ಭಾನುವಾರ, ಆಗಸ್ಟ್ 21, 2022

ವೀರ ಬಂಕೆಯ-ಮುಳಿಯ ತಿಮ್ಮಪ್ಪಯ್ಯ

 


Skip to main content

Full text of "ವೀರ ಬಂಕೆಯ"

See other formats




UNIVERSAL 

LIBRARY 



OU 198341 




===============================


ಮೊದಲನೆ ಮುದ್ರಣ   ೧೯೪೮

ಎರಡನೆಯ ಮುದ್ರಣ  ೧೯೪೯

ಮೂರನೆಯ ಮುದ್ರಣ ೧೯೪೯

ನಾಲ್ಕನೆಯ ಮುದ್ರಣ  ೧೯೫೪


ಬೆಲೆ

ಒಂದುವರೆ ರುಪಾಯಿ 

--------------------------------------------------

Printers:

Vijaya Printers & Publishers Ltd. Mangalore-1


=============================

ಮುಮ್ಮಾತು 




ಸುಮಾರು ಒಂದುಸಾವಿರದನೂರು ವರ್ಷಗಳಿಗೆ ಹಿಂದೆ ಸಂದು 

ಹೋದ ಕನ್ನಡದ ತಿರುಳಾದೊಬ್ಬ ಅಪ್ರತಿಮ ವೀರನ ಚರಿತ್ರವೇ ಈ ಕಥೆ

ಯೊಳಗಿನ ವಸ್ತು. ಈಗಿನ ಕಾಲದ 'ಚರಿತ್ರ'ವೆಂಬ ಚರಿತ್ರಗ್ರಂಥರಾಶಿ 

ಯೊಳಗೆ ಈ ವೀರ ಬಂಕೆಯನ ಗಂಧಗಾಳಿಯೂ ಬೀಸಲಿಲ್ಲ. ಆದರೆ 

ನೃಪತುಂಗ ಚಕ್ರವರ್ತಿಯ ಕಾಲದ ಹಲವು ಶಾಸನಗಳು ಆತನ ಕಥಾನಕ 

ಗಳನ್ನೂ , ವೀರವರ್ತನಗಳನ್ನೂ ಸಾರುತ್ತಿವೆ. ಕೊಣ್ಣೂರ ಶಾಸನಾದಿ 

ಗಳಿಂದ ವೀರತೆಯ ಸಾರಾಂಶವನ್ನೆತ್ತಿ ಈ ಕತೆಯನ್ನು ಚಿತ್ರಿಸಿ 

ದ್ದೇನೆ. ಕತೆಯಲ್ಲವೆ? ಈ ಸಂದರ್ಭದಲ್ಲಿ ಕಿಂವದಂತಿಯಾಗಿ ಬೀಸಿಬಂದ 

ಕೆಲ ಕತೆಗಳನ್ನೂ ಕಥೆಗಾರಿಕೆಯಲ್ಲಿ ಬಳಸುವ ಕೆಲ ಬಣ್ಣಗಳನ್ನೂ 

ಬಳಸಿಕೊಂಡಿದ್ದೇನೆ. ಆದರೂ ಈ ಕತೆಯ ಜೀವಾಳ ಚಾರಿತ್ರಿಕವಲ್ಲದೆ 

ಕೃತ್ರಿಮವಲ್ಲ. 


ಈಗ ಬೆಂಗಳೂರಿನಿಂದ ಪೂನಾದತ್ತ ಸಾಗುವ ರೈಲ್ವೆ ಮಾರ್ಗದ 

ಪಕ್ಕದಲ್ಲಿ ಬಂಕಾ ಪುರನೆಂಬ ಊರಿದೆಯಷ್ಟೆ? ಅದಕ್ಕ ಹಿಂದಿನ ಹೆಸ 

“ಬಂಕೆಯ ಪುರ” ಎಂದು. ಬಂಕೆಯನ ಕಾಲವಾದಮೆಲೆ, ನೃಪತುಂಗ  

ಕುಮಾರ ಕೃಷ್ಣ ರಾಜನು ಮಾನ್ಯ ಖೇಟವನ್ನಾಳುತ್ತಿದ್ದನು. ಆಗ ಸಾಮಂತ 

ನಾಗಿದ್ದ ಬಂಕೆಯ ಕುಮಾರನ ರಾಜಧಾನಿ ಆ ಸ್ಥಳಕ್ಕೆ ಸ್ಥಾನಾಂತರವಾ 

ಗಿತ್ತು. ಆ ಮೇಲೆ ತನ್ನ ತಂದೆಯ ಸ್ಮಾರಕವಾಗಿ ಅತನು 'ಬಂಕೆಯಪುರ' 

ಎಂಬ ರಾಜಧಾನಿಯನ್ನು ಕಟ್ಟಿಸಿದನಂತೆ. ಆ ಅರಮನೆಯಲ್ಲಿ ಒಕ್ಕಲು

ಗೊಳ್ಳುವ ಸಮಾರಂಭಕ್ಕೆ ಆಳುವ ದೊರೆಯಾಗಿದ್ದ ಕೃಷ್ಣ ರಾಜನೇ ಚಿತ್ತ 

ಯಿಸಿದ್ದನಂತೆ. ರಾಷ್ಟ್ರಕೂಟ ರಾಜವಂಶಕ್ಕೆ, ಈ ಮುಕುಲ- ಕುಲದಲ್ಲಿ-

ವಿಶೇಷವಾಗಿ ಬಂಕೆಯನಲ್ಲಿದ್ದ ಅದರವೇ ಅದರಲ್ಲಿ ಹೊಳೆಯುತ್ತಿದೆ. 

ಹಿಂದಿನ "ಮುಕುಲ-ಕುಲ' ಹೆಸರು ಬದಲಾಗಿ ಆಮೇಲಾಕುಲಕ್ಕೆ "ಚಲ್ಲ 

ಕೇತನ-ವಂಶ' ಎಂಬ ಹೆಸರಾಯಿತೆಂಬುದು ಶಾಸನಗಳಿಂದ ತಿಳಿದು 

ಬರುತ್ತಿದೆ. 



ಈ ಕಥಾನಕ ನಡೆದುದು ಪಂಪಭಾರತಾದಿಗಳಿಂದ ಒಂದು ನೂರು 

ವರ್ಷಗಳಿಗೆ ಹಿಂದಷ್ಟೆ? ಕವಿರಾಜ ಮಾರ್ಗಕ್ಕಿಂತಲೂ, ಹತ್ತು ಹದಿನೈದು 

ವರ್ಷಗಳಿಗಾದರೂ ಹಿಂದೆಂದು ನನ್ನ ಭಾವನೆ. ಅಷ್ಟು ಹಂದಣ ಕಾಲದ 



ii------------------------------------- 


ಕತೆಯಾದುದರಿಂದ ಇದರ ಶೈಲಿಯನ್ನು, ಒಂದಷ್ಟು ; ಶುದ್ಧವಾಗಿ ಬಲಿಯ 

ಬೇಕಾಯಿತು. ಹಾಗೆಂದಿದು ಹೊಸಗನ್ನಡದ ಮೇರೆಯನ್ನು ಒಂದಿಷ್ಟೂ

ಮೀರಿ ಹಿಂದೆ ಹರಿದಿಲ್ಲ. ಹೊಸಗನ್ನಡದಲ್ಲಿ-ಹೊಸಗನ್ನಡ ಗದ್ಯ ಮಾರ್ಗ 

ದಲ್ಲಿ-ನುರಿತ ಬಂಧುಗಳು ಈ ನನ್ನ ಹೊಸಗನ್ನಡ ಕಥಾನಕದ ಶೈಲಿಯನ್ನು 

ಪರಾಂಬರಿಸಬೇಕು; ಒಪ್ಪಿದೆಯೇ ತಸ್ಪಿದೆಯೇ ಬೆಪ್ಪಾಗಿದೆಯೇ ಎಂಬು 

ದನ್ನು ಮನಗಂಡು ಸೂಚಿಸಬೇಕು; ಎಂದು ಪ್ರಾರ್ಥಿಸುತ್ತೇನೆ. ವಿಷಯ 

ವನ್ನೇರಿಸುವಲ್ಲಿ, ಶೈಲಿಯನ್ನೇರಿಸುವಲ್ಲಿ ಎಲ್ಲೆಲ್ಲಿ ಅಂಧಾನುಕರಣೆಯತ್ತ 

ಹರಿಯದೆ ಮುಂದಿನ ನಮ್ಮ ಹೊಸಗನ್ನಡ ಮಾರ್ಗ ಸ್ವತಂತ್ರವಾಗಿ ಸಳಗ 

ಬೇಕೆಂದು ನನ್ನ ಭಾವನೆ. 


ಹಾಗಾದರೆ ಪ್ರತಿ ಯೊಬ್ಬ ಲೇಖಕನದು ಭಿನ್ನಮಾರ್ಗವಾಗಿ ಹರಿದ 

ಕನ್ನಡವು ನಾನಾ ಮಾರ್ಗವಾಗುವುದಲ್ಲವೆ ಎನ್ನಬಹುದು. ಹೌದು; 

ಸಾಹಿತ ದೊಳಗಿನ ಲೇಖನ ಮಾರ್ಗಗಳೆಂದರೆ, ಮುಂಬಯಿ-ಕಲ್ಪತ್ತ- 

ಬೆಂಗಳೂರು ಮೊದಲಾದ ಮಹಾನಗರಗಳೊಳಗಿನ ಮಾರ್ಗಗಳಂತೆ ನಿಬಿಡ 

ಗಳಾಗಿರಬೇಕು. ಹಾಗಿದ್ದರೇ ಅವುಗಳು ಮಹಾ ನಗರಗಳೆನ್ನಿಸುವುವು. ಹಳ್ಳಿ 

ಗಾಡಿನಿಂದ ಹೊಸದಾಗಿ ಬಂದವರಿಗೆ ಗುರಿಗೊಳ್ಳುವುದು ಒಂದಿಷ್ಟು ತನ್ನ 

ವಾದೀತು. ಆದರೆ ಬಹುಸಂಖ್ಯಾಕರಾದ ನಾಗರೀಕರಿಗೂ, ಕೆಲವೇ ದಿನ

ಪಳಗಿದಲ್ಲಿ ಹಳ್ಳಿಗರಿಗೂ, ಹರಿದಾಡಲು ಏನೇನೂ ಕಷ್ಟವಾಗುವುದಿಲ್ಲ. 

ಹಾಗಿಲ್ಲದೇ ಒಂದೋ‌ ಎರಡೋ ದಾರಿಗಳು ಮಾತ್ರವೇ ಅದಲ್ಲಿ ಅವುಗಳು 

ನಗರಿಗಳೇ ಆಗಲಾರವು. ಮಾತ್ರವಲ್ಲ, ಹಾಗೆ ತಡೆಗಟ್ಟುವುದು ಸಾಧ್ಯವೂ 

ಅಲ್ಲ. ನಾನಾ ಭೇದಗಳಿದ್ದರೂ ಮಾನವಕೋಟಿಯೊಳಗಿನ ಮಾನವತೆ 

ಒಂದೇ ಆಗಿರುವಂತೆ, ಮಾರ್ಗಗಳೊಳಗೂ ಐಕ್ಯವಿದೆ ಎಂಬುದನ್ನರಿಯ 

ಬೇಕು. ಪರಾನುಕರಣೆಯನ್ನು ಹರಿದೊಗೆದು ಸ್ವತಂತ್ರವಾಗಿ ಮುಂದುವ  

ರಿಯಬೇಕು. ಈ ಹೇಳಿಕೆಯನ್ನು ಕಿರಿಯರಾದ ಇಂದಿನ ಲೇಖಕರು 

ಪರಾಂಬರಿಸಬೇಕಾಗಿ ಪ್ರಾರ್ಥಿಸುತ್ತೇನೆ. 



ಕಾಸರಗೋಡು ತಾಲೂಕು, ) ಇತಿ, 

ಪೆರ್ಲ, (ದ. ಕ.) ೨೮-೮-೧೯೪೮) ಮುಳಿಯ ತಿಮ್ಮಪ್ಪಯ್ಯ. 


೧-----------------------------------------------------------

ಒಂದನೆಯ ಪರಿಚ್ಛೇದ 

ಕಥಾಮುಖ



ಸಾವಿರ ವರ್ಷಗಳಿಗೂ ಒಂದಷ್ಟು ಹಿಂದಿನ ಕಾಲ. ಕನ್ನಡ ನಾಡಿನ 

ಸಾರ್ವಭೌಮನೆನಿಸಿದ ರಾಷ್ಟ್ರ ಕೂಟ ವಂಶದ ಅಮೋಘವರ್ಷ ನೃಪ 

ತುಂಗನು ಮಾನ್ಯಖೇಟರಾಜಧಾನಿಯನ್ನು ನಿರ್ಮಿಸಿ ನೆಲೆಗೊಂಡು ಆಳು 

ತ್ತಿದ್ದ ಕಾಲವದು. ಪಡುವಣ ದಿಕ್ಕಿನಿಂದ ಬೀಸಿದ ಇಂದಿನ ನವನಾಗರಿ 

ಕತೆಯ ಬಿರುಗಾಳಿಗಾಗಲಿ, ಯಾಂತ್ರಿಕ ಸಂಸ್ಕೃತಿ ಯ ಮುಗಿಲುಮಿಂಚುಗಳಿ 

ಗಾಗಲಿ, ಅವಿನೀತವರ್ತನೆಯ ಸಿಡಿಲು ಮಳೆಗಾಳಿಗಳಿಗಾಗಲಿ, ಸಿಲುಕಿ 

ಸೋತು ಸೊಪ್ಪಾದ ಒಂದೇ ಒಂದು ವ್ಯಕ್ತಿಯಾದರೂ ಆಗ ಇದ್ದಿಲ್ಲವಂತೆ. 

ಹಾಗೆಂದ ಮೇಲೆ ಸಾಮಾನ್ಯ ಸಂಸಾರಕ್ಕೆ, ಸಮಾಜಕ್ಕೆ, ಸಂಕಟವೆಲ್ಲಿಂದ 

ಬರಬೇಕು? 'ಉದಾರ' ಎಂಬುದು ನೃಪತುಂಗದೇವನ ಬಿರುದು. ಸಾರ್ಥಕ 

ವಾದ ಬಿರುದದು. ಕಲ್ಲುಹರಳನ್ನೂ ನೆಲ್ಲಿನೊಡನೆ ಮಾರಾಟವೆಸಗುವ 

ಅಂಗಡಿಗಾರನ ಬಿರುದಲ್ಲ. 


ಬೇಕಾದರೆ ಶಾಸನಾಧಾರವನ್ನೀಕ್ಷಿಸಬಹುದು. ಒಮ್ಮೆ ನಮ್ಮ ಕನ್ನಡ 

ನಾಡಿನಲ್ಲಿಯೂ ಬರಗಾಲ ತಲೆಯಿಕ್ಕಿತಂತೆ. ನಾಡವರಿಗಿಂತಲೂ ಹೆಚ್ಚಾಗಿ 

ಅರಸನ ಮನಸ್ಸು ಕಳವಳಿಸಿತು. ಹೌದು; ಇಂದಿನ ಸಾಮಾಜಕ ಭಾವನೆ 

ಅಂದಿನವರ ತಕ್ಕಡಿಯಲ್ಲಿ ತೂಗುತ್ತಿರಲಿಲ್ಲ. *ರಾಜಾ ಕಾಲಸ್ಯ ಕಾರಣಂ? 

ಎಂಬುದೇ ಆ ತೂಗುವ ತೊಲೆ.  ಆರಸನ ಆಳಿಕೆಯ ಪರಿಣಾಮವಾಗಿ 

ಕಾಲವೇ ಉತ್ತಮ ಮಧ್ಯಮಾಧಮಗಳಾಗಿ ಮಾರ್ಪಟ್ಟು ಪ್ರಜಾವರ್ಗದ 

ಜೀವನವನ್ನು ರಂಜಿಸುವುದು ಅಂಜಿಸುವುದು ಭಂಜಿಸುವುದು ಎಂಬುದು ಆ 

ಮಾತಿನ ಮಥಿತಾರ್ಥ. ಭಾರತ ಭೂಮಿಯ ಆದರ್ಶ ಮಹಾವ್ಮಕ್ತಿ 

ಎನ್ನಿಸಿದ ಶ್ರೀರಾಮನಂತೆ ಅಮೋಘವರ್ಷ-ನೃಪತುಂಗನು ಕಳವಳ 

ಗೊಂಡನು. ನಾಡೊಳಗಿನ ನಾಯಕರನ್ನೆಲ್ಲ ತನ್ನ ಮಹಾಸಭೆಗೆ ಬರಮಾಡಿಸಿ 

ಕೊಂಡನು. ಮಂತ್ರಿ ಸಾಮಂತ ಮಹಾಸಾಮಂತಾದಿಗಳಿಂದ ವಿದ್ವನ್ಮಂಡಲ 

ದಿಂದ ಕಿಕ್ಕಿರಿದ ಒಡ್ಡೋಲಗದಲ್ಲಿ ಕೃತಾಂಜಲಿಯಾಗಿ ಎದ್ದು ನಿಂತನು;-- 

“ಅಭೂತಪೂರ್ವವಾದ ಈ ಬರಗಾಲದ ಸನ್ನೆಗಳಿಗೆ ನಿದಾನವೇನಾಗಿರ 

ಬಹುದು? ನಿವಾರಣೋಪಾಯ ಹೇಗೆ?” ಎಂದು ಕೇಳಿಕೊಂಡನು. ಹಲ 

ವರು ಸುಮ್ಮನಾಗಿದ್ದರೂ ಲೋಕ ಪ್ರಸಿದ್ಧನಾದ ಜೋಯಿಸನೊಬ್ಬನು 



೨-------------------------------------------------------------------



ಎದ್ದುನಿಂತು ಹೀಗಾಡಿದನಂತೆ:-“ ಮಹಾಸ್ವಾಮಿ ಕಾರಣವಿಲ್ಲದೆ ಕಾರ್ಯ 

ವಿಲ್ಲ, ಎಂಬುದು ನಿರ್ವಿವಾದವಷ್ಟೆ? ಈಗ ಆ ಕಾರಣದ ಹೊಲಬನ್ನು 

ಹುಡುಕುವುದಕ್ಕೆಂತಲೂ ಹೆಚ್ಚಾಗಿ ಕಾರ್ಯವನ್ನು ಬಗೆಹರಿಸಿಬಿಡುವುದೇ 

ಅತ್ಯಾವಶ್ಯಕವೆನನ್ನಿಸಿದೆ. ಅದೇನೋ ಕಾರಣದಿಂದ ಸೌಭಾಗ್ಯದೇವತೆಯಾದ 

ಲಕ್ಷ್ಮೀದೇವಿಯ ಮನಮುನಿಸು ನಮ್ಮ ನಾಡಿನ ಮೇಲೆ ಹರಿಯಲಾರಂಭಿಸು 

ವಂತಿದೆ. ಆಕೆಯನ್ನು ಪೂಜಿಸಿ ಮನುಷ್ಯ ರಕ್ತವನ್ನು ಬಲಿಯಾಗಿ ಸಮರ್ಪಿಸಿ 

ದಲ್ಲಿ ಮುಂದಿನ ಅವಘಡದ ಬೇರುಕಿತ್ತು ಹೋಗುವುದು "

 

ರಾಜಭಕ್ತಿ ಪೂರಿತವಾದ ಪ್ರ ಜಾವರ್ಗದ ಹುರುಪಿನ ಎಡೆಯೊಲವಿನಲ್ಲೇ 

ರಾಜ್ಯಲಕ್ಷ್ಮೀದೇವಿ ನೆಲಸಿರುವುದೆಂದು ನೃಪತುಂಗನಿಗೆ ಗೊತ್ತಿದ್ದ ಸಂಗತಿ 

ಅದರಿಂದ ಕೂಡಲೆ ಸ್ನಾನವೆಸಗಿ ಪರಿಶುದ್ಧನಾಗಿ ಆ ನೆರೆದ ನಾಡವರಿದಿರಿ 

ನಲ್ಲೇ ಲಕ್ಷ್ಮೀದೇವಿಯನ್ನರ್ಚಿಸಿದನು. ಯಾರ ರಕ್ತಬಲಿ ಸಮರ್ಪಿತವಾಗು 

ವುದೋ ಎಂದು ಮಂದಿ ಬೆರಗಾಗಿ ನೋಡುತ್ತಿತ್ತು. ಫಕ್ಕನೆ ತನ್ನ ಕಿಗ್ಗತ್ತಿ 

ಯನ್ನು ಸೆಳೆದನಂತೆ. “ಮಹಾದೇವಿ, ನಿನ್ನ ಬೇಸರಿಕೆಯ ಕುರುಹಾದ. 

ಈ ಬರಗಾಲದ ಆವರಣಕ್ಕೆ ಲೋಕನಾಯಕನೆನ್ನಿಸಿದ ನನ್ನ ಈ ಕ್ಟೆಯ 

ನ್ಯೂನತೆಯ ಕಾರಣವಿರಬೇಕು. ಅದರಿಂದ ಈ ಕೈಯನ್ನೇ ಶಿಕ್ಷಿಸಿ 

ನಿನ್ನಡಿಗೆ ರಕ್ತಬಲಿಯೆನ್ನರ್ಪಿಸುತ್ತೇನೆ. ತೃಪ್ತಳಾಗು, “ಪ್ರಜಾವರ್ಗದಲ್ಲಿ 

ಪ್ರಸನ್ನಳಾಗು” ಎಂದು ಪ್ರಾರ್ಥಿಸಿ ಬೆರಳನ್ನು ತುಂಡಿಸಿ ಸರ್ರನೆ ಸುರಿವ 

ನೆತ್ತರ ಧಾರೆಯಿಂದ ದೇವಿಯನ್ನರ್ಚಿಸಿದನಂತೆ. ನೆರೆದ ಜನಸಂದಣಿ ಬೆರಗಾಗಿ 

ಹೋಯಿತು. ಆ ನಿಮಿಷವೇ ಮೇರೆಯಾಗಿ ತಡೆದ ಬರಗಾಲ ಮಾಯ 

ವಾಗಿ ಹೋಯಿತು. ಮಾತಿದು ಬರಿಯ ಪರಂಪರಾಯಾತವಾಗಿ ಬಂದ 

ಹಳಸಿದ ಮಾತಲ್ಲ. ಅವನ ಆ ಹಿಂದಿನ ಕಾಲದಲ್ಲೇ ಶಾಸನಾಕ್ಷರಗಳಲ್ಲಿ ಕೆತ್ತಿ 

ಈಈಗಲೂ ನರ್ತಿಸುತ್ತಿರುವ ಮಾತು. ಅರಸನ ಅಂಥ ಪ್ರ ಪ್ರಜಾಪ್ರೇಮವನ್ನರಿತ 

ನಾಡವರು, ಅದು ಮೊದಲ್ಗೊಂಡು ಆಲಸ್ಯವನ್ನುಳಿದರು; ಮೈಮರೆದು 

ಒಕ್ಕಲುತನದಲ್ಲಿ ಸರ್ವತೋಮುಖವಾಗಿ ದುಡಿಯಲಾರಂಭಿಸಿದರು; ಅದ 

ರಿಂದಾಗಿ ಹುಲುಸಾದ ಬೆಳೆ ಬೆಳೆದು ಬರಗಾಲ ತೊಲಗಿಹೋಯಿತು; 

ಎಂದು ಈ ಸಾವಿರ ವರ್ಷಗಳಿಂದಿತ್ತಣ ನಾಗರಿಕರಾದವರು ಬೇಕಾದರೆ 

ಹೇಳಬಹುದು. ನೃಪತುಂಗನ ಪ್ರಜಾರಂಜಕತನದ ಹೊಲಬನ್ನು ಕಾಣಿಸು 

ವುದನ್ನೇ ಪ್ರಕೃತದ ಗುರಿ. 


ಸಾವಿರ ವರ್ಷಗಳೊಳಗಿನ ತಿಂಗಳು-ದಿನಗಳೆಡೆಯಲ್ಲಿ ಸಿಲುಕಿ ಗಸಣಿ 

ಗೊಂಡರೂ ನೃಪತುಂಗನ ಹೆಸರು ಸವೆದು ಹೋಗಿಲ್ಲ. ಕನ್ನಡ ಸಾಹಿತ್ಯ, 



೩-----------------------------------------------------------------



ಕ್ಷೇತ್ರದಲ್ಲಂತೂ ಆತನ ಹೆಸರೆಂದರೆ ಸಹಸ್ರನಾಮ. ಇನ್ನೊಬ್ಬನೆದೆಯಾ 

ದರೆ ಅಂಥ ಬಗೆಬಗೆಯ ರಾಜಕೀಯ ಸಾಮಾಜಿಕ ಸಂಕಷ್ಟಗಳಿಂದುರಿಯು 

ತ್ತಿದ್ದಲ್ಲೆ ಭಸ್ಮಾವಶೇಷವಾಗುತ್ತಿತ್ತು. ಅವನದಾದುದರಿಂದಲೇ, ಪುಟಕ್ಕೇರಿದ 

ಕಾಂಚನವಾಯಿತ್ತು. ರಾಜಕುಲೀನರೊಳಗೂ ಇಂಥ ವ್ಯಕ್ತಿ ಇದೆಯೇ 

ಎಂದು ಕೆಲವರು ಶಂಕಿಸುತ್ತಿದ್ದರು. ಶ್ರೀರಾಮ-ಧರ್ಮರಾಜರನ್ನು ಬೆರ 

ಲೆತ್ತಿ ಕಾಣಿಸಿ ಅಂಥ ಶಂಕೆಯನ್ನು ಬಲ್ಲವರು ನಿವಾರಿಸುತ್ತಿದ್ದರು. ಇದಕ್ಕೆ 

ಅವನ ಸ್ವಶಕ್ತಿ ಮಾತ್ರವೇ ಅಲ್ಲ; ನರನರಗಳಲ್ಲಿ ತುಂಬಿದ ವಾಂಶಿಕವಾದ ರಕ್ತ 

ಬಲವೂ ನೆರವಾಯಿತು ಎನ್ನಬೇಕು. ಚರಿತ್ರಪ್ರಸಿದ್ಧನೆನ್ನಿಸಿದ ಅಕಾಲ 

ವರ್ಷ ನಿರುಪಮ-ಧ್ರುವರಾಜನ ಮೊಮ್ಮಗನು ಮಾತ್ರವೇ ಅಲ್ಲ; ಶಾಸನ 

ಪ್ರ ಖ್ಯಾತನಾಗಿ ಹಿಮವದ್ಗಿರಿಯಿಂದ ಹಿಡಿದು ತೆಂಕಣ ಲಂಕಾಂತವಾದ 

ಭಾರತ ಭೂಮಿಗೆ ಚಕ್ರವರ್ತಿ ಎನ್ನಿಸಿದ ಜಗತ್ತುಂಗ-ಗೋವಿಂದರಾಜನ 

ಏಕಮಾತ್ರ ಕುಮಾರನು. ನೃಒತಿಂಗನ ತಾಯಾದರೂ ಸಾಮಾನ್ಯಳಾದ 

ರಾಜಕುಮಾರಿಯಲ್ಲ. ಕೌಸಲ್ಯಾದೇವಿ ಶ್ರೀರಾಮನನ್ನು ಹೇಗೋ ಹಾಗೆ 

ನೃಪತುಂಗನನ್ನು ಹಡೆದು ಕೃತಾರ್ಥಳಾದ ಗಾಮುಂಡಬ್ಬೆಯೇ ಆ ನಾರೀ 

ಶಿರೋಮಣಿ. ಗೋವಿಂದ ರಾಜನು ಭಾರತ ಭೂಮಿಯ ನಡುವಣ, 

ವಿಂಧ್ಯಾದ್ರಿಯ ತಪ್ಪಲಲ್ಲಿ ನೆಲೆನಡೆದ ರೇವಾ ರಾಜಧಾನಿಯ 'ಶ್ರೀ ಭವನ' 

ಎಂಬ ಅರಮನೆಯಲ್ಲಿ ನೆಲಸಿ ತನ್ನ ಜಗತ್ತುಂಗ ಬಿರುದನ್ನು ಸಾರ್ಥಕ 

ವನ್ನಾಗಿ ಮಾಡಿದ ಮಹಾವೀರನು. ನೃಪತುಂಗನು ಅಲ್ಲಿಯೇ ಜನಿಸಿ 

ದನು. ಆದರೆ ಗೋವಿಂದನು ಕ್ರಿ. ಶ್ರ. ಸುಮಾರು ೭೧೨ರಲ್ಲಿ ದಿವಂಗತ 

ನಾದನು. ಆಗ ನೃಪತುಂಗನು ಬಲುಕಿರಿಯ ಕುಮಾರನಿದ್ದನು. ಅದ 

ರಿಂದ ಆ ರಾಜಧಾನಿಯೂ, ವಿಂಧ್ಯಪ್ರಾ ೦ತ್ಯದ ಉತ್ತರೋತ್ತ ರ- ಕನ್ನಡ 

ನಾಡೂ ಹಿಂದಿನ ಅಂತಶ್ಶತ್ರುಗಳ ಹಂಚಿಕೆಗಾಸ‌ರೆಯಾಯಿತು. ಆದರೂ 

ಚದುರನಾದುದರಿಂದ ಅವರ ಬಲೆಯಿಂದ ತಪ್ಪಿಸಿಕೊಂಡು, ತೆಂಕಣ ಭಾಗದ 

ಮಲಖೇಡ ರಾಜಧಾನಿಯನ್ನು ನಿರ್ಮಿಸಿಕೊಂಡು ಅಲ್ಲಿ ನೆಲಸಿದನು. ಅದ 

ರಿಂದ ಉತ್ತರೋತ್ತರಭಾಗದ ಕನ್ನಡ ನಾಡು ನಾಮಾವಶೇಷವಾದರೂ, 

ಕಾವೇರಿಯಿಂದ ಮಾಗೋದಾವರಿವರೆಗಿನದು ನೆಲೆಗೊಂಡಿತು. 

* * * *

ನೃಪತುಂಗನ ಈ ಆಳಿಕೆ ದೃಢವಾಗಿ ನೆಲೆಗೊಳ್ಳುವಲ್ಲಿ ಅವನ 

ಧಾರ್ಮಿಕ ರಾಜನೀತಿಕುಶಲತೆಯೇ ಪ್ರಮುಖ ಕಾರಣವೆನ್ನಬೇಕು. 

ಅದನ್ನು ಕೆಲಸದಲ್ಲಿ ಅಚ್ಚೊತ್ತುವ ಬಲುಮಂದಿ ಮಂತ್ರಿ ಸಾಮಂತ- 



೪----------------------------------------------------------------------



ಸೇನಾನಾಯಕರೂ ಅವನಿಗನುವಾಗಿದ್ದರು  ಅವರೊಳಗೂ ಬಂಕೆಯ 

ನೆಂಬ ಮಹಾವೀರನೇ ಮೇಲುಮಟ್ಟದವನು. ನೃಪತುಂಗನೇ ಶಾಸನ 

ವೊಂದರಲ್ಲಿ * “ಜಳಜಳಿಸುವ ನನ್ನ ಬೇರೊಂದು ಖಡ್ಗವೋ ಎಂಬಂತಿರು 

ವವನು” ಎಂದು ಬಣ್ಣಿಸುವ ಮಾತಿನಿಂದಲೆ ಆ ಬಂಕೆಯನ ಯೋಗ್ಯತೆ 

ಬಯಲಾಗುತ್ತಿದೆ. ಅವನ ವೀರತೆಗೆ ರಾಜನೀತಿ ಚಾತುರ್ಯಕ್ಕೆ ಮೆಚ್ಚಿದ 

ನೃಪತುಂಗನು ಬನವಸೆ ಹನ್ನೆರಡು ಸಾವಿರ ಸೀಮೆಯನ್ನಿತ್ತು ಆ ಬಂಕೆಯ 

ನನ್ನು ಸಾಮಂತ ಪದವಿಗೇರಿಸಿದ್ದನು. ಈ ಬಂಕೆಯನಲ್ಲಿ ಅಂಥ ವಿಶ್ವಾಸವು 

ನೀತಿ ಚತುರನಾದ ನೃಪತುಂಗನಿಗೆ ನೆಲೆಗೊಳ್ಳಲು ಇನ್ನೊಂದು ಪ್ರಬಲವಾದ 

ಕಾರಣವಿದೆ. ಆ ಬಂಕೆಯನ ವಂಶವು ಹಿಂದಿನಿಂದಲೇ ಪರಂಪಕೆವಿಡಿದು 

ರಾಷ್ಟ್ರಕೂಟಕುಲವನ್ನೊಂದಿ ಏಳಿಗೆಗೊಳ್ಳುತ್ತಾ ಬಂದಿತ್ತು. ಆ ವಂಶದ 

ಮೂಲ ಪುರುಷನಾದ ಮುಕುಲನೆಂಬ ವೀರನು ದಂತಿದುರ್ಗನ ತಂದೆಯೂ 

ರಾಷ್ಟ್ರಕೂಟ ಕುಲಸ್ಥಾಪಕನೂ ಆದ ಇಂದ್ರರಾಜನ ಬಲಗೈ ಯ ಬಂಟ 

ನಾಗಿದ್ದನಂತೆ. ಆ ಮುಕುಲನ ಕುಲದಲ್ಲಿ ಎರಕೋ ರಿ ಎಂಬಾತನು 

ಜನಿಸಿದನು. ಅವನು ಮತ್ತಿನ ನಿರುಪಮ ಧ್ರುವಜೀವನ ಹಾಲಿನೊಡನೆ 

ನೀರಾಗಿ ಬೆರಸಿದ್ದನು. ಎರಕೋರಿಯ ಮಗನಾದ ಧೋರ(ಧ್ರುವ)ನು, 

ಧ್ರುವ ಕುಮಾರನಾದ ಚಕ್ರವರ್ತಿ ಗೋವಿಂದ ರಾಜನ ಸೇನಾನಾಯಕನು, 

ಆ ಧೋರನಿಗೆ ವಿಜಯಾಂಬೆ ಎಂಬರಸಿಯಲ್ಲಿ ಉದಯಿಸಿದ ವೀರನೇ ಬಂಕೆ 

ಯನು. ಹೀಗೆ ಕುಲವಿಡಿದು ಬಲಿದು ಬಂದ, ಎಳವೆಹಿಡಿದು ಒಡನಾಡಿ 

ಬಳೆದು ಬಂದ, ಬಂಕೆಯನಲ್ಲಿ ನೃಪತುಂಗನ ವಿಶ್ವಾಸವು ಬೇರೂರಿಕೊಂಡಿತ್ತು, 

ಅರಸನ ಆಪ್ತ ಸೇನಾಪತಿಯಾಗಿದ್ದು ಬಲುಮಂದಿ ಹೆಸರುಗೊಂಡ 

ಹಗೆಗಳ ಸಂದಣಿಗಳನ್ನು ಹೊಗೆಯನ್ನಾಗಿ ಮಾರ್ಪಡಿಸಿದಾತನೆಂದರೆ ಆ 

ವೀರ ಬಂಕೆಯನೇ. ಬಂಕೆಯನಲ್ಲಿ ಅರಸನಿಗೆ, ಅರಸನಲ್ಲಿ ಬಂಕೆಯನಿಗೆ 

ನೆಲಸಿ ಬಲಿತಿದ್ದ ಆ ಪ್ರೇಮ ಭಕ್ತಿಗಳಿಗೆ ಅವುಗಳೇ ಅಲ್ಲದೆ ಬೇರೆ ಹೋಲಿಕೆ 

ಗಳಿಲ್ಲ. ಸಾಮಂತ ಪದವಿಗೇರಿದರೂ ಆತನು ಅರಸನಲ್ಲಿ ತನಗಿದ್ದ ಭೃತ್ಯ 

ಭಾವವನ್ನೇ ಬಿಗಿವಿಡಿದಿದ್ದನು. ಅದರಿಂದ ಆಗಾಗ ತನ್ನ ರಾಜಧಾನಿಗೆ 

ಹೋಗಿಬರುತ್ತಿದ್ದರೂ ಹೆಚ್ಚಾಗಿ ಆತನ ತಂಗುದಾಣವೆಂದರೆ ಮಾನ್ಯ ಖೇಟವೇ 

ಆಗಿತ್ತು. ಅದರಿಂದ ನಾಡಿನ ದಿನಂಪ್ರ ತಿಯಾಳಿಕೆ ಸಾಗಲಿಕ್ಕೆ ಯಾವತ್ತೂ 

ಬಗೆಯೆ ತೊಡರೂ ಇದ್ದಿಲ್ಲ. ಗಣಪತಿ ಭಟಾರನೆಂಬ ಮಹಾಪ್ರಧಾನನು 

ರಾಜ್ಯಾಂಗಗಳನ್ನೆಲ್ಲ ಸನ್ನೆಯಲ್ಲಿರಿಸಿ ಪಾಲಿಸುತ್ತಿದ್ದನು. ಪತುಂಗಿಗೆ 

............


* (ಮದೀಯೋ ವಿತತಜ್ಯೋತಿರ್ನಿಶಿತಾಸಿರಿ  ವಾಪರಃ' ಕೊಳನೂರು-ಶಾಸನ 


೫---------------------------------------------------------------


ಬಂಕೆಯನಲ್ಲಿ ಯಾವ ರೀತಿಯ ವಿಶ್ವಾಸವೋ ಅದೇ ರೀತಿಯ ವಿಶ್ವಾಸವು 

ಬಂಕೆಯನಿಗೆ ಗಣಪತಿ ಭಟಾರನಲ್ಲಿದ್ದುದಂತೆ. ಅದರಿಂದಲೇ ನಿಶ್ಶಂಕನಾಗಿ

ಬಂಕೆಯನು ರಾಜಸನ್ನಿಧಿಯಲ್ಲೆ ಹೆಚ್ಚಾಗಿ ಸುಳಿದಾಡುತ್ತಿದ್ದುದು. ಪರಾಂ 

ಬರಿಸಿರಿ:- ನಾಡೊಡೆಯನಾದ ನೃಪತುಂಗನು ಉದಾರ ವೈಷ್ಣವ ಮತೀ 

ಯನು; ಬಂಕೆಯನು ಅಚ್ಚ-ಜೈನನು; ಗಣಪತಿ ಭಟಾರನೆಂದರೆ ವೈದಿಕ 

ಬ್ರಾಹ್ಮಣನು. ಮೂವರೂ ರಾಜಕೀಯ ಸಾಮಾಜಿಕ ಧಾರ್ಮಿಕಾದಿ 

ವಿಷಯಗಳಲ್ಲಿ ತ್ರಿವೇಣಿಯಾಗಿ ಬೆರೆದು ಹೆಣೆದು ಆದರ್ಶ ವೃಕ್ತಿಗಳೆನ್ನಿಸಿ 

ತೊಡಕಿಲ್ಲದಂತೆ ಲೋಕವನ್ನು ಪಾಲಿಸುತ್ತಿದ್ದರು.

 

ನೃಪತುಂಗನ ನೀತಿಚತುರತೆ, ಕಲಾಪರಿಣತಿ, ಸರ್ವಮತ ಸಾಮರಸ್ಯ 

ಭಾವನೆ, ಮೇಲಾಗಿ ಕಾರ್ಯದಲ್ಲಿ ಅಚ್ಚೊತ್ತುತ್ತಿದ್ದ ಉದಾರತೆಗಳನ್ನು 

ಬಣ್ಣಿಸಬೇಕಾಗಿಲ್ಲ. ಉಮಾದೇವಿ ಎಂಬರಸಿಯಲ್ಲಿ ಕೃಷ್ಣನೆಂಬ ಕುಮಾರನೂ, 

ಚಂದ್ರಬ್ಬಲಬ್ಬೆ ಶಂಖಾದೇವಿಯರೆಂಬ ಕುಮಾರಿಯರೂ ಜನಿಸಿ ಹರೆಯದ 

ಹಂತವನ್ನೇರುತ್ತಿದ್ದರು. ಕುಮಾರನು, ಸ್ವಲ್ಪವೇ ಕಾಲಕ್ಕೆ ಮೊದಲು 

ಯುವರಾಜ ಪದವಿಯನ್ನಲಂಕರಿಸಿರಾಜಕೀಯ ಕಾರ್ಯಭಾರದ ಹೋಗು- 

ಹೊಕ್ಕುಗಳ ತಾಗು-ತಕ್ಕುಗಳಲ್ಲಿ ಪಳಗುತ್ತಿದ್ದನು. ವೀರ ಬಂಕೆಯನು. 

ಮುಖ್ಯಪ್ರಾ ಣನಂತೆ ಮಹಾರಾಜನ ಅಂತರಂಗ ಬಹಿರಂಗಗಳಲ್ಲಿ ಮುಖ್ಯ 

ಪ್ರಾಣನೇ ಆಗಿದ್ದನು. 

==============


ಬಲಗೈ ಬಂಟ 



ಕೀರ್ತಿನಾರಾಯಣನೆನ್ನಿಸಿದ ಜಗತ್ತುಂಗ ಗೋವಿಂದ ರಾಜನ ಕಾಲ 

ದಲ್ಲಿ ಆ ರಾಜ ದಂಪತಿಗಳ ಹೇಲಾ (ವಿಲಾಸ) ನಗರಿಯಾಗಿದ್ದುದನ್ನೆ ಮತ್ತೆ 

ಮಲಖೇಡ ಎಂದು ಕರೆಯುತ್ತಿದ್ದುದು. ಅಂದು ನಗರಿಯ ಸುತ್ತು 

ಮುತ್ತಲೂ ಮಲೆ ಹಂದರವಾಗಿ ಹಬ್ಬಿಕೊಂಡಿತ್ತು. ಅದರೊಳಗಿನ ಅರಮನೆ 

ಯಲ್ಲಿ, ಆಗಾಗ ಅರಸನು ಸಸರಿವಾರನಾಗಿ ಬಿಜಯಂಗೈದು, ಖೇಲನ 

(ವಿಲಾಸ) ಮಗ್ನನಾಗಿದ್ದು, ಹಿಂದಿನ ಅರಸಾಳಿಕೆಯ ಬೇವುಬೇಸರಗಳನ್ನು 

ಳಿದು ಹುರುಪುಗೊಂಡು ಹೋಗುತ್ತಿದ್ದನು. ಆ ಮಲಖೇಡವೇ ನೃಪ 

ತುಂಗನ ರಾಜಧಾನಿಯಾಗಿ ಮಾರ್ಪಟ್ಟು ರಾಜಕೀಯವಾಗಿ ಮಾನ್ಯಖೇಟ 

ಎನ್ನಿಸಿದರೂ ಲೋಕದಬಾಯಲ್ಲದು ಮಲಖೇಡವೇ ಆಗಿತ್ತು. ಆದರೇನು? 

ಹಿಂದಿನ ಮಲೆಗಿಲೆಗಳೆಲ್ಲ ಗೊತ್ತಿನಗುರಿಗಾದರೂ ಎಡೆಯಿಲ್ಲದಂತೆ ತೊಲಗಿ 



೬--------------------------------------------------------------------- 



ಹೋಗಿತ್ತು. ಅದೇ ಇದೆಂದು ಗುರುತಿಸುವಂತಿರಲಿಲ್ಲ. ಚಚ್ಚೌಕವಾಗಿ 

ಅರಸನೆದೆಯಂತೆ ಉದಾರವೆನ್ನಿಸಿ ವಿಸ್ತರಿಸಿಕೊಂಡಿದ್ದುದು. ಆಡಂಬರಕ್ಕೆಡೆ 

ಯಿಲ್ಲದ ಸೊಬಗು ಸೊಬಗಿನ ಸೀಮೆಯನ್ನು ಮೀರದ ಬಾಳಿಕೆ, ಬಾಳಿಕೆಯ 

ಹಜ್ಜೆಯಲ್ಲಿ ಹಜ್ಜೆಯಿಡುವ ದಾನಮಾನ, ದಾನಮಾನಕ್ಕನುವಾದ ನಡವಳಿ, 

ನಾಗರಿಕ ಪ್ರಜಾವರ್ಗದ ಜೀವನದಲ್ಲಿ ಹಾಸಾಗಿ-ಹೊಕ್ಕಾಗಿ ಬಟ್ಟೆಗೊಂಡಿತ್ತು. 

ಕೊಂಕನ್ನೇ ಮಸೆಯುತ್ತಿದ್ದ ಚಾಳುಕ್ಯ-ಗಂಗ ಪ್ರಮುಖರಾದ ಸಾಮಂತರು 

ತಣ್ಣಗಾಗಿ ಸಲುವಳಿಗೊಂಡು ಹೊಕ್ಕು ಹೊರಡುತ್ತಿದ್ದುದರಿಂದ ನಾಡೆಲ್ಲ 

ಪ್ರಶಾಂತವಾಗಿತ್ತು. “ಯಾರನ್ನಾದರೂ ನಂಬಬಹುದು; ಚಾಳುಕ್ಯಗಂಗ 

ರೆಂದರೆ ಬೂದಿಯೊಳಗಿನ ಕೆಂಡ” ಎಂದು ನೃಪತುಂಗನು ಆಡುತ್ತಿದ್ದನಂತೆ. 



ಮಳೆಗಾಲದ ಆರಾಟ ಹೋರಾಟಗಳೆಲ್ಲ ಮುಗಿದು ಚಳಿಗಾಲದ 

ನರ್ತನಕ್ಕೆ ನಾಂದಿಯಾಗಿತ್ತು. ಸೂರ್ಯದೇವನು ನಗುತ್ತಾ ಪಡುಗಡೆಯ 

ಬೆಳುಮುಗಿಲ ಪರದೆಯತ್ತ ಸರಿಯುತ್ತಿದ್ದನು. ರಾಜಭವನದ ಮೇಲುಪ್ಪ 

ರಿಗೆಯ ಪಶ್ಚಿಮ ವಾಟದಲ್ಲಿ ಮಹಾರಾಜನು ಆಸನಾಸೀನನಾಗಿದ್ದರೆ ಬಂಕ 

ಯನು ಅತ್ತಿತ್ತ ಅಲೆದಾಡುತ್ತಿದ್ದನು.  ನೋಟವದು ಇಬ್ಬರ ಕಣ್ಮನ 

ಗಳನ್ನು ಅವರವರ ಭಾವನಾನುಸಾರವಾಗಿ ಸೆಳೆಯುತ್ತಿತ್ತು. ಅದರಿಂದ 

ಮಾತುಗೀತುಗಳ ಕವಲುದಾರಿಗೆ ಎಡೆ ಇದ್ದಿಲ್ಲ. ದಿನಪತಿಬಿಂಬವು ಮೋಡ 

ದೆಡೆಯಲ್ಲಿ ಮರದೆಲೆಗಳ ಸೆರೆಗಳಲ್ಲಿ ನಸುನಸುವಾಗಿ ಮರೆಯಾಗಿ ಮಿರುಗ 

ಲಾರಂಭಿಸಿತು. ಅದನ್ನೆ ಪರಾಂಬರಿಸುತ್ತಿದ್ದ ದೊರೆಯ ಮನಸ್ಸು 

ಅದೊಂದು ಯೋಗ ಸಮಾಧಿಯಲ್ಲಿ ಮುಳುಗಿಹೋಗಿತ್ತು. ಲೌಕಿಕಾ 

ನಂದದಲ್ಲಿ ತೇಲಾಡುತ್ತಿದ್ದ ಬಂಕೆಯನ ಬಗ್ಗೆ ಆ ಸೂರ್ಯಬಿಂಬದ ಹಜ್ಜೆ 

ಯಲ್ಲಿ ಹಜ್ಜೆಯಿಟ್ಟು ನಲಿದಾಡುತ್ತಿದ್ದುದು. ಅಷ್ಟರಲ್ಲಿ ದಿನಮಣಿಯ ನಸು 

ಗೆರೆ ಕೆಳಗಿಳಿದು ಮಾಸಿಹೋದುದನ್ನು ಹೊರಗಣ್ಣಿನಿಂದ ಕಂಡ ಬಂಕೆಯನ 

ಹೊರಗಣ್ಣು ದೊರೆಯತ್ತ ತಿರುಗಿತು. ಸಮಾಧ್ಯವಸ್ಥೆಯಲ್ಲಿದ್ದವನನ್ನು 

ನೋಡಿ ಆಶ್ಚರ್ಯಚಕಿತನಾದನು. ಒಂದಿಷ್ಟು ಕಳೆದ ಮೇಲೆ ಎಚ್ಚರಕ್ಕೇ 

ರಿದ ಅರಸನ ಮುಖವನ್ನೇ ನೋಡುತ್ತಿದ್ದನು. 



ನೃಪತುಂಗ: ಇದೇನು ಬೆರಗಾದವನಂತೆ ನೋಡುತ್ತಿರುವೆ? 



ಬಂಕೆಯ:--ಮಹಾಸ್ವಾಮಿಯವರ ಮುಖಮಂಡಲದಲ್ಲಿ ತಲೆದೋ 

ರಿದ ವಿಶಿಷ್ಟವಾದ ಸಮಾಧಿಲಕ್ಟಣವೇ ಹಾಗೆ ಬೆರಗಾಗಿಸಿತು. 


೭-----------------------------------------------------------------


ನೃಪ:--(ನಕ್ಕು ಓಹೋ, ಹಾಗೋ?....ಮುಳುಗುತ್ತಿದ್ದ ನೇಸರ 

ಬಿಂಬವನ್ನು ಪರಾಂಬರಿಸಿ ಒಂದಿಷ್ಟು ಭಾವನಾಪರವಶನಾದೆನು. 


ಬಂಕೆ:-ಉದಯಾಸ್ತ ವೆಂಬುದು ದಿನಂಪ್ರತಿಯ ವಾಡಿಕೆಯಲ್ಲವೆ? 

ಅದರಿಂದ ತಮ್ಮಲ್ಲಿ ಈ ಬಗೆಯ ಬದಲಾವಣೆಗೆ ಏನು ಕಾರಣ? 


ನೃ ಪ:--ಕಾಲದೇಶಾನುಸಾರವಾಗಿ ಮಾರ್ಪಡುತ್ತಿರುವುದು ಜೀವತ್ಪ

ದಾರ್ಥಗಳ ಪ್ರಕೃತಿ ಏನೂ ಬದಲಾವಣೆ ಇಲ್ಲದಿರುವುದು ನಿರ್ಜೀವ ದ್ರವ್ಯ 

ಗಳ ಸ್ವಭಾವ. ಆಯಾ ವ್ಯಕ್ತಿಗಳ ಪ್ರಕೃತಿಯ ಮಟ್ಟಕ್ಕನುವಾಗಿಯೇ 

ವ್ಯತ್ಯಾಸವು ತಲೆದೋರುವುದರೆಲ್ಲೇನೂ ಆಶ್ಚರ್ಯವಿಲ್ಲ. 


ಬಂಕೆ;--ಮುಳುಗುತ್ತಿದ್ದ ಸೂರ್ಯಬಿಂಬವನ್ನೀಕ್ಚಿಸಿ ನಾನೂ 

ಆನಂದಮಗ್ನನಾದೆನು. ಆದರೆ ತಮ್ಮದಿದು ಬರಿಯ ಆನಂದಮಗ್ನತೆಯಾಗಿ 

ತೋರಲಿಲ್ಲ. 


ನೃಪ: --(ಶುಂದಹಾ ಸದಿಂದ್ರ ಹೌದು. ಹೇಳಿಡೆನಲ್ಲವೆ, ಅದೆಲ್ಲ 

ಆಯಾ” ವ್ಯಕ್ತಿ ಗಳ ಪ್ರಕೃತಿಯನ್ನೊಂದಿಕೊಂಡಿದೆ ಎಂದು? ಮಗನಿಗೆ 

ಮುತ್ತಿನ ಗೊಂಚಲಾಗಿ ತೋರಿದ ತಂದೆಯ ನರೆಮೀಸೆ, ಆತನಿಗೆ ಮೃತ್ಯು 

ನಿನ ಕರೆಯೋಲೆಯ ವಿಳಾಸವಾಗಿ ತೋರಬಹುದು. 


ಬಂಕೆ:--(ಸಖೇದಾಶ್ಚರ್ಯದೊಡನೆ) ಕ್ಷಮಿಸಬೇಕು, ಈ ಮಾತಿನ 

ತಾತ್ಪರ್ಯವನ್ನು ವಿಶದವಾಗಿ ನಿರೂಪಿಸಬೇಕು. 



ನೃಪ:- ಹಾಗಾದರೆ ಸಾವಧಾನದಿಂದ ಪರಾಂಬರಿಸು. ನಮ್ಮ 

ಕುಮಾರ ಕೃಷ್ಣನೆಂದರೆ ಇನ್ನೂ ಕುಮಾರನೇ. ಬೆಳ್ಳಗಿದ್ದುದೆಲ್ಲ ಸಕ್ಕರೆ 

ಯೆಂದು ಭ್ರಮಿಸಿಬಿಡುತ್ತಾನೆಂಬ ಸಂದೇಹವಿದೆ. ಆ ಸಂಜೆಯ ಸೂರ 

ನಂತೆ ನನಗೆ ಹರಯವೇರುತ್ತಾ ಇದೆ. ನಮ್ಮ ತೀರ್ಥರೂಪರು ಜೀವಂತ 

ರಾಗಿದ್ದಲ್ಲಿ ಅವರ ತಾಳಕ್ಕೆ ಲಯವಾಗಿ ಬೆರೆದುಕೊಂಡಿದ್ದವರಲ್ಲವೆ ಚಾಳುಕ್ಯ 

ಗಂಗರಾಜರೆಂದರೆ? ಅವರು ಅಕಾಲದಲ್ಲಿ ದೈವಾಧೀನರಾದಕೂಡಲೆ ನಮ್ಮ 

ಪುರಾತನವಾದ ರೇವಾ ರಾಜಧಾನಿಯನ್ನು ಸೇನಾಸಮೇತರಾದ ವೆಂಗಿಯ 

ವಿಜಯಾದಿತ್ಯನೂ ಅವನ ಮಗ ವಿಷ್ಣುವರ್ಧನನೂ ಸುಲಿದು ಬಿಟ್ಟರು. 

ನಾನು ಬಲು ಕಿರಿಯನಾಗಿದ್ದುದರಿಂದ, ನಾನಾ ಬಗೆಯ ತೊಡಕಿನ ಬಲೆ 

ಯಿಂದ ತಪ್ಪಿಸಿಕೊಂಡು ಇಲ್ಲಿ ನೆಲಸುವುದರಲ್ಲೇ ಬೇಕುಸಾಕಾಗಿಹೋಯಿತು. 

ಸೂರ್ಯಾಸ್ತ ವನ್ನು ಪರಾಂಬರಿಸುವಲ್ಲಿ ಈಗ ಅ ಅವಸ್ಥೆ ಮತ್ತೊಮ್ಮೆ ನೆನ 

ಪಾಗಿ ಭಾನನಾತರಂಗದಲ್ಲಿ ತೇಲಾಡಿಹೋದೆನು. ಅಂದು ಕಿರಿಯನಾಗಿ 



೮-----------------------------------------------------------------



ದ್ದುದರಿಂದ ನೀನೊಂದನ್ನೂ ಸರಿಯಾಗಿ ತಿಳಿದಿಲ್ಲ. ನಿನ್ನ ತಂದೆ ಕೀರ್ತಿ 

ಶೇಷನಾದ ಧೋರನ ನೆರವೂ ಪರಮಾತ್ಮನ ದಯವೂ ಇದ್ದುದರಿಂದ ಇಷ್ಟಾ 

ದರೂ ಆಯಿತು ಎನ್ನುವ. ಈಗಿನ ನಮ್ಮ ಅಂತಶ್ಶತ್ರುಗಳಾದ ಗಂಗರಾಜಾ 

ದಿಗಳು ಅಂಥದೇ ಹೂಣಿಕೆಯನ್ನು ಬೇರೊಂದು ಬಗೆಯಲ್ಲಿ ಪೋಣಿಸುತ್ತಿ 

ದ್ದಾರೆಂದು ಭಾಸವಾಗುತ್ತಿದೆ. 


ಬಂಕೆ:--ಅದೇನು? 


ನೃಪ:--ಗಂಗರಾಜ ರಾಜಮಲ್ಲನ ಕುಮಾರ ಬೂತುಗನಿಗೂ ನಮ್ಮ 

ಕುಮಾರನಿಗೂ ಎರೆದ ನೀರು ಸೋರದ ಕೆಳೆತನವಾಗಿಬಿಟ್ಟಿದೆ. ಆತನಿಗೆ 

ನಮ್ಮ ಹಿರಿಯ ಕುವರಿ ಚಂದ್ರಬ್ಬಲಬ್ಬೆ ಯನ್ನು ವರಿಸಬೇಕೆಂಬ ಉದ್ದೇಶ 

ವಂತೆ. ಅದು ಪುರುಷಾರ್ಥ ಕಾಮವೇ ಆದರೆ--ಮಾತ್ರವಲ್ಲ ಪರಸ್ಪರ 

ವಾಗಿ ನೆಲೆಗೊಂಡಿದ್ದರೆ, ನಮ್ಮದೇನೂ ಆಕ್ಷೆೇಪವಿಲ್ಲ. ಗಂಗರಾಜರೆಂದರೆ 

ನಾಡಾಡಿ ಮನೆತನದವರಲ್ಲ. 


ಬಂಕೆ: --ಹಾಗಾದರೆ ಅದು ಅಂಥ ನಲ್ಮೆಯಲ್ಲವೆಂಬುದಕ್ಕೆ ಸರಿ 

ಯಾದ ಆಧಾರವಿದ್ದಿರಬೇಕಲ್ಲವೆ? 


ನೃಪ:--ಸಂಶಯವೇನು? ಒಳಗೊಳಗಿನ ಸೂತ್ರವದು ಬಹುಕಾಲ 

ದಿಂದ ಗಂಟಿಕ್ಕಿ ಬಿಗಿಯುತ್ತಾ ಬಂದರೂ ನಮಗಿನ್ನೂ ಹೊರಗಾಗಿಯೇ ಇದೆ. 


ಬಂಕೆ:--ಅದೇಕೆ? ತಮ್ಮ ಸನ್ನಿಧಿಗೆ ಹೊರಗಾಗಿ ಬಂಧುತ್ವವಿದು 

ಸಾಧ್ಯ್ಯವಾಗಬಹುದೆಂಬ ಭಾವನೆಯೂ ಅವರಿಗಿರಬಹುದೆ? 


ನೃಪ:-ಇರಲಾರದು. ಒಳಗಂಟು ಬಲಿದು ಬಿಡಿಸಲಾರದ ಅರಿ 

ಗಂಟಾಗಿ ಪರಿಣಮಿಸುವ ವರೆಗೆ ಹಾಗೇ ಇರಬೇಕೆಂದು ಆ ಗಂಗನ ಎಣಿಕೆ 

ಯಾಗಿರಬೇಕು. 


ಬಂಕೆ:-- ಹಾಗಾದರೆ ಈ ಸಂಚಿನ ಗುಟ್ಟು ನಮ್ಮವರಿಗೇನೂ ಗೊತ್ತಾ 

ಗಿಲ್ಲವೆಂದು ತೋರುತ್ತಿದೆ ನಮ್ಮವರ ಕೈಯೂ ಇರಬೇಕಲ್ಲವೆ? 


ನೃಷ:--ಹೌದು ಅದೀಗ ಇಷ್ಟೊಂದು ಬೇಸರಕ್ಕಾಸರೆ. ನಮ್ಮ 

ಕುಮಾರನೆಂದರೆ ಬೆಳ್ಳ ಗಿದ್ದುದೆಲ್ಲ ಸಕ್ಕರೆ ಎಂದು ನಂಬುವ ಪ್ರಕೃತಿಯವನು. 


ಬಂಕೆ:-- ಮಹಾರಾಣಿಯವರಿಗೆ ವಿಷಯವಿದು ಗೊತ್ತಿಲ್ಲವೆ? 



ನೃಪ:--(ನಗುತ್ತ) ಹೂಂ. ಸಂಭಾಷಣಾವಸರದಲ್ಲಿ ಒಸರುತ್ತಿದ್ದ 

ಆ ಬೂತುಗನ ಗುಣ ಬಿಂದುಗಳಿಂದಲೂ ಆಕೆಗದು ಗೊತ್ತಿರಬೇಕೆಂದು 



೯---------------------------------------------------------------- 



ತೋರುತ್ತಿದೆ. ಆದರೆ ಗಂಗವಂಶೀಯರ ನ್ನಪನೀತಿಯ ಚಾಕಚಕ್ಯವೆಲ್ಲ 

ಈ ಹೆಂಗುಸರಿಗೆ ಮಕ್ಕಳಿಗೆ ಏನುಗೊತ್ತು? ಸಂಜೆಯಾದೊಡನೆ ಬಾಂದಳ 

ವನ್ನಾವರಿಸಬೇಕೆಂಬ ತಿಂಗಳಿನಂತೆ ಕೈಸಿಲುಕಿಸ ಸುತ್ತಿದ್ದಾರವರು. ಬೂತುಗ 

ನಾದರೂ ಹುಡುಗ; ಈ ನಾಟಕಕ್ಕೆಲ್ಲ ಸೂತ್ರಧಾರನಾಗಿರುವುದು ಅವನ 

ತಂದೆ ರಾಜಮಲ್ಲನು. 


ಬಂಕೆ: ಹಾಗಿದ್ದರೆ ಈ ಯುವರಾಜಾದಿಗಳಿಗೆಲ್ಲ ಈ ಗಂಗಾದಿ 

ಸಾಮಂತರ ವಕ್ರರಾಜನೀತಿಯ ಒಳವನ್ನು ಸೂಚಿಸಿ ಮುಂದೆ ಜಾಗೃತ 

ರಾಗಿರುವಂತೆ ತಾವೇ ಅಜ್ಞಾಪಿಸಿರಿ. ಅಪ್ಪಣೆಯಾದರೆ ನಾನೇ ಹೋಗಿ 

ಗಂಗರಾಜನೆದೆಗೆ ರಾಜನೀತಿಯ ಮೆದುನುಡಿಯಿಂದಲೆ ಬಿಸಿಹುಟ್ವಸಿ 

ಬರುತ್ತೇನೆ. ಇಂಥ ಅಂತಶ್ಶತ್ರುಗಳ ಕೈಯನ್ನು ಇನ್ನೂ ಹೆಚ್ಚಿ ಗೆ ಸಡಿಲಾಗಿ 

ಬಿಟ್ಟರೆ ಅಪಾಯಕರವಲ್ಲವೆ?' 


ನೃಪ:_-ಹೌದು. ಆದರೆ ಇನ್ನೂ ಒಂದಿಷ್ಟು ಕಾಲಪ್ರತೀಕ್ಷೆ 

ಮಾಡುವ. ಪ್ರತ್ಯಕ್ಷವಾದ ಅವರ ಅಪರಾಧವನ್ನು ಅವರ ತಲೆಗೇ ಹೊರಿ 

ಸುವ ಸಂದರ್ಭ ಒದಗಲಿ. ಬೂತುಗನು ಆಗಾಗ ಬಂದು ಮೇಲಿಂದ 

ಮೇಲೆ ವಿನಯವನ್ನು ತೋರ್ಪಡಿಸಿಕೊಂಡು ಮನೆಮಂದಿಯಂತೆಯೇ 

ಇರುತ್ತಾನೆ. ಲೋಕದವರನ್ನೇ ದೂರುವ ಸಂದರ್ಭವನ್ನು ಅವರೇ 

ಒದಗಿಸಿಕೊಳ್ಳುವಂತಿರುವಲ್ಲಿ ನಾವಾಗಿ ದುಡುಕುವುದು ನೀತಿಯಲ್ಲ. ತಣ್ಣೀ 

ರಾದರೂ ತಣಿಸಿ ಕುಡಿಯಬೇಕಲ್ಲವೆ? 


ಬಂಕೆ:--ಹಾಗೆಂದರೆ? 


ನೃ ಪ:- ಬಿಸಿನೀರನ್ನು ತಣಿಸುವ ಉದ್ದೇಶವಲ್ಲ ತಣ್ಣಿ ರನ್ನು ತಣಿಸು 

ವಲ್ಲಿ. ಮಿಶ್ರಿತವಾಗಿ ಎತ್ತೆತ್ತಲೂ ಪಸರಿಸಿದೆ. ಕಲ್ಮಷದ ಅಣುಗಳೆಲ್ಲ ಅಡಿ 

ಯಲ್ಲಿ ನೆಲಸಿ ಸ್ವಚ್ಛವಾಗಿ ಕಾಣಿಸುವಂತಾಗಲಿ ಎಂದು. ಆ ಮೇಲೆ ತಿಳಿ 

ನೀರನ್ನೆತ್ತಿ ಕೊಂಡು ಕೆಸರನ್ನತ್ತ ಚೆಲ್ಲಿಬಿಡುವುದು ಲಾಭವಲ್ಲವೆ? 


ಬಂಕೆ:- (ಭಾವಿಸಿ) ಮಹಾರಾಜರ ಭಾವನೆಯನ್ನು ಪರಾಂಬರಿಸಿ 

ದಲ್ಲಿ ಬೂತುಗನು ಸ್ವಭಾವತಃ ಉತ್ತಮ ಕುಮಾರನೆಂದೂ ಅವನ ತಂದೆಯೇ 

ಇಷ್ಟೊಂದು ಬೇಸರಕ್ಕೆ ಕಾರಣವೆಂದೂ ತೋರುವುದಲ್ಲವೆ? 


ನೃಪ:- ಹೌದು, ಸರಿಯಾಗಿ ಊಹಿಸಿದೆ. 


ಬಮಕೆ:- ನಿಧಿಯನ್ನೆತ್ತಿ ಹಾವನ್ನು ತೊಲಗಿಸುವುದೆಂದರೆ ಸುಲಭ 

ಕಾರ್ಯವಲ್ಲ. 


೧೦-----------------------------------------------------------------


ನೃಪ:--ಅಲ್ಲ, ಒಂದೊ ಅದರ ಹಲ್ಲನ್ನು ಕಿತ್ತುಬಿಡಬೇಕು; ಅಲ್ಲವೆ 

ತಡೆಗಟ್ಟಬೇಕು. 


ಬಂಕೆ:--ಅದು ಮಂತ್ರವಾದಿಯ ಕೆಲಸ, ದಂಡನಾಯಕನದಲ್ಲ. 


ನೃಪ:--ಈ ಸಂದರ್ಭದಲ್ಲಿ ದಂಡನಾಯಕನೇ ಮಂತ್ರವಾದಿಯ 

ಪಾತ್ರವನ್ನು ವಹಿಸಿಕೊಂಡರೆ ಉತ್ತಮವೆಂದು ನನ್ನ ಭಾವನೆ. 


ಮಂದಹಾಸದೊಡನೆ ಬಂಕೆಯನು ಸುಮ್ಮನಾದನು. ಆಗ ಪಡು 

ಗಡೆಯ ಬಾಂದಳವು ಕಾವಿಯ ಸಾರಣೆಯನ್ನೊಂದಿ ತಳತಳಿಸುವ ಗೋಡೆ 

ಯಾಗಿ ಪರಿಣಮಿಸುತ್ತಾ ಬಂತು. ಲೆಕ್ಕಕ್ಕೆ ಸಿಕ್ಕದ ಹಕ್ಕಿಗಳ ಸಾಲು 

ಗಾಳಿಯಲ್ಲಿ ತೇಲಾಡಿಕೊಂಡು ಈಜಾಡಿಕೊಂಡು ಹಾರಾಡಿಕೊಂಡು ಬರು 

ತ್ತಿದ್ದುವು. ಈ ಗತಿ ವ್ಯತ್ಯಾಸದಿಂದಾಗಿ ಮುಂದಿನವು ಹಿಂದೆ ಹಿಂದಿನವು 

ಮುಂದಾದರೂ ನಡುವಣವು ಹಾಗೆ ಇದ್ದುದು ಪರಾಂಬರಿಕೆಯ ಕಣ್ಣನ್ನು 

ತೆರೆಯಿಸುತ್ತಿತ್ತು. ಆ ಹಕ್ಕಿಗಳ ಸಾಲುಗಳೆಂದರೆ, ಕೆಲವು ಎರಡೆರಡಾಗಿ 

ಕೆಲವು ಹಲಹಲವಾಗಿ, ಕೆಲವು ಒಂದೊಂದಾಗಿ ಹಾರಾಡುತ್ತ ಬಹುಶಃ 

ತಂತಮ್ಮ ಸಾಮಾಜಿಕ ಸ್ಥಿತಿಗತಿ ವ್ಯತ್ಯಾಸಗಳನ್ನೇ ಕಾಣಿಸುತ್ತಿದ್ದುವೆಂದು 

ತೋರುತ್ತಿದೆ. ಭಿನ್ನ ಭಿನ್ನಗಳಾದ ನಾದ-ಸ್ವರಭೇದ-ಜಲ್ಪನ ಪದ್ಧತಿಗಳಲ್ಲಿ, 

ಅಕ್ಷರ-ವಾಕ್ಯಗಳ ಹೊಲಬು ನಮಗಾಗದಿದ್ದರೂ ಭಾವನಾಸಾರವು ಸುರಿ 

ಯುವಂತಿತ್ತು. ಗೂಡುಗಳಲ್ಲಿ ಹಸಿದೆದ್ದು ಕಾಯುತ್ತಿರುವ ಮರಿಗಳ 

ವಿಚಾರ, ಹಿಂದೆಕಂಡ ನಾನಾ ದೃಶ್ಯ-ವಸ್ತುಗಳ ಚರ್ಚೆ-ಅನ್ಯೋನ್ಯವಾದ 

ನಲ್ಮೆಯೊಲ್ಮೆಗಳ ಸೂಚನೆ- ಮುಂದಿನ ತಂತಮ್ಮ ಜೀವನ ವಿಚಾರದ ಚಿತ್ರ 

ಮೊದಲಾದುವೇ ಆ ಸಂಭಾಷಣಾಸಾರವಾಗಿ ಭಾವಿಸಬೇಕು. ಅವುಗಳದೂ 

ಒಂದು ಸಾಮಾಜಿಕವಾದ ಕಟ್ಟು ನಿಟ್ಟು ಇರಬೇಕಲ್ಲಿ. ಒಡನಾಡಿಗಳ ಹಲ 

ನುಡಿಗೊಂದರಂತೆ ಉತ್ತರಿಸುವ, ಉತ್ತರಿಸದೆ ಹುಂಗುಟ್ಟುವ, ಹುಂಗುಟ್ಟದೆ 

ಮೌನವಾಗಿರುವ, ದೂರಕ್ಕೆ ತೊಲಗಿ ಏಕೈಕವಾಗಿ ಹಾರುವ ಜೀವಿ 

ಗಳೂ ಇದ್ದುವು. ಅಷ್ಟರಲ್ಲಿ ಮೊದಲಿನ ಕೆಂಬಣ್ಣವೆಲ್ಲ ಮಸುಕಾಗಿ 

ಮಸುಕು ಮಬ್ಬಿನ ಮರಿಯಾಗಿ ಪಲ್ಲಟಸಲಾರಂಭಿಸಿತು. ಚಲನ ಸ್ವರೂಪಿ 

ಕಾಲಪುರುಷನ ಏಕಾಧಿಪತ್ಯದ ಪ್ರಪಂಚದೊಳಗೆ ಯಾವುದೂ ಸ್ಥಾಯಿ 

ಯಾಗಿ ಇರಲಾರದು ಎಂಬುದನ್ನು ಸೂಚಿಸುತ್ತಿತ್ತು. 


ಅದೆಲ್ಲವನ್ನೂ ಪರಾಂಬರಿಕೆಯೊಡನೆ ಪ್ರತೀಕ್ಷಿಸುತ್ತಿರುವಲ್ಲಿ ಕಗ್ಗತ್ತಲೆ 

ಕವಿದುದು. ಬಾಂದಳದಲ್ಲಿ ಕೋಟ್ಯಾವಧಿ ನಕ್ಷತ್ರಗಳು ಮಿನುಗುತ್ತಿ 



೧೧---------------------------------------------------------------- 



ದ್ದುವು. ಅವುಗಳೆಲ್ಲ ಒಂದಾಗಿ ಸಂಘಟಿಸಿದರೆ ಎಷ್ಟೋ ಚಂದ್ರಬಿಂಬ 

ಗಳಾಗಿ ಪರಿಣಮಿಸುವುದೆಂದು ತೋರುತ್ತಿದೆ. ಆದರೂ, ಒಂದೇ ಒಂದು 

ಬಿಂಬದ ಕಲಾಪರಿಣತಿ ಅವುಗಳಷ್ಟರಿಂದಲೂ ಸಾಗುವಂತಿಲ್ಲ. ವಿಘ 

ಟನೆಯ ಅವಸ್ಥೆಯೇ ಹಾಗೋ, ಹೇಗಿದ್ದರೂ ಅವುಗಳ ಪ್ರಕೃತಿಯೇ 

ಹಾಗೋ ಯಾರು ಬಲ್ಲರು? ಆವರೆಗೂ ಭಾವನಾಪರವಶನಾದ ನೃಪ 

ತುಂಗನು ಮಂದಹಾಸವೆಸಗಿದನು. ಗುಡಿಗಳ ಶಂಖನಾದವೆತ್ತಲೂ ವ್ಯಾಪಿ 

ಸಿತು. ಆಚಾರಕ್ಕನುವಾಗಿ ಬಂಕೆಯೆನಿಗೆ ಸಂಜೆಗಿಂತ ಮೊದಲೆ ಆಹಾರ 

ವನ್ನು ಪೂರ್ತಿಸಬೇಕೆಂಬುದು ನೃಪತುಂಗನಿಗಂತಿರಲಿ, ಸ್ವತಃ ಬಂಕೆಯ 

ನಿಗೇ ನೆನಪಾಗಲಿಲ್ಲ. 'ಏನು ನಮ್ಮೊಡಗೂಡಿದ ಬಂಕೆಯನಿಗೆ ಹೋಳಿಗೆ 

ತಪ್ಪಿತೇ?” ಎಂದು ಅರಸನು ನಗುತ್ತಾ ಕೇಳಿದನು. "ಹೋಳಿಗೆ ತಪ್ಪಿ 

ದರೂ ಹಬ್ಬ ತಪ್ಪಲಾರದು' ಎಂದು ಬಂಕೆಯನು ಉತ್ತರವಿತ್ತನು. 'ಹಬ್ಬ 

ವೆಂದರಾವುದು?' ಎಂಬ ಪ್ರಶ್ನೆಗೆ 'ದೊರೆಯ ಬಲಗೈಯಬಂಟನೆನ್ನಿಸು 

ವುದೇ ಹಬ್ಬ' ಎಂದು ಮರುಮಾತುಗೊಟ್ಟನು. "ಬಲಗೈಬಂಟನೆನ್ನಿಸಿ 

ಮೊದಲೊಬ್ಬನಿಗೆ ಹನ್ನೆರೆಡು ವರ್ಷವೂ ಉಪವಾಸವ್ರತನಾಗಿದೆಯಂತೆ? 

ಎಂಬ ಮಾತಿಗೆ, ಆ 'ವ್ರತದಿಂದಲ್ಲವೆ ಹಗೆ ಹೊಗೆಯಾಗಿ ಹಾರಿದುದು?' 

ಎಂದು ಮರುನುಡಿ. ನೃಪತುಂಗನು ಮಂದಹಾಸವೆಸಗಿದರೆ, ಬಂಕೆಯನ 

ಮೊಗದಲ್ಲಿ ಗಂಭೀರ ಭಾವನೆಯ ಮೇಲಿನ ಮುಗುಳುನಗೆಯ ತಂಪು 

ಸೂಸಿತು. ಆ ಮೇಲೆ ಬಂಕೆಯನೆದ್ದು ತನಗಾಗಿಯೇ ಮೀಸಲಾಗಿದ್ದ 

ಬಂಕೆಯವಾಡಿ ಎಂಬ ರಾಜಭವನಕ್ಕೈದಿದನು. 

==============


ಹಗೆಗಳ ಹಂಚಿಕೆ 


ಮರುದಿನದ ಹೊತ್ತು ಮೂಡಿ ಸುಮಾರು ಮಾರುದ್ದಕ್ಕೇರಿತು. 

ಏಳುವರೆ ಗಂಟೆಯಾದರೂ ಬಂಕೆಯೆನಿಗೆ ಎಚ್ಚರವಾಗಿಲ್ಲ. ಹಿಂದಿನ ಸಂಜೆ 

ಯ ಸಂಭಾಷಣಸಾರವೇ ತಲೆಗೇರಿ ನಡುವಿರುಳು ದಾಟದರೂ ಬಂಕೆಯೆ 

ನಿಗೆ ನಿದ್ದೆ ಬಂದಿಲ್ಲ. ಆ ಗಂಗರ ಮತ್ತು ಅವರ ಗೆಳೆಯರೆನ್ನಿಸಿದ ಮೂಡಣ 

ಚಾಳುಕ್ಯಾದಿ ಸಾಮಂತರ ವಿಚಾರದಲ್ಲಿ ದೊರೆಯ ಪರಾಂಬರಿಕೆ; ಅದರ 

ಮೇಲಿನ ತನ್ನ ಸೂಚನೆಗಳನ್ನು ಕಡೆದು ಹಿಟ್ಟನ್ನು ಹದಕ್ಕಿಳಿಸುವಲ್ಲಿ ಅಷ್ಟು 

ಕಾಲ ಸವೆದು ಹೋಗಿತ್ತು. ಅದರಿಂದ ಕಣ್ಮನಗಳು ಮಗ್ಗುಲನ್ನೊಂದಿ 

ದರೂ ನಿದ್ರಾದೇವಿಯ ಸ್ಮರಣೆ ಅವನಿಗಾಗಲಿಲ್ಲ. ಆಕೆಯಾದರೂ ಪದ್ಧ 



೧೨----------------------------------------------------- 



ತಿಗೆ ಶರಣಾಗಿ ಅವನನ್ನು ತಡವರಿಸಲಿಲ್ಲ, ಫಕ್ಕನೆ ಇದಮಿತ್ಥಮೆಂಬ 

ನಿರ್ಧಾರಕ್ಕಿಳಿದು ಅತ್ತ ತಿರುಗಿದನು. ಮೋಹಪರವಶನಾಗಿ ಆ ಪ್ರೇಮ 

ಪಾಶಬದ್ಧನಾಗಿ ಮೈಮರೆತು ತಲ್ಲೀನನಾಗಿದ್ದನು. ಅದರಿಂದಲೇ ಎಚ್ಚರ 

ಕ್ಕಷ್ಟು ತಡವಾಗಿರಬೇಕು. ಪ್ರಾತಃಕಾಲದ ಪದ-ಮೆಲ್ವಾಡುಗಳನ್ನು 

ಮೇಳದೊಡನೆ ಹಾಡುತ್ತಿದ್ದ ಪಾಠಕರ ಸಂಗೀತ ಘೋಷದಿಂದಲೇ ಎಚ್ಚತ್ತ 

ಬಂಕೆಯನು ಮುಖಮಜ್ಜನಾದಿಗಳನ್ನು ತೀರಿಸಿದರು. ಧರ್ಮನಾಥನನ್ನು 

ಪೂಜಿಸಿ ತನ್ನೊಡನಿದ್ದ ಬಲಗೈಯ ಬಂಟರೊಡನೆ ಉಪಾಹಾರವನ್ನು 

ತೀರಿಸಿ ಚಾವಡಿಗೈ ತಂದನು. ತನ್ನ ಪ್ರತೀಕ್ಷೆಗಾಗಿಯೇ ಬಂದು ಕಾಯು 

ತ್ತಿದ್ದ ನಾಲ್ಕೈದು ಮಂದಿ ಪರಿಚಿತಾತಿಥಿಗಳನ್ನು ಕಂಡು ನಾಚಿಕೆಯೂ 

ಆಶ್ಚರ್ಯವೂ ಆಯಿತು ಸ್ವಾಭಾವಿಕವಾಗಿ ನಸುಕಿನಿಂದ ಮೊದಲೇ 

ಏಳುವವನ ಎಚ್ಚರಕ್ಕೆ ಅಷ್ಟು ತಡವಾದುದು ಲಜ್ಜಾ ಕಾರಣವಾದರೆ ತನ್ನೂ 

ರವರು ನೆರೆಯೂರವರು ಬಹುಶಃ ತನ್ನ ಭೆಟ್ಟಿಗಾಗಿ ಅಲ್ಲಿವರೆಗೆ ಬಂದುದೆ 

ಆಶ್ಚರ್ಯಕ್ಕೆ ಕಾರಣ, ಅವರೆಲ್ಲರೂ ರಾಜಧಾನಿಯೊಳಗೆ ನೆಲಸಿದ ಬಂಧು 

ವಾದ ರಾಯಣ ಹೆಗ್ಗಡೆಯಲ್ಲಿ ಉಪಾಹಾರವನ್ನು ಮುಗಿಸಿಕೊಂಡೇ ಬಂದಿ 

ರುವರು ಎಂಬುದನ್ನರಿತ ಮೇಲೆ ಸಂಭಾಷಣಕ್ಕಾರಂಭವಾಯಿತು. 



ಬಂಕೆ:--ಇದೇನು, ನೀವೈವರೂ ಸೇರಿ ಇಲ್ಲಿವರೆಗೆ ಬಂದುದನ್ನು 

ಪರಾಂಬರಿಸಿದಲ್ಲಿ ಏನೋ ವಿಶಿಷ್ಟವಾದೊಂದು ಗುರಿಯಿದ್ದಂತೆ ತೋರು 

ವುದಲ್ಲವೆ? 'ಪುಲಿಗೆರೆ'ಯ 'ಮಹಾಜನ' ಎಂದರೆ ನಮ್ಮ ನಾಡುಗಳೊಳ 

ಗೆಲ್ಲ ಹಿರಿಯದು, ಕಾರ್ಯಬಾಹುಳ್ಳದಿಂದಲೂ ಮೇಲಾದ ಸಂಸ್ಥೆ. 

ಅದನ್ನು ನೋಡಿ ನಡೆಯಿಸುವುದರಲ್ಲೇ ರವಿಕಯ್ಯನವರ ಸಮಯವೆಲ್ಲ 

ಸವೆದುಹೋದೀತು. ಅಂಥವರನ್ನೂ ಕೂಡಿಕೊಂಡು ಬಂದುದನ್ನೀಕ್ಷಿಸಿ 

ದರೆ ಏನೋ ಒಂದು ಮಹತ್ತರವಾದ ರಾಜಕಾರ್ಯವೇ ಆ ಗುರಿ ಎಂದು 

ತೋರುತ್ತಿದೆಯಲ್ಲವೆ? 


ರವಿ:- ಹೌದು. ಈ ನಿಮ್ಮ ಸಿಂಘಣ ಗೌಡರೊಡನೆ ಇವರೆಲ್ಲ 

ಬಂದು ನನ್ನನ್ನು ಒತ್ತಾಯಿಸಿದರು. ಅದರಿಂದ ನಾನೂ ಹೊರಡಬೇಕಾ 

ಯಿತು. 


ಬಂಕೆ:--(ಸಿಂಘಣನತ್ತ ತಿರುಗ) ಗೌಡರೆ, ಹಾಗಿದ್ದರೆ ನಿಮ್ಮೆಲ್ಲರ 

ಆಗಮನದಲ್ಲಿ ನಿಮ್ಮದೇ ಕಾರ್ಯವು ಪ್ರಮುಖವೆಂದಾಯಿತು. ಅದರಿಂದ 

ವಿಶೇಷವಾಗಿ ನನ್ನನ್ನು ಕಾಣಲಿಕ್ಳಾಗಿಯೇ ನೀವು ಬಂದುದೆಂದು ಭಾವಿಸ 


೧೩—-------------------------—--------- 



ಬೇಕಾಗಿದೆ. ಬನವಸೆಯ ರಾಜಧಾನಿಗೆ ನೀವು ಮಾತ್ರವೇ ಹೋಗಿದ್ದರೆ 

ಸಾಕಾಗುತ್ತಿತ್ತು. ಒಂದು ವೇಳೆ ನಾನಲ್ಲಿ ಇಲ್ಲದಿರಲೂ ಬಹುದೆಂಬ 

ಸಂಶಯ ನಿಮ್ಮನ್ನು ಅಂಟಿಕೊಂಡಿದ್ದಿರಲೂ ಬಹುದು. ಹಾಗಾದರೂ 

ಏನು? ನನ್ನು ಮಹಾಪ್ರಧಾನರಿರುವಲ್ಲಿ ನಾನಿಲ್ಲದ ನ್ಯೂನತೆ ಏನೂ ಇಲ್ಲ 

ವೆಂಬುದು ನಿಮಗಿನ್ನೂ ಗೊತ್ತಿಲ್ಲವೆ? 


ಸಿಂಘ:- ಅಲ್ಲಿಗೂ ಹೋಡೆ. ಮಹಾಪ್ರಧಾನರು ಚೆನ್ನಾಗಿ ಪರಾಂ 

ಬರಿಸಿ “ಪ್ರಕೃತ ವಿಷಯದಲ್ಲಿ ಇದಮಿತ್ಥಂ  ಎಂದು ನಿರ್ಧರಿಸಲು ತನ್ನು 

ಭಾವನೆಯೋದೇ ಸಾಕಾಗಲಾರದು. ಚಕ್ರವರ್ತಿಗಳ ಸನ್ನಿಧಿಯ ಒಪ್ಪಿ 

ಗೆಯೂ ಬೇಕಾಗಬಹುದು" ಎಂದರು. ಅದಕ್ಕಾಗಿ ಇವರೆಲ್ಲರನ್ನೂ 

ಪ್ರಾರ್ಥಿಸಿ ಕರಕೊಂಡು ಬಂದಿರುತ್ತೇನೆ. 


ಬಂಕೆ:--ಅಂಥಾ ವಿಶಿಷ್ಟ ಕಾರ್ಯವೇನು? 


ಸಿಂಘಃ:--ಗಡಿನಾಡಿನಲ್ಲಿರುವ ಹಲವು ಪ್ರಜಾವರ್ಗಕ್ಕೆ, ವಿಶೇಷವಾಗಿ 

ನನಗೆ, ಆ ಗಂಗರಾಜಾಧಿಕಾರಿಗಳ ಒಳಗೈಯ ಅತ್ಯಾಚಾರವನ್ನು ಸೈಸಿ 

ಕೊಳ್ಳುವುದೂ ಜೀವಿಸುವುದೂ ಅಸಾಧ್ಯ ಮಹಾಸ್ವಾಮಿ. 


'ಬಂಕೆ:- (ಆಶ್ಚರ್ಯದಿಂದ) ಕಾರಣವೇನು? 


ಸಿಂಘ:--ನನಗರಿವಂತೆ ಅಂಥ ಕಾರಣವೇನೂ ಇಲ್ಲ. ಹಿಂದಿನಿಂದ 

ಹಿಡಿದು ಹೇಗೋ ಹಾಗೆ ಇಂದಿಗೂ ಆ ಗಡಿನಾಡಿನ ಗಂಗರಾಜ ಪ್ರಜಾ 

ವರ್ಗದೊಡನೆಯೂ ಅಧಿಕಾರಿಗಳಲ್ಲಿಯೂ ವಿನಯದಿಂದಲೇ ವರ್ತಿಸುತ್ತಿ 

ದ್ದೇನೆ ಆದರೆ ನನ್ನ ನಾಡಿನಲ್ಲಿ ದೊರೆಯಲ್ಲಿ ವಿಶೇಷವಾಗಿ ಚಕ್ರವರ್ತಿ 

ಗಳಲ್ಲಿರುವ ಭಕ್ತಿಯನ್ನು ಕುಗ್ಗಿಸಿಕೊಳ್ಳಲಿಲ್ಲ. ಅದುವೇ ಆ ನೆರೆನಾಡಿನ 

ಅಧಿಕಾರಿಗಳಿಗೆ ನನ್ನಂಥವರಲ್ಲಿ ಅಸಹ್ಯ ಭಾವವೆಂದು ತೋರುತ್ತಿದೆ. 


ಬಂಕೆಃ--ಚಕ್ರವರ್ತಿಗಳನ್ನು ಶಬ್ದತಃ ನಿಂದಿಸುತ್ತಾರೇನು? 


ಸಿಂಘ:--ಹಾಗೇನೂ ಶಬ್ದತಃ ಕೇಳಿಲ್ಲ. ಆದರೆ, "ಕುಮಾರ ಕೃಷ್ಣ 

ರಾಜರು ಬೇಗನೆ ಚಕ್ರವರ್ತಿಗಳಾಗುತ್ತಾರೆ. ಆ ಮೇಲೆ ಈ ಬಂಕೆಯನ 

ಹೆಮ್ಮೆಯ ಕೇನೆಗೆ ಕಲ್ಲಿಟ್ಟಂತಾಗುವುದು” ಎನ್ನುತ್ತಾರಂತೆ. 


ಬಂಕೆ:--(ಭಾವಿಸಿ) ಹುಂ, ಇರಲಿ. ಆ ನಾಡವರ ಹೇಳಿಕೆ ಹೇಗೆ? 


ಸಿಂಘ:--ಸಾಮಾನ್ಯರಾದ ನಾಡವರ ಹೇಳಿಕೆಯಲ್ಲೇನಿದೆ? ಮಳೆ 

ಗಾಲದಲ್ಲಿ ಗಾಳಿ ಬಂದಂತೆ ಕೊಡೆ ಹಿಡಿಯುತ್ತಾರವರು. 



೧೪ —--------------------------------- 



ಬಂಕೆ:--ಅದೂ ಹೋಗಲಿ. ಆ ಅಧಿಕಾರಿಗಳೆಂಬವರ ಅತ್ಯಾಚಾರ 

ಅಸಹ್ಯವೆಂದು ಸೂಚಿಸಿದ್ದಿರಲ್ಲವೆ? ಅದೇನು? 


ಸಿಂಘ:--ನಾನಾ ಬಗೆಯ ಕೊಳ್ಳೆ ಸುಲಿಗೆಗಳು, ಗೌಡರಿಗೆ, ನಾಡ 

ಗೌಡರಿಗೆ ಗೊತ್ತಿದ್ದಂತೆ ನಮ್ಮ ಪ್ರಜಾವರ್ಗದ ಮೇಲೆ ನಡೆಯುತ್ತಿವೆ. 


ಬಂಕೆ: ನೀವು ಆ ಗೌಡರಲ್ಲಿ ಅದನ್ನು ಹೇಳಿಕೊಳ್ಳಲಿಲ್ಲವೆ? 


ಸಿಂಘು:-- ಅವರ ಪ್ರಜೆಯಾದ ಕೇತಯ್ಯನೆಂಬುವನು ಹೆಸ ರುಗೊಂಡ 

ಸುಲಿಗೆಗಾರನೆಂಬುದು ಎಲ್ಲರಿಗೂ ಗೊತ್ತಿದೆ. ನಾನಿಲ್ಲದಾಗ ಹಲಬಾರಿ 

ನಮ್ಮ ಮನೆಯವರನ್ನು ಬೈದುದಲ್ಲದೆ ಹೊರಗಿದ್ದ. ಪಾತ್ರಗಳನ್ನು 

ಕೊಂಡೊಯ್ದನಂತೆ. ಒಮ್ಮೆ ಹಟ್ಟಿಯಲ್ಲಿದ್ದ ಕರೆಯುವ ದನಕರುಗಳನ್ನೂ 

ಬಿಡಿಸಿಕೊಂಡು ಹೋದನು. ಆಗಲೆ ಬರುತ್ತಿದ್ದ ನಾನೇ ಅದನ್ನು ಕಂಡರೂ 

ಮಾಡುವುದೇನು? ನಮ್ಮ ಗಡಿದಾಟಿ ಅತ್ತಕಡೆಯಲ್ಲಾಗಿದ್ದನು. ಅವನೊ 

ಡನೆ ಮೂರು ನಾಲ್ಕು ಮಂದಿ ಜಟ್ಟಗರಾದ ದಡಿಗರೂ ಇದ್ದರು 


ಬಂಕೆ: “ಕೂಡಲೆ ನೀವು ಆ ಸೀಮೆಯ ಗೌಡರಲ್ಲಿ ದೂರಿಕೊಳ್ಳ 

ಬೇಕಾಗಿತ್ತು. 


ಸಿಂಘ:--ಹಾಗೂ ಮಾಡಿದೆ. ಆದರೇನು? “ನಿಮ್ಮ ದೊರೆ ಬಂಕೆ 

ಯರಲ್ಲಿ, ಅಲ್ಲವೆ ಆ ಚಕ್ರವರ್ತಿಗಳೆಂಬವರಲ್ಲಿ ಮೊರೆಯಿಡಬಹುದಲ್ಲ? 

ಎಂದು ನನ್ನ ಮಾತನ್ನು ಗಾಳಿಗೆ ಹಿಡಿದುಬಿಟ್ಟರು, ಅದರಿಂದ, ಬೇರಾವ 

ದಾರಿಯೂ ತೋರದಾಯಿತು. ಈ ರವಿಕಯ್ಯನವರೇ ಮೊದಲಾದವರನ್ನು 

ಸಾಕ್ಷಿಗಳನ್ನಾಗಿ ಕರೆಕೊಂಡು ಇಲ್ಲಿವರೆಗೆ ಬಂದಿದ್ದೇನೆ, ಹಣ್ಣು-ಕತ್ತಿಗಳಿ 

ರಡನ್ನೂ ಒಪ್ಪಿಸಿರುತ್ತೇನೆ, 


ಬಂಕೆ:--(ರವಿಕಯ್ಯನತ್ತ ತಿರುಗಿ) ಆ ಅತ್ಯಾಚಾರವನ್ನು ನೀವು 

ಕಂಡುದು ಹೇಗೆ? 


ರವಿ; --ನಾನಾಗಲಿ ಈ ಕುಪ್ಪೆಯನವರೆ ಮೊದಲಾದವರಾಗಲಿ ಅದನ್ನು 

ಪ್ರತ್ಯಕ್ಷವಾಗಿ ಕಂಡಿಲ್ಲ. ಆದರೆ ನಮ್ಮ ಗಡಿಯಲ್ಲಿರುವ ಹೊಯ್ಸಳ-ಗಂಗರ 

ಅಧಿಕಾರಿಗಳ ವರ್ತನೆಯೂ ಒಂದಿಷ್ಟು ಮಿತಿವಿತಾರಿದುದೇ. ಹತ್ತು 

ಮಂದಿಯ ಕಳದಲ್ಲಿ ಮಹಾರಾಜರನ್ನು ನೀಕರಿಸುತ್ತಾರೆ. ಯುವರಾಜ 

ರನ್ನೇನೋ ಬಹಳವಾಗಿ ಹೊಗಳುತ್ತಾರೆ, 


ಬಂಕೆ: ಆ ಬಗೆಯ ಒಳಗೊಳಗೆ ಕೂಡಿಬಾರದ ನುಡಿಗಳಿಗೆ ಕಾರಣ 

ವೇನಿರಬಹುದು? 



೧೫------------------------------------------------------- 



ಕುಪ್ಪೆ:--ಗೊತ್ತಿಲ್ಲ ಎನ್ನಬೇಕು. 


ಬಂಕೆ: — 'ಎನ್ನಬೇಕು' ಎಂದರೆ? 


ಕುಪ್ಪೆ:--ಹೌದು, ಮಂದಟ್ಟಾಗದ ಸುದ್ದಿಗೆ ರೆಕ್ಕೆಗಟ್ಟುವುದು 

ತಪ್ಪಲ್ಲವೆ? ವಿಶೇಷವಾಗಿ ಇದು ನಮ್ಮ ರಾಜ-ಮನೆತನಕ್ಕೆ ಸಂಧಿಸಿದ 

ಸಂಗತಿ. 


ಬಂಕೆ:--ರಾಜಕೀಯ ವಿಷಯದಲ್ಲಿ, ಗಾಳಿಯ ಸುದ್ದಿಯನ್ನಾದರೂ 

ಅಲಕ್ಷಿಸಬಾರದು. ಚೆನ್ನಾಗಿ ಪರಾಂಬರಿಸಿ ಜಳ್ಳನ್ನು ತೂರಿಕೊಳ್ಳದಿದ್ದರೆ 

ನೆಲ್ಲನ್ನಾರಿಸಿಕೊಳ್ಳುವುದೆಂತು? 


ಕುಪ್ಪೆ:--ಹೌದು, ಅದರಿಂದಲೆ ನಾವೂ ಅಂಥ ವರ್ತಮಾನಗಳಿಗೆ 

ಕಿವಿಗೊಡುತ್ತಿರುವುದು. ಆದರೂ, ನಾವಾರಿಸಿಕೊಂಡುದು ತೀರಾ ನೆಲ್ಲೆಂದು 

ಭಾವಿಸುವಂತಿಲ್ಲ. 


ಬಂಕೆ: - ಆಗಲಿ; ತಿಳಿದುದನ್ನು ಸೂಚಿಸಿರಿ. 


ರವಿ:--ನಮ್ಮ ಯುವರಾಜರಿಗೂ, ಗಂಗ ಯುವರಾಜ ಬೂತುಗ 

ನಿಗೂ ಬಲಿದು ಬೇರೂರಿದ ಗೆಳೆತನವೆಂಬುದು ಹಲವರಿಗೆ ಗೊತ್ತಾಗಿದೆ. 

ಅದರಿಂದ, ಕುಮಾರಿ ಚಂದ್ರಬ್ಬಲಬ್ಬೆಗೂ ಬೂತುಗನಿಗೂ ಒಳಗೊಳಗಿನ 

ನಲ್ಮೆ ನೆಲೆಗೊಂಡ ಸಂಗತಿ ಈಗೀಗ ಬಿಚ್ಚಿದ ಗುಟ್ಟಾಗುತ್ತ ಬಂದಿದೆ, ಆದರೆ 

ಮಹಾರಾಜರ ಚಿತ್ತಕ್ಕದು ಅಸಹನೀಯವೆಂಬ ವಾರ್ತೆಯೂ ಇದೆ. ಅದ 

ರಿಂದ, ನಮ್ಮ ಕುಮಾರಾಧಿರಾಜರೊಳಗೆ ಭೇದದ ಕೀಲನ್ನು ಗಂಗರಾಜರು 

ಜಡಿವ ಹವಣಿಕೆಯಲ್ಲಿದ್ದಾರೆಂದೂ, ಅದು ಕೆಲಮಟ್ಟಿಗೆ ಸಫಲವಾಗಿದೆ 

ಎಂದೂ ಕಿಂವದಂತಿ. 


ಬಂಕೆ:--(ಭಾವನಾಮುಗ್ನನಾಗಿ) ಹೂಂ. ಇರಲಿ, ಅವರ ಭೇದೋ 

ಪಾಯಕ್ಕೆ ನಮ್ಮ ಯುವರಾಜರು ಮನಃಪೂರ್ವಕವಾಗಿ ಸಿಲುಕಿದರೆಂಬ 

ಸುದ್ದಿ ಏನು? 


ಕುಪ್ಪೆ:--ಅದರ ಒಳವಿನ್ನೂ ಹೊರಗಾಗಲಿಲ್ಲ, ಅಂತೂ ಯುವ 

ರಾಜರೆದೆ ಒಂದಷ್ಟು ಭೇದಕ್ಕೊಳಗಾಗಿದೆ ಎಂದು ತೋರುತ್ತಿದೆ. ಹಾಗೆ 

ಭೇದಕ್ಕೆ ಸೆರೆಗೊಳ್ಳು ವುದೆಂದರೆ, ಧಾರ್ಮಿಕ ನಿಯಮದಿಂದ ತೊಲಗಿದೆ. 

ಕಾಮವು ವಿಶೃಂಖಲವಾಗಿ ಅರ್ಥದತ್ತ ಧಾವಿಸುವುದೆಂಜೀ ತಾತ್ಪರ್ಯ. 

ಅಂಥ ಭಾವನೆ ಪುರುಷಾರ್ಥ ಕಾಮವೆನ್ನಿಸಲಾರದು; ಅಂತಶ್ಶತ್ರು ಕಾಮ 

ವಾಗಿಯೇ ಪರಿಣಮಿಸುತ್ತಿದೆ. ಮತ್ತೇನು? ಅದು ಕ್ರೋಧವಾಗಿ ಲೋಭ 


೧೬------------------------------------------------------------ 



ವಾಗಿ ನಾನಾಬಗೆಯಾಗಿ wi ಕಂಡಬಟ್ಟೆಯಲ್ಲಿ ಕಾಲಿಡುವುದು 

ಮಾತ್ರವಲ್ಲ; ವ್ಯಕ್ತಿಯನ್ನು ಸಮಾಜವನ್ನು ಯಾಕೆ? ಕಾಲದಲ್ಲಿ ರಾಜ್ಯ 

ವನ್ನೂ ಅಸ್ತವ್ಯಸ್ತವಾಗಿ ಮಾಡಬಹುದು. 


 ಬಂಕೆ:- ಹೌದು, ಕುಪ್ಪೆಯನವರ ಮಾತೆಂದರೆ ಸಾವಿರಕ್ಕೊಂದು 

ಮಾತು. ನಮ್ಮ ಮಹಾರಾಜರು ಆಗಿಂದಾಗ ಆಡುತ್ತಾರೆ, “ತನ್ನನ್ನಾಳದೆ 

ಮನೆಯನ್ನಾಳುವುದಸಾಧ್ಯ; ಮನೆಯನ್ನಾಳದೆ ರಾಜ್ಯವನ್ನಾಳುವುದಸಾಧ್ಯ 

ಎಂದು. ಕುಪ್ಪೆಯನನರೆಂದುದನ್ನು ಮರ್ಧಿಸಿದರೆ ನಮ್ಮ ಮಹಾರಾಜರಿಗೆ 

ಇನ್ನೂ ಮನೆಯನ್ನೂಳುವ ಹಿಡುವಳಿಯೊದಗಿಲ್ಲವೆಂದು ಭಾವಿಸಬೇಕಾ 

ಯಿತು. ಇದನ್ನಾಲಿಸಿದರೆ ಮಹಾರಾಜರು ಕಳವಳಿಸದೆ ತನ್ನ ನ್ಯೂನತೆ 

ಯನ್ನೆ ಹುಡುಕಲಾರಂಭಿಸುವರು. ಆದರೆ, ಈಗ ಅಂಥ ತಾತ್ವಿಕ ಭಾವನೆಗೆ 

ಎಡೆಯಿಲ್ಲವೆಂದೇ ಅಲ್ಪಜ್ಞನಾದರೂ ನನ್ನ ನಿರ್ಧಾರ. ಯಾುವರಾಜರದು 

ಹುಡಗ ಬುದ್ಧಿಯ ಎಡವಿಕೆ ಎಂದೇ ಹೇಳುವ. ಆದರೆ ಆ ಎಡವಿಕೆಗೆ ಈ 

ಅಂತಶ್ಶತ್ರುಗಳೆ ಕಾರಣ. ಮನೆಹೊತ್ತುವಲ್ಲಿ ಬಾವಿತೋಡುವ ಹಂಚಿಕೆ 

ಎಂದರೆ ದಿನದಿನಗಳ ರಾಜನೀತಿಗೆ ಸಲ್ಲದು. 


ಎನ್ನುತ್ತಿರುವಲ್ಲಿ ಬಂಕೆಯನ ಕಣ್ಣು ಕೆಂಪೇರಿತು; ಗಂಭೀರವಾಗಿ 

ತೆರೆದಿದ್ದರೂ ಹೊರಗಿನ ನೋಟವೆಲ್ಲವೂ ತಡೆಗಟ್ಟಿಹೋಗಿ ಸ್ಥಿಮಿತವಾ 

ಯಿತು. ರಾಜನೀತಿ ವಿವೇಚನೆ ಆಮೆಯಂತೆ ಒಳಮಮೈಯಾಗಿ ಎದೆಯಾಳ 

ದಲ್ಲಿ ನೆಲಸಿತು, ಎಂಟು-ಹತ್ತು ನಿಮಿಷಗಳ ವರೆಗೆ ಹಾಗೆಯೇ ಇದ್ದನು. 

ಫಕ್ಕನೆ ಉದ್ಬುದ್ಧನಾಗಿ ಮಾತನ್ನೆತ್ತಿದನು: “ವೇಶ್ಯಾಂಗನೇವ ನೃಪನೀತಿ 

ರನೇಕ ರೂಪಾ" ಎಂಬುದು ನಮ್ಮಂಥ ಅಲ್ಪರಿಗೆ ಬಳಕೆಯಿಲ್ಲದೆ ತರುಣ 

ರಾಜನೀತಿಯ ಆದರ್ಶ ಲಕ್ಷಣವಾಗಿ ತೋರುತ್ತಿದೆ. ಆದರೆ ನಮ್ಮ 

ಮಹಾರಾಜರ ಉದಾತ್ತ ಹೃದಯಕ್ಕೆ ತಾರುಣ್ಯದಿಂದಿತ್ತ ಹಾಗೆ ತೋರಲೇ 

ಇಲ್ಲ. ನಾನಾ ರೂಪವಾಗಿ ನಟಿಸುತ್ತಾ ಬಂದ ಆ ವೇಶ್ಯಾಂಗನೆಯೆದೆಯಲ್ಲಿ 

ಧಾರ್ಮಿಕ ತಳಹದಿ ಇರುವುದಾದರೂ ಹೇಗೆ? ಅದಿಲ್ಲದ ರಾಜನೀತಿ ಎಂಬು 

ದಕ್ಕೆ ನೀತಿ ಎಂಬ ಹೆಸರಾದರೂ ಹೇಗೆ? ದುರ್ಗಂಧವನ್ನೂ ಗಂಧವೆನ್ನಲಾ 

ಗದು. ಆದರೂ ಕಾಲಾನುಸಾರವಾಗಿ ತಲೆದೋರುವ ಇಂಥ ಹೊಯ್ಸಳ. 

ಗಂಗಾದಿ ಬಗುಳುಸನ್ನಿಗಳನ್ನು ತಡೆಗಟ್ಟುವ ಮೂಲಿಕೆ ಮದ್ದುಗಳೂ ವೈದ್ಯ 

ನೆನ್ನಿಸಿದಾತನಲ್ಲಿ ಸಿದ್ಧಗಳಾಗಿರಬೇಕು ಹಾಗಿಲ್ಲದೆ ಮನೆಹೊತ್ತುವಲ್ಲಿ 

ಬಾವಿಯನ್ನು ತೋಡಬಯಸಿದರೆ ಅದು ರಾಜನೀತಿಯೇ ಆಗದು. ಇರಲಿ. 



೧೭---------------------------------------------------------------


ನಾವೆಲ್ಲರೂ ಒಟ್ಟಾಗಿ ಮಹಾರಾಜರನ್ನು ಸಂದರ್ಶನವೆಸಗಿ ಬರುವ” 

ಎಂದನು. ಎಲ್ಲರೂ ಎದ್ದು ರಾಜಭವನದತ್ತ ಸಾಗಿದರು. 

============


ಪುರಪ್ರಯಾಣ 



ಅಮಾವಾಸ್ಯೆಯ ರಾತ್ರಿ ಎಂದ ಮೇಲೆ ಕೇಳಬೇಕೆ? ಬಟ್ಟಿಗಟ್ಟಿ ಇಳಿ 

ಸಿದ ಇರುಳಿನ ಸಾರವನ್ನು ಪ್ರಪಂಚ ಪಾತ್ರ ದಲ್ಲಿ ತುಂಬಿಸಿದಂತೆ ತೋರು 

ತ್ತಿತ್ತು. ತೇಜಸ್ವಿಗಳೆಂಬ ಹೆಸರಿಟ್ಟು ಸೂರ್ಯ ಚಂದ್ರರನ್ನು ಹಲವರು 

ಹೊಗಳುತ್ತಾರೆ, ಹಾಡುತ್ತಾರೆ. ಅದರೊಳಗೆ ಒಮದಿಷ್ಟು ಹುರುಳಾದರೂ

ಉಂಟಿ? ಈ ಪ್ರಪಂಚಕ್ಕೆ ಘಾತುಕವಾದ ಭೇದಬುದ್ಧಿಯ ಕಗ್ಗತ್ತಲೆಯ 

ನಡೆಯನ್ನು ಅವರಿಂದ ತಡೆಯಲಾಗಲಿಲ್ಲ. ಅವರ ಗುಪ್ತ ಚಾರಕಕೆಂಬವರು 

ಮಿಳಮಿಳನೆ ನೋಡುವುದಲ್ಲದೆ ಬೇರೇನೂ ಇಲ್ಲ ಎನ್ನಬೇಕು, ಈ ಅಂಧಂತ 

ಮಸರಾಜನ ಆಳಿಕೆಯನ್ನೇನೆನ್ನಬೇಕು! ಪ್ರಜಾವರ್ಗದೊಳಗೆ ಬಲು 

ಮಂದಿ ಕಣ್ಣುಳ್ಳವರಿರುತ್ತಾರಷ್ಟೆ? ಆದರೆ ಅವರ ಕಣ್ಣಿಗೆ ಎಡೆಗೊಟ್ಟರೆ 

ಅಲ್ಪ ಸಂಖ್ಯಾಕರಾದ ಕುರುಡರ ಗತಿ ಏನಾಗಲಿಕ್ಕಿಲ್ಲ! ಎಲ್ಲರೂ ತಂತಮ್ಮ 

ದಾರಿಹಿಡಿದು ಗುರಿ ಮುಟ್ಟುವಲ್ಲಿ ಬೆರಳೆಣಿಕೆಯ ಈ ಕುರುಡರನ್ನು ಕೈ 

ಗೊಟ್ಟು ಯಾರು ಉದ್ದರಿಸಬೇಕು? 'ಅನಾಥೋ ದೈವ ರಕ್ಷಿತಃ' ಎಂದಲ್ಲವೆ 

ಹಿರಿಯರ ಮಾತು? ಅದರಿಂದ, ದೈವಸ್ವರೂಪನಾದ ನಮ್ಮ ತಮೋರಾಜನು 

ಅದೊಂದು ಹೊಸ ದಾರಿಯನ್ನು ಕಡಿದಿರುವನು. ನಿಜವಾದ ಪ್ರಜಾಸತ್ತೆ 

ನೆಲೆಗೊಳ್ಳ ಬೇಕಾದರೆ ಸರ್ವ ಪ್ರಜಾವರ್ಗದ ಆಂತರಂಗಿಕ-ಬಾಹ್ಯಾನುಕೂ 

ಲ್ಯಗಳು ಒಂದೇ ರೀತಿಯಲ್ಲಿರಬೇಕು. ಈ ಕಣ್ಣಿರುವುದರಿಂದಲೇ ಹಲವರು 

ಅಲ್ಪ ಸಂಖ್ಯಾಕರಾದ ಕುರುಡರನ್ನು ನಿರ್ದಯದಿಂದ ಅಲಕ್ಷಿಸಿ ಮುಂದು 

ವರಿಯುತ್ತಾ ರೆ. ಅದರಿಂದೇನಾಗುತ್ತಿದೆ ಎನ್ನುತ್ತೀರೊ? ಹಿಂದಾಳುಗಳಾದ 

ಈ ಕುರುಡರೆಂಬವರು ತಮ್ಮ ಒಡನಾಡಿಗಳಾದ ಸಹೋದರರೇ ಎಂಬ 

ಕನಿಕರದ ಗುರುತೂ ಆಗದಷ್ಟು ಆ ಕಣ್ಣುಳ್ಳ ಮುಂದಾಳುಗಳೆಂಬವರು 

ಕುರುಡರಾಗಿಬಿಡುತ್ತಾರೆ. ಈ ತತ್ವಸಾರವನ್ನು ಅರಿಯದ, ಅಥವಾ 

ಅರಿತೂ ಅರಿಯದೆ ಕಂಡಾಬಟ್ಟೆಯಲ್ಲಿ ಬಿಟ್ಟ ಅರಸಾಳಿಕೆಯಿಂದಾಗಿಯೇ 

ಪ್ರಪಂಚದಲ್ಲಿ ಈಗಿನ ಇಷ್ಟೆಲ್ಲ ಅನರ್ಥಪರಂಪರೆಗೆ ಕಾರಣ, "ಈ 

ಕಣ್ಗುರುಡನು ಕಣ್ಣುಳ್ಳ ವನು ಎಂಬ ಭೇದವೆಂಬುದು ಪ್ರಕೃಕಿಯಲ್ಲವೆ? 

ಅದನ್ನು ನಮ್ಮಂಥವರು ಬದಲಿಸಲಾರಂಭಿಸುವುದೆಂದರೆ ಹುಚ್ಚಲ್ಲವೆ?" 


೧೮-----------------------------------------------------------


ಎಂದು ಯಾರಾದರೂ ಆಕ್ಷೇಪಿಸಬಹುದು. ಸಲ್ಲದ ಆಕ್ಷೇಪವೆದು. 

'ಪ್ರಕೃತಿ' ಎಂದು ಎಲ್ಲವನ್ನೂ ತನ್ನಷ್ಟಕ್ಕೆ ತಾನಾಗುವಂತೆ ಬಿಡುತ್ತಾ. 

ಬಂದರೆ ಅದೇ ವಿಕೃತಿ ಎನ್ನಿಸುವುದು. ಕಂಡಾಬಟ್ಟೆಯಾಗಿ ಬಿಟ್ಟು 

ಬಿಟ್ಟರೆ, ನಂದನವನನೇ ಕಾಡಾಗಿ ಮಾರ್ಪಡುವುದಲ್ಲವೆ? ಅದರಿಂದ. 

ಆ ಪ್ರಕೃತಿಯೆಂಬುದನ್ನು ಹದವರಿದು ತಿದ್ದಿ ಕೊಳ್ಳುವುದು ಕರ್ತವ್ಯ. 

ಅದಕ್ಕನುವಾಗಿಯೇ .ಈ ಕತ್ತಲೆಯ ಕಾಡಿಗೆಯನ್ನೆತ್ತೆತ್ತಲೂ ಬಳಿವುದು, 

ನೋಡಿರಿ, ಕಣ್ಣುಳ್ಳವರಿಗೂ ಕುರುಡರಿಗೂ ಒಂದೇ ರೀತಿಯ ಗುರಿ- ದಾರಿ 

ಗಳು. ಕೃತಕವಾದ ಸಂಖ್ಯಾಪ್ರಮಾಣವೇನು ವೇದವಾಕ್ಯವೇ? 'ಸಹನಾ 

ವವ....' ಎಂಬ ವೇದಾಂಗ ವಾಕ್ಯವನ್ನನುಸರಿಸಿ ಎಲ್ಲರೂ ಒಡನಿದ್ದು 

ಒಡನಾಡಿ-ಬಳೆದು ಬಾಳಲಿ. ನನ್ನಾಳಿಕೆಯಲ್ಲಿ ಸೂರ್ಯ ಚಂದ್ರಾದಿಗಳೂ 

ಬೇಡ; ಅವರಿಂದ ಸಮಾಜದೊಳಗೆ ತಲೆಯಿಕ್ಕುವ ಪಂಕ್ತಿಭೇದವೂ ಬೇಡ. 


ನಮ್ಮ ಅಂಧಂತಮಸರಾಜನ ಮೇಲಿನ ನೀತಿ ಸೂತ್ರಕ್ಕನುವಾಗಿ. 

ಕಗ್ಗತ್ತಲೆಯ ತಲೆ ಎತ್ತೆತ್ತಲೂ ತುರುಕಿಹೋಗಿತ್ತು. ದಾರಿಯ ಹೊಲಬು. 

ಹಾಗಿರಲಿ, ನಾಡಾವುದು? ಕಾಡಾವುದು? ಬೀಡೆಲ್ಲಿ? ಅಂಗಳವೆಲ್ಲಿ? ಎಂಬ 

ಪರಿಚಯವೇ ಆಗದು. ಸದ್ದಿಲ್ಲದಂತೆ ಒಂದಂಗುಲಕ್ಕಿಂತ ಮುಂದೆ, ಮನುಷ್ಯ 

ನಿರಲಿ, ಮರವಿರಲಿ, ಇಲಿ ಬರಲಿ, ಹುಲಿಯೇ ಬರಲಿ, ಗೊತ್ತಾಗುವಂತಿರಲಿಲ್ಲ. 

ಇಡೀ ಪ್ರಪಂಚವನ್ನು ಅಪಾರವಾದೊಂದು ಕಗ್ಗಂಬಳಿಯಿಂದ ಮುಸುಕಿ 

ಮುಚ್ಚಿದಂತಿತ್ತು. ಕತ್ತಲೆಯ ರಾಜ್ಯವೇ ರಾಜ್ಯ. ಆ ಕತ್ತಲೆಯ ಗೆಳೆಯ 

ರಾದ ಕಳ್ಳ ಕಾಕರ, ಹುಲಿ ಚಿರತೆಗಳ ಕೈ ಕಾಲಾಟಿಗಳೇ ಆಟ. “ಇದೇನು 

ಹೀಗಾಯಿತು?" ಎಂದು ಯಾರಾದರೂ ಕೇಳುವಿರೇ? ಈ ಪ್ರಶ್ನೆಗೆ ಉತ್ತರ 

ವಾಗಿ ಚಿಕ್ಕದೊಂದು ಕತೆಯುಂಟು. 


ಒಮ್ಮೆ ತೇಜಸ್ವಿಗಳಾದ ಸೂರ್ಯಚಂದ್ರಾದಿಗಳಿಗೂ, ಅಂಧಂತಮ 

ಸ್ಸೆಂಬ ಕಗ್ಗತ್ತಲೆಗೂ ಲೋಕಾಧಿಕಾರದಲ್ಲಿ ತಾಂಮೇಲು ತಾಂಮೇಲು. 

ಎಂಬ ಚರ್ಚೆಯಾಯಿತಂತೆ. ಚರ್ಚೆ ಹೋಗಿ ಜಗಳ, ಜಗಳದ ಮೇಲೆ: 

ಹೋರಾಟದ ಹೊಯ್ಯೈಯೇ ತಲೆದೋರಿತು. ಇಕ್ಕಡೆಯಲ್ಲಿಯೂ 

ಅವರ ಅನುಯಾಯಿಗಳು ಸೊಂಟಗಟ್ಟಿ, ತಯಾರಾದರು. ನೆಲೆಗೊಂಡು 

ಕ್ರಮಬದ್ಧವಾದ ಹಗಲಿದು ರಾತ್ರಿ ಇದು ಎಂಬ ಭೇದವೇ ಇರಲಿಲ್ಲ. 

ಪ್ರಜಾವರ್ಗಕ್ಕೆ ನೀರೊಳಗೆ ಕಣ್ಣುದೆರೆದಂತಾಯಿತು. ಇದು ಹಗಲೆಂದು. 

ಎದ್ಡು ಉದ್ಯೋಗಕ್ಕಾರಂಭಿಸುವಲ್ಲಿ ಕಗ್ಗತ್ತಲೆ ಕವಿಯಿತು. 'ಹೂಂ' 



೧೯ —----------------------------------- 



ಎಂದು ಹಾಸಿಗೆ ಹಿಡಿವಲ್ಲಿ ಬೆಳಕು ಬೀದಿವರಿಯಿತು. ಪ್ರಜಾವರ್ಗದ 

ಪಾಡು, ರಾಜಸೂಯಾವಸರದಲ್ಲಿ ಮಯನ ಸಭೆಯೊಳಗೆ ಪ್ರವೇಶಿಸಿದ 

ದುರ್ಯೋಧನನ ಪಾಡಾಯಿತಂತೆ. ಆಂತೂ ಇಂತೂ ಲೋಕಕ್ಕೆ 

ಸಂಕಷ್ಟದ ಹೊರೆ. ಗೋಡೆ ಬಿದ್ದರೆ ಜಗಲಿಯ ಮೇಲಲ್ಲವೆ? ಪಕ್ಷಪಾತ 

ಬಡಿದು ನಾಯಕರೆಂಬವರು ಜಗಳಕೆ ರೆಕ್ಕೆ ಗಟ್ಟಿದರೆ ಮತ್ತೇನಾಗಬೇಕು? 

ಪ್ರಜಾವರ್ಗವೂ ಮದ್ದಿಲ್ಲದ ಪಕ್ಷವಾತಕ್ಕೆ ತುತ್ತಾಯಿತು. ಅನಾಯಕ 

ವಾಯಿತು ಲೋಕ. 


ಇದನ್ನೆಲ್ಲ ಪರಾಂಬರಿಸಿದ ಇಂದ್ರಾದಿ ದೇವತೆಗಳು ಬೆರಗಾದರು. 

ತಮ್ಮೊಳಗೇ ಒಬ್ಬನಾದ ಯಮನೆಣಿಕೆಯಂತೆ ಮಾನವಲೋಕಕ್ಕಿಳಿದು 

ನರಸಮಾಜವನ್ನು ಕಣ್ಣು ಗಟ್ಟುವ, ಕಣ್ಮುಚ್ಚಿಸಿ ನಿದ್ರಾಮುದ್ರಿತವನ್ನಾಗಿ 

ಮಾಡುವ, ಮೃತ್ಯುದೇವತೆಯ ಚೈತನ್ಯವೇ ಈ ಕತ್ತಲೆ ಎಂದು ಮನವರಿಕೆ 

ಯಾಯಿತು. ಹಾಗೆ ತಮ್ಮವನಾದ ಯಮನ ಕೈವಾಡವಿರುವುದರಿಂದ 

ಆ ಕತ್ತಲೆಯನ್ನಲ್ಲಗಳೆವುದೂ ಅಸಾಧ್ಯವಾಯಿತು. ಅದರಿಂದ ಎಲ್ಲರೂ 

ಕೂಡಿ ಅದೊಂದು ಮಧ್ಯಸ್ಥಿಕೆಯನ್ನು ಇಕ್ಕಡೆಯ ಒಪ್ಪುಗೆಯಂತೆ ಮಾಡಿದ 

ರಂತೆ. ಆ ಸಿದ್ಧಾಂತವೆಂದರೆ ಹೀಗೆ:-'ತಿಂಗಳಿಗೊಂದರಂತೆ ಅಮವಾಸ್ಯೆಯ 

ರಾತ್ರಿಯಲ್ಲಿ ಸಂಪೂರ್ಣವಾಗಿ ಅಂಧಂತಮದ ಆಳಿಕೆ ನಡೆಯಬೇಕು. 

ಉಳಿದುವುಗಳಲ್ಲಿ ಲೆಕ್ಕಕ್ಕನುವಾಗಿ ಚಂದ್ರ-ತಮಸ್ಸುಗಳ ಪಾಲುಗಾರಿಕೆಯ 

ಆಳಿಕೆ, ಇದಲ್ಲದೆ ಗವಿಗುಹೆಗಳೇ ಮೊದಲಾದುವುಗಳಲ್ಲಿ ಹಗಲಿರುಳೆಂಬ  

ಭೇದವಿಲ್ಲದೆ ಕತ್ತಲೆ ತನ್ನ ಕೈವಾಡವನ್ನು ಹಬ್ಬಿಸಬಹುದು.' ಈ ನಿರ್ಧಾ 

ಕ್ಕನುವಾಗಿ ಲೋಕದಾಳಿಕೆ ಇಬ್ಭಾಗವಾದುದಂತೆ. ಆಗುವುದಾಗಿ  

ಹೋಯಿತು. ಇನ್ನು ಸೂರ್ಯಚಂದ್ರಾದಿ ತೇಜಸ್ವಿಗಳೇ ನ್ಯಾಯಶೀಲರು; 

ಈ ಕತ್ತಲೆ ಎಂದರೆ ಮಾಯಾಸ್ವರೂಪಿಯಾದ ಲೋಕವಿಭಾಗಕ್ಕೆ ಕಾರಣ 

ವಾದ ನಿಕೃಷ್ಟವ್ಯಕ್ತಿ; ಎಂದು ಹೊಗಳಿ ತೆಗಳಿದರೆ ಫಲವೇನು? 'ರಾತ್ರಿಯಲ್ಲಿ 

ನಿದ್ರಿಸಿದರೂ ಕತ್ತಲೆಯ ಮಟ್ಟಿಗೆ ಪರಾಂಬರಿಕೆಯಿಂದಿದ್ದರಾಯಿತು.' 

ಎಂದು ಬಲ್ಲವರಾಡುತ್ತಾರೆ, 


ಅಂಥ ಕಗ್ಗತ್ತಲೆ ಕವಿದ ಅಮವಾಸ್ಯೆಯ ರಾತ್ರಿ ಸುಮಾರು 

ಎಂಟುವರೆ ಒಂಭತ್ತು ಗಂಟಿಯಾಗಿರಬಹುದು. ಮಹಾರಾಜನ ಅಪ್ಪಣೆ 

ಯನ್ನೊಂದಿದ, ಮಲ್ಲಗಂಟಿನ ಗಂಡುಡಿಗೆಯನ್ನುಟ್ಟ, ವೀರ ಬಂಕೆಯನು 

ರಾಜಧಾನಿಯ ಹೆಬ್ಬಾಗಿಲನ್ನು ಹೊರಟನು. ಉಡಿಗೆತೊಡಿಗೆಗಳಲ್ಲಿ 




೨೦----------------------------------------------------------------



ಮೈಗಟ್ಟುಮಟ್ಟಗಳಲ್ಲಿ ತನ್ನೊ ಡನೆ ಬದಲಿಸಬಹುದಾದ ನಾಲ್ವರು ಜಗಜಟ್ಟಿ 

ಗಳು ಹಿಂಬಾಲಿಸಿದರು. ಕಂಚಣ, ಮುಂಜಣ, ಡಂಕಣ, ಮಾದಣ ಎಂಬುದು 

ಅವರವರ ಹೆಸರುಗಳು. ಆ ವೀರ ಪುರುಷರೆಂದರೆ ನಾಲ್ಕು ಅಂತಃಕರಣ 

ಗಳಾದರೆ ಬಂಕೆಯನೇ ಆತ್ಮವಂತೆ. ಕ್ರಮವಾಗಿ ಹಲ್ಲಣಿಸಿ ಸಜ್ಜಾದ 

ಐದು ಕುದುರೆಗಳು ಘೂಂಕರಿಸುತ್ತಿದ್ದುವು. ಆಯಾ ವೀರರನ್ನು ಭಕ್ತಿ 

ಯಿಂದ ತಂತಮ್ಮತ್ತ ಕರೆವಂತೆ ನೆಲವನ್ನು ಮುಂಗಾಲಿನಿಂದ ಬೆರಟು 

ತ್ತಿದ್ದುವು. ಬಂಕೆಯನು ತನ್ನ ಕುದುರೆಯ ಪಕ್ಕಬೆನ್ನು ಗಳನ್ನು ಸವರಿದನು. 

ತಟ್ಟಿದನು. ತಿರುಗಿದ ಕುದುರೆ ಓರೆಗಣ್ಣಿನಲ್ಲಿ ನೋಡುತ್ತಿರುವಲ್ಲಿ ಹಲ್ಲಣದ 

ಹಂತದಲ್ಲಿ ಎಡಗಾಲನ್ನು ಹೊಗಿಸಿದವನೇ' ಧಿಮ್ಮನೇ ಬೆನ್ಲಿನಲ್ಲಾದನ್ನು 'ಬಿಂಬ 

ದಂತೆ ಪ್ರತಿಬಿಂಬಗಳಲ್ಲವೆ? ಕಂಚನಾದಿಗಳಾದ ಆ ಜಟ್ಟಿಗರೂ ತಂತಮ್ಮ 

ವಾಹನಗಳ ಮೇಲಾದರು. ಕಂಚಣ, ಮಂಜಣರು ಮುಂಡೆ ಹಂತಿಹಿಡಿದರೆ 

ಡಂಕಣ, ಮಾದಣರು ಹಿಂಗಡೆ ಸಾಲುಗೊಂಡರು. ನಡುವೆ ಸ್ಪಸ್ತಿಕದ 

ಮಧ್ಯಮಣಿಯಾಗಿ, ಹಾಗೆ ಲೆಕ್ಕಿಸಿದ್ದಲ್ಲಿ ಐವರು ಆರು ಮಂದಿಯಾಗಿ 

ತೋರುವಂತೆ, ವೀರಾಗ್ರಣಿ ಬಂಕೆಯನಿದ್ದನು. ಕಾದುಕೊಂಡಿದ್ದ ಭಟನು 

ಸನ್ನೆಗನುವಾಗಿ ಹತ್ತಿರಕ್ಕಡಿಯಿಟ್ಟನು. ಬಾಗಿದ ವೀರಾಗ್ರಣಆತನ 

ಕಿವಿಯಲ್ಲೇನನ್ನೊ ಪಿಸುಗುಟ್ಟಿದನು. ಒಡನೆ ಅವನತ್ತ ಹರಿದನು. 

ಕಡಿವಾಣದ ಕೈಗಳಿಗನುವಾಗಿ ಕುದುರೆಗಳು ಅತ್ತ ಸಾರಿದುವು. ರಾಯ 

ಬೀದಿಯದು ಎಂಬುದನ್ನು ಸೂಚಿಸಬೇಕಾಗಿಲ್ಲ. ಬೀದಿಯೊಳಗೆ ಅಲ್ಲಲ್ಲಿ 

ದೀಪಸ್ತಂಭಗಳಿದ್ದುದರಿಂದ ದಾರಿ ತಕ್ಕಮಟ್ಟಿಗೆ ಸರಿಯಾಗಿ ತೋರುತ್ತಿತ್ತು. 

ಮಾತ್ರವಲ್ಲವೀಕುದುರೆಗಳ ಹಣೆಯಲ್ಲಿ ಸುತ್ತಲೂ ಬಲಿದು ಮುಂಗಡೆಗೆ 

ದೀಪಜ್ವಾಲೆ ಏಕಾಗ್ರವಾಗಿ ಹರಿವಂತೆ ಕಟ್ಟಿದ ಕಂದಿಲುಗಳು ಮಿರುಮಿರುಗು 

ತ್ತಿದ್ದುವು. ಅಂದೊಂದು ತಾಳಲಯಾನುಸಾರವಾಗಿ ನಡೆದು ನಡೆಮೀರಿ 

ಹಾರಾಡಿದುವು. ಬೀದಿವರಿದೋಡಲಾರಂಭಿಸಿದುವು. 


ಬಂಕೆಯನು ನವರಾತ್ರಿಯ ಮಹೋತ್ಸವಕ್ಕಾಗಿ ಮಲಖೇಡನಗರ 

ಕ್ಕೈದಿದ್ದ ಸಮಯವದು. ಚಳಿ ಎಂದರೆ ಚಳಿ. ಅದನ್ನಳೆದು ತೂಗಿ 

ಹೋಲಿಸಲಿಕ್ಕಾಶ್ರಯವಾದ ಇನ್ನೊಂದು ಪದಾರ್ಥವಿಲ್ಲ. ಚಳಿಯಾದಂತೆ 

ಯಾರಾದಾರು? ಹತ್ತಿರದ ಯಾವ ಬಂಧುಬಳಗದವರೂ ಆಗಲಿಕ್ಕಿಲ್ಲ 

ಎನ್ನಬೇಕು. ಅದರೊಳಗೂ ಚಳಿಗಾಲದೊಳಗಿನ ತಿರುಳಾದ ಚಳಿಯದು. 

ರಾತ್ರಿಯಲ್ಲಂತೂ ಅದರ ಬಲವನ್ನೇನನ್ನಲಿ! ಹೊಳೆ ಕಾಲುವೆಗಳಲ್ಲಿಳಿದುದು 



೨೧--------------------------------------------------------------------



ಆನೆಯೇ ಆಗಲಿ, ಅದರ ಬಲ ಚಲಗಳೆಂಬುದು ಮೊಸಳೆಯ ಹಿಡಿತಕ್ಕೆ 

ತೃಣಪ್ರಾಯವಲ್ಲವೆ? ಹಾಗೆಯೇ ಚಳಿಗಾಲದೊಳಗಾದುದು ಯಾರೇ ಆಗಲಿ 

ಅವರೆಲ್ಲ ಚಳಿಯ. ಸೆರೆಯಾಳುಗಳು. ಆದಕೆ ನಮ್ಮ ವೀರ-ಪಯಣಿಗರು ಅಂಥ 

ಸೆರೆಯಾಳುಗಳಲ್ಲ. ಸಂಸಾರದೊಳಗಿದ್ದರೂ ಮಮತಾದಿ ಮಾಯಾಪಾಶ 

ವನ್ನು ಹರಿದ ಸ್ಥಿತಪ್ರಜ್ಞರಂಥವರೆನ್ನಬೇಕು. ಮೈಮುರಿದು ಕಾರ್ಯಪ್ರವೃತ್ತ 

ರಾಗುವವರನ್ನು ಚಳಿ ಹಿಡಿಯಬಲ್ಲುದೆ? ಅವರ ಮೈ ಯಲ್ಲಿ ಧಾರಾಕಾರವಾಗಿ 

ಬೆವರು ಹರಿಯುತ್ತಿತ್ತು. ಕೈಮೀರಿದವರನ್ನು ಹೊತ್ತು ಹೊಗಳಿ, ಮೀಾರದವ 

ರನ್ನು ಮುರುಟಿಸಿ ಮುಕ್ಳುವುದು ಚಳಿಗಾಲ ಪುರುಷನ ವಿಶಿಷ್ಟವಾದ ರಾಜ 

ನೀತಿ, ಆ ರಾಜನೀತಿಯ ಸತ್ವಸಾರವಾಗಿ ಮಂಜಿನ ಹನಿ ಇಳಿಯುತ್ತಿತ್ತು. 

ಕತ್ತಲೆಯ ಹಸರದಿಂದಾಗಿ ತೋರದಿದ್ದರೂ ಕಾಲದ ಕೈಗೆ ಅದರಿಂದೊದಗು 

ತ್ತಿದ್ದ ಹುರುಪು ಅಷ್ಟಿಷ್ಟಲ್ಲ. ಚಳಿಗಾಲವೇ ಚಕ್ರವರ್ತಿಯಾದರೆ ಮಂಜು 

ಚದುರನಾದ--ಮಂತ್ರಿಯಂತೆ. ಕುದುರೆಗಳ ಖರಪುಟದ ಸದ್ದಿಗೆ ಬೆದರಿ 

ಬಗೆಬಗೆಯ ಕಿರಿಹಿರಿಯ ಮೃಗಗಳು ಬೀದಿಯಡ್ಡವಾಗಿ ಉದ್ದವಾಗಿ 

ಹರಿದೋಡುತ್ತಿದ್ದುವು. ಕೆಲತರದ ಇರಳು-ಹಕ್ಕಿಗಳು- ಈ ವೈಹಾಳಿಗರನ್ನು 

ಕಂಡೋ ಏನೋ?-ಕಿಂಚು-ಕೀಚಲುಗುಟ್ಬುತ್ತಿದ್ದುವು. ದೀಪಸ್ತಂಭ 

ಗಳಿಂದಾಗಿ ಬೀದಿಯುದ್ದಕ್ಕೂ ಇಕ್ಕಡೆಯಲ್ಲಿ ಹಬ್ಬಿದ ನಾಡುಬೀಡುಗಳ-- 

ಕಾಡುಗುಡ್ಡಗಳ ಹೊಲಬು ಹೊಮ್ಮುತ್ತಿತ್ತು. ಅಂತೂ ಬಹುದೂರಕ್ಕೆ 

ಹೊರಳಿ-ತೆರಳಿದರು. 


ಹಾಗೆ: ತೆರಳುತ್ತಿರುವಲ್ಲಿ ಸುಮಾರು ನಾಲ್ಕು ಗಂಟಿಯಾಗಿತ್ತು. 

ಕ್ರಮಬದ್ಧವಾದ ಒಂದೆರಡು ಮೂರು ಸ್ತಂಭಗಳಲ್ಲಿ ದೀಪವಾರಿಹೋದುದು. 

ಬಂಕೆಯನ ಚಾಣಾಕ್ಷಿಗೆ ಕಾಣಿಕೆಯಾಯಿತು. ಅದರಂತೆ ಮುಂದಿನ 

ನಾಲ್ಕು ದೀಪಗಳೂ ತೋರಲಿಲ್ಲ. ಮಾತ್ರವಲ್ಲ; ಮತ್ತಿನದೆಂದರೆ ಎಡೆ 

ಸೊಣಗಿನ ಗೊಂಡಾರಣ್ಯದಲ್ಲಿ ಸುಳಿದು ಸುತ್ತಿ ಇಳಿದು ಹತ್ತಿ ಸಾಗುವ 

ಬೀದಿ. ಅದರಿಂದ ಬಂಕೆಯನು ಭಾವಮಗ್ನನಾಗಿ ಪರಾಂಬರಿಸಿದನು: 

“ಹುಣ್ಣಮೆಯಂದೊ ಸಂಜೆ ಹಿಡಿದು ನಸುಕಿನ ವರೆಗೆ ಉರಿಯುವ ನಿಯಮ 

ಬದ್ಧವಾದ ದೀಪಮಾಲಿಕೆ ಇದು ಈ ಕಾರಿರುಳ ರಾತ್ರಿಯಲ್ಲಿ - ವಿಶೇಷವಾಗಿ 

ಈ ಕಗ್ಗಾಡಿನ ಇಟ್ಟೆಡೆಯಲ್ಲಿ ಆರಿಹೋದುದೆದರೆ ಸ್ವಾಭಾವಿಕವಲ್ಲ. 

ನಮ್ಮರಸನಾಳಿಕೆಯ ಈಯೂರ 'ಮಹಾಜನ'ದ ಭಂಡಾರದಲ್ಲಿ ಮಾತ್ರ 

ಎಣ್ಣೆಗೆ ಸೊನ್ನೆಯಾಯಿತೆ? ಅಲ್ಲ. ನಮ್ಮ ಸಿಂಘಣನ ನಾಡಿದು. ಹಗೆಗಳ 



೨೨--------------------------------------------------------------



ಹಂಚಿಕೆ ಏನೋ, ಈ ಪ್ರಾಂತದಲ್ಲಿ ನಮಗಾಗಿ ಸಿದ್ಧವಾಗಿದೆ. ಸಿಂಘಣಾದಿ 

ಗಳ ರಾಜಧಾನೀಪ್ರಯಾಣವೂ, ನಮ್ಮ ಆಗಮನದ ಗೂಢವಾರ್ತೆಯೂ, 

ವಿರೋಧಿಗಳಿಗೆ ಹೇಗೋ ಗೊತ್ತಾಗಿರಬೇಕು, ಎಂದು ನಿರ್ಧರಿಸಿದನು. 

ಕೂಡಲೇ ಕಂಚನಾದಿಗಳನ್ನು ನಿಲ್ಲಿಸಿ ತನ್ನ ಭಾವನಾಸಾರವನ್ನು ಮಾತ್ರ 

ಸೂಚಿಸಿದನು. ಆ ಮೇಲೆ ನಾಯಕನಾದ ತಾನೇ ಮುಂದಾಗಿ ಕುದುರೆ 

ಯನ್ನೇರಿ, ಮೊದಲಿನ ಪದ್ಧ ತಿಯಲ್ಲೇ ಕಂಚನಾದಿಗಳು ಹಿಂಬಾಲಿಸುವಂತೆ 

ಅಪ್ಪಣೆಯಿತ್ತನು. ಮಾತ್ರವಲ್ಲ "ಮುಂದಿನ ವಿಶಿಷ್ಠ ಭಾಗವನ್ನು ದಾಟುವ 

ವರೆಗೆ ಬೆನ್ನಿಗೂ ಕಣ್ಣುಳ್ಳವರಾಗಿ, ಸಿದ್ಧಶಸ್ತ್ರರಾಗಿ ಚಾಣಕ್ಷ ರಾಗಿ ವರ್ತಿಸಿರಿ" 

ಎಂದು ಎಚ್ಚರಿಸಿ ಮುಂಬರಿದನು. ಕಂಚನಾದಿಗಳು ಹಿಂಬಾಲಿಸಿದರು. ಬೀದಿ 

ಯದು ಬೆಟ್ಟದ ಪಕ್ಕದ ಕಾಡಿನಲ್ಲಿ ತೆಂಕಣ ದಿಕ್ಕಿಗೆ ಹರಿದು ಕಾಡಿಂದತ್ತಣ 

ಬಯಲಲ್ಲಿ ಸರಿಯಾಗಿ ಪಡುಗಡೆಗೆ ಮಂಡಲಾಕಾರವಾಗಿ ತಿರುಗಿ ಹೋಗು 

ತ್ತಿದ್ದುದು, ಕಾಡಿನೊಳಗಿನ ದೀಪಸ್ತಂಭಗಳ ಮಿಣುಕೊಂದೂ ತೋರದೆ 

ಅದರಿಂದತ್ತ ತಿರುಗಿಹೋಗುವಲ್ಲಿ ದೀಪಸ್ತಂಭಗಳು ಉರಿಯುತ್ತಿದ್ದುದನ್ನು 

ಬಂಕೆಯನು ದೂರದಲ್ಲಿ ಕಂಡನು; ತನ್ನವರಿಗೆ ಕಾಣಿಸಿದನು. “ಈ ಕಾಡಿ 

ನೊಳಗೆಲ್ಲೋ ಹಗೆಗಳ ಹಂಚಿಕೆಯ ಸಂಚು ಹುದುಗಿದೆ. ಅದನ್ನೇ 

ಸೂಚಿಸುತ್ತಿದೆ, ಈ ತಪ್ಪಲಲ್ಲೆಲ್ಲಾ ಕಪ್ಪಾಗಿ ಆ ಬಯಲಲ್ಲಿ ಹೊಳೆಯುವ 

ದೀಪ ರಾಜಿ" ಎಂದು ಪಯಣಿಗರು ಭಾವಿಸಿದರು. ಆ ಕಗ್ಗಾಡಿನ ತಪ್ಪಲ 

ನಡುವೆ, ಮೂವತ್ತು ನಾಲ್ವತ್ತು ಮಾರುಗಳ ತನಕ ಏರಿ ಇಳಿದ. ದಿಣ್ಣೆಯನ್ನು 

ಕಡಿದು ಸಮತಳವಾಗಿ ಮಾಡಿದ ಬೀದಿಯದು. ಅದರ ತೆಂಕಣ ತುದಿಯು 

ಇಕ್ಕಡೆಯ ದಿಣ್ಣೆಗಳು ಆಳುದ್ದದ ಏರಿನಲ್ಲಿದ್ದುವು. ಬಂಕೆಯನ ಕುದುರೆ 

ಆ ಕಡೆಯಲ್ಲಿ ಧಾವಿಸುವಲ್ಲಿ ಇಕ್ಕಡೆಯ ದಿಣ್ಣೆಗಳ ಮೇಲಿನ ಸೇತುವೆಯಂತೆ 

ಅಡ್ಡ ವಾಗಿ ಬಿದ್ದ ಮರವೊಂದು ಕಂದಿಲ ಮಸುಕಿನಲ್ಲಿ ತೋರಿಬಂತು. 

ಕುದುರೆ ಮಾತ್ರ ನಿರಾಬಾಧವಾಗಿ ಓಡಿಹೋಗಬಹುದಲ್ಲದೆ ಮೇಲೇರಿದವನ 

ಅವಸ್ಥೆ ದುರವಸ್ಥೆಯೇ. ಅಷ್ಟರಲ್ಲಿ 'ವಾಯುವೇಗ'ವದು; ಧೀಂಕಿಟ್ಟು 

ಸಮೀಪಿಸಿತು. ಮನನ-ಮಾತು-ಮಾಟಗಳಿಗೆಡೆ ಇಲ್ಲ. “ಜಯ ಜಯ 

ಮಹಾವೀರ” ಪ್ರಾರ್ಥನಾನಾದದೊಡನೆ ಧಿಮ್ಮನೆ ಹಾರಿ ಮುಂಧುಮುಕಿ 

ದನು, ಅವನನ್ನನುಸರಿಸಿ ಮತ್ತಿನವರೂ ಹಾರಿದರು, ಆದರೆ ಬಂಕೆಯಾದಿ 

ಗಳು:`ಕೆಳಗುರುಳಿದರೆಂದೇ ಭಾಸವಾಗುವಂತ್ತಿತ್ತಲ್ಲದೆ ಮುಂಬರಿವ ಕುದುರೆ 

ಗಳ ಬೆನ್ನಿನಲ್ಲಿ ನೆಲಸಿದುದು ಗೊತ್ತಾಗುವಂತಿರಲಿಲ್ಲ. 



೨೩----------------------------------------------------------------



ಅಷ್ಟರಲ್ಲಿ ಹಲಮಂದಿ ಶಸ್ತ್ರಧಾರಿಗಳಾದ ಭಟರು ಅವರ ಮೇಲೆ 

ಬಿದ್ದರು. ಉರುಳಿರಲೇಬೇಕೆಂದು ಬಗೆದಲ್ಲಿಗೆ ಈಟ ಬರ್ಚಿಗಳಿಂದ ಇರಿಯ 

ಲಾರಂಭಿಸಿದರು. ತಮೋ ರಾಜನ ರಾಜ್ಯಪದ್ಧತಿಯ ಮಹಿಮೆಯಲ್ಲವೆ? 

ಗಾಯವೊತ್ತಟ್ಟು ಮದ್ದೊತ್ತಟ್ಟು ಎಂಬಂತಾಯೆತು. ಆ ಒಳವನ್ನರಿಯದೆ 

ಬಹುಶಃ "ದ್ರೋಣ ಪರ್ವಾಂತ್ಯದ ಧೃಷ್ಟದ್ಯುಮ್ನರಾಗುತ್ತೇವೆ” ಎಂದು 

ಮೂಢರವರು ನಿರ್ಧರಿಸಿರಬೇಕಾಗಿ ತೋರುತ್ತಿದೆ “ಇನ್ನೇನು, ಆ ಘಾತ 

ವಡೆದುರುಳಿ ಮೈಮರೆದವರನ್ನು ಸಂಪೂರ್ಣವಾಗಿ ಮರೆಯಿಸಿಬಿಡುವು 

ಬೆಂದರೆ ಅತಿಸುಲಭವೆಂದು ಅವರು ಭಾವಿಸಿರಬೇಕು. ಈ ಕುರುಡುಕಾಳಗ 

ದೊಳಗೆ ನಾಲಲ್ಕೈದು ಮಂದಿ ತಮ್ಮವರೇ ನೆಲಕ್ಕೊರಗಿದರು. ಒರಗಿದಲ್ಲಿ 

ಗೆರಗಿ ಹಗೆತನವನ್ನರಗಿಸಿಕೊಂಡರು. ಕುದುರೆಗಳ ಮೇಲಿಂದಿಳಿಯದ ಬಂಕೆ 

ಯಾದಿಗಳಿಗೆ ಹಾಗೆಯೇ ಸಾಗಿಬಿಡಬಹುದಾಗಿತ್ತು. ಆದರೆ ಅಂಥ ವರ್ತನ 

ವೆಂದರೆ 'ಹೇಡಿಗಳ ತಲೆಗೆ ಹರಕೆ ಹೊತ್ತ ಮುಡಿನಿನ ಬಾಳುವೆ' ಎಂದೇ 

ಅವರೆಣಿಕೆಯಾಯಿತು. “ಜಯ ಮಹಾವೀರ" ಎಂಬ ಮತ್ತೊಂದು 

ಜಯನಾದವೆದ್ದಿತು. ನಾದವು ಶ್ರವಣವನ್ನು ನಾಟುವುದರೊಡನೆ ಬಗೆ 

ಬಗೆಯಾಯುಧಗಳ ಹೊಡೆತಗಳು ಆ ಪುಂಡಾಳುಗಳ ಅಂಗೋಪಾಂಗ 

ಗಳನ್ನು ನಾಟದುವು. ಹಿಂದಿನ ತಮ್ಮ ಆಟವೆಂದರೆ ಬಯಲಾಟನೇ ಸರಿ 

ಎಂದು ಅವರಿಗಾಗಲೇ ಮಂದಟ್ಟಾದುದು. ಆದರೂ ಎದೆಗುಂದದೆಚ್ಚರ 

ದಿಂದ ಹೋರಾಡಿದರು. ಈ ಕಳ್ಳಕಾಕರಿಗೆ ಕಲಿಸುವ ಪಾಠಕ್ಕೆ ನಿಮ್ಮವರೆ 

ಗೇಕೆ? ಎಂದು ಬಂಕೆಯನನ್ನು ಹಿಂದಿರಿಸಿ ದಿಗ್ಗಜಗಳಂಥ ಕಂಚನಾದಿ ವೀರ 

ರಾವುತರು ಮುಂದಾದರು. ಅವರ ಕಗ್ಗಲಗುದುರೆಗಳು ಆ ದೌಡುಗಾರರ 

ಸಂದಣಿಯಲ್ಲಿ ತಾಂಡವವೆಸಗಿದುವು. ಹಾಯ್ದಲ್ಲಿ ಕೆಲವರು, ಖುರ 

ಘಾತಕ್ಕೆ ಕೆಲವರು, ದೂಡಿದಲ್ಲಿ ಮರಬಂಡೆಗಳಿಗೆ ತಾಟಿ ಕೆಲವರು, ವೀರರ 

ಆಯುಧಗಳ ಹೊಡೆತಕ್ಕೆ ಗುರಿಯಾಗಿ ಹಲವರು ನುಗ್ಗು ನುರಿಯಾದರು, 

ಏವತ್ತು.ನೂರು ಮಂದಿಯೊಳಗೊಬ್ಬನಾದರೂ ಈ ಕೊಳ್ಳೆಗಾರಿಕೆಗ ಬಿರು 

ದಾದ ಗಾಯವನ್ನೊಂದದವರಿಲ್ಲ. ಕೆಲವರಂತೂ ಪಲಾಯನ ಸೂತ್ರ 

ವನ್ನೇ ಪಾಠ ಮಾಡಿದರು. ಸತ್ತವರನ್ನು ಮೈಮರೆತವರನ್ನುಳಿದು ಗಾಯ 

ವನ್ನೊಂದಿ ನಡೆಗುಂದಿದಿಬ್ಬರನ್ನು ಮತ್ತೆ ನೋವಾಗದಂತೆ ಕುದುರೆಗಳ 

ಲ್ಲೇರಿಸಿಕೊಂಡು ವೀರಾವತಾರಿ ಬಂಕೆಯಾದಿಗಳು ತಮ್ಮ ಬನವಸೆಯ ರಾಜ 

ಧಾನಿಯತ್ತ ಮುಂದಿನ ಪಯಣನವನ್ನೆಸಗಿದರು. ಅಷ್ಟರಲ್ಲಿ ಪ್ರಾತಃಕಾಲದ 



೨೪------------------------------------------------------------------ 



ತಂಗಾಳಿ ಬೀಸಿತು. ಚಳಿಗಾಲವಾದರೂ ಏನು? ಹೊತ್ತಾರೆಯ ಮಂದ

ಮಾರುತನ ತಂಪಿಗೂ. ಚಳಿಗೂ ವ್ಯತ್ಯಾಸವಿದೆಯಲ್ಲವೆ? 

================


ಉಪಕಥೆ 



ಹೀಗೆ ಬಂಕೆಯಾದಿಗಳನ್ನು ಮಧ್ಯಮಾರ್ಗದಲ್ಲಿ ತಡೆದ, ತಡೆದು 

ಗತಿಗೆಟ್ಟು ಚದರಿ ಹೋದವರಾರು? ಎಂಬ ಪ್ರಶ್ನೆಯೊಂದು ವಾಚಕರ 

ಮನಸ್ಸನ್ನು ಕೆದರದಿರಲಿಕ್ಕಿಲ್ಲ. ಹೌದು, ಕಾಲಿಗೆ ಕಾಲಿದ್ದರೆ ಹಾರುವಲ್ಲೇ 

ಕಾಣುವುದಲ್ಲದೆ ಅದನ್ನು ಹಿಡಿದು ತೋರಿಸಸಲಿಕ್ಕಾಗುವುದೆ? ಅದು ಮುಂದೆ 

ಕಾಣುವುದು ಎನ್ನುವ. ಆದರೆ, ನನಗಿಲ್ಲಿ ಕಂಡುದು ಅದಲ್ಲ. ಕಂಚ 

ನಾದಿ ಕಂಕಣಗಟ್ಟಿದ ಮಲ್ಲರಾಯರಿಂದೊಡಗೂಡಿದಂದಲ್ಲ, ಏಕಾಂಗಿ 

ಯಾಗಿದ್ದರೂ ಸರಿಯೆ, ಆ ಅಸಹಾಯ ಶೂರರನ್ನು ಕೆರಳಿಸಿ ಮರಳ 

ಬಹುದು ಎಂದು ಭಾವಿಸಿದ, ಭಾವಿಸಿ ಧಾವಿಸಿ ಬಂದು ಕೆಣಕಿದವರ ಎದೆ 

ಗಾರಿಕೆಯೇ ನನಗೆ ಕಂಡುದು. ಅದೇನು? ಎಂದು ಬೇಕಾದರೆ ಕೇಳಿರಿ. 

ಉತ್ತರವಾಗಿ, ಪರಂಪರಾಗತವಾಗಿ ಬಂದ ಚಿಕ್ಕ ಕತೆಯೊಂದನ್ನು ವಿಸ್ತರಿಸು 

ತ್ತೇನೆ. 


ಬಂಕೆಯನಾಳುತ್ತಿದ್ದ ನಾಡು ಬನವಾಸಿ ಎಂಬುದನ್ನು ಹಿಂದೆಯೇ 

ಸೂಚಿಸಿದ್ದೇನೆ. ಮಲಯಾಚಲರಾಜನ ರಾಜಧಾನೀ ಪ್ರದೇಶವದು ಎಂದು 

ಕವಿಗಳು ಬಣ್ಣಿಸಿದರೂ ನಿಜವಾಗಿ ಅರಣ್ಯ ನಿಬಿಡವಾದ ಪ್ರದೇಶವದು.

ಮನುಷ್ಯರನ್ನು ಗಿಳಂಕರಿಸಿಬಿಡುವ ಹುಲಿಕರಡಿಸಿಂಹಗಳ ತಾಯ್ಮನೆಯದು. 

ದನಜಿಂಕೆ ಮೊದಲಾದ ಸಾಧುಪ್ರಾಣಿಗಳೆಂದರೆ, ಅವುಗಳಿಗೆ ನಮ್ಮ ಬದನೆ- 

ಹೀರೇಕಾಯಿಗಳಂತೆ. ಅಂಥ ಹುಲಿಯೊಂದು ಒಮ್ಮೆ ತುಳು ಹಲಸಿನಹಣ್ಣಿ 

ನಂತಿರುವ ಮಾನವನನ್ನು ಹಿಡಿದು ತಿಂದುಬಿಟ್ಟಿತಂತೆ. ಬಿಸಿಯಾಗದೆ 

ಬೆಣ್ಣೆ ಕರಗುವುದೆ? ಕೂಡಲೆ ಪ್ರಜಾ ಜನರು ಬೆದರಿ ಬೆಂಡಾದರು. ಬಂಕೆಯ 

ದೊರೆಯಲ್ಲಿಗೆ ಹೋಗಿ ಹಿಂದಿನ ದಿನದಲ್ಲಾದ ಆ ದುರವಸ್ಥೆಯನ್ನು ದೂರಿ 

ಕೊಂಡರು. ಕೇಳಿದ ದೊರೆ ಮನಸಿನಲ್ಲಿ ಮರುಗಿದನು, ಮೋರೆಯಲಿ 

ಮುಗುಳ್ನಕ್ಕನು, “ಏನು, ನನ್ನ ಪ್ರಜಾವರ್ಗದವರಾಗಿದ್ದು ಕೊಂಡು 'ಹುಲಿ 

ಎಂಬ ಪಶುಪ್ರಾಣಿಯೊಂದು ಅತಿಕ್ರಮಿಸಿ ನಮ್ಮಂತೇ ಇರುವ ಮಾನವ 

ನೊಬ್ಬನನ್ನು ಕೊಂದು ತಿಂದು ಬಿಟ್ಟುದು' ಎಂದು ಮೊರಿಯಿಡುವುದೆ?” 



೨೫------------------------------------------------------------ 



ಎನ್ನುತ್ತಾ ಗಹಗಹಿಸಿಬಿಟ್ಟನಂತೆ. ಜನರು ಮಾತೆತ್ತಲಿಲ್ಲ. “ಆಗಲಿ, ಸಂಜೆಗೆ 

ರಾಜಾಂಗಣಕ್ಕೆ ಬನ್ನಿರಿ. ನನ್ನನ್ನು ಕಾಣದೆ ಹೊರಡಬೇಡಿರಿ” ಎಂದು 

ಅವರನ್ನು ಕಳುಹಿದನು. 


ಸಂಜೆಗೊಂದಷ್ಟು ಮೊದಲೆ ಭಯಂಕರಾಕೃತಿಯ ಐದು ವ್ಯಕ್ತಿಗಳು 

ಅರಮನೆಯ ಹೆಬ್ಬಾಗಿಲನ್ನು ದಾಟದುವು. ಕಾಣದ ಕೇಳದ ಭೂತಾಕಾ 

ರದ ಆ ವ್ಯಕ್ತಿಯನ್ನು ಕಂಡರೆ ಗರ್ಭಿಣಿಯ ಬಸಿರು ಒಸರಾಗಿ ಹರಿಯ 

ಬೇಕು; ಕಡು ಜೌವನಿಗನಾದವನ ಕಲ್ಲೆದೆ ನುಗ್ಗುನುರಿಯಾಗಿ ಹಾರಬೇಕು. 

ಅಡಿಹಿಡಿದು ಮುಡಿವರೆಗೆ ಎಣ್ಣೆಯ ಬಣ್ಣದಲ್ಲಿ ಮಿರುಮಿರುಗುವ ಅದೇನೋ 

ಉಡುಗೆಯನ್ನುಟ್ಟಿದ್ದರು. ಬಣ್ಣದಿಂದಾಗಿ ಒಂದಷ್ಟು ದೂರಕ್ಕೆ ಏನೋ 

ಒಂದು ಬಗೆಯ ಕಗ್ಗಂಬಳಿಯನ್ನು ಮುಸುಕು ಹಾಕಿಕೊಂಡ ವ್ಯಕ್ತಿಗಳಂತೆ, 

ಅಥವಾ ಕರಡಿಗಳ ಸಾಲಿನಂತೆ ಭಾಸವಾಗುವಂತಿದ್ದರೂ ಒಂದಿಷ್ಟು ಹತ್ತಿರ 

ದಲ್ಲಿದ್ದು ನೋಡಿದಲ್ಲಿ ಹಾಗಲ್ಲ. ಅಡಿಯಿಂದ ನಡುವಿನವರೆಗೆ ಚಲ್ಲಣ 

ವಾಗಿ, ನಡುವಿನಿಂದ ಕೊರಳಿನ ಪರ್ಯಂತ ಉರಸ್ತ್ರ (ಎದೆಗಾವು)ವಾಗಿ, 

ಕೊರಳಿನಿಂದ ಮೇಲಿನದು ಸೀಸಕವಾಗಿ ತೋರುತ್ತಿತ್ತು. ಅಂಗೈಯಿಂದ 

ತೋಳಿನ ನಡುವಿನ ಸೊಂಟನ ವರೆಗೆ ಹೊಗಿಸಿ ಬಲಿದ ವ್ಯಾಘ್ರನಖ (ಹುಲಿ 

ಯುಗುರು) ಎಂಬುದನ್ನು ಕಂಡರೆ ಝಗ್ಗೆನ್ನದ ಎದೆ ಯಾರಿಗುಂಟು? ಅದರ 

ಮೇಲಿನ ಭುಜಕೀರ್ತಿ ತಪ್ಪಲಿನಂತೆ, ಮೇಲೇರಿದ ಶಿಖರವಾದ ಸೀಸಕವನ್ನು 

ಕಂಠಾಲಿಂಗನವೆಸಗಿಕೊಂಡಿತ್ತು. ಆ ಸೀಸಕದ ಮೊಗರಂಬದೆಡೆಯಲ್ಲಿ 

ಕಣ್ಣೆರಡು ಮಿಣುಗುಟ್ಟಿದರೂ, ಅದಾರೆಂಬ ಗುರುತು ಗೊತ್ತಾಗುವುದೆ? 

ಸಂದರ್ಭವನ್ನೂಹಿಸಿ ಅವರನ್ನರಿಯಬೇಕಾದರೆ ನೀವೇ ಆಗಬೇಕು. ಹೇಗೆ 

ಗೊತ್ತಾಯಿತೆ? ಇವರೇ ಅವರು. ಮುಚ್ಚಂಜೆ ಮೀರಿತ್ತು. 


ಹುಲಿರಾಯನು ಒಂದು ಪ್ರಾಣಿಯನ್ನು ಹಿಡಿಯಿತೆಂದರೆ ಆಗಲೇ 

ಅಥವಾ ಆ ದಿನವೇ ಅದನ್ನು ಮುಕ್ಕಿ ಪಾರಣೆಗೈಯ್ಯದಂತೆ. ಆ ಬಾರಿ 

ಸರಿಯಾಗಿ ರಕ್ತವನ್ನು ಹೀರುವುದೇ ಅದರ ಮೀಸಲಾದ ಉದ್ಯೋಗ, 

ಮರುದಿನ ರಾತ್ರಿ ಸಮಯಕ್ಕೆ ಸರಿಯಾಗಿ ಬಂದು ಮತ್ತಿನ ಸಮಾರಂಭ. 

ಹೆಣಬಿದ್ದಲ್ಲಿಗೆ ಐವರೂ ಹೋದರು. ಅಷ್ಟರಲ್ಲಿ ಹುಲಿಯ ಆರಭಟೆ 

ಒಂದಷ್ಟು ದೂರದ ತಪ್ಪಲಿನ ಗವಿಯತ್ತಣಿಂದ ಗುಡುಗಿತು. ಹುಲಿರಾಯನು 

ಓಲಸರಿಯ ಬಾರಣೆಗಾಗಿ ಹೊರಟನೆಂಬುದು ಅವರಿಗೆ ಗೊತ್ತಾಯಿತು. 

"ಹತ್ತು ಹದಿನೈದು ಮಾರು ದೂರದ ನಾಲ್ಕು ಮೂಲೆಗಳಿಗೆ ಸರಿದು ಈ 



೨೬------------------------------------------------------------------ 



ಬಯಲಾಟಕ್ಕೆ ನೋಟಕರಾಗಿರಿ” ಎಂದು ಬಂಕೆಯನು ತನ್ನವರೊಡ 

ನಾಡಿದನು. ಹಾಗೆ ದೊರೆಯನ್ನು ಹುಲಿಗೊಪ್ಪಿಸಿ ತೊಲಗಿ ನಿಲ್ಲುವುದೆಂದರೆ 

ಕಂಚನಾದಿಗಳಿಗೆ ಸೈಸಲಾರದ ಸಂಕಟವಾಯಿತು. ಛೇ, ನಿಮ್ಮ ಚಂಡಿ 

ತನವಾದರೆ ಇಂದಿನ ಆಟಕ್ಕೇ ಸೊನ್ನೆ ಸುತ್ತಿದಂತೆ. ಈ ಐದೂ ಹುಲಿಗಳ 

ನ್ನೀಕ್ಷಿಸಿದರೆ ಅದು ರಂಗಸ್ಥಳಕ್ಕೇ ಬರಲಾರದು. ಕೂಡಲೆ ತೊಲಗಿರಿ." 

ಎಂದು ಬಂಕೆಯನು ಪಿಸುನುಡಿಯಿಂದ ಒತ್ತಾಯಿಸಿದನು. ಮನವಿಲ್ಲದ 

ಮನಸ್ಸಿನಿಂದಾದರೂ ಅವರು ತೊಲಗಿ ನಿಲ್ಲಲೇ ಬೇಕಾಯಿತು. 


ಅವರು ಸರಿವುದೂ ಯಮದೂತನೆನ್ನಿಸಿ ಹೆಬ್ಬುಲಿಯದು ನಿಶ್ಶಂಕ 

ವಾಗಿ ಬರುವುದೂ ಸರಿಯಾಯಿತು. ಶಂಕೆಯೆಂಬುದು ರೋಮರೋಮ 

ಕೂಪಗಳಲ್ಲಿ ಶಂಕುವಾಗಿ ಕುಕ್ಳುವುದು ಪ್ರಕೃತಿ. ವಿವೇಕಿಗಳಿಗೂ ಹೇಡಿ 

ಗಳಿಗೂ ಅದು ಸ್ವಭಾವವಂತೆ. ಮೊದಲಿನವರದು ವಿಚಾರದಿಂದಾದರೆ 

ಮತ್ತಿನವರದು ಅಂಜಿಕೆಯಿಂದ, ತನ್ನನ್ನು ಕಂಡ ಪ್ರಾಣಿಯ ರೋಮರಾಜಿ 

ಯನ್ನೇ ಹುಲಿ ಮೊತ್ತಮೊದಲು ಪರಾಂಬರಿಸಿ ನೋಡುವುದು. ಅದು 

ಭಯದಿಂದ ಬಾಗಿಹೋದಕೆ ಮೇಲೆ ಬೀಳುವುದೂ, ಧೈರ್ಯದಿಂದ 

ನೆಟ್ಟಗೆ ನಿಮಿರಿದರೆ ಹಿಂಜರಿವುದೂ ಅದರ ಸ್ವಭಾವ. ಆದುದರಿಮದಲೇ

'ಕಳ್ಳ' 'ಹೇಡಿ' ಎಂಬುವು ಕೆಲವು, ಕನ್ನಡ ಪ್ರಾಂತಗಳ ಆಡುಮಾತಿನಲ್ಲಿ 

ಹುಲಿಯ ಒಳಹೆಸರಾಗಿನೆ, ಆದರೆ, ಆ ದಿನದ ಅವಸ್ಥೆ ಹಾಗಲ್ಲ. 

ತನ್ನೆಂಜಲಾದ ಹೆಣದೆಡೆಗೆ ಬೇರಾರು ಏಕೆ ಬರುವರು? ಯಾರೂ ಬರ 

ಲೊಲ್ಲರು; ಎಂಬುದರಿಂದಲೇ ಅದಕ್ಕೆ ಆಗ ನಿಶ್ಚಂಕಭಾವ. ಆರ್ಭಟಿ 

ಸುತ್ತಾ ಅದು ಶವದೆಡೆಗೆ ಬಂತೇ ಬಂತು. ಅಸ್ತವ್ಯಸ್ತವಾಗಿ ಕೆಡೆದ 

ಹೆಣದ ತಲೆಯನ್ನು ಕೈಯಿಂದ ಕೆದರುವಲ್ಲಿ, ಕಾಲಿನತ್ತ ನಿಂತಿರುವ 

ಇನ್ನೊಂದು ಪ್ರಾಣಿ ಅದಕ್ಕೆ ತೋರಿತು. ಅದೂ ತನ್ನಂತೆ ಚತುಷ್ಟಾದಿ- 

ಪ್ರಾಣಿಯಾಗಿ ಭಾಸವಾದರೂ, ಭಾವನಾತೀತವಾದೊಂದು ಹೊಸತನ 

ಅದರಲ್ಲಿ ಹೊಳೆದಂತಾಯಿತು. ಅಷ್ಟಾದೊಡನೆ, ನಿಂತಂತೆಯೆ ಒಂದೆರಡು 

ಹೆಜ್ಜೆ, ಹಿಂದೆ ಸರಿಯಿತದು. ಹುಲಿ ಆ ವರೆಗೂ ಕಾಣದ, ಕನವರಿಸದ 

ಭಯಂಕರ ನವೀನ ಪ್ರಾಣಿ ಇದು! ಹಿಂಜರಿದ ಹಜ್ಜೆಯಲ್ಲಿ ನೆಲೆಗೊಂಡು... 

ಈ ಪ್ರಾಣಿಯ, ಮೋರೆ ಮುಸುಕಿದೆಯಷ್ಟೆ? ಎಡೆಯಲ್ಲಿ--ಮಿಳಮಿಳನೆ 

ಮಿರುಮಿರುಗುವ ಕಣ್ಣಲ್ಲಿ ಕಣ್ಣೂರಿ ಸೋಡಿ" ಪರಾಂಬರಿಸಿತು. ಮಿಡುಕದೆ 

ಸಮದೃಷ್ಟಿಯಾಗಿ ಅದೂ ತನ್ನನ್ನೇ ನೋಡುತ್ತಿದೆ! ನಾಗಾಲಿನಲ್ಲಿ ಹರಿಯು 



೨೭------------------------------------------------------------------------



ವಂತಿದ್ದರೂ ತನ್ನಂತಿರುವ ವನ್ಯಪ್ರಾಣಿಯಲ್ಲನಿದು ಎಂದು ನಿರ್ಧರಿಸಿರ 

ಬೇಕು. ಅದರಿಂದಲೇ ನೋಟದ ಮೇಲೆ ಒಂದು ಆರಭಟಿಯ ಒಗ್ಗರಣೆ. 

ಆ ಒಗ್ಗರಣೆಗೂ ಮರುಸದ್ದಿಲ್ಲ. ಕಂಗೆಡದೆ ಎದೆಗೆಡಡೆ ಅದು ನಿಂತಲ್ಲೇ 

ನಿಂತಿದೆ. ಮೂಗಿಗೆ ಗುಂಗುಮಿಸುವ ವಾಸನೆ, ಅದು ಮಾನವ ಪ್ರಾಣಿ 

ಎಂದೇ ಸಾರುತ್ತಿದೆ. ಅದರೆ ತನಗಿದಿರಾಗಿ ನಿಂತು ಈ ಬಗೆಯಲ್ಲಿ ಅಸಡ್ಡೆ 

ಗಾಣಿಸುವ ಮಾನವ ಪ್ರಾಣಿಯೂ ಇದೆಯೆ! ಮಾತ್ರವಲ್ಲ ಪ್ರಮಾಣದಲ್ಲಿ 

ತನಗೂ ಮೀರಿದೆಯದು!! ನೆಲೆದಪ್ಪಿದ ಹುಲಿಯ ಮನಸ್ಸು ಮಂಕಾಗಿ 

ಹೋಗಿರಬೇಕು. 



ಅಷ್ಟರಲ್ಲಿ ಪ್ರತಿಪ್ರಾಣಿ ಗುಡುಗುಟ್ಟಿ ಗರ್ಜಿಸಿತು; ಬುಸುಗುಟ್ಟುತ್ತಾ 

ಒಮ್ಮೆ ಇಕ್ಕಾಲುಗಳಲ್ಲಿ ನಿಂತು ವ್ಯಾಘ್ರನಖ ಹಸ್ತವನ್ನು ಮುಂದೆ ನೀಡಿ 

ಆಂದೋಲನವೆಸಗಿತು. ಕಂಠಧ್ವನಿಯನ್ನಾಲಿಸಿದೊಡನೆ ಇದು ಮಾನವ 

ನೆಂದು ನಿರ್ಧರಿಸಿತು. ಆಕಾರದಿಂದ ಚಳಿಹಿಡಿದ ಎದೆ ಒಂದಷ್ಟು, ಬಿಸು 

ಪಾದರೂ ಆ ವ್ಯಕ್ತಿಯ ಧೈರ್ಯಕ್ಕೆ ಬೆರಗಾಯಿತು. ಆದರೇನು? ತನ್ನ 

ಕೊಳ್ಳೆಯಾದ ಹೆಣವನ್ನು ನರಭಕ್ಷಕನು ಹಿಂಜರಿವನೆ? "ಒಂದೆರಡಲಿ 

ಎರಡು” ಎಂದು ನರಭಕ್ಷಣ-ಮಗ್ಗಿಯನ್ನು ಗುಣಿಸಿಬಿಡುವುದೆಂದೇ ನಿರ್ಧರಿ 

ಸಿತು. ನೆಲಬಿರಿವ ಗರ್ಜನೆಯ ಏರಾಟ-ಹೋರಾಟ-ಹಾರಾಟಗಳಿಗೆ 

ಪ್ರಾರಂಭವಾಯಿತು. ಕಂಚನಾದಿಗಳು ಅದೃಶ್ಯರಾಗಿದ್ದು ಕೊಂಡು ಪೊದ 

ರೆಡೆಯಲ್ಲಿ ಹತ್ತಿರ ಹತ್ತಿರಕ್ಕಾದರು. 


ಹುಲಿರಾಯ-ಮಲ್ಲರಾಯರ ಮಲ್ಲಗಾಳೆಗಕ್ಕೆ ಮೊದಲಾಯಿತು; 

ಅತ್ತಿತ್ತ ಹಾರಾಡಲಿಕ್ಕೆ ತೊಡಗಿದರು. ಅನ್ಯೋನ್ಯವಾಗಿ ಹೊಂಚುಹಾಕಿ 

ವಂಚಿಸಿ ಮರ್ಮಸ್ಥಳಕ್ಕೆರಗಿ ಹಗೆಯನ್ನು ನೆಲಕ್ಕೆರಗಿಸಿ ಬಿಡುವುದೇ ಆ 

ಹಂಚಿಕೆಯ ಗುರಿ. ಮೆಲ್ಲನೆ ಶವದ ಹಿಂಗಾಲನ್ನು ಹಿಡಿದು ಪಕ್ಕಕ್ಕೆ ತಳ್ಳಿದ 

ಮಲ್ಲರಾಯನು ಹುಲಿರಾಯನ ಹತ್ತಿರಕ್ಕಾದನು. ಅಬ್ಬಾ ಈತನ 

ಗರ್ವವೇ! ಎಂದು ತೋರಿರಬೇಕದಕ್ಕೆ. ತನ್ನ ಕೊಳ್ಳೆ ಯನ್ನು ಪರಪ್ರಾಣಿ 

ಗಳಾಕ್ರಮಿಸುವುದು! ಆಕ್ರಮಿಸಿ ಮುಟ್ಟಿ ಕೊಳೆಯೆಸಗುವುದೆಂದರೆ ಸಾಮಾ 

ನ್ಯವಾದ ನೀಕಾರವೇ ಹುಲಿರಾಯನ! ಘರ್ಫರ ನಾದವನ್ನೆಸಗಿ ಶವದ 

ಮಿದುಳು ಜಜ್ಜರಿಸುವ ಮಸ್ತಕವನ್ನು ಬಲಿದು ತನ್ನ ಪಕ್ಕಕ್ಕೆ ಬಿಸಾಡಿತು. 

ಕಣ್ಣು ಕೆಂಪೇರಿ ಮುಂಗಾಲಿನಿಂದ ಮಣ್ಣನ್ನು ಕೆದರಿ ಮೃತ್ಯು ದೇವತೆಯಂತೆ 

ಬಾಯ್ದೆರೆದು ಗರ್ಜಿಸಿತು. ಮಲ್ಲರಾಯನ ಆರ್ಭಟೆ, ಆರ್ಭಟೆಗನುವಾದ 



೨೮------------------------------------------------------------------



ಆಟೋಪಾನುಭಾವಗಳು ಇಮ್ಮಡಿಯಾದುವು. ಈ ಬಗೆಯ ಹೀನಾಯ 

ವೆನ್ನೀಕ್ಷಿಸಿ ಮುಂದೆ ಸೈರಿಸಲಾಗಲಿಲ್ಲ. ಒಮ್ಮೆ ಘರ್ಫರನಾದ, ನಾದಾನು 

ಸಾರವಾಗಿ ಪಕ್ಕಕ್ಕೊಲೆದು ಹಗೆಯ ಮರ್ಮಸ್ಥಳವನ್ನು ಪ್ರತೀಕ್ಷಿಸುವುದು, 

ಹೀಗೆ ಐದಾರು ಬಾರಿ ಹುಲಿ ಅಲೆದಾಡಿತು. ಅದಕ್ಕನುವಾಗಿ ನಮ್ಮ 

ಮಲ್ಲೇಶ್ವರನೂ ಹಜ್ಜೆಯಿಕ್ಕಿದನು. ಗರಡಿಸಾಧನೆಯಿಂದ ಹದವಡೆದ 

ಮೈಯಲ್ಲವೇ ಅದು? ದಿಣ್ಣೆಯಾಗಿದ್ದ ಮೈಯದು ನೆಲಕ್ಕಮರಿ ಗುಂಡುಗಲ್ಲಿ 

ನಂತೆ ತೋರಿತು. ಹಾರಿ ತೋರಿದುದೂ ಧುಡುಮ್ಮನೆ ಮೇಲೆ ಹಾರಿದುದೂ 

ಒಟ್ಟೊಟ್ಟಿಗೆ. ಹುಲಿ ತನ್ನ ಮೇಲೆ ಬೀಳುವ ಮೊದಲೆ ಮಲ್ಲರಾಯನು 

ಸರಕ್ಕನೆ ಮುಂದೆ ಸರಿದನು. ಆಹಾ! ಕೇಳದ-ಕಾಣದ- ಕನವರಿಸದ 

ಅತ್ಯದ್ಭುತ ಕಾರ್ಯವನ್ನೇನೆನ್ನಲಿ!! ಬೀಳುವ ಹುಲಿಯ ಹಿಂಗಾಲುಗಳನ್ನು 

ಬಿಗಿವಿಡಿದು ಫಕ್ಕನೆ ಮೇಲೆತ್ತಿದ ವೇಗ ಕಣ್ಣಿಗೆ ಕಾಣುವಂತಿದ್ದಿಲ್ಲ. ಭುರ್ರನೆ 

ಬೀಸುತ್ತಿದ್ದುದು ಮಾತ್ರವೇ ಕಾಣುತ್ತಿತ್ತು. ಆಶ್ಚರ್ಯದ ಮೇಲಿನ 

ಆಶ್ಚರ್ಯವೆನ್ನಿಸಿ ತಿರುಗುತದು ಕುಂಬಾರನ ಚಕ್ರವಾಗಿ ಐವತ್ತೋ 

ನೂರೋ ಆ ತಿರುಗಣೆಯ ಬಾರಿಯನ್ನಾರು ಲೆಕ್ಕಿಸಿದವರು? ಆ ಲೆಕ್ಕವಾ 

ದರೂ ಎಷ್ಟಾಗಬೇಕೆಂಬ ಪರಿಮಿತಿ ಆ ಮಹಾವೀರನಿಗೇ ಗೊತ್ತು. ಕಡೆಗೆ 

ಹದಕ್ಕೆ ಬಂದ ನರಭಕ್ಷಕನನ್ನು ಮೇಲೆತ್ತಿ ಧಡಮ್ಮನೆ ಬಂಡೆಗಲ್ಲೊಂದರ 

ಮೇಳ ಅಪ್ಪಳಿಸಿದನು. ತಲೆಯೆಲ್ಲಾ ನಜ್ಜುಗುಜ್ಜು! ಕಣ್ಣುಗಳ ಗೋಳ 

ಗಳೆರಡೂ, ತಾಳಿಹಣ್ಣಿನ ಗೋಳವಾಗಿ ಫಳ್ಳನೆ ನೆಗೆದುವು. ಹುಲಿ ಇಲಿ 

ಗಿಂತ ಕಡೆಯಾಗಿ ಕೆಡೆದುದು. ಕಂಚನಾದಿಗಳಷ್ಟರಲ್ಲಿ ಪಕ್ಕದಲ್ಲಾದರು. 

ಈಟಿ ಬರ್ಚಿಗಳಿಂದ ಅದನ್ನು ತಿವಿದಿರಿದು ಬಾರದ ಬನ್ನಗೊಳಿಸಿದರು. 

ಅದಕ್ಕೆ ಮೊದಲೆ, ಬನ್ನವೂ ಇಲ್ಲ, ಗಿನ್ನವೂ ಇಲ್ಲ, ಎಂಬ ತುರೀಯಾವಸ್ಥೆ 

ಗಿಂತಲೂ ಅತ್ತ ದಾಟಿಹೋಗಿತ್ತದು. ಪ್ರಾಣವಾಯು ಒಕ್ಕಲುದೆಗೆದು 

ಹೊಸಮನೆಯನ್ನು ಹುಡುಕುತ್ತಿದ್ದ ಸಮಯವದು. 



ಮತ್ತೇನು? ಕಾಲನ ಹಿಡಿತದಂತಿದ್ದ ಕಾಲ ಹಿಡಿತವನ್ನು ಬಂಕೆ 

ಯನು ಆಗಲೂ ಬಿಟ್ಟಲ್ಲ. ಹಾಗೆಯೇ ಸೆಳೆದುಕೊಂಡು ಅರಮನೆಯ 

ಮುಂದುವರಿದನು. ಭಟರು ಹಿಂಬಾಲಿಸಿದರು. ಏರನ್ನೇರುವಲ್ಲಿ, ದಿಣ್ಣೆ ಯಿಂದ 

ದಿಣ್ಣೆಗೆ ಧಿಂಕಿಡುವಲ್ಲಿ, ಇಳಿವಲ್ಲಿ ಸುಳಿವಲ್ಲಿ, ಬಗೆಬಗೆಯಾಘಾತಗಳಿಂದ, 

ಮುಂದಿನ ಸೆಳೆತದಿಂದ ಹುಲಿರಾಯನ ಮೈ ಪಟ್ಟಪಾಡನ್ನು ಕನವರಿಸಲಿಕ್ಕೂ 

ಸಾಧ್ಯವಿಲ್ಲ. ಕಂಡೇತೀರಬೇಕು! ಪಂಚಮಹಾವೀರರು ಮೇಲಿನ ತಪ್ಪಲಿ 



೨೯----------------------------------------------------------------- 



ನಿಂದ ದಾರಿಹಿಡಿದು ಬಂದು ಹೆಬ್ಬಾಗಿಲಲ್ಲಿ ಒಳಹೊಕ್ಕರು. ಕಾಂಚನಾದಿ 

ಗಳು “ಜಯ ಜಯ ಮಹಾವೀರ ಬಂಕೆಯ" ಎಂಬ ಜಯಘೋಷವನ್ನೆಬ್ಬಿಸಿ 

ದರು. ನಾದವದು ಬಾಂದಳವನ್ನು ಮುಟ್ಟಿತು. ರಾಜ್ಯಾಂಗಣದಲ್ಲಿ ಜನ 

ಸಂದಣಿ ಕಿಕ್ಕಿರಿದುಹೋಗಿತ್ತು. ಅಲ್ಲಲ್ಲಿ ಬೊಂಬಾಳ ದೀವಿಗೆಗಳು ಬೆಳಗು 

ತ್ತಿದ್ದುವು. ನಡುವೆ ಜನಸಮ್ಮರ್ದವನ್ನು ತೊಲಗಿಸಿ ಬಂಕೆಯನು ಆ 

ಹುಲಿಯ ಶರೀರಾನಶೇಷವನ್ನತ್ತ ಎಸೆದನ. ಅಲ್ಲಿ ಹಿಡಿದ ಹಿಮ್ಮಡವನ್ನಿಲ್ಲಿಯೇ 

ಬಿಟ್ಟುದು! ಜಯನಾದ ಮತ್ತೆ ಮೊಳಗಿತು. ಏಕಚಕ್ರ ನಗರದ ಬಕಾಸುರನ 

ಅವಸ್ಥೆ ಈ ವ್ಯಾಘ್ರಾಸುರನಿಗಾಯಿತು. ಕಲಿಯುಗದ ಭೀಮ! ರಣ ಪರಶು 

ರಾಮ!” ಎಂದು ಆನಂದಾತಿರೇಕದ ಪ್ರಜಾವರ್ಗ ಹಾಡಲಾರಂಭಿಸಿತು. 

ಬಂಕೆಯಾದಿಗಳತ್ತ ಸಾರಿದರು, ಉಪಕಥೆಯನ್ನುಳಿದ ನಾವಿತ್ತ ಸಾರುವ. 


ಹೇಗೆ? ಇಂಥ ಬಂಕೆಯನನ್ನು--ಅಂಗರಕ್ಷಕರು ಹಾಗಿರಲಿ, ಏಕಾಂಗಿ 

ಯಾಗಿದ್ದರೂ ಐವತ್ತು ನೂರು ಮಂದಿ ಉಂಡಾಡಿಗಳಿಗೆ ಹಿಡಿದು ಹಿಂಡಿ 

ಹಿಳಿದು ಬಿಡಬಹುದೆಂಬ ಭಾವನೆಯೆ? ಆದರೆ ಕತೆ ಇದು ಪೌರಾಣಿಕ 

ವಾಗಿ, ಅಲ್ಲವೆ ಬಣ್ಣ ಕೊಟ್ಟ ಪಂಚತಂತ್ರದ ಕಥೆಯಾಗಿ ಈಗಿನ ಸುಶಿಕ್ಷಿತ 

ರೆಂಬವರಿಗೆ ಕಾಣಬಹುದು. ಇರಲಿ, ಇಂಥವರು ಎಷ್ಟೆಷ್ಟೋ ಓದಿ” ಪುಸ್ತಕ 

ಪಾರಾಯಣವೆಸಗಿದವರಾಗಿರಬಹುದು. ಬಾಲ್ಯದಲ್ಲಿ ನಿಯಮಬದ್ಧವಾಗಿ 

ಬ್ರಹ್ಮಚರ್ಯವನ್ನು ಪಾಲಿಸಿ, ಗುರುಕುಲದ ವಿದ್ಯಾಭ್ಯಾಸವನ್ನು ಪೂರೈಸಿ,

ಗೃಹಸ್ಥಾಶ್ರಮವನ್ನು ಕೈಕೊಂಡ ಸುಶಿಕ್ಷಿತರು ಎಷ್ಟು ಮಂದಿ? ಅದರಿಂದಲೇ 

ಹಿಂದಿನ ಅಪ್ರತಿಮಚಾರಿತ್ರಿಕ ಕಥೆಗಳನ್ನು ಕೇಳುವಲ್ಲಿಯೂ ಅವರಿಗೆ 

ಸಂದೇಹ. ಕೀರ್ತಿಶೇಷರಾದ ಇತ್ತಣ ನಮ್ಮ ರಾಣಾಪ್ರತಾಪಸಿಂಹ - ಛತ್ರಪತಿ 

ಶಿವಾಜಿ- ಝಾಂಸಿ ಲಕ್ಷ್ಮೀಬಾಯಿ- ಏಕಾಂಗವೀರ- ತಾಂತ್ಯಾಟೋಪಿ 

ಗಳೆಂಬವರ ಕತೆಗಳೊಳಗೂ ಹಲವಂಶ ಅವರಿಗೆ ಕಟ್ಟು ಕತೆಯೇ. ಕಾರಣ 

ವೇನೆಂದರೆ ಅವರೇ ಕಟ್ಟು ಕಥೆಯಾಗಿ ಬಿಟ್ಟಿದ್ದಾರೆ. ತಲೆದಿರುಗುವಾತನಿಗೆ- 

ತನ್ನ ತಲೆಯಲ್ಲ--ಊರೇ ಗರ್ರನೆ ತಿರುಗುತ್ತಿದೆ. ಗಿಳಿಪಾಠದಂತೆ ಕಲಿತು 

ಬಂದ ಓದು. ಓದಲ್ಲ. ಕಲೆತು ಬಂದು ಎಡೆಗೊಂಡ ಓದೇ ಓದು. ನಿಜ 

ವಾದ ಸುಶಿಕ್ಷಿತರೆಂದರೆ  ಅಂಥವರೇ. ಪರಾಕ್ರಮದಲ್ಲಿ ಈ ವರೆಗೂ ನವೆದು 

ಸವೆದ ನಮ್ಮ ನಾಡಿದು ಸಂಶಯಾತ್ಮಕವಾಗಿಬಿಟ್ಟಿದೆ. 'ಸಂಶಯಾತ್ಮಾವಿನಶ್ಯತಿ' 

ಎಂಬುದನ್ನು ಪರಾಂಬರಿಸಿ. ವೀರ ಬಂಕೆಯನನ್ನು ಹಿಂಬಾಲಿಸಿರಿ. 

==============

೩೦--------------------------------------------------------------------- 



ಎರಡನೆಯ ಪರಿಚ್ಛೇದ 


ಒಳಸಂಚು 


ಗಂಗರಾಜವಂಶವೆಂದರೆ ಅತಿ ಪುರಾತನ ಕಾಲದಿಂದಲೂ ಪ್ರಸಿದ್ಧ 

ವಾದ ಶಾಸನಾದಿ ವಿಖ್ಯಾತವಾದ ಕನ್ನಡ ರಾಜವಂಶಗಳೊಳಗೊಂದು. ರಾಜ 

ನೀತಿಗನುವಾಗಿ ಹಲಮಂದಿ ಹೆಸರಾಂತ ಅರಸರು ಆಗಿ ಹೋಗಿದ್ದರು ಆ 

ವಂಶದಲ್ಲಿ. ಸಾಲಾಗಿ ಹಲವರು, ಅಲ್ಲವೆ ಕೆಲವರಾದರೂ ಅಂಥ ಪ್ರಜಾ 

ರಂಜಕ ರಾಜರು ಆಳಿ-ಬಾಳಿದ ಮೇಲೆ ಇಡಿ ವಂಶಕ್ಕೇ ಹೆಸರಾಗುತ್ತಿದೆ. 

ಇದು ರಾಜ ವಂಶಕ್ಕೆ ಅಲ್ಲ; ನಮ್ಮಂಥ ಸಾಮಾನ್ಯರ ಮನೆತನಗಳಿಗೂ 

ಮೀಸಲಾದುದೇ. ಆದರೆ, ಕೆಯ್ಯ ಕದಿರಿನೊಡಹುಟ್ಟಿ ಹಲವು ಜಳ್ಳೂ 

ನೆಲ್ಲಾಗಿ ಭಾಸವಾಗುತ್ತಿದೆ. ಕೆಯ್ಕೊಯ್ದ ಒಕ್ಕಲಿಗರು, ಮೊದಲು ಅ ಜಳ್ಳಿಗೂ 

ಕುಲದ ಮನ್ನಣೆಯಿತ್ತು ನೆಲ್ಲಿನೊಡನೆ ಹೊತ್ತುಕೊಂಡು ಬಂದು ಅಂಗಣದಲ್ಲಿ 

ರಿಸುತ್ತಾರೆ. ಆ ಮೇಲೆ ಕೆಯ್ಬಡಿದು ಒಣಗಿಸುವ ಪರಾಂಬರಿಕೆ ಸಾಗಿ 

'ಇದು ನೆಲ್ಲು ಅದು ಜಳ್ಳು' ಎಂದು ವಿಂಗಡಿಸುತ್ತಾರೆ. ಆ ಪರಾಂಬ ರಿಕೆಯ 

ಕಣ್ಣಿಗೂ ತಪ್ಪಿ ಕೆಲಕೆಲವು ಜಳ್ಳು- ಅರೆ ಜಳ್ಳು- ಹೊಟ್ಟುಗಳೂ ನೆಲ್ಲಿ

ನೊಟ್ಟಗೆ ರಾಶಿಗೂಡುತ್ತಿವೆ, ಆದರಂತೆ ಕುಲವಿಡಿದು ಬಂದ ನಿರರ್ಥಕ 

ವ್ಯಕ್ತಿಗಳೂ ಕೆಲಗಾಲದ ವರೆಗೆ ರಾಜರೆನ್ನಿಸಿ 'ಪ್ರತ್ಯಕ್ಷ ದೇವತೆ'ಗಳಾಗಿ 

ಬಿಡುವುದೂ ಇದೆ. ನೋಡಿರಿ; ಇತ್ತೀಚೆಗೆ ಆ ಕಟ್ಟಿಟ್ಟ ಭತ್ತಗಳನ್ನೆಲ್ಲ ಕುಟ್ಟಿ 

ಅಕ್ಕಿಯಾಗಿ ಮಾಡಿದರಲ್ಲವೆ? ಕುಲವಿಡಿದು ಬೆಂದವುಗಳಿಲ್ಲ ತೂರಿ ಹಾರಿ 

ಗಾಳಿಯ ಗಂಟಾದುವು. ಆದಕ್ಕೆ ಶುದ್ಧವಾದ ಅಕ್ಕಿಯೊಡನೆ ವರ್ಣ ಪ್ರಮಾಣ 

ಗಳಿಂದೊಂದಿ ಕಲ್ಲ ಹರಳುಗಳೂ ಸೇರಿಬಿಡುವುದುಂಟು. ಜಾಣಾಕ್ಷರು 

ಅವನ್ನೂ ಗೇರಿ ವಿಂಗಡಿಸುತ್ತಾರೆ. ಆದರೆ ಅಲ್ಲಿಯೂ ಮೈಮರೆಯಿಸಿ 

ಕೊಂಡು ಊಟದಲ್ಲಿ ಮಾತ್ರ ಕಟಕ್ಕೆಂದು ಉಗುಳಿಕೆಯ ಮನ್ನಣೆಗೊಳ್ಳುವವು 

ಗಳೂ ಇದ್ದಾವೆ. ಇನ್ನು ಕೆಲವು ಹೊಟ್ಟೆಯೊಳಗಾಗಿ ಹೋಗುವುದೂ ಇವೆ. 

ಕೆಲವು ರೋಗ ನಿದಾನಗಳಾಗುವುದೂ ಇವೆ. ಪ್ರಕೃತ ತಳಕಾಡಿನ ಅರಸ 

ನಾದ ರಾಜಮಲ್ಲನೆಂಬ' ಗಂಗರಾಜನು ಅಂಥವನೇ. 


ಈ ಗಂಗನೂ, ಇವನ ಭಾವನೆಯೊಡನೆ ಹೆಣೆದೊಂದಾದ ಕೆಲವರೂ, 

ರಾಷ್ಟ್ರಕೂಟ ಸಾರ್ವಭೌಮ ನೃಪತುಂಗನ ಸಾಮಂತವರ್ಗದಲ್ಲಿ ಸೇರಿದ 



೩೧---------------------------------------------------------------------



ವರೇ. ಆದರೆ, “ಬರುವ ಕಾಲ ಬರಲಿ! ಮಾಳಿಗೆ ಮನೆ ಕಟ್ಟಿಯೇನು,” 

ಎಂದು ವಟವೃಕ್ಷದ ಮೇಲೆ ಪ್ರತಿಯೊಂದು ಮಳೆಗಾಲದಲ್ಲಿಯೂ, ನೆನೆ 

ಯುವ ಅನಂದದಲ್ಲೇ ಕಾಗೆಗೆಗಳು ದಿನದೂಡುವುವಂತೆ. ಎಷ್ಟೋ 

'ಬರುವೆ ಕಾಲ' ಬಂದು ಹೋಗಿ ಇವರೆಣಿಕೆಯ 'ಮಾಳಿಗೆ ಮನೆ' ಇನ್ನೂ  

ಆಗಿಲ್ಲ. ಆದರೆ ಆ ಕಾಗೆಗಳಂತೆ ಇವರು ಸ್ವಕಾರ್ಯವನ್ನು ಮರೆತಿರಲಿಲ್ಲ. 

ಯಾವಾಗಲೂ ಹಂಚಿಕೆ-ಹೊಂಚಿಕೆಗಳಲ್ಲೆ ಮಗ್ನರಾಗಿದ್ದರು. ಆದರೇನು? 

ಅಡಿಯ ಪಂಚಾಂಗವಾಯಿತು ಎನ್ನುವಲ್ಲಿ ಎಲ್ಲವೂ ಜರಿದುಹೋಗುತ್ತಿತ್ತು. 

ಅದು ಪಂಚಾಂಗ ದೋಷವೋ ಅವರ ಜಾತಕದೋಷವೋ ಗೊತ್ತಿರಲಿಲ್ಲ. 

ಹಿಂದಿನ ಭಾಗದಲ್ಲಿ ಸೂಚಿತವಾದಂತೆ ಜರಿದು ಬಿದ್ದುದೂ ಅಂಥ ಪಂಚಾಂಗ 

ಗಳಲ್ಲೊಂದು, ಗಂಗರಾಜನ ಆ ವರೆಗಿನ ಜೀವನವೇ ಸೋಲದ ಮೇಲಿನ 

ಸೋಲ-ಜೀವನ, ಆದರೂ ಅವನು ನಿರಾಶನಾಗಿಲ್ಲ, " 'ಬರುವ ಕಾಲ' 

ಬರಲಾರದೇ?” ಎಂಬುದೇ ಆಶಾಂಕುರ, 


ಆ 'ಕಾಲ'ವೂ ಎಂದೋ ಬರುತ್ತಿತ್ತು. ತಾನು ಅರುವತ್ತು- ಅರು 

ವತ್ತೈದರ ಗಡಿಯನ್ನು ಮುಟ್ಟಿದುದರಿಂದ ಕುಮಾರ-ಬೂತುಗನ ಏಳಿಗೆಯ 

ರೂಪವಾಗಿ ಅರಳಿ ಗಮಗಮಿಸುವುದಲ್ಲವೇ ಆ ಉತ್ತಮ ಕಾಲವೆಂದರೆ? 

ಆತ್ಮಾ ವೈ ಪುತ್ರ ನಾಮಾ ಆಸೀತ್‌" ಎನ್ನುತ್ತಾರೆ ಬಲ್ಲವರು. ಆದಕ್ಕೆ 

ಉತ್ತಮಾರ್ಥವನ್ನೇ ಕಲ್ಪಿಸಿಕೊಂಡು ಪ್ರಾಯಭರಿತನಾದ ಮತ್ತು ವಿನಯ 

ಪೂರ್ಣನಾದ ಆ ಕುಮಾರನ ಎಣಿಕೆಗನುವಾಗಿಯೇ ಮುಂದಿನ ರಾಜನೀತಿ 

ಯಲ್ಲಿ ರಾಜನು ಬಾಗಬೇಕಾಗಿತ್ತು. ಮತ್ತಿನ ಸಾಗು ನೀಗು-ತಾಗು ಬೀಗು 

ಗಳೆಲ್ಲ ಅವನನ್ನೇ ಹೊತ್ತಿರಬೇಕಲ್ಲವೆ? ಆದರೆ, ಬೂತುಗನಿಗೂ ಇವನೆದೆಯ 

ಬೀಗದ ಕೈ ಸಿಕ್ಕುವಂತಿರಲಿಲ್ಲ. ಮನಸ್ಸಿನಲ್ಲೊಂದು ಮಾತಿನಲ್ಲಿನ್ನೊಂದು 

ಮಾಟದಲ್ಲಿ ಬೇರೊಂದು. ಅದರಿಂದ ಅವನೂ ತಂದೆಯೊಡನೊಂದಾಗಿರ 

ಲಿಲ್ಲ. ಕಿಚ್ಚು ಕಾಯಿಸಿಕೊಳ್ಳುವಂತಿದ್ದನು. ಆದರೂ ಬೂತುಗನು 

ಕುಮಾರನಾದರೂ ರಾಜನೀತಿಯಲ್ಲಿ ನುರಿತ ಸ್ವತಂತ್ರಾಭಿಪ್ರಾ ಯವುಳ್ಳ 

ವನು. ತಂದೆಯ ಕವಲೆಣಿಕೆದಾರಿಗಳು ಅವನಿಗೆ ಒಗ್ಗು ್ತಿರಲಿಲ್ಲ; ಕೆಲಬಾರಿ 

ನೋವನ್ನೂ ಉಂಟುಮಾಡುತ್ತಿದ್ದುವು. ವಿನೀತವೃತ್ತಿಯಿಂದಾಗಿ ಬೂತು 

ಗನ ರಾಷ್ಟ್ರಕೂಟ ಕುಮಾರನೊಡನೆ ಹಾಲುನೀರಾಗುತ್ತ ಇದ್ದನು. ಆ 

ವಿಶ್ವಾಸದಿಂದಾಗಿ ಕುಮಾರ ಕೃಷ್ಣನ ಸಹೋದರಿ ಚಂದ್ರಬ್ಬ ಲಬ್ಬೆ ಬೂತುಗರ 

ಪ್ರೇಮ ಬಿಂದು ಸಮಿ-ಸಮಾಪಕ್ಕೆ ಆಕೃಷ್ಟವಾಗುತಿತ್ತು. ಅದಕ್ಕೆ ಈ 



೩೨ ----------------------------------------------------------------------



ತಂದೆಯೂ ಸಂಪೂರ್ಣವಾಗಿ ನೆರವಾಗುತ್ತಿದ್ದರೆ ಆ "ಬರುವ ಕಾಲ' ಎಂಬುದು 

ನಲಿದಾಡಿ ಬರುತ್ತಿತ್ತಲ್ಲವೆ! ಈ ಸಂಬಂಧ ವಿಚಾರವು ಆ ರಾಜಸಿಂಹನಿಗೂ 

ಗೊತ್ತಾಗಿದೆ, ಅದರೆ ಆ ಸಂಬಂಧವು ಪ್ರಬಲರಾದ ರಾಷ್ಟ್ರಕೂಟರೊಡ 

ನಾದರೆ, ತನ್ನ ಸಾಮಂತತನವೇ ಸ್ಥಾಯಿಯಾಗಿ ಬಿಡುವುದೆ? ಮುಂದಿನ 

ಮಗನ ಜೀವನ ವಿಚಾರವಂತಿರಲಿ. ಸಾಯುವುದರೊಳಗೆ ಒಂದು ದಿನ 

ಕ್ಕಾದರೂ ತನ್ನ ಗಂಗ ಕುಲದ ಪುರಾತನ-ಪೆರುಮಾಳ್ತನದ ಗದ್ದುಗೆಯನ್ನೇ 

ರುವುದೆಂತು? ಎಂಬೆಣಿಕೆಯಿಂದಲೇ ಅವನ ಮನಸ್ಸು ದೋಣಿಗೆ ಕಾಲಿಡು 

ತ್ತಿದ್ದುದು. 


ನೃಪತುಂಗ ಕುಮಾರನಾದ ಯುವರಾಜ ಕೃಷ್ಣನು ಬೂತುಗನ 

ಪ್ರೇಮಪಾಶಕ್ಕೊಳಗಾಗಿ ತಳಕಾಡಿನ ಕೇದಲದುರ್ಗ--ರಾಜಧಾನಿಗೆ 

ಹೋಗಿದ್ದ ಕಾಲವದು. ತಂದೆ ನೃಪತುಂಗನೆಂದರೆ ಆಲಂಕಾರಿಕರು ಲಕ್ಷಿ 

ಸಿದ 'ಸತೃಣಾಭ್ಯವಹಾರಿ'ಯಲ್ಲ; ಬಲು ಮೇಲ್ತರಗತಿಯ'ವಿವೇಚಕಿ'  

ಎಂಬುದು ಕೃಷ್ಣನಿಗೆ ಗೊತ್ತಿತ್ತು. ಮಾತ್ರವಲ್ಲ, ಆ ಪರಾಂಬರಿಕೆಯಿಂದಲೇ 

ಬೂತುಗನು ವಿನೀತನಾಗಿದ್ದರೂ, ತನ್ನ ತಂದೆಗೊಳಗಾಗಿರಬೇಕಾದುದ 

ರಿಂದ ಆ ವಿನಯವನ್ನು ಅಕ್ಷರಶಃ ಅನುಸರಿಸಲಾರನೆಂದು ಭಾವಿಸಿ, ನೃಪ 

ತುಂಗನು ಮೇಲಿನ ಬಂಧುತ್ವ ಸಂಬಂಧವನ್ನು ಅಲಕ್ಷಿಸುತ್ತಿದ್ದುದೂ ತಿಳಿ 

ದಿತ್ತು. ರಾಜಮಲ್ಲನೆಂದರೆ ಗೋಮುಖ ವ್ಯಾಘ್ರನೆಂದು ಅವನೊಮ್ಮೆ 

ಕೆಲವರಿದಿರಿನಲ್ಲಿಯೂ. ಆಡಿದ್ದನು. ಅದರಿಂದ ಅಂಥ ವಿರೋಧಿಯಲ್ಲಿಗೆ 

ತಾನು ಪಯಣವೆಸಗುವುದು ಗೊತ್ತಾದರೆ ತಂದೆ ಸಮ್ಮತಿಸನೆಂದು ಅವನು 

ತಿಳಿದಿದ್ದನು. ಬೂತುಗನ ಒತ್ತಾಯವನ್ನು ಮೀರಲಾರದ ಕೃಷ್ಣನಿಗೆ, 

“ನುಂಗಿದರೆ ಗಂಟಲು ಸುಡುವುದು, ಉಗುಳಿದರೆ ಶುದ್ಧಗೆಡುವುದು” 

ಎಂಬಂತಾಯಿತು. ಅದರಿಂದ ಮಾನ್ಯಖೇಟ ನಗರಕ್ಕೆ ಎಂದಿನಂತೆ ಬಂದಿದ್ದ 

ಬೂತುಗನೊಡನೆ ಕೆಲದಿನದ ಬೇಟಿಯ. ವಿಹಾರವನ್ನು ಕಲ್ಪಿಸಿಕೊಂಡು 

ಹೊರಟವನು ಪಯಣದ ಮೇಲೆ ಪಯಣವಾಗಿ ಕೇದಲದುರ್ಗದ ಹತ್ತಿರ 

ದಲ್ಲಿರುವ ತಮ್ಮ ರಾಯಭಾರಿಯ ಬೀಡಿಗೈದಿದನು. ಅಲ್ಲಿಂದ ಒಂದೆರಡು 

ದಿನದ ಆತಿಥ್ಯಕ್ಕಾಗಿ ತಳಕಾಡ ರಾಜಧಾನಿಗೆ ಹೋಗಿದ್ದನು. ಆ ಸಮಯ 

ದಲ್ಲಿ ಗುಪ್ತಚಾರರ ಮೂಲಕ ಬಂಕೆಯನ ರಾಜಧಾನೀ ಪ್ರಯಾಣವನ್ನರಿತು 

ಕೊಂಡ ಗಂಗರಾಜನು, ಬೂತುಗನಿಗೂ ಗೊತ್ತಾಗದಂತೆ ಹಿಂದಿನ ಹಂಚಿಕೆ 

ಯನ್ನು ಕಲ್ಪಿಸಿದುದು. “ಇನ್ನೇನು? ಬಂಕೆಯನ ಮೋಕ್ಷವಾದಂತೆಯೇ 



೩೩---------------------------------------------------------------------- 



ಸರಿ. ಕುಮಾರ ಕೃಷ್ಣನೂ ನಮ್ಮ ಪೆಟ್ಟಗೆಯೊಳಗಾದನು. ಈ ಕಡಿವಾಣದ 

ಹಿಡಿತವನ್ನು ಮೀರಿ ಆ ಮಲಖೇಡದ ಮುದಿಗುದುರೆ ಎತ್ತಹೋದೀತು? 

ಒಂದೆರಡು ದಿನಗಳೊಳಗೆ ನಮ್ಮ ಮಿತ್ರರಾದ ವೆಂಗಿಯ ಗುಣಗಾಂಕ ವಿಜ 

ಯಾದಿತ್ಯಾದಿಗಳು ಮಲಖೇಡವನ್ನು ಮುತ್ತಿ, ಕೊಳ್ಳೆ ಹೊಡೆದು ನೃಪತುಂಗ 

ನನ್ನು ಹದಕ್ಕಿಳಿಸಿದ ವಾರ್ತೆಯೂ ಮುಟ್ಟಬಹುದು" ಎಂದು ಮನಸ್ಸಿನಲ್ಲೇ  

ಮಂಡಿಗೆಯನ್ನು ಮೆಲ್ಲುತ್ತಿದ್ದನು. ಅಷ್ಟರಲ್ಲಿ ಬಂಕೆಯನಿಂದ ವಿಧ್ವಸ್ತರಾಗಿ 

ದಿಕ್ಕುಪಾಲಾಗಿ ಓಡಿದ ತನ್ನ ಕಡೆಯವರೊಳಗಿನ ಕೆಲವರು ಬಂದು 

ಏಕಾಂತವಾಗಿ ಸುದ್ದಿಯನ್ನೆಲ್ಲ ಸೂಚಿಸಿದರು. ಗಂಗರಾಜನ ಕಲ್ಪನಾಚಿತ್ರ 

ವೊಂದು ಮಾಸಿತು. ಆಗಲೇ ಯುವರಾಜ ಬೂತುಗನ ದೂತನೊಬ್ಬನು 

ಆಸ್ಥಾನಕ್ಕೆ ಬಂದನೆಂದು ತಿಳಿದ ಗಂಗರಾಜನು ಮೆಲ್ಲನೆ ಅಲ್ಲಿಗೈದಿದನು. 


ದೂತಃ- (ನಮಸ್ಕರಿಸಿ) ಯುವರಾಜರು ಚಕ್ರವರ್ತಿ ಕುಮಾರಕ 

ರೊಡನೆ ಈಗಲೇ ಇಲ್ಲಿಗೆ ದಯಮಾಡಿಸುತ್ತಾರಂತೆ. “ಮಹಾರಾಜರ 

ಸಮಯವನ್ನು ನಿರೀಕ್ಷಿಸಿ ಬಾ” ಎಂದು ಅಪ್ಪಣೆ ಮಾಡಿದರು. 


ರಾಜಮಲ್ಲ:--(ಸ್ವಗತ) ಈ 'ಚಕ್ರವರ್ತಿ-ಕುಮಾರಕ' ಪ್ರಾಣಿ ಇಲ್ಲಿಗೆ 

ಬಂದು ಬೋನಿನಲ್ಲಾದುದೇನೋ ಸಂತೋಷ. ಆದರೆ, ಏರಿಸಿದ ಕಟ್ಟೋ 

ಣದ ಕೀಲೊಂದು ಕಳಚಿಹೋಯಿತಲ್ಲಾ. ಜಡಿದ ಇನ್ನೊಂದಾದರೂ  

ಹೇಗಾಗಿದೆಯೊ? ಅದೂ ಮಂದಟ್ಟಾಗುವ ಮೊದಲೆ ಆ ಪ್ರಾಣಿ ಪ್ರತ್ಯಕ್ಷ 

ವಾಗುವುದು ಸಮ್ಮತವಲ್ಲ, ನಮ್ಮ ಬೂತುಗನಾದರೂ ಸರಿಯಾಗಿರುತ್ತಿದ್ದರೆ 

ಯಾವ ಸಂಶಯಕ್ಕೂ ಎಡೆ ಇರುತ್ತಿದಿಲ್ಲ. ಆ ಗೋವಳ ಕುಲದ 

ಹೆಣ್ಣೊಂದು ಕಣ್ಣಿಗೆ ಬಿದ್ದು ಬೂತುಗನಿವನು ಬರಿಯ ಬೂತೇ ಆಗಿಬಿಟ್ಟಿ 

ದ್ದಾನೆ. ಕೆಸರುಗಂಬವಾದ ಈತನನ್ನು ಆಧರಿಸಿ ಮೇಲೇರಿದಕೆ ರಾಜನೀತಿ 

ಪಾತಾಳದಲ್ಲಾಗಬಹುದು. ಅದರಿಂದ ಈ ಸಂದರ್ಭವನ್ನು ಹೇಗಾದರೂ 

ತಡೆದುಬಿಡುವುದೇ ವಾಸಿ. ಆ ಇನ್ನೊಂದು ಹಂಚಿಕೆಯ ಸುದ್ದಿ 'ಇದಮಿತ್ಥ೦'  

ಆಗಲಿ, 


ದೂತ: .. ಕುಮಾರ ಕೃಷ್ಣ ರಾಜರಿಗೆಬೇಗನೆ ಹಿಂದಿರುಗಬೇಕಂತೆ. 

ಅದರಿಂದ ಸಮಯವನ್ನರಿತು ಮಿಂಚಿನ ವೇಗದಲ್ಲಿ ಬರಬೇಕೆಂದು ಅಪ್ಪಣೆ 

ಯಾಗಿದೆ ಮೆಹಾಸ್ವಾಮೀ. 


ರಾಜಮಲ್ಲ:- (ಅಸಯ್ಯಭಾವದಿಂದ) ಯಾರ ಅಪ್ಪಣೆಯೊ? 


ದೂತ:- ನಮ್ಮ ಯುವರಾಜರದು ಮಹಾಸ್ವಾಮೀ.  



೩೪------------------------------------------------------------------



ರಾಜ:--ಏನು ನಮ್ಮ ಆನುಕೂಲ್ಲಕ್ಕಿಂತಲೂ ಅವನ ಅಸ್ಪಣೆ 

ಮೇಲಾಯಿತೆ? ಚಕ್ರವರ್ತಿ ಕುಮಾರರನ್ನು, ನಾವು ಕಾಣುವಂತೆ ಕಾಣ  

ಬೇಡವೆ? ಹೂಂ, ಆ ಪದ್ಧತಿಗಿದ್ದ ಈ ಮೊನ್ನೆಯ ಹುಡುಗರಿಗೆಲ್ಲಿ ಗೊತ್ತು? 


ದೂತ:-ಹಾಗಾದರೆ ಏಂದು ನಿವೇದಿಸಬೇಕು? 


ರಾಜ:--ಅದನ್ನೇ ಈಗ ಆಲೋಚಿಸುತ್ತಿರುವುದು. ಇರಲಿ; ಮಾನ  

ಖೇಟದ ಯುವರಾಜರೊಡನೆ ಬೇರೆ ಯಾರಾದರೂ ಇದ್ದಾರೊ? ಅಥವಾ  

ಅವರೊಬ್ಬರೊ? 


ದೂತ: -ಒಬ್ಬರಿದ್ದಾರೆ ಮಹಾಸ್ತಾಮಾ. ಅವೆರಿಗಿಂತಲೂ ಚಿಕ್ಕವ 

ರೊಬ್ಬರಿದ್ದಾರೆ. ನೋಟಕ್ಕೆ ಯುವರಾಜರನ್ನೂ ಮೀರುವ ಸೌಂದರ್ಯ 

ಶಾಲಿಗಳು. ಅವರೂ ಅರಸು ಮನೆತನದವರಾಗಿರುವಂತೆ ತೋರುತ್ತಿದೆ. 


ರಾಜ:--ಬೇರೆ ಯಾರೂ ಇಲ್ಲವೊ? 


ದೂತ:--ಅವರು ಬೇಟೆಗಾಗಿ ಹೊರಟನರಂತೆ. ಒಡನಾಡಿಗಳಾಗಿ 

.............


ರಾಜ: -ಆ ಪುರಾಣವೆಲ್ಲ ಹಾಗಿರಲಿಯೋ. "ಉಂಡಾಯಿತೊ. 

ಗುಂಡಾ" ಎಂದರೆ "ಮುಂಡಾಸು ಮೂವತ್ತು ಮೊಳ" ಎನ್ನುವ ಉಪಕಥೆ 

ಎಲ್ಲಾ ಗೊತ್ತಿದೆ. ಅದು ಹಾಗಿರಲಿ. ಕೇಳಿದುದಕ್ಕೆ ಮಾತ್ರ ಉತ್ತರ ಹೇಳು. 


ದೂತ:--ಇದ್ದವರೆಲ್ಲರೂ ರಾಷ್ಟ್ರಕೂಟ ರಾಯಭಾರಿಗಳ ಬೀಡಿನಲ್ಲಿ 

ದ್ದಾರಂತೆ ಮಹಾಸ್ವಾಮೀ. 


ರಾಜ:---ಇರಲಿ ಕುಮಾರ ಕೃ ಷ್ಣರಾಜರ ಒಟ್ಟಗಿದ್ದವರ ಹೆಸರೇನು 

ಗೊತ್ತಿದೆಯೆ? 


ದೂತ:--ನನಗೆ ಸರಿಯಾಗಿ ಗೊತ್ತಿಲ್ಲ ಸ್ವಾಮೀ. ಆದರೂ ಅವ: 

ರವರು ಮಾತಾಡುತ್ತಿ ರುವಲ್ಲಿ 'ರಾಣಾ ಬಾಲಚಂದ್ರ' ಎಂದು ಅವರೆ ಹೆಸ. 

ರಾಗಿರಬೇಕೆಂದು ತೋರಿತು. 


ರಾಜ:-(ಸ್ವಗತ) "ರಾಣಾ ಬಾಲಚಂದ್ರ! ..,. ಈ ಹೆಸರು ರಾಜ 

ಪುತ್ರರಿಗೇ ಇರಬೇಕು. ಆದರೆ, ಕುಮಾರ ಕೃಷ್ಣನನ್ನುಳಿದು ಬೇರಾವ: 

ರಾಜಪುತ್ರನೂ ಅಲ್ಲಿಲ್ಲವಲ್ಲ! ನಮಗೆ ಗೊತ್ತಿರುವಂತೆ, ಸಾಮಂತ ವರ್ಗ 

ದೊಳಗಿನ ಯಾವ 'ಅರಸು ಮನೆತನಡೊಳಗೂ ಈ ಹೆಸರಿನ ಕುಮಾರಕರಿಲ್ಲ. 

ಒಂದುವೇಳೆ ಇದ್ದರೂ 'ಈ ಬಸವನ ಹಿಂದೆ ಬಾಲವಾಗಿ ಅಲ್ಲಾಡುವವರಿಲ್ಲ,' 



೩೫-------------------------------------------------------------------------- 



ಇದಾವ ಬಾಲವಿರಬಹುದು?........(ದೂತನನ್ನು ಕುರಿತು) ಇರಲಿ; ಅವನೇನು 

ವೆಂಗಿಯವನಾಗಿರಬಹುದೆ? 


ದೂತ: ನನ್ನಂಥವರಿಗೆ ಅದೆಲ್ಲ ಹೇಗೆ ಗೊತ್ತಾದೀತು? 


ರಾಜ:-- ಅವನು ಕನ್ನಡವನ್ನೆ ಆಡುತ್ತಾನೆಯೆ? ಅಲ್ಲವೆ ಗುಜರಾತಿ 

ಗಿಜರಾತಿ ಆಡುತ್ತಾನೆಯೆ? 


ದೂತ:--ಅವರಿಬ್ಬರೇ ಮಾತಾಡುವಲ್ಲಿ ಒಮ್ಮೊಮ್ಮೆ ಬೇರಾವುದೋ 

ಒಂದು ಮಾತು ಬರುತ್ತಿದೆ. ಅದಾವ ಮಾತೆಂದು ನನಗೆ ಗೊತ್ತಾಗುವಂತಿಲ್ಲ 

ಮಹಾಸ್ವಾಮೀ. 


ರಾಜ: (ಸ್ವಗತ) ಹುಂ! ಹಾಗಾದರೆ ಗುಜರಾತಿನ ಯಾವುದೋ 

ಒಂದು ಶಾಖೆಗೇರಿದ ಮರಿಯಾಗಿರಬಹುದು. ಅಲ್ಲಿ, ಅವುಗಳು ಎಷ್ಟಿವೆ, 

ಇದಾವುದು? ಎಂಬುದಾದರೂ ಯಾರು ಬಲ್ಲರು! (ಪ್ರಕಾಶ) ಹುಂ, ಹಾಗಾ 

ದರೆ ಹೋಗು. ಮಹಾರಾಜರಿಗೆ ಏನೋ ಮೈಯಲ್ಲಿ ಆಲಸ್ಮವಿದೆ. ದಯ 

ವಿಟ್ಟು. ಶ್ರೀಮಂತ ಯುವರಾಜರು ಒಂದೆರಡು ದಿವಸ ಅರಮನೆಯ ಆತಿಥ್ಯ 

ದಲ್ಲಿರಬೇಕೆಂದೂ, ಬಹುಶಃ ನಾಳೆಯೇ ಭೇಟಿಯ ಸಮಯವನ್ಸೇರ್ಪಡಿಸಿ 

ಮಹಾರಾಜರೇ ತಿಳಿಸುವರು ಎಂದೂ ನಮ್ಮ ಮಾತಾಗಿ ಹೇಳು. 


ಅದನ್ನಾಲಿಸಿ ದೂತನು ಅತ್ತ ಸಾಗಿದನು. 


=============


` ರಸಿಕ ಗೋಷ್ಠಿ 


ಬೂತುಗನ ಅರಮನೆಯಲ್ಲಿ ದೂತನನ್ನೇ ಪ್ರತೀಕ್ಷಿಸುತ್ತಿದ್ದರು 

ಕುಮಾರ-ಕೃಷ್ಣರಾಜಾದಿಗಳು. ಅವನ ಆಗಮನವನ್ನು ಕಾಣದೆ ಒಂದಷ್ಟು 

ಬೇಸರವೂ ಆಯಿತು. ಅದನ್ನರಿತ ಬೂತುಗನು ಹೀಗೆ ಮಾತನ್ನೆತ್ತಿದನು: 

“ದೂತನನ್ನು ಕಾಣದೆ ಯುವರಾಜರಿಗೆ ಒಂದಷ್ಟು ವೈಕಲ್ಯವಾದಂತೆ 

ತೋರುತ್ತಿದೆ. ನನಗೆ ಗೊತ್ತಿ ದೆಯಷ್ಟೆ? ನೀವೆಲ್ಲ ಕಾಲದ ತೂಕಕ್ಕನು 

ವಾಗಿಯೇ ಬಳೆದು ಬಂದವರು ಮಾಡುವುದೇನು? ನಮ್ಮ ತೀರ್ಥ 

ರೂಪರೆಂದರೆ ಹಾಗಲ್ಲ. ಅವರದೇ ಕಾಲ, ಅವರದೇ ತೂಕ. 


ಬಾಲಚಂದ್ರ:- ಹೌದು; 'ರಾಜಾ ಕಾಲಸ್ಯ ಕಾರಣಂ' ಎಂಬ 

ಶಾಸ್ತ್ರಾನುಸಾರವಾದ ನಡವಳಿಯವರಲ್ಲವೆ? 


ಬೂತು:--ಹೂಂ, ಹಾಗೆನ್ನಬೇಕು. ಯಾವ ಬೇಸರವಾದರೂ 

ನನ್ನನ್ನು ನೋಡಿ ಮರೆಯಬೇಕು. 



೩೬------------------------------------------------------------



ಬಾಲ:--(ಮಂದಹಾಸದಿಂದ) ಹಾಂ, ಅವರ ಈ ನಡವಳಿಯನ್ನಷ್ಟೇ 

ಅಲ್ಲ; ನಿಮ್ಮನ್ನು ನೋಡಿ ಅವರನ್ನು ಕೂಡಾ ಮರೆತುಬಿಡುವುದೆಂದು 

ನಿರ್ಧರಿಸಿಯೇ ನಾವು ಬಂದುದೆಂದು ನಿಮಗೆ ಗೊತ್ತಿಲ್ಲವೆ? 


ಬೂತು:--ಹೌದು, ಗೊತ್ತಿದೆ. ಆದರೂ, ನನ್ನ ಒತ್ತಾಯಕ್ಕೊಳ 

ಗಾಗಿ ಬಂದಿರುವ ಮಾನ್ಯಾತಿಥಿಗಳು ಈ ರೀತಿಯ ತೊಡಕನ್ನನುಭವಿಸ 

ವಂತಾದುದರಿಂದ ಹಾಗೆ ಹೇಳಬೇಕಾಯಿತು. 


ಬಾಲ: (ನಗುತ್ತಾ) ಆಯಿತು, ಉಪಚಾರದ ಮಾತಿದು. 


ಬೂತು: —ಏನಯ್ಯಾ ನಗುತ್ತೀರಿ? * 'ಸಂಪ್ರಾಪ್ತ ಪರಿಚಯಾ ನಾ 

ಮುಪಚಾರಃ ಕೈತವಂ ಭವತಿ' ಎಂಬ ತಾತ್ಪರ್ಯವನ್ನಿಟ್ಟು ನನ್ನಲ್ಲಿ ಕಪಟ 

ವರ್ತನೆಯನ್ನು ಆರೋಪಿಸುತ್ತೀರೇನು? 


ಬಾಲ: ಅದೇನು? ನೀವೂ ನಮ್ಮ ಯುವರಾಜರೂ 'ಸಂಪ್ರಾಪ್ತ 

ಪರಿಚಯ'ರಾಗಿರಬಹುದು. ನಾನು ಅಂಥವನಲ್ಲವಷ್ಟೆ? 


ಬೂತು:--ಯುವರಾಜರ ಸಂಬಂಧದಿಂದಾಗಿ ನೀವೂ ಗೆಳೆಯರೇ. 

ಗುಜರಾತಿನ ರಾಷ್ಟ್ರಕೂಟ ಮನೆತನವೇನು ನಮಗೆ ಹೊರಗಿನದೇ? ಮಾತ್ರ 

ವಲ್ಲ; ಅರಮನೆಯಿಂದ ಹೊರಟುದು ಮೊದಲ್ಗೊಂಡು ಹಲದಿನಗಳ ಒಡ 

ನಾಡಿಕೆ ನಮ್ಮಲ್ಲಿಯೂ ತಲೆದೋರಿದೆಯಷ್ಟೆ? 


ಬಾಲ:--ಆಗಲಿ; ಆದರೂ ಧಾರ್ಮಿಕ ಪ್ರೇಮದ ಜೀವಾಳವನ್ನು 

ಕಾರ್ಯಸಂದರ್ಭದಲ್ಲೇ ಕಾಣಬೇಕಲ್ಲವೆ? ಯಾವುದನ್ನಾದರೂ ಕಾಣ 

ಬಹುದು; ಇಲ್ಲಿಂದಲ್ಲಿಗೆ ಹೋದ ನಿಮ್ಮ ದೂತನ ಹೋದ ಹೆಜ್ಜೆಯುಂಟು. 

ಬಂದ ಹೆಜ್ಜೆ ಇಲ್ಲ, 


ಬೂತುಗನು ಬೇಸತ್ತು ಹೊರಗೆ ನೋಡುವಲ್ಲಿ ಮಾದಪ್ಪನ ತಲೆಯ 

ಕುಡಿ ತೋರಿತು, “ಹಾಗಲ್ಲ, ಬರುವ ಹಜ್ಜೆ ಅದೋ ತೋರುತ್ತಿದೆ.” 

ಎಂದನವನು. ಬಂದ ದೂತನ ಮಾತನ್ನರಿತ ಮೇಲೆ ಕುಮಾರ ಕೃಷ್ಣನಿ 

ಗಂತೂ ಬೇಸರವೇ ಆಯಿತು. “ಹೂಂ, ನಮಗೇನು ಬಂದದಾರಿಗೆ ಸುಂಕ 

ವಿದೆಯೆ?” ಎಂದನು. 


ಬೂತು:--ಕ್ಷಮಿಸಬೇಕು; ಮಾನ್ಯ ಯುವರಾಜರಿಗೆ ನನ್ನಿಂದಾಗಿ 

.............


* "ಸಂಪೂರ್ಣ ಸರಿಚಯವಿರುವನರಲ್ಲಿ ಉಪಯೋಗಿಸಿದ ಉಪಚಾರನೆಂಬುದು 

ಕಪಟವಾಗಿ ಪರಿಣಮಿಸುತ್ತದೆ. "



೩೭--------------------------------------------------------------



ಬಹಳ ತೊಂದರೆಯಾದಂತಾಯಿತು. ಒಂದು ವೇಳೆ ನಾಳೆಯ ವರಿಗೆ 

ಇಲ್ಲಿರಲು ಅಸಾಧ್ಯವೆಂದಾದಲ್ಲಿ ನಾನೂ ಒಟ್ಟಿಗೇ ಬರುತ್ತೇನೆ. 



ಕುಮಾರ-ಕೃಷ್ಣ: —ಏನು ಸ್ವಾಮಿ, ನನ್ನಂಥವನು ಬಂದು ಭೇಟ. 

ಗಾಗಿ ಹೀಗೆ ಕಾಯುವುದೆಂದರೇನು? ಸಮಯ ನಿರೀಕ್ಷೆಗಾಗಿ ದೂತನನ್ನು 

ಕಳುಹುವುದೆಂದರೆ ಅದೊಂದು ಮಾನ್ಯರ ಆಚಾರ. ನಿಮಗೆ ಇಷ್ಟರಲ್ಲೇ 

ಗೊತ್ತಾಗಿರಬೇಕು; ನಮ್ಮ ಆಸ್ಥಾನದಲ್ಲಿ ಭಾರತ ಭೂಮಿಯ ಹೊರಗಿನ 

ಮತ್ತು ಒಳಗಿನ ರಾಯಭಾರಿಗಳು ಆಗಾಗ ಬಂದು ಹೋಗುತ್ತಾರೆ. ಎಲ್ಲವೂ 

ನೀತಿನಿಯಮಿತ ಯಂತ್ರಕ್ರಿಯೆಯಂತೆ. ಒಂದೇ ಒಂದು ನಿಮಿಷದ ತಡವಳಿ 

ಇಲ್ಲದೆ ನಮ್ಮ ಚಕ್ರವರ್ತಿಗಳ ಭೇಟಿ ಸಾಗುತ್ತಿದೆ. .ನಾವೇನು ನಾಡಾಡಿ 

ಗಳಾಗಿ ಇಲ್ಲಿ ಬಂದವರೆ? ಒಂದು ರೀತಿಯಲ್ಲಿ ನೋಡಿದರೆ ನಾಡಾಡಿ 

ಗಳಾಗಿ ಬಂದುದೂ ನಿಜ. ಆದರೆ ಗೊತ್ತಾದ ಮೇಲೂ ಅರಮೆನೆಗಿರಬೇಕಾದ 

ಆಚಾರೋಪಚಾರಕ್ಕೆ ಸೊನ್ನೆ ಸುತ್ತಿದೆ. 


ಈ ಮಾತನ್ಹಾಲಿಸಿದ ಬೂತುಗನು ಅಸ್ತವ್ಯಸ್ತನಾದನು. 'ಏನು ಹೇಳುವುದು 

ಏನು ಮಾಡುವುದು ಎಂದು ಅರಿಯದ ಆತನ ಮನಸ್ಸು ಆಳುದ್ದದ 

ನೀರಿನಲ್ಲಿ ಮುಳುಗಿ ಕಂದೆರೆದಂತಾಯಿತು. ಇದನ್ನರಿತ ಬಾಲಚಂದ್ರನು 

ನಗುತ್ತಾ ಮೆಲ್ಲನೆ ಮಾತನ್ನೆತ್ತಿದನು. 


ಬಾಲ:--ಅಣ್ಣಯ್ಯಾ, ಇದೇನು, ನಿನ್ನಮನೋವೃತ್ತಿ ಹಲಬಾರಿ 

ತಣು ಸೇರಿಕೊಂಡಿದ್ದರೂ, ಒಮ್ಮೊಮ್ಮೆ ಫಕ್ಕನೆ ಮೂಗಿನ ಮೇಲಾಗುತ್ತಿದೆ? 

ಒಮ್ಮೆ ನಮ್ಮ ಪ್ರಿಯ ಯುನರಾಜರನ್ನು ಕುರಿತು ನೀನು “ನಿಮ್ಮನ್ನು ನೋಡಿ 

ಅವರನ್ನು, ಎಂದರೆ ಅವರ ತಂದೆಯವರನ್ನೂ ಕೂಡ ಮರೆತುಬಿಡುವುದೆಂದು. 

ನಿರ್ಧರಿಸಿಯೇ ನಾವು ಬಂದುದು” ಎಂದಂದುದು ಮರೆತು ಹೋಯಿತೆ? 

ಆಗ ನಾನಂದ ಆ ಮಾತು ನನ್ನ ಭಾವನೆಯಿಂದುಕ್ಕಿದುದಲ್ಲ. 


ಕು. ಕೃಷ್ಣ -—(ಮಂದಹಾಸದಿಂದ) ಏನು ನೀನೂ ಯುವರಾಜ ಬೂತು 

ಗರೂ ಇಷ್ಟೇ ಕಾಲದೊಳಗೆ ಅಷ್ಟೊಂದು ಕೆಳೆಯರಾಗಿ ಬಿಟ್ಟಿರೊ? ಅವರ 

ನ್ನಾಧರಿಸಿ ಹಿಡಿದ ನಿನ್ನ ಮಾತನ್ನು ಪರಾಂಬರಿಸಿ ನೋಡಿದಲ್ಲಿ “ಅಸುವೊಂದು  

ಮೆಯ್ಯೆರಡು” ಎಂಬ ಹಾಗೆ ತೋರುತ್ತಿ ದೆ! 


ಬಾಲ:--ಅದೇನೂ ಇಲ್ಲ. ನಿನ್ನ ಮಾತಿನ ಮಸಕಕ್ಕೆ ಕಂಗಾಲಾದ 

ಈ ಯುವರಾಜರ ಅವಸ್ಥೆ ಯನ್ನು ಮನಗಂಡು. ಹಾಗೆ ಹೇಳಿದೆ. ಅವರನ್ನು 



೩೮---------------------------------------------------------



ಈ ತಂದೆಯ ಸಂಕಲೆಯಿಂದ ಬಿಡಿಸಿ ಆಧರಿಸಲಿಕ್ಕೆ ನೀನೇ ಆಗಬೇಕಲ್ಲದೆ 

ನನ್ನಿಂದೇನಾದೀತು? 


ಕು. ಕೃಷ್ಣ. —ಸರಿಯಪ್ಪಾ ಸರಿ. ಅದಿರಲಿ; ಈ ಮಹಾರಾಜರ 

ಭೇಟಿಯನ್ನೇ ಪ್ರತೀಕ್ಷಿಸಿಕೊಂಡು ಇನ್ನೂ ತಡೆಯಲಾಗುವುದಿಲ್ಲ. ನಮ್ಮ

ವನವಿಹಾರ ಇಷ್ಟು ದೀರ್ಘವಾಗುವುದು; ಇಲ್ಲಿಯವರೆಗೆ ಸುಳಿದು 

ಸುತ್ತುವುದು; ಎಂಬ ಸಂಗತಿ ಅರಮನೆಯೊಳಗೆ ಯಾರಿಗೂ ಗೊತ್ತಿಲ್ಲ. 

ಯಾಕೆ? ನಮಗೇ ತಿಳಿದಿರಲಿಲ್ಲ. ಪೂಜ್ಯರಾದ ತಾತಪಾದರಿಗೆ ವೇದ್ಯ 

ವಾದಲ್ಲಿ ಏನೆಲ್ಲ ತೊಡಕಿಗೆ ಕಾರಣವಾಗುವುದೊ? ಅವರ ಶುದ್ಧ ಹೃದಯ 

ಒಂದಿಷ್ಟು ಸಂಶಯಕ್ಕೆಡೆಗೊಟ್ಟುದೆಂದರೆ ಮತ್ತೆ ಪೂರ್ವಾವಸ್ಥೆಗೊಳ್ಳುವುದು 

ಸುಲಭವಲ್ಲ. ನಿಷ್ಕಲ್ಮಷ ರಾಜನೀತಿಯ ಹಾಸುಹೊಕ್ಕಾಗಿ ಬಳೆದ ನಡವಳಿ 

ಅವರದು. 


ಬಾಲ:---ಹೌದು. ನಮಗೇನು? ಈ ಕೂಡಲೆ ಹೊರಟು ಬಿಡುವ. 

(ತಿರುಗಿ ನೋಡಿ) ಏನು ಯುವರಾಜರೆ, ನಾವು ಹೊರಟು ಬಿಡಲೆ? 


ಬೂತುಗ:--ಯುವರಾಜರೆ ಒತ್ತಾಯಿಸಿ ನಿಮ್ಮನ್ನು ಇಲ್ಲಿ ವರೆಗೂ 

ಸೆಳೆದುಕೊಂಡು ಬಂದ ಅಪರಾಥವನ್ನು ಕ್ಷಮಿಸಬೇಕು. ಅಂತೂ 

ನನ್ನಂಥವನ ಜೀವನವೆಂದರೆ ಜೀವನವಲ್ಲ. ನನ್ನನ್ನು ಮೂಢನೆಂದು ಬೇಕಾ 

ದರೆ ಭಾವಿಸಿರಿ; ಮೂರ್ಖನೆಂದು ಮಾತ್ರ ಬಗೆಯಬಾರದಾಗಿ ಪ್ರಾರ್ಥಿಸು 

ತ್ತೇನೆ. 


ಕು. ಕೃಷ್ಣ:--ಯುವರಾಜರೆ ............


ಬೂತುಗ:--ನೀವು ನನ್ನನ್ನು ಆ ಹೆಸರಿನಿಂದ ಕರೆಯಬಾರದು. 

ಯುವರಾಜನಾಗುತ್ತಿದ್ದರೆ ನನ್ನ ಮಾತಿನಂತೆ ಮಹಾರಾಜರು ಕೂಡಲೆ 

ನಿಮ್ಮನ್ನು ಆಸ್ಥಾನಕ್ಕೆ ಬರಮಾಡಿ ಮನ್ನಿಸುತ್ತಿದ್ದರಲ್ಲವೆ? ಅವರಿಗಾದರೂ, 

ತಿಳಿಸಿದಂಥ ಶಾರೀರಿಕವಾದ ಅಸ್ವಸ್ಥತೆ ಇದ್ದಂತೆ ತೋರುವುದಿಲ್ಲ. ಎಂದಿನಂಥ 

ವಾಸಿಯಾಗದ ಮಾನಸಿಕ ರೋಗವೇನೋ ಅಂಟಕೊಂಡುದಾಗಿರಬೇಕು. 


ಕು. ಕೃಷ್ಣ :--ಆಗಲಯ್ಯಾ, ನಮ್ಮೊಳಗಿನ ಎರಕಕ್ಕೆ ಇವರಿಂದ ಲವ 

ಲೇಶವಾದರೂ ಕವಲಾಗಬಹುದೆಂದು ಶಂಕಿಸಬೇಡಿರಿ. ಅದಿರಲಿ; ನಮ್ಮ  

ಬಾಲ ಆಡಿದಂತೆ ನಾವೀಗಲೇ ಹೊರಟುಬಿಡುತ್ತೇವೆ. 


ಬೂತುಗ:--ಆಗಲಿ;  ಒತ್ತಾಯಿಸಿ ನಿಮ್ಮನ್ನಿಲ್ಲಿವರೆಗೆ ಸೆಳೆತಂದ 

ನಾನೂ ಅಲ್ಲಿವರೆಗೆ ಬರುತ್ತೇನೆ. ನೀವೆಂದಂತೆ ರಾಜಧಾನಿಯೊಳಗಿನ ನಿಮ್ಮ 



೩೯--------------------------------------------------------------------- 



ಇಷ್ಟು ದಿನಗಳ ಅಭಾವದ ಹೊಲಬು ತುಬ್ಬಾಗಿ ಚಕ್ರವರ್ತಿಗಳಿಗೇನಾದರೂ 

ಬೇಸರಿಕೆಯಾದಲ್ಲಿ "ಅದೆಲ್ಲದಕ್ಕೂ ನಾನೇ ಕಾರಣಭೂತನು. ಸರ್ವಾಪ 

ರಾಧಂ ಕ್ಲಮಸ್ವ” ಎಂದು ಬೇಡಿಕೊಳ್ಳಲೂ ಬಹುದು. 


ಬಾಲ:--- (ಮುಗುಳು ನಗುತ್ತಾ) ಓಹೋ! ಗೊತ್ತಾಯಿತು. "ಕಾರಣ 

ಭೂತಾ--ಅಲ್ಲವೆ? ಹಾಂ ಈಗ ಗೊತ್ತಾಯಿತು. ನಿಮ್ಮ ಭೂತುಗ ಎಂಬ 

ಹೆಸರಿನ ಮೂಲ ರೂಪವು 'ಭೂತ' ಎಂದೇ ಇರಬೇಕು. ಏನು ಈ ಭೂತ 

ನಮ್ಮನ್ನು ಹಿಡಿದು ಹಿಂಬಾಲಿಸಿಕೊಂಡೂ ಬರುವುದೆ? 


ಕು. ಕೃಷ್ಣ :-- ಭೂತ ಹಿಡಿವುದೆಂದರೆ ಅದೃಷ್ಪವಾಗಿ ಮೆಯ್ಯೊಳಗೇ 

ಸೇರಿ ಬಿಡುವುದು. ಹಾಗೆ ಸೇರಿ ಅಭಿನ್ನವಾದ ಮೇಲೆ ಹಿಂಬಾಲಿಸುವು 

ದೆಂದಿಲ್ಲ. 


ಬಾಲ:--ಹಾಗಾದಲ್ಲಿ ಈ ಯುವರಾಜರೆಂದರೆ--ಹೂಂ, ತಪ್ಪಿದೆ, 

ಯುವರಾಜರು ಎನ್ನ ಬಾರದಾಗಿತ್ತು: ಹೋಗಲಿ, ಉಪ್ಪುಂಡ ನಾಲಿಗೆಯಲ್ಲಿ 

ತಪ್ಪು ಬಾರದಿರುವುದೆ? ಈ ಗಂಗರಾಜ ಕುಮಾರರೆಂದರೆ ಭೂತವೂ 

ಹೌದು, ನಮ್ಮ ಅದೃಷ್ಟವೂ ಹೌದು, ಎಂದಂತಾಯಿತು. ಹಾಗಲ್ಲವೆ ನಿಮ್ಮ 

ಮಾತಿನ ಸಾರ? 


ಕು. ಕೃಷ್ಹ:--ಬಾಲ, ನೀನೆಂದರೆ ಏನೆಂದು ನನಗೆ ಗೊತ್ತಿದೆಯಷ್ಟೆ? 

ಹಾಗೆ ಗೊತ್ತಿದ್ದೂ ಈ ಪಯಣದಲ್ಲಿ ಯಾಕೆ ಒಡಗೂಡಿ ಬಂದೆನೋ ತಿಳಿದು 

ದಾಗಿದೆ. ನಮ್ಮ ಭಾವಂದಿರಿಗೆ ಹೀಗೆಲ್ಲಾ ಮಾತಾಡಿದರೆ............ 


ಬಾಲ: ನಿಲ್ಲಿರಿ. "ನಮ್ಮ ಭಾವ” ಎಂದಿರಲ್ಲಾ ಅದು ಹೇಗೆ? 

"ಭೂತಕೃತ್‌ ಭೂತಹೃದ್ಭಾವೋ ಭೂತಾತ್ಮಾ ಭೂತ ಭಾವನಃ" ಎಂಬ 

ಮಂತ್ರವೊಂದು ನೆನಪಾಯಿತಲ್ಲಾ! ಅದು ಇವರಿಗಾಗಿಯೇ ಉಂಬಾಯಿತೆ? 

ಅಂತೂ ನನ್ನಣ್ಣನೀಗ 'ಭೂತಭಾವ'ನಾದುದು ನಿಜವಾಗಿ ತೋರುತ್ತಿದೆ 

ಯಲ್ಲವೆ? 


ಕು. ಕೃಷ್ಣ:--ನಿನ್ನ ಹರಟೆ ಎಲ್ಲ ಹಾಗಿರಲಿ, ನಮ್ಮ ಗೆಳೆತನವೇ 

ಭಾವನಾರೂಪವಾಗಿ ಹದವಡೆದುದರಿಂದ ಹಾಗಾಗಿ 'ನಮ್ಮ ಭಾವ' ಎಂದಾಡಿ 

ಬಿಟ್ಟೆ. ಸಮಾನಕುಲ-ಪ್ರಾಯ-ಸ್ವಭಾವದವರು, ಹಾಗೆ “ಭಾವ-ಮಾವ” 

ಮೊದಲಾಗಿ ಪರಸ್ಪರ ಸಂಬೋಧಿಸುವುದು ಪ್ರಕೃತಿಯಲ್ಲವೆ? ಅದರಿಂದಾಗಿ- 

ನಾನು ಮಾತ್ರವೆಂದೇನು? ನನ್ನ ತಮ್ಮನಾದ ನೀನೂ 'ಭೂತಭಾವ'

ನಾಗಬೇಕಾಯಿತು. 



೪೦-------------------------------------------------------------- 



ಬಾಲ:--ಆಗಲಿ; ಇವರನ್ನೇನೋ 'ಭಾವ? ಎನ್ನುತ್ತೇನೆ. ಆದರೆ 

'ಭಾವ-ಮಾವ? ಎಂದು ಹೇಳಿದಿರಲ್ಲಾ. ಅದಕ್ಕನುವಾಗಿ ಈ 'ಭಾವ'ನ 

ತಂದೆಯನ್ನು 'ಮಾವ' ಎಂದು ಖಂಡಿತವಾಗಿಯೂ ಕರೆಯಲೊಲ್ಲೆ. 


ಕು. ಕೃಷ್ಣ:-- ಇವರನ್ನು "ಭಾವ' ಎಂದು ಮನಃಪೂರ್ತವಾಗಿ ಒಪ್ಪಿ 

ಕರೆಯುವೆಯಲ್ಲಾ. ಹಾಗಾದಲ್ಲಿ ಮತ್ತಿನ 'ಮಾವ'ನೂ ಬಸವನ ಹಿಂದಿನ 

ಬಾಲವಾಗಿ, ನೀನು ಕರೆಯದಿದ್ದರೂ ಬರುವುದು. ಇದರ ಮೇಲೆ, ನಿನ್ನ 

ಸ್ವಭಾವಾನುಸಾರವಾಗಿ 'ಆ ಬಸವ' ಎಂದರೆ ಯಾರು? ಎಂದು ಪ್ರಶ್ನಿಸ 

ಬೇಡ. 


ಬಾಲ:--( ನಗುತ್ತಾ) ಇಲ್ಲ. ಗೊತ್ತಾದ ಮೇಲೂ ಪ್ರಶ್ನೆಯೆ? 

ಆದಂತಿರಲಿ, 'ಇವರ ತಂದೆ' ಎಂದಿರಲ್ಲಾ. ಅತಿ ರೂಢವಾಗಿದ್ದರೂ ಆ 

'ತಂದೆ' ಎಂಬ ಪದಕ್ಕೆ ನಿಜವಾದ ಅರ್ಥವೇನು? 


ಕು. ಕೃಷ್ಣ:-(ಬಾಲನನ್ನೀಕ್ಷಿಸುತ್ತಾ) ಹಾ, ನಿನ್ನ ಮೂರ್ತಿ ಸಣ್ಣದಾ 

ದರೂ ಕೀರ್ತಿ ದೊಡ್ಡದಪ್ಪಾ! ನಿನ್ನ ಮಾತಿನ ಹೊದರಿನಲಿ ಹೊಕ್ಕವನು. 

ಹಿಂದಿರುಗುವಂತಿಲ್ಲ. ಮುಳ್ಳು ಮೊನೆಗಳು ಬಟ್ಟೆಯನ್ನು ಚುಚ್ಚಿ ಹಿಡಿದು 

ತಡೆದು ಬಿಡುವುದಲ್ಲದೆ ತಪ್ಪಿಸಿಯೂ ಬಿಡುತ್ತ ತ 


ಬಾಲ:--ಏನು ಬಟ್ಟೆದಪ್ಪಿತೆ? (ಎಂದು ಅತ್ತಿತ್ತ ತಿರುಗಾಡುತ್ತಾ ನಿಲು 

ಗನ್ನಡಿಯನ್ನು ನೋಡಿಕೊಂಡು) ಇಲ್ಲ ತಪ್ಪಲಿಲ್ಲ. ಆ ಪದದ ಅರ್ಥವೇ 

ನೆಂಬುದನ್ನು ಹೇಳು, ನೋಡುವ. ಅಥವಾ 'ಈ ಭಾವ' ಹೇಳಿದರೂ ಸರಿಯೆ. 


ಬೂತುಗ: --'ತಂದೆ'- ಎಂದರೆ "ತನ್ನ ದೆವ್ವ' ಎಂಬುದರ ಸಂಗ್ರಹ 

ರೂಪ, ಪ್ರತಿಯೊಬ್ಬ ಮಗನಿಗಾಗಲಿ ಮಗಳಿಗಾಗಲಿ 'ತನ್ನ ಪ್ರತ್ಯಕ್ಷೃದೈವ' 

ಎಂದರೆ ಬೇರಾರು? , ಕೆಲಮಂದಿ ಪುಣ್ಯವಂತ-- ಕುಮಾರಕರಿಗೆ, ನಮ್ಮ 

ಶ್ರೀಮಂತ ಯುವರಾಜರಿಗೆ ಹೇಗೋ ಹಾಗೆ, ಆ ಪದವು ಸಾರ್ಥಕವಾಗಿರು 

ತ್ತಿದೆ. ಪುಣ್ಯಹೀನರಾ....ದ....... (ಬೂತುಗನ ಕೊರಳು ಗದ್ದದಿಸಿತು.) 


ಬಾಲ:--ಏನು? ಪುಣ್ಯ ಹೀನರಾದವರಿಗೆ ಅದು 'ದೆವ್ವ'ವಾಗಿ ಪರಿಣ 

ಮಿಸುತ್ತಿದೆ” ಎಂದು ತಾತ್ಪರ್ಯವೆ? ಹಾಗಿದ್ದರೆ ಮಂತ್ರವಾದ ಮೂಲಕ 

ವಾಗಿ ಅದನ್ನೊಂದು ಕಲ್ಲಿನಲ್ಲಿ ಸಾ ಪಿಸಿಬಿಟ್ಟರಾಯಿತು. ನಮ್ಮಣ್ಣನೂ ಆ  

ಮಂತ್ರವಾದದಲ್ಲಿ ನುರಿತವನೇ. ಒಂದು ವೇಳೆ ಅವನಿಂದ ಅಸಾಧ್ಯವಾದರೆ 

ನಮ್ಮ ಬನನಸೆಯ ಬಂಕಣ್ಣನಿದ್ದಾ ನೆ. 'ಪುಲಿಗುಲಿ ಬಂಕೆಯಂ' ಎಂಬುದು 

ಆತನ ಬಿರುದು. ಇಂಥ ದೆವ್ವಗಳೆಂದರೆ ಅವನ ಗಾಳಿ ಬೀಸಿದಲ್ಲಿಂದ 

ಗಾವುದಧುದ್ದಕ್ಕೂ ಮಿಸುಕಲಾರವು. 



೪೧-------------------------------------------------------------- 



ಆ ಸಂದರ್ಭದಲ್ಲಿ ಬೂತುಗನೆದೆಯಿಂದ ಮುಖ ಮೂಲಕವಾಗಿ ಹೊರ 

ಹೊಮ್ಮುವ, ಸನ್ನೆಯಿಲ್ಲದ ಸನ್ನೆಯಾದ, ಮಾತಿಲ್ಲದ ಮಾತಾದ, ಭಾವ 

ವನ್ನು ಕುಮಾರಕೃಷ್ಣನು ಕಂಡನು, “ಇಂಥ ಮಾನ್ಯ ವ್ಯಕ್ತಿಗಳನ್ನು 

ಒತ್ತಾಯಿಸಿ, ಅವರ ಗುರುಹಿರಿಯರಿಗೂ ಗೊತ್ತಿಲ್ಲದಂತೆ ತನ್ನ ಅರಮನೆಗೇ

ಕರಕೊಂಡು ಬಂದೆನು. ಇವರಿಗೆ, ಇಲ್ಲಿಯೂ ಯೋಗ್ಯವಾದ ರಾಜ 

ಸನ್ಮಾನವನ್ನು ಕಾಲದಲ್ಲಾಚರಿಸುವ ಹಣೆಬರಹ ತನಗಿಲ್ಲವಾಯಿತು" 

ಎಂಬುದೇ ಆ ಸನ್ನೆಯಿಲ್ಲದ ಸನ್ನೆಯ, ಮಾತಿಲ್ಲದ ಮಾತಿನ ಸಾರವು. 

ಆ ಸಾರ ಬಿಂದು ಬಿಂದುವೆಸ್ನಿಸಿದರೂ ಧಾರಾಕಾರವಾಗಿ ಮುತ್ತಿನ ಮಣಿ 

ಯಾಗಿ ಸುರಿಯುತ್ತಿತ್ತು. ಸ್ವಾಭಾವಿಕವಾಗಿ ಪರಾಂಬರಿಸಿದಲ್ಲಿ ಬೂತುಗ 

ನೆಂದರೆ ಬಲು ರಸಿಕ ವ್ಯಕ್ತಿ. ಬೆಡಗಿನ ನುಡಿಗಟ್ಟಿನಲ್ಲಿ, ವ್ಯಂಗ್ಯಾರ್ಥದ 

ಮಿಂಚಿನೊಡನೆ ಹೊಂಚುಹಾಕುವ ಹುರುಪೆದ್ದ ಕೊಂಕು ಮಾತಿನಲ್ಲಿ, 

ಚೆಲುಚೆಲುವಾಗಿ ಮಿರುಮಿರುಗುವ ಬಣ್ಣಗಾರಿಕೆಯ ಸುಳಿಸೊಲ್ಲಿನಲ್ಲಿ- 

ಯಾಕೆ? ರಸಿಕಜನ ಸಮ್ಮಾನನೆನ್ನಿಸಿದ ವಿಲಾಸಗೋಷ್ಕಿಯ ರಂಗದಲ್ಲಿ 

ಬೂತುಗನೆಂದರೆ ಬಾಲ ಚಂದ್ರನಿಗೂ ಸರಿಮಿಗಿಲಾದ ಮಲ್ಲನು. ಆದರೇನು? 

ಸ್ಥಾನ--ಸಂದರ್ಭಗಳ ಕೊರತೆಯಿಂದಾಗಿ ಅವನಿಗೆ ಕಣ್ಣೇ ಕಾಣದಂತಾ 

ಗಿತ್ತು. ಅದನ್ನರಿತ ರಾಷ್ಟ್ರಕೂಟ ಯುವರಾಜನು ಮರುಕಗೊಂಡವನಾಗಿ 

ಮಾತನ್ಷೆತ್ತಿದನು: -“ಚಂದ್ರ, ಹದಕ್ಕಿಳಿದ ಹಿಟ್ಟನ್ನಿನ್ನೂ ಹಿಸುಕುವುದೇಕೆ? 

ಬಾರದದು." ಎಂದು ಮಂದಹಾಸದೊಡನಾದರೂ ಒಂದಿಷ್ಟು ಗಂಭೀರ 

ವಾಗಿ ನುಡಿದನು. ಆವರೆಗೂ “ಬಾಲ -- ಬಾಲ” ಎಂದು ಸಂಬೋಧಿಸುತ್ತಿ

ದ್ದನನು, ಫಕ್ಕನೆ 'ಚಂದ್ರ'ಎಂಬ ನಾಮಾಂತಭಾಗದಿಂದ ಕರೆದುದು

ಅವನೆದೆಯಲ್ಲಿ ಆಶ್ಚರ್ಯವನ್ನುಂಟುಮಾಡಿತು. ಬೂತುಗನೆಂದರೆ ಅತಿ 

ಚತುರನಾದ ಗೋಷ್ಟೀರಂಗದ ಮಲ್ಲನೆಂದು ಮೊದಲೆ ಸೂಚಿಸಿದಿನಷ್ಟೆ. 

ಫಕ್ಕನೆ ತಿರುಗಿದನು. ಬಾಲಚಂದ್ರ ನ ಮುಖಮಂಡಲದಲ್ಲಿ ಬಾಲಚಂದ್ರನ 

ಸಲ್ಲಾಪಗಳನ್ನೆ ಅಕ್ಷರಶಃ ಪರಾಂಬರಿಸುತ್ತಾ ಕಣ್ಣಿರಿಸಿದನು. ಇರಿಸಿದುದೇ 

ತಡ, ಸರ್‌ ಸರ್‌ ಎಂದು ಸಿಹಿ ಸಿಹಿಯಾಗಿ ಸರಿದು ಆತನ ಎದೆ ವರೆಗೂ 

ಊರಿತದು. ಆ ಊರಾಟದಿಂದಾಗಿ ಆ ಯುವಕನ ಮಾತಿನ ಹಾರಾಟವೆಲ್ಲ 

ನಿಂತುಹೋಯಿತು. ಇಬ್ಬರಿಗೂ ಕವಲು ಮನವಿಲ್ಲ, ಮಾತಿಲ್ಲ, ಮಾಡಿಕೆ 

ಯಂತೂ ಇಲ್ಲವೇ ಇಲ್ಲ, ಸ್ತಬ್ಧರಾಗಿದ್ದರು. ಕುಮಾರ ಕೃಷ್ಣನು ಆ 

ಅಕ್ಷಿ ಯುದ್ಧದ ಸೋಲಗೆಲವಿನ ಮಧ್ಯಸ್ಥನಾಗಿದ್ದನು. ಇತ್ಯರ್ಥವೇನಾ 

ಯಿತೆಂದು ಕೇಳುತ್ತೀರೋ? ಒಂದೇ ಒಂದು ನಿಮಿಷದೊಳಗೆ ಇಬ್ಬರೂ


೪೨----------------------------------------------

ಚೇತರಿಸುವಂತಾಗಿದ್ದರು. ಮರುಕವೆಲ್ಲ ಮಾಸಿಹೋದ ಬೂತುಗನ ಮುಖ

ಮಂಡಲದಲ್ಲಿ ಮಂದಹಾಸದ ಕಳೆ ಸೂಸುತ್ತಿತ್ತು. ಮತ್ತಿನಾತನ ಅವಸ್ಥೆ 

ಏನು? ಹಿಂದಿನ ಬಾಲಪದ ಒಳನುಸುಳಿ ಮುಂಬರಿದ ಚಂದ್ರಬಾಲಾಂಬೆ 

(ಚಂದ್ರಬ್ಬಲಬ್ಬೆ) ರೋಹಿಣಿಯಾಗಿ ಲಜ್ಜೆಯಿಂದ ತಲೆಬಾಗಿ ಮಿರುಗಿದಳು. 


"ಇದೆಂಥ ಬಣ್ಣಗಾರಿಕೆಯ ಬಯಲಾಟವಯ್ಯಾ? ಎಂದು ಪ್ರಶ್ನೆಯೆತ್ತು 

ವಿರೇನು? ಇಲ್ಲ, ನಿಮಗೆ ಕೇಳಲಿಕ್ಕೂ ನನಗೆ ಹೇಳಲಿಕ್ಕೂ ಎಡೆ ಇಲ್ಲ: 

ಅದೋ, ಗಂಗರಾಜನು ತಾನಾಗಿ ಯುವರಾಜ ಕೃಷ್ಣನ ದರ್ಶನಾರ್ಥವಾಗಿ 

ಬಂದು ಬೂತುಗನ ರಾಜಾಂಗಣಕ್ಕಿಳಿಯುತ್ತಿದ್ದನು. 

=================



ಧಾರ್ಮಿಕ ಮಂತ್ರ-ಗೋಷ್ಠಿ 



ಈ ಕತೆಗಾರರ ಅವಸ್ಥೆಯೇ ಹಾಗೆ. ಹೇಗೆಂದರೆ, ಒಂದೇ ಕ್ಲೆಯಲ್ಲಿ 

ಹಲವು ಕಾಯಿಗಳನ್ನು ನೆಲಮುಟ್ಟದಂತೆ ಹಾರಾಡಿಸುವವನ ಹಾಗೆ. ಹಿಂದೆ 

ಕಂಡಂತೆ ಗಂಗರಾಜನು ಬರುವಲ್ಲಿ ಅತ್ತಣ ಮಾನ್ಯಖೇಟ ರಾಜಧಾನಿಯ 

ಸುದ್ದಿಯೇ ಸುದ್ದಿ. ಆ ಸುದ್ದಿ ಸುಳಿಗಾಳಿಗೆ ಸಿಲುಕಿ ತಲೆಮರೆಯಿಸಿ 

ಕೊಳ್ಳಲಿಕ್ಕೆಂದೇ ಈ ಮಹಾರಾಯ ಕುಮಾರ ಕೃಷ್ಣನ ಭೇಟಿಯನ್ನು ಮರೆ 

ಗೊಂಡುದಾಗಿರಬೇಕು. ಅದರಿಂದ, ಆ ಕತೆಯನ್ನೇ ಪರಿಶೀಲಿಸುವ; 

ಇವನದು ಬೇರೆ ಆಡಬೇಕಾಗಿಲ್ಲ ಅದರೊಡನೆ ಬಸವನ ಹಿಂದಿನ ಬಾಲ 

ವಾಗಿ ತಾನೇ ಆಡುವುದು. 



ಕೆಲದಿನಗಳ ಹಿಂದೆ ವನವಿಹಾರಕ್ಕೆಂದು ಹೊರಗೈದಿದ ಕುಮಾರ 

ಕೃಷ್ಣನು ಆ ವರೆಗೂ ಬಾರದುದರಿಂದ ಚಕ್ರವರ್ತಿಯ ಮನಸ್ಸು ಉದ್ವಿಗ್ನ 

ವಾಗಿದ್ದುದು. ಎಂಟು ದಿನಗಳ ಅವಧಿಯಳಿದು, ಹದಿನಾರನ್ನೂ ಮೀರಿ  

ಇಪ್ಪತ್ತು- ನಾಲ್ಕೆಂಬುದು ನಾಳೆಗಾಗಿತ್ತು. ಕುಮಾರನೊಡನೆ ಕುಮಾರಿ  

ಚಂದ್ರಬ್ಬಲಬ್ಬೆ ಯೂ ಹೋಗಿರುವುದು ಮತ್ತಿಷ್ಟು ಕಳವಳ. ರಾಜಕುಮಾರಿ 

ಯರು ತಮ್ಮವರೊಡನೆ ವಿಹಾರಕ್ಕಡಿಯಿಡುವುದೇನೋ ರಾಜವಂಶಕ್ಕೆ ಹೊಸ 

ತಲ್ಲ. ಆದರೆ, ಎಲ್ಲವೂ ನಿಯಮಬದ್ಧವಿರಬೇಕಲ್ಲವೆ? ಒಡನಾಡಿಯಾಗಿದ್ದ 

ಬೂತುಗನೇನೋ ಉತ್ತಮಕುಮಾರನೇ. ಹಾಗಿದ್ದರೂ, 'ಅವನೆಂದರೆ ಆ 

ಗಂಗರಾಜನ ಮಗನಲ್ಲನೇ' ಎಂಬ ಶಂಕೆ ಕರಗದ ಆಹಾರವಾಗಿತ್ತು. ಅಷ್ಟೆ 



೪೩------------------------------------------------------------------



ಲ್ಲವೂ ಸಾಲದುದಕ್ಕೆ ಆಗಲೆ ಬಂದ ಗೂಢಚಾರಕನೊಬ್ಬನು ಕುಮಾರ 

ಕೃಷನು ಬೂತುಗನೊಡನೆ ಕೇದಲದುರ್ಗದತ್ತ ತೆರಳಿದ ಸುದ್ದಿಯನ್ನು ತಿಳಿಸಿ 

ದನು ಎಂತೆಂತಹ ಹಿಂದಿನ ಕಠಿನ ಪ್ರಸಂಗಗಳಲ್ಲಿಯೂ ಕುಗ್ಗಿ ಬಗ್ಗದ ಕದಲಿ 

ಕಳವಳಿಸದ ದೃಢಚಿತ್ರವದು. ಅದರೂ ಅದನ್ನಾಲಿಸಿದ ಚಕ್ರವರ್ತಿಯ 

ಎದೆ ಒಮ್ಮೆ ಕಂಪಿಸಿತು; ಮರುನಿಮಿಷಕ್ಕೆ ಕಲ್ಲಾಯಿತು. “ಹಾವು ಮುಪ್ಪಾ 

ಗಿದೆ ಹೌದು, ವಿಷ ಮುಪ್ಪಾಗಿಲ್ಲ ಎಂಬುದು ಆ ಕುರುಡು ಗಂಗನ ಬರಡೆಡೆಗೆ 

ಹೇಗೆ ಗೊತ್ತಾದೀತು? ಏನು ಮಕ್ಕಳನ್ನಾಕರ್ಷಿಸಿ, ಕುಂಭಸ್ಥಳಕ್ಕೆ ಅಂಕುಶ 

ವೆತ್ತಿದ್ದೇನೆ, 'ಅಡಿದಪ್ಪಿಸಿಬಿಟ್ಟರೆ ಆನೆಯೂ ಉರುಳುವುದೇ ಸರಿ' ಎಂದು 

ಕನವರಿಸಿದನೇ ಆ ಮರುಳು ಗಂಗನು? ಕನವರಿಸಲಿ; ಕನವರಿಕೆಯ ಹಣ್ಣು 

ಹಣ್ಣಲ್ಲ, ಮಣ್ಣಿನ ಮುದ್ದೆ ಎಂಬುದನ್ನು ಮುಕ್ಕುವಲ್ಲಿ ಭಾವಿಸಲಿ”. ಎಂದೆಣಿ 

ಸಿದ ಚಕ್ರವರ್ತಿ, ತನ್ನ * ಮಹಾಸಭೆಯೊಳಗೆ ಸಭಾಸದನೂ ವಾಗಧಿಪನೂ 

ಆದ %ಜಯಾಳ್ವನನ್ನು ಬರಿಸಿದನು. ಮಣೆಯೇರಿ ಮನ್ನಣೆಸಡೆದ ಜಯಾ 

ಳ್ವನು ಮಾತನ್ನೆತ್ತಿದನು:-- 


ಜಯಾಳ್ವ:--ಮಹಾರಾಜರೇನು ಅಕಾಲದಲ್ಲಿ ಬರಿಸಿದಿರಿ? 


ನೃಪತುಂಗ: ಮಾನ್ಯ ವಾಗಧಿಪರಿಗೆ ನಮ್ಮ ಪ್ರಕೃತಾವಸ್ಥೆ ಪರಾಂಬ 

ರಿಕೆಗೆ ಬಂದಿಲ್ಲವೇನು? 


ಜಯಾಳ್ವ: -ಹಾಗೆನ್ನ ಬೇಕಾದ ಅವಸ್ಥೆಯೂ ಈಗ ಅರಸಾಳಿಕೆಗೆ 

ಒದಗಿರುವುದೆ? 


ನೃಪತುಂಗ:--ಒದಗಿದೆಯೋ ಎಂಬ ಸಂಶಯ ಮಾತ್ರ, ಸಂಶಯ 

ಚಿತ್ತನೆಂದು ಆಗಿಂದಾಗ ನನ್ನ ವಿಷಯದಲ್ಲಾಡುತ್ತೀರಿ. ಈಗಿನದೂ ಅಂಥ 

ಸಂಶಯದ ಕವಲೆಣಿಕೆಯೆ? ಗಂಗರಾಜನ ಕಿರುಕುಳವನ್ನು ಕಿತ್ತೊಗೆಯ 

ಲೆಂದು ನಿರ್ಧರಿಸಿ ಇಲ್ಲಿಂದತ್ತ ಸಾಗಿದ ಬಂಕೆಯನನ್ನು ರಾತ್ರಿಯಲ್ಲಿ ಆ 

ಗಂಗನ ಆಪ್ತರಾದ ಕೊಳ್ಳೆಗಾರರು ಸಂಧಿಸಿದರಂತೆ. ಕೊಳ್ಳೆಗಾರರೇ ಅಸ್ತ 

ವ್ಯಸ್ತರಾದರೆಂದು ವಾರ್ತೆಯೊಂದಾದರೆ ನಮ್ಮವರೇ ಗತಿಗೆಟ್ಟಿರೆಂಬುದಿ

.....

*ಇದಕ್ಕೆ "ನೃಪತುಂಗನ ಮಹಾಸಭೆ" ಎಂದು ಹೆಸರಾಗಿತ್ತು. ಹಿಂದಣ ರಾಜನೀತಿ 

ಗನುವಾಗಿ ಗ್ರಾಮ-ವಿಸಯ-ರಾಷ್ಟ್ರಗಳಲ್ಲಿ 'ಮಹಾಸಭೆ'ಗಳಿದ್ದುವು. ಇದು ರಾಷ್ಟ್ರದ 

ಮಹಾಸಭೆ. ಅದರ ಅಧ್ಯಕ್ಷನು ನೃಪತುಂಗನೇ. 


% ಈ ಜಯಾಳ್ವನ ಪರಿಚಯವನ್ನು "ಕವಿರಾಜ ಮಾರ್ಗವಿನೇಕ' ಪ್ರಥಮ 

ಭಾಗದಲ್ಲಿ ಮಾಡಿಕೊಳ್ಳಬೇಕು. 



೪೪----------------------------------------------------------------



ನ್ನೊಂದು, ವೆಂಗಿಯ ಗುಣಗುವಿಜಯಾದಿತ್ಯನ ಹಲಮಂದಿ ಸಂಚುಗಾ 

ರರು ರಾಜಧಾನಿಯ ಹೊರಗೊಳಗೆ ತಲೆಮರೆಸಿ ತಲೆಎತ್ತಿದ್ದಾರಂತೆ. ಮಂದಿ 

ರದ ಕಂಬಕ್ಳಾದರೂ ಕಿವಿಯಂತೆ. ಮೂರ್ತಿಗಾದರೂ ನಾಲಗೆಯಂತೆ. 

ಬೂತುಗಸಹಿತನಾಗಿ ಕುಮಾರ ಕೃಷ್ಣನು ತಂಗಿಯೊಡಗೂಡಿ ವನವಿಹಾರ 

ಕ್ಕೆಂದು ಹೋದವನು ಇನ್ನೂ ಹಿಂದಿರುಗಲಿಲ್ಲ. ಅತನು ಇತ್ತೀಚಿಗೆ ತಳ 

ವನದ ಕೇದಲದುರ್ಗನಲ್ಲಿದ್ದನೆಂಬ ಒಳಸುದ್ದಿ ಸೂಸಿದೆ. ಅಂತೂ ನಮ್ಮ  

ನಗರವಾಸಿಗಳೆದೆ ಪ್ರಕ್ಷೋಭಕ್ಕೆ ಎಡೆಯಾಗಿದೆ. ಇಂಥ ಸಂದರ್ಭದಲ್ಲಿ 

ಸಂಶಯದ ತೊಲೆ ತೂಗದಿರುವುದು ಹೇಗೆ? 


ಜಯಾಳ್ವ ;-(ನಗುತ್ತಾ) ನಿಮ್ಮ ವಿಷಯದಲ್ಲಿ ನಾನಾಡುತ್ತಿದ್ದುದು 

'ಸಂಶಯಚಿತ್ತ' ರೆಂದು: ಅದು ರಾಜನೀತಿಯಲ್ಲಿ ಪಳಗಿದವರ ಗುಣವಲ್ಲದೆ

ದೋಷವಲ್ಲವೆಂದೇ ಭಾವಿಸಬೇಕಾಗಿದೆ. ನೀತಿಯ ಎಚ್ಚರಿಕೆ,'ಸಂಶ 

ಯಾತ್ಮ'ನು ಗತಿಗೆಡುತ್ತಾನೆಂದಲ್ಲದೆ 'ಸಂಶಯಚಿತ್ತ'ನೆಂದಲ್ಲ. ಚಿತ್ತದ 

ಸಂಶಯ, ಕಾರ್ಯಕಾರಿಯಾದ ಮನಸ್ಸಿನ ಅವಿಚಾರಿತ ಕ್ರಿಯೆಯನ್ನು 

ತಡೆದು ನಿಲ್ಲಿಸುತ್ತಿದೆ. ಅದರಿಂದಲೆ ಮನಸ್ಸು ಮುಂದಿನ ದಾರಿ ಏನೆಂದು 

ಬುದ್ಧಿಯೊಡನೆ ಕೇಳುವುದು. ಪರಾಂಬರಿಸಿದ ಬುದ್ಧಿ "ಇದಮಿತ್ಥ೦ ಎಂಬು 

ದನ್ನು ಅಹಂಕೃತಿಗೆ ಸೂಚಿಸುವುದು. ಅದರ ಆಜ್ಞೆಯಂತೆ ಚಿತ್ತ ದ ಸಂಶಯ 

ವಳಿದು ದಾರಿತೋರಿದ ಮನಸ್ಸಿನ ಸನ್ನೆಯಂತೆ ಇಂದ್ರಿಯಗಳ ಮೂಲಕವಾಗಿ 

ಧರ್ಮ-ಕರ್ಮಗಳು ಸಾಗುತ್ತಿವೆ. ಈ ಅಂತರಂಗಗಳೆಂದರೆ ಆತ್ಮನ ಮಹಾ 

ಸಭೆಯ ಕಾರ್ಯನಿರ್ಧಾರಕ ಸದಸ್ಯರಲ್ಲವೆ? ಅದರಿಂದ ಬುದ್ಧಿಯ ನಿರ್ಧಾ 

ರದ ವರೆಗೆ ಸಂಶಯವಿದ್ದೇ ತೀರಬೇಕು. ಆದರೆ, ಈ ಅಂತರಂಗಸಮಿತಿಯ 

ಅಧ್ಯಕ್ಷನಾದ ಆತ್ಮನಲ್ಲಿ ಸಂಶಯವೇ ಸ್ಥಾಯಿಯಾಗಿ ನೆಲಸಿಬಿಟ್ಟರೆ ಮದ್ದಿ 

ಲ್ಲದೆ ರೋಗವಾಗುವುದು. ಅಥವಾ ಅವನ ಬುದ್ಧಿಯೇ ಕಲ್ಮಷಿತವಾಗಿ 

ಕಂಗಾಣದಾಗಿದೆ ಎಂದೆಣಿಸಬೇಕು. ಈ ವಿಚಾರವೆಲ್ಲವೂ ನಿಮ್ಮ ಭಾವನೆ 

ಯಲ್ಲಿ “ಬಿತ್ತಿದ ಬೆಳೆ, ಕೊೈಯ್ದ ಕೈ ಇರಲಿ; ಎನು? ನಿಮ್ಮ ಚಿತ್ತಕ್ಕೆ 

ಕುಮಾರೀ ಕುಮಾರಕರು ಹಗೆಗಳ ದೋಣಿಗೆ ಕಾಲಿಟ್ಟರಬಹುದೆಂದು 

ಸಂಶಯವೆ? 


ನೃಪತುಂಗೆ: - (ಭಾವಿಸಿ) ಬೇರೂರಿ ನೆಲೆಗೊಂಡ ಸಂಶಯವಲ್ಲ. 

ಆದರೂ ಪರಿಸ್ಥಿತಿಯನೀಕ್ಷಿಸಿದ ಚಿತ್ತ ತಡೆದುಹೋಗಿದೆ. 



೪೫------------------------------------------------------------



ಜಯಾಳ್ವ:- ನನ್ನೆಣಿಕೆಯಂತೆ ಕುಮಾರ ಕೃಷ್ಣನೆಂದರೆ ಚಂಚಲ 

ಪ್ರಕೃತಿಯವನಲ್ಲ. ರಾಜನೀತಿಯಲ್ಲಿ ಹಾದು ಹರಿದ ಅವನೆದೆಯನ್ನು 

ನಾನರಿಯದಾತನೆ? 


ನೃಪತುಂಗ:--ಶುಕನಾಸನಂತೆ ಗುರುಗಳಾದ ನೀವು ಅರಿಯದಿರುವು 

ಸೃಷ್ಟಿ ಹೇಗೆ? ನಿಮ್ಮನ್ನು ಕರೆಯಿಸಲು ಅದೂ ಒಂದು ಕಾರಣ. 


ಜಯಾಳ್ವ: :--ಹಾಗಿದ್ದರೆ ಕೇಳಿರಿ, ನಮ್ಮದು ಲಕ್ಟಣವನ್ನಚ್ಚು 

ಕಟ್ಟಾಗಿಸುವ ಹಳೆ ಕೈಯಾದರೆ ಅವನದು ಲಕ್ಷ್ಯವಾದ ಕಾರ್ಯವನ್ನು 

ಪೂರ್ತಿಸುವ ಹೊಸ ಕೈ. ಪವಿತ್ರಧಾರಿಯಾಗಿ ಮಂತ್ರಸಾರವನ್ನು ಹೀರದೆ  

ಆತನು ಹೊರಟಿಲ್ಲ. ಬಂಕೆಯನ್ಕು ಸನ್ನಿಧಿಯ ಆಜ್ಞಾಧಾರಿಯಾಗಿ ಗುರಿ 

ಗೊಂಡು ಹೊರಟರೆ ಯುವರಾಜನು ನೀತಿ ಶಾಸ್ತ್ರದ ಸೂತ್ರಾನುಸಾರ 

ವಾಗಿ ಮುಂಬರಿದಿದ್ದಾನೆ. ಅವನೊಡನಿದ್ದ ಬೇಟಿಗಾರರೆಂದರೆ ಸುಸಜ್ಜಿತರಾದ 

ಕೆಲಮಂದಿ ಸೈನಿಕರು. ನಿಮಗೆ ಅದಿನ್ನೂ ಹೊಸದಾಗಿರದಿದ್ದರೂ ರಾಷ್ಟ್ರಪತಿ 

ಯಾಗಿ ನಿವೇದಿಸುತ್ತೇನೆ. ಅವರು ಆ ನಮ್ಮ ರಾಯಭಾರಿಯ ಠಾಣೆಯ 

ದಲ್ಲಿ ಮೊದಲೇ ನೆಲಸಿ ಮತ್ತೆ ಬರುವ ವೀರ ಬಂಕೆಯನ  ಸೇನಾಧಾರೆಗೆ 

ಸಾಣೆಯಾಗುವರು. ರಾಣಾ-ಬಾಲಚಂದ್ರನೆಂಬ ರೂಪಾಂತರದಿಂದ 

ಕುಮಾರಿ ತನ್ನಣ್ಣನೊಡನೆ ಸಾಗಿದುದರೊಳಗೂ ಹುರುಳಿದೆ. ಸಮಯದ 

ಸಂಧಿಯಲ್ಲಿ ಬೂತುಗನೇನಾದರೂ ಪಿತೃಭಕ್ತಿ ಬದ್ಧತೆಯಿಂದ ತೂಬಿನ ಕೆಸರಿ 

ನಂತಾಗಿ ಬಿಡುವನೋ ಎಂಬ ಸಂಶಯದಿಂದ ಆಕೆಯೂ ಹೋದುದು. ಏನು 

ಇನ್ನೂ ನಿಮಗೆ ಯುವರಾಜನಲ್ಲಿ ಸಂಶಯವೆ? ಹಾಗಿದ್ದರೆ ಇಷ್ಟೇ ನಿವೇದಿಸು 

ತ್ತೇನೆ. ನಮ್ಮ ಯುವರಾಜನಂಥ ವ್ಯಕ್ತಿಗೇ ಮುಂದಿನ ರಾಷ್ಟ್ರಕೂಟದ 

ಅರಸಾಳಿಕೆ ಬೇಡವಾದರೆ ನಿಮಗೇಕದು? ತಾಯಿಗೆ ಮಗು ಬೇಡವಾದರೆ 

ಅಜ್ಜಿಗೆ ಮೊಮ್ಮಗುವೇಕೆ? 


ನೃಪತುಂಗ: ನಮ್ಮ ರಾಜನೀತಿಪರವಾದ ಸಂದೇಹವೆಂಬುದು, 

ಆಹಾರಾಧಿಕ್ಯದೊಡನಾಗುವ ಅಜೀರ್ತಿಯಂತೆ ದೇಹಾವಧಿಯಾಗಿ ಇರುವುದೇ 

ಎನ್ನುವ. ಆದರೂ ರಾಷ್ಟ್ರಪತಿಗಳಾದ ಮತ್ತು ಗುರು-ಬಂಧುಗಳಾದ 

ನೀವೇ ಇಷ್ಟಾಡಿದ ಮೇಲೂ ಪ್ರಕೃತಕ್ಕೆ ಸಂದೇಹವೇನು? ಅದಂತಿರಲ್ಲಿ; 

ರಾಜಧಾನಿಯೊಳಗೆ ಗುಜುಗುಜಿಸುವ ಗಲಬೆಗೇನುಕಾರಣ? 


ಜಯಾಳ್ವ:- ವೆಂಗಿಯ ವಿಜಯಾದಿತ್ಯನೂ ಕಂಟಿಯ ಯುವರಾಜ 

ನಂದಿವರ್ಮನೂ ಗಂಗರಾಜ ಪ್ರೇರಿತರಾಗಿ ಏನೇನೋ ಹಂಚಿಕೆಯನ್ನೆ 



೪೬-----------------------------------------------------------



ಸಗಿದ್ದಾರಂತೆ. ಪುಣ್ಯನಾಮಧೇಯರಾದ ಚಕ್ರವರ್ತಿ-ಗೋವಿಂದರಸರು 

ಹೇಲಾನಗರಿಯಾಗಿದ್ದ ಇಲ್ಲಿ ದಿವಂಗತರಾದರಷ್ಟೆ? ಆಗ ತನ್ನ ತಂದೆ  

ಅಜ್ಜಂದಿರು ಅತಂತ್ರವಾಗಿದ್ದ ಹಿಂದಣ ರೇವಾರಾಜಧಾನಿಯನ್ನು ಸೂರೆ 

ಗೊಂಡ ಕತೆ,-ಆ ಗುಣಕನ ಕಿವಿಯಲ್ಲಿ ಗುಣುಗುತ್ತಿದೆಯಾಗಿ ತೋರುತ್ತಿದೆ. 

ಯುವರಾಜ ಬಂಕೆಯರು ಹೊರಗಡಿಯಿಟ್ಟ ಮುಹೂರ್ತವನ್ನರಿತು “ತದೇವ 

ಲಗ್ನಂ........” ಎಂದು ಹಾಡಲಾರಂಭಿಸಿದ್ದಾನೆ. ಆ ಹಾಡಿನ ಪಾಡೂ 

ಇಷ್ಟರಲ್ಲಿ ಒಂದು ನೆಲೆಗೆ ಬಂದಿರಬಹುದು. 


ನೃಪತುಂಗ: ಆ ಗುಣಗ-ನಂದಿವರ್ಮರ ಪ್ರಯತ್ನವೇನು? 



ಜಯಾಳ್ವ: -ನಮ್ಮ ರಾಜಧಾನಿಗೆ ಹರಿದಾರಿ ದೂರಕ್ಕೆ ಪೂರ್ವ 

ದಲ್ಲಿರುವ ಬಂಗನ ಬಯಲಿನಲ್ಲಿ ಗೋಸಾಯಿಗಳ ವೇಷದಿಂದ ಇಳಿದಿದ್ದಾರಂತೆ. 



ನೃಪತುಂಗ:--ಅವರ ಪರಾಂಬರಿಕೆಗಾಗಿ ಏನಾದರೂ ಸೂತ್ರ ಸುರಿ 

ದಿದೆಯೆ? 


ಜಯಾಳ್ವ:-- ಹೂಂ, ಸ್ವಲ್ಪವೇ ಸಮಯದೊಳಗೆ ಎಲ್ಲವೂ ವಿದಿತ 

ವಾಗುವುದು. 


ನೃಪತುಂಗ:--ಎನು ಗುಣಗಾಂಕರನೊಡನೆ ಪಲ್ಲವ-ನಂದಿವರ್ಮನೂ 

ಸೇರಿರುವನೆ? ಹಾಗಿದ್ದರೆ ಅವನಲ್ಲಿ ನಾವಿರಿಸಿದ ಪ್ರೇಮವು ಅಸ್ಥಾನ 

ಪ್ರಯುಕ್ತವಾಯಿತು. 


ಜಯಾಳ್ವ: -ನಮ್ಮಂಥವರು ಸಂಪೂರ್ಣವಾಗಿ ಹಾಗೆ ನಿರ್ಧರಿಸಿ 

ಬಿಡಬಾರವು. ಕೆಲವೆಡೆಯಲ್ಲಿ 'ಹುಡುಗ-ಬುದ್ಧಿ ಎಡವಿ ಬಿದ್ದುಹೋಗು 

ವುದೂ' ಇದೆ. ಹಾಗೇ ಸರಿ ಎಂದು ಮನಗಂಡಲ್ಲಿ ಕೈ ಗೊಟ್ಟು ಉದ್ದರಿಸಲೂ 

ಬೇಕಾಗುವುದು. 


ನೃಪತುಂಗ:--ಇದೂ ಹುಡುಗ-ಬುದ್ಧಿ ಏನು? ನಮ್ಮ ಜೀವನ 

ರತ್ನವನ್ನೇ ಆತನಿಗೆ ಒಪ್ಪಿಸುವಲ್ಲಿ ಹವಣಿಸುತ್ತಿದ್ದೇನೆ. ಅದನ್ನವನೂ ಮನ 

ವಾರೆ ಬಲ್ಲನು. ಹಾಗಿದ್ದೂ ಹೀಗೆ ವರ್ತಿಸುವುದೆಂದರೇನು? ನಿದ್ದೆ ಬಂದವ 

ರನ್ನೆಚ್ಚರಿಸಬಹುದು; ಬಾರದೆ ಬಂದಂತೆ ವರ್ತಿಸುನವರನ್ನೆಚ್ಚರಿಸುವುದು 

ಹೇಗೆ?


ಜಯಾಳ್ವ:--ಗಾದೆ ಇದು ಶೆಲವೆಡೆಯಲ್ಲಿ ಅಚ್ಛು ಕಟ್ಟಾಗಿ ಕೂಡ 

ಲಾರದು. ಕೆಲವರು ಕಾಲ ಸಂದರ್ಭಗಳನ್ನೊಂಡಿ ಪರರ ಮದ್ದು- ಮಾಟ 



೪೭------------------------------------------------------------------------- 



ಗಳಿಗೆ ಸಿಲುಕಿ ಮರವೆಗೊಳ್ಳುವುದುಂಟು, ಅಂಥ ವ್ಯಕ್ತಿಗೆ ನಿಜವಾದ ನಿದ್ದೆ 

ಬಂದಿರುವುದಿಲ್ಲ. ಆದರೂ ಬಂದಂತೆ ಅವನು ವರ್ತಿಸುವುದಾಗಿ ಭಾಸ 

ವಾಗುವುದುಂಟು. ಫಕ್ಕನೆ ಎಚ್ಚರವಾಗದ ಮೂರ್ಛಾವಸ್ಥೆಯದು, 

ಸಮಯದಲ್ಲಿ ಎಚ್ಚರಗೊಂಡನನು, ಜಾಣನಾಗಿದ್ದರೆ ಆಮೇಲೆ ಅಂಥ ಬಲೆಗೆ 

ಸಿಲುಕದಿರುತ್ತಾನೆ. 


ನೃಪತುಂಗ: ಹಾಗಿದ್ದರೆ, ಈ ವರೆಗೂ ಆ ಪಲ್ಲವ ಯುವರಾಜನು 

ಮೂಢನಾಗಿದ್ದವನೆಂದಾಯಿತಲ್ಲವೆ? ಆ 'ಮೂಢ'ನನ್ನೂ ನಮ್ಮಲ್ಲಿ 'ಏಕ 

ರಾಶಿ'ಗೊಳಿಸುವ ಮಂತ್ರವನ್ನೆಸಗಿದ್ದೇವಲ್ಲವೆ? ಆ ಭಾವನಾನುಸಾರವಾಗಿ 

ಪರಾಂಬರಿಸಿದರೆ ನಾವು ಯಾವ ವರ್ಗಕ್ಕೆ ಸೇರಿದಂತಾಗಬೇಕು? 


ಜಯಾಳ್ವ:-'ಭಾವನೆ 'ಯೆಂದರೆ ' ಸಂಸ್ಥಾರ'( ಸಂಸ್ಕೃತಿ)ದ ಒಂದಂಶ. 

'ವೇಗ-ಭಾವನೆ-ಸ್ಥಿತಿಸ್ಥಾಪಕ'ವೆಂದು ಆಂತರಂಗಿಕವಾದ ನಡವಳಿ ಪಳಗುವ 

ಅವಸ್ಥಾತ್ರಯ. ಶುದ್ಧವಾಗಿ ನೆಲೆಗೊಂಡ ಮೇಲೆ ಅದಕ್ಕೆ ಸಂಸ್ಕೃತಿ ಅಲ್ಲವೆ 

ಶೀಲ ಎಂಬ ಹೆಸರಾಗುತ್ತಿದೆ. 'ವೇಗ' ಎಂದರೆ ಪಳಗುವ ಬುದ್ಧಿಯ 

ಚಲನ, ಅದು ಚಲಿಸುವಲ್ಲಿ -ನಾವು ವಿಹಾರಕ್ಕೆ ಹೊರಟಾಗ ಕಂಡು 

ಎದೆಯಲ್ಲಚ್ಚೊತ್ತುವ ದೃಶ್ಯಗಳಂತೆ--ಅಂತರಂಗದಲ್ಲಿ ಸುಳಿದಾಡುವ ಬಗೆ 

ಬಗೆಯ ಎಣಿಕೆಯೇ 'ಭಾವನೆ' ಹಿಂದಿನ ವೇಗಕ್ಕೊಳಗಾಗಿ ಮಿತಿ ಮೀರಿ 

ಹೋಗುವ ಭಾವನೆಯನ್ನು ಅಂಕಿತದಲ್ಲಿರಿಸುವ ಆ ಪಳಕವನ್ನೇ 'ಸ್ಥಿತಿ 

ಸ್ಥಾಪಕ' ಎನ್ನುವುದು. ಈ ಮೂರೂ ಪಳಗಿ ಹದಗೊಂಡು ಕಾರ್ಯಸಾಧಕ 

ವಾದ ಆಂತರಂಗಿಕ ಶುದ್ಧಿಯೇ ಸಂಸ್ಕೃತಿ. ನಾವು ಆತನ ಭಾವನಾದೋಷ 

ವನ್ನು ತಿದ್ದಬಹುದು; ಅದು ಅಸಾಧ್ಯವಾದಲ್ಲಿ ಮಾಡುವುದೇನು? ನಮ್ಮ 

ಸಂಸ್ಕೃತಿಯ ಏಕದೇಶವಾದ ಭಾವನೆಯನ್ನು ತಿದ್ದಿ ನಮ್ಮಷ್ಟಕ್ಕೆ ನಾವಾಗು 

ವುದೆ ಸಾಧ್ಯೌಷಧವಾಗಿ ತೋರುತ್ತಿದೆ. 


ನೃಪತುಂಗ: - ಹಾಗಿದ್ದರೆ ನಮ್ಮ ಈ ವರೆಗಿನ ಸಂಸ್ಕೃತಿ ಮಾಸಿ 

ದಂತಾಯಿತಲ್ಲವೆ? 


ಜಯಾಳ್ವ: (ನಗುತ್ತಾ) ಈ ವಿಶ್ವಸಂಸಾರದೊಳಗೆ ನಿಷ್ಕಲಂಕವಾದ 

ಸಂಸ್ಕೃತಿಗೆ ಏರಿದವರೂ ಇದ್ದಾರೇನು? ಇದ್ದರೆ ಅಂಥವರು ಈ ಪ್ರಾಪಂಚಿಕ 

ಪಾಶವನ್ನು ಹರಿದೊಗೆದು 'ಹೊಕ್ಕುದೇ ಮನೆ ಹೋದುದೇ ದೇಶ'ವಾಗಿ 

ಸಾಗುತ್ತಾರೆ. ಅಂಥ ಸ್ಥಿತಪ್ರಜ್ಞರಿಗೆ ಈ ರಾಜಕೀಯ-ಸಾಂಸಾರಿಕಾದಿ 

ಬಂಧನಗಳೆಲ್ಲಿಂದ? 



೪೮----------------------------------------------------------------



ನೃಪತುಂಗ:- (ತಲೆದೂಗುತ್ತ) ಹೌದು; ಉತ್ತಮ ಜೀವನವೆಂದರೆ 

ಹಾಗೆ ಪ್ರಕೃತಿಯೊಳಗಿನ ಗಾಳಿಯಾಗಿ ಬೆಳಕಾಗಿ. ಹರಿಯಬೇಕು. ಆ 

ಆನಂದಾವಸ್ಥೆಗೆ, ಇಂದ್ರಿಯಗಳು ಮನಸ್ಸಿನಲ್ಲಿ, ಮನಸ್ಸು ಬುದ್ಧಿಯಲ್ಲಿ, 

ಬುದ್ಧಿ ಅಹಂಕೃತಿಯಲ್ಲಿ ಅಹಂಕೃತಿ ಚಿತ್ತದಲ್ಲಿ ಸಂದಿಲ್ಲದೊಂದಾಗಬೇಕು. 

ಆ ಅಂತಃಕರಣವು ಮೈಯುಳಿದು ಆತ್ಮದಲ್ಲಿ ಬೆರೆಯಬೇಕು; ಕೆಸರಳಿದು 

ತಿಳಿಯೊಸರು ತಾನುತಾನೇ ಆಗಬೇಕು. ಈ ಜನ್ಮದೊಳಗೆ ಆ ಅವಸ್ಥೆ 

ಹಾಗಿರಲಿ; ಭಾವನೆಯಾದರೂ ಕಸರಿಲ್ಲದೆಸರಾಗಿ ಸೂಸುವುದು ಹೇಗೆ? 


ಜಯಾಳ್ವ:--ಅದಕ್ಕೂ ಒಂದು ನಿಯಮಿತ ಸಮಯ ಬರಬೇಕಲ್ಲವೆ? 

ಬಿತ್ತಿ ಬೆಳೆಯಿಸಿ ಪರಾಂಬರಿಸುವುದು ಒಕ್ಕಲಿಗನಾದರೆ, ಕೈಯನ್ನು ತೆನೆ 

ಗೊಳಿಸಿ ಮಾಗಿಸುವುದು ಕಾಲದ ಕೈವಾಡ. ಅಗೆಹೆಸುರುಗಳನ್ನೆತ್ತಿದರೆ 

ಭತ್ತವಾಗುವುದೆ? 


ನೃಪತುಂಗ:--ಸರಿ. ಅದಂತಿರಲ್ಲಿ ಆ ನಂದಿವರ್ಮಾದಿಗಳನ್ನು 

ಪರಾಂಬರಿಸತಕ್ಕ ಸೇನಾನಾಯಕರಾಗಿ ಯಾರು ನಿಯಮಿತರಾಗಿದ್ದಾರೆ? 


ಜಯಾಳ್ವ:--(ಒಂದಿಷ್ಟು ಭಾವಿಸಿ) ಮಹಾರಾಜರಿಗೆ ಮೇಲಿಂದ ಮೇಲೆ 

ಆ ನೂತನ ಸೇನಾನಾಯಕನ ಹೊಲಬಾಗಲಾರದು. ಶಂಖವರ್ಮನೆಂದು 

ಆತನ ಹೆಸರು. ಯುವಕನಾದರೂ ಆತನ ಹುರುಪು-ಜಾಣ್ಮೆಗಳು ಎಣಿಕೆ 

ಯಿಂದತ್ತಣವು. ಆ ಕಾರ್ಯಕ್ಕಾತನೇ ತಕ್ಕವನೆಂದು ನಿರ್ಧರಿಸಿಕೊಂಡೇ 

ಅಣಿಗೊಳಿಸಲಾಗಿದೆ.  


ಹೀಗೆ ಸಂಭಾಷಣೆ ಸಾಗುತ್ತಿರುವಲ್ಲಿ ಬನವಾಸಿಯಿಂದ ಬಂಕೆಯನ 

ದೂತನೂ, ಕೇದಲದುರ್ಗದತ್ತಣಿಂದ ರಾಷ್ಟ್ರಕೂಟ ರಾಯಭಾರಿಯ 

ದೂತನೂ ಬಂದು ಸಮಯವನ್ನು ಪ್ರತೀಕ್ಷಿಸುತ್ತಿದ್ದರು. ಮಹಾರಾಜನ 

ಮನವರಿಕೆಯಾಯಿತದು. ಕೂಡಲೆ ಜಯಾಳ್ವನು ಅತ್ತ ಸಾಗಿದನು; 

ಅರಸನು ಇತ್ತಣ ಪರಾಂಬರಿಕೆಯಲ್ಲಾದನು. 

=========


ಕ್ಷೋಭ ಶಾಂತಿ 

ಚಿತ್ತಾರನು ಬಲಿದ ಬಣ್ಣವಾದ ನಸು ಬೆಳಕು ಇನ್ನೂ ಹರಿಯ 

ಲಾರಂಭಿಸಿತ್ತೋ ಇಲ್ಲವೊ? ಅದನ್ನು ಕಾಣುವವರಾರು, ಕಂಡಾಡುವವ 

ರಾರು? ಚಳಿಯ ಹಿಡಿತಕ್ಕೊಳಗಾಗಿ ಬೆರಳು ಮುಟ್ಟದ ಚೇರಟೆ(ಶತಪದಿ)- 

ಯಂತೆ ಎಂಟುಗೇಣಿನ ಮೈ ಎರಡು ಗೇಣಾಗಿ ಜನಸಂದಣಿಗೆ ಸಂದಣಿ 



೪೯------------------------------------------------------------- 



ಸುತ್ತಿ ಸುರುಟಿ ಹೋಗಿತ್ತು. ರಾಜಧಾನಿಯ ನಾಗರಿಕರೆಂಬವರ ಸುಖಾನು 

ಭವದಲ್ಲಿ ಮೈಮರೆತ ಜೀವನ ಹಾಗಾದರೆ ಒಂದಷ್ಟು ದೂರದ ಬಂಗನ 

ಬಯಲೆಂಬ ಹಳ್ಳಿಗಾಡ ಪಾಡು ಹಾಗಿದ್ದಿಲ್ಲ. ಒಕ್ಳಲಿಗರ ಕುಟುಂಬದಿಂದ 

ತುಂಬಿದ ಹಳ್ಳಿಯದು. ಜನ ಸಮಾಜವನ್ನು ಕೋಳಿ ಎಚ್ಚರಿಸುವುದೆಂದು 

ಪ್ರಸಿದ್ಧವಾದರೆ; ಆ ಹಳ್ಳಿಯೊಳಗೆ ಕೋಳಿಗಳನೆಚ್ಚರಿಸುವುದು ಒಕ್ಕಲಿಗರೇ. 

ಮಾತ್ರವಲ್ಲ, ಒಂದೆರಡು ದಿನಗಳಿಂದ ತಮ್ಮ ಹಳ್ಳಿಯೊಳಗಿನ ಧರ್ಮಶಾಲೆ 

ಯಲ್ಲಿ ಅಸಂಖ್ಯಾಕರಾದ ಗೋಸಾಯಿಗಳು ಬಂದಿಳಿದಿದ್ದಾರೆ. ಹಗಲೆಲ್ಲ 

ಜೀವನಕ್ಕಾಗಿ ನಾಡುದ್ದಕ್ಕೂ ಹರಿಯುವುದರಿಂದ ಅವರೆಲ್ಲರ ಒಡ್ಡೋಲಗ 

ಕ್ಕೆಡೆಯಾಗುವುದು ರಾತ್ರಿಯಲ್ಲೇ. ಸುಮಾರು ರಾತ್ರಿ ಎಂಟೂವರೆ- 

ಒಂಭತ್ತು ಗಂಟೆಗೆ ಬಂದು ಸೇರಿ ಅಡಿಗೆ-ಊಟ-ಭಂಗಿಯೊಡನೆ ಮಾತು 

ಕತೆಗಳ ಕೋಲಾಹಲವೆಲ್ಲ ಕೊನೆಯಾಗಿ ಮಲಗಿ ಗೊರಕೆಯೇಳುವಲ್ಲಿ 

ಐದು ಗಂಟೆಯಾಗುತ್ತಿದೆ. ಆಗ ಎದ್ದು ಮತ್ತೆ ಭಂಗಿ ಸೇದಿ ಮುಖದೊಳೆದು 

ಅವರ ನಿಯಮಬದ್ಧವಾದ 'ಪ್ರಾತಸ್ಸಂಧ್ಯಾವಂದನೆ' ಮಾತ್ರವಲ್ಲ, 'ಮಳೆ 

ನಿಂತ ಮೇಲೆ ಮರದಡಿಯ ಹನಿ' ಎನ್ನುತ್ತಾರಷ್ಟೆ? ಅದರಂತೆ, ಎಲ್ಲರೂ 

ಮಲಗಿದಂತೆ ತೋರಿದ ಮೇಲೆ ಆ ಧರ್ಮಶಾಲೆಗೆ ಯಾರೋ ಬಂದು 

ಹೋಗುವುದೂ, 'ಗುಜುಗುಜು ಮಾತು'ಗುಟ್ಟುವುದೂ ಹಳ್ಳಿಗರಿಗೆ ತಿಳಿದು 

ಬಂದಿತ್ತು. ಅದರಿಂದ "ಇವರು ಬರಿಯ ನಾಡಾಡಿ ಗೋಸಾಯಿಗಳಲ್ಲ; 

ಇವರ ಹಿಂದೆ ಕಟ್ಟಿ ಅಲುಗಾಡುವ ಬಾಲವೊಂದಿದೆ.” ಎಂಬ ಸಂದೇಹವು ಬಿತ್ತಿ, 

ಒಂದಷ್ಟು ಹೊದರಾಗಿಯೂ ಬೆಳೆದಿತ್ತು. ಅದರಿಂದ, ಆ ಸುತ್ತ ಮುತ್ತಣ 

ಹಳ್ಳಿಯ ನಾಡವರಂತೂ ಕಣ್ಣಿಗೆ ಎಣ್ಣೆಯೆರೆದಂತೆ ಎಚ್ಚರಿತಿದ್ದರು. ಒಮ್ಮೊ 

ಮ್ಮೆ ಈ ಒಡ್ಡರೊಳಗಿನ ಕೆಲಮಂದಿ ಯುವಕರು ತಮ್ಮ ಊಟ-ಉಪಚಾರ 

ಗಳನ್ನೆಲ್ಲ ಮುಗಿಸಿಕೊಂಡು ತಪ್ಪಲಿಂದ ಕೆಳಗಣ ಗುಡಿಸಲುಗಳತ್ತ ನಡುವಿರು 

ಳಿನಲ್ಲಿ ಇಳಿವುದೂ ಉಂಟು. "ಎನಾದಕೊಂದು ಕಾರಣ ಹಾಗಿಳಿಯಲಿಕ್ಕಿದ್ದೇ 

ಇದೆ; “ಚಳಿಯೋ ಚಳಿ! ಏನಯ್ಯಾ, ನೀವೆಲ್ಲ ಈ ಚಳಿಯ ಹುಳುಗಳಾಗಿ 

ಹೇಗೆ ಅಂದಿನಿಂದಿಂದಿನ ವರೆಗೆ ಕಾಲಹರಣ ಮಾಡುತ್ತೀರೋ ದೇವರೇ 

ಬಲ್ಲ! ನಮ್ಮ ಬೆಂಕಿ ಎಲ್ಲ ಚಳಿಗೆ ಹೆದರಿ ಮುದುರಿ ಹೋಯಿತು. ಒಂದಿಷ್ಟು 

ಬೆಂಕಿ ಕೊಡಿ ನೋಡುವ. ಈ ಸೇದು ಬತ್ತಿಗೆ ಜೀವಕಳೆದುಂಬಿ ನಮ್ಮ 

ಚೈತನ್ಯ ಜ್ಯೋತಿಯನ್ನು ಬೆಳೆಗಿಸಿಕೊಳ್ಳುತ್ತೇವೆ? ಎಂದು ಮೊದಲಾದ ಕಾರಣ 

ವನ್ನೂ ನೆವವನ್ನೊ ಒಡ್ಡಿಕೊಂಡು ಬರುತ್ತಿದ್ದರು, ಹಾಗೆ ಬರಲು ಸಮಯಸಾರಿ 


೫೦--------------------------------------------------------------------



ಗೆಯೂ ಇದ್ದಿಲ್ಲ. ಬೆಳಗಿನ ಪರ್ಯಂತ ಯಾವಾಗಲೇ ಬರಲಿ, ನಾಲ್ಕೂ 

ವರೆ ಐದು ಗಂಟಿಯ ವರೆಗೂ ಆ ಗುಡಿಸಲುಗಳಲ್ಲಿ ಮಿಣಿಮಿಣಿ ದೀಪಗಳಷ್ಟೇ 

ಅಲ್ಲ, ಉರಿಯುವ ಅಗ್ಗಿಷ್ಟಿಕೆಯೂ, ವಿಶೇಷವಾಗಿ ಮುದುಕ ಮುದುಕಿಯರ 

ಕೆಮ್ಮಲುಗಳೂ ಎಚ್ಚರಗೊಂಡಿದ್ದುವು. ಒಮ್ಮೆ ಸುಮಾರು ಪ್ರಾತಃಕಾಲ 

ವಾಗಿತ್ತು; ಒಬ್ಬಿಬ್ಬರು ವೇಗವಾಗಿ ಬಂದು ಗುಡಿಸಲನ್ನೇರಿದರು. ಅಗ್ಗಿ 

ಷ್ಟಿಕೆ ಕನಲಿಕೊಂಡಿದ್ದಿಲ್ಲ ಆದರೆ, ಸೇದುಬತ್ತಿಯನ್ನು ಸೆಳೆಯುತ್ತಿದ್ದ 

ಮನೆಯ ಮುದುಕನ ಹೊದರು-ಗಡ್ಡಕ್ಕೆ ಹೇಗೋ ಬೆಂಕಿತಗಲಿ ಜ್ವಲಿಸ 

ಲಾರಂಭಿಸಿತು. ಹಳೆ ಮುದುಕ! ದಾಡಿಯಾಗಿ ಬಳೆದು, ಮಡಿಕೆಗೊಂಡ  

ಜುಂಜುಗೂದಲಿಗೆ ಬೆಂಕಿ ಹಿಡಿವಲ್ಲಿ ಗೊತ್ತಾಗಲಿಲ್ಲ. ಅದರುರಿಯ ಕಾವು 

ತಗಲಿದ ಮೇಲೆಯೇ ಫಕ್ಕನೆ 'ಹೀಗೆ' ಎಂದು ಪರಾಂಬರಿಕೆಯಾಯಿತು. 

ದಿಗಿಲಿನ ಕಳವಳಕ್ಕೆ ತುತ್ತಾಗಿ ಹಾ ಎಂದು ಕಿರಿಚಾಡುತ್ತಾ ಅದನ್ನವನು 

ಹಿಸುಕುತ್ತಿದ್ದನು. ಹಾಗೇ ಎರಡು ನಿಮಿಷ ಕಳೆದರೆ ಬೆಂಕಿಯದು 'ಹಸೆಗೆ- 

ಹಸೆಯಿಂದ ಹತ್ತಿರದ ಮರೆಗೆ, ಮರೆಯಿಂದ ಇಡೀ ಗುಡಿಸಲಿಗೆ' ಹತ್ತಿ ಭಸ್ಮಾ 

ವಶೇಷವಾಗಬಹುದಾಗಿತ್ತು. ಯಾರನ್ನು ಹಿಡಿದು ಹಿಂಡಿದ ಚಳಿಯೂ 

ಬೆಂಕಿಯನ್ನು ಹಿಡಿದಿಲ್ಲ ಎನ್ನುವ. ಆಗಮಿಸಿದ ಇಬ್ಬರೊಳಗೊಬ್ಬನು. 

ಮುದುಕನ ಹತ್ತಿರಕ್ಕೆ ಬಂದು, ಬತ್ತಿ ಬೆರಳೆಡೆಯಲ್ಲಿರಿಸಿಕೊಂಡು ಆಡಿದನು; 

“ಅಜ್ಜಾ, ಒಂದಿಷ್ಟು ದಯಮಾಡು, ಚಳಿಹಿಡಿದು ಹಿಪ್ಪೆಯಾಗಿ ಬಿಟ್ಟದ್ದೇನೆ. 

ನಿಮಿಷಾರ್ಧದಲ್ಲಿ ಬತ್ತಿಗೆ ಜೀವಕಳೆ ತುಂಬಿಸಿಬಿಡುತ್ತೇನೆ. ಆ ವರೆಗೆ 

ದಾಡಿಯನ್ನು ಹಿಸುಕದೆ ಸುಮ್ಮನಿದ್ದು ಬಿಡಯ್ಯಾ, ಎಂದನು. ಪ್ರಾರ್ಥನೆ. 

ಯದು ಆ ಮುದುಕನಿಗೆ ಕೇಳುವಂತಿರಲೇ ಇಲ್ಲ. ಆಗ ಒಬ್ಬನು ಚಡಪಡಿ 

ಸುವ ಆತನ ಎರಡೂ ಕೈಗಳನ್ನು ಬಲವಾಗಿ ಹಿಡಿದುಕೊಂಡನು. ಇನ್ನೊ 

ಬ್ಬನು:--'ಗಲಭೆಮಾಡಬೇಡ, ಮುದುಕನಾದ ನಿನ್ನಂಥವರು ಮಾಡುವ 

ಕಾರ್ಯದೊಳಗೆ ನಮ್ಮಂಥ ಕಿರಿಯರಿಗೆ ಹೀಗೆ ಹುರುಪುದುಂಬುವುದ 

ಕ್ಕೆಂತಲೂ ಮೇಲಾದ ಧರ್ಮಕಾರ್ಯ ಯಾವುದು?” ಎನ್ನುತ್ತಾ ತುಟಿಗೇರಿ. 

ಸಿದ ಬತ್ತಿಯನ್ನು ಸೇದಲಾರಂಭಿಸಿದನು. ಮುದುಕನ ಗೋಳಾಟವ 

ನ್ನೇನೆಂದು ವಿಸ್ತರಿಸಲಿ. ಅಷ್ಟರೊಳಗೆ ಎಚ್ಚರವಾಗಿ ಬಂದು ಇವರ ಮೇಲೆ 

ಹಾರಿ ಕೈಮಾಡಿದವನೆಂದರೆ ಆತನ ಸರ್ವಸ್ವವಾದ ಒಬ್ಬನೇ ಮಗನು. 

ಆದರೆ ಗಲಭೆಯನ್ನಾಲಿಸಿದ ಒಡ್ಡ ಯುವಕರು 'ಎರಡು ಹನ್ನೆರಡಲಿ ಇಪ್ಪತ್ತು 

ನಾಲ್ಕಾ'ಗಿ ಬಿಟ್ಟಿದ್ದರು. ಆ ಒಬ್ಬ ಯುವಕನ ಅವಸ್ಥೆ 'ಬಡವನ ಕೋಪ 



೫೧---------------------------------------------------------------------- 



ದವಡೆಗೆ ಮಾರಿ'ಯಾಗಿ ಪರಿಣಮಿಸಿತ್ತು. ಅಷ್ಟರಲ್ಲಿ ನೆರೆಕರೆಯ ಒಕ್ಕಲಿಗರ 

ಸಂತೆಯೇನೋ ಕೂಡಿತು. ಆದರೆ ಆ ಕೂಡಿಕ್ಕಿದೇನು, ಕೋರಿಯೇ *

ಕಂಬಳವೇ?' ಎಲ್ಲರೂ ಕಣ್ಣು ಕಿವಿಯಾಗಿ ಗಲಭೆಯೊಳಗಾದರಲ್ಲದೆ 'ಕಣ್ಣೇ 

%ಕಿವಿಯಾದ' ಹಾವುಗಳಾಗಿ ದುಷ್ಟರನ್ನಿರಿದು ಬಿಡುವಷ್ಟು ಎದೆಗಾರಿಕೆ 

ಯುಳ್ಳವರಾಗಲಿಲ್ಲ. 


ಅಷ್ಟರೊಳಗೆ ನಾಲ್ವತ್ತು- ಐವತ್ತು ಮಂದಿ ಸಶಸ್ತ್ರ ವೀರಭಟರು ಗುಡಿ 

ಸಲಿನ ಸುತ್ತಮುತ್ತಲಾಗಿದ್ದರು. ದಬ್ಬಾಳಿಕೆಯ ಆ ಒಡ್ಡ ಯುವಕರೆಲ್ಲರೂ 

ಅವರ ಕೈಸಂಕಲೆಯ ಕಾಣಿಕೆಗಳಲ್ಲಿ. ಮುದುಕನ ಹಾಸಿಗೆಗೆ ತಗಲಿ 

ಹರಿದು ಮರೆಗೇರುತ್ತಿದ್ದ ಬೆಂಕೆಯ ನಾಲಗೆಯಾರಿತು. ದಡ್ಡರಾದರೂ 

ತಲೆಯೆಣಿಕೆಯಲ್ಲಿ ಹಿರಿಯರಾದ ಕೂಟಕುಳಿ--ನಾಡವರಿಗೆ “ಅದಾರು 

ಇದಾರು?” ಎಂಬ ಹೊಲಬೂ ಫಕ್ಕನೆ ಆಗಲಿಲ್ಲ. “ಹಾ ಹಾಯ್‌ ಎಂದು 

ಗುಲ್ಲೆಬ್ಬಿಸಿ  ಅಡ್ಡತಿಡ್ಡಾಗಿ ಓಡಾಡಿ ಕೈಗೆ ಕಾಲಿಗೆ ತಡೆಯಾದರವರು. 

'ಹೂಂ, ಹೂಂ, ಎಂದು ಗದರಿಸಿ ಹುಬ್ಬಿನ ಜರ್ಬಿನಿಂದ, ವೀರಭಟರು 

ಅವರನ್ನು ತೊಲಗಿಸಿದರು. ಇಷ್ಟಾಗುವಲ್ಲಿ ಮೇಲಿನ ಧರ್ಮ ಶಾಲೆಯ 

ಪರಿಸರದಿಂದೆದ್ದ ಗುಲ್ಲು ಬಾಂದಳವನ್ನು ದುಂದುಮಿಸಿತು. ಆಗ ಗೇಣುದ್ದ 

ಕ್ಕೇರಿದ ಹೊತ್ತಿನಿಂದಾಗಿ, ಮಂಜಿನೆದೆಗೆ ಹರಳಣ್ಣೆ ಗುಡಿದಂತಾಗಿತ್ತು. 

ವೀರಭಟರು ನಾಡವರಿಗೆಲ್ಲ ಧೈರ್ಯವನ್ನಿತ್ತು “ಏನಯ್ಯಾ, ಬತ್ತಿಗೆ ಬೆಂಕಿ 

ತಗಲಿತೆ? ಹಿಡಿದ ಚಳಿ ಈಗ ತೊಲಗಿತೆಂದು ತೋರುವುದಲ್ಲವೆ?” ಎಂದು 

ಮಾತಿನಿಂದ ಮನಸ್ಸಿಗೆ, ಕೈಯಿಂದ ಬೆನ್ನಿಗೆ ಕುಕ್ಕುತ್ತಾ ಆ ಕೊಳ್ಳೆಗಾರ 

ರೊಡನೆ ಮೇಲೇರಿದರು. 


ಅಷ್ಟರಲ್ಲಿ ಕೆಲ ಮಂದಿ ಪಟುಭಟರೊಡನೆ ,ಸಂಕಣ ನಾಯಕನು 

ಬಂದು ಆ ಧರ್ಮಶಾಲೆಯ ಅಂಗಳದಲ್ಲಿ ನಿಂತಿದ್ದನು. ಸಂಕಣ ನಾಯಕ 

ಎಂದರೆ ಯಾಕೆಂದು ಶಂಕಿಸುವಿರೊ? ಹಿಂದಿನ ಚಕ್ರವರ್ತಿ- ಜಯಾಳ್ವರ 

ಸಂಭಾಷಣೆಯಲ್ಲಿ ತೋರುವ ಶಂಖವರ್ಮನೆಂಬ ಆ ನೂತನ ದಳನಾಯಕ 

ನನ್ನು ಸೈನಿಕರು ಕರೆಯುವೆ ಹೆಸರೇ ಅದಾಗಿ ತೋರುತ್ತಿದೆ. ಸಂಕಣ್ಣ 

................


* 'ಕೋರಿ' = ಬಿತ್ತಿಕ್ಕುವ ಉತ್ಪ ವರೂಪದ ಕಡೆಯ ಕೃಷಿ ಸಮಾರಂಭ! 


ಕಂಬಳಿ = ಜೋಡು ಕೋಣಗಳನ್ನು ಕಟ್ಟಿ ಓಡಿಸುವ ವಿಲಾಸಾತ್ಮಕವಾದ 

ಒಕ್ಕಲಿಗರ. ಉತ್ಸವ 


% 'ಕಣ್ಣೇಕಿವಿಯಾದ' 



೫೨-------------------------------------------------------



ನಾಯಕನೊಡನೆ ಆ ಬಂಗನಪಳ್ಳಿ ಯ ಪಾಳೆಯಗಾರನೂ ಅರಸುಮನೆತನ 

ಗಳವರಂತೆ ತೋರುವ ಮತ್ತಿಬ್ಬರು ಯುವಕರೂ ಇದ್ದರು. ಆ ಕೊಳ್ಳೆ 

ಗಾರರೊಡನೆ ಮೇಲೇರುತ್ತಿರುವ ತನ್ನ ಕಡೆಯ ಸೈನಿಕರಲ್ಲಿ ಪರಾಂಬರಿಸಿ 

ಅವರ ವರ್ತನೆಯನ್ನೆ ಲ್ಲ ತಿಳಿದುಕೊಂಡ ನಾಯಕನು ಆ ಪಾಳೆಯಗಾರನೇ 

ಮೊದಲಾದವರ ಮುಖದಲ್ಲಿ ಕಣ್ಣಿ ಟ್ಟನು. ಅವರ ನಾಚಿಕೆಯನ್ನವಲಂಬಿಸಿ 

ಕೊಂಡು ಮಾತೆತ್ತಿದನು. 


“ಮಿತ್ರರೇ, ನಿಮ್ಮ ಅಂತರಂಗದ ಹೆಬ್ಬಾಗಿಲನ್ನು ತೆರೆದಾಡಬೇಕು. 

ನಮ್ಮ ಚಕ್ರವರ್ತಿಗಳ ಉದಾರ ಬಿರುದು ಅಕ್ಬರಶಃ ಸಾರ್ಥಕವಾದುದು. 

ನಿಜವಾಗಿಯೂ ಪಶ್ಚಾತ್ತಾಪ ಜಲದಿಂದ ತೊಳೆದಲ್ಲಿ ಅಪಾರ ಪಾತಕ ಹೃದಯ 

ವನ್ನೂ ಕ್ಲಮಿಸಿಬಿಡುವುದು ಅವರ ಹುಟ್ಟುಗುಣ, 'ಮಾನವನಿದ್ದಲ್ಲಿ ಮಸಣ 

ವೆಂದೂ ಆ ಮಸಣದೊಳಗೆ ಒಂದಿಷ್ಟಾದರೂ ಕರಿಮುರಿ ಮಜ್ಜೆ 

ಮಾಂಸಗಳಿರದೆ ಎಲ್ಲವೂ ಭಸ್ಮಾನಶೇಷವಾಗುವಂತೆ ಜಾಗೃತವಾಗಿರುವುದೇ 

ಧರ್ಮವೆಂದೂ' ಅವರ ನಿರ್ಣಯ. ಅದರಿಂದ ತಿಳಿದ ಮೇಲೆ ಶುದ್ಧ 

ನಾಗುವ ಮುಂಗುರಿಯುಳ್ಳ ಎಂಥವಥಿಗಾದರೂ ಅವರಲ್ಲಿ ಆಶ್ರಯವಿದೆ. 

ಈ ವಿಷಯವನ್ನು ಸರಿಯಾಗಿ ಮಂದಟ್ಟು ಮಾಡಿಕೊಂಡು ಮುಂದಿನ 

ಪ್ರಶ್ನೆಯನ್ನುತ್ತರಿಸಬೇಕು. ಹೇಗೆ? ಸಂಸಾರವನ್ನು ರೌರವದಲ್ಲಿ ಮುಳು 

ಗಿಸುವ ಇಂಥ ವ್ಯಕ್ತಿಗಳನ್ನು ನಮ್ಮಂಥವರು ವಿಶೃಂಖಲವಾಗಿ ಹರಿಯ 

ಬಿಡಬಹುದೆ? ಬಿಟ್ಟರೆ ಅದರಿಂದೊದಗುವ ಪರಿಣಾಮಕ್ಕೆ ಉತ್ತರವಾದಿ 

ಗಳು ಅವರೋ ನಾವೊ? ನೀವು ಪ್ರತಿವಾದಿಗಳೆಂದೆಣಿಸಿಕೊಂಡು ಆಡುವ 

ಮಾತಲ್ಲವಿದು. ಕಿರಿಯ ನಾದ ಸಾಮಾಜಕನಾಗಿ, ಒಂದಷ್ಟು ಹಿರಿಯರಾದ 

ನಿಮ್ಮ ಬೋಧನೆಯನ್ನು ಹೀರಿಕೊಳ ಲಿಕ್ಟಾಗಿ ಕೇಳುತ್ತೇನೆ” ಎಂದನು. 




ಯಾರೂ ಮಾತೆತ್ತದೆ ಒಂದೆರಡು ನಿಮಿಷ ಮೌನವಾಗಿದ್ದರು. ಆ 

ಮೇಲೆ ಆಜಾನುಬಾಹುವೂ ಸೌಂದರ್ಯನಿಧಿಯೂ ಆದ ಹಿಂದಣ ಕುಮಾ 

ರಕರೊಳಗೊಬ್ಬನು--*ಹುಂ, ಸಂದೇಹವೇನು?" ಎಂಬ ಮುನ್ನುಡಿಯೊ 

ಡನೆ ಉತ್ತರಿಸಿದನು:-"ಹುಂ, ಸಂದೇಹವೇನು? ಇವರು ಆ ಮುದುಕನಿ  

ಗಿತ್ತ ಕೋಟಲೆ ನಿಜವಾದರೆ, ಇವರನ್ನು ಕ್ರೂರ ಮೃಗಗಳಿಗಿಂತಲೂ 

ಅತ್ತತ್ತ ಎನ್ನಲೇಬೇಕು. 


ಸಂಕಣ:--ಪ್ರಿಯ....... ವರ್ಮರೆ, ನಿಮ್ಮ ನೆಲೆವಡೆದ ಉತ್ತರವನ್ನು 

ಕೇಳಿ ಮನಸ್ಸೊಂದಷ್ಟು ಸಮಾಧಾನವಾಯಿತು. ಆದರೆ ....... ಕೋಟಲೆ 


53--------------------------------------------------



ನಿಜವಾದರೆ? ಎನ್ನುತ್ತೀರಿ. ದುರುದ್ದೇಶವಿಡಿದು ಸುಳ್ಳನ್ನಾಡಿದರೆ ಆಚರಿಸಿ. 

ದರೆ, ಈ ಮಾನ್ಯಖೇಟ ರಾಜಧಾನಿಯ ಸಂಬಂಧವನ್ನೇ ತಾವು ಕಳೆದು 

ಕೊಳ್ಳ ಬೇಕಾಗುವುದೆಂಬುದನ್ನು ಈ ಪ್ರತಿಯೊಬ್ಬ ಸೈನಿಕನೂ ಬಲ್ಲನು. 

ಅದೂ ಬೇಡ; ನೀವೇ ಈ ಸೂರೆಗಾರರನ್ನು ಕೇಳಿರಿ. ಅವರು ಅಲ್ಲಗಳೆದರೆ. 

ನಾವೆಲ್ಲರೂ ಒಮ್ಮೆ ಇವರೊಡನೆ, ಅದೋ ಕಾಣುವ ಗುಡಿಸಲವರೆಗೈದಿ 

ಪರಾಂಬರಿಸುವ.


...  ವರ್ಮ:-(ಗಂಭೀರತೆಯಿಂದ್ರ ಆಪ್ತ ಸಂಕಣನವರೆ, ಈ ಸಂದರ್ಭ 

ವನ್ನೊಂದಿ ಹೀಗಾಡುತ್ತೇನೆಂದು ಭಾವಿಸಬಾರದು. ಅದೇನೋ ನಿಮ್ಮ 

ಮುಖವನ್ನು ಕಂಡು ಮಾತನ್ನು ಕೇಳಿ ಈ ಮನಸ್ಸೆಂಬುದು ನಿಮ್ಮದೇ ಆಗಿ 

ಬಿಟ್ಟಿದೆ. ...... ಕೋಟಲೆ ನಿಜವಾದರೆ” ಎಂದುದರಲ್ಲಿ "ನಿಮ್ಮ ಮಾತು 

ಸಂಶಯಾಸ್ಪದವಾದುದು' ಎಂಬ ತಾತ್ರರ್ಯವೆಲ್ಲ. "ಮಾನವ ವರ್ಗದಲ್ಲಿ 

ಸೇರಿದವರಾಗಿದ್ದರೆ, ಇವರು ಆ ಬಡ ಮುದುಕನನ್ನು ಹಾಗೆ ಹಿಂಸೆಗೈಯ್ಯು 

ವರೆ? ಎಂಬುದೇ ಅದರ ತಾತ್ಪರ್ಯಾರ್ಥ. ಮಾತ್ರವಲ್ಲ, ಈ ಕೊಳ್ಳೆ 

ಗಾರರಲ್ಲಿ ನಾನು ವಿಚಾರಿಸುವುದಾದರೂ ಹೇಗೆ? ನನಗೂ ಇವರಿಗೂ 

ಯಾವ ಬಗೆಯ ಬಾದರಾಯಣ ಸಂಬಂಧವೂ ಇಲ್ಲ. 


ಸಂಕಣಃ--ಈ ಅಲ್ಪರ ಸಂಬಂಧವಿಡಿದು ನಿಮ್ಮ ಬಾಳಿಕೆ ಹಗುರವಾಗ 

ಬಾರದೆಂದೇ ಪ್ರಾರ್ಥಿಸುತ್ತೇನೆ. ಆದರೆ ಈ ಒಡ್ಡರೆಂದರೆ ವಾಸ್ತವಿಕವಾಗಿ 

ಒಡ್ಡರಲ್ಲ. ಗಂಗರಾಜಮೆಲ್ಲನ ಹಂಚಿಕೆಗೊಳಗಾದ ನಮ್ಮ ಈ ಗುಣಾಂಕ 

ವಿಜಯಾದಿತ್ಯರ ಮತ್ತು ನಿಮ್ಮ ಪ್ರೋತ್ಸಾಹದಿಂದ ಇಲ್ಲಿ ಸುಳಿದು ಸುತ್ತಿ 

ಸಮಯನಿರೀಕ್ಷೆಯಿಂದಿರುವ ದಾಳಿಗಾರರೆಂಬ ಸುದ್ದಿ ಹಿಂದಿನಿಂದಲೇ ಪಿಸು 

ಗುಟ್ಟಕೊಂಡಿತ್ತು. 'ವೃಥಾ ನಾಡಾಡಿಗಳಾದ ಬಡಜನರಿಗೆ ತೊಂದರೆಯಾಗ 

ಬಾರದು' ಎಂದು ಮಹಾರಾಜರು ಸೈಸಿಕೊಂಡರು. ನೋಡಿರಿ; ಇವರು 

ಒಡ್ಡರಲ್ಲ, ಕೊಳ್ಳೆ ಗಾರರೆಂಬ ಕೈ ಕಂಡಿದೆ. ಹೀಗೆ ಎದೆದೆರೆದಾಡಿದ ಮಾತಿಗೆ 

ನೊಂದುಕೊಳ್ಳ ಬಾರದು. ನಾವೆಲ್ಲರೂ ತಪ್ಪನ್ನು ಕಿತ್ತೊಗೆದು ಒಪ್ಪಾದ 

ಮನಸ್ಸಿಗೆ ಮನೆಯಾದ ಸಮಾಜವನ್ನು ತುಂಬಬೇಕಾಗಿ ಪ್ರಾರ್ಥಿಸುತ್ತೇನೆ. 


ಗುಣಗಾಂಕಃ--(ಒಂದಸ್ಟು ಭಾವಿಸಿ ) ನಾಯಕರೆ, ಹೌದು. ತಪ್ಪಾ 

ಯಿತು ಉಪ್ಪನ್ನು ಸಕ್ಕರೆಯನ್ನಾಗಿ ಭಾವಿಸಿದುದು ತಪ್ಪಾ ಯಿತು. 


ಸಂಕಣ:--ಅಲ್ಲ; ತಪ್ಪನ್ನು ತಪ್ಪೆಂದು ತಿಳಿದು ತಿದ್ದಿಕೊಂಡರೆ ಆ 

ತಪ್ಪೂ ಒಪ್ಪಾಗಿ ಪರಿಣಮಿಸುವುದಲ್ಲವೆ? ಸಂದರ್ಭಕ್ಕೆ ಸಿಲುಕಿ ಸುಳ್ಳನ್ನಾಡಿ- 


54----------------------------------------------------



ಬಿಡುತ್ತೇವೆ. ಆದರೆ, ಪ್ರಬುದ್ಧರಾಗಿ "ಇದು ಸುಳ್ಳು' ಎಂದು ತಿಳಿದು 

ಕೊಂಡರೆ ಮತ್ತೆಲ್ಲಿದೆ ಸುಳ್ಳು? ಸಂಗ್ರಹವಾಗಿ ಹೇಳಿದ ಆ ಉಪ್ಪು ಸಕ್ಕರೆ 

ಗಳ ಹೊಲಬನ್ನು ಸರಿಯಾಗಿ ತಿಳಿದುಕೊಳ್ಳ ಬೇಕಾಗಿದೆ. 


ಗುಣಗಾಂಕ:--ಇನ್ನೂ ಮುಚ್ಚುಮರೆಯೆ? ಗಂಗರಾಜರಾದ ರಾಜ 

ಮಲ್ಲರ ಬೋಧನೆಗೆ ನಾವೂ ಒಂದಷ್ಟು ಕಿವಿಗೊಟ್ಟುದು ತಪ್ಪಾಯಿತು. 

ಆದರೆ, ಪಲ್ಲವ ಕುಮಾರ ನಂದಿವರ್ಮರಿಗೆ ರಾಜಮಲ್ಲರಲ್ಲಿ ಅಷ್ಟೊಂದು 

ಬಳಕೆ ಇಲ್ಲ. ಅವರ ಕುಮಾರರಾದ ಯುವರಾಜ-ಬೂತುಗರಲ್ಲಿ ಮಾತ್ರ 

ಇವರು 'ಅಸುವೊಂದು ಮೆಯ್ಯೆರಡಾ'ಗಿರುವವರು. "ನಮ್ಮ ಬೂತುಗನೂ 

ನೀವೂ ವೆಂಗಿಗೈದಿ ಸಾಮಂತಶೇಖರ ಗುಣಗಾಂಕರೊಡಗೂಡಿ ವಿರೋಧಿಗಳ 

ಹೆಮ್ಮೆಯನ್ನಣಗಿಸಲು ಪ್ರಯತ್ನಿಸಬೇಕಾಗಿತ್ತು. ಆದರೇನು? ಬೂತುಗನು

ಅನಾರೋಗ್ಯದಿಂದ ಹೊರಡಲಾರದವನಿದ್ದಾನೆ. ಈ ಪತ್ರವನ್ನು ಅವನೇ 

ಎಂದು ಭಾವಿಸಿ ಕೂಡಲೇ ವೆಂಗಿಗೈದಿ ನಮ್ಮೆಲ್ಲರ ಕಾರ್ಯದ ಸಾಧನೆಯಲ್ಲಿ 

ನೆರವಾಗುವಿರೆಂದು ನಂಬಿದ್ದೇನೆ." ಎಂದು ಬೂತುಗನ ತಂದೆ ರಾಜಮಲ್ಲರು 

ನಿಮಗೊಂದು ಪತ್ರವನ್ನು ಬರೆದಿದ್ದರಂತೆ. ನನಗೂ ಅಂಥದೇ ಆದ ಹೇಳಿಕೆ 

ಯೊಂದು ಬಂದಿದೆ. ಆದರೆ ಕುಮಾರ ಬೂತುಗರು ರೋಗಗ್ರಸ್ತರಾಗಿರುವ 

ರೆಂಬುದು ಸಕ್ಕರೆಯಂತಿರುವ ಉಪ್ಪೆಂದು ಇತ್ತೀಚೆಗೇನೋ ಸಿದ್ಧವಾಗಿ 

ಉಂಡ ಮೇಲೆ ಜಾತಿ ಗೊತ್ತಾದಂತಾಗಿದೆ. ನಮ್ಮ ವೆಂಗಿಗೆ ಬಂದ ಮೇಲಂತೂ 

ಇತ್ತಣ ಆಗಮನದ ವಿಷಯದಲ್ಲಿ ತೂಗಿ ತೊನೆದು ತೂಕಡಿಸುತ್ತಿದ್ದ ಈ

ನಂದಿವರ್ಮರನ್ನೂ ಒತ್ತಾಯಿಸಿಕೊಂಡು ಹೊರಟುದನ್ನೇನೆನ್ನಲಿ. ಅಪರಾಧದ 

ಮೇಲಿನ ಒಗ್ಗರಣೆಯಾಯಿತು. ಈ ಪಾಳೆಯಗಾರರೆಂದರೆ ಬರಿಯ 

ಕೆಳೆತನದ ಹಂಗಿಗಾಗಿ ಈ ಭೂತದ ಪಾತ್ರವಾದವರು. ಮಾತಾಡಿಸಿದರೆ 

ಇವರೆದೆಯಿಂದ ಭೂತಾವೇಶದ ಮಾತೊಂದೂ ಹೊರಡಲಾರದು. ಹೆಚ್ಚೇಕೆ? 

ನಾನೇ ಬಂದು ಚಕ್ರವರ್ತಿಗಳ ಸನ್ನಿಧಿಯಲ್ಲಿ ಹಣ್ಣು -ಕತ್ತಿಗಳೆರಡನ್ನೂ 

ಸಮರ್ಪಿಸಿ ಬಿಡುತ್ತೇನೆ. 


ಸಂಕಣ:--(ಎದೆಯೊಸರಿ) ನಿಮ್ಮೆದೆ, ಇದೇ ಬಗೆಯಲ್ಲಿ ಉತ್ತರೋತ್ತ  

ವಾಗಿ ನಿಷ್ಕಳಂಕತೆಯ ಹಂತವನ್ನೇರುತ್ತಾ ಹೋಗಲಿ. ಹಾಗೆ ಹೋದಲ್ಲಿ 

ಚಕ್ರವರ್ತಿಗಳ ಹೃದಯೋದಾರತೆಯೂ ನಿಮಗೆ ವಿಶದವಾದೀತು. ಅದಂತಿ 

ರಲಿ; ನೀವಿನ್ನು ಮುಂದೆ ಆ ಗಂಗರಾಜನ ಕವಡಿಕೆಯ ಕಾಲುಗಣ್ಣಿಗೆ 

ಸಿಲುಕುವಂತಿಲ್ಲ ಎಂಬುದನ್ನು ನಂಬಿರಿ, 



೫೫------------------------------------------------------



ನಂದಿವರ್ಮ:--ಹಾಗೆಂದರೇನು? 


ಸಂಕಣ:--ನಮ್ಮಣ್ಣ ಬಂಕೆಯರುಗಳು ಇಷ್ಟರಲ್ಲೆ ಆ ಕಾರ್ಯವನ್ನು 

ಪೂರಯಿಸಿರಬಹುದು. 


ನಂದಿವರ್ಮ:--(ಸಂಕಣನ ಮುಖವನ್ನೇ ನೋಡುತ್ತಾ) ನಿಮ್ಮ "ಅಣ್ಣ'

ಎಂದರೆ ಯಾರೆಂಬುದನ್ನು ನಾವು ತಿಳಿಯಬಹುದೇ? 


ಸಂಕಣ:--(ಒಂದಿಷ್ಟು ತಡೆದು) ಓಹೋ, ನುಡಿಗಟ್ಟಿನ 'ಗಳು' ಮೀರಿ 

ಹೋಯಿತು. ಆ ನನ್ನ ಅವಿಚಾರದಿಂದಾಗಿ ಅರ್ಥಾಂತರಕ್ಕೆ ದಾಟದಿರೆ? 

ಸಹೋದರ ಭಾವನೆಯಿಂದಾಗಿ ಬಂಕೆಯರನ್ನೇ 'ನಮ್ಮಣ್ಣ' ಎಂದು 

ಹೇಳಿಬಿಟ್ಟೆ.  


ನಂದಿವರ್ಮ:--ಅಷ್ಟೇ ಅಲ್ಲ; ಯುವರಾಜರೂ ವೀರ ಬಂಕೆಯರೂ

ಭಿನ್ನ ಭಿನ್ನ ಮಾರ್ಗವನ್ನೊಂದಿ ಗಂಗಮಂಡಲವನ್ನು ಪ್ರವೇಶಿಸಿದ್ದಾರೆ' 

ಎಂಬ ಸುದ್ದಿ ಬಂದಿದೆ. ಅದರಿಂದ ಕುಮಾರ- ಕೃಷ್ಣರಾಜರೆಂದರೆ, ಕುಲಪ

ರಂಪರಾಸಂಬಂಧವಿಡಿದು ನಿಮ್ಮ ಅಣ್ಣಂದಿರಿರಬಹುದೆ? ಎಂದು ಭಾವಿಸಿದೆನು. 


ಸಂಕಣ:--ನಿಮ್ಮೆಣಿಕೆ ಎಂದರೆ ಕುಶಾಗ್ರದಂತೆ ಮೊನಚಾಗಿದೆ. 

ಆಗಲಿ; ಈಗಲೆ ಹೊತ್ತು ಮೀರಿತು. ಮಹಾರಾಜರೂ ರಾಷ್ಟ್ರಪತಿ ಜಯಾ 

ಳ್ವರೂ ಪ್ರತೀಕ್ಷಿಸುತ್ತಿರಬಹುದು. 


ಎನ್ನುತ್ತ ಸಂಕಣ ನಾಯಕನು ನಗರದತ್ತ ದಾರಿಹಿಡಿದನು. ನಂದಿ 

ವರ್ಮನು ಏನೋ ಒಂದು ಬಗೆಯ ಸಂಶಯಕ್ಕಾಸರೆಯಾಗಿ ಹಿಂಬಾಲಿಸಿದರೆ  

ಗುಣಗಾಂಕಾದಿಗಳು ಅನುಸರಿಸಿ ಹೋದರು. ವೀರಭಟರೊಳಗೆ ಹಲವರು 

ಅವರ ಅನುಯಾಯಿಗಳಾಗಿ ನಡೆದರೆ, ಕೆಲವರು ಕೊಳ್ಳೆಗಾರರನ್ನು ನಡೆಯಿ 

ಸಿಕೊಂಡು ಸೆರೆಮನೆಯತ್ತ ಸಾರಿದರು. 

================


ಮೂರನೆಯ ಪರಿಚ್ಛೇದ 



ಸಂಸಾರ ಸಾರ



ಮಾನ್ಯ ಖೇಟದಿಂದ ಹಿಂದಿರುಗಿದ ಬಂಕೆಯನು ತನ್ನ ಬನವಾಸಿಯ 

ರಾಜಧಾನಿಯನ್ನಾಗಲೆ ಸೇರಿದ್ದನು. ಹಿಂಬೆಂದಿನದರಂತೂ ಅಲ್ಲದ ಹುರು 



೫೬----------------------------------------------------------------------- 



ಪೇರಿದ ಆಗಮನವದು. ಆ ಹುರುಪು ದೊರೆಯ ಮೊಗದಲ್ಲಿ ಮೆಯ್ಯಲ್ಲಿ 

ನಡೆಯಲ್ಲಿ ನುಡಿಯಲ್ಲಿ ಒಸರುಕ್ಕಿ ಹರಿಯುತ್ತಿತ್ತು. ಹರಿಯುತ್ತಿರುವ ಆ 

ರಸವನ್ನು ವಿಶೇಷಜ್ಞರು ಒಂದು ವೇಳೆಗೆ ಸವಿಯರಿತು ಹೀರ ಬಲ್ಲರಾದರೂ 

ಸಾಮಾನ್ಯರಾದ ಹಲವರು ಹೇಗೆ ಸರಿಯಾಗಿ ಹೀರುವುದು? ಹಾಗಿದ್ದರೂ. 

“ದೊರೆಗಳ ಮೋರೆ *ಪೂವಲಿಗೆದರಿದ ಮಲ್ಲರಾಯನ ಮೋರೆಯಾಗಿದೆ. 

ಇದೇನಾಗಿರಬೇಕು?". ಎಂದು ಒಳಗೊಳಗೇ ಗುಣುಗುಟ್ಟುತ್ತಿದ್ದರು. 

ಕೋಟೆಯೊಳಗೆ ಹೊಕ್ಕವನೇ, ಕಾಂಚನಾದಿಗಳನ್ನು “ಈ ಹೊತ್ತು ವಿಶ್ರ 

ಮಿಸಿಕೊಳ್ಳಿ ರಿ” ಎಂದು ಅವೆರವರಲ್ಲಿಗೆ ಕಳುಹಿದನು. ಆ ಮೇಲೆ 'ವಾಯು. 

ವೇಗ'ದಿಂದಿಳಿದು, ಅದನ್ನು ರಾವುತರ ಕೈಗೊಪ್ಪಿಸಿ ಲಾಯದತ್ತ ಕಳುಹಿ. 

ದನು. ಹಾಗೆಯೇ ಕಾಲ್ನಡೆಯಾಗಿ, ಜೀವದ ಗೆಳೆಯನೂ ಮಹಾಪ್ರಧಾ 

ನನೂ ಆದ ಗಣಪತಿ ಭಟಾರನ ಮನೆಯತ್ತ ಹತ್ತು ಹಜ್ಜೆ ಯಿರಿಸುವಲ್ಲಿ 

ಫಕ್ಕನೆ ನೆನಪು ಪಕ್ಕಕ್ಕೆ ಕಣ್ಣನ್ನು ತಿರುಗಿಸಿತು. ಅಂತಃಪುರದ ಮಾಳಿಗೆಯಿಂದ 

ಕೆಳಗಿಳಿದು, ಕುಂದಣ- ಕುಮಾರನನ್ನೆತ್ತಿ ಕೊಂಡ ರಾಣಿ ಕಡೆಮೆಟ್ಟಿಲಲ್ಲಿ 

ನಿಂತಿದ್ದಳು. ಮುಗುಳ್ಳಗುತ್ತಾ ಬಂಕೆಯನು “ಏನು ತಲೆಮರಸಿಕೊಂಡು 

ಪಾರಾಗಲಿಕ್ಕೆ ಎಡೆ ಇಲ್ಲವೆ?" ಎನ್ನುತ್ತಾ ಹಿಂಜರಿದು ಹತ್ತಿರಕ್ಕೆ ಬಂದನು. 

“ಕಳ್ಳತನ ಮಿತಿಮಾರಿದುದನ್ನರಿತು ಹೆಚ್ಚಿಗೆ ಪರಾಂಬರಿಸಿಕೊಳ್ಳ ಬೇಕಾಗಿದೆ" 

ಎಂದು ಮಂದಹಾಸದಿಂದ ಮಾರುತ್ತರವಿತ್ತಳು “ಅದೇನು ರಾಜಧಾನಿ 

ಯೊಳಗೂ ಕಳ್ಳರೇ?” ಎಂಬ ಆಶ್ಚರ್ಯಚ್ಛನ್ನ-ವಿಲಾಸಪ್ರಶ್ನೆಗೆ “ಆದೇನೋ 

ನನಗರಿಯದು ರಾಜಧಾನಿಯೊಳಗೆ ನಾವೇ ಕಳ್ಳರು ಎನ್ನುತ್ತಾನೆ ನಮ್ಮ 

ಕುಂದಣ” ಎಂಬುತ್ತರ. ಅಷ್ಟರಲ್ಲಿ ಎರಡು-ಎರಡೂವರೆ ವರ್ಷಗಳ ಮಗು 

ವಾದ ಕುಂದಣನು ನಗುತ್ತಾ ಅಮ್ಮನ ಮಗ್ಗುಲಿನಿಂದ ಅಪ್ಪನದಕ್ಕೆ ಶಾಖೋ 

ಲ್ಲಂಘನ ವೆಸಗಿದನು. ಬಂಕೆಯನು ಮಗುವನ್ನಿತ್ತಿಕೊಂಡು ಮುದ್ದಿಡುತ್ತಾ- 

“ಕುಂದೂ ನೀನು ನಾವೇ ಕಳ್ಳ ರೆನ್ನುತ್ತಿಯಂತಲ್ಲವೆ?” ಎನಲು ಮಗು ತಲೆಯನ್ನ 

ಲ್ಲಾಡಿಸಿತು. “ನಿಜವಾಗಿ ಹೇಳು. ಕಳ್ಳರೆಂದರೆ ನಿನ್ನ ತಾಯಲ್ಲವೆ?” ಅದಕ್ಕೂ 

..................


* ನಮ್ಮ ಇತ್ತಣ ಕನ್ನಡನಾಡಿನಲ್ಲಿ "ಮಲ್ಲರಾಯ'ನೇ ಮೊದಲಾಗಿ ಹೆಸರುಗೊಂಡ 

ಭೂತಗಳ "ಕೋಲ' ಎಂಬ ಉತ್ಸವವಿದೆ. ಅಗ ಊರಗುರಿಕಾರನೇ ಮೊದಲಾದ 

ವರು ಆ ಭೂತಪಾತ್ರಿಯ ಮುಂಗಡೆಯಲ್ಲಿ ನಿಂತು ಪ್ರಾರ್ಥಿಸಿ ಆಂಜಲಿಯಲ್ಲಿ 

ತುಂಬಿದ ಹೂಗಳನ್ನು ಪಾತ್ರಿಯ ಮೈಗೆಸೆಯುತ್ತಾರೆ. ಅದನ್ನು 'ಪೂವಲಿ' ಅಥವಾ 

*ಪೂವೇರಿ' ಎನ್ನುತ್ತಾರೆ. 



೫೭-------------------------------------------------------------------- 



ಮಗು ತಲೆಯನ್ನಲ್ಲಾಡಿಸಿತು. ಬಂಕೆಯನು ನಗುತ್ತಾ “ಮಗುವಾದರೇನು? 

ಕವಲೆಣಿಕೆ-ನೋಟಗಳಿಗೆ ಮರುಳಾಗದೆ ಗುರಿಹಿಡಿದೇ ಹೊಡೆಯುತ್ತಿದೆ?" 

ಎಂದು ಮತ್ತಷ್ಟು ನಕ್ಕುಬಿಟ್ಟನು. “ಹೀಗೆ ಅಧಿಕಾರಸ್ಥಾನದಲ್ಲಿ ಸಾಕ್ಷಿ 

ವಿಚಾರಣೆಮಾಡಿ ಮನಗೂಡಿದ ಜಾಣ್ಮೆಯಲ್ಲವೆ? ಊಂ, ಹೂಂ ಎಂದು 

ಮಗುವನ್ನು ತಾಯಿ ಎತ್ತಿಕೊಳುವಲ್ಲಿ ತಂದೆಯ ಸೀಸಕವನ್ನು ಸೆಳೆದು ಮಗು 

ತಲೆಗೇರಿಸಿಕೊಂಡಿತು. “ಕುಂದಣ್ಣಾ ಸತ್ಯಹೇಳು ಅಮಾವಾಸ್ಯೆಗೆ ಮಾಯ 

ವಾಗಿ ಹುಣ್ಣಿಮೆಗೆ ಮೂಡುವ ಈ ಟೋಪಿಯವರಲ್ಲವೆ ಕಳ್ಳರು?” ಎಂದಳು. 

ಅದಕ್ಕೂ ಆ ತಲೆಯಾಟದ ಉತ್ತರವೇ ಬಂತು. “ಸೋತೆ” ಎಂದ ಬಂಕೆಯ 

ನಲ್ಲಿ “ 'ಲೋಕಕ್ಕೆ ಸೋಲದ ಗಂಡ' ಎಂಬ ಹೊರಬಿರುದಿದ್ದರೂ 'ಮನೆಗೆ 

ಸೋಲುವ ಗಂಡ' ಎಂಬ ಒಳಬಿರುದೊಂದೊಡಗಿದುದು ಇದೇ ಮೊದಲು" 

ಎಂದು ರಾಣಿ ಉತ್ತರಿಸಿದಳು. 



ದೂರಾಂತರದೊಳಗೆ ನೆರೆದು ನೋಡುತ್ತ ಕಣ್ಮನಗಳ ಹಂಬಲವನ್ನು 

ಸವಿಯುತ್ತಿದ್ದ ಸೇವಕಿಯರನ್ನು ಫಕ್ಕನೆ ಕಂಡು ರಾಣಿ ನಾಚಿದಳು. ವಲ್ಲಭ 

ನನ್ನು ಕರೆದುಕೊಂಡು ಮಾಡದಮೇಲೆ ಸಾಗಿದಳು. ಆ ಮೇಲೆ, ಸ್ನಾನ 

ಭೋಜನ ವಿಶ್ರಾಂತಿಗಳೆಲ್ಲ ಅಲ್ಲೆ ಜರುಗಿದುವು. ಸಂಜೆಗಿಂತ ಒಂದಷ್ಟು 

ಮೊದಲೇ ಬಂಕೆಯನು ಕೆಳಗಿಳಿವುದೂ ಗಣಪತಿ ಭಟಾರನು ತನ್ನ ಕಾರ್ಯ 

ಸ್ಥಾನದಿಂದ ಆ ದಾರಿಯಾಗಿ ಬರುವುದೂ ಸರಿಯಾಯಿತು. ಅರಸಾಳಿಕೆಯ 

ಆಡಂಬರಾಚಾರವೆಂಬುದು ಅವನಿದ್ದಲ್ಲಿಗೆ ತಲೆಯಿಟ್ಟೂ ಮಲಗಲಾರದು. 

ಇಬ್ಬರೂ ಒಡಗೂಡಿ ಮಹಾಪ್ರಧಾನನ ಮನೆಯ ದಾರಿಯನ್ನೇ ಹಿಡಿದರು. 

ದೊರೆ ಹಿಂದಿರುಗುವಲ್ಲಿ ಸುಮಾರು ಎಂಟೊಂಬತ್ತು ಗಂಟಿ ರಾತ್ರಿ ಯಾಗ 

ಬಹುದು. ಸ್ವಭಾವಕ್ಕನುವಾಗಿ ಎಷ್ಟೇ ವಿಲಾಸವಿರಲಿ, ಮುಗುಳ್ನಗೆ ಕಂಪಿ 

ಸಲಿ, ಅವುಗಳ ಮೇಲೊಂದು ಗಂಭೀರವಾದ ರಾಜಕಾರಣ ಭಾವನೆ ಗುಳು 

ಗುಳಿಸುತ್ತಿದ್ದುದನ್ನು ಪರಿಜನದೊಡನೆ ಪುರಜನವೂ ಕಂಡುಕೊಂಡಿತ್ತು. 

“ಯಾವ ಕದಿರನ್ನು ಕೊಯ್ದರೇನು, ಪ್ರಜಾವರ್ಗವಾದ ನಮ್ಮ ಎಡೆಯಂಗಳ 

ವನ್ನಲ್ಲವೆ ತುಂಬುವುದು?” ಎಂದು ಅವರೆಲ್ಲರೂ ನಿಶ್ಶಂಕರಾಗಿದ್ದರು. 



ಮರುದಿನದ ಹೊತ್ತು ಮೂಡಿತು. ಬಂಕೆಯನು ಮಿಂದು ಮಡಿ 

ಯುಟ್ಟನು. ಜಿನಸ್ಮರಣೆ ಅಂತರಂಗದಲ್ಲಿ ನಲಿಯುತ್ತಿದ್ದಂತೆ, ಮನೆದೈವ 

ವಾದ ಮಹಾವೀರನ ಬಸದಿಗೆ ಅಡಿಯಿಟ್ಟನು. ಮೈ ಜಿನಮೂರ್ತಿಗೆರಗು 

ವಲ್ಲಿ ಎದೆಗನ್ನಡಿಯೊಳಗೆ ಚೇತನಾತ್ಮಕವಾದ ತೇಜೋಮೂರ್ತಿ ನೆಲೆ 



೫೮---------------------------------------------------------------



ಗೊಂಡಿತು. ಆ ಮೇಲೆ- ಅಂತರಂಗನೆಲ್ಲಿ, ಬಹಿರಂಗವೆಲ್ಲಿ, ತಾನೆಲ್ಲಿ ತನ್ನತನ 

ವೆಂಬುದಾದರೂ ಎಲ್ಲಿ?-- ಇಡೀ ಮೆಯ್ಯೇ ಸ್ತಬ್ದವಾಗಿ, "ನೋಟಕರಿಗೊಂದು 

ಪ್ರತಿಮಾಯೋಗಿಯಾಗಿ ಭಾಸವಾದನವನು. ಐದು ನಿಮಿಷಗಳಲ್ಲಿ ಎಚ್ಚ 

ತ್ತನು. ಇಂದ್ರನಿಂದ ತೀರ್ಥಪ್ರಸಾದಗಳನ್ನು "ಜಯ ಜಯ ಮಹಾವೀರ 

ಎಂಬ ಸ್ತುತಿಯೊಡನೆ ಸ್ಟೀಕರಿಸಿ ವಂದನಾಪೂರ್ವಕವಾಗಿ ಹಿಂದಿರುಗಿದನು. 

ಬಂದು ಭೋಜನಶಾಲಾಪ್ರವೇಶವೆಸಗುವಲ್ಲಿ ನವರಸಾನ್ನ ಭೋಜನವನ್ನು 

ತಾನೇ ಸಿದ್ದಗೊಳಿಸಿ, ಎಲೆ-ಮಣೆಗಳನ್ನಿರಿಸಿದ ರಾಣಿ ಇದಿರುನೋಡು 

ತ್ತಿದ್ದಳು. ಇಂದ್ರನಿಗೆ ಅಡಿಯಿಟ್ಟೊಡನೆ ಕಾಲುದೊಳೆಯಲು ತುಂಬಿದ 

ಬಂಗಾರದ ತಂಬಿಗೆಯನ್ಫಿತ್ತು, ಒಳಗೆ ಬಂದ ಕೂಡಲೆ 'ಸಾರನ್ನ ಮಾತ್ರಕ್ಕೆ 

ದಯಮಾಡಬೇಕು' ಎಂದು ಮುಗುಳ್ನಗೆಗೂಡಿ ಬಿನ್ನಯಿಸಿದಳು. 


ಬಂಕೆಯೆ:-(ನಿಂತುಕೊಂಡು) ಸಾರನ್ನ ಮಾತ್ರ ಎಂದರೇನು? 

ಸಂಸಾರಸಾರಾನ್ನವಾಗಬೇಕು, ವೀರಶ್ರೀ. 


ವೀರಶ್ರೀ (ರಾಣಿ): ತಮ್ಮ ಪ್ರೇಮರಸದೊಡನೆ ಹಾಗೂ ಆಗ 

ಬಹುದು. 


ಬಂಕೆಯ:-- ಈ "ಪ್ರೇಮಕ್ಕೆ' ಪಾತ್ರವೇ ತೋರುವುದಿಲ್ಲ ಮತ್ತೆ 

ಲ್ಲಿಂದ ಪ್ರೇಮರಸ? 


ವೀರಶ್ರೀಯು ಲಜ್ಜೆಯಿಂದ “ಅದೋ ಆ ಬಲಗಡೆಯ ಪಾತ್ರವೇ ಈ 

'ಪ್ರೇಮ'ಕ್ಕೆ ಎಂದು ಕುಂದಣನನ್ನಲ್ಲಿ ಕುಳ್ಳಿ ರಿಸಿದಳು. 


ಬಂಕೆಯ--ಆದು "ಪ್ರೇಮ ಪಾತ್ರವಲ್ಲ, ಪ್ರೇಮಫಲದ ಪಾತ್ರ. 

ಇತ್ತ 'ಪ್ರೇಮ'ದ ಪಾತ್ರವೂ ಇಲ್ಲದಿದ್ದರೆ ಸಂಸಾರಸಾರಾನ್ಸ ಹಾಗಿರಲಿ, 

ನಿನ್ನ ಉಪಚಾರದ "ಸಾರನ್ನು ಹೋಗಿ 'ನೀರನ್ನ'ವಾಗಿಬಿಟ್ಟರೆ? 


ವೀರಶ್ರೀಯು “ಹೌದು, * 'ನೀರನ್ನ'ವಾಗಬೇಕೆಂದೇ ಎದೆಯಾಸೆ? 

ಎಂದು ಕಡೆಗಣ್ಣಿನಿಂದೀಕ್ಷಿಸಿದಳು.


ಬಂಕೆಯ: — ಇಲ್ಲಿಯೂ % ಆಶ್ಲೇಷ'ವೆ? ಪರಿಜನರಾದ ಈ ಪ್ರೌಢ 

ಸ್ತ್ರೀಯರೆಲ್ಲ ನಕ್ಕಾರು ನೀನೇ ಗಣಿಸದಿದ್ದಲ್ಲಿ ನನಗೇನು? 

...........................

*ನೀರ್‌= ಪ್ರೇಮ. ನೀರನ್ನ= ಪ್ರೇಮಭರಿತಳಾದ ರಾಣಿ ಇಕ್ಕುವ ಭೋಜನ . 

ಎಂದು ತಾತ್ಪರ್ಯ. 


% ೧ ಆ- ಶ್ಲೇಷ ಒಂದು ಪದದಲ್ಲಿ ಹೊಳೆ ದು ತೋರುವ ಪ್ರಸಿದ್ಧವಾದ ಆ ಎರಡು 

ಅರ್ಥ. ೨ ಅಶ್ಲೇಷ ಅಲಿಂಗನ. 



೫೯------------------------------------------------------------------



ಎಂದು ರಾಣಿಯನ್ನು ಸೆಳೆದು ಎಡಗಡೆಯಲ್ಲಿ ಕುಳ್ಳಿರಿಸಿ, ಬಂಕೆಯನು 

ಮಧ್ಯದಲ್ಲಿ ಮಂಡಿಸಿದನು. ಅಷ್ಟರಲ್ಲಿ ವೀರಶ್ರೀಗೆ ಎಲೆಮಣೆಗಳನ್ನು ತಂದು 

ಪರಿಚಾರಿಕೆಯರು ಇಟ್ಟರು. “ಇದೇನು ಇಷ್ಟು ಮಾತ್ರವೆ? ಈ ಎರಡೂ 

ಮಣೆಗಳಿಗೆ ಮೇಲುವಾಸೆಲ್ಲಿ?" ಎಂದು ಬಂಕೆಯನು ಅತ್ತ ನೋಡಿದನು. 

ಸೇವಕೆಯರು ಒಳಗೊಳಗೇ ನಗುತ್ತಾ ತಂದು ಎರಡೂ ಮಣೆಗಳಿಗೆ ಮೇಲು 

ವಾಸನ್ನಿಕ್ಕಿದರು. 


ವೀರಶ್ರೀ:--ಯಾವ ಮದುಮಕ್ಕಳಿಗಾಗಿ ಮೇಲುವಾಸು? 


ಬಂಕೆಯ:- ಕಾಣುವುದಿಲ್ಲವೆ? ಈ 'ಹಳೆಗಾಲದ ಮುದುಮದು 

ಮಕ್ಕಳಿಗಾಗಿಯೇ'. ಹೊಸಬರಿಗಾದರೂ ಮದುವೆಯಾದ ಮೇಲಲ್ಲವೆವೆ 

ಮೇಲ್ವಾಸು? 


ವೀರಶ್ರೀ:--ಏನೋ ಒಂದು ಬಗೆಯ ಹುಚ್ಛೇರಿದಂತೆ ಭಾಸ 

ವಾಗುತ್ತಿದೆ. 


ಬಂಕೆಯಃ--ಹೌದು. ಎಲ್ಲರಿಗೂ ಒಂದೊಂದು ಬಗೆಯ ಹುಚ್ಚೇ. 

ಆದರೆ, ಏರಿದ ಹುಚ್ಚು ಸ್ವಚ್ಛವಾಗಿರಬೇಕೆಂದೇ ಹೀಗೆ ಮಣೆಗಳ ಮೇಲೆ 

ಹಾಸುವುದು; ಗೊತ್ತಾಯಿತೆ? ಅದರಿಂದಲೇ ಇದು ಮೇಲ್ವಾಸು ಹುಂ, 

ಕುಳಿತುಕೋ. 


ಎನಲು,ವೀರಶ್ರೀ ಕುಳಿತುಕೊಂಡಳು. ಭೋಜನಕ್ಕಾರಂಭವಾಯಿತು. 

ಕುಲವೃದ್ಧೆಯರು ಕ್ರಮವಾಗಿ ತರವರಿತು ಬಡಿಸುತ್ತಿದ್ದರು. ಮತ್ತೆ 

ಮಾತಿಗೆ ಮೊದಲಾಯಿತು. 


ಬಂಕೆಯ: :-(ವಿಲಾಸಯುಕ್ತ-ಗಂಭೀರತೆಯಿಂದ) ನೀನೇನೋ ಆಡುತ್ತಿ 

ನಾವೇ ಕಳ್ಳರೆಂದು. ನೋಡು, ಈ ಬಗೆಯ ನಾಡಾಡಿತನ ನನ್ನ ಹಣೆಬರಹ 

ವಾಗಿ ತೋರುತ್ತಿದೆ, ಹಾಗಿರುವಲ್ಲಿ ಈ ರೀತಿಯ ಕಳ್ಳನಾಗದೆ ಜೀವಿಸು 

ವುದು ಹೇಗೆ? ನಿನ್ನ ನೆನವರಿಕೆ ಎಂದರೆ ನಾನು ಕದ್ದ ಅಕ್ಷಯಪಾತ್ರ. ಅದ 

ರಿಂದ ಎಲ್ಲಿದ್ದರೂ ಸಂಸಾರ ಸಾರಭೋಜನ ಒಳಗಿಂದೊಳಗೇ ಸಂದುಬಿಡು 

ತ್ತಿದೆ. ಅಮಾವಾಸ್ಯೆಗೊಂದು ಸಂಕ್ರಾಂತಿಗೊಂದು ಎಂಬಂತೆ ಹೀಗೆ ಪ್ರತ್ಯಕ್ಷ 

ವಾಗಿ ಸಾಗುವುದು ಒಮ್ಮೊಮ್ಮೆ. ಏನು ಅಂಥ ಕಳ್ಳನಾಗುವುದೂ ತಪ್ಪೆ೦ದು 

ನಿನ್ನೆಣಿಕೆಯೆ? 


ವೀರಶ್ರೀ- ಇದೇನು ಮೃಚ್ಛ ಕಟಕ ನಾಟಕಡೊಳಗಿನ ಶರ್ನಿಲಕನ 

ವೇಷವೆ? 



೬೦ -------------------------------------------------------



ಬಂಕೆಯ:--ಛೇ ಎಂದೂ ಅಲ್ಲ. ಚೋರಶಾಸ್ತ್ರಿ ಯಾಗಿದ್ದರೂ 

ಆಚಾರದಲ್ಲವನು ಗುರಿದಪ್ಪಿ ನಡೆದು ಕಡೆಗೆ ಪಶ್ಚಾತ್ತಾಪಗೊಂಡನು. 

ಬಂಕೆಯನೇನು ಅಂಥ ಅವಿವೇಕಿಯೆ? 


ವೀರಶ್ರೀಃ- ಹಾಗಾದರೆ ಗುರಿದಪ್ಪದೆ ಇಂಥ ಕಳ್ಳರಾಗಬೇಕಲ್ಲವೆ? 

 

ಬಂಕೆಯ:--ಸಂದೇಹವೇನು? ಹಾಗೆ ನಡೆದು 'ಪ್ರಿಯಗಳ್ಳ -ಗುಣ 

ಗಳ್ಳ' ಮೊದಲಾದ ಬಿರುದುಗಳನ್ನೊಂದಿದ ಮಹಾವ್ಯಕ್ತಿಗಳಾದ ಸ್ತ್ರೀ ಪುರು 

ಷರು ನಮ್ಮ ಕನ್ನಡನಾಡಿನಲ್ಲಿ ಹಾಸುಹೊಕ್ಕಾಗಿದ್ದರು. 


ವೀರಶ್ರೀ:--ಅದೆಲ್ಲ ಪುರುಷರಿಗೇ ಇದ್ದ ಮಹಾಬಿರುದು. 


ಬಂಕೆಯು:--ಲೋಕವೆಂದರೆ ಪ್ರಗತಿಪರವಲ್ಲವೆ? ಮುಂದೆ ಸ್ತ್ರೀ 

ಯರೂ ಹಾಗಾಗಬೇಕು. 


ವೀರಶ್ರೀ:--ಕಳ್ಳತನವೇ ಪ್ರಗತಿಯ ಲಕ್ಷ್ಮಣವೇನು? 


ಬಂಕೆಯ:--ಇದು ಪ್ರಗತಿವಿಘಾತಕವಾದ ಕಳ್ಳತನವೆ? ಇಂಥ 

ಗುಣದ-ಪ್ರೇಮದ ಕಳ್ಳತನವಿಲ್ಲದಿದ್ದರೆ 'ರಾಗ ಬರುವಾಗ ತಂತಿ ಕಡಿದು 

ಹೋದ' ಅವಸ್ಥೆಗೂ ಸಂಸಾರವಿಳಿಯಬಹುದು. 

ವೀರಶ್ರೀಃ--ಹಾಗೆಂದರೇನು? 


ಬಂಕೆಯ:--ಏನು ಆ ಕತೆಯನ್ನು ಕೇಳಬೇಕೆ? 


ವೀರಶ್ರೀ:--ಹೌದು, ಕೇಳದಿದ್ದರೆ ಗೊತ್ತಾಗುವುದು ಹೇಗೆ? 

“ಆಗಲಿ" ಎಂದು ಬಂಕೆಯನು ಆ ಕತೆಯನ್ನೆತ್ತಿದನು. 

“ಒಂದಾನೊಂದು ನಾಡಿನಲ್ಲಿ ನನ್ನಂಥ ಅರಸನೊಬ್ಬನಿಗೆ ಸಂಗೀತ 

ದೊಳಗೆ ನಿನ್ನನ್ನೂ ಮೀರಿದ 'ಗಾನಸರಸ್ವತಿ' ಎಂಬ ರಾಣಿ ಇದ್ದಳಂತೆ. 

ನನ್ನಂಥ 'ಅರಸ' ಎಂದ ಮೇಲೆ ಆ ರಾಜನ ಸಂಗೀತಕಲಾರಸಿಕತೆ ತಾನಾಗಿ 

ಗೊತ್ತಾಗಬಹುದು. ಆದರೂ ಬಗೆಬಗೆಯ ಸಂಗೀತಗಾರರು ಹಲವರು 

ಬಂದು ಆಸ್ಥಾನವನ್ನು ಹೊಕ್ಕು ತಂತಮ್ಮ ವಚಿದ್ವತ್ತೆಯನ್ನು ಪ್ರದರ್ಶಿಸಿ 

ಉಡುಗೊರೆ-ತುಡುಗೊರೆ ಮುಂತಾದ ಬಹುಮಾನಗಳನ್ನೊಂದಿ ಹೋಗು 

ತ್ತಿದ್ದರು. ಆಯಾ ಸಂಗೀತಾವಸರಗಳಲ್ಲಿ ಅರಸನ ಹಾವಭಾವ ವಿಶೇಷ 

ಗಳನ್ನು ಕಂಡು ವಿದ್ವಾಂಸರು ಅರಸನಿಗೆ 'ಗಾನಕಲಾಗ್ರಂಥಿ' ಒಂಬ 

ಬಿರುದನ್ನಿಟ್ಟಿದ್ದರಂತೆ."


ವೀರಶ್ರೀ:- ಆ ಬಿರುದಿನ ಅರ್ಥವೇನು? 



೬೧---------------------------------------------------------------------


ಬಂಕೆಯ:-- (ನಗುತ್ತಾ) ಅದೀಗ ಅರಸನಿಗೊಪ್ಪುವ ಸಾರ್ಥಕವಾದ 

ಬಿರುದು. 'ಗಾನಕಲೆಯ ಗಂಟು' ಎಂಬುದು ಶಬ್ಬಾರ್ಥವಾದರೆ, 'ಗಾನ 

ವಿದ್ಯಾಪ್ರವೀಣ' ಎಂಬುದು ತಾತ್ಸರ್ಯಾರ್ಥ. ಒಮ್ಮೆ ಬೇರೊಬ್ಬ ಸಂಗೀತ 

ಗಾರನು ರಾಜಾಸ್ಥಾನದಲ್ಲಿ ಹಾಡುತ್ತಿದ್ದನು. ಹಾಡುಗಾರಿಕೆಗೆ ಕಳೆಯೇರಿ 

ದಂತೆ ಅರಸನ ಅಂಗಾಭಿನಯ ನ್ಯಾಸವಿನ್ಯಾಸಗಳಿಗೂ ಹುರುಪೇರುತ್ತಿತ್ತು. 

ಸಭಿಕರಾರನ್ನೂ ನೋಡದ ವಿದ್ವಾಂಸನು ಅರಸನ ಭಾವನಾತರಂಗದಲ್ಲೇ 

ತೇಲಾಡಿ ಮೈಮರೆತು ಹಾಡುತ್ತಿದ್ದನು. ಫಕ್ಕನೆ ಆ ತರಂಗನೆಲ್ಲ ಸ್ತಬ್ದ 

ವಾಗಿ ಅರಸನ ಮೋರೆಯಲ್ಲಿ ಗಾಬರಿ, ಬಾಯೆಲ್ಲ 'ಹಾ, ಹಾ' ಎಂಬ 

ಸದ್ದೆದ್ದಿತು. ಅತ ಎಚ್ಚರಿತು ನೋಡುತ್ತಾ ನೆ! “ತಡೆ ತಡೆ 

ರಾಗಬರುವಲ್ಲಿ ತಂತಿ ಕಡಿದು ಹೋಯಿತು, ಕಟ್ಟಿಕೊಳ್ಳುತ್ತೆ ನೆ. ಎಂದು 

ಅರಸನೆಂದನಂತೆ, ಆಸ್ಥಾನದಲ್ಲಿ ಆಗಾಗ ಹೊಕ್ಕು ಹೊರಡುತ್ತಿದ್ದ ರಸಿಕ 

ಸಭಿಕರಿಗೆ ಕಡಿದು ಹೋಗಿದ್ದ ಆ ರಾಗದ ತಂತಿಯ ಹೊಲಬು ಗೊತ್ತಾ 

ಗಿದ್ದಿರಬಹುದು. ಆದಕ್ಕೆ ಗೊತ್ತಿಲ್ಲದ ವಿದ್ವಾಂಸನು ಸಂಗೀತವನ್ನೊಂದಿಷ್ಟು 

ನಿಲ್ಲಿಸಿ ಅರಸನನ್ನೇ ನೋಡುತ್ತಿದ್ದನು. ಅರಸನು ಹಿಂದಿರುಗಿ ನೋಡು 

ತ್ತಾನೆ! ಪರದೆಯಿಂದ ಹಿಂದೆ ಕುಳಿತ ರಾಣಿ ಸಂದರ್ಭವರಿತು ಅಲುಗಾಡಿಸಿ 

ದಾಗ ತನ್ನ ತಲೆ ಒಲೆದಾಡುವಂತೆ ಹೆಗಲಿಗೆ ಅಣಿಗೊಳಿಸಿ ಕಟ್ಟಿದ್ದ, ಆ 

'ರಾಗ ಬರುವ ತಂತಿ' ಕಡಿದು ಹೋಗಿತ್ತು. ಆಕೆ ಒಳಗಿನಿಂದ ಯಥಾ 

ಪ್ರಕಾರ ಅಲುಗಿಸುತ್ತಿದ್ದರೂ, ಕಡಿದು ಬಿದ್ದ ರಾಗದ ತಂತಿ ತನ್ನ ಕೊರಳಿಗೆ 

ಹೊರಗಾದುದನ್ನು ರಾಜನು ಕಂಡನು. ಆ ಮೇಲೆ ಮೆಲ್ಲನೆ ಅದನ್ನು ಸರಿ 

ಗೊಳಿಸಿ ಕಟ್ಟಿಕೊಂಡ ಅರಸನು ಮತ್ತೆ ಆಸನದಲ್ಲಿ ಕುಳಿತನು. ಆಗ ಇತರ 

ಸಭಿಕರ ಮಾತಂತಿರಲಿ, ಆ ಸಂಗೀತ ನಿದ್ವಾಂಸನಿಗೆ ಆ ರಾಗ ಬರುವ 

ತಂತಿಯೂ ಅದರ ಹೊಲಬೂ ಗೋಚರವಾಯಿತು. "ಅಯ್ಯೋ, ಈ 

ಅರಸಿಕನೆದೆ ನನ್ನ ಸಂಗೀತವನ್ನು ಕಾಣಿಕೆಯಿಡುವ ಬಟ್ಟಲಾಯಿತೆ!” 

ಎಂಬೆಣಿಕೆ ಮೂಡಿತು. ಅರಸನಾಗ “ಆಗಲಿ; ಯಥಾಪ್ರಕಾರ ಸಂಗೀತ ಮುಂದು

ವರಿಯಲಿ” ಎಂದನು. ಆದರೆ ವಿದ್ವಾಂಸನು ಆ ನಿಮ್ಮ ರಾಗ ಬರುವ ಅನು 

ರಾಗದ ತಂತಿ ಮತ್ತೆ ಕಡಿದು ಹೋಗುವುದೋ ಎಂಬ ಸಂದೇಹದಿಂದ ನನ್ನೆದೆ 

ಗಾಬರಿಗೊಂಡಿದೆ. ಒಳಗಿನ ರಾಗವೆಲ್ಲ ಆರಿ ಹೋಗಿ ವಿರಾಗವೆನ್ನಿಸಿ ಬಿಟ್ಟಿದೆ.  

ಮಹಾಸ್ವಾಮಿ, ಇನ್ನೊಮ್ಮೆ ಸರಾಗನಾಗಿ ಬಂದು ಹಾಡುತ್ತೇನೆ” ಎಂದು ಹೇಳಿ 

ದವನೇ ತನ್ನ * ಗಂಟುಮೂಟೆಗಳನ್ನೆ ಲ್ಲ ಕಟ್ಟಿಕೊಂಡು ಹೊರಟುಹೋಗಿ ಬಿಟ್ಟ 

ನಂತೆ. ಇದೀಗ 'ರಾಗಿಬರುವಾಗ' ತಂತಿ ಕಡಿದ ಕತೆ. 



೬೨------------------------------------------------------------------



ವೀರಶ್ರೀ:--(ಚೆನ್ನಾಗಿ ನಗುತ್ತಾ) ಹಾಗಿದ್ದರೆ ಆ ರಾಣಿ ಸಂಗೀತ ಕಲಾ 

ನಿಪುಣೆಯಾದುದು ತಪ್ಪೇನು?  


ಬಂಕೆಯ:--ಅಲ್ಲ, ಗಾನ ಪ್ರವೀಣೆಯಾದುದೆಂದರೆ ತಪ್ಪಲ್ಲ. ಆ 

ಸೂತ್ರದ ಬೊಂಬೆಯನ್ನೆ ರಂಗದಲ್ಲಿ ಕುಣಿಸುತ್ತ, 'ಇದು ಬೊಂಬೆಯಲ್ಲ 

ಮನುಷ್ಯ' ಎಂಬಂತೆ ಕಾಣಿಸುತ್ತಿದ್ದುದು ತಪ್ಪು. 


ವೀರಶ್ರೀ:--ಅದು ಆ ಅರಸನೆಂಬವನ ಅಪರಾಥ. 


ಬಂಕೆಯ:--ಅಪರಾಧ ಯಾರದೇ ಆಗಲಿ. ಸಂಸಾರವದು ನಿಸ್ಸಾರ 

ವಾಯಿತು. 


ವೀರಶ್ರೀ:--(ಬೇಸರದಿಂದ) ಹೂಂ, ಹೌದು. ನಮ್ಮ ಮಹಾರಾಣಿಯ 

ವರಿಗೆ ಇಬ್ಬರು ಮಗಳಂದರಿದ್ದಾರೆ. ಇಷ್ಟರಲ್ಲೆ ಬ್ರಹ ನು ಅಚ್ಚೊತ್ತಿ ತಯಾರಿ 

ಸಿರಬೇಕಾದ ಕುಮಾರರು ಎಂಥವರೋ ಯಾರು ಬಲ್ಲರು? (ಫಕ್ಕನೆ ನೆನಪಾಗಿ) 

ಏನು - ನಮ್ಮೆ ಹಿರಿಯ ರಾಜಕುಮಾರಿಯರಿಗೂ, ಗಂಗ ಯುವರಾಜರಿಗೂ 

ಪ್ರೇಮಗ್ರಂಥಿ ಬಲಿಯುತ್ತಾ ಬಂದಿದೆ--ಎಂಬ ಸುದ್ದಿ ನಿಜವೇನು? 


ಅಷ್ಟರಲ್ಲಿ ಭೋಜನ ತೀರುತ್ತ ಬಂದಿತ್ತು. ಸವಿಸನಿಯಾದ ಪಾಯ 

ಸಾದಿಗಳ ಮೇಲೆ ಹಾಲನ್ನವನ್ನುಂಡು ತೇಗಿದ ಬಂಕೆಯನು ಕಡೆಗೆ ಉಪ್ಪಿನ 

ಕಾಯರಸವನ್ನು ನಕ್ಕುತ್ತಿದ್ದ ಕೆ ಕಾಲವದು. ಆ ಗಂಗರಾಜಕುಲದ ನೆನಪಾದ 

ಕೂಡಲೆ 'ಹೂಂ' ಎಂದನು. ತನ್ನ ಸಂಶಯಾತ್ಮಕ ಪ್ರಶ್ನೆಯನ್ನೇ ಒಪ್ಪಿ 

'ಹುಂ'ಗುಟ್ಟದ ಹೂಂಕಾರವಲ್ಲವದು ಎಂದು ರಾಣಿಗೆ ಗೊತ್ತಾಯಿತು. 

ಎದ್ದು ಕೈದೊಳೆದುಕೊಂಡು ಬಂದ ವಲ್ಲಭನ ಮುಖದಲ್ಲಿ ಹಿಂದಿನ ಶೃಂಗಾ 

ರಾನುಭಾವವೆಲ್ಲ ಕಿತ್ತುಹೋಗಿ ವೀರತೆಯ ಅಗೆ ಚಿಗಿದು ನೆಗೆಯುತ್ತಿತ್ತು. 

"ಹೌದು, ಭೂತುಗನದಷ್ಟೇ ಅಲ್ಲ; ಆ ಗಂಗರಾಜಕುಲದ ಜಾತಕವನ್ನೆಡ 

ಸ್ಫುಟಗೊಳಿಸಿ ನೋಡಬೇಕಾದ ಕಾಲಬಂದಿದೆ”. ಎಂದು ಕುಂದಣನನನ್ನೆತ್ತಿ  

ಕೊಂಡು  ಅತ್ತ ಸಾರಿದನು, “ಹೂಂ, ಇಲ್ಲಿ ತಾತ್ಕಾಲಿಕವಾದ ಗೂಢ ಮಂತ್ರ 

ವೇನೋ ಮುಳುಗಿ ಮೂಡುತ್ತಿದೆ” ಎಂದೆಣಿಸಿದಳು ವೀರತ್ರೀ. 

======


ದಾಳಿ 

ಮರುದಿನದ ಮಧ್ಯಾಹ್ನ ಕಳೆದಿತ್ತು. ಅರಮನೆಯೊಳಗೆ ವೀರೋತ್ಸವದ. 

ಹೊಸ ಹುರುಪು ಹೂಂಕರಿಸುತ್ತಿತ್ತು. ಅಸ್ಥಾನದೊಳಗೆ ರಾಜಾಂಗಣ 

ದೊಳಗೆ, ಹೆಸರುಹೊತ್ತ ಪಟೆಭಟರು ತಂತಮ್ಮ ಸೇನಾಸಾಮಗ್ರಿಗಳೊಡನೆ 



೬೩------------------------------------------------------------------



ನೆರೆದು ತರವರಿತು ಅನುವಾಗಿ, ಅಲ್ಲಲ್ಲಿ ನೆರೆದು ಕಾಲಪ್ರತೀಕ್ಷೆಯಲ್ಲಿದ್ದರು. 

ಅತ್ತ ಬಾಹ್ಯಾಂತಃ ಪರಿಪೂತನಾದ ಬಂಕೆಯನು ಮಹಾವೀರನ ಬಸದಿಗೈದಿ 

ದನು. ಜಿನಮೂರ್ತಿಗೆರಗಿ ತೀರ್ಥಪ್ರಸಾದಗಳನ್ನು ಕೈಗೊಂಡು ಹಿಂದಿರು 

ಗಿದನು. ಜೈತ್ರ ಯಾತ್ರೆಯ ಉಡಿಗೆ-ತೊಡಿಗೆಗಳ ಕಳೆ ಕೈಗೊಡುತ್ತಿರಲು 

ಮಹಾ ಪ್ರಧಾನ ಗಣಪತಿ ಭಟಾರನೊಡನೆ ಆಸ್ಥಾನವನ್ನಲಂಕಸಿರಿದನು. 

ಸೇಕಾನಾಯಕರು ಕ್ರಮವಿಡಿದು ಮುಂದೈದಿ ನೀರಾಗ್ರ ಜಿಯಾದ ದೊರೆಗೆ 

ವಂದಿಸಿದರು. ಅರಸನು ಎಲ್ಲರನ್ನೂ ಮನ್ನಿಸುತ್ತಿ ವಲ್ಲಿ. 'ವೀರಬಂಕೆಯ 

ಮಹಾರಾಜರಿಗೆ ಜಯವಾಗಲಿ' ಎಂಬ ಜಯಫೋಷವು. ರಾಜಾಂಗಣದಲ್ಲಿ 

ನೆರೆದ  ಸಂದಣಿಯಿಂದಿದ್ದು ಮೂರುಬಾರಿ ಬಾಂದಳವನ್ನು ದುಮುದುಮಿಸಿತು. 

ಅದರೊಡನೆ ಜಯಭೇರಿ ಕಹಳಾದಿ ವಾದ್ಯ ಧ್ವನಿಗಳು ಹಾರಿ- ಹೆರಡಿ 

ದಿಗ್ಭಿತ್ತಿಯನ್ನು ಅಲುಗಾಡಿಸಿದವು. ಚತುರಂಗ ಸೇನೆಯ ಹುರುಪು- 

ತಿರುಪುಗಳಲ್ಲೊಂದು ಮಿರುಪು ತಲೆದೋರಿತು. ಸಾಲಂಕೃತವಾದ 'ವಾಯು 

ವೇಗ' ವನ್ನು ರಾವುತಕಲ್ಪರಾದ ಅಶ್ವರಕ್ಷಕರು ಮೆರವಣಿಗೆಯೊಡನೆ ತಂದು 

ರಾಜಾಂಗಣ ಮಧ್ಯದಲ್ಲಿ ನಿಲ್ಲಿಸುವುದೂ, ಸಿದ್ಧರಾದ ಕಂಚಣ--ಮಂಜಣಾದಿ 

ಗಳು ತಂತಮ್ಮ ಕುದುರೆಗಳೊಡನೆ ಆಯೆಡೆಗೆ ಅಡಿಯಿಡುವುದೂ ಒಟ್ಟೊಟ್ಟಿ 

ಗಾಯಿತ್ತು ಅಷ್ಟರಲ್ಲಿ ಮಹಾಪ್ರಧಾನ- ಭಟಾರನು ಹಿಂಬಾಲಿಸುತ್ತಿರಲು 

ಬಂಕೆಯನು ಆಸ್ಥಾನದ ಮೊಗನಾಡದಲ್ಲಿ ನಿಂತು ಎಲ್ಲರನ್ನೂ ಮಂದಹಾಸ 

ದೊಡನೆ ವಂದಿಸಿದರು. ಜಯಧ್ವನಿಯೊಡನೆ ಕೆಳಗಿಳಿದು ಅಂಗರಕ್ಷಕರಾದ 

ಮಹಾಮಲ್ಲರ ಮಧ್ಯದಲ್ಲಿ ನೆಲೆಗೊಂಡ ತನ್ನ' ವಾಯುವೇಗ'ದ ಪ ಪಕ್ಕದಲ್ಲಿ 

ಆಸ್ಥ ನಕ್ಕಭಿಮುಖವಾಗಿ ಹಿಂದಿರುಗಿ ನಿಂತನು. ತನ್ನೆಡಗಡೆಯಲ್ಲಿದ್ದ ಮಹಾ 

ಪ್ರಧಾನ ಗಣಪತಿ ಭಟಾರನನ್ನು ಎರಡೂ ಕೈಗಳಿಂದ ಸೆಳೆದು ಬಲಭಾಗದಲ್ಲಿ 

ನಿಲ್ಲಿಸಿ ಮಾತನ್ನೆತ್ತಿದನು. “ಪ್ರಜಾರಂಜನೆಯೇ ರಾಜನೆಂಬವನ ಪ್ರಮುಖ 

ಧ್ಯೇಯವೆಂದು ನನ್ನ ಭಾವನೆ. ಆ ಭಾವನೆಯನ್ನೇ ಎದೆಗೊಂಡ ಚಕ್ರವರ್ತಿ 

ಗಳ ಹೆಜ್ಜೆಯಲ್ಲಿ ಹಜ್ಜೆಯಿಡುತ್ತಿದ್ದೇನೆಂಬುದು ನಿಮಗೆಲ್ಲರಿಗೂ ಗೊತ್ತು. 

ಈ ಹೊತ್ತು ಎತ್ತಿದುದಾದರೂ ಅದೇ ಹೆಜ್ಜೆಯನ್ನೆಂಬುದು ಮಂದಟ್ಟಾ ಗಿರ 

ಬಹುದು. ಸಾಮಂತ ಗಂಗರಾಜನ ವರ್ತನೆಯಿಂದಾಗಿ ಗಡಿನಾಡಿನ ಪ್ರಜಾ 

ವರ್ಗದ ಜೀವನವೆಂಬುದು ಪಶುಜೀವನವಾಗಿಬಿಟ್ಟಿದೆ. ಬೀಳದ ಚೆನ್ನೆ 

ಯಂತಾದ ಆ ದೂರುಗಳು ಮಹಾರಾಜರ ಉದಾರಹೈದಯವನ್ನೂ 

ಬೇಕಿ ವಿಷಯಗಳಿಗೆ ಆಸ್ಪದವಿಲ್ಲದಾಗಿ ಮಾಡಿವೆ. 



೬೪------------------------------------------------------------- 



ಗಡಿನಾಡಿನವರನ್ನು ಮಾತ್ರವೆ ಅಲ್ಲ ಧಾರ್ಮಿಕರಾಗಿ 'ಇದು 

ಅವಿನಯ' ಎಂದು ನಿವೇದಿಸುವ ಆ ಗಂಗನ ಒಳನಾಡಿನ ವಿವೇಕಿವರ್ಗ 

ವನ್ನೂ 'ಮನಸ್ಸಿಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು' ಎಂಬ ಆರೋಪಾಪ 

ವಾದಗಳ ಪಿಡುಗು ನಡುಗಿಸಲಾರಂಭಿಸಿವೆಯಂತೆ. ಅವನ ಗಂಗವಾಡಿ 

ಯಾದರೂ ನಾಡೆಂಬುದನ್ನೂ, ಅಲ್ಲಿಯವರು ಕೂಡ ಮಾನವರೆಂಬುದನ್ನೂ 

ಆತನು ಮರೆಯದಿರಬೇಕಾಗಿದ್ದುದು. ಅವನೆಣಿಕೆ ಹಾಗಿಲ್ಲ. 'ರಾಜಾ 

ಪ್ರತ್ಯಕ್ಷ ದೇವತಾ' ಎನ್ನಿಸಿ ಮೈಯೇರಿದವನವನು. ಮೈಯೇರಿದ ದೆವ್ವವಿಳಿ 

ಯದೆ, ಆ ಪ್ರತ್ಯಕ್ಷ ದೇವತೆ ಎಂದರೇನು? ಪ್ರಜಾಮಂಡಲವೆಂದರೇನು? 

ಎಂಬುದರ ಸಾರಾರ್ಥ ಅವನಿಗಾಗದು. ಅದರಿಂದಲೇ ಮುಂದಿನ ರಾಜನಾಗ 

ಲಿರುವ ಕುಮಾರ ಬೂತುಗನ ಪ್ರಾರ್ಥನೆಯನ್ನೂ ಅಲ್ಲಗಳೆಯುತ್ತಿದ್ದಾನೆ. 

ಇರಲಿ; ಕನಸಿನ ಅರಮನೆಯನ್ನಾಳುತ್ತೇನೆಂಬುದನ್ನು ನೆನಸಿನ ಸೆರೆಮನೆ 

ಯಲ್ಲೆದ್ದು ನಿರ್ಥರಿಸಿಕೊಳ್ಳಲಿ. ಗಂಗನ ಈ ಅವಿನೀತ ವರ್ತನೆಗೆ 

ನಿಸ್ಸಂಶಯಾಧಾರವಿದೆಯೇ? ಎಂದು ಯಾರೂ ಸಂದೇಹಿಸಬಾರದು. 

ಮೊನ್ನೆ ರಾಜಧಾನಿಯಿಂದ ಹಿಂದಿರುಗಿ ಬರುವ ಆ ಕಗ್ಗತ್ತಲೆಯಲ್ಲಿ ಎಲ್ಲವೂ 

ಸಿದ್ಧಾಂತಕ್ಕೆ ಬಂದಿದೆ, ಆ ಸಂಗತಿಯನ್ನು ನಾವೆನ್ನುವುದಕ್ಕಿಂತಲೂ ಆ 

ಗಂಗನ ಕಡೆಯ ಪುಂಡರೊಳಗೆ ಅಳಿದುಳಿದ ಇವರಿಬ್ಬರು ಧಾವಂತ 

ವಾಗಿ ಸಾರುವಲ್ಲಿ ನಿಮಗೆ ಮಂದಟ್ಟಾ ಗಬಹುದು" ಎಂದನು. 



ಅಷ್ಟರಲ್ಲಿ ಕಂಚಣ-ಮಂಜಣರು ಸೆರೆವಿಡಿದು ತಂದ ಆ ಇಬ್ಬರನ್ನು 

ಮುಂದೆ ಕರೆದುಕೊಂಡು ಬಂದರು. ತಮಗೆ ರಾಜಮಲ್ಲನಿಂದೊದಗಿದ 

ಆದೇಶವನ್ನೂ, ಬಂಕೆಯಾದಿಗಳನ್ನು ಬಗೆಹರಿಸಲು ತಾವೆಸಗಿದ ಮಹಾ 

ಪ್ರಯತ್ನವನ್ನೂ, ಅದೆಲ್ಲವೂ 'ಪರರಿಗಿಟ್ಟ ಶೂಲ--ತಮಗಾಗಿ' ಪರಿಣಮಿಸು 

ವಂತೆ ಮಾಡಿದ ವೀರ ಬಂಕೆಯನ ಯುಕ್ತಿ- ಸಾಮರ್ಥ್ಯವನ್ನೂ ಅವರು 

ವಿಸ್ತರಿಸಿ ಹೇಳಿದರು. ಅದನ್ನಾಲಿಸಿದ ಜನಸಂದಣಿ ಗಂಗನ ದುರ್ಮಾರ್ಗಕ್ಕೆ, 

ತಮ್ಮರಸನ ಅಪ್ರತಿಮ ಸಾಹಸಕ್ಕೆ ಬೆರಗಾಯಿತು; ಭಾವಿಸುತ್ತಾ ಒಂದೆರಡು 

ನಿಮಿಷ ಸ್ತಬ್ಧವಾಯಿತು. ಮತು ಮತ್ತೆ ಮಾತನ್ನೆತ್ತಿ ದನು. "ಈ 

ಗಂಗನೆಂದರೆ ಅವನೀತ-ದುರ್ವಿನೀತಾದಿಗಳ ವಂಶದ ಕೂಸೆಯಲ್ಲೇ 

ಚಿಗುರಿದವನೆಂಬುದನ್ನು ಅವನೊಡನೆ ನಾವೂ ಒಪ್ಪಬೇಕು. ಆದರೆ, 

ಪಾಕಸ್ಥಾನದಲ್ಲಿ ಸಿದ್ದವಾದ ಆ ಕಣಿಲೆಯ ಪಾಕ ಹೇಗೆ ಆರೋಗ್ಯಕ್ಕೊಪ್ಪು 

ವುದೋ ನೋಡಬೇಕಾಗಿದೆ. ಏನು, ಈಗಿನ ಕಾಲದಲ್ಲಿ ಇಂಥದೂ ರಾಜ 



೬೫-------------------------------------------------------------



ನೀತಿಯಾಗಿ ಗಣಿಸಲ್ಪಡುವುದೆ? ಹಗೆಗಳಲ್ಲಿಯೂ ಶುದ್ಧ ವಿನಯವನ್ನು 

ಆಚರಿಸುವ ನಮ್ಮ ಉದಾರ ಚಕ್ರವರ್ತಿಗಳ ವಿನಯವೆಲ್ಲಿ? ಪಾಷಂಡ 

ವರ್ತನೆಯಾದ ಈ ಅಭಿನಯವೆಲ್ಲಿ? ತೃಣಪ್ರಾ ಯನಾದ ಈ ಬಂಕೆಯ 

ನೊಬ್ಬನನ್ನು ದಾಟಿಸಿಬಿಟ್ಟಲ್ಲಿ, ರಾಷ್ಟ್ರಕೂಟ ಸಿಂಹಾಸನ ಗಡಗಡಿಸುವು 

ದೆಂದು ಭಾವಿಸಿದನೆ ಆ ಮೂಢನು? ಅಲ್ಲ, ಆತನು ಮೂಢನಲ್ಲ. ಹಾಗಿರು 

ತ್ತಿದ್ದರೆ ಸುತ್ತಮುತ್ತಣ ಬುದ್ಧಿವೃದ್ಧ ಮಂತ್ರಿಗಳ ಬೋಧನೆಯಿಂದ ಹದ 

ಕ್ಕಿಳಿಯಬೇಕಾಗಿತ್ತು ಆತನ ಭಾವನೆ. ನತು ಕಡುಮೂರ್ಖ. 

'ಮೂರ್ಖಸ್ಯ ನಾಸ್ತ್ಯೌಷಧಂ' ಎಂಬ ಮಾತು ಆತನಲ್ಲೇ ಗುರಿಮುಟ್ಟತು. 

ಹೋಗಲಿ, ನಮ್ಮ ಚಕ್ರವರ್ತಿಗಳ ಮಿತಿಮಾರಿದ ಉದಾರತೆಗೂ ಒಂದು 

'ಇತಿ' ನೆಲೆಗೊಂಡಂತೆ ತೋರುತ್ತಿದೆ. ಅವರೇ ಕಳುಹಿದ ಕಡೆಯ 

ನಿರೂಪ ಇಷ್ಟರೊಳಗೆ ಗಂಗನ ಹಸ್ತಗತವಾಗಿರಬೇಕು. ಸೇನಾಸಮೇತ 

ರಾಗಿ ಗಂಗವಾಡಿಯ ಎಲ್ಲೆಯನ್ನು ದಾಟುವಲ್ಲಿ, ದೂತನು ಉತ್ತರದೊಡನೆ 

ನಮ್ಮನ್ನು ಸಂಗಡಿಸಬಹುದು. ಒಟ್ಟಾರೆ ಹಾವು ಸಾಯಬಾರದು, ಕೋಲು 

ಮುರಿಯಬಾರದು, ಎಂಬ ಆ ಉಪಾತ್ತೋದ್ದೇಶ ಸಫಲವಾದರೆ ನಮಗೆಲ್ಲರಿ 

ಗೂ ಆನಂದವೇ ಸರಿ” ಎಂದನು. 


ಆ ಮೇಲೆ ಗಣಪತಿ ಭಟಾರನನ್ನುದ್ದೇಶಿಸಿ ಬಂಕೆಯನಾಡಿದನು;-- 

“ಮಹಾ ಪ್ರಧಾನರೆ, ನೀವೆಂದರೆ ಒಳಗೊಂದು ಹೊರಗೊಂದು ಅರಿಯದ 

ವೈದಿಕ ಬ್ರಾಹ್ಮಣರೆಂಬುದನ್ನು ಬಲ್ಲೆನು. ಅದೇ ರೀತಿಯಲ್ಲಿ ನನ್ನ ಸರಿ 

ಶುದ್ಧ ಜೈನಮತಾನುಯಾಯಿತ್ವನ್ನರಿತವರೆಂದರೆ ನೀವು. ಹೀಗೆ ಅನು 

ಯಾಯಿಗಳೆಲ್ಲ ಆಯಾ ವ್ಯಕ್ತಿಗಳನ್ನು ಗುರಿಗೊಂಡರಿತಲ್ಲಿ ಕೆಲವರಿಗೆ ಬುದು 

ಬುದಾಕಾರವಾಗಿ ಗೊಳಿಸುವ ಮತಮತಗಳೊಳಗಿನ ವೈಷಮ್ಯ-ದ್ವೇಷ 

ಭಾವನೆಗಳು ಎಂದೆಂದೋ ಬಿಸಿಲಿದಿರಿನ ಮಂಜಾಗಿ ಮಾಸಿಹೋಗುತ್ತಿದ್ದು 

ವೆಂಬಲ್ಲಿ ನನಗಂತೂ ಸಂಶಯವಿಲ್ಲ. ಭಿನ್ನಮತಗಳೆಂದರೆ ಸಾಲಾಗಿ ಮುಖ 

ದೊಳಗೆ ನೆಲೆವಡೆದ ದಂತಪಂಙ್ತಿ ಎನ್ನಬಹುದು. ಎಡೆಹೊಕ್ಕು ಹೊರ 

ಡುವ ಹಲವು ವ್ಯಾಖ್ಯಾನ ವಿವೃತ್ತಿಯ ಕಡ್ಡಿಗಳಿಂದಾಗಿ ಆ ಹಲ್ಲುಗಳೇ 

ಕಳಚಿಹೋಗುವುವೋ ಎಂಬ ಸಂಜೀಹವಾಗುತ್ತಿದೆ. ಅಂಥಕಡ್ಡಿಗಳಿಗೆ ಈ 

ವರೆಗೆ ನಮ್ಮ ನಾಡಿನಲ್ಲಿಡೆಯಿಲ್ಲ ಎಂಬುದು ನಿಮಗೆ ಮನವರಿಕೆಯಾ 

ಗಿರುವ ಸಂಗತಿ. ಆದರೆ ನಾನೀಗ ದುರುದುಂಬಿತನದ ಗಂಗನನ್ನು ಹದ 

ಗೊಳಿಸಲಾಗಿ ಅವನ ರಾಜ್ಯದೊಳಗೇ ನುಗ್ಗುತ್ತೇನೆ. ರಾಜಮಲ್ಲನೆಂದರೆ 


೬೬-------------------—---------------------------------------- 


ನನ್ನನ್ನೂ ಚಕ್ರವರ್ತಿಗಳ ಧರ್ಮಮಾರ್ಗವನ್ನೂ ಇದಿರಿಸಬಲ್ಲ ಸಾಹಸಿ 

ಎಂಬ ಸಂಶಯದಿಂದಾಡುವ ಮಾತಲ್ಲವಿದು. ಆದರೂ ದೈವದ ದಾರಿ 

ಯನ್ನಾರು ಬಲ್ಲರು! ಹೋರಾಟದಲ್ಲಿ ಹಗೆಯನ್ನು ಹಣಿದು ಹಣ್ಣಿಗಿಳಿಸಿದರೆ 

ಮಾತ್ರ ಬಂಕೆಯನೀತನು ಹಿಂದಿರುಗಿ ಬಂದು ಸಿಂಹಾಸನಕ್ಕೇರುವನು. 

ಯುದ್ಧರಂಗದಲ್ಲಿ ಬಿದ್ದರೆ ಮುಗಿದುದಷ್ಟೆ; ಅದಕ್ಕೆ ಬದಲಾಗಿ, ಎಲ್ಲಿಯಾದರೂ 

ಪ್ರತಿಜ್ಞಾ ಭಂಗವೊದಗಿದಲ್ಲಿ ಜೀವಚ್ಚವವೆನ್ನಿಸಿಕೊಂಡು ಹಿಂದಿರುಗಲಾರನು; 

ಈ ಕೂದಲನ್ನು ಕಿತ್ತು ಕಾವಿಯನ್ನುಟ್ಟು ಅರಣ್ಯಕ್ಕೆ ಅತಿಥಿಯಾಗುವನು. 

ಸಂದರ್ಭವದು ದೈ ವವಶಾತ್‌ ತಲೆದೋರಿದಲ್ಲಿ ಈ ನಾಡು ಬೀಡುಗಳಿಗೆ 

ಪ್ರಜಾವರ್ಗಕ್ಕೆ ನೀವಲ್ಲದೆ 'ಅನ್ಯಥಾ ಶರಣಂ ನಾಸ್ತಿ'. ಮಗು ಕುಂದಣ 

ನಿನ್ನೂ ಚಿಕ್ಕವನು; ರಾಣಿ ವೀರಶ್ರೀ ಎಂದರೆ ಪ್ರಬುದ್ಧೆಯಾದರೂ ಹೆಂಗು 

ಸಲ್ಲವೆ? ಯಾವ ಬಗೆಯ ಮತವೈಷಮ್ಯವೂ ತಲೆದೋರದಂತೆ ಕಾಪಾಡುವ 

ಭಾರವು ನಿಮ್ಮ ತಲೆಯ ಮೇಲೆ. ಅಂಥ ಶಕ್ತಿ ಸಾಮರ್ಥ್ಯಗಳನ್ನು ನಿಮಗೆ 

ಮಹಾವೀರನು ಕರುಣಿಸಲಿ”. 


ಬಂಕೆಯನ ಮಾತು ಮುಗಿವ ವರೆಗೂ ಜನಸಂದಣಿ ಎಷ್ಟು ನಿಶ್ಶಬ್ದ 

ವಾಗಿತ್ತೆಂದು ಬಲ್ಲಿರೋ?--ಸಾಸಿವೆ ಬಿದ್ದ ಸದ್ದೂ ಕಿವಿಗೆ ಕೇಳುವಷ್ಟು 

ನಿಶ್ಶಬ್ದವಾಗಿತ್ತು. ಹೃದಯೋದ್ರೇಕದ ಮಾತುಗಳವು; ಏರುತ್ತಾ ಹೋಗು 

ತ್ತಿದ್ದ ಆ ವೀರಾಗ್ರೇಸರನ ಮುಖಮಂಡಲವೆಂದರೆ ಬೇರೆ ಬೇರೆ ಭಾವಗಳ 

ಹೊನಲುಗಳಿಂದ ಬೆರೆದಿದ್ದರೂ ವೀರರಸವೇ ಅಲ್ಲಿ ಜಳಜಳಿಸುತ್ತಿದ್ದುದು. 

ಉಬ್ಬಿದ ನೀಳವಾದ ಬಂಗಾರದ ಬಟ್ಟಲಿನಾಕಾರದ ಮೋರೆಯದು ಕ್ರಮ 

ವಾಗಿ ಕಾವಿಬಣ್ಣಕ್ಕೇರಿತು. ಹೇರೀಳೆಯ ಹಣ್ಣುಗಳಂತುಬ್ಬಿದ ದವಡೆಗಳು 

ಮಿರುಮಿರುಗುತ್ತಿದ್ದುವು. ಉದ್ದವಾದ ಕಡೆಗಣ್ಣುಗಳಲ್ಲಿ ಸೂಸಿ ಕೆನ್ನೆಗಳಲ್ಲಿ 

ಹರಿಯುತ್ತಿರುವ ಬಣ್ಣಿಸಲಾರದ ಭಾವನೆಯ ಬಣ್ಣವದು ಮೊಗವಾಡದ 

ಚಿತ್ರಕ್ಕೆ ಜೀವಕಳಾರೇಖೆಯಾಗಿತ್ತು. ಸ್ವಾಭಾವಿಕವಾಗಿ ಹೆದೆಯೇರಿಸಿದ 

ಬಿಲ್ಲಿನಂತೆ ಬಾಗಿದ ಹುಬ್ಬುಗಳ ಕೊನೆಗಳಿಗೆ ಹಸ್ತಲಾಘವವನ್ನೆಸಗಿ ಮನ್ನಿ 

ಸುತ್ತಿವೆಯೋ ಎಂಬಂತ್ತಿರುವ ಗಂಟಿಕ್ಕಿದ ಮೀಸೆಗಳ ಕುಡಿಗಳು ಕುಣಿಯು 

ತ್ತಿದ್ದುವು. ನಲ್ಗಣ್ಣುಗಳ ನಡುವೆ ತಾರೆಗಳು ಮೀನಾಗಿ ಈಜಾಡುತ್ತಿದ್ದುವು. 

ಗಿರಿಶಿಖರವಾದ ಹಣೆಯಲ್ಲೊಸರುವ ಬೆವರ ಬಿಂದುಗಳೊಳಗೆ, ಕೆಲವು ಹಾಗೆ 

ಕೆನ್ನೆಗಳತ್ತ ಜಾರಿದರೆ, ಕೆಲವು ಹೀಗೆ ಮೂಗಿನ ಇಕ್ಕಡೆಗಳಲ್ಲಿಳಿದು ಬಿಸು 

ಸುಯ್ಲಿನ ಸೂಂಕಾರದಿಂದ ನುರಿವಡೆದು ಹಾರುತ್ತಿದ್ದುವು. ದೃಶ್ಯವದನ್ನು 



೬೭-------------------------------------------------------------------- 



ಏನೆಂದು ಬಣ್ಣಿಸಲಿ. ಪುಣ್ಯವಂತರಾದ ನೋಟಕರ ಮನಸ್ಸಿಗೆ ಕಣ್ಣಿಗೆ 

ಅದೊಂದು ಮೀಸಲಹಬ್ಬ ಎಂದರೆ ಮಂದಟ್ಟಾಗಬಹುದೆ? 


ಕನ್ನಡ ವೀರನಾದ ತಮ್ಮ ದೊರೆ ಹಗೆಗಳನ್ನು ಸದೆಬಡಿಯುವನು; 

ಪ್ರತಿಜ್ಞಾ ಪೂರಣದೊಡನೆ ಲೋಕಕಲ್ಯಾಣಕಾರಕನೆನ್ನಿಸುವನು, ಎಂಬ ಸಂಗತಿ 

ಯಲ್ಲಿ ಯಾರಿಗೂ ಸಂದೇಹನಿದ್ದಿಲ್ಲ. ಆದರೆ ಆತನ ಮಾತಿನ ಸರಣಿ 

ಯಲ್ಲೇ ಹರಿಯುತ್ತಿದ್ದ ಹಲಮಂದಿ ವಿವೇಕಿಗಳೊಡನೆ ಗಣಪತಿ ಭಟಾರನ 

ಕಣ್ಣುಗಳೂ ಅಶ್ರು ಪೂರಿತಗಳಾದುವು. ಕ್ಶೆಯ ನೇಣಿನಿಂದ ಅವುಗಳನ್ನೊರಸಿ 

ದನು; ಗದ್ಗದಿಸುತ್ತಿದ್ದ ಕೊರಳನ್ನು ಹದಕ್ಕೆರಗಿಸಿದನು; ಆಸ್ಥಾನದ 

ಮಾಳಿಗೆಯ ಕಿಟಕಿಯಲ್ಲಿ ಮಗುವನ್ನೆತ್ತಿಕೊಂಡು ತನ್ನ ವೀರ ವಲ್ಲಭನ 

ಮೊಗದಲ್ಲಿ ಕಣ್ಣಾಗಿ ಮಾತಿನಲ್ಲಿ ಮನವಾಗಿ ಸಿಂತಿದ್ದ ವೀರಶ್ರೀಯನ್ನೇ 

ಸಂಬೋಧಿಸುತ್ತ ನುಡಿಯನ್ನೆತ್ತಿ ದನು. 


“ಸ್ತ್ರೀರತ್ನವೆನಿಸಿದ ವೀರಶ್ರೀದೇವಿಯೇ, ಉದಾತ್ತನಾದ ನಿನ್ನ ವಲ್ಲಭನ 

ಮಾತಿನ ಮಟ್ಟವೆಂದರೆ ನಿನ್ನೆದೆಯನ್ನಷ್ಟೆ ಅಲ್ಲ, ನಮ್ಮೆಲ್ಲರೆದೆಯಾಳ 

ವನ್ನೂ ಕಾಣಿಸಿಬಿಟ್ಟಿದೆ. ಇದು ಮರುಕದ ಬಾಷ್ಪವಲ್ಲ; ಅವನ ವಾಗ್ಧಾ 

ರೆಯೇ ತೋಡಿ ನಮ್ಮೆಲ್ಲರ ನರಗಳ ನಳಿಗೆಯಲ್ಲಿ ಮೇಲಕ್ಕೆತ್ತಿ ಸುರಿಯುವ 

ವೀರರಸ ಬಾಷ್ಟ. ನೀನೇನೋ ಆತನ ಕೈಹಿಡಿದು ಮೈಗೆ-ಬಾಳುವೆಗೆ 

ಮುಡಿಪಾದ ವೀರಶ್ರೀ; ಆದರೂ, ಸಹೋದರೀ ಕಲ್ಪಳಾದುದರಿಂದ ಹುಡುಗಿ 

ಎಂದು ಬಗೆದು ಹೇಳುತ್ತೇನೆ. ಆ ಮಾತನ್ನಾಲಿಸಿ ಗಲಭೆಗೀಡಾಗಬೇಡ. 

ಸಿಂಹರಾಜನು ಈ ಗಂಗನ ಘೂಂಕಾರಕ್ಕೆ ಕಂಗೆಡುವುದಲ್ಲ. ಆದರೂ 

ಚಕ್ರವರ್ತಿಗಳ ಧಾರ್ಮಿಕವಾದ ರಾಜನೀತಿಯ ವಿನಯದಲ್ಲಿ ಹಾಸು 

ಹೊಕ್ಕಾಗಿ ಬಳೆದುದರಿಂದ ಮಾತದು ಹದಮೀರಿ ಮೆದುವಾದ ಲೇಹ್ಯದಂತೆ 

ತೋರುತ್ತಿದೆ. ಎಂಥೆಂಥ ರೋಗಗಳ ಹುಟ್ಟನ್ನೂ ಅಡಗಿಸಿಬಿಡುವ ಶಕ್ತಿ 

ಆ ಮೃದುತ್ವಕ್ಕಿದೆ. *“ಪುಲಿಗುಲಿ ಬಂಕೆಯಂಗಿದಿಕೆ ಚಿಕ್ಕಿಲಿ, ರಂಗವ 

ಪೂಪ ಪಾತ್ರಮೇ?” ಅತನೇನೋ %'ಓತಪ್ರೋತಂಕಟೀಪ್ರಮಾಣಂ' ಎಂದು 

................

* ಏಕಾಂಗ ವೀರತೆಯಿಂದ ಹುಲಿಗಳನ್ನಪ್ಪಳಿಸಿ ಕೊಂದ ನಮ್ಮ ಬಂಕೆಯನಲ್ಲಿ ಚಿಕ್ಕಿಲಿ 

 ಯಂಥ ಗಂಗನಿದಿರಾಗಯಗುವನೆ? ಚಿಕ್ಕಿಲಿಯ ಪರಾಕ್ರಮಕ್ಕೆ ಯುದ್ಧರಂಗವೆಂದರೆ 

ಭಕ್ಷ್ಯ ಭಾಜನವೆ? 

% ಹೊಳೆಯ ಉದ್ದಗಲಗಳನ್ನು ಗುಣಿಸಿನೋಡಿ, ಸಾಮಾನ್ಯವಾಗಿ ಹೊಳೆಯ ಪ್ರವಾಹ 

ಸೊಂಟದ ವರೆಗೆ ಎಂದು ನಿರ್ಧರಿಸಿ ನೋಡಿದ ಗಣಿತ ಶಾಸ್ತ್ರಿಯೊಬ್ಬನು ಹೊಳೆಗಿಳಿದು 

ಮುಳುಗಿ ಹೋದನೆಂಬುದು ಒಂದು ಕತೆ. 



೬೮----------------------------------------------------------------------— 



ತನ್ನ ಸಿದ್ಧಾಂತವನ್ನೇ ಆಧರಿಸಿ ಹೊಳೆದಾಟಲು ನಿರ್ಧರಿಸಿದ ಗಣಿತ ಶಾಸ್ತ್ರ 

ಯಂತೆ ಭಾಸವಾಗುತ್ತಾನೆ. ಆಗಲಿ; ಆ ಗೋರ್ಕಲ್ಲ ಮೇಲೆ ಇನ್ನೆಷ್ಟು 

ಮಳೆಗರೆಯಬೇಕು? 



ನನ್ನ ವಿಷಯವಾಗಿ ದೊರೆ ಏನನ್ನೊ ಆಡಿದನು. ಆ ನಮ್ಮೊಳಗಿನ 

ಪ್ರೇಮಬಂಧವೆಂಬುದು ಬಿಡಿಸಲಾರದಂತೆ ಬೆಳೆದ ಕಗ್ಗಂಟು. ಅದು ವೀರ 

ಶ್ರೀದೇವಿಗೆ ಮಾತ್ರವೇ ಅಲ್ಲ; ನಾಡೊಳಗೆಲ್ಲ ಗಾಳಿಯ ಗಂಟಾಗಿಯೂ 

ಹಬ್ಬಿದೆ. ಆದರೂ, ನಿಮ್ಮೆಲ್ಲರ ಸಮಕ್ಷಮದಲ್ಲಿ ಅದನ್ನಾಡಿದ ದೊರೆ, ತನ್ನ 

ಉದಾರತೆಯನ್ನು ರಸವತ್ತಾಗಿ ಪ್ರಕಟಿಸಿದನಲ್ಲದೆ ಬೇರೇನೂ ಅಲ್ಲ. ಅದು 

ಅತನ ಧಾರ್ಮಿಕ ವಿನಯಸ್ವರೂಸವಲ್ಲದೆ, ಆ ಮಾತಿನಲ್ಲಿ ಹೊಳೆಯುವ 

ದುಷ್ಟರಿಣತಿ ಏನೇನೂ ಕಾರ್ಯರೂಪವಾಗುವಂತಿಲ್ಲವೆಂಬುದು ನಮಗೆಲ್ಲ 

ಗೊತ್ತಿದೆ. ಅದರಿಂದ ಅದಕ್ಕೆ ನನ್ನ ಉತ್ತರದ ಅವಶ್ಯಕತೆಯೇ ಇಲ್ಲ. 

ಮತ್ತೇನು? ವೀರಶ್ರೀವಲ್ಲಭನಾದ ನಮ್ಮ ಅರಸನು ಜಯಶ್ರೀಯ ಮದು 

ವಣಿಗನಾಗಿ ಹಿಂದಿರುಗುವ ಮರು ದಿಬ್ಬಣವನ್ನೇ ಪ್ರತೀಕ್ಷಿಸುತ್ತಿರುವ? 

ಎಂದು ಮಾತಿಗೆ ಮುದ್ರೆಯನ್ನೊತ್ತಿದನು. 


ಆಗ ಕಿಕ್ಕಿರಿದು ನೆರೆದ ಜನಸಂದಣಿಯೊಳಗಿನವನೊಬ್ಬನ ರಸವೊಸ 

ರುವ ಕಂಠದಿಂದ-'ಭುಜಬಲಿಯ ಭುಜಾದಂಡಂ, ವಿಜಯಾಂಬಾತ್ಮಜನ 

ತೋಳ್ಗೆನೆರಮಕ್ಕೆ....." ಎಂಬ ಛಂದೋಬದ್ದವಾದ ಅಸಂಪೂರ್ಣ 

ಕವಿತಾವಾಣಿ ಮೇಲೆದ್ದಿತು. ಅದನ್ನೆ ಹೆಲವರೆತ್ತಿಕೊಂಡು ಮತ್ತೊಮ್ಮೆ 

ಹಾಡುವಲ್ಲಿ ಬೇರೊಬ್ಬನ ಕಂಠದಿಂದ 'ಜನವ್ರಜಮೊಲ್ದಮೋಘವರ್ಷನ, 

ಸುಜನತೆಯೊಳ್‌ ಬಾಳ್ಗೆ ಧೆರ್ಮಮೆತ್ತಂ ನಲಿಗೇ" ಎಂಬ ಪೂರಕಭಾಗವು 

ಹರಿದುದು. ಅದೂ ಹಲವರೆದೆಯಲ್ಲಿ ಹೊಕ್ಕು ಬಾಯಲ್ಲಿ ಹೊರಟ ಕೂಡಲೆ 

ಬಂಕೆಯರಸನ ಮುಖಮಂಡಲವರಳಿತು. ನೆರೆದ ಸಂದಣಿಗೆ ತಲೆವಾಗಿದನು. 

ಹರಕೆಯೊಡನೆ ವಾಯುನೇಗಾಶ್ವದ ಬೆನ್ನಿಗೆ ಧಿಂಕಿಟ್ಟನು. ರಣಭೇರಿ- 

ಜಯಫೋಷಗಳೊಡನೆ ಸೇನೆ ನಡೆಗೊಂಡುದು. 



ಆನಂದೋತ್ಸಾಹ 


ಪಯಣದ ಮೇಲೆ ಪಯಣವಾಗಿ ಸೇನೆ ಗಂಗವಾಡಿಯನ್ನೊಂದಿತು. 

ವಿಷಯವನ್ನರಿತಿದ್ದ ರಾಷ್ಟ್ರಕೂಟ-ರಾಯಭಾರಿ, ಬಂಕೆಯನ ಆಗಮನ 

ವನ್ನು ಪ್ರತೀಕ್ಷಿಸುತ್ತಿದ್ದನು. ಆ ಮೊದಲೆ, ಮಾನ್ಯಖೇಟದಿಂದ ಬಂದ 


೬೯-------------------------------------------------------------


ರಾಜದೂತನೂ, ರಾಜಮಲ್ಲನನ್ನು ಕಂಡು ಚಕ್ರವರ್ತಿಯ ಪತ್ರ ತ್ರವನ್ನೊಪ್ಪಿಸಿ  

ಉತ್ತರವನ್ನು ಪಡಕೊಂಡು ಬಂದು ರಾಯಭಾರಿಯ ಅರಮನೆಯಲ್ಲೇ 

ಕಾದುಕೊಂಡಿದ್ದನು. ಆ ಅರಮನೆಗೆ ರಟ್ಟವಾಡಿ ಎಂದು ಹೆಸರು. ಕೇದಲ 

ದುರ್ಗ ಕಾವೇರಿಯಿಂದ ತೆಂಕಣ ದಡದಲ್ಲಿದ್ದರೆ, ರಟ್ಟವಾಡಿ ಬಡಗದಡಕ್ಕೆ 

ಒಂದಿಷ್ಟು ದೂರದಲ್ಲಿತ್ತು. ರಾಯಭಾರಿ ಅಣಿಗೊಳಿಸಿದ ಉಪಚಾರದಿಂದ 

ಎಲ್ಲರೂ ಪಥಶ್ರಮವನ್ನು ಕಳೆಯುತ್ತಿರುವಲ್ಲಿ, ಬಂಕೆಯನು ರಾಯಭಾರಿ- 

ದೂತರೊಡನೆ ಮಂತ್ರಾಲಯದೊಳಗೈದಿದನು. ಮತ್ತೆ ಸಂಭಾಷಣೆಗೆ 

ಮೊದಲಾಯಿತು. 


ಬಂಕೆಯಃ--ವೈಜಣ, ಏನು ಗಂಗನ ಭೆಟ್ಟಿ ಯಾಯಿತೆ? 


ವೈಜಣ:--ಆಯಿತು. ಪ್ರತ್ಯುತ್ತರವೂ ಒದಗಿತು. 


ಬಂಕೆಯ:--ಹಾಗಾದರೆ ಆಪ ಪ್ರತ್ಯುತ ತ್ತರವೆಲ್ಲಿ? ನಿನ್ನಲ್ಲಿ ಕೇಳಿ ತಿಳಿದು 

ಕೊಳ್ಳು ವುದಕ್ಕಿಂತಲೂ ಅದರಿಂದಲೆ ಅವನ ಹಣೆಬರಹವನ್ನೋದಿಕೊಳ್ಳು 

ವುದು ವಾಸಿ. 


ವೈಜಣ: —ಉತ್ತರವದು ಚಕ್ರವರ್ತಿಗಳ ಸನ್ನಿಧಾನಕ್ಕಿರುವುದು; 

ಆದರೂ ಮ್ಮ ಕೈಗೊಪ್ಪಿಸಬಹುದಂತೆ. 


ಬಂತೆಯ:- ಇದೇನು? ಸೇನಾಸಮೇತನಾಗಿ ನಿಮ್ಮತ್ತ ದಾಳಿ 

ಯಿಡುವ ಬಂಕೆಯನಿಗೇ ಉತ್ತರವನ್ನೀಯಬೇಕೆಂದು ಚಕ್ರವರ್ತಿಯವರ 

ಪತ್ರವೇ ಸಾರುತಿತ್ತು? 


ವೈಜಣ: ಇರಬಹುದು; ಅಷ್ಟೇ ಅಲ್ಲ; ಚಕ್ರವರ್ತಿಗಳ ಆ ವಿಶಿಷ್ಟ 

ನಿರೂಪವನ್ನು ನಾನೂ ಹೇಳಿದ್ದೆನು. 


ಬಂಕೆಯ: - ಹಾಗಾದರೆ ಅದೇನು ಭೇತಾಳೋದಯ? 


ವೈಜಣ:- ಏನೆಂದು ಗೊತ್ತಾಗಲಿಲ್ಲ. ನಾನು ಭೆಟ್ಟಿಯಾದಂದು 

ಅವರು ಉತ್ತರವನ್ನೀಯಲಿಲ್ಲ; “ಪರಾಂಬರಿಸಿ ನಾಳೆ ಉತ್ತರವನ್ನು ಕಳುಹು 

ತ್ತೇನೆ” ಎಂದರು. ನಾನು ಚಕ್ರವರ್ತಿಗಳ ಅಪ್ಪಣೆಯಂತೆ ಕುಮಾರ- 

ಬೂತುಗರಲ್ಲಿಗೆ ಹೋದೆ. ಮರುದಿವಸ-ಎಂದರೆ ಈ ಹೊತ್ತು- ಬೆಳಗ್ಗೆ 

ಉತ್ತರವನ್ನೊಬ್ಬನು ತಂದುಕೊಟ್ಟನು. 


ಬಂಕೆಯ:--ನೀನು ಮತ್ತೊಮ್ಮೆ ಆ ಗಂಗನನ್ನು ಸಂದರ್ಶಿಸ 

ಬೇಕಾಗಿತ್ತು. 



೭೦ --------------------------------------------------------------------------


ವೈಜಣ:- ಹೌದು. “ನಿಮ್ಮ ದೊರೆಗಳನ್ನು ಇನ್ನೊಮ್ಮೆ ಕಾಣ 

ಬೇಕಾಗಿದೆ. ಏನು ಸಮಯವಿರಬಹುದೆ?" ಎಂದು ಕೇಳಿದೆ. ಅದಕ್ಕವನು 

'ಇಲ್ಲ; ಕಾರ್ಯಾಂತರದಿಂದಾಗಿ ದೊರೆಗಳಿಗೆ ತಲೆದುರಿಸಲಿಕ್ಕೂ ಎಡೆಯಿಲ್ಲ 

ವಂತೆ' ಎಂದನು. “ಹಾಗಲ್ಲವಯ್ಯಾ, 'ಇಲ್ಲಿಗೆ ಬೇಗನೆ ಬರಲಿರುವ 

ಸಾಮಂತ ಚೂಡಾಮಣಿ-ಬಂಕೆಯರಸರ ವಿಳಾಸಕ್ಕೇ ಉತ್ತರವನ್ನು 

ಕೊಡಬೇಕೆಂದು ಚಕ್ರವರ್ತಿಗಳ ನಿರೂಪ,” ಎಂದೆ. 


ಬಂಕೆಯು:--ಏನೆಂದು ಉತ್ತರಿಸಿದನು? 


ವೈಜಣ: --'ಬಂಕೆಯರಿಗೆ ಉತ್ತರವನ್ನು ತಲುಪಿಸಬೇಕು' ಎಂದು 

ಚಕ್ರ ವರ್ತಿಗಳ ಪತ್ರದಲ್ಲಿರುವುದಲ್ಲದೆ, 'ಬಂಕೆಯರ ವಿಳಾಸಕ್ಕೆ.........  

ಎಂದಲ್ಲ. ಅದರಿಂದ ಈ ಪತ್ರವನ್ನು ಬೇಕಾದರೆ ಬಂಕೆಯರೆ ಕೈಗೊಪ್ಪಿಸ 

ಬಹುದಂತೆ" ಎಂದನು. 


ಬಂಕೆಯ:--ಹೂಂ, ಮತ್ತೇನು? 


ವೈಜಣ: ಅಲ್ಲವಯ್ಯಾ, ಮಹಾರಾಜರ ಪತ್ರದಲ್ಲೇ ಹಾಗಿಲ್ಲದಿ 

ದ್ದರೆ, "ಬಂಕೆಯರಸರ ವಿಳಾಸಕ್ಕೆ ಬರೆಯಬೇಕು' ಎಂಬುದಾಗಿ ಬಾಯಿ 

ಮಾತಿನಲ್ಲಿ ಎಚ್ಚರಿಸುವರೆ?" ಎಂದೆ. “ಪತ್ರದಲ್ಲಿರುತ್ತಿದ್ದರೆ ಬಾಯಿಮಾತಿನ 

ಎಚ್ಚರಿಕೆಯಾದಕೂ ಯಾಕೆ? ನಮ್ಮ ದೊರೆಗಳಿಂದರೆ ಅದನ್ನೆಲ್ಲಾ ತಿಳಿಯ 

ಲಾರದ ಯಃಶಶ್ಚಿದ್ವ್ಯಕ್ತಿ ಎಂದು ಭಾವಿಸಬೇಡ” ಎಂದುನೀಕರಿಸಿ ನುಡಿ 

ದನು. ಮತ್ತೆ ಅವನೊಡನೆ ಮಾತನ್ನೆತ್ತಬಾರದಾಗಿತ್ತು. ಆದರೂ ವಿನಯ 

ಪೂರ್ವಕನಾಗಿ “ಹಾಗಲ್ಲ..........." ಎಂಬ ನನ್ನ ನುಡಿಯನ್ನಾಲಿಸಿದೊ 

ಡನೆ ಆತನ ಮಾತಿನ ಭೂತಕ್ಕೆ ಹೂವನ್ನೆರಚಿದಂತಾಯಿತು ಏನೇನೋ 

ಅಡಲಾರಂಭಿಸಿದನು. 


ಬಂಕೆಯ: ಆಗಲಿ, ನೆನಪಿದ್ದರೆ ಆತನ ಮಾತನ್ನೇ,-- ಇಲ್ಲವಾದರೆ 

ಅದರ ತಾತ್ಸರ್ಯವನ್ನಾದರೂ ಹೇಳು. 


ವೈಜಣ:-- ಏನಯ್ಯಾ, ನಮ್ಮ ಮಾನ್ಯ ಮಹಾರಾಜರಿಗೂ, ಮೊನ್ನೆ 

ಬಂದ ಮಳಿಗೆ ನಿನ್ನೆ ಮೊಳೆತ ಚಗಟೆಗಳಾದ ಈಗಿನ ಹೊಸ ಹೊಸಬರಾದ 

ಸಾಮಂತರಿಗೂ ಏನು ಸಂಬಂಧ?” ಎಂಬುದೇ ಆತನ ಕಡೆಯ ಮಾತು. 

ಕುಮಾರ ಭೂತುಗರು ಅಷ್ಟರಲ್ಲಿ ಒಳಗಿನಿಂದ ಬಂದರು. ಮತ್ತೆ ಆತನು 

ಮುಂದುವರಿಸದೆ ಹೋಗಿಬಿಟ್ಟನು. 


೭೧-----------------------------------------------------------------


ಅದನ್ನಾಲಿಸಿದ ಬಂಕೆಯನ ಮುಖಮಂಡಲದಲ್ಲಿ ಕ್ರೋಧ- ಹಾಸ 

ಗಳೆರಡೂ ತಲೆದೋರಿದುವು. “ಹೂಂ, ಹಾಕಿದ ಕೂಳು, ಹೇಳಿದ ಬಿಟ್ಟಿ 

ಯಾದ ಆಳಿನ ಮಾತಲ್ಲ; ಸೋಕಿದ ಪಿಶಾಚಿ ಎಂದೆನ್ನಿಸಿದ ಗಂಗನ 

ಮಾತದು. ಈ ಪತ್ರ ಚಕ್ರವರ್ತಿಗಳ ಸನ್ನಿಧಿಯನ್ನೊಂದಿದ ಮೇಲೆಯೇ 

ಈ 'ಚಗಟೆ'ಯ ದಾಳಿಗೆಡೆಯಾದೀತು, ಎಂದು ಆತನ ಭಾವನೆಯಾಗಿರ 

ಬಹುದು. ಆ ಗಾದೆಯ ಮಾತನ್ನವನು ಈ ಚಕ್ರವರ್ತಿಗಳಿಗಿತ್ತ ಪತ್ರ 

ದಲ್ಲಿಯೂ ಉಪಯೋಗಿಸಿರಲಿಕ್ಕಿಲ್ಲ. ಏನೋ ತಡೆಯಲಾರದ ಉದ್ವೇಗ 

ದಿಂದ ಆತನ ಬಾಯಿಯಿಂದುರುಳಿದ ಮಾತದು. ಅದನ್ನೇ ಎತ್ತಿಕೊಂಡ 

ಆಳು ಹಾಗೇ ಆಡಿಬಿಟ್ಟಿರಬೇಕು. ಹಾಗಲ್ಲವೆ ಗಂಪಣರನರೇ?" ಎಂದು 

ರಾಯಭಾರಿಯ ಮುಖವನ್ನೀಕ್ಷಿಸಿದನು. 


ಗಂಪಣ:--ಸರಿ. ಹಾಗಾದರೆ ಈ ವೈಜಣನು ರಾಜಧಾಸನಿಗೈದಿ 

ಮಹಾರಾಜರ ನಿರೂಪಣದೊಡನೆ ಬರುವಲ್ಲಿವರೆಗೆ ಸೇನಾಸಮೇತರಾದ 

ನೀವು ಇಲ್ಲಿಯೇ ತಡೆದಿರುವುದೆ? 


ಬಂಕೆಯ:--(ಗಂಭೀರತೆಯೊಡನೆ) ಯಾವ ರಾಜನೀತಿಯ ಮಾರ್ಗ 

ವಿದು? “ಗಂಗವಾಟವಟಾಟವಿ'ಯನ್ನು ಕಿತ್ತೊಗೆದು ಬಾ” ಎಂಬ ಚಕ್ರವರ್ತಿ 

ಗಳ ಸ್ವಹಸ್ತಾಕ್ಸರ ನಿರೂಪವು ನನ್ನ ಕೈಯೊಳಗೆ ಬುಸುಗುಟ್ಟುತ್ತಿರುವಲ್ಲಿ 

ಗಾರುಡಿಗನ ರಕ್ಷಾ- ಪತ್ರ ಅದನ್ನೇನು ತಡೆಗಟ್ಟಬಲ್ಲುದೆ? ಚಕ್ರವರ್ತಿಗಳು  

ದೂತನ ಪತ್ರದಲ್ಲಿ ಬರೆದು, ಸಾರಿ ಹೇಳಿದುದಕ್ಕೆ ಪ್ರತ್ಯುತ್ತರ ನನಗೆ ಬಂದಿಲ್ಲ. 

ಗಾಯವೊತ್ತಟ್ಟು ಮದ್ದೊತ್ತಟ್ಟೆಂಬಂತಾಗಿದೆ ಆತನ ಉತ್ತರವೆಂಬುದು. 

ನಾಳೆ ಅಭಿಮಾನದ ಗೊಂಡೆ-ಬಾವುಟ ಬಾಗುವಲ್ಲಿ ಎಲ್ಲವೂ 

ಮಂದಟ್ಟಾದೀತು. 


ಗಂಪಣ: ಹೌದು. ಆದರೂ ಚಕ್ರವರ್ತಿಗಳಿಗೆ ದೂತನಲ್ಲೇ ಪತ್ರ  

ವನ್ನೊಪ್ಪಿಸಿರುವನಲ್ಲವೆ? ಅದರೊಳಗೆ ನಿಮ್ಮ ನಮ್ಮ ಮೇಲಿನ ಆರೋಪ 

ಗಳು ಏನೆಲ್ಲ ಇವೆಯೊ? 


ಬಂಕೆಯ:--ಇರಲಿ; ಅದು ಕಟ್ಟಿಟ್ಟ ಗಂಟು, ಆದರೆ, ಇದೆಲ್ಲವೂ 

ಕಾಲ ವಂಚನೆಯ ಶಾಖೋಲ್ಲಂಘನವೆಂಬಲ್ಲಿ ನಿಮಗೂ ಸಂದೇಹವೆ? 

ರಾಜನೀತಿಯ ವಿನಯದಲ್ಲಿ ಒಂದಿಷ್ಟಾದರೂ ಬಾಗಿದವನಾಗಿದ್ದಲ್ಲಿ ಆತನು 

ನನಗೇ ಉತ್ತರವನ್ನು ಕಳುಹುತ್ತಿದ್ದನು, 'ತಾಯಿಗೆ ಮಗು ಬೇಡವಾದರೆ 



೭೨---------------------------------------------------------------------- 



ಅಜ್ಜಿಗೆ ಮೊಮ್ಮಗುವೇಕೆ?' (ದೂತನತ್ತ ತಿರುಗಿ) ಕುಮಾರ ಬೂತುಗನಿಗೂ 

ಮಹಾರಾಜರ ಸಂದೇಶ ಪತ್ರವನ್ನು ಕೊಟ್ಟಿರುವೆಯಷ್ಟೆ? ಅವನು ಪ್ರತ್ಯುತ್ತರ 

ವನ್ನಿತ್ತಿರುವನೆ? 


ವೈಜಣ:--ಹೌದು; ಸಮರ್ಪಿಸಿದ್ದಾನೆ. ಮಾತ್ರವಲ್ಲ; ವನವಿಹಾರ 

ಕ್ಕೆಂದು ಹೊರಟ ನಮ್ಮ ಯುವರಾಜಾದಿಗಳನ್ನು ಕರಕೊಂಡು ಈ ದಾಳಿಯ 

ಸಂದರ್ಭದಲ್ಲಿ ಗಂಗವಾಡಿಗೆ ಬಂದುದು ಆತನಿಗೆ ಸೈಸಲಾರದ ನೋವ 

ನ್ನ್ನುಂಟುಮಾಡಿದೆ. ಆ ಸರ್ವಾಪರಾಧವು ತನ್ನದೇ. ಅದನ್ನು ಒಂದು 

ವೇಳೆ ಕ್ಷಮಿಸದಿದ್ದರೂ ಯುವರಾಜಾದಿಗಳಲ್ಲಿ ಬೇಸರಿಸಲಾಗದೆಂದೂ, ದಾಳಿ 

ಯಿಡುವ ಬಂಕೆಯರಸನಿಗೆ ತ್ರಿಕರಣಪೂರ್ವಕವಾಗಿ ನೆರವಾಗುವೆನೆಂದೂ 

ಪತ್ರದಲ್ಲಿ ಬರೆದುದಲ್ಲದೆ ಬಾಯಿಮಾತಾಗಿಯೂ ನಿವೇದಿಸಿದ್ದಾನೆ. 


ಬಂಕೆಯ:--(ಭಾವಿಸಿ) ಹುಂ, ಒಮ್ಮೆ ಹುಡುಗನಾಗಿ ಎಡವಿದರೂ 

ಮುಂದೆ ಜಾಗೃತನಾಗುವನೆಂದು ತೋರುತ್ತಿದೆ. ಇರಲಿ; ನಮ್ಮ ಯುವ 

ರಾಜರನ್ನು ಕಂಡಿಲ್ಲವೆ? 


ವೈಜಣ:--ಇಲ್ಲ; ಕಾಣಲಿಕ್ಕೆ ಎಡೆಯಾಗಲಿಲ್ಲ.  ಯುವರಾಜರ 

ದರ್ಶನಕ್ಕಾಗಿ ಗಂಗರಾಜರು ಕುಮಾರ ಬೂತುಗರಲ್ಲಿಗೆ ಹ ಪ್ರಥಮತಃ ಬಂದಿದ್ದ 

ರಂತೆ. ಆ ಮೇಲೆ ಆಮಂತ್ರಿಸಿದ ನಿಯಮಿತ ಸಮಯಕ್ನನುವಾಗಿ, ಅವರು 

ಗಂಗರಾಜಾಲಯಕ್ಕೆ ಚಿತ್ತಯಿಸಿದ್ದರು. ಆ ಸಂದರ್ಭದಲ್ಲೇ ನಾನು 

ಬೂತುಗರಲ್ಲಿಗೆ ಹೋಗಿದ್ದುದು. 


ಬಂಕೆಯ:--ಅದೇನು ಕುಮಾರ ಬೂತುಗನನ್ನುಳಿದು ನಮ್ಮ ಯುವ 

ರಾಜರು ಏಕಾಂಗಿಯಾಗಿ ಅಲ್ಲಿಗೈದಿದ್ದರೆ? 


ವೈಜಣ:--ಹೌದು; ಆದರೆ ನನ್ನನ್ನು ನಿರೀಕ್ಷಿಸುವುದಕ್ಕಾಗಿಯೇ 

ಹಿಂದುಳಿದುದೆಂದೂ ಆಗಲೇ ರಾಜಾಲಯದತ್ತ ಹೊರಡುವುದಾಗಿಯೂ  

ಕುಮಾರ ಬೂತುಗರೇ ಹೇಳಿದರು. 


ಬಂಕೆಯ:--(ಸ್ವಲ್ಪ ತಡೆದು) ನಮ್ಮ ಯುವರಾಜರು ಅಲ್ಲಿರುವುದು 

ಸರಿಯಾಗಿ ಮಂದಟ್ಟಾದ ಮೇಲೂ ಅವರನ್ನು ಕಂಡು ಮಾತಾಡದೆ ಬಂದು 

ದೆಂದರೆ ರಾಜನೀತಿಯ ದಾರಿಯನೊಂದಿಷ್ಟು ತೊಲಗಿದಂತಾಯಿತು. 


ವೈಜಣ-- ನನಗೂ ಹಾಗೇ ತೋರುತ್ತಿದೆ. ಆದರೆ, ನಿಮ್ಮನ್ನು 

ಸಂಧಿಸುವ ಕಾಲಕ್ಕೆ ಎಲ್ಲಿ ತೊಡಕಾಗಿ ಬಿಡುವುದೋ ಎಂದು ಸಂದೇಹಿಸಿ 

ಬಂದುಬಿಟ್ಟೆ. ಏನು; ಇನ್ನೊಮ್ಮೆ ಹೋಗಿ ಸಂದರ್ಶಿಸಿ ಕೊಂಡುಬರಲೆ? 



೭೩------------------------------------------------------------------- 



ಬಂಕೆಯಃ:--ನಾನು ಸೇನಾಸಮೇತನಾಗಿ ಬಂದು ಇಲ್ಲಿ ಇಳಿದಿರುವೆ 

ನೆಂಬ ಸುದ್ದಿ ಇಷ್ಟರಲ್ಲಿ ಅಲ್ಲಿ ಎತ್ತೆತ್ತಲೂ ಹರಡಿರಬಹುದು, "ಮಾತ ತ್ರವಲ್ಲ, 

ಗುಪ್ತಚಾರ ಸಂಚಾರದ ಶ್ವಾಸೋಚ್ಚ್ವಾಸದಿಂದಲೇ ಗಂಗನ ರಾಜನೀತಿ ಈ 

ವರೆಗೆ ಜೀವಿಸುತ್ತಿದ್ದುದೆಂಬುದು ಹಿಂದೆಯೇ ಗೊತ್ತಾಗಿದೆ. ಅದರಿಂದ 

ನೀನೇ ಯುವರಾಜರನ್ನು ಸಂದರ್ಶಿಸುವುದಕ್ಕಾಗಿ ಮತ್ತೊಮ್ಮೆ ಹೋಗುವು 

ದೆಂದರೆ ಅಲ್ಲಿಯವರಿಗೆ ವಿಲಕ್ಷಣವಾಗಿ ತೋರಬಹುದು. 


ಗಂಪಣ: ಹಾಗಾದರೆ ಬೇರೊಬ್ಬ ದೂತನನ್ನು ಕಳುಹಬೇಕೆ? 

ಅಥವಾ ನಾನೇ ಹೋಗಿ ಕಂಡು ಮಾತಾಡಿ ಬರಲೆ? 


ಬಂಕೆಯ:- ನಮ್ಮ ಯುವರಾಜರು ಗಂಗವಾಡಿಗೆ ಬಂದು ದಿವಸ 

ವೆಷ್ಟಾಗಿರಬಹುದು? 


ಗಂಪಣ:- ನಾಲ್ಕೋ, ಐದೋ? 


ಬಂಕೆಯ:--ಅಷ್ಟೆಯೇ? ರಾಜಧಾನಿಗೆ ಆ ಸುದ್ದಿ ಬೀಸಿ ಎಷ್ಟೆಷ್ಟೋ  

ದಿನಗಳು ಕಳೆದುಹೋದುವು. 


ಗಂಪಣ:--ಛೇ, ಅದೆಲ್ಲವೂ ಈ ಗುಪ್ತಚಾರಕರಿಂದಾಗಿ ಬೀಸಿದ 

ಗಾಳಿಸುದ್ದಿ. ಕೆಲಸಂದರ್ಭಗಳಲ್ಲಿ ಅದರಿಂದೊದಗುವ ಅನರ್ಥ ಪರಿಣಾಮ 

ಎಷ್ಟೋ ಇದೆ. ತಮ್ಮ ಹೊಟ್ಟೆಯೊಂದೇ ಗುರಿಯಾಗಿ ಆ ಉದ್ಯೋಗದಲ್ಲಿ 

ಹೇಗಾದರೂ ನುಸುಳಿ ಸುಳಿದಾಡುವರು ಬಲುಮಂದಿ. ತಮಗೆ ಗೊತ್ತಾ 

ಗುವುದೆಂಬುದು ಒಂದರ ಗಾಳಿಯಾದರೆ, ಅವರು ಅದಕ್ಕೆ ಕೂಡಿಸುವುದು 

ಸೊನ್ನೆಗಳನ್ನೇ. ಅವುಗಳು ಕಂಡವರ ಕಿವಿಗೆ ಬಿದ್ದು ಮಾತಿನಲ್ಲಿ ಹೊರಳಿ 

'ವರ್ತಮಾನ ಪತ್ರಿಕೆಗಳೇ' ಆಗಿಬಿಡುವುದೂ ಇದೆ. ಕುಮಾರ ಬೂತುಗರೊಡನೆ 

ನಮ್ಮ ಯುವರಾಜಾದಿಗಳೆಲ್ಲರೂ ಪ್ರಥಮತಃ ಇಲ್ಲಿಯೇ ಬಂದಿಳಿದು 

ಮಾತಾಡಿ ಹೋದುದು. 


ಬಂಕೆಯ:--ಅವರೊಡನೆ ಬಂದ ಬೇಟಿಗಾರರೆಲ್ಲರೂ ಎಲ್ಲಿದ್ದಾರೆ? 


ಗಂಪಣ:--ಇಲ್ಲಿಯೇ ಇದ್ದಾ ರೆ. ದಿನಕೊಮ್ಮೆ ಕೆಲಕೆಲವರು ಗಂಗ 

ವಾಡಿಯ ದುರ್ಗದೊಳಗೂ ಹೋಗಿ ಯುವರಾಜರನ್ನು ಸಂದರ್ಶಿಸಿ ಬರು 

ತ್ತಾರೆ. ಕೆಲವರು ಅವರ ಅಂಗರಕ್ಷಕರಾಗಿ ಅಲ್ಲೇ ಇದ್ದಾರೆ. ಅಲ್ಲದೆ, 

ನನಗೆ ಈ ವರೆಗೂ ಅಪರಿಚಿತರಾದ ರಾಣಾ ಬಾಲಚಂದ್ರರೆಂಬವರೊಬ್ಬರು 

ಬಂದಿರುತ್ತಾರೆ. ಅವರು ಯುವರಾಜರ ಆಪ್ತರಂತೆ. ಈ ದಿನ ವೈಜಣ 

ನೊಡನೆ ಅವರು ನಮ್ಮಲ್ಲಿಗೆ ಬಂದಿರುತ್ತಾರೆ. 



೭೪---------------------------------------------------------------------— 



ಬಂಕೆಯ: (ಸಂತೋಷದಿಂದ) ಓಹೋ ಹಾಗೇನು? ರಾಣಾಬಾಲ 

ಚಂದ್ರ ಎಂದರೆ ಯಾರವರು? ಈ ವರೆಗೂ ಕೇಳದ ಹೆಸರದು. ಇರಲಿ, 

ಈಗ ಅವರಿಲ್ಲಿದ್ದಾರೆ? 


ಗಂಪಣಃ--'ಒಂದೆರಡು ದಿನಗಳಿಂದ ಸುಖವಿಲ್ಲ; ನನ್ನನ್ನು ಎಚ್ಚ 

ರಿಸಬೇಡಿರಿ' ಎಂದು ಹೇಳಿ ನಮ್ಮ ವಾಡಿಯ ಮಾಳಿಗೆಗೆ ಹೋಗಿ ಮಲಗಿ 

ದ್ದಾರೆ. ಅದಂತಿರಲಿ; ಈಗ ನಾನೇ ಹೋಗಿ ಯುವರಾಜರನ್ನು ಕಂಡು 

ಬರಲೇನು? 


ಬಂಕೆಯು:--ಈಗ ನೀವೇಕೆ ಹೋಗುವುದು? ಹಗೆಗಳೆಡೆಯಲ್ಲಿ 

ಆಗಾಗ ಹೋಗುವುದು ಸರಿಯಲ್ಲ. ನಾಳೆ ನಾನೇ ಹೋಗುತ್ತೇನಷ್ಟೆ? 

ಯುವರಾಜರ ಒಡನಾಡಿಗಳಾಗಿದವರೊಳಗೆ ಒಬ್ಬಿಬ್ಬರನ್ನು ಪ್ರಕ್ನತ ಕಂಡು 

ಒಂದಿಷ್ಟು ಮಾತಾಡಬೇಕಾಗಿದೆ. 


ಕೂಡಲೆ ಗಂಪಣನು ಒಬ್ಬ ಚಾರಕನನ್ನು ಕಳುಹಿದನು. ಅವನೊಡನೆ 

'ಮಂದಣ-ಮಾರಪ್ಪ'ರೆಂಬವರು ಬಂದು ಬಂಕೆಯನಿಗೆ ವಂದಿಸಿದರು. 

ಅವರನ್ನೀಕ್ಷಿಸಿ ಬಂಕೆಯನು ನಗುತ್ತಾ ಮಾತನ್ನೆತ್ತಿದನು. "ಓಹೋ, ಆ 

ಬೇಟಿಗಾರರೆಂದರೆ ನೀವೆಯೋ? ನಾನೇನೋ ಬೇಡರೋ, ಬೇಡ- ವೃತ್ತಿ 

ಯವರೋ ಎಂದು ಭಾವಿಸಿದ್ದೆ. ಕುಳಿತುಕೊಳ್ಳಿರಿ ಎಂದನು. 


ಇಬ್ಬರೂ ಕುಳಿತುಕೊಂಡ ಮೇಲೆ ನಸುನಗುತ್ತಾ ಮಂದಣನು, 

"ನಾವೇನೋ ಬೇಡರಲ್ಲವಷ್ಟೆ? ವೃತ್ತಿಯೊಳಗೂ ಬೇಕಾದುದನ್ನೇ ಅವ 

ಲಂಬಿಸಿದವರು ಮಹಾಸ್ವಾಮಿ” ಎಂದನು. 


ಬಂಕೆಯ:--ಅದೇನು ನನ್ನೆಣಿಕೆ ಹೊರಗಾದ ಸಂಗತಿಯೇ? ಕುರು 

ಡಾಗಿದ್ದ ಎಣಿಕೆ ಹಾಗೆ ಒಂದಿಷ್ಟು ಪರಡಲಾರಂಭಿಸಿತು. ಕಂದೆರೆದ ಕೂಡಲೆ 

ಗುರಿಯತ್ತ ಹರಿಯಿತು. ಇರಲಿ; ಯುವರಾಜರಿಲ್ಲಿದ್ದಾರೆ? 


ಮಂದಣ:--ಅವರೇನೋ ಕೇದಲದುರ್ಗದಲ್ಲಿ ಕುಮಾರ ಬೂತುಗರ 

ಆತಿಥ್ಯದಲ್ಲಿದ್ದಾರೆ. 


ಬಂಕೆಯ:--ನಮ್ಮ ಈ ಆಗಮನ ವಿಚಾರವು ಅವರೆದೆಯನ್ನು 

ಹೊಕ್ಕಿಲ್ಲವಲ್ಲವೆ? 


ಮಂದಣ:--ಅವರಿಗೆ ಮಾತ್ರವೇ ಯಾಕೆ? ಬೂತುಗರಿಗೂ ಇದು 

ಗೊತ್ತಿರುವ ಸಂಗತಿ. ಆದರೂ, ಪ್ರಕೃತ ಗೊತ್ತಿಲ್ಲದಂತೆ ಅಥವಾ ಅದೊಂದು 

ವಿಶಿಷ್ಟ ಸಂಗತಿಯಲ್ಲದಿರುವಂತೆ ವರ್ತಿಸಿಕೊಂಡಿದ್ದಾರೆ. 



೭೫—----------------------------------------------------------------------

ಬಂಕೆಯ:--ಅದಕ್ಕೇನು ಕಾರಣವಿರಬಹುದು? 


ಮಂದಣ:--ವಿಶಿಷ್ಟ ಕಾರಣವೇನೆಂಬುದು ನಮಗೆ ಸರಿಯಾಗಿ ತಿಳಿ 

ಯದು. ರಾಜಮಲ್ಲರು ಒಮ್ಮೆ ಬಂದು ನಮ್ಮ ಯುವರಾಜರ ಸಂದ 

ರ್ಶನವನ್ನು ತೆಗೆದುಕೊಂಡರು. ಆ ಮೇಲೆ ಒಂದೆರಡು ಬಾರಿ ಇವರನ್ನು 

ತಮ್ಮಆಸ್ಥಾನಕ್ಕೆ ಕರಕೊಂಡು ಹೋಗಿ ಸತ್ಕರಿಸಿದರು. ಆ ಮೇಲೆ 

ಯುವರಾಜರೆದೆಯ ಸುಡುನೀರಿಗೆ ಒಂದಿಷ್ಟು ತಣ್ಣೀರೆರಿದಿರುವಂತೆ ತೋರಿಸಿ 

ಕೊಂಡಿದ್ದಾರೆ. 


ಬಂಕೆಯ:--ಹಾಗಾದರೇನು ಇನ್ನಾದರೂ ಗಂಗರಾಜರು ಸನ್ಮಾರ್ಗ 

ವನ್ನು ಹಿಡಿಯಬಹುದು ಎಂಬ ಭಾವನೆಯಲ್ಲಿದ್ದಾರೆಯೇ? 


ಮಂದಣ:--ಆ ಭಾವನೆಯಲ್ಲಿರುವಂತೆ ತೋರಲಿಲ್ಲ. ಆದರೂ, 

ಸುಸಂಧಿಯನ್ನು ಪ್ರತೀಕ್ಷಿಸಿಕೊಂಡು ಹಾಗಿರುವುದಾಗಿ ಕಾಣುತ್ತಿದೆ. 


ಬಂಕೆಯ:--ಕುಮಾರ ಬೂತುಗರೊಡನೆ ನಮ್ಮ ಯುವರಾಜರು 

ಆಸ್ಥಾನಕ್ಕೈದಿದುದೋ? ಅಲ್ಲವೆ ಏಕಾಂಗಿಗಳಾಗಿಯೋ? 


ಮಂದಣ:--ಬೂತುಗರನ್ನುಳಿದು ನಮ್ಮ ಯುವರಾಜರು ಎಲ್ಲಿಗೂ 

ಹೋಗುವಂತಿಲ್ಲ. ಒಮ್ಮೆ ಮಾತ್ರ ಈ ವೈಜಣಯ್ಯನವರ ಪ್ರತೀಕ್ಷೆಯಿಂದಾಗಿ 

ಅವರು ಹಿಂದುಳಿದು ಆ ಮೇಲೆ ಹೋದರು. 


ಬಂಕೆಯ:--ಯುವರಾಜರು ಯಾವಾಗ ಇಲ್ಲಿಂದ....... (ಒಂದಿಷ್ಟು 

ಭಾವಿಸಿ) ಆ ಮಾತು ಹಾಗಿರಲಿ, ಯುವರಾಜರೊಡನೆ--ಏನಪ್ಪಾ ಆ ಹೆಸರೇ 

ಮರೆತುಹೋಯಿತು--ಹೂಂ, ಹೌದು; ರಾಣಾಬಾಲಚಂದ್ರ ಎಂಬ ಹೆಸರಿನ  

ತರುಣ ಮಿತ್ರರೊಬ್ಬರು ಇದ್ದಾರಂತೆ. ಅವರೆಲ್ಲಿಯವರು? 


ಮಾರಪ್ಪ:--ಹೌದು. ಅವರ ಹೊಲಬುಗಿಲಬೊಂದೂ ಗೊತ್ತಿಲ್ಲ. 

ನಾವು ಹೊರಡುವಾಗಿನಿಂದಲೆ ನಮ್ಮ ಯುವರಾಜರ ಒಟ್ಟಿಗೆ ಇದ್ದುದು ಮಾತ್ರ 

ವಲ್ಲ; ಅವರೊಡನೆ ಈ ವರೆಗೂ ಕೇದಲ ದುರ್ಗದಲ್ಲಿದ್ದರು. ಈ 

ಹೊತ್ತು ವೈಜಣಯ ನವರೊಡನೆ ಬಂದವರು ತಲೆನೋವಿನಿಂದಾಗಿ ಮಾಳಿಗೆ 

ಯಲ್ಲಿ ಮಲಗಿಕೊಂಡೇ ಇದ್ದಾರೆ. ನಿಮಗೇನವರ ಗುರುತೂ ಇಲ್ಲವೆ? 


ಬಂಕೆಯ:- ಇದ್ದಂತೆ ತೋರುವುದಿಲ್ಲ. 


ಮಾರಪ್ಪ: (ಒಂದಿಷ್ಟು ಭಾವಿಸಿ) ಬಹುಶಃ ನಿಮಗೆ ಮರೆತುಹೋಗಿರ 

ಬೇಕೆಂದು ತೋರುತ್ತದೆ. ಈ ನಿಮ್ಮ ಚಾರಕನು ಬಾರದಿರುತ್ತಿದ್ದರೂ, ನಿಮ್ಮ 



೭೬-----------------------------------------------------------


ಸಮಯವನ್ನರಿತುಕೊಂಡ್ಕು ರಾಣಾಬಾಲಚಂದ್ರರ ಹೇಳಿಕೆಯೊಂದನ್ನು 

ನಿವೇದಿಸಲಿಕ್ಕಾಗಿ ನಾನೇ ಬರುತ್ತಿದ್ದೆನು. 


ಬಂಕೆಯ:--(ಒಂದಿಷ್ಟು ಪರಾಂಬರಿಸಿ) ಹುಂ, ಅದು ಹಾಗಿರಲಿ. 

ಅವರ ಹೇಳಿಕೆ ಏನು? 


ಮಾರಪ್ಪ:-- 'ನನ್ನ್ನ ಆಪ್ತಬಂಧುಗಳಾದ ಬಂಕೆಯಣ್ಣನವರಲ್ಲಿ 

ಇಷ್ಟೊಂದು ಮಾತನ್ನು, ಎಡೆಯರಿತು ನಿವೇದಿಸಬೇಕು. ಪ್ರಕೃತದ ರಾಜ 

ಕೀಯಾದಿ ವಿಷಯಗಳೊಳಗೆ ಕೆಲವನ್ನು ಅವರೊಡನೆ ಏಕಾಂತದಲ್ಲಿದ್ದು 

ಮಂತ್ರಿಸಬೇಕಾಗಿದೆ. ನನಗೂ ಮೈಯಲ್ಲಿ ಜಾಡ್ಯ. ಅದರಿಂದ ಯಾವ  

ವಿಶೇಷಕಾರ್ಯದ ನಿರ್ಧಾರಕ್ಕೂ ಮೊದಲು ಇಲ್ಲಿ ಬಂದು ಮಾತಾಡಿ 

ಹೋಗಬೇಕು' ಎಂಬುದೇ ಆ ಹೇಳಿಕೆ. 


ಅದನ್ನಾಲಿಸಿದ ಬಂಕೆಯನಿಗೆ ಆಶ್ಚರ್ಯವಾಯಿತು. ನೆನವರಿಕೆಯ 

ಸಂಚಿಯನ್ನೆಸ್ಷೆಷ್ಟೋ ಮಗುಚಿ ಹುಡುಕಿ ನೋಡಿದನು. ಆತನ ಪರಿಚಯವೇ  

ತೋರಲಿಲ್ಲ. ಅವನಂತೂ 'ಬಂಕೆಯಣ್ಣ' ಎನ್ನುತ್ತಾನೆ. ಹಾಗೆ ಕರೆಯುವವ 

ರೆಂದರೆ ಕೆಲವೇ ಕೆಲವರು. ಯುವರಾಜರನ್ನುಳಿದರೆ ಮತ್ತೆ ಕೆಲವರೂ ಇಲ್ಲ. 

ಅವರೊಳಗೆ ಇವನು ಸೇರುವಂತಿಲ್ಲ ಎಂಬಲ್ಲಿ ಸಂಶಯವೂ ಇಲ್ಲ. ಹಾಗಿದ್ದರೆ 

ಈ ಆಪ್ತವ್ಯಕ್ತಿ ಯಾರು? ಎಂಬ ಪ್ರಶ್ನೆಯೇ ಆಶ್ಚರ್ಯಕ್ಕಾಸ್ಪದ. “ಹಾಂ,  

ಹೋಗಲಿ. ಅಂಗೈನೆಲ್ಲಿಗೆ ಕನ್ನಡಿ ಯಾಕೆ? ಹೋಗಿ ನೋಡಿದಲ್ಲಿ ಎಲ್ಲವೂ  

ವಿಶದವಾಗುವುದಷ್ಟೆ?' ಎಂದು ನಿರ್ಧರಿಸಿದನು. “ಇರಲಿ ಆತನೆಲ್ಲಿದ್ದಾನೆ?” 

ಎನ್ನುತ್ತಾ ಕುಳೆತಲ್ಲಿಂದ ಎದ್ದನು. ಮಾರಪ್ಪ ಏಕಾಂಗಿಯಾದ ಬಂಕೆಯನನ್ನು 

ಆ ರಟ್ಟವಾಡದ ಮಾಳಿಗೆಗೆ ಕರಕೊಂಡು ಹೋಗಿ ಆ ವಿಶಿಷ್ಟವಾದ ತೊಟ್ಟಿ  

ಯನ್ನು ತೋರಿಸಿ ಹಿಂದಿರುಗಿದನು. ಬಂಕೆಯನು ಪುನಃ ಕಳೆಗಿಳಿವಲ್ಲಿ 

ಸುಮಾರು ಕಾಲ ಸವೆದುಹೋಗಿತ್ತು. ಆದರೆ ಆಗ ಹಿಂದೆ ಆವರಿಸಿದ 

ಆಶ್ಚರ್ಯವೆಲ್ಲ ಮಾಸಿಹೋದ ಆತನ ಮುಖಮಂಡಲದಲ್ಲಿ ಆನಂದೋತ್ಸಾಹ 

ಗಳ ಎಳಬಿಸಿಲು ಹುರುಪೇರಿ ನಲಿದಾಡುತ್ತಿದ್ಧುದು. 

==============


ಸಂಶಯಗೋಷ್ಠಿ- ನಿರ್ಧಾರ 



ಜೈನರಿಗೆ ರಾತ್ರಿ ಭೋಜನ ನಿಷಿದ್ಧವಷ್ಟೆ? ಬಂಕೆಯರಸನೇ ಮೊದ 

ಲಾದವರಿಗೆ ಆಹಾರಾದ್ಯುಪಚಾರಗಳೆಲ್ಲ ಸಂಜೆಗಿಂತ ಹಿಂದೆಯೇ ನೆರವೇರಿ 


೭೭--------------------------------------------------------------------


ದ್ದುವು. ಮಾನ್ಯಾತಿಥಿಗೆ ಸತ್ಕಾರವನ್ನೆಸಗುವ ಗೃಹಸ್ಥನಾದುದರಿಂದ ಗಂಪ 

ಣನು ಬಂಕೆಯರಸನೊಡನೆ ತಾನೂ ಹಂತಿಗೊಂಡಿದ್ದನು. ದಳನಾಯಕರ 

ಮತ್ತು ಸೈನಿಕರ ಉಪಚಾರವೆಲ್ಲ ಅವರವರ ಪದ್ಧತಿಗೆ, ಸವಿಗೆ, ಸಮಯ 

ಕೊಪ್ಪುವಂತೆ, ಹತ್ತಿರದ ಬೇರೊಂದು ವಾಡಿಯಲ್ಲಿ ಸಾಂಗವಾಗುತ್ತಿದ್ದವು. 

ಬಂಕೆಯ -ಗಂಪಣರು ರಟ್ಟವಾಡದ ಓಲಗಸಾಲೆಯೊಳಗೆ ಆಸನಾಸೀನ 

ರಾಗಿದ್ದರು. ಕಂಚಣಾದಿ ವೀರಭಟದಿಗ್ಗಜಗಳು, ಮೊಗವಾಡದ ನಾಲ್ಕೂ 

ಮೂಲೆಗಳ ಗೋಡೆಗಳಿಗೆರಗಿಸಿದ ದಿಂಬುಗಳಿಗೆ ಬಾಗಿ ನೆಲದಲ್ಲಿ ಕುಳಿತಿದ್ದರು. 

ಗಂಪಣನಿಗೆ ಬಂಕೆಯನು ಮಂತ್ರಿಸಿದ ಆ ಹೊಸಬನಾದ ಯುವಕನನ್ನು 

ನೋಡಿದೊಡನೆ ಕಂಡ ಮೋರೆಯಾಗಿ ತೋರಿದರೂ, ವರ್ತನೆಯಿಂದ 

ಕಾಣದ ವ್ಯಕ್ತಿಯೆನ್ನಿಸಿ ಭಾಸವಾಗಿ, ಅತನಾರೆಂದು ತಿಳಿಯಬೇಕೆಂಬ ಕುತೂ 

ಹಲವಾಗಿತ್ತು. ಆತನ ಹೊಲಬೇ ಆಗದಂತಿದ್ದ ಬಂಕೆಯನು, ಸುಮಾರು 

ಹೊತ್ತು ಮಂತ್ರಿಸಿ ಬಂದ ಮೇಲೆ ಅತನ ವಿಚಾರವನ್ನೆ ದೂರಕ್ಕೆಸೆಯು 

ತಿದ್ದುದನ್ನರಿತ ಮೇಲಂತೂ ಗಂಪಣನ ಕುತೂಹಲ ಕುದಿಯಲಾರಂಭಿಸಿತು. 

ಆ ಯುವಕನೂ ಬಂಕೆಯನೂ ಮಂತ್ರಿಸುತ್ತಿದ್ರುದೆಂದರೆ ಗಂಗವಾಡಿಯೊಳಗೆ 

ಸುತ್ತಿಸುಳಿದು ಬುಸುಗುಟ್ಟುತ್ತಿರುವ ಪ್ರಕೃತದ ರಾಜಕೀಯ ವಿಚಾರವನ್ನೇ 

ಎಂಬಲ್ಲಿ ಸಂಶಯವಿಲ್ಲ. ತಾನೆಂದರೆ ಹಿಂದಿನಿಂದಲೂ ರಾಷ್ಟ್ರಕೂಟ ಮನೆ 

ತನಕ್ಕೆ ಪರಿಚಿತನಾಗಿ. ಈ ಗಂಗವಾಡಿಯಲ್ಲೆ ನಿಯಮಿತನಾಗಿರುವ ರಾಯ 

ಭಾರಿ. ಇಂಥ ತನಗೂ ಗೊತ್ತಿಲ್ಲದವನಾಗಿ, ರಾಜಕೀಯ ಕಾರ್ಯಭಾರದ 

ಬೀಗದ ಕೈಯನ್ನು ತಿರುಗಿಸುವ ಅ ಪೂರ್ವ ರಾಜಕೀಯ ಯುವಕನಾರಿದು? 

ಎಂಬುದೇ ಆ ಕುತೂಹಲದ ಬೀಜ, ಹಾಗೆಂದು, ಬಂಕೆಯನು ಉದ್ದೇಶ 

ಪೂರ್ವಕವಾಗಿ ಹೇಳದಿದ್ದ ವಿಷಯದಲ್ಲಿ ತಾನಾಗಿ ಪ್ರಶ್ನಿಸುವುದಾದರೂ 

ರಾಜಕೀಯ ವಿನಯಕ್ಕೆ ಸಮ್ಮತವಲ್ಲ. ಆದರೂ ಆಸೆ ಪಾಶವಾಗಿ ಬಲಿದಿದೆ 

ಮಾಡುವುದೇನು? 


ಬಂಕೆಯರಸನೆಂದರೆ ರಸಿಕಗೋಷ್ಠೀ ನಿಪುಣನೆಂಬುದು ಗಂಪಣನಿಗೆ 

ಗೊತ್ತಿತ್ತು. ಆಗಿನ ಕಾಲದಲ್ಲಿ ರಸಿಕರೊಳಗಿನ ಸವಿಮಾತುಗಾರಿಕೆ ಅಥವಾ 

ಗೋಷ್ಠಿ ಎಂದರೆ ಚದುರಂಗವೇ ಮೊದಲಾದ ಆಟಗಳ ಕಲೆಯೇ ಆಗಿದ್ದುದು. 

ವಿಂಧ್ಯದ ತೆಂಕಣ ಭಾಗದಲ್ಲಿ ಹಬ್ಬಿದ ಹಲವು ನಾಡುಗಳೊಳಗೆ ಕನ್ನಡ 

ನಾಡು, ಅದರೊಳಗೂ ಬನವಾಸಿ. ಪುರಾತನ ಕಾಲದಿಂದಲೂ ಗೋಷ್ಠಿ 

ಯಲ್ಲಿ ಹೆಸರುಗೊಂಡುದು. ಆ ಬನವಾಸಿಗೆ, ಅಧಿಕಾರದಲ್ಲಿ ಮಾತ್ರವೇ 



೭೮----------------------------------------------------------------------- 



ಅಲ್ಲ; ಕಲಾನೈಪುಣ್ಯದಲ್ಲಿಯೂ ಬಂಕೆಯರಸನು ದೊರೆಯಾಗಿದ್ದನು. ಬನ 

ವಾಸಿಯ ಕಲಾನಿಪುಣರ ಗೋಷ್ಠಿಪ್ರಪಂಚವನ್ನು ಮತ್ತಿನ ಮಹಾ ಕವಿ 

ಪಂಪನು ಮನದುಂಬಿ ಬಣ್ಣಿಸುವುದನ್ನು ವಾಚಕರರಿತಿರಬಹುದು. ಏನಾದ 

ರೇನು? ಗೋಷ್ಠಿರಸದಲ್ಲಿ ಮುಳುಗಿ ಮೈಮರೆತ ಈ ರಸಿಕರೆಂಬವರಿಂದ ಕನ 

ವರಿಸುವವರ ಬಾಯಿಂದ ಹೇಗೋ ಹಾಗೆ ಕೆಲವೇಳೆ ಸಂದರ್ಭಕ್ಕನುವಾಗಿ 

ಒಳಗುಟ್ಟುಗಳನ್ನು ಅಷ್ಟಿಷ್ಟು ಸೆಳೆದುಬಿಡಲೂ ಸಾಧ್ಯವಿದೆಯಂತೆ, ಅದನ್ನೆ 

ಗುರಿಗೊಂಡ ಗಂಪಣನು ಮೆಲ್ಲನೆ, ಎಡೆಯರಿತು ಬಂಕೆಯನೆದೆಯನ್ನು 

ಪರಾಂಬರಿಕೆಯ ವಿಲಾಸವಚನಗಳಿಂದ ಕೆದರಿದನು. 


ಅಂಥ ಕಲಾನಿಪುಣರಾಗಿ 'ಜಗತೀತಳಗತಮನುಜರೊಳಗೆ ಮಾತ 

ರಿವರ್‌ ಕೆಲಬರೆ' ಎಂಬುದು ಬಲ್ಲವರ ಹೇಳಿಕೆ. ಆ ಬಲ್ಲವರೊಡನೆ ಪಳಗಿ 

ಬೆಳಗಿ ಪುಳಕಿಸಿದ ಬಂಕೆಯನು ಕರೆವಲ್ಲಿ ಹಿಂಜರಿವನೆ? ರಣರಂಗದಲ್ಲಿ 

ಹೇಗೋ ಹಾಗೆ ರಸಿಕರಂಗದಲ್ಲಿಯೂ ತಲೆಮರೆಸುವಾತನಲ್ಲ. ಮಾತಿಗೆ 

ಮಾತು ಕೈ ಗೊಟ್ಟು ರಂಗಕ್ಕಿಳಿಯಿತು. ಕೆಮ್ಮಣ್ಣಿನ ಲೇಪದಂತಿರುವ ರಾಗ 

ರಸರಂಜಿತವಾಗ್ಗ೦ಧ ಗಮಗಮಿಸಲಾರಂಭಿಸಿತು. ಮನದಲ್ಲಿ ಮೊಳೆದು 

ಅಭಿನಯದಲ್ಲಿ ಚಿಗುರಿದ ಭಾವನೆಗಳು ಮಾತಾಗಿ ಅರಳುತ್ತಿದ್ದುವು. ಪ್ರಕೃ 

ತದ ರಾಜಕೀಯ ವಿಷಯವನ್ನೆ ಹೆಚ್ಚಾಗಿ ಬಲಿದು ತನ್ನೆದೆಯನ್ನೌಕುತ್ತಿದ್ದ 

ಗಂಪಣನ ಹಿಡಿತಗಳನ್ನು ಬಂಕೆಯನ್ನು ಕ್ಷಣದೊಳಗೆ ಸಡಿಲಿಸುತ್ತಿದ್ದನು. 

ಮಾತಿನ ಸೂಜಿಯನ್ನು ಬೇರೆ ದಾರದಿಂದ ಪೋಣಿಸಿ ಸುರಿಯುತ್ತಿದ್ದನು. 

ಇದನ್ನೆಲ್ಲ ಕಂಡ ಗಂಪಣನು ನಿರಾಶನಾದನು. ಆದರೆ “ಹೊಸಯುವಕನೆಂದರೆ 

ಪ್ರಕೃತದ ಗೂಢಮಂತ್ರದಲ್ಲಿ ನುಸುಳಿಕೊಂಡಿರುವ ವಿಶಿಷ ವ್ಯಕ್ತಿಯೇ ಆಗಿರ 

ಬೇಕು. ಅದರಿಂದಲೇ ಬಂಕೆಯನು ಹೀಗೆ ಜಾಣ್ಮೆಯಿಂದ ಮಾತಿನ ತಲೆ 

ಯನ್ನು ಮರೆಯಿಸುವುದು" ಎಂದು ನಿರ್ಧರಿಸಿ ಕಡೆಗೆ "ಆಯಿತು ಸ್ವಾಮಿ, 

ಸೋತರೂ ಗೆದ್ದೆನು" ಎಂದು ನಕ್ಕನು. 


ಬಂಕೆಯ: ಮೊದಲು ಸೋತುದು ಮತ್ತೆ ಗೆದ್ದುದು. ಹಾಗಿದ್ದರೆ 

ಗೆಲವೇ ಆಯಿತು. “ಸೋತರೂ...” ಎಂಬುದು ನಿರರ್ಥಕ, 


ಗಂಪಣ: ಹಾಗಲ್ಲ; ಸೋಲವೂ ಗೆಲುವಾಗಿ ಪರಿಣಮಿಸಿತು. 

ಎಂದು ಆ ಮಾತಿನ ತಾತ್ರರ್ಯ. 


ಬಂಕೆಯ: ಮಸಿ ತೊಳೆದು ಹೋಗಿ ಮೈ ಬೆಳ್ಳಗಾಗಬಹುದು. 

ಆದರೆ ಮಸಿಯಂತೆ ಕಪ್ಪಾದ ಮೈಬಣ್ಣವೇ ಬೆಳ್ಳಗಾಗುವುದು ಹೇಗೆ? 



೭೯—-------------------------------------------------------------- 



ಗಂಪಣ:--ಹೌದು. ಬಳಿದ ಮಸಿ ತೊಳೆದುಹೋಗುವುದಲ್ಲವೆ? 



ಬಂಕೆಯ:- ಗೋಷ್ಠಿ ಎಂದರೆ ಹಾಗೆ ಬಣ್ಣ ಬಳಿದುಕೊಂಡು 

ಆಡುವ ಆಟ-ನಾಟಕಗಳಲ್ಲ. ಅಕೃತ್ರಿಮವಾದ ಕಲೆಯದು. 


ಗಂಪಣ:--ಬಲುಮಟ್ಟಿಗೇನೋ ಸರಿಯದು. ಆದರೆ, ಈ ಸಂಸಾರ 

ನಾಟಕದಲ್ಲೇ ಕೆಲಮಟ್ಟಿಗೆ ಕೃತ್ರಿಮತೆ ಇದೆ. ಈ ನಾಟಕದೊಳಗಿನ ಒಂದು 

ದೃಶ್ಯವಾಗಿರುವ ಗೋಷ್ಠಿಯಲ್ಲಿ ಏನೇನೂ ಕವಡಿಲ್ಲವೆವುದಾದರೂ 

ಹೇಗೆ? 


ಬಂಕೆಯ:--ಅಂಥ ಅತಾತ್ತ್ವಿಕ ಭಾವನೆಯ ತಳಹದಿಯಲ್ಲಿ ನೀವು 

ಪ್ರಾರಂಭಿಸಿದರೆ. ಈ ಗೋಷ್ಠಿ ನಿಜವಾದ ಗೋಷ್ಠಿಯಲ್ಲ, ಕೃತ್ರಿಮ 

ಗೋಷ್ಠಿಯೇ ಆಗುವುದಲ್ಲವೆ” 


ಗಂಪಣ:--ಹಾಗೆಣಿಸಬಾರದು. ಏನೋ ಒಂದು ಸಂಶಯ ತಲೆ 

ದೋರಿ ಮನಸ್ಸು ಒಂದಿಷ್ಟು ಅಲ್ಲಾಡಿದುದಕ್ಕೆ ಕ್ಷಮಿಸಬೇಕು. 


ಬಂಕೆಯ:--ಅದರಲ್ಲೇನು? ಸಂಶಯವೆಂದಕೆ ಬಲಿದು ಬೇರೂರಿ 

ನೆಲೆಗೊಂಡ ಭ್ರಮೆಯಂತೆ ಅಪಾಯಕಾರಕವಲ್ಲ. ಕೆಸರುಗಂಬದಂತಾಗಿ 

ಹಾಗೋ ಹೀಗೋ ಎಂದು ಅಲುಗಾಡುವ ಸಂಶಯಗ್ರಸ್ಥರಾಗಿರುವ ನಮ್ಮ 

ಚಕ್ರವರ್ತಿಗಳ ಮನಃಪ್ರವೃತ್ತಿ ನಿಮ್ಮನ್ನೆಂದೇನು? ನಮ್ಮೆಲ್ಲರ ಭಾವನೆಯನ್ನೂ 

ಬಿಟ್ಟುದಲ್ಲ. 


ಹೀಗೆನ್ನುವಲ್ಲಿ ರಾತ್ರಿ ಏರಿಹೋಗಿತ್ತು. ರಾಜಾಂಗಣದಲ್ಲಿ ಯಾರೋ 

ಬರುವ ಹೆಜ್ಜೆಯ ಸದ್ದಾಯಿತು. "ಕಂಚಣ, ಯಾರದು?" ಎಂದು ಬಂಕೆ 

ಯನು ಕೇಳುವಲ್ಲಿ, ಅವನೆದ್ದು ಮೊಗವಾಡದ ಬಾಗಿಲಿಗೆ ಬಂದಿದ್ದನು. 

ಯಾರೋ ಎರಡು ಮೂರು ಮಂದಿ ಹೊಸಬರು ಬರುತ್ತಿರುವಂತೆ ಭಾಸ 

ವಾಯಿತು. ತಿಂಗಳು ಬೆಳಕಿದ್ದರೂ ಅತಿಥಿಗಳ ಮೋರೆಯನ್ನು ಬೆಳಗಿಸು 

ವಂತಿರಲಿಲ್ಲ. "ಯಾರದು?" ಎಂಬ ಪ್ರಶ್ನೆಗೆ " ನಾವು ಹಳಬರು, ಹೊಸಬ 

ರಲ್ಲ" ಎಂಬ ಉತ್ತರದೊಡನೆ ಅವರೂ ಬಂದು ಮೆಟ್ಟಿಲನ್ನೇರಿದರು. ಸ್ವರ 

ವನ್ನಾಲಿಸಿದೊಡನೆ ಬಂಕೆಯನು ಗಂಪಣನನ್ನು ಕುರಿತು, “ನಮ್ಮ ಮಹಾ 

ಸಭಾಸದಸ್ಯರಾದ ಮಹಾವೀರಾಚಾರ್ಯರ ಸ್ವರದಂತೆ ಕೇಳುತ್ತಿದೆ. ಬಹುಶಃ 

ಚಕ್ರವರ್ತಿಗಳ ಸಂಶಯವೇ ರಾಯಭಾರಿಗಳಿಂದ ನಿಮ್ಮೆ ಸಂಶಯವನ್ನುದ್ಧರಿ 

ಸಲು ಬಂದಿರಬೇಕು” ಎಂದನು. 



೮೦---------------------------------------------------------------------



ಅಷ್ಟರಲ್ಲಿ ಮಹಾವೀರಾಚಾರ್ಯ ರು ಸಂಗಾತಿಗಳೊಡನೆ ಮೇಲೆ ಬಂದಿ 

ದ್ದರು. ಆತಿಥ್ಯಾದಿಗಳೆಲ್ಲ ಸಾಂಗವಾದೊಡನೆ “ಭೋಜನಾದಿಗಳೆಲ್ಲ ಎಲ್ಲಿ 

ನೆರವೇರಿತು?” ಎಂದು ಗಂಪಣನು ವಿಚಾರಿಸಿದನು. “ಹತ್ತಿರದ ಈ ರವಿ 

ಕಯ್ಯನವರ ಬಂಧುಗಳ ಮನೆಯಲ್ಲೇ ಅದೆಲ್ಲ ಪೂರ್ತಿಸಿತು. ನಮ್ಮ ಭೋಜ 

ನಾದಿಗಳೆಲ್ಲವನ್ನೂ ಪರಾಂಬರಿಸಿಕೊಳ್ಳದೆ ಆ ರವಿ ಮುಂದುವರಿಯುವನೇ? 

ಹಾಗೆ ರವಿ ಕೈ ಯಲ್ಲಿರುವುದರಿಂದಲೇ ಇವರು 'ರವಿಕಯ್ಯ'  ಎಂದು ವಿಲಾಸ 

ವಚನವನ್ನಾಡಿದರು. 


ಬಂಕೆಯ:-- (ನಗುತ್ತಾ) ಗಣಜೆತಶಾಸ್ತ್ರಪಾರಂಗತರಾದ ನಿಮಗೆ ರವಿ 

ಕಯ್ಯನವರ ನೆರವೇಕೆ? ಇಡಿ ಪ್ರಪಂಚದೊಳಗಿನ ಸೂರ್ಯಾದಿ ಗ್ರಹಗಳ 

ಲೆಕ್ಕಪಕ್ಕಗಳೆಲ್ಲ ನಿಮ್ಮೆಣಿಕೆಯೊಳಗೆ. ಹಾಗೆಂದ ಮೇಲೆ ಆ ಸೂರ್ಯನಾ 

ದರೂ ಮಾಡುವುದೇನು? 


ಮಹಾವೀರಾಚಾರ್ಯ:--(ಮಂದಹಾಸದಿಂದ) ನಮ್ಮ ಲೆಕ್ಕಪಕ್ಕ  

ಗಳೆಂದರೆಲ್ಲಾ ಪುಸ್ತಕದೊಳಗಿನ ಬದನೆಕಾಯಿ. ಹಾಗಲ್ಲವಾಗಿದ್ದರೆ  

ಸಂದರ್ಭದಲ್ಲಿ ಇಲ್ಲಿಯ ವರೆಗೂ ಬರಬೇಕಾಗಿತ್ತೆ? 


ಬಂಕೆಯ:--ಹುಂ, ಒಂದಿಷ್ಟು ಹೊಳೆದಂತಾಯಿತು. ಆದರೂ 

ಸ್ಫುಟವಾಗಿ ಹೇಳಿಬಿಡಿರಿ. 


ಮಹಾವೀರಾಚಾರ್ಯ:-- ಹೇಳಿದೆನಲ್ಲ, ನಮ್ಮದು ಪುಸ್ತಕದ 

ಬದನೆಕಾಯಿ ಎಂದು. ಈ ಬದನೆಕಾಯಿ ನಿಮ್ಮ ಹಸ್ತಕವನ್ನೊಂದಿಯೇ 

ಪಾಕವಾಗಬೇಕು. 


ಎನ್ನುತ್ತಾ ಚಕ್ರವರ್ತಿಗಳ ಪತ್ರವನ್ನಾತನ ಕೈಯಲ್ಲಿತ್ತನು 


ಬಂಕೆಯನು ಮಹಾರಾಜನ ಸಂದೇಶರೂಪ ಪತ್ರವನ್ನು ಒಮ್ಮೆಯಲ್ಲ, 

ಇಮ್ಮೆ ಪರಾಮರ್ಶದೊಡನೆ ಆಮೂಲಾಗ್ರವಾಗಿ ಓದಿದನು. ಗಂಪಣನ  

ಮೋರೆಯತ್ತ ಅವನ ಕಣ್ಣೊಮ್ಮೆ ತಿರುಗಿತು. “ಕ್ಷಣಕಾಲಕ್ಕೆ ಮೊದಲು 

ನೋಡದೆ ಟೀಕಿಸಿದರೂ ಅದು ಈ ಸೂತ್ರಕ್ಕೆ ತಕ್ಕ ಟಿಪ್ಪಣಿಯಾಗಿತ್ತು."  

ಎಂದಾಡಿದನು. ಆಗ ಆತನ ಮೋರೆಯಲ್ಲಿ ಗೋಷ್ಠೀ ಸಂಬಂಧವಾದ 

ವಿಲಾಸಬಿಂದುವು ಆರಿಹೋಗಿ ಗಂಭೀರಚ್ಛಾಯೆ ಜಳಜಳಿಸುತ್ತಿತ್ತು. ಗಂಪಣ 

ನಷ್ಟೇ ಅಲ್ಲ, ಎಲ್ಲರೂ ಮೌನವಾಗಿದ್ದರು. ಬಂಕೆಯನು ಮಾತೆತ್ತಿ 

ದನು; “ಆಚಾರ್ಯರೇ ಮಹಾರಾಜರ ಸಂದೇಹವನ್ನು ಹುರಿಯೇರಿಸುವ 



೮೧--------------------------------------------------------------------- 



ವಿಲಕ್ಷಣ ಸಂದರ್ಭವೇನಾದರೂ, ನಾನು ಹೊರಟ ಮೇಲೆ ರಾಜಧಾನಿಯಲ್ಲಿ 

ಸಂಭವಿಸಿತೆ?” 


ಮಹಾವೀರ: ಅಂಥದೇನೂ ಇಲ್ಲ. ಆದರೆ ಗುಪ್ತವೇಷಧಾರಿ 

ಗಳೆನ್ನಿಸಿದ ಹೆಗೆಗಳ ಹಸ್ತಕರಾದ ಕೆಲವರಿಂದ ಅಷ್ಟಿಷ್ಟು ಕಿರುಕುಳವಾಗಿತ್ತು. 

ಅದನ್ನರಿತು ರಾಷ್ಟ್ರಪತಿ- ಜಯಾಳ್ವರು ಆ ಕ್ಷೋಭವೆನ್ನೆಲ್ಲ ಅಲ್ಲಿಂದಲ್ಲಿಗೇ 

ತಣಿಸಿಬಿಟ್ಟರು. 


ಬಂಕೆಯ:--ಅದು ಚಕ್ರವರ್ತಿಗಳಿಗೆ ಮನವರಿಕೆಯಾಗಿಲ್ಲವೆ? 


ಮಹಾವೀರ:--ಸನ್ನಿಧಿಯಲ್ಲಿ ನಿವೇದಿಸಿಕೊಂಡು ಅಜ್ಞಾಧಾರಕರಾದ 

ಮೇಲೆಯೇ ರಾಷ್ಟ್ರಪತಿಗಳು ಆ ಕಾರ್ಯದಲ್ಲಿ ಪ್ರವೃತ್ತರಾದುದು. 


ಬಂಕೆಯಃ--ರಾಷ್ಟ್ರಪತಿಗಳು ಆ ಕ್ಷೋಭವನ್ನೆಲ್ಲ ತಣಿಸಿದ ಕಾರ್ಯ 

ಕ್ರಮ ಹೇಗೆ? 


ಮಹಾವೀರ:--ಒಬ್ಬ ಹೊಸಬನಾದ ದಳಾಧಿಕಾರಿಯನ್ನು ನೇಮಿಸಿ 

ಗುಪ್ತ ವೇಷಧಾರಿಗಳನ್ನೂ ಅವರೊಡನೆ ಬಾಲವನ್ನಲುಗಾಡಿಸುವ ಕಂಟಕ 

ವ್ಯಕ್ತಿಗಳನ್ನೂ ಬಂಧನದಲ್ಲಿರಿಸಿದರು. ಹೊರಗಿನ ನಾಮಾಂಕಿತರಾದ 

ಯಾರೊ ಒಬ್ಬಿಬ್ಬರು ಮಾನ್ಯ ವ್ಯಕ್ತಿಗಳು ಅವ್ಯಕ್ತರಾಗಿ ಆ ಮಾನಕ್ಕೊಳ 

ಗಾಗಿದ್ದರಂತೆ. 


ಬಂಕೆಯ:- ಆ ಮಾನಕ್ಕೊಳಗಾದ ಮಾನ್ಯ ವ್ಯಕ್ತಿಗಳು ಯಾರೆಂ 

ಬುದು ಇನ್ನೂ ಗೊತ್ತಾಗಲಿಲ್ಲವೆಂದಾಯಿತು. ಇರಲಿ; ಈ ಹೊಸಬನಾದ 

ದಳಪತಿಯಾದರೂ ಯಾರು? 


ಮಹಾವೀರ:--ಗೊತ್ತಿಲ್ಲವೆಂದೇ ಈ ವರೆಗೆ ಗೊತ್ತಿರುವುದು. 


ಬಂಕೆಯ:--ನಿಮ್ಮ ಗಣಿತಶಾಸ್ತ್ರಕ್ಕೂ ಸಿಕ್ಕದ ಸಿದ್ಧಾಂತಶೇಷವೇ 

ಆತನ ಹೊಲಬು? 


ಮಹಾವೀರ:- ಹೌದು ಸ್ವಾಮಿ. ಗೂಢಾದ್ಗೂಢತರವಷ್ಟೆ ಅಲ್ಲ. 

ಅವನ ಹೊಲಬದು ಗೂಢತಮದೊಳಗೆ ಮುಳುಗಿ ಮೂಡುತ್ತಿ ದೆ. 


ಬಂಕೆಯ:-- 'ಮುಳುಗಿ'ದುದು ಮಾತ್ರವಲ್ಲ, ಮೂಡುತ್ತಲೂ 

ಇದೆಯೆ? ಹಾಗೆ ಮೂಡುತ್ತಿರುವ ಆ ಶೇಷವಾವುದು? 


ಮಹಾವೀರ:--“ಸಂಕಣನಾಯಕ" ಎಂಬ ಜನರಾಡುವ ಹೆಸ 

ರೊಂದು. ಅವನ ನಿಜವಾದ ಹೆಸರು "ಶಂಖವರ್ಮ” ಎಂದಂತೆ. ಮರೆಯ 



೮೨——------------------------------------------------------------- 



ಲಾರದ ಹೆಸರಲ್ಲವೆ ಅದು? ಕನ್ನಡದಲ್ಲಿ ಶಂಖವರ್ಮ ಎಂಬ ಮಹಾಕವಿ. 

ಯೊಬ್ಬನಿದ್ದನಷ್ಟೆ? ಆ ಶಂಕದೊಡನೆ ಈ ಶಂಖವನ್ನೂ ಊದಿ ದನಿಗೊಳಿಸಿದ  

ದಾಸಯ್ಯನಾಗಿ ಮರೆಯವದಿರುತ್ತೇನೆ. 


ಬಂಕೆಯ:--(ಪರಾಂಬರಿಸಿ) ಅರ್ಥವೇ ಆಗದಂತೆ ಓದುವ ಶಾಸ್ತ್ರ 

ವಚನವಯ್ಯಾ ನಿಮ್ಮದು. 


ಮಹಾವೀರ: -ಓದುವುದು ಶಾಸ್ತ್ರ... ...... ’ ಎಂಬ ಗಾದೆಯನ್ನು 

ಕೇಳಿಲ್ಲವೆ? ನಮ್ಮಂಥ ಶಾಸ್ತ್ರಿಗಳು ಓದುವ ಶಾಸ್ತ್ರಕ್ಕೆ ಮಾತ್ರವೇ ಯಾಕೆ? 

ಆ ಗಾದೆಯ ಮುಂದಿನ ಭಾಗಕ್ಕೂ ನಿಮ್ಮಂಥವರಿಗೆ ಅರ್ಥವಾಗುವಂತಿಲ್ಲ. 


ಬಂಕೆಯ:--ಆಗಲಿ; ಮಹಾರಾಜರ ಪತ್ರದೊಳಗೆ “ಹಗೆಗಳೆಸಗಿದ 

*ಅಂತರ್ಭೇದದಿಂದ ಇಲ್ಲಿ ಸಂಕ್ಷೋಭವಾಗಿದೆ. ತಡಮಾಡದೆ, ಬೇರೆ 

ಕಾರ್ಯಗಳನ್ನೆಲ್ಲ ಬದಿಗಿರಿಸಿ ನೀನು ಹಿಂದಿರುಗಬೇಕು” ಎಂದು ಸೂಚಿ 

ಸಿದ್ದಾರಲ್ಲ! ಇದರ ಅರ್ಥವಾದರೂ ಏನು? ಇದು ಬಹುಶಃ ಪ್ರಜಾ 

ಸಂಕ್ಷೋಭವಲ್ಲ; ಮೆಹಾರಾಜರ ಹೃದಯ ಸಂಕ್ಷೋಭವೇ ಆಗಿರ 

ಬೇಕಲ್ಲವೆ? ಹೋಗಲಿ; ರಾಷ್ಟ್ರಪತಿಗಳು ಪ್ರತ್ಯೇಕವಾಗಿ ಏನಾದರೂ 

ಸಂದೇಶಿಸಿದ್ದಾರೇನು? 


ಮಹಾವೀರ:--ಏನೂ ಇಲ್ಲ. ಆದರೂ “ಬಂಕೆಯರಸರು ಅವಿವೇಕ 

ದಿಂದ ಎಲ್ಲಿಯೂ ಕೈದುಡುಕಲೊಲ್ಲರು. ಯಾವುದಕ್ಕೂ ನಾಲ್ಕಾರು ದಿನ 

ಗಳು ಕಳೆಯಲಿ. ಸರ್ವಾಧಿಕಾರದೊಡನೆ ಆಜ್ಞಪ್ತರಾಗಿ ಕಳುಹಿದ ಸಾಮಂತ 

ವೀರನನ್ನು, ಬಾಂದಳದಿಂದ ಗಾಳಿಪಟವನ್ನು ಹೇಗೋ ಹಾಗೆ ಈ ನೂಲಿ 

ನಿಂದ ಸೆಳೆಯಬಹುದೆ?” ಎಂದು ಚಕ್ರವರ್ತಿಗಳೊಡನೆಯೇ ಅವರು ನಿವೇದಿ 

ಸಿಕೊಂಡರು ಆ ಮಾತು ಬಹುಶಃ ಪ್ರಕ್ಷುಬ್ಧವಾಗಿದ್ದ ಮಹಾರಾಜರ 

ಕಿವಿಗೆ ಬಿದ್ದಿದ್ದುಜೋ ಇಲ್ಲವೋ? 


ಬಂಕೆಯ:--ಆ ಮಾತು ನಿಮ್ಮ ಕಿವಿಗಂತೂ ಬಿದ್ದಿದೆ. 


ಮಹಾವೀರ:--ಹೌದಯ್ಯ. ನಮ್ಮ ಗಣಿತ ಶಾಸ್ತ್ರದ ಜೀವಾಳವಾದ 

ಸೊನ್ನೆಯಂತೆ, ಬಿದ್ದಿದೆ. 


ಬಂಕೆಯ:--ಏನು ಸೊನ್ನೆ ಎಂದರೆ ನಿಮ್ಮ ಶಾಸ್ತ್ರಕ್ಕೇ ಜೀವಾಳವೊ?' 

.............

*ಪದ್ಯ ೨೮; Epigraphica Indica Vol VI No. 4 Konnur 

Inscription of Amoghavarsha I Ad 86। (ಶಾ. ಶ. 783) 



೮೩----------------------------------------------------------------------


ಮಹಾವೀರ:--ಮತ್ತೆ? ಸಂಖ್ಯೆಗಳ ಮುಂದೆ ಹಿಂದೆ ನಡುವೆ ಎಡೆ 

ಯರತು ಸುತ್ತಿ ಒಂದನ್ನು ಹತ್ತಕ್ಕೇರಿಸುವುದೂ ಇಳಿಸುವುದೂ ಸೊನ್ನೆ 

ಯಲ್ಲವೆ? ಅದರಿಂದಲೇ ಸೊನ್ನೆ ಬ್ರಹ್ಮಾಂಡವನ್ನೇ ಮುಳುಗಿಸುವಷ್ಟೂ 

ತೇಲಾಡಿಸುವಷ್ಟೂ ಸಮರ್ಥವಾಗಿದೆ. ಸೊನ್ನೆ ಎಂದರೆ ಗಣಿತ ಶಾಸ್ತ್ರದ 

ಪರಮಾತ್ಮನಂತೆ! 


ಆಚಾರ್ಯನ ಮಾತನ್ನು ಕೇಳಿದ ಬಂಕೆಯನು “ಇರಲಿ. ಹಾಗಿದ್ದರೆ, 

ರಾಜಧಾನಿಯೊಳಗೆ ಅಂಥ ಸಂಕ್ಷೋಭವೇನೂ ಇಲ್ಲವೆಂಬಲ್ಲಿ ಸಂಶಯವಿಲ್ಲ. 

ಈ ಗಂಗವಾಡಿಯನ್ನು ಹೊದ್ದಿಕೊಂಡಿರುವ ಕೆಲವು ಸಂಗತಿಗಳೇ ಅವರೆದದೆ 

ಯನ್ನು ಕಳವಳಕ್ಕೀಡಾಗಿ ಮಾಡಿವೆ. ಆಚಾರ್ಯರೆ, ವಿಸ್ತೃತವಾಗಿ ಉತ್ತರ 

ವನ್ನು ಬರೆದು ನಿಮ್ಮ ಕೈಯಲ್ಲಿ ಒಪ್ಪಿಸುತ್ತೇನೆ. ಚಕ್ರವರ್ತಿಗಳ ಮನಸ್ಸಿ 

ನಲ್ಲಿ ಗುಣುಗುಟ್ಟುತ್ತಿರದ ಸಂದೇಹವೆಂದರೆ ಎಂಥದೆಂಬುದು ನನಗಿಲ್ಲಿ 

ಸ್ಫುಟವಾಗಿದೆ. ರಾಜಧಾನಿಯಲ್ಲಿ, ಫಕ್ಕನೆ ಹಿಂದಿರುಗಬೇಕಾದ ಕ್ಷೋಭ 

ವೇನೂ ಇಲ್ಲ ಎಂಬುದು ಪತ್ರಕಿಂತಲು ಹೆಚ್ಚಾಗಿ ನಿಮ್ಮ ಮಾತಿನಿಂದ 

ವಿದಿತವಾಗಿದೆ. ತನ್ನ ಅತಿಕ್ರಮಕ್ಕಿನ್ನೂ ಗಂಗರಾಜನು ಪಶ್ಚಾತ್ತಾಪ 

ಗೊಳ್ಳದಿರುವಲ್ಲಿ ದೊರೆಗಳಿಂದ ಆಜ್ಞಪ್ತನಾಗಿ ಬಂದ ಈ ಬಂಕೆಯನು 

ಸುಮ್ಮನೆ ಹಿಂದಿರುಗುವುದೆಂದರೆ ಅಂಜುಬುರುಕತನ; ರಾಜನೀತಿಯ 

ಸಂಸ್ಕೃತಿಗೆ ಕಲಂಕ. ಇಲ್ಲಿ ಎಲ್ಲವೂ ಮಾನ್ಯಖೇಟದ ಕೀರ್ತಿಯನ್ನು 

ಬೆಳಗುವಂತಿದೆಯಲ್ಲದೆ ಅವಕ್ಕೆ ಕಳಂಕವನ್ನೊಡ್ಡುವ ಲಕ್ಷಣವಲ್ಲ. ಚಕ್ರ 

ವರ್ತಿಗಳು ಬಂಕೆಯನಲ್ಲಿ ದೋಷವನ್ನಾರೋಪಿಸಬಾರದು. ಹಗೆಯ 

ಹೆಮ್ಮೆಯ ಹೊದರನ್ನು ನಿಶ್ಶೇಷವಾಗಿ ಸವರಿ 'ಅನ್ಯಥಾ ಶರಣಂ ನಾಸ್ತಿ' 

ಎಂದು ಮರೆಹೊಕ್ಕ ಅತನನ್ನು ಸೆಳೆದುಕೊಂಡು ಸನ್ನಿಧಾನಕ್ಕೆ, ಹಿಂದಿರುಗು 

ವಂತಾದರೆ ಹಿಂದಿರುಗುತ್ತೇನೆ. ಕರ್ಮವಿಪಾಕದಿಂದಾಗಿ ವಿರೋಧಿಗಳಿಂದ 

ಸೋಲವಾದರೆ ಸಂಸಾರವನ್ನುಳಿದು ಸನ್ಯಾಸಿಯಾಗಿ ತಲೆಮರೆಸುವೆನು; 

ಅಥವಾ ಏಕಾಕಿಯಾಗಿ ಪ್ರತಾಪಾಂತರ್ಜ್ಯೋತಿಯಲ್ಲಿ ನಂದುವೆನು. ಹಗೆಯ 

ಗೆಲವಿನಲ್ಲಿ ಸಂದೇಹಿಸಿ ಬಿಂಕೆಯನು ಹೀಗಾಡಿದನೆಂದು ಭಾವಿಸಬಾರದು. 

ಆ ವಿಷಯದಲ್ಲಿ ಸಂದೇಹವಿಲ್ಲ. ಆದರೆ ದೈವದುರ್ವಿಪಾಕದಿಂದ ಹುಲ್ಲು 

ಹೆಣೆದು ಆನೆಯನ್ನು ಬಂಧಿಸುವ ಹಗ್ಗವಾಗಬಹುದು. ಎಡೆಬಿಡದೆ ತೊಡ 

ಕುವ ದೊರೆಗಳ ಸಂದೇಹಪಾಶ ಮನವನ್ನು ಮೈಯನ್ನು ಕಟ್ಟಬಹುದು. 

ಈ ಮಾತೆಂದರೆ ಕೈವರ್ತಿಸುವ ಪತ್ರದ ಟಿಪ್ಪಣಿ ಎಂದು ನಿವೇದಿಸಿರಿ.' 



೮೪---------------------------------------------------------------------- 



ಎಂದನು. ಪತ್ರವನ್ನು ತಾನೇ ಬರೆದು ಮಹಾನೀರಾಚಾರ್ಯನ ಕೈಯ 

ಲಿತ್ತನು. ಬಂಕೆಯನ ಮುಖಮಂಡಲವು ಪ್ರತಾಪ ಜ್ಯೋತಿಯ ಗೋಳವಾಗಿತ್ತು. 

ಮರುಮಾತು ಯಾರ ಬಾಯಿಂದ ಹೊರಟೀತು? ಆತನ ಅನುಭಾವವನ್ನೀಕ್ಷಿಸಿ  

ಆಚಾರ್ಯನ ಪ್ರಕೃತಿ ಸಹಜವಾದ ವಿಲಾಸಭಾವನೆ ಆರಿಹೋಗಿತ್ತು. ಒಂದಿಷ್ಟು 

ಕಳೆದ ಮೇಲೆ ಎಲ್ಲರೂ ಶಯ್ಯಾಸಕ್ತರಾದರು. 

============


ಅಭಿಯೋಗವೂ ಪ್ರತಿಜ್ಞಾ ಪೂರ್ತಿಯೂ 



ಬಂಕೆಯನ ಹುರುಪಿನಂತೆ ಮರುದಿವಸದ ಹೊತ್ತು ಮೂಡಿತು. 

ಮಹಾವೀರಾಚಾರ್ಯನು ಆಗಲೆ ರಾಜಧಾನಿಯತ್ತ ಹಿಂದಿರುಗಿದ್ದನು. 

ಬಂಕೆಯನ ವೀರಾವೇಶದೊಡನೆ ಚತುರಂಗ ಸೇನೆ ಕೇದಲ ದುರ್ಗದತ್ತ 

ಸಾಗಿತು. ಕಂಚನಾದಿಗಳು ದೊರೆಯ ಮೈಗೆ ಕೈಯಾಗಿ, ಕಣ್ಣಿಗೆ ರೆಪ್ಪೆ 

ಯಾಗಿದ್ದರು. ಪಡೆಯ ನಟ್ಟನಡುವೆ, ವೀರರಸ ಮೈದುಂಬಿ ಹರಿವ ಬಂಕೆಯ 

ದೊರೆ, ಸರಿದೂಕದ ಆ ಕಂಚನಾದಿಗಳೊಡನೆ ಸಾಗುತ್ತಿದ್ದು. ಮೇಲಿಂದ 

ಮೇಲಿನ ನೋಟಕ್ಕೆ ಹೊಲಬಾದ ಒಡ್ಡಾರದ ಕುರುಹಿನ ಕವಲರಿಯದ 

ಆಳಂಗದ ಬೇರ್ಪಡಿಸಲಾಗದ ಭಾವಾನುಭಾವಗಳ ದಳನಾಯಕರು ದಾಂಡಿ 

ಗರು ಮಲ್ಲಾಳುಗಳು ಹರಿಯುತ್ತಿದ್ದರು. ಪಡೆ ಕಾವೇರಿಯ ದಡವನ್ನೊಂದಿತು. 

ಬಲುಮಟ್ಟಿಗೆ ಸಾಗಿಹೋದ ಶರತ್ಕ ಲದೊಡನೆ ಹೊಳೆ ಕಾಲುವೆಯಾಗಿತ್ತು. 

ಆದರೂ, ದುರ್ಗದ ಸುತ್ತಣ ಕೃತ್ರಿಮಕಂದಕ ಸೇನೆಗೆ ಸುಗಮವಾಗಿರಲಿಲ್ಲ. 

ಆದರೇನು? ಹಿಂದಿನ ಸಂಜೆಯಲ್ಲೇ ಕಾರ್ಯಾಂತರಕ್ಕೆಂದು ಬಡಗಣ 

ದಡಕ್ಕೈದಿದ ಹಲಮಂದಿ ಅಂಬಿಗರು ರಾತ್ರಿಯಲ್ಲಿಯೂ ಅಲ್ಲೇ ತಡೆದಿದ್ದರು. 

ಹಾಗೆ ತಡೆಯಲು ಒಳಗೆ ನೆಲಸಿದ ಕೆಲಮಂದಿ ಪ್ರಬಲ ಕಂಟಕವ್ಯಕ್ತಿಗಳ 

ಕೈಯಾಟವೇ ಕಾರಣವೆಂದು ಗೊತ್ತಾಗುವಲ್ಲಿ ವಿರೋಧಿಸೇನೆ ತೆಪ್ಪ ದೋಣಿ 

ಗಳನ್ನೊಂದಿ ಹೊಳೆಯ ಮಧ್ಯದಲ್ಲಾಗಿದ್ದರು. 


ತನ್ನೆಣಿಕೆಗೆ ಬದಲಾಗಿ ಅಘಟತಘಟನೆಯದು ಸಂಭವಿಸಿದ ಸುದ್ದಿ 

ಅಷ್ಟರಲ್ಲೇ ಗಂಗರಾಜನಿಗೆ ಗೊತ್ತಾಗಿತ್ತು. ಬಂಕೆಯನ ಸೇನೆ ಗಂಗ 

ವಾಡಿಗೆ ದಾಳಿಯಿಟ್ಟ ಸಂಗತಿ ಗೊತ್ತಾಗುವ ವರೆಗೆ ಯುವರಾಜ ಕೃಷ್ಣನಲ್ಲಿ 

ವಿನಯದಲ್ಲೇ ಇದ್ದ ರಾಜಮಲ್ಲನ ವರ್ತನೆ ಇಷ್ಟಷ್ಟು ಬಿಗು- ಹಾಗಿ  

ಬಲಿಯುತ್ತಿದ್ದುದು ಅವನಿಗೆ ಗೊತ್ತಾಗದಿರಲಿಲ್ಲ. ಕುಮಾರ- ಬೂತುಗನು 



೮೫----------------------------------------------------------------------- 



ಯುವರಾಜನ ಅಂಗರಕ್ಷಣೆಯಲ್ಲಿ ಬಲು ಜಾಗೃತನಾಗಿದ್ದರೂ ಬಂಕೆಯನ 

ಸೇನೆ ದುರ್ಗದಿಂದಿತ್ತ ಕಾಲಿಡುವ ವರೆಗೆ ತಂದೆಗೆ ಬಹಿರಂಗವಾಗಿ ಕ್ಲೆಯೆತ್ತ 

ಲಿಲ್ಲ. ಆದರೂ, ಅವನ ಕಡೆಯ ಬಲು ಮಂದಿ ಪಟುಭಟರು ಅದನ್ನೆಲ್ಲ 

ಅರಿತಿದ್ದರು; ತಮ್ಮ ಯುವರಾಜನ ಅಪ್ಪಣೆಯನ್ನು ಪ್ರತೀಕ್ಷಿಸುತ್ತಿದ್ದರು. 

ಆದರೆ, ಆ ಹಿಂದಿನರಾತ್ರಿ ಕಳೆದು ಎಚ್ಚರವಾಗಿ ತಮ್ಮೊಡೆಯರ ಸನ್ನಿಧಿ 

ಗೈದುವಲ್ಲಿ ಬಾಗಿಲು ಬಲಿದಿತ್ತು. ಸುತ್ತುಮುತ್ತು ವಿಚಾರಿಸಿದರೂ ಹೊಲ 

ಬಾಗಲಿಲ್ಲ ತಮ್ಮವರಾಗಿ ಅವರೊಡನಿದ್ದ ಕಲಮಂದಿ ಅಂಗರಕ್ಷಕರೆಂಬವರೂ 

ಅಲ್ಲಿರಲಿಲ್ಲ. ದಿಗ್ಭ್ರಮೆ ಬಂಧಿಸಿತವರನ್ನು. ಹೆಚ್ಚಾಗಿ ನಾಯಕರ 

ಹಜ್ಜೆಯಲ್ಲಿ ಹಜ್ಜೆಯಿಟ್ಟೇ ನಡೆದ ಈ ಅನುಯಾಯಿಗಳೆಂಬವರಿಗೆ ಪ್ರತ್ಯುತ್ಪನ್ನ

ಮತಿತ್ತ್ವದ ಬಳಕೆಯೇ ಇರುವುದಿಲ್ಲ. ಕಂಗಾಣದಾದರವರು. ಮತ್ತೇನು? 

ಕುರುಡು ಪರಡುವುದು, ತಡವರಿಸಿ ಬೀಳುವುದು. ಅಂಥಾ ಸಂದರ್ಭದಲ್ಲೇ 

'ಆಳು ಹೊಕ್ಕಲ್ಲಿ ಹಾಳು' ಎನ್ನುವುದು. ಆದರೆ, ಗುಪ್ತ ವೇಷಧಾರಿಗಳಾದ 

ಯುವರಾಜ ಕೃಷ್ಣನ ಅನುಯಾಯಿಗಳೂ ಕೆಲವರು ಅವರೊಡನಿದ್ದರು. 

“ಬಂಕೆಯರಸರ ಸೇನೆ ಬಂದು ಈ ದಡವನ್ನೊಂದಿದೆಯಂತೆ; ಜನವರ್ಗ 

ವೆಲ್ಲ ಗಜಬಜಿಸುತ್ತಿದೆ. ಅದು ಮೇಲೇರುವಲ್ಲಿ 'ಸೆರೆನೋಡಿ ಉಳಿ 

ಹೊಡೆಯಲಾರಂಭಿಸಬೇಕು" ಎಂದು ಭಾವಿಸಿ ಕೋಟಿಯೊಳಗಿನಿಂದಲೇ 

ಪ್ರತೀಕ್ಷಿಸುತ್ತಿದ್ದರು. 


ಅಷ್ಟರಲ್ಲಿ ಗಂಗವಾಡಿಯಲ್ಲಿ ಹೆಸರುಗೊಂಡ ಸುಸಜ್ಜಿತವಾದ ಪಡೆ 

ಯೊಂದು ಕಂದಕದ ಬಳಿಗಿಳಿಯಿತು. ಅವರ ಕರಾಳಾಕೃತಿಯನ್ನು ಕಂಡು, 

ಗುಡುಗನ್ನು ಗಿಳಂಕರಿಸುವ ಗರ್ಜನೆಯನ್ನು ಕೇಳಿ, ಮುಖದಲ್ಲಿ ಮಿಂಚಿ 

ಮಂಡಲಿಸಿ ಮಡಲಿಕ್ಕುವ ಅನುಭಾವಗಳನ್ನು ಬಗೆದು ಬಳಲಿ ಬೆಂಡಾಗದವ 

ರಾರು? ಬೂದಿಯೊಳಗಿನ ಕೆಂಡವಾದರೂ ಅಲ್ಲಿಯೇ ಅದು ಚುಯ್ಯನೆ ನಂದಿ 

ಮಸಿ ಗಟ್ಟಿಯಾಗಬಹುದು. ಗಂಗವಾಡಿಯ ಪ್ರಕೃತದ ಅರಸನು ತನಗೆ 

ದೈವಾಯತ್ತವಾಗಿ ಒದಗಿದ ಮಾಂಡಲಿಕಾವಸ್ಥೆಯನ್ನಲಕ್ಷಿಸಿ ಅಂತಶ್ಶತ್ರು  

ಗಳಿಗೊಳಗಾಗಿ ಧಾರ್ಮಿಕ ರಾಜನೀತಿಯನ್ನು ಕದಡಿ ಕಲಕಿಸುವ 

ವೈಯಕ್ತಿಕ-ವರ್ತನೆಯನ್ನು ಹಿಂದೆ ಬೇಸರಿಸಿ ಬಣ್ಣಿಸಿದುದಲ್ಲದೆ ಆತನ 

ಮೂಲಬಲದ ವೀರತೆಯನ್ನಲ್ಲ. ಆ ರಾಜಕುಲವೆಂದರೆ ಹಿಂದೊಮ್ಮೆ 

ದಕ್ಷಿಣದೇಶಕ್ಕೆಲ್ಲ ಶಿಖಾರತ್ನವೆನ್ನಿಸಿ ರಾರಾಜಸುತಿದ್ದುದಲ್ಲವೆ? ಅವಿನೀತ- 

ದುರ್ವಿನೀತರೆಂದು ಆ ಕುಲದಲ್ಲಿ ಕೀರ್ತಿಗೊಂಡ ತಂದೆಮಕ್ಕಳಾದ ಅರಸರು 

ವಿರೋಧಿಗಳ ಕುಹಕನೀತಿಗೆ ಕುಗ್ಗದೆ ಬಗ್ಗದೆ ತಲೆಯೆತ್ತಿ ಆಯಾ ಹೆಸರು 



೮೬---------------------------------------------------------------- 



ಗಳನ್ನೊಂದಿದವರು. ಅವರು ನಿಯಮಿಸಿದ ನೀತಿಶಾಸ್ತ್ರದ ಅಚ್ಚಿನಲ್ಲೇ 

ಪರಂಪರೆವಿಡಿದು ಪಳಗಿ ಬೆಳಗುತ್ತಾ ಬಂದ ಮೂಲಬಲವದು, ಆದರೇನು? 

ರಾಷ್ಟ್ರಕೂಟಾಧಿಷ್ಠಿತವಾದ ವೀರ ಬಂಕೆಯನ ಸೇನೆ ಗಂಗವಾಡಿಯದಕ್ಕೆ 

ಕಡಮೆಯೆ? ಅದು ಸಾಣೆಗೊಂಡು ಒರೆಯೊಳಗೇ ಹುದುಗಿ ವಿಶ್ರಮಿಸಿ 

ಕೊಂಡಿದ್ದ ಖಡ್ ದಂತಾದರೆ ಇದಕ್ಕೆ ವಿಶ್ರಾಂತಿ ಎಂಬುದಿಲ್ಲವೇ ಇಲ್ಲ; 

ಹೋರಾಟದ ಪಳಕವೆಂದರೆ ಇದರ ಒಳಹೊರಗೆ  ಸೂಸುವ ಸುಯ್ಲಿನಂತೆ, 

ಬಂಕೆಯನ ನಾಯಕತನವನ್ನು ಹೋಲಿಸಲಿಕ್ಕೆ ಹದಗೊಂಡ  ಪದವಿಲ್ಲ, 

ಪದಾರ್ಥವಿಲ್ಲ. ಅಂತೂ ಉಭಯಸೇನೆ ಸಮ್ಮುಖದಲ್ಲಾ ಯಿತು. 


ದಾಟುತ್ತಿರುವ ಪಡೆಯನ್ನು ಅಲ್ಲಿಂದಲ್ಲಿಗೇ, ಈ ಲೋಕದ ಗಡಿ 

ಯಿಂದತ್ತ ದಾಟಸಬೇಕೆಂಬುದೇ ಗಂಗವಾಡಿಯವರ ಪ್ರಥಮೋದ್ದೇಶ. 

ಅವರ ಮನಗಣ್ಣುಗಳು ಆ ಕಾರ್ಯದಲ್ಲೇ ಹೆಣೆದುಕೊಂಡಿದ್ದುವು. ಕಲ್ಲು 

ಗುಂಡುಗಳ-ತಾಳುಗೊಂಬೆಗಳ-ಗದಾಮುದ್ಗರಗಳ ಬೀಸಾಟಕ್ಕೆ ತುತ್ತಾ ದ 

ಹಲವು ತೆಪ್ಪುಗಳು ನಡುನೀರಿನಲ್ಲಿ ಸಂದಳಿದು ಕದಲಿದುವು; ಕೆಲದೋಣಿಗಳು 

ಒಡೆದು ಮುಳುಗಿದವು. ಅವುಗಳೊಳಗಿನ ಮಂದಿಗಳೇನಾದರೆಂದು ಹೇಳ 

ಬೇಕೆ? 'ಚೀರಾಡಿ ತೇಲಾಡಿ ಜೀವನ ಸಂಗ್ರಾಮದಲ್ಲಿ ಹೋರಾಡುತ್ತ ಆ 

ವಿರೋಧಿ ಸೈನಿಕರ ಅಟ್ಟಹಾಸದ ಪರಿಹಾಸ್ಯಕ್ಕೆ ಬಲಿಯಾಗುತ್ತಿದ್ದರು. ಅವರು 

ತೆಂಕಣ ತೀರದತ್ತ ಸಾಗದೆ ಭಯದಿಂದಲೋ ಎಂಬಂತೆ ಈಸಾಟದಲ್ಲೆ 

ಹೊತ್ತುಗಳೆವಂತಿದ್ದುದನ್ನೀಕ್ಷಿಸಿದ ಸೈನಿಕರು, ನಗುತ್ತ “ಹೇಗೆ ಗಂಗವಾಡಿಯ 

ದಾಳಿಯ ಸವಿ-ಗೊತ್ತಾಯಿತೆ?” ಎಂದು ವಕ್ರೋಕ್ತಿಯನ್ನೆಸೆಯುತ್ತಿದ್ದರು. 

ಅದೆಲ್ಲವನ್ನೂ ದುರ್ಗದ ಅಟ್ಟಾಲಕದೊಳಗೇರಿ ನೋಡುತ್ತಿದ್ದ ಗಂಗರಾಜನಿಗೆ 

ರೆಪ್ಪೆಯಲುಗಾಟವೆಂಬುದು ಎಷ್ಟು ತೊಡಕೆನ್ನಿಸುತ್ತಿದ್ದುದೋ ಅವನಿಗೇ 

ಗೊತ್ತು. ಹೀಗೆ ಐದು-ಹತ್ತು ನಿಮಿಷಗಳು ಕಳೆದಿಲ್ಲ; ಅಷ್ಟರೊಳಗೆ 

ಕೋಟಿಯ ಅಕ್ಕಪಕ್ಕಗಳಿಂದ ಬಂಕೆಯನ ಪಡೆಯ ಗುಡುಗಿನ ಗೂಡಾರದ 

ಆರ್ಭಟಗಳುಕ್ಕಿದುವು; ಒಡನೊಡನೆ ಸಿಡಿಲಿನ ಪಡಲಿಗೆ ಎನ್ನಿಸಿದ ಮುದ್ಗರ 

ಮುಸುಂಡಿ ಮಸಲಾದ್ಯಾಯುಧಗಳ ಮಳೆಯೂ ಹಗೆಗಳ ಮೇಲಕ್ಕುರುಳ 

ದುವು. ಮೊದಲು ಹೊಳೆ ದಾಟುವವರನ್ನು ಅಲಕ್ಷಿಸಿ ಕಲ್ಗುಂಡುಗಳಿಂದೆಸೆದು 

ಕೋಟಲೆಗೊಳಿಸುತ್ತಿದ್ದ ಗಂಗನ ಸೈನಿಕರು ಫಕ್ಕನೆ ದಿಙ್ಮೂಢರಾದರು. 

ಮೂಢತೆಯಿಂದ ಅತ್ತಿತ್ತ ನೋಡುವಲ್ಲಿ ಕಾರ್ಮೋಡದಂತೆ ಕವಿಯುತ್ತಿರುವ 

ಮಿತಿಮಾರಿದ ಅಪೂರ್ವ ಪಟುಭಟರನ್ನೀಕ್ಸಿಸಿ ಗಲಭೆಯಿಂಜೆಡೆ ಕುದಿಯ 



೮೭---------------------------------------------------------------------



ಲಾರಂಭಿಸಿತು. ಅಘಟಿತಘಟನೆ ಇದು ಹೇಗಾಯಿತು? 'ರೂಢಿರ್ಯೋಗಾ 

ಪ್ಪಲೀಯಸೀ' ಎಂದು ಬಲ್ಲವರಾಡುತ್ತಾರಲ್ಲ? ಅದೇ ಇದಕ್ಕುತ್ತರವು. 

ಇದಿರಿನ ದೋಣಿ ತೆಪ್ಪಗಳಲ್ಲಿ ಹೊಳೆದಾಟುತ್ತಿದ್ದವರೊಳಗೆಲ್ಲರೂ ವೇಷ 

ಭೂಷಣದ ಸೈನಿಕರಲ್ಲದೆ ನಿಜವಾದ ಸೈನಿಕರಲ್ಲ. ಗಂನವಾಡಿಯವರ ಮನೋ 

ಮಾರ್ಗವನ್ನು ಆ ಚದುರಂಗದಾಟದ ಸೇನೆಯತ್ತ ಸೆಳೆದು ತಡೆಗಟ್ಟ ನಿಲ್ಲಿಸಿದ 

ಬಂಕೆಯನು, ತನ್ನ ಸೇನೆಯನ್ನು ಬೇರೆ ಮೂರೂ ಕಡೆಗಳಲ್ಲಿ ನಿರ್ಬಾಧ 

ವಾಗಿ ದಾಟಸಿಬಿಟ್ಟದ್ದನು. ಇದರಿಂದ ಕಣ್ಣಿಗೆ ಬರುವ ಅಪಾಯ ಹುಬ 

ನ್ನೊರಸಿ ಹಾರಿಹೋದಂತಾಯಿತು. ಹಗೆಗಳ ಧೈರ್ಯಕ್ಕೆ ಅಪಧೈರ್ಯದ  

ಕೋಟೆಯನ್ನೇರಿಸಿದಂತೆಯೂ ಆಯಿತು. ಆದೀಗ ಬಂಕೆಯನ ವಿಜಯೋ 

ದಯದ ಲಕ್ಷಣವಾಗಿ ಬೀಸಿದ ತಂಗಾಳಿ. 


ಆದರೆ, ಹೀಗೆ ಜಲದುರ್ಗವನ್ನುತ್ತರಿಸುವಲ್ಲಿ ಬಂಕೆಯನಿಗೆ ಅತಿ 

ಗೂಢವಾಗಿ ಒಳಗಿನಿಂದಯಾರಾದರೂ ನೆರವಾಗಿದ್ದರೆ? ಎಂದು ಯಾರಾ 

ದರೂ ಪ್ರಶ್ನಿಸಿದಲ್ಲಿ “ಇದ್ದಿರಬೇಕು; ಆ ನೆರವೇ ನೂತನ ಯುವಕನ 

ಏಕಾಂತ ಸಂಭಾಷಣೆಯ ವರದಿಂದ ಬಂಕೆಯನ ಮೆದುಳಿಗೆ ಹರಿದುದಿರ 

ಬೇಕು” ಎಂದು ಉತ್ತರಿಸಬೇಕಾಗಿದೆ. ರಾಜಮಲ್ಲನ ಕಿವಿಗೆ, ಹಿಂದಣಿಂದ 

ಅಕೃಪಕ್ಕಗಳಿಂದ ಮೇಲೇರಿ ಬಾಂದಳಕ್ಕೆ ದುಂದುಮಿಸುವ ಕೋಲಾಹಲ 

ನಾದ ಕೇಳಲಾರಂಭಿಸಿತು, “ಇದೇನು? ತನ್ನ ಮಗನೇ ಒಳಗಿದ್ದು 

ಹೊರಗೆ ಕಡಿದನೆ? ಬೂತುಗನು ಗಂಗಕುಲಕ್ಕೇ ಬೂತುಗನಾದನೇ? " 

ಎಂಬ ಭಯಾವೃತ ಸಂಶಯವು ಆತನನ್ನು ಪೀಡಿಸಿತು. **ಮೊದಲಿನೆಣಿಕೆ 

ಯಂತೆ ಕಣ್ಣು ಮುಚ್ಚಿ ಅವರಿಬ್ಬರನ್ನೂ 'ಹಾಗೆ ಮಾಡಿಯೇ ಮುಂದಿನದಕ್ಕೆ 

ಶ್ರೀಕಾರನನ್ನೆತ್ತಬೇಕಾಗಿದ್ದಿತು" ಎಂದು ಭಾವಿಸುವಲ್ಲಿ ಹಿಂದಣ ಕೋಟೆಯ 

ಮೇಲೆ ಶತ್ರುಭಟರು ತಲೆಯೆತ್ತಲಾರಂಭಿಸಿದ್ದರು. ಅಷ್ಟರಲ್ಲಿ ಮುಂದೆ 

ಮೈಯೊಡ್ಡಿನಿಂದ ಪಡೆಯೆಲ್ಲ ಹಿಂದಕ್ಕೆ ಧಾವಿಸಿತು. ವೀರಬಂಕೆಯನು 

ಅದನ್ನು ಕಂಡೊಡನೆ ತನ್ನವರಿಗೆ ಕೈವಾರಿಸಿದನು. ಗಂಗವಾಡಿಯವರು 

ಹಗೆಗಳ ಆಕ್ರಮಕ್ರಮವನ್ನು ಸೈರಿಸಲಾರದಾದರು; ಜೀವದ ಹಂಗನ್ನು 

ಹರಿದು ಹೋರಾಡಿದರು. 


ಗಂಗವಾಡಿಯಲ್ಲಿ ತಲೆಯೆತ್ತಿದ ಕೇದಲದುರ್ಗವೆಂದರೆ ನಿನ್ನೆ ಮೊನ್ನೆ 

ಯದಲ್ಲ; ಪುರಾತನ ಕಾಲದ ಅತಿ ಭದ್ರವಾದ ಕೋಟೆ.. ಹೊರಗಿನಿಂದ 

ಮೇಲೇರುವುದು ಅಥವಾ ಅದನ್ನು ಮುರಿದುಬಿಡುವುದು ಎಂದರೇನು? 



೮೮ --------------------------------------------------------------------



ಕನಸಿನ ಚಕ್ಕುಲಿಯನ್ನು ಮುರಿದು ಬಿಡುವುದೆ? ಕೋಟೆಯೊಳಗಿನ ಕೊತ್ತಳ 

ಗಳಿಂದ ಅಟ್ಟಳಿಗೆಯ ಗಂಡಿಗಳಿಂದ,ಬಗೆಬಗೆಯ ಆ ಯುಧೆಗಳು ಗುರಿಗೊಂಡು 

ಜಡಿಮಳೆಯಾಗಿ ಸುರಿಯುತ್ತಿದ್ದುವು. ಒಳಗೆ ನೆಲೆಗೊಂಡ ಸೈನಿಕರಿಗೆ 

ಏರುವವರು ಕಣ್ಣಿಗೆ ಕಟ್ಟಿದಂತಾದರೆ, ಏರುವವರಿಗೆ ಒಳಗಿನ ದೃಶ್ಯ ವೆಂಬುದು 

ಕಣ್ಣನ್ನೇ ಕಟ್ಟಿದೆ. ಅದರಿಂದ ಹೊರಗಿನವರು ಮೈಯೊಡ್ಡಬೇಕಾದ 

ಕೋಟಲೆ ಎಂಥದೆಂಬುದನ್ನು ಭಾವಿಸಿರಿ. ಆದರೂ ಬನವಾಸಿಯವರು 

ಎದೆಗೆಟ್ಟು ಗುರಿದಪ್ಪಲಿಲ್ಲ. ಎಂಥ ಪಟುಭಟರಾಗಿದ್ದರೂ ಏನು? ತಲೆಮರಸಿ 

ಒಳಗಡಗಿ ಹೊರಗಿನವರ ಮೇಲೆ ಕೈಮಾಡುವವರಲ್ಲವೆ ಅವರು? ಅಂಥವ 

ರನ್ನು ಹದಕ್ಕಿಳಿಸುವಲ್ಲಿ ಸಂಶಯವಿದ್ದರೆ ತಮ್ಮ ನಾಡನ್ನುಳಿದು ಬರುವವರೆ 

ಬನವಾಸಿಯ ವೀರರು? ಕೆಲಮಂದಿ ಜಗಜಟ್ಟಿಗಳು ದುರ್ಗದ ಮೇಲೆ 

*ಮಿಳಿಯುಡುಗಳನ್ನು ಸುಯ್ಯೆಂದು ಬಿಸುಟಿರು. ಉಡುಗಳವು ಕೋಟೆಯ 

ತೆನೆಗಳನ್ನು ಕಚ್ಚಿದುವು. ಅಚ್ಚೊತ್ತಿ ನೆಲೆಗೊಂಡುವು. ಉಡುಗಳ 

ಕಚ್ಚೆಂದರೆ ಮಂಗ-ಮುಷ್ಟಿಗಿಂತ ಮಿಗಿಲು. ಹೆಣದ ಹಿಡಿತವನ್ನು ಬಿಡಿಸಿ 

ದರೂ ಅದನ್ನು ಸಡಿಲಿಸಲಸಾಧ್ಯ. ಆಮೇಲೆ ಹಿಂದಣ ಮಿಳಿಗಳನ್ನು 

ಮೈಗೆ ಬಲಿದು ಬಿಗಿಬಿಡಿದು ಸಶಸ್ತ್ರರಾಗಿ ಸರ್ರನೆ ಲಗ್ಗೆ ಯೇರಿದರು. ಮತ್ತೆ 

ಕೆಲವರು ಏಣಿ- ಡೆಂಕಣಿ-ಹಂತಗಳಿಂದಡರಿ ಮೇಲಾದರು. ಮತ್ತೇನು? 

ಕೋಟೆಯ ಕಂಡಿಗಳಲ್ಲಿ ಕೋಲು-ಕೋವಿಗಳನ್ನು ತುರುಕಿಹೊಡೆದರು. 

ಕೆಲವರು ಗುದ್ದಲಿ-ಗದಾ-ಪರಶು-ಮುದ್ದರಗಳಿಂದ, ಇದ್ದ ಬಾಗಿಲುಗಳನ್ನು 

ಮುರಿದರು, ಇಲ್ಲದ ಬಾಗಿಲುಗಳನ್ನು ತೆರೆದರು. ಅಷ್ಟಾದೊಡನೆ, 'ಹರಿದ 

ಅಂಗಿಗೆ ಹಾಕಿದುದೇ ಕೈ' ಎಂಬಂತಾಯಿತು ಹೊರಗಿನ ಪಡೆ ಕೋಟೆಯೊಳಗೆ 

ಎತ್ತೆತ್ತಲೂ ನುಗ್ಗಿ ತು. 


ಬನವಾಸಿಗೆ ಎರಡನೆಯ ಜಯವಿದು. ಆದರೂ ಗಂಗವಾಡಿಯ 

ವೀರರು ಹಿಂಜರಿಯಲಿಲ್ಲ. ಇಕ್ಕಡೆಯ ಮಹಾಮಲ್ಲರು ಹೊಯ್ಕೈಗೆ ಅಕ್ಷತೆ 

ಗೊಟ್ಟರು. ಹಣಾಕಣಿ- ಮಲ್ಲಾ ಮಲ್ಲಿ-ಕೇಶಾಕೇಶಿಗಳೇ ಮೊದಲಾದ  

ಹಿಂದಿನ ಕಾಲದ ಹೋರಾಟಕ್ಕೆ ಕಳೆಏರುತಿ ತ್ತಿತ್ತು. ಎಲುಬು ಹಣ್ಣಾಗುವ 

ಗುದ್ದು, ಕರುಳು ಸಡಿಲಾಗುವ ಜಡಿತ, ತೊರಳೆ ಸುರಿಯುತ್ತಿರುವ ಹೊಡೆತ 

ಗಳ ತಾಳ, ಲಯಗೂಡಿತು. ಇಂಥ ಅಪ್ರತಿಮ ಸಾಹಸದ ದೀವಟಿಗೆ 

................

*ಮಿಳಿಯುಡು = “ಮಿಳಿ" ಎಂದರೆ ಹದಗೊಂಡ ಚರ್ಮದ ಹಗ್ಗ. ಆ ಹಗ್ಗದ 

ತುದಿಯಲ್ಲಿ ಕಟ್ಟುವ ಒಂದು ಓತಿಯಂಥ ಪ್ರಾಣಿಗೆ 'ಉಡು' ಎಂಬ ಹೆಸರು. 



೮೯-------------------------------------------------------------------



ಯನ್ನೆತ್ತಿ ಹಿಡಿದ ಜಗಜಟ್ಟಿಗಳಿಗೆ ಸೋಲ ಗೆಲವುಗಳ ಗುರಿ ಇದೆಯೇ? ಇಲ್ಲ. 

ಕಾಲ್ಮುರಿದು ಹೊರಳುವವನ ಕೆ, ತೋಳುದಕ್ಕೂ ಸುತ್ತಿ ಸುರುಳಿದ ಹೆಗೆಯ 

ಮೆದುಳಿನ ನೆತ್ತಿಯನ್ನೆತ್ತುತ್ತಿತ್ತು. ಕೈಯುಡಿದ ಕಾಲು ವಿರೋಧಿಯು 

ತೊಡೆಯನ್ನೌಕಿ ಬಂಧಿಸಿದ ಸಂಕಲೆ ಎನ್ನಿಸಿತ್ತು. ತಲೆಕಳಚಿದ ಮುಂಡವದು 

ವೈರಿಗೆ ಕೇತುಗ್ರಹಣವನ್ನೆಸಗಿತ್ತು. ಕೆಳಗೆ ಧರ್ರನೆ ಹರಿಯುತ್ತಿದ್ದ ರಕ್ಷಧಾರೆ, 

'ಸತ್ತರೆ ಕೆಳಗೆ' ಎಂಬ ಗಂಗವಾಡಿಯ ವೀರರ ಗುರಿಯನ್ನು ಲೋಕಕ್ಕೆ 

ಸಾರಿಹೇಳುವುದೋ ಎಂಬಂತೆ ತೋರಿತು. ಹಾಗೆ ಗುರಿದಪ್ಪಿ ಹೋರಾಡುವ 

ತನ್ನವರ ವೀರತೆಯನ್ನು ಕೋಟಿಯ ಮೇಲೆ ನಿಂತು ನೋಡುತ್ತಿ ದ್ದ ರಾಜ 

ಮಲ್ಲನು ಕಂಡನು. ಅಂಥ ಕಟ್ಟಿದ ಹುಂಜಗಳಿಗೆ ಜಯಾಪಜಯಗಳ 

ಗೊಡವೆ ಇಲ್ಲವಾದರೂ. ಕಟ್ಟುವ ಹುಂಬನಿಗಿದೆಯಲ್ಲವೆ? ಆಗ ಕೆಳಗಡೆಯ 

ರಂಗದಲ್ಲಿ ರಾರಾಜಿಸುತ್ತಿ ದ್ದ ಬಂಕೆಯನನ್ನು ಹಿಂಬಾಲಿಸಿದ್ದ ತನ್ನ ಕುಮಾರ 

ಬೂತುಗನೂ, ಯುವರಾಜ ಕೃಷ್ಣನೂ ಆತನ ಕಣ್ಣಿಗೆ ಬಿದ್ದರು. ಮತ್ತಿನ 

ವನ ಮಾತು ಹಾಗಿರಲ್ಲಿ, ಮೊದಲಿನವನನ್ನು ಕಂಡೊಡನೆ ಮುದುಕನ ಕಣ್ಣೇ 

ಕುರುಡಾಯಿತು. ಅದೇನು ಮೂರ್ಛಾಪರಿಣಾಮವೋ, ಜೀವನ ನಿರಾಶಾ 

ಪ್ರಸಂಗವೋ ಗೊತ್ತಿಲ್ಲ, ಕೋಟೆಯಿಂದ ಕೆಳಗೆ ಧಡಮ್ಮನೆ ಬಿದ್ದು ಬಿಟ್ಟನು. 

ನಮ್ಮ ಕಂಚಣ- ಮಂಜಣರು ಆ ಸಂದರ್ಭವನ್ನೇ ಹೇಗೆ ಪ್ರತಿಕ್ಷಿಸು 

ತ್ತಿದ್ದರೋ ತಿಳಿಯದು. ಬೀಳುತ್ತಿರುವ ರಾಯಮಲ್ಲನ ಮೈ ನೆಲಕ್ಕಪ್ಪಳಿ 

ಸುವ ಮೊದಲೆ--ಹಳೆಗೋಣಿಯೊಂದನ್ನು ಹೇಗೋ ಹಾಗೆ--ಅವರ ಎತ್ತಿದ 

ಕೈಗಳಲ್ಲಾಗಿತ್ತು. ಬೂತುಗ-ಬಂಕೆಯರು ಫಕ್ಕನೆ ಆ ಕಡೆಗೆ ಧಾವಿಸಿದರು. 

'ಅಂತರಂಗಿಕ ಕ್ಷೋಭದಿಂದಾಗಿ ಮೈಮರೆತು ಮೂರ್ಛೆವಡೆದಿದ್ದರೂ ಅಪಾ 

ಯವೇನೂ ಇಲ್ಲ' ಎಂದು ನಿರ್ಧಾರವಾಯಿತು. ತಮ್ಮ ದೊರೆ ವಿರೋಧಿ 

ವಶನಾದುದನ್ನೂ ಕುಮಾರ ಬೂತುಗನು ಬಂಕೆಯನ ಅನುಯಾಯಿ  

ಎಂಬುದನ್ನೂ ಪತ್ಯಕ್ಷವಾಗಿ ಕಂಡ ಅಳಿದುಳಿದ ಗಂಗವಾಡಿ ಸೈನಿಕರೆದೆಯು 

ಸುಡುನೀರಿಗೆ ತಣ್ಣೀರನ್ನು ಬೆರಸಿದಂತಾಯಿತು. 


ಮೆಲ್ಲನೆ ಗಂಗವಾಡಿಯ ಸೈನಿಕರಿದೆ ಹದಕ್ಕಿಳಿಯುತ್ತಿರುವುದನ್ನು 

ಬಂಕೆಯನೂ ಯುವರಾಜ ಕೃಷ್ಣನೂ ಪರಾಂಬರಿಸುತ್ತಿದ್ದರು. ಕೂಡಲೆ 

ಚಕ್ರವರ್ತಿಗಳ ಉದಾರತೆಯಿಂದೊಡಗೂಡಿದ ಸಂದೇಶದೊಡನೆ "ಮುಂದೆ 

ನಿಮ್ಮ ಯುವರಾಜ ಬೂತುಗನೇ ಗಂಗವಾಡಿಯ ಸಾಮಂತ ಚೂಡಾಮಣಿ 

ಯಾಗುವನು; ಎಲ್ಲರೂ ಶಸ್ತ್ರವನ್ನಿಳುಹಿ ಶಾಂತರಾಗತಕ್ಕುದ್ದು ಅದರಿಂದ 



೯೦---------------------------------------------------------------------- 



ಗಂಗವಾಡಿಯ ಕ್ಷೋಭ ನಿವೃತ್ತವಾಗುವುದಲ್ಲದೆ ದೈವಾಯತ್ತವಾಗಿ 

ಕೋಟೆಯಿಂದುರುಳಿ ಅವಗಡಕ್ಕೊಳಗಾದ ನಿಮ್ಮ ದೊರೆಗಳನ್ನು ಔಷಧೋಷ 

ಚಾರಗಳಿಂದ ಎಚ್ಚರಗೊಳಿಸಲು ಸಾಧಕವಾಗುವುದು” ಎಂದು ಡಂಗುರ 

ವನ್ನು ಎತ್ತೆತ್ತಲೂ ಸಾರಿಸಿದರು. ಅದನ್ನಾಲಿಸಿದ-ಮಾತ್ರವಲ್ಲ ರಾಜಮಲ್ಲನ 

ಶೋಚನೀಯಾವಸ್ಥೆಯನ್ನು ಕಣ್ಣಾರೆ ಕಂಡ-ಸೈನಿಕರು ಮುಂದಾರಿಗಾಣದೆ 

ಶಸ್ತ್ರವನ್ನಿಳುಹಿದರು. ಎತ್ತೆತ್ತಲೂ ರಾಷ್ಟ್ರ ಕೂಟಿದ ಗರುಡಧ್ವಜವೇರಿತು. 

ಪಿತ್ತದಂತೇರಿದ ಅಂತಃಕ್ಷೋಭೆ ನೆತ್ತಿಯಿಂದಿಳಿಯಿತು. ಆದರೂ ರೋಗ 

ವಿಳಿದು ಪಥ್ಯಾವಸ್ಥೆಯನ್ನೊಣದಿದ ವ್ಯಕ್ತಿಯಂತಿದ್ದ ಗಂಗವಾಡಿ, ನಿಶ್ಭಾಯ 

ವಾಗಿದ್ದುದು. ಬೂತುಗನ ಮೋರೆಯಾದರೂ ಅದಕ್ಕೆ ಅಪವಾದವಾಗಿ 

ಇದ್ದಿಲ್ಲ. ತಂದೆ ಮಾಡಿದ ಮೂಲಕ್ಕೆ 'ಮಮ' ಎಂದು ಕೈಯೆತ್ತುವಾತನು, 

ಸಾಲಕ್ಕೆ 'ನಮಮ' ಎನ್ನಲಾಗುವುದೆ? ಅವನ ನೋವು-ಬೇವುಗಳನ್ನಾರಿಸಲು 

ಕೃಷ್ಣರಾಜ-ಬಂಕೆಯರು ಎಷ್ಟೆಷ್ಟೋ ಯತ್ನಿಸಿದರು. ಅಷ್ಟರಲ್ಲಿ ಅರಮನೆಯ 

ಪ್ರಧಾನ ವೈದ್ಯರ ಉಪಚಾರವೆಲ್ಲವೂ ಸಾಂಗವಾಗಿ ರಾಜಮಲ್ಲನ ಜೀವನ 

ಮೆಲ್ಲನೆ ಅತ್ತಣಿಂದಿತ್ತ ಮೊಗವಿಕ್ಕುವ ಲಕ್ಷಣ ಹೊಳೆಯಿತು. ಅದನ್ನು 

ಕಂಡೆ ಬೂತುಗನ ಕಣ್ಣಿಗೆ ಒಂದಿಷ್ಟು ನೀರು ಮುಟ್ಟಸಿದಂತಾಯಿತು. 


ಆ ಮೇಲೆ, ಬಂಕೆಯ ಕೃಷ್ಣರು, ಬೂತುಗೆ ಹೇಳಿಕೆಯಂತೆ ಗಂಗ 

ವಾಡಿಯ ಪ್ರಜಾವರ್ಗದ ಮತ್ತು ರಾಯಮನೆತನದ ತಾತ್ಕಾಲಿಕ ವ್ಯವಸ್ಥೆ 

ಗಳೆಲ್ಲ ಸರಿಯಾಗಿ ನಡೆವಂತೆ ಅಣಿಗೊಳಿಸಿದರು. ಬನವಾಸಿಯ ದಳ 

ವೊಂದನ್ನು ರಕ್ಷಣೆಗಾಗಿ, ರಾಯಭಾರಿ-ಗಂಪಣನನ್ನು ಚಕ್ರವರ್ತಿಗಳ 

ಮುಂದಿನ ಆದೇಶದ ವರೆಗೆ ರಾಜಪ್ರತಿನಿಧಿಯಾಗಿ, ನೇಮಿಸಿದರು. ತದ 

ನಂತರ ಎಲ್ಲರೂ ರಾಯಭಾರಿಯ ರಟ್ಟವಾಡದಲ್ಲಿ ಒಂದುಹೊತ್ತು ವಿಶ್ರಮಿಸಿ 

ಮಾನ್ಯಖೇಟಿದ ಪಯಣಕ್ಕನುವಾದರು. ತಂದೆಯನ್ನು ಆ ಅವಸ್ಥೆಯಲ್ಲೇ 

ಬಿಟ್ಟು ಹೋಗುವುದೆಂದರೆ ಬೂತುಗನಿಗೆ ಜೀವಕ್ಕೆ ಬಂದಂತಾಯಿತು. ಆದರೆ, 

ಯುವರಾಜ-ಕೃಷ್ಣ, ರಾಣಾಬಾಲಚಂದ್ರರು ಚಕ್ರವರ್ತಿಗಳಿಗೂ ತಿಳುಹುದೆ 

ತನ್ನನ್ನು ಹಿಂಬಾಲಿಸಿ ಬಂದು ತನ್ನ ಗಂಗವಾಡಿಯಲ್ಲಿ ಒಂದಷ್ಟು ತಮಗಲ್ಲ 

ದುದನ್ನೂ ಅನುಭವಿಸಿದುದು ಯಾರಿಗಾಗಿ? ಅವರ ಮೋರೆ- ಎದೆಗಳನ್ನು 

ನೋಡಿ 'ಭವಿತವ್ಯಂಭವ್ಯತೇವ' ಎಂದು ನಿರ್ಧರಿಸಿದ ಬೂತುಗನು ಹಿಂಬಾ  

ಲಿಸಲೇ ಬೇಕಾಯಿತು. 


ಆಗ ಬಂಕೆಯನು, ಯುವರಾಜ ಕೃಷ್ಣಾದಿ ಪ್ರಮುಖರ ಮುಖ 

ಪಙ್ತಿಯಲ್ಲಿ ಕಣ್ಣನ್ನು ಹರಡುತ್ತಾ:- ಸಂದರ್ಭಲ್ಲಿ ಮತ್ತೊಂದನ್ನಾಡಲೇ 


೯೧----------------------------------------------------------------------


ಬೇಕಾಗಿದೆ. ನಮ್ಮ ಬನವಸೆಯ ಅರಮನೆ ಎಂದರೆ ಮಾನ್ಯಖೇಟ ರಾಜ 

ಧಾನಿಯ ಒಂದು ಮೊಗವಾಡವಲ್ಲದೆ ಬೇರೆಯಲ್ಲ. ಅಲ್ಲಿಂದಲೇ ಈ 

ವಿಜಯ 

ಯಾತ್ರಾ ಶ್ರೀಬಳ್ಳಿ ಪ್ರಾರಂಭವಾಗಿದೆ. ಆದುದರಿಂದ ನೀವೆಲ್ಲರೂ ಸಮ್ಮತಿ 

ಯಿತ್ತು, ಆ ಶ್ರೀಬಳ್ಳಿಯನ್ನು ಅರಳಿಸಿ ಪರಿಮಳಿಸಿಕೊಂಡು ಅಲ್ಲಿಗಾಗಿಯೇ 

ದಯಮಾಡಿಸಬೇಕು. ಮಾತ್ರವಲ್ಲ, ನಾನು ಸಂಸಾರಡೊಡನೆ ಮಾನ್ಯಖೇಟ 

ಕ್ಕೈದಬೇಕೆಂದು ಮಹಾರಾಣಿಯವರ ಅಪ್ಪಣೆಯೂ ಆಗಿದೆ. ಅದರಿಂದ, 

ನಾವೆಲ್ಲರೂ ಬನವಸೆಗಾಗಿ ಹಿಂದೆರಳಬೇಕೆಂದು ಪ್ರಾರ್ಥಿಸುತ್ತೇನೆ” ಎಂದನು. 

ಎಲ್ಲರೂ ಅನುಮೋದಿಸಿದೊಡನೆ ಬಯ ಹಾಗೇ ಸಾಗಿತು. 

==============

ನಾಲ್ಕನೆಯ ಪರಿಚ್ಛೇದ

    ಹಿಂಬಯಣ 



ಒಂದರ ಮೇಲೆ ಇನ್ನೊಂದಾಗಿ ಕೆಲದಿನಗಳು ಮೂಡಿ ಮುಳುಗಿ 

ದುವು. ಗಂಗವಾಡಿಯಲ್ಲಿ ನಡೆದ ಘಟನೆಯನ್ನೂ, ಇಂಥ ವಿಶಿಷ್ಟದಿನ-- 

ಸಮಯದೊಳಗೆ ತಾವೆಲ್ಲರೂ ರಾಜಧಾನಿಯನ್ನೊಂದುವೆನೆಂಬುದನ್ನೂ, 

ಪತ್ರಮೂಲಕವಾಗಿ, ಬಂಕೆಯನು ಬನವಾಸಿಗೆ ಹೊರಡುವ ಮೊದಲೆ 

ಚಾರನೊಬ್ಬನೊಡನೆ ಕಳುಹಿದ್ದನು. ಅದರಿಂದ ಆ ಮೇರೆಯೊಳಗಿನವು 

ಕೆಲವೇ ದಿನಗಳಾದರೂ ಸ್ವಾತಂತ್ರ್ಯಸುಖಸಂಪತ್ತಿನವುಗಳಾಗಿದ್ದವು. ವಲ್ಲ 

ಭನ ನಿಜಯಾಗಮನವನ್ನು ಕಂಡ ಉಂಡ ಅರಗಿಸಿದ ವೀರಶ್ರೀದೇವಿಯ 

ಆನಂದಕ್ಕೆ ಸರಿ ಇಲ್ಲ; ದೊರೆ ಇಲ್ಲ. ರಾಣಾ ಬಾಲಚಂದ್ರ ನೆಂಬವನು ಅಲ್ಲಿಗೆ 

ಬಂದಮೇಲೂ ಹಿಂದಿನ ಪಾತ್ರವನ್ನೇ ಧರಿಸಿಕೊಂಡಕಲು ಬಂಕೆಯನ 

ರಾಜಧಾನಿ ಎಂದರೆ ಮೊದಲಿನ ರಂಗವೆ? ಮಾತ್ರವಲ್ಲ; ಯುವರಾಜ ಕೃಷ್ಣನೇ 

ಮೊದಲಾದ ಚಕ್ರವರ್ತಿಕುಮಾರಕರು-ವಿಶೇಷವಾಗಿ ಕುಮಾರಿಕೆಯರೆಂದರೆ 

ವೀರಶ್ರೀದೇವಿಗೆ ಎರಡುಮೂರನೆಯ ಜೀವಗಳಂತೆ. ಹಾಗಿರುವಲ್ಲಿ ನಮ್ಮ 

ನೂತನ ರಾಣನು ಹೊರಗಿರುವುದಾದರೂ ಹೇಗೆ? ರಾಜಧಾನಿಯನ್ನು 

ಪ್ರವೇಶಿಸಿದೊಡನೆ ಆತನು ನೆಟ್ಟನೆ ಎದ್ದು ಅಂತಃಪುರದತ್ತ ಸಾಗಿಯೇ 

ಬಿಟ್ಟನು. ಮುಗುಳುನಗೆಯೊಡನೆ ಬಂಕೆಯನೂ ಆ ವ್ಯಕ್ತಿಯನ್ನು 



೯೨------------------------------------------------------------------- 



ಹಿಂಬಾಲಿಸಿದ್ದನು. ಅದರಿಂದ ಕೆಲವರ ಗುಜುಗುಜು-ಕೆಲವರ ಗಲಬೆ,  

ಕೆಲವರ ಭ್ರಮಸಂಶಯಗಳು ತಲೆದೋರಿದ್ದರೂ 'ಇದೇನೋ ಒಂದು 

ಗೂಢವಿಲಾಸವೇ ಸರಿ' ಎಂದು ಭಾವನೆಯಾಗಿ ಅಲ್ಲಲ್ಲೇ ತಂಗಿದುವು. 

ಮುಂದೆ ಫಕ್ಕನೆ ಬೆರಗಾದ ವೀರಶ್ರೀ, ಹಿಂದೆ ವಿಲಾಸಮೂರ್ತಿಯಾದ ವೀರ 

ಬಂಕೆಯ ಇವರ ನಡುವೆ ಈ ಬಾಲಚಂದ್ ನ ಕಳೆ ಏನಾಯಿತೋ ಯಾರು 

ಬಲ್ಲರು? ಒಂದಿಷ್ಟು ಹೊತ್ತು ಕಳೆವಲ್ಲಿ ಕುಮಾರ ಕೃಷ್ಣನೂ ಯುವರಾಜ 

ಬೂತುಗನೂ ದೂತಿಯೊಬ್ಬಳ ಕರೆಯಂತೆ ಅಲ್ಲಿಗೈದಬೇಕಾಯಿತು. 

ಅಂತಃಪುರ ವಿಚಾರವಲ್ಲವೇ? ಹೆಚ್ಚಿನ ವಿಚಾರ ನಮಗೇನೂ ತಿಳಿಯದು. 

ಅಂತೂ, ಕುಮಾರಬೂತುಗನು ಮೊದಮೊದಲು ಮಾನವರು ಹಿಡಿದು 

ಬಿಟ್ಟ ಗುಬ್ಬಿಯಂತಾಗಿದ್ದರೂ ಮೆಲ್ಲಮೆಲ್ಲನೆ ತನ್ನ ಪ್ರಕೃತಿಯನ್ನು ಹಿಡಿದು 

ನಡೆಯಲಾರಂಭಿಸಿದ್ದನು. 


ಗಣಪತಿ ಭಟಾರನ ಸವಾರನ ಕೈವಾರ. ಆ ಕೈವಾರದೊಳಗೆ 

ರಾಜನೀತಿ ಸಂಬದ್ಧವಾದ ಸ್ವಚ್ಛ ವಿನಯವೂ ಎಲ್ಲೆಲ್ಲೂ ಅಚ್ಚೊತ್ತಿ ಮಿರುಗು 

ತ್ತಿತ್ತು. ಆತನ ನೀತಿಯ ಸೂತ್ರವನ್ನೂ ಂದಿಯೇ ಬಂಕೆಯನೆ ಊರಾಳಿಕೆ 

ಕಂದು ಕಸರಿಕೆಗಾಸ್ಪದವಾಗದಂತೆ ರಂಜಿಸುತ್ತಿದುದು. ಅಂಥ ಮೇಲು 

ಮಟ್ಟದ ಮಹಾಪ್ರಧಾನನೊದಗಿದುದರಿಂದ ಬಂಕೆಯನ ಮಾಸಲಾದ 

ವೀರತೆ ವಿಶದವಾಯಿತೋ ಬಂಕೆಯನಂಥ ದೊರೆ ಇಟ್ಟ ಸಂಪೂರ್ಣ 

ವಿಶ್ವಾಸದಿಂದ ಭಟಾರನ ರಾಜನೀತಿಗೆ ಸಾಣೆಯಿಕ್ಕಿತೋ, ಎಂದು ಕೆಲವರಿಗೆ 

ಸಂದೇಹ. ಎರಡೂ ಸರಿಯಲ್ಲ; ಅಂಥ ರಾಜಮಂತ್ರಿಗಳೊದಗಿದುದೆಂದರೆ 

ಬನವಾಸಿ ನಾಡಿನ ಪುಣ್ಯ ಎಂದು ಸಂಶಯದ ಎರಡೂ ಕವಲುಗಳನ್ನು 

ಕಳಚಿ ಬಿಡಬಹುದು. ಇರಲಿ; ಬನವಾಸಿಯ ರಾಜಧಾನಿ ಒಂದೆರಡು ದಿನ 

ವಿಜಯೋತ್ಸವದಲ್ಲಿ ಮುಳುಗಿತ್ತು. ಎರಡನೆಯ ದಿನ ಎಲ್ಲರೊಡನೆ 

ಬಂಕೆಯನು ಓಲಗಸಾಲೆಯಲ್ಲಿ ಆನಂದದಲ್ಲಿದ್ದನು. ವಿಜೃಂಭಣೆಯಲ್ಲಿ 

ಆಳು ಅರಸು-ಬಡವ ಬಲ್ಲಿದ ಮೊದಲಾದ ಕವಲಿರಲಿಲ್ಲ. ಕುಮಾರ-ಕೃಷ್ಣ 

ಬೂತುಗರು ತಕ್ಕೆಡೆಯಲ್ಲಿ ಮಂಡಿಸಿದ್ದರಷ್ಟೆ. ವೀರತ್ರೀದೇವಿಯೂ 

ಚಂದ್ರಬ್ಬಲಬ್ಬೆಯೊಡನೆ ಓಲಗ ಸಾಲೆಗೆ ಕಳೆಗೂಡಿಸಿದ್ದಳು. ಆಗ ಬಂಕೆ 

ಯನು ಕುಮಾರ ಬೂತುಗನನ್ನೀಕ್ಷಿಸಿ ಮಾತನ್ನೆತ್ತಿದನು:--*ಈ ವಿಜೃಂಭ 

ಹಾವಸರದಲ್ಲಿ ಕುಮಾರ ಬೂತುಗರ ಚಿತ್ತವನ್ನು ಆನಂದಕ್ಕಿಂತಲೂ 

ಒಂದಿಷ್ಟು ಹೆಚ್ಚಾಗಿ ನೋವು ಕುಗ್ಗಿಸಬಹುದ್ಕು ಆದರೂ ನನ್ನ ಪ್ರಾರ್ಥನೆ 



೯೩--------------------------------------------------------------------



ಯನ್ನು ಮನ್ಸಿಸಿ ಅವರು ಇಲ್ಲಿವರೆಗೆ ಚಿತ್ತಯಿಸಿದರು. ಅವರ ಈ ಪ್ರೇಮ 

ನನ್ನ ಜೀವಾವಧಿಯಾಗಿ ಬಾಡದೆ ಮಗಮಗಿಸುತ್ತಿರುವುದು. ಯೌವನದಲ್ಲಿ 

ಎಂಥ ವಿವೇಕಿಗಳಲ್ಲಾದರೂ ಅಂಥ ಸೌಜನ್ಯೋದಾರತೆ ನೆಲಸುವುದೆಂದರೆ 

ಸುಲಭವಲ್ಲ. ಇಂಥ ಉದಾರತೆಯ ಫಲವಾಗಿ ಅವರಲ್ಲಿ ಚಕ್ರವರ್ತಿಗಳ 

ಅನುಗ್ರಹವೆಂಬುದು ಕಟ್ಟಿಟ್ಟ ಗಂಟೇ ಸರಿ ಅದಂತಿರಲಿ, ಅವರ ಆ 

ನೋವಿಗೆ ಬಾಹ್ಯ ಕಾರಣ ಈ ಬಂಕೆಯನಾಗಿ ಹಲವರಿಗೆ ತೋರಿದರೂ, 

ಚಕ್ರವರ್ತಿಗಳ ಸರ್ವಸಮತಾಭಾವವೇ ಅದಕ್ಕೆ ನಿಜವಾದ ಕಾರಣವೆಂಬುದು 

ಸ್ವತಃ ಬೂತುಗರಿಗೇ ಗೊತ್ತಿರಬಹುದು. ನಾನೆಂದರೆ ಚಕ್ರವರ್ತಿಗಳ 

ಕೈ ಬೊಂಬೆ; ಅಥವಾ *'ಮದೀಯೋವಿತತಜ್ಯೋತಿರ್ನಿತಿತಾಸಿರಿವಾಪರಃ' 

ಎಂದು ಅವರೇ ಬಣ್ಣಿ ಸಿದ ಮಾತಿನ ಸಾರವಾದರೂ ಅಷ್ಟೆ. ಸಂದರ್ಭದಲ್ಲಿ 

ವಿಷಗಳಿಗೆಯೂ ಬರುತ್ತಿದೆ, ಅಮೃತಗಳಿಗೆಯೂ ಬರುತ್ತಿದೆ. ಆ ವಿಷವನ್ನ 

ಮೃತವನ್ನಾಗಿ ಮಾತ್ರವೆ ಅಲ್ಲ, ಅಮೃತವನ್ನೂ ಅಮೃತಫಲದಾಯಕ 

ವನ್ನಾಗಿ ಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಮಿತಿಮಾರಿ ಕುಡಿ 

ಯುತ್ತಾ ಹೋದಲ್ಲಿ ಹಾಲೂ ಹಾಳೆನ್ಸಿಸುವುದು. ಹೆಚ್ಚೇಕೆ? ಬೂತುಗನೆ, 

ಮುಂದಿನ ನಿನ್ನ ಆಳಿಕೆಯಲ್ಲಿ ಈ ಬಂಕೆಯನೆಂದರೆ, ಪರಮಪರೆವಿಡಿದು 

ಕೀರ್ತಿಪಡೆದ ಗಂಗಕುಲಕ್ಕೆ ಭಂಜಕನಲ್ಲ ರಂಜಕನೆಂಬುದು ಯಾವಾಗಲೂ 

ನಿನ್ನ ಮನಃ ಫಲಕದಿಂದ ಮಾಸಿಹೋಗಬಾರದೆಂದು ಪ್ರಾರ್ಥಿಸುತ್ತೇನೆ. 

ಇದಕ್ಕೆ, ನನ್ನ ಸಹೋದರಕಲ್ಪರಾದ ಈ ರಾಷ್ಟ್ರಕೂಟ ಸಹೋದರರೇ 

ಸಾಕ್ಷಿಗಳು. ನಿನ್ನ ಪೂಜ್ಯರಿಗೆ 'ಹನುಮನಾಯಕಿಗೆ ದೀವಟಿಗೆಯವನಲ್ಲಿ 

ಕಣ್ಣು' ಎಂದು ನಾಡವರಾಡುವರಲ್ಲ, ಹಾಗೆ ಎಲ್ಲ ತಪ್ಪೂ,  ಸ್ವದೋಷವೂ 

ಈ ಬಂಕೆಯನಲ್ಲೇ ಭಾಸವಾಗುವುದು ಈ ಜನ್ಮಕ್ಕೇರಿಸಿದ ಮುಡಿನಿನ 

ಗಂಬಾಗಿಬಿಟ್ಟದೆ. ಅದರಿಂದ ಮುಂದಿನ ನಿನ್ನ ಆಳಿಕೆಯವಸರದಲ್ಲಿ, ನಿನ್ನ 

ತೀರ್ಥರೂಪರು ಜೀವಂತರಿರುವವರೆಗೆ-ಅಸ್ತಂಗತಿಗೆ ಹರಯವೇ ಆದಿ 

ಕಾರಣವಲ್ಲ ಎಂಬುದನ್ನು ಬಲ್ಲೆ ಆದರೂ ಸಾಂಪ್ರದಾಯಕ್ಕನುವಾಗಿ ಆಡಿ 

ಬಿಟ್ಟೆ- ಯಾವ ವಿಜೃಂಭಣಾದಿ ಸಂದರ್ಭಗಳಲ್ಲೂ ನಾನು ಗಂಗವಾಡಿಗೆ  

ಪ್ರವೇಶಿಸುವುದಿಲ್ಲ. ಆದರೂ ನೀನೆಂದರೆ ನ ನನ್ನ ಒಡಹುಟ್ಟೇ ಸರಿ, ಎಂಬು 

ದನ್ನು ಮರೆಯಲಾರೆ. " 

....................

* "ಹರಿತವಾಗಿ ಜಳಜಳಿಸುವ ನನ್ನ ಕೈಯ ಖಡ್ಗದಂತಿರುವವನು” 



Epigraphia Indica  VOL. No. 4 

Konnur Inscription of Amoghavarsha | A. D. 861 (ಶ. 783) 



೯೪---------------------------------------------------------------------- 



ಎನ್ನುವಲ್ಲಿ ಬಂಕೆಯನ ಕಣ್ಣು ಬಾಷ್ಪ ಪೂರಿತವಾಯಿತು. ಅದೇ 

ಅವಸ್ಥೆಯನ್ನೊಂದಿದ ಬೂತುಗನು ಬಂಕೆಯನ್ನಾಲಿಂಗಿಸಿದನು: -ನನ್ನ 

ಹುಟ್ಟನ್ನು ಹಿಡಿದಂಟಿದ ದುರದೃಷ್ಟಕ್ಕೆ ನೊಂದೆನಲ್ಲದೆ ನಿಮಗಲ್ಲ, ನಿಮ್ಮಲ್ಲಿ 

ಬೇಸರವಾಗಿದ್ದರೆ ಅದು ಈ ಯುವರಾಜರೇ ಮೊದಲಾದವರನ್ನೂ ವ್ಯಾಪಿಸ. 

ಬೇಕಲ್ಲವೆ? ಯುವರಾಜರೇ ಮೊದಲಾದವರು ನನ್ನ ಸಲುವಾಗಿ "ಒಂದಿಷ್ಟು 

ರಾಜಧಾನಿಯ ವಕ್ರದೃಷ್ಟಿ ಗೂ ಪಾತ್ರರಾಗಿದ್ದರೆಂಬುದನ್ನು ನಾನೂ ಬಲ್ಲೆ. 

ಬೂತುಗನೆಂದರೆ ನನ್ನ ಆಪ್ತಬಂಧು ಎಂಬುದನ್ನು ನೀನೆಂದಿಗೂ ಮರೆಯ 

ದಿದ್ದರೆ ಸಾಕಾಗಿದೆ. ಬೇರೆ ಕೆಲವು ಮಾತುಗಳಿಗೆ ಏನೆಂದು ಉತ್ತರಿಸಲಿ? 

ದೈವವು ನನ್ನ ಪರವಾಗಿ ಇನ್ನು ಮುಂದೆಯೂ ದುರ್ದೈವವೆನ್ನಿಸಲಿಕ್ಕಿಲ್ಲ; 

ಎಂದು ನಂಬಿರುವುದೇ ಅದಕ್ಕುತ್ತ ರವಲ್ಲವೆ?” ಎಂದನು. ನೆರೆದವರೆಲ್ಲರೂ-- 

ವಿಶೇಷವಾಗಿ ವೀರಶ್ರೀ--ಬೂತುಗನನ್ನು ಕೊಂಡಾಡಿದಳು. ಆ ಮೇಲೆ 

ಚಂದ್ರಬ್ಬಲಬ್ಬೆಯ ಕಿವಿಯಲ್ಲಿ "ಹಾಗಲ್ಲವಾದರೆ ನೀನು ಇಂಥ ಮಹಾವ್ರತ 

ವನ್ನು ಕೈಗೊಳ್ಳುತ್ತಿದ್ದಿಯೆ?” ಎಂದು ಪಿಸುಗುಟ್ಟಿದಳು. ಸುತ್ತುಮುತ್ತು 

ಕುಳಿತಿದ್ದ ಅರಸುಮನೆತನದ ಕುಮಾರಿಕೆಯರಿಗೆ ಆ ಪಿಸುಮಾತು ಕೇಳಿತು. 

“ಅತ್ತೆಮ್ಮನವರೆ, ಅದೇನು ಮಹಾವ್ರತ?” ಎಂದಳೊಬ್ಬಳು. “ನಮಗೆಲ್ಲ 

ಗೊತ್ತಿಲ್ಲದ, ಗೊತ್ತಾಗದ ಮಹಾವ್ರತವದು” ಎಂದಳು ವೀರಶ್ರೀ. ಹೌದು; 

ಕೇಳಿದುದರಿಂದಲೇ ಗೊತ್ತಿಲ್ಲದುದೆಂದು ಗೊತ್ತಾಗುವುದೆಲ್ಲವೆ? ದಯವಿರಿಸಿ 

ಹೇಳಿದರೆ ಗೊತ್ತಾಗುವುದು" ಎಂದೊಬ್ಬ ಚದುರೆಯಾಡಿದಳು. “ಆಚರಿಸಿದ 

ಪುಣ್ಯವತಿ ಮುಂದಿರುವಲ್ಲಿ ಗೋಚರಿಸಿದವರನ್ನೆಲ್ಲ ಪ್ರಶ್ನಿಸುವುದೆ?” ಎಂದು 

ವೀರಶೀ ನಕ್ಕಳು, “ಮಾಡಿ ದಣಿದಾಕೆಗೆ ಅಡಿಗೆಯ ಸವಿಯರಿಯದು, 

ಉಂಡರಿತ ನೀವೇ ಹೇಳಬೇಕು" ಎಂದಳು ನಗುನೆಗೆವ ಕುಮಾರಿ ಬೇರೊ  

ಬ್ಬಳು. ಆಗ “ನೀನೆಂದಂತೆ ಉಂಡೇ ಅರಿಯಬೇಕದನ್ನು; ಕಿವಿಯಿಂದ 

ತುರುಕಲಾರದ ಮಹಾವ್ರತನೈವೇದ್ಯಪ್ರಸಾದ!" ಎಂದು ಬಂಕೆಯನಾಡಲು 

ಕುಮಾರಿಯರೆಲ್ಲರು ನಕ್ಕರು. ಅಬ್ಬಾ! ಈ ಕಾಲದ ಈ ಕುಮಾರಿಯರ 

ಪ್ರಗತಿಯನ್ನೇನ್ನಲಿ!" ಎನ್ನುತ್ತಾ ಬಂಕೆಯನು ಕುಮಾರಿ-ಚಂದ್ರಬ್ಬಲಬ್ಬೆ 

ಯತ್ತ 'ಮುಂದಹಾಸವನ್ನು ಪಸರಿಸಿದನು. 


ಬೂತುಗನೆದೆಯ ಹದವನ್ನು ಮಿಡಿದು ಪರಾಂಬರಿಸುವುದು ಆ 

ಸಮಾರಂಭದೊಳಗಿನ ಬಂಕೆಯನ ಗುರಿಯಾಗಿತ್ತು. ಅದನ್ನರಿತು ಆತನು 

ಸಂತುಷ್ಟನೂ ಆದನು. ಆ ಮೇಲೆ ಎಲ್ಲರೂ ಮಾನ್ಯಖೇಟ ಪ್ರಯಾಣದಲ್ಲಿ 

ಉದ್ಯುಕ್ತರಾದರು. 



— ೯೫ -----------------------------------------------------------



ಬಂಕೆಯು:--ಮಹಾರಾಣಿಯವರು ಬಲುಬಾರಿ "ನಿಮಗೆ ಗಂಡಸರಿಗೆ 

ಸಾವಿರದೊಂದು ಕೆಲಸವೂ ಇರುವುದರಿಂದ ಕಾಲ ಹೇಗೂ ಸಾರವೆನ್ನಿಸು 

ತ್ತಿದೆ. ಅಂತಃ ಪುರವೆಂಬುದು ಬಹುಕಾಲದಿಂದ ನಮ್ಮ ಸಿರಿ ಬಾರದೆ 

ಉಪ್ಪಿಲ್ಲದೋಗರವಾಗಿಬಿಟ್ಟಿದೆ,” ಎಂದಿದ್ದರು. ಹೇಗೆ ಸಮಯವಿದೆಯೆ? 

ಇದ್ದರೆ ಇದೇ “ಸುಮುಹೂರ್ತಾ ಸಾವಧಾನಾ” ಎನ್ನುತ್ತೇನೆ. 


ವೀರಶ್ರೀ:--(ನಗುತ್ತಾ) ನಾನೇ ಆ ಮಾತಕ್ನೆತ್ತುವುದರಲ್ಲಿದ್ದೆ. 

ಕುಮಾರಿ ಚಂದ್ರಿ ಯನ್ನೊಬ್ಬಳನ್ನೇ ಕಳುಹುವುದೇ? 


ಬಂಕೆಯೆ: (ಎಲಾ ಗಂಭೀರತೆಯೊಡನೆ) ಹೌದಪ್ಪಾ ಈ ಗಂಡಸರ 

ಪಡೆಯೊಡ್ಡಿನ ಗುಂಡುಗಲ್ಲುಗಳ ನಡುವೆ ನಾಚಿದ ಆ ಎಳಬಳ್ಳಿ ಬಳುಕಿ 

ಹೋದೀತು! ನಿನೊಬ್ಬಳೇ ಯಾಕೆ? ಎಲ್ಲಿ, ಮಲ್ಲಿಗೆ ಮಾಲತಿ ಸೇವಂತಿಗೆ 

...... ಹೂಂ, ಎಲ್ಲವೂ ಹೊರಡಲಿ, 


ವೀರಶ್ರೀ:--ಸದಾ ನಿಮ್ಮ ವಿಲಾಸದ ಗಂಟೆಗೆ ಒಂದೇ ಸ್ವರ. ಬಳ್ಳಿ 

ಯಾಗಿದ್ದಲ್ಲಿ ಬಳುಕಬೇಕು, ಮರವಾಗಿದ್ದಲ್ಲಿ ಮೇಲೇರಲೂ ಬೇಕು. 


ಬಂಕೆಯ:- ಆಹಾ! ಕವಿತೆಯೇ ಕವಿತೆ !!


ಕುಮಾರಿಕೆಯರು:- (ನಗುತ್ತಾ) ಹಾಗಾದರೆ ಆ "ಮಹಾವ್ರತ'ದ 

ಪ್ರಸಾದ ಸ್ವೀಕಾರಕ್ಕೆ ನಾವೂ ಹೊರಡಲೆ? 


ಬಂಕೆಯು:--ಆಗಲಿ; ಎಲ್ಲರೂ ಹೊರಡಲಿ. 


ಎಲ್ಲರೂ ಸಿದ್ಧರಾದರು. ಜೈತ್ರಯಾತ್ರೆಯ ಹಿಂಬಯಣವೆಂದರೆ 

ಅದೊಂದು ದಿಬ್ಬಣವಾಗಿ ಪರಿಣಮಿಸಿತು. ಮಾನ್ಯಖೇಟದತ್ತ ಗುರಿ 

ಗೊಂಡು ಸಾಗಿತು.

============

 

ಜೀವನಶಿಖರ 


ಹಿಂದೆ ಬಂಕೆಯ-ಕಂಚಣಾದಿಗಳು ಮಾನ್ಯಖೇಟದಿಂದ "ವಾಯು 

ವೇಗಾ”ದಿಗಳನ್ನೇರಿ ಬನವಾಸಿಗೆ ಧಾವಿಸಿದ ಪಯಣವೇ ಬೇರೆ: ಈ 

ಪಯಣವೇ ಬೇರೆ. ಅದು ಪಯಣದೊಳಗಿನ ಪಯಣವಾದರೆ, ಇದೀಗ 

"ಪಯಣದ ಮೇಲೆ ಪಯಣ'. ಅದನ್ನೆಲ್ಲ ಪರಾಂಬರಿಸಿಕೊಂಡ ಬಂಕೆ 

ಯನು ಎಲ್ಲವನ್ನೂ ವಿಸ್ತರಿಸಿ, ಚಕ್ರ ವರ್ತಿಗಳಿಗೆ ಮೊದಲೇ ಬರೆದಿದ್ದನು. 

ಅದರಿಂದ ರಾಜಧಾನಿಯಲ್ಲಿ ಮಹಾರಾಜಾದಿಗಳೆಲ್ಲರೂ ಆ ವಿಶಿಷ್ಟ ದಿನ 



— ೯೬ —------------------------------ 



ದಲ್ಲಿ ಮಹಾವೀರ ಬಂಕೆಯನೇ ಮೊದಲಾದವರ ಪುನರಾಗಮನವನ್ನು 

ಪ್ರತೀಕ್ಷಿಸುತ್ತಿದ್ದರು. 'ನೃಪತುಂಗ ಮಹಾಸಭೆ' ಎಂದರೆ ಮಾನ್ಯಪೇಟ 

ದೊಳಗೆ ಸುಸಂಸ್ಕೈತರಾದವರ ಪ್ರತಿನಿಧಿಸಂಸ್ಥೆಯಷ್ಟೆ? ಆ ಸಂಸ್ಥೆಯ ಸಭಾ 

ಸದಸ್ಯರೆಲ್ಲರೂ ನೆರೆದ ಆಸ್ಥಾನವನ್ನು ಚಕ್ರವರ್ತಿ ಸಮಯಕ್ಕೊಂದಿಷ್ಟು 

ಮೊದಲೇ ಅಲಂಕರಿಸಿದ್ದನು. ರಾಷ್ಟ್ರಪತಿ ಜಯಾಳ್ವನ ನು ಹಲಮಂದಿ ಹೆಸರು 

ಗೊಂಡ ನಾಗರಿಕ ಸ್ತ್ರೀಪುರುಷರೊಡನೆ ಹೆಬ್ಬಾಗಿಲ ಪರಿಸರದಲ್ಲಿಅಡ್ಡಾಡುತ್ತಿ 

ದ್ದನು. ಕಾಲಕ್ಕೆ ಸರಿಯಾಗಿ ಬಂಕೆಯಾದಿಗಳು ಬಂದರೇ ಬಂದರು. ಜಯ 

ಧ್ವನಿಯೊಡನೆ ವಾದ್ಯಘೋಷವು ಆಕಾಶವನ್ನಲುಗಿಸಿತು. ಆ ಧ್ವನಿಯಲ್ಲ, 

ಆ ಘೋಷವಲ್ಲ, ಅವುಗಳೊಳಗೆ ದುಮುದುಮಿಸುವ ಮೀಸಲಾದ 

ಆನಂದದ ಹುರುಪೇ ಹುರುಪು. ಬರಿಯ ಈ ಗಂಗವಾಡಿಯನ್ನು ಹ 

ಕೈಳಿಸಿದುದರಿಂದಲೇ ಮಾನ್ಯಖೇಟಕ್ಕೆ ಅಂಥ ಆನಂದವಲ್ಲ; ಆ ಗಂಗವಾಡಿ 

ಯೆಂದರೆ ಹಿಂದಣ ಕಾಲದಿಂದಲೂ ಮಾನ್ಯಖೇಟಕ್ಕೆ ವಿರುದ್ಧವಾಗಿ 

ಮಂತ್ರತಂತ್ರಗಳಿಗೊಂದು ಯಂತ್ರಸ್ವರೂಪನೆನ್ನಿಸಿತ್ತು. ಯಂತ್ರವೀಗ 

ಸಂಪೂರ್ಣವಾಗಿ ಕಳಚಿಬಿದ್ದುದು, ಮುಂದೆ ಎಂದಿಗೂ ಕೂಡಲಾರದ 

ಜರಾಸಂಧಸಂಧಿಗಳಂತೆ ಅಸ್ತವ್ಯಸ್ತವಾಯಿತು. ಈ ವಿಷಯವನ್ನು, ಚಕ್ರ 

ವರ್ತಿಯ ಎಡಬಲಗಳಲ್ಲಿ ಆದರಾತಿಥ್ಯಗಳೊಡನೆ ಮಂಡಿಸಿದ ಗಣಗಾಂಕ  

ನಂದಿವರ್ಮರ ಮುಖಮೆಂಡಲಗಳೇ ಸೊಚಿಸುತ್ತಿ ದು ವು. 


ಬಂಕೆಯ ಕ ಷ್ಣ ಬೂತುಗಾದಿಗಳು ಜಯಾಳ್ವನೊಡನೆ ಆಸ್ಥಾನಕ್ಕೈದಿ 

ದರೆ, ವೀರಶ್ರೀಯೇ ಮೊದಲಾದವರು ಶಂಖಾದೇವಿಯನ್ನು ಹಿಂಬಾಲಿಸಿ 

ಅಂತಃಪುರದತ್ತ ಸಾರಿದರು. ಬಂಕೆಯನ ಕಡೆಯಪತ್ರವನ್ನೀಕ್ಷಿಸಿದ ಮೇಲೆ 

ಕುಮಾರ ಕೃಷ್ಣಾದಿಗಳ ಪರವಾಗಿ ನೃಷತುಂಗನೆದೆಯನ್ನು ಕುಕ್ಕಿ ಕುರು 

ಕುರಿಸುತ್ತಿದ್ದ ಬಲುಬಗೆಯ ಸಂಶಯಗಳೆಲ್ಲ ಮಾಸಿಹೋಗಿದ್ದವು. ಆದರೂ 

ಅವನನ್ನು ಕಾಣುವ ವರೆಗೆ ಮನಸ್ಸು ಸಂಪೂರ್ಣವಾಗಿ ಪ್ರಕೃತಿಯನ್ನೊಂದಿ 

ರಲಿಲ್ಲ. ಜತ್ತ ಮೊದಲು ಕುಮಾರಕೃಷ್ಣನು ಆಸನದ ಬಳಿಗೈದಿ ಸಾಷ್ಟಾಂಗ 

ವಾಗಿ ವಂದಿಸಿ ತಂದೆಯ ಪಾದಗಳನ್ನು ಸ್ಪರ್ಶಿಸಿದನು. ಕಾಲುವೆಯಾದ 

ಮಗನ ಕಣ್ಣೀರು ತಂದೆಯ ಪಾದಗಳನ್ನು ತೊಳೆಯುತ್ತಿದ್ದರೆ, ತಂದೆಯದು 

ಮಗನ ತಲೆಯನ್ನು ಪ್ರೋಕ್ಷಿಸುತ್ತಿತ್ತು. ಈ ಕಣ್ಣೀರುಗಳು ಇಬ್ಬರ ಅಂತಃ 

ಕರಣಗಳನ್ನೂ ತೊಳೆದು ನಿರ್ಮಲೀಕರಿಸಿದುವು. 


ಆ ಮೇಲೆ ಯುವರಾಜ ಬೂತುಗನೂ, ಬಂಕೆಯನೂ ಕ್ರಮವಾಗಿ 

ವಂದಿಸಿದರು. ಅವರಿಬ್ಬರನ್ನೂ ಹಿಡಿದೆತ್ತಿ ಚಕ್ರವರ್ತಿ ಮನ್ನಿಸಿದನು. 



೯೭--------------------------------------------------------------- 



ಎಲ್ಲರೂ ತಮ್ಮ ತಮ್ಮ ಆಸನಗಳನ್ನಲಂಕರಿಸಿದ ಮೇಲೆ, ಚಕ್ರವರ್ತಿ ಮಹಾ 

ಚತ ಮತ್ತು ಜಯಾಳ್ವನ ಮುಖಗಳತ್ತ ಕಣ್ಣನ್ನಲೆಯಿಸುತ್ತ 

ಮಾತನ್ನೆತ್ತಿದನು:-- 


' ಪುರುಷಪ್ರಯತ್ನ ಎಷ್ಟು ಸಮಕಟ್ಟಾಗಿ ಸಾಗಿದರೂ, ಎಣಿಕೆ ಯಂತೆ 

ಕಾರ್ಯ ಕೈಗೂಡುವುದೆಂದರೆ ಸುಲಭವಲ್ಲ. ಅದನ್ನೀಗ ಅದೃಷ್ಟ ಅಥವಾ 

ದೈವ ಎನ್ನುವುದು. ಅದೂ ಪೌರುಷದಲ್ಲೊಡವೆರೆದೇ , ರೂಪಿಸು 

ವುದು. ಆದರೇನು, ಸರ್ವಗುಣಸಂಪನ್ನವಾದರೂ ಕೆಲಬಾರಿ ಅಡುಗೆ, 

ಪಾಕಕ್ಕೆ ಬಾರದೆ ಸವಿಯಾಗುವುದಿಲ್ಲ. ಹಾಗಾಗಿದೆ ನಮ್ಮ ಈ ದಿನದ 

ಆನಂದ. ಬಂಕೆಯಾದಿಗಳೆಲ್ಲರ ತ್ರಿಕರಣಗಳೂ ನಿಷ್ಕಳಂಕವಾದುವುಗಳು. 

ನಮ್ಮ ಯುವರಾಜಾದಿ ಚಿರಂಜೀವಿಗಳ ವರ್ತನೆ ಹೇಗೋ ಎಂದೊಮ್ಮೆ 

ಭ್ರಮೆಗೊಂಡೆ. ಅವರು ಮೈಮರೆದು ಸಾಗರದ ಆಳಕ್ಕೆ ಧುಮುಕಿ 

ಮುತ್ತನ್ನೆತ್ತಿ ತಂದು, ಭ್ರಮೆಯನ್ನು ಈ ತಲೆಗೇ ಹೊರಿಸಿದರು, ಇಷ್ಟಾದರೂ 

ಚಿತ್ರ ಕಳೆದುಂಬಿಸಿಲ್ಲ, ನಮ್ಮ ಕಿರಿಯರಾದ ಬೂತುಗ ನಂದಿವರ್ಮ ಗುಣ 

ಗಾಂಕರೆಂದರೆ. ಈ ಮೆಯ್ಯ ಅಂಗೋಪಾಂಗಗಳೇ ಅಲ್ಲದೆ ಭಿನ್ನಗಳಲ್ಲ. 

ಅವರ ಮೋರೆ ಒಂದಲ್ಲವಾದರೆ ಇನ್ನೊಂದು ಬಗೆಯ ಬಂದಣಿಕೆ ಹಿಡಿದು, 

ಅರಳಬೇಕಾದಂತೆ ಅರಳಲಿಲ್ಲ, ಅದು ಅವರ ತಪ್ಪಲ್ಲ; ಒದಗಿದ ಸಂದರ್ಭದ 

ತಪ್ಪು. ಮಾನ್ಯರಾದ ಯಾರಿಗೂ, ಹಾಗಾದೀತು; ಆಗಬೇಕು. ಅಂಥ 

ಸಂದರ್ಭ ಇನ್ನೊದಗದಂತೆ ನೋಡಿಕೊಳ್ಳುವ ಕರ್ತವ್ಯ ನಮ್ಮದೇ ಆಗಿದೆ. 

ಅದರಿಂದ ಮುಂದಿನ ಮಾತನ್ನು ಮಥಿಸಿ ಪರಾಂಬರಿಸಿರಿ.


ಧರ್ಮಾನುಸಾರವಾಗಿ ಪ್ರತಿಯೊಬ್ಬನೂ ಅರ್ಥವನ್ನು ಕಾಮಿಸಬೇಕು, 

ಹಾಗಿದ್ದರೆ ಮಾತ್ರ ಕಾಮವೆಂದರೆ ಪುರುಷಾರ್ಥನೆನ್ನಿಸಿ ಸಂಸಾರ ಎಂಬ 

ಹೆಸರು ಸಾರ್ಥಕ. ಹಾಗಿಲ್ಲದೆ ಧರ್ಮವನ್ನುಳಿದು ಕಾಮಿಸಲಾರಂಭಿಸಿದರೆ 

ಇದು ನಿಸ್ಸಾರವೆನ್ನಿಸುವುದು. ಹಾಗೆ ಕಂಡಬಟ್ಟೆಯಾಗಿ ಹರಿದ ಕಾಮವು 

ಪುರುಷಾರ್ಥತೆಯನ್ನು ತೊರೆದು ಅಂತಃಶ್ಶತ್ರುವಾಗುವುದು; ಮಾತ್ರವಲ್ಲ, 

ಸಂದರ್ಭಾನುಸಾರವಾಗಿ ಕ್ರೋಥಲೋಭಾದಿ ನಾನಾರೂಪವನ್ನೊಂದು 

ವುದು. ಭಾವಿಸಿರಿ; ಸಂಸಾರಸಾರ ಪುರುಷಾರ್ಥವೆಂದೆನ್ನಿಸುವ ಧಾರ್ಮಿಕ 

ಕಾಮವೆಲ್ಲಿ? ಅದೇ ಕಾಮವು ಧರ್ಮವನ್ನಲ್ಲಗಳೆದರೆ ಅಂತಃಶೃತ್ರುವೆನ್ನಿಸಿ, 

ಸಂಸಾರ ಜೀವನವನ್ನೇ ನಿಸ್ಸಾರವನ್ಶ್ಯಾಗಿಮಾಡುತ್ತಿದೆ. ಅದರಿಂದ ಏಳ್ಗೆ ಯತ್ತ 

ಹರಿಯತಕ್ಕ ರಾಜಕುಮಾರರು ವಿಶೇಷವಾಗಿ ಗುಣದತ್ತ ಆತ್ಮೀಯತೆಯನ್ನು 



೯೮ —------------------------------------ 



ಹರಿಯಿಸಲು ಅಭ್ಯಾಸಿಸಬೇಕು; ದೋಷದ ಕಡೆಗಲ್ಲ. ಇದನ್ನು ವಿವೇಚಿಸಿ 

ದಲ್ಲಿ, ಬೂತುಗಾದಿಗಳಾದ ಕಿರಿಯರ ನಡವಳಿಯೇ ನಮ್ಮ ಮುದುಕರ 

ದಕ್ಕಿಂತ ಮೇಲು ಎಂದು ತೋರುವುದು. ತಿದ್ದಲಾರದ ಬುದ್ಧಿ ನಮ್ಮಂಥ 

ಮುದುಕರದು; ತಿದ್ದುತ್ತಾ ಮೇಲ್ಮೆಗೇರುವುದು ನಿಮ್ಮಂಥ ಕಿರಿಯರದು. 

ಈ ಕಲ್ಲುಗುಂಡುಗಳೆಡೆಯಲ್ಲಿ ಸಿಲುಕಿ ಕೆಲವೇಳೆ ಕಿರಿಯರು ಬಳಲಿಹೋಗು 

ತ್ತಾರೆ. ಈ ಬಳಲಿಕೆಯ ಚಿತ್ರಕ್ಕೆ ಗಂಗವಾಡಿಯಿಂದ ನಮಗೆ ವೈಜಣನಲ್ಲಿ 

ಬರೆದು ಕಳುಹಿದ ಚಿರಂಜೀವಿ ಬೂತುಗನ ಪತ್ರವೇ ಸಾಕ್ಷಿಯಾಗಿದೆ. 

ಅದರಿಂದ ಚಿರಂಜೀವಿ-ಕುಮಾರರೇ, ನಿಮ್ಮ ಸಂದರ್ಭಾನುಸಾರವಾದ 

ಬೇಸರಿಕೆ ಬೇಸರಿಕೆಯಲ್ಲ; ಮುದುಕರಾದ ನಮಗೆ ಲಜ್ಜಾದಾಯಕವಾಗಿದೆ 

ಎಂದು ಮಾರ್ಪಡಿಸಬೇಕಾಗಿದೆ. 


ಈ ಸಂದರ್ಭದಲ್ಲಿ ಮಾತುಶ್ರೀಯವರಾದ ಗಾಮುಂಡಬ್ಬಾ ದೇವಿ 

ಯವರು ಬಾಲ್ಯದಲ್ಲಿ ಹೇಳಿದ ಕತೆಗಳೊಳಗೊಂದು ನೆನಪಾಗುತ್ತಿದೆ: 


ಹರಿದಾರಿಯ ಉದ್ದಗಲಕ್ಕೆ ಹಬ್ಬಿಹರಡಿದ ವಿಂದ್ಯಾಚಲದ ಹೆಗ್ಗಾಡಿ 

ನೊಳಗೆ ಗೊಲ್ಲದಾರಿಗನೊಬ್ಬನು ಸಾಗುತ್ತಿದ್ದನಂತೆ. ಹುಲಿಕರಡಿಗಳಿಗೆ 

ಹಗಲಿನಲ್ಲೂ ನಿರ್ಭಯವಾದ ವಿಹಾರಸ್ಥಾನವದು. ಕಾರ್ಯವೆಂದರೆ 

ಕರ್ತವ್ಯವಾಗಿತ್ತು. ಅದರಿಂದ ಹೇಗಾದರೂ ಧಾವಿಸಿ ಕತ್ತಲೆಯೊಳಗೆ ಅತ್ತ 

ಸಾರುವೆನೆಂದು ನಿರ್ಧರಿಸಿ ಆತನು ನಡೆಯುತ್ತಿದ್ದನು. ನಟ್ಟನಡುವೆ 

ನುಸುಳಿದಕಿ ಮಧ್ಯಾಹ್ನವೇ ಸಂಜೆಯಾಗಿ ತೋರುವ ಗೊಂಡಾರಣ್ಯವದು. 

ಸಂದರ್ಭವಶದಿಂದ ಸಂಜೆ ಹತ್ತಿರದಲ್ಲಿರಲಿಲ್ಲವಾದರೂ ಬಲು ದೂರದಲ್ಲಿರ 

ಲಿಲ್ಲ. ಅದರಿಂದ ಸಮಯವನ್ನೆಲ್ಲಿ ರಾತ್ರಿ ನುಂಗಿ ನೀರು ಕುಡಿದು ಬಿಡು 

ತ್ತಿದೆಯೋ ಎಂಬ ಭಯ ಹೊಟ್ಟೆಯೊಳಗವಲಕ್ಕಿಗುಟ್ಟುತ್ತಿತ್ತು. ಆದರೂ 

ಗೊಲ್ಲನು ನಡೆಯುತ್ತಲೇ ಇದ್ದನು. ಕೆಲಮಾರು ಮುಂದುವರಿವಲ್ಲಿ 

“ಯಾರದು, ಬೇಹೂರಿನ ಮಂಜಣನೆ?” ಎಂಬ ಮಾತು ಪಕ್ಕದ ಹೊದರಿ 

ನಿಂದ ಕೇಳಿತು. ಹೆಸರೆತ್ತಿ ಕರೆಯುವುದನ್ನು ಕೇಳಿ ಫಕ್ಕನೆ ನಿಂತುಹೋದನ 

ವನು. ಹೊದರಿನೊಳಗಿನಿಂದ ಯಾರೂ ತೋರಲಿಲ್ಲ. ದಿಗ್ಭ್ರಮೆಗೊಂ 

ಡಂತಾದ ಮಂಜಣನು ಗಣಿಸದೆ ಮುಂದುವರಿದನು. 


"ನಿಲ್ಲೋ, ಯಾಕೆ ಬೂತಹಿಡಿದವನಂತೆ ಓಡುತ್ತೀ? ಒಂದಿಷ್ಟು 

ನಿಲ್ಲು. ನಾನೇನು ಮನುಷ್ಯನಲ್ಲವೆ?' ಎಂಬ ಮಾತು ಮತ್ತೆ ಕೇಳಿತು. 

'ಹೇಗಿದ್ದರೂ ನನ್ನಂತೆ ಮನುಷ್ಯನಲ್ಲವೆ? ಸಂಜೆಯಾದರೂ ಒಬ್ಬನಿಗಿಂತ  



೯೯-----------------------------------------------------------


ಇಬ್ಬರೇ ಲೇಸು' ಎಂದು ಭಾವಿಸಿದ ಮಂಜಣನು ನಿಂತು, "ನೀವು ಯಾರು? 

ಹೊದರಿನೊಳಗೇನು ಹೊಕ್ಕಿದ್ದೀರಿ?' ಎಂದನು. 'ನಾನೋ? ಮುಡು 

ಗುಂಡಿಯ ಮಲ್ಲಪ ಎಂಬ ಹೆಸರು ಕೇಳಿದ್ದಿಯೊ? ಕೇಳಿದ್ದರೆ ಅವನೇ 

ನಾನು' ಎನ್ನುತ್ತಾ ಮೆಲ್ಲನೆ ದಾರಿಗಿಳಿದನು. ಅವನ ಹೊಲಬನ್ನರಿತ 

ಮಂಜಣ ಒಂದು ನಿಮಿಷ ಸ್ತಬ್ಧ ನಾಗಿಹೋದನು. 


ಮಲ್ಲಪ:-ಕೇಳಯ್ಯ ನನ್ನ ಜೀವನವೆಂದರೆ, ಆ ತೊಂಬತ್ತೊಂಬತ್ತರ 

ಮೇಲೆ ಮತ್ತೊಂದು ಕಿರೀಟವಿಟ್ಟೂ ಆಯಿತು. ಎಷ್ಟೆಷ್ಟೋ ಕಾರ್ಯಗಳ 

ನ್ನೆಸಗಬೇಕೆಂದು ಭಾವಿಸಿದ್ದೆ. ಈ ಮೂರ್ಖಲೋಕದಿಂದಾಗಿ ಎಲ್ಲವೂ 

ನಿರರ್ಥಕವಾಯಿತು. ಈ ಮೂರ್ಖತೆಗೆ ಈಗಲಾದರೂ ಮದ್ದೊಂದನ್ನರೆಯ 

ದಿದ್ದರೆ ಮುಂದೆ ಯಾವಾಗ? 


ಮಂಜಣ:-- ಈ ಹೆಗ್ಗಾಡಿನಲ್ಲಿ ಯಾವ ಮದ್ದನ್ನರೆಯಬಹುದು? 


ಮಲ್ಲಪಃ —ಒಂದೈದು ಹತ್ತು ನಿಮಿಷದ ವರೆಗೆ ನಿಂದು ಯಾವ 

ಮದ್ದನ್ನರೆಯುತ್ತೇನೆ ಎಂಬುದಕ್ಕೆ ಸಾಕ್ಷಿಯಾಗು. 'ಸಾಕ್ಷಿಯಿಲ್ಲದ ಕೆಲಸ 

ದಿಕ್ಕಿಲ್ಲದಾ ಗಂಟು? ಎನ್ನುತ್ತಾ ರಲ್ಲವೆ? 

 

ಮಂಜಣ:--ಆಗಲಿ; ಆ ಔಷಧಸ್ವರೂಪದ ಕಾರ್ಯವೇನು? 

ಸೂಚಿಸಿರಿ. 


ಮಲ್ಲಪ:- ಹಾಗಾದರೆ ಪರಾಂಬರಿಸಿ ಕೇಳು: 

'ಹುಲಿ ತಿಂದು ಸವಿಯರಿತು ನಾಡಜನರನ್ನೆಲ್ಲ । 

ತಿನಲೆಂದು ಬಂದಿಲ್ಲಿ ಹಾರಯ್ಸಿ ಕುಳಿತಿಹೆನು' ॥ 

ಏನು ಈಗಲಾದರೂ ಗೊತ್ತಾಯಿತೊ? 


ಆ ಮಾತನ್ನಾಲಿಸಿದ ಮಂಜಣನು ಮತ್ತೆ ಮಾತನ್ನೆತ್ತಲಿಲ್ಲ. ಓಡಿಯೇ 

ಹೋದನು. ಮಲ್ಲಪನ ಮುಂದಿನ ಕತೆಯನ್ನಿನ್ನು ಬಣ್ಣಿಸಬೇಕಾಗಲ್ಲವಷ್ಟೆ? 

ಅದು ಅವನೆಂದಂತೆ ಸಾಗಿತು. ಆ ನರಭಕ್ಷಕನಾದ ಹುಲಿಯ ಪೀಡೆ ಹಬ್ಬ 

ದಂತೆ ನಾಡವರು ಬೇಟಿಯಾಡಿ ಅದನ್ನು ಕೊಂದುಬಿಟ್ಟರಂತೆ,” 


ಕತೆಯನ್ನಾಲಿಸಿದ ಸಭಿಕರೆಲ್ಲರೂ ನಗೆಗಡಲಿನಲ್ಲಿ ಮುಳುಗುತ್ತಿರುವು 

ದನ್ನು ತಡೆದು, ಚಕ್ರ ವರ್ತಿ ಮುಂದುವರಿಸಿದನು “ಅದಂತಿರಲಿ; ಅದರಂತೆಯೇ 

ಅಲ್ಲ, ಆದರೂ ಕೆಲಮಟ್ಟಿಗೆ ಆಗುವುದೆಲ್ಲ ಆಗಿಹೋಯಿತು ಎನ್ನುವ. 

ಅದನ್ನೆಲ್ಲ ಮರೆಯಬೇಕಾದ ಕಿರಿಯರಿಗಾಗಿ ಈ ಮಾತನ್ನಡುತ್ತೇವೆ:-- 



೧೦೦ —------------------------------- 



*ನಾವು ಊರನ್ನಾಳುವ ಅರಸರಾಗಿ ಬಾಳಬೇಕಾದರೆ ಮೊತ್ತ ಮೊದಲು 

ಅಹಂಕಾರ ಮುಮಕಾರಗಳನ್ನು ಕಿತ್ತೊಗೆಯಬೇಕು. ಧರ್ಮದಲ್ಲಿ ಮಾತ್ರವೇ 

ಕಣ್ಣಿರಿಸಿ ನಡೆಯಬೇಕು. ಧಾರ್ಮಿಕರಾಗಿದ್ದ ಯಾವ ರಾಜೇಂದ್ರರೇ 

ಆಗಲಿ, ನಮಗೆ ಪೂಜ್ಯರವರು. ಆ ಪೂಜ್ಯ ಭಾವವೆಂದಕ್ಕೆ ಅವರು 

ಉದ್ದರಿಸಿದ ಧರ್ಮವನ್ನು ಮತ್ತೆ ಮುಳುಗಿಹೋಗದಂತೆ ನಾವು ರಕ್ಷಿಸು 

ವುದೇ. ಈ ಧರ್ಮರಕ್ಷಣ ಸಂದರ್ಭದಲ್ಲೆ ಹಲಮಂದಿ ದುಷ್ಟರು ಶಿಕ್ಷಿತ 

ರಾದರು. ಇಂದಿನ ರಾಜಕುಮಾರರಿಗೆಲ್ಲ ಹೇಳುತ್ತೇವೆ; ಮುಂದಿನವರಿಗಾಗಿ 

ಬರೆಯಿಸುತ್ತೇವೆ. 'ಪರಂಪರಾಗತವಾಗಿ ಬಂದು ನಮ್ಮಲ್ಲಿ ನೆಲಸಿದ ಧರ್ಮ 

ವೆಂದರೆ ಮುಂದೆ ನಿಮ್ಮ ಹಕ್ಕಿನದು. ನಮಗಿಂತಲೂ ಚೆನ್ನಾಗಿ ನೀವು 

ಅದರಲ್ಲಿ ನಡೆದು ಅದನ್ನು ನಡೆಯಿಸಬೇಕು' ಎಂದು ಪ್ರಾರ್ಥಿಸುತ್ತೇವೆ. 

ಹಿಂದಣ ಕೆಲಮಂದಿ ವೀರಪುರುಷರು ಪರಾಕ್ರಮದಿಂದ ಭೂತಲವನ್ನನು 

ಭವಿಸಿದರು. ಭೂತಲವಿದು ಇಂದಿಗೂ ಅವರದೇನು? ಕೆಲವರು ಪರರಿಗೆ 

ದಾನಮಾಡಿದರು. ಪಡೆದವರು ಪಾಲಿಸಿಕೊಂಡು ಬಂದರೆ? ವೈರಾಗ್ಯ 

ಗೊಂಡ ಕೆಲವರು ಅನುಭವಿಸದೆ ಪರರಿಗೂ ಕೊಡದೆ ಗುರಿಯಿಲ್ಲದೆ ತ್ಯಾಗ 

ಮಾಡಿದರು. ಅಂಥ ತ್ಯಾಗತೀಲತೆಯಾದರೂ ಈ ಲೋಕದಲ್ಲಿ ನೆಲಸಿ 

ದೆಯೇ? ಯಾವುದೂ ಇಲ್ಲ, ಅದರಿಂದ ಮುಂದಿನಾಳಿಕೆಯ ಕಡಿವಾಣ 

ವನ್ನು ಬಿಗಿವಿಡಿದು ನಡೆಯಿಸಲಿರುವ ಪಾರ್ಥಿವೇಂದ್ರರಲ್ಲಿ ಇಷ್ಟನ್ನೆ ಪ್ರಾರ್ಥಿಸಿ 

ಕೊಳ್ಳು ತ್ತೇವೆ. -ಲೋಕಾಧಾರಕಶಕ್ತಿ ಎನ್ನಿಸಿದ ಧಾರ್ಮಿಕ ಸಂಸ್ಕೃತಿ 

ಯೊಂದನ್ನೆ ಬಳಸಿರಿ; ಹರಡಿಸಿರಿ; ಮಹಾತ್ಮರೆನ್ನಿಸಿರಿ: ಅದೇ ಜೀವನ ಶಿಖರ!” 

ಎಂದು ಚಕ್ರವರ್ತಿ ಸಾರಿದನು. 

.................

* ಅಮೋಘವರ್ಷನ ಸಂಜನ ಶಾಸನ--ಪದ್ಯ ೫೧-೫೨ A.D. ೮೭೧ (ಶಕ-೭೯೩) 

ಆ ಶ್ಲೋಕಗಳು: --

ರಾಜೇಂದ್ರಾಸ್ತೇ ವಂದನೀಯಾಸ್ತು ಪೂರ್ವೇ! 

ಯೇಷಾಂ ಧರ್ಮಃ ಪಾಲನೀಯೋಸ್ಮದಾದ್ಯೈಃ: | 

ಧ್ವಸ್ತಾ ದುಷ್ಟಾ ವರ್ತಮಾನಾಃ ಸ್ವಧರ್ಮ- । 

ಪ್ರಾರ್ಥ್ಶಾಯೇತೇ ಭಾವಿನಃ ಪಾರ್ಥಿವೇಂದ್ರಾಃ ॥ ೫೧ ॥ 

ಭುಕ್ತಂ ಕೈಶ್ಚಿದ್ವಿಕ್ರಮೇಣಾಪರೇಭ್ಯೋ | 

ದತ್ತಂ ಚಾನ್ಯೈಸ್ತ್ಯಕ್ತಮೇವಾ ಪರೈರ್ಯತ್‌ । 

ಕಾಸ್ಥಾ$ನಿತ್ಯೇ ತತ್ರ ರಾಜ್ಯೇ ಮಹದ್ಭಿಃ । 

ಕೀರ್ತ್ಯಾಧರ್ಮಃ ಕೇವಲಂ ಪಾಲನೀಯಃ ॥ ೫೨ || 



— ೧೦೧ —---------------------------- 



ನೃಪತುಂಗಚಕ್ರವರ್ತಿಯ ಸಾವಿರವರ್ಷಗಳಿಂದ ಹಿಂದಣ, ವಿವೇಕ 

ಪರಿಪೂರಿತ ಸಂದೇಶವಿದು. ಇಂದಿಗೂ ಅಚ್ಚಳಿಯದೆ ಅದು ಹಾಗೆಯೇ 

ಬೇರುಬಿಡಲು, ದಾಂಗುಡಿಗೊಂಡು ಹಬ್ಬಲು, ಆರಂಭಿಸಿದೆ, ಎಂಬುದನ್ನು 

ನಮ್ಮ ಭಾರತಭೂಮಿಯ ಕಥೆಯಂತೆ ವೈಥೆಯೂ ಮೆರೆಯಲಾರದು. 



ಇರಲಿ; ಚಂದ್ರಬ್ಬಲಬ್ಬೆ_-ಶಂಖಾದೇವಿಯರ ಚಟುವಟಕೆ, ಅದರ 

ಪರಿಣತಿ ಮೊದಲಾದುವುಗಳೆಲ್ಲವೂ ಆಗ ಜನಜನಿತವಾಗಿ ಹಬ್ಬಿದ್ದುದು. 

ಅವರವರ ಒಪ್ಪುಗೆಯಂತೆ ಆಯಾ ವಿವಾಹಗಳನ್ನು ಬೇಗನೆ ನೆರವೇರಿಸುವು 

ದಾಗಿ ಚಕ್ರವರ್ತಿ ನಿರ್ಧೆರಿಸಿದನು; ಸಾರಿಹೇಳಿದನು. ತಮ್ಮಲ್ಲಿ ಬಂದ 

ಆ ಶುಭಸಂದೇಶವನ್ನರಿತ ನಂದಿವರ್ಮನ ತಂದೆ ಪಲ್ಲವರಾಜನು ಆನಂದ 

ಗೊಂಡನು. ಗಂಗವಾಡಿಯ ರಾಜಮಲ್ಲನೂ ಮುಂದಾರಿಗಾಣದೆ ಒಪ್ಪ 

ಬೇಕಾಯಿತು, 'ಹಾವು ಕಚ್ಚಿದ ಬಾಯಿ ಬರಿಬಾಯಿ' ಎಂದಾಗಿತ್ತಲ್ಲವೆ 

ಪ್ರಕೃತ ಸಂದರ್ಭದಲ್ಲಿ? ಎಲ್ಲಾದರೂ ಮುಂದೊಮ್ಮೆ ನಂಜು ತುಂಬುವ  

ಕಾಲವನ್ನು ಪ್ರತೀಕ್ಷಿಸಿಕೊಂಡೇ ಆತನು "ಹುಂ'ಗುಟ್ಟಿರಲೂಬಹುದು. 

ಆದರೆ, ಮುಪ್ಪೇರಿ ತನ್ನ ಹಲ್ಲು ಕಳಚಿ ಹೋಗಿದೆ; ಮುಂದೆಂದೂ ನಂಜೇ 

ರುವಂತಿಲ್ಲ, ಎಂಬುದು ಆ ಹಾವಿನ ಭಾವನೆಯಿಂದತ್ತಣದಾಗಿರಬಹುದು. 

ಅದಂತಿರಲಿ; ಮಾನ್ಯಖೇಟರಾಜಧಾನಿ ಆನಂದ ತುಂದಿಲವಾಯಿತು. ಆ 

ಆನಂದರಸಾಯನದೊಳಗಿನ ವೀರ ಬಂಕೆಯನು ಸವಿಯಾಗಿ ಎತ್ತೆತ್ತಲೂ 

ಹೊಳೆಯುತ್ತಿದ್ದನು. 

=========


ಉಪಸಂಹೃತಿ



ಬೂತುಗ ನಂದಿವರ್ಮರಿಗೆ, ಚಂದ್ರಬ್ಬಲಬ್ಬೆ ಶಂಖಾದೇವಿಯರ 

ವಿವಾಹವಾಯಿತು. ಅಂಥ ಮಂಗಳಸಮಾರಂಭಕ್ಕೆ ಸರಿಯಾದುದು 

ಹಿಂದಿನ ಚಾರಿತ್ರಿಕ ಸೀಮೆಯೊಳಗೆ 'ನಭೂತ' ಎಂದೂ, ಮುಂದಿನದರಲ್ಲಿ 

ಬಹುಶಃ 'ನಭವಿಷ್ಯತಿ' ಎಂದೂ ಕೊಂಡಾಡಿದರು. ತನ್ನನ್ನೇರಿಕೊಂಡು 

ಬರುತ್ತಿರುವ ವಯಸ್ಸಿನ ಹೊರೆಯನ್ನು ಚಕ್ರವರ್ತಿ ತೂಗಿನೋಡುತ್ತಿದ್ದನು. 

ಧಾರ್ಮಿಕಮಾರ್ಗವನ್ನು ತೊರೆಯದಿದ್ದರೂ, ಸ್ವಾತಂತ್ರ್ಯಪ್ರಿಯನಾದ 

ಕುಮಾರಕನ ಮತ್ತು ಕುಮಾರಿಕೆಯರ ಮನಃಪ್ರವೃತ್ತಿಗಳನ್ನು ಆಯಾ 

ಲಕ್ಷಣಗಳಿಂದಲೇ ಪರಾಂಬರಿಸಿ ನಿರ್ಧರಿಸಿಕೊಂಡನು. ಆ ನಿರ್ಧಾರಕ್ಕನುಸಾ 



— ೧೦೨ —------------------------------- 



ರವಾಗಿಯೇ, ಮೊದಲೊಮ್ಮೆ ಈ ಗಂಗಪಲ್ಲವರ ಬಾಂಧವ್ಯವೆಂದರೆ ಬಂಧವೇ 

ಸರಿ ಎಂದು ಭಾವಿಸಿದ್ದರೂ, ಅದನ್ನುಳಿದು ಸಂದರ್ಭಾನುಸಾರವಾಗಿ ತಾನೇ 

ಪಳಗಿದನು; ಗಾಳಿಗನುವಾಗಿ ಚುಕ್ಕಾಣಿಯನ್ನು ಹಿಡಿದನು. ರಾಜಕೀಯ 

ಸಾಮಾಜಿಕಾದಿ ನೀತಿಗಳಲ್ಲಿಲ್ಲ ನೃಪತುಂಗನದೆಂದರೆ ಉದಾರತೆಯ ಹೆದ್ದಾರಿ. 

ಕೊಂಕಿನ ಕವಲುದಾರಿಯನ್ನವನು ಕನಸಿನಲ್ಲಿಯೂ ಮೆಟ್ಟಲ್ಲ. ಈ ಸಂದ 

ರ್ಭದಲ್ಲಿ ಬಂಕೆಯನ ನೆರವೆಂದರೆ ದೈವದತ್ತವಾದುದೆಂದೇ ಅವನ ಭಾವನೆ. 

ಆ ಬಂಕೆಯನೆಂದಕಿ, ರಾಷ್ಟ್ರಕೂಟ ಕುಲವನ್ನಾಸರೆಗೊಂಡು ಮೆಟ್ಟಿಲಿನಿಂದ 

ಮೆಟ್ಟಲಿಗೇರುತ್ತ ಬಂದ ಕುಲದಲ್ಲಿ ಹುಟ್ಟಿಬೆಳೆದವನು. ಆದರೆ ಆತನಿಂದು 

ಸಾಮಂತ ಚೂಡಾಮಣಿ. ಕಲೆಯಿಲ್ಲದ ಕಲೆಗಲ್ಲದ ಎಷ್ಟೋ ಹೆಸರಿನ 

ಚೂಡಾಮಣಿಗಳು ಪೆಟ್ಟಿಗೆಯೊಳಗಾದ ಕಾಲವದು. ಹಾಗಿದ್ದರೂ ಬಂಕೆ 

ಯನೆಂದಕ್ಕೆ ಸಾರ್ಥಕ ಚೂಡಾಮಣಿಯಾಗಿದ್ದನು. ಸ್ವಭಾವತಃ ಅಪ್ರತಿಮ 

ಶಕ್ತಿಯುಕ್ತಿ ಚೈತನ್ಯಶಾಲಿ. ದೊರೆಯ ಹೃದಯಾರಾಮವನ್ನು ಕೋಲು 

ಬೇಲಿಯಿಲ್ಲದೆ ಸುತ್ತಿ ಸುಳಿದರಿತ ಜಾಣ; ಕಣ್ಣಿಗೆ ರೆಪ್ಪೆಯಾಗಿ ಮೈಗೆ 

ಕೈಯಾಗಿ, ಕಾರ್ಯಕ್ಕೆ ಧುಮುಕಿ ಪಾರಂಗತನಾಗುವ ಸಾಧಕ ಎಂದರೆ 

ವೀರಬಂಕೆಯನಲ್ಲದೆ ಇನ್ನೊಬ್ಬರಿರಲಿಲ್ಲ. 


ಅಂಥ ಬಂಕೆಯನು ತನ್ನಿದಿರಿನಲ್ಲಿ ಸಾಮಂತಗೀಮಂತನಲ್ಲ; ಬರಿಯ 

ಸೇವಕನು. ಆ ಬಿರುದೇ ತನಗೆ ಮನ್ನಣೆಯೆಂದು ಆತನ ಭಾವನೆ. ಆತನ 

ರಾಣಿ ವೀರತ್ರೀ ಎಂದರೆ ಆದರ್ಶ ದಂಪತಿಚಿತ್ರವನ್ನು ಲೋಕಕ್ಕೆ ಕಾಣಿಸ 

ಲಿಕ್ಕಾಗಿಯೇ ಎಂಬಂತೆ ಬಂಕೆಯನನ್ನು ಕೈವಿಡಿದಾಕೆ. 'ದೊರೆಗಳು 

ಕೈವಿಡಿದು ನಡೆಯಿಸಿದರೆ, ವೀರಶ್ರೀ ಕೈವಿಡಿದೆತ್ತಿದಳು' ಎಂದು ಬಂಕೆಯನೇ 

ಒಮ್ಮೆ ಮಹಾರಾಣಿ ಉಮಾದೇವಿಯೊಡನೆ ಆಡಿದ್ದನಂತೆ. ಅಂಥ ತನ್ನ 

ಆತ್ಮಬಂಧು ಬಂಕೆಯನಲ್ಲಿ ಕುಮಾರಕೃಷ್ಣನು 'ಎರೆದ ನೀರು ಸೋರದ' 

ಗೆಳೆಯನಾಗಿರುವುದನ್ನೀಕ್ಷಿಸಿ ನೃಪತುಂಗನಿಗೆ ವಿಶ್ವಾಸಪೂರ್ವಕವಾದ 

ಆನಂದವೇರುತ್ತಿತ್ತು. ಅಂಥ ಬಂಕೆಯನ ಪರವಾಗಿ ಏನಾದರೊಂದು 

ಸ್ಮಾರಕೋಚಿತದಾನವನ್ನೆಸಗಬೇಕೆಂದು ಚಕ್ರವರ್ತಿಯ ಭಾವನೆಯಾಗಿತ್ತು, 

ಈ ಸಂದರ್ಭದಲ್ಲಿ ಅವನೇ ಒಮ್ಮೆ ಪ್ರಾರ್ಥಿಸಿದನಂತೆ. ಅದನ್ನೂ, ಆದಾನ 

ಸ್ವರೂಪವನ್ನೂ ಮುಂದಿನ ಭೂದಾನ ಶಾಸನವಾಕ್ಯವು ಸಾರುತ್ತಿದೆ: 



— ೧೦೩ —------------------------------- 



*"ಈ ಬಗೆಯ ವಿಶಿಷ್ಟವ್ಯಕ್ತಿ ಯೂ, ನನ್ನ `ಇಷ್ಟಭೃತ್ಯನೂ ಆದ 

ಬಂಕೆಯನು ಕೋಲನೂರಿನಲ್ಲಿ ಅವನಿಂದಲೇ ನಿರ್ಮಾಪಿತವಾದ ಬಸದಿ  

ಯೊಂದಕ್ಕೆ ನನ್ನ ಹೆಸರೊತ್ತಿದ್ದ ದಾನವೊಂದಾಗಬೇಕೆಂದು ಪ್ರಾರ್ಥಿಸಿದನು. 

ಧಾರ್ಮಿಕ ಪ್ರಾರ್ಥನೆಯದು ಸಾರ್ಥಕವಾಗಲೇಬೇಕು, ಎಂಬೆಣಿಕೆಯಿಂದ 

ಮಾನ್ಯ ಖೇಟಿರಾಜಧಾನಿಯಲ್ಲಿ ನೆಲೆವಡೆದು, ತಾಯಿ ತಂದೆಗಳಿಗೆ ಮತ್ತು 

ನನಗೆ, ಐಹಿಕಾಮುಷ್ಮಿಕ ಪುಣ್ಯಕೀರ್ತಿಗಳು ಮೇಲ್ಮೆಗೊಳುವಂತೆ ಆ ಜಿನಾ 

ಲಯ ಪರಿಪಾಲನನಿಯುಕ್ತನಾದ ದೇವೇಂದ್ರ ಮುನೀಶ್ವರನಿಗೆ......... " 


ನೃಪತುಂಗನ ಸರ್ವಮತೋದಾರತೆ ಯಾರನ್ನು ಬೆರಗಾಗಿಸದು? 

ವಿವಾಹೋತ್ಸವಕ್ಕಾಗಿ ಬಂದಿದ್ದ ಬಂಧುಬಾಂಧವರೂ, ಸಾಮಂತಮಿತ್ರಾದಿ 

ಗಳೂ ಸನ್ಮಾನಯುತರಾಗಿ ಹಿಂದಿರುಗುವಂತಿದ್ದರು, ಭಾರತಭೂಮಿಯೊಳ 

ಗಿನಿಂದ ಮತ್ತು ಹೊರಗಿನಿಂದ ಆಗತರಾಗಿ ಬಂದ ರಾಯಭಾರಿಗಳೂ ಮಾನ 

ಖೇಟದ ಮೀಸಲಾದ ಸವಿನೆನಪುಗಳನ್ನು ಎದೆಯಚ್ಚೆನಲ್ಲೊತ್ತಿಕೊಳ್ಳುತ್ತಾ 

ಹೊರಡಲನುವಾದರು. ಮರುದಿಬ್ಬಣ ಹೊರಡುವ ಮುಹೂರ್ತವೂ 

ಹತ್ತಿರವಾಗುತ್ತಿತ್ತು. ಚಕ್ರವರ್ತಿದಂಪತಿಗಳ ಕಣ್ಣುಗಳು ಆನಂದಬಾಷ್ಪ 

ಬಿಂದುಗಳಿಂದ ತುಂಬಿದ್ದುವು. ಎಲ್ಲರನ್ನೂ ಬೇರೆಬೇರೆಯಾಗಿ ಕರೆದ 

ನೃಪತುಂಗನು, ಹಿತಮಿತವಾಗಿ ಬೋಧಿಸಬೇಕಾಡುದನ್ನಾಡಿದನು. ಕಡೆಗೆ 

ಬೀರಬಂಕೆಯನತ್ತ ತಿರುಗಿದನು. ದೊರೆಯ ಚಿತ್ತವನ್ನರಿತ ಬಂಕೆಯನು 

ಎದ್ದುನಿಂತನು. 


ನೃಪತುಂಗ: ಹಿಂದಿನ ದಾನಕಾರ್ಯವೆಂದರೆ ಜಿನಾಲಯಕ್ಕಾಗಿ 

ಮಾಡಿದ ಕರ್ತವ್ಯಕರ್ಮ. 


ಬಂಕೆಯ:--ಸರಿ, ಚಕ್ರವರ್ತಿಗಳ ಉದಾರತೆ ವಿಶ್ವಭರಿತವಾದುದು. 

..............

*ತೇನ ಏವಂಭೂತೇನ ಬಂಕೆಯಾಭಿಧಾನೇನ ಮದಿಷ್ಟಭೃತ್ಯೇನ ಪ್ರಾರ್ಥಿ 

ತಸ್ಸನ್‌ ತತಾರ್ಥನಯಾ ಮಾನ್ಯಖೇಟಿರಾಜಧಾನ್ಮಾಂ ಅವಸ್ಥಿತೇತನ ಮಯಾ ಮಾ 

ತಾಪಿತ್ರೋ! ಆತ್ಮನಶ್ಚೈವ ಐಹಿಕಾಮುತ್ರಿಕ ಪುಣ್ಯ ಯಶೋಥಿವೃದ್ಧಯೇ ಕೋಲ 

ನೂರೇ ತದ್ದಂಕೆಯ ನಿರ್ಮಾಪಿತ ಜಿನಾಲಯ ಪರಿಪಾಲನ ನಿಯುಕ್ತಾಯ 


Epigraphia Indica Vol. 11, No. 4, 

Konnur Inscription of Amoghavarsha I 

&. 0. 861 (ಶಾ. ಶ. ೭೮೩) 



— ೧೦೪ —------------------------------- 



ನೃಪತುಂಗ:--ನಮ್ಮದೆಯ ರಾಜನೀತಿಯನ್ನು ಆಗಾಗ ಸಾಣೆ 

ಗೊತ್ತುತ್ತಿರುವ ಕೋಟಲೆಗಳೆಲ್ಲವೂ ಒಮ್ಮೆಗೆ ಬಗೆಹರಿದಂತಾದುದಲ್ಲವೆ? 


ಬಂಕೆಯು:--ಪರಮಾತ್ಮದಯದಿಂದ ಹಾಗಾಯಿತೆಂದು ಭಾಸವಾ 

ಗುತ್ತಿದೆ. 


ನೃಪತುಂಗ: ಹೌದು, ಪರಮಾತ್ಮನ ದಯೆಯಲ್ಲದೆ ಯಾವುದು 

ಸಾಧ್ಯ? ಆ ಭಕ್ತಿಭಾವನೆಯಲ್ಲಿ, ಈ ಪೌರುಷಾಧಿಕೃತಯುಕ್ತಿ ಕಾರ್ಯದಲ್ಲಿ 

ನೆಲಸಿರಬೇಕಲ್ಲವೆ? 


ಬಂಕೆಯ:-- ಸರ್ವಸಮ್ಮತವಾದ ಮಾತು. 


ನೃಪತುಂಗ:-ಪ್ರಕೃತಕಾಲದಲ್ಲಿ ನಮ್ಮ ರಾಷ್ಟ್ರಕೂಟ ರಾಜನೀತಿಯ 

ಪೌರುಷಮೂರ್ತಿಯೆಂದರೆ ನೀನು. ಈ ವರೆಗೆ ನಿನಗೆ ಯಾವ ಉಪಕಾರ 

ವನ್ನೆಸಗುವ ಸಂದರ್ಭವೂ ಒದಗಲಿಲ್ಲ. ಈ ಮಂಗಳಮುಹೂರ್ತದಲ್ಲಿ 

ನಾವು ನಿನಗೆ ಯಾವ ಬಗೆಯ ಉಪಕಾರವನ್ನು ಮಾಡಲಿ? 


ಬಂಕೆಯ:--ಉಪಕಾರ ಎಂದರೆ ಅಪಕಾರಕ್ಕೆ ತೀರ ಬದಲಾಗಿರು 

ಪುದಲ್ಲವೆ? 


ನೃಪತುಂಗ:-- ಹೌದು. 


ಬಂಕೆಯ:--(ಮಂದಹಾಸದೊಡನೆ) ಹಗೆಗಳ ಅಪಕಾರಕ್ಕೆ ಸಿಲುಕಿ 

ದವನಿಗೆ ಮಾತ್ರವೆ, ಹಸಿದವನಿಗಾಹಾರದಂತೆ ಉಪಕೃತಿಯ ಅವಶ್ಯಕತೆ 

ಯಲ್ಲವೆ? ನನಗೆ ದೈವದ ಮತ್ತು ಸನ್ನಿಧಾನದ ದಯದಿಂದ ಯಾರ ಅಪ 

ಕಾರವೂ ಸಫಲವಾಗಲಿಲ್ಲ. 


ನೃಪತುಂಗ:--(ನಗುತ್ತಾ) ಏನು? ಅಪಕಾರವನ್ನೊಂದದವನಿಗೆ 

ಉಪಕಾರವೆಸಗುವ ಕಾಮನೆ ಎಂದರೆ, ಆತನಿಗೆ ಅಪಕಾರವನ್ನೆ ರೂಪಾಂತರ 

ವಾಗಿ ಪ್ರಾರ್ಥಿಸಿದಂತಾಗುವುದು ಎಂದಲ್ಲವೆ? (ಸಭಿಕರನ್ನೀಕ್ಷಿಸಿ) ನೋಡಿ 

ದಿರೋ ನಮ್ಮ ಬಂಕೆಯನ ವಾಙ್ನೆಪುಣತೆಯನ್ನು? ಹಾಗಲ್ಲ, ರೋಗ 

ರಹಿತನಾದವನು ಸೇವಿಸಿದ ಕೆಲಮದ್ದು ಆರೋಗ್ಯಾಭಿವೃದ್ಧಿಯನ್ನಾಗಿಸು 

ವುದು. ಹಾಗಿದ್ದರೂ ನಿನ್ನ ಪ್ರಶ್ನೆ ಎಂದರೆ ಸಾಮಾನ್ಯವಾದುದಲ್ಲ; 

ತಾತ್ವಿಕರನ್ನೂ ತಲೆದೂಗಿಸುವಂಥದು. ಅದಂತಿರಲಿ; ಹಾಗಾದರೇನು 

ಎತ್ತಿದ ನಮ್ಮ ಮಾತನ್ನು ನಿರರ್ಥಕವನ್ನಾಗಿ ಮಾಡುವೆಯ? 



— ೧೦೫ —---------------------------- 



ಬಂಕೆಯನಾಗ "ಎಂದೂ ಇಲ್ಲ. ಸನ್ನಿಧಾನದ ಉದಾತ್ತವಾದ 

ಅನುಗ್ರಹಬುದ್ಧಿ ಈ ಬಂಕೆಯನಲ್ಲಿ ಗುರಿಯಿಟ್ಟುದಾದರೆ ಇಷ್ಟೊಂದು ಉಪ 

ಕಾರವನ್ನು ಯಾಚಿಸುತ್ತೆೇನೆ:-'ಸಾರಾಸಾರವನ್ನು ಪರಾಂಬರಿಸುವ, 

ಪರಾಂಬರಿಕೆಯನ್ನು ಕವಲಿಲ್ಲದಾಡುವ-ಆಡಿದುದನ್ನು ಅಚ್ಚೊತ್ತಿದಂತಾ 

ಚರಿಸುವ ಅಕಳಂಕ ಸಂಸ್ಕೃತಿ ಕನ್ನಡನಾಡಿನಲ್ಲಿ ಹಾಸುಹೊಕ್ಕಾಗಿ ಹಸರಿ 

ಸಲಿ. ಇದರಿಂದ, ಈ ಬಂಕೆಯನೆಂಬಾತನ ಹೆಸರು ಸವೆದುಹೋಗಿ 

ಸಂಸಾರಸಾರ ರೂಪಪರಮಾನ್ನದಲ್ಲಿ ಸಮರಸವಾಗಲಿ' ಪರಮಾತ್ಮನನ್ನು 

ದ್ದೇಶಿಸಿದ ಈ ಪ್ರಾರ್ಥನೆ ಚಕ್ರವರ್ತಿಗಳ ತ್ರಿಕರಣಪೂರ್ವಕವಾಗಿ ನೆಗೆಯ 

ಬೇಕು. ಇದೇ ಭೃತ್ಯಬಂಕೆಯನಿಗೊದಗತಕ್ಕ ಉಪಕಾರ” ಎಂದನು. 


ಆನಂದೋದ್ರೇಕದ ಗಂಭೀರತೆಯೊಡನೆ ನೃಷತುಂಗ ಚಕ್ರವರ್ತಿ 

ಎದ್ದು ನಿಂತನು. ವೀರ ಬಂಕೆಯನು ಸೂಚಿಸಿದ ಆ ಪ್ರಾರ್ಥನಾಕ್ಷರಗಳ 

ನೆತ್ತಿ ಹಾಗೆಯೆ ಎಲ್ಲರೊಡನೆ ಪ್ರಾರ್ಥಿಸಿದನು. 


ಅತಿಥಿಗಳೊತ್ತಟ್ಟು, ಮದುವಣಿಗರ ಮರುದಿಬ್ಬಣವೊತ್ತಟ್ಟು. ತನ್ನವ 

ರೊಡಗೂಡಿದ ವೀರಬಂಕೆಯನೊತ್ತಟ್ಟು, ಮುಕ್ಕವಲಾಗಿ ನೆರೆದ ಸಂದಣಿ 

ಹರಿದುದು, ಪ್ರಜಾವರ್ಗ ಆನಂದತುಂದಿಲಸ್ವಾಂತವಾಗಿ ವೀರ ಬಂಕೆಯ 

ನನ್ನು ಇದಿರುಗೊಂಡುದು. 'ಬನವಸೆ ಕನ್ನಡಬನವಸೆಯಾಯಿತು' ಎಂದು 

ಹಾಡಿನಲಿದಾಡುತ್ತಿತ್ತು. ಮತ್ತೇನು? 


ಬಗೆಚಿಗುರಾಯ್ತು ಮಾತುಮುಗುಳಾಯ್ತು ಪುರುಲ್‌ ಮರಲಾಗಿ ಕಂಪುಕ। 

ಮ್ಮಗೆ ಹೊನಲಾಯ್ತು ಕೋಗಿಲೆಗೆ ಕನ್ನಡವಕ್ಕಿಗೆ ತುಂಬಿಗೆಂಬಮಾ | 

ತೊಗೆದಿರೆ ನಾಡು ತಿಂತಿಣಿಸೆ ಬಂಕೆಯನಾಬನವಾಸಿಯೊಳ್‌ ಜಸೆಂ । 

ನೆಗೆದು ಬಸಂತನಾಗಿ ನೆಲನಂ ಪೊರೆದಂ ಪೊಗರೇರುವಂದದಿಂ || 


=========


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ