದಕ್ಕೆ ಆಂತರಾಳದಲ್ಲಿ ಇಷ್ಟವಿಲ್ಲವೆಂದು ತಿಳಿದು, ಜ್ಯೋತಿಪ್ರಕಾಶನು ಸ್ವಲ್ಪ 

ನಕ್ಕು, " ತಮ್ಮ ಮಗಳು ಇಷ್ಟು ಲಜ್ಜಾಶೀಲೆಯಾಗಲೇಕೆ ?” ಎಂದನು. 


ಹೈಮವತಿಯು ಮನಸ್ಸಿನಲ್ಲಿ ಮಗಳ ಮೇಲೆ ರೇಗಿಕೊಂಡು, " ನನ್ನ ಮಗ 

ಳಾದ ಮಾತ್ರಕ್ಕೆ ಏನು ? ಹಳ್ಳಿಗಾಡಿನ ಹಿಂದೂಗಳ ಮನೆಯಲ್ಲಿ ಪಾಲಿತಳಾದ 

ವಳು ” ಎಂದು ಹೇಳಿದಳು. 

 

ಜ್ಯೋತಿ: "ನಿಮ್ಮ ಮಗಳ ಹೆಸರೇನು ?” 


ಹೈಮವತಿ:-"ಹೆಸರು ಚೆನ್ನಾಗಿಲ್ಲ; ಕುರುಚಿ ಪೂರ್ಣವಾದುದುಂದ, 

ಅದನ್ನು ಹೇಳುವದಕ್ಕೆ ನಾಚಿಕೆಯಾಗುವುದು. ” 


ಜ್ಯೋತಿ--"ಕುರುಚಿ ಪೂರ್ಣವಾಗಿ ಕೇಳುವುದಕ್ಕೆ ಎಷ್ಟು ಕರ್ಕಶವಾಗಿ 

ದ್ದರೂ, ಅದು ನೀವೇನೂ ನಾಮಕರಣಮಾಡಿ ಇಟ್ಟ ಹೆಸರಲ್ಲ; ಹಾಗಿರುವಾಗ 

ಆ ವಿಷಯದಲ್ಲಿ ಲಜ್ಜೆಗೆ ಕಾರಣವೇನು ?" 


ಹೈಮವತಿಯು ಸ್ವಲ್ಪ ಹಿಂದು ಮುಂದು ನೋಡಿ, " ಅವರು ನನ್ನ ಮಗಳಿಗೆ 

'ದರ್ಗಾವತಿ' ಎಂಬ ಹೆಸರಿಟ್ಟರು'' ಎಂದಳು. 


ಈ ಹೆಸರನ್ನು ಕೇಳ ಜ್ಯೋತಿಪ್ರಕಾಶನು ಸ್ವಲ್ಪ ನಡುಗಿದವನ ಹಾಗೆ ಮೈಯ 

ಆಡಿಸಿ, " ಈ ಹೆಸರು ಕೇವಲ ಕುರುಚಿ ಪೂರ್ಣವಾಗಿರುವುದು ಮಾತ್ರವೇ ಅಲ್ಲ, 

ಇದು ಘೋರತರವಾದ ಪೌತ್ತಲಿಕತಾ* ಪೂರ್ಣವಾಗಿರುವುದು ತಾವು ಬೇಗನೆ 

ಈ ಹೆಸರನ್ನು ತಪ್ಪಿಸಿ, ಬೇರೆ ಹೆಸರನ್ನು ಇಡಬೇಕು. ಈ ಹೆಸರು ಹೇಳಬೇಕೆಂದರೆ 

ನಾಲಗೆ ತಿರುಗದೆ ತೊಡುಕುತೊಡಕಾಗುವದು.'' 


ಹೈಮವತಿ:- ಹಾಗಾದರೆ, ತಾವು ನನ್ನ ಮಗಳಿಗೆ ಒಂದು ಸೊಗಸಾದ 

ಹೆಸರನ್ನು ಹೇಳಿ? 

.................. 

* Idolatrouiness. 

------------------------------------------------------------------

ಎರಡನಯ ಪರಿಚ್ಛೇದ ೧೧

 

ಜ್ಯೋತಿ: ---" ನನಗೆ ಅಷ್ಟು ಚೆನ್ನಾಗಿ ಗೊತ್ತಾಗುವುದಿಲ್ಲ. ನೀವು ಒಂದು 

ಹೆಸರನ್ನು ಹೇಳಿದರೆ ಅದು ಸರಿಯಾದುದೇ ಅಲ್ಲವೇ ಎಂಬುದನ್ನು ಹೇಳಬಲ್ಲೆನು, 

ಅದಲ್ಲದೆ ತಮ್ಮ ಇಂತಹ ಸುಂದರಿಯಾದ ಮಗಳಿಗೆ ತಕ್ಕದೊಂದು ಹೆಸರನ್ನು ಹಠಾ 

ತ್ತಾಗಿ ಹೇಳುವುದಕ್ಕೆ ತೋಚುವುದಿಲ್ಲ. ನೀವು ಒಂದು ಹೆಸರನ್ನು ಗೊತ್ತು 

ಮಾಡಬೇಕು ? 


ಹೈಮವತಿಯು ಮಗಳ ಸೌಂದರ್ಯದ ಸುಖಸ್ಥಿತಿಯಿದುಂಟಾದ ಆಹ್ಲಾದ 

ದಿಂದ ಮೈವೆಚ್ಚಿಗೆಯುಳ್ಳವಳಾಗಿ, : ಒಳ್ಳೆಯದು-'ವಿನೋದಿನೀ' ಎಂದು ಹೆಸರಿ 

ಟ್ಟರೆ ಹೇಗೆ ಇರುವದು ? ಹೇಳಿರಿ ?” ಎಂದಳು. 


ಜ್ಯೋತಿ ಪ್ರಕಾಶನು ಸ್ವಲ್ಪ ಹೊತ್ತು ಯೋಚಿಸಿ, " ವಿನೋದಿನಿ" ಎಂಬ ಹೆಸರು 

ಬಹಳ ಚೆನ್ನಾಗಿರುವದು, ತಮ್ಮ ಮಗಳು ಯಥಾರ್ಥವಾಗಿಯೂ ವಿನೋದಿನಿಯೇ  

ಸರಿ'' ಎಂದನು. 

 

ದುರ್ಗಾವತಿಯು ತನ್ನ ಇದಿರಿಗೆಗೆ ನನ್ನ ವಿಚಾರವಾಗಿ ತನ್ನ ತಾಯಿಯ ಸಂಗಡ ಒಬ್ಬ 

ಅಪರಿಚಿತನಾದ ಯುವಕನು ಹೀಗೆ ಮಾತನಾಡಿದುದನ್ನು ಕೇಳಿ, ಲಜ್ಜೆಯಿಂದ 

ಮೃತಪ್ರಾಯಳಾದಳು. ಮತ್ತು ತಲೆತಗ್ಗಿದವಳಾಗಿ, ಮನಸ್ಸಿನಲ್ಲಿ ಅನೇಕ ದೇವದೇವಿ 

ಯರನ್ನು ಸ್ಮರಿಸಿಕೊಂಡು ನಿನ್ನ ಪ್ರಾಣ ಹೋಗಬೇಕೆಂದು ಹೇಳಿಕೊಳ್ಳುತ್ತಲಿದ್ದಳು.  

ಅವಳ ಅಭಿಪ್ರಾಯದಲ್ಲಿ ಇದಕ್ಕಿಂತ  ಅಸಹ್ಯವಾದ ಲಜ್ಜಾಸ್ಪದವಾದುದು ಮತ್ತಾ 

ವುದೂ ಇರಲಾರದೆದು ತಿಳಿದಿದ್ದಳು. ಆದರೆ ಇತ್ತಲಾಗಿ ಹೈಮವತಿಯು ಒಬ್ಬ ಸುಕ್ಷಿ ತ

ನಾದ ಯುವಕನ ಬಾಯಿಯಿಂದ ಈ ಪ್ರಕಾರ ತನ್ನ ಮಗಳ ರೂಪದ ಖ್ಯಾತಿಯನ್ನು 

ಕೇಳಿ, ಸ್ವರ್ಗಸುಖವನ್ನಾದರೂ ಬಿಡುವದಕ್ಕೆ ಸಿದ್ದವಾಗಿದ್ದಳು. 

 

ಜ್ಯೋತಿಪ್ರಕಾಶನು:-" ಈ ತಡವೆ ಒಳ್ಳೆಯದು, ನಿಮ್ಮ ಮಗಳು ಎಷ್ಟರ 

ಮಟ್ಟಿಗೆ ಓದಿರುವಳು.” 


ಹೈಮವತಿಗೆ ಈಗ ತಂಟೆಗೆ ಬಂತು. ಏಕೆಂದರೆ, ದುರ್ಗಾವತಿಗೆ ಅಕ್ಷರಜ್ಞಾ 

ನವೂ ಇರಲಿಲ್ಲ; ಅದನ್ನವಳು ತಿಳಿದಿದ್ದಳು. ಆದರೆ ಹೊರಪಡಿಸದೆ, ತನಗೆ ಆ ವಿಷ 

ಯವು ಇನ್ನೂ ಚೆನ್ನಾಗಿ ಗೊತ್ತಿಲ್ಲವೆಂದು ಹೇಳಿದಳು.

 

ಜ್ಯೋತಿ-" ಯುನಿವರ್ಸಿಟಿ ಪರೀಕ್ಷೆ ಯಾವುದಾದರೂ ಆಗಿರುವುದೇ!” 


ಹೈಮವತಿ:-(ಸ್ವಲ್ಪ ನಕ್ಕು ) "ಇಲ್ಲ." 


ಜ್ಯೋತಿ:-  (ಒಂದು ರೊವೆ ನಿಟ್ಟುಸಿರನ್ನು ಬಿಟ್ಟು, " ಈಶ್ವರನು ಯಾರನ್ನೂ 

ಸರ್ವಂಗ ಸುಂದರವಾಗಿ ಮಾಡಿಲ್ಲ. ನಿಮ್ಮ ಇಂತಹ ಸೌಂದರ್ಯ ಸನ್ನೆ ಯಾದ 

--------------------------------------------------------------------

12 ಉನ್ಮಾದಿನಿ  


ಮಗಳು ಸುಶಿಕ್ಷಿತಳಾದರೆ, ನಿಶ್ಚಯವಾಗಿಯೂ ಒಂದು ರಮಣಿರತ್ನವಾಗುವಳು, 

ಅದಕ್ಕೆ ಇನ್ನೂ ಬಹಳ ಕಾಲವಿರುವುದು. ತಾವು ಅವಳಿಗೆ ಚೆನ್ನಾಗಿ ವಿದ್ಯೆಯನ್ನು 

ಕಲಿಸಿದರೆ, ಈ ಕುಸಂಸ್ಕರ, ಈ ಲಜ್ಜೆ, ಮತ್ತು ಇಂತಹ ಅಸಾಮಾಜಿಕ ಸ್ವಭಾವ 

ಇವೇ ಮುಂತಾದವೆಲ್ಲಾ ದೂರವಾಗಿ ಹೋಗುವುವು"

 

ಹೈಮವತಿ:- "ಆ ವಿದ್ಯೆಯನ್ನು ಕಲಿಸುವ ಭಾರವು ಅವಳ ಮುಂದಿನ 

ಗಂಡನ ಮೇಲೆ ಇರುವದು, ಉಪಯುಕ್ತನಾದ ವರನು ಸಿಕ್ಕಿದರೆ, ಕೂಡಲೆ 

ಅವಳಿಗೆ ಮದುವೆಮಾಡಿಬಿಡುವೆನು " 

 

ಜ್ಯೋತಿಪ್ರಕಾಶನು ಆಹ್ಲಾದದಿಂದ " ಅದು ಒಳ್ಳೆಯದಾದ ಯುಕ್ತಿಯ 

ಅಹುದು, ತಮ್ಮ ಮಗಳಿಗೆ ಎಂತಹ ವರನು ಬೇಕಾದರೂ ಸಿಕ್ಕುವನು, ವರನಿಗೆ 

ಅಭಾವವಿಲ್ಲ, ನೂರಾರು ಅವಿವಾಹಿತಳಾದ ಸುಶಿಕ್ಷಿತರಾದ ಯುವಕರು ನಿಮ್ಮ 

ಮಗಳ ಕೈಹಿಡಿಯುವುದಕ್ಕೆ ಲಾಲಾಯಿತರಾಗಿರುವರು. ನಿಮ್ಮ ಮಗಳನ್ನು ಪಡೆಯು 

ವವನ ಹಾಗೆ ಸೌಭಾಗ್ಯಶಾಲಿಯು ಈ ಸೃಷ್ಟಿಯಲ್ಲಿ ಯಾರೂ ಇರಲೆಂದು ತೋರು 

ವುದು'' ಎಂದು ಹೇಳಿದನು. 


ಈ ಮಾತಿನಿಂದ ಹೈಮವತಿಯ ಆನಂದವು ಮಿತಿಮೀರಿ ಹೋಯಿತು. ಅಕ 

ಸ್ಮಾತ್ತಾಗಿ ಹೈಮವತಿಯ ಹೃದಯವು ಅಹಂಕರದಿಂದುಬ್ಬಿತ್ತು. ಏಕೆಂದರೆ ರೂಪ 

ವೇನು, ಧನವೆನು, ವಿದ್ಯೆಯನ್ನು ಸಕಲ ವಿಷಯಗಳಲ್ಲಿಯ ಜ್ಯೋತಿಪ್ರಕಾಶನೇ 

ಅವಳ ಮಗಳಿಗೆಗೆ ತಕ್ಕ ಪಾತ್ರನಾಗಿದ್ದನು. ಆದುದರಿಂದ ಅಂತಹವನ ಬಾಯಿಯಿಂ 

ದಲೇ ಆಹ್ವಾದವೂ ಅಹಂಕಾರವೂ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ. 


ಹೈಮವತಿಯು ಆಹ್ಲಾದದಿಂದ ( ನನ್ನ ಮಗಳು ನಿಮ್ಮನ್ನು ಮೆಚ್ಚಿ ವರಿಸುವ 

ಹಾಗೆ ಹೇಗಾದರೂ ಮಾಡಿ ಪ್ರಯತ್ನ ಪಡುವೆನು” ಎಂದು ಹೇಳಿಬಿಟ್ಟಳು. 

 

ಆ ಮಾತನ್ನು ಕೇಳಿ ಜ್ಯೋತಿಪ್ರಕಾಶನು ಕೂಡ ಆಹ್ಲಾದದಿಂದ ಉನ್ಮತ್ತ 

ನಾಗಿ ನಾನು ತಮಗೆ ನನ್ನ ಆಂತರ್ಯವಾದ ಧನ್ಯವಾದವನ್ನು* ಹೇಳುವುದಕ್ಕೆ 

ಮಾತಿಲ್ಲದವನಾಗಿರುವೆನು” ಎಂದು ಹೇಳಿದನು. 

 

ಇತ್ತಲಾಗಿ ದುರ್ಗಾವತಿಯ ಮನಸ್ಸಿನಲ್ಲಿ ಏನೇನು ನಡೆಯುತ್ತಲಿತ್ತೊ ಅದ 

ನ್ನೆಲ್ಲಾ ನಾವು ವರ್ಣಿಸಲಾರೆವು, ದುರ್ಗಾವತಿಯು ಒಂದೊಂದು ತಡವೆ, ಇದೇನು 

ಸ್ವಪ್ನವೋ, ಅಥವಾ ನಿಜವೋ, ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಳು. ಜ್ಯೋತಿ 

.................

* Thanks. 

-----------------------------------------------------------------------

ಮೂರನೆಯ ಪರಿಚ್ಛೇದ 13 


ಪ್ರಕಾಶನು ಈ ಪ್ರಕಾರ ಮಾತುಕಥೆ ನಡೆದಮೇಲೆ ಅಪ್ಪಣೆ ತೆಗೆದುಕೊಂಡು ಹೋದನು. 

ಹೊರಟುಹೋಗುವಾಗ ಮಾರನೆಯ ದಿನ ಎಷ್ಟು ಹೊತ್ತಿಗೆ ಬರಬೇಕೋ ಅದನ್ನೂ 

ತಿಳಿದುಕೊಂಡು ಹೋದನು. 

--- 


ಮೂರನೆಯ ಪರಿಚ್ಛೇದ. 

ಈ ಪ್ರಕಾರ ಪ್ರತಿದಿನವೂ ವಿವಾಹವಾರ್ಥಿಯಾದವರು ತಂಡತಂಡವಾಗಿ ಬರಲಾ 

ರಂಭಿಸಿದರು. ಆದರೆ ದುರ್ಗಾವತಿಯು ಪ್ರಾಣ ಹೋದರೂ, ಅವದಿರಿಗೆ 

ಬಂದು ಕಾಣಿಸಿಕೊಳ್ಳುತ್ತಿರಲಿಲ್ಲ. ಏನು ಮಾಡಿದರೂ ಅವಳು ಹೊರಕ್ಕೆ ಹೊರಡಳು. 

ಆದುದರಿಂದ ಅವರು ಎಷ್ಟು ಉತ್ಸುಕರಾಗಿ ಎಷ್ಟು ಆನಂದದಿಂದ ಮನೆಗೆ ಪ್ರವೇಶ 

ಮಾಡುವರೋ, ಅದಕ್ಕಿಂತ ಹೆಚ್ಚಾದ ನಿರಾಶೆಯಿಂದ ವ್ಯಸನದಿಂದ ಮನೆ 

ಯಿಂದ ಹಿಂದಿರುಗಿ ಹೊರಟು ಹೋಗುವರು, ದುರ್ಗಪತಿಯು ಶಾರೀರಕವಾದ 

ಆಲಸ್ಯದ ನೆವಮಾಡಿಕೊಂಡು ಹಾಸಿಗೆಯ ಮೇಲೆ ಮಲಗಿರುತ್ತ ಅಳುತ್ತಿರುವಳು. 

ಮತ್ತು ಪ್ರತಿ ಮಹೂರ್ತದಲ್ಲಿಯೂ ಒಬ್ಬನನ್ನು ಕುತೂಹಲದಿಂದ ಇದಿರುನೋಡು 

ತ್ತಲಿರುವಳು. ಅವಳು ಮನಸ್ಸಿನಲ್ಲಿ, " ನನ್ನ ಜೀವನ ಸರ್ವಸ್ವವೇ ? ನೀನೆಲ್ಲಿರುವೆ ? 

ಒಂದು ತಡವೆ ಬಂದು ಹೋಗು, ನಿನ್ನನ್ನು ಹೊರತು ನನ್ನನ್ನು ಮತ್ತಾರು ಈ ನರಕ 

ದಿಂದುದ್ಧಾರ ಮಾಡಲಾರರು ? ನಾನು ಮೃತ್ಯುವಿಗೆ ಹೆದರುವುದಿಲ್ಲ. ಕೇವಲ ನಿನ್ನ 

ಮೇಲಿನ ಆಶೆಯಿಂದ ಈ ಪ್ರಾಣವನ್ನು ಇದುವರೆಗೂ ಉಳಿಸಿ ಇಟ್ಟುಕೊಂಡಿರುವೆನು." 

ಎಂದೆಂದುಕೊಳ್ಳುವಳು. 

 

ದುರ್ಗಾವತಿಯ ಕಣ್ಣಿಗೆ ನಿದ್ದೆ ಹತ್ತದು; ಭಯದಿಂದ ಅವಳಿಗೆ ನಿದ್ದೆ ಹತ್ತದು.  

ಸ್ವಲ್ಪ ಜಂಪುಹಿಡಿದು ಕಣ್ಣು ಮುಚ್ಚುತ್ತಲೆ, ಕನಸಿನಲ್ಲಿ ಖಗೇಂದ್ರವನ್ನು ಕಾಣುವಳು; 

ಕೂಡಲೆ ಎಚ್ಚರವಾಗುವಳು, ಅವಳಿಗೆ ಆಹಾರದಲ್ಲಿ ರುಚಿ ತಪ್ಪಿತು ಅವಳಿಗೆ ಆಲಸ್ಯ 

ವೆಂದು ಅವಳ ತಾಯಿಯು ಏನೇನೋ ಉಪಾಯದಿಂದ ಆಹಾರವನ್ನು ಕೊಡುವಳು. 

ಮೊದಲು ಅವಳ ಆಲಸ್ಯಕ್ಕೋಸ್ಕರ ತಾಯಿ ತಂದೆಗಳು ಉದ್ವಿಗ್ನ ವಾದರು. ಕಡೆಗೆ ಅವ 

ರಿಬ್ಬರೂ ಯೋಚಿಸಿ, ಹೆಣ್ಣಿಗೆ ಮದುವೆ ಮಾಡಿದರೆ, ಆಲಸ್ಯವು ಹೋಗುವುದೆಂದು 

ಸ್ಥಿರಮಾಡಿ ಕೊಂಡರು. ಹೆಣ್ಣು ಮೆಚ್ಚಿದ ವರನನ್ನು ಹುಡುಕಬೇಕಿದ ಕಷ್ಟವೊ 

ಅವರಿಗೆ ಇರಲಿಲ್ಲ. ಜ್ಯೋತಿಪ್ರಕಾಶನನ್ನು ನೋಡಿದ ಮೇಲೆ ಹೈಮವತಿಯು ಬೇರೆ 

-----------------------------------------------------------------------------

14 ಉನ್ಮಾದಿನಿ 


ಮತ್ತಾರನ್ನೂ ಕಣ್ಣೆತ್ತಿ ನೋಡಲಿಲ್ಲ. ಜ್ಯೋತಿಪ್ರಕಾಶವನ್ನು ಬಿಟ್ಟರೆ, ಹೆಣ್ಣಿಗೆ ಸರಿ 

ಯಾದ ವರನಾರೂ ಇಲ್ಲ. ಆದುದರಿಂದ ನವೀನಗೋಪಾಲನೂ ಹೈಮವತಿಯೂ 

ಚರ್ಚೆ ಮಾಡಿ, ಜ್ಯೋತಿ ಪ್ರಕಾಶನಿಗೇ ಹೆಣ್ಣನ್ನು ಕೊಡಬೇಕೆಂದು ಸ್ಥಿರಮಾಡಿ  

ಕೊಂಡರು. ಅದು ಕಾರಣ ಅಂದುಮೊದಲ್ಗೊಂಡು ಬೇರೆ ವಿವಾಹವಾರ್ಥಿಗಳು ಬರು 

ವುದು ನಿಂತುಹೋಯಿತು, ಕೇವಲ ಜ್ಯೋತಿಪ್ರಕಾಶನೊಬ್ಬನಿಗೆ ಮಾತ್ರ ಬರುವುದಕ್ಕೆ 

ಅಡ್ಡಿ ಇರಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಯಾವಾಗ ಬೇಕಾ 

ದರೂ ಅವನು ಮನೆಗೆ ಬರುತ್ತಲಿರುವನು. 


ಇತ್ತಲಾಗಿ ಅನಾಹಾರದಿಂದಲೂ, ಅನಿದ್ರೆಯಿಂದಲೂ, ಭಯದಿಂದಲೂ, ಆಶ್ಚ 

ರ್ಯದಿಂವ, ಚಿಂತೆಯಿಂದ, ದುರ್ಗಾವತಿಯ ಮಸ್ತಿಷ್ಟವು ಕ್ರಮವಾಗಿ ವಿಕೃತ 

ವಾಗಲಾರಂಭಿಸಿತು ಹೀಗೆ ವಿಕೃತವಾಗುವ ಕಾರ್ಯವು ಗೋಚರವಿಲ್ಲದೆ ಸ್ವಲ್ಪಸ್ವಲ್ಪ 

ವಾಗಿ ಕ್ರಮವಾಗಿ ನಡೆಯುತ್ತ ಬಂದುದರಿಂದ, ಯಾರ ದೃಷ್ಟಿಯೂ ಆ ಕಡೆ ಬೀಳ 

ಲಿಲ್ಲ. ಒಂದು ದಿನ ಜ್ಯೋತಿ ಪ್ರಕಾಶನು ದುಗ೯ವತಿಯನ್ನು ನೋಡುವುದಕ್ಕೆ ಬಂದಿ 

ದ್ದಾಗ, ದುರ್ಗಾವತಿಯು ನಗುತ್ತ ನಗುತ್ತ, ಚಿಕ್ಕಮನೆಯಿಂದ ಹೊರಗೆ ಹೊರಟುಹೋ 

ದಳು, ಆ ನಗುವು ಸ್ವಭಾವಿಕವಾದುದೋ ಅಥವಾ ಅಸ್ವಾಭಾವಿಕವಾದುದೋ, 

ಅದನ್ನು ಕುರಿತು ಯಾರು ಯೋಚಿಸಲಿಲ್ಲ. ಹೈಮವತಿಯು ಆ ನಗುವನ್ನು ಕಂಡು 

ವಿಶೇಷ ಆನಂದಿದಳಾದಳು.  ಏಕೆಂದರೆ, ಅವಳು ಆ ನಗುವನ್ನು ನೋಡಿ ತನ್ನ ಸ್ವಂತ 

ಮನಸ್ಸಿನ ಭಾವದಂತೆ ಅರ್ಥಮಾಡಿಕೊಂಡಳು.  ಈ ನಗುವೇ ದುರ್ಗಾವತಿಯ ಸರ್ವ  

ನಾಶಕ್ಕೆ ಮೂಲವಾಯಿತು. ಮಾರನೇ ದಿನವೇ ದುರ್ಗಾವತಿಯನ್ನು ಜ್ಯೋತಿ ಪ್ರಕಾ 

ಶನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಿಷ್ಕರ್ಷೆಯಾಯಿತು. 


ಮಾರನೆಯ ದಿನ ಪ್ರಾತಃಕಾಲದಿಂದ ನವೀನಗೋಪನ ಮನೆಯು ಆನಂದೋ 

ತ್ಸವಗಳಿಂದ ಪರಿಪೂರ್ಣವಾಯಿತು. ಬ್ರಹ್ಮೋಸಮಾಜಕ್ಕೆ ಸೇರಿದ ಯುವಕಯುವತಿ 

ಯರು ಮಹಾನಂದಿಂದ ದಳದಳವಾಗಿ ಅವನ ಮನೆಗೆ ಬರಲಾರಂಭಿಸಿದರು. ಅವರ 

ನಾನಾಜಾತೀಯ ನಾನಾ ವರ್ಣಗಳ ನಾನಾ ಫಾಷನ್* (ನಾನಾ ಭಾವದ) ಉಡು 

ಪುಗಳನ್ನು ನೋಡಿದರೆ ಆಶ್ಚರ್ಯವುಂಟಾಗುತ್ತಲಿತ್ತು, ಅನೇಕ ಮಂಗಳವಾದ್ಯಗಳಿಗೆ 

ಪ್ರತಿಯಾಗಿ, ಉಚ್ಛವಾದ ಮಧುರವಾದ ಹಾಸ್ಯಧ್ವನಿಯಿಂದ ಆ ಗೃಹವು ಪ್ರತಿಧ್ವನಿತ 

ವಾಗುತಲಿತ್ತು, ದುರ್ಗಾವತಿಯು ಕೂತಿದ್ದ ಮನೆಯಲ್ಲಿ ಸುಂದರಿಯರ ಗುಂಪು ಸೇರಿ 

ರುವುದು. ಎಲ್ಲರೂ ಸುರಸುಂದರವಾದ ವೇಷಭೂಷಣಗಳಿ೦ದ ಭೂಷಿತರಾಗಿದ್ದರು.  

ಆದರೆ ದುರ್ಗಾವತಿಗೆ ಇದುವರೆಗೂ ಸಮಯೋಚಿತವಾದ ಉಡುಗೆತೊಡುಗೆಗಳುಇಟ್ಟಿ  

-----------------------------------------------------------------------------

ಮೂರನೆಯ ಪರಿಚ್ಛೇದ ೧೩


ರಲಿಲ್ಲ. ಆದುದರಿದ ಹೆಂಗಸರೆಲ್ಲರೂ ಹಾಸ್ಯಮಾಡಲಾರಂಭಿಸಿದರು, ಒಬ್ಬಳು ಅವ 

ಳಿಗೋಸ್ಕರ ಪಶ್ಚತ್ತಾತಪಸಟ್ಟಳು, ಅಷ್ಟರೊಳಗೆ ಹೈಮವತಿಯು ಬೇಗಬೇಗನೆ 

ದುರ್ಗಾವತಿಯ ನೂತನವಾದ ತುಡುಗೆಗಳನ್ನೆಲ್ಲಾ ತಂದು, ಅವನ್ನೆಲ್ಲಾ ಅವಳಿಗೆ ತುಡಿ 

ಸುವುದಕ್ಕೆ ಏರ್ಪಾಡುಮಾಡಿದಳು. ದುರ್ಗಾವತಿಗೆ ಈಗ ಭಯ, ಲಜ್ಜೆ, ಚಿಂತೆ 

ಆಶ್ಚರ್ಯ ಮುಂತಾವುದಾವುದೂ ಇರಲಿಲ್ಲ. ಹಿಂದೂಗಳ ಮನೆಯಲ್ಲಿ ಹೀಗೆ ಆಕಸ್ಮಿ 

ಕವಾದ ಪರಿವರ್ತನ ಉಂಟಾಗಿದ್ದರೆ, ಎಲ್ಲರ ದೃಷ್ಟಿಯೂ ಅವಳ ಮೇಲೆ ಬೀಳುತ್ತಲಿತ್ತು. 

ಆದರೆ ಬ್ರಹ್ಮೋಮತಾವಲಂಬಿಗಳ ಮನೆಯಲ್ಲಿ ಇದಾವುದೂ ಹೆಚ್ಚು ವಿಷಯವಲ್ಲ.  

ಅದು ವಿಚಾರಿಸಬೇಕಾಗಿದ್ದ ವಿಷಯವಾಗಿಯೂ ಇರಲಿಲ್ಲ. ಈ ದಿನ ದುರ್ಗಾವತಿಯು  

ಸ್ವಲ್ಪ ವಿಕೃತವಾದ ತಲೆಯ ಮಿದುಳಿನಲ್ಲಿ ಬಹು ದಿನದಿಂದ ಅಭೀಷ್ಟವಾಗಿದ್ದ ಪ್ರಿಯ 

ನೊಡನೆ ಬದುಕುವ ಆಸೆಯು ಹೊಕ್ಕಿತ್ತು. ಈ ಸಮಯಲ್ಲಿ ಭಯ, ಲಜ್ಜೆ, ವಿಸ್ಮಯ  

ಮುಂತಾದ ನಾರಿಯರಿಗೆ ಉಚಿತವಾದ ಗುಣಗಳನ್ನು ತೊರೆದಿದ್ದ ದುರ್ಗಾವತಿಯು  

ನಸುನಗುತ್ತ ತಾಯಿಯನ್ನು ಕುರಿತು "ನನ್ನ ವರನು ಯಾವಾಗ ಬರುವನೆ,  ಅಮ್ಮಾ!" 

ಎಂದು ಕೇಳಿದಳು. 

 

ತತ್‌ಕ್ಷಣದಲ್ಲಿ ಸುಂದರಿಯರ ಮಹಲಿನಲ್ಲಿ ವೀಣೆಯನ್ನು ಧಿಕ್ಕರಿಸುವ ಅನುಚ್ಚ 

ವಾದ ನಗುವಿನ ಧ್ವನಿಯೆ೦ದು ಎದ್ದಿತು, ಅನೇಕರು ಅಸ್ಪಷ್ಟವಾಗಿ ಹಾಸ್ಯ ಹುಡುಗಾಟ 

ಗಳನ್ನು ಮಾಡಲಾರಂಭಿಸಿದರು, ಮಗಳ ಬಾಯಿಂದ ಇಂತಹ ಮಾತನ್ನು ಕೇಳಿ 

ಹೈಮವತಿಯ ಆನಂದಕ್ಕೆ ಪಾರವಿರಲಿಲ್ಲ. ತನ್ನ ಸಂಸರ್ಗದಿಂದ ಇಷ್ಟು ಸ್ವಲ್ಪ ಕಾಲ 

ದಲ್ಲಿಯೇ ಮಗಳ ಸ್ವಭಾವದಲ್ಲಿ ಇಂತಹ ಪರಿವರ್ತನೆಯುಂಟಾದುದಕ್ಕೆ ತನ್ನನ್ನು ತಾನೇ 

ಮನಸ್ಸಿನಲ್ಲಿ ಹೊಗಳಿ ಕೊಂಡಳು. ಮತ್ತು ಮಗಳ ಮುಖವನ್ನು ಮುದ್ದಿಟ್ಟು ಕೊಂಡು 

" ಈಗಲೇ ಬರುವನೇ --ವಿನೋದ ! ಇದೇನು, ವರನಿಗೋಸ್ಕರ ಇಷ್ಟು ಆತುರವುಳ್ಳವ 

ಳಾಗಿರುವೆ ?” ಎಂದಳು. 


ದುರ್ಗಾವತಿಗೆ' ಅವಳ ಪೌತ್ತಲಿಕ ಹೆಸರಿಗೆ ಪ್ರತಿಯಾಗಿ ಈಗ ವಿನೋದಿನೀ 

ಎಂದು ಹೆಸರಿಟ್ಟಿತ್ತು. ನಾವು ಈಗಿನಿಂದ ಮುಂದಕ್ಕೆ ದುರ್ಗವತಿ' ಎಂಬ ಹೆಸರನ್ನು 

ಬಿಟ್ಟು ಅವಳನ್ನು 'ವಿನೋದಿನೀ' ಎಂಬ ಹೆಸರಿನಿಂದಲೇ ಕರೆಯುವೆವು. ವಿನೋದಿನಿಗೆ 

ಈಗ ಆ ನಗುವು ಇಲ್ಲ. ವಿನೋದಿನಿಯು ಈ ತಡವೆ ಕಾತುರಕಂಠಳಾಗಿ, " ನಾನು ಅವನನ್ನು 

ಎಷ್ಟು ಹೊತ್ತಿಗೆ ನೋಡುವೆನೆ, ತಾಯಿ ?” ಎಂದಳು. 

 

ಹೀಗೆ ಹೇಳುತ್ತ ಹೇಳುತ್ತ ವಿನೋದಿನಿಯು ಅತ್ತು ಬಿಟ್ಟಳು. ಮುಂದೆ ಗಂಡನಾ 

ಗುವವನ ಮೇಲೆ ಹುಡುಗಿಗೆ ಈ ಪ್ರಕಾರ ಪ್ರಗಾಢವಾದ ಪ್ರಣಯವುಂಟಾಗಿರುವು 

-------------------------------------------------------- 

16 ಉನ್ಮಾದಿನಿ 

 

ಯೋಚಿಸಿ, ಜೈಮವತಿಯ ಮೈಯಲ್ಲಿ ಆನಂದವು ಹಿಡಿಯಲಾರದೆ ಹೋಯಿತು ! ಈ 

ಸಮಯದಲ್ಲಿ ಒಬ್ಬ ಸುಂದರಿಯು ಮತ್ತೊಬ್ಬ ಸುಂದರಿಯ ಭುಜವನ್ನು ಮುಟ್ಟಿ, 

ವೈದ್ಯುತಿಕ ಕಟಾಕ್ಷದ ಸಂಜ್ಞೆಯಿಂದ, "ಎಲೈ ವಿದ್ಯುಲ್ಲತೆ ! ನೀನೇನೋ ಪ್ರಣಯ 

ಪ್ರಣಯವೆಂದು ಹೇಳುತ್ತ, ಪ್ರೀತಿಸುವುದಾಗಿ ಹೇಳಲಿದೆಯಷ್ಟೆ? ಪ್ರಣಯವಾವುದೊ 

ಕಣ್ಣಾರೆ ನೋಡೆ-ಇವಳಿಗೂ ವರನಿಗೂ ಎಷ್ಟು ದಿನದ ಪರಿಚಯವೆಂದು ತಿಳಿದಿರುವೆ? 

ನೋಡು ” ಎಂದಳು. 

 

ವಿನೋದಿನಿಯು ಕಣ್ಣೊರಸಿಕೊಂಡು ಒಂದು ಪ್ರಕಾರವಾದ ಉದಾಸೀನಭಾವ 

ದಿಂದ ಆ ಸು೦ದರಿಯನ್ನು ಬಿರುಗಣ್ಣಿನಿಂದ ನೋಡಿದಳು, ವಿದ್ಯುಲ್ಲತೆಯೆಂಬ ಹೆಸ  

ರುಳ್ಳ ಸುಂದರಿಯು ಪ್ರಥಮೋಕ್ತವಾದ ಸುಂದರಿಯನ್ನುದ್ದೇಶಿಸಿ, " ನೋಡೆ, ಹೇಮ 

ಪ್ರಭೆ ! ಕನ್ನೆಯು ಹೇಗೆ ನಿನ್ನ ಕಡೆ ತಿರುಗಿನೋಡುವಳು !'' ಎಂದು ಹೇಳಿದಳು. 


ಹೇಮಪ್ರಭೆಯು ಆಗ ವಿಸ್ಮಿತಳಾಗಿ, " ಇಬೇನೆ ? ಪ್ರಣಯಿನಿಯ ನೋಟವೇ?” 

ಎಂದಳು. 

 

ಈ ಸಮಯಯದಲ್ಲಿ ವಿನೋದಿನಿಯು ಚೀತಾರಮಾಡುತ್ತ, "ನನಗೆ ಬೇಗನೆ 

ಉಡುಪನ್ನುಡಿಸಿಬಿಡು, ವರನು ಹಿಂದಿರುಗಿ ಹೋಗಿಬಿಡುವನು ” ಎಂದು ಹೇಳಿದಳು. 


ವಿನೋದಿನಿಯ ಚೀತ್ಕಾರವನ್ನು ಕೇಳಿ ಅನೇಕ ಸುಂದರಿಯರು, " ಇದೇನು ಒರ 

ಟುತನ ! ನಾಗರೀಕವಿಲ್ಲದ ಹೆಣ್ಣು ! '' ಎಂದು ಹೇಳಿ ಮೂಗುಗಳನ್ನು ಆತುಂಚಿತ 

ವಾಗಿ ಮಾಡಿಕೊಂಡು, ಆ ಚಿಕ್ಕ ಮನೆಯನ್ನು ಬಿಟ್ಟು ಎದ್ದು ಹೊರಟುಹೋದರು. 

ಸ್ವಲ್ಪ ಹೊತ್ತಿನಲ್ಲಿಯೇ ದರಸು ಬಂದನು, ವರನು ಬಂದನು' ಎಂದು ಗದ್ದಲವಾಗಿ, 

ಆ ಗದ್ದಲದೊಂದಿಗೆ ಜ್ಯೋತಿ ಪ್ರಕಾಶನ ಆ ಚಿಕ್ಕ ಮನೆಗೆ ಪ್ರವೇಶಮಾಡಿದನು, ವಿನೋ 

ದಿನಿಯು ಆತುರದಿಂದ ಅವನನ್ನು ದೃಷ್ಟಿಸಿ ನೋಡಿದಳು. ಆದರೆ ಉತ್ತರಕ್ಷಣದಲ್ಲಿಯೇ 

ತಲೆಯನ್ನು ಬಗ್ಗಿಸಿಕೊಂಡಳು. ಆಗ ತಗ್ಗಿಸಿದ ತಲೆಯನ್ನು ಪುನಃ ಎತ್ತಲಿಲ್ಲ. 

ಲಜ್ಜೆಯೇ ಇದಕ್ಕೆ ಕಾರಣವೆಂದು ತಿಳಿದುಕೊಂಡು, ಅಲ್ಲಿದ್ದ ರಮಣಿಯರೆಲ್ಲರೂ 

ಹಾಸ್ಯಪರಿಹಾಸ್ಯ ಮಾಡತೊಡಗಿದರು. ಆದರೆ ವಿನೋದಿನಿಯ ಬಾಯಲ್ಲಿ ಪುನಃ 

ಮಾತು ಹೊರಡಲಿಲ್ಲ. ಆಗ ಮಾತು ನಿಂತುಹೋದ ಮೇಲೆ ಇನಃ ಯಾರೂ ಅವಳು 

ಮಾತನಾಡಿದುದನ್ನು ಕೇಳಲಿಲ್ಲ. 

 

ಇತ್ತಲಾಗಿ ವಿವಾಹದ ಪ್ರಯತ್ನ ಜರುಗುತ್ತಲಿತ್ತು, ಲಗ್ನಕ್ಕೆ ಕರೆಯಲ್ಪಟ್ಟ 

ದೊಡ್ಡ ದೊಡ್ಡ ಮನೆಯ ಹೆಂಗಸರೂ ಗಂಡಸರ ಮಂದಿರದಲ್ಲಿ ಬಂದು ನೆರೆದರು 

ಮದುವೆಯ , ಹೆಣ್ಣು ಗಂಡು ಬರುವುದನ್ನು ನಿರೀಕ್ಷಿಸಿಕೊಂಡು ಕುಳಿತಿದ್ದರು. 

-------------------------------------------------------- 

ಮೂರನೆಯ ಪರಿಚ್ಛೇದ 17 


ಬರುವವರೆಲ್ಲರೂ ಬಂದಿರುವ ಸಮಾಚಾರವು ಬಂದಕೂಡಲೆ, ಎಲ್ಲರೂ ಮಹಾನಂದ 

ದಿಂದ ವರಕನೈಯರನ್ನು ಸಂಗಡ ಕರೆದುಕೊಂಡು, ಮಂದಿರಕ್ಕೆ ಬಂದು ಸೇರಿದರು. 

ಈ ದಿನ ಬ್ರಹ್ಮ ತದ ಪ್ರಥಮಾಚರ್ಯರೇ ಸ್ವಯಂ ಬಂದು, ವರಕನೈಯರನ್ನು 

ಇದಿರ್ಗೊಂಡು ಮಂದಿರಕ್ಕೆ ಕರೆದುಕೊಂಡು ಹೋದರು. ಮೊದಲು ಪ್ರಾರ್ಥನೆ 

ಆಯಿತು. ಪ್ರಾರ್ಥನೆಯಾದಮೇಲೆ ಸಂಗೀತ, ಸಂಗೀತವಾಡಮೇಲೆ ಆಚಾರ್ಯರ 

ವಕ್ತೃತೆ* , ಆ ವಕ್ತೃತೆಯಾದಮೇಲೆ ವರಕಟ್ಟೆನ್ಯೆಯರಿಗೆ ಅನೇಕ ಉಪದೇಶವಾಯಿತು.  

ಕಡೆಗೆ ಆಚಾರ್ಯರ ಆಶೀರ್ವಾದದೊಂದಿಗೆ ಆ ವ್ಯಕ್ತಿ ಯು ಪೂರೈಸಿಶು, ಕಟ್ಟಕಡೆಗೆ 

ವರಕನ್ನೆ ಯರು ಪ್ರತಿಜ್ಞಾಬದ್ಧರಾದ ಮೇಲೆ, ಸಂಬಂಧಿಮಾಲೆಗಳು ಪರಿವರ್ತಿತವಾ 

ದುವು. ಈ ಪ್ರಕಾರ ಆ ದಿನದ ವಿವಾಹದ ಕಾರ್ಯವು ಪೂರ್ತಿಯಾಯಿತು. 


ವಿನೋದಿನಿಯು ಸೂತ್ರದ ಬೊಂಬೆಯಹಾಗೆ ಈ ಕೆಲಸ ಕಾರ್ಯಗಳನ್ನು ನಡೆ 

ಯಿಸಿದಳು. ಏನಾಯಿತೋ ಅವಳದನ್ನು ಅರಿಯಲು ಸಮರ್ಥಳಾಗಿರಲಿಲ್ಲ. ಅವಳಿಗೆ 

ಈ ಹೊಸ ದೃಶ್ಯವು ಒಂದು ಕನಸೆಂದು ಭ್ರಮೆಯಾಯಿತು, ಅವಳಿಗೆ ಸರಿಯಾದ 

ತಿಳಿವೇ ಇರಲಿಲ್ಲ ; ಅವಳು ಹಾತ್ತಾಗಿ ಜಡಪ್ರಾಯವಾಗಿ ಹೋದಳು. ವಿನೋದಿ 

ನಿಯು ಒಂದೇ ತಡವೆಗೆ ಸೀರವ, ನಿರ್ವಕ್ಕು, ನಿಷ್ಪಂದ ! 


ವಿನೋದಿನಿಗೆ ಸ್ವಲ್ಪ ಸಂಜ್ಞಾ ಲಾಭವುಂಟಾದಾಗ, ಅವಳು ತನ್ನ ಇದಿರಿಗೆ 

ನಡೆದ ಘಟನೆಗೆ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನ ಪಟ್ಟಳು. ಆದರೆ ಅವಳ 

ಬುದ್ದಿಗೆ ಅದಾವುದೂ ಗೊತ್ತಾಗದೆ ಹೋಯಿತು. ಅವಳು ಕಲಿಕತ್ತಿಗೆ ಬಂದಮೇಲೆ 

ನೋಡಿದುದೆಲ್ಲಾ ವಿಸ್ಮಯಜನಕವಾಗಿದ್ದುವು. ಇದೂ ಅವುಗಳಿಗನುಗುಣವಾದ 

ಅಥವಾ ತತ್ಸಂಬಂಧವಾದ ಘಟನೆಯಾಗಿರಬಹುದೆಂದು ತಿಳಿದುಕೊಂಡಳು ಬ್ರಹ್ಮೋ 

ಮತ ಪ್ರಕಾರ ತನಗೆ ಮದುವೆಯಾಯಿತೆಂದು ಅವಳಿಗೆ ಸ್ವಲ್ಪವೂ ಗೊತ್ತಾಗಲಿಲ್ಲ. 

ಅವಳ ಮೊದಲನೆಯ ಮದುವೆಯ ಪ್ರಸ್ತಾಪವೂ ಬರಲಿಲ್ಲ. ಅರ್ಧ ಜ್ಞಾನ, ಅರ್ಧ 

ಅಜ್ಞಾನ, ಇಂತಹ ಜ್ಞಾನಾಜ್ನಾವಸ್ಥೆಯಲ್ಲಿ ಈ ಮದುವೆಯ ಸಂಬಂಧವಾಗಿ ಅವ 

ಳಿಂದ ಹೇಳಿಸಿ ಮಾಡಿಸಿದುದೆಲ್ಲಾ ಅವಳು ಒಂದು ಮೋಹಿನೀ ಮಂತ್ರಶಕ್ತಿಯಿಂದ 

ಮುಗ್ಧಳಾದವಳ ಹಾಗೆ ಹೇಳಿ ಮಾಡಿದುದಾಗಿರುವುವು.

 

ಇತ್ತಲಾಗಿ ಮದುವೆಯ ಕಾರ್ಯವು ಪೂರ್ತಿಯಾದಮೇಲೆ, ವರನು ಮಹಾ 

ಉಲ್ಲಾಸದಿಂದ ಹೆಂಡತಿಯನ್ನು ಸ್ವಂತ ಮನೆಗೆ ಕರೆದುಕೊಂಡು ಹೋದನು. ಆಗ 

ಅವನ ಮನೆಯು ಆನಂದದಿಂದಲೂ ಉತ್ಸವಗಳಿಂದಲೂ ಪೂರ್ಣವಾಯಿತು. 

…………………….. 

*Eloquent sermon. 

-------------------------------------------------------------------


ನಾಲ್ಕನೆಯ ಪರಿಚ್ಛೇದ. 


ಪೂರ್ವೋಕ್ತ ಪರಿಣಯವಾದ ಮೂರು ದಿನಗಳಲ್ಲಿಯೇ ಜ್ಯೋತಿಪ್ರಕಾಶನು ವಿಷಣ್ಣ 

ವದನನಾಗಿ ಒಂದು ನಿರ್ಜನವಾದ ಕೊಟ್ಟಡಿಯಲ್ಲಿ ಒಬ್ಬನೇ ಕುಳಿತಿದ್ದನು. 

ಈಗವನಿಗೆ ಹರ್ಷದಲ್ಲಿ ವಿಷಾದ, ಇಷ್ಟರಲ್ಲಿಯೇ ಅವನ ಹೃದಯದಲ್ಲಿ ಆನಂದೆಲ್ಲಾ 

ಸದ ಒಂದು ಚಿಹ್ನೆ ಯಾದರೂ ಇರಲಿ, ಈ ಪರಿಣಯದಲ್ಲಿ ಅವನಿಗೆ ಇದ್ದ ಆಶೆ ಭರ  

ವಸೆಗಳೆಲ್ಲವೂ ನಿರ್ಮಲವಾಗಿ ಹೋದವು ಆಹ್ಲಾದೋಬ್ಲ್ಯಾಸಗಳಿಗೆ ಪ್ರತಿಯಾಗಿ 

ಅವನು ಮನಸ್ಸಿನಲ್ಲಿ ಒಂದು ದಾರುಣವಾದ ಯಾತನೆಯನ್ನು ಅನುಭವಿಸುತ್ತಲಿದ್ದನು. 

ಆ ಆಶೆ ಭರವಸೆಗಳಿಗೆ ಪ್ರತಿಯಾಗಿ ಅವನ ಹೃದಯವು ನೈರಾಶ್ಯದ ವಿಷಮವಾದ 

ಆಘಾತದಿಂದ ಶತಧಾ ಒಡೆದುಹೋಗಿರುವುದು. ಜ್ಯೋತಿಪ್ರಕಾಶನು ನಿಟ್ಟುಸಿರನ್ನು 

ಬಿಟ್ಟು, ಏತಕ್ಕೆ ಹೀಗಾಯಿತೆಂದೆಂದುಕೊಂಡನು. 


ಈ ಸಮಯಕ್ಕೆ ಸರಿಯಾಗಿ ಮತ್ತೊಬ್ಬ ಮನುಷ್ಯನು ಕೊಟ್ಟಡಿಯೊಳಗೆ 

ಪ್ರವೇಶಮಾಡಿದನು. ಜ್ಯೋತಿಪ್ರಕಾಶನು ಆ ಮನುಷ್ಯನಿಗೆ ಅಭ್ಯರ್ಥನ ಮಾಡಿ, ಆವ 

ನನ್ನು ಇದಿರಿಗೆ ಇದ್ದ ಕುರ್ಚಿಯ ಮೇಲೆ ಕುಳ್ಳಿರಿಸಿದನು. ನಾವಾಗತ ವ್ಯಕ್ತಿಯು 

ಜ್ಯೋತಿಪ್ರಕಾಶನ ಮುಖವನ್ನು ಒಂದು ತರವೆ ನೋಡಿ, “ ಇದೇನು, ಮುಖವು 

ಬಾಡಿರುವ ಹಾಗಿದೆ ? ಮೈಯಲ್ಲಿ ಆಲಸ್ಯವೇನು ? ” ಎಂದು ಕೇಳಿದನು. 


ಜ್ಯೋತಿ ಪ್ರಕಾಶನು ಬಿಸುಸುಯ್ದು, " ನನಗೆ ಶಾರೀರಕ ಆಲಸ್ಯವೇನು ಇಲ್ಲ, 

ಆದರೆ, ನರೇಂದ್ರ, ನಾನು ಬಹಳ ವಿಸದ್ಗ್ರಸ್ತನಾಗಿ ರುವೆನು, ನನ್ನ ಹೆಂಡತಿಯು ಬಹಳ 

ಆಸುಸ್ಥಳಾಗಿರುವಳು. ಅದಕ್ಕೋಸ್ಕರವೇ ನಿನ್ನನ್ನು ಕರೆಯಿಸಿದೆನು” ಎಂದನು. 


ನಗೇಂದ್ರನಾಥ ಸರಕಾರನು ಕಲಿಕತ್ತೆಯಲ್ಲಿ ಒಬ್ಬ ಪ್ರಸಿದ್ಧನಾದ ಬ್ರಹ್ಮೋ 

ಡಾಕ್ಟರನು, ಮತ್ತು ಜ್ಯೋತಿಪ್ರಕಾಶನಿಗೆ ಪರಮಾಪ್ತನಾದ ಸ್ನೇಹಿತ ಜೋತಿಪ್ರಕಾ 

ಶನ ಮಾತನ್ನು ಕೇಳಿ ಆಶ್ಚರ್ಯಪಟ್ಟು, "ಅದೇನು, ಇಷ್ಟರಲ್ಲಿಯೇ ಅವಳಿಗೆ ಆಲಸ್ಯ 

ವುಂಟಾಯಿತೆ ? ” ಎಂದು ಕೇಳಿದನು. 


ಜ್ಯೋತಿ :-" ಆಲಸ್ಯವು ಎಂತಹದುದೋ ಅದು ಗೊತ್ತಾಗದು. ಆದರೆ 

ಲಕ್ಷಣಗಳನ್ನು ನೋಡಿದರೆ, ಪ್ರಾಣವಳಿಯುವುದು ಕಷ್ಟ. ಅಷ್ಟು ತಿಳಿದುಕೊಳ್ಳ 

ಬಲ್ಲೆನು. " 

---------------------------------------

ನಾಲ್ಕನೆಯ ಪರಿಚ್ಛೇದ 19 

 

ನಗೇಂದ್ರ :- ಅಂತಹ ಲಕ್ಷಣಗಳು ಕಂಡುಬಂದುದಾವುದು ವಿವರ 

ವಾಗಿ ಹೇಳು. 

 

ಜ್ಯೋತಿ :- "ಮೊದಲು, ಆ ವಿವಾಹವಾದ ರಾತ್ರಿ ನನ್ನ ಸಂಗಡ ಏನೂ 

ಮಾತನಾಡಲಿಲ್ಲ. ರಾತ್ರಿಯೆಲ್ಲಾ ಎಷ್ಟೇ ಪ್ರಯತ್ನ ಪಟ್ಟೆನು ; ಆದರೂ ಅವಳು 

ಬಾಯಿಯಿಂದ ಒಂದು ಮಾತು ಕೂಡ ಹೊರಡಲಿಲ್ಲ. ಮರುದಿನ ಬೆಳಗ್ಗೆ ಎದ್ದು 

ನೋಡಲಾಗಿ, ವಿನೋದಿನಿಯ ಕಣ್ಣುಗಳು ರಕ್ತವರ್ಣವಾಗಿದ್ದುವು. ಆಗಲೂ ಬಾಯಿ 

ಯಲ್ಲಿ ಮಾತಿಲ್ಲ. ಆದರೆ ಆ ವಿಶಾಲವಾದ, ರಕ್ತದ ಹಾಗೆ ಕೆಂಪೇರಿದ್ದ ಕಣ್ಣುಗಳಿಂದ 

ನನ್ನನ್ನು ದೃಷ್ಟಿಸಿ ನೋಡಿದಳು. ಅವಳ ಆ ನೋಟವನ್ನು ನೋಡಿ ಆಗ ನನಗೆ ಮೈ 

ರಕ್ತವೆಲ್ಲಾ ಒಣಗಿಹೋಗುತ್ತ ಬಂತು, ಪಿಶಾಚಿ, ಭೂತ ಎಂಬುದನ್ನು ನಾನು ನಂಬು 

ವುದಿಲ್ಲ. ಆದರ ನಂಬುಗೆ ನನಗೆ ಇಲ್ಲ, ಆದರೆ ನಮ್ಮ ಮನೆಯಲ್ಲಿ ಕೆಲಸ ಮಾಡುವ 

ದಾದಿಯು ' ವಿನೋದಿನಿಗೆ ನಿಜವಾಗಿಯೂ ಭೂತ ಹಿಡಿದಿದೆ' ಎಂದು ಹೇಳಿದಳು, 

ನಾನದನ್ನು ನಂಬದೆ ಆ ರಾತ್ರಿಯ ನಾವು ಏಕಶಯ್ಕೆಯಲ್ಲಿ ಮಲಗಿದ್ದೆವು. ರಾತ್ರಿ 

ಯಲ್ಲಾ ಎನೋದಿನಿಗೆ ನಿದ್ದೆಯಿಲ್ಲ. ಹಾಸಿಗೆಯಮೇಲೆ ನಿಲ್ಲಲಾರದೆ ಹೊರಳಾಡಿ 

ಹೋದಳು, ಸ್ವಲ್ಪವೂ ಕಣ್ಣು ಮುಚ್ಚಲಿಲ್ಲ. ನಾನು ಅವಳ ಮೈ ಮುಟ್ಟಿ ನೋಡಿದೆನು, 

ಮೈ ಬೆಂಕಿಯಾಗಿ ಸುಡುತ್ತಲಿತ್ತು, ಎಳ್ಳು ಹಾಕಿದರೆ ಸಿಡಿಯುವ ಹಾಗಿತ್ತು. ಅತ್ಯಂತ 

ಜ್ವರವೆಂದು ತಿಳಿದೆನು, ಕೈಯಿಂದ ಹಾಗೆಯೇ ಅವಳ ಮೈ ಸವರಿದೆನು, ನಾಲೈದು 

ನಿಮಿಷದೊಳಗೆ ಆ ಮೈ ಬೆಂಕಿಯು ಕ್ರಮವಾಗಿ ಕಡಿಮೆಯಾಗುತ್ತಾ ಬಂದು, ಕಡೆಗೆ 

ಮೈಯೆಲ್ಲಾ ಆಲಿಕಲ್ಲು ಮುಟ್ಟಿದಹಾಗೆ ತಣ್ಣಗಾಗಿ ಹೋಯಿತು. ನಾನು ರಾತ್ರಿ 

ಯೆಲ್ಲಾ ಪರೀಕ್ಷಿಸಿ ನೋಡಿದೆನು, ನಾನು ಅವಳ ಮೈ ಮೇಲೆ ಕೈಯಿಟ್ಟರೆ ಕೂಡಲೆ 

ಮೈಯೆಲ್ಲಾ ಆಲಿಕಲ್ಲಿನಹಾಗೆ ತಣ್ಣಗಾಗುವುದು, ಕೈ ತೆಗೆದುಬಿಟ್ಟರೆ ಕ್ರಮವಾಗಿ 

ಮೈಯಲ್ಲಿ ಉಷ್ಣ ವೇರುವುದು ; ಹೀಗಾಗುತ್ತಲಿತ್ತು. ನಾನು ಸ್ವಲ್ಪ ಹೆಚ್ಚಾಗಿ ಕೈಯ 

ಟ್ಟು ಕೊಂಡಿದ್ದರೆ ನಿಜವಾಗಿಯೂ ಅವಳು ಕೊಲ್ಹಾಪ್ಸಾಗಿ*  (ಒಮ್ಮಿಂದೊಮ್ಮೆ ಕ್ಷೀಣಿ 

ಸಿಹೋಗಿ) ಅವಳ ಮೃತ್ಯುವುಂಟಾಗುತ್ತಲಿತ್ತು. ಬೆಳಗ್ಗೆ ಎದ್ದು ನೋಡಿದೆನು, ಕಣ್ಣು 

ಅಷ್ಟು ಕೆಂಪಾಗಿರಲಿಲ್ಲ ; ರಕ್ತಪಾಶವಿರಲಿಲ್ಲ. ಶರೀರದಲ್ಲಿಯ ರಕ್ತವೆಲ್ಲಾ ಶೋಷಿಸಿ  

ಹೋಗಿತ್ತು. ಮೈಯೆಲ್ಲಾ ಹಲ್ಲಿಯಹಾಗೆ ಬೆಳ್ಪಾಗಿ ಹೋಗಿತ್ತು. ಅವಳು ನಿಶ್ಯಕ್ತಿಯಾ 

ಗಿರುವುದನ್ನು ನೋಡಿ, ನನಗೆ ಬಹಳ ಭಯವುಂಟಾಯಿತು, ನಿನ್ನನ್ನು ಕರೆಯಿಸಬೇಕೆಂ 

ದಿದ್ದೆನು. ಆದರೆ ನಮ್ಮ ಮನೆಯ ಪರಿಚಾರಿಕೆಯ ಹೆಂಗಸರಿಗೆ ಏನು ಗೊತ್ತಾಯಿತೋ 

.............

*collapse 

----------------------------------------- 

20 ಉನ್ಮಾದಿನಿ 


ನಾನದನ್ನು ಅರಿಯೆನು, ಅವರು ನಿನ್ನನ್ನು ಕರೆಯಿಸಬೇಡವೆಂದು ಹೇಳಿದರು. ಅವರ 

ಹೇಳಿಕೆಯ ಪ್ರಕಾರ ಒಬ್ಬ ಮಂತ್ರಗಾರನನ್ನು ಕರೆಯಿಸಿದೆನು. ಅವನು ಬಂದು 

ಮಾಡಿದ ಕಾರ್ಯವನ್ನು ನೋಡಿ, ನನಗೆ ಬಹಳ ಆಶ್ಚರ್ಯವಾಯಿತು, ಪಿಶಾಚಿ, 

ಭೂತ, ಮಂತ್ರ ಇವುಗಳಲ್ಲಿ ನನಗೆ ಸ್ವಲ್ಪವೂ ನಂಬುಗೆಯಿಲ್ಲ. ಆದರೆ ಆ ಮಂತ್ರಗಾ 

ರನ ಕಾರ್ಯವನ್ನು ನೋಡಿ ನನಗೆ ನಂಬುಗೆಯುಂಟಾಯಿತು. ” 


ಈ ಸಮಯದಲ್ಲಿ ಡಾಕ್ಟರನು ಮುಂದೆ ಮಾತು ಸಾಗಗೊಡಿಸದೆ, “ ಆ ನಂಬುಗೆ 

ಯುಂಟಾದುದು ಹೇಗೆ ? '' ಎಂದನು.


 ಜ್ಯೋತಿಪ್ರಕಾಶನು ಪುನಃ ಹೇಳತೊಡಗಿದನು :-ಅಂತಹ ದುರ್ಬಲವುಳ್ಳ ರೋಗಿಯು, 

ಎರಡು ಸಾಸವೆಯು ಕಾಳುಗಳನ್ನು ಮಂತ್ರಿಸಿ ಮೈಮೇಲೆ ಹಾಕುತ್ತಲೆ, ಅವಳ ಶಕ್ತಿಯು 

ಅತಿ ಯಾಯಿತು, ಆಗವಳನ್ನು ಹಿಡಿದು ನಿಲ್ಲಿಸುವುದೇ ಕಷ್ಟವಾಯಿತು.” 


ನಗೇಂದ್ರನಾಥನು ಆತುರದಿಂದ, " ಅನಂತರ, ಅದಾದಮೇಲೆ ?” ಎಂದನು. 


ಜ್ಯೋತಿಪ್ರಕಾಶನು ಪುನಃ ಹೇಳತೊಡಗಿದನು :-_" ಅನಂತರ ಒಂದು ಅರಸಿ 

ನದ ಕೊನೆಯ ತುಂಡನ್ನು ಮಂತ್ರಿಸಿ, ಮೂಗಿಗೆ ತೋರಿಸಿದೊಡನೆ ಬಾಯಿಯಿಂದ 

ಮಾತು ಹೊರಟಿತು. ಆ ವಿವಾಹವಾದಮೇಲೆ ವಿನೋದಿನಿಯ ಬಾಯಿಯಿಂದ ಒಂದು 

ಮಾತನ್ನೂ ಕೇಳಿರಲಿಲ್ಲ. ಆದುಕಾರಣ ಆತುರದಿಂದ ನಾನೂ ಹೋಗಿ ಅಲ್ಲಿ ನಿಂತು 

ಕೊಂಡೆನು. ಆದರೆ ಅವಳು ಹೇಳಿದ ಮಾತುಗಳನ್ನು ಕೇಳಿ, ನನಗೆ ಎದೆಯು ನಡುಗಿ 

ಹೋಯಿತು. ಆ ಕಂಠಸ್ವರವು ಅತಿ ಕರ್ಕಶವಾಗಿತ್ತು, ವಿನೋದಿನಿಯ ಕಂಠಸ್ವರ 

ವೆಂದು ನನಗೆ ನಂಬುಗೆ ಹುಟ್ಟಲಿಲ್ಲ. ಆ ಕರ್ಕಶವಾದ ಕಂಠಸ್ವರದಲ್ಲಿ ಅವಳು ಹೇಳಿದ 

ಮಾತುಗಳು ಏನಿರಬಹುದೆಂದು ತಿಳಿಯುವೆ ? ಏನೆಂದರೆ :--' ನೀವು ಇವಳನ್ನು 

ಏತಕ್ಕೆ ಇಲ್ಲಿಗೆ ಕರೆತಂದಿ ? ಅವಳು ಎಲ್ಲಿದ್ದಳೋ ಆ ಮಹೇಶಪುರಕ್ಕೆ ಕರೆದುಕೊಂಡು 

ಹೋಗಿ, ಅಲ್ಲಿ ಬಿಟ್ಟು ಬನ್ನಿ, ಇಲ್ಲದಿದ್ದರೆ ನಿಮಗೆ ಮೇಲಾಗದು. ನಿಮ್ಮಲ್ಲಿ ಒಬ್ಬನೂ 

ಪ್ರಾಣದಿಂದಿರನು ' ಎಂದು ಹೇಳಿ ವಳು, ನಾನು ಸ್ವಬ್ದನಾಗಿ ಅಲ್ಲಿಯೇ ಇದಿರಿಗೆ ನಿಂತಿ 

ದ್ದೆನು, ನನ್ನನ್ನು ಕಂಡು ನನ್ನ ಮೇಲೆ ರೇಗಿದಳು, ನನ್ನನ್ನು ಕುರಿತು, 'ನೀನು 

ವಿನೋದಿನಿಯನ್ನು ಮದುವೆ ಮಾಡಿಕೊಂಡೆನೆಂದು ತಿಳಿದಿರುವೆಯಾ ? ಅವಳು ನಿನ್ನವಳಾ 

ಗುವಳೆ ? ವಿನೋದೆಯು ಎಂದಿಗೂ ನಿನ್ನ ವಿನೋದೆಯಾಗಳು, ಅವಳು ದುರ್ಗಾವತಿ 

ಯಾಗಿರುವಳು, ಬರಕಾಲವೂ ನನ್ನವಳಗಿರುವಳು. ಅವಳನ್ನು ಕರೆದುಕೊಂಡು 

ಹೋಗಿ ಬಿಟ್ಟು ಬಾ ! ಈಗಲೆ ಬಿಟ್ಟ ಬಾ !! ” ಎಂದು ಹೇಳಿದಳು. ನಾನಾದರೋ, 

ಅವಾಕ್ ? ಆ ಭಯಂಕರವಾದ ಕಂಠಸ್ವರವು ಈಗಲೂ ನನ್ನ ಕಿವಿಗೆ ಕೇಳಿಸುವಹಾಗಿ 

-------------------------------------------

ನಾಲ್ಕನೆಯ ಪರಿಚ್ಛೇದ 21 

 

ರುವುದು, ವಿನೋದಿನಿಯ ಆ ಸುಂದರವಾಗಿದ್ದ ಕಣ್ಣುಗಳನ್ನು ನೋಡಿ, ನಾನು 

ವಿಮೋಹಿತನಾಗಿದ್ದೆನು, ಈಗ ಆ ಕಣ್ಣುಗಳನ್ನು ನೋಡಿದರೆ, ನನ್ನ ಪ್ರಾಣವು ಭಯ 

ದಿಂದ ಆಕುಲವಾಗುವುದು, ಭೂತ, ಪಿಶಾಚಿ ಇವುಗಳಲ್ಲಿ ನನಗೆ ಈಗ ದೃಢವಾದ 

ನಂಬುಗೆಯು೦ಟಾಗಿಹೋಗಿರುವದು " 


ನಗೇಂದ್ರ:-"ಅನಂತರ, ಮಂತ್ರವಾದಿಯು ಆಗ ಏನುಮಾಡಿದನು ?” 


ಜ್ಯೋತಿ:-" ನನಗೇನೋ ಆ ಭೂತವನ್ನು ಬಿಡಿಸಿ ಓಡಿಸುವ ಭರವಸೆಯರ 

ಲಿಲ್ಲ. ಆದರೆ ಮಂತ್ರವಾದಿಯು ಆ ಸಮಯದಲ್ಲಿ ಭೂತವನ್ನು ಬಿಡಿಸುವುದಾಗಿ 

ಭರವ ಸೆಯನ್ನು ಕೊಟ್ಟನು, ಮತ್ತು ತನಗೆ ತಕ್ಕ ಪುರಸ್ಕಾರವನ್ನು ಕೊಡಬೇಕೆಂದು ಕೇಳಿ 

ಕೊಂಡನು. ಅನಂತರ ಸಾಸವೆಯ ಕಾಳುಗಳನ್ನು ಮಂತ್ರಿಸಿ ಒಂದೊಂದಾಗಿ ಅವಳ 

ಮೈಮೇಲೆ ಎಸೆಯುತ್ತ ಬಂದನು, ಆದು ರೋಗಿಗೆ ಅಸಹ್ಯವಾಗುತ್ತ ಬಂದು  

ಯಾತನಸೂಚಕ ಶಬ್ದದಿಂದ ' ಹೋಗುವೆನು ?' ' ಹೋಗುವೆನು !!' ಎಂದು ಕೂಗಿ 

ಕೊಂಡಳು. ಆಗ ಮಂತ್ರವಾದಿಯು ಒಂದು ದೊಡ್ಡ ಕೊಡದಲ್ಲಿ ತುಂಬಾ ನೀರು 

ಬೇಕೆಂದನು. ಕೊಡದಲ್ಲಿ ನೀರನ್ನು ತಂದಿಟ್ಟರು. ಆ ನೀರು ತುಂಬಿದ ಕೊಡವನ್ನು 

ಹಲ್ಲಿನಿಂದ ಕಚ್ಚಿಕೊಂಡು ಹೋಗೆಂದು ಮಂತ್ರವಾದಿಯು ಅಪ್ಪಣೆ ಮಾಡಿದನು. 

ರೋಗಿಯು ನಮ್ಮೆಲ್ಲರ ಇದಿರಿಗೆ ತುಂಬಿದ್ದ ಕೊಡವನ್ನು ಕೈಯಿಂದ ಮುಟ್ಟಿದೆ, 

ಮುಂದಿನ ಹಲ್ಲುಗಳಿಂದ ಕಚ್ಚಿ ಎತ್ತಿಕೊಂಡು, ಮನೆಯ ಬಾಗಿಲಿನ ಹೊರಕ್ಕೆ ತೆಗೆದು 

ಕೊಂಡು ಹೋದಳು. ಅಲ್ಲಿ ಕೊಡವನ್ನು ನೆಲದಮೇಲೆ ಇಟ್ಟು ರೋಗಿಯು ಅಜ್ಞಾನ 

ಳಾಗಿ, ನೆಲದಮೇಲೆ ಬಿದ್ದು ಬಿಟ್ಟಳು, ನಾವು ಬಹಳ ಪ್ರಯಾಸಪಟ್ಟು, ಅವಳಿಗೆ ತಿಳಿವು 

ರುವ ಹಾಗೆ ಮಾಡಿದೆವು. ಆಗವಳು ಹಿಂದೂಗಳ ಮನೆಯ ಸೊಸೆಯ ಹಾಗೆ 

ಮುಖಕ್ಕೆ ಗೋಷೆಬಟ್ಟೆಯನ್ನು ಹಾಕಿಕೊಂಡು, ಲಜ್ಜೆಯಿಂದ ಒಂದು ಸ್ಥಳದಲ್ಲಿ 

ಸುಮ್ಮನೆ ಕುಳಿತುಕೊಂಡಳು, ಭೂತವು ಬಿಟ್ಟು ಹೋಯಿತೆಂದು ನಾವೆಲ್ಲರೂ ಮಹಾ 

ನಂದದಿಂದ ಮಂತ್ರವಾದಿಗೆ ಯಥೋಚಿತ ಪುರಸ್ಕಾರವನ್ನು ಕೊಟ್ಟು ಕಳುಹಿಸಿದವು, 

ಆದರೆ ಸಾಯಂಕಾಲವಾದಮೇಲೆ ಮತ್ತೊಂದು ರಗಳೆಯುಂಟಾಯಿತು, ನಾನು ಮನೆ 

ಯೊಳಕ್ಕೆ ಪ್ರವೇಶಮಾಡಿದನು. ಆ ಕೂಡಲೇ ವಿನೋದಿನಿಯು ವಿಕಟಾಕಾರವಾಗಿ 

ನಕ್ಕಳು. ಆ ನಗುವಿನಿಂದ ಮನೆಯೆಲ್ಲಾ ಪ್ರತಿಧ್ವನಿತವಾಯಿತು. ಅಂತಹ ಭಯಂಕರ 

ವಾದ ನಗುವನ್ನು ನಾನು ಹುಟ್ಟಿದಮೇಲೆ ಕೇಳಿರಲಿಲ್ಲ, ಆ ನಗುವನ್ನು ಕೇಳಿ, ನನ್ನ 

ಪ್ರಾಣವು ನಡುಗಿ ಹೋಯಿತು, ನಾನು ಭಯದಿಂದ ಪುನಃ  ಮನೆಯೊಳಗೆ ಹೋಗ 

ಲಿಲ್ಲ. ನಾನು ಮನೆಯೊಳಗಿನಿಂದ ಹೊರಕ್ಕೆ ಬಂದೆನೋ ಇಲ್ಲವೋ, ಅಷ್ಟರೊಳಗೆ 

--------------------------------------------

22 ಉನ್ಮಾದಿನಿ 

 

ಬಾಗಿಲನ್ನು ಬಲವಾಗಿ ಹಾಕಿಕೊಂಡಳು. ಒಳಗಡೆ ಆಗುಣಿ ಹಾಕಿಕೊಂಡು ರಾತ್ರಿ 

ಯೆಲ್ಲಾ ಬಾಗಿಲನ್ನು ತೆಗೆಯಲಿಲ್ಲ. ಸ್ವಲ್ಪ ಹೊತ್ತಿನಮೇಲೆ ನಗುವೇನೋ ನಿಂತಿತ್ತು. 

ಆದರೆ ಅದಕ್ಕೆ ಪ್ರತಿಯಾಗಿ ಅಳುವು ಪ್ರಾರಂಭವಾಯಿತು ಹೀಗೆ ನಗುವು ಅಳುವುಗ 

ಳಿಂದ ರಾತ್ರಿ ಕಳೆಯಿತು. ಬೆಳಗಾದಮೇಲೆ ಬಾಗಿಲನ್ನು ಒಡೆಯಬೇಕಾಯಿತು. ಆದರೆ 

ಒಳಗೆ ಹೋಗುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ಪುನಃ ಭೂತವೇ ಬಂತೋ, 

ಅಥವಾ ಮತ್ಯಾವ ರೋಗವೋ ಎಂಬುದನ್ನು ಗೊತ್ತು ಮಾಡಲಾಗದೆ ನಿನ್ನನ್ನು ಕರೆಯಿ ಸಿದನು. " 

 

ನರೇಂದ್ರನಾಥನು ಸ್ವಲ್ಪ ಯೋಚಿಸಿ, " ನಾನು ರೋಗಿಯನ್ನು ನೋಡಿ ಅನಂತರ 

ಹೇಳುವೆನು” ಎಂದನು. 


ಜ್ಯೋತಿ:- ನೀನು ಕೊಟ್ಟಿಡಿಯೊಳಗೆ ಹೋಗಿ ನೋಡಬಹುದು. ಆದರೆ 

ನನಗೆ ಬರುವುದಕ್ಕೆ ಧೈರ್ಯ ಸಾಲದು, ಒಂದು ವೇಳೆ ಭೂತವೇ ಆಗಿದ್ದರೆ, ಆ 

ಭೂತಕ್ಕೆ ನನ್ನ ಮೇಲೆಯೇ ಹೆಚ್ಚು ಕ್ರೋಧವಿರುವಹಾಗಿರುವುದು.” 


ನರೇಂದ್ರನಾಥನು ಒಳಗೆ ಹೋಗಿ ಅರ್ಧಗಂಟೆಯ ಹೊತ್ತು ನೋಡಿ ಅನಂತರ 

ಹೊರಗೆ ಬಂದು, " ಇದು ನಿನ್ನ ಭೂತಪ್ರೇತ ಯಾವುದೂ ಅಲ್ಲ. ಇದೊಂದು ರೋಗ 

ವಿಶೇಷ ಇದಕ್ಕೆ ಇಂಗ್ಲಿಷುಡಾಕ್ಟರರು ಮೆಲಾಂಕೋಲಿಯ * ಎಂದು ಹೇಳುವರು. 

ನಮ್ಮ ಪಂಡಿತರು ಇದೊಂದು ವಾಯುರೋಗವನ್ನುವರು” ಎಂದನು. 


ಜ್ಯೋತಿಪ್ರಕಾಶನು ಆಶ್ಚರ್ಯಪಟ್ಟು, " ಹಠಾತ್ತಾಗಿ ಈ ರೋಗವು ಘಟನೆ 

ಯಾದುದು ಹೇಗೆ ? ಈ ರೋಗಕ್ಕೆ ಕಾರಣವೇನು, ಊಹಿಸಲಾಪೆಯಾ ?” ಎಂದನು. 


ನಗೇಂದ್ರ:-ಯಾವುದಾದರೂ ಮರ್ಮಾಂತಿಕವಾದ ಮನೋಕೋಶ ಅಥವಾ 

ಶೋಕವುಂಟಾದರೆ, ಈ ರೋಗವು ಹುಟ್ಟುವುದು, ಇವಳಿಗೆ ಅಂತಹ ಕಾರಣವೇನಾ 

ದರೂ ಉಂಟೆ ?” 


ಜ್ಯೋತಿ:-" ಅಂತಹ ಕಾರಣ ಯಾವಾಗಲೂ ಉಂಟಾಗಿಲ್ಲ. ಉಂಟಾಗುವ 

ಹಾಗೂ ಇಲ್ಲ. ವಿನೋದಿನಿಯ ದೊಡ್ಡಪ್ಪನು ಆಕೆಯನ್ನು ಇದುವರೆಗೂ ಲಾಲನ

ಪಾಲನ ಮಾಡುತ್ತಲಿದ್ದವು, ಈಗ ಆತನು ಗತಿಸಿಹೋದನು, ಆ ವ್ಯಸನವು ಇನ್ನೂ 

ಇರುವುದೆಂದು ನನಗೆ ಬೋಧೆಯಾಗುವುದಿಲ್ಲ. ಅದೇನೋ, ವ್ಯಸನಕ್ಕೆ ಒಂದು ಕಾರ 

ಣವೇ ಆಹುದು, ಆದರೆ ಅದಕ್ಕೆ ಪ್ರತಿಯಾಗಿ ಆಹ್ಲಾದಕ್ಕೆ ಕಾರಣಗಳು ಸಹಸ್ರಪಾಲು 

ಹೆಚ್ಚಾಗಿವೆ. ಮೊದಲು, ಆ ದೊಡ್ಡಪ್ಪನ ಮರಣದಿಂದ ವಿನೋದಿನಿಯು ಒಂದು 

.................

• Melancholia 

---------------------------------------

ನಾಲ್ಕನೆಯ ಪರಿಚ್ಛೇದ ೨೩ 

ಲಕ್ಷಕ್ಕಿಂತಲೂ ಹೆಚ್ಚು ಆಸ್ತಿಗೆ ಉತ್ತರಾಧಿಕಖರಿಣಿಯಾದಳು, ಅದರಮೇಲೆ ಆಗವಳು 

ಹಳ್ಳಿಗಾಡಿನಲ್ಲಿ ಅತಿ ಹೀನಾವಸ್ಥೆಯಲ್ಲಿ ಬಹಳ ಭಯಂಕರವಾದ ಮೌಲಿಕತೆ ಮತ್ತು 

ಕುಸಂಸ್ಕಾರ ಮಧ್ಯದಲ್ಲಿ ಪ್ರತಿಪಾಲಿಶಳಾಗಿರುತ್ತಿದ್ದಳು. ಈಗ ಅದಕ್ಕೆ ಪ್ರತಿಯಾಗಿ 

ಈ ಕಲಿಕಾ ಪಟ್ಟಣದಲ್ಲಿ ನಮ್ಮ ಸಮಾಜದ ಶ್ರದ್ಧಾ ಸ್ಪದರಾದ ನವೀನಗೋಪಾಲ 

ಬಾಬುಯವರ ಮನೆಯಲ್ಲಿ ಈ ಹುಡುಗಿಯ ತಾಯಿ, ಉನ್ನ ಮನವುಳ್ಳ ಹೈಮವತಿ 

ಯಿಂದ ಅತ್ಯಂತ ಆದರದಿಂದ ಪ್ರತಿಪಾಲಿತಳಾಗುತ್ತಿದ್ದಳು. ವಿನೋದಿನಿಯ ಆನಂದಕ್ಕೆ 

ಇನ್ನೂ ಕಾರಣವುಂಟು, ಅವಳ ತಾಯಿತಂದೆಯವರು ಆಕೆಯೇ ಮೆಚ್ಚಿದ ವರನಿಗೆ 

ಕೊಟ್ಟು ಅವಳಿಗೆ ಮದುವೆ ಮಾಡಿರುವರು. ವಿವಾಹದ ದಿನ ವಿನೋದಿನಿಯು ನನ್ನ 

ಮೇಲೆ ಅವಳಿಗಿದ್ದ ಪ್ರೀತಿಯನ್ನು ಪ್ರಕಾಶಪಡಿಸಿದುದನ್ನು ನೋಡಿ, ನಮ್ಮ ಸಮಾಜದ 

ನಮ್ಮ ಸೋದರಿಯರೆಲ್ಲರೂ ಅತ್ಯಂತ ವಿಸ್ಮಿತರಾದರು, ಅದಕ್ಕೋಸ್ಕರ ಅವಳು ಹೆಚ್ಚು 

ಹಿಂಸೆಪಟ್ಟಳೆಂದೂ ಕೇಳಿದೆನು, ಆದುದರಿಂದ ಮರ್ಮಾಂತಿಕ ಮನೋಕಷ್ಟ ಅಥವಾ 

ಶೋಕಕ್ಕೆ ಪ್ರತಿಯಾಗಿ ಅತ್ಯಂತ ಆನಂದಕ್ಕೆ ಹೆಚ್ಚು ಕಾರಣಗಳಿದ್ದುವು. ಏತಕ್ಕೋಸ್ಕರ 

ಹೀಗಾಯಿತೋ, ಅದನ್ನು ಸ್ಥಿರಮಾಡುವುದು ಕಷ್ಟವಾಗಿದೆ.” 


ನರೇಂದ್ರ (ಸ್ವಲ್ಪ ಹೊತ್ತು ಯೋಚಿಸಿ) :- ಅತ್ಯಂತ ಆನಂದವುಂಟಾದರೂ 

ಈ ರೋಗವು ಹುಟ್ಟುವುದು, ನಾನು ವಿಲಾಯತಿ ಲಾನ್‌ಸೆಟ್ * ಎಂಬ ಪತ್ರಿಕೆಯಲ್ಲಿ 

ಅಂತಹ ಘಟನೆಯೊಂದನ್ನು ಓದಿದ ಜ್ಞಾಪಕವಿರುವುದು.” 


ಜ್ಯೋತಿ:- "ಅಣ್ಣಾ ! ನಿನ್ನ ಹೇಳಿಕೆಯಿಂದ ನನಗೆ ಇದ್ದ ಒಂದು ದುರ್ಭಾ 

ವನೆಯು ಹೋಯಿತು, ಈಗ ಹೆಚ್ಚು ಆನಂದದಿಂದಲೇ ವಿನೋದಿನಿಗೆ ಈ ಭಯಂಕರ 

ವಾದ ರೋಗವು ಹುಟ್ಟಿರಬೇಕು. ಆ ವಿಚಾರದಲ್ಲಿ ಇನ್ನು ಸಂದೇಹವಿಲ್ಲ. ಆದರೆ 

ಈಗಲೂ ನನ್ನ ಮನಸ್ಸಿನಲ್ಲಿ ಒಂದು ಸಂದೇಹವುಳಿದುಕೊಂಡಿರುವುದು ಏನೆಂದರೆ, 

ಆ ಭೂತದ ಸಮಾಚಾರ ನನಗೆ ಇನ್ನೂ ಚೆನ್ನಾಗಿ ಗೊತ್ತಾಗಲಿಲ್ಲವಾಗಿದೆ. ” 


ಡಾಕ್ಟರನು, " ಅದೂ ಈ ರೋಗದ ಕಾರ್ಯವಾಗಿರುವುದು, ಈ ರೋಗ 

ಗ್ರಸ್ತರೋಗಿಯು ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರವಾದ ಕಾರ್ಯಗಳನ್ನು 

ಮಾಡುವನು, ಮಂತ್ರವಾದಿಗಳು ಕೇವಲ ಕೌಶಲ್ಯದಿಂದ ತಮಗೆ ಇಷ್ಟ ಬಂದ ಮಾತು 

ಗಳನ್ನು ರೋಗಿಯ ಬಾಯಿಯಿಂದ ಹೇಳಿಸುವರು; ಮತ್ತು ತಮ್ಮ ಮನೋದುತವಾದ 

ಕಾರ್ಯವನ್ನೂ ರೋಗಿಯಿಂದ ಮಾಡಿಸುವರು. ಭೂತಪ್ರೇತವೆಲ್ಲಾ ಸುಳ್ಳು ” ಎಂದು 

ಹೇಳಿದರು. 

...................

* Lancet

-----------------------------------------

೨೪ ಉನ್ಮಾದಿನೀ 


ಜ್ಯೋತಿ:- ಆ ವಿಚಾರವನ್ನು ಕುರಿತು ನಿನ್ನೊಡನೆ ಕಡೆಗೆ ತರ್ಕಮಾಡು 

ವೆನು, ಈಗ ರೋಗವು ಹೋಗಿ ಹೇಗೆ ಆರೋಗ್ಯವಾಗಬೇಕೋ, ಅದರ ವ್ಯವಸ್ಥೆ 

ಯನ್ನು ಮಾಡು, ” 


ನಗೇಂದ್ರ:-" ಬಹಳ ಪ್ರಯಾಸಪಟ್ಟರೆ, ಈ ರೋಗವು ಆರೋಗ್ಯವಾಗು 

ವುದು ; ಆದರೆ ಬೇಗನೆ ಆರೋಗ್ಯವಾಗದು ; ಸಾವಕಾಶ ಬೇಕು. ನಾನು ಕೊಡುವ 

ಔಷಧವನ್ನು ಸೇವಿಸಬೇಕು ; ನಿಯಮಿತ ಆಹಾರವೂ ರಾತ್ರಿ ಸರಿಯಾದ ನಿದ್ರೆಯೂ 

ಇದಕ್ಕೆ ಏರ್ಪಾಟಾಗಬೇಕು. ಈ ಪ್ರಕಾರ ಮತ್ತು ನಾಲ್ಕು ತಿಂಗಳು ಮಾಡಿದರೆ, 

ಆರೋಗ್ಯಲಾಭವುಂಟಾಗಬಹುದು. " 


ಜ್ಯೋತಿ :-" ನಾನು ಹತ್ತಿರ ಹೋದರೆ, ರೋಗವು ಹೆಚ್ಚುವುದು. ಹೀಗಿರು 

ವಾಗ ನಾನು ಅವಳ ಹತ್ತಿರ ಹೋಗುವುದುಚಿತವೆ ? ?” 


ನಗೇಂದ್ರ :- ಹಾಗಾದರೆ ಹೋಗದಿರುವುದೇ ಒಳ್ಳೆಯದು. ನಾನು ಹೇಳುವ 

ಹಾಗೆ ವ್ಯವಸ್ಥೆ ಮಾಡಿದರೆ ಸಾಕು, ” 


ಹೀಗೆಂದು ಹೇಳಿ, ಡಾಕ್ಟರನು ಔಷಧ ಚೀಟಿಯನ್ನು ಬರೆದು ಕೊಟ್ಟು 

ಹೊರಟುಹೋದನು. ಜೋತಿಪ್ರಕಾಶನು ಔಷಧವನ್ನು ಇರಿಸುವುದಕ್ಕೆ ಜನರನ್ನು 

ಕಳುಹಿಸಿದನು. 

++++++++

ಐದನೆಯ ಪರಿಚ್ಛೇದ. 

ವಿನೋದಿನಿಯ ಆಲಸ್ಯದ ಸಮಾಚಾರವು ಆಕೆಯ ತಂದೆಯಾದ ನವೀನಗೋಪಾಲ 

ನಿಗೂ, ಆಕೆಯ ತಾಯಿಯಾದ ಹೈಮವತಿಗೂ ಮುಟ್ಟಿತು. ಆ ಭಯಂಕರ 

ವಾದ ಸಮಾಚಾರದಿಂದ ಅವರಿಗೂ ಹರ್ಷದಲ್ಲಿ ವಿವಾದವುಂಟಾಯಿತು. ಅವರು ಮರ್ಮಾ 

ಹಶರಾಗಿ ಮಗಳನ್ನು ನೋಡುವುದಕ್ಕೆ ಬಂದರು. ಅವರು ಬಂದ ಸಮಯದಲ್ಲಿ ಕೊಟ್ಟಡಿ 

ಯಲ್ಲಿ ಬೀಗವನ್ನು ಹಾಕಿ ಇಡಲ್ಪಟ್ಟಿದ್ದ ವಿನೋದಿನಿಯು ತೆರೆದಿದ್ದ ಕಿಟಿಕೆಯಲ್ಲಿ ನಿಂತು 

ಕೊಂಡು ಮೊಳಕಾಲಿನವರೆಗೆ ಕೆದರಿ ಹಾರಾಡುತ್ತಲಿದ್ದ ತೈಲಹೀನವಾದ ಕೂದಲುಳ್ಳವ 

ಳಾಗಿ, ಹುಚ್ಚಿಯಹಾಗೆ ಹಾಡುತಲಿದ್ದಳು :-- 

-----------------------------------------

ಐದನೆಯ ಪರಿಚ್ಛೇದ ೨೫ 

" ಬರುವೆನೆಂದು ಹೇಳಿ ಹೋದವನು ?” || 

" ಬರಲಿಲ್ಲ-ಬರಲಿಲ್ಲ-ಬರಲಿಲ್ಲವೆ” || 

ಈ ಅಸಂಬದ್ಧವಾದ ಜಾಡು ಮುಗಿಯುತ್ತಲೇ, ಬೇರೆ ರಾಗವನ್ನೆತ್ತಿ ಮತ್ತೊಂದು 

ಅಸಂಬದ್ಧವಾದ ಹಾಡನ್ನು ಹಾಡಲಾರಂಭಿಸಿದಳು : 

" ಮರೆತೆನೆಂದು ಮಾಡಿದ್ದೇನೆ” || 

ಮರೆಯಲಿಲ್ಲವೆ ಹೋಗು ಸಖಿ-"

ಹೀಗೆ ಮನಸ್ಸಿಗೆ ಬಂದ ರಾಗದಿಂದ ಹಾರಿ ಪೂರೈಸಿದೊಡನೆ ವಿನೋದಿನಿಯು 

ಅಳುವುದಕ್ಕೆ ತೊಡಗಿದಳು. ಆ ಅಳುವಿನಲ್ಲಿಯೂ, ನೈರಾಶ್ಯದಿಂದ ತನ್ನ ಪ್ರಾಣವು 

ದಗ್ಗವಾಗುತ್ತಲಿರುವುದೆಂಬ ಮರ್ಮಾ೦ತಿಕವಾದ ಮಾತುಗಳನ್ನು ಹೇಳುವಳು. 


ಈ ಸಮಯದಲ್ಲಿ ಪರಿಚಾರಿಕೆಯೊಬ್ಬಳು ಬಂದು ವಿನೋದಿನಿಯನ್ನು ಕುರಿತು, 

" ಒಂದು ತಡವೆ ಇತ್ತ ಕಡೆ ನೋಡು ! ನಿಮ್ಮ ತಾಯಿ ಬಂದಿರುವಳು ” ಎಂದು 

ಕೇಳಿದಳು. 

 

' ತಾಯಿ ಬಂದಿರುವಳು' ಎಂಬ ಮಾತು ಕಿವಿಗೆ ಬೀಳುತ್ತಲೇ, ಎಲ್ಲೇ 

/ನಮ್ಮಮ್ಮ ? ಎಲ್ಲೇ ನಮ್ಮಮ್ಮ ?' ಎಂದು ಕೂಗುತ್ತ, ಉನ್ಮತ್ತ ಭಾವದಿಂದ ವಿಸ್ಫಾರಿತ 

ನಯನೆಯಾಗಿ ನಾಲ್ಕು ದಿಕ್ಕುಗಳೂ ತಿರುಗಿತಿರುಗಿ ನೋಡಿದಳು. 


ಪರಿಚಾರಿಕೆ:- ನಿಮ್ಮಮ್ಮನು ನಿನ್ನ ಇದಿರಿಗೆ ನಿಂತಿರುವಳಲ್ಲವೆ ?” 


ವಿನೋದಿನಿಯು ವಿಸ್ಫಾರಿತಲೋಚನಗಳುಳ್ಳವಳಾಗಿ, ಹೈಮವತಿಯನ್ನು ಸ್ವಲ್ಪ 

ಹೊತ್ತು ದೃಷ್ಟಿಸಿ ನೋಡಿದಳು. ಅನಂತರ ಭೀತಿವ್ಯಂಜಕ ಸ್ವರದಿಂದ, " ಇಲ್ಲ ! 

ಇಲ್ಲ !! ಇಲ್ಲ !!! ಇವಳು ನಮ್ಮಮ್ಮನಲ್ಲ ! ನಮ್ಮಮ್ಮನು ಸ್ವರ್ಗಕ್ಕೆ ಹೋದಳು ! 

ಇವಳು ರಾಕ್ಷಸಿ-ನನ್ನನ್ನು ತಿನ್ನುವುದಕ್ಕೆ ಬಂದಿರುವಳು !!! ನೀನು ನನ್ನನ್ನು ರಕ್ಷಿಸು- 

ನನ್ನನ್ನುಳಿಸು !!! ” ಎಂದು ಕೂಗಿದಳು. 

 

ಮಗಳ ಇಂತಹ ಶೋಚನೀಯವಾದ ಅವಸ್ಥೆಯನ್ನು ನೋಡಿ, ಹೈಮವತಿಯು 

ಇನ್ನು ತಾಳಲಾರದೆ ಹೋದಳು. ಅವಳ ಉಚ್ಛಶಿಕ್ಷೆ, ಸಭ್ಯತೆ, ಮುಂತಾದುವುಗಳ 

ಅಭಿಮಾನವು ದೂರವಾಗಿ ಹೋಗಿ ಅವಳೂ ಅಶಿಕ್ಷಿತೆಯರಾದ ಹಿಂದೂ ಹೆಂಗಸರ 

ಹಾಗೆ ಗಟ್ಟಿಯಾಗಿ ಅಳುವುದಕ್ಕೆ ತೊಡಗಿದಳು. ಆ ಭಯಂಕರವಾದ ದೃಶ್ಯವನ್ನು 

ನೋಡಿ, ನವೀನಗೋಪಾಲನ ಕಣ್ಣುಗಳಿಂದ ನೀರು ಹರಿದು, ವಕ್ಷಸ್ಥಳವು ತೊಯಿದು 

ಹೋಯಿತು. ತಾಯಿತಂದೆಗಳಿಬ್ಬರೂ ಹೀಗೆ ಅಳುವುದನ್ನು ನೋಡಿ, ವಿನೋದಿನಿಗೆ 

ಹಠಾತ್ತಾಗಿ ಜ್ಞಾನೋದಯವಾದ ಹಾಗಾಗಿ, ಸ್ವಲ್ಪ ಅಪ್ರಸ್ತುತಳ, ತಾಯಿಯನ್ನು 

--------------------------------------------

26 ಉನ್ಮಾದಿನಿ 


ಕುರಿತು- ಅಮ್ಮ ! ನಿನಗೆ ಮನಸ್ಸಿಗೆ ಬರಲಿಲ್ಲವೆ? ನನ್ನ ಮನಸ್ಸಿನ ಆಸೆ ಏನೆಂಬುದು 

ಗೊತ್ತಾಗಲಿಲ್ಲವೆ? ಮೊದಲು, ಅವರು ಬರಲಿ-ನನ್ನ ಮನಸ್ಸು ಸರಿಯಾಗುವುದು-- 

ಆಗ ಒಳ್ಳೆಯ ಮಾತುಗಳನ್ನು ಕೇಳುವೆ. ನನಗೆ ಮನಸ್ಸು ಮೊದಲಿನ ಹಾಗಾಗು 

ವುದು” ಎಂದು ಹೇಳಿದಳು.  


ಈ ಸಮಯದಲ್ಲಿ ಜ್ಯೋತಿಪ್ರಕಾಶನು ಅಲ್ಲಿಯೇ ಇದ್ದವನು ನವೀನಗೋಪಾಲ 

ನನ್ನು ಕುರಿತು, 14 ಎನೋದಿನಿಯು ಈಗ ಹೇಗಿರುವಳು ?” ಎಂದು ಕೇಳಿದನು. 


ನವೀನಗೊಪಾಲನು ಕಣೇ ರಸಿಕೊಂಡು, " ಈಗ ಏನೆಂದು ಹೇಳಲಿ ? ನೋಡಿ 

ದರೆ, ಆ ನಮ್ಮ ವಿನೋದಿನಿಯ ಹಾಗಿಲ್ಲ; ಈಗ ಉನ್ಮಾದಿನಿಯಾಗಿರುವಳು ” ಎಂದು 

ಹೇಳಿದನು, " 


ಈ ಮಾತುಗಳು ವಿನೋದಿನಿಯ ಕಿವಿಗೆ ಬಿದ್ದ ಕೂಡಲೆ ಅವಳು ಚೀತ್ಕಾರಮಾ 

ಡುತ್ತ, “ ನಾನು ವಿನೋದಿನಿಯಲ್ಲ-ಎಂದಿಗೂ ವಿನೋದಿನಿಯಲ್ಲ !! ಮೊದಲು 

ದುರ್ಗಾವತಿಯಾಗಿಲ್ವೆನು-ಈಗ ಉನ್ಮಾನಿಯಾದೆನು ನಿಜವಾಗಿ ಉನ್ಮಾದಿನೀ...” 

 

ಹೀಗೆಂದು ಹೇಳಿ ಜನಕ ಒನನಿ ಮತ್ತು ಜ್ಯೋತಿಪ್ರಕಾಶ ಇವರನ್ನು ಕೈಬೆರಳಿ 

ನಿಂದ ನಿರ್ದೇಶಿಸಿ ತೋರಿಸು, ಮೊದಲಿಗಿಂತಲೂ ಉಚ್ಚ ಕಂಠಸ್ವರದಿಂದ, " ನೀವು 

ಗಳೇ ನನ್ನನ್ನು ಉನ್ಮಾದಿನಿಯಾಗಿ ಮಾಡಿದವರು, ಹೀಗೆ ನಾನು ಉನ್ಮಾದಿನಿಯಾಗು 

ವುದಕ್ಕೆ ನೀವೇ ಮೂಲಕಾರಣ' ಎಂದು ಕೂಗಿ ಹೇಳಿದಳು. 

 

ಆಗ ನವೀನಗೋಪಾಲರು ಕಣ್ಣೀರಸಿಕೊಂಡು, ರುದ್ದ ಕಂಠನಾಗಿ ಬಹು 

ಕಷ್ಟದಿಂದ " ಏತಕ್ಕೆ? ತಾಯಿ ! ನಾವು ನಿನ್ನನ್ನು ಹೇಗೆ ಉನ್ಮಾದಿನಿಯಾಗಿ ಮಾಡಿ 

ದೆವು ? ನಿನ್ನ ನ್ನು ಮಹೇಶಪುರದಿಂದ ಕರೆತಂದಮೇಲೆ, ನಿನಗೆ ಒಂದು ದಿನವಾದರೂ 

ಕಷ್ಟ ಕೊಡಲಿವೆ” ಎಂದನು. 


ಉನ್ಮಾದಿನಿಯು ಉನ್ಮಸ್ವರದಿಂದ, “ ನನಗೆ ಆ ನಿಮ್ಮ ಸುಖವು ಬೇಕಿಲ್ಲ- 

ಬೇಕಿಲ್ಲ ! ನನಗೆ ಸುಖಪಡಿಸುವವರು ಏತಕ್ಕೆ ಬಂದು ಸುಖಪಡಿಸಲಿಲ್ಲ ? ನೀನು ನನ್ನನ್ನು 

ಕರೆತಂದವನು ಅವರನ್ನು ಏತಕ್ಕೆ ಕರೆತರಲಿಲ್ಲ ? ಏತಕ್ಕೆ ಸಮಾಚಾರವನ್ನು ಕಳುಹಿಸ 

ಲಿಲ್ಲ ?” ಎಂದಳು. ಜ್ಯೋತಿಪ್ರಕಾಶನು ವಿಸ್ಮಿತನಾಗಿ ನವೀನಗೋಪಾಲನನ್ನು ಬಿರುಗ 

ಣ್ಣುಗಳಿಂದ ಬಿರಬಿರನೆ ನೋಡುತ್ತ,” ಅವನು ಯಾರು ?” ಎಂದು ಕೇಳಿದನು. 


ನವೀನಗೋಪಾಲನು ವಿಷಣ್ಣ ಮನನಾಗಿ, ಏನೂ ಗೊತ್ತಾಗುವುದಿಲ್ಲವೆಂದನು. 

 

ಆಗ ಉನಾದಿನಿಯು ಚೀತ್ಕಾರವಾಯು, ಕt ಅವರು ನನ್ನ ಜೀವಿತೇಶ್ವರ ! 

ಅವನು ನನ್ನ ವೈಕುಂಟೇಶ್ವರ! ") ಎಂದು ಕೂಗಿದಳು. 

--------------------------------------- 

ಐದನೆಯ ಪರಿಚ್ಛೇದ ೨೭ 

ಜ್ಯೋತಿಪ್ರಕಾಶನು ಪುನಃ ನವೀನಗೊಪಾಲನ ಮುಖವನ್ನು ನೋಡಿದನು. 

ನವೀನಗೋಪಾಲನು ಮೊದಲಿನ ಹಾಗೆ ವಿಷಣ್ಣವದನನಾಗಿ, ಉನ್ಮಾದಿನಿಯ ಪ್ರಲಾಪ 

ವೆಂದನು. 


ಈ ಸಮಯದಲ್ಲಿ ನರೇಂದ್ರನಾಥನು ಅಲ್ಲಿಗೆ ಬಂದನು. ಡಾಕ್ಟರನನ್ನು ನೋಡಿ, 

ಉನ್ಮಾದಿನಿಯು ಮುಖಪರದೆಯನ್ನು ಎಳೆದುಕೊಂಡು, ಲಜ್ಜೆಯಿಂದ ತರಬಡ ಸವರಿಸಿ 

ಕೊಂಡಳು. ಅನಂತರ ಒತ್ತಟ್ಟಿಗೆ ನಿಂತುಕೊಂಡು ಅಸ್ಪುಟಸ್ವರದಿಂದ, " ಇದೇನೆ 

ನಾಚಿಕೆಗೇಡು ಬಂದಿರುವರು ! ನಾನು ಇನ್ನು ಮಾತನಾಡುವುದುಂಟೆ ? ?” ಎಂದೆಂದು 

ಕೊಂಡಳು. 

 

ಹೀಗೆ ಹೇಳಿಕೊಂಡು ಉನ್ಮಾದಿನಿಯು ಉಸಿರದೆ ಒತ್ತಟ್ಟಿಗೆ ಸ್ವಲ್ಪ ಹೊತ್ತು 

ನಿಂತಿದ್ದಳು. ಪುನಃ ಅದೇ ಲಜ್ಞಾಭಾವದಿಂದ, " ಎಲ್ಲಿಗೆ ಹೋಗಲೆ ? ಯಾರೂ ಸ್ವಲ್ಪ 

ಕೂತುಕೊಳ್ಳುವ ಹಾಗೆ ಹೇಳಲಿಲ್ಲವೆ? ಎಷ್ಟು ಯುಗಾಂತರದ ಮೇಲೆ ಬಂದರೆ, 

ಅವರಿಗೆ ಸ್ವಲ್ಪವೂ ಆದರ ತೋರಿಸಬೇಡವೇನೆ ? ” ಎಂದು ಹೇಳಿದಳು. 


ಪರಿಚಾರಿಕೆ :-ಅವರು ಡಾಕ್ಟರ ಬಾಬು ; ನಿನ್ನನ್ನು ನೋಡುವುದಕ್ಕೆ ಬಂದಿರು 

ವರು, ತಾಯಿ !” 


ಇದನ್ನು ಕೇಳಿ ಉನ್ಮಾದಿನಿಯು ಅವಕುಂಠನದ ಬಟ್ಟೆಯನ್ನು ತೆಗೆದು ದೂರ 

ಬಿಸುಟು, " ಡಾಕ್ಟರ ಬಾಬು ! ನಿಮ್ಮಲ್ಲಿ ವಿಷವಿರುವುದೇ ? ನಿಮ್ಮ ಬೇರೆ ಔಷಧವನ್ನು 

ನಾನು ತೆಗೆದುಕೊಳ್ಳುವುದಿಲ್ಲ. ನನಗೆ ವಿಷದ ಔಷಧವನ್ನು ಕೆಡಿರಿ, ದೊಡ್ಡ ಮಾತ್ರೆ 

ಯನ್ನು ಮಾಡಿಕೊಡಿರಿ” ಎಂದಳು. 


ಡಾಕ್ಟರ :- ನೀನು ವಿಷದ ಔಷಧವನ್ನು ತಿನ್ನಲೇಕೆ ? 


ಉನ್ಮಾದಿನಿ :→" ಬಹಳ ಉರಿ-ಬಹಳ ಯಾತನೆ-ಪಾಣಜ್ವಾಲೆ--  

ತಲೆಯ ಉರಿ!!! ಎಲ್ಲಾ ಜ್ವಲಿಸಿಹೋಗಿದೆ ; ಜ್ವಲಿಸಿ ಸುಟ್ಟು ಬೂದಿಯಾಗಿ ಹೋಗಿದೆ!!! 


ಡಾಕ್ಟರು :-" ಒಳ್ಳೆಯದು, ನಾನು ಅವೆಲ್ಲಾ ಸರಿಯಾಗುವ ಹಾಗೆ 

ಮಾಡುವೆನು. 


ಉನ್ಮಾದಿನಿಯು ಈ ಮಾತನ್ನು ಕೇಳಿ ಉನ್ಮತ್ರಭಾವದಿಂದ ಚೀತ್ಕಾರಮಾಡುತ್ತ, 

“ ನೀನು ಎಲ್ಲಾ ಸರಿಯಾಗುವಹಾಗೆ ಮಾಡುವೆಯಾ? ಔಷಧದಿಂದ ಸಾಗದು ; ನಿನ್ನ 

ಔಷಧ ಪ್ರಯೋಜನವಿಲ್ಲ. ಅವರನ್ನು ಕರೆದುಕೊಂಡು ಬಾ ! ನನ್ನ ಜ್ವಾಲೆಯೆಲ್ಲಾ 

ತಣ್ಣಗಾಗುವದು ” ಎಂದಳು. 

------------------------------------------------ 

೨೮ ಉನ್ಮಾದಿನಿ 

 

ಈ ಸಮಯದಲ್ಲಿ ಅಲ್ಲಿ ನಿಂತಿದ್ದವರೆಲ್ಲರೂ ಆತುರದಿಂದ ಡಾಕ್ಟರನ ಮುಖ 

ವನ್ನು ನೋಡಿದರು. ಡಾಕ್ಟರನು ಇಂಗಿತದಿಂದ ಅವರೆಲ್ಲರನ್ನೂ ಮಾತನಾಡದಿರುವ 

ಹಾಗೆ ನಿಷೇಧಿಸಿ, ಪುನಃ, " ಆವರು ಎಂದರೆ ಯಾರು ? ನಿನಗೇನಾಗಬೇಕು ?” ಎಂದು 

ಕೇಳಿದನು. 

 

ಉನ್ಮಾದಿನಿಯು ವಿಸ್ಮಿತನೇತ್ರಳಾಗಿ ಸ್ವಲ್ಪ ಹೊತ್ತು ನರೇಂದ್ರನಾಥನನ್ನು 

ಕಣ್ಣೆವೆ ಮುಚ್ಚದೆ ನೋಡಿದಳು. ಏನೋ ಹಿಂದಿನ ವೃತ್ತಾಂತವನ್ನು ನೆನಪಿಗೆ ತಂದು 

ಕೊಳ್ಳುವ ಪ್ರಯತ್ನ ಪಟ್ಟಳು. ಅನಂತರ ಮೆಲ್ಲ ಮೆಲ್ಲಗೆ ಅನುಚ್ಚಸ್ವರದಿಂದ "ಅವರು 

ನನಗೆ ಏನಾಗಬೇಕೆ ? ಆದು ನಾನರಿಯೆ. ಆದರೆ ಅವರು ಸರ್ವದಾ ನನ್ನ ಮನಸ್ಸಿ 

ನಲ್ಲಿರುವರು. ಸ್ವಲ್ಪ ಸ್ವಲ್ಪ ಜ್ಞಾಪಕವಿದೆ. ಅವರು ಬರುತ್ತಾರೆ-ಕೂಡಲೆ ಹೊರಟು 

ಹೋಗುತ್ತಾರೆ. ಅವರು ಯಾವಾಗ ಬರುವರೋ ಯಾವಾಗ ಹೋಗುವರೊ, ಅದು 

ಗೊತ್ತಾಗುವುದಿಲ್ಲ. ಅವರನ್ನು ಹಿಡಿಯಲಾರೆ !” ಎಂದಳು. 

 

ಹೀಗೆ ಹೇಳುತ್ತಿದ್ದ ಹಾಗೆ ಉನ್ಮಾದಿನಿಯು, " ಈ ತಡವೆ ಸಿಕ್ಕಿದರು. ಇನ್ನು 

ಬಿಡುವುದಿಲ್ಲ ! ಇನ್ನು ಬಿಡುವುದಿಲ್ಲ !! ” ಎಂದು ಕೂಗಿದಳು. 


ಜ್ಯೋತಿಪ್ರಕಾಶನು ಈ ಸಮಯದಲ್ಲಿ ಡಾಕ್ಟರನನ್ನು ಕುರಿತು, " ಇದೇನು 

ನಗೇಂದ್ರ ? ಏನಾದರೂ ಗೊತ್ತಾಯಿತೆ ?” ಎಂದು ಕೇಳಿದನು. 


ನಗೇಂದ್ರನಾಥ :- "ಯಾರೋ ಒಬ್ಬ ಮನುಷ್ಯನಿಗೋಸ್ಕರ ಇವಳ ಪ್ರಾಣವು 

ತುಡಿದುಕೊಳ್ಳುತ್ತಲಿರುವುದು. ಆದರೆ, ಆ ಮನುಷ್ಯನಾರೋ ಅದನ್ನು ತಿಳಿಯಲಾರೆನು. 


ನವೀನಗೋಪಾಲ :-" ನನ್ನ ಗತಿಸಿ ಹೋದ ಅಣ್ಣಂದಿರನ್ನು ಉದ್ದೇಶಿಸಿ 

ಹೇಳುವ ಮಾತಾಗಿರಬೇಕು. " 


ಈ ಸಮಯದಲ್ಲಿ ಪರಿಚಾರಿಕೆಯು, " ಅದಲ್ಲವಣ್ಣಾ ! ಅದಲ್ಲ ! ನಿಮಗೆ 

ಗೊತ್ತಾಗುವುದಿಲ್ಲ ! ಈ ಮಾತೆಲ್ಲಾ ಆ ಭೂತದ ಮಾತು ! ಆ ಭೂತವನ್ನು ಬಿಡಿ 

ಸಿದ ಮಂತ್ರವಾದಿಯನ್ನು ಕರೆಯಿಸಿರಿ | ಅವನನ್ನು ಬರುವ ಹಾಗೆ ಮಾಡಿರಿ ! ನಾನು 

ಬಹಳ ಕಡೆ ನೋಡಿರುವೆನು ! ಇದೆಲ್ಲಾ ನಾನು ಚೆನ್ನಾಗಿ ಬಲ್ಲೆನು ! ” ಎಂದು 

ಹೇಳಿದಳು. 


ಡಾಕ್ಟರ :- ಆ ಮಾತೆಲ್ಲಾ ಹೋಗಲಿ! ರೋಗಿಯನ್ನು ಹೀಗೆ ಸೆರೆಯಲ್ಲಿ 

ಇಟ್ಟಿರಬೇಕೇಕೆ ?” 


ಜ್ಯೋತಿಪ್ರಕಾಶ- ಹೊರಗೆ ಓಡಿಹೋಗುವದು ಭಯ? 

------------------------------------------

ಆರನೆಯ ಪರಿಚ್ಛೇದ ೨೯ 

ನಗೇಂದ್ರನಾಥ:-( ಬಾಗಿಲನ್ನು ತೆಗೆದು ಬಿಡಿ, ಅಂತಹ ಮನೆಯಲ್ಲಿ ಇಕ್ಕ 

ಟ್ಟಿನಿಂದ ಇರುವುದು ಸರಿಯಲ್ಲ. ಅವಳು ಸ್ವಲ್ಪ ಸ್ವತಂತ್ರವಾಗಿದ್ದರೆ ಒಳ್ಳೆಯದು. 

ಹೊರಗೆ ಹೋಗದ ಹಾಗೆ ನೋಡಿಕೊಂಡರೆ ಸಾಕು, ಹೀಗಿರುವುದು ಪ್ರಾಣಕ್ಕೆ 

ಆಪಾಯ !" 


ಈ ಸಮಯದಲ್ಲಿ ಉನ್ಮಾದಿನಿಯು ಪುನಃ ರಾಗವನ್ನೆತ್ತಿದಳು; 

ದೇಶೀ ರಾಗ-ರೂಪಕ ತಾಳ 

ಬಾಧಾಂ ವಿಧೇಹಿ ಮಲಯಾನಿಲಂ ಪಂಚಬಾಣ || 

ಪ್ರಾಣಾನ್‌ ಗ್ರಹಣ ನ ಗೃಹಂ ಪುನರಾಶ್ರಯಿಷ್ಯೆ || 

ಕಿಂ ತೇ ಕೃತಾಂತಭಗಿನಿ ಕ್ಷಮಯಾ ತರಂಗೈ | 

ರಂಗಾನಿ ಸಿಂಚ ಮಮ ಶಾಮ್ಯತು ದೇಹದಾಹಃ || * 

ಈ ಸೂದೆಯನ್ನು ಕರೆವ ಮನೋಹರಿಯಾದ ಮಧುರ ಸಂಗೀತವನ್ನು ಕೇಳಿ 

ಎಲ್ಲರೂ ದುಃಖಿತರಾದರು. ಡಾಕ್ಟರ ಬಾಬುವು ಬಿಸುಸುಯ್ದು, " ಆಹಾ ! ಕಂಠ 

ಸ್ವರವು ಅತಿ ಮಧುರವಾದುದು. ಹೀಗೆ ರೋಗಗ್ರಸ್ತವಾಗದಿದ್ದರೆ, ಈಕೆಯು ನಮ್ಮ 

ಸಮಾಜಕ್ಕೆ ಉಜ್ವಲವಾದ ಶಿರೋಮಣಿಯಾಗಿರುವಳು ” ಎಂದು ಹೇಳಿದನು. 


ಕೊಟ್ಟಡಿಯ ಬಾಗಿಲನ್ನು ತೆರೆಯಿಸಿ ಬಿಟ್ಟು, ಡಾಕ್ಟರ ಬಾಬುವು ಔಷಧವನ್ನು 

ಕೊಡುವುದಕ್ಕೆ ಏರ್ಪಾಟುಮಾಡಿ ಹೊರಟು ಹೋದನು. 

-------------

ಆರನೆಯ ಪರಿಚ್ಛೇದ. 


ಇತ್ತಲಾಗಿ ತರ್ಕಾಲಂಕಾರ ಮಹಾಶಯನು ಗ್ರಾಮಕ್ಕೆ ಹಿಂದಿರುಗಿ ಬಂದು, ರಾಮ 

ಗೋಪಾಲನು ಕಾಲವಾದ 'ಸಮಾಚಾರವನ್ನು ಕೇಳಿದನು; ಮತ್ತು ದುರ್ಗವ 

ತಿಯ ತಂದೆಯು ಬಂದು, ದುರ್ಗಾವತಿಯನ್ನು ಕಲಿಕತ್ತೆಗೆ ಕರೆದುಕೊಂಡು ಹೋದ 

ನೆಂದೂ ತಿಳಿದುಬಂತು. 

...........

* ಹೇ ಮಲಯವಾಯವೇ ! ಹೇ ಮನ್ಮಥನೇ ! ನನಗೆ ಬಾಧೆಯನ್ನು ಕೊಡು ! ನನ್ನ ಪ್ರಾಣಗ 

ಳನ್ನು ತಗೆದುಕೋ! ನಾನು ಮನೆಯನ್ನು ಪುನಃ ಆಶ್ರಯಿಸುವುದಿಲ್ಲ. ಈ ಯಮನ ಸಹೋದರಿಯೇ 

ನನ್ನ ಮೇಲೆ ಕ್ಷಮೆಮಾಡುವುದರಿಂದ ನಿನಗೇನು ಪ್ರಯೋಜನ ? ನಿನ್ನ ಕೃಪಾಕರಂಗಗಳಿಂದ ನನ್ನ ಅoಗ 

ಳನ್ನು ನಡೆಯಿಸು, ನನ್ನ ದೇಹಜ್ವಾಲೆಯು ಶಾಂತವಾಗಲಿ !

---------------------------------------

೩೦ ಉನ್ಮಾದಿನಿ 


ಈ ಸಮಾಚಾರವನ್ನು ಕೇಳುತ್ತಲೇ, ತರ್ಕಾಲಂಕಾರ ಮಹಾಶಯನು ಅಲಹಾ 

ಬಾದಿಗೆ ಖಗೇಂದ್ರನಾಥನಿಗೆ ಸಮಾಚಾರವನ್ನೆಲ್ಲಾ ವಿವರಿಸಿ, ಒಂದು ಕಾಗದವನ್ನು 

ಬರೆದು ಕಳುಹಿಸಿದನು. ಖಗೇಂದ್ರನಾಥನು ಕಾಗದವನ್ನು ನೋಡಿದೊಡನೆ, ಅಲಹಾ. 

ಬಾದಿನಿಂದ ಮೂರು ದಿನಗಳೊಳಗೆ ಮಹೇಶಪುರಕ್ಕೆ ಬಂದು, ಅಲ್ಲಿ ತರ್ಕಾಲಂಕಾರ 

ಮಹಾಶಯನನ್ನು ನೋಡಿ " ಮಹಾಶಯರೇ ! ನನ್ನ ಜೀವನ ಮರಣಗಳೆರಡೂ ತಮ್ಮ 

ಕೈಯಲ್ಲಿರುವುದು ತಮ್ಮನ್ನು ಹೊರತು, ನನ್ನ ವಿವಾಹಸಮಾಚಾರವನ್ನು ಮತ್ತಾರೂ 

ಆರಿಯರು, ತಾವು ನನ್ನನ್ನು ಬದುಕಿಸಬೇಕು” ಎಂದು ಹೇಳಿದನು. 


ತರ್ಕಾಲಂಕಾರ (ನಗು):- ಅದಕ್ಕೊಸ್ಕರ ಯೋಚನೆ ಪಡಲೇಕೆ ? 

ನಿನ್ನ ವಿವಾಹವನ್ನು ಕುರಿತು ನಾನು ಮುಖ್ಯ ಸಾಕ್ಷಿಯಾಗಿರುವೆನು. ಅದಲ್ಲದೆ 

ನನ್ನಲ್ಲಿ ಬೇರೆ ಸಾಕ್ಷ್ಯವೂ ಇರುವುದು. ನಾನು ಸಮಯದಲ್ಲಿರದೆ ಇದ್ದುದಕ್ಕೋಸ್ಕರ 

ಬಹಳ ನಾಚಿಕೆಯುಳ್ಳವನಾಗಿರುವನು. ಚಿಂತೆಯಿಲ್ಲ; ಇದೇ ಊಟವಾದನಂತರ 

ನಾವಿಬ್ಬರೂ ಕಲಿಕತ್ತೆಗೆ ಹೋಗಿ ಅಲ್ಲಿ ನವೀನಗೋಪಾಲನಿಗೆ ನಡೆದಿರುವ ವಿಚಾರವ 

ನ್ನೆಲ್ಲ ವಿವರವಾಗಿ ತಿಳಿಸುವ. "

 

ಆ ದಿನ ಊಟವಾದ ಮೇಲೆ ತರ್ಕಾಲಂಕಾರ ಮಹಾಶಯನು ಖಗೇಂದ್ರನನ್ನು 

ಸಂಗಡ ಕರೆದುಕೊಂಡು ಕಲಿಕತ್ಸೆಗೆ ಹೊರಟನು. ಅವರಿಬ್ಬರೂ ಆ ದಿನ ರಾತ್ರಿಯೇ 

ಕಲಿಕತ್ತೆಗೆ ಮುಟ್ಟಿದರು. ಆ ರಾತ್ರಿ ನವೀನಗೊಪಾಲನು ಇರುವ ಸ್ಥಳವು ಗೊತ್ತಾ 

ಗಲಿಲ್ಲ. ತರ್ಕಾಲಂಕಾರ ಮಹಾಶಯನು ಆ ರಾತ್ರಿ ಬಬ್ಬ ಶಿಷ್ಯನ ಮನೆಯಲ್ಲಿ ಉಳ 

ಕಂಡನು. ಮಾರನೆಯ ದಿನ ಪ್ರಾತಃಕಾಲದಲ್ಲಿ ಎದ್ದು, ಖಗೇಂದ್ರನೊಡನೆ ಹೋಗಿ, 

ನವೀನಗೋಪಾಲನನ್ನು ನೋಡಿದನು. ಆತನಿಗೂ ನವೀನಗೋಪಾಲನಿಗೂ ಪೂರ್ವಪರಿ 

ಚಯವಿರಲಿಲ್ಲ, ತರ್ಕಾಲಂಕಾರ ಮಹಾಶಯನು ಮೊದಲು ತನ್ನ ಸ್ವಂತ ಪರಿಚಯ 

ವನ್ನು ಹೇಳಿಕೊಂಡನು. 


ಅದಕ್ಕೆ ನವೀನಪಾಲನು, " ನಾನು ತಮ್ಮ ಸೋದರಮಾವಂದಿರನ್ನು 

ಬಲ್ಲೆನು. ಆದರೆ ತಮ್ಮನ್ನು ಯಾವಾಗ ನೋಡಿದ ನೆನಪಿಲ್ಲ” ಎಂದು ಹೇಳಿದನು. 


ತರ್ಕಲಂಕಾರ:- ಮೊದಲು ನಾನು ನಮ್ಮ ಮಾವಂದಿರ ಮನೆಯಲ್ಲಿ 

ಇರುತ್ತಿರಲಿಲ್ಲ. ಈಗ ಅವರು ಸ್ವರ್ಗಸ್ಥರಾದರು, ಅವರಿಗೆ ಸಂತಾನಸಂತತಿ ಇಲ್ಲದುದ 

ರಿಂದ ಅವರ ಆಸ್ತಿಗೆ ನಾನೇ ಬಾಧ್ಯನಾದೆನು, ಅದುಕಾರಣ ನಾನೇ ತಮ್ಮ ಕುಲ 

---------------------------------------------

ಆರನೆಯ ಪರಿಚ್ಛೇದ ೩೧ 

ನವೀನಗೋಪಾಲ:--- ತಾವು ಇಲ್ಲಿಗೆ ಬಂದ ಉದ್ದೇಶವೇನು ? ಕುಲಪುರೋ  

ಹಿತರೆಂದು ಹೇಳುವುದರಿಂದ ನಾನು ನಮ್ಮನ್ನು ಕುಲಪುರೋಹಿತರೆಂದೊಪ್ಪಿಕೊಳ್ಳಲು 

ಸಿದ್ಧನಾಗಿಲ್ಲ.” 


ತರ್ಕಾಲಂಕಾರ:---" ತಮ್ಮ ಅಣ್ಣಂದಿರು ನನ್ನನ್ನು ಕುಲಪುರೋಹಿತರೆಂದು 

ಅಂಗೀಕರಿಸಿರುವರು. ಅದು ಸಲುವಾಗಿ ನಾನು ನಿಮ್ಮಲ್ಲಿ ಯಾವ ಭಿಕ್ಷೆಯನ್ನು 

ಬೇಡಲೂ ಬಂದವನಲ್ಲ, ಏಕೆಂದರೆ, ನಾನು ತಮ್ಮಲ್ಲಿ ಆ ಸನ್ಮಾನವನ್ನು ಹೊಂದಲಾ 

ರೆನೆಂದು ಬಲ್ಲೆನು, ನಾನು ತಮ್ಮ ಮಗಳ ಮದುವೆಯನ್ನು ಮಾಡಿಸಿದವನು. ಆ ಆಳಿ 

ಯನಿಗೂ ತಮಗೂ ಗುರುತುಪರಿಚಯವಿಲ್ಲ ವಾಗಿ, ನಿಮಗೆ ಅವನ ಪರಿಚಯಮಾಡಿ 

ಕೊಡುವುದಕ್ಕೋಸ್ಕರ ಮಾತ್ರ ಬಂದಿರುವೆನು. ಈತನೇ ತಮ್ಮ ಅಳಿಯ; ದುರ್ಗಾವ 

ತಿಯ ಗಂಡ."

 

ಹೀಗೆಂದು ಹೇಳಿ, ತರ್ಕಾಲಂಕಾರ ಮಹಾಶಯನು ಖಗೇಂದ್ರನನ್ನು ತೋರಿಸಿ 

ದನು, ನವೀನಗೊಪಾಲನು ಅಚ್ಚರಿಪಟ್ಟು, ಒಂದು ತಡವೆ ಖಗೇಂದ್ರನ ಮುಖವನ್ನು 

ನೋಡಿ, ಅನಂತರ ತರ್ಕಾಲಂಕರನನ್ನು ಕುರಿತು, "ಮಾತು ನನಗೆ ಏನೇನೂ ಅರ್ಥ 

ವಾಗುವುದಿಲ್ಲ. ನನಗೆ ಹೇಗೆ ಅಳಿಯನಾಗಬೇಕು?” ಎಂದು ಕೇಳಿದನು. 

 

ತರ್ಕಾಲಂಕಾರ:-- ತಮ್ಮ ಅಣ್ಣಂದಿರು ತಮ್ಮ ಮಗಳಾದ ದುರ್ಗಾವತಿಯನ್ನು ಈತನಿಗೆ 

ಕೊಟ್ಟು ಮದುವೆಮಾಡಿದರು.'' 


ನವೀನಗೋಪಾಲನು ಪುನಃ ಹೆಚ್ಚು ಆಶ್ಚರ್ಯದಿಂದ, " ಅದು ಹೇಗೆ ? ಆ 

ಸಮಾಚಾರ ಸ್ವಲ್ಪವೂ ನನಗೆ ತಿಳಿಯಬರಲಿಲ್ಲ” ಎಂದನು. 

 

ತರ್ಕಾಲಂಕಾರ:-" ತಾವು ಮಗಳಿಗೆ ಅಲ್ಪ ವಯಸ್ಸಿನಲ್ಲಿ ಹಿಂದೂಮತಾನು 

ಸಾರವಾಗಿ ಮದುವೆಮಾಡಲು ಸಮ್ಮತಿಸಲಾರಿರೆಂದು ಈ ವಿವಾಹವು ಗೋಪ್ಯವಾಗಿ 

ನಡೆಯಿಸಿದುದಯಿತು.'' 


ನವೀನಗೋಪಾಲ-" ಮತ್ತಾರು ಈ ವಿವಾಹ ವಿಚಾರವನ್ನು ಬಲ್ಲವರು?” 


ತರ್ಕಾಲಂಕಾರ- ನಾನು ಬಲ್ಲೆನು ; ಮತ್ತೊಬ್ಬ ತಿಳಿದು ಇದ್ದವರು ಸ್ವರ್ಗಸ್ಥರಾಗಿ 

ಹೋದರು. ಈಗ ನನ್ನನ್ನು ಹೊರತು ಮತ್ತಾರೂ ಅರಿಯರು.” 


ನವೀನಗೋಪಾಲ-" ನಮ್ಮ ಮಾತನ್ನು ನಾನು ಹೇಗೆ ನಂಬಲಿ ? ಈ ಹುಡು 

ಗಿಗೋಸ್ಕರ ನಮ್ಮ ಅಣ್ಣಂದಿರು ಸ್ವಲ್ಪ ಆಸ್ತಿಯನ್ನು ಬಿಟ್ಟು ಹೋಗಿರುವರು, ಆ 

ಆಸ್ತಿಗೊಸ್ಕರವೇ ಈತಂತ್ರವೇನಾದರೂ ನಡೆದಿದ್ದರೂ ನಡೆದಿರಬಹುದು." 

----------------------------------------------

೩೧ ಉನ್ಮಾದಿನಿ 


ತರ್ಕಾಲಂಕಾರ:- "ನನಲ್ಲಿ ಬೇರೆ ಪ್ರಮಾಣವೂ ಉಂಟು. ನೀವು ನಿಮ್ಮ ಅಣ್ಣಂದಿರ 

ಕೈಬರಹವನ್ನು ನೋಡಿದರೆ ಗುರುತಿಸುವಿರೋ ? " 


ನವೀನಗೊಪಾಲ- " ಚೆನ್ನಾಗಿ ಗುರುತಿಸುವನು.” 


ತರ್ಕಲಂಕಾರ:-" ಹಾಗಾದರೆ ಈ ಕಾಗದವನ್ನು ಓದಿರಿ.” 


ಹೀಗೆಂದು ಹೇಳಿ, ತರ್ಕಾಲಂಕರನು ಒಂದು ಕಾಗದವನ್ನು ನವೀನಗೋಪಾಲ 

ನಿಗೆ ಕೊಟ್ಟನು. ನವೀನಗೋಪಾಲನು ಕಂಪಿತ ಹೃದಯನಾಗಿ, ಆ ಕಾಗದವನ್ನು 

ಓದಲಾರಂಭಿಸಿದನು. ಕಾಗದವು ಈ ಪರಿಯಾಗಿತ್ತು; 


" ಕಲಾಣ ವರೇಷು- 

ಈ ಕಾಗದವು ನನ್ನ ಮರಣಾನಂತರ ನಿನಗೆ ಮುಟ್ಟುವ ಹಾಗೆ ಏರ್ಪಾಡುಮಾಡಿರುವನು.  

ಏಕೆಂದರೆ, ಈ ಕಾಗದದಲ್ಲಿ ಬರೆದಿರುವ ಸಮಾಚಾರವು ನಿನಗೆ ಪ್ರೀತಿಕರವಾಗಿ ಇರದು.  ನಾನು ನಿನ್ನನ್ನು 

ಎಷ್ಟರಮಟ್ಟಿಗೆ ಪ್ರೀತಿಸುವೆನೆಂಬುದನ್ನು ಈ ಕಾಲದಲ್ಲಿ ಬರೆಯುವುದಕ್ಕೆ ಇಷ್ಟವುಳ್ಳವನಾಗಿಲ್ಲ. 

ನಾನು ಬದುಕಿರುವ ಕಾಲದಲ್ಲಿ ನಿನಗ ನನಗೂ ವೈಮನಸ್ಸಾಗದಿರುವುದೊಂದೇ ನನಗೆ ಇಷ್ಟವಾದುದು ಆದು 

ಸಲುವಾಗಿ ನಿನಗೆ ಒಂದು ಕೆಲಸವನ್ನು ತಿಳಿಸದೆ ನಡೆಯಿಸಿರುವೆನು, ಆ ಕೆಲಸವೇನೆಂದರೆ, ನಾನು ಗೋಪ್ಯವಾಗಿ 

ನಿನ್ನ ಮಗಳಿಗೆ ಹಿಂದೂ ಮತಾನುಸಾರವಾಗಿ ಮದುವೆಮಾಡಿರುವೆನು, ಮಗಳು ನಿನ್ನವಳಾದರೂ, 

ನಾನು ದುರ್ಗಾವತಿಯನ್ನು ಪ್ರೀತಿಸುತ್ತಲಿದ್ದನೆಂಬುದನ್ನು ನೀನು ಚೆನ್ನಾಗಿ ಬಲ್ಲೆ, ನನ್ನ ಮತದ ನಂಬು 

ಗೆಯ ಪ್ರಕಾರ ನಾನು ಈ ಕಾರ್ಯವನ್ನು ಸರಿಯಾಗಿಯೇ ಮಾಡಿರುವೆನು.  ಈ ಕಾರ್ಯವನ್ನು ಕುರಿತು 

ನೀನು ಸಂತುಷ್ಟನಾದರೂ ಅಥವಾ ಅಸಂತುಷ್ಟನಾದರೂ, ನಾನದನ್ನು ನೋಡುವುದಕ್ಕೆ ಪುನಃ ಬರಲಾ 

ರೆನು ನಾನು ದುರ್ಗಾವತಿಯನ್ನು ಯಾವ ಪಾತ್ರನಿಗೆ ಕೊಟ್ಟಿರುವನು, ಆತನೊಡಗೂಡಿ ಆಕೆಯ 

ಸುಖಿಯಾಗಿರುವಳೆಂದು ನಾನು ದೃಢವಾಗಿ ನಂಬಿರುವೆನು, ನಾನು ದುರ್ಗಾದಯನ್ನು ಆಕೆಯು 

ವರನಿಗೆ ಕೊಟ್ಟು ಮದುವೆಮಾಡುವೆನೆಂದು ತಿಳಿದು ನೀನೂ ಸುಖಿಯಾಗುವ ವರನು ನನಗೆ ಪರಮಾಪ್ತ, 

ಮಿತ್ರನಾದ ಅಶುತೋಷ ಬಾಬುವಿನ ಮಗನಾಗಬೇಕು. ಅವನ ಹೆಸರು ' ಖಗೇಂದ್ರನಾಥ ' ನಿನ್ನ 

ಇಷ್ಟಕ್ಕೆ ವಿರೋಧವಾಗಿ ಮದುವೆ ಮಾಡಿರುವ ತಪ್ಪು ನನ್ನ ತಪ್ಪಾಗಿರುವುದು, ನಾನು ನಿನಗೆ ಜೇಷ್ಠ 

ಸಹೋದರನೆಂಬುದರ ಮೇಲೆ ನೀನು ಖತಿಗೊಳ್ಳಬೇಡ, ನೀನು ನಿನ್ನ ಮಗಳಿಗೂ ಅಳಿಯನಿಗೂ ಆಶೀ 

ರ್ವಾದ ಮಾಡಬೇಕೆಂದು ನಾನು ಕೋರುವೆನು. ಈ ಕಾಗದವನ್ನು ತರುವ ತರ್ಕಾಲಂಕಮಹಾಶಯರು, 

ಆವರಲ್ಲದಿದ್ದರೆ, ಅವರ ಪ್ರತಿನಿಧಿಯು, ಅವರ ಹೊರತು ಮತ್ತಾರೂ ಈ ವಿವಾಹದ ವಿಚಾರವನ್ನರಿಯರು.  

ನೀನೇನಾದರೂ ಕೇಳಿದರೆ, ಅದಕ್ಕೆ ಅವರು ಉತ್ತರವನ್ನು ಕೊಡುವರು. 

ಇತಿ ಆಶೀರ್ವಾದ 

ಶ್ರೀರಾಮಗೋಪಾಲವರ್ಮ "

----------------------------------------------- 

ಆರನೆಯ ಪರಿಚ್ಛೇದ  33 


ಪತ್ರವನ್ನು ಓದುತ್ತಿದ್ದ ಹಾಗೆ ನವೀನಗೆೋಪಾಲನ ತಲೆಯ ಮೇಲೆ ಅಕಸ್ಮಾ 

ತ್ತಾಗಿ ಆಕಾಶದಲ್ಲಿ ಮೇಘವಿಲ್ಲದೆ ಸಿಡಿಲುಬಿದ್ದಹಾಗಾಗಿ, ಅವನು ಏನೊಂದೂ ಮಾತಿ 

ಲ್ಲದೆ ಸ್ವಂಭಿತನಾದನು. ತರ್ತಾಲಂಕಾರ ಮಹಾಶಯನು, ಈಗ ನನ್ನ ಮಾತಿನಲ್ಲಿ 

ತಮಗೆ ನಂಬುಗೆಯುಂಟಾಯಿತೆ?” ಎಂದು ಕೇಳಿದನು. 


ನವೀನ ಪಾಲನು ಪ್ರಶ್ನೆಗೆ ಉತ್ತರವನ್ನು ಹೇಳದೆ, ತಾವು ಈ ಕಾಗದ 

ವನ್ನು ನನಗೆ ಇದುವರೆಗೆ ಕೊಡಲಿಲ್ಲವೇಕೆ ? ” ಎಂದು ಕೇಳಿದನು. 


ತರ್ಕಾಲಂಕಾರ :--ತಮ್ಮ ಅಣ್ಣಂದಿರು ಸತ್ತಾಗ ನಾನು ಊರಲ್ಲಿರಲಿಲ್ಲ, ನಾನು 

ಆಗ ನನ್ನ ಶಿಷ್ಯನೊಬ್ಬನ ಮನೆಗೆ ಹೋಗಿದವನು ಅಲ್ಲಿ ಆಲಸ್ಯವಾಗಿ, ಮೂರು 

ವಾರಗಳು ಹಾಸಿಗೆಯನ್ನು ಹಿಡಿದು ಮಲಗಿದ್ದೆನು. ಊರಿಗೆ ಬರುತ್ತಲೇ ಈ ಸಮಾಚಾ 

ರವು ತಿಳಿಯಬಂತು. ಅಲಹಾಬಾದಿಗೆ ಕಾಗದವನ್ನು ಬರೆದು, ಖಗೇಂದ್ರನನ್ನು ಕರೆಯಿ 

ಸುವುದಕ್ಕೆ ಒಂದು ವಾರ ಹಿಡಿಯಿತು. ನಿನ್ನೆ ಖಗೇಂದ್ರನು ನನ್ನ ಮನೆಗೆ ಬಂದು 

ಸೇರಿದ ಕೂಡಲೆ, ಈ ದಿನ ತಮ್ಮಲ್ಲಿಗೆ ಬಂದಿರುವೆನು.” 

 

ನವೀನಗೋಪಾಲನ ಬಾಯಿಯಲ್ಲಿ ಮಾತಿಲ್ಲ ; ಯಾವ ಮಾತನ್ನು ಹೇಳುವು 

ದಕೂ ತೋಚದು. ಆಗ ತರ್ಕಾಲಂಕಮಹಾಶಯರು ಪುನಃ, " ಈಗ ತಮ್ಮ 

ಮನಸ್ಸಿನಲ್ಲಿ ಮತ್ತೇನೂ ಸಂದೇಹವಿಲ್ಲವಷ್ಟೆ ? ” ಎಂದು ಕೇಳಿದನು. 


ನವೀನಗೋಪಾಲನು ಅನ್ಯಮನನಾಗಿ, " ಈಗ ಸಂದೇಹವಿದ್ದರೂ ಇಲ್ಲದ್ದಿರೂ 

ಎರಡೂ ಒಂದೇ. ನಾನು ನಮ್ಮ ಬ್ರಹ್ಮಮತಾನುಸಾರವಾಗಿ ಪುನಃ ಅವಳಿಗೆ 

ಮದುವೆಮಾಡಿದೆನು ” ಎಂದನು. 


ತರ್ಕಾಲಂಕಾರ ಮಹಾಶಯನು ಕೂಡಲೆ, " ಅದು ಹೇಗೆ ? ತಾವು ಇಂತಹ 

ಭಯಂಕರವಾದ ಪಾಪಕಾರ್ಯವನ್ನು ಮಾಡಿದಿದು ಹೇಗೆ ? ” ಎಂದು ಕೇಳಿದನು. 


ಖಗೇಂದ್ರನಾಥನು ಈ ಭಯಂಕರವಾದ ಮಾತನ್ನು ಕೇಳಿದ ನಿಮಿಷದಲ್ಲಿ ನಡು 

ಗಿದನು. ಬಿರುಗಣ್ಣು ಬಿಟ್ಟು, ಹುಚ್ಚನಹಾಗೆ ಒಂದು ತಡವೆ ನವೀನಗೋಪಾಲನ 

ಮುಖವನ್ನೂ, ಒಂದು ತಡವೆ ತರ್ಕಾಲಂಕಾರನ ಮುಖವನ್ನೂ , ತಿರುತಿರುಗಿ ನೋಡಲಾ 

ರಂಭಿಸಿದನು. ಅವನು ಯಾವ ಮಾತನ್ನು ಆಡುವವನ ಶಕ್ತನಾಗಿರಲಿಲ್ಲ. 

 

ಇತ್ತಲಾಗಿ ತರ್ಕಾಲಂಕಾರ ಮಹಾಶಯನ ಮಾತಿಗೆ ಉತ್ತರವಾಗಿ ನವೀನ 

ಗೋಪಾಲನು, " ನಾನು ಇದನ್ನು ಪಾಪಕಾರ್ಯವೆಂದು ತಿಳಿದಿಲ್ಲ” ಎಂದನು. 

-------------------------------------------- 

34 ಉನ್ಮಾದಿನೀ 


ತರ್ಕಾಲಂಕಾರನು ಈ ಕಡವೆ ಕ್ರೋಧದಿಂದ ಅಧೀರನಾಗಿ, " ಒಂದು ಕಡವೆ 

ಮದುವೆ ಭಾಗ ಹೆಣ್ಣಿಗೆ ಪುನಃ ಮದುವೆ ಮಾಡುವುದು ಪಾಪಕಾರ್ಯವಲ್ಲವೆಂದು 

ಹೇಗೆ ಹೇಳುವಿರಿ ? '' ಎಂದನು. 


ನವೀನಗೊಪಾಲನೂ ಕೋಪಭರಿತನಾಗಿ, : ಹಿಂದೂಮತದ ಪ್ರಕಾರ ಆದ 

ಮದುವೆಯನ್ನು ಮದುವೆಯೆಂದು ನಾವು ಲೆಕ್ಕಿಸುವುದಿಲ್ಲ” ಎಂದನು.


ತರ್ಕಾಲಂಕಾರ :--- ತಾವು ಲೆಕ್ಕಿಸದೆ ಇರಬಹುದು. ಪ್ರಪಂಚದಲ್ಲಿ ಎಲ್ಲಾ 

ಕಡೆಯಲ್ಲಿಯೂ ಲೆಕ್ಕಿಸುವರು. ಹಿಂದೂ ವಿವಾಹವು ತಮ್ಮಗಳ ವಿವಾಹದ ಹಾಗೆ 

ಕೇವಲ ಮನಸ್ಸಿನ ಮೇಳನ ಅಧವಾ ಪ್ರತಿಜ್ಞಾಬದ್ದವೆಂದು ಆಗುವುದಿಲ್ಲ. ಹಿಂದೂ 

ವಿವಾಹದೊಂದಿಗೆ ಧರ್ಮದ ಗೂಢವಾದ ಗುರುತರ ಸಂಬಂಧವುಂಟು, ಆ ಸಂಬಂಧವು 

ಇಹಕಾಲ ಮತ್ತು ಪರಕಾಲ ಇವೆರಡು ಕಾಲಕ್ಕೂ ವ್ಯಾಪಿಸಿರುವುದು. ಅದನ್ನಾರೂ 

ತಪ್ಪಿಸಲಾರರು ; ಆ ಸಂಬಂಧವು ಯಾವಾಗಲೂ ತಪ್ಪದು. ತಮ್ಮ ಮಗಳನ್ನು ಇಂತಹ 

ಗುರುತರವಾದ ಸಂಬಂಧದಿಂದ ಹೇಗೆ ತಪ್ಪಿಸುವಿರಿ ?” 


ನವೀನಗೋಪಾಲ : -" ನನ್ನ ಮಗಳನ್ನು ಕನ್ಯಾದಾನ ಮಾಡುವುದಕ್ಕೆ ನನ್ನ 

ಹೊರತು ಮತ್ತಾರಿಗೂ ಅಧಿಕಾರವಿಲ್ಲ.” 


ತರ್ಕಾಲಂಕಾರ: ...." ಅದು ತಪ್ಪು; ತಮ್ಮ ಮಗಳನ್ನು ಸ್ವಂತ ಮಗಳಹಾಗೆ 

ಪಾಲನೆ ಮಾಡುತ್ತಲಿದ್ದ ನಿಮ್ಮ ಅಣ್ಣಂದಿರಿಗೆ ಸಂಪೂರ್ಣ ಅಧಿಕಾರವಿತ್ತು. ವಿವಾಹವು 

ಧರ್ಮಸಮ್ಮತವಾಯಿತೆ, ಅಥವಾ ಇಲ್ಲವೆ, ಅದನ್ನು ಕುರಿತು ನಿಮ್ಮ ಮಗಳನ್ನೇ ವಿಚಾ ರಿಸಬಹುದು." 


ನವೀನಗೋಪಾಲ  .. " ನನ್ನ ಮಗಳು ಈಗ ವಾಯುರೋಗಗ್ರಸ್ತಳಾಗಿರು 

ವಳು, ಅವಳೊಡನೆ ಯಾವ ಮಾತು ಕೇಳುವುದಕ್ಕೂ ಉಪಾಯವಿಲ್ಲ. ? 


ತರ್ಕಾಲಂಕಾರ :---"ಹಾಗಾದರೆ ಅವಳ ಆ ವಾಯುರೋಗಕ್ಕೆ ತಾವೇ 

ಕಾರಣ, ಈ ಭಯಂಕರವಾದ ಪಾಪಕಾರ್ಯವೇ ಅವಳನ್ನು ಹುಚ್ಚಿಯನ್ನಾಗಿ ಮಾಡಿ 

ರುವುದು.” 


ಆಗ ನವೀನಗೋಪಾಲನ ಮನಸ್ಸಿನಲ್ಲಿ ಏನು ಹೊಳೆಯಿತೋ ಅದನ್ನು ಹೇಳುವು 

ದಕ್ಕಾಗುವುದಿಲ್ಲ. ಆದರೆ ಅವನು ಬಿಸುಸುಯ್ದು ದುಃಖದಿಂದ ಕಂದಿದ ಮುಖವುಳ್ಳ 

ವನಾಗಿ, " ಆದುದು ಆಗಿಹೋಯಿತು ; ಈಗ ಅದಕ್ಕೆ ಬೇರೆ ಉಪಾಯವಿಲ್ಲ " 

---------------------------------------------

ಆರನೆಯ ಪರಿಚ್ಛೇದ 35 

ಈ ಸಮಯದಲ್ಲಿ ಖಗೇಂದ್ರನ ಮನಸ್ಸಿನಲ್ಲಿ ಏನಾಗುತ್ತಲಿತ್ತೊ, ಅದನ್ನು 

ನಾವು ಬಣ್ಣಿಸಲಾರೆವು. ಅವನು ಮನದಲ್ಲಿ ಇಷ್ಟು ದಿನದಮೇಲೆ ದುರ್ಗಾವತಿಯನ್ನು 

ಹೊಂದಿ ಎಷ್ಟೋ ಆನಂದಿತನಾಗುವೆನೆಂದು ಕಲ್ಪಿಸಿಕೊಂಡಿದ್ದನು. ಅದೆಲ್ಲಾ ಬೇರ್ಪಟ್ಟು 

ಹೋಗಿ, ಈ ಭಯಂಕರ ಸಮಾಚಾರ ; ಸಮಾಚಾರವಾದರೋ, ಮನವು ಅದನ್ನು 

ಧಾರಣೆ ಮಾಡಲಾರದು, ಕಣ್ಣಾರೆ ಕಂಡರೂ ಹಠಾತ್ತಾಗಿ ನಂಬಲು ಯೋಗ್ಯವಾಗಿರ 

ಲಿಲ್ಲ. ಅವನು ಹೆಚ್ಚು ಬೆಳಂಬದಿಂದ ಮನಸ್ಸಿನಲ್ಲಿ : ಇದು ಕನಸೋ ಅಥವಾ 

ದಿಟವೋ ' ಎಂದು ಭ್ರಮಿಸುತ್ತಲಿದ್ದನು. 


ಕನಸೇ ಆಗಲಿ, ದಿಟವೇ ಆಗಲಿ, ಖಗೇಂದ್ರರು ಬೇಳಿಡುತ್ತ, ಮರ್ಮಾಂತಿಕ 

ವಾದ ಯಾತನೆಯಿಂದ ಚೆದರಿದ ಮನಸ್ಸುಳ್ಳವನಾದನು: ಬಾಯಿಯಲ್ಲಿ ಮಾತು ಹೊರ 

ಡದು, ಆದರೆ ಮನಸ್ಸಿನಲ್ಲಿ ಭೀಷಣವಾದ ಬೆಂಕಿಯು ಹತ್ತಿ ಉರಿಯುತ್ತಲಿತ್ತು, 

ದುರ್ಗಾವತಿಗೆ ಹುಚ್ಚು ಹಿಡಿದಿದೆ ಎಂಬ ಸಮಾಚಾರವನ್ನು ಕೇಳಿ, ಈ ಕಾರ್ಯವು 

ಅವಳ ಇಷ್ಟಕ್ಕೆ ವಿರೋಧವಾಗಿ ನಡೆದಿರಬೇಕೆಂದು ನಂಬುಗೆ ಉಂಟಾಯಿತು. ಆಗ 

ಅವನಿಗೆ ಕ್ರೋಧ ಹುಟ್ಟಿ, ಸರ್ವಶರೀರವೂ ಹೆಚ್ಚು ಉರಿಯಲಾರಂಭವಾಯಿತು. ಅವನು 

ಸಹಿಸಲಸದಳವಾದ ಕೋಪದಿಂದ, ತಾವು ಇ೦ತಹ ಕೆಟ್ಟ ಕೆಲಸವನ್ನು ಏತಕ್ಕೆ 

ಮಾಡಿದಿರಿ ? ” ಎಂದು ಕೇಳಿದನು. 


ಖಗೇಂದ್ರನಾಥನ ಈ ಪ್ರಕಾರವಾದ ಕ್ರೋಧಯುಕ್ತವಾದ ಮಾತನ್ನು ಕೇಳಿ, 

ನವೀನಗೋಪಾಲನ ದೃಷ್ಟಿಯು ಅವನಮೇಲೆ ಬಿತ್ತು. ಅವನನ್ನು ಕುರಿತು ನಾಲ್ಕಾರು 

ಮಾತುಗಳನ್ನು ಹೇಳಬೇಕೆಂದು ನನಗೋಪಾಲನಿಗೆ ಇಷ್ಟವುಂಟಾಯಿತು. ಆದರೆ 

ಖಗೇಂದ್ರನು ಆ ಕಾಲದಲ್ಲಿ ತಾಳಿದ್ದ ಮೂರ್ತಿಯನ್ನು ನೋಡಿ, ಮನಸ್ಸಿನಲ್ಲಿ ಭೀತಿ 

ಗೊಂಡು, ಧೀರಭಾವದಿಂದ, ನಾನು ಅಂತಹ ಕೆಟ್ಟ ಕೆಲಸವನ್ನು ಮಾಡಿಲ್ಲ. ನನ್ನ 

ಸ್ವ೦ತ ಮಗಳಿಗೆ ಮದುವೆಮಾಡಿದೆನು. ಇದು ಕೆಟ್ಟ ಕೆಲಸವಾದುದು ಹೇಗೆ ?"  

ಎಂದನು.

 

ಖಗೇಂದ್ರನಾಥನು ಪುನಃ ಉತ್ತೇಜಿತ ಸ್ವರದಿಂದ, “ ನೀವು ನಿಮ್ಮ ಮದುವೆ 

ಯಾಗಿದ್ದ ಹೆಣ್ಣಿಗೆ ಮದುವೆಮಾಡಿರುವಿರಿ !! ” ಎಂದನು. 


ನವೀನಗೋಪಾಲನು ಪುನಃ ಧೀರಭಾವದಿಂದ, " ಆ ಪೂರ್ವ ವಿವಾಹವಾ 

ದುದು ನನಗೆ ತಿಳಿದಿದ್ದರೆ, ಈ ಕಾರ್ಯವು ನಡೆದಿರುವ ಸಂಭವವೂ ಇತ್ತೆಂದು 

ತೋರುವುದು. ಆದರೆ ನಾನೇನು ಮಾಡಲಿ ? ಎಲ್ಲವೂ ಈಶ್ವರೇಚ್ಛೆ!'' ಎಂದನು. 

---------------------------------------------

೩6 ಉನ್ಮಾದಿನೀ 


ತರ್ಕಾಲಂಕಾರ :--- ಆದರೆ ಈಗಿನ ಮದುವೆಯಾಗುವ ಸಮಯದಲ್ಲಿ 

ನಿಮ್ಮ ಮಗಳ ಇಷ್ಟವೇನೆಂಬುದನ್ನು ವಿಚಾರಿಸಿದಿರಾ ? ತಾವು ಹಾಗೇನಾದರೂ 

ಮಾಡಿದಿರೊ ?" 


ನವೀನಗೋಪಾಲ - : ಅದನ್ನೆಲ್ಲಾ ವಿಚಾರಿಸಬೇಕಾಗಿದ್ದ ಭಾರವು ನಮ್ಮ 

ಮನೆಯ ಹೆಂಗಸಿನ ಮೇಲಿತ್ತು. ನಾನು ಸ್ವಂತವಾಗಿ ಏನು ವಿಚಾರಿಸಲಿಲ್ಲ. ಈಗ 

ವಿಚಾರಿಸಲಾಗಿ ಅವಳೂ ಮರೆತುಹೋದಳೆಂದು ತಿಳಿಯಬಹುದಾಗಿದೆ. ಅವಳಿಗೆ 

ಇದಲ್ಲಾ ತಿಳಿದರೆ, ಅವಳೂ ಅನುತಾಪಪಡವಳು. " 

 

ತರ್ಕಾಲಂಕಾರ ಮಹಾಶಯನು ಕೋಪ ತಡಿಯಲಾರದೆ, " ಕೇವಲ ಅನು 

ತಾಪವು ಈ ಪಾಪಕ್ಕೆ ತಕ್ಕ ಪ್ರಾಯಶ್ವಿತ್ತವಾಗದು. ಶಾಸ್ತ್ರದಲ್ಲಿಯೂ ಇಂತಹ 

ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಉಕ್ತವಾಗಿರುವ ಹಾಗೆ ನನೆಗೆ ತೋರುವುದಿಲ್ಲ'' 

ಎಂದನು. 


ನವೀನಗೋಪಾಲ :- ಇನ್ನು ಹೆಚ್ಚು ಮಾತು ಬೆಳೆಯಿಸಿ ಪ್ರಯೋಜನವಿಲ್ಲ. 

ಈ ವಿವಾಹವನ್ನು ಮಾಡಿ ನಾನು ಒಂದು ದಿನವಾದರೂ ಸುಖಿಯಾಗಲಿಲ್ಲ. ದುರ್ಗಾ 

ವತಿಯ ಅವಸ್ಥೆಯನ್ನು ನೋಡಿ ನನ್ನ ಎದೆಯು ಸೀಳಿಹೋಗುತ್ತಲಿರುವುದು. ಈ 

ವಿವಾಹವನ್ನು ಮಾಡಿದುದರಿಂದಲೇ ಅವಳಿಗೆ ಈ ಅವಸ್ಥೆ ಉಂಟಾಗಿರುವುದೆಂದು ನಿಮ್ಮ 

ಹೇಳಿಕೆಯ ಮೇಲೆ ತಿಳಿದಿರುವೆನು.'' 


ಈ ಸಮಯದಲ್ಲಿ ಖಗೇಂದ್ರನು ತರ್ಕಾಲಂಕಾರನ ಕಿವಿಯಲ್ಲಿ ಏನೋ ಉಸಿರಿ 

ದನು. ತರ್ಕಾಲಂಕಾರ ಮಹಾಶಯನು ಪುನಃ " ನಿಮ್ಮ ಮಗಳನ್ನು ನಾವು ಒಂದು 

ತಡವೆ ನೋಡಬೇಕೆಂದು ಇಷ್ಟವಳ್ಳವರಾಗಿದ್ದೇವೆ" ಎ೦ದನು. 


ನವೀನಗೊಪಾಲ :-ನನ್ನ ಮಗಳು ಈ ಮನೆಯಲ್ಲಿಲ್ಲ. ಅವಳಿಗೆ ಮದುವೆ 

ಯಾಗಿರುವ ಗಂಡನಾದ ಜ್ಯೋತಿಪ್ರಕಾಶನ ಮನೆಯಲ್ಲಿರುವಳು. ಈಗ ಅವಳು ಇರುವ 

ಅವಸ್ಥೆಯನ್ನು ನೋಡಿದರೆ, ಅವಳನ್ನು ನೋಡುವುದೂ ನೆಡೆದಿರುವುದೂ ಎರಡೂ 

ಸಮ. "

 

ತರ್ಕಲಂಕಾರಸು ಜ್ಯೋತಿಪ್ರಕಾಶನ ಮನೆ ಇರುವ ಸ್ಥಳವನ್ನು ವಿಚಾರಿಸಿ 

ಕೊಂಡು, ಖಗೇಂದ್ರನೆಡನೆ ಕುಂದಿದ ಮನವುಳ್ಳವನಾಗಿ ಆಲ್ಲಿಂದ ಹೊರಟು 

ಹೋದನು. ನವೀನಗೋಪಾಲನು ಹೆಂಡತಿಯನ್ನು ನೋಡುವ ಸಲುವಾಗಿ ಮನೆಯೊ 

ಳಗೆ ಹೊರಟುಹೋದನು. 

------

----------------------------------------------------------------------------

 

ಏಳನೆಯ ಪರಿಚ್ಛೇದ. 

ಹೈಮವತಿಯು ತನ್ನ ಪ್ರಿಯಪುತ್ರಿಯಾದ ವಿನೋದಿನಿಯ ಅವಸ್ಥೆಯನ್ನು ಸ್ವತಃ 

ನೋಡಿ, ವಿಶೇಷವಾಗಿ ವ್ಯಸನಾಕ್ರಾಂತಳಾಗಿದ್ದಳು. ಬಹುಕಾಲದ ಮೇಲೆ 

ಮಗಳನ್ನು ಪಡೆದು, ಮನಸ್ಸಿನಲ್ಲಿ ಯಾವ ಆಶಾಬೀಜವು ಅಂಕುರಿತವಾಗಿತ್ತೋ, ಅದು 

ಈಗ ನಿರ್ಮಲವಾಗಿ ಹೋಯಿತು. ಹೈಮವತಿಯು ಪುತ್ರಶೋಕದಿಂದ ಶೋಕಕುಲ 

ಳಾಗಿದ್ದುದರಿಂದ, ಆಹಾರಾದಿಗಳ ಮೇಲೆ ಅವಳಿಗೆ ಅಷ್ಟು ದೃಷ್ಟಿಯಿಲ್ಲ. ಈ 

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಳುಗಳು ನೀರುಗಡ್ಡೆಯನ್ನು ಹಾಕದೆ ಕೊಟ್ಟರೂ, 

ಅವಳು ಒಂದು ಮಾತನ್ನೂ ಹೇಳದೆ ಕುಡಿದುಬಿಡುವಳು.. ಟೀ ಅಥವಾ ಕಾಫಿಗೆ ಸಕ್ಕರೆ 

ಸಾಲದಿದ್ದರೂ, ಹುಬ್ಬುಗಂಟುಹಾಕಿಕೊಳ್ಳದೆ ಕುಡಿದುಬಿಡುವಳು. ಸಂಧ್ಯಾಕಾಲದಲ್ಲಿ 

ವಾಯುಸೇವ.ಗೆ ಹೊರಗೆ ಹೋಗುವದು ಹೈಮವತಿಗೆ ನಿತ್ಯದ ಕೆಲಸವಾಗಿತ್ತು ; 

ಆ ವಯಸೇವನೆಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟಳು. ಆ೯ಗಳು ಗೋರಿಕೆಹೊಡೆ 

ಯುತ್ತ ನಿದ್ದೆ ಹೋಗುತ್ತಿದ್ದರೂ, ಹೈಮವತಿಯು ಈಗ ಮೊದಲಿನ ಹಾಗೆ ಅವ 

ರನ್ನು ತಿರಸ್ಕರಿಸುತ್ತಿರಲಿಲ್ಲ. ಅಥವಾ ಹೊಡೆಯುತ್ತಿರಲಿಲ್ಲ. ಇನ್ನೂ ಅಲ್ಲದೆ ಊಟ 

ವಾದಮೇಲೆ ಹಗಲುಹೊತ್ತು ಅಭ್ಯಾಸವಾಗಿದ್ದ ನಿದ್ರೆಯನ್ನು ಈ ಮನಸ್ಸಿನ ವ್ಯಧೆಯ 

ಸಲುವಾಗಿ ಬಿಟ್ಟಿದ್ದಳು. 


ಈ ದಿನ ಓಮ “ತಿಯ ಊಟವಾದ ಒಳಿ, ಪಾಸಿಗೆಯ ಮೇಲೆ ಬಿದ್ದು 

ಕೊಂಡು ಹೊರಳಾಡುತ್ತಿದ್ದಳು ಏನು ಮಾಡಿದರೂ ನಿದ್ರೆ ಹತ್ತದು, ಒಬ್ಬ ಪರಿಚಾ 

ರಿಕಯು ಬೀಸಣಿಗೆ ಬೀಸುತ್ತ ಅವಳಿಗೆ ಗಾಳಿಯನ್ನು ಹಾಕುತ್ತಿದ್ದಳು. ಮತ್ತೊಬ್ಬಳು 

ಅವಳ ತಲೆಗೆ ನಿರುಗಡ್ಡೆಯನ್ನು ಹಾಕುತ್ತಾ ಒತ್ತುತ್ತಿದ್ದಳು ಇನ್ನೊಬ್ಬಳು ಕೈಯಲ್ಲಿ 

ಲ್ಯಾಂಡರ್ ಸೀಸೆಯನ್ನು ಹಿಡಿದು ಹತ್ತಿರ ನಿಂತಿದ್ದಳು. ಈ ಸಮಯದಲ್ಲಿ ನವೀನ 

ಗೋಪಾಲ ಆ ಚಿಕ್ಕ ಮನೆ ಬಂದನು. ಬಂದವನು ಹೆಂಡತಿಯು ಈ ಪ್ರಕಾರ ಅವ 

ಸ್ಥೆಪಡುವುದನ್ನು ಕಂಡು, ಬಹಳ ಮನಗುಂದಿದವನಾದನು. ಮೆಲ್ಲ ಮೆಲ್ಲಗೆ ಹಾಸಿ 

ಗೆಯ ಪಾರ್ಶ್ವದಲ್ಲಿ ಕುಳಿತುಕೊಂಡು, ಬಿಸುಸುಯ್ದು, ಮೊದಲು ತಾನೇ ಮಾತೆತ್ತಿ, 

"ದುರ್ಗಾವತಿಗೆ ಇಂತಹ ರೋಗವುಂಟಾಗುವುದಕ್ಕೆ ಕಾರಣ..." 


ಆ ಕೂಡಲೆ ಗಂಡನ ಮಾತನ್ನು ಪೂರೈಸಗೊಡಿಸದೆ, ಹೈಮವತಿಯು, 

" ನಿನಗೂ ಆ ರೋಗ ಬಂದು ಹಿಡಿದ ಹಾಗಿದೆ. ನೀನು ಪುತ್ರಿಶೋಕದಿಂದ ಅವಳ 

ಹೆಸರನ್ನು ಕೂಡ ಮರೆತುಬಿಟ್ಟೆ ” ಎಂದು ಹೇಳಿದಳು. 

--------------------------------------------- 

38 ಉನ್ಮಾದಿನಿ 


ನವೀನಗೋಪಾಲನು ಹೆಂಡತಿಯ ಮಾತಿಗೆ ಸ್ವಲ್ಪ ಬೇಸರಗೊಂಡು, 

" ಹೋಗಲಿ, ಹೆಸರಿನಲ್ಲಿ ಏನೂ ಬರುವುದಿಲ್ಲ. ಈಗ ನನಗೆ ಬಹಳ ಅನುತಾಪವುಂಟಾ 

ಗಿರುವುದು. ಡಾಕ್ಟರ್ ನರೇಂದ್ರಬಾಬುವು ದುರ್ಗಾವತಿಯ ತಲೆಯ ಮಿದುಳು 

ಹೆಚ್ಚು ಆನಂದದಿಂದ ವಿಕೃತವಾಯಿತೆಂದು ಹೇಳಿದ್ದನು. ಅದು ತಪ್ಪ; ದುರ್ಗಾವ 

ತಿಗೆ ಮರ್ಮಾಂತಿಕವಾದ ಮನೋಕಷ್ಟವುಂಟಾಗಿ, ಅವಳು ಉನ್ಮಾದೆಗ್ರಸ್ತೆಯಾಗಿರು 

ವಳು. ಮೊದಲು ನಮ್ಮ ಅಣ್ಣಂದಿರು ಅವಳಿಗೆ ಹಿಂದೂಮತದಪ್ರಕಾರ ವಿವಾಹವನ್ನು 

ಮಾಡಿದ್ದರು. ನಾವು ಪುನಃ ಅವಳಿಗೆ ನಮ್ಮ ಬ್ರಹ್ಮ ತಕ್ಕನುಗುಣವಾಗಿ ಮದುವೆ 

ಮಾಡಿದವು ” ಎಂದನು. 


ಮಲಗಿದ್ದ ಹೈಮವತಿಯು ನವೀನಗೋಪಾಲನ ಮಾತು ಕಿವಿಗೆ ಬಿದ್ದ ನಿಮಿಷ 

ದಲ್ಲಿ ಹಠಾತ್ತಾಗಿ ಎದ್ದು ಕುಳಿತುಕೊಂಡಳು. ತಕ್ಷಣದಲ್ಲಿ ಹೆಚ್ಚು ಅಚ್ಚರಿಯಿಂದ 

" ಅದೇನು ? ನಮ್ಮ ಮಗಳಿಗೆ ಹಿಂದೂಮತದ ಪ್ರಕಾರ ಮದುವೆಯೇ ? ಬಾಯಿಬಿಡ 

ಬೇಡ ! ಇಂತಹ ಮಾತು ನಮ್ಮ ಸಮಾಜದಲ್ಲಿ ಹೊರಬಿದ್ದರೆ, ಏನೆಂದರು ? ಸಾಕು ! 

ಇನ್ನೂ ಆ ಮಾತು ಬೇಡ ! " ಎಂದಳು. 


ನವೀನಗೊವಾಲನು ಹೆಂಡತಿಯ ಮಾತು ಕೇಳಿ ಬೇಸರಗೊಂಡು, " ಆ 

ಮಾತನ್ನು ಗುಟ್ಟಾಗಿಡಬೇಕೆಂದು ನಿನಗೆ ತಿಷ್ಟು ಅಗಚಾಟಲೆ ? ನಿನಗೆ ಮದುವೆಯಾ 

ದುದು ಯಾವ ಮತದ ಪ್ರಕಾರ ? ಹಿಂದೂಮತದ ಪ್ರಕಾರವಲ್ಲವೆ? ಈಗ ನಾವು 

ಮಾಡಿದ ಕೆಲಸ ಎಷ್ಟನರ್ಥಕ್ಕಿಟ್ಟಿತೋ ತಿಳಿದಿರುವೆಯಾ ? ಅದನ್ನು ಹೇಳುವುದಕ್ಕೆ 

ಇಲ್ಲಿಗೆ ಬಂದೆನು '! ಎಂದನು. 


ಹೈಮವತಿಯು ಆಶ್ಚರ್ಯಪಟ್ಟು, " ಇದರಿಂದ ಕೆಲಸ ಕೆಟ್ಟ ದುದೇನು ? ” 

ಎಂದಳು. 

 

ನವೀನಗೊಪಾಲ :-" ನಾವು ಈ ಕೆಲಸವನ್ನು ಮಾಡಿಯೇ ನಮ್ಮ ಮಗ 

ಳನ್ನು ಉನ್ಮಾದಿನಿಯಾಗಿ ಮಾಡಿದೆವು. ಅವಳು ಆ ದಿನ ತನ್ನ ಮನಸ್ಸಿನ ಯಾತನೆ 

ಯಿಂದ ಹೇಳಿದ ಮರ್ಮಸ್ಪರ್ಶಿಯಾದ ಮಾತುಗಳು ನಿನಗೆ ನೆನಪಿಲ್ಲವೆ ? ಅವಳಾಡಿದ 

ಮಾತುಗಳೆಲ್ಲಾ ಹುಚ್ಚಿಯ ಮರುಳುಮಾತುಗಳೆಂದು ನಾವು ಅತ್ತ ಕಡೆ ದೃಷ್ಟಿ ಕೊಡ 

ಲಿಲ್ಲ. ಎದೆಗೆ ನಾಟುವ ಉನ್ಮಾದಿನಿಯ ಆ ಮಾತುಗಳನ್ನು ಈಗ ನೆನಪಿಗೆ ತಂದು 

ಕೊಂಡರೆ, ನನ್ನ ಪ್ರಾಣವೇ ಹಾರಿಹೋಗುತ್ತಲಿರುವುದು ಒಳ್ಳೆಯದು, ಮೊದಲು 

ನಿನಗೆ ಈ ವಿಚಾರವು ಸ್ವಲ್ಪವೂ ಗೊತ್ತಾಗಲಿಲ್ಲವೇ ?" 

-------------------------------------------------------------------------------- 

ಏಳನೆಯ ಪರಿಚ್ಛೇದ 39 

 

ಹೈಮವತಿ :-ಗೊತ್ತಿಲ್ಲದೆ ಉಂಟೆ ? ಅದನ್ನು ತಿಳಿದವಳಾಗಿಯೇ ಬೇಗಬೇಗನೆ 

ಮದುವೆ ಮಾಡಿದನು. ಅವಳಿಗೆ ಮೊದಲು ಏನೋ ಒಂದು ವಿಧವಾದ ಮದುವೆ 

ಯಾಗಿರಬೇಕೆಂದು ಗೊತ್ತಾಯಿತು. ಆದರೆ ಅದೆಂತಹ ಮದುವೆ ? ಮದುವೆಯಾದವ 

ಳಿಗೆ' ವರನಲ್ಲಿ ಪ್ರಣಯ ಹುಟ್ಟಿ ಮದುವೆಯಾಗಬೇಕು. ಪ್ರಣಯವು ಹುಟ್ಟಬೇಕಾ 

ದರೆ ಪಾತ್ರನಿಗೂ ಪಾತ್ರಿಗೂ ಪರಸ್ಪರ ಕೆಲವು ಕಾಲ ಹೆಚ್ಚು ಆಂತರ್ಯವಾದ ಬಳಕೆ 

ಬೇಕು, ಅದಾವುದೂ ಇಲ್ಲ. ಅವಳಿಗೆ ಪ್ರಣಯವೆಂಬ ಪದಾರ್ಥವೇ ಗೊತ್ತಿಲ್ಲ. 

ಪುನಃ ಮತ್ತೊಂದು ಮದುವೆ ಮಾಡಿಬಿಟ್ಟರೆ, ಹಿಂದೆ ಹಿಂದೂಮತದ ಪ್ರಕಾರ ಆಗಿ 

ದ್ದೆಂಬ ಪ್ರಣಯಶೂನ್ಯವಾದ ಮದುವೆಯು ತಾನಾಗಿಯೇ ಮರೆತುಹೋಗುವುದೆಂದು 

ಬೇಗಬೇಗನೆ ಅವಸರಪಟ್ಟು, ಮದುವೆಯ ಕೆಲಸವನ್ನು ಮಾಡಿದನು. ” 


ನವೀನಗೋಪಾಲ:... ಮಾಡಿದ ಕೆಲಸವು ಸರಿಯಾದ ಕೆಲಸವಾಗಲಿಲ್ಲ.” 


ಹೈಮವತಿ :- ಮಾಡದೆ ಹೋಗಿದ್ದರೆ-ನೀನೇ ನೋಡು. ಹಣದ ಆಸೆಗೆ ಮಗಳ ಮೇಲಿನ 

ಮಮತೆಯನ್ನು ತೊರೆದುಬಿಟ್ಟು, ಅವಳನ್ನು ಇದುವರೆಗೂ ಹಿಂದೂ ಗಳ 

ಮನೆಯಲ್ಲಿ ಬಿಟ್ಟಿದ್ದೆವು. ಆ ಹಣವೂ ನಮ್ಮ ಕೈಬಿಟ್ಟು ಹೋಗುತ್ತಲಿತ್ತು, 

ಹುಡುಗಿಯನ್ನು ಒಬ್ಬ ಹಿಂದೂ ಹುಡುಗನು ಮದುವೆಮಾಡಿ ಕೊಂಡು ಕರೆದುಕೊಂಡು 

ಹೋಗಿದ್ದರೆ, ಆ ರಾಶಿ ಹಣ ನಮ್ಮ ಕೈಸೇರುತ್ತಲಿತ್ತೇ ? ನಾವು ಪುನಃ ಮದುವೆ 

ಮಾಡದೆ ಹೋಗಿದ್ದರೆ, ಹಣವೂ ಹೋಗಿ, ಬ್ರಹ್ಮೋ ಸಮಾಜದಲ್ಲಿ ನಮಗೆ ತಲೆಯೂ 

ತಗ್ಗಿ ಹೋಗುತ್ತಲಿತ್ತು, ಉಯಿಲಿನ ಪ್ರಕಾರ ಹಣವೆಲ್ಲಾ ಹಿಂದೂ ಹುಡುಗನ ಪಾಲಾ 

ಗುತ್ತಲಿರಲಿಲ್ಲವೆ? ನಮ್ಮ ಮಕ್ಕಳಿಗೆ ಏನೂ ಬರುತ್ತಿರಲಿಲ್ಲ. ಮಾಡದೆ ಹೋಗಿದ್ದರೆ-- 

ನೀನು ಹೇಳು, ಏನಾಗುತ್ತಲಿತ್ತು ?” 


ನವೀನಗೊಪಾಲ:- ಹಣಕ್ಕೋಸ್ಕರ ಮಗಳನ್ನು ಹೀಗೆ ಉನ್ಮಾದಿನಿ 

ಯಾಗಿ ಮಾಡಿದುದು ಒಳ್ಳೆಯ ಕೆಲಸವಾಯಿತೆ ? ನಿನಗೆ ಹಣದಮೇಲೆ ಎಷ್ಟು ಆಸೆ ? 

ಹಾಳು ಹಣದ ಪಿಶಾಚಿಯಾಗಿ, ಮಕ್ಕಳ ಮೇಲಿನ ಮಮತೆ ಮುಂತಾದುದೆಲ್ಲಾ 

ತೊಲಗಿ ಹೋಯಿತು, ಮನಸ್ಸಿನಲ್ಲಿ ದುಃಖವುಂಟಾಗಲಿಲ್ಲವೆ? ಅನುತಾಪ ಬೇಡವೆ?” 

  

ಈ ಪರಿಯಾದ ಪತಿಯ ಮಾತಿನಿಂದ, ಹಿಮದಿಂದ ತೊಯಿದು ಅರಳಿದ ಪದ್ಮದ 

ಹಾಗಿದ್ದ ಹೈಮವತಿಯ ಮುಖವು ಗಂಭೀರಭಾವವನ್ನು ತಾಳಿ, ಅಭಿಮಾನದಿಂದ 

ತಟಗುಟ್ಟಲಾರಂಭಿಸಿತು. ಹೈಮವತಿಯು ಮುಖವನ್ನು ಬೇರೆ ಕಡೆ ತಿರುಗಿಸಿಕೊಂಡು, 

ಪಕ್ಕದಲ್ಲಿದ್ದ ಹೆಂಗಸರನ್ನು ನೋಡಿ ಕರುಣಸ್ವರದಿಂದ, " ನನಗೆ ದುಃಖವಿಲ್ಲವೆ?  

--------------------------------------------

4೦ ಉನಾದಿನಿ 


ನಾನು ಕಣ್ಣಾರೆ ವಿನೋದಿನಿಯ ಕಷ್ಟ ಯಾತನೆಗಳನ್ನೆಲ್ಲಾ ನೋಡಿದ ದಿನ ಮೊದ 

ಲ್ಗೊಂಡು ಹಾಸಿಗೆಯನ್ನು ಬಿಟ್ಟು ಎದ್ದಿಲ್ಲ. ನೀವು ಹೇಳಿರೆ ? ನನಗೆ ಕಷ್ಟವಿಲ್ಲವೆ ?  

ಹಗಲು ರಾತ್ರಿ ನೋಡಿದವರು ನೀವು ಹೇಳಿರೆ ? ನಾನು ಸುಖದಲ್ಲಿರುವೆನೆ, ದುಃಖದಲ್ಲಿ 

ರುವೆನೊ ನಿಜವನ್ನು ಹೇಳಿರಿ” ಎಂದು ಅವಳಿಸಿದಳು. 


ಹೀಗೆಂದು ಹೇಳಿ ತನ್ನ ಮಾತನ್ನು ಸ್ಥಾಪಿಸುವ ಛಲವನ್ನು ಇದಿರಿಗೆ ನಿಂತಿದ್ದ 

ಗೆಳತಿಯಮೇಲೂ ಸೇವಕಿಯರ ಮೇಲೂ ಹಾಕಿಬಿಟ್ಟು, ಹೈಮವತಿಯು ಉಡುಪಿನ 

ಜೇಬಿನಲ್ಲಿ ಮಡಿಸಿಟ್ಟಿದ್ದ ಪಟ್ಟು ಕೈವಸ್ತ್ರವನ್ನು ತೆಗೆದು, ಅದರ ಒಂದೆರಡು ಮಡುಪು 

ಗಳನ್ನು ಮಾತ್ರ ಬಿಚ್ಚಿ, ಅದರಿಂದ ಕಣ್ಣುಗಳನ್ನು ಮರೆಮಾಡಿ ಮುಚ್ಚಿಕೊಂಡು, 

ನೂತನ ಸಭ್ಯಾಚಾರಪದ್ದತಿಗನುಸಾರವಾಗಿ ಅಳುತ್ತ ಕುಳಿತಳು, ಹೈಮವತಿಯು ಆಳು 

ವನ್ನು ಕಂಡು, ನವೀನಗೋಪಾಲನಿಗೆ ತಲೆತಿರುಗಿದಹಾಗಾಗಿ, ಅವನು ಗಾಬರಿಪಟ್ಟು 

 " ನೀನು ಮೊದಲು ವಿವಾಹವಾದುದು ನೋಡಿದವಳಲ್ಲ.  ನಿನಗೆ ಹೇಗೆ ಗೊತ್ತು ? 

ಮತ್ತೇನುತಾನೇ ಮಾಡಬಲ್ಲವಳಾಗಿದ್ದೆ ? ಹುಡುಗಿಯು ಎಲ್ಲಾ ಸಮಾಚಾರವನ್ನು 

ಹೊರಪಡಿಸಿ ಹೇಳಬೇಕಾಗಿತ್ತು. ಆ ಮಾತು. ಹೋಗಲಿ ! ಬಿಡು ! ಈಗ ಹುಡುಗಿಯ 

ಮೊದಲಿನ ಗಂಡನು ಬಂದಿರುವನು, ಇತ್ತಲಾಗಿ ಈ ಅವಸ್ಥೆ. ಹುಡುಗಿಯ ಅವಸ್ಥೆ 

ನೋಡಿದರೆ ಅದು ಹಾಗೆ. • • • • • ಈಗ ಮಾಡುವುದೇನು ? '' ಎಂದನು. 


ಹೈಮವತಿಯು ಆಗಲ್ಲ ಅಭಿಮಾನಭರಿತಳಾಗಿ, " ಅದನ್ನು ನಾನು ಹೇಗೆ ಹೇಳಲಿ? 

ನನಗೇನು ಗೊತ್ತು ? ” ಎಂದಳು. 


ನವೀನಗೊಪಾಲನು ಆಶ್ಚರ್ಯಪಟ್ಟು, " ನೀನೇ ಎಲ್ಲವನ್ನು ತಿಳಿದವಳು. 

ನಿನ್ನ ಮಾತಿಲ್ಲದೆ ನಾನು ಯಾವ ಕೆಲಸವನ್ನು ಮಾಡಿರುವೆನು ? ” ಎಂದನು. 


ಪತಿಯ ಇಂತಹ ಮಾತುಗಳನ್ನು ಕೇಳಿದ ಪತ್ನಿಯ ದುರಭಿಮಾನವು ಮತ್ತಷ್ಟು 

ಹೊತ್ತು ತಾನೇ ಉಳಿದಿರುವುದು ? ಹೈಮವತಿಯು ಆಗ ಕಣ್ಣಿಗೆ ಮರೆಮಾಡಿಕೊಂ 

ಡಿದ್ದ ಕೈವಸ್ತ್ರವನ್ನು ತೆಗೆದು, ಪುನಃ ಮೊದಲಿನ ಹಾಗೆ ಮಡುಪುಮಾಡಿ, ಅದನ್ನು 

ಇದ್ದೆಡೆಯಲ್ಲಿಟ್ಟು ಕೊಂಡು, ಗೆಳತಿಯನ್ನೂ ಪರಿಚಾರಿಕೆಯನ್ನೂ ಹೊರಗೆ ಹೋಗುವ 

ಹಾಗೆ ಅಪ್ಪಣೆ ಮಾಡಿ, ಅನುಚ್ಚಸ್ವರದಿಂದ ಮೆಲ್ಲ ಮೆಲ್ಲಗೆ ಗಂಡನನ್ನು ಕುರಿತು, 

" ನಮ್ಮ ವಿನೋದಿನಿಯು ಮೊದಲಿನ ಹೇಗೆ ಸುಸ್ಥಳಗಿ, ಅದರೊಂದಿಗೆ ನಿನ್ನ ಅಣ್ಣನ 

ಆಸ್ತಿಯ ನಮ್ಮ ಕೈಬಿಟ್ಟು ಹೋಗದಿರುವುದಕ್ಕೆ ಏನು ಉಪಾಯವನ್ನು ಮಾಡ 

ಬೇಕೊ ಆ ಉಪಾಯವನ್ನು ಹುಡುಕಿ ಮಾಡಬೇಕು. ಇದು ನಮ್ಮ ಸಮಾಜ 

ದರದು ನಿಂದಿಸುವರೆಂದು ಹೆದರಬೇಡ ” ಎಂದು ಹೇಳಿದಳು. 

----------------------------------------- 

ಎಂಟನೆಯ ಪರಿಚ್ಛೇದ  ೪೧ 

ನವೀನಗೋಪಾಲನು ಸ್ವಲ್ಪಹೊತ್ತು ಚಿಂತಿಸಿ ನೋಡಿ, ಅನಂತರ, " ಅದೇ 

ಸರಿಯಾದ ಮಾರ್ಗ, ನಾನು ಜ್ಯೋತಿಪ್ರಕಾಶನಿಗೆ ಹೇಗಾದರೂ ತಿಳಿಯಹೇಳಿ, ಆವ  

ಆಗಿರುವ ವಿವಾಹದ ಸಂಬಂಧವನ್ನು ಬಿಡುಗಡೆ ಮಾಡುವಹಾಗೆ ಮಾಡುವೆನು. 

ಅದಲ್ಲದೆ ಅವನು ಆ ಉನ್ಮಾದಿನಿಯನ್ನು ಕಟ್ಟಿಕೊಂಡು ಏನುತಾನೇ ಮಾಡಲಾರನು? 

ದುರ್ಗಾವತಿಯನ್ನು ಮೊದಲು ಮನೆಗೆ ಕರೆದುಕೊಂಡು ಬಾ ! ಆನಂತರ ಪರಪಕ್ಷದ 

ವರು ನಾವು ಹೇಳಿದ ಹಾಗೆ ಕೆಲಸ ಮಾಡಲೊಪ್ಪಿಕೊಂಡರೆ, ಆಗವರಿಗೆ ಮಗಳನ್ನು 

ಬಿಟ್ಟು ಕೊಟ್ಟು ಬಿಡುವ ” ಎಂದು ಹೇಳಿದನು. 

 

ಹೈಮವತಿಯು ಮುಖವನ್ನು ಅಲ್ಲಾಡಿಸುತ್ತ, " ಆಹಾ ! ನಿನ್ನ ಬುದ್ಧಿಯು 

ಎಂತಹ ಯುಕ್ತಿಯುಕ್ತವಾದುದು ! ಮೊದಲು, ನೀನು ಅದನ್ನೆಲ್ಲಾ ವ್ಯವಸ್ಥೆಪಡಿಸು. 

ಅನಂತರ ಜ್ಯೋತಿ ಪ್ರಕಾಶನ ಮದುವೆಯ ಸಂಬಂಧವನ್ನು ಬಿಡಿಸಿ ಹುಡುಗಿಯನ್ನು 

ಮನೆಗೆ ಕರೆತರಬೇಕು. ಹಾಗೆ ಮಾಡದಿದ್ದರೆ ಹುಡುಗಿಯ ಹೋಗಿ, ಅವಳೊಡನೆ 

ಆಸ್ತಿಯ ಕೈಬಿಟ್ಟು ಹೋಗಿಬಿಡುವುದು ” ಎಂದು ಹೇಳಿದಳು. 


" ಒಳ್ಳೆಯದು, ಹಾಗೆಯೇ ಮಾಡುವೆನು ” ಎಂದು ಹೇಳಿ ನವೀನಗೊಪಾ 

ಲನು ಜ್ಯೋತಿಪ್ರಕಾಶನ ಮನೆಯ ಕಡೆಗೆ ಬೇಗಬೇಗನೆ ಕಾಲುಹಾಕುತ್ತ ಹೊರಟು 

ಹೋದನು. 

-------------

ಎಂಟನೆಯ ಪರಿಚ್ಛೇದ 

ಜೋತಿಪ್ರಕಾಶನು ನಿಟ್ಟುಸಿರನ್ನು ಬಿಟ್ಟು, " ತಮ್ಮ ಮಾತುಗಳಲ್ಲಿ ನನಗೆ 

ನಂಬುಗೆ ಇಲ್ಲ. ಆದರೆ ಅವಸ್ಥೆಯನ್ನು ನೋಡಿದರೆ, ಈಗ ನಂಬುಗೆ 

ಯುಂಟಾಗುವುದು' ಎಂದು ಹೇಳಿದನು. 


ತರ್ಕಲಂಕಾರ ಮಹಾಶಯನು, " ತಾವು ಇಷ್ಟು ಸಹಜವಾಗಿ ನಂಬವಿರೆಂದು 

ನಾನು ಯೋಚಿಸಿರಲಿಲ್ಲ ” ಎಂದನು. 


ಜ್ಯೋತಿಪ್ರಕಾಶ :_ಹಾಗೆ ನಂಬುವುದಕ್ಕೆ ಕಾರಣವುಂಟು ಮೊದಲಿನಿಂ 

ದಲೂ ಇಂತಹ ಘಟನೆಯೊಂದು ನಡೆದಿರಬೇಕೆಂದು ಊಹೆಯಿತ್ತು. ಈಗ ಅದು 

ಖಂಡಿತವಾಯಿತು, ಈಗ ತಾವು ಹೇಳುವದೇನು ?" 

----------------------------------------

೪೨ ಉನ್ಮಾದಿನೀ 


ತರ್ಕಾಲಂಕಾರ :- ನೀನು ಶಿಷ್ಯ ಮತ್ತು ಶಾಂತನಾದವನೆಂದು ತೋರು 

ತ್ತಿದೆ. ನಿನ್ನಲ್ಲಿಗೆ ಬರುವುದಕ್ಕೆ ಮೊದಲು ನಮಗೆ ಉಂಟಾಗಿದ್ದ ಭಯಕ್ಕೆ ಕಾರಣವಿಲ್ಲ 

ಎಂದು ಈಗ ಗೊತ್ತಾಯಿತು. ನಾವು ಹಳ್ಳಿಗಾಡಿನಲ್ಲಿರತಕ್ಕೆ ಹಿಂದೂಗಳು. 

ಬ್ರಹ್ಮಸಮಾಜಕ್ಕೆ ಸೇರಿದವರ ಬಳಿಗೆ ಹೋಗುವುದಕ್ಕೆ ಭಯಪಡುವೆವು. ಅದಲ್ಲದೆ 

ನವೀನಗೊಪಾಲನು ನಮ್ಮ ವಿಷಯದಲ್ಲಿ ನಡೆಯಿಸಿದ ವ್ಯವಹರಣೆಯನ್ನು ನೋಡಿ, 

ಹಿಂದೆ ನಡೆದಿರುವ ವೃತ್ತಾಂತವನ್ನೆಲ್ಲಾ ಹೇಳುವುದಕ್ಕೆ ಹೆದರುವೆವು.” 


ಜ್ಯೋತಿಪ್ರಕಾಶ :-* ನವೀನಗೋಪಾಲನು ನಿಮ್ಮನ್ನು ಕುರಿತು ನಿಷ್ಠುರ 

ಮಾಡಿದನೇನು ?" 


ತರ್ಕಾಲಂಕಾರ :-_ಮೊದಲು ನಿಷ್ಟುರ ಮಾಡಿದರು. ಅನಂತರ ಕಡೆಕಡೆಗೆ 


ಸಮಧಾನಗೊಂಡನು. ನಾನು, “ ನೀವೆ ನಿಮ್ಮ ಮಗಳು ಉನ್ಮಾದಿನಿಯಾಗುವುದಕ್ಕೆ 

ಕಾರಣರಾದಿರಿ' ಎಂದು ಒತ್ತಿ ಖಂಡಿತವಾಗಿ ಹೇಳಿದಮೇಲೆ ಸ್ವಲ್ಪ ಶಾಂತಮೂರ್ತಿ 

ಯನ್ನು ತಾಳಿದನು. ” 


ಜ್ಯೋತಿಪ್ರಕಾಶ :* ನೀವು ಅವನಿಗೆ ನಿಜವನ್ನು ಹೇಳಿದಿರಿ, ನನಗೆ ಅದೆಲ್ಲಾ 

ಮೊದಲು ಗೊತ್ತಾಗಿರಲಿಲ್ಲ. ಈಗ ಆ ಉನ್ಮಾದಿನಿಯು ಹೇಳುವ ಮಾತುಗಳೂ 

ಮಾಡುವ ಕಾರ್ಯಗಳೂ ಎಲ್ಲಾ ಅರ್ಥವಾಗುತ್ತಲಿವೆ. ನಾನು ಈ ವಿವಾಹವನ್ನು 

ಮಾಡಿಕೊಂಡು ಎಷ್ಟು ಅನಾದವನ್ನು ಮಾಡಿರುವೆನೊ, ಅದನ್ನು ಇಷ್ಟೆಂದು ಹೇಳ 

ಆರೆನು, ಅವಳಿಗೆ ಮನಸ್ಸಿಗೆ ಎಷ್ಟು ಕಷ್ಟವಾಗಿ ಹೀಗೆ ಉನ್ಮಾದಿನಿಯಾಗಿರಬೇಕೋ, 

ಅದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ತಾವು ಏನೂ ಹೇಳಿದರೂ ಅದನ್ನು 

ಮಾಡುವುದಕ್ಕೆ ಸಿದ್ಧನಾಗಿರುವೆನು.” 


ತರ್ಕಾಲಂಕಾರನು ಸ್ವಲ್ಪ ಹೊತ್ತು ಹಾಗೆಯೇ ಯೋಚಿಸಿದನು, ಅನಂತರ 

ಒಂದು ತಡವೆ ಖಗೇಂದ್ರನ ಮುಖವನ್ನು ನೋಡಿದನು. ಪುನಃ ಸ್ವಲ್ಪ ಯೋಚಿಸಿದನು. 

ಪುನಃ ಜೋತಿಪ್ರಕಾಶನನ್ನು ಕುರಿತು, " ನಾನೇನು ಹೇಳಲಿ ? ನನ್ನ ತಲೆ ! ನೀನು 

ಮದುವೆಮಾಡಿಕೊಂಡು ಹೆಣ್ಣನ್ನು ಮನೆಗೆ ಕರೆದುಕೊಂಡು ಬಂದಿರುವಾಗ, ನಾವು 

ಅವಳನ್ನು ಮನೆಗೆ ಹೇಗೆ ಕರೆದುಕೊಂಡು ಹೋಗಲಾದೀತು ? ಅದು ಆಗಲಾರದು " 

ಎಂದನು. 


ಜೋತಿಪ್ರಕಾಶ :- ಏತಕ್ಕೆ ಕರೆದುಕೊಂಡು ಹೋಗಕೂಡದು ? ನಮ್ಮ 

ಸಮಾಜದ ಮಂದಿರದಲ್ಲಿ ನಾವಿಬ್ಬರೂ ಪ್ರತಿಜ್ಞಾ ಬದ್ದರಾದುದು ಹೊರತು ನಮಗೆ 

-------------------------------------------

ಎಂಟನೆಯ ಪರಿಚ್ಛೇದ 43 


ಗಂಡಹೆಂಡಂದಿರಿಗೆ ಮತ್ತಾವವಿಧವಾರ ಸಂಪರ್ಕವೂ ಆಗಿಲ್ಲ. ನಿಮ್ಮ ದುರ್ಗವ 

ತಿಯು ಮೊದಲು ಹೇಗೆ ಪವಿತ್ರಳಾಗಿ ಸತಿಯಾಗಿದ್ದಳೊ, ಈಗಲೂ ಹಾಗೆಯೇ ಶುದ್ಧ 

ಳಾಗಿರುವಳು ." 

 

ತರ್ಕಾಲಂಕಾರ :-ಆದರೂ ಈಗ ಆಗಿರುವ ವಿವಾಹದ ಸಮಾಚಾರವು 

ನಮ್ಮ ಹಿಂದೂಗಳಿಗೆ ತಿಳಿದರೆ, ಬಹಳ ಅನರ್ಥಕ್ಕೆ ಕಾರಣವಾಗುವುದು." 


ಜ್ಯೋತಿಪ್ರಕಾಶ :-" ಹಾಗಾದರೆ, ಮತ್ತಾವ ವಿಚಾರದಲ್ಲಿ ನನ್ನೊಡನೆ  

ಮಾತನಾಡುವದಕ್ಕೆ ಬಂದಿರುವಿರಿ ? ಮತ್ತು ಹೇಳುವುದಕ್ಕೆ ಸಂಕುಚಿತರಾಗಿರುವಿರಿ ?" 


ತರ್ಕಾಲಂಕಾರ :- ರಾಮಗೋಪಾಲನು ಸಾಯುವ ಕಾಲದಲ್ಲಿ ರೊಕ್ಕ 

ವಾಗಿ ಅರುವತ್ತು ಸಾವಿರ ರೂಪಾಯಿಯನ್ನೂ, ಸ್ಥಾವರ ಆಸ್ತಿಯಾಗಿ ಎಪ್ಪತ್ತು, 

ಎಂಭತ್ತು ಸಾವಿರ ರೂಪಾಯಿಯನ್ನೂ ಬಿಟ್ಟು, ಉಯಿಲಿನ ಮೂಲಕವಾಗಿ ಅದನ್ನೆಲ್ಲಾ 

ದುರ್ಗಾವತಿಗೆ ಕೊಟ್ಟಿರುವನು. ಅದಕ್ಕೆಲ್ಲಾ ಅವಳ ಈ ಗಂಡನನ್ನು ಅಧಿಕಾರಿಯಾಗಿ 

ಮಾಡಿರುವನು, ಈಗ ಆ ಆಸ್ತಿಯೆಲ್ಲಾ ಯಾರ ವಶದಲ್ಲಿರುವುದೋ, ಅದನ್ನೂ ಕೇಳು 

ವುದಕ್ಕೆ ಬಂದೆವು. '' 


ಜ್ಯೋತಿಪ್ರಕಾಶ :-" ನನಗೆ ಆ ವಿಚಾರವಾವುದೂ ಗೊತ್ತಿಲ್ಲ. ಆ ಹುಡು 

ಗಿಯ ಆಸ್ತಿಯೆಲ್ಲಾ ನವೀನಗೋಪಾಲನ ಸ್ವಾಧೀನದಲ್ಲಿರುವುದಾಗಿ ಮಾತ್ರ 

ಕೇಳಿರುವೆನು. ” 


ತರ್ಕಾಲಂಕರನು ಸ್ವಲ್ಪ ಯೋಚಿಸಿ, " ಒಂದುವೇಳೆ ಚಿಕಿತ್ಸೆಯಿಂದ ದುರ್ಗಾ 

ವತಿಯು ಆರೋಗ್ಯ ಲಾಭವನ್ನು ಹೊಂದಿ, ಶಾಸ್ತ್ರ ಪ್ರಕಾರ ಅವಳನ್ನು ನಾವು ಗ್ರಹಣ 

ಮಾಡುವುದಾದರೆ, ಅವಳ ಆಸ್ತಿಯನ್ನೆಲ್ಲಾ ಅವಳಿಗೆ ಕೊಡಬೇಕಾಗುವುದು'' ಎಂದನು. 


ಖಗೇಂದ್ರನಾಥನು ಆ ಕೂಡಲೆ, " ನನಗೆ ಆ ಆಸ್ತಿ ಮುಂತಾದುದು ಯಾವುದೂ 

ಬೇಡ, ನನಗೆ ಹೆಂಡತಿಯು ಆರೋಗ್ಯ ಸ್ಥಿತಿಯಲ್ಲಿ ಬಂದರೆ ಸಾಕು” ಎಂದನು. 


ಜ್ಯೋತಿಪ್ರಕಾಶ :-" ನಾನು ತಿಳಿದಿರುವಮಟ್ಟಿಗೆ ಅವಳು ನಿಮ್ಮನ್ನು ನೋಡಿ 

ದರೆ ಸಾಕು. ಅದರಿಂದಲೇ ಅವಳು ಆರೋಗ್ಯಲಾಭವನ್ನು ಹೊಂದಿ, ರೋಗವೆಲ್ಲಾ 

ಹೋಗಿ ಬಿಡುವುದು." 

 

ತರ್ಕಾಲಂಕಾರ ಮಹಾಶಯರು ಖಗೇಂದ್ರನನ್ನು ನೋಡಿ, "ಇನ್ನು ನಾನು 

ಹೇಳುವುದು ಏನು ಉಳಿದಿರುವುದು ? ” ಎಂದನು. 


ಖಗೇಂದ್ರನಾಥನು ಅವನತ ಮಸ್ತಕನಾಗಿ, “ ನಾನು ಒಂದು ಕಡವೆ ಅವ 

ಳನ್ನು ನೋಡಲು ಇಷ್ಟವುಳ್ಳವನಾಗಿರುವೆನು ” ಎಂದನು. 

------------------------------------------- 

೪೪ ಉನ್ಮಾದಿನೀ 

 

ಜ್ಯೋತಿಪ್ರಕಾಶನು ಕೂಡಲೆ, " ನಾನು ನಿಮ್ಮನ್ನು ಅದನ್ನೇ ಕೇಳಿಕೊಳ್ಳಬೇ 

ಕೆಂದಿದ್ದೆನು, ಬೇಕಾದರೆ, ಈಗಲೇ ನೋಡಬಹುದು ” ಎಂದನು. 

 

ತರ್ಕಾಲಂಕಾರ :- ಅವಳನ್ನು ಎಲ್ಲಿ ಇರಿಸಿರುವಿರಿ ? " 


ಜ್ಯೋತಿಪ್ರಕಾಶ :: ಮನೆಯಲ್ಲಿ ಬೀಗ ಹಾಕಿ ಕೂಡಿಹಾಕಿಡುವುದು ಸರಿ 

ಯಲ್ಲ ವೆಂದು ಡಾಕ್ಟರನು ಹೇಳಿದ ಕಾರಣ, ಅವಳನ್ನು ನಮ್ಮ ಮನೆಯ ಹಿಂದೆ

ಇರುವ ತೋಟದಲ್ಲಿ ಬಿಟ್ಟಿದ್ದೇವೆ. ತೋಟಕ್ಕೆ ಸುತ್ತಲೂ ಮನೆಗಳಿರುವುದರಿಂದ, 

ಅವಳು ಮತ್ತೆಲ್ಲಿಯ ಹೋಗುವುದಕ್ಕೆ ಮಾರ್ಗವಿಲ್ಲ, ಆ ತೋಟಕ್ಕೆ ಹೋದರೆ ಅವ  

ಳನ್ನು ನೋಡಬಹುದು ! 


ಖಗೇಂದ್ರನಾಥನು ಕೂಡಲೇ ಎದ್ದು ನಿಂತನು. ಅವನೊಂದಿಗೆ ತರ್ಕಾಲಂಕಾರ 

ಮಹಾಶಯನು ಎದ್ದನು. ಈ ಸಮಯದಲ್ಲಿ ನವೀನಗೋಪಾಲಸು ಅಲ್ಲಿಗೆ ಬಂದನು ; 

ಒಂದು ಜ್ಯೋತಿಪ್ರಕಾಶನ ಬಾಯಿಯಿಂದ ನಡೆದಿದ್ದ ಮಾತುಕಥೆಗಳನ್ನೆಲ್ಲಾ ಕೇಳಿದನು. 

ಜ್ಯೋತಿಪ್ರಕಾಶನು ದುರ್ಗಾವತಿಯನ್ನು ಪರಿತ್ಯಾಗ ಮಾಡಲು ಸಮ್ಮತವುಳ್ಳವನಾಗಿ 

ರುವ ಸಂಗತಿಯನ್ನು ತಿಳಿದು ಸಂತುಷ್ಟನಾದನು. ಆದರೆ ಮಗಳು ಕಡೆಗೆ ತನ್ನ ಕೈಬಿಟ್ಟು 

ಹೋಗುವಳೆಂದು ಚಿಂತಿತನಾದನು. ಈ ಸಮಯದಲ್ಲಿ ದುರ್ಗಾವತಿಯನ್ನು ನೋಡ 

ಬೇಕೆಂಬ ಮಾತು ಬಂತು. ನವೀನಗೋಪಾಲನು ಅದಕ್ಕೆ ಒಪ್ಪಲಿಲ್ಲ. ಆದರೆ ಜ್ಯೋತಿ 

ಪ್ರಕಾಶನು, ನೋಡಿದರೆ ಒಳ್ಳೆಯದಾಗುವುದೆಂದು ಹೇಳಿದಮೇಲೆ ನವೀನಗೊಪಾ 

ಲನು ಪುನಃ ಆಕ್ಷೇಪಿಸಲಾರದೆ ಸುಮ್ಮನಿದ್ದನು. 


ಅನಂತರ ನಾಲ್ಕು ಮಂದಿಯೂ ತೋಟಕ್ಕೆ ಹೋದರು. ಅಲ್ಲಿ ಹೋಗಿ ನೋಡ 

ಲಾಗಿ, ಉನ್ಮಾದಿನಿಯು ವನದೇವಿಯ ಹಾಗೆ ಅಲಂಕೃತಳಾಗಿ ತಿರುಗಾಡುತ್ತಲಿದ್ದಳು. 

ಹೂವೆಲ್ಲಾ ಮಾಲೆಯಾಗಿ ಕಟ್ಟಿ ಧರಿಸಿಕೊಂಡಿದ್ದಳು. ಈ ದಿನ ಉನ್ಮಾದಿನಿಯು 

ಹೂವಿನ ಅಂಗಿ ತೊಟ್ಟಿದ್ದ ಹಾಗೆ ಮೈಯೆಲ್ಲಾ ಹೂವಿನಿಂದ ಮುಚ್ಚಿ ಹೋಗಿತ್ತು. ಕಂಠ 

ದಲ್ಲಿ ಹೂವಿನ ಹಾರ-ಶಿರದಲ್ಲಿ ಹೂವಿನ ಕಿರೀಟ-ಮೈಯೆಲ್ಲಾ ಹೂವಿನಿಂದ ಅಲಂ 

ಕಾರ, ಉನಾದಿನಿಯು ತನ್ನ ಮನಸ್ಸಿಗೆ ಬಂದಹಾಗೆ ಹಾಡುವಳು-ಕುಣಿದಾಡು 

ವಳು-ಅಲ್ಲಲ್ಲಿ ಹೂವನ್ನೆತ್ತುವಳು. 


ಖಗೇಂದ್ರನಾಥನ ರೆಪ್ಪೆ ಹಾಕದೆ ನೋಡಲಾರಂಭಿಸಿದನು ನೋಡುತ್ತಿದ್ದ ಹಾಗೆ 

ಅವನ ಕಣ್ಣು ಅಶ್ರುಧರಕಾಂತವಾಯಿತು. ಉನ್ಮಾದಿನಿಗೆ ಅತ್ತಕಡೆ ದೃಷ್ಟಿಯಿರ 

ಲಿಲ್ಲ. ಆವಳು ಆನಂದದಿಂದ ತನ್ನ ಇಷ್ಟ ಬಂದ ಕಡೆ ತಿರುಗಾಡುತ್ತಲಿದ್ದಳು. 

------------------------------------------- 

  ಎಂಟನೆಯ ಪರಿಚ್ಛೇದ ೪೫ 

" ಈ ದಿನ ಉನ್ಮಾದಿನಿಗೆ ಇಷ್ಟು ಆನಂದವೇತಕ್ಕೆ?” ಎಂದು ಅಲ್ಲಿದ್ದ ನಾಲ್ಕು ಮಂದಿಯ 

ಯೋಚಿಸುತ್ತಲಿದ್ದರು. ಆದರೆ ಅವರಿಗೆ ಅದರ ಕಾರಣವನ್ನು ತಿಳಿಯಲಸಾಧ್ಯವಾಗಿತ್ತು. 

 

ಕ್ರಮವಾಗಿ ಅವರು ಉನ್ಮಾದಿನಿಯ ಸಮೀಪ , ಹೋಗಲಾರಂಭಿಸಿದರು. 

ಆದರೂ ಉನ್ಮಾದಿನಿಯು ಅತ್ತಕಡೆ ನೋಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲರೂ 

ಉನ್ಮಾದಿನಿಯ ಇದಿರಿಗೆ ಹೋಗಿ ನಿಂತರು. ಆದರೂ ಉನ್ಮಾದಿನಿಯು ಅವರಕಡೆ 

ಕಣ್ಣೆತ್ತಿ ನೋಡಲಿಲ್ಲ. ಈ ಸಮಯದಲ್ಲಿ ಜ್ಯೋತಿಪ್ರಕಾಶನು, " ಯಾರು ಬಂದಿರು 

ವರು ? ಇತ್ತ ಕಡೆ ತಿರುಗಿ ನೋಡು ! ” ಎಂದನು. 


ಉನ್ಮಾದಿನಿಯು ಕಣ್ಣೆತ್ತಿ ನೋಡಿದಳು. ವಿಸ್ಫಾರಿತ ನೇತ್ರಗಳಿಂದ ಸ್ಥಿರದೃಷ್ಟಿ 

ಯುಳ್ಳವಳಾಗಿ ಖಗೇಂದ್ರನಾಥನ ಮುಖವನ್ನು ನೋಡಿದಳು. ಶಿಲಾಮಯವಾದ 

ಮೂರ್ತಿಯ ಹಾಗೆ ನಿಶ್ಚಲವಾಗಿ ಸ್ಟಿರಭಾವದಿಂದ ಹಾಳೆಯೇ ಸ್ವಲ್ಪ ಹೊತ್ತು ನಿಂತಿ 

ದ್ದಳು. ಅವಳು ಈ ಪ್ರಕಾರ ನಿಂತಿರುವುದನ್ನು ನೋಡಿ ನಾಲ್ಕು ಮಂದಿಯ ವಿಸ್ಮಿತ 

ರಾಗಿ ಸ್ತಂಭಿತರಾದರು. ಆ ಮೂರ್ತಿಯನ್ನು ನೋಡಿ ಯಾರೂ ಕಣ್ಣೆವೆಯನ್ನು ಅಲು 

ಗಾಡಿಸಲಾರದೆ ನಿಂತಿದ್ದರು. ಯಾರ ಬಾಯಿಯಿಂದಲೂ ಒಂದು ಮಾತು ಇಲ್ಲ. 

ಅನಂತರ ಉನ್ಮಾದಿನಿಯು ಉನ್ಮತ್ತಭಾವದಿಂದ ಓಡಿಬಂದು ಖಗೇಂದ್ರನಾಥನನ್ನು 

ಆಲಿಂಗನೆ ಮಾಡಿಕೊಂಡಳು. ಖಗೇಂದ್ರನಾಥನೂ ಉನ್ಮತ್ತಭಾವದಿಂದ ಉನ್ಮಾದಿನಿ 

ಯನ್ನು ಆಲಿಂಗನೆ ಮಾಡಿ ಹಿಡಿದು ಕೊಂಡನು, ಉನ್ಮಾದಿನಿಯು ಖಗೇಂದ್ರನಾಥನ 

ಈ ಪ್ರಕಾರವಾದ ಪ್ರಗಾಢವಾದ ಆಲಿಂಗನೆಯಲ್ಲಿ ಸ್ವಲ್ಪಹೊತ್ತು ಸ್ಥಿರಭಾವದಿಂದ 

ನಿಶ್ಚಲಳಾಗಿದ್ದಳು. ಆದರೆ ಇದೇನು ? ಕ್ರಮವಾಗಿ ಉನ್ಮಾದಿನಿಯ ಶರೀರವು ಬಿರುಸಾ 

ಗುತ್ತ ಬಂದುದೇಕೆ ? 


ಎಲ್ಲರೂ ವಿಸ್ಮಿತರಾಗಿ ನೋಡುತ್ತಿದ್ದ ಹಾಗೆ ಉನ್ಮಾದಿನಿಯ ಪ್ರಾಣವಾಯುವು 

ಹಾರಿಹೋಗಿತ್ತು. ಖಗೇಂದ್ರನಾಥನು ಮೂರ್ಛಿತನಾಗಿ ಅಲ್ಲಿಯೇ ಬಿದ್ದನು. ನವೀನ 

ಗೋಪಾಲನು ಆರ್ತನಾದ ಮಾಡಿದನು. ತರ್ಕಾಲಂಕಾರನು ಬುದ್ದಿ ಹೋದವನ 

ಹಾಗಾಗಿ ಅಲ್ಲಿಯೇ ನಿಂತಿದ್ದನು, ಜ್ಯೋತಿಪ್ರಕಾಶನು ಚೀತ್ಕಾರ ಮಾಡುತ್ತ, ಸತಿಯು 

ಪುಷ್ಪಾಲಂಕೃತಳಾಗಿ ಪ್ರತಿಪಕ್ಷದಲ್ಲಿ ಸ್ವರ್ಗಕ್ಕೆ ಹೋದಳೆಂದು ಕೂಗಿದನು. 


ಸಂಪೂರ್ಣಂ

-----------------------------------

ಮ! ರಾ!! ಬಿ. ವೆಂಕಟಾ ಚಾರ್ಯರಿ೦ದ 

ರಚಿತವಾದ 

ಪುಸ್ತಕಗಳು.

 (ಪರಿಶೋಧಿತವಾಗಿ ಪರಿವರ್ಧಿತವಾಗಿ ನಮ್ಮಲ್ಲಿ ದ್ವಿತೀಯ ಮುದ್ರಣವಾಗಿರುತ್ತವೆ) ಪುಸ್ತಕದ ಹೆಸರು, ಕ್ರಯ, ವುಸ್ತಕದ ಹೆಸರು ಕ್ರಯ 

 ಆಗಮಿ ಹುಡುಗಿ ೮ ಭಾಂತಿವಿಲಾಸ 

 ಅತ್ತಿಗೆ 0 ೩ ; ಭಾರತಮಹಿಳಾ 

 ಆಮ್ಮ ತಪುಲಿನ ೦ ೧೦ : ಮನೋರಮಾ (Detective Novel) ೧ ಅಹಲ್ಯಾಬಾಯಿ * o ೮ ೯ ಮರಕ 

 ಆನಂದಮಠ* ೦ ೦ ಮಾಸ್ತಿ 

 ಇಂದಿರಾ ೬ ಮಾಧವೀಲತಾ * 

 ಉನ್ಮಾದಿನಿ ೬ ೧ ಮೃಣ್ಮಯಿ(ಕಪಾಲಕುಂದಲ ಏನೆ ಭಾಗ* ೧೦ 

 ಉಪವಾಸ 6 ೬ ಯಗಳಾಂಗುರಿಯ •••೦ ೩. 

 ಕಪಾಲಕುಂಡಲಾ* ೧೨ ೦.ರಜಸಿ 

 ಕಮಲಾಕಾಂತ ೨ ರಮಾಬಾಯಿ 

 ಕರ್ಮಕ್ಕೆ ತಕ್ಕ ಫಲ ೧ ೧  ಜಸಿಂಹ* 

 ಕೃಷ್ಣ ಕಾಂತನ ಉಯಿಲು* 5 ಧಾರಾಣೇ 

 ಕಾಗೆ - ೦ ೧ ೧ ಇಮೇಶ್ವರನ ಅದೃಷ್ಟ

 ಕೊಹಿನುರು * ೧೨ ೦ ಲೀಲೆ (ಹೊಸ ಕಾದಂಬರಿ) 

 ಗಿಡೊಕ್ಕಧರ್ವ ೧ ೬ ಕರಸ್ಯ 1ನೆ ಇವಾಗ 

 ಚಂದ್ರಶೇಖರ ... ೧ ೦ ೦ ಲೋಕಹಳ್ಳಿ 2ನೆ ಭಾಗ 

 ಚಿತ್ರವಿಚಿತ್ರಾವಳಿ 1, ಭಾಗೆ $ ೧ ವಂಗಜೇತ 

 ಡಿ 2 ಭಾಗ 3 ವಿಷವೃಕ್ಷ 

 ಚಿರತ್ನನಾಟಕರತ್ನ* ವೆಸಿಸುನಗರದ ವಣಕ* 

 ದಾಡಿಯ ಹೇಳಿಕೆವೈಜ್ಞಾನಿಕ ಪ್ರಹಸನ 

 ದೇವೀಚೌಧುರಾಣಿ ... ೧ ೪ ಸಾಧನೆ | 

 ದೇಶಾಂತರಗಳಲ್ಲಿ ಪ್ರಾ; ಚೀನಭಾರತ ಸೀತಾರಾಮ 

 ಉಪನಿವೇಶಗಳು ... c ೪ ರ್ಸಿತಾವನವಾಸ* 

 ದುರ್ಗೆಶನಂದಿನಿ ". ೧ ೪೦ ಸುಶಿಕ್ಷಿತರೆಂಬ ಸಭ್ಯರಾದ ಹಿಂದೂಗಳು 

 ನವಾಬನಂದಿನಿದುರ್ಗೆಶನಂದಿನಿಯನಭಾಗ)೧ ೮ ೦ ಸ್ತ್ರೀ ಶಿಕ್ಷೆಯ ಸಮಸ್ಯೆ* 

 ನಿರದೆ ••• ೮ ೦ ಶಕುಂತಲಾ* 

 ನೀಳಾಗೀತ ". 6 ೨ ೬ ಶಾಂತಿ* 

 ಸಂದನುಡಿ ... ೦ ೨ ೦ ಶಾಂತಿ 2ನೆ ಭಾಗ* 

 ಪರಿಮಳನ(DetectiveNove1) ೦ ೧೦ 6 ಶಾರದಾಸೋತ್ರ ಕದಂಬಕಂ

 ಪ್ರಾಚೀನ ನವೀನ ಸ್ತ್ರೀಪುರುಷರು* ,. p ೩ ೦ ಕಾರದಾಸ್ತೋತ್ರ ಮಂಡಲಂ 

 ಭರತಖಂಡದ ಪೂರ್ವ ವ್ಯಕ್ತ* .. ೦ ೮೦ ಕ್ಷತ್ರಿಯರವಣಿ 

 

* ಈ ಗುರ್ತುಜಾಕಿರುವ ಪುಸ್ತಕಗಳು ಅಚ್ಚಾಗುತ್ತಿವೆ. ಈಗಲೇ ಆರ್ಡರುಕೊಟ್ಟರೆ ವಿಳಾಸವನ ರಿಜಿಸ್ಟ ಮಾಡಿಕೊಂಡು ಸಿದ್ದವಾದ ಕೂದಲೇ ಏ. ಸಿ. ಮಾಡುತ್ತೇವೆ. 

ಮ್ಯಾನೇಜರ್‌-ರಾಯಲ್ ಪ್ರೆಸ್, ಮೈಸೂರ 

==========================================



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ